ಧ್ಯಾನ ಮಿಂಚು: ಭಾಗ 3

ನನ್ನ ಕೈಗಿಂತ ನಿನ್ನದೇ ಮೇಲು! (ನಿ)

-ನ್ನ ಆಡಿಯಲ್ಲಿ ನನ್ನ ಹವಾಲು!
ಕೈಗೀಯದೆ ಹೋಗದೆನ್ನ ಕಾಲು!
ಗಿಂಡಿ ನೀರಿಂದಿಂಗದೆನ್ನ ಸೋಲು!
ತ್ತರಿಪೆ, ರಕ್ಷಿಸು, ಕೃಪಾಳು!
ನಿನಗಿಂತಧಿಕರಾರು ಹೇಳು! (ನಿ)
-ನ್ನಪ್ಪಣೆಯಂತಿರಲೆನ್ನ ಬಾಳು!
ದೇವ, ನೀನಾಗಬೇಕೆನ್ನ ಪಾಲು!
ಮೇಲು, ಕೀಳುಂಟೆಂಬುದೇ ಸವಾಲು! (ಮೇ)
-ಲು, ಕೀಳು ನಿರಂಜನಾದಿತ್ಯಾಳು!!!
ಅಥವಾ
-ಲು, ನಿರಂಜನಾದಿತ್ಯ ದಯಾಳು!

ಔಷಧಿ ತಿಂದುಂಬಭ್ಯಾಸ ಬೇಡ! (ಉ)

-ಷಃ ಕಾಲದಲ್ಲೇಳದಿರಬೇಡ! (ಅ)
-ಧಿಪತಿಯ ಧ್ಯಾನ ಬಿಡಬೇಡ!
ತಿಂಡಿ, ತೀರ್ಥದಿಚ್ಛೆ ಆಗಬೇಡ! (ಔ)
-ದುಂಬರದ ಪೂಜೆ ಬಿಡಬೇಡ!
ಹುದೇನದರಿಂದೆನಬೇಡ! (ಅ)
-ಭ್ಯಾಸ ಮಾಡದೇನೂ ಹೇಳಬೇಡ!
ದಾಚಾರಕ್ಕನಾದರ ಬೇಡ!
ಬೇಡಿ, ಕಾಡಿ ಕೆಟ್ಟು ಹೋಗಬೇಡ! (ಮಾ)
-ಡ, ನಿರಂಜನಾದಿತ್ಯ ಪವಾಡ!!!

ಕಡಲ ಹೀರುವನಮ್ಮಾ ಮಿತ್ರ! (ಮೋ)

-ಡವ ನೊಡೆಯುವನಮ್ಮಾ ಮಿತ್ರ! (ಜ)
-ಲವೃಷ್ಟಿ ಸೃಷ್ಟಿಪನಮ್ಮಾ ಮಿತ್ರ!
ಹೀನ ಶಕ್ತ್ಯಂತಕನಮ್ಮಾ ಮಿತ್ರ!
ರುಜುಮಾರ್ಗ ಪ್ರಿಯನಮ್ಮಾ ಮಿತ್ರ!
ರ ಯೋಗಾದರ್ಶನಮ್ಮಾ ಮಿತ್ರ!
ಯನಾನಂದಾಂಗನಮ್ಮಾ ಮಿತ್ರ! (ನ)
-ಮ್ಮಾ ತ್ರಿಪುರಾಂಬಾತ್ಮನಮ್ಮಾ ಮಿತ್ರ! (ಅ)
-ಮಿತ ತೇಜೋಬಲನಮ್ಮಾ ಮಿತ್ರ! (ಪು)
-ತ್ರ, ನಿರಂಜನಾದಿತ್ಯಮ್ಮಾ ಮಿತ್ರ!!!

ರಾಜಕೀಯ ನೀನಗೇಕಮ್ಮಾ?

ನಸೇವೆ ಇದ್ದಲ್ಲಾಗ್ಲಮ್ಮಾ!
ಕೀಳು, ಮೇಲು ನೋಡದಿರಮ್ಮಾ!
ತಿಪತಿಯಾಜ್ಞೆ ಅದಮ್ಮಾ!
ನಿನ್ನದು ಮಾತೆಯ ಸ್ಥಾನಮ್ಮಾ! (ತ)
-ನಯರು ನಿನಗೆಲ್ಲರಮ್ಮಾ! (ಯೋ)
-ಗೇಶ್ವರಿ ನೀನೆಂದರಿಯಮ್ಮಾ!
ರ್ಮ, ಧರ್ಮದಿಂದಾಲಭ್ಯಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯಾಗಮ್ಮಾ!!!

ಹೋರಾಟಕ್ಕೆ ನಮ್ಮ ಕೈ ಗಟ್ಟಿಮಾಡಿ!

ರಾತ್ರಿ, ಹಗಲು, ಗುರು ಧ್ಯಾನ ಮಾಡಿ! (ನ)
-ಟನೆಗಾರರೊಡನೆ ಸೇರಬೇಡಿ! (ಧ)
-ಕ್ಕೆ ಸತ್ಯ, ಧರ್ಮಕ್ಕುಂಟುಮಾಡಬೇಡಿ!
ಡೆ, ನುಡಿಯೊಂದಾಗಿ ಸೇವೆ ಮಾಡಿ! (ಒ)
-ಮ್ಮತಕ್ಕಾಗಡ್ಡದಾರಿ ಹಿಡ್ಯಬೇಡಿ!
ಕೈ ಸೇರುವುದಿಷ್ಟ! ಸಂದೇಹಬೇಡಿ!
ರ್ವದಿಂದ ಪತಿತರಾಗಬೇಡಿ! (ಹು)
-ಟ್ಟಿದ್ದು ಸಾರ್ಥಕವಾಗುವಂತೆ ಮಾಡಿ!
ಮಾನಾವಮಾನ ಶಿವಾರ್ಪಣ ಮಾಡಿ! (ಕೂ)
-ಡಿ ನಿರಂಜನಾದಿತ್ಯನೊಡನಾಡಿ!!!

ಆರೆಂತಿರಬೇಕೆಂದರಿತವರಾರು?

ರೆಂಬೆಯ ಕೊಬೆಗಂಟಿಸಿದವರಾರು?
ತಿರೆಯಲ್ಲಿ ನೀರಿರಿಸಿದವರಾರು?
ಮ್ಯ ರಂಗಲರ್ಗಳಿಗಿತ್ತವರಾರು?
ಬೇಸರಾನಂದ ಮನಕ್ಕಿತ್ತವರಾರು?
ಕೆಂಡದಲ್ಲುರಿಯಿರಿಸಿದವರಾರು?
ತ್ತ ಗುರು ಚಿತ್ತವಲ್ಲದೆ ಮತ್ಯಾರು? (ಇ)
-ರಿಸಿದಂತಿರದಿದ್ದರೆ ಕೇಳ್ವರಾರು?
ತ್ವವಿದರಿತರೆ ದುಃಖಿಗಳಾರು?
ರ ಪರಬ್ರಹ್ಮಾನಂದಕ್ಕಿದಿರಾರು?
ರಾಮ ರಾಮೆನುತವನಲ್ಲೊಂದಾಗಿರು! (ಇ)
-ರು ನಿರಂಜನಾದಿತ್ಯನಿಷ್ಟವೆಂದಿರು!!!

ಬೆತ್ತಲೆಯಾಗಿ ಬಂದೆನ್ನ ಸೇರೇ! (ಅ)

-ತ್ತ ಇತ್ತೆತ್ತೆತ್ತೋಡಬೇಡ ಬಾರೇ! (ತ)
-ಲೆಯಾರಿಸಿಕೊಂಡು ಬೇಗ ಬಾರೇ!
ಯಾವಲಂಕಾರವೂ ಬೇಡ ಬಾರೇ (ಕೂ)
-ಗಿ ಗಂಟಲೊಣಗಿತೋಡಿ ಬಾರೇ!
ಬಂದೆ ಬಂದೆಂದೆಲ್ಲೋ ಹೋದೆ, ಬಾರೇ! (ಕಾ)
-ದೆನಗೆ ಸಾಕಾಯ್ತಿನ್ನಾದ್ರೂ ಬಾರೇ! (ನಿ)
-ನ್ನವಿವೇಕ ಸುಟ್ಟುಬಿಟ್ಟು ಬಾರೇ!
ಸೇರಿದರಾಮೇಲೆ ಹೋಗಲಾರೇ! (ಬಾ)
-ರೇ, ನಿರಂಜನಾದಿತ್ಯನ ಸೇರೇ!!!

ರೋಗ ಬೇಗ ವಾಸಿಯಾಗಬೇಕು! (ಯೋ)

-ಗ, ತ್ಯಾಗ ಸಫಲವಾಗಬೇಕು!
ಬೇರೆ ವ್ಯವಹಾರ ಸಾಯಬೇಕು! (ಹ)
-ಗಲಿರುಳು ಧ್ಯಾನ ಸಾಗಬೇಕು!
ವಾಙ್ಮನಸುಗಳೊಂದಾಗಬೇಕು!
ಸಿಟ್ಟು ಹುಟ್ಟಡಗಿ ಹೋಗಬೇಕು! (ಮಾ)
-ಯಾ ಮೋಹ ನಿರ್ನಾಮವಾಗಬೇಕು! (ರಾ)
-ಗ, ದ್ವೇಷಗಳಿಲ್ಲದಾಗಬೇಕು!
ಬೇಡ ಕಣ್ಣಪ್ಪನಂತಾಗಬೇಕು! (ಬೆ)
-ಕು ನಿರಂಜನಾದಿತ್ಯ ತಾ ಬೇಕು!!!

ಅಚ್ಚುಕಟ್ಟು ಆರ್ಯರಾಚಾರಚ್ಚುಕಟ್ಟು (ಹು)

-ಚ್ಚು ಹರಟೆ ಬಿಟ್ಟನುಷ್ಠಾನಚ್ಚುಕಟ್ಟು!
ರ್ಮ, ಧರ್ಮ, ನೇಮ, ನಿಷ್ಠೆಯಚ್ಚುಕಟ್ಟು! (ಒ)
-ಟ್ಟು ಸೇರಿಹಪರ ಸಾಧಿಪಚ್ಚುಕಟ್ಟು!
ದರೋಪಚಾರಾತ್ಮಭಾವಚ್ಚುಕಟ್ಟು! (ಧೈ)
-ರ್ಯ, ಸ್ಥೈರ್ಯವರ್ಧಕ ದಾರಿಯಚ್ಚುಕಟ್ಟು!
ರಾಜ, ಮಂತ್ರಿಯಾಳುಗಳೈಕ್ಯಚ್ಚುಕಟ್ಟು!
ಚಾಡಿ, ಚೌರ್ಯಕ್ಕೆಡೆಗೊಡದಚ್ಚುಕಟ್ಟು! (ವ)
-ರ ಗುರುಭಕ್ತಿ ಪಿರಿದೆಂಬಚ್ಚುಕಟ್ಟು! (ಬಿ)
-ಚ್ಚು ಹೃದಯದುಚ್ಛ ಭಾವದಚ್ಚುಕಟ್ಟು!
ಷ್ಟ, ಸುಖ ಪ್ರಸಾದವೆಂಬಚ್ಚುಕಟ್ಟು! (ಗು)
-ಟ್ಟು ನಿರಂಜನಾದಿತ್ಯ ಪ್ರೇಮಚ್ಚುಕಟ್ಟು!!!

ಸರ್ವಾಧಾರಾಗಿಹಗಾವಾಧಾರ? (ಓ)

-ರ್ವಾತ್ಮ ವಿಶ್ವವ್ಯಾಪಿಗಾವಾಧಾರ?
ಧಾರಾಕಾರ ವ್ಗದಾಧಾರ!
ರಾಗ, ದ್ವೇಷ ನಾಶಕ್ಕದಾಧಾರ! (ಯೋ)
-ಗಿ ಯಾಗಬೇಕಾದರದಾಧಾರ!
ರಿ, ಹರರಜರ್ಗದಾಧಾರ!
ಗಾಳಿ, ಬಿಸಿಲಿಗೆಲ್ಲದಾಧಾರ!
ವಾಸುದೇವ ವಸುಧೆಗಾಧಾರ!
ಧಾತ್ರಿ ಚರಾಚರಕ್ಕೆಲ್ಲಾಧಾರ! (ವ)
-ರ, ನಿರಂಜನಾದಿತ್ಯಾತ್ಮಾಧಾರ!!!

ಬಣ್ಣದ ಬದುಕು ಸಾಕು ಮಾಡಮ್ಮಾ! (ಸ)

-ಣ್ಣವಳು ನೀನೆನ್ನ ಮಾತು ಕೇಳಮ್ಮಾ!
ಯಾನಿಧಿ ಗುರುರಾಜ ಕಾಣಮ್ಮಾ!
ಳಲಿಹೆ ಬಹುಕಾಲದಿಂದಮ್ಮಾ!
ದುರ್ವಿಷಯದಿಂದ ಸುಖವಿಲ್ಲಮ್ಮಾ!
ಕುಪಿತಳಾಗದಿರೆನ್ನ ಮೇಲಮ್ಮಾ!
ಸಾಧಿಸಿ ನನ್ನಂತೆ ಸುಖಿಯಾಗಮ್ಮಾ!
ಕುಲಶೀಲ ನಿರ್ಮಲವಾಗಲಮ್ಮಾ!
ಮಾಯಾಜಾಲಕ್ಕೆ ಬೀಳಬಾರದಮ್ಮಾ! (ತ)
-ಡ ಮಾಡದೆರಗು ಶ್ರೀಪಾದಕ್ಕಮ್ಮಾ! (ಅ)
-ಮ್ಮಾ ಸದ್ಗುರು ನಿರಂಜನಾದಿತ್ಯಮ್ಮಾ!!!

ದೇಹ ನಾನಲ್ಲ, ಸಾವು ನನಗಿಲ್ಲ!

ಸ್ತ, ಪಾದಗಳಧೀನ ನಾನಿಲ್ಲ!
ನಾಮ, ರೂಪಗಳ ಶಾಶ್ವತವಲ್ಲ!
ಯನ, ನಾಸಿಕಕಾಳು ನಾನಲ್ಲ! (ಎ)
-ಲ್ಲ ವಿಚಿತ್ರವಾಗಿ ತೋರುವುದಲ್ಲ!
ಸಾಕು, ಬೇಕೆಂಬ ವೃತ್ತಿನನಗಿಲ್ಲ! (ಬೇ)
-ವು, ಬೆಲ್ಲದಲಿ ಭೇದ ಕಾಣೆನಲ್ಲ!
ರ, ನಾರಿಯರಲ್ಲಾನಿಹೆನ್ನಲ್ಲ!
ಪುಂಸಕನಲ್ಲೂ ನಾನಿದ್ದೇನಲ್ಲ!
ಗಿರಿ-ನದಿಗಳಲ್ಲೂ ಇರ್ಪೆನಲ್ಲ! (ಅ)
-ಲ್ಲ, ನಿರಂಜನಾದಿತ್ಯಾತ್ಮನೆಲ್ಲಿಲ್ಲ???

ಬಹು ಬಯಕೆ ಬಸರಿಗೆ ಧಕ್ಕೆ!

ಹುರಿದ ಪದಾರ್ಥಾರೋಗ್ಯಕ್ಕೆ ಧಕ್ಕೆ!
ರಗಾಲದಿಂದ ಶಾಂತಿಗೆ ಧಕ್ಕೆ!
ಮವಿರದಿರೆ ಕಾರ್ಯಕ್ಕೆ ಧಕ್ಕೆ!
ಕೆಸರಾಧಿಕ್ಯ ಮೊಳಕೆಗೆ ಧಕ್ಕೆ!
ಲಹೀನತೆ ವಿಜಯಕ್ಕೆ ಧಕ್ಕೆ!
ಸಿಡುಕಿಂದ ಬಡವನಿಗೆ ಧಕ್ಕೆ!
ರಿಪುಗಳಿಂದ ಸ್ವರೂಪಕ್ಕೆ ಧಕ್ಕೆ! (ಕಾ)
-ಗೆಗಳ ಸಂಗ ಕೋಗಿಲೆಗೆ ಧಕ್ಕೆ!
ನದಾಸೆ ನಿತ್ಯ ಸುಖಕ್ಕೆ ಧಕ್ಕೆ! (ಧ)
-ಕ್ಕೆ ನಿರಂಜನಾದಿತ್ಯಂಧಕಾರಕ್ಕೆ!!!

ಕಣ್ಣು ಮಂಜಾದರೆ ಬೇಕು ಸೂರ್ಮ! (ಹು)

-ಣ್ಣು ಮಾಯಲಿಕಿಕ್ಕ ಬೇಕು ಸೂರ್ಮ!
ಮಂಗನಂತಾದಾಗ ಬೇಕು ಸೂರ್ಮ!
ಜಾಗ್ರತನಾಗಲು ಬೇಕು ಸೂರ್ಮ! (ಮ)
-ದವಿಳಿಸಲಿಕ್ಕೆ ಬೇಕು ಸೂರ್ಮ! (ಬ)
-ರೆಯುವ ಚಿತ್ರಕ್ಕೆ ಬೇಕು ಸೂರ್ಮ!
ಬೇನೆ ಶಮನಕ್ಕೆ ಬೇಕು ಸೂರ್ಮ!
ಕುಲಾಂಗನೆಯಿಕ್ಕ ಬೇಕು ಸೂರ್ಮ! (ಪ್ರ)
-ಸೂತ ಸ್ತ್ರೀಯರಿಕ್ಕ ಬೇಕು ಸೂರ್ಮ! (ಧ)
-ರ್ಮ, ನಿರಂಜನಾದಿತ್ಯಗಾ ಸೂರ್ಮ!!!

ನಾನಿರುವಂತೆ ನೀನೂ ಇರು!

ನಿರ್ವಿಕಲ್ಪ ಭಾವದಿಂದಿರು!
ರುಚಿಯೂಟ ಆಶಿಸದಿರು!
ವಂಚಿಸುವಭ್ಯಾಸ ಬಿಟ್ಟಿರು!
ತೆರೆಮರೆಯ ಕಾಯಂತಿರು!
ನೀಚರ ಸಂಗ ಮಾಡದಿರು!
ನೂರಾರು ಸಂಕಲ್ಪ ಸುಟ್ಟಿರು!
ರಿಸಿದಂತಿದ್ದುಕೊಂಡಿರು! (ಗು)
-ರು ನಿರಂಜನಾರ್ಕನಂತಿರು!!!

ಅರಿತು ಸೇವೆ ಮಾಡಬೇಕು! (ಬ)

-ರಿಯುಪಚಾರ ಬಿಡಬೇಕು! (ಮಾ)
-ತುಗಳು ಕಮ್ಮಿಯಾಗಬೇಕು!
ಸೇವಾತ್ಮ ಭಾವದಿಂದಾಗ್ಬೇಕು! (ಗೈ)
-ವೆನಾನೆಂಬ ಗರ್ವ ಸುಡ್ಬೇಕು!
ಮಾಧವನ ಧ್ಯಾನ ಸಾಗ್ಬೇಕು! (ಒ)
-ಡಲಿನಾಸೆ ನಿಲಿಸಬೇಕು!
ಬೇಸರವಿರದಿರಬೇಕು! (ಬೇ)
-ಕು, ನಿರಂಜನಾದಿತ್ಯಬೇಕು!!!

ನಾನಾರೆಂದರಿಯದವರಾರಾದರೇನು?

ನಾಮ, ರೂಪಕ್ಕಂಟಿಕೊಂಡಿರ್ಪವರಿಂದೇನು? (ಯಾ)
-ರೆಂದರಿಯದ ಜ್ಞಾನಿಗಳೇನೆಂದರೇನು?
ನ, ಜನ, ಧನವಂತರಾದರಾಯ್ತೇನು? (ಪ)
-ರಿಪರಿಯಲಿಹಸುಖ ಪಟ್ಟರಾಯ್ತೇನು?
ಜ್ಞ, ಯಾಗಗಳಾಟ ಹೂಡಿದರಾಯ್ತೇನು?
ಯಾಶೂನ್ಯರಾದವರಿಗೇನಿದ್ದರೇನು?
ರ ಗುರುಸೇವಗೀ ಜನ್ಮವಲ್ಲವೇನು?
ರಾಮಾಯಣ ಬರೆದವ ಸಾಮಾನ್ಯನೇನು?
ರಾಮಭಕ್ತ ಮಾರುತಿಗುಪಮಾನವೇನು?
ತ್ತಾತ್ರೇಯನಿಷ್ಟದಂತಿರಬಾರದೇನು?
ರೇಣುಕಾತ್ಮಜನಾದರ್ಶನುಚಿತವೇನು? (ಏ)
-ನು, ನಿರಂಜನಾದಿತ್ಯನರಿವಾಗದೇನು???

ಸ್ವಾವಲಂಬಿಗೆಲ್ಲೆಲ್ಲೂ ಸ್ಥಾನ! (ಅ)

-ವನಿಗನುಚಿತಾವ ಸ್ಥಾನ?
ಲಂಚ ಬಿಟ್ಟರೆಲ್ಲಾ ಸ್ವಸ್ಥಾನ!
ಬಿಸಿಯೂಟವೀವುದಾ ಸ್ಥಾನ! (ಬ)
-ಗೆಬಗೆಯಾಸೆಗಾವ ಸ್ಥಾನ? (ಹು)
-ಲ್ಲೆಗೆಲ್ಲಿರುವುದೊಂದೇ ಸ್ಥಾನ? (ಹು)
-ಲ್ಲೂ, ನೀರೂ ಇದ್ದರದೇ ಸ್ಥಾನ!
ಸ್ಥಾನದೇ ಗೋಪಾಲನ ಸ್ಥಾನ! (ಜ್ಞಾ)
-ನ ನಿರಂಜನಾದಿತ್ಯ ಸ್ಥಾನ!!!

ಗಣರಾಜ್ಯಾಧಿಪ ಗಣಪ! (ಗ)

-ಣ ಹಿತಚಿಂತಕ ಗಣಪ!
ರಾಜಭೋಗ ತ್ಯಾಗ ಗಣಪ! (ಭೋ)
-ಜ್ಯಾನಂದ ಪ್ರದಾತ ಗಣಪ! (ವ್ಯಾ)
-ಧಿಹರ ವೈದ್ಯಶ ಗಣಪ!
ತಿತ ಪಾವನ ಗಣಪ!
ಗನ ಸಮಾನ ಗಣಪ! (ಗು)
-ಣ ದೋಷ ಬಲ್ಲವ ಗಣಪ! (ದೀ)
-ಪ ನಿರಂಜನಾದಿತ್ಯಾಧಿಪ!!!

ತರತರ ಹೂಗಳೊಂದು ಮಾಲೆ! (ವ)

-ರ ಗುರುವಿಗೆಲ್ಲಾ ಬಾಲಲೀಲೆ!
ನು, ಮನೇಂದ್ರಿಯಗಳ ಲೀಲೆ!
ಸ, ಕಸವೆಲ್ಲಾ ಸಮ ಲೀಲೆ!
ಹೂಡಿ ಗುರಿ ಸೇರಿಸುವ ಲೀಲೆ!
ಣಪತಿಯ ವಿಚಿತ್ರ ಲೀಲೆ! (ಬಾ)
-ಳೊಂದವನಿಗತ್ಯಾನಂದ ಲೀಲೆ!
ದುಃಖ, ಸುಖವೇಕರಸ ಲೀಲೆ!
ಮಾತಡಗಲಾತ್ಮಾರಾಮ ಲೀಲೆ! (ಮಾ)
-ಲೆ, ಶ್ರೀ ನಿರಂಜನಾದಿತ್ಯ ಲೀಲೆ!!!

ಯಾರು ಯಾರಲ್ಲೇಕತೃಪ್ತರಾಗಬೇಕು? (ಗು)

-ರುವೆಲ್ಲರಲ್ಲಿಹನೆಂಬ ಜ್ಞಾನಬೇಕು!
ಯಾರಿಂದಾಯ್ತಾಯಾಸವೆಂದರಿಯಬೇಕು! (ಕಾ)
-ರಣ ತಾನೇ ಎಂದು ಮನಗಾಣಬೇಕು! (ಉ)
-ಲ್ಲೇಖಿಸದೆ ಸರಿ ಮಾಡಿಕ್ಕೊಳ ಬೇಕು!
ಷ್ಟವಾದರೂ ತಾಳ್ಮೆಯಿಂದಿರಬೇಕು!
ತೃಪ್ತಿ ತನಗದರಿಂದ ಬರಬೇಕು! (ಗು)
-ಪ್ತವಾಗಿ ಸಾಧನೆ ಸಾಗುತ್ತಿರಬೇಕು!
ರಾಮಭಕ್ತಿ ನಿಶ್ಚಲವಾಗಿರಬೇಕು!
ತಿ ಸ್ವಸ್ಥಿತಿಯಲ್ಲಿ ನೆಲಸಬೇಕು!
ಬೇಕಿದಕೆ ಗುರುಕೃಪೆಯೊಂದೇಬೇಕು!
ಕುಷ್ಠ ನಿರಂಜನಾದಿತ್ಯಳಿಸಬೇಕು!!!

ಶ್ರೀಯರಸಗಿಷ್ಟ ಧ್ಯಾನಮಿಂಚು! (ಧ್ಯೇ)

-ಯ ಸಿದ್ಧಿಗಾಧಾರ ಧ್ಯಾನಮಿಂಚು! (ವ)
-ರ ಗುರು ವಚನ ಧ್ಯಾನಮಿಂಚು!
ರ್ವ ಸಮನ್ವಯ ಧ್ಯಾನಮಿಂಚು! (ಯೋ)
-ಗಿಗಮೃತಪಾನ ಧ್ಯಾನಮಿಂಚು! (ಕ)
-ಷ್ಟ ಜೀವರ ಮಿತ್ರ ಧ್ಯಾನಮಿಂಚು!
ಧ್ಯಾನ, ಜ್ಞಾನಸಾರ ಧ್ಯಾನಮಿಂಚು! (ಸ್ಥಾ)
-ನ, ಮಾನ, ವರ್ಧಕ ಧ್ಯಾನಮಿಂಚು! (ಪ್ರೇ)
-ಮಿಂಗಿಂಚರ ಗಾನ ಧ್ಯಾನಮಿಂಚು! (ಹಂ)
-ಚು, ನಿರಂಜನಾರ್ಕ ಧ್ಯಾನಮಿಂಚು!!!

ಧನಘಳಿಸುವುದು ಕಷ್ಟವಲ್ಲ! (ಮ)

-ನವೊಲಿಸುವುದು ಸುಲಭವಲ್ಲ! (ಸಂ)
-ಘ ಕಟ್ಟುವುದು ಕಠಿಣವೇನಲ್ಲ! (ಉ)
-ಳಿಸಿಕೊಳ್ಳಲಿಕಿದು ಕಾಲವಲ್ಲ! (ಹ)
-ಸು ಕೊಂಡುಕೊಳ್ಳುವುದು ಶ್ರಮವಲ್ಲ! (ಮೇ)
-ವು ಒದಗಿಸಲಸೌಕರ್ಯವೆಲ್ಲ!
ದುರ್ವಿದ್ಯೆ ಫಲಿಸಿ ಸುಖವೇನಿಲ್ಲ!
ಲಿಮಲ ಹೋದರೆ ದುಃಖವಿಲ್ಲ! (ಇ)
-ಷ್ಟ ಶ್ರೀಕೃಷ್ಣನಾದರೆ ತಂಟೆಯಿಲ್ಲ!
ರದರಾಜನವ ಲೋಕಕ್ಕೆಲ್ಲ! (ಗೊ)
-ಲ್ಲ, ನಿರಂಜನಾದಿತ್ಯ ಊರಿಗೆಲ್ಲ!!!

ಸದ್ಗುರು ಗಣಾಧಿಪನಾಗಯ್ಯಾ! [ಸ]

-ದ್ಗುರುವಿಗೆ ಕಿಂಕರನಾಗಯ್ಯಾ! (ಹ)
-ಣ, ಕಾಸು, ಬೇಡದವನಾಗಯ್ಯಾ!
ರ್ವರಹಿತ ಭಕ್ತನಾಗಯ್ಯಾ! (ಪ್ರಾ)
-ಣಾಧಾರಕ್ಕುಣುವುವನಾಗಯ್ಯಾ! (ದ)
-ಧಿಯನ್ನಾಶಿಸದವನಾಗಯ್ಯ! (ಅ)
-ಪಚಾರ ಮಾಡದವನಾಗಯ್ಯಾ! (ಜ)
-ನಾರ್ಧನನಾಜ್ಞಾಬದ್ಧನಾಗಯ್ಯಾ! (ಹ)
-ಗಲಿರುಳಾತ್ಮ ಸ್ಥಿತನಾಗಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನಾಗಯ್ಯಾ!!!

ಶಾಂತಿ ಕೆಟ್ಟರಾರಿಗೆ ಸುಖವಯ್ಯಾ? [ಮ]

-ತಿಗೆಟ್ಟ ಮೇಲಿನ್ನೇನು ಸುಖವಯ್ಯಾ?
ಕೆಟ್ಟೂಟಟ್ಟರಾರಿಗೆ ಸುಖವಯ್ಯಾ? (ಹು)
-ಟ್ಟಡಗದಿದ್ದರೇನು ಸುಖವಯ್ಯಾ?
ರಾಗಿಯಾದರಾರಿಗೆ ಸುಖವಯ್ಯಾ? (ಆ)
-ರಿ ಹರಿಯಾದರೇನು ಸುಖವಯ್ಯಾ? (ಹೊ)
-ಗೆ ಸುತ್ತಿದರಾರಿಗೆ ಸುಖವಯ್ಯಾ?
ಸುಟ್ಟ ಬಟ್ಟೆಯಿಂದೇನು ಸುಖವಯ್ಯಾ?
ದ್ಯೋತಾಘಾತಾರಿಗೆ ಸುಖವಯ್ಯಾ? (ಜೀ)
-ವ ಭಾವವಿದ್ದರೇನು ಸುಖವಯ್ಯಾ? (ಅ)
-ಯ್ಯಾ ನಿರಂಜನಾದಿತ್ಯ ಸುಖವಯ್ಯಾ!!!

ವಿಮಲಾಕ್ಷಿಯರಿವು ನಿಜರೂಪ! [ಕ]

-ಮಲಾಕ್ಷಿಗದಾಗ್ವುದು ಹರಿರೂಪ! (ಫಾ)
-ಲಾಕ್ಷೀಕ್ಷಿಸುವುದು ಪ್ರಳಯರೂಪ! (ಸಾ)
-ಕ್ಷಿ ಸದಾ ಸಚ್ಚಿದಾನಂದ ಸ್ವರೂಪ! (ಭ)
-ಯಹರವಿದಮರ ವಿಶ್ವರೂಪ! (ಹ)
-ರಿ, ಹರ, ಅಜರೆಲ್ಲಾ ಇದೇ ರೂಪ! (ನೋ)
-ವು, ಸಾವಿಲ್ಲದಾಕಾರೋಂಕಾರ ರೂಪ!
ನಿತ್ಯ ಸುಖಪ್ರದವೀ ಗುರು ರೂಪ!
ರಾ, ಜನ್ಮ ರಹಿತ ಸ್ಥಿರರೂಪ!
ರೂಪ, ನಾಮಾತೀತಾತ್ಮಾ ರಾಮರೂಪ! (ರೂ)
-ಪರಾ ನಿರಂಜನಾದಿತ್ಯ ರೂಪ!!!

ನೆಟ್ಟಲ್ಲಿ ಬೇರೂರಿಕೊಳ್ಳಬೇಕು! [ಸೊ]

-ಟ್ಟವಾಗಿ ಬೆಳೆಯದಿರಬೇಕು! (ಎ)
-ಲ್ಲಿದ್ದರೂ ಪೂಜಾರ್ಹವಾಗಬೇಕು!
ಬೇನೆಗಳು ಗುಣವಾಗಬೇಕು! (ಆ)
-ರೂಢನಾಗಿ ಸಿದ್ಧನಾಗಬೇಕು!
ರಿಪುಗಳಡಗಿ ಹೋಗಬೇಕು!
ಕೊಡುಗೈ ಸುತ್ತಲೂ ಕಾಣಬೇಕು! (ಕ)
-ಳ್ಳಕಾಕರು ಸುಧಾರಿಸಬೇಕು!
ಬೇಡುವ ಕೈ ಮಾಯವಾಗಬೇಕು! (ಬೇ)
-ಕು, ನಿರಂಜನಾದಿತ್ಯಾತ್ಮವಾಕು!!!

ನೋಯಿಸಬೇಡ ನಿನ್ನ ಪತಿಯನ್ನು! (ತಾ)

-ಯಿ, ತಂದೆ, ಬಂಧುವೆಂದರ್ಯವನನ್ನು!
ದಾ ಸ್ಮರಿಸವನ ಪಾದವನ್ನು!
ಬೇರೇನೂ ಯೋಚಿಸಬೇಡ ನೀನಿನ್ನು! (ಒ)
-ಡಗೂಡ್ಯಾನಂದ ಪಡಿಸವನನ್ನು!
ನಿನಗವನಲ್ಲದೆ ಗತ್ಯಾರಿನ್ನು? (ಉ)
-ನ್ನತಿಗೆ ಪಾಲಿಸವನಾಜ್ಞೆಯನ್ನು!
ರಿಹರಿಪನೆಲ್ಲಾ ಕಷ್ಟವನ್ನು!
ತಿಳಿ, ಅವನಿಷ್ಟವೇನೆಂಬುದನ್ನು! (ಧ್ಯೇ)
-ಯ ಸಿದ್ಧಿಗಾಗಿ ನಂಬು ಅವನನ್ನು! (ಇ)
-ನ್ನು ನಿರಂಜನಾದಿತ್ಯ ಗತಿಯೆನ್ನು!!!

ಕೈ ಬಿಡಬೇಡ ಕಾಂತೆಯನ್ನು!

ಬಿರು ನುಡಿಯಾಡದಿರಿನ್ನು! (ದೂ)
-ಡದಿರು ಹೊರಗವಳನ್ನು!
ಬೇರಾರಿಹರವಳಿಗಿನ್ನು? (ಒ)
-ಡಗೂಡಿ ಸೇವೆ ಸಾಗಲಿನ್ನು!
ಕಾಂಚಿ ಕಾಮಾಕ್ಷಿ ತಾನಾಗಿನ್ನು!
ತೆಗಿಸು ಬೇಗ ತೆರೆಯನ್ನು! (ಕಾ)
-ಯ ಮನದಿಷ್ಟ ಸಲಿಸಿನ್ನು! (ಚೆ)
-ನ್ನು ನಿರಂಜನಾದಿತ್ಯಾಂಗಿನ್ನು!!!

ಸಂಗಾತಿಯ ಕರೆದುಂಬುದಮ್ಮ ಕಾಗೆ! (ತ)

-ಗಾದೆ ಮಾಡಿಕ್ಕಿಸಿಕೊಂಬುದಮ್ಮ ಕಾಗೆ!
ತಿನುತ ಹಾರಿಹೋಗುವುದಮ್ಮ ಕಾಗೆ! (ನಿ)
-ಯಮಭಂಗ ಮಾಡುವುದಿಲ್ಲಮ್ಮ ಕಾಗೆ!
ರೆಗೆ ಕಾದಿರುವುದಿಲ್ಲಮ್ಮ ಕಾಗೆ!
ರೆಕ್ಕೆ ಬಡಿದೆಚ್ಚರಿಪುದಮ್ಮ ಕಾಗೆ! (ಕಾ)
-ದುಂಡಲ್ಲದೆ ಎಲ್ಲೂ ಹೋಗದಮ್ಮ ಕಾಗೆ!
ಬುದ್ಧಿ ಕಲಿಸುತಿದೆಮಗಮ್ಮ ಕಾಗೆ!
ತ್ತ ಸ್ವರೂಪವೆಂದರಿಯಮ್ಮ ಕಾಗೆ! (ತ)
-ಮ್ಮವರ ಪ್ರೇಮಕ್ಕಾದರ್ಶವಮ್ಮ ಕಾಗೆ!
“ಕಾ” ಎಂದೀ ಸಂದೇಶವೀವುದಮ್ಮ ಕಾಗೆ! (ಕಾ)
-ಗೆ ನಿರಂಜನಾದಿತ್ಯಾನಂದಮ್ಮ ಕಾಗೆ!!!

ಪ್ರಸಾದಕ್ಕಳುವುದಕ್ಕಾ ಬೆಕ್ಕು!

ಸಾಮಾನ್ಯವೆನ ಬೇಡಕ್ಕಾ ಬೆಕ್ಕು!
ತ್ತನದೊಂದು ರೂಪಕ್ಕಾ ಬೆಕ್ಕು! (ಮ)
-ಕ್ಕಳಿಗಿಂತಕ್ಕರೆಯಕ್ಕಾ ಬೆಕ್ಕು! (ಹಾ)
-ಲು ಹಳಸ್ಲುತಿನ್ನದಕ್ಕಾ ಬೆಕ್ಕು! (ಹಾ)
-ವು ಹಲ್ಲಿಗಳಂತಕಕ್ಕಾ ಬೆಕ್ಕು! (ಅ)
-ದರ ಸ್ಪರ್ಶಕ್ಕೊಪ್ಪದಕ್ಕಾ ಬೆಕ್ಕು! (ಲೆ)
-ಕ್ಕಾಚಾರದಂತಿರ್ಪುದಕ್ಕಾ ಬೆಕ್ಕು!
ಬೆರೆಯದಾರೊಂದಿಗಕ್ಕಾ ಬೆಕ್ಕು! (ಇ)
-ಕ್ಕು, ನಿರಂಜನಾದಿತ್ಯಾ ತ್ಮಾ ಬೆಕ್ಕು!!!

ಬಾಗಿಲು ಕಾಯುತಿದೆ ಕರಿ ನಾಯಿ! (ರೇ)

-ಗಿದರೂ ಪ್ರೀತಿ ತೋರವುದಾ ನಾಯಿ! (ಕಾ)
-ಲು ಕೈ, ನೆಕ್ಕಿ ಕುಣಿಯುವುದಾ ನಾಯಿ!
ಕಾಡಿ ಕದ್ದು, ತಿನ್ನುವುದಿಲ್ಲಾ ನಾಯಿ!
ಯುಕ್ತ ವೇಳೆಗೆ ಬರುವುದಾ ನಾಯಿ!
ತಿನಿಸಿದ್ದು ತಿಂದಿರುವುದಾ ನಾಯಿ! (ಇ)
-ದೆಲ್ಲರ ಪ್ರೀತಿ ಪಾತ್ರವಾದಾ ನಾಯಿ!
ಷ್ಟಕ್ಕಂಜಿ ಕರ್ಮ ಬಿಡದಾ ನಾಯಿ! (ವೈ)
-ರಿಯನ್ನೊಳಗೆ ಸೇರಿಸದಾ ನಾಯಿ!
ನಾಗರಾಜ ಸ್ವಾಮಿ ಪ್ರೇಮಿಯಾ ನಾಯಿ! (ನಾ)
-ಯಿ, ನಿರಂಜನಾದಿತ್ಯನುಯಾಯಿ!!!

ದೋಸೆ ಆಸೆ ಅನಾರೋಗ್ಯ ಕೂಸೇ! (ಕಿ)

-ಸೆಯಲ್ಲಿ ಸದಾ ಅದೇನು ಕೂಸೇ?
ಗಾಗ್ಗೇನೂ ತಿನ್ನಬೇಡ ಕೂಸೇ! (ಸೀ)
-ಸೆಯಲ್ಲಿ ಹಾಲಿದೆ ಕುಡಿ ಕೂಸೇ!
ಡೆ, ವಡೆ ಮೈಗಾಗದು ಕೂಸೇ! (ಅ)
-ನಾನಾಸು, ಕಿತ್ತಳೆ ತಿನ್ನು ಕೂಸೇ!
ರೋಗಿಯಾಗದಂತೆ ಇರು ಕೂಸೇ! (ಯೋ)
-ಗ್ಯವಿದು ಪರಮ ಭಾಗ್ಯ ಕೂಸೇ!
ಕೂಡ್ಯಾಡುತ್ತಮರೊಡನೆ ಕೂಸೇ!
ಸೇರು ನಿರಂಜನಾದಿತ್ಯ ಕೂಸೇ!

ದೂರ ವಿರಸಿದರೆ ಕ್ಷೇಮ! (ಪ)

-ರ ದಾಸ್ಯವಿರದಿರೆ ಕ್ಷೇಮ!
ವಿಷಯಾಸೆಬಿಟ್ಟರೆ ಕ್ಷೇಮ! (ಹ)
-ರಿ ನಾಮ ಹಾಡಿದರೆ ಕ್ಷೇಮ!
ಸಿಟ್ಟು ಸುಟ್ಟು ಬಿಟ್ಟರೆ ಕ್ಷೇಮ!
ಯಾ ಬುದ್ಧಿಯಿದ್ದರೆ ಕ್ಷೇಮ! (ನೆ)
-ರೆ ಭಕ್ತರಾದರೆ ಕ್ಷೇಮ!
ಕ್ಷೇತ್ರಜ್ಞ ತಾನಾದರೆ ಕ್ಷೇಮ! (ಕ್ಷೇ)
-ಮ ನಿರಂಜನಾದಿತ್ಯ ಧಾಮ!!!

ದಿವ್ಯ ಚಿತ್ತಕ್ಕೆ ಎಲ್ಲಾ ಸಾಧ್ಯ, ವೇದ್ಯ! (ಅ)

-ವ್ಯವಸ್ಥೆಯಿಲ್ಲದದಕ್ಕೆಲ್ಲಾ ಸಾಧ್ಯ!
ಚಿದಾಕಾಶ ಸೂರ್ಯನಿಗೆಲ್ಲಾ ವೇದ್ಯ! (ಬೆ)
-ತ್ತಲೆ ನಿಲಿಸಲವನಿಗೇ ಸಾಧ್ಯ! (ಹ)
-ಕ್ಕೆನಗಿಹುದೆಂಬುದವಗೇ ವೇದ್ಯ
ಡರಡಗಿಪುದವಗೇ ಸಾಧ್ಯ! (ಎ)
-ಲ್ಲಾರಿರ ಬೇಕೆಂಬುದವಗೇ ವೇದ್ಯ!
ಸಾಕಾರ, ನಿರಾಕಾರವಗೇ ಸಾಧ್ಯ! (ದ)
-ಧ್ಯಲ್ಲಿಹ ನವನೀತವಗೇ ವೇದ್ಯ!
ವೇಳ ವೇಳೆಯರಿತವಗೇ ಸಾಧ್ಯ! (ಪಾ)
-ದ್ಯ, ನಿರಂಜನಾದಿತ್ಯಗೆ ನೈವೇದ್ಯ!!!

ಒದ್ದೆ ಸೀರೆಯಲೋಡಲಾಗುವುದಿಲ್ಲ! (ಇ)

-ದ್ದೆಲ್ಲವನಾಗ ಕೆತ್ತುಕೊಳ್ಳುವೆನಲ್ಲ!
ಸೀರೆಯಾರುವಾಗ ಪರಾರಿ ನಾನಾಲ್ಲ! (ಬೇ)
-ರೆ ಸಹಾಯಕರಾಕೆಗಲ್ಲಿಲ್ಲವಲ್ಲ! (ಮಾ)
-ಯಗಾರನಾ ಯೋಚನೆ ಫಲಿಸಲಿಲ್ಲ!
ಲೋಕನಾಥ ತಾನೇ ಕಾಪಾಡಿದನಲ್ಲ! (ಬಿ)
-ಡನವನೆಂದಿಗೂ ಶರಣರನೆಲ್ಲ! (ಲೀ)
-ಲಾ ಮೂರ್ತಿ ರಂಗನಾಥನಾಗಿಹನಲ್ಲ!
ಗುರುದೇವನವ ಭೂಮಂಡಲಕ್ಕೆಲ್ಲ! (ಆ)
-ವುದೂ ಅವನಾಜ್ಞೆಯಿಲ್ಲದಾಗದಲ್ಲ!
ದಿನ ರಾತ್ರಿಯವನ ನೆನೆಯಿರೆಲ್ಲ! (ಅ)
-ಲ್ಲ, ನಿರಂಜನಾದಿತ್ಯ ಕಣ್ಣು ಮುಚ್ಚಿಲ್ಲ!!!

ಚಪಲ ವಿಫಲ ಕಾಪಾಲಿಯಿಂದ!

ರಮ ವೈರಾಗ್ಯ ಯೋಗೀಶ ನಿಂದ! (ಕಾ)
-ಲ ಭೈರವ ಪರಮೇಶ್ವರನಿಂದ!
ವಿಶ್ವ ವ್ಯಾಪಕ ವಿರಾಡ್ರೂಪನಿಂದ! (ಸ)
-ಫಲವಾಗಲಿ ತಪ ಕೃಪೆಯಿಂದ! (ಬಾ)
-ಲಕನುದ್ಧಾರ ಪೂಜ್ಯ ಪಿತನಿಂದ!
ಕಾಲಿಗೆರಗಿ ಪ್ರಾರ್ಥಿಪುದರಿಂದ!
ಪಾಮರನ ಪಾಪ ನಾಶವನಿಂದ! (ಅ)
-ಲಿಪ್ತನಾಗಬೇಕಾಶೀರ್ವಾದದಿಂದ!
ಯಿಂಬು ದೊರಕಲಿ ಶಂಭುವಿನಿಂದ!
ತ್ತ ಶ್ರೀ ನಿರಂಜನಾದಿತ್ಯ ನಿಂದ!!!

ಇಹದಲ್ಲಿ ಪರಲೋಕ ಕಾಣಪ್ಪಾ!

ತ್ತಿಂದ್ರಿಯದಾಟ ಇಹ ಕಾಣಪ್ಪಾ!
ತ್ತ ಮನವಾಗೆ ಪರ ಕಾಣಪ್ಪಾ! (ಎ)
-ಲ್ಲಿದ್ದರಲ್ಲೇ ದೇವನಿಹ ಕಾಣಪ್ಪಾ!
ರಿ ಪರಿಯಾಸೆ ಇಹ ಕಾಣಪ್ಪಾ! (ವ)
-ರ ಗುರು ಚರಣಾಶ್ರಯ ಕಾಣಪ್ಪಾ!
ಲೋಭ, ಮೋಹ ತ್ಯಾಗ ಪರ ಕಾಣಪ್ಪಾ!
ರ್ತನ ಮರವೆ ಇಹ ಕಾಣಪ್ಪಾ!
ಕಾಮೇಶ್ವರ ಧ್ಯಾನ ಪರ ಕಾಣಪ್ಪಾ! (ಹ)
-ಣ, ಕಾಸಿನಾಸೆಯೇ ಇಹ ಕಾಣಪ್ಪಾ! (ಅ)
-ಪ್ಪಾ ನಿರಂಜನಾದಿತ್ಯಾತ್ಮ ಕಾಣಪ್ಪಾ!!!

ಶ್ರೀ ಪಾದದಲೈಕ್ಯವಾಗ ಬೇಕಪ್ಪಾ!

ಪಾಪರಾಶಿ ನಾಶವಾಗಬೇಕಪ್ಪಾ!
ಯೆ ಗುರುವಿನದಿರ ಬೇಕಪ್ಪಾ!
ತ್ತ ತಾನೇ ಗುರುವಾಗ ಬೇಕಪ್ಪಾ!
ಲೈಂಗಿಕ ಭೇದ! ಅಡಗ ಬೇಕಪ್ಪಾ! (ಐ)
-ಕ್ಯಮನಸವನ ಲಾಗ ಬೇಕಪ್ಪಾ!
ವಾಸುದೇವನುಪದೇಶ ಬೇಕಪ್ಪಾ!
ತಿಗದೇ ದಾರಿಯಾಗ ಬೇಕಪ್ಪಾ!
ಬೇರೆಲ್ಲಾ ಚಪಲಳಿಯ ಬೇಕಪ್ಪಾ!
ನಸು ನೆನಸಲ್ಲೈಬೇಕಪ್ಪಾ! (ಅ)
-ಪ್ಪಾ ನಿರಂಜನಾದಿತ್ಯ ಶ್ರೀಪಾದಪ್ಪಾ!!!

ಗುರು ಕೃಪಾಂಜನವೀ ವಚನ!

ರುಚಿ, ಶುಚಿಗಾದರ್ಶ ವಚನ!
ಕೃತಾದಿ ಯುಗದಾರ್ಯ ವಚನ!
ಪಾಂಚಜನ್ಯ ವಿತ್ತ ಪ್ರವಚನ!
ಗದೋದ್ಧಾರಕ್ಕಾಪ್ತ ವಚನ!
ರ ನಾರಾಯಣಪ್ಪ ವಚನ!
ವೀತರಾಗ ವಿಜಯ ವಚನ!
ರಗುರು ಶಿವೇಚ್ಛಾ ವಚನ!
ರಾಚರಾತ್ಮಾನಂದ ವಚನ! (ಘ)
-ನ ನಿರಂಜನಾದಿತ್ಯ ವಚನ!!!

ಸಾಧನೆಡೆಬಿಡದೆ ಮಾಡಕ್ಕಾ (ಬೋ)

-ಧನೆ ಸಧ್ಯಕ್ಕೆ ಸಾಕುಮಾಡಕ್ಕಾ!
ನೆನೆಯುತಿರು ಶಿವನಾಮಕ್ಕಾ! (ಕ)
-ಡೆಗಾಲಕ್ಕದೇ ಗತಿ ಕಾಣಕ್ಕಾ!
ಬಿಗಡಾಯಿಸುತಿದೆ ಕಾಲಕ್ಕಾ! (ಒ)
-ಡ ನಾಡಿಗಳೂ ಕೈ ಬಿಡ್ವರಕ್ಕಾ! (ಮುಂ)
-ದೆಯಾಗುವುದಿಂದೇ ಆಗಲಕ್ಕಾ!
ಮಾಯಾ ಬಂಧ ಹರಿದು ಬಾರಕ್ಕಾ! (ಮೃ)
-ಡನ ಸೇರಿ ಸುಖಿಯಾಗಿರಕ್ಕಾ! (ಅ)
-ಕ್ಕಾ ನಿರಂಜನಾದಿತ್ಯ ಶಿವಕ್ಕಾ!!!

ನಿನ್ನ ನೀನರಿತು ಬೆರೆತುಕೋ! (ಅ)

-ನ್ನಪೂರ್ಣಾದೇವಿ ನಾನಾಗಿದ್ದುಕೋ!
ನೀಚ ಸಹವಾಸ ಬಿಡಿಸಿಕೋ!
ಮಶ್ಯಿವಾಯೆಂದು ಜಪಿಸಿಕೋ! (ಊ)
-ರಿನ ಹೆಸರು ನೆನಪಿಟ್ಟುಕೋ!
ತುಷಾರಾದ್ರಿಯದೆಂದರಿತುಕೋ!
ಬೆನಕನಾಡಿಸುತಲ್ಲಿದ್ದುಕೋ! (ಬೇ)
-ರೆ ವ್ಯಾಪಾರವಿರದಂತಿದ್ದುಕೋ! (ಮಾ)
-ತು ನಿಲ್ಲಿಸಿ ಮೌನವಾಗಿದ್ದುಕೋ! (ಅ)
-ಕೋ! ನಿರಂಜನಾದಿತ್ಯೇಶಪ್ಪಿಕೋ!!!

ನೀವಲ್ಪಮಾನವರಲ್ಲ!

ರ ಗುರು ರೂಪವೆಲ್ಲ! (ಕ)
-ಲ್ಪನೆಯಿಂದ ಭಿನ್ನವೆಲ್ಲ!
ಮಾಡಿ ವಿಚಾರ ನೀವೆಲ್ಲ!
ನ್ನನರಿಯಬೇಕೆಲ್ಲ!
ರೈಕ್ಯ ಸಾಧಿಸಿರೆಲ್ಲ! (ನ)
-ರ ಜನ್ಮ ಸಾಮಾನ್ಯವಲ್ಲ! (ಎ)
-ಲ್ಲ ನಿರಂಜನಾದಿತ್ಯಲ್ಲ!!!

ಬದುಕಿದ್ದುಪಯೋಗವೇನಿನ್ನು?

ದುಡಿಯುವಗತ್ಯ ಕಾಣದಿನ್ನು! (ಹಾ)
-ಕೆದ್ದೆಲ್ಲ ಅರಗಿಪಾಸೇಕಿನ್ನು? (ಬಿ)
-ದ್ದು, ಇದ್ದೆದ್ದೋಡುವುದು ಸಾಕಿನ್ನು!
ರಮಾತ್ಮನಾಗಿದ್ದರಾಯ್ತಿನ್ನು!
ಯೋಗವದಕ್ಕೆಲ್ಲದೇತಕಿನ್ನು?
ರ್ವದಿಂದಿರ್ಪ ಕಾಲವಲ್ಲಿನ್ನು!
ವೇಷ, ಭೂಷಣ ಬೇಕಿಲ್ಲವಿನ್ನು!
ನಿಶಿ, ದಿನ ನಿಜಾನಂದವಿನ್ನು! (ಅ)
-ನ್ನು, ನಿರಂಜನಾದಿತ್ಯಗೇನಿನ್ನು???

ಅತೀತನಾದಾಗ ಮುಕ್ತಿಯಯ್ಯಾ!

ತೀವ್ರವಾದ ಸಾಧನೆ ಬೇಕಯ್ಯಾ!
ನ್ನರಿವಿದಕಿರಬೇಕಯ್ಯಾ!
ನಾದ, ಬಿಂದು ಕಲಾತೀತದಯ್ಯಾ!
ದಾರಿ ಬಹುದೂರವಿದಕಯ್ಯಾ!
ದ್ದಲವಲ್ಲೇನೇನಿಲ್ಲವಯ್ಯಾ!
ಮುಕುಂದನಾವಾಸದೇ ಕಾಣಯ್ಯಾ! (ಭ)
-ಕ್ತಿಯಿಂದಾಗಬೇಕು ಧ್ಯಾನವಯ್ಯಾ! (ಕಾ)
-ಯ, ಮನ, ಕರಗಿಸಬೇಕಯ್ಯಾ! (ಅ)
-ಯ್ಯಾ,! ನಿರಂಜನಾದಿತ್ಯ ಮುಕ್ತಯ್ಯಾ!!!

ಕಾಪಿಗೆ ಕಾದಿಹದು ಬಚ್ಚಲು ಬಾಯಿ!

ಪಿಡಿದರಾ ದಾರಿ ನೀನು ಚಿರಸ್ಥಾಯಿ!
ಗೆಳೆತನಕಾದರ್ಶಾಗಿರ್ಪುದಾ ಬಾಯಿ!
ಕಾರ್ಯದಕ್ಷತೆಯಿಂದದು ಚಿರಸ್ಥಾಯಿ!
ದಿನ, ರಾತ್ರಿಯೆಲ್ಲಾ ಸೇವಾತುರಾ ಬಾಯಿ!
ಹುಳಿ, ಖಾರ ಸಮವೆಂಬ ಚಿರಸ್ಥಾಯಿ!
ದುಡಿಯುವುದು ನಿಷ್ಕಾಮದಿಂದಾ ಬಾಯಿ!
ಯಲು ಸಂಗದಿಂದದು ಚಿರಸ್ಥಾಯಿ! (ಹ)
-ಚ್ಚಗೆಲೆ, ಬಳ್ಳಿಗಳಿಗಾಧಾರಾ ಬಾಯಿ! (ಮೇ)
-ಲು, ಕೀಳೆಂಬುದಿಲ್ಲದದು ಚಿರಸ್ಥಾಯಿ!
ಬಾರೆಂಬುದು ಮಲ, ಮೂತ್ರಕ್ಕೂ ಆ ಬಾಯಿ! (ಬಾ)
-ಯಿ ನಿರಂಜನಾದಿತ್ಯ ಕಾಪಿಗಾ ಸ್ಥಾಯಿ!!!

ತಡಕದಿರತ್ತಿತ್ತಾಗು ಗುರುಚಿತ್ತ! (ಬ)

-ಡ ಬಡಿಸುವುದೆಲ್ಲಾ ಕೆರಳಿ ಪಿತ್ತ!
ನಸಿನಾ ಸಂಸಾರವದಸ್ತವ್ಯಸ್ತ!
ದಿವ್ಯ ನಾಮಾಮೃತ ಪಾನವೇ ಪ್ರಶಸ್ತ!
ಸಾಸ್ವಾದಾನಂದಿಸುವನು ವಿರಕ್ತ! (ಅ)
-ತ್ತಿತ್ತೋಡಾಡುತಿರ್ಪುದು ಚಂಚಲ ಚಿತ್ತ! (ದ)
-ತ್ತಾತ್ರೇಯನನುಗ್ರಹದಿಂದ ನಿವೃತ್ತ!
ಗುಹ್ಯ, ಜಿಹ್ವಾ ಚಾಪಲ್ಯದಿಂದ ಸ್ವಸ್ತ!
ಗುಣಾತೀತನಾದಾಗ ಬಂಧ ವಿಮುಕ್ತ! (ತ)
-ರು, ಲತಾದಿಯಂತರ್ಯಾಮಿ ಸರ್ವಶಕ್ತ!
ಚಿರಂಜೀವಿ ಹನುಮಂತ ರಾಮಭಕ್ತ! (ಚಿ)
-ತ್ತ, ನಿರಂಜನಾದಿತ್ಯ ತಾ ಗುರುದತ್ತ!!!

ಸಂಜೆಯಾಯ್ತು, ಪ್ರಜ್ಞೆ ಹೋಯ್ತಾನಂದ ವಾಯ್ತು! (ಅ)

-ಜೆಯನುಗ್ರಹದಿಂದಜ್ಞಾನಸ್ತವಾಯ್ತು!
ಯಾಗಾದ್ಯನುಷ್ಠಾನದ ಸಮಾಪ್ತಿಯಾಯ್ತು! (ಆ)
-ಯ್ತು, ವಿಶ್ರಾಂತಿಯ ರಾತ್ರಿ ಬಂದು ಸೇರ್ಯಾಯ್ತು!
ಪ್ರಭುವಿನ ಸೇವೆಗೆ ವಿಳಂಬವಾಯ್ತು! (ಆ)
-ಜ್ಞೆ ಬಂದು ಬಹುಕಾಲ ಕಳೆದುಹೋಯ್ತು!
ಹೋಗಿ ಸೇರಲೇಬೇಕೆಂಬರಿವೀಗಾಯ್ತು! (ಆ)
-ಯ್ತಾತನ ಕೃಪಾದೃಷ್ಟೀಗೆನ್ನ ಮೇಲಾಯ್ತು!
ನಂದಕಂದನಭಯೋಕ್ತಿ ನಿಜವಾಯ್ತು!
ಶಾವತಾರಿಯ ಲೀಲೆ ಮಂದಟ್ಟಾಯ್ತು!
ವಾದ, ಭೇದದ ಹುಚ್ಚಳಿದು ಹೋಯ್ತು! (ಅ)
-ಯ್ತು, ನಿರಂಜನಾದಿತ್ಯ ನಾಮನ್ವರ್ಥಾಯ್ತು!!!

ಸ್ಥಿತಿ, ಗತಿ, ಅನ್ನಪಾನಾದಿಯಿಂದ!

ತಿನ್ನು ಸ್ವಾತಿಕಾಹಾರಾದುದರಿಂದ!
ಂಗೋದಕ ಶುದ್ಧವಿದ್ದರಾನಂದ! (ಮ)
-ತಿ ಬೆಳಗಬೇಕೀ ವಿಜ್ಞಾನದಿಂದ!
ನುಚಿತದೆಡೆ ಬೇಡದರಿಂದ! (ಉ)
-ನ್ನತದ ಸುಖಕೀ ವಿವೇಕಾನಂದ!
ಪಾಚಕ ನಿಂತಿದ್ದರಾರೋಗ್ಯಾನಂದ! (ಅ)
-ನಾರೋಗ್ಯನಾವಶ್ಯ ಮಸಾಲೆಯಿಂದ!
ದಿವ್ಯ ನಾಮದಿಂದಟ್ಟರತ್ಯಾನಂದ!
ಯಿಂಪಾದ ರಾಮನಾಮ ಬ್ರಹ್ಮಾನಂದ! (ಕಂ)
-ದ, ನಿರಂಜನಾದಿತ್ಯಚ್ಚುತಾನಂದ!!!

ಬೇಕು, ಬೇಡೆನ್ನುವವ ನಾನಲ್ಲ! (ವ್ಯಾ)

-ಕುಲವೇಕೆಂದು ಯೋಚಿಸಿರೆಲ್ಲ!
ಬೇಕು ಬೇಡೆಂದಾಯ್ತು ದುಃಖವೆಲ್ಲ! (ಕೊ)
-ಡನೆಂದಿದ್ದರೂ ಕಾಡುವಿರಲ್ಲ! (ಹೊ)
-ನ್ನು, ಹೆಣ್ಣು, ಮಣ್ಣು ಶಾಶ್ವತವಲ್ಲ! (ಭ)
-ವ ಬಂಧದಿಂದ ಪಾರಾಗಿರೆಲ್ಲ!
ರ ಗುರುಧ್ಯಾನ ಮಾಡಿರೆಲ್ಲ!
ನಾಮ, ರೂಪಾತೀತರಾಗಿರೆಲ್ಲ! (ಜ)
-ನಕ ರಾಜನಂತಾಗಿ ನೀವೆಲ್ಲ! (ಬ)
-ಲ್ಲ ನಿರಂಜನಾದಿತ್ಯ ಆ ಗೊಲ್ಲ!!!

ಹೆತ್ತೆ, ಹೊತ್ತೆ, ಸತ್ತೆ, ಗುಪ್ತೆ! (ಎ)

-ತ್ತೆತ್ತ ಸುತ್ತಿ ಬಂದೆ ಗುಪ್ತೆ!
ಹೊತ್ತು ಹೊತ್ತುಣಿಪಾ ಗುಪ್ತೆ! (ಮ)
-ತ್ತೆ ನೀರೆರೆಯುವಾ ಗುಪ್ತೆ!
ರ್ವ ಸೌಭಾಗ್ಯಾರ್ಥೆ ಗುಪ್ತೆ! (ಮ)
-ತ್ತೆ ಬರುವೆನೆಂಬಾ ಗುಪ್ತೆ!
ಗುಪ್ತಳಾದಳೀಗಾ ಗುಪ್ತೆ! (ಗು)
-ಪ್ತೆ ನಿರಂಜನಾದಿದ್ಯಾಪ್ತೆ!!!

ಅರ್ಥವರಿತನರ್ಥದಿಂದ ಪಾರಾಗು! (ವ್ಯ)

-ರ್ಥ ಕಾಮ್ಯಾರ್ಥಿಯಾಗದೆ ಎದ್ದು ಪಾರಾಗು!
ರ ಗುರುರೂಪ ನಂಬಿ ಪಾರಾಗು! (ಹ)
-ರಿ ಹರ ಬ್ರಹ್ಮವದೆಂದಿದ್ದು ಪಾರಾಗು!
ನುಮನ ಪ್ರಾಣಾರ್ಪಿಸುತ ಪಾರಾಗು! (ತ್ರಿ)
-ನಯನನಾಶೀರ್ವಾದ ಹೊಂದಿ ಪಾರಾಗು! (ಅ)
-ರ್ಥನರ್ಥಕಾರಿಯೆಂದರಿತು ಪಾರಾಗು! (ಅ)
-ದಿಂಬಾಗಿಹಾತ್ಮ ಪ್ರೇಮಿಯಾಗಿ ಪಾರಾಗು!
ರ್ಶನವಿದೇ ಮುಕ್ತಿಯೆಂದು ಪಾರಾಗು!
ಪಾಪ ಪುಣ್ಯದಕಿಲ್ಲೆಂದು ಪಾರಾಗು!
ರಾಮದಾಸಾನಂದವಿದೆಂದು ಪಾರಾಗು! (ಬಾ)
-ಗು ನಿರಂಜನಾದಿತ್ಯನಾಗಿ ಪಾರಾಗು!!!

ಇರುವವನೊಬ್ಬ ಗುರುದೇವ ದತ್ತ! (ಅ)

-ರುಣ, ಕಿರಣ, ಕಾಂತಿ ಸ್ವರೂಪ ದತ್ತ!
ರದಾಪ್ರಿಯ ಶ್ರೀ ರಂಗನಾಥ ದತ್ತ!
ನಜಭವ, ಶ್ರೀ ಹರಿ ಹರ ದತ್ತ!
ನೊಸಲ್ಗಣ್ಣನೆಂಬ ಕಾಲಾಂತಕ ದತ್ತ (ಅ)
-ಬ್ಬರಾರ್ಭಟದರಿಕುಲ ಕಾಲ ದತ್ತ!
ಗುಹೇಶ್ವರನಾದಾಪ್ತ ಬಾಂಧವ ದತ್ತ! (ಗ)
-ರುಡಾರೂಢ, ವರ ಯೋಗಾರೂಢ ದತ್ತ!
ದೇಶ, ಕಾಲಾತೀತ ಜಗನ್ನಾಥ ದತ್ತ!
ರ ಯೆಹೋವಲ್ಲಾದ್ಯನಂತಾತ್ಮ ದತ್ತ!
ಡ ಸೇರಿಪ ತಾರಕನಾಮ ದತ್ತ! (ಇ)
-ತ್ತತ್ತೆತ್ತೆತ್ತ ನಿರಂಜನಾದಿತ್ಯ ದತ್ತ!!!

ಒಡಲಿನೊಡೆತನೊಡೆಯನದಯ್ಯಾ! (ಪ)

-ಡಬೇಡ ಗರ್ವ ನಿನ್ನದದೆನುತಯ್ಯಾ! (ಒ)
-ಲಿಸಿಕೊಳಬೇಕವನ ಜೀವರಯ್ಯಾ!
ನೊರೆ ಹಾಲು ಸವಿದವ ಬಲ್ಲನಯ್ಯಾ! (ನ)
-ಡೆಯಬೇಕಾರ್ಯರ ಹೆದ್ದಾರಿಯಲ್ಲಯ್ಯಾ!
ನುವಿರುವಾಗ ತನ್ನನರಿಯಯ್ಯಾ!
ನೊಗವಿರುವಾಗೆತ್ತು ಕಟ್ಟಬೇಕಯ್ಯಾ! (ಕ)
-ಡೆ ಗಂಡರದರಿಂದ ಕಷ್ಟ ಕಾಣಯ್ಯಾ
ಮನಾಳ್ಗಳು ಸದಾ ಕಾದಿಹರಯ್ಯಾ! (ಧ)
-ನ ಕನಕಕ್ಕಾಸೆ ಪಡಬೇಡವಯ್ಯಾ!
ಯಾನಿಧಿ ಸದ್ಗುರು ಮಹಾದೇವಯ್ಯಾ! (ಅ)
-ಯ್ಯಾ ನಿರಂಜನಾದಿತ್ಯ ಯಜಮಾನಯ್ಯಾ!!!

ತಂಗಿಯಲ್ಲಲ್ಲಿ ನೋಡುವುದೇನು ತಂಗಿ? (ಭಂ)

-ಗಿ, ಲಿಂಗಿ, ರಂಗಿ, ಸಂಗಿ, ಬಾ ಬೇಗ ತಂಗಿ!
ಜಮಾನ ಕಾದಿಹನು ಬಾ ಬೇಗ ತಂಗಿ! (ನ)
-ಲ್ಲನಲ್ಲದೆ ಬೇರಾರು ಗತಿ, ಬಾ ತಂಗಿ! (ಅ)
-ಲ್ಲಿರುವ ಸುಖವೆಲ್ಲಿಹುದು ಬಾ ತಂಗಿ!
ನೋವು, ಬಾವು, ಸಾವು, ಅಲ್ಲಿಲ್ಲ ಬಾ ತಂಗಿ! (ನೋ)
-ಡುವುದೇನು, ಮೊಂಡಾಟ ಸಾಕು, ಬಾ ತಂಗಿ! (ಕಾ)
-ವುದವನ ಭಾರವೆಂದೋಡಿ ಬಾ ತಂಗಿ!
ದೇಶ, ಕಾಲಾನುಕೂಲವಿ ಬಾ ತಂಗಿ! (ಅ)
-ನುಪಮಾರ್ಯನೊಡಗೂಡಿರು, ಬಾ ತಂಗಿ!
ತಂಗಿ ಭಾಸುರಾಂಗಿಯಾಗಿರು ಬಾ ತಂಗಿ! (ಯೋ)
-ಗಿ ನಿರಂಜನಾದಿತ್ಯನಾಗು ಬಾ ತಂಗಿ!!!

ದುಡುಕಬೇಡಿ ತಡಕಿ ನೋಡಿ! (ಕು)

-ಡುಕರೊಡಗೂಡ್ಯೋಡಾಡ ಬೇಡಿ!
ಬಳಕ್ಕಾಗಿ ಸುಳ್ಳಾಡ ಬೇಡಿ!
ಬೇನೆ ಸಹಿಸಿ ಹರಿಯ ನೋಡಿ! (ಕಾ)
-ಡಿ, ಬೇಡಿ, ಕಾಲ ಕಳೆಯಬೇಡಿ!
ತ್ವಾರ್ಥ ಚಿಂತಿಸದಿರಬೇಡಿ! (ಮೃ)
-ಡ ನಡಿಯನ್ನು ನೆನೆದು ನೋಡಿ!
ಕಿವಿ, ಬಾಯ್ಕಾಣ್ಣು ತೆರೆಯಬೇಡಿ!
ನೋಡಿ ಸುಮ್ಮಗೆ ಕೂತಿರಬೇಡಿ! (ಕೂ)
-ಡಿ, ನಿರಂಜನಾದಿತ್ಯನ ನೋಡಿ!!!

ಸತ್ಸಂಗಿಯಾಗಿ ಸ್ವಾಮಿ! [ಸ]

-ತ್ಸಂಪ್ರಜ್ಞಾನಂದ ಸ್ವಾಮಿ!
ಗಿಡ, ಬಳ್ಳಿಯೂ ಸ್ವಾಮಿ!
ಯಾಕೆ ಸಂದೇಹ ಸ್ವಾಮಿ?
ಗಿರಿ, ನದಿಯೂ ಸ್ವಾಮಿ!
ಸ್ವಾರಸ್ಯವಿದೇ ಸ್ವಾಮಿ! (ಸ್ವಾ)
-ಮಿ, ನಿರಂಜನ ಸ್ವಾಮಿ!!!

ತಿಂಡಿ ತೀರ್ಥವೇನು ಸ್ವಾಮಿ? [ಕೊ]

-ಡಿ ನೀವಾಗಿ ಅವ ಸ್ವಾಮಿ!
ತೀರ್ಥರೂಪ ಅವ ಸ್ವಾಮಿ! (ವ್ಯ)
-ರ್ಥವೆಲ್ಲಾ ಬಾಹ್ಯಾರ್ಥ ಸ್ವಾಮಿ!
ವೇದಾಂತಾರ್ಥತ್ಮಾರ್ಥ ಸ್ವಾಮಿ!
ನುಡಿ ನಡೆಯೊಂದೇ ಸ್ವಾಮಿ!
ಸ್ವಾಮಿ ಶಿವಾನಂದ ಸ್ವಾಮಿ! (ನೇ)
-ಮಿ ನಿರಂಜನಾರ್ಕ ಸ್ವಾಮಿ!!!

ಸೇವೆ ಸ್ವೀಕರಿಸಬೇಕು ಸ್ವಾಮಿ! [ನೀ]

-ವೆನ್ನಿಷ್ಟಸಲಿಪುದೆಂದು ಸ್ವಾಮಿ?
ಸ್ವೀಕರಿಸಿ ದಾಸನೆಂದು ಸ್ವಾಮಿ!
ರುಣಿಸಿದೆನಗೀಗ ಸ್ವಾಮಿ! (ಅ)
-ರಿಯದ ಪಾಮರ ನಾನು ಸ್ವಾಮಿ!
ರ್ವಜ್ಜಮೂರುತಿ ನೀವು ಸ್ವಾಮಿ!
ಬೇಕೆನಗೆ ನಿಮ್ಮ ಸೇವೆ ಸ್ವಾಮಿ! (ಸಾ)
-ಕು ಸಂಸಾರ ಸುಖವೆಲ್ಲ ಸ್ವಾಮಿ!
ಸ್ವಾರ್ಥ ಮತ್ತೇನಿಲ್ಲೆನಗೆ ಸ್ವಾಮಿ! (ಸ್ವಾ)
-ಮಿ ನಿರಂಜನಾದಿತ್ಯ ನಮಾಮಿ!!!

ಬಾಗಿಲಿಗೆ ಬಂದ ರಂಗನಾಥ! [ಕೂ]

-ಗಿದರೂ ಬಾರದ ರಂಗನಾಥ! (ಒ)
-ಲಿದರುರು ಭಾಗ್ಯ ರಂಗನಾಥ! (ಬೇ)
-ಗೆದ್ದು ಸ್ವಾಗತಿಸು ರಂಗನಾಥ!
ಬಂಧ ಬಿಡಿಸುವ ರಂಗನಾಥ!
ತ್ತ ರೂಪನವ ರಂಗನಾಥ! (ಶ್ರೀ)
-ರಂಗ ಪುರವಾಸ ರಂಗನಾಥ!
ರುಡ ಗಮನ ರಂಗನಾಥ! (ಅ)
-ನಾದಿ ಮಧ್ಯಾಂತ ಶ್ರೀರಂಗನಾಥ! (ನಾ)
-ಥ, ನಿರಂಜನಾದಿತ್ಯ ಶ್ರೀನಾಥ!!!

ಬಾಲಕಾ! ಭೂಮಾಲಿಕಾ ವ್ಯಾಪಕ! (ಹೊ)

-ಲ, ಮನೆ, ಮಠಕ್ಕೆಲ್ಲಾ ಮಾಲಿಕ!
ಕಾಯಕಾ, ಸಹಾಯಕಾ, ವ್ಯಾಪಕ!
ಭೂತ, ಭವಿಷ್ಯಕ್ಕೆಲ್ಲಾ ಮಾಲಿಕ!
ಮಾಡುವನೇನನ್ಯಾಯಾ ವ್ಯಾಪಕ? (ಬ)
-ಲಿಯ ತುಳಿದಾಳಿದಾ ಮಾಲಿಕ!
ಕಾಪಾಡುವವನಾತಾ ವ್ಯಾಪಕ!
ವ್ಯಾಮೋಹ ದೂರದರ್ಶಾ ಮಾಲಿಕ!
ರಹಿತ ಚಿಂತಕಾ ವ್ಯಾಪಕ! (ಏ)
-ಕ, ನಿರಂಜನಾದಿತ್ಯಾ ಮಾಲಿಕ!!!

ಸಂವಿಧಾಯಕ ಗಣನಾಯಕ!

ವಿದ್ಯಾವರ್ಧಕ ಗಣನಾಯಕ! (ಪ್ರ)
-ಧಾನಾಧ್ಯಾಪಕ ಗಣನಾಯಕ!
ಮ ಸಾಧಕ ಗಣನಾಯಕ!
ಲಿ ಧ್ವಂಸಕ ಪಣನಾಯಕ!
ತಿ ದರ್ಶಕ ಗಣನಾಯಕ! (ಗು)
-ಣ ಗಣಾತ್ಮಕ ಗಣನಾಯಕ!
ನಾಮ ಭಜಕ ಗಣನಾಯಕ! (ನ)
-ಯ ಸ್ವಭಾವಿಕ ಗಣನಾಯಕ! (ಮೂ)
-ಕ, ನಿರಂಜನಾರ್ಕ ವಿನಾಯಕ!!!

ಉಪ್ಪಿಟ್ಟಿಡ್ಲಿ ದೋಸೆ ಬೇಕೇನಪ್ಪಾ? (ಒ)

-ಪ್ಪಿಗೆಯಾದದ್ದು ತಿನ್ನ ಬೇಕಪ್ಪಾ! (ರೊ)
-ಟ್ಟಿ ಬೇಕಾದರದನ್ನೇ ತಿನ್ನಪ್ಪಾ! (ಕೊ)
-ಡ್ಲಿ, ಬಿಡ್ಲಿ, ನಿನ್ನಿಷ್ಟ ತಿಳಿಸಪ್ಪಾ!
ದೋಷ ನಿನಗಾಗಬಾರದಪ್ಪಾ! (ಆ)
-ಸೆ ನಿನಗೇನಿಲ್ಲೆಂದು ಗೊತ್ತಪ್ಪಾ!
ಬೇಕೇನಾದರೊಂದೀ ದೇಹಕ್ಕಪ್ಪಾ!
ಕೇಳದಿದ್ದರೂ ತಾಯ್ಬಿಡಳಪ್ಪಾ!
ಮಸ್ಕಾರ ಅಪ್ಪನಡಿಗಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯ ನಮ್ಮಪ್ಪಾ!!!

ನಿಂದೆಗಳ ಸಹಿಸುವುದೆಂತಪ್ಪಾ? (ಬಂ)

-ದೆವು ನಿನ್ನಡಿಗೆ ದುಃಖದಿಂದಪ್ಪಾ!
ತಿ ನಮಗೆ ನೀನಲ್ಲವೇನಪ್ಪಾ? (ಕೇ)
-ಳಲಾರೆವು ಚುಚ್ಚು ಮಾತುಗಳಪ್ಪಾ!
ರ್ವಶಕ್ತ ನೀನಾಗಿರುವಿಯಪ್ಪಾ! (ಬ)
-ಹಿರಾಡಂಬರ ನಮಗೆ ಬೇಡಪ್ಪಾ!
ಸುಪುತ್ರರಾಗಿರಿಸೆಮ್ಮ ನಮ್ಮಪ್ಪಾ! (ಠಾ)
-ವು, ಠಿಕಾಣಿಹೆಯಿಲ್ಲದಾಗಿವಪ್ಪಾ! (ಅ)
-ದೆಂತು ನಾವ್ನಿನ್ನ ಮರೆಯುವುದಪ್ಪಾ?
ಪ್ಪೊಪ್ಪುಗಳು ನಿನಗರ್ಪಿತಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯಪ್ಪ ತಿಮ್ಮಪ್ಪಾ!!!

ಹೆಣನ ಗಣ ಮಾಡಿತಾ ಶಿವಗುಣ! (ಗ)

-ಣಪತಿಯೆನಿಸಿತದೇ ಶಿವಗುಣ!
ಟರಾಜನಾಯ್ತು ಮತ್ತಾ ಶಿವಗುಣ! (ಮ)
-ಗ ಗುಹನಾಗಿ ಮೂಡಿತಾ ಶಿವಗುಣ! (ಗು)
-ಣ ಮಣ್ಯರ್ಧ ನಾರೀಶ್ವರಾ ಶಿವಗುಣ!
ಮಾರಹರ ಯೋಗೀಶ್ವರಾ ಶಿವಗುಣ! (ಬೇ)
-ಡಿದಿಷ್ಟಾರ್ಥ ನೀಡುವುದಾ ಶಿವಗುಣ!
ತಾಪಸರ ಪಾಪನಾಶಾ ಶಿವಗುಣ!
ಶಿವಶಂಕರ ಓಂಕಾರಾ ಶಿವಗುಣ!
ರ ದಕ್ಷಿಣಾಮೂರ್ತಿಯಾ ಶಿವಗುಣ!
ಗುರುದತ್ತ ಗುಣಾತೀತಾ ಶಿವಗುಣ! (ಪ್ರಾ)
-ಣ ನಿರಂಜನಾದಿತ್ಯಗಾ ಶಿವಗುಣ!!!

ಏಕಾದಶಿಗೇನೇನು ಇವತ್ತು?

ಕಾಪಾಡೆಂಬ ಪ್ರಾರ್ಥನೆ ಇವತ್ತು!
ತ್ತನ ಪಾದ ಧ್ಯಾನ ಇವತ್ತು!
ಶಿವನಿಷ್ಟ ಭಜನೆ ಇವತ್ತು (ಯೋ)
-ಗೇಶ್ವರನ ಸ್ಮರಣೆ ಇವತ್ತು! (ನೀ)
-ನೇ ನಾನೆಂಬ ಚಿಂತನೆ ಇವತ್ತು! (ತ)
-ನು ಮರೆತಾತ್ಮ ಸ್ಥಿತಿ ಇವತ್ತು!
ನ್ನೇನು ಬೇಕಾಗಿದೆ ಇವತ್ತು? (ಅ)
-ವಸ್ಥಾತ್ರಯವಾರಾಮ ಇವತ್ತು! (ಹೊ)
-ತ್ತು ನಿರಂಜನಾದಿತ್ಯಗಸತ್ತು!!!

ಸೇವೆಗಿರಬೇಕು ಸಕಲಾನುಕೂಲ! (ಶಿ)

-ವೆಯೇ ಪ್ರಿಯ ತಾಯಿಯಾದರನುಕೂಲ! (ಯೋ)
-ಗಿಯಾಗಿ, ತ್ಯಾಗಿಯಾದರದನುಕೂಲ! (ವ)
-ರ ಗುರು ದತ್ತ ತಾನಾದರನುಕೂಲ!
ಬೇಡ ಬಾಲನಾಸಕ್ತಿ, ಭಕ್ತ್ಯನುಕೂಲ!
ಕುಲ, ಗೋತ್ರ ಭ್ರಾಂತಿ ಹೋದರನುಕೂಲ!
ದ್ವಿದ್ಯಾ ವಿದ್ಯಾರ್ಥಿಯಾದರನುಕೂಲ!
ಷ್ಟ ಸಹಿಷ್ಣುತೆಯಿದ್ದರನುಕೂಲ!
ಲಾಭ ದಾಸೆಯಿಲ್ಲದಿದ್ದರನುಕೂಲ! (ಅ)
-ನುಮಾನ ಬುದ್ಧಿಲ್ಲದಿದ್ದರನುಕೂಲ!
ಕೂಟ, ನೋಟದಾಟಬಿಟ್ಟರನುಕೂಲ! (ಬಾ)
-ಲ, ನಿರಂಜನಾದಿತ್ಯಗೆಲ್ಲಾನುಕೂಲ!!!

ಗೋಪಾಲನಡಿಗೆ ದತ್ತನಡಿಗೆ!

ಪಾಕವಿದಾತ್ಮಾನಂದದ ಕೊಡುಗೆ! (ಬ)
-ಲ ಪ್ರದಾಯಕ ಪ್ರಸಾದದಡಿಗೆ!
ರನುದ್ವೇಗಶಾಂತಿಗಾ ಕೊಡುಗೆ! (ಅ)
-ಡಿಗೆರಗೆಂದೆಚ್ಚರಿಪಾ ಅಡಿಗೆ!
ಗೆಳೆಯನಿತ್ತ ಪ್ರೇಮದ ಕೊಡುಗೆ!
ತ್ತಾರ್ಪಣವಾದ ಗೀತೆಯಡಿಗೆ! (ಬಿ)
-ತ್ತ ಶುದ್ಧಿಯಿಂದದ್ವೈತಕ್ಕೀ ಕೊಡುಗೆ! (ಮ)
ಸ್ಸಿಗೆ ಅಗೋಚರವೀ ಅಡಿಗೆ! (ಬೇ)
-ಡಿದರೂ ನೀಡುವರಾರೀ ಕೊಡುಗೆ? (ಕಾ)
-ಗೆ, ನಿರಂಜನಾದಿತ್ಯಾಪ್ತನಡಿಗೆ!!!

ನಡೆ, ನುಡಿಗನ್ನಡಿ ನೋಡಿ! (ಒ)

-ಡೆಯನಂದದರಲ್ಲಿ ನೋಡಿ! (ಅ)
-ನುದಿನ ಶುಚಿಮಾಡಿ ನೋಡಿ! (ಅ)
-ಡಿಗಡಿಗೆಚ್ಚರದಿ ನೋಡಿ!
ತಿ, ಸ್ಥಿತಿದರಲ್ಲಿ ನೋಡಿ! (ತ)
-ನ್ನರಿವಿಗಿದಗತ್ಯ ನೋಡಿ! (ಪಾ)
-ಡಿ, ಹರಿನಾಮಾನಂದ ನೋಡಿ! (ನಾ)
-ನೋ? ಅವನೋ? ಯಾರೆಂದು ನೋಡಿ! (ಕೂ)
-ಡಿ, ನಿರಂಜನಾದಿತ್ಯ ನೋಡಿ!!!

ಸರ್ವಸಂಗ ಪರಿತ್ಯಾಗಿಯಾಗು! (ಓ)

-ರ್ವ ಗುರುದೇವನಲ್ಲೈಕ್ಯವಾಗು!
ಸಂಸಾರ ವ್ಯಾಪಾರ ದೂರನಾಗು! (ಸಾ)
-ಗರದಲೆಗಳಿಂದ ಪಾರಾಗು!
ರಮಹಂಸ ಯೋಗಿ ನೀನಾಗು! (ಹ)
-ರಿ ಸ್ಮರಣೆ ಮಾಡುವವನಾಗು! (ನಿ)
-ತ್ಯಾನಿತ್ಯ ಚಿಂತಿಸುವವನಾಗು!
ಗಿರಿಧರನಂತಲಿಪ್ತನಾಗು! (ಆ)
-ಯಾಸವಿಲ್ಲದಾತ್ಮಾರಾಮನಾಗು! (ಆ)
-ಗು, ನಿರಂಜನಾದಿತ್ಯ ನೀನಾಗು!!!

ಮನಸು ಗಟ್ಟಿ ಮಾಡಿ ನೋಡೀ ಸೃಷ್ಟಿ!

ಮಿಸು ಶ್ರೀಪಾದದಲ್ಲಿಟ್ಟು ದೃಷ್ಟಿ!
ಸುದರ್ಶವಾಗುವುದೆಲ್ಲಾ ಸೃಷ್ಟಿ!
ರುಡಗಮನಗಿಷ್ಟದಾ ದೃಷ್ಟಿ! (ಕ)
-ಟ್ಟಿ ಹಾಕಲಾರದಾರನ್ನೂ ಆ ಸೃಷ್ಟಿ!
ಮಾಯಾ, ಮಾಧವರಭೇದದಾ ದೃಷ್ಟಿ! (ಪ)
-ಡಿಸುವುದೆಲ್ಲರನಾನಂದಾ ಸೃಷ್ಟಿ!
ನೋವು, ಕಾವು, ಸಾವಿಲ್ಲದಾತ್ಮ ದೃಷ್ಟಿ! (ನೀ)
-ಡೀಡೇರಿಪುದೆಲ್ಲರ ಗುರೀ ಸೃಷ್ಟಿ!
ಸೃಷ್ಟಿ, ಸ್ಥಿತಿ, ಲಯವೇಕಾತ್ಮ ದೃಷ್ಟಿ! (ಇ)
-ಷ್ಟಿ, ನಿರಂಜನಾದಿತ್ಯಾನಂದಾ ಸೃಷ್ಟಿ!!!

ನಿನ್ನೆ ನೀ ಕಾದೆ, ಇಂದು ನಾ ಕಾದೆ! (ಸ)

-ನ್ನೆ ನಿನ್ನದು ನಾನರಿಯದಾದೆ!
ನೀನಾಡುವಾಟವೆಲ್ಲಾ ಮರ್ಯಾದೆ!
ಕಾಲ ಕಾಲಕ್ಕೂ ನನ್ನ ತಗಾದೆ! (ಇ)
-ದೆನ್ನ ಲಭ್ಯವೆಂದು ತಣ್ಣಗಾದೆ!
ಇಂದಂದೆಂದೆಂದೂ ನಿನ್ನವನಾದೆ!
ದುರಿತ ದೂರ ಶಿವ ನೀನಾದೆ!
ನಾಮ ಜಪಿ ಸತತ ನಾನಾದೆ!
ಕಾದು ನಿನ್ನಲ್ಲಿ ನಾನೈಕ್ಯನಾದೆ! (ಕಾ)
-ದೆ, ನಿರಂಜನಾದಿತ್ಯ ನಾನಾದೆ!!!

ನೀನು ಹೊಯ್ಸಳ, ನಾನು ನಿಶ್ಚಲ! [ತ]

-ನುಭಾವದಿಂದ ನೀನು ಹೊಯ್ಸಳ!
ಹೊಣೆಗಾರಾತ್ಮ ನಾನು ನಿಶ್ಚಲ! (ಪಾ)
-ಯ್ಸದಾಸೆಯಿಂದ ನೀನು ಹೊಯ್ಸಳ! (ಕೀ)
-ಳದೆಂದುಳಿವ ನಾನು ನಿಶ್ಚಲ!
ನಾನು, ನೀನೆಂಬ ನೀನು ಹೊಯ್ಸಳ! (ನಾ)
-ನು ನೀನೊಂದೆಂಬ ನಾನು ನಿಶ್ಚಲ! [ಅ]
-ನಿತ್ಯಕ್ಕಂಟಿಹ ನೀನು ಹೊಯ್ಸಳ! [ನಿ]
-ಶ್ಚಲಾತ್ಮನೆಂಬ ನಾನು ನಿಶ್ಚಲ! [ಬಾ]
-ಲ ನಿರಂಜನಾದಿತ್ಯಾತ್ಮ ಬಲ!!!

ಮಾರಣ ಮಾಡಿದಾ ರಾವಣಪ್ಪಾ! [ದಾ]

-ರಣೆ ಹೂಡಿದಾ ರಘುರಾಮಪ್ಪಾ! [ಬಾ]
-ಣಗಳ ಬಿಟ್ಟನಾ ರಾವಣಪ್ಪಾ!
ಮಾಯ ಗೈದನಾ ರಘುರಾಮಪ್ಪಾ! [ಅ]
-ಡಿಯಿಡದಾದನಾ ರಾವಣಪ್ಪಾ!
ದಾರಿದೋರಿದಾ ರಘುರಾಮಪ್ಪಾ!
ರಾಗ, ದ್ವೇಷ ಬಿಟ್ಟಾ ರಾವಣಪ್ಪಾ!
ರೈಕ್ಯವಿತ್ತಾ ರಘುರಾಮಪ್ಪಾ! [ರ]
-ಣದಲಿ ಮಡಿದಾ ರಾವಣಪ್ಪಾ! [ಅ]
-ಪ್ಪಾ ನಿರಂಜನಾದಿತ್ಯನೆಂದಪ್ಪಾ!!!

ಸಂಜೀವಿನಿ ತಂದಾ ಹನುಮಂತ

ಜೀವದಾಸೆ ಬಿಟ್ಟಾ ಹನುಮಂತ!
ವಿಷವಿಳಿಸಿದಾ ಹನುಮಂತ!
ನಿಲಿಸಿ ಪಾಡಿದಾ ಹನುಮಂತ!
ತಂದೆ, ತಾಯ್ನೀನೆಂದಾ ಹನುಮಂತ!
ದಾರಿ ತೋರಿಸೆಂದಾ ಹನುಮಂತ!
ರಿಗೆರಗುತಾ ಹನುಮಂತ! [ತ]
-ನುಭಾವ ಮರೆತಾ ಹನುಮಂತ!
ಮಂಗಳಾಗಲೆಂದಾ ಹನುಮಂತ! [ಪಿ]
-ತ ನಿರಂಜನಾದಿತ್ಯನೆನುತ್ತ!!!

ಸದಾ ಶಿವ ಜಪ ಮಾಡಪ್ಪಾ

ದಾಯವಾದಿಯಿದಕಿಲ್ಲಪ್ಪಾ!
ಶಿಶು ಗಣೇಶನಂತಿರಪ್ಪಾ!
ಸ್ತ್ರ ಭೂಷಣಾಗ ಬೇಡಪ್ಪಾ!
ನ ಸಂಘ ನಿನಗೇಕಪ್ಪಾ?
ಡಿಯಳೆಯುವ ಶಿವಪ್ಪಾ!
ಮಾತಾಡದೆ ತೆಪ್ಪಗಿರಪ್ಪಾ!
ಮರುಧರ ಕಾಯ್ವನಪ್ಪಾ! [ಅ]
-ಪ್ಪಾ! ಶ್ರೀ ನಿರಂಜನಾದಿತ್ಯಪ್ಪಾ!!!

ಬಡಿಸಿದ್ದುಣ ಬೇಕಯ್ಯಾ [ಬೇ]

-ಡಿದ್ದು ಕೊಡುವರಾರಯ್ಯಾ? (ಕ)
-ಸಿವಿಸಿ ಕಷ್ಟಕಾಣಯ್ಯಾ! (ಇ)
-ದ್ದುದನುಂಡು ಹೊರಡಯ್ಯಾ! [ಹ]
-ಣ, ಕಾಸೇಕೆ ನಿನಗಯ್ಯಾ?
ಬೇಡುವ ಪಾಡು ಬೇಡಯ್ಯಾ!
ರ್ಮ, ಧರ್ಮಾಶ್ರಮಕ್ಕಯ್ಯಾ! [ಅ]
-ಯ್ಯಾ ನಿರಂಜನಾದಿತ್ಯಯ್ಯಾ!!!

ಪ್ರಸಾದ ಕಾದಿಹುದು ನಿನಗೆ!

ಸಾಮರ್ಥಸಾಲದೀಗ ನಿನಗೆ!
ತ್ತ ಭಕ್ತಿಯೇ ದಾರಿ ನಿನಗೆ!
ಕಾರ್ಯಸಿದ್ಧಿಯಾಗ್ವುದು ನಿನಗೆ!
ದಿವ್ಯ ನಾಮವಾಧಾರ ನಿನಗೆ!
ಹುರುಪಿರಬೇಕೀಗ ನಿನಗೆ!
ದುರಿತದಂಜಿಕೇಕೆ ನಿನಗೆ?
ನಿರುಪಮಾತ್ಮಾಶ್ರಯ ನಿನಗೆ!
ಂಬಿಗೆ ಸದಾ ಬೇಕು ನಿನಗೆ! (ನೆ)
-ಗೆ, ನಿರಂಜನಾದಿತ್ಯನೆಡೆಗೆ!!!

ಮದುವೆಯಾಗಲಿ, ಮದವಿಳಿಯಲಿ!

ದುಸ್ಸಂಗದಿಂದ ಬಿಡುಗಡೆಯಾಗಲಿ!
ವೆಗ್ಗಳದ ನಿಜಾನಂದವುಂಟಾಗಲಿ!
ಯಾದವೇಂದ್ರನ ಸೇವೆ ಸದಾ ಸಾಗಲಿ!
ಮನಾಗಮನಾತ್ಮಾರ್ಥದಿಂದಾಗಲಿ!
ಲಿಪಿ ಬ್ರಹ್ಮವದಕ್ಕೆ ಶಿರ ಬಾಗಲಿ!
ಧುರ ರಾಮನಾಮ ಜಪವಾಗಲಿ!
ರ್ಶನಾಕಾಂಕ್ಷೆ ಬಲಗೊಳ್ಳುತ್ತಿರಲಿ!
ವಿಕಲ್ಪ, ಸಂಕಲ್ಪಗಳಿಲ್ಲದಾಗಲಿ! (ನ)
-ಳಿನನಾಭನ ಸಾಯುಜ್ಯ ಸಿದ್ಧಿಸಲಿ!
ಮಪಿತನುಪಕಾರ ಸ್ಮರಿಸಲಿ! (ಮಾ)
-ಲಿಕ, ನಿರಂಜನಾದಿತ್ಯ ತಾನಾಗಲಿ!!!

ಮಲಗಿರು, ಅಲ್ಲಿಲ್ಲೋಡಾಡ ಬೇಡಮ್ಮಾ! (ಬಾ)

-ಲಕರಂಕೆಯಲ್ಲಿಟ್ಟು ಕೊಳ್ಳಬೇಕಮ್ಮಾ! (ಬಾ)
-ಗಿಲು ಮುಚ್ಚಿ ಬಂದು ಒಳಗೆ ಸೇರಮ್ಮಾ! (ಊ)
-ರು, ಕೇರಿಗವರು ಹೋಗಬಾರದಮ್ಮಾ!
ಮ್ಮ, ನೀನವರ ಮಾರ್ಗದರ್ಶಿಯಮ್ಮಾ! (ಅ)
-ಲ್ಲಿಲ್ಲೋಡಾಡಿದರೆ ಅಗೌರವವಮ್ಮಾ (ಎ)
-ಲ್ಲೊ

ಡಿ ಹೋದರೂ ಇಲ್ಲೇ ಬರಬೇಕಮ್ಮಾ! (ಕೂ)
-ಡಾಡುತ್ತಿಲ್ಲೇ ಸುಖವಾಗಿರಬೇಕಮ್ಮಾ! (ಮೃ)
-ಡನವರಿಗೆ ತಂದೆಯಲ್ಲವೇನಮ್ಮಾ?
ಬೇಕವರಿಗಪ್ಪನ ಸೇವೆ ಕಾಣಮ್ಮಾ! (ಗಂ)
-ಡ ನಿನಗೆ ನಂಜುಂಡನಲ್ಲವೇನಮ್ಮಾ? (ಅ)
-ಮ್ಮಾ, ನಿರಂಜನಾದಿತ್ಯನಾತ ಬಾರಮ್ಮಾ!!!

ಅವತಾರಿಗಳೆಲ್ಲರನಿಂದು ಕಂಡೆ!

ರ ಧ್ಯಾನದಲ್ಲಿ ಅವರನ್ನು ಕಂಡೆ!
ತಾವೆಲ್ಲೆಲ್ಲೂ ಇದ್ದಾರೆಂಬುದನ್ನು ಕಂಡೆ! (ಬ)
-ರಿಸುತವರನೆನ್ನಲ್ಲಿಂದಿಲ್ಲಿ ಕಂಡೆ!
ಮನಾಗಮನಾನಂದವನ್ನು ಕಂಡೆ! (ವೇ)
-ಳೆಯನುಸರಿಸಿ ಬಂದುದನ್ನು ಕಂಡೆ! (ಅ)
-ಲ್ಲ, ಏಸು, ಮೊದಲಾದವರನ್ನು ಕಂಡೆ! (ವ)
-ರ ಗುರುಕೃಪೆಯಿದೆಂಬುದನ್ನು ಕಂಡೆ! (ನಾ)
-ನಿಂದು, ಮುಂದೆಂದೆಂದೊಂದೆಂಬುದನ್ನು ಕಂಡೆ!
ದುಡಿಮೆಗೀ ಫಲವೆಂಬುದನ್ನು ಕಂಡೆ!
ಕಂಡದ್ದು ಹೇಳುವಾನಂದವನ್ನು ಕಂಡೆ! (ಕಂ)
-ಡೆ, ನಿರಂಜನಾದಿತ್ಯನಾಗಿದ ಕಂಡೆ!!!

ಬರಬೇಕಾದವರು ಬರಲಿಲ್ಲವೇಕೆ? (ಇ)

-ರಬೇಕಾದವರೆಲ್ಲ ಇರಲಿಲ್ಲವೇಕೆ?
ಬೇಕು, ಬೇಡೆಂಬಹಂಕಾರವಿರುವುದೇಕೆ?
ಕಾರಣ, ಕಾರ್ಯ ಕರ್ತನರಿವಾಗದೇಕೆ?
ಶರಥಾತ್ಮಜನ ದಯೆ ಬೇಕದಕೆ!
ರ ಗುರು ರಾಮನ ಧ್ಯಾನ ಮುಖ್ಯದಕೆ! (ಪಾ)
-ರು ಮಾಡುವನವ, ಸಂದೇಹವಿಲ್ಲದಕೆ!
ಯಲಾಡಂಬರವ ಬಿಡಬೇಕಿದಕೆ!
ಮಿಸಬೇಕು ಮನ ತತ್ವ ಚಿಂತನಕೆ!
ಲಿಂಗ ಭೇದವಿಲ್ಲ ದಿವ್ಯಾತ್ಮ ಚೇತನಕೆ! (ಬ)
-ಲ್ಲ ಮಾರುತಿ ಇಹನು ಮಾರ್ಗದರ್ಶನಕೆ!
ವೇದಾಂತಾರ್ಥ ಸಿದ್ಧನಿವನೆಲ್ಲಾ ಲೋಕಕ್ಕೆ! (ಏ)
-ಕೆ? ನಿರಂಜನಾದಿತ್ಯನವನಾದುದಕೆ!!!

ಇಬ್ಬರಿಷ್ಟ ಒಂದಾಯ್ತಯ್ಯಾ! (ಅ)

-ಬ್ಬರಾರ್ಭಟವಿನ್ನೇಕಯ್ಯಾ? (ವ)
-ರಿಸಿ ಸುಖಿಯಾಗಿರಯ್ಯಾ! (ದು)
-ಷ್ಟ ಸಹವಾಸ ಬೇಡಯ್ಯಾ!
ಒಂದಾಗಿದ್ದು ಬದುಕಯ್ಯಾ!
ದಾಸರ ದಾಸನಾಗಯ್ಯಾ! (ಆ)
-ಯ್ತಯ್ಯನಿಷ್ಟವೆಂದಿರಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಯ್ಯಾ!!!

ಮಧುರ ಭಾವ ಬೆಳೆಯಲಿ! (ಸಾ)

-ಧು, ಸಂತರ ಸಂಗವಾಗಲಿ!
ಘುನಾಥನಾಪ್ತನಾಗಲಿ!
ಭಾಗ್ಯವಿದೆಂಬರಿವಾಗಲಿ!
ಡವೆಯಾಸೆಯಳಿಯಲಿ!
ಬೆಡಗದಡಗಿ ಹೋಗಲಿ! (ಕ)
-ಳೆ ಆತ್ಮನದು ಹೆಚ್ಚಾಗಲಿ! (ಭ)
-ಯ, ಭ್ರಾಂತಿ ನಿರ್ನಾಮವಾಗಲಿ! (ಶೂ)
-ಲಿ, ನಿರಂಜನಾದಿತ್ಯಾಗಲಿ!!!

ಚಿಕ್ಕಮ್ಮ, ದೊಡ್ಡಮ್ಮಮ್ಮ ಗಂಗಮ್ಮ! (ಅ)

-ಕ್ಕರೆ ತೋರುವಳಮ್ಮ ಗಂಗಮ್ಮ (ಅ)
-ಮ್ಮಗುಣಿಸುವಳಮ್ಮ ಗಂಗಮ್ಮ! (ಬಂ)
-ದೊಡನಾಡುವಳಮ್ಮ ಗಂಗಮ್ಮ! (ಗು)
-ಡ್ಡ ಡಾಟಿ ಬಂದಳಮ್ಮ ಗಂಗಮ್ಮ (ತಿ)
-ಮ್ಮಪ್ಪನ ಮಗಳಮ್ಮ ಗಂಗಮ್ಮ! (ಬೊ)
-ಮ್ಮನನುಜಾತಳಮ್ಮ ಗಂಗಮ್ಮ!
ಗಂಗಾಧರಗಾಳಮ್ಮ ಗಂಗಮ್ಮ!
ತಿ ತೋರುವಳಮ್ಮ ಗಂಗಮ್ಮ! (ಅ)
-ಮ್ಮ, ನಿರಂಜನಾದಿತ್ಯವಳಮ್ಮ!!!

ಅನೃತವೇನು ನೀನಮೃತ?

ನೃಪೋತ್ತಮನು ನೀನಮೃತ!
ನು, ಮನ ನಿನ್ನದಮೃತ!
ವೇಷವೆಲ್ಲಶಾಶ್ವತಮೃತ!
ನುಡಿಗಳವಡದಮೃತ!
“ನೀ” “ನಾ” ನೆಂಬುದಿಲ್ಲದ್ದ ಮೃತ!
ಯನಕ್ಕ ಗೋಚರಮೃತ!
ಮೃಡಾಣಿಯಾಗಿ ನೀನಮೃತ! (ಪಿ)
-ತ ನಿರಂಜನಾತ್ಯಮೃತ!!!

ಅಣ್ಣಾ! ರಾವಣಾ! ಏಕೀ ಬುದ್ಧಿ ಭ್ರಮಣ? (ಹೆ)

-ಣ್ಣಾಸೆ, ಮಣ್ಣಾಸೆಯಲ್ಲಾ ಬುದ್ಧಿ ಭ್ರಮಣ!
ರಾಗ, ದ್ವೇಷಾಸೂಯೆಯೂ ಬುದ್ಧಿ ಭ್ರಮಣ!
ರ ಭಕ್ತನಿಗೇಕೀ ಬುದ್ಧಿ ಭ್ರಮಣ? (ಗು)
-ಣಾಢ್ಯನಾದವಗಿಲ್ಲ ಬುದ್ಧಿ ಭ್ರಮಣ!
ಸಪಚಾರವಾಯ್ತೀ ಬುದ್ಧಿ ಭ್ರಮಣ?
ಕೀಳಾಸೆಯಿಂದಾಗ್ವುದು ಬುದ್ಧಿ ಭ್ರಮಣ!
ಬುಧಾದಿ ಗ್ರಹ ದ್ವೇಷ ಬುದ್ಧಿ ಭ್ರಮಣ! (ನಿ)
-ದ್ಧಿಗಡ್ಡಿ ಮಾಡುವುದು ಬುದ್ಧಿ ಭ್ರಮಣ!
ಭ್ರಷ್ಠನೆನಿಸುವುದು ಬುದ್ಧಿ ಭ್ರಮಣ!
ಹಾತ್ಮನಿಗಾಗದು ಬುದ್ಧಿ ಭ್ರಮಣ! (ಮಾ)
-ಣ, ನಿರಂಜನಾದಿತ್ಯ ಬುದ್ಧಿ ಭ್ರಮಣ!!!

ಸೀತೆಯ ಸೊತ್ತು ಮಾರುತಿಯ ಸಂಪತ್ತು!

ತೆರೆದಿದೆಲ್ಲರಿಗೆ ದಾರೀ ಸಂಪತ್ತು! (ಭ)
-ಯವಿದಕಿಲ್ಲದಿದು ಭಾರೀ ಸಂಪತ್ತು!
ಸೊರಗಿ, ಕರಗುವುದಿಲ್ಲಾ ಸಂಪತ್ತು! (ಇ)
-ತ್ತು, ಮೇಲೆತ್ತುವುದೆಲ್ಲರನಾ ಸಂಪತ್ತು!
ಮಾನಾವಮಾನ ಲೆಕ್ಕಿಸದಾ ಸಂಪತ್ತು! (ತು)
-ರು, ಕರುಗಳಿಗೂ ಇದಾಪ್ತ ಸಂಪತ್ತು!
ತಿನುತಿನುತ್ತಧಿಕ ಸ್ವಾದಾ ಸಂಪತ್ತು!
ಜ್ಞ ಯಾಗಕ್ಕಿದೇ ಪ್ರಾಮುಖ್ಯ ಸಂಪತ್ತು!
ಸಂತರ ನಿರಂತರಪೇಕ್ಷಾ ಸಂಪತ್ತು!
ತಿತ ಪಾವನ ಶ್ರೀರಾಮಾ ಸಂಪತ್ತು! (ಹೊ)
-ತ್ತು, ಹೆತ್ತ ನಿರಂಜನಾದಿತ್ಯ ಸಂಪತ್ತು!!!

ಇಟ್ಟ ಶ್ರೀರಂಗಪಟ್ಟಣದಲ್ಯಾಕಿಟ್ಟ? (ಅ)

-ಟ್ಟ ಹಾಸವಿಲ್ಲದಿಷ್ಟಜೀವನಕ್ಕಿಟ್ಟ!
ಶ್ರೀ ಶಿವಾನಂದನಿಷ್ಟವೆಂಬುದಕ್ಕಿಟ್ಟ!
ರಂಗನಾಥನ ಸಾಯುಜ್ಯ ಸುಖಕ್ಕಿಟ್ಟ! (ಯೋ)
-ಗರಾಜನಪೇಕ್ಷೆ ಸಲ್ಲಿಸಲಿಕ್ಕಿಟ್ಟ!
ತಿಸೇವಾಫಲವುಣ್ಣಿಸಲಿಕ್ಕಿಟ್ಟ! (ಕೊ)
-ಟ್ಟ ವಚನ ಪರಿಪಾಲಿಸಲಿಕ್ಕಿಟ್ಟ! (ತಾ)
-ಣ ನಿರಂಜನಾದಿತ್ಯ ನಿಲಯಕ್ಕಿಟ್ಟ!
ತ್ತ ವಚನ ಬರೆಯುವುದಕ್ಕಿಟ್ಟ! (ಕ)
ಲ್ಯಾಣಿಯ ಸೇವೆ ಸ್ವೀಕರಿಪುದಕ್ಕಿಟ್ಟ! (ಯಾ)
-ಕಿಟ್ಟಾಕಿಟ್ಟ ತಾನೂಟ ಬಿಟ್ಟು ಇಕ್ಕಿಟ್ಟ? (ಅ)
-ಟ್ಟಡಿಗೆಯ ನಿರಂಜನಾದಿತ್ಯಕ್ಕಿಟ್ಟ!!!

ಆತ್ಮ ಪುರಾಣಾರ್ಥವೇನು ಶಿವ? [ಆ]

-ತ್ಮ ನೀನೆನ್ನುವುದದೆಲೆ ಜೀವ!
ಪುಸ್ತಕವಿದನೀ ನೋಡು ಶಿವ!
ರಾಮನಾಮಿಗದೇಕೆಲೆ ಜೀವ? (ಪ್ರಾ)
-ಣಾಧಾರವದೆಂದಿಹೆನು ಶಿವ! (ಅ)
-ರ್ಥವದರಂತರಾರ್ಥಾನು ಜೀವ?
ವೇದಾಂತವೆಂದರದೇನು ಶಿವ? (ಅ)
-ನುಮಾನವಿನ್ನೂ ಉಂಟೇನು ಜೀವ?
ಶಿವಾನಂದಾರಾಮ ತಾನೆ ಶಿವ? (ಶಿ)
-ವ ನಿರಂಜನಾದಿತ್ಯ ಸಂಜೀವ!!!

ಬಿಡಬೇಕೆರಡು ಕಣ್ಣ ನೀನು! [ಬಿ]

-ಡ ಬಾರದೆನ್ನ ಕರವ ನೀನು!
ಬೇರಾರಿಹರೆನಗೆಲ್ಲಾ ನೀನು!
ಕೆಸರಲದ್ದಬೇಡೆನ್ನ ನೀನು
ಕ್ಕಸಾಂತಕ ಶ್ರೀರಾಮ ನೀನು! (ಕೊ)
-ಡು ಅಭಯವೆನನೀಗ ನೀನು!
ಡೆಗಾಣಿಸೆನ್ನ ಕಷ್ಟ ನೀನು! (ಕ)
-ಣ್ಣ ತೆರೆದುದ್ಧರಿಸೆನ್ನ ನೀನು!
ನೀನೇ ನಾನಾಗಿ ಮಾಡೆನ್ನ ನೀನು! (ಹ)
-ನುಮ ನಿರಂಜನಾದಿತ್ಯ ನೀನು!!!

ಭವಬಂಧವಿಲ್ಲೆಂದ ಶಿವಾನಂದ! (ಶಿ)

-ವನಾನಂದ ತಾನೆಂದ ಶಿವಾನಂದ! (ಸಂ)
-ಬಂಧ “ನಾ” “ನೀ” ನೊಂದೆಂದ ಶಿವಾನಂದ!
ರ್ಮಬಂಧವಿದೆಂದ ಶಿವಾನಂದ!
ವಿಧಿಯೆಂದ, ಹರ್ಯೆಂದ ಶಿವಾನಂದ! (ನಿ)
-ಲ್ಲೆಂದ, ನಿನ್ನವನೆಂದ ಶಿವಾನಂದ!
ತ್ತಾನಂದನಾಗೆಂದ ಶಿವಾನಂದ!
ಶಿವಾನಂದನವನೆಂದ ಶಿವಾನಂದ
ವಾದಾನಂದ ಸಾಕೆಂದ ಶಿವಾನಂದ!
ನಂದನಂದನಾನಂದ ಶಿವಾನಂದ! (ಕಂ)
-ದ, ನಿರಂಜನಾದಿತ್ಯ ಶಿವಾನಂದ!!!

ನೋಡಿಯಾಗುವುದೇನು ನನ್ನನ್ನು? [ನೀ]

-ಡಿ ಕಾಪಾಡೆನ್ನುವೆನು ನಿನ್ನನ್ನು!
ಯಾವುದಕ್ಕಾಗಿಟ್ಟಿಹೆ ನನ್ನನ್ನು?
ಗುರುವೆಂದು ನಂಬಿಹೆ ನಿನ್ನನ್ನು! (ಸಾ)
-ವು, ನೋವಿನಲೇಕಿಟ್ಟೆ ನನ್ನನ್ನು? (ಸ್ವ)
-ದೇಶ ಬಿಟ್ಟರಸುವೆ ನಿನ್ನನ್ನು! (ಅ)
-ನುಕೂಲವಾಗಿರಿಸು ನನ್ನನ್ನು!
ಯನ ನೋಡಿರಲಿ ನಿನ್ನನ್ನು (ಇ)
-ನ್ನನಾದರಿಸಬೇಡ ನನ್ನನ್ನು! (ಅ)
-ನ್ನು, ನಿರಂಜನಾದಿತ್ಯ ನೀನನ್ನು!!!

ಬಳಕೆಗೆ ಬಾರದೋದೇಕೆ? [ಆ]

-ಳಲರಿಯದ ದೊರೆಯೇಕೆ?
ಕೆಲಸಕ್ಕಿಲ್ಲದ ಆಳೇಕೆ? (ಹ)
-ಗೆತನದ ಬಂಧುಗಳೇಕೆ?
ಬಾಣಗಳಿಲ್ಲದ ಬಿಲ್ಲೇಕೆ?
ಚನೆಯಿಲ್ಲದೆ ಸೇನೇಕೆ?
ದೋಣಿಯಿಲ್ಲದ ಚುಕ್ಕಾಣ್ಯೇಕೆ?
ದೇವಗಲ್ಲದ ಧ್ಯೇಯವೇಕೆ? (ಈ)
-ಕೆ ನಿರಂಜನಾದಿತ್ಯನಾಕೆ!!!

ಆಯಿತವರಿಗೆಚ್ಚರ! [ಹೋ]

-ಯಿತೊಳಗಿನಹಂಕಾರ!
ತ್ವಾರ್ಥ ಜ್ಞಾನ ವಿಚಾರ!
ರ ಗುರು ಮಂತ್ರೋಚ್ಚಾರ! (ಉ)
-ರಿಸಿತೆಲ್ಲಾ ಸೇಚ್ಛಾಚಾರ!
ಗೆಳೆಯನಿಚ್ಛೋಪಚಾರ! [ಅ]
-ಚ್ಚಳಿಸಿತೆಲ್ಲಪಚಾರ! (ಹ)
-ರ ನಿರಂಜನಾದಿತ್ಯಾರ!!!

ಲೋಕನಾಯಕನೇಕ ಸಿದ್ಧಿ ವಿನಾಯಕ!

ರ್ಮಕರ್ತನಿವ ಸದ್ಬುದ್ಧಿಪ್ರದಾಯಕ!
ನಾನಾ, ದೇಶ ಮತಾತ್ಮ ಪ್ರಚೋದಕ!
ಮ, ನಿಯಮಾದ್ಯಷ್ಟಾಂಗ ಯೋಗೋದ್ಭೋದಕ!
ಷ್ಟಸಾಧ್ಯವನಿಷ್ಟಸಿದ್ಧಿಗೈವಾತ್ಮಿಕ!
ನೇತನವನಾಗೇಕೈಕ ಗಣನಾಯಕ!
ಲಿಕಲ್ಮಷವಿನಾಶ ವಿದ್ಯಾದಾಯಕ!
ಸಿರಿಯರಸನಾಪ್ತ ಕರಿ ರಾಜಾಧಿಕ! (ವೃ)
-ದ್ಧಿ, ಕ್ಷಯಾಧಿಕಾರಿ ಶಿವಾನಂದ ಬಾಲಕ!
-ವಿಜಯಾನಂದಕ್ಕಿವನಾಪ್ತ ಸಹಾಯಕ!
ನಾಗರಾಜಕುಮಾರನಗ್ರಜ ವ್ಯಾಪಕ!
ಶಸ್ಸಾಮ್ರಾಜ್ಯ ಚಕ್ರವತೀಶ ಗಾಯಕ!
ಮಲಾಪ್ತ ನಿರಂಜನಾದಿತ್ಯ ಶೈವಿಕ!!!

ಪ್ರೀತಿಇರಲಂತರಂಗದಲ್ಲಿ!

ತಿಳಿದಿದ ತೋರು ಕಾರ್ಯದಲ್ಲಿ
ರದಿರು ಫಲಾಪೇಕ್ಷೆಯಲ್ಲಿ
ಮಿಸುತ್ತಿರಾತ್ಮಾನಂದದಲ್ಲಿ!
ಲಂಬೋದರ ಗಣೇಶಾತ್ಮನಲ್ಲಿ!
ಳೆದಿರು ತೃಪ್ತಿ ಮನದಲ್ಲಿ!
ರಂಗನಾಥನಡಿಯಡಿಯಲ್ಲಿ!
ರ್ವ ರಹಿತ ಭಾವನೆ

ಲ್ಲಿ!
ರ್ಶನಾಕಾಂಕ್ಷೆ ಸತತದಲ್ಲಿ! (ಇ)
-ಲ್ಲಿ ನಿರಂಜನಾದಿತ್ಯನಿರ್ಪಲ್ಲಿ!!!

“ನೀ” ನೋಡುವುದು ರಾವಣನನ್ನು! [ನಾ]

-ನೋಡುವುದು ಸೀತಾರಾಮನನ್ನು! (ನೋ)
-ಡು, ಸೀತಾರಾಮ, ರಾವಣರನ್ನು! (ಸಾ)
-ವು ರಹಿತಾತ್ಮನೆಂದವರನ್ನು!
ದುರಾಶಾಧೀಶ ರಾವಣನನ್ನು!
ರಾಜ ರಾಜೇಶ ಶ್ರೀರಾಮನನು! (ಭಾ)
-ವತೀತನಲ್ಲಿ ನೋಡವರನ್ನು! (ಬ)
-ಣಗು ವಿಷಯಿ ರಾವಣನನ್ನು! (ಅ)
-ನನ್ಯ ಪ್ರೇಮಮಯಿ ರಾಮನನ್ನು! (ಅ)
-ನ್ನು, ನಿರಂಜನಾದಿತ್ಯಭಿನ್ನೆನ್ನು!!!

“ನೀ” ನೋಡುವುದು ರಾವಣನನ್ನು! (“ನಾ”)

-ನೋಡುವುದು ಸೀತಾರಾಮನನ್ನು! (ಸು)
-ಡು, ದುರಾಗ್ರಮ ರಾವಣನನ್ನು! (ಸಾ)
-ವು ಕಾಣೆ ಸೇರೆ ಶ್ರೀರಾಮನನ್ನು! (ಉ)
-ದುರಿಪ ರಾಮ ರಾವಣನನ್ನು!
-ರಾತ್ರಿ, ದಿನ ನೆನೆ ರಾಮನನ್ನು!
-ವಧಿಸದಿರ ರಾವಣನನ್ನು! (ಕೆ)
-ಣಕದೆ ಕೂಡಿಕೊಂ ರಾಮನನ್ನು!
ಂಬಿರಬೇಡ ರಾವಣನ್ನು! (ಚೆ)
-ನ್ನು ನಿರಂಜನಾದಿತ್ಯನಾಗಿನ್ನು!!!

ದೇವರಾರಿಗಡಿಯಾಳು? [ಅ]

-ವನಾಜ್ಞೆಯಿಂದೆಲ್ಲಾ ಬಾಳು! (ಶ್ರೀ)
-ರಾಮ ಪರಮ ದಯಾಳು! (ಹ)
-ರಿವಂಶಕ್ಕಿವ ಮುಂದಾಳು!
ರ್ವವೆಳ್ಳಷ್ಟಿಲ್ಲದಾಳು! (ಅ)
-ಡಿಗೆಡಲೆಬ್ಬಿಸುವಾಳು!
ಯಾರಿಗೂ ಆಳಗದಾಳು! (ಏ)
-ಳು, ನಿರಂಜನಾದಿತ್ಯಾಳು!!!

ದಾರಿ ತೋರುವುದು ಕೈಕಂಬ! (ಊ)

-ರಿನಒಡೆಯ ಪ್ರಿಯ ಸಾಂಬ!
ತೋಳಗಳಟ್ಟುವ ಹೇರಂಬ! (ಉ)
-ರು ಭಕ್ತಿಯಿಂದ ಹೋಗಿರೆಂಬ! (ಹಾ)
ವುಗಳಿಗಂಜಬೇಡಿರೆಂಬ!
ದುಸ್ತರವಲ್ಲ ದಾರಿಯೆಂಬ!
ಕೈಲಾಸವೇ ನಮ್ಮ ಊರೆಂಬ!
ಕಂದಮ್ಮ ಬಾ ಬೇಗೆಂಬಳಂಬ (ಸಾಂ)
-ಬ ನಿರಂಜನಾದಿತ್ಯ ಬಿಂಬ!!!

ಕೊನೆಯಂಕ ಸ್ವಾರಸ್ಯಾಂಕ! (ಸೇ)

-ನೆ ವಿಸರ್ಜಿಪಮೃತಾಂಕ! (ತ್ರ)
-ಯಂಬಕನದರ್ಶನಾಂಕ!
ಲಿ ರಾವಣ ಧ್ವಂಸಾಂಕ!
ಸ್ವಾತ್ಮಾರಾಮ ವಿಜಯಾಂಕ!
ಣಧೀರಾಂಜನೇಯಾಂಕ! (ತ)
-ಸ್ಯಾಂತರ್ಗತ ವಿಮಲಾಂಕ! (ಅಂ)
-ಕ ನಿರಂಜನಾದಿತ್ಯಾಂಕ!!!

ದೇಹಕ್ಕಾಯಾಸವೇಕಪ್ಪ?

ಸಿದಾಗುಂಡರಾಯ್ತಪ್ಪ! (ಸಿ)
-ಕ್ಕಾಗೆಲ್ಲಾ ತಿನ್ನಬೇಡಪ್ಪ!
ಯಾಕಿಷ್ಟು ಚಪಲವಪ್ಪ?
ತ್ಸಂಗಿಯಾಗಿಂತೇಕಪ್ಪ?
ವೇಳೆ ನಿಯಮಗತ್ಯಪ್ಪ!
ಗ್ಗನ್ಯಥಾ ಸಾಗದಪ್ಪ! (ತ)
-ಪ್ಪ, ನಿರಂಜನಾದಿತ್ಯಪ್ಪ!!!

ಋಣ ಸಂದಾಯವಾಗುವುದೆಂತು? (ಹ)

-ಣ ಕೊಟ್ಟು ರಸೀತಿ ಪಡೆಯಿಂತು!
ಸಂಗ ಸಜ್ಜನರದೊಂದು ಕಂತು!
ದಾಸನಾಗುವುದಿನ್ನೊಂದು ಕಂತು!
ಮಾಭ್ಯಾಸ ಮಗುದೊಂದು ಕಂತು!
ವಾಸುದೇವ ಭಕ್ತಿಯೊಂದು ಕಂತು!
ಗುರು ಪಾದಾ ಶ್ರಯ ದೊಡ್ಡ ಕಂತು! (ಠಾ)
-ವು ಅದೆಂಬಾನಂದದ್ಯಂತ ಕಂತು! (ಎಂ)
-ದೆಂದೂಬಿಡುಗಡೆ ಗೈವ ಕಂತು! (ಆಂ)
-ತು, ನಿರಂಜನಾದಿತ್ಯನಾಗಿಂತು!!!

ವಿನಾಶ ಕಾಲಕ್ಕೆ ವಿಪರೀತ ಬುದ್ಧಿ!

ನಾನೀ ಶರೀರವೆಂಬಹಂಕಾರ ಬುದ್ಧಿ!
ರಣ ವಚನಕ್ಕನಾದರ ಬುದ್ಧಿ!
ಕಾರಣ ಕರ್ತನರಿಯದಲ್ಪ ಬುದ್ಧಿ!
ಕ್ಷ್ಯ ವಿಷಯ ಸುಖಕ್ಕಿರುವ ಬುದ್ಧಿ! (ಇ)
ಕ್ಕೆನನ್ಯರಿಗೇನನ್ನೆಂಬ ಲೋಭ ಬುದ್ಧಿ
ವಿಕಲ್ಪದಿಂದಿರುವ ಕುಹಕ ಬುದ್ಧಿ!
ರನಿಂದೆ ಮಾಡುವತಿನೀಚಬುದ್ಧಿ!
ರೀತಿ, ನೀತಿಗಪಾರ್ಥ ಮಾಡುವ ಬುದ್ಧಿ!
ನ್ನ ಪ್ರಶಂಸೆ ತಾನೇ ಹೇಳುವ ಬುದ್ಧಿ!
ಬುದ್ಧ, ಸಿದ, ತಾನೆಂದೆಂಬ ಮೋಸ ಬುದ್ಧಿ! (ವೃ)
-ದ್ಧಿ, ನಿರಂಜನಾದಿತ್ಯಾನಂದ ಸಿದ್ಧಿ,!!!

ನನ್ನ ಮೇಲೆ ನಿನಗದೆಷ್ಟು ಪ್ರೀತಿ! [ನಿ]

-ನ್ನ ರೂಪಕ್ಕೆರಕ ಹೊಯ್ಯುವಾ ಪ್ರೀತಿ!
ಮೇಲ್ಮೇಲೆ ಕಷ್ಟ ಕೊಟ್ಟು ಕಾಯ್ವಾ ಪ್ರೀತಿ! (ಶೂ)
-ಲೆ ಬರಿಸಿ ವಾಸಿ ಮಾಡುವಾ ಪ್ರೀತಿ!
ನಿಶಿ, ದಿನ, ಧ್ಯಾನಾನುಗ್ರಹಾ ಪ್ರೀತಿ!
ಶ್ವರದಾಸೆ ಬಿಡಿಸುವಾ ಪ್ರೀತಿ!
ಗನಾಧಿಪನುರು ಸೇವಾ ಪ್ರೀತಿ! (ಇ)
-ದೆನಗಿತ್ತ ಶಿವಾನಂದವಾ ಪ್ರೀತಿ! (ಎ)
-ಷ್ಟುಣಿಸಿದರೂ ಸಾಲದೆಂಬಾ ಪ್ರೀತಿ!
ಪ್ರೀತಿ, ರೀತಿ, ಸಚ್ಚಿದಾನಂದಾ ಪ್ರೀತಿ! (ಇ)
-ತಿ, ನಿರಂಜನಾದಿತ್ಯಾನಂದಾ ಪ್ರೀತಿ!!!

ಶಿವ ಸೇವೆ ಸಾಗುತ್ತಿರಲಿ! (ಭ)

-ವ ನಾವೆ ಹೋಗುತ್ತಿರಲಿ!
ಸೇರ್ವೂರು ಕೈಲಾಸಾಗಿರಲಿ! (ಶಿ)
-ವೆ ಪೂಜ್ಯ ತಾಯಿಯಾಗಿರಲಿ!
ಸಾಯುಜ್ಯ ಶಿವನಲ್ಲಾಗಲಿ!
ಗುಹ ಸಹಾಯಕನಾಗಲಿ! (ಹ)
-ತ್ತಿರ ವಿಘ್ನೇಶ್ವರನಿರಲಿ!
ಘುರಾಮನೂ ಅಲ್ಲಿರಲಿ! (ಶೂ)
-ಲಿ ನಿರಂಜನಾದಿತ್ಯಾಗಲಿ!!!

ಶಿವ ನಾಮ ಪ್ರೇಮ ಶ್ರೀರಾಮ! (ಶಿ)

-ವಗಾ ಪ್ರೇಮನಾಮ ಶ್ರೀ ರಾಮ!
ನಾಮವಿಬ್ಬರಿಗೂ ಆರಾಮ!
ಹಿಮಾ ನಾಮ ಶಿವ, ರಾಮ!
ಪ್ರೇಮ ಧಾಮ, ಕೈಲಾಸಾರಾಮ!
ಹಾದೇವ ನಾಮಾತ್ಮಾರಾಮ!
ಶ್ರೀ ಶಿವ ಸಾಂಬ, ಸೀತಾರಾಮ!
ರಾಮಾತ್ಮ ಶಿವಾನಂದಾ ರಾಮ! (ನಾ)
-ಮ, ನಿರಂಜನಾದಿತ್ಯಾ ರಾಮ!!!

ದಾಸಾ! ನಿನ್ನಲ್ಲಿ ಶಿವನ ವಾಸ!

ಸಾರ್ಥಕವಾಗಲೀ ಸಹವಾಸ!
ನಿಶ್ಚಲ ಭಕ್ತಿಯೇ ಶ್ರೀನಿವಾಸ! (ಕ)
-ನ್ನ, ಕತ್ತರಿಯದೆಲ್ಲಾ ಆಯಾಸ! (ನಿ)
-ಲ್ಲಿಸೆಲ್ಲಾ ಪರ ಊರು ಪ್ರವಾಸ!
ಶಿವೆಯೊಡಗೂಡಿರ್ಪುದಾ ವಾಸ!
ಜ್ರ ವೈಢೂರ್ಯಕ್ಕೇನಲ್ಲಾ ವಾಸ!
ಶ್ವರೇಶ್ವರ ಜ್ಞಾನಕ್ಕಾ ವಾಸ!
ವಾದ, ಭೇದಗಳಿಗಲ್ಲಾ ವಾಸ!
ತ್ಯ ನಿರಂಜನಾದಿತ್ಯಾವಾಸ!!!

ಶಿವಶಂಕರಾ ಪರಮೇಶ್ವರಾ!

ರಸುಂದರಾ ಚಂದ್ರಶೇಖರಾ!
ಶಂಕರೀ ವರಾ ಶಾಂತ ಸಾಗರಾ!
ಲಿ ಸಂಹರಾ ಲಲಿತ ವರಾ!
ರಾಜ ಶೇಖರಾ ಗಿರಿಜೇಶ್ವರಾ!
ರ್ವತೇಶ್ವರಾ ಪಾರ್ವತೀಶ್ವರಾ!
ಣ ಭೀಕರಾ ಕರುಣಾಕರಾ!
ಮೇರು ಗಂಭೀರಾರ್ಧನಾರೀಶ್ವರಾ! (ವಿ)
-ಶ್ವ ಸೋದರಾ ಶ್ರೀ ಬಸವೇಶ್ವರಾ!
ರಾಜ ನಿರಂಜನಾದಿತ್ಯೇಶ್ವರಾ!!!

ನಾನಾರೆಂದಮ್ಮನ ಗಂಡ ನಂಜುಂಡ!

ನಾಮ, ರೂಪಾತೀತ ಗಂಡ ನಂಜುಂಡ! (ಆ)
-ರೆಂದು ತೋರುವನು ಗಂಡ ನಂಜುಂಡ!
ತ್ತನೇನಾನೆಂಬ ಗಂಡ ನಂಜುಂಡ! (ಅ)
-ಮ್ಮಯ್ಯಣ್ಣಯ್ಯಾನೆಂಬ ಗಂಡ ನಂಜುಂಡ!
ಟರಾಜಾನೆಂಬ ಗಂಡ ನಂಜುಂಡ!
ಗಂಗಾಧರಾನೆಂಬ ಗಂಡ ನಂಜುಂಡ! (ಮೃ)
-ಡನೆಂಬವಾನೆಂಬ ಗಂಡ ನಂಜುಂಡ! (ಅ)
-ನಂಗಾರಿ ನಾನೆಂಬ ಗಂಡ ನಂಜುಂಡ! (ನಂ)
-ಜುಂಡ, ಮಾರ್ತಾಂಡೆಂಬ ಗಂಡ ನಂಜುಂಡ! (ಬೇ)
-ಡ ಶ್ರೀ ನಿರಂಜನಾದಿತ್ಯ ನಂಜುಂಡ!!!

ಆಳಿ ಬಾಳಿ ಅಳಿದವರೆಷ್ಟೋ! (ಕೂ)

-ಳಿಲ್ಲದೆ ಪ್ರಾಣ ಬಿಟ್ಟವರೆಷ್ಟೋ!
ಬಾಳಿದು ವ್ಯರ್ಥವೆಂದವರೆಷ್ಟೋ! (ಕಾ)
-ಳಿಕಾ ಪೂಜೆ ಮಾಡಿದವರೆಷ್ಟೋ!
ದೂ ವಿಫಲವಾದವರೆಷ್ಟೋ! (ಬ)
-ಳಿಕ ವಿಚಾರ ಗೈದವರೆಷ್ಟೋ!
ರ್ಶನಾರ್ಥ ತಿಳಿದವರೆಷ್ಟೋ! (ಭ)
-ವ ರೋಗ ಗುಣವಾದವರೆಷ್ಟೋ! (ತೆ)
-ರೆ ಮರೆಯಾಗುಳಿದವರೆಷ್ಟೋ! (ಎ)
-ಷ್ಟೋ? ನಿರಂಜನಾದಿತ್ಯನಂತೆಷ್ಟೋ?!!!

ಕ್ರಿಸ್ತನಿಗುದಯಾಸ್ತ ಉಂಟೇನು?

ಸ್ತವನವಗಗತ್ಯ ಉಂಟೇನು?
ನಿರ್ಮಲನಿಗೆ ಸ್ನಾನ ಉಂಟೇನು?
ಗುಣ, ದೋಷಾತ್ಮನಿಗೆ ಉಂಟೇನು?
ಯಾಶೀಲಗೆ ಲೋಭ ಉಂಟೇನು?
ಯಾತ್ರೆಯಾಸೆ ಅವಗೆ ಉಂಟೇನು? (ಬೆ)
-ಸ್ತನಿಗೆ ಜಲ ಭಯ ಉಂಟೇನು?
ಉಂಡವಗೆ ಹಸಿವೆ ಉಂಟೇನು? (ನ)
-ಟೇಶನಿಗೆ ನಾಚಿಕೆ ಉಂಟೇನು? (ತಾ)
-ನು ನಿರಂಜನಾದಿತ್ಯನಲ್ಲೇನು???

ಅಹಂ ಮದ ಮಹಮ್ಮದಗಿಲ್ಲಾ!

ಹಂಸಾತ್ಮನವನಾಗಿದ್ದಾನಲ್ಲಾ!
ದ, ಮತ್ಸರಗಳವಗಿಲ್ಲಾ!
ಯಾ ಹೃದಯನಾಗಿರ್ಪನಲ್ಲಾ!
ನೆ, ಮಠದಾಸೆಯೊಲ್ಲನಲ್ಲಾ!
ಗಲಿರುಳಲ್ಲಲ್ಲ ತಾನೆಲ್ಲಾ! (ತ)
-ಮ್ಮವರೆಲ್ಲರಾಗಿರುವರಲ್ಲಾ!
ನ, ಕರೂ ತಾನಾಗಿಹನಲ್ಲಾ (ತ್ಯಾ)
-ಗಿಯಿವ ಸಾಮಾನ್ಯ ಜೀವನಲ್ಲಾ! (ಎ)
-ಲ್ಲಾ ಶ್ರೀ ನಿರಂಜನಾದಿತ್ಯನಲ್ಲಾ!!!

ಲಕ್ಷ್ಮಿ ನಿನ್ನವಳು ನರಸಿಂಹ! (ಲ)

-ಕ್ಷ್ಮಿಗಾರೆದುರಾಳು ನರಸಿಂಹ?
ನಿನ್ನ ಶಕ್ತ್ಯವಳು ನರಸಿಂಹ! (ಅ)
-ನ್ನ ದಾನಿಯವಳು ನರಸಿಂಹ!
ರದೆಯವಳು ನರಸಿಂಹ! (ಗೋ)
-ಳು ನೋಡಳವಳು ನರಸಿಂಹ!
ತೋದ್ಧಾರಿವಳು ನರಸಿಂಹ!
ಮಾ ನಾಮಿವಳು ನರಸಿಂಹ!
ಸಿಂಗಾರಮ್ಮವಳು ನರಸಿಂಹ!
ರಿ ನಿರಂಜನಾದಿತ್ಯಾ ಸಿಂಹ!!!

ಶ್ರೀರಂಗಪಟ್ಟಣದಲ್ಲೆನ್ನ ವಾಸ!

ರಂಗನಾಥ ಸ್ವಾಮಿಯಾ ಶ್ರೀನಿವಾಸ! (ಸಾ)
-ಗರ ಸುತೆಯ ನಿತ್ಯ ಸಹವಾಸ!
ತಿತ ಪಾವನ ಶ್ರೀಕೃಷ್ಣ ದಾಸ! (ಪ)
-ಟ್ಟದರಸಿಯೊಡಗೂಡಿರ್ಪಾ ದಾಸ! (ಹ)
-ಣಕಾಶಿಸನಾ ನಿರಂಜನ ದಾಸ!
ತ್ತ ನಿರಂಜನಾದಿತ್ಯನಾವಾಸ! (ಎ)
-ಲ್ಲೆಲ್ಲಿಲ್ಲದನನ್ಯಾದರದಾವಾಸ! (ಅ)
-ನ್ನ ಪೂರ್ಣಾಮರಗಂಗೆಯರ್ಗಾವಾಸ! (ಶಿ)
-ವಾನಂದ, ಶಶಿ ಪ್ರೇಮಾತ್ಮ ನಿವಾಸ! (ದಾ)
-ಸ, ನಿರಂಜನಾದಿತ್ಯ ನಿಲಯೇಶ!!!

ನಿನ್ನ ದೇವರ ಗುಡಿಯಿದಮ್ಮಾ! (ಅ)

-ನ್ನ, ವಸನ ದಾತನವನಮ್ಮಾ! (ತ)
-ದೇಕ ಧ್ಯಾನ ನಿನಗಿರಲಮ್ಮ! (ಅ)
-ವನ ಸೇವೆ ನಿನ್ನ ಭಾಗ್ಯವಮ್ಮಾ! (ಹೊ)
-ರಗಿನ ಹವ್ಯಾಸವಿನ್ನೇಕಮ್ಮಾ?
ಗುಣಾವಗುಣ ಗುರು ಚಿತ್ತಮ್ಮಾ! (ಗು)
-ಡಿಸಿ, ಯೊರಸಿ ಶುಚಿ ಮಾಡಮ್ಮಾ! (ಬಾ)
-ಯಿ, ಕೈ, ನಿರ್ಮಲವಿರಬೇಕಮ್ಮಾ!
ತ್ತನಾಗ ಒಲಿಯುವನಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯವನಮ್ಮಾ!!!

ನಾ ನಿನಗೆ ಹೊಸಬನಲ್ಲ!

ನಿನಗೆನ್ನ ಜ್ಞಾಪಕವಿಲ್ಲ!
ನ್ನ ನೀನು ಬಿಡುವಂತಿಲ್ಲ! (ತೆ)
-ಗೆ ನಿನ್ನ ದೃಷ್ಟಿ ದೋಷವೆಲ್ಲ!
ಹೊಳೆವುದೆನ್ನಾಕಾರವೆಲ್ಲ!
ಹನೆಯಿಂದಾಗಲಿದೆಲ್ಲ!
ರಡಾಸೆಗಾಗುಳಿವಿಲ್ಲ!
ನ್ನ ಹೊರತಾಗೇನೂ ಇಲ್ಲ! (ಗೊ)
-ಲ್ಲ ನಿರಂಜನಾದಿತ್ಯನೆಲ್ಲ!!!

ಮಂಗಳಾಂಗನುದಯ ಮಂಗಳವಾರ! (ಸಂ)

-ಗವಾಯ್ತವಗಿಳೆಯ ಭೀಕರಾಕಾರ! (ಬಾ)
-ಳಾಂಗಾರ, ಸಂಗೀತಾಗಾರ, ಶ್ರೀ ಶೃಂಗಾರ!
ಣನಾತೀತವಿವನ ಉಪಕಾರ!
ನುಡಿ, ನಡೆಯೊಂದಾಗಿ ಗೈವೋಪಚಾರ!
ಯೆ ಚರಾಚರದಲ್ಲಿವಗಪಾರ!
ದುಪತಿಯ ಗೀತಾಸಾರ ಗಂಭೀರ!
ಮಂಗಳ ವೀರೇಳು ಲೋಕಕ್ಕಿದಾಧಾರ!
ರ್ವಭಂಗ ಗೈದು ಮಾಳ್ಪ ಆತ್ಮೋದ್ಧಾರ! (ಖೂ)
-ಳರಕ್ಕಸ ಸಂಹಾರ ಕುಂಜ ವಿಹಾರ!
ವಾಙ್ಮನಕ್ಕ ಗೋಚರಾ ನಂದ ಕಿಶೋರ! (ವ)
-ರ ನಿರಂಜನಾದಿತ್ಯಾನಂದಾವತಾರ!!!

ಆಚಾರ ವಿಚಾರವೇ ಸಂಸ್ಕಾರ!

ಚಾರುತರ ಸಂಸ್ಕಾರಾಪ್ತಾಕಾರ!
ಘುಪತಿಯದಾದರ್ಶಾಚಾರ!
ವಿಚಾರಾಶಾದೂರ ರಘುವೀರ!
ಚಾಪ, ಬಾಣ, ಧರ ರಣಧೀರ!
ಕ್ಕಸರವನಿಗೆ ನಿಸ್ಸಾರ!
ವೇದ ವೇದ್ಯಾತ್ಯ ವೇದಾಂತಸಾರ!
ಸಂತ ಪಂಥಕ್ಕಿವ ಸದಾಧಾರ! (ಸಂ)
-ಸ್ಕಾರಿ ಮಾರುತಿಯ ಪ್ರೇಮಾಗಾರ! (ವ)
-ರದ ನಿರಂಜನಾದಿತ್ಯಾಕಾರ!!!

ಏನಾನಂದ ನಿನ್ನ ಸಂಬಂಧ?

‘ನಾ’ ನೋಡಿದ್ದಿಲ್ಲಂಥ ಸಂಬಂಧ!
-ನಂಬಲಾರೆನನ್ಯ ಸಂಬಂಧ!
ತ್ತ ಸೇವಾನಂದಾ ಸಂಬಂಧ!
ನಿಶಿ, ದಿನ, ಬೇಕಾ ಸಂಬಂಧ! (ಅ)
-ನ್ನ ಪಾನಕ್ಕಾಗ್ಯೇನು ಸಂಬಂಧ?
ಸಂಗವಾ ಶ್ರೀರಂಗ ಸಂಬಂಧ!
ಬಂಧವೇನಾತ್ಮಾರ್ಥ ಸಂಬಂಧ? (ಗಂ)
-ಧ, ನಿರಂಜನಾದಿತ್ಯ ಸಂಬಂಧ!!!

ದೇವರ ಮಾತು ಭಕ್ತರ ಸಂಪತ್ತು! (ಅ)

-ವರಿಗೇತಕ್ಕಿನ್ನಿತರ ಸಂಪತ್ತು?
ಕ್ತ ಮಾಂಸದಲ್ಲೆಲ್ಲಾ ಆ ಸಂಪತ್ತು!
ಮಾತು ಮಾತಿಗೂ “ಶ್ರೀರಾಮ” ಸಂಪತ್ತು!
ತುದಿ ಮೊದಲಿಲ್ಲದಾತ್ಮ ಸಂಪತ್ತು!
ಕ್ತಿ ಭಾವ ತುಳುಕಾಡ್ವ ಸಂಪತ್ತು! (ಮು)
-ಕ್ತರಾಗುವುದೇ ಅವರ ಸಂಪತ್ತು!
ತ್ನವೆಂದರಾತ್ಮಾ ರಾಮ ಸಂಪತ್ತು!
ಸಂಗ ಸದಾ ಸೀತಾರಾಮ ಸಂಪತ್ತು!
ತಿತ ಪಾವನ ನಾಮ ಸಂಪತ್ತು! (ತು)
-ತ್ತು ನಿರಂಜನಾದಿತ್ಯಗೀ ಸಂಪತ್ತು!!!

ಬಾಳಿ ಬಡವಾಗುವುದದೆಂತು? (ಆ)

-ಳಿದೂರಲ್ಲಾಳಾಗುವುದದೆಂತು?
ಲ್ಲವ ಸೊಲ್ಲಿಲ್ಲದಿರ್ಪುದೆಂತು? (ನಾ)
-ಡ ಗೌಡ ಮೂಢ ತಾನಾದರೆಂತು?
ವಾರಿಜಾರ್ಕನಗಲಿರ್ಪುದೆಂತು?
ಗುರುದ್ರೋಹಿಯಾದರಿರ್ಪುದೆಂತು? (ಮಾ)
-ವು ಬೇವನಿತ್ತರುಣ್ಣುವುದೆಂತು?
ತ್ತ ಚಿತ್ತಕ್ಕಿದಿರಾಡ್ವುದೆಂತು?
ದೆಂಟಿಲ್ಲದೆಲೆಯಿರುವುದೆಂತು? (ಕಂ)
-ತು ನಿರಂಜನಾದಿತ್ಯಾತ್ಮನೆಂತು???

ದಂಡಿಸಬೇಡ ಮಂಡಿಸಬೇಡ ದೇಹವನ್ನು! (ಬಿ)

-ಡಿಸು ಇಂದ್ರಿಯ ಚಪಲದಿಂದೀ ದೇಹವನ್ನು!
ತತ ವಿರಿಸಾರೋಗ್ಯದಲ್ಲೀ ದೇಹವನ್ನು!
ಬೇಡಿ, ಕಾಡಿ, ಬೆಳಸಬೇಡ ಈ ದೇಹವನ್ನು! (ದ)
-ಡ ಸೇರಲಿಕಾಗಿಟ್ಟರೆ ಸಾಕೀ ದೇಹವನ್ನು!
ಮಂಗಳಾತ್ಮನಿಗಾಗಿ ಬಳಸೀ ದೇಹವನ್ನು! (ಅ)
-ಡಿಗಡಿಗಾತ್ಮಾನಂದದಲ್ಲಿಡೀ ದೇಹವನ್ನು!
ತ್ಸಂಗದಲ್ಲಿ ಸದಾ ಇರಸೀ ದೇಹವನ್ನು!
ಬೇರಾವ ಕಡೆಗೆಳೆಯ ಬೇಡೀ ದೇಹವನ್ನು! (ಸ)
-ಡಗರದೂಟಕ್ಕೆಬ್ಬಿಸದಿರೀ ದೇಹವನ್ನು!
ದೇವೀ ಪ್ರಸಾದ ತೃಪ್ತಿಯಲ್ಲಿಡೀ ದೇಹವನ್ನು!
ರಿ ಭಜನೆಗುಪಯೋಗಿಸೀ ದೇಹವನ್ನು!
ರ ಮಾರುತಿಯ ಹಾಗಿರಿಸೀ ದೇಹವನ್ನು! (ಸ)
-ನ್ನುತ ನಿರಂಜನಾದಿತ್ಯಗಾಗೀ ದೇಹವನ್ನು!!!

ಒಳಗೆ ನಗ, ಹೊರಗೆ ನಿಗ! (ಬ)

-ಳಗ ಬಯಸಿಹುದು ವಿಭಾಗ!
ಗೆಳತನದೈಕ್ಯಕ್ಕೇಕೆ ಭಾಗ?
ಗಧರನಾಗುವುದೇ ಯೋಗ!
ತಿಗೇಡದು ಮಿಥ್ಯಾನುರಾಗ!
ಹೊಡೆದಟ್ಟಬೇಕಿದನು ಬೇಗ!
ಘುವರನಾಶ್ರಯದಿಂದೀಗ!
ಗೆಲಲರಿಗಳ ಮಹಾತ್ಯಾಗ!
ನಿತ್ಯ, ಸತ್ಯ, ಸಚ್ಚಿದಾನಂದಾಗ! (ಆ)
-ಗ, ನಿರಂಜನಾದಿತ್ಯನ ಭಾಗ!!!

ಮಹಾ ಶಿವರಾತ್ರಿಯಂತೆ ನಾಳೆ!

ಹಾಲಾಹಲ ಜೀರ್ಣವಂತೆ ನಾಳೆ!
ಶಿವಾನಂದ ಲೀಲೆಯಂತೆ ನಾಳೆ!
ರಮೃತೋತ್ಪತ್ತಿಯಂತೆ ನಾಳೆ!
ರಾಹು, ಕೇತು, ಸೋಲ್ವರಂತೆ ನಾಳೆ!
ತ್ರಿನೇತ್ರನ ಪೂಜೆಯಂತೆ ನಾಳೆ! (ಸಾ)
-ಯಂಕಾಲಭಿಷೇಕವಂತೆ ನಾಳೆ! (ಮಾ)
-ತೆಗೆ ಮಹಾನಂದವಂತೆ ನಾಳೆ!
“ನಾ” ನರ್ಧ ನಾರೀಶನಂತೆ ನಾಳೆ! (ಗೆ)
-ಳೆಯ ನಿರಂಜನಾದಿತ್ಯೇಶಾಳೆ!!!

ನೀಲಕಂಠನಿಗೆ ಕರ್ಪೂರಾರತಿ ಬೆಳಗಯ್ಯಾ! (ಬಾ)

-ಲಕರಿಬ್ಬರನ್ನೂ ಕೂರಿಸ್ಯಾರತಿ ಬೆಳಗಯ್ಯಾ!
ಕಂಡವರಿಗಿದೊಪ್ಪಿಸದೆ ನೀನೇ ಬೆಳಗಯ್ಯಾ! (ಕಂ)
-ಠದಲ್ಲಿ ರುದ್ರಾಕ್ಷಿ ಧಾರಣೆ ಮಾಡಿ ಬೆಳಗಯ್ಯಾ!
ನಿಶ್ಚಲಭಕ್ತಿ, ಭವದಿಂದಾರತಿ ಬೆಳಗಯ್ಯಾ! (ಬ)
-ಗೆಬಗೆ ಪತ್ರ ಪುಷ್ಪಗಳರ್ಚಿಸಿ ಬೆಳಗಯ್ಯಾ!
ದಳ್ಯಾದಿ ಫಲ ನೈವೇದ್ಯ ಮಾಡಿ ಬೆಳಗಯ್ಯಾ! (ಚ)
-ರ್ಪೂಟಗಳಟಾಟೋಪ ಬಿಟ್ಟಾರತಿ ಬೆಳಗಯ್ಯಾ!
ರಾತ್ರಿಯೆಲ್ಲಾ ಭಜನೆ ಮಾಡ್ಯಾರತಿ ಬೆಳಗಯ್ಯಾ! (ವ)
-ರ ಶಿವಾನಂದವನ್ನನುಭವಿಸಿ ಬೆಳಗಯ್ಯಾ! (ಸ)
-ತಿ ಪಾರ್ವತಿಯ ಸ್ಮರಿಸುತ್ತಾರತಿ ಬೆಳಗಯ್ಯಾ!
ಬೆಳ್ಳಿ ಬೆಟ್ಟವೇ ಇದೆನುತಾರತಿ ಬೆಳಗಯ್ಯಾ! (ಬಾ)
-ಳ ನೇತ್ರನನ್ನಲಂಕರಿಸ್ಯಾರತಿ ಬೆಳಗಯ್ಯಾ!
ಡಿ ಬಿಡಿ ಬಿಟ್ಟು ಮಂಗಳಾರತಿ ಬೆಳಗಯ್ಯಾ! (ಅ)
-ಯ್ಯಾ ನಿರಂಜನಾದಿತ್ಯ ಶಿವನೆಂದು ಬೆಳಗಯ್ಯಾ!!!

ಮಾತಾಡದೇ ಇದ್ದರೆ ಬಹು ಕ್ಷೇಮ (ವಾ)

-ತಾವರಣ ನೋಡ್ಯಾಡಿದರೆ ಕ್ಷೇಮ! (ಒ)
-ಡನಾಡಿ ವಿರಕ್ತನಾದರೆ ಕ್ಷೇಮ!
ದೇವರ ವಿಚಾರವಿದ್ದರೆ ಕ್ಷೇಮ!
ತರ ಮಾತಿನಿಂದಾಗದು ಕ್ಷೇಮ! (ತ)
-ದ್ದರ್ಶನಕ್ಕೆ ಸಹಾಯಾದರೆ ಕ್ಷೇಮ! (ತೊ)
-ರೆದರೆಲ್ಲಾ ಸಂಪರ್ಕವನ್ನು ಕ್ಷೇಮ!
ಹಿರ್ಮುಖನಾಗದಿದ್ದರೆ ಕ್ಷೇಮ!
ಹುಸಿ ಮಾಯಾದೂರನಾದರೆ ಕ್ಷೇಮ!
ಕ್ಷೇತ್ರಜ್ಞ ತಾನಾಗಿದ್ದರೆಲ್ಲಾ ಕ್ಷೇಮ! (ಪ್ರೇ)
-ಮ ನಿರಂಜನಾದಿತ್ಯನದು ಕ್ಷೇಮ!!!

ಆರ್ಯೋಕ್ತ್ಯನು ಭವವಾಗಬೇಕು (ಸೂ)

-ರ್ಯೋ ಪಾಸನಾ ಫಲ ಕಾಣಬೇಕು! (ಭ)
-ಕ್ತ್ಯನುಕೂಲ ಮಾಡಿ ಕೊಡಬೇಕು! (ಅ)
-ನುಮಾನ ನಿರ್ನಾಮವಾಗಬೇಕು!
ಜನೆ ಹೆದ್ದಾರಿಯಾಗಬೇಕು!
ರ ಗುರುಲೀಲೆ ನೋಡಬೇಕು!
ವಾದ ಭೇದಳಿದು ಹೋಗಬೇಕು!
ಮನಾತ್ಮನತ್ತ ಬರಬೇಕು!
ಬೇಗ ಬೇಗ ದಾರಿ ಸಾಗಬೇಕು! (ಬೇ)
-ಕು ನಿರಂಜನಾದಿತ್ಯಾಗಬೇಕು!!!

ಧರ್ಮ, ಕರ್ಮಿಯೇ ಹಿತೈಷಿ! [ದು]

-ರ್ಮದ ಬಿಟ್ಟವ ಹಿತೈಷಿ!
ರ್ತವ್ಯ ನಿಷ್ಟ ಹಿತೈಷಿ! (ಊ)
-ರ್ಮಿಳೆಯರಸ ಹಿತೈಷಿ!
ಯೇಸುಕ್ರಿಸ್ತಾತ್ಮ ಹಿತೈಷಿ!
ಹಿಮಗಿರೀಶ ಹಿತೈಷಿ! (ಮ)
-ತೈಕ್ಯಾತ್ಮ ಗಾಂಧಿ ಹಿತೈಷಿ! (ಋ)
-ಷಿ ನಿರಂಜನಾದಿತ್ಯಾರ್ಷಿ!!!

ನಾಗ ಪ್ರತಿಷ್ಠೆ ಮಾಡಲೇನಪ್ಪಾ? [ಆ]

ಬಹುದದಕಾರಡ್ಡಿಯಪ್ಪಾ?
ಪ್ರತಿಷ್ಠೆ ಮಾಡು ನಿನ್ನೊಳಗಪ್ಪಾ!
ತಿಥಿ, ವಾರ ನಿರ್ಬಂಧವಿಲ್ಲಪ್ಪಾ! (ನಿ)
-ಷ್ಠೆಯೊಂದೇ ಸಮವಿರಬೇಕಪ್ಪಾ!
ಮಾಡು ಸದಾ ಶಿವ ಜಪವಪ್ಪಾ! (ಬ)
-ಡವರಿಗನ್ನದಾನ ಮಾಡಪ್ಪಾ!
ಲೇಸಿದಕ್ಕಿಂತ ಬೇರೇನಿಲ್ಲಪ್ಪಾ!
ಮಶ್ಯಿವಾಯ ಮಂತ್ರಾರಾಮಪ್ಪಾ! (ಅ)
-ಪ್ಪಾ ನಿರಂಜನಾದಿತ್ಯ ಶಿವಪ್ಪಾ!!!

ಕೂಗಿ ಕೂಗಿ ಸುಸ್ತಾಯ್ತಪ್ಪಾ! [ರೇ]

-ಗಿದರಾಗುಪುದೇನಪ್ಪಾ?
ಕೂಗಿಗುತ್ತರ ನೀಡಪ್ಪಾ! (ಬಾ)
-ಗಿ ಬೇಡುವೆ ನಿನ್ನನಪ್ಪಾ!
ಸುಪ್ರಸನ್ನ ನೀನಾಗಪ್ಪಾ! (ಪ್ರ)
-ಸ್ತಾಪನ್ಯರದಿಲ್ಲವಪ್ಪಾ! (ಆ)
-ಯ್ತದೇನಪರಾಧವಪ್ಪಾ? (ಅ)
-ಪ್ಪಾ, ನಿರಂಜನಾದಿತ್ಯಪ್ಪಾ!!!

ಉಪಚಾರ ಮಾನ್ಯವಮ್ಮಾ!

ಡಬೇಡ ದುಃಖವಮ್ಮಾ!
ಚಾಮುಂಡಾಂಬೆ ವಿಮಲಮ್ಮಾ!
ಗಳೆ ಯೋಗಿಯೊಲ್ಲಮ್ಮಾ!
ಮಾರ್ಗದರ್ಶಿ ನೀನಾಗಮ್ಮಾ! (ಅ)
-ನ್ಯರಿಂದಾಗದೀ ಕಾರ್ಯಮ್ಮಾ!
ರಗುರು ಶಿವನಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಮ್ಮಾ!!!

ತಲೆಯ ಮೇಲಿನ ಮಲ್ಲಿಗೆ! [ಬೆ]

-ಲೆಯುಳ್ಳ ಗೊಬ್ಬರ ಮೊಲ್ಲೆಗೆ! (ಕಾ)
-ಯಕ್ಕೀಗಭಿಮಾನ ಜಿಲ್ಲೆಗೆ! (ಅ)
-ಮೇಲದು ಹೋಗುವುದಲ್ಲಿಗೆ? (ಬ)
-ಲಿ ರಾಜೇಂದ್ರ ನಿರುವಲ್ಲಿಗೆ!
ದಿಯೊಡಗೂಡಿ ಕೊಲ್ಲಿಗೆ!
ತ್ತೋಡುವುದು ಬಂದಲ್ಲಿಗೆ! (ಅ)
-ಲ್ಲಿಲ್ಲೆಲ್ಲೆಲ್ಲಿರ್ಪವನಲ್ಲಿಗೆ! (ಹೀ)
-ಗೆ ನಿರಂಜನಾದಿತ್ಯನಾಗೆ!!!

ಶಿವೇಚ್ಛೆಯಲ್ಲವೇನು ನಾಗ? [ಜೀ]

-ವೇಶ್ವರನಲ್ಲೇನಾಗ ನಾಗ? (ಸ್ವೇ)
-ಚ್ಛೆಯಹಂಕಾರಿಯೇನು ನಾಗ? (ದಾ)
-ಯವಾದ ಮಾಳ್ಪನೇನು ನಾಗ? (ಬ)
-ಲ್ಲವನಲ್ಲೇನು ಶಿವ ನಾಗ?
ವೇದಾಂತಸಾರ ಗುಹ ನಾಗ! (ಅ)
-ನುಮಾನವೇಕಾರಾಮಾ ನಾಗ! (ಆ)
-ನಾಗ, ನೀನಾಗ ಶಿವ ನಾಗ! (ನಾ)
-ಗ ನಿರಂಜನಾದಿತ್ಯ ಯೋಗ!!!

ವಿಶಾಲಾಕಾಶದಲ್ಲಿ ವಿಶ್ವಾತ್ಮ!

ಶಾಶ್ವತನಾಗಿವನು ಸತ್ಯಾತ್ಮ! (ವೇ)
-ಲಾಯುಧಸ್ವಾಮಿ ಗುರುಗುಹಾತ್ಮ!
ಕಾಮ ಹರ, ಹರ ಶ್ರೀರಾಮಾತ್ಮ!
ಕ್ತಿ ಸ್ವರೂಪ ಸದಾಶಿವಾತ್ಮ!
ತ್ತಾವಧೂತ ನಿತ್ಯಾನಂದಾತ್ಮ! (ಮ)
-ಲ್ಲಿಕಾರ್ಜುನ ಲಿಂಗ ವಿಮಲಾತ್ಮ!
ವಿಚಾರ ಸಾಗರ ಚಿನ್ಮಯಾತ್ಮ! (ವಿ)
-ಶ್ವಾಧಾರೋಂಕಾರ ಶ್ರೀ ಶಂಕರಾತ್ಮ! (ಆ)
-ತ್ಮ, ನಿರಂಜನಾದಿತ್ಯ ಸರ್ವಾತ್ಮ!!!

ವಿಶಾಲಾಕಾಶದಲ್ಲಿ ವಿಶ್ವಾತ್ಮ!

ಶಾಶ್ವತನವನಾಗ್ಯಚಲಾತ್ಮ! (ನಿ)
-ಲಾಕಾಶದಲ್ಲಿ ಛಾಯಾಪತ್ಯಾತ್ಮ!
ಕಾಮಹರನಾತಾಗಿ ರಾಮಾತ್ಮ!
ಕ್ತಿರೂಪವದಾಗಿ ಮುಕ್ತಾತ್ಮ!
ತ್ತ ತಾನಾಗಿ ಅವಧೂತಾತ್ಮ! (ಮ)
-ಲ್ಲಿಕಾರ್ಜುನವನಾಗಿ ಲಿಂಗಾತ್ಮ!
ವಿರಾಡ್ರೂಪ ಆ ನಂದಕಂದಾತ್ಮ! (ವಿ)
-ಶ್ವಾಕಾರನಾಗಿ ಚರಾಚರಾತ್ಮ! (ಆ)
-ತ್ಮ, ನಿರಂಜನಾದಿತ್ಯ ನಿತ್ಯಾತ್ಮ!!!

ನನ್ನ ಬೆಳಕೆಲ್ಲರಿಗಾಗಿ! (ಅ)

-ನ್ನ, ಪಾನಗಳದರಿಂದಾಗಿ!
ಬೆಲೆ ಬಹಳದರಿವಾಗಿ! (ಒ)
-ಳ, ಹೊರಗೆಲ್ಲಾತ್ಮ ನಾನಾಗಿ!
ಕೆರೆ, ಭಾವಿ, ನೀರೆಲ್ಲಾನಾಗಿ! (ಬ)
-ಲ್ಲವರ ಬುದ್ಧಿ ರೂಪಿಯಾಗಿ!
ರಿಪು ಕುಲ ಸಂಹಾರನಾಗಿ!
ಗಾಳಿ ಬೆಂಕಿಯಾಕಾರವಾಗಿ! (ಯೋ)
-ಗಿ ನಿರಂಜನಾದಿತ್ಯ ತ್ಯಾಗಿ!!!

ಉತ್ಸಾಹವಿಲ್ಲ ಕರ್ಮಕ್ಕೆ ಪ್ರೋತ್ಸಾಹವಿಲ್ಲ! (ತಾ)

-ತ್ಸಾರ ಮಾಡಿದರಾವುದೂ ಸಾಗುವುದಿಲ್ಲ!
ರಿ ಕೃಪೆಯಿಂದಲೇ ನಡೆಯಬೇಕೆಲ್ಲ!
ವಿಧಿಯೆಂದಳುತ್ತ ಹಾಳಾಯ್ತು ಕಾಲವೆಲ್ಲ! (ಬ)
-ಲ್ಲವರ ಮಾತನುಭವಕ್ಕೆ ಬರುತ್ತಿಲ್ಲ!
ರ್ಮ ಹೀಗಾಗಿ ಕೆಡುತ್ತಿರುವುದೆಲ್ಲೆಲ್ಲ! (ಮ)
-ರ್ಮವರಿತವರ ದರ್ಶನವಾಗುತ್ತಿಲ್ಲ! (ಧ)
-ಕ್ಕೆಯಿದರಿಂದಾರ್ಯ ಸಂಸ್ಕೃತಿಗಳಿಗೆಲ್ಲಾ!
ಪ್ರೋತ್ಸಾಹೋತ್ಸಾ ಹಕ್ಕಗತ್ಯೆಂದರೆ ತಪ್ಪಿಲ್ಲ! (ಉ)
-ತ್ಸಾಹ ಹೀನರೆಂದು ಜರೆದು ಫಲವಿಲ್ಲ! (ಅ)
-ಹರ್ನಿಶಿಯಿದೇ ಚಿಂತೆ ಸಾಧಕರಿಗೆಲ್ಲ!
ವಿಶ್ವನಾಥ ತಾನೇ ಬಗೆ ಹರಿಸಲೆಲ್ಲ! (ಬ)
-ಲ್ಲ ನಿರಂಜನಾದಿತ್ಯನಲ್ಲೀ ಹವಾಲೆಲ್ಲ!!!

ಪ್ರಶಾಂತಾಂತರಂಗಾ ಶ್ರೀರಂಗ!

ಶಾಂತ ತರಂಗಾಂಗಾ ಶ್ರೀರಂಗ! (ಸಂ)
-ತಾಂಗ ಸಂಗಾ ರಂಗಾ ಶ್ರೀರಂಗ! (ವೀ)
-ತರಾಗಾಂಗಾರಾಂಗಾ ಶ್ರೀರಂಗ!
ರಂಗಾ ಪಾಂಡುರಂಗಾ ಶ್ರೀರಂಗ! (ಗಂ)
-ಗಾ ಕಾವೇರೀ ಸಂಗಾ ಶ್ರೀರಂಗ!
ಶ್ರೀರಂಗಾರಾಮಾಂಗಾ ಶ್ರೀರಂಗ!
ರಂಗಾಂಗ ಸಾರಂಗಾ ಶ್ರೀರಂಗ! (ರಂ)
-ಗ ನಿರಂಜನಾದಿತ್ಯ ಸಂಗ!!!

ಬೋಳಿಯಾಗು, ಮಹಾ ಕಾಳಿಯಾಗು! (ಗಾ)

-ಳಿ ಗೋಪುರ ಬಿಟ್ಟು ಕಾಳಿಯಾಗು!
ಯಾಕನ್ಯರೂಪ? ಬಾ! ಕಾಳಿಯಾಗು!
ಗುರುಶಿವನಿಷ್ಟ! ಕಾಳಿಯಾಗು!
ದನಾಕ್ಷಿ ತಾಯಿ ಕಾಳಿಯಾಗು!
ಹಾಸಿಗೆ ಹೇಸಿಗೆ! ಕಾಳಿಯಾಗು!
ಕಾಪಾಲಿಯಿರ್ಪಲ್ಲಿ ಕಾಳಿಯಾಗು! (ಆ)
-ಳಿ, ಬಾಳಿ, ಅಳಿದು ಕಾಳಿಯಾಗು!
ಯಾಕಿನ್ನೂ ನಿಧಾನ? ಕಾಳಿಯಾಗು! (ಆ)
-ಗು ನಿರಂಜನಾದಿತ್ಯಾತ್ಮಳಾಗು!!!

ಬೋಳಿಯಾಗೂಳಿಗದಾಳಾಗು! (ಕಾ)

-ಳಿ ಮಹಾಮಾಯೆ ನೀನಾಳಾಗು!
ಯಾಕಿನ್ನೂ ನಿಧಾನ? ಆಳಾಗು!
ಗೂಳಿಯಾಳುವವಗಾಳಾಗು! (ಅ)
-ಳಿದುಳಿದ ಶಿವಗಾಳಾಗು!
ಣಪತಿಯಯ್ಯಗಾಳಾಗು!
ದಾತ ಶಿವ ದತ್ತಗಾಳಾಗು! (ಕೀ)
-ಳಾಗು, ಮೇಲಾಗು, ನೀನಾಳಾಗು! (ಆ)
-ಗು, ನಿರಂಜನಾದಿತ್ಯಾತ್ಮಾಗು!!!

ವರ ಪಾದಪೂಜೆಗೀಗ ಕಾಲ ತಂಗೀ! (ಚಿ)

-ರಕಾಲವಿದು ನಡೆಯಬೇಕು ತಂಗೀ!
ಪಾಶ್ಚಿಮಾತ್ಯರ ಹಾಗಲ್ಲ ನಾವು ತಂಗೀ! (ಪಾ)
-ದ ಪತಿಯದು ಸದಾ ಪೂಜಾರ್ಹ ತಂಗೀ!
ಪೂರ್ಣಭಕ್ತಿಯಿಂದಾಗಬೇಕಿದು ತಂಗೀ! (ಪೂ)
-ಜೆ ಮಾಡಿ ತೀರ್ಥ ಸೇವಿಸಬೇಕು ತಂಗೀ!
ಗೀತೆಯವನದು ಹಾಡಬೇಕು ತಂಗೀ!
ತಿಯಿದು ಸದ್ಗತಿಗೆ ದಾರಿ ತಂಗೀ!
ಕಾಲಕ್ಕೆ ತಕ್ಕುಪಚಾರ ಮಾಡು ತಂಗೀ! (ಅ)
-ಲಕ್ಷ್ಯವೆಂದೂ ಮಾಡಬೇಡವನ ತಂಗೀ!
ತಂದೆ, ತಾಯಿ, ಬಂಧು, ಬಳಗಾತ ತಂಗೀ! (ತ್ಯಾ)
-ಗೀಶ ಶ್ರೀ ನಿರಂಜನಾದಿತ್ಯ ಮಾತಂಗೀ!!!

ಕಾಳಿ ಮುಂದೆ, ನೀ ಹಿಂದೆ, ರಾಮಕೃಷ್ಣ! (ಬಾ)

ಳಿದನವಳಿಗಾಗಿ ರಾಮಕೃಷ್ಣ!
ಮುಂದೆ ನಿಂದೊಲಿಸಿದ ರಾಮಕೃಷ್ಣ! (ಎ)
-ದೆಗೆಡದಾತ್ಮಾಭ್ಯಾಸಿ ರಾಮಕೃಷ್ಣ!
ನೀತಿ, ರೀತಿಯಾದರ್ಶಿ ರಾಮಕೃಷ್ಣ!
ಹಿಂದೂ ಧರ್ಮ ಪ್ರತೀಕ ರಾಮಕೃಷ್ಣ! (ಬಂ)
-ದೆನುದ್ಧಾರಕ್ಕೆಂದ ಶ್ರೀ ರಾಮಕೃಷ್ಣ!
ರಾತ್ರಿ, ದಿನ, ದುಡಿದ ರಾಮಕೃಷ್ಣ!
ಡದಿಯೊಡಗೂಡಿ ರಾಮಕೃಷ್ಣ!
ಕೃಪಾಭಿಕ್ಷೆ ಪಡೆದ ರಾಮಕೃಷ್ಣ! (ಪೂ)
-ಷ್ಣ ನಿರಂಜನಾದಿತ್ಯ ರಾಮಕೃಷ್ಣ!!!

ಲಗ್ನ ಪತ್ರಿಕೆ ಆಗಲಿಂದು! [ಮ]

-ಗ್ನಳಾಗವನಲ್ಲಿ ನೀನಂದು!
ಡು ನಿಜಾನಂದವೆಂದೆಂದು!
ತ್ರಿಮೂರ್ತಿ ರೂಪನವನೆಂದು! (ಏ)
-ಕೆನಗಿನ್ನನ್ನ ಸೇವೆಯೆಂದು!
-ಆಗಲವನ ಸೇವೆ ಮುಂದು!
ರತಿಗಿದೇ ಧರ್ಮವೆಂದು!
ಲಿಂಗಪೂಜೆಯಾಗಲೆಂದೆಂದು! (ಅ)
-ದು, ನಿರಂಜನಾದಿತ್ಯನೆಂದು!!!

ಧಾರೆರೆಸುವವ ಶ್ರೀರಂಗರಾಜ! [ಎ]

-ರೆಸಿಕೊಂಬವನಾಗ ರಂಗರಾಜ! (ಎ)
-ರೆದೆರೆಸುವರಾಗ ರಂಗರಾಜ!
ಸುಖ, ಸೌಭಾಗ್ಯ ಯೋಗ ರಂಗರಾಜ!
ರ ವಿಜಯಾನಂದ ರಂಗರಾಜ!
ರ ನಾಗೇಂದ್ರ ಶಾಯಿ ರಂಗರಾಜ!
ಶ್ರೀಧರ ನರಹರಿ ರಂಗರಾಜ!
ರಂಗಾಂಗ ಸಾರಂಗ ಶ್ರೀ ರಂಗರಾಜ!
ತಿ ಪತಿತೋದ್ಧಾರ ರಂಗರಾಜ!
ರಾಜ ರಾಜ ಶ್ರೀರಾಮ ರಂಗರಾಜ! (ನಿ)
-ಜ, ನಿರಂಜನಾದಿತ್ಯ ರಂಗರಾಜ!!!

ಮುದಿನಾಯಿಗನ್ನವಿಕ್ಕುವರಾರು?

ದಿಟ್ಟಪರದನ್ನು ಪ್ರೀತಿಯಿಂದಾರು?
ನಾಯಿ ಬಂತೋಡಿಸೆನ್ನದವರಾರು? (ಬಾ)
-ಯಿ ಬಾರದದನ್ನು ಕೇಳುವರಾರು?
ತಿಯದಕೆ ದತ್ತನಲ್ಲದಾರು? (ಅ)
ನ್ನ, ಪಾನವೆಲ್ಲರಿಗೀವಾತಾ ಗುರು!
ವಿಧಿ ವಿಲಾಸವರಿತವರಾರು? (ಹೊ)
-ಕ್ಕು, ಹಾಸಾಗಿರ್ಪಾತ್ಮನ ಕಂಡರಾರು?
ನವಾಸಿ ಸನ್ಯಾಸಿಗಾಧಾರಾರು?
ರಾಮನಾಮವಲ್ಲದೆಮತ್ತಿನ್ಯಾರು? (ಆ)
-ರು, ನಿರಂಜನಾದಿತ್ಯನಲ್ಲದಾರು???

ಸನ್ಯಾಸಿಗೇಕನ್ಯ ವಿಚಾರ?

ನ್ಯಾಯಾನ್ಯಾಯ ಐಹಿಕಾಚಾರ! (ಘಾ)
-ಸಿಗೈವುದೆಲ್ಲಾ ಮಿಥ್ಯಾಚಾರ! (ಯೋ)
-ಗೇಶ್ವರಗಾಗಿರಲಾಚಾರ!
ಷ್ಟಾ ಚೋರ ಮಾರನಾಚಾರ! (ಮಾ)
-ನ್ಯವದು ಸದ್ಗುರು ವಿಚಾರ!
ವಿಕಲ್ಪದಿಂದಪಪ್ರಚಾರ! (ಆ)
-ಚಾರ ಆದರ್ಶಾತ್ಮ ವಿಚಾರ! (ಅ)
-ರ ನಿರಂಜನಾದಿತ್ಯಾಚಾರ!!!

ಚಿಕ್ಕಣ್ಣಗೇನಿಕ್ಕಬೇಕಣ್ಣಾ? (ಅ)

-ಕ್ಕ ಪಕ್ಕದಲ್ಲೇನಿಹುದಣ್ಣಾ? (ಬ)
-ಣ್ಣ ಬಣ್ಣದಂಬೆ ಗೊಂಬೆಯಣ್ಣಾ! (ಬೇ)
-ಗೇಳೀ ಜಾಗದಿಂದ ನೀನಣ್ಣಾ!
ನಿನಗೀವೆ ನಾ ಸಿಹಿಹಣ್ಣಾ! (ಸ)
-ಕ್ಕರೆ ಬೆರೆಸುತುಣ್ಣದಣ್ಣಾ!
ಬೇರೆಲ್ಲಾ ಮಲಬದ್ಧವಣ್ಣಾ!
ಷ್ಟ, ನಷ್ಟವುಗಳಿಂದಣ್ಣಾ! (ಹ)
-ಣ್ಣಾ, ನಿರಂಜನಾದಿತ್ಯಾತ್ಮಣ್ಣಾ!!!

ನನಗಂಟಿಕೊಂಡಿಹುದೆಲ್ಲ! (ನಾ)

-ನದಾವುದಕ್ಕಂಟಿಕೊಂಡಿಲ್ಲ!
ಗಂಭೀರ ಸ್ಥಿತಿ ನನ್ನದೆಲ್ಲ! (ಭೇ)
-ಟಿ ಭಕ್ತರಿಗಾಗದೇನಿಲ್ಲ!
ಕೊಂಡುಕೊಂಬವರೆನ್ನನಿಲ್ಲ! (ಕೂ)
-ಡಿ ಕೊಳ್ಳಲಭ್ಯಂತರವಿಲ್ಲ!
ಹುಚ್ಚು ಬಿಡದದಾಗುವುದಿಲ್ಲ! (ಇ)
-ದೆಲ್ಲರ ಸಂಪತ್ತಲ್ಲದಿಲ್ಲ! (ನ)
-ಲ್ಲ ನಿರಂಜನಾದಿತ್ಯ ಗೊಲ್ಲ!!!

ಚಿಕ್ಕಣ್ಣಾ ದಾನಿ ನೀನಾಗಣ್ಣಾ! (ಅ)

-ಕ್ಕರೆಯಪ್ಪನಲ್ಲಿರಲಣ್ಣಾ! (ಹೆ)
-ಣ್ಣಾಸೆ, ಮಣ್ಣಾಸೆಗಳೇಕಣ್ಣಾ?
ದಾತ, ನಾಥಪ್ಪ ತ್ಯಾಗೀಶಣ್ಣಾ!
ನಿನಗೆಲ್ಲೆಲ್ಲೂ ಬಳಗಣ್ಣಾ!
ನೀನೆಲ್ಲರವನಲ್ಲೇನಣ್ಣಾ?
ನಾನು ನೀನೆಂಬವನಲ್ಲಣ್ಣಾ!
ಣೇಶಣ್ಣನಲ್ಲವೇನಣಾ? (ಅ)
-ಣ್ಣಾ, ನಿರಂಜನಾದಿತ್ಯಾತ್ಮಣ್ಣಾ!!!

ಜೀವರಿಗಿಹುದು ಬಹು ಭಾಷೆ! [ದೇ]

ರದಾಗಿಹುದು ಸರ್ವ ಬಾಷೆ! (ಅ)
-ರಿತವರಿಗೆಲ್ಲಾ ಪೂಜ್ಯ ಭಾಷೆ!
ಗಿರಿಜಾಪತಿಗೆ ಯಾವ ಭಾಷೆ? (ಬ)
-ಹು ಪುರಾತನ ಸಂಸ್ಕೃತ ಭಾಷೆ! (ಸ)
-ದುಪಯೋಗಾಗಬೇಕೆಲ್ಲಾ ಭಾಷೆ!
ಡಿದಾಟಕ್ಕಾಗ್ಯೇನಲ್ಲ ಭಾಷೆ! (ಇ)
-ಹುದಾತ್ಮನಿಗೊಂದು ಗುಪ್ತ ಭಾಷೆ!
ಭಾಷೆಯದೇ ಮೌನಾನಂದ ಭಾಷೆ! (ಭಾ)
-ಷೆ ನಿರಂಜನಾದಿತ್ಯಗೀ ಭಾಷೆ!!!

ಬಾಯಿ ಬಡಾಯಿ ಮೃತ ಪ್ರಾಯಿ! [ತಾ]

-ಯಿ ಗೀತಾ ಅಷ್ಟಾದಶಾಧ್ಯಾಯಿ!
ಹು ಸುಖ ಸಂಪತ್ಪ್ರದಾಯಿ! (ಆಂ)
-ಡಾಳಮ್ಮಾ ಸತ್ಯಭಾಮಾ ತಾಯಿ!
ಯಿವಳ ನಾಮ ಚಿರಸ್ಥಾಯಿ!
ಮೃತ್ಯುಂಜಯಾತ್ಮಾ ಮೈತ್ರೇಯಿ (ದಾ)
-ತ, ನಾಥ, ಶ್ರೀ ನಾಗೇಂದ್ರ ಶಾಯಿ!
ಪ್ರಾಣಿಕೋಟಿ ಹೃದಯಾಶ್ರಯಿ! (ತಾ)
-ಯಿ ನಿರಂಜನಾದಿತ್ಯಾತ್ರೇಯಿ!!!

ಚಿತ್ರಕರ್ತನ ಚಿತ್ರ ಗುಪ್ತ! [ಪು]

-ತ್ರ, ಮಿತ್ರ, ಕಳತ್ರಾತ್ಮ ಗುಪ್ತ!
ರ, ಚರಣಾಂಗಾತ್ಮ ಗುಪ್ತ! (ವ)
-ರ್ತಮಾನ ವ್ಯಾಪಾರಾತ್ಮ ಗುಪ್ತ!
ರ ನಾರಾಯಣಾತ್ಮ ಗುಪ್ತ!
ಚಿರಂಜೀವಿಯಾದಾತ್ಮ ಗುಪ್ತ!
ತ್ರಯಮೂರ್ತಿ ರೂಪಾತ್ಮ ಗುಪ್ತ!
ಗುರು ಶಿವಾನಂದಾತ್ಮ ಗುಪ್ತ! (ತೃ)
-ಪ್ತ ನಿರಂಜನಾದಿತ್ಯ ಗುಪ್ತ!!!

ಚಿತೆಯೊಂದುನೊಡ್ಡುತಿರ್ಪಾ!

ತೆರೆ ಮರೆಯಲ್ಲೊಡ್ಡುತಿರ್ಪಾ! (ಕಾ)
-ಯೊಂದನ್ನೊಳಗೆ ತಾನಿಟ್ಟಿರ್ಪಾ! (ಅ)
-ದುರಿಂದವನೇ ಹಾಳಾಗಿರ್ಪಾ! (ಬಾ)
-ನೊಡೆಯನಿದನ್ನರಿತಿರ್ಪಾ! (ದು)
-ಡ್ಡು, ಕಾಸು, ಕೀಳಬೇಕೆಂದಿರ್ಪಾ! (ಮ)
-ತಿಗೆಟ್ಟು ನಾಶವಾಗುತ್ತಿರ್ಪಾ! (ಇ)
-ರ್ಪಾ! ನಿರಂಜನಾದಿತ್ಯೇರ್ಪಾ!!!

ಯೋಚನೆ, ಯೋಚನೆ, ಆಪಾದನೆ!

ಪಲಾತ್ಮನಿಗಾಸೆ ಸಂಪಾದನೆ!
ನೆನಪದಕ್ಕೆದೊಂದೇ ವಾಸನೆ!
ಯೋಚನೆ ದುರ್ವಿಷಯೋಪಾಸನೆ!
ಕ್ಕಳದ ಗೊಂಬೆಯ ಲಾಲನೆ!
ನೆಲೆಯಿಲ್ಲದಯೋಗ್ಯ ಭಾವನೆ!
ಗು ಹೋಗಿಗೆಲ್ಲಾ ಅಸಹನೆ!
ಪಾಡಿ, ಬೇಡುವನು ಸಂಭಾವನೆ!
ತ್ತಗಾಗುತ್ತಿರಲಾಧರಾನೆ! (ನೀ)
-ನೆನ್ನ ನಿರಂಜನಾದಿತ್ಯನೆನೆ!!!

ಅಂದೊಡೆದ ಕಾಯಿಗಿಂದು ಮೋಕ್ಷ!

ದೊರಕಿತಾ ಜೀವಗಿಂದು ಮೋಕ್ಷ! (ಕ)
-ಡೆಗಂಡರಪ್ಪನಾಗದು ಮೋಕ್ಷ!
ತ್ತನೊಲಿದಾಗುವುದು ಮೋಕ್ಷ!
ಕಾಮ್ಯಕರ್ಮಕ್ಕಿಲ್ಲಗತಿ ಮೋಕ್ಷ! (ಬಾ)
-ಯಿಯುಪಚಾರಕ್ಕದಾವ ಮೋಕ್ಷ? (ತ್ಯಾ)
ಗಿಂಗಳವಡದಿರದು ಮೋಕ್ಷ!
ದುರ್ವಿದ್ಯೆಯಿಂದ ಆಗದು ಮೋಕ್ಷ! (ವ್ಯಾ)
-ಮೋಹ ಬಿಟ್ಟರಾಗುವುದು ಮೋಕ್ಷ! (ಮೋ)
-ಕ್ಷ ನಿರಂಜನಾದಿತ್ಯ ಕಟಾಕ್ಷ!!!

ಸುಂದರ ಮನ ಮಂದಿರ ತನು!

ತ್ತಾತ್ಮಾನಂದನುದಯ ಭಾನು!
ಘುವರ ರವಿವಂತ ಸೂನು!
ದ, ಮತ್ಸರ ರಹಿತ ತಾನು!
ರೋರಗ ವಂದ್ಯ ಸುರಧೇನು!
ಮಂಗಳಾಂಗ ಶ್ರೀರಂಗನವನು!
ದಿನರಾತ್ರ್ಯಾತನ ನೆನೆ ನೀನು!
ಕ್ಷಿಸುವನವನೆಲ್ಲರನ್ನು!
“ತತ್ವಮಸ್ಯಾರ್ಥ” ರೂಪ ಶಿವನು! (ತಾ)
-ನು ನಿರಂಜನಾದಿತ್ಯನಿವನು!!!

ಇದಿರು ನೋಡುವುದಾರನ್ನು?

ದಿವ್ಯನಾಮ ಪ್ರೇಮಾತ್ಮನನ್ನು!
ರುಕ್ಮಿಣೀಶ ಶ್ರೀಕೃಷ್ಣನನ್ನು!
ನೋಡಿ, ಕೂಡಬೇಕವನನ್ನು! (ಪಾ)
-ಡುತ್ತೊಂದಾಗಬೇಕು ನಾನಿನ್ನು! (ಸಾ)
-ವು, ನೋವಿಲ್ಲದಾನಂದನನ್ನು!
ದಾರಿ ತೋರಿದಾ ಗುರುವನ್ನು!
ಕ್ಷಿಪಾ ಶ್ರೀರಂಗಾತ್ಮನನ್ನು! (ಚೆ)
-ನ್ನು ನಿರಂಜನಾದಿತ್ಯನನ್ನು!!!

ಸಾಧನೆ ವ್ಯಾಧಿಹರವಯ್ಯಾ!

ರ್ಮವಿದಕ್ಕೊಂದಿಹುದಯ್ಯಾ!
ನೆರೆ ಶ್ರದ್ಧೆ ಪ್ರಾಮುಖ್ಯವಯ್ಯಾ!
ವ್ಯಾಕುಲವೇಕೆ ನಿನಗಯ್ಯಾ? (ಅ)
-ಧಿಕಾರದಾಸೆ ವ್ಯರ್ಥವಯ್ಯಾ!
ರಿ ಭಜನಾನಂದವಯ್ಯಾ!
ವಿಸುತಾತ್ಮಾರಾಮನಯ್ಯಾ!
ರ ಗುರುರೂಪವದಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾತ್ಮಯ್ಯಾ!!!

ಹರಿ, ಹರ, ಕುಮಾರರೆನ್ನ ಲೇಖನಿ! [ಸು]

-ರಿಸುವುದು ಧ್ಯಾನಮಿಂಚಾ ಲೇಖನಿ! (ಅ)
-ಹರ್ನಿಶಿ ವಿರಾಮವಿಲ್ಲದಾ ಲೇಖನಿ! (ವ)
-ರಮೃತಪಾನ ಮಾಡಿಸುವಾ ಲೇಖನಿ! (ವ್ಯಾ)
-ಕುಲ ನಿರ್ಮೂಲಗೊಳಿಸುವಾ ಲೇಖನಿ!
ಮಾರನಾಟ ಸುಟ್ಟು ಹಾಕುವಾ ಲೇಖನಿ! (ವ)
ರಾಮನಾಮ ಬರೆಯುವಾ ಲೇಖನಿ! (ಧ)
-ರೆಯ ಕಲ್ಯಾಣಕ್ಕಿದಾದರ್ಶ ಲೇಖನಿ! (ನ)
-ನ್ನ, ನಿನ್ನೆಂಬಹಂಕಾರ ಬಿಟ್ಟಾ ಲೇಖನಿ!
ಲೇಸಿದೇ ಚಿರಕಾಲವಿರ್ಪಾ ಲೇಖನಿ! (ಸು)
-ಖ, ದುಃಖವೇಕರಸ ಗೈವಾ ಲೇಖನಿ!
ನಿತ್ಯ ಶ್ರೀ ನಿರಂಜನಾದಿತ್ಯಾ ಲೇಖನಿ!!!

ಬಲ್ಲವನೆಲ್ಲವನೆಲ್ಲೆಲ್ಲಿಹನಲ್ಲವಾ? (ಅ)

-ಲ್ಲ, ಗೊಲ್ಲರೆಲ್ಲಾ ಫುಲ್ಲ ಗೋವಿಂದನಲ್ಲವಾ?
ರಗುರು ಶಿವಾನಂದನವನಲ್ಲವಾ?
ನೆನೆವ ಮನಕೆ ಗೋಚರಿಪನಲ್ಲವಾ? (ಎ)
-ಲ್ಲ ಜಾತಿ, ಮತಕ್ಕಿವನೊಬ್ಬನೇ ಅಲ್ಲವಾ?
ನ, ಗಿರಿ ಗುಹೆಗಳಲ್ಲಿವನಿಲ್ಲವಾ?
ನೆಲ ಜಲಾಕಾಶದಲ್ಲಿ ವ್ಯಾಪಿಸಿಲ್ಲವಾ? (ಹು)
-ಲ್ಲೆ, ನರಿ, ನಾಯಿಗಳಲ್ಲೂ ಇಹನಲ್ಲವಾ? (ಮ)
-ಲ್ಲಿಕಾರ್ಜುನ ಲಿಂಗದಲ್ಲಿವ ತುಂಬಿಲ್ಲವಾ?
ರಿ, ಹರ, ಬ್ರಹ್ಮಾದಿಗಳಿವನಲ್ಲವಾ?
ರ, ಸುರಾಸುರರಿವನೇ ತಾನಲ್ಲವಾ? (ಎ)
-ಲ್ಲರಲ್ಲೆಲ್ಲಿಹನೆಂದು ನಾವೆಲ್ಲಾ ನಂಬುವಾ! (ದೇ)
-ವಾ ನಿರಂಜನಾದಿತ್ಯನೆಂದು ಭಜಿಸುವಾ!!!

ಅಂತರಂಗದ ಚಿಂತೆ ಅಂತರ್ಯಾಮಿ ಬಲ್ಲ!

ನು, ಮನೆಂದ್ರಿಯಕ್ಕೆಲ್ಲಾ ಅವನೇ ನಲ್ಲ!
ರಂಗನಿವನ ಆಳ ಅರಿತವರಿಲ್ಲ! (ಆ)
-ಗಣದೀಗಿಲ್ಲ ಈಗಿನದು ಆಮೇಲಿಲ್ಲ!
ಯೆ, ದಾಕ್ಷಿಣ್ಯಕ್ಕೆ ಏನೂ ಕಡಿಮೆಯಿಲ್ಲ!
-ಚಿಂತೆ ಮನಸ್ಸಿನಿಂದಿನ್ನೂ ದೂರವಾಗಿಲ್ಲ!
ತೆರೆಯೊಳಗಾಗುತಿದೆ ಸನ್ನಾಹವೆಲ್ಲ!
ಅಂಕದ ಪರದೆಯಿನ್ನೂ ಮೇಲಕ್ಕೆತ್ತಿಲ್ಲ!
ಳಮಳದಿಂದೇನೂ ಪ್ರಯೋಜನವಿಲ್ಲ! (ಕಾ)
-ರ್ಯಾರ್ಥಿ ತಾಳ್ಮೆಯಿಂದಿರದೆ ನಿರ್ವಾಹವಿಲ್ಲ!
ಮಿಗಿಲಾದಾತ್ಮ ಚಿಂತನೆ ಬೇಕಿದಕೆಲ್ಲ!
ರಡಾಸೆ ಹೋಗದೆ ಇದಾಗುವುದಿಲ್ಲ! (ಬ)
-ಲ್ಲ ನಿರಂಜನಾದಿತ್ಯಗತಿ ಜಗಕೆಲ್ಲ!!!

ಆಧುನಿಕ ಸಂತಾನ ನಿರೋಧ ಕ್ರಮಕ್ರಮ!

ಧುರ ಧೀರೇಂದ್ರಿಯ ವಿಜಯಾಕ್ರಮಾವಿಕ್ರಮ
ನಿರ್ಮಲಾನ್ನಾಸನ ಪ್ರಾಣಾಯಾಮಾದರ್ಶ ಕ್ರಮ!
ರ್ಮ, ಧರ್ಮಾಚರೆಣೆಗಿದತ್ಯುತ್ತಮ ಕ್ರಮ!
ಸಂತಾನ ಮಿತಗೊಳಿಸಲಿಕ್ಕಿದಾರ್ಯ ಕ್ರಮ!
ತಾಪ, ಕೋಪಗಳಡಗಲಿಕ್ಕೆ ಬೇಕೀ ಕ್ರಮ!
ಶ್ವರವ ಗೆದ್ದೀಶ್ವರನಾಗಲಿಕ್ಕೀ ಕ್ರಮ!
ನಿಶ್ಚಲ ತತ್ವಸ್ಥಿತಿಯೂರ್ಜಿತಕ್ಕಾಪ್ತ ಕ್ರಮ!
ರೋಗ ನಿವಾರಣೆಗಿದೊಂದೇ ಪ್ರಸಿದ್ಧ ಕ್ರಮ!
ನ್ವಂತರಿಯುಪದೇಶಿಸುವಧ್ಯಾತ್ಮ ಕ್ರಮ!
ಕ್ರಯ ವಿದಕ್ಕಪಾರವೆಂಬನುಭವ ಕ್ರಮ!
ರೆಯದೆಲ್ಲರೂ ಪಾಲಿಸಬೇಕಿಂಥಾ ಕ್ರಮ! (ಅ)
-ಕ್ರಮದಿಂದಾಗ್ವರಿಷ್ಟ ತಪ್ಪಿಸುವುದೀ ಕ್ರಮ!
ಹಾತ್ಮಾ ನಿರಂಜನಾದಿತ್ಯಾತ್ಮಾನಂದಾ ಕ್ರಮ

ಕುಮಾರನೋರ್ವಾದರ್ಶಾಪ್ತ ಮಿತ್ರ! [ಉ]

-ಮಾದೇವಿಗಿವನು ಪ್ರಿಯ ಪುತ್ರ! (ಹ)
-ರನಪಾರ ಪ್ರೇಮಕ್ಕೆ ಸತ್ಪಾತ್ರ!
ನೋಡಬಹುದಿವನ ಸರ್ವತ್ರ! (ಗೀ)
-ರ್ವಾಣಿಯ ಕೃಪೆಯಿಂದ ಪವಿತ್ರ!
ತ್ತನಾಮವಿವನಿಷ್ಟ ಮಂತ್ರ! (ಸ್ಪ)
-ರ್ಶಾಸ್ಪರ್ಶವೆಣಿಸದೆ ಸ್ವತಂತ್ರ! (ಆ)
-ಪ್ತ ಗುಹನಿರ್ಪನೆಲ್ಲರ ಹತ್ರ! (ಅ)
-ಮಿತಾನಂದ ಪ್ರದಾಸ್ಕಂದ ನೇತ್ರ! (ಮಿ)
-ತ್ರ ನಿರಂಜನಾದಿತ್ಯಾ ತ್ರಿನೇತ್ರ!!!

ಪರದೇಶ ಪ್ರವಾಸ ಆಯ್ತೇನೇ? (ತ)

-ರತರದ ನೋಟ ಸಾಕಾಯ್ತೇನೇ? (ಸ್ವ)
-ದೇಶದ ನೆನಪೀಗ ಬಂತೇನೇ?
ಕ್ತಿ, ಸಾಮರ್ಥ್ಯ ಉಡುಗಿತೇನೇ?
ಪ್ರಭು ಸಾಮೀಪ್ಯವೀಗ ಬೇಕೇನೇ?
ವಾದಿಸುವುದಿನ್ನೂ ಬಿಟ್ಟಿಲ್ಲೇನೇ?
ರ್ವಸ್ವವೂ ನಲ್ಲನಲ್ಲವೇನೇ?
ಜ್ಞೆ ಪಾಲಿಸಬೇಕಲ್ಲವೇನೇ? (ಆ)
-ಯ್ತೇನೇ? ಚಪಲ ಮುಗಿಯಿತೇನೇ? (ನಾ)
-ನೇ ಶ್ರೀ ನಿರಂಜನಾದಿತ್ಯ ನೀನೇ???

ಜನ ಸಂಖೆ ಹೆಚ್ಚಬಾರದಂತೆ! (ಮ)

-ನಸೇಚ್ಛಾ ವರ್ತಿಸಬಾರದಂತೆ!
ಸಂಘ ದ್ವೇಸವಿರಬಾರದಂತೆ! (ಶಾ)
-ಖೆಗಳು ಬೆಳೆಯಬಾರದಂತೆ!
ಹೆಸರಿಗಾಶಿಸಬಾರದಂತೆ! (ಮ)
-ಚ್ಚರವೆಂದೂ ಪಡಬಾರದಂತೆ!
ಬಾಯಿ ಮಾತು ಹೆಚ್ಚ ಬಾರದಂತೆ! (ವ)
-ರ ಭಜನೆ ಬಿಡಬಾರದಂತೆ!
ದಂಭ, ದರ್ಪ ತೋರಬಾರದಂತೆ! (ಜೊ)
-ತೆ, ಶ್ರೀ ನಿರಂಜನಾದಿತ್ಯನಂತೆ!!!

ಎಡಬಿಡದೆನ್ನ ನೀ ನೋಡಿಕೋ! (ಬಿ)

-ಡನು ನಾ ನಿನ್ನನೆಂದರಿತುಕೋ!
ಬಿಸಿಲೆನ್ನದೆನ್ನ ನೀ ನೋಡಿಕೋ! (ಕೇ)
-ಡ ಮಾಡ ಗುರುವೆಂದರಿತುಕೋ! (ಇ)
-ದೆನ್ನ ಧನವೆಂದು ನೀ ನೋಡಿಕೋ! (ಉ)
-ನ್ನತಿಗೀ ದಾರಿಯೆಂದರಿತುಕೋ!
ನೀನೇ ನಾನೆಂಬಂತೆನ್ನ ನೋಡಿಕೋ!
ನೋಡ್ಯನುಭವದಿಂದರಿತುಕೋ! (ಕೂ)
ಡಿ, ಪಾಡ್ಯಾನಂದದಿಂದ ನೋಡಿಕೋ! (ಅ)
-ಕೋ! ನಿರಂಜನಾದಿತ್ಯರಿತುಕೋ!!!

ಚಿರಋಣಿ ನಿನಗೆ ಗುರುದೇವ! (ವ)

-ರ ದೈವಿಕವನುಳಿಸಿದೆ ಜೀವ!
ಜು ಮಾರ್ಗಾವಲಂಬಿ ಗುರುದೇವ! (ದ)
-ಣಿಯದೇ ಸೇವೆ ಗೈವೆ ನೀನು ಜೀವ!
ನಿನಗೊಲಿದಿಹನು ಗುರುದೇವ!
ರಳಬೇಡ ನೀನು ಪ್ರಿಯ ಜೀವ!
ಗೆಳೆಯ ನಿನ್ನವನು ಗುರುದೇವ!
ಗುರುಭಕ್ತ ನೀನಹುದಲೆ ಜೀವ! (ಕ)
-ರುಣಿಸಿರ್ಪಾತ್ಮಾನಂದ ಗುರುದೇವ!
ದೇವದೇವಾನಂದ ನಿನ್ನಿಂದ ಜೀವ! (ದೇ)
-ವ ನಿರಂಜನಾದಿತ್ಯ ಗುರುದೇವ!!!

ದಾರಿತಪ್ಪಿದರಾಗ ಮಗ! (ಅ)

ರಿಗಳ ಮುರಿದಾಗ ಮಗ!
ನ್ನಪ್ಪನಂತಾದಾಗ ಮಗ! (ಒ)
-ಪ್ಪಿಗೆಯಪ್ಪಗಾದಾಗ ಮಗ!
ತ್ತಪ್ಪಪ್ಪನೆಂದಾಗ ಮಗ! (ವಿ)
-ರಾಗಿಯವನಾದಾಗ ಮಗ! (ಯೋ)
-ಗ ಸಿದ್ಧ ತಾನಾದಾಗ ಮಗ!
ಗ ಗುಹನಂತಾದಾಗ ಮಗ! (ಮ)
-ಗ ನಿರಂಜನಾದಿತ್ಯಗಾಗ!!!

ಸ್ಥಾನ ಮಾನಕ್ಕೆಲ್ಲೆಲ್ಲೂ ಸ್ವಾಗತ! [ಜ್ಞಾ]

-ನಕ್ಕಂತರಂಗದಲ್ಲಿ ಸ್ವಾಗತ!
ಮಾತು, ಕಥೆಗೆಲ್ಲರ ಸ್ವಾಗತ!
ಡೆಗೆ ಶ್ರೀರಂಗನ ಸ್ವಾಗತ! (ದಿ)
-ಕ್ಕೆಲ್ಲಕ್ಕಾನೆಂಬಗೆಲ್ಲಾ ಸ್ವಾಗತ! (ಒ)
-ಲ್ಲೆನೇನೆಂಬಗಲ್ಲನ ಸ್ವಾಗತ! (ಚೆ)
-ಲ್ಲೂರ ಗೌಡಗೆಲ್ಲರ ಸ್ವಾಗತ!
ಸ್ವಾಮಿ ಭಕ್ತಗಾತ್ಮನ ಸ್ವಾಗತ! (ಅಂ)
-ಗ ಶೃಂಗಾರಗೆಲ್ಲರ ಸ್ವಾಗತ! (ಸಂ)
-ತ ನಿರಂಜನಾದಿತ್ಯ ಸ್ವಾಗತ!!!

ಸಿಟ್ಟಿನನಿಷ್ಟ ಸೃಷ್ಟಿ ದುಷ್ಟ ಜೀವ! [ಗ]

-ಟ್ಟಿ ಮನದಾತ್ಮನಿಷ್ಟ ಗುರುದೇವ!
ಯನ, ನಾಲಿಗೆಗಾಳಲ್ಪ ಜೀವ!
ನಿಗ್ರಹೇಂದ್ರಿಯ ಜಯ ಗುರುದೇವ! (ಕ)
-ಷ್ಟ ಪಡುತಿಹನು ವಿಷಯಿ ಜೀವ!
ಸೃಷ್ಟೀಶ ನಿರ್ವಿಷಯಿ ಗುರುದೇವ! (ದೃ)
-ಷ್ಟಿ ದೋಷದಿಂದಳುತಿಹನು ಜೀವ!
ದುರಿತ ದೂರ ವರ ಗುರುದೇವ! (ಭ್ರ)
-ಷ್ಟ ತಾನಾಗಿ ಬಳಲುವನು ಜೀವ!
ಜೀವ, ಶಿವ್ಯೆಕ್ಯಾನಂದ ಗುರುದೇವ! (ಅ)
-ವ ನಿರಂಜನಾದಿತ್ಯ ಮಹಾದೇವ!!!

ಯಾರಿದ್ದರೇನು, ಸತ್ತರೇನು ಸೂರ್ಯತ್ತನೇನು?

ರಿವಾಜಿನಂತೆ ಮೂಡಿ ಮುಳುಗುತ್ತಿಲ್ಲವೇನು? (ಇ)
-ದ್ದವರನ್ನುದ್ಧಾರ ಮಾಡದಿರುತಿಹನೇನು? (ಆ)
-ರೇನೆಂದರೂ ಪ್ರತಿ ಮಾತು ತಾನಾಡುವನೇನು? (ತ)
-ನು, ಮನ, ಕರಗಿದರೂ ಆತನಿಲ್ಲವೇನು?
ಚ್ಚಿದಾನಂದ ರೂಪನಾಗಿರುವನವನು! (ಹೆ)
-ತ್ತವನೂ, ಹೊತ್ತವನೂ, ಆತ ತಾನಲ್ಲವೇನು?
ರೇಗಾಡಿ, ಕೂಗಾಡಿ, ಹೊಡೆದಾಡುತ್ತಿಹನೇನು?
ನುಡಿಯದೇ ನಡೆದಾದರ್ಶನಾಗಿಲ್ಲವೇನು?
ಸೂರ್ರಧಾರಿಯಾಗಿ ಸರ್ವಸಾಕ್ಷಿಯಾಗಿಹನು! (ಕಾ)
-ರ್ರ್ಯದಕ್ಷತೆಯಲ್ಲಾತದ್ವಿತೀಯನಲ್ಲವೇನು? (ಇ)
-ತ್ತತ್ತೆತ್ತೆತ್ತವನಾತ್ಮ ಬೆಳಗುತಿಲ್ಲವೇನು? (ತಾ)
ನೇ ತಾನಾಗಿ ಪರಬ್ರಹ್ಮನಾಗಿರುತಿಹನು! (ಅ)
-ನುಪಮಾತ್ಮ ಶ್ರೀ ನಿರಂಜನಾದಿತ್ಯನವನು!!!

ನಿಂದಾ, ಸ್ತುತಿಗಳಾರಿಗೇನು? (ಸ)

-ದಾತ್ಮ ಚಿಂತನೆ ಮಾಡು ನೀನು! (ಸು)
-ಸ್ತು ಮಾಡಿಕೊಳ್ಳಬೇಡ ನೀನು!
ತಿಳಿ, ಶರೀರವಲ್ಲ ನೀನು! (ತ್ಯಾ)
-ಗದಿಂದಾಗು ನಿಶ್ಚಲ ನೀನು! (ಹೇ)
-ಳಾ ಗುರುಮಂತ್ರ ಸದಾ ನೀನು! (ಅ)
-ರಿವಾಗ್ವುದಾಗಾರೆಂದು ನೀನು! (ಯೋ)
-ಗೇಶನಾಗುವೆ ಆಗ ನೀನು! (ನೀ)
-ನು, ನಿರಂಜನಾದಿತ್ಯ ನಾನು!!!

ವಿಜಯಾನಂದಾ ಶಿವಾಯ ನಮಃ!

ಮುನಾನಂದಾ ಶಿವಾಯ ನಮಃ!
ಯಾದವಾನಂದಾ ಶಿವಾಯ ನಮಃ!
ನಂದ ಗೋವಿಂದಾ ಶಿವಾಯ ನಮಃ!
ದಾತ ಮುಕುಂದಾ ಶಿವಾಯ ನಮಃ!
ಶಿವೆಯಾನಂದಾ ಶಿವಾಯ ನಮಃ!
ವಾಸ್ತವಾನಂದಾ ಶಿವಾಯ ನಮಃ!
ತೀಶಾನಂದಾ ಶಿವಾಯ ನಮಃ!
ಟೇಶಾನಂದಾ ಶಿವಾಯ ನಮಃ! (ನ)
-ಮಃ ನಿರಂಜನಾದಿತ್ಯಾಯ ನಮಃ!!!

ನಿತ್ಯ ನಿಯಮಾನುಷ್ಟಾನ ಬಿಟ್ಟಿಲ್ಲ! [ಅ]

-ತ್ಯ ಗತ್ಯವಿದೆಂಬುದ ಮರೆತಿಲ್ಲ!
ನಿರ್ಮಲಾನಂದ ನಿಶ್ಚಲವಾಗಿಲ್ಲ!
ದುಪನಾಜ್ಞೆ ಪಾಲಿಸದೇನಿಲ್ಲ!
ಮಾಯೆಯ ಬಂಧನಕ್ಕೊಳಗಾಗಿಲ್ಲ! (ಅ)
-ನುಭವಾಮೃತ ಪಾನ ತೃಪ್ತ್ಯಾಗಿಲ್ಲ! (ಭ್ರ)
-ಷ್ಟಾಚಾರಕ್ಕೇನೂ ಆಸ್ಪದ ಕೊಟ್ಟಿಲ್ಲ!
ಡೆ, ನುಡಿಯಲ್ಲಿ ವ್ಯತ್ಯಾಸವಿಲ್ಲ!
ಬಿಟ್ಟಿ ಬಸವನಂತೋಡಾಡುತ್ತಿಲ್ಲ! (ಶೆ)
-ಟ್ಟಿ ವ್ಯಾಪಾರದಂತೇನಭ್ಯಾಸವಿಲ್ಲ! (ಅ)
-ಲ್ಲ ನಿರಂಜನಾದಿತ್ಯ ಬಲ್ಲನೆಲ್ಲ!!!

ಉತ್ಸಾಹ ಭಂಗ, ಭಯ ತರಂಗ! (ತ)

-ತ್ಸಾಧನೆಗಭಯಾಂಗಾ ಶ್ರೀರಂಗ!
ದ್ದು

ಈರಬಾರದಾ ತರಂಗ!
ಭಂಗಿಸಬೇಕದನಾ ಶ್ರೀರಂಗ!
ತಿಗೆಡಿಸುವುದಾ ತರಂಗ!
ಕ್ತಗೆ ಗತಿಯಾಗಾ ಶ್ರೀರಂಗ!
ಮ ಸ್ವರೂಪ ಮಾಯಾ ತರಂಗ!
ತ್ವಾರ್ಥಾತ್ಮ ಪ್ರಮೇಯಾ ಶ್ರೀರಂಗ!
ರಂಗ, ವಿಷಯ ರಂಗಾ ತರಂಗ! (ರಂ)
-ಗ, ನಿರಂಜನಾದಿತ್ಯಾ ಶ್ರೀರಂಗ!!!

ಹೊತ್ತಳಿಯಿತು, ಸೊತ್ತುಳಿಯಿತು! (ಕು)

-ತ್ತ ಕಳೆಯಿತು, ದತ್ತನಾಯಿತು! (ಬೋ)
-ಳಿಯದಾಯಿತು, ಕಾಳಿಯಾಯಿತು! (ಬಾ)
-ಯಿಯಡಗಿತು, ತಾಯಿಯಾಯಿತು!
ತುರಿ ಹೋಯಿತು, ತುರೀಯಾಯಿತು!
ಸೊಕ್ಕಡಗಿತು, ದಿಕ್ಕೊದಗಿತು! (ಬಿ)
-ತ್ತುವುದಾಯಿತು, ತುತ್ತೆನಿಸಿತು! (ಗಾ)
-ಳಿ ನಿಂತಾಯಿತು, ಬಾಳ್ವಂತಾಯಿತು! (ಕಾ)
-ಯಿ, ಹಣಾಯಿತು, ಬಾಯಿಗೊಪ್ಪಿತು! (ಬಂ)
-ತು, ನಿರಂಜನಾದಿತ್ಯನಾಗಿಂತು!!!

ಸೇವಾಸಕ್ತಗಾಲಸ್ಯವಿಲ್ಲ!

ವಾದವನಿಗೆ ಬೇಕಾಗಿಲ್ಲ!
ಣ್ಣದು, ದೊಡ್ಡದೆಂಬುದಿಲ್ಲ! (ಭ)
-ಕ್ತನಿಗಾರಾಜ್ಞೆಯೂ ಬೇಕಿಲ್ಲ!
ಗಾಯಿಯಂತವನ ಬಾಳೆಲ್ಲ!
ಕ್ಷ್ಯ ಫಲಾಪೇಕ್ಷೆಯಲ್ಲಿಲ್ಲ! (ದಾ)
-ಸ್ಯಭಾವ ಅಂಗಾಂಗದಲ್ಲೆಲ್ಲ!
ವಿನಯಕ್ಕವಗೆಣೆಯಿಲ್ಲ! (ಗೊ)
-ಲ್ಲ ನಿರಂಜನಾದಿತ್ಯಾ ಫುಲ್ಲ!!!

ಜಪ ತಪವೇಕೆ ಮಾಡಬೇಕು?

ರಮಾತ್ಮನಾಗಲದು ಬೇಕು!
ಪಸ್ಸು ಸದಾ ಸಾಗಬೇಕು!
ತಿತಾವಸ್ಥೆ ತೊಲಗಬೇಕು!
ವೇಷ, ಭೂಷಣಾಸೆ ಹೋಗಬೇಕು!
ಕೆಡುಕು ಯೋಚನೆ ಬಿಡಬೇಕು!
ಮಾತುಗಳೆಲ್ಲಾ ನಿಲ್ಲಿಸಬೇಕು! (ಮ)
-ಡದಿ ಮಹೇಶನಿಗಾಗ ಬೇಕು!
ಬೇಸರ ಬಿಟ್ಟು ಭಜಿಸಬೇಕು!
ಕುಮಾರ ನಿರಂಜನಾದಿತ್ಯಕ್ಕು!!!

ಮದುವೆಯಾಗುವಿರೇನು ನೀವು? [ಬ]

-ದುಕಿ ಐಕ್ಯ ಸುಖ ನೋಡಿ ನೀವು! (ಸೇ)
-ವೆ ಗುರುವಿನದು ಮಾಡಿ ನೀವು! (ಮಾ)
-ಯಾ ಮೋಹಾಂಧರಾಗಬೇಡಿ ನೀವು!
ಗುರಿಗಾಗಿ ಒಡನಾಡಿ ನೀವು!
ವಿಕಲ್ಪ ಬಾರದಂತಾಡಿ ನೀವು!
ರೇಗಾಟ ಬಿಟ್ಟು ಓಡಾಡಿ ನೀವು (ಅ)
-ನುದಿನಾತ್ಮ ಧ್ಯಾನ ಮಾಡಿ ನೀವು!
“ನೀ” ‘ನಾ’ ನೆಂದೊದ್ದಾಡಬೇಡಿ ನೀವು! (ಠಾ)
-ವು ನಿರಂಜನಾದಿತ್ಯಾತ್ಮ ರೇವು!!!

ಬರೆಯಲಿರಬೇಕುತ್ತಮ ಲೇಖನಿ! (ಒ)

-ರೆಯಲಿಕಿರಬೇಕು ಮಧುರ ವಾಣಿ! (ನ)
-ಯ ವಿನಯದೆರಕವೇ ಆ ಭವಾನಿ! (ಒ)
-ಲಿಯದಾಗದಾವುದೀ ಮನಮೋಹಿನಿ!
ಘುಪತಿಗೂ ಬೇಕಾಯ್ತಾ ಸಂಜೀವಿನಿ!
ಬೇಸಾಯಕ್ಕಿರಬೇಕಾ ಜಲವಾಹಿನಿ!
ಕುಲ ಸ್ತ್ರೀಯೇ ಸರ್ವ ಸೌಭಾಗ್ಯದಾಯಿನಿ! (ದ)
-ತ್ತ ಭಕ್ತಿಯಲ್ಲಿವಳೇ ಆ ಶಿರೋಮಣಿ!
ಹಾಮಾತೆ ಮಾತಂಗಿಷ್ಟಪ್ರದಾಯಿನಿ!
ಲೇಸು ಮಾಳ್ಪವಳೀ ಪತಿತ ಪಾವನಿ! (ಸು)
-ಖ, ದುಃಖವೇಕರಸಳಾ ಕುಂಡಲಿನಿ!
ನಿತ್ಯ ಶ್ರೀ ನಿರಂಜನಾದಿತ್ಯಾಭಿಧಾನಿ!!!

ಕಾಪಿಗೆ ಕಾಯದೆ ನಿರ್ವಾಹವಿಲ್ಲ!

ಪಿರಿದಾಗಿಹುದಿದರರ್ಥವೆಲ್ಲ!
ಗೆಳೆಯನಿಗರಿವಾಗಿಹುದೆಲ್ಲ!
ಕಾಲಮೌಲ್ಯವೆಂದರಿಯಬೇಕೆಲ್ಲ!
ದುನಾಥನಿದ ಸಾರಿದನಲ್ಲ! (ಎ)
-ದೆಗುಂದದಭ್ಯಾಸದಿಂದಾಗ್ವುದೆಲ್ಲ!
ನಿರ್ಮಲವಾಗಬೇಕು ಮನವೆಲ್ಲ! (ಸ)
-ರ್ವಾತ್ಮ ಭಾವವಿರಲಿ ನಿಮಗೆಲ್ಲ!
ರಿಸ್ಮರಣೆಯಾಗಬೇಕೆಲ್ಲೆಲ್ಲ!
ವಿಮಲಾನಂದಕ್ಕನ್ಯ ದಾರಿಯಿಲ್ಲ! (ಬ)
-ಲ್ಲ ನಿರಂಜನಾದಿತ್ಯಾತ್ಮ ಪ್ರಫುಲ್ಲ!!!

ಗೆಳೆಯರೊಟ್ಟಿಗಾಗಲಿಷ್ಟ ಸಿದ್ಧಿ! (ಹ)

-ಳೆಯದಾದರೂ ಕೆಡದಾತ್ಮ ಬುದ್ಧಿ! (ನ್ಯಾ)
-ಯ ಬದ್ಧವಾದರಾಗುವುದು ಸಿದ್ಧಿ! (ಆ)
-ರೊಟ್ಟಿಗಾರಿದ್ದರೂ ಫಲ್ಯಾ ಸದ್ಬುದ್ಧಿ! (ಒ)
-ಟ್ಟಿಗಾರೊಟ್ಟಿಗಾರಿದ್ದರಾವ ಸಿದ್ಧಿ? (ಯೋ)
-ಗಾನಂದರೊಟ್ಟಿಗಿಷ್ಟದೊಂದೇ ಬುದ್ಧಿ!
ತಿ, ಸ್ಥಿತಿಯಾದಾರೊಟ್ಯುಚ್ಛ ಸಿದ್ಧಿ!
ಲಿಪ್ತವಾಗದಾಗಾರೊಟ್ಟಿಗಾ ಬುದ್ಧಿ! (ಇ)
ಷ್ಟ, ಮಿತ್ರರೊಟ್ಟಿಗಿದೇ ಸರ್ವ ಸಿದ್ಧಿ! (ಘಾ)
-ಸಿ, ಕುಹಕರೊಟ್ಟಿಗಿದ್ದರಾ ಬುದ್ಧಿ! (ಸಿ)
-ದ್ಧಿ, ನಿರಂಜನಾದಿತ್ಯಾನಂದಾ ಸಿದ್ಧಿ!!!

ಬಡವ ನಾನು ಒಡೆಯ ನೀನು! (ಬಿ)

-ಡ ಬೇಡ ನನ್ನ ಕೈಯನ್ನು ನೀನು! (ಭಾ)
-ವ ಶುದ್ಧನಾಗಿ ಮಾಡೆನ್ನ ನೀನು!
ನಾಮ, ರೂಪಾತೀತ ಗುರು ನೀನು! (ತ)
-ನುವಿನುಪಾಧಿ ಬಿಡಿಸು ನೀನು!
ಳಗೆ ಹೊರಗೆಲ್ಲವೂ ನೀನು! (ಕ)
-ಡೆಗಾಣಿಸೆಲ್ಲಾ ದುರಿತ ನೀನು! (ಜ)
-ಯ ಪ್ರದ ಮಾಡೆನ್ನ ಜನ್ಮ ನೀನು!
-ನೀಡು ಲೋಕಕ್ಕೆಲ್ಲಾ ಶಾಂತಿ ನೀನು! (ಮ)
-ನುಜ ನಿರಂಜನಾದಿತ್ಯಾತ್ಮ ನೀನು!!!

ಬೆಕ್ಕಾಗಬೇಡ ಬೆಕ್ಕೆಗೀಡಾಗಬೇಡ! [ವಾ]

-ಕ್ಕಾಯ, ಮನ, ಮಲಿನಗೊಳಿಸಬೇಡ!
ರ್ವದಿಂದ ಗೂಳಿಯಂತೋಡಾಡಬೇಡ!
ಬೇರೆಯವರಾಸ್ತ್ಯಪಹರಿಸಬೇಡ! (ಒ)
-ಡನಾಟ ದುರ್ಜನರಲ್ಲಿ ಮಾಡಾಬೇಡ!
ಬೆಡಗಿಗಾಗಿ ಬಡವನಾಗಬೇಡ! (ಧ)
-ಕ್ಕೆ ನಿಜರೂಪಕ್ಕೆ ತಂದುಕೊಳ್ಳಬೇಡ!
-ಗೀತೋಪದೇಶವನ್ನು ಮರೆಯಬೇಡ! (ಓ)
-ಡಾಡಿ ವ್ಯರ್ಥಾಲಾಪ ಮಾಡುತ್ತಿರಬೇಡ!
ದ್ದೆ ಹಸನಾಗದೇನೂ ಬಿತ್ತಬೇಡ!
ಬೇಜಾರೆಂದು ಉದಾಸೀನನಾಗಬೇಡ! (ಬ)
-ಡಕ ನಿರಂಜನಾದಿತ್ಯನೆನ ಬೇಡ!!!

ನಿಲುಗಡೆಯೇ ಬಿಡುಗಡೆ! (ಹ)

-ಲುಬಿನಳಿವೇ ಬಿಡುಗಡೆ!
ರ್ವನಾಶವೇ ಬಿಡುಗಡೆ! (ಒ)
-ಡೆಯನೈಕ್ಯವೇ ಬಿಡುಗಡೆ! (ಕಾ)
-ಯೇಚ್ಛಾ ತ್ಯಾಗವೇ ಬಿಡುಗಡೆ!
ಬಿಚ್ಚು ಮನವೇ ಬಿಡುಗಡೆ! (ಕೆ)
-ಡುಕಡಗ್ವುದೇ ಬಿಡುಗಡೆ!
ತ್ಯಾತ್ಮನದೇ ಬಿಡುಗಡೆ! (ಬಿ)
-ಡೆ ನಿರಂಜನಾದಿತ್ಯನೆಡೆ!!!

ಲೋಕಕ್ಕೆಲ್ಲಾ ಗುರುದೇವ ದಿಕ್ಕು!

ಲ್ಲೊಳಗಿನ ಕಪ್ಪೆಗಾ ದಿಕ್ಕು! (ರೆ)
-ಕ್ಕೆ ಮುರಿದ ಹಕ್ಕಿಗದೇ ದಿಕ್ಕು! (ಎ)
-ಲ್ಲಾ ಕಾಲದಲ್ಲೂ ಅದೊಂದೇ ದಿಕ್ಕು!
ಗುಲಾಮರಸರಿಗೆಲ್ಲಾ ದಿಕ್ಕು! (ತು)
-ರು ಕರುಗಳಿಗೂ ಅದೇ ದಿಕ್ಕು! (ಅ)
-ದೇ ದಶ ದಿಕ್ಕುಗಳಿಗೂ ದಿಕ್ಕು!
ನಚರಗಳಿಗದೇ ದಿಕ್ಕು!
ದಿತ್ಯದಿತಿಜರಿಗೆಲ್ಲಾ ದಿಕ್ಕು! (ದಿ)
-ಕ್ಕು ನಿರಂಜನಾದಿತ್ಯಾನಂದಕ್ಕು!!!

ಹುಡುಕುವರು ತಡಕುವರು! (ನೋ)

-ಡುವರಾ ಮೇಲೆ ದುಡುಕುವರು! (ಬೇ)
-ಕು ಬೇಡೆಂಬುದ ಬಿಡದಿಹರು! (ಭಾ)
-ವ ಬಂಧ ಹರಿಯದಂತಿಹರು! (ಗು)
-ರು ಪಾದಕ್ಕೆ ಎರಗದಿಹರು!
ಮಗೆ ತಾವಡ್ಡಿಯೊಡ್ಡಿಹರು! (ಬ)
-ಡವರಾಗಿ ಬಳಲುತಿಹರು!
ಕುಲ ಶೀಲ ಮರೆಯುತಿಹರು!
ರ ಸಿಕ್ಕಿಲ್ಲೆಂದಳುತಿಹರು! (ಗು)
-ರು ನಿರಂಜನಾದಿತ್ಯಗಾಳಾರು???

ಮದುವೆ ಆಯಿತು, ಮಹಾತ್ಮವಾಯಿತು!

ದುರ್ವವ್ಯಹಾರವೆಲ್ಲಾ ದೂರವಾಯಿತು! (ಸೇ)
-ವೆಗವಕಾಶ ದೊರಕಿದಂತಾಯಿತು!
ದದ್ದೆಲ್ಲಾ ಒಳ್ಳೆಯದಕ್ಕೇ ಆಯಿತು! (ತಾ)
-ಯಿ, ತಂದೆಯವನೆಂಬರಿವುಂಟಾಯಿತು! (ಮಾ)
-ತುಗಳೆಲ್ಲಾ ಅವನದೊಂದೇ ಆಯಿತು!
ನೆತನಕ್ಕೆ ಭೂಷಣವದಾಯಿತು!
ಹಾದಿ ನಿಜಾನಂದಕ್ಕೆ ತೆರೆದಾಯಿತು! (ಆ)
-ತ್ಮ ಚಿಂತನೆಯೇ ನಿತ್ಯ ಕರ್ಮವಾಯಿತು!
ವಾದ ಭೇದಕ್ಕೆ ಮನಸ್ಸೋಡದಾಯಿತು! (ಬಾ)
-ಯಿ ಶ್ರೀರಾಮ ಭಜನೆಗಣಿಯಾಯಿತು! (ಹೇ)
-ತು ನಿರಂಜನಾದಿತ್ಯ ನೆಂಬಅರಿವಾಯ್ತು!!!

ಬಾಳ ಬಲ್ಲವಗೆ ಮಗಳ ಕೊಡು! (ಆ)

-ಳ ಬಲ್ಲರಸನಿಗೆ ಕಪ್ಪ ಕೊಡು!
ಡಬಗ್ಗರಿಗನ್ನ, ವಸ್ತ್ರ ಕೊಡು! (ಬ)
-ಲ್ಲ ಆತ್ಮ ಜ್ಞಾನಿಗೆ ಗೌರವ ಕೊಡು!
ರ ಗುರುವಿಗೆಲ್ಲವನ್ನೂ ಕೊಡು!
ಗೆಳೆಯನಿಗಾಶ್ರಯವನ್ನು ಕೊಡು!
ಡದಿಗಾತ್ಮ ಶಾಂತಿಯನ್ನು ಕೊಡು!
ರ್ವಕ್ಕೆ ತಿಲೋದಕವನ್ನು ಕೊಡು! (ಕ)
-ಳವಳಕ್ಕಾತ್ಮ ಸ್ಪೂರ್ತಿಯನ್ನು ಕೊಡು!
ಕೊಡುಗೈಯ್ಯಯ್ಯನಿಗೆ ಹೊನ್ನು ಕೊಡು (ಕೊ)
-ಡು ನಿರಂಜನಾದಿತ್ಯಗರ್ಘಕೊಡು!!!

ಬಯಸದೇ ಬಂದದ್ದು ಭಗವತ್ಪ್ರಸಾದ! [ಜ]

-ಯ ಅಪಜಯವೆಲ್ಲಾ ಅವನ ಪ್ರಸಾದ!
ತತವನ ಸೇವೆ ಅವನ ಪ್ರಸಾದ!
ದೇಶಾಂತರದ ಪ್ರವಾಸವನ ಪ್ರಸಾದ!
ಬಂದೂರು ಸೇರುವುದು ಅವನ ಪ್ರಸಾದ!
ರಿದ್ರನಾಗಿರುವುದುದವನ ಪ್ರಸಾದ! (ಎ)
-ದ್ದುದ್ದಾಮನಾಗುವುದೂ ಅವನ ಪ್ರಸಾದ!
ಕ್ತನಾಗಿರುವುದು ಅವನ ಪ್ರಸಾದ!
ರ್ವಿಯಾಗಿರುವುದೂ ಅವನ ಪ್ರಸಾದ! (ಭ)
-ವಭಯಬಂಧನವೂ ಅವನ ಪ್ರಸಾದ! (ಸ)
-ತ್ಪ್ರವರ್ತಕನಾಗುವುದವನ ಪ್ರಸಾದ!
ಸಾಧ್ಯಾಸಾಧ್ಯಗಳೆಲ್ಲಾ ಶ್ರೀ ಗುರು ಪ್ರಸಾದ!
ತ್ತ ನಿರಂಜನಾದಿತ್ಯಗೆಲ್ಲಾ ಪ್ರಸಾದ!!!

ಆರಿಗಾರಾಪ್ತರೆಂದರುಹಪ್ಪಾ! (ಅ)

-ರಿಯದಾಗಿಹದು ನಿನ್ನಾಟಪ್ಪಾ!
ಗಾಢ ಪ್ರೇಮವಾರಿಗಿಹುದಪ್ಪಾ?
ರಾಗ, ರೋಗ ಹೆಚ್ಚಾಗಿಹುದಪ್ಪಾ! (ಆ)
-ಪ್ತನಾತ್ಮನೆಂದಾರರಿವರಪ್ಪಾ? (ಬಾ)
-ರೆಂದರೆ ಬರದೇಕಿಹುದಪ್ಪಾ?
ಯೆಯುಂಟಾಗಲಿ ನಿನಗಪ್ಪಾ! (ಮ)
-ರುಳು ಮಾಡದಿರೆನ್ನ ನೀನಪ್ಪಾ!
ಗಲಿರುಳೆನ್ನೊಡನಿರಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯ ಬಾರಪ್ಪಾ!!!

ಬುಧಾನಂದಾ ವಿಮಲಾನಂದ!

ಧಾರಾನಂದಾ ಶ್ರೀಧರಾನಂದ!
ನಂದಾನಂದಾ ಮುಕುಂದಾನಂದ!
ದಾತಾನಂದಾ ಸೀತಾತ್ಮಾನಂದ!
ವಿಶ್ವಾನಂದಾ ಶ್ರೀಶಿವಾನಂದ!
ಹಾನಂದಾ ಮಹೇಶಾನಂದ!
ಲಾಭಾನಂದಾ ಗೋಪಾಲಾನಂದ!
ನಂಜಾನಂದಾ ಸಹಜಾನಂದ! (ಕಂ)
-ದ ನಿರಂಜನಾದಿತ್ಯಾ ನಂದ!!!

ಲೋಕವ ಬಿಡಿಸ್ಯೇಕದಲಿರಿಸಿದನೆನ್ನ ಶಿವ!

ಲಿತುದ ಕದಲಿಸಿ ಬಲಿಸಿದನೆನ್ನ ಶಿವ!
ಸ್ತ್ರವ ಬಿಚ್ಚಿಸಿಚ್ಛೆಯ ಸಲಿಸಿದನ್ನೆನ್ನ ಶಿವ!
ಬಿಡಿ ಬಿಡಿಯಾದುದನೊಂದು ಮಾಡಿದನೆನ್ನ ಶಿವ! (ಅ)
-ಡಿಗಡಿಗವನಡಿಯಾಶ್ರಯವಿತ್ತನೆನ್ನ ಶಿವ! (ದಾ)
-ಸ್ಯೇಚ್ಛೆಯನ್ನು ನುಚ್ಚು ನೂರಾಗಿ ಕೊಚ್ಚಿದನೆನ್ನ ಶಿವ!
ರ್ಮಾಕರ್ಮ ವಿಕರ್ಮ ವಿವರಿಸಿದನೆನ್ನ ಶಿವ!
ಕ್ಷಕನ್ಯೆಯಾದರ್ಶ ಭಕ್ತಿ ಬೇಕೆಂದನೆನ್ನ ಶಿವ! (ಒ)
-ಲಿಯುವನಾಗ ಪರಮೇಶ್ವರನೆಂದನೆನ್ನ ಶಿವ!
ರಿಪು ಮನ್ಮಥಾರಿ ನಾನೆಂದಾತ್ಮಾನಂದನೆನ್ನ ಶಿವ!
ಸಿರಿಯರಸ ಶ್ರೀ ರಾಮಾತ್ಮ ನಾನೆಂದನೆನ್ನ ಶಿವ!
ಡ ಸೇರಿಪುದಾ ರಾಮನಾಮವೆಂದನೆನ್ನ ಶಿವ!
ನೆರೆ ಭಕ್ತಿಯಿಂದ ಭಜಿಸದನೆಂದನೆನ್ನ ಶಿವ! (ಉ)
-ನ್ನತದ ಜೀವನ್ಮುಕ್ತಿಯಿದರಿದೆಂದನೆನ್ನ ಶಿವ!
ಶಿವನೇ ರಾಮ, ರಾಮನೇ ಶಿವನೆಂದನೆನ್ನ ಶಿವ!
ನಜಸಖ ನಿರಂಜನಾದಿತ್ಯ ಶ್ರೀರಾಮ ಶಿವ!!!

ಚಿರಕಾಲವಿರಲೀ ಮಾಂಗಲ್ಯ! (ವ)

-ರ ಸೇವೆಗಾಗಿರಲೀ ಮಾಂಗಲ್ಯ!
-ಕಾಮ, ಕ್ರೋಧಳಿಸಲೀ ಮಾಂಗಲ್ಯ!
ಕ್ಷ್ಯ ಸಿದ್ಧಿಗಾಗಲೀ ಮಾಂಗಲ್ಯ!
ವಿವೇಕಕ್ಕಾಗಿರಲೀ ಮಾಂಗಲ್ಯ! (ವ)
-ರ ಸಂತಾನವೀಯಲೀ ಮಾಂಗಲ್ಯ! (ಬ)
-ಲೀಸಲಿ ಭಕ್ತಿ ಭಾವಾ ಮಾಂಗಲ್ಯ!
ಮಾಂಗಲ್ಯೆ ಉಳಿಸಲೀ ಮಾಂಗಲ್ಯ! (ರಾ)
-ಗ ದ್ವೇಷ ಬಿಡಿಸಲೀ ಮಾಂಗಲ್ಯ! (ಮೌ)
-ಲ್ಯ ನಿರಂಜನಾದಿತ್ಯ ಮಾಂಗಲ್ಯ!!!

ನಿನ್ನ ಮಾಂಗಲ್ಯದಲೆನ್ನನಿರಿಸಿಕೊಂಡೆ! [ಅ]

-ನ್ನ ಪೂರ್ಣಾದೇವಿಯೇ ನೀನೆಂದರಿತುಕೊಂಡೆ!
ಮಾಂಗಲ್ಯೆಯಲ್ಲದಿನ್ಯಾರಿವಳೆಂದು ಕೊಂಡೆ! (ಯೋ)
-ಗ ಮಾತೆ ಪಾರ್ವತಿಯೆಂದು ತಿಳಿದುಕೊಂಡೆ! (ಬಾ)
-ಲ್ಯ, ಕೌಮಾರ್ಯಾದ್ಯವಸ್ಥಾ ದೂರಳೆಂದು ಕೊಂಡೆ!
ಯಾಮಯಿಯಿವಳೆಂದು ಸ್ಮರಿಸಿ ಕೊಂಡೆ! (ಬಾ)
-ಲೆ ಕಾಮಾಕ್ಷಿಯೆಂದತ್ಯಾನಂದ ತಂದುಕೊಂಡೆ! (ಉ)
ನ್ನತದಾದರ್ಶವಿವಳದೆಂದಂದು ಕೊಂಡೆ!
ನಿರ್ಮಲ ಚರಿತಾತ್ಮಳಿವಳೆಂದು ಕೊಂಡೆ! (ನಾ)
-ರಿ ಶಿರೋಮಣಿ ದಾಕ್ಷಾಯಣಿಯೆಂದು ಕೊಂಡೆ!
ಸಿಟ್ಟಿವಳದು ಸುಟ್ಟು ಹೋಯ್ತೆಂದಂದುಕೊಂಡೆ!
ಕೊಂಚವೂ ಅನುಮಾನಿಸದಂತಂದುಕೊಂಡೆ! (ಒ)
-ಡೆಯ ನಿರಂಜನಾದಿತ್ಯಾನಂದಂದುಕೊಂಡೆ!!!

ನಿನ್ನ ಮಾಂಗಲ್ಯದಲೆನ್ನನಿರಿಸಿಕೊಂಡೆ! (ಭಿ)

-ನ್ನ ಭಾವವೆಲ್ಲಾ ಹೋಗಲೆಂದು ಬೇಡಿಕೊಂಡೆ!
ಮಾಂಗಲ್ಯೆ ನೀನೆಂದು ನನ್ನಿಂದೆನಿಸಿಕೊಂಡೆ! (ಅ)
-ಗಲುವುದೆಂತೆಂದು ಪರಿತಪಿಸಿಕೊಂಡೆ! (ಮೌ)
-ಲ್ಯ ಶುದ್ಧಾಂತರಂಗಕ್ಕೆಷ್ಟೆಂದರಿತುಕೊಂಡೆ!
ಕ್ಷಪುತ್ರಿ ನೀನೆಂದು ನೀ ತಿಳಿದುಕೊಂಡೆ! (ಲೀ)
-ಲೆ ವಿಚಿತ್ರವೆಂದು ಕಣ್ಣೀರೊರಸಿಕೊಂಡೆ! (ಉ)
-ನ್ನತಿ ನಿನಗಾಗಲೆಂದು ನಾನಂದುಕೊಂಡೆ!
ನಿನ್ನೊಡನೆ ನಾನಿದ್ದೇನೆಂದೆನಿಸಿಕೊಂಡೆ! (ಇ)
-ರಿಸಿಕೊಂಡಿದ್ದೇನೆಂದಾಗ ನೀನೊಪ್ಪಿಕೊಂಡೆ!
ಸಿಟ್ಟನ್ನು ಬಾರದೆಂದಾಶೀರ್ವದಿಸಿಕೊಂಡೆ!
ಕೊಂಚವೂ ಸಂದೇಶವಿಲ್ಲದಂತಿದ್ದುಕೊಂಡೆ! (ಒ)
-ಡೆಯ ನಿರಂಜನಾದಿತ್ಯನೊಲಿಸಿಕೊಂಡೆ!!!

ನಿನ್ನಾಸೆಯಲಿ ನೀನಿದ್ದೆ! (ನ)

-ನ್ನಾನಂದದಲಿ ನಾನಿದ್ದೆ! (ಆ)
-ಸೆ ನಿರಾಶೆಯಾಯ್ತೆಂದಿದ್ದೆ!
ತ್ನವಿಲ್ಲದೆ ನಾನಿದ್ದೆ! (ಚ)
-ಲಿಸಲಾರದೆ ನೀನಿದ್ದೆ!
ನೀನೇ ನಾನಾಗಿ ನಾನಿದ್ದೆ!
ನಿದ್ರೆಯಿಲ್ಲದೆ ನೀನಿದ್ದೆ! (ಎ)
-ದ್ದೆ, ನಿರಂಜನಾದಿತ್ಯಾದೆ!!!

ಬಾಬು ಇನ್ನೂ ಬಂದಿಲ್ಲವೇಕೆ?

ಬುದ್ಧಿವಂತಳಾ ಮನೆಯಾಕೆ!
ದ್ದದ್ದಿದ್ದಂತಾಡುವಳಾಕೆ! (ತ)
-ನ್ನೂರಿಗೆ ಹೋಗಲಿರ್ಪಳಾಕೆ!
ಬಂದಳೀಗವನೊಡನಾಕೆ! (ಹಾ)
-ದಿಯಲ್ಲಡ್ಡಿಯಾಯ್ತೆಂದಳಾಕೆ! (ನ)
-ಲ್ಲನ ನೆರಳಾನೆಂದಳಾಕೆ!
ವೇಷಾಡಂಬರವಿಲ್ಲದಾಕೆ! (ಆ)
ಕೆ ನಿರಂಜನಾದಿತ್ಯಾತ್ಮಾಕೆ!!!

ಜನ್ಮ ದಿನ ನಾನೆಂದಿತಾ ಪೂರ್ಣಿಮಾ! [ಚಿ]

-ನ್ಮಯರೂಪಿ ನಾನೆಂದಿತಾ ಪೂರ್ಣಿಮಾ!
ದಿವ್ಯ ಜ್ಯೋತಿಯದೆಂದಿತಾ ಪೂರ್ಣಿಮಾ!
‘ನಮಃ ಶಿವಾಯ’ ವೆಂದಿತಾ ಪೂರ್ಣಿಮಾ!
ನಾದಸ್ವರೂಪಾನೆಂದಿತಾ ಪೂರ್ಣಿಮಾ!
ನೆಂಟನಾನೆಲ್ಲಕ್ಕೆಂದಿತಾ ಪೂರ್ಣಿಮಾ!
ದಿನಕರಾತ್ಮಾನೆಂದಿತಾ ಪೂರ್ಣಿಮಾ!
ತಾರಕನಾಮಾನೆಂದಿತಾ ಪೂರ್ಣಿಮಾ!
ಪೂರ್ಣವಾದದಿದೆಂದಿತಾ ಪೂರ್ಣಿಮಾ! (ವ)
-ರ್ಣಿಪುದೆಂತದನೆಂದಿತಾ ಪೂರ್ಣಿಮಾ!
ಮಾತೆ ನಿರಂಜನಾದಿತ್ಯಾ ಪೂರ್ಣಿಮಾ!!!

ಶಕ್ತಿ, ಸಾಮಾರ್ಥ್ಯ ಪರಿಪೂರ್ಣವಾಗಿದೆ! (ಭು)

-ಕ್ತಿಗಾಗ್ಯದ ಬಳಸಬಾರದಾಗಿದೆ!
ಸಾಫಲ್ಯವಾಗುವ ಸಮಯ ಮುಂದಿದೆ!
ನವೀಗೊಳ ಮುಖ ಮಾದಿಕೊಂಡಿದೆ! (ಸ್ವಾ)
-ರ್ಥ್ಯಕ್ಕಾಗಿ ಈಗ ಬರಲಾರದಾಗಿದೆ!
ರಮ ಶಾಂತಿಗದೀಗ ಬಯಸಿದೆ! (ಹ)
-ರಿ ಸ್ಮರಣೆ ಬಿಟ್ಟು ಕದಲದಾಗಿದೆ!
ಪೂರ್ಣ ತೃಪ್ತಿ ಹೊಂದಿ ಬರುವೆನೆಂದಿದೆ! (ವ)
-ರ್ಣ, ಲಿಂಗ, ಭೇದದಕಿಲ್ಲದಂತಾಗಿದೆ!
ವಾದ, ವಿವಾದದಕೆ ಬೇಡವಾಗಿದೆ!
ಗಿರಿಜಾಪತಿಯಾಜ್ಞೆ ಕಾಯುತ್ತಲಿದೆ! (ಬಂ)
-ದೆ ನಿರಂಜನಾದಿತ್ಯನಾಗೀಗ ನಿಂದೆ!!!

ಅಯ್ದೆಯಲ್ಲವೇನೇ ನೀನು ಮುಗ್ಧೆ? [ಬಾ]

-ಯ್ದೆರೆಯ ಬೇಡಾಣ್ಮನೆದುರಯ್ದೆ!
ದುನಾಥ ಸ್ವರೂಪಾತನಯ್ದೆ! (ನ)
-ಲ್ಲನೇ ನಿನ್ನ ಸರ್ವ ಸೌಭಾಗ್ಯಯ್ದೆ!
ವೇದಕಾಲದ ಸ್ತ್ರೀ ನೀನಾಗಯ್ದೆ!
ನೇಮದಿಂದಾಗಲಿ ಸೇವೆಯಯ್ದೆ!
ನೀತಿ, ರೀತಿಗಾದರ್ಶಳಾಗಯ್ದೆ!
ನುಡಿ, ನಡೆಯೊಂದಾಗಬೇಕಯ್ದೆ!
ಮುನಿಜನರಾತಿಥ್ಯ ಮಾಡಯ್ದೆ! (ಮು)
-ಗ್ಧೆ, ನಿರಂಜನಾದಿತ್ಯಾತ್ಮಾಗಯ್ದೆ!!!

ವಿರಕ್ತಾ! ನೀನೇಕಾದೆ ಅನುರಕ್ತ?

ಕ್ತ ಮಾಂಸದೊಡಲು ರೋಗಗ್ರಸ್ತ! (ಯು)
-ಕ್ತಾಯುಕ್ತವರಿಯದೆ ಕಾಮಗ್ರಸ್ತ!
‘ನೀ’ ‘ನಾ’ ನೆಂಬುದರಿಂದ ಕ್ರೋಧಗ್ರಸ್ತ!
ನೇಮ, ನಿಷ್ಠೆಯಿಲ್ಲದೆ ಲೋಭಗ್ರಸ್ತ!
ಕಾಮ್ಯ ಕರ್ಮಗಳಿಂದ ಮೋಹಗ್ರಸ್ತ! (ಆ)
-ದೆ ನೀನನವರತ ಮದಗ್ರಸ್ತ!
ಲ್ಪ ಜೀವನಾದೆ ಮತ್ಸರಗ್ರಸ್ತ! (ಅ)
-ನುಪಮನಾದ ನೀನು ಸರ್ವಶಕ್ತ! (ವ)
-ರ ಗುರು ದತ್ತನಾಗಿ ಶೋಭಿಸಿತ್ತ! (ಶ)
-ಕ್ತ, ನಿರಂಜನಾದಿತ್ಯನೆನಿಸುತ್ತ!!!

ಸದಾ ನಿನ್ನ ಸೇವೆಗೆ ಸಿದ್ಧ!

ದಾರಿ ತೋರಿತಾತ್ಮ ಸಂಬಂಧ!
ನಿನ್ನಾಚ್ಞೆಯಂತಿರಲೂ ಸಿದ್ಧ! (ಉ)
-ನ್ನತಿಯ ಸಾಧಿಸಲೀ ಬಂಧ!
ಸೇರಿಯೊಂದಾಗಿರಲೂ ಸಿದ್ಧ!
ವೆಸನ ಕಳೆಯಲೀ ಬಂಧ!
ಗೆಳೆಯನಾಗಿರಲೂ ಸಿದ್ಧ!
ಸಿಟ್ಟು ಸುಟ್ಟುಹಾಕಲೀ ಬಂಧ! (ಶು)
-ದ್ಧ ನಿರಂಜನಾದಿತ್ಯ ಸಿದ್ಧ!!!

ಗೃಹಪ್ರವೇಶವಾಗಬೇಕು! [ಗ್ರ]

-ಹಗತಿ ಚೆನ್ನಾಗಿರಬೇಕು!
ಪ್ರಯತ್ನ ಬಿಡದಿರಬೇಕು!
ವೇಷ ಬದಲಾಯಿಸಬೇಕು!
ಬರಿಯಂತಾಗಿರ ಬೇಕು!
ವಾಸ ಸ್ಥಿರವಾಗಿರಬೇಕು!
ತಿ ಶ್ರೀರಾಮನೆನಬೇಕು!
ಬೇರೆ ವಿಚಾರ ಬಿಡಬೇಕು! (ಕಾ)
-ಕುತ್ಸ್ಥ ನಿರಂಜನಾದಿತ್ಯಕ್ಕು!!!

ಮಾಲಿಕಗೆಣಿಸಬೇಡ ದ್ರೋಹ! (ಒ)

-ಲಿಸಿಕೊಂಡರಾಗ್ವುದನುಗ್ರಹ!
ರ್ತವ್ಯ ಭ್ರಷ್ಟನಾದರೆ ದ್ರೋಹ! (ಮಿ)
-ಗೆ ಭಕ್ತಿಯಿಂದಿದ್ದರನುಗ್ರಹ! (ದ)
-ಣಿಸಿದರವನನ್ನಾಯ್ತು ದ್ರೋಹ!
ರ್ವ ಸಿದ್ಧಿಗೆ ಬೇಕನುಗ್ರಹ!
ಬೇರೆಕಡೆಗೋಡಿದರೆ ದ್ರೋಹ! (ಬ)
-ಡತನಳಿಸುವುದನುಗ್ರಹ!
ದ್ರೋಹ ಚಿಂತನೆ ತನಗೇ ದ್ರೋಹ! (ಸ್ನೇ)
-ಹ, ನಿರಂಜನಾದಿತ್ಯಾನುಗ್ರಹ!!!

ನಾಗರಾಜ ವಿಜಯಾನಂದಾತ್ರೇಯ! (ಅಂ)

-ಗ ಜಾರಿ ಪ್ರಿಯ ಗುರು ದತ್ತಾತ್ರೇಯ!
ರಾಜರಾಜಾಧೀಶ ಗುಹೇಶಾತ್ರೇಯ!
ವಿಧಿ, ಹರಿ, ಹರೈಕ್ಯ ರೂಪಾತ್ರೇಯ!
ಪ ತಪೋಪಾಸಕಾ ದತ್ತಾತ್ರೇಯ!
ಯಾಗ, ಯೋಗ ಸರ್ವ ಸಾಭಾಗ್ಯಾತ್ರೇಯ!
ನಂದ, ಕಂದ, ಮುಕುಂದಾ ದತ್ತಾತ್ರೇಯ!
ದಾತ, ನಾಥ, ಜಗನ್ನಾಥಾ ಅತ್ರೇಯ! (ಅ)
-ತ್ರೇಯಾ ಅತ್ರಿತನಯಾ ದತ್ತಾತ್ರೇಯ! (ಜ)
-ಯ ನಿರಂಜನಾದಿತ್ಯಾನಂದಾತ್ರೇಯ!!!

ನಿರಹಂಕಾರ ನಿರಾಕಾರ! (ನ)

-ರಹರಿ ರೂಪಾದ್ಭುತಾಕಾರ!
ಹಂಸಾಕಾರ ನಿರ್ಮಲಾಕಾರ! (ವಿ)
-ಕಾರ ನಾಮ ರೂಪಾದ್ಯಾಕಾರ! (ವ)
-ರ ಗುರು ದತ್ತ ನಿರ್ವಿಕಾರ! (ಅ)
-ನಿತ್ಯವಾ ಚರಾಚರಾಕಾರ! (ಸ್ಥಿ)
-ರಾಕಾರಾ ಅಂತರಾತ್ಮಾಕಾರ! (ಆ)
-ಕಾರ, ವಿಕಾರಾತ್ಮಾಪಚಾರ! (ವ)
-ರ ನಿರಂಜನಾದಿತ್ಯೋಂಕಾರ!!!

ಮೌನಾಭ್ಯಾಸದಿಂದೇನಾಯ್ತು?

ನಾನಾರೆಂಬರಿವುಂಟಾಯ್ತು! (ಅ)
-ಭ್ಯಾಸ ಶಿವಾಜ್ಞೆಯಿಂದಾಯ್ತು!
ದಾತ್ಮಾನಂದ ಕಂಡಾಯ್ತು! (ಅಂ)
-ದಿಂದು, ಮುಂದೆಂಬುದು ಹೋಯ್ತು!
ದೇಹ ದೇವಾಲಯವಾಯ್ತು!
ನಾಮದಿಂದದು ಭರ್ತಾಯ್ತು! (ಆ)
-ಯ್ತು, ನಿರಂಜನಾದಿತ್ಯಾಯ್ತು!!!

ದುಂಡು ಮಲ್ಲಿಗೆ ಮಾಲೆ ಮಾರ್ತಾಂಡನಿಗೆ! [ಗಂ]

-ಡು ಹೆಣ್ಣೊಂದಾದಾ ಭೂಮಂಡಲೇಶ್ವರಗೆ!
ದನವೈರಿ ಮಹಾ ಮಾಯಾಧವಗೆ! (ಅ)
-ಲ್ಲಿಲ್ಲೆಲ್ಲೆಲ್ಲಿರುವಾ ಮಲ್ಲಿಕಾರ್ಜುನಗೆ! (ಹ)
-ಗೆ ಬಗೆ ಬಗಿವಾ ಬಸವೇಶ್ವರಗೆ! (ಉ)
-ಮಾರಮಣ ಗುರು ಪರಮೇಶ್ವರಗೆ! (ತ)
-ಲೆಯ ಮೇಲ್ಲಂಗೆಯ ಧರಿಸಿರ್ಪವಗೆ! (ನಾ)
-ಮಾಮೃತ ಪಾನಾನಂದಾ ನಂದೀಶ್ವರಗೆ! (ಆ)
-ರ್ತಾಂತರಂಗಾಪ್ತ ರಕ್ಷಕಾತ್ರೇಯನಿಗೆ! (ಮೃ)
-ಡನಾಪ್ತ ಪುತ್ರ ಕಾರ್ತಿಕೇಯಾತ್ಮನಿಗೆ!
ನಿತ್ಯ ಸತ್ಯ ಸಚ್ಚಿದಾನಂದಾತ್ಮನಿಗೆ!
ಗೆಳೆಯ ಶ್ರೀ ನಿರಂಜನಾದಿತ್ಯನಿಗೆ!!!

ಸದಾ ವಿಷಯಿ ಬೀದಿ ನಾಯಿ!

ದಾರಿ ಬದಲಾಯಿಸದಾ ನಾಯಿ!
ವಿಷಾನ್ನದಿಂದ ಸಾಯ್ವುದಾ ನಾಯಿ! (ರೋ)
-ಷ ಮಾತ್ರ ಬಿಡದಿಹುದಾ ನಾಯಿ! (ಬಾ)
-ಯಿ ಹಾಕುವುದಮೇಧ್ಯಕ್ಕಾ ನಾಯಿ!
ಬೀದಿ ಬೀದಲ್ಯೆಯುವುದಾ ನಾಯಿ! (ಕ)
-ದಿಯುವಭ್ಯಾಸ ಬಿಡದಾ ನಾಯಿ!
ಜಮಾನನಾ ಶ್ರೀರಂಗ ಶಾಯಿ!
ನಾಯಿಯಲ್ಲೂ ವಾಸಾ ಶೇಷಶಾಯಿ! (ನಾ)
-ಯಿಗಾ ನಿರಂಜನಾದಿತ್ಯ ತಾಯಿ!!!

ಸೇವೆಯ ಫಲ ಜನ್ಮ ಸಫಲ! (ನಾ)

-ವೆಗಾವಾಗಾರೇನಿತ್ತರು ಫಲ? (ಭ)
-ಯದಿಂದದು ಕಳೆದಿಲ್ಲ ಕಾಲ!
ಲಕಾಗಿ ಮಾಡಿಲ್ಲದು ಛಲ! (ಜ)
-ಲದಲ್ಲಿಹುದದಕೆ ಸಕಲ!
ನ್ನವೆಲ್ಲಾ ಸೇವೆಗಾ ವಿಮಲ! (ತ)
-ನ್ಮಯವಾಗಿ ಬಿಡುವುದೊಡಲ!
ತ್ಕಾರ್ಯ ನಿರತಗದೇ ಫಲ!
ಲಾತ್ಮ ತೃಪ್ತಿಯೊಂದೇ ಸುಫಲ! (ಫ)
-ಲ ನಿರಂಜನಾದಿತ್ಯಾತ್ಮ ಬಲ!!!

ಹವ್ಯಾಸವೇನಾದರಿರಬೇಕು!

ವ್ಯಾಪ್ತಿ ದೈವಿಕದಲ್ಲಿರಬೇಕು!
ತ್ಯಹವಾಸ ಸತತ ಬೇಕು!
ವೇದಾಂತಾಚಾರಕ್ಕೆ ಬರಬೇಕು!
ನಾಮ ಜಪದ ಸಹಾಯ ಬೇಕು!
ರ್ಪ, ದಂಭವಿರದಿರಬೇಕು! (ಅ)
-ರಿಷಡ್ವರ್ಗವನ್ನು ಜೈಸಬೇಕು! (ವ)
-ರಗುರು ಪಾದಕ್ಕಾಳಾಗಬೇಕು!
ಬೇಡುವಭ್ಯಾಸ ಬಿಡಿಸಬೇಕು! (ಬೇ)
-ಕು ನಿರಂಜನಾದಿತ್ಯಾಗಬೇಕು!!!

ನಿನ್ನ ದರ್ಶನ ಸುಖವಯ್ಯಾ! [ನ]

-ನ್ನ ಮಾಲಿನ್ಯ ಹೋಗ ಬೇಕಯ್ಯಾ!
ಯೆ ನಿನ್ನದಿರಬೇಕಯ್ಯಾ! (ಸ್ಪ)
ರ್ಶವಾಗಬೇಕು ಪಾದವಯ್ಯಾ!
ಶಿಸುವುದಾಗಘವಯ್ಯಾ!
ಸುಪುತ್ರನಾಗುವೆ ನಾಗಯ್ಯಾ! (ದುಃ)
-ಖವಾಗ ಪರಿಹಾರವಯ್ಯಾ!
ರ ಗುರುದೇವ ನೀನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾತ್ಮಯ್ಯಾ!!!

ಅನುಕಂಪಂತರಂಗಕ್ಕೆ ಅಲಂಕಾರ!

ನುಡಿಯಂತೆ ನಡೆ ದೇಹಕ್ಕಲಂಕಾರ!
ಕಂದರ್ಪ ವಿಜಯ ಯೋಗಕ್ಕಲಂಕಾರ!
ಪಂಕಜ ಸರೋವರಕ್ಕೆ ಅಲಂಕಾರ!
ತ್ವಾರ್ಥ ಚಿಂತನೆ ಆತ್ಮಕ್ಕಲಂಕಾರ!
ರಂಗನಾಥ ಶ್ರೀರಂಗಕ್ಕೆ ಅಲಂಕಾರ!
ಣನಾಯಕ ಕುಲಕ್ಕೆ ಅಲಂಕಾರ! (ಅ)
-ಕ್ಕೆ, ಸದ್ಗುರು ಸೇವೆ ಬಾಳಿಗಲಂಕಾರ!
ನುದಿನ ಸಾಧನೆ ಸರ್ವಾಲಂಕಾರ! (ಅ)
ಲಂಕಾರ ಶಂಕರಗೋಂಕಾರಾಲಂಕಾರ!
ಕಾಮಾಕ್ಷಿ ಕೈವಲ್ಯ ಧಾಮಕ್ಕೆ ಅಲಂಕಾರ! (ವ)
-ರ ನಿರಂಜನಾದಿತ್ಯಾದರ್ಶಾಲಂಕಾರ!!!

ತಬ್ಬಿಬ್ಬಾಗದೆ ಅಬ್ಬೆಯಾಗಿ ತಬ್ಬಿಕೋ! [ಮ]

-ಬ್ಬಿನಿಂದ ಬೆಳಕಿಗೆ ಬಂದು ತಬ್ಬಿಕೋ! (ಹ)
-ಬ್ಬಾಚರಿಸಿ ಉಪಚರಿಸಿ ತಬ್ಬಿಕೋ!
ಮನವೆನ್ನದತಿ ದೂರ ತಬ್ಬಿಕೋ! (ಹಿಂ)
-ದೆ, ಮುಂದೆ, ನೋಡದೆ ನೀನೆನ್ನ ತಬ್ಬಿಕೋ!
ರುಣ ಕಿರಣದಿಂದೆನ್ನ ತಬ್ಬಿಕೋ! (ಕ)
-ಬ್ಬೆನಿಂದ ಬರೆಸ್ಯಾನಂದಿಸಿ ತಬ್ಬಿಕೋ!
ಯಾವಾಗಲೂ ನಿನ್ನದಿದೆಂದು ತಬ್ಬಿಕೋ!
ಗಿರಿಜಾತನಯ ನಾನೆಂದು ತಬ್ಬಿಕೋ!
ಡವೇಕೆಂದೋಡಿ ನಾ ಬಂದೆ ತಬ್ಬಿಕೋ! (ಎ)
-ಬ್ಬಿಸುತೀಗಜ್ಞಾನದಿಂದೆನ್ನ ತಬ್ಬಿಕೋ! (ಅ)
-ಕೋ, ಶ್ರೀ ನಿರಂಜನಾದಿತ್ಯಾತ್ಮ ತಬ್ಬಿಕೋ!!!

ಅನುಭವವಾಗಲಿ ಪ್ರಸಾದ ಮಹಿಮೆ! (ಅ)

-ನುಮಾನ ಜೀವಗರಿವಾಗದಾ ಮಹಿಮೆ!
ಕ್ತನರಿತಾನಂದಿಸುವನಾ ಮಹಿಮೆ!
ರ ಮಾರುತಿ ರೂಪಾನುಗ್ರಹ ಮಹಿಮೆ!
ವಾನರ ಪರಬ್ರಹ್ಮತಾನಾದ ಮಹಿಮೆ!
ಗನಮಣಿಯಂಶಾತ್ಮನಾದ ಮಹಿಮೆ! (ಕ)
-ಲಿ ರಾವಣನ ನಿಗ್ರಹಿಸಿತಾ ಮಹಿಮೆ!
ಪ್ರತಿಭಟರನೆದುರಿಸಿತಾ ಮಹಿಮೆ!
ಸಾಧ್ವೀಸೀತೆಯರಿತಳಾ ವರ ಮಹಿಮೆ!
ತ್ತ ಭಕ್ತಲರ್ಕನರಿತನಾ ಮಹಿಮೆ!
ಗು

ವರಾಯಗರಿವಾಯ್ತಾ ಮಹಿಮೆ!
ಹಿಮ ಗಿರಿ ತನಯೆಯಾಕಾರಾ ಮಹಿಮೆ!
ಮೆರೆವ ನಿರಂಜನಾದಿತ್ಯಾತ್ಮಾ ಮಹಿಮೆ!!!

ಪರಹಿಂಸೆ ಪೈಶಾಚಕ ವೃತ್ತಿ! (ತ)

-ರತರ ಕಾರಣದಿಂದಾ ವೃತ್ತಿ! (ಅ)
-ಹಿಂಸೆಯಿಂದಾಗುವುದು ನಿವೃತ್ತಿ! (ಆ)
-ಸೆಯಿಂದಾಗುವುದು ಹಿಂಸಾವೃತ್ತಿ!
ಪೈಪೋಟಿಯೆಂಬುದಜ್ಞಾನ ವೃತ್ತಿ!
ಶಾಖಾಹಾರದಿಂದ ಸಾಧು ವೃತ್ತಿ!
ರಾಚರಕ್ಕಾಧಾರ ಈ ವೃತ್ತಿ!
ಷ್ಟದಾಯಕವಾ ದುಷ್ಟ ವೃತ್ತಿ!
ವೃತ್ತಿನಾಶದಿಂದಾತ್ಮ ಸಂತೃಪ್ತಿ! (ವೃ)
-ತ್ತಿ, ನಿರಂಜನಾದಿತ್ಯಾತ್ಮ ಭಕ್ತಿ!!!

ತಪಸಿಗಸಾಧ್ಯವಾವುದಿಲ್ಲೆಂದೆ! (ತ)

-ಪಸ್ವಿಗಳ ತಪಸ್ಸು ನಾನೇ ಎಂದೆ! (ಹು)
-ಸಿಯಲ್ಲ ನನ್ನ ಮಾತೆಂದು ನೀನಂದೆ!
ತಿಗೇಡು ಹರಿದಿಲ್ಲೇಕೆ ತಂದೆ?
ಸಾಧನೆಗೆ ಪ್ರೋತ್ಸಾಹ ನೀಡು ತಂದೆ! (ಬಾ)
-ಧ್ಯನ ಬಾಧೆ ಹೋಗಲಾಡಿಸು ತಂದೆ!
ವಾಸುದೇವ ನೀ ಜಗಕ್ಕೆಲ್ಲಾ ತಂದೆ! (ಕಾ)
-ವುದೀಗ ನೀ ಬಂದು ಮಗನ ತಂದೆ!
ದಿನ, ರಾತ್ರಿ ಕಳೆಯಲೆಂತು ತಂದೆ? (ಒ)
-ಲ್ಲೆಂದುಪೇಕ್ಷಿಸದೆ ಬಾ ಬೇಗ ತಂದೆ! (ಬಂ)
-ದೆ, ನಿರಂಜನಾದಿತ್ಯ ನಾನಾ ತಂದೆ!!!

ಕಥೆ ಕೇಳಿ ಕಾಲ ಕಳೆಯಬೇಡ! (ವ್ಯ)

-ಥೆ ಪಟ್ಟು ಪಥ ಬಿಟ್ಟೋಡಾಡಬೇಡ!
ಕೇಳಿ, ಹೇಳಿ, ಹಿಗ್ಗಿ ಹಾರಾಡಬೇಡಾ! (ಬಾ)
-ಳಿ ಲೀಲಾನಂದ ಕಾಣದಿರಬೇಡ!
ಕಾಟಾಚಾರದ ಕರ್ಮ ಮಾಡಬೇಡ!
ಕ್ಷ್ಯಸಿದ್ಧಿಯ ದಾರಿ ಬಿಡಬೇಡ!
ಪಿಯಂತೆ ಲಲ್ಲಿಲ್ಲಿ ನೋಡಬೇಡ! (ಹ)
-ಳೆಯ ಚಾಳಿಗಳಿಟ್ಟುಕೊಳ್ಳ ಬೇಡ! (ಭ)
-ಯದಿಂದನ್ಯ ದೈವವ ನಂಬಬೇಡ!
ಬೇಕು ದೃಢ ಭಕ್ತಿ,! ಮರೆಯಬೇಡ! (ಬಿ)
-ಡ, ನಿರಂಜನಾದಿತ್ಯ ಧ್ಯೇಯ ಬಿಡ!!!

ಸುತ್ತಿತು ನಿನಗಾಗೀ ಒಡಲು! (ಅ)

-ತ್ತಿತ್ತು, ಬತ್ತಿತು ಮತ್ತೀ ಒಡಲು! (ಮಾ)
-ತು, ಕಥೆ ನಿಲ್ಲಿಸಿತೀ ಒಡಲು!
ನಿತ್ಯ ಜಪ ಮಾಡಿತೀ ಒಡಲು!
ಮಸ್ಕಾರರ್ಪಿಸಿತೀ ಒಡಲು!
ಗಾನಾನಂದ ಕೊಟ್ಟಿತೀ ಒಡಲು!
ಗೀತಾಭ್ಯಾಸ ಮಾಡಿತೀ ಒಡಲು!
ಲಿಸಿತು ನಿನ್ನನೀ ಒಡಲು!
ಮರುಧರನದೀ ಒಡಲು! (ಬ)
-ಲು ನಿರಂಜನಾದಿತ್ಯನೊಡಲು!!!

ಗುರು, ಹಿರಿಯರೇ ದೇವರಪ್ಪಾ! (ಕ)

-ರುಣೆ ತೋರಿ ಕಾಪಾಡುವರಪ್ಪಾ!
ಹಿತೈಷಿಗಳವರೇ ಕಾಣಪ್ಪಾ! (ಹ)
-ರಿ ಭಜನೆ ಬಿಡಬಾರದಪ್ಪಾ! (ಭ)
-ಯ, ಭಕ್ತಿ, ಸದಾ ಇರಬೇಕಪ್ಪಾ!
ರೇಣುಕೆಯ ಮಗನಂತಿರಪ್ಪಾ!
ದೇವಿಯೇ ತಾಯಿಯೆಂದರಿಯಪ್ಪಾ!
ರ ಪಡೆದುದ್ಧಾರವಾಗಪ್ಪಾ!
ಮೇಶ, ಉಮೇಶರಂತಾಗಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯ ನಮ್ಮಪ್ಪಾ!!!

ಗುರುವಿನ ಮಾತು ಕೇಳಪ್ಪಾ! [ತೋ]

-ರುವನವ ಸನ್ಮಾರ್ಗವಪ್ಪಾ!
ವಿನಯದಿಂದಿರು ನೀನಪ್ಪಾ!
ಮಸ್ಕಾರ ಮಾಡವಗಪ್ಪಾ!
ಮಾಡಬೇಡ ಮೊಂಡಾಟವಪ್ಪಾ!
ತುಡುಗನಾಗಬಾರದಪ್ಪಾ!
ಕೇಡಾರಿಗೂ ಮಾಡಬೇಡಪ್ಪಾ! (ಬಾ)
-ಳ ಬೆಳಕಾಗಿ ಬದುಕಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯಮ್ಮಪ್ಪಾ!!!

ಹಣ್ಣ ಮುತ್ತಿತು ಕರಿ ಇರುವೆ! [ಕ]

-ಣ್ಣ ಬಿಟ್ಟೇಕೆ ನೀ ನೋಡುತಿರುವೆ?
ಮುಗಿಸಲಿ ತನ್ನಾಸೆ ಇರುವೆ! (ಮ)
-ತ್ತಿನ್ಯಾರು ಗತಿಯೆಂದಾನಿರುವೆ! (ಮಾ)
-ತು, ಕಥೆ ಬಲ್ಲುದೇನಾ ಇರುವೆ?
ರ್ಮವಿದದಕೆಂದಾನಿರುವೆ! (ಅ)
-ರಿಯದಿನ್ಯಾವ ಧರ್ಮಾ ಇರುವೆ!
ರಿಸಿದವ ನಾನಾಗಿರುವೆ! (ಆ)
-ರು ನಾನೆಂದರಿಯದಾ ಇರುವೆ! (ಈ)
-ವೆ, ನಿರಂಜನಾದಿತ್ಯಾಗಿರುವೆ!!!

ಗ್ರಹಾಧಿಪನಾತ್ಮ ಗೃಹಾಧಿಪ!

ಹಾಸು, ಹೊಕ್ಕಾಗಿರ್ಪಾಯೋಧ್ಯಾಧಿಪ! (ಸಾ)
-ಧಿಸಿರ್ಪವನಾ ವಾನರಾಧಿಪ! (ಜ)
-ಪ, ತಪದಿಂದಾತ ಯೋಗಾಧಿಪ!
ನಾನು ನೀನೊಂದಾಗಿ ಲೋಕಾಧಿಪ! (ಆ)
-ತ್ಮನಂತನಾಮ, ರೂಪಾತ್ಮಾಧಿಪ!
ಗೃಹಿಣಿ ಸೀತಾಂತರಂಗಾಧಿಪ!
ಹಾರಾರ್ಪಿಸಿರ್ಪಾ ಶ್ರೀರಂಗಾಧಿಪ! (ವ್ಯಾ)
-ಧಿಹರಾ ವಿಚಿತ್ರ ದುರ್ಗಾಧಿಪ! (ದೀ)
-ಪ ಶ್ರೀ ನಿರಂಜನಾದಿತ್ಯಾಧಿಪ!!!

ನಾನಿನಗೇನು ಮಾಡಬೇಕತ್ತೆ?

ನೀನೆಲ್ಲಾ ಹೇಳಿ ಮಾಡಿಸತ್ತೆ! (ಬೇ)
-ಗೇಳೆಂದರೇಳುವೆ ನಾನಾತ್ತೆ! (ಅ)
-ನುದಿನದಾಚಾರವೇನತ್ತೆ?
ಮಾಡೆಲೇನಡಿಗೆ ನಿತ್ಯತ್ತೆ? (ನಾ)
-ಡರೂಢಿ ನಾನರಿಯೆನತ್ತೆ!
ಬೇಕು ಪತಿಸೇವೆನಗತ್ತೆ!
ಷ್ಟ ನನಗಾವುದಿಲ್ಲತ್ತೆ! (ಅ)
-ತ್ತೆ ನಿರಂಜನಾದಿತ್ಯಾತ್ಮತ್ತೆ!!!

ಸಲಿಗೆಯಾದರೆ ಸಲಗವೂ ಮಿಗ! [ನಾ]

-ಲಿಗೆ ಬಿಗಿ ತಪ್ಪಿದರಪ್ಪುದು ರೋಗ! (ಹ)
-ಗೆತನದಿಂದಾಗುವುದಾಸ್ತಿ ವಿಭಾಗ!
ಯಾಗದಿಂದ ಸರ್ವಸಮೃದ್ಧಿ ಭೂಭಾಗ!
ರ್ಪ, ದಂಭದಿಂದ ಕೆಡುವುದು ಯೋಗ! (ಕೆ)
-ರೆ, ತೊರೆ ಬತ್ತಿದರೆ ಏತಕ್ಕಾ ಜಾಗ?
ರ್ವೇಶ್ವರಗಾಗಿರಬೇಕೆಲ್ಲಾ ತ್ಯಾಗ! (ಬ)
-ಲ ಗುಂದಿಸುವುದೆಲ್ಲಾ ವಿಷಯ ಭೋಗ!
ರ್ವದಿಂದ ಗತಿಗೆಡುವುದುದ್ಯೋಗ! (ಆ)
-ವೂರಾದರೇನು ಸುಖ ಮಿಥ್ಯಾನುರಾಗ?
ಮಿಸುಕಾಡ ಗರುಡನ ಮುಂದೆ ನಾಗ! (ಜ)
-ಗಕೆ ನಿರಂಜನಾದಿತ್ಯ ಉಪಯೋಗ!!!

ಕೊಟ್ಟದ್ದುಟ್ಟುಕೊಂಡಿರಬೇಕೆಂಬುದೊಂದು ಕಟ್ಟು! [ಪ]

-ಟ್ಟದರಸಿಯಾಗಬೇಕಾದರೆ ಬೇಕಾ ಕಟ್ಟು! (ಸ)
-ದ್ದು ಮಾಡಿ ಗುದ್ದಾಡಿದರೆ ಮುರಿವುದೊಗ್ಗಟ್ಟು! (ಹು)
-ಟ್ಟು, ಸಾವು, ಸುಟ್ಟುಹಾಕಲಿಕ್ಕಿರಬೇಕೊಗ್ಗಟ್ಟು!
ಕೊಂಡ ಕೋತಿಯಂತಾಡಿದರೆಲ್ಲಿಹುದೊಕ್ಕಟ್ಟು? (ಅ)
-ಡಿಗಡಿಗೊಡೆಯನಡಿಗೆರಗಲೊಕ್ಕಟ್ಟು! (ವ)
-ರ ಗುರುವಿನುಪದೇಶದಂತಿದ್ದರೊಕ್ಕಟ್ಟು!
ಬೇರಾರೂ ಬಿಡಿಸಲಾರರೀ ಭವದ ಕಟ್ಟು!
ಕೆಂಜೆಡೆಯ ನಂಜುಂಡನಿಗಾರದೇನು ಕಟ್ಟು?
ಬುದ್ಧಿವಂತೆ ಕಾಮಾಕ್ಷಿ ಸದಾತನಲ್ಲೊಗ್ಗಟ್ಟು! (ಕಾ)
-ದೊಂದಾಗ್ಯರ್ಧನಾರೀಶ್ವರನಪ್ಪುದಚ್ಚುಕಟ್ಟು!
ದುರ್ವಿಷಯ ವ್ಯಾಮೋಹವೇ ಭಯಂಕರ ಕಟ್ಟು!
ಳಚಿದರಿಂದ ಕಲ್ಯಾಣಿಗಾಯಿತೊಕ್ಕಟ್ಟು! (ಗು)
-ಟ್ಟು, ನಿರಂಜನಾದಿತ್ಯಾನಂದನಿಂದಾಯ್ತು ರಟ್ಟು!!!

ಬೇಕಿರುವಲ್ಲಿ ನೂಕು ನುಗ್ಗುಲು!

ಕಿರಿಯರಾದಿಯಾಗೀ ನುಗ್ಗುಲು!
ರುಚಿ ಜಗಕ್ಕೀ ನೂಕು ನುಗ್ಗಲು! (ಆ)
-ವ ಸುಖ ಸೌಭಾಗ್ಯಕ್ಕೀ ನುಗ್ಗುಲು? (ವ)
-ಲ್ಲಿನಾಥನೊಲ್ಲಾ ನೂಕು ನುಗ್ಗಲು!
ನೂತನ ವರ್ಷದಲ್ಲೀ ನುಗ್ಗುಲು!
ಕುಗ್ಗಿ ಹೋಗಲೀ ನೂಕು ನುಗ್ಗುಲು! (ತ)
-ನು, ಮನಾಧೀನವಾಗೀ ನುಗ್ಗುಲು! (ಹೆ)
-ಗ್ಗುರಿಯಲ್ಲಿಲ್ಲಾ ನೂಕು ನುಗ್ಗುಲು! (ಬ)
-ಲು ನಿರಂಜನಾದಿತ್ಯಾವಾಗಲೂ!!!

ಆಳಾಗಿಹೆನು ನಾನು ನಿನಗೆ! (ಹಾ)

-ಳಾದರೆ ಅಪಕೀರ್ತಿ ನಿನಗೆ! (ಹೇ)
-ಗಿರಬೇಕೆಂದರುಹು ನನಗೆ!
ಹೆರವಳಲ್ಲ ನಾನು ನಿನಗೆ! (ಅ)
-ನುಭವದರಿವಿಲ್ಲ ನನಗೆ!
ನಾನೇನೂ ಹೇಳಲಾರೆ ನಿನಗೆ! (ಅ)
-ನುದಿನ ಸೇವೆ ನೀಡು ನನಗೆ!
ನಿನ್ನ ಕರ್ತವ್ಯ ಗೊತ್ತು ನಿನಗೆ!
ನ್ನನಂತ ಸಾಷ್ಟಾಂಗ ನಿನಗೆ! (ಗಂ)
-ಗೆ ನಿರಂಜನಾದಿತ್ಯನಡಿಗೆ!!!

ಬಿಟ್ಟರೂ ಬಿಡೆ ನಾ ನಿನ್ನ ಸಂಗ! (ಕೊ)

-ಟ್ಟವರಾರೆನಗೆ ನಿನ್ನ ಸಂಗ?
ರೂಪ ಮರೆಸಿ ನೀನಿತ್ತೆ ಸಂಗ!
ಬಿಸಿಯಾನಂದ ವಿತ್ತುದಾ ಸಂಗ! (ತ)
-ಡೆಯಿತನೇಕ ರೋಗವಾ ಸಂಗ!
‘ನಾ’, ‘ನೀ’ ನೆಂಬುದನಟ್ಟಿತಾ ಸಂಗ!
ನಿತ್ಯ ಸಾಗುತ್ತಿರುವುದಾ ಸಂಗ! (ಅ)
-ನ್ನ, ಪಾನ ಬೇಡೆನಿಪುದಾ ಸಂಗ!
ಸಂಬಂಧ ಬಲಿಸಿಹುದಾ ಸಂಗ! (ರಂ)
-ಗ ನಿರಂಜನಾದಿತ್ಯನಾ ಸಂಗ!!!

ನಾನೇ ನೀನೆಂಬುದನರಿತುಕೋ! (ನೀ)

-ನೇಕೆ ಬೇರಾದೆಯೆಂದರಿತುಕೋ!
ನೀನಿದ ನಿತ್ಯ ವಿಚಾರಿಸಿಕೋ! (ನೀ)
-ನೆಂಬಹಂಕಾರ ಬಿಟ್ಟೊಂದಾಗಿಕೋ!
ಬುದ್ಧಿ ಸದಾ ಶುದ್ಧವಾಗಿಟ್ಟುಕೋ!
ತ್ತನಿಗೆಲ್ಲಾ ಒಪ್ಪಿಸಿದ್ದುಕೋ!
ಯನಾದಿಂದ್ರಿಯ ಜಯಿಸಿಕೋ! (ಪ)
-ರಿ, ಪರಿಯಾಸೆ ನಾಶ ಮಾಡಿಕೋ!
ತುರಿಯಾತೀತನ ಸ್ಮರಿಸಿಕೋ (ಅ)
-ಕೋ, ನಿರಂಜನಾದಿತ್ಯದೆಂದುಕೋ!!!

ಮೈಗಾಗುವುದಿಲ್ಲಾ, ಬಾಯ್ಮುಚ್ಚುವುದಿಲ್ಲಾ!-(ಹೀ)

-ಗಾಗಿ ಅನಾರೋಗ್ಯ ತಲೆಯೆತ್ತಿತಲ್ಲಾ!
ಗುಣಾವಗುಣ ಮನಸ್ಸು ನೋಡುತ್ತಿಲ್ಲಾ! (ಸಾ)
-ವು, ನೋವಿನ ಗೋಳು ನಿತ್ಯ ತಪ್ಪಿದ್ದಲ್ಲಾ!
ದಿವ್ಯನಾಮ ಜಪದಲ್ಲಾಸಕ್ತಿಯಿಲ್ಲಾ! (ಎ)
-ಲ್ಲಾ ಬರಿ ಬಾಯಿ ಬ್ರಹ್ಮವಾಗಿಹುದಲ್ಲಾ!
ಬಾಯಿ, ಕೈಗಳಲ್ಲೈಕ್ಯ ಕಾಣುತ್ತಲಿಲ್ಲಾ! (ತಾ)
-ಯ್ಮುನಿದರಾದರಿಸುವವರಾರಿಲ್ಲಾ! (ಹು)
-ಚ್ಚು ವ್ಯಾಮೋಹವೇ ಹೆಚ್ಚಾಗಿರುವುದಲ್ಲಾ! (ಮಾ)
-ವುತನಾನೆ ನಿರ್ಲಕ್ಷಿಸಬಾರದಲ್ಲಾ!
ದಿಕ್ಕುತಪ್ಪಿದರೆ ಊರು ಸಿಕ್ಕದಲ್ಲಾ! (ಬ)
-ಲ್ಲಾ ನಿರಂಜನಾದಿತ್ಯನಾಧೀನವೆಲ್ಲಾ!!!

ಈ ತೀರ್ಥಾತೀರ್ಥಾರ್ಥ ಗುರುಪಾದ ತೀರ್ಥ!

ತೀರ್ಥಗಳಲ್ಲಿ ಇದೇ ಪಾವನ ತೀರ್ಥ! (ವ್ಯ)
-ರ್ಥಾಲಾಪಕ್ಕಳವಡದಾ ದಿವ್ಯ ತೀರ್ಥ!
ತೀವ್ರ ಭಕ್ತನಿಗದೇ ಅಮರ ತೀರ್ಥ! (ಅ)
-ರ್ಥಾಪೇಕ್ಷಿಗಾವುದೇನುಪಯೋಗ ತೀರ್ಥ? (ಸ್ವಾ)
-ರ್ಥ ಬಿಟ್ಟ ಪರಮಾರ್ಥಿಗಾನಂದಾ ತೀರ್ಥ!
ಗುರುಪಾದದಿಂದ ಹುಟ್ಟಿತೆಲ್ಲಾ ತೀರ್ಥ! (ಕ)
-ರು

ಸಿಹನು ಗುರು ಶಿವನಾ ತೀರ್ಥ!
ಪಾಪ, ತಾಪ, ಕೋಪ ನಾಶಕ್ಕಿದೇ ತೀರ್ಥ!
ಕ್ಷಕನ್ಯೆಯನುದ್ಧರಿಸಿತೀ ತೀರ್ಥ!
ತೀರ್ಥವಿದೇ ರಾಮೇಶ್ವರ ಮಹಾ ತೀರ್ಥ (ವ್ಯ)
-ರ್ಥ ನಿರಂಜನಾದಿತ್ಯಾತ್ಮಗನ್ಯ ತೀರ್ಥ!!!

ಮೋಡದಿಂದ ಕಡಲಾಯ್ತು! (ಕ)

-ಡಲಿನಿಂದ ಮೋಡವಾಯ್ತು!
ದಿಂಬು ತಲೆಗೆ ಇಂಬಾಯ್ತು! (ಅ)
-ದಕ್ಕೆ ಹೇತು ತಲೆಯಾಯ್ತು!
ರ್ಮದಿಂದ ಒಡಲಾಯ್ತು! (ಒ)
-ಡಲಿನಿಂದ ಕರ್ಮವಾಯ್ತು! (ಫ)
-ಲಾಪೇಕ್ಷೆಯಿಲ್ಲದೆಲ್ಲಾಯ್ತು! (ಆ)
-ಯ್ತು ನಿರಂಜನಾದಿತ್ಯಾಯ್ತು!!!

ಮೋಡದಿಂದಾಯ್ತು ಕಡಲು! (ಕ)

-ಡಲಿನಿಂದಾಯ್ತು ಮುಗಿಲು! (ಬೆಂ)
-ದಿಂಧನದಿಂದಾಯ್ತಿಜ್ಜಲು (ಅ)
-ದಾಯ್ತೊಲೆ ಬೆಂಕಿ ಹಚ್ಚಲು! (ಆ)
-ಯ್ತು, ಹೋಯ್ತು ಬಹಳೊಡಲು!
ರ್ಮದಿಂದಾಯ್ತೀ ಒಡಲು! (ಒ)
-ಡಲಿಂದಾಯ್ತು ಕರ್ಮಗಳು! (ಬ)
-ಲು, ನಿರಂಜನಾದಿತ್ಯಾಳು!!!

ಜ್ಯೋತಿ ಕೊಟ್ಟಿತೌಷಧಿಯ! (ಪ್ರೀ)

-ತಿ ತೋರಿಸಿತಾ ವಿಜಯ!
ಕೊಟ್ಟಿತದ ಕಾರ್ತಿಕೇಯ! (ಸು)
-ಟ್ಟಿತದನಾರೋಗ್ಯ ಭಯ (ಹಿ)
-ತೌಷಧಿಯಾದಿತ್ಯೋದಯ! (ವಿ)
-ಷ ನಾಶ “ನಮಃ ಶಿವಾಯ”! (ಬೇ)
-ಧಿಯಾದಾಮೇಲೆ ನಿರ್ಭಯ! (ಆ)
-ಯ ನಿರಂಜನಾದಿತ್ಯಾಯ!!!

ಮನವಿದ್ದಾಗ ಧನವಿಲ್ಲ! (ಧ)

-ನವಿರುವಾಗ ಮನವಿಲ್ಲ!
ವಿಷಯಾಸೆ ನಾಶವಾಗಿಲ್ಲ! (ಒ)
-ದ್ದಾಟ, ಗುದ್ದಾಟ ಮಟ್ಟಾಗಿಲ್ಲ!
ತಿಗೇಡಿನಾಟ ಬಿಟ್ಟಿಲ್ಲ!
ರ್ಮ ಕರ್ಮಾಸಕ್ತಿ ಹುಟ್ಟಿಲ್ಲ!
ರಳಾಟವೇನೂ ತಪ್ಪಿಲ್ಲ!
ವಿರಕ್ತನಾಗಲಿಷ್ಟವಿಲ್ಲ! (ಬ)
-ಲ್ಲ ನಿರಂಜನಾದಿತ್ಯನಲ್ಲ!!!

ಅನ್ಯ ದ್ವೇಷಕ್ಕೆ ತನ್ನಾಸೆ ಕಾರಣ! [ವ]

-ನ್ಯ ಮೃಗದಂತಾದರೆಂಥಾ ಜೀವನ? (ಉ)
-ದ್ವೇಗ ಅಶಾಂತಿಗೆ ಮೂಲ ಕಾರಣ!
ಡ್ರಿಪುಗಳಿಂದ ವ್ಯರ್ಥ ಜೀವನ! (ಅ)
-ಕ್ಕೆ ಸದಾ ಶಿವ ಜಪವೀ ಕಾರಣ!
ತನು ಭಾವಲ್ಪ ಮಾನವ ಜೀವನ! (ಅ)
-ನ್ನಾಹಾರವಲ್ಲ ಜನ್ಮಕ್ಕೆ ಕಾರಣ! (ಆ)
-ಸೆಗಳಿಂದ ಹಾಳಾಯ್ತಿಹ ಜೀವನ
ಕಾಲ ಪೋಲಾಗಬಾರದೀ ಕಾರಣ! (ವ)
-ರ ಗುರು ಸೇವಾ ನಂದಾತ್ಮ ಜೀವನ! (ತ್ರಾ)
-ಣ ನಿರಂಜನಾದಿತ್ಯಾತ್ಮ ಧಾರಣ!!!

ಸಂವತ್ಸರವಿದು “ಸಾಧಾರಣ”! (ಭ)

-ವ ಪಾಶ ನಾಶ ಶಿವ ಪಾವನ! (ತ)
-ತ್ಸರ್ವಮೆಂಬಾನಂದಾತ್ಮ ಧಾರಣ! (ವ)
-ರ ಗುರುಪಾದ ಸೇವೆ ಪಾವನ!
ವಿಚಾರದಿಂದಾಗಲಿ ಧಾರಣ! (ಬ)
-ದುಕಿದರಿಂತು ಜನ್ಮ ಪಾವನ!
ಸಾಯುಜ್ಯ ಸಿದ್ಧಿಗಾಗಿ ಧಾರಣ! (ಸಾ)
-ಧಾರಣ ಜೀವನಿಂತು ಪಾವನ!
ಘುಪತಿ ರಾಮನ ಧಾರಣ! (ಪ್ರಾ)
-ಣ, ನಿರಂಜನಾದಿತ್ಯ ಪಾವನ!!!

ಹುಟ್ಟಿದೆನು ಶಿವನಿಷ್ಟದಂತೆ! [ಇ]

-ಟ್ಟಿಹನು ನನ್ನ ತನ್ನಿಷ್ಟದಂತೆ! (ಹಿಂ)
-ದೆ, ಮುಂದಿಂದೆಲ್ಲಾ ತನಿಷ್ಟದಂತೆ! (ಅ)
-ನು ಭವಿಸ್ಯಾಯ್ತಾತನಿಷ್ಟದಂತೆ!
ಶಿಕ್ಷೆ, ರಕ್ಷೆಯಾತನಿಷ್ಟದಂತೆ!
ಸನಾನ್ನವಾತನಿಷ್ಟದಂತೆ!
ನಿತ್ಯ ಸೇವೆಯಾತನಿಷ್ಟದಂತೆ! (ಕ)
-ಷ್ಟ, ಸುಖಗಳಾತನಿಷ್ಟದಂತೆ! (ತ)
-ದಂಗ ಸಂಗಕ್ಕಾತನಿಷ್ಟದಂತೆ! (ಸಂ)
-ತೆ, ನಿರಂಜನಾದಿತ್ಯಗಿಲ್ಲಂತೆ!!!

ಸುಖ ನಿದ್ರೆ ತಾಯಿ ತೊಡೆಯಲ್ಲಿ!

ಗವಾಹನಗಾನಂದವಲ್ಲಿ!
ನಿತ್ಯ ನಿಶ್ಚಿಂತೆಯಾ ತಲ್ಪದಲ್ಲಿ! (ನಿ)
-ದ್ರೆಯಿಂದೆಬ್ಬಿಸ್ಯುಣಿಸುವಳಲ್ಲಿ!
ತಾಪತ್ರಯವಿಲ್ಲ ಬಾಲಗಲ್ಲಿ! (ತಾ)
-ಯಿಗಿಹುದೆಲ್ಲಾ ಜವಾಬ್ದಾರ್ಯಲ್ಲಿ!
ತೊಳೆವಳಂಟಿದ್ದ ಮಲವಲ್ಲಿ! (ಬಿ)
-ಡೆನೆಂಬಳನಾರೋಗ್ಯವಾದಲ್ಲಿ! (ಭ)
-ಯ ನಿವಾರಣೆ ಮಾಡುವಳಲ್ಲಿ! (ಇ)
-ಲ್ಲಿ, ನಿರಂಜನಾದಿತ್ಯಾನಂದಲ್ಲಿ!!!

ಇಂದೇನು ಬರೆಯಬೇಕಪ್ಪಾ?

ದೇಶ, ಕಾಲ ಚೆನ್ನಾಗಿಲ್ಲಪ್ಪಾ! (ಅ)
-ನುದಿನನ್ಯಾಯ ಹೆಚ್ಚಿತಪ್ಪಾ!
ಡವರುಳಿವಂತಿಲ್ಲಪ್ಪಾ! (ದೊ)
-ರೆಯದೊಂದೂಟವರಿಗಪ್ಪಾ! (ಭ)
-ಯ, ಭಕ್ತಿಗೆಲ್ಲಾ ಹಿಂಸೆಯಪ್ಪಾ!
ಬೇಕೀಗ ನಿನ್ನ ಸಹಾಯಪ್ಪಾ!
ರುಣೆ ತೋರಿ ಕಾಪಾಡಪ್ಪಾ! (ಅ)
-ಪ್ಪಾ, ಶ್ರೀ ನಿರಂಜನಾದಿತ್ಯಪ್ಪಾ!!!

ಪಾಡಿ ಸುಬ್ರಹ್ಮಣ್ಯೇಶ್ವರನ! (ನೋ)

-ಡಿ ಶ್ರೀ ಗುರು ಗುಹೇಶ್ವರನ!
ಸುಖ, ದುಃಖವೇಕ ಸಮನೆ!
ಬ್ರಹ್ಮ, ವಿಷ್ಣು, ಶಿವ ಪ್ರಿಯನ! (ಬ್ರ)
-ಹ್ಮ ವಿದ್ಯಾ ಪೂರ್ಣಾನುಭವನ! (ಗ)
-ಣ್ಯೇಶ್ವರ ಗಣನಾಯಕನ! (ವಿ)
-ಶ್ವವ್ಯಾಪಿ ಪುರುಷೋತ್ತಮನ! (ವಿ)
-ರಕ್ತ ಪಳನಿಯಾಂಡವನ! (ಘ)
-ನ, ಶ್ರೀ ನಿರಂಜನಾದಿತ್ಯನ!!!

ಸಾಲ ಸಲಿಸಿ ಮೂಲ ಬಲಿಸು! [ಬಾ]

-ಲ ಗೋಪಾಲನ ಲೀಲೆ ಸ್ಮರಿಸು!
ರ್ವ ಸಾಕ್ಷಿಯ ಗುರಿಯಿರಿಸು!
ಲಿಪ್ತ ನಾಗದೆಲ್ಲನುಭವಿಸು!
ಸಿಟ್ಟು ಸುಟ್ಟು ಪಟ್ಟ ಸ್ವೀಕರಿಸು!
ಮೂಕನಾಗಿ ಲೋಕೇಶನೆನಿಸು!
ಜ್ಜೆ ಬಿಟ್ಟವಧೂತನೆನಿಸು!
ಲಿಯ ತ್ಯಾಗವಳವಡಿಸು! (ಒ)
-ಲಿಸಿ ಗುರುಪುತ್ರ ನೀನೆನಿಸು! (ಕೂ)
-ಸು ನಿರಂಜನಾದಿತ್ಯಗೆನಿಸು!!!

ಸತ್ತು ಹೋದಂತಿರಬೇಕಯ್ಯಾ! (ಅ)

-ತ್ತು ಪ್ರಯೋಜನವಿಲ್ಲವಯ್ಯಾ!
ಹೋಗುವುದೀ ಶರೀರವಯ್ಯಾ!
ದಂಭ, ದರ್ಪವಿದಕೇಕಯ್ಯಾ?
ತಿಳಿದರಿದ ಸುಖವಯ್ಯಾ! (ಆ)
-ರದಾವ ಹಂಗು ಇದಕಯ್ಯಾ?
ಬೇಕು ಬೇಕೆಂದಾಯ್ತು ದುಃಖವಯ್ಯಾ!
ರ್ಮಾಕರ್ಮವೆಲ್ಲಾ ಸುಳ್ಳಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾತ್ಮಯ್ಯಾ!!!

ಸೇವೆ ಮಾಡುವವನೊಬ್ಬನಯ್ಯಾ! [ಸೇ]

-ವೆಗಾಶಿಸುವವರನೇಕಯ್ಯಾ!
ಮಾತಿನ ಚಮತ್ಕಾರ ಸಾಕಯ್ಯಾ (ಮಾ)
-ಡುವಾತ ಆಡುವುದಿಲ್ಲವಯ್ಯಾ!
ರ ಗುರುಭಕ್ತನವನಯ್ಯಾ! (ಅ)
-ವರಿವರ ಮಾತವನಾಡಯ್ಯಾ!
ನೊರೆ ಹಾಲ ಗುಣವನದಯ್ಯಾ! (ಅ)
-ಬ್ಬರಾರ್ಭಟಗಳವಗಿಲ್ಲಯ್ಯಾ!
ಮಶ್ಯಿವಾಯವನ ಮಂತ್ರಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯವನಯ್ಯಾ!!!

ಪ್ರಶಸ್ತ ಹಸ್ತ ಗುರುದತ್ತ ಹಸ್ತ!

ಕ್ತಿ ಸಂಪ್ರದಾತಾ ಶ್ರೀ ದತ್ತಹಸ್ತ!
ಸ್ತವನಾನಂದಭಯಾ ದತ್ತಹಸ್ತ!
ಹರಿ, ಹರ, ಬ್ರಹ್ಮೈಕ್ಯಾ ದತ್ತ ಹಸ್ತ! (ಅ)
-ಸ್ತ ಉದಯ ಕಾರಣಾ ದತ್ತಹಸ್ತ!
ಗುರುಭಕ್ತಿ ಭರಿತಾ ದತ್ತಹಸ್ತ! (ಕ)
-ರುಣಾಭರಣಾನಂದಾ ದತ್ತ ಹಸ್ತ!
ತ್ತಾತ್ರೇಯಾವತಾರಾ ದತ್ತಹಸ್ತ! (ಅ)
-ತ್ತ, ಇತ್ತೆತ್ತೆತ್ತ ವ್ಯಾಪ್ತಾ ದತ್ತಹಸ್ತ!
“ಹರೇ ರಾಮ” ಮಂತ್ರಾತ್ಮಾ ದತ್ತಹಸ್ತ! (ಹ)
-ಸ್ತ ನಿರಂಜನಾದಿತ್ಯಾ ದತ್ತಹಸ್ತ!!!

ಕಕ್ಷಿಗಾರರಿಗಾರ ರಕ್ಷೆ! [ಸಾ]

-ಕ್ಷಿ ಸ್ವರೂಪೀಶ್ವರನ ರಕ್ಷೆ! (ಆ)
-ಗಾಗಾತನ ಸ್ಮರಣೆ ರಕ್ಷೆ!
ಗಳೆಯಿಂದಾಗದು ರಕ್ಷೆ! (ದಾ)
-ರಿ ನೇರಾಗಿದ್ದ ರಾಗ ರಕ್ಷೆ!
ಗಾಲಿ ಗೋಪುರಕಾವ ರಕ್ಷೆ? (ಪ)
-ರ ಪೀಡೆಗೊದಗದು ರಕ್ಷೆ! (ವ)
-ರ ವಿಭೀಷಣಗಾಯ್ತು ರಕ್ಷೆ! (ಶಿ)
-ಕ್ಷೆ, ನಿರಂಜನಾದಿತ್ಯ ರಕ್ಷೆ!!!

ನಾರದಾ! ದಾರಿ ತೋರಬಾರದಾ? (ನ)

-ರನಜ್ಞಾನ ಕಳೆಯ ಬಾರದಾ? (ಸ)
-ದಾನಂದ ನಿನ್ನಂತಿರ ಬಾರದಾ? (ಉ)
-ದಾರಿಯಾಗೀಗ ಬರ ಬಾರದಾ? (ಹ)
-ರಿ ಮಹಿಮೆ ತಿಳಿಸ ಬಾರದಾ?
ತೋರಿ ಸಂತೋಷ ನೀಡ ಬಾರದಾ? (ಧ)
-ರಣಿಯಶಾಂತಿ ನೀಗ ಬಾರದಾ?
ಬಾರದಿರಪ ಕೀರ್ತಿ ಬಾರದಾ? (ಸು)
-ರ ಋಷಿ ನಿನ್ನ ನಂಬ ಬಾರದಾ? (ಸ)
-ದಾ ನಿರಂಜನಾದಿತ್ಯಾ ನಾರದ!!!

ಅವತಾರಗಳಾದುವು ಬಹಳ! (ಅ)

-ವರ ಕಥೆಗಳೆಲ್ಲೆಲ್ಲೂ ಬಹಳ! (ಮ)
-ತಾಚಾರ್ಯರೆನಿಸಿದರು ಬಹಳ (ಧ)
-ರಣಿಯಲ್ಲಾಯ್ತು ಪಂಗಡ ಬಹಳ!
ತಿಗೆಟ್ಟಿತಿದರಿಂದ ಬಹಳ! (ಕೀ)
-ಳಾಸೆಯುಂಟಾಯ್ತಿದರಿಂದ ಬಹಳ!
ದುಡಿಮೆ ವಿಫಲವಾಯ್ತು ಬಹಳ! (ಸಾ)
ವು, ಸುಲಿಗೆಗಳೆಲ್ಲೆಲ್ಲೂ ಬಹಳ!
ಲವೀಯಲೀಗ ಗುರು ಬಹಳ!
ಬ್ಬಲಿ ಗುರು ಭಜನೆ ಬಹಳ! (ತೌ)
-ಳ ನಿರಂಜನಾದಿತ್ಯನಿಷ್ಟ ಮೇಳ!!!

ಪತಿತೋದ್ಧಾರ ದೈತ್ಯ ಸಂಹಾರ! (ಸ)

-ತಿ ಸೀತೆಯತ್ಯಮೌಲ್ಯಾಲಂಕಾರ! (ಜಾ)
-ತೋತ್ತಮ ಸೂರ್ಯವಂಶ ಮಂದಾರ! (ಶ್ರ)
-ದ್ಧಾ ಭಕ್ತಿಗನವರತಾಧಾರ!
ರೆಮೇಶ, ಉಮೇಶರೇಕಾಕಾರ!
ದೈವೀಸಂಪದ್ಗುಣಗಳಾಗಾರ! (ಸ)
-ತ್ಯ ಧರ್ಮ ರಾಮರಾಜನುದಾರ!
ಸಂಪೂರ್ಣಾತ್ಮಾನಂದ ರಘುವೀರ!
ಹಾಡಿ ಹಣ್ಣಾದ ಭಕ್ತರಪಾರ! (ವ)
-ರ ನಿರಂಜನಾದಿತ್ಯನಾಕಾರ!!!

ಆಟ, ನೋಟ, ಊಟವೆಲ್ಲಾ ಸಾಕು! [ಕಾ]

-ಟವಾದ ಮೇಲುದೇಕಿರಬೇಕು?
ನೋವಿಲ್ಲದಿದ್ದರದೊಂದೇ ಸಾಕು! (ದಿ)
-ಟದಲ್ಲಿ ಸದಾ ಲಯಿಸಬೇಕು!
ರಿಂದೂರಿಗಲೆದಾಟ ಸಾಕು! (ಊ)
-ಟಕ್ಕಾಗ್ಯೇಕೆ ಬದುಕಿರಬೇಕು? (ಸ)
-ವೆದರೀ ಪ್ರಾರಭ್ದ ಕರ್ಮ ಸಾಕು! (ಎ)
-ಲ್ಲಾದಕ್ಕೂ ಗುರು ಕರುಣೆ ಬೇಕು!
ಸಾರ್ಥಕವಾದರೀ ಜನ್ಮ ಸಾಕು! (ಸಾ)
-ಕು, ನಿರಂಜನಾದಿತ್ಯಾಗಬೇಕು!!!

ಆಸ್ತಿಕ ಭಾವನಾ ಪುರಾತನಾ! (ನಾ)

-ಸ್ತಿಕತೆಗೀಶ್ವರನೇ ಕಾರಣಾ!
ರ್ಮಕ್ಕಿರದಾಯ್ತು ಸಂಭಾವನಾ!
ಭಾರಹೊತ್ತು ಸುಸ್ತಾಯ್ಯು ಜೀವನಾ!
ರ ಗುರು ದೇವ ಸದಾ ಮೌನಾ!
ನಾರಾಯಣಗೇಕಿಲ್ಲ ಕರುಣಾ?
ಪುಣ್ಯ, ಪಾಪದಿಂದಾಯ್ತು ಜನನಾ! (ಪಾ)
-ರಾಗುವುದಕ್ಕಿನ್ನಾವ ಸಾಧನಾ?
“ತತ್ವಮಸಿ” ಸ್ಥಿತಿಯೇ ಪಾವನಾ! (ಘ)
-ನಾ, ನಿರಂಜನಾದಿತ್ಯ ಚಿಂತನಾ!!!

ಉಪಕಾರ ಸ್ಮರಣೆಯಿಲ್ಲದ ಕಾಲ!

ರಮಾರ್ಥ ಚಿಂತನೆಗುಪೇಕ್ಷಾ ಕಾಲ!
ಕಾಮಾತಿರೇಕದಿಂದೊದ್ದಾಡುವ ಕಾಲ! (ಪ)
-ರ ಪೀಡೆಯೇ ಧರ್ಮವಾಗಿರುವ ಕಾಲ! (ವಿ)
-ಸ್ಮಯ, ವಿಚಿತ್ರ ಪ್ರದರ್ಶನದ ಕಾಲ!
ವಿ, ಚಂದ್ರರನ್ನು ಕೆಣಕುವ ಕಾಲ! (ಕಾ)
-ಯಿದೆ, ಕಾನೂನು ಹದಗೆಟ್ಟಿಹ ಕಾಲ! (ಬ)
-ಲ್ಲವರಿಗೆಲ್ಲಾ ಕಲ್ಲೆಸೆಯುವ ಕಾಲ!
ಯಾ, ದಾಕ್ಷಿಣ್ಯಕ್ಕೆಡೆಯಿಲ್ಲದ ಕಾಲ!
ಕಾದಾಟದಿಂದ ಕಂಗೆಟ್ಟಿರುವ ಕಾಲ! (ಕಾ)
-ಲ, ನಿರಂಜನಾದಿತ್ಯನಿಗೊಂದು ಲೀಲ!!!

ರಾವಣ ಸಾಯಲಿ, ರಾಮನುಳಿಯಲಿ! [ಭ]

-ವಬಂಧ ಹರಿದು ಸಾರೂಪ್ಯವಾಗಲಿ! (ತೃ)
-ಣ, ಕಾಷ್ಟದಲ್ಲವನೆಂಬರಿವಾಗಲಿ!
ಸಾಯುಜ್ಯ ಸಿದ್ಧಿಯಿಂದ ಮುಕ್ತಿಯಾಗಲಿ!
ಮನ ಭಯ ನಿವಾರಣೆಯಾಗಲಿ! (ಮ)
-ಲಿನ ವಾಸನೆ ಹೆಸರಿಲ್ಲದಾಗಲಿ!
ರಾರಾಜಿಸುತಾತ್ಮಾರಾಮನಾಗಿರಲಿ!
ಡದಿ ಸೀತಾ ಮನಕಾಪ್ತಾಗಿರಲಿ! (ಹ)
-ನುಮಂತ ಪ್ರಾಣ ಸ್ನೇಹಿತನಾಗಿರಲಿ! (ಉ)
-ಳಿದಾಳಿ ಸರ್ವರಿಷ್ಟ ಪೂರ್ತಿಯಾಗಲಿ! (ಜ)
-ಯ ಸೀತಾರಾಮೆಂಬ ಘೋಷ ಮೊಳಗಲಿ! (ಒ)
-ಲಿದು ನಿರಂಜನಾದಿತ್ಯ ಬಂದಿರಲಿ!!!

ಹರಿಕೆ ಹೊತ್ತು ಹರಸಿಕೊಳ್ಳಬೇಕೇನು? (ಹ)

-ರಿನಾಮ ಸ್ಮರಣೆಗವನೊಲಿಯನೇನು?
ಕೆಟ್ಟು ಹೋಗುವುದಾ ದೇವನಿಗಿಷ್ಟವೇನು?
ಹೊಟ್ಟೆಗಿಕ್ಕಿ ಕಕ್ಕಿಸುವುದು ನ್ಯಾಯವೇನು? (ಅ)
-ತ್ತು, ಕಾಡಿ, ಬೇಡೀ ಒಡಲ ಸಾಕಬೇಕೇನು?
ರಿಯೇ, ತಾಯಿ ತಂದೆಯೆಂಬುದು ಸುಳ್ಳೇನು? (ತೋ)
-ರ ಬೇಕವನಾಗಿ ಕರುಣೆಯಲ್ಲವೇನು?
ಸಿಟ್ಟವಗಿಲ್ಲೆಂಬುದು ಸತ್ಯವಲ್ಲವೇನು?
ಕೊಳೆಯವನೇ ತೊಳೆಯ ಬೇಕಲ್ಲವೇನು? (ಹ)
-ಳ್ಳಕ್ಕೆ ತಳ್ಳಿ ಕೊಲ್ಲುವುದಧರ್ಮವಲ್ಲವೇನು?
ಬೇಕಾದಂತರಿಸಿ ಕೊಳ್ಳಲೆಂದಿರ್ಪೆ ನಾನು!
ಕೇಳಲೂ, ಹೇಳಲೂ ಶಕ್ತನಾಗಿಲ್ಲ ನಾನು! (ಅ)
-ನುಪಮಾತ್ಮ ನಿರಂಜನಾದಿತ್ಯನವನು!!!

ದೇವರ ದಯೆ ಬರಬೇಕು! (ಭ)

-ವ ಬಂಧ ಕತ್ತರಿಸಬೇಕು! (ಪ)
-ರಮಪದವ ಸೇರಬೇಕು! (ಅ)
-ದಕಾಗಿ ಸದಾ ಸೇವೆ ಬೇಕು! (ಛಾ)
-ಯೆಯಾಗುದಿಸಿ ಬರಬೇಕು!
ರಬರುತ್ತದಾಗ ಬೇಕು! (ಚಿ)
-ರಕಾಲ ಸುಖಿಯಾಗಬೇಕು!
ಬೇರೆನ್ನೇನೀ ಜನ್ಮಕ್ಕೆ ಬೇಕು? (ಬೇ)
-ಕು, ನಿರಂಜನಾದಿತ್ಯಾಗ್ಬೇಕು!!!

ಶಿಕ್ಷಕರಿಗೆ ಧ್ಯಾನಮಿಂಚಿನೂಟ! (ಅ)

-ಕ್ಷರಕ್ಷರಕ್ಕೂ ಕಣ್ಣೀರೆರೆದೂಟ!
ರೆದರೂ ಬೇಡಾಯ್ತಿತರ ಊಟ! (ಅ)
-ರಿತವರಿಗೆ ಬೇಕು ಜ್ಞಾನದೂಟ!
ಗೆಲುವು ನೀಡಲಿಕ್ಕೆ ಬೇಕೀ ಊಟ!
ಧ್ಯಾನಮಗ್ನೆ ರುಕ್ಮಿಣಿಯಾಸೆಯೂಟ!
ಮ್ರನಾಗಿ ಪಾಲ್ಗೊಂಡಾಚಾರ್ಯಾ ಊಟ!
ಮಿಂಚಿತಾ ಶುದ್ಧ ಮನದಲ್ಲಾ ಊಟ!
ಚಿರಕಾಲ ಚೈತನ್ಯ ಪ್ರದಾ ಊಟ!
ನೂತನ ವರ್ಷದ ಪ್ರಸಾದದೂಟ! (ಊ)
-ಟ, ನಿರಂಜನಾದಿತ್ಯನಿಕ್ಕಿದೂಟ!!!

ಚೆನ್ನಾಗಿದೆ ರುಕ್ಮಿಣಿಯುಪ್ಪಿಟ್ಟು! (ತ)

-ನ್ನಾತ್ಮನೊಪ್ಪಿ ಮಾಡಿದಾ ಉಪ್ಪಿಟ್ಟು!
ಗಿರಿಧರಾರ್ಪಣವಾದುಪ್ಪಿಟ್ಟು! (ಬೆಂ)
-ದೆಲ್ಲಾ ಸಮರಸವಾದುಪ್ಪಿಟ್ಟು!
ರುಚಿಯಾದ ಕಂದಬದುಪ್ಪಿಟ್ಟು! (ರು)
-ಕ್ಮಿಯನುಜೆಯ ಪ್ರೇಮದುಪ್ಪಿಟ್ಟು! (ಉ)
-ಣಿಸಿದಳು ಕೃಷ್ಣಗಾ ಉಪ್ಪಿಟ್ಟು! (ಆ)
-ಯುರಾರೋಗ್ಯ ಯೋಗದಾ ಉಪ್ಪಿಟ್ಟು! (ಒ)
-ಪ್ಪಿಸಿತವಳವಗಾ ಉಪ್ಪಿಟ್ಟು! (ಕೊ)
-ಟ್ಟು, ನಿರಂಜನಾದಿತ್ಯಗುಪ್ಪಿಟ್ಟು!!!

ಸಾಲೋಕ್ಯದಿಂದ ಸಾಮೀಪ್ಯಕ್ಕೆ ಬಾ!

ಲೋಕ ವ್ಯವಹಾರ ಮರೆತು ಬಾ! (ಐ)
-ಕ್ಯಕ್ಕಿದಗತ್ಯವೆಂದರಿತು ಬಾ! (ಅಂ)
-ದಿಂದು, ಮುಂದೆನ್ನದೆ ಈಗಲೇ ಬಾ! (ಇ)
-ದರಿಂದಭ್ಯುದಯವಹುದು ಬಾ!
ಸಾಯುವ ಮುಂಚೆಲ್ಲಾ ಸಾಧಿಸು ಬಾ!


ರಾ, ಕಬೀರಾದಿಗಳಂತೆ ಬಾ! (ಗೋ)
-ಪ್ಯವಿದರಲ್ಲೇನಿಲ್ಲೆಂದೋಡಿ ಬಾ! (ಮಿ)
-ಕ್ಕೆಲ್ಲಾಸೆ ಮಿಥ್ಯವಾಗಿಹುದು ಬಾ!
-ಬಾ, ನಿರಂಜನಾದಿತ್ಯಾಪ್ತಾತ್ಮ ಬಾ!!!

ರಾಮನೊಲಿದಾಗ ಕಪಿಯೂ ಕವಿ! (ಕಾ)

-ಮನೊಲಿದರಾಗ ಕವಿಯೂ ಕಪಿ! (ನೀ)
-ನೊಲಿದು ನಾನಾಗಾತ್ಮನುಭಾವಿ! (ಮ)
-ಲಿನ ವೃತ್ತಿಯಾದಾಗ ಕಾಮಜೀವಿ!
ದಾಸನಾದಾಂಜನೇಯತ್ಮಾನುಭಾವಿ!
ರ್ವಿ ರಾವಣೇಶ್ವರ ಕಾಮಜೀವಿ!
ರ್ಮನಿಷ್ಟ ಕೌಂತೇಯಾತ್ಮಾನುಭಾವಿ! (ಪಾ)
-ಪಿ ಧೃತರಾಷ್ಟ್ರ ತುಚ್ಛ ಕಾಮಜೀವಿ! (ಸಾ)
-ಯೂಜ್ಯ ಸಿದ್ಧ ಸುಧಾಮಾತ್ಮಾನುಭಾವಿ!
ರ್ಮಭ್ರಷ್ಟ ಕೌರವ ಕಾಮಜೀವಿ! (ಕ)
-ವಿ, ನಿರಂಜನಾದಿತ್ಯಾತ್ಮತ್ಮಾನುಭಾವಿ!!!

ಗುರುಪಾದಾರಾಧಕ ಯಾತ್ರಿಕ! [ತೋ]

-ರುವನು ವಿಶ್ವಪ್ರೇಮಾ ಯಾತ್ರಿಕ!
ಪಾಡುವನಾತ್ಮ ಗೀತಾ ಯಾತ್ರಿಕ!
ದಾತ, ನಾಥಾತ್ಮನೆಂದಾ ಯಾತ್ರಿಕ!
ರಾಗ, ದ್ವೇಷ ರಹಿತಾ ಯಾತ್ರಿಕ!
ರ್ಮ, ಕರ್ಮ, ನಿರತಾ ಯಾತ್ರಿಕಾ!
ಷ್ಟ, ಸುಖಕ್ಕಂಜನಾ ಯಾತ್ರಿಕ!
ರನ್ನೂ ನಿಂದಿಸನಾ ಯಾತ್ರಿಕ! (ಕೃ)
-ತ್ರಿಮ, ಮೋಸ ಮಾಡನಾ ಯಾತ್ರಿಕ! (ಲೋ)
-ಕ ನಿರಂಜನಾದಿತ್ಯಾತ್ಮಕ!!!

ಇರುವಾಗ ಬೆರೆತಿರುವುದಿಲ್ಲ! [ಊ]

-ರು ಬಿಟ್ಟ ಮೇಲೆ ಬಾಯ್ಬಿಡುವರೆಲ್ಲ!
ವಾದ, ಭೇದಗಳಿಗಾಗೆಡೆಯಿಲ್ಲ!
ತಿ ಯಾರಿನ್ನೆಮಗೆಂಬರಾಗೆಲ್ಲ!
ಬೆರಗಾಗುವರಾರೀ ಮೂತಿಗೆಲ್ಲ? (ಖ)
-ರೆಯ ಪ್ರೇಮವಿದ್ದರಾಗುವುದೆಲ್ಲ!
ತಿಳಿದೊಲಿಸ ಬೇಕಾತ್ಮನನ್ನೆಲ್ಲ! (ಗು)
-ರು ಕೃಪೆಗಾಗಿ ಭಜಿಸಬೇಕೆಲ್ಲ! (ಆ)
-ವುದೂ ಅತುರದಿಂದಾಗುವುದಿಲ್ಲ! (ಕಾ)
-ದಿದ್ದಿಷ್ಟ ಸಿದ್ಧಿ ಪಡೆಯಬೇಕೆಲ್ಲ! (ತ)
-ಲ್ಲಣ, ನಿರಂಜನಾದಿತ್ಯಗೇನಿಲ್ಲ!!!

ರಂಗನಾಟ ನಿನಗೇಕೀಗ ಮಂಗಾ? (ರಂ)

-ಗನೊಲಿದಾಮೇಲಾಗಲಾಟ ಮಂಗಾ!
ನಾಟಕದಾಟ ಸುಖವಿಲ್ಲ ಮಂಗಾ! (ದಿ)
-ಟದ ದಾರಿಯನ್ನೀಗ ಹಿಡಿ ಮಂಗಾ!
ನಿನ್ನ ಚೇಷ್ಟೆಯ ಬಿಟ್ಟುಬಿಡು ಮಂಗಾ!
ಯ, ಭಯ, ಭಕ್ತಿ ಬಲಿಸು ಮಂಗಾ!
ಗೇಣು ಹೊಟ್ಟೆಗಾಗಿಲ್ಲ ಜನ್ಮ ಮಂಗಾ!
ಕೀಳಾಸೆಗಳನೆಲ್ಲ ಕೊಲ್ಲು ಮಂಗಾ!
ರ್ವ ಬಿಟ್ಟಾತ್ಮ ಧ್ಯಾನ ಮಾಡು ಮಂಗಾ!
ಮಂಗನಾಗ ರಂಗನಾಗುವ ಮಂಗಾ! (ರಂ)
-ಗಾ ನಿರಂಜನಾದಿತ್ಯಾತ್ಮ ಸಾರಂಗಾ!!!

ಬಯಸಿ ಬರಡಾಗದಿರಬೇಕು! (ಬ)

-ಯಸದೇ ಬಂದುದಕ್ಕೆ ತೃಪ್ತಿ ಬೇಕು! (ಹು)
-ಸಿಯಿಂದ್ರಿಯಾನಂದ ಸಾಕೆನ್ನಬೇಕು!
ಲ್ಲವರೊಡನಾಟವಿರಬೇಕು! (ಪ)
-ರರೊಡವೆಗಾಶಿಸದಿರಬೇಕು! (ಕೂ)
-ಡಾಟ ಗುರಿಗೆ ನೆರವಾಗಬೇಕು! (ಅ)
-ಗತ್ಯದಾತ್ಮ ಚಿಂತನೆ ಸದಾ ಬೇಕು!
ದಿನಕರನಂತೇಕನಿಷ್ಠೆ ಬೇಕು! (ವ)
-ರ ಗುರುಗೆ ಗುಲಾಮನಾಗಬೇಕು!
ಬೇಜಾರಾರಿಗೂ ಆಗದಿರಬೇಕು!
ಕುಲೇಶ ನಿರಂಜನಾದಿತ್ಯಾಗ್ಬೇಕು!!!

ಬಂದಿರದಾಗೇಕೆ ಬಂದಿಲ್ಲೆಂಬೆ? [ಬಂ]

-ದಿರುವಾಗದೇಕೆ ಹೋಗಿಲ್ಲೆಂಬೆ? (ತ)
-ರತರದೂಟ ಕೊಟ್ಟಾಗೇಕೆಂಬೆ! (ಸ)
-ದಾ ಒಂದೇ ಇಟ್ಟಾಗ ಸಾಕಾಯ್ತೆಂಬೆ!
ಗೇಣು ಹೊಟ್ಟೆಗಾಗೀ ಕಷ್ಟವೆಂಬೆ! (ಯಾ)
-ಕೆ ದೇವರ ದಯೆ ಬಂದಿಲ್ಲೆಂಬೆ!
ಬಂಧು, ಬಾಂಧವರು ದೇವರೆಂಬೆ!
ದಿನ, ರಾತ್ರಿ ಸಾಕೀ ಕಾಟಾವೆಂಬೆ! (ನಿ)
-ಲ್ಲೆಂದರೋಡೋಡೆಂದರೆ ನಿಲ್ಲೆಂಬೆ! (ಗೊಂ)
-ಬೆ, ನಿರಂಜನಾದಿತ್ಯನಲ್ಲೆಂಬೆ!!!

ದಾನಿಯಾಗು, ಕಲ್ಯಾಣಿಯಾಗು! [ಮೌ]

-ನಿಯಾಗು, ಯೋಗೇಶ್ವರಿಯಾಗು! (ಕಾ)
-ಯಾಭಿಮಾನರಹಿತೆಯಾಗು!
ಗುರು ಶಿವ ಸ್ವರೂಪಿಯಾಗು! (ಅ)
-ಕಳಂಕಾತ್ಮ ಕಾಮಾಕ್ಷಿಯಾಗು! (ಬಾ)
-ಲ್ಯಾದ್ಯವಸ್ಥೆಗೆ ಸಾಕ್ಷಿಯಾಗು! (ಪ್ರಾ)
-ಣಿ ಕೋಟಿಗೆಲ್ಲಾಧಾರಿಯಾಗು! (ಪ್ರಿ)
-ಯಾ ಪ್ರಿಯವಿಲ್ಲದಬ್ಬೆಯಾಗು! (ಆ)
-ಗು, ನಿರಂಜನಾದಿತ್ಯಾತ್ಮಾಗು!!!

ಸ್ವರೂಪ ಸಿದ್ಧಿಗೆ ಭಾವಾತೀತ ಧ್ಯಾನ! [ಸ್ವ]

-ರೂಪ ಸ್ಥಿತನಿಗಿಲ್ಲ ಮಾನಾವಮಾನ!
ರ ಪೀಡೆ ತಪ್ಪಿ ಆಗ ಸಮಾಧಾನ!
ಸಿರಿ ಮದಾದ್ಯಷ್ಟಾ ಮದದಂತರ್ಧಾನ! (ವೃ)
-ದ್ಧಿ, ಕ್ಷಯ, ಭಯವೆಲ್ಲಾಗ ನಿರ್ಮೂಲನ! (ಬ)
-ಗೆ ಬಗೆಯ ಭೋಗಕ್ಕಿಲ್ಲಾಗಭಿಮಾನ!
ಭಾರ್ಯಾ, ಭರ್ತೃಗಳೆಲ್ಲಾ ದೇವ ಸಮಾನ!
ವಾದ, ಭೇದಾದಿಗಳಾಗ ಪಲಾಯನ! (ಜಾ)
-ತೀಯ ಕಲಹಕ್ಕಾಗ ಉಪಶಮನ!
ನ್ನದೀ ವಿಶ್ವವೆಂಬಾನಂದ ಜೀವನ!
ಧ್ಯಾನವಿದರಿಂದ ಬಂಧ ವಿಮೋಚನ! [ಪಾ]
-ನ, ನಿರಂಜನಾದಿತ್ಯಾನಂದ ಪಾವನ!!!

ಪತಿ ಶ್ರೀರಾಮನಾದರೇನಾಯ್ತು? [ಸ]

-ತಿ ಪ್ರಾರಬ್ಧ ಭೋಗಿಸಬೇಕಾಯ್ತು!
ಶ್ರೀರಾಮ ಪ್ರೇಮ ಸುಸ್ಥಿರವಾಯ್ತು!
ರಾವಣನಿಗೂ ಭಯವುಂಟಾಯ್ತು!
ರ್ಕಟೇಶನ ದರ್ಶನವಾಯ್ತು!
ನಾಮ ಮಹಿಮೆಯ ಅರಿವಾಯ್ತು!
ಯೆ ರಾಮನದವಳಿಗಾಯ್ತು! (ಈ)
-ರೇಳು ಲೋಕಕ್ಕುಪಕಾರವಾಯ್ತು!
ನಾಸ್ತಿಕ ಭಾವದ ನಾಶವಾಯ್ತು! (ಆ)
-ಯ್ತು, ನಿರಂಜನಾದಿತ್ಯ ತಾನಾಯ್ತು!!!

ಅನ್ನದಾನಾನಂದಾ ಶ್ರಿಕೃಷ್ಣ! [ತ]

-ನ್ನವರೆಲ್ಲರೆಂಬವಾ ಕೃಷ್ಣ!(ಉ)
-ದಾರ ಗುಣ ಸಂಪನ್ನಾ ಕೃಷ್ಣ! (ಅ)
-ನಾದರವಿಲ್ಲವದವಾ ಕೃಷ್ಣ!
ನಂದ ಕಂದ ಗೋವಿಂದಾ ಕೃಷ್ಣ!
ದಾಸರ ದಾಸಾ ರಾಧಾ ಕೃಷ್ಣ!
ಶ್ರೀಹರಿ ಸ್ವರೂಪಾ ಶ್ರೀ ಕೃಷ್ಣ!
ಕೃಪಾಕರಾ ಗೋಪಾಲ ಕೃಷ್ಣ! (ಕೃ)
-ಷ್ಣ, ನಿರಂಜನಾದಿತ್ಯಾ ಕೃಷ್ಣ!!!

ತೀರ್ಥಸ್ನಾನ ಕಾರ್ಯಕ್ರಮವಿಡ್ಲಿ! [ಅ]

-ರ್ಥವರಿತು ಮಾಳ್ಪ ನೇಮವಿಡ್ಲಿ!
ಸ್ನಾನ ಪಾಪನಾಶನವೆಂದಿಡ್ಲಿ!
ರ, ನಾರಿ, ಭೇದವಿಲ್ಲದಿಡ್ಲಿ!
ಕಾವೇರಿ ಮಹಾತ್ಮೆಯರಿತಿಡ್ಲಿ (ಆ)
-ರ್ಯ ಋಷಿ ಸಮ್ಮತವಿದೆಂದಿಡ್ಲಿ! (ಚ)
-ಕ್ರ ಪಾಣಿಗಿದಾನಂದವೆಂದಿಡ್ಲಿ!
ನಶ್ಯುದ್ಧಿಗಿದು ಬೇಕೆಂದಿಡ್ಲಿ!
ವಿದ್ಯಾ ಬುದ್ಧಿ ಸಿದ್ಧಿಗಾಗಿದಿಡ್ಲಿ! (ಇ)
-ಡ್ಲಿ ನಿರಂಜನಾದಿತ್ಯಗಾಗಿಡ್ಲಿ!!!

ಅನ್ಯರನುಷ್ಟಾನಕ್ಕಡ್ಡಿ ಮಾಡಬೇಡ! [ಮಾ]

-ನ್ಯವಾದ ನಿನ್ನ ದಾರಿ ನೀ ಬಿಡಬೇಡ! (ವ)
-ರ ಗುರುವಿನಾಜ್ಞೆಯುಲ್ಲಂಘಿಸಬೇಡ! (ಅ)
-ನು ದಿನದ ಸೇವೆಗನಾಸಕ್ತಿ ಬೇಡ! (ಶಿ)
-ಷ್ಟಾಚಾರವನ್ನುಪೇಕ್ಷಿಸಿ ಕೆಡಬೇಡ!
ಶ್ವರ ಸುಖಕ್ಕಪೇಕ್ಷೆ ಪಡಬೇಡ! (ಅ)
-ಕ್ಕ ತಮ್ಮಂದಿರೆಂಬಕ್ಕರೆ ಬಿಡಬೇಡ! (ದು)
-ಡ್ಡಿಗಾಗನ್ಯಾಯವಾಗಿರೂ ಮಾಡಬೇಡ!
ಮಾತಾಡಿದಂತೆ ನಡೆಯದಿರಬೇಡ! (ಒ)
-ಡನಾಟ ದುರ್ಜನರದು ಮಾಡಬೇಡ!
ಬೇಕಾಗಿರುವಾತ್ಮಧ್ಯಾನ ಬಿಡಬೇಡ! (ಮೃ)
-ಡ ನಿರಂಜನಾದಿತ್ಯ ಸಂದೇಹ ಬೇಡ!!!

ಸ್ತುತಿಯಾಸೆಯಿಲ್ಲದವರಾರು?

ತಿಳಿದಾತ್ಮ ಜ್ಞಾನಿ ಮಾನವರು! (ಮಾ)
-ಯಾ ಪಾಶ ಹರಿದೊಗೆದವರು! (ಆ)
-ಸೆಗಳಿಂದ ಹೊರಗಾದವರು! (ಭಾ)
-ಯಿ, ಗುಹ್ಯಗಳ ಜೈಸಿದವರು! (ಎ)
-ಲ್ಲವೊಬ್ಬಾತ್ಮನೆಂದರಿತವರು! (ಮ)
-ದ, ಮತ್ಸರಗಳಿಲ್ಲದವರು!
ರ ಗುರುಪಾದ ಸೇವಕರು!
ರಾಮ ಧ್ಯಾನ ಸದಾ ಮಾಳ್ಪವರು! (ಗು)
-ರು ನಿರಂಜನಾದಿತ್ಯಾಪ್ತರು!!!

ನಿನ್ನಾನಂದ ನಿನ್ನ ಮನೆಯಲ್ಲಿ! [ಅ]

-ನ್ನಾಹಾರಕ್ಕೆ ಕಡಿಮೆಯಿಲ್ಲಲ್ಲಿ!
ನಂದ ಕಂದ ವಾಸವಾಗಿರ್ಪಲ್ಲಿ!
ರ್ಶನ ಸುಖನುಭವಿಸಲ್ಲಿ!
ನಿಶ್ಚಲ ಭಕ್ತಿ ಸೇವೆ ಮಾಡಲ್ಲಿ! (ಬ)
-ನ್ನ ಪಡಬೇಡ ಓಡಿ ಎಲ್ಲೆಲ್ಲಿ!
ಹಿಮನಾಗು ಇದ್ದೆಡೆಯಲ್ಲಿ! (ಮ)
-ನೆಯಾಗ ಮಂದಿರವಾಗ್ವುದಲ್ಲಿ! (ಜ)
-ಯ ಘೋಷ ಮಾಳಗುವುದಾಗಲ್ಲಿ! (ಎ)
-ಲ್ಲಿ? ನಿರಂಜನಾದಿತ್ಯನಿರ್ಪಲ್ಲಿ!!!

ಬಂಧವೋ, ಮೋಕ್ಷವೋ ನಾ ಕಾಣೆ!

ರ್ಮವೋ, ಕರ್ಮವೋ ನಾ ಕಾಣೆ! (ನೋ)
-ವೋ, ಸಾವೋ ಯಾವುದೂ ನಾ ಕಾಣೆ!
ಮೋಹವೋ, ಸ್ನೇಹವೋ ನಾ ಕಾಣೆ!
ಕ್ಷಯವೋ, ಜಯವೋ ನಾ ಕಾಣೆ! (ಮಾ)
-ವೋ, ಬೇವೋ ಆವುದೂ ನಾ ಕಾಣೆ!
ನಾದವೋ, ಬಿಂದುವೋ ನಾ ಕಾಣೆ!
ಕಾಮನೋ, ರಾಮನೋ ನಾ ಕಾಣೆ! (ಹೊ)
-ಣೆ ನಿರಂಜನಾದಿತ್ಯ ಕಾಣೆ!!!

ಹೋದೆ, ಬಂದೆ, ಬೆಂದೆ, ನಾ ತಂದೆ! [ಕಾ]

-ದೆ ನಿನಗಾಗಲ್ಲಿಲ್ಲಿ ತಂದೆ!
ಬಂಧನವೇ ಹೆಚ್ಚಾಯ್ತು ತಂದೆ! (ಎ)
-ದೆಗೆಟ್ಟಾಯ್ತು ನಿರಾಶೆ ತಂದೆ!
ಬೆಂಬಲ ನೀಡೀಗ ಬಾ ತಂದೆ! (ಬಂ)
-ದೆನ್ನಿಷ್ಟ ಸಿದ್ಧಿ ಮಾಡು ತಂದೆ!
ನಾನಿನ್ನು ತಾಳಲಾರೆ ತಂದೆ!
ತಂತಿ ಕಿತ್ತರೇನಿದೆ ತಂದೆ? (ನೊಂ)
-ದೆ ನಿರಂಜನಾದಿತ್ಯ ತಂದೆ!!!

ಶೃಂಗೇರಿ ನೋಡುವನು ನಿತ್ಯಾ ಸಾರಂಗ! (ಯೋ)

-ಗೇಶ, ತ್ಯಾಗೇಶ ಮುರುಗೇಶಾ ಸಾರಂಗ! (ಹ)
-ರಿ ಹರ ಬ್ರಹ್ಮ ಸ್ವರೂಪಾತ್ಮಾ ಸಾರಂಗ!
ನೋಟ, ಓಟ, ನಾಟಕಲೋಲಾ ಸಾರಂಗ! (ಉ)
-ಡುಗೊರೆ ಲೋಕಕ್ಕೇ ಬೆಳಕಾ ಸಾರಂಗ!
ನ ಗಿರಿ ಗುಹಾಭಿಮಾನೀ ಸಾರಂಗ! (ಅ)
-ನುದಿನನುಷ್ಟಾನುಕಾದರ್ಶಾ ಸಾರಂಗ!
ನಿತ್ಯ ನಿರ್ಮಲ, ನಿಜಾನಂದಾ ಸಾರಂಗ! (ಕಾ)
-ತ್ಯಾಯಿನಿನಯನಾಪ್ತ ಮಿತ್ರಾ ಸಾರಂಗ!
ಸಾಧು, ಸಜ್ಜನರಭಿಮಾನೀ ಸಾರಂಗ!
ರಂಗನಾಥನಿಗೆ ಸತ್ಸಂಗಾ ಸಾರಂಗ! (ಜ)
-ಗನ್ನಾಥ ನಿರಂಜನಾದಿತ್ಯಾ ಸಾರಂಗ!!!

ನಿನಗಿರಬೇಕು ನನ್ನ ಸಂಗ!

ನಗಿರಬೇಕೆಲ್ಲರ ಸಂಗ!
ಗಿರಿಜೆಗೆ ಗಿರೀಶನ ಸಂಗ! (ಪ)
-ರಮೇಶ್ವರನಿಗೆ ಸರ್ವ ಸಂಗ!
ಬೇಕೆಲ್ಲರಿಗೆ ಸದಾ ಸತ್ಸಂಗ! (ವ್ಯಾ)
-ಕುಲಕ್ಕೆಲ್ಲಾ ಕಾರಣ ದುಸ್ಸಂಗ! (ಮ)
-ನಸಿಗಶಾಂತಿಂದ್ರಿಯದ ಸಂಗ! (ಉ)
-ನ್ನತದಾನಂದಕ್ಕಾತ್ಮನ ಸಂಗ!
ಸಂಶಯಪಡದೆಮಾಡೀ ಸಂಗ! (ಸಂ)
-ಗ, ನಿರಂಜನಾದಿತ್ಯಾತ್ಮ ಲಿಂಗ!!!

ಬಗೆ ಹರಿದಾಗಾರಾಮಪ್ಪಾ! (ಬ)

-ಗೆದಿದದಭ್ಯಾಸ ಮಾಡಪ್ಪಾ!
ಡುಹಾಸೆಗಳ ಬಿಡಪ್ಪಾ! (ಹ)
-ರಿ ನಾಮ ಸದಾ ಜಪಿಸಪ್ಪಾ!
ದಾರಿಯಿದು ಸುಲಭವಪ್ಪಾ! (ಯೋ)
-ಗಾನಂದ ಸಿದ್ಧಿಸುವುದಪ್ಪಾ!
ರಾಮನಾಮ ತಾರಕವಪ್ಪಾ!
ರ್ಕಟನೂ ಮಹಾತ್ಮಾದಪ್ಪಾ! (ಅ)
-ಪ್ಪಾ ನಿರಂಜನಾದಿತ್ಯಾತ್ಮಪ್ಪಾ!!!

ವಿಶ್ವಾಸ ಕೆಡಿಸಬೇಡಪ್ಪಾ!

ಶ್ವಾನದ ಬದುಕು ಸಾಕಪ್ಪಾ!
ತ್ಯದ ನೆಲೆಯ ತೋರಪ್ಪಾ!
ಕೆಡುಕು ಬುದ್ಧಿಯ ಕೊಲ್ಲಪ್ಪಾ! (ಅ)
-ಡಿಗೆರಗುವೆನು ನಾನಪ್ಪಾ!
ರ್ವ ಸಾಕ್ಷಿ ಗುರು ನೀನಪ್ಪಾ!
ಬೇರೆ ಗತಿಯೆನಗಿಲ್ಲಪ್ಪಾ! (ತ)
-ಡಬಡಿಸುತಿದೆ ಜೀವಪ್ಪಾ! (ಅ)
-ಪ್ಪಾ ನಿರಂಜನಾದಿತ್ಯಾತ್ಮಪ್ಪಾ!!!

ಹೊಲಸು ಹೊರಿಸಿ ಕುಲಗೆಡಿಸಬೇಡ! (ಬಾ)

-ಲ ನಿನ್ನವನೆಂಬಭಿಮಾನ ಬಿಡಬೇಡ!
ಸುಖದ ಸತ್ಯಾರ್ಥಕ್ಕೆ ಚ್ಯುತಿ ತರಬೇಡ!
ಹೊಣೆಗಾರ ನಿನೆಂಬುದನಲ್ಲೆನ ಬೇಡ!
ರಿಸಿ, ಮುನಿ ಮಾತನ್ನನೃತ ಮಾಡಬೇಡ! (ಘಾ)
-ಸಿಯಾದಾತ್ಮಕ್ಕೆ ನರಸುಕ್ಕನಿಕ್ಕಬೇಡ!
ಕುಕಲ್ಪನೆಗವಕಾಶವನ್ನೀಯಬೇಡ!
ಕ್ಷ್ಯ ನಿನ್ನಿಂದೆಂದಿಗೂ ತಪ್ಪಿಸಬೇಡ! (ಬ)
-ಗೆ ಬಗೆಯಾಸೆಗಳಿಂದ ಕೆಡಿಸಬೇಡ! (ನು)
-ಡಿ, ನಡೆ ಶುದ್ಧವಾಗಿರಿಸದಿರಬೇಡ!
ದಾ ನಿನ್ನ ಧ್ಯಾನ ಮಾಡಿಸದಿರಬೇಡ!
ಬೇನೆ, ಬೇಸರವಿತ್ತು ಬೆದರಿಸಬೇಡ! (ಪೊ)
-ಡಮಡುವ ನಿರಂಜನಾದಿತ್ಯಗೀ ಮೂಢ!!!

ಆದಿ ಗುರು ಕಾಣಯ್ಯ ನೀನು! (ಆ)

-ದಿ ಮಧ್ಯಾಂತ ರಹಿತ ನೀನು!
ಗುಣಾತೀತಾತ್ಮಾರಾಮ ನೀನು! (ವ)
-ರುಣೇಂದ್ರಾದಿಗಳಾತ್ಮ ನೀನು!
ಕಾಮಹರ ಗಿರೀಶ ನೀನು! (ತೃ)
-ಣ ಕಾಷ್ಠಗಳಲ್ಲೆಲ್ಲಾ ನೀನು! (ಅ)
-ಯ್ಯ ಲೋಕಗಳಿಗೆಲ್ಲಾ ನೀನು! (ಪು)
-ನೀತ ದತ್ತಾತ್ರೇಯಾತ್ಮ ನೀನು! (ನೀ)
-ನು ನಿರಂಜನಾದಿತ್ಯ ಭಾನು!!!

ಯಾವಾಗೇನಿಕ್ಕ ಬೇಕೆಂತರಿತಿಹಳಮ್ಮ!

ವಾಸುದೇವ ಶಿಶುವಿಗೆ ಹಾಲಿತ್ತಳಮ್ಮ! (ಯೋ)
-ಗೇಶನಾದಾಗಿಷ್ಟ ಸೇವೆ ಮಾಡಿದಳಮ್ಮ!
ನಿಕಟ ಪ್ರೇಮಕ್ಕವಕಾಶ ಕೊಟ್ಟಳಮ್ಮ! (ರ)
-ಕ್ಕಸ ವಿನಾಶಕ್ಕೆ ಶಕ್ತಿ ನೀಡಿದಳಮ್ಮ!
ಬೇಡಿದವರಿಷ್ಟಾರ್ಥ ಕೊಡಿಸಿದಳಮ್ಮ!
ಕೆಂಗಣ್ಣನಲ್ಲಿ ಮೈತ್ರಿ ಕಲ್ಪಿಸಿದಳಮ್ಮ!
ತ್ವ ಗೀತೋಪದೇಶ ಮಾಡಿಸಿದಳಮ್ಮ!
ರಿಪುಗಳ ಕೆಡಹಿ ಕುಣಿಸಿದಳಮ್ಮ! (ಪ)
-ತಿ ಸತ್ಯಭಾಮಾದೇವಿಗೆನಿಸಿದಳಮ್ಮ!
ರಿಸಿದಳು ರುಕ್ಮಿಣಿಯ ಕಷ್ಟವಮ್ಮ! (ಒ)
-ಳ ಹೊರಗೆಲ್ಲಾತ್ಮಾನಂದ ತುಂಬಿದಳಮ್ಮ! (ಬೊ)
-ಮ್ಮ ನಿರಂಜನಾದಿತ್ಯಾನಂದ ನಿರತಮ್ಮ!!!

ಮೂದಲಿಸಿ ನಿನಗೇನು ಸುಖವಮ್ಮಾ?

ಯಾಮಯಿ ನೀನಾಗಬಾರದೇನಮ್ಮಾ? (ಕ)
-ಲಿಸ ಬೇಕೆಲ್ಲಾ ವಿದ್ಯಾ ಬುದ್ಧಿ ನೀನಮ್ಮಾ!
-ಸಿಟ್ಟು ಮಾಡಿ ಕೆಟ್ಟವಳಾಗಬೇಡಮ್ಮಾ!
ನಿನಗೆಲ್ಲಾ ಮಕ್ಕಳೊಂದೇ ಸಮವಮ್ಮಾ!
ನ್ನಲ್ಲಿಷ್ಟು ಉದಾಸೀನವದೇಕಮ್ಮಾ? (ಈ)
-ಗೇನು ಹೆಳಬೇಕೋ ಹೇಳಿ ಮಾಡಿಸಮ್ಮಾ! (ತ)
-ನು, ಮನ, ಪ್ರಾಣಗಳೆಲ್ಲಾ ನಿನ್ನದಮ್ಮಾ!
ಸುಪುತ್ರನಾಗಿ ಜನ್ಮ ಮುಗಿಯಲಮ್ಮಾ! (ದುಃ)
-ಖವೆಷ್ಟೆಂತ ಸಹಿಸಿ ಬದುಕಲಮ್ಮಾ?
ಸ್ತ್ರಾಭರಣದಾಸೆ ನನಗಿಲ್ಲಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಾನಂದ ನೀನಮ್ಮಾ!!!

ಕಂದನಾಕ್ರಂದನ ಕೇಳದೇನಮ್ಮಾ?

ತ್ತೋತ್ಪತ್ತಿಗಾರು ಕಾರಣರಮ್ಮಾ? (ಅ)
-ನಾದರವಳಿಗುಚಿತವೇನಮ್ಮಾ? (ಸಂ)
-ಕ್ರಂದನಾದಿಗಳೆಲ್ಲಾ ಆಪ್ತರಮ್ಮಾ! (ಆ)
-ದರದೋರಿ ಉಣಿಸು ಬಾ ಬೇಗಮ್ಮಾ! (ಕ)
-ನಸು, ನೆನಸಿನಲ್ಲೆಲ್ಲಾ ನೀನಮ್ಮಾ!
ಕೇಳುವರಾರು ನಿನ್ನ ಹೊರತಮ್ಮಾ? (ತೊ)
-ಳಲಿ, ಬಳಲಿ, ಬೆಂಡಾಗಿಹೆನಮ್ಮಾ!
ದೇವಿ ನೀನೀಗ ಪ್ರಸನ್ನಳಾಗಮ್ಮಾ! (ತ)
-ನಯನನ್ನೆತ್ತಿ ಮುದ್ದಾಡು ಬಾರಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಾನಸೂಯಮ್ಮಾ!!!

ಮನಕಾನಂದ ಮನೆಯ ಬಣ್ಣ!

ಯನಕ್ಕಿಷ್ಟ ಹಸುರು ಬಣ್ಣ!
ಕಾಲಾಧೀನವೆಲ್ಲಾ ವಿಧ ಬಣ್ಣ!
ನಂದಕಂದನಂಗಾಕಾಶ ಬಣ್ಣ!
ತ್ತಗುರುದೇವ ತಾಂಬ್ರ ಬಣ್ಣ!
ಲಹರ ಅರಿಶಿನ ಬಣ್ಣ!
ನೆರೆ ಪರಿಣಾಮಕಾರೀ ಬಣ್ಣ!
ಮಾಭ್ಯಾಸದಿಂದ ಶುದ್ಧ ಬಣ್ಣ!
ರಲಿ ಚಿರ ಸುಖಕ್ಕೀ ಬಣ್ಣ! (ಅ)
-ಣ್ಣ ನಿರಂಜನಾದಿತ್ಯ “ದ್ರಾಂ” ಬಣ್ಣ!!!

ನಿದ್ರಿಸಿದಾಗ ಎಬ್ಬಿಸಬೇಡ! [ಇಂ]

-ದ್ರಿಯಗಳಿಗೆ ಆಗೇನೂ ಬೇಡ! (ಉ)
ಸಿರಾಟಕ್ಕೆ ಅಡ್ಡಿ ತರಬೇಡ! (ಸ)
-ದಾಶಿವನಂತಿರದಿರಬೇಡ!
ಡಿ ಬಿಡಿ ಮಾಡಿ ಕೆಡಬೇಡ!
ದ್ದರೂ ಗದ್ದಲ ಮಾಡಬೇಡ! (ಕೊ)
-ಬ್ಬಿ ಮಿಥ್ಯ ಸುಖಕ್ಕಾಶಿಸಬೇಡ!
ತ್ಸಂಗಾತ್ಮಧ್ಯಾನ ಬಿಡಬೇಡ!
ಬೇರೆ ಯಾವುದನ್ನೂ ನಂಬಬೇಡ! (ಬಿ)
-ಡ, ನಿರಂಜನಾದಿತ್ಯ ಧೃಢ!!!

ದೋಸೆ ಹಾಕಿ ಕೊಡಲೇನು? [ಆ]

-ಸೆ ನನಗಿರುವುದೇನು? (ಮ)
-ಹಾ ಯೋಗಿ ನಾನಲ್ಲವೇನು? (ಹಾ)
-ಕಿ ದಣಿಯ ಬೇಡ ನೀನು!
ಕೊಡು ತನು, ಮನ ನೀನು! (ಮಾ)
-ಡ ಬೇಕೆನ್ನ ಧ್ಯಾನ ನೀನು!
ಲೇಸದರಿಂದಲ್ಲವೇನು? (ಭಾ)
-ನು ನಿರಂಜನಾದಿತ್ಯಾನು!!!

ಅನ್ಯಾವಲಂಬನದಿಂದತೃಪ್ತಿ! [ಸ]

-ನ್ಯಾಸ ಧರ್ಮದಿಂದ ಆತ್ಮತೃಪ್ತಿ! (ಅ)
-ವರಿವರ ಹಾರೈಸಲತೃಪ್ತಿ!
ಲಂಕೇಶ್ವರಾರಿಯಾಶ್ರಯತೃಪ್ತಿ!
ಗೆ ಬಗೆಯಾಸೆಯಿಂದತೃಪ್ತಿ! (ಅ)
-ನವರತ ಆತ್ಮಾನಂದ ತೃಪ್ತಿ! (ಅಂ)
-ದಿಂದು ಮುಂದೇನೆಂದಿದ್ದರತೃಪ್ತಿ!
-ದತ್ತನಿಷ್ಟವೆಂದರೆಲ್ಲಾ ತೃಪ್ತಿ! (ಭ್ರಾ)
-ತೃ ಪ್ರೇಮವಿಲ್ಲದಿದ್ದರತೃಪ್ತಿ! (ತೃ)
-ಪ್ತಿ, ಶ್ರೀ ನಿರಂಜನಾದಿತ್ಯ ಪ್ರಾಪ್ತಿ!!!

ನಿಮ್ಮ ಮನೆಗಾವ ಬಣ್ಣ ಸ್ವಾಮಿ? [ನ]

-ಮ್ಮವಳಿಷ್ಟ ರಾಮ ಬಣ್ಣ ಸ್ವಾಮಿ!
ಕ್ಕಳಿಗೂ ಇಷ್ಟಾ ಬಣ್ಣ ಸ್ವಾಮಿ!
ನೆರೆ ಶಾಂತಿಪ್ರದಾ ಬಣ್ಣ ಸ್ವಾಮಿ!
ಗಾಲಿ ಮಳೆಗೊಳ್ಳೇ ಬಣ್ಣ ಸ್ವಾಮಿ!
ರ ಗುರುಕೃಪಾ ಬಣ್ಣ ಸ್ವಾಮಿ!
ಹು ಆಕರ್ಷಣಾ ಬಣ್ಣ ಸ್ವಾಮಿ! (ಮ)
-ಣ್ಣದಕ್ಕಂಟದಿರ್ಪಾ ಬಣ್ಣ ಸ್ವಾಮಿ!
-ಸ್ವಾಮಿನಾಮ ಪ್ರೇಮಾ ಬಣ್ಣ ಸ್ವಾಮಿ! (ಪ್ರೇ)
-ಮಿ ನಿರಂಜನಾದಿತ್ಯದೇ ಸ್ವಾಮಿ!!!

ಸಹಸ್ರ ಕುಸುಮಾರ್ಚನೆಯಾಯ್ತು ಶಿವಪಾದಕ್ಕೆ!

ಳದಿ ನೀಲಿ ಕೆಂಪು ಹೂಗಳಾ ಶಿವಪಾದಕ್ಕೆ!
ಸ್ರವಿಸಿದ್ದಾಯ್ತೆಲ್ಲಾ ತೀರ್ಥಗಳಾ ಶಿವಪಾದಕ್ಕೆ!
ಕುಣಿ ಕುಣಿದು ಬಿದ್ದಾಯ್ತೂ ಗುರು ಶಿವಪಾದಕ್ಕೆ!
ಸುಖ, ದುಃಖವನ್ನೊಪಿಸಿದ್ದಾಯ್ತೂ ಶಿವಪಾದಕ್ಕೆ!
ಮಾನಾಪಮಾನ ಬಿಟ್ಟು ಕೊಟ್ಟಾಯ್ತಾ ಶಿವಪಾದಕ್ಕೆ! (ಅ)
-ರ್ಚನಾದ್ಯೆಲ್ಲಾ ವಿಧ ಪೂಜೆಯಾಯ್ತಾ ಶಿವಪಾದಕ್ಕೆ! (ಮ)
-ನೆ, ಮಠವೆಲ್ಲಾ ಅರ್ಪಿಸಿದ್ದಾಯ್ತಾ ಶಿವಪಾದಕ್ಕೆ!
ಯಾವುದೂ ನಿನ್ನಿಷ್ಟವೆಂದಿದ್ದಾಯ್ತಾ ಶಿವಪಾದಕ್ಕೆ! (ಆ)
-ಯ್ತು, ಮಾಡಿಸಿದ್ದೆಲ್ಲಾ ಮಾಡಿದ್ದಾಯ್ತಾ ಶಿವಪಾದಕ್ಕೆ!
ಶಿಶುವಿದು ನಿನ್ನದೆಂದದ್ದಾಯ್ತಾ ಶಿವಪಾದಕ್ಕೆ!
ರಗುರು ನೀನೆಲ್ಲವೆಂದಾಯ್ತಾ ಶಿವಪಾದಕ್ಕೆ!
ಪಾರು ಮಾಡುವಾತ ನೀನೆಂದಾಯ್ತಾ ಶಿವಪಾದಕ್ಕೆ!
ಯೆಯಿನ್ನೂ ಬಾರದೇಕೆಂದಾಯ್ತಾ ಶಿವಪಾದಕ್ಕೆ! (ಅ)
-ಕ್ಕೆ ನಿರಂಜನಾದಿತ್ಯನಿಂದ ಕಲ್ಯಾಣ ಜಗಕ್ಕೆ!!!

ಗುರುದೇವನ ಪ್ರೀತಿಯಲ್ಲೇರು ಪೇರಿಲ್ಲ! (ಕು)

-ರುಡು ಅಜ್ಞಾನಿಗಳಿಗಿದರಿವಾಗಿಲ್ಲ!
ದೇಶ ಕಾಲಾನುಸಾರವನ ಕಾರ್ಯವೆಲ್ಲ! (ಅ)
-ವರಿವರ ಮಾತವ ಕೇಳುವವನಲ್ಲ!
ಶ್ವರದಾನಂದಕ್ಕೆವನಂಟಿಕೊಂಡಿಲ್ಲ!
ಪ್ರೀತಿಯವನದು ಆತ್ಮರಾಮನೆಂದೆಲ್ಲ!
ತಿರಸ್ಕಾರ ಮನೋಭಾವ ಅವನಿಗಿಲ್ಲ! (ಮಾ)
-ಯ, ಮಂತ್ರ, ಯಂತ್ರ ಮಾಡುವಾತನವನಲ್ಲ! (ಉ)
-ಲ್ಲೇಖಿಸಿದಂತೆ ನಡೆಯದಿರುವುದಿಲ್ಲ!
ರುಚಿಯರುಚಿಯವನೆಣಿಸುದಿಲ್ಲ!
ಪೇಚಾಡಿಸಿ ಯಾರನ್ನೂ ನೋಯಿಸುವುದಿಲ್ಲ! (ಅ)
-ರಿತೆಲ್ಲರ ಸೇವೆ ಮಾಡದಿರುವುದಿಲ್ಲ! (ಬ)
-ಲ್ಲ ನಿರಂಜನಾದಿತ್ಯಗನಾದರವಿಲ್ಲ!!!

ಮನಸಿನಂತೆ ಮಹಾದೇವ! (ನಿ)

-ನಗರಿಯಲ್ಲಾ ಗುರುದೇವ!
ಸಿದ್ಧ ನಿನ್ನುದ್ಧಾರಕ್ಕಾ ದೇವ!
ನಂಬು ನಿನ್ನವನೆಂದಾ ದೇವ! (ಮಾ)
-ತೆಯೂ, ಪಿತನೂ ಮಹಾದೇವ!
ಮಕಾರ ಸುಟ್ಟಾಗಾ ದೇವ!
ಹಾಡಿ, ಕೂಡಿ, ನೀನಾಗಾ ದೇವ!
ದೇಹ ಮೋಹ ಬಿಟ್ಟಾಗಾ ದೇವ! (ಕಾ)
-ವ ನಿರಂಜನಾದಿತ್ಯ ದೇವ!!!

ತೂತು ಮುಚ್ಚಿ ಬಣ್ಣ ಬಳಿಯಯ್ಯಾ! (ಮಾ)

-ತು ಮುಗಿಸಿ ಕೆಲಸ ಮಾಡಯ್ಯಾ!
ಮುನಿಸು ಬಿಟ್ಟು ಮುನಿಯಾಗಯ್ಯಾ! (ಮು)
-ಚ್ಚಿ ಬಾಯಿ ಸಚ್ಚರಿತನಾಗಯ್ಯಾ!
ಟ್ಟೆ ಬಿಚ್ಚಿ ಬಾವಿಗಿಳಿಯಯ್ಯಾ! (ಕ)
-ಣ್ಣ ತೆರೆದು ಉಣ್ಣ ಬಡಿಸಯ್ಯಾ!
ಲ ನೋಡಿ ಭಾರ ಹೊರಿಸಯ್ಯಾ! (ಕೇ)
-ಳಿ, ಹೇಳಿ, ವೇಳೆ ನಿರ್ಧರಿಸಯ್ಯಾ!
ಜ್ಞ ಮಾಡ್ಯಜ್ಞಾನ ಕಳೆಯಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾನಂದಯ್ಯಾ!!!

ಕಣ್ಣಿಗಾಯ್ತು ಹೆಣ್ಣು, ಮಣ್ಣು, ಹುಣ್ಣು! (ಹು)

-ಣ್ಣಿಮೆಯನರಿಯದೀಗಾ ಕಣ್ಣು! (ಕೂ)
-ಗಾಡ, ರೇಗಾಟಕ್ಕಾಸ್ಪದಾ ಹುಣ್ಣು! (ಆ)
-ಯ್ತು ಕೋಧೋದ್ರಿಕ್ತಾ ಎರಡೂ ಕಣ್ಣು!
ಹೆದರಿಸುವುದಮ್ಮನಾ ಹುಣ್ಣು! (ಮ)
-ಣ್ಣು ಇನ್ನೂ ಬೇಕೆನ್ನುವುದಾ ಕಣ್ಣು!
ಕ್ಕಳೆಲ್ಲರಿಗೂ ಭಯಾ ಹುಣ್ಣು! (ಉ)
-ಣ್ಣುವುದಕ್ಕೂ ಅಭ್ಯಂತರಾ ಕಣ್ಣು!
ಹುಳು ಬಿದ್ದರೆ ಮಾಯದಾ ಹುಣ್ಣು! (ಹು)
-ಣ್ಣು ನಿರಂಜನಾದಿತ್ಯಗಿಲ್ಲೆಣ್ಣು!!!

ನೇತ್ರೋನ್ಮೀಲನವಾದಾಗೆನ್ನ ದರ್ಶನ! (ಮಂ)

-ತ್ರೋಚ್ಣರಣೆಯೆಂಬುದೊಂದು ಸದ್ಭಾವನ! (ಉ)
-ನ್ಮೀಲನಕ್ಕಾಗಿರಬೇಕು ಜ್ಞಾನಾರ್ಜನ!
ಕ್ಷ್ಯ ಸಚ್ಚಿದಾನಂದಾರಾಮ ಪಾವನ!
ಶಿಸಬೇಕೆಲ್ಲಾ ಲೌಕಿಕ ವಾಸನ! (ನಿ)
-ವಾಸವಾಗಬೇಕಾರಾಮನಿಗೀ ಮನ! (ಸ)
-ದಾ ನಾಮಸ್ಮರಣೆಯಿದಕೆ ಸಾಧನ! (ಹೊ)
-ಗೆ ಹೋಗಲಿಕ್ಕಾಗಬೇಕಗ್ನಿಜ್ವಲನ! (ಉ)
-ನ್ನತಾದರ್ಶವಿದೇ ಸಾರ್ಥಕ ಜೀವನ!
ತ್ತ ಗುರುದೇವನದಿದೇ ಬೋಧನ! (ದ)
-ರ್ಶನಕ್ಕೆ ಪ್ರಾಮುಖ್ಯವನಾಜ್ಞಾ ಪಾಲನ!
ಮೋ ನಿರಂಜನಾದಿತ್ಯಾತ್ಮ ಚೇತನ!!!

ಮನಸು ಸರಿಪಡಿಸಿಕೊಳಬೇಕು! (ಅ)

-ನವರತದಕಾತ್ಮ ಚಿಂತನೆ ಬೇಕು!
ಸುಮ್ಮಗಲ್ಲಿಲ್ಲಿ ಸುತ್ತಾಡದಿರಬೇಕು!
ರ್ವವೂ ಗುರುಚಿತ್ತವೆಂದಿರಬೇಕು! (ಪ)
-ರಿಪರಿಯ ಯೋಚನೆಯ ಬಿಡಬೇಕು!
-ಪರರಲ್ಲಿ ತಪ್ಪೆಣಿಸದಿರಬೇಕು! (ದು)
-ಡಿಮೆಯಾತ್ಮ ಭಾವನೆಯಿಂದಾಗಬೇಕು! (ಪು)
-ಸಿ ಮಾತಿಗೆ ಕಿವಿಕೊಡದಿರಬೇಕು!
ಕೊಡುವಾತನೆಡೆ ಬಿಡದಿರಬೇಕು! (ಒ)
-ಳ, ಹೊರಗೆಲ್ಲಾ ಚೊಕ್ಕಟವಾಗಬೇಕು!
-ಬೇರೆಲ್ಲೂ ಹೋಗದಿಲ್ಲೇ ಸಾಧಿಸಬೇಕು! (ಬೇ)
-ಕು ನಿರಂಜನಾದಿತ್ಯಾಶೀರ್ವಾದ ಬೇಕು!!!

ನಿವೃತ್ತನಾದೆನಗೇನು ಗತಿ?

ವೃಥಾಲಾಪ ಬಿಟ್ಟರೆ ಸದ್ಗತಿ! (ಅ)
-ತ್ತ, ಇತ್ತ ಸುತ್ತಿದರಧೋಗತಿ!
ನಾಮ ಜಪದಿಂದುತ್ತಮ ಗತಿ! (ನಿಂ)
-ದೆ ಮಾಡಿದರನ್ಯರಧೋ ಗತಿ! (ಧ)
-ನ ದಾಸೆ ಸತ್ತರುತ್ತಮ ಗತಿ! (ಭೋ)
-ಗೇಚ್ಛೆಯಿಂದಾಗುವುದಧೋ ಗತಿ! (ಹ)
-ನುಮನಂತಾದರುತ್ತಮ ಗತಿ! (ಸಂ)
-ಗನಂಗನದಾದರಧೋ ಗತಿ! (ಗ)
-ತಿ, ನಿರಂಜನಾದಿತ್ಯಾತ್ಮ ಜ್ಯೋತಿ!!!

ಗುರುವಿನಾಶ್ರಮ ನಿನ್ನ ಮನೆಯಮ್ಮಾ! (ಇ)

-ರುತ ಮೌನದಿಂದ ಸೇವೆ ಸಲ್ಲಿಸಮ್ಮಾ!
ವಿರಕ್ತಿ ಭಾವ ಸತತವಿರಲಮ್ಮಾ!
ನಾಮ ಜಪ ಎಡೆಬಿಡದಾಗಲಮ್ಮಾ!
ಶ್ರಮದ ಪರಿಹಾರವಿದರಿಂದಮ್ಮಾ!
ಕ್ಕಳ ಲಭ್ಯದಂತವರಿರಲ್ಲಮ್ಮಾ!
ನಿನ್ನ ಗುರಿ ನೀನು ಸಾಧಿಸಬೇಕಮ್ಮಾ! (ಅ)
-ನ್ನದಾತ ಪತಿಗೆದುರಾಡಬೇಡಮ್ಮಾ!
ಮಕಾರ ಬಿಟ್ಟೆಲ್ಲಾ ಮಾಡುತಿರಮ್ಮಾ!
ನೆಮ್ಮದಿಗೆ ಬೇರಾವ ದಾರಿಯಿಲ್ಲಮ್ಮಾ! (ಭ)
-ಯ, ಭಕ್ತಿ, ಗುರುಚರಣದಲ್ಲಿಡಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾನಂದವಿದಮ್ಮಾ!!!

ಪರಮಗುರು ವಿಮಲ! (ಭಾ)

-ರತ ಕಥನಾನುಕೂಲ!
ಧುರ ಭಾಷಾ ವಿಶಾಲ!
ಗುರು ಗೀತಾನಂದ ಲೋಲ! (ಗು)
-ರು ಕುಲ ನಿರ್ಮೂಲಾ ಕಾಲ!
ವಿರಾಡ್ರೂಪಾ ವನಮಾಲ!
ನಮೋಹನಾ ಗೋಪಾಲ! (ನೀ)
-ಲ ನಿರಂಜನಾದಿತ್ಯಲ್ಲ!!!

ವಿಮಲ ವಚನ ಭಾರತ!

ನಕತ್ಯಾನಂದಾ ಭಾರತ! (ಮೂ)
-ಲದಲ್ಲೊಂದಾಗಿರ್ಪಾ ಭಾರತ!
ರ ಗುರು ಕೃಪಾ ಭಾರತ!
ರಾಚರಾತ್ಮಾರ್ಥಾ ಭಾರತ!
ರನಿಷ್ಟಪ್ರದಾ ಭಾರತ!
ಭಾರತದಾದರ್ಶಾ ಭಾರತ! (ಅ)
-ರವನರುಹುವುದಾ ಭಾರತ! (ಕ)
-ತ ನಿರಂಜನಾದಿತ್ಯ ಪಿತ!!!

ಆಳಿದವರು ಅಳಿಯುವರು! (ಅ)

-ಳಿದವರು ಎದ್ದು ಆಳುವರು!
ತ್ತನಿಷ್ಟ ಬಲ್ಲವರು ಯಾರು?
ನವಾಸಕ್ಕಾಗಿ ಹೋಗುವರು! (ತಿ)
-ರುಗಿ ಬಂದು ಊರು ಸೇರುವರು!
ಪ್ಪನಾಜ್ಞೆ

ಈರುವವರಾರು? (ಬಾ)
-ಳಿ, ಬಳಲಿ, ಬರಡಾಗುವರು! (ಆ)
-ಯುಷ್ಯ ವ್ಯರ್ಥವಾಯಿತೆನ್ನುವರು!
ರ ಗುರು ಬೋಧೆ ಕೇಳುವರು! (ಗು)
-ರು ನಿರಂಜನಾದಿತ್ಯಾಗುವರು!!!

ಉಮಾ ಮಹೇಶ್ವರೀ ರಾಜೇಶ್ವರಿ!

ಮಾರಿ ಗರ್ವದಿಂದೀ ಮಹೇಶ್ವರಿ!
ಹೇಶನರಸೀ ರಾಜೇಶ್ವರಿ!
ಹೇರಂಬ ಜನನೀ ಮಹೇಶ್ವರಿ! (ನ)
-ಶ್ವರಾಶಾ ವಿಜಯೀ ರಾಜೇಶ್ವರಿ! (ನಾ)
-ರೀ ಶಿರೋಮಣಿ ಈ ಮಹೇಶ್ವರಿ! (ಕ)
-ರಾಳ ಭದ್ರಕಾಳೀ ರಾಜೇಶ್ವರಿ! (ಅ)
-ಜೇಯ ಮಾಯಾಶಕ್ತೀ ಮಹೇಶ್ವರಿ! (ವಿ)
-ಶ್ವದಾದ್ಯಂತ ರೂಪೀ ರಾಜೇಶ್ವರಿ! (ಹ)
-ರಿನಿರಂಜನಾದಿತ್ಯಾತ್ಮೇಶ್ವರಿ!!!

ಮೂಗು ಚುಚ್ಚುವುದೊಂದು ಹುಚ್ಚು! (ಮೂ)

-ಗುಬೊಟ್ಟಿಡಬೇಕೆಂಬ ಹುಚ್ಚು! (ನಾ)
-ಚುವುದದಿಲ್ಲವೆಂಬ ಹುಚ್ಚು! (ಹೆ)
-ಚ್ಚು ರೂಪದರಿಂದೆಂಬ ಹುಚ್ಚು (ನೋ)
-ವು ಆದರಾಗಲೆಂಬ ಹುಚ್ಚು! (ಒಂ)
-ದೊಂದು ಕಾಲಕ್ಕದೆಂಬ ಹುಚ್ಚು! (ಇಂ)
-ದು ಅದೆಲ್ಲಾ ಬೇಡೆಂಬ ಹುಚ್ಚು!
ಹುಚ್ಚಿಂದ್ರಿಯಾನಂದೆಂಬ ಹುಚ್ಚು! (ಮೆ)
-ಚ್ಚು, ನಿರಂಜನಾದಿತ್ಯ ಹೆಚ್ಚು!!!

ಮೆಚ್ಚಿದವನಿಗೆ ಮಸಣ ಸುಖ! (ಸ)

-ಚ್ಚಿದಾನಂದಾತ್ಮಾರಾಮನಿಗಾತ್ಮ ಸುಖ! (ಮಂ)
-ದಮತಿಗೆ ವಿಷಯಾನಂದ ಸುಖ! (ನ)
-ವ ಯುವತಿಗಾನಂದ ಭೋಗ ಸುಖ!
ನಿತ್ಯಾನಂದಾಪೇಕ್ಷಿಗೆ ಯೋಗ ಸುಖ! (ಕಾ)
-ಗೆಗೆ ಹೊಲಸು ಮಾಂಸಾಹಾರ ಸುಖ!
ಡದಿ, ಮಕ್ಕಳು, ಸಂಸಾರ ಸುಖ!
ಜ್ಜನ ಸಂಗದಿಂದ ಶಾಂತಿ ಸುಖ! (ಗು)
-ಣ ಹೀನ ಮಾನವನಿಗಿಲ್ಲ ಸುಖ!
ಸುಖ ದುಃಖ ಸಮನಿಗೆಲ್ಲಾ ಸುಖ! (ಸ)
-ಖ ನಿರಂಜನಾದಿತ್ಯ ನಿತ್ಯ ಸುಖ!!!

ಶ್ರೀ ಸೀತಾರಾಮರಂತರಂಗದಲ್ಲಿ! (ಆ)

-ಸಿ

ನರಾಗಿರುವರಾನಂದದಲ್ಲಿ!
ತಾಪಸರ ದಿವ್ಯ ಸನ್ನಿಧಿಯಲ್ಲಿ!
ರಾಮನಾಮಸ್ಮರಣಾ ವೇಳೆಯಲ್ಲಿ!
ನೋಲಯದುತ್ತಮ ಸ್ಥಿತಿಯಲ್ಲಿ! (ಸಾ)
-ರಂಗನೇರಿ ಬರುವ ಕಾಲದಲ್ಲಿ!
ತ್ವ ದರ್ಶನಾನಂದೋದ್ಯೋಗದಲ್ಲಿ!
ರಂಜಿಸುಸರು ಪೂರ್ಣ ಶೋಭೆಯಲ್ಲಿ!
ರ್ವರಹಿತ ಭಾವ ಭಂಗಿಯಲ್ಲಿ!
ರ್ಶನ ಪಾವನವಾಗಿಹುದಲ್ಲಿ! (ಅ)
-ಲ್ಲಿ, ನಿರಂಜನಾದಿತ್ಯನಡಿಯಲ್ಲಿ!!!

ವಿಶ್ವಾಮಿತ್ರ ನಾನಾದಾಗ ನೀನು ರಾಮ! [ವಿ]

-ಶ್ವಾಮಿತ್ರ ನೀನಾದಾಗ ನಾನು ಶ್ರೀ ರಾಮ!
ಮಿತ್ರ ಪ್ರೇಮದಿಂದೆಲ್ಲರಿಗೂ ಆರಾಮ!
ತ್ರಯಮೂರ್ತಿ ರೂಪ ದತ್ತಾತ್ರೇಯಾರಾಮ!
ನಾಮ ರೂಪಾತೀತ ಸ್ಥಿತಿ ಸದಾರಾಮ!
ನಾದ, ಬಿಂದು, ಕಲಾತೀತ ಆತ್ಮಾರಾಮ! (ಪಾ)
-ದಾಶ್ರಯ ಸದ್ಗುರು ದೇವನದಾರಾಮ! (ಸಂ)
-ಗ ಸಜ್ಜನರದು ಜೀವರಿಗಾರಾಮ!
ನೀಲಮೇಘಶ್ಯಾಮ ಸುಧಾಮಗಾರಾಮ! (ಅ)
-ನುದಿನವನ ಭಜನಾನಂದಾರಾಮ!
ರಾಮ, ಸೀತಾ, ಕೃಷ್ಣ, ರಾಧಾ ನಾಮಾರಾಮ!
ಹಿಮ ನಿರಂಜನಾದಿತ್ಯಾ ಶ್ರೀರಾಮ!!!

ಪರಾಶರ, ವ್ಯಾಸ, ಶುಕಾತ್ಮಾ! [ವಿ]

-ರಾಜಿಸಲೆಲ್ಲರಲೀ ಆತ್ಮಾ!
ಮ ದಮಾತ್ಮಾ ಗೋವಿಂದಾತ್ಮಾ! (ವ)
-ರ ಗುರುದತ್ತಾ ಪರಮಾತ್ಮಾ!
ವ್ಯಾಪಿಸಿಹನೆಲ್ಲೆಲ್ಲೀ ಆತ್ಮಾ!
ರ್ವ ಕಾರಣ ಕರ್ತಾ ಆತ್ಮಾ!
ಶುದ್ಧ ಸಚ್ಚಿದಾನಂದಾ ಆತ್ಮಾ! (ಓಂ)
-ಕಾರ ಸ್ವರೂಪಾ ಶಂಕರಾತ್ಮಾ! (ಆ)
-ತ್ಮಾ, ನಿರಂಜನಾದಿತ್ಯೇಂದ್ರಾತ್ಮಾ!!!

ದ್ವಾಪರ ಯುಗದ ಮಹಾಭಾರತ!

ರಮ ಪುರುಷ ಕೃಷ್ಣಾ ಭಾರತ!
ಕ್ಕಸಾಂತಕನಾ ಮಹಾ ಭಾರತ!
ಯುಕ್ತ ಗೀತಾನಾಥ ಕೃಷ್ಣಾ ಭಾರತ!
ರ್ವ ರಹಿತಾತ್ಮಾ ಮಹಾಭಾರತ! (ಯಾ)
-ದವ ವಂಶರತ್ನ ಕೃಷ್ಣಾ ಭಾರತ!
ದನ ಮೋಹನಾ ಮಹಾ ಭಾರತ!
ಹಾನಿ ವೃದ್ಧಿಗೀಶ ಕೃಷ್ಣಾ ಭಾರತ! (ಭೂ)
-ಭಾರ ಹರ ಧೀರಾ ಮಹಾಭಾರತ! (ವ)
-ರ ಕರುಣಾಮೂರ್ತಿ ಕೃಷ್ಣಾ ಭಾರತ! (ಸ್ಥಿ)
-ತ ಶ್ರೀ ನಿರಂಜನಾದಿತ್ಯಾ ಭಾರತ!!!

ತಪಸ್ಸೇ ನಿಗ್ರಹಾನುಗ್ರಹ ಶಕ್ತಿ!

ತಿತ ಪಾವನಾ ಪರಮ ಶಕ್ತಿ! (ದು)
-ಸ್ಸೇನಾ ವಿನಾಶಕಾ ದೈವಿಕ ಶಕ್ತಿ!
ನಿತ್ಯ ಬಲಿಸಬೇಕೀ ದಿವ್ಯ ಶಕ್ತಿ!
ಗ್ರಹಚಾರ ಕಳೆವುದಿದೇ ಶಕ್ತಿ!
ಹಾಲಾಹಲವ ಜೀರ್ಣಿಸಿತಾ ಶಕ್ತಿ! (ಅ)
-ನುಗ್ರಹಿಸಿತು ಧ್ರುವಪಟ್ಟಾ ಶಕ್ತಿ! (ಉ)
-ಗ್ರ ನರಸಿಂಹನ ತಂದಿತಾ ಶಕ್ತಿ!
ರಿ ಹರಜರೇಕ ರೂಪ ಶಕ್ತಿ!
ಕ್ತಿ ಭಕ್ತಿ, ಭಾವ, ಭಜನಾ ಶಕ್ತಿ! (ಶ)
-ಕ್ತಿ, ನಿರಂಜನಾದಿತ್ಯಾನಂದಾ ಮುಕ್ತಿ!!!

ಪಾಂಡವರರಿಯಣ್ಣ ಕರ್ಣ! [ಒ]

-ಡನಾಡಿ ಕೌರವಗೆ ಕರ್ಣ!
ರಪುತ್ರ ಕುಂತಿಗೆ ಕರ್ಣ! (ವೀ)
-ರ ಶಿಷ್ಯ ಭಾರ್ಗವಗೆ ಕರ್ಣ!
ರಿ ಪುಕುಲಕಂತಕ ಕರ್ಣ!
ದುತನಯಾಪ್ತ ಕರ್ಣ! (ಉ)
-ಣ್ಣರ್ಕಗರ್ಘ್ಯ ಕೊಡದೆ ಕರ್ಣ! (ಅ)
-ಕಳಂಕ ತೇಜೋರಾಶಿ ಕರ್ಣ! (ಕ)
-ರ್ಣ ನಿರಂಜನಾದಿತ್ಯ ವರ್ಣ!!!

ಕೊಡಿಸಿದ್ದನ್ನುಡಿಸ ಬೇಕಯ್ಯಾ! (ಬ)

-ಡಿಸಿದುದನುಣಿಸಬೇಕಯ್ಯಾ!
ಸಿಕ್ಕಿದಷ್ಟಕ್ಕೆ ತೃಪ್ತಿ ಬೇಕಯ್ಯಾ! (ಸ)
-ದ್ದಡಗಿಸಿ ಸಿದ್ಧಿಸಬೇಕಯ್ಯಾ! (ಸ)
-ನ್ನುತಾತ್ಮ ಧ್ಯಾನಮಾಡಬೇಕಯ್ಯಾ! (ಹಿ)
-ಡಿತ ಮನಸ್ಸಿಗಿರಬೇಕಯ್ಯಾ!
ಜ್ಜನ ಸಂಗ ಸದಾ ಬೇಕಯ್ಯಾ!
ಬೇಡರ ಕೂಟ ಬಿಡಬೇಕಯ್ಯಾ!
ರ್ಮ, ಧರ್ಮವರಿಯಬೇಕಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾನಂದಯ್ಯಾ!!!

ಸೊಕ್ಕಿದ ಮಕ್ಕಳಕ್ಕರೆ ಏಕೆ? (ಕ)

-ಕ್ಕಿದನ್ನಕ್ಕಾಸೆ ಪಡುವುದೇಕೆ? (ಆ)
-ದರವಿಲ್ಲದಮೃತಾನ್ನವೇಕೆ?
ತಿಗೆಟ್ಟವರ ಸಂಗ ವೇಕೆ? (ಸ)
-ಕ್ಕರೆ ಹಾಕದ ಪಾನಕವೇಕೆ? (ಬ)
-ಳಕೆಗಿಲ್ಲದ ವೇದಾಂತವೇಕೆ? (ಧಿ)
-ಕ್ಕರಿಸುವವರಾಶ್ರಯವೇಕೆ? (ಬ)
-ರೆಯಲಾಗದ ಲೇಖನಿ ಯೇಕೆ?
ರು ಪೇರಿರುವ ಪ್ರೇಮವೇಕೆ? (ನೌ)
-ಕೆ ನಿರಂಜನಾದಿತ್ಯ ಮೋಕ್ಷಕ್ಕೆ!!!

ತಿಳಿಯತಕ್ಕದ್ದು ತಿಳಿದಾಯ್ತು! (ಅ)

-ಳಿವುದೀ ದೇಹವೆಂದರಿತಾಯ್ತು! (ಭ)
-ಯ ವ್ಯಾಮೋಹದಿಂದೆಂದರಿತಾಯ್ತು!
ನ್ನ ರೂಪವೇನೆಂದರಿತಾಯ್ತು! (ಅ)
-ಕ್ಕರೆಯ ಗುರುಕೃಪೆಯುಂಟಾಯ್ತು! (ತಿ)
-ದ್ದು ಪಾಡುಗಳವನಿಂದುಂಟಾಯ್ತು! (ಮ)
-ತಿ ವಿಕಾಸದಿಂದಾನಂದವಾಯ್ತು! (ಉ)
-ಳಿಯ ಬೇಕಾದದ್ದುಳಿದಂತಾಯ್ತು!
-ದಾರಿ ಬಹುದೂರ ಸಾಗಿಹೋಯ್ತು! (ಆ)
-ಯ್ತು, ನಿರಂಜನಾದಿತ್ಯ ತಾನಾಯ್ತು!!!

ನನ್ನ ಧ್ಯಾನ ನಿನಗೆ ಇರಲಿ! (ನಿ)

-ನ್ನ ಯೋಗಕ್ಷೇಮ ನನಗಿರಲಿ!
ಧ್ಯಾನದಿಂದ ನನ್ನರಿವಾಗಲಿ! (ದಿ)
-ನ, ರಾತ್ರಿ, ಇದು ಸಾಗುತ್ತಿರಲಿ! (ಅ)
-ನಿತ್ಯ ಸುಖಾಸೆ ಸತ್ತು ಹೋಗಲಿ!
ಮಸ್ಕಾರ ಶ್ರೀಪಾದಕ್ಕಾಗಲಿ! (ಹ)
-ಗೆಗಳೆಲ್ಲಾ ನಿರ್ನಾಮವಾಗಲಿ!
ಡಾ, ಪಿಂಗಳ ಶುದ್ಧವಾಗಲಿ! (ವ)
-ರ ಸುಷುಮ್ನಾ ತೆರೆಯಲ್ಪಡಲಿ! (ಅ)
-ಲಿಪ್ತ ನಿರಂಜನಾದಿತ್ಯಾಗಲಿ!!!

ಜೀವನದಲ್ಲೇಕೆ ಶಾಂತಿಯಿಲ್ಲ? (ಜೀ)

-ವ ದೇವನಾಗಲ್ಕೆ ಯತ್ನಿಸಿಲ್ಲ (ಅ)
-ನನ್ಯ ಭಕ್ತಿ, ಭಾವ, ಬಲಿತಿಲ್ಲ! (ಮ)
-ದ ಮತ್ಸರಾದಿಗಳಳಿದಿಲ್ಲ! (ಇ)
-ಲ್ಲೇನಲ್ಲೇನೆಂಬ ಭ್ರಾಂತಿ ಹೋಗಿಲ್ಲ!
ಕೆಲಸ ನಿಷ್ಕಾಮದಿಂದಾಗಿಲ್ಲ! (ಅ)
-ಶಾಂತಿಯಿದರಿಂದೆಂಬರಿವಿಲ್ಲ!
ತಿಳಿದು ಬಾಳುವಭ್ಯಾಸವಿಲ್ಲ (ತಾ)
-ಯಿ ತಂದೆ ದೇವರೆಂದರಿತಿಲ್ಲ! (ಫು)
-ಲ್ಲ ನಿರಂಜನಾದಿತ್ಯ ತಾನೆಲ್ಲ!!!

ಮತಾಂತರದಿಂದಂತರಂಗ ಶುದ್ಧಿಯೇನಯ್ಯಾ? (ಪೀ)

-ತಾಂಬರ ಧರಿಸಿದಾಕ್ಷಣ ಹರಿಯೇನಯ್ಯಾ?
ರತರದಾಶಾಪೂರ್ತಿಗೆ ಮತವೇನಯ್ಯಾ?
ಹಸ್ಯವರಿತು ರಮೇಶನಾಗಬೇಕಯ್ಯಾ! (ವಾ)
-ದಿಂಗಳವಡದೆಂದಿಗೂ ನಿಜ ಸುಖವಯ್ಯಾ!
ದಂಭ, ದರ್ಪ, ಬಿಟ್ಟು ಸಾಧನೆ ಮಾಡಬೇಕಯ್ಯಾ!
ತ್ವಾರ್ಥ ಚಿಂತನಾಸಕ್ತನಾಗಿರಬೇಕಯ್ಯಾ!
ರಂಭೆ, ಊರ್ವಶಿಯರಿಗಾಗಿ ಮತವಲ್ಲಯ್ಯಾ!
ಜ, ತುರಗ, ಭೋಗಕ್ಕಾಗಿ ಜನ್ಮವಲ್ಲಯ್ಯಾ!
ಶುದ್ಧ ಸಚ್ಚಿದಾನಂದ ಸುಖಾಪೇಕ್ಷಿಯಾಗಯ್ಯಾ (ಸಿ)
-ದ್ಧಿಸುವುದಿದು ನಿತ್ಯಾನಿತ್ಯ ಜ್ಞಾನದಿಂದಯ್ಯಾ! (ಹೇ)
-ಯೇಚ್ಛೆಯಿಂದ ಹಾಳಾಗುವುದಾವ ನ್ಯಾಯವಯ್ಯಾ! (ಮ)
-ನಸನಿರಿಸು ಸದಾ ಗುರುಪಾದದಲ್ಲಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಮತೀಯ ನೀನಾಗಯ್ಯಾ!!!

ಅಜ, ಹರಿ, ಹರರೊಂದಾಗಿ ನಾನೆಂದೆ!

ನನ, ಮರಣ, ರಹಿತ ನಾನೆಂದೆ!
ಸ್ತ, ಪಾದಗಳಿಲ್ಲದವ ನಾನೆಂದೆ! (ಕ)
-ರಿವದನ ಕಾರ್ತಿಕೇಯಾತ್ಮ ನಾನೆಂದೆ!
ದಿನಾಲ್ಕು ಲೋಕಗಳಾತ್ಮ ನಾನೆಂದೆ! (ಪ)
-ರಮಗುರು ಪರಮಹಂಸ ನಾನೆಂದೆ! (ಬೇ)
-ರೊಂದಿಲ್ಲದಖಂಡ ಬ್ರಹ್ಮಾಂಡ ನಾನೆಂದೆ! (ಸ)
-ದಾ ಸರ್ವಕಾರ್ಯಕಾರಣಾತ್ಮ ನಾನೆಂದೆ!
ಗಿಡ, ಮರ, ಪಶು, ಪಕ್ಷ್ಯಾತ್ಮ ನಾನೆಂದೆ!
ನಾಮ, ರೂಪಾತೀತನಂತಾತ್ಮ ನಾನೆಂದೆ!
ನೆಂಟ, ಭಂಟ, ತುಂಟರಲ್ಲೆಲ್ಲಾ ನಾನೆಂದೆ! (ಅಂ)
-ದೆ

, ನಿರಂಜನಾದಿತ್ಯಾನಂದ ನಾನೆಂದೆ!!!

ತಿಂದು ಕೆಟ್ಟೆನೆನಬೇಡಪ್ಪಾ!

ದುಡುಕಿದರಕ್ಕು ಕೇಡಪ್ಪಾ!
ಕೆಟ್ಟಾಹಾರ ತಿನ್ನಬೇಡಪ್ಪಾ! (ಹೊ)
-ಟ್ಟೆ ಕೆಟ್ಟರೆ ದುಷ್ಟ ರೋಗಪ್ಪಾ! (ಬೇ)
-ನೆಗೆಡೆಗೊಡಬಾರದಪ್ಪಾ! (ಮ)
-ನ ಬಿಗಿ ಹಿಡಿದು ಆಡಪ್ಪಾ!
ಬೇಲಿ ಹೊಲಕ್ಕಿರಬೇಕಪ್ಪಾ! (ಗೌ)
-ಡಗಿದರಿಂದಲೇ ಲಾಭಪ್ಪಾ! (ತ)
-ಪ್ಪಾಡ ನಿರಂಜನಾದಿತ್ಯಪ್ಪಾ!!!

ವಿಷಯ ವಿಚಾರ ವಿಷಾಹಾರ!

ಡ್ರಿಪುಗಳಾರ್ಭಟಾಧಿಕಾರ! (ಭ)
-ಯ, ಭ್ರಾಂತಿ, ಅಶಾಂತಿ ಸಂಚಾರ!
ವಿವೇಕರಹಿತವಾದಾಚಾರ!
ಚಾಡಿ, ಚೌರ್ಯಗಳಿಗೆಲ್ಲಾಗಾರ! (ಪ)
-ರ ಪೀಡೆಯಲ್ಲಾಸಕ್ತಿ ಅಪಾರ!
ವಿಟರಂತೆ ಶರೀರ ಶೃಂಗಾರ! (ರೋ)
-ಷಾತಿರೇಕದಿಂದ ಅಪಚಾರ! (ಮ)
-ಹಾತ್ಮ ತಾನಾದಾಗ ಪರಿಹಾರ! (ವಿ)
-ರಕ್ತ ನಿರಂಜನಾದಿತ್ಯಾಕಾರ!!!

ಬಟ್ಟೆ, ಬರೆ ಶುಚಿಯಾಗಿರಬೇಕು! [ಕ]

-ಟ್ಟೆಯಲ್ಲಿ ನೀರು ಸದಾ ಇರಬೇಕು!
ದಿ, ಬಗ್ಗಡವಿಲ್ಲದಿರಬೇಕು!
-ರೆಗೊಂದುತ್ತಮ ತೂಬೂ ಇರಬೇಕು!
ಶುದ್ಧ ನೀರು ಸೇರುತ್ತಾ ಇರಬೇಕು! (ಪಾ)
-ಚಿ ಹಬ್ಬದಂತೆಚ್ಚರವಿರಬೇಕು! (ಬಾ)
-ಯಾರಿದರೆ ಕುಡಿವಂತಿರಬೇಕು!
ಗಿಡ ಮರ ದೂರದಲ್ಲಿರಬೇಕು!
ಸ್ತೆಯೋಡಾಟವಿರದಿರಬೇಕು!
ಬೇಸಾಯಕ್ಕೂ ನೆರವಾಗಿರಬೇಕು! (ಬೇ)
-ಕು ನಿರಂಜನಾದಿತ್ಯ ಕೃಪೆ ಬೇಕು!!!

ಶುದ್ಧವಾಗಬೇಕು ಮನಸಪ್ಪಾ! [ಸಿ]

-ದ್ಧನಾಗಿ ಪರಮಾತ್ಮನಾಗಪ್ಪಾ!
ವಾಗಾಡಂಬರ ವ್ಯರ್ಥ ಕಾಣಪ್ಪಾ!
ಗನ ಸದೃಶನಾಗೀಗಪ್ಪಾ!
ಬೇಗುದಿ ಶಾಂತವಾಗಬೇಕಪ್ಪಾ! (ಸಾ)
-ಕು ಮಾಡಬೇಕೊಲೆಯುರಿಯಪ್ಪಾ!
ಡಿಕೆಗಂಟ ಬಾರದನ್ನಪ್ಪಾ!
ಮ್ರ ಭಾವದಿಂದದನ್ನುಣ್ಣಪ್ಪಾ!
ದಾನಂದದರಿಂದಪ್ಪುದಪ್ಪಾ! (ಇ)
-ಪ್ಪಾ ನಿರಂಜನಾದಿತ್ಯನಿಂತಪ್ಪಾ!

ಇಕ್ಕಿದ್ದುಂಡಾರೋಗ್ಯವಾಗಿದ್ದುಕೋ! (ಅ)

-ಕ್ಕಿ, ಗೋಧಿಗೆಲ್ಲಾ ಹೊಂದಿಸಿದ್ದುಕೋ! (ಕ)
-ದ್ದುಂಬಭ್ಯಾಸವಿಲ್ಲದಂತಿದ್ದುಕೋ! (ಬೇ)
-ಡಾದಾಗ ಉಪವಾಸವಿದ್ದುಕೋ! (ಆ)
-ರೋಪವಾರಲ್ಲೂ ಮಾಡದಿದ್ದುಕೋ! (ಯೋ)
-ಗ್ಯ ಪರಮಾರ್ಥಿ ನೀನಾಗಿದ್ದುಕೋ! (ಯಾ)
-ವಾಗಲೂ ಸತ್ಸಂಗಿಯಾಗಿದ್ದುಕೋ! (ಯೋ)
-ಗಿಯಾಗ್ಯಾತ್ಮಾನಂದದಲ್ಲಿದ್ದುಕೋ! (ಮ)
-ದ್ದು, ಮಾಟದಾಟ ಹೂಡದಿದ್ದುಕೋ! (ಅ)
-ಕೋ, ನಿರಂಜನಾದಿತ್ಯಾಗಿದ್ದುಕೋ!!!

ಹರಸಿ ಹಾಡಿಸುವವ ನೀನು! (ತ)

-ರತರದ ರಾಗಲಾಪ ನೀನು!
ಸಿತಾರು, ವೀಣಾ ಸಾರಂಗಿ ನೀನು!
ಹಾವ, ಭಾವ, ತಾಳ, ಮೇಳ ನೀನು! (ಹಾ)
-ಡಿ ಮೈಮರೆವ ರಸಿಕ ನೀನು!
ಸುಶ್ರಾವ್ಯ ಗೀತಾ ಸಾಹಿತ್ಯ ನೀನು!
ರ ಸಂಕೀರ್ತನಾನಂದ ನೀನು!
ರ ಗುರು ದತ್ತಾತ್ರೇಯ ನೀನು!
ನೀಲಾಕಾಶ ಸದೃಶಾತ್ಮ ನೀನು! (ನೀ)
-ನು ನಿರಂಜನಾದಿತ್ಯನಲ್ಲೇನು???

ಪುಷ್ಪಾರ್ಪಣೆ ಪದ್ಮ ಪಾದಕ್ಕೆ! [ಬಾ]

-ಷ್ಪಾರ್ಘಸಮೇತಾ ಶ್ರೀ ಪಾದಕ್ಕೆ! (ದ)
-ರ್ಪ ದಂಭವಿಲ್ಲದಾ ಪಾದಕ್ಕೆ! (ಹೊ)
-ಣೆಯೆಲ್ಲಕ್ಕಾಗಿರ್ಪಾ ಪಾದಕ್ಕೆ!
ತಿತೋದ್ಧಾರದಾ ಪಾದಕ್ಕೆ! (ಪ)
-ದ್ಮನಾಭನಾ ದಿವ್ಯ ಪಾದಕ್ಕೆ!
ಪಾರ್ಥಿವ ರೂಪಿನಾ ಪಾದಕ್ಕೆ!
ತ್ತಾತ್ಮನಾ ಗುರು ಪಾದಕ್ಕೆ! (ಹೊ)
-ಕ್ಕೆ, ನಿರಂಜನಾದಿತ್ಯನಕ್ಕೆ!!!

ತಾನಾಗಿ ಬಂತು ತನ್ನಂತಾಯಿತು!

ನಾಯಿ ನರಿಯ ಭಯ ಹೋಯಿತು! (ಕೂ)
-ಗಿ ಕೂಗಿ ಪ್ರೀತಿಸುವಂತಾಯಿತು!
ಬಂದದ್ದನ್ನುಂಡಿರುವಂತಾಯಿತು! (ಮಾ)
-ತು ವಿನಯ ಭರಿತವಾಯಿತು!
ನ್ನವನಾನೆಂಬರಿವಾಯಿತು! (ತ)
-ನ್ನಂಗ ಸವರಿಸುವಂತಾಯಿತು!
ತಾರತಮ್ಯದರಿವುಂಟಾಯಿತು! (ಆ)
-ಯಿತು, ಶುದ್ಧ ಸಾತ್ವಿಕವಾಯಿತು! (ಹೇ)
-ತು, ನಿರಂಜನಾದಿತ್ಯನಾಯಿತು!!!

ವಿಮಲ ಭಾರತ ಸರ್ವಮಾನ್ಯಮಕ್ಕೆ!

ಲ ನಿರ್ಮೂಲಕ್ಕಿದು ಸಾಧನಮಕ್ಕೆ!
ಕ್ಷ್ಯ ಸಿದ್ಧಗಿದರುಪಯೋಗಮಕ್ಕೆ!
ಭಾಗೀರಥಿಯಂತಿದು ವ್ಯಾಪಕಮಕ್ಕೆ!
ಸಾಸ್ವಾದಕರಿಗಿದಾನಂದಮಕ್ಕೆ!
ತ್ವಶೋಧಕರಿಗಿದರರ್ಥಮಕ್ಕೆ!
ತ್ಸಂಗಿಗಳಿಗಿದೊಂದು ಪಾಠಮಕ್ಕೆ! (ಗ)
-ರ್ವ ಮೊದಲಾದ ರೋಗಕ್ಕೌಷಧಮಕ್ಕೆ
ಮಾಯಾ ಮೋಹಕ್ಕಿದು ರಾಮಬಾಣಮಕ್ಕೆ! (ಮಾ)
-ನ್ಯವಾಗಿ ಜನ್ಮ ಶ್ರೀ ಕೃಷ್ಣಾರ್ಪಣಮಕ್ಕೆ!
ತ ಭಾರತರದ್ದಜರಾಮರಮಕ್ಕೆ! (ಅ)
-ಕ್ಕೆ ನಿರಂಜನಾದಿತ್ಯ ದರ್ಶನಮಕ್ಕೆ!!!

ಅಂದವರಾರೋ ಬಂದವರಾರೋ!

ರ್ಶನ ಪಡೆದವರು ಯಾರೋ! (ಶಿ)
-ವ ನಾಮ ಭಜಿಸಿದವರಾರೋ! (ವೈ)
-ರಾಗ್ಯ ಬಲಿಸಿದವರು ಯಾರೋ! (ಸು)
-ರೋರಗರಾತ್ಮಾನೆಂದವರಾರೋ!
ಬಂಧ ಹರಿದ ಬಾಂಧವರಾರೋ!
ಯಾನಿಧಿಗಳಾದವರಾರೋ!
ರ ಗುರು ಸೇವಾಸಕ್ತರಾರೋ!
ರಾರಾಜಿಪ ಜೀವನ್ಮುಕ್ತರಾರೋ! (ಬಾ)
-ರೋ, ನಿರಂಜನಾದಿತ್ಯನ ಸೇರೋ!!!

ನಿರಂಜನಾದಿತ್ಯಾ ಪರಮಾತ್ಮ!

ರಂಗನಾಥನಾಗಿಹನೀ ಆತ್ಮ!
ಗದ್ವ್ಯಾಪಿಯಾಗೀತಮರಾತ್ಮ!
ನಾಲ್ಕು ವೇದದ ಸಾರವೀ ಆತ್ಮ!
ದಿವ್ಯ ಜೀವನಾತ್ಮ ವಿಮಲಾತ್ಮ!
ತ್ಯಾಗರಾಜ ಶ್ರೀ ಶಿವಾನಂದಾತ್ಮ!
ರಿಪರಿ ಲೀಲಾವತಾರಾತ್ಮ!
ಘುರಾಮನಾಮದಲ್ಲೈಕ್ಯಾತ್ಮ!
ಮಾತಿಲ್ಲದ ಕಾರಣಕರ್ತಾತ್ಮ! (ಆ)
-ತ್ಮ ನಿರಂಜನಾದಿತ್ಯಾನಂದಾತ್ಮ!!!

ಏನೇನೋ ಕೇಳಬೇಕೆಂದಿದ್ದೆ! (ನೀ)

-ನೇ ಸಿಕ್ಕಲ್ಲೆಲ್ಲಾ ಮರೆತಿದ್ದೆ!
ನೋಡಿಯೇ ತೃಪ್ತಿ ಪಡುತ್ತಿದ್ದೆ!
ಕೇಳದೇನೇ ತಿಳಿಸುತಿದ್ದೆ! (ಕ)
-ಳವಳವಿಲ್ಲದಿರುತಿದ್ದೆ!
ಬೇಕಿನ್ನೇನೆನಗೆನುತಿದ್ದೆ! (ಸಾ)
-ಕೆಂದು ಹೋಗಲೆತ್ನಿಸುತಿದ್ದೆ!
ದಿವ್ಯಾನುಮತಿ ಬೇಡುತಿದ್ದೆ! (ಎ)
-ದ್ದೆ, ನಿರಂಜನಾದಿತ್ಯಗಿದ್ದೆ!!!

ಅಪ್ಪನಂತಾಗಬೇಕು ಮಗನೇ! (ಅ)

-ಪ್ಪಣೆ ಮೀರಬಾರದು ಮಗನೇ!
ನಂದ ಕಂದನಂತಿರು ಮಗನೇ!
ತಾಯಿ, ತಂದೆ ದೇವರು ಮಗನೇ!
ಟ್ಟಿ ಮಾಡು ಮನಸು ಮಗನೇ!
ಬೇಕೇನೆಂದವ ಬಲ್ಲ ಮಗನೇ!
ಕುಲತಿಲಕನಾಗು ಮಗನೇ!
ದ, ಮತ್ಸರ ಬೇಡ ಮಗನೇ!
ರ್ವವಿರಬಾರದು ಮಗನೇ (ನೀ)
-ನೇ ನಿರಂಜನಾದಿತ್ಯ ಮಗನೇ!!!

ಗುರುಕೃಪೆ ಗಂಡಾಂತರ ತಪ್ಪಿಸಿತು! (ಊ)

-ರು ಸೇರಿ ಗುರುದರ್ಶನ ಮಾಡಿಸಿತು!
ಕೃತಿಗಳ ಭಾವದಿಂದ ಹಾಡಿಸಿತು!
ಪೆಚ್ಚು ಮುಖಕ್ಕೆ ಹರ್ಷವುಂಟುಮಾಡಿತು!
ಗಂಗಾಂಬೆಯಾದರಾತಿಥ್ಯ ದೊರಕಿತು!
ಡಾಂಭಿಕವಿಲ್ಲದ ಪ್ರೇಮದರಿವಾಯ್ತು!
ತ್ವ ಚಿಂತನೆಗಿದೊಂದು ಪಾಠವಾಯ್ತು!
ಘುರಾಮನ ಭಜನೆಗೆಡೆಯಾಯ್ತು!
ನು, ಮನವನಡಿಗರ್ಪಣೆಯಾಯ್ತು! (ತ)
-ಪ್ಪಿ ನಡೆಯಬಾರದೆಂಬ ಅರಿವಾಯ್ತು!
ಸಿರಿಯರಸ ಕಾಯ್ವನೆಂಬರಿವಾಯ್ತು! (ಹೇ)
-ತು ನಿರಂಜನಾದಿತ್ಯನೆಂದಂತಾಯಿತು!!!

ಸುತ್ತು, ಮುತ್ತೆಚ್ಚರವಾಗಿ ಗುಡಿಸು! (ಚಿ)

-ತ್ತುಗಳಲಕ್ಷ್ಯ ಮಾಡದೆ ಗುಡಿಸು!
ಮುರುಕು ಮನೆಯೆನ್ನದೆ ಗುಡಿಸು! (ಪ)
-ತ್ತೆ ಮಾಡಿ ಕಸವನ್ನೆಲ್ಲಾ ಗುಡಿಸು! (ಬ)
-ಚ್ಚಲನ್ನೂ ಅಚ್ಚುಕಟ್ಟಾಗಿ ಗುಡಿಸು! (ಪ)
-ರಮಾತ್ಮ ಪ್ರೀತ್ಯರ್ಥಕ್ಕಾಗಿ ಗುಡಿಸು!
ವಾಸನೆಯಲ್ಲಾ ತೊಳೆದು ಗುಡಿಸು! (ರೇ)
-ಗಿ ಕೂಗಾಡದೆಲ್ಲಾ ಜಾಗ ಗುಡಿಸು!
ಗುರುನಾಮ ಜಪಿಸುತ್ತ ಗುಡಿಸು! (ಗ)
ಡಿಬಿಡಿ ಮಾಡದೆ ನಿತ್ಯಗುಡಿಸು! (ಅ)
-ಸು ನಿರಂಜನಾದಿತ್ಯನಲ್ಲಿರಿಸು!!!

ಪರೀಕ್ಷಾ ಫಲಿತಾಂಶವಾವಾಗ? (ಶ)

-ರೀರ ಶ್ರಮ ಸಾರ್ಥಕವಾದಾಗ! (ರ)
-ಕ್ಷಾಕವಚನುಗ್ರಹವಾದಾಗ!
ಲಾಪೇಕ್ಷೆ ನಿರ್ಮೂಲವಾದಾಗ (ಮ)
-ಲಿನ ವಾಸನೆ ಕ್ಷಯವಾದಾಗ!
ತಾಂಡವೇಶ್ವರನರಿವಾದಾಗ!
ಕ್ತಿ ಸಂಚಾರ ಸ್ಥಿರವಾದಾಗ!
ವಾಙ್ಮನಸ್ಸುಗಳೈಕ್ಯವಾದಾಗ!
ವಾದ, ಭೇದಗಳಂತ್ಯವಾದಾಗ! (ಮ)
-ಗ ನಿರಂಜನಾದಿತ್ಯಗಾದಾಗ!!!

ಮಕ್ಕಳ ಹೃದಯ ಮಾಧವಗೆ! (ಅ)

-ಕ್ಕರೆಯವರಲ್ಲಿ ಮಾಧವಗೆ! (ಒ)
-ಳ, ಹೊರಗೆಂದಿಲ್ಲ ಮಾಧವಗೆ!
ಹೃದಯ ನಿರ್ಮಲ ಮಧವಗೆ!
ಯೆಯಲಂಕಾರ ಮಾಧವಗೆ! (ಭ)
-ಯ, ಭಕ್ತಿ, ಸ್ವಾಗತ ಮಾಧವಗೆ!
ಮಾತು, ಕತೆ, ಬೇಡ ಮಾಧವಗೆ!
ರ್ಮ, ಕರ್ಮ, ಪ್ರೇಮ ಮಾಧವಗೆ!
ರ ಗುರುನಾಮ ಮಾಧವಗೆ! (ಬ)
-ಗೆ ನಿರಂಜನಾದಿತ್ಯನೆಮಗೆ!!!

ಲಂಗೋಟಿ ಬಿಗಿಯಾಗಿ ಕಟ್ಟು!

ಗೋಡೆ ಹಾಕಿಸಿ ಮನೆ ಕಟ್ಟು! (ಲೂ)
-ಟಿ ಮಾಡದೆ ಸಾಮ್ರಾಜ್ಯ ಕಟ್ಟು!
ಬಿಸಿಯಾರಿಸಿ ಬುತ್ತಿ ಕಟ್ಟು! (ಬಾ)
-ಗಿಲು ಬಿಟ್ಟು ಬಚ್ಚಲು ಕಟ್ಟು!
ಯಾತ್ರೆ ಮುಗಿಸಿ ಜಾತ್ರೆ ಕಟ್ಟು! (ಮಾ)
-ಗಿದಾಗ ಮಾರಾಟಕ್ಕೆ ಕಟ್ಟು!
ಟ್ಟೆ ಕಟ್ಟಿಸಿ ತೂಬು ಕಟ್ಟು! (ಗು)
-ಟ್ಟು ನಿರಂಜನಾದಿತ್ಯ ಹುಟ್ಟು!!!

ಮಾರನಾಟ ಚೋರಕೂಟ ಸಂಕಟ! [ಖಾ]

-ರ ದೂಟ ಅಸುರರಾಟ ಸಂಕಟ!
ನಾರಿಯಾಟ, ಮಾರಿಯೂಟ ಸಂಕಟ! (ನೋ)
-ಟದಾಟ, ಕೂಟದೊಟ್ಟೂಟ ಸಂಕಟ! (ಕು)
-ಚೋದ್ಯದಾಟಮೇಧ್ಯದೂಟ ಸಂಕಟ! (ಕ)
-ರ ಚರಣದಾಟ ನೋಟ ಸಂಕಟ!
ಕೂಗಾಟ, ರೇಗಾಟದಾಟ ಸಂಕಟ! (ನ)
-ಟ ನಟಿಯರಾಟ ಕೂಟ ಸಂಕಟ!
ಸಂಪ್ರದಾಯದೀಗಿನಾಟ ಸಂಕಟ!
ಚ್ಚಾಟ, ಗುದ್ದಾಟದಾಟ ಸಂಕಟ! (ನೆಂ)
-ಟ ನಿರಂಜನಾದಿತ್ಯಗಿದೊಂದಾಟ!!!

ಹಂಬಲಿಸಿ ಹುಂಬನಾಗಬೇಡ!

ಯಕೆಗೆ ಬಲಿಯಾಗಬೇಡ! (ನಾ)
-ಲಿಗೆಗೆ ಸಲಿಗೆ ಕೊಡಬೇಡ! (ಹು)
-ಸಿ ಮಾಯೆಗಾಶ್ರಯ ನೀಡಬೇಡ!
ಹುಂಜನಂತೆ ಕಾಳಗಾಡ ಬೇಡ!
ಸವನಂತಿರದಿರಬೇಡ!
ನಾಮ, ರೂಪಕ್ಕೆ ಹುಚ್ಚಾಗಬೇಡ! (ಭ)
-ಗವಂತನ್ಯನೆಂದರಿಯ ಬೇಡ!
ಬೇಸತ್ತು ಬೇಸಾಯ ಬಿಡಬೇಡ! (ಕಾ)
-ಡ, ನಿರಂಜನಾದಿತ್ಯ ಬಿಟ್ಟೋಡ!!!

ಗೇಣುದ್ದ ಬಟ್ಟೆ ಮಾರುದ್ದ ಹೊಟ್ಟೆ! [ಗು]

-ಣುಗುಟ್ಟಿ ನಿಟ್ಟುಸಿರು ನೀ ಬಿಟ್ಟೆ! (ಉ)
-ದ್ದಳತೆ ನೋಡದೇ ನೀನು ಕೆಟ್ಟೆ!
ದುಕಿಗೆ ಬೇಕು ತೃಪ್ತಿ ಬಟ್ಟೆ! (ಇ)
-ಟ್ಟೆ ನೀನೇಕೆ ದೊಡ್ಡದೊಂದು ತಟ್ಟೆ?
ಮಾಡಲೂಟಕ್ಕೆ ಮೂರ್ಕಾಸು ಕೊಟ್ಟೆ! (ಸಾ)
-ರು, ಹುಳಿಯೆಲ್ಲಕ್ಕೂ ಆಸೆ ಪಟ್ಟೆ! (ಗ)
-ದ್ದಲವೆಬ್ಬಿಸಿ ವೃಥಾ ಗೋಳಿಟ್ಟೆ!
ಹೊಲಸ ಕಳೆಯಿತಾತ್ಮ ನಿಷ್ಟೆ! (ಸು)
-ಟ್ಟೆ ನಿರಂಜನಾದಿತ್ಯನಾಗ್ಬಿಟ್ಟೆ!!!

ಸೊಗಸಾಗಿದೆ ಗುಲಾಬಿ ವಿಜಯ! [ಆ]

-ಗಬೇಕದರಂತೆ ನೀನು ವಿಜಯ!
ಸಾಧು ವೃತ್ತಿಗಿದಾದರ್ಶ ವಿಜಯ!
ಗಿಡದೊಡಲೆಲ್ಲಾ ಮುಳ್ಳು ವಿಜಯ! (ಅ)
-ದೆಲ್ಲಾ ದಾಟಿ ಬಂದಿತಾ ಹೂ ವಿಜಯ!
ಗುರುಪಾದಕ್ಕದು ಶೋಭೆ ವಿಜಯ!
ಲಾವಣ್ಯದಲ್ಲನುಪಮ ವಿಜಯ!
ಬಿಳಿ, ಕೆಂಪು ಮಿಶ್ರವರ್ಣ ವಿಜಯ!
ವಿವಿಧೋಪಯೋಗಿಯಿದು ವಿಜಯ!
ನ್ಮ ಸಾರ್ಥಕದರದು ವಿಜಯ! (ಧ್ಯೇ)
-ಯ ನಿರಂಜನಾದಿತ್ಯಾತ್ಮ ವಿಜಯ!!!

ಪಾರ್ವತಿಗೀ ಫಲ ಸಮರ್ಪಣೆ! [ಸ]

-ರ್ವ ಕಾರ್ಯ ಸಿದ್ಧಿಗಾಗೀ ಅರ್ಪಣೆ! (ಸ)
-ತಿ, ಪತಿಯರೈಕ್ಯಕ್ಕೀ ಅರ್ಪಣೆ! (ಯೋ)
-ಗೀಶ್ವರಾನುಗ್ರಹಕ್ಕೀ ಅರ್ಪಣೆ!
ಲ, ಪುಷ್ಪ, ಸಹಿತಾ ಅರ್ಪಣೆ!
ಲಿತಾ ಸುತಗಿಷ್ಟಾ ಅರ್ಪಣೆ! (ವಾ)
-ಸವಾಂಬೆಯಾನಂದಕ್ಕೀ ಅರ್ಪಣೆ!
ನಶ್ಯಾಂತಿ ಲಾಭಕ್ಕೀ ಅರ್ಪಣೆ! (ಸ)
-ರ್ಪದೋಷ ವಿನಾಶಕ್ಕೀ ಅರ್ಪಣೆ! (ಹೊ)
-ಣೆ ನಿರಂಜನಾದಿತ್ಯಗಾರೆಣೆ???

ಕ್ಷೀರಸಾಗರ ಸತ್ಸಂಗದಲ್ಲಿ!

ಮೇಶ ಪವಡಿಸಿರ್ಪನಲ್ಲಿ!
ಸಾಧ್ವಿ ಶ್ರೀ ರಮಣಿ ಸಹಿತಲ್ಲಿ!
ಗನಾಂಗಣದ ಅಡಿಯಲ್ಲಿ!
ಸ ಭರಿತ ಸಂಗೀತದಲ್ಲಿ!
ರಸಿಜಾಸನನ ಪೊತ್ತಲ್ಲಿ! (ಸ)
-ತಂಪ್ರದಾಯದಾರ್ಯ ರೀತಿಯಲ್ಲಿ!
ರುಡಾದಿಗಳ ಬಳಿಯಲ್ಲಿ!
ರ್ಶನವೀಯುತೆಲ್ಲರಿಗಲ್ಲಿ! (ಎ)
-ಲ್ಲಿ? ನಿರಂಜನಾದಿತ್ಯನಿರ್ಪಲ್ಲಿ!!!

ಒಂದು ಮೂರಾಗಿ ಹುಟ್ಟಿತಯ್ಯಾ! [ಬಂ]

-ದುದಿದಕನೇಕ ರೂಪಯ್ಯಾ!
ಮೂಗು, ಕಿವಿಯೆಲ್ಲಾ ಬಂತಯ್ಯಾ!
ರಾಗ, ದ್ವೇಷಾವರಿಸಿತಯ್ಯಾ! (ಆ)
-ಗಿ ಹೊಯ್ತು ಬಹಳ ಕಾಲಯ್ಯಾ!
ಹುಚ್ಚು ಮೋಹ ಹೆಚ್ಚಾಯಿತಯ್ಯಾ! (ಕೆ)
-ಟ್ಟಿತೀಗೆಲ್ಲೆಲ್ಲೂ ಕರ್ಮವಯ್ಯಾ!
ತ್ವವರಿತೊಂದಾಗೀಗಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾತ್ಮಯ್ಯಾ!!!

ಮುಗಿಲಂಗಿ ಸಾರಂಗಿ ಸತ್ಸಂಗಿ!

ಗಿರಿತರು ಲತಾಂಗೀ ಸತ್ಸಂಗಿ! (ಆ)
-ಲಂಬವಬಂಬನಾಂಗೀ ಸತ್ಸಂಗಿ!
ಗಿರಿಧರ ಗೋಪಾಂಗೀ ಸತ್ಸಂಗಿ!
ಸಾಮಗಾನ ಲೋಲಾಂಗೀ ಸತ್ಸಂಗಿ!
ರಂಗನಾಥ ನಾಮಾಂಗೀ ಸತ್ಸಂಗಿ!(ಭ)
-ಗಿರಥೇಚ್ಛಾ ಪೂರ್ಣಾಂಗೀ ಸತ್ಸಂಗಿ!
ರ್ವ ಕಾರಣತ್ಮಾಂಗೀ ಸತ್ಸಂಗಿ! (ತ)
-ತ್ಸಂಗೀಶ್ವರನರ್ಧಾಂಗೀ ಸತ್ಸಂಗಿ! (ಯೋ)
-ಗಿ ನಿರಂಜನಾದಿತ್ಯಾಂಗೀ ಸಂಗಿ!!!

ತನ್ನ ಮಾನ ತಾನೇ ಕಳಕೊಂಡ! (ಉ)

-ನ್ನತದ ಸೇವೆ ಮಾಡಿಸಿಕೊಂಡ!
ಮಾತು ಮಾತಿಗೂ ಸ್ಮರಿಸಿಕೊಂಡ!
ಶ್ವರವಿದೆಂದು ಅಂದುಕೊಂಡ!
ತಾಳ ಮೇಳ ಗಾನ ಕೇಳಿಕೊಂಡ!
ನೇಮ, ನಿಷ್ಠೆಯನಿರಿಸಿಕೊಂಡ!
ಷ್ಟ, ಸುಖವ ಸಹಿಸಿಕೊಂಡ! (ಬ)
-ಳಸಿ ವೇದಾಂತಿಯಾಗಿದ್ದುಕೊಂಡ!
ಕೊಂಡ ಕೋತಿಯಂತಾಡಿಸಿಕೊಂಡ! (ಗಂ)
-ಡ ನಿರಂಜನಾದಿತ್ಯ ಪ್ರಚಂಡ!!!

ಕಿತ್ತುಕೊಂಡಾನಂದಿಸುವವ ನೀನು! (ಅ)

-ತ್ತು, ಬೇಸತ್ತು ಸುಸ್ತಾಗುವವ ನಾನು!
ಕೊಂಡೊಯ್ವೆ ನಿನ್ನ ಬಳಿಗೆನ್ನ ನೀನು! (ಮೊಂ)
-ಡಾಟ ಭಂಡಾಟ ಮಾಡುತಿಹೆ ನಾನು!
ನಂಬಿಗೆ ಬಲವಾಗಲೆಂಬೆ ನೀನು!
ದಿಕ್ಕುಗೆಟ್ಟು ಬಳಲುತಿಹೆ ನಾನು!
ಸುರಿಸುತಿಹೆ ಬಲವರ್ಷ ನೀನು! (ಅ)
-ವರಿವರಿಗಡ್ಡ ಬೀಳುವೆ ನಾನು!
ರಗುರು ದತ್ತನಾಗಿಹೆ ನೀನು!
ನೀನೇ ನಾನೆಂಬುದನರಿಯೆ ನಾನು! (ನಾ)
-ನು, ನೀನು, ನಿರಂಜನಾದಿತ್ಯನೇನು???

ದತ್ತನೆಲ್ಲಿ ಕೂಡಿಟ್ಟಿಹನು ವಿತ್ತ? (ಎ)

-ತ್ತ, ನೋಡಿದರತ್ತವನದೇ ಚಿತ್ತ! (ಮ)
-ನೆ, ಮಠ, ಕಟ್ಟಿರಬೇಕೇನು ದತ್ತ? (ಅ)
-ಲ್ಲಿಲ್ಲೋಡಾಡುವವನೊಬ್ಬನುನ್ಮತ್ತ!
ಕೂಸುಗಳ ಕೂಸಾಗಿ ಶಾಂತ ಚಿತ್ತ (ಮ)
-ಡಿ ಮೈಲಿಗೆನ್ನದಾತ್ಮಾ ರಾಮ ದತ್ತ! (ಹು)
-ಟ್ಟಿ, ಸಾಯದವನಪ್ರಮೇಯ ಚಿತ್ತ!
ರಿ, ಹರ, ಬ್ರಹ್ಮೈಕ್ಯಾನಂದ ದತ್ತ! (ತ)
-ನು, ಮನ ತಾನಲ್ಲದಗೇಕೆ ವಿತ್ತ?
ವಿರಕ್ತ ಗುರುದತ್ತ ನಿತ್ಯ ತೃಪ್ತ! (ವಿ)
-ತ್ತ ನಿರಂಜನಾದಿತ್ಯಾನಂದ ದತ್ತ!!!

ಅಂದು ಬರಬೇಕಾದವನಿಂದು ಬಂದ!

ದುರಿತದೂರ ಗುರುದೇವ ನೀನೆಂದ!
ರಡಾಯಿತೆನ್ನ ಬದುಕು ಬಾಳೆಂದ! (ಪ)
-ರಮಾರ್ಥ ಜೀವನಾನುಗ್ರಹ ಮಾಡೆಂದ!
ಬೇರಿನ್ಯಾರೂ ನನಗಿಲ್ಲ ಗತಿಯೆಂದ!
ಕಾಲಚಕ್ರದೇಟು ಸಹಿಸೆ ನಾನೆಂದ!
ಯೆದೋರಿ ಕಾಪಾಡಬೇಕು ನೀನೆಂದ! (ಭ)
-ವಬಂಧ ಸಂಬಂಧ ಸಾಕಿನ್ನೆನಗೆಂದ!
ನಿಂದಿಸುತನ್ಯರನು ಕೆಟ್ಟೆ ನಾನೆಂದ!
ದುರ್ವಿಷಯ ವ್ಯಾಪಾರ ಕಠಿಣವೆಂದ!
ಬಂಧು, ಬಾಂಧವರೆಲ್ಲಾ ಕೈ ಬಿಟ್ಟರೆಂದ!
ತ್ತ ನಿರಂಜನಾದಿತ್ಯ ಸಲಹೆಂದ!!!

ಲೋಭ ಬುದ್ಧಿಯಿನ್ನೂ ಹೋಗಿಲ್ಲ!

ಕ್ತಿಯ ಸ್ವರೂಪ ಗೊತ್ತಿಲ್ಲ!
ಬುಧವಾರವಾಗ್ಲೇ ಬಂತಲ್ಲ! (ಸಿ)
-ದ್ಧಿ, ರಿದ್ಧಿಗಳಾಸೆ ಸತ್ತಿಲ್ಲ! (ಬಾ)
-ಯಿ ಬಡಾಯಿ ಕಮ್ಮಿಯಾಗಿಲ್ಲ! (ತ)
-ನ್ನೂರ ದಾರಿ ದೂರ ಸಾಗಿಲ್ಲ!
ಹೋರಾಟದಾಟ ಮುಗಿದಿಲ್ಲ! (ಯೋ)
-ಗಿರಾಜನಾರೆಂಬರಿವಿಲ್ಲ! (ಬ)
-ಲ್ಲ ನಿರಂಜನಾದಿತ್ಯನೆಲ್ಲ!!!

ಅಗಲಿದ ಪತಿಯಾತ್ಮಕ್ಕೆ ಶಾಂತಿ! (ಭ)

ವಂತನ ಪೂಜೆಯಿಂದದು ಪ್ರಾಪ್ತಿ! (ಮ)
-ಲಿನಾಚಾರದಿಂದೊದಗದಾ ಶಾಂತಿ! (ಹೃ)
-ದಯ ಶುದ್ಧಿಯರ್ಘ್ಯದಿಂದದು ಪ್ರಾಪ್ತಿ!
ರಮಾನ್ನ, ಭಕ್ಷ್ಯದಿಂದಲ್ಲಾ ಶಾಂತಿ! (ಪ)
-ತಿಯಾಜ್ಞೆ ಪಾಲಿಸಿದರದು ಪ್ರಾಪ್ತಿ! (ಬಾ)
-ಯಾರಿದಾಗನ್ನದಿಂದಾಗದು ಶಾಂತಿ! (ಆ)
-ತ್ಮ ನಿಷ್ಠೆಯಿಂದ ನಿತ್ಯ ಶಾಂತಿ ಪ್ರಾಪ್ತಿ! (ಮಿ)
-ಕ್ಕೆಲ್ಲಾ ಕರ್ಮಗಳಿಂದಾಗದಾ ಶಾಂತಿ! (ಅ)
-ಶಾಂತಿಯಾಶಾ ನಾಶಾದಾಗದು ಪ್ರಾಪ್ತಿ! (ಸ್ಥಿ)
-ತಿ ನಿರಂಜನಾದಿತ್ಯಾನಂದಾ ಶಾಂತಿ!!!

ನೀನು ಸಿದ್ಧ ಜೀವನ್ಮುಕ್ತನೇನು? (ಅ)

-ನುಮಾನವಿನ್ನೂ ಹೋಗಿಲ್ಲವೇನು?
ಸಿರಿಯಾಸೆ ನನಗಿಹುದೇನು? (ಶು)
-ದ್ಧ ಜೀವನ ನನ್ನದಲ್ಲವೇನು?
ಜೀನನಾಗಿ ನಾನಿರುವೆನೇನು? (ಅ)
-ವರಿವರ ಮಾತಾಡುವೆನೇನು? (ತ)
-ನ್ಮುದಿತನಾಗಿ ನಾನಿಲ್ಲವೇನು? (ಭ)
-ಕ್ತರೊಳಗೆ ಬೆರೆತಿಲ್ಲವೇನು?
ನೇತ್ರದಲ್ಲಿ ಬೆಳಕಿಲ್ಲವೇನು? (ನಾ)
-ನು ನಿರಂಜನಾದಿತ್ಯಾತ್ಮ ಭಾನು!!!

ನಾಕೊಟ್ಟೆ, ನೀ ತೊಟ್ಟೆ, ಬಟ್ಟೆಗೆಟ್ಟೆ!

ಕೊರಗದೀಗ ತೋರಾತ್ಮ ನಿಷ್ಟೆ! (ಬ)
-ಟ್ಟೆ ಬರೆಗಳೊಳಗೇ ಬಚ್ಚಿಟ್ಟೆ!
ನೀಚರೊಡನಾಡಿಯಾಗಿಬಿಟ್ಟೆ!
ತೊಡಕುಗಳಲಕ್ಷಿಸಿ ಕೆಟ್ಟೆ! (ಪ)
-ಟ್ಟೆ ಪೀತಾಂಬರಗಳಿಷ್ಟ ಪಟ್ಟೆ!
ಡಬಗ್ಗರಿಗಷ್ಟಿಷ್ಟು ಕೊಟ್ಟೆ! (ತ)
-ಟ್ಟೆ, ಲೋಟಗಳ ಹೆಚ್ಚಿಸಿ ಬಿಟ್ಟೆ! (ಹ)
-ಗೆಗಳಾಟಕ್ಕವಕಾಶ ಕೊಟ್ಟೆ! (ಸು)
-ಟ್ಟೆ ನಿರಂಜನಾದಿತ್ಯನಾಗ್ಬಿಟ್ಟೆ!!!

ಹನುಮನಾಗಿ ಜಲಧಿಯ ದಾಟಿದೆನಂದು! (ಅ)

-ನುಪಮ ಸಾಹಸಿ ಭಕ್ತನೆನಿಸಿದೆನಂದು!
ರ್ಕಟ ಮನೋಜಯನೆಂದೆನಿಸಿದೆನಂದು!
ನಾಮ ಭಜನಾನಂದದಿ ಲಯಿಸಿದೆನಂದು!
ಗಿರಿಯ ಕಿತ್ತು ತಂದ ಧೀರನಾದೆ ನಾನಂದು!
ನಕಜಾತೆಯ ದೀನದಾಸನಾದೆನಂದು!
-ಲಯಗೊಳಿಸಿದೆ ಅಶೋಕವನವನಂದು! (ವಿ)
-ಧಿಯ ಪಾಶಕ್ಕೆ ಕಟ್ಟು ಬಿದ್ದೆ ಮೌನದಿಂದಂದು!
ಮ, ನಿಯಮಾದ್ಯಷ್ಠಾಂಗ ಯೋಗಿಯಾದೆನೆಂದು!
ದಾಶರಥಿಯ ಪ್ರಿಯ ಭಂಟನಾದೆ ನಾನಂದು! (ಭೇ)
-ಟಿ ಭರತ ಬಂಧುಗಿತ್ತೆ ಆನಂದದಿಂದಂದು! (ಸ)
-ದೆಬಡಿದಿಕ್ಕಿದೆ ರಕ್ಕಸರನ್ನು ನಾನಂದು! (ಅ)
-ನಂತ ನಾಮ ರೂಪಿಯಾಗಿಹೆನು ನಾನೆಂದೆಂದು! (ಇಂ)
-ದು ನಿರಂಜನಾದಿತ್ಯನಾಗಿಹೆ ನೋಡು ಬಂದು!!!

ನಿರಂಜನಾದಿತ್ಯನೆಂಬವನಾರಮ್ಮಾ? (ನಿ)

-ರಂಜನಾನಂದ ಸರಸ್ವತಿ ಕಾಣಮ್ಮಾ!
ಗದ್ಗುರು ಶಿವಾನಂದನ ಕಂದಮ್ಮಾ!
ನಾಮ ಸಂಕೀರ್ತನಾನಂದನವನಮ್ಮಾ!
ದಿನ, ರಾತ್ರ್ಯಖಂಡ ಭಜನಾನಂದಮ್ಮಾ!
ತ್ಯಜಿಸಿದನೆಲ್ಲಾ ದತ್ತಾಜ್ಞೆಯಂತಮ್ಮಾ!
ನೆಂಟನೂ, ಭಂಟನೂ ತಾನಾಗಿಹನಮ್ಮಾ!
ಯಲಾಡಂಬರವಿಲ್ಲದವನಮ್ಮಾ!
ರ ಕರುಣಾಮೂರ್ತಿಯಾಗಿಹನಮ್ಮಾ!
ನಾಮ ರೂಪಾತೀತವನ ಸ್ಥಿತಿಯಮ್ಮಾ!
ಘುವಂಶದಾದಿ ಪುರುಷ ತಾನಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಂತರ್ಯಾಮಿಯಮ್ಮಾ!!!

ಭ್ರಮರಾಂಬೆ ನನ್ನಮ್ಮ ಕಾಣಮ್ಮಾ!

ಹಾದೇವನೆನ್ನ ಪಿತನಮ್ಮಾ! (ಸು)
-ರಾಂಗನೆಯರು ದಾಸಿಯರಮ್ಮಾ!
ಬೆನಕನೆನ್ನನು ಜಾತನಮ್ಮಾ!
ವಿಲೆನಗೆ ವಾಹನವಮ್ಮಾ! (ನ)
-ನ್ನ ನಿಲಯವೆಲ್ಲಾ ಕಡೆಯಮ್ಮಾ! (ಅ)
-ಮ್ಮನಿಗೆ ಪ್ರಿಯಪುತ್ರ ನಾನಮ್ಮಾ!
ಕಾಲನ ಭಯ ನನಗಿಲ್ಲಮ್ಮಾ! (ಹ)
-ಣ ಕಾಸಿಗಾಶಿಪವನಲ್ಲಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾಗುಹಮ್ಮಾ!!!

ನೀನಾರೆಂದು ಸರಿಯಾಗಿ ಹೇಳಪ್ಪಾ!

ನಾನು ನೀನೇ ಅಲ್ಲವೇನೋ ಸೂರಪ್ಪಾ? (ನೂ)
-ರೆಂಟು ಬಾರಿ ಜಪಿಸೀ ತತ್ವವಪ್ಪಾ!
ದುರಿತ ದೂರಪ್ಪುದಿದರಿಂದಪ್ಪಾ!
ರಸ್ವತ್ಯಾಧಾರ ಸರ್ವರಿಗಪ್ಪಾ! (ಹ)
-ರಿ, ಹರ, ಬ್ರಹ್ಮ ಜ್ಞಾನದರಿಂದಪ್ಪಾ!
-ಯಾವ ಮತವಾದರೇನಾಯಿತಪ್ಪಾ? (ಯೋ)
-ಗಿ ರಾಜನ ಪ್ರಾಣಲಿಂಗವದಪ್ಪಾ!
ಹೇಳುವೆನಿದ ಶರಣರಿಗಪ್ಪಾ! (ಒ)
-ಳ, ಹೊರಗೀ ಸತ್ಯ ಸದಾ ನೋಡಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯ ಸರ್ವಾತ್ಮಪ್ಪಾ!!!

ನಾನು ಕಣ್ಮರೆಯಾಗುವುದಿಲ್ಲ! (ತ)

-ನು ನಾನೆಂದರದಾಗುವುದಿಲ್ಲ!
ಣ್ಣು ಕಂಡದ್ದೊಂದೂ ಸ್ಥಿರವಲ್ಲ! (ಆ)
-ಣ್ಮನಲ್ಲೊಂದಾದರೆ ದುಃಖವಿಲ್ಲ! (ಹ)
-ರೆಯದ ಕಳೆಗುಂದುವುದಿಲ್ಲ!
ಯಾರ ಭಯವೂ ಇರುವುದಿಲ್ಲ!
ಗುರು ಕರುಣೆ ಬೇರಿನ್ನೇನಿಲ್ಲ! (ಸಾ)
-ವು, ನೋವಿನ ಅಂಜಿಕೆಯೇ ಇಲ್ಲ!
ದಿನ, ರಾತ್ರಿ ನಿಜಾನಂದವೆಲ್ಲ! (ನ)
-ಲ್ಲ ನಿರಂಜನಾದಿತ್ಯ ನಿರ್ಮಲ!!!

ನೀನಂದೆ, ನಾ ಬಂದೇನು ಮುಂದೆ?

ನಂಬಿದೆನು ನಾ ನಿನ್ನ ತಂದೆ! (ತಿಂ)
-ದೆ ನೀನುಣಿಸಿದ್ದೆಲ್ಲ ತಂದೆ!
ನಾಳೆಗೇನೂ ಇಟ್ಟಿಲ್ಲ ತಂದೆ!
ಬಂತು ತೃಪ್ತಿ ನಿನ್ನಿಂದ ತಂದೆ!
ದೇವರ ದೇವ ನೀನು ತಂದೆ! (ತ)
-ನುಜನುದ್ಧಾರ ಮಾಡು ತಂದೆ!
ಮುಂದೆ, ಹಿಂದೆ, ಅರಿಯೆ ತಂದೆ! (ತಂ)
-ದೆ ನಿರಂಜನಾದಿತ್ಯನೆಂದೆ!!!

ನೀನು ಹೇಳಿದೆ, ನಾನು ಬರೆದೆ!

ನುಡಿದಂತಿರಬೇಕೆಂದೊರೆದೆ!
ಹೇಳಿದ್ದು ಕೇಳಬೇಕೆಂದೊರೆದೆ! (ಬಾ)
-ಳಿಗಿದು ಅಗತ್ಯವೆಂದೊರೆದೆ! (ಎ)
-ದೆ ಶುದ್ಧವಾಗಿರಿಸೆಂದೊರೆದೆ!
ನಾಮ ಭಜನೆ ಮಾಡೆಂದೊರೆದೆ! (ಅ)
-ನುಮಾನ ಮಾಡಬೇಡೆಂದೊರೆದೆ!
ಯಲಾಡಂಬರೇಕೆಂದೊರೆದೆ! (ಮ)
-ರೆಯಬಾರದಪ್ಪನೆಂದೊರೆದೆ! (ತಂ)
-ದೆ, ನಿರಂಜನಾದಿತ್ಯಾತ್ಮನೆಂದೆ!!!

ನಿನಗೀಗೇನಾಗಬೇಕಮ್ಮಾ?

-ನನಗರುಹಾರೆಂದು ಬೊಮ್ಮಾ! (ಯೋ)
-ಗೀಶ್ವರನೆಂಬರವನಮ್ಮಾ! (ಭೋ)
-ಗೇಚ್ಛೆನಗೇಕಿತ್ತನಾ ಬೊಮ್ಮಾ? (ತಾ)
-ನಾರೆಂದು ತಿಳಿಸಲಿಕ್ಕಮ್ಮಾ! (ಈ)
-ಗ ನಾನೆಂತಾಗುವುದಾ ಬೊಮ್ಮಾ?
ಬೇಕದಕೆ ನಿರ್ಮೋಹವಮ್ಮಾ!
ರುಣಿಸಲದನಾ ಬೊಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾಗಮ್ಮಾ!!!

ನಾನೂ, ನೀನು, ಅವನಯ್ಯಾ!

ನೂರಾರು ರೂಪನವನಯ್ಯಾ!
ನೀನೇಕೆ ದುಃಖಿಪುದಯ್ಯಾ!
ನೂರೆಂಟು ನಾಮವಗಯ್ಯಾ!
ಲ್ಲೂ, ಇಲ್ಲೂ, ಇಹನಯ್ಯಾ!
ರ ಗುರು ಶ್ರೀ ರಾಮಯ್ಯಾ! (ಅ)
-ನವರತ ಜಪಿಸಯ್ಯಾ! (ಅ)
-ಯ್ಯಾ,! ನಿರಂಜನಾದಿತ್ಯಯ್ಯಾ!!!

ಈ ತಪಸ್ಸಿನ್ನೆಷ್ಟು ದಿನವಪ್ಪಾ? (ಪಿ)

-ತನಿಷ್ಟ ಪೂರ್ಣವಾಗಬೇಕಪ್ಪಾ!
ತಿತೋದ್ಧಾರವಾಗಬೇಕಪ್ಪಾ! (ಹು)
-ಸಿಯ ಹೆಸರಡಗಬೇಕಪ್ಪಾ! (ಹ)
-ನ್ನೆರಡನೆಯದೇಳಬೇಕಪ್ಪಾ! (ಅ)
-ಷ್ಟು ಬಲ ವೃದ್ಧಿಯಾಗಬೇಕಪ್ಪಾ!
ದಿವ್ಯ ಜ್ಯೋತಿ ಬೆಳಗಬೇಕಪ್ಪಾ!
ವ ಯುಗಾಗ ಬರಬೇಕಪ್ಪಾ! (ಭು)
-ವನ ವೈಕುಂಠವಾಗಬೇಕಪ್ಪಾ! (ಅ)
-ಪ್ಪಾ ನಿರಂಜನಾದಿತ್ಯಾನಂದಪ್ಪಾ!!!

ನೀನೂ ಅಪ್ಪ, ನಾನೂ ಅಪ್ಪಾ ಶಿವಪ್ಪ! (ಏ)

-ನೂ ಸಂಶಯವಿದರಲ್ಲಿಲ್ಲವಪ್ಪ!
ವನಿಗೊಂದಾಟವಿದೆಲ್ಲವಪ್ಪ! (ಚ)
-ಪ್ಪರ ವಿಶಾಲಾಕಾಶವಿದಕಪ್ಪ!
ನಾಟಕ ಸ್ವಾರಸ್ಯವಾಗಿದೆಯಪ್ಪ!
ನೂಕು, ನುಗ್ಗಲು ಹೇಳಿತೀರದಪ್ಪ!
ನುದಿನವಿದಾಗುತಿದೆಯಪ್ಪ! (ತ)
-ಪ್ಪಾಡಿದರಾಗುವುದು ಶಿಕ್ಷೆಯಪ್ಪ!
ಶಿವಪ್ಪನಿದಕೆಲ್ಲಾ ನಾಯಕಪ್ಪ!
ರ ರಂಗನಾಯಕಿ ಗೌರಿಯಪ್ಪ! (ಅ)
-ಪ್ಪಾ ನಿರಂಜನಾದಿತ್ಯಾದಿ ಮೂಲಪ್ಪ!!!

ನಾ ಬಿದ್ದೆ, ನೀ ಬಿದ್ದೆ, ಎಲ್ಲಾ ಒದ್ದೆ ಮುದ್ದೆ!

ಬಿಸಿ ಬಾರದಂತೆ ಮೋಡದೊಳಗಿದ್ದೆ! (ನಿ)
-ದ್ದೆಗೆಡೆ ಕಾಣದೆ ನಡುಗುತ್ತಲಿದ್ದೆ!
ನೀರಾಗಿ ಎಲ್ಲೆಲ್ಲೂ ಹರಿದಾಡುತ್ತಿದ್ದೆ!
ಬಿರುಗಾಳಿಯಾಗ್ಯೆಲ್ಲೆಲ್ಲೂ ಬೀಸುತ್ತಿದ್ದೆ! (ಗ)
-ದ್ದೆ, ಹೊಲ, ಮನೆಯಲ್ಲಾ ಆವರಿಸಿದ್ದೆ!
ಲ್ಲೇನು ಮಾಡಬೇಕೆಂದರಿಯದಿದ್ದೆ! (ಚೆ)
-ಲ್ಲಾಟ, ಒದ್ದಾಟಗಳಾನಂದಿಸುತಿದ್ದೆ!
ಳಗಿನ ಗುಟ್ಟು ಗುಪ್ತವಾಗಿಟ್ಟಿದ್ದೆ! (ಸ)
-ದ್ದೆನಗೇಕೆಂದು ಮೌನಮುದ್ರೆಯಿಂದದ್ದೆ!
-ಮುಗಿಸಬೇಕೀ ಭ್ರಮೆಯನೆನುತಿದ್ದೆ! (ಎ)
-ದ್ದೆ, ನಿರಂಜನಾದಿತ್ಯ ನಾ, ನೀನೆಂದೆದ್ದೆ!!!

ಕಿತ್ತಳೆ ಸಿಪ್ಪೆ ಹೊತ್ತಳಾ ತಿಪ್ಪೆ! (ಸ)

-ತ್ತ ಮೇಲೆ ಬನ್ನಿರೆಂಬಳಾ ತಿಪ್ಪೆ! (ಕೊ)
-ಳೆತರೂ ಸ್ವಾಗತಿಪಳಾ ತಿಪ್ಪೆ! (ಹ)
-ಸಿ ಬಿಸಿಗಳುಣ್ಣುವಳಾ ತಿಪ್ಪೆ! (ಸ)
-ಪ್ಪೆ, ಹುಳಿ, ಖಾರ ಪ್ರಿಯಳಾ ತಿಪ್ಪೆ!
ಹೊಸದು, ಹಳೇದೆನ್ನಳಾ ತಿಪ್ಪೆ (ಉ)
-ತ್ತಮಾಧಮವೆಂದೆನ್ನಳಾ ತಿಪ್ಪೆ! (ಬಾ)
-ಳಾಟಕ್ಕೆ ಸಹಾಯಕಳಾ ತಿಪ್ಪೆ!
ತಿರುಗಾಡದಿರುವಳಾ ತಿಪ್ಪೆ! (ತಿ)
-ಪ್ಪೆ ನಿರಂಜನಾದಿತ್ಯನಂತಿಪ್ಪೆ!!!

ಇರುಳು ಕಂಡ ಬಾವಿಯಲ್ಲಿ ಹಗಲು ಬಿದ್ದ! (ಮ)

-ರುಳು ಮಾತುಗಳಾಲಿಸಿ ಮೈಮರೆತುಬಿದ್ದ! (ಗೋ)
-ಳು ಸಹಿಸಲಾಗದೆ ಸಹಾಯಿಯಾಗಿ ಬಿದ್ದ!
ಕಂಗೆಟ್ಟವರಿಗೆ ದಿಕ್ಕು ತೋರಹೋಗಿ ಬಿದ್ದ! (ಬ)
-ಡವರಿಗಾಧಾರವಾಗ್ಯಾಧಾರ ತಪ್ಪಿ ಬಿದ್ದ!
ಬಾಯಿ ಬಡಾಯಿಗಳಿಗೆ ಬಲಿಯಾಗಿ ಬಿದ್ದ!
ವಿಷ ಮಿಶ್ರಾನ್ನವೆಂದರಿಯದೆ ತಿಂದು ಬಿದ್ದ!
ಜಮಾನಗಿರಿ ಎಲ್ಲರಿಗಿತ್ತು ತಾ ಬಿದ್ದ! (ಮ)
-ಲ್ಲಿಗೆಯ ಮಾಲೆಗಳಿಗೆ ಮನಸೋತು ಬಿದ್ದ!
ಣ್ಣು ಹಂಪಲುಗಳರ್ಪಣೆಗೆ ಹಿಗ್ಗಿ ಬಿದ್ದ! (ಹಾ)
-ಲು ಮೊಸರು ಬಡಿಸಿ ಬಡವಾಗಿ ತಾ ಬಿದ್ದ!
ಬಿಗಡಾಯಿಸಿದೆ ಕಾಲವೆಂದರಿತೂ ಬಿದ್ದ! (ಬಿ)
-ದ್ದ ನಿರಂಜನಾದಿತ್ಯ ತಾನೆಂದರಿತು ಎದ್ದ!!!

ಇರುಳು ಕಂಡ ಬಾವಿಯಲ್ಲಿ ಹಗಲು ಬಿದ್ದ! [ಮೀ]

-ರುವುದಕ್ಕಾಗದು ಪ್ರಾರಬ್ಧವೆಂಬುದು ಸಿದ್ಧ! (ಹಾ)
-ಳು ಬಾವಿಯ ರಾತ್ರಿನೋಡಿ ಎಚ್ಚರವಾಗಿದ್ದ!
ಕಂಡೂ ಕಾಣದಂತಾಗಿ ಹಗಲೇ ತಾನು ಬಿದ್ದ! (ಮೃ)
-ಡನನುಗ್ರಹವಾದಾಗವನು ಮೇಲಕ್ಕೆದ್ದ!
ಬಾಲಧ್ರುವರಾಯ ಪರಮಪದದಿಂದೆದ್ದ!
ವಿಶ್ವಾಮಿತ್ರ ಬ್ರಹ್ಮ ಋಷಿ ತಾನೆಂದೆನುತೆದ್ದ!
ಮ ಪಾಶ ಹರಿದು ಮಾರ್ಕಂಡೇಯ ತಾನೆದ್ದ! (ಮ)
-ಲ್ಲಿಕಾರ್ಜುನನಿಂದರ್ಜುನನೆಬ್ಬಿಸಿಕೊಂಡೆದ್ದ!
ರಿಭಜನಾ ಬಲದಿಂದ ಪ್ರಹ್ಲಾದನೆದ್ದ!
ಜರಾಜ ಕಷ್ಟದಿಂದ ಬಿಡಿಸಿಕೊಂಡೆದ್ದ! (ಮೇ)
-ಲುಸಿರೆಳೆದ ಸತ್ಯವಾನ ಜೀವದಿಂದದ್ದೆ!
ಬಿಡದಿದ್ದರೆ ಗುರುವಾದ ವಿಜಯ ಸಿದ್ಧ! (ಎ)
-ದ್ದ ನಿರಂಜನಾದಿತ್ಯ ಜೀವನ್ಮುಕ್ತಾತ್ಮ ಸಿದ್ಧ!!!

ನಿತ್ಯ ನಿನ್ನನ್ನು ನಾ ನೋಡಬೇಕು! (ಭೃ)

-ತ್ಯನೆಂದನ್ನ ಸ್ವೀಕರಿಸಬೇಕು!
ನಿಶಿ, ದಿನ ಸೇವೆ ಕೊಡಬೇಕು! (ಅ)
-ನ್ನ ಬಟ್ಟೆಯಾಸೆ ಯೋಡಿಸಬೇಕು! (ನಿ)
-ನ್ನು ಚ್ಛಿಷ್ಟ ದಯಪಾಲಿಸಬೇಕು!
ನಾಚಿಕೆ, ಲಜ್ಜೆ, ಬಿಡಿಸಬೇಕು!
ನೋಟ, ಕೂಟ ಸಾಕುಮಾಡಬೇಕು! (ಒ)
-ಡನಾಟ ನಿನ್ನದೇ ಆಗಬೇಕು!
ಬೇರೆ ಕಡೆಗೋಡದಿರಬೇಕು! (ಬೇ)
-ಕು, ನಿರಂಜನಾದಿತ್ಯ ನೀ ಬೇಕು!!!

ಇಂದಿನ ದಿನ ಸುದಿನವಯ್ಯಾ! (ಮುಂ)

-ದಿನದೆಂತಿರುವುದೋ ಕಾಣೆನಯ್ಯಾ!
ಶ್ವರವ ನಂಬಿರಬೇಡಯ್ಯಾ! (ಹಿಂ)
-ದಿನ ಯೋಚನೆ ಬಿಟ್ಟುಬಿಡಯ್ಯಾ!
ಮಿಸು ಗುರುಪಾದಕ್ಕೀಗಯ್ಯಾ!
ಸುರಧೇನು ಸಮಾನವದಯ್ಯಾ!
ದಿನ ರಾತ್ರ್ಯದನು ನೆನೆಯಯ್ಯಾ!
ರಳಾಟ ಬಿಟ್ಟೋಡುವುದಯ್ಯಾ! (ಶಿ)
-ವ ಸಾಯುಜ್ಯ ಲಭಿಸುವುದಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯ ಸಾಂಬಯ್ಯಾ!!!

ನಿನ್ನಂಥಾ ಸುಕೃತಶಾಲಿಯಾರು ವೀಣಾ? [ನ]

-ನ್ನಂತರಂಗ ಸೂರೆಗೊಂಡೆ ನೀನು ವೀಣಾ! (ವೃ)
-ಥಾಲಾಪ ಮಾಡುವುದಿಲ್ಲ ನೀನು ವೀಣಾ!
ಸುಮಧುರ ಸಂಗೀತ ನಿನ್ನದು ವೀಣಾ!
ಕೃತಿಗಳ ಸುರಿಮಳೆ ಗೈವೆ ವೀಣಾ!
ರತರ ರಾಗಲಾಪ ಮಾಳ್ಪೆ ವೀಣಾ!
ಶಾಸ್ತ್ರೋಕ್ತ ರೂಪ ಲಾವಣ್ಯೆ ನೀನು ವೀಣಾ! (ಒ)
-ಲಿವೆ ಭಕ್ತರಿಗೆ ಸದಾ ನೀನು ವೀಣಾ!
ಯಾವ ಮತಭೇದ ನಿನಗಿಲ್ಲ ವೀಣಾ! (ಪೌ)
-ರುಷ ಕೊಚ್ಚಿಕೊಳ್ಳುವವಳಲ್ಲ ವೀಣಾ! (ಕ)

ವೀಣಾರಾಣಿಗೆ ನೀನೇನೇನು ಕೊಟ್ಟೆ? (ಋ)

-ಣಾನುಬಂಧ ದೊಡ್ಡದೆಂದಂದು ಬಿಟ್ಟೆ!
ರಾಗ ರಸಾಸ್ವಾದಕ್ಕೆ ಕಿವಿ ಕೊಟ್ಟೆ! (ದ)
-ಣಿಯದೇ ಸೇವೆ ಸಾಗಲೆಂದು ಬಿಟ್ಟೆ! (ನ)
-ಗೆಮೊಗದಿಂದ ಸುಸ್ವಾಗತ ಕೊಟ್ಟೆ!
ನೀನು ಮಹಾಮಹಿಮಳೆಂದು ಬಿಟ್ಟೆ!
ನೇರಾಗಿ ಕುಳಿತು ದರ್ಶನ ಕೊಟ್ಟೆ!
ನೇತ್ರಗಳೆರಡನ್ನೂ ಮುಚ್ಚಿಬಿಟ್ಟೆ! (ತ)
-ನು ಮನಗಳನ್ನವಳಿಗೆ ಕೊಟ್ಟೆ!
ಕೊನೆ ತನಕ ಮೌನಿಯಾಗಿ ಬಿಟ್ಟೆ! (ಕೊ)
-ಟ್ಟೆ, ನಿರಂಜನಾದಿತ್ಯನನ್ನೇ ಕೊಟ್ಟೆ!!!

ವೀಣೆಗಾರು ಮಾಲೆ ಹಾಕಿದರಮ್ಮಾ? (ಎ)

-ಣೆಯವಳಿಗಾರೂ ಸರಿಯಿಲ್ಲಮ್ಮಾ!
ಗಾಯನ ಶಿರೋಮಣಿಯವಳಮ್ಮಾ!
ರುಜುಮಾರ್ಗಿ ತಾನಾಗಿರುವಳಮ್ಮಾ!
ಮಾತು, ಗೀತವಳಿಗೆ ಬೇಕಿಲ್ಲಮ್ಮಾ! (ಲೋ)
-ಲೆ ಸತತ ನಾದಬ್ರಹ್ಮದಲ್ಲಮ್ಮಾ!
ಹಾವ, ಭಾವ, ಬಹು ಗಂಭೀರವಮ್ಮಾ!
ಕಿರುನಗೆ ಸದಾ ಮುಖದಲ್ಲಮ್ಮಾ!
ರ್ಶನ ಮನೋಹರವಳದಮ್ಮಾ! (ಅ)
-ರಸಿ ಬಂದಳು ವರನೆಡೆಗಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯ ಮಾಲಿಕಮ್ಮಾ!!!

ಪರಿವರ್ತನೆಯಾದ ಮೇಲೆ ಬಾ! [ಅ]

-ರಿಕುಲ ನಿರ್ಮೂಲವಾದಾಗ ಬಾ! (ಅ)
-ವರಿವರ ಮಾತು ಬಿಟ್ಟಾಗ ಬಾ! (ಕ)
-ರ್ತನಲ್ಲಿ ನಂಬಿಗೆ ಬಂದಾಗ ಬಾ! (ಮ)
-ನೆ, ಹೊಲದಾಸೆಯಳಿದಾಗ ಬಾ! (ಮಾ)
-ಯಾ, ಜಾಲ ಪೂರ್ಣ ಹರಿದಾಗ ಬಾ!
ತ್ತನಪ್ಪಣೆ ಸಿಕ್ಕಿದಾಗ ಬಾ!
ಮೇಲ್ಮುಸುಕು ಕಿತ್ತೊಗೆದಾಗ ಬಾ! (ತ)
-ಲೆ ಹರಟೆ ಬರಿದಾದಾಗ ಬಾ!
ಬಾ, ನಿರಂಜನಾದಿತ್ಯಂದಾಗ ಬಾ!!!

ಸೇವಾ ನಿರತೆ ಸುಮಪ್ರಿಯೆ!

ವಾಙ್ಮನಾತೀತಾತ್ಮಳಾ ಪ್ರಿಯೆ!
ನಿರ್ಮಲ ಶೀಲಾತ್ಮಳಾ ಪ್ರಿಯೆ! (ವ)
-ರಗುರು ಪ್ರೇಮಾತ್ಮಳಾ ಪ್ರಿಯೆ! (ಮಾ)
-ತೆ ಸರ್ವ ಸೌಮಂಗಳಾ ಪ್ರಿಯೆ!
ಸುಖ, ದುಃಖ ಸಮಳಾ ಪ್ರಿಯೆ!
ತ್ಸರ ರಹಿತಳಾ ಪ್ರಿಯೆ!
ಪ್ರಿಯಾಪ್ರಿಯ ವರ್ಜಳಾ ಪ್ರಿಯೆ! (ಛಾ)
-ಯೆ, ನಿರಂಜನಾದಿತ್ಯ ಪ್ರಿಯೆ!!!

ವಿವೇಕ ಚೂಡಾಮಣಿ ಗೀರ್ವಾಣಿ!

ವೇದಸಾರನ ಹೃದಯ ರಾಣಿ!
ರ್ಮಯೋಗದ ನಿಸ್ವಾರ್ಥ ವಾಣಿ!
ಚೂಡಾಲಾತ್ಮರೂಪಿ ಪೂರ್ಣ ಜ್ಞಾನಿ! (ಮೃ)
-ಡಾದಿ ವಂದ್ಯೆ ಶ್ರೀ ವಿದ್ಯಾಭಿಮಾನಿ!
ದಾಲಸಾಭಿದಾನೀ ಮೋಹಿನಿ! (ಮ)
-ಣಿ ಮಕುಟಾಲಂಕಾರ ಶೋಭಿನಿ!
ಗೀತ ಗೋವಿಂದಾನಂದ ವರ್ಷಿಣಿ! (ಸ)
-ರ್ವಾಭೀಷ್ಟಾನುಗ್ರಹ ಪ್ರದಾಯಿನಿ! (ಧ)
-ಣಿ, ಶ್ರೀ ನಿರಂಜನಾದಿತ್ಯ ಮೌನಿ!!!

ಸೃಷ್ಟಿಯ ವ್ಯಾಪಾರಕ್ಕೊಬ್ಬ ಶೆಟ್ಟಿ! [ದೃ]

-ಷ್ಟಿಸಲಿಕ್ಕಾಗದಿರ್ಪನಾ ಶೆಟ್ಟಿ! (ಆ)
-ಯ, ವ್ಯಯ ಲೆಃಖವಿಡನಾ ಶೆಟ್ಟಿ!
ವ್ಯಾಮೋಹವಿಲ್ಲದವನಾ ಶೆಟ್ಟಿ!
ಪಾಪ, ಪುಣ್ಯ ಯೋಚಿಸನಾ ಶೆಟ್ಟಿ! (ಯಾ)
-ರನ್ನೂ ಲಕ್ಷ್ಯಕ್ಕೆ ತರನಾ ಶೆಟ್ಟಿ! (ತ)
-ಕ್ಕೊಳ್ಳುವ, ಕೊಡುವ, ಜಾಣಾ ಶೆಟ್ಟಿ! (ಒ)
-ಬ್ಬರ ಕೈಗೂ ನಿಲುಕನಾ ಶೆಟ್ಟಿ! (ಅ)
-ಶೆಯಿಂದನ್ಯಾಯ ಮಾಡನಾ ಶೆಟ್ಟಿ! (ಗ)
-ಟ್ಟಿ, ಶ್ರೀ ನಿರಂಜನಾದಿತ್ಯ ಶೆಟ್ಟಿ!!!

ನಿನ್ನ ಪಾಡಿಗೆ ನೀನಿರಬೇಕು![ನ]

-ನ್ನ ಪಾಡೇನೆಂದು ತಿಳಿಸಬೇಕು!
ಪಾಪಿ ನೀನಲ್ಲೆಂದರಿಯಬೇಕು! (ಅ)
-ಡಿಗಡಿಗಾತ್ಮ ಧ್ಯಾನ ಮಾಡ್ಬೇಕು! (ಬ)
-ಗೆಬಗೆಯ ಆಸೆ ಬಿಡಬೇಕು!
ನೀನೇ ನಾನೆಂಬರಿವಾಗಬೇಕು!
ನಿಶ್ಚಲ ಭಕ್ತಿಯಿಂದಿರಬೇಕು! (ಹೊ)
-ರಗಿನ ಸಂಪರ್ಕ ನಿಲ್ಲಬೇಕು!
ಬೇಲಿಯೊಳಗೇ ಬೆಳೆಸಬೇಕು! (ಬೇ)
-ಕು, ನಿರಂಜನಾದಿತ್ಯಾಗ್ಬೇಕು!!!

ಸಮಾಜ ಕಲ್ಯಾಣವೆಂತಪ್ಪಾ? [ಕಾ]

-ಮಾದಿಗಳ ನಾಶದಿಂದಪ್ಪಾ! (ಭ)
-ಜನಾದಿ ಸತ್ಕರ್ಮದಿಂದಪ್ಪಾ!
ರ್ಮ, ಧರ್ಮ ನಿಷ್ಠೆಯಿಂದಪ್ಪಾ! (ಕ)
-ಲ್ಯಾಣಿಯನುಗ್ರಹದಿಂದಪ್ಪಾ! (ಗ)
-ಣಪತಿಯ ಸೇವೆಯಿಂದಪ್ಪಾ!
ವೆಂಕಟೇಶಾನಂದದಿಂದಪ್ಪಾ!
ರಣಿಯಾದರ್ಶದಿಂದಪ್ಪಾ! (ಅ)
-ಪ್ಪಾ ನಿರಂಜನಾದಿತ್ಯಾತ್ಮಪ್ಪಾ!!!

ಮಹತ್ಕಾರ್ಯಾಕಾಂಕ್ಷೆ ಮನಸಿಗೆ!

ಗಲಿರುಳಿದಾ ಮನಸಿಗೆ! (ಮಿ)
-ಕ್ಕಾವ ಆಸೆಯಿಲ್ಲಾ ಮನಸಿಗೆ! (ಸೂ)
-ರ್ಯಾದರ್ಶತೆ ಸದಾ ಮನಸಿಗೆ! (ಏ)
-ಕಾಂತ ಸುಖ ಬೇಕಾ ಮನಸಿಗೆ! (ಶಿ)
-ಕ್ಷೆ, ರಕ್ಷೆ, ಬೇಕಿಂದಾ ಮನಸಿಗೆ!
ತ ಭೇದವಿಲ್ಲ ಮನಸಿಗೆ!
ಟನೆ ಬೇಕಿಲ್ಲಾ ಮನಸಿಗೆ!
ಸಿಟ್ಟು ಬೇಡವೀಗಾ ಮನಸಿಗೆ! (ಬ)
-ಗೆ ನಿರಂಜನಾದಿತ್ಯನಿಳೆಗೆ!!!

ಒರಳಲ್ಲಿ ಕೂತರೆ ಒನಿಕೆ ಪೆಟ್ಟು ತಪ್ಪೀತೆ? [ಮ]

-ರಳಲ್ಲಿ ನಿಂತರದು ಕುಸಿಯದೆ ತಾನಿದ್ದೀತೇ? (ಆ)
-ಳವರಿಯದೇ ಹಾರಿದರೆ ಮುಳುಗದಿದ್ದೀತೇ? (ಮ)
-ಲ್ಲಿಕಾರ್ಜುನ ಮುನಿದರೆ ಪ್ರಳಯಾಗದಿದ್ದೀತೇ?
ಕೂಲಿ ಕೊಡದಿದ್ದರೆ ಕೆಲಸ ನಿಲ್ಲದಿದ್ದೀತೇ?
ಲೆ ಭಾರವಾದಾಗೋಡಿದರೆ ಬೀಳದಿದ್ದೀತೇ? (ಕೆ)
-ರೆ, ಭಾವಿ, ಬತ್ತಿದರೆ ಬತ್ತದ ಫಸಲೆದ್ದೀತೇ?
ಣಗಿದ ಮರಕ್ಕೆ ನೀರೆರೆದರದೆದ್ದೀತೇ?
ನಿರಶನದಿಂದೊಡಲು ಬಡವಾಗದಿದ್ದೀತೇ?
ಕೆಡುಕು ಬಗೆದವನಿಗೆ ಕೇಡಾಗದಿದ್ದೀತೇ?
ಪೆಣಕೆ ಗೈದ ಶೃಂಗಾರ ವ್ಯರ್ಥವಾಗದಿದ್ದೀತೇ? (ಗು)
-ಟ್ಟು ರಟ್ಟು ಮಾಡಿದರೆ ತೊಟ್ಟ ಪ್ರತಿಜ್ಞೆ ಗೆದ್ದೀತೇ?
ರಣಿಯುದಿಸದಿದ್ದರೆ ಪ್ರಪಂಚವಿದ್ದೀತೇ? (ತ)
-ಪ್ಪೀಡಿಟ್ಟರೆ ದುಷ್ಟ ಮೃಗ ಕೈಕೊಟ್ಟೋಡದಿದ್ದೀತೇ?
ತೇಜಸ್ಸು ನಿರಂಜನಾದಿತ್ಯನನ್ನಗಲಿದ್ದೀತೇ?

ಜೀವನಕೇನು ದಾರಿ ಹೇಳಪ್ಪಾ!

ರಗುರು ಭಜನೆ ಮಾಡಪ್ಪಾ! (ದೀ)
-ನರನ್ನುದ್ಧಾರ ಮಾಳ್ಪ ತಾನಪ್ಪಾ! (ಲೋ)
-ಕೇಶ್ವರನವನೆಂದರಿಯಪ್ಪಾ! (ಅ)
-ನುಮಾನ ನಿನಗೇನೂ ಬೇಡಪ್ಪಾ!
ದಾರಿ ತಾನೇ ತೆರೆಯುವುದಪ್ಪಾ! (ಅ)
-ರಿಷ್ಟ ನಿವಾರಣೆಯಪ್ಪುದಪ್ಪಾ!
ಹೇಳಲೇನಾ ಮಹಿಮೆಯನಪ್ಪಾ? (ಒ)
-ಳ, ಹೊರಗೆಲ್ಲವನೇ ಕಾಣಪ್ಪಾ! (ಅ)
ಪ್ಪಾ, ನಿರಂಜನಾದಿತ್ಯ ದತ್ತಪ್ಪಾ!!!

ಎಷ್ಟು ಯೋಚನೆ ಮಾಡಿದರೇನು? [ಎ]

-ಷ್ಟುತ್ತಮನಾಗಿ ನೀನಿದ್ದರೇನು?
ಯೋಗೀಶ್ವರನೆನಿಸಿದರೇನು? (ವಾ)
-ಚಸ್ಪತಿ ತಾನೇ ನೀನಾದರೇನು?
ನೆನೆಸಿದಂತೆಲ್ಲಾಗುವುದೇನು?
ಮಾಡಿಟ್ಟದ್ದುಣ ಬೇಕಲ್ಲವೇನು? (ಬ)
-ಡಿಸು ಬೇರೆಂದರಾಗುವುದೇನು?
ಯೆಯೆಂದು ತೃಪ್ತನಾಗು ನೀನು! (ಹ)
-ರೇಚ್ಛೆಗೆ ಶಿರಬಾಗಿರು ನೀನು! (ನೀ)
-ನು ನಿರಂಜನಾದಿತ್ಯಾಗ್ಬೇಡೇನು??

ನನ್ನ ಸ್ವರೂಪ ನನಗಾನಂದ! [ಭಿ]

-ನ್ನ ರೂಪ ಲಾವಣ್ಯಸಹ್ಯಾನಂದ!
ಸ್ವದೇಶವಾಸ ಪವಿತ್ರಾನಂದ! (ಊ)
-ರೂರಲೆದಾಟ ಮಲಿನಾನಂದ!
ದ್ಮ ಪಾದ ಸೇವೆ ನಿತ್ಯಾನಂದ!
ಲ್ಲನಗಲಲನಿತ್ಯಾನಂದ!
“ನಮಶ್ಯಿವಾಯ” ಮಂತ್ರತ್ಯಾನಂದ!
ಗಾಢ ಭಕ್ತಿ ಭಾವಭಯಾನಂದ! (ಅ)
-ನಂಗನಂಗ ಭಂಗ ಶಿವಾನಂದ!
ತ್ತ ನಿರಂಜನಾದಿತ್ಯಾನಂದ!!!

ಪತಿಯ ಬೆರೆತು ಮೈಮರೆತೆ!

ತಿರುಪತೀಶನಾರೆಂದರಿತೆ!
ಜ್ಞೇಶ್ವರನವನೆಂದರಿತೆ!
ಬೆಡಗ ಸುಟ್ಟವನನ್ನರಿತೆ! (ಮ)
-ರೆತಿಲ್ಲವನೆನ್ನನೆಂದರಿತೆ!
ತುರಿಯಾತೀತವನೆಂದರಿತೆ!
ಮೈ ಭಾವವನಿಗಿಲ್ಲೆಂದರಿತೆ!
ಮಕಾರ ಶೂನ್ಯನೆಂದರಿತೆ! (ಕ)
-ರೆ ಸಿಹ ನೀಗೆನ್ನನೆಂದರಿತೆ! (ಸೋ)
-ತೆ, ನಿರಂಜನಾದಿತ್ಯಸುಪ್ರೀತೆ!!!

ಬಾಗಿಲು ತೆಗೆದೊಳಗೆ ಬಾ! [ಭಾ]

-ಗಿ ಯಾಗೆನ್ನಾನಂದದಲ್ಲಿ ಬಾ! (ಕಾ)
-ಲು, ಕೈಗಳನ್ನುತೊಳೆದು ಬಾ!
ತೆಗೆದಿಟ್ಟೊಡವೆಗಳ ಬಾ!
ಗೆಳೆಯರನ್ನೆಲ್ಲಾ ಬಿಟ್ಟು ಬಾ! (ಬಂ)
-ದೊಮ್ಮೆ ಒಡಗೂಡಿ ನೋಡು ಬಾ! (ಕಾ)
-ಳಗದ ಭಯವಿಲ್ಲಿಲ್ಲ ಬಾ! (ಹ)
-ಗೆಗಳಿಗೆಡೆಯಿಲ್ಲಿಲ್ಲ ಬಾ!
ಬಾ, ನಿರಂಜನಾದಿತ್ಯಾಗು ಬಾ!!!

ನಿರ್ಗಂಧ ಕುಸುಮವೆಷ್ಟಿದ್ದರೇನು? (ದು)

-ರ್ಗಂಧಕ್ಕದರಿಂದ ಸಹಾಯವೇನು? (ಅ)
-ಧರ್ಮಿಗಳಾದ ಮಕ್ಕಳೆಷ್ಟಿದ್ದೇನು?
ಕುರುಕುಲವ ನೋಡಬಾರದೇನು?
ಸುಪುತ್ರ ಭೀಷ್ಮ ಧನ್ಯನಲ್ಲವೇನು?
ದ ಮತ್ಸರ ಬಿಡಬಾರದೇನು? (ನಾ)
-ವೆ ಮೋಕ್ಷಕ್ಕೆ ಶ್ರೀ ಕೃಷ್ಣನಲ್ಲವೇನು? (ಸೃ)
-ಷ್ಟಿಗೊಡೆಯ ಆತ ತಾನಲ್ಲವೇನು? (ತ)
-ದ್ದರ್ಶನಕೆ ದುಡಿಯ ಬಾರದೇನು?
ರೇತೋರ್ಧ್ವಗಾಮ್ಯವನದಲ್ಲವೇನು? (ತಾ)
-ನು, ನಿರಂಜನಾದಿತ್ಯನಲ್ಲವೇನು???

ಅಂದಿನ ಬಣ್ಣ ಶ್ರೀರಾಂ ಬಣ್ಣ! (ಇಂ)

-ದಿನ ಬಣ್ಣ “ಓಂ ದ್ರಾಂ ಓಂ” ಬಣ್ಣ! (ದಿ)
-ನಕರ ಸಮಾನವೀ ಬಣ್ಣ!
ಹು ಮನೋಹರವೀ ಬಣ್ಣ! (ಕ)
-ಣ್ಣಲ್ಲಾಕರ್ಷಣವಿರ್ಪ ಬಣ್ಣ!
ಶ್ರೀರಾಮನೊಲಿಸಿದ ಬಣ್ಣ! (ತಾ)
-ರಾಂಗಣಕ್ಕಾಧಾರವೀ ಬಣ್ಣ! (ಅ)
-ಬಲಾಂತರಂಗೋಜ್ವಲ ಬಣ್ಣ! (ಬ)
-ಣ್ಣ ನಿರಂಜನಾದಿತ್ಯ ಬಣ್ಣ!!!

ಆ ಶಾಸ್ತ್ರೀಶಾಸ್ತ್ರಿ ಬಟ್ಟೆಗಿಸ್ತ್ರಿ! (ದೇ)

-ಶಾಧೀಶರಿಗಗತ್ಯಾ ಇಸ್ತ್ರಿ!
-ಸ್ತ್ರೀಯರಿಗೂಬೇಕೀಗಾ ಇಸ್ತ್ರಿ!
ಶಾಲಾಮಕ್ಕಳ ಪ್ರಾಣಾ ಇಸ್ತ್ರಿ! (ಭಾ)
-ಸ್ತ್ರಿಕಾಭ್ಯಾಸೊಂದುತ್ತಮ ಇಸ್ತ್ರಿ!
ಸಿರ ಸ್ವಚ್ಛತೆಗಾ ಇಸ್ತ್ರಿ! (ಹೊ)
-ಟೆ ಪಾಡಿಗೊಂದುದ್ಯೋಗಾ ಇಸ್ತ್ರಿ! (ಯೋ)
-ಗಿಯಾಗಲಿಕ್ಕೂ ಬೇಕಾ ಇಸ್ತ್ರಿ! (ಶಾ)
-ಸ್ತ್ರಿ ಶ್ರೀ ನಿರಂಜನಾದಿತ್ಯೇ ಸ್ತ್ರಿ!!!

ನಿನ್ನೊಳಗೆಲ್ಲಾ ಯಂತ್ರ ಮಂತ್ರಗಳಮ್ಮಾ! (ನಿ)

-ನ್ನೊಡೆಯ ಗುರುದತ್ತನಾಗಿಹನಮ್ಮಾ! (ಒ)
-ಳಗೂ, ಹೊರಗೂ ವ್ಯಾಪಕನವನಮ್ಮಾ! (ಬ)
-ಗೆ ಬಗೆಯ ನಾಮ, ರೂಪವನಿಗಮ್ಮಾ! (ಉ)
-ಲ್ಲಾಸದಿಂದ ಇಷ್ಟಮಂತ್ರ ಜಪಿಸಮ್ಮಾ!
ಯಂತ್ರ, ತಂತ್ರ ನಿನ್ನನ್ನೇನೂ ಮಾಡದಮ್ಮಾ!
ತ್ರಯಮೂರ್ತಿ ದತ್ತ ಮುರುಗ ತಾನಮ್ಮಾ!
ಮಂಗಳವಾಗುವುದೆಂದು ನಂಬಿರಮ್ಮಾ! (ಪು)
-ತ್ರ, ಪುತ್ರಿಯರ ಚಿಂತೆ ನಿನಗೇಕಮ್ಮಾ?
ರ್ವಕ್ಕುಳಿಗಾಲವಿಲ್ಲೆಂದರಿಯಮ್ಮಾ! (ಕ)
-ಳವಳ ಬಿಟ್ಟು ನೆಮ್ಮದಿಯಿಂದಿರಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯಾನಂದ ದತ್ತಮ್ಮಾ!!!

ಆ ಅಸ್ತ್ರ ಈ ಅಸ್ತ್ರ ಬ್ರಹ್ಮಾಸ್ತ್ರ!

ನಾದಿಮಧ್ಯಾಂತ ಬ್ರಹ್ಮಾಸ್ತ್ರ! (ವ)
-ಸ್ತ್ರ ಕಿತ್ತೊಗೆವುದು ಬ್ರಹ್ಮಾಸ್ತ್ರ!
ರ್ಷೆಯುಟ್ಟುವುದು ಬ್ರಹ್ಮಾಸ್ತ್ರ!
ಸೂಯಾರಿಪುದು ಬ್ರಹ್ಮಾಸ್ತ್ರ! (ಶಾ)
-ಸ್ತ್ರ ಸಮ್ಮತವಿದು ಬ್ರಹ್ಮಾಸ್ತ್ರ! (ತಾಂ)
ಬ್ರ ವರ್ಣಸಾರಂಗ ಬ್ರಹ್ಮಾಸ್ತ್ರ! (ಬ್ರ)
-ಹ್ಮಾನಂದ ಭರಿತ ಬ್ರಹ್ಮಾಸ್ತ್ರ! (ಶಾ)
-ಸ್ತ್ರ, ಶ್ರೀ ನಿರಂಜನಾದಿತ್ಯಾಸ್ತ್ರ!!!

ಕೈಮುಗಿಯುವುದೇಕೊಬ್ಬರಿಗೊಬ್ಬರು?

ಮುಸಲ್ಮಾನನೂ ಹಿಂದೂ ಸೋದರರು! (ತ್ಯಾ)
-ಗಿ, ಯೋಗಿಗಳಾಗ ಬೇಕವರಿಬ್ಬರು!
ಯುಕ್ತಾಯುಕ್ತತೆಯರಿಯಬೇಕಿಬ್ಬರು! (ಗೋ)
-ವುಹತ್ಯ ಮಾಡಬಾರದವರಿಬ್ಬರು!
ದೇವರೊಬ್ಬನೆಂದರಿಯಬೇಕಿಬ್ಬರು!
ಕೊಲೆ, ಸುಲಿಗೆಯ ಬಿಡಬೇಕಿಬ್ಬರು! (ಅ)
-ಬ್ಬರಾರ್ಭಟ ಬಿಡಬೇಕವರಿಬ್ಬರು! (ವೈ)
-ರಿಯೈಕ್ಯದಿಂದೆದುರಿಸಬೇಕಿಬ್ಬರು!
ಗೊಡ್ಡಾಚಾರ ಬಿಡಬೇಕವರಿಬ್ಬರು! (ಒ)
-ಬ್ಬರನೊಬ್ಬರಾದರಿಸಬೇಕಿಬ್ಬರು! (ಗು)
-ರು ನಿರಂಜನಾದಿತ್ಯಗ್ಬೇಕಿಬ್ಬರು!!!

ಮಲ್ಲಿಗೆ! ಬಾ ನೀನೆನ್ನಲ್ಲಿಗೆ! (ಅ)

-ಲ್ಲಿ ನೀನಿದ್ದರೆಲ್ಲಾ ಗಲ್ಲಿಗೆ! (ನ)
-ಗೆ ಮೊಗದಿಂದ ಬಾ ಇಲ್ಲಿಗೆ!
ಬಾಲೆ ನೀನೆರಗು ನಲ್ಲಗೆ!
ನೀಚ ಸಂಗ ಸಾಕು ಮಲ್ಲಿಗೆ!
ನೆಲೆ ಬಿಟ್ಟಡುವುದೆಲ್ಲಿಗೆ! (ಉ)
-ನ್ನತಿಗಾಗಿ ಬಾ ನೀನಿಲ್ಲಿಗೆ! (ಮ)
-ಲ್ಲಿಕಾರ್ಜುನ ತಾನಿರ್ಪಲ್ಲಿಗೆ! (ಬಾ)
-ಗೆ, ನಿರಂಜನಾದಿತ್ಯನಾಗೆ!!!

ಕೇಶವಾ ಲೋಕೇಶ ವಾಸವಾ! (ಅ)

-ಶಕ್ತೋದ್ಧಾರ ಗೈವಾ ಪಾದವಾ! (ಜೀ)
-ವಾತ್ಮಗಿತ್ತು ಕಾಯೋ ಮಾಧವಾ!
ಲೋಕವಾಸ ಸಾಕೋ ಯಾದವಾ!
ಕೇಳೆನೇನಿನ್ನು ರಾಧಾಧವಾ!
ರಣಗೀಯಾತ್ಮ ಯೋಗವಾ!
ವಾದ ಭೇದಾತೀತ ಮೋದವಾ!
ರ್ವ ನಾಮ ರೂಪಾನಂದವಾ! (ದೇ)
-ವಾ! ನಿರಂಜನಾದಿತ್ಯ ಶಿವಾ!!!

ಅನಸೂಯಾ ತಾಯಿ ನೀನಾಗಮ್ಮಾ!

ಮಿಸು ನಿತ್ಯ ಶ್ರೀ ಪಾದಕ್ಕಮ್ಮಾ! (ಅ)
-ಸೂಯೆಗೆ ಕಾರಣ ದ್ವೈತವಮ್ಮಾ! (ಕಾ)
-ಯಾಭಿಮಾನಳಿದಾಗದಿಲ್ಲಮ್ಮಾ!
ತಾನೇ ಸಕಲವಾಗಬೇಕಮ್ಮಾ! (ಬಾ)
-ಯಿ ಮಾತು ಪ್ರಯೋಜನವಿಲ್ಲಮ್ಮಾ!
ನೀನನುಭವಿಸ್ಯಾನಂದಿಸಮ್ಮಾ!
ನಾಮ, ರೂಪಕ್ಕಾಳಾಗಬೇಡಮ್ಮಾ! (ಭ)
-ಗವಂತ ನಿರ್ವಿಕಾರ ಕಾಣಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾತ್ಮದಮ್ಮಾ!!!

ಕಚ್ಚೆ ಕಟ್ಟು, ರುಚಿಕಟ್ಟು, ಸೇರೊಟ್ಟು! (ಕೆ)

-ಚ್ಚೆದೆಯ ಹನುಮನಾಗಿ ಸೇರೊಟ್ಟು!
ಣ್ಣು, ಕಿವಿ, ಮೂಗು ಬಿಟ್ಟು ಸೇರೊಟ್ಟು! (ಸು)
-ಟ್ಟು ವೈರಿಗಳ ಬಂದೀಗ ಸೇರೊಟ್ಟು! (ಪೌ)
-ರುಷವಿದೆಂದು ಸಾಧಿಸಿ ಸೇರೊಟ್ಟು!
ಚಿದಾನಂದ ರೂಪಿಯಾಗಿ ಸೇರೊಟ್ಟು!
ನ್ಯೆ ಮಾತಂಗಿ ನೀನಾಗಿ ಸೇರೊಟ್ಟು! (ಮು)
-ಟ್ಟು ಮಡಿಯ ಭ್ರಾಂತಿಬಿಟ್ಟು ಸೇರೊಟ್ಟು!
ಸೇನಾಪತಿ ಕಂದನಾಗಿ ಸೇರೊಟ್ಟು!
ರೊಚ್ಚಿಗೆದ್ದವರ ಕೊಚ್ಚಿ ಸೇರೊಟ್ಟು! (ಕ)
-ಟ್ಟು, ನಿರಂಜನಾದಿತ್ಯನಾಣೆಯಿಟ್ಟು!!!

ಚೆನ್ನಾಗಿದ್ದೀಯೇನೋ ಅಣ್ಣಾ? (ನಿ)

-ನ್ನಾನಂದವೆಲ್ಲಾ ಮುಕ್ಕಣ್ಣಾ!
ಗಿರಿಜೆಗೇನನ್ನಲಣ್ಣಾ? (ತ)
-ದ್ದಿವ್ಯ ಭೇಟಿ ಬೇಕ್ಮುಕ್ಕಣ್ಣಾ! (ಪ್ರಿ)
ಯೇಶ್ವರಿಯಿಷ್ಟವದಣ್ಣಾ! (ಮ)
-ನೋಜಯ ಕೊಡು ಮುಕ್ಕಣ್ಣಾ!
ವಳನ್ನೇಧ್ಯಾನಿಸಣ್ಣಾ! (ಅ)
-ಣ್ಣಾ, ನಿರಂಜನಾದಿತ್ಯಣ್ಣಾ!!!

ಬೇಕು ಬಿಟ್ಟವಗಾವ ಕಷ್ಟ?

ಕುಲ, ಶೀಲ, ಸುಟ್ಟಾತ್ಮ ಶ್ರೇಷ್ಠ!
ಬಿಸಿ, ಶೀತವೆಂದರೆ ಕಷ್ಟ! (ಸಿ)
-ಟ್ಟಡಗಿಸಿಕೊಂಡಾತ್ಮ ಶ್ರೇಷ್ಠ! (ಭ)
ರೋಗ ಪೀಡೆ ಬಹು ಕಷ್ಟ!
ಗಾಢಾತ್ಮ ವಿಶ್ವಾಸಾತ್ಮ ಶ್ರೇಷ್ಠ! (ಭಾ)
-ವ ಭಕ್ತಿಯಿಲ್ಲದಿರೆ ಕಷ್ಟ!
ರ್ಮಬಂಧ ಹೋದಾತ್ಮ ಶ್ರೇಷ್ಠ! (ಇ)
-ಷ್ಟ ನಿರಂಜನಾದಿತ್ಯಾತ್ಮೇಷ್ಟ!!!

ಸೇವೆಗಾದರ್ಶಳಮ್ಮ ಗಂಗಾ! [ಈ]

-ವೆ ಸದ್ಗತಿಯೆಂಬಳಾ ಗಂಗಾ!
ಗಾಳಿ, ಮಳೆಗಂಜಳಾ ಗಂಗಾ!
ಮ, ಶಮಾ ಶೀಲಳಾ ಗಂಗಾ! (ಸ್ಪ)
-ರ್ಶ ಸುಖ ಶೀತಲಳಾ ಗಂಗಾ! (ಒ)
-ಳ ಹೊರಗಿರುವಳಾ ಗಂಗಾ! (ಅ)
-ಮ್ಮ ತಾನೆಲ್ಲರವಳಾ ಗಂಗಾ!
ಗಂಗಾಧರ ಪ್ರಿಯಳಾ ಗಂಗಾ! (ಗಂ)
-ಗಾ ನಿರಂಜನಾದಿತ್ಯಾತ್ಮಾಂಗಾ!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ