ಧ್ಯಾನ ಮಿಂಚು: ಭಾಗ 6

ಆಳಿದವರು ಬಾಳಿಲ್ಲ! (ಬಾ)

-ಳಿದವರಾರೂ ಆಳಿಲ್ಲ!
ಬ್ಬಾಳಿಕೆಯೇ ಎಲ್ಲೆಲ್ಲಾ!
ಸ್ತ್ರಾನ್ನಕ್ಕೆ ಗತಿಯಿಲ್ಲ!
ರುಜುಮಾರ್ಗ ಬಿಟ್ಟರೆಲ್ಲಾ!
ಬಾಳಿಂತಾದ್ರೆ ಸುಖವಿಲ್ಲ! (ಉ)
-ಳಿ ಗಾಲ ಸ್ವಾತಂತ್ರಕ್ಕಿಲ್ಲ (ಬ)
-ಲ್ಲ ನಿರಂಜನಾದಿತ್ಯೆಲ್ಲಾ!!!

ಒಬ್ಬೊಬ್ಬರದೊಂದೊಂದು ದುಡಿಮೆ! (ಒ)

-ಬ್ಬೊಡೆಯನದ್ದಿದೊಂದು ಮಹಿಮೆ (ಕ)
-ಬ್ಬಗಳ್ಪೊಗಳುವುದಾ ಹಿರಿಮೆ!
ಜಸ್ತಮಸ್ಸಾತ್ವಿಕಾ ಪ್ರತಿಮೆ! (ಇ)
-ದ್ದೊಂಭತ್ತುದ್ವಾರಕ್ಕೊಂದೊಂದು ಭ್ರಮೆ!
ದೊಂಬರಾಟದಲ್ಲಿದೆಲ್ಲಾ ಜಮೆ!
ದುರ್ಜನ, ಸಜ್ಜನರಿರ್ಪಿ

ಸೀಮೆ!
ದುಡಿಯದಿದ್ದರಿಕ್ಕಳು ಉಮೆ (ಕೂ)
-ಡಿ ಆಳ್ವಳ್ಹರಿಯೊಡನೆ ರಮೆ! (ಉ)
-ಮೆ ನಿರಂಜನಾದಿತ್ಯಾತ್ಮಾ ರಮೆ!!!

ಪಕ್ಷವಾವುದಾಳಿದರೇನು? (ಲ)

-ಕ್ಷಣವಾಗಿಡ್ಬೇಕ್ರಾಷ್ಟ್ರವನ್ನು! (ನಿ)
-ವಾರಿಸ್ಬೇಕೆಲ್ಲಾ ಕಷ್ಟವನ್ನು! (ಗೋ)
-ವು ಹತ್ಯೆಯಾಗಬಾರದಿನ್ನು!
ದಾನವ ಬುದ್ಧಿ ಹೋಗ್ಬೇಕಿನ್ನು! (ಬಾ)
-ಳಿಧನ್ಯರಾಗ್ಬೇಕೆಲ್ಲರಿನ್ನು!
ಮೆ, ಶಮಾಭ್ಯಾಸಾಗ್ಬೇಕಿನ್ನು! (ಹ)
-ರೇ ರಾಮ ಭಜನೆ ಮಾಡ್ಬೇಕಿನ್ನು! (ಸೂ)
-ನು ನಿರಂಜನಾದಿತ್ಯಗೆನ್ನು!!!

ಬಂದ್ರೆ-ಹೋಗ್ಲಿಕ್ಕೆ ಮನಸ್ಸಿಲ್ಲ! (ಹೋ)

-ದ್ರೆ ಬರ್ಲಿಕಮ್ಮ ಬಿಡೋದಿಲ್ಲ!
ಹೋಗಿ, ಬರ್ತಿದ್ರಾನಂದವಿಲ್ಲ! (ಆ)
-ಗ್ಲಿ ಗುರುವಿನಿಚ್ಛೆಯಂತೆಲ್ಲ! (ಸಿ)
-ಕ್ಕೆ ನನ್ನರಿಗೆಂದಿಹೆನಲ್ಲಾ!
ಗುವಿನೀ ಮಾತು ಸುಳ್ಳಲ್ಲ! (ತ)
-ನಯನೇಳಿಗೆ ತಂದೆಗೆಲ್ಲಾ!
ಸಿರಬಾಗಿ ಹೇಳಿದೆನೆಲ್ಲಾ! (ಎ)
-ಲ್ಲಾ ನಿರಂಜನಾದಿತ್ಯ ಬಲ್ಲ!!!

ಮತ ಸ್ವೀಕಾರಕ್ಕೆ ಪಾತ್ರನಾಗಬೇಕು!

ನ್ನ ಜೀವನ ಮಾದರಿಯಾಗಬೇಕು!
ಸ್ವೀಕಾರ ಬೇಡದೇ ಬಂದರಾಗಬೇಕು!
ಕಾರ್ಯನಿಷ್ಠ ಸೇವಕನಾಗಿರಬೇಕು!
ಸ, ವಿರಸವಾಗದಂತಿರಬೇಕು! (ಬೆ)
-ಕ್ಕೆಗೆ, ಪಕ್ಕವಾದ್ಯ ಬಾರಿಸದಿರ್ಬೇಕು!
ಪಾಪಭೀರುವಾಗಿ ಕರ್ತವ್ಯ ಮಾಡ್ಬೇಕು! (ಯಂ)
-ತ್ರ, ತಂತ್ರಗಳ ಹುಚ್ಚು ಇಲ್ಲದಿರ್ಬೇಕು!
ನಾಸ್ತಿಕನಾಗಿ ತಾನಿರದಿರಬೇಕು!
ರ್ವವೆಂದೆಂದಿಗೂ ಪಡದಿರಬೇಕು!
ಬೇರೆಯವರನ್ನು ದೂರದಿರಬೇಕು! (ವ್ಯಾ)
-ಕುಲ ನಿರಂಜನಾದಿತ್ಯ ಕಳೆಯ್ಬೇಕು!!!

ನಿಷ್ಪಕ್ಷಪಾತಾಧಿಕಾರಿ ಯಾರು? (ದು)

-ಷ್ಪರಿಣಾಮಕ್ಕೆಡೆಕೊಡ್ಡವರು!
ಕ್ಷಮಾಶೀಲರಾದ ಸಜ್ಜನರು!
ಪಾಪ-ಪುಣ್ಯ ವಿಚಾರ ಪರರು!
ತಾಳ್ಮೆಯಿಂದ ದೂರುಕೇಳ್ವವರು!
ಧಿಕ್ಕಾರ ಬುದ್ಧಿಯಿಲ್ಲದವರು!
ಕಾಮಾತುರರಲ್ಲದಿರ್ಪವರು!
ರಿಸಿ, ಮುನಿಗಳ ಸೇವಕರು!
ಯಾತನೆ ನಿವಾರಿಸುವವರು! (ಗು)
-ರು ನಿರಂಜನಾದಿತ್ಯ ದಾಸರು!!!

ಮತದಾನವಾರಿಗೆ ಮಾಡ್ಬೇಕು?

ನ್ನಂತನ್ಯರೆಂದಿರ್ಪಗಾಗ್ಬೇಕು!
ದಾಸರದಾಸರಿಗದಾಗ್ಬೇಕು!
ಯ, ವಿನಯಾನ್ವಿತಗಾಗ್ಬೇಕು!
ವಾಙ್ಮನಶ್ಯುದ್ಧಾತ್ಮನಿಗಾಗ್ಬೇಕು!
ರಿಪುಗಳಿಲ್ಲದವಗಾಗ್ಬೇಕು!
ಗೆಲುವೊಲವುಳ್ಳವಗಾಗ್ಬೇಕು!
ಮಾತು, ಕೃತಿಯೊಂದಿರ್ಪಗಾಗ್ಬೇಕು! (ಮಾ)
-ಡ್ಬೇಕಂಥವನಾಯಕನಾಗ್ಬೇಕು! (ಟಾ)
-ಕು ನಿರಂಜನಾದಿತ್ಯನಾಗ್ಬೇಕು!!!

ನೋಡ್ಯಾನಂದಿಸುವವನೊಬ್ಬ! (ಹಾ)

-ಡ್ಯಾನಂದ ಪಡುವವನೊಬ್ಬ (ಆ)
-ನಂದ ನೋಡದೇಪಡ್ವವ್ನೊಬ್ಬ!
ದಿಕ್ಕುತೋರ್ಬೇಕೊಬ್ನಿಗಿನ್ನೊಬ್ಬ!
ಸುಜನರೆಲ್ಲರ್ಗೆ ದೇವ್ರೊಬ್ಬ!
ನಧಿಗಿಲ್ಲ ಹಳ್ಳ, ದಿಬ್ಬ!
ರ ಗುರು ದತ್ತ ತಾನೊಬ್ಬ!
ನೊಗಹೊತ್ತರೈತಗೀಗ್ಹಬ್ಬ! (ಹ)
-ಬ್ಬ, ನಿರಂಜನಾದಿತ್ಯನುಬ್ಬ!!!

ನನ್ನನ್ನು ನೋಡಿ ಏನಾಗ್ಬೇಕು! (ಚಿ)

-ನ್ನ, ಬೆಳ್ಳಿ, ಎಲ್ಲರಿಗೂ ಬೇಕು! (ನ)
-ನ್ನುಡಿಯಲ್ಲದೆಂತಿರ ಬೇಕು!
ನೋಟಿನರಾಶಿ ಸುರಿಸ್ಬೇಕು! (ದು)
-ಡಿಯದೆನ್ನಿಂದದೆಂತಾಗ್ಬೇಕು?
ನಾದ್ರೂ ಪವಾಡ ಮಾಡ್ಬೇಕು!
ನಾನರಿಯೆನೆಂದ್ರೇಕ್ನಗ್ಬೇಕು? (ಆ)
-ಗ್ಬೇಕು, ಗುರುಸೇವೆ ಸಾಗ್ಬೇಕು! (ಬೇ)
-ಕು ನಿರಂಜನಾದಿತ್ಯಾಗ್ಬೇಕು!!!

ಕಾಮಿಗಿಲ್ಲ ಖರ್ಚಿನ ಹಿಡಿತ!

ಮಿತವ್ಯಯವಿಲ್ಲದೇ ಪತಿತ! (ರಾ)
-ಗಿ, ಭತ್ತದಲ್ಲೂ ದುರಾಡಳಿತ! (ಬ)
-ಲ್ಲವರ ಮಾತನ್ನು ಕೇಳನಾತ!
ತಿಗೊಂಡಾಗ ಕಿರಾತನಾತ! (ಬ)
-ರ್ಚಿ, ಈಟಿಗೂ ಕೈಹಾಕುವನಾತ!
ತದೃಷ್ಟನಾಗಳಿವನಾತ!
ಹಿತಾಹಿತವನ್ನರಿಯನಾತ! (ತಿಂ)
-ಡಿಪೋತನಾಗ್ನರಳುವನಾತ! (ಸಂ)
-ತ ನಿರಂಜನಾದಿತ್ಯಗಾಗ್ಲಾತ!!!

ದರಿದ್ರ, ಶ್ರೀಮಂತ, ಪ್ರಕೃತಿ ಧರ್ಮ!

(ಪ)-ರಿ ಪೂರ್ಣವಾಗಿಲ್ಲದಾಗದೀ ಕ್ರಮ!
(ಭ)-ದ್ರ ಸರ್ಕಾರವಾದ್ರೂ ಇದೊಂದು ಭ್ರಮ!
ಶ್ರೀ ರಾಮರಾಜ್ಯದಲ್ಲೂ ಇತ್ತಸಮ!
ಮಂದಿಯಲ್ಲಿರಬೇಕನ್ಯೋನ್ಯಪ್ರೇಮ!
ರತರದಾಸೆಯಿಂದೆಲ್ಲಾ ಶ್ರಮ!
ಪ್ರಗತಿಗಾಗಿ ಮಾಡಬೇಕುದ್ಯಮ!
ಕೃತ್ರಿಮದಿಂದ ಬಾಳವನಧಮ!
(ಪ್ರೀ)-ತಿ, ವಿಶ್ವಾಸವೇ ಸಹಕಾರ ಧರ್ಮ!
(ಅಂ)-ಧ ವಿಶ್ವಾಸದಿಂದ ಕೆಡ್ದಿರ್ಲೀ ಜನ್ಮ!
(ಧ)-ರ್ಮ, ಕರ್ಮ, ನಿರಂಜನಾದಿತ್ಯ ಪ್ರೇಮ!!!

ಜ್ಞಾನಸಾಗರವೇ ತಾನಾದರೇನು?

ರನ ವ್ಯಾಮೋಹ ಕಳೆದನೇನು?
ಸಾಧನೆ ತಾನೆಷ್ಟು ಮಾಡಿದರೇನು?
ರುಡಗಮನ ಭೇಟಿ ಕೊಟ್ನೇನು?
ತಿಪತಿಗಿನ್ನೂ ಆಳಾಗಿಹನು!
ವೇಷ ಭೂಷಣಕ್ಕಾಶಿಸುತ್ತಿಹನು!
ತಾನೇ ತಾನಾಗಾನಂದಿಸದಿಹನು!
ನಾಮ, ರೂಪ, ಭ್ರಾಂತಿ ಬಿಡದಿಹನು!
ತ್ತನಿದನೆಂತು ಸಹಿಸಿಹನು?
ರೇಗ್ಬೇಡೆಂದವ್ನನ್ನೀಗ ಬೇಡುವೆನು! (ನಾ)
-ನು ನಿರಂಜನಾದಿತ್ಯ ದತ್ತ ತಾನು!!!

ಯಂತ್ರ, ತಂತ್ರದಿಂದ ಸ್ವತಂತ್ರವೇನಯ್ಯಾ?

(ಪಾ)-ತ್ರ ತಾನಾಗುವುದಕ್ಕಭ್ಯಾಸ ಮಾಡಯ್ಯಾ!
ತಂಡಗಳು ಹೆಚ್ಚಾದರ ಶಾಂತಿಯಯ್ಯಾ!
(ಕ್ಷಾ)-ತ್ರ ತೇಜಸ್ಸು ರಾಜ್ಯವನ್ನಾಳಬೇಕಯ್ಯಾ!
(ಹಿಂ)-ದಿಂದಿನಾಡಳಿತ ಹೋಲಿಸಿ ನೋಡಯ್ಯಾ!
ರ್ಪದಿಂದ ಶಾಂತಿಸುಖ ಸಿಕ್ಕದಯ್ಯಾ!
ಸ್ವಧರ್ಮವೇನಂದರಿತಿರಬೇಕಯ್ಯಾ!
ತಂದೆ, ತಾಯಿ, ಬಂಧು, ಮಿತ್ರ, ದೇವರಯ್ಯಾ!
(ಪು)-ತ್ರ ಪೌತ್ರವ್ಯಾಮೋಹ ದುಃಖಹೇತುವಯ್ಯಾ!
ವೇದಾಂತ ಕೃತಿಯಲ್ಲಿ ಕಾಣಬೇಕಯ್ಯಾ!
ಡೆಯಿಲ್ಲದ ನುಡಿ ವ್ಯರ್ಥಕಾಣಯ್ಯಾ!
(ಅ)-ಯ್ಯಾ ನಿರಂಜನಾದಿತ್ಯಾನಂದನಾಗಯ್ಯಾ!!!

ಬಾಯ್ಗಿಟ್ರುಣ್ಣುವ ಭಾಗ್ಯ ಬೇಕಲ್ಲಾ! (ನಾ)

-ಯ್ಗಿರುವ ಬುದ್ಧಿ ಕಚ್ಚುವುದಲ್ಲಾ! (ಉ)
-ಟ್ರುಡಿಗೆ ಬಿಚ್ಚ್ಲೇಬೇಕೊಮ್ಮೆ ಎಲ್ಲಾ! (ಹೆ)
-ಣ್ಣು ಚೆನ್ನಾಗಿದ್ರೂ ಕಣ್ಣಿಲ್ಲವಲ್ಲಾ!
ಧ್ವೊಪ್ಪಿದ್ರೂ ವರನೊಪ್ಬೇಕಲ್ಲಾ!
ಭಾಗ್ಯವೆಂದ್ರೆ ಗುರುಚಿತ್ತವೆಲ್ಲಾ! (ಯೋ)
-ಗ್ಯ ಮಗನಿಗವನಾಸ್ತಿಯೆಲ್ಲಾ!
ಬೇಜಾರಿಲ್ಲದೇ ಸೇವೆ ಮಾಡೆಲ್ಲಾ!
ರಣಾಳುವೆಂಬರವ್ನನ್ನೆಲ್ಲಾ (ಎ)
-ಲ್ಲಾ ನಿರಂಜನಾದಿತ್ಯ ತಾನೆಲ್ಲಾ!!!

ಪರಿಸ್ಥಿತಿ ಸುಧಾರಿಸಿದೆ! (ಪ)

-ರಿಣಾಮ ನೋಡಬೇಕಾಗಿದೆ! (ಸ್ವ)
-ಸ್ಥಿತಿ ನಿಜಗುರಿಯಾಗಿದೆ! (ಪ್ರ)
-ತಿ ದಿನ ಸಾಧನೆ ಸಾಗಿದೆ!
ಸುತ್ತುಮುತ್ತ ಬೆಳಕಾಗಿದೆ! (ಕ್ಷು)
-ಧಾ ಬಾಧೆ ಕಡಿಮೆಯಾಗಿದೆ!
ರಿಪುಗಳಾರ್ಭಟ ನಿಂತಿದೆ!
ಸಿಗ್ಬೇಕಾದದ್ಸಿಗ್ಬೇಕಾಗಿದೆ! (ಆ)
-ದೆ ನಿರಂಜನಾದಿತ್ಯನಾದೆ!!!

ನಾಟ್ಯವೀಗ ಹೊರಾಂಗಣದಲ್ಲಿ!

(ಭೇ)-ಟ್ಯದೃಷ್ಟವಿಲ್ಲ ನಿನಗಿನ್ನಲ್ಲಿ!
ವೀತ-ರಾಗಿ ಬರಲಾರನಲ್ಲಿ!
(ಆ)-ಗ ಬೇಕನುಭವ ನಿನಗಲ್ಲಿ!
ಹೊಲಸು ವ್ಯವಹಾರ ಬೇಡಲ್ಲಿ!
(ಶ್ರೀ)-“ರಾಂ”, “ಶ್ರೀರಾಂ” ಎಂದು ಜಪಮಾಡಲ್ಲಿ!
ಡ್ಬಿಡಿ ಮಾಡಿ ಕೆಡದಿರಲ್ಲಿ!
(ಹ)-ಣಕ್ಕಾಗಿ ಹೆಣವಾಗ ಬೇಡಲ್ಲಿ!
ರ್ಶನವಾಗ್ಲಂತರಂಗದಲ್ಲಿ! (ಎ)
-ಲ್ಲಿ ನಿರಂಜನಾದಿತ್ಯಾತ್ಮನಲ್ಲಿ!!!

ಲೋಕನಾಥ ನೀನೆಂಬರಿವಾಗಬೇಕು!

ರ್ತವ್ಯ ನಿನ್ನಂತೆಲ್ಲರೂ ಮಾಡಬೇಕು!
ನಾಮ, ರೂಪ, ಅದಕ್ಕೆಂದರಿಯಬೇಕು!
ಳಕು ಅದರಲ್ಲಿಲ್ಲದಿರಬೇಕು!
ನೀತಿ, ನೇಮ, ನಿಷ್ಕಳಂಕವಿರಬೇಕು!
ನೆಂಟನೂ, ಭಂಟನೂ, ನೀನಾಗಿರಬೇಕು!
ಡವ, ಬಲ್ಲಿದ, ಭೇದ ಹೋಗಬೇಕು!
ರಿಪುಗಳಿಗೆ ತ್ರಿಪುರಾರಿಯಾಗ್ಬೇಕು!
ವಾಮಾಂಗಿಸಹಿತ ದರ್ಶನ ಕೊಡ್ಬೇಕು!
ಣನಾಥನೆಂದೆನ್ನನ್ನೆತ್ತಿ ಕೊಳ್ಬೇಕು!
ಬೇಕ್ನನಗೆ ನಿನ್ನ ಕೃಪೆಯ ಬೆಳಕು! (ಸಾ)
-ಕು ನಿರಂಜನಾದಿತ್ಯನಿಗೀ ಬದುಕು!!!

ಅವ್ರವ್ರಿಷ್ಟದಂತೆ ಅವ್ರವ್ರ ತೀರ್ಮಾನ!

ವ್ರತಾನುಷ್ಠಾನಕ್ಕೆ ನಂಬಿಕೆ ಪ್ರಧಾನ! (ಅ)
-ವ್ರಿವ್ರಿಗೆ, ಇವ್ರವ್ರಿಗೆ, ಮಾರ್ಗದರ್ಶನ! (ಇ)
-ಷ್ಟ ಸಿದ್ಧಿಗಾಗ್ಬೇಕು ದೇವರ ದರ್ಶನ!
ದಂಭ ದರ್ಪದಿಂದಾಗ್ದು ಕಾರ್ಯಸಾಧನ!
ತೆನೆ ಬಲಿತು ಹಣ್ಣಾದ್ರೆ ಪ್ರಯೋಜನ!
ಕಾಲದ ಕೊ

ಲೆಲ್ಲಾ ನಿಷ್ಪ್ರಯೋಜನ!
ವ್ರಜನಾರಿಯರಂತಿರ್ಬೇಕು ಸಹನ! (ಅ)
-ವ್ರ ಬಾಳು ಅದರಿಂದಾಯ್ತು ರಸಾಯನ!
ತೀರ್ಥ ಪ್ರಸಾದ ಶ್ರೀಪಾದದ್ದು ಪಾವನ! (ದು)
-ರ್ಮಾರ್ಗಾವಲಂಬನದಿಂದಧಃ ಪತನ!
ಮೋ ನಿರಂಜನಾದಿತ್ಯ ಸನಾತನಾ!!!

ಹುಚ್ಚಪ್ಪಾ! ನಿನಗಿಚ್ಛೆ ಉಚ್ಚೆಗುಂಡಿ ಏನಪ್ಪಾ!

(ಅ)-ಚ್ಚರಿಯಾಗುತಿದೆ ನಿನ್ನ ನೋಡಿ ನನಗಪ್ಪಾ!
(ತು)-ಪ್ಪಾನ್ನ ತಿಂದು ಬೆಪ್ಪನೀನಾಗಬಹುದೇನಪ್ಪಾ?
ನಿನ್ನಪ್ಪನೆಂತಿರ್ಪನೆಂದರಿತರತಿರ್ಬೇಕಪ್ಪಾ!
ರಕ ಯಾತನೆ ನಿನಗಾಗುಂಡಿಯಲ್ಲಪ್ಪಾ!
ಗಿಡಬಳ್ಳಿಯಂತಾಗಬಾರದೀ ಜನ್ಮವಪ್ಪಾ!
(ಇ)-ಚ್ಛೆ ಸ್ವಚ್ಛವಾದಾಗ ಹುಚ್ಚುಬಿಟ್ಟು ಹೋಗ್ವುದಪ್ಪಾ!
ತ್ತಮರ ಸಂಗವಿದಕ್ಕತ್ಯಗತ್ಯವಪ್ಪಾ!
(ಕ)-ಚ್ಚೆ, ಕೈ, ಬಾ

, ಸ್ವಚ್ಛವಾಗ್ಯಚ್ಚುತನಾಗಬೇಕಪ್ಪಾ!
ಗುಂಡಿನೇಟಿಗೂ ಆಗಂಜಬೇಕಾಗಿಲ್ಲವಪ್ಪಾ!
(ಆ)-ಡಿ ಮಾಡದವ ಅಧಮನೆಂದೆನಿಪನಪ್ಪಾ!
ಕೆ ಸಾವಕಾಶ ಪರಿವರ್ತನೆಗೀಗಪ್ಪಾ!
ರಜನ್ಮ ಬಂದಾಗ ಗುರುಸೇವೆ ಮಾಡಪ್ಪಾ!
(ಅ)-ಪ್ಪಾ, ನಿರಂಜನಾದಿತ್ಯನಿರ್ಪಬಗೆ ಹೀಗಪ್ಪಾ!!!

ತರತರದ ಯಾಗ ಯಜ್ಞಾದಿಗಳೂ ವಿಜ್ಞಾನ!

ಹಸ್ಯವಿದು ಬಹು ಗೂಢವೆಂಬುದಾ ವಿಜ್ಞಾನ!
ತ್ತ್ವಸಿದ್ಧಾಂತಾನುಷ್ಠಾನ ಶ್ರೇಷ್ಠವೆಂಬುದು ಜ್ಞಾನ!
ಘುವೀರೋತ್ಪತ್ತಿಗೂ ಬೇಕಾಯ್ತುಯಜ್ಞ ವಿಜ್ಞಾನ!
ಮೆ, ಶಮಾದಿಗಳಿಂದಾಗುವುದು ಆತ್ಮಜ್ಞಾನ!
ಯಾಗ, ಯಜ್ಞಾದಿಗಳಿಷ್ಟಸಿದ್ಧಿಗಾಗಿದ್ದ ವಿಜ್ಞಾನ!
ತಿಗೆಟ್ಟೀಗಿನ ಸ್ಥಿತಿ ಅರಿಯದಾ ವಿಜ್ಞಾನ!
ಮ ನಿಯಮಾದ್ಯಷ್ಟಾಂಗ ಯೋಗಕ್ಕಿದು ಸಮಾನ!
ಜ್ಞಾನ ಮಾತ್ರದಿಂದಲೇ ಜೀವನ್ಮುಕ್ತಾತ್ಮದರ್ಶನ!
ದಿವ್ಯ ಜ್ಞಾನಾನಂದಸಿದ್ಧಿಯೇ ಇಂದ್ರಿಯದಮನ!
ದಾದ್ಯಾಯುಧಧಾರಿಗಳಿಂದಲ್ಪೋಪಶಮನ!
(ಆ)-ಳೂಳಿಗೆ ಮಾಡಿದಾಗ ಮಾತ್ರ ಅವ್ರಿಂದ ವೇತನ!
ವಿಕಲ್ಪ ಸಂಕಲ್ಪಾತೀತಾತ್ಮ ಪರಮಪಾವನ!
ಜ್ಞಾನೇಶ್ವರಗೆ ವಿಜ್ಞಾನದಿಂದೇನು ಪ್ರಯೋಜನ?
ಭೋಮಣಿ ನಿರಂಜನಾದಿತ್ಯಾಜ್ಞಾನ, ವಿಜ್ಞಾನ!!!

ಅಂತರ್ಯಾಮಿಗೇಕೆ ವದಂತಿ?

ನಗದರಿಂದ ಅಶಾಂತಿ! (ಭಾ)
-ರ್ಯಾ ಮಕ್ಕಳಿಲ್ದಾತ ಏಕಾಂತಿ!
ಮಿತ್ರ, ಶತ್ರುದೂರಾ ವೇದಾಂತಿ!
ಗೇಣಿ ಅಳೆಯ್ದಾತ ಭೂಪತಿ!
ಕೆರೆ, ಭಾವ್ಯವಗೆ ಸಂಗಾತಿ!
ರ ಗುರುದತ್ತಾ ಶ್ರೀಪತಿ!
ದಂಡ, ಕಮಂಡ್ಲುಧಾರೀ ಯತಿ! (ಯ)
-ತಿ ನಿರಂಜನಾದಿತ್ಯ ಗತಿ!!!

ದರ್ಬಾರ್ನಡೆಸುವವ ನೀನು! (ಇ)

-ರ್ಬಾರ್ದು ಹೊರ್ಗಿನ್ನೆಂಬವ ನಾನು! (ತೋ)
-ರ್ನನ್ಗೆ ದಾರಿಯೊಳಕ್ಕೆ ನೀನು! (ಮಾ)
-ಡ ನಿನಗಪಚಾರ ನೀನು!
ಸುದರ್ಶನದೊಡೆಯ ನೀನು! (ಭ)
-ವ ಪಾಶಬಂಧಿತನು ನಾನು! (ಭ)
-ವನಾಶ ಪರಮೇಶ ನೀನು!
ನೀನೇ ಗತಿಯೆನ್ನುವೆ ನಾನು! (ನೀ)
-ನು ನಿರಂಜನಾದಿತ್ಯ ತಾನು!!!

ಮನಸಿನ ಮಾಟವೆಲ್ಲಾ ಕಾಟ!

ಷ್ಟ ಕಷ್ಟಗಳಾಗಿ ಕಚ್ಚಾಟ!
ಸಿರಿ, ಸಾಮ್ರಾಜ್ಯಕ್ಕೆ ಹೊಡೆದಾಟ!
ನ್ನದು, ನಿನ್ನದೆಂದು ಕಿತ್ತಾಟ!
ಮಾಯೆ ತಾನೆನಿಸಿ ಕಪಟಾಟ!
ಕ್ಕು, ಟವಳಿಮಾಡಿ ಕಳ್ಳಾಟ!
ವೆಸನಗಳ್ಗಾಳಾಗಿ ಗೋಳಾಟ! (ಅ)
-ಲ್ಲಾಡಿಲ್ಲಾಡಿ, ಕುಣ್ದಾಡಿ ಹುಚ್ಚಾಟ!
ಕಾಮಿನಿಯೊಡನಾಡಿ ಸರ್ಸಾಟ! (ನೋ)
-ಟ ನಿರಂಜನಾದಿತ್ಯಗೆ ಸ್ಫುಟ!!!

ಆಸಕ್ತಿ ಇಲ್ಲದ ಶಕ್ತಿ ವ್ಯರ್ಥ!

ಕ್ತಿ ಶಕ್ತಿಯಿಲ್ಲದಿದ್ರೆ ವ್ಯರ್ಥ! (ಭ)
-ಕ್ತಿಯಿಂದ ಸಕಲ ಪುರುಷಾರ್ಥ!
ರ್ಬಾರದು ಭಕ್ತನಿಗೆ ಸ್ವಾರ್ಥ! (ಎ)
-ಲ್ಲರಲ್ಲಿಹ ಶ್ರೀರಾಮ ಸಮರ್ಥ!
ರ್ಶನಾನಂದಪಡೆದ ಪಾರ್ಥ!
ಕ್ತಿ ದುರುಪಯೋಗಿಪ ಧೂರ್ತ! (ಭು)
-ಕ್ತಿ ಸುಖವೊಂದೇ ಅವನಿಷ್ಟಾರ್ಥ!
ವ್ಯವಹಾರವನದ್ದೆಲ್ಲಾ ಸ್ವಾರ್ಥ!
(ಸಾ)-ರ್ಥಕ ನಿರಂಜನಾದಿತ್ಯಾತ್ಮಾರ್ಥ!!!

ಹಾರಾಟ, ಹೋರಾಟ, ಹೀರಾಟ ಇನ್ನಿಲ್ಲ!

ರಾತ್ರಿ, ಹಗಲು, ವಿಮಾನ ಯಾತ್ರೆ ಇಲ್ಲ! (ಆ)
-ಟ, ನೋಟ, ಕೂಟಕ್ಕೂ ಆಮಂತ್ರಣವಿಲ್ಲ!
ಹೋಗಾಚೆಗೆನ್ನುವವರೇ ಈಗೆಲ್ಲೆಲ್ಲಾ!
ರಾಗ, ದ್ವೇಷಾಸೂಯೆಗೆ ಕಡಿಮೆಯಿಲ್ಲ! (ಕಾ)
-ಟ ದಿನದಿನಕ್ಕೂ ಹೆಚ್ಚಿ ಶಾಂತಿಯಿಲ್ಲ!
ಹೀನಕೃತ್ಯಕ್ಕಧಿಕಾರಾನ್ಕೂಲವಿಲ್ಲ!
ರಾಮನಾಮ ಜಪದಲ್ಲಾಸಕ್ತಿಯಿಲ್ಲ! (ಕ)
-ಟಕ ತಾನಾದ್ರೆ ಸೊಂಟಮುರಿವರೆಲ್ಲ!
ಳೀವಯಸ್ಸಿನಲ್ಲೀ ಪ್ರಾರಬ್ಧವೆಲ್ಲ! (ಮ)
-ನ್ನಿಸಬೇಕಾ ಸದ್ಗುರು ತಪ್ಪುಗಳೆಲ್ಲ! (ಪು)
-ಲ್ಲ ನಿರಂಜನಾದಿತ್ಯ ನಿರ್ದಯನಲ್ಲ!!!

ಅಧಿಕಾರವಿದ್ದಾಗ ಹುಲಿ! (ಅ)

-ಧಿಕಾರವಿಲ್ಲದಾಗ ಇಲಿ!
ಕಾರ್ಯಾಸಕ್ತಿ ಸೂರ್ಯನಿಂದ್ಕಲಿ! (ಪ)
-ರಮಾರ್ಥವರಿತು ನೀನುಲಿ!
ವಿವೇಕಿ, ವಿರಾಗಿಯಾಗ್ಬಲಿ! (ಇ)
-ದ್ದಾಗ ದಾನಮಾಡ್ಲಿಕ್ಕೆ ಕಲಿ!
ದ್ದೆಯುತ್ತು, ಬಿತ್ತಿದ ಕೂಲಿ!
ಹುಟ್ಟಿ, ಸಾಯ್ವ ಮೊದ್ಲೇ ಸಿಗಲಿ! (ಉ)
-ಲಿ ನಿರಂಜನಾದಿತ್ಯಾಲಿಸ್ಲಿ!!!

ಮಿಂಚಿಹೋದ ಕಾರ್ಯಕ್ಕೇಕೆ ಚಿಂತೆ? (ಸಂ)

-ಚಿತ ಮುಗೀತೆಂದಿದ್ರೆ ನಿಶ್ಚಿಂತೆ!
ಹೋರಾಡು ವೀರ ಅರ್ಜುನನಂತೆ!
ಯಾಳು ಕೃಷ್ಣನಾಗಿರ್ಪನಂತೆ!
ಕಾರ್ಯಕ್ಕಾಗಿ ಕಾರ್ಯಮಾಡ್ಬೇಕಂತೆ! (ಸೂ)
-ರ್ಯನಿದಕ್ಕೆ ಮಾದರಿ ತಾನಂತೆ! (ಹ)
-ಕ್ಕೇನಿಹುದದಿದು ಬೇಡ್ಲಿಕ್ಕಂತೆ!
ಕೆಡ್ಸಿಲ್ಲಾತ ನಂಬಿದವ್ರನ್ನಂತೆ!
ಚಿಂತೆ ಚಿತೆಗಿಂತ ಘೋರವಂತೆ! (ಚಿಂ)
-ತೆ ನಿರಂಜನಾದಿತ್ಯಗಿಲ್ವಂತೆ!!!

ಗುರಿ ಸೇರದ ಪಾಂಡಿತ್ಯವೇತಕ್ಕೆ? (ಗು)

-ರಿ ಸೇರಿದಾತನೇ ಗುರು ಲೋಕಕ್ಕೆ!
ಸೇವೆ ಸಲ್ಲಿಸಬೇಕಾ ಶ್ರೀಪಾದಕ್ಕೆ! (ಪ)
-ರಮ ಪಾಪಿಯೂ ಪಾವನನಾಗ್ಲಿಕ್ಕೆ!
ರ್ಶನಾನುಗ್ರಹವೇ ಸಾಕದಕ್ಕೆ!
ಪಾಂಚಭೌತಿ ಕೊಡಲಿರ್ಪುದದಕ್ಕೆ! (ಹೆಂ)
-ಡಿರ್ಮಕ್ಕಳ ಸುಖ ಕಿಂಚಿತ್ಕಾಲಕ್ಕೆ! (ನಿ)
-ತ್ಯ ಶಾಂತಿ ಸುಖ ಸಚ್ಚಿದಾನಂದಕ್ಕೆ!
ವೇದೋಪನಿಷದ್ಗಳಿರ್ಪುದದಕ್ಕೆ!
“ತತ್ವಮಸಿ”ಯರ್ಥ ಸಾಧಿಸಲಿಕ್ಕೆ! (ಅ)
-ಕ್ಕೆ, ನಿರಂಜನಾದಿತ್ಯಾನಂದೆಲ್ಲಕ್ಕೆ!!!

ಅಂತರಿಕ್ಷವನ್ನಳೆವ ಸಾಹಸ ಸಾಕಪ್ಪಾ! (ಅಂ)

-ತರಂಗ ಶುದ್ಧವಾದರೆಲ್ಲಾ ಅಳೆದಂತಪ್ಪಾ!
ರಿಸಿ, ಮುನಿಗಳಿಂದಾಯ್ತು ತಪಸ್ಸದಕ್ಕಪ್ಪಾ!
ಕ್ಷಣಿಕವೀ ಚರಾಚರವೆಂದರಿತಿರಪ್ಪಾ!
ರಗುರುಕೃಪೆಯಿಂದ ಧನ್ಯರಾದರಪ್ಪಾ! (ಉ)
-ನ್ನತದ ಆತ್ಮ ಸಾಕ್ಷಾತ್ಕಾರ ಪಡೆದರಪ್ಪಾ! (ಇ)
-ಳೆಯ ವ್ಯಾಮೋಹದಿಂದ ಉದ್ಧಾರವಾದರಪ್ಪಾ!
ಜ್ರಕವಚ ತೊಟ್ಟವರೂ ಸತ್ತುಹೋದ್ರಪ್ಪಾ!
ಸಾಯುಜ್ಯವೆಂಬ ಅದೇ ಚಿರಂಜೀವಿತ್ವವಪ್ಪಾ!
ದಿನಾಲ್ಕುಲೋಕ, ಸುಖಕ್ಕಿಂತದು ಮೇಲಪ್ಪಾ!
ಚ್ಚಿದಾನಂದ ಪರಬ್ರಹ್ಮವೇ ಎಲ್ಲೆಲ್ಲಪ್ಪಾ!
ಸಾಧಿಸಬೇಕಿದನ್ನೀ ನರಜನ್ಮದಲ್ಲಪ್ಪಾ!
ಲಿಮಲಹರ ಶ್ರೀರಾಮ ಭಜನೆಯಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯಾನಂದವೇ ಗುರಿಯಪ್ಪಾ!!!

ಪೌರುಷವೆಷ್ಟು ಕೊಚ್ಚಿಕೊಂಡ್ರೇನು? (ಗು)

-ರು ಕೃಪೆಗೆ ಪಾತ್ರನಾಗು ನೀನು!
ಡ್ವೈರಿಗಳ ಜಯಿಸು ನೀನು! (ನಾ)
-ವೆ ಗುರುವೆಂದು ನಂಬಿರು ನೀನು! (ನಿ)
-ಷ್ಟುರವಾರಲ್ಲೂ ಮಾಡ್ಬೇಡ ನೀನು!
ಕೊಳೆಯೊಳಗಿರಿಸ್ಬೇಡ ನೀನು! (ಸ)
-ಚ್ಚಿದಾನಂದರೂಪಿಯಾಗು ನೀನು!
ಕೊಂಡಾಡು ಗುರುಮಹಿಮೆ ನೀನು! (ಕಂ)
-ಡ್ರೇನೂ ಮಾತನಾಡಬೇಡ ನೀನು! (ತಾ)
-ನು ನಿರಂಜನಾದಿತ್ಯನವನು!!!

ಹೊರಗಣ್ಣು ಕಂಡದ್ದಿಂದಿರದೆಂದೆಂದೂ!

(ಪ)-ರಬ್ರಹ್ಮಕ್ಕಳಿವಿಲ್ಲದಿರ್ಪುದೆಂದೆಂದೂ!
ರ್ವಿಮಾನವನರಿಯನಿದನಿಂದು!
(ಹೆ)-ಣ್ಣು, ಮಣ್ಣಿಗಾಗಿ ದಣಿವನವನಿಂದು!
ಕಂದನನ್ನೆತ್ತಿ ಮುದ್ದಾಡುವ ತಾನಿಂದು!
(ಒ)-ಡನಾಟ ಸಜ್ಜನರದ್ದೇಕೆಂಬನಿಂದು!
(ಜಿ)-ದ್ದಿಂದನ್ಯರನ್ನು ಪೀಡಿಸುತ್ತಿಹನಿಂದು!
ದಿವ್ಯ ಜೀವನ ನಡೆಸದಿಹನಿಂದು!
ಸನೆಯಾಡ್ವುದು ಬಂಡುಮಾತನ್ನಿಂದು!
(ತಂ)-ದೆಂದು ಕರೆಯದಿಹ ದೇವರನ್ನಿಂದು!
(ಎಂ)-ದೆಂದಿಗವನೇ ಗತಿಯೆಂದು ನಂಬಿಂದು!
(ಇಂ)-ದೂ, ಮುಂದೂ, ನಿರಂಜನಾದಿತ್ಯನೇ ಎಂದು!!!

ಬೇಕಾದರೆ ಮನೆಯಾಕೆಯೇ ಮೇನಕೆ!

(ಸಾ)-ಕಾದರೆ ಮೇನಕೆಯಾದ್ರೂ ಮನೆಯಾಕೆ!
ಶೇಂದ್ರಿಯಗಳು ಸಹಾಯ ಮನೆಕೆ!
(ಕ)-ರೆದರೂ ಬಾರದದು ಸನ್ನಿಧಾನಕ್ಕೆ!
ದ, ಮತ್ಸರವೆಂದರಿಷ್ಟವದಕ್ಕೆ!
(ಮ)-ನೆ ಮನೆಗಲೆವ ಸ್ವಭಾವವದಕ್ಕೆ!
ಯಾರ ಮಾತೂ ರುಚಿಸದಿರ್ಪುದದಕ್ಕೆ!
ಕೆಟ್ಟ ಚಾಳೆಯಿಂದಂಟಿಹುದು ಜಗಕ್ಕೆ!
(ಬಾ)-ಯೇ ಬಿಡದೆ ಮಾಡುವಭ್ಯಾಸ ಅದಕ್ಕೆ!
ಮೇರೆಯಿಲ್ಲ ಅದರ ಆಡಳಿತಕ್ಕೆ!
ಲ್ಲನೆಮ್ಮ ಬಾಲಗೋಪಾಲನದಕ್ಕೆ!
(ಸಾ)-ಕೆ ನಿರಂಜನಾದಿತ್ಯಕೃಷ್ಣನದಕ್ಕೆ??

ಗುರುವಾರ ಗಣನಾಯಕನಾಯ್ಕೆ!

ರುಜುಮಾರ್ಗಿಗಾಗಬೇಕೀಗ ಆಯ್ಕೆ!
ವಾದ, ಭೇದವಿಲ್ಲದೇ ಆಗ್ಬೇಕಾಯ್ಕೆ!
ಘುರಾಮನ ಭಕ್ತಗಾಗ್ಬೇಕಾಯ್ಕೆ!
ಣರಾಜ್ಯಕ್ಕಿದೇ ಯೋಗ್ಯವಾದಾಯ್ಕೆ!
(ಹ)-ಣಕಾಸಿಗಾಶಿಸಿ ಮಾಡ್ಬಾರದಾಯ್ಕೆ!
(ಜ)-ನಾನುರಾಗಿಯಾದವಗಾಗ್ಬೇಕಾಯ್ಕೆ!
ಶಸ್ಸುಂಟಾಗ್ಬೇಕ್ಭಾರತಕ್ಕೀ ಆಯ್ಕೆ!
ರ್ತವ್ಯನಿಷ್ಠೆ ಕಲಿಸ್ಬೇಕೀ ಆಯ್ಕೆ!
(ನಾ)-ನಾ ಮತ, ಪಂಥದೈಕ್ಯದಿಂದಾಗ್ಲಾಯ್ಕೆ!
(ಆ)-ಯ್ಕೆ, ನಿರಂಜನಾದಿತ್ಯಾನಂದದಾಯ್ಕೆ!!!

ಇವರು ಬಂದರೆಂದಾನಂದವಿಲ್ಲ! (ಅ)

-ವರು ಹೋದರೆಂದು ವ್ಯಸನವಿಲ್ಲ! (ಬ)
-ರುವುದು, ಹೋಗ್ವುದವ್ನಿಚ್ಛೆಯಂತೆಲ್ಲಾ!
ಬಂದವರಲ್ಲಿ ಅಪ್ತತೆಯೂ ಇಲ್ಲ! (ಹೋ)
ವರಾರಲ್ಲೂ ವಿರೋಧವೂ ಇಲ್ಲ! (ಯಾ)
-ರೆಂದು ಬಂದೆಷ್ಟುಕಾಲವೆಂದಾರ್ಬಲ್ಲ?
ದಾರಿ ನೇರಮಾಡ್ಬೇಕ್ಬಂದವರೆಲ್ಲಾ!
ನಂದ ಕಂದ ಬುದ್ಧಿಕೊಡ್ಲವ್ರಿಗೆಲ್ಲಾ!
ರಿದ್ರ, ಶ್ರೀಮಂತ, ಭೇದ ಬೇಕಿಲ್ಲ!
ವಿಧಿ, ವಿಲಾಸಕ್ಕಾರೂ ಹೊಣೆಯಲ್ಲ! (ಬ)
-ಲ್ಲ ನಿರಂಜನಾದಿತ್ಯಗೊಪ್ಪಿಸೆಲ್ಲಾ!!!

ಗಾಳಿ ಬೀಸ್ತು, ಧೂಳೆದ್ದಿತು, ಮಳೆಬಿತ್ತು!

(ಆ)-ಳಿದ ಬಾಳಿಗೀಗ ಸಮಾಪ್ತಿಯಾಯಿತು!
ಬೀಸಿದ ಬಿರುಗಾಳಿ ಶಾಂತವಾಯಿತು!
(ಸು)-ಸ್ತು ಪರಿಹಾರಕ್ಕನುಕೂಲವಾಯಿತು!
ಧೂರ್ತತನ ವಿರ್ಬಾರದೆಂಬರಿವಾಯಿತು!
(ಹ)-ಳೆಯುಗ್ರಾಕಾರಕ್ಕೆ ನಾಚುವಂತಾಯಿತು!
(ತಿ)-ದ್ದಿಕೊಳ್ಳದಿದ್ರೆ ವಿಧಿಯಿಲ್ಲದಾಯಿತು!
ತುಕ್ಕಾಗ್ದಂತಾಯುಧ ಒಳಗಿಡಬೇಕಾಯ್ತು!
ಲಹರಿರಾಗ ಹಾಡಬೇಕಾಯಿತು!
(ಗೆ)-ಳೆಯರ ಕೂಟ ಕಟ್ಟಬೇಕಾಗಿ ಬಂತು!
ಬಿತ್ತಿದ ಫಸ್ಲು ಕೊಯ್ಯಲೇ ಬೇಕಾಯಿತು!
(ಹೊ)-ತ್ತು, ನಿರಂಜನಾದಿತ್ಯನಿಚ್ಛೆಯಂತಾಯ್ತು!!!

ಬೇಡಿದ್ದುಕೊಟ್ಟು ಬೇಡಾದದ್ದಾಗ್ವುದೇಕೆ?

(ಹಾ)-ಡಿದರೆ ಹರಿನಾಮ ಶಾಂತಿ ಜೀವಕ್ಕೆ!
(ಬಿ)-ದ್ದುಹೋಗುವ ದೇಹಕ್ಕೆ ಮೋಹವೇತಕ್ಕೆ?
ಕೊಡಬೇಕಾದದ್ಕೊಡ್ವಾಗ ಚಿಂತೆಯೇತಕ್ಕೆ?
(ಹು)-ಟ್ಟು ಸಾವಿಗೆ ಕಟ್ಟುಬೀಳುವುದೇತಕ್ಕೆ?
ಬೇಕಾಗಿಲ್ಲ ಭಯಪಡುವುದಿದಕ್ಕೆ!
(ನೀ)-ಡಾಡಬೇಕು ದುರ್ಜನ ಸಂಗ ಅದಕ್ಕೆ!
ತ್ತ ಭಕ್ತಿ ಹೆಚ್ಚಲಿ ದಿನದಿನಕ್ಕೆ!
(ಒ)-ದ್ದಾಡಬೆಡ ಸಿಕ್ಕಿ ಸಂಸಾರಪಾಶಕ್ಕೆ!
(ಆ)-ಗ್ವುದುದ್ಧಾರ ಬಿದ್ದ್ರೆ ಸದ್ಗುರುಪಾದಕ್ಕೆ!
ದೇವ ದೇವ ಪರಬ್ರಹ್ಮನಾಗ್ವುದಕ್ಕೆ!
(ಏ)-ಕೆ ತಡ ನಿರಂಜನಾದಿತ್ಯನಾಗ್ಲಿಕ್ಕೆ!!!

ಯಾರಿಗೇನಾನಂದವಿಹುದಯ್ಯಾ? (ಅ)

-ರಿಯದಾಗಿದೆ ಹೇಳು ನೀನಯ್ಯಾ!
ಗೇದು, ಗೇದು ಸುಸ್ತಾಗಿಹೆನಯ್ಯಾ!
ನಾಮಕ್ಕೆ ಬೆಲೆಯಿಲ್ಲವೇನಯ್ಯಾ!
ನಂಬಿಕೆಗನ್ಯಾಯಮಾಡ್ಬೇಡಯ್ಯಾ!
ತ್ತಾರ್ತರಕ್ಷಕನಲ್ವೇನಯ್ಯಾ!
ವಿಧಿಸೆನಗಾಜ್ಞೆಯನ್ನೀಗಯ್ಯಾ!
ಹುಸಿಯಾಗ್ಬಾರ್ದು ನಿನ್ನಮಾತಯ್ಯಾ!
ರ್ಶನಕೊಟ್ಟುದ್ಧಾರ ಮಾಡಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯ ದತ್ತಯ್ಯಾ!!!

ಬರೆಯದಿರುವುದು ಬಹಳಾರಾಮ! (ಬ)

-ರೆದುದನ್ನೋದಿಸದಿರ್ಪುದತೀಕ್ಷೇಮ!
ದ್ವಾತದ್ವಾಡ್ಪವಗಿಲ್ಲ ತತ್ವಪ್ರೇಮ!
ದಿನರಾತ್ರಿ ವಿಷಯಕ್ಕವ ಗುಲಾಮ!
ರುಕ್ಮಿಣೀಶನಾತನ ಕಣ್ಣಿಗಧಮ! (ಯಾ)
-ವುದೂ ತನ್ನಂತಾಗ್ಬೇಕೆಂಬುದವ್ನ ಕಾಮ!
ದುರ್ವ್ಯಾಜ್ಯಹೂಡುವುದ್ರಲ್ಲವ ನಿಸ್ಸೀಮ!
ಡವನಾದ್ರೂ ವರಭಕ್ತ ಸುಧಾಮ! (ದೇ)
-ಹ ಭಾವನಾಶಕ್ಕೆ ರಾಧಾಕೃಷ್ಣ ನಾಮ! (ವೇ)
-ಳಾವೇಳೆಯೆನ್ನದೇ ಹಾಡಬೇಕಾ ನಾಮ!
ರಾಮ, ಶ್ಯಾಮರಿಗೆ ಸಾಷ್ಟಾಂಗ ಪ್ರಣಾಮ!
(ನೇ)-ಮ ನಿರಂಜನಾದಿತ್ಯನಿಗೆ ಸಂಭ್ರಮ!
(ಧಾ)-ಮ ನಿರಂಜನಾದಿತ್ಯಗಾಕಾಶ ಧಾಮ!!!

ಬಾಳಿನಗೊತ್ತು, ಗುರಿಯಿಲ್ಲದವ ನಿರುದ್ಯೋಗಿ!

(ಅ)-ಳಿದು ಹೋಗುವುದವನ ಶರೀರ ವ್ಯರ್ಥವಾಗಿ!
ಯನಾದಿಂದ್ರಿಯಗಳನ್ನಾಳಬಲ್ಲವ ಯೋಗಿ!
ಗೊಡ್ಡೆಮ್ಮೆಗೆಷ್ಟು ಮೇವಿಟ್ರೂ ಆಗದದುಪಯೋಗಿ!
(ಅ)-ತ್ತು ಕರೆದೇನುಮಾಡಿದ್ರೂ ಅದು ನಿರುಪಯೋಗಿ!
ಗುರುಚಿತ್ತಕ್ಕೆ ಬಂದರೆ ಅದು ನಿತ್ಯೋಪಯೋಗಿ!
(ಅ)-ರಿತಿದನು ಮಾಡ್ಬೇಕವನ ಸೇವೆ ನಿರುದ್ಯೊಗಿ!
(ತಾ)-ಯಿಯಂತೆತ್ತಿಕೊಂಬನಾಮಗನ ಸುಪ್ರೀತನಾಗಿ!
(ತ)-ಲ್ಲಣಗೊಳ್ಳದೇ ಇಟ್ಟಲ್ಲಿರ್ಬೇಕ್ಬೆಕ್ಕಿನ ಕೂಸಾಗಿ!
ಯೆಯವನಮೇಲೆ ಬೀರುವನಪಾರವಾಗಿ!
ರದರಾಜ ವರವೀವ ತನ್ನಿಚ್ಛೆಯಂತಾಗಿ!
ನಿಶ್ಚಲ ಭಕ್ತಿಯಿರ್ಬೇಕ್ನಿನ್ನಲ್ಲಿ ಅವನಿಗಾಗಿ!
(ಗು)-ರು ರೂಪದಿಂದವನಿರುವ ದತ್ತಾತ್ರೇಯನಾಗಿ!
(ಉ)-ದ್ಯೋಗ ಅವನ ಸೇವೆಯಂದರಿತು ಮಾಡಲಾಗಿ!
(ತ್ಯಾ)-ಗಿ ನಿರಂಜನಾದಿತ್ಯಾನುಗ್ರಹವಕ್ಕು ತಾನಾಗಿ!!!

ಅಕಾರಣವಾಗನ್ಯರ ದೂರ್ವುದೇಕೆ?

ಕಾರ್ಯಕ್ಕವ್ನೇ ಕಾರಣವೆಂದಿರ್ಬಾರ್ದೇಕೆ?
ಚನಾತ್ಮಕಸೇವೆ ಮಾಡುದ್ಧಾರಕ್ಕೆ!
(ತೃ)-ಣ ಸಮಾನ ವಿಘ್ನಗಳವ್ನ ಚಿತ್ತಕ್ಕೆ!
ವಾರ, ತಿಥಿ, ಮಾಸ, ಲೆಃಖ ಬೇಡದಕ್ಕೆ!
ಡ್ಡ, ಮೀಸೆ, ಕಿತ್ರೇನು, ಬಿಟ್ರೇನದಕ್ಕೆ?
(ಧ)-ನ್ಯನಾಗ್ಬೇಕಾದ್ರೆ ಇರಬಾರದು ಬೆಕ್ಕೆ!
ಕ್ಕಸರಾದ್ರೂ ಜೀವರೀಕಾರಣಕ್ಕೆ!
ದೂರ್ವಾಸರ ಸಿಟ್ಟೇ ಹೇತು ಪತನಕ್ಕೆ! (ಇ)
-ರ್ವುದು ಗುರುಸೇವೆಯೊಂದೇ ಉದ್ಧಾರಕ್ಕೆ!
ದೇಶದೇಳಿಗೆಗೆ ಬೇಕಿದೇ ಸಧ್ಯಕ್ಕೆ! (ಅಂ)
-ಕೆಯಿಲ್ಲ ನಿರಂಜನಾದಿತ್ಯಾನಂದಕ್ಕೆ!!!

ಗೆದ್ದುಬಂದವರು ಕೆಲವರು! (ಬಿ)

-ದ್ದು, ಎದ್ದೊದ್ದಾಡಿದವ್ರನೇಕರು!
ಬಂಧನಕ್ಕೂ ಒಳಗಾದ್ರವರು!
ಯೆದೋರೆಂದು ಹಲುಬಿದರು!
ಸುದೇವಸುತನಾತ್ಮಜರು!
ರುಜು ಮಾರ್ಗಾಸಕ್ತರಾದವರು!
ಕೆಟ್ಟಯೋಚನೆ ಕೈಬಿಟ್ಟವರು!
ಕ್ಷ್ಯಸಿದ್ಧಿಯ ಪಡೆದ್ರವರು!
ರ ಗುರುಸೇವಾ ನಿರತರು! (ಯಾ)
-ರು? ನಿರಂಜನಾದಿತ್ಯ ದಾಸರು!!!

ಯಾವ ಪಕ್ಷವಾದರೂ ದೇವರೇ ದಕ್ಷ!

ಸುಧಾತಳದ್ದೆಲ್ಲವೂ ಸ್ವಾರ್ಥ ಪಕ್ಷ!
ತಿತಪಾವನ ರಾಮಗಿಲ್ಲಪೇಕ್ಷ!
ಕ್ಷಯಾಭಿವೃದ್ಧಿರಹಿತ ಸ್ಥಿತಿ ಮೋಕ್ಷ!
ವಾದ, ವಿವಾದಾತೀತ ಜಗದಾಧ್ಯಕ್ಷ!
ಶಾವತಾರಿ ಶ್ರೀಹರಿ ಕಮಲಾಕ್ಷ!
ರೂಪ, ಲಾವಣ್ಯಾನುಪಮಾ ವಿಶಾಲಾಕ್ಷ!
ದೇಹಾಭಿಮಾನವಿಲ್ಲದವ ಫಾಲಾಕ್ಷ!
ರ ಗುರು ದತ್ತನೆಲ್ಲರಿಗೂ ರಕ್ಷಾ!
(ಹ)-ರೇ ರಾಮ ಭಜನೆಗೆ ಮಾಡ್ಬಾರ್ದುಪೇಕ್ಷಾ!
ಯಾಮಯಗಿಲ್ಲ ಜಾತಿ, ಮತ, ಪಕ್ಷ!
(ವೀ)-ಕ್ಷಕ ನಿರಂಜನಾದಿತ್ಯ ವಿಶ್ವಾಧ್ಯಕ್ಷ!!!

ಕೂತೂಹಲ ಅಪಕ್ವ ಸ್ಥಿತಿ!

ತೂರಿ, ಕೇರದ ಭತ್ತಾಸ್ಥಿತಿ!
ಗ್ಲಿರುಳಿರ್ಬೇಕಾತ್ಮ ಸ್ಥಿತಿ!
ಕ್ಷ್ಯದಲ್ನೆಟ್ಟ ಗುರೀ ಸ್ಥಿತಿ!
ನನ್ಯ ಭಕ್ತಿಗಿದೇ ಸ್ಥಿತಿ!
ರಮ ಪಾವನವೀ ಸ್ಥಿತಿ! (ಸಿ)
-ಕ್ವದತ್ಯಂತಾಪರೂಪಾ ಸ್ಥಿತಿ!
ಸ್ಥಿತಪ್ರಜ್ಞೆಯೂ ಇದೇ ಸ್ಥಿತಿ! (ಗ)
-ತಿ ನಿರಂಜನಾದಿತ್ಯ ಪತಿ!!!

ಕಾಮನ ಮನ ಚಂಚಲ!

(ರಾ)-ಮನ ಮನ ನಿಶ್ಚಂಚಲ!
ರ ಕಾಮದಿಂದ ಬಲ!
(ರಾ)-ಮ ನಿಷ್ಕಾಮದಿಂದ್ಸಬಲ!
ಶ್ವರ ಮಾಯೆ ಚಪಲ!
ಚಂದ್ರಶೇಖರ ಅಚಲ!
ರಾಚರ ಮಾಯಾಜಾಲ! (ಕಾ)
-ಲ ನಿರಂಜನಾದಿತ್ಯಲಾ!!!

ನಾನಿದ್ದಲ್ಲಿಗೆ ನೀನೇ ಬಾ!

ನಿನ್ನವರ್ಗಿಲ್ಗಾ ಲಾಭ; ಬಾ!
(ಇ)-ದ್ದಲ್ಲಿಂದ್ಲೇ ಮಾಳ್ಪೆಶುಭ, ಬಾ!
(ಇ)-ಲ್ಲಿ ನನ್ನೊಳೈಕ್ಯವಾಗು ಬಾ!
ಗೆದ್ದಾಸೆಗಳ ನೀನು ಬಾ!
ನೀನು ನಾನಾಗಬೇಕು ಬಾ!
ನೇತ ನಾನೆಂದು ನಂಬಿ ಬಾ!
ಬಾ, ನಿರಂಜನಾದಿತ್ಯಾಗ್ಬಾ!!!

ಪೂರ್ವಿಕ ನಿರಂಜನಗಾನು ಶರಣು!

(ಉ)-ರ್ವಿಗೆ ತಕ್ತಿ, ಬೆಳಕೀವಗೆ ಶರಣು!
ರ್ಮಾಕರ್ಮ ಮರ್ಮಜ್ಞನಿಗೆ ಶರಣು!
ನಿತ್ಯ ನಿಯಮನಿಷ್ಠನಿಗೆ ಶರಣು!
ರಂಗ ಸಾರಂಗಾಭೇದನಿಗೆ ಶರಣು!
ನತಾ ಜನಾರ್ದನನಿಗೆ ಶರಣು!
ಯನ ಮನೋಹರನಿಗೆ ಶರಣು!
ಗಾಣಾಪತ್ಯದಧ್ಯಕ್ಷನಿಗೆ ಶರಣು!
(ಅ)-ನುಪಮ ಸಹನಾಮೂರ್ತಿಗೆ ಶರಣು!
ಮೆ, ದಮೆಯರಸನಿಗೆ ಶರಣು!
(ವ)-ರ ಗುರು ದತ್ತಾವತಾರಿಗೆ ಶರಣು!
(ಉ)-ಣು ನಿರಂಜನಾದಿತ್ಯ ಪ್ರಸಾದವುಣು!!!

ನಾವೆಣಿಸಿದಂತಾವುದಾಗಿದೆ? (ಎ)

-ವೆಯಿಕ್ಕುವಷ್ಟ್ರಲ್ಲೇ ಬೇರಾಗಿದೆ! (ಉ)
-ಣಿಸ್ಬೇಕಾದನ್ನ ಚೆಲ್ಲಿಹೋಗಿದೆ!
ಸಿಪ್ಪೆ ಕೀಳ್ವಾಗ್ಹಣ್ಣೇ ಕೊ

ದ್ಹೋಗಿದೆ!
ದಂಟಿನ್ಜೊತೆ ಬೆರ್ಳೂ ತುಂಡಾಗಿದೆ!
ತಾಳ್ಮೆಯಿಂದಿದ್ರೆ ಬಾಳ್ಗೋಳಾಗಿದೆ! (ಮೇ)
-ವು ತಿನ್ತಿದ್ದಾಕ್ಳಿಗೆ ಹಾವ್ಕಚ್ಚಿದೆ!
ದಾಸನಿಗೆ ಮೋಸವೇ ಆಗಿದೆ!
ಗಿಡಕ್ಕಿಟ್ಟ ಗೊಬ್ಬ್ರದ್ನೇ ತಿಂದಿದೆ!
(ಇ)-ದೆ, ನಿರಂಜನಾದಿತ್ಯಗೇನಿದೆ???

ಮಲಗಬೇಕೆಂದು ನಾನಿದ್ದೆ! (ಕೆ)

-ಲಸದ ನೆನ್ಪಾದೊಡನೆದ್ದೆ! (ಹ)
-ಗಲು, ರಾತ್ರಿ, ಹೀಗಾದ್ರೇನ್ನಿದ್ದೆ?
ಬೇಡಪ್ಪಾ ಜನ್ಮವೆನ್ನುತ್ತಿದ್ದೆ!
ಕೆಂಗಣ್ಣನಾಜ್ಞೆಗೆ ಕಟ್ಟಿದ್ದೆ!
ದುಡಿದವ್ನ ಪಾದಕ್ಕೆ ಬಿದ್ದೆ!
ನಾನೇ ಅವನಾಗ್ಬೇಕೆಂದಿದ್ದೆ!
ನಿಷ್ಠೆಯಿಂದಭ್ಯಾಸ ಮಾಡ್ತಿದ್ದೆ! (ಗೆ)
-ದ್ದೆ, ನಿರಂಜನಾದಿತ್ಯಾಗ್ಯೆದ್ದೆ!!!

ನೀತಿ, ರೀತಿಯಿಂದ ಖ್ಯಾತಿಯಯ್ಯಾ (ಜಾ)

-ತಿ ಯಾವುದಾದರೇನಾಯಿತಯ್ಯಾ?
ರೀತಿಗೆಟ್ಟವ ಬ್ರಾಹ್ಮಣ್ನೇನಯ್ಯಾ? (ಪ)
-ತಿತ ನಂದನಾರ್ಪಾವನನಯ್ಯಾ! (ಬಾ

)
-ಯಿಂದ ಬಹಳ ಹೇಳ್ಬಹುದಯ್ಯಾ!
ತ್ತನಂತಾರ್ದಿಗಂಬರರಯ್ಯಾ? (ವ್ಯಾ)
-ಖ್ಯಾನ ಕೇಸರಿಗ್ಳಾದ್ರಾಯ್ತೇನಯ್ಯಾ?
ತಿಳಿದದ್ದು ಬಾಳಲ್ಲಿರ್ಬೇಕಯ್ಯಾ! (ಜ)
-ಯಭೇರಿ ಆಗ ಮೊಳಗ್ಬೇಕಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯನಾಗಯ್ಯಾ!!!

ಮಂತ್ರ ಜಪಮಾಡುವುದೇತಕ್ಕೆ?

(ಪಾ)-ತ್ರ ಪರಮಾರ್ಥಕ್ಕಾಗುವುದಕ್ಕೆ!
ಪ ಮೂರ್ತಿ ತಾನಾಗುವುದಕ್ಕೆ!
ತಿತಪಾವನನಾಗ್ವುದಕ್ಕೆ!
ಮಾತು ಕಡಿಮೆಯಾಗುವುದಕ್ಕೆ!
(ಕೇ)-ಡುಗಳಿಂದ ಪಾರಾಗುವುದಕ್ಕೆ!
(ಠಾ)-ವು ತನ್ನದನ್ನು ಸೇರುವುದಕ್ಕೆ!
ದೇವಗುಣ ತನ್ನದಾಗ್ವುದಕ್ಕೆ!
ತ್ತ್ವಸಿದ್ಧಾಂತ ಸಿದ್ಧಿಸಲಿಕ್ಕೆ!
(ಅ)-ಕ್ಕೆ ನಿರಂಜನಾದಿತ್ಯತಾನಕ್ಕೆ!!!

ಅನುಕೂಲವಿದ್ದರಾಗುತ್ತದೆ!

(ಅ)-ನುಕೂಲವಿಲ್ದಿದ್ರೆ ಹೋಗುತ್ತದೆ!
ಕೂತ್ರೇಳ್ವುದಕ್ಕೂ ಅದು ಬೇಕಾಗ್ತದೆ!
ಭ್ಯಾನ್ಕೂಲವೆರ್ಡೂ ಬೇಕಾಗಿದೆ!
ವಿಶ್ವಾಸ ದೇವ್ರಲ್ಲಿರ್ಬೇಕಾಗಿದೆ!
(ಇ)-ದ್ದದ್ದರಲ್ಲಿ ತೃಪ್ತಿ ಬೇಕಾಗಿದೆ!
ರಾಗ, ದ್ವೇಷ, ಬಿಡಬೇಕಾಗಿದೆ!
ಗುರುಕೃಪೆ ಬೇಕೇ ಬೇಕಾಗಿದೆ!
(ಉ)-ತ್ತಮ ನಡತೆಯಿರ್ಬೇಕಾಗಿದೆ! (ತಂ)
-ದೆ ನಿರಂಜನಾದಿತ್ಯ ನೀನೆಂದೆ!!!

ಎಷ್ಟೆಚ್ಚರವಾಗಿದ್ದರೇನು! (ಚೇ)

-ಷ್ಟೆ ವಿಧಿಯದು ತಪ್ಪೀತೇನು? (ಬೆ)
-ಚ್ಚಬಾರದು ಇದಕ್ಕೆ ನೀನು!
ಘುಪತಿಯ ನೆನೆ ನೀನು!
ವಾತಾತ್ಮಜನಂತಾಗು ನೀನು!
ಗಿರಿಯನ್ನೆತ್ತಿ ತಂದ್ನವನು! (ಎ)
-ದ್ದನವನಿಂದ ರಾಘವನು! (ಹ)
-ರೇ ರಾಮ ಜಪಮಾಡು ನೀನು! (ನೀ)
-ನು ನಿರಂಜನಾದಿತ್ಯಸೂನು!!!

ನಿರ್ಲಿಪ್ತ ಪರಮಾತ್ಮ ನಟರಾಜ! (ಜಾ)

-ರ್ಲಿ, ಬೀಳ್ಲಿ, ಆಡ್ಲಿ, ಹಾಡ್ಲಿ, ನಟರಾಜ! (ಆ)
-ಪ್ತನಾಗಿಹನೆಲ್ಲಕ್ಕಾ ನಟರಾಜ!
ರಾಪರಗಳಲ್ಲೂ ನಟರಾಜ!
ಸ, ವಿರಸದಲ್ಲೂ ನಟರಾಜ!
ಮಾನಾಪಮಾನದಲ್ಲೂ ನಟರಾಜ! (ಆ)
-ತ್ಮ, ಅನಾತ್ಮಗಳಲ್ಲೂ ನಟರಾಜ!
ಟನಾಧಾರಾ ಪರಬ್ರಹ್ಮ ನಿಜ! (ದಿ)
-ಟವಿದೊಂದೇ ನಿಜಾನಂದ ಸಹಜ! (ವಿ)
-ರಾಜಿಪುದಿದರ ವಿಜಯ ಧ್ವಜ! (ನಿ)
-ಜ ನಿರಂಜನಾದಿತ್ಯಾನಂದ ಧ್ವಜ!!!

ಆದರೋಪಚಾರಾತುರರೇ ಹೆಚ್ಚು!

ರ್ಶನಾನಂದಾತುರರಿಲ್ಲ ಹೆಚ್ಚು!
ರೋಗವಾಸಿಯಾಗ್ಲೆಂಬವರೂ ಹೆಚ್ಚು!
ರಮಾರ್ಥಕ್ಕಾಗಿರ್ಪವ್ರಿಲ್ಲ ಹೆಚ್ಚು!
ಚಾಡಿ ಹೇಳ್ವಭ್ಯಾಸದವರೂ ಹೆಚ್ಚು!
ರಾಮ ಭಜನೆ ಮಾಳ್ಪವ್ರಿಲ್ಲ ಹೆಚ್ಚು!
ತುಟಿಮುಚ್ಚದೆ ಹರಟ್ಟವ್ರೂ ಹೆಚ್ಚು!
(ವಿ)-ರಕ್ತರಾಗಿರುವವರಿಲ್ಲ ಹೆಚ್ಚು!
ರೇಗಾಡಿ, ಕೂಗಾಡುವವರೂ ಹೆಚ್ಚು!
ಹೆರರ್ತನ್ನವ್ರೆನ್ನದವ್ರಿಲ್ಲ ಹೆಚ್ಚು!
(ಹೆ)-ಚ್ಚು, ನಿರಂಜನಾದಿತ್ಯಾನಂದ ಹೆಚ್ಚು!!!

ತಾಳ್ಮೆಯಿಂದೆಲ್ಲಾ ನೋಡುತ್ತಿರಯ್ಯಾ!

(ಕಾ)-ಳ್ಮೆದ ಹಾಕದಿದ್ದ್ರು ದರದಯ್ಯಾ!
(ಬಾ

)-ಯಿಂದಂದದ್ಕಾರ್ಯಕ್ಕೆ ಬರ್ಬೇಕಯ್ಯಾ!
(ಎ)-ದೆಗುಂದಿದರದೆಂತಾದೀತಯ್ಯಾ?
(ಉ)-ಲ್ಲಾಸದಿಂದ ಕರ್ತವ್ಯ ಮಾಡಯ್ಯಾ!
ನೋವ್ನಿನ್ನದನ್ನೀಗ ಸಹಿಸಯ್ಯಾ!
(ಮಾ)-ಡು ಗುರುನಾಮ ಭಜನೆಯಯ್ಯಾ!
(ಅ)-ತ್ತಿತ್ತ ಸುತ್ತಾಡಿ ಸುಸ್ತಾಗ್ಬೇಡಯ್ಯಾ!
ಘುವೀರಗಾರ ಬಲವಯ್ಯಾ?
(ಅ)-ಯ್ಯಾ ನಿರಂಜನಾದಿತ್ಯನದ್ದಯ್ಯಾ!!!

ಅತೃಪ್ತಿಯಳ್ತೆಕೋಲನ್ನತ್ತೆಸೆಯಯ್ಯಾ!

ತೃಣವೂ ಗುರುಚಿತ್ತವಿಲ್ದಲ್ಲಾಡದಯ್ಯಾ! (ವ್ಯಾ)
-ಪ್ತಿಯವನದ್ದೀರೇಳು ಲೋಕದಲ್ಲಯ್ಯಾ!
ಮನೂ ಅವನಾಜ್ಞೆ

ಈರಲಾರಯ್ಯಾ!
(ಅ)-ಳ್ತೆ ಅವನದ್ದೆಂದಿಗೂ ತಪ್ಪಾಗದಯ್ಯಾ!
ಭ್ಯಕ್ಕಾಗಿ ಸದಾ ಪ್ರಾರ್ಥಿಸಬೇಕಯ್ಯಾ!
(ಚಿ)-ನ್ನ ಬೆಳ್ಳಿ ಬೇಡಿ ದುಃಖಿಯಾಗಬೇಡಯ್ಯಾ!
(ಮ)-ತ್ತೆ, ಮತ್ತೆ, ಸತ್ತು, ಹುಟ್ಟಲೇಬಾರದಯ್ಯಾ!
ಸೆರೆ ಕುಡಿದ ಕೋತಿಯಂತೀ ಮನ್ಸಯ್ಯಾ!
ಮನಿಯಮದಿಂದದ ಕಟ್ಟೇಕಯ್ಯಾ!
(ಅ)-ಯ್ಯಾ, ನಿರಂಜನಾದಿತ್ಯಾನಂದವೆಲ್ಲಯ್ಯಾ!!!

ಬೆಕ್ಕೇ! ನೀನು ಹುಟ್ಟಿದ್ದೇತಕ್ಕೆ! (ಹ)

-ಕ್ಕೇನಿದೆ ಜೀವರ ಕಾಡ್ಲಿಕ್ಕೆ?
ನೀತಿ ಇಲ್ಲದಾಯ್ತು ಲೋಕಕ್ಕೆ! (ಅ)
-ನುದಿನ ಅತ್ಯಾಸೆ ಭೋಗಕ್ಕೆ!
ಹುಚ್ಚು ಹಿಡಿಸಿದೆ ಮನಕ್ಕೆ! (ಕ)
-ಟ್ಟಿದೆ ಕಾಮಿನಿಯಪಾಶಕ್ಕೆ! (ಇ)
-ದ್ದೇನು ಮಾಡಿದ್ದಾಯ್ತೀ ಜನ್ಮಕ್ಕೆ! (ಸಂ)
-ತನಾಗಿ ಹೋಗು ಸಾಯುಜ್ಯಕ್ಕೆ! (ಅ)
-ಕ್ಕೆ, ನಿರಂಜನಾದಿತ್ಯನಕ್ಕೆ!!!

ಅಕ್ಕನ ಪಕ್ಕ ಬೆಕ್ಕಿಗೆ ಚೊಕ್ಕ! (ಅ)

-ಕ್ಕರೆಯಿಂದಿಕ್ಕುವಳ್ಹಾಲನ್ನಕ್ಕ!
ಯವಾದ ಮೈ ಹೆಸ್ರಿಗೆ ತಕ್ಕ!
ತಿ ಗೃಹಸೇರಿಲ್ಲಿನ್ನೂ ಅಕ್ಕ! (ದ)
-ಕ್ಕಬಾರದು ಅವಳಿಗೀ ಠಕ್ಕ!
ಬೆಕ್ಕೆಗೊಳಗಾಗಿಲ್ಲೆಂಬಳಕ್ಕ! (ಪ)
-ಕ್ಕಿವಾಹನ ತಾನೇಕಿನ್ನೂ ಸಿಕ್ಕ?
ಗೆಳೆಯನವ್ನೊಬ್ಬಳೆಂಬಳಕ್ಕ!
ಚೊಕ್ಕಮ್ಮನೆದುರವನು ಪುಕ್ಕ! (ಅ)
-ಕ್ಕ! ನಿರಂಜನಾದಿತ್ಯನಾಗಕ್ಕ!!!

ಬರ್ಬೇಕ್ಬರ್ಬೇಕನ್ನುತ್ತೆ ಬಾರದಾಗ! (ಇ)

-ರ್ಬೇಕಿರ್ಬೇಕನ್ನುತ್ತೆ ಬಂದುಕೂತಾಗ! (ಏ)
-ಕ್ಬರ್ಬೇಕನ್ನುತ್ತೆ ಕೊಂಚಹೊತ್ತಾದಾಗ! (ಇ)
-ರ್ಬೇಕದಕ್ಕಾಗಿ ತೆಪ್ಪಗೊಳಗೀಗ!
ಷ್ಟವಾಗಿದಂತಿರಲ್ಮನಕ್ಕೀಗ! (ತಿ)
-ನ್ನುವುದುಣ್ಣುವುದೂ ಏಕೆಂಬುದೀಗ?
(ಎ)-ತ್ತೆತ್ತಲೂ ಕತ್ತಲೆ ಸುತ್ತಿಹುದೀಗ!
ಬಾಯ್ಬಡ್ಕೊಂಡ್ರೆ ಬರುವವರಾರೀಗ?
(ಪ)-ರಮೇಶ್ವರನೊಬ್ಬನೇ ಗತಿ ಈಗ!
ದಾತ, ನಾಥ, ನೀನೇಕಾಯೋ ಬಂದೀಗ!
(ಖ)-ಗ ನಿರಂಜನಾದಿತ್ಯಾ ತೋರ್ದಾರೀಗ!!!

ಆಪತ್ತು ಬಂದಾಗಾಪ್ತರೂ ವೈರಿಗಳು!

ತಿಯರೂ ಕೇಳರ್ದ್ರೌಪದಿಯ ಗೋಳು!
(ಸ)-ತ್ತು ಹೋದಮೇಲೇಕೆ ದಿನ, ರಾತ್ರಿಯಳು?
ಬಂದಾಪತ್ತು ಕಳೆವವರ್ಬಂಧುಗಳು!
ದಾರಿದ್ರ್ಯ ನಿವಾರಿಸ್ಬೇಕು ದಾನಿಗಳು!
ಗಾದೆ ಹೇಳಿ ಬಾಧಿಸ್ಬಾರ್ದುದಾರಿಗಳು!
(ಲಿ)-ಪ್ತರಾಗದೇ ಬಾಳ್ಬೇಕು ಸಂಸಾರಿಗಳು!
ರೂಪ, ಲಾವಣ್ಯವೆಲ್ಲಾ ನೀರ್ಗುಳ್ಳೆಗಳು!
ವೈರಾಗ್ಯದಿಂದ ಧನ್ಯರು ಜೀವಿಗಳು!
ರಿಪುಗಳಾರರಿಂದೆಲ್ಲಾ ಕಷ್ಟಗಳು!
ಣೇಶನಿಂದಾಗ್ಬೇಕ್ಪರಿಹಾರಗಳು!
(ಕೇ)-ಳು ನಿರಂಜನಾದಿತ್ಯ ಹಿತೋಕ್ತಿಗಳು!!!

ಮೈ ಬಣ್ಣ ಬದಲಾದ್ರೇನಾಯ್ತಮ್ಮ?

ಣ್ಣಕ್ಕಾಶ್ಸಿಲ್ಲ ನಾನ್ತಿಳಿಯಮ್ಮಾ! (ಹು)
-ಣ್ಣನ್ನಾ ಗುರುವಿನ್ನೂ ಮಾಯ್ಸಿಲ್ಲಮ್ಮಾ!
ಯಸಿದ್ದಾವುದೂ ಸಿಕ್ಕಿಲ್ಲಮ್ಮಾ!
ಯಾಮಯನವನೆಂಬರಮ್ಮಾ!
ಲಾಭನನಗಾವ್ದೂ ಆಗಿಲ್ಲಮ್ಮಾ! (ಉ)
-ದ್ರೇಕದಿಂದ ಫಲವೇನಿಲ್ಲಮ್ಮಾ!
ನಾಮಸ್ಮರಣೆಯನ್ಬಿಟ್ಟಿಲ್ಲಮ್ಮಾ! (ತಾ)
-ಯ್ತನವನ್ನವನುಳ್ಸಿಕೊಳ್ಲಮ್ಮಾ! (ಬೊ)
-ಮ್ಮ ನಿರಂಜನಾದಿತ್ಯ ಕಾಣಮ್ಮಾ!!!

ಈ ಮನೆಗೆ ಯಾವಾಗ ಬರುವುದು?

ನಸ್ಸಿಗುತ್ಸಾಹ ಬಂದಾಗ್ಬರ್ವುದು!
ನೆಮ್ಮದಿಯಿಲ್ಲದಿದ್ದ್ರೇನೂ ಆಗದು!
ಗೆದ್ದರರಿಗಳ ನೆಮ್ಮದ್ಯಹುದು!
ಯಾಕೆ ತಡವೆಂದರಿಯದಿಹುದು!
ವಾದ, ವಿವಾದಗಳ್ಬೇಡಾಗಿಹುದು!
ತಿ ದತ್ತನೆಂದು ನಂಬ್ಯಾಗಿಹುದು!
ಳಲಿದ ಬಾಳು ಬೆಂಡಾಗಿಹುದು!
ರುದ್ರ ಭೂಮಿಯೇ ಲೇಸೆನಿಸಿಹುದು!
(ಸಾ)-ವು ಬಾರದೆ ಇದಕ್ಕನ್ಕೂಲಾಗದು!
(ಕುಂ)-ದು ನಿರಂಜನಾದಿತ್ಯಗಿರ್ಬಾರದು!!!

ಅಕ್ಷರ ಮಾಲಾರ್ಪಣೆ ಕಂಠಕ್ಕೆ! (ದ)

-ಕ್ಷತಾನಾಗಿ ಶೋಭಿಸುವುದಕ್ಕೆ!
ಕ್ಷಕನೆಲ್ಲರಿಗಾಗ್ವುದಕ್ಕೆ!
ಮಾರ್ಗದರ್ಶಕನಾಗುವುದಕ್ಕೆ!
ಲಾಭ, ನಷ್ಟ, ಸಮದರ್ಶಿತ್ವಕ್ಕೆ! (ಬೇ)
-ರ್ಪಡದೆ ಸತಿಯೊಡನಿರ್ಲಿಕ್ಕೆ! (ಹ)
-ಣೆಗಣ್ಣ ತಾನೆಂದರಿತಿರ್ಲಿಕ್ಕೆ!
ಕಂದ, ಗಣೇಶರ್ಪುತ್ರರಾಗ್ಲಿಕ್ಕೆ!
ಕ್ಕು, ಠವಳಿಗಳ, ಸುಟ್ಟುಹಾಕ್ಲಿಕ್ಕೆ (ಅ)
-ಕ್ಕೆ ಶಿವ, ನಿರಂಜನಾದಿತ್ಯರೊಂದಕ್ಕೆ!!!

ಜೊತೆಗೂಡಿ ಬಂದ್ರೆ ನಾ ನಿನಗೆ ಸಿಕ್ಕೆ!

(ಕ)-ತೆ, ಕಲಾಪವೇಕೆ ನನ್ನ ನೋಡಲಿಕ್ಕೆ?
ಗೂಡಿನ ಒಳಗೆ ಪ್ರವೇಶ ಒಂದಕ್ಕೆ!
(ತಿಂ)-ಡಿ, ತೀರ್ಥದ ಮಾತಲ್ಲ ಮುಖ್ಯ ಅದಕ್ಕೆ!
ಬಂದಮೇಲ್ಸಿದ್ದವಾಗ್ಬೇಕೆಲ್ಲಾ ತ್ಯಾಗಕ್ಕೆ!
(ಬಂ)-ದ್ರೆ ಹೋಗ್ಬೇಕೆಂಬವ್ರಾರೂ ಒಪ್ಪರದಕ್ಕೆ!
ನಾ ನಿನಗೆ, ನೀನೆನಗಾಗ್ಬೇಕದಕ್ಕೆ!
ನಿಶ್ದಿನವೆಲ್ಲಾ ಹೀಗಿರ್ಬೆ

ಕಾನಂದಕ್ಕೆ!
(ಘ)-ನ ಲಕ್ಷ್ಮೀನೃಸಿಂಹ ತತ್ವಾರ್ಥವಿದಕ್ಕೆ!
(ಆ)-ಗೆ ಇದು ಸಾಧನ ಸದಾ ಸಾಯುಜ್ಯಕ್ಕೆ!
ಸಿಹಿ, ಕಹಿ, ಯರಿಯದೇಕ ರಸಕ್ಕೆ!
(ಅ)-ಕ್ಕೆ, ನಿರಂಜನಾದಿತ್ಯಾನಂದವೆಲ್ಲಕ್ಕೆ!!!

ಶಿವಕೃಷ್ಣರಲ್ಲೇಕೆ ಭೇದ? (ಇ)

-ವರೇ ಗುರುವಾದಾಗ ಭೇದ!
ಕೃಷ್ಣರ್ಜುನಗೆ ಗುರುವಾದ! (ಪೂ)
-ಷ್ಣ ಮಾರುತಿಗೆ ಗುರುವಾದ! (ಹ)
-ರ ಪಾರ್ವತಿಗೆ ಗುರೂ ಆದ! (ಇ)
-ಲ್ಲೇ ನಮ್ಮಲ್ಲಿ ವಾದ, ವಿವಾದ!
ಕೆಲಸ, ಕಾರ್ಯವೊಂದ್ವಿನೋದ!
ಭೇದ ರಹಿತ ಆತ್ಮನಾದ!
ತ್ತ ನಿರಂಜನಾದಿತ್ಯಾದ!!!

ನಾಮ, ರೂಪ, ಬೇರಾದ್ರೂ ರಾಮ, ಶ್ಯಾಮಾರಾಮ!

ನಸ್ಸೆರಡರ ಗುರಿ ನಿತ್ಯಾತ್ಮಾರಾಮ!
ರೂಢಿಯಲ್ಲಿ ಬಂದಿತ್ತು ಮಾನವ ಜನುಮ!
ರಮಾರ್ಥ ಸಮರ್ಥನೆಗಾಗಿತ್ತು ನೇಮ!
ಬೇಕಿಂಥಾ ಪಾತ್ರಗಳೆಂಬುದು ಸೃಷ್ಟಿಕ್ರಮ!
ರಾಜಸ, ತಾಮಸವೆಂಬುದನರಿಯನಾತ್ಮ!
(ತ)-ದ್ರೂಪದರ್ಶನವಾದಮೇಲೆಲ್ಲೊಂದೇ ಸಮ!
ರಾಗ, ದ್ವೇಷವಿಲ್ಲದಾಪ್ತ ಭಕ್ತ ಸುಧಾಮ!
ಡದಿ, ಮಕ್ಕಳ, ಪ್ರೇಮಮಾಯಾ ಮಹಿಮಾ!
(ವೇ)-ಶ್ಯಾವೃತ್ತಿಯುಳ್ಳವರಲ್ಲೂ ಇದೆ ಈ ಪ್ರೇಮ!
ಮಾನಾಪಮಾನವೆಲ್ಲಾ ಮನಸ್ಸಿನ ಭ್ರಮಾ!
ರಾತ್ರಿ, ಹಗ್ಲೊಂದೇಸಮ ಕಾಡುವನು ಕಾಮ!
ಹಿಮ ನಿರಂಜನಾದಿತ್ಯಾನಂದಾರಾಮ!!!

ಹಲವರ ನೀತಿ, ರೀತಿ ಒಂದಾದ್ರದೇ ಸಂಘ!

ಭ್ಯವಾಗುವುದಾಗ ಪರಸ್ಪರ ಸತ್ಸಂಗ!
ರದರಾಜನ ಮಕ್ಕಳಿಗಿದೊಂದು ರಂಗ!
ಕ್ಕಸರೊಡನಾಟದಿಂದಕ್ಕು ತೇಜೋಭಂಗ!
ನೀರಮೇಲಿನ ಗುಳ್ಳೆಯಂತಸ್ಥಿರ ರಾಜ್ಯಾಂಗ!
ತಿಳಿದಿದನು ಬಹುದೂರವಿರ್ಪಾ ಸಾರಂಗ!
ರೀತಿಯಿವನದಿದಕಂಜಿಹನು ಅನಂಗ!
ತಿತಿಕ್ಷೆಯಿಂದ ಸಿದ್ಧಿ, ರಾಜಯೋಗದಷ್ಟಾಂಗ!
ಒಂದರಿಂದ ಉಂಟಾಗಿರುವುದು ನಾನಾ ಅಂಗ!
ದಾರಿ ವಿವಿಧ ಆಗುವುದಕ್ಕೆ ಶಿವಲಿಂಗ!
(ಭ)-ದ್ರವಾಗಿರಿಸಬೇಕು ವೀರ್ಯ ಮಾನವನಂಗ!
ದೇಶಭಕ್ತರಿಗಿರ್ಬಾರದಧಿಕ ಪ್ರಸಂಗ!
ಸಂವಿಧಾನ ಮಾಡ್ಬಾರದು ಸ್ಥಾನ, ಮಾನ, ಭಂಗ!
ರ್ಷಣಾತೀತ ನಿರಂಜನಾದಿತ್ಯ ರಾಜ್ಯಾಂಗ!!!

ಕೃಷ್ಣನಿಗಾಗಿ

ಈರಾ ಹುಚ್ಚಿ! (ಕೃ)

-ಷ್ಣನಾಪ್ತನಾದಾಕೆಗೆ ಮೆಚ್ಚಿ!
ನಿಶ್ಚಲ ಭಕ್ತಳಾದಾ ಹುಚ್ಚಿ!
ಗಾನಮಾಡಿದಳವ್ನ ಮೆಚ್ಚಿ!
ಗಿರಿಧರ ಗೋಪಾಲ್ಗಾ ಹುಚ್ಚಿ!


ಸಲಾದಳವಗೆ ಮೆಚ್ಚಿ!
ರಾತ್ರಿ, ಹಗ್ಲು, ಕುಣಿದ್ಲಾ ಹುಚ್ಚಿ!
ಹುಮ್ಮಸ್ತುಂಬಿದ ಕೃಷ್ಣ ಮೆಚ್ಚಿ! (ಹು)
-ಚ್ಚಿ ನಿರಂಜನಾದಿತ್ಯಾಪ್ತೇಚ್ಛಿ!!!

ನಾನು ನಿನ್ನನ್ನೊಳಗೆ ಕರೆದೆ! (ನೀ)

-ನು ಅಲಕ್ಷಿಸಿ ಹೊರಗೆ ಹೋದೆ!
ನಿನ್ನವನಾನೆಂದರಿಯದಾದೆ! (ನಿ)
-ನ್ನ ಕರ್ಮಫಲ ನೀನುಣ್ಣಲಿದೆ! (ನ)
-ನ್ನೊಡನಾಟಕ್ಕಪೇಕ್ಷಿಸಲಿದೆ! (ತೋ)
ಗಳ ಕಾಟಕ್ಕೆ ಅಂಜಲಿದೆ!
ಗೆಳೆಯರ್ವೈರಿಗಳಾಗಲಿದೆ!
ತ್ತಲೆ ಸುತ್ತೂ ಕವಿಯಲಿದೆ! (ಧ)
-ರೆಯಲ್ಲಿನ್ನಿರಲಾರೆನ್ನಲಿದೆ! (ತಂ)
-ದೆ ನಿರಂಜನಾದಿತ್ಯೆತ್ತಲಿದೆ!!!

ಬರುವೆನೆಂದವರಿಂದು ಬಂದಿಲ್ಲ! (ಬ)

-ರುವೆವೆನ್ನದವ್ರಿಂದು ಬಂದರೆಲ್ಲ! (ತಾ)
-ವೆಷ್ಟು ಹೇಳಿದ್ರೂ ಎಲ್ಲಾ ಆಗ್ವುದಿಲ್ಲ! (ನಾ)
-ನೆಂಬಹಂಕಾರವಿನ್ನೂ ಸಾಯಲಿಲ್ಲ!
ತ್ತನಿಗಿನ್ನೂ ಕರುಣೆ ಬಂದಿಲ್ಲ!
ರ ಗುರು ಅವನೇ ಲೋಕಕ್ಕೆಲ್ಲ! (ಊ)
-ರಿಂದೂರಿಗೆ ಸುತ್ತಿದ್ರಾತ ಸಿಕ್ಕೋಲ್ಲ!
ದುರ್ಬುದ್ಧಿಗಳನ್ನೆಲ್ಲಾ ಬಿಡ್ಬೇಕೆಲ್ಲ!
ಬಂಜೆಯ ಸೌಂದರ್ಯ ಸಾರ್ಥಕವಿಲ್ಲ!
ದಿವ್ಯ ನಾಮಭಜನೆ ಸುಖಕ್ಕೆಲ್ಲ! (ಬ)
ಲ್ಲ ನಿರಂಜನಾದಿತ್ಯನಿದನ್ನೆಲ್ಲ!!!

ದಾಶರಥಿಗೆ ಸೀತೆಯ ಚಿಂತೆ!

ಬರಿಗೆ ಶ್ರೀರಾಮನ ಚಿಂತೆ!
ಜ್ಜು, ಸರ್ಪವೆಂಬ ಭ್ರಾಂತಿಯಂತೆ!
(ತಿ)-ಥಿ, ವಾರವೆಣ್ಸಿ ಕಾಣುವ ಚಿಂತೆ!
(ಹೀ)-ಗೆಲ್ಲೆಲ್ಲೇನೇನೋ ತರದ ಚಿಂತೆ!
ಸೀತಾ, ರಾಮರಿಂದ ಶಾಂತಿಯಂತೆ!
(ಚಿಂ)-ತೆ ಸೀತೆಯದು ಹತವಾಯ್ತಂತೆ!
ಮ ರಾವಣನಿಗಾದನಂತೆ!
ಚಿಂತೆ ಚಿತೆಯಿಂದಧಿಕವಂತೆ!
(ಮಾ)-ತೆ ನಿರಂಜನಾದಿತ್ಯ ತಾನಂತೆ!!!

ನಿನ್ನಭೀಷ್ಟ ತಿರಸ್ಕೃತವಾಗ್ವುದಿಲ್ಲ!

(ನ)-ನ್ನ, ನಿನ್ನಲ್ಲಿ ಭೇದವೆಂದೆಂದಿಗೂ ಇಲ್ಲ!
ಭೀತಿಗೆ ಕಾರಣವೇ ಕಾಣುವುದಿಲ್ಲ!
(ದು)-ಷ್ಟರನ್ನು ಹತ್ತಿರ ಸೇರಿಸಬೇಕಿಲ್ಲ!
ತಿನ್ನುವುದುಣ್ಣುವುದಕ್ಕೆ ಕಮ್ಮಿಯಿಲ್ಲ!
(ವ)-ರ ಗುರು ಕರುಣೆ ನಿನಗಿದೆಯಲ್ಲ!
(ಸಂ)-ಸ್ಕೃತಿ ನಿನ್ನದು ಕಲುಷಿತವಾಗಿಲ್ಲ!
ನ್ನವರೆಂಬವರು ದೇವರೇ ಎಲ್ಲ!
ವಾತಾವರಣಾನುಕೂಲವಿದೆಯಲ್ಲ!
(ನ)-ಗ್ವುದು, ಅಳುವುದು ನಿಲ್ಲಿಸಬೇಕೆಲ್ಲ!
ದಿವ್ಯ ಜೀವನಕ್ಕನಾಸಕ್ತಿ ಬೇಕಿಲ್ಲ! (ಪು)
-ಲ್ಲ ನಿರಂಜನಾದಿತ್ಯ ನೀನೇಕಾಗಿಲ್ಲ??

ಸಂಗೀತ, ಸಾಹಿತ್ಯ, ಪಾಂಡಿತ್ಯ!

ಗೀರ್ವಾಣಿಗಿರುವುದು ಸ್ತುತ್ಯ!
ನ್ಮಯನಾಗವ್ಳಲ್ಲಿ ನಿತ್ಯ!
ಸಾಹಿತ್ಯ ಅವಳ್ದೆಲ್ಲಾ ಸತ್ಯ!
ಹಿತೈಷಿ ಅವಳೆಂದಾಗ್ಭೃತ್ಯ!
ತ್ಯಜಿಸಬೇಕೆಲ್ಲಾ ಅಕೃತ್ಯ!
ಪಾಂಚಭೌತಿಕ ದೇಹಾ ಸತ್ಯ!
ಡಿಕ್ಕಿಹೊಡೆವ್ದು ದಿನ ನಿತ್ಯ! (ಭೃ)
-ತ್ಯ ನಿರಂಜನಾದಿತ್ಯ ಸತ್ಯ!!!

ವ್ಯಥೆಯಿಲ್ಲದ ಕಥೆಗಾರನಾರು?

(ಕ)-ಥೆಗಾಧಾರವಾಗಿರುವ ದೇವರು!
(ತಾ)-ಯಿ, ತಂದೆ, ಎಲ್ಲರಿಗಾರ್ಗಿಪವರು!
(ಹು)-ಲ್ಲ ತಂದು ಹಾಕಿ ಹೂಪಡೆದವರು!
ತ್ತಾತ್ರೇಯಾಂಕಿತ ನಿತ್ಯಾನಂದರು!
ರ, ಚರಣಾದಿಂದ್ರಿಯಾತೀತರು!
(ಸು)-ತೆ, ಸುತಾದಿಗಳಾಸೆ ಬಿಟ್ಟವರು!
ಗಾಡಿಯಸ್ಥಿರತೆಯರಿತವರು!
ತಿ ಪತಿಯ ಹತಗೈದವರು!
ನಾಮಜಪ ಸದ ಮಾಡುವವರು!
(ಯಾ)-ರು? ನಿರಂಜನಾದಿತ್ಯಾವಧೂತರು!!!

ಆಪ್ತರ ಅಪಚಾರ ಅಲಕ್ಷ್ಯ! (ಆ)

-ಪ್ತರಾದವರಿಗೆ ಅದೇ ಭಕ್ಷ್ಯ! (ತೋ)
-ರಬಾರದವರಲ್ಲಿ ಉಪೇಕ್ಷ್ಯ!
ವರ ವಿರುದ್ಧಾಡ್ಬಾರ್ದು ಸಾಕ್ಷ್ಯ!
ಕ್ಷ ಬುದ್ಧಿಗೆ ಸಿದ್ಧಿ ಸದ್ಲಕ್ಷ್ಯ!
ಚಾರು ಚರಣತೀರ್ಥ ಸಂಪ್ರೋಕ್ಷ! (ವ)
-ರಗುರು ದೃಷ್ಟಿ ಸದಾ ಸ

ಈಕ್ಷ್ಯ!
ದಕ್ಕೆ ಯಾವುದೂ ಇಲ್ಲಪೇಕ್ಷ! (ಫಾ)
-ಲ ಲೋಚನನಾದರ್ಶವೇ ಲಕ್ಷ್ಯ! (ಲ)
-ಕ್ಷ್ಯ ನಿರಂಜನಾದಿತ್ಯಗೆ ಭಕ್ಷ್ಯ!!!

ಸ್ಥಾನಮಾನಕ್ಕೇಕೆ ಅಪೇಕ್ಷೆ ಅಯೋಗ್ಯಾ?

ರಜನ್ಮ ಬಂದಾಗ್ಲೂ ಬೇಡ್ವೇ ವೈರಾಗ್ಯ?
ಮಾರನೊಡನಾಟದಿಂದ ಬಂತೇನ್ಭಾಗ್ಯ?
ಶ್ವರವೀ ಶರೀರಸಂಬಂಧ ಭೋಗ್ಯ! (ದಿ)
-ಕ್ಕೇ ತೋಚದಂತಾಗಿ ಕೆಡುವುದಾರೋಗ್ಯ!
ಕೆಟ್ಟ ಬುದ್ಧಿ ಬಿಟ್ಟಿನ್ನಾದ್ರೂ ಆಗು ಯೋಗ್ಯ!
ನುಪಮಾತ್ಮಾ ರಾಮ ಪರಮಯೋಗ್ಯ
(ಅ)-ಪೇಕ್ಷಿಸದಿದ್ರೂ ಲಭ್ಯವಗೆ ಸೌಭಾಗ್ಯ! (ದ)
-ಕ್ಷೆ ಸೀತೆ ಸತಿಯಾದುದವನ ಭಾಗ್ಯ!
ವನೇ ನೀನಾಗು ಈಗಾದ್ರೂ ಅಯೋಗ್ಯಾ!
ಯೋಗವೆಂದರಿದೆಂದರಿಯೋ ಅಯೋಗ್ಯಾ!
(ಯೋ)-ಗ್ಯಾ, ನಿರಂಜನಾದಿತ್ಯಾನಂದ ಭಾಗ್ಯ!!!

ಎಲೆಯುದ್ರ ಬೇಕಾದಾಗದುದ್ರೀತು! (ಕೊ)

-ಲೆ ನೀನದನ್ನು ಕಿತ್ತರುಂಟಾದೀತು! (ಆ)
-ಯುಷ್ಯಮಿತಿಯೆಲ್ಲಕ್ಕುಂಟೆಂದಂದೀತು! (ಭ)
-ದ್ರ ಸರಕಾರವೂ, ಛಿದ್ರವಾದೀತು!
ಬೇಸಾಯ ತಾಳ್ಮೆಯಿದ್ರೆ ಫಲಿಸೀತು!
ಕಾಲಕಾಯದಿದ್ರೆ ನಷ್ಟವಾದೀತು!
ದಾಹವೆಂದುಚ್ಚೆಕುಡಿದ್ರೇನಾದೀತು?
ತಿಗೇಡು, ಮತಿಗೇಡುಂಟಾದೀತು!
ದುಡುಕಿದರೆಲ್ಲಾ ಕುಲಗೆಟ್ಟೀತು! (ಬ)
-ದ್ರೀ ನಾರಾಯಣನಿಚ್ಛೆಯಂತಾದೀತು! (ಹೇ)
-ತು ನಿರಂಜನಾದಿತ್ಯಾಗ್ಬೇಕಾದೀತು!!!

ಕಂಡದ್ದು ಹೇಳಿದ್ರೆ ಕೆಂಡದಂಥಾ ಕೋಪ!

(ದಂ)-ಡ ತೆರಬೇಕಾದಾಗೇಕೆ ವೃಥಾಲಾಪ?
(ಬಿ)-ದ್ದು ಒದ್ದಾಡುವುದು ಪ್ರಾರಬ್ಧದಶಾಪ!
ಹೇಗೆ ತೋರಲಿದ ನಿನಗೆ ದಾಸಪ್ಪಾ?
(ಬಾ)-ಳಿನ ಆಮೂಲಾಗ್ರ ತನಿಖೆಮಾಡಪ್ಪಾ!
(ಆ)-ದ್ರೆ, ಹೋದ್ರೆಂಬಿತ್ಯಾದಿ ಮಾತಿನ್ನು ಸಾಕಪ್ಪಾ!
ಕೆಂದುಟಿ ಚೆಲ್ವಯರ ಹಿಂದೋಡ್ಬೇಡಪ್ಪಾ!
(ಬೆ)-ಡಗವರದು ಮಾಯಾಜಾಲ ಕಾಣಪ್ಪಾ!
ದಂಭ, ದರ್ಪಕ್ಕವರು ಮಣಿಯರಪ್ಪಾ!
(ವೃ)-ಥಾಕಾಲಕಳೆದು ಹಾಳಾಗ ಬೇಡಪ್ಪಾ!
ಕೋಗಿಲೆಯಾಗಿ ಕಾಗೆಯಲ್ಲೆನಿಸಪ್ಪಾ!
(ಸಂ)-ಪದ ನಿರಂಜನಾದಿತ್ಯಾತ್ಮಾನಂದಪ್ಪಾ!!!

ಒಳಗೂ, ಹೊರಗೂ, ಬೆಳಕ್ಬೇಕು! (ಆ)

-ಳವಾಗಿದನ್ನಾಲೋಚಿಸ ಬೇಕು!
ಗೂಳಿಗಳೋಡಾಟ ತಪ್ಪಿಸ್ಬೇಕು!
ಹೊತ್ತು ಮುಳುಗಿದಾಗಿದಾಗ್ಬೇಕು!
ಹಸ್ಯ ಪ್ರಕೃತಿ ಕಲಿಸ್ಬೇಕು!
ಗೂಬೆಗವಕಾಶವಾಗ್ದಿರಬೇಕು!
ಬೆಚ್ಚದಂತೆ ಮುಂಜಾಗ್ರತೆ ಬೇಕು! (ಕ)
-ಳಕಳಿಯಪ್ರಾರ್ಥನೆ ಮಾಡ್ಬೇಕು!
(ಯಾ)-ಕ್ಬೇಕು? ಇಹಸುಖ, ದುಃಖಸಾಕು!
(ಬೇ)-ಕು ನಿರಂಜನಾದಿತ್ಯನಾಗ್ಬೇಕು!!!

ಶೂಲಿ ವನಮಾಲಿಯಾಗೀಗ ಬಾ! (ಒ)

-ಲಿದು ನಿರಂಜನಿರಾಧೆಗೆ ಬಾ!
ರ್ಷಗಳಹಳಾಯ್ತು ಬೇಗ ಬಾ!
ಗುನಗುತ ನಲಿದಾಡಿ ಬಾ!
ಮಾಡಿಸಿಕೋ ಸೇವೆ ನನ್ನಿಂದ ಬಾ! (ನಿ)
-ಲಿಸು ಸದಾ ನಿನ್ನೊಳಗೆನ್ನ, ಬಾ!
ಯಾಕಿಷ್ಟುಪೇಕ್ಷೆ ನನ್ನಮೇಲೆ? ಬಾ!
ಗೀತಾರ್ಥ ಪ್ರಕಟಿಸೆನ್ನಲ್ಲಿ ಬಾ!
ತಿ ನೀನೇ ನನಗೆ, ಓಡಿ ಬಾ!
ಬಾ, ನಿರಂಜನಾದಿತ್ಯ ನೀನೇ, ಬಾ!!!

ಭಕ್ತಿ ತೆಗೆಸಲಿ ಬಾಗಿಲನ್ನು! (ಶ)

-ಕ್ತಿ ಮುಚ್ಚಿಸಲೆಲ್ಲಾಕಾಲದನ್ನು!
ತೆರೆದ್ಬಂದೊಳಗೆ ಮುಚ್ಚದನ್ನು!
ಗೆಳತಿಯೆಂದರಿ ಶಕ್ತಿಯನ್ನು!
ಚ್ಚಿದಾನಂದಕ್ಬೇಡವಳನ್ನು! (ಒ)
-ಲಿದವರವಳಿವಳೆಲ್ಲವನ್ನು!
ಬಾಲಕನವಳಿಗೆ ನೀನೆನ್ನು!
ಗಿರಿಧರ ಗೋಪಿಗಾದಂತೆನ್ನು!
ಯಮಾಳ್ಪಳವಳ್ಕಷ್ಟವನ್ನು! (ತಿ)
-ನ್ನು ನಿರಂಜನಾದಿತ್ಯಾನ್ನವನ್ನು!!!

ಅಗ್ಸನಾರೋಪ ಲವ, ಕುಶರ್ಸ್ವರೂಪ!

(ವಾ)-ಗ್ಸಮರ್ಥನೆ ತೋರಿಸಿದ, ನಿಜರೂಪ!
ನಾರದ ಬಲ್ಲ ನಾರಯಣನ ರೂಪ!
ರೋಗಿಯ ಕಣ್ಣಿಗೆಲ್ಲವೂ ಯಮರೂಪ!
ರಮಾರ್ಥಿ ಬಲ್ಲ ಪರಮಾತ್ಮರೂಪ!
ಕ್ಷ್ಮಣನ ಬಲ್ಲುದು ಊರ್ಮಿಳಾರೂಪ!
ನಜಕ್ಕಾನಂದ ಆದಿತ್ಯರೂಪ!
ಕುಹಕರಿಗೆ ಅದೇ ಮೃತ್ಯುಸ್ವರೂಪ!
ಬರಿಗೆ ಶ್ರೀರಾಮ ಗುರುಸ್ವರೂಪ!
(ಅ)-ರ್ಸ್ವಧರ್ಮನಿಷ್ಠರೋ ಅವರದೇರೂಪ!
ರೂಪ, ರೇಖೆಯೆಲ್ಲಾ ಅಶಾಶ್ವತರೂಪ!
ರಮಾತ್ಮ ನಿರಂಜನಾದಿತ್ಯರೂಪ!!!

ನಾಳೆಯಿಂದಭ್ಯಾಸ ಮಾಡ್ತೇನೆ ಗುರುಜಿ!

(ಕ)-ಳೆಯಿತಿಷ್ಟಾಯುಷ್ಯ ಹೀಗಂದು ಸುರುಚಿ!
(ಕೈ)-ಯಿಂದಿಷ್ಟುದಿನ ಆಗದಿತ್ತು ಗುರುಜಿ!
(ಆ)-ದಷ್ಟಾದ್ರೂ ನಿತ್ಯಮಾಡ್ತಿದ್ರಾಗ್ತಿತ್ಸುರುಚಿ!
(ಅ)-ಭ್ಯಾಸಕ್ಕೆ ಆರೋಗ್ಯ ಬೇಡ್ವೇನು ಗುರುಜಿ?
ರ್ವಾನ್ಕೂಲ ನಾಳೆಗಿದೆಯೇ ಸುರುಚಿ?
ಮಾಡುತ್ತೇನೆ ನಾನಿನ್ನುಮುಂದೆ ಗುರುಜಿ!
(ಮಾ)-ಡ್ತೇನೆ, ಬಿಡ್ತೇನೆನ್ಲಿಕ್ಕೆ ನೀನ್ಯಾರ್ಸುರುಚಿ?
ನೆನಪಾಯ್ತು ನೀವಂದದ್ಹಿಂದೆ ಗುರುಜಿ!
ಗುರುಕೃಪೆ ಬೇಕೆಲ್ಲಕ್ಕಲ್ವೇನ್ಸುರುಚಿ?
(ಅ)-ರುಹಿರಿದಕೆ ದಾರಿ ನೀವೇ ಗುರುಜಿ! (ಭ)
-ಜಿಸು ನಿರಂಜನಾದಿತ್ಯನ ಸುರುಚಿ!!!

ಬಲಹೀನನ ಮೇಲಬಲೆಯೂ ಸಬಲೆ!

ಕ್ಷ್ಯದಲ್ಲಿಟ್ಟಿದ ಕೂಗಾಡ್ಬೇಡಿನ್ನು ಮೇಲೆ!
ಹೀನೈಸಿ ರೇಗಿಸ್ಬೇಡವಳನ್ನಿನ್ನು ಮೇಲೆ!
ಷ್ಟ ಕಷ್ಟದ ವ್ಯವಹಾರ ಸಾಕಿನ್ಮೇಲೆ!
ಯ, ವಿನಯದಿಂದ ಬಾಳ್ಬೇಕಿನ್ನು ಮೇಲೆ!
ಮೇರೆ

ಈರಿ, ಜಾರಿ, ಉರುಳ್ಬೇಡಿನ್ನು ಮೇಲೆ!
ಗ್ಗೆಹತ್ತಿ ಕುಣಿಯಬಾರದಿನ್ನು ಮೇಲೆ!
ಲಗುಂದಿದಾಗ ಸಾಗದು ಕಾಮಲೀಲೆ!
(ತ)-ಲೆ ಬಿಸಿಮಾಡಿಕೊಳ್ಬೇಡದಕಿನ್ನು ಮೇಲೆ!
(ಸಾ)-ಯುಜ್ಯಕ್ಕಾಗಭ್ಯಾಸಮಾಡ್ದಿರ್ಬೇಡಿನ್ನು ಮೇಲೆ!
ದಾ ಸದ್ಗುರು ಧ್ಯಾನಮಾಡುತ್ತಿರಿನ್ಮೇಲೆ!
ಳಲಿಸಲಾರಳಾಗ ನಿನ್ನನ್ನಬಲೆ! (ಕ)
-ಲೆತಿರು ನಿರಂಜನಾದಿತ್ಯನಲ್ಲಿನ್ಮೇಲೆ!!!

ಮೋಡನೋಡಿ ಗಿಡಕ್ಕುಪವಾಸ ಬೇಡ!

(ದ)-ಡ ಸೇರ್ವಮುಂಚೆ ಊರಿನ ಯೋಚ್ನೆ ಬೇಡ!
ನೋಡದೇ ಮದುವೆಗೊಪ್ಪಿಕೊಳ್ಳಬೇಡ!
(ಹಾ)-ಡಿಸದೆ ಸಂಭಾವನೆ ನಿರ್ಧರಿಸ ಬೇಡ!
ಗಿಡನೋಡಿ ಹಣ್ಣಿನ ಭವಿಷ್ಯಾಡ್ಬೇಡ!
ಬ್ಬನೋಡಿ ಲಾಡುತಿನ್ನುವಾಸೆ ಬೇಡ!
(ಬೆ)-ಕ್ಕು ಇದ್ದಮಾತ್ರಕ್ಕಿಲಿಸತ್ತಿತೆನ್ಬೇಡ!
ರಮಾತ್ಮನ ಕಾಣದೇನೂ ಹೇಳ್ಬೇಡ!
ವಾಙ್ಮಯಮಾತಿಗೆ ಮರುಳಾಗ ಬೇಡ!
ತತ ಸಾಧನೆ ಮಾಡದಿರ ಬೇಡ!
ಬೇಡ, ಊಹಾಪೋಹದ ಬದುಕೇ ಬೇಡ!
(ಬೇ)-ಡ ನಿರಂಜನಾದಿತ್ಯಗಾಬಾಳೇ ಬೇಡ!!!

ಹಚ್ಚಿಕೊಂಡಿಲ್ಲಾರನ್ನೂ ನಾನು! (ಮು)

-ಚ್ಚಿಸಿದೆ ಬಾ

ಯನ್ನೆಂದೋ ನಾನು!
ಕೊಂದಿಹೆನಾಸೆಯನ್ನು ನಾನು!
(ದು)-ಡಿದೆನವನಿಗಾಗಿ ನಾನು!
(ಉ)-ಲ್ಲಾಸೋತ್ಸಾಹದಿಂದಿಲ್ಲ ನಾನು!
ತಿಸುಖವೇಕೆಂಬೆ ನಾನು?
(ನ)-ನ್ನೂರು ಸೇರಬೇಕೀಗ ನಾನು!
ನಾಕಸುಖಸಾಕೆಂಬೆ ನಾನು!
(ನಾ)-ನು, ನಿರಂಜನಾದಿತ್ಯನವ್ನು!!!

ಅಯ್ಯೋಪಾಪವೆಂದಾಶ್ರಯ ಕೊಟ್ಟೆ! (ಬೈ)

-ಯ್ಯೋದಕ್ಕೆಲ್ರನ್ನೂ ಶುರುಮಾಡ್ಬಿಟ್ಟೆ!
ಪಾವನವಾಗಲೆಂದಿಚ್ಛೆಪಟ್ಟೆ!
ತಿತನಾಗಿ ನೀನೀಗ ಕೆಟ್ಟೆ!
ವೆಂಕಟೇಶನಿಷ್ಟತಿಳ್ಸಿಬಿಟ್ಟೆ!
ದಾರಿಸಂಕಟಕ್ಕೆ ಹಿಡಿದ್ಬಿಟ್ಟೆ!
ಶ್ರವಣ, ಮನನಕ್ಕಾಜ್ಞೆಕೊಟ್ಟೆ!
ಮ, ನಿಯಮವೆಲ್ಲಾ ಬಿಟ್ಬಿಟ್ಟೆ!
ಕೊಡ್ಬೇಕಾದದ್ದೆಲ್ಲವನ್ನೂ ಕೊಟ್ಟೆ! (ಕೆ)
-ಟ್ಟೆ, ನಿರಂಜನಾದಿತ್ಯನ ಬಿಟ್ಟೆ!!!

ಅಸಂಖ್ಯ ಜನಕ್ಕಸಂಖ್ಯ ಬುದ್ಧಿ!

ಸಂಭಾವನೆಗಾಶಿಪುದಾ ಬುದ್ಧಿ! (ಸೌ)
-ಖ್ಯ ವಿಷಯದಿಂದೆಂಬುದಾ ಬುದ್ಧಿ!
ಗದಲ್ಲಿದರಿಂದ ದುರ್ಬುದ್ಧಿ!
ರ, ನಾರಿಗಹಂಕಾರ ವೃದ್ಧಿ! (ಸಿ)
-ಕ್ಕ ಬೇಕೆನ್ನುವರು ರಿದ್ಧಿ, ಸಿದ್ಧಿ!
ಸಂಜೆ, ಮುಂಜಾನೆಲ್ಲೆಲ್ಲದೇ ಸುದ್ಧಿ! (ಸೌ)
-ಖ್ಯವಿದೆಂದು ಬಂಧನಕ್ಕೆ ಬಿದ್ದಿ!
ಬುಧ್ಯಾತ್ಮನಿಗಾದ್ರೆ ಮೋಕ್ಷ ಸಿದ್ಧಿ! (ಸಿ)
-ದ್ಧಿ ನಿರಂಜನಾದಿತ್ಯಾತ್ಮ ಬುದ್ಧಿ!!!

ನಿನ್ನಂತೆ ನನ್ನ ನೀ ಮಾಡಬಲ್ಲೆ!

(ನ)-ನ್ನಂಬೋಣವನ್ನೇಕ್ನಿಜ ಮಾಡ್ಲೊಲ್ಲೆ?
ತೆಪ್ಪತೇಲುತ್ತಲಿದೆ ನೀರಲ್ಲೇ!
ಡೆಸಲೇಕ್ತಡ ದಡದಲ್ಲೇ?
(ಬ)-ನ್ನ ಪಡಲಾರೆ ಸಮುದ್ರದಲ್ಲೇ!
ನೀರೊಳಗಿನಹಿಂಸೆ ನೀ ಬಲ್ಲೆ
ಮಾಡಿದ್ರಿಂದಪಾರು ಶೀಘ್ರದಲ್ಲೇ!
(ಒ)-ಡಗೂಡಿ ಐಕ್ಯವಾಗಿರೆನ್ನಲ್ಲೇ!
ಳಲಲಾರೆ ಬೇರ್ಬೇರಾಗಿಲ್ಲೇ!
(ನ)-ಲ್ಲೆ ನಿರಂಜನಾದಿತ್ಯಗಾನ್ಬಲ್ಲೇ!!!

ನಾನೇಕೆ, ನೀನೇಕೆ, ಅವನೇಕೆಂಬೇಕೆ?

ನೇಮನಿಷ್ಠಾತೀತೊಬ್ಬೆನ ಬಾರ್ದೇಕೆ?
ಕೆಲ್ಸಕ್ಕೊಂದು ಗುಣನಾಮವಿರ್ಬಾರ್ದೇಕೆ?
ನೀಚಕರ್ಮಿ ಹೊಲೆಯಅಂದ್ರೆ ಸಿಟ್ಟೇಕೆ?
ನೇರದಾರಿಯವ ಬ್ರಾಹ್ಮಣ ತಾನಕ್ಕೆ!
ಕೆಟ್ಟದ್ಮಟ್ಟಹಾಕ್ವವ ಕ್ಷತ್ರಿಯನಕ್ಕೆ!
ದಿದರ ವ್ಯಾಪಾರಿ ವೈಶ್ಯತಾನಕ್ಕೆ!
ರಗುರುಗುಣಾತೀತ ದೇವರಕ್ಕೆ!
ನೇಮಿಸಿದಂತಿರ್ಪಬುದ್ಧಿ ಯೆಲ್ಲಕ್ಕಕ್ಕೆ!
ಕೆಂದಾವರೆಯಾಪ್ತತೆ ಆದರ್ಶವಕ್ಕೆ!
ಬೇಕೆಂದು ಧ್ಯೇಯ ನಿಶ್ಚಿಂತೆಯಿಂದಿರ್ಲಿಕ್ಕೆ!
ಕೆಲಸ ನಿರಂಜನಾದಿತ್ಯನಾಗ್ಲಿಕ್ಕೆ!!!

ಮಹಾಲಯ ಪಕ್ಷದಲ್ಲೆಲ್ಲಾ ಪಕ್ಷಾಂತ್ಯ!

ಹಾಡುತ್ತ ಹರಿನಾಮ ಸಂತರ್ಗಾಯ್ತಂತ್ಯ!
ಕ್ಷ್ಮೀಶನವತಾರಗಳಿಗಾಯ್ತಂತ್ಯ!
ಜ್ಞ, ಯಾಗ, ಮಾಡಿದವರಿಗಾಯ್ತಂತ್ಯ!
ಟ್ಟವೇರಿ ಆಳಿದವರಿಗಾಯ್ತಂತ್ಯ!
ಕ್ಷಣ ಕ್ಷಣಕ್ಕೂ ಆಗುತ್ತಿದೆಲ್ಲಾ ಅಂತ್ಯ!
ರಿದ್ರ, ಧನವಂತರಿಗೆಲ್ಲಾಯ್ತಂತ್ಯ! (ಬ)
-ಲ್ಲೆವೆಲ್ಲಾ ಅಂದ ನಾಯಕರಿಗಾಯ್ತಂತ್ಯ! (ಎ)
-ಲ್ಲಾ ಜೀವರಿದನ್ನರಿತ್ಬಾಳ್ವುದಗತ್ಯ!
ಕ್ಷಗಳ್ಕಟ್ಟಿ ಹೊಡೆದಾಡ್ಬಾರ್ದು ನಿತ್ಯ! (ದ)
-ಕ್ಷಾಂಜನೇಯನಾದರ್ಶ ಪಾಲಿಸ್ಬೇಕ್ಭೃತ್ಯ! (ಸ)
-ತ್ಯ, ನಿರಂಜನಾದಿತ್ಯಾನಂದಕ್ಕಿಲ್ಲಾಂತ್ಯ!!!

ನಿಶ್ಚಲತೆಯೇ ಗಾಂಭೀರ್ಯ! (ದು)

-ಶ್ಚಟವಿಲ್ಲದವನಾರ್ಯ!
ಕ್ಷ್ಮೀನರಸಿಂಹಾಚಾರ್ಯ!
ತೆರೆ ಮರೆಯಲ್ಲೇ ಕಾರ್ಯ!
ಯೇಕಾಂತದಲ್ಲಿ ಸೌಕರ್ಯ!
ಗಾಂಗೇಯನಲ್ಲಿತ್ತು ಶೌರ್ಯ!
ಭೀಮನದ್ದಸಾಧ್ಯ ಧೈರ್ಯ! (ಸೂ)
-ರ್ಯ, ನಿರಂಜನಾದಿತ್ಯಾರ್ಯ!!!

ನಾನೇಕೆ ಕಾಣಿಸಿಕೊಳ್ಳಬೇಕು?

ನೇಮ, ನಿಷ್ಠೆಯಲ್ಲಿ ನಾನಿರ್ಬೇಕು!
ಕೆಲ್ಸವಿದ್ರೆ ಹೊರಗೆ ಬರ್ಬೇಕು!
ಕಾರಣಕರ್ತನಾಜ್ಞೆಯಾಗ್ಬೇಕು!
(ಕು)-ಣಿಸಿದಂತೆ ಕುಣಿಯಲೇಬೇಕು!
ಸಿಟ್ಟುಮಾಡಿಕೊಳ್ಳದಿರಬೇಕು!
ಕೊಟ್ಟದ್ದು ತಿಂದುಕೊಂಡಿರಬೇಕು!
(ಉ)-ಳ್ಳದ್ರಲ್ಲಷ್ಟಿಷ್ಟು ದಾನಮಾಡ್ಬೇಕು!
ಬೇಸರಪಡದೇ ಇದಾಗ್ಬೇಕು!
(ಕಾ)-ಕುಸ್ಥ ನಿರಂಜನಾದಿತ್ಯಾಗ್ಬೇಕು!!!

ನನ್ನನ್ನು ನೀನೆಂದೋ ಮರೆತೆ!

(ನಿ)-ನ್ನದು ನನಗೇಕಿನ್ನು ಚಿಂತೆ?
(ಮು)-ನ್ನುಡಿ ಬರೆದಾದ್ಮೇಲೆ ಕತೆ!
ನೀನೀಗದರಲ್ಲಿ ನಿರತೆ!
ನೆಂಟರಿಗೇನಿಲ್ಲ ಕೊರತೆ!
ದೋಷಿ ನೀನಾದಾಗ ಪತಿತೆ!
ನೆ, ಮಾರ್ಕಳ್ಕೊಂಡಾಗ ಭೀತೆ!
(ತೆ)-ರೆ ನಿನ್ನ ಕಣ್ಣನ್ನಪಖ್ಯಾತೆ!
(ದಾ)-ತೆ, ನಿರಂಜನಾದಿತ್ಯ ಮಾತೆ!!!

ಬುದ್ಧಿವಂತಾ! ನೀನೇ ಬಹುಭಾಗ್ಯವಂತಾ!

(ವೃ)-ದ್ಧಿ, ಕ್ಷಯಾತೀತ ನೀನು ವಿಚಾರವಂತಾ!
ವಂಶ ನಿನ್ನದು ರಹಿತಾದಿಮಧ್ಯಾಂತಾ!
ತಾನೇ ತಾನಾಗಿಲ್ಲದಾಗ ಜ್ಞಾನವಂತಾ!
ನೀನಿದನರಿತೀಗಾಗಬೇಕನಂತಾ!
ನೇಮ, ನಿಷ್ಠೆಯಿಂದ ಮಾಡ್ಸ್ವರೂಪ ಚಿಂತಾ!
ಯಕೆಗಳಿಗೀಗಾಗ ಬೇಕು ಅಂತ!
ಹುಸಿಮಾಯೆಯಂದರಿತೀಗಾಗು ಸಂತ!
ಭಾರತದಕೀರ್ತಿ ಹಬ್ಬ್ಲಿ ದಿಗ್ದಿಗಂತಾ!
(ಯೋ)-ಗ್ಯನಾದವಗಾರದೇನು ಬಲವಂತಾ?
ವಂದಿಸು ದತ್ತಾತ್ರೇಯಗೆ ಗುರುವೆಂತ!
ತಾನೇ ನಿರಂಜನಾದಿತ್ಯನವನೆಂತ!!!

ಯೋನಿಜರೆಲ್ಲರೆಂಬುದು ಸತ್ಯ!

ನಿಜವಿದಾದ್ರೂ ಬೇರ್ಬೇರೆ ಕೃತ್ಯ!
ಗಕ್ಕಿಲ್ಲೇಕ ರಾಜಾಧಿಪತ್ಯ! (ನೆ)
-ರೆ ಹೊರೆಯಲ್ಲಿ ಜಗಳ ನಿತ್ಯ! (ಮ)
-ಲ್ಲನಾದವನಿಗಖಿಲ ಭೃತ್ಯ! (ಯಾ)
-ರೆಂತೇಕೆ ಮಾಡಿದ್ರಿಂಥಾ ದಾಂಪತ್ಯ?
ಬುದ್ಧಿಗರಿವಾಗದಿದ್ರೌಚಿತ್ಯ!
ದುರ್ಬುದ್ಧಿಯಲ್ಲಿ ಆಗ್ಬಾರದಂತ್ಯ!
ರ್ವರ ಉದ್ಧಾರ ಅತ್ಯಗತ್ಯ! (ಸ್ತು)
-ತ್ಯ ನಿರಂಜನಾದಿತ್ಯಾಧಿಪತ್ಯ!!!

ಪ್ರಾರ್ಥನೆ ಫಲಿಸದಿರದಮ್ಮಾ! (ಸಾ)

-ರ್ಥಕವಾಗುವುದು ಜನ್ಮವಮ್ಮಾ!
ನೆನಪಿನ್ಯಾರ್ದೂ ಮಾಡ್ಬಾರ್ದಮ್ಮಾ!
(ವಿ)-ಫಲವಾಗದು ಭಜನೆಯಮ್ಮಾ!
(ಅ)-ಲಿಪ್ತಳಾಗಿ ಸಂಸಾರ ಮಾಡಮ್ಮ!
ರ್ವಸ್ವವೂ ದತ್ತ ನಿನಗಮ್ಮಾ!
ದಿವ್ಯ ಜೀವನವಿಂತು ಸಾಗ್ಲಮ್ಮಾ!
ಕ್ತ, ಮಾಂಸದ ದೇಹಾನಿತ್ಯಮ್ಮಾ!
ಹಿಸುವುದಿದನ್ನಗ್ನಿಯಮ್ಮಾ!
(ಅ)-ಮ್ಮಾ ನಿರಂಜನಾದಿತ್ಯ ನಿತ್ಯಮ್ಮಾ!!!

ಹೆಣ್ಣಿಗಾಗಿ ಕಾದಿದ್ದನೊಬ್ಬ! (ಬ)

-ಣ್ಣಿಸುತ್ತವಳ ಕಪ್ಪು ಹುಬ್ಬ!
ಗಾಳಿಗೋಪುರದಲ್ಲಿ ಹಬ್ಬ!
(ಮು)-ಗಿಸಿ ಹೋದನವಳ ತಬ್ಬ!
ಕಾಲ್ಗೇಟುಕೊಟ್ಟಿತೊಂದು ಡಬ್ಬ!
ದಿಕ್ಕೇಕಾಣದಂತಾಯ್ತಬ್ಬಬ್ಬಾ!
(ಉ)-ದ್ದ ಮೇಲ್ನೋಡಿದ ಹರ್ಕು ಜುಬ್ಬ!
ನೊಸ್ಲಲ್ಲೂ ಮೂಡಿತ್ತೊಂದು ಡುಬ್ಬ!
(ಹ)-ಬ್ಬ ನಿರಂಜನಾದಿತ್ಯ ಕಬ್ಬ!!!

ರಾಮಾನಂದಗಿಲ್ಲ ಮಾರಾನಂದ!

ಮಾರಾನಂದಗಿಲ್ಲ ರಾಮಾನಂದ!
ನಂದಿವಾಹನ ಶ್ರೀರಾಮಾನಂದ!
ಶಶಿರಾಸುರ ಮಾರಾನಂದ!
ಗಿರಿಜೆಗೆ ರಾಮನಾಮಾನಂದ!
(ಎ)-ಲ್ಲರಲ್ಲಿರುವಾತ್ಮ ನಿತ್ಯಾನಂದ!
ಮಾಯಾಮೋಹಿತಗನಿತ್ಯಾನಂದ!
ರಾಮದಾಸಾಂಜನೇಯಾತ್ಮಾನಂದ!
ನಂಬಿದವಗೀ ಪರಮಾನಂದ!
ತ್ತ, ನಿರಂಜನಾದಿತ್ಯಾನಂದ!!!

ಮಂದಮತಿಗೆ ಮೈಥುನಾನಂದ!

ಶೇಂದ್ರಿಯ ಸಂಗದಕ್ಕಾನಂದ!
ಲಿನಾಸೆಯಿಂದ ಭವ ಬಂಧ!
ತಿತಿಕ್ಷೆ, ವೈರಾಗ್ಯದಿಂದಾನಂದ!
ಗೆಳೆಯ ವಿದುರಗೆ ಗೋವಿಂದ!
ಮೈಥಿಲೀಪತಿ ವಿಶುದ್ಧಾನಂದ!
(ಮ)-ಥುರಾನಾಥ ಸೀತಾನಾಥಾನಂದ!
ನಾಮ ಸಂಕೀರ್ತನೆ ಬ್ರಹ್ಮಾನಂದ!
ನಂಬಿದವಗಾಗ್ವುದೀ ಆನಂದ! (ಆ)
-ದರ್ಶ ನಿರಂಜನಾದಿತ್ಯಾನಂದ!!!

ಹೇಳುವವರು ಹೇಳುತ್ತಲೇ ಇದ್ದಾರೆ!

(ಕೇ)-ಳುವವರೆಲ್ಲಾ ಕೇಳುತ್ತಲೇ ಇದ್ದಾರೆ!
(ದೇ)-ವರ ಹೆಸ್ರಲ್ಲೇನೇನೋ ಮಾಡುತ್ತಿದ್ದಾರೆ!
(ಭ)-ವ ಪಾಶದಲ್ಲೊದ್ದಾಡುತ್ತಲೂ ಇದ್ದಾರೆ!
(ಕ)-ರುಣೆಗಾಗಿ ಪ್ರಾರ್ಥಿಸುತ್ತಲೂ ಇದ್ದಾರೆ!
ಹೇರಂಬ ಗಣಪನ ಕಾಣದಿದ್ದಾರೆ!
(ಬಾ)-ಳುವುದಿನ್ನೆಂತೆಂದು ತಿಳಿಯದಿದ್ದಾರೆ!
(ದ)-ತ್ತ ಚಿತ್ತದಂತಾಗ್ಲೆಂದೀಗನ್ನುತ್ತಿದ್ದಾರೆ!
(ಹಾ)-ಲೇ ವಿಷವಾದ್ರುಳಿವವರಾರಿದ್ದಾರೆ?
ದ್ದು ಸತ್ತಂತಿದ್ದೀಗ ಸುಖ್ವಾಗಿದ್ದಾರೆ!
(ಒ)-ದ್ದಾಟದಿಂದ ಬಿಡುಗಡೆಯಾಗಿದ್ದಾರೆ!
(ಮೊ)-ರೆ ನಿರಂಜನಾದಿತ್ಯಗಿಡುತ್ತಿದ್ದಾರೆ!!!

ಸುಧಾಮಾನುಗ್ರಹ ಹಿರಿಮೆಯೇನು?

(ಸು)-ಧಾ ಪಾನವೆಲ್ಲರಿಗೂ ಆಗ್ಬೇಡ್ವೇನು?
ಮಾನವನ ಪಾಲಿಗೆ ವಿಷವೇನು?
(ಅ)-ನುಮಾನ ಪರಿಹರಿಸ್ಬೇಕು ನೀನು!
ಗ್ರಹಣ ನಾನಪೇಕ್ಷಿಸಿದೆನೇನು?
ಗ್ಲಿರುಳ್ನಾನಿನ್ನ ಸ್ಮರಿಸಿಹೆನು!
ಹಿತೈಷಿ ಎಲ್ಲಕ್ಕೂ ನೀನಲ್ಲವೇನು?
(ಅ)-ರಿಯದವರ್ಮೇಲ್ಕೆಂಡ ಕಾರ್ಬಾರ್ದ್ನೀನು!
(ಭಾ)-ಮೆಯಾಗಿ ಪರಿವರ್ತಿಸೆಮ್ಮ ನೀನು!
(ಬಾ)-ಯೇ ಬಿಡಲಾರದಂತಾಗಿಹೆ ನಾನು!
(ಏ)-ನು ನಿರಂಜನಾದಿತ್ಯಾ! ಮೌನವೇನು?

ರಾಜಾಧಿರಾಜ ಆಕಾಶರಾಜ!

ಜಾಗ್ರತ್ಸ್ವಪ್ನ, ನಿದ್ರಾತೀತ ರಾಜ!
(ಅ)-ಧಿಪತಿರೇಳು ಲೋಕಕ್ಕಾ ರಾಜ!
ರಾತ್ರಿ, ದಿನಮಾನಕ್ಕವ್ನೇ ರಾಜ!
ರಾ, ಜನ್ಮ ರಹಿತಾತ್ಮಾ ರಾಜ!
ರ್ಯರಾರಾಧ್ಯ ದೇವರಾ ರಾಜ!
ಕಾಲಾಂತಕ ಶಿವರಾಮಾ ರಾಜ!
ಕ್ತಿ, ಬೆಳಕಿನಾಗರಾ ರಾಜ!
ರಾಮ ನಾಮ ಜಪಾನಂದಾ ರಾಜ!
(ನಿ)-ಜ, ಶ್ರೀ ನಿರಂಜನಾದಿತ್ಯಾ ರಾಜ!!!

ನನ್ನಾಕೆಗೆ ಭೋಗೇಚ್ಛೆ ಇಲ್ಲ!

(ನ)-ನ್ನಾದರೋಪಚಾರ ಬಿಟ್ಟಿಲ್ಲ!
ಕೆಲ್ಸದಲ್ಲಿ ಶ್ರದ್ಧೆಯೇನಿಲ್ಲ!
ಗೆಳೆಯರನ್ಯರಾರೂ ಇಲ್ಲ!
ಭೋದದಲ್ಲಿ ವ್ಯತ್ಯಾಸವಿಲ್ಲ!
(ಯೋ)-ಗೇಶ್ವರನಲ್ಲಿನ್ನೂ ಬೆರ್ತಿಲ್ಲ!
(ಸ್ವ)-ಚ್ಛೆಯಾದಾಗೊಂದಾಗದಿರೋಲ್ಲ!
ಹಸುಖದಾಸೆ ಈಗಿಲ್ಲ!
(ಬ)-ಲ್ಲ ನಿರಂಜನಾದಿತ್ಯನೆಲ್ಲಾ!!!

ನನಗೇನೂ ಬೇಕಾಗಿಲ್ಲವೇಕೆ?

ನ್ನ ಸ್ವರೂಪ ಬೇರಾದುದಕೆ!
ಗೇಯ್ಮೆ ತಟಸ್ಥವಾಗಿರ್ಪುದಕೆ!
ನೂತನ ರೀತಿ ಸಾಕಾದುದಕೆ!
ಬೇಕಾದದ್ದೆಲ್ಲಾ ಸಿಕ್ಕಿದುದಕೆ!
ಕಾಮನ ಕಾಟ ತಪ್ಪಿದುದಕೆ!
ಗಿರಿಜಾಪತಿ ತಾನಾದುದಕೆ!
(ಎ)-ಲ್ಲರಲ್ಲವನ ನೋಡಿದುದಕೆ!
ವೇದಾಂತಾನುಭವವಾದುದಕೆ!
(ಏ)-ಕೆ? ನಿರಂಜನಾದಿತ್ಯಾದುದಕೆ!!!

ಶುದ್ಧಿಯ ಪರಮಾವಧಿ ಸಿದ್ಧಿ!

(ಬು)-ದ್ದಿಯಲ್ಲಿದೆ ಮಾಯೆಯ ಅಶುದ್ಧಿ!
ಮ, ನಿಯಮದಿಂದದು ಶುದ್ಧಿ!
ರಿಪರಿಯಾಶಾನಾಶಾ ಶುದ್ಧಿ!
(ಪ)-ರಮಾತ್ಮತ್ವಾ ಶುದ್ಧಿಯಿಂದ ಸಿದ್ಧಿ!
ಮಾತಾಡದೇ ತಿದ್ದಿಕೋಳ್ಬೇಕ್ಬುದ್ದಿ!
ರಗುರು ಕೃಪೆಗಾಗೀ ಶುದ್ಧಿ!
(ನಿ)-ಧಿಯೆಂಬುದೀ ಪರಮಾರ್ಥ ಸಿದ್ಧಿ!
ಸಿಕ್ಕಿದರಿದು ಸ್ಥಿರ ಸಮೃದ್ಧಿ!
(ಸಿ)-ದ್ಧಿ ನಿರಂಜನಾದಿತ್ಯಾನಂದಾಬ್ಧಿ!!!

ಸಾಕ್ಷಾತ್ಕಾರಾಪೇಕ್ಷಿ ಎಲ್ಲೂ ಹೋಗ್ಬೇಕಿಲ್ಲ!

(ಪ)-ಕ್ಷಾದಿಗಳಲ್ಲಿ ಪಾಲ್ಗೊಳ್ಳಬೇಕಾಗಿಲ್ಲ!
(ಸ)-ತ್ಕಾರ ಸಮಾರಂಭಕ್ಕೋಡಬೇಕಾಗಿಲ್ಲ!
ರಾಗ, ದ್ವೇಷವಿಟ್ಟುಕೊಳ್ಳಬೇಕಾಗಿಲ್ಲ!
ಪೇಚಾಟವಾವುದಕ್ಕೂ ಪಡ್ಬೇಕಾಗಿಲ್ಲ!
ಕ್ಷಿಪ್ರ ಗುರಿ ಸೇರುವಾತುರ ಬೇಕಿಲ್ಲ!
ಡರುಗಳಿಗಧೀರನಾಗ್ಬೇಕಿಲ್ಲ!
(ಅ)-ಲ್ಲೂ, ಇಲ್ಲೂ, ಎಲ್ಲೆಲ್ಲೂ ನೀನಾಗಿಹೆಯೆಲ್ಲಾ!
ಹೋಮ, ಹವನದಗತ್ಯವೇನೂ ಇಲ್ಲ!
(ಆ)-ಗ್ಬೇಕ್ಸದಾತ್ಮ ಚಿಂತನೆ; ಭಯವೇನಿಲ್ಲ!
ಕಿರ್ಕುಳ ಸಂಸಾರಕ್ಕಂಟಿಕೊಳ್ಬೇಕಿಲ್ಲ!
(ಪು)-ಲ್ಲ ನಿರಂಜನಾದಿತ್ಯನಂತಾಗ್ಬೇಕೆಲ್ಲಾ!!!

ನಾನಾಡುವುದೆಲ್ಲಾ ನಿಜ!

ನಾ, ನೀ ನೊಂದೆಂಬುದೂ ನಿಜ!
(ಹಾ)-ಡುವುದ್ನಿನ್ನ ನಾಮ ನಿಜ!
(ಸಾ)-ವು, ನೋವು, ದೇಹಕ್ಕೆ ನಿಜ!
(ತಂ)-ದೆ, ತಾ

ಯೆಲ್ಲಾ ನೀನೇ ನಿಜ!
(ಚೆ)-ಲ್ಲಾಟ ಮನಸ್ಸಿಗೆ ನಿಜ!
“ನಿತ್ಯವಲ್ಲ ಅದು” ನಿಜ!
(ನಿ)-ಜ, ನಿರಂಜನಾದಿತ್ಯಜ!!!

ನೀ ನಡೆಸಿದಂತೆ ನಾನಪ್ಪಾ!

ನಗಿಲ್ಲ ಸ್ವಶಕ್ತಿಯಪ್ಪಾ!
(ಬಿ)-ಡೆ ನಿನ್ನ ಸೇವೆಯನ್ನಾನಪ್ಪಾ!
ಸಿಟ್ಟು ನನ್ಮೇಲೆ ಮಾಡ್ಬೇಡಪ್ಪಾ!
ದಂಡಿಸಬೇಡ ಕೂಸನ್ನಪ್ಪಾ!
ತೆಗೆ ಅಜ್ಞಾನ ಮುಸುಕಪ್ಪಾ!
ನಾಶವಾಗ್ವ ದೇಹವಿದಪ್ಪಾ!
ಮಸ್ಕಾರ ನಿನ್ನಡಿಗಪ್ಪಾ! (ಅ)
-ಪ್ಪಾ, ಶ್ರೀ ನಿರಂಜನಾದಿತ್ಯಪ್ಪಾ!!!

ಯೋಗೀ! ಬೇಡುವೆ ನಾಶಿರಬಾಗಿ!

(ತ್ಯಾ)-ಗಿ! ಮಾಡೆನ್ನನೀಗ ನಿನ್ನದಾಗಿ!
ಬೇಗ್ಬೇಗೀಗ್ನಾಬಂದೆ ನಿನಗಾಗಿ!
(ಉಂ)-ಡು, ತಿಂದು, ಕಾಲಕಳೆದೆ ತೇಗಿ!
ವೆಸನದಿಂದ ನಾನಾದೆ ರೋಗಿ!
ನಾಚುವೆ ನಾನಾಗಲಿಕ್ಕೆ ಭೋಗಿ!
ಶಿವೆಯಾಗಿ ನಾನಾಗ್ಬೇಕರ್ಧಾಂಗಿ!
(ವ)-ರ ಗುರು, ಶಿವ ನೀನು ವಿರಾಗಿ!
ಬಾಳಬೇಕಿನ್ನು ನಾನು ನೀನಾಗಿ!
(ಯೋ)-ಗಿ ನಿರಂಜನಾದಿತ್ಯ ನಾನಾಗಿ!!!

ಬೆಲ್ಲದೆಲ್ಲಾಭಾಗ ಸಿಹಿಯಲ್ಲವೇನು?

(ಅ)-ಲ್ಲ ಯೆಂದರದು ಬೆಲ್ಲವಾಗುವುದೇನು?
(ಹಿಂ)-ದೆ, ಮುಂದೆ ಯೋಚಿಸಿ ಆಡಬೇಕು ನೀನು!
(ಕ)-ಲ್ಲಾದ್ರದನ್ನು ಕಲ್ಲೆಂದೇ ಅನ್ಬೇಕು ನೀನು!
ಭಾರ್ಯಾ, ಭರ್ತರಲ್ಲಿ ಭೇದ ಕಾಣ್ಬೇಡ ನೀನು!
(ಯೋ)-ಗವೆಂದರಿದೆಂದರಿಯಬೇಕು ನೀನು!
ಸಿಹಿಯೊಂದೇ ಕಂಡಾಗ್ಸಾಯುಜ್ಯೆನ್ನು ನೀನು!
ಹಿತಾ, ಹಿತಗಳನ್ನಾಗ ಕಾಣೆ ನೀನು!
ದುಪತಿಯ ರಾಧೆಯಾಗ್ಬೇಕು ನೀನು!
(ಗ)-ಲ್ಲಕ್ಕೆ ಮುದ್ದಿಕ್ಕಿದ್ರೆ ರಾಧೆಯಾಗೆ ನೀನು!
ವೇದಾಂತ ಸಾರವೇ ಆಗ್ಬೇಕೀಗ ನೀನು! (ಏ)
-ನು? ನಿರಂಜನಾದಿತ್ಯಾನಂದನಾಗ್ನೀನು!!!

ಇಷ್ಟವಿಲ್ಲದಿದ್ರೆ ನೀನೇ ನಾನು ಸ್ಪಷ್ಟ!

(ಕ)-ಷ್ಟ, ನಷ್ಟಗಳಿಗೆಲ್ಲಾ ಕಾರಣ ಇಷ್ಟ!
ವಿಷಯಿ ತಾನಾಗುವನು ಯೋಗಭ್ರಷ್ಟ!
(ಗೆ)-ಲ್ಲಬೇಕು ಬಲ್ಲವ ತನ್ನ ಇಷ್ಟಾನಿಷ್ಟ!
ದಿವ್ಯ ಜೀವನದ ರೀತಿ ಇದು ಶ್ರೇಷ್ಠ!
(ನಿ)-ದ್ರೆ, ಮೈಥುನಾದಿಗಳೆಲ್ಲವೂ ಕನಿಷ್ಠ!
ನೀಚತನದಿಂದಾಗಿ ಮಾನವ ದುಷ್ಟ!
ನೇಮ, ನಿಷ್ಠಾ-ನಾರದಾ ಸದಾ ಸಂತುಷ್ಟ!
ನಾರಾಯಣನಿಂದಂತ್ಯ ಅವ್ನ ಸಂಕಷ್ಟ!
(ಮ)-ನುಜನಿದನ್ನರಿಯದ್ದು ದುರದೃಷ್ಟ!
ಸ್ಪಟಿಕ ಮಣಿಯಂತಿರ್ಬೇಕಾತ್ಮ ನಿಷ್ಠ!
(ಸ್ಫ)-ಷ್ಟ, ನಿರಂಜನಾದಿತ್ಯಾನಂದ ಆಪ್ತೇಷ್ಟ!!!

ಜನನೀ, ಜನಕರಾಟ ಕೂಸಿಗೆ ಕಾಟ!

(ಮ)-ನಸಿಜಗಾಗಿ ಆಯ್ತವರಿಬ್ಬರ ಕೂಟ!
ನೀರಮೇಲಣ ಗುಳ್ಳೆಯಂಥಾ ಒಡನಾಟ!
ನಿಸುವಾಗ ಮಗು ತಾಯಿಗೆ ಒದ್ದಾಟ!
(ತ)-ನಯ ಬೆಳೆದೆಂತೆಲ್ಲಾ ಅವನ ಹುಚ್ಚಾಟ!
ಣ್ಣೀರು ಸುರಿಸುತ್ತ ತಾಯ್ತಂದೆಯರೂಟ!
ರಾತ್ರಿ, ಹಗಲೆಲ್ಲಾ ಮೂವರಿಗೂ ಪೇಚಾಟ!
(ಆ)-ಟಕ್ಕಾಗಿದ್ದ ಕೂಟದಲ್ಲೀಗ ಹೊಡೆದಾಟ!
ಕೂಸ್ಬೆಳ್ದು ಕೂಸಿಗ್ತಂದೆಯಾದ್ರದೊಂದು ನೋಟ!
ಸಿಕ್ಕಲಾರದು ಶಾಂತಿ ಹತ್ತಿದರೀಛಟ!
(ಹೇ)-ಗೆ ಬಾಳ್ಬೇಕೆಂಬುದಕ್ಕೆ ಪ್ರತಿದಿನ ಪಾಠ!
ಕಾರ್ಯನಿರತ ಸಾಧಕನಪ್ಪ ಸಾಮ್ರಾಟ!
(ದಿ)-ಟ ನಿರಂಜನಾದಿತ್ತಾತ್ಮನೇ ಆ ಸಾಮ್ರಾಟ!!!

ನೀನಲ್ಲಿಲ್ಲೋಡಾಡಿದರೆ ನನಗೇನು?

(ನಿ)-ನಗೆ ಅದರಿಂದುಂಟಾದ ಲಾಭವೇನು?
(ಇ)-ಲ್ಲಿ ಕೈಗೂಡದ್ದು ಅಲ್ಲಿ ಕೈಗೂಡೀತೇನು?
(ಅ)-ಲ್ಲೋಲ ಕಲ್ಲೋಲ ವೃತ್ತಿಗಲಭ್ಯ ನಾನು!
(ಕೊಂ)-ಡಾಡು ಗುರುಮಹಿಮೆ ಇದ್ದಲ್ಲಿ ನೀನು!
(ಗು)-ಡಿಯಾಗುವುದದರಿಂದ ನಿನ್ನ ತನು!
ಮೆ, ಶಮೆಯುಳ್ಳ ಭಕ್ತನುತ್ತಮನು!
(ತೆ)-ರೆ ಮರೆಯ ತಾಯಿಯಂತಿರ್ಪನವನು!
ಯವಿನಯದಿಂದಿರುವನವನು!
ಶ್ವರ ಸುಖಕ್ಕೆ ಆಶಿಸನವನು!
(ಯೋ)-ಗೇಶ್ವರಗಚ್ಚುಮೆಚ್ಚಾಗಿಹನವನು!
(ತಾ)-ನು ನಿರಂಜನಾದಿತ್ಯಾನಂದನವನು!!!

ಭಾನು ಬಾನಿನಲ್ಲಿ, ನಾನು ಭೂಮಿಯಲ್ಲಿ!

(ಅ)-ನುದಿನ ನಮ್ಮ ಭೇಟಿ ಹಗಲಿನಲ್ಲಿ!
ಬಾರದಿರುವನವನು ನಾನಿದ್ದಲ್ಲಿ!
ನಿತ್ಯ ನಿಮಂತ್ರಣವವನಿಗೆನ್ನಲ್ಲಿ!
ನಗಿಲ್ಲ ಶಕ್ತಿ ಹೋಗುವುದಕ್ಕಲ್ಲಿ!
(ಅ)-ಲ್ಲಿ, ಇಲ್ಲಿನ ನಮ್ಮಿಬ್ಬರಾತ್ಮನೆಲ್ಲೆಲ್ಲಿ!
ನಾಮ, ರೂಪಾತೀತನಿಗೆ ಭೇದವೆಲ್ಲಿ!
(ತ)-ನು, ಮನ ತನ್ನ ಲೀಲಾನಂದಕ್ಕಲ್ಲೀಲ್ಲಿ!
ಭೂಮ್ಯಾಕಾಶ ಸಂಬಂಧ ಪ್ರಕೃತಿಯಲ್ಲಿ!
ಮಿತ್ರ ಪಾಲಿಸುತ್ತಿಹನು ನಿತ್ಯದಲ್ಲಿ!
ಮನಾಗುವನು ಋಣ ತೀರಿದಲ್ಲಿ!
(ಅ)-ಲ್ಲಿ, ಇಲ್ಲಿ ನಿರಂಜನಾದಿತ್ಯನೆಲ್ಲೆಲ್ಲಿ!!!

ವ್ಯವಸ್ಥಾಪಕ ಸರ್ವ ವ್ಯಾಪಕ! (ಅ)

-ವಗೆಲ್ಲಾ, ಕರತಲಾ ಮಲಕ!
ಸ್ಥಾನ, ಮಾನಕ್ಕವ ವಿನಾಯಕ!
ರತತ್ವಾರ್ಥ ಪ್ರತಿ ಪಾದಕ!
ಷ್ಟ, ಸುಖಃಕ್ಕಂಜದ ಸಾಧಕ!
ರ್ವ ಸಮನ್ವಯದಾ ಸಾಧಕ!
ರ್ವ ಸಮನ್ವಯದಾ ದರ್ಶಕ!
(ಗ)-ರ್ವ ರಹಿತ ಶುದ್ಧ ಆಧ್ಯಾತ್ಮಿಕ!
ವ್ಯಾಮೋಹಾತೀತ ಮಾಯಾಜನಕ!
ವನ ಸುತ ಹನುಮಾನಿಕ! (ಸಂ)
-ಕಟ ನಿರಂಜನಾದಿತ್ಯಾಂತಕ!!!

ಕಾಮನಿಗೆ ಕನಿಕರವಿಲ್ಲ!

ಹಿಳೆ ಹೇಗಿದ್ರೂ ಪರ್ವಾಗಿಲ್ಲ!
ನಿಶಿ, ದಿನವೆಂಬ ಭೇದವಿಲ್ಲ!
(ಗಂ)-ಗೆಯನ್ನೂ ಈಜಾಡಿ ಹೋಗಬಲ್ಲ!
ಳ್ಳತನಕ್ಕೂ ಹೇಸುವುದಿಲ್ಲ!
ನಿಶಾಪಾನಕ್ಕಭ್ಯಂತರವಿಲ್ಲ!
ತ್ತು ಕೊಯ್ಲಿಕ್ಕೂ ಹಿಂಜರಿಯೋಲ್ಲ!
ಕ್ಕಸರ ಗುಣಗಳೇ ಎಲ್ಲಾ!
ವಿಶ್ವಾಸಕ್ಕಂತೂ ಯೋಗ್ಯನೇ ಅಲ್ಲ!
(ಒ)-ಲ್ಲ, ನಿರಂಜನಾದಿತ್ಯನಿದೆಲ್ಲಾ!!!

ಬಿಡು ಬಿಡಾ ಬಡವೆಯ ಗೊಡವೆ!

(ಕ)-ಡು ದುಃಖಿಯಾದಳೀಗವಳ್ವಿಧವೆ!
ಬಿಸಿಯಾದ ತಲೆಗೆಲ್ಲಾ ಮರವೆ!
(ಓ)-ಡಾಡ್ಲಿಕ್ಕೂ ಬಿಡರವಳಾ ಜನವೇ!
ದ್ಕುವುದೇ ಕಷ್ಟ ಅವರ್ನಡುವೆ!
(ಗಂ)-ಡ ಹೋದ ಮೇಲೇಕೆ ಚಿನ್ನದೊಡವೆ?
(ಸೇ)-ವೆ ಮೂರ್ಮಕ್ಕಳದ್ದು ಸಾಗ್ಬೇಕಲ್ಲವೇ?
(ಸಾ)-ಯದೇ ಉಳಿವವರಾರಿಲ್ಲಲ್ಲವೇ?
(ಈ)-ಗೊಪ್ಪತ್ತಿಗಾಗುವಷ್ಟಿದೆಯಲ್ಲವೇ?
ಮರು ಧರಗತಿ ನಿನ್ಗೆನ್ನುವೆ! (ಈ)
-ವೆ, ನಿರಂಜನಾದಿತ್ಯಾನಂದ ಶಿವೆ!!!

ಹುಡ್ಕಿದಾಗ ಸಿಗದ್ದೀಗ್ತಾನಾಗಿ ಸಿಕ್ತು!

(ಹು)-ಡ್ಕಿ, ತಡ್ಕಿ, ತಡ್ಕಿ, ಹುಡ್ಕಿ ಬೇಜಾರಾಗಿತ್ತು!
ದಾರಿ ಬೇರೆ ಹಿಡಿಯೋಣ ಅನ್ನಿಸಿತ್ತು!
ಡ್ಬಿಡಿ ಮಾಡ್ಬಾರ್ದೆಂತ ನಿಧಾನಿಸಿತ್ತು!
(ದಾ)-ಸಿ

ಈರಾಬಾಯಿಯ ನೆನಪೂ ಬಂದಿತ್ತು!
ಲ್ಲಿಗಲ್ಲಿಯಲ್ಲಾಕೆ ಕುಣಿದಾಗಿತ್ತು!
(ಇ)-ದ್ದೀಗಿಂತವ್ಳೊಂದೋಣಿಯಲ್ಲಿ ಬಿದ್ದಾಗಿತ್ತು!
(ಆ)-ಗ್ತಾನೇ ಶ್ರೀ ಕೃಷ್ಣ ಬಂದೆತ್ತಿಕೊಂಡಾಗಿತ್ತು!
ನಾವೆಣ್ಸಿದಂತಾಗ್ವುದಾದ್ರೇಕಿಂತಾಗ್ತಿತ್ತು?
ಗಿಡ ಕಾಲಾಂತರದಲ್ಲಿ ಮರವಾಯ್ತು!
ಸಿಹಿಯಾದ ಹಣ್ಣನ್ನೂ ಕೊಡುವಂತಾಯ್ತು!
(ಸಿ)-ಕ್ತು, ನಿರಂಜನಾದಿತ್ಯಾನಂದ ಪ್ರಾಪ್ತ್ಯಾತು!!!

ದೇವರದ್ದೀ ಸೃಷ್ಟಿಯಾಡಳಿತ!

(ಅ)-ವನಾಗಿಹ ಜಾತಿ, ಮತಾತೀತ!
(ನ)-ರನಜ್ಞಾನದಿಂದನೇಕ ಮತ!
(ಬಿ)-ದ್ದೀಗೊದ್ದಾಡ ಬೇಕಾಯ್ತು ಸತತ!
ಸೃಷ್ಟೀಶನಿಂದುದ್ಧಾರ ಪತಿತ!
(ದೃ)-ಷ್ಟಿ ಬೀಳದಿದ್ರಾಗ್ವುದನಾಹುತ!
ಯಾಕಿಷ್ಟು ನಿರ್ದಯೆ ಅವಧೂತ?
(ತ)-ಡಮಾಡ ಬೇಡವೋ! ಮಾತಾಪಿತಾ!
(ಉ)-ಳಿಸೊಂದೇ ಮತ, ಅನವರತ!
(ಸಂ)-ತ ನಿರಂಜನಾದಿತ್ಯಗೀ ಮತ!!!

ತಪೋನಿಧಿಯಿಂದ ಜಗತ್ತಿನಾಗು, ಹೋಗೆಲ್ಲಾ!

ಪೋಷಣೆ, ವೀಕ್ಷಣೆ, ರಕ್ಷಣೆ ಮುಂತಾದುವೆಲ್ಲಾ!
ನಿತ್ಯಾನಿತ್ಯ ವಿವೇಕದಾಗುರು ಬಲ್ಲನೆಲ್ಲ!
(ವ್ಯಾ)-ಧಿಹರಕ್ಕವ್ನ ದಿವ್ಯನಾಮ ಭಜಿಸ್ಬೇಕೆಲ್ಲ!
(ತಾ

)-ಯಿಂದಧಿಕ ಪ್ರೀತಿ ಅವಗೆ ನಮ್ಮಮೇಲೆಲ್ಲಾ!
ರ್ಶನಾನುಗ್ರಹ ಅವನಿಷ್ಟದಂತೆಯೆಲ್ಲಾ!
ಪ, ಧ್ಯಾನ, ಇತ್ಯಾದಿಗಳ್ಮಾರ್ಗ ಅದಕ್ಕೆಲ್ಲಾ!
(ಯೋ)-ಗ ಮಾರ್ಗದಲ್ಲೂ ಸಂಶಯ ಪಡಬೇಕಾಗಿಲ್ಲ!
(ಬಿ)-ತ್ತಿದ ಜಾಗಕ್ಕನುಸರಿಸಿ ಫಲಿಸದಿಲ್ಲ!
ನಾಟಿಯಾದ ಮೇಲೆ ಕೀಳಬೇಕು ಕಳೆಯೆಲ್ಲಾ!
ಗುರುವಿನ ಮಾರ್ಗದರ್ಶನ ಬೇಕಿದಕೆಲ್ಲಾ!
ಹೋಮ, ಹವನಗಳಲ್ಲೂ ಅರ್ಥವಿಲ್ಲದಿಲ್ಲಾ!
(ಬ)-ಗೆ ಬಗೆಯ ದಾರಿ ಊರು ಸೇರುವುದಕ್ಕೆಲ್ಲಾ!
(ಎ)-ಲ್ಲಾ, ನಿರಂಜನಾದಿತ್ಯಾನಂದದಿಂದಾಯಿತಲ್ಲಾ!!!

ನಿನಗೆ ಬೇಕಾಗಿರುವುದೊಂದು ಇಲ್ಲ!

ನಗೆ ಬೇಕಾಗ್ದಿರುವುದೊಂದೂ ಇಲ್ಲ!
ಗೆಳೆಯರು, ವೈರಿಗಳು ನಿನಗಿಲ್ಲ!
ಬೇಡೆಂದ್ರೂ ದ್ವಂದ್ವ ನನ್ನ ಬಿಡುವುದಿಲ್ಲ!
ಕಾಮಾರಿಯೆಂದು ನೀನು ಮೆರೆವೆಯಲ್ಲಾ!
ಗಿರಿಜೆ ಕಾಮಾಕ್ಷಿಯೆನಿಸುವಳಲ್ಲಾ!
(ಕ)-ರುಣಾಕರ ನೀನಮರ ನಾದೆಯೆಲ್ಲಾ!
(ಸಾ)-ವು, ನೋವಿನ ಮಾನವ ನಾನಾದೆನಲ್ಲಾ!
(ಒಂ)-ದೊಂದೂ ವಿಚಿತ್ರ ನಿನ್ನ ಲೀಲೆಗಳೆಲ್ಲಾ!
(ಒಂ)-ದೂ ಅರಿಯದಜ್ಞಾನಿ ನಾನಾದೆನಲ್ಲಾ!
ನ್ನೂ ಎಷ್ಟುದಿನ ಈ ಭೇದಗಳೆಲ್ಲಾ?
(ಬ)-ಲ್ಲ ನಿರಂಜನಾದಿತ್ಯಗೆನ್ನಾಜ್ಞೆ ಇಲ್ಲ!!!

ಹಾವು ಸಾಯದಿದ್ರೆ ಏಟೆಷ್ಟು ಕೊಟ್ರೇನು? (ಬಾ)

-ವು ಬತ್ತದಿದ್ದ್ರೆಷ್ಟು ಪಟ್ಟು ಹಾಕಿದ್ರೇನು?
ಸಾಯುಜ್ಯ ಸಿಕ್ಕದ ಸಾಧನೇನಾದ್ರೇನು?
ಜ್ಞ, ಯಾಗ, ರುಚ್ರುಚಿಯಾದೂಟಕ್ಕೇನು?
ದಿವ್ಯ ಜೀವನ ಚಿತ್ತಶಾಂತಿಗಲ್ವೇನು?
(ನಿ)-ದ್ರೆ ಯೋಗ ಸಮಾಧಿಯಾಗಬಲ್ಲುದೇನು?
ನೇಮಾಡಿದ್ರೂ ಫಲವುಣ್ಣೇ ಬೆಕ್ನೀನು!
(ಸ)-ಟೆಯಾಡಿ ದಿಟವನ್ನಟ್ಟಲಾರೆ ನೀನು?
(ಎ)-ಷ್ಟು ತಿದ್ದಿದ್ರೂ ನಾಯ್ಬಾಲ ಡೊಂಕಲ್ಲವೇನು?
ಕೊಳೆ ತೊಳೆವತನಕ ಶುದ್ಧ ನೀನು!
(ಕೊ)-ಟ್ಟ್ರೇನು, ಬಿಟ್ಟ್ರೇನು, ಹೊಟ್ಟೆತುಂಬಿಸ್ಬೇಕ್ನೀನು!
(ಅ)-ನುಭವಿಸಿ ನಿರಂಜನಾದಿತ್ಯನಾಗ್ನೀನು!!!

ಅವತಾರಿಗೂ ಸುಖ ದುಃಖ ಬೆರಕೆ! (ಭ)

-ವ ಬಂಧವೆಂಬುದೊಂದು ಕಲಬೆರಕೆ!
ತಾನೇ ತಾನಾಗಿರ್ಲಿಕ್ಕೊಪ್ಪದಾ ಬೆರಕೆ! (ವೈ)
-ರಿ ನಿಗ್ರಹ ಕಷ್ಟ ಸಂಸಾರೀ ಮನಕ್ಕೆ!
ಗೂಳಿಯಂತೋಡಾಡುವುದಿಷ್ಟ ಅದಕ್ಕೆ!
ಸುತಾದಿಗಳ ಸುಖ ಸ್ವಲ್ಪದಿನಕ್ಕೆ!
ತಿಗೊಳ್ಳುವನವರ ಸ್ವಭಾವಕ್ಕೆ!
ದುಃಖಿಸುವನೀ ಸಂಸಾರ ಬಂಧನಕ್ಕೆ!
ಗವಾಹನನ ಬೇಡ್ವನುದ್ಧಾರಕ್ಕೆ!
ಬೆದರುವನವ ಯಮನ ಪಾಶಕ್ಕೆ! (ವ)
-ರ ಗುರುಕೃಪೆ ಬೇಕು ನಿತ್ಯ ಸುಖಕ್ಕೆ!
(ಏ)-ಕೆ ಶಂಕೆ ನಿರಂಜನಾದಿತ್ಯಾನಂದಕ್ಕೆ!!!

ಬಾಳೇ ಬರಹವಾಗಿರಬೇಕು! (ಕೂ)

-ಳೇ ದೇಹವೆಂದರಿತಿರಬೇಕು!
ಚ್ಚಲು ಕೊಚ್ಚೆ ತಿಂದ್ರೇನಾಗ್ಬೇಕು!
(ಊ)-ರ ಕೇರಿಯ ಹಂದಿ ತಾನಾಗ್ಬೇಕು!
ರಿ ನಾಮಾಮೃತ ಕುಡಿಯ್ಬೇಕು! (ಭ)
-ವಾಬ್ಧಿಯಲ್ಲಿ ಮುಳುಗದಿರ್ಬೇಕು! (ತ್ಯಾ)
-ಗಿಯಾಗಿ ಯೋಗೀಶ್ವರನಾಗ್ಬೇಕು!

ಬೇಕಿಲ್ಲದೂಟ ತಿನ್ನದಿರ್ಬೇಕು!
(ಬೇ)-ಕು ನಿರಂಜನಾದಿತ್ಯನೆನ್ಬೇಕು!!!

ಋಣ ಸಂಬಂಧ ತೀರಿದರೇನಾಗುತ್ತೆ?

(ಗು)-ಣಸಂಪನ್ನ ಪತಿಯಿಂದ ದೂರಾಗತ್ತೆ!
ಸಂಘ ವಿಷಯಗಳಲ್ಲಿ ಉಂಟಾಗುತ್ತೆ
ಬಂಧನ ದುಃಖ ಕ್ಷಣ ಕ್ಷಣ ಹೆಚ್ಚುತ್ತೆ!
ರ್ಮ ಬುದ್ಧಿಗೆ ಜಾಗವಿಲ್ಲದಾಗುತ್ತೆ!
ತೀಟೆ, ವ್ಯಾಜ್ಯದಲ್ಲೇ ಕಾಲಕಳೆಯುತ್ತೆ!
ರಿಪುಗಳ ಆಕ್ರಮಣ ಹೆಚ್ಚಾಗುತ್ತೆ!
ರಿದ್ರಾವಸ್ಥೆಗಾಮಂತ್ರಣವಾಗತ್ತೆ!
ರೇಖೆ, ರೂಪಾದಿಗಳೆಲ್ಲಾ ಮಂಕಾಗುತ್ತೆ!
ನಾಮ ಜಪವಂತೂ ಮರೆತೇಹೋಗುತ್ತೆ!
ಗುರಿತಪ್ಪಿ ಪಾತಾಳಕ್ಕೆ ಉರುಳತ್ತೆ! (ಕ)
-ತ್ತೆತ್ತಿದ್ರೆ ನಿರಂಜನಾದಿತ್ಯ ಕಾಣುತ್ತೆ!!!

ತಬ್ಬಲಿಯನ್ನುದ್ಧರಿಸೋ ಗುರುದೇವಾ! (ದ)

-ಬ್ಬಬೇಡ ಅದನ್ನು ನರಕಕ್ಕೆ ದೇವಾ! (ಆ)
-ಲಿಸೀಗದ್ರ ಮೊರೆಯ ಸದ್ಗುರು ದೇವಾ!
ಮ ಸ್ವರೂಪಿಗಳಾದರಾಪ್ತರ್ದೇವಾ! (ತಿ)
-ನ್ನುವನ್ನಕ್ಕೂ ಮಣ್ಣುಬಿತ್ತು ಗುರುದೇವಾ?
(ಶು)-ದ್ಧ ಜೀವನಕ್ಕೆ ಬೆಲೆಯಿಲ್ಲವೇ ದೇವಾ?
(ವೈ)-ರಿಗಳನ್ನು ಸನ್ಮಾರ್ಗಕ್ಕೆಳೆಯೋ ದೇವಾ!
“ಸೋಹಂ, ಹಂಸಃ” ಸತ್ಯತೋರೋ ಗುರುದೇವಾ!
ಗುಹ್ಯಾದಿಂದ್ರಿಯ ಸೌಖ್ಯ ಸಾಕ್ಮಹಾದೇವಾ!
(ಕ)-ರುಣೆ ತೋರಿ ಕಾಪಾಡೀಗ ಗುರುದೇವಾ!
ದೇವದೇವ ದತ್ತಾತ್ರೇಯ ಗುರುದೇವಾ!
(ಧ)-ವಾ ನಿರಂಜನಾದಿತ್ಯಾನಂದ ಮಾಧವಾ!!!

ಪರಿಹಾರ ನೀಡಿ ಪರಿಣಾಮ ನೋಡಿ!

ರಿವಾಜೆಂದು ಯಾರನ್ನೂ ತುಳಿಯಬೇಡಿ!
ಹಾಸಿಗೆ ಹಾಸದೆ ಮಲಗೆನ್ನಬೇಡಿ!
ಫ್ತು, ಆಮದು, ವ್ಯವಸ್ಥೆ ಸರಿಮಾಡಿ!
ನೀನು, ನಾನು, ಎಂದು ಜಗಳಾಡಬೇಡಿ!
(ದು)-ಡಿಮೆ ದೇವರ ಸೇವೆಯೆನ್ನುತ್ತ ಮಾಡಿ!
ರವಿತ್ತಾಪಹಾರ ಮಾಡಲೇಬೇಡಿ!
ರಿಪುಗಳೊಳಗಿಂದ ತಳ್ಳದಿರ್ಬೇಡಿ!
(ಗ)-ಣಾಧಿಪನಾಗಿವರ ಜೈಸದಿರ್ಬೇಡಿ!
ದನಾರಿಯಾದರ್ಶದಂತೆಲ್ಲಾ ಮಾಡಿ!
ನೋಡಿದ್ರೂ ಪರಾಂಬರಿಸದಿರಬೇಡಿ!
(ಹಾ)-ಡಿ ನಿರಂಜನಾದಿತ್ಯ ಭಜನೆ ಮಾಡಿ!!!

ಕಾಣುವನವ ಹಗಲಿನಲ್ಲಿ!

(ಕಾ)-ಣುವುದಿಲ್ಲವ ಕತ್ತಲಿನಲ್ಲಿ!
ಜ್ರಾದಿ ನವರತ್ನಗಳಲ್ಲಿ!
ರ, ಸುರಾಸುರಾದಿಗಳಲ್ಲಿ!
ರುಣಾದಿ ದಿಕ್ಪಾಲಕರಲ್ಲಿ!
ರಿ ಹರ ಬ್ರಹ್ಮಾದಿಗಳಲ್ಲಿ!
ಗನಾದ್ಯೆಲ್ಲಾ ಲೋಕಗಳಲ್ಲಿ!
ಲಿಪಿಯಾಗಿ ವೇದಾದಿಗಳಲ್ಲಿ!
ದ, ನದಿ, ಜಲಧಿಗಳಲ್ಲಿ!
(ಅ)-ಲ್ಲಿಲ್ಲಿ ನಿರಂಜನಾದಿತ್ಯನಲ್ಲಿ!!!

ಬಯಸಿದಾಗ ಬಂದವರಿಲ್ಲ!

(ಬ)-ಯಸದಾಗ್ಬಂದರೂರವರೆಲ್ಲಾ!
ಸಿಗುವುದು ನಮ್ಮಿಚ್ಛೆಯಂತಲ್ಲ!
ದಾಶರಥಿಗಳಾಗಬೇಕೆಲ್ಲ!
ರ್ವದಿಂದ ಪ್ರಯೋಜನವಿಲ್ಲ!
ಬಂದ್ರೂ, ಬಾರ್ದಿದ್ರೂ ತಾನೇ ತಾನೆಲ್ಲಾ!
ತ್ತನೆಂದನಿದ ನಮಗೆಲ್ಲಾ!
ರಗುರು ಆತ ಲೋಕಕ್ಕೆಲ್ಲಾ!
(ಗು)-ರಿ ಸೇರಿಸ್ಬೇಕವ್ನೆ ನಮ್ಮನ್ನೆಲ್ಲ!
(ಪು)-ಲ್ಲ ನಿರಂಜನಾದಿತ್ಯ ತಾನೆಲ್ಲ!!!

ನಿದ್ದೆಯಿಂದ ಎದ್ದಮೇಲೆ ಊಟ!

(ಸ)-ದ್ದೆಳ್ಳೆಷ್ಟಾದರೂ ಬಲು ಪೇಚಾಟ!
(ಬಾ

)-ಯಿಂದ ಹೇಳಲಾಗದಷ್ಟೂ ಕಾಟ!
(ಕಂ)-ದ ತಾನೆದ್ದ ಮೇಲೆಲ್ಲಾ ಆಟ!
ದುರಿಸದೇ ನೋಡ್ಬೇಕಾ ನೋಟ!
(ಬಿ)-ದ್ದರೂ ಬಿಡ್ಬಾರ್ದವನೊಡನಾಟ!
ಮೇಲ್ಮಟ್ಟದ್ವಾಗ್ವುದಾಗಿನಾ ಕೂಟ!
ಲೆಕ್ಕಿಸಬಾರ್ದು ಸಮಯದೋಟ!
ರ್ಧ್ವಗತಿಗೊಯ್ಯುವುದಿಂಥಾಟ!
(ಊ)-ಟ ನಿರಂಜನಾದಿತ್ಯಗಿಂಥಾಟ!!!

ನೀನು ಹೇಳಬೇಕು, ನಾನು ಕೇಳಬೇಕು!

ನುಡಿ ನಡೆಯೊಂದಾಗ್ದವ್ನ ಮಾತೇಕ್ಬೇಕು?
ಹೇಳಿತೀರದು ಅಲ್ಲಿಲ್ಲಿನ ತೊಡಕು!
(ಬ)-ಳಸುವರು ಧರ್ಮ, ಮಾಡ್ಲಿಕ್ಕೆ ಕೆಡಕು!
ಬೇಕಾಗಿಹುದೆಲ್ಲರಿಗೀಗ ಥಳಕು!
ಕುಚೇಲನಂಥವ್ರೀಕಾಲಕ್ಕೆ ಕೊಳಕು!
ನಾಟಕದ ವೇಷದಂತಾಯ್ತೀಗ್ಬದುಕು!
(ತ)-ನು, ಮನ, ಧನ ಗುರುಸೇವೆಗಾಗ್ಬೇಕು!
ಕೇದಾರೇಶ್ವರ ಅವ್ನೆಂದರಿಯಬೇಕು!
(ತಾ)-ಳ, ಮೇಳದಿಂದವನ ಭಜಿಸಬೇಕು!
ಬೇರೆ

ವರ ದೂಷಣೆ ಮಾಡ್ದಿರ್ಬೇಕು! (ಸಾ)
-ಕು, ನಿರಂಜನಾದಿತ್ಯನಾಗ್ಲಿಕ್ಕಿಷ್ಟ್ಸಾಕು!!!

ರಾಸಲೀಲೆ ಒಂದುಸಲಮಾತ್ರ!

ದಾ ನೆನ್ಪದರದು ಸರ್ವತ್ರ!
ಲೀನವಾಗ್ಲಿಕ್ಕದು ನೆಪಮಾತ್ರ!
ಲೆಕ್ಕಿಸಬಾರದು ಯಂತ್ರ, ತಂತ್ರ!
ಒಂದೇ ದಾರಿಗೆ ಲಭ್ಯ ಸ್ವತಂತ್ರ!
ದುರ್ವ್ಯಾಪಾರದಿಂದ ಪರತಂತ್ರ!
ಜ್ಜನ ಸಂಗದಿಂದ ಪವಿತ್ರ!
ಕ್ಷ್ಮಣ ರಾಘವಗಾಪ್ತ ಮಿತ್ರ!
ಮಾರುತಿ ರಾಮನ ಕೃಪಾಪಾತ್ರ!
(ಮಂ)-ತ್ರ ನಿರಂಜನಾದಿತ್ಯಾತ್ಮ ಸ್ತೋತ್ರ!!!

ರಾಮ ಶಬರಿಗಾಗಿ, ಶಬರಿ ರಾಮಗಾಗಿ!

ನಸ್ಸು ಎರಡೂ ಒಂದಾಗಿರುತ್ತಿರಲಾಗಿ!
ರೀರ ವ್ಯಾಮೋಹ ಮರೆತು ಹೋಗಿರಲಾಗಿ!
ನವಾಸಿಗಳೂ ಸ್ವಜನರೆಂದಿರಲಾಗಿ!
ರಿಸಿ ಜೀವನಚ್ಚು, ಮೆಚ್ಚಾಗಿರುತ್ತಿರಲಾಗಿ!
ಗಾರುಡೀ ವಿದ್ಯೆ ಬೇಡವೆಂದಿರುವುದ್ರಿಂದಾಗಿ!
ಗಿಡ, ಮರದಲ್ಲೂ ತನ್ನ ಕಂಡುದರಿಂದಾಗಿ!
ಮೆ, ದಮೆಗಳ ಸಿದ್ಧಿಪಡೆದಿರಲಾಗಿ!
ಲ ಆತ್ಮಾರಾಮ ಬಲವೆಂದು ಇರಲಾಗಿ!
ರಿಪುಗಳಿಗೆ ಅಂಜದಿರುವುದರಿಂದಾಗಿ!
ರಾಗ, ದ್ವೇಷಗಳಿಲ್ಲದಿರುವುದರಿಂದಾಗಿ!
ದ, ಮತ್ಸರವಿಲ್ಲದಿರುವುದರಿಂದಾಗಿ!
ಗಾನ ಹರಿಗುಣ ಕೀರ್ತನೆಯಾಗಿರಲಾಗಿ!
(ಯೋ)-ಗಿ ನಿರಂಜನಾದಿತ್ಯ ಆರ್ಯನಾಗಿರಲಾಗಿ!!!

ಮನಸ್ಸಿನಾಟಕ್ಕೆ ಮಿತಿಉಂಟು!

(ತ)-ನಗೆ ಅಸಾಧ್ಯವಾದದ್ದೂ ಉಂಟು!
ಸಿಬ್ಬಂದಿಯ ಮೇಲೆ ದರ್ಪ ಉಂಟು!
ನಾನಾ ಇಂದ್ರಿಯಗತ್ಯದಕ್ಕುಂಟು!
(ಗಂ)-ಟ ಲೊಣಗಿದ್ರದರದ್ದೇನುಂಟು?
(ಬೆ)-ಕ್ಕೆ ದುರ್ಬಲಗೇನು ಸುಖವುಂಟು?
ಮಿತ್ರನನ್ನು ಕೈ ಬಿಡುವುದುಂಟು!
ತಿನ್ನುವ ಬಾಯಿ ಮುಚ್ಚುವುದುಂಟು!
ಉಂಡು, ತಿಂದು, ತೆಗಳುವುದುಂಟು!
(ಅಂ)-ಟು ನಿರಂಜನಾದಿತ್ಯಗೇನುಂಟು??

ಬಯಸದಿದ್ದ್ರೂ ಆಗ್ಬೇಕಾದದ್ದಾಗುತ್ತೆ!

(ಬ)-ಯಸಿದ್ರೂ ಆಗ್ಬಾರದ್ದು ಆಗ್ದೇ ಹೋಗತ್ತೆ!
ದ್ಗುರು ಚಿತ್ತದಂತೆ ಎಲ್ಲಾ ಆಗುತ್ತೆ!
ದಿವ್ಯ ಜೀವನವೇ ಕರ್ತವ್ಯವಾಗುತ್ತೆ!
(ತ)-ದ್ದ್ರೂಪ ಸಿದ್ಧಿ ನಮ್ಮ ಗುರಿಯಾಗಿರುತ್ತೆ!
ತ್ಮಚಿಂತನೆಯಿಂದದು ಸಿದ್ಧಿಸುತ್ತೆ!
(ಸಾ)-ಗ್ಬೇಕಿದು ಸತತವೆಂಬಾಜ್ಞೆಯಾಗುತ್ತೆ!
ಕಾಮ್ಯ ಕರ್ಮವಿದಲ್ಲವೆಂದೆನಿಸುತ್ತೆ!
ರ್ಪ, ದಂಭಕ್ಕಿದೆಡೆಗೊಡದಿರುತ್ತೆ!
(ಒ)-ದ್ದಾಟ, ಗುದ್ದಾಟವನ್ನಿದು ತಪ್ಪಿಸುತ್ತೆ!
ಗುಹ್ಯಾ, ಜಿಹ್ವಾದಿ ಚಾಪಲ್ಯ ಬಿಡಿಸುತ್ತೆ!
(ಮ)-ತ್ತೆ ನಿರಂಜನಾದಿತ್ಯಾನಂದವೀಯುತ್ತೆ!!!

ಯಾರಿಗಾಗಿ ಹೂ ಬಿಟ್ಟಿಹುದು?

(ಹ)-ರಿಯಾನಂದಕ್ಕಾದಿಹುದು!
ಗಾಳಿಗೆ ಕಂಪೀಯಲಿಹುದು!
ಗಿರಾಕಿಗಾಶಿಸದಿಹುದು!
ಹೂ ನೀನಾಗೆನ್ನುತ್ತಲಿಹುದು!
ಬಿಸಿಲ್ಗರಿ ಜಲೇಗೆಂದಿಹುದು!
(ಕ)-ಟ್ಟಿ ಮುಡಿಯಲಲ್ಲೆಂದಿಹುದು!
ಹುಟ್ಟು ಸಾರ್ಥಕವಾಗಿಹುದು!
(ಇ)-ದು ನಿರಂಜನಾದಿತ್ಯಹುದು!!!

ಅಮೃತ ಕುಡಿಸ್ಲಾರೆಯಾದರೆ ಬೇಡ!

ಮೃತವಪ್ಪ ವಿಷಮಾತ್ರ ಕುಡಿಸ್ಬೇಡ!
ಪ್ಪುಗಳನ್ನು ಅಳಿಸದಿರಬೇಡ!
ಕುಲ, ಶೀಲ, ನಿನ್ನದುಳಿಸದಿರ್ಬೇಡ!
(ದು)-ಡಿಮೆ ನಿನಗಾಗಿ ಮಾಡಿಸದಿರ್ಬೇಡ!
(ಈ)-ಸ್ಲಾಗದ ಭವಸಾಗರದಲ್ಲದ್ಬೇಡ!
(ಕ)-ರೆದಾನಂದದಿಂದ ತೋರು ನಿನ್ನ ನಾಡಾ!
ಯಾಕೆನ್ನನ್ನಿಲ್ಲಿ ಮುಚ್ಚಬೇಕು ಕಾರ್ಮೊಡ?
ರ್ಶನಕ್ಕಿನ್ನಾದರೂ ತಡ ಮಾಡ್ಬೇಡ!
(ತೊ)-ರೆದು ಶ್ರೀಪಾದ ಜೀವಿಸುವುದೇ ಬೇಡ!
ಬೇರೇನನ್ನೂ ನೀನೆನಗೆ ಕೊಡಬೇಡ!
(ಗಂ)-ಡ ನಿರಂಜನಾದಿತ್ಯ ನೀನಾಗ್ದಿರ್ಬೇಡ!!!

ಇನ್ನೂ ಬಿಟ್ಟಿಲ್ಲವೇನಯ್ಯಾ ಹುಚ್ಚು?

(ನಿ)-ನ್ನೂಳಿಗದಲ್ಲೆನ್ನಹಚ್ಚಿ ಮೆಚ್ಚು!
ಬಿಟ್ಟುಕೊಟ್ರೆ ನಿನದೇನು ಹೆಚ್ಚು?
(ಹು)-ಟ್ಟಿಸಿದ ಭಂಡ್ವಾಳವೀಗ ಬಿಚ್ಚು!
(ಕೊ)-ಲ್ಲಬೇಡ ಕೊಟ್ಟು ಕಹಿ ಕಲ್ಗಚ್ಚು!
ವೇಷ, ಭೂಷಣದಾಸೆಯ ಕೊಚ್ಚು!
ನ್ನ ಬಾಳ ದೋಣಿಯ ನೀನೊಚ್ಚು!
(ಕೈ)-ಯ್ಯಾರೆ ಅದರ ತೂತೆಲ್ಲಾ ಮುಚ್ಚು!
ಹುಟ್ಟು ಹಾಕ್ಸಿ ಮಾಡ್ಬೇಡೆನ್ನ ಪೆಚ್ಚು!
(ಮೆ)-ಚ್ಚು ನಿರಂಜನಾದಿತ್ಯಾತ್ಮನಚ್ಚು!!!

ತೀಟೆ ತೀರಿಸಲಿಕ್ಕಾಯ್ತನೇಕ ಜನ್ಮ!

(ವಾ)-ಟೆ ತಿಂದು ಹಣ್ಣೆಸೆದಂತಾಯ್ತೆಲ್ಲಾ ಜನ್ಮ!
ತೀರ್ಥಸ್ನಾನ ಬಹಳ ಮಾಡಿತ್ತಾ ಜನ್ಮ!
(ಹ)-ರಿ, ಹರ, ಕ್ಷೇತ್ರ ಮಾಡಿತ್ತಾ ಜನ್ಮ!
ಧ್ಯಕ್ಕೀಗಾದ್ರು ಸಾರ್ಥಕವಾಗ್ಲೀ ಜನ್ಮ!
(ಅ)-ಲಿಪ್ತವಾಗಿರ್ಲಿ ಸಂಸಾರದಿಂದೀ ಜನ್ಮ!
(ಹ)-ಕ್ಕಾವುದೋ ಅದನ್ನು ಸಾಧಿಸಲೀ ಜನ್ಮ!
(ಆ)-ಯ್ತರ್ಧಾಯುಷ್ಯ ಅರಿಯದಿದನ್ನೀ ಜನ್ಮ!
ನೇಮದಿಂದಾತ್ಮ ಧ್ಯಾನ ಮಾಡ್ಲೀಗೀ ಜನ್ಮ!
ಷ್ಟ ತಪ್ಪಿಲ್ಲಾದಾಗ್ವುದು ಪುನರ್ಜನ್ಮ!
ಯ ಸದ್ಗುರು ಪಾದಕ್ಕೆನ್ನಲೀ ಜನ್ಮ!
(ತ)-ನ್ಮಯ ನಿರಂಜನಾದಿತ್ಯನಲ್ಲೀ ಜನ್ಮ!!!

ಅನನ್ಯ ಪ್ರೀತಿ ಅನ್ಯೋನ್ಯವಿರಬೇಕು!

ನ್ನ, ನಿನ್ನ, ಬೆಸುಗೆ ಬಿಡದಿರ್ಬೇಕು!
(ಧ)-ನ್ಯರು ನಾವೆಂಬ ಸಂತೃಪ್ತಿಯಿರಬೇಕು!
ಪ್ರೀತಿಯಿದನ್ನು ಸಾಯುಜ್ಯವೆನ್ನಬೇಕು!
ತಿಟ್ಟು, ಹಳ್ಳವಿದ್ರೇನು? ಫಸ್ಲಾಗ್ಬೇಕು!
ಪ್ಪ, ಮಗ, ಇಬ್ಬರೂ ದುಡಿಯಬೇಕು!
(ಮಾ)-ನ್ಯೋಪಯುಕ್ತ ರೀತಿಯಿಂದದಾಗಬೇಕು!
(ಶೂ)-ನ್ಯವೃತ್ತಿಯಲ್ಲಿ ಅದು ಐಕ್ಯವಾಗ್ಬೇಕು!
ವಿಧಿ, ಹರಿ, ಹರರೊಂದಾಗಿರಬೇಕು!
ತಿಪತಿಯ ಚಿಂತೆ ಬಿಟ್ಟಿರಬೇಕು!
ಬೇಡಿದ್ರೆ ಇಂಥಾ ವರವನ್ನೇ ಬೇಡ್ಬೇಕು!
(ಬೇ)-ಕು, ನಿರಂಜನಾದಿತ್ಯಾನಂದಕ್ಕಿದ್ಬೇಕು!!!

ಸ್ಥಾನ, ಮಾನ, ಹಾನಿ ನಿನ್ನಿಂದ ಕಾಮಿನಿ!

ರಹರಿಯ ದಾಸಿ ಲಕ್ಷ್ಮಿ ಕಾಮಿನಿ!
ಮಾರಹರನರಸಿ ದೇವಿ ಕಾಮಿನಿ!
ರೋತ್ತಮ ಶ್ರೀ ರಾಮಪತ್ನಿ ಕಾಮಿನಿ!
(ಮ)-ಹಾ ಕಾಳಿಯೆನಿಸಿದ ತಾಯಿ ಕಾಮಿನಿ!
ನಿತ್ಯಾನಿತ್ಯ ಜ್ಞಾನಿ ಶಾರದೆ ಕಾಮಿನಿ!
ನಿಜ ಭಕ್ತೆ

ಈರಾಬಾಯಿಯೂ ಕಾಮಿನಿ!
(ತ)-ನ್ನಿಂದೆಲ್ಲವೆಂಬ ಮಹಾಮಾಯೆ ಕಾಮಿನಿ!
ತ್ತಾತ್ರೇಯನ ಹೆತ್ತವಳೂ ಕಾಮಿನಿ!
ಕಾಮಿಗಳ ಭೋಗವಸ್ತುವೂ ಕಾಮಿನಿ!
ಮಿತ್ರನನ್ನೊಲಿಸಿದ ಕುಂತಿ ಕಾಮಿನಿ!
ನಿತ್ಯ, ಸತ್ಯ, ನಿರಂಜನಾದಿತ್ಯ ದಾನಿ!!!

ನಿನಗೆ ಪೂರ್ಣ ಶರಣಾದೆಂದೆ ನಾನು!

ನಗಭಯವಿತ್ತೆ ಮನಸಾ ನೀನು!
ಗೆರೆ ನಿನ್ನದನ್ನು ದಾಟಿ ಹೋಗೆ ನಾನು!
ಪೂರ್ವಾಪರವೆಲ್ಲಾ ಬಲ್ಲವನು ನೀನು!
(ವ)-ರ್ಣನಾತೀತ ಕರುಣಾಳು ಗುರು ನೀನು!
ಕ್ತನಲ್ಲ ನಿನ್ನನರಿಯಲು ನಾನು!
ಕ್ಷಕನು ನನಗೆ ನೀನೆಂಬೆ ನಾನು!
(ತೃ)-ಣಾದ್ಯೆಲ್ಲವನು ಪೊರೆವವನು ನೀನು!
ದೆಂಟಾಗ್ಯೆಲೆಗಂಟಿಕೊಂಡವನು ನೀನು!
(ಬಂ)-ದೆ ನಿನ್ನಡಿದಾವರೆಯೆಡೆಗೆ ನಾನು!
ನಾನೇ ನೀನು, ನೀನೆ ನಾನಾಗ್ಲೆಂಬೆ ನಾನು!
(ಜ)-ನುಮದಾತ ನಿರಂಜನಾದಿತ್ಯ ನೀನು!!!

ಇಚ್ಛೆಯ ಉದ್ರೇಕವೇ ಅಶಾಂತಿ!

(ತು)-ಚ್ಛೆನಿಪ ವಿಷಯತ್ಯಾಗ ಶಾಂತಿ!
ಜ್ಞ, ಯಾಗಾದಿಗಳೆಲ್ಲಾ ಭ್ರಾಂತಿ!
ನ್ನತಿಗಾಗಿರಬೇಕು ಕ್ರಾಂತಿ!
(ಇ)-ದ್ರೇನು ಪುರುಷಾರ್ಥ ಅಪಖ್ಯಾತಿ!
(ತ್ರಿ)-ಕರಣ ಶುದ್ಧನಿಗಾವ ಜಾತಿ?
ವೇದಾಂತ ಜೀವನವೇ ಸುನೀತಿ!
ಜ್ಞಾನದಿಂದಾಗಿಹುದು ಭೀತಿ!
ಶಾಂಭವಿ ತಾನಾಗ್ವುದೊಳ್ಳೇ ರೀತಿ!
(ಗ)-ತಿ ಶ್ರೀ ನಿರಂಜನಾದಿತ್ಯ ಪತಿ!!!

ನನ್ನನ್ನು ಸದಾ ನೆನೆಯುತಿರು!

(ನ)-ನ್ನನ್ನು ನಿನ್ನವನೆಂದು ನಂಬಿರು!
(ತಿ)-ನ್ನುವುದ್ಪ್ರಸಾದವೆಂದರಿತಿರು!


ಈಪವಿಲ್ಲೆಂದು ಅಳದಿರು!
ದಾಸಿ

ಈರಾಬಾಯಿಯಂತೆ ಇರು!
ನೆನಪನ್ಯರದು ಮಾಡದಿರು!
ನೆಲ, ಹೊಲಗಳಾಶಿಸದಿರು!
(ಸಾ)-ಯುಜ್ಯ ಗುರಿಯೆಂದು ತಿಳಿದಿರು!
ತಿತಿಕ್ಷೆ ಅಭ್ಯಾಸ ಮಾಡುತ್ತಿರು!
(ಇ)-ರು ನಿರಂಜನಾದಿತ್ಯನಾಗಿರು!!!

ನಿನ್ನಾಜ್ಞೆಯಂತೆ ನೀನೇ ನಡೆಸು!

(ನ)-ನ್ನಾಸೆಯನ್ನೆಲ್ಲಾ ಪೂರ್ತಿಗೊಳಿಸು!
(ಪ್ರ)-ಜ್ಞೆ ಸದಾ ಶ್ರೀಪಾದದಲ್ಲಿರಿಸು!
(ಭ)-ಯಂಗಳನ್ನೆಲ್ಲಾ ಪರಿಹರಿಸು!
ತೆರೆಹೊಡೆತದಿಂದ ತಪ್ಪಿಸು!
ನೀಚರಿಂದತಿ ದೂರವಿರಿಸು!
ನೇಮ, ನಿಷ್ಠೆ, ಹೇಗೆಂದು ತಿಳಿಸು!
ಮಸ್ಕಾರ ಸದಾ ಸ್ವೀಕರಿಸು!
(ಮ)-ಡೆವಾಳನ ಕೆಲಸ ಮಾಡಿಸು!
(ಕೂ)-ಸು ನಿರಂಜನಾದಿತ್ಯಗೆನಿಸು!!!

ಅಲ್ಪಾವಧಿ ಶಕ್ತಿ ಭುಕ್ತಿ!

(ಕ)-ಲ್ಪಾದ್ಯತೀತ ಶಕ್ತಿ ಮುಕ್ತಿ!
ರಗುರು ಭಕ್ತಿ ಶಕ್ತಿ!
(ಅ)-ಧಿಕಾರ ಅಜ್ಞಾನಾಸಕ್ತಿ!
ರಣಶಕ್ತಿ ವಿರಕ್ತಿ!
(ಸಿ)-ಕ್ತಿದರಿಂದ ಶಿವಶಕ್ತಿ!
ಭುಜಬಲ ದೇಹಶಕ್ತಿ!
(ಶ)-ಕ್ತಿ ನಿರಂಜನಾದಿತ್ಯೋಕ್ತಿ!!!

ನಿನಗೆ ನನ್ನಿಂದಿನ್ನೇನಾಗ್ಬೇಕು?

ನ್ನನ್ನು ನೀನು ದೂರದಿರ್ಬೇಕು!
ಗೆಳೆಯನೆಂದೆನ್ನ ಭಾವಿಸ್ಬೇಕು!
ನ್ನ ಗುಣಗಳ್ನಿನ್ನಲ್ಲಿರ್ಬೇಕು!
(ನಿ)-ನ್ನಿಂದ ಸದಾ ಸಾಧನೆಯಾಗ್ಬೇಕು!
ದಿವ್ಯ ನಾಮಾಮೃತ ಕುಡಿಯ್ಬೇಕು!
(ಹೊ)-ನ್ನೇಕೆ, ಮಣ್ಣೇಕೆನಗೆಂದಿರ್ಬೇಕು!
ನಾಶವಿಲ್ಲದ “ನಾ” ನೀನಾಗ್ಬೇಕು!
(ಸಾ)-ಗ್ಬೇಕಿದಕ್ಕಾಗಿ ತಪಸ್ಸಾಗ್ಬೇಕು!
(ಬೇ)-ಕು, ನಿರಂಜನಾದಿತ್ಯಾತ್ಮಾಗ್ಬೇಕು!!!

ನಿನ್ನ ಹುಚ್ಚಿನಿಂದ ನಾನು ಕೊಚ್ಚಿಹೋಗ್ತಿದ್ದೇನೆ!

(ನ)-ನ್ನನ್ನು ನೀನು ಕಡೆಗಂಡ್ರೆ ನಾನಿರ್ಬಾರ್ದುತಾನೇ?
ಹುಸಿಮಾಯೆಯಾಟವೆಂದವನೂ ನೀನೇತಾನೆ?
(ಮೆ)-ಚ್ಚಿ ನಿನ್ನನ್ನು ನಾನೀಗ ಸೇರಬಯಸಿದ್ದೇನೆ!
ನಿಂದಾ, ಸ್ತುತಿಗಳ, ಸಮವಾಗೆಣಿಸಿದ್ದೇನೆ!
ತ್ತ ಗುರುವೇ ನೀನೆಂದು ನಾನು ನಂಬಿದ್ದೇನೆ!
ನಾಮ ನಿನ್ನದನ್ನು ಸದಾ ಸ್ಮರಿಸುತ್ತಿದ್ದೇನೆ!
ನುಡಿದಂತೆ ನಡೆಯುತ್ತಲೂ ಇರುತ್ತಿದ್ದೇನೆ!
ಕೊಳಕನ್ನು ಒಂದೊಂದಾಗಿ ತೊಳೆಯುತ್ತಿದ್ದೇನೆ!
(ಸ)-ಚ್ಚಿದಾನಂದವೇ ಗುರಿಯೆಂದರಿತಿರುತ್ತೇನೆ!
ಹೋರಾಟವಿದಕ್ಕಾಗಿ ನಡೆಸುತ್ತಲಿದ್ದೇನೆ!
(ಸಂ)-ಗ್ತಿಗಳನ್ನೆಲ್ಲಾ ನಿವೇದಿಸಿಕೊಂಡಿರುತ್ತೇನೆ!
(ಉ)-ದ್ದೇಶ ಮತ್ತು ದಾರಿ ನನ್ನದು ಒಪ್ಪಿಗೆತಾನೆ?
(ನೀ)-ನೆನ್ನ ಪಂಚಪ್ರಾಣ ನಿರಂಜನಾದಿತ್ಯ ನೀನೇ!!!

ಅನ್ನ ನೀರ್ಬಿಟ್ಟವ್ರೆಲ್ಲಾ ಶಿವನ ಕಂಡ್ರಾ?

(ಅ)-ನ್ನ, ಸಾರು, ಹುಳಿ, ಮಾಡಿಟ್ಟವ್ರೆಲ್ಲಾ ಉಂಡ್ರಾ!
ನೀವೇ ಎಲ್ಲಕ್ಕೂ ಕಾರಣವೆಂದಂದ್ಕೊಂಡ್ರಾ!
(ಕ)-ರ್ಬಿದವರುದ್ಧಾರವಾದದ್ದನ್ನು ಕಂಡ್ರಾ?
(ನೆ)-ಟ್ಟ ಗಿಡಗಳೆಲ್ಲಾ ಬದುಕಿದ್ದು ಕಂಡ್ರಾ?
(ದೇ)-ವ್ರೆಲ್ಲಕ್ಕೂ ಕಾರಣವೆಂದರಿತುಕೊಂಡ್ರಾ?
(ಕ)-ಲ್ಲಾದಹಲ್ಯೆಯನೆಬ್ಸಿದ ರಾಮಚಂದ್ರಾ!
ಶಿಕ್ಷಿಸಲ್ಪಟ್ಟವಳಿಗಾಗಿ ದೇವೇಂದ್ರಾ!
(ಪ)-ವನಸುತ ಮಾರುತಿ ಆದ ಬ್ರಹ್ಮೇಂದ್ರಾ!
ರನಾದರ್ಜುನ ತಾನಾದ ವೀರೇಂದ್ರ!
ಕಂಸ ಮಾವನನ್ನು ಕೊಂದ ಯಾದವೇಂದ್ರಾ!
(ಕಂ)-ಡ್ರಾ? ಶ್ರೀ ನಿರಂಜನಾದಿತ್ಯ ತಾಪಸೇಂದ್ರಾ!!!

ಊದಿ, ಊದಿ, ಊದಿತ್ತು ಕಣ್ಣು!

ದಿಕ್ಕಿಲ್ಲದಾದಳೀಗಾ ಹೆಣ್ಣು!
ರಲ್ಲೇನಿದೆ ಒಣ ಮಣ್ಣು! (ಮಂ)
-ದಿಯ ಮಾತಿಂದೊಡ್ಲೆಲ್ಲಾ ಹುಣ್ಣು!
ಳಿಗ ಮಾಡ್ಬಲ್ಲಳಾ ಹೆಣ್ಣು! (ಕಾ)
-ದಿಹಳೀಗಾ ಓದಿದ ಹೆಣ್ಣು! (ಮು)
-ತ್ತುತ್ತಿದೆ ಅವ್ಳ ನೀಚ ಕಣ್ಣು!
ರುಣೆ ತೋರ್ಲೀಗಾ ಮುಕ್ಕಣ್ಣು!
(ಉ)-ಣ್ಣು ನಿರಂಜನಾದಿತ್ಯ ಹಣ್ಣು!!!

ಜೋಡಿ ಸರಿಯಾಗಿರಬೇಕು! (ಗಾ)

-ಡಿಯೋಟಕ್ಕನ್ಕೂಲವಾಗ್ಬೇಕು!
ದಾ ಮಾಲೀಕಗಾಗಿರಬೇಕು! (ದಾ)
-ರಿ ಬಿಟ್ಟು ನಡೆಯದಿರ್ಬೇಕು!
ಯಾರ ತೋಟಕ್ಕೂ ನುಗ್ದಿರ್ಬೇಕು!
(ರಾ)-ಗಿ, ಬತ್ತದ ಗದ್ದೆಯುಳ್ಬೇಕು!
ಗಳೆಯೇನೂ ಮಾಡ್ದಿರಬೇಕು!
ಬೇಲಿಯೊಳಗೇ ಮೇಯಬೇಕು! (ಬೇ)
-ಕು, ನಿರಂಜನಾದಿತ್ಯಾಗ್ಬೇಕು!!!

ನನ್ನಿಷ್ಟ ನಿನಗೆ ಕಷ್ಟ,! (ನಿ)

-ನ್ನಿಷ್ಟ ನನಗತಿ ಕಷ್ಟ! (ಭ್ರ)
-ಷ್ಟನಿಗೆಲ್ಲಾ ಬಹುಕಷ್ಟ!
ನಿಜರೂಪ ಸರ್ವಶ್ರೇಷ್ಠ!
ಶ್ವರ ರೂಪ ಕನಿಷ್ಟ!
ಗೆಲಬೇಕೆಲ್ಲಾ ಅರಿಷ್ಟ! (ಸ್ವ)
-ಕರ್ಮ, ಧರ್ಮ ಸರ್ವೊತ್ಕೃಷ್ಟ! (ಶ್ರೇ)
-ಷ್ಟ, ನಿರಂಜನಾದಿತ್ಯೇಷ್ಟ!!!

ಇತ್ತೆನ್ದದ್ದಿಂದಿಲ್ಲದಿತ್ತು! (ಮ)

-ತ್ತೆ ಇಲ್ಲೆಂದದ್ರಲ್ಲದಿತ್ತು! (ನ)
-ನ್ದ ಕಂದ ನಾಟದಾಗಿತ್ತು! (ಎ)
-ದ್ದಿಂದಿನ ವೇಳೆ ಹಾಗಿತ್ತು!
ದಿನಚರಿ ಸಾಗುತ್ತಿತ್ತು! (ಮ)
-ಲ್ಲ ಮರ್ದನಗೆಲ್ಲಾ ಗೊತ್ತು!
ದಿವ್ಯೋಪದೇಶದಾಗಿತ್ತು! (ಗೊ)
-ತ್ತು ನಿರಂಜನಾದಿತ್ಯಾಯ್ತು!!!

ದಿಕ್ಕಿಲ್ಲದವನಿಗೆ ಹಕ್ಕೇನು? (ಇ)

-ಕ್ಕಿದ್ದನ್ನುಣ್ಣುತ್ತಿರಬೇಕವನು! (ಅ)
-ಲ್ಲಗೆಳೆಯ್ಬಾರ್ದನ್ಯರನ್ನವನು!
ಯೆಗೆ ಪಾತ್ರನಾಗ್ಬೇಕವನು!
ರ್ಣಭೇದ ಬಿಡಬೇಕವನು!
ನಿಶ್ಚಲ ಭಕ್ತನಾಗ್ಬೇಕವನು!
ಗೆಲ್ಬೇಕಿಂದ್ರಿಯಗಳನ್ನವನು!
ರಟೆ ಮಲ್ಲನಾಗ್ಬಾರ್ದವನು! (ಠ)
-ಕ್ಕೇನೂ ಮಾಡದಿರಬೇಕವನು! (ಸೂ)
-ನು, ನಿರಂಜನಾದಿತ್ಯಗವನು!!!

ನಾನಿದ್ದಲ್ಲಿ ನೀನಿದ್ರೆ ನಿತ್ಯ ಸುಖ! (ನೀ)

-ನಿದ್ದಲ್ಲಿ ನಾನಿದ್ರೆ ಅನಿತ್ಯ ಸುಖ! (ಇ)
-ದ್ದದ್ದಂದ್ರೆ ತಿರುಗಿಸಬೇಡ ಮುಖ! (ಮ)
-ಲ್ಲಿಕಾರ್ಜುನ ಲಿಂಗವೇ ನಿನ್ನ ಸಖ!
ನೀನದ್ರಲ್ಲೈಕ್ಯವಾದ್ರೆ ಮುಕ್ತಿ ಸುಖ!
ನಿತ್ಯವಿರ್ಲಿ ಗುರುಮಂತ್ರದುಲ್ಲೇಖ! (ತೊಂ)
-ದ್ರೆಗಳಿಗೆ ಪಡ್ಬೇಡ ನೀನು ದುಃಖ!
ನಿನಗೆ ಬೇಕಿಲ್ಲ ಜಪದ ಲೆಃಖ! (ಭೃ)
-ತ್ಯ ನೀನವಗಾದ್ರೆ ಪರಮ ಸುಖ!
ಸುರ, ನರಾದ್ಯರಾ ಗುರು ತಿರುಕ!
ಗ ಶ್ರೀ ನಿರಂಜನಾದಿತ್ಯ ಸಖ!!!

ಸರ್ವಶಕ್ತ ತಾನಾಗಬೇಕು! (ಗ)

-ರ್ವವೇನೂ ಇಲ್ಲದಿರಬೇಕು!
ರಣರ ಪೊರೆಯಬೇಕು! (ಯು)
-ಕ್ತ ಸೇವೆ ಸ್ವೀಕರಿಸಬೇಕು!
ತಾಳ್ಮೆ ಬಹಳವಿರಬೇಕು!
ನಾಮ, ರೂಪಕ್ಕಂಟದಿರ್ಬೇಕು!
ಗನ ಸದೃಶನಾಗ್ಬೇಕು!
ಬೇರೆಯವರಾಳದಿರ್ಬೇಕು! (ಬೇ)
-ಕು, ನಿರಂಜನಾದಿತ್ಯನಾಗ್ಬೇಕು!!!

ಪುಗ್ಸಾಟೆ ಸಿಕ್ಕಿದ್ರೆ ಪುನ್ಗೂಮಲ! (ವಾ)

-ಗ್ಸಾಮರ್ಥ್ಯವಿದ್ರೀಗ ಮಹಾಬಲ! (ವಾ)
-ಟೆ ಚೀಪುವ ಆಧುನಿಕ ಕಾಲ!
ಸಿರಿವಂತನ ಪೂಜಿಪಕಾಲ! (ದ)
-ಕ್ಕಿಸ್ಕೊಳ್ವರ್ಪರ ಧನವೀ ಕಾಲ! (ಮು)
-ದ್ರೆ ಬಸವನಿಗೊತ್ತದ ಕಾಲ!
ಪುಸಿಗೆ ಮೋಸ ಹೋಗುವ ಕಾಲ! (ಬಿ)
-ನ್ಗೂ ವಿಷಯ ಸುಖದಾ ಕಾಲ!
ಹಾಲಿಂಗವನ್ನೊಲ್ಲದ ಕಾಲ! (ಕಾ)
-ಲ ಶ್ರೀ ನಿರಂಜನಾದಿತ್ಯ ಲೀಲಾ!!!

ಬರುವವರಲ್ಲಿರುವವರಾರಿಲ್ಲ! (ಕ)

-ರುಬಿದರದಕ್ಕೆ ಪ್ರಯೋಜನವಿಲ್ಲ!
ರಗುರು ಚಿತ್ತ ಪ್ರಶ್ನಿಸುವರಿಲ್ಲ! (ಅ)
-ವರವರ ಪ್ರಾರಬ್ಧ ಭೋಗಿಸ್ಬೇಕೆಲ್ಲಾ!
ಹಸ್ಯ ವಿದನರಿತಿರಬೇಕೆಲ್ಲಾ! (ಸ)
-ಲ್ಲಿಸಬೇಕ್ಭಕ್ತಿಯಿಂದ ಸೇವೆಯನ್ನೆಲ್ಲಾ!
ರುಜುಮಾರ್ಗಕ್ಕೆ ಸಮಯಾವುದೂ ಇಲ್ಲ!
ನವಾಸಿಯೇ ಆಗಬೇಕೆಂದೇ ನಿಲ್ಲ!
ಸನಾಶನಕ್ಕಾಗಿ ಬದುಕ್ಬೇಕಿಲ್ಲ!
ರಾತ್ರಿ, ಹಗಲೆನ್ನದೇ ಭಜಿಸ್ಬೇಕೆಲ್ಲಾ!
ರಿಪುಗಳಿದ್ರಿಂದ ನಾಶವಾಗ್ವರೆಲ್ಲಾ! (ಪು)
-ಲ್ಲ ನಿರಂಜನಾದಿತ್ಯಾನುಭವವೆಲ್ಲಾ!!!

ನಿಗ್ರಹಾನುಗ್ರಹ ಶಕ್ತನಾರು?

ಗ್ರಹಿಸ್ಲಿಕ್ಕಶಕ್ಯ ಅವ್ನಊರು!
ಹಾದಿ ಅಲ್ಲಿಗೆ ತೋರ್ವವನಾರು?
(ಮ)-ನುಜರು ಅಶಕ್ತರಾಗಿಹರು!
(ಉ)-ಗ್ರ ತಪಸ್ಸಿಗೂ ಕಾಣದಿಹರು!
ರಿಸುವವ್ರಾರವ್ರ ಬೇಜಾರು?
ರಣಾಗತ ರಕ್ಷಕಾ ಗುರು!
(ಮು)-ಕ್ತರು ಅವನಿಂದ ಮಾನವರು!
ನಾಸ್ತಿಕರಿದ ನೇನರಿವರು? (ಗು)
-ರು ನಿರಂಜನಾದಿತ್ಯ ದೇವರು!!!

ಶಿವ ನೀನಾಗಬೇಕೆಂಬೆ! (ಶ)

-ವ ನೀನಾಗಬಾರದಂಬೆ!
ನೀರಜಾಕ್ಷಿಯಾದ್ರೇನಂಬೆ?
ನಾಶವಾಗುವುದದೆಂಬೆ!
ಣಪನಬ್ಬೆ ನೀನಂಬೆ!
ಬೇಕ್ನಿನ್ನಾಶೀರ್ವಾದವೆಂಬೆ!
ಕೆಂಗಣ್ಣಗಾಪ್ತಳ್ನೀನಂಬೆ!
(ಅಂ)-ಬೆ, ನಿರಂಜನಾದಿತ್ಯೆಂಬೆ!!!

ನೀನು ಪಾಲುಗಾರನೆಂದ ಶಿವಾನಂದ!

(ನಾ)-ನು ನಿನ್ನವನೆಂದವನ ಪ್ರಿಯ ಕಂದ!
ಪಾರಮಾರ್ಥಿಯಾದ ಸದ್ಗುರು ಬಾ ಎಂದ!
(ಹಾ)-ಲು, ಮೊಸ್ರು, ತುಪ್ಪದೂಟವಲ್ಲಾತ್ಮಾನಂದ!
ಗಾಡಿಯೋಡದಾಯ್ತುಪವಾಸದಿಂದ!
ಸದೂಟ ಪ್ರತಿ ದಿನ ತಾನು ತಿಂದ!
ನೆಂಟ, ಭಂಟ ನಾದವನಿಗಿದಾನಂದ!
ಯೆ ನಿನಗೇಕಿಲ್ಲೆಂದನಾಗ ಕಂದ!
ಶಿವನಾನಂದ ನಿನ್ನಾನಂದವಾಗ್ಲೆಂದ!
ವಾದ, ಭೇದವನ್ನೀಗ ಸಾಕುಮಾಡೆಂದ!
ನಂಬಿ ಸುಖಿಯಾಗಿರೆಂದ ಶಿವಾನಂದ!
ತ್ತ ನಿರಂಜನಾದಿತ್ಯ ಶಿವಾನಂದ!!!

ಅಧಿಕಾರಿಗಧಿಕಾರವಿಲ್ಲ! (ಅ)

-ಧಿಕಾರನಧಿಕಾರಿಗೀಗೆಲ್ಲ!
ಕಾಳಿ, ಬೋಳಿ ನ್ಯಾಯವೀಗೆಲ್ಲೆಲ್ಲಾ! (ವೈ)
-ರಿನಿಗ್ರಹಕ್ಕೆ ಶಕ್ತಿಯೇ ಇಲ್ಲ!
ರ್ವಕ್ಕೆ ಮಾತ್ರ ಅಳತೆ ಇಲ್ಲ!
ಧಿಕ್ಕಾರ ಸತ್ಪುರುಷರಿಗೆಲ್ಲ!
ಕಾರಾಗ್ರಹವಾಸವರಿಗೆಲ್ಲಾ!
ಹಸ್ಯ ಬಾಳಿನದ್ದರಿವಿಲ್ಲ!
ವಿಕಲ್ಪ, ಸಂಕಲ್ಪ ಹೆಚ್ಚಿತಲ್ಲಾ! (ಬ)
-ಲ್ಲ ನಿರಂಜನಾದಿತ್ಯ ಪ್ರಪುಲ್ಲ!!!

ದರ್ಶನಕೊಟ್ಟು ಪೂಜೆ ಸ್ವೀಕರಿಸಯ್ಯಾ! (ಸ್ಪ)

-ರ್ಶದಿಂದ ನಾಶವಾಗ್ಬೇಕು ಪಾಪವಯ್ಯಾ!
ಮಸ್ಕಾರದಿಂದ ಹಂಕಾರ ಹೋಗ್ಲಯ್ಯಾ!
ಕೊಳೆ ಕೃಪಾಕಿರಣದಿಂದಳಿಯ್ಲಯ್ಯಾ! (ಹು)
-ಟ್ಟು ಸಾವಿನ ಕಟ್ಟು ಬಿಟ್ಟು ಹೋಗಲಯ್ಯಾ!
-ಪೂರ್ಣವೊಂದೇ ವಿರಾಜಿಸುತ್ತಿರಲಯ್ಯಾ! (ಸಂ)
-ಜೆ, ಮುಂಜಾನೆಯೆಂಬುದಿಲ್ಲದಿರಲಯ್ಯಾ!
ಸ್ವೀಕರಿಸಿ ಸೇವೆ ಆಶೀರ್ವದಿಸಯ್ಯಾ!
ಳೆಯಿತೆಂತೇಳು ದಶಕಗಳಯ್ಯಾ!
ರಿಸಿಜೀವನ ನಿನ್ನನುಗ್ರಹವಯ್ಯಾ!
ಚ್ಚಿದಾನಂದ ಪರಮ ಗುರಿಯಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾಂದ ಅದಯ್ಯಾ!!!

ನಿರ್ಲಜ್ಜಾ ನರ್ತನ ನಿನ್ನದು ಸಂಪದಾ! (ತೋ)

-ರ್ಲರಿಯರಾಭಾವ ಅನ್ಯರು ಸಂಪದಾ! (ಕ)
-ಜ್ಜಾಯ ನೇವೇದ್ಯಕ್ಕೂ ಮೇಲದು ಸಂಪದಾ!
ಗುಮೊಗ ನಿನ್ನದು ಚೆಂದ ಸಂಪದಾ! (ಕ)
-ರ್ತನ ಕಲಾ ಕೌಶಲವದು ಸಂಪದಾ!
ಟರಾಜ ಗುರು ನಿನಗೆ ಸಂಪದಾ!
ನಿನಗೊಲಿದಿಹನವನು ಸಂಪದಾ! (ನಿ)
-ನ್ನ ತನ್ನಂತೆ ಮಾಡುವನವ ಸಂಪದಾ!
ದುರಾಗ್ರಹ ನಿನಗೇನಿಲ್ಲ ಸಂಪದಾ!
ಸಂತಸದಿಂದಿರು ಸರ್ವದಾ ಸಂಪದಾ!
ರಮಾರ್ಥಸಾರವೇ ನೀನು ಸಂಪದಾ!
ದಾತ ಶ್ರೀ ನಿರಂಜನಾದಿತ್ಯ ಸಂಪದಾ!!!

ಇರ್ಸಿಕೊಂಡಂತಿರುವೆ ನಿನ್ನಲ್ಲಿ ನಾನು! (ಆ)

-ರ್ಸಿಕೊಳ್ಬೇಕು ನನ್ನೆಲ್ಲಾ ಸುಗುಣ ನೀನು!
ಕೊಂಚವೂ ಸಂದೇಹ ಪಡಬಾರ್ದು ನೀನು!
ಡಂಭಾಚಾರ ಮಾಡುವವನಲ್ಲ ನಾನು!
ತಿರುಗುತಿಹೆ ಜಗವ ನಿತ್ಯ ನಾನು! (ಗು)
-ರುವೆಂದು ಸದಾ ಸ್ಮರಿಸು ನನ್ನ ನೀನು!
ವೆಸನವಾವುದಕ್ಕೂ ಪಡ್ಬೇಡ ನೀನು!
ನಿನ್ನ ಸುಖ, ದುಃಖದಲ್ಲಿ ಭಾಗಿ ನಾನು! (ನಿ)
-ನ್ನ ಸರ್ವಸ್ವವೂ ತ್ರಿಕಾಲದಲ್ಲೂ ನಾನು!
(ಮ)-ಲ್ಲಿಕಾರ್ಜುನೆನ್ನಿಂದ ಬೇರಲ್ಲ ನೀನು!
ನಾದ, ಬಿಂದು, ಕಲಾತೀತ ನಾನು, ನೀನು!
(ಅ)-ನುಪಮಾತ್ಮ ನಿರಂಜನಾದಿತ್ಯ ಭಾನು!!!

ಕಣ್ಣಿಲ್ಲದವಗೆ ಹೆಣ್ಣೇನು ಮಣ್ಣೇನು? (ಬ)

-ಣ್ಣಿಪರ ಮಾತಿಂದ ಪ್ರಯೋಜನವೇನು?
(ಒ)-ಲ್ಲದಿರಬೇಕಾವುದನ್ನೂ ಅಂಥವನು!
ತ್ತನನ್ನೇ ಸ್ಮರಿಸುತ್ತಿರ್ಬೇಕವನು!
ರ ಸಾಯುಜ್ಯ ಪಡೆಯಬೇಕವನು!
ಗೆಲ್ಬೇಕದಕ್ಕಿಂದ್ರಿಯಂಗಳನ್ನವನು!
ಹೆದರಬೇಕಿಲ್ಲಾವುದಕ್ಕೂ ಅವನು! (ಕ)
-ಣ್ಣೇ ಕಾಣದ ಸೂರ್ದಾಸ ಬಾಳ್ಲಿಲ್ಲವೇನು?
(ಅ)-ನುಭವಿಯಾದ ಪರಮಾರ್ಥಿಯವನು!
ದ, ಮತ್ಸರವಿಲ್ಲದಿದ್ದನವನು!
(ಹ)-ಣ್ಣೇ ಬೇಕು, ಹಾಲೇ ಬೇಕು ಎಂದಿಲ್ಲವನು!
(ತ)-ನುಜ ನಿರಂಜನಾದಿತ್ಯಗಂಥವನು!!!

ತಿಂದು ದೂರುವುದಾವ ಹಿರಿಮೆ?

ದುರ್ವಿಧಿಯದಿದೊಂದು ಮಹಿಮೆ!
ದೂರಿದ್ರೆ ದಾತಗೇನು ಕಡಿಮೆ? (ಗು)
-ರುದೇವನದ್ದು ಒಂದೇ ನಿಲುಮೆ!
(ಸಾ)-ವು, ನೋವಿಗಂಜದೇ ಮಾಳ್ಪಗೈಮೆ!
ದಾಸರ ದಾಸರಲ್ಲದ್ರ ಜಮೆ! (ಭ)
-ವ ಪಾಶನಾಶಕ್ಕೆ ಶಮೆ, ದಮೆ!
ಹಿತೈಷಿ ಲೋಕಕ್ಕೆ ಸತ್ಯಭಾಮೆ! (ವೈ)
-ರಿ ನಿಗ್ರಹಕ್ಬೇಕವಳೊಲುಮೆ! (ಉ)
-ಮೆ ನಿರಂಜನಾದಿತ್ಯಾತ್ಮ -ಧಾಮೆ!!!

ಸಾರಥಿ ಸದ್ಗುರು ಕೃಷ್ಣಪರಮಾತ್ಮ!

ಥ ಶರೀರವಾಗಿಹನೊಳಗಾತ್ಮ! (ರ)
-ಥಿಕ ವಿಜಯಿಯಾಗಲ್ಕಾರಣಾ ಆತ್ಮ!
ತತವನಿಚ್ಛೆಯಂತಿರ್ಬೇಕ್ಜೀವಾತ್ಮ! (ಸ)
-ದ್ಗುರು ಕೃಪೆಯಿಂದವನೂ ಪರಮಾತ್ಮ!
ರುಧಿರ, ಮಾಂಸದ ಗೊಂಬೆ ತಾನಲ್ಲಾತ್ಮ!
ಕೃಷ್ಣ ವಿಶ್ವರೂಪದರ್ಶನ ಯೋಗಾತ್ಮ!
(ಪೂ)-ಷ್ಣನಿದ ಸಮರ್ಥಿಸುವ ದರ್ಶನಾತ್ಮ!
ಡಬಾರದು ಸಂದೇಹ ಮಾನವಾತ್ಮ!
ತಿಪತಿಯ ನಿಗ್ರಹಿಯೇ ಶಿವಾತ್ಮ!
ಮಾಡಬೇಕಭ್ಯಾಸ ಸತತ ಜೀವಾತ್ಮ! (ಆ)
-ತ್ಮ, ನಿರಂಜನಾದಿತ್ಯ ಪರಮಾತ್ಮ!!!

ಆಡಿದ್ರೆ ಜಗಳ, ಹಾಡಿದ್ರೆ ಜೋಗುಳ!

ಡಿಕ್ಕಿ ಹೊಡೆಯಿತೆಂದ್ರೆ ತಂದೆ ಬೈಗಳ!
(ನಿ)-ದ್ರೆ ಬಾರದಿದ್ದ್ರೆಲ್ಲರಿಗೂ ಕಿರುಕುಳ!
ವಾಬ್ದಾರಿ ದೇವರಿಗಂತೂ ಬಹಳ!
ತಿ, ಸ್ಥಿತಿಗಳಿರಬೇಕು ಸರಳ! (ಅ)
-ಳವಟ್ಟು ತತ್ವ ಬಾಳ್ವವರು ವಿರಳ!
ಹಾನಿ ಮಾಳ್ಪನು ಎಲ್ಲರಿಗೂ ದುರುಳ!
(ಕ)-ಡಿ, ಬಡಿ, ಎನ್ನುತ್ತಾರ್ಭಟಿಪಾ ಮರುಳ!
(ಬಂ)-ದ್ರೆ ಮಳೆ, ಕಾದ್ರೆ ಬಿಸ್ಲಾದ್ರೆ ಕಳವಳ!
ಜೋಡಿ ಸರಿಯಾಗಿರ್ದಿದ್ರೆ ರೈತನುಳ!
ಗುಟ್ಟು ರಟ್ಟಾದಮೇಲೆ ಹಿಟ್ಟು ಹೇರಳ!
(ಕೇ)-ಳ ನಿರಂಜನಾದಿತ್ಯನ್ಯ ಮಾತುಗಳ!!!

ಸರ್ವಕ್ಕೂ ಕಾಲ ಅಂತಕ! (ಗ)

ರ್ವಕ್ಕೂ ಕಾಲ ಅಂತಕ! (ಒ)
-ಕ್ಕೂಟಕ್ಕೂ ಕಾಲ ಅಂತಕ!
ಕಾಮಕ್ಕೂ ಕಾಲ ಅಂತಕ!
ಭ್ಯಕ್ಕೂ ಕಾಲ ಅಂತಕ!
ಅಂದಕ್ಕೂ ಕಾಲ ಅಂತಕ!
ಮಕ್ಕೂ ಕಾಲ ಅಂತಕ! (ಲೋ)
-ಕ ನಿರಂಜನಾದಿತ್ಯಕ!!!

ನೆನ್ಸಲ್ಲಾಗದ್ದು ಕನ್ಸಲ್ಲಾಯ್ತು! (ತಾ)

-ನ್ಸರಿಯಿಲ್ಲೆಂಬ ಅರಿವಾಯ್ತು! (ಕ)
-ಲ್ಲಾಗಿರ್ಬೇಕೆಂದು ಆಜ್ಞೆಯಾಯ್ತು! (ರಂ)
-ಗನಾಥ ತಾನೆಂದು ಗೊತ್ತಾಯ್ತು! (ಮು)
-ದ್ದು ಮುಖ ಮುದ್ದಾಡೆಂದಂತ್ತಾಯ್ತು!
ಳ್ಕೊಳ್ಬೇಡವ್ನನ್ನೆಂದಂತಾಯ್ತು! (ತಾ)
-ನ್ಸರ್ವಾಂತರ್ಯಾಮಿಯೆಂದಂತಾಯ್ತು! (ಉ)
-ಲ್ಲಾಸ ತುಂಬಿ ತಬ್ಬಿಕೊಂಡಾಯ್ತು! (ಆ)
-ಯ್ತು, ನಿರಂಜನಾದಿತ್ಯಾನಾಯ್ತು!!!

ಹನುಮಾನಗನುಮಾನವಿಲ್ಲ!

ನುಡಿ, ನಡೆಯಲ್ಲಂತರವಿಲ್ಲ!
ಮಾನಾಪಮಾನದ ಲಕ್ಷ್ಯವಿಲ್ಲ!
ಶ್ವರಕ್ಕೊಂದಿಷ್ಟು ಆಸೆಯಿಲ್ಲ!
ಗನಕ್ಕೂ ತಾ ನೆಗೆಯಬಲ್ಲ! (ತ)
-ನು, ಮನ, ಧನ, ರಾಮನಿಗೆಲ್ಲ!
ಮಾರಾರಿಯ, ಮರೆತವನಲ್ಲ! (ವಾ)
-ನರ ವೀರನಿವ ಮಹಾಮಲ್ಲ!
ವಿಧಿ ಪಟ್ಟ ಗಿಟ್ಟಿಸಿದ ಪುಲ್ಲ! (ಪು)
-ಲ್ಲ, ನಿರಂಜನಾದಿತ್ಯ ಪ್ರಪುಲ್ಲ!!!

ಅರ್ಪಿಸಿದೆ ತನು, ಮನ, ಧನ, ನಾನು! (ತೋ)

-ರ್ಪಿ ಅನಾದರವನ್ನು ನನ್ನಲ್ಲಿ ನೀನು!
ಸಿಟ್ಟು ಮಾಡಲಪರಾಧ ನನ್ನಲ್ಲೇನು? (ತಂ)
-ದೆ, ತಾಯಿ, ಬಂಧು, ಮಿತ್ರ ನನಗೆ ನೀನು!
ತ್ವ ಚಿಂತನೆ ಮಾಡುತ್ತಿಹೆನು ನಾನು! (ಅ)
-ನುಪಮ ಕರುಣಾಸಾಗರನು ನೀನು!
ಲಿನವಾಸನೆಯುಳ್ಳವನು ನಾನು!
ಶ್ವರ ಸುಖದಾಸೆ ಕೀಳ್ಬೇಕು ನೀನು!
(ಅಂ)-ಧ ಕಾರಾವೃತನಾಗಿರುವೆನು ನಾನು!
ಭೋಮಣಿ ಜ್ಯೋತಿರಾತ್ಮರೂಪಿ ನೀನು!
ನಾನೂ, ನೀನೂ, ಒಂದಾಗಿರ್ಬೇಕೆಂಬೆ ನಾನು!
(ನೀ)-ನು, ನಿರಂಜನಾದಿತ್ಯಾನಂದ ಭಾನು!!!

ಹಾಸಿಗೆ ಎಷ್ಟು ಸೊಗಸಾಗಿದ್ದರೇನು? (ಹೇ)

-ಸಿಗೆ ಮೈಮೇಲೆ ಗಮನಿಸಿದಿಯೇನು?
ಗೆಲಬೇಕಾಸೆಗಳೆಲ್ಲವನ್ನೂ ನೀನು!
ಷ್ಟಿದ್ದರಷ್ಟಕ್ಕೇ ತೃಪ್ತಿಪಡು ನೀನು! (ನಿ)
-ಷ್ಟುರಕ್ಕವಕಾಶ ಕೊಡಬಾರ್ದು ನೀನು!
ಸೊರಗಿ, ಕರಗ್ಬಾರ್ದಾಸೆಯಿಂದ ನೀನು!
ದ್ದಲ ಮಾಡದೇ ಭಜಿಸ್ಬೇಕು ನೀನು!
ಸಾಯುಜ್ಯ ಸುಖಕ್ಕರ್ಹನಾಗ್ಬೇಕು ನೀನು!
ಗಿಡ, ಮರದಂತಲ್ಲ, ಮಾನವ ನೀನು! (ಇ)
-ದ್ದದ್ದನ್ನು ಹಂಚಿ ತಿನ್ನಲೂಬೇಕು ನೀನು! (ಯಾ)
-ರೇನೇ ಅಂದರೂ ಮೌನವಾಗಿರು ನೀನು! (ಅ)
-ನುಪಮ ನಿರಂಜನಾದಿತ್ಯ-ನಾಗ್ನೀನು!!!

ಸದಾರೋಗ್ಯ ಭಾಗ್ಯವಂತರಾಗಿ ಇರಿ!

ದಾಸರ-ದಾಸರಾಗಿ ಧನ್ಯರಾಗಿರಿ!
ರೋಗಕಾರಕಾಹಾರ ಸೇವಿಸದಿರಿ!
(ಯೋ)-ಗ್ಯತಾನುಸಾರ ಸಂಸಾರ ಸಾಗಿಸಿರಿ!
ಭಾರ್ಯಾ, ಭರ್ತರನ್ಯೋನ್ಯವಾಗಿರುತ್ತಿರಿ!
(ವ್ಯಂ)-ಗ್ಯವಾಗಿಯೂ ಯಾರನ್ನೂ ನೋಯಿಸದಿರಿ!
ವಂಶಗೌರವವನ್ನುಳಿಸಿಕೊಂಡಿರಿ!
ತ್ವ ಚಿಂತನೆ ಸದಾ ಮಾಡುತ್ತಲಿರಿ!
ರಾಗ, ದ್ವೇಶಗಳಿಂದ ದೂರವಾಗಿರಿ!
ಗಿರಿಜಾಧವನ ಧ್ಯಾನಮಾಡುತ್ತಿರಿ!
ದು ಮುಕ್ತಿಗೆ ದಾರಿಯೆಂದರಿತಿರಿ!
(ಹ)-ರಿ ನಿರಂಜನಾದಿತ್ಯನೆಂದರಿಯಿರಿ!!!

ನನ್ಗಾಗಿರಲವಕಾಶ ನಿನಗಿದೆ! (ನಿ)

-ನ್ಗಾಗಿ ಮಂದಿರದ ಕದ ತೆರೆದಿದೆ!
ಗಿರಿಜೆ ನೀನೆಂದರಿಯಬೇಕಾಗಿದೆ!
ಘು ರಾಮನಾಮ ಜಪಿಸ್ಬೇಕಾಗಿದೆ! (ನೀ)
-ಲ ಕಂಠನಿಗಿದು ಸಮ್ಮತವಾಗಿದೆ! (ಭ)
-ವ ಬಂಧನ ಬಿಡುಗಡೆಯಾಗಲಿದೆ!
ಕಾಲ ಹಾಳುಮಾಡದಿರಬೇಕಾಗಿದೆ!
ಕ್ತಿ ಶಿವನಿಂದಲೇ ಬರುತ್ತಲಿದೆ!
ನಿಶ್ಚಲ ಭಕ್ತಿಗೆ ಪೂರ್ಣ ಫಲವಿದೆ!
ಟನೆಯಿಂದ ಕಾಟ ಹೆಚ್ಚಾಗಲಿದೆ!
(ಯೋ)-ಗಿ ರಾಜನ ಉಪದೇಶವಿದಾಗಿದೆ!
(ಇ)-ದೆ, ನಿರಂಜನಾದಿತ್ಯನ ದಯೆ ಇದೆ!!!

ವಿಶ್ವಾಸ ಘಾತಕಿ ಮಾಯ! (ವೈ)

-ಶ್ವಾನರನಂತೆ ನಿರ್ದಯ!
ತ್ಯವಲ್ಲ ಮಿಥ್ಯಾಕಾಯ! (ಮೇ)
-ಘಾವೃತ ಸೂರ್ಯನ ಛಾಯ!
ಮದಿಂದಾಗಿದೆ ಭಯ!
ಕಿತ್ತಾಟಕ್ಕಿದೇ ಸಮಯ!
ಮಾಧವನೀಯಲಾಶ್ರಯ! (ಜ)
-ಯ ನಿರಂಜನಾದಿತ್ಯಾಯ!!!

ಕಾಶಿಯತ್ತ ಪಥ ಸಾಗಿಲ್ಲ!

ಶಿವನಚಿತ್ತವರಿತಿಲ್ಲ!
ಕ್ಷಿಣೀ ವಿದ್ಯೆಯೆ ಎಲ್ಲೆಲ್ಲಾ! (ಕ)
-ತ್ತ ಕೊ

ದ್ರೂ ಕೇಳುವವರಿಲ್ಲ!
ರಮಾರ್ಥ ಬೆಳಗಲಿಲ್ಲ!
ನ ಕೌಶಲ ಬೇಕಾಗಿಲ್ಲ!
ಸಾಧನೆಗೆ ಪ್ರೋತ್ಸಾಹವಿಲ್ಲ!
ಗಿರಿಜೆಗೂ ದಯೆ ಬರ್ಲಿಲ್ಲ! (ನ)
-ಲ್ಲ ನಿರಂಜನಾದಿತ್ಯ ಪುಲ್ಲ!!!

ನಾ ನಿನಗೇನೂ ಹೇಳುವುದಿಲ್ಲ!

ನಿನಗರಿಯದ್ದಾವುದೂ ಇಲ್ಲ!
ನ್ನ ವಿಶ್ವಾಸ ಕೆಟ್ಟುಹೋಗಿಲ್ಲ!
ಗೇಣೀದಾರನಂತೆ ನಾನೇನಲ್ಲ! (ನಾ)
-ನೂ, ನೀನೂ ಇಂದಿನವರೇನಲ್ಲ!
ಹೇಳಿದರೆ ನಂಬುವವರಿಲ್ಲ! (ಬಾ)
-ಳು ತರತರವಾಗಿಂತಾಯ್ತೆಲ್ಲ! (ನೋ)
-ವು ಸಹಿಸಲಿಕ್ಕಾಗುವುದಿಲ್ಲ!
ದಿವ್ಯ ನಾಮಜಪ ಬಿಟ್ಟೇ ಇಲ್ಲ! (ಪು)
-ಲ್ಲ ನಿರಂಜನಾದಿತ್ಯನ್ಯನಲ್ಲ!!!

ನನ್ನ ನೀನೆಂತು ಬಿಟ್ಟಿರಬಲ್ಲೆ?

(ನಿ)-ನ್ನ ಸರ್ವಸ್ವ ನಾನೆಂದು ನೀ ಬಲ್ಲೆ?
ನೀನೆನ್ನ ಬಿಟ್ಟರುಳಿಯಲೊಲ್ಲೆ!
ನೆಂಟರೆಂಬವರ್ಮಾಳ್ಪರು ಹಲ್ಲೆ!
ತುಡುಗರಿರುವರ್ಪಕ್ಕದಲ್ಲೇ!
ಬಿಡದೇ ಜಪಿಸು ಮನದಲ್ಲೇ!
(ಹು)-ಟ್ಟಿದ್ದು ಸಾರ್ಥಕವಾಗ್ಲೀ ಜನ್ಮದಲ್ಲೇ!
ಮಿಸಿ ಒಂದಾಗು ಈಗ ಇಲ್ಲೇ!
ಹು ಜನ್ಮದಾತಾ ಪೂರ್ತಿಗಿಲ್ಲೇ!
(ಬ)-ಲ್ಲೆ, ನಿರಂಜನಾದಿತ್ಯನಾಗ್ಬಲ್ಲೇ!!!

ಮೆಚ್ಚುಗೆ ಎಂಬುದೊಂದು ಹುಚ್ಚು! (ಮು)

-ಚ್ಚುವುದದನ್ನು ಹೊಟ್ಟೇಕಿಚ್ಚು! (ತೆ)
-ಗೆಯಬೇಕದನ್ನು ಮೋಕ್ಷೇಚ್ಚು!
ಎಂಟು ಮದದಿಂದೆಲ್ಲಾ ನುಚ್ಚು!
ಬುದ್ಧಿ ಭ್ರಮೆಯಾದಮೇಲ್ಪೆಚ್ಚು! (ಒಂ)
-ದೊಂದಾಗಿ ಜ್ಞಾನ ಬತ್ತಿ ಹಚ್ಚು!
ದುರಾಶೆಗಳನ್ನೆಲ್ಲಾ ಕೊಚ್ಚು!
ಹುಟ್ಟು, ಸಾವಿನ ಕಟ್ಟು ಬಿಚ್ಚು! (ನೆ)
-ಚ್ಚು, ನಿರಂಜನಾದಿತ್ಯನಚ್ಚು!!!

ನಿನಗಿಷ್ಟವಾಗ್ಲಿಲ್ಲ, ಬರ್ಲಿಲ್ಲ!

ನ್ನಿಷ್ಟ ಪೂರ್ತಿಸಲನ್ಯರಿಲ್ಲ! (ತ್ಯಾ)
-ಗಿ, ಯೋಗಿಯಾದ್ರೂ ಗುರಿಸೇರ್ಲಿಲ್ಲ!
(ಸ್ಪ)-ಷ್ಟವಾಗಿ ನೀನೇನೂ ತಿಳಿಸ್ಲಿಲ್ಲ!
ವಾದ, ಭೇದ, ನನ್ನಲ್ಲೇನೂ ಇಲ್ಲ!
(ಆ)-ಗ್ಲಿ ನಿನ್ನಾನಂದದಂತೆಯೇ ಎಲ್ಲಾ!
(ಅ)-ಲ್ಲಗಳೆಯಬೇಡಪ್ತನ ಸೊಲ್ಲ!
ಯಲಾಡಂಬರ ನನ್ನಲ್ಲಿಲ್ಲ!
(ಇ)-ರ್ಲಿ ಜ್ಞಾಪಕದಲ್ಲಿ ಈ ಮಾತೆಲ್ಲಾ!
(ಪು)-ಲ್ಲ ನಿರಂಜನಾದಿತ್ಯನೇ ಎಲ್ಲಾ!!!

ರಾಧೆಗೆ ಶ್ರೀಕೃಷ್ಣನೇ ಬೇಕು!

(ರಾ)-ಧೆಯೇ ಶ್ರೀಕೃಷ್ಣನಿಗೂ ಬೇಕು!
ಗೆಳೆಯರು ಹೀಗಿರಬೇಕು!
ಶ್ರೀರಾಮನಿಗೆ ಸೀತೆ ಬೇಕು!
ಕೃಪೆ ರಾಮನದ್ದಾಕೆಗ್ಬೇಕು!
(ಪೂ)-ಷ್ಣ ಈರೇಳು ಲೋಕಕ್ಕೂ ಬೇಕು!
ನೇಮದಿಂದವನಂತಾಗ್ಬೇಕು!
ಬೇರೇ ನೀ ಜನ್ಮದಲ್ಲಾಗ್ಬೇಕು?
(ಬೇ)-ಕು, ನಿರಂಜನಾದಿತ್ಯಾಗ್ಬೇಕು!!!

ನಿನಗಾಗಿ ಜನ್ಮ ಮುಗಿಸಲೆನ್ನ ಸಂಕಲ್ಪ!

ನಗೆಲ್ಲಾ ಲೋಕದ ಸುಖಸಂಪತ್ತು ಅಲ್ಪ!
ಗಾಯತ್ರೀರೂಪದ ನಿನ್ನ ಧ್ಯಾನ ಕಾಯಕಲ್ಪ!
ಗಿರಿಧರ ಗೋಪಾಲನಿಗಿದೇ ಮೃದುತಲ್ಪ!
ಗತ್ತವನನ್ನರಿಯದೇ ಆಯ್ತು ವಿಕಲ್ಪ!
(ತ)-ನ್ಮಯನಾದಾಗವನಲ್ಲಿ ಹೋಗ್ವುದಾ ವಿಕಲ್ಪ!
ಮುನಿಜನರೆಂಬವರೂ ಅರಿತದ್ದು ಸ್ವಲ್ಪ!
ಗಿರಿಜಾಪತಿಯದ್ದೆಂದೆಂದಿಗೂ ಸತ್ಸಂಕಲ್ಪ!
ತಿ ಪಾರ್ವತೀದೇವ್ಗಿಲ್ಲವನಲ್ಲಿ ವಿಕಲ್ಪ!
(ತ)-ಲೆಮೇಲಿದ್ದರೂ ಗಂಗಾದೇವಿಗಿಲ್ಲ ಕುಕಲ್ಪ!
(ಮ)-ನ್ನಣೆಗೆ ಯೋಗ್ಯ ಇಂಥಾ ಪರಿಶುದ್ಧ ಸಂಕಲ್ಪ!
ಸಂದೇಹಪಡ್ದೇ ಸಾಧಿಸ್ಬೇಕೀ ವಾಕ್ಕಾಯಕಲ್ಪ!
ನಕ ಸಭಾಪತಿಯಾಗನುಗ್ರಹಮಾಳ್ಪ!
(ಕ)-ಲ್ಪನಾತೀತ ನಿರಂಜನಾದಿತ್ಯ ಸಂಕಲ್ಪ!!!

ನನಗೆ ನಿನ್ನ ನೋಡುವಾಸೇ! (ನಿ)

-ನಗೆ ನನ್ನನ್ನು ನೋಡುವಾಸೆ! (ಹೇ)
-ಗೆ ಪೂರ್ತಿಯಾದೀತು ನಮ್ಮಾಸೆ?
ನಿನಗೆ ಇಲ್ಲ ಲಂಚದಾಸೆ!
(ನ)-ನ್ನಲ್ಲಿಲ್ಲ ಬೇಕೆಂದರೂ ಪೈಸೆ!
ನೋಡು! ಹಣ್ಣಾಯ್ತು ಗಡ್ಡ, ಮೀಸೆ!
(ಮಾ)-ಡು ಖಾಲಿ ನಿನ್ನೌಷಧಿ ಶೀಸೆ!
ವಾಸಿಯಾಗ್ಲೆಲ್ಲಾ ಭೋಗದಾಸೆ!
(ಆ)-ಸೆ ನಿರಂಜನಾದಿತ್ಯ ಜೈಸೆ!!!

ಉಸಿರೆಳೆಯುತಿದೆ ನೋಡು!

ಸಿರಿ ಸಹಿತೀ ಬೀಡ ಬಿಡು! (ಮ)
-ರೆಯದೀಗಾದ್ರು ಜಪಮಾಡು! (ವೇ)
-ಳೆ ಕಾದು ಅಪ್ಪನನ್ನು ಕೂಡು!
ಯುಗವಾವುದಾದ್ರೇನು? ಓಡು!
ತಿರುಗಿ ನೋಡ್ಬೇಡ ಈ ನಾಡು! (ಹಿಂ)
-ದೆ, ಮುಂದಿನ ಮಾತನ್ನು ಸುಡು!
ನೋಟ, ಕೂಟಾನಂದ ಸಾಕ್ಮಾಡು! (ಪಾ)
-ಡು, ನಿರಂಜನಾದಿತ್ಯ ಹಾಡು!!!

ಶ್ರೀಪತಿಯೇ ಪರಮ ವೈದ್ಯ!

ರರಡಿಗೋಡಿ ಹಾಳಾದ್ಯಾ!
ತಿನ್ನು ಭಕ್ತಿಯಿಂದ ನೇವೇದ್ಯ! (ತಾ)
-ಯೇ ಕೂಸ ಕೊಲ್ಪುದಾವ ಚೋಧ್ಯ?
ರಮಗುರು ನಿಜಾರಾಧ್ಯ! (ಪ)
-ರರ ದುಃಖಾತನಿಗೆ ವೇದ್ಯ!
ನೋಜಪ ಸುಶ್ರಾವ್ಯ ವಾದ್ಯ!
ವೈಜ್ಞಾನಿಕನರಿಯಾ ವಿದ್ಯಾ!
(ವೇ)-ದ್ಯ ನಿರಂಜನಾದಿತ್ಯ ವೈದ್ಯ!!!

ನೆನೆಯದಿರುವುದೇ ನೆಮ್ಮದಿ!

ನೆನಪು ಅಸ್ಥಿರದ್ದು ದುರ್ವಿಧಿ!
ಮನೆನ್ನುವುದು ಕಾಲಾವಧಿ!
ದಿಗಂಬರಗಿಲ್ಲಾವ ಉಪಾಧಿ!
ರುಚಿ ಅರುಚ್ಯಾತೀತ ಸಮಾಧಿ! (ಸಾ)
-ವು, ಸಂಕಟವಿಲ್ಲದ ಅನಾದಿ!
ದೇಶ, ಕಾಲತೀತ ಜ್ಞಾನನಿಧಿ!
ನೆರೆ ಪವಿತ್ರವಂಥಾಸನ್ನಿಧಿ! (ಬೊ)
-ಮ್ಮ, ವಿಷ್ಣು, ಶಿವರ ಪ್ರತಿನಿಧಿ! (ಆ)
-ದಿ, ನಿರಂಜನಾದಿತ್ಯ ಅನಾದಿ!!!

ಗಂಟು, ಮೂಟೆ ಕಟ್ಟಿದವ್ರೆಲ್ಲಾ ಹೋದ್ರಾ? (ಏ)

-ಟು ತಿಂದವರೆಲ್ಲರೂ ಸತ್ತೇ ಹೋದ್ರಾ?
ಮೂರ್ತಿತ್ರಯರನೆಲ್ಲರೂ ನೋಡಿದ್ರಾ? (ಬೇ)
-ಟೆಯಾಡಿದವರೆಲ್ಲಾ ಹಂದಿ ತಿಂದ್ರಾ?
ಲಾವಿದರೆಲ್ಲಾ ಶ್ರೀಮಂತರಾದ್ರಾ? (ಹು)
-ಟ್ಟಿದ ಎಲ್ಲಾ ಮಕ್ಕಳೂ ಬದುಕಿದ್ರಾ?
ರ್ಪ, ದಂಭದಿಂದ ಕೆಟ್ಟ ದೇವೇಂದ್ರ! (ದೇ)
-ವ್ರೆಲ್ಲಕ್ಕೂ ಕಾರಣವೆಂದ್ಮಾಡು ನಿದ್ರಾ! (ಉ)
-ಲ್ಲಾಸದಿಂದ ಸೇರು ಕ್ಷೀರಸಮುದ್ರ!
ಹೋಗೋದೂ, ಬರೋದೂ ನಿಂತಾಗ ಭದ್ರ! (ನಿ)
-ದ್ರಾ, ನಿರಂಜನಾದಿತ್ಯನಿಗುಪದ್ರ!!!

ನಿನ್ನನ್ನೇ ನೆನೆನೆನೆದು ನಾನತ್ತೆ! (ನ)

-ನ್ನನ್ನೀ ನೆನೆನೆನೆದು ನೀನು ಹೆತ್ತೆ! (ಇ)
-ನ್ನೇನಾದರಿದ್ದರಾಗಲಿ ಇವತ್ತೇ!
ನೆಪ ಮಾತ್ರಕ್ಕಾಗಿ ಶರೀರ ಹೊತ್ತೇ!
ನೆಗಳ್ದಾಳಿ ಬಾಳಿದವರ್ಗೇನಿತ್ತೆ?
ನೆಟ್ಟ ಗಿಡದಿಂದ್ಲೂ ಆಯ್ತು ವಿಪತ್ತೇ!
ನೆನಸಲ್ಲೀಯದ್ದು ಕನಸಲ್ಲಿತ್ತೇ?
ದುಡಿದವನಿಗೆ ಊಟ ಒಪ್ಪತ್ತೇ!
ನಾಮಸ್ಮರಣೆಯಿಂದಾದದ್ದಾಪತ್ತೇ?
ರ, ನಾರಾಯಣರೊಂದೆಂದೆನ್ನುತ್ತೆ! (ಇ)
-ತ್ತೆ ನಿರಂಜನಾದಿತ್ಯಾನಂದ ಮತ್ತೆ!!!

ನಾನ್ಯಾರಿಗೂ ಗುರುವಾಗುವುದು ಬೇಡ! (ನೀ)

-ನ್ಯಾವಾಗ್ಲೂ ನನಗೆ ಗುರುವಾಗ್ದಿರ್ಬೇಡ!
(ವೈ)-ರಿಗಳನ್ನು ತಲೆಯೆತ್ತಲೂ ಬಿಡ್ಬೇಡ!
ಗೂಗೆ, ಕಾಗೆಗಳಂತೆನ್ನ ಇರಿಸ್ಬೇಡ!
ಗುಡಿ ದೇಹವೆಂಬುದ ಪುಸಿ ಮಾಡ್ಬೇಡ!
(ಇ)-ರುತ್ತದ್ರಲ್ಲಿ ಮಹಿಮೆ ತೋರದಿರ್ಬೇಡ!
ವಾಮಾಚಾರದ ಹುಚ್ಚು ಹಿಡಿಸಬೇಡ!
ಗುರಿ ಸಿದ್ಧಿಯನುಗ್ರಹ ಮಾಡ್ದಿರ್ಬೇಡ!
(ಸಾ)-ವು, ನೋವಿನ ಬಾಳೆಂದೆಂದಿಗೂಕೊಡ್ಬೇಡ!
ದುರ್ಜನರನ್ನು ಹತ್ತಿರ ಸೇರಿಸ್ಬೇಡ!
ಬೇರ್ಸಹಿತಹಂಕಾರ ಕೀಳದಿರ್ಬೇಡ!
(ಮೃ)-ಡ ನಿರಂಜನಾದಿತ್ಯನೆಂಬುದು ಧೃಡ!!!

ಅಳೆವುದು, ಸುರಿವುದೆಷ್ಟು ಹೊತ್ತು? (ಬೇ)

-ಳೆ, ಕಾಳುಗಳು ಇರುವಷ್ಟು ಹೊತ್ತು! (ಸಾ)
-ವು ಹೊತ್ತುಕೊಂಡು ಹೋಗುವಷ್ಟು ಹೊತ್ತು!
ದುರ್ವಿದಿಯಾಟ ನಡೆವಷ್ಟು ಹೊತ್ತು!
ಸುದರ್ಶನನು ಬರುವಷ್ಟು ಹೊತ್ತು!
ರಿಪುಗಳಿಗಾಳಾಗುವಷ್ಟು ಹೊತ್ತು! (ಬೇ)
-ವು, ಬೆಲ್ಲ, ಬೇರೆ ಬೇರೆಂದಷ್ಟು ಹೊತ್ತು!
(ತಂ)-ದೆ, ತಾಯಿ, ಯಾರೆಂದರಿವಷ್ಟು ಹೊತ್ತು! (ಅ)
-ಷ್ಟು ಬೇಕು, ಇಷ್ಟು ಬೇಕೆಂಬಷ್ಟು ಹೊತ್ತು!
ಹೊರಗೊಳಗೊಂದೇ ಎಂಬಷ್ಟು ಹೊತ್ತು!
(ಹೊ)-ತ್ತು ನಿರಂಜನಾದಿತ್ಯನ ಸಂಪತ್ತು!!!

ನಾನು ನಿನ್ನ ಹಕ್ಕುದಾರ! (ನೀ)

-ನು ನನ್ನ ಜೀವನಾಧಾರ!
ನಿನ್ನದು ಸುಂದರಾಕಾರ! (ನ)
-ನ್ನದು ಕುರೂಪದಾಕಾರ!
ರಿ, ಹರರ್ನಿನ್ನಾಕಾರ! (ಠ)
-ಕ್ಕು ಮಾನವ ನನ್ನಾಕಾರ!
ದಾರಿ ನಿನ್ನಲ್ಲಿಗೆ ದೂರ! (ದೂ)
-ರ, ನಿರಂಜನಾದಿತ್ಯಾರ!!!

ಸರ್ವಸಿದ್ಧಿ ಗುರು ಕೃಪೆಯಿಂದ! (ಗ)

-ರ್ವ ವಿಲ್ಲದೇ ಸ್ಮರಿಸ್ಬೇಕಾದ್ರಿಂದ!
ಸಿಕ್ಕಿದವ್ಕಾಶ ಬಿಡ್ಬಾರ್ದಾದ್ರಿಂದ! (ವೃ)
-ದ್ಧಿಯಾಗ್ಬೇಕ್ಭಕ್ತಿ ಸತತಾದ್ರಿಂದ!
ಗುರುವಿಗಿದಿರಾಡ್ಬಾರ್ದಾದ್ರಿಂದ! (ಕ)
-ರುಣೆಗೆ ಪಾತ್ರರಾಗ್ವರದ್ರಿಂದ!
ಕೃತಿಯಂತೆ ಮಾತಿರ್ಬೇಕಾದ್ರಿಂದ!
ಪೆರತೊಂದು ಪೂಜೆಬೇಡಾದ್ರಿಂದ! (ಬಾ

)
-ಯಿಂದೆಷ್ಟಾಡಿದ್ರೇನಾಗ್ವುದದ್ರಿಂದ?
ತ್ತ ನಿರಂಜನಾದಿತ್ಯಾನಂದ!!!

ಸದಾ ನಿನ್ನ ಸೇವೆಗವಕಾಶವಿರ್ಲಿ!

ದಾರಿ ನಿನ್ನಿಂದಲೇ ಕಲ್ಪಿಸಲ್ಪಡಲಿ!
ನಿನಗಹಿತವಾದದ್ದು ಆಗದಿರ್ಲಿ! (ನ)
-ನ್ನ, ನಿನ್ಲಲ್ಲಿ ಭಿನ್ನಭಾವವಿಲ್ಲದಿರ್ಲಿ!
ಸೇವಿಸುವಾಹಾರವೂ ಒಂದೇ ಆಗಿರ್ಲಿ!
ವೆಚ್ಚವೆಲ್ಲಾ ನಿನ್ನಿಚ್ಛೆಯಂತೆಯೇ ಆಗ್ಲಿ!
ಡ್ಬಿಡಿ ಎಳ್ಳಷ್ಟೂ ನನ್ನಲಿಲ್ಲದಿರ್ಲಿ!
ರಗುರು ನೀನೆಂಬ ನಂಬಿಗೆ ಇರ್ಲಿ!
ಕಾರ್ಯ ಕೈಗೂಡಿಪ ಭಾರ ನಿನಗಿರ್ಲಿ!
ಕ್ತಿ

ಈರಿ ದುಡಿವ ಶಕ್ತಿ ನನ್ಗಿರ್ಲಿ!
ವಿಕಲ್ಪಕ್ಕೆಡೆ ನಿನ್ನಿಂದ ಆಗದಿರ್ಲಿ! (ಇ)
-ರ್ಲಿ, ನಿರಂಜನಾದಿತ್ಯಾನಂದದಿಂದಿರ್ಲಿ!!!

ಸಿಕ್ಕಬೇಕಾದದ್ದು ಸಿಕ್ಕೇ ಸಿಕ್ಕುವುದು! (ತ)

-ಕ್ಕ ವ್ಯವಸ್ಥೆ ತಾನಾಗಿಯೇ ಆಗುವುದು!
ಬೇಡಿ, ಕಾಡಿ, ಕಾಲ ವ್ಯರ್ಥವಾಗುವುದು!
ಕಾಮಹರನಿಷ್ಟದಂತೆಲ್ಲಾಗುವುದು?
ಶೇಂದ್ರಿಯ ಅವನಾಧೀನವಿಹುದು! (ಕ)
-ದ್ದು ಬಾಳಲಿಕ್ಕೆಡೆಗೊಡದಿರುವುದು!
ಸಿಟ್ಟಿಗೆದ್ದರೆ ಪ್ರಳಯವಾಗುವುದು! (ದಿ)
-ಕ್ಕೇ ತೋಚದೆ ಎಲ್ಲಾ ಭಸ್ಮವಾಗುವುದು!
ಸಿದ್ಧ, ಸಾಧ್ಯರಿಗಿದರರಿವಿಹುದು! (ಠ)
-ಕ್ಕು, ಠವಳಿಗಾಜ್ಞಾನ ಸಿದ್ಧಿಯಾಗದು! (ನಾ)
-ವು, ನೀವೆಂಬಹಂಕಾರಕ್ಕರಿವಾಗದು! (ಇ)
-ದು ನಿರಂಜನಾದಿತ್ಯಾನಂದಕ್ಕಹುದು!!!

ನಿನಗೆ ನಾನಂಟಿಕೊಂಡಿಲ್ಲ!

ನಗೆ ನೀನಂಟಿಕೊಂಡಿಲ್ಲ! (ಬ)
-ಗೆ ಬಗೆ ರೂಪಾದ್ರೂ ಇಬ್ರಿಲ್ಲ!
ನಾ, ನೀನೊಂದೆಂದವ ನಾನಲ್ಲ!
ನಂಬಿಸಿ ವಂಚಿಪುದು ಸಲ್ಲ! (ಭೇ)
-ಟಿ ನೀನು ಕೊಡುತ್ತಲೇ ಇಲ್ಲ!
ಕೊಂಗ, ಮಂಗ ನಾನಾದೆನಲ್ಲಾ! (ಬಿ)
-ಡಿಸೆನ್ನ ಹುಚ್ಚು ನೀನೀಗೆಲ್ಲಾ! (ಬ)
-ಲ್ಲ, ನಿರಂಜನಾದಿತ್ಯನೆಲ್ಲಾ!!!

ನನ್ನ ನೀ ನೋಡು ನಿನ್ನ ಹೃದಯದಲ್ಲಿ!

(ನಿ)-ನ್ನವನು ನಾನೆಂದರಿವಾಗುವುದಲ್ಲಿ!
ನೀಚತನಕ್ಕವಕಾಶವಿಲ್ಲ ಅಲ್ಲಿ!
ನೋಡಿ, ಕೂಡಿ, ಧನ್ಯನಾಗ್ಬೇಕು ನೀನಲ್ಲಿ!
(ಗು)-ಡುಗು, ಮಿಂಚಿಗೆ ಅಂಜಬೇಕಾಗಿಲ್ಲಲ್ಲಿ!
ನಿತ್ಯಾನಂದ ರಾಮರಾಜ್ಯ ಸುಖವಲ್ಲಿ!
(ಉ)-ನ್ನತದಾತ್ಮ ಸಾಕ್ಷಾತ್ಕಾರವಾಗ್ವುದಲ್ಲಿ!
ಹೃತ್ಪೂರ್ವಕ ಸೇವೆಗವಕಾಶವಲ್ಲಿ!
ತ್ತ ನಾನೆಂಬರಿವಾಗುವುದಾಗಲ್ಲಿ!
ಮನು ದಾಸ್ಯಮಾಡುತ್ತಿರುವನಲ್ಲಿ!
ರ್ಪ, ದಂಭವೆಲ್ಲಾ ನೆಲಸಮವಲ್ಲಿ!
(ಇ)-ಲ್ಲಿ ನಿರಂಜನಾದಿತ್ಯ ನಿಲಯದಲ್ಲಿ!!!

ತನ್ನ ದರ್ಶನದಿಂದ ತನಗೆ ಶಾಂತಿ!

(ತ)-ನ್ನನ್ನು ತಾನು ನೋಡದಿದ್ರಿಂದ ಅಶಾಂತಿ!
ತ್ತ ಬೇರೆ, ತಾನು ಬೇರೆಂಬುದು ಭ್ರಾಂತಿ!
(ದ)-ರ್ಶನವೆಂದ್ರೆ ಭೇದವಳಿದ ಪ್ರಶಾಂತಿ!
ಡೆ, ನುಡಿಯೊಂದಾದವನೇ ವೇದಾಂತಿ!
ದಿಂಡಾಗಿ ಬೆಳೆದ ಮಾತ್ರಕ್ಕಲ್ಲ ಕಾಂತಿ!
ಶೇಂದ್ರಿಯಗಳ ಜಯ ಸೂರ್ಯಕಾಂತಿ!
ಪಸ್ಸಿದಕ್ಕಾಗಿ ಎಂಬುದೇ ವಿನಂತಿ!
ರ, ನಾರಿಯರ್ಗೀಗಾನಂದಾ ವದಂತಿ! (ಬ)
-ಗೆ ಬಗೆ ಮಣಿಮಾಲೆಗಾಧಾರ ತಂತಿ!
ಶಾಂಬವಿ ಜೀವಕೋಟಿಗೆಲ್ಲಾ ಆತಂತಿ! (ಗ)
-ತಿ ಶ್ರೀ ನಿರಂಜನಾದಿತ್ಯತಾ ವೇದಾಂತಿ!!!

“ಓ ನನ್ನ ಪ್ರಿಯರಾಮ ”

ನನ್ನ ನೀನು ಹಿಮಾಲಯ ಸೇರಿಸಿದೆ! (ನಿ)

-ನ್ನನ್ನು, ನನು ಶಿವಪಾದ ಸೇರಿಸಿದೆ!
ನೀತಿ, ರೀತಿ, ನಿನ್ನದನ್ನು ನಾಮೆಚ್ಚಿದೆ! (ತ)
-ನು, ಮನ, ಧನ, ನಾನಿನಗೊಪ್ಪಿಸಿದೆ!
ಹಿರಿಮೆ ನನ್ನದನ್ನು ನೀ ಬಣ್ಣಿಸಿದೆ!
ಮಾನವ ಜನ್ಮ ಸಾರ್ಥಕಗೊಳಿಸಿದೆ!
ಕ್ಷ್ಯವರಿತು ಪಟ್ಟಾಭಿಷೇಕಗೈದೆ!
ಜಮಾನನಾಗಿ ಸೇವಕ ನೀನಾದೆ!
ಸೇರಿ ಸದ್ಗುರು ಪಾದ ನೀ ಧನ್ಯನಾದೆ! (ಹ)
-ರಿ, ಹರ, ವಿಧಿ ರೂಪಿಯನ್ನು ನೋಡಿದೆ!
ಸಿರ ಬಾಗಿ ಅವನಿಗೆ ವಂದಿಸಿದೆ! (ತಂ)
-ದೆ ಶ್ರೀ ನಿರಂಜನಾದಿತ್ಯನೆನಗೆಂದೆ!!!

ದೇವರ ಸಾಕ್ಷಾತ್ಕಾರವಾಗ್ಬೇಕು! (ದೇ)

ರೆಂತಿಹ ನೆಂಬರಿವಾಗ್ಬೇಕು! (ನ)
-ರ ಹರಿಯೆಂಬರಿವುಂಟಾಗ್ಬೇಕು!
ಸಾಧನೆಯಿಂದದು ಸಿದ್ಧಿಸ್ಬೇಕು! (ರ)
-ಕ್ಷಾ ಕವಚ ಸದ್ಗುರುವಾಗ್ಬೇಕು! (ತಾ)
-ತ್ಕಾಲಿಕ ಸುಖದಾಸೆ ಬಿಡ್ಬೇಕು!
ಕ್ತಗತ ವಾಸನೆ ಹೋಗ್ಬೇಕು!
ವಾಕ್ಯಾರ್ಥದನುಭವವಾಗ್ಬೇಕು! (ಆ)
-ಗ್ಬೆ

ಕಿದೇ ಜನ್ಮದಲ್ಲೆಲ್ಲಾಗ್ಬೇಕು! (ಪಾ)
-ಕು ನಿರಂಜನಾದಿತ್ಯಮಾಡ್ಬೇಕು!!!

ದೇವರ ಧ್ಯಾನ ದೇವ ತಾನಾಗಲಿಕ್ಕೆ! (ಜೀ)

-ವನೆನಿಸಿ ದುಃಖಿಯಾಗದಿರಲಿಕ್ಕೆ! (ತ)
-ರ ತರ ದಾಸೆಯಿಂದ ಮುಕ್ತನಾಗ್ಲಿಕ್ಕೆ! (ಸಾ)
-ಧ್ಯಾ ಸಾಧ್ಯತೆಯ ಭಯ ತಪ್ಪಿಹೋಗ್ಲಿಕ್ಕೆ!
ಶ್ವರ ಶರೀರವೆಂದರಿವಾಗ್ಲಿಕ್ಕೆ!
ದೇಶ, ವಿದೇಶ ಭ್ರಾಂತಿಯಿಲ್ಲದಾಗ್ಲಿಕ್ಕೆ!
ಸ್ತ್ರಭರಣಾಲಂಕಾರ ಬೇಡಾಗ್ಲಿಕ್ಕೆ!
ತಾತ್ಸಾರ ಯಾರನ್ನೂ ಮಾಡದಿರಲಿಕ್ಕೆ!
ನಾಮ, ರೂಪಕ್ಕಂಟಿಕೊಳ್ಳದಿರಲಿಕ್ಕೆ!
ರಿಷ್ಟ, ಕನಿಷ್ಟ, ಭೇದ ಹೋಗಲಿಕ್ಕೆ! (ಕ)
-ಲಿತ ವಿದ್ಯೆಯೆಲ್ಲಾ ಸಾರ್ಥಕವಾಗ್ಲಿಕ್ಕೆ! (ಅ)
-ಕ್ಕೆ, ಶ್ರೀ ನಿರಂಜನಾದಿತ್ಯ ತಾನಾಗ್ಲಿಕ್ಕೆ!!!

ಮೆರೆಸಿ ಸ್ಮರಿಸಲೊಂದು ಕಾಲ!

(ಮ)-ರೆಸಿ ಮೋಸ ಮಾಡಲೊಂದು ಕಾಲ!
ಸಿರಿಪತಿಗಿದು ಲೀಲಾ ಜಾಲ!
(ವಿ)-ಸ್ಮಯವೆಮಗವನದೀ ಲೀಲಾ!
(ಅ)-ರಿತು ಪರಮಾರ್ಥಿಯಾಗ್ಬೇಕ್ಬಾಲ!
ತತವಿರಬೇಕು ಸುಶೀಲ!
(ಪೋ)-ಲೊಂಬತ್ತು ದ್ವಾರದಿಂದೆಲ್ಲಾ ಬಲ!
ದುರ್ವ್ರಯವಾಗ್ಬಾರ್ದು ತಪೋಬಲ!
ಕಾಮಕ್ಷಿಗೆ ಕಾಮಾರಿಯ ಬಲ! (ಬಾ)
-ಲ ನಿರಂಜನಾದಿತ್ಯಗಾ ಬಲ!!!

ತಳಮಳಗೊಳಬೇಡ! (ತಾ)

-ಳ, ತಂಬೂರಿ, ಬಿಡಬೇಡ!
ದ, ಮತ್ಸರ, ಪಡ್ಬೇಡ! (ಥ)
-ಳಕಿನ ಬಾಳು ಬಾಳ್ಬೇಡ!
ಗೊಡವೆ ಅನ್ಯರದ್ಬೇಡ! (ಕ)
-ಳವು, ದರೋಡೆ, ಮಾಡ್ಬೇಡ!
ಬೇಯದ ಅನ್ನ ನೀಡ್ಬೇಡ! (ನೀ)
-ಡ, ನಿರಂಜನಾದಿತ್ಯಾಡ!!!

ಭರ್ತಿಮಾಡಿ ಬಾಯಿ ಮುಚ್ಚು! (ಮೂ)

-ರ್ತಿ ನೋಡಿ ಸೇವೆಗೆ ಹಚ್ಚು!
ಮಾಡಿ, ನೋಡಿ, ಮನ ಮೆಚ್ಚು! (ಕೂ)
-ಡಿ, ಆಡಿ, ಬಿಡ್ಹೊಟ್ಟೆಕಿಚ್ಚು!
ಬಾಳಿ, ಆಳಿ, ಬಿಡು ಹುಚ್ಚು! (ತಾ)
-ಯಿ ಋಣ ಎಲ್ಲಕ್ಕೂ ಹೆಚ್ಚು!
ಮುಕ್ತಿ ಸುಖಕ್ಕಾಸೆ ಕೊಚ್ಚು! (ಮೆ)
-ಚ್ಚು, ನಿರಂಜನಾದಿತ್ಯಚ್ಚು!!!

ನಿನ್ನ ನೆನೆ-ನೆನೆದು ನಾ ಹಣ್ಣಾದೆ! (ಅ)

-ನ್ನ ಪಾನ, ಬಿಟ್ಟೀಗ ನಾ ಸಣ್ಣಗಾದೆ!
ನೆಪಮಾತ್ರಕ್ಕೆ ಜೀವ ಉಳಿದಿದೆ!
ನೆರೆ ದುಃಖದಿಂದ ಕಾಲ ಸಾಗ್ತಿದೆ!
ನೆಲ, ಹೊಲವೆಲ್ಲಾ ತೊರೆದಾಗಿದೆ! (ಮ)
-ನೆ, ಮಠವೆಲ್ಲೆಡೆಯಲ್ಲೂ ಆಗಿದೆ!
ದುಸ್ಸಂಗದಿಂದ ದೂರವಿದ್ದಾಗಿದೆ!
ನಾಮಸ್ಮರಣೆ ಸಾಧನೆಯಾಗಿದೆ!
ಠಯೋಗವನ್ನೆಂದೋ ಬಿಟ್ಟಾಗಿದೆ!
(ಹೆ)-ಣ್ಣಾಗಿ, ಗಂಡಾಗಿ, ನಾ ನಿನ್ನ ನೋಡಿದೆ!
(ಬಂ)-ದೆ ನಿರಂಜನಾದಿತ್ಯನಾಗೀಗೆಂದೆ!!!

ಮರೆಯದಿರೇ ಮಾಧವನಾ! (ಪೊ)

-ರೆವ ನಿನ್ನ ಪ್ರಿಯಕರನಾ!
ಮನಿಗೆ ತಂದೆಯಾದವನಾ!
ದಿವ್ಯ-ಜ್ಯೋತಿ ಸ್ವರೂಪಾತ್ಮನಾ!
ರೇಚಕ, ಪೂರಕಾತೀತನಾ!
ಮಾತಾ, ಪಿತ, ತಾನಾದವನಾ!
ರ್ಮ, ಕರ್ಮ, ವರಿತವನಾ!
ರ್ಣಾ, ಶ್ರಮಭೇದಾತೀತನಾ!
ನಾ, ನಿರಂಜನಾದಿತ್ಯಾತ್ಮನಾ!!!

ಮರೆಯಲಾರೆ ನಾ ನಿನ್ನನಯ್ಯಾ! (ಇ)

-ರೆ ನರೆಕ್ಷಣ ನಿನ್ನ ಬಿಟ್ಟಯ್ಯಾ!
ಜ್ಞಪಶು ನಾನು ನಿನಗಯ್ಯಾ!
ಲಾಲನೆ, ಪಾಲನೆ, ನಿನ್ನಿಂದಯ್ಯಾ! (ಕ)
-ರೆಸಿಕೊಳ್ಳೆನ್ನ ನಿನ್ನಡಿಗಯ್ಯಾ!
ನಾಮಬಲ ನಿನ್ನದೆನಗಯ್ಯಾ!
ನಿಶ್ಚಲ ಭಕ್ತಿ ಕರುಣಿಸಯ್ಯಾ! (ನಿ)
-ನ್ನಲ್ಲೆನ್ನ ಬೆರೆಸಿಕೊಂಡಿರಯ್ಯಾ!
ನಗಿನ್ನೇನೇನೂ ಬೇಡವಯ್ಯಾ!
(ಅ)-ಯ್ಯಾ, ನಿರಂಜನಾದಿತ್ಯನೆನ್ನಯ್ಯಾ!!!

ದುಡಿಯುವವನು ಗೊಲ್ಲ!

(ದು)-ಡಿಯುವವ ಹಾಲ ಮಲ್ಲ!
ಯುಗ, ಯುಗದಿಂದಿದೆಲ್ಲಾ!
ರ್ತನೆ ದೇಶದಲ್ಲೆಲ್ಲಾ!
ರ್ಣ ಭೇದವಿದಕ್ಕಿಲ್ಲ!
(ಅ)-ನುಭವಿಸ್ಲಾನಂದವೆಲ್ಲಾ!
ಗೊಲ್ಲ, ಮಲ್ಲ, ಭೇದ ಸಲ್ಲ!
(ಬ)-ಲ್ಲ ನಿರಂಜನಾದಿತ್ಯೆಲ್ಲಾ!!!

ಭೋಗ ತ್ಯಾಗದಿಂದಾಗು ಯೋಗಿ!

ಣಪತಿಯಾಗು ಹಾಗಾಗಿ!
(ನಿ)-ತ್ಯಾನಂದಾನುಭವಿ ವಿರಾಗಿ!
(ಗ)-ಗನ ಸದೃಶಮನ ಮಾಗಿ!
ದಿಂಡೆಯರೊಡಗೂಡಿ ರೋಗಿ!
ದಾಸರ ದಾಸರು ನೀವಾಗಿ!
ಗುರುಕೃಪೆಗೆ ಪಾತ್ರರಾಗಿ!
ಯೋನಿಜನೇಕಾಗ್ಬೇಕು ಭೋಗಿ?
(ಆ)-ಗಿ, ಶ್ರೀ ನಿರಂಜನಾದಿತ್ಯಾಗಿ!!!

ಬುಗುರಿ ತಿರುಗುತಿದೆ ನೋಡು!

ತಿಗೆಡದಂತೆ ಒಡನಾಡು!
(ಅ)-ರಿಯದಿಹುದದು ತನ್ನ ಪಾಡು!
ತಿದ್ದು ನೀನು ದಾರಿ ನೇರಮಾಡು!
(ಕ)-ರುಣೆಯಿಂದ ತೋರದರ ಬೀಡು!
ಗುರಿಯಲ್ಲತಾನೆ ಸುಡುಗಾಡು?
ತಿಳಿವ ನಿನ್ನಂತದಕ್ಕೂ ನೀನು!
(ನಿಂ)-ದೆಗೀಡಾಗದಾಟವನ್ನೇ ಹೂಡು!
ನೋಡಿದ್ರದರಾಟ ನಗೆಗೇಡು!
(ಮಾ)-ಡು, ನಿರಂಜನಾದಿತ್ಯನಂತಾಡು!!!

ನೀನೆನ್ನ ಮರೆಯ ಬಲ್ಲೆ! (ನಾ)

-ನೆನಿತ್ತು ಮರೆಯಬಲ್ಲೆ! (ನ)
-ನ್ನ ಕರ್ತವ್ಯ ಬಿಡಲೊಲ್ಲೆ!
ದಾಂಧಳಾಗ್ನೀನಿರಲ್ಲೇ! (ಕ)
-ರೆದು ಸುಸ್ತಾಗ್ವೆನಾನಿಲ್ಲೇ! (ಕಾ)
-ಯವಸ್ಥಿರವೆಂದ್ನಾ ಬಲ್ಲೆ!
ಲ್ಲೆ! ನೀನಲ್ಲೇ, ನಾನಿಲ್ಲೇ! (ಇ)
-ಲ್ಲೆ

ನಿರಂಜನಾದಿತ್ಯೆಲ್ಲೆ!!!

ನನ್ನ ಯೋಗ ನಿನ್ನ ಭೋಗ!

(ಉ)-ನ್ನತಿಗೀಮಾರ್ಗ ಸರಾಗ!
ಯೋಚನೆ ತಟಸ್ಥ ಈಗ! (ರಂ)
-ಗ, ಸಾರಂಗರೀಗೇಕಾಂಗ!
ನಿನಗಿಷ್ಟ ಹೀಗೀಗಾಗ! (ನ)
-ನ್ನ ಅಂತರಂಗ್ಬಹಿರಂಗ! (ಶಂ)
-ಭೋ ಮಹಾದೇವ ಸತ್ಸಂಗ!
(ಲಿಂ)-ಗ ನಿರಂಜನಾದಿತ್ಯಾಂಗ!!!

ನಿತ್ಯಾನಂದಾನುಗ್ರಹವಗುತ್ತಲಿದೆ! (ಸ)

-ತಾ



ಸತ್ಯದರಿವೆನಗಾಗುತ್ತಲಿದೆ!
ನಂಬಿಗೆ ದಿನೇ ದಿನೇ ಹೆಚ್ಚುತ್ತಲಿದೆ!
ದಾರಿ ಸರಿಯೆಂಬ ಧೈರ್ಯ ಬರುತ್ತಿದೆ!
(ತ)-ನು, ಮನ, ಧನ, ಸಮರ್ಪಣೆಯಾಗಿದೆ!
ಗ್ರಹಚಾರದ ಭ್ರಾಂತಿ ತಪ್ಪಿಹೋಗಿದೆ!
ಗಲಿರುಳಾತ್ಮ ಚಿಂತನೆ ಸಾಗಿದೆ!
ವಾದ, ವಿವಾದಕ್ಕಿಸ್ಟವಿಲ್ಲದಾಗಿದೆ!
ಗುಡಿ ಈ ಶರೀರವೆಂಬರಿವಾಗಿದೆ!
(ಎ)-ತ್ತನೋಡಿದರೂ ತತ್ವ ತುಂಬಿದಂತಿದೆ!
(ಬ)-ಲಿತು, ಹಣ್ಣಾಗಿ ನೈವೇದ್ಯವಾಗಲಿದೆ!
(ಎ)-ದೆ ವಿಶಾಲ ನಿರಂಜನಾದಿತ್ಯಗಿದೆ!!!

ನಿರ್ಯೋಚನೆ ಸಹಜ ಸ್ಥಿತಿ!

(ಕಾ)-ರ್ಯೋತ್ಸಾಹ ಅಸಹಜ ಸ್ಥಿತಿ!
(ಕಾಂ)-ಚನ ಕ್ಕಾಶಿಸುವುದೀ ಸ್ಥಿತಿ!
(ಮ)-ನೆ, ಮಠ, ಕಟ್ಟುವುದೀ ಸ್ಥಿತಿ!
ತ್ಯವನ್ನರಿಯದೀ ಸ್ಥಿತಿ!
ಗರಣದಲ್ಲಂತ್ಯಾ ಸ್ಥಿತಿ!
ನನ, ಮರಣಕ್ಕೀ ಸ್ಥಿತಿ!
ಸ್ಥಿತ ಪ್ರಜ್ಞೆಯೇ ಆತ್ಮ ಸ್ಥಿತಿ!
(ಇ)-ತಿ ನಿರಂಜನಾದಿತ್ಯ ಸ್ಥಿತಿ!!!

ಮನಸು ತಾಳಿದ ರೂಪಕ್ಕೆ ಮಿತಿಯೇ ಇಲ್ಲ!

(ಮ)-ನಸು ಬಾಳಿ, ಆಳಿದ ರೂಪಕ್ಕೂ ಮಿತಿ ಇಲ್ಲ!
ಸುಟ್ಟು ಬೂದಿಮಾಡಿದ ರೂಪಕ್ಕೂ ಮಿತಿ ಇಲ್ಲ!
ತಾಯಿ, ತಂದೆ, ಬಂಧು, ಬಳಗಕ್ಕೂ ಮಿತಿ ಇಲ್ಲ!
(ಹೇ)-ಳಿದ, ಕೇಳಿದ, ರೂಪಕ್ಕಂತೂ ಮಿತಿಯೇ ಇಲ್ಲ!
ರ್ಶನ ಸತ್ತಮೇಲಾರೂಪ ಮತ್ತೆಕೊಟ್ಟಿಲ್ಲ!
ರೂಪ, ರೇಖೆಗಳನಂಬಿ ಕೆಡಬೇಕಾಗಿಲ್ಲ!
ರಮಾತ್ಮ ವ್ಯಾಪಿಸದ ಜಾಗವೆಲ್ಲೂ ಇಲ್ಲ!
(ಅ)-ಕ್ಕೆ ಈ ದಿವ್ಯಜ್ಞಾನ ಜಗದ ಜೀವರಿಗೆಲ್ಲಾ!
ಮಿಥ್ಯಾ ಮೋಹದಿಂದ ಬಿಡುಗಡೆಯಾಗಿರಲೆಲ್ಲಾ!
ತಿತಿಕ್ಷಾಭ್ಯಾಸದಿಂದಿದ ಸಾಧಿಸಬೇಕೆಲ್ಲಾ!
(ತಾ)-ಯೇ, ಪರಮೇಶ್ವರಿ! ಕಾಪಾಡು ಮಕ್ಕಳನ್ನೆಲ್ಲಾ!
ನ್ಯಾರೂ ಗತಿ, ಮತಿ, ದಾತರು ನಮಗಿಲ್ಲ!
(ನ)-ಲ್ಲ ನಿರಂಜನಾದಿತ್ಯ ಶಿವನೆಂಬೆ! ಸುಳ್ಳಲ್ಲ!!!

ವಿರಕ್ತನುಪಕಾರ ಅಗೋಚರ!

ಮಾರಮಣನಾಗಿ ಲೋಕೋದ್ಧಾರ!
(ಭ)-ಕ್ತವತ್ಸಲನೆನಿಸಿ ದೀನೋದ್ಧಾರ!
ನುಡಿ, ನಡೆಗಾದರ್ಶ ರಘುವೀರ!
ರಶುರಾಮ ವೀರ ತಪೋವರ!
ಕಾಮಹರಶಂಕರ ಸರ್ವೇಶ್ವರ!
ಜಕನ ಕೊಂದ ಯಾದವೇಶ್ವರ!
ನುಪಮ ಭಕ್ತ ವಾಯುಕುಮಾರ!
ಗೋಸೇವಾಗ್ರೇಸರ ನಂದಕುಮಾರ!
ರಾಚರ ವ್ಯಾಪಕ ಗುರುವರ!
(ವ)-ರದ ನಿರಂಜನಾದಿತ್ಯ ಶ್ರೀಧರ!!!

ತ್ಯಾಗಿ ಭೋಗಿಯಾಗಿ ಇರಲಾರ!

(ಭೋ)-ಗಿ ತ್ಯಾಗಿಯಾಗಿಯೂ ಇರಲಾರ!
ಭೋದ ವೀರ್ವರ್ದಜಗಜಾಂತರ!
ಗಿರಿಧರಗಪಾರ ಸಂಸಾರ!
ಯಾದವಗವರಿಂದಲಂಕಾರ!
(ಯೋ)-ಗಿ ರಾಜರಾಜೇಶ್ವರ ಶಂಕರ!
ವನ ರೀತಿ, ನೀತಿ, ಓಂಕಾರ!
ಮೇಶ, ಉಮೇಶ, ಪರಾತ್ಪರ!
(ಲೀ)-ಲಾನುಸಾರ ಆಚಾರ, ವಿಚಾರ!
(ವಿ)-ರಕ್ತ ನಿರಂಜನಾದಿತ್ಯಾಕಾರ!!!

ನಿನಗಾಯ್ತು ಭುಕ್ತಿ, ನನಗಾಯ್ತು ಮುಕ್ತಿ!

ಶ್ವರೈಹಿಕಸುಖ ನಿನಗಾಸಕ್ತಿ!
ಗಾಡಿ ಓಡಿಸಲಿಕ್ಕಾಗ್ಯೇನೇನೋಯುಕ್ತಿ!
(ಬಾ)-ಯ್ತುಟಿಯಾಟವೆಲ್ಲಾ ಇರುವಾಗ ಶಕ್ತಿ!
ಭುಜ ಬಲಶಾಲಿಗೊಪ್ಪದು ವಿರಕ್ತಿ!
(ಭ)-ಕ್ತಿ, ಮುಕ್ತಿದಾಯಕರಾಮನೆಂದಾರ್ಯೋಕ್ತಿ!
ರ, ನಾಡಿಗಾನಾಮಾಮೃತಾತ್ಮ ಶಕ್ತಿ!
ಡೆ, ನುಡಿಯಲ್ಲಿ ಕಾಣಬೇಕು ಭಕ್ತಿ!
ಗಾಳಹಾಕಿ, ಶಾಸ್ತ್ರ ಹೇಳ್ವುದಲ್ಲ ಭಕ್ತಿ!
(ಆ)-ಯ್ತು ಪತನವಿದರಿಂದೆಂಬಳು ಶಕ್ತಿ!
ಮುನಿಜನರಿಗಾಪ್ತಳಾ ಪರಾಶಕ್ತಿ!
(ಶ)-ಕ್ತಿ ನಿರಂಜನಾದಿತ್ಯಗಾ ಶಿವಶಕ್ತಿ!!!

ಬಂದಾಗ ಒಂದಾಗಿರಬೇಕೆಂಬೆ!

(ಒಂ)-ದಾಗಿರುವಾಗ ಬರಬೇಕೆಂಬೆ!
(ಯೋ)-ಗ ಗಮನಾಗಮನಾತೀತೆಂಬೆ!
ಒಂದಾಗ್ದಿದ್ದರೆ ಜಗಳವೆಂಬೆ!
ದಾರಿ ಬೇರಾದ್ರೂ ಗುರಿ ಒಂದೆಂಬೆ!
ಗಿರಿಧಾರಿ ಯೋಗೇಶ್ವರನೆಂಬೆ!
ಘುರಾಮ ಧರ್ಮ ಕರ್ಮಿಯೆಂಬೆ!
ಬೇಕೆಲ್ಲಕ್ಕೂ ಗುರುಕೃಪೆಯೆಂಬೆ!
(ಏ)-ಕೆಂಬ ಗಿಹ, ಪರವಿಲ್ಲವೆಂಬೆ!
(ಅಂ)-ಬೆ, ನಿರಂಜನಾದಿತ್ಯ ಮೂಕಾಂಬೆ!!!

ಅಗಲಿರಲಾರೆನು ನಾ!

(ಗ)-ಗನ ಮಣಿಯದವನಾ!
(ಒ)-ಲಿದೆನ್ನ ಪಾಲಿಸುವನಾ!
ವಿ ಕುಲ ಲಲಾಮನಾ!
ಲಾವಣ್ಯಮಯ ರೂಪನಾ!
(ಬೆ)-ರೆತೆನ್ನೊಳಗಿರ್ಪವನಾ!
(ಅ)-ನುಪಮಾದ್ವೈತ ಶಿವನಾ!
ನಾ, ನಿರಂಜನಾದಿತ್ಯನಾ!!!

ಒಂದಾದವರ ಸಂದು ಮುರಿಯದಿರ್ಲಿ!

ದಾಶರಥಿ ತಾನಾಗಿ ಬಾಳು ಬೆಳಗ್ಲಿ!
ತ್ತ ಗುರುವಿನ ಕೃಪೆಯಿದಕ್ಕಾಗ್ಲಿ!
ನವಾಸದಲ್ಲೂ ಬೇರೆಯಾಗದಿರ್ಲಿ!
ಕ್ಕಸರ ಸೊಕ್ಕಮುರಿಯುವಂತಾಗ್ಲಿ!
ಸಂಶಯಕ್ಕವಕಾಶವಾಗದಂತಾಗ್ಲಿ!
ದುರದೃಷ್ಟವೆಂಬ ಮಾತೇ ಬರದಿರ್ಲಿ!
ಮುನಿಪೋತ್ತಮರ ಮಾತು ಸತ್ಯವಾಗ್ಲಿ!
ರಿಸಿ ಪತಂಜಲೀಯೋಗ ಸಿದ್ಧಿಯಾಗ್ಲಿ!
ದುಪನ ವಿಶ್ವರೂಪ ಕಾಣುತ್ತಿರ್ಲಿ!
ದಿವ್ಯ ಜ್ಞಾನಾನಂದಾನುಭವವುಂಟಾಗ್ಲಿ!
(ಇ)-ರ್ಲಿ ನಿರಂಜನಾದಿತ್ಯನಲ್ಲೊಂದಾಗಿರ್ಲಿ!!!

ಯಾರಿಗೇನಾಗ್ಬೇಕ್ನನ್ನಿಂದೆಂಬುದ್ನಾ ಬಲ್ಲೆ!

ರಿಪುಗಳಿಷ್ಟಕ್ಕೆ ತಲೆದೂಗಲೊಲ್ಲೆ!
ಗೇಲೆ, ಬೇಲಿಗಳ ದಾಟಿ ನಾನಿರ್ಬಲ್ಲೆ!
ನಾನಾರೆಂಬರಿವನ್ನು ಮರೆಯಲೊಲ್ಲೆ!
(ಹೋ)-ಗ್ಬೇಕ್ಬರ್ಬೇಕೆಂಬ ಚಪಲ ಬಿಡಬಲ್ಲೆ!
(ಬೇ)-ಕ್ನನಗವನ ಸಾಕ್ಷಾತ್ಕಾರವೀಗಿಲ್ಲೇ!
(ನಿ)-ನ್ನಿಂಗಿತವೇನೆಂದು ಚೆನ್ನಾಗಿ ನಾ ಬಲ್ಲೆ!
(ಎಂ)-ದೆಂದಿಗೂ ಪರನಿಂದೆ ನಾ ಮಾಡಲೊಲ್ಲೆ!
ಬುಗುರಿಯಾಟವೆಷ್ಟುಹೊತ್ತೆಂದ್ನಾಬಲ್ಲೆ!
(ಬಂ)-ದ್ನಾ, ಹೋದ್ನಾ ಎಂಬ ಕುಚೋದ್ಯನಾ ಮಾಡ್ಲೊಲ್ಲೆ!
ರ್ವುದು, ಹೋಗ್ವುದು, ದೈವೇಚ್ಛೆಯೆಂದ್ಬಲ್ಲೆ!
(ಬ)-ಲ್ಲೆ, ನಿರಂಜನಾದಿತ್ಯ ಗತಿಯೆಂದ್ಬಲ್ಲೆ!!!

ನೀನೇಕಿಷ್ಟು ಪ್ರೀತಿ ನನ್ನಲ್ಲಿಟ್ಟಿ?

(ನಾ)-ನೇ ನೀನೆಂದು ಭರವಸೆ ಕೊಟ್ಟಿ!
ಕಿರಿಯ ನೀನಾದರೇನೆಂದ್ಬಿಟ್ಟಿ!
(ಇ)-ಷ್ಟು ವಿಶಾಲ ನನ್ನ ಗುರುದೃಷ್ಟಿ!
(ಸು)-ಪ್ರೀತ ನಿನ್ನ ಸೇವೆಯಿಂದಂದ್ಬಿಟ್ಟಿ!
ತಿಪ್ಪೆಯಿಂದೆನ್ನ ಮೇಲೆತ್ತಿಬಿಟ್ಟಿ!
ಶ್ವರವಿದೆಂಬ ಜ್ಞಾನಕೊಟ್ಟಿ!
(ಅ)-ನ್ನ, ಬಟ್ಟೆ, ಕೂತಲ್ಲಿಗೇ ತಂದಿಟ್ಟಿ!
(ಅ)-ಲ್ಲಿಲ್ಲಿ ಸುತ್ತುವುದು ತಪ್ಪಿಸ್ಬಿಟ್ಟಿ!
(ಇ)-ಟ್ಟಿ ನಿರಂಜನಾದಿತ್ಯನಾಗಿಟ್ಟಿ!!!

ನಂಬುಗೆಯೇ ಕರ್ಮಕ್ಕೆ ಕಾರಣ!

ಬುಧ ಜನರಿಂದ ನಿರೂಪಣ!
(ಬ)-ಗೆ ಬಗೆಯಿಂದದು ಪ್ರಕಟಣ!
(ತಾ)-ಯೇ ಪರದೈವವೆಂಬ ಘೋಷಣ!
ರ್ತವ್ಯವಳ ನಾಮಸ್ಮರಣ!
(ಚ)-ರ್ಮದ ಗೊಂಬೆ ಅವ್ಳಲ್ಲೆಂಬಂಬೋಣ!
(ಅ)-ಕ್ಕೆ ಅವಳಿಂದೆಲ್ಲರ ಕಲ್ಯಾಣ!
ಕಾಮಾಕ್ಷಿಯೆಂಬುದವ್ಳೊಂದು ಗುಣ!
(ಸು)-ರ ನರಾದಿಗ್ಳವ್ಳ ಭಕ್ತ ಗಣ!
(ಋ)-ಣ, ನಿರಂಜನಾದಿತ್ಯ ಕಿರಣ!!!

ಆವ ಜನ್ಮದ ಸುಕೃತ ಫಲವಿದೋ!

ರ ಗುರು ಮಹಿಮೇಯರಿವಾಗದೋ!
ನ್ಮವೆಷ್ಟವನಿಗಾಗಿ ಕಳೆದುದೋ!
(ತ)-ನ್ಮಯತೆಯೆಂದನುಗ್ರಹವಾಗುವುದೋ!
ತ್ತನ ಆಜ್ಞೆ ಎಂದಿಗೆ ಬರುವುದೋ!
ಸುಖ, ಶಾಂತಿ ಅದರಿಂದಾಗ್ಬೇಕಿಹುದು!
ಕೃಪೆಗಾಗಿ ಪ್ರಾರ್ಥಿಸುತ್ತಿರುತ್ತಿಹುದು!
ಪ್ಪುಗಳಿಗೆ ಕ್ಷಮೆ ಬೇಡುತ್ತಿಹುದು!
ಒನೆ ಲಿನೆ ಮಿ

ಸಿ




ಭ್ಯಕ್ಕೆ ಕಾಲ ಕಾಯಬೇಕಾಗಿಹುದು!
ವಿಕಲ್ಪ, ಸಂಕಲ್ಪವಿಲ್ಲದಂತಿಹುದು!
ದೋಷ ನಿರಂಜನಾದಿತ್ಯಗೇನಿಹುದು???

ತಗೊಳ್ಳಿ ಬಿಸಿ ಬಿಸಿ ರೊಟ್ಟಿ!

ಗೊಲ್ಲಕೃಷ್ಣನ ಮನೇ ರೊಟ್ಟಿ!
(ಬೆ)-ಳ್ಳಿ ತಟ್ಟೆಯೊಳಗಿಟ್ಟ ರೊಟ್ಟಿ!
ಬಿಟ್ಟಿ ಕೊಡುತ್ತಿಹರೀ ರೊಟ್ಟಿ!
ಸಿಕ್ಕದು ಎಲ್ಲರಿಗೀ ರೊಟ್ಟಿ!
ಬಿಟ್ಟರೀಗ ಕೆಟ್ಟಿ, ಈ ರೊಟ್ಟಿ!
ಸಿಹಿಯಾಗಿಹಾ ಬೆಣ್ಣೆ ರೊಟ್ಟಿ!
ರೊಕ್ಕಾಕೊಟ್ರೂ ಸಿಕ್ಕದಾ ರೊಟ್ಟಿ!
(ಗ)-ಟ್ಟಿ ನಿರಂಜನಾದಿತ್ಯ ಜಟ್ಟಿ!!!

ಒಳ ಹೊರಗಿರುವೆನ್ನ ಪ್ರಿಯ ಸ್ವಾಮಿ! (ಅ)

-ಳತೆಯಾಗದೇ ನನ್ನಾಳವಿನ್ನೂ ಸ್ವಾಮಿ?
ಹೊತ್ತು, ಹೆತ್ತು, ಕತ್ತುಹಿಸುಕ್ಬೇಡ ಸ್ವಾಮಿ! (ಪೆ)
-ರರಾರ್ಗತಿ ನೀನಲ್ಲದೆನಗೆ ಸ್ವಾಮಿ! (ಯೋ)
-ಗಿಯ ಸಹಭಾಗಿ ನಾನಲ್ಲವೇ ಸ್ವಾಮಿ! (ಕ)
-ರುಣಾ ಕವಚ ತೊಡಿಸೆನಗೆ ಸ್ವಾಮಿ! (ಸ)
-ವೆಸಿದೆನೀಕಾಯ ನಿನಗಾಗಿ ಸ್ವಾಮಿ! (ನಿ)
-ನ್ನದೆಂದಿದನ್ನುದ್ಧರಿಸೋ ಗುರು ಸ್ವಾಮಿ!
ಪ್ರಿಯಾಪ್ರಿಯದರಿವೆನಗಿಲ್ಲ ಸ್ವಾಮಿ!
ಜಮಾನ, ನಿನ್ನಾಧೀನವೆಲ್ಲಾ ಸ್ವಾಮಿ!
ಸ್ವಾರ್ಥವೆನ್ನಲ್ಲೇನಿಹುದು? ಹೇಳೋ ಸ್ವಾಮಿ!


ರಾ ಸ್ವಾಮಿ ನಿರಂಜನಾದಿತ್ಯ ಸ್ವಾಮಿ!!!

ಒಂಟಿಯಾಗಿ ನಾನಿರಲಾರೆ!

(ಜಂ)-ಟಿಯಾಗ್ದೆಯೂ ಇರದಿರ್ಲಾರೆ!
ಯಾರ ತಂಟೆಗೂ ಹೋಗಲಾರೆ!
(ಯೋ)-ಗಿ ನಾನೆಂದು ಹೇಳ್ಕೊಳ್ಳಲಾರೆ!
ನಾಶವಾಗ್ವುದಕ್ಕಾಶಿಸ್ಲಾರೆ!
ನಿತ್ಯಾನಂದಕ್ಕುಪೇಕ್ಷಿಸ್ಲಾರೆ!
ಸ ವಿರಸವಾಗಿರ್ಲಾರೆ!
ಲಾವಣ್ಯಕ್ಕೆ ಸೋತು ಕೆಡ್ಲಾರೆ!
(ಹೊ)-ರೆ ನಿರಂಜನಾದಿತ್ಯಗಿರೆ!!!

ನೋಡುವ ಕಣ್ಣು ಮಂಜಾಯಿತು!

(ಹಾ)-ಡುವ ಗಂಟ್ಲು ಮುಚ್ಚಿಹೋಯಿತು!
ರ್ಣಿಪ ಬುದ್ಧಿ ಮಂಕಾಯಿತು!
ಷ್ಟಕ್ಕಂತ್ಯವಿಲ್ಲದಾಯಿತು!
(ಉ)-ಣ್ಣುವನ್ನದ ರುಚಿ ಕೆಟ್ಟಿತು!
(ಹೋಯಿತು)
ಮಂಡೆಯೆಲ್ಲಾ ಬಿಳುಪಾಯಿತು!
ಜಾಗರಣೋಪವಾಸಾಯಿತು!
(ಆ)-ಯಿತು, ನಿರಾಶೆಯುಂಟಾಯಿತು!
(ಅಂ)-ತು ನಿರಂಜನಾದಿತ್ಯಾಯಿತು!!!

ವಣಾಶ್ರಮ ಧರ್ಮಿಯಲ್ಲನಾನು! (ಸ್ವ)

ರ್ಣಾಕ್ಷರದಲ್ಲಿ ಬರೆದಿಡ್ನೀನು! (ಆ)
-ಶ್ರಮವೆಲ್ಲಾದ್ರಲ್ಲಿರುವೆ ನಾನು!
ನನ ಮಾಡೀ ಮಾತನ್ನು ನೀನು!
ರ್ಮ ಕರ್ಮಕ್ಕೆಲ್ಲಾಧಾರ ನಾನು!
(ಕ)-ರ್ಮಿಯಾಗ್ನಿಷ್ಕರ್ಮ ಸಿದ್ಧನಾಗ್ನೀನು!
ದುಪತಿಯ ಗೀತಾತ್ಮ ನಾನು! (ಇ)
-ಲ್ಲದಸಲ್ಲದ ವ್ಯವಹಾರಿ ನೀನು!
ನಾಶರಹಿತೇಕನಾಥ ನಾನು! (ನೀ)
-ನು ನಿರಂಜನಾದಿತ್ಯ ಸೂನು!!!

ಸಾವಿತ್ರಿಯಾದರ್ಶ ವಧುವಿಗಿರಲಿ!

ವಿಧಿಯ ಜಯಿಸುವ ಧೈರ್ಯವಿರಲಿ! (ಅ)
-ತ್ರಿ ಸತಿಯಂಥಾ ಪಾತಿವ್ರತ್ಯವಿರಲಿ!
ಯಾದವೇಂದ್ರನ ರಾಧೆಯಂತೆ ಇರಲಿ!
ಮಯಂತಿಯ ಏಕನಿಷ್ಠೆ ಇರಲಿ! (ದ)
-ರ್ಶನಕ್ಕಾಗಿ

ಈರಾಳಂತೆ ಹುಚ್ಚಾಗಲಿ!
ರಲಕ್ಷ್ಮಿಯಾಗಿ ಪತಿ ಪಾದೊತ್ತಲಿ! (ಬಂ)
-ಧು ಬಳಗಕ್ಕೆ ಮಂದಾಕಿನಿಯಂತಿರ್ಲಿ!
ವಿವೇಕ, ವೈರಾಗ್ಯ, ಮೈತ್ರೇಯಿಯಂತಿರ್ಲಿ!
ಗಿರಿಜೆಯಂತರ್ಧನಾರೀಶ್ವರನಾಗ್ಲಿ! (ವ)
-ರ ಗುರುಭಕ್ತಿ ಬಾಳನ್ನು ಭವ್ಯಮಾಡ್ಲಿ! (ಕ)
-ಲಿಮಲ ನಿರಂಜನಾದಿತ್ಯಳಿಸಲಿ!!!

ನಿನಗೆನ್ನ ತಳಮಳದರಿವಿದೆ!

ಯ, ವಿನಯದ ಬಿನ್ನಹವಾಗಿದೆ!
ಗೆಳೆಯ ನಿನೊಬ್ಬನೆನಗೆಂದಾಗಿದೆ! (ನಿ)
-ನ್ನ ಸಾಯುಜ್ಯವೊಂದೇ ನನ್ನಾಶೆಯಾಗಿದೆ!
ಪಸ್ಸು ದೀರ್ಘಕಾಲದಿಂದಾಗುತಿದೆ! (ಕೊ)
-ಳಕುವಾಸನೆ ನಿರ್ಮೂಲವಾಗುತಿದೆ!
ನೋಭೀಷ್ಟವಿನ್ನೂ ನೆರವೇರದಿದೆ! (ಬಾ)
-ಳಲ್ಲಿ ಬಹು ಭಾಗ ಮುಗಿದೇ ಹೋಗಿದೆ!
ಯೆ ನಿನಗೇಕೋ ಇನ್ನೂ ಬಾರದಿದೆ!
ರಿಸಿಗಳ ಫಲಶೃತಿ ಮಂಕಾಗಿದೆ!
ವಿಚಾರಕ್ಕೆ ವಿರಾಮವಿಲ್ಲದಾಗಿದೆ! (ತಂ)
-ದೆ ನಿರಂಜನಾದಿತ್ಯಗೊಪ್ಪಿಸ್ಯಾಗಿದೆ!!!

ಅಲೆಗಳಾರ್ಭಟ ಎಷ್ಟು ಹೊತ್ತು? (ಅ)

-ಲೆದಾಗ್ದೆ ಗಾಳಿ ಇರ್ವಷ್ಟು ಹೊತ್ತು!
ಟ್ಟಿ ಮುಟ್ಟಾಗಿರ್ವುದೆಷ್ಟು ಹೊತ್ತು? (ಗೋ)
-ಳಾಟನ್ನಕ್ಕಿಲ್ಲದಿರ್ವಷ್ಟು ಹೊತ್ತು! (ನಿ)
-ರ್ಭಯ ಆತ್ಮನಿಗೆ ಎಲ್ಲಾ ಹೊತ್ತು! (ನ)
-ಟ, ವಿಟರ್ಗೆ ಭಯ ಎಲ್ಲಾ ಹೊತ್ತು!
-ಎಡರ್ಗಂಜಬಾರದು ಯಾವತ್ತೂ! (ನಿ)
-ಷ್ಟುರ ಸ್ವಭಾವದಿಂದ ವಿಪತ್ತು!
ಹೊಡೆದಾಟ, ಬಡಿದಾಟಾಪತ್ತು! (ಹೊ)
-ತ್ತು, ನಿರಂಜನಾದಿತ್ಯ ಸಂಪತ್ತು!!!

ಬೊಗಳುವುದು, ಕಚ್ಚುವುದು ನಾಯಿ!

ಣಿಸಬಾರದದನ್ನು ಸಿಪಾಯಿ! (ಕೂ)
-ಳು ಸಿಕ್ಕದಾದಾಗದು ಬಡಾಪಾಯಿ! (ಸಾ)
-ವು, ನೋವು, ಬಂದಾಗದು ನಿರುಪಾಯಿ!
ದುರ್ಜನಗೆ ಹದವಿಲ್ಲ ಕೈ ಬಾಯಿ!
ಷ್ಟ ಕೊಡ್ವನನ್ಯರ್ಗಾ ದುರುಪಾಯಿ! (ಮೆ)
-ಚ್ಚುವಳೇನವನ ಚಾಮುಂಡಿ ತಾಯಿ? (ಬೇ)
ವು ಬಿತ್ತಿದವ ಕೊ

ಯ್ಯ ಮಾವಿನ್ಕಾಯಿ!
ದುರ್ವ್ಯಾಪಾರಿಯಾಗನು ಸದಾಶ್ರಯಿ!
ನಾಮಸ್ಮರಣೆಯಿಂದವ ವಿಜಯಿ! (ಬಾ)
-ಯಿ ಮುಚ್ಚಿ ನಿರಂಜನಾದಿತ್ಯಾದಾಯಿ!!!

ಬರ್ಬೇಕು, ಇರ್ಬೇಕು, ಗುರು ಪರಮಾತ್ಮ! (ಸೇ)

-ರ್ಬೇಕು ಅವನಲ್ಲಿ ಈ ಪಾಪಿ ಜೀವಾತ್ಮ!
ಕುಲ, ಗೋತ್ರ ನೋಡ್ವವ್ನಲ್ಲಾ ಪರಮಾತ್ಮ!
ಹ ಸುಖಕ್ಕಾಶಿಸುವನು ಜೀವಾತ್ಮ! (ಬೇ)
-ರ್ಬೇರೆ ರೂಪದಿಂದಿಹನು ಪರಮಾತ್ಮ!
ಕುಕಲ್ಪನೆ ಮಾಡುತಿಹನು ಜೀವಾತ್ಮ!
ಗುಣಾತೀತ ಜಗದ್ಗುರು ಪರಮಾತ್ಮ! (ಕಿ)
-ರುಕುಳ ಪರರಿಗೀವನು ಜೀವಾತ್ಮ!
ತಿತ ಪಾವನ ದತ್ತ ಪರಮಾತ್ಮ! (ಪೆ)
-ರರವಗುಣವೆಣಿಪನು ಜೀವಾತ್ಮ!
ಮಾನಾಪಮಾನವೆಣಿಸ ಪರಮಾತ್ಮ! (ಆ)
-ತ್ಮ, ನಿರಂಜನಾದಿತ್ಯ ಗುರು ಸರ್ವಾತ್ಮ!!!

ವಿಮಲಾ, ಕಮಲಾ, ಮಂಜುಳಾ!

ನಸ್ಸಿಗಾಯ್ತಾನಂದತುಳಾ! (ವಿ)
-ಲಾಸಾತೀತಾನಂದ ಮಂಗಳಾ! (ತ್ರಿ)
-ಕರಣ ಶುದ್ಧಿಗಿದೇ ಫಲ!
ನೋ ಮಾಲಿನ್ಯಕ್ಕೆ ವಿಫಲ!
ಲಾಭಾಲಾಭಕ್ಕೆ ಕರ್ಮ ಫಲ!
ಮಂದಾಕಿನಿ ಸುಕೃತ ಫಲ! (ಮಂ)
-ಜುನಾಥನ ತಪದ ಫಲ! (ಬಾ)
-ಳಾ ನಿರಂಜನಾದಿತ್ಯ ಫಲ!!!

ಮನಸು ಮಾಧವಗೆ ಶರಣಾಗ್ಬೇಕು! (ಮ)

-ನಸ್ಸಿಗಾತ ಮಾರ್ಗದರ್ಶನ ನೀಡ್ಬೇಕು!
ಸುಸೂತ್ರವಾಗಿ ಸಾಧನೆ ಸಾಗಬೇಕು!
ಮಾಡಿದ ಕೆಲಸಕ್ಕೆ ಕೂಲಿ ಸಿಗ್ಬೇಕು!
ರ್ಮ ಪರಸ್ಪರರಿಗನ್ವಯಿಸ್ಬೇಕು! (ಭ)
-ವ ಸಾಗರ ನಿರ್ಭಿ

ತಿಯಿಂದ ದಾಟ್ಬೇಕು! (ಕಾ)
-ಗೆ, ಗೂಗೆಯಂತೆ ಕಿತ್ತು ತಿನ್ನದಿರ್ಬೇಕು!
ಕ್ತಿ, ಅಶಕ್ತರುಪಕಾರಕ್ಕಿರ್ಬೇಕು!
ಕ್ತಪಾತಕ್ಕೆ ಪ್ರೋತ್ಸಾಹ ಕೊಡ್ದಿರ್ಬೇಕು! (ಗಾ)
-ಣಾಪತ್ಯ ಹೀಗಿರುತ್ತಾ ಬೆಳಗಬೇಕು! (ಆ)
-ಗ್ಬೇಕೆಲ್ಲಕ್ಕೂ ಶಾಂತಿ ಸುಖ ಉಂಟಾಗ್ಬೇಕು!
ಕುತಂತ್ರ ನಿರಂಜನಾದಿತ್ಯ ಸುಡ್ಬೇಕು!!!

ಈ ದೇಹದಲ್ಲಿಂದ್ರಿಯ ಸುಖ ಮನಸಿನಾಸೆ!

ದೇವರನ್ನಿದಕ್ಕಾಗಿ ಪ್ರಾರ್ಥಿಸಿದ್ರೂ ನಿರಾಸೆ!
ಗಲಿರುಳು ಮಾಡುವವರು ನಾನಾ ಪ್ರಶಂಸೆ!
ರ್ಶನಕ್ಕಾಗಿ ದುಡಿವವರಿಗೆಲ್ಲಾ ಹಿಂಸೆ! (ಇ)
-ಲ್ಲಿಂದಲ್ಲಿಗೆ, ಅಲ್ಲಿಂದಿಲ್ಲಿಗಲೆಯ್ಲಿಕ್ಬೇಕ್ಪೈಸೆ! (ಉ)
-ದ್ರಿಕ್ತರಾದವರಿಗೆ ಬರುವುದು ದುರ್ದೆಸೆ!
ಶಸ್ಸಿಗಾಗಿ ಮಾಡಬೇಕಭ್ಯಾಸ ಅಹಿಂಸೆ!
ಸುಸೂತ್ರ ಸಂಸಾರವಿದ್ರಿಂದೆಂಬ ಭರವಸೆ!
ತಿಗೊಳ್ವುದಕೆ ಮೂಲಕಾರಣ ದುರಾಸೆ!
ನೆ ಮನೆಯಲ್ಲೂ ಭಿನ್ನಭಾವದತ್ತೆ, ಸೊಸೆ!
ಶಿಸುವುದದು ಈಶ್ವರೀಭಾವ ಉದಿಸೆ!
ಸಿಕ್ಕಲಾರದೀ ಸುಜ್ಞಾನ ಸಂತೆಯಲ್ಲರಸೆ!
ನಾಮಸ್ಮರಣೆ ಸದಾ ಆಗ್ಬೇಕದು ಫಲಿಸೆ! (ಆ)
-ಸೆ ಶ್ರೀ ನಿರಂಜನಾದಿತ್ಯ ನಿರ್ನಾಮಗೊಳಿಸೆ!!!

ನಾನುದ್ರೇಕಿ, ನೀನು ವಿವೇಕಿ! (ನೀ)

-ನು ವಿಚಾರಿಯಾಗಿ ಏಕಾಕಿ! (ಬಂ)
-ದ್ರೇನು, ಹೋದ್ರೇನೆಂಬ ಪಿನಾಕಿ!
ಕಿರಿಯಳು ನಾ ನಿನ್ನ ಸಖಿ!
ನೀನೆನ್ನ ಬೆಳೆಸಿದ ಸಾಕಿ! (ನಾ)
-ನು ಬಂದೆ ಈಗ್ನಿನ್ನ ಹುಡುಕಿ!
ವಿರೋಧಿಸಬೇಡ ದುಡುಕಿ!
ವೇಶ್ಯೆ ನಾನಲ್ಲ ನೋಡಿಣಿಕಿ! (ಏ)
-ಕಿ, ನಿರಂಜನಾದಿತ್ಯಾನೇಕಿ!!!

ಅತಿ ಆಸೆ ಗತಿಗೇಡು!

ತಿಳಿದಿದ ಕಾರ್ಯ ಮಾಡು!
ತ್ಮ ಧ್ಯಾನ ಸದಾ ಮಾಡು!
ಸೆಣಸಾಟ ಬಿಟ್ಟು ಬಿಡು!
ಭಸ್ತಿಯಂತೆಲ್ಲಾ ಮಾಡು!
ತಿರುಗಾಟ ಸಾಕು ಮಾಡು! (ಯೋ)
-ಗೇಶ್ವರನ ಸಂಗ ಮಾಡು! (ನೋ)
-ಡು ನಿರಂಜನಾದಿತ್ಯಾಡು!!!

ನನ್ನ ನಿನ್ನಲ್ಲಿ ಯಾರು ಮೇಲು? (ಉ)

-ನ್ನತದಲ್ಲಿರ್ಪವನೇ ಮೇಲು!
ನಿತ್ಯಾನಿತ್ಯಕ್ಕಿಂತಲೂ ಮೇಲು! (ಭಿ)
-ನ್ನ, ಭೇದವಿಲ್ಲದವ ಮೇಲು! (ಅ)
-ಲ್ಲಿಲ್ಲಿ, ಎಲ್ಲೆಲ್ಲಿರ್ಪವ ಮೇಲು!
ಯಾತ್ರೆ ನಿತ್ಯ ಮಾಳ್ಪವ ಮೇಲು! (ಗು)
-ರು ಎಲ್ಲರಿಗಿಂತಲೂ ಮೇಲು!
ಮೇಲು, ಕೀಳಿಲ್ಲದವ ಮೇಲು! (ಮೇ)
-ಲು, ನಿರಂಜನಾದಿತ್ಯ ಮೇಲು!!!

ತನ್ನ ಮನೆ ಅನ್ಯರ ಪಾಲಾಗ್ವಂತಿದೆ! (ಉ)

-ನ್ನತಿ ಅವರಿಗದ್ರಿಂದಾಗದಂತಿದೆ!
ನಸ್ಸಿನ ಆಟ ವಿಚಿತ್ರವಾಗಿದೆ!
ನೆನಪದಕ್ಕುದ್ಧಾರದ್ದಿಲ್ಲದಾಗಿದೆ!
ಪಚಾರ ಆಪ್ತರಿಗೆ ಆಗುತಿದೆ! (ವ)
-ನ್ಯ ಮೃಗಗಳಿಗಿಂತಲೂ ಕೀಳಾಗಿದೆ! (ವ)
-ರ ಗುರುಕೃಪೆ ಅದಕ್ಕಾಗ್ಬೇಕಾಗಿದೆ!
ಪಾತಕವೆಲ್ಲಾ ನಾಶವಾಗ್ಬೇಕಾಗಿದೆ! (ಲೀ)
-ಲಾ ನಾಟಕದಾನಂದ ಪಡ್ಬೇಕಾಗಿದೆ! (ಆ)
-ಗ್ವಂತೆ ತನ್ನಂತನುಗ್ರಹಿಸ್ಬೇಕಾಗಿದೆ!
ತಿಳಿದವನಿಗೆಷ್ಟು ಹೇಳ್ಬೇಕಾಗಿದೆ? (ತಂ)
-ದೆ, ನಿರಂಜನಾದಿತ್ಯ ತಾನೆಂದಾಗಿದೆ!!!

ವಿಜಯಾನಂದ ಗೀತೆ ಮಂಜುಳ!

ರಾ ಜನ್ಮಾತೀತಾತ್ಮ ಮಂಜುಳ!
ಯಾದವನ ಮುರಳಿ ಮಂಜುಳ!
ನಂದ ಕಂದ ಗೋವಿಂದ ಮಂಜುಳ!
ಶರಥಾತ್ಮಾರಾಮ ಮಂಜುಳ!
ಗೀರ್ವಾಣೀ ವೀಣಾ ನಾ ಮಂಜುಳ! (ಮಾ)
-ತೆ, ಜಗನ್ಮಾತೆ, ಸೀತೆ ಮಂಜುಳ!
ಮಂತ್ರ, ಯಂತ್ರ, ತಂತ್ರಾಂಗಿ ಮಂಜುಳ! (ಮಂ)
-ಜುನಾಥನ ಗಿರಿಜೆ ಮಂಜುಳ! (ಬಾ)
-ಳ ನಿರಂಜನಾದಿತ್ಯ ಮಂಜುಳ!!!

ಸೂರ್ಯನಲ್ಲಿ ಸಕಲ ಸಂಪತ್ತು! (ಆ)

-ರ್ಯನಿವ ಕಾರ್ಯನಿಷ್ಠ ಯಾವತ್ತೂ!
ದಿಯಾಗಿ ಹರಿವುದಾ ಸೊತ್ತು! (ಸ)
-ಲ್ಲಿಸುವನು ಸೇವೆ ಎಲ್ಲಾ ಹೊತ್ತೂ!
ಕಲ ಲೋಕದಿಲ್ದಿದ್ರಸತ್ತು!
ರ್ಮ, ಧರ್ಮಕ್ಕಾಧಾರಾ ಸದ್ವತ್ತು!
ಕ್ಷ್ಯ ಸಿದ್ಧಿ ಮಾರ್ಗದಕ್ಕೆ ಗೊತ್ತು!
ಸಂಗವದರದ್ದಾದ್ರಿಲ್ಲಾಪತ್ತು!
ರಮಾರ್ಥ ಸಾರಾ ದಿವ್ಯ ಮುತ್ತು! (ಒ)
-ತ್ತು, ನಿರಂಜನಾದಿತ್ಯ ಪಾದೊತ್ತು!!!

ಪ್ರೀತಿ, ವಿಶ್ವಾಸವಿಲ್ಲದಿದ್ರೇನಿದ್ರೇನು?

ತಿಪ್ಪೆ ಗುಂಡಿಯ ಮಾಣಿಕ್ಯವಲ್ಲವೇನು?
ವಿಶ್ವಾಸಿ ಹೇಗಿರ್ಬೇಕೆಂದರಿತಿರ್ನೀನು!
ಶ್ವಾಸೋಚ್ಚ್ವಾಸದಂತಿರ್ಬೇಕ್ನನ್ನಲ್ಲಿ ನೀನು!
ತಿ ಶಿರೋಮಣಿ ಸೀತೆಯಾಗ್ಬೇಕ್ನೀನು!
ವಿಧಿ ಲಿಖಿತ ಸಾವಿತ್ರಿಯಾಗ್ಮೀರ್ನೀನು! (ಗೊ)
-ಲ್ಲ ಕೃಷ್ಣನ ರಾಧೆಯಂತಾಗ್ಬೇಕು ನೀನು!
ದಿನ, ರಾತ್ರಿ

ಈರಾಳಂತೆ ಇರು ನೀನು! (ಉ)
-ದ್ರೇಕದಿಂದ ಹಾಳಾಗಬಾರದು ನೀನು!
ನಿನ್ನಾಪ್ತನಿಗೆರಡೆಣಿಸ್ಬೇಡ ನೀನು! (ಇ)
-ದ್ರೇಕನಿಷ್ಠೆಯಿಂದ ಇರಬೇಕು ನೀನು! (ತ)
-ನು ನಿರಂಜನಾದಿತ್ಯಗೊಪ್ಪಿಸು ನೀನು!!!

ಸ್ವಾರ್ಥಿ ಮಾನವ ವಿಕಲ್ಪೋನ್ಮತ್ತ! (ಪ್ರಾ)

-ರ್ಥಿಸಿ ಜಯಘಳಿಸಲಶಕ್ತ!
ಮಾಟ, ಮಾರಣಗಳಲ್ಲಾಸಕ್ತ!
ಯನಾದಿಂದ್ರ್ಯಾನಂದಾನುರಕ್ತ!
ರ ಗುರು ಸೇವಾಸಕ್ತ ಭಕ್ತ!
ವಿವೇಕ, ವಿಚಾರದಿಂದ ತೃಪ್ತ!
ಡು ಲೋಭಿ ಆಗಲಾರ ಮುಕ್ತ! (ಪಾ)
-ಲ್ಪೋಳ್ಯುಂಡು ಕೀಳುಪೋಲಿಯಾಗ್ವೋನ್ಮತ್ತ! (ತ)
-ನ್ಮಯತಾಸಕ್ತ ಸದಾ ವಿರಕ್ತ! (ಚಿ)
-ತ್ತ ನಿರಂಜನಾದಿತ್ಯಗೀಯುತ್ತ!!!

ಗುಣ ನೋಡಿ ವರ್ಣ ಗೊತ್ತು ಮಾಡು! (ವ್ರ)

-ಣ ನೋಡಿ ಸೂಕ್ತ ಚಿಕಿತ್ಸೆ ಮಾಡು!
ನೋಟ, ಕೂಟದಾರ್ಭಟ ಬಿಟ್ಬಿಡು!
ಡಿಕ್ಕಿ ಹೊಡೆಯದಂತೆ ಓಡಾಡು!
ರ ಗುರುಧ್ಯಾನ ಸದಾ ಮಾಡು! (ಜೀ)
-ರ್ಣವಾಗುವಷ್ಟೇ ಭೋಜನ ಮಾಡು!
ಗೊಲ್ಲ ಬಾಲ್ನಂತೆ ಗೋ ಸೇವೆ ಮಾಡು! (ಉ)
-ತ್ತು ಹದಮಾಡಿ ಬಿತ್ತನೆ ಮಾಡು!
ಮಾತಾ, ಪಿತರಿಷ್ಟ ಪೂರ್ತಿ ಮಾಡು! (ಹಾ)
-ಡು, ನಿರಂಜನಾದಿತ್ಯನ ಕೂಡು!!!

ಮೇಲು, ಕೀಳುಮುಖ ನಿನ್ನ ಬೋಳುಮುಖ!

(ಹಾ)-ಲು ತಾನೇ ಮೊಸ್ರು, ಬೆಣ್ಣೆಂಬ ಬಹು ಮುಖ?
ಕೀರ್ತಿ, ಅಪಕೀರ್ತಿ ಭಾವ ಭೇದ ಮುಖ! (ಅ)
-ಳು, ನಗುಗಳೂ ಸ್ಥಿತಿ ವ್ಯತ್ಯಾಸ ಮುಖ!
ಮುದ್ದು ಮುಖ, ಸದ್ದಿಲ್ಲದ ಬುದ್ಧ ಮುಖ!
ಗೇಂದ್ರ, ನಾಗೇಂದ್ರರೆಲ್ಲಾ ಕಾರ್ಯ ಮುಖ!
ನಿತ್ಯ, ಸತ್ಯ, ಆನಂದವೇ ನಿಜ ಮುಖ! (ಅ)
-ನ್ನಪೂರ್ಣಾದಿ ಮಾತಾ ಮುಖ ಪ್ರೀತಿ ಮುಖ!
ಬೋಧನಾ, ಸಾಧನಾ ಮುಖ ಗುರು ಮುಖ! (ಆ)
-ಳು, ಅರಸಾದಿಗಳೆಲ್ಲಾ ದಾಸ ಮುಖ!
ಮುನಿ, ಋಷಿಗಳೆಲ್ಲರೂ ತಪೋ ಮುಖ! (ಸ)
-ಖ ನಿರಂಜನಾದಿತ್ಯ ವಿರಕ್ತ ಮುಖ!!!

ಯಾರಿಗರುಹಲೀ ಮನದ ದುಃಖ?

ರಿಪುಕುಲಾಂತಕ ದತ್ತನೇ ಸಖ!
ಣಿಸಬಾರದು ತಪ್ಪಾ ಪ್ರಮುಖ!
ರುಜುಮಾರ್ಗಿಯಾಗೆಂಬಾ ನಿಜ ಸಖ!
ರಿಭಜನೆ ಮಾಡೆಂಬಾ ಪ್ರಮುಖ!
ಲೀಲಾ ಮಾರುತಿ ಅವನೆಂಬಾ ಸಖ!
ರೆಯ್ಬೇಡವನನ್ನೆಂಬಾ ಪ್ರಮುಖ!
ಡೆ, ನುಡಿ, ಅವನಂತಿರ್ಲೆಂಬಾ ಸಖ!
ರ್ಶನದಿಂದಾನಂದೆಂಬಾ ಪ್ರಮುಖ!
ದುಃಖ ಶಾಂತಿಯಿಂತಪ್ಪುದೆಂಬಾ ಸಖ!
ಗ ನಿರಂಜನಾದಿತ್ಯ ಪ್ರಮುಖ!!!

ಸಂತರ ಸಂಗ ಸಂತೆಯಲ್ಲಾಗದಮ್ಮಾ!

ರತರ ವ್ಯಾಪಾರವಿರ್ಪಲ್ಲಾಗ್ದಮ್ಮಾ!
ಹಸ್ಯವಿದರಿತು ಶರಣಾಗಮ್ಮಾ!
ಸಂದೇಹವೇನೇನೂ ಪಡ್ಬೇಕಾಗಿಲ್ಲಮ್ಮಾ!
ತಿ, ಮತಿ, ದಾತ, ಸದ್ಗುರು ಕಾಣಮ್ಮಾ!
ಸಂಜೆ, ಮುಂಜಾನೆ ಪ್ರಶಸ್ತ ಕಾಲವಮ್ಮಾ!
ತೆರೆಮರೆಯಲ್ಲಿದ್ದಭ್ಯಾಸ ಮಾಡಮ್ಮಾ!
ದುನಾಥನ ಗೀತಾ ಧ್ಯಾನ ಮಾಡಮ್ಮಾ! (ಚೆ)
-ಲ್ಲಾಟದ ಮನಸ್ಸಿಗಿದೌಷಧಿಯಮ್ಮಾ!
ಜಮುಖ, ಅಜಮುಖ, ಸ್ವಮುಖಮ್ಮಾ!
ತ್ತಾತ್ರೇಯ ತ್ರಿಲೋಕಕ್ಕೂ ಗುರುವಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಳಾಗಮ್ಮಾ!!!

ಬಿದ್ದಿ, ಎದ್ದಿ, ಬಿದ್ದಿ, ಸದ್ಬುದ್ಧಿಯಾಗಿದ್ದೀ!

(ಮು)-ದ್ದಿನ ಮಗು ನೀನು ಈಗ ಆಗುತ್ತಿದ್ದೀ!
ಡವಿದರೂ ಎದೆಗೆಡದೆ ಎದ್ದೀ! (ಸ)
-ದ್ದಿಲ್ಲದೇ ನಿನ್ನ ದಾರಿ ನೀನು ಹಿಡ್ದಿದ್ದೀ!
ಬಿಕ್ಕಿ, ಬಿಕ್ಕಿ ಅಳ್ವುದನ್ನು ನಿಲ್ಲಿಸಿದ್ದೀ! (ಕ)
-ದ್ದಿಟ್ಟು ತಿನ್ನುವಭ್ಯಾಸ ಇಲ್ಲದೇ ಇದ್ದೀ!
ಜ್ಜನರ ಸಂಗದಲ್ಲೇ ಸದಾ ಇದ್ದೀ! (ಬು)
-ದ್ಬುದದಂತೀ ಸಂಸಾರವೆಂದರಿತಿದ್ದೀ! (ಸಿ)
-ದ್ಧಿ, ರಿದ್ಧಿಗಳಿಗಾಶಿಸದೆ ನೀನಿದ್ದೀ!
ಯಾವಾಗಲೂ ಆತ್ಮಧ್ಯಾನ ಮಡುತ್ತಿದ್ದೀ!
ಗಿರಿಜಾಧವನೇ ನೀನೆಂದು ನಂಬಿದ್ದೀ! (ಇ)
-ದ್ದೀ, ನಿರಂಜನಾದಿತ್ಯನಾಗಿದ್ದೀ!!!

ಕರೆದ್ರೆ ಬಾರ, ಬಂದ್ರೆ ತೋರ! (ತಿ)

-ರೆಯೆಲ್ಲಾ ಅವನ ಆಕಾರ! (ನಿ)
-ದ್ರೆ, ಸ್ವಪ್ನ, ಜಾಗ್ರತ್ತಲ್ಲೆಚ್ಚರ!
ಬಾನನ್ನೂ ತೂರುವಷ್ಟೆತ್ತರ! (ಸು)
-ರ, ನರಾದಿ ಲೋಕ ವಿಸ್ತಾರ!
ಬಂದ, ಹೋದೆಂಬುದುಪಚಾರ! (ಮು)
-ದ್ರೆ ಕಾಣಿಸದಂತೇ ಭಂಗಾರ! (ಹ)
ಒನೆ ಲಿನೆ ಮಿ

ಸಿ




-ರ ನಿರಂಜನಾದಿತ್ಯಾಂಗಾರ!!!

ಉದ್ರೇಕ ಶಾಂತಿಯಿಂದ ತದ್ರೂಪ ಸಿದ್ಧಿ! (ಭ)

-ದ್ರೇಶ್ವರನೇ ಅದು ತಾನೆಂಬ ಪ್ರಸಿದ್ಧಿ!
ರ್ಮ, ಧರ್ಮ ಬದ್ಧವಾದ್ರೆ ಮನಶ್ಯುದ್ಧಿ!
ಶಾಂಭವಿಯಾದರ್ಶದಿಂದ ಭಕ್ತಿ ವೃದ್ಧಿ! (ತಿ)
-ತಿಕ್ಷಾಪತಿ ಸೇವೆಯಿಂದದ್ವೈತ ಸಿದ್ಧಿ! (ತಾ

)
-ಯಿಂದಧಿಕ ದೈವವಿಲ್ಲೆಂದು ಪ್ರಸಿದ್ಧಿ!
ರ್ಪ, ದಂಭದಿಂದ ಕೆಡುವುದು ಬುದ್ಧಿ!
ತ್ವ ಜೀವನಕ್ಕಿದೆರಡೂ ಉಪಾಧಿ! (ಚಿ)
-ದ್ರೂಪವೆಂಬುದೊಂದೇ ನಿತ್ಯ, ಸತ್ಯ, ನಿಧಿ!
ರಮಾರ್ಥ ಸಿದ್ಧನಿಗಿಲ್ಲ ದುರ್ವಿಧಿ!
ಸಿದ್ಧಿ, ರಿದ್ಧಿಗಿಂತಧಿಕ ಯೋಗಸಿದ್ಧಿ! (ಸಿ)
-ದ್ಧಿ, ನಿರಂಜನಾದಿತ್ಯಗಧ್ಯಾತ್ಮ ಸಿದ್ಧಿ!!!

ಹಾಲಿನ ಬಣ್ಣ ನೋಡ್ಯಾನಂದವಾಯ್ತು! (ಹಾ)

-ಲಿನ ರುಚಿ ಸವಿದು ತೃಪ್ತಿಯಾಯ್ತು! (ಘ)
-ನ ಗುಣವದರದ್ದನುಭವವಾಯ್ತು!
ದುಕಿಗದೇ ಬೇಕೆಂದದ್ದೂ ಆಯ್ತು! (ಉ)
-ಣ್ಣದಿರ್ಲಿಕ್ಕೀಗದನ್ನಸಾಧ್ಯವಾಯ್ತು!
ನೋಡ್ನೋಡಿ ಗೊಲ್ಲನ ದಾರಿ ಸುಸ್ತಾಯ್ತು! (ಓ)
-ಡ್ಯಾಡಿ, ಅಡ್ಡಾಡೀಗೇನೋ ಬಂದಂತಾಯ್ತು!
ನಂಬಿಗೆಯಿದ್ದ ಹಾಲೀಗ ನೀರಾಯ್ತು! (ಅ)
-ದರಲ್ಲಿದ್ದ ಗುಣವೂ ಕಮ್ಮಿಯಾಯ್ತು!
ವಾದಿಸಿ ಫಲವಿಲ್ಲೆಂಬರಿವಾಯ್ತು! (ಆ)
-ಯ್ತು, ನಿರಂಜನಾದಿತ್ಯ ತಟಸ್ಥಾಯ್ತು!!!

ನನ್ನ ಕೈಬಿಟ್ಟು ನೀನು ಕೆಟ್ಟೆ! (ಅ)

-ನ್ನ, ಬಟ್ಟೆ, ನಾನೆಷ್ಟೆಷ್ಟೋ ಕೊಟ್ಟೆ!
ಕೈ, ಬಾಯ್ತೊಳೆದುಣಿಸಿ ಬಿಟ್ಟೆ!
ಬಿಡ್ಬೇಡೆನ್ನನ್ನೆಂದಾಜ್ಞೆಯಿಟ್ಟೆ! (ಹು)
-ಟ್ಟು ಗುಣ ನೀನು ತೋರ್ಸಿಬಿಟ್ಟೆ!
ನೀತಿ, ರೀತಿ, ಬದ್ಲಾಯಿಸ್ಬಿಟ್ಟೆ! (ಜ)
-ನುಮ ವ್ಯರ್ಥಮಾಡಿ ಕೊಂಡ್ಬಿಟ್ಟೆ!
ಕೆಟ್ಟ ಮೇಲ್ಬುದ್ಧಿ ಬಂತೆಂದ್ಬಿಟ್ಟೆ! (ಉ)
-ಟ್ಟೆ, ನಿರಂಜನಾದಿತ್ಯ ಬಟ್ಟೆ!!!

ತಿಳಿಯಿತು ನಿನ್ನಂತರಂಗ! (ಹೇ)

-ಳಿ ಫಲವೇನಾ ತೇಜೋಭಂಗ? (ಹೋ)
-ಯಿತು ತಿಪ್ಪೆಗೆ ಶಿವಲಿಂಗ!
ತುಚ್ಛವಾಯ್ತದರ ಸತ್ಸಂಗ!
ನಿನಗೀಗುಂಟಾಯ್ತು ದುಸ್ಸಂಗ! (ನ)
-ನ್ನಂತಾಗಿಸಿಲ್ಲ ನನ್ನ ಸಂಗ! (ಪ)
-ತನಕ್ಕೆ ಕಾರಣ ಅನಂಗ!
ರಂಗ, ಸಾರಂಗ, ಸುಂದರಾಂಗ! (ಲಿಂ)
-ಗ ಶ್ರೀ ನಿರಂಜನಾದಿತ್ಯಾಂಗ!!!

ಬಟ್ಟೆ, ಬರೆ ಬಿಚ್ಚಿಟ್ಟು ನನ್ನ ಸೇರ್ಬಿಟ್ಟೆ! (ಹೊ)

-ಟ್ಟೆ ಪಾಡಿನಾಟ ನನಗಗಿ ಬಿಟ್ಟಿಟ್ಟೆ!
ರದಿರಲಾರೆ ನಿನ್ನಡಿಗೆಂದ್ಬಿಟ್ಟೆ! (ಕ)
-ರೆಸಿಕೋ ನಿನ್ನಡಿಗೆಂದು ಮೊರೆಯಿಟ್ಟೆ!
(ವಿಶ್ವಾಸ)-ಬಿಚ್ಭ್ವಾಸ ನಿನ್ನದನ್ನು ನಾನು ಮೆಚ್ಬಿಟ್ಟೆ! (ಮೆ)
-ಚ್ಚಿದ್ಮೇಲ್ನಾನು ಬಹಳ ಹಚ್ಚಿಕೊಂಡ್ಬಿಟ್ಟೆ! (ಬಿ)
-ಟ್ಟು ಲೋಭವನ್ನು ಧಾರಾಳಿ ನಾನಗ್ಬಿಟ್ಟೆ!
ನ್ನ, ನಿನ್ನ ಮೈತ್ರಿ ಆದರ್ಶವೆಂದ್ಬಿಟ್ಟೆ!(ನಿ)
-ನ್ನ ಸುಕೃತಕ್ಕೆಣೆಯೇ ಇಲ್ಲವೆಂದ್ಬಿಟ್ಟೆ!
ಸೇವೆ ನಿನ್ನದಕ್ಕಾಗಿ ನಾ ಪಣ ತೊಟ್ಟೆ! (ದು)
-ರ್ಬಿಧಿಯಿಂದಾಗೀಗ ಕೆಳಗಿಳಿದ್ಬಿಟ್ಟೆ! (ಹೊ)
-ಟ್ಟೆ ನಿರಂಜನಾದಿತ್ಯನದ್ದುರಿಸ್ಬಿಟ್ಟೆ!!!

ಮೆಚ್ಚುವವರಾರು ನಿನ್ನನ್ನು? (ಅ)

-ಚ್ಯುತಾನಂತ ಗೋವಿಂದನನ್ನು!
ರವಿತ್ತು ಕಾಪಾಡೆನ್ನನ್ನು!
ರ್ಷ ಬಹಳಾಯ್ತ್ನೋಡ್ದೇ ನಿನ್ನನ್ನು! (ವೈ)
-ರಾಗ್ಯವಿನ್ನೆಂತಿರಬೇಕೆನ್ನು? (ಗು)
-ರು ನೀನೆಂದೊಪ್ಪಿಹೆ ನಿನ್ನನ್ನು!
ನಿರ್ದಯದಿಂದ ನೋಡ್ಬಾರ್ದಿನ್ನು! (ನ)
-ನ್ನ, ನಿನ್ನೈಕ್ಯವಾಗ್ದಿರ್ಬಾರ್ದಿನ್ನು! (ಅ)
-ನ್ನು ನಿರಂಜನಾದಿತ್ಯಾದೆನ್ನು!!!

ಹೇಳುವಾಗಿದ್ದಾನಂದ ಕೇಳುವಾಗಿಲ್ಲ! (ಕೇ)

-ಳುವಾಗ ಇದ್ದಾನಂದ ಬಾಳುವಾಗಿಲ್ಲ!
ವಾಕ್ಪಟುತ್ವ ಮರುಳು ಮಾಡಿತು ಎಲ್ಲಾ! (ಯೋ)
-ಗಿ ರಾಜನನ್ನೆಷ್ಟು ಕೂಗಿದ್ರೂ ಬರ್ಲಿಲ್ಲ! (ಇ)
-ದ್ದಾ ದಿನದ ಮೂಢ ನಂಬಿಗೆ ಈಗಿಲ್ಲ!
ನಂಜುಂಡನ ಸ್ತೋತ್ರಕ್ಕೇನೂ ಕಮ್ಮಿಯಿಲ್ಲ!
ರ್ಶನವಾಗದಿದ್ರೇನೂ ತೃಪ್ತಿಯಿಲ್ಲ!
ಕೇವಲ ಗಿಳಿ ಪಾಠದಂತಾಯಿತೆಲ್ಲ! (ಹಾ)
-ಳು ಮಾಡ್ಬಾರ್ದು ಹಿರಿಯಕ್ಕಿರಿಯರ್ನೆಲ್ಲಾ!
ವಾದಿಸುವುದಾರಲ್ಲೆಂದೀಗ ಗೊತ್ತಿಲ್ಲ!
ಗಿರಿಧಾರಿಯೇ ಬಾರದೀಗಾಗ್ವುದಿಲ್ಲ! (ಗೊ)
-ಲ್ಲನೇ ನಿರಂಜನಾದಿತ್ಯನಾದ್ರಾಯ್ತಲ್ಲ!!!

ದರ್ಶನ ಎಲ್ಲರಿಗೂ ಸಿಕ್ಕದಯ್ಯಾ! (ಸ್ಪ)

-ರ್ಶ ದರ್ಶನವಾದ್ರೂ ದುರ್ಲಭವಯ್ಯಾ!
ವವಿಧ ಭಕ್ತಿಯೂ ಮಾನ್ಯವಯ್ಯಾ!
ಚ್ಚರ, ಸ್ವಪ್ನದಲ್ಲೂ ಆಗ್ವುದಯ್ಯಾ! (ಸ)
-ಲ್ಲಬೇಕು ಸೇವೆಲ್ಲರಿಂದವಗಯ್ಯಾ!
ರಿಪುಗಳಾರನ್ನೂ ಜೈಸ್ಲೇಬೇಕಯ್ಯಾ!
ಗೂಢವಿದು ಪರಮಾರ್ಥದಲ್ಲಯ್ಯಾ!
ಸಿಕ್ಕಿದಾಗ ದಕ್ಕಿಸಿಕೊಳ್ಬೇಕಯ್ಯಾ! (ಅ)
-ಕ್ಕರೆಯಿಂದವನನ್ನೊಲಿಸ್ಬೇಕಯ್ಯಾ!
ತ್ತನಿಚ್ಚೆಯಂತೆಲ್ಲಾ ಆಗ್ವುದಯ್ಯಾ! (ಅ)
-ಯ್ಯಾ, ದತ್ತ, ಶ್ರೀ ನಿರಂಜನಾದಿತ್ಯಯ್ಯಾ!!!

ತಳಮಳದಿಂದ ಕಳೆಗುಂದಬೇಡ! (ಒ)

-ಳ, ಹೊರ ನಾಮಾಮೃತ ತುಂಬದಿರ್ಬೇಡ!
ದನ ಬಾಧೆಗೆ ಗುರಿಯಾಗಬೇಡ! (ಖ)
-ಳ ಕುಲದ ಸ್ಮರಣೆ ಕನ್ಸಲ್ಲೂ ಬೇಡ! (ಅಂ)
-ದಿಂದಿನುಪದೇಶ ಬೇರ್ಬೇರೆನಬೇಡ!
ತ್ತಾತ್ರೇಯನ ಭಜನೆ ಬಿಡಬೇಡ!
ಳಂಕ ಅವನ ಪಾದಕ್ಕೆ ತರ್ಬೇಡ! (ವೇ)
-ಳೆ ವಿಷಯ ಸುಖಕ್ಕೆ ಹಾಳ್ಮಾಡ್ಬೇಡ!
ಗುಂಡಪ್ಪ ನೀನಾಗಿ ಉಂಡಾಡಿಯಾಗ್ಬೇಡ!
ರಿದ್ರಾವಸ್ಥೆಗೆ ಅಂಜಿ ಅಳಬೇಡ!
ಬೇರೆಯವರನುಕರಣೆ ಮಾಡ್ಬೇಡ! (ಬಿ)
-ಡ, ನಿರಂಜನಾದಿತ್ಯ ಸ್ವಧರ್ಮ ಬಿಡ!!!

ನಾನಿರ್ಬೇಕಾ? ಸಾಯ್ಬೇಕಾ?? ಜನಕಾ???

ನಿನಗೇಕೆ ಬಂತೀ ಅವಿವೇಕಾ? (ಇ)
ರ್ಬೇಕಾದದ್ದಿಲ್ಲದಿದ್ರುಂಟೇ ಲೋಕಾ?
ಕಾರಣಕರ್ತನಾಜ್ಞೆ ತನಕಾ!
ಸಾಧನೆ ಸಾಗದಿದ್ರೇನು ಸುಖಾ? (ಕಾ)
-ಯ್ಬೆ

ಕವನ ಕೃಪೆಗೆ ಬಾಲಕಾ!
ಕಾಮ ಜೀವನ ಚಿಂತಾಜನಕಾ!
ರಾ, ಜನ್ಮಕ್ಕೆ ಗುರು ತಾರಕಾ!
ಶ್ವರಕ್ಕಾಶಿಪಳು ಗಣಿಕಾ! (ಸಾ)
-ಕಾ, ಶ್ರೀ ನಿರಂಜನಾದಿತ್ಯ ಬೇಕಾ???

ನಾನೆಷ್ಟು ಶ್ರೇಷ್ಠನಾದರೇನು! (ನೀ)

-ನೆನ್ನ ಉಪೇಕ್ಷಿಸಿಲ್ಲವೇನು? (ನಿ)
-ಷ್ಟುರ ಸ್ವಭಾವಿಯಲ್ಲ ನಾನು!
ಶ್ರೇಯಸ್ಸನ್ನೇ ಬಯಸುವೆನು! (ದು)
-ಷ್ಟ ಸಹವಾಸದಲ್ಲಿರೆನು!
ನಾಮ ಜಪವೆಂದೂ ಬಿಡೆನು!
ಯೆಯುಳ್ಳವನಾಗು ನೀನು!
ರೇಗಿ, ಕೂಗಾಡಿ ಫಲವೇನು? (ತಾ)
-ನು ನಿರಂಜನಾದಿತ್ಯ ಭಾನು!!!

ಬಗ್ಗ ಸಗ್ಗದಲ್ಲೂ ಜಗ್ಗದಯ್ಯಾ! (ಅ)

-ಗ್ಗವಾಗಿ ಸಿಕ್ಕಿದ್ರೂ ಒಗ್ಗದಯ್ಯಾ!
ತ್ಸಂಗವದ್ರದ್ದು ಮಾಂಸಕ್ಕಯ್ಯಾ! (ಮು)
-ಗ್ಗರಿಸುವುದದ್ರ ಸ್ವಭಾವವಯ್ಯಾ!
ನದ ಕತ್ತಲ್ಲದ್ರ ಕಣ್ಣಯ್ಯಾ! (ಅ)
-ಲ್ಲೂ, ಇಲ್ಲೂ, ಅದಕ್ಕಿದೇ ಪಾಡಯ್ಯಾ!
ನ್ಮವಜಕ್ಕಜ ಅಂತಿತ್ತಯ್ಯಾ! (ಹ)
-ಗ್ಗ ಹಾವೂ, ಹಾವ್ಹಗ್ಗವೂ ಆಗ್ದಯ್ಯಾ!
ರ್ಶನ ಸಾಧು, ಸಜ್ಜನರ್ಗಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಅದಯ್ಯಾ!!!

ಪ್ರವೃತ್ತಿಪ್ರಿಯೆ ನೀನಾದೆ! (ನಿ)

-ವೃತ್ತಿ ಪ್ರಿಯನು ನಾನಾದೆ! (ಮು)
-ತ್ತಿನ ಮಾಲೆ ನೀ ಧರ್ಸಿದೆ!
ಪ್ರಿಯ ತುಳ್ಸಿ ನಾ ಧರ್ಸಿದೆ! (ಬಾ)
-ಯೆನ್ನುವೇಚ್ಛೆ ನನಗಿದೆ!
ನೀನದರಿಯದಂತಿದೆ!
ನಾವಿಬ್ರೋಂದಾಗ್ಬೇಕಾಗಿದೆ! (ಕಾ)
-ದೆ, ನಿರಂಜನಾದಿತ್ಯಾದೆ!!!

ಹಂಡೆಯಲ್ಲಿ ತುಂಬಾ ತಣ್ಣೀರಿರ್ಲಿ! (ಮಂ)

-ಡೆ ತೊಳೆಯ್ಲಿಕ್ಕುಪಯೋಗವಾಗ್ಲಿ!
ದುನಾಥನ ಗೀತೆ ಅದಾಗ್ಲಿ! (ಅ)
-ಲ್ಲಿ, ಇಲ್ಲಿ, ಚೆಲ್ಲಿ ಹಾಳಾಗದಿರ್ಲಿ!
ತುಂಟ ಮಕ್ಕಳು ದೂರದಲ್ಲಿರ್ಲಿ!
ಬಾಯಿ, ಕೈ, ಮೈಯೆಲ್ಲಾ ಮಡಿಯಾಗ್ಲಿ!
ರಳರಾಮೇಲೆ ಹತ್ರ ಬರ್ಲಿ! (ಕ)
-ಣ್ಣೀರೊರೆಸಿಕೊಂಡೊಟ್ಟಿಗೆ ಬರ್ಲಿ! (ಹು)
-ರಿಗಡ್ಲೇ ಕೈಯಲ್ಲೀಸ್ಕೊಂಡು ತಿನ್ಲಿ! (ಬ)
-ರ್ಲಿ ನಿರಂಜನಾದಿತ್ಯನೂರ್ಸೇರ್ಲಿ!!!

ಡೋಲಿನ ಸದ್ದು ಕೇಳುತಿದೆ! (ಮಾ)

-ಲಿಕಗದು ಬೇಡವಾಗಿದೆ!
ಷ್ಟ, ಕಷ್ಟವನಿಗೇನಿದೆ?
ದ್ದಿಲ್ಲದಿರ್ಬೇಕೆಂಬುದಿದೆ! (ಸ)
-ದ್ದು ಮಾಡಿ ಡೊಲ್ಹರಿಯಲಿದೆ!
ಕೇಳಿದವ್ರು ಪೆಚ್ಚಾಗಲಿದೆ! (ಬಾ)
-ಳು ಗೋಳಾಗಿ ಹೋಳಾಗಲಿದೆ! (ಮಿ)
-ತಿ

ಈರ್ದಿದ್ರೆ ಗೌರವವಿದೆ! (ತಂ)
-ದೆ ನಿರಂಜನಾದಿತ್ಯನೆಂದೆ!!!

ನಿನ್ನ ಪ್ರಶ್ನೆಗೆ ನೀನೇ ಉತ್ತರಿಸಬಲ್ಲೆ! (ನ)

-ನ್ನ ಮಾತಿನಂತೆ ನೀನೀಗ ನಡೆಯಲೊಲ್ಲೆ!
ಪ್ರಯತ್ನಪಟ್ಟು ಕಾರಣ ಹುಡ್ಕು ನಿನ್ನಲ್ಲೇ! (ಪ್ರ)
-ಶ್ನೆಯುತ್ತರ ಕಾರ್ಯಗತ ಮಾಡು ಇದ್ದಲ್ಲೇ!
ಗೆಳೆಯರೆಲ್ಲರೂ ಇರಲಿ ದೂರದಲ್ಲೇ!
ನೀತಿ, ರೀತಿ, ನಿರ್ಧರಿಸು ಮನಸ್ಸಿನಲ್ಲೇ!
ನೇಮದಿಂದದನ್ನಾಚರಿಸು ಮನೆಯಲ್ಲೇ!
ದಾಸೀನ ತೋರಿದರೆ ಪಾರಾಗಲೊಲ್ಲೆ! (ಸು)
-ತ್ತಮುತ್ತುತ್ತಮ ವಾತಾವರಣ ಮಾಡಲ್ಲೇ! (ವೈ)
-ರಿ ನಿಗ್ರಹ ಮಾಡಭ್ಯಾಸಬಲದಿಂದಲ್ಲೇ!
ದಾ ನಾಮಜಪದಿಂದೆಲ್ಲಾ ಗೆಲ್ಲಬಲ್ಲೆ!
ಯಲಾಡಂಬರದ ಮೇಲ್ನಡೆಸು ಹಲ್ಲೆ! (ಬ)
-ಲ್ಲೆ, ನಿರಂಜನಾದಿತ್ಯಾಶೀರ್ವಾದಿದಿಂದಿಲ್ಲೇ!!!

ನಿನ್ನನ್ನು ನಿರೀಕ್ಷಿಸಿ ಫಲವಿಲ್ಲ! (ನ)

-ನ್ನನ್ನು ಪರೀಕ್ಷಿಸಿಯೂ ಫಲವಿಲ್ಲ! (ಅ)
-ನ್ನುವುದು, ಆಡುವುದು, ಏಕಿದೆಲ್ಲಾ?
ನಿನ್ನ ಲೀಲಾಜಾಲವೇ ಊರಲ್ಲೆಲ್ಲಾ!
ರೀತಿ, ನೀತಿ, ತಿದ್ದದೆ ಗತಿಯಿಲ್ಲ!
ಕ್ಷಿತಿಪತಿಯಾಗಲು ಬೇಕಿದೆಲ್ಲಾ!
ಸಿಹಿ, ಕಹಿ, ಪ್ರಕೃತಿ ರುಚಿ ಎಲ್ಲ!
ಲ ಕರ್ಮದಂತೆಂಬುದು ಸುಳ್ಳಲ್ಲ!
ಕ್ಷ್ಯ ಶ್ರೀಪಾದದಲ್ಲಿಡಬೇಕೆಲ್ಲಾ!
ವಿಕಲ್ಪ, ಸಂಕಲ್ಪ , ಬಿಡಬೇಕೆಲ್ಲಾ! (ಬ)
-ಲ್ಲ, ನಿರಂಜನಾದಿತ್ಯ ಅದನ್ನೆಲ್ಲಾ!!!

ಉಂಡಾದ್ಮೇಲೈದ್ನಿಮಿಷ ವಿರಾಮ! (ಉ)

-ಡಾಹಿಸಿದ್ಮೇಲ್ವಿಮಾನ ದಿಗ್ಭ್ರಮ! (ಹೋ)
-ದ್ಮೇಲೆ ಬಹಳದೂರ ವಿಕ್ರಮ! (ಓ)
-ಲೈಸಿದ್ಮೇಲೊಡ್ಡೋಲಗ ಸಂಭ್ರಮ! (ಇ)
-ದ್ನಿನ್ನ, ನನ್ನ ಯೋಗದೊಂದು ಕ್ರಮ!
ಮಿತ್ರಗಿದ್ರ ಪೂರ್ಣ ಪರಿಶ್ರಮ!
ಣ್ಮುಖಗಾನಂದ ಪರಾಕ್ರಮ!
ವಿರಕ್ತ ದತ್ತಾವಧೂತಾಶ್ರಮ!
ರಾತ್ರಿ, ಹಗಲನುಷ್ಠಾನ ಪ್ರೇಮ! (ಪ್ರೇ)
-ಮ ನಿರಂಜನಾದಿತ್ಯ ಸುನಾಮ!!!

ನಿನ್ನಿಷ್ಟ ಸಿದ್ಧಿ ನೀನ್ಮಾಡಿಕೊಂಡಿ! (ನ)

-ನ್ನಿಷ್ಟ ಸಿದ್ಧಿಗೇನು ದಾರಿ ಕಂಡಿ? (ಕ)
-ಷ್ಟ ನನ್ನದನ್ನು ನೀನರಿತ್ಕೊಂಡಿ!
ಸಿರ ಬಾಗ್ಸಿ ಸೇವೆ ಮಾಡಿಸ್ಕೊಂಡಿ! (ಶು)
-ದ್ಧಿ ಇದೇ ತ್ರಿಕರಣೆಂದೊಪ್ಕೊಂಡಿ!
ನೀನೇಕಿನ್ನೂ ದೂರದಲ್ಲಿದ್ಕೊಂಡಿ? (ಉ)
-ನ್ಮಾದ ಹಿಡ್ಸಿ ನನ್ನ ಕುಣಿಸ್ಕೊಂಡಿ!
ಡಿಕ್ಕಿ ಹೊಡೆಯ್ದಂತೆನ್ನ ನೋಡ್ಕೊಂಡಿ!
ಕೊಂಡಾಡುವೆನು, ಬಾರೇ ಚಾಮುಂಡಿ! (ಕೂ)
-ಡಿ ನಿರಂಜನಾದಿತ್ಯನಾಗ್ಚಂಡಿ!!!

ಉಸಿರಾಟವಿರುವವರೆಗೆಲ್ಲಾ!

ಸಿಹಿ, ಕಹಿ, ಹುಳಿ, ಖಾರಗಳೆಲ್ಲಾ!
ರಾತ್ರಿ, ಹಗಲು, ಉದಯಾಸ್ತವೆಲ್ಲಾ! (ಕೂ)
-ಟ, ನೋಟ, ಆಟ, ಪಾಠಾದಿಗಳೆಲ್ಲಾ!
ವಿಕಲ್ಪ, ಸಂಕಲ್ಪಾರೋಪಗಳೆಲ್ಲಾ!
ರುಚಿ, ಶುಚಿ, ಹಸಿವೆ, ದಾಹವೆಲ್ಲಾ!
ಸನ, ಅಶನಗಳಿಚ್ಛೆಯೆಲ್ಲಾ!
ರ್ಣಾಶ್ರಮ ಧರ್ಮದಾರ್ಭಟವೆಲ್ಲಾ! (ಹ)
-ರೆಯ, ವೃದ್ಧಾಪ್ಯಾದ್ಯವಸ್ಥೆಗಳೆಲ್ಲಾ!
ಗೆಳೆಯ, ಗೆಳತಿಯರ್ಮೋಹವೆಲ್ಲಾ! (ಬ)
-ಲ್ಲಾ, ನಿರಂಜನಾದಿತ್ಯಾನಂದವೆಲ್ಲಾ!!!

ಬೇಡುವವರು ಬೇಡುತ್ತಲೇ ಇದ್ದಾರೆ! (ನೀ)

-ಡುವವರು ಕಣ್ಮುಚ್ಚಿ ಕೂತೇ ಇದ್ದಾರೆ! (ದೇ)
-ವರೆಂಬವರೂ ಹೀಗೇ ಸುಮ್ಮಗಿದ್ದಾರೆ! (ಯಾ)
-ವ ನೆರವೂ ಇಲ್ಲದನೇಕರಿದ್ದಾರೆ! (ಯಾ)
-ರು ಅವರನ್ನು ಕೇಳುವವರಿದ್ದಾರೆ?
ಬೇಲಿ ಹೊಲ ಮೇದ್ರೆ ಪೈರಿಗಾರಿದ್ದಾರೆ? (ನ)
-ಡು ಬೀದಿಯಲ್ಲೇ ಕೊಲೆ ಮಾಡುತ್ತಿದ್ದಾರೆ! (ಸು)
-ತ್ತಮುತ್ಲವ್ರು ಅಸಹಾಯಕ್ರಾಗಿದ್ದಾರೆ!
ಲೇಖಕನ ಬಾಯಿಗ್ಮಣ್ಣು ಹಾಕಿದ್ದಾರೆ!
ಹ, ಪರ, ಜೀವರ್ಕಂಗಾಲಾಗಿದ್ದಾರೆ! (ಒ)
-ದ್ದಾಟ ಸಾಕ್ಮಾಡೆಂದು ಪ್ರಾರ್ಥಿಸುತ್ತಿದ್ದಾರೆ! (ಮೊ)
-ರೆ ನಿರಂಜನಾದಿತ್ಯನಿಗಿಡ್ತಿದ್ದಾರೆ!!!

ದೂರ್ವ ಸಾ

ಈಪ್ಯಕ್ಕಿಂತ ದೂರ್ದಸಾಲೋಕ್ಯ ಲೇಸು! (ಇ)

-ರ್ವಲ್ಲೆ ಇರಬೇಕಾದಂತಿದ್ದರೆ ಅದೇ ಲೇಸು!
ಸಾಧಕಗೆ ತ್ರಿಕರಣ ಶುದ್ಧಿಯಾದ್ರೆ ಲೇಸು!


ರದಿದ್ರೆ ಗುರು, ಹಿರಿಯರ ಮಾತು ಲೇಸು! (ಗೋ)
-ಪ್ಯವಿಲ್ಲದ ಗೋಪೀ ಭಕ್ತಿಭಾವವಿದ್ರೆ ಲೇಸು! (ಹ)
-ಕ್ಕಿಂದಿದ್ದದ್ದು ನಾಳೆಯಿರದೆಂದರಿತ್ರೆ ಲೇಸು!
ಪ್ಪೆಣಿಸುವುದಕ್ಕಿಂತ ಗುಣ ಗ್ರಾಹ್ಯ ಲೇಸು!
ದೂರದ ಬೆಟ್ಟಕ್ಕಿಂತ ಹತ್ರದ ತಿಟ್ಟು ಲೇಸು! (ಬಾ)
-ರ್ದವ್ನ ನಿರೀಕ್ಷೆಗಿಂತ ಇದ್ದವ್ನ ಲಕ್ಷ್ಯ ಲೇಸು!
ಸಾಧು, ಸಜ್ಜನರ ಸಂಗ ಎಲ್ಲಕ್ಕಿಂತ ಲೇಸು!
ಲೋಕೋದ್ಧಾರವಿದರಿಂದೆಂದು ನಂಬಿದ್ರೆ ಲೇಸು! (ಐ)
-ಕ್ಯದಿಂದ ಸೌಖ್ಯವೆಂದರಿತಿರುವುದು ಲೇಸು!
ಲೇಪ ವಿಷಯಾಸಕ್ತಿಯದ್ದಾಗದಿದ್ರೆ ಲೇಸು!
ಸುಖಕ್ಕೆ ನಿರಂಜನಾದಿತ್ಯಾದರ್ಶ ಲೇಸು!!!

ಲಿಪ್ತ ಸನ್ಯಾಸಿಗಿಂತ ಲಿಪ್ತ ಸಂಸಾರಿ ಮೇಲು! (ಪ್ರಾ)

-ಪ್ತವಾದದ್ದರಲ್ಲಿ ತೃಪ್ತನಾಗುವವ ಮೇಲು!
ರೋಜದೆಲೆಯಂತಿರುವವ ಸದಾ ಮೇಲು! (ಅ)
-ನ್ಯಾಯ ಯಾರಿಗೂ ಮಡದವ ಬಹಳ ಮೇಲು!
ಸಿಹಿ, ಕಹಿ, ಸಮನಾಗೆಣಿಸುವವ ಮೇಲು! (ಈ)
-ಗಿಂದ್ಲೇ ದಿವ್ಯ ಜೀವನ ನಡೆಸುವವ ಮೇಲು!
ನ್ನ ತಪ್ಪನ್ನು ತಾನು ತಿದ್ದುವವನೇ ಮೇಲು! (ಮ)
-ಲಿನ ವಾಸನೆಯಿಲ್ಲದಿಹ ಮನಸ್ಸು ಮೇಲು! (ಕ್ಲಿ)
ಪ್ತವಾದಾಹಾರ, ವಿಹಾರವಿರುವವ ಮೇಲು!
ಸಂಭಾವನಾಪೇಕ್ಷೆಯಿಲ್ಲದ ಸೇವೆಯೇ ಮೇಲು!
ಸಾಲ ಮಾಡುವ ಶೀಲವಿಲ್ಲದವನೇ ಮೇಲು!
ರಿಸಿ, ಮುನಿಗಳ ಪವಿತ್ರ ಜೀವನ ಮೇಲು!
ಮೇಲು, ಕೀಳೆನ್ನದೆ ಬಾಳುವವ ಬಹು ಮೇಲು! (ಮೇ)
-ಲು, ನಿರಂಜನಾದಿತ್ಯ ಎಲ್ಲರಿಗಿಂತ ಮೇಲು!!!

ಶಿಷ್ಟಾಚಾರ ನಮ್ಮಲ್ಲಿರಲಿ! (ಭ್ರ)

-ಷ್ಟಾಚಾರ ನಮ್ಮಿಂದ ತೊಲಗ್ಲಿ!
ಚಾರಿತ್ರ್ಯ ನಮ್ಮದು ಬೆಳಗ್ಲಿ!
ವಿ ವಂಶದವರಾಳಲಿ!
ಶ್ವರಕ್ಕಾಶಿಸದಿರಲಿ! (ಒ)
-ಮ್ಮತದ ಜನಾಂಗವಿರಲಿ! (ಬ)
-ಲ್ಲಿದ, ಬಡವ, ಭೇದ ಹೋಗ್ಲಿ! (ಪ)
-ರಮಾರ್ಥ ದುಂದುಭಿ ಮೊಳಗ್ಲಿ! (ಮಾ)
-ಲಿಕ ನಿರಂಜನಾದಿತ್ಯಾಗ್ಲಿ!!!

ಅದಿದು, ನನ್ನದೆಂಬಭಿಮಾನಿ ನಾನು!

ದಿನ, ರಾತ್ರೆರಡೂ ನನ್ನದೆಂಬೆ ನಾನು!
ದುಡಿವವ ನಾನು, ದುಡಿಸ್ವವ ನಾನು!
ರನೂ, ನಾರಿಯೂ ನಾನೆನ್ನುವೆ ನಾನು! (ನ)
-ನ್ನ ಬಿಟ್ಟಿನ್ನೊಂದಿಲ್ಲೆಂದರಿತಿಹೆ ನಾನು! (ಎಂ)
-ದೆಂದಿಗೂ, ಎಲ್ಲೆಲ್ಲಿಯೂ, ಎಲ್ರಲ್ಲೂ ನಾನು!
ಡವನು ನಾನು, ಬಲ್ಲಿದವನೂ ನಾನು!
ಭಿಕ್ಷುಕನೂ ನಾನು, ರಕ್ಷಕನೂ ನಾನು!
ಮಾನಿಯೂ ನಾನು, ಮಾನಹೀನನೂ ನಾನು!
ನಿಗ್ರಹಾನುಗ್ರಹ ಸಮರ್ಥನೂ ನಾನು!
ನಾನೂ, ನೀನೂ, ಒಂದಾದುದೇ ಕಾಮಧೇನು!
ನುಡಿವೆಣ್ಣು ನಿರಂಜನಾದಿತ್ಯ ನಾನು!!!

ಆಜ್ಞಾಪಾಲನೆ ಎಲ್ಲಿ ತನಕ?

ಜ್ಞಾನ ನೆಲೆ ನಿಲ್ಲುವ ತನಕ!
ಪಾಪ, ಪುಣ್ಯವಿಲ್ಲದ ತನಕ!
ಕ್ಷ್ಯ ಸಿದ್ಧಿಯಾಗುವ ತನಕ!
ನೆಟ್ಟದ್ದು ಫಲಿಸುವ ತನಕ!
ಚ್ರವೂ ಕನ್ಸೆನ್ನುವ ತನಕ! (ಅ)
-ಲ್ಲಿಲ್ಲೆಲ್ಲೆಲ್ಲಿ ತಾನಾಗ್ವ ತನಕ!
ಳಮಳ ಅಳಿವ ತನಕ!
ಷ್ಟ, ಕಷ್ಟಕ್ಕಂಜದ ತನಕ! (ಲೋ)
-ಕ ನಿರಂಜನಾದಿತ್ಯಪ್ಪ ತನ್ಕ!!!

ಸಾಧು, ಸಜ್ಜನರಿಗಾರು ದಿಕ್ಕು? (ಬಂ)

-ಧು, ಬಾಂಧವರಿಗೆಲ್ಲಾ ಬೇಡಕ್ಕು!
ಕಲೇಶ್ವರನಿಗೂ ಬೇಡಕ್ಕು! (ಕ)
-ಜ್ಜಕ್ಕೆ ತಕ್ಕ ಕೂಲಿ ಸಿಗದಕ್ಕು!
ಷ್ಟ, ಕಷ್ಟವಂತ್ಯವಾಗದಕ್ಕು!
ರಿಸಿ ಜೀವನವೂ ವ್ಯರ್ಥವಕ್ಕು!
ಗಾಲಿ ಜಾರಿದ ಗಾಡಿಯೇನಕ್ಕು?
ರುಚಿಯಿಲ್ಲದೂಟ ತಿಪ್ಪೆಗಕ್ಕು! (ಆ)
-ದಿತ್ಯ ಸೇವೆ ಮಾಡಿದರೇನಕ್ಕು? (ಅ)
-ಕ್ಕು, ನಿರಂಜನಾದಿತ್ಯಾನಂದಕ್ಕು!!!

ಮಾನ, ಮರ್ಯಾದೆ, ತ್ರಿಲಿಂಗಕ್ಕೂ ಸಮಾನ!

ರರಿದರಿಯದಿದ್ದರಪಮಾನ!
ಹಿಳೆಯರಿಗೂ ಆಗ್ಬೇಕು ಸನ್ಮಾನ! (ವೀ)
-ರ್ಯಾಭಿವೃದ್ಧಿಯಿಂದ ಆರೋಗ್ಯ ಜೀವನ! (ತಂ)
-ದೆ ದೇವರಂತಾದರೆ ಜನ್ಮ ಪಾವನ! (ಅ)
-ತ್ರಿ ಪುತ್ರನಾದರ್ಶದಂತಿರ್ಬೇಕ್ಸಜ್ಜನ!
ಲಿಂಗ, ರಂಗರೊಂದೆಂಬುದೇ ನಿಜ ಜ್ಞಾನ!
ಣಪತಿಯ ಬಾಳಿನದ್ದೀ ವಿಧಾನ! (ಒ)
-ಕ್ಕೂಟದಭ್ಯಾಸವಿಲ್ಲದಿದ್ದರಧ್ವಾನ!
ಜ್ಜನರಿಗೆ ಸತ್ಸಂಗವೇ ಪ್ರಧಾನ!
ಮಾಡಬೇಕಿದ್ದಾಗ ದೀನರಿಗೆ ದಾನ! (ದಾ)
-ನ ನಿರಂಜನಾದಿತ್ಯನಿಂದನುದಿನ!!!

ಹುಚ್ಚನಿಗುಚ್ಚೆ ಕುಡಿಯಬೇಕೆಂಬಿಚ್ಛೆ! (ಬೆ)

-ಚ್ಚಗಿನ ಹಚ್ಚಡ ಚಳಿ ಬಂದಾಗಿಚ್ಛೆ!
ನಿನ್ನಿಚ್ಛೆ, ನನ್ನಿಚ್ಛೆ, ಎಲ್ಲಾ ದೇವರಿಚ್ಛೆ!
ಗುಣ, ದೋಷ ನೋಡಿ ಪಡಬೇಕು ಇಚ್ಛೆ! (ಕ)
-ಚ್ಛೆ, ಕೈ, ಬಾ

ಸ್ವಚ್ಛವಿರ್ಬೆ

ಕೆಂಬುದಾರ್ಯೇಚ್ಛೆ!
ಕುಜನರಿಗರಿವಾಗದೀ ಸದಿಚ್ಛೆ! (ಹೊ)
-ಡಿ, ಬಡಿ, ಕಡಿಯೆಂಬುದವನಿಗಿಚ್ಛೆ!
ದುಪನ ಸಂತಾನಕ್ಕೂ ಬಂತಾ ಇಚ್ಛೆ!
ಬೇಡೆಂದ್ರೂ ಕೃಷ್ಣನಾಜ್ಞೆ

ಈರಿತಾ ಇಚ್ಛೆ!
ಕೆಂಡವಾಯ್ತವರನ್ನು ಸುಡ್ಲಿಕ್ಕಾ ಇಚ್ಛೆ!
ಬಿಟ್ಟಿ ಬಸವನ ಕಟ್ಟಬಾರದಿಚ್ಛೆ! (ಇ)
-ಚ್ಛೆ, ನಿರಂಜನಾದಿತ್ಯಗೆ ನಿರಿಚ್ಛೆ!!!

ನಿನ್ನ ಸಂಗ ನಾನು ಬಿಡಲಾರೆ! (ನ)

-ನ್ನ ಸಂಗ ನೀನು ಇಚ್ಛಿಸಲಾರೆ!
ಸಂಗ ಮುಕ್ತ ನೀನೆಂಬುದು ಖರೆ!
ತಿ ನನಗೆ ಇನ್ಯಾರು ಬೇರೆ?
ನಾ, ನೀನೊಂದಾಗ್ಬೇಕೆಂದೆನ್ನ ಮೊರೆ! (ನೀ)
-ನುಪೇಕ್ಷಿಸಿದ್ರೆನಗಿದು ಸೆರೆ!
ಬಿಡ್ಬೇಡೆನ್ನ ಕೈಯನ್ನೆನ್ನ ಧೊರೆ! (ಭಂ)
-ಡತನ ನಾನೆಂದೂ ಮಾಡಲಾರೆ! (ಕ)
-ಲಾತೀತ ನಿನ್ನಂತೆನ್ನ ಗೈದ್ವೊರೆ! (ಇ)
-ರೆ, ನಿರಂಜನಾದಿತ್ಯನಗ್ಲಿರೆ!!!

ಪರಮಾರ್ಥಾಭ್ಯಾಸ ಮಾಡ್ಬೇಕೇಕೆ? (ನಿ)

-ರರ್ಥ ಜೀವನ ತಪ್ಪಿಸಲಿಕ್ಕೆ!
ಮಾಯಾ, ಮೋಹ, ವಿಮುಕ್ತನಾಗ್ಲಿಕ್ಕೆ! (ಸ್ವಾ)
-ರ್ಥಾತಿರೇಕವಿಲ್ಲದಾಗಲಿಕ್ಕೆ! (ಸ)
-ಭ್ಯಾತ್ಮನಾಗ್ನಿತ್ಯಾನಂದನಾಗ್ಲಿಕ್ಕೆ!
ರ್ವಾತ್ಮ ಭಾವ ವಿರಾಜಿಸ್ಲಿಕ್ಕೆ!
ಮಾನವ ಜನ್ಮ ಸಾರ್ಥಕಾಗ್ಲಿಕ್ಕೆ! (ನೋ)
-ಡ್ಬೇಕ್ದೇವ್ರನ್ನೆಂಬಿಷ್ಟ ಸಿದ್ಧಿಸ್ಲಿಕ್ಕೆ!
-ಕೇಳಿದ್ದೂ, ಹೇಳಿದ್ದೂ ನಿಜಾಗ್ಲಿಕ್ಕೆ! (ಏ)
-ಕೆ? ನಿರಂಜನಾದಿತ್ಯಾಗ್ಲಿಕ್ಕೆ!!!

ಪಾಪ, ಪುಣ್ಯಕ್ಕಾಶೆಯೇ ಕಾರಣ! (ಪಾ)

-ಪ, ಪುಣ್ಯದಿಂದ ಪತನೋತ್ಥಾನ!
ಪುರುಷಾರ್ಥ ಬಾಳಿನ ದರ್ಪಣ! (ಗ)
-ಣ್ಯ, ಅಗಣ್ಯತೆಗಿದು ಪ್ರಮಾಣ! (ವಾ)
-ಕ್ಕಾಯ, ಮನಶುದ್ಧಿಯವ ಜಾಣ!
ಶೆಟ್ಟಿಯ ಗುಟ್ಟರಿವಾ ನಿಪುಣ!
ಯೇಸುವಿನಲ್ಲೂ ಗುಣ ಗ್ರಹಣ!
ಕಾಮನದ್ದು ಕೆಟ್ಟ ಪ್ರಕರಣ!
ತಿಗಿದ್ರಿಂದ ಬುದ್ಧಿ ಭ್ರಮಣ! (ಬಾ)
-ಣ, ನಿರಂಜನಾದಿತ್ಯ ಕಿರಣ!!!

ಆಶಾ ನಾಶವೇ ಈಶತ್ವ!

ಶಾರೀರಿಕವೇ ಜೀವತ್ವ!
ನಾಶವಾಗದ್ದೇ ಬ್ರಹ್ಮತ್ವ! (ನಾ)
-ಶವಾಗುವುದೇ ನರತ್ವ!
ವೇದಾಂತವೇ ನಿಜತತ್ವ!
ರೈದಿಂದ್ರ್ಯಾತೀತಾ ತತ್ವ!
ಶಾಕ್ತಾ ಶಕ್ತರೆಲ್ಲಾ ತತ್ವ! (ತ)
-ತ್ವ ನಿರಂಜನಾದಿತ್ಯತ್ವ!!!

ಚಂದನ ಶಿಲಾನನಕ್ಕೇಕೆ ಲೇಪನ? (ಸುಂ)

-ದರ ಬಾಲಾನನಕ್ಕಾಗಲಾ ಲೇಪನ!
ಶ್ವರ ದೇಹಕ್ಕೆ ಸಂಸಾರ ಲೇಪನ!
ಶಿವಲಿಂಗಕ್ಕೆ ಸದಾ ಭಸ್ಮ ಲೇಪನ!
ಲಾಭದಾಯಕವಿದು ಜನ್ಮ ಪಾವನ!
ಮಿಸಬೇಕು ಅದಕ್ಕೆ ಪ್ರತಿ ದಿನ!
ರ ಹರನಾಗಲು ಬೇಕು ಸಾಧನ! (ಬೆ)
-ಕ್ಕೇಕೆ ಬೇಕು? ಅದು ಪತನ ಕಾರಣ!
ಕೆಟ್ಟ ಮೇಲ್ಬುದ್ಧಿ ಬಂದ್ರೇನು ಪ್ರಯೋಜನ?
ಲೇಸಕ್ಕು! ಸತತ ಮಾಡಾತ್ಮ ಚಿಂತನ!
ರಮಾರ್ಥ ಸಾಗರ ಗೀತಾ ಬೋಧನ!
ರ, ಹರಿ, ನಿರಂಜನಾದಿತ್ಯಾನನ!!!

ಧರ್ಮ, ಕರ್ಮವರ್ತಿ ನಿಸ್ವಾರ್ಥಿ! (ಮ)

-ರ್ಮವಿದರಿತವ ಮೋಕ್ಷಾರ್ಥಿ! (ತ್ರಿ)
-ಕರಣ ಶುದ್ಧ ಪರಮಾರ್ಥಿ! (ಚ)
-ರ್ಮದ ಗೊಂಬೆಗಂಟಿಹ ಸ್ವಾರ್ಥಿ!
ಸನಾಶನಕ್ಕಾತಭ್ಯರ್ಥಿ! (ಕೀ)
-ರ್ತಿಗಿರ್ಬೇಕು ಕರ್ತವ್ಯ ಸ್ಫೂರ್ತಿ! (ಅ)
-ನಿತ್ಯಕ್ಕಾಶಿಪನು ಕಾಮ್ಯಾರ್ಥಿ!
ಸ್ವಾನುಭವಿ ಶ್ರೀ ದತ್ತ ಮೂರ್ತಿ! (ಅ)
-ರ್ಥಿ, ಶ್ರೀ ನಿರಂಜನಾದಿತ್ಯಾರ್ಥಿ!!!

ವೀಣಾಪಾಣಿ ವಾಣಿ ರಾಣಿ! (ಗು)

-ಣಾತೀತಳವಳ್ಗೀರ್ವಾಣಿ!
ಪಾಮರರ್ಗೆ ಸ್ಪರ್ಶಮಣಿ! (ದ)
-ಣಿದವರ್ಗೆ ಸಂಜೀವಿನಿ!
ವಾಸುದೇವನ್ಕೊಳಲ್ಧ್ವನಿ! (ಗ)
-ಣಿ, ಸರ್ವ ವಿದ್ಯಾವರ್ಧಿನಿ!
ರಾಣಿ, ಬ್ರಹ್ಮನ ಅರ್ಧಾಂಗಿಣಿ! (ವಾ)
-ಣಿ, ನಿರಂಜನಾದಿತ್ಯಾಣಿ!!!

ಸುಖ, ಶಾಂತಿ, ಜೀವನವಿರಲಿ! (ಮು)

-ಖದಲ್ಲದು ಹೊರ ಹೊಮ್ಮುತ್ತಿರ್ಲಿ! (ಪ್ರ)
-ಶಾಂತ ವಾತಾವರಣವಿರಲಿ! (ಪ್ರ)
-ತಿ ದಿನಕ್ಕೊಂದು ನೇಮವಿರಲಿ!
ಜೀವವಿರುವವರೆಗದಿರ್ಲಿ!
ರ ಬೇಡುವಭ್ಯಾಸ ತಪ್ಪಿರ್ಲಿ!
ಶ್ವರಕ್ಕಂಟಿಕೊಳ್ಳದಿರಲಿ!
ವಿಕಲ್ಪ, ಸಂಕಲ್ಪವಿಲ್ಲದಿರ್ಲಿ! (ಪ)
-ರಮಾತ್ಮನಲ್ಲಿ ನಂಬಿಗೆಯಿರ್ಲಿ! (ಮಾ)
-ಲಿಕ ನಿರಂಜನಾದಿತ್ಯಾಗಿರ್ಲಿ!!!

ನಾಥ ನಿಚ್ಛಾವರ್ತಿಯಾಗು! (ರ)

-ಥ ನೀನೀಗವನಿಗಾಗು!
ನಿತ್ಯ ಸೇವಾಸಕ್ತನಾಗು! (ಸ್ವೇ)
-ಚ್ಚಾಚಾರ ವಿದೂರನಾಗು!
ಕ್ರ ದಾರಿ ಬಿಟ್ಟು ಸಾಗು! (ಕೀ)
-ರ್ತಿ ಶ್ರೀ ಪಾದಕ್ಕೆಂದು ಬಾಗು!
ಯಾದವನ ರಾಧೆಯಾಗು! (ಆ)
-ಗು, ನಿರಂಜನಾದಿತ್ಯಾಗು!!!

ನನ್ನನ್ನು ತಿದ್ದಿಕೊಳ್ಳುವ ಶಕ್ತಿ ನನಗಿಲ್ಲ! (ನಿ)

-ನ್ನನ್ನು ನಂಬಿದ್ದೇಕೆಂದು ನಾನು ಹೇಳಬೇಕಿಲ್ಲ! (ನಿ)
-ನ್ನುಡಿಯಲ್ಲಿ ಬಿದ್ದ ಕೂಸನ್ನರದ್ದಾಗ್ವುದಿಲ್ಲ!
ತಿಳಿದಿಹ ನಿನ್ನ ಮಗ ನಿನ್ನ ಶಕ್ತಿಯೆಲ್ಲಾ! (ಅ)
-ದ್ದಿ ಪಾತಾಳದಲ್ಲಿವನನ್ನು ಫಲವೇನಿಲ್ಲ!
ಕೊಚ್ಚೆಯುಚ್ಚೆ ಗುಂಡಿಯ ವಾಸನೆ ಬೇಕಾಗಿಲ್ಲ! (ತ)
-ಳ್ಳುವುದಿವನನ್ನದರಲ್ಲಿ ವಿಹಿತವಲ್ಲ!
ರ ಗುರು ನೀನಾಗಿರುವುದು ಅದಕ್ಕಲ್ಲ!
ರಣು, ಶರಣೆಂದೊಪ್ಪಿಸಿಹೆನು ನಾನೆಲ್ಲಾ! (ಭ)
-ಕ್ತಿ, ಭಾವ ಬೆಳೆಸುವ ಭಾರ ನಿನ್ನದೇ ಎಲ್ಲಾ!
ಯ, ವಿನಯದಿಂದೊರೆವೆ ನಾನಿದನ್ನೆಲ್ಲಾ!
ಗು ನಗುತ ಬಂದೆನ್ನ ಉದ್ಧರಿಸೋ ಪುಲ್ಲ!
ಗಿರಿಧರ ಗೋಪಾಲ ನೀನಾಗಿರುವೆಯಲ್ಲಾ! (ಬ)
-ಲ್ಲ ನಿರಂಜನಾದಿತ್ಯ ನಿನ್ನ ಲೀಲೆಯನ್ನೆಲ್ಲಾ!!!

ನನ್ನಿಷ್ಟದಂತೆ ನೀನೇಕಿಲ್ಲೆಂದ್ನಾಬಲ್ಲೆ (ನ)

-ನ್ನಿಷ್ಟ ಅಶಾಶ್ವತವೆಂದು ನೀನು ಬಲ್ಲೆ! (ಅ)
-ಷ್ಟ ಮದಾಸಕ್ತಳ್ನಾನೆಂದು ನೀನು ಬಲ್ಲೆ!
ದಂಭ, ಧರ್ಪ ನೀನೊಪ್ಪೆಯೆಂದು ನಾ ಬಲ್ಲೆ!
ತೆಕ್ಕೆ ಬಿಚ್ಚಿದ ಸರ್ಪ ನಾನೆಂದ್ನೀ ಬಲ್ಲೆ!
ನೀನೆಂತಿರ್ಪೆಯೆಂದ್ನಾನಿನ್ನೂ ಹೇಳಲೊಲ್ಲೆ!
ನೇತ ನೀನೆಂದು ಖಚಿತವಾಗ್ನಾ ಬಲ್ಲೆ!
ಕೆಚ್ಚಿಕ್ಕಿದ್ರೆನ್ನ ಬಾಳಿಗಾನುಳಿಯ್ಲೊಲ್ಲೆ! (ಕ)
-ಲ್ಲೆಂದಹಲ್ಯೆಗೆ ಜೀವ ನೀ ಬರಿಸ್ಬಲ್ಲೆ? (ಇಂ)
-ದ್ನಾನೇಕೆ ಅನುಗ್ರಹಿಸಲ್ಪಡಲೊಲ್ಲೆ?
ಲಾಬಲ ನೋಡ್ದೆ ಕೃಪೆ ಮಾಡೀಗಿಲ್ಲೇ! (ಬ)
-ಲ್ಲೆ, ನಿರಂಜನಾದಿತ್ಯನಾನ್ಬಿಟ್ಟಿರ್ಲೊಲ್ಲೆ!!!

ಹುಟ್ಟಿತು, ಬೆಳೀತು, ಸತ್ತಿತು ಮನಸು (ಕ)

-ಟ್ಟಿ ಮನೆ, ಮಠ ಪಟ್ಟವೇರ್ತಾ ಮನಸು!
ತುಪ್ಪ, ಹಾಲು, ಮೊಸ್ರು ತಿಂದಿತಾ ಮನಸು!
ಬೆರೆತು ಸತಿಯೊಡನಿತ್ತಾ ಮನಸು! (ಆ)
-ಳೀ, ಬಾಳೀ, ಮಲಿನವಾಯಿತಾ ಮನಸು!
ತುದಿ, ಮೊದ್ಲಿಲ್ದಾಸೆಗೀಡಾಯ್ತಾ ಮನಸು!
ಟೆಯಾಡಿ ದಿಟಕ್ಕಡ್ಡಾಯ್ತಾ ಮನಸು! (ಹ)
-ತ್ತಿ, ಇಳಿದು, ಸುತ್ತಿ, ಸುಸ್ತಾಯ್ತಾ ಮನಸು!
ತುಕ್ಕು ಹಿಡಿದ ಯಂತ್ರವಾಯ್ತಾ ಮನಸು!
ಳೆ, ಗಾಳಿಯಲ್ಲೊದ್ದಾಡಿತಾ ಮನಸು!
ರಳುರುಳಿ ಮುದುರಿತಾ ಮನಸು! (ಲೇ)
-ಸು ನಿರಂಜನಾದಿತ್ಯಾನಂದ ಮನಸು!!!

ಭಾವ ಭರಿತನಾದವ ಜೀವ! (ಭಾ)

-ವ ರಹಿತನಾಗಿರ್ಪವ ದೇವ!
ವ ಭಯವಿಲ್ಲದವ ಶಿವ!
ರಿಪು ಕುಲಕಾಲಾ ಮಹಾದೇವ!
ಪೋನಿಧಿ ಈತ ಅಂಬಾಧವ!
ನಾಮ ಜಪಾನಂದ ಸ್ವಾನುಭವ!
ಕ್ಷ ಯಜ್ಞಧ್ವಂಸಕಾ ಭೈರವ!
ರ ಗುರು ದತ್ತ ಸದಾಶಿವ!
ಜೀವನ್ಮುಕ್ತ ಭಾವಾತೀತಾದವ! (ಇ)
-ವ ನಿರಂಜನಾದಿತ್ಯನೆಂಬವ!!!

ನಾನಿರುವೆಡೆ ನಿನಗೆ ಗೊತ್ತು!

ನಿನಗದರ ಮಹತ್ತೂ ಗೊತ್ತು! (ದ)
-ರುಶನ ಆಪ್ತರಿಗೆಂದೂ ಗೊತ್ತು!
ವೆಸನ ನಿಷ್ಫಲವೆಂದೂ ಗೊತ್ತು! (ಕೂ)
-ಡೆ ಒಡನಾಡಿ ನಿನ್ಗೆಲ್ಲಾ ಗೊತ್ತು!
ನಿನ್ನ, ನನ್ನ ಸಂಬಂಧವೂ ಗೊತ್ತು!
ಶ್ವರ ನಾನಲ್ಲೆಂಬುದೂ ಗೊತ್ತು!
ಗೆಳೆಯಾಗ್ರೇಸರಾನೆಂದೂ ಗೊತ್ತು!
ಗೊತ್ತಿದ್ರೂ ಸೇರಲ್ಬಂದಿಲ್ಲ ಹೊತ್ತು! (ಹೊ)
-ತ್ತು ನಿರಂಜನಾದಿತ್ಯಗಾವತ್ತು!!!

ನನ್ನದು ಹೆಂಗರುಳಾಗಿ ಹೀಗಾಯ್ತು (ನ)

-ನ್ನ ಮೇಲಿನಾರೋಪ ಸಹಿಸ್ಬೇಕಾಯ್ತು!
ದುಷ್ಪುತ್ರರಿಂದ ದೂರವಿರ್ಬೇಕಾಯ್ತು!
ಹೆಂಗ್ಸೂ, ಗಂಡ್ಸೂ ನಾನಾಗಿರಬೇಕಾಯ್ತು!
ತಿಗೆಟ್ರೂ ಮತಿಗೆಡ್ದಿರ್ಬೇಕಾಯ್ತು!
ರುಜು ಮಾರ್ಗ ಬಿಡದಿರಬೇಕಾಯ್ತು! (ವೇ)
-ಳಾ ವೇಳೆಯಲ್ಲೂ ಹೊರ ಬರ್ಬೇಕಾಯ್ತು! (ಯೋ)
-ಗಿ ರಾಜನಿಚ್ಛಾವರ್ತಿಯಾಗ್ಬೇಕಾಯ್ತು!
ಹೀಚ್ಕ, ಹಣ್ಣೆನ್ನದೆಲ್ಲಾ ತಿನ್ಬೇಕಾಯ್ತು!
ಗಾಳಿ, ಮಳೆಗುಸ್ರೆತ್ತದಿರ್ಬೇಕಾಯ್ತು! (ಆ)
-ಯ್ತು, ನಿರಂಜನಾದಿತ್ಯೇಚ್ಛೆಯಂತಾಯ್ತು!!!

ಅನಿಷ್ಟದಂಟೆಳ್ಳಷ್ಟಿಲ್ಲದಿಷ್ಟ ಮೂರ್ತಿ!

ನಿಶಿ, ದಿನಾರ್ತರುದ್ಧಾರಾಸಕ್ತಾ ಮೂರ್ತಿ! (ದು)
-ಷ್ಟರನ್ನು ನಿಗ್ರಹಿಸುವುದಾ ಮೂರ್ತಿ!
ದಂಭ, ದರ್ಪವಿಲ್ಲದಿರುವುದಾ ಮೂರ್ತಿ! (ಸ)
-ಟೆಯಾಡಿ ದಿಟವ ಮರೆಸದಾ ಮೂರ್ತಿ! (ಕು)
-ಳ್ಳ ವಾಮನನಾಗಿಯೂ ಬಂದಿತ್ತಾ ಮೂರ್ತಿ! (ಸೃ)
-ಷ್ಟಿ, ಸ್ಥಿತಿ, ಲಯಕ್ಕಾಗಿ ಆಯ್ತು ತ್ರಿಮೂರ್ತಿ! (ಗೊ)
-ಲ್ಲ ಬಾಲನಾಗಿ ಗೋವ್ಗಳ ಕಾಯ್ತಾ ಮೂರ್ತಿ! (ಬಿ)
-ದಿ



ದ್ದಹಲ್ಯೆಯನ್ನೆತ್ತಿತಾ ರಾಮ ಮೂರ್ತಿ! (ಅ)
-ಷ್ಟ ಮದಗಳ ಜೈಸಿತಾ ದತ್ತ ಮೂರ್ತಿ!
ಮೂರು ಲೋಕಕ್ಕೂ ಇದೇ ಸದ್ಗುರು ಮೂರ್ತಿ! (ಸ್ಫೂ)
-ರ್ತಿದಾತ ಶ್ರೀ ನಿರಂಜನಾದಿತ್ಯ ಮೂರ್ತಿ!!!

ಕದಮುಚ್ಚಿದ್ರೆ ಮದ ನುಚ್ಚಾದೀತೇನಯ್ಯಾ! (ಅ)

-ದಕ್ಕಭ್ಯಾಸವೂ ಗುರುಕೃಪೆಯೂ ಬೇಕಯ್ಯಾ!
ಮುಖ ದರ್ಶನ ತತ್ಕಾಲಕ್ಕೆ ತಪ್ಪೀತಯ್ಯಾ! (ರೊ)
-ಚ್ಚಿಗೇಳುವ ಇಚ್ಛೆಯ ಸ್ವಚ್ಛ ಮಾಡ್ಬೇಕಯ್ಯಾ! (ನಿ)
-ದ್ರೆಯಿಂದೆದ್ದು ಜಾಗ್ರತ್ತಿಗೀಗ ಬರ್ಬೇಕಯ್ಯಾ!
ನಸ್ಸಿನ ಜಯ ಮಾರುತಿಗಿದೆಯಯ್ಯಾ!
ಶರಥಾತ್ಮಜನನುಗ್ರಹವದಯ್ಯಾ!
ನುಡಿ, ನಡೆಯೆಲ್ಲಾ ಶ್ರೀ ರಾಮಸೇವೆಗಯ್ಯಾ! (ಕ)
-ಚ್ಚಾಟಕ್ಕೆ ಶಾಂತಿ, ಸುಖ ಸಿಕ್ಕಲಾರದಯ್ಯಾ!
ದೀನನಾಗಿ ದಾನಿಗೆ ಶರಣಾಗ್ಬೇಕಯ್ಯಾ!
ತೇಜೋವಧೆ ಯಾರನ್ನೂ ಮಾಡಬಾರದಯ್ಯಾ!
ಮಿಸಬೇಕೆಲ್ಲರೊಳಗಿಹಾತ್ಮಗಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಗಿದಾನಂದವಯ್ಯಾ!!!

ತಪ್ಪಿಲ್ಲದಪ್ಪನಂತಾಗ್ಬೇಕು ನಾನಪ್ಪ! (ಕ)

-ಪ್ಪಿನ ಲೇಪ ಮುಖಕ್ಕಾಗಬಾರದಪ್ಪಾ! (ಕೊ)
ಲ್ಲಬೇಡ ಹಿಂಸೆ ಕೊಟ್ಟೇ ಶರೀರವಪ್ಪಾ!
ಯಾನಿಧಿ ನೀನೆಂಬುದು ಸುಳ್ಳೇನಪ್ಪಾ? (ಕೊ)
-ಪ್ಪರಿಗೆ ನಿಧಿ ನಾನು ಬಯಸಿಲ್ಲಪ್ಪಾ!
ನಂಬಿಕೆ ಫಲಿಸಬೇಕೆಂಬೆ ನಾನಪ್ಪಾ!
ತಾಳಿದ್ದಕ್ಕೆ ಪಾತಾಳ ಗತಿಯೇನಪ್ಪಾ! (ಆ)
-ಗ್ಬೇಕೀಗ ನಿನ್ನ ದಿವ್ಯ ದರ್ಶನವಪ್ಪಾ!
ಕುಪಿತನಾಗ್ಬೇಡ ನನ್ನೀ ಹಠಕ್ಕಪ್ಪಾ!
“ನಾನೇ ನೀನೆಂದು” ನೀನಂದಿಲ್ಲವೇನಪ್ಪಾ?
ನ್ನಾಸೆ ಆ ಸತ್ಯ ಕಾಣುವುದಕ್ಕಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯಾನಂದನಾಗಪ್ಪಾ!!!

ಭಾವಾತೀತನುಳಿದವನು! (ಭಾ)

-ವಾನ್ವಿತನು ಅಳಿದವನು!
ತೀರ್ಥ, ಕ್ಷೇತ್ರದಲ್ಲವ್ನಿಹನು!
ಲೆ, ಕೈ, ಕಾಲಿಲ್ಲದಿಹನು!
ನುಡಿ, ನಡೆ, ಯಿಲ್ಲದಿಹನು! (ಗಾ)
-ಳಿ, ಮಳೆಯ ಸಹಿಸಿಹನು!
ತ್ತಾತ್ರೇಯ ತಾನೆಂದಿಹನು!
ರ ಗುರು ತಾನಾಗಿಹನು! (ತಾ)
-ನು, ನಿರಂಜನಾದಿತ್ಯ ಭಾನು!!!

ಪಿಶಾಚಿಯನ್ನಟ್ಟುವ ಶಕ್ತಿ ಯಾರಿಗೆ?

ಶಾಕ್ತೇಯನಾದಾ ಶಾಪಾಶಾತೀತನಿಗೆ!
ಚಿದಂಬರನಾದ ದಿಗಂಬರನಿಗೆ!
ದುಪತಿಯ ದಾಸ ಸುಧಾಮನಿಗೆ! (ಮ)
-ನ್ನಣೆ ಸಜ್ಜನರಿಗೀಯುವವನಿಗೆ! (ಹು)
-ಟ್ಟು, ಸಾವಿನ, ಗುಟ್ಟು ತಿಳಿದವನಿಗೆ!
ರ ಗುರುವಿನ ದೀನ ದಾಸನಿಗೆ!
ಮೆ, ದಮೆಯ, ವೈರಾಗ್ಯಶೀಲನಿಗೆ! (ಯು)
-ಕ್ತಿಯಿಲ್ಲದ ಶುದ್ಧ ಭಕ್ತಿಯುಳ್ಳವಗೆ!
ಯಾರ ನಿಂದೆಯನ್ನೂ ಮಾಡದವನಿಗೆ! (ಹ)
-ರಿನಾಮ ಸಂಕೀರ್ತನಾ ಆನಂದನಿಗೆ!
ಗೆಳೆಯ ಶ್ರೀ ನಿರಂಜನಾದಿತ್ಯನಿಗೆ!!!

ಆಳುವವರೀವರು ಭರವಸೆ! (ಬಾ)

-ಳುವವರಿಗಾಗಿಹುದು ನಿರಾಸೆ!
ರ್ತಕನೀವುದು ಹರಕು ದೋಸೆ! (ಅ)
-ವನ ಪೆಟ್ಟಿಗೆ ತುಂಬಾ ಬಿಟ್ಟಿ ಪೈಸೆ!
ರೀತಿ, ನೀತಿ, ಹೀಗಾಗಿ ಶನಿದೆಸೆ!
ಸನಾಶನವಿಲ್ಲದೆ ದುರ್ದೆಸೆ! (ಕ)
-ರುಣೆಯೆನ್ನುವುದು ಬರೀ ಕನಸೇ!
ಗವಂತನಿಗಿದೊಂದು ತಮಾಷೆ! (ಪ)
-ರಮಾರ್ಥ ಜೀವನಕ್ಕಾಗಿದೆ ಹಿಂಸೆ!
ಚನಭ್ರಷ್ಟನಾಗ್ಬೇಡ್ವೋ ಅರಸೇ! (ಆ)
-ಸೆ, ನಿರಂಜನಾದಿತ್ಯಗೆ ನಿರಾಸೆ!!!

ಸುಳ್ಳು ಕಥೆ ಕಲ್ಪಿಸುವ ಕಾಮಿ! (ಮು)

-ಳ್ಳು ಮೇಲಿನ ಬಟ್ಟೆಯಂತಾ ಕಾಮಿ!
ಪಟ ಪ್ರೇಮ ತೋರ್ಪವಾ ಕಾಮಿ! (ವ್ಯ)
-ಥೆ ಪಡುವವರ ನೋಡಾ ಕಾಮಿ!
ನಕಾಭರಣ ಪ್ರೇಮಿ ಕಾಮಿ! (ಶಿ)
-ಲ್ಪಿಗಳಿಷ್ಟ ಕಟ್ಟುವನಾ ಕಾಮಿ!
ಸುಜನರ ದ್ವೇಷಿಪನಾ ಕಾಮಿ!
ಸ್ಥು, ವಾಹನಕ್ಕಾಶಿಪನಾ ಕಾಮಿ!
ಕಾಲನಿಗಂಜುವವನಾ ಕಾಮಿ! (ಪ್ರೇ)
-ಮಿ ಶ್ರೀ ನಿರಂಜನಾದಿತ್ಯಸ್ವಾಮಿ!!!

ಕೀರ್ತ



ಪಕೀರ್ತಿ ಕೃತ್ಯದಿಂದ! (ಮ)

-ರ್ತ



ರ್ಮಾಡ್ಬೇಕು ಸತ್ಕರ್ಮಾದ್ರಿಂದ!
ತಿತರು ದುಷ್ಕರ್ಮದಿಂದ!
ಕೀಚಕ ಸತ್ತನದರಿಂದ! (ಕೀ)
-ರ್ತಿ ಧರ್ಮಜಗುತ್ತಮಾದ್ರಿಂದ!
ಕೃಷ್ಣ ಮೆರೆದಾತ್ಮತ್ವದಿಂದ! (ಸ)
-ತ್ಯಭಾಮೆ ಪತಿಭಕ್ತಿಯಿಂದ! (ಅ)
-ದಿಂದೂ ಅಂಥಾ ಸತಿಗಾನಂದ! (ಕಂ)
-ದ ನಿರಂಜನಾದಿತ್ಯಾನಂದ!!!

ರೂಪ ನಾಮಕ್ಕೆ ತಕ್ಕಂತಿರ್ಬೇಕು! (ರೂ)

-ಪಕ್ಕೆ ತಕ್ಕಂತೆ ನಾಮವಿರ್ಬೇಕು!
ನಾಮ, ರೂಪಕ್ಕೊಳ್ಳೇ ಗುಣ ಬೇಕು!
ರ್ತ



ರದ್ರಿಂದುದ್ಧಾರವಾಗ್ಬೇಕು! (ಬೆ)
-ಕ್ಕೆ ನಾಶವಾಗಿ ಮುಕ್ತರಾಗ್ಬೇಕು!
ತ್ವ ಚಿಂತನೆ ಸದಾ ಮಾಡ್ಬೇಕು! (ಚ)
-ಕ್ಕಂದವಾಡ್ವುದು ಕಮ್ಮಿಯಾಗ್ಬೇಕು!
ತಿತಿಕ್ಷೆ, ವೈರಾಗ್ಯ, ಹೆಚ್ಚಾಗ್ಬೇಕು! (ಇ)
-ರ್ಬೇಕು, ಇದ್ದೂ ಇಲ್ಲದಂತಿರ್ಬೇಕು! (ಬೇ)
-ಕು, ನಿರಂಜನಾದಿತ್ಯನಾಗ್ಬೇಕು!!!

ನಿನ್ನಂತೆ ಒಪ್ಪುವವರಾರ್ನನ್ನ? (ನ)

-ನ್ನಂತೆ ಅಪ್ಪುವವರಾರ್ನಿನ್ನ?
ತೆರೆಮರೆಯಾಟ ನಿನ್ನ, ನನ್ನ!
ಲಿದ ಮೇಲ್ಬಿಡಲಾರೆ ನಿನ್ನ! (ತ)
-ಪ್ಪುಗಳೇನಿದ್ದರೂ ಕ್ಷಮಿಸ್ನನ್ನ!
ನವಾಸದಲ್ಲೂ ಬಿಟ್ನೇ ನಿನ್ನ? (ಭ)
-ವ ಬಂಧನದಿಂದ ಬಿಡಿಸ್ನನ್ನ!
ರಾಮಾಯಣ ಲೀಲೆ ನನ್ನ, ನಿನ್ನ! (ತೋ)
-ರ್ನನಗಿಬ್ಬರೂ ಒಂದೆಂಬುದನ್ನ! (ನಿ)
-ನ್ನ, ನನ್ನ, ನಿರಂಜನಾದಿತ್ಯೆನ್ನ!!!

ಬಳಲಿಕೆ ನಿವಾರಣೆ ನೆರಳಲ್ಲಿ! (ತ)

-ಳಮಳ ಶಾಂತಿ ಗುರು ಸನ್ನಿಧಿಯಲ್ಲಿ!
ಲಿನ್ಗ ಭೇದಾಂತ್ಯ ಜ್ಞಾನಸಿದ್ಧಿಯಾದಲ್ಲಿ!
ಕೆಲಸದ ಬೆಲೆ ಫಲ ಸಿಕ್ಕಿದಲ್ಲಿ!
ನಿಶಿ, ದಿನ, ಸೂರ್ಯೊ

ದಯಾಸ್ತವಿದಲ್ಲಿ!
ವಾದ, ಭೇದ ಮನಸು ಬದುಕಿದ್ದಲ್ಲಿ!
ತಿ ಸುಖ ಕಾಮನೆಂಬವನಿದ್ದಲ್ಲಿ! (ಹ)
-ಣೆಬರಹವೆಂಬುದಾಸೆಗಳಿದ್ದಲ್ಲಿ!
ನೆರೆಮನೆ ತನ್ನದೆಂಬುದೊಂದಿದ್ದಲ್ಲಿ!
ಮೇಶ, ಉಮೇಶರೈಕ್ಯ ಬ್ರಹ್ಮದಲ್ಲಿ! (ಒ)
-ಳ, ಹೊರ, ಗೋಡೆ, ಬಾಗಿಲುಗಳಿದ್ದಲ್ಲಿ! (ಅ)
-ಲ್ಲಿ, ಇಲ್ಲಿ, ನಿರಂಜನಾದಿತ್ಯನೆಲ್ಲೆಲ್ಲಿ!!!

ತಿನ್ನೆನ್ನುತ್ತಲಿದೆ ಮನಸು! (ನಿ)

-ನ್ನೆಯಿಂದಲೇ ಹೊಟ್ಟೆ ಹೊಲಸು! (ತ)
-ನ್ನುವುದಿಲ್ಲೆನ್ನುವುದೇ ಲೇಸು! (ಚಿ)
-ತ್ತ ಸ್ಥಿರವಿದ್ದವನರಸು! (ಬ)
-ಲಿಯಾಗ್ಬಾರ್ದಾಸೆಗೆ ಮನಸು! (ತಂ)
-ದೆಯಂದದಲ್ಲಿರ್ಬೇಕು ಕೂಸು!
ಲಗಿಸಿದಾಗ ನಿದ್ರಿಸು! (ಅ)
-ನವರತವನ ಸ್ಮರಿಸು! (ಲೇ)
-ಸು ನಿರಂಜನಾದಿತ್ಯರಸು!!!

ನಿನ್ನ ಹಂಬಲ ನನಗೆನ್ನಬಹುದು? (ನ)

-ನ್ನ ಹಂಬಲ ನಿನಗೆನ್ನಲೆಂತಹುದು?
ಹಂಗಿಗ ನಾನಾಗಿರಬೇಕಾಗಿಹುದು! (ಬೆಂ)
-ಬಲಿಗ ನೀನಾಗಿರಬೇಕಾಗಿಹುದು!
ಕ್ಷ್ಯ ನನ್ನದು ಸದಾ ನಿನ್ನಲ್ಲಿಹುದು! (ದಿ)
-ನ, ರಾತ್ರಿ, ನಿನ್ನದೇ ಧ್ಯಾನವಾಗಿಹುದು! (ನಿ)
-ನಗೇಕೆನ್ನ ಮೇಲುಪೇಕ್ಷೆಯಾಗಿಹುದು?
ಗೆಳೆತನವೆನಗಿನ್ನಾರಲ್ಲಿಹುದು? (ನಿ)
-ನ್ನಲ್ಲೀಗ ಕರ್ತವ್ಯಲೋಪವಾಗಿಹುದು!
ದುಕಿರುವುದು ನಿನಗಾಗಿಹುದು!
ಹುಸಿಯಾಡ್ಯೆನಗೇನಾಗ್ಬೇಕಾಗಿಹುದು? (ಬಂ)
-ದು ನಿರಂಜನಾದಿತ್ಯನಾಗಿಹುದು!!!

ಆಶಾ ಪೂರ್ತಿಯಾಯ್ತೆಂದವರಾರೂ ಇಲ್ಲ!

ಶಾಸ್ತ್ರಜ್ಞರೂ ಅತೃಪ್ತಿಯಿಂದ ಸತ್ತ್ರೆಲ್ಲ!
ಪೂರ್ಣಾಯುಗಳಿಗುಳಿವಾಸೆ ತಪ್ಪಿಲ್ಲ! (ಕೀ)
-ರ್ತಿಗಾಗ್ಯೇನೇನೋ ಮಾಡಿದವರೇ ಎಲ್ಲಾ!
ಯಾಗಗಳಿಂದ್ಲೂ ಮಮಕಾರ ಹೋಗ್ಲಿಲ್ಲ! (ಆ)
ಯ್ತೆಂದು ಹಿಗ್ಗಿ, ಕುಗ್ಗಿಹೋದವರೇ ಎಲ್ಲಾ!
ರ್ಶನವಾಯ್ತೆಂದವ್ರು ಸ್ವಾರ್ಥಿಗ್ಳಾದ್ರೆಲ್ಲಾ!
ರ ಗುರುವಿನಂತಾದವ್ರ ಹೆಸ್ರಿಲ್ಲ!
ರಾಮದಾಸ ಹನುಮಂತಾದವ್ರಿಲ್ಲ!
ರೂಪಕ್ಕಂಟಿಕೊಂಡು ಕಾಣದೇ ಬಿದ್ದ್ರೆಲ್ಲಾ!
ಹ, ಪರಾತೀತಾತ್ಮ ಅತೃಪ್ತನಲ್ಲ! (ಪು)
-ಲ್ಲ ನಿರಂಜನಾದಿತ್ಯಗೇನೂ ಬೇಕಿಲ್ಲ!!!

ಅತ್ತು ಫಲವಿಲ್ಲ ಸತ್ತಿರುವುದಿಲ್ಲ! (ಕಿ)

-ತ್ತು ತಿನ್ನುವವರೀ ಬಳಗಗಳೆಲ್ಲಾ!
ಲಾಪೇಕ್ಷೆ ಬಿಟ್ಟು ಕರ್ಮಮಾಡಿರೆಲ್ಲ!
ಕ್ಷ್ಯ ಸಿದ್ಧಿಯಾಗದೇನಿರುವುದಿಲ್ಲ!
ವಿವೇಕ, ವೈರಾಗ್ಯದಿಂದ ಬಾಳಿರೆಲ್ಲ! (ಅ)
-ಲ್ಲ, ಕಲ್ಲುಗೊಂಬೆ ದೇವರೆಂದಿಗೂ ಅಲ್ಲ! (ಆ)
-ಸತ್ತಿನಲ್ಲೂ ಪರಮಾತ್ಮನಿಲ್ಲದಿಲ್ಲ! (ಹ)
-ತ್ತಿ ಜ್ಞಾನಗಿರಿ ನೋಡೀಶ್ವರನನ್ನೆಲ್ಲಾ! (ದ)
-ರುಶನ ವಿನಾ ಭವ ಹರಿವುದಿಲ್ಲ! (ಹಾ)
-ವು ಎಂದು ಹಗ್ಗಕ್ಕಂಜಿ ಓಡ್ಬೇಕಾಗಿಲ್ಲ!
ದಿವ್ಯ ಜ್ಞಾನಾನಂದ ಕಂದರಾಗಿರೆಲ್ಲಾ! (ಎ)
-ಲ್ಲರಾತ್ಮ ನಿರಂಜನಾದಿತ್ಯ ಸುಳ್ಳಲ್ಲ!!!

ನನ್ನವ ನೀನೆಂದು ನಂಬಿ ಮೋಸಹೋದೆ! (ನಿ)

-ನ್ನನ್ನೆಷ್ಟು ಕೂಗಿದ್ರೂ ನೀನು ಬಾರದಾದೆ!
ರ ಗುರು ನಿನ್ನ ನಿತ್ಯ ಪೂಜಿಸಿದೆ!
ನೀಚರ ನಿಂದೆಗೆ ವೃಥಾ ಗುರಿಯಾದೆ!
ನೆಂಟ, ಭಂಟನೆಂದ ನೀನೀಗೆಲ್ಲಿಹೋದೆ?
ದುಡಿಮೆಗೆ ತಕ್ಕ ಕೂಲಿ ಪಡೆಯ್ದಾದೆ!
ನಂದಿವಾಹನ ತಂದೆಯೆಂದು ಬೆಪ್ಪಾದೆ!
ಬಿದಿಲಿಖಿತವೆಂಬುದ ನಂಬದಾದೆ!
ಮೋಡ ಮುಚ್ಚಿದ ಸೂರ್ಯನಂತೆ ನಾನಾದೆ!
ಮಯ ಕಾದು, ಕಾದು, ನಾನು ಸುಸ್ತಾದೆ!
ಹೋಗುವುದಿನ್ನೆಲ್ಲಿಗೆಂದರಿಯದಾದೆ! (ಬಂ)
-ದೆ, ನಿರಂಜನಾದಿತ್ಯನೇ ಶಿವನೆಂದೆ!!!

ಆಡ್ದೇ, ಮಾಡ್ದೇ, ನಿನ್ನ ನೆನಪೆನ್ನ ದೀಕ್ಷೆ! (ಕಾ)

-ಡ್ದೇ, ಬೇಡ್ದೇ, ನೀನೀವುದೆನ್ನ ನಿತ್ಯ ಭಿಕ್ಷೆ!
ಮಾಯ ಮೋಹದಿಂದ ಪಾರಾಗಲ್ನೀ ರಕ್ಷೆ! (ಬಾ)
-ಡ್ದೇ ಇರ್ಬೇಕೀ ಕುಸುಮವೆಂದಿದ್ರಪೇಕ್ಷೆ!
ನಿರಪರಾಧಿಗಳಿಗಾಗ್ಬಾರ್ದು ಶಿಕ್ಷೆ! (ನಿ)
-ನ್ನ ನಂಬಿದವರನ್ನು, ಮಾಡ್ಬಾರ್ದುಪೇಕ್ಷೆ! (ನೀ)
-ನೆಮ್ಮ ಮೇಲೆ ಬೀರ್ನಿನ್ನ ಕೃಪಾಕಟಾಕ್ಷೆ!
ಮಗೆ ಬೇಕಿಲ್ಲ ಚಿತ್ರಕನ ನಕ್ಷೆ!
ಪೆತ್ತವಳಲ್ಲವೇ ನಮ್ಮನ್ನು ಫಾಲಾಕ್ಷೆ? (ತ)
-ನ್ನ ಮಕ್ಕಳ ಕಾಪಾಡಲವಳೇ ದಕ್ಷೆ!
ದೀನರನ್ನು ಮಾಡಬಾರದು ಪರೀಕ್ಷೆ! (ದೀ)
-ಕ್ಷೆ, ನಿರಂಜನಾದಿತ್ಯನಿಗೆಲ್ಲರೀಕ್ಷೆ!!!

ಬಯಕೆಯ ಭಂಗ ಕಲಿಕೆಯ ರಂಗ!

ಮ ನಿಯಮಗಳೆಂಬುದು ಯೋಗಾಂಗ!
ಕೆಟ್ಟದ್ದೊಳ್ಳೆಯದೆಂಬಾಟ ಜೀವನಾಂಗ!
ಶಸ್ಸುಪಯಶಸ್ಸೆಲ್ಲಾ ಶಾಂತಿ ಭಂಗ!
ಭಂಡತನಕ್ಕಗತ್ಯ ಪುಂಡರ ಸಂಗ!
ಗನ ಸದೃಶಾತ್ಮ ರಂಗ ಸಾರಂಗ!
ಲಿಮಲನಾಶಕ್ಕಿರ್ಬೇಕು ಸತ್ಸಂಗ!
ಲಿಪ್ತನಿಗಾನಂದೈಹಿಕ ಜನ ಸಂಗ!
ಕೆಡಲಿಕ್ಕೆ ಕಾರಣ ಅಧಿಕಪ್ರಸಂಗ!
ಜ್ಞರಕ್ಷಕ ಶ್ರೀರಾಮ ಸುಂದರಾಂಗ!
ರಂಗ, ಶ್ರೀರಂಗ, ಪಾಂಡುರಂಗ, ಸರ್ವಾಂಗ!
ಭಸ್ತಿ ನಿರಂಜನಾದಿತ್ಯಾನಂದಾಂಗ!!!

ನಾನು ಅಂಬಾ, ನೀನು ಸಾಂಬಾ! (ಸೂ)

-ನು ಈರ್ವರಿಗೂ ಹೇರಂಬಾ!
ಅಂಬಾ, ಲೋಕಾಂಬಾ, ಮೂಕಾಂಬಾ! (ಸಾಂ)
-ಬಾರ್ಧನಾರೀಶ್ವರ ಬಿಂಬಾ!
ನೀತಿ, ರೀತ್ಯಭೇದಾ ಬಿಂಬಾ (ಅ)
-ನುಪಮ ಸುಂದರಾ ಬಿಂಬಾ!
ಸಾಂಖ್ಯಯೋಗಾನಂದಾ ಬಿಂಬಾ! (ಸಾಂ)
-ಬಾ, ನಿರಂಜನಾದಿತ್ಯಾಂಬಾ!!!

ಲಂಚ, ವಂಚನೆಯ ಮಂಚವೆಷ್ಟು ಕಾಲ?

ರಾಚರಗಳಿರವು ಚಿರಕಾಲ!
ವಂಶ, ಅಂಶಗಳ ನುಂಗಿದನು ಕಾಲ!
ರಿತ್ರೆಯಲ್ಲೆಂತಿಹುದು ಗತ ಕಾಲ?
ನೆಗಳ್ದಾಳಿ, ಬಾಳಿದರು ಕ್ಷಣ ಕಾಲ!
ಜ್ಞ, ಯಾಗ, ಮಾಡಿದವರೂ ನಿರ್ಮೂಲ!
ಮಂದಿರಗಳುರುಳಿ ಸೇರಿವೆ ನೆಲ!
ರಣ ಸೇವಕರಿಗಿಲ್ಲ ಬೆಂಬಲ!
ವೆಚ್ಚ ಮಾಡಿದ್ದೊಂದೂ ಆಗಿಲ್ಲ ಸಫಲ! (ನಿ)
-ಷ್ಟುರ ಬುದ್ಧಿಯಿಂದ ಕಳೆಯ್ತಾಯುಷ್ಕಾಲ!
ಕಾಮಾರಿ ಕರುಣಿಸ್ಲಿ ಸುಭಿಕ್ಷೆ ಕಾಲ! (ಕಾ)
-ಲ, ಶ್ರೀ ನಿರಂಜನಾದಿತ್ಯ ಮಹಾ ಕಾಲ!!!

ನನಗೆ ನೀನಂಟಿಕೊಂಡಿರತಕ್ಕದ್ದು!

ನ್ನಿಂದ ನೀನೆಂದು ತಿಳಿಯತಕ್ಕದ್ದು!
ಗೆಳೆತನನ್ಯೋನ್ಯವಾಗಿರತಕ್ಕದ್ದು!
ನೀಚರ ಸಂಗವಿಲ್ಲದಿರತಕ್ಕದ್ದು!
ನಂಬಿಗೆ ಅಚಲವಾಗಿರತಕ್ಕದ್ದು!
ಟಿಪ್ಪಣಿಯಂತೆ ಕಥೆ ಸಾಗತಕ್ಕದ್ದು!
ಕೊಂಚವೂ ವ್ಯತ್ಯಾಸವಾಗ್ದಿರತಕ್ಕದ್ದು!
ಡಿಕ್ಕಿ ಹೊಡೆಯ್ದಂತೆಚ್ಚರವಿರ್ತಕ್ಕದ್ದು!
ಮೆ, ಉಮೆಯರಾದರ್ಶವಿರ್ತಕ್ಕದ್ದು!
ಪ್ಪನ್ನು ತಿದ್ದಿಕೊಳ್ಳುತ್ತಿರತಕ್ಕದ್ದು! (ಅ)
-ಕ್ಕ, ಪಕ್ಕ, ಚೊಕ್ಕವಾಗಿಟ್ಟಿರತಕ್ಕದ್ದು! (ಮು)
-ದ್ದು, ನಿರಂಜನಾದಿತ್ಯನ ಮಾಡ್ತಕ್ಕದ್ದು!!!

ಪ್ರಾಣ ಹೋದ್ರೂ ಬಿಡದಂತಿದ್ಬಿಡಿ! (ಹ)

-ಣದಾಸೆಯನ್ನೀಗಿಂದ ಬಿಟ್ಟಿಡಿ!
ಹೋರಾಡ್ಯಾರು ನೀವೆಂದರಿತ್ಬಿಡಿ! (ತ)
-ದ್ರೂಪ ಸಿದ್ಧಿಯ ಮಾಡಿಕೊಂಡ್ಬಿಡಿ!
ಬಿದಿ ಲಿಖಿತವ ಮರೆತ್ಬಿಡಿ! (ದಂ)
-ಡ, ಕಮಂಡ್ಲು ಧಾರಿಯ ಸೇರ್ಬಿಡಿ!
ದಂಭ, ದರ್ಪಗಳನ್ನು ಬಿಟ್ಟಿಡಿ!
ತಿತಿಕ್ಷೆ, ವೈರಾಗ್ಯ, ಹೆಚ್ಚಿಸ್ಬಿಡಿ! (ಸ)
-ದ್ಬಿಜ್ಜೆಯಲ್ಲಿ ಶ್ರದ್ಧೆ ಇರಿಸ್ಬಿಡಿ! (ಕೂ)
-ಡಿ ನಿರಂಜನಾದಿತ್ಯನಾಗ್ಬಿಡಿ!!!

ಭವಿಷ್ಯ ಹೇಳುವವ ನಾನಲ್ಲ!

ವಿಧಿ, ಹರಿ, ಹರರೂ ಹೇಳಿಲ್ಲ! (ಭಾ)
-ಷ್ಯಕಾರರಂತೂ ಹೇಳಲೇ ಇಲ್ಲ!
ಹೇಳಿ, ಕೇಳಿದ್ರಿಂದ ಫಲವಿಲ್ಲ! (ಗೋ)
-ಳು ತಪ್ಲಿಕ್ಕದು ದಾರಿಯೇ ಅಲ್ಲ! (ಅ)
-ವಧೂತ ಗೀತಾಭ್ಯಾಸ ಮಾಡ್ರೆಲ್ಲಾ!
ರ ಗುರುವಿನಾ ಮಾತ್ಸುಳ್ಳಲ್ಲ!
ನಾಶವಾಗುವುದರಾಸೆ ಸಲ್ಲ!
ವ್ಯ ಭಕ್ತಿಯ ಗುರಿ ಅದಲ್ಲ! (ಒ)
-ಲ್ಲ, ನಿರಂಜನಾದಿತ್ಯನಿದೆಲ್ಲಾ!!!

ಅಭಿರುಚಿಗೆ ತಕ್ಕಂತೆ ಕೂಟ!

ಭಿಕ್ಷುಕರ್ಭೋಜನದಲ್ಲಿ ಕೂಟ!
ರುದ್ರ ಭೂಮಿಯಲ್ಲಿ ನರಿ ಕೂಟ!
ಚಿತ್ರಕರ್ಕಲಾಶಾಲೆಯಲ್ಕೂಟ!
ಗೆಳೆಯರೇಕಾಂತದಲ್ಲಿ ಕೂಟ!
ಸ್ಕರರಣ್ಯಗಳಲ್ಲಿ ಕೂಟ! (ಚಿ)
-ಕ್ಕಂದಿನಲ್ಲೆಲ್ಲರಲ್ಲೊಡನಾಟ!
ತೆಪ್ಪಗಳಲ್ಲಿ ನೀರಲ್ಲೋಡಾಟ!
ಕೂಗು ಹಾಕ್ಯೆಲ್ಲರ ಸೇರ್ಸುವಾಟ! (ಕಾ)
-ಟ ನಿರಂಜನಾದಿತ್ಯಗೆ ಕೂಟ!!!

ದ್ರೌಪದಿಗೆ ಜಯ, ದುಃಶಾಸನಗೆ ಭಯ!

ತಿತಪಾವನ ಕೃಷ್ಣನಿತ್ತನಭಯ!
ದಿಕ್ಕಿಲ್ಲದನಾಥರ್ಗವನಿಂದ ವಿಜಯ! (ಹ)
-ಗೆಗಳಾದ ಕೌರವರಿಗಾಯ್ತಪಜಯ!
ಗತ್ಪತಿಯ ಕೆಣಕಿದವರ್ಗಪಾಯ!
ಜ್ಞ ರಕ್ಷಣೆಗಾಯ್ತವನಿಂದ ಸಹಾಯ!
ದುಃಖಕಾರಕಾಸುರರ ಗೈದನು ಲಯ!
ಶಾಸ್ತ್ರ, ಪುರಾಣಾದಿಗಳಿಗಿವನೇ ಧ್ಯೇಯ!
ಜ್ಜನ ಸುದಾಮನಿವನಿಗೆ ಗೆಳೆಯ!
ರನ ಸಾರಥ್ಯ ಮಾಡಿತ್ತನು ಗೀತೆಯ!
ಗೆಲಿಸಿ ಯುದ್ಧವ ಪಾಲಿಸಿದ ಪ್ರಜೆಯ!
ಕ್ತಿ ಭಾವಕ್ಕಾಗಿ ಮೆಚ್ಚಿದನು ರಾಧೆಯ!
ದುಪ ನಿರಂಜನಾದಿತ್ಯ ದತ್ತಾತ್ರೇಯ!!!

ಇಂದು ನಾನಳುವೆ, ನಾಳೆ ನೀನಳುವೆ!

ದುರಹಂಕಾರ ಪಡಬೇಡ ಮಗುವೆ!
ನಾಮ, ರೂಪ, ಮಾತ್ರ ಬೇರ್ಬೇರೆ ಶಿಶುವೆ!
ಮ್ಮ ಮನಸ್ಸನ್ನು ನಾವ್ಜೈಸ್ಬೇಕ್ಮಗುವೆ! (ಅ)
-ಳುವುದು, ನಗ್ವುದು ಅದ್ರಾಟ ಶಿಶುವೆ!
ವೆಸನ, ಸಂತೋಷ ಅದಿದ್ರೆ ಮಗುವೆ!
ನಾನೋಪಾಯ ಇದ ಜೈಸಲು ಶಿಶುವೆ! (ಇ)
-ಳೆಯ ಸುಖಕ್ಕಾಶಿಸದಿರ್ಬೇಕ್ಮಗುವೆ!
ನೀನಾರೆಂಬುದನ್ನರಿಯಬೇಕ್ಯಿಶುವೆ!
ಶ್ವರದದೇಹ ನೀನಲ್ಲ ಮಗುವೆ! (ಕೀ)
-ಳು ವ್ಯಾಮೋಹಕ್ಕೊಳಗಾಗ್ಬಾರ್ದು ಶಿಶುವೆ! (ಸೇ)
-ವೆ ನಿರಂಜನಾದಿತ್ಯನದ್ಮಾಡ್ಮಗುವೆ!!!

ಹಣವಿದ್ದವ ಕೋಣನಾದರೂ ಜಾಣ! (ಹ)

-ಣವಿಲ್ಲದವ ಜಾಣನಾದರೂ ಕೋಣ!
ವಿದ್ಯಾ, ಬುದ್ದಿಗೆಲ್ಲಿರುವುದೀಗ ಮಾನ? (ತಿ)
-ದ್ದದಿದ್ದರೀ ಬುದ್ಧಿ ಆಗದು ಪಾವನ! (ಅ)
-ವರವ್ರ ಯೋಗ್ಯತಾನ್ಸಾರಾಗ್ಲಿ ಸನ್ಮಾನ!
ಕೋಡಗನೇರಬಾರದು ಸಿಂಹಾಸನ! (ಗ)
-ಣಗಳುದ್ಧಾರ ಮಾಳ್ಪವಗಾಗ್ಲಾ ಸ್ಥಾನ!
ನಾಶವಾಗ್ಲಿ ನಾನಾ ಜಾತಿ, ಮತ, ಮನ!
ರಿದ್ರರಿಗೂ ಇರ್ಲಿ ಹಕ್ಕು ಸಮಾನ!
ರೂಪ, ಲಾವಣ್ಯವಿರವು ಬಹು ದಿನ!
ಜಾಗ್ರತ್ಸ್ವಪ್ನದಲ್ಲೂ ಇರ್ಲಿ ಆತ್ಮಜ್ಞಾನ! (ಗು)
-ಣ ನಿರಂಜನಾದಿತ್ಯಗೆ ಪ್ರಧಾನ!!!

ಸೃಷ್ಟಿಯ ಗುಟ್ಟು ರಟ್ಟಾಗಲಿಲ್ಲ! (ಅ)

-ಷ್ಟಿಷ್ಟೊರೆದ್ರೂ ಸ್ಪಷ್ಟವಾಗಲಿಲ್ಲ!
ಮ, ನಿಯಮದಿಂದ್ಲೂ ಆಗ್ಲಿಲ್ಲ!
ಗುರುವಿದನ್ನನುಗ್ರಹಿಸ್ಲಿಲ್ಲ! (ಮು)
-ಟ್ಟು, ಮಡಿ ಪ್ರಯೋಜನವಾಗ್ಲಿಲ್ಲ!
ಹಸ್ಯಭೇದ್ಯವಾಗಿಹುದಲ್ಲಾ!! (ಅ)
-ಟ್ಟಾದಡುಗೆಯಂಬುದೇ ಆಯ್ತಲ್ಲಾ!!
ರ್ವ ಮಾತ್ರ ಕಮ್ಮಿಯಾಗ್ಲೇ ಇಲ್ಲ! (ಒ)
-ಲಿದು ದೇವರೇ ಹೇಳಬೇಕೆಲ್ಲ! (ಬ)
-ಲ್ಲ ನಿರಂಜನಾದಿತ್ಯಾಡ್ವುದಿಲ್ಲ!!!

ನಾನೇನು ಮಾಡಲೆಲ್ಲಿ ಹೋಗಲಾರೆ ಕೇಳಲಿ?

ನೇರ ದಾರಿ ತೋರಿ ನಡೆಸಬೇಕದರಲ್ಲಿ!
ನುಚ್ಚಾದೆ ನಾನೀ ಕಾಲಚಕ್ರದ ವೇಗದಲ್ಲಿ!
ಮಾತಾ, ಪಿತರೆಷ್ಟೋ ಆದರ್ಬಹು ಜನ್ಮದಲ್ಲಿ! (ಆ)
-ಡಲಸದಳಾಗ ಪಟ್ಟ ಕಷ್ಟಗಳೀಗಿಲ್ಲ! (ಅ)
-ಲೆದಲೆದು ಸಾಕಾಯ್ತನೇಕ ಲೋಕಗಳಲ್ಲಿ! (ಅ)
-ಲ್ಲಿ, ಇಲ್ಲಿ, ಕೇಳಿದ್ದು ಸುಳ್ಳಾದ್ಮೇಲೇನಿಹುದಿಲ್ಲಿ?
ಹೋಗಿ, ಬರುವ, ವ್ಯವಹಾರ ಸಾಕ್ಮಾಡ್ಬೇಕಿಲ್ಲಿ!
ಣಗಳಾನಂದದಿಂದಿರ್ಪ ಕೈಲಾಸವೆಲ್ಲಿ? (ಲೀ)
-ಲಾ ಜಾಲವಾಗಿ ಕರೆದೊಯ್ಯಬೇಕ್ನನ್ನನ್ನಲ್ಲಿ! (ವ)
-ರ ಗುರು ಶಿವಸನ್ನಿಧಿಯಲ್ಲಿರ್ಬೇಕ್ನಾನಲ್ಲಿ!
ಕೇಳ್ವುದೂ, ಹೇಳ್ವುದೂ, ಮುಕ್ತಾಯವಾಗುವುದಲ್ಲಿ!
(ಬಾ)-ಳನಾಗಿ ಫಾಲನೇತ್ರನಿಗೆ ನಾನಿರ್ಬೇಕಲ್ಲಿ! (ಕೈ)
-ಲಿ ಕೈಯಿಟ್ಟು ನಿರಂಜನಾದಿತ್ಯ ಸೇರ್ಸ್ಬೇಕಲ್ಲಿ!!!

ಸಿಟ್ಟು ಮಾಡುವುದು ಅವಿವೇಕ! (ಗು)

-ಟ್ಟು ತಿಳಿಯದೇ ಈ ಅವಿವೇಕ!
ಮಾಡಬೇಕಾರಲ್ಲೀ ಅತಿರೇಕ? (ಮಾ)
-ಡುವವ ಮಾಡ್ಸಿಕೊಳ್ವವ ಏಕ! (ನೀ)
-ವು, ನಾವೊಂದಾದ್ಮೇಲೇಕವಿವೇಕ?
ದುರಹಂಕಾರದಿಂದವಿವೇಕ!
ದರಿಂದಾಗಿ ಕೆಟ್ಟಿತೀ ಲೋಕ!
ವಿವೇಕ, ವೈರಾಗ್ಯದಿಂದ ಸುಖ!
ವೇಷಕ್ಕೆ ಮೋಸಹೋಗಿ ಈ ದುಃಖ! (ಏ)
-ಕ, ನಿರಂಜನಾದಿತ್ಯಾಯ್ತನೇಕ!!!

ಕಾಮ ದಹನ ಆರಿಂದೆಂದು?

ನ ಶಿವಮಯವಾದಂದು!
ತ್ತನಾದರ್ಶಳವಟ್ಟಂದು!
ಗಲಿರುಳ್ತಾನಿಂತಿದ್ದಂದು!
ಡೆ, ನುಡ್ಯಿವಾರ್ಪಣಾದಂತು!
ಗಿನದ್ಮತ್ತಿನದ್ದಿಲ್ದಂದು! (ಬೇ)
-ರಿಂದಹಂಕಾರ ಕಿತ್ತೊಗ್ದಂದು! (ಎಂ)
-ದೆಂದಿಗೂ ತಾನ್ಮೌನಿಯಾದಂದು! (ಅಂ)
-ದು, ನಿರಂಜನಾದಿತ್ಯನಿಂದು!!!

ಬೆಳಕಿನಲ್ಲಿ ಬೆತ್ತಲೆ ನಿಲ್ಲು! (ಥ)

-ಳಕು, ಕೊಳಕೇನಿಲ್ಲದೇ ನಿಲ್ಲು!
ಕಿರುಕುಳವಿಲ್ಲದಲ್ಲಿ ನಿಲ್ಲು!
ರನಾದ್ರೂ, ನಾರಿಯಾದ್ರೂ ನಿಲ್ಲು! (ಕ)
-ಲ್ಲಿನ ಗೊಂಬೆಯೋ ಎಂಬಂತೆ ನಿಲ್ಲು!
ಬೆಕ್ಕೆಗೆಡೆಗೊಡದಂತೆ ನಿಲ್ಲು! (ಹೆ)
-ತ್ತವರೆಲ್ಲರೆಂದರಿತು ನಿಲ್ಲು! (ಲೀ)
-ಲೆ ಈ ಸೃಷ್ಟಿಯೆಂದರಿತು ನಿಲ್ಲು!
ನಿರಾಲಂಬನು ನೀನೆಂದು ನಿಲ್ಲು! (ನಿ)
-ಲ್ಲು ನಿರಂಜನಾದಿತ್ಯನಾಗ್ನಿಲ್ಲು!!!

ಚಿತ್ತ ವೃತ್ತಿ ನಿರೋಧವೇ ಚಿರ ಶಾಂತಿ! (ಸ)

-ತ್ತ ಮೇಲೆ ಈ ಶರೀರ ಅದೆಂಥಾ ಶಾಂತಿ?
ವೃಥಾ ಕಾಲಕ್ಷೇಪದಿಂದಾಗದು ಶಾಂತಿ! (ಅ)
-ತ್ತಿತ್ತ ಚಿತ್ತ ಚಲಿಸದಿದ್ದರೆ ಶಾಂತಿ!
ನಿತ್ಯಾನಿತ್ಯ ವಿಚಾರದಿಂದಕ್ಕು ಶಾಂತಿ!
ರೋಗ ಶರೀರಕ್ಕಾಗದು ಚಿರ ಶಾಂತಿ!
ರ್ಮ, ಕರ್ಮವೂ ಇಲ್ಲದಾತ್ಮಕ್ಕಾ ಶಾಂತಿ!
ವೇದಾಂತ ಕಾರ್ಯಗತವಾದಾಗ ಶಾಂತಿ!
ಚಿರಂಜೀವಿತ್ವವೆಂಬುದಕ್ಕರ್ಹಾ ಶಾಂತಿ!
ಹಸ್ಯವಿದನರಿತಾಗಾತ್ಮ ಶಾಂತಿ!
ಶಾಂಭವಿಯನುಭವಿಸುವಳೀ ಶಾಂತಿ! (ತಿ)
-ತಿಕ್ಷಾತ್ಮ ನಿರಂಜನಾದಿತ್ಯಗಾ ಶಾಂತಿ!!!

ಲಭ್ಯಕ್ಕನುಗುಣವಾಗಿ ಬುದ್ಧಿ! (ಸ)

-ಭ್ಯನಾಗಿರಲು ಬೇಕು ಸದ್ಭುದ್ಧಿ! (ಠ)
-ಕ್ಕರ ಸಂಪರ್ಕದಿಂದ ದುರ್ಬುದ್ಧಿ! (ತ)
-ನು, ಮನ, ಧನಾರ್ಪಣಾತ್ಮ ಬುದ್ಧಿ!
ಗುರಿ ಸಿದ್ಧಿಗಿರ್ಬೇಕಿಂಥಾ ಬುದ್ಧಿ! (ಹ)
ದಾಸೆಯೆಂಬುದಜ್ಞಾನ ಬುದ್ಧಿ!
ವಾದ, ವಿವಾದಹಂಕಾರ ಬುದ್ಧಿ! (ಯೋ)
-ಗಿಗಿರಬೇಕು ನಿರ್ಮಲ ಬುದ್ಧಿ! (ಅಂ)
-ಬುಜಮಿತ್ರನದ್ದಾದರ್ಶ ಬುದ್ಧಿ! (ಸಿ)
-ದ್ಧಿ, ನಿರಂಜನಾದಿತ್ಯಗಾ ಬುದ್ಧಿ!!!

ಕಾಮ ಅಪಕಾರಿ, ರಾಮ ಉಪಕಾರಿ!

ದ, ಮತ್ಸರಕ್ಕೆ ಕಾಮ ಜವಾಬ್ದಾರಿ!
ವನ ತಂದೆ ಸ್ಥಿತಿ ಕರ್ತ ಶ್ರೀ ಹರಿ!
ರಮೇಶ್ವರನವನ ಅಂತ್ಯಕಾರಿ!
ಕಾಮಾಕ್ಷಿಯೆನಿಸಿ ಪಾರ್ವತಿ ಉದ್ಧಾರಿ!
ರಿಸಿ, ಮುನಿಗಳ್ಗಿವನ ಹಿಂಸೆ ಭಾರಿ!
ರಾಮ, ಕಾಮಾಂಧ ರಾವಣನ ಸಂಹಾರಿ!
ಹಾಮಹಿಮನಿವ ಅಹಲ್ಯೋದ್ಧಾರಿ!
ರಗಶಯನ ನಾರಾಯಣಾ ಹರಿ!
ವನಜಗೆ ಸಾಯುಜ್ಯವಿತ್ತೋದಾರಿ!
ಕಾದಿದ್ದನುಜನಭೀಷ್ಟಪ್ರದಕಾರಿ! (ಹ)
-ರಿ ನಿರಂಜನಾದಿತ್ಯ ರಾಮನೆಂದರಿ!!!

ವಿಷಯಕ್ಕಾಗಿ ತ್ಯಾಗಿಯಾಗ್ಬೇಡ! (ವಿ)

-ಷಯ ತ್ಯಾಗಿಯಾಗದೇ ಇರ್ಬೇಡ!
ಶಸ್ಸಿಗಾಗ್ದೀರ್ಘಾಯುಷ್ಯ ಬೇಡ! (ಹ)
-ಕ್ಕಾದಾತ್ಮಾರ್ಥಕ್ಕಾಗಿರದಿರ್ಬೇಡ!
ಗಿರಿಯಂತಿರ್ಬೇಕ್ಮನಸ್ಸು ಧೃಡ! (ನಿ)
-ತ್ಯಾನಂದನುಭವಿಸದಿರ್ಬೇಡ!
ಗಿಳಿ ಪಾಠಕ್ಕೆ ಪ್ರಾಧಾನ್ಯ ಬೇಡ!
ಯಾಜ್ಞವಲ್ಕ್ಯನಾದರ್ಶ ಬಿಡ್ಬೇಡ! (ಆ)
-ಗ್ಬೇಡ, ತ್ರಿಶಂಕುವಿನಂತಾಗ್ಬೇಡ! (ಮಾ)
-ಡ, ನಿರಂಜನಾದಿತ್ಯ ಹಾಗ್ಮಾಡ!!!

ಬಯಸಿದ್ದು ಬಹಳ, ಸಿಕ್ಕಿದ್ದು ವಿರಳ!

ಜಮಾನ ಶೇಖರಿಸಿಹನು ಹೇರಳ!
ಸಿರಿದೇವಿಯ ಪ್ರೀತಿಪನವ ಬಹಳ! (ಕ)
-ದ್ದು ತಿನ್ನುವವರದ್ದೇ ಈಗ ಉಪಟಳ!
ಗೆಹರಿಸುವವರಾರ್ಭಕ್ತರ ಗೋಳ?
ರಕು ಬಟ್ಟೆ, ಮುರುಕು ಗುಡಿಸಲು ಬಾಳ! (ಹೇ)
-ಳಲೆಂತೀ ಬಡವ್ರ ಬಾಳ ಮಳೆಯಿರುಳ?
ಸಿಪಾ

ಗಳಧಿಕಾರವರ ಮೇಲತುಳ! (ದಿ)
-ಕ್ಕಿಲ್ಲದ ಅನಾಥರಿಗೆ ಗತಿ ಪಾತಾಳ! (ಬಿ)
-ದ್ದು ಒದ್ದಾಡುವಾಗೆಂಬರ “ವನು ಮರುಳ”!
ವಿಧಾತನಾಟವಿಂತಿದ್ರೂ ಆತ ಮಂಜುಳ! (ಪ)
ಮಾರ್ಥಿ ಯಾವುದಕ್ಕೂ ಪಡ ತಳಮಳ! (ಬಾ)
-ಳ ನಿರಂಜನಾದಿತ್ಯ ನಿರಾಳ, ಸರಳ!!!

ವ್ಯಾಪ್ತಿಗೆ ತಕ್ಕ ಪ್ರಾಪ್ತಿಗೆ ತೃಪ್ತಿ! (ಉ)

-ಪ್ತಿನ್ನುವವಗೆ ನೀರಿನ ಜ್ಞಪ್ತಿ!
ಗೆಳೆಯರಿಗೊಡನಾಟ ತೃಪ್ತಿ!
ರುಣರ್ಗ್ತರುಣಿಯರ ಜ್ಞಪ್ತಿ! (ಚಿ)
-ಕ್ಕ ಮಕ್ಕಳಿಗಾಟದಲ್ಲಿ ತೃಪ್ತಿ!
ಪ್ರಾಣಿವರ್ಗಕ್ಕಾಹಾರದ ಜ್ಞಪ್ತಿ! (ಪ್ರಾ)
-ಪ್ತಿಯಾದಾಗಾಪ್ತ ವಸ್ಥು ಸಂತೃಪ್ತಿ! (ಹ)
-ಗೆಗಳಿಗೆ ಪೀಡಿಸುವ ಜ್ಞಪ್ತಿ!
ತೃಣ, ಕಾಷ್ಠವಾಸಾತ್ಮಗೆ ತೃಪ್ತಿ! (ತೃ)
-ಪ್ತಿ ಶ್ರೀ ನಿರಂಜನಾದಿತ್ಯ ಪ್ರಾಪ್ತಿ!!!

ಬಿಟ್ಟಿರುವುದು ನಿನ್ನನ್ನು ಕಷ್ಟ! (ಒ)

-ಟ್ಟಿಗಿರುವುದು ಮತ್ತಷ್ಟೂ ಕಷ್ಟ! (ಬ)
-ರುವುದು, ಹೋಗ್ವುದದೆಂಥಾ ಇಷ್ಟ? (ನಾ)
-ವು ತಪ್ಪಿಸ್ಲಾರೆವೀ ದುರದೃಷ್ಟ!
ದುಡಿಯಬೇಕೆಂಬುದೇನೋ ಸ್ಫಷ್ಟ!
ನಿನ್ನನ್ನು ದೂಡಿದ್ರೆ ನಾನು ಭ್ರಷ್ಟ! (ನ)
-ನ್ನನ್ನು ಕಾಡಿದರೆ ನೀನು ದುಷ್ಟ! (ಇ)
-ನ್ನು ಮೇಲಾದರೀಡೇರಲಭೀಷ್ಟ!
ರ ಮುಗಿದು ಬೇಡ್ವೆನಾಪ್ತೇಷ್ಟ! (ಸ್ಪ)
-ಷ್ಟ,ಶ್ರೀ ನಿರಂಜನಾದಿತ್ಯಾಪ್ತೇಷ್ಟ!!!

ನಾನು ದಾಸಿ, ನೀನು ಉದಾಸಿ!

ನುತಿಪೆ ನಾ ನಿನ್ನ ಉಪಾಸಿ!
ದಾರಿ ಕಾಣದಾಗಿದೆ ಘಾಸಿ!
ಸಿಟ್ಟೇಕೆ? ಬಾ, ಕೈಲಾಸವಾಸಿ!
ನೀ ನೆನ್ನವ್ನೆಂಬುದಲ್ಲ ಹುಸಿ!
ನುಡಿಯಬೇಡನೃತ ಹೇಸಿ!
ಪೇಕ್ಷಿಸಿದ್ರೆ ಮುಖಕ್ಮಸಿ!
ದಾಸಿಯೆಂತಹಳು ರಾಕ್ಷಸಿ? (ದಾ)
-ಸಿ, ನಿರಂಜನಾದಿತ್ಯೋದಾಸಿ!!!

ಮಾಲಿಕನಿಗೆ ಮಾಲಾರ್ಪಣೆ! (ಕ)

-ಲಿಮಲದ್ದಾಗ್ಲಿ ನಿವಾರಣೆ!
ಷ್ಟವಾಗಿಹುದೀ ಬವಣೆ!
ನಿನಗ್ಬೇಡೆನ್ನ ವಿವರಣೆ!
ಗೆಳೆಯನಾಗಿ ತೊರ್ಕರುಣೆ!
ಮಾಡ್ಬಾರದು ನಿರಾಕರಣೆ!
ಲಾಭ, ನಷ್ಟಕ್ಕೆ ನೀನೇ ಹೊಣೆ! (ಕಾ)
-ರ್ಪಣ್ಯ ಬಿಟ್ಟು ನೀಡು ರಕ್ಷಣೆ! (ಆ)
-ಣೆ, ನಿರಂಜನಾದಿತ್ಯಗಾಣೆ!!!

ತೀರ್ಥದಿಂದ ಕ್ಷೇತ್ರ ಪವಿತ್ರ! (ತೀ)

-ರ್ಥ ಕ್ಷೇತ್ರಗಳಿಂದ ಪವಿತ್ರ! (ಅಂ)
-ದಿಂದೆನ್ನದೇ ರೂಢಿ ಸರ್ವತ್ರ!
ರ್ಶನವೀವ ನಿತ್ಯ ಮಿತ್ರ!
ಕ್ಷೇಮಕ್ಕೆ ಬೇಕು ಪಾತ್ರಾಪಾತ್ರ! (ಮಂ)
-ತ್ರ ಜಪವೆಂಬುದೊಂದು ಸೂತ್ರ!
ರಮಾತ್ಮ ದರ್ಶನಾ ನೇತ್ರ!
ವಿಜ್ಞಾನಿ ನೊಡಲೀ ವಿಚಿತ್ರ! (ಮಂ)
-ತ್ರ, ಶ್ರೀ ನಿರಂಜನಾದಿತ್ಯ ಮಂತ್ರ!!!

ಏರಿಗೊಂದು, ನೀರಿಗೊಂದೆಳೆದ್ರಾಗ್ದುಳುಮೆ! (ಅ)

-ರಿತಿದ ಮಾಡ್ಬೇಕೊಳ್ಳೇ ಎತ್ತುಗಳ ಜಮೆ!
ಗೊಂದಲವೆಬ್ಬಿಸಿದರೆ ಸಾಗದು ಗೈಮೆ!
ದುಡಿವವರಿಗಿರಬಾರದು ಬುದ್ಧಿ ಭ್ರಮೆ!
ನೀತಿ, ರೀತಿಯಲ್ಲನಸೂಯೆ ಅನುಪಮೆ! (ಹ)
-ರಿ ಹರ, ಅಜರಿಗ್ತಾಯಿಯಾದ ಮಹಿಮೆ!
ಗೊಂಡಾರಣ್ಯದಲ್ಲಿದ್ದತ್ರಿ ಸತಿ ನಿಷ್ಕಾಮೆ! (ನಿಂ)
-ದೆ, ವಂದನೆಯನ್ನಲಕ್ಷ್ಯ ಗೈದ ನಿಸ್ಸೀಮೆ! (ಎ)
-ಳೆದ್ರೆ ನೊಗ ಹೀಗೆ ಆಗ್ವುದೊಳ್ಳೇ ಉಳುಮೆ!
ದ್ರಾಕ್ಷಾಬಳ್ಳಿಯಾಲಂಬನ ಶಿವನಲ್ಲುಮೆ! (ಆ)
-ಗ್ದು ಹೀಗಿರಲ್ಕಾಮನೊಡನೆ ರತಿ, ಕಾಮೆ! (ಧೂ)
-ಳು ಹೊನ್ನಾದ ತೆರ ಹರಿಯೊಡನೆ ರಮೆ! (ಶ)
-ಮೆ, ದಮೆ, ನಿರಂಜನಾದಿತ್ಯನ ಹಿರಿಮೆ!!!

ಹಿಂದಿನ ವಾಸನೆ, ಇಂದಿನ ಯೋಚನೆ! (ಇಂ)

ದಿನ ಯೋಚನೆ ಮುಂದಿನಾಶಾ ಭಾವನೆ! (ಮ)
-ನಸ್ಸಿಂತಾದರದೆಂತು ಶಾಂತಿ ಪಾಲನೆ?
ವಾಸನಾ ನಾಶಕ್ಕಾಗ್ಬೇಕೀಗ ಸಾಧನೆ!
ತತ ಮಾಡ್ಬೇಕಿದಕ್ಕಾತ್ಮೋಪಾಸನೆ!
ನೆಮ್ಮದಿ ನೆಲಸುವುದೆಂದಾಶ್ವಾಸನೆ!
ಇಂಗಿ ಭವಾಬ್ಧಿ ಆಗ್ವನು ತಾನವನೆ!
ದಿವ್ಯ ನಾಮಾಮೃತ ಸಾರ್ಥಕ ಸೇವನೆ!
ರ, ನಾರಿಯರಲ್ಲಿರ್ಬಾರದ ಸಹನೆ!
‘ಯೋಗಿ’ ಅರ್ಧ ನಾರೀಶ್ವರ ಶಿವ ತಾನೇ?
ರಾಚರ ವ್ಯಾಪಕನು ಈತ ತಾನೇ? (ನೆ)
-ನೆ ನಿರಂಜನಾದಿತ್ಯನೆಂದಾತನನ್ನೇ!!!

ಚಿತ್ರಕೂಟದಲ್ಲಿ ವಿಚಿತ್ರ ನೋಟ! (ಪ)

-ತ್ರ, ಫಲ, ಪುಷ್ಪದಿಂದ ಪೂಜ ಕೂಟ!
ಕೂಡಿ ಭರತ ರಾಮನೊಡನಾಟ! (ದಿ)
-ಟವರಿತು ಲಕ್ಷ್ಮಣ ಕುಣಿದಾಟ!
ಶರಥನಂತ್ಯಕ್ಕಾಗಿ ಗೋಳಾಟ! (ಅ)
-ಲ್ಲಿ ಪಾದುಕಾಡಳಿತಾರಾಮ ಪಾಠ!
ವಿ



ಭರತೂರಿಗೆ ಹೊರಟ!
ಚಿತೆಗೆ ಬೀಳ್ವುದ್ಬಾರದಿದ್ರೆ ದಿಟ! (ಮಂ)
-ತ್ರ ಮುಗ್ಧವಾಯ್ತಿದು ಕೇಳಿದಾ ಕೂಟ!
ನೋಡಿ ಚಕಿತರಾದ್ರು ವಿಧಿಯಾಟ! (ನೋ)
-ಟ ನಿರಂಜನಾದಿತ್ಯಗಿಂಥಾಟ!!!

ಬಾಡಿಗೆ ಗಾಡಿ ಓಡದಿದ್ರೇನು ಗತಿ? (ತಿಂ)

-ಡಿ, ತೀರ್ಥಕ್ಕೆ ಗತಿಯಿಲ್ಲದಾಗ್ವ ಸ್ಥಿತಿ! (ಕಂ)
-ಗೆಡದೆದೆ ಕೊಡಬೇಕಾದಾಪತ್ಸ್ಥಿತಿ!
ಗಾಡಿ ದುರಸ್ತಿ ಮಾಡ್ದೆ ಇಲ್ಲನ್ಯ ಗತಿ! (ಪಂ)
-ಡಿತಾಚಾರಿಯ ಸೇವೆಯೇ ಈಗ ಗತಿ!
ಡಾಟ ಶುರುವಾದಾಗಿಲ್ಲ ದುಃಸ್ಥಿತಿ! (ಮೊಂ)
ತನ ಮಾಡಿದ್ರೆ ಕೆಡ್ವುದಾತ್ಮ ಸ್ಥಿತಿ!
ದಿವ್ಯ ಜ್ಞಾನದಿಂದುತ್ತಮ ಪರಿಸ್ಥಿತಿ! (ಉ)
-ದ್ರೇಕ ಮನಸ್ಸಿನಿಂದಕ್ಕು ಅಧೋಗತಿ! (ಅ)
-ನುಪಮ ಫಲಪ್ರದಾ ಶ್ರೀಪಾದ ಸ್ಥುತಿ!
ಗನ ಸದೃಶಾತ್ಮಾ ಶ್ರೀಪಾದ ಯತಿ! (ಗ)
-ತಿ ನಿರಂಜನಾದಿತ್ಯಾತ್ರಿ ಪುತ್ರ ಯತಿ!!!

ಗುಲ್ಲಿಲ್ಲದೆ ಬೆಲ್ಲವಾಗ್ವುದಿಲ್ಲ! (ಹ)

-ಲ್ಲಿಲ್ಲದೆ ಮೆಲ್ವುದಕ್ಕಾಗ್ವುದಿಲ್ಲ! (ತ)
-ಲ್ಲಣಿಸಿದರೇನೂ ಆಗ್ವುದಿಲ್ಲ!
ದೆವ್ವಗಳೂ ಕೂಟವಿಲ್ಲದಿಲ್ಲ!
ಬೆಲೆ ಒಳ್ಳೇತನಕ್ಕವ್ರಲ್ಲಿಲ್ಲ! (ಇ)
-ಲ್ಲಸಲ್ಲದ ವ್ಯವಹಾರವೆಲ್ಲಾ!
ವಾಸನಾ ಪರಿಣಾಮವಿದೆಲ್ಲಾ! (ಆ)
-ಗ್ವುದು ದೈವಬಿತ್ತದಂತೆ ಎಲ್ಲಾ!
ದಿವ್ಯ ನಾಮ ಜಪ ಮಾಡಿರೆಲ್ಲಾ! (ಬ)
-ಲ್ಲ ನಿರಂಜನಾದಿತ್ಯನಂತೆಲ್ಲಾ!!!

ನನಗೆ ಹಕ್ಕಿಲ್ಲ, ನಿನಗೆ ದಿಕ್ಕಿಲ್ಲ!

ನಗೆ ತಲೆ ಹರಟೆ ಬೇಕಾಗಿಲ್ಲ!
ಗೆಳೆಯನಿಗೆ ಅದು ವಿಹಿತವಲ್ಲ!
ರಿ ಸ್ಮರಣೆ ಮಾಡದೇ ಗತಿಯಿಲ್ಲ! (ಹ)
-ಕ್ಕಿ ಪಕ್ಕಿಗಳಿಗೂ ಬೇರೆ ನಾಥರಿಲ್ಲ! (ಅ)
-ಲ್ಲಗಳೆದರೆ ಈ ಮಾತು ಸುಖವಿಲ್ಲ!
ನಿತ್ಯ ಕರ್ಮ ನಿಷ್ಕಾಮದಿಂದ ಮಾಡೆಲ್ಲಾ!
ಶ್ವರ ದೇಹಕ್ಕಲಂಕಾರ ಬೇಕಿಲ್ಲ! (ಕಾ)
-ಗೆ, ಗೂಗೆಗಳಂಥಾ ಬಾಳ್ವೆ ನಿನಗಲ್ಲ!
ದಿವ್ಯ ಜೀವನದ ರೀತಿ ಪಾಲಿಸೆಲ್ಲಾ! (ಸಿ)
-ಕ್ಕಿದಾಗ ನೆಕ್ಕಿಕೊಳ್ಳದಾಗುವುದಿಲ್ಲ! (ಪು)
-ಲ್ಲ ನಿರಂಜನಾದಿತ್ಯನಂತಿನ್ನೊಂದಿಲ್ಲ!!!

ನಿನಗೆ ಬೇಕೆಂದೆನಿಸಿಲ್ಲ! (ನ)

-ನಗೆ ಸಾಕು ಎಂದೆನಿಸಿಲ್ಲ! (ಹೀ)
-ಗೆ ನನ್ನ, ನಿನ್ನ ಭೇದವೆಲ್ಲಾ!
ಬೇಕೆನ್ನದೇ ನಿನ್ನಂತಾಗ್ಲೆಲ್ಲಾ! (ಏ)
-ಕೆಂದ್ರೆ ಕೀರ್ತಿ ನಿನಗೇ ಎಲ್ಲಾ! (ನಿಂ)
-ದೆ ನನ್ನ ಪಾಲಿಗಿತ್ತೆಯಲ್ಲಾ?
ನಿನ್ನಾಟ ನಿನಗೆ ಗೊತ್ತಿಲ್ಲಾ!
ಸಿಕ್ಕಿ ಬಿದ್ದೊದ್ದಾಟ ನನ್ಗಲ್ಲಾ? (ಬ)
-ಲ್ಲ, ನಿರಂಜನಾದಿತ್ಯನೆಲ್ಲಾ!!!

ಶರೀರ ಉರಿದು ಹೋದ್ಮೇಲಾರ್ಬಂದ್ರೇನು? (ಖ)

-ರೀದಿಯಾದ್ಮೇಲ್ಪರೀಕ್ಷಿಸಿ ಫಲವೇನು?
ಹಸ್ಯವಿದರಿತು ಸೇವೆ ಮಾಡ್ನೀನು!
ಳ್ಳಾಗ ಉಟ್ಟು, ಕೊಟ್ಟು ಉಣ್ಣಬೇಕ್ನೀನು! (ಬ)
-ರಿಯ ಮಾತಿನ ಮಂಡಿಗೆ ಹಾಕ್ಬೇಡ್ನೀನು!
ದುಡಿಯಬೇಕು ಶಕ್ತಿಯಿದ್ದಾಗ ನೀನು!
ಹೋದಮೇಲೆ ದುಃಖಪಟ್ಟು ಫಲವೇನು? (ತಿಂ)
-ದ್ಮೇಲೆ ದೂರ್ಬಾರದಡುಗೆಯನ್ನು ನೀನು!
ಲಾಭಕ್ಕಾಗಿ ಮೋಸಮಾಡ್ಬಾರದು ನೀನು! (ಯಾ)
-ರ್ಬಂಧು ಯಾರ್ವೈರಿಯೆಂದರಿತಿರು ನೀನು! (ಉ)
-ದ್ರೇಕಗೊಂಡಾಗ ಮಾತು ನಿಲ್ಲಿಸು ನೀನು! (ಸೂ)
-ನು ನಿರಂಜನಾದಿತ್ಯಗಾಗ್ಬೇಕು ನೀನು!!!

ಸಂಜೀವ ನಿರ್ವಿಷಯಾನಂದ!

ಜೀವ ತಾ ದುರ್ವಿಷಯಾನಂದ!
ರದರಾಜ ಸೇವಾನಂದ!
ನಿತ್ಯಾನಿತ್ಯಜ್ಞ ನಿತ್ಯಾನಂದ! (ಗ)
-ರ್ವಿ ಮಾನವ ಅಜ್ಞಾನಾನಂದ!
ಡಾನನ ಸಚ್ಚಿದಾನಂದ!
ಯಾದವೇಂದ್ರ ಸಹಜಾನಂದ!
ನಂಜುಂಡೇಶ್ವರ ಯೋಗಾನಂದ! (ಕಂ)
-ದ ನಿರಂಜನಾದಿತ್ಯಾನಂದ!!!

ವಾರಿಜಮಿತ್ರನ ಪ್ರೀತಿಪಾತ್ರ ಸರೋಜ! (ಅ)

-ರಿತವರಾರ್ನಿನ್ನ, ನನ್ನ ಪ್ರೀತಿ ಸರೋಜಾ?
ನ್ಮಕೋಟಿಯಿಂದ ಬಂದದ್ದಿದು ಸರೋಜ!
ಮಿತ್ರ ವಾರಿಜ ಸಹಿತ ಶೋಭೆ ಸರೋಜ! (ಮಿ)
-ತ್ರ ಸಹಿತ ವಾರಿಜ ಭೂಷಣ ಸರೋಜ!
ನ್ನ ಕೀರ್ತಿ, ನಿನ್ನ ಪ್ರೀತ್ಯಾದರ್ಶ ಸರೋಜ!
ಪ್ರೀತಿ ವಿಶ್ವಾಸದಿಂದಲೇ ಶಾಂತಿ ಸರೋಜ!
ತಿತಿಕ್ಷೆ ನಿನ್ನದು ಅನುಪಮ ಸರೋಜ!
ಪಾಮರರಿದನ್ನೇನರಿವರು ಸರೋಜ?
ತ್ರಯಮೂರ್ತಿಗಳಿಗೂ ನೀನ್ಬೇಕು ಸರೋಜ!
ದಾಸೀನಳ್ನಿನ್ನ ಮೇಲೆ ಲಕ್ಷ್ಮಿಸರೋಜ!
ರೋಗ ಶಾಂತಿ ನಿನ್ನ ಗಂಧದಿಂದ ಸರೋಜ! (ನಿ)
-ಜ, ನಿರಂಜನಾದಿತ್ಯಾಪ್ತನಾಪ್ತೆ ಸರೋಜ!!!

ನೀನೇ ಸರ್ವಸ್ವವೆಂದರಿತವಗಿನ್ನೇನ್ಬೇಕು? (ತಾ)

-ನೇ ನೀನಾಗಿ ನಿತ್ಯಾನಂದನಾದರದೇ ಸಾಕು!
ಮಾಜ ನಿರ್ಬಂಧಕ್ಕೆ ಜೀವ ಕಟ್ಟು ಬೀಳ್ಬೇಕು! (ಗ)
-ರ್ವ ತಲೆಗೇರಿದವನಿಗೆ ಎಲ್ಲವೂ ಬೇಕು!
ಸ್ವರೂಪ ಸಿದ್ಧಿ ಅವನಿಗೆ ಹೇಗಾಗಬೇಕು?
ವೆಂಕ್ಟೇಶನ ಹುಂಡಿ ತುಂಬುವುದವನಿಗ್ಬೇಕು!
ಯೆ ಬಂದಿಲ್ಲೆಂದು ಸದಾ ಅಳುತ್ತಿರಬೇಕು! (ಅ)
-ರಿಷಡ್ವರ್ಗಕ್ಕವ ಗುಲಾಮನಾಗಿರಬೇಕು!
ರಲೆ, ತಂಟೆಗಾರಗೆಂತು ಶಾಂತಿ ಸಿಗ್ಬೇಕು?
ರ ಗುರುವಿಗವನು ಶರಣಾಗಬೇಕು!
ಗಿರಿಜಾಪತಿಯೇ ಗುರುವೆಂದರಿಯಬೇಕು! (ಇ)
-ನ್ನೇನೇ ಮಾಡಿದ್ರೂ ವ್ಯರ್ಥವೆಂದು ತಿಳಿಯಬೇಕು! (ತಿ)
-ನ್ಬೇಕು ಗುರುಪ್ರಸಾದ! ಬಿಡ್ಬೇಕ್ಥಳಕು!
ಕುಲಕೆ ಬೇಕು ನಿರಂಜನಾದಿತ್ಯ ಬೆಳಕು!!!

ವಿಶ್ವಾಸ ಘಾತುಕ ಪ್ರಪಂಚವಿದು! (ವಿ)

-ಶ್ವಾಮಿತ್ರನನ್ನೂ ಹೊತ್ತು ಹೆತ್ತಿತಿದು!
ತ್ಯ ಹರಿಶ್ಚಂದ್ರನ ಕಾಡಿತದು! (ಸಂ)
ಘಾನೇಕ ಸ್ಥಾಪಿಸಿ ವಿಫಲವಾಯ್ತದು!
ರುಣಿಯರ ಮಾನ ಕಳೆಯ್ತದು!
ಪಿ ವೀರ ವಾಲಿಯ ಕೊಂದಿತದು!
ಪ್ರಸಿದ್ಧ ಕ್ಷೇತ್ರಗಳಳಸಿತದು!
ಪಂಚಾಂಗ ಪಠಿಸಿ ವಂಚಿಸಿತದು!
ತುರೋಪಾಯದಿಂದ ಆಳಿತದು!
ವಿಶ್ವರೂಪ ತೋರ್ಯುದ್ಧರಿಸಿತದು! (ಇ)
-ದು ನಿರಂಜನಾದಿತ್ಯಾನಂದಹುದು!!!

ಗುಟ್ಟು ವ್ಯಥೆ ಎಂದು ರಟ್ಟಾದೀತು? (ಕ)

-ಟ್ಟುಕಥೆ ಸಟೆಯೆಂದಂದಾದೀತು!
ವ್ಯಭಿಚಾರ ಭಕ್ತಿಗೇನಾದೀತು? (ವ್ಯ)
-ಥೆ ಚಿತೆಯ ಹಾಗೆ ಉರಿಸೀತು!
ಎಂಟು ಮದಗಳಿಂದೇನಾದೀತು?
ದುಶ್ಚಾರಿತ್ರ್ಯದಿಂದಂತ್ಯವಾದೀತು!
ತಿ ಸುಖದಿಂದ ಏನಾದೀತು? (ಅ)
-ಟ್ಟಾದಡ್ಗೆ ತಿಪ್ಪೆಗಿಟ್ಟಂತಾದೀತು!
ದೀಪವಿಲ್ಲದಿದ್ದರೇನಾದೀತು? (ಹೇ)
-ತು ನಿರಂಜನಾದಿತ್ಯನೆಂದೀತು!!!

ಶರೀರ ಸೌಂದರ್ಯಕ್ಕೆಲ್ಲರಾಸೆ!

ರೀತಿ, ನೀತಿಯೆಲ್ಲಾ ಹೊಲಸಾಸೆ! (ಪ)
-ರಮಾರ್ಥಕ್ಕಿಲ್ಲ ಯಾರಿಗೂ ಆಸೆ!
ಸೌಂದರ್ಯವಳಿದಾಗ ನಿರಾಸೆ!
ರಿದ್ರಗೆ ಹೊಟ್ಟೆ, ಬಟ್ಟೆಯಾಸೆ! (ಶೌ)
-ರ್ಯವಂತನಿಗೆ ಹೋರಾಡುವಾಸೆ! (ಬೆ)
-ಕ್ಕೆಗೆ ಸದಾ ರತಿಸುಖದಾಸೆ! (ಬ)
-ಲ್ಲವರಿಗೆ ಪ್ರಪುಲ್ಲರಪ್ಪಾಸೆ!
ರಾಮದಾಸಗೆ ರಾಮನಪ್ಪಾಸೆ! (ಆ)
-ಸೆ, ನಿರಂಜನಾದಿತ್ಯಾನಂದಾಸೆ!!!

ಆವಾಹನೆ, ವಿಸರ್ಜನೆ, ಮನತನ!

ವಾಙ್ಮಾನಕೆ ಪರಮಾತ್ಮನೊಡೆತನ!
ಗಲಿರುಳ್ಮಾಡ್ಬೇಕವನ ಚಿಂತನ!
ನೆನಪು ನಶ್ವರದ್ದಾದರೆ ಪತನ!
ವಿವೇಕ, ವೈರಾಗ್ಯ, ಪರಮಾರ್ಥ ಸಾಧನ!
ತ್ತು, ಹುಟ್ಟುವುದು ಸಂಸಾರ ಬಂಧನ! (ನಿ)
-ರ್ಜನ ಪ್ರದೇಶದಲ್ಧ್ಯಾನಿಸ್ಬೇಕವನ! (ಮ)
-ನೆ, ಮಠಗಳಲ್ಲಿ ಅಶಾಂತಿ ಜೀವನ!
ನೋವೃತ್ಯಳಿದ್ಮೇಲೆ ಶಿವ ದರ್ಶನ! (ಮ)
-ನಶ್ಯಾಂತಿಗಾಗಿ ಸಾಕಾರವೊಂದು ವಿಧಾನ!
ತ್ವಜ್ಞ ನೋಡುವನು ತನ್ನಲ್ಲವನ! (ಮ)
-ನಸ್ಸಾನಲ್ಲೆಂದ ನಿರಂಜನಾದಿತ್ಯನ!!!

ನಾನು ಸೇವಕ, ನೀನು ನಾವಿಕ!

ನುಡಿಯಲೆಂತು ನಿನ್ನ ಕೌತುಕ?
ಸೇರ್ದಾದೆ ನಿನ್ನ ಮಾಡಿ ಪಾತಕ! (ಭ)
-ವ ಜಲಧಿಯಿದಪಘಾತಕ!
ರುಣಾಕರ ನೀನುದ್ಧಾರಕ!
ನೀನೇ ನನ್ನ ರೇಚಕ, ಪೂರಕ! (ಮ)
-ನುಜ ಜನ್ಮವಾಗಲಿ ಸಾರ್ಥಕ!
ನಾನೇನೂ ತಿಳಿಯದ ಬಾಲಕ!
ವಿವೇಕಿ ನೀನು ನೌಕಾ ಚಾಲಕ! (ಸಂ)
-ಕಟ ನಿರಂಜನಾದಿತ್ಯಾಂತಕ!!!

ಬೇಕಾದದ್ದು ಎಲ್ಲಿದ್ದ್ರೂ, ಹೇಗಿದ್ದ್ರೂ ಬೇಕು!

ಕಾಲ, ಅಕಾಲವೆನ್ನದೇ ಅದು ಬೇಕು!
ಡ್ಡನಾದ್ರೂ, ಹೆಡ್ಡನಾದ್ರೂ ಅದು ಬೇಕು! (ಕ)
-ದ್ದು ತಂದು, ಗುದ್ದು ತಿಂದಾದ್ರೂ ಅದು ಬೇಕು!
ಡರುಗಳೆಷ್ಟೇ ಬಂದ್ರೂ ಅದು ಬೇಕು! (ಮ)
-ಲ್ಲಿಕಾರ್ಜುನ ಕಾವಲಿದ್ದ್ರೂ ಅದು ಬೇಕು! (ತ)
-ದ್ದ್ರೂಪ ಸಿದ್ಧಿಸುವಲ್ಲಿ ಈ ಹಠ ಬೇಕು!
ಹೇಡಿಯಾಗಿ ಅರ್ಧದಲ್ಲಿ ಬಿಡ್ದಿರ್ಬೇಕು!
ಗಿರಿಧಾರಿಯಂತೆ ವಿಜಯಿಯಾಗ್ಬೇಕು! (ಚಿ)
-ದ್ದ್ರೂಪವೇ ತದ್ದ್ರೂಪವೆಂದರಿಯಬೇಕು!
ಬೇಡಾದದ್ದಾಶಿಸಿ ಕೆಡದಿರಬೇಕು! (ಬೇ)
-ಕು ನಿರಂಜನಾದಿತ್ಯಾನಂದವೇ ಬೇಕು!!!

ತೊಟ್ಟಿಕ್ಕುವುದಿಲ್ಲದಾಗುವ ತನಕ ಹಿಂಡು! (ಬಿ)

-ಟ್ಟಿ ಬಸವನಂತೇನೂ ಮಾಡಬಾರದು ಗಂಡು! (ಹ)
-ಕ್ಕು ಸಾಧಿಸುವಾಗ ಠಕ್ಕು ತೊರ್ಬಾರದು ಗಂಡು! (ಗೋ)
-ವುಗಳ ಪಾಲಿಸಿದ ಗೋಪಾಲನೊಬ್ಬ ಗಂಡು!
ದಿನವೆಲ್ಲಾ ಮೇಯಿಸಿದಾಕಳುಗಳಾ ಗಂಡು! (ಗೊ)
-ಲ್ಲ ಬಾಲೆಯರ ಪ್ರೀತಿಪಾತ್ರನಾಗಿದ್ದಾ ಗಂಡು!
ದಾಸರ ದಾಸನೂ ಆಗಿದ್ದಾ ವಿಚಿತ್ರ ಗಂಡು!
ಗುದ್ದಾಟದಲ್ಲಿ ಅದ್ವಿತೀಯನಾಗಿದ್ದಾ ಗಂಡು!
ಸ್ತ್ರ ದ್ರೌಪದಿಯದಕ್ಷಯ ಮಾಡಿತಾ ಗಂಡು!
ರಳನಾಗಿ ದುರುಳರ ಕೊಂದಿತಾ ಗಂಡು!
ರಕಾಸುರನಸು ಹೀರಿ ತೇಗಿತಾ ಗಂಡು!
ನಲಿ ಭೀಷ್ಮನಲಿ ಚಕ್ರವೆತ್ತಿತಾ ಗಂಡು!
ಹಿಂಡು ಕಲಮಲ ಜಲವನ್ನು ವೀರ ಗಂಡು (ಗಂ)
-ಡು, ಹೆಣ್ಣು ಭೇದ ನಿರಂಜನಾದಿತ್ಯ ನೀ ಹಿಂಡು!!!

ಯಾರೂ ಬಗೆ ಹರಿಸದಿರುವ ಪ್ರಶ್ನೆ!

ರೂಪ, ನಾಮ, ಚರಾಚರೋತ್ಪತ್ತಿ ಪ್ರಶ್ನೆ!
ಹಳ ಆಳವಾಗಿರುವುದೀ ಪ್ರಶ್ನೆ!
ಗೆದ್ದಮೇಲಲ್ಲವೇ ಪ್ರಶಸ್ತಿಯ ಪ್ರಶ್ನೆ!
ರಿ, ಹರರೆಲ್ಲಿಹರ್ಕೇಳಲೀ ಪ್ರಶ್ನೆ?
ರಿಸಿಗಳು ಉತ್ತರಿಸಿಲ್ಲ ಈ ಪ್ರಶ್ನೆ!
ರ್ವಜ್ಞ ಗುರು ಬಿಡಿಸಬೇಕೀ ಪ್ರಶ್ನೆ!
ದಿವ್ಯ ಜೀವನೋತ್ಪತ್ತಿ ನಂತ್ರದ ಪ್ರಶ್ನೆ!
ರುಕ್ಮಿಣೀಶನುತ್ತರಿಸಿದ್ದನೀ ಪ್ರಶ್ನೆ!
ರ ಸೃಷ್ಟಿ ಕೌತುಕದ್ದೀಗಿನ ಪ್ರಶ್ನೆ!
ಪ್ರಶನ್ನನಾಗೀಶ್ವರ ಬಿಡಿಸ್ಲೀ ಪ್ರಶ್ನೆ! (ಪ್ರ)
-ಶ್ನೆ, ನಿರಂಜನಾದಿತ್ಯಗೆಲ್ಲರಾ ಪ್ರಶ್ನೆ!!!

ಸ್ವಾರ್ಥರಹಿತನಾಗೆಂಬುದು ಸುಲಭ! (ಸ್ವಾ)

-ರ್ಥವಿಲ್ಲದವ ಸಿಕ್ಕುವುದು ದುರ್ಲಭ!
ಕ್ತ, ಮಾಂಸದಲ್ಲಂಟಿರುವುದೀ ಜಂಭ!
ಹಿತೈಷಿಯೆಂಬುವನಿಗೂ ಇದೇ ಜಂಭ!
ಪಸ್ವಿಗಳಲ್ಲೂ ಇತ್ತು ಈ ಪ್ರಲೋಭ!
ನಾಶವಾದಾಗ ಮನಸ್ಸು ಇಲ್ಲ ಜಂಭ! (ಹೀ)
-ಗೆಂದಮೇಲಮನಸ್ಕವೇ ನಿಸ್ವಾರ್ಥ ಬಿಂಬ!
ಬುದ್ಧಿ, ಅಹಂಕಾರ, ಚಿತ್ತವೆಲ್ಲಾ ಬಿಂಬ!
ದುಃಖ, ಸುಖ, ದ್ವಂದಾತೀತಾ ಪೂರ್ಣ ಬಿಂಬ!
ಸುದರ್ಶನಧಾರಿಗೂ

ಈರಿದ್ದಾ ಬಿಂಬ!
ಕ್ಷ್ಯವಿದೇ ನಿರ್ವಿಕಾರ ಗುರು ಸಾಂಬ!
ಗವಾನ್ ನಿರಂಜನಾದಿತ್ಯಾ ಬಿಂಬ!!!

ಊರು ಕಂಡವ ನೇರದಾರಿ ತೋರ್ಬಲ್ಲ!

ರುಜು ಮಾರ್ಗಿಗೆ ಗಜ, ಧ್ವಜ ಬೇಕಿಲ್ಲ!
ಕಂಡದ್ದೆಂದ್ರೆ ಮಂಡೆಯೊಡೆಯುವರೆಲ್ಲ!
ಕಾಯಿತರಿಗೆ ಧರ್ಮಾಧರ್ಮವಿಲ್ಲ!
ನವಾಸಿಗಳಿಗಾರ ಹಂಗೂ ಇಲ್ಲ!
ನೇಮ ನಿಷ್ಠೆಗೆ ಜಾತಿ, ಮತವೇನಿಲ್ಲ!
ಹಸ್ಯವಿದರಿಯ್ಲಿ ಕಿರಿಯರೆಲ್ಲಾ!
ದಾಸರಿಗೆ ವೇಷದ ಅಗತ್ಯವಿಲ್ಲ!
ರಿಪುಕುಲಾಂತಕಗರಿ ಭಯವಿಲ್ಲ!
ತೋರ್ಕೆಗಾಗಿ ಏನೂ ಮಾಡಬೇಕಾಗಿಲ್ಲ! (ದು)
-ರ್ಬಲರ ಸೇವೆ ಸಬಲರ್ಮಾಡಲೆಲ್ಲಾ! (ಪು)
-ಲ್ಲ ನಿರಂಜನಾದಿತ್ಯಗದೇ ಹಗ್ಲೆಲ್ಲಾ!!!

ಸೃಷ್ಟಿಯಲ್ಲೇನೇನಿದೆಂಬುದೂಹಾತೀತ! (ಇ)

-ಷ್ಟಿದ್ದರೂ ಅತೃಪ್ತನಾಗಿಹ ವಿಧಾತ!
ಮನೆಂಬವನಿಂದ ಎಲ್ಲಾ ನಿಪಾತ! (ಕ)
-ಲ್ಲೇ ದೇವರೆಂಬುದೀಗಿನ ದ್ವೈತ ಮತ!
ನೇಮ, ನಿಷ್ಠಾನುಷ್ಠಾನಕ್ಕಿಲ್ಲ ಮತ!
ನಿತ್ಯಾನಿತ್ಯ ವಿವೇಕಿಗದ್ವೈತ ಮತ! (ಒಂ)
-ದೆಂದಂದು ಬಹಲ ರೂಪಕ್ಕೀಗ ಮತ!
ಬುದ್ಧಿ ಭ್ರಮಾ ನಾಶಕ್ಕೆ ಬೇಕೇಕ ಮತ!
ದೂರಿ ಫಲವೇನ್ಪಾಶ್ಚಿಮಾತ್ಯರ ಮತ?
ಹಾದಿ ಒಂದೂರಿಗೆ ಈ ವಿವಿಧ ಮತ!
ತೀಟೆ ವ್ಯಾಜ್ಯದಿಂದುದ್ಧಾರ ಯಾವ ಮತ?
ತ್ವ ನಿರಂಜನಾದಿತ್ಯಾನಂದ ಮತ!!!

ಆ ಮೂರ್ತಿಯನ್ನು ನಾನು ನೋಡಿಲ್ಲ!

ಮೂರ್ತಿಯಿದನ್ನು ನೀನೂ ನೋಡಿಲ್ಲ! (ಮೂ)
-ರ್ತಿಗಳ್ಸಂಧಿಸದದಾಗ್ವುದಿಲ್ಲ! (ಪ್ರ)
-ಯತ್ನ ಸಫಲ ಲಭ್ಯದಂತೆಲ್ಲಾ! (ಇ)
-ನ್ನುಳಿದ ಕಾರಣವೇನೂ ಇಲ್ಲ!
ನಾಳೆ ನೋಡೀತೆನ್ನುವ ಹಾಗಿಲ್ಲ! (ತ)
-ನು ಇರುತ್ತೋ, ಸಾಯುತ್ತೋ ಗೊತ್ತಿಲ್ಲ!
ನೋಡ್ಲಿಕ್ಕೀಗಭ್ಯಂತರವೇನಿಲ್ಲ! (ಪ)
-ಡಿಸ್ಬೇಕ್ಸಾರ್ಥಕ ಈ ಕಾಲ ಎಲ್ಲಾ! (ಪು)
-ಲ್ಲ, ನಿರಂಜನಾದಿತ್ಯನ್ಯನಲ್ಲ!!!

ನಮ್ಮಿಬ್ಬ್ರ ಋಣಾನುಬಂಧವೆಂದಿನಿಂದ? (ಸ)

-ಮ್ಮಿಲನವೀಗ ಯಾವ ಉದ್ದೇಶದಿಂದ? (ಸೊ)
-ಬ್ಬ್ರ ಹಾಕ್ವುದೊಳ್ಳೇ ಫಸಲಿನಾಸೆಯಿಂದ!
ಷಿ ಜೀವನ ಇಬ್ಬರಿಗೂ ಆನಂದ! (ಪ್ರಾ)
-ಣಾಪಾಯ ಭಯ ನಮ್ಮಿಬ್ಬರಿಗಿಲ್ಲೆಂದ! (ಅ)
-ನುಭವಿಸಬೇಕು ಸದಾ ಬ್ರಹ್ಮಾನಂದ!
ಬಂಧು, ಬಳಗದ್ದು ನಮಗಿಲ್ಲ ಬಂಧ!
ರ್ಮಾಧರ್ಮದ ಚಿಂತೆ ತಪ್ಪಿಹೋಯ್ತೆಂದ! (ನಾ)
-ವೆಂದಿಗೂ ಬೇರ್ಬೇರಿರಲಾಗ್ವುದಿಲ್ಲೆಂದ!
ದಿವ್ಯ ಜೀವನ ಮತ್ತಾವುದಕ್ಕಲ್ಲೆಂದ!
ನಿಂದಕರಿಗ್ನಾವಂಜಬೇಕಾಗಿಲ್ಲೆಂದ!
ತ್ತ, ನಿರಂಜನಾದಿತ್ಯ ಒಂದೇ ಎಂದ!!!

ಬಯಸಿ ತರಿಸಿದ್ದು ಬಳಸಲಾಗಿಲ್ಲ! (ಬ)

-ಯಸದೇ ಬಂದದ್ದು ಬಳಸದುಳಿದಿಲ್ಲ!
ಸಿರಿಯೊಡೆಯನಾಡಳಿತಾನಂದವೆಲ್ಲ!
ಪಸ್ವಿಗೂ ಬೇಡಿದ್ದೆಲ್ಲಾ ಸಿಕ್ಕಲೇ ಇಲ್ಲ! (ವೈ)
-ರಿಗಳಿರ್ಬಾದ್ದೆಂದ್ರೂ ಅವರೂರು ಬಿಟ್ಟಿಲ್ಲ!
ಸಿಹಿ, ಕಹಿ ಸಮಾನಾಗ್ಲೆಂದ್ರೆ ಅದಾಗ್ಲಿಲ್ಲ! (ಬಿ)
-ದ್ದು, ಎದ್ದು, ಬಿದ್ದು ಕಳೆಯಿತು ಕಾಲವೆಲ್ಲ!
ಯಲಾಡಂಬರಕ್ಕೇ ಬೆಲೆ ಊರಲ್ಲೆಲ್ಲಾ! (ಒ)
-ಳ, ಹೊರಗಿನ ಜಗಳದಿಂದಶಾಂತ್ಯೆಲ್ಲಾ!
ರ್ವೊ

ದಯ ಕಿರಣವಿನ್ನೂ ಕಾಣುತ್ತಿಲ್ಲ!
ಲಾಭ ಬಡಕರ ಕಾಟವೇನೂ ತಪ್ಪಿಲ್ಲ!
ಗಿರಿಜನ, ಹರಿಜನಕ್ಕೆ ಶಾಂತಿಯಿಲ್ಲ! (ಬ)
-ಲ್ಲ ನಿರಂಜನಾದಿತ್ಯರಿಯದ್ದೇನೂ ಇಲ್ಲ!!!

ನಾನು, ನೀನವನೊಬ್ಬನು! (ಅ)

-ನುಮಾನವೇನಿಲ್ಲೆಂಬೆನು!
ನೀನಿದ ನಂಬಿರೆಂಬೆನು!
ಶ್ವರ ನಾವಲ್ಲೆಂಬೆನು!
ರ ಗುರು ಅದೆಂಬೆನು! (ನೀ)
-ನೊಬ್ಬಾನೊಬ್ಬನಿಲ್ಲೆಂಬೆನು! (ಒ)
-ಬ್ಬನೇ ಎಲ್ಲವೂ ಎಂಬೆನು! (ನೀ)
-ನು ನಿರಂಜನಾದಿತ್ಯಾನು!!!

ಒಬ್ಬನ ಮೇಲೊಬ್ಬ ಮಲಗಿದ್ದ! (ಹ)

-ಬ್ಬ ಮುಗಿದ ಬಳಿಕೊಬ್ಬನೆದ್ದ!
ಡುರಾತ್ರಿಯಲ್ಲಿನ್ನೊಬ್ಬನೆದ್ದ!
ಮೇಲಿದ್ದವನು ಕೆಳಗೆ ಬಿದ್ದ! (ಕಾ)
-ಲೊಬ್ಬನದ್ದಿನ್ನೊಬ್ಬ ಹಿಡಿದಿದ್ದ! (ಇ)
-ಬ್ಬರನ್ನೂ ಬೇರೊಬ್ಬ ನೋಡುತ್ತಿದ್ದ!
ಧಾಂಧ್ರವರಿಬ್ಬ್ರನಾತ ಒದ್ದ! (ಕಾ)
-ಲ ಬೆಳಗಾಯ್ತೆಂದಲ್ಲಿಂದಾತೆದ್ದ! (ಭೋ)
-ಗಿಗಳ್ಗತಿಯಿದೆಂದು ನಗ್ತಿದ್ದ! (ಇ)
-ದ್ದ, ನಿರಂಜನಾದಿತ್ಯ ಮೂಡ್ತಿದ್ದ!!!

ದಾರಿ ಊರಿಗೆ ತೋರಿ ವಾರಿಧಿಗಿಳಿಸಬೇಡ!

ರಿಸಿ, ಮುನಿಗಳುಪದೇಶ ಸುಳ್ಳು ಮಾಡಬೇಡ!
ರ್ಧ್ವರೇತನಾಗಿ ನನ್ನನ್ನು ಮಾಡದಿರಬೇಡ!
ರಿಪುಗಳಾರರ ಹಿಂಸೆಗೆನ್ನ ಗುರಿ ಮಾಡ್ಬೇಡ!
ಗೆದ್ದು ಶ್ರೀ ಪಾದಕ್ಕೆ ಕೀರ್ತಿ ಬರಿಸದಿರಬೇಡ!
ತೋಳ, ನರಿ, ನಾಯಿಗಳಂತೆನ್ನ ಇರಿಸಬೇಡ!
ರಿಕ್ತ ಹಸ್ತರಾಗಿ ನಂಬಿದವರನ್ನಟ್ಟಬೇಡ!
ವಾರ, ತಿಥಿ, ಮಾಸಗಳೆಣಿಸಿ ಅಳಿಸಬೇಡ!
ರಿದ್ಧಿ, ಸಿದ್ಧಿಗಳಾಸೆಗೆನ್ನ ಮನ ಎಳೆಯ್ಬೇಡ!
ಧಿಕ್ಕಾರ ಯಾರನ್ನೂ ನನ್ನಿಂದ ಮಾಡಿಸಲೇಬೇಡ!
ಗಿರಿಜಾಪತಿಯ ದರ್ಶನ ಕೊಡಿಸದಿರ್ಬೆ

ಡ! (ಅ)
-ಳಿದುಹೋಗುವ ದೇಹದ ಮೇಲಾಗ್ರಹ ಪಡ್ಬೇಡ!
ರ್ವವೂ ನೀನೆನಗೆಂಬ ವಿಶ್ವಾಸ ಕೆಡಿಸ್ಬೇಡ!
ಬೇಡ, ಖಂಡಿತ ನನಗಿನ್ನಾವುದನ್ನೂ ಕೊಡ್ಬೇಡ!
ಮರುಧರ ನಿರಂಜನಾದಿತ್ಯನಾಗ್ದಿರ್ಬೇಡ!!!

ಹಿಂದಿಲ್ಲದಿಂದಿಲ್ಲ, ಇಂದಿಲ್ಲದೆ ಮುಂದಿಲ್ಲ!

ದಿನ, ರಾತ್ರಿ ಇಲ್ಲದಿದ್ದರಿದಾವ್ದೂ ಇಲ್ಲ! (ಎ)
-ಲ್ಲಕ್ಕೂ ಕಾರಣಕರ್ತನೊಬ್ಬನಿಲ್ಲದಿಲ್ಲ! (ಅಂ)
-ದಿಂದಿನ ಸಂಬಂಧದರಿವಿನ್ನೂ ಆಗಿಲ್ಲ!
ದಿವ್ಯ ಜ್ಞಾನವಿಲ್ಲದೇ ಇದಾಗುವುದಿಲ್ಲ! (ಬ)
-ಲ್ಲ ನಾರದಂದಿನಂತಿಂದೂ ಬಾರ್ದಾಗ್ವುದಿಲ್ಲ!
ಇಂದಿನ ಪರಿಸ್ಥಿತಿ ಕೆಟ್ಟಿರುವುದೆಲ್ಲಾ!
ದಿಕ್ಕೇ ತೋಚದಾಯ್ತು ಹರಿ, ಹರರಿಗೆಲ್ಲಾ! (ತ)
-ಲ್ಲಣಿಸಿದ್ದು ಚಂಡಿ ದ್ರೌಪದಿಯ ಕಂಡೆಲ್ಲಾ! (ಬಂ)
-ದೆನೆಂದು ನಾರದ ಬಂದು ಒರೆದನೆಲ್ಲಾ!
ಮುಂದೆ ಸುಖ, ಶಾಂತಿಯಿಂದಿದ್ದರವರೆಲ್ಲಾ!
ದಿವ್ಯ ಜೀವನ ಮಹಿಮೆ ತೋರ್ಬೇಕೀಗೆಲ್ಲಾ! (ಬ)
-ಲ್ಲ ನಿರಂಜನಾದಿತ್ಯಗೆಲ್ಲಾ ಹೇಳ್ಯಾಯ್ತಲ್ಲಾ!!!

ಹುಟ್ಟು ಗುಣ ಸುಟ್ರೂ ಬಿಟ್ಟು ಹೋಗದಯ್ಯಾ! (ಗು)

-ಟ್ಟು ಇದ ತಿಳಿದು ತೃಪ್ತಿಯಿಂದಿರಯ್ಯಾ!
ಗುಡ್ಡ, ಕಾಡು ಸುತ್ತಿದ್ದೂ ನೆನಪುಂಟಯ್ಯಾ! (ಹ)
-ಣ, ಹಣ ಎಂತ ಬಡ್ಕೊಂಡದ್ದೂ ಉಂಟಯ್ಯಾ!
ಸುಖ ಜಗಜೀವನ ಬೇಡಿದ್ದುಂಟಯ್ಯಾ! (ಕೊ)
-ಟ್ಟ್ರೂ ಈಗ ಬೇಡವೆಂದು ಪ್ರಾರ್ಥಿಪೆನಯ್ಯಾ!
ಬಿಸಿಲ್ಮಳೆ ಈಗ ಸಹಿಸ್ಬಲ್ಲೇನಯ್ಯಾ! (ಕ)
-ಟ್ಟುನಿಟ್ಟಿನ ನೇಮ ಈಗೇನಿಲ್ಲವಯ್ಯಾ!
ಹೋದದ್ದಕ್ಕೀಗ ಅಳುವುದಿಲ್ಲವಯ್ಯಾ!
ಗನ ಸದೃಶಾತ್ಮಾದರ್ಶವಿದಯ್ಯಾ!
ತ್ತ ಗುರು ದೇವನ ಕೃಪೆಯಿದಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾನಂದ ಹೊಂದಯ್ಯಾ!!!

ಕಥೆ ತಾಳ್ತಾಳೆನ್ನುತ್ತಿದೆ! (ವ್ಯ)

-ಥೆ ಹಾಳಾಯಿತೆನ್ನುತಿದೆ!
ತಾಳ್ತಾಳೀಗ ವೃದ್ಧನಾದೆ! (ಅ)
-ಳ್ತಾ, ಅಳ್ತಾ ದಿಕ್ಕಿಲ್ಲದಾದೆ! (ಕೊ)
-ಳೆಯಿನ್ನೇನು ಬಾಕಿ ಇದೆ? (ತಿ)
-ನ್ನುವುದು ಬಿಡ್ಬೇಕಾಗಿದೆ!
ತಿತಿಕ್ಷೆಯಿಂದೇನಾಗಿದೆ? (ಆ)
-ದೆ ನಿರಂಜನಾದಿತ್ಯಾದೆ!!!

ಇಂದ್ರಿಯ ಸುಖಾಸಕ್ತಿಯಿಂದವ್ಯವಸ್ಥೆ! (ಬ)

-ದ್ರಿ ಯಾತ್ರೆ ಮಾಡಿದ್ರೂ ಹೋಗ್ದು ದುರವಸ್ಥೆ!
ಮ, ನಿಯಮದಭ್ಯಾಸ ಸುವ್ಯವಸ್ಥೆ!
ಸುಸೂತ್ರ ಜೀವನಕ್ಕಿದೊಳ್ಳೇ ಅವಸ್ಥೆ!
ಖಾರ, ಹುಳಿ, ಜಾಸ್ತಿ ತಿಂದರೆ ಅಸ್ವಸ್ಥೆ!
ತ್ವಾಹಾರ ಸೇವನೆಯಿಂದ ಸುಸ್ವಸ್ಥೆ! (ಮು)
-ಕ್ತಿ ಸಿದ್ಧಿಗಿದು ಸರಿಯಾದ ವ್ಯವಸ್ಥೆ! (ಬಾ

)
-ಯಿಂದಾಡಿದ ಮಾತ್ರಕ್ಕಾಗ್ದು ಸುವ್ಯವಸ್ಥೆ!
ಮೆ, ಶಮೆಯಿಂದಾಗುವುದಾತ್ಮಾವಸ್ಥೆ!
ಒನೆ ಲಿನೆ ಮಿ

ಸಿ




ರ ಗುರುಕೃಪೆಯಿಂದ ನಿಜಾವಸ್ಥೆ! (ಸಂ)
-ಸ್ಥೆ, ನಿರಂಜನಾದಿತ್ಯಗೆ ವಿಶ್ವಸಂಸ್ಥೆ!!!

ಇರ್ಬೇಕಾದಂತಿಟ್ಟಿರ್ಪಾಗೇಕ್ಚಿಂತೆ? (ಬ)

-ರ್ಬೇಕೀ ವಿವೇಕ ಗುರುವಿನಂತೆ!
ಕಾಲಕ್ತಕ್ಕ ಲೀಲೆಂದ್ರೆ ನಿಶ್ಚಿಂತೆ!
ದಂಭಾಚಾರವಿರಬಾರದಂತೆ!
ತಿರುಪತಿ ನೀನಿರುವೂರಂತೆ! (ಮೆ)
-ಟ್ಟಿಲು ಮನದಲ್ಲೇ ಹತ್ಬೇಕಂತೆ! (ಏ)
-ರ್ಪಾಡಿದಕ್ಕೇನೂ ಖರ್ಚಿಲ್ಲವಂತೆ!
ಗೇಯ್ಮೆಗದ್ರಿಂದ ತೊಂದ್ರೆಯಾಗ್ದಂತೆ (ಸಾ)
-ಕ್ಚಿಂತೆ! ಮಾಡು ಸತತಾತ್ಮಾ ಚಿಂತೆ! (ಮಾ)
-ತೆ ಶ್ರೀ ನಿರಂಜನಾದಿತ್ಯನಂತೆ!!!

ದೇವರಿಗೆ ಜಯ, ಜೀವರ್ಗಪಜಯ! (ಅ)

-ವರವ್ರ ಕರ್ಮಾನ್ಸಾರ ಜಯಾಪಜಯ! (ಅ)
-ರಿತಿದನ್ನು ಮಾಡ್ಬೇಕು ದೇಶಸೇವೆಯ!
ಗೆಜ್ಜಲಿನಂತೆಂದರಿತು ಬಿಡಾಸೆಯ!
ನತೆ ಸಹಿಸದೀಗ ಹಸಿವೆಯ! (ನ್ಯಾ)
-ಯ ಬೆಲೆಗೆ ಕೊಡ್ಬೇಕಾಹಾರ ದಿನ್ಸಿಯ!
ಜೀತಮುಕ್ತ ಬಾಳಲೀಗ ಸುಸಮಯ! (ಭ)
ಬಂಧ ಮುಕ್ತಿಗಾಗಿ ಮಾಡ್ಭಜನೆಯ! (ಸ್ವ)
-ರ್ಗ, ನರಕಾತೀತವಾಗಿರಿಸಿಚ್ಛೆಯ!
ರಮಾರ್ಥಕ್ಕಿದುವೇ ಪರಮ ಧ್ಯೇಯ!
ಯಿಸಬೇಕಿಂತು ನಶ್ವರ ಮಾಯೆಯ! (ಪ್ರಿ)
-ಯ ನಿರಂಜನಾದಿತ್ಯಗಿಂಥಾ ತನಯ!!!

ನನಗಿನ್ನೇಕೆ ತಳಮಳ?

ನಗರಿವಾಯ್ತವನಾಳ!
ಗಿರೀಶನಿಗೆ ನಾನು ಬಾಳ! (ಇ)
-ನ್ನೇನನ್ನೂ ನನ್ನಿಂದವ ಕೇಳ!
ಕೆಟ್ಟರೆ ಕೇಳನೆನ್ನ ಗೋಳ!
ತ್ಸ್ವರೂಪಿಯಾಗ್ಬೇಕ್ತರಳ! (ಥ)
-ಳಕ್ನಿಂದ ಕೆಡುವ ದುರುಳ!
ಹಾದೇವ ಬಹು ಸರಳ! (ಬಾ)
-ಳ ನಿರಂಜನಾದಿತ್ಯ ಬೋಳ!!!

ಇಡ್ಬೇಕಾದಂತಿಟ್ಕೊಡ್ಬೇಕಾದದ್ಕೊಟ್ಟಿದ್ದಾನೆ! (ಆ)

-ಡ್ಬೇಡ ಪ್ರತಿ ಮಾತೆಂದು ಆಜ್ಞಾಪಿಸಿದ್ದಾನೆ!
ಕಾರ್ಯ ಮಾಡಿಸಿದಂತೆ ಮಾಡು ಎಂದಿದ್ದಾನೆ!
ದಂಡ, ಕಮಂಡಲು ಕೈಲಿರಲೆಂದಿದ್ದಾನೆ!
ತಿತಿಕ್ಷೆ ಬಲವಾಗಿರಬೇಕೆಂದಿದ್ದಾನೆ! (ಉ)
-ಟ್ಕೊಳ್ಳೋದಿಲ್ಲದಿದ್ರೂ ಆಗ್ಬಹುದೆಂದಿದ್ದಾನೆ! (ಬಿ)
-ಡ್ಬೇಡ ಲಂಗೋಟಿಯನ್ನೆಂದಿಗೂ ಎಂದಿದ್ದಾನೆ!
ಕಾಲಾಕಾಲೆನ್ನದೇ ಜಪ ಮಾಡೆಂದಿದ್ದಾನೆ!
ತ್ತಾತ್ರೇಯನೇ ನಿನ್ನ ಗುರು ಎಂದಿದ್ದಾನೆ! (ತಂ)
-ದ್ಕೊಳ್ಬೇಕವನ ಗುಣ ನಿನ್ನಲ್ಲೆಂದಿದ್ದಾನೆ! (ಹು)
-ಟ್ಟಿ, ಸಾಯುವ ಬಾಳು ಇನ್ನು ಸಾಕೆಂದಿಆ



ನೆ! (ಒ)
-ದ್ದಾಟವಿದ್ರಿಂದೆಂದುಪದೇಶ ಮಾಡಿದ್ದಾನೆ! (ತಾ)
-ನೆ

ನಿರಂಜನಾದಿತ್ಯನಾಗೀಗುದ್ಸಿದ್ದಾನೆ!!!

ಭಗವತ್ಪ್ರಸಾದ ಒಮ್ಮತದಿಂದ ಹಂಚಿಕೊಳ್ಳಿ!

ರ್ವ ಬಿಟ್ಟನ್ಯೋನ್ಯವಾಗಿ ಒಗಟು ಬಿಡಿಸಿಕೊಳ್ಳಿ!
ರುಣಾನಾಲೆಯೂ ನಿಮ್ಮವರಿಗೆಂದರಿತ್ಕೊಳ್ಳಿ! (ಸ)
-ತ್ಪ್ರಜೆಗಳಾಗಲುದಾರ ಬುದ್ಧಿ ಬೆಳೆಸಿಕೊಳ್ಳಿ!
ಸಾಹಸ ರಚನಾ ಕಾರ್ಯದಲ್ಲಿ ತೋರಿಸಿಕೊಳ್ಳಿ!
ರ್ಪ, ದಂಭದಿಂದ ಅಶಾಂತಿಯೆಂದರಿತುಕೊಳ್ಳಿ!
ಗ್ಗಟ್ಟಿನಿಂದ ಕಳ್ಳನನ್ನು ಹೊರಗಟ್ಟಿಕೊಳ್ಳಿ! (ನಿ)
-ಮ್ಮ, ನಮ್ಮ ಹೋರಾಟ ವಿವೇಕದಿಂದ ಮುಗ್ಸಿಕೊಳ್ಳಿ!
ಜ್ಞರ ಸಲಹೆಗಳನ್ನೂ ಪರಾಂಬರ್ಸಿಕೊಳ್ಳಿ! (ಅಂ)
-ದಿಂದಿನ ಸ್ಥಿತಿ, ಗತಿಗೆ ತಕ್ಕಂತೆ ನಡೆದ್ಕೊಳ್ಳಿ!
ಒನೆ ಲಿನೆ ಮಿ

ಸಿ




ಹಂಗಿಗರನ್ಯರಿಗಾಗ್ದೆ ಸ್ವತಂತ್ರರಾಗಿದ್ಕೊಳ್ಳಿ!
ಚಿರಾಯುರಾರೋಗ್ಯ ಭಾಗ್ಯವಂತರಾಗಿದ್ದುಕೊಳ್ಳಿ!
ಕೊಟ್ಟವ ಕಿತ್ತುಕೊಳ್ಳದಂತೆ ಭಕ್ತಿಯಿಂದಿದ್ಕೊಳ್ಳಿ! (ಕೊ)
-ಳ್ಳಿ, ನಿರಂಜನಾದಿತ್ಯಾನಂದ ಸಂಪಾದಿಸಿಕೊಳ್ಳಿ!!!

ಶಿವ ಸಂಬಂಧ ತಪ್ಪಿದ್ರೆ ಭವಬಂಧ! (ಭ)

-ವ ಬಂಧ ತಪ್ಪಿದ್ರೆ ಶಿವನ ಸಂಬಂಧ!
ಸಂಬಂಧವಾದ್ಮೇಲಾರದೇನು ನಿರ್ಬಂಧ?
ಬಂಧು, ಬಳಗಕ್ಕಿಂತಧಿಕಾ ಸಂಬಂಧ!
ರ್ಮ, ಕರ್ಮವಿಲ್ಲದ್ದದೆಂಥಾ ಸಂಬಂಧ?
ನು, ಮನವೆಲ್ಲಾ ಹೊಲಸು ದುರ್ಗಂಧ! (ತ)
-ಪ್ಪಿ ನಡೆಯುವಾ ಜೀವ ಸದಾ ಮದಾಂಧ! (ನಿ)
-ದ್ರೆ, ಮೈಥುನಾಹಾರದಲ್ಲಾ ಜೀವ ಅಂಧ!
ಗವದ್ಭಕ್ತಿಯಿಂದಲೇ ಶಿವಾನಂದ!
ರಿಸಿದ ಮೇಲವನ ಬ್ರಹ್ಮಾನಂದ!
ಬಂದೊದಗದಾಮೇಲೆ ಅನಿತ್ಯಾನಂದ! (ಗಂ)
-ಧ ನಿರಂಜನಾದಿತ್ಯ ವಾರಿಜಬಂಧ!!!

ನನ್ನನ್ನು ನೀನ್ಸೋಲಿಸಿದೆ! (ನಿ)

-ನ್ನನ್ನು ನಾನು ಜಯಿಸಿದೆ! (ಅ)
-ನ್ನುವುದ್ಬೆಡೆಂದ್ಸುಮ್ಮನಾದೆ!
ನೀತಿ, ರೀತಿ ಹೀಗಾಗಿದೆ! (ನಾ)
-ನೊ





ತ್ರೂ ನಿನ್ನವ ನಾನಾದೆ! (ಕ)
-ಲಿಸಿದ ಗುರು ನೀನಾದೆ! (ಹು)
-ಸಿ ಮಾಯಾತೀತ ನಾನಾದೆ! (ಆ)
-ದೆ, ನಿರಂಜನಾದಿತ್ಯಾದೆ!!!

ದೈವ ದ್ರೋಹಿಗೆ ಏನು ಶಿಕ್ಷೆ?

ಸನಾನ್ನ ಕಳ್ಕೊಳ್ವ ಶಿಕ್ಷೆ!
ದ್ರೋಣಾಚಾರ್ಯಗಾದಂಥಾ ಶಿಕ್ಷೆ!
ಹಿತೈಷಿ ಕೈ ಬಿಡುವ ಶಿಕ್ಷೆ! (ಹ)
-ಗೆಗಳಿಂದ ಕಾಟದ ಶಿಕ್ಷೆ!
ಕಲವ್ಯನ ಶಾಪ ಶಿಕ್ಷೆ!(ಮಾ)
-ನುಷ ಜನ್ಮ ವ್ಯರ್ಥಾಗ್ವ ಶಿಕ್ಷೆ!
ಶಿವ ಕಾಮನಿಗಿತ್ತ ಶಿಕ್ಷೆ! (ಶಿ)
-ಕ್ಷೆ ನಿರಂಜನಾದಿತ್ಯೋಪೇಕ್ಷೆ!!!

ನಿನ್ನ ಕರ್ಮಫಲಕ್ಕೆ ನೀನೇ ಭಾಗಿ! (ನ)

-ನ್ನ ನಿಷ್ಕರ್ಮದಿಂದ ನಾನಾದೆ ಯೋಗಿ!
ಪ್ಪು ಹಣಕ್ಕಾಶಿಸುವವ ಭೋಗಿ! (ಕ)
-ರ್ಮ ಶರೀರ ಸುಖಕ್ಕಾಶಿಪ ತ್ಯಾಗಿ! (ಸ)
-ಫಲ ಮಾಡುವನೀ ಜನ್ಮ ವಿರಾಗಿ!
ಕ್ಷ್ಯಾತ್ಮನಲ್ಲಿಡುವಾತ ನಿಸ್ಸಂಗಿ! (ಧ)
-ಕ್ಕೆ ಧರ್ಮಕ್ಕಾಗಿ ಕೆಡುವ ದುಸ್ಸಂಗಿ!
ನೀತಿ, ರೀತಿಯಿಲ್ಲದಿರ್ಪ ಕೋಡಂಗಿ!
ನೇಮ, ನಿಷ್ಠಾ ಸತಿ ರಾಮನರ್ಧಾಂಗಿ!
ಭಾವ, ಭೇದ ರಹಿತಾತ್ಮಾ ಸಾರಂಗಿ! (ಯೋ)
-ಗಿ ನಿರಂಜನಾದಿತ್ಯ ಅನಲಾಂಗಿ!!!

ನಾನು ನನ್ನ ತಪ್ಪು ತಿದ್ದಿಕೊಳ್ಳಬೇಕು! (ನೀ)

-ನು ನನಗೆ ಅನುಗ್ರಹ ಮಾಡಬೇಕು!
ಮ್ಮಿಬ್ಬರ ಕರ್ತವ್ಯ ನಾವ್ನಾವ್ಮಾಡ್ಬೇಕು! (ಉ)
-ನ್ನತದ ಗುರಿ ಇಬ್ಬರಿಗೂ ಇರ್ಬೇಕು!
ರಲೆ, ತಂಟೆ, ನಮ್ಮಲ್ಲಿಲ್ಲದಿರ್ಬೇಕು! (ಉ)
-ಪ್ಪು ತಿಂದವ ನೀರು ಕುಡಿಯಲೇಬೇಕು!
ತಿರುಮಂತ್ರ ಗುರುವಿಗೆ ಹೇಳ್ದಿರ್ಬೇಕು! (ಗ)
-ದ್ದಿಗೆ, ಸಿಂಹಾಸನದಾಸೆ ಬಿಡಬೇಕು!
ಕೊಳಲು ನಾದ ಕೃಷ್ಣನದ್ದು ಕೇಳ್ಬೇಕು! (ಕ)
-ಳ್ಳ, ಸುಳ್ಳರ, ಸಹವಾಸ ಸಾಕೇ ಸಾಕು!
ಬೇಡರೇಕಲವ್ಯನ ಸತ್ಸಂಗ ಬೇಕು!
ಕುಲ ನಿರಂಜನಾದಿತ್ಯನದ್ದಾಗ್ಬೇಕು!!!

ಉಪಕಾರ ಸ್ಮರಿಸುವವರ್ವಿರಳ!

ರಮಾತ್ಮ ಕೊಡುತ್ತಿಹನು ಬಹಳ!
ಕಾರ್ಯವಾದ್ಮೇಲ್ಮರೆಯದವರ್ವಿರಳ!
ಕ್ತಗತವಾದಾ ಗುಣ ನರ ಕೀಳ!
ಸ್ಮರಿಸುವನು ಆದಾಗ ಕಿರುಕುಳ!
ರಿಪುಗಳ ಸಂಹರಿಸೆಂದಿಡ್ವ ಗೋಳ!
ಸುಖ ಬಂದಾಗ ದೇವರ ಹೆಸ್ರು ಹೇಳ!
ರ ಗುರುಸೇವೆ ಮಾಡೆಂದರೆ ಕೇಳ! (ಭ)
-ವ ಸಾಗರದಿಂದ ಹೀಗಾಗಿ ಮೇಲೇಳ! (ಗ)
-ರ್ವಿಯಾಗಲ್ಲಿಲ್ಲಿ ತಿರುಗುವಾ ಮರುಳ!
ಕ್ಕಸನ ಕೈಯಿಂದ ಪಾರಾದ ಬಾಳ! (ಬಾ)
-ಳ ಪ್ರಹ್ಲಾದ ನಿರಂಜನಾದಿತ್ಯ ಬಾಳ!!!

ಅಳಿಲಣ್ಣ ಬಂದ, ರೊಟ್ಟಿ ತಿಂದ! (ನ)

-ಳಿನನಾಭನೇ ನಾನು ನೋಡೆಂದ!
ಕ್ಷ್ಮಿಗೆ ಹೇಳದೇ ಬಂದೆನೆಂದ! (ಉ)
-ಣ್ಣಲಾರೆನು ನಾನೊಬ್ಬನೇ ಎಂದ!
ಬಂದ, ತಿಂದ, ಹೋದ, ಮತ್ತೆ ಬಂದ!
ರ್ಶನ ಅವನದ್ಬಹು ಚಂದ!
ರೊಟ್ಟಿಯೊಂದೇ ನನಗಿಷ್ಟವೆಂದ! (ಗ)
-ಟ್ಟಿ ಹೆಚ್ಚಾಗಿ ಇರಬಾರದೆಂದ!
ತಿಂದರೆಷ್ಟು ದಿನ ತಿಂದೇನೆಂದ!
ತ್ತ ನಿರಂಜನಾದಿತ್ಯಾನಂದ!!!

ಕೃತ, ತ್ರೇತ, ದ್ವಾಪರ, ಕಳೆದ್ಕಲಿ ಬಂತು!

ನ್ನ ತಾನರಿತಿರ್ಪುದೇ ಕಷ್ಟಕ್ಕೆ ಬಂತು! (ಅ)
-ತ್ರೇಯ ದತ್ತಾತ್ರೇಯನೆಂಬ ಹೆಸರೂ ಬಂತು!
“ತತ್ವಮಸಿ”ಯ ಗೂಢಾರ್ಥದರಿವೂ ಬಂತು!
ದ್ವಾರಕೇಶನ ಗೀತೆಯೂ ಬೆಳಕಿಗ್ಬಂತು!
ರಮಾರ್ಥ ಸಾರವಿದೆಂದರಿವಿಗ್ಬಂತು!
ಹಸ್ಯವಿದರ್ಜುನನಿಂದ ಹೊರಗ್ಬಂತು!
ಲಿಮಲ ಹೆಚ್ಚೀಗ ಕುರುಡತ್ವ ಬಂತು! (ಕ)
-ಳೆಯ ಕಾಟದಿಂದ ಬೆಳೆ ಹಾಳಾಗ್ತಾ ಬಂತು! (ಬಂ)
-ದ್ಕಳೆಗಳ ವಿನಾಶಕ್ಕೆ ವಿಷವೂ ಬಂತು! (ಇ)
-ಲಿ, ಹೆಗ್ಗಣಗಳು ಜಾಸ್ತಿಯಾಗುತ್ತಾ ಬಂತು!
ಬಂತು, ಹೊಟ್ಟೆ, ಬಟ್ಟೆಗಿಲ್ಲದ ಕಾಲ ಬಂತು!
ತುರ್ತು ಸ್ಥಿತಿ ನಿರಂಜನಾದಿತ್ಯಗ್ಬೇಡಾಯ್ತು!!!

ಮಾನವಾ ನೀನಾಗ್ಬೇಡ ದಾನವ!

ತದೃಷ್ಟರಿಗೆ ಮಾಡ್ದಾನವ!
ವಾಮಾಂಗಿಗೆಂದಿಡ್ಬೇಡ ಧನವ!
ನೀನ್ಮಾಡೀಗ ನಿನ್ನ ಕರ್ತವ್ಯವ!
ನಾಳೆಯೂಟಕ್ಕಿರ್ಪ ಗುರುದೇವ! (ಆ)
-ಗ್ಬೇಡೀಗ ಪಾಪಿ, ಮಾಡಿ ಲೋಭವ!
ಮರುಧರ ಶಿವ ನಿನ್ನವ!
ದಾಕ್ಷಾಯಿಣಿಯಂತೆ ಮಾಡ್ತ್ಯಾಗವ! (ಮ)
-ನನ ಮಾಡ್ಪಾರ್ವತೀ ವಿವಾಹವ! (ಶಿ)
-ವ ನಿರಂಜನಾದಿತ್ಯನೆಂಬವ!!!

ಎಷ್ಟು ಮುದ್ದು ಮಾಡಿದ್ರೇನು ನಾಯಿಯನ್ನು? (ಅ)

-ಷ್ಟು, ಇಷ್ಟುಂಬಾಗಲ್ಲಾಡಿಸ್ವುದ್ಬಾಲವನ್ನು!
ಮುದ್ದೆ ಕಮ್ಮಿಯಾದ್ರೆ ಕಚ್ಚುವುದ್ನಿನ್ನನ್ನು! (ಕ)
-ದ್ದು ತಿಂದೂ ಮಾಡುವುದು ವಂಚನೆಯನ್ನು!
ಮಾಲಿಕನೆಂತು ಸಹಿಸುವನಿದನ್ನು? (ಓ)
-ಡಿಸುವನು ದೂರ ಮನೆಯಿಂದದನ್ನು! (ಭ)
-ದ್ರೇಶ್ವರಗ್ಬಗೆಯಬಾರದೆರಡನ್ನು!
ನುಡಿದಂತೆ ನಡೆದ್ಸೇವಿಸ್ಬೇಕವ್ನನ್ನು!
ನಾಳೆ ಎನ್ನದೆ ಇಂದೇ ಮಾಡ್ಬೇಕದನ್ನು! (ತಾ)
-ಯಿಯಾಗಿ ನಿನ್ನ ಮುದ್ದಾಡಿದವನನ್ನು!
ಮನಿಗೂ ತಂದೆಯೆನ್ಸಿದವನನ್ನು! (ಸ)
-ನ್ನುತ ನಿರಂಜನಾದಿತ್ಯ ಸ್ವಾಮಿಯನ್ನು!!!

ಮುಂದಿಟ್ಟ ಹೆಜ್ಜೆ ಹಿಂದಿಟ್ಟರೇನು ಫಲ?

ದಿಗ್ಭ್ರಾಂತನಾಗಿ ಕೆಳಗುರುಳ್ವ ಫಲ! (ಪ)
-ಟ್ಟ ಶ್ರಮವೆಲ್ಲಾ ವ್ಯರ್ಥವಾಗುವ ಫಲ!
ಹೆದರಿದ ಹೇಡಿ ಎನಿಸುವ ಫಲ! (ಬಿ)
-ಜ್ಜೆಗೆ ಬೆಲೆಯಿಲ್ಲದಂತಾಗುವ ಫಲ!
ಹಿಂಬಾಲಕರೆಲ್ಲಾ ಕೈಬಿಡುವ ಫಲ!
ದಿವ್ಯ ನಾಮದ ನಂಬಿಗೆ ಹೋಗ್ವ ಫಲ! (ಅ)
-ಟ್ಟಡುಗೆ. ಉಟ್ಟ ಬಟ್ಟೆ ಬೇಡಾಗ್ವ ಫಲ!
ರೇಣುಕಾತ್ಮಜಗೆ ಬಲಿಯಾಗ್ವ ಫಲ! (ಮ)
-ನುಜ ಜನ್ಮ ವ್ಯರ್ಥವಾಗುವಂಥಾ ಫಲ! (ಕ)
-ಫ, ವಾತ, ಪಿತ್ತ ಪೀಡಿತನಾಗ್ವ ಫಲ! (ಬಾ)
-ಲ ನಿರಂಜನಾದಿತ್ಯನ ಇಚ್ಛಾ ಫಲ!!!

ಆತ್ಮ ಚಿಂತನೆ ಇಲ್ಲ, ವಂಚನೆ ತಪ್ಪಿಲ್ಲ! (ಮಾ)

-ತ್ಮನೆ, ಮಠ, ಆಸ್ತಿ, ಪಾಸ್ತಿಯದ್ದೇ ಎಲ್ಲೆಲ್ಲ!
ಚಿಂತಿಸುವರು ಇದು ಸಿಕ್ಕದಾದಾಗೆಲ್ಲಾ!
ಪ್ಪೆಣಿಸುವರನ್ಯರ ಮೇಲಿದಕ್ಕೆಲ್ಲಾ!
ನೆರಳೀವ ಮರವನ್ನೇ ಕಡಿವರೆಲ್ಲಾ!
ಷ್ಟಾರ್ಥ ತನ್ನದು ಸಿದ್ಧಿಸ್ಲಿಕ್ಕಾಗಿದೆಲ್ಲಾ! (ಕೊ)
-ಲ್ಲಲಿಕ್ಕೂ ಹೇಸರು ಬಡಬಗ್ಗರನ್ನೆಲ್ಲಾ!
ವಂದನಾರಾಧನೆಗಳ್ಬೇಕಿವರಿಗೆಲ್ಲಾ!
ರ್ಚಾಕೂಟಗಳಲ್ಲಿವರಾಸಕ್ತಿ ಎಲ್ಲಾ!
ನೆನೆಯರಿವರುಪಕಾರಿಗಳನ್ನೆಲ್ಲಾ!
ತ್ವ ಜ್ಞಾನದಿಂದ ಸುಖಿಗಳಾಗ್ಬೇಕೆಲ್ಲಾ! (ಮು)
-ಪ್ಪಿಗೆ ಮೊದಲೇ ಸಾಧಿಸ್ಬೇಕಿದನ್ನೆಲ್ಲಾ! (ಬ)
-ಲ್ಲ ನಿರಂಜನಾದಿತ್ಯನಾದೇಶ ಸುಳ್ಳಲ್ಲ!!!

ಗುಣ ಹೀನ ಹೆಣ ಸಮಾನ! (ತಾ)

-ಣ ಅವನದೊಂದು ಸ್ಮಶಾನ!
ಹೀನವೃತ್ತಿಯಿಂದವ ಶ್ವಾನ!
ರಕಯಾತನಾ ಜೀವನ!
ಹೆಣ್ಣು ಹೊನ್ನಿಗಾಗಿ ವಂಚನ! (ಗ)
-ಣರಾಜ್ಯದಲ್ಲಿಲ್ಲವ್ಗೆ ಸ್ಥಾನ!
ದ್ಗುಣಿಗೆ ಸದಾ ಸನ್ಮಾನ!
ಮಾಳ್ಪನವ ಶ್ರೀಪಾದಾರ್ಚನ! (ಘ)
-ನ, ಶ್ರೀ ನಿರಂಜನಾದಿತ್ಯನ!!!

ಬಹು ದಿನದ ಮಸ್ತಕ ವಿಚಾರ ಪುಸ್ತಕ!

ಹುಸಿ ಮಾತುಗಳ್ತುಂಬಿರಬಾರದು ಪುಸ್ತಕ!
ದಿವ್ಯ ಜೀವನಕ್ಕುಪಯೋಗವಾಗ್ಬೇಕ್ಪುಸ್ತಕ!
ರ ಜನ್ಮ ಸಾರ್ಥಕ ಮಾಡಬೇಕು ಪುಸ್ತಕ!
ರ್ಪ, ದಂಭಗಳನ್ನಡಗಿಸ್ಬೇಕು ಪುಸ್ತಕ!
ನ್ಮಥನ ಜೈಸುವಂತಿರಬೇಕು ಪುಸ್ತಕ!
ಸ್ತವನಕ್ಕನುಕೂಲವಾಗಿರ್ಬೇಕು ಪುಸ್ತಕ!
ರ್ಮ, ಧರ್ಮ, ಕಲಿಸುತ್ತಿರಬೇಕು ಪುಸ್ತಕ!
ವಿಕಲ್ಪ, ಸಂಕಲ್ಪಕ್ಕೆಡೆ ಕೊಡ್ಬಾರ್ದು ಪುಸ್ತಕ!
ಚಾರಿತ್ರ್ಯದ ವಧೆ ತೋರಿಸ್ಬೇಕು ಪುಸ್ತಕ!
ಹಸ್ಯ ದೇವರದ್ದು ತೋರಿಸ್ಬೇಕು ಪುಸ್ತಕ!
ಪುಣ್ಯ, ಪಾಪದ ಅರ್ಥ ತಿಳಿಸ್ಬೇಕು ಪುಸ್ತಕ! (ಬೆ)
-ಸ್ತ ಗುಹನ ಭಕ್ತಿಯ ಕೊಂಡಾಡ್ಬೇಕು ಪುಸ್ತಕ!
ಲಿ ಹರ ನಿರಂಜನಾದಿತ್ಯನ ಪುಸ್ತಕ!!!

ಪ್ರಕೃತಿ ವಿಕೃತಿಯಾಗಿ ಕಲಾಕೃತಿ!

ಕೃಪೆಯಿಂದ ವಿಕೃತಿ ಮೂಲ ಪ್ರಕೃತಿ!
ತಿರುಪತಿಯ ಮೂರ್ತಿ ದಿವ್ಯ ಆಕೃತಿ!
ವಿಕಲ್ಪ, ಸಂಕಲ್ಪಾತೀತ ಪೂರ್ಣಾಕೃತಿ!
ಕೃತ್ರಿಮ ಭಕ್ತಿಗೆ ದೊರಕದಾ ಸ್ಥಿತಿ!
ತಿತಿಕ್ಷೆ, ವೈರಾಗ್ಯದಿಂದ ಊರ್ಧ್ವ ಗತಿ!
ಯಾವ ಯುಗದಲ್ಲಾದರೂ ಇದೇ ರೀತಿ!
ಗಿರಿಜಾರಮಣಾದರ್ಶ ಊರ್ಧ್ವ ರೇತಿ!
ರಣತ್ರಯ ಶುದ್ಧಳ್ಸರ್ತಿ ಪಾರ್ವತಿ!
ಲಾಭ ಅವಳ ಕೃಪೆಯಿಂದ ಮುಕುತಿ!
ಕೃಪಣತನವರಿಯದಾ ದಂಪತಿ! (ಇ)
-ತಿ ನಿರಂಜನಾದಿತ್ಯರ್ಧನಾರ್ಯಾಕೃತಿ!!!

ತಪ್ಪೆಣಿಸಲಾರೆ, ಇಪ್ಪೆಡೆ ಬಿಡ್ಲಾರೆ! (ಸಿ)

-ಪ್ಪೆ ತಿನ್ನಲಾರೆ, ಹಣ್ಣು ಬಿಸಾಡಲಾರೆ! (ಋ)
-ಣಿ ಗುರುವಿಗೆಂಬುದ ಮರೆಯಲಾರೆ!
ತತ ಸ್ಮರಣೆ ಮಾಡದಿರಲಾರೆ!
ಲಾಭ, ನಷ್ಟಗಳನ್ನು ಲಕ್ಷಿಸಲಾರೆ! (ಕ)
-ರೆದಾಗ ಬರಬೇಕೆನ್ನದಿರಲಾರೆ!
ನ್ನಾರನ್ನೂ ಎಂದಿಗೂ ಪೂಜಿಸಲಾರೆ! (ಮು)
-ಪ್ಪೆನಗಡಸಿದರೂ ನಾನಳಲಾರೆ! (ರಂ)
-ಡೆ, ಮುಂಡೆ ಎಂದು ಬೈಸಿಕೊಂಡಿರಲಾರೆ!
ಬಿಟ್ಟು ನಿನ್ನನ್ನೆಂದಿಗೂ ನಾನಿರಲಾರೆ! (ನೋ)
-ಡ್ಲಾಗದ ನೋಟವೆಲ್ಲಿದ್ರೂ ನೋಡಲಾರೆ! (ಇ)
-ರೆ, ನಿರಂಜನಾದಿತ್ಯನನ್ನಗಲಿರೆ!!!

ಅಲಕ್ಷ್ಯದಿಂದಾಪ್ತನ ನಿರ್ಗಮನ!

ಕ್ಷ್ಯ ಸರಿ ಇದ್ರೆ ಸಹಗಮನ! (ಸಾ)
-ಕ್ಷ್ಯನೇಕವಿದೆ ಅದಕ್ಕನುದಿನ! (ಬಂ)
-ದಿಂದುದ್ಧಾರ ಮಾಡ್ಬೇಕು ತರಳನ!
ದಾಸರ ದಾಸ ನೀನೆಂಬ ವಚನ! (ಆ)
-ಪ್ತನಿಗನುಭವವಾಗ್ಬೇಕೀ ದಿನ!
ಡೆ, ನುಡಿಯಂತಿದ್ದ್ರೆ ಪ್ರಯೋಜನ!
ನಿನ್ನಡಿಗೆನ್ನ ಅನಂತ ನಮನ! (ಸ್ವ)
-ರ್ಗ ಸುಖವನ್ನೂ ಹೇಸುವುದೀ ಮನ!
ದಾಂಧತೆಯಿಂದಿರ್ಬಾರ್ದು ಜೀವನ!
ಮೋ ನಿರಂಜನಾದಿತ್ಯ ಪಾವನಾ!!!

ಆಗ ಸರಳೆ, ಈಗ ತರಲೆ!

ತಿಕೆಡ್ಸಿತೀಗ ವಿಧಿ ಲೀಲೆ!
ದಾಶಿವಗಚ್ಚುಮೆಚ್ಚಾ ಬಾಲೆ!
ಮಿಸಿತವಳ ಭವ ಜ್ವಾಲೆ! (ಕ)
-ಳೆದುಕೊಂಡಳು ಶಿವನ ಮಾಲೆ!
ಗದರಿಂದಾಗಿ ತಲೆ ಶೂಲೆ!
ತಿಯೇನವಳಿಗಿನ್ನು ಮೇಲೆ?
ಪ್ಪು ತಿದ್ದಿಕೊಂಡಾಗ್ಬೇಕ್ಸುಶೀಲೆ! (ಪ)
-ರ ಶಿವಗೆ ಶರಣಾಗ್ಲೀಗಲೇ! (ಬಾ)
-ಲೆ ನಿರಂಜನಾದಿತ್ಯಗಾಮೇಲೆ!!!

ಪ್ರಣಯ ಸಂಬಂಧ ಮೂರು ದಿನ! (ಗ)

-ಣಪತಿಯ ಸಂಬಂಧ ನೂರು ದಿನ!
ದುಪತಿಯದ್ದನೇಕ ದಿನ!
ಸಂಬಂಧ ದತ್ತನದ್ದೆಲ್ಲಾ ದಿನ!
ಬಂಧು, ಬಾಂಧವರೊಂದೇ ದಿನ!
ರ್ಮ, ಕರ್ಮ ಮಾಡ್ಬೇಕನುದಿನ!
ಮೂರ್ಲೋಕ ಸುಖದಾಸೆ ಆಜ್ಞಾನ!
ರುಜು ಮಾರ್ಗದಿಂದಲೇ ಸುಜ್ಞಾನ!
ದಿವ್ಯ ಜೀವನದಿಂದಾತ್ಮ ಜ್ಞಾನ!
ಮೋ ನಿರಂಜನಾದಿತ್ಯಾನನಾ!!!

ಕೊರಗಿ, ಸೊರಗಿದ್ರೂ ಮರುಕವೇ ಇಲ್ಲ!

ತಿಪತಿಯನ್ನು ಸುಟ್ರೂ ಆತ ಸತ್ತಿಲ್ಲ!
ಗಿರಿಜಾಪತಿಗವನ ಕಾಟವೇನಿಲ್ಲ!
ಸೊಕ್ಕನ್ನಡಗಿಸಲನ್ಯರಿಂದಾಗ್ವುದಿಲ್ಲ!
ಮಣಿ ಪಾರ್ವತಿ ಉಳ್ಸಿದ್ದೇಕೋ ಗೊತ್ತಿಲ್ಲ!
ಗಿರೀಶಾನುಗ್ರಹವಾದ್ರಾರ್ದೇನೂ ನಡ್ಯೋಲ್ಲ! (ತ)
-ದ್ರೂಪ ಸಿದ್ಧಿಗೆ ಅದನ್ನು ಬಿಟ್ರೆ ಆಗೋಲ್ಲ!
ನೋಜಯಕ್ಕೇ ಪ್ರಾಮುಖ್ಯತೆ! ಸುಳ್ಳೇನಲ್ಲ! (ಮಾ)
-ರುತಿ ಒಲಿದರೆ ಇದು ಕಷ್ಟವೇನಲ್ಲ!
ರೆದರೂ ಆತ ಬರುವುದಿಲ್ಲವಲ್ಲಾ!
ವೇದನೆಯಂತೂ ಸಹಿಸಲಾಗುವುದಿಲ್ಲ!
ಹ ಸುಖದಪೇಕ್ಷೆಯ ಫಲವಿದೆಲ್ಲಾ! (ಬ)
-ಲ್ಲ ನಿರಂಜನಾದಿತ್ಯ ಯೋಗೀಶ್ವರನೆಲ್ಲಾ!!!

ಮಾಲಿಕನನ್ನೇ ಕಚ್ಚುವದೊಂದು ನಾಯಿ! (ಆ)

-ಲಿಸದವನ ಮಾತನ್ನಾ ಕೆಟ್ಟ ನಾಯಿ!
ಚ್ಚಿಸಿಕೊಂಡ್ರೂ ಪ್ರೀತಿ ತಾಯಿಗಾನಾಯಿ!
ರುಳುತಿದೆ ರೋಗದಿಂದೀಗಾ ನಾಯಿ! (ಇ)
-ನ್ನೇನಾಗಲಿದೆಯೋ ಆ ಬಡ ನಾಯಿ?
ಟ್ಟಿಗೊಳಗಾಗಿ ರೋದಿಪುದಾ ನಾಯಿ! (ಬಿ)
-ಚ್ಚುವುದೇ ತಡ, ಕೊಚ್ಚೆಗೋಡ್ವುದಾ ನಾಯಿ!
ರ ಗುರು ಲೀಲೆ ಅರಿಯದಾ ನಾಯಿ! (ಒಂ)
-ದೊಂದು ಕ್ಷಣಕ್ಕೊಂದೊಂದು ಬುದ್ಧಿ ಆ ನಾಯಿ!
ದುರ್ಬುದ್ಧಿಯಿಂದೀಗ ಹೀಗಾಯಿತಾ ನಾಯಿ!
ನಾರಾಯಣನೆಲ್ಲಕ್ಕೂ ಸಾಕುವ ತಾಯಿ! (ತಾ)
-ಯಿ, ಶ್ರೀ ನಿರಂಜನಾದಿತ್ಯಾ ಪೂಜ್ಯ ತಾಯಿ!!!

ಮೂಡಿದ್ದು ಮುಳುಗಲೇ ಬೇಕು! (ಬಾ)

-ಡಿದ್ದು ಮತ್ತೆ ಚಿಗುರಬೇಕು! (ಬಿ)
-ದ್ದು ಹೋದದ್ದೆದ್ದು ಬರಬೇಕು!
ಮುದ್ದು ಮಗು ಮುದಿಯಾಗ್ಬೇಕು! (ಅ)
-ಳುವವರು ನಗಲೂ ಬೇಕು!
ಗ್ಗ ಬಗ್ಗನೂ ಆಗಬೇಕು!
ಲೇಖಕ ಸ್ತಬ್ದನಾಗ್ಲೂ ಬೇಕು!
ಬೇಕು ಸಾಕೈಕ್ಯದಿಂದಿರ್ಬೇಕು! (ಟಾ)
-ಕು ನಿರಂಜನಾದಿತ್ಯಾಗ್ಬೇಕು!!!

ಋಣಾನುಬಂಧ ಕಾರಣ ವ್ಯಾಮೋಹಕ್ಕೆ! (ಪ್ರಾ)

-ಣಾ ಪಾನಾದಿಯಿಂದ ಚಾಲಿತ ದೇಹಕ್ಕೆ (ಮ)
-ನು ಮೊದಲಾದವರ ಈ ಸಂತಾನಕ್ಕೆ!
ಬಂಧ ವಿಮೋಚನೆ ಈ ಜನ್ಮದಲ್ಲಕ್ಕೆ!
ರ್ಮ, ಕರ್ಮಕ್ಕೆ ಧಕ್ಕೆಯುಂಟಾಗದಕ್ಕೆ!
ಕಾಮನ ನಿರ್ಮೂಲ ಈಗಾದರೂ ಅಕ್ಕೆ!
ತಿಸುಖದಾಸೆ ನಿಶ್ಯೇಷ ನಾಶಕ್ಕೆ! (ತೃ)
-ಣ, ಕಾಷ್ಠ ವ್ಯಾಪಕಾತ್ಮಾನೆಂಬಅರಿವಕ್ಕೆ!
ವ್ಯಾಧಿ ಪೀಡೆಯಿಂದ ಬಿಡುಗಡೆಯಕ್ಕೆ!
ಮೋಕ್ಷವೆಂಬಾತ್ಮ ಸಾಕ್ಷಾತ್ಕಾರವೀಗಕ್ಕೆ!
ರಿ, ಹರ, ಬ್ರಹ್ಮೈಕ್ಯ ದರ್ಶನವಕ್ಕೆ! (ಅ)
-ಕ್ಕೆ, ನಿರಂಜನಾದಿತ್ಯ ಸಾಕ್ಷಿಯಿದಕ್ಕೆ!!!

ಪರಸ್ಪರ ವಿಶ್ವಾಸ ಎಷ್ಟಿದ್ದರೇನು? (ಪ್ರಾ)

-ರಬ್ಧವನ್ನು ಭೋಗಿಸ್ಲೇ ಬೇಕ್ನಾನು, ನೀನು!
ಸ್ಪರ್ಶ ಶ್ರೀಪಾದದ್ದಾದ್ರೂ ದುಃಖಿ ನೀನು! (ವ)
-ರ ಗುರುವಿನ ಚಿತ್ತವೆಂದರಿ ನೀನು!
ವಿಶ್ವಾಸಘಾತಕನಾಗಬಾರ್ದು ನೀನು!
ಶ್ವಾನಕ್ಕಿಂತ್ಲೂ ಆಗ ಕೀಳಾಗುವೆ ನೀನು!
ಒನೆ ಲಿನೆ ಮಿ

ಸಿ




ಡರ್ಗಂಜಿ ಬಿಡ್ಬೇಡವನನ್ನು ನೀನು! (ದೃ)
-ಷ್ಟಿ ಬೇರೆಡೆಗೆ ಹೊರಳಿಸ್ಬಾರ್ದು ನೀನು! (ಮೆ)
-ದ್ದರೆ ಅವನುಚ್ಛಿಷ್ಟ ಪಾವನ ನೀನು!
ರೇಗಿ ಕೂಗಾಡ್ಬಾರ್ದವನ ಮುಂದೆ ನೀನು! (ನೀ)
-ನು ನಿರಂಜನಾದಿತ್ಯನಾಗ್ಬೇಡವೇನು!!!

ಅತ್ರಿಕಂಡ ರೂಪ ನಾನೂ ನೋಡ್ಬೇಕಯ್ಯಾ!

ತ್ರಿಲೋಕ ಸುಖಕ್ಕೂ ತಿಲಾಂಜಲಿಯಯ್ಯಾ!
ಕಂಡಮೇಲೊಂದುಕ್ಷಣವೂ ಇರ್ಬಾರ್ದಯ್ಯಾ! (ದಂ)
-ಡ, ಕಮಂಡಲು ಎಲ್ಲಾ ಇರಬೇಕಯ್ಯಾ!
ರೂಪ, ನಾಮ, ಅಸ್ಥಿರವಾದ್ರೂ ತೋರಯ್ಯಾ!
ರಬ್ರಹ್ಮ ನಿರಾಕಾರ ನಿಜವಯ್ಯಾ!
ನಾನೂ ನಿನ್ನವನೆಂದಾರೂಪ ತೋರಯ್ಯಾ!
ನೂರಾರು ಜನ್ಮದಿಂದೀ ಹಂಬಲವಯ್ಯಾ!
ನೋಯಿಸ್ಬೇಡ ಈ ದಿನ ದಾಸನನ್ನಯ್ಯಾ! (ಮಾ)
-ಡ್ಬೇಡೀಗಲಾದರೂ ಉದಾಸೀನವಯ್ಯಾ!
ರ ಮುಗಿದು ಮೊರೆಯಿಡುವೆನಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾನಂದ ನೀನಯ್ಯಾ!!!

ಬೇಡ್ದಿದ್ಗಂಡಗ್ಮೊಸ್ರಲ್ಲಿ ಕಲ್ಲು! (ಹಾ)

-ಡ್ದಿದ್ದ ಹೆಣ್ಣಿಗ್ಬಾಯ್ಲಿಲ್ಲ ಹಲ್ಲು! (ಬಂ)
-ದ್ಗಂಡ್ನಟ್ಟಿ ಹೋದ್ಮಿಂಡ್ನೊಟ್ಟಿದ್ಗ್ರುಲ್ಲು! (ಮ)
-ಡದಿ, ಮಕ್ಳ ಸಾ







ಗೇನ್ಸೊಲ್ಲು? (ಆ)
-ಗ್ಮೊಟ್ಟೆ ತಿಂದೀಗ್ಕೆಟ್ಟೆಂದ್ಬಜೊಲ್ಲು! (ದ)
-ಸ್ರ ಕಳ್ದು ದೀಪವ್ಳೀಗೆಲ್ಲೆಲ್ಲು! (ಮ)
-ಲ್ಲಿಗೆಯ ವಾಸನೆ ನಮ್ಮಲ್ಲೂ!
ರ್ಮ ಮಾಡಿ ಮನವ ಗೆಲ್ಲು! (ನಿ)
-ಲ್ಲು, ನಿರಂಜನಾದಿತ್ಯಾಗ್ನಿಲ್ಲು!!!

ಬಾಯಿ ಮುಚ್ಚಿ ನಾಯಿಯ ಹಾಗಿರು! (ತಾ)

-ಯಿ ಹಾಕಿದ್ದು ತಿಂದು ಮಲಗಿರು!
ಮುದಿಯಾಗ್ವ ವರೆಗೂ ಹಾಗಿರು! (ಕ)
-ಚ್ಚಿ ಯಾರಿಗೂ ನೋವು ಮಾಡದಿರು!
ನಾರುವ ಮೂಳೆ ಜಗಿಯದಿರು! (ಬಾ)
-ಯಿ ಬಿಟ್ಟು ಕಳ್ಳರನ್ನಟ್ಟುತ್ತಿರು!
ಜಮಾನಗಚ್ಚುಮೆಚ್ಚಾಗಿರು!
ಹಾರಿ ಗಾಯ ಮಾಡಿಕೊಳ್ಳದಿರು!
ಗಿಳಿ, ಕೋಳಿಗಳ ತಿನ್ನದಿರು! (ಗು)
-ರು ನಿರಂಜನಾದಿತ್ಯನೆಂದಿರು!!!

ಕಷ್ಟಕ್ಕಂಜುವುದಿಲ್ಲ ಇಷ್ಟ! (ನ)

-ಷ್ಟವೆಷ್ಟಾದ್ರೂ ಬಿಡನು ಇಷ್ಟ! (ಚ)
-ಕ್ಕಂದಕ್ಕೆಡೆಗೊಡೆನು ಇಷ್ಟ!
ಜುಲುಮಿನಿಂದೇನೂ ಮಾಡೇಷ್ಟ! (ಯಾ)
-ವುದೇ ಮಾತವನದು ಸ್ಪಷ್ಟ!
ದಿಟವ ಬಿಟ್ಟು ಆಗ ಭ್ರಷ್ಟ! (ತ)
-ಲ್ಲಣಕ್ಕವಕಾಶ ಕೊಡೇಷ್ಟ!
ಷ್ಟಾನಿಷ್ಟದಲ್ಲಿ ಭಾಗಿಷ್ಟ! (ಶ್ರೇ)
-ಷ್ಟ, ನಿರಂಜನಾದಿತ್ಯಾಪ್ತೇಷ್ಟ!!!

ಬಿರುಸಿನ ಬಾಣಗಳನ್ನು ನೀ ಬಿಟ್ಟೆ! (ಕ)

-ರುಣೆ ನಿನ್ನದೆಂದು ನಾನದ ತೊಟ್ಟೆ!
ಸಿಹಿ, ಕಹಿಯನುಭವ ನೀನು ಕೊಟ್ಟೆ!
ಶ್ವರದ ದೇಹಕ್ಕೆ ನಿನ್ನಿಷ್ಟ ಅಷ್ಟೇ?
ಬಾರಿಬಾರಿಗೂ ನಾನು ಮೊರೆಯನ್ನಿಟ್ಟೆ! (ತೃ)
-ಣ ಸಮಾನವೆಂದೆನ್ನ ನೀ ತಳ್ಳಿಬಿಟ್ಟೆ!
ಟ್ಟಿಯಾಗ್ನಿನ್ನ ಪಾದ ನಾನ್ಹಿಡಿದ್ಬಿಟ್ಟೆ! (ತ)
-ಳಮಳ ನನ್ನದರಿವು ಮಾಡಿಕೊಟ್ಟೆ! (ನ)
-ನ್ನುಬ್ಬಸ ಹೆಚ್ಚಾಗೀಗ ಸಾಯ್ಲಾಗಿಬಿಟ್ಟೆ!
ನೀನೇನ್ಮಾಡ್ತಿಯೋ ಮಾಡೆಂದ್ಕೊನೆಗಂದ್ಬಿಟ್ಟೆ!
ಬಿಸಿಯುಸಿರ ಕೊಂಚ ನೀನಿಳಿಸ್ಬಿಟ್ಟೆ! (ಬ)
-ಟ್ಟೆ ನಿರಂಜನಾದಿತ್ಯನದ್ದುಟ್ಟುಬಿಟ್ಟೆ!!!

ಸಕಲವೂ ನೀನೇ, ನಿನ್ನೊಳ್ಸಕಲವೂ ತಾನೇ? (ಸ)

-ಕಲದಿಂ ಬೇರೆ ಇರುವವನೂ ನೀನೇ ತಾನೇ?
ಕ್ಷ್ಯ ನಿನ್ನ ಮಕ್ಕಳಿಗೆ ಹೀಗಿರ್ಬೇಕು ತಾನೇ? (ನಾ)
-ವು, ನೀವೆಂಬ ಭಿನ್ನ ಭಾವ ಮಾಯವಾಗ್ಬೇಕ್ತಾನೇ?
ನೀಚ, ಉಚ್ಚ ಎಂಬಹಂಕಾರ ಸಾಯಬೇಕ್ತಾನೇ?
ನೇಮ, ನಿಷ್ಠೆಯಿಂದ ನಿನ್ನ ಧ್ಯಾನ ಮಾಡ್ಬೇಕ್ತಾನೇ?
ನಿತ್ಯಾನಿತ್ಯ ವಿಚಾರವೂ ಮಾಡುತ್ತಿರ್ಬೇಕ್ತಾನೇ? (ತ)
-ನ್ನೊಬ್ಬನ ಸುಖ ಮಾತ್ರ ಬಯಸ್ಬಾರದು ತಾನೇ? (ಬಾ)
-ಳ್ಸಮಸ್ತ ಜೀವರಾಶಿಯದ್ದೂ ಹೊನ್ನಾಗ್ಬೇಕ್ತಾನೇ?
ಳ್ಳತನ, ಮೋಸ, ವಂಚನೆ ಮಾಡ್ಬಾರ್ದು ತಾನೇ?
ಭ್ಯಾನ್ಸಾರ ಲಾಭ, ನಷ್ಟ; ಸುಖ, ದುಃಖ ತಾನೇ? (ಮಾ)
-ವು ಬಿತ್ತಿದವ ಬೇವನ್ನೆಂದಿಗೂ ಕೊಯ್ಯತಾನೇ?
ತಾನೇ ತಾನಾಗಿರಲಿಕ್ಕಿದೆಲ್ಲಾ ಬೇಕು ತಾನೇ?
ನೇಮ ನಿರಂಜನಾದಿತ್ಯನದ್ದಾದರ್ಶತಾನೇ???

ನಿನ್ನ ಹುಚ್ಚು ನನಗೆ ಹೆಚ್ಚಾಯ್ತು! (ನ)

-ನ್ನ ಕಿಚ್ಚು ನೀನಾರಿಸದಂತಾಯ್ತು!
ಹುಚ್ಚು ನಿನಗೀಗ ಹಿಡಿದಾಯ್ತು! (ಅ)
-ಚ್ಚುಮೆಚ್ಚಿನೆನ್ಗೆ ನಿರಾಸೆಯಾಯ್ತು!
ನ್ಗಾಗಳ್ವ ಗತಿ ನಿನ್ಗೀಗಾಯ್ತು!
ನ್ನ ಬಾಳು ಬಾಡಿ ಬರಡಾಯ್ತು!
ಗೆಳೆತನಕ್ಕಪಚಾರವಾಯ್ತು!
ಹೆಜ್ಜೆ ಹಾಕಿ ನಡೆಯದಂತಾಯ್ತು! (ಕ)
-ಚ್ಚಾಡಬಾರದೆಂಬರಿವೀಗಾಯ್ತು! (ಆ)
-ಯ್ತು, ನಿರಂಜನಾದಿತ್ಯಾನಂದಾಯ್ತು!!!

ಆಗ್ಮಾಡ್ದಡ್ಗೆ ಈಗುಂಡಾ ಮೇಲ್ತೇಗು! (ಈ)

-ಗ್ಮಾಡ್ಬೇಕಾದದ್ದೀಗ್ಲೇ ಮಾಳ್ಪವ್ನಾಗು! (ಮಾ)
-ಡ್ದ ಕರ್ಮ ಫಲಾಮೇಲುಂಬವ್ನಾಗು! (ಗ)
-ಡ್ಗೆಯಿರ್ಪಾಗ ಹಾಲ್ತುಂಬುವವ್ನಾಗು!
ಡಿಗನಾಗದಿರ್ಪವನಾಗು!
ಗುಂಜಾ ನರಸಿಂಹನೇ ನೀನಾಗು! (ಬ)
-ಡಾಯಿ ಕೊಚ್ಚಿಕೊಳ್ಳದವನಾಗು!
ಮೇಷ,

ಈನವೆಣಿಸದವ್ನಾಗು! (ತೇ)
-ಲ್ತೇಲಿ ಮುಳುಗದೆಲೆ ನೀನಾಗು! (ಆ)
-ಗು, ನಿರಂಜನಾದಿತ್ಯ ನೀನಾಗು!!!

ಹೊಸ್ಬಟ್ಟೆದುರ್ನೋಡಿ ಹಳೇದ್ಬಿಚ್ಬೇಡ! (ಹೊ)

-ಸ್ಬಟ್ಟೆ ಬಂದ್ಮೇಲೆ ಹಳೇದನ್ನುಡ್ಬೇಡ! (ಬ)
-ಟ್ಟೆ ಇಲ್ದವ್ರಿಗೆ ದಾನ ಮಾಡ್ದಿರ್ಬೇಡ!
ದುರಾಸೆ ಎಂದಿಗೂ ಪಡಲೇಬೇಡ! (ಕಾ)
-ರ್ನೋಟ ನೋಡಿ ನಿನ್ನ ಗಾಡಿ ಬಿಡ್ಬೇಡ!
ಡಿಕ್ಕಿ ಹೊಡೆವಂತೆ ಗಾಡ್ಯೋಡಿಸ್ಬೇಡ!
ಳ್ಳ, ದಿಣ್ಣೆಯಲ್ಲೆಚ್ಚರ ತಪ್ಬೇಡ! (ಹೊ)
-ಳೇ ನೀರಲ್ಲಿ ನಿನ್ನ ಜಂಭ ತೋರ್ಬೇಡ! (ಬಿ)
-ದ್ಬಿಟ್ಟಾಮೇಲೆ ಮುಳುಗಿ ಸಾಯಬೇಡ! (ಮಾ)
-ಡ್ಬೇಡ, ವಿಮರ್ಶಿಸದೇನೂ ಮಾಡ್ಬೇಡ! (ಆ)
-ಡ, ಶ್ರೀ ನಿರಂಜನಾದಿತ್ಯ ಮಾತಾಡ!!!

ನಿನ್ನ ಗುಂಡಿ ನೀನೇ ತೋಡಿಕೊಂಡೆ! (ನ)

-ನ್ನ ಕೃಪೆಯಾಗಿ ಹರಿದುಕೊಂಡೆ!
ಗುಂಪುಗಾರಿಕೆ ಬೆಳೆಸಿಕೊಂಡೆ!
ಡಿಕ್ಕಿಯಿಂದೊಡೆಯಲಿದೆ ಮಂಡೆ!
ನೀತಿ, ರೀತಿಯನ್ನು ಕೆಡ್ಸಿಕೊಂಡೆ!
ನೇತನಾಜ್ಞೆ

ಈರಿ ನಡೆದ್ಕೊಂಡೆ!
ತೋಳಗ್ಳಿಂದ ಸುತ್ತುವರಿಸ್ಕೊಂಡೆ! (ಬಿ)
-ಡಿಸಿಕೊಳ್ವ ದಾರಿ ಕಳಕ್ಕೊಂಡೆ!
ಕೊಂಡೆ, ಮುಂಡೆಯ ಬಾಳು ಕೊಡ್ಕೆಂಡೆ! (ಬಿ)
-ಡೆ, ನಿರಂಜನಾದಿತ್ಯನೆಂದ್ಕೊಂಡೆ!!!

ನೆಗಡಿ, ಕೆಮ್ಮು ಮಾಮೂಲು ರೋಗ!

ಗ್ಗ, ಬಗ್ಗರಿಗೆಲ್ಲಾ ಆ ರೋಗ! (ತಿಂ)
-ಡಿ, ತೀರ್ಥ ವ್ಯತ್ಯಾಸದಿಂದಾ ರೋಗ!
ಕೆಟ್ಟ ಹವಾದಿಂದಲೂ ಆ ರೋಗ! (ದ)
-ಮ್ಮು, ಉಬ್ಬಸಕ್ಕೂ ಆ ರೋಗ!
ಮಾಡಿದ್ರೆ ಚಿಕಿತ್ಸೆ ಶಾಂತಾ ರೋಗ!
ಮೂಲೋಚ್ಛಾಟನೆಗೆ ಬೇಕು ಯೋಗ! (ಕಾ)
-ಲು, ಕೈ, ನೋವು ನಿವಾರಕ ಯೋಗ!
ರೋಗ ತಡೆಗಟ್ಟುವುದು ಯೋಗ! (ಖ)
-ಗ ನಿರಂಜನಾದಿತ್ಯೋಪಯೋಗ!!!

ಅಪೇಕ್ಷೆಯ ಪಕ್ಷ ನಿರೀಕ್ಷೆ, ಪರೀಕ್ಷೆ!

ಪೇಚಾಟ ತಂದಿಡುವುದು ನಿರೀಕ್ಷೆ! (ರ)
-ಕ್ಷೆ, ಶಿಕ್ಷೆಗಳ ತೀರ್ಮಾನಕ್ಕೆ ಪರೀಕ್ಷೆ!
ಜ್ಞ, ಯಾಗಗಳಿಗುಂಟೊಂದು ಅಪೇಕ್ಷೆ!
ರಮಾರ್ಥ ಸಿದ್ಧಿಗನಪೇಕ್ಷಾ ದೀಕ್ಷೆ!
ಕ್ಷಯಿಸಿದಾಗ ವಾಸನೆ ಕಾಮೋಪೇಕ್ಷೆ!
ನಿಯಮಬದ್ಧವಾಗಿರಬೇಕು ದೀಕ್ಷೆ!
ರೀತಿ, ನೀತಿಗಳ್ತಪ್ಪಿದಾಗ ದುರ್ಭಿಕ್ಷೆ! (ಶಿ)
-ಕ್ಷೆ ತಪ್ಪಿಸುವುದು ದತ್ತಾತ್ರೇಯ ರಕ್ಷೆ!
ರಮಾರ್ಥ ಸಾಧನೆಗೆ ಇರ್ಲೊಂದ್ನಕ್ಷೆ! (ನಿ)
-ರೀಕ್ಷೆ ವ್ಯರ್ಥವಾದಾಗಾಗ್ವುದು ಉಪೇಕ್ಷೆ! (ರ)
-ಕ್ಷೆ, ಶ್ರೀ ನಿರಂಜನಾದಿತ್ಯ ಸೇವಾದೀಕ್ಷೆ!!!

ಯಾರಿಚ್ಛೆಯಂತಾವಾಗೇನಾಗಿದೆ?

ರಿಸಿಗಳೂ ಸೋಲೊಪ್ಪಿಯಾಗಿದೆ! (ಇ)
-ಚ್ಛೆ ವಸಿಷ್ಟನದ್ದು ಸುಳ್ಳಾಗಿದೆ! (ತಾ)
-ಯಂದಿರು ಮಕ್ಳ ಕಳ್ಕೊಂಡಾಗಿದೆ!
ತಾಪಸಿಗಳ ಜಂಭಡಗಿದೆ!
ವಾಮಾಂಗಿಯ ವಿಯೋಗ ಬಂದಿದೆ!
ಗೇಣಿ ಸಂದಾಯವಿಲ್ಲದಾಗಿದೆ!
ನಾಸ್ತಿಕರ ರಾಜ್ಯಭಾರಾಗಿದೆ! (ಯೋ)
-ಗಿಗಳೂ ಗೋಳಿಡುವಂತಾಗಿದೆ! (ತಂ)
-ದೆ ನಿರಂಜನಾದಿತ್ಯೆಂದೂ ಒಂದೇ!!!

ಬೇಕಾಗಿದ್ರೆ ದೂರ ಮನೆ ನೆರೆಮನೆ! (ಬೇ)

-ಕಾಗಿದ್ರೆ ನೆರೆಮನೆಯೂ ದೂರ ಮನೆ!
ಗಿರಿ ತಿರುಪತಿಯದ್ದು ದೂರ ತಾನೇ? (ನಿ)
-ದ್ರೆ, ಊಟ ಬಿಟ್ಟು ಯಾತ್ರೆ ಹೋಗ್ತಾರೆ ತಾನೇ?
ದೂರ, ಹತ್ತಿರ, ಮನಸ್ಸಿನ ಭಾವನೆ! (ಪ)
-ರಸ್ಪರವಿರ್ಬೆ

ಕ್ಪರಮಾರ್ಥ ಚಿಂತನೆ!
ನುಜ ಅತ್ರಿಜನಾಗ್ಲಿಕ್ಕೆ ಸಾಧನೆ!
ನೆನೆದಾಚರಿಸ್ಬೇಕವನ ಬೋಧನೆ!
ನೆಟ್ಟ ಗಿಡಕ್ಕೆ ನೀರೆರೆಯಬೇಕ್ತಾನೇ? (ಮ)
-ರೆತರೆ ಒಣಗಿ ಹೋಗುವುದು ತಾನೇ!
ರವಾದಮೇಲೆ ಹಂಗೇನಿಲ್ಲ ತಾನೇ!
ನೆನೆದು ನಿರಂಜನಾದಿತ್ಯನಾಗ್ನೀನೇ!!!

ನಿರ್ಭಿ

ತಿಯಿಂದ ನೀನಿಲ್ಲಿ ಮಲಗಮ್ಮಾ! (ದು)

-ರ್ಭಿ

ತಿಗೆ ಇಲ್ಲಿ ಕಾರಣವೇನಿಲ್ಲಮ್ಮಾ!
ತಿಳಿಯದವರಿಗೆ ಲಿಂಗ ಭೇದಮ್ಮಾ! (ಬಾ

)
-ಯಿಂದಾಡಿದ ಮತ್ರಕ್ಕಾ ಭೇದ ಹೋಗ್ದಮ್ಮಾ!
ಮೆ, ಶಮೆಯಭ್ಯಾಸದಕ್ಕೆ ಬೇಕಮ್ಮಾ!
ನೀತಿಗೆಟ್ಟ ಅಜ್ಞಾನಿಗಳಿಲ್ಲಿಲ್ಲಮ್ಮಾ!
ನಿಶ್ಚಲ ಭಕ್ತಿಗೆ ದ್ರೌಪದಿ ಸಾಕ್ಷ್ಯಮ್ಮಾ! (ಎ)
-ಲ್ಲಿದ್ದರೂ ನಿನ್ನನ್ನು ಸ್ವಾಮಿ ಕಾಯ್ವನಮ್ಮಾ!
ಲಗ್ವಾಗೇಳ್ವಾಗವನ ಸ್ಮರಿಸಮ್ಮಾ!
ಕ್ಷ್ಮೀದೇವಿಯ ನಿತ್ಯಾಭ್ಯಾಸವಿದಮ್ಮಾ!
ರುಡೋರಗರವ್ವ ಸೇವಕರಮ್ಮಾ! (ಅ)
-ಮ್ಮಾ! ಶ್ರೀ ನಿರಂಜನಾದಿತ್ಯ ಸಾಕ್ಷಿಯಮ್ಮಾ!!!

ಲಭ್ಯವಿಲ್ಲದಿದ್ರೆ ಬೇಡಿದ್ರೂ ನೀಡರು! (ಲ)

-ಭ್ಯವಿದ್ರೆ ಇದ್ದಲ್ಲಿಗೇ ತಂಡುಕೊಡ್ವರು!
ವಿಧಿ, ಹರಿ, ಹರ, ಚಿತ್ತವಿದೆಂಬರು! (ಎ)
-ಲ್ಲವೂ ಸಂಚಿತಾನುಸಾರವೆನ್ನುವರು!
ದಿಟವ ನಾನಾ ಮಾತಲ್ಲಿ ಹೇಳುವರು! (ನಿ)
-ದ್ರೆ ಮಾಡಿದ್ದ್ರೂ ಎಬ್ಬಿಸಿ ತಿನ್ನಿಸುವರು!
ಬೇಡ್ವವ್ನ ಕತ್ತು ಹಿಡಿದು ದಬ್ಬುವರು! (ಬ)
-ಡಿದು, ಹೊಡೆದು ಅವನ ಹಿಂಸಿಪರು! (ತ)
-ದ್ರೂಪ ತಾನೂ, ಅವನೂ ಎಂದರಿಯರು!
ನೀತಿ, ರೀತಿ, ಮರೆತು ಹಾಳಾಗುವರು! (ಮೃ)
-ಡನೊಲಿದರೆಲ್ಲಾ ಸಾಧ್ಯವೆನ್ನುವರು! (ಗು)
-ರು ನಿರಂಜನಾದಿತ್ಯಾತನೆನ್ನುವರು!!!

ಇಪ್ಪತ್ತೈದ್ಸಾವಿರದೈನೂರರ್ವತ್ತೆಂಟು ದಿನ ಕಂಡೆ! (ಅ)

-ಪ್ಪ ಪರಮೇಶ್ವರನೆಂಬುದನ್ನು ನಾನರಿತುಕೊಂಡೆ! (ಚಿ)
-ತ್ತೈಕಾಗ್ರತೆಯಿಂದವನ ದರ್ಶನವೆಂದರಿತ್ಕೊಂಡೆ! (ತ)
-ದ್ಸಾಧನೆಗಾಸನಾದಿ ಯೋಗಾಭ್ಯಾಸ ಕಲಿತುಕೊಂಡೆ!
ವಿಷಯಾಸಕ್ತಿ ಮನಸ್ಸಿಗಿದೆಯೆಂದರಿತುಕೊಂಡೆ!
ಮಣೀಯ ನೋಟಗಳಿಂದ ದೂರದಲ್ಲಿದ್ದುಕೊಂಡೆ!
ದೈತ್ಯ ಕಾಮನ ಉಪಟಳವನ್ನು ಸಹಿಸಿಕೊಂಡೆ!
ನೂರೆಂಟು ಗಾಯತ್ರೀ ಜಪ ಎರಡ್ಬೇಳೆ ಮಾಡಿಕೊಂಡೆ!
ಘುಪತಿ ರಾಘವ ಭಜನೆಯನ್ನೂ ಮಾಡಿಕೊಂಡೆ! (ಪ)
-ರ್ವತಗಳ ಮೇಲೂ ಘೋರ ತಪಸ್ಸಾಚರಿಸಿಕೊಂಡೆ! (ಎ)
-ತ್ತೆಂದ್ರತ್ತ ಸುತ್ತಾಟೋಪವಾಸಕ್ಕೂ ಶುರು ಮಾಡಿಕೊಂಡೆ! (ಕೋ)
-ಟು, ಬೂಟು, ಕಿತ್ತೆಸೆದು ಲಂಗೋಟಿಯಲ್ಲೇ ಇದ್ದುಕೊಂಡೆ!
ದಿನ, ರಾತ್ರಿಯೆನ್ನದೆ ದೇಹ ದಂಡನೆ ಮಾಡಿಕೊಂಡೆ!
ತದೃಷ್ಟ ನಾನೆಂದು ನನ್ನನ್ನು ನಾನೇ ಹಳಿದ್ಕೊಂಡೆ!
“ಕಂದನನ್ನು ಕಾಯೋ”! ಎಂದು ಗೊಳೋ ಎಂದು ಅತ್ತುಕೊಂಡೆ! (ಕಂ)
-ಡೆ, ಶ್ರೀ ನಿರಂಜನಾದಿತ್ಯಾನಂದದಲ್ಲಿ ಶಾಂತಿ ಕಂಡೆ!!!

ಕಾಮ್ಯಾರ್ಥಿಯಾಗಿ ಕಾಲವಶವಾಗ್ಬೇಡ! (ಭೂ)

-ಮ್ಯಾಕಾಶಾದಿ ಲೋಕಗಳಿಗಾಶಿಸ್ಬೇಡ! (ಪಾ)
-ರ್ಥಿವ ದೇಹ ಸಂಬಂಧಕ್ಕೊಳಗಾಗ್ಬೇಡ!
ಯಾರಿಂದಲೂ ಏನನ್ನೂ ಬಯಸಬೇಡ! (ಹಂ)
-ಗಿಲ್ಲದ ಲಿಂಗಕ್ಕೆ ಶರಣಾಗ್ದಿರ್ಬೇಡ!
ಕಾಲ, ದೇಶಕ್ಕೆ ಹೊಂದಿಕೊಳ್ಳದಿರ್ಬೇಡ!
ಕ್ಷ್ಯ ಪರಮಾತ್ಮನಲ್ಲಿಡದಿರ್ಬೇಡ!
ರ್ಣಾಶ್ರಮ ಧರ್ಮಕ್ಕಪಾರ್ಥ ಮಾಡ್ಬೇಡ!
ಮೆ, ದಮೆಯಭ್ಯಾಸ ಬಿಟ್ಟಿರಬೇಡ!
ವಾದ, ವಿವಾದದಲ್ಲಿ ಕಾಲ ಹಾಕ್ಬೇಡ! (ಆ)
-ಗ್ಬೇಡ, ದುರಭ್ಯಾಸಕ್ಕೆ ಬಲಿಯಾಗ್ಬೇಡ! (ಮೃ)
-ಡ ನಿರಂಜನಾದಿತ್ಯ, ಸಂದೇಹ ಬೇಡ!!!

ನನ್ನನ್ನು ಏನೂ ಕೇಳಬಾರದು! (ನಿ)

-ನ್ನ ಕಷ್ಟ ಸುಖವೆಲ್ಲಾ ನನ್ನದು! (ಹೊ)
-ನ್ನು, ಮಣ್ಣಿನಾಶೆ ಇರಬಾರದು!
ನೇ ಆದ್ರೂ ಜಪ ಬಿಡ್ಬಾರದು!
ನೂರಾರ್ಮಂತ್ರದ ಹುಚ್ಚಿರ್ಬಾರದು!
ಕೇಶವನ ಪ್ರಸಾದೆಸೆಯ್ಬಾರ್ದು! (ತಾ)
-ಳ, ಮೇಳಾವಲಂಬಿಯಾಗಿರ್ಬಾರ್ದು!
ಬಾಯಿ ಹರಟೆ ಮಾತಾಡ್ಬಾರದು!
ವಿಯಾದರ್ಶ ಬಿಡಬಾರದು! (ಇ)
-ದು ನಿರಂಜನಾದಿತ್ಯನೆಂದುದು!!!

ಪರಮಾಪ್ತತೆ ನಿನಗಿಲ್ಲವೇ ಇಲ್ಲ! (ಕ)

-ರ, ಚರಣಾದಿಯಿದ್ರೆ ತಾನೇ ಅದೆಲ್ಲಾ?
ಮಾಯಾ ಪ್ರಭಾವ ನಿನ್ನ ಮೇಲೇನೂ ಇಲ್ಲ! (ಆ)
-ಪ್ತ ನೀನೆನಗೆನ್ನುವುದಾಶೆಯಿಂದೆಲ್ಲಾ!
ತೆಗಳ್ವುದು, ಹೊಗಳ್ವುದದಕ್ಕಾಗ್ಯೆಲ್ಲಾ!
ನಿನ್ನಂತಾಗ್ವತನ್ಕ ನನ್ಗೆಲ್ಲಾ ಬೇಕಲ್ಲಾ!
ನ್ನಿಷ್ಟದಂತಾವುದೂ ಆಗುವುದಿಲ್ಲ!
ಗಿರಿಜೆಯಂತೆನ್ನ ನೀ ಸ್ವೀಕರಿಸಿಲ್ಲ! (ಎ)
-ಲ್ಲ ತಪ್ಪೂ ನನ್ಮೇಲ್ಹೆರಿಸುವೆಯಲ್ಲ?
ವೇದಾಂತ ಸ್ವರೂಪಿಗಿದು ಸರಿಯಲ್ಲ!
ಬ್ರೂ ಸದಾ ಒಂದಾಗಿದ್ರಾಕ್ಷೇಪಣೆಯಿಲ್ಲ! (ಪು)
-ಲ್ಲ ನಿರಂಜನಾದಿತ್ಯ ಅನ್ಯನಲ್ವಲ್ಲಾ!!!

ಸ್ಥೂಲಗಳ್ಸದಾ ಒಂದಾಗಿರ್ಲಾಗ್ವುದಿಲ್ಲ! (ಜ)

-ಲ, ಮಲಕ್ಕಾದ್ರೂ ಬೇರಾಗಿರ್ಲೇ ಬೇಕಲ್ಲಾ! (ಅ)
-ಗತ್ಯವೆಂಬುದು ಇಂದ್ರಿಯ ತೃಪ್ತಿಗೆಲ್ಲಾ! (ಹ)
-ಳ್ಸಬಾರದು ವಿಶ್ವಾಸ ಕ್ಷುಲ್ಲಕಕ್ಕೆಲ್ಲಾ!
ದಾಶರಥಿ, ಸೀತೆಯರ್ಸಾಮಾನ್ಯರಲ್ಲ!
ಒಂದಾಗಿತ್ತಾತ್ಮ ಸುಖ, ದುಃಖದಲ್ಲೆಲ್ಲಾ!
ದಾನವರಾಟ ಹೀಗಾಗಿ ನಡೆಯಲಿಲ್ಲ! (ಯೋ)
-ಗಿಗಳಾಗಿ ತ್ಯಾಗಿಗಳಾಗಿದ್ದ್ರವ್ರೆಲ್ಲಾ! (ಬ)
-ರ್ಲಾರದು ಸೋಲು ಇಂಥವರಿಗೆ ಎಲ್ಲಾ! (ಆ)
-ಗ್ವುದು, ಹೋಗ್ವುದು ದೈವೇಚ್ಛೆಯಂತೆ ಎಲ್ಲಾ!
ದಿನ, ರಾತ್ರಿ, ಸ್ಮರಿಸಬೇಕವನನ್ನೆಲ್ಲಾ! (ಪು)
-ಲ್ಲ, ನಿರಂಜನಾದಿತ್ಯ ಇಂತಿದ್ದಾನಲ್ಲಾ!!!

ಹಿಗ್ಗುವನು ಕುಗ್ಗುವನು ಜೀವ! (ಹಿ)

-ಗ್ಗು, ಕುಗ್ಗುಗಳಿಲ್ಲದವ ದೇವ! (ಜೀ)
-ವ ದೇವನಾಗಲ್ಬೇಕ್ಸಮ ಭಾವ! (ತಾ)
-ನು ಮಾಡ್ಬೇಕಿದಕ್ಕೆ ಗುರುಸೇವಾ!
ಕುಟಿಲತನವನ್ನೊಪ್ಪನವ! (ಗು)
-ಗ್ಗುರಿಯನ್ನವಾದ್ರೂ ತಿನ್ಬೇಕಿವ! (ಶಿ)
-ವನೆಂದರಿಯಬೇಕು ಗುರುವ! (ಅ)
-ನುಮಾನಪಟ್ಟರಾಗುವೆ ಶವ!
ಜೀರ್ಣಿಸಿಕೊಳ್ಬೇಕುಪದೇಶವ! (ಜೀ)
-ವ ನಿರಂಜನಾದಿತ್ಯನಾಗುವ!!!

ಒಡಕೆಂದೆಸೆಯುವುದ್ರಲ್ಲಿದ್ದೆ! (ಒ)

-ಡನೆ ತಪ್ಪು ನನ್ನದೆಂದ್ತಿಳಿದೆ!
ಕೆಂಗಣ್ಣಿನ ಬಣ್ಣ ಇಳಿಸಿದೆ!
ದೆಸೆದೆಸೆಗ್ದಿಟ್ಟಿಸಿ ನೋಡಿದೆ!
ಸೆಕೆಯಿಂದ ಬಿಡುಗಡೆಯಾದೆ!
ಯುಗಾಂತ್ಯ ಬಂದ್ರೂ ವಿವೇಕ್ಯಾಗೆಂದೆ! (ಹಾ)
-ವು ಹಗ್ಗವೆಂದಾದೀತು? ಎಂದೆ! (ಭ)
-ದ್ರವಾಗಿರಬೇಕು ಮನಸ್ಸೆಂದೆ! (ಮ)
-ಲ್ಲಿಕಾರ್ಜುನ ಸ್ವರೂಪ “ನಾ”ನೆಂದೆ! (ಗೆ)
-ದ್ದೆ, ನಿರಂಜನಾದಿತ್ಯಾಗೀಗೆದ್ದೆ!!!

ಹಾಗಾಗ್ಬೇಕು, ಹೀಗಾಗ್ಬೇಕೆಂಬುದಜ್ಞಾನ!

ಗಾಳಿ ಬೀಸಿದತ್ತ ಸಾಗಿದೆ ಜೀವನ! (ಬಾ)
-ಗ್ಬೇಕು ಸದ್ಗುರು ಪಾದಕ್ಕೆ ಪ್ರತಿದಿನ!
ಕುಚೋದ್ಯ ಮಾಡಬಾರದು ನೀನವನ!
ಹೀನಕೃತ್ಯದತ್ತೋಡಬಾರದು ಮನ!
ಗಾನ ಹಾಡಬೇಕು ಕೊಂಡಾಡಿ ದತ್ತನ! (ಹೋ)
-ಗ್ಬೇಕು ಒಳ ಹೊರಗಿನೆಲ್ಲಾ ಮಲಿನ!
ಕೆಂದಾವರೆಯಡಗೆ ಹಚ್ಚೇಕ್ಚಂದನ! (ಇಂ)
-ಬು ದೊರತಾಗುವುದು ಜನ್ಮ ಪಾವನ!
ಹಿಸಿ ಹೋಗುವುದು ಭವ ಬಂಧನ!
ಜ್ಞಾನದೃಷ್ಟಿಗಾಗ ಗೋಚರ ದರ್ಶನ!
ಮೋ ನಿರಂಜನಾದಿತ್ಯ ನಾರಾಯಣ!!!

ನಾ ನಿನ್ನ ಮರೆಯಲಾರೆ! (ನೀ)

-ನಿನ್ನೂ ಭೇಟಿಯೇಕಾಗ್ಲಾರೆ! (ನಿ)
-ನ್ನಧರ್ಮ ನಾ ಸಹಿಸ್ಲಾರೆ!
ಹಿಳೆಗಾಗ್ಬಾರ್ದು ಸೆರೆ! (ಹ)
-ರೆಯದಂದ ಮುಂದ್ನೋಡ್ಲಾರೆ!
ಮನೂರ ಸೇರ್ದಿರ್ಲಾರೆ! (ಬಾ)
-ಲಾದಿತ್ಯನನ್ನಾಗ್ನೋಡ್ಲಾರೆ! (ಇ)
-ರೆ, ನಿರಂಜನಾದಿತ್ಯಾರೆ!!!

ಎಪ್ಪತ್ತೊಂದರಲ್ಲಿ ತಪ್ಪಿತೊಂದು! (ಅ)

-ಪ್ಪನಿಗಾನಂದವದರಿಂದಿಂದು! (ಮ)
-ತ್ತೊಂದು ಸಲ ಪೂಜೆಯಾಗ್ಬೇಕೆಂದು!
ತ್ತ, ನಿವನೊಂದೆಂಬುದಕ್ಕಂದು! (ಈ)
-ರಹಸ್ಯ ಆನಂದಪಡಿಸ್ಲಿಂದು! (ನಿ)
-ಲ್ಲಿಸಿ ದುಃಖವನ್ನದಕ್ಕಾಗಿಂದು!
ತ್ವವರಿತ್ಮುಕ್ತರಾಗ್ಬೇಕೆಂದು! (ಅ)
-ಪ್ಪಿಕೊಳ್ಳಿ ಅಪ್ಪನನ್ನು ನೀವಂದು!
ತೊಂದ್ರೆಯಾಗದು ನಿಮಗೆಂದೆಂದೂ! (ಇಂ)
-ದು ನಿರಂಜನಾದಿತ್ಯ! ದತ್ತಂದು!!!

ನೀ ನಡೆವ ದಾರಿ ನಿನ್ನೂರ್ಸೇರಿಸದು!

ನ್ನೂರು, ನಿನ್ನೂರು, ಒಂದೇ ಆಗಿಹುದು! (ಕಂ)
-ಡೆನಗಾ ದಾರಿ ಬೇಜಾರಾಗಿರುವುದು! (ದೇ)
-ವರ ಲೀಲೆ ವಿಚಿತ್ರವಾಗಿರುವುದು!
ದಾರಿ ತಪ್ಪಿ ಹಳ್ಳಕ್ಕೆ ಬೀಳ್ಬೇಕಾಗ್ವುದು! (ಅ)
-ರಿತಿದ ನೇರ ದಾರಿ ಹಿಡಿದ್ಕೊಳ್ವುದು!
ನಿನ್ನ ಸುಖ, ದುಃಖ, ನನ್ನದಾಗಿಹುದು! (ನ)
-ನ್ನೂರು ನೀ ಸೇರಿ ಸುಖವಾಗಿರುವುದು! (ಊ)
-ರ್ಸೇರಿದ್ಮೇಲೆ ಮತ್ತೆಲ್ಲಿಗೂ ಹೋಗ್ಬಾರದು! (ವೈ)
-ರಿಗಳಿಂದಿಂತು ಪಾರಾಗ್ಬೇಕಾಗಿಹುದು!
ದ್ಧರ್ಮ ಪಾಲನೆ ಮಾಡ್ಬೇಕಾಗಿಹುದು! (ಬಂ)
-ದು, ನಿರಂಜನಾದಿತ್ಯನಾಗಿರುವುದು!!!

ಕರ್ತವ್ಯ ಭ್ರಷ್ಟ ದೂರುವನನ್ಯರನು! (ಆ)

-ರ್ತ ರಕ್ಷಕನೆ ಮರೆತಿರುವನು!
ವ್ಯಭಿಚಾರ ಭಕ್ತಿಯುಳ್ಳವನವನು!
ಭ್ರಮಾ ಭರಿತನಾಗಿರುವನವನು! (ಶಿ)
-ಷ್ಟರ ಸಂಗ ತ್ಯಜಿಸಿರುವನವನು!
ದೂತ ಮನ್ಮಥನಿಗಾಗಿರ್ಪನವನು! (ಗು)
-ರುಸೇವಾ ಮಹಿಮೆಯರಿಯನವನು!
ಸ್ತ್ರಾದಿ ಅಲಂಕಾರಾಸಕ್ತನವನು!
ಯನಾದಿಂದ್ರಿಯ ವಿಷಯಿಯವನು! (ಧ)
-ನ್ಯನಾಗುವನು ತನ್ನ ತಿಳಿದ್ರವನು! (ಪ)
-ರಮಾರ್ಥ ಕರ್ತವ್ಯವೆಂದರಿಯ್ಲವನು! (ತಾ)
-ನು ನಿರಂಜನಾದಿತ್ಯನೇ ಆಗುವನು!!!

ಜ್ಞಾನಾಮೃತ, ಸಾರ ಗೀತಾ!

ನಾನಾರೆಂದೆಂಬುದು ಗೀತಾ!
ಮೃತ್ಯುಂಜಯ ವಿದ್ಯೆ ಗೀತಾ!
ಪ್ಪು, ತಿದ್ದುವುದು ಗೀತಾ!
ಸಾಧನೆಗೆ ದಾರಿ ಗೀತಾ!
ಮಾನಂದಾನಂದ ಗೀತಾ!
ಗೀರ್ವಾಣಿಗಚ್ಮೆಚ್ಚು ಗೀತಾ! (ಗೀ)
-ತಾ, ನಿರಂಜನಾದಿತ್ಯ ತಾ!!!

ನನ್ನ ಕಷ್ಟ ನಿನಗೇನು ಗೊತ್ತು? (ನಿ)

-ನ್ನನ್ನು ದೂರವಿರಿಸ್ಬಾರದಿತ್ತು!
ಳವು, ಸುಲಿಗೆ ಸುತ್ತುಮುತ್ತೂ! (ದು)
-ಷ್ಟರನ್ನು ಶಿಕ್ಷಿಸಬೇಕಾಗಿತ್ತು!
ನಿನ್ನಂತೆನ್ನನ್ನೇಕೆ ಮಾಡ್ಬಾರ್ದಿತ್ತು?
ನಗೆ ನೀನೇ ಸರ್ವ ಸಂಪತ್ತು!
ಗೇಯ್ಮೆ ನಿನ್ನ ಸೇವೆಯಾಗ್ಬೇಕಿತ್ತು!
ನುಡಿದೇನು ಫಲ? ನಾನಸತ್ತು!
ಗೊಲ್ಲ ಬಾಲಕೃಷ್ಣಾ! ಕೊಡೊಂದ್ಮುತ್ತು! (ಗೊ)
-ತ್ತು, ನಿರಂಜನಾದಿತ್ಯ ನೀನ್ಗೊತ್ತು!!!

ವೀರ್ಯ ಸಾಗರ ಗಂಗಾಧರ! (ಕಾ)

-ರ್ಯತತ್ಪರ ಪರಮೇಶ್ವರ!
ಸಾಕಾರ, ನಿರಾಕಾರೇಶ್ವರ!
ಣಪತಿ ಕೈಲಾಸೇಶ್ವರ! (ಮಾ)
-ರಹರ ತ್ರಿಪುರ ಸಂಹಾರ!
ಗಂಭೀರ ಅರ್ಧನಾರೀಶ್ವರ!
ಗಾನಲೋಲ ತಾಂಡವೇಶ್ವರ! (ಸ್ವ)
-ಧರ್ಮನಿಷ್ಟ ಭುವನೇಶ್ವರ! (ಹ)
-ರ ನಿರಂಜನಾದಿತ್ಯೇಶ್ವರ!!!

ಪ್ರಕೃತಿಗುಂಟು ಕರ್ತವ್ಯ ನಿಷ್ಠೆ!

ಕೃತ, ತ್ರೇತದ್ದೇ ಇಂದಿಗೂ ನಿಷ್ಠೆ!
ತಿಳಿ ನೀರ್ಗಾಳಿಗಚಲ ನಿಷ್ಠೆ! (ಆ)
-ಗುಂಡಕ್ಕಿ, ಗೋಧಿಗೀಗಲೂ ನಿಷ್ಠೆ! (ಉಂ)
-ಟು ಅವೆಲ್ಲಕ್ಕೊಂದು ಕಾಲ ನಿಷ್ಠೆ!
ಲಿತವರಲ್ಲೀಗಿಲ್ಲ ನಿಷ್ಠೆ! (ಧೂ)
-ರ್ತನಲ್ಲದವಗೆ ನೇಮ, ನಿಷ್ಠೆ!
ವ್ಯವಹಾರ ಜಯಕ್ಬೇಕು ನಿಷ್ಠೆ!
ನಿತ್ಯವಿರ್ಬೇಕಾತ್ಮ ಧ್ಯಾನ ನಿಷ್ಠೆ! (ನಿ)
-ಷ್ಠೆ, ನಿರಂಜನಾದಿತ್ಯಾತ್ಮ ನಿಷ್ಠೆ!!!

ತಿನ್ನಬಾರದ್ದು ತಿಂದಾಯ್ತು! (ಬ)

-ನ್ನ ಪಡುವಾಗಾಡದಾಯ್ತು!
ಬಾಯಿ ರುಚಿಗಾಶ್ಸಿಂತಾಯ್ತು! (ಪ)
-ರಮಾರ್ಥದಿಂದಾನಂದಾಯ್ತು! (ಬಿ)
-ದ್ದು, ಎದ್ದು ಕೂತ್ಕೊಳ್ಬೇಕಾಯ್ತು!
ತಿಂಗ್ಳುಗಳುರುಳಿ ಹೋಯ್ತು!
ದಾರಿ ತಪ್ಪಿ ಶಿಕ್ಷೆಯೂಯ್ತು! (ಕಾ)
-ಯ್ತು, ನಿರಂಜನಾದಿತ್ಯಾಯ್ತು!!!

ಮರೆಯೆ ನಾ ನಿನ್ನ ಮಾಯೇ, ತಾಯೇ! (ತಿ)

-ರೆಯಾನುಭವವಾಯ್ತೀಗ ತಾಯೇ! (ದ)
-ಯೆ ನಿನ್ನದೆನ್ನಲ್ಲಪಾರ ತಾಯೇ!
ನಾನಾರೆಂದು ಅರುಹಿದೆ ತಾಯೇ!
ನಿನ್ನ ಪರೀಕ್ಷೆ ಕಠಿಣ ತಾಯೇ! (ನ)
-ನ್ನನ್ನುತ್ತೀರ್ಣಗೊಳಿಸಿದೆ ತಾಯೇ!
ಮಾಯೇ, ಜಾಯೇ, ತನಯೇ ನೀ ತಾಯೇ! (ಕಾ)
-ಯೇ! ಕಂಗೆಟ್ಟಿಲ್ಲಾ ಮಕ್ಕಳ ತಾಯೇ!
ತಾಳೆವೀ ಭವದ ಬೇಗೆಯ ತಾಯೇ! (ಕಾ)
-ಯೇ! ಶ್ರೀ ನಿರಂಜನಾದಿತ್ಯ ಪ್ರಿಯೇ!!!

ಮಿಂಚಿಹೋದ ಕಾರ್ಯಕ್ಕೇಕೆ ಚಿಂತೆ? (ಸಂ)

-ಚಿತ ಅನುಭವಿಸ್ಲೇ ಬೇಕಂತೆ!
ಹೋರಾಟಮನಸ್ಕಕ್ಕಾಗ್ಬೇಕಂತೆ!
ತ್ತಾತ್ರೇಯನಂತಿರಬೇಕಂತೆ!
ಕಾಯಾಭಿಮಾನ ಬಿಡಬೇಕಂತೆ! (ಆ)
-ರ್ಯ ಮಾನವ ಸಂಸ್ಕೃತಿಯಿದಂತೆ! (ಹ)
-ಕ್ಕೇನನ್ಯಕ್ಕೆ ಸಾಧಿಸ್ಬೇಡವಂತೆ!
ಕೆಚ್ಚೆದೆಯ ಧೀರನಾಗ್ಬೇಕಂತೆ!
ಚಿಂತೆ ಚಿತೆಗಿಂತ ಉರಿಯಂತೆ! (ಚಿಂ)
-ತೆ ನಿರಂಜನಾದಿತ್ಯ ಮಾಡ್ನಂತೆ!!!

ಮನವಿದ್ದರೆ ತನುವಿರುವುದು! (ಮ)

-ನವಿಲ್ಲದಿದ್ದರೆ ತನುವಿರದು!
ವಿರಕ್ತನಿಗೂ ನೋವು, ಸಾವಿಹುದು! (ಸ)
-ದ್ದಡಗಿಸಿ ಸಹಿಸಿರಬಹುದು! (ತಿ)
-ರೆಯ ಸುಖವ ಬಿಟ್ಟಿರಬಹುದು!
ತ್ವ ಸುಖವ ನೆರವಾಗುವುದು! (ತ)
-ನು, ಮನ ಅನ್ಯೋನ್ಯವಾಗಿರುವುದು!
ವಿಶ್ವರೂಪ ದರ್ಶನವಾಗುವುದು! (ಗು)
-ರು ಸಾರೂಪ್ಯ ಸಿದ್ಧಿಯುಂಟಾಗುವುದು! (ಸಾ)
-ವು, ನೋವಿನ ಮೂಲವಳಿಯುವುದು! (ಅ)
-ದು, ನಿರಂಜನಾದಿತ್ಯಾನಂದೆಂಬುದು!!!

ಬೇಕಾದದ್ದು ಪ್ರಾಣವಿದ್ದ್ರೂ, ಹೋದ್ರೂ ಬೇಕು!

ಕಾರಣಕರ್ತ ಅದೆಂದರಿಯಬೇಕು!
ರಿದ್ರ, ಶ್ರೀಮಂತರಿಗೆಲ್ಲಾ ಅದ್ಬೇಕು! (ಸ)
-ದ್ದು ಮಾಡದೇ ಅದು ಸಿದ್ಧಿಯಾಗಬೇಕು!
ಪ್ರಾರ್ಥನೆ, ಭಜನೆ ಮಾಡುತ್ತಿರಬೇಕು! (ಹ)
-ಣ, ಕಾಸಿನಾಶೆ ತ್ಯಜಿಸಿಬಿಡಬೇಕು!
ವಿಶ್ವಾಸಘಾತಕನಾಗದಿರಬೇಕು! (ಬಿ)
-ದ್ದ್ರೂ, ಎದ್ದ್ರೂ ಎದೆಗೆಡದೆ ಇರಬೇಕು!
ಹೋದದ್ದಕ್ಕಾಗಿ ಚಿಂತಿಸದಿರಬೇಕು! (ತ)
-ದ್ರೂಪ ಚಿದ್ರೂಪವೆಂದರಿತಿರಬೇಕು!
ಬೇಸರವೀವ ಸಂಸಾರ ಬೇಡಾಗ್ಬೇಕು! (ಬೇ)
-ಕು ನಿರಂಜನಾದಿತ್ಯ ಎಂದೆಂದೂ ಬೇಕು!!!

ಶಿವನಿಗೆ ಎಲ್ಲಾ ಗೊತ್ತು! (ಜೀ)

-ವನಿಗೆ ಅದೆಂತು ಗೊತ್ತು!
ನಿನ್ನವನಾತಾದ್ರೆ ಗೊತ್ತು! (ನ)
-ಗೆ ಮುಖ ತೋರಿದ್ರೆ ಗೊತ್ತು!
ಡರ್ತಪ್ಪಿದರೆ ಗೊತ್ತು! (ಚೆ)
-ಲ್ಲಾಟ ವೃತ್ತಿ ಸತ್ತ್ರೆ ಗೊತ್ತು!
ಗೊರಕೆ ಬಿಟ್ಟೆದ್ರೆ ಗೊತ್ತು! (ಗೊ)
-ತ್ತು, ನಿರಂಜನಾದಿತ್ಯಾಯ್ತು!!!

ಸ್ವ ಸಾಮರ್ಥ್ಯವಿಲ್ಲದವ ಜೀವ!

ಸಾಮರ್ಥ



ತುಂಬಿರುವವ ದೇವ!
ನಗಂಡಿದ ಮಾಡು ಧ್ಯಾನವ! (ಅ)
-ರ್ಥ



ನಾಥರಿಗೆ ಮಾಡ್ಬೇಕ್ದಾನವ!
ವಿಶ್ವನಾಥನೆಲ್ಲೆಲ್ಲೂ ಇರುವ! (ಬ)
-ಲ್ಲ ಜ್ಞಾನಿಗಳ್ಗೆ ಗೋಚರಿಸುವ!
ರಿದ್ರ, ಶ್ರೀಮಂತಾದಿ ಕೇಶವ!
ರ ಗುರು ರೂಪನಾಗಿರುವ!
ಜೀವನ್ಮುಕ್ತಿ ಸುಖವನ್ನೀಯುವ! (ಅ)
-ವ ನಿರಂಜನಾದಿತ್ಯನೆಂಬವ!!!

ಶಿವನಸೇರಿ ಧನ್ಯಳಾದಳ್ಪಾರ್ವತಿ! (ಅ)

-ವಳಿಗಾಗಿ ಶಿವನಾದ ಭಿಕ್ಷಾ ಯತಿ!
ಗೇಂದ್ರ ಸುತೆ ಪಾರ್ವತಿ ಸೂಕ್ಷ್ಮ ಮತಿ!
ಸೇರಿ ಸೇವಾತತ್ಪರಳಾದಳಾ ಸತಿ! (ಕ)
-ರಿವದನನೆಂದರವಳಿಗೆ ಪ್ರೀತಿ!
ರಣಿಯ ನರರಿಗವನೇ ಗತಿ! (ಮಾ)
-ನ್ಯ ಸಿದ್ಧಿ ವಿನಾಯಕ ಸುತನ ನೀತಿ! (ಆ)
-ಳಾಗಿ, ಅರಸಾಗಿ ಪಾಲಿಸುವ ರೀತಿ!
ಯಾಮಯಿ ತಾಯಿಗಿವನಿಂದ ಸ್ಫೂರ್ತಿ! (ಕೀ)
-ಳ್ಪಾಮರರ ಪಂಡಿತರ ಗೈವ ಕೀರ್ತಿ! (ಗ)
-ರ್ವರಹಿತ ಶಿವಗಣ ಚಕ್ರವರ್ತಿ! (ಪ್ರೀ)
-ತಿ ನಿರಂಜನಾದಿತ್ಯನಲ್ಲಿವಗತಿ!!!

ರಜಾದಲ್ಲಿ ಬಾರದವ, ಸಜಾದಲ್ಲಿ ಬಂದಾನಾ?

ಜಾತಿ, ನೀತಿ ಬಿಟ್ಟ ಮಾತ್ರಕ್ಕೆ ಮುಖ್ಯಸ್ಥನಾದಾನಾ? (ಉ)
-ದಯದಲ್ಲಿ ಏಳದವ ಕತ್ತಲೆಯಲ್ಲೆದ್ದಾನಾ? (ಇ)
-ಲ್ಲಿಲ್ಲದ ಪರಮಾತ್ಮ ಪರಲೋಕದಲ್ಲಿದ್ದಾನಾ!
ಬಾಯಿಗೆ ಹಾಕಿದ್ರೂ ತಿನ್ನದವ ತಾನೇ ತಿಂದಾನಾ?
ತಿಸುಖಾಸಕ್ತನಾಗಿರ್ಪವ ಯತಿಯಾದಾನಾ?
ಮೆ, ಶಮೆಗಳಿಲ್ಲದವ ವೇದಾಂತಿಯಾದಾನಾ?
ಸ್ತ್ರ ಬಿಚ್ಚಿ ಬೆತ್ಲೆ ನಿಂತವ ಅವಧೂತಾದಾನಾ?
ರ್ವ ಸಂಗ ಪರಿತ್ಯಾಗಿ ಸಂಸಾರಿ ಮತ್ತಾದಾನಾ?
ಜಾಮಾತನಾಗದವ ಮಾವನೆಂದಾದ್ರೂ ಆದಾನಾ?
ಯೆಯಿಲ್ಲದವ ಧರೆಗರಸ ತಾನಾದಾನಾ? (ಗ)
-ಲ್ಲಿಗೇರಿಸಿದ್ರೂ ಸದ್ಭಕ್ತ ಗುರುನಿಂದೆ ಮಾಡ್ಯಾನಾ?
ಬಂಧು ಬಾಂಧವರೆಂದು ಮುಕುಂದ ಅಂಟಿಕೊಂಡಾನಾ?
ದಾಶರಥಿ ರಾಮ ರಾವಣನೆಂದಾದ್ರೂ ಆದಾನಾ?
ನಾರಾಯಣ ನಿರಂಜನಾದಿತ್ಯ ತಾನಲ್ಲೆಂದಾನಾ???

ಹೊಟ್ಟೆ, ಬಟ್ಟೆ ಕೊಟ್ಟವನ ಬಿಟ್ಟು ನೀ ಕೆಟ್ಟೆ! (ದಿ)

-ಟ್ಟೆ ನೀನೆಂಬುದನ್ನು ನೀನೀಗ ತೋರ್ಸಿಕೊಟ್ಟೆ!
ಟ್ಟೆ ಬದ್ಲಸಿ ನರಕದಲ್ಲಿ ಬಿದ್ಬಿಟ್ಟೆ! (ತ)
-ಟ್ಟೆ ನೀನಿಟ್ಟು ಕಹಿಯೂಟ ಬಡಿಸ್ಬಿಟ್ಟೆ!
ಕೊಟ್ಟ ವಚನಕೆ ತಪ್ಪಿ ನಡೆದುಬಿಟ್ಟೆ! (ಅ)
-ಟ್ಟಹಾಸದ ಬಾಳಿಗೀಗ ಶುರು ಮಾಡ್ಬಿಟ್ಟೆ! (ಭ)
-ವ ಬಂಧನಕ್ಕೆ ಕಟ್ಟು ಬೀಳಲಣ್ಯಾಗ್ಬಿಟ್ಟೆ!
ರ ಜನ್ಮ ವ್ಯರ್ಥ ಮಾಡಲ್ದಾರಿ ಮಾಡ್ಕೊಟ್ಟೆ!
ಬಿಕ್ಕಟ್ಟು ಪರಿಹರಿಸ್ಲಾಗದಂತಿದ್ಬಿಟ್ಟೆ! (ಹೊ)
-ಟ್ಟು ತಿಂದು ಅಕ್ಕಿ ಚೆಲ್ಲುವಂತೆ ನೀನಾಗ್ಬಿಟ್ಟೆ!
ನೀತಿ ರೀತಿ ಶಿವನದ್ಗಾಳಿಗೆ ತೂರ್ಬಿಟ್ಟೆ
ಕೆಲಸ ಕೈ

ಈರಿ ಹೋಗೀಗ ನೀನು ಕೆಟ್ಟೆ! (ಬ)
-ಟ್ಟೆ ನಿರಂಜನಾದಿತ್ಯನದ್ದೇಕೆ ನೀನ್ಬಿಟ್ಟೆ???

ಎಡರಿಗಂಜುವನೇ ಪ್ರೇಮಿ? (ಕಂ)

-ಡ ರಾಮನ ಗೋಸ್ವಾಮಿ ಪ್ರೇಮಿ! (ಹ)
-ರಿ ಶರಣ ಪ್ರಹ್ಲಾದ ಪ್ರೇಮಿ!
ಗಂಗಾಧರಾರ್ತೊ

ದ್ಧಾರ ಪ್ರೇಮಿ! (ಅಂ)
-ಜುವನೇ ವಿಷಕ್ಕೆ ಆ ಪ್ರೇಮಿ!
ರ ಪಾರ್ವತಿಗೆ ಆ ಪ್ರೇಮಿ! (ಅ)
-ನೇಕೆಡರ್ಗೆದೆಗೊಟ್ಟಾ ಪ್ರೇಮಿ!
ಪ್ರೇತ ವಿಭೂತಿ ಪ್ರಿಯಾ ಪ್ರೇಮಿ! (ಸ್ವಾ)
-ಮಿ ನಿರಂಜನಾದಿತ್ಯಾ ಪ್ರೇಮಿ!!!

ನನ್ನಿಷ್ಟದಂತೆ ನೀನಿರೆಂದನ್ನಲಾರೆ! (ನಿ)

-ನ್ನಿಷ್ಟದಂತೆ ನಾನಿರಲಾರೆನ್ನಲಾರೆ! (ಕ)
-ಷ್ಟ ಸಹಿಸಿಕೊಂಡು ಬದುಕಿರಲಾರೆ!
ದಂಡ ತೆರಲು ನಾನೆಂದೂ ಒಪ್ಪಲಾರೆ!
ತೆರೆದ ಬಾಯಿಂದೇನೂ ಹೇಳಲಾರೆ!
ನೀತಿ, ರೀತಿಗಪಚಾರ ಮಾಡಲಾರೆ!
ನಿನ್ನನ್ನಲ್ಲದಿನ್ಯಾರನ್ನೂ ನಂಬಲಾರೆ! (ಯಾ)
-ರೆಂದರೂ ಅದಕ್ಕೆ ಕಿವಿಗೊಡಲಾರೆ!
ರ್ಶನವನ್ನು ಬಯಸದಿರಲಾರೆ! (ನಿ)
-ನ್ನನ್ನೇನೂ ಕೇಳಿ ಹಿಂಸೆ ಪಡಿಸಲಾರೆ!
ಲಾವಣ್ಯಕ್ಕೆ ಮನ ಸೋಲದಿರಲಾರೆ! (ಬೆ)
-ರೆತ್ರೆ ನಿರಂಜನಾದಿತ್ಯನ ಬಿಡ್ಲಾರೆ!!!

ಹಿಂದಿನ ರುಚಿ ಇಂದಿನಭಿರುಚಿ!

ದಿನ, ರಾತ್ರಿಂತಾದ್ರಾಗ್ದು ಮನ ಶುಚಿ!
ಶ್ವರದಾಸೆ ಅಳಿದಾಗ ಶುಚಿ!
ರುಜುಮಾರ್ಗ ತಪ್ಪಿದರೆ ಅರುಚಿ!
ಚಿರಾಯುರಾರೋಗ್ಯವಂತ ಮರೀಚಿ!
ಇಂದ್ರಜಾಲವೆಂಬುದೊಂದು ಪಿಶಾಚಿ!
ದಿವ್ಯ ಜೀವನಾನಂದಕ್ಕಿದು ಪಾಚಿ!
ತದೃಷ್ಟನೆಂಬುದಕಿದು ಸೂಚಿ!
ಭಿಕ್ಷು ಸೇರನಿದರ ಬಳಿ ನಾಚಿ! (ದು)
-ರುಳ ತಬ್ಬಿಕೊಳ್ಳುವನಿದ ಬಾಚಿ! (ಶು)
-ಚಿ ನಿರಂಜನಾದಿತ್ಯನಿಗೆ ರುಚಿ!!!

ಸಕ್ಕರೆಗಾಗಕ್ಕರೆ ಬೇಡಪ್ಪಾ! (ಅ)

-ಕ್ಕರೆಗಾಗಿ ಸಕ್ಕರೆ ಬೇಕಪ್ಪಾ! (ಮ)
-ರೆತರಿದನು ಕಷ್ಟ ಕಾಣಪ್ಪಾ!
ಗಾನಲೋಲ ಬಾಲಗೋಪಾಲಪ್ಪಾ!
ಗನದ ಬಣ್ಣವನದಪ್ಪಾ! (ಸ)
-ಕ್ಕರೆ, ಹಾಲ್ಬೆಣ್ಣೆ ಅವನಿಗಿಷ್ಟಪ್ಪಾ! (ನೆ)
-ರೆ ಮನೆಯೂ ತನ್ನದೆಂಬನಪ್ಪಾ!
ಬೇಡಿ, ಕಾಡಿ ತಿನ್ನನವನಪ್ಪಾ! (ಉಂ)
-ಡಮನೆಗೆ ಎರಡೆಣಿಸ್ನಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯ ತಾನಪ್ಪಾ!!!

ಕೊಡುವವನ ಸಮಯ ಕಾಯ್ಬೇಕಯ್ಯಾ! (ದು)

-ಡುಕದಿರಬೇಕು ಬೇಡುವವನಯ್ಯಾ!
ಸ್ತ್ರಾಲಂಕಾರಕ್ಕವ ಮರುಳಾಗ್ನಯ್ಯಾ!
ಕ್ರಬುದ್ಧಿಯೆಂದೂ ಇರಬಾರದಯ್ಯಾ!
ಯ, ವಿನಯದಿಂದ ಇರಬೇಕಯ್ಯಾ!
ಟೆಯಾಡುವಭ್ಯಾಸವಿರಬಾರ್ದಯ್ಯಾ!
ತ ಯಾವುದಾದರೂ ಆಗಿರಲಯ್ಯಾ!
ಮ, ನಿಯಮ, ಪಾಲನೆಯಾಗ್ಬೇಕಯ್ಯಾ!
ಕಾಯಾಭಿಮಾನವಿರದಿರಬೇಕಯ್ಯಾ (ಸಾ)
-ಯ್ಬೇಕು ಸ್ವಧರ್ಮ ನಿಷ್ಠಾವಂತನಾಗಯ್ಯಾ!
ಳ್ಳ, ಸುಳ್ಳರ, ಸಂಗ ಮಾಡ್ಬಾರದಯ್ಯಾ! (ಅ)
-ಯ್ಯಾ, ನೀನಿಂತು ನಿರಂಜನಾದಿತ್ಯಾಗಯ್ಯಾ!!!

ತರತರದ ನಾಟಕ ನಾ ನೋಡಿದೆ!

ಸಗಳೊಂಭತ್ತರಿಂದದು ತುಂಬಿದೆ!
ರಲೆ, ತಂಟೆಗಳನ್ನೆಲ್ಲಾ ನೋಡಿದೆ!
ತಿ ಸುಖಕ್ಕಾಗಿ ಸತ್ತದ್ದೂ ನೋಡಿದೆ!
ನುಜ ದಮನವನ್ನೂ ನಾ ನೋಡಿದೆ!
ನಾನಾರೆಂದರಿತವರನ್ನೂ ನೋಡಿದೆ!
ಗರು ಕಾಳಗವನ್ನೂ ನಾ ನೋಡಿದೆ!
ಳವು, ಸುಲಿಗೆಗಳನ್ನೂ ನೋಡಿದೆ!
ನಾಸ್ತಿಕ ಸ್ತ್ರೀ, ಪುರುಷರನ್ನೂ ನೋಡಿದೆ!
ನೋವು, ಸಾವಿಲ್ಲದವರನ್ನೂ ನೋಡಿದೆ!
ಡಿಕ್ಕಿಯಿಂದುರುಳಿದವ್ರನ್ನೂ ನೋಡಿದೆ! (ತಂ)
-ದೆ ನಿರಂಜನಾದಿತ್ಯ ನಾನೆನಿಸಿದೆ!!!

ಹೊಟ್ಟೆಯ ಕೂಸಿಗೆ ಹೆಸರಿಡಬೇಡ! (ಕೆ)

-ಟ್ಟೆನೆಂದಾಮೇಲೆ ಕುಟ್ಟಿಕೊಂಡು ಅಳ್ಬೇಡ!
ತ್ನ ನಮ್ಮದೆಲ್ಲಾ ಫಲಿಸೀತೆನ್ಬೇಡ!
ಕೂತಾಗ, ನಿಂತಾಗಾತ್ಮಧ್ಯಾನ ಬಿಡ್ಬೇಡ!
ಸಿಕ್ಕಿದ್ದರಲ್ಲಿ ತೃಪ್ತಿ ಪಡದಿರ್ಬೇಡ!
ಗೆಳೆತನ ದುರ್ಜನರದ್ದು ಮಾಡ್ಬೇಡ!
ಹೆರವರಾಸ್ತಿ ಪಾಸ್ತಿಗೆ ಆಶಿಸ್ಬೇಡ!
ತ್ತು, ಹುಟ್ಟುವ ನೆಂಟತನ ಹೂಡ್ಬೇಡ!
ರಿಪುಕುಲಾಂತಕನ ಮರೆತಿರ್ಬೇಡ!
ಮರುಧರಗೆ ಶರಣಾಗ್ದಿರ್ಬೇಡ!
ಬೇಕು, ಬೇಡವೆಂದವ್ನಲ್ಲೇನೂ ಹೇಳ್ಬೇಡ! (ಬಿ)
-ಡ, ನಿರಂಜನಾದಿತ್ಯ ಶಿವ ಕೈ ಬಿಡ!!!

ತೊಗಲ್ಗೊಂಬೆಗಾಶಿಸಬೇಡ! (ಅ)

-ಗಲಿದ್ರದಕ್ಕಾಗಳಬೇಡ! (ಕ)
-ಲ್ಗೊಂಬೆಯನ್ನು ಪೂಜಿಸಬೇಡ!
ಬೆಳಿಗ್ಗೆ ಬೇಗೇಳದಿರ್ಬೇಡ!
ಗಾಯತ್ರೀ ಜಪ ಮಾಡ್ದಿರ್ಬೇಡ!
ಶಿಷ್ಟ ಸಂಪ್ರದಾಯ ಬಿಡ್ಬೇಡ!
ಮದೃಷ್ಟಿ ಕೆಡಿಸಬೇಡ!
ಬೇರಿಗೆ ಬೆಂಕಿ ಹಾಕಬೇಡ! (ಸು)
-ಡ, ನಿರಂಜನಾದಿತ್ಯದ್ಮಾಡ!!!

ಅತ್ಯುತ್ತಮ ಬಾಳೆಂತಹುದು? (ಮೃ)

-ತ್ಯುವನು ಜೈಸಿದರಹುದು! (ಚಿ)
-ತ್ತವೃತ್ತಿ ಸತ್ತರದಹುದು!
ನನಾತ್ಮನದ್ದಾದ್ರಹುದು!
ಬಾಯ್ಕೈ, ಕಚ್ಚೆ, ಶುದ್ಧಾದ್ರಹುದು! (ಕೀ)
-ಳೆಂಬಹಂಕಾರ ಬಿಟ್ಟ್ರಿಹುದು!
“ತತ್ವಮಸಿ” ಯಾದಾಗಹುದು!
ಹುಸಿಗಧೀನಾಗ್ದಿದ್ದ್ರಹುದು! (ಅ)
-ದು ನಿರಂಜನಾದಿತ್ಯಾಗ್ವುದು!!!

ನಿಸ್ವಾರ್ಥ ಸೇವೆಯಿಂದಾನಂದ!

ಸ್ವಾಮಿಗಿದು ಪರಮಾನಂದ! (ಅ)
-ರ್ಥಕ್ಕಾಗ್ಯಾದ್ರೆ ಕ್ಷಣಿಕಾನಂದ!
ಸೇತು ಬಂಧನ ರಾಮಾನಂದ! (ಧ)
-ವೆ ಸೀತೆಗಿದು ನಿತ್ಯಾನಂದ! (ನಾ)
-ಯಿಂದನ ಸೇವೆ ಧನಾನಂದ!
ದಾಮೋದರಗುದ್ಧಾರಾನಂದ!
ನಂಜುಂಡನದ್ದಖಂಡಾನಂದ! (ಕಂ)
-ದ ನಿರಂಜನಾದಿತ್ಯಾನಂದ!!!

ಸೊಕ್ಕಿದ ಸೊಸೆಗಿಲ್ಲ ಚೊಕ್ಕ ಪಕ್ಕ! (ಅ)

-ಕ್ಕಿ, ರಾಗಿ, ಗೋಧಿ ಯಜಮಾನ ತಂದಿಕ್ಕ!
ರ್ಪ, ದಂಭ ಅವಳದಕ್ಕಾತ ಸಿಕ್ಕ!
ಸೊಸೆಯ ಕೂಟಾಟ ನೋಡಿ ಮಾವ ನಕ್ಕ! (ಸೊ)
-ಸೆ ಅತ್ತೆಯರ್ಜಗಳ ಕೇಳ್ಯೊಳ ಹೊಕ್ಕ!
ಗಿರಾಕಿಗಳ್ಕೊಡುವರವಳಿಗ್ರೊಕ್ಕ! (ಎ)
-ಲ್ಲವನು ನುಂಗುವ ಆಪ್ತನೆಂಬ ಠಕ್ಕ! (ಲಂ)
-ಚೊಪ್ಪತ್ತಿನಾಟಕ್ಕವಳಿಗೊಂದು ಲಕ್ಕ! (ಸಿ)
-ಕ್ಕರೆ

ಈನ್ತಿಂದು ಬೇಡನ ಚೀಲಕ್ಕಕ್ಕಾ!
ತಿತಳುದ್ಧಾರ ಸದ್ಗುರುವಿಂದಕ್ಕ! (ಮು)
-ಕ್ಕಣ್ಣ ನಿರಂಜನಾದಿತ್ಯಾ ಗುರು ಅಕ್ಕಾ!!!

ಜಿತೇಂದ್ರಿಯ ನಾನೀಗಹುದು! (ಜಾ)

-ತೇಂದ್ರಿಯ ಸ್ತಬ್ದವಾಗಿಹುದು! (ಇಂ)
-ದ್ರಿಯದ ಭವಿಷ್ಯರಿಯದು!
ಮ, ನಿಯಮ, ಸಾಗಿಹುದು!
ನಾಮಜಪವಾಗುತ್ತಿಹುದು!
ನೀನೂ, ನಾನೂ ಒಂದೆಂದಿಹುದು!
ಮನ ಗುರಿಯಲ್ಲಿಹುದು!
ಹುಸಿಯಾಸೆಯಿಲ್ಲದಿಹುದು! (ಇಂ)
-ದು ನಿರಂಜನಾದಿತ್ಯಹುದು!!!

ಆಗ್ಬಾರದ್ದು ಆಗ್ಬೇಕೆಂದ್ರಾದೀತಾ? (ಈ)

-ಗ್ಬಾ ಅಂದ್ರೆ ಸೂರ್ಯೊ

ದಯ ಆದೀತಾ? (ಇ)
-ರದಿದ್ದ್ರೊಂದು ನೇಮ ಜಗತ್ತು ಇದ್ದೀತಾ? (ಕ)
-ದ್ದು ತಿನ್ನುತ್ತಿದ್ದ್ರೆ ಗುದ್ದು ತಪ್ಪೀತಾ?
ಚಾರ ಕೆಟ್ರೆ ಆಚಾರ್ಯಾದೀತಾ? (ಆ)
-ಗ್ಬೇಕಾದದ್ದು ಆಗ್ದಿದ್ದರಾದೀತಾ? (ಬೇ)
-ಕೆಂಬಾತ್ಮಾನಂದ ಬಾರ್ದಿದ್ದ್ರಾದೀತಾ? (ನಿ)
-ದ್ರಾಹಾರ ಬಿಟ್ಟದುಕ್ಲಿಕ್ಕಾದೀತಾ?
ದೀಪವಿಲ್ಲದೆ ಓದ್ಲಿಕ್ಕಾದೀತಾ?
ತಾರೆ ನಿರಂಜನಾದಿತ್ಯಾದೀತಾ???

ಮಾಣಿಕ್ಯದ ಬೆಲೆ ಮಂಗನಿಗೇನ್ಗೊತ್ತು? (ಕಾ)

-ಣಿಕೆಯ ಮಹತ್ತು ಗಣಿಕೆಗೇನ್ಗೊತ್ತು? (ಶ)
-ಕ್ಯವಿಲ್ಲ ತಿಳಿಯಲ್ಬುದ್ಧಿಯ ಕಿಮ್ಮತ್ತು!
ಶೆಂದ್ರಿಯಗಳದ್ದೇ ಈಗ ಕಸ್ರತ್ತು!
ಬೆಕ್ಕೆಗೆಡೆಗೊಟ್ಟು ಕೊಯ್ಯುವರು ಕತ್ತು! (ಹಾ)
-ಲೆರೆದ ಕೈಗಿಕ್ಕುವರ್ವಿಷದ ತುತ್ತು!
ಮಂತ್ರ, ತಂತ್ರವೆಂದು ತಿನ್ನುವರು ಕಿತ್ತು!
ಗನ ಸದೃಶಾದರ್ಶ ಹೋಯ್ತು ಸತ್ತು!
ನಿಷ್ಠೆ, ನೇಮಾನುಷ್ಠಾನಕ್ಕೀಗ ವಿಪತ್ತು!
ಗೇಣಿದಾರನ ಪಾಲಿಗೇ ಭೂಮಿ ಬಿತ್ತು! (ಏ)
-ನ್ಗೊತ್ತು? ಮುಂದಕ್ಕೆ ಬರಲಿರುವಾಪತ್ತು? (ಎ)
-ತ್ತು, ಶ್ರೀ ನಿರಂಜನಾದಿತ್ಯನತ್ತ ಕತ್ತು!!!

ಸೊಕ್ಕಿದ ಸೊಸೆಗೆ ಮಿಕ್ಕಿದ ದೋಸೆ! (ಅ)

-ಕ್ಕಿ, ರಾಗಿ ಬೆರಕೆ ಹಿಟ್ಟಿನ ದೋಸೆ!
ರ್ಪ, ದಂಭದಾಕೆಗೆ ಹರ್ಕು ಹಸೆ!
ಸೊಡರಿಗೆ ನೀರ್ಬೆರೆತೆಣ್ಣೆ ಸೀಸೆ! (ಕಿ)
-ಸೆಯಲ್ಲಿ ಚಲಾವಣೆಯಾಗ್ದ ಪೈಸೆ!
ಗೆಳೆಯರಲ್ಲಿವಳ ಭೋಗದಾಸೆ!
ಮಿತಿ

ಈರಿದಾಗ ಎಲ್ಲ ನಿರಾಸೆ! (ದಿ)
-ಕ್ಕಿಲ್ಲದೆ ಅಲ್ಲಲ್ಲಿ ಅಲೆವ ದೆಸೆ!
ಯೆ ದೇವರದ್ದಾದ್ರೆಲ್ಲಾ ಸೊಗಸೇ!
ದೋಷ ತಿದ್ದಿಕೊಳ್ಳಬೇಕೀಗಾ ಸೊಸೆ! (ಸೊ)
-ಸೆಗಾಗ ನಿರಂಜನಾದಿತ್ಯ ಹಿಸೆ!!!

ನಿನ್ನ ನೆನೆಯದ ಮನ ನಾಯಿ ಸಮಾನ! (ಅ)

-ನ್ನ ನಿನ್ನದು ತಿಂದನ್ಯರ ಮನೇ ಜವಾನ!
ನೆಕ್ಕುವುದೆಲ್ಲರ ಚಪ್ಪಲಿ ಪ್ರತಿ ದಿನ! (ಮ)
-ನೆ ಮನೆ ಸುತ್ತುತ್ತಿರುವುದಾ ಸ್ವಾರ್ಥ ಶ್ವಾನ!
ಜಮಾನನ ಮರೆತದಕ್ಕೆಲ್ಲಿ ಸ್ಥಾನ! (ಕಂ)
-ದಕದ ಮಲ, ಮೂತ್ರದಲ್ಲದಕ್ಕೆ ಸ್ನಾನ!
ಲಗುವುದು ತಿಪ್ಪೆಯಲ್ಲಿ ರಾತ್ರಿ, ದಿನ! (ತ)
-ನಗದೇ ಆನಂದಪ್ರದಾಯಕ ಜೀವನ!
ನಾರುವ ಮಾಂಸವೇ ಅದಕ್ಕೆ ರಸಾಯನ! (ಬಾ)
-ಯಿ ಬಿಟ್ಟು ಬೊಗಳಿದರೆಲ್ಲಾ ಪಲಾಯನ!
ಹವಾಸ ಅದರದ್ದು ಬಲು ಕಠಿಣ!
ಮಾಡ್ಬೇಕದರುದ್ಧಾರಕ್ಕಾಗೀಗ ಬಂಧನ! (ಜ್ಞಾ)
-ನ ನಿರಂಜನಾದಿತ್ಯನಿಂದ ಆಗ ದಾನ!!!

‘ನಿಷ್ಠೆ’ಗೆ ದಷ್ಟ ಪುಷ್ಪನಾಗ್ಬೇಕಾಗಿಲ್ಲ! (ನಿ)

-ಷ್ಠೆ ಮನೋಬಲವಲ್ಲದೆ ಮತ್ತೇನಲ್ಲ! (ಬ)
-ಗೆ ಬಗೆಯಾಸೆಯಿದ್ದರಿದಾಗ್ವುದಿಲ್ಲ!
ರಿದ್ರ, ಶ್ರೀಮಂತ ಭೇದ ಇದಕ್ಕಿಲ್ಲ! (ದು)
-ಷ್ಟರ ಸಂಗ ಇದನ್ನಿರಗೊಡ್ವುದಿಲ್ಲ!
ಪುಷ್ಟಿಯೆಂಬುದು ಸ್ಥೂಲಶರೀರಕ್ಕೆಲ್ಲ! (ಕ)
-ಷ್ಟ, ಸುಖಗಳಿಗಿದಧೀನವಾಗಿಲ್ಲ!
ನಾಳೆಗಾಗಿದಕ್ಕೇನೂ ಯೋಚನೆ ಇಲ್ಲ! (ಆ)
-ಗ್ಬೇಕಾದದ್ದಾಗ್ಬೇಕಾದಾಗಂಜುವುದಿಲ್ಲ!
ಕಾಲನನ್ನೂ ಲಕ್ಷ್ಯಕ್ಕೆ ತರುವುದಿಲ್ಲ!
ಗಿರಿಜಾರಮಣನೇ ಸಾಕ್ಷಿಯಿದಕ್ಕೆಲ್ಲಾ! (ಪು)
-ಲ್ಲ ನಿರಂಜನಾದಿತ್ಯನಂತಿರ್ಬೇಕೆಲ್ಲಾ!!!

ನಿಗ್ರಹಾನುಗ್ರಹ ಶಕ್ತಿಯ ಬಯಕೆ! (ಅ)

-ಗ್ರಸ್ಥಾನ, ಮಾನಕ್ಕೆ ಮಾನವ ಕುಲಕ್ಕೆ! (ದೇ)
-ಹಾನಂದದ ಹೆಬ್ಬಯಕೆಲ್ಲಾ ಜನಕೆ!
ನುಡಿದಂತೆ ನಡೆವ ಬಾಳ್ಬೇಕದಕೆ! (ಉ)
-ಗ್ರ ತಾಪಸೇಶ್ವರನಾಗಬೇಕದಕೆ!
ತ್ತಿಂದ್ರಿಯ ಜಯವಿರಬೇಕದಕೆ! (ಅ)
-ಶನ, ಪಾನ ಶುದ್ಧವಿರಬೇಕದಕೆ! (ಭ)
-ಕ್ತಿ, ಮುಕ್ತಿಯಾಕಾರವಾಗಬೇಕದಕೆ!
ಮನ ಜೈಸುವ ಸ್ಥಿತಿ ಬೇಕದಕೆ!
ಯಲಾಡಂಬರ ಬರೀ ಬೂಟಾಟಿಕೆ! (ಕಾ)
-ಯ ಕಲ್ಪದಿಂದ್ಲೂ ಈಡೇರದೀ ಬಯಕೆ! (ಏ)
-ಕೆ? ನಿರಂಜನಾದಿತ್ಯ ಬಾಯ್ಬಿಡನೇಕೆ???

ಒಂದಿಗಿರಬೇಕು, ನಾ ನಿನ್ನಂದಚಂದ ನೋಡಬೇಕು!

ದಿನ, ರಾತ್ರಿಗಳುರುಳುವುದರಿಯದಿರಬೇಕು!
ಗಿರಿಜಾ, ಶಂಕರರಾಗಿ ವಿಹರಿಸುತ್ತಿರಬೇಕು!
ಜಾ ದಿನಗಳೆಂಬವುಗಳು ಇಲ್ಲದಿರಬೇಕು!
ಬೇಸರದಾಯಕ ಸಂಸಾರವದಾಗದಿರಬೇಕು!
ಕುಹಕು, ಕುಚೋದ್ಯವಾವುದೂ ನಮ್ಮಲ್ಲಿಲ್ಲದಿರ್ಬೇಕು!
ನಾಳೆಯ ಚಿಂತೆ ನಮ್ಮಿಬ್ಬರಲ್ಲೂ ಇಲ್ಲದಿರಬೇಕು!
ನಿನ್ನಲ್ಲೆಂದೂ ನಾನು ವಿಕಲ್ಪವೆಣಿಸದಿರಬೇಕು! (ನ)
-ನ್ನಂತರಂಗ, ಬಹಿರಂಗ ಸ್ವಾಮಿ ನೀನಾಗಿರಬೇಕು!
ರ್ಶನ, ಸ್ಪರ್ಶನಕ್ಕಡ್ಡಿ ನನಗಾಗದಿರಬೇಕು!
ಚಂಚಲ ಸ್ವಭಾವ ನನ್ನದನ್ನು ನೀನಳಿಸಬೇಕು!
ಯೆ ನನ್ನ ಮೇಲೆ ನಿನ್ನದು ಎಂದೆಂದೂ ಇರಬೇಕು!
ನೋವು, ಸಾವಿನ ಚಿಂತೆ ನಮ್ಮಲ್ಲಿ ಇಲ್ಲದಿರಬೇಕು! (ರುಂ)
-ಡಮಾಲೆ ನನಗೆ, ಮುಂಡಮಾಲೆ ನಿನಗಾಗಬೇಕು!
ಬೇರಿನ್ಯಾರ ಸುಖಕ್ಕೂ ನಾವಡ್ಡಿಯಾಗದಿರಬೇಕು! (ಬೇ)
-ಕು, ನಿರಂಜನಾದಿತ್ಯ ಸದಾ ಸಾಕ್ಷಿಯಾಗಿರಬೇಕು!!!

ಅಮೃತ ಕುಡಿದು ಅನೃತ ಆಡ್ಬಹುದೇನಯ್ಯಾ?

ಮೃತ್ಯುಂಜಯ ಶಿಕ್ಷಿಸದೆ ಎಂದಿಗೂ ಬಿಡನಯ್ಯಾ!
ಬ್ಬಲಿಯನ್ನು ತಬ್ಬಿಕೊಳುವುದು ಧರ್ಮವಯ್ಯಾ!
ಕುಚೇಷ್ಟೆ, ಕುಕಲ್ಪನೆ ಕಾರಣ ಪತನಕ್ಕಯ್ಯಾ!
ಡಿಕ್ಕಿ ಹೊಡೆದು ಸತ್ತರೆ ಸದ್ಗತಿಯಿಲ್ಲವಯ್ಯಾ!
ದುರ್ಬುದ್ಧಿ ಬಿಟ್ಟೀಗಲಾದರೂ ಸಜ್ಜನನಾಗಯ್ಯಾ!
ನವರತ ಸದ್ಗುರು ಪಾದಸೇವೆ ಮಾಡಯ್ಯಾ!
ನೃತ್ಯ, ನಾಟಕಾದಿಗಳ ಹುಚ್ಚು ಬಿಟ್ಟುಬಿಡಯ್ಯಾ!
ತ್ವ ಜೀವನದಿಂದ ಪರಮಾತ್ಮನಾಗೀಗಯ್ಯಾ!
ತ್ಮಾನಂದವೊಂದೇ ಶಾಶ್ವತವೆಂದು ತಿಳಿಯಯ್ಯಾ! (ಆ)
-ಡ್ಬಹುದು ಸಾವಿರ, ಒಂದಾದ್ರೂ ಮಾಳ್ಪವರಾರಯ್ಯಾ?
ಹುಡುಗಾಟಕ್ಕೆ ಗುಡುಗಾಟ ನಿಲ್ಲಲಾರದಯ್ಯಾ!
ದೇವರ ದಯೆಯಿಂದಲೇ ಕಷ್ಟ ತಪ್ಪಬೇಕಯ್ಯಾ!
ಯ, ವಿನಯದಿಂದವನ ಪಾರ್ಥನೆ ಮಾಡಯ್ಯಾ! (ಅ)
-ಯ್ಯಾ ನಿರಂಜನಾದಿತ್ಯ ಆಗ ಒಲಿಯುವನಯ್ಯಾ!!!

ನೀನು ಮಲಗಿಸಿದಲ್ಲಿ ಮಗು ಅಳುತ್ತಲಿದೆ! (ತಾ)

-ನು ಎದ್ದು ಬರಲೀಗ ಅಸಹಾಯಕವಾಗಿದೆ! (ಮ)
-ಮತೆಯಿಂದ ನೀನೇ ಎತ್ತಿ ಹಾಲೂಡಬೇಕಾಗಿದೆ! (ಕಾ)
-ಲ ವಿಳಂಬಮಾಡಿದರದು ಸತ್ತೇ ಹೋಗುತ್ತದೆ!
ಗಿರಿರಾಜ ಸುತೆಯಾದ ನಿನಗದು ಗೊತ್ತಿದೆ!
ಸಿಟ್ಟಿದರ ಮೇಲೆ ಮಾಡಲಿಕ್ಕದೇನು ಮಾಡಿದೆ!
ಶೇಂದ್ರಿಯದ ಗೂಡಲ್ಲಿ ಅದನ್ನೇಕಿರಿಸಿದೆ? (ಅ)
-ಲ್ಲಿ ಅದರ ಸ್ವತಂತ್ರವನ್ನು ಅಪಹರಿಸಿದೆ!
ತಿವಂತೆ ನಿನಗದು ಹೇಗೆ ಸರಿಹೋಗಿದೆ?
ಗುರು ಶಿವನೇ ನಿನ್ಗೆ ಸದ್ಬುದ್ಧಿ ಕೊಡ್ಬೇಕಾಗಿದೆ!
ವನಿಗೆ ನಾನೇನು ದೂರು ಹೇಳಬೇಕಾಗಿದೆ? (ಅ)
-ಳುವ ಧ್ವನಿ ಆತನಿಗೂ ಕೇಳುವ ಹಾಗೇ ಇದೆ! (ಚಿ)
-ತ್ತಕ್ಕೆ ತಕ್ಕೊಂಡು ನೀನೇ ಬಂದೆತ್ತಿಕೊಳ್ಬೇಕಾಗಿದೆ! (ಒ)
-ಲಿದು ಹಾಲಿನ ಸ್ಥನ ಚೀಪಿಸಲೇಬೇಕಾಗಿದೆ! (ತಂ)
-ದೆ ನಿರಂಜನಾದಿತ್ಯ ಪರಮೇಶ್ವರೇಚ್ಛೆ ಇದೇ!!!

ಉಣಿಸಿ, ಕುಣಿಸಿ, ದಣಿಸಿತು ಹೆಣ್ಣು! (ಮ)

-ಣಿಸಿ ಗೋಣೂ ಮುರಿಯಿತಾ ಮಾಯೆ ಹೆಣ್ಣು!
ಸಿರಿ ಸಂಪತ್ತಿತ್ತು ಮೆರೆಸಿತಾ ಹೆಣ್ಣು!
ಕುತಂತ್ರದಿಂದ ಬಂಧಿಸಿತು ಆ ಹೆಣ್ಣು! (ಗ)
-ಣಿಕೆಯಾಗಿ ಬಹು ಭೋಗಿಯಾಯ್ತಾ ಹೆಣ್ಣು!
ಸಿಪ್ಪೆಯುಳಿದಾಗಪ್ಪಳಿಸಿತಾ ಹೆಣ್ಣು!
ಶರಥನ ಪ್ರಾಣ ಹೀರಿತಾ ಹೆಣ್ಣು! (ರಾ)
-ಣಿಯಾಗಿ ರಾಜ್ಯಭಾರ ಮಾಡಿತಾ ಹೆಣ್ಣು!
ಸಿಕ್ಕಿಬಿದ್ದಾಗ ಕಕ್ಕಾಬಿಕ್ಕ್ಯಾಯ್ತಾ ಹೆಣ್ಣು!
ತುದಿ ಮೊದಲಿಲ್ಲದ ಆಟದ್ದೀ ಹೆಣ್ಣು!
ಹೆತ್ತು ಜಗತ್ತಿಗೇ ತಾಯಿಯಾಯ್ತೀ ಹೆಣ್ಣು! (ಕ)
-ಣ್ಣುರ್ವಿಗೆ ನಿರಂಜನಾದಿತ್ಯಾಗೀ ಹೆಣ್ಣು!!!

ಹಿಂದು, ಮುಂದು ನೋಡದೆಲ್ಲರ ನಾ ನಂಬಿದೆ!

ದುರ್ವಿಧಿಯಿಂದ ನಾನೀಗ ವಂಚಿತನಾದೆ!
ಮುಂದೇನು ಮಾಡಬೇಕೆಂಬುದರಿಯದಾದೆ!
ದುಸ್ಸಂಗ ಫಲವಿದೆಂದರಿತವನಾದೆ!
ನೋವನ್ನೀಗ ನಾನು ಸಹಿಸದವನಾದೆ! (ಬಿ)
-ಡಬೇಕೆಲ್ಲಾ ಸಂಗವೆಂದು ನಿರ್ಧರಗೈದೆ! (ಕಂ)
-ದೆರೆದೆ ನಾ ನಿನ್ನ ದಯೆಯಿಂದೀಗ ತಂದೇ! (ನಿ)
-ಲ್ಲಲೆನ್ನ ಕಣ್ಣೆದುರು ನಿನ್ನ ಮೂರ್ತಿಯೊಂದೇ! (ಇ)
-ರದಿರಲಿಹದ ಸಂಬಂಧ ಇನ್ನು ಮುಂದೆ!
ನಾನೂ, ನೀನೂ ಸದಾ ಒಂದಾಗಿರ್ಬೇಕು ತಂದೇ!
ನಂಬಿಗೆ ದ್ರೋಹಿಗಳ ಶಿಕ್ಷಿಸು ನೀನಿಂದೇ!
ಬಿಸಿಯಾಗ್ದೇ ಬೆಣ್ಣೆ ಕರಗ್ದಲ್ಲವೇ ತಂದೇ? (ತಂ)
-ದೆ

! ನಿರಂಜನಾದಿತ್ಯತ್ಮನೂ ನೀನೂ ಒಂದೇ!!!

ಬಾಯ್ಗಿಟ್ಟನ್ನ ತಾಯ್ಮುಖಕ್ಕುಗುಳಿತ್ಮಗು! (ತಾ)

-ಯ್ಗಿದ್ರಿಂದದ್ರಮೇಲೆ ಸಿಟ್ಟೇಕೆ ಬಂದೀತು? (ಕ)
-ಟ್ಟ ಕಡೆಗದು ತಿನ್ನಲೇಬೇಕಾದೀತು! (ತ)
-ನ್ನ ಹೊಟ್ಟೆ ತಾಯಿಗಾಗ ತಣ್ಣಗಾದೀತು!
ತಾಯಿಯ ದುಃಖ ಮಗುವೆಂತರಿತೀತು? (ತಾ)
-ಯ್ಮುನಿದ್ರೆ ಮಗುವೆಂತು ಬದುಕಿದ್ದೀತು!
ಗವಾಹ್ನನ ಕೃಪೆಯಿಂದೆಲ್ಲಾದೀತು! (ದಿ)
-ಕ್ಕು ಅವನೇ ಎಂಬನುಭವವಾದೀತು!
ಗುಣ ಸಾಗರಾತನೆಂದರಿವಾದೀತು! (ಬಾ)
-ಳಿನ ಸಾರ್ಥಕತೆಗೆ ದಾರಿಯಾದೀತು! (ಆ)
-ತ್ಮ ಚಿಂತನೆಗಾಗ ಪ್ರಾರಂಭವಾದೀತು!
ಗುರು ನಿರಂಜನಾದಿತ್ಯ ತಾನಾದೀತು!!!

ಹೊಲವ ಮೇದ ಬೇಲಿ ಚಿತೆಗಾಹುತಿ!

ಕ್ಷ್ಯದಲ್ಲಿಟ್ಟಿದ ಬದುಕು ಸಂಗಾತಿ!
ರ ಗುರುವಿನ ಶ್ರೇಷ್ಠ ಪ್ರಸಾದ ವಿಭೂತಿ!
ಮೇಲಿಂದ್ಮೇಲಿದನು ಸೇವಿಸು ಸಂಗಾತಿ!
ಹಿಸುವುದೆಲ್ಲಾ ಪಾತಕ ವಿಭೂತಿ!
ಬೇಕು ಪೂರ್ಣ ವಿಶ್ವಾಸದ್ರಲ್ಲಿ ಸಂಗಾತಿ!
ಲಿಪಿ ಬ್ರಹ್ಮನದ್ದಳಿಸುವುದ್ವಿಭೂತಿ!
ಚಿರಕಾಲ ಆಗು ಶಿವನೇ ಸಂಗಾತಿ!
ತೆಗೆಯುವುದಜ್ಞಾನವನ್ನು ವಿಭೂತಿ!
ಗಾನ ಮಾಡು ಶಿವನ ಸ್ತೋತ್ರ ಸಂಗಾತಿ!
ಹುಸಿ ಮಯೆಗೆ ಬಹು ಭಯಾ ವಿಭೂತಿ! (ಯ)
-ತಿ ನಿರಂಜನಾದಿತ್ಯ ಶಿವ ಸಂಗಾತಿ!!!

ಮುರ್ಕಾದ್ರೇನು, ಹರ್ಕಾದ್ರೇನು ಪ್ರಸಾದ? (ಸ)

-ರ್ಕಾರದಾಜ್ಞೆಯೊಳಗಿಲ್ಲ ಪ್ರಸಾದ! (ಉ)
-ದ್ರೇಕ, ಉದ್ವೇಗದ್ದೇನಲ್ಲ ಪ್ರಸಾದ! (ಅ)
-ನುಕಂಪಾನುಗ್ರಹಾತ್ಮಕ ಪ್ರಸಾದ!
ಠಕ್ಕೆ ಸಿಕ್ಕಲಾರದು ಪ್ರಸಾದ! (ಮಾ)
-ರ್ಕಾಣ್ಣೀಯನಿಗೆ ಸಿಕ್ಕಿತು ಪ್ರಸಾದ! (ಉ)
-ದ್ರೇಕಿ ಯಮನ ಸೋಲ್ಸಿತಾ ಪ್ರಸಾದ! (ಮ)
-ನುಷ್ಯನಿಗಗತ್ಯ ಇಂಥಾ ಪ್ರಸಾದ!
ಪ್ರಜಾಪ್ರಭುತ್ವಕ್ಕೆ ಬೇಕೀ ಪ್ರಸಾದ!
ಸಾಧಕಗೆ ಸಿಕ್ಕುವುದೀ ಪ್ರಸಾದ! (ಕಂ)
-ದ ನಿರಂಜನಾದಿತ್ಯಗೀ ಪ್ರಸಾದ!!!

ತಪ್ಪೇಕನ್ಯರ ಮೇಲೆ ಹೇರುವೆ? (ಸಿ)

-ಪ್ಪೇಕ್ತೆಗೆಯದೇ ತಿನ್ನುತ್ತಿರುವೆ!
ರ್ತವ್ಯ ಭ್ರಷ್ಟ ನೀನಾಗಿರುವೆ! (ಧ)
-ನ್ಯಳಾದಳು ಶಿವನಿಂದ ಶಿವೆ!
ಘುಪತಿಯ ಪ್ರಾಣಾ ಮಂತ್ರವೇ!!
ಮೇಲನೆಸಗುವ ಮಂತ್ರದುವೇ! (ತ)
-ಲೆ ಶೂಲೆ ನಿವಾರಕಾ ಜಪವೇ!
ಹೇಳಿದ್ದನ್ನು ಮಾಡ್ಬೇಕು ಮಗುವೇ! (ಗು)
-ರು ಶಿವಗಾಗ್ಬೇಕೆಲ್ಲರ ಸೇವೆ! (ಶಿ)
-ವೆ, ನಿರಂಜನಾದಿತ್ಯಾನುಭವೆ!!!

ಪ್ರಸಾದದಲ್ಲತೃಪ್ತಿ ಬೇಡಮ್ಮಾ!

ಸಾರೂಪ್ಯಕ್ಕಿದು ಬೇಕೇ ಬೇಕಮ್ಮಾ!
ರ್ಶನ ಮಾತ್ರವೇ ಸಾಲದಮ್ಮಾ!
ತ್ತನಿತ್ತ ತುತ್ತನ್ನುಣ್ಬೇಕಮ್ಮಾ! (ಚೆ)
-ಲ್ಲಬಾರದಿದನ್ನು ತಿಪ್ಪೆಗಮ್ಮಾ! (ಮಾ)
-ತೃ ಸ್ವರೂಪಿ ಗುರು ದತ್ತನಮ್ಮಾ! (ಜ್ಞ)
-ಪ್ತಿಯಲ್ಲಿಟ್ಟುಕೊಂಡಿರಿದನ್ನಮ್ಮಾ!
ಬೇಕಿವನ ಸ್ಮರಣೆ ನಿತ್ಯಮ್ಮಾ! (ಪುಂ)
-ಡರಿಗಿವ ಮಾರ್ತಾಂಡ ಕಾಣಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯವನಮ್ಮಾ!!!

ಅಮೃತ ಕುಡಿಸುವಾ ತಾಯಿ ಬೇಕು!

ಮೃತ್ಯುಗೀವವಳೇಕೆ ಬೇಕು?
ನ್ನ ತಾ ತಿಳಿವಂತಾಗ್ಬೇಕು!
ಕುಲ, ಗೋತ್ರದಾಟ ಬಿಡ್ಬೇಕು! (ದು)
-ಡಿಮೆ ಫಲ ಕಾಣಲೇ ಬೇಕು!
ಸುಖ ಸ್ಥಿರವಾಗಿರಬೇಕು!
ವಾಸುದೇವ ತಾನಾಗಬೇಕು!
ತಾಯ್ೀತೆಯೆಂದರಿಯಬೇಕು! (ಬಾ)
-ಯಿ ಸದಾ ತೆರೆದಿರಬೇಕು!
ಬೇರಿನ್ನೇನೂ ಬೇಡೆನಬೇಕು! (ಬೇ)
-ಕು, ನಿರಂಜನಾದಿತ್ಯಾಗ್ಬೇಕು!!!

ಇಪ್ಪತ್ತೊಂದರ ಬಲ ಎಪ್ಪತ್ತೊಂದಕ್ಕಿಲ್ಲ! (ಒ)

-ಪ್ಪದಿದ್ದರೆ ಈ ಮಾತಿಗೆ ಆಗುವುದಿಲ್ಲ! (ಇ)
-ತ್ತೊಂದುಕಾಲ ಬಲದ ಪ್ರದರ್ಶನಕ್ಕೆಲ್ಲ!
ಣಿದ ಶರೀರಕ್ಕೀಗ ಆ ಬಲವಿಲ್ಲ! (ಕ)
-ರಗಿತದು ಪ್ರಕೃತಿ ಧರ್ಮದಂತೀಗೆಲ್ಲ!
ಲಾಬಲವೆಂಬುದು ಸ್ಥೂಲ ದೇಹಕ್ಕೆಲ್ಲ!
ಕ್ಷ್ಯದಲ್ಲಿಟ್ಟಿದ ದೇಹ ಮೋಹ ಬಿಡ್ರೆಲ್ಲ!
ಲ್ಲಾ ಕಾಲ ಆತ್ಮನಲ್ಲಿ ವ್ಯತ್ಯಾಸವಿಲ್ಲ! (ತ)
-ಪ್ಪದೇ ಸದಾ ಮಾಡ್ಬೇಕಾತ್ಮ ಚಿಂತನೆಯೆಲ್ಲ! (ಮ)
-ತ್ತೊಂದು ಬಾರಿ ಹುಟ್ಟಲೇಬಾರದು ನಾವೆಲ್ಲ!
ತ್ತ ಸಾಯುಜ್ಯ ಪಡೆಯಬೇಕು ನಾವೆಲ್ಲ! (ಹ)
-ಕ್ಕಿರುವುದು ಅದಕ್ಕೆ ನಮ, ನಿಮಗೆಲ್ಲಾ! (ಪು)
-ಲ್ಲ ನಿರಂಜನಾದಿತ್ಯನ ಮಾತು ಸುಳ್ಳಲ್ಲ!!!

ದೇವರ ಲೀಲೆ ಜೀವರಿಗೆ ಶೂಲೆ! (ಭ)

-ವಸಾಗರದಲ್ಲಿದೆ ಭೀಕರಲೆ! (ನ)
-ರರೊದ್ದಾಡ್ವರೇಳಲಾರದೆ ಮೇಲೆ! (ತೇ)
-ಲೀಚೆ ಬರಲ್ಪ್ರಕೃತಿ ಪ್ರತಿಕೂಲೆ! (ಕೊ)
-ಲೆಗಣಿಯಾಗಿದೆ ಯಮನ ಬಲೆ!
ಜೀವರಿಗೀಗಿಲ್ಲ ಅವರ ನೆಲೆ! (ಅ)
-ವರುದ್ಧಾರಕ್ಕೆ ಸಮಯ ಈಗಲೇ! (ಹ)
-ರಿ ಚಿತ್ತಕ್ಕೂ ಬಂದಿಹುದದಾಗಲೇ!
ಗೆಳೆಯನನ್ನು ಸ್ವಾಗತಿಸೀಗಲೇ!
ಶೂಲಪಾಣಿಯಿಂದ ಶಮನ ಶೂಲೆ! (ಲೀ)
-ಲೆ ನಿರಂಜನಾದಿತ್ಯಾನಂದ ಲೋಲೆ!!!

ಯಾರ್ಯಾರನ್ನು ಪೂಜಿಸಿದ್ರೂ ನನ್ನ ಪೂಜೆ!

(ಕಾ)-ರ್ಯಾರ್ಥಿಯಿಷ್ಟಕ್ಕೊಪ್ಪುವ ರೂಪದ ಪೂಜೆ!
ಹೀಮ್ರಾಮೇಸುಗಳಿಗೂ ಆಗ್ಲಿ ಪೂಜೆ! (ತ)
-ನ್ನುದ್ಧಾರಕ್ಕಾಗಿ ಮಾಡ್ಬೇಕು ನಿತ್ಯ ಪೂಜೆ!
ಪೂಜ್ಯ ತಾನಾಗ್ವ ವರೆಗೂ ಆಗ್ಬೇಕ್ಪೂಜೆ! (ತ್ಯ)
-ಜಿಸಿದ್ರೆ ಭೇದ ಭಾವ ಸಾರ್ಥಕ ಪೂಜೆ! (ಸಾ)
-ಸಿರನಾಮದೊಬ್ಬನಿಗೆ ಎಲ್ಲಾ ಪೂಜೆ! (ತ)
-ದ್ರೂಪ ಸಿದ್ಧಿಗೆ ಪರಿಪರಿಯ ಪೂಜೆ!
ನ್ನ ನಿನ್ನದೆಂಬ್ದು ಹೋಗ್ದಿದ್ರೇಕಾ ಪೂಜೆ! (ಅ)
-ನ್ನ, ಬಟ್ಟೆಗಾಗಿ ಮಾಡುವುದ್ಕೀಳ್ಪೂಜೆ!
ಪೂಜಿಸ್ಕೊಳ್ಬೇಕೆಂಬವಗಾಗ್ದಿರ್ಲಿ ಪೂಜೆ! (ಪೂ)
-ಜೆ, ನಿರಂಜನಾದಿತ್ಯನದ್ದಾತ್ಮ ಪೂಜೆ!!!

ಊಹಾಪೋಹಕ್ಕಾಸೆ ಕಾರಣ!

ಹಾಳಾಯ್ತದರಿಂದ ಸದ್ಗುಣ!
ಪೋಲಾಯ್ತು ಇದರಿಂದ ಹಣ!
ಗಲಿರುಳು ಹಗರಣ! (ತಿ)
-ಕ್ಕಾಟದ್ದೆಲ್ಲೆಲ್ಲೂ ಪ್ರಕರಣ!
ಸೆರೆಮನೆಗವ್ರ ದಿಬ್ಬಣ!
ಕಾರ್ಯೋನ್ಮುಖನಾಗ್ಬೇಕ್ತರುಣ! (ಪ)
ಮಾರ್ಥಿ ನರನುರು ಜಾಣ! (ಜಾ)
-ಣ, ನಿರಂಜನಾದಿತ್ಯ ರಾಣ!!!

ಬಳಸಿಕೊಂಡಂತೆ ಭಗವಂತ! (ಕೆ)

-ಳಗೆ, ಮೇಲೆ, ಹೊರಗೊಳಗಾತ!
ಸಿಕ್ಕಲಾರ ಯಾರ ಕೈಗೂ ಆತ!
ಕೊಂಬು, ಕಹಳೆ ಕೇಳಿ ಬಾರಾತ!
ಡಂಗು ಬಡಿಪಾಟದಲ್ಲಿಲ್ಲಾತ!
ತೆಗಳಿದ್ರೂ ಕುಪಿತನಾಗಾತ!
ಕ್ತಿ ಭಾವಕ್ಕೆ ಅಧೀನ ಆತ!
ರ್ವಿ

ಕಣ್ಣುಗಳಿಗೆ ಕಾಣಾತ!
ವಂದನೆ, ನಿಂದನೆಗಲಕ್ಷ್ಯಾತ! (ಆ)
-ತ ನಿರಂಜನಾದಿತ್ಯ ಅನಂತ!!!

ಜಗತ್ಪತಿಯೂ ಜಗತ್ತನ್ನೊಪ್ಪಿಸ್ಲಾರ!

ತಿ, ಮತಿ, ದಾತಾರ ಹಂಗಲ್ಲೂ ಇರ! (ಸ)
-ತ್ಪಥ ಬಿಟ್ಟು ಅವನಾವಾಗಲೂ ಸಾರ!
ತಿಕ್ಕಾಟ ತೀಟೆ ವ್ಯಾಜ್ಯಕ್ಕೆ ಆತ ಬಾರ! (ಸಾ)
-ಯೂಜ್ಯ ಅವನದತ್ಯಂತ ಸುಖಕರ!
ನನ, ಮರಣಕ್ಕವನು ವಿದೂರ!
ಗನ ಸದೃಶ ಅವನ ಆಕಾರ! (ದ)
-ತ್ತ ಗುರುವಾಗಿವನಾದರ್ಶಾವತಾರ! (ತ)
-ನ್ನೊಲಿಮೆಯಿಂದೆಲ್ಲಾ ಲೋಕಗಳುದ್ಧಾರ! (ತ)
-ಪ್ಪಿ ನಡೆವವರಿಗಿವನ ಧಿಕ್ಕಾರ! (ಈ)
-ಸ್ಲಾರದ ಸಂಸಾರಕ್ಕೆ ತಾರಕಾಕಾರ! (ವ)
-ರ ನಿರಂಜನಾದಿತ್ಯ ದತ್ತನಾಕಾರ!!!

ಸಂಕಲ್ಪದಲ್ಲೇ ಸಂದಿತಾಯುಷ್ಯ!

ಳವಳದಿಂದಿಹನು ಶಿಷ್ಯ! (ಕ)
-ಲ್ಪನೆಗೆ ತಕ್ಕಂತೆ ಸೂತ್ರ ಭಾಷ್ಯ!
ರ್ಶನಾನುಗ್ರಹಕ್ಕೆ ಭವಿಷ್ಯ! (ಗು)
-ಲ್ಲೇನೆಬ್ಬಿಸಿದರೇನು ಮನುಷ್ಯ!
ಸಂಶಯ ಪಿಶಾಚಿಗವ ವಶ್ಯ!
ದಿವ್ಯ ಜೀವನಕ್ಕಾತ ಅದೃಶ್ಯ!
ತಾನೇ ತಾನಾದಾಗಿಲ್ಲ ದೃಕ್ದೃಶ್ಯ!
ಯುಗಗಳೆಲ್ಲಾ ಆಗ ಅಲಕ್ಷ್ಯ! (ಶಿ)
-ಷ್ಯಗೆ ನಿರಂಜನಾದಿತ್ಯ ಲಕ್ಷ್ಯ!!!

ಸರ್ವ ಕಲ್ಯಾಣ ಸರ್ವರಿಂದ! (ಸ)

-ರ್ವರೊಳಗವ್ನಿರುವುದ್ರಿಂದ! (ತ್ರಿ)
ರಣ ಶುದ್ಧವಾಗ್ಲಾದ್ರಿಂದ! (ಕ)
-ಲ್ಯಾಣಿಯಂತಾಗುವುದದ್ರಿಂದ! (ಗ)
-ಣರಾಜ್ಯಕ್ಕೆ ಸುಖ ಅದ್ರಿಂದ!
ರ್ವರಾನಂದ ಶಿವಾನಂದ! (ಗ)
-ರ್ವದಿಂದಹುದು ಭವಬಂಧ! (ಯಾ)
-ರಿಂದ ಯಾರಿಗೆ ಏನಾನಂದ? (ಕಂ)
-ದ ನಿರಂಜನಾದಿತ್ಯಾನಂದ!!!

ದುಡ್ಡಿದ್ದ್ರೆ ಬೇಡ್ದಿದ್ದದ್ದೂ ಬೇಕು! (ದ)

-ಡ್ಡಿರ್ದಿದ್ರೆ ಬೇಕಾದದ್ದೂ ಸಾಕು! (ಎ)
-ದ್ದ್ರೆ, ಬಿದ್ದ್ರೆ, ಸದ್ದಿಲ್ಲದಿರ್ಬೇಕು!
ಬೇರಾರನ್ನೂ ದೂರದಿರ್ಬೇಕು! (ಮಾ)
-ಡ್ದಿದ್ದದ್ದು ಮಾಡ್ದೆನದಿರ್ಬೇಕು! (ಇ)
-ದ್ದದ್ರಲ್ಲಿ ತೃಪ್ತನಾಗಿರ್ಬೇಕು! (ಇ)
-ದ್ದೂ ಇಲ್ಲದಂತೆ ಬದುಕ್ಬೇಕು!
ಬೇಲಿ ತೋಟಕ್ಕೆ ಬೇಕೇಬೇಕು! (ಬೇ)
-ಕು ನಿರಂಜನಾದಿತ್ಯಾಗ್ಬೇಕು!!!

ಯಾವ ಪಕ್ಷಕ್ಕೆ ನಾನು ಸೇರ್ಲಪ್ಪಾ?

ಸ್ತ್ರಾನ್ನ ಕೊಟ್ಟವ್ನನ್ನು ಸೇರಪ್ಪಾ!
ಡ್ಬೇಡ ಸಂದೇಹ ಅವ್ನಲ್ಲಪ್ಪಾ!
ಕ್ಷಮಿಸುವನು ನಿನ್ನ ತಪ್ಪಪ್ಪಾ! (ಬೆ)
-ಕ್ಕೆಯಿಂದ ಸ್ಥಾನ, ಮಾನ ನಾಶಪ್ಪಾ!
ನಾಮಸ್ಮರಣೆ ಸದಾ ಮಾಡಪ್ಪಾ!
ನುಡಿದಂತೆ ನಡೆಯಬೇಕಪ್ಪಾ!
ಸೇರ್ಲಿಕ್ಕವ್ನನ್ನಿದು ದಾರಿಯಪ್ಪಾ! (ಇ)
-ರ್ಲವನಲ್ಲಚಲ ಭಕ್ತಿಯಪ್ಪಾ! (ಅ)
-ಪ್ಪಾ ನಿರಂಜನಾದಿತ್ಯ ಅವ್ನಪ್ಪಾ!!!

ಜಗತ್ತನ್ನು ಮರೆತಿರುವುದೆಂದ್ರೇನು? (ಭ)

-ಗವದ್ಧ್ಯಾನಾಸಕ್ತನಾಗ್ವುದೆಂಬೆ ನಾನು! (ಚಿ)
-ತ್ತವೃತ್ತಿ ನಿರೋಧಿಸುವುದೆಂಬೆ ನಾನು! (ತ)
-ನ್ನುದ್ಧಾರಕ್ಕೆಳಸುವುದೆಂಬೆನು ನಾನು!
ದೋನ್ಮತ್ತನಾಗದಿರ್ಪುದೆಂಬೆ ನಾನು! (ನೀ)
-ರೆಯರ ಸಂಗ ಬಿಡುವುದೆಂಬೆ ನಾನು!
ತಿತಿಕ್ಷೆ ವೈರಾಗ್ಯವಿರ್ಪುದೆಂಬೆ ನಾನು! (ಆ)
-ರು ವೈರಿಗಳ ಜೈಸುವುದೆಂಬೆ ನಾನು! (ಹಾ)
-ವು, ಹಗ್ಗ, ಭ್ರಾಂತಿ ತಪ್ಪುವುದೆಂಬೆ ನಾನು! (ತಂ)
-ದೆಂಬವನನ್ನರಿತಿರ್ಪುದೆಂಬೆ ನಾನು! (ಉ)
-ದ್ರೇಕೋದ್ವೇಗವಿಲ್ಲದಿರ್ಪುದೆಂಬೆ ನಾನು! (ತ)
-ನು, ನಿರಂಜನಾದಿತ್ಯನಲ್ಲೆಂಬೆ ನಾನು!!!

ವಿವೇಕ ವಿಚಾರಾಚಾರದಿಂದಾರೂಪ್ಯ!

ವೇಷ, ಭೂಷಣ ತಕ್ಕಂತಿದ್ದರಾರೂಪ್ಯ!
ರಣತ್ರಯ ಶುದ್ಧವಾದಾಗಾರೂಪ್ಯ!
ವಿಶ್ವಾಸ ತನ್ನಲ್ಲಿ ತನಗಿದ್ದ್ರಾರೂಪ್ಯ!
ಚಾಪಲ್ಯಾತೀತ ಮನಸ್ಸಿನಿಂದಾರೂಪ್ಯ!
ರಾಗ, ದ್ವೇಷ, ವರ್ಜಿತವಾದಾಗಾರೂಪ್ಯ!
ಚಾತುರ್ವರ್ಣಾಶ್ರಮಕ್ಕೆ ಆಧಾರಾರೂಪ್ಯ!
ಹಸ್ಯವಿದಭ್ಯಾಸವಾದಾಗಾರೂಪ್ಯ! (ಅಂ)
-ದಿಂದೆಂದೆಂದಿಗೂ ಅಚ್ಚಳಿಯದ್ದಾರೂಪ್ಯ!
ದಾಶರಥಿ, ಪಾರ್ಥಸಾರಥಿ ಸಾರೂಪ್ಯ!
ರೂಪ, ನಾಮ, ಗುಣ, ಭೇದಕ್ಕಾಗ್ದಾರೂಪ್ಯ! (ಗೋ)
-ಪ್ಯ, ನಿರಂಜನಾದಿತ್ಯ ದತ್ತ ಸಾರೂಪ್ಯ!!!

ವೇಷ ಸುಡು, ಆಸೆ ಬಿಡು, ಸುಖ ಪಡು!

ಡ್ವೈರಿಗಳನ್ನೆಲ್ಲಾ ನಿಗ್ರಹ ಮಾಡು!
ಸುಗುಣಾವಳಿಯಳಿಗಾಶ್ರಯ ಕೊಡು! (ತು)
-ಡುಗ ತುಂಟಾದಿಗಳೊಡನಾಟ ಬಿಡು!
ತ್ಮ ಧ್ಯಾನ ಎಲ್ಲಾ ವೇಳೆಯಲ್ಲೂ ಮಾಡು!
ಸೆರೆ, ಸೇಂದಿ ಕುಡಿಯುವಭ್ಯಾಸ ಬಿಡು!
ಬಿಡುಗಡೆ ಸಂಸಾರದಿಂದಾಗಿಬಿಡು! (ಮಾ)
-ಡು, ಹರಿಭಜನೆ ಪ್ರತಿದಿನ ಮಾಡು!
ಸುಧಾಮ ಪ್ರಿಯನ ಗೀತಾಭ್ಯಾಸ ಮಾಡು!
ರ, ದೂಷಣಾರಿಯ ಸ್ಮರಣೆ ಮಾಡು!
ರಮಾತ್ಮನನ್ನು ನಿನ್ನಲ್ಲಿಯೇ ನೋಡು! (ನೋ)
-ಡು, ನಿರಂಜನಾದಿತ್ಯನನ್ನೊಡಗೂಡು!!!

ದೇವರನ್ನನಾದರಿಸಬೇಡ! (ಅ)

-ವನನ್ನಿನ್ನೆಲ್ಲೂ ಹುಡುಕಬೇಡ! (ಹೊ)
-ರಗೊಳಗವನ ಕಾಣ್ದಿರ್ಬೇಡ! (ನಿ)
-ನ್ನಲ್ಲಿಹನನ್ನು ನೋಡದಿರ್ಬೇಡ!
ನಾನು, ನೀನೆಂದೊದ್ದಾಡಿ ಸಾಯ್ಬೇಡ!
ರ್ಶನವಾಗ್ದೇ ಏನೂ ಹೇಳ್ಬೇಡ!
ರಿಸ್ಯುಕ್ತ್ಯೆಂಬಂಧ ವಿಶ್ವಾಸ ಬೇಡ!
ತ್ಯಾನ್ವೇಷಣೆ ಮಾಡದಿರ್ಬೇಡ!
ಬೇಟೆ ಮೃಗ ಸಿಗ್ದೆ ಮರಳ್ಬೇಡ! (ಮೃ)
-ಡ, ನಿರಂಜನಾದಿತ್ಯ ಹಿಂದೋಡ!!!

ಆಸೆಗಳಿಲ್ಲದ್ದು ವಿಮಲ!

ಸೆಜ್ಜೆವನೆಯೊಲ್ಲದ್ವಿಮಲ!
ಗರ್ವಾತೀತವಾದದ್ದ್ವಿಮಲ! (ನಾ)
-ಳಿನ ಚಿಂತೆಯಿಲ್ಲದ್ದ್ವಿಮಲ! (ನ)
-ಲ್ಲ, ನಲ್ಲೆ ಭೇದೊಲ್ಲದ್ದ್ವಿಮಲ! (ಇ)
-ದ್ದು ಇಲ್ಲದಂತಿದ್ದದ್ವಿಮಲಅ!
ವಿಕಲ್ಪ ಅಳಿದದ್ದ್ವಿಮಲ!
ಮಹಾ ವಾಕ್ಯ ಲಕ್ಷ್ಯದ್ದ್ವಿಮಲ! (ಬಾ)
-ನಿರಂಜನಾದಿತ್ಯಮಾಲ!!

ಇಂದ್ರಿಯಗಳದ್ದು ಸಹಕಾರ ಸಂಘ! (ನಿ)

-ದ್ರಿಸುವಾಗಲೂ ಸಹಕಾರ ಆ ಸಂಘ!
ಶಸ್ಸು ಸಹಕಾರವಿಲ್ದಿದ್ರೆ ಭಂಗ!
ಣಗಳಿವರ ನಾಯಕಂತರಂಗ! (ಬಾ)
-ಳಬೇಕಾದ್ರಿವಕ್ಕೆ ಬೇಕದರ ಸಂಗ! (ಗೆ)
-ದ್ದು ಇವುಗಳನ್ನು ಅದಾಗ್ವುದು ರಂಗ!
ರ್ವ ನಾಮ, ಸರ್ವ ರೂಪ ಶ್ರೀ ಸಾರಂಗ!
ರಿ ಇವನಿಗೆ ಹಾಸಿಗೆ ಭುಜಂಗ!
ಕಾಲನಿವನಿಂದ ನಿರ್ನಾಮ ಅನಂಗ!
ಘುವೀರನಿಂದ ಶಿವ ರಾಮಲಿಂಗ!
ಸಂಸಾರಾಬ್ಧಿ ತಾರಕ ಆ ಪಾಂಡುರಂಗ! (ಸಂ)
-ಘ, ನಿರಂಜನಾದಿತ್ಯನದ್ದು ನಿಸ್ಸಂಘ!!!

ಎಲ್ಲ ಹಸುವಿನಂತಲ್ಲ ಕಾಮಧೇನು! (ಎ)

-ಲ್ಲಾ ಕಲ್ಲಿನಂತಲ್ಲ ತಿಮ್ಮಪ್ಪೆಂಬವನು!
ಣವಂತ ಗುಣವಂತನೂ ಆಗನು!
ಸುಕೃತಶಾಲಿಯಾಗಿರ್ಬೇಕ್ಮಾನವನು!
ವಿವೇಕ, ವಿಚಾರಾತ್ಮನಾಗ್ಬೇಕವನು!
ನಂಬಿಕೆ ದ್ರೋಹಿಯಾಗಬಾರದವನು!
ನ್ನ ತಾನು ತಿಳಿದಿರಬೇಕವನು! (ತ)
-ಲ್ಲಣಗೊಂಡು ಅಧೀರನಾಗಾಗವನು!
ಕಾಮಹರಶಿವನೇತಾನಾಗುವನು!
ನಸ್ಸು ಪಾರ್ವತಿಯೆಂದರಿಯುವನು! (ವಿ)
-ಧೇಯಳಾದವಳಲ್ಲೈಕ್ಯಗೊಳ್ಳುವನು! (ತಾ)
-ನು ನಿರಂಜನಾದಿತ್ಯಾನಂದಾಗುವನು!!!

ಹುಟ್ಟಿಸಿದವನಿಟ್ಟಂತಿರಬೇಕು! (ಸಿ)

-ಟ್ಟಿಗೆದ್ದು, ಬಿದ್ದೊದ್ದಾಡದಿರಬೇಕು!
ಸಿಹಿ, ಕಹಿ ಏನ್ಕೊಟ್ರೂ ತಿನ್ನಬೇಕು!
ಡ್ದನಾದ್ರೂ, ಹೆಡ್ಡನಾದ್ರೂ ಇರ್ಬೇಕು!
ನವಾಸಕ್ಕಟ್ಟಿದ್ರೂ ಹೋಗಬೇಕು!
ನಿತ್ಯಾನಂದವಿತ್ತ್ರೂ ಆನಂದಿಸ್ಬೇಕು! (ಉ)
-ಟ್ಟಂಬರ ಬಿಚ್ಚಿಹಾಕೆಂದ್ರೆ ಬಿಚ್ಚೇಕು!
ತಿರುಪತೀಶನಾಗೆಂದ್ರೆ ಆಗ್ಬೇಕು!
ತ್ನಾಭರಣತೊಡೆಂದ್ರೆತೊಡ್ಬೇಕು!
ಬೇಡಯಾವುದೂಅಂದ್ರೆ ಬಿಸಾಡ್ಬೇಕು! (ಭ)
-ಕುತಿ ನಿರಂಜನಾದಿತ್ಯ ಕೊಡ್ಬೇಕು!!!

ಸ್ಥೂಲ, ಸೂಕ್ಷ್ಮಗಳೆಲ್ಲಾನ್ನ, ಪಾನದಿಂದ!

ಯ ಮನಸ್ಸು ಮುಕ್ತ ಸಂಸಾರದಿಂದ!
ಸೂಕ್ತಾಹಾರ, ವಿಹಾರವಿರ್ಬೇಕಾದ್ದ್ರಿಂದ! (ಲ)
-ಕ್ಷಣ ಇಂದ್ರಜಿತ್ತುವನ್ನು ಹೇಗೆ ಕೊಂದ! (ಹ)
-ಗಲಿರಳು ನಿದ್ರಾಹಾರ ಬಿಟ್ಟು ಕೊಂದ! (ಇ)
-ಳೆಯ ಭಾರವಿಳುಹಬೇಕಾದ್ದರಿಂದ! (ಅ)
-ಲ್ಲಾಡದ ನಿಶ್ಚಲ ಮನಸ್ಸಿದ್ದದ್ದ್ರಿಂದ! (ತ)
-ನ್ನ ಕರ್ತವ್ಯ ನಿಷ್ಠೆ ಸದಾ ಇದ್ದದ್ದ್ರಿಂದ!
ಪಾವನ ಶ್ರೀರಾಮ ಪಾದ ಸೇವೆಯಿಂದ!
ಶ್ವರದಾಶಾಪಾಶ ನಾಶವಿದ್ರಿಂದ! (ಅಂ)
-ದಿಂದೆಂದೆಂದಿಗೂ ಇದರಿಂದಾತ್ಮಾನಂದ!
ತ್ತಾತ್ರೇಯ ನಿರಂಜನಾದಿತ್ಯಾನಂದ!!!

ಕಾರಣವರಿತು ಕಷ್ಟ, ನಷ್ಟದಿಂದೆದ್ದೇಳು!

ಸ ವಿರಸವಾಗದಂತೆಚ್ಚರದಿಂದೇಳು! (ಗ)
-ಣಪತಿಯಿಂದ ಸದಾ ಸದ್ಗುಣವನ್ನೇ ಕೇಳು!
ರಗುರುವಿನಾಜ್ಞಾಧಾರಕನಾಗಿ ಬಾಳು! (ಪ)
-ರಿ ಪರಿಯಾಸೆಗಳಿಗೊಳಗಾದರೆ ಗೋಳು!
ತುರಿಯಾತೀತಾತ್ಮನಾಗಿ ನೀನೀಗ ಅರಳು!
ಲಿಮಲ ತೊಳೆಯದಿದ್ದರೆ ನೀನ್ಮರುಳು! (ದು)
-ಷ್ಟ ಸಹವಾಸದಿಂದ ಬಲು ದೂರ ತೆರಳು!
ವ ನಾಗರಿಕತೆಯಲ್ಲೇನಿದೆ ತಿರುಳು? (ಶಿ)
-ಷ್ಟ ಸಂಪ್ರದಾಯವೆಂಬುದೀಗ ಕಾಲಿನ ಧೂಳು!
ದಿಂಡಾಗಿ ಬೆಳೆದ ಮೂತ್ರಕ್ಕಾಗನವನಾಳು! (ತಂ)
-ದೆ, ತಾಯಿ ದೇವರೆಂದು ಧೈಯದಿಂದೀಗ ಹೇಳು! (ಇ)
-ದ್ದೇನವನಿಗಾಗಿ ಎಂದು ತಿನ್ನತ್ತಿರು ಕೂಳು! (ಏ)
-ಳು ನಿರಂಜನಾದಿತ್ಯನಾಗಿ ನೀನೀಗೆದ್ದೇಳು!!!

ಗೀತೆಗೆ ಪ್ರೀತಿ ವೆಂಕಟೇಶಮ್ಮಾ! (ಜೊ)

-ತೆ ಬಿಟ್ಟಿರಲಾರರವರಮ್ಮಾ!
ಗೆದ್ದಾಗ, ಸೋತಾಗ ಒಟ್ಟಿಗಮ್ಮಾ!
ಪ್ರೀತಿಬ್ಬರದ್ದೂ ಪರಿಶುದ್ಧಮ್ಮಾ!
ತಿನ್ನುವುದೊಂದೇ ತಟ್ಟೆಯಲ್ಲಮ್ಮಾ! (ಸಾ)
-ವೆಂಬನೋವು ಅವರಿಗಿಲ್ಲಮ್ಮಾ!
ರುಣಾ ಹೃದಯರವರಮ್ಮಾ! (ಪೇ)
-ಟೆ ಬೀದಿ ಸುತ್ತುವುದಿಲ್ಲವ್ರಮ್ಮಾ!
ರಣರವರ್ಗುರುವಿಗಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾನಂದಮ್ಮಾ!!!

ಯಾವಾಗೇನುಬೇಕೋ ಅದು ಸಿಕ್ಕುತ್ತಿದೆ!

ವಾದ ವ್ಯರ್ಥವೆಂದರಿಯಬೇಕಾಗಿದೆ!
ಗೇಲಿ ಯಾರನ್ನೂ ಮಾಡದಿರ್ಬೇಕಾಗಿದೆ!
ನುರಿತ ಅನುಭವಿಯಾಗ್ಬೇಕಾಗಿದೆ!
ಬೇಡಿ ಯಾರನ್ನೂ ಕಾಡಬಾರದಾಗಿದೆ!
ಕೋಪ ತಾಪಕ್ಕೆಡೆಗೊಡ್ಬಾರದಾಗಿದೆ!
ನವರತಾತ್ಮ ಧ್ಯಾನ ಬೇಕಾಗಿದೆ!
ದುಶ್ಚಟಗಳನ್ನೆಲ್ಲಾ ಬಿಡ್ಬೇಕಾಗಿದೆ!
ಸಿದ್ಧಿ, ರಿದ್ಧಿಗಾಶಿಸಬಾರದಾಗಿದೆ! (ಠ)
-ಕ್ಕು, ಮೋಸ ಯಾರಿಗೂ ಮಾಡ್ಬಾರದಾಗಿದೆ! (ಹ)
-ತ್ತಿ ಕೈಲಾಸವಾಸಿಯಾಗಬೇಕಾಗಿದೆ! (ತಂ)
-ದೆ ನಿರಂಜನಾದಿತ್ಯ ಶಿವನಾಗಿದೆ!!!

ಏನು ನೋಡಿದರೇನಾಯ್ತು? (ಅ)

-ನುಮಾನ ಮಾತ್ರ ಹೆಚ್ಚಾಯ್ತು!
ನೋಡಿದ ಕಣ್ಣು ಮಂಜಾಯ್ತು! (ದು)
-ಡಿಮೆಯೆಲ್ಲಾ ವ್ಯರ್ಥವಾಯ್ತು!
ಕ್ಷತೆಯ ಬೆಲೆ ಹೋಯ್ತು! (ಬೇ)
-ರೇನೂ ದಾರಿ ತೋರದಾಯ್ತು! (ನಾ)
-ನಾರೆಂದರಿಯಬೇಕಾಯ್ತು! (ಆ)
-ಯ್ತು, ನಿರಂಜನಾದಿತ್ಯಾಯ್ತು!!!

ಏನು ಬರಸ್ಬೇಕೆಂದು ನಿನಗೇ ಗೊತ್ತು!

ನುಡಿ, ನಡೆ ನಿನ್ನಂತಿಟ್ಟೆನ್ನ ಮೇಲೆತ್ತು!
ರೆಯಬಾರ್ದೆಂದಾಗ್ಬರೆಸ್ಲಿಕ್ಕೂ ಗೊತ್ತು! (ಬ)
-ರೆಯ್ಲೇಬೇಕೆಂದಾಗ ಕಲ್ಲು ಹಾಕ್ಲೂ ಗೊತ್ತು! (ಬೀ)
-ಸ್ಬೇಡ ನಿನ್ನ ಮಾಯಾಜಾಲ! ಇದಸತ್ತು!
ಕೆಂಜೆಡೆಯ ಕೆಂಗಣ್ಣನೆನ್ನ ಸಂಪತ್ತು!
ದುರಿತದೂರನಾದಾತ ನೀನೆಂದ್ಗೊತ್ತು!
ನಿನ್ನ ಪಾದ ಸೇವೆಗೆ ಇದೊಂದು ಹೊತ್ತು!
ನ್ನಿಂದ ದೂರ ಮಾಡು ಎಲ್ಲಾ ವಿಪತ್ತು! (ತ್ಯಾ)
-ಗೇಶ ನಿನ್ನಿಂದುದ್ಧಾರವಾಗ್ಲೀ ಜಗತ್ತು!
ಗೊತ್ತಾಗಲೆಲ್ಲರಿಗೂ ನಿನ್ನ ಮಹತ್ತು! (ಹೊ)
-ತ್ತು ನಿರಂಜನಾದಿತ್ಯ ಬಂದು ಬಹ್ಳಾಯ್ತು!!!

ಅವರವರಭಿರುಚಿಗೆ ತಕ್ಕಾಟ, ಊಟ!

ಧು, ವರರಲ್ಲಿರಬಾರ್ದಾದ್ರಿಂದ ತಿಕ್ಕಾಟ!
ಸಭರಿತ ಹಣ್ಣು, ಹಾಲ್ಕೆಲವರಿಗಿಷ್ಟ!
ಡೆ, ಕೋಡ್ಬಳೆ, ಚಕ್ಕುಲಿ ಕೆಲವರಿಗಿಷ್ಟ!
ಣಾಂಗಣದ ಹೋರಾಟ ಕೆಲವರಿಗಿಷ್ಟ!
ಭಿಕ್ಷೆ, ಉಪೇಕ್ಷೆ, ತಿತಿಕ್ಷೆ, ಕೆಲವರಿಗಿಷ್ಟ!
ರುಧಿರ, ಮಾಂಸಗಳೂಟ ಕೆಲವರಿಗಿಷ್ಟ!
ಚಿರೋಟಿ, ಒಬ್ಬಟ್ಟಿನೂಟ ಕೆಲವರಿಗಿಷ್ಟ!
ಗೆಡ್ಡೆ, ಗೆಣಸು, ತರ್ಕಾರಿ ಕೆಲವರಿಗಿಷ್ಟ!
ಡೆಯಲಿಕ್ಕಸಾಧ್ಯ ಒಬ್ಬರಿನ್ನೊಬ್ಬರಿಷ್ಟ! (ಹ)
-ಕ್ಕಾರಿಗಾವುದಕ್ಕೆನ್ನುವುದು ಬಹಳ ಕಷ್ಟ! (ಘ)
-ಟಕ್ಕಾಹಾರ, ವಿಹಾರ ಬೇಕೆಂಬುದೇನೋ ಸ್ಪಷ್ಟ!
ಟ ತಾಮಸವಾದಷ್ಟೂ ಜೀವ ಕೋಟಿ ದುಷ್ಟ! (ದಿ)
-ಟ, ನಿರಂಜನಾದಿತ್ಯಾನಂದರಿತಾಗ್ಬಲಿಷ್ಟ!!!

ಅಸ್ಥಿರದ ದೇಹಕ್ಕೆ ಎಷ್ಟೊಂದೇರ್ಪಾಡು? (ಸ್ವ)

-ಸ್ಥಿತಿ ತಪ್ಪಿ ಹುಟ್ಟಿದ್ದ್ರಿಂದ ಈ ಮಾರ್ಪಾಡು!
ತಿಸುಖವೆಂಬುದಿದ್ದದ್ದ್ರಿಂದೀ ಪಾಡು!
ಶೇಂದ್ರಿಯಗಳಿಗೆ ಇದೊಂದು ಗೂಡು!
ದೇವರ ದರ್ಶನಕ್ಕಿದೇ ನಂಜನ್ಗೂಡು!
ರಕೆ ಹೊತ್ತು ಪ್ರಯತ್ನ ಪಟ್ಟು ನೋಡು! (ಹ)
-ಕ್ಕೆಲ್ಲರಿಗಾಗಿರುವುದೀ ಶಿವನ ಬೀಡು!
ಡವಿ ಬೀಳದಂತೆ ವರವ ಬೇಡು! (ಇ)
-ಷ್ಟೊಂದನ್ಕೂಲವಿಲ್ಲಿರುವಾಗೇಕೆ ಕಾಡು?
ದೇವರನ್ನು ನೋಡಿ ಊರಿಗೆ ಹೊರಡು! (ದ)
-ರ್ಪಾದಿಗಳೆಲ್ಲವನ್ನೂ ಇಲ್ಲೇ ಬಿಟ್ಬಿಡು! (ಆ)
-ಡು, ಶಿವ ನಿರಂಜನಾದಿತ್ಯನೆಂದ್ಹಾಡು!!!

ನಿಷ್ಕಾಮಿಗೆ ನಿರ್ದಾಕ್ಷಿಣ್ಯ ತಂಗೀ! (ದು)

-ಷ್ಕಾಲವೆಂಬುದವಗಿಲ್ಲ ತಂಗೀ!
ಮಿತಿಯಿಲ್ಲವ್ನಾನಂದಕ್ಕೆ ತಂಗೀ!
ಗೆಳೆಯನವನಿಳೆಗೆ ತಂಗೀ!
ನಿಲುವವನಚಲ ತಂಗೀ! (ಸ)
-ರ್ದಾರರಿಗವ ಸರ್ದಾರ ತಂಗೀ! (ಅ)
-ಕ್ಷಿ ಅವನದತಿ ಸೂಕ್ಷ್ಮ ತಂಗೀ! (ಪು)
-ಣ್ಯ, ಪಾಪ, ಅವನಿಗಿಲ್ಲ ತಂಗೀ!
ತಂದೆ, ತಾಯಿ ಲೋಕಕ್ಕವ ತಂಗೀ! (ಈ)
-ಗೀತ ನಿರಂಜನಾದಿತ್ಯ ತಂಗೀ!!!

ದೇವರ ನೆನೆಪಿಗಾಗಿ ಹಬ್ಬ!

ಸ್ತ್ರಾಭರಣಾಲಂಕಾರಾ ಹಬ್ಬ!
ಸದೌತಣದೂಟವೂ ಹಬ್ಬ!
ನೆಣ್ಟರಿಷ್ಟರು ಬಂದಾಗ್ಲೂ ಹಬ್ಬ!
ವ ದಂಪತಿಗಳಾದ್ರೂ ಹಬ್ಬ!
ಪಿಶಾಚಿ ಬಾಧೆ ತಪ್ಪಿದ್ರೂ ಹಬ್ಬ!
ಗಾಯತ್ರಿಯ ಪೂಜೆ ಶ್ರೇಷ್ಠ ಹಬ್ಬ!
ಗಿರಿಧರನ ಜಯಂತಿ ಹಬ್ಬ!
ರಿದಾಸಗೆಲ್ಲಾ ದಿನ ಹಬ್ಬ! (ಕ)
-ಬ್ಬ ನಿರಂಜನಾದಿತ್ಯಗೀ ಹಬ್ಬ!!!

ದೇವರ ಕಾರ್ಯಕ್ಕೇಕೆ ಪ್ರತಿಭಟನೆ? (ಅ)

-ವನೇ ನೀನೆಂದಾಗಿಹುದು ಪ್ರಕಟನೆ! (ನಿ)
-ರತ ಮಾಡಬೇಕು ಇದನ್ನು ಚಿಂತನೆ!
ಕಾಮ ತುಂಬಿದ್ದರೆ ಆಗದು ಸಾಧನೆ! (ಧೈ)
ರ್ಯ, ಸ್ಥೈರ್ಯ ಸಹಿತಾಗ್ಬೇಕು ಭಾವನೆ! (ಸೊ)
-ಕ್ಕೇ ಮಾನವಗಾಗಿಹುದೀಗಾಚ್ಛಾದನೆ!
ಕೆಡುಕ ತಾನೆಸಗುವನು ವಂಚನೆ!
ಪ್ರತಿಭಟಿಸಿ ಮಾಡುವನು ನಿಂದನೆ!
ತಿಳಿದಾಗ ತನ್ನನ್ನು ತಾನು ವಂದನೆ!
ವರೋಗದಿಂದ ಆಗ ವಿಮೋಚನೆ! (ಕೂ)
-ಟಸ್ಥನಾಗಿ ಆಗೀರೇಳ್ಲೋಕ ರಂಜನೆ! (ಬೇ)
-ನೆ ನಿರಂಜನಾದಿತ್ಯನಿಂದಾಗ ಕೊನೆ!!!

ಏನ್ಹೇಳ್ಯೇನ್ಕೇಳ್ಯೇನ್ಕಾಸಿನ ಪ್ರಯೋಜನ? (ನೀ)

-ನ್ಹೇಳಿದ್ದೆಲ್ಲವೂ ಈಗ ನಿಷ್ಪ್ರಯೋಜನ? (ಕೇ)
-ಳ್ಯೇನಾಯ್ತೀಗ ಪ್ರವಚನ ಪ್ರತಿದಿನ? (ನಾ)
-ನ್ಕೇಳಿದ್ದು ನಿನ್ನ ದಿವ್ಯಾಕಾರ ದರ್ಶನ! (ಹೇ)
-ಳ್ಯೇಕೆ ಮಾಡಬೇಕಾಗಿತ್ತಿಂಥಾ ವಂಚನ? (ಕ)
-ನ್ಕಾಭರಣಾಲಂಕಾರ ನಾನ್ಬೇಡಿದೆನಾ?
ಸಿರಿ, ಸಾಮ್ರಾಜ್ಯಾಧಿಪತ್ಯಾಶಿಸಿದೆನಾ?
ಶ್ವರವಾವುದನ್ನೂ ಬಯಸಿಲ್ಲ ನಾ!
ಪ್ರತಿಜ್ಞೆ ಪರಿಪಾಲಿಸುತ್ತಿರುವೆ ನಾ!
ಯೋಗಿಯಾಗಿ ಅರ್ಪಿಸಿದೆ ತನು ಮನ!
ಗತ್ಪತಿ ನಿನಗಿನ್ನೇಕನ್ಯ ಧನ?
ಮೋ ನಿರಂಜನಾದಿತ್ಯಾನಂದಾನನ!!!

ಮುಚ್ಚಿದ್ದ ಬಾಗಿಲಬಿಚ್ಚಿಸೀಗ ಮುಚ್ಚಿಸಿದೆ! (ಹು)

-ಚ್ಚಿದರಿಂದಾರಿಗೇನು ಪರಿಣಾಮವಾಗಿದೆ? (ಸ)
-ದ್ದರ್ಶನದ ಮಹಿಮೆ ಯಾರಿಗೆ ಗೊತ್ತಾಗಿದೆ?
ಬಾಯಿ ವೇದಾಂತಕ್ಕಿದು ನಿಲುಕದಂತಾಗಿದೆ!
ಗಿರಾಕಿಯಿಂದ ಯೋಗಿಗೇನಾಗಬೇಕಾಗಿದೆ?
ಕ್ಷ್ಯವಲ್ಲದ ಲಕ್ಷ ರೂಪ್ಯಾ ಅಲಕ್ಷ್ಯಾಗಿದೆ!
ಬಿದಿ, ಹರಿ, ಹರರಿದಕ್ಕೆ ಮೆಚ್ಬೇಕಾಗಿದೆ! (ಮೆ)
-ಚ್ಚಿ ಸಾಯುಜ್ಯಾನುಗ್ರಹವೀಗ ಮಾಡ್ಬೇಕಾಗಿದೆ!
ಸೀತಾರಾಮ, ರಾಧೇಶ್ಯಾಮರೇ ಆಗ್ಬೇಕಾಗಿದೆ!
ತಿ, ಸ್ಥಿತಿ, ಒಂದಾದಾಗ ಮುಚ್ಚಿದಂತಾಗಿದೆ!
ಮುಚ್ಚಿದ್ದೀರೀತಿ ಇನ್ನು ತೆರೆಯಬಾರ್ದಾಗಿದೆ! (ಮೆ)
-ಚ್ಚಿದಮೇಲೆ ಹುಚ್ಚಿಲ್ಲ, ಕೆಚ್ಚಿಲ್ಲದಂತಾಗಿದೆ!
ಸಿರ ಬಾಗಬೇಕೆಲ್ಲರೀ ಸಹಜ ಸ್ಥಿತಿಗೆ! (ಬಂ)
-ದೆ ನಿರಂಜನಾದಿತ್ಯಾನಂದದಿಂದೀ ಸ್ಥಿತಿಗೆ!!!

ಬಾಯಿಯಲ್ಲಿ ಮಗ, ಮಗ; ಹೊಟ್ಟೆಯಲ್ಲಿ ಧಗ, ಧಗ (ತಾ)

-ಯಿಯ ಸ್ವಭಾವ ಹೀಗಿದ್ದರೆ ಉಳಿವನೇನಾ ಮಗ!
ಮನಾದರೂ ಇಂಥಾ ಕಾರ್ಯವನ್ನೆಂದಿಗೂ ಎಸಗ! (ಬ)
-ಲ್ಲಿದರ್ಬೆಲ್ಲದಂತಾಡಿ ಕೊರಳ ಕೊಯ್ಯುವರೀ ಯುಗ!
ರೆಸಿ ಕೊಲುವವರಿಗೆ ತೋರಬಾರದು ಮೊಗ!
ಣರಾಜ್ಯದಲ್ಲಿರಬಾರದೆಂದೆಂದಿಗೂ ಈ ರೋಗ!
ಹಾದೇವನೇ ಕರುಣಿಸಬೇಕೆಲ್ಲರಿಗೂ ಯೋಗ!
ಗನ ಸದೃಶನಾದಾ ಗುರುವಿಗಿದೇ ಸುಯೋಗ!
ಹೊತ್ತು, ಹೆತ್ತು, ಸತ್ತುಹೋಗುವುದೆಂಬುದು ಕರ್ಮಭೋಗ! (ಕೆ)
-ಟ್ಟೆವಿದರಿಂದ ನಿನ್ನ ಮಕ್ಕಳಾದ ನಾವು ಶ್ರೀರಂಗ!
ಜ್ಞ, ಯಾಗಾದಿಗಳ ಮಾಡಲೀಗೆಲ್ಲಾ ಅಂಗ, ಭಂಗ! (ನಿ)
-ಲ್ಲಿಸಲೆಮ್ಮ ಮನ ತನ್ನಡಿಯಲ್ಲಿ ಗುರು ಸಾರಂಗ!
ರೆಯ ಉದ್ಧಾರವಾಗಬೇಕು ಅವನಿಂದ ಈಗ!
ತಿ ನೀನೇಯೆಂದು ಮೊರೆಯಿಡುವೆವು ಬಾ ನೀನ್ಬೇಗ!
ರ್ಮರಕ್ಷಣಾ ಸಾಮರ್ಥ



ನಿನಗಿರುವುದೌ ಖಗ! (ಖ)
-ಗ ನಿರಂಜನಾದಿತ್ಯ ನೆಂಬುದರಿಯಲೀಗ ಜಗ!!!

ಮದನನ ಸಂಗ ಮಾನಭಂಗ!

ತ್ತನ ಸಂಗ ನಿತ್ಯಾತ್ಮಲಿಂಗ!
ರರಿಗಿರ್ಬೇಕ್ಸದಾ ಸತ್ಸಂಗ!
ಟ, ವಿಟರಿಗಾಪ್ತ ಅನಂಗ!
ಸಂಕಲ್ಪದಿಂದ ಶುದ್ಧಾಂತರಂಗ!
ಗನ ಸದೃಶಾತ್ಮ ನಿಸ್ಸಂಗ!
ಮಾನಾಭಿಮಾನದ ಮನ ಮಂಗ!
ರ ನಾರಾಯಣಾತ್ಮ ಶ್ರೀರಂಗ! (ಶು)
-ಭಂಕರ ಸದಾ ಶ್ರೀ ಶಂಭುಲಿಂಗ! (ಖ)
-ಗ ನಿರಂಜನಾದಿತ್ಯಾನಂದಾಂಗ!!!

ಬಿದ್ದಾಗ ಎತ್ತು ಎನ್ನುವರು! (ಎ)

-ದ್ದಾಗ ಕತ್ತು ಹಿಸುಕುವರು! (ಜ)
-ಗತ್ತನ್ನಿಂತು ಕೆಡಿಸಿಹರು!
ಲ್ಲಕ್ಕೂ ಸಾಕ್ಷಿ ಆ ದೇವರು! (ಹೊ)
-ತ್ತು, ಹೆತ್ತು, ಸಲಹಿದವರು!
ಷ್ಟು ಕಷ್ಟ ಪಡುತಿಹರು? (ಅ)
-ನ್ನುವುದು ಯಾರಲ್ಲಿ ಈ ದೂರು?
ರ ಗುರುವೇ ಮಾಡ್ಬೇಕ್ಪಾರು! (ಸೇ)
-ರು, ನಿರಂಜನಾದಿತ್ಯಾ ಗುರು!!!

ದರ್ಶನವಾಯ್ತೀಗ ಹೋಗ್ತೇವೇ! (ಸ್ಪ)

-ರ್ಶಕ್ಕಾಗಿ ತಿರಿಗಿ ಬರ್ತೇವೆ!
ಮಸ್ಕಾರ ಸದಾ ಮಾಡ್ತೇವೆ!
ವಾದ, ಭೇದ, ಬಿಡ್ತಾ ಇದ್ದೇವೆ! (ಆ)
-ಯ್ತೀಶ್ವರನಿಚ್ಛೆಯೆನ್ನುತ್ತೇವೆ!
ತಿ ಅವನೆಂದೆನ್ನುತ್ತೇವೆ!
ಹೋದಲ್ಲೆಲ್ಲಾತನ ನೋಡ್ತೇವೆ! (ಆ)
-ಗ್ತೇವವನ ದಾಸರಾಗ್ತೇವೆ! (ನಾ)
-ವೇ ನಿರಂಜನಾದಿತ್ಯಾಗ್ತೇವೆ!!!

ಹಸೆ ಹಾಸಿದ್ದಾಯ್ತು ಹೊರಗೆ!

ಸೆಣ್ಗಳ್ಬರಬಹುದಲ್ಲಿಗೆ!
ಹಾರಾರ್ಪಿಸ್ಬಹ್ದು ಗುರುವಿಗೆ!
ಸಿರ ಬಾಗಬೇಕವನಿಗೆ! (ಸ)
-ದ್ದಾದರೆ ಆಗದವನಿಗೆ! (ಆ)
-ಯ್ತು, ಕೆಲ್ಸ, ಹೋಗ್ಬಹುದೂರಿಗೆ!
ಹೊತ್ತಿರ್ವಾಗ್ಲೇ ಹೋಗಿ ಮನೆಗೆ!
ಸ್ತೆ ನಿಮಗೆಲ್ಲಾ ಗೊತ್ತಿದೆ! (ಹೀ)
-ಗೆ ನಿರಂಜನಾದಿತ್ಯನಾಗೆ!!!

ಯಾರಿಗೂ ಏನೂ ಮಾಡುವ ಸ್ವತಂತ್ರವಿಲ್ಲ! (ಅ)

-ರಿತಿದನು ಹರಿನಾಮ ಸ್ಮರಿಸಿರೆಲ್ಲ!
ಗೂಬೆ ಕೂಗಿದರೆ ಹೆದರಬೇಕಾಗಿಲ್ಲ!
ನಾಗ್ಬೇಕೋ ಅದಕ್ಕದು ಕಾರಣವಲ್ಲ!
ನೂತನ, ಪುರಾತನ ಕಲ್ಪನೆಗಳೆಲ್ಲ!
ಮಾಡಿಸುವ ಮಾಲಿಕನದ್ದೇ ಚಿತ್ತವೆಲ್ಲ! (ಕಾ)
-ಡು, ನಾಡುಗಳು ಅವನಧೀನದಲ್ಲೆಲ್ಲ!
ಸನಾಶನದೇರ್ಪಾಡು ಅವನದೆಲ್ಲ!
ಸ್ವರೂಪ ಧ್ಯಾನ ಮಾಡ್ಬೇಕ್ಹಗಲಿರುಳೆಲ್ಲ!
ತಂತ್ರ, ಮಂತ್ರ, ಯಂತ್ರಗಳ್ಹೊಟ್ಟೆ ಪಾಡಿಗೆಲ್ಲ! (ಮೂ)
-ತ್ರ, ಮಲ, ತಡೆದರುದ್ಧಾರವಾಗ್ವುದಿಲ್ಲ!
ವಿವೇಕ, ವಿಚಾರ, ವೈರಾಗ್ಯ ಸಾಧಿಸ್ರೆಲ್ಲ! (ಪು)
-ಲ್ಲ ನಿರಂಜನಾದಿತ್ಯನಾದರ್ಶವಿದೆಲ್ಲಾ!!!

ನೆಮ್ಮದಿಯ ಬಾಳಿಗಿರ್ಬೇಕ್ಪರಮಾರ್ಥ! (ಒ)

-ಮ್ಮತದ ಮನಸ್ಸಿರಬೇಕೆಂಬುದರ್ಥ!
ದಿಟವಾದಾತ್ಮ ನೀನೆಂಬುದದರರ್ಥ!
ದ್ವಾತದ್ವಾಡದಿರಬೇಕೆಂಬುದರ್ಥ!
ಬಾಡುವ ಮುಂಚೆ ವಾಸನೆ ನೋಡೆದಂರ್ಥ! (ಅ)
-ಳಿವಿಂಡಿನಂತೆ ಕಾರ್ಯೊ

ನ್ಮುಖಾಗೆಂದರ್ಥ!
ಗಿಡ, ಬಳ್ಳಿಯಲ್ಲೂ ದೇವ್ರಿದ್ದಾನೆಂದರ್ಥ! (ಬೇ)
-ರ್ಬೇರೇ ರೂಪದಲ್ಲೊಬ್ಬ ನಿರ್ಪನೆಂದರ್ಥ! (ವಾ)
-ಕ್ಪಟುತ್ವಕ್ಕವನೊಲಿಯನೆಂದು ಅರ್ಥ! (ನಿ)
-ರತ ಅವನ ನೆನೆಯಬೇಕೆಂದರ್ಥ!
ಮಾಯೆಗೆ ಮರುಳಾಗಬಾರದೆಂದರ್ಥ! (ಅ)
-ರ್ಥ, ನಿರಂಜನಾದಿತ್ಯ ನಾಗ್ಬೇಕೆಂದರ್ಥ!!!

ಕಡ್ಲೇಪುರಿ ಮಾರಿ ಸಾಹುಕಾರನ್ನಿಸ್ಲಿಕಲ್ಲ ಜನ್ಮ! (ಕೂ)

-ಡ್ಲೆ ಹೆಸರಿಗೆ ತಕ್ಕಂತಿರುವಂತಾಗಲೀಗ ಜನ್ಮ!
ಪುಣ್ಯ, ಪಾಪದ ಕರ್ಮದಿಂದ ವ್ಯರ್ಥವಾಗ್ದಿರ್ಲೀ ಜನ್ಮ!
ರಿಸಿ, ಮುನಿಯುಪದೇಶದ ಸತ್ಯ ಕಾಣ್ಬೇಕೀ ಜನ್ಮ!
ಮಾಡಿದ ಗುರುಸೇವೆಗೆ ಫಲ ಕೊಡಬೇಕೀ ಜನ್ಮ! (ಹ)
-ರಿ, ಹರ, ಬ್ರಹ್ಮಾದಿಗಳು ಬೆಳಗಿಸಬೇಕೀ ಜನ್ಮ!
ಸಾಧನೆ ವಿಫಲವಾಗುವುದಾದರೆ ಏಕೀ ಜನ್ಮ?
ಹುಸಿಯ ದಹಿಸಿ, ದಿಟವ ಮೆರಸಬೇಕೀ ಜನ್ಮ!
ಕಾಮ ರಾವಣನ ಕೊಂದು ರಾಮನಾಗಬೇಕೀ ಜನ್ಮ!
ಮಿಸಬೇಕು ಸೀತಾ ಮನ ಅವನಲ್ಲಿ ಈ ಜನ್ಮ! (ನ)
-ನ್ನಿಯ ಮಾತಿನಗಸನಲಕ್ಷಿಸಬಾರದೀ ಜನ್ಮ! (ಹೇ)
-ಸ್ಲಿ, ಕುಹಕು, ಕುಚೋದ್ಯಗಳ ಮಾತುಗಳನ್ನೀ ಜನ್ಮ! (ಅ)
-ಕ



ರೆ ಸಕ್ಕರೆಗಿಂತಲೂ ಮೇಲೆಂದರಿಯಲೀ ಜನ್ಮ! (ನ)
-ಲ್ಲ, ನಲ್ಲೆಯರೈಕ್ಯ ಸ್ಥಿರವಾಗಿ ಉಳಿಸಲೀ ಜನ್ಮ!
ಯಭೇರಿ ಪರಮಾರ್ಥಕ್ಕೆ ಹೊಡೆಯಲೀ ಜನ್ಮ! (ತ)
-ನ್ಮಯವಾಗ್ಲಿ ನಿರಂಜನಾದಿತ್ಯಾನಂದದಲ್ಲೀ, ಜನ್ಮ!!! ||

ನಿನ್ನಾಚಾರ, ವಿಚಾರ ನಾನರಿತಿಲ್ಲ! (ನಿ)

-ನ್ನಾಕಾರ, ವಿಕಾರ ನಾನೇನೂ ನೋಡಿಲ್ಲ! (ಆ)
-ಚಾರ್ಯರುಗಳ ಮಾತನುವಭವಾಗಿಲ್ಲ!
ಟ್ಟಾಗದಿದ್ದ್ರೆ ಗುಟ್ಟು ಆನಂದವಿಲ್ಲ!
ವಿದಿ, ಹರಿ, ಹರರ್ಬಗೆ ಹರಿಸ್ಲೆಲ್ಲ!
ಚಾತಕದಂತೆ ನಿರೀಕ್ಷಿಸುವೆನೆಲ್ಲ!
ಮಾರಮಣಗೇಕೆ ಕರುಣೆಯಿಲ್ಲ?
ನಾರದಗೇಕೀಗ ಕಲ್ಯಾಣೇಚ್ಛೆಯಿಲ್ಲ?
ಶಿಸುತಿದೆ ಆರ್ಯ ಸಂಸ್ಕೃತಿಯೆಲ್ಲ! (ಹ)
-ರಿ ದರ್ಶನದಿಂದ ಗುರಿ ಸೇರ್ಬೇಕಲ್ಲ!
ತಿರೆಯಾಗು, ಹೋಗು ಅವನಿಗೇ ಎಲ್ಲ! (ಬ)
-ಲ್ಲ ನಿರಂಜನಾದಿತ್ಯ ಪರಿಸ್ಥಿತ್ಯೆಲ್ಲಾ!!!

ಸ್ಥಿತಿ, ಗತಿಯ ಪೂರ್ಣರಿವು ನಿನ್ನಿಂದ!

ತಿಳಿಸಲಸದಳನ್ಯರಿಂದಾದ್ರಿಂದ!
ಣಪತಿ ನೀನು ಸರ್ವಜ್ಞನಾದ್ರಿಂದ!
ತಿಳಿಸೆಲ್ಲವನೆಮಗಾನಂದದಿಂದ!
ಶಸ್ಸುಂಟಾಗ್ಬೇಕೆಮಗೀಗ ನಿನ್ನಿಂದ!
ಪೂಜೆ ಸಾರ್ಥಕವಾಗ್ಲಿ ದರ್ಶನದಿಂದ (ಜೀ)
-ರ್ಣವಾಗ್ಬೇಕಾಹಾರ ಆಗ್ನಿ ಬಲದಿಂದ! (ಉ)
-ರಿಯದದು ಹನಿಯ ಕಟ್ಟಿಗೆಯಿಂದ! (ಮಾ)
-ವು, ಬೇವಾದ್ರೂ ಒಣಗಿದ್ದಾಗ್ಬೇಕಾದ್ರಿಂದ!
ನಿನ್ನ ದರ್ಶನವೇ ಬೇಕ್ನಮಗಾದ್ರಿಂದ! (ನಿ)
-ನ್ನಿಂದ ನಾವು ಬೇರೇನಲ್ಲವಾದದ್ರಿಂದ!
ತ್ತ ನೀ ಬಾ, ನಿರಂಜನಾದಿತ್ಯಾನಂದ!!!

ಬಹು ಜನ್ಮದ ಇಹ ಸಂಬಂಧ ನನಗೆ!

ಹುಸಿ ಮಾಯೆಗೆನ್ನ ಮೇಲಧಿಕಾರ ಹೀಗೆ!
ನಿಸಿದಾಗಿಂದಾಡ್ಸಿದಾಟ ಬಗೆ ಬಗೆ! (ಉ)
-ನ್ಮತ್ತನಂತಾದೆ ಇದರರ್ಥರಿಯದಾಗೆ!
ರ್ಶನದಿಂದೆಲ್ಲಾ ಜ್ಞಾನವೆಂಬ ನಂಬಿಗೆ!
ದು ಎಂದಾಗುವುದೆಂದರಿಯದೆನಗೆ!
ಗಲಿರುಳೆಲ್ಲಾ ಅದೇ ಜಪವೆನಗೆ!
ಸಂಪರ್ಕ ಜಗತ್ತಿನದ್ದೀಗ ಬಂತೆನಗೆ!
ಬಂಧು ಬಾಂಧವ ಗುರುದತ್ತನೇ ನನಗೆ!
ರ್ಮ ಕರ್ಮವಾವುದೂ ಅರಿಯದೆನಗೆ!
ಡೆ, ನುಡಿಗಳರ್ಪಿಸಿಹೆನವನಿಗೆ!
ಲವೊಲವಿಂದ ಪ್ರಾಪ್ತವಾಗ್ಬೇಕೆನಗೆ! (ಹೀ)
-ಗೆ, ನಿರಂಜನಾದಿತ್ಯನಾಗಿಹೆ ಧರೆಗೆ!!!

ಅಂದ, ಚಂದ ನೋಡುವ ಕಣ್ಣೆನಗಿಲ್ಲ!

ಯೆ ದಾಕ್ಷಿಣ್ಯಕ್ಕೊಳಗೆ ಜಾಗವಿಲ್ಲ!
ಚಂಚಲ ಸ್ವಭಾವದ ಮನಸ್ಸೀಗಿಲ್ಲ!
ರಿದ್ರ ಶ್ರೀಮಂತರಲ್ಲಿ ಭೇದವಿಲ್ಲ!
ನೋಡ್ದೇ ನಂಬ್ಲಿಕ್ಕೆ ಮನಸ್ಸೊಪ್ಪುವುದಿಲ್ಲ!
ಡುಮ್ಕಿ ಹೊಡೆಯುವಷ್ಟು ಅಶ್ರದ್ಧೆಯಿಲ್ಲ!
ರ ಗುರುಭಕ್ತಿಯೇನೂ ಕಮ್ಮಿಯಿಲ್ಲ!
ನಿಕರವೇಕೋ ಅವಗೆ ಬಂದಿಲ್ಲ! (ಬೆ)
-ಣ್ಣೆಯಂತಿದ್ದರೂ ಸುಣ್ಣ ಬೆಣ್ಣೆಯೇನಲ್ಲ!
ಶ್ವರದ ದೇಹಕ್ಕಾಶಿಸುವುದಿಲ್ಲ!
ಒನೆ ಲಿನೆ ಮಿ

ಸಿ







ಚೊ



ಲೆತೆ ದತ
ಗಿ .............................! (ತ)
-ಲ್ಲಣ ನಿರಂಜನಾದಿತ್ಯನಿಗೇನಿಲ್ಲ!!!

ಅಸ್ಥಿರದ ಮನವ ನಂಬಿ ಕೆಡ್ಬೇಡ!

ಸ್ಥಿರ ಮನಸ್ಸಿನಾತ್ಮಾನಂದ ಬಿಡ್ಬೇಡ!
ಜಸ್ತಮನ್ಸಿನಾಹಾರ ಸೇವಿಸ್ಬೇಡ!
ರ್ಶನಕ್ಕಿದನಗತ್ಯವೆನಬೇಡ!
ಡದಿ, ಮಕ್ಕಳಲ್ಲಿ ವ್ಯಾಮೋಹ ಬೇಡ!
ಯನಾದಿಂದ್ರಿಯಾನಂದಕ್ಕಾಳಾಗ್ಬೇಡ!
ರ ಗುರುವಿನಾಜ್ಞೆ

ಈರಲೇ ಬೇಡ!
ನಂಬಿ ನೀನೇ ನಂಜುಂಡ ತಾನಾಗ್ದಿರ್ಬೇಡ!
ಬಿಧಿ, ಹರಿ, ಹರರ್ಬೇರ್ಬೇರೆಂದೆನ್ಬೇಡ!
ಕೆಲ್ಸಕ್ಕಪ್ಪ ಹೆಸ್ರೆಂದರಿಯದಿರ್ಬೇಡ! (ಕೂ)
-ಡ್ಬೇಡ, ದುರ್ಜನರಿಷ್ಟಕ್ಕೊಳಗಾಗ್ಬೇಡ! (ಮೃ)
-ಡ ನಿರಂಜನಾದಿತ್ಯ ನೀನಾಗ್ದಿರ್ಬೇಡ!!!

ನನ್ನ ದೇವರ ದಾಸರ ದಾಸಿ ನಾನು! (ಅ)

-ನ್ನ ಬಟ್ಟೆಗಾಶಿಸೆನವರಿಂದ ನಾನು!
ದೇಹಾಭಿಮಾನ ತೊರೆದಿಹೆನು ನಾನು!
ಡವೆ ವಸ್ಥುವಿಗಾಶಿಸೆನು ನಾನು!
ಹಸ್ಯವಿದೀ ಬಾಳಿನದ್ದೆಂಬೆ ನಾನು?
ದಾಸರ ದಾಸಿಯಾಗಿ ಧನ್ಯಳು ನಾನು!
ರ್ವ ಸೌಭಾಗ್ಯವಿದೆನಗೆಂಬೆ ನಾನು!
ತಿ ಪತಿಯೆಂಬವಗೆ ತಾಯಿ ನಾನು!
ದಾರಿದ್ರ್ಯವೆಳ್ಳಟ್ಟಿಲ್ಲೆನಗೆಂಬೆ ನಾನು!
ಸಿರಿದೇವಿಯೆಂದನ್ನಿಸಿಹೆನು ನಾನು!
ನಾರದನ ವಿಕಾಮಹನಾಪ್ತೆ ನಾನು! (ನಾ)
-ನು, ನಿರಂಜನಾದಿತ್ಯಾನಂದಾತ್ಮಳ್ನಾನು!!!

ಆಗ್ಬೇಕಾದದ್ದಾಗ್ತಿರ್ವಾಗೇಕಾತುರ ಕಾತುರ? (ಸಾ)

-ಗ್ಬೇಕಾಗಿದೆ ದಾರಿ ಊರಿಗಿನ್ನೂ ಸ್ವಲ್ಪ ದೂರ!
ಕಾಲಚಕ್ರ ಹರಿಸುವುದು ಭೂಮಿಯ ಭಾರ!
ಯೆ ದಾಕ್ಷಿಣ್ಯಗಳೆಂಬುದಿಲ್ಲದದು ಕ್ರೂರ! (ಮು)
-ದ್ದಾಡಿಸುತಿದೆ, ಒದ್ದಾಡಿಸುತಿದೆ ಜೀವರ! (ಆ)
-ಗ್ತಿದೆ ಹೀಗೆ ಎಲ್ಲೆಲ್ಲೂ ಅನಾದಿಯಿಂದ ತರ! (ಇ)
-ರ್ವಾಗ ಜೀವದಲ್ಲರಿತಿರೆಬೇಕೀ ವಿಚಾರ!
ಗೇಯ್ಮೆ ಜೀವರಿಗಾಗಿಹುದು ಬಹಳ ತರ!
ಕಾಮ್ಯ ಕರ್ಮಗಳಿಂದತ್ಯವಾಗದು ಸಂಸಾರ!
ತುರಿಯಾತೀತವೆಂಬ ಸ್ಥಿತಿಯೇ ನಿರಾಕಾರ!
ಮಾಲೋಲ, ಉಮಾಲೋಲರೆಲ್ಲರೂ ಸಾಕಾರ!
ಕಾಲ ಲೀಲೆಯಲ್ಲವರ ಮಹಿಮೆ ಅಪಾರ! (ಎಂ)
-ತು ಬಣ್ಣಿಸಬಲ್ಲನವರ ಆಟ ಚತುರ! (ನಿ)
-ರತ ನಿರಂಜನಾದಿತ್ಯಗರಿವೀ ವಿಚಾರ!!!

ಕಾಗೆ ಬರುವುದಳಿಲ ಕೊಲ್ಲುವುದಕ್ಕಲ್ಲ! (ಹ)

-ಗೆತನವೆಂಬುದು ತಾನೇ ತಿನ್ನಬೇಕೆಂದಲ್ಲ!
ಹಳೆಚ್ಚರದಿಂದ ಶ್ರೀ ಹರಿ ಸಾಕ್ಬೇಕೆಲ್ಲ!
ರುದ್ರನೆಂಬವಗೆ ಸಂಹಾರ ಕೆಲಸವೆಲ್ಲಾ! (ಹಾ)
-ವುಗಳದ್ದೇ ಓಡಾಟ ಅವನ ಮೈಮೇಲೆಲ್ಲಾ!
ಯೆ, ದಾಕ್ಷಿಣ್ಯ, ಅವುಗಳದ್ದವನಿಗಿಲ್ಲ! (ಅ)
-ಳಿಗಾಲ ಬಂದರಾವುದೂ ಉಳಿಯುವುದಿಲ್ಲ!
ಒನೆ ಲಿನೆ ಮಿ

ಸಿ




ಕೊಲ್ಲ ಬಂದ ಯಮನನ್ನೇ ಹಿಂದಟ್ಟಿದನಲ್ಲಾ! (ಗೆ)
-ಲ್ಲುವುದು, ಸೋಲುವುದು, ಅವನಿಂದಲೇ ಎಲ್ಲಾ! (ಸಾ)
-ವು ಬಂದಾಗ ಹಾವಿನಿಂದಲೂ ಕಚ್ಚಿಸಬಲ್ಲ!
ರ್ಶನಾನುಗ್ರಹವಿತ್ತನಸುರರಿಗೆಲ್ಲಾ! (ಮ)
-ಕ್ಕಳು ಅವನಿಗೆ ನಾವೆಂದರೆ ತಪ್ಪೇನಿಲ್ಲ! (ಪು)
-ಲ್ಲ, ನಿರಂಜನಾದಿತ್ಯ ಅವನಿಂದನ್ಯನಲ್ಲ!!!

ರವಿಯುದಯಕ್ಕರುಣ ಕಿರಣವೇ ಸಾಕ್ಷಿ!

ವಿಧಿವಶವಾದುದಕ್ಕೆ ಶ್ವಾಸ ನಾಶಸಾಕ್ಷಿ!
ಯುಕ್ತಾ ಯುಕ್ತ ಹೀನತೆಗೆ ಬುದ್ಧಿ ಭ್ರಮೆ ಸಾಕ್ಷಿ!
ಮೆ, ಶಮೆಯಿಲ್ಲದನಾಚಾರಿಗವ್ನೇ ಸಾಕ್ಷಿ!
ಮ, ನಿಯಮ ಸಿದ್ಧಿಗವ್ರವ್ರ ಮನ ಸಾಕ್ಷಿ! (ಚೊ)
-ಕ್ಕಟವಾಗಿ ತಾನಿರ್ಪೂದಕ್ಕಪಕ್ಕವೇ ಸಾಕ್ಷಿ!
ರುಚಿಯೂಟವೆಂಬುದಕ್ಕೆ ಅತಿಥಿಯೇ ಸಾಕ್ಷಿ! (ಗು)
-ಣಹೀನನೆಂಬುದಕ್ಕೆ ಗಣಹೀನನೇ ಸಾಕ್ಷಿ!
ಕಿವಿ, ಬಾಯ್ಮುಚ್ಚಿದಕ್ಕೆ ಆತ್ಮಸ್ಥಿತಿಯೇ ಸಾಕ್ಷಿ!
ಮೇಶೋಮೇಶರೆಂಬುದಕ್ಕವ್ರ ವೃತ್ತಿ ಸಾಕ್ಷಿ! (ಜಾ)
-ಣರೆಂಬುದಕ್ಕವರವರ ಜಾಣ್ಮೆಯೇ ಸಾಕ್ಷಿ!
ಒನೆ ಲಿನೆ ಮಿ

ಸಿ







ಚೊ



ಲೆತೆ ದತ
ವೇ .................................!
ಸಾ

ಈಪ್ಯ, ಸಾರೂಪ್ಯಾದಿಗೆಲ್ಲಾ ಸಾಧನೆ ಸಾಕ್ಷಿ! (ಸಾ)
-ಕ್ಷಿ ನಿರಂಜನಾದಿತ್ಯಾನಂದ ತಾ ಸರ್ವ ಸಾಕ್ಷಿ!!!

ಊಟದೆಲೆಯ್ಮುಂದೆ ಹರಟ್ಬೇಡ! (ಊ)

-ಟ ಕೊಟ್ಟವ್ನ ನೆನೆಯದಿರ್ಬೇಡ! (ತಂ)
-ದೆ, ತಾಯಿ ಅವನೇ! ಮರೆಯ್ಬೇಡ! (ಮೇ)
-ಲೆ, ಕೆಳ್ಗೆ ನೋಡಿ ಕಾಲ ಹಾಕ್ಬೇಡ! (ತಾ)
-ಯ್ಮುಂದೆಚ್ಚರ ತಪ್ಪಿರಲೇ ಬೇಡ! (ಹಿಂ)
-ದೆ ಮುಂದಿನದ್ದೇನೂ ಯೋಚಿಸ್ಬೇಡ!
ರಿನಾಮ ಸ್ಮರಣೆ ಬಿಡ್ಬೇಡ!
ಹಸ್ಯನುಭವಿಸದಿರ್ಬೇಡ! (ಹು)
-ಟ್ಬೇಡ, ಸಾಯ್ಬೇಡ ಪಾರಾಗ್ದಿರ್ಬೇಡ! (ಮೃ)
-ಡ ನಿರಂಜನಾದಿತ್ಯ ಕೈ ಬಿಡ!!!

ತಪ್ಪೊಪ್ಪ ಮಾಡಿ ಕಪ್ಪ ಕೊಳ್ಳಯ್ಯಾ! (ಇ)

-ಪ್ಪೊಡಲ್ನಿನ್ನ ಸೇವೆಗಾಗಿರ್ಲಯ್ಯಾ! (ಅ)
-ಪ್ಪ ನೀನೆಲ್ಲರಿಗಲ್ಲವೇನಯ್ಯಾ?
ಮಾಡ್ಬೇಡ ಪಕ್ಷಪಾತವೆನ್ನಯ್ಯಾ! (ಅ)
-ಡಿಗೆಡದಂತೆ ನೋಡಿಕೊಳ್ಳಯ್ಯಾ!
ಪ್ಪ, ಕಾಣಿಕೆ ನಾಟಕವಯ್ಯಾ! (ಕೊ)
-ಪ್ಪರಿಗೆ ಕೊಟ್ರೂ ಸಾಕಾಗದಯ್ಯಾ!
ಕೊಳ್ಬೇಕೆಲ್ಲರ ವಿಶ್ವಾಸವಯ್ಯಾ! (ಹ)
-ಳ್ಳಕ್ಕೆ ತಳ್ಳಿದ್ರೇನು ಲಾಭವಯ್ಯಾ! (ಅ)
-ಯ್ಯಾರ್ಯ ಶ್ರೀ ನಿರಂಜನಾದಿತ್ಯಯ್ಯಾ!!!

ಹೇಳುವ ಕೇಳುವವರಿಹರು! (ಬಾ)

-ಳುವವರಂದಂತಿಲ್ಲದಿಹರು!
ಸ್ತ್ರ ಬಿಚ್ಚಿ ಕುಣಿವವ್ರಿಹರು!
ಕೇದಾರೇಶ್ವರ ತಾವಾಗ್ದಿಹರು! (ಕಾ)
-ಳು ಕಡ್ಡಿ ಕೂಡಿಹಾಕಿಟ್ಟಿಹರು!
ರ್ಣಾಶ್ರಮ ಕೇಳಿ ಕೊಡ್ತಿಹರು!
ಡವೆ, ವಸ್ತುಗಳ್ತುಂಬಿಹರು! (ಯಾ)
-ರಿಗೂ ನೆರವಾಗದಂತಿಹರು!
ರಿ ಕೀರ್ತನೆ ಮಾಡುತ್ತಿಹರು! (ಗು)
-ರು ನಿರಂಜನಾದಿತ್ಯಾಗರು!!!

ದರ್ಶನವಿಲ್ಲದ್ದದೆಂಥಾ ಪರಮಾರ್ಥ? (ಸ್ಪ)

-ರ್ಶ ಪಾದದ್ದಾಗದೇ ಸಿದ್ಧಿಸದಿಷ್ಟಾರ್ಥ!
ಶ್ವರದ ಮೋಹ ನಾಶ ಪುರುಷಾರ್ಥ!
ವಿಧಿ, ಹರಿ, ಹರಾದಿಗಳೊಪ್ಲೀ ಅರ್ಥ! (ಬ)
-ಲ್ಲವರ ಕೃಪೆಯಿಂದ ಜೀವ ಕೃತಾರ್ಥ! (ತ)
-ದ್ದರ್ಶನವೆಂಬದೇ ಕೃಪೆಯ ಪೂರ್ಣಾರ್ಥ!
ದೆಂಟಾದ ಕೃಷ್ಣನಿಂದ ಪೂವಾದ ಪಾರ್ಥ! (ವೃ)
-ಥಾಲಾಪದಿಂದಾಗುತಿದೆ ವಿಕಲ್ಪಾರ್ಥ!
ತಿತನ ಪಾವನ ಮಾಡ್ಬೇಕ್ಸಮರ್ಥ!
ತಿಪತಿಯಿಂದಾಯಿತೆಲ್ಲಾ ಅನರ್ಥ!
ಮಾರಹರ ಬೆಳಗಿದ ಪರಮಾರ್ಥ! (ತೀ)
-ರ್ಥ, ನಿರಂಜನಾದಿತ್ಯನ ಪಾದತೀರ್ಥ!!!

ನಿನಗೆ ನಾನು, ನನಗೆ ನೀನು ದೇವರು!

ಮ್ಮಿಬ್ರಲ್ಲಿ ಭೇದವಿಲ್ಲದ್ದ್ರಿಂದಿಬ್ಬ್ರೂ ದೇವ್ರು!
ಗೆಳೆಯನಾಗಿ ಇಳೆಗೆ ಭಾನು ದೇವರು!
ನಾರಾಯಣ ನೀನಾಗವನಿಗೆ ದೇವರು!
ನುಡಿ, ನಡೆಯಲ್ಲಿಬ್ಬರೂ ಪರಮಾತ್ಮರು!
ಶ್ವರವಲ್ಲ ನಾವೆಂದಿರ್ಪ ನಾವ್ದೇವರು!
ರ ನಾರಾಯಣರೆಂದು ನಮ್ಮ ಹೆಸರು!
ಗೆಲುವು, ಸೋಲುಗಳೆಂಬುದಿಲ್ಲದವರು!
ನೀನೂ, ನಾನೂ, ಲೀಲಾನಾಟಕದ ನಟರು!
ನುರಿತಗ್ರಗಣ್ಯರಾದ ಕಲಾವಿದರು!
ದೇಶ, ವೇಷ, ಭಾಷೆಗಳೊಂದಾಗಿರ್ಪವರು!
ರಗುರು ದತ್ತಾತ್ರೇಯ ಸಾರ್ವಭೌಮರು!
ರುಜು ಮಾರ್ಗಿ ನಿರಂಜನಾದಿತ್ಯಾ ದೇವರು!!!

ವ್ಯವಸ್ಥೆಯಿದ್ದರವಸ್ಥೆ! (ಅ)

-ವಸ್ಥೆಯಿದ್ದರೆ ವ್ಯವಸ್ಥೆ! (ಸ್ವ)
-ಸ್ಥೆ ಇದಿದ್ದ್ರೆ ಸಂಸಾರಸ್ಥೆ! (ನಾ)
-ಯಿಯ ಬಾಳು ದುರವಸ್ಥೆ! (ಸ)
-ದ್ದಡಗದಿದ್ದ್ರವ್ಯವಸ್ಥೆ! (ಅ)
-ರಸ ಮಾಡ್ಬೇಕ್ಸುವ್ಯವಸ್ಥೆ!
ರ್ಣಾಶ್ರಮ ಸುವ್ಯವಸ್ಥೆ! (ಸ್ವ)
-ಸ್ಥೆ, ನಿರಂಜನಾದಿತ್ಯಸ್ಥೆ!!!

ನಿನ್ನ ಮೇಲೆ ಎಲ್ಲರ ಪುಕಾರು! (ನ)

-ನ್ನ ಆಸೆ ಪೂರೈಸದ್ದ್ರಿಂದಾ ದೂರು!
ಮೇರೆ

ಈರಿದ್ರಾರೂ ಉಳಿಯರು!
ಲೆಖ್ಖಾಚಾರಕ್ಕೆ ಸಿಕ್ಕ ದೇವರು!
ಲ್ಲಾ ಕಾಲದಲ್ಲಿತ್ತೀ ತಕ್ರಾರು! (ಪು)
-ಲ್ಲ ಲೋಚನನಿಗಾವುದೆದುರು?
ಟ್ಟೆ ಮುರಿಸ್ಕೊಂಡರಸುರರು!
ಪುನೀತರಾದರು ಸಜ್ಜನರು!
ಕಾದು ತಾಳ್ಮೆಯಿಂದ ನೋಡುತ್ತಿರು! (ಸೇ)
-ರು ನಿರಂಜನಾದಿತ್ಯನ ಊರು!!!

ಮುಂಜಿ, ಸಂಜೆ ಮುಂಜಾನೆಯ ಕುಡಿತಕ್ಕಾ?

ಜಿಜ್ಞಾಸುಗಳು ಮಾಡಬೇಕೆಲ್ಲಾ ಪಕ್ಕಾ!
ಸಂಸ್ಕೃತಿ ಭಾರತದ್ದು ಬಹಳ ಚೊಕ್ಕಾ! (ಪ್ರ)
-ಜೆ ಸರಿಪಡಿಸ್ಬೇಕು ತಮ್ಮಕ್ಕಪಕ್ಕ!
ಮುಂಡಾಸಿರಬೇಕು ಯೋಗ್ಯತೆಗೆ ತಕ್ಕ!
ಜಾತ್ಯಾತೀತ ಸಿದ್ಧ ಸಂತೆಯಲ್ಲಿ ಸಿಕ್ಕ!
ನೆರೆಮನೆಯ ಎಂಜಲು ಆತ ನೆಕ್ಕ!
ಮ, ನಿಯಮಾದಿಯಿಂದ ಆತ ಚೊಕ್ಕ!
ಕುಲ, ಶೀಲಾದರ್ಶದಿಂದ ಸಾಧಿಸ್ಹಕ್ಕ! (ಮ)
-ಡಿ ಮಾಡುತ್ತಿರ್ಬೇಕು ಮನಸ್ಸನ್ನು ಠಕ್ಕ!
ಪಸ್ಸಿನಿಂದಲೇ ಅಕ್ಕ ಪಕ್ಕ ಚೊಕ್ಕ! (ತಿ)
-ಕ್ಕಾಟಕ್ಕೆ ನಿರಂಜನಾದಿತ್ಯಾತ್ಮ ದಕ್ಕ!!!

ಬಾಳಿಗಿರಬೇಕೊಂದು ಶಿಸ್ತು! (ಆ)

-ಳಿಗದ್ರಂತಿರ್ಬೇಕೊಂದು ದುಸ್ತು! (ಹೀ)
-ಗಿರದಿದ್ದ್ರಿರದ್ಬಂದೋಬಸ್ತು! (ಈ)
-ರಹಸ್ಯ ತಿಳಿಯದೆ ಸುಸ್ತು!
ಬೇಕುಗಳ್ಹೆಚ್ಚಾಗಿ ಅಶಿಸ್ತು!
ಕೊಂಡ್ಕೊಂಬರೆಲ್ಲರೂ ಹೊಸ್ಹೊಸ್ತು!
ದುಡ್ಡಿಲ್ಲದಿರ್ಪ ರೋಗ ಕಸ್ತು!
ಶಿರ ತರಿವವ್ರದ್ದೇ ಗಸ್ತು! (ಅ)
-ಸ್ತು, ನಿರಂಜನಾದಿತ್ಯ ಶಿಸ್ತು!!!

ನೂಕುನುಗ್ಗಲಿನ ಭಾಷಣ ಕೇಳ್ಯಾದುದೇನು?

ಕುಹಕು, ಕುಚೋದ್ಯ, ಕುಚೇಷ್ಟೆ ನಿಂತುಹೋಯ್ತೇನು?
ನುಡಿದಂತೆ ನಡೆಯುವಭ್ಯಾಸ ಮಾಡು ನೀನು! (ಬ)
-ಗ್ಗನಂತೆ ಘರ್ಜಿಸಿ ಗಗ್ಗನಂತಾಗ್ಬೇಡ ನೀನು! (ಅ)
-ಲಿಪ್ತ ಭಾವದಿಂದ ಸೇವೆ ಮಾಡಬೇಕು ನೀನು!
ಶ್ವರಾನಂದಕ್ಕಾಗ್ಯೇನೂ ಮಾಡ್ಬಾರದು ನೀನು!
ಭಾರತ, ರಾಮಾಯಣದಿಂದ ಕಲಿತದ್ದೇನು?
ಡ್ರಿಪುಗಳನ್ನು ಇನ್ನೂ ಜಯಿಸಿಲ್ಲ ನೀನು! (ಒ)
-ಣ ಜಂಭಕ್ಕೆ ಮರುಳಾಗಿ ಕೆಟ್ಟಿರುವೆ ನೀನು!
ಕೇಡನ್ನೆಂದಿಗೂ ಬಗೆಯಬೇಡಾರಿಗೂ ನೀನು! (ಬೋ)
-ಳ್ಯಾಗಿ, ಕಾಳ್ಯಾಗಿ, ದಂಭ, ದರ್ಪ ತೋರ್ಬೇಡ ನೀನು!
ದುಷ್ಟಕೂಟದಿಂದ ದೂರವಿರಬೇಕು ನೀನು!
ದೇವರಲ್ಲಿ ಭಯ, ಭಕ್ತಿ ಬೆಳೆಸ್ಬೇಕು ನೀನು! (ತ)
-ನು, ಮನ, ನಿರಂಜನಾದಿತ್ಯಗರ್ಪಿಸು ನೀನು!!!

ಕೇಳಿದ್ಕೊಡ್ದಿದ್ರೆ ಹೇಳಿದ್ಕೇಳ್ವವರಾರು? (ಕೋ)

-ಳಿಯಂತೆಲ್ಲಾ ತಮ್ಮೆಡೆಗೇ ಕೆದ್ಕುವರು! (ಇಂ)
-ದ್ಕೊಡ್ದವ್ರು ಮುಂದೆ ಕೊಡ್ತೇವಂದ್ರೆ ನಂಬರು! (ದು)
-ಡ್ದಿಹಗೆ ಹೀಗೆ ಮಾಡುವನು ದೇವರು! (ನಿ)
-ದ್ರೆ, ಆಹಾರ, ತೊರೆದಿಹರು ಭಕ್ತರು!
ಹೇಳಿದ್ಕೇಳಿ ಹೀಗಾಯ್ತೆಂದಳುತ್ತಿಹರು! (ಉ)
-ಳಿಗಾಲವಿಲ್ಲೆಂದು ತೊಳಲುತ್ತಿಹರು! (ಇ)
-ದ್ಕೇನು ಹೇಳ್ವರೀಗ ನಮ್ಮ ಬಲ್ಲವರು? (ಉ)
-ಳ್ವ ರೈತರು ದಿಕ್ಕು ತೋಚದೆ ಸುಸ್ತಾದ್ರು!
ಸನಾಶನಕ್ಕೂ ಗತಿಯಿಲ್ಲದಾದ್ರು!
ರಾಜ್ಯಭಾರ ಮಾಡುವರು ನಮ್ಮವರು! (ಯಾ)
-ರು? ನಿರಂಜನಾದಿತ್ಯನೆಂದರಿಯರು!!!

ನೀನ್ಕೇಳಿದ್ದನ್ನಿತ್ತೆ ನಾನೀಗ! (ನಾ)

-ನ್ಕೇಳಿದ್ದ ಕೊಡ್ಬೇಕು ನೀನೀಗ! (ಉ)
-ಳಿಯಬಾರದು ಋಣ ಭೋಗ! (ಗ)
-ದ್ದಲ ಮಾಡ್ಯೇನು ಫಲವೀಗ? (ನಿ)
-ನ್ನಿಷ್ಟದಂತಿರ್ಬೇಕ್ನಿನ್ನ ಮಗ! (ಕಿ)
-ತ್ತೆಸೆ ನಿನ್ನುದಾಸೀನವೀಗ!
ನಾನೂ, ನೀನೂ ಒಂದಾಗ್ಬೇಕೀಗ! (ಪು)
-ನೀತವಾಗ್ಲಿದರಿಂದ ಜಗ! (ಮ)
-ಗ ನಿರಂಜನಾದಿತ್ಯ ಖಗ!!!

ಕಣ್ಣಿಲ್ಲದವನ ಬಣ್ಣನೆಗೇನು ಬೆಲೆ? (ಹ)

-ಣ್ಣಿನ ರುಚಿ ಸವಿದ ಮೇಲದಕ್ಕೆ ಬೆಲೆ! (ಬ)
-ಲ್ಲವರ ಮಾತನುಭವವಾದ್ಮೇಲೆ ಬೆಲೆ!
ರ್ಶನ ಕೊಡದ ದೇವರಿಗೇನು ಬೆಲೆ?
ನವಾಸೋಪವಾಸಕ್ಕೆ ಬರ್ಬೇಕು ಬೆಲೆ!
ರ, ನಾರಿಯರ್ಕಣ್ಮುಚ್ಚ್ಯೆಲ್ಲಕ್ಕೀವರ್ಬೆಲೆ!
ಡವರಿಗಾಗುತಿದೆ ಇದ್ರಿಂದ ಕೊಲೆ! (ಬ)
-ಣ್ಣ ಬಣ್ಣದ ಮಾತುಗಳಾಡಿ ಬೀಸ್ವರ್ಬಲೆ!
ನೆಲೆದಪ್ಪಿ ಉರುಳ್ವಳಿದರಿಂದಬಲೆ!
ಗೇಣಿದಾರರಿಗೀಗ ತಿರುಗಿದೆ ತಲೆ!
ನುಡಿಯಲೇನೀಗಿನಾಡಳಿತದ ಕಲೆ!!
ಬೆಟ್ಟ, ಗುಡ್ಡಗಳ ಮೇಲೆಲ್ಲೂ ಬಂಗಲೆ!!! (ಮೇ)
-ಲೆ ನಿರಂಜನಾದಿತ್ಯನ ವಿಚಿತ್ರ ಲೀಲೆ!!!

ಅಂತರಂಗ, ಬಹಿರಂಗಾತೀತ, ಶುದ್ಧಾಂತರಂಗ!

ತವಿದರಿತಿರುವವನೆಂದೆಂದೂ ನಿಸ್ಸಂಗ!
ರಂಗ, ಸಾರಂಗ, ಪಾಂಡುರಂಗ, ವಿಮಲಾಂತರಂಗ!
ರ್ವದಿಂದೆಲ್ಲರನು ವಂಚಿಸುವವನನಂಗ!
ರಲನೇಕಜನ್ಮ ಕಾರಣ ಇವನ ಸಂಗ!
ಹಿತೈಷಿ ತಾನೆನಿಸಿ ಮಾಡುವನು ಮಾನ ಭಂಗ!
ರಂಗುರಂಗಿನಿವನಾಟಕೆ ಸೋತ ಋಷ್ಯಶೃಂಗ!
ಒನೆ ಲಿನೆ ಮಿ

ಸಿ




ತೀರ್ಥಳಾದಳವನ ಸಹವಾಸದಿಂದ ಗಂಗ!
ಪೋನಿಧಿ ಗಿರಿಜಾಧವನೀತ ಸುಂದರಾಂಗ!
ಶುಕಾದಿಗಳಿಗೆ ಆಗಿತ್ತು ಅವನ ಸತ್ಸಂಗ! (ಶು)
-ದ್ಧಾಂತರಂಗ ಸಿದ್ಧಿಗೆ ಪೂಜಿಸ್ಬೇಕು ಶಿವಲಿಂಗ!
ತ್ವ ಸಿದ್ಧಿಗೆ ಅನುಕೂಲ ಅಷ್ಟಾಂಗ ಯೋಗಾಂಗ!
ರಂಭೆ, ಊರ್ವಶಿ ಮೊದ್ಲಾದವರಿಂದ ತಪೋಭಂಗ!
ಭಾಸ್ಥಿ ಶ್ರೀ ನಿರಂಜನಾದಿತ್ಯ ಶುದ್ಧಾಂತರಂಗ!!!

ನಿಗ್ರಹಾನುಗ್ರಹ ಶಕ್ತಿಯಿಂದೈಹಿಕಾನಂದ! (ನಿ)

-ಗ್ರಹಿಸಲ್ಪಟ್ಟಿ ಮನಸ್ಸಿನಿಂದ ಬ್ರಹ್ಮಾನಂದ!
ಹಾಲು, ಮೊಸರು, ತುಪ್ಪದಿಂದ ಶರೀರಾನಂದ!
ನುಡಿ, ನಡೆಗಳೊಂದಾದಾಗ ನಿರ್ಭಯಾನಂದ!
ಗ್ರಹ ಶಾಂತ್ಯಾದಿ ಕರ್ಮದಿಂದ ಕ್ಷಣಿಕಾನಂದ!
ಸ್ತ, ಪಾದಾದಿಂದ್ರಿಯ ಸಂಬಂಧ ಭವಬಂಧ!
ರಣರಿಗೆಲ್ಲಾ ಪರಮಾತ್ಮನ ಸಂಬಂಧ! (ಭ)
-ಕ್ತಿ ಭಾವವೆಂಬುದು ಸುವಾಸನೆಯ ಶ್ರೀಗಂಧ! (ಬಾ)
-ಯಿಂದ ಬರುವ ಹರಿ ಕೀರ್ತನೆ ಸದಾನಂದ!
ದೈವೀ ಸಂಪತ್ತಿನಿಂದಲೇ ನಿತ್ಯ ನಿಜಾನಂದ!
ಹಿರಿಯರಾಡಿದರಿದನನುಭವದಿಂದ!
ಕಾತುರಾತುರಗಾರಗೊದಗದೀ ಆನಂದ!
ನಂದ ಕಂದನ ಮುರಲೀವಾದನಾತ್ಮಾನಂದ!
ತ್ತ ಗುರು ನಿತ್ಯ ನಿರಂಜನಾದಿತ್ಯಾನಂದ!!!

ಲೋಪ, ದೋಷಗಳ ತಿದ್ದಲಿ ಪಂಡಿತ!

ರಿಣತನು ಭಾಷೆಗಳಲ್ಲಿ ಆತ!
ದೋಣಿ ಸಾಗ್ವಾಗಿಲ್ಲ ನೀರಿನ ಹಿಡಿತ! (ವೇ)
-ಷ, ಭೂಷಣಗಳ ಲಕ್ಷಿಸಬಾರ್ದಾತ!
ರ್ವದಿಂದ ಪತಿತನಾಗುವನಾತ! (ಒ)
-ಳಗಿಹಳವನಲ್ಲಿ ವಾಣೀ ದೇವತಾ!
ತಿಳಿದಿದನು ಸಾಕ್ಷಾತ್ಕರಿಸ್ಬೇಕಾತ! (ಸ)
-ದ್ದಡಗಿ ಶುದ್ಧನಾಗುವನಾಗ ಆತ!
ಲಿಪ್ತನಾಗ್ಬಾರದು ಸಂಸಾರದಲ್ಲಾತ!
ಪಂಚಕೋಶ ಹರಿದು ಬರಬೇಕಾತ! (ಮ)
-ಡಿಯುವುದಿಲ್ಲಾಗಾತ ಪರಬ್ರಹ್ಮ ತಾ!
ಪೋನಿಧಿ ನಿರಂಜನಾದಿತ್ಯನಾತ!!!

ಅಧಿಕಾರಾನುಕೂಲವಿದೆ ನಿನಗೆ!

ಧಿಕ್ಕಾರ ಮಾಡುವುದೇಕೆಮ್ಮನ್ನು ಹೀಗೆ?
ಕಾಮ್ಯಾರ್ಥಿ ನಾನಲ್ಲ; ಗೊತ್ತಿದೆ ನಿನಗೆ!
ರಾತ್ರಿ, ದಿನ ಮೊರೆಯಿಡುವೆ ನಿನಗೆ! (ತ)
-ನು ಮನಗಳರ್ಪಿಸಿಹೆನು ನಿನಗೆ!
ಕೂಡಬೇಕು ನಿನ್ನನ್ನೆಂಬಾಸೆ ನನಗೆ!
ಕ್ಷ್ಯವಿಲ್ಲ ಇನ್ನಾವುದಕ್ಕೂ ನನಗೆ!
ವಿಧಿ, ಹರಿ, ಹರರೆಲ್ಲಾ ನೀನೆನಗೆ! (ತಂ)
-ದೆ, ತಾಯಿ, ಬಂಧು, ಬಳಗ ನೀನೆನಗೆ!
ನಿಸ್ವಾರ್ಥಿ ಸುಪುತ್ರನು ನಾನು ನಿನಗೆ!
ನ್ನನ್ನೇಕಿಗ ನೂಕಿರುವೆ ಧರೆಗೆ? (ತೆ)
-ಗೆದಪ್ಪು ನಿರಂಜನಾದಿತ್ಯಾ! ಎದೆಗೆ!!!

ಅವ್ಯವಹಾರಕ್ಕೆಡೆ ಕೊಡ್ಬೇಡ!

ವ್ಯವಸ್ಥೆಗೆ ತಪ್ಪಿ ನಡೆಯ್ಬೇಡ!
ಶ ಮೋಹಿನಿಯಾಟಕ್ಕಾಗ್ಬೇಡ!
ಹಾಳು, ಹರಟೆ ಮಾತನ್ನಾಡ್ಬೇಡ!
ಫ್ತಿನಲ್ಲಿ ವಂಚನೆ ಮಾಡ್ಬೇಡ! (ಹ)
-ಕ್ಕೆಮ್ಮದೇನೆಂದರಿಯದಿರ್ಬೇಡ! (ಒ)
-ಡೆಯನಲ್ಲವಿಶ್ವಾಸ ಪಡ್ಬೇಡ!
ಕೊಟ್ಟವನಿಗೆ ಮೋಸ ಮಾಡ್ಬೇಡ! (ಬೇ)
-ಡ್ಬೇಡ, ನಾಮ ಸ್ಮರಣೆ ಬಿಡ್ಬೇಡ! (ಮೃ)
-ಡ, ನಿರಂಜನಾದಿತ್ಯಲ್ಲೆನ್ಬೇಡ!!!

ಅನಿವಾರ್ಯಕ್ಕೆ ಆಳಾಗಬೇಕು!

ನಿರ್ಲಕ್ಷ್ಯ ಸ್ಥಾನ, ಮಾನಕ್ಕಾಗ್ಬೇಕು!
ವಾದಕ್ಕೆಡೆ ಕೊಡದಿರಬೇಕು! (ಕಾ)
-ರ್ಯ ತತ್ಪರನಾಗುತ್ತಿರಬೇಕು! (ಬೆ)
-ಕ್ಕೆಗೆ ಜಾಗವಿಲ್ಲದಿರಬೇಕು!
ತ್ಮ ಭಾವ ಸ್ಫುರಿಸುತ್ತಿರ್ಬೇಕು! (ವೇ)
-ಳಾ ವೇಳೆ ಎಣಿಸದಿರಬೇಕು!
ಟ್ಟಿ ಮನಸ್ಸುಳ್ಳವನಾಗ್ಬೇಕು!
ಬೇರಾರನ್ನೂ ದೂಷಿಸದಿರ್ಬೇಕು! (ಬೇ)
-ಕು, ನಿರಂಜನಾದಿತ್ಯನಾಗ್ಬೇಕು!!!

ಗೋಳಿಲ್ಲದ ಬಾಳಿನ ದಿನವಾವುದು? (ಹೇ)

-ಳಿ ಮನವ ಸರಿಪಡಿಸ್ಲಿಕ್ಕಾಗದು! (ತ)
-ಲ್ಲಣ ಹುಟ್ಟು ಗುಣವಾಗಿ ಬಂದಿಹುದು!
ರಿದ್ರ, ಶ್ರೀಮಂತರಿಗೆಲ್ಲಾ ಇಹುದು!
ಬಾಲಕ, ಬಾಲಕಿಯರಿಗೂ ಇಹುದು! (ಗಾ)
-ಳಿ ಮೂಟೆ ಕಟ್ಟಿದ್ರೇನು ಸುಖವಹುದು?
ಶ್ವರಕ್ಕೆ ಆದ್ರಿಂದ ಆಶಿಸ್ಬಾರದು!
ದಿವ್ಯ ಜೀವನದಿಂದ ಸುಖವಿಹುದು!
ರರಿದನ್ನು ಪರೀಕ್ಷಿಸಬಹುದು!
ವಾದ, ವಿವಾದದಿಂದರಿವಾಗದು! (ಸಾ)
-ವು, ಸಂಕಟ ಯಾವ ದೇಹಕ್ಕೂ ತಪ್ಪದು!
ದುಡಿದ್ರೆ ನಿರಂಜನಾದಿತ್ಯಾಗ್ಬಹುದು!!!

ಬೀಸುವ ಗಾಳಿಗೆ ಕಾಳ್ಯಾದ್ರೇನು ಬೋಳ್ಯಾದ್ರೇನು!

ಸುಳಿ ಗಾಳಿ ಪ್ರಕೃತಿಯ ಅಕ್ರಮವಲ್ವೇನು?
ನಗಳನ್ನೂ ನಿರ್ನಾಮ ಮಾಡಿಲ್ಲವೇ ತಾನು?
ಗಾಮ, ಭೀಮಾದಿಗಳೆಲ್ಲಾ ಉರುಳಿಲ್ಲವೇನು? (ಹೇ)
-ಳಿದವರೂ ಕೇಳಿದವರೂ ಅಳಿದ್ರಲ್ವೇನು?
ಗೆಳೆಯರೂ, ವೈರಿಗಳೂ ಸತ್ತುಹೋದ್ರಲ್ವೇನು?
ಕಾರಣಕರ್ತಗಿದೊಂದಾಟವೆಂದರಿ ನೀನು! (ಗೂ)
-ಳ್ಯಾ ಪರಶಿವನ ಹೊತ್ತು ತಿರುಗುತ್ತದೇನು? (ಉ)
-ದ್ರೇಕೋದ್ವೇಗದಿಂದ ತಪ್ಪೆಣಿಸಬೇಡ ನೀನು! (ಅ)
-ನುಮಾನ ಬಿಟ್ಟು ಆತ್ಮಾನಂದನಾಗ್ಬೇಕು ನೀನು!
ಬೋಧಿಸಿದವರೆಲ್ಲಾತ್ಮನನ್ನು ತೋರಿದ್ರೇನು? (ಚ)
-ಳ್ಯಾದ್ರೂ, ಸೆಖೆಯಾದ್ರೂ ಸದಾ ಸಹಿಸ್ಯಾದದ್ದೇನು? (ಭ)
-ದ್ರೇಶ್ವರ, ಶರೀರವಲ್ಲವೆಂದು ನಂಬು ನೀನು! (ತ)
-ನು ಭಾವ ಬಿಟ್ಟು ನಿರಂಜನಾದಿತ್ಯಾಗು ನೀನು!!!

ಕುಡ್ಕ, ಹಡ್ಕ, ಬಾಯ್ಬಡ್ಕರ ಸಂಗ ಮಾಡ್ಬೇಡಕ್ಕಾ! (ಮಾ)

-ಡ್ಕರುಣಾನಿಧಿ ಶ್ರೀ ಕೃಷ್ಣನ ಧ್ಯಾನವನ್ನಕ್ಕಾ!
ದಿಬದೆಗೆ ತ್ರಿಮೂರ್ತಿಗಳೂ ಮಕ್ಕಳಕ್ಕಾ! (ಕೆ)
-ಡ್ಕರ ಸಹವಾಸದಿಂದ ಸರ್ವನಾಶವಕ್ಕಾ!
ಬಾಲಕೃಷ್ಣನ ಬಾಲಲೀಲೆ ವಿಚಿತ್ರವಕ್ಕಾ! (ತಾ)
-ಯ್ಬಲವಂತಕ್ಕೆ ಬಾಯಲ್ಲಿ ತೊರ್ದ ಬ್ರಹ್ಮಾಂಡಕ್ಕಾ! (ಮಾ)
-ಡ್ಕರ್ತವ್ಯವೆಂದರ್ಜುನನನ್ನೆಬ್ಬಿಸಿದನಕ್ಕಾ!
ಣರಂಗದಲ್ಲಾಯ್ತದ್ವೈತ ದರ್ಶನವಕ್ಕಾ!
ಸಂಗ ಶ್ರೀ ಕೃಷ್ಣನದ್ದಾಗ ಸಾರ್ಥಕವಾಯ್ತುಕ್ಕಾ!
ರ್ವಿಗಳೆಲ್ಲರಿಗೂ ಪ್ರಾಯಶ್ಚಿತ್ತವಾಯ್ತಕ್ಕಾ!
ಮಾಡ್ಬೇಕು ಆದುದರಿಂದ ಸತ್ಸಂಗವನ್ನಕ್ಕಾ! (ಇ)
-ಡ್ಬೇಕು ಪೂರ್ಣ ವಿಶ್ವಾಸ ಗುರುಪಾದದಲ್ಲಕ್ಕಾ!
ಮರಧರನಿಂದಧಿಕ ಗುರುವಿಲ್ಲಕ್ಕಾ! (ಅ)
-ಕ್ಕಾ ನಿರಂಜನಾದಿತ್ಯಾನಂದಾ ಸ್ವರೂಪವಕ್ಕಾ!!!

ಪ್ರಜೆಗಳೆಚ್ಚತ್ತಾಗಾಡಳಿತ ಸುಸೂತ್ರ! (ಬಂ)

-ಜೆಯಾದವಳು ಹೆಂಡತಿ ಹೆಸ್ರಿಗೆ ಮಾತ್ರ!
ರ್ವಿಯಾದವಳಿಗೆ ಜನಿಸನು ಪುತ್ರ! (ಇ)
ಳೆಯ ಜೀವನದಲ್ಲಿ ಇದು ಒಂದು ಚಿತ್ರ! (ಸ)
-ಚ್ಚೆರಿತೆಯಿಲ್ಲದಿರುವ ಬಾಳಪವಿತ್ರ! (ದ)
-ತ್ತಾವತಾರದಿಂದುದ್ಧಾರ ಅತ್ರಿ ಗೋತ್ರ!
ಗಾಡಿಗಾರ ಕೃಷ್ಣನಿರುವನು ಸರ್ವತ್ರ! (ಒ)
-ಡನಾಡಿ ಅರ್ಜುನನಿಗಾದನವ ಮಿತ್ರ! (ಆ)
-ಳಿ, ಬಾಳಿ, ಕಂಗೊಳಿಸಿತವನಾಪ್ತ ಚಿತ್ರ!
ತ್ವೋಪದೇಶೀ ಗೀತೆಯದು ಮಹತ್ಪಾತ್ರ!
ಸುಡುಗಾಡಾಯ್ತು ರಣರಂಗ ಕುರುಕ್ಷೇತ್ರ!
ಸೂಕ್ತಾಡಳಿತ ನಡೆಸಿದಾ ಪಾಂಡುಪುತ್ರ! (ಮಿ)
-ತ್ರನೆನಿಸಿ ನಿರಂಜನಾದಿತ್ಯ ಸರ್ವತ್ರ!!!

ದೈವೀಕ ಸುಖಪ್ರದಾಯಕ!

ವೀರ್ಯನಾಶಕ ದುಃಖಕಾರಕ!
ಶ್ಮಲ ಕಳೆಯ್ಬೇಕ್ಸಾಧಕ!
ಸುತೆ, ಸುತಾದಿಗಳ್ಭಾಧಕ!
ರಾರಿಯ ಧ್ಯಾನ ತಾರಕ!
ಪ್ರಜೆಗಿರ್ಬೇಕಿದು ಜ್ಞಾಪಕ!
ದಾಶರಥಿಗಾಗ್ದತಿರೇಕ!
ಜ್ಞಕ್ಕವ ಮಾರ್ಗದರ್ಶಕ! (ಲೋ)
-ಕ ನಿರಂಜನಾದಿತ್ಯಾತ್ಮಕ!!!

ರಾಗ, ದ್ವೇಷ ಜಗದೋದ್ದಾರನಿಗಿಲ್ಲ!

ರ್ವವೆಂಬುದವನಿಗೆಳ್ಳಷ್ಟೂ ಇಲ್ಲ! (ಉ)
-ದ್ವೇಗ, ಉದ್ರೇಕಗಳು ಅವನಿಗಿಲ್ಲ!
ಡ್ರಿಪುಗಳನ್ನಾತ ಜೈಸಿಹನೆಲ್ಲಾ!
ರಾ, ಜನ್ಮದುಃಖ ಅವನಿಗಿಲ್ಲ!
ತಿ, ಸ್ಥಿತಿಗೆ ಕಾರಣ ಅವ್ನೇ ಎಲ್ಲ!
ದೋಷಾರೋಪಣೆಗವನು ಪಾತ್ರನಲ್ಲ! (ಶ್ರ)
-ದ್ದಾ, ಭಕ್ತಿಯಿಂದ ಪೂಜಿಸ್ಬೇಕವ್ನನ್ನೆಲ್ಲಾ!
ಕ್ಕಸರನ್ನೊಕ್ಕಲಿಕ್ಕುವವಾ ಮಲ್ಲ!
ನಿತ್ಯ, ಸತ್ಯಾನಂದ ಸ್ವರೂಪಾ ಪ್ರಪುಲ್ಲ!
ಗಿರಿಯನ್ನೆತ್ತಿಂದ್ರನ ಮುರಿದಾ ಗೊಲ್ಲ! (ಬ)
-ಲ್ಲ ನಿರಂಜನಾದಿತ್ಯಾ ಲೀಲೆಯನ್ನೆಲ್ಲ!!!

ತನ್ನ ಕೆಲಸದಲ್ಲಿ ತಾನು ಮೈಮರೆತಿರ್ಬೇಕು! (ಉ)

-ನ್ನತಿಗೆ ಇದು ಅತ್ಯಗತ್ಯವೆಂದರಿತಿರ್ಬೇಕು!
ಕೆತ್ತಿದಂತೆ ಗೊಂಬೆಯೆಂಬ ಮಾತು ನಿಜವಾಗ್ಬೇಕು!
ಗ್ನ, ಮುಹೂರ್ತ ನೋಡುವಭ್ಯಾಸ ಬಿಟ್ಟುಬಿಡ್ಬೇಕು!
ರ್ವೇಶ್ವರನಿಗೊಪ್ಪಿಸಿ ಎಲ್ಲಾ ಮಾಡುತ್ತಿರ್ಬೇಕು!
ಡ ಸೇರುವ ತನಕ ಎದೆಗೆಡದಿರ್ಬೇಕು ! (ಮ)
-ಲ್ಲಿಕಾರ್ಜುನನ ಭಜನೆ “ಅಕ್ಕ” ನಂತೆ ಮಾಡ್ಬೇಕು!
ತಾಯಿ, ತಂದೆ, ಅವನೇ ಎಂಬ ನಂಬಿಗೆಯಿರ್ಬೇಕು! (ತ)
-ನು, ಮನ, ಧನವೆಲ್ಲಾ ಅವನಿಗರ್ಪಿಸ್ಬೇಕು!
ಮೈಥಿಲಿಯೇ ತಾನಾಗಿ ಪಟ್ಟ ಕಟ್ಟಿಸಿಕೊಳ್ಬೇಕು!
ದಾಂಧ ರಾವಣಾಸುರನ ಲಕ್ಷಿಸದಿರ್ಬೇಕು! (ಮೇ)
-ರೆ

ಈರಿತೆಂದಾಗ ತಾನೇ ಮಹಾ ಕಾಳಿಯಾಗ್ಬೇಕು!
ತಿತಿಕ್ಷೆ, ವೈರಾಗ್ಯ, ಜೀವನಲ್ಲಿ ಬಲವಾಗ್ಬೇಕು! (ಇ)
-ರ್ಬೇಕು, ಸರ್ವಸಂಗಪರಿತ್ಯಾಗಿಯಾಗಿ ಇರ್ಬೇಕು!
ಕುಲ ನಿರಂಜನಾದಿತ್ಯನಿಂದುದ್ಧಾರವಾಗ್ಬೇಕು!!!

ತನಗೆ ತಾನು ಗುರುವಾಗ್ವುದೇ ಗುರಿ!

ರರಿಗಿದಕ್ಕೆ ನೆರವಾಗ್ಬೇಕ್ಹರಿ!
ಗೆಳೆಯ ಅರ್ಜುನನಿಗಾದ ಪರಿ!
ತಾನೇಕಾಗ್ಬೇಕನ್ಯರ ಮೇಲಧಿಕಾರಿ?
ನುಡಿದಂತೆ ನಡೆಯದೇ ಹಾಳಾದಿರಿ!
ಗುಹ್ಯಾದಿಂದ್ರಿಯಕ್ಕಾಳಾಗೀಗ ಕೆಟ್ಟಿರಿ!
ರುಜುಮಾರ್ಗದಲ್ಲೇ ಸದಾ ನಡೆಯಿರಿ!
ವಾದದಲ್ಲೇ ಆಯುಷ್ಯ ಕಳೆಯದಿರಿ! (ಆ)
-ಗ್ವುದೆಲ್ಲಾ ಒಳ್ಳೆಯದಕ್ಕೆಂದರಿಯಿರಿ!
ದೇವರೇ ನೀವಾಗ್ವುದಕ್ಕೆ ಯತ್ನಿಸಿರಿ
ಗುಡಿ ನಿಮ್ಮ ದೇಹವೆಂದು ತಿಳಿಯಿರಿ! (ಹ)
-ರಿ ನಿರಂಜನಾದಿತ್ಯನೆಂದರಿಯಿರಿ!!!

ಮನಸ್ಸಿನಲ್ಲಿ ಆಸೆ ಇದೆ!

ರ, ನಾಡಿ ಬಲಗುಂದಿದೆ!
ಸಿಕ್ಕಿದ್ದು ದಕ್ಕದಂತಾಗಿದೆ!
ಕಾರ ದರ್ಶನಕ್ಕಾಗಿದೆ! (ಕ)
-ಲ್ಲಿನ ಗೊಂಬೆ ಬೇಕಾದಷ್ಟಿದೆ!
ರ್ತೊ

ದ್ಧಾರದು ಮಾಡದಿದೆ!
ಸೆರೆಗೊಡ್ಡಿ ಬೇಡಿದ್ದಾಗಿದೆ!
ದ್ರ ಜೋಳಿಗೆ ತುಂಬದಿದೆ! (ತಂ)
-ದೆ ನಿರಂಜನಾದಿತ್ಯನೆಂದೆ!!!

ಚಿರಾಯುರಾರೋಗ್ಯ ಭಾಗ್ಯಗಳ್ಸಂಪದ!

ರಾಜಾಧಿರಾಜರಿಗೂ ಬೇಕೀ ಸಂಪದ!
ಯುಕ್ತಾಹಾರ, ವಿಹಾರದಿಂದಾ ಸಂಪದ!
ರಾಗ, ದ್ವೇಷಕ್ಕೆ ಲಭಿಸದಾ ಸಂಪದ!
ರೋಗ, ಹರ ಸದ್ಗುರು ಕೃಪಾ ಸಂಪದ! (ಭಾ)
-ಗ್ಯವಿದೇ ಸ್ಥಿರ ಪರಮಾರ್ಥ ಸಂಪದ!
ಭಾವಾತೀತವೇ ಸ್ವರೂಪಾತ್ಮ ಸಂಪದ! (ಯೋ)
-ಗ್ಯತಾನುಸಾರ ಅನುಗ್ರಹಾ ಸಂಪದ!
ಗನಮಣಿಗಿದೇ ಸರ್ವ ಸಂಪದ! (ಬಾ)
-ಳ್ಸಂಜೀವಿನಿಯಾಗಲಗತ್ಯಾ ಸಂಪದ!
ರಮಾರ್ಥಿಗೆ ಬೇಕಿನ್ಯಾವ ಸಂಪದ? (ಕಂ)
-ದ ನಿರಂಜನಾದಿತ್ಯನಿಗಾ ಸಂಪದ!!!

ಸದ್ಭಾವನೆಯುಳ್ಳವನಾ ಮಹಾದೇವ! (ಸ)

-ದ್ಭಾರ್ಯಾಂಗನೆಗೆ ಅವನೇ ದೇವ ದೇವ!
ರಿಸಿದ ಮೇಲ್ಬಿಡಲಾರನಾ ಶಿವ!
ನೆನೆಯ ಬೇಕವನ ದಿವ್ಯ ನಾಮವ!
ಯುಗಾಂತ್ಯದಲ್ಲವನೇ ಕಾಲ ಭೈರವ! (ಬೆ)
-ಳ್ಳಗಿನ ಕೈಲಾಸದಲ್ಲವ್ನ ವೈಭವ!
ರ ಗುರು ಗುಹನಿಗೆ ತಂದೆ ಅವ!
ನಾನೂ, ನೀನೂ ಬಂದೆಂಬನಾ ಅಂಬಾಧವ!
ನನ ಮಾಡ್ಮಲ್ಲಿಕಾರ್ಜುನ ಲಿಂಗವ!
ಹಾಲಹಲವ ಜೀರ್ಣಿಸಿಕೊಂಡನವ!
ದೇಗುಲವ ಮಾಡು ನಿನ್ನ ಶರೀರದ! (ಶಿ)
-ವ ನಿರಂಜನಾದಿತ್ಯ ವಾಸ ಮಾಡುವ!!!

ಶಂಕರ ನಾರಾಯಣಾತ್ಮಾನಂದ ಕಂದ!

ರ್ತವ್ಯ ನಿಷ್ಠನಾಗೆಂದರ್ಜುನಗಂದ!
ಣರಂಗದಲ್ಲಿ ಹೇಡಿಯಾಗ್ಬೇಡೆಂದ!
ನಾನಿರಲು ನಿನಗೇಕೆ ಭಯವೆಂದ!
ರಾತ್ರಿ, ದಿನ ನಿನ್ನೊಡನಿರುವೆನೆಂದ!
ಶಸ್ಸು ನನ್ನಿಂದ ನಿನಗಾಗ್ವುದೆಂದ! (ಪ್ರಾ)
-ಣಾರ್ಪಣೆ ಮಾಡುವರು ವೈರಿಗಳೆಂದ! (ಆ)
-ತ್ಮಾನುಭವದಿಂದೆಲ್ಲವನ್ನೂ ಮಾಡೆಂದ!
ನಂಬಿಗೆ ನನ್ನಲ್ಲಚಲ ಇರಲೆಂದ!
ರ್ಶನ ಮಾಡೆನ್ನ ವಿಶ್ವರೂಪವೆಂದ!
ಕಂಗಾಲಾಗದಿರು ನೋಡಿ ಅದನ್ನೆಂದ!
ತ್ತ ನಿರಂಜನಾದಿತ್ಯಾನಂದ ಕಂದ!!!

ಕೊಳಲನ್ನೂದಿದನಾ ಶ್ರೀಧರ ಮುರಲೀಧರ! (ತಾ)

-ಳ ಲಯ ಗತಿಬದ್ಧವಾದಕಾ ಮುರಲೀಧರ!
ಕ್ಷ್ಯಮಾಡುವವನಲ್ಲ ಠೀಕೆ ಮುರಲೀಧರ! (ತ)
-ನ್ನೂರರಸಾ ಬಲರಾಮಾನುಜ ಮುರಲೀಧರ!
ದಿವ್ಯಾಧ್ಯಾತ್ಮ ಸಾಧಕ, ಬೋಧಕಾ ಮುರಲೀಧರ!
ರಿದ್ರ, ಶ್ರೀಮಂತರೆಲ್ಲಾ ಗುರು ಮುರಲೀಧರ!
ನಾಮ ರೂಪಾನಂತ ಭಗವಂತಾ ಮುರಲೀಧರ!
ಶ್ರೀಕರ, ಶುಭಕರ ಸ್ವರೂಪಾ ಮುರಲೀಧರ!
ರ್ಮ, ಕರ್ಮಗಳಿಗೆಲ್ಲಾಧಾರಾ ಮುರಲೀಧರ!
ರಾಗ ಜ್ಞಾನ ಸಾಗರಾ ಶ್ರೀಧರಾ ಮುರಲೀಧರ!
ಮುನಿಜನ ಹೃದಯ ಪ್ರದೀಪಾ ಮುರಲೀಧರ!
ಘುಪತಿ ರಾಘವನಾದವಾ ಮುರಲೀಧರ!
ಲೀಲಾಮಯ ಮಾನುಷ ವಿಗ್ರಹಾ ಮುರಲೀಧರ! (ಬಂ)
-ಧಹರ, ರಾಧಾ ವರ, ಸುಂದರಾ ಮುರಲೀಧರ! (ನ)
-ರಹರಿ ಶ್ರೀ ನಿರಂಜನಾದಿತ್ಯಾ ಮುರಲೀಧರ!!!

ಬರೆಸುವವ ನಾಗರಾಜ! (ಬ)

-ರೆಯುವವನಾ ಯೋಗಿರಾಜ!
ಸುಪುತ್ರನಿವನು ಸಾಂಬಜ!
ರ ಗುರುವೆಂಬುದು ನಿಜ!
ರ್ಣಾತೀತ ಸ್ಥಿತಿ ಸಹಜ!
ನಾಮಸ್ಮರಣೆ ದತ್ತ ಬೀಜ!
ಣರಾಜ್ಯದಲ್ಲೊಬ್ಬ ಪ್ರಜ!
ರಾಮನೂ ಮಾಡಿದನು ಪೂಜ!
ಯ ನಿರಂಜನಾದಿತ್ಯಜ!!!

ಸಿದ್ಧನಾಗು! ಯುದ್ಧವನ್ನೊದ್ದು ಶುದ್ಧನಾಗು! (ಸ)

-ದ್ಧರ್ಮ, ಸದಾಚಾರದಿಂದ ಸಾಧಕನಾಗು!
ನಾರುವೀ ಶರೀರ ಮೋಹವಿದೂರನಾಗು!
ಗುಣಾತೀತ ನೀನಾಗಿ ಪರಬ್ರಹ್ಮನಾಗು! (ಸಾ)
-ಯುವ ಮೊದಲೇ ಸಾಧಿಸಿ ಮುಕ್ತ ನೀನಾಗು! (ಬ)
-ದ್ಧನಾಗಿ ಸಂಸಾರದಲ್ಲಿರದವನಾಗು!
ರ ಬ್ರಹ್ಮಚರ್ಯ ಪಾಲನಾಭ್ಯಾಸಿಯಾಗು! (ಇ)
-ನ್ನೊಮ್ಮೆ ಹುಟ್ಟು, ಸಾವಿಗೊಳಗಾಗದವ್ನಾಗು! (ಗೆ)
-ದ್ದು ಷಡ್ರಿಪುಗಳನ್ನು ಜಿತೇಂದ್ರಿಯ ನಾಗು!
ಶುಭಾಶುಭ, ಭಯ, ಭ್ರಾಂತಿ ಬಿಟ್ಟವನಾಗು! (ಸಿ)
-ದ್ಧರ ಸ್ಥಿತಿಯಿದೆಂದರಿತವರಂತಾಗು!
ನಾಮ ಜಪ ಸುಲಭೋಪಾಯದಿಂದದಾಗು!
ಗುರು ನಿರಂಜನಾದಿತ್ಯಗೆ ಶರಣಾಗು!!!

ವಿಚಾರವಿಲ್ಲ ಪ್ರಚಾರವೆಲ್ಲ!

ಚಾರಿತ್ರಿಕಾಲಂಕಾರದಕ್ಕೆಲ್ಲಾ!
ಹಸ್ಯ ಭಗವಂತನೇ ಬಲ್ಲ!
ವಿಶೇಷೋತ್ಸವಕ್ಕೆ ಬೆಲೆಯೆಲ್ಲಾ! (ಬ)
-ಲ್ಲ ಜ್ಞಾನಿಯನ್ನಲಕ್ಷಿಪರೆಲ್ಲಾ!
ಪ್ರಜಾಪ್ರಭುತ್ವಕ್ಕೀ ಕಾಲವೆಲ್ಲ!
ಚಾಕಚಕ್ಯತೆಯಾಳ್ವಿಕೆಯಿಲ್ಲ! (ಪ)
-ರಮಾರ್ಥ ಬಾಯ್ಮಾತಿನಲ್ಲೇ ಎಲ್ಲಾ!
ವೆಸನಗಳಿಗೆ ಮಿತಿಯಿಲ್ಲ! (ಪು)
-ಲ್ಲ ನಿರಂಜನಾದಿತ್ಯಳಿಸ್ಲೆಲ್ಲಾ!!!

ಹೊರಗಣ್ಣ ಮುಚ್ಚಿ, ಒಳಗಣ್ಣ ತೆರೆ!

ಹಸ್ಯವ ಮುಚ್ಚಿಹುದು ಬಾಹ್ಯ ಪೊರೆ!
ಮನ ಹೊರಗಾದರೆ ಬೇಕು ಸೀರೆ! (ಸ)
-ಣ್ಣ, ದೊಡ್ಡವರಲ್ಲೆಲ್ಲದೇ ಪರಂಪರೆ!
ಮುಳುಗಲಿಕ್ಕಿದೆ ಬೇಕಾದಷ್ಟು ಕೆರೆ! (ಬಿ)
-ಚ್ಚಿಡದಿದ್ದರೆ ಬಟ್ಟೆಗಳ ತೊಂದರೆ!
ಳಗಿಳಿದು ತೊಳೆವಾಗಿಲ್ಲ ಧರೆ! (ತ)
-ಳಮಳ, ಕಳವಳ, ಮನಕೆ ಹೊರೆ!
ಗನ ಸದೃಶ ನೀನಾಗಿ ಮೈಮರೆ! (ಬ)
-ಣ್ಣ ಬಣ್ಣಗಳಳಿದಾಗ ನೀನೇ ಧೊರೆ!
ತೆರೆಯದಿದ್ದ್ರೆ ಕಣ್ಣಾನಂದದ ಸೂರೆ! (ಧ)
-ರೆಗೆ ನಿರಂಜನಾದಿತ್ಯಾನಂದ ಬೀರೆ!!!

ಅಶಕ್ತ ಯಾರಿಗೇನ್ಮಾಡಬಲ್ಲ?

ಕ್ತ ಏನ್ಬೇಕಾದ್ರೂ ಮಾಡ್ಬಲ್ಲ! (ಭ)
-ಕ್ತನಾದವ ಇನ್ನೇನ್ಹೇಳ್ಬಲ್ಲ?
ಯಾತನೆಯ ಸಹಿಸಲೊಲ್ಲ!
ರಿಪುಗಳಾರ್ಭಟವೇ ಎಲ್ಲ!
ಗೇಲಿ ಮಾಳ್ಪವರನ್ಯರನ್ನೆಲ್ಲ! (ಸ)
-ನ್ಮಾರ್ಗಿಗಳಿಗೆ ಸ್ಥಾನ ಇಲ್ಲ! (ಆ)
-ಡ



ಹುದು, ಮಾಡುವವರಿಲ್ಲ! (ಬ)
ಒನೆ ಲಿನೆ ಮಿ

ಸಿ




-ಲ್ಲ ನಿರಂಜನಾದಿತ್ಯ ಪುಲ್ಲ!!!

ದಾಸರ ದಾಸ ನಾನೆಂದೀಗೆಲ್ಲಿ ಹೋದೆ?

ಕಲವೂ ನಿನ್ನಿಚ್ಛೆಯೆಂದು ನಂಬಿದೆ!
ಮೇಶ, ಉಮೇಶ ನೀನೆಂದ್ಭಜಿಸಿದೆ!
ದಾರಿ ನಡೆಸಿ ಊರು ಸೇರಿಸದಾದೆ!
ಗುಣ, ಸಾಕಾರ ರೂಪ ತೋರದಾದೆ!
ನಾಳೆ, ನಾಳೆ ಎಂದು ನಂಬಿ ಹುಂಬನಾದೆ!
ನೆಂಟನೂ, ಭಂಟನೂ ನಾನೆಂದು ತಪ್ಪಿದೆ!
ದೀರ್ಘ ಕಾಲದ ತಪದಿಂದೇನಾಗಿದೆ?
ಗೆಳೆಯ ನೀನಾಗುವೆಯೆಂದೂಹಿಸಿದೆ! (ಎ)
-ಲ್ಲಿ ನೋಡಿದರೂ ಮೋಸವೇ ನಡೆದಿದೆ!
ಹೋಗ್ಬೇಕಾದದ್ದೆಲ್ಲಾ ಹೋಗಿ ಮುಗಿದಿದೆ! (ಎ)
-ದೆ ನಿರಂಜನಾದಿತ್ಯಗಾಗುಳಿದಿದೆ!!!

ಹೋಗಳುವ, ತೆಗಳುವವರೇಕೆ ರಾಮರಾಜ್ಯಕ್ಕೆ?

ರ್ವಿಗಳ ಹೊಡೆದಾಟ ಬೇಕಿಲ್ಲಾ ರಾಮರಾಜ್ಯಕ್ಕೆ! (ಆ)
-ಳುಗಳೂ, ಆಳುವವರೂ ಸಮಾನಾ ರಾಮರಾಜ್ಯಕ್ಕೆ!
ಸನ, ಆಶನದಭಾವವಿಲ್ಲಾ ರಾಮರಾಜ್ಯಕ್ಕೆ!
ತೆರೆದ ಹೃದಯದ ಪ್ರಜೆಗಳೇ ರಾಮರಾಜ್ಯಕ್ಕೆ!
ಮನವೆಲ್ಲರದ್ದೂ ಶ್ರೀರಾಮಚಂದ್ರನ ಪಾದಕ್ಕೆ! (ಹಾ)
-ಳು ಹರಟೆ ಮಾತು ಸೊಗಸದಾ ಶ್ರೀ ರಾಮರಾಜ್ಯಕ್ಕೆ!
ಸಿಷ್ಟಾದಿಗಳ ಮಾರ್ಗದರ್ಶನ ಸೇವೆ ಅದಕ್ಕೆ!
ನಜಾಕ್ಷಿ, ಸೀತಾದೇವಿಯ ನಿತ್ಯ ಪೂಜೆ ಅದಕ್ಕೆ!
ರೇಗಾಟ, ಕೂಗಾಟಗಳೊಪ್ಪವು ಅವಳ ಮನಕ್ಕೆ!
ಕೆರೆ, ಭಾವಿಗಳಿಗೆ ಕಮ್ಮಿಯಿಲ್ಲಾ ರಾಮರಾಜ್ಯಕ್ಕೆ!
ರಾರಾಜಿಸುವ ಫಲ, ಪುಷ್ಪಗಿಡಗಳಾ ರಾಜ್ಯಕ್ಕೆ!
ಹಾತ್ಮರಿಗೆ ಸದಾ ಸುಸ್ವಾಗತಾ ರಾಮರಾಜ್ಯಕ್ಕೆ!
ರಾಕ್ಷಸಾಧಮರ ಪ್ರವೇಶವಿಲ್ಲಾ ರಾಮರಾಜ್ಯಕ್ಕೆ! (ಪೂ)
-ಜ್ಯ, ಸೀತಾರಾಮರೇ ತಂದೆ, ತಾಯಿ, ದೇವರಾ ರಾಜ್ಯಕ್ಕೆ! (ಅ)
-ಕ್ಕೆ ಶ್ರೀ ನಿರಂಜನಾದಿತ್ಯ ಗುರು ಶ್ರೀ ರಾಮರಾಜ್ಯಕ್ಕೆ!!!

ಕಣ್ಣಿಗೆ ಕಾಣಿಸಬೇಕಾ ಶ್ರೀ ಕೃಷ್ಣ! (ಬ)

-ಣ್ಣಿಸಿಕೊಂಡದ್ದಾಗ ಸಾರ್ಥಕಾ ಕೃಷ್ಣ!
ಗೆಳೆಯ ನಮಗೂ ಆಗಲಾ ಕೃಷ್ಣ!
ಕಾರಣ? ಭೇದ ರಹಿತಾ ಶ್ರೀ ಕೃಷ್ಣ! (ಉ)
-ಣಿಸಿಕೊಳ್ಳಲಿ ನಮ್ಮಿಂದಲೂ ಕೃಷ್ಣ!
ರ್ವ ಸಮನ್ವಯ ಉಳ್ಳವಾ ಕೃಷ್ಣ!
ಬೇಡ ದೀನರ ಮೇಲೆ ಹಠ ಕೃಷ್ಣಾ!
ಕಾದಿರುವುದೆಷ್ಟು ಸಮಯ ಕೃಷ್ಣಾ?
ಶ್ರೀ ಕೃಷ್ಣ, ಗೋವಿಂದ, ಮುಕುಂದ ಕೃಷ್ಣಾ!
ಕೃಪೆ ಮಾಡೆಮ್ಮಾ ಮೇಲಮ್ಮಯ್ಯ ಕೃಷ್ಣಾ! (ಪೂ)
-ಷ್ಣ, ನಿರಂಜನಾದಿತ್ಯಾನಂದ ಕೃಷ್ಣ!!!

ನಾನು, ದೊಡ್ಡವನೂ ಅಲ್ಲ, ಸಣ್ಣವನೂ ಅಲ್ಲ!

ನುಡಿ ನನ್ನದಿದರಲ್ಲಿ ಸುಳ್ಳೆಳ್ಳಷ್ಟೂ ಇಲ್ಲ!
ದೊಡ್ಡದೆಂಬುದು ನನ್ನಿಂದ ಬೇರೆ ಇನ್ನೊಂದಿಲ್ಲ! (ಹೆ)
-ಡ್ಡರಲ್ಲಿ ಕೊನೇಯವನು ನಾನೆಂದ್ರೆ ತಪ್ಪಿಲ್ಲ!
ರ ಗುರು ದ್ವಂದ್ವಾತೀತನೆಂದು ಜ್ಞಾನಿ ಬಲ್ಲ!
ನೂರಾರು ಕೋಟಿ ವರ್ಷದನುಭವ ಸುಳ್ಳಲ್ಲ!
ಮರನಾದಾತ್ಮನಿಗೆ ಜರಾ, ಜನ್ಮವಿಲ್ಲ! (ನ)
-ಲ್ಲ, ನಲ್ಲೆಯರಾಗಿ ಸಂಸಾರಿಯಾಗದೇನಿಲ್ಲ!
ತ್ಯದ ಮುಂದೆ ಮಿಥ್ಯಕ್ಕೆ ಸ್ಥಾನ, ಮಾನ, ಸಲ್ಲ! (ಹೆ)
-ಣ್ಣನ್ನು ಕಂಡು ಮರುಳಾದವಗುದ್ಧಾರವಿಲ್ಲ!
ಯೋವೃದ್ಧನಿಗೂ ಕಾಮ ಬಾಧೆ ತಪ್ಪಿದ್ದಲ್ಲ!
ನೂತನ, ಪುರಾತನಾನುಭವ ಮಾತಿದೆಲ್ಲಾ!
ನುಗ್ರಹ ಗುರುವಿನದ್ದಾದ್ರೆ ಭಯವಿಲ್ಲ! (ಬ)
-ಲ್ಲ ನಿರಂಜನಾದಿತ್ಯನ ಮಾತೇನೂ ಸುಳ್ಳಲ್ಲ!!!

ಕಲಿಸಲಾರಿಗೇನು ನಾನು? (ಕ)

-ಲಿಯಲಾರಿಂದೇನನ್ನು ನಾನು?
ರ್ವಾಂತರ್ಯಾಮಿ ಸ್ವಾಮಿ ನಾನು!
ಲಾಭ, ನಷ್ಟ ಲಕ್ಷಿಸೆ ನಾನು!
ರಿಪುಕುಲಕೆ ಕಾಲ ನಾನು!
ಗೇಯ್ಮೆ ಮುಗಿಸಿದವ ನಾನು!
ನುಡಿಯದೇ ನಡೆವೆ ನಾನು!
ನಾಮಾನಂತವಾಗಿರ್ಪೆ ನಾನು! (ಭಾ)
-ನು ನಿರಂಜನಾದಿತ್ಯ ನಾನು!!!

ಮಂಜುನಾಥನಾಗಿ ನಾನಿನ್ನೊಳಗಯ್ಯಾ!

ಜುಟ್ಟವನದ್ದಾರ ಕೈಗೂ ಸಿಕ್ಕದಯ್ಯಾ!
ನಾಮ ಅವನದ್ದತಿ ಪವಿತ್ರವಯ್ಯಾ! (ಪ)
-ಥ ಅವನ ಎಡೆಗೆ ಭಜನೆಯಯ್ಯಾ!
ನಾಚಿಕೆ ಬಿಟ್ಟು ಮೈ ಮರೆಯಬೇಕಯ್ಯಾ!
ಗಿರಿಜಾಮತಿ ಅವನಲ್ಲೈಕ್ಯವಯ್ಯಾ!
ನಾಗರಾಜ ಅವಳಿಗೆ ಮಗನಯ್ಯಾ!
ನಿತ್ಯ, ಶುದ್ಧ, ಸಿದ್ಧ, ಬುದ್ಧನವನಯ್ಯಾ! (ತ)
-ನ್ನೊಬ್ಬನಿಗೋಸ್ಕರ ಅವನಿಲ್ಲವಯ್ಯಾ! (ಬ)
-ಳಸಿಕೊಂಡವ ಬಹು ಭಾಗ್ಯವಂತನಯ್ಯಾ!
ರ್ವದ ಕಣ್ಣಿಗೆ ಮಣ್ಣಿಕ್ಕುವನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾನಂದವನಯ್ಯಾ!!!

ಆದಿ, ಅಂತ್ಯ, ಸಹಜಾನಂದ!

ದಿವ್ಯ ಜೀವನ ಸದಾನಂದ!
ಅಂದಿಂದು ಇದೊಂದೇ ಆನಂದ!
ತ್ಯಜಿಸಬೇಕು ಮಿಥ್ಯಾನಂದ!
ತ್ತು ಹುಟ್ಟುವುದೀ ಆನಂದ!
ರಿ, ಹರರಮರಾನಂದ!
ಜಾತಿ, ಮತಾತೀತಾತ್ಮಾನಂದ!
ನಂದ ನಂದನಗಿದಾನಂದ! (ಕಂ)
-ದ ನಿರಂಜನಾದಿತ್ಯಾನಂದ!!!

ಇರಿಸಿದಂತಿರ್ಪವನಿಗೇನು ಚಿಂತೆ? (ಅ)

-ರಿತಿದನಿರು ಬೆಕ್ಕಿನ ಮರಿಯಂತೆ!
ಸಿಕ್ಕಿದ್ದುಂಡು ತೃಪ್ತನಾಗಿರದರಂತೆ!
ದಂಭ ತೋರಿದರೆ ನಾಯಿ ಬಾಯಿಗಂತೆ!
ತಿಳಿದಿದನು ಬಾಳಿದಳ್ಸೀತಾಮಾತೆ! (ಅ)
-ರ್ಪಣೆಯಾಗಿದ್ದಳು ರಾಮನಿಗಾ ಸೀತೆ!
ನವಾಸಕ್ಕೂ ಅಂಜಲಿಲ್ಲಾ ಭೂಜಾತೆ!
ನಿಶಿ, ದಿನ ರಾಮಧ್ಯಾನಾಸಕ್ತೆ ಸೀತೆ! (ಯೋ)
-ಗೇಶ್ವರಿ ಎನಿಸಿ ಆದಳು ವಿಖ್ಯಾತೆ! (ತ)
-ನುಜರೀರ್ವರಿಂದ ನಿಂದೆಯಿಂದ ಮುಕ್ತೆ!
ಚಿಂತಾಂತರಂಗಾತೀತಳಾ ಸತೀ ಸೀತೆ! (ಸೀ)
-ತೆ ನಿರಂಜನಾದಿತ್ಯಗದಿತಿಯಂತೆ!!!

ವಿಚಾರಶೀಲರೊಮ್ಮತದಭಿಪ್ರಾಯ ವೇದ, ಶಾಸ್ತ್ರ!

ಚಾತುರ್ವಣಾಶ್ರಮ ಧರ್ಮದೂ ಅದರಲ್ಲೊಂದು ಪಾತ್ರ!
ಹಸ್ಯ ಸಂಶೋಧನೆಯಿಂದರಿಯ ಬೇಕು ಸತ್ಪುತ್ರ!
ಶೀಲ ಉತ್ತಮಗೊಂಡು ಆಗಬೇಕು ವಿಶಾಲ ನೇತ್ರ!
ಕ್ಷಣವರಿತಾತ್ಮ ದರ್ಶನವಾಗ್ಬೇಕು ಸರ್ವತ್ರ!
ರೊಟ್ಟಿ ಮಾಡಬಲ್ಲವನಿಗೆ ರೊಟ್ಟಿಯೂಟ ಸುಸೂತ್ರ! (ಅ)
-ಮ್ಮ ಕಲಿಸುವಳದನು ಸಮಯ ಕಾದರೆ ಮಾತ್ರ!
ಪ್ಪೆಣಿಸಲಾರನವಳಲ್ಲಿ ರಾಮನಂಥಾ ಪುತ್ರ!
ಶರಥಾತ್ಮಜನ ರವಿವಂಶ ಗೋತ್ರ ಪವಿತ್ರ!
ಭಿನ್ನ, ಭೇದವಿಲ್ಲದ್ದವನ ರಾಜ್ಯಭಾರ ಚರಿತ್ರ!
ಪ್ರಾಚೀನರ್ವಾಚೀನದ ಹೊಡೆದಾಟ ಅಜ್ಞಾನ ಚಿತ್ರ!
ದುವಂಶ ನಿರ್ನಾಮವಾಯ್ತು ಮರೆತು ಕುಲ, ಗೋತ್ರ!
ವೇದೋಪನಿಷತ್ಸಾರದರಿವಿನ ಬಾಳೇ ಸ್ವತಂತ್ರ!
ಶೇಂದ್ರಿಯದಾನಂದಕ್ಕಾಶಿಸಿ ಆಯ್ತು ಪರ ತಂತ್ರ!
ಶಾಸಕರಾಗಬೇಕವುಗಳ ಮೇಲೆ ದಿನ, ರಾತ್ರ! (ಅ)
-ಸ್ತ್ರ, ನಿರಂಜನಾದಿತ್ಯನಿಂದ ಪಡೆವ ಕೃಪಾ ಪಾತ್ರ!!!

ಪ್ರಿಯಾಪ್ರಿಯಾತ್ಮಾರ್ಪಣೆ ಮಾಡಿ ಸ್ವೀಕರಿಸು!

ಯಾವುದೇ ಆದರೂ ಯೋಚಿಸಿ ನಿರ್ಧರಿಸು!
ಪ್ರಿಯತಮೆಯನ್ನು ನೋವಾಗದಂತಿರಿಸು!
ಯಾದವ, ರಾಧೆಯರಂತೆ ವ್ಯವಹರಿಸು! (ಆ)
-ತ್ಮಾನಂದದಲ್ಲಿ ಅವಳನ್ನು ಮೈಮರೆಸು! (ಸ)
-ರ್ಪಶಾಯಿಯಂತಾಕೆಯ ಸೇವೆ ಸ್ವೀಕರಿಸು! (ಹೊ)
-ಣೆ ಹೊತ್ತು, ಋಣತೆತ್ತು ಆನಂದಪಡಿಸು!
ಮಾನಾಭಿಮಾನವೆಂಬ ಭ್ರಾಂತಿ ಕರಗಿಸು! (ಅ)
-ಡಿಗಡಿಗಾದರ್ಶದ ನೆನಪು ಹುಟ್ಟಿಸು!
ಸ್ವೀಕರಿಸಿದ ಮೇಲಗಲದಂತಿರಿಸು!
ರ್ತವ್ಯವೆನೇಂದು ಪದೇ ಪದೇ ಯೋಚಿಸು!
ರಿಪುಕುಲವನ್ನೆಲ್ಲಾ ಸಂಪೂರ್ಣ ಜಯಿಸು! (ಲೇ)
-ಸು ನಿರಂಜನಾದಿತ್ಯನಿಂದಾಯ್ತೆಂದೆನಿಸು!!!

ಮಂತ್ರ ಕಾರಣವೆಲ್ಲಾ ತಂತ್ರ, ಯಂತ್ರಕ್ಕೆ! (ಪು)

-ತ್ರರಾದ ರ್ತ್ರಿಮೂರ್ತಿಗಳಾ ಪ್ರಭಾವಕ್ಕೆ!
ಕಾಮ್ಯಾರ್ಥಿಗಾಯ್ತುಪಯೋಗರ್ಧ ಲಾಭಕ್ಕೆ! (ಪ)
-ರಮಾರ್ಥಿಗಿದಾಯ್ತು ಜನ್ಮ ಸಾರ್ಥಕಕ್ಕೆ! (ಕೋ)
-ಣ ಮಂತ್ರವೂ ನೆರವಾಯ್ತು ಮುಕ್ತನಕ್ಕೆ! (ಸೇ)
-ವೆ ನಿಷ್ಕಾಮದಿಂದಾಗ್ಬೇಕಾತ್ಮ ಸುಖಕ್ಕೆ! (ಕ)
-ಲ್ಲಾದಹಲ್ೋದ್ಧಾರ ನಿದರ್ಶನದಕ್ಕೆ!
ತಂತಮ್ಮೋದ್ಧಾರ ಮುಖ್ಯವೀಗ ಜನಕ್ಕೆ! (ಪು)
-ತ್ರ, ಕಳತ್ರಾದಿಗಳ್ಕಾರಣ ಬಂಧಕ್ಕೆ! (ತಾ)
-ಯಂದಿರಾಗ್ಲೇಬೇಕೆಂದಿಲ್ಲ ಸ್ತ್ರೀ ವರ್ಗಕ್ಕೆ!
ತ್ರಯಂಬಕನನ್ನೊಲಿಸ್ಬೇಕುದ್ಧಾರಕ್ಕೆ! (ಅ)
-ಕ್ಕೆ ನಿರಂಜನಾದಿತ್ಯ ಶಿವನೆಲ್ಲಕ್ಕೆ!!!

ಆತುರದಿಂದಾಯ್ತು ತಪ್ಪಳತೆ ಬಲ್ಲವನಿಂದ!

ತುರೀಯಾತೀತನಾಗುವುದು ಸುಲಭವಲ್ಲೆಂದ!
ಚಿಸಿದರೆ ಏನಾಯ್ತು ಗ್ರಂಥಕೋಟಿಯನ್ನೆಂದ! (ಅಂ)
-ದಿಂದು ಜಗತ್ತಿನಲ್ಲೆಲ್ಲೆಲ್ಲೂ ಇದೇ ಕಥೆಯಿಂದ!
ದಾರಿ ನಡೆದು ಬಾಯಾರಿದಾಗ್ಬಾವಿ ಮಾತೇಕೆಂದ? (ಹೋ)
-ಯ್ತು, ಭಕ್ತಿ, ವಿಶ್ವಾಸೋತ್ಸಾಹಗಳು ಮನಸ್ಸಿನಿಂದ!
ನ್ನ ಮಗ ತನ್ನಂತಾಗದಿದ್ದರಾರ ತಪ್ಪೆಂದ! (ತ)
-ಪ್ಪ ತನಯನದ್ದೆನ್ನುವುದು ಯಾವ ನ್ಯಾಯವೆಂದ! (ಕೇ)
-ಳದಿರುವುದು ಮೊರೆಯ ಅಪ್ಪನಿಗೊಪ್ಪದೆಂದ!
ತೆರೆ ಹರಿದು ಬರಲೀಗ ಹರಿ ಹೊರಗೆಂದ!
ರೀ ಮಾತಿನುಪಚಾರದಿಂದ ಫಲವೇನೆಂದ! (ಬ)
-ಲ್ಲವರು ಆಡಿದಂತಿರದಿದ್ದರಧರ್ಮವೆಂದ!
ರ ಭೀಷ್ಮ ಪ್ರತಿಜ್ಞೆಯಾದರ್ಶವಿರಬೇಕೆಂದ!
ನಿಂದಾ, ಸ್ತುತಿಗಳಿಗೆ ಕುಗ್ಗ, ಹಿಗ್ಗಬಾರದೆಂದ!
ರ್ಶನ ನಿರಂಜನಾದಿತ್ಯನಿತ್ತು ಕಾಯಲೆಂದ!!!

ಅಭ್ಯಾಸವೇ ಬಾಳಿನ ಸ್ವರೂಪ! (ಲ)

-ಭ್ಯಾನುಸಾರ ಪ್ರಾಪ್ತ ಈ ಸ್ವರೂಪ!
ರ್ವಕ್ಕೂ ಸಂಚಿತವೆಂಬ ನೆಪ!
ವೇದಾನುಷ್ಠಾನ ವಿಪ್ರ ಸ್ವರೂಪ!
ಬಾಳಿದರಿಂದ ಬ್ರಹ್ಮ ಸ್ವರೂಪ! (ಅ)
-ಳಿವಿಲ್ಲದ ಇದೇ ನಿಜ ರೂಪ!
ಶ್ವರವೆಲ್ಲಾ ಸ್ಥೂಲ ಸ್ವರೂಪ!
ಸ್ವಚ್ಛವಾಗಿದ್ದರೊಳ್ಳೇದೀ ರೂಪ!
ರೂಪ, ನಾಮಕ್ಕಾಧಾರಾತ್ಮ ರೂಪ! (ಶ್ರೀ)
-ಪತಿ ನಿರಂಜನಾದಿತ್ಯ ರೂಪ!!!

ಭಕ್ತ ಭಗವಂತರುದ್ದೇಶ ಅಭಿನ್ನ! (ಮು)

-ಕ್ತನೆನಿಸುವನು ಅರಿತರೆ ತನ್ನ!
ಗವಂತನಿರುವನರಿತಿದನ್ನ!
ರ್ವಾತೀತ ಸ್ಥಿತಿಯಿದು ಬಲು ಚೆನ್ನ!
ವಂದನೆ ನಿಂದನೆ ತನಗೆ ಬೇಕೆನ್ನ!
“ತತ್ವಮಸಿ”ಯ ಸಾರ ರೂಪ ಸಂಪನ್ನ! (ಗು)
-ರುದತ್ತ ಬಣ್ಣಿಸಿಹನಿಂತು ತಾ ತನ್ನ! (ಇ)
-ದ್ದೇನೆಲ್ಲರೊಳಗೆನ್ನುತ್ತಿಹನಾ ರನ್ನ!
ರಣನಾಗಿ ಬಿಡಹಂಕಾರವನ್ನ!
ವನು ಉದ್ಧಾರ ಮಾಡುವನು ನಿನ್ನ!
ಭಿಕ್ಷುವೆಂದರಿಯಬಾರದವನನ್ನ! (ನಿ)
-ನ್ನನ್ನವ್ನೆಂದರಿ ನಿರಂಜನಾದಿತ್ಯನನ್ನ!!!

ತ್ಯಾಗ, ಯೋಗ ಮೂರ್ತಿ ಬ್ರಾಹ್ಮಣ!

ರ್ವರಹಿತ ಪಂಚಪ್ರಾಣ!
ಯೋಚಿಸಿ ಕಾರ್ಯ ನಿರ್ವಹಣ!
ಣಿಸುತ್ತಿರನವ ಹಣ!
ಮೂರು ಲೋಕವಿವಗೆ ತೃಣ! (ಕಾ)
-ರ್ತಿಕೇಯನಂತಿವನೂ ಗಣ! (ಸಾಂ)
-ಬ್ರಾಣಿಯಂತೆ ಶುದ್ಧೀಕರಣ! (ಬ್ರಾ)
-ಹ್ಮಣ ಸರ್ವ ಸುಖ ಕಾರಣ!(ಪ್ರಾ)
-ಣ ನಿರಂಜನಾದಿತ್ಯಾರ್ಪಣ!!!

ಪಾಂಡಿತ್ಯಕ್ಕಾಗಿ ಮಾಡ್ಬೇಕಭ್ಯಾಸ ನಿತ್ಯ! (ನು)

-ಡಿಯಬಾರದು ಎಂದೆಂದಿಗೂ ಅಸತ್ಯ!
ತ್ಯಜಿಸುವುದು ದುಸ್ಸಂಗ ಅತ್ಯಗತ್ಯ! (ತಿ)
-ಕ್ಕಾಟಕ್ಕೆಡೆಗೊಡ್ದಿರ್ಬೇಕು ದಾಂಪತ್ಯ!
ಗಿರಿಜಾಶಂಕರರ ಆದರ್ಶ ಸ್ತುತ್ಯ!
ಮಾರನಾಟವನ್ನು ಮಾಡಿದನು ಅಂತ್ಯ! (ಇ)
-ಡ್ಬೇಕವನಲ್ಲಿ ಭಕ್ತಿ, ವಿಶ್ವಾಸ ಮರ್ತ್ಯ!
ಲ್ಮಷನಾಶ ಶಿವ ತಾಂಡವ ನೃತ್ಯ! (ಅ)
-ಭ್ಯಾಗತರಾದರೋಪಚಾರ ಅಗತ್ಯ!
ದ್ಗುರು ಕೃಪೆಗಾಗಿ ಆಗ್ಬೇಕು ಭೃತ್ಯ!
ನಿಷ್ಕಪಟವಾಗಿರಬೇಕು ಸಾಹಿತ್ಯ! (ನಿ)
-ತ್ಯ ನಿರಂಜನಾದಿತ್ಯ ಕಿರಣ ಸತ್ಯ!!!

ಎತ್ತರದ್ದಕ್ಕಾಶಿಸಬೇಡ! (ಹ)

-ತ್ತರದ್ದಕ್ಕನಾದರ ಬೇಡ!
ಹಸ್ಯವರಿಯದಿರ್ಬೇಡ! (ಎ)
-ದ್ದ ಮೇಲೆಚ್ಚರ ತಪ್ಪಬೇಡ!! (ಮಿ)
-ಕ್ಕಾರನ್ನೂ ಅವಲಂಬಿಸ್ಬೇಡ!
ಶಿವನನ್ನಲ್ಲಿಲ್ಲರಸ್ಬೇಡ!
ದಾಶಿವ ನೀನಾಗ್ದಿರ್ಬೇಡ!
ಬೇರೆ ನೀನವನಿಂದೆನ್ಬೇಡ! (ಮೃ)
-ಡ ನಿರಂಜನಾದಿತ್ಯನಾಡ!!!

ಮುಷ್ಕರ ಹೂಡದಿರಬೇಕು! (ನಿ)

-ಷ್ಕಪಟ ಸೇವೆ ಸಾಗಬೇಕು! (ಪ)
-ರಮಾರ್ಥವರಿತಿರಬೇಕು!
ಹೂ, ಹಣ್ಣು, ಭಕ್ತಿಯಾಗಬೇಕು! (ಒ)
ನಾಡಿ ಸಜ್ಜನನಾಗ್ಬೇಕು!
ದಿವ್ಯ ನಾಮ ಜಪಿಸಬೇಕು! (ಮ)
-ರಣಕ್ಕೆ ಅಂಜದಿರಬೇಕು!
ಬೇವು, ಬೆಲ್ಲ ಸವಿಯಬೇಕು! (ಬೇ)
-ಕು ನಿರಂಜನಾದಿತ್ಯಾಗ್ಬೇಕು!!!

ಬುದ್ಧಿ ಜೀವಿಗಳನ್ನಲಕ್ಷಿಸಬೇಡಿ! (ವೃ)

-ದ್ಧಿಗಾಗಿವರಿಗೇ ಅಧಿಕಾರ ನೀಡಿ!
ಜೀವರುದ್ದಾರಕ್ಕಂತು ಸಹಾಯ ಮಾಡಿ!
ವಿಕಲ್ಪ ಮಾಡಿ ವಿನಾಶ ಹೊಂದಬೇಡಿ!
ಣರಾಜ್ಯಕ್ಕೆ ಗಣ್ಯರೇ ನರ, ನಾಡಿ! (ಒ)
-ಳ ಜಗಳಕ್ಕಾಗಿವರ ತಳ್ಳಬೇಡಿ! (ಉ)
-ನ್ನತಿಗೋಸ್ಕರ ಅವರನ್ನೊಡಗೂಡಿ!
ಲ}ಕ್ಷ್ಯವರಿಯದವರ ಸ್ನೇಹ ಬೇಡಿ {\





ಬಿಡಿ! (ರ)
-ಕ್ಷಿಸುವ ದೇವರನ್ನು ಮರೆಯಬೇಡಿ!
ರ್ವ ಸಹಕಾರದಿಂದ ಸೇವೆ ಮಾಡಿ!
ಬೇಡನ ಕೈಗೆ ಲೇಖನಿ ಕೊಡಬೇಡಿ! (ಮಾ)
-ಡಿ, ನಿರಂಜನಾದಿತ್ಯಾಜ್ಞೆಯಂತೆ ಮಾಡಿ!!!

ದೆವ್ವಗಳಲ್ಲಿ ನಂಬಿಗೆ ಮಕ್ಕಳಿಗೆ! (ಜ)

-ವ್ವನದ ಮದವೀಗವರೆಲ್ಲರಿಗೆ!
ತಿ, ಸ್ಥಿತಿ ಬದ್ಲಾಗ್ಬೇಕೀಗವರಿಗೆ! (ಬ)
-ಳಸ್ಬಾದ್ದವರನ್ನು ಮುಷ್ಕರಗಳಿಗೆ! (ಸ)
-ಲ್ಲಿಸಬೇಕವರ ಸೇವೆ ದೇವರಿಗೆ!
ನಂಜುಂಡ ಕಥೆ ಹೇಳಬೇಕವರಿಗೆ!
ಬಿಸಿಯೇರ್ಬಾರ್ದು ರಕ್ತ ಬಾಲಕರಿಗೆ!
ಗೆಳೆಯ ರ್ಸಜ್ಜನರಾಗ್ಬೇಕವರಿಗೆ!
ತ್ಸರ ಬುದ್ಧಿಯಿರ್ಬಾರದವರಿಗೆ! (ಇ)
-ಕ್ಕಬಾರದೆಂಜಲನ್ನ ಹಿರಿಯರಿಗೆ! (ತಿ)
-ಳಿಸಬೇಕಾತ್ಮ ಸ್ವರೂಪ ಮಕ್ಕಳಿಗೆ! (ಹೀ)
-ಗೆ ನಿರಂಜನಾದಿತ್ಯಾನಂದರ್ತಾವಾಗೆ!!!

ಲೀಲಾ ಜಾಲೆ ಮಹಿಳೆ ಚಪಲೆ!

ಲಾಭಪ್ರದೆಯಾದರೂ ಚಪಲೆ!
ಜಾತ್ಯಾತೀತಳಾದರೂ ಚಪಲೆ! (ಕ)
-ಲೆಗಾಧಾರಳಾದರೂ ಚಪಲೆ!
ನಸಿಜಗೆ ತಾ



ಚಪಲೆ!
ಹಿತಾಹಿತ ಮಾಳ್ಪಳೀ ಚಪಲೆ! (ತೊ)
-ಳೆಯುವಳು ಶ್ರೀಪಾದ ಚಪಲೆ!
ರಾಚರಕ್ಕೆ ರಾಣೀ ಚಪಲೆ!
ತಿವ್ರತೆಯಾದರೂ ಚಪಲೆ! (ಲೀ)
-ಲೆಗಾ ನಿರಂಜನಾದಿತ್ಯ ನೆಲೆ!!!

ಕಲ್ಲದೇವರೆನ್ಸಿದವಗಾನು ಋಣಿ! (ಎ)

-ಲ್ಲರಲ್ಲಿರ್ಪಾತ ಈರೇಳ್ಲೋಕಕ್ಕೆ ಧಣಿ!
ದೇವದೇವ ಅನುಪಮ ಕೃಪಾ ಗಣಿ!
ರಗಳನ್ನೇನ್ಬೇಡ್ಬೇಕಾಗಿದೆ ಪ್ರಾಣಿ?
ರೆಕ್ಕೆ, ಪುಕ್ಕ ಹಕ್ಕಿಗಿತ್ತಿರುವಾ ಗುಣಿ! (ತಿ)
-ನ್ಸಿದನ್ಹುಲ್ಲನ್ನಾಕಳಿಗಾ ಚಕ್ರಪಾಣಿ!
ಯಾನಿಧಿಯವನ ರಾಣಿ ರುಕ್ಮಿಣಿ!
ಧಿಸಿದನಸುರರಾ ವೀರಾಗ್ರಣಿ!
ಗಾಯನ ಕಲೆಯಲ್ಲಿವನೊಬ್ಬ ನಿಪುಣಿ!
ನುಡಿಯಿವನದು ವರ ಗೀತಾ ವಾಣಿ!
ಷಿ, ಮುನಿಗಳಿಗಿವ ಪಂಚಪ್ರಾಣಿ! (ಗು)
-ಣಿ ನಿರಂಜನಾದಿತ್ಯ ಕೃಷ್ಣ ಗೀರ್ವಾಣಿ!!!

ಏಕೆ ಹೋಗ್ಬೇಕವರ ಮನೆಗೆ!

ಕೆಟ್ಟಹಂಕಾರ ಬೇಡ ನಿನಗೆ!
ಹೋಗ್ದಿದ್ದ್ರೆ ನಷ್ಟವಿಲ್ಲವರಿಗೆ! (ನೀ)
-ಗ್ಬೇಕ್ವಿಕಲ್ಪ ಸಂಕಲ್ಪ ಶಾಂತಿಗೆ! (ತ್ರಿ)
-ಕರಣ ಶುದ್ಧಿ ಬೇಕ್ಭಕ್ತನಿಗೆ!
ರ ಗುರು ಕೃಪೆ ಆಗವಗೆ!
ಹಸ್ಯವರುಹಿದೆ ನಿನಗೆ!
ನನ ಮಾಡ್ಬಂಧ ಮುಕ್ತನಾಗೆ!
ನೆಟ್ಟ ಗಿಡಕ್ಕೆ ನೀರ್ಹವ ಹಾಗೆ! (ಹೀ)
-ಗೆ ನಿರಂಜನಾದಿತ್ಯ ನೀನಾಗೆ!!!

ವಿಕಲ್ಪಕ್ಕೆ ವಿನಾಶ ಪ್ರತಿಫಲ!

ಲ್ಪನಾತೀತಾತ್ಮ ಚಿಂತನಾ ಫಲ! (ಕ)
ಲ್ಪ, ಕಾಯಕ್ಕಾದರೆ ಸಿಕ್ಕದೀ ಫಲ! (ಬೆ)
-ಕ್ಕೆ ನಾಶವಾದಾಗ ಜನ್ಮ ಸಫಲ!
ವಿವೇಕ, ವಿಚಾರಕ್ಕಕ್ಕು ಈ ಫಲ!
ನಾನಾರೆಂದರಿತಿರುವುದಾ ಫಲ!
ರಣುರುಣ್ಣುವರು ನಿತ್ಯಾ ಫಲ!
ಪ್ರಪಂಚದಾಶಾತ್ಮನಿಗಿಲ್ಲಾ ಫಲ!
ತಿತಿಕ್ಷೆ, ವೈರಾಗ್ಯಕ್ಕೆ ಇದೇ ಫಲ!
ಲಿಸಿದಾಗಳಿವುದು ಚಪಲ! (ಬಾ)
-ಲ ನಿರಂಜನಾದಿತ್ಯಾನಂದಚಲ!!!

ನಿವೃತ್ತಾಧಿಕಾರಿಯಾಜ್ಞೆಗೇನು ಬೆಲೆ?

ವೃಥಾ ಕೆಡಿಸಿಕೊಳ್ಬಾರದಾತ ತಲೆ! (ಕಿ)
-ತ್ತಾಟಕ್ಕೆ ಹೋದರೆ ತಪ್ಪುವುದು ನೆಲೆ! (ವಿ)
-ಧಿಲಿಖಿತವೆಂಬುದೊಂದು ಮಹಾ ಜ್ವಾಲೆ!
ಕಾಣದೇ ಮಾಡುವುದು ಅದು ತರಲೆ!
ರಿಸಿ, ಮುನಿಗಳಿಗೂ ಆ ತಲೆ ಶೂಲೆ!
ಯಾದವನನ್ನೂ ಅಪ್ಪಳಿಸಿತ್ತಾ ಅಲೆ! (ಪ್ರ)
-ಜ್ಞೆತಪ್ಪಿ ಬಿದ್ದು ಕಲ್ಲಾದ್ಳಹಲ್ಯಾ ಬಾಲೆ! (ಯೋ)
-ಗೇಶ ಭಾರ್ಗವ ಗೈದ ತಾಯಿಯ ಕೊಲೆ! (ಅ)
-ನುಭವಿಸಿದಳ್ಬಾಯ್ಮುಚ್ಚಿದನ್ನಬಲೆ!
ಬೆಚ್ಚಿ ಪೂತನಿ ಸತ್ತಳುಣಿಸಿ ಮೊಲೆ! (ಬೆ)
-ಲೆ ನಿರಂಜನಾದಿತ್ಯಗಿತ್ತಾಗ ನೆಲೆ!!!

ಅಸ್ಥಿರದಂದ, ಚಂದ ನಂಬಿ ಎಲ್ಲೆಲ್ಲೂ ದೊಂಬಿ!

ಸ್ಥಿರ ಶಾಂತಿ ಸುಖಕ್ಕೆ ಪರಮಾತ್ಮನ ನಂಬಿ!
ಸ ಜೇನಿಗಾಗಿ ಅರವಿಂದ ಬಂಧಿ ದುಂಬಿ!
ದಂಭ, ದರ್ಪ ತೋರಿ ಕೌರವಗೇನಾಯಿತೆಂಬಿ?
ಶರಥಗೆ ಪುತ್ರವಿಯೋಗವೆಂತಾಯ್ತೆಂಬಿ?
ಚಂದಕ್ಕೆ ಮರುಳಾದರಿಂಥಾ ಫಲವನ್ನುಂಬಿ!
ತ್ತ ದರ್ಶನವಾಯ್ತತ್ರಿಗೆ ನಿಜವ ನಂಬಿ!
ನಂದಕಂದನಿಂದುದ್ಧಾರವಾದರ್ಜುನ, ನಂಬಿ!
ಬಿದ್ದು ಹೋದ ದುರ್ಯೋಧನ ಮಯೆಯನ್ನು ನಂಬಿ!
ಲ್ಲೆಲ್ಲೂ ಪರಮಾತ್ಮನಿರುವನೆಂದು ನಂಬಿ! (ಗು)
-ಲ್ಲೆಬ್ಬಿಸಬೇಡಿ ವೇಷಧಾರಿಗಳನ್ನು ನಂಬಿ! (ಕೊ)
-ಲ್ಲೂರು ಮೂಕಾಂಬಿಕೆ ನಿಮ್ಮ ಮನಸ್ಸೆಂದೇ ನಂಬಿ! (ಒಂ)
-ದೊಂದು ಗುಣವನ್ನೂ ಅಳವಡ್ಸಿದನ್ನು ನಂಬಿ! (ನಂ)
-ಬಿ, ನಿರಂಜನಾದಿತ್ಯ ನೀವಾಗಲಿದ ನಂಬಿ!!!

ನಿನ್ನದಿಲ್ಲದ ವಾರ್ತೆ ನನಗೇತಕ್ಕೆ? (ನಿ)

-ನ್ನವನಲ್ಲಿರಬಾರದು ಕೀಳು ಬೆಕ್ಕೆ!
ದಿಕ್ಕು ಕೆಟ್ಟ ಓಟ ನರಕ ಕೂಪಕ್ಕೆ! (ಅ)
-ಲ್ಲಸಲ್ಲದೆಲ್ಲಾ ಹರಟೆ ಪತನಕ್ಕೆ!
ಒನೆ ಲಿನೆ ಮಿ

ಸಿ





ದತ ಮಿ

ಸಿ




.............................!
ವಾದವಿವಾದ ವೃತ್ತಿ ಶಾಂತಿಗೆ ಧಕ್ಕೆ! (ಆ)
-ರ್ತೆಗಿರಬಾರದು ಸಂಶಯ ಮನಕ್ಕೆ!
ಮೋ ಎಂದೆತ್ತು ಎರಡೂ ಕೈ ಮೇಲಕ್ಕೆ!
ಡ್ಕೆ ನುಡಿಯೊಂದಾಗಬೇಕು ಅದಕ್ಕೆ! (ಯೋ)
-ಗೇಶ್ವರನ ಕೃಪೆಯಿರಬೇಕದಕ್ಕೆ!
ತ್ವ ಚಿಂತನೆ ಸದಾ ಮಾಡ್ಬೇಕಿದಕ್ಕೆ! (ಅ)
-ಕ್ಕೆ, ನಿರಂಜನಾದಿತ್ಯಾನಂದ ಎಲ್ಲಕ್ಕೆ!!!

ಹಿರಣ್ಯಗರ್ಭಗಾಗಿರಲೆಲ್ಲಾ ಹಬ್ಬ!

ವಿಯುದಿಸಿದರುಂಟು ಎಲ್ಲಾ ಹಬ್ಬ! (ಗ)
-ಣ್ಯ ಹದಿನಾಲ್ಕು ಲೋಕಕ್ಕೂ ಅವನೊಬ್ಬ!
ಗನಮಣಿಯಂತಾಗ್ಬೇಕ್ಪ್ರತಿಯೊಬ್ಬ! (ದ)
-ರ್ಭಶಾಯಿ ಅವನಂತಾದವರಲ್ಲೊಬ್ಬ!
ಗಾರುಡಿಗಾರನಾದರೂ ಕೃಷ್ಣನೊಬ್ಬ!
ಗಿರಿಜಾಧವ ನಿಸ್ಸಂದೇಹವಾಗೊಬ್ಬ!
ಮೇಶ ಅವನೇ ಆದವರಲ್ಲೊಬ್ಬ!
ಲೆಃಖಕ್ಕೆ ಸಿಗ್ಬಹುದಿನ್ಯಾರಾದ್ರೊಬ್ಬಿಬ್ಬ! (ಎ)
-ಲ್ಲಾ ಬಲ್ಲವರ್ಬರೆದಿಹರಿವ್ನ ಕಬ್ಬ!
ರನಾಗಿ ಹೀರುವನೆಲ್ಲರ ಕೊಬ್ಬ! (ಒ)
-ಬ್ಬ ನಿರಂಜನಾದಿತ್ತಗೀ ಎಲ್ಲಾ ಹಬ್ಬ!!!

ಸುಖವೆಂದರೇನೆಂದರಿಯಲರಸು!

ರಾರಿ ಯಾರೆಂದರಿಯಲೀಗರಸು!
ವೆಂಕಟೇಶಾತನೆಂದರಿಯಲರಸು!
ರ್ಶನಾಗತ್ಯವನ್ನರಿಯಲರಸು!
ರೇಗಾಟ, ಸಲ್ಲದೆಂದರಿಯಲರಸು!
ನೆಂಟ, ಭಂಟಾತ್ಮನೆಂದಸಿರಿಯಲರಸು!
ತ್ತನೆಲ್ಲವೆಂದರಿಯಲೀಗರಸು!
ರಿಸೀಶನವನೆಂದರಿಯಲರಸು!
ದುಪನವನೆಂದರಿಯಲರಸು!
ಯೇಶನವನೆಂದರಿಯಲರಸು!
ಹಸ್ಯವಿದನ್ನೀಗರಿಯಲರಸು! (ಕೂ)
-ಸು ನಿರಂಜನಾದಿತ್ಯಗಾಗಲರಸು!!!

ಬಳಸುತ್ತಿರುವಂತೆ ಭವನ! (ಒ)

-ಳ, ಹೊರ, ನಿರ್ಮಲ ದೇವಸ್ಥಾನ!
ಸುತ್ತು, ಮುತ್ತು ಹೊಲಸು ಸ್ಮಶಾನ! (ಕ)
-ತ್ತಿ, ಗುರಾಣಿ ತಾಣ ತಾಲೀಮ್ಖಾನ! (ತು)
-ರು, ಕರುಗಳ ಸ್ಥಾನ ಗೋಸ್ಥಾನ!
ವಂದಿ ಮಾಗಧರ ಸ್ಥಾನಾಸ್ಥಾನ! (ಚಿಂ)
-ತೆ, ದುಃಖಗಳದ್ದು ಬಂದೀಖಾನೆ!
ವಭಯ ನಾಶಕ್ಕಾತ್ಮ ಜ್ಞಾನ!
ರ ಗುರು ಚರಣ ಪಾವನ!
ಮೋ ನಿರಂಜನಾದಿತ್ಯಾನನ!!!

ಜಗನ್ನಾಥನರಿವು ಜಗತ್ತಿಗಿಲ್ಲ! (ಜ)

-ಗತ್ತನ್ನು ಅವನೆಂತು ಮರೆಯಬಲ್ಲ? (ತ)
-ನ್ನಾನಂದವಿದೆಲ್ಲಾ ಎಂದವನು ಬಲ್ಲ! (ಪ್ರ)
-ಥಮ ಪೂಜೆಗಾತ್ಮ ಅನರ್ಹನೇನಲ್ಲ!
ರ ನಾರಿಯರು ಮರೆತರಿದೆಲ್ಲ! (ಪ)
-ರಿಪರಿಯಾಸೆಯಿಂದೊದ್ದಾಡುವರೆಲ್ಲ! (ಅ)
-ವು ಅಸ್ಥಿರವೆಂದವರು ಅರಿತಿಲ್ಲ!
ವನ ಪಾಲಾಗದವರಾರೂ ಇಲ್ಲ!
ರ್ವದಿಂದ ಹೊಡೆದಾಡುತ್ತಿಹರೆಲ್ಲ! (ಕ)
-ತ್ತಿ, ಬಂದೂಕುಗಳೂ ಬೇಕವರಿಗೆಲ್ಲ! (ಯೋ)
ಗಿರಾಜ ನಗುವನು ನೋಡಿದನ್ನೆಲ್ಲ! (ಪು)
-ಲ್ಲ ನಿರಂಜನಾದಿತ್ಯ ಲೀಲೆ ಇದೆಲ್ಲ!!!

ಕಾಮಿನಿ, ಕಾಂಚನದಾಸೆ ಕಾಲನಿಗಿಂತ ಕ್ರೂರ!

ಮಿತಿಯಿಲ್ಲದ್ದರಿಂದವುಗಳು ಬಹಳ ಕ್ರೂರ!
ನಿತ್ಯಾನಂದ ಸುಖಕ್ಕಿದು ಕೊಡಲಿಯ ಪ್ರಹಾರ!
ಕಾಂತಿ ಕುಂದಿಸುವುದೀ ಭೀಕರಾಯುಧ ಪ್ರಹಾರ!
ರಾಚರಾತ್ಮನನ್ನು ಮರೆಸುವುದೀ ವಿಚಾರ!
ಷ್ಟ, ಕಷ್ಟಕ್ಕೆ ಗುರಿಯಾಗುವ ಈ ಆಶಾತುರ!
ದಾಸ್ಯ ಶೃಂಖಲೆಯಲ್ಲಿ ಬಂಧಿಪನವನ ಮಾರ!
ಸೆರೆಯಲ್ಲಿ ನರಳಿ ಸಾಯುವನಜ್ಞಾನೀ ನರ!
ಕಾಪಾಡಬೇಕೆಲ್ಲರನ್ನೀ ಸ್ಥಿತಿಯಲ್ಲಿ ಶ್ರೀಧರ!
ಕ್ಷ್ಮಿಗಿತ್ತಂತಾಶ್ರಯವಿತ್ತು ರಕ್ಷಿಸಲೆಲ್ಲರ!
ನಿಶಿ, ದಿನ, ಮೊರೆಯಿಡುತ್ತಿರುವೆಲ್ಲಾ ಭಕ್ತರ! (ಹಂ)
-ಗಿಂದ ಬಿಡುಗಡೆ ಮಾಡೀ ಸಂಸಾರೀ ಪಾಮರರ!
ಪಿಸುತಿರುವುದವರನ್ನೀ ಘೋರ ಸಂಸಾರ!
ಕ್ರೂರ ವೈರಿಗಳನ್ನೀಗ ಮಾಡಬೇಕು ಸಂಹಾರ! (ವ)
ಗುರು ದತ್ತಾತ್ರೇಯ ನಿರಂಜನಾದಿತ್ಯಾಕಾರ!!!

ನಿನ್ನ ಚಿತ್ತಕ್ಕೆ ವ್ಯತಿರಿಕ್ತವಾದರಾಪತ್ತು! (ನ)

-ನ್ನ ಪ್ರತಿದಿವಸದನುಭವಕ್ಕಿದು ಗೊತ್ತು!
ಚಿತಾಭಸ್ಮವೂ ನೀನಿಚ್ಛಿಸಿದರೆ ಸಂಪತ್ತು! (ಉ)
-ತ್ತಮವೆಂದು ನಾನೆಣಿಸಿದ್ದರಿಂದ ವಿಪತ್ತು! (ಬೆ)
-ಕ್ಕೆಗಾರ್ತಿಯೂ ನಿನ್ನಿಚ್ಛೆಯಿಂದೇರಿದಳಂತಸ್ತು!
ವ್ಯಕ್ತಾವ್ಯಕ್ತನಾದ ನಿನ್ನದೇ ಎಲ್ಲಾ ಮಹತ್ತು!
ತಿಳಿದವನೆನ್ನುವ ಈ ಮಾನವ ಅಸತ್ತು! (ಹ)
-ರಿ ನರಹರಿಯಾಗಿ ಮೆರೆದೆ ನೀನಾವತ್ತು! (ಭ)
-ಕ್ತ ರಾಮದಾಸನಿಗೆ ಚಾವಟಿ ಏಟು ಬಿತ್ತು!
ವಾಲಿ ಶ್ರೀರಾಮಚಂದ್ರನ ಬಾಣಕ್ಕಾದ ತುತ್ತು!
ಶರಥ ಪುತ್ರಶೋಕದಿಂದ ಬಿದ್ದ ಸತ್ತು!
ರಾವಣನಂಥಾ ಭಕ್ತನಿಗೂ ಬಂತೊಂದು ಕುತ್ತು!
ತಿತನೂ, ಪಾವನನೂ ಆಗ್ಬಲ್ಲಾ ಸಚ್ಚಿತ್ತು! (ಇ)
-ತ್ತು ನಿರಂಜನಾದಿತ್ಯಾನಂದ ರಕ್ಷಿಸ್ಲೀವತ್ತು!!!

ನನಗೆ ಕಹಿಯಾದೂಟ ನಿನಗಿಕ್ಕಲಾರೆ! (ನಿ)

-ನಗಿಷ್ಟವಾದೂಟ ನೀನುಣ್ಬೇಡವೆನ್ನಲಾರೆ!
ಗೆಳೆಯನಾಗಿ ಹಿತೋಕ್ತಿಯಾಡದಿರಲಾರೆ!
ಷ್ಟಕ್ಕೆ ನೀನು ಗುರಿಯಾದ್ರೆ ನಾನ್ಸಹಿಸ್ಲಾರೆ!
ಹಿರಿಯರನ್ನು ಗೌರವಿಸೆನ್ನದಿರಲಾರೆ!
ಯಾರ ತಂಟೆಗೂ ಹೊಗ್ಬೇಡವೆನ್ನದಿರಲಾರೆ!
ದೂರ್ಬಾರ್ದನ್ನವಿಕ್ಕಿದವನನ್ನೆನ್ನದಿರ್ಲಾರೆ! (ದಿ)
-ಟವಾದ ದೇವರನ್ನೇ ನಂಬೆನ್ನದಿರಲಾರೆ!
ನಿತ್ಯ, ನಿರಾಮಯ ದೇವರೆನ್ನದಿರಲಾರೆ!
ಮಿಸಾ ಪರಮಾತ್ಮನಿಗೆನ್ನದಿರಲಾರೆ!
ಗಿರಿಧಾರಿಯ ಮಾತು ಸುಳ್ಳಲ್ಲೆನ್ನದಿರಲಾರೆ! (ತ)
-ಕ್ಕ ಶಿಷ್ಯ ನೀನವನಿಗೆನ್ನದಿರಲಾರೆ!
ಲಾಭವದರಿಂದಾಗ್ವುದೆಂದೆನ್ನದಿರಲಾರೆ! (ಖ)
-ರೆ ನಿರಂಜನಾದಿತ್ಯ ಕೃಷ್ಣನೆನ್ನದಿರ್ಲಾರೆ!!!

ಸ್ಥಾನ, ಮಾನಕ್ಕಾಗಿ ಮಾನವ ಪಟ್ಟ ಕಷ್ಟಷ್ಟಿಷ್ಟಲ್ಲ! (ಹೀ)

-ನ ಕಾಮ ಅವನನ್ನುರುಳಿಸದೆಯೂ ಬಿಡಲಿಲ್ಲ!
ಮಾತಿನಲ್ಲೇ ಸ್ವರ್ಗಸುಖವನ್ನು ತೋರಿಸಿದರೆಲ್ಲ!
ಭೋಮಂಡಲದಲ್ಲೂ ಹಾರಾಡಿ, ಸುಸ್ತಾಗಿ ಸತ್ತ್ರೆಲ್ಲ! (ತಿ)
-ಕ್ಕಾಟ, ಹೋರಾಟ, ಹೊಡೆದಾಟಕ್ಕೆ ಮಿತಿಯಿಲ್ಲ!
ಗಿರಿ ಶಿಖರಗಳೇರಿ ಕಂದಕಕ್ಕೂ ಬೀಳದಿಲ್ಲ!
ಮಾನವತಿಯರ ಪಾಡನ್ನಂತೂ ಹೇಳಲಳವಲ್ಲ!
ಡೆದ ಕಾಡು, ಮೇಡು ದಾರಿಗಳಿಗಳತೆಯಿಲ್ಲ!
ಸಿಷ್ಟಾದಿ ಗುಹೆಗಳಲ್ಲಿ ಗಡ್ಡದವರೇ ಎಲ್ಲಾ!
ತಂಜಲಿ ಯೋಗ ಸೂತ್ರ ಪಠಿಸದವರೇ ಇಲ್ಲ! (ಅ)
-ಟ್ಟಹಾಸಾರ್ಭಟದ ಮಾಂತ್ರಿಕ, ತಾಂತ್ರಿಕತೇ ಎಲ್ಲೆಲ್ಲಾ!
ನಿಕರ ಮಾತ್ರ ಪರಮಾತ್ಮನಿಗಿನ್ನೂ ಬಂದಿಲ್ಲ! (ದು)
-ಷ್ಟರ ಹಾವಳಿ ಮಾತ್ರ ದಿನ ದಿನಕ್ಕೂ ಹೆಚ್ಚದಿಲ್ಲ! (ಸೃ)
-ಷ್ಟಿಯ ಈ ವಿಚಿತ್ರವೇನೆಂದು ಹೇಳುವವರೇ ಇಲ್ಲ! (ಸ್ಫ)
-ಷ್ಟವಾಗಿದನ್ನರುಹದಿದ್ದರೆ ಗತ್ಯಂತರವಿಲ್ಲ! (ಪು)
-ಲ್ಲ ನಿರಂಜನಾದಿತ್ಯನಿಗೇ ಶರಣಾಗಬೇಕೆಲ್ಲಾ!!!

ಸಮಾಜ ನೀತಿಗೆ ಬಾಹಿರ ನಾನು!

ಮಾನಾಭಿಮಾನಕ್ಕಾಶಿಸದವ ನಾನು!
ರಾ, ಜನ್ಮಾತೀತ ಪರಮಾತ್ಮ ನಾನು!
ನೀಚೋಚ್ಚ ರಹಿತ ಯೋಗೇಶ್ವರ ನಾನು!
ತಿಥಿ, ವಾರ, ನಕ್ಷತ್ರಾತೀತಾತ್ಮ ನಾನು!
ಗೆಳೆಯ, ವೈರಿಗಳಿಲ್ಲದವ ನಾನು!
ಬಾಯಿ, ಕೈ, ಕಚ್ಚೆಗಧೀನನಲ್ಲ ನಾನು!
ಹಿಗ್ಗು, ಕುಗ್ಗುಗಳಿಲ್ಲದವನು ನಾನು!
ಜಸ್ತಮಸ್ಸತ್ವ ಗುಣಾತೀತ ನಾನು!
ನಾದ, ಬಿಂದು, ಕಲೆಗತೀತನು ನಾನು! (ಅ)
-ನುಪಮೋದಾರಿ ನಿರಂಜನಾದಿತ್ಯಾನು!!!

ಧರ್ಮ ಸಂಸ್ಥಾಪನೆಗಾಗಿ ವನವಾಸ! (ಮ)

-ರ್ಮವಿದರುಹಿತು ರಾಮ ವನವಾಸ!
ಸಂಗಡಿಗರಾರೆಂದಿತಾ ವನವಾಸ!
ಸ್ಥಾನ, ಮಾನ, ಮರೆತಿತ್ತಾ ವನವಾಸ!
ತಿತೋದ್ಧಾರ ಮಾಡಿತಾ ವನವಾಸ! (ಇ)
-ನೆಯನಾದರ್ಶ ತೋರಿತಾ ವನವಾಸ!
ಗಾಢ ಭ್ರಾತೃಪ್ರೇಮಕ್ಕಾಗೀ ವನವಾಸ!
ಗಿರಿಜನ ಸೇವೆಗಾಗೀ ವನವಾಸ!
ರ ಶಬರಿಗಾಗ್ಯಾಯ್ತೀ ವನವಾಸ! (ವಾ)
-ನರ ವೀರನಿಗಾಗ್ಯಾಯ್ತೀ ವನವಾಸ!
ವಾಲಿ ಸುಗ್ರೀವರ್ಗಾಗ್ಯಾಯ್ತೀ ವನವಾಸ! (ಜ)
-ಸ ನಿರಂಜನಾದಿತ್ಯಗಾ ವನವಾಸ!!!

ಪ್ರಜಾಹಿತೈಷಿಗಾರೇನು ಹೇಳಬೇಕು?

ಜಾತಿ, ಮತ ಭೇದ ಅವನಿಗೇಕ್ಬೇಕು?
ಹಿತವನ್ನೇ ಸರ್ವರಿಗೂ ಮಾಡಬೇಕು!
ತೈಲಧಾರೆಯಂಥಾ ಕರ್ತವ್ಯ ಬೇಕು! (ಋ)
-ಷಿ ಚಕ್ರವರ್ತಿ ಅತ್ರಿಯಂತಿರಬೇಕು!
ಗಾಯತ್ರೀ ದೇವತೆಯಂತೆ ಇರಬೇಕು!
ರೇಣುಕಾ ತನಯನಂತೆ ಇರಬೇಕು! (ಅ)
-ನುಪಮ ಗುಣಿ ಶ್ರೀರಾಮನಂತಿರ್ಬೇಕು!
ಹೇರಂಬ ಗಣಪತಿಯಂತಿರಬೇಕು! (ಖ)
-ಳ ರಾವಣಾಸುರನಂತಿರದಿರ್ಬೇಕು!
ಬೇರಾರ ಶಿಫಾರಸೂ ಕೇಳದಿರ್ಬೇಕು!
ಕುಲ ನಿರಂಜನಾದಿತ್ಯನದ್ದಾಗ್ಬೇಕು!!!

ಯಾರ ಸ್ಮರಿಸಿ ಯಾರಿಗೀಗೇನಾಯ್ತು?

ಹಸ್ಯವಿದರದ್ದರಿಯದಾಯ್ತು!
ಸ್ಮರಣೆಯೇ ಕೊನೆ ತನಕವಾಯ್ತು!
ರಿಪು ಸಂಹಾರವೀಗಾಗದಂತಾಯ್ತು!
ಸಿರಿಧರನ ಪತ್ತೆಯಾಗದಾಯ್ತು!
ಯಾದವೇಂದ್ರನ ಅಭಯವೇನಾಯ್ತು!
ರಿಸ್ಯುಕ್ತಿಯನುಭವವಾಗದಾಯ್ತು!
ಗೀಳುಗಳಿಗೆ ಮಿತಿಯಿಲ್ಲದಾಯ್ತು!
ಗೇಣಿದಾರಗೊಡೆತನವೀಗಾಯ್ತು!
ನಾಥನಿಲ್ಲದ ಮಕ್ಕಳಾದಂತಾಯ್ತು! (ಆ)
-ಯ್ತು ನಿರಂಜನಾದಿತ್ಯೇಚ್ಛೆಯಂತಾಯ್ತು!!!

ಯಾವ ಮತ ಶ್ರೇಷ್ಠವೆಂದರುಹಪ್ಪಾ! (ಅ)

-ವಧೂತ ನಿನ್ನಾಜ್ಞೆಯಿದಕ್ಕೇನಪ್ಪಾ?
ತ, ಮತವೆಂದ್ಕಚ್ಚಾಡುವರಪ್ಪಾ!
ನಯರನ್ಯೋನ್ಯವಾಗಿಲ್ಲವಪ್ಪಾ!
ಶ್ರೇಯಸ್ಸಿಗಾವುದುದಾರಿ ಹೇಳಪ್ಪಾ? (ಅ)
-ಷ್ಟ ಮದಗಳಿಂದ ಪಾರುಮಾಡಪ್ಪಾ!
ವೆಂಕಟೇಶ, ಅಲ್ಲಾ, ಯೆಹೋವಾರಪ್ಪಾ?
ರ್ಶನ ಅವರದು ಮಾಡಿಸಪ್ಪಾ! (ಕ)
-ರುಣೆ ತೋರಿಸಬೇಕು ನೀನೀಗಪ್ಪಾ!
ದಿನಾಲ್ಕು ಲೋಕಕ್ಕೊಬ್ಬ ದೇವಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯ ಅವನಪ್ಪಾ!!!

ನಿದ್ರಿಸುವವಗನ್ನವಾದ್ರೇನು, ಮುದ್ದೆಯಾದ್ರೇನು? (ತಿಂ)

-ದ್ರಿ, ಬಿಟ್ರಿ ಎಂದಾರೋಪಿಸಿದರಾತಗರಿವೇನು?
ಸುಜ್ಞಾನಿ ಮಾನವನಿಗೆ ಸಮಾಜದ ಹಂಗೇನು?
ಸ್ತ್ರ ರೇಷ್ಮೆಯದ್ದಾದರೇನು, ಹತ್ತಿಯದ್ದಾದ್ರೇನು?
ರ ಗುರುಕೃಪೆಯಿಂದಾತ ಭೇದ ಬಿಟ್ಟಿಹನು!
ರ್ವರಹಿತನಾಗಿ ಕಾಲ ಕಳೆಯುತ್ತಿಹನು! (ನ)
-ನ್ನದು, ನಿನ್ನದೆಂದೀರ್ಷಾಸುಯೆಯಿಲ್ಲದಂತಿಹನು!
ವಾದ, ವಿವಾದಕ್ಕೆ ಬಹು ದೂರವಿರುತ್ತಿಹನು! (ಉ)
-ದ್ರೇಕೋದ್ವೇಗಗಳಿಗೆಡೆ ಕೊಡದಿರುತ್ತಿಹನು!
ನುಡಿಯದೇ ಕೆಲಸವನ್ನೆಲ್ಲಾ ಮಾಡುತ್ತಿಹನು!
ಮುರುಕು ಗುಡಿಸಲಿನಲ್ಲೂ ತೃಪ್ತಿಯಿಂದಿಹನು! (ಇ)
-ದ್ದೆಡೆಯಲ್ಲೇ ದಿವ್ಯದರ್ಶನ ಪಡೆಯುತ್ತಿಹನು!
ಯಾರೇನೆಂದರೂ ಮುನಿಸಿಕೊಳ್ಳದಿರುತ್ತಿಹನು! (ಹೋ)
-ದ್ರೇಕೆ ಹೋದೆ, ಬಂದ್ರೇಕೆ ಬಂದೆನ್ನದಿರುತ್ತಿಹನು! (ಭಾ)
-ನು ನಿರಂಜನಾದಿತ್ಯಾನಂದ ದತ್ತನಾಗಿಹನು!!!

ಹಸಿವಿದ್ದವಗೆ ಕದಾನ್ನವೂ ಸುಧಾನ್ನ! (ಹ)

-ಸಿವಿಲ್ಲದವಗೆ ಸುಧಾನ್ನವೂ ಕದಾನ್ನ!
ವಿಶ್ವಾಸವಿದ್ದರೆ ವಿಷವೂ ಅಮೃತಾನ್ನ! (ಸ)
-ದ್ದರ್ಶನ ಪಡೆಯುವನಾ ಗುಣಸಂಪನ್ನ!
ರ ಗುರು ಅವನಲ್ಲಿ ಸದಾ ಪ್ರಸನ್ನ!
ಗೆರೆ ದಾಟಿದರೆ ಆಗುವುದು ವಿಪನ್ನ!
ಷ್ಟಕ್ಕೀಡಾದಳು ಸೀತೆ ಮರೆತಿದನ್ನ!
ದಾಶರಥಿಯ ಪ್ರೀತಿ ಎತ್ತಿತವಳನ್ನು! (ತ)
-ನ್ನನ್ಯಾಯಕ್ಕಾಗ್ಯುಂಡ ರಾವಣ ಫಲವನ್ನ! (ಹಾ)
-ವೂ ಹಗ್ಗವಾಗಿ ಮಾಡಿದರ್ಮಥನವನ್ನ!
ಸುರರುಂಡರಾನಂದದಿಂದಮೃತವನ್ನ!
ಧಾವಿಸಿದರಸುರರು ಒಪ್ಪಿ ಸೋಲನ್ನ! (ಉ)
-ನ್ನತಿಗೆ ನೆನೆ ನಿರಂಜನಾದಿತ್ಯನನ್ನ!!!

ಸಾಕ್ಷಾತ್ಕಾರವಾದ ಮೇಲಿನ್ನೇನು?

ಕ್ಷಾಮ, ಡಾಮರಕ್ಕಳೋಲ್ಲ ನೀನು! (ಸ)
-ತ್ಕಾರದಿಂದುಬುವುದಿಲ್ಲ ನೀನು!
ತಿಪತಿಗಾಳಾಗೋಲ್ಲ ನೀನು!
ವಾಸನೆಗಾಗೋಲ್ಲ ನೀನು!
ರ್ಪ, ದಂಭಕ್ಕೆ ಅಂತಕ ನೀನು!
ಮೇಲು ಕೀಳೆನ್ನುವುದಿಲ್ಲ ನೀನು!
ಲಿಪ್ತನಲ್ಲ ಯಾವುದಕ್ಕೂ ನೀನು! (ಹೊ)
-ನ್ನೇ ಮಣ್ಣು, ಮಣ್ಣೇ ಹೊನ್ನೆಂಬೆ ನೀನು! (ನಾ)
-ನು ನಿರಂಜನಾದಿತ್ಯೆಂಬೆ ನೀನು!!!

ನಾಮ, ರೂಪಕ್ಕವಸಾನವೆಂದು?

ನ್ಮಥನ ಆಟ ಮುಗಿದಂದು! (ಆ)
-ರೂ ವೈರಿಗಳೂ ಸತ್ತುಹೋದಂದು!
ರಮಾತ್ಮನಾರೆಂದರಿತಂದು! (ಚೊ)
-ಕ್ಕಟ ಮನಸ್ಸನ್ನೂ ಹೊಂದಿದಂದು! (ಅ)
-ವಧೂತ ಗೀತಾದರ್ಶ ಬಂದಂದು!
ಸಾಯುಜ್ಯಾನುಭವಿ ನೀನಾದಂದು!
ಶ್ವರ ಜಗತ್ತೆಂದರಿತಂದು!
ವೆಂಕಟಾಚಲ ಮನಸ್ಸಾದಂದು! (ಅ)
-ದು ನಿರಂಜನಾದಿತ್ಯನೆಂದಂದು!!!

ಹೊಟ್ಟೆ ಬಟ್ಟೆಗಾಗೆಷ್ಟಾಟ? (ಸಿ)

-ಟ್ಟೆಬ್ಬಿಸುವುದಾ ಕೆಟ್ಟಾಟ!
ದ್ಧನೂ ಸಿದ್ಧನೆಂಬಾಟ! (ಗು)
-ಟ್ಟೆನ್ನುವುದಾ ಸಟೆಯಾಟ!
ಗಾಳಿ ಮೂಟೆ ಕಟ್ಟುವಾಟ!
ಗೆಳೆಯ ಕತ್ತು ಕೊ

ವಾಟ! (ಅ)
-ಷ್ಟಾವಧಾನವೆಂಬೊಂದಾಟ! (ದಿ)
-ಟ ನಿರಂಜನಾದಿತ್ಯಾಟ!!!

ಮಂದಿರವ ಮನ ಸ್ವಚ್ಛವಾಗಿರಿಸಬೇಕು!

ದಿವ್ಯ ನಾಮಸ್ಮರಣೆಯಿಂದದನ್ನು ಮಾಡ್ಬೇಕು!
ಕ್ತ, ಮಾಂಸದೀ ಗೊಂಬೆ ಗುಡಿಯೆಂದರಿಯ್ಬೇಕು!
ಸ್ತ್ರಾದ್ಯಲಂಕಾರಾ ಭಾವನೆಯಿಂದ ಮಾಡ್ಬೇಕು!
ನುಷ್ಯರನ್ನು ಮೆಚ್ಚಿಸ್ಲಿಕ್ಕಲ್ಲವಾಗಿರ್ಬೇಕು!
ಟರಾಜ ಒಳಗಿಹನೆಂದರಿಯ ಬೇಕು!
ಸ್ವರೂಪ ವ್ಯಕ್ತಾವ್ಯಕ್ತವೆಂದು ತಿಳಿಯಬೇಕು! (ಉ)
-ಚ್ಛ, ನೀಚ ಅವನಿಗಿಲ್ಲವೆಂದರಿಯಬೇಕು!
ವಾದ, ಭೇದಕ್ಕವ ಸಿಕ್ಕನೆಂದರಿಯಬೇಕು!
ಗಿಡ, ಬಳ್ಳಿಯಲ್ಲೂ ಇರುವನೆಂದರಿಯಬೇಕು!
ರಿಸಿಗಳನುಭವದಿದೆಂದರಿಯಬೇಕು!
ಚ್ಚಿದಾನಂದಾತ್ಮ ಅವನೆಂದರಿಯಬೇಕು!
ಬೇರಾವ ರೂಪವನ್ನೂ ಕಲ್ಪಿಸದಿರಬೇಕು!
ಕುಲಕ್ಕೆ ನಿರಂಜನಾದಿತ್ಯಾನಂದವಿರ್ಬೇಕು!!!

ವಿಧಿವಶ ಮಾನವ ಬಲ! (ಅ)

-ಧಿಕಾರದಹಂಕಾರಾ ಬಲ!
ರ ಗುರುವಿಗಾತ್ಮ ಬಲ!
ರಣನಿಗೆ ಕೃಪಾ ಬಲ!
ಮಾಯಾ ಮೋಹಿತಗಿಲ್ಲಾ ಬಲ!
ರ ನಾಡಿಗಳೆಲ್ಲ ಬಲ!
ರ ಮಾರುತಿಗಾವ ಬಲ?
ಲ, ಮಹಾಬಲಾತ್ಮ ಬಲ! (ಬಾ)
-ಲ ನಿರಂಜನಾದಿತ್ಯಾ ಬಲ!!!

ವಾಕ್ಯಾರ್ಥದಲ್ಲಿದೆ ಪರಮಾರ್ಥ! (ಐ)

-ಕ್ಯಾನಂದವನ್ನೀಯುವುದಾ ಅರ್ಥ! (ಸಾ)
-ರ್ಥಕವದ್ರಿಂದ ಜನ್ಮವೆಂದರ್ಥ!
ಶೇಂದ್ರಿಯಗಳ್ನಾನಲ್ಲೆಂದರ್ಥ! (ನಿ)
-ಲ್ಲಿಸಿ ಮನಸ್ಸನ್ನಾವಾಗೆಂದರ್ಥ!
ದೆವ್ವಗಳ ನಂಬಬೇಡೆಂದರ್ಥ!
ತಿತೋದ್ಧಾರೀ ದಾರಿಯೆಂದರ್ಥ! (ಹ)
-ರ ಹರಿ, ಬ್ರಹ್ಮರೈಕ್ಯವೆಂದರ್ಥ!
ಮಾಯಾತೀತ ಬ್ರಹ್ಮ ಅದೆಂದರ್ಥ! (ಅ)
-ರ್ಥ, ನಿರಂಜನಾದಿತ್ಯದೆಂದರ್ಥ!!!

ಆಕಾರಕ್ಕೂ, ಆಚಾರಕ್ಕೂ ನೆಂಟು!

ಕಾಮನೆಗಳು ದೇಹಕ್ಕೆ ಉಂಟು!
ಮಿಸಿದ್ರದ್ರಲ್ಲಿ ಭವದಂಟು! (ತ)
-ಕ್ಕೂಳಿಗದಿಂದ ಶಾಂತಿಯ ಗಂಟು!
ತ್ಮಾನಾತ್ಮ ವಿಚಾರ ಟೇಕುಂಟು!
ಚಾತುರ್ವರ್ಣಾಶ್ರಮಾಚಾರಕ್ಕುಂಟು! (ಪ)
-ರಮಾರ್ಥಕ್ಕಿದರಗತ್ಯವುಂಟು! (ಒ)
ಕ್ಕೂಟಕ್ಕಿದರಿಂದ ನೆರವುಂಟು!
ನೆಂಟ, ಭಂಟರ ಸೌಹಾರ್ದವುಂಟು! (ಅಂ)
-ಟು ನಿರಂಜನಾದಿತ್ಯಗೇನುಂಟು???

ಇಂದ್ರಿಯಾನಂದದಿಂದಾದ ದೇಹವಿದು! (ಬ)

-ದ್ರಿಕಾಶ್ರಮಕ್ಕೆ ಹೋದ್ರೂ ಚೇಷ್ಟೆ ಬಿಡದು!
ಯಾದವೇಂದ್ರನನ್ನು ಸಹ ಕಾಡಿತ್ತದು!
ನಂದಿವಾಹನನ್ನೂ ಪೀಡಿಸಿತ್ತದು!
ತ್ತಾವತಾರಕ್ಕೆ ಹೇತುವಾಯಿತದು! (ಅಂ)
-ದಿಂದೆಲ್ಲಾ ಐಹಿತಕ್ಕೆ ದುಡಿಯಿತದು!
ದಾರಿ ಸಾಗದೆ ಸುಸ್ತಾಗಿ ಸತ್ತಿತದು!
ರಿದ್ರ, ಶ್ರೀಮಂತ, ಎಂದೊದ್ದಾಡಿತದು!
ದೇಶ, ವಿದೇಶ, ಸುತ್ತಾಡಿ ಬಂದಿತು!
ರ್ಷವಿಲ್ಲದೆ ಬೆಂಡಾಗಿ ಹೋಯಿತದು!
ವಿರಕ್ತಿಯಿಂದ ಮುಕ್ತಿ ಅದಕ್ಕಹುದು! (ಇ)
-ದು ನಿರಂಜನಾದಿತ್ಯ ಸಾಧಿಸಿದುದು!!!

ಚಿನ್ಮಯ ನೀನಾಗಿರಲೇಕೆ ಚಿಂತೆ? (ತ)

-ನ್ಮಯ ನೀನಾದಾಗ ಚಿಂದೆ ನಿಶ್ಚಿಂತೆ!
ದುಪನ ಉಪದೇಶ ಅದಂತೆ!
ನೀಚ ವಾಸನೆಗಳಿಂದಾಯ್ತು ಚಿಂತೆ!
ನಾನಾರೆಂದು ತಿಳಿದಾಗ ನಿಶ್ಚಿಂತೆ! (ಯೋ)
-ಗಿಯಾಗೆಂದಾ ಗೀತೋಪದೇಶವಂತೆ! (ಧೀ)
-ರನಾಗಿ ಸ್ವಧರ್ಮ ಪಾಲಿಸ್ಬೇಕಂತೆ!
ಲೇಶವೂ ಎದೆಗುಂದಬಾರದಂತೆ!
ಕೆಡುಕನ್ಯರಿಗೆಸಗ್ಬಾರದಂತೆ!
ಚಿಂತೆ ಚಿತೆಗಿಂತಲೂ ಕ್ರೂರವಂತೆ! (ಚಿಂ)
-ತೆ ನಿರಂಜನಾದಿತ್ಯಗಿಲ್ಲಿವಂತೆ!!!

ತಂದೆ, ತಾಯಿ ನೀನಾಗಣ್ಣಾ! (ಬಂ)

-ದೆನ್ನನ್ನು ಸೇರಿಕೊಳ್ಳಣ್ಣಾ!
ತಾಮಸ ಮಾಡಬೇಡಣ್ಣಾ! (ಆ)
-ಯಿತ್ತೆಪ್ಪತ್ತೊಂದು ವರ್ಷಣ್ಣಾ!
ನೀನೇ ನಾನೆಂದ್ರಾಯ್ತೇನಣ್ಣಾ?
ನಾನದನ್ನು ಕಾಣ್ಬೇಕಣ್ಣಾ! (ಹ)
-ಗಲಿರುಳದೇ ಹುಚ್ಚಣ್ಣಾ! (ಅ)
-ಣ್ಣಾ, ನಿರಂಜನಾದಿತ್ಯಣ್ಣಾ!!!

ಮೋಸ ಮಾಡಿತಾ ಕರಿ ಮೋಡ!

ಸಿಯ ವಂಚಿಸಿತಾ ಮೋಡ!
ಮಾಯವಾಯ್ತೇಕಾ ಮಳೆ ಮೋಡ? (ಜ)
-ಡಿ ಮಳೆಯಾಗ್ಬೇಕಿತ್ತಾ ಮೋಡ!
ತಾನಿಟ್ಟಂತಿರ್ಬೇಕೆಂಬಾ ಮೃಡ!
ನಿಕರ ತೋರದೇ ಬಿಡ! (ದಾ)
-ರಿ ಕೈಲಾಸಕ್ಕೆ ಡೊಂಕು ಮಾಡ!
ಮೋಸಾರೋಪಣೆಗೆಡೆ ಕೊಡ! (ಮೃ)
-ಡ ನಿರಂಜನಾದಿತ್ಯಾ ಮೋಡ!!!

ತಬ್ಬಿ ಮುತ್ತಿಕ್ಕಬೇಕು ನಾ ನಿನ್ನ! (ಕೊ)

-ಬ್ಬಿಹೆ ನಾನೆಂದು ದೂರ್ಬೇಡ ನನ್ನ!
ಮುನಿಸಿಂದೇಕೆ ಹೊರಗಿಟ್ಟೆನ್ನ? (ಅ)
-ತ್ತಿತ್ತಲ್ಲಾಡದಂತಿರ್ಸಿಕೊಳ್ಳೆನ್ನ! (ಸಿ)
-ಕ್ಕದಂತನ್ಯರಿಗೆ ಇರಿಸೆನ್ನ!
ಬೇರೇನನ್ನೂ ಬೇಡೆ ನಾನು ನಿನ್ನ!
ಕುಲ ಸ್ತ್ರೀಯೆಂದು ಸ್ವೀಕರಿಸೆನ್ನ!
ನಾನೆಂದೆಂದೂ ಸೇವಕಳು ನಿನ್ನ!
ನಿಜವೆಂದು ನಂಬು ಈ ಮಾತನ್ನ! (ನ)
-ನ್ನ ನಿರಂಜನಾದಿತ್ಯಾ! ಬಾ!! ರನ್ನಾ!!!

ಮಾಡು ವ್ಯಾಯಾಮ ಇಷ್ಟ ಮಂತ್ರ ಜಪಿಸುತ್ತ ನಿತ್ಯ! (ನೋ)

-ಡು ಅದರ ಪರಿಣಾವನ್ನೆನ್ನ ಪ್ರಿಯ ಭೃತ್ಯ!
ವ್ಯಾಧಿನಾಶಕ್ಕಿದನುಭವ ಸಿದ್ಧ ಸೂಕ್ತ ಕೃತ್ಯ!
ಯಾಕೆ ನಂಬಿಗೆಯಿಂದ ಮಾಡಬಾರದಿದ ಮರ್ತ



?
ನಕ್ಕೀವುದು ಹರ್ಷ ದೇಹಕಾಂತಿಯಿತ್ತು ಸತ್ಯ!
ದು ನಿತ್ಯಾಭ್ಯಾಸವಾಗ್ಬೇಕೆಂಬುದ್ರಲಿಲ್ಲಸತ್ಯ! (ಕ)
-ಷ್ಟವಿಲ್ಲದ ಶ್ವಾಸೋಚ್ಛ್ವಾಸ ವ್ಯಾಯಾಮಗತ್ಯ!
ಮಂಜುನಾಥನ ಯೋಗ ಶರೀರ ಸೌಂದರ್ಯ ಸ್ತುತ್ಯ!
ತ್ರಯಮೂರ್ತಿ ಸ್ವರೂಪ ದತ್ತನದ್ದೇ ಪಾರುಪತ್ಯ!
ರಾ, ಜನ್ಮ, ವಿದೂರನಾದವದೇ ಕೃತಕೃತ್ಯ!
ಪಿಸುಣರಿಗೇನರಿವಾಗುವುದಿದರ ಸತ್ಯ?
ಸುದರ್ಶನಧಾರಿ ಮಲ್ಲನಿಗಿದಿರಾವ ದೈತ್ಯ! (ತ)
-ತ್ತ ಬಡಿಕರಿಗರಿವಾಗದಿವನ ಸಾಮರ್ಥ್ಯ!
ನಿತ್ಯ ಕರ್ಮಾನುಷ್ಠಾನ ಸಾರೂಪ್ಯಕ್ಕೆ ಅತ್ಯಗತ್ಯ!
ತ್ಯಜಿಸ ನಿತ್ಯ ನೇಮ, ಕರ್ಮ ನಿರಂಜನಾದಿತ್ಯ!!!

ವಿರಕ್ತ ಅನುರಕ್ತನೆಂತಹನು? (ಪ)

-ರಮಾರ್ಥದಲ್ಲಾತ ಮುಳುಗಿಹನು! (ಶ)
-ಕ್ತನೂ, ಅಶಕ್ತನೂ ತಾನಾಗಿಹನು!
ಜರಾಮರ ತಾನೆನಿಸಿಹನು! (ಮ)
-ನುಜ, ದನುಜಾಭೇದನಾಗಿಹನು! (ಸು)
-ರ, ನರಲೋಕಕ್ಕಾಶಿಸದಿಹನು! (ರ)
-ಕ್ತ, ಮಾಂಸ ನಾನಲ್ಲೆಂದರಿತಿಹನು! (ನಾ)
-ನೆಂಬವ ನಿರಂಜನನೆಂದಿಹನು!
ಮಾದಿ ಗುಣಾತೀತನಾಗಿಹನು!
ರಿ ಹರಾದ್ಯರನ್ನೂ

ಈರಿಹನು! (ತಾ)
-ನು ನಿರಂಜನಾದಿತ್ಯನಾಗಿಹನು!!!

ಬೆದರಿಕೆಗಂಜದು ಪ್ರಸಾದಾಕಾಂಕ್ಷೆ!

ಯಾಶೂನ್ಯನಲ್ಲಾತ ಮಾಡ್ಲಿಕ್ಕುಪೇಕ್ಷೆ!
ರಿಪುಗಳಡಗಿಸ್ಯಾಯ್ತು ಯಜ್ಞ ರಕ್ಷೆ!
ಕೆಟ್ಟ ಹಿರಣ್ಯಕಶ್ಯಪಗಾಯ್ತು ಶಿಕ್ಷೆ!
ಗಂಡನನ್ನುಳಿಸಿದಾ ಸಾವಿತ್ರಿ ದಕ್ಷೆ!
ವನನ್ನೂ ಒಲಿಸಿಕೊಂಡಿತಾಕಾಂಕ್ಷೆ!
ದುರುಳ ದುಶ್ಯಾಸನಿಗಾಯ್ತು ಶಿಕ್ಷೆ!
ಪ್ರಭು ಕೃಷ್ಣ ದ್ರೌಪದಿಗಿತ್ತನು ರಕ್ಷೆ!
ಸಾವಿಗೂ ಹೆದರದು ಮಹತ್ವಾಕಾಂಕ್ಷೆ!
ದಾರಿ ಸಾಗಲಿಕ್ಕಾಗಿರಬೇಕು ದೀಕ್ಷೆ! (ಪ್ರ)
-ಕಾಂಡ ಪಂಡಿತನೂ ಮಾಡ್ಬಾರದುತ್ಪ್ರೇಕ್ಷೆ! (ಶಿ)
-ಕ್ಷೆ ಶ್ರೀ ನಿರಂಜನಾದಿತ್ಯನಿಂದ ರಕ್ಷೆ!!!

ಪ್ರಕೃತಿಯ ಗುಣಗಾನ ಮಾಡದವರಾರು?

ಕೃತ, ತ್ರೇತೆಯಲ್ಲೂ ಅದನ್ನು ಬಣ್ಣಿಸಿಹರು!
ತಿಳಿಯಲದರಾಳಸಮರ್ಥರಾಗಿಹರು!
ಜ್ಞ, ಯಾಗಗಳಿಂದಲೂ ಅರಿಯದಿಹರು!
ಗುಣಾತೀತರ್ತಾವಾಗಿ ಗುರುರಾಜರಿಹರು! (ತೃ)
-ಣ ಸಮಾನವಿದು ನಿಜರೂಪಕ್ಕೆಂದಿಹರು!
ಗಾನ ಲೋಲರಿಗೂ ಪ್ರೋತ್ಸಾಹ ನೀಡುತ್ತಿಹರು!
ರ, ನಾರಿಯರಿದ್ರಲ್ಲೇ ಮಗ್ನರಾಗಿಹರು!
ಮಾಯೆಯನ್ನೇ ನಂಬಿ ಮೋಸಹೋಗುತ್ತಲಿಹರು!
ಮರುಧರೆನೆಲ್ಲಿಹನು ಎಂದರಿಯರು!
ರ್ಶನಕ್ಕಾಗಿ ಅಲ್ಲಿಲ್ಲಿ ಓಡಾಡುತ್ತಿಹರು! (ಅ)
-ವನೆಲ್ಲರೊಳಗಿಹನೆಂದರಿಯದಿಹರು!
ರಾಗ, ದ್ವೇಷ ಬಿಟ್ಟಾಗವನನ್ನು ಕಾಣುವರು! (ಗು)
-ರು ನಿರಂಜನಾದಿತ್ಯನೆಂದರಿಯುವರು!!!

ಹಸಿವೆಯೆಂದಮೇಧ್ಯ ತಿನ್ನಬಾರ್ದಯ್ಯಾ!

ಸಿಕ್ಕದಿದ್ದ್ರನ್ನ ಪ್ರಾಣ ಬಿಡಬೇಕಯ್ಯಾ!
ವೆಸನಗಳನ್ನು ಜಯಿಸಬೇಕಯ್ಯಾ! (ಥೂ)
-ಯೆಂದವುಗಳ ಮೇಲುಗುಳಬೇಕಯ್ಯಾ!
ರ್ಶನೇಚ್ಛೆಗೆ ಮನೋಜಯ ಬೇಕಯ್ಯಾ!
ಮೇಧಾವಿಯಾದರೆ ಮಾತ್ರ ಸಾಲದಯ್ಯಾ! (ಅ)
-ಧ್ಯಕ್ಷ ಭಾಷಣವೇನೂ ದೊಡ್ಡದಲ್ಲಯ್ಯಾ!
ತಿಳಿದದ್ದಾಚಾರಕ್ಕೆ ಬರಬೇಕಯ್ಯಾ! (ತ)
-ನ್ನ ತಾನರಿತಾಗ ಜ್ಞಾನ ಪೂರ್ಣವಯ್ಯಾ!
ಬಾಳಿನ ಸಾರ್ಥಕತೆ ಅದರಿಂದಯ್ಯಾ! (ನಿ)
-ರ್ದಯತೆ ಆಗೂರು ಬಿಟ್ಟೋಡುವುದಯ್ಯಾ! (ಅ)
-ಯ್ಯಾ ನಿರಂಜನಾದಿತ್ಯ ಜ್ಞಾನೇಶ್ವರಯ್ಯಾ!!!

ನಿರೀಕ್ಷಾ, ಪರೀಕ್ಷಾತೀತ ನಿತ್ಯಾನಂದ!

ರೀತಿ, ನೀತಿ, ರಹಿತಾ ವಿಮಲಾನಂದ! (ರ)
-ಕ್ಷಾ, ಶಿಕ್ಷಾ, ನಿರ್ಲಕ್ಷ್ಯಾ ಸದಾ ಶಿವಾನಂದ!
ರಮ ಪಾವನಾ ಪರಬ್ರಹ್ಮಾನಂದ! (ನಾ)
-ರೀ ಶಿರೋಮಣಿ ಸೀತಾ ಶ್ರೀರಾಮಾನಂದ!
ಕ್ಷಾತ್ರ ತೇಜೋ ರಾಶಿ ಬಲಭೀಮಾನಂದ!
ತೀರ್ಥೊ

ದ್ಧಾರ ಗುರು ಗಂಗಾಧರಾನಂದ!
ತ್ವಮಸಿಯರ್ಥ ಸಿದ್ಧ ಶಿವಾನಂದ!
ನಿಶ್ಚಲ ತತ್ವಜ್ಞಿ ಹರಿಹರಾನಂದ!
ತ್ಯಾಗಾಗ್ರಣಿ ಗುರು ದತ್ತಾತ್ರೇಯಾನಂದ!
ನಂದಕಂದ, ಗೋವಿಂದ ಪರಮಾನಂದ!
ಯಾನಿಧಿ ನಿರಂಜನಾದಿತ್ಯಾನಂದ!!!

ಬಾಲಾ ಸರಸ್ವತಿ ಸದಾ ಸೌಖ್ಯಾ!

ಲಾಭಾಲಾಭ ಸಂತುಷ್ಟೆ ಆ ಸೌಖ್ಯಾ!
ಚ್ಚಿದಾನಂದ ಸ್ವರೂಪೀ ಸೌಖ್ಯಾ!
ಮ್ಯ, ಮನೋಹರ ಮೂರ್ತಿ

ಸೌಖ್ಯಾ!
ಸ್ವಯಂ ಪ್ರಕಾಶ ಸುಂದರೀ ಸೌಖ್ಯಾ! (ಶೃ)
-ತಿ, ಸ್ಮೃತಿಗಳಿಗಾಧರಾ ಸೌಖ್ಯಾ!
ರಸ ಸಂಗೀತ ಸಾರಾ ಸೌಖ್ಯಾ!
ದಾಸರ ದಾಸೀ ಗಿರ್ವಾಣೀ ಸೌಖ್ಯಾ!
“ಸೌ” ಬೀಜಾಕ್ಷರಾರ್ಥಾಕಾರೀ ಸೌಖ್ಯಾ! (ಸೌ)
-ಖ್ಯಾ, ನಿರಂಜನಾದಿತ್ಯಾತ್ಮ ಸಖ್ಯಾ!!!

ನಿನ್ನ ಭಕ್ತಿ ಪೂಜೆಯಿಂದ ನಾನು ದತ್ತ! (ಅ)

-ನನ್ನ, ಪಾನಾದಿ ನೈವೇದ್ಯದಿಂದಾಗಿ ದತ್ತ!
ವ್ಯ ನಿಲಯದಲ್ಲಿರಿಸಿದ್ದ್ರಿಂದ ದತ್ತ! (ಶ)
-ಕ್ತಿ ಪ್ರದರ್ಶನವಾಗದಿದ್ದರೂ ದತ್ತ!
ಪೂರ್ಣ ವಿಶ್ವಾಸಕ್ಕೆ ಪ್ರತಿಫಲ ದತ್ತ! (ಗಾ)
-ಜೆನಿಸಿಕೊಂಡ್ರೂ ಮಾಣಕ್ಯ ಗುರು ದತ್ತ! (ಬಾ

)
-ಯಿಂದ ವೇದಾಂತಾಡುವವನಲ್ಲ ದತ್ತ!
ಮೆ, ಶಮೆಗಳಲ್ಲಗ್ರಗಣ್ಯಾ ದತ್ತ!
ನಾನು ನೀನೆಂಬ ಭೇದರಹಿತಾ ದತ್ತ! (ತ)
-ನುಜಾನುಜಾದಿ ಬಾಂಧವರೆಲ್ಲಾ ದತ್ತ!
ಶೇಂದ್ರಿಯಾತೀತ ಗುರುದೇವ ದತ್ತ! (ಇ)
-ತ್ತತ್ತೆತ್ತೆತ್ತ ನಿರಂಜನಾದಿತ್ಯ ದತ್ತ!!!

ಸರ್ವ ಸುಖ, ಸಾಧನಾ, ಸಂಪತ್ತುಳ್ಳಾಕೆ ಸೌಖ್ಯಾ! (ಸ)

-ರ್ವಶಕ್ತ ಶ್ರೀಹರಿಯ ಪ್ರೀತಿಯ ಸೊಸೆ ಸೌಖ್ಯಾ!
ಸುಶ್ರಾವ್ಯ ವೀಣಾವಾದನ ಕಲಾನಿಧಿ ಸೌಖ್ಯಾ!
ಗವಾಹನನೊಲಿದ ಗಾನಲೋಲೆ ಸೌಖ್ಯಾ!
ಸಾಮಾದಿ ಚತುರ್ವೆ

ದ ಸಾರವಾರಿಧಿ ಸೌಖ್ಯಾ!
ರ್ಮ, ಕರ್ಮಾನುಭವದ ಪೂರ್ಣ ಜ್ಞಾನಿ ಸೌಖ್ಯಾ!
ನಾಮ ಸಂಕೀರ್ತನಾನಂದ ಸಮಾಧಿಸ್ಥೆ ಸೌಖ್ಯಾ!
ಸಂಸಾರದಾವರಣದಲ್ಲಿ ನಿರ್ಲಿಪ್ತೆ ಸೌಖ್ಯಾ!
ಟ್ಟದ ರಾಣಿ ಬ್ರಹ್ಮನಿಗೆ ಗೀರ್ವಾಣೀ ಸೌಖ್ಯಾ! (ಕ)
-ತ್ತು ಎತ್ತಿ ಹಾರುವ ಮಯೂರವಾಹಿನೀ ಸೌಖ್ಯಾ! (ಕ)
-ಳ್ಳಾಟ, ಸುಳ್ಳಾಟವಿಲ್ಲದ ಸತ್ಯವಂತೆ ಸೌಖ್ಯಾ!
ಕೆಟ್ಟ ಯೋಚನೆಗಳಿಗೆಡೆಕೊಡಳಾ ಸೌಖ್ಯಾ!
“ಸೌ” ಬೀಜಾಕ್ಷರದಧಿದೇವತೆ ಬಾಲಾ ಸೌಖ್ಯಾ! (ಸೌ)
-ಖ್ಯಾ ನಿರಂಜನಾದಿತ್ಯನಾಗಿರಲೆಲ್ಲಾ ಸೌಖ್ಯಾ!!!

ರಾಮನೂ ನೀನೇ, ಕೃಷ್ಣನೂ ನೀನೇ!

ಹಿಮಾದರ್ಶ ಬೇರಾದ್ರೂ ನೀನೇ!
ನೂರಾರವತಾರದಲ್ಲೂ ನೀನೇ!
ನೀಚೋಚ್ಚವಿಲ್ಲದ ಆತ್ಮ ನೀನೇ!
ನೇಮ, ನಾಮ, ರೂಪತೀತ ನೀನೇ!
ಕೃತಿ ಬೇರಾದ್ರೂ ಕರ್ತನು ನೀನೇ! (ಪೂ)
-ಷ್ಣನೆಂಬಾರ್ಕನಲ್ಲೂ ಸದಾ ನೀನೇ!
ನೂರಾರು ಮಂತ್ರದೊಳಗೂ ನೀನೇ!
ನೀನು ನಾನೆಂದೀಗೇನಿಲ್ಲ ತಾನೇ! (ನೀ)
-ನೇ, ನಿರಂಜನಾದಿತ್ಯಾತ್ಮ ನಾನೇ!!!

ಕಾರಣ ಕಲ್ಪಿಸಿ, ಕಾರ್ಯ ಸಾಧಿಸುವ ಜಾಣ ನೀನು!

ಹಸ್ಯವಿದನ್ನರಿಯದೇ ದೂರುವರನ್ಯರನು! (ಗ)
-ಣಪತಿಯಿಂದ ವ್ಯಾಸಭಾರತ ಬರೆಸಿಲ್ವೇ ನೀನು?
ರ್ತವ್ಯವೆಂಬ ಹುಚ್ಚು ಹಿಡಿಸಿ ಮೌನಿಯಾದೆ ನೀನು! (ಶಿ)
-ಲ್ಪಿ ಕೆತ್ತಿರುವ ಮೂರ್ತಿಗೆ ಪೂಜಿಸಿಕೊಳ್ಳುವೆ ನೀನು!
ಸಿಕ್ಕದಂತೆ ನಿನ್ನೊಳಗುಟ್ಟ ಬಚ್ಚಿಟ್ಟಿರುವೆ ನೀನು!
ಕಾಮದಹನಕ್ಕೇನೂ ಅನ್ನದ ಕಾಮನಪ್ಪ ನೀನು! (ಕ್ರೌ)
-ರ್ಯವಿದು ನಿನ್ನದೆಂದರೆ ನಿರಾಕರಿಸುವೆ ನೀನು!
ಸಾರ್ವಭೌಮ ನೀನಾದ್ರೂ ಚರಾಚರ ವ್ಯಾಪಕ ನೀನು!
ಧಿಕ್ಕರಿಸಿದವರನ್ನು ಸತ್ಕರಿಸುವ ನೀನು!
ಸುಖಾಪೇಕ್ಷಿಯೆಂತಿರ್ಬೆ

ಕೆಂಬಾದರ್ಶಕ್ಕಂತಿರ್ಪೆ ನೀನು!
ಸುದೇಶನಾದ್ರು ಸುಧಾಮನಾತಿಥ್ಯ ಗೈದೆ ನೀನು!
ಜಾರ, ಚೋರನೆನಿಸಿದ್ರೂ ಸರ್ವರಾರಾಧ್ಯನು ನೀನು! (ಕೋ)
-ಣ ಜಪ ಮಾಡಿಸಿ ಜಾಣನನ್ನಾಗಿಸಿದವ ನೀನು!
ನೀಚೋಚ್ಚವೆನ್ನದೆ ಅರ್ಜುನಗಾದೆ ಸಾರಥಿ ನೀನು!
ನುಡಿಯದೇ ಸೇವೆ ಗೈವ ನಿರಂಜನಾದಿತ್ಯ ನೀನು!!!

ಪರಮಾರ್ಥ ಯಾವ ಬಾಯಿ ಹೇಳಿದ್ರೂ ಹಿತ! (ನ)

-ರ, ನಾರಿಯರಲ್ಲಿ ಯಾರು ಹೇಳಿದ್ರೂ ಹಿತ!
ಮಾತಿನಂತೆ ನಡೆವವರಂದ್ರತೆ ಹಿತ! (ಅ)
-ರ್ಥ ಅನ್ವರ್ಥವಾಯ್ತೆಂದಾಗ ಪರಮ ಹಿತ! (ಅ)
ಯಾರಿಂತಿರುವನೋ ಅವನೇ ಪುರೋಹಿತ!
ಸಿಷ್ಠಾದಿಗಳಿಂತಿದ್ದು ಮಾಡಿದರ್ಹಿತ!
ಬಾಯಿ ಬಡಾಯಿಯಿಂದಾಗುವುದು ಅಹಿತ! (ಕಾ)
-ಯಿ ಹಣ್ಣಾದ ಮೇಲೆ ತಿನ್ನುವುದೇವಿಹಿತ!
ಹೇಳಿದ್ದನುಭವಕ್ಕೆ ಬಾರದಿದ್ದ್ರೇನ್ಹಿತ? (ಕೂ)
-ಳಿಗಿಲ್ಲದವನಾಗ್ಬಾರದು ವಿವಾಹಿತ! (ಆ)
-ದ್ರೂ ಆ ದಾಂಪತ್ಯವಿರದು ಶಾಂತಿ ಸಹಿತ!
ಹಿರಣ್ಯಕಶ್ಯಪಗೆಷ್ಟಿದ್ದಾರಿಗೇನ್ಹಿತ? (ಹಿ)
-ತ, ನಿರಂಜನಾದಿತ್ಯಾನಂದತ್ಯಂತ ಹಿತ!!!

ಕದವನ್ನು ಸರಿಯಾಗಿ ಮುಚ್ಚು!

ಮೆ, ಶಮೆಯಿಂದದನ್ನು ಮುಚ್ಚು!
ರ ಗುರು ಸೇವೆಗಾಗಿ ಮುಚ್ಚು! (ಹೊ)
-ನ್ನು, ಹೆಣ್ಮಣ್ಣು ನುಗ್ಗದಂತೆ ಮುಚ್ಚು!
ದಾಶಿವನ ನೆನೆದು ಮುಚ್ಚು!
ರಿಪುಕುಲಾಂತಕಾತ್ನೆಂದು ಮುಚ್ಚು!
ಯಾಚನೆ ಮಾಡದೇನನ್ನೂ ಮುಚ್ಚು! (ಯೋ)
-ಗಿ ಅವನಂತಾಗ್ಬೇಕೆಂದು ಮುಚ್ಚು!
ಮುಕ್ತನಾಗಲು ಮನವ ಮುಚ್ಚು! (ಕಿ)
-ಚ್ಚು ನಿರಂಜನಾದಿತ್ಯಗೇನ್ಹೆಚ್ಚು???

ಅಸ್ಥಿರದಲ್ಲಸ್ಥಿರ ವಿಜ್ಞಾನ ಯುಗ!

ಸ್ಥಿತಿ, ಗತಿಯ ಸಂಶೋಧನೆಯ ಯುಗ!
ತಿ ಸುಖಕ್ಕೆ ವಿವಿಧಾಟದ ಯುಗ!
ರಿದ್ರ, ಶ್ರೀಮಂತ ಹೋರಾಡುವ ಯುಗ! (ಇ)
-ಲ್ಲ ಸಲ್ಲದಪಾರ್ಥ ಕಲ್ಪಿಸುವ ಯುಗ! (ಸ್ವ)
-ಸ್ಥಿತಿಯಲ್ಲಿರಲಿಕ್ಕಿಚ್ಛಿಸದ ಯುಗ!
ಮ್ಯ ನೋಟ, ಕೂಟ ನಿರ್ಮಾಣದ ಯುಗ!
ವಿಷ ಮಿಶ್ರಾಹಾರ ಪದಾರ್ಥದ ಯುಗ!
ಜ್ಞಾನ ಕೆಡಿಪಮಲು ಸೇವನಾ ಯುಗ!
ರ, ನಾರಿಯರಿಗಿದಿಷ್ಟದ ಯುಗ!
ಯುವತಿ ಸ್ಥಾನ, ಮನಕ್ಕಾಶಿಪ ಯುಗ! (ಯೋ)
-ಗ ನಿರಂಜನಾದಿತ್ಯೈಕ್ಯವೆಂದ ಯುಗ!!!

ಕಾಮ ರಾಮನಾದಾಗ ಸೀತಾಮಾತೆ! (ಕ)

-ಮ ರಾವಣನಾದಾಗ ಚಿತಾ ಮಾತೆ!
ರಾಮ, ರಾವಣರ, ಹಿತೈಷೀ ಮಾತೆ!
ಮತಾ ರೂಪಿ ರಾಮ, ಸೀತಾಮಾತೆ!
ನಾಮ, ರೂಪಕ್ಕನುಸರಿಸೀ ಮಾತೆ!
ದಾಶರಥಿಯ ರಾಣೀ ಮಹಾಮಾತೆ!
ರ್ವಿ ರಾವಣನಂತ್ಯಕಾರೀ ಮಾತೆ!
ಒನೆ ಲಿನೆ ಮಿ

ಸಿ




ತಾನೇ ತಾನದಾದಾಗ ಜಗನ್ಮಾತೆ!
ಮಾಯೆಯಿವಳೆಲ್ಲಾ ಲೋಕಕ್ಕೂ ಮಾತೆ! (ಮಾ)
-ತೆ, ಸೀತೆ ನಿರಂಜನಾದಿತ್ಯೈಕ್ಯತೆ!!!

ನಿನ್ನ ರೂಪವೇನೆಂದು ವಿಚಾರ ಮಾಡು! (ಕ)

-ನ್ನ ಕತ್ತರಿಗಳನ್ನು ದೂರ ಬಿಸಾಡು! (ಸ್ವ)
-ರೂಪಕ್ಕೆ ಬೇಡವಾದದ್ದನ್ನೆಲ್ಲಾ ಬಿಡು!
ರಮಾರ್ಥದಾನಂದವನ್ನಾಗ ಪಡು!
ವೇಷ, ಭೂಷಣದಾಸೆ ಕಡಿಮೆ ಮಾಡು!
ನೆಂಟರಿಷ್ಟರಂಬಿಲ್ಲದೇ ಒಡನಾಡು!
ದುಷ್ಟ ಕೂಟಗಳ ಬಿಟ್ಟು ದೂರ ಓಡು!
ವಿಜ್ಞಾನಕ್ಕೂ

ಈರಿದ್ದರಲ್ಲೊಡಗೂಡು!
ಚಾತುರ್ವರ್ಣಾಶ್ರಮದುದ್ದೇಶರಿತಾಡು!
ಹಸ್ಯ ಅಸೂಯೆಯಿಂದಲ್ಲೆಂದು ಹಾಡು!
ಮಾನವನೇಳಿಗೆಗಾಗಿದೆಲ್ಲಾ ಪಾಡು! (ಹಾ)
-ಡು, ನಿರಂಜನಾದಿತ್ಯನನ್ನು ಕೊಂಡಾಡು!!!

ಬೆವರು ಸುರಿಸಿ ಬಿತ್ತಿದ ಬೀಜ! (ಬೆ)

-ವರು ಸುರಿಸೇ ಬೆಳೆಸ್ಬೇಕು ನಿಜ! (ಕ)
-ರುಣೆ ಪ್ರಕೃತಿಗಿರ್ಬೇಕು ಸಹಜ!
ಸುವ್ಯವಸ್ಥೆ ತುಂಬಿಸೀತು ಕಣಜ! (ವೈ)
-ರಿ ನಿಗ್ರಹಕ್ಕೆ ಬೇಕು ಗಟ್ಟಿ ಭುಜ!
ಸಿಹಿ, ಕಹಿಯೂಟ ಉಣ್ಬೇಕ್ಮನುಜ!
ಬಿಡನು ಹೀಗಿರದಿದ್ದರೆ ಅಜ! (ಬಿ)
-ತ್ತಿದ್ದನ್ನುಂಡು ಹಾರಿಸಬೇಕು ಧ್ವಜ!
ರಿದ್ರನೂ ಆಗಬಹುದು ರಾಜ!
ಬೀದಿಯ ಬಸವನದ್ಬರೀ ಮಜ!
ಜಯ ನಿರಂಜನಾದಿತ್ಯಗೇ ನಿಜ!!!

ಹಾವೂ ಶಿವನಿಗೆ ಹೂಗಳ ಹಾರ! (ಹೂ)

-ವು ಭವನಿಗೆ ಹಾವುಗಳ ಹಾರ!
ಶಿವನ ಹೃದಯ ಪರಮೋದಾರ! (ಭ)
-ವನ ಮನ ಕಾಮದಿಂದ ವಿಕಾರ!
ನಿತ್ಯಾನಿತ್ಯ ನಿರ್ಧಾರ ನಿರ್ವಿಕಾರ!
ಗೆಳೆಯ ಲೋಕಕ್ಕೆಲ್ಲಾ ದಿವಾಕರ!
ಹೂವಾದ ಪದ್ಮಕ್ಕವನಿಂದಾಕಾರ! (ಸಂ)
-ಗವದರದ್ದು ಭ್ರಮರಕ್ಕಾಹಾರ! (ಒ)
-ಳ, ಹೊರ, ಶುಚಿಗಾಗಿ ಸದಾಚಾರ!
ಹಾಲಾಹಲವುಂಡ ಶಿವಶಂಕರ! (ಹ)
-ರ, ನಿರಂಜನಾದಿತ್ಯಾನಂದಾಕಾರ!!!

ಸಾವ ಮರೆಸಿಹುದು ವಿಷಯ ಸುಖ! (ಸಾ)

-ವ ಜಯಿಸಿಹುದು ಸಾಕ್ಷಾತ್ಕಾರ ಸುಖ!
ನುಜ ಜನ್ಮದ ಉದ್ದೇಶ ಆ ಸುಖ! (ಧ)
-ರೆಯ ಸುಖಕ್ಕಾಶಿಸಿದರಿಲ್ಲಾ ಸುಖ!
ಸಿಟ್ಟು ಬಿಟ್ಟರೆ ಲಭ್ಯಾತ್ಮಾರಾಮ ಸುಖ!
ಹುಟ್ಟು, ಸಾವಿನ ಬಾಳಲ್ಲೇನಿದೆ ಸುಖ?
ದುರ್ಮತಿ ಬಯಸದು ಪರಮ ಸುಖ!
ವಿವೇಕ, ವಿಚಾರ, ವೈರಾಗ್ಯಕ್ಕಾ ಸುಖ!
ಡ್ರಿಪುಗಳ ನಿಗ್ರಹದಿಂದಾ ಸುಖ!
ಮ, ನಿಯಮದ ನೆರವಿಂದಾ ಸುಖ!
ಸುದರ್ಶನಧಾರೀ ಕೃಪೆಯಿಂದಾ ಸುಖ! (ಸ)
-ಖ ನಿರಂಜನಾದಿತ್ಯನಿಂದೆಲ್ಲಾ ಸುಖ!!!

ಗೋಚರದಿಂದಾಗ್ಬೇಕು ಪ್ರಚಾರ!

ರ್ವಿತ ಚರ್ವಣವೀಗಾಚಾರ!
ಮೇಶ ದರ್ಶನಕ್ಕಾವಾಚಾರ? (ಬಂ)
-ದಿಂದೂ ತೋರಬೇಕು ತನ್ನಾಕಾರ!
ದಾರಿ ತೊರ್ಸಿ ಸೇರಿಸ್ಬೇಕ್ತನ್ನೂರ! (ಹೋ)
-ಗ್ಬೇಕಾತುರ! ಆಗ್ಬೇಕವತಾರ!
ಕುಚೇಷ್ಟೆಯೆನ್ನದಿರೀ ವಿಚಾರ!
ಪ್ರಜಾಪ್ರಭುತ್ವಕ್ಬೇಕ್ಸದಾಚಾರ!
ಚಾತಕಗಳಾಗಿ ಆಗ್ಲುದ್ಧಾರ! (ಸೇ)
-ರಲಿ ನಿರಂಜನಾದಿತ್ಯನೂರ!!!

ಹಾದರ ದಾರೋಪಕ್ಕಲ್ಲಾದರೋಪಚಾರ ಪೂಜೆ!

ರ್ಶನ, ಸ್ಪರ್ಶನದಿಂದ ಧನ್ಯಳಾದಳ್ಗಿರಿಜೆ!
ಹಸ್ಯ ರಾಸಲೀಲೆಯದ್ದರಿತಿದ್ದಳು ಕುಬ್ಜೆ!
ದಾಮೋದರನನ್ನರಿತಿದ್ದಳು ರುಕ್ಮಿಣಿಯನುಜೆ!
ರೋಮ, ರೋಮವೂ ಕಂಡಿತ್ತಾನಂದನ ರಾಧೆಯೋಜೆ! (ಗೋ)
-ಪನ ನೋಡಲೋಡಿದರ್ಗೋಪಿಯರು ಪ್ರತಿ ಸಂಜೆ! (ಹೊ)
-ಕ್ಕರವನ ಮಂದಿರುವ, ಮಾಡಿದರೆಲ್ಲಾ ಪೂಜೆ! (ಎ)
-ಲ್ಲಾ, ಕೆಲಸ, ಕಾರ್ಯಗಳಿಗಾಗ ಸಂಪೂರ್ಣ ರಜೆ!
ನುಜರಿಗೆಲ್ಲಾ ಆಗುತ್ತಿತ್ತು ಕಠಿಣ ಸಜೆ!
ರೋಗಮುಕ್ತರಾಗುತ್ತಿದ್ದರವನ ಎಲ್ಲಾ ಪ್ರಜೆ!
ತಿತೋದ್ಧಾರದಿಂದ ಪವಿತ್ರವಾಯಿತು ಪ್ರಜೆ!
ಚಾರಿತ್ರ್ಯ ವಧೇಚ್ಛೆಯ ಮನಸ್ಸು ಆಯ್ತು ಬಂಜೆ!
ಹಸ್ಯವರಿತಾನಂದಿಸಿದಳ್ರಾಧಾಯೋನಿಜೆ!
ಪೂರ್ಣಾನುಗ್ರಹ ಪಡೆದಳು ದ್ರುಪದ ತನುಜೆ! (ಓ)
-ಜೆ ನಿರಂಜನಾದಿತ್ಯನದ್ದನ್ನರಿಯಿತಂಬುಜೆ!!!

ಕೊಂಪೆ ಹಂಪೆಯಾಗಿ ಮೆರೆಯಿತೆಂದು! (ಹಂ)

-ಪೆ ಕೊಂಪೆಯಾಗಿ ಮರೆಯಿತದಿಂದು! (ಅ)
-ಹಂಕಾರಿ ಯೋಚಿಸಲಿದನ್ನೆಂದೆಂದು!
ಪೆಡಂಭೂತದಿಂದಾರಿಗಾನಂದೆಂದು?
ಯಾದವೇಂದ್ರಗರಿವಾಯಿತಿ ದಂದು! (ಬಿ)
-ಗಿ ತಪ್ಪಿ ಹಾಳಾಯ್ತವನ ವಂಶಂದು!
ಮೆಟ್ಟಿತು ಶ್ರೀ ಪಾದ ಫಣಿಯನ್ನಂದು! (ಕೊ)
-ರೆಯಿತದನ್ನು ಮುಂದೆ ಬಾಣವೊಂದು! (ಆ)
-ಯಿತಿಂತಂತ್ಯ ಕೃಷ್ಣ ಶರೀರವಂದು!
ತಂದೆ, ತಾಯಿ ಎಲ್ಲಿ ಹೋದರಾಗಂದು? (ಅಂ)
-ದು, ಇಂದು ನಿರಂಜನಾದಿತ್ಯೆಂದೆಂದೂ!!!

ಸರಸ್ವತೀ! ನೋಡ್ಬೇಕು ನಿನ್ನನೆಂಬನೀ ಯತಿ!

ಚಿಸಲಿ ನಿನ್ನ ಸ್ತೋತ್ರ ನಿನ್ನ ನೋಡೀ ಯತಿ!
ಸ್ವಧರ್ಮ ಮರ್ಮವರಿಯಲಿ ನಿನ್ನಿಂದೀ ಯತಿ!
ತೀರ್ಥ ಸೇವಿಸ್ಲಿ ನಿನ್ನ ಪಾದ ತೊಳೆದೀ ಯತಿ!
ನೋವು, ಸಾವು ಮಾಯವದರಿಂದೆಂಬನೀ ಯತಿ! (ಮಾ)
-ಡ್ಬೇಕನುಗ್ರಹವನ್ನು ನೀನೀಗೆಂಬನೀ ಯತಿ!
ಕುಮಾರನಿವನನ್ನುದ್ಧರಿಸೆಂಬನೀ ಯತಿ!
ನಿಜ ಭಕ್ತಿಯನ್ನಿತ್ತು ರಕ್ಷಿಸೆಂಬನೀ ಯತಿ! (ಉ)
-ನ್ನತಿ ನಿನ್ನಿಂದೆಂದು ನಂಬಿಹೆನೆಂಬನೀ ಯತಿ! (ಇ)
-ನ್ನೆಂತೊರೆಯಲೆನ್ನಭೀಷ್ಟವನ್ನೆಂಬನೀ ಯತಿ!
ಳಲಿ ಬೆಂಡಾದೆ ನಾ ನಿಲ್ಲೀಗೆಂಬನೀ ಯತಿ!
ನೀನೊಲಿಯದ ಬಾಳು ವ್ಯರ್ಥವೆಂಬನೀ ಯತಿ! (ಜ)
-ಯ ಬ್ರಹ್ಮನ ರಾಣಿ ಗೀರ್ವಾಣಿಗೆಂಬನೀ ಯತಿ! (ಜ್ಯೋ)
-ತಿರ್ಮಯ ಸ್ವರೂಪಿ ನಿರಂಜನಾದಿತ್ಯಾ ಯತಿ!!!

ಸಾಹಿತೀ! ನಿನಗಿದೆಯೇನು ಮಾಹಿತೀ?

ಹಿತೈಷಿಯನ್ನೇ ನೀನು ಮರೆತಿರುತೀ!
ತೀರಿಸದೇ ಋಣವನ್ನು ನೀನಿರುತೀ!
ನಿನ್ನನ್ನು ನೀನಾರೆಂದರಿಯದಿರುತೀ!
ಟ, ವಿಟರ ಸಂಗದಲ್ಲೇ ಇರುತೀ!
ಗಿರಿಜಾಧವನಂತೆ ಆಗದಿರುತೀ! (ತಂ)
-ದೆ, ತಾಯಿ ಅವನೆಂದರಿಯದಿರುತೀ! (ತಾ)
-ಯೇ ಪರದೈವವೆಂದರಿಯದಿರುತೀ! (ಅ)
-ನುಮಾನವೆಲ್ಲರಲ್ಲೂ ಬೆಳೆಸಿರುತೀ!
ಮಾಡೀಗಾದರೂ ವ್ಯತ್ಯಾಸ ಪರಿಸ್ಥಿತೀ!
ಹಿರಣ್ಯಗರ್ಭಗಾಗು ಶರಣಾಗತೀ! (ಯ)
-ತೀಶ ನಿರಂಜನಾದಿತ್ಯ ನೀನಾಗುತೀ!!!

ಹಳಬ ನಿನ್ನನ್ಯಾರು ಲಕ್ಷಿಪರಯ್ಯಾ? (ಆ)

-ಳ ನಿನ್ನದನ್ನರಿತವರಿಲ್ಲವಯ್ಯಾ!
ಹು ಗುಟ್ಟಾಗಿಟ್ಟಿಹೆ ನಿನ್ನ ನೀನಯ್ಯಾ!
ನಿಶ್, ದಿನ ಜಾಗೃತ್ಸ್ಥಿತಿ ನಿನಗಯ್ಯಾ! (ಉ)
-ನ್ನತಿ ನಿನ್ನಿಂದಾಗಬೇಕೆಲ್ಲರಿಗಯ್ಯಾ!
ನ್ಯಾಯಾನ್ಯಾಯ ಬಲ್ಲವ ನೀನೊಬ್ಬನಯ್ಯಾ!
ರುಜುಮಾರ್ಗಾವಲಂಬಿ ನೀನೆಂಬೆನಯ್ಯಾ!
ಯ, ಸೃಷ್ಟಿ, ಸ್ಥಿತಿ ಎಲ್ಲಾ ನಿನ್ನಿಂದಯ್ಯಾ! (ದ)
-ಕ್ಷಿಣಾಮೂರ್ತಿ ನೀನಲ್ಲದಿನ್ಯಾರೆನ್ನಯ್ಯಾ?
ರಮೇಶ್ವರ ಪರಮಾತ್ಮ ನೀನಯ್ಯಾ! (ತ)
-ರಳರ ತಪ್ಪೊಪ್ಪು ಮಾಡ್ಯಪ್ಪಿಕೊಳ್ಳಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯ ಶಿವ ನೀನಯ್ಯಾ!!!

ಜುಟ್ಟು, ಜನಿವಾರ ಕಿತ್ತ್ರಿ, ಹುಟ್ಟು ಗುಣ ಬಿಟ್ಟೀತೇ? (ಕ)

-ಟ್ಟುಪಾಡಿಗೊಳಪಟ್ಟು ಸಾಧಿಸಿದ್ರದು ಬಿಟ್ಟೀತು!
ವನನ್ನೂ ಉಜ್ವಲ ತಪಸ್ಸು ಅಟ್ಟಿಬಿಟ್ಟೀತು!
ನಿಶ್ಚಲ ತತ್ವ ಸ್ಥಿರವಾದರಾವುದುಳಿದೀತು?
ವಾಮಾಚಾರದಿಂದ ಅಧಃಪತನವುಂಟಾದೀತು!
ಕ್ಕಸಾಧಮರಿಗಾದ ಪ್ರಾಯಶ್ಚಿತ್ತವಾದೀತು!
ಕಿರುಕುಳಾಧಿಕ್ಯದಿಂದ ಬುದ್ಧಿ ಭ್ರಂಶವಾದೀತು! (ಸ)
-ತ್ತ್ರಿ ಮತ್ತೆ ಮತ್ತೆ ಹುಟ್ಟಿ ಸತ್ತುಹೋಗಬೇಕಾದೀತು!
ಹುಟ್ಟುಗುಣವೆಂದು ಕುಟ್ಟಿಕೊಂಡತ್ತರೇನಾದೀತು? (ಹು)
-ಟ್ಟು, ಸಾವಿನ ಮೂಲೋಚ್ಚಾಟನೆಯಿಂದಾನಂದಾದೀತು!
ಗುರುವಿನ ಗುಲಾಮಗಭೀಷ್ಟ ಸಿದ್ಧಿಯಾದೀತು! (ತೃ)
-ಣ ಸಮಾನ ಈರೇಳು ಲೋಕಗಳೆಂದನಿಸೀತು!
ಬಿದಿ, ಹರಿ, ಹರರೂ ತಲೆದೂಗಬೇಕಾದೀತು! (ಬಿ)
-ಟ್ಟೀ ಬಸವನಿಗಿದೆಲ್ಲಾ ಸ್ವಪ್ನ ನಿಧಿಯಾದೀತು!
ತೇಜಸ್ವೀ ನಿರಂಜನಾದಿತ್ಯಗಾರಿಂದೇನಾದೀತು???

ನಿನ್ನನ್ನು ನೀನು ನೋಡಿಕೊಳ್ಳಪ್ಪಾ! (ಚಿ)

-ನ್ನ, ಬೆಳ್ಳಿಗಳೆಷ್ಟು ದಿನವಪ್ಪಾ? (ತಿ)
-ನ್ನುವುದಕ್ಕಾಗೀ ಜನ್ಮವಲ್ಲಪ್ಪಾ!
ನೀರ ಮೇಲಿನ ಗುಳ್ಳೆ ದೇಹಪ್ಪಾ! (ಅ)
-ನುಮಾನವಿದರಲ್ಲೇನಿಲ್ಲಪ್ಪಾ!
ನೋವು, ಸಾವಿದಕ್ಕೆ ತಪ್ಪದಪ್ಪಾ! (ಬ)
-ಡಿವಾರದ ಮಾತಿನ್ನು ಸಾಕಪ್ಪಾ!
ಕೊಟ್ಟವನ ಋಣ ತೀರಿಸಪ್ಪಾ! (ಕ)
-ಳ್ಳರೆಲ್ಲಾ ದೋಚಿಕೊಳ್ಳುವರಪ್ಪಾ! (ತ)
-ಪ್ಪಾಡ ಶ್ರೀ ನಿರಂಜನಾದಿತ್ಯಪ್ಪಾ!!!

ಶಿವ ನೀನಾಗಿರಲ್ಭವನೆಂತು?

ರ್ಣ ಭೇದಾತೀತ ಶಿವನಂತು!
ನೀಚೋಚ್ಚ ರಹಿತ ಶಿವನಂತು!
ನಾದಪ್ರಿಯನಾಗಿ ಶಿವನಂತು! (ಯೋ)
-ಗಿರಾಜ ನೀನಾಗಿ ಶಿವನಂತು!
ತಿ ಪತಿ ಹತ ಶಿವನಂತು! (ವೇ)
-ಲ್ಭ ವ್ಯಾಸ್ತ್ರನಪ್ಪಯ್ಯ ಶಿವನಂತು!
ರ ನಂದಿಶ್ವರ ಶಿವನಂತು!
ನೆಂಟ, ಭಂಟನಾಗಿ ಶಿವನಂತು! (ಇಂ)
-ತು ಶಿವ ನಿರಂಜನಾದಿತ್ಯಂತು!!!

ಅರ್ಕೆ

ಶ್ವರಗಂಬರಾಲಂಕಾರ! (ತ)

-ರ್ಕೆ

ಶ್ವರನಿಗೆ ಸಭಾಲಂಕಾರ!
ಶ್ವಶುರ ಗೃಹಕ್ಕಳ್ಯಾಲಂಕಾರ!
ಘುಪತಿಗೆ ಧರ್ಮಾಲಂಕಾರ!
ಗಂಗೆಗೆ ಶಿವಲಿಂಗಾಲಂಕಾರ!
ಸವನಿಗೆ ಸೇವಾಲಂಕಾರ!
ರಾಸಲೀಲೆ ಕೃಷ್ಣಗಲಂಕಾರ!
ಲಂಬೋದರಗೆ ಇಂಬಲಂಕಾರ!
ಕಾಮಿನಿಗೆ ಕಾಮ ಅಲಂಕಾರ! (ಅ)
-ರ ನಿರಂಜನಾದಿತ್ಯಾಲಂಕಾರ!!!

ಹಣ್ಣಾಗುತ್ತಾಗುತ್ತಾ ರಸ ಉಕ್ಕೀತು! (ಹ)

-ಣ್ಣಾದದ್ದು ತಿನ್ನತಕ್ಕದ್ದದಾದೀತು!
ಗುಣಾವಗುಣ ವಿಮರ್ಶೆಯಾದೀತು! (ಹ)
-ತ್ತಾರು ಕಣ್ಣುಗಳನ್ನಾಕರ್ಷಿಸೀತು!
ಗುಡಿಗಳಿಗೊಯ್ಯಲ್ಪಡಲಾದೀತು! (ಮ)
-ತ್ತಾರಿಗೆಲ್ಲೂ ಅದು ಸಿಕ್ಕದಾದೀತು!
ಮಾರಮಣ ಗರ್ಪಣೆಯಾದೀತು!
ರ್ವರಿಗೂ ಪ್ರಸಾದವದಾದೀತು!
ದಯಾಸ್ತದ ಸ್ತೋತ್ರ ಕೇಳಿಸೀತು! (ಸಿ)
-ಕ್ಕೀತು ನಿಜಾನಂದವಾಗ ದಕ್ಕೀತು! (ಇಂ)
-ತು ನಿರಂಜನಾದಿತ್ಯಾನಂದಾದೀತು!!!

ಶಾಂತಿಗಾಗಿ ನಾನಿಲ್ಲಿಗೆ ಬಂದೆ!

ತಿರುತಿರುಗಿ ಸುಸ್ತಾಗಿ ಬಂದೆ!
ಗಾರುಡೀ ವಿದ್ಯೆ ಬೇಡೆಂದು ಬಂದೆ! (ಯೋ)
-ಗಿರಾಜನೇ ಗತಿಯೆಂದು ಬಂದೆ!
ನಾಯಿಗಂಜದೇ ಒಳಗೆ ಬಂದೆ!
ನಿನಗಿನ್ನೇನು ಹೇಳಲಿ ತಂದೇ? (ನಿ)
-ಲ್ಲಿಸೆನ್ನ ಮನ ನಿನ್ನಲ್ಲಿ ತಂದೇ!
ಗೆರೆ

ಈರಿ ಹೋಗಲಾರೆ ತಂದೇ!
ಬಂಧನ ಸಾಕೆನಗಿನ್ನು ತಂದೇ! (ತಂ)
-ದೆ ನಿರಂಜನಾದಿತ್ಯ ನೀನೆಂದೆ!!!

ಕರೆದ್ರೂ ಬಾರದ್ದೊರೆದ್ರೆ ಬಂದೀತೇ? (ಧ)

-ರೆಯರಸಸಡ್ಡೆ ಮಾಡಿದ್ರಾದೀತೆ? (ಬಂ)
-ದ್ರೂ, ಬಾರ್ದಿದ್ರೂ ಕರೆಯದಿದ್ರಾದೀತೇ?
ಬಾಣ ಬಿಡದಿದ್ರೆ ಮೃಗ ಸತ್ತೀತೇ!
ಹಸ್ಯವಿದ್ರದ್ದೊಂದು ದೊಡ್ಡ ಕತೆ! (ಇ)
-ದ್ದೊಡನಾಡಲಿಕ್ಕೆ ಬೇಕು ಮಮತೆ! (ಹ)
-ರೆಯದ ಮದದಲ್ಲಿದು ಕೊರತೆ! (ನಿ)
-ದ್ರೆ, ಆಹಾರ, ಮೈಥುನಕ್ಕಾತುರತೆ!
ಬಂದ್ರೂ ಕೊನೆಗಾಲ ಇದಿಷ್ಟೇ ಚಿಂತೆ!
ದೀಪವಾರಿದ ಮೇಲೆ ಗತಿ ಚಿತೆ! (ಮಾ)
-ತೇಕೆ ನಿರಂಜನಾದಿತ್ಯನೇ ಮಾತೆ!!!

ಬ್ರಾಹ್ಮಣ್ಯದಲ್ಲಿ ಪುರೋಹಿತನ ಪಾತ್ರ! (ಬ್ರ)

-ಹ್ಮ ತೇಜಸ್ಸಿನಿಂದ ಕೂಡಿತ್ತಂದಾ ಪಾತ್ರ! (ಗ)
-ಣ್ಯತೆಗೆ ಹೆಸರಾಗಿತ್ತಾ ಪೂಜ್ಯ ಪಾತ್ರ! (ಉ)
-ದಯಾಸ್ತದಾಹ್ನೀಕಕ್ಕಾ ದರ್ಶನ ಪಾತ್ರ! (ಕ)
-ಲ್ಲಿನ ಗೊಂಬೆಯಂತೇಕಾಗ್ರತೆಯ ಪಾತ್ರ!
ಪುಸಿಯಾಡದೇ ಇರುತ್ತಿತ್ತಾ ಸತ್ಪಾತ್ರ!
ರೋಗಪೀಡಿತವಾಗಿರ್ತಿದ್ದಿಲ್ಲಾ ಪಾತ್ರ!
ಹಿತಕಾರಿಯಾಗಿತ್ತೆಲ್ಲರಿಗಾ ಪಾತ್ರ!
ಪದಿಂದಾಗಿತ್ತು ಪರಿಶುದ್ಧಾ ಪಾತ್ರ!
ರರುದ್ಧಾರಕ್ಕೆ ಇದೇ ತಕ್ಕ ಪಾತ್ರ!
ಪಾರಮಾರ್ಥದಿಂದಲೇ ಎಲ್ಲಾ ಪವಿತ್ರ! (ಮಂ)
-ತ್ರಮೂರ್ತಿ ನಿರಂಜನಾದಿತ್ಯ ಸ್ವತಂತ್ರ!!!!

ದೋಸೆ ತಿನ್ನ ಬೇಕೆಂಬಾಸೆ ಮನಸಿಗೆ! (ಹೊ)

-ಸೆಯಬಾರ್ದಾರನ್ನೆಂಬುದೂ ಮನಸಿಗೆ!
ತಿನ್ನುವುದ್ರಿಂದದ ವಾಸನೆ ಹೊಟ್ಟೆಗೆ! (ತ)
-ನ್ನ ಚಪಲದಿಂದಾಗಿಂದ್ರಿಯಕ್ಕೆ ಬೇಗೆ!
ಬೇಕಿಲ್ಲದ್ದನ್ನು ದೂಡಬೇಕು ಹೊರಗೆ!
ಕೆಂಡ ಕಾರಿದ್ರೆ ಕಂಡದ್ದನ್ನಂದ್ರೆ ಹೇಗೆ?
ಬಾಯಿ, ಕೈಗಳ್ಗುಳಿಗಾಲವಿಲ್ಲ ಹೀಗೆ! (

ಈ)
-ಸೆ ಹಣ್ಣಾದ್ರೂ ಎಲ್ಲಾ ಬೇಕು ಮನಸ್ಸಿಗೆ!
ರುಕೇಷ್ಟ ಸಿದ್ಧಿಗಾಗಿ ಮನಸಿಗೆ!
ಶ್ವರದಿಂದದನ್ನೆಳೆವುದು ಹೇಗೆ!
ಸಿರಿಯರಸನ ದಯೆಯಿಂದದಾಗೆ! (ಹೀ)
-ಗೆ ನಿರಂಜನಾದಿತ್ಯಾನಂದ ನೀನಾಗೆ!!!

ಚುನಾವಣೆಗೆ ಸ್ಪರ್ಧಿಸಬೇಕು!

ನಾಸ್ತಿಕತನ ಬಿಟ್ಟುಬಿಡ್ಬೇಕು!
ನವಾಸಕ್ಕೂ ಸಿದ್ಧವಿರ್ಬೇಕು! (ಗೆ)
-ಣೆಯರು ಸಜ್ಜನರಾಗಿರ್ಬೇಕು!
ಗೆದ್ದರಹಂಕಾರ ಪಡ್ದಿರ್ಬೇಕು! (ಆ)
-ಸ್ಪದ ಲಂಚಕ್ಕೆ ಇಲ್ಲದಿರ್ಬೇಕು! (ಮ)
-ರ್ಧಿಸಿ ಮತ ಘಳಿಸದಿರ್ಬೇಕು!
ತ್ಯಕ್ಕೆ ಚ್ಯುತಿ ಇಲ್ಲದಿರ್ಬೇಕು!
ಬೇಸಾಯ ಬಿಟ್ಟು ಬಿಡದಿರ್ಬೇಕು! (ಹಾ)
-ಕು, ನಿರಂಜನಾದಿತ್ಯ ಪೋಷಾಕು!!!

ಅಸಡ್ಡೆಯಿಂದ ಹಳ್ಳ ದಿಣ್ಣೆ ಸಮವಾಗದು!

ರ್ವಾತ್ಮ ಭಾವವಿಲ್ಲದೆ ಸಾಧನೆ ಸಾಗದು! (ಗೆ)
-ಡ್ಡೆ, ಗೆಣಸು ತಿಂದ ಮಾತ್ರಕ್ಕೆ ಮುಕ್ತಿಯಾಗದು! (ಬಾ

)
-ಯಿಂದಾಡಿದ್ದು ಕಾರ್ಯದಲ್ಲಿದ್ದ್ರೆ ಕಷ್ಟ ಕಾಣದು!
ಡ ಸೇರ್ವತನಕ ಹುಟ್ಟು ಹಾಕ್ದಿರ್ಲಾಗದು!
ಗ್ಗವೆಂದು ಮನಗಾಣದೆ ಭಯ ಹೋಗದು! (ಬೆ)
-ಳ್ಳಗೆ ಕಂಡದ್ದೆಲ್ಲವನ್ನೂ ಹಾಲೆನ್ನಲಾಗದು!
ದಿತಿ ಸುತರೆಲ್ಲವರೂ ಸಭ್ಯರೆನ್ನಲಾಗದು! (ಹೆ)
-ಣ್ಣೆಲ್ಲಕ್ಕೂ ಹೊಣೆಯೆಂದವಳ ಬಿಟ್ಟಿರ್ಲಾಗದು!
ಹಕಾರವಿಲ್ಲದೆ ಸಂಸಾರ ನಡೆಯದು!
ಮಕಾರಾತಿರೇಕದಿಂದ ಸುಖವಾಗದು!
ವಾರ್ಧಿಕ್ಯಾದ್ಯವಸ್ಥೆಗಳ ಮರೆತಿರ್ಲಾಗದು!
ತಿ, ಸ್ಥಿತಿಗೆ ಪರಿಸ್ಥಿತ್ಯೇಕೆನ್ನಲಾಗದು!
ದುರಾಗ್ರಹಿ ನಿರಂಜನಾದಿತ್ಯನೆನ್ಲಾಗದು!!!

ನಿರ್ಭಯ ಭೋಗ ಜೀವನಕ್ಕೆ ವಿವಾಹ! (ಗ)

-ರ್ಭಧಾರಣಾ ನಿಶ್ಚಿಂತೋಪಾಯ ವಿವಾಹ! (ನ್ಯಾ)
-ಯ ಸಮ್ಮತದ ಹಕ್ಕಿಗಾಗಿ ವಿವಾಹ!
ಭೋಜನಾನುಕೂಲಕ್ಕೋಸ್ಕರ ವಿವಾಹ!
ಣಿಕಾ ಜೀವನ ತಡೆಗೆ ವಿವಾಹ!
ಜೀವನ ಸುವ್ಯವಸ್ಥೆಗಾಗಿ ವಿವಾಹ!
ರ್ಣಾಶ್ರಮ ಧರ್ಮದ್ದೊಂದಂಗ ವಿವಾಹ!
ರ, ನಾರಿಯರನ್ಯೋನ್ಯಕ್ಕೆ ವಿವಾಹ! (ಧ)
-ಕ್ಕೆ ಪ್ರಕೃತಿ ಧರ್ಮಕ್ಕಾಗ್ದಂತೆ ವಿವಾಹ!
ವಿಧಿ, ಹರಿ, ಹರರಂತಿರ್ಲು ವಿವಾಹ!
ವಾಸುದೇವ, ರಾಧೆಯ್ರಂತಿರ್ಲು ವಿವಾಹ! (ದೇ)
-ಹ ನಿರಂಜನಾದಿತ್ಯಾನುಗ್ರಹ!!!

ಎಲ್ಲಾ ನಿನಗೊಪ್ಪಿಸಿ ಮಾಳ್ಪುದೆನ್ನ ಧರ್ಮ! (ಕ)

-ಲ್ಲಾದಹಲ್ಯೆಯನ್ನೆಬ್ಬಿಸಿದ್ದು ನಿನ್ನ ಧರ್ಮ!
ನಿತ್ಯಾನಿತ್ಯ ವಿಚಾರಿಯಾಗ್ವುದೆನ್ನ ಧರ್ಮ! (ದಿ)
-ನ, ರಾತ್ರಿ, ನಿನ್ನ ನೆನೆವುದು ನನ್ನ ಧರ್ಮ!
ಗೊಡ್ಡಾಕಳನ್ನು ಕರೆವುದು ನಿನ್ನ ಧರ್ಮ! (ಅ)
-ಪ್ಪಿಕೊಂಡೆನ್ನನ್ನುದ್ಧರಿಪುದು ನಿನ್ನ ಧರ್ಮ!
ಸಿರಿ, ಸಂಪತ್ತಿನಾಸೆ ಬಿಡ್ವುದೆನ್ನ ಧರ್ಮ!
ಮಾಟ, ಮಾರಣ, ಮಾಡದಿರ್ಪುದೆನ್ನ ಧರ್ಮ! (ಕೀ)
-ಳ್ಪುಣ್ಯ, ಪಾಪ ತಪ್ಪಿಸುವುದು ನಿನ್ನ ಧರ್ಮ! (ತಂ)
-ದೆ! ನಿನ್ನಂತೆನ್ನ ಮಾಡುವುದು ನಿನ್ನ ಧರ್ಮ! (ಉ)
-ನ್ನತಿಯನ್ನೇ ಬಯಸುವುದು ನನ್ನ ಧರ್ಮ!
ರ್ಮ ಕರ್ಮವೇನೆಂದರಿವುದೆನ್ನ ಧರ್ಮ! (ಕ)
-ರ್ಮ ನಿರಂಜನಾದಿತ್ಯನಂತಿದ್ದ್ರೆ ಸ್ವಧರ್ಮ!!!

ಹಿರಿಮೆ, ಕಿರಿಮೆಗಳ ಜಗಳ ಸಾಕಪ್ಪ! (ವೈ)

-ರಿ ನಿಗ್ರಹವೆರಡ್ರಿಂದ್ಲೂ ಆಗುವುದಿಲ್ಲಪ್ಪಾ!
ಮೆಲುಕು ಹಾಕಿ ಗುರುಬೋಧೆ ಸಿದ್ಧನಾಗಪ್ಪ!
ಕಿರುಕುಳ ವೃತ್ತಿ ತರಿವುದು ಕೊರಳಪ್ಪಾ! (ಅ)
-ರಿತಿದನ್ನಿರು ಸತತ ಸದ್ವೃತ್ತಿಯಲ್ಲಪ್ಪಾ!
ಮೆಟ್ಟಿ ಪಾತಾಳಕ್ಕಿಳಿಸಬೇಕು ಸಿಟ್ಟನ್ನಪ್ಪಾ!
ತಿಗೇಡು ಬರಲಿಕ್ಕಿದೇ ಕಾರಣವಪ್ಪಾ! (ಆ)
-ಳವಾಗ್ಯೆಲ್ಲವನ್ನೂ ಯೋಚನೆ ಮಾಡಿ ನೋಡಪ್ಪಾ!
ನನ, ಮರಣದಿಂದ ಪಾರಾಗಬೇಕಪ್ಪಾ!
ಗನ ಸದೃಶ ನೀನಾದರಿದಾಗ್ವುದಪ್ಪಾ! (ಥ)
-ಳಕು, ಕೊಳಕುಗಳೆಲ್ಲಾ ತೊಳೆಯಬೇಕಪ್ಪಾ!
ಸಾಧಿಸಿದರೆ ಸಬಳ ನುಂಗಬಹುದಪ್ಪಾ!
ಣ್ಣಾರೆ ಕಂಡ್ರೂ ಪರಾಂಬರಿಸಿ ನೋಡ್ಬೇಕಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯನೇ ನೀನಾಗಬೇಕಪ್ಪಾ!!!

ತಾನೇ ಯೋಚಿಸಿ ಮಾಡ್ಬೇಕ್ತನ್ನ ಕರ್ತವ್ಯ!

ನೇಮ, ನಿಷ್ಠೆಯಿಂದ ಮಾಡ್ಬೇಕು ಕರ್ತವ್ಯ!
ಯೋಗ ಮಾರ್ಗಾವಲಂಬನೆಲ್ರ ಕರ್ತವ್ಯ!
ಚಿರಾಯುರಾರೋಗ್ಯಕ್ಕಿದಾದ್ಯ ಕರ್ತವ್ಯ!
ಸಿಟ್ಟು ಬಿಡ್ವುದು ಮೊಟ್ಟಮೊದ್ಲ ಕರ್ತವ್ಯ!
ಮಾಯಾ ಜಯವೆಂಬುದು ದೊಡ್ಡ ಕರ್ತವ್ಯ! (ತೊ)
-ಡ್ಬೇಕ್ದೀಕ್ಷೆಯಿದಕ್ಕೆಂಬುದೆಲ್ರ ಕರ್ತವ್ಯ! (ಮು)
-ಕ್ತನಾಗಲಿಕ್ಕಿದೇ ಜೀವನ ಕರ್ತವ್ಯ! (ಅ)
-ನ್ನ, ವಸ್ತ್ರದಾನ ಉಳ್ಳವನ ಕರ್ತವ್ಯ!
ನಿಕರಾರ್ತರಲ್ಲೆಲ್ಲರ ಕರ್ತವ್ಯ! (ಕ)
-ರ್ತನನ್ನರಿಯುವುದು ಮರ್ತ



ಕರ್ತವ್ಯ!
ವ್ಯವಸ್ಥೆ ನಿರಂಜನಾದಿತ್ಯ ಕರ್ತವ್ಯ!!!

ಅಧಿಕಾರ ದಾಹದಾಡಳಿತಾರಿಗೇನು ಸುಖ? (ದ)

-ಧಿ ಮಥನ ತಾಳ್ಮೆಗೆಟ್ಟು ಬೆಣ್ಣೆ ಕಾಣದ ಸುಖ!
ಕಾಟಾಚಾರದ ಸ್ವಾರ್ಥಿಯಿಂದಾಗದಾರಿಗೂ ಸುಖ! (ಪ)
ಮಾರ್ಥದಿಂದಲೇ ಸರ್ವಸಮಾನಾನಂದ ಸುಖ!
ದಾಯಾದಿ ಮತ್ಸರದಿಂದಾರಿಗೆಂದಾಗಿದೆ ಸುಖ?
ಗರಣದ ಹುಟ್ಟಡಗದೆ ಆಗದು ಸುಖ!
ದಾಶರಥಿ, ಮಾರುತಿಯಂತಿದ್ದರೆಲ್ಲಾ ಸುಖ! (ಬ)
-ಡವ, ಬಲ್ಲಿದರಲ್ಲನ್ಯೋನ್ಯವುಂಟಾದಾಗ ಸುಖ! (ಹು)
-ಳಿ ರಸದೊಂದು ತೊಟ್ಟು ಬಿದ್ದ್ರೂ ಇಲ್ಲ ಕ್ಷೀರ ಸುಖ!
ತಾವೆಲ್ಲರವರೆಂದೆಲ್ಲರೂ ತಿಳಿದಾಗ ಸುಖ!
ಒನೆ ಲಿನೆ ಮಿ

ಸಿ




ಗೇಯ್ಮೆ ಅವರದ್ದಾಗಿತ್ತು ಸರ್ವ ಕಲ್ಯಾಣ ಸುಖ!
ನುಡಿಯದೇ ನೀಡುತ್ತಿದ್ದರವರು ಪೂರ್ಣ ಸುಖ!
ಸುದರ್ಶನಧಾರಿಯ ವಿಶ್ವರೂಪದಿಂದಾ ಸುಖ!
ಗ ನಿರಂಜನಾದಿತ್ಯ ಸಾಕ್ಷಿಯೆಂದಿದ್ದ್ರಾ ಸುಖ!!!

ಕಲಿಯಬೇಕಾದದ್ದಾರೂ ಕಲಿತಿಲ್ಲ! (ಕ)

-ಲಿಸುವವರದನ್ನಂತೂ ಯಾರೂ ಇಲ್ಲ! (ಕಾ)
-ಯ ನಿರ್ಮಾಣದಾದಿಯೆಂತೆಂದು ಗೊತ್ತಿಲ್ಲ!
ಬೇಕಿದ್ರರಿವೆಂದ್ರರುಹುವವರಿಲ್ಲ!
ಕಾಲ ಹೀಗೇ ಕಳೆಯುತ್ತಾ ಬಂದಿತಲ್ಲಾ! (ಉ)
-ದಯಾಸ್ತದಂಥೇರ್ಪಾಡಾರು ಮಾಡಬಲ್ಲ? (ಒ)
-ದ್ದಾಡುತ್ತಿಹರಿದಕ್ಕೆ ವಿಜ್ಞಾನಿಗಳೆಲ್ಲಾ! (ಗು)
-ರೂಪದೇಶವೆಂಬುದು ಹೊಟ್ಟೆಗಾಗ್ಯೆಲ್ಲಾ!
ಲಿಸ್ಬೇಕು ಜಗದ್ಗುರು ಇದನ್ನೆಲ್ಲಾ! (ಕೂ)
-ಲಿ ದುಡಿಮೆಗಿಲ್ಲಾದ್ರಿದ್ದು ಫಲವಿಲ್ಲ!
ತಿಳುವಳಿಕೆಯಿಲ್ಲದೇ ಕೆಟ್ಟೆವೆಲ್ಲಾ! (ಬ)
-ಲ್ಲ ನಿರಂಜನಾದಿತ್ಯ ಕಲಿಸ್ಲೀಗೆಲ್ಲಾ!!!

ಜಗತ್ತಿಗೆ ಶಾಂತಿ ಸಮಾಧಾನವೆಂದು? (ಅ)

-ಗತ್ಯವಿಲ್ಲದ ವ್ಯವಹಾರ ಬಿಟ್ಟಂದು! (ಕ)
-ತ್ತಿ ಮಸೆತನ್ಯರ ಮೇಲೆ ತಪ್ಪಿದಂದು! (ಸೋ)
-ಗೆಗಣ್ಣವರ ಬೇಟೆಯಾಟ ನಿಂತಂದು!
ಶಾಂತಿ ಸಾಗರ ಎಲ್ಲಾ ಮನಸ್ಸಾದಂದು!
ತಿಗಣೆ ಸ್ವಭಾವ ಆಪ್ತರು ಬಿಟ್ಟಂದು!
ದ್ಗುರು ನಾಮಸ್ಮರಣೆ ಸದಾದಂದು!
ಮಾನವ ತನ್ನನ್ನು ತಾನು ತಿಳಿದಂದು! (ಸು)
-ಧಾಮನಂತೆ ಸರಳಜೀವಿಯಾದಂದು!
ಭೋಮಣಿಯಾದರ್ಶ ಪಾಲಿಸಿದಂದು! (ಹಾ)
-ವೆಂದು ಮಾಯೆಯಿಂದ ದೂರ ಸರಿದಂದು! (ಹಿಂ)
-ದು, ಮುಸ್ಲಿಂ ನಿರಂಜನಾದಿತ್ಯನಾದಂದು!!!

ಹಿಂದೂ ಮತದಲ್ಲಿ ದೇವರ ಸೇವೆ ತರತರ!

ದೂರ್ಬಾರದಾವುದನ್ನೂ, ಸರ್ವ ಮಾನ್ಯವೆಲ್ಲಾ ತರ!
ನಸ್ಸಿನ ಬೆಳವಣಿಗೆಗೆ ತಕ್ಕಂತೀ ತರ!
ತ್ವಮಸಿ ಸಿದ್ಧಾಂತ ಕೈಲಾಸ ಗಿರಿ ಶಿಖರ!
ರ್ಶನ ಪರಶಿವನದ್ದಿಲ್ಲಿ ಪ್ರಣವಾಕಾರ! (ಕ)
-ಲ್ಲಿನ ಲಿಂಗ, ಮೂರ್ತಿಯಲ್ಲಿದಿರ್ಪುದೂ ಸತ್ಯಸಾರ!
ದೇಶ, ಕಾಲಾತೀತವಾದುದಾ ಪರಿಪೂರ್ಣಾಕಾರ! (ಅ)
-ವರವರ ಭಕ್ತಿಗೆ ತಕ್ಕಂತವರ್ಗೆ ಗೋಚರ!
ಘುಪತಿಗೂ ಪ್ರೀತಿ ರಾಮೇಶ್ವರ ಲಿಂಗಾಕಾರ!
ಸೇತುಬಂಧನದ ಶ್ರಮವದ್ರಿಂದ ಪರಿಹಾರ! (ಧ)
-ವೆ ಸೀತಾ ಸಮೇತವಾದಾ ಸೇವೆ ಶಿವ ಸ್ವೀಕಾರ!
ನು, ಮನ, ಧನಾರ್ಪಣೆಯಿಂದಾಗಿತ್ತಾ ಆಚಾರ! (ನ)
-ರ, ನಾರಿಯರಿದನ್ನರಿತು ಮಾಡ್ಬೇಕು ಸಂಸಾರ!
ನುಜರ್ಲವ, ಕುಶರಂತಾಗುದಿಸಿ ಜೈಕಾರ! (ತ)
-ರ ತರ ಗುರು ನಿರಂಜನಾದಿತ್ಯನಿಂದುದ್ಧಾರ!!!

ಯೋಗಿ ನಿರೀಕ್ಷಿಸುವವನೇನಲ್ಲ! (ಭೋ)

-ಗಿ ನಿರೀಕ್ಷಿಸದಿರುವವನಲ್ಲ! (ಅ)
-ನಿತ್ಯವೀ ಜಗತ್ತೆಂದು ಯೋಗಿ ಬಲ್ಲ!
ರೀತಿ, ನೀತಿ, ಬೇರೆ ಭೋಗಿಯದ್ದೆಲ್ಲ! (ದ)
-ಕ್ಷಿಣಾಮೂರ್ತಿಯದ್ದು ಮೌನದಲ್ಲೆಲ್ಲ!
ಸುಗಂಧ, ವನಿತಾಸಕ್ತನಿದೊಲ್ಲ!
ರ ಯೋಗಿಗೀರೇಳ್ಲೋಕಗಳೆಲ್ಲ!
ಶವಾಗಿಹನು ಭೋಗಿವಕ್ಕೆಲ್ಲ!
ನೇಮ, ನಿಷ್ಠೆ, ಭೋಗಿಗೆ ಬೇಕಾಗಿಲ್ಲ!
ರಳುವನು ಜೀವಮಾನವೆಲ್ಲ! (ಪು)
-ಲ್ಲ ನಿರಂಜನಾದಿತ್ಯ ಲಿಪ್ತನಲ್ಲ!!!

ಮತ್ಸರಿಯಲ್ಲಾರ್ಧನಾರೀಶ್ವರ! (ತ)

-ತ್ಸಮಾನತೆಯಿತ್ತಾಕೇಗೀಶ್ವರ! (ಕ)
-ರಿವದನಗಿತ್ತ ಪ್ರಾಣೇಶ್ವರ!
ತಿಯಾಗಿ ಬೇಡಿದನೀಶ್ವರ! (ಕ)
-ಲ್ಲಾದನು ಭಕ್ತರಿಗಾಗೀಶ್ವರ! (ನಿ)
-ರ್ಧರಿಸಿ ವಿಷ ಕುಡಿದೇಶ್ವರ!
ನಾಮ ಜಪ ಮಾಡಿದನೀಶ್ವರ! (ಕಿ)
-ರೀಟಿಗಿತ್ತನಸ್ತ್ರವನ್ನೀಶ್ವರ! (ವಿ)
-ಶ್ವನಾಥನಾಗ್ಯೆಲ್ಲೆಲ್ಲಿರ್ಪೆ

ಶ್ವರ! (ಹ)
-ರ ಶ್ರೀ ನಿರಂಜನಾದಿತ್ಯೇಶ್ವರ!!!

ಆಸೇ! ಸಾಕಾಗಿಲ್ಲವೇ ತಮಾಷೆ?

ಸೇರಿ ಗಂಡನ, ಮಾಡು ಶುಶ್ರೂಷೆ!
ಸಾಲ, ಸೋಲವಾದ್ರೂ ಹೊಯ್ತೇ ತೃಷೆ?
ಕಾರ್ಪಣ್ಯದಿಂದ ತಪ್ಪಿದೆ ಭಾಷೆ!
ಗಿಡ, ಮರಕ್ಕುಂಟೇ ಅಭಿಲಾಷೆ? (ಬ)
-ಲ್ಲವಳಾಗಿ ಆಗೀಗ ನಿರ್ದೋಷೆ!
ವೇಳೆ ಹಾಳ್ಮಾಡುತಿದೆ ಪರಿಷೆ!
ಪ್ಪೊಪ್ಪಿ ಸ್ವೀಕರಿಸೀಗ ಘೋಷೆ!
ಮಾತೆಯಾಗಿ ಆಗ್ವಾರ್ದು ಕಿಲ್ಬಿಷೆ! (ದೋ)
-ಷೆ

! ನಿರಂಜನಾದಿತ್ಯಗೆ ಕೊಡ್ಭಾಷೆ!!!

ಗೊತ್ತು, ಗುರಿ, ಇಲ್ಲದ ಬಾಳಿಗಾಪತ್ತು! (ತು)

-ತ್ತು ಹತ್ತು ತಿಂದ್ರೊಂದು ಬೇಕಾದಾಗಾಪತ್ತು!
ಗುಡಿಸಲಾಳಿಗರಮನೆ ಆಪತ್ತು! (ಅ)
-ರಿಗಳಾರರಿಂದೆಲ್ಲರಿಗೂ ಆಪತ್ತು!
ದ್ದದ್ದ್ರಲ್ಲಿ ತೃಪ್ತಿ ಪಟ್ಟರಿಲ್ಲಾಪತ್ತು! (ಗೊ)
-ಲ್ಲ ಬಾಲೆಯರ ಬಾಳಾದರ್ಶವಾಗಿತ್ತು!
ನ, ಕರುಗಳೇ ಅವರ ಸಂಪತ್ತು!
ಬಾವಿ ನೀರು, ಹೊಲದ ಹುಲ್ಲೇ ಸಾಕಿತ್ತು! (ಅ)
-ಳಿದೇ ಹೋಯಿತಾ ಪರಂಪರೆ ಇವತ್ತು!
ಗಾನ ಅವರದ್ಭಾವ ಪೂರ್ಣವಾಗಿತ್ತು!
ರವಶತೆ ಆಗಾಗ ಬರುತ್ತಿತ್ತು! (ಇ)
-ತ್ತು ನಿರಂಜನಾದಿತ್ಯಾನಂದದಲ್ಲಿತ್ತು!!!

ದಿನ, ರಾತ್ರಿ ಬೊಗಳುತ್ತಿರುವ ಕಾಳ!

ಡು ರಾತ್ರಿಯಲ್ಲಿವನಾಟ ಬಹಳ!
ರಾಮ ಭಜನೆ ಅವನಿಗೀ ಬೊಗಳ!
ತ್ರಿದೋಷ ಪೀಡೆಯಿಂದವನು ನರಳ!
ಬೊಜ್ಜು ಕರಗಿಸಿಟ್ಟಿಹನು ಕರುಳ!
ತಿಗೆಡುವನವನೆದುರ್ದುರುಳ! (ಹಾ)
-ಳು, ಹರ್ಕಿಲ್ಲದಿವನಾಹಾರ ಸರಳ! (ಹ)
-ತ್ತಿರ ಹೋದರೆ ಕಚ್ಚುವನು ಬೆರಳ!
ರುಚಿಯಾಗಿ ತಿನ್ನುವನು ರೊಟ್ಟಿಗಳ!
ರ್ಷಕ್ಕೊಂದೆರಡು ಮಾಳ್ಪ ಸ್ನಾನಗಳ!
ಕಾಮಿನಿ, ಕಾಂಚನ ಮುಟ್ಟನವುಗಳ! (ಹೇ)
-ಳದಿರ ನಿರಂಜನಾದಿತ್ಯಗವ್ನಾಳ!!!

ಋಣ ಸ್ವಾಮಿ, ಭೃತ್ಯರೀರ್ವರಿಗೂ ಉಂಟು! (ತೃ)

-ಣ ಸಮಾನ ಮುಕ್ತನಿಗೀ ಗಂಟು!
ಸ್ವಾರ್ಜಿತ, ಪಿತ್ರಾರ್ಜಿತಕ್ಕೆಲ್ಲಾ ಇದುಂಟು!
ಮಿತಿಯಿಲ್ಲದಿದು ಅನಾದಿಯ ಗಂಟು!
ಭೃಗುವೂ ಇದನ್ನು ಅಂದು ತೀರ್ಸಿದ್ದುಂಟು!
ತ್ಯಜಿಸಿದಾಗಾಸೆಗಳ ನೀರೀಗಂಟು!
ರೀತಿಯಿದಕ್ಕೆ ತರತರದಲ್ಲುಂಟು! (ಪಾ)
-ರ್ವತೀಶನ ಭಜನೆ ಸುಲಭವುಂಟು! (ಅ)
-ರಿತಿದ ಮಾರ್ಕಂಡೇಯ ಬದುಕಿದ್ದುಂಟು!
ಗೂಢವಿದ್ದ್ರದ್ದರಿಯ ಬೇಕಾದದ್ದುಂಟು!
ಉಂಡು, ತಿಂದು, ಮಲಗುವುದ್ರಲ್ಲೇನುಂಟು? (ಗಂ)
-ಟು ನಿರಂಜನಾದಿತ್ಯ ಕರಗ್ಸಿದ್ದುಂಟು!!!

ನಿನ್ನಿಂದೆನಗನ್ಯಾಯವಾಯ್ತಂದ್ಕೊಂಡಿದ್ದೆ! (ನ)

-ನ್ನಿಂದದಾಗ್ಬಾರ್ದಿನ್ನೆಂದು ನಿದ್ದೆಯಿಂದೆದ್ದೆ! (ತಂ)
-ದೆ ನಿನ್ನ ಸೇವೆಯೇ ನನಗಾಗ್ಲಿ ಹುದ್ದೆ!
ನ್ನಜ್ಞಾನದಿಂದೇನೇನೋ ಬಯಸಿದ್ದೆ! (ಈ)
-ಗದು ತಪ್ಪೆಂದರಿತು ಪಾದಕ್ಕೆ ಬಿದ್ದೆ!
ನ್ಯಾಯಮೂರ್ತಿ ಹೌದು ನೀನೆಂದೀಗ ಗೆದ್ದೆ!
ಜ್ಞ, ಯಾಗಕ್ಕಿಲ್ಲದ ಪ್ರಸಾದ ಮೆದ್ದೆ!
ವಾಯುಸುತನಂತಾಗಬೇಕೆನ್ನುತ್ತೆದ್ದೆ! (ತಾ)
-ಯ್ತಂದೆ ಕೊಟ್ಟ ಬಟ್ಟೆಯಾಗ್ದಿನ್ನೊದ್ದೆ ಮುದ್ದೆ! (ತಿಂ)
-ದ್ಕೊಂಡು ಬಿದ್ದಿರುವೆನು ನೀನಿತ್ತ ಮುದ್ದೆ! (ಅ)
-ಡಿದಾವರೆಯ ಸೇವೆ ಮಾಡುತ್ತಲಿದ್ದೆ! (ಗೆ)
-ದ್ದೆ, ಶ್ರೀ ನಿರಂಜನಾದಿತ್ಯನಾಗೀಗೆದ್ದೆ!!!

ವ್ಯವಸ್ಥೆ ನಿನ್ನದಸ್ತವ್ಯಸ್ತವಾದರವ್ಯವಸ್ಥೆ!

ನಜವರಳದ, ಮುದುರದ ದುರವಸ್ಥೆ! (ಸಂ)
-ಸ್ಥೆಗಳೆಲ್ಲಾ ತಲೆಕೆಳಗಾಗುರುಳುವವಸ್ಥೆ!
ನಿಲ್ಲಲಾರದೆ ಗಿಡ, ಮರಗಳ್ಮರಣಾವಸ್ಥೆ! (ಅ)
-ನ್ನ, ವಸ್ತ್ರ ಕಾಣದೆ ಪ್ರಾಣಿಗಳಳಿಯುವವಸ್ಥೆ!
ಯೆ ನಿನ್ನದಿದ್ದರೆ ಮಾತ್ರ ಚಿರಂಜೀವಾವಸ್ಥೆ! (ಪು)
-ಸ್ತಕಗಳೆಷ್ಟೋದಿ, ಬರೆದ್ರೂ ಬಾರದೀ ಅವಸ್ಥೆ!
ವ್ಯವಹಾರ ಜಗತ್ತಿದ್ದೆಲ್ಲಾ ಕ್ಷಣಿಕಾವಸ್ಥೆ! (ಅ)
-ಸ್ತಮಾನೋದಯದಂಥಾದ್ದಿನ್ನೊಂದೇನಿದೆ ವ್ಯವಸ್ಥೆ?
ವಾದಿ, ಪ್ರತಿವಾದಿಗಳ್ಕಟ್ಟಿದರನೇಕ ಸಂಸ್ಥೆ!
ಡ ಸೇರದಂತಾಗೀಗೆಲ್ಲಾ ಶೋಚನೀಯಾವಸ್ಥೆ!
ಹಸ್ಯವರಿತಾಗಾಗುವುದು ಸಹಜಾವಸ್ಥೆ!
ವ್ಯಭಿಚಾರ ಭಕ್ತಿಗಳವಡದು ಈ ಅವಸ್ಥೆ! (ಭ)
-ವಪಾಶ ಹರಿದೊಗೆಯಲಿಕ್ಕೆ ಬೇಕೀ ಅವಸ್ಥೆ! (ಸ್ವ)
-ಸ್ಥೆ ನಿರಂಜನಾದಿತ್ಯ ಮಾತೆಯದ್ದಿದೇ ಅವಸ್ಥೆ!!!

ನಾನಂದಂತೆಂತಾಗಿದೆ ಹೇಳು! (ನೀ)

-ನಂದಂತೇ ಸಾಗುತಿದೆ ಬಾಳು!
ದಂಭ ದರ್ಪದಿಂದ ನಾ ಕೀಳು!
ತೆಂಗು, ಮಾವೇ ನನ್ನಿಂದ ಮೇಲು!
ದಾನ ಶೀಲವುಗಳ ಬಾಳು! (ಯೋ)
-ಗಿರಾಜನಿನಗಿಲ್ಲ ಗೋಳು! (ತಂ)
-ದೆ ನೀನು ಮಾಡ್ಬೇಡೆನ್ನ ಹಾಳು!
ಹೇರಂಬ ಗಣಪಗಾಗಾಳು! (ಬಾ)
-ಳು ನಿರಂಜನಾದಿತ್ಯನೊಲು!!!

ಕೈವಲ್ಯಧಾಮವಾಗಬೇಕೀ ಶರೀರ! (ಭ)

-ವಸಾಗರ ದಾಟಿಪುದಾಗಾ ಶರೀರ! (ಮೌ)
-ಲ್ಯ ತಪಸ್ಸೆಂದರಿಯಲೀಗಾ ಶರೀರ!
ಧಾತು ಕ್ಷಯ ಮಾಡಬಾರದಾ ಶರೀರ!
ನೋಜಯಕ್ಕೆ ಸಹಾಯಾಗಾ ಶರೀರ!
ವಾಸುದೇವನಿಗಾಲಯಾಗಾ ಶರೀರ! (ಯೋ)
-ಗ ಸಾಧನೆಯಿಂದದಾಗಲಾ ಶರೀರ!
ಬೇಕದಕ್ಕಿಂದ್ರಿಯ ನಿಗ್ರಹೀ ಶರೀರ!
ಕೀಚಕನಾಗದಿರಬೇಕಾ ಶರೀರ!
ಪಥ ಮಾಡ್ಬೇಕ್ಭೀಷ್ಮನಂಥಾ ಶರೀರ!
ರೀತಿಯಲ್ಲಾಗ್ಬೇಕು ಸುಧಾಮಾ ಶರೀರ! (ನ)
-ರರಾಗ ನಿರಂಜನಾದಿತ್ಯ ಶರೀರ!!!

ನೆನೆಯಬೇಡಾ ಮಾಯೆಗೊಳಗಾಗಬೇಡ! (ಮ)

-ನೆ ಮನೆಗಲೆದಾಡಿ ಮರುಳಾಗಬೇಡ!
ಮನ ಬಲೆಯಲ್ಲಿ ಸಿಕ್ಕಿ ಬೀಳಬೇಡ!
ಬೇಟೆಯಾಡುತ್ತಿರುವನವ ಮರೆಯಬೇಡ! (ಓ)
-ಡಾಡುವಾಗ ದಾರಿ ತಪ್ಪಿ ನಡೆಯಬೇಡ!
ಮಾತಿನ ಭರದಲ್ಲಾರ ಮೇಲೂ ಬೀಳ್ಬೇಡ! (ದ)
-ಯೆಗಾಗಿ ಕೃಷ್ಣನ ಪ್ರಾರ್ಥಿಸದಿರಬೇಡ!
ಗೊಡ್ಡಾಕಳು ನಾನೆಂದಳುತ್ತಿರ ಬೇಡ! (ತ)
-ಳಮಳಗೊಂಡು ಕರ್ತವ್ಯ ಭ್ರಷ್ಟನಾಗಬೇಡ!
ಗಾಡಿಗಾರನೆಂದವನ ಕಡೆಗಾಣ್ಬೇಡ!
ದಾಯುದ್ಧದಲ್ಲವನಾಟ ಮರೆಯ್ಬೇಡ!
ಬೇರಾರಿಗೂ ಅವನನ್ನು ಹೋಲಿಸಬೇಡ! (ಆ)
-ಡ ನಿರಂಜನಾದಿತ್ಯಗವನೆರಡಾಡ!!!

ಕಪಟ ನಾಟಕ ಎಲ್ಲಿ ತನಕ?

ರದೆ ಹರಿಯದಿರ್ಪ ತನಕ! (ನ)
-ಟರಲ್ಲುತ್ಸಾಹವಿರುವ ತನಕ!
ನಾಟಕ ಪ್ರೇಮಿಗಳಿರ್ಪ ತನಕ! (ದಿ)
-ಟದಭಿರುಚಿ ಹುಟ್ಟುವ ತನಕ!
ಲೆ ಕಲೆಗಾಗಿರುವ ತನಕ!
ಡರಿಗೆದೆಗುಂದದ ತನಕ! (ಮ)
-ಲ್ಲಿಕಾರ್ಜುನಗಿಷ್ಟವಿರ್ಪ ತನಕ!
ತ್ವಸ್ಥಿತ ತಾನಾಗುವ ತನಕ!
ಶ್ವರದಾಸೆ ಹೋಗುವ ತನಕ! (ಲೋ)
-ಕ ನಿರಂಜನಾದಿತ್ಯಾಗ್ವ ತನಕ!!!

ನನ್ನದೆಂಬುದು ನನ್ನಲ್ಲೇನೂ ಇಲ್ಲ! (ಅ)

-ನ್ನ, ಬಟ್ಟೆಯೆಲ್ಲವೂ ದಾತನದ್ದೆಲ್ಲಾ! (ಮುಂ)
-ದೆಂತಾದೀತೋ ಹೇಳಲಾಗುವುದಿಲ್ಲ!
ಬುದ್ಧಿಗಾಗಿ ಶಕ್ತಿ ಆತ ಕರುಣ್ಸಿಲ್ಲ!
ದುಡಿಯುವುದಾತನಿಷ್ಟದಂತೆಲ್ಲ!
ನಗದಕ್ಕೆ ಮಜೂರಿ ಸಿಕ್ಕಿಲ್ಲ! (ನ)
-ನ್ನ, ಆಗು, ಹೋಗು, ಅವನಿಗೆಲ್ಲ! (ಎ)
-ಲ್ಲೇನು ಮಾಡಿಸುತ್ತಾನೆಂದು ಗೊತ್ತಿಲ್ಲ!
ನೂತನ ಸನಾತನವನೇ ಬಲ್ಲ!
ಟ್ಟಂತಿರದಿದ್ದರೇಂ ಗತಿಯಿಲ್ಲ! (ಬ)
-ಲ್ಲ ನಿರಂಜನಾದಿತ್ಯಗರ್ಪಣೆಲ್ಲಾ!!!

ಪಾತ್ರಾ ಪಾತ್ರವರಿತು ಮಾಡ್ಬೇಕ್ಸಕಾಲದಲ್ಲಿ ಸೇವೆ!

ತ್ರಾಣಹೀನನಿಗೆ ಸೂಕ್ತಾನ್ನ, ಪಾನವೀವುದು ಸೇವೆ!
ಪಾಲುಮಾರಿಕೆಯವಗೆಷ್ಟುಮಾಡಿದ್ರೂ ವ್ಯರ್ಥಾಸೇವೆ!
ತ್ರಯಮೂರ್ತಿ ಸ್ವರೂಪಿ ದತ್ತನ ಧ್ಯಾನ ಶ್ರೇಷ್ಠ ಸೇವೆ!
ರ್ಣಾಶ್ರಮ ಭೇದವಿಲ್ಲಿದೆ ಮಾಳ್ಪುದಾದರ್ಶ ಸೇವೆ!
ರಿಸಿ, ಮುನಿಗಳಂದು ಮಾಡಿದರಿಂಥಾ ಯೋಗ್ಯ ಸೇವೆ!
ತುರೀಯಾತೀತ ತ್ರಿಪುಟಿ ನಾಶವಾದ್ಮೇಲೇನು ಸೇವೆ!
ಮಾಡಬೇಕು ಮನೋನಾಶಕ್ಕಿಂತ ಮುಂಚೆ ಎಲ್ಲಾ ಸೇವೆ! (ಬಿ)
-ಡ್ಬೇಕು ಫಲಾಪೇಕ್ಷೆ ಮಾಡುವಾಗ ಪ್ರತಿಯೊಂದು ಸೇವೆ! (ವಾ)
-ಕ್ಸಮರ್ಥನೆಂದ ಮಾತ್ರಕ್ಕವನಿಂದಾಗದಾವ ಸೇವೆ!
ಕಾಮಿನಿ, ಕಾಂಚನದಾಸೆ ತುಂಬಿರುವಾಗೆಂಥಾ ಸೇವೆ?
ಕ್ಷ್ಯ ಸಿದ್ಧಿಗಿರಬೇಕು ಶುದ್ಧ ಮನಸ್ಸಿನ ಸೇವೆ!
ಶೇಂದ್ರಿಯ ವಿಷಯಾಸಕ್ತಿ ಬಿಡದಾಗದು ಸೇವೆ! (ಮ)
-ಲ್ಲಿಕಾರ್ಜನ ಒಪ್ಪಿದ ಅಕ್ಕಮಹಾದೇವಿಯ ಸೇವೆ!
ಸೇತು ಬಂಧನದಲ್ಲಿ ಮರೆಯ್ಬಾರದಳಿಲು ಸೇವೆ! (ಸೇ)
-ವೆ ನಿರಂಜನಾದಿತ್ಯನದ್ದೀರೇಳು ಲೋಕದ ಸೇವೆ!!!

ಹಸಿವೆಯಾದರೆ, ಬಿಸಿಯಾಗಿದ್ದರೆ ತಿನ್ನೋಣ!

ಸಿಕ್ಕಿದ್ದೆಲ್ಲಾ ತಿಂದ್ರೆ ರೋಗ ಬಂದರೇನು ಮಾಡೋಣ? (ನೀ)
-ವೆಲ್ಲರೂ ಪ್ರೀತಿಯಿಂದ್ಲೇ ಕೊಡುತ್ತೀರೆಂದು ನಂಬೋಣ!
ಯಾಕೆ ನಿಮ್ಮೆಲ್ಲರನ್ನೂ ಆಮೇಲೆ ವೃಥಾ ದೂರೋಣ?
ತ್ತಾತ್ರೇಯನ ದರ್ಶನಕ್ಕಾಗ್ಯೆಲ್ಲಾ ಶ್ರಮಿಸೋಣ! (ಧ)
-ರೆಯ ಸುಖವನ್ನೆಲ್ಲಾ ಅದಕ್ಕಾಗಿ ಮರೆಯೋಣ!
ಬಿಡಬಾರದೆಷ್ಟು ಕಷ್ಟ ಬಂದರೂ ಆ ಧಾರಣ!
ಸಿಕ್ಕಿದಾಗ ಸಮಯ ಅದೇಕೆ ಬುದ್ಧಿ ಭ್ರಮಣ?
ಯಾವಾಗ ಮುಗಿಸುವನೋ ಯಮರಾಯ ಪ್ರಯಾಣ?
ಗಿರಿಧಾರಿಯ ಪಾದ ಸೇರಿ ಅಲ್ಲಿ ನಿದ್ರಿಸೋಣ! (ಎ)
-ದ್ದರೂ, ಬಿದ್ದರೂ, ಅಲ್ಲಿಯೇ ಇದ್ದು ಧನ್ಯರಾಗೋಣ! (ಹ)
-ರೆಯದ ದಿನಗಳನ್ನು ವ್ಯರ್ಥ ಮಾಡದಿರೋಣ!
ತಿರಿಗಿ, ತಿರಿಗಿ, ಹುಟ್ಟಿ ಸತ್ತು ಹುಟ್ಟದಿರೋಣ! (ತಿ)
-ನ್ನೋಣ ಅಮೃತವನ್ನೇ ಕುಡಿದಮರರಾಗೋಣ! (ಋ)
-ಣ ನಿರಂಜನಾದಿತ್ಯನದ್ದು ಹೀಗೆ ತೀರಿಸೋಣ!!!

ಚರ್ವಿತ ಚರ್ವಣ ಮಾಡಿ ಕುಣಿದವರೇ ಎಲ್ಲಾ! (ಉ)

-ರ್ವಿಯೊಡೆಯನ ಸಾಕಾರಾಕಾರ ಕಂಡವರಿಲ್ಲ!
ತ್ವೋಪದೇಶ ಮಾಡಿ ಜಾರಿಕೊಂಡವರೇ ಎಲ್ಲಾ!
ತುರ್ಮುಖಾದಿಗಳ ಠಾವು, ಠಿಕಾಣಿ ಗೊತ್ತಿಲ್ಲ! (ಗ)
-ರ್ವದಿಂದ ಮತಗಳನೇಕ ಹುಟ್ಟಿಕೊಂಡವೆಲ್ಲ! (ಗ)
-ಣಪತಿ ಸಜೀವ, ಸಾಕಾರದಿಂದೆಲ್ಲೂ ಬಂದಿಲ್ಲ!
ಮಾತು ವ್ಯಾಸನದ್ದು ನಂಬುವಂಥಾಸ್ಥಿತಿ ಈಗಿಲ್ಲ! (ಬಿ)
-ಡಿಸಬೇಕೀ ಸಂಶಯವೃತ್ತಿಯನ್ನವರೇ ಎಲ್ಲಾ!
ಕುಲ, ಗೋತ್ರಾದಿಗಳು ಅವರದೇ ನಮ್ಮದೆಲ್ಲಾ! (ತ)
-ಣಿಸದಿದ್ದರೀ ದಾಹ ಕಂಗಾಲಾಗ್ವೆವು ನಾವೆಲ್ಲಾ!
ರ್ಶನವಿತ್ತು ಧರ್ಮ ಸಂಸ್ಥಾಪನೆ ಮಾಡ್ಲವ್ರೆಲ್ಲಾ! (ಶಿ)
-ವ, ಜೀವರೈಕ್ಯ ಸುಖಾಮೇಲ್ ಬರ್ಲಿ ನಮಗೆಲ್ಲಾ!
ರೇಣುಕಾತ್ಮಜಗಾದನುಭವ ನಮ್ಗಾಗ್ಲೀಗೆಲ್ಲ!
ಚ್ಚರದಿಂದಿರ್ಬೇಕಾದ್ರೆ ನಿದ್ರೆ ಬಾರ್ದಿರ್ಬೇಕಲ್ಲಾ? (ಬ)
-ಲ್ಲಾ ನಿರಂಜನಾದಿತ್ಯ ತೊರಿಸ್ಲಿ ನಿಜವನ್ನೆಲ್ಲಾ!!!

ಮುರಲೀಧರನೆಂದು ಹೆಸರು! (ಕ)

-ರದಲ್ಲಿ ಖಡ್ಗ ಹಿಡಿಯದಿರು!
ಲೀನ ಮುರಲಿಯಲ್ಲೇ ಆಗಿರು!
ರ್ಮ, ಕರ್ಮ ಬದ್ಧರ್ನಾವೀರ್ವರು!
ಕ್ಕಸ ನಾನೆಂದೆಣಿಸದಿರು! (ನೀ)
-ನೆಂದೆಂದೂ ನನ್ನನ್ನು ಬಿಡದಿರು!
ದುರ್ವ್ಯಾಪಾರಕ್ಕೆನ್ನ ದೂಡದಿರು!
ಹೆಮ್ಮೆ ನನಗೇಕೆ ನಿನ್ನೆದುರು?
ದಾ ನನ್ನ ಕಣ್ಣೆದುರ್ನೀನಿರು! (ಇ)
-ರು ನಿರಂಜನಾದಿತ್ಯನಾಗಿರು!!!

ಹಾಲಲ್ಲಿ ನೀರು ಬೆರೆತ್ರೆ ಬೆಲೆ ಬರುತ್ತೆ! (ಹೇ)

-ಲಲ್ಲದು ಬೆರೆತ್ರೆ ದುರ್ವಾಸನೆ ಬರುತ್ತೆ! (ಕ)
-ಲ್ಲಿನಲ್ಲಿ ಮೂರ್ತಿ ಕೆತ್ತಿದ್ರೆ ಪೂಜೆಯಾಗುತ್ತೆ!
ನೀರಿನಲ್ಲಿ ಹಾಕಿದ್ರೆ ಮುಳುಗಿ ಹೋಗುತ್ತೆ! (ಯಾ)
-ರು ಹೇಗಿರ್ಬೇಕೋ ಹಾಗಿದ್ರೆ ಮಾನ ಬರುತ್ತೆ!
ಬೆಟ್ಟದಮೇಲಂಗಡಿ ಇಟ್ರೇನು ಬರುತ್ತೆ? (ಕ)
-ರೆದ್ರೂ ಗಿರಾಕಿ ಬಾರದೆಲ್ಲಾ ಹಾಳಾಗುತ್ತೆ! (ಮಾ)
-ತ್ರೆ ನುಂಗಿದರೆ ರೋಗ ಶಮನವಾಗುತ್ತೆ!
ಬೆಲ್ಲವನ್ನೇ ತಿನ್ನುತ್ತಿದ್ರೆ ಕ್ರಿಮಿ ಹೆಚ್ಚುತ್ತೆ! (ತ)
-ಲೆ ಬಾಗಿದ್ರೆ ಗುರುವಿಗುದ್ಧಾರವಾಗುತ್ತೆ!
ಯಲಾಡಂಬರದಿಂದ ಪತನಾಗುತ್ತೆ! (ಕು)
-ರುವಂಶದಂತಾಗಿ ಜನ್ಮ ವ್ಯರ್ಥವಾಗುತ್ತೆ! “(ಎ)
-ತ್ತೆನ್ನ, ನಿರಂಜನಾದಿತ್ಯಾ!” ಎನ್ಬೇಕಾಗುತ್ತೆ!!!

ಭಾವಾವೇಶ ಕುದಿದುಕ್ಕುವ ಹಾಲಿನಂತೆ! (ಭಾ)

-ವಾತೀತ ಕುದಿಸಿಳಿಸಿಟ್ಟ ಹಾಲಿನಂತೆ!
ವೇದಾಂತಿ ಆ ಒಳಗಿಳಿಸಿಟ್ಟ ಹಾಲಂತೆ!
ಮೆ, ದಮೆಯಿಂದದು ಸಿದ್ಧಿಸುವುದಂತೆ!
ಕುಹಕು, ಕುಚೋದ್ಯಕ್ಕಾಸ್ಥಿತಿ ಬಾರದಂತೆ!
ದಿನ, ರಾತ್ರಿಯೆನ್ನದೇ ದುಡಿಯಬೇಕಂತೆ!
ದುರ್ವ



ವಹಾರಕ್ಕೆ ಮನಸ್ಸೋಡ್ಬಾರದಂತೆ! (ಹ)
-ಕ್ಕು ಇದರಭ್ಯಾಸಕ್ಕೆಲ್ಲರಿಗೂ ಉಂಟಂತೆ! (ಭ)
-ವರೋಗವನ್ನಿದು ಗುಣ ಮಾಡುವುದಂತೆ!
ಹಾಲಿದರಿಂದಜೀರ್ಣವಾಗ್ವುದಿಲ್ಲವಂತೆ! (ಮಾ)
-ಲಿಕನ ರಕ್ಷಾ ಕವಚ ಇದಕ್ಕುಂಟಂತೆ!
ನಂಜುಂಡಗಿದ್ರಿಂದ ವಿಷ ಜೀರ್ಣವಾಯ್ತಂತೆ! (ಕ)
-ತೆ ಪುರಾಣಾತೀತ ನಿರಂಜನಾದಿತ್ಯಂತೆ!!!

ನನ್ನ ಪೂಜೆ ಸಾಕಾಯ್ತು, ನಿನ್ನ ಪೂಜೆ ಬೇಕಾಯ್ತು! (ನ)

-ನ್ನ ನಾನರಿತು ನಿನ್ನಲ್ಲೈಕ್ಯವಾಗಬೇಕಾಯ್ತು!
ಪೂಜೋಪಚಾರದ ಗುರಿಯಿದೆಂಬರಿವಾಯ್ತು! (ಪ್ರ)
-ಜೆಗಳ ಕಲ್ಯಾಣವಿದರಿಂದೆಂದು ಗೊತ್ತಾಯ್ತು!
ಸಾರಿ, ಹೋರಾಡುವ ಶ್ರಮ ಪರಿಹಾರವಾಯ್ತು!
ಕಾಲಕ್ಕೆ ತಕ್ಕ ಲೀಲೆಯೆಂಬುದು ನಿಜವಾಯ್ತು! (ಆ)
-ಯ್ತು, ನಿನ್ನಿಷ್ಟದಂತೆಲ್ಲಾಗುತಿದೆಂಬರಿವಾಯ್ತು!
ನಿನ್ನನ್ನೇನೇನೋ ಅಜ್ಞಾನದಿಂದಂದದ್ದು ಆಯ್ತು! (ಇ)
-ನ್ನದು ನನ್ನಿಂದಾಗದೆಂದು ಕ್ಷಮೆ ಬೇಡಿದ್ದಾಯ್ತು!
ಪೂರ್ಣಾಶೀರ್ವಾದ ನನಗೀಗ ದೊರೆತಂತಾಯ್ತು! (ಅಂ)
-ಜೆ ನಾನಿನ್ಯಾವುದಕ್ಕೂ ಎಂಬ ಧೈರ್ಯವುಂಟಾಯ್ತು!
ಬೇಡುವವನೂ, ನೀಡುವವನೂ ನೀನೇ ಆಯ್ತು!
ಕಾಲ ನಿಶ್ಚಿಂತೆಯಿಂದಿಂತು ಕಳೆಯುವಂತಾಯ್ತು! (ಆ)
-ಯ್ತು, ನಿರಂಜನಾದಿತ್ಯಾನಂದದಲ್ಲಿರ್ಪಂತಾಯ್ತು!!!

ಡಂಗುರ ಸಾರಬೇಕು ನಿನ್ನ ಮಹಿಮೆ!

ಗುಡಿಗಳಲ್ಲೆಲ್ಲಾ ಕಾಣ್ಬೇಕಾ ಮಹಿಮೆ!
ಕ್ತಪಾತ ನಿಲ್ಲಿಸಬೇಕಾ ಮಹಿಮೆ!
ಸಾಧನೆ ಸಾರ್ಥಕ ಮಾಡ್ಬೇಕಾ ಮಹಿಮೆ!
ಣರಂಗಕ್ಕಿಳಿಸ್ಬಾರದಾ ಮಹಿಮೆ!
ಬೇಕು ದರ್ಶನಾನುಭವದ ಮಹಿಮೆ!
ಕುಲ, ಶೀಲ ಬೆಳಗಬೇಕಾ ಮಹಿಮೆ!
ನಿಜಗೊಳಿಸ್ಬೇಕಾರ್ಯೋಕ್ತಿಯಾ ಮಹಿಮೆ! (ನಿ)
-ನ್ನ ಸಾಯುಜ್ಯನುಗ್ರಹಿಸ್ಬೇಕಾ ಮಹಿಮೆ!
ತ ಭೇದ ಹತ ಮಾಡ್ಬೇಕಾ ಮಹಿಮೆ!
ಹಿತೈಷಿ ಸರ್ವರ, ತೊರ್ಬೇಕಾ ಮಹಿಮೆ! (ಭ್ರ)
-ಮೆಹರ ನಿರಂಜನಾದಿತ್ಯ ಮಹಿಮೆ!!!

ನಂಬಿದ್ದಿನ್ನೂ ಸಾಲದೇ ಗುರುದೇವಾ?

ಬಿದ್ದೊದ್ದಾಡ್ವುದ್ಕಾಣದೇ ಗುರುದೇವಾ? (ಮ)
-ದ್ದಿದಕ್ಕೇನೂ ಇಲ್ಲವೇ ಗುರುದೇವಾ? (ನಿ)
-ನ್ನೂಳಿಗಕ್ಕಿದೇ ಫಲ? ಗುರುದೇವಾ?
ಸಾವೇಕೆ ಬಾರ್ದಿದಕ್ಕೆ ಗುರುದೇವಾ? (ಅ)
-ಲಕ್ಷ್ಯ ನೀನ್ಮಾಡ್ಬಹುದೇ ಗುರುದೇವಾ?
ಒನೆ ಲಿನೆ ಮಿ

ಸಿ




ಗುಣ ದೋಷ ಕ್ಷಮಿಸು ಗುರುದೇವಾ? (ದ)
-ರುಶನವಿತ್ಮೇಲೆತ್ತು ಗುರುದೇವಾ!
ದೇಶಕ್ಕಾಗ್ಲಿ ಸುಭಿಕ್ಷೆ ಗುರುದೇವಾ! (ದೇ)
-ವಾ! ನಿರಂಜನಾದಿತ್ಯ ಗುರುದೇವಾ!!!

ಬಂದವ್ಗಿಕ್ಕದೇ ಬರ್ತೇನೆಂದವ್ಗಾಗಿ ಬಚ್ಚಿಡ್ಬೇಡ!

ತ್ತನಾವಾಗೆಂದು ಬರ್ತಾನೋ? ಮೈಮರೆತಿರ್ಬೇಡ! (ಇ)
-ವ್ಗಿಕ್ಕಬಾರ್ದು, ಅವಗಿಕ್ಬೇಕೆಂಬ ಅಜ್ಞಾನ ಬೇಡ! (ದ)
-ಕ್ಕಲಾರ್ದಯೋಗ್ಯರಿಗೆ ಭಿಕ್ಷೆ; ತಿಳಿಯದಿರ್ಬೇಡ!
ದೇವರೆಲ್ಲರಲ್ಲಿಹನೆಂಬುದರಿಯದಿರ್ಬೇಡ!
ಡವ, ಬಲ್ಲಿದರಲ್ಲಿ ಭೇದ ಕಲ್ಪಿಸಬೇಡ! (ತೋ)
-ರ್ತೇನೆ ಚಮತ್ಕಾರವೆಂಬವನನ್ನು ನಂಬಬೇಡ!
ನೆಂಟರಿಷ್ಟರಿಗೊಂದನ್ಯರಿಗಿನ್ನೊಂದು ಮಾಡ್ಬೇಡ!
ಯಾದೃಷ್ಟಿಯಿಂದೆಲ್ಲರನ್ನು ನೋಡದಿರಬೇಡ! (ನೋ)
-ವ್ಗಾಗಿ, ಸಾವ್ಗಾಗಿ ಚಿಂತಿಸುತ್ತಾ ಕುಳಿತಿರಬೇಡ! (ಯೋ)
-ಗಿಯಾಗಿ ನಿಜಾನಂದಾನುಭವಿಯಾಗದಿರ್ಬೇಡ!
ಹು ಜನ್ಮದ ಸುಕೃತ ಈ ಜನ್ಮ! ಹಾಳಾಗ್ಬೇಡ! (ನೆ)
-ಚ್ಚಿ ಧನ, ಧ್ಯಾನ; ಸತಿ, ಸುತರ ಕೆಟ್ಟುಹೋಗ್ಬೇಡ! (ಮಾ)
-ಡ್ಬೇಡ ದುರ್ಜನ ಸಹವಾಸವೆಂದೆಂದೂ ಮಾಡ್ಬೇಡ! (ಎ)
-ಡರ್ಗಂಜಿ ನಿರಂಜನಾದಿತ್ಯ ನಿಜ ಧರ್ಮ ಬಿಡ!!!

ಕೇಳ್ಳಿಕ್ಕೂ, ಹೇಳ್ಳಿಕ್ಕೂ, ಹುಟ್ಟಿ, ಸತ್ತು ಸಾಕಾಯ್ತು! (ಬಾ)

-ಳ್ಳಿಕ್ಕಾಗೀಗ ಧರೆಯಲ್ಲವತರಿಸ್ಯಾಯ್ತು! (ಹ)
-ಕ್ಕೂರ್ಜಿತಗೊಳಿಸಬೇಕೆಂಬ ಇಚ್ಛೆಯಾಯ್ತು!
ಹೇಳ್ಬೇಕಾರಿಗಾರೆಂಬ ಜ್ಞಾನೋದಯವಾಯ್ತು! (ಆ)
-ಳ್ಳಿಕ್ಕೆ ಶಕ್ತಿ, ಸಾಮರ್ಥ



ಬೇಕೆಂಬರಿವಾಯ್ತು! (ಮಿ)
-ಕ್ಕೂಳಿಗದಿಂದಾರಿಗೂ ಸುಖವಿಲ್ಲದಾಯ್ತು!
ಹುರುಪೆಂತು ಬರಬೇಕೋ ತಿಳಿಯದಾಯ್ತು! (ಕ)
-ಟ್ಟಿಟ್ಟಿರುವ ಬುತ್ತಿ ಹೊಟ್ಟೆಗೇ ಸಾಲದಾಯ್ತು!
ರ್ವಶಕ್ತನಿಗೇ ಶರಣೆನಬೇಕಾಯ್ತು! (ಎ)
-ತ್ತುವವನೆತ್ತಿದಾಗಾಳೋಣ ವೆಂದಿದ್ದಾಯ್ತು!
ಸಾವಿಲ್ಲದ ಶರೀರವಿಲ್ಲೆಂದರಿತಾಯ್ತು!
ಕಾಲ ಕಾಯುವುದೀ ಬಾಳಿನ ಪಾಲಿಗಾಯ್ತು! (ಆ)
-ಯ್ತು, ನಿರಂಜನಾದಿತ್ಯಾನಂದ ಗುರಿಯಾಯ್ತು!!!

ಸಂಸ್ಕಾರಕ್ಕೆ ತಕ್ಕಂತೆ ಬುದ್ಧಿ! (ಸಂ)

-ಸ್ಕಾರ ಆಚಾರದಿಂದ ಸಿದ್ಧಿ! (ಪ)
-ರಮಾರ್ಥಿಗಿರ್ಬೇಕ್ಯುದ್ಧ ಬುದ್ಧಿ! (ಬೆ)
-ಕ್ಕೆಯಿಂದಾಗುವುದು ದುರ್ಬುದ್ಧಿ!
ನಗಾಗ್ದದ್ದ್ರಿಂದಭಿವೃದ್ಧಿ! (ಚ)
-ಕ್ಕಂದದಿಂದಾಗದಾವ ಸಿದ್ಧಿ!
ತೆರೆ ನಿಲ್ಲದಾಗ್ದು ಶಾಂತಾಬ್ಧಿ!
ಬುದ್ಧಿ ಆತ್ಮನಾಗ್ವುದೇ ಸಿದ್ಧಿ! (ಸಿ)
-ದ್ಧಿ, ನಿರಂಜನಾದಿತ್ಯ ಬುದ್ಧಿ!!!

ಕಕ್ಷಿಗಾರಗೊಬ್ಬ ನ್ಯಾಯವಾದಿ ಸಾಕು! (ಕ)

-ಕ್ಷಿಗಾರರನೇಕ ನ್ಯಾಯವಾದಿಗ್ಬೇಕು!
ಗಾಳ್ಬೀಸಿದತ್ತ ಕಕ್ಷಿಗಾರೋಡ್ದಿರ್ಬೇಕು! (ವ)
-ರಮಾನದತ್ಯಾಸೆ ನ್ಯಾಯವಾದ್ಬಿಡ್ಬೇಕು!
ಗೊಡ್ಡಾಕಳ ಹಿಂಡಲೆತ್ನಿಸದಿರ್ಬೇಕು! (ಒ)
-ಬ್ಬನನ್ನೇ ಕಕ್ಷಿಗಾರ ನಂಬುತ್ತಿರ್ಬೇಕು!
ನ್ಯಾಯಾನ್ಯಾಯ ದೈವೇಚ್ಛೆಯಂತೆಂದಿರ್ಬೇಕು! (ಕಾ)
-ಯಕಕ್ಕೆ ತಕ್ಕ ಪ್ರತಿಫಲ ಸಿಕ್ಬೇಕು!
ವಾಸುದೇವನಾದ್ರೂ ಇದನ್ನೊಪ್ಪಬೇಕು!
ದಿವ್ಯಜೀವನಕ್ಕಾಗ ಬೆಲೆ ಬರ್ಬೇಕು!
ಸಾಯುಜ್ಯ ಸುಖಕ್ಕದು ನೆರವಾಗ್ಬೇಕು! (ಬೇ)
-ಕು ನಿರಂಜನಾದಿತ್ಯಾನಂದವಿರ್ಬೇಕು!!!

ಜೀವಾತ್ಮನಾಗಿ ಬಾಳಿ ದುಃಖಿಯಾಗ್ಬೇಡ! (ಶಿ)

-ವಾತ್ಮನಾಗಿ ಬಾಳಿ ಸುಖಿಯಾಗ್ದಿರ್ಬೇಡ! (ಆ)
-ತ್ಮಸ್ವರೂಪವರಿತು ಅದಾಗ್ದಿರ್ಬೇಡ!
ನಾಮ, ರೂಪಕ್ಕಂಟಿ ಹುಟ್ಟಿ, ಸಾಯಬೇಡ!
ಗಿರಿಜಾಧವನ ಮರೆಯಲೀ ಬೇಡ!
ಬಾಯ್ಕೈ, ಕಚ್ಚೆ ಮಲಿನಗೊಳಿಸಬೇಡ! (ಗಾ)
-ಳಿ ಗೋಪುರ ಕಟ್ಟಿ ಬಿದ್ದುರುಳಬೇಡ!
ದುಃಸ್ಸಂಗದಿಂದ ದೂರವಿರದಿರ್ಬೇಡ!
ಖಿನ್ನನಾಗಿ ಯಾವುದಕ್ಕೂ ಚಿಂತಿಸ್ಬೇಡ!
ಯಾತನಾ ಸಂಸಾರಕ್ಕೆ ಕಟ್ಟು ಬೀಳ್ಬೇಡ! (ಆ)
-ಗ್ಬೇಕಿಂದೇ ಜೀವನ್ಮುಕ್ತ! ಧೈರ್ಯಗೆಡ್ಬೇಡ! (ಮೃ)
-ಡ ನಿರಂಜನಾದಿತ್ಯಾಸ್ಥಿತಿಯ ಬಿಡ!!!

ಪರಮಾತ್ಮನ ಪ್ರೀತಿಯನ್ನರಿಯದೇ ಕೆಟ್ಟಿರೆಲ್ಲಾ!

ಘುಪತಿಯ ಪ್ರೀತಿಯನ್ನಾಂಜನೇಯ ಪೂರ್ಣ ಬಲ್ಲ!
ಮಾಯೆಗಾತ ಮರುಳಾಗಿ ಎಂದೂ ಸೋತವನೇ ಅಲ್ಲ! (ಆ)
-ತ್ಮ ವಿಶ್ವಾಸದಲ್ಲಿ ಆತನಿಗೆ ಸಮಾನರೇ ಇಲ್ಲ! (ವಾ)
-ನರನೆಂದಾತನನ್ನು ಕಡೆಗಂಡವರಾರೂ ಇಲ್ಲ!
ಪ್ರೀತಿಪಾತ್ರನಾಗಿ ಸೀತಾನ್ವೇಷಣ ಮಾಡಿದನಲ್ಲಾ!!
ತಿತಿಕ್ಷೆ, ವೈರಾಗ್ಯ ಅವನದು ಸಾಮಾನ್ಯವೇನಲ್ಲ! (ಭ)
-ಯಪಟ್ಟು ಎಂದೂ ವೈರಿಗೆ ಬೆನ್ನು ತೋರಿಸಲೇ ಇಲ್ಲ! (ತ)
-ನ್ನನ್ನು ನಂಬಿದವರನ್ನು ಆತ ಕೈ ಬಿಟ್ಟವನಲ್ಲ! (ವೈ)
-ರಿ ರಾವಣ ಕಂಡನವನ ಪರಾಕ್ರಮವನ್ನೆಲ್ಲಾ! (ಕಾ)
-ಯ ಬಲದಿಂದ ಬೆಟ್ಟವನ್ನೇ ಹೊತ್ತು ತಂದನಾ ಮಲ್ಲ!
ದೇವಾದಿ ದೇವತೆಗಳೂ ಕೊಂಡಾಡದೇ ಇರಲಿಲ್ಲ! (ಏ)
-ಕೆ ಈಗವನ ದರ್ಶನವಾಗುತ್ತಿಲ್ಲವೋ? ಗೊತ್ತಿಲ್ಲ! (ಗು)
-ಟ್ಟ ರಟ್ಟು ಮಾಡದೆ ಈಗ ಗತ್ಯಂತರ ಕಾಣುತ್ತಿಲ್ಲ! (ಮೊ)
-ರೆಯಿಡೋಣ ಅವನಿಗೇ ದಿನ, ರಾತ್ರಿ, ಭಕ್ತರೆಲ್ಲಾ! (ಎ)
-ಲ್ಲಾ ಬಲ್ಲ ನಿರಂಜನಾದಿತ್ಯನಿಗೆ ಕಷ್ಟವಿದಲ್ಲ!!!

ಅನೇಕರೊಪ್ಪಿ ಅಪ್ಪಿದರು ಕೃಷ್ಣನನ್ನು!

ನೇಮ ನಿಷ್ಠೆಯಿಂದ ಪೂಜಿಸಿದ್ರವನನ್ನು!
ಳ್ಳ ಸುಳ್ಳನೆಂದೂ ನಿಂದಿಸಿದ್ರವನನ್ನು! (ನೀ)
-ರೊಳಗೆ ಕಾಳಿಂಗನ ತುಳಿದವನನ್ನು! (ತ)
-ಪ್ಪಿತಸ್ಥ ಮಾವ ಕಂಸನ ಕೊಂದವನನ್ನು!
ಹಂಕಾರೀಂದ್ರನಡಗಿಸಿದವನನ್ನು! (ಅ)
-ಪ್ಪಿ ಕುಚೇಲನನ್ನಾದರಿಸಿದವನನ್ನು!
ಯಾನಿಧಿ ವಿದುರನ ಅತಿಥಿಯನ್ನು! (ಕು)
-ರು ಕುಲವ ನಿರ್ಮೂಲ ಮಾಡಿದವನನ್ನು!
ಕೃಷ್ಣೆಯ ಸೀರೆ ಅಕ್ಷಯ ಗೈದವನನ್ನು! (ಪೂ)
-ಷ್ಣನಿಗೆ ಚಕ್ರ ಅಡ್ಡ ಹಿಡಿದವನನ್ನು!
ರನಿಗೆ ತತ್ವ ಬೋಧಿಸಿದವನನ್ನು! (ಸ)
-ನ್ನುತ ನಿರಂಜನಾದಿತ್ಯ ಗೋಪಾಲನನ್ನು!!!

ಪುರಾಣಿಕ ಪುರುಷೋತ್ತಮನಾಗ್ಬೇಕಯ್ಯಾ!

ರಾಮದಾಸ ಮಾರುತಿ ತಾನಾಗಬೇಕಯ್ಯಾ! (ಕ)
-ಣಿ ಹೇಳುವಭ್ಯಾಸ ಬಿಟ್ಟುಬಿಡಬೇಕಯ್ಯಾ!
ಡು ಲೋಭಿಯಾ ತಾನಿರಬಾರದಯ್ಯಾ!
ಪುತ್ರ, ಕಳತ್ರಾದಿ ವ್ಯಾಮೋಹ ಬಿಡ್ಬೇಕಯ್ಯಾ!
ರುಕ್ಮಿಣೀಶನ ಗೀತಾತ್ಮನಾಗಬೇಕಯ್ಯಾ!
ಷೋಡಶೋಪಚಾರದ ಗುರಿ ಸೇರ್ಬೇಕಯ್ಯಾ! (ತ)
-ತ್ತ ಬಡಿಕನಾದರಾವಿದ್ಯೆ ವ್ಯರ್ಥವಯ್ಯಾ!
ದ, ಮತ್ಸರವಂತೂ ಇರ್ಲೇ ಬಾರದಯ್ಯಾ!
ನಾದ, ಬಿಂದು, ಕಲಾತೀತ ನಾಗಬೇಕಯ್ಯಾ! (ಆ)
-ಗ್ಬೇಕಿದೇ ಜನ್ಮದಲ್ಲಿ ಸಾಕ್ಷಾತ್ಕಾರವಯ್ಯಾ!
ಲಿಯುಗವಿದಾದ್ರೂ ಧೈರ್ಯಗೆಡ್ಬೇಡಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾನಂದ ನೀನಾಗಯ್ಯಾ!!!

ವಿಪುಲಾನಂದದಲ್ಲಿ ಗೋಪಾಲ ಆ ನಂದ!

ಪುರಾಣ ಪುರುಷ ಪುರುಷೋತ್ತಮಾ ಆ ನಂದ!
ಲಾವಣ್ಯ ಮೂರುತಿ ಬಾಲಕೃಷ್ಣ ಆ ನಂದ!
ನಂದ ಕಂದ, ಮುಕುಂದ ಗೋವಿಂದ ಆ ನಂದ!
ಧಿ, ಕ್ಷೀರ, ನವನೀತ ಚೋರ ಆ ನಂದ!
ರಿದ್ರ ಕುಚೇಲನಾಪ್ತಮಿತ್ರ ಆ ನಂದ! (ಕ)
-ಲ್ಲಿನ ಮೂರ್ತಿಯಾಗಿರ್ಪನೆಲ್ಲೆಲ್ಲೂ ಆ ನಂದ!
ಗೋಪಿಕಾ ಜನ ಮನಮೋಹನ ಆ ನಂದ!
ಪಾರ್ಥಸಾರಥಿ ಶ್ರೀ ಗೀತಾನಾಥ ಆ ನಂದ! (ಜ)
-ಲಕ್ರೀಡೆಯಾಡಿದ ಲೀಲಾ ಜಾಲ ಆ ನಂದ!
ಪದ್ಭಾಂಧವ ರಾಧಾ ಮಾಧವ ಆ ನಂದ!
ನಂಬಿದ ಉದ್ಧವನೋದ್ಧಾರಕ ಆ ನಂದ!
ತ್ತ ನಿರಂಜನಾದಿತ್ಯಾನಂದ ಆ ನಂದ!!!

ಅಂದಿಂದೆಂಬ ಭೇದ ನಿನಗಿದೆಯೇನು?

ದಿಂಬು ತಲೆಗಿಂಬು ಕೊಡಬೇಡವೇನು?
ದೆಂಟಿಗೆಲೆಯಂಟಿಕೊಂಡರೆ ತಪ್ಪೇನು?
ಲಾಬಲ ಪರೀಕ್ಷೆಯಗತ್ಯವೇನು?
ಭೇದ ಬುದ್ಧಿ ತೋರ್ಬಾರದ ತಂದೆ ನೀನು!
ರ್ಶನ ಕೊಡದಿರಬಾರದು ನೀನು!
ನಿಗಮಾಗಮ ಗೋಚರನಾದರೇನು?
ಡು ನೀರಲ್ಲಿ ಕೈ ಬಿಡ್ಬಾರದು ನೀನು!
ದೆವ್ವಗಳಿಗೂ ಸ್ಥಾನವಿತ್ತಿಹೆ ನೀನು! (ತಾ)
-ಯೆ ಮೃತ್ಯುವಾದಾಗ ರಕ್ಷಿಸಿದ್ದೆ ನೀನು! (ಭಾ)
-ನು ನಿರಂಜನಾದಿತ್ಯನೆಂದಪ್ಪು ನೀನು!!!

ನಿನಗೆ ಕಿರೀಟ, ನನಗೆ ಲಪೇಟ!

ನಗಾಗುತಿದೆ ದಿನ ರಾತ್ರಿ ಕಾಟ!
ಗೆಳೆಯ ನೀನೆನಗೆಂಬುದೇನೋ ದಿಟ!
ಕಿರಿಯನಾದೆನಗೆ ಸಿಕ್ಕದೊಂದೂಟ!
ರೀತಿ, ನೀತಿಯಲ್ಲಿ ನಿನ್ನದೇ ಮುಂದೋಟ! (ಆ)
-ಟ, ಪಾಠದಲ್ಲೆಲ್ಲಾ ನನ್ನದು ಹಿಂದೋಟ!
ನಗಿರುವುದು ತರ್ತರದ ಛಟ!
ನ್ಗೀಗ ತೋರು ನಿನ್ನ ರೂಪ ವಿರಾಟ!
ಗೆರೆ ದಾಟದಂತಿಟ್ಟು ಕೊಡೊಡನಾಟ!
ಕ್ಷ್ಯದಲ್ಲಿರಿಸು ಸದಾ ನನ್ನ ನೋಟ!
ಪೇಟೆ ಬೀದಿಯಲ್ಲಿಲ್ಲೆನಗೆ ಸುತ್ತಾಟ! (ದಿ)
-ಟ, ನಿರಂಜನಾದಿತ್ಯಾನಂದಾನು ದಿಟ!!!

ಮಾತು ಕೊಟ್ಟಂತಿದ್ದು ಬಿಡಯ್ಯಾ!

ತುರೀಯಾತೀತ ನೀನಾಗಯ್ಯಾ!
ಕೊಳಕು ಥಳಕು ಸಾಕಯ್ಯಾ! (ಉ)
-ಟ್ಟಂಬರ ಹರಿದು ಹಾಕಯ್ಯಾ!
ತಿತಿಕ್ಷೆ, ವೈರಾಗ್ಯವಿರ್ಲಯ್ಯಾ! (ಮು)
-ದ್ದು ಮಗು ಅಪ್ಪನಿಗಾಗಯ್ಯಾ!
ಬಿಸಿ, ಹಸಿ, ಎಲ್ಲಾ ತಿನ್ನಯ್ಯಾ!
ಮರುಧರ ನೀನಾಗಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾತಯ್ಯಾ!!!

ಮನಸಿಗೆ ಶರೀರ ಬೇಕು! (ಮ)

-ನಸ್ಸು ಶರೀರಕ್ಕಿರ್ಲೂ ಬೇಕು!
ಸಿಹ್ಯೂಟವೆರಡಕ್ಕೂ ಬೇಕು!
ಗೆಳೆತನನ್ಯೋನ್ಯವಿರ್ಬೇಕು!
ಕ್ತಿ ಶರೀರಕ್ಕಿರಬೇಕು!
ರೀತಿ, ನೀತಿ, ಮನಕ್ಕಿರ್ಬೇಕು! (ಪ)
-ರಮಾರ್ಥಿಗಿಂತನ್ಕೂಲಾಗ್ಬೇಕು!
ಬೇಡದ ಹವ್ಯಾಸ ಬಿಡ್ಬೇಕು! (ಬೇ)
-ಕು, ನಿರಂಜನಾದಿತ್ಯಾಗ್ಬೇಕು!!!

ಒಂದೊಂದಾಗಿಂದೆಲ್ಲಾ ಆಯ್ತು!

ದೊಂಬರಾಟವಾಡಿದ್ದಾಯ್ತು!
ದಾಸರ ದಾಸನಾಗ್ಯಾಯ್ತು!
ಗಿಂಡಿ ಮಾಣಿಯಾದದ್ದಾಯ್ತು!
ದೆವ್ವಗಳೋಡಿಸಿದ್ದಾಯ್ತು! (ಕ)
-ಲ್ಲಾಗಿ ಕುಳಿತ್ಕೊಂಡದ್ದಾಯ್ತು!
ತ್ಮಾನಂದಾನುಭವಾಯ್ತು! (ಆ)
-ಯ್ತು ನಿರಂಜನಾದಿತ್ಯಾಯ್ತು!!!

ಅಳಿಲ ಬಾ

ರೊಟ್ಟಿ ಕಾಗೆ ಬಾ

ಗೆ! (ಘ)

-ಳಿಸಿದವ್ಗಿಲ್ಲ ತನ್ನ ಹೊಟ್ಟೆಗೆ! (ಬ)
-ಲಶಾಲಿಯಾದವನ ಪಾಲಿಗೆ!
ಬಾ

ಯ್ಬಾಯ್ಬಡ್ಕೊಂಡ್ರಿಲ್ಲ ಬಡವಗೆ!
ರೊಕ್ಕ ಸಿಕ್ಕುವುದಿಲ್ಲವನಿಗೆ! (ಹಿ)
-ಟ್ಟಿಲ್ಲದ ದುಡಿಮೆ ಅವನಿಗೆ!
ಕಾಲದ ಮಹಿಮೆ ಈಗ ಹೀಗೆ!
ಗೆದ್ದೆತ್ತಿನ ಬಾಲೆತ್ತುವ ಹಾಗೆ!
ಬಾ

ಬಡಾಯಿ ನಿಲ್ಲುವುದು ಹೇಗೆ?
ಗೆಳೆಯ ನಿರಂಜನಾದಿತ್ಯಾಗೆ!!!

ಸಹಜ ಸ್ಥಿತಿ ಸಿದ್ಧಿಗಾಗಿ ನಾನಾನುಭವ!

ಠಯೋಗದಿಂದಾದಪೂರ್ಣತೆಯನುಭವ!
ಡದೇಹಕ್ಕಾರೋಗ್ಯ ದೊರೆತುದನುಭವ!
ಸ್ಥಿರ ಬುದ್ಧಿ ರಾಜಯೋಗದಿಂದಾದನುಭವ!
ತಿತಿಕ್ಷೆ, ವೈರಾಗ್ಯದಿಂದಾತ್ಮ ತತ್ವಾನುಭವ!
ಸಿಟ್ಟಿನಿಂದಪ್ಪ ದುಷ್ಪರಿಣಾಮದನುಭವ! (ಸಿ)
-ದ್ಧಿ ರಿದ್ಧಿ ಸ್ವಸ್ಥಿತಿಗಡ್ಡಿಯಾದ ಅನುಭವ!
ಗಾನ, ಭಜನೆಯಿಂದ ಭಾವಾವೇಶಾನುಭವ!
ಗಿರಿಧರನ ಗೀತೆಯಿಂದ ಜ್ಞಾನಾನುಭವ!
ನಾಮ ಜಪದಿಂದ ಮನಶ್ಯುದ್ಧಿಯನುಭವ!
ನಾನಾರೆಂಬ ವಿಚಾರದಿಂದಾನಂದಾನುಭವ!
ನುಡಿಯಡಗಿದ ಮೇಲೆ ಬಹಳಾನುಭವ!
ಕ್ತರೊಡನಾಟದಿಂದೇನೇನೋ ಅನುಭವ! (ಶಿ)
-ವ ನಿರಂಜನಾದಿತ್ಯಾನಂದ ಪೂರ್ಣಾನುಭವ!!!

ಬಡವರ ತ್ಯಾಗಕ್ಕಾರಿತ್ತರು ಬೆಲೆ?

ಬ್ಬ ತಲೆ ಮೇಲೆ ಹೊರಿಸಿದ್ದೇ ಬೆಲೆ!
ಸನಾಶನವಿಲ್ಲದೇ ಸತ್ತದ್ಬೆಲೆ!
ಕ್ತದಾನ ಮಾಡ್ಯಶಕ್ತರಾದದ್ಬೆಲೆ! (ಸ)
-ತ್ಯಾಗ್ರಹ ಕಾಲದಲ್ಲೇಕಿದಕ್ಕೆ ಶಾಲೆ?
ಣರಾಜ್ಯದಲ್ಲೀಗ ತಪ್ಪಿತು ನೆಲೆ! (ಹ)
-ಕ್ಕಾರಾರ್ಗೇನೇನೆಂದರಿಯದಿದ್ರೇನ್ಬೆಲೆ? (ಕ)
-ರಿ ತಿಮ್ಮನ ಪಾದಕ್ಕೆ ಕಾಣಿಕೆ ಬೆಲೆ! (ಹೆ)
-ತ್ತವರಿಗಾಯ್ತಿದರಿಂದ ತಲೆ ಶೂಲೆ!
ರುಕ್ಮಿಣೀಶನ ಗೀತೆಗ್ಬಾಯಲ್ಲೇ ಬೆಲೆ!
ಬೆಕ್ಕೆ ತೃಪ್ತಿಗೊಳಿಸಲ್ಕಿದೊಂದು ಕಲೆ! (ಸ)
-ಲೆ ನಿರಂಜನಾದಿತ್ಯ ಧ್ಯಾನಕ್ಕೇನ್ಬೆಲೆ???

ಉರಿಯಿತು ಶರೀರ, ಸುರಿಯಿತು ಬೆವರು!

ರಿಸಿಗಳ್ಯಾರಿಂತು ತಪಸ್ಸು ಮಾಡಿಹರು? (ಆ)
-ಯಿತದಕ್ಕೇನೇನೆಂದರುಹ ಬೇಕೀಗವರು!
ತುಟಿ ಎರಡು ಮಾಡದೇಕಿರುವರವರು?
ರಣಾಗತಿಯನ್ನೊದ್ದಿರುವರೀಗವರು!
ರೀತಿ, ನೀತಿ, ಕಲಿಸದೇ ಬಾಯಿ ಮುಚ್ಚಿಹರು! (ಪ)
-ರಮಾರ್ಥದ ಹಿರಿಮೆ ತೋರದಿರುತಿಹರು!
ಸುಖ, ದುಃಖಕ್ಕಾಗದವರೆಂಥಾ ಹಿರಿಯರು? (ಯಾ)
-ರಿದಕ್ಕೆಲ್ಲಾ ಪರಿಹಾರ ತೋರಿಸುವವರು? (ತಾ)
-ಯಿ, ತಂದೆ ನಮ್ಮೆಲ್ಲರಿಗಾಗಿರುವಾ ದೇವರು!
ತುರೀಯಾತೀತನವನೆಂಬರು ಬಲ್ಲವರು!
ಬೆಟ್ಟದ ಶಿಖರವೇರಿರುತ್ತಿಹನೆಂಬರು!
ರ ಗುರು ದತ್ತಾತ್ರೇಯನವನೆನುವರು!
ರುಜು ಮಾರ್ಗಿ ನಿರಂಜನಾದಿತ್ಯಾತೆನ್ನುವರು!!!

ಹಾಲ್ಬಿಟ್ಟೋಡಿತು ಹೇಲ್ತಿನ್ಲಿಕ್ನಾಯಿ (ಕಿ)

-ಲ್ಬಿಷಿಗೇನು ಮಾಡಿದ್ರೇನು ಸ್ನೇಹಿ? (ಕೊ)
-ಟ್ಟೋರ್ಗಂಟ್ಮುಳುಗಿಸುವನಾ ದ್ರೋಹಿ! (ಚಾ)
-ಡಿ, ತರ್ಲೆಯವ್ನಾಗ ಗುಣಗ್ರಾಹಿ!
ತುಚ್ಛ ಲುಚ್ಛರಿಗವ ಸಹಾಯಿ!
ಹೇಳುವುದಾವಾಗಲೂ ಬಡಾಯಿ! (ಕಾ)
-ಲ್ತಿವಿದಾಗವಿತ್ಕೊಂಬುದಾ ನಾಯಿ! (ತಿ)
-ನ್ಲಿಕ್ಕಿಕ್ಕದಾಗಳುವುದಾ ನಾಯಿ! (ಸಾ)
-ಕ್ನಾಯಿಯಾಯ್ತೀಗೋಡಾಡ್ವ ಹುಚ್ನಾಯಿ! (ತಾ)
-ಯಿ ನಿರಂಜನಾದಿತ್ಯಾ! ನೀ ತ್ರಾಹಿ!!!

ಇಪ್ಪತ್ತರಾನಂದ ಇಪ್ಪತ್ತೈದಕ್ಕಿಲ್ಲ! (ಕ)

-ಪ್ಪ ಕಾಣಿಕೆಗಾಗಿ ದೇವರಲ್ಲವಲ್ಲಾ! (ಕ)
-ತ್ತಲಿನಲ್ಲಾವುದೂ ಕಾಣಿಸುವುದಿಲ್ಲ!
ರಾಗ ದ್ವೇಷಕ್ಕೆಡೆಯಿರಬಾರದಲ್ಲಾ !
ನಂಬಿಕೆಗಸಾಧ್ಯವಾದುದಾವುದಿಲ್ಲ!
ರ್ಶನವಾವುದೋ ಸ್ಥಿತಿಯಲ್ಲಾಯ್ತಲ್ಲಾ!
ಪ್ಪತ್ತೈದರ ಮಹತ್ವವದೇನಲ್ಲ! (ಇ)
-ಪ್ಪತ್ತರಭ್ಯಾಸದ ಪ್ರಭಾವ ಅದೆಲ್ಲಾ! (ಚಿ)
-ತ್ತೈಕಾಗ್ರತೆಯೇ ಕಾರಣ ಅದಕ್ಕೆಲ್ಲಾ!
ಣ್ಸಿದ್ರೂ ಧಣಿಯ ಮರೆಯ್ಬಾರದಲ್ಲಾ! (ಹ)
-ಕ್ಕಿದ್ರೂ ಸೊಕ್ಕಿ ನೆಡೆದ್ರೆ ಫಲವೇನಿಲ್ಲ! (ಪು)
-ಲ್ಲ ನಿರಂಜನಾದಿತ್ಯನನ್ನಾವ ಬಲ್ಲ!!!

ನಾನ್ಬಂದ್ರೂ ಬರ್ಬಾರದ್ಬಾರದುಳಿದೀತೇ? (ನೀ)

-ನ್ಬಂದು ಕರೆದ್ರೀಗ ನನಗದೊಪ್ಪೀತೇ? (ಬಂ)
-ದ್ರೂ, ಬಾರ್ದಿದ್ರೂ, ಕೆಲಸ, ಕಾರ್ಯ ನಿಂತೀತೇ?
ಯಸಿದಾಗೆಲ್ಲಾ ನಾನ್ಬರ್ಲಿಕ್ಕಾದೀತೇ? (ಇ)
-ರ್ಬಾರ್ದು ಸಂಕಲ್ಪವೆನ್ನದಿದ್ದರಾದೀತೇ?
ಹಸ್ಯವಿದನ್ನರಿತು ಬಿಡು ಚಿಂತೆ! (ಮ)
-ದ್ಬಾಲಕನನ್ನು ನಾನ್ಮರೆತರಾದೀತೇ?
ಕ್ಷಣೆಗಾಗಿರ್ಪೆ ನಾನವನ ಜೊತೆ!
ದುಸ್ಸಂಗಿಯಾದರೆ ಮುಗಿದಂತೆ ಕತೆ! (ತಿ)
-ಳಿಸಿರ್ಪಳಿದನ್ನಾತಗೆ ಸೀತಾ ಮಾತೆ!
ದೀಪ! ನಂದಾದೀಪವಾಗ್ಲೆಂಬಳಾ ಪ್ರೀತೆ! (ಸೀ)
-ತೇ! ನೀನೇ ಆ ನಿರಂಜನಾದಿತ್ಯ ಮಾತೆ!!!

ಬರುವ, ಹೋಗುವವರಿಂದ ದೂರವಿರುವ! (ಗು)

-ರು ಹದಿನಾಲ್ಕು ಲೋಕಕ್ಕೆನಿಸಿಕೊಂಡಿರ್ಪವ!
ರ ಗುರು ದತ್ತಾತ್ರೇಯನೆಂಬ ಹೆಸರವ!
ಹೋದೆ, ಬಂದೆ, ಎಂದು ಎಂದೆಂದೂ ಹೇಳದವ!
ಗುಣ, ದೋಷಗಳಲ್ಲಿ ಭೇದ ಕಾಣದಿರ್ಪವ!
ನಿತಾ, ವಸ್ಥು, ವಾಹನಾದಿಗಳಿಲ್ಲದವ!
ಸನ, ಅಶನಕ್ಕಾಗಿ ಬದುಕಿರದವ! (ಯಾ)
-ರಿಂದಲೂ ಏನನ್ನೂ ಯಾಚಿಸದೇ ಇರುವವ!
ಮೆ, ಶಮೆಯ ಸಾಕಾರ ರೂಪವಾಗಿರ್ಪವ!
ದೂಷಣೆ ಯಾರನ್ನೂ, ಎಂದೂ ಮಾಡದಿರುವವ!
ಘುರಾಮನಿಗೂ ಹಿರಿಯನಾಗಿರುವವ!
ವಿಷವನ್ನು ಹಾಲಿನಂತೆ ಜೀರ್ಣಿಸಿಕೊಂಡವ! (ಕು)
-ರುವಂಶ ನಾಶಕ್ಕೆ ಕಾರಣಭೂತನಾದವ! (ಅ)
-ವನೇ ನಿರಂಜನಾದಿತ್ಯನಾಗಿ ಹೊಳೆವವ!!!

ಜೀವನದ್ದೋಡಾಟದ ಜೀವನ! (ದೇ)

-ವನದ್ದು ಕೂರಾಟದ ಜೀವನ!
ರನದ್ದು ನಶ್ವರ ಜೀವನ! (ಎ)
-ದ್ದೋ, ಬಿದ್ದೋ ನರಳುವ ಜೀವನ! (ಮೃ)
-ಡಾಣೀಶ್ವರರ್ದಾನಂದ ಜೀವನ! (ಗಂ)
-ಟಲ ಗಾಳ ಜೀವನ ಜೀವನ!
ತ್ತನದ್ದಾತ್ಮಾನಂದ ಜೀವನ!
ಜೀವನಿಗೆ ಸಂಸಾರ ಜೀವನ! (ದೇ)
-ವನಿಗದು ನಿಸ್ಸಾರ ಜೀವನ! (ಲಿ)
-ನ ನಿರಂಜನಾದಿತ್ಯ ಜೀವನ!!!

ಏಕಿದೆಲ್ಲಾ ಬರೆಸುವೆಯಪ್ಪಾ?

ಕಿರುಕುಳ ತಪ್ಪಿಸಲಿಕ್ಕಪ್ಪಾ!
ದೆವ್ವಗಳನ್ನೋಡಿಸಲಿಕ್ಕಪ್ಪಾ! (ಅ)
-ಲ್ಲಾಡದೇ ನೀನಿರುವುದಕ್ಕಪ್ಪಾ!
ಯಲಾಡಂಬರ ಹೋಗ್ಲಿಕ್ಕಪ್ಪಾ! (ಸೆ)
-ರೆಯಿಂದ ಹೊರಗೆ ಬರ್ಲಿಕ್ಕಪ್ಪಾ!
ಸುದರ್ಶನಾನಂದನಾಗ್ಲಿಕ್ಕಪ್ಪಾ! (ಧ)
-ವೆ ಸದಾಶಿವನಿಗಾಗ್ಲಿಕ್ಕಪ್ಪಾ!
ಜ್ಞದುದ್ದೇಶ ಸಾಧಿಸ್ಲಿಕಪ್ಪಾ! (ಅ)
-ಪ್ಪಾ ನಿರಂಜನಾದಿತ್ಯನಾಗಪ್ಪಾ!!!

ಲೆಃಖಕ್ಕೆ ಸಿಕ್ಕದ ಬಾಬುಗಳು! (ದುಃ)

-ಖಕ್ಕೆಲ್ಲಾ ಕಾರಣ ಅವುಗಳು! (ಕು)
-ಕ್ಕೆ ಹಣ್ಣು ಮಾರುವ ಕಾಕಗಳು!
ಸಿರಿವಂತ ರಾತ್ರಿಯಂಗ್ಡಿಗಳು! (ಮು)
-ಕ್ಕಣ್ಣನೊಡಲಿನೊಡವೆಗಳು!
ರಿದ್ರರ ಮುರ್ಕು ಮನೆಗಳು!
ಬಾಯಿ ಬಡಕ ದಲ್ಲಾಳಿಗಳು!
ಬುರ್ಖೆಯೊಳಗಿನ ಮುಖಗಳು!
ಡ್ಡ,

ಈಸೆಗಳ ಗೂಂಡಾಗಳು! (ಹೇ)
-ಳು, ನಿರಂಜನಾದಿತ್ಯಗೀ ಗೋಳು!!!

ಅನ್ಯೋನ್ಯತೆಯೇ ಶಾಂತಿಯ ಮೂಲ ಮಂತ್ರ! (ಕ)

-ನ್ಯೊಪದೇಶದಲ್ಲಿದೇ ಮೊದಲ ಮಂತ್ರ! (ಧ)
-ನ್ಯನಾದನನ್ಯೋನ್ಯತೆಯಿಂದ ಸೌಮಿತ್ರ!
ತೆಗಳಿಕೆ ಹೊಗಳಿಕೆ ತೂತು ಪಾತ್ರೆ! (ತಾ)
-ಯೇ ಈ ಶಾಂತಿ ನೀತಿಗೆ ಸ್ತೋತ್ರಾರ್ಹ ಪಾತ್ರ!
ಶಾಂಭವೀ, ಗಣೇಶಾನ್ಯೋನ್ಯತೆ ಪವಿತ್ರ!
ತಿಳಿಯಬೇಕೀ ತತ್ವ ಮಾನವ ಪುತ್ರ!
ಮ, ಸಾವಿತ್ರಿಯರ್ತೆರೆದಿಹರ್ನೇತ್ರ! (ತ್ರಿ)
-ಮೂರ್ತಿ ದತ್ತ ತೋರಿದನಿದ ಸರ್ವತ್ರ!
ಕ್ಷ್ಮೀ ನರಸಿಂಹರಲ್ಲಿಟ್ಟ್ರೂ ಸ್ವತಂತ್ರ!
ಮಂತ್ರ, ಯಂತ್ರ, ತಂತ್ರಕ್ಕಿದೇ ಮುಖ್ಯ ಸೂತ್ರ! (ಪಾ)
-ತ್ರನಿದಕ್ಕೆ ನಿರಂಜನಾದಿತ್ಯ ಪುತ್ರ!!!

ಇದ್ದು, ಪ್ರಯೋಜನವಿಲ್ಲ, ಮುದ್ದು ಮಾಳ್ಪವರಿಲ್ಲ! (ಬಿ)

ದ್ದು, ಒದ್ದಾಡದೇ, ಸದ್ದಿಲ್ಲದೇ, ಸಾಯಬೇಕೀ ಮಲ್ಲ!
ಪ್ರತಾಪವಿವನದನ್ನು ಬಣ್ಣಿಸುವವರಿಲ್ಲ!
ಯೋಗಿರಾಜ ಶಿವನಿಗೆ ಅದೆಲ್ಲಾ ಬೇಕಾಗಿಲ್ಲ!
ಗತ್ತಿಗವನನ್ನು ತಿಳಿವ ಯೋಗ್ಯತೆಯಿಲ್ಲ!
ರಳುತಿಹರಿದರಿಂದ ಜನಕೋಟಿಯೆಲ್ಲಾ!
ವಿಚಿತ್ರವೀ ಪ್ರಪಂಚದ ಕಾರ್ಯಕ್ರಮಗಳೆಲ್ಲಾ! (ತ)
-ಲ್ಲಣಗೊಂಡಮಾತ್ರಕ್ಕೆ ಪರಿಹಾರವಾಗ್ವುದಿಲ್ಲ!
ಮುಕುತಿ ತತ್ವಾರ್ಥವರಿತು ಸಾಧಿಸಬೇಕೆಲ್ಲಾ! (ಉ)
-ದ್ದು, ಕಡ್ಲೇಬೆಳೆಯಾಂಬೋಡೆ ತಿಂದಂತೆ ಇದೇನಲ್ಲ!
ಮಾಡಿದ್ರೆ ಸದಾ ತತ್ವಾರ್ಥ ಚಿಂತನೆ ಕಷ್ಟವಿಲ್ಲ! (ಬ)
-ಳ್ಪ ಹಿಡಿಯದಿದ್ರೆ ಬರೆಯಲಿಕ್ಕಾಗುವುದಿಲ್ಲ! (ಅ)
-ವರವರ ಶ್ರದ್ಧೆಯಂತೆ ಪರಿಣಾಮಗಳೆಲ್ಲಾ! (ಹ)
-ರಿ, ಹರ, ಬ್ರಹ್ಮಾದಿಗಳಲ್ಲೇಕತ್ವ ಕಾಣಿರೆಲ್ಲಾ! (ಪು)
-ಲ್ಲ ನಿರಂಜನಾದಿತ್ಯ ನಿಷ್ಟದಂತಿರುವುದೆಲ್ಲಾ!!!

ಆಸೆಯಾದಾಗ ದೋಸೆಯಿಲ್ಲ! (ದೋ)

-ಸೆ ಇರುವಾಗ ಆಸೆ ಇಲ್ಲ!
ಯಾಕ್ತಾಗಿದೆ ಹೀಗೆ ಗೊತ್ತಿಲ್ಲ!
ದಾನಿಯಲ್ಲಿ ಲೋಭವೇನಿಲ್ಲ!
ತಿಗೇಡು ದೀನನಿಗೆಲ್ಲಾ!
ದೋಷವಿವನೆಣಿಸ್ಬಾರ್ದಲ್ಲಾ!
ಸೆರೆ ಸಂಸಾರದ್ದು ತಪ್ಲಿಲ್ಲ!
ದಕ್ಕಾಸೆ ಕಾರಣವೆಲ್ಲಾ! (ಬ)
-ಲ್ಲ ನಿರಂಜನಾದಿತ್ಯನೆಲ್ಲ!!!

ನನಗೆ ನೀನನುವಾಗಬೇಕು! (ನಿ)

-ನಗೆ ತಕ್ಕ ಮಗ ನಾನಾಗ್ಬೇಕು! (ಹೀ)
-ಗೆ ಅಲಕ್ಷಿಸಿದ್ರವ್ನೇನಾಗ್ಬೇಕು?
ನೀತಿ, ರೀತಿ ಬಿಟ್ಕೆಟ್ಟು ಹೋಗ್ಬೇಕು!
ರಹರಿಗಿದರಿವಾಗ್ಬೇಕು!
ನುಡಿ, ನಡೆಯನ್ನವ್ನೇ ತಿದ್ಬೇಕು!
ವಾದಕ್ಕಾಸ್ಪದವಿಲ್ಲದಿರ್ಬೇಕು!
ತಿ, ಸ್ಥಿತಿ, ವ್ಯವಸ್ಥೆಯಾಗ್ಬೇಕು!
ಬೇಡಾದ್ರಿದು ಪ್ರಳಯವಾಗ್ಬೇಕು!!!

ಕದ್ದು ತಿನ್ನುವವನನ್ನೇಕೆ ಮುದ್ದು ಮಾಡ್ಬೇಕು? (ಇ)

-ದ್ದುದನ್ನೇ ತಿಂದು ಆತ ನೆಮ್ಮದಿಯಿಂದಿರ್ಬೇಕು!
ತಿನ್ನುವುದಕ್ಕಾಗೀ ಜನ್ಮವಲ್ಲೆಂದರಿಯ್ಬೇಕು! (ತ)
-ನ್ನುಳಿವಿಗಾಗಿ ಅನ್ಯರನ್ನಳಿಸದಿರ್ಬೇಕು! (ಭ)
-ವಸಾಗರದಿಂದ ಪಾರಾಗಿ ಊರು ಸೇರ್ಬೇಕು!
ರ ಗುರುವಿನ ಸಾಯುಜ್ಯಾನಂದ ಪಡ್ಬೇಕು!
ರ ಸುರೋರಗರಿಗೆ ಮಾದರಿಯಾಗ್ಬೇಕು! (ಇ)
-ನ್ನೇನನ್ನೂ, ಯಾರನ್ನೂ, ಎಂದೆಂದೂ ಕೇಳದಿರ್ಬೇಕು!
ಕೆಲಸವಿಷ್ಟಾದಮೇಲೆ ಹೊರಡುತ್ತಿರ್ಬೇಕು!
ಮುನ್ದಿನ ವ್ಯವಸ್ಥೆಯನ್ನಪ್ಪನಿಗೇ ಬಿಡ್ಬೇಕು! (ಸ)
-ದ್ದು ಮಾಡ್ದೇ ಅವನೊಡಗೂಡಿ ಇರುತ್ತಿರ್ಬೇಕು!
ಮಾರಿಯ ಬಲೆಯಿಂದಿಂತು ತಪ್ಪಿದಂತಾಗ್ಬೇಕು! (ಮಾ)
-ಡ್ಬೇಕು! ಹೀಗಾದ್ಮೇಲೇನೇ ಮುದ್ದು ಮಾಡ್ಸಿಕೊಳ್ಬೇಕು!
ಕುಲ ಶ್ರೀ ನಿರಂಜನಾದಿತ್ಯನದ್ದಿಂತಾಗ್ಬೇಕು!!!

ದಿನ, ವಾರಗಳುರುಳುತಿವೆ ಮಿಂಚಿನಂತೆ!

ರರಿದನರಿಯದೇ ಮಾಳ್ಪರ್ಮಾಯಾ ಸಂತೆ!
ವಾರಿಜಮಿತ್ರನ ಸ್ಮರಣೆಯೇ ಇಲ್ಲದಂತೆ!
ಣಭೇರಿ ಹೊಡೆದಾಗೆದ್ದರೇನಾಗ್ವುದಂತೆ?
ಣರಾಜ್ಯ ಹೆಣರಾಜ್ಯವಾಗದಿರದಂತೆ! (ಕಾ)
-ಳು, ಕಡ್ಡಿ, ದವಸ, ಧಾನ್ಯ ಬೂದಿಯಾಗ್ವುದಂತೆ!
ರುಧಿರ, ಮಾಂಸದ ಹೊಳೆ ಹರಿಯುವುದಂತೆ! (ಕೇ)
-ಳುವವರಾರನ್ಯಾರೂ ಇಲ್ಲದಾಗುವರಂತೆ!
ತಿರೆಯ ಪಾಡು ಹೀಗಾದ್ಮೇಲೇನು ಗತಿಯಂತೆ? (ಧ)
-ವೆ ವಿಧವೆಯಾಗಿ ಮುಂಡೆಯಾಗ್ವ ಸ್ಥಿತಿಯಂತೆ!
ಮಿಂದ್ರೆ ಪಶ್ಚಾತ್ತಾಪಾಂಬುಧಿಯಲ್ಲಿ ಮೋಕ್ಷವಂತೆ!
ಚಿರಕಾಲವಿದು ನಿಜ ಸುಖವೀವುದಂತೆ!
ನಂಬಿಗೆಯಿಲ್ಲದವಗಿದೆಲ್ಲಾ ಮೆಂತೇ ಕಂತೆ! (ಸಂ)
-ತೆಗೂ ನಿರಂಜನಾದಿತ್ಯನಡ್ಡಿಯಿಲ್ಲವಂತೆ!!!

ಯಾತ್ರಾರ್ಥಿಗಳಿಗನಾಯಾಸ ದರ್ಶನ!

ತ್ರಾಣಗುಂದಿದ ಭಕ್ತಳಿಗೆ ದರ್ಶನ! (ಪ್ರಾ)
-ರ್ಥಿಸಿದ ರೀತಿಗೆ ಸಾರ್ಥಕಾ ದರ್ಶನ! (ಜ)
-ಗತ್ತು ಬಯಸುವುದಿಂದು ಪ್ರದರ್ಶನ! (ಬಾ)
-ಳಿಗಿದರಿಂದ ಆಗದು ಪ್ರಯೋಜನ!
ತಿಗೆಟ್ಟು, ಮತಿಗೆಟ್ಟಿರೆಲ್ಲಾ ಜನ!
ನಾನಾ ಉಪಾಧಿಗೊಳಗಾಯ್ತವ್ರ ಮನ!
ಯಾರೂ ಭಜಿಸದಿಹರು ಪ್ರತಿ ದಿನ!
ತ್ಯ ಬಿಟ್ಟು ಸುತ್ತುವರು ನಿಶಿದಿನ!
ರ್ಪ, ದಂಭಕ್ಕಾಗುತ್ತಲಿದೆ ಸನ್ಮಾನ! (ಸ್ಪ)
-ರ್ಶ ಮಾಡ್ಲಿಕ್ಕೆ ಸದ್ಗುರು ಪಾದವಮಾನ! (ನೆ)
-ನಸಿರಿ, ನಿರಂಜನಾದಿತ್ಯಾನಂದ!!!

ಅಂತರಂಗವನ್ನಾಳುವವ ಶ್ರೀರಂಗ!

ನ್ನಿಂದಾಗುತಿದೆಲ್ಲಾ ಎಂಬುದೀ ಮಂಗ!
ರಂಗನೂ ಮಾಯೆಯೊಳಗೆಂಬುದೀ ಮಂಗ!
ರ್ವ ಮುರಿವುದಿದರದ್ಯಿವಲಿಂಗ! (ಭು)
-ವನೇಶ್ವರಿಯೆದ್ರೂ ದಿಗಂಬರಾ ಲಿಂಗ! (ನ)
-ನ್ನಾಧೀನ ನೀನೆನ್ನುದಾ ಆತ್ಮಲಿಂಗ! (ಗೋ)
-ಳು, ನಿನ್ನದದಕ್ಕಂಟದೆಂಬುದಾ ಲಿಂಗ! (ಭು)
-ವನಾದ್ಯೆಲ್ಲಾ ಲೋಕಗಳಿಗಾಧಾರಾ ಲಿಂಗ!
ರ್ಣಿಸಲಸದಳ ಆ ಮಹಾ ಲಿಂಗ!
ಶ್ರೀಕರ, ಶುಭಕರ ಆ ತೇಜೋ ಲಿಂಗ!
ರಂಗ, ಶ್ರೀರಂಗ, ಪಾಂಡುರಂಗ ಆ ಲಿಂಗ!
ಭಸ್ತಿ ನಿರಂಜನಾದಿತ್ಯಾ ಶ್ರೀರಂಗ!

ಲಿಂಗದಂತೆ ಅಂಗ, ಅಂಗದಂತೆ ಲಿಂಗ!

ತಿ, ಸ್ಥಿತಿ ಪರಿಶುದ್ಧಕ್ಕೆ ಸತ್ಸಂಗ!
ದಂಭ, ದರ್ಪದಿಂದ ಸ್ಥಾನ, ಮಾನ, ಭಂಗ!
ತೆರೆದು ವಿಕಾಸವಾಗ್ಬೇಕಂತರಂಗ!
ಅಂಗ ಸಾಧನೆಯಿಂದ ಬಲಭೀಮಾಂಗ!
ಣಿಕಾಲೋಲ ಕ್ರೂರ ಚೋರ ಅನಂಗ!
ಅಂತರಂಗ ಬಹಿರಂಗ, ಶುದ್ಧ ರಂಗ!
ರ್ವ ರಹಿತ, ಸರ್ವಹಿತಾತ್ಮ ಲಿಂಗ!
ದಂಗೆಕೋರ, ದರೋಡೆಗಾರ ಫಟೀಂಗ!
ತೆಗಳ, ಹೊಗಳ, ಬೊಗಳ, ನಿಸ್ಸಂಗ!
ಲಿಂಗಾತ್ಮ ಲಿಂಗ, ತೇಜೋ ಲಿಂಗ ಸಾರಂಗ!
ತಿ ನಿರಂಜನಾದಿತ್ಯಾನಂದ ಲಿಂಗ!!!

ಅಚ್ಚುಕಟ್ಟಿದ್ದಲ್ಲಿ ಬೆಚ್ಚಿ ಬೀಳುವುದಿಲ್ಲ! (ಬಿ)

-ಚ್ಚು ಮನಸ್ಸಿನಿಂದ ಒಡನಾಡಬೇಕೆಲ್ಲಾ!
ಪಟ, ವಂಚನೆಗಳ ಬಿಡಬೇಕೆಲ್ಲಾ! (ದಿ)
-ಟ್ಟಿ ಗುರು ಪರಮಾತ್ಮನಲ್ಲಿಡಬೇಕೆಲ್ಲಾ! (ಬಿ)
-ದ್ದರೂ, ಎದ್ದರೂ ಸ್ಮರಿಸಬೇಕವ್ನನ್ನೆಲ್ಲಾ! (ಹ)
-ಲ್ಲಿರುವಾಗಲೇ ಕಡಲೆ ತಿನ್ನಬೇಕೆಲ್ಲಾ!
ಬೆಡಗಿನ ಹಲ್ಲಿಂದಗಿಯಲಾಗ್ವುದಿಲ್ಲ! (ನೆ)
-ಚ್ಚಿದನ್ನು ತಿಂದರೆ ಜೀರ್ಣವಾಗುವುದಿಲ್ಲ!
ಬೀಳ್ಬಾರದು ಬಲಿ ಕೃತಕಗಳಿಗೆಲ್ಲಾ! (ಗೋ)
-ಳು ಸಮಾಜದಲ್ಲಿಂದಿದರಿಂದಲೇ ಎಲ್ಲಾ! (ಸಾ)
-ವು, ನೋವು ಹೆಚ್ಚಾಯಿತಿದರಿಂದಲೇ ಎಲ್ಲಾ!
ದಿವ್ಯ, ಶುದ್ಧ ಜೀವನಕಣಿಯಾಗಿರೆಲ್ಲಾ! (ಪು)
-ಲ್ಲ ನಿರಂಜನಾದಿತ್ಯ ಧ್ಯಾನ ಮಾಡಿರೆಲ್ಲಾ!!!

ಕೂಗಿದ್ದೊಬ್ಬ, ಬಂದದ್ದೊಬ್ಬ, ಆಯ್ತು ಹಬ್ಬ!

ಗಿರಿಧರನ ಲೀಲೆ ವಿಚಿತ್ರಬ್ಬಬಾ! (ಬಿ)
ದ್ದೊದ್ದು, ಗುದ್ದಾಡಿ, ಸತ್ತ್ರವನವ್ರಬ್ಬಬ್ಬಾ! (ಕ)
-ಬ್ಬಗಾರರಿಗಿದೊಂದು ವಿಶೇಷ ಹಬ್ಬ!
ಬಂದದ್ದೇಕೆಂದರಿಯದೇ ಆಯ್ತು ಗಬ್ಬ!
ರಿದ್ರ, ಶ್ರೀಮಂತರದ್ದೇನೆನ್ಲಿ ಕೊಬ್ಬ! (ಕ)
-ದ್ದೊಡಲ ಬೆಳೆಸಿ ಹಾಕ್ವರನ್ಯ ಜುಬ್ಬ! (ಹ)
-ಬ್ಬ, ಹರಿದಿನವೆಂದ್ಹಾರಿಸುವರ್ಹುಬ್ಬ!
ರು ಹರಿಯುವರೀ ಆಜ್ಞಾನ ಮಬ್ಬ? (ಆ)
-ಯ್ತು, ಹೋಯ್ತು, ಆಯ್ತೆಂದಾಗಿಹೋಯ್ತೆಲ್ಲಾ ಹಬ್ಬ!
ರಿ ದರ್ಶನ ಪಡೆದಿಲ್ಲ ಯಾರೊಬ್ಬ! (ಹ)
-ಬ್ಬ ನಿರಂಜನಾದಿತ್ಯಾನಂದಂತ್ಯ ಹಬ್ಬ!!!

ಗುಂಡಮ್ಮಗಳಿಗೆ ಕಲ್ಲುಗುಂಡೊಂದು ದೇವರು!

ಕ್ಕಾ, ಡಮರು, ವಾದ್ಯ ಗದ್ದಲಕ್ಕಾಶಿಪರು! (ತ)
-ಮ್ಮತಮ್ಮ ಕಪ್ಪ, ಕಾಣಿಕೆಗಳರ್ಪಿಸುವರು!
ತಿಗೆಟ್ಟೆವೆಂದಳುತ್ತಾ ಕಣ್ಣೀರಿಡುವರು! (ಬಾ)
-ಳಿಗೆ ಬೆಳಕೀಗ ತೋರೆಂದು ಪ್ರಾರ್ಥಿಸುವರು!
ಗೆಳೆಯನಾಗ್ಯೆಮಗೆ ನೆರವಾಗೆನ್ನುವರು!
ನಿಕರ ನಿನಗೇಕೆ ಬಾರದೆನ್ನುವರು! (ಗು)
-ಲ್ಲು ಮಾಡುವವರ ಗಲ್ಲಿಗೇರಿಸೆನ್ನುವರು!
ಗುಂಡಮ್ಮಗಳಾ ದೇವರೆಂದು ಮಾತಾಡುವರು?
ಡೊಂಕು ಬಾಲದ ನಾಯಕರವರಾಗಿಹರು!
ದುರುಗುಟ್ಟಿ ಎಲ್ಲರನ್ನೂ ನೋಡುತ್ತಿರುವರು!
ದೇಹಾಭಿಮಾನಕ್ಕೊಳಗಾಗಿ ಕುಣಿಯುವರು!
ರದರಾಜ ತಮ್ಮಲ್ಲಿಹನೆಂದರಿಯರು! (ಗು)
-ರು ನಿರಂಜನಾದಿತ್ಯಾತ್ಮನೇ ನಿಜ ದೇವರು!!!

ಮಂತ್ರ ಶಕ್ತಿಯಾನುಭವವಾಗಬೇಕು! (ಚಿ)

-ತ್ರ ಆ ನಾಮಿಯನ್ನೇ ಹೋಲುತ್ತಿರಬೇಕು!
ಕ್ತಿ

ಈರಿದ್ದಕ್ಕಾಗಿ ದುಡಿಯಬೇಕು! (ಯು)
ಕ್ತಿಯ ವಿದ್ವತ್ಪ್ರದರ್ಶನ ಬಿಡಬೇಕು!
ಯಾಗಗಳು ಫಲಪ್ರದವಾಗಬೇಕು! (ಅ)
-ನುಭವಕ್ಕಿಲ್ಲದಿದ್ರದೇಕಿರಬೇಕು!
ಜನೆಗಜಾದಿಗಳೊಲಿಯಬೇಕು! (ಅ)
-ವರಿವರ ಮಾತು ನಮಗಿನ್ನು ಸಾಕು!
ವಾಚಾಳಿಗಳ ಪ್ರವಚನವೂ ಸಾಕು! (ಭ)
-ಗವಂತ ತಾನೇ ದಾರಿ ತೋರಿಸಬೇಕು!
ಬೇಕಿಲ್ಲದಾರೋಪ ಮಾಡದಿರಬೇಕು!
ಕುಲ ನಿರಂಜನಾದಿತ್ಯನದ್ದಾಗ್ಬೇಕು!!!

ಹಿಂದಿನದ್ದರಿಯೆ, ಮುಂದಿನದ್ದೊರೆಯೆ! (ಇಂ)

-ದಿನದ್ದಕ್ಕಿಂದೇ ಕೂಲಿಕೊಡು ಹರಿಯೇ!
ನಗನ್ಯ ಗತಿಯಿಲ್ಲ ಶ್ರೀ ಹರಿಯೇ! (ಎ)
-ದ್ದರೆ, ಕೂತ್ರೆ ನಿನ್ನ ಜಪ ಶ್ರೀ ಹರಿಯೇ!
ರಿದ್ಧಿ, ಸಿದ್ಧಿಯಾಸೆ ನನಗಿಲ್ಲ ಹರಿಯೇ! (ದ)
-ಯೆ ನಿನ್ನದಿದ್ದರೆ ಸಾಕು ಶ್ರೀ ಹರಿಯೇ!
ಮುಂಡಾಸು ಮಂಡೆಗೆ ರಕ್ಷಣೆ ಹರಿಯೇ!
ದಿವ್ಯ ದರ್ಶನವೀಗಾಗ್ಬೇಕು ಹರಿಯೇ!
ನ್ನಳಿಲು ಸೇವೆ ಕಾಣಿಕೆ ಹರಿಯೇ! (ಇ)
-ದ್ದೊಡಲು ಚರಣ ಸೇವೆಗೆ ಹರಿಯೇ! (ಹ)
-ರೆಯದ ದಿನದಂತೀಗಲ್ಲ ಹರಿಯೇ! (ಪ್ರಿ)
-ಯೆ ನಿರಂಜನಾದಿತ್ಯಗಾನು ಹರಿಯೇ!!!

ನಿರಂಜನಾಶೀರ್ವಾದ ನಿಮ್ಮೆಲ್ಲರಿಗೆ!

ರಂಗನಾಥನೆಲ್ಲಾ ಪ್ರಿಯ ಮಕ್ಕಳಿಗೆ!
ನನ, ಮರಣ, ಸಾಕೆಂಬವರಿಗೆ!
ನಾನಾ ತರದ ವ್ಯಾಧಿ ಪೀಡಿತರಿಗೆ!
ಶೀಘ್ರ ಗುರಿ ಸೇರಬೇಕೆಂಬವರಿಗೆ! (ಸ)
-ರ್ವಾತ್ಮ ಭಾವ ಬರಲೆಂಬೆನವರಿಗೆ!
ತ್ತ ಕೃಪೆಯಾಗಲೆಂಬೆನವರಿಗೆ!
ನಿಶ್ಚಲ ಭಕ್ತಿಯಿರ್ಲೆಂಬೆನವರಿಗೆ! (ಹಿ)
-ಮ್ಮೆಟ್ಬಾರ್ದಭ್ಯಾಸದಲ್ಲೆಂಬೆನವರಿಗೆ! (ಅ)
-ಲ್ಲ ಸಲ್ಲದಾಟ ಸಾಕೆಂಬೆನವರಿಗೆ! (ಅ)
-ರಿಗಳಾರ ಜೈಸಿರೆಂಬೆನವರಿಗೆ!
ಗೆಳೆಯ ನಿರಂಜನಾದಿತ್ಯವರಿಗೆ!!!

ಗಂಡ ಚಂಡ, ಹೆಂಡತಿ ಪ್ರಚಂಡ! (ಒ)

-ಡನಾಡಿದರಿಬ್ಬರೂ ಅಖಂಡ!
ಚಂದದಲ್ಲಿ ಅನುಪಮಾ ಗಂಡ! (ಹೆಂ)
-ಡತಿಯ ಕೊರಳ ಮಾಲೆ ರುಂಡ!
ಹೆಂಡ್ತಿಗಾಯ್ತ್ರುಂಡ, ಗಂಡಗಾಯ್ತ್ಮುಂಡ! (ಗಂ)
-ಡನ ನೊಸಲಿನಂಬಕ ಕೆಂಡ! (ಸ)
-ತಿಯಾಕ್ರೋಶಕ್ಬಲಿ ಚಂಡ, ಮುಂಡ!
ಪ್ರಳಯದಲ್ಲೀ ಗಂಡ ಮಾರ್ತಾಂಡ!
ಚಂಡಿಕೆಂಬಾ ಹೆಂಡತಿ ಪ್ರಚಂಡ! (ಮೃ)
-ಡ ನಿರಂಜನಾದಿತ್ಯ ಅಖಂಡ!!!

ಭಿಕ್ಷೆ ಹಾಕಿದ ಕೈಗಾಗ್ಬಾರದು ಶಿಕ್ಷೆ! (ರ)

-ಕ್ಷೆ ಅದಕ್ಕೀಗಾಗುತ್ತಿರುವ ಪರೀಕ್ಷೆ!
ಹಾಲಾದರೂ ವಿಷ ಬೆರೆತರುಪೇಕ್ಷೆ!
ಕಿತ್ತಾಟವೇ ಪರಸ್ಪರವಾದ್ರೆ ಶಿಕ್ಷೆ!
ಡ ಸೇರ್ಲಿಕ್ಕಿರಬೇಕು ಅಪೇಕ್ಷೆ!
ಕೈ, ಬಾ

, ಕಚ್ಚೆ ಶುದ್ಧವಿದ್ದರೆಲ್ಲಾ ರಕ್ಷೆ!
ಗಾರ್ಧಭಕ್ಕೆ ದೊಣ್ಣೆ ಏಟಿನ ಶಿಕ್ಷೆ! (ಆ)
-ಗ್ಬಾರದ್ದಾಗ್ಬಾರದೆಂದೇ ಸದಾ ನಿರೀಕ್ಷೆ!
ವಿಸುತನದ್ದಾಗಿತುತ್ತಮ ನಕ್ಷೆ!
ದುರ್ಬುದ್ಧಿಗಳಿಗೆಲ್ಲಾ ಅದು ಉಪೇಕ್ಷೆ!
ಶಿವಾನಂದನಿತ್ತನೆಲ್ಲರಿಗೂ ದೀಕ್ಷೆ! (ದ)
-ಕ್ಷೆ ನಿರಂಜನಾದಿತ್ಯ ಮಾತೆ ಫಾಲಾಕ್ಷೆ!!!

ಬಾಯ್ನೀರು ಸುರಿಸಿದ್ರೆ ಹಾಲ್ಬ ಸಿಕ್ಕೀತೆ? (ತಾ)

-ಯ್ೀನನುಗ್ರಹಿಸಿದರೆಲ್ಲಾ ಸಿಕ್ಕೀತು! (ಕ)
-ರುಣೆ ನಿನ್ನದಿಲ್ಲದಿದ್ದರೇನಾದೀತು?
ಸುಡುಗಾಡನ್ನೀಗ್ಲೇ ಸೇರಬೇಕಾದೀತು! (ಉ)
-ರಿದು ಬರೀ ಬೂದಿಯಾಗಬೇಕಾದೀತು!
ಸಿಕ್ಕಿದೆಡೆಗೆ ಹಾರಿಹೊಗ್ಬೇಕಾದೀತು! (ಭ)
-ದ್ರೆ ಸಾವಿತ್ರಿಯೊಲಿದ್ರಾನಂದವಾದೀತು!
ಹಾಹಾಕಾರವೆಲ್ಲಾ ಅಡಗಿಹೋದೀತು! (ಹಾ)
-ಲ್ಬ ಇದ್ದಲ್ಲಿಗೇ ಬಂದು ಬಾಯ್ಗೆ ಬಿದ್ದೀತು!
ಸಿಹಿ ಸವಿದು ಬ್ರಹ್ಮಾನಂದವಾದೀತು! (ಉ)
-ಕ್ಕಿತದಂಕ್ಕಿಳಿದ ಕೆನೆ ಹಾಲಾದೀತು! (ಮಾ)
-ತೇ! ನಿರಂಜನಾದಿತ್ಯ ನೀನೆಂದ್ರಾದೀತು!!!

ನೆನೆನೆನೆದು ಕಾಮಿನಿಯ ಕಾಮನಾದ!

ನೆನೆನೆನೆದು ರಾಮನನು ರಾಮನಾದ!
ನೆಲ ಮಗಳ ಕದ್ದೊಯ್ದವ ಕಾಮನಾದ!
ನೆರೆ ರಾಮಧ್ಯಾನ ಗೈದವ ರಾಮನಾದ!
ದುರಾಗ್ರಹದಾ ದುರ್ಯೊ

ಧನ ಕಾಮನಾದ!
ಕಾಳಿಂಗನ ತುಳಿದ ಬಾಲಾ ರಾಮನಾದ!
ಮಿತಿ

ಈರಿದಾಸೆಯಿಂದ ನರ ಹಾಳಾದ!
ನಿತ್ಯಾನಿತ್ಯವರಿತವ ಉದ್ಧಾರವಾದ!
ದುಪನ ಕೆಣಕಿ ಕಂಸ ಮೃತನಾದ!
ಕಾರ್ಯ, ಕಾರಣಜ್ಞ ವಿದುರ ಉದ್ಧಾರಾದ!
ಹೇಶ್ವರ ಮುನಿದು ಕಾಮ ಬೂದಿಯಾದ!
ನಾಮ ಜಪಿಸಿ ಮಾರ್ಕಂಡೇಯ ಉದ್ಧಾರಾದ!
ತ್ತ ಶ್ರೀ ನಿರಂಜನಾದಿತ್ಯಾನಂದನಾದ!!!

ದತ್ತ ಮಂದಿರ ನಿರ್ಮಾಣವಾಗಬೇಕು! (ಉ)

-ತ್ತಮ ದೇವ ಶಿಲ್ಪ ಅದನ್ನು ಕಟ್ಬೇಕು!
ಮಂದಿರ ಚಿರಕಾಲ ಉಳಿಯಬೇಕು!
ದಿನ, ರಾತ್ರಿ, ಭಜನೆ ನಡೆಯಬೇಕು!
ಮೇಶ, ಉಮೇಶ, ವಾಣೀಶರ್ಕಾಯ್ಬೇಕು!
ನಿರಂಜನಗದು ಸ್ಮಾರಕವಾಗ್ಬೇಕು! (ಧ)
-ರ್ಮಾಧರ್ಮ ಅಲ್ಲಿ ನಿರ್ಣಯವಾಗಬೇಕು! (ಹ)
-ಣ ಅಲ್ಲಿ ಸದಾ ಸುರಿಯುತ್ತಿರಬೇಕು!
ವಾರಿಜಮಿತ್ರನೇ ಪೂಜಾರಿಯಾಗ್ಬೇಕು! (ಜ)
-ಗತ್ಕಲ್ಯಾಣಕ್ಕಾಗಿ ಹೀಗಾಗಲೇಬೇಕು!
ಬೇಜವಾಬ್ದಾರಿಯವ್ರಾಟ ನಿಲ್ಲಬೇಕು! (ಮ)
-ಕುಟ ನಿರಂಜನಾದಿತ್ಯ ಧರಿಸ್ಬೇಕು!!!

ಸುಂದರಮ್ಮನನುಭವ ಸ್ಫೂರ್ತಿದಾಯಕ!

ತ್ತನ ಸೇವೆ ಮಾಡಿದ್ದಕ್ಕಿದು ಸಾರ್ಥಕ! (ಚಿ)
-ರ ಕಾಲವಿರ್ಬೇಕವಳದ್ದೊಂದು ಸ್ಮಾರಕ! (ನ)
-ಮ್ಮ ಸ್ತ್ರೀ ಸಮಾಜಕ್ಕವಳು ಮಾರ್ಗದರ್ಶಕ!
ಗುನಗುತೆಲ್ಲರ ಸೇವೆ ಮಾಳ್ಪ ಮುಖ!
ನುಡಿಯದೇ ನಡೆವವನವಳ ಸಖ!
ಜನಾನಂದದ ಜಾಗ ಅವನ ಲೋಕ!
ರ ಗುರು ಸ್ವರೂಪಾತನೆಂಬವ್ರನೇಕ!
ಸ್ಫೂರ್ತಿ ಪಡವವ್ನಿಂದ ಕಾಕ, ಪಿಕ, ಶುಕ! (ಅ)
-ರ್ತಿಯಿಂದವನ ಪೂಜಸುವಳಾ ಬಾಲಿಕಾ!
ದಾಶರಥಿಯ ರಾಮಾಯಣ ಸಹಾಯಕ! (ಕಾ)
-ಯ ಬಲದಲ್ಲವಳ ಸ್ಥಿತಿ ಚಿಂತಾತ್ಮಕ! (ಸಂ)
-ಕಟ ಶ್ರೀ ನಿರಂಜನಾದಿತ್ಯ ನಿವಾರಕ!!!

ನಲ್ವತ್ವರ್ಷದ ಮೌನ ಸಾರ್ಥಕಾಗ್ಬೇಕು! (ಬಿ)

-ಲ್ವದಳಾರ್ಚನೆ ನಿರಂತರವಾಗ್ಬೇಕು! (ತ)
-ತ್ವಮಸಿಯರ್ಥಸಾರದೆಂದರಿಯ್ಬೇಕು! (ಹ)
-ರ್ಷವೆಲ್ಲೆಲ್ಲೂ ಎಲ್ಲರಲ್ಲೂ ತುಳುಕ್ಬೇಕು!
ತ್ತಾತ್ರೇಯನವತಾರವದಾಗ್ಬೇಕು!
ಮೌಢ್ಯವೆಲ್ಲರದ್ದೂ ನಿರ್ನಾಮವಾಗ್ಬೇಕು!
ರರುದ್ಧಾರ ತಡವಿಲ್ಲದಾಗ್ಬೇಕು!
ಸಾವಕಾಶದಿಂದೇಕೆಲ್ಲರೂ ಕೆಡ್ಬೇಕು?? (ಪ್ರಾ)
-ರ್ಥನೆಯಿದು ವ್ಯರ್ಥವಾಗದೇ ಇರ್ಬೇಕು!
ಕಾಲ ಕಾದದ್ದು ಫಲಪ್ರದವಾಗ್ಬೇಕು! (ಆ)
-ಗ್ಬೇಕು, ಚಿರ ಶಾಂತಿ ತಾಂಡವವಾಡ್ಬೇಕು!
ಕುಲ ನಿರಂಜನಾದಿತ್ಯನದ್ದಾಗ್ಬೇಕು!!!

ಸೇವೆ ತಗೊಂಡು ಸಾವನೀವವ ದೇವಯ್ಯಾ!

ವೆಸನದಿಂದಂತು ಪಾರು ಮಾಡುವನಯ್ಯಾ!
ನ್ನಲ್ಲಾಮೇಲೆ ಬೆರೆಸಿಕೊಳ್ಳುವನಯ್ಯಾ!
ಗೊಂದಲವೆಬ್ಬಿಸುವುದವನಾಟವಯ್ಯಾ! (ನ)
-ಡು ನೀರಿನಲ್ಲೆಂದೆಂದೂ ಕೈಯ ಬಿಡನಯ್ಯಾ!
ಸಾವಿಗೆ ಅಂಜದೆ ನಂಬಿ ಈಸಬೇಕಯ್ಯಾ!
ಸ್ತ್ರವೊಂದಾದ್ಮೆಲೊಂದುಡ್ವಂತೀ ದೇಹವಯ್ಯಾ!
ನೀನಾರೆಂದರಿತ ಮೇಲೆ ನಿಶ್ಚಿಂತೆಯಯ್ಯಾ! (ಭ)
-ವಬಂಧನವಾಗ ತಪ್ಪಿಹೋಗುವುದಯ್ಯಾ! (ಶಿ)
-ವ, ಜೀವರೈಕ್ಯಾನಂದಾಮೇಲಾಗುವುದಯ್ಯಾ!
ದೇವದೇವ ಸದ್ಗುರು ದತ್ತಾತ್ರೇಯನಯ್ಯಾ! (ಅ)
-ವನಲ್ಲದೆ ಇನ್ಯಾರು ಜಗದ್ಗುರುವಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾನಂದ ಅವನಯ್ಯಾ!!!

ಕಾಗೆಗಿನ್ನೂ ಬುದ್ಧಿ ಬಂದಿಲ್ಲ!

ಗೆಳೆತನದಕ್ಕೆ ಬೇಕಿಲ್ಲ! (ನುಂ)
-ಗಿಬಿಡ್ತನ್ಯರಾಹಾರವೆಲ್ಲಾ! (ತ)
-ನ್ನೂರಿನ ಚಿಂತೆ ಅದಕ್ಕಿಲ್ಲ!
ಬುದ್ಧಿ ಹೇಳ್ಬೇಕಾರಿದಕ್ಕೆಲ್ಲಾ? (ಸಿ)
-ದ್ಧಿ ವಿನಾಯಕ ಹೇಳಲೆಲ್ಲಾ!
ಬಂಧು ಬಾಂಧವವನೇ ಎಲ್ಲಾ!
ದಿಕ್ಕಿಲ್ಲದನಾಥರ್ನಾವೆಲ್ಲಾ! (ಬ)
-ಲ್ಲ ನಿರಂಜನಾದಿತ್ಯವೆಲ್ಲಾ!!!

ಮಾನವನ ಸನ್ನಾಹದಿಂದವಮಾನ! (ದಿ)

-ನಕರನ ಧ್ಯಾನದಿಂದ ಆತ್ಮಜ್ಞಾನ!
ರ ಗುರುವೆಂದು ನಂಬಬೇಕವನ!
ಶ್ವರವೆಂದರಿಯಬೇಕ್ಮಾನವನ!
ತ್ಯವರಿಯದೇ ನರಳುವವನ! (ತ)
-ನ್ನಾತ್ಮವನ್ನು ತಾನೇ ವಂಚಿಸುವವನ!
ನ್ದಿ, ನರಿ ನಾಯಿಯಂತಿರುವವನ! (ಅಂ)
-ದಿಂದು, ಮುಂದೆಂದಾಡುವ ಅವಿವೇಕನ!
ಡ ಸೇರುವಾಸೆಯಿಲ್ಲದಾಧಮನ!
ರ ಗುರುವಿನಾಜ್ಞೆ

ಈರುವವನ!
ಮಾಡೀಗಲಾದರೂ ಸಾರ್ಥಕ ಜೀವನ!
ಮೋ ಶ್ರೀ ನಿರಂಜನಾದಿತ್ಯ ಪಾವನ!!!

ನಾಯಿ ಬೊಗಳಬಾರದೆಂದರಾದೀತಾ? (ತಾ)

-ಯಿ ಮುದ್ದು ಮಾಡಬಾರದೆಂದರಾದೀತಾ?
ಬೊಕ್ಕೆ ಕೀವ್ಸುರಿಸಬಾರದೆಂದ್ರಾದೀತಾ?
ದ್ದೆಯಲ್ಲಿ ಕೆಸ್ರಿರಬಾರದೆಂದ್ರಾದೀತಾ? (ತೋ)
-ಳ ಕುರಿಯ ಮೇಲ್ಬೀಳಬಾರದೆಂದ್ರಾದೀತಾ?
ಬಾನಿನೊಡೆಯ ತಣ್ಣಗಾದರಾದೀತಾ?
ಣಾಂಗಣ ನಿಶ್ಯಬ್ಧವಿರಲಾದೀತಾ?
ದೆಂಟಿಗೆಲೆ ಅಂಟಿಕೊಳ್ಳದಿದ್ರಾದೀತಾ?
ಯೆ ದೇವರಿಗಿಲ್ಲದಿದ್ದರಾದೀತಾ?
ರಾತ್ರಿ ಕತ್ತಲೆಯಿರಬಾರ್ದೆಂದ್ರಾದೀತಾ?
ದೀನ ದಾನಿಯಾಗಬೇಕೆಂದರಾದೀತಾ?
ತಾರೆ ಶ್ರೀ ನಿರಂಜನಾದಿತ್ಯನಾದೀತಾ???

ಭಗವಂತನಾನಂದಕ್ಕಾರಡ್ಡಿ? (ಯೋ)

-ಗದಿಂದವನೇ ತಾನಾಗ್ಲಾರಡ್ಡಿ?
ವಂದನೆ ನಿಂದನೆಯಾಗದಡ್ಡಿ!
ತ್ವ ತಿಳಿಯದಿದ್ರೆಲ್ಲಾ ಅಡ್ಡಿ!
ನಾಮ ರೂಪಕ್ಕಂಟಿಕೊಂಡ್ರೂ ಅಡ್ಡಿ!
ನಂಬಿಕೆಯಿಲ್ಲದಿದ್ರೂ ಅಡ್ಡಿ!
ಮೆ, ಶಮೆಯಿಲ್ಲದಿದ್ರದಡ್ಡಿ! (ಹ)
-ಕ್ಕಾಗಿರ್ಪಾಗಿದೆಲ್ಲರಿಗೇ ಕಡ್ಡಿ?
ಮಿಸಿದಾಗವನಲ್ಲಿಲ್ಲಡ್ಡಿ! (ಅ)
-ಡ್ಡಿ, ನಿರಂಜನಾದಿತ್ಯಗೊಡ್ಲಡ್ಡಿ!!!

ಬಲಿಯ ತುಳಿದ ವಾಮನನುಳಿದ! (ಬ)

-ಲಿಷ್ಟರಿಗೇ ಕಾಲನಾದಿ ಕಾಲದಿಂದ!
ದುಪ ಶಕ್ತಿ, ಯುಕ್ತಿಗಳಿಂದಾಳಿದ!
ತುಳಿದು ನರಕನನ್ನಪ್ಪಳಿಸಿದ! (ಕಾ)
-ಳಿನ್ಗ ಸರ್ಪವ ತುಳಿದದುಮಿದ!
ಶಗ್ರೀವಾಸುರನನ್ನು ರಾಮ ಕೊಂದ!
ವಾರಿಜಾಂಬಿಕೆಯನ್ನಾತ ರಕ್ಷಿಸಿದ!
ನ್ಮಥನನ್ನು ಪರಮೇಶ್ವರ ಕೊಂದ!
ಯನ ಕಾಮಾಕ್ಷಿಯಲ್ಲವನು ನಿಂದ! (ಮ)
-ನುಜರಿಗಿದೆಲ್ಲಾ ಒಂದು ಆನಂದ! (ಬಾ)
-ಳಿಗಿದ್ರಿಂದೆಂದಿಗೂ ಇಲ್ಲ ನಿಜಾನಂದ!
ತ್ತ ನಿರಂಜನಾದಿತ್ಯ ಬ್ರಹ್ಮಾನಂದ!!!

ದೇವರಿಗೂ, ನನಗೂ, ಭೇಟಿ ಮಾಡಿಸೋ ಜಗದ್ಗುರು!

ಜ್ರ, ವೈಢೂರ್ಯದ ಕಿರಿಟಧಾರಿಯೇ ಜಗದ್ಗುರು? (ಹ)
-ರಿ, ಹರಾದಿಗಳಾವಾಸವೆಲ್ಲಿ? ತೋರೋ ಜಗದ್ಗುರು!
ಗೂಗೆ, ಕಾಗೆಗಳಂತೆ ನಾವಿರಬೇಕೇ ಜಗದ್ಗುರು?
ಯ ವಿನಯದಿಂದ ಪ್ರಾರ್ಥಿಸುವೆನೋ ಜಗದ್ಗುರು!
ಷ್ಟ, ಕಷ್ಟದಿಂದ ಭ್ರಷ್ಟರಾಗಿಹೆವೋ ಜಗದ್ಗುರು!
ಗೂಣ್ಡಾಗಳ ಕಾಟ ಹೆಚ್ಚಾಗುತ್ತಿಹುದೋ ಜಗದ್ಗುರು!
ಭೇದಭಾವಕೆಡೆ ಕೊಡಲೇ ಬೇಡವೋ ಜಗದ್ಗುರು! (ಘಾ)
-ಟಿತನಕ್ಕಾಗೀ ನರಜನ್ಮ ಬಂತೇನೋ ಜಗದ್ಗುರು!
ಮಾನ, ಪ್ರಾಣ, ಹಾನಿಯಾಗುತಿದೆ, ನೋಡೋ ಜಗದ್ಗುರು! (ನೋ)
-ಡಿದನ್ನೇಕೆ ಸುಮ್ಮಗಿರುತ್ತಿರುವೆಯೋ ಜಗದ್ಗುರು?
ಸೋಲೆನಗಾದ್ರದು ನಿನಗಲ್ಲವೇನೋ ಜಗದ್ಗುರು?
ಗತ್ಕಲ್ಯಾಣವೀಗಲಾದರೂ ಮಾಡೋ ಜಗದ್ಗುರು!
ತಿ, ಮತಿಗೆಡಿಸಿದವರು ಯಾರೋ ಜಗದ್ಗುರು? (ಮ)
-ದ್ಗುರು ಶ್ರೀ ದತ್ತಾತ್ರೇಯನಾಗಿರ್ಪವನೋ ಜಗದ್ಗುರು! (ಗು)
-ರು, ಶ್ರೀ ನಿರಂಜನಾದಿತ್ಯಾನಂದಾತ್ಮನೇ ಜಗದ್ಗುರು!!!

ನಾನು, ನೀನೆಂದೊಬ್ಬಂಟಿಗನಾಗಿ ಹೋಗುವ ಜೀವ! (ನೀ)

-ನು ನಾನೊಂದೆಂದಾನಂದದಲ್ಲಿರ್ಪವ ಮಹಾದೇವ!
ನೀಚೋಚ್ಚವೆಂದು ಹೊಡೆದಾಡಿ ಸಾಯುವವ ಜೀವ!
ನೆಂಟರಿಷ್ಟರು ಬಂಧಗಳೆನಗಾನೆಂಬಾ ದೇವ!
ದೊರಕಬೇಕೆನಗದಿದೆಂದೊದ್ದಾಡ್ವವ ಜೀವ! (ಕ)
-ಬ್ಬಂಗಳೆನ್ನ ಮೇಲೆಷ್ಟು ಬರೆದರೇನೆಂಬಾ ದೇವ!
ಟಿಪ್ಪಣಿ, ಠೀಕೆಗಳ ಬರೆದು ಹಿಗ್ಗುವಾ ಜೀವ!
ತಿ, ಸ್ಥಿತಿ, ಲಯವಿಲ್ಲದವ ನಾನೆಂಬಾ ದೇವ!
ನಾಳೆಗೇನು ಗತಿ ನನಗೆಂದಳುವವ ಜೀವ! (ತ್ಯಾ)
-ಗಿಯಾಗಿ, ಯೋಗಿಯಾಗಿ, ತೃಪ್ತನಾಗಿರ್ಪವ ದೇವ!
ಹೋರಾಡಿ, ತಾರಾಡಿ, ತೂರಾಡಿ, ಬೀಳುವವ ಜೀವ!
ಗುಣಾತೀತ, ಗುರು ದತ್ತಾತ್ರೇಯ ಏಕೈಕ ದೇವ!
ಸನ, ಅಶನ, ವಸತಿಗಾಗಿರ್ಪವ ಜೀವ!
ಜೀವನ್ಮುಕ್ತ, ಸರ್ವಶಕ್ತ, ನಿರ್ಲಿಪ್ತಾ ನಿಜ ದೇವ!
ರದರಾಜ ನಿರಂಜನಾದಿತ್ಯಾ ದೇವ ದೇವ!!!

ಆಶೀರ್ವಾದ ಪಡೆಯುವ ಬಗೆ ಹೇಗೆ? (ಫಾ)

-ಶೀ ಆಜ್ಞೆ ಕೊಟ್ಟಾಶೀರ್ವದಿಸೆಂದ್ರೆ ಹೇಗೆ? (ಗ)
-ರ್ವಾದಿಗಳ ಬಿಟ್ಟು ಪೂರ್ಣ ಶರಣಾಗೆ!
ರಿದ್ರನಾದ್ರೂ ಸದಾಚಾರಿ ತಾನಾಗೆ!
ತಿಸೇವೆ ನಿಷ್ಕಳಂಕವಾಗಿ ಆಗೆ! (ನ)
-ಡೆಯಂತೆ ನುಡಿ ಸತತವಿರಲಾಗೆ!
ಯುಕ್ತಿ ಭಕ್ತಿಯಲ್ಲಿ ಬೆರೆಸದಿರ್ಲಾಗೆ!
ರ ಗುರುವೇ ದೇವರೆಂದರಿವಾಗೆ!
ಲವಂತವಿಲ್ಲದೇ ಸೇವೆಯೆಸಗೆ!
ಗೆಳೆಯ ನೆನಿಸಿ ವಂಚಿಸದಿರ್ಲಾಗೆ!
ಹೇರಳವಿದ್ದು ಉದಾರಿ ತಾನಾಗೆ!
ಗೆಳೆಯ ನಿರಂಜನಾದಿತ್ಯನಂತಾಗೆ!!!

ಶ್ರೀ ತ್ಯಾಗರಾಜ ವಿಶ್ವಸ್ಥ ಸಮಿತಿ! (ಸ)

-ತ್ಯಾ ಸತ್ಯ ಜ್ಞಾನದಾದಿರ್ಲೀ ಸಮಿತಿ! (ಗ)
-ಗನ ಸದೃಶಾತ್ಮನಿಗಾಗೀ ಸಮಿತಿ!
ರಾಗ, ಭಾವ ಸಿದ್ಧಿಗಾಗೀ ಸಮಿತಿ!
ಗತ್ಕಲ್ಯಾಣ ಕಾರ್ಯಕ್ಕೀ ಸಮಿತಿ!
ವಿಕಲ್ಪ ಸಂಕಲ್ಪಾಂತ್ಯಕ್ಕೀ ಸಮಿತಿ!
ಶ್ವಪಚತ್ವ ವಿನಾಶಕ್ಕೀ ಸಮಿತಿ! (ಸ್ವ)
ಸ್ಥ ಚಿತ್ತ ಪ್ರಾಪ್ತಿಯಾಗಲಕ್ಕೀ ಸಮಿತಿ!
ರ್ವೊ

ದಯ ವಿಜಯಕ್ಕೀ ಸಮಿತಿ!
ಮಿತ್ರಭಾವ ಬೆಳಗ್ಲಿಕ್ಕೀ ಸಮಿತಿ! (ಪ್ರೀ)
-ತಿ ನಿರಂಜನಾದಿತ್ಯಗೀ ಸಮಿತಿ!!!

ಆಡಳಿತ ಮಂಡಳಿಯಾದರ್ಶ ಕರ್ತವ್ಯ!

ಮ್ಬಾಚಾರಕ್ಕೆಡೆಕೊಡದಿರ್ಪ ಕರ್ತವ್ಯ! (ಹ)
-ಳಿದಾರನ್ನೂ ನೋಯಿಸದಿರುವ ಕರ್ತವ್ಯ!
ತ್ವ ಸಿದ್ಧಿಗಾಗಿ ದುಡಿಯುವ ಕರ್ತವ್ಯ!
ಮಂದಿರದ ಪತಿವ್ರತೆ ಕಾಯ್ವ ಕರ್ತವ್ಯ! (ನ)
-ಡತೆ ಪರಿಶುದ್ಧವಾಗಿಡುವ ಕರ್ತವ್ಯ! (ತು)
-ಳಿಯದನ್ಯ ಮತೀಯರನ್ನಿರ್ಪ ಕರ್ತವ್ಯ!
ಯಾಗ ಗುರುಸೇವೆಯೆಂದರಿವ ಕರ್ತವ್ಯ!
ಶೇಂದ್ರಿಯ ನಿಗ್ರಹದಭ್ಯಾಸ ಕರ್ತವ್ಯ! (ದ)
-ರ್ಶನಕ್ಕಾಗಿ ಸತತ ಕಾಯುವ ಕರ್ತವ್ಯ!
ಡೆಗೆ ಸಾಯುಜ್ಯಾನಂದಿಸುವ ಕರ್ತವ್ಯ! (ಕ)
-ರ್ತನಿಗಿಂತುತ್ತಮಾತ್ಮಜರಪ್ಪ ಕರ್ತವ್ಯ! (ಸೇ)
-ವ್ಯ ನಿರಂಜನಾದಿತ್ಯನಾಗುವ ಕರ್ತವ್ಯ!!!

ಅಂದ, ಚಂದ, ಕಂದಕದ ಪಾಲಿಗಾಯ್ತು!

ಯೆ, ದಾಕ್ಷಿಣ್ಯ ಮೃತ್ಯುವಿಗಿಲ್ಲದಾಯ್ತು!
ಚಂದ್ರಲೋಕಕ್ಕೆ ಹೋದದ್ದೂ ವ್ಯರ್ಥವಾಯ್ತು!
ಶೇಂದ್ರಿಯದ ಚಪಲ ಹೆಚ್ಚಿ ಹೋಯ್ತು!
ಕಂಡವರ ಮನೆಯ ಭಿಕ್ಷೆಗೀಡಾಯ್ತು!
ಬ್ಬಿಸಿ ಹಲ್ಲು ಮುರಿಸಿಕೊಂಡದ್ದಾಯ್ತು!
ಳ್ಳ, ಸುಳ್ಳನೆಂದೆನಿಸಿಕೊಂಡದ್ದಾಯ್ತು!
ಫೇದಾರನಿಂದೊದೆಸಿಕೊಂಡದ್ದಾಯ್ತು!
ಪಾಪಿ ಮಾನವನ ಪಾಡೀ ರೀತಿಯಾಯ್ತು! (ಆ)
-ಲಿಸುವವರಿವನ ಮಾತಿಲ್ಲದಾಯ್ತು!
ಗಾಡಿ ಬಹಳಾಳಕ್ಕೆ ಉರುಳಿಹೋಯ್ತು! (ಆ)
-ಯ್ತು ನಿರಂಜನಾದಿತ್ಯನೇ ಕಾಯ್ಬೇಕಾಯ್ತು!!!

ಕಾಮನನ್ಕೊಚ್ಚಿಕೊಂಡೊಯ್ವಾ ಗಾಳಿ, ಮಳೆಯಲ್ಲ!

ನ್ಮಥನ ಶರೀರ ಸುಟ್ಟ್ರೂ ಆತ ಸತ್ತಿಲ್ಲ!
ಶ್ವರ ಶರೀರವಲ್ಲದೆ ಆತ್ಮನೇನಲ್ಲ! (ತಾ)
-ನ್ಕೊಟ್ಟದ್ದನ್ನು ತಾನೇ ಕಿತ್ತುಕೊಂಡ್ರೆ ತಪ್ಪೇನಿಲ್ಲ! (ಹು)
-ಚ್ಚಿನ ನಾಯಿಯನ್ನೂ ಕೊಲ್ಲದಿದ್ದ್ರಾಗುವುದಿಲ್ಲ!
ಕೊಂದಾದ್ಮೇಲೆ ಹಬ್ಬ ಕಾಗೆ, ಗೂಗೆಗಳಿಗೆಲ್ಲಾ!
ಡೊನ್ಕು ಬಾಲದ ನಾಯಕರ್ಗನ್ಯ ಗತಿಯಿಲ್ಲ! (ಸಾ)
-ಯ್ವ ಹೊತ್ತಿಗಾದರೂ ಬಾಯಿ ಮುಚ್ಚುವುದಲ್ಲಾ!!
ಗಾನ, ನಾಮ ಭಜನೆ ಅದಕ್ಕೆ ಬೇಕಿಲ್ಲವಲ್ಲಾ! (ಕೋ)
-ಳಿಯ ಮೇಲ್ಹಾರುವಾಗಿನಾರ್ಭಟವೇ ಸಾಕಲ್ಲಾ!!
ದ, ಮತ್ಸರವುಳ್ಳವನ ಪಾಡು ಇದೆಲ್ಲಾ! (ಮೂ)
-ಳೆರಸದಷ್ಟು ರುಚಿ ಬೇಳೆ ಸಾರದಕ್ಕಿಲ್ಲ! (ತಾ)
-ಯ, ತಂದೆಯ ಬೀಜಗುಣಕ್ಕಾರೇನ್ಬಾಡಬಲ್ಲ? (ಪು)
-ಲ್ಲ ನಿರಂಜನಾದಿತ್ಯ ನಿಚ್ಛೆಯಂತಾಗಲೆಲ್ಲಾ!!!

ಬಟ್ಟೆ ತರ್ತೇನೆಂದವ ಬಟ್ಟೆ ಬಿಟ್ಟ! (ಹೊ)

-ಟ್ಟೆಗಿಲ್ಲೆಂದಮೇಧ್ಯ ತಿಂದು ಬಿಟ್ಟ!
ನ್ದೆ, ತಾಯಿಯನ್ನೇ ವಂಚಿಸಿಬಿಟ್ಟ! (ಬ)
-ರ್ತೇನೆಂದವನೆಲ್ಲಿಗೋ ಹೋಗಿಬಿಟ್ಟ!
ನೆಂಟರಿಂದವ ದೂರವಾಗಿಬಿಟ್ಟ!
ರಿದ್ರಾಂಗನೆಯನ್ನೂ ಅಪ್ಪಿ ಬಿಟ್ಟ!
ರ್ಚಸ್ಸೆಲ್ಲಾ ಕಳೆದುಕೊಂಡು ಬಿಟ್ಟ!
ಳಲಿ, ತೊಳಲಿ ಕುಳಿತೇ ಬಿಟ್ಟ! (ಕೆ)
-ಟ್ಟೆನೆಂದು ತಲೆ ಚಚ್ಚಿಕೊಂಡು ಬಿಟ್ಟ!
ಬಿಸಿಯಾರಿದ ತಂಗ್ಳು ತಿಂದುಬಿಟ್ಟ! (ಪ)
-ಟ್ಟ ನಿರಂಜನಾದಿತ್ಯ ನೇರಿಬಿಟ್ಟ!!!

ಹೊಟ್ಟೆಯ ಹುಣ್ಣು ರೇಶ್ಮೆ ಬಟ್ಟೆಯುಟ್ರೆ ಮಾಯದು! (ಅ)

-ಟ್ಟೆಣ್ಣೆಯೌಷಧಿ, ತೈಲ ಗುಣ ಮಾಡದಿರದು! (ವ್ರ)
-ಯ ಯೋಚನೆ ಮಾಡದೆಂದಿಗೂ ಮಾಡಬಾರದು!
ಹುಣ್ಣಿಗೆ ತಕ್ಕೌಷಧಿಯನ್ನುಪೇಕ್ಷಿಸ ಬಾರದು! (ಉ)
-ಣ್ಣುವನ್ನ ಮಣ್ಣಿಂದಾದ್ರೂ ಮಣ್ಣು ಬೆರೆಸ್ಬಾರದು!
ರೇಚಕವೇ ಸದಾ ಆದ್ರೆ ಪ್ರಾಣ ಉಳಿಯದು! (ರೇ)
-ಶ್ಮೆಯ ಗುಣ, ದೋಷ ವಿಮರ್ಶಿಸದಿರ್ಬಾರದು!
ಟ್ಟೆ ಹತ್ತಿಯದ್ದೆಂದು ಅಲಕ್ಷಿಸಬಾರದು! (ಹೊ)
-ಟ್ಟೆ, ಬಟ್ಟೆಗೋಸ್ಕರವೇ ಬದುಕಿರಬಾರದು! (ಆ)
-ಯುಷ್ಯ ಮಾಯಾಮೋಹದಲ್ಲಿ ಕಳೆಯಬಾರದು! (ಸು)
-ಟ್ಟ್ರೆ ಬೂದಿಯಾಗುವ ದೇಹವ ನಂಬಬಾರದು!
ಮಾಧವನ ನಂಬಿಗೆಯನ್ನು ಬಿಡಬಾರದು!
ಮನ ಬಲೆಯಿಂದಾಗ ಪಾರಾಗಬಹುದು!
ದುರಿತ ಶ್ರೀ ನಿರಂಜನಾದಿತ್ಯನಿಗಂಟದು!!!

ಆಳಲ್ಲಿರ್ಪ ನಿಷ್ಠೆ ಆಳ್ವವನಲ್ಲಿಲ್ಲ! (ಹ)

-ಳಸಲನ್ನ ಹಾಕಿದ್ರೂ ತಿನ್ನುವನೆಲ್ಲಾ! (ಸ)
-ಲ್ಲಿಸುವನು ಸೇವೆ ದಿನ, ರಾತ್ರಿಯೆಲ್ಲಾ! (ದ)
-ರ್ಪ ತೋರ್ಪನಾಳ್ವವನಿವನ ಮೇಲೆಲ್ಲಾ!
ನಿರ್ವಂಚನೆಯ ಸ್ವಭಾವಾಳ್ವವಗಿಲ್ಲ! (ನಿ)
-ಷ್ಠೆಯ ಬದಲಾಗಿ ದುಷ್ಟತನವೆಲ್ಲಾ!
ಳಿನ ಗೋಳ ಕೇಳ್ವಾಳುವವನಿಲ್ಲ! (ಆ)
-ಳ್ವವವನ ಕಿವಿ ಹಿತ್ತಾಳೆಯಾಯಿತಲ್ಲಾ!!
ಜ್ರ ವೈಢೂರ್ಯಗಳಾಸೆ ಆಳಿಗಿಲ್ಲ!
ತದೃಷ್ಟನ ಪ್ರೀತಿಸುವವರಿಲ್ಲಾ! (ಎ)
-ಲ್ಲಿ ನೋಡಿದರೂ ಇದೇ ಪಾಡಾಯಿತಲ್ಲಾ! (ಪು)
-ಲ್ಲ ನಿರಂಜನಾದಿತ್ಯ ತಿದ್ದಲೀಗೆಲ್ಲಾ!!!

ದಕ್ಷಿಣೇಶ್ವರ ಯಕ್ಷಿಣೀಶ್ವರಾದ್ರೇನ್ತಪ್ಪು?

ಕ್ಷಿಪ್ರ ಕುಬೇರ ತಾನಾಗಲಿಕ್ಕದೆಂದೊಪ್ಪು! (ಗ)
-ಣೇಶಗದ್ರಿಂದಾನಂದವೆಂದವನನ್ನಪ್ಪು! (ಈ)
-ಶ್ವರನಿಗಂಟಿದಾವ ತರದ ತಪ್ಪೊಪ್ಪು! (ನ)
-ರರೆಷ್ಟು ಬೆಳ್ಳಗಿದ್ರೂ ಅವರೆಲ್ಲಾ ಕಪ್ಪು!
ದುಪ ಕಪ್ಪಾದ್ರೂ ಆತ ದೇವರೆಂದೊಪ್ಪು! (ರ)
-ಕ್ಷಿಪ, ಶಿಕ್ಷಿಪ ಬಲವಿರ್ಪಾಗೆಲ್ಲಿ ಕಪ್ಪು? (ತೃ)
-ಣೀಕರಿಸ್ಬೇಕ್ಬಣ್ಣ, ತಿಣ್ಣವೆಂಬುದನ್ನೊಪ್ಪು! (ನ)
-ಶ್ವರವಾದಮೇಲಿದೆಲ್ಲಾ, ಆತ್ಮನನ್ನಪ್ಪು!
ರಾಮ, ಕೃಷ್ಣರು ಮಾಯೆಗೆ ಹಾಕಿದ್ರೇನ್ಸೊಪ್ಪು? (ಉ)
-ದ್ರೇಕೋದ್ವೇಗಗಳಳಿದಾಗಿಲ್ಲ ತಪ್ಪೊಪ್ಪು! (ಸ)
-ನ್ತ ಕಬೀರದಾಸ ಸಾಕ್ಷಿಯಿದಕ್ಕೆಂಬುದೊಪ್ಪು! (ಒ)
-ಪ್ಪು, ನಿರಂಜನಾದಿತ್ಯ ಸರ್ವಜ್ಞನೆಂದಪ್ಪು!!!

ರಾಮರಾಜ್ಯದ ಹೆಬ್ಬಾಗಿಲು ಸದಾ ತೆರೆದಿತ್ತು!

ದಾಂಧ ಅರಸರ ದೃಷ್ಟಿಗದು ಬೀಳದಿತ್ತು!
ರಾತ್ರಿ, ದಿನ ಜಯಭೇರಿಯೊಂದೇ ಮೊಳಗುತ್ತಿತ್ತು! (ಆ)
-ಜ್ಯ ಮೊದಲಾದ ಹವಿರ್ಧೂಮವೆಲ್ಲೆಲ್ಲೂ ಹಬ್ಬಿತ್ತು!
ರಿದ್ರ, ಶ್ರೀಮಂತರ ಸೌಹರ್ದವೆಲ್ಲೆಲ್ಲೂ ಇತ್ತು!
ಹೆತ್ತಮ್ಮನೇ ಪರದೈವವೆಂಬ ನಂಬಿಗೆಯಿತ್ತು! (ಹ)
-ಬ್ಬಾದಿಗಳು ಅವಳ ಹೆಸರಲ್ಲಿ ಆಗುತ್ತಿತ್ತು!
ಗಿರಿ, ಗುಹೆಗಳ ಋಷಿಗಳಿಗಾತಿಥ್ಯವಿತ್ತು! (ಹಾ)
-ಲು, ಹಣ್ಣು, ಹೂಗಳ ಸುರಿಮಳೆಯೇ ಆಗುತ್ತಿತ್ತು!
ತ್ಸಂಗದಿಂದ ಪ್ರಜೆಗಾನಂದವುಂಟಾಗುತ್ತಿತ್ತು!
ದಾಸ, ದಾಸಿಯರಿಗುಡುಗೊರೆಗಳಾಗುತ್ತಿತ್ತು! (ಸೀ)
-ತೆಯ ಕರಕಮಲದಿಂದದು ಲಭಿಸುತ್ತಿತ್ತು! (ನೆ)
-ರೆದೆಲ್ಲರ ಹರ್ಷಧ್ವನಿ ಅಂಬರಕ್ಕೇರುತ್ತಿತ್ತು!
ದಿವ್ಯ ಜೀವನದಾ ದಿವಸಕ್ಕಿಂದು ಕಲ್ಲು ಬಿತ್ತು! (ಎ)
-ತ್ತು, ನಿರಂಜನಾದಿತ್ಯಾ ರಾಮನಾಗೀಗೆಮ್ಮನ್ನೆತ್ತು!!!

ಮಹಾದ್ವಾರದಲ್ಲಿ ಪ್ರಸಾದ ಚೆಲ್ಲಿತ್ತು!

ಹಾಯಾಗ್ಯಾರಾದ್ರೂ ತಿನ್ನಬಹುದಾಗಿತ್ತು!
ದ್ವಾದಶಿಯ ಪುಣ್ಯ ದಿನವಿಂದಾಗಿತ್ತು!
ಕ್ಕಸ ಕಾಗೆಗದಿಂದು ಕಾಣದಿತ್ತು!
ತ್ತನ ಮುದ್ದಳಿಲಿಗದು ಕಾದಿತ್ತು! (ಮ)
-ಲ್ಲಿಗೆ ಬಳ್ಳಿಯಿಂದಿಳಿದು ಬರುತ್ತಿತ್ತು!
ಪ್ರತಿ ದಿನ ಕರೆಗೋಕೊಟ್ಟಿತ್ತು!
ಸಾನಂದದಿಂದ ತಿಂದು ಮರ ಹತ್ತಿತು!
ತ್ತನಿಚ್ಛೆಗಾರೆದುರಾಡಲಾದೀತು?
ಚೆನ್ನಾಗಿದನ್ನರಿತರಿಲ್ಲ ವಿಪತ್ತು! (ಅ)
-ಲ್ಲಿ, ಇಲ್ಲಿ, ಎಲ್ಲೆಲ್ಲೂ ಪ್ರಸಾದ ಸಂಪತ್ತು! (ಹೊ)
-ತ್ತು ನಿರಂಜನಾದಿತ್ಯಾನಂದಕ್ಕಿವತ್ತು!!!

ತರತರದಾಪ್ತರ್ಭಗವಂತನಿಗೆ!

ಹಸ್ಯರಿವಾಗದೊಬ್ಬ್ರದಿನ್ನೊಬ್ಬ್ರಿಗೆ!
ನ್ನಂತರಂಗ ಹೇಳನವನಾರಿಗೆ!
ಮಿಸುವನವನು ಎಲ್ಲರೊಂದಿಗೆ!
ದಾರಿ ತನ್ನೂರಿಗೆ ತೋರ್ಪನೆಲ್ಲರಿಗೆ! (ಆ)
-ಪ್ತರಲ್ಲಿ ಗುದ್ದಾಟ ಒಪ್ಪದವನಿಗೆ! (ಅ)
-ರ್ಭಕರು ನಾವ್ಸಕಲರೂ ಅವನಿಗೆ!
ಮನ್ಸಿದನ್ನು ಪಾತ್ರರಾಗ್ಬೇಕ್ಪ್ರೀತಿಗೆ!
ವಂದಿಸಬೇಕವನ ಪಾದಗಳಿಗೆ!
ನ್ನಂತೆಲ್ಲರನ್ನೂ ಮಾಳ್ಪಾ ಗುರುವಿಗೆ!
ನಿತ್ಯಾನಿತ್ಯ ವಿಚಾರ ತತ್ಪರನಿಗೆ!
ಗೆಳೆಯ ಶ್ರೀ ನಿರಂಜನಾದಿತ್ಯನಿಗೆ!!!

ಊಟಕ್ಕಿಕ್ಕದುಪ್ಪಿನಕಾಯಿ ಮತ್ತೇತಕ್ಕೆ?

ಗರು ಸುಸ್ತಾದ್ಮೇಲೆ ಕಾಳಗವೇತಕ್ಕೆ? (ಹ)
-ಕ್ಕಿ ಹಾರಿದ ಮೇಲೆ ಗೂಡಿನ ಚಿಂತೇತಕ್ಕೆ? (ದ)
-ಕ್ಕಲಾರದ ಹಕ್ಕ ಸಾಧಿಸುವುದೇತಕ್ಕೆ?
ದುರಾಗ್ರಹದಿಂದ ಕೆಡುಕು ಜೀವನಕ್ಕೆ! (ಉ)
-ಪ್ಪಿಲ್ಲದಿದ್ದರಿದೆಯೇನು ರುಚಿ ಊಟಕ್ಕೆ!
ರರು ಹೊಂದಿಕೊಳ್ಳಬೇಕು ಸಂದರ್ಭಕ್ಕೆ!
ಕಾಯಿದೆ, ಕಾನೂನುಗಳು ಬರೀ ನೆಪಕ್ಕೆ! (ಬಾ)
-ಯಿ ಬಡಾಯಿಯಧಿಕಾರ ಎಷ್ಟು ದಿನಕ್ಕೆ?
ನಶ್ಯುದ್ಧಿಯಿರ್ಬೇಕ್ಯಾಂತಿ ಜೀವನಕ್ಕೆ! (ಕಿ)
-ತ್ತೇನ್ಬಡಿದೇನೆಂಬವ ಹೋಗ್ಲಿ ಸ್ಮಶಾನಕ್ಕೆ!
ರಣಿಯಿರ್ಪಾಗ ಸಕಾಲ ಉದ್ಯೋಗಕ್ಕೆ! (ಅ)
-ಕ್ಕೆ ನಿರಂಜನಾದಿತ್ಯ ಕೃಪೆಯೆಲ್ಲಕ್ಕೆ!!!

ಉರಿಯ ಕಾರಣವನ್ನಾರಿಸು!

ರಿಪುಗಳನ್ನು ದೂರ ಓಡಿಸು!
ಶಸ್ಸಿಗಿರ್ಬೇಕ್ಜಿತ ಮನಸ್ಸು!
ಕಾಲಾಕಾಲ ಆಮೇಲೆ ಎಣಿಸು!
ಣಧೀರನೆನಿಸಿ ಜಯಿಸು! (ತೃ)
-ಣ ಸಮಾನ ಹಣವೆಂದೆಣಿಸು!
ರ ಗುರುಪಾದಕ್ಕೆ ನಮಿಸು! (ಮ)
-ನ್ನಾಥ, ಶ್ರೀಕಾಂತ ನೀನೆಂದೊಪ್ಪಿಸು! (ಹ)
-ರಿ, ಹರ, ಬ್ರಹ್ಮನೆಂದವ್ನರ್ಚಿಸು! (ಅ)
-ಸು, ನಿರಂಜನಾದಿತ್ಯಗರ್ಪಿಸು!!!

ಬಾ, ಬಾ, ಮುದ್ದು ಕಂದ ಬಾ, ಬಾ!

ಬಾ ಬೇಗ ಕಾದಿಹಳಂಬಾ!
ಮುನಿವಳಾಮೇಲ್ಬಂದ್ರಂಬಾ! (ತಿ)
-ದ್ದುವಳ್ನಿನ್ನ ಬುದ್ಧಿ ಅಂಬಾ!
ಕಂಗಾಲಾಗಿಹಳೀಗಂಬಾ!
ತ್ತ ನೀನೆಂಬಳ್ಮೂಕಾಂಬಾ!
ಬಾ, ಹಾಲುಣಿಸುವಳಂಬಾ! (ಅಂ)
-ಬಾ ನಿರಂಜನಾದಿತ್ಯಾಂಬಾ!!!

ನಾನೇಕೆ ಪಡಲಿನ್ನು ದುಃಖ?

ನೇರ ದಾರಿಯಲ್ಲೂ ಆತಂಕ!
ಕೆಡಿಸಿದನೆನ್ನಾಪ್ತ ಸಖ!
ರಮಾರ್ಥಿಗಿಲ್ಲಿಲ್ಲ ಸುಖ!
ಮರುಧರಗಿಲ್ಲ ಮುಖ!
ಲಿಪಿ ಬ್ರಹ್ಮನದ್ದಾವ್ತನಕ? (ತಿ)
-ನ್ನುವುದಕ್ಬಂತೇನೀ ಶುನಕ!
ದುಃಖದಿಂದ್ಲೇ ಸತ್ತಾ ಕನಕ! (ಸು)
-ಖ ನಿರಂಜನಾದಿತ್ಯಾತ್ಮಕ!!!

ಜೀವನಿಷ್ಟದಂತೆಂತಿರಬಲ್ಲ ದೇವ?

ಶವಾಗಿರ್ಪವನಲ್ಲಾರಿಗೂ ದೇವ!
ನಿತ್ಯ, ನಿರಾಮಯ, ನಿರಂಜನ ದೇವ! (ಅ)
-ಷ್ಟ ಮದಾತೀತ ಸದ್ಗುರು ಮಹಾದೇವ!
ದಂಡ, ಕಮಂಡಲು ಧಾರಿ ದತ್ತ ದೇವ!
ತೆಂಕು, ಬಡಗಾದಿ ದಿಕ್ಕಿನಲ್ಲಾ ದೇವ!
ತಿತಿಕ್ಷೆಯಿಂದಾಗಬೇಕು ಜೀವ, ದೇವ!
ಕ್ತಮಾಂಸದ ಗೊಂಬೆ ತಾನಲ್ಲಾ ದೇವ!
ಯಕೆಗಳಿದ್ದವನೆಂತಾಗ್ವ ದೇವ? (ತ)
-ಲ್ಲಣಗೊಳ್ಳದ ಶರಣನಪ್ಪ ದೇವ!
ದೇವ, ಜೀವರೈಕ್ಯ ಶಿವಾನಂದ ದೇವ! (ಅ)
-ವನೇ, ನಿರಂಜನಾದಿತ್ಯಾನಂದ ದೇವ!!!

ಕಾಗೆಗಿಲ್ಲಾದರದ ಸ್ವಾಗತ! (ಹ)

-ಗೆತನಕ್ಕಿಲ್ಲಿಲ್ಲ ಸುಸ್ವಾಗತ!
ಗಿಳಿಗಳರಿಗೇಕೆ ಸ್ವಾಗತ? (ಕೊ)
-ಲ್ಲಾಟ, ಕೀಳಾಟಕ್ಕಿಲ್ಲ ಸ್ವಾಗತ!
ತ್ತಾಪಹಾರಿಗಿಲ್ಲ ಸ್ವಾಗತ!
ಕ್ತಪಾತಾತ್ಮಗಿಲ್ಲ ಸ್ವಾಗತ!
ತ್ತ ಭಕ್ತಾಗ್ರಣಿಗೆ ಸ್ವಾಗತ!
ಸ್ವಾನುಭವಿಗಾತ್ಮೀಯ ಸ್ವಾಗತ! (ಖ)
-ಗನಿಗೆ ಪೂರ್ಣ ಕುಂಭ ಸ್ವಾಗತ!
ರಣಿ ನಿರಂಜನಾದಿತ್ಯಾತ!!!

ಆಗ್ಲಿಂದು ಪಾದಪೂಜೆ ಆನಂದದಿಂದ! (ಹೋ)

-ಗ್ಲಿಂತೆಲ್ಲಾ ಪಾಪದೋಷಗಳದರಿಂದ!
ದುರ್ಮರಣಕ್ಕೀಡಾಗದಿರಲದ್ರಿಂದ!
ಪಾಶ ಸಂಸಾರದ್ದು ಹರಿಯಲದ್ರಿಂದ!
ತ್ತ ಸಾಕ್ಷಾತ್ಕಾರವಾಗಲದರಿಂದ!
ಪೂರ್ಣಾಯುರಾರೋಗ್ಯವುಂಟಾಗುದ್ರಿಂದ! (ಬಂ)
-ಜೆಯರ್ಪುತ್ರವತಿಯರಾಗಲದ್ರಿಂದ!
ಗಲಿಷ್ಟಾರ್ಥವೆಲ್ಲಾ ಸಿದ್ಧಿ ಅದ್ರಿಂದ!
ನಂಬಿಗೆಗಿಂಬು ದೊರಕಲದರಿಂದ!
ಡ ಸೇರುವ ಶಕ್ತಿ ಬರಲದ್ರಿಂದ! (ಕಾ)
-ದಿಂದೇ ದರ್ಶನ ಪಡೆಯಿರದಿರಿಂದ!
ತ್ತ ಶ್ರೀ ನಿರಂಜನಾದಿತ್ಯ ತಾನೆಂದ!!!

ಸೈರಣೆಯಿದ್ದ್ರೆ ಸಲಕರಣೆ ಭದ್ರ!

ಹಸ್ಯವಿದರಿಯದೇ ಎಲ್ಲಾ ಛಿದ್ರ! (ಅ)
ಣೆಕಟ್ಟು ಸೈರಣೆಯಿಂದಾಯಿತು ಭದ್ರ! (ತಾ)
-ಯಿ ಗಾಂಧಾರಿಯ ಗರ್ಭವೇಕಾಯ್ತು ಛಿದ್ರ? (ಗೆ)
-ದ್ದ್ರೆ ಮನಸ್ಸಿನಸಹನೆಯನ್ನು ಭದ್ರ!
ಹನೆಯಿಲ್ಲದೆ ಯದುವಂಶ ಛಿದ್ರ!
ಕ್ಷ್ಯಪರಮಾತ್ಮನಲ್ಲಿದ್ದ್ರೆಲ್ಲಾ ಭದ್ರ!
ರ್ತವ್ಯಭ್ರಷ್ಟತೆಯಿಂದೆಲ್ಲಾ ಉಪದ್ರ! (ವ)
-ರ ಗುರುವಿನಚಿತ್ತ ಕ್ಷೀರ ಸಮುದ್ರ! (ಗೆ)
-ಣೆಯನವನಾದರೆ ಇಲ್ಲ ಉಪದ್ರ!
ವಬಂಧನದಿಂದ ಪಾರಾದ್ರೆ ಭದ್ರ! (ಭ)
-ದ್ರ ನಿರಂಜನಾದಿತ್ಯಾಶ್ರಯ ಸುಭದ್ರ!!!

ರಾಮ, ಕೃಷ್ಣರಂತೆ ನಿರಂಜನನಲ್ಲ!

ನಸ್ಸಿನಧೀನ ನಿರಂಜನನಿಲ್ಲ!
ಕೃತದಲ್ಲೂ ನಿರಂಜನನಿಲ್ಲದಿಲ್ಲ! (ಪೂ)
ಷ್ಣನಿರದೆಲ್ಲಾ ಯುಗದಲ್ಲಾಗ್ವುದಿಲ್ಲ!
ರಂಗುರಂಗಿನಂಗಿ ಆತ ತೊಡಬಲ್ಲ!
ತೆಗಳಿಕೆ, ಹೊಗಳಿಕೆ ಲಕ್ಷ್ಯವಿಲ್ಲ!
ನಿರಾಕಾರಗದು ಪ್ರಯೋಜನವಿಲ್ಲ!
ರಂಗನಾಥದನ್ನು ಬಿಟ್ಟಿರ್ಲಾಗ್ವುದಿಲ್ಲ!
ಗದೊಡೆತನ ಗಂಡಾಗುಂಡಿಗಲ್ಲ!
ರಹರಿ ಸರಿಯಾಗಿ ಆಳಬಲ್ಲ!
ಶ್ವರದಲ್ಲಿದ್ದೀಶ್ವರನೆನಿಸ್ಬಲ್ಲ! (ಪು)
-ಲ್ಲ ನಿರಂಜನಾದಿತ್ಯಾನಂದಾತ್ಮನೆಲ್ಲಾ!!!

ತನ್ನ ತಾನರಿತವಗನ್ಯ ಪೂಜೆ ಬೇಕಿಲ್ಲ! (ಉ)

-ನ್ನತದ ಕೈಲಾಸಕ್ಕಿಂತೆತ್ತರವಿನ್ನೊಂದಿಲ್ಲ!
ತಾನೇ ಸಕಲವೂ ಆದ ಮೇಲೆ ಎರಡಿಲ್ಲ!
ರ ನಾರಾಯಣನಾಗಿ ನಿಶ್ಚಿಂತನಾಗ್ಬಲ್ಲ!
ರಿಪುಗಳವನೆದ್ರು ತಲೆಯೆತ್ತುವುದಿಲ್ಲ!
ರಿದಿಕ್ಕುವನವನು ಆ ನೀಚರನ್ನೆಲ್ಲಾ!
ರ ಗುರುವಾಗುವನವ ಜಗತ್ತಿಗೆಲ್ಲಾ!
ರ್ವವೆಳ್ಳಷ್ಟೂ ಅವನಲ್ಲಿ ಇರುವುದಿಲ್ಲ! (ಧ)
-ನ್ಯನೆನಿಸುವನವ ಸುರಾ, ಸುರರಿಂದೆಲ್ಲಾ!
ಪೂಜೆಗರ್ಹನಾಗುವನವ ಅವರಿಗೆಲ್ಲಾ! (ಸ)
-ಜೆಗೊಳಗಾಗುವರು ನಿಂದಿಸಿದವರೆಲ್ಲಾ!
ಬೇಕಾದುದಾವುದೂ ಆ ಮಹಾನುಭಾವಗಿಲ್ಲ!
ಕಿರ್ಕಿರಿಯ ಸಂಸಾರ ಬಂಧನವನಿಗಿಲ್ಲ! (ಪು)
-ಲ್ಲ ನಿರಂಜನಾದಿತ್ಯಾನಂದವೊಂದೇ ಎಲ್ಲೆಲ್ಲಾ!!!

ವನಿತಾ! ನಿನ್ನಲ್ಲಿ ರತ ನರನನವರತಾ!

ನಿನ್ನಲ್ಲೇನಿರುವುದು ಅಂಥಾ ಅತಿ ಮಾನವತಾ?
ತಾತ್ಸಾರ ಮಾಡಿದರೂ ಆತ ನಿನ್ನ ಅಧೀನ ತಾ!
ನಿನ್ನಿಂದ ಸೋಲಿಸಲ್ಪಡದವನು ಯಾವನಾತ? (ಅ)
-ನ್ನ, ಬಟ್ಟೆ, ಕೊಡುವವನ ಮೇಲೂ ನಿನ್ನಾಡಳಿತ! (ಕ)
-ಲ್ಲಿನ ಗೊಂಬೆಯಂತಾಗುವನು ನಿನ್ನೆದುರು ಆತ!
ತಿ ಸುಖಕ್ಕಾಗಿ ಮರುಳಾಗಿರುವನು ಆತ!
ನ್ನಲ್ಲಿ ಶಕ್ತಿ ಕುಂದಿದಾಗ ಆತ ತಿರಸ್ಕೃತ!
ರ, ನಾರಿಯರು ಹೀಗೆ ಪರಸ್ಪರ ವಂಚಿತ!
ಮೇಶ, ಉಮೇಶರೂ ವ್ಯಾಮೋಹದಲ್ಲಿ ಬಂಧಿತ!
ರ ನಾರಿಗರುಹಬೇಕು ತನ್ನ ದುರ್ಬಲತಾ!
ತದೃಷ್ಟನೆನಿಸಿದನಿದರಿಂದ ನರ ತಾ!
ರ ಗುರು ದತ್ತನುದ್ಧರಿಸಬೇಕೆಲ್ಲರ ತಾ! (ಪ)
-ರಮಾರ್ಥ ಸಾಗರದಲ್ಲದ್ದಬೇಕೆಲ್ಲರನ್ನೂ ತಾ!
ತಾ, ನಿರಂಜನಾದಿತ್ಯನಾಗೀಗ ಕಾಪಾಡಲಾತ!!!

ಜಾತಿ ಉಳಿಯಲಿ, ಅನೀತಿ ಅಳಿಯಲಿ

ತಿಳುವಳಿಕೆ ಎಲ್ಲರಿಗೂ ಉಂಟಾಗಲಿ!
ತ್ತಮಾದರ್ಶಕ್ಕಲಕ್ಷ್ಯವಿಲ್ಲವಿರಲಿ! (ತು)
-ಳಿಯುವ ಮನೋಭಾವನ್ಯರನ್ನು ಸಾಯಲಿ!
ಶಸ್ಸು ಸಕಲರಿಗೂ ಪ್ರಾಪ್ತವಾಗಲಿ! (ಮಾ)
-ಲಿನ್ಯ ಮನಸ್ಸಿನದ್ದಿಂದೇ ಮಾಯವಾಗಲಿ!
ವ್ರವರ ಕರ್ತವ್ಯ ಅವ್ರವರು ಮಾಡಲಿ!
ನೀಚೋಚ್ಛ ಕದನ ಅವಸಾನವಾಗಲಿ!
ತಿಮ್ಮಪ್ಪನಾಸ್ತಿ ತಿರಿದುಂಬುವರ್ಗಾಗಲಿ!
ನಾಚಾರಕ್ಕದುಪಯೋಗವಾಗ್ದಿರಲಿ! (ಆ)
-ಳಿನಿಂದರ್ಸನವರೆಗೂ ಸುಖವಾಗಲಿ! (ಕಾ)
-ಯ ಮೋಹ ಧ್ಯೇಯಸಿದ್ಧಿಗಾಗಿಲ್ಲದಿರಲಿ! (ಕ)
-ಲಿಮಲ ನಿರಂಜನಾದಿತ್ಯ ಕಳೆಯಲಿ!!!

ವೇಷಕ್ಕೆ ವಶವಾಗುವವರೇ ಎಲ್ಲಾ!

ಡ್ರಿಪುಗಳ್ಮರೆಯಾಗಿರ್ಪರಾಗೆಲ್ಲಾ! (ಬೆ)
-ಕ್ಕೆಯೇ ಕಾರಣ ವೇಷಾದಿಗಳಿಗೆಲ್ಲಾ!
ಸ್ತ್ರವಿಲ್ಲದ ದಿಗಂಬರರೆಲ್ಲೆಲ್ಲಾ!
ಮೆ, ದಮೆಯ ಗಂಧ ಅವರಿಗಿಲ್ಲ!
ವಾಸನಾ ಕ್ಷಯವಂತೂ ಇಲ್ಲವೇ ಇಲ್ಲ!
ಗುಲಾಮರಾಗ್ವರೀ ಗುರುಗಳಿಗೆಲ್ಲಾ!
ರ ಗುರು ಘೋಷಿಸಿಕೊಳ್ಳುವುದಿಲ್ಲ!
ರ್ಣಾಶ್ರಮದ ಕಟ್ಟು ಅವನಿಗಿಲ್ಲ! (ಯಾ)
-ರೇನೆಂದರೂ ಅವನಿಗೆ ಲಕ್ಷ್ಯವಿಲ್ಲ!
ಲ್ಲರುನ್ನತಿಗವನ ತಪಸ್ಸೆಲ್ಲಾ! (ಅ)
-ಲ್ಲಾ ನಿರಂಜನಾದಿತ್ಯ ವೇಷಧಾರ್ಯಲ್ಲಾ!!!

ತನ್ನ ತೂತ್ಮುಚ್ಚಲಾರ್ದವನ್ಯರದ್ದೇನ್ಮಾಡ್ಬಲ್ಲ? (ತ)

-ನ್ನ ಹೊಟ್ಟೆಪಾಡಿಗಾಗಿ ಅವನ ಆಟವೆಲ್ಲಾ!
ತೂಕವಿಲ್ಲದ ಮಾತು ಗಾಳಿ ಪಾಲಾಗ್ವುದೆಲ್ಲಾ! (ಸೋ)
-ತ್ಮುಖ ತೋರಿಸದಂತಾಗ್ವ ಬಾಳವನದೆಲ್ಲಾ! (ಎ)
-ಚ್ಚರವಾಗಿರ್ಬೇಕು ಇಂಥಾ ಜನರೊಡನೆಲ್ಲಾ!
ಲಾಗ ಹಾಕ್ಬಲ್ಲವ ಅನ್ಯರಿಂದ್ಲೂ ಹಾಕಿಸ್ಬಲ್ಲ! (ಗಾ)
-ರ್ದಭವೆಂದೆಂದಿಗೂ ಕುದುರೆಯಾಗುವುದಿಲ್ಲ!
ಡವೆ ಹೇರಳವಿದ್ದವಳ್ಲಕ್ಷ್ಮಿಯೇನಲ್ಲ! (ಶೂ)
-ನ್ಯ ಬುದ್ಧಿಯವಗೆ ಬ್ರಹ್ಮಾನಂದ ಲಭ್ಯವಿಲ್ಲ! (ಪ)
-ರತತ್ವ ಚಿಂತನೆಯಿಂದದಸಾಧ್ಯವೇನಲ್ಲ! (ತ)
-ದ್ದೇವತ್ವಕ್ಕಾಗಿ ದುಡಿಯಬೇಕ್ಮಾನವರೆಲ್ಲಾ! (ಉ)
-ನ್ಮಾದ ಇಂದ್ರಿಯ ಸುಖಕ್ಕಾಗಿರುವುದೆಲ್ಲೆಲ್ಲಾ! (ಬಿ)
-ಡ್ಬಹುದಿದನ್ನು ಶ್ರೀ ಗುರುಕೃಪೆಯಾದಾಗೆಲ್ಲಾ! (ಪು)
-ಲ್ಲ, ನಿರಂಜನಾದಿತ್ಯ ಧ್ಯಾನ ಮಾಡಿದ್ದಕ್ಕೆಲ್ಲಾ!!!

ರೂಪದರ್ಶನವಾದವಗೆ ಪಾಪ, ಪುಣ್ಯವಿಲ್ಲ!

ರಮಾತ್ಮ ಸ್ವರೂಪ ತಿಳಿಯಬೇಕಿದಕ್ಕೆಲ್ಲಾ!
ಶೇಂದ್ರಿಯ ಮತ್ತು ಮನಸ್ಸು ಪರಮಾತ್ಮನಲ್ಲ! (ಸ್ಪ)
-ರ್ಶಕ್ಕೆ ಸಿಕ್ಕದವನನ್ನು ನೊಡ್ಬೇಕ್ಜ್ಞಾನದಿಂದೆಲ್ಲಾ!
ಶ್ವರವಲ್ಲದಾತ್ಮ ತಾವೆಂದರಿಯಬೇಕೆಲ್ಲಾ!
ವಾಸನಾ ಕ್ಷಯವಾಗದೇ ದರ್ಶನವಾಗ್ವುದಿಲ್ಲ!
ಮೆ, ಶಮೆಯಭ್ಯಾಸ ಕಡೆಗಣಿಸುವಂತಿಲ್ಲ!
ಡವೆ, ವಸ್ತುಗಳಲಂಕಾರದಕ್ಕೆ ಬೇಕಿಲ್ಲ!
ಗೆಜ್ಜೆ ಕಟ್ಟಿ ಕುಣಿದ ಮಾತ್ರಕ್ಕೇನೂ ಆಗ್ವುದಿಲ್ಲ!
ಪಾದಪೂಜಾದಿಗಳಾಪ್ತರಭಿಮಾನದಿಂದೆಲ್ಲ!
ರಮಾತ್ಮ ಸ್ವರೂಪದನ್ನಪೇಕ್ಷಿಸುವುದಿಲ್ಲ!
ಪುರುಷೋತ್ತಮನಿವನೆಂಬುದರಲ್ಲಿ ಸುಳ್ಳಿಲ್ಲ! (ಗ)
-ಣ್ಯನಿವನಾಗಿರುವ ಸ್ಥಾವರ, ಜಂಗಮಕ್ಕೆಲ್ಲಾ!
ವಿಧಿ, ಹರಿ, ಹರರೆಂಬುದು ಗುಣ, ನಾಮವೆಲ್ಲಾ! (ಪು)
-ಲ್ಲ ನಿರಂಜನಾದಿತ್ಯನ ಪ್ರತಿಭೆ ಅಷ್ಟಿಷ್ಟಲ್ಲ!!!

ಭವಸಾಗರ, ಭಯದಾಗರ!

ಸನಾಶನಕ್ಕೆಳುವ ನರ!
ಸಾಕದಿಹ ಪುತ್ರ ಪುತ್ರಿಯರ!
ರಿಗೇಡಿಂದಾಗಿಹ ಕಿಂಕರ!
ತಿ ಕ್ರೀಡೆ ಮಾತ್ರ ನಿರಂತರ!
ಜನೆಗಾಗಿದೆ ಅಭ್ಯಂತರ!
ಮನಿಗೇನಿಲ್ಲ ಕನಿಕರ!
ದಾರಿ ತೋರಬೇಕೀಗ ಈಶ್ವರ!
ಣವಾದರೆಲ್ಲಾ ಸುಖಕರ! (ಹ)
-ರ ನಿರಂಜನಾದಿತ್ಯಾ ಶಂಕರ!!!

ಬಹು ತರದ ಚಿಕಿತ್ಸೆಯಾಯ್ತು!

ಹುರುಪು ಮನಸ್ಸಿಗಿಲ್ಲದಾಯ್ತು!
ತ್ವ ಚಿಂತನೆಗೆ ಶುರುವಾಯ್ತು!
ಕ್ತದ ಗೊಂಬೆಗಲಕ್ಷ್ಯವಾಯ್ತು!
ತ್ತನಿಗಿದು ಆನಂದವಾಯ್ತು!
ಚಿತ್ತ ಚಾಂಚಲ್ಯ ಕಡಿಮೆಯಾಯ್ತು!
ಕಿವಿಗಾರ ಮಾತೂ ಬೇಡವಾಯ್ತು! (ವ)
-ತ್ಸೆ, ವತ್ಸಲೆಗಾದದ್ದೊಳ್ಳೇದಾಯ್ತು!
ಯಾರಿಗೆ, ಯಾರಿಲ್ಲೆಂಬರಿವಾಯ್ತು! (ಆ)
-ಯ್ತು ನಿರಂಜನಾದಿತ್ಯಾನಂದಾಯ್ತು!!!

ನಿರಂಜನಾದಿತ್ಯ ಕಿರಣವೆಲ್ಲಕ್ಕೂ ಬೇಕು!

ರಂಗುರಂಗಿನ ಹೂಗಳಿಗದಿರಬೇಕು!
ಲವ ಬತ್ತಿಸಿ ಮೋಡ ಮಾಡಲದು ಬೇಕು!
ನಾಮ, ರೂಪಾದಿಗಳ ನಿರ್ಮಾಣಕ್ಕದು ಬೇಕು!
ದಿವ್ಯ ಜ್ಞನೋದಯವಾಗಲಿಕ್ಕದಿರಬೇಕು!
ತ್ಯಜಿಸಲು ಸ್ವಾರ್ಥವನ್ನದರಾದರ್ಶ ಬೇಕು!
ಕಿವಿ, ಬಾ

ಮುಚ್ಚಿಚ್ಛೆಯಿಲ್ಲದಿರ್ಲಿಕ್ಕದಿರ್ಬೇಕು!
ಕ್ಕಸರ ಸೊಕ್ಕಡಗಿಸಲಿಕ್ಕದು ಬೇಕು! (ತೃ)
-ಣ ಸಮಾನ ಹಣವೆಂದರಿಯಲದಿರ್ಬೇಕು!
ವೆಸನಗಳ ನಾಶಕ್ಕದರ ಸ್ಪರ್ಶ ಬೇಕು! (ಎ)
-ಲ್ಲರನ್ನೂ ಮಲ್ಲರನ್ನಾಗಿಸಲದಿರ ಬೇಕು! (ಹ)
-ಕ್ಕೂರ್ಜಿತಗೊಳಿಸ್ಯದೇ ತಾನಾಗ್ಲಿಕ್ಕದು ಬೇಕು!
ಬೇಕಾದದ್ದಾದ ಮೇಲಿನ್ನೇನು ಬೇಕೆನ ಬೇಕು!
ಕುಲ ತಿಲಕ ನಿರಂಜನಾದಿತ್ಯನೆನಬೇಕು!!!

ಮಾಡಿದುಪಕಾರ ಮರೆವವನ ಗತಿ ಏನು? (ಗುಂ)

-ಡಿ ತನಗೆ ತಾನೇ ತೋಡಿಕೊಳ್ಳುತ್ತಿರ್ಪನವನು!
ದುಸ್ಸಂಗಕ್ಕೀಡಾಗಿ ನರಳುತ್ತಲಿರುವನವನು!
ತಿತನಾಗಿ ಪಾತಾಳ ಸೇರುತ್ತಿರ್ಪನವನು!
ಕಾಗೆ, ಗೂಗೆಗೂ, ಕೀಳೆನಿಸುತ್ತಿರುವನವನು!
ತಿ ಕ್ರೀಡೆಯಲ್ಲಿ ತಲ್ಲೀನನಾಗಿರ್ಪನವನು!
ದ ಮತ್ಸರ ಭರಿತನಾಗಿರುವನವನು!
ರೆಕ್ಕೆ, ಪುಕ್ಕ, ಕಿತ್ತ ಹಕ್ಕಿಯಾಗುತ್ತಿರ್ಪನವನು!
ನವಾಸೋಪವಾಸಕ್ಲೊಳಗಾಗಿಹನವನು!
ಚನಭ್ರಷ್ಟ ಮಾನಹೀನನೆನ್ಸಿಹನವನು!
ರರೂಪಿಯಾದ ನರಿಯಾಗಿರುವನವನು!
ತಿ, ಮತಿಗೆಟ್ಟ ಪಿಶಾಚಿಯಾಗಿರ್ಪನವನು!
ತಿಪ್ಪೆಯಮೇಧ್ಯ ಮೆಲ್ವ ಶ್ವಾನನಾಗಿರ್ಪನವನು!
ನಾನಂದಕ್ಕೆ ಮಾಡಿದ ಬ್ರಹ್ಮನೀ ಸೃಷ್ಟಿಯನು?
ನುಡಿಯದಾದ ನಿರಂಜನಾದಿತ್ಯೋತ್ತರವನು!!!

ಮಿತಿಯಿದ್ದರೆ ಹಿತ; ಅತಿಯಾದರಹಿತ!

ತಿನ್ನುವಾಹಾರ ಜೀರ್ಣವಾಗುವಷ್ಟಿದ್ದ್ರೆ ಹಿತ! (ಬಾ)
-ಯಿ ರುಚಿಗಾಗಿ ಸದಾ ತಿನ್ನುತ್ತಿದ್ದರಹಿತ! (ಇ)
-ದ್ದದ್ದರಲ್ಲಿ ತೃಪ್ತಿಯಿಂದ ಇರುವುದು ಹಿತ! (ನೆ)
-ರೆಯವ್ರಂತಿರಲು ಸಾಲ ಮಾಡಿದರಹಿತ!
ಹಿರಿಯರನ್ನು ಗೌರವಿಸುವುದ್ರಿಂದ ಹಿತ!
ನ್ನ ಕುದುರೆಗೇ ಮೂರು ಕಾಲೆಂದರಹಿತ!
ನಾಸಕ್ತಿ ಮಾಯೆಗಿರುವುದರಿಂದ ಹಿತ!
ತಿರಸ್ಕಾರ ಮಹೇಶ್ವರನಿಗಾದರಹಿತ!
ಯಾರನ್ನೂ ನಿಂದಿಸದಿರುವುದರಿಂದ ಹಿತ!
ಶೇಂದ್ರಿಯಗಳ ಸಡಿಲು ಬಿಟ್ಟರಹಿತ!
ಘುರಾಮನಾದರ್ಶ ಪಾಲಿಸಿದರೆ ಹಿತ!
ಹಿರಣ್ಯಕಶ್ಯಪಾದಿಗಳಂತಿದ್ದರಹಿತ! (ಹಿ)
-ತ ನಿರಂಜನಾದಿತ್ಯನಂತಿದ್ದರೆಲ್ಲಾ ಹಿತ!!!

ವಿಫಲ ಮನೋರಥ ದುಃಖಿ ದಶರಥ!

ಲಿಸದಾಗ ಪಟ್ಟಾಭಿಷೇಕದಿಷ್ಟಾರ್ಥ!
ಕ್ಷ್ಮಣನೂ ಹಿಡಿದಾಗ ರಾಮನ ಪಥ!
ಡದಿ ಮೈಥಿಲಿಯೂ ಹತ್ತಿದಾಗ ರಥ!
ನೋಡದಾದನೀ ದೃಶ್ಯವನು ದಶರಥ! (ಭ)
-ರತನದ್ದಾಯ್ತಾಮೇಲೆ ಕಠಿಣ ಶಪಥ!
ರಗುಟ್ಟಿದನು ಧೀರರಸ ದಶರಥ!
ದುಃಖಾಗ್ನಿಗಾಹುತಿಯಾಯ್ತವನಂಗ ರಥ!
ಖಿನ್ನನಾದನದ ಕಂಡು ಸುತ ಭರತ!
ಶರಥ ರಾಮ ಅಧಿಕಾರಿಯೆನುತ!
ರಣಣ್ಣಗೆನುತ ಹೊರಟ ಭರತ! (ವ)
-ರ ಚಿತ್ರಕೂಟದಲ್ಲಾಯ್ತವಗೆ ಸ್ವಾಗತ! (ಪ)
-ಥ ನಿರಂಜನಾದಿತ್ಯ ಬೆಳಗಲೆನುತ!!!

ಅತಿಕ್ರಮಕ್ಕೆ ಪ್ರತಿಕ್ರಮ ಶಿಕ್ಷೆ!

ತಿಳಿಗೇಡಿ ಬಯಸುವನು ರಕ್ಷೆ!
ಕ್ರಮ ಬದ್ಧತೆಗಿರಬೇಕಪೇಕ್ಷೆ!
ನುಜ ಮಾಡಿಹನಿದಕ್ಕುಪೇಕ್ಷೆ! (ಇ)
-ಕ್ಕೆನನ್ಯರ್ಗೆಂಬವಗೇಕೆ ನಿರೀಕ್ಷೆ?
ಪ್ರಪಂಚದಲ್ಲಿ ಇದೊಂದು ಪರೀಕ್ಷೆ!
ತಿರಿದುಂಬುವಗೂ ಮಹತ್ವಾಕಾಂಕ್ಷೆ!
ಕ್ರಯ, ವಿಕ್ರಯದಲ್ಲೆಲ್ಲಾ ಉತ್ಪ್ರೇಕ್ಷೆ!
ರ್ತ



ರಿಂತಿದ್ದರಾಗದು ಸುಭಿಕ್ಷೆ!
ಶಿವೆಯಾಗಬೇಕು ನಮಗಧ್ಯಕ್ಷೆ! (ದೀ)
-ಕ್ಷೆ ನಿರಂಜನಾದಿತ್ಯಗೀಯ್ಲಾ ದಕ್ಷೆ!!!

ನೀನಡಗಡಗಿ ಕೂತಿರುವೆ! (ನಾ)

-ನಡಿಗಡಿಗೆ ನೋಡುತ್ತಿರುವೆ!
ಮರುಧರ ನೀನಾಗಿರುವೆ!
ಭಸ್ತಿಯೆನಿಸಿ ನಾನಿರುವೆ! (ಒ)
-ಡಲಗಾಶಿಸದೆ ನೀನಿರುವೆ! (ತ್ಯಾ)
-ಗಿಯಾಗಿ ಖಗ ನಾನಾಗಿರುವೆ!
ಕೂಳೆಲ್ಲಕ್ಕೂ ನೀನಿಕ್ಕುತ್ತಿರುವೆ!
ತಿರುಕನೆನಿಸಿ ನಾನಿರುವೆ! (ಗು)
-ರು ಜಗತ್ತಿಗೇ ನೀನಾಗಿರುವೆ! (ಶಿ)
-ವೆ ನಿರಂಜನಾದಿತ್ಯನೆನ್ನುವೆ!!!

ಸತ್ಯಸಂಧ ಗೆದ್ದ, ಜರಾಸಂಧ ಬಿದ್ದ! (ನಿ)

-ತ್ಯ, ನಿರಂಜನನ ಮೇಲಾಗದು ಯುದ್ಧ!
ಸಂಪೂರ್ಣ ವಿಜಯಕ್ಕವನೊಬ್ಬ ಬದ್ಧ!
ರ್ಮ ಬಾಹಿರನ ಮೇಲೆ ಅವ ಕು

ದ್ಧ!
ಗೆಳೆಯನಾಗ್ಯೆಲ್ಲರ ಸೇವೆಗೂ ಸಿದ್ಧ! (ಬಿ)
-ದ್ದ, ಎದ್ದ, ಬಿದ್ದ, ಜರಾಸಂಧ ಅಶುದ್ಧ!
ನ್ಮವಿತ್ತವನ ಮೇಲೇಕವನೆದ್ದ?
ರಾಗ ದ್ವೇಷಿಗೆ ಕೇಡು ಸತತ ಸಿದ್ಧ!
ಸಂಗಡಿಗರಿವನವರಪ್ರಬುದ್ಧ!
ರೆಯನುದ್ಧರಿಪವ ಯೋಗ ಸಿದ್ಧ!
ಬಿದಿ, ಹರಿ, ಹರರಿಂದ್ಲೂ ಈತ ಉದ್ದ! (ಒ)
-ದ್ದಸತ್ಯ ನಿರಂಜನಾದಿತ್ಯ ಕೃಷ್ಣೆದ್ದ!!!

ದತ್ತ ಧ್ಯಾನಾರೂಢ ಗುರು ನಿರಂಜನ! (ಚಿ)

-ತ್ತವೃತ್ತಿ ನಿಂತಾಗ ದತ್ತ ನಿರಂಜನ!
ಧ್ಯಾನಗಮ್ಯಾತೀತ ದತ್ತ ನಿರಂಜನ!
ನಾಮ, ರೂಪಾತೀತ ದತ್ತ ನಿರಂಜನ!
ರೂಪಧಾರಿಯಾಗಿ ಅತ್ರಿಗೆ ನಂದನ! (ದೃ)
-ಢ ಭಕ್ತಿಗಿವನ ದರ್ಶನಾಲಿಂಗನ!
ಗುಣಗಾನಕ್ಕೊಲಿಯುವಾ ನಿರಂಜನ!
ರುಜುಮಾರ್ಗಿಯಾಗಿ ಮಾಡ್ಬೇಕು ಕೀರ್ತನ!
ನಿತ್ಯನೇಮದಿಂದರ್ಚಿಸಬೇಕವನ!
ರಂಗನಾಥನೂ ತಾನೇ ಆಗಿರ್ಪವನ!
ಗತ್ತಿನೇಕೈಕಾ ಪರಮೇಶ್ವರನ!
ಳಿನ ಸಖಾ ನಿರಂಜನಾದಿತ್ಯನ!!!

ಇಂದ್ರಿಯಾತೀತಾನಂದ ನಿರಂಜನಾದಿತ್ಯಾನಂದ! (ಉ)

-ದ್ರಿಕ್ತ ಮನೋಭಾವವಿಲ್ಲದ ಇದೇ ನಿತ್ಯಾನಂದ!
ಯಾಗ, ಭೋಗದಿಂದಾಗುವುದೆಲ್ಲಾ ಅನಿತ್ಯಾನಂದ!
ತೀರ್ಥ, ಕ್ಷೇತ್ರ ಯಾತ್ರೆಯಿಂದುತ್ತಮ ಸಂಸ್ಕಾರಾನಂದ!
ತಾಮಸ ವೃತ್ತಿ ನಾಶಕ್ಕಿದೊಂದು ಸಾಧನಾನಂದ!
ನಂಜುಂಡೇಶ್ವರನ ಸ್ಥಿತಿ ಇಂದ್ರಿಯಾತೀತಾನಂದ!
ತ್ತಾತ್ರೇಯ ಪರಿಪೂರ್ಣ ಪರಬ್ರಹ್ಮಾತ್ಮಾನಂದ!
ನಿಶಿ, ದಿನನುದಿನವಿರ್ಪುದಿದಮರಾನಂದ!
ರಂಭೆ, ಊರ್ವಶಿಯರಿಂದಾಗ್ವುದು ಮರಣಾನಂದ!
ರಾ, ಜನ್ಮಾತೀತವಾಗಿಹುದು ಸಚ್ಚಿದಾನಂದ!
ನಾದ, ಬಿಂದು, ಕಲಾತೀತವಿದು ಪ್ರಣವಾನಂದ!
ದಿಗ್ದಿಗಂತ ವ್ಯಾಪಕವಿದು ಸರ್ವೇಶ್ವರಾನಂದ!
ತ್ಯಾಗಿ, ಯೋಗಿ, ವಿರಾಗಿ ನಿರಂಜನಾದಿತ್ಯಾನಂದ!
ನಂದಕಂದ, ಗೋವಿಂದ, ಮುಕುಂದ, ಸಹಜಾನಂದ!
ಶಾವತಾರ ಸಾಕ್ಷಿ ನಿರಂಜನಾದಿತ್ಯಾನಂದ!!!

ಸಿಕ್ಕಬಹುದಿದ್ದಲ್ಲೇ ನಿತ್ಯ ಪರಮಾನ್ನ! (ಸ)

-ಕ್ಕರೆ ವ್ಯಾಧಿಯವನಿಗಿದರಿಂದ ಬನ್ನ!
ಯಸ್ದೇ ಬಂದ್ರೂ ಯೋಚಿಸ್ಬೇಕುಣ್ಣುವ ಮುನ್ನ!
ಹುಶಾರ್ತಪ್ಪಿದ್ರೆ ಕೆಡುವುದಾರೋಗ್ಯ ಚಿನ್ನ!
ದಿವ್ಯ ಪ್ರಸಾದವೆಂದೆಲ್ಲಾ ಉಂಬುವ ಚೆನ್ನ! (ಎ)
-ದ್ದರೂ, ಬಿದ್ದರೂ, ಆಗನು ಈ ಚೆನ್ನ ಖಿನ್ನ! (ಉ)
-ಲ್ಲೇಖಿಸದಂತಿಡಲಾಗ್ವುದೇ ಮನಸ್ಸನ್ನ?
ನಿರ್ವಿಕಲ್ಪ ಸಿದ್ಧೇಶ್ವರನಾಗ್ಬೇಕ್ಪ್ರಸನ್ನ!
ತ್ಯಜಿಸ್ಬೇಕಿದಕ್ಕಾಗಿ ಎಲ್ಲಾ ಆಸೆಯನ್ನ!
ಡದೇ ಅಧೈರ್ಯ ಮಾಡ್ಬೇಕ್ಸಾಧನೆಯನ್ನ!
ಕ್ಕಸರೂ ಪಡೆದರು ಸಿದ್ಧಿಗಳನ್ನ!
ಮಾತೆಯೇ ಕಾಯಬೇಕು ದೀನ ಶಿಶುವನ್ನ! (ಉ)
-ನ್ನತದ ನಿರಂಜನಾದಿತ್ಯಾ ಮಾತೆ ನನ್ನ!

ಮನಸ್ಸೀ ದೇಹಕ್ಕೇನು ಲಭ್ಯವೋ ಅದನ್ನಾಶಿಸ್ಲಿ! (ಮ)

-ನಸ್ಸಿಗದ್ರರಿವಿಲ್ಲದಿದ್ದ್ರೆ ದೇವರಿಂದರಿಯ್ಲಿ! (ನಿ)
-ಸ್ಸೀಮನೆನಿಸಿರುವಾ ದೇವರು ನೆರವು ನೀಡ್ಲಿ!
ದೇಹಕ್ಕಾಯಾಸವಾಗ್ವಾಸೆಗಳನ್ನಾಶಿಸದಿರ್ಲಿ!
ರಿ ಮಂದಿರ ದೇಹವೆಂಬುದನ್ನರಿತಿರ್ಲಿ! (ಹ)
-ಕ್ಕೇತಕ್ಕೂರ್ಜಿತಗೊಳಿಸ ಬಾರದೆಂದದರಿಯ್ಲಿ!
ನುಡಿ, ನಡೆಯೊಂದು ಮಾಡಿ ಆನಂದನುಭವಿಸ್ಲಿ!
ಕ್ಷ್ಯ ವಿನಾಶದೆಡೆಗೆ ಎಳೆಯಲ್ಪಡದಿರ್ಲಿ! (ಅ)
-ಭ್ಯಥಿ ಸಚ್ಚಿದಾನಂದ ಸಾಯುಜ್ಯಾನುಭವಕ್ಕಾಗ್ಲಿ! (ಭಾ)
-ವೋದ್ರೇಕಕ್ಕೆ ಒಳಗಾಗದೆ ವಿರಾಗಿಯಾಗಿರ್ಲಿ!
ಖಂಡ ಬ್ರಹ್ಮಾನಂದದಲ್ಲಿ ಲಯವಾಗಿ ಹೋಗ್ಲಿ!
ತ್ತಾತ್ರೇಯ ಸಾಕ್ಷಾತ್ಕಾರವಿದೇ ಎಂದು ತಿಳಿಯ್ಲಿ! (ತ)
-ನ್ನಾಗು, ಹೋಗುಗಳೆಲ್ಲವೂ ಅದರಿಂದೆಂದರಿಯ್ಲಿ!
ಶಿರೋಧಾರ್ಯ ಈ ಜ್ಞಾನವೆಂಬುದ ಮರೆಯದಿರ್ಲಿ! (ಹಾ)
-ಸ್ಲಿ, ನಿರಂಜನಾದಿತ್ಯಾನಂದ ತಲ್ಪದಲ್ಮಲಗ್ಲಿ!!!

ಅಧರ್ಮಾಚರಣೆಗೆಡೆ ಕೊಡುವುದೇತಕ್ಕೆ?

ರ್ಮಸ್ಥಾಪನೆಗೆ ಬರ್ತೇನೆನ್ನುವುದೇತಕ್ಕೆ? (ಕ)
-ರ್ಮಾನುಷ್ಠಾನ ನಿಷ್ಠನಿಗೆ ಕಷ್ಟಗಳೇತಕ್ಕೆ?
ರಾಚರಾತ್ಮನಿಗೇನು ಕಮ್ಮಿ ಸಾಮರ್ಥ್ಯಕ್ಕೆ?
ಹಸ್ಯ ಭೇದಿಸಿಷ್ಟಾರ್ಥಾನುಗ್ರಹವೀಗಕ್ಕೆ! (ಹೊ)
-ಣೆ ಗೊತ್ತವನಿಗಿದು ಸದಾ ಭೂಷಣವಕ್ಕೆ! (ಬ)
-ಗೆಬಗೆಯರಿಷ್ಟಗಳೆಲ್ಲಾ ನಿರ್ನಾಮವಕ್ಕೆ! (ಒ)
-ಡೆಯನ ಮಕ್ಕಳಿಗೆ ಬಡತನವೇತಕ್ಕೆ?
ಕೊಡಬೇಕು ಸಮಪಾಲು ಎಲ್ಲಾ ಸಂತಾನಕ್ಕೆ! (ದು)
-ಡುಕದಂತಿರ್ಪ ಭಾರವೆಲ್ಲರದ್ದೂ ಪಾದಕ್ಕೆ! (ಸಾ)
-ವು ನಿರಾಯಾಸವಾಗಿ ಬರಲೀ ಶರೀರಕ್ಕೆ!
ದೇವರ ಲೀಲೆಯಾನಂದಕ್ಕಳುವುದೇತಕ್ಕೆ?
ತ್ವ ಚಿಂತನೆಯಿಂದ ಹೋಗ್ಬೇಕು ಸಾಯುಜ್ಯಕ್ಕೆ! (ಅ)
-ಕ್ಕೆ ನಿರಂಜನಾದಿತ್ಯಾನಂದ ಮಕ್ಕಳೆಲ್ಲಕ್ಕೆ!!!

ಪ್ರಪಂಚದಲ್ಲಿ ಸಾಧಕನಿರಬೇಕು! (ಪ್ರ)

-ಪಂಚತೆ ಅವನಲ್ಲಿಲ್ಲದಿರಬೇಕು!
ನ್ಚಲ ಚಿತ್ತ ತಾನಾಗದಿರಬೇಕು!
ರ್ಶನ ಪಡೆದು ಧನ್ಯನಾಗಬೇಕು! (ಅ)
-ಲ್ಲಿಲ್ಲಿ ಸುತ್ತಾಡದಿರುತ್ತಲೂ ಬೇಕು!
ಸಾಯುಜ್ಯ ಪರಮಗುರಿಯಾಗಬೇಕು!
ರ್ಮ ಸೂಕ್ಷ್ಮತೆಯನ್ನು ತಿಳಿಯಬೇಕು!
ಷ್ಟ, ನಷ್ಟಗಳಿಗಳದಿರಬೇಕು!
ನಿತ್ಯ ನೇಮಾನುಷ್ಠಾನದಲ್ಲಿರಬೇಕು! (ಪ)
-ರ ನಿಂದೆಯನ್ನು ಮಾಡದೇ ಇರಬೇಕು!
ಬೇಕು, ಏಕಾಂತವೇ ಸಾಧನೆಗೆ ಬೇಕು!
ಕುಲ ನಿರಂಜನಾದಿತ್ಯನದ್ದಾಗ್ಬೇಕು!!!

ವರದಿ ಒಪ್ಪಿಸಿದ ನಂಜುಂಡಯ್ಯ! (ಪ)

-ರ ನಿಂದೆ ಪಾಪವೆಂದ ನಂಜುಂಡಯ್ಯ!
ದಿನ್ರಾತ್ರಿ ಧ್ಯಾನಿಸೆಂದ ನಂಜುಂಡಯ್ಯ!
ನ್ಟಿಯಾಗಿರ್ಬೇಕೆಂದ ನಂಜುಂಡಯ್ಯ! (ತ)
-ಪ್ಪಿಲ್ಲದವರಿಲ್ಲೆಂದ ನಂಜುಂಡಯ್ಯ!
ಸಿರಿಗಾಶಿಸ್ಬಾರ್ದೆಂದ ನಂಜುಂಡಯ್ಯ!
ರ್ಶನ ಜ್ಞಾನಕ್ಕೆಂದ ನಂಜುಂಡಯ್ಯ!
ನಂಬು ನೀನವನೆಂದ ನಂಜುಂಡಯ್ಯ! (ನಂ)
-ಜುಂಡ ಶಕ್ತಿ ಅದೆಂದ ನಂಜುಂಡಯ್ಯ! (ಒ)
-ಡಲು ಅದಲ್ಲವೆಂದ ನಂಜುಂಡಯ್ಯ! (ಅ)
-ಯ್ಯ ನಿರಂಜನಾದಿತ್ಯಾ ನಂಜುಂಡಯ್ಯಾ!!!

ಕೋತಿ ರೂಪಕ್ಕೆ ಕೋಟಿ ಬೆಲೆಯಾಭರಣಾಲಂಕಾರ!

ತಿಳಿತಿಳಿದೂ ಆಗುತಿದೆ ನಶ್ವರಕ್ಕಲಂಕಾರ!
ರೂಪ, ಲಾವಣ್ಯ, ಸಹಜವಾಗಿದ್ದರೇಕಲಂಕಾರ?
ರಮಾರ್ಥ ಜೀವನವೇ ದೇಹಕ್ಕಮೌಲ್ಯಾಲಂಕಾರ! (ಬೆ)
-ಕ್ಕೆಯಿಂದ ದಶಕಂಠ ಮಾಡಿದ್ದೆಲ್ಲಾ ಮಾಯಾಲಂಕಾರ!
ಕೋಣನನ್ನೂ ಜಾಣನನ್ನಾಗಿಸುವುದೇ ಅಲಂಕಾರ? (ದಾ)
-ಟಿಸಲ್ಕೆ ಭವಸಾಗರವ ಬೇಕ್ವಿವೇಕಾಲಂಕಾರ!
ಬೆತ್ತಲೆಯವಧೂತನಿಗೆ ದಿಗಂಬರಾಲಂಕಾರ! (ಲೀ)
-ಲೆ ಪರಮಾತ್ಮನದ್ದರಿಯಲಕ್ಕೆ ಬೇಡಲಂಕಾರ!
ಯಾರನ್ನೂ ಮೆಚ್ಚಿಸದು ಚಿರಕಾಲ ದೇಹಾಲಂಕಾರ!
ಕ್ತಿ ಭಾವವೊಂದೇ ಮಾನವಗೆ ಶಾಶ್ವತಾಲಂಕಾರ! (ಪ)
-ರಮೇಶ್ವರನಿಗೆ ಸದಾ ಚಿತಾ ಬೂದಿಯಲಂಕಾರ! (ಗು)
-ಣಾತೀತತೆಯೇ ಗುರು ಮಹಾರಾಜನಿಗಲಂಕಾರ!
ಲಂಕೆಯನ್ನೆಲ್ಲಾ ಉರಿಸಿತು ನೀಚ ಕಾಮಾಂಧಕಾರ!
ಕಾಪಾಡಿತು ವಿಭೀಷಣನನ್ನು ದಿವ್ಯ ರಾಮಾಕಾರ! (ಹ)
-ರ ನಿರಂಜನಾದಿತ್ಯಗಲಂಕಾರಾ ರಾಮಾವತಾರ!!!


ಲಭ್ಯದೆದುರು ವಿದ್ಯಾ, ಬುದ್ಧಿ, ರೂಪ ತೃಣ! (ಸ)

-ಭ್ಯನಾದರೂ ಲಭ್ಯವಿಲ್ಲದಿದ್ದರೆ ಹೆಣ!
ದೆವ್ವಗಳೂ ಲಭ್ಯವಿದ್ದರೆಲ್ಲರ ಪ್ರಾಣ!
ದುಡಿದ್ರೂ ಲಭ್ಯವಿಲ್ಲದಿದ್ದ್ರೆ ಸಿಕ್ಕದು ಹಣ!
ರುಚಿ, ಅರುಚಿಯೆನ್ನದವಗಿಲ್ಲ ಋಣ!
ದಿವೇಕಿಯಾಗಿ ಮುಗಿಸಬೇಕು ಪ್ರಯಾಣ! (ಪಾ)
-ದ್ಯಾದಿಯಿಂದ ಗುರು ಸೇವೆ ಗೈವವ ಜಾಣ!
ಬುದ್ಧಿಗೆಟ್ಟು ಗುರುನಿಂದೆ ಮಾಳ್ಪವ ಕೋಣ! (ರಿ)
-ದ್ಧಿ, ಸಿದ್ಧಿಗಾಶಿಸುವುದೆಲ್ಲಾ ಹಗರಣ!
ರೂಪ, ನಾಮಾತೀತಾತ್ಮನಿಗಿಲ್ಲ ಭ್ರಮಣ!
ರಮಾತ್ಮ ಸ್ವರೂಪಿ ಬ್ರಹ್ಮಜ್ಞ ಬ್ರಾಹ್ಮಣ!
ತೃಪ್ತ ತಾನಾಗಿ ಮಾಳ್ಪನು ಲೋಕ ಕಲ್ಯಾಣ! (ತೃ)
-ಣ, ನಿರಂಜನಾದಿತ್ಯಾನಂದಕ್ಕೆ ತ್ರಿಗುಣ!!!

ಇಂದ್ರಿಯಗಳ್ಮುದಿಯಾದವ್ಮನದ ಸಂಗದಲ್ಲಿ! (ಉ)

-ದ್ರಿಕ್ತವಾಗಿದ್ದವಾಸಂಗದಲ್ಲೊಂದು ಕಾಲದಲ್ಲಿ!
ತ್ನವಿಲ್ಲದಾಗಿರುವವೀಗ ವೃದ್ಧಾಪ್ಯದಲ್ಲಿ! (ಈ)
-ಗಲೂ ಅವುಗಳು ಮನಸ್ಸಿನ ಅಧೀನದಲ್ಲಿ! (ಬಾ)
-ಳ್ಮುಗಿದ್ರೆ ಸಾಕಾಗಿದೆ ಅದಕ್ಕೀಗ ಭೂಮಿಯಲ್ಲಿ!
ದಿನಕ್ಕೊಂದು ರೋಗ ಅವಕ್ಕೀಗ ಈ ದೇಹದಲ್ಲಿ!
ಯಾವ ದೇವರಿಗೂ ಕರುಣೆಯಿಲ್ಲವುಗಳಲ್ಲಿ!
ಯೆಗಾಗಿ ದುಡಿದದ್ದೆಲ್ಲಾ ವ್ಯರ್ಥವಾಯಿತಿಲ್ಲಿ! (ನೋ)
-ವ್ಮನಸ್ಸಿಗೂ ಆಗುತಿದೆ ಈಗವುಗಳಿಂದಿಲ್ಲಿ!
ಶ್ವರದವುಗಳಿಗೆ ದರ್ಶನದಾಸೆ ಇಲ್ಲಿ!
ತ್ತ ದಯೆದೋರಿದರೆ ಸಾಯ್ವನಾನಂದದಲ್ಲಿ!
ಸಂಗ ಕೊನೆಗಾಲದಲ್ಲಾದ್ರೂ ಇರಲವನಲ್ಲಿ!
ತಿ, ಮತಿದಾತ ತಾನೆನಿಸಿಕೊಂಡವನಲ್ಲಿ!
ಶೇಂದ್ರಿಯಗಳೆಂದವರ ಕರೆದವನಲ್ಲಿ! (ಇ)
-ಲ್ಲಿ ನಿರಂಜನಾದಿತ್ಯಾನಂದ ರೂಪೀ ದತ್ತನಲ್ಲಿ!!!

ಅಪ್ಪ ಕಾಶಿಗೆ, ಮಗ ಪಾಶಿಗೆ! (ತ)

-ಪ್ಪದು ಪ್ರಾರಬ್ಧವರಿಬ್ಬರಿಗೆ!
ಕಾಮ ಹರನ ಕಣ್ಣಿನಗ್ನಿಗೆ!
ಶಿವ ಭಕ್ತ ಶ್ರೀರಾಮ ಕೃಪೆಗೆ!
ಗೆರೆ

ಈರಿದ್ರೆಲ್ಲಾ ದುರ್ಗತಿಗೆ!
ನನಕ್ಕಿದು ನಮ್ಮೆಲ್ಲರಿಗೆ!
ರ್ವ ಅಡ್ಡಿ ಕಾಶಿಯ ದಾರಿಗೆ!
ಪಾಪಿ ಹೋಗುವ ಯಮನೂರಿಗೆ!
ಶಿವಭಕ್ತಿ ದಾರಿ ಸರ್ವರಿಗೆ! (ಆ)
-ಗೆ, ನಿರಂಜನಾದಿತ್ಯನಂತಾಗೆ!!!

ಹಸಿದವಗನ್ನ, ಬಾಯಾರಿದವಗೆ ಪಾನ!

ಸಿಕ್ಕದ ಹಾಗೆಲ್ಲಾ ನೀಡಬಾರದನ್ನ ಪಾನ!
ಣಿವಾರಿದ ನಂತರ ಮಾಡಬೇಕು ಸ್ನಾನ!
ಸ್ತ್ರವಿಲ್ಲದವಗೆ ಮಾಡಾಬೇಕ್ವಸ್ತ್ರ ದಾನ!
ಗನಮಣಿಯ ಆದರ್ಶದಿಂದ ಪಾವನ! (ಉ)
-ನ್ನತದಲ್ಲವನದ್ದು ನಿಸ್ಪೃಹತಾ ಜೀವನ!
ಬಾಯಿಬಡಕತನದಿಂದೇನು ಪ್ರಯೋಜನ? (ಆ)
-ಯಾಸಮಾಡಿಕೊಳ್ಳುವನು ವೃಥಾ ಪ್ರತಿದಿನ! (ಅ)
-ರಿತಿದನು ಆಗಬೇಕು ಮಾನವ ಸಜ್ಜನ!
ಯಾನಿಧಿ ಪರಮಾತ್ಮನದ್ದಾಗ್ಬೇಕ್ದರ್ಶನ! (ಭ)
-ವಭಯದಿಂದಾಗ ನರನಿಗೆ ವಿಮೋಚನ! (ಬ)
-ಗೆಬಗೆಯಭಿಲಾಷೆಯಿಂದಾಗ್ವುದು ಬಂಧನ!
ಪಾಪಕೂಪದಲ್ಲದ್ದುವುದು ಮಾಯಾ ಚಿಂತನ! (ಅ)
-ನವರತ ಪ್ರಾರ್ಥಿಸು ನಿರಂಜನಾದಿತ್ಯನ!!!

ನಿನ್ನ ಧರ್ಮದಲ್ಲಿ ನೀನಿರೆಂದಿರಿಸಿಹ ದತ್ತ!(ನ)

-ನ್ನ ಧ್ಯಾನವೇ ನಿನ್ನ ಧರ್ಮವೆನ್ನುತ್ತಿರುವ ದತ್ತ!
ಮ, ಕರ್ಮನಿಷ್ಠ ಸಾಯುಜ್ಯಕ್ಕರ್ಹನೆಂಬ ದತ್ತ! (ಮ)
-ರ್ಮವಿದನ್ನರಿತು ಮಾಡು ಸಾಧನೆಯೆಂಬ ದತ್ತ!
ಶೇಂದ್ರಿಯ ವಿಷಯಾಸಕ್ತಿ ದಹಿಸೆಂಬ ದತ್ತ! (ಅ)
-ಲ್ಲಿ, ಇಲ್ಲಿ, ಇಲ್ಲರಲ್ಲೂ ನೋಡು ನನ್ನನ್ನೆಂಬ ದತ್ತ!
ನೀನಿಚ್ಛಿಪ ರೂಪ ದರ್ಶನದಿಂದೇನೆಂಬ ದತ್ತ!
ನಿಜರೂಪವನ್ನರಿತದೇ ನೀನಾಗೆಂಬ ದತ್ತ! (ಬಾ)
-ರೆಂದರೆ ಬರುವ ರೂಪಿ ಅಸ್ಥಿರವೆಂಬ ದತ್ತ! (ಆ)
-ದಿ, ಮಧ್ಯಾಂತವಿಲ್ಲದ್ದೇ ಸ್ಥಿರ ರೂಪವೆಂಬ ದತ್ತ!
ರಿಸಿ, ಮುನಿಗಳಿಗಿದು ಗೋಚರವೆಂಬ ದತ್ತ!
ಸಿರಿಯರಸ, ಉಮೆಯರಸರಿದೆಂಬ ದತ್ತ!
ದಿನಾಲ್ಕು ಲೋಕದಲ್ಲೂ ವ್ಯಾಪಕವೆಂಬ ದತ್ತ! (ಈ)
-ದರ್ಶನ ನಿಶ್ಚಲತತ್ವ ಸ್ಥಿತನಿಗೆಂಬ ದತ್ತ! (ಇ)
-ತ್ತತ್ತೆತ್ತೆತ್ತ ನಿರಂಜನಾದಿತ್ಯಾತ್ಮಾನೆಂಬ ದತ್ತ!!!

ಸ್ಮರಿಸಿದವನ ಉದ್ಧಾರ! (ಉ)

-ರಿಸಿದಸುರನ ಸಂಹಾರ!
-ರಿಸಿದಸುರನ ಸಂಹಾರ!
ಸಿರಿಯರಸಗಿದಾಚಾರ!
ಶಾವತಾರದ್ದಿದೇ ಸಾರ!
ಸುಧೇಶಗಿದಲಂಕಾರ! (ಆ)
-ನತರಿಗೆಲ್ಲಾ ಪುರಸ್ಕಾರ!
ದ್ಧಟತನಕ್ಕ ಧಿಕ್ಕಾರ! (ಶ್ರ)
-ದ್ಧಾ, ಭಕ್ತಿಗೊಲಿವ ಶಂಕರ! (ಹ)
-ರ, ನಿರಂಜನಾದಿತ್ಯೇಶ್ವರ!!!

ಬಹುಕಾಲ ಪೂಜಿಸಿದ್ದನ್ನು ತೊಲಗೆನ್ನುವುದೆಂತು?

ಹುಸಿಯಾದರೂ ಅದಕ್ಕೆ ಮಸಿ ಬಳಿಯುವುದೆಂತು?
ಕಾದಿಲ್ಲವೇ ಕೃಪೆಗೋಸ್ಕರ ಬರಿಗಾಲಲ್ಲಿ ನಿಂತು?
ಕ್ಷ್ಯ ಸಿದ್ಧಿಗೀಸ್ಕರ ದುಡಿಯುವ ಕ್ರಮವಿನ್ನೆಂತು?
ಪೂರ್ವಾರ್ಧ ಬಾಳಿನದೆಲ್ಲಾ ಹೀಗೆ ಕಳೆಯುತ್ತಾ ಬಂತು!
ಜಿಹ್ವಾದಿಂದ್ರಿಯ ಚಾಪಲ್ಯ ಕಡಿಮೆಯಾಗುತ್ತಾ ಬಂತು!
ಸಿರಿಯರಸನನ್ನು ಒಲಿಸಿಕೊಳ್ಳುವುದೆನ್ನೆಂತು? (ತ)
-ದ್ದರ್ಶನದುದ್ದೇಶಕ್ಕಾಗಿ ಕಾಯ ಕರಗುತ್ತಾ ಬಂತು! (ತಿ)
-ನ್ನುವುದುಣ್ಣುವುದಕ್ಕೂ ಮನಸ್ಸಿಲ್ಲದಾಗುತ್ತಾ ಬಂತು!
ತೊಗಲಿನ ಗೊಂಬೆಯಾಟದಿಂದಾರಿಗಾನಂದ ಬಂತು? (ಮ)
-ಲ ಮೂತ್ರದ ಗುಂಡಿಯಲ್ಲಿ ನರಳಬೇಕಾಗಿ ಬಂತು!
ಗೆದ್ದು ಮೇಲೆದ್ದು ಬಂದರೂ ದುರ್ವಾಸನೆ ಹೊಗ್ದಿದ್ದ್ರೆಂತು? ಒ

ಕಾಣುಬಂತು? (ನಿ)
-ನ್ನುಪೇಕ್ಷೆ ನನ್ನುತ್ಸಾಹವನ್ನೆಲ್ಲಾ ದಹಿಸುತ್ತಾ ಬಂತು! (ಕಾ)
-ವು ಸಹಿಸುವುದಕ್ಕೂ ಆಗದ ದುಸ್ಥಿತಿ

ಈಗ ಬಂತು! (ಇ)
-ದೆಂತು ಪರಿಹಾರವೋ? ತಿಳಿಯದೇಗ ಭ್ರಮೆ ಬಂತು!
ತುರಿಯಾತೀತ ನಿರಂಜನಾದಿತ್ಯಗರ್ಪಣೆಯಿಂತು!!!

ನೇಮ, ನಿಷ್ಠ ಬಾಳಿನ ತಾಳ, ಮೇಳ!

ನಸ್ಸಿದರಿಂದ ಸದಾ ನಿರಾಳ!
ನಿರಂಜನ ಬಲ್ಲನಿದರ ಆಳ! (ನಿ)
-ಷ್ಠೆಯಿಲ್ಲದರಸು ಚೆನ್ನಾಗಿ ಆಳ!
ಬಾಲ ಹಿಡಿಕರಿಗಿಕ್ಕುವ ಕೂಳ! (ನ)
-ಳಿನನಾಭವ ಸ್ಸರಿಸಾ ದುರುಳ!
ರಹರಿ ದಾಸಾ ಪ್ರಹ್ಲಾದ ಬಾಳ!
ತಾಪಸೂ

ತ್ತಮನಂತಿದ್ದಾ ತರಳ! (ಒ)
-ಳ, ಹೊರ, ಶುದ್ಧವನಂತೆ ವಿರಳ!
ಮೇದಿನೀಪತಿಯಾದರೂ ಸರಳ! (ಬಾ)
-ಳ ನಿರಂಜನಾದಿತ್ಯಗಾ ತರಳ!!!

ತಿನ್ಲಿಕ್ಕಿದ್ದವಗೆ ತಿಂದ್ರಾಗುವುದಿಲ್ಲ! (ತಿ)

-ನ್ಲಿಕ್ಕಿಲ್ಲದವ್ಗೆ ತಿಂದ್ರೇನೂ ಆಗ್ವುದಿಲ್ಲ! (ಸೊ)
-ಕ್ಕಿದ ಮಾನವನಿಗಿದರರಿವಿಲ್ಲ! (ಮ)
-ದ್ದನ್ನಿದಕ್ಕೆ ಧನ್ವಂತರಿ ಕೂಡಬಲ್ಲ! (ಅ)
-ವನನ್ನು ಕಂಡವರಾರೆಂಬರಿವಿಲ್ಲ! (ಹೇ)
-ಗೆ ಈ ಸಮಸ್ಯಾ ನಿವೃತ್ತಿಯೋ ಗೊತ್ತಿಲ್ಲ!
ತಿಂದುಂಡು ಸಾಯುವುದಕ್ಕೀ ಜನ್ಮವಲ್ಲ! (ನಿ)
-ದ್ರಾಹಾರ, ಮೈಥುನದಿಂದೇ ದುಃಖವೆಲ್ಲಾ!
ಗುರುಹಿರಿಯರ ಮಾತಿದು ಸುಳ್ಳಲ್ಲ! (ಕಾ)
-ವುದವರೆಲ್ಲರ ಭಾರ ನಮ್ಮನ್ನೆಲ್ಲಾ!
ದಿನ, ರಾತ್ರಿ, ಪ್ರಾರ್ಥಿಸೋಣವರನ್ನೆಲ್ಲಾ! (ಫು)
-ಲ್ಲ ನಿರಂಜನಾದಿತ್ಯನ ಮೂಲಕೆಲ್ಲಾ!!!

ಮನದಿಂದಾಗಬೇಕೆಲ್ಲಾ ತ್ಯಾಗ! (ವ)

-ನದಲ್ಲೂ ಮಾಡಿದರೆಲ್ಲಾ ಭೋಗ! (ಅಂ)
-ದಿಂದಿನದ್ದೇನಲ್ಲಾ ಭವ ರೋಗ!
ದಾಸನನ್ನೂ ಪೀಡಿಸಿತೀ ರೋಗ!
ತಿ ನೀನೆಂಬುದೇ ಶಿವಯೋಗ!
ಬೇಕಿದಕ್ಕೆ ಶುದ್ಧ ಮನೋ ಜಾಗ!
ಕೆರೆ, ಬಾವಿ, ನದಿಯ