“ಅಮ್ಮಾ,” ಎಂದಳುವಾಗಮ್ಮ ಗುಮ್ಮಾಗ್ಬಹುದೇ? (ನ)   5(3215)

-ಮ್ಮಾಚಾರ, ವಿಚಾರಕ್ಕೀ ಗತಿಯಾಗ್ಬಹುದೇ?
ಎಂಜಲು ಪ್ರಸಾದವೆಂದರಿತುಣ್ಬಾರದೇ?
ರ್ಶನಾನುಗ್ರಹಾಸೆ ವ್ಯರ್ಥವಾಗ್ಬಹುದೇ? (ಬಾ)
-ಳುವುದಿನ್ನೆಂತೆಂದಾದರೂ ತಿಳಿಸ್ಬಾರದೇ?
ವಾಸನಾ ನಾಶದಭ್ಯಾಸವಾಗುತ್ತಲಿದೆ!
ರ್ವದಿಂದ ಮರೆಯುವುದಿಲ್ಲದಾಗಿದೆ! (ನ)
-ಮ್ಮ ತೀರ್ಥಕ್ಷೇತ್ರ ನಾಲ್ಕು ಗೋಡೆಯೊಳಗಿದೆ!
ಗುರುದತ್ತನೇ ನಮಗೆಲ್ಲವೂ ಆಗಿದೆ! (ನ)
-ಮ್ಮಾನಂದವನಾನಂದವೆಂದು ನಂಬ್ಯಾಗಿದೆ! (ಈ)
-ಗ್ಬರದಿದ್ದರಿನ್ಯಾವಾಗ ಬರುವೆ ತಂದೇ?
ಹುರಿಸಿಕೊಂಡು, ಸುಟ್ಟು, ಕೆಟ್ಟ ಬಣ್ಣವಾದೆ!
ದೇವ, ದೇವ ನಿರಂಜನಾದಿತ್ಯ ನೀನೆಂದೆ!!!

“ಉಳಿಸಿದರುಳಿ ಅಳಿಸಿದರಳಿ”! (ಆ)   5(3137)

-ಳಿ, ಬಾಳಿಂತುದ್ಧಾರವಾದರಸು ಬಲಿ!
ಸಿರಿ, ಸಾಮ್ರಾಜ್ಯ ಸಹಿತಳಿದಾ ಬಲಿ!
ತ್ತ ವಿತ್ತಾಪಹಾರ ಮಾಡಿಲ್ಲಾ ಬಲಿ!
ರುಜುಮಾರ್ಗಕ್ಕಾದರ್ಶಾ ರಾಜೇಶ ಬಲಿ! (ಇ)
-ಳಿದರೂ ಪಾತಾಳದಲ್ಲುಳಿದಾ ಬಲಿ!
ಳಿಯದಿರದೀ ದೇಹವೆಂದಾ ಬಲಿ! (ತು)
-ಳಿವುದಕ್ಕಾರು ವಾಮನನೆಂದಾ ಬಲಿ!
ಸಿಕ್ಕಿ ನುಜ್ಜಾಗೆ ನಾ ಹೆಜ್ಜೆಗೆಂದಾ ಬಲಿ!
ರ್ಶನ, ಸ್ಮರ್ಶನದಿಂದೈಕ್ಯಾದಾ ಬಲಿ!
ಕ್ತ ಮಾಂಸದ ಗೊಂಬೆ ತಾನಲ್ಲಾ ಬಲಿ! (ಬಾ)
-ಳಿ ನಿರಂಜನಾದಿತ್ಯ ಬಲಿಯಂತುಳಿ!!!

“ಓಂ ದ್ರಾಂ ಓಂ” ಸಾಯುಜ್ಯ ಸಿದ್ಧಿ ಮಂತ್ರ!   4(1847)

“ದ್ರಾಂ” ಹಂಸಾರ್ಥ ಸೂಚಿಸುವ ಮಂತ್ರ!
“ಓಂ” ಸರ್ವವ್ಯಾಪಕೇಕಾತ್ಮ ಮಂತ್ರ!
ಸಾಕಾರ ನಿರಾಕಾರಕ್ಕಾ ಮಂತ್ರ! (ಕಾ)
-ಯುವುದೆಲ್ಲಾ ಕಾಲದಲ್ಲಾ ಮಂತ್ರ! (ರಾ)
-ಜ್ಯ ವೈಭೋಗಕ್ಕಾಶಿಸದಾ ಮಂತ್ರ! (ಹು)
-ಸಿ ಮಾಯೆಯ ಲೆಕ್ಕಿಸದಾ ಮಂತ್ರ! (ವೃ)
-ದ್ಧಿ, ಕ್ಷಯಗಳಂಟಿಲ್ಲದಾ ಮಂತ್ರ!
ಮಂತ್ರ, ಯಂತ್ರಗಳಾಧಾರಾ ಮಂತ್ರ! (ನೇ)
-ತ್ರ ನಿರಂಜನಾದಿತ್ಯಗಾ ಮಂತ್ರ!!!

“ಕಿರಿಯರಿಗೆಲ್ಲಾ ಕಿರಿಯನು ನಾನಯ್ಯಾ ”? (ಅ)   2(456)

-ರಿತಿದನಳವಡಿಸಲು ಸುಖವಯ್ಯಾ!
ತ್ನವಿದಾಗಿ ನಿತ್ಯಶಾಂತಿ ನೋಡಿರಯ್ಯಾ! (ಆ)
-ರಿಗೂ ಹಿರಿತನದಹಂಕಾರ ಬೇಡಯ್ಯಾ!
ಗೆಳೆಯರಗೆಳೆಯಾರ್ಕನೆಂತಿಹನಯ್ಯಾ!? (ಅ)
-ಲ್ಲಾಡದಿದ್ದು ಕರ್ಮನಿಷ್ಠನಾಗಿಹನಯ್ಯಾ!
ಕಿರಿತನ, ಹಿರಿತನ ವಿದೆಯೇನಯ್ಯಾ! (ಅ)
ರಿತರಿದೇ ಮಾರ್ಗದರ್ಶಕವೆಂಬೆನಯ್ಯಾ! (ಆ)
-ಯ, ವ್ಯಯದಧಿಕಾರ ಸ್ಥಿರವಲ್ಲವಯ್ಯಾ!
ನುಡಿದಂತೆ ನಡೆಯುವವನಾಗಿರಯ್ಯಾ!
ನಾಮ ಶಿವಗುರುವಿನದು ಜಪಿಸಯ್ಯಾ!
ನ್ನದೆಂಬುದನೆಲ್ಲಾ ಮರೆತುಬಿಡಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಗಿದೊಪ್ಪಿಗೆಯಯ್ಯಾ!!!

“ಗುರಿವಿನಂತೆ ಶಿಷ್ಯ, ತಂದೆಯಂತೆ ಮಗ!” ಆಗ್ಬೇಕು!   6(4185)

ರುಧಿರ ಮಾಂಸದ ಗೊಂಬೆ ಗುರುವಲ್ಲೆಂದರಿಯ್ಬೇಕು!
ವಿಧಿ, ಹರಿ, ಹರರೊಂದಾದದ್ದವನೆಂದರಿಯ್ಬೇಕು!
ನಂದಕಂದನೆಂದ ಪರಮಾತ್ಮ ಅದೆಂದರಿಯ್ಬೇಕು!
ತೆರೆಯಬೇಕಿದಜ್ಞಾನ ತೆರೆಯೆಂದರಿಯ್ಬೇಕು!
ಶಿರೋಧಾರ್ಯ ಗುರುವಿನಾಜ್ಞೆ ಶಿಷ್ಯಗೆಂದರಿಯ್ಬೇಕು! (ಶಿ)
-ಷ್ಯ ಸದ್ಗುಣಗಳ ಮೂರ್ತಿಸ್ವರೂಪವೆಂದರಿಯ್ಬೇಕು!
ತಂದೆ ಜಗತ್ತೆಲ್ಲಕ್ಕೂ ಸೃಷ್ಟಿಕರ್ತನೆಂದರಿಯ್ಬೇಕು! (ಇ)
-ದೆಲ್ಲಕ್ಕೂ ಹೇತುವಾದಾತ ಗೋಚರನೆಂದರಿಯ್ಬೇಕು! “(ಅ)
-ಯಂ ಆತ್ಮಾ ಬ್ರಹ್ಮ!” ಇದೇ ಪೂಜ್ಯ ತಂದೆ ಯೆಂದರಿಯ್ಬೇಕು! (ಸು)
-ತೆ, ಸುತ, ಬಂಧು ಮಿತ್ರರು ನಾವವಗೆಂದರಿಯ್ಬೇಕು!
ಕ್ಕಳೆಲ್ಲಾ ಚೊಕ್ಕ ಬುದ್ಧಿಯವ್ರಾಗ್ಬೇಕೆಂದರಿಯ್ಬೇಕು! (ಹೆಂ)
-ಗರುಳು ಪರಸ್ಪರದಲ್ಲಿರಬೇಕೆಂದರಿಯ್ಬೇಕು!
ಗ ಹಿಂದಿನ “ನಾಣ್ನೂಡಿ” ನಿಜವಾಯ್ತೆಂದರಿಯ್ಬೇಕು! (ಹೋ)
-ಗ್ಬೇಕನಾಚಾರತ್ಯಾಚಾರ ನಮ್ಮೆಲ್ರಿಂದೆಂದರಿಯ್ಬೇಕು!
ಕುಲವಿಂತು ನಿರಂಜನಾದಿತ್ಯಾನಂದದಲ್ಲಿರ್ಬೇಕು!!!

“ನೀ” ನೋಡುವುದು ರಾವಣನನ್ನು! (“ನಾ”)   3(1099)

-ನೋಡುವುದು ಸೀತಾರಾಮನನ್ನು! (ಸು)
-ಡು, ದುರಾಗ್ರಮ ರಾವಣನನ್ನು! (ಸಾ)
-ವು ಕಾಣೆ ಸೇರೆ ಶ್ರೀರಾಮನನ್ನು! (ಉ)
-ದುರಿಪ ರಾಮ ರಾವಣನನ್ನು!
-ರಾತ್ರಿ, ದಿನ ನೆನೆ ರಾಮನನ್ನು!
-ವಧಿಸದಿರ ರಾವಣನನ್ನು! (ಕೆ)
-ಣಕದೆ ಕೂಡಿಕೊಂ ರಾಮನನ್ನು!
ಂಬಿರಬೇಡ ರಾವಣನ್ನು! (ಚೆ)
-ನ್ನು ನಿರಂಜನಾದಿತ್ಯನಾಗಿನ್ನು!!!

“ನೀ” ನೋಡುವುದು ರಾವಣನನ್ನು! [ನಾ]   3(1098)

-ನೋಡುವುದು ಸೀತಾರಾಮನನ್ನು! (ನೋ)
-ಡು, ಸೀತಾರಾಮ, ರಾವಣರನ್ನು! (ಸಾ)
-ವು ರಹಿತಾತ್ಮನೆಂದವರನ್ನು!
ದುರಾಶಾಧೀಶ ರಾವಣನನ್ನು!
ರಾಜ ರಾಜೇಶ ಶ್ರೀರಾಮನನು! (ಭಾ)
-ವತೀತನಲ್ಲಿ ನೋಡವರನ್ನು! (ಬ)
-ಣಗು ವಿಷಯಿ ರಾವಣನನ್ನು! (ಅ)
-ನನ್ಯ ಪ್ರೇಮಮಯಿ ರಾಮನನ್ನು! (ಅ)
-ನ್ನು, ನಿರಂಜನಾದಿತ್ಯಭಿನ್ನೆನ್ನು!!!

“ಭಂ ಭಂ ಭಂ ಭಂ ಭಂ ಮಹಾದೇವ”!   1(244)

ಶಿವ ಶಿವ ಶಿವ ಜಯ!
ವಧ ವಧ ಅರಿ ಭಯ!
ತಾಂಡವ ಥೈ ಥೈ ಥೈ ಜಯ!
ಡಮರು ಡಂ ಡಂ ಅಬಯ!
ವರ ಗಿರಿಪ್ರಿಯ ಜಯ!
ನಾಟ್ಯಾನಂದ ಶಿವ ಜಯ! (ಭೇ)
-ಟ್ಯಲಭ್ಯ ಭಂ ಭಂ ಭಂ ಭಯ!
ಲೀಲಾಜಾಲ ಕಾಲ ಜೈ ಜೈ! (ಲೀ)
-ಲಾ ನಿರಂಜನ ಶಿವ ಜೈ!!!

“ರಾಮಾ! ಕೃಷ್ಣಾ” ಎಂದೊರಲುವೆವು ನಾವು!   5(2676)

ಮಾತಿಗುತ್ತರವೀಯದಿಹಿರಿ ನೀವು!
ಕೃತಾರ್ಥರಾಗಬೇಕೆಂದಿಹೆವು ನಾವು! (ತೃ)
-ಷ್ಣಾಸೂಯಾದಿಗಳಿಲ್ಲದವರು ನೀವು!
ಎಂದಿಗೆ ದರ್ಶನ ಪಡೆವುದು ನಾವು?
ದೊಡ್ಡ ಮನಸ್ಸು ಮಾಡಬೇಕೀಗ ನೀವು! (ಪ)
-ರಮ ಪಾಪಿಗಳಾಗಿರ್ಬಹುದು ನಾವು! (ಕ)
-ಲುಷಿತಗಳ ಕ್ಷಮಿಸಬೇಕು ನೀವು!
ವೆಗ್ಗಳರ್ನೀವೆಂದು ನಂಬಿಹೆವು ನಾವು! (ಸಾ)
-ವು, ನೋವುಗಳ್ಭಯ ತಪ್ಪಿಸ್ಬೇಕು ನೀವು!
ನಾವ್ಯಾರೆಂದರಿಯದಿರುವೆವು ನಾವು! (ಕಾ)
-ವುದು ನಿರಂಜನಾದಿತ್ಯನಾಗಿ ನೀವು!!!

‘ಅಹಂ ಬ್ರಹ್ಮಾಸ್ಮಿ’ ಅರ್ಥವೇನಪ್ಪಾ! (ಅ)   2(692)

-ಹಂಕಾರಿ ಜೀವ ನಾನಲ್ಲವಪ್ಪಾ!
ಬ್ರಹ್ಮಾಂಡವೆಲ್ಲಾ ತುಂಬಿಹೆನಪ್ಪಾ! (ಬ್ರ)
-ಹ್ಮಾ, ವಿಷ್ಣು, ಶಿವ ರೂಪ ನಾನಪ್ಪಾ! (ವಿ)
-ಸ್ಮಿತನಾಗದಭ್ಯಾಸ ಮಾಡಪ್ಪಾ!
ಸತ್ಯದೂಯೆಗಂಟಬೇಡಪ್ಪಾ! (ಸಾ)
-ರ್ಥಕವಾಗಲೀ ನರಜನ್ಮಪ್ಪಾ!
ವೇದಾಂತ ವಿಷಯ ಸುಖವಪ್ಪಾ! (ಅ)
-ಪ್ಪಾ! ಬ್ರಹ್ಮ ನಿರಂಜನಾದಿತ್ಯಪ್ಪಾ!!!

‘ಓಂ’ ದ್ರಾಂ ಓಂ ಗುರು ದತ್ತಾಯ ನಮಃ!   1(141)

‘ದ್ರಾಂ’ ಕಾರಾದ್ವೈತ ಸಿದ್ಧಾಯ ನಮಃ!
‘ಓಂ’ ಕಾರ ಗುರು ಶಿವಾಯ ನಮಃ!
‘ಗು’ಹೆ ಗುಂಡಿ ಆನಂದಾಯ ನಮಃ!
‘ರು’ಚಿ ಪ್ರಸಾದಾನಂದಾಯ ನಮಃ!
‘ದ’ತ್ತ ತ್ರಿಮೂರ್ತಿ ರೂಪಾಯ ನಂಅ! (ಅ)
‘ತ್ತಾ’ಪ್ತರುದ್ಧಾರ ಗುರುವೇ ನಮಃ!
‘ಯ’ತಿಗಣ ಗಣ್ಯಾಂಗಾಯ ನಂಅಃ!
‘ಮಃ’ ಶ್ರೀ ನಿರಂಜನಾಂಗಾಯ ನಮಃ!

‘ನನ್ನದೆಂ’ಬುದನಳಿಸಿ ‘ನಾನೆಂ’ಬುದ ನಿಲಿಸಯ್ಯಾ! (ತ)   2(517)

-ನ್ನ ತಾನರಿತ ಮೇಲೆ ಅನ್ಯವಿನ್ನೊಂದಿಲ್ಲ ಕಾಣಯ್ಯ! (ಅ)
-ದೆಂತೆನೆ, ನನ್ನದೆಂದಿರದಾಗ ದ್ವೈತವಾಗ್ವುದಯ್ಯಾ!
ಬುದ್ಧಿಯಲಿದನರಿತೆಲ್ಲವೂ ನಾನಾಗಬೇಕಯ್ಯಾ!
ಶರಥ ರಾಮ ಸರ್ವಾತ್ಮಾರಾಮನಾಗಬೇಕಯ್ಯಾ!
ರ ನೋಡಿದ ವಿಶ್ವರೂಪದಲ್ಲೆಲ್ಲಾ ಕೃಷ್ಣನಯ್ಯಾ! (ಬ)
-ಳಿಕಾವ ಭಯ, ಮೋಹಗಳೂ ಇರುವುದಿಲ್ಲವಯ್ಯಾ!
ಸಿದ್ಧಿಸಿಕೊಳಬೇಕೀಸ್ಥಿತಿಯ, ಮಿಥ್ಯವ ಬಿಟ್ಟಯ್ಯಾ!
‘ನಾ’ನಾರೆಂದು ನಿರಂತರ ಶೋಧಿಸುತಿರಬೇಕಯ್ಯಾ!
ನೆಂಟ, ಭಂಟ, ತುಂಟ, ಕುಂಟರೆಲ್ಲರ ಆತ್ಮ ನಾನಯ್ಯಾ!
ಬುಧ ಜನಕಿದರಿಯದ ವಿಚಾರವಲ್ಲವಯ್ಯಾ!
ತ್ತನಿದ ಘಂಟಾಘೋಷವಾಗಿ ಸಾರಿರುವನಯ್ಯಾ!
ನಿತ್ಯದಭ್ಯಾಸ ತಪ್ಪದೇ ಮಾಡ್ಯಪ್ಪನಾಗಬೇಕಯ್ಯಾ! (ಆ)
-ಲಿಸೀ ಗುರುವಚನದಂತಿದ್ದು ನಾನೇ ನೀನಾಗಯ್ಯಾ!
ರ್ವ ದೇಶ, ಕಾಲಗಳಲ್ಲಿದೊಂದೇ ಇರಬೇಕಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನಿಂದ ಇದನು ಕಲಿಯಯ್ಯಾ!!!

‘ನಿಷ್ಠೆ’ಗೆ ದಷ್ಟ ಪುಷ್ಪನಾಗ್ಬೇಕಾಗಿಲ್ಲ! (ನಿ)   6(3761)

-ಷ್ಠೆ ಮನೋಬಲವಲ್ಲದೆ ಮತ್ತೇನಲ್ಲ! (ಬ)
-ಗೆ ಬಗೆಯಾಸೆಯಿದ್ದರಿದಾಗ್ವುದಿಲ್ಲ!
ರಿದ್ರ, ಶ್ರೀಮಂತ ಭೇದ ಇದಕ್ಕಿಲ್ಲ! (ದು)
-ಷ್ಟರ ಸಂಗ ಇದನ್ನಿರಗೊಡ್ವುದಿಲ್ಲ!
ಪುಷ್ಟಿಯೆಂಬುದು ಸ್ಥೂಲಶರೀರಕ್ಕೆಲ್ಲ! (ಕ)
-ಷ್ಟ, ಸುಖಗಳಿಗಿದಧೀನವಾಗಿಲ್ಲ!
ನಾಳೆಗಾಗಿದಕ್ಕೇನೂ ಯೋಚನೆ ಇಲ್ಲ! (ಆ)
-ಗ್ಬೇಕಾದದ್ದಾಗ್ಬೇಕಾದಾಗಂಜುವುದಿಲ್ಲ!
ಕಾಲನನ್ನೂ ಲಕ್ಷ್ಯಕ್ಕೆ ತರುವುದಿಲ್ಲ!
ಗಿರಿಜಾರಮಣನೇ ಸಾಕ್ಷಿಯಿದಕ್ಕೆಲ್ಲಾ! (ಪು)
-ಲ್ಲ ನಿರಂಜನಾದಿತ್ಯನಂತಿರ್ಬೇಕೆಲ್ಲಾ!!!

‘ರಾಮ ರಾಮ ಸೀತಾ’ ಬಾಯಿ!   2(654)

ಧುರ ಭಜನಾ ಬಾಯಿ!
ರಾಮನಾಮ ಪ್ರೇಮಾ ಬಾಯಿ!
ರುತಾತ್ಮಜನಾ ಬಾಯಿ!
ಸೀತಾಬಾಯಿ, ರಾಮಾಬಾಯಿ!
ತಾರಕನಾಮದಾ ಬಾಯಿ!
ಬಾಯಿ ಶಬರಿಯಾ ಬಾಯಿ!
ಯಿಷ್ಟ ನಿರಂಜನಾ ಬಾಯಿ!!!

‘ರಾಮನಾಮ ಜಪ’ ಮಂತ್ರ ಪುಷ್ಪ!   2(914)

ನೋಹರ ಸುವಾಸನಾ ಪುಷ್ಪ! (ಅ)
-ನಾಯಾಸದಿಂದ ಲಭ್ಯವೀ ಪುಷ್ಪ!
ಹೇಶ್ವರನರ್ಚಿಪುದೀ ಪುಷ್ಪ!
ಗದಲಿದೊಂದಪೂರ್ವ ಪುಷ್ಪ!
ವನ ಸುತನ ಪೂಜಾ ಪುಷ್ಪ!
ಮಂಗಳ ಲೋಕ ಕಲ್ಯಾಣ ಪುಷ್ಪ!
ತ್ರಯೋದಶಾಕ್ಷರೀ ಮಂತ್ರ ಪುಷ್ಪ!
ಪುರುಷಾರ್ಥಸಿದ್ಧಿಗಿದೇ ಪುಷ್ಪ! (ಪು)
-ಷ್ಪ, ನಿರಂಜನಾದಿತ್ಯಾಪ್ತ ಪುಷ್ಪ!!!

‘ಸತ್ಯ’ದಿ ನೆಲಸಲದೇ ಮೋಕ್ಷವಯ್ಯಾ! (ಅ)   2(472)

-ತ್ಯಮೂಲ್ಯವಾದಿದುವೇ ಆ ಬ್ರಹ್ಮವಯ್ಯಾ!
ದಿನ, ನಿಶಿ ಜಗವೆಲ್ಲಾ ಅದೇ ಅಯ್ಯಾ!
ನೆನೆ! “ನಾ” “ನೀ” ಅದರಲಡಕವಯ್ಯಾ! (ಮ)
-ಲರಹಿತವಾಗಲು ದ್ವೈತವಿಲ್ಲಯ್ಯಾ!
ಕಲಕೂ ‘ನಾ’ ಆಧಾರವಲ್ಲೇನಯ್ಯಾ!
ಕ್ಷ್ಯ ‘ನಾ’ ಆಗೆ ಮಾಯೆ ಅಲಕ್ಷ್ಯವಯ್ಯಾ!
ದೇಶ, ಕಾಲ ಆದಿದೆಂಬುದಿಲ್ಲವಯ್ಯಾ!
“ಮೋಕ್ಷ” ವೃತ್ತಿ ಮನಕಿಲ್ಲದಾದಾಗಯ್ಯಾ! (ಅ)
-ಕ್ಷಯಾತ್ಮನೇ ನಾನೂ, ನೀನೂ ಎಲ್ಲವಯ್ಯಾ!]
ರ ವಿಶ್ವೇಶ್ವರನವ ಸಾಕ್ಷಿ ಅಯ್ಯಾ! (ಅ)
ಯ್ಯಾ! ನಿರಂಜನಾದಿತ್ಯ ದತ್ತ ತಾನಯ್ಯ!!!

-ಮಗಳಿಗೆ ಮದುವೆಯಾಗಲಿ!   4(1551)

ಳಿಗೆ ಬೇಗ ಕೂಡಿಬರಲಿ! (ಅ)
-ಳಿಯವಿವೇಕಿಯಾಗದಿರಲಿ! (ಹೊಂ)
-ಗೆಯ ನೆರಳಂತವನಿರಲಿ!
ಹಾತ್ಮರ ದಾಸನಾಗಿರಲಿ!
ದುಸ್ಸಹವಾಸ ಮಾಡದಿರಲಿ! (ದಾ)
-ವೆ, ದರೋಡೆಗೆ ಹೋಗದಿರಲಿ! (ದಾ)
-ಯಾದಿ ಮತ್ಸರವಿಲ್ಲದಿರಲಿ! (ರಂ)
-ಗನಾಥನ ಭಕ್ತನಾಗಿರಲಿ! (ಒ)
-ಲಿಸಿ ನಿರಂಜನಾದಿತ್ಯಾಗಲಿ!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ