ಧ್ಯಾನ ಮಿಂಚು: ಭಾಗ 4
“ನಿರಂಜನೋಪದೇಶ”
(ಮುಕ್ತಿಗೆ ದಾರಿ)
-ದಾಸರ ದಾಸರಾಗಿ ಧನ್ಯರಾಗಿರಿ!
ರೋಗಕಾರಕಾಹಾರ ಸೇವಿಸದಿರಿ! (ಯೋ)
ಗ್ಯತಾನುಸಾರ ಸಂಸಾರ ಸಾಗಿಸಿರಿ!
ಭಾರ್ಯಾಭರ್ತರನ್ಯೋನ್ಯವಾಗಿರುತ್ತಿರಿ! (ವ್ಯಂ)
ಗ್ಯವಾಗಿಯೂ ಯಾರನ್ನೂ ನೋಯಸದಿರಿ!
ವಂಶಗೌರವವನ್ನುಳಿಸಿ ಕೊಂಡಿರಿ!
ತತ್ತ್ವಚಿಂತನೆ ಸದಾ ಮಾಡುತ್ತಲಿರಿ!
ರಾಗ ದ್ವೇಷಗಳಿಂದ ದೂರವಾಗಿರಿ!
ಗಿರಿಜಾಧವನ ಧ್ಯಾನ ಮಾಡುತ್ತಿರಿ!
ಇದು ಮುಕ್ತಿಗೆ ದಾಯಿಯೆಂದರಿತಿರಿ! (ಹ)
-ರಿ, ನಿರಂಜನಾದಿತ್ಯನೆಂದರಿಯಿರಿ!!!
“ವಂದನಂ”
ರಂಗಕ್ಷೇತ್ರ ನಿವಾಸಿನ
ಜರ್ಪಧ್ಯಾನ ನಿರತಂ
ನರ್ತಾಭೀಷ್ಟ ಪ್ರದಾಯಕಂ
ಗುರುಂ ಮೌನವ್ರತೋದ್ದೀಪ್ತಂ
ರುಂಡ ಮಾಲಾಧರ ಪ್ರಿಯಂ
ವಂದೇ ವಂದಾರು ಮಂದಾರಂ
ದೇವ ದತ್ತ ಸ್ವರೂಪಿಣಂ
-ವಿರ್ಭವಿಸಿತವನಲ್ಲಾತ್ಮ ಶುದ್ಧ!
ಕಳೆಯಿತಿಂದಿಗವನ ಪ್ರಾರಬ್ಧ! (ಅ)
-ಭಯ ಪ್ರಧಾನ ಮಾಡಿದನು ಸಿದ್ಧ! (ಯು)
-ಕ್ತ ಸೇವೆ ಕೈಕೊಂಡನಾ ವಯೋವೃದ್ಧ!
ನಡೆಸಿ ಕೊಂಡೊದನವನಾ ಸಿದ್ಧ! (ಪಾ)
-ವನ ಪಾದಕ್ಕೆರಗಿದನಾ ವೃದ್ಧ!
ನೊಸಲಿಂದಿಟ್ಟನು ಪ್ರಸಾದಾ ಸಿದ್ಧ! (ತ)
-ಬ್ಬಲಿಗಾಯ್ತು ಹಬ್ಬವೆಂದನಾ ವೃದ್ಧ! (ನಿ)
-ವೃತ್ತ ನೀನಾಗು ಬೇಗೆಂದನಾ ಸಿದ್ಧ! (ಸಿ)
-ದ್ಧ, ನಿರಂಜನಾದಿತ್ಯಾನಂದ ಶುದ್ಧ!!!
ಚಿತ್ರ ವಿಚಿತ್ರ ಮಾಯಾ ಚಿತ್ರ! (ಸೂ)
-ತ್ರ ಧಾರಾತ್ಮನಿರ್ಪ ಸರ್ವತ್ರ!
ವಿಶ್ವವವನ ಕಲಾ ಕ್ಷೇತ್ರ!
ಚಿತ್ರೀಕರಣ ದಿನ, ರಾತ್ರ! (ಚಿ)
ತ್ರದಲ್ಲಿದೆ ವಿವಿಧ ಪಾತ್ರ!
ಮಾತಾ, ಪಿತರು ನೆಪ ಮಾತ್ರ! (ಆ)
-ಯಾಸಕಾರಕಾ ಚಲ ಚಿತ್ರ!
ಚಿದಾಕಾಶದಲ್ಲಂತ್ಯಾ ಚಿತ್ರ! (ಚಿ)
-ತ್ರ ನಿರಂಜನಾದಿತ್ಯ ತಂತ್ರ!!!
ತ್ರಯಮೂರ್ತಿ ಸ್ವರೂಪಾಧಾರ ನಾನಮ್ಮಾ!
ಕವಿತಾಶಕ್ತ್ಯನುಪಮನಿನ್ನದಮ್ಮಾ! (ಕ)
-ಥಾಸಂವಿಧಾನಕ್ಕಧಿನಾಥ ನಾನಮ್ಮಾ!
ನಿರ್ದೆಶನಾಚಾತುರ್ಯವೂ ನಿನ್ನದಮ್ಮಾ! (ಆ)
-ರೂಪ, ನಾಮಗಳ ಚೈತನ್ಯ ನಾನಮ್ಮಾ!
-ಪವಾಡ ಅತಿವಿಚಿತ್ರ ನಿನ್ನದಮ್ಮಾ (ಹೊ)
-ಣೆಗಾರ ವರಗುರುಸ್ವಾಮಿ ನಾನಮ್ಮಾ!
ನಿರತೆನ್ನ ಸೇವಾಭಾರ ನಿನ್ನದಮ್ಮಾ! (ನಿ)
-ನ್ನನೆನ್ನೊಳಗೈಕ್ಯಗೈವಾತ್ಮ ನಾನಮ್ಮಾ!
ದತ್ತಗುರು ಸ್ವರೂಪವೇ ನಿನ್ನದಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಾನಂದ ನಾನಮ್ಮಾ!!!
ದೇವರಚಿತ್ತಕ್ಕದು ಬಂದಿಲ್ಲ! (ಬಾ)
-ಕಿ ಕಾರಣ ನಂಬತಕ್ಕದಲ್ಲ! (ತ)
-ನ್ನೂರಲ್ಲಾದರೆ ಕಷ್ಟವೇ ಇಲ್ಲ!
ಉದ್ಯೋಗಾತನೇ ಕೊಡಬೇಕಲ್ಲ! (ಉ)
-ದ್ಯೋಗಾಸಕ್ತಿ ಕಡಿಮೆಯೇನಿಲ್ಲ!
ಗರ್ವಿಷ್ಟ ತಾನಾಗಿರುವುದಿಲ್ಲ! (ಪು)
-ಸಿಯಾಡುವಭ್ಯಾಸ ತನಗಿಲ್ಲ! (ಸಿ)
-ಕ್ಕಿದ್ದೇನನ್ನೂ ಬೇಡೆನ್ನುವುದಿಲ್ಲ! (ಬ)
-ಲ್ಲ,ನಿರಂಜನಾದಿತ್ಯಾಪ್ತನೆಲ್ಲ!!!
-ಹಿರಂಗಕ್ಕಾಗದದು ಜೀವಾ!
ಮೆಲ್ಲಮೆಲ್ಲೊಳಗೆ ಬಾ ಜೀವಾ!
ತೋರಿ ನಿನ್ನ ಕೊಲುವೆ ಜೀವಾ! (ಬ)
-ರುವೆ ತಾನೆನ್ನಲ್ಲಿಗೆ ಜೀವಾ?
ಗುರುವಿನಿಷ್ಟೆನ್ನಿಷ್ಟ ದೇವಾ! (ಮ)
-ರು ಮಾತನಾಡೆ ನಾನು ದೇವಾ!
ದೇವದೇವ ಶ್ರೀಗುರುದೇವಾ! (ಈ)
-ವಾ ನಿರಂಜನಾದಿತ್ಯೈಕ್ಯವಾ!!!
-ದ್ಯೋಪಚಾರ ಪೂಜೋದ್ಯೋಗವಮ್ಮಾ! (ತ್ಯಾ)
-ಗಿಯಾಗಿರಬೇಕುದ್ಯೋಗಕ್ಕಮ್ಮಾ!
ನಿಚೋಚ್ಛವೆಣಿಸಬಾರದಮ್ಮಾ!
ನಾಮಸ್ಮರಣೆ ಮಾಡಬೇಕಮ್ಮಾ!
ಗಿರಿಜೆಗಾರಾಮ ಮಂತ್ರವಮ್ಮಾ! (ಪ)
-ರಮ ಪಾವನೆಯದರಿಂದಮ್ಮಾ!
ಬೇಡನ್ಯಕಸುಬು ನಿನಗಮ್ಮಾ!
ಕನಕಾಭರಣದೇ ಕಾಣಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯೋದ್ಯೋಗ್ಯಮ್ಮಾ!!!
-ಯ ರುಚಿಗದ ಬಿಡಬೇಡಮ್ಮಾ!
ಕಂಗೆಟ್ಟರೆ ಕಷ್ಟ ತಪ್ಪದಮ್ಮಾ! (ಉ)
-ದರ ಶಾಂತಿಗಾಗ್ಯನ್ನ ನೀಡಮ್ಮಾ!
ನಿತ್ಯ ನೇಮವಿದಕೆ ಬೇಕಮ್ಮಾ! (ಆ)
-ಗಾಗೇನನ್ನೂ ಕೊಡಬಾರದಮ್ಮಾ! (ಹೀ)
-ಗಿದ್ದರೆ ನೆಮ್ಮದಿ ನಿನಗಮ್ಮಾ! (ನೀ)
-ರತ್ಯಂತುತ್ತಮ ಪಾನೀಯವಮ್ಮಾ! (ಕ)
-ಲಹವಾದರೆ ಕಂದನಿರನಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾ ಕಂದಮ್ಮಾ!!!
ದೂರದಲ್ಲೂ ಸುಗಂಧಾ ಪೂವಯ್ಯಾ!
ಇಂಬು ಸಕಲರಿಗಾ ಪೂವಯ್ಯಾ! (ಹಿಂ)
-ದೂ ಮಸಲ್ಮಾನಾನಂದಾ ಪೂವಯ್ಯಾ!
ಅನ್ಯೋನ್ಯ ಪ್ರೇಮಭಾವಾ ಪೂವಯ್ಯಾ! (ಒಂ)
-ದೊಂದೆಸಳೂ ಸಾರ್ಥಕಾ ಪೂವಯ್ಯಾ!
ದುರಭಿಮಾನ ಶೂನ್ಯಾ ಪೂವಯ್ಯಾ!
ಪೂರ್ವಾಪರ ನೋಡದಾ ಪೂವಯ್ಯಾ! (ಶಿ)
-ವ ಸೇವೆಗಾಗಿಹುದಾ ಪೂವಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾ ಪೂವಯ್ಯಾ!!!
ಮೈ, ಕೈ, ನೆಕ್ಕುತ್ತಿತ್ತಾ ಬೆಕ್ಕು!
ಕೈ ತಪ್ಪೀಗ ಹೋಯ್ತಾ ಬೆಕ್ಕು! (ಮ)
-ನೆ ಮಗುವಾಗಿತ್ತಾ ಬೆಕ್ಕು! (ನೆ)
-ಕ್ಕುವುದಾರನ್ನೀಗಾ ಬೆಕ್ಕು? (ಮ)
ತ್ತಿಲ್ಲಿ ಒಪ್ಪುದೇನಾ ಬೆಕ್ಕು? (ಸು)
-ತ್ತಾಡಲಾರದೀಗಾ ಬೆಕ್ಕು!
ಬೆದರುತಿದೀಗಾ ಬೆಕ್ಕು! (ಬೆ)
-ಕ್ಕು ನಿರಂಜನಾದಿತ್ಯಕ್ಕು!!!
-ಡಿಗಡಿಗಪಚಾರದಕಪ್ಪುದಕೆ!
ಗಮನವಿಳೆಯ ಕಡೆಗಾದುದಕೆ! (ಹಾ)
-ಡಿ, ಪಾಡಿ, ಕೂಡಿಯೊಡನಾಡದುದಕ್ಕೆ!
ಗೊಡ್ಡಾಚಾರಗಳ ಬಿಡದಿದ್ದುದಕೆ!
ಡಮರುಗೇಶನ ಮರೆತಿದ್ದುದಕೆ! (ಕ)
-ಲಿಮಲದ ಲೇಪನ ಹೆಚ್ಚಾದುದಕೆ!
ಗಾಳಿಗೋಪುರ ಕಟ್ಟಲೆತ್ನಿಸಿದಕೆ! (ಛಾ)
-ಯಾಪತಿಯ ಕಿರಣ ಬೀಳದುದಕೆ!
ಸರ್ವನಾಮವೊಂದೆಂಬರಿವಿಲ್ಲದಕೆ!
ವೇದಾಂತ ಬರೀ ಬಾಯಿ ಮಾತಾದುದಕೆ! (ಏ)
-ಕೆ?ನಿರಂಜನಾದಿತ್ಯನರಿಯದಕೆ!!!
-ಣದ ಭತ್ತಕ್ಕೆ ಜಾಗ ಬೇಕಯ್ಯಾ!
ಜವರಾಯ ಕಾದಿರುವನಯ್ಯಾ!
ಬೇಡವನ ಸಹವಾಸವಯ್ಯಾ!
ಗದ್ದು ವಾಸನೆ ಹಳೇ ಕಾಳಯ್ಯಾ! (ಸು)
-ಖಾನಂದ ಬಂಗಾರುಸಣ್ಣವಯ್ಯಾ! (ಬ )
-ಲಿಸಬೇಕುತ್ತಮತಳಿಯಯ್ಯಾ!
ಮಾತಿನಿಂದ ಕಾಲ ಪೋಲಾಯ್ತಯ್ಯಾ! [ಮ]
-ಡದಿಯಿಷ್ಟಕ್ಕೀಗೆಡೆಯಿಲ್ಲಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯ ಬಂದಯ್ಯಾ!!!
ಚಿರ ಸುಖಕ್ಕೆ ಬಂತಾ ಬೆಕ್ಕು! (ಕ)
-ತ್ಲಲ್ಲೊಳಗೋಡಿ ಬಂತಾ ಬೆಕ್ಕು! (ಸ)
-ಭ್ಯವಾಗಿದ್ದುಕೊಂಡಿತಾ ಬೆಕ್ಕು! (ಸು)
-ದತಿಗೀಗ ಬೇಕಾಯ್ತಾ ಬೆಕ್ಕು!
ಬಲವಂತಕ್ಕೀಡಾಯ್ತಾ ಬೆಕ್ಕು! []
-ಡವಾಗಿರುವುದೀಗಾ ಬೆಕ್ಕು!
ಬೆಣ್ಣೆಈಗ ತಿನ್ನದಾ ಬೆಕ್ಕು! [ಬೆ]
-ಕ್ಕು ನಿರಂಜನಾದಿತ್ಯಾತ್ಮಕ್ಕು!!!
-ದ್ದರೆ ಮನೆ ಆಗಲಿ ಗದ್ದಲ! [ಕ]
-ಲಿವ ವಿದ್ಯಾರ್ಥಿಗೇಕೆ ಗದ್ದಲ?
ಪೂರ್ಣವಾದಾಗಾಗಲಿ ಗದ್ದಲ! [ಸಂ]
-ಜೆಯಾರತಿಗೀಗೇಕೆ ಗದ್ದಲ? [ಯೋ]
-ಗೇಶನಿದ್ದಾಗಾಗಲಿ ಗದ್ದಲ!
ಕೆಲಸಕಾರ್ಯಾತಂಕ ಗದ್ದಲ! [ಯೋ]
-ಗ ಸವಿವಾಗಾಗಲಿ ಗದ್ದಲ! [ಗೆ]
-ದ್ದಲು ಹುಳಕ್ಕಿದೆಯೇ ಗದ್ದಲ [ಬಾ]
-ಲ ನಿರಂಜನಾದಿತ್ಯ ನಿರ್ಮಲ!!!
ರಂಗನಾಥನೆಂದಾತ್ರಿನಂದನ!
ಜಗತ್ಪತಿಯೆಂದಾತ್ರಿನಂದನ!
ನಾದಾನಂದನೆಂದಾತ್ರಿನಂದನ! [ಮೂ]
-ರೆಂವನಲ್ಲೆಂದಾತ್ರಿನಂದನ!
ದಾಶರಥಿಯೆಂದಾತ್ರಿನಂದನ!
ತ್ರಿಲೋಕಾತ್ಮನೆಂದಾತ್ರಿನಂದನ! [ಅ]
-ನಂಗಾಧಿಪನೆಂದಾತ್ರಿನಂದನ!
ದತ್ತನವನೆಂದಾತ್ರಿನಂದನ! [ಘ]
-ನ ನಿರಂಜನಾದಿತ್ಯಾ ಪಾವನ!!!
ದತ್ತಗಾಸ್ತಿ, ಪಾಸ್ತಿ, ನಾಸ್ತಿ! (ಚಿ)
-ತ್ತ ಶಾಂತಿಯೊಂದವನಾಸ್ತಿ!
ಗಾಳಿ, ಬೆಳಕವನಾಸ್ತಿ! [ಅ]
-ಸ್ತಿ, ನಾಸ್ತ್ಯತೀತವನಾಸ್ತಿ!
ಪಾಪ ಪುಣ್ಯ ರಹಿತಾಸ್ತಿ! [ಜಾ]
-ಸ್ತಿ, ಕಮ್ಮಿಲ್ಲದಾನಂದಾಸ್ತಿ!
ನಾಮ, ರೂಪವಿದೂರಾಸ್ತಿ! [ಸ್ವ]
-ಸ್ತಿ, ನಿರಂಜನಾದಿತ್ಯಾಸ್ತಿ!!!
ಉಸಿರಲ್ಲ, ಮನಸಲ್ಲ, ನಾನೆಲ್ಲೆಲ್ಲಾ!
ಸಿಹಿಯಲ್ಲ, ಕಹಿಯಲ್ಲ, ನಾನೆಲ್ಲೆಲ್ಲಾ!
ರಸವಲ್ಲ, ಕಸವಲ್ಲ, ನಾನೆಲ್ಲೆಲ್ಲಾ! [ಪ]
-ಲ್ಲವವಲ್ಲ, ಫಲವಲ್ಲ, ನಾನೆಲ್ಲೆಲ್ಲಾ!
ಮರವಲ್ಲ, ಗಿಡವಲ್ಲ, ನಾನೆಲ್ಲೆಲ್ಲಾ!
ನರನಲ್ಲ, ನಾರಿಯಲ್ಲ, ನಾನೆಲ್ಲೆಲ್ಲಾ!
ಸಟೆಯಲ್ಲ, ದಿಟವಲ್ಲ, ನಾನೆಲ್ಲೆಲ್ಲಾ! [ಕ]
-ಲ್ಲದುವಲ್ಲ, ಹುಲ್ಲದಲ್ಲ, ನಾನೆಲ್ಲೆಲ್ಲಾ!
-ನೆಲವಲ್ಲ, ಜಲವಲ್ಲ ನಾನೆಲ್ಲೆಲ್ಲಾ! [ನ]
-ಲ್ಲೆಯಾನಲ್ಲ, ನಲ್ಲಾನಲ್ಲ, , ನಾನೆಲ್ಲೆಲ್ಲಾ! [ಅ]
-ಲ್ಲಾ ನಿರಂಜನಾದಿತ್ಯಾನಂದನೆಲ್ಲೆಲ್ಲಾ!!!
ನಾದಬ್ರಹ್ಮ ನಿತ್ಯಾನಂದ!
ಮೃತ ಸಂಜೀವಿನ್ಯಾನಂದ!
ತನ್ಮಯ ಮನಾತ್ಮಾನಂದ!
ಪಾದಸೇವಾಮರಾನಂದ!
ನಾರಸಿಂಹ ಸ್ತೋತ್ರಾನಂದ!
ನಂದಕಂದ ನಾಮಾನಂದ! (ಕಂ)
-ದ ನಿರಂಜನಾದಿತ್ಯಂದ!!!
-ಧುಹೃದಯ ಸತತಾ ರಮಣ! (ಸ್ವ)
-ರ, ತಾಳ ಬದ್ಧ ಗೀತಾ ರಮಣ!
ಗಾನಲೋಲ ಶ್ರೀಲೋಲಾ ರಮಣ!
ನಯ, ವಿನಯ ಶೀಲಾ, ರಮಣ!
ಮಲಹರ ಶಂಕರಾ ರಮಣ! (ಧ್ಯಾ)
-ನೋಪಾಸನ ನಿರತಾ ರಮಣ!
ರಘುಪತಿ ರಾಘವಾ ರಮಣ!
ಮದನ ಮೋಹನಾ ಶ್ರೀರಮಣ! (ತಾ)
-ಣ ನಿರಂಜನಾದಿತ್ಯ ಸ್ಮರಣ!!!
-ಮಾರಮಣ ವಿಶ್ವನಾ ವಾದನ! (ದ)
-ಧಿಯನ್ನ ಉಣಿಸಿದಾ ವಾದನ! (ಓಂ)
-ಗೊಉ ಮೈ ಮರೆಸಿದಾ ವಾದನ!
ದತ್ತಗಾನಂದವಾದಾ ವಾದನ! (ದೇ)
-ವೀ ಪ್ರಸಾದದಿಂದಾದಾ ವಾದನ! (ಪ್ರಾ)
ಣಾರ್ಪಣೆಗೂ ಅಂಜದಾ ವಾದನ! (ಭಾ)
-ವಾವೇಶಾತ್ಮಾನಂದದಾ ವಾದನ!
ದರ್ಶನಾನುಗ್ರಹದಾ ವಾದನ! (ಘ)
-ನ ನಿರಂಜನಾದಿತ್ಯಾವಾಹನ!!!
-ಮಾಪತಿ ವಿಶ್ವನಾಥಾರ್ಚನ! (ದ)
-ಧಿಯನ್ನ ಭಕ್ತಿ ನಿವೇದನ! (ಚಿ)
-ತ್ತ ಶುದ್ಧಿಯಿಂದಾದಾಲಾಪನ!
ವೀರ್ಯ ವೃದ್ಧಿಯಿಂದಾದಾ ತಾನ! (ಗ)
-ಣಾಧಿಪತಿಯ ಗುಣ ಗಾನ! (ಭಾ)
-ವಾವೇಶ ಪಲ್ಲವಿ ಪಾವನ!
ದತ್ತಾತ್ರೇಯ ರೂಪ ದರ್ಶನ (ಘ)
-ನ ನಿರಂಜನಾದಿತ್ಯಾತ್ಮನ!!!
ಸುವ್ಯವಸ್ಥೆಯಿಂದಾಗಬೇಕು!
ಧಾರಾಳಿ ಶ್ರೀಮಂತನಾಗ್ಬೇಕು! (ಪ)
-ರಮಾರ್ಥಿ ತಾನಾಗಿರಬೇಕು! (ಹೊ)
-ಣೆ ಭಗವಂತನಾಗಬೇಕು!
ಯಾರೂ ನೋಯದಂತಿರಬೇಕು!
ಗಲಾಟೆ ಮಾಡದಿರಬೇಕು!
ಬೇಸಾಯ ವೃದ್ಧಿಯಾಗಬೇಕು! (ಬೇ)
-ಕು ನಿರಂಜನಾದಿತ್ಯಾಗ್ಬೇಕು!!!
-ತ್ಸರ ಮನೋವೃತ್ತಿಯಲ್ವೇನಪ್ಪಾ? (ಪ)
-ರಮೇಶ್ವರ ಮನಸಲ್ಲವಪ್ಪಾ!
ದೇವರ ಸ್ವರೂಪ ನಿನ್ನದಪ್ಪಾ! (ಭ)
-ವದಾಸೆ ಬಿಟ್ಟದ ಸಾಧಿಸಪ್ಪಾ! (ಹ)
-ರಿ ಪ್ರಸಾದ ಕಷ್ಟ, ಸುಖವಪ್ಪಾ!
ಗುಂಜಾ ನರಸಿಂಹನಂತಿರಪ್ಪಾ! (ಪೇ)
-ಟೇ ವ್ಯಾಪಾರಿಯವನಲ್ಲವಪ್ಪಾ! (ಮ)
-ನಸ ಪರಿವರ್ತಿಸಬೇಕಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯಾನಂದಪ್ಪಾ!!!
ಶಾಶ್ವತಾನಂದಕ್ಕಿದನುಗ್ರಹ!
ನಾಮಸ್ಮರಣೆಗಿದೊಂದನುಗ್ರಹ! (ಪಾ)
-ಶ ಹರಿಸುವ ಪರಮಾನುಗ್ರಹ! (ಬೆ)
-ಕ್ಕೆಗೀಡಾಗದಾನಂದಿಪನುಗ್ರಹ!
ನಿನ್ನುನ್ನತಿಗಿದವನನುಗ್ರಹ! (ವಿ)
-ರಾಗಿಯಾಗಲಿದವನನುಗ್ರಹ!
ಶಾಪವೆಂತಾಗುವುದೀ ಅನುಗ್ರಹ? (ತ)
-ನು ಭಾವ ಸಾಯಲಿಕ್ಕೀ ಅನುಗ್ರಹ! (ಉ)
-ಗ್ರ ನರಸಿಂಹಾವತಾರನುಗ್ರಹ!
ಹರಿ ನಿರಂಜನಾದಿತ್ಯಾನುಗ್ರಹ!!!
-ಡಿಗಡಿಗೆ ದರ್ಶನವಿಲ್ಲವಯ್ಯಾ!
ಬಾ ನೀನು ಮತ್ತೊಮ್ಮೆ ಕರೆದಾಗಯ್ಯಾ! (ಈ)
-ಗಿನ ಪೂಜೆ ಮುಗಿದಿರುವುದಯ್ಯಾ! (ಮಾ)
-ಲೀಕನೀಗೇಕಾಂತದಲ್ಲಿರ್ಪನಯ್ಯಾ!
ಗದ್ದಲ ಮಾಡದೆ ಹೋಗಿಬಿಡಯ್ಯಾ! (ಸಂ)
-ತೆ ವ್ಯಾಪಾರದಂತೆ ಇದಲ್ಲವಯ್ಯಾ! [ನೆ]
ರೆ ಭಕ್ತಿ ವಿಶ್ವಾಸ ಸದಾ ಬೇಕಯ್ಯಾ! (ಕಾ)
-ಯದಭಿಮಾನವಿರಬಾರದಯ್ಯಾ! (ಮ)
-ದ, ಮತ್ಸರಗಳಳಿಯಬೇಕಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾಜ್ಞೆಯಿದಯ್ಯಾ!!!
ಹೀನವೃತ್ತಿಯಾಸ್ತಿ ನಿರ್ನಾಮ!
ನಾನಾತಂತ್ರ, ಯಂತ್ರ, ನಿರ್ನಾಮ!
ಮದೋನ್ಮತ್ತ ಮನ ನಿರ್ನಾಮ! (ಊ)
-ರೂರಪಪ್ರಚಾರ ನಿರ್ನಾಮ!
ಪಟ್ಟ, ಪರಿವಾರ ನಿರ್ನಾಮ!
ನಿಬಿಡಾಂಧಕಾರ ನಿರ್ನಾಮ! (ದು)
ರ್ನಾಟಕಾಭಿನಯ ನಿರ್ನಾಮ! (ನಾ)
ಮ ನಿರಂಜನಾದಿತ್ಯಾರಾಮ!!!
ಅಲ್ಲೋಲ ಕಲ್ಲೋಲಲೆಗಳಿಂದ ಪಾರು! (ತ)
-ಲ್ಲೋಲಾಂತರಂಗರಿಷ್ಟಗಳಿಂದ ಪಾರು! (ಸ)
-ಲಸಲಕ್ಕೂ ನಿಮಿಷಾರ್ಧದಲ್ಲಿ ಪಾರು!
ಕರುಣಾಮಯನ ಕೃಪೆಯಿಂದ ಪಾರು! (ತ)
-ಲ್ಲೋಪವಾದರೆಂದಿಗೂ ಆಗದು ಪಾರು! (ಬ)
-ಲವಾದ ಭಕ್ತಿಯಿಂದಾಗುವುದು ಪಾರು! (ಅ)
-ಲೆದಾಟ ತಪ್ಪಿಸಿ ಮಾಳ್ಪುದು ಪಾರು!
ಗರ್ವನಾಶವಾಗದಾಗದೆಂದೂ ಪಾರು! (ಕಾ)
-ಳಿಂದ ಮರ್ದನನ ಸೇವೆಯಿಂದ ಪಾರು! (ಪಾ)
-ದ ಭಜನೆಯಿಂದ ದುಃಖದಿಂದ ಪಾರು!
ಪಾಪಪುಣ್ಯಾದಿ ಬಂಧನದಿಂದ ಪಾರು! (ಪಾ)
-ರು ನಿರಂಜನಾದಿತ್ಯನಿಂದೆಲ್ಲಾ ಪಾರು!!!
ಶಾಂಭವೀಶ್ವರನಾಜ್ಞೆ ಮೀರಬೇಡ!
ತಿಕ್ಕಾಟದಿಂದ ಬಡವಾಗಬೇಡ!
ಗದ್ದು ವಾಸನೆಯಿರಗೊಡಬೇಡ!
ವರ ಸೇವೆಯ ಕಳಕೊಳ್ಳಬೇಡ!
ಕಾಟಾಚಾರಕ್ಕಾಗ್ಯೇನೂ ಮಾಡಬೇಡ!
ಶಮ, ದಮದಭ್ಯಾಸ ಬಿಡಬೇಡ!
ಕೊಲೆಗಡಕರೊಡಗೂಡಬೇಡ!
ಡಬ್ಬಿಯ ನಿಧಿ ಹೊರಗಿಡಬೇಡ!
ಬೇಡಿದಿಷ್ಟ ಪಡೆಯದಿರಬೇಡ! (ಗಂ)
-ಡ ನಿರಂಜನಾದಿತ್ಯಗಾವ ಖಂಡ???
ಜಗಳ ಕದನ ಸಂಗಾ ರಂಗಾ!
ಕೀರ್ತಿಯಾಸೆಗೊದ್ದಾಡುವಾ ರಂಗ!
ಯಮ, ನಿಯಮವಿಲ್ಲದಾ ರಂಗ!
ರಂಬೆಯೂರ್ವಶಿ ನೃತ್ಯದಾ ರಂಗ! (ಯೋ)
-ಗ ಜೀವನಕ್ಕನಾದರಾ ರಂಗ!
ಶಾಂತಿ ಬಾಯಿಮೂತಾಗಿರ್ಪಾ ರಂಗ!
ತಿತಿಕ್ಷೆಯನುಪೇಕ್ಷಿಪಾ ರಂಗ!
ಭಂಡಾರ ಭರ್ತಿ ಮಾಡುವಾ ರಂಗ! (ಸೊ)
-ಗ ನಿರಂಜನಾದಿತ್ಯಾತ್ಮರಂಗ!!!
ವಿಶ್ವಕರ್ಮನಿಗೆ ಪ್ರಾಣಾಭರಣ!
ಕಿರಾತ ಬಿಲ್ಲಿಗೆ ಬಾಣಾಭರಣ!
ರಣಧೀರನಿಗೆ ಧೈರ್ಯಾಭರಣ! (ಗ)
-ಣಪತಿಯಪ್ಪಗೆ ಯೋಗಾಭರಣ!
ಶಶಿಕಲಾಂಬೆಗೆ ಖಡ್ಗಾಭರಣ!
ಶಿಖಿವಾಹನಗೆ ಶೂಲಾಭರಣ!
ಗಾನ ಶಾರದೆಗೆ ವೀಣಾಭರಣ!
ಭಕ್ತ ಮಾರುತಿಗೆ ನಾಮಾಭರಣ!
ರಘುಪತಿಗಾತ್ಮಾರಾಮಾಭರಣ! (ತ್ರಾ)
-ಣ ನಿರಂಜನಾದಿತ್ಯಾತ್ಮಾಭರಣ!!!
-ರಬೇಕೊಳಗೆ, ಆಗಿಲ್ಲಾ ನೋವು!
ಗಾಳಿ, ಮಳೆಗೀಡಾದಾಗಾ ನೋವು!
ದಾಸ್ಯ ಭಕ್ತಿ ಸೇವೆಗಿಲ್ಲಾ ನೋವು! (ಭೋ)
-ಗಾಸಕ್ತಿ ಹೆಚ್ಚಿದರಾಗಾ ನೋವು!
ಗುರುನಾಮ ಪ್ರೇಮಕ್ಕಿಲ್ಲಾ ನೋವು! (ಠಾ)
-ವು ತಪ್ಪಿದಾಗಾಗುವುದಾ ನೋವು!
ದುರ್ಮೋಹ ಹರಿದರಿಲ್ಲಾ ನೋವು!
ನೋಟ, ಕೊಟೇಚ್ಛೆಯಾದಾಗಾನೋವು! (ನೋ)
-ವು ಹರಾ ನಿರಂಜನಾದಿತ್ಯಾವು!!!
ವಿಷಯಾಸೆ ಸತ್ತಾಗದು ವೃದ್ಧಿ!
ಕರ್ಮವಿದಕ್ಕಾದಾಗದು ಸಿದ್ಧಿ!
ವೃತ್ತಿ ವಿನಾಶದಿಂದದು ವೃದ್ಧಿ! (ಬು)
-ದ್ಧಿ, ಶುದ್ಧಿ ಹೀಗಾಗಿ ಅದು ಸಿದ್ಧಿ!
ಯಿಂಬಾಗಿ ಆಗುವುದಭಿವೃದ್ಧಿ! (ಎ)
-ದೆಗೆಡದೆ ಸಾಧಿಪುದಾ ಸಿದ್ಧಿ! (ಚೆ)
-ಲ್ಲಾಟ ಮನಕಿಲ್ಲದಾಗಾ ವೃದ್ಧಿ!
ಸಿದ್ಧಿಯಿದೇ ನಿಜಾನಂದ ಸಿದ್ಧಿ! (ಸಿ)
-ದ್ಧಿ, ನಿರಂಜನಾದಿತ್ಯಾನಂದಾಬ್ಧಿ!!!
-ಲಿನ ಯೋಗ್ಯತೆ ಗೌಳಿಗ ಬಲ್ಲ!
ನಲ್ಲೆಯ ರೂಪ ನಲ್ಲನೇ ಬಲ್ಲ!
ಬೆಳೇ ಗುಣ ಬೆಳೆದವ ಬಲ್ಲ! (ಕ)
-ಲೆಯಂತಸ್ತು ಕಲಾಧರ ಬಲ್ಲ!
ಮಾಯೆಯಾಟ ಮಾಧವನೇ ಬಲ್ಲ! (ಜಾ)
-ಲಿಯ ನೆಲೆ ಕೀಳುವವ ಬಲ್ಲ!
ಕಬ್ಬದ ಸವಿ ಕಬ್ಬಿಗ ಬಲ್ಲ!
ಬಲೆಯ ಬಲ ಬೆಸ್ತನೇ ಬಲ್ಲ! (ಅ)
-ಲ್ಲ ನಿರಂಜನಾದಿತ್ಯೆಲ್ಲಾ ಬಲ್ಲ!!!
-ಪ್ಪದಾಗಿ ಬಂತು ಉರಿಗಂದೆ! (ಬ)
-ಳಸಬಾರದೆಣ್ಣೆ ನೀನೆಂದೆ! (ಆ)
-ಸೆಂಬದು ಬಹಳ ಹಾಳೆಂದೆ! (ಖಂ)
-ಡಿತ ತಿನ್ನಬೇಡಿನ್ನು ಮುಂದೆ! (ಮೈ)
-ಗೆ ಆಗದೆ ಆಗಾಗ ನೊಂದೆ!
ನೀತಿ, ನಿಯಮಗತ್ಯವೆಂದೆ!
ತಿಂದು ಕೆಟ್ಟೆನೆಂಬುದೇಕೆಂದೆ! (ತಂ)
-ದೆ ನಿರಂಜನಾದಿತ್ಯಾಗೆಂದೆ!!!
ಮಾತುಮಾತಿಗೆದುರಾಡುವನಮ್ಮಾ! (ಕ)
-ರಕರೆ ಬಹಳ ಮಾಡುವನಮ್ಮಾ!
ನನ್ನೊಡನೆ ಮಲಗಬೇಕಂತಮ್ಮಾ!
ಮೇರೆ ಈರಿ ಚೇಷ್ಟೆಮಾಡುವನಮ್ಮಾ!
ಲೇಖನಿ, ಪುಸ್ತಕ ಹಿಡಿಯನಮ್ಮಾ!
ಕಷ್ಟವನಿಂದ ತಂದೆ ತಾಯಿಗಮ್ಮಾ!
ತೃಣ ಸಮಾನವರವನಿಗಮ್ಮಾ! (ಪ್ರಾ)
-ಪ್ತಿಯವನದೇನಿಹುದೋ ಹೇಳಮ್ಮಾ! (ಭ)
-ಯ, ಭಕ್ತಿ ಅವನಿಗೇನೂ ಇಲ್ಲಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಗತಿಯಮ್ಮಾ!!!
ಒಳಗಣ್ಣಿಂದೆನ್ನ ನೋಡು ಮುದ್ದಣ್ಣಾ! (ಕ)
-ಳವಳ ಪಡಬೇಡಿನ್ನು ಮುದ್ದಣ್ಣಾ! (ಮ)
-ಗನಲ್ಲವೇ ನೀನೆನಗೆ ಮುದ್ದಣ್ಣಾ? (ಕ)
-ಣ್ಣಿಂದ ಕಾಣದಿದ್ದರೇನು ಮುದ್ದಣ್ಣಾ? (ತಂ)
-ದೆಯಾಜ್ಞೆಯಂತಿರು ನೀನು ಮುದ್ದಣ್ಣಾ! (ನ)
-ನ್ನನಿನ್ನ ಸಂಬಂಧನಾದಿ ಮುದ್ದಣ್ಣಾ! (ಮ)
-ನೋಜಯದಿಂದದನರಿ ಮುದ್ದಣ್ಣಾ! (ಬೀ)
-ಡು ನನಗೆ ನಿನ್ನ ದೇಹ ಮುದ್ದಣ್ಣಾ!
ಮುದದಿಂದೆನ್ನ ಧ್ಯಾನಿಸು ಮುದ್ದಣ್ಣಾ! (ತ)
-ದ್ದರ್ಶನವಾಗುವುದಣ್ಣ ಮುದ್ದಣ್ಣಾ! (ಕ)
-ಣ್ಣಾ ನಿರಂಜನಾದಿತ್ಯಾತ್ಮ ಮುದ್ದಣ್ಣಾ!!!
-ಹ್ಯೇಂದ್ರ್ಯ ಚಪಲ ಸದಾಪಜಯ! (ಇ)
-ಚ್ಛೆಯಚ್ಯುತಗಾದರೆ ವಿಜಯ! (ಗಂ)
-ಗಾಧರನನುಗ್ರಹಾ ವಿಜಯ!
ಗುರುಪಾದ ಸೇವೆಗಾ ವಿಜಯ! (ಸಾ)
-ವು, ನೋವು, ಭಯ ತಪ್ಪೀ ವಿಜಯ!
ದತ್ತ ಭಜನೆ ನಿತ್ಯ ವಿಜಯ!
ಪರಮಾನಂದ ಪ್ರಾಪ್ತೀ ವಿಜಯ!
ಜಗನ್ಮಾತೆಗೆ ತೃಪ್ತೀ ವಿಜಯ! (ಪ್ರಿ)
-ಯ ನಿರಂಜನಾದಿತ್ಯ ವಿಜಯ!!!
ದಾರಿದ್ರ್ಯಾತ್ಮರಿಗಮ್ಮ ನೀನಾಗಮ್ಮಾ!
ಚಾತುರ್ವರ್ಣೀಯರಮ್ಮ ನೀನಾಗಮ್ಮಾ! (ವ)
-ರ ಗುರುಪಾದ ದಾಸಿ ನೀನಾಗಮ್ಮಾ!
ಸಂತಾಂತರಂಗ ವಾಣಿ ನೀನಾಗಮ್ಮಾ!
ಪರಮಾನಂದ ಯೋಗಿ ನೀನಾಗಮ್ಮಾ! (ಚೆ)
-ನ್ನೆ ಪರಮೇಶ್ವರಿಯೇ ನೀನಾಗಮ್ಮಾ!
ನೀತಿ, ನಿಯಮವಂತೆ ನೀನಾಗಮ್ಮ!
ನಾಮ ಭಜನಾ ಪ್ರೇಮಿ ನೀನಾಗಮ್ಮಾ!
ಗಗನ ಸದೃಶಾತ್ಮ ನೀನಾಗಮ್ಮಾ! (ಅ)
-ಮ್ಮಾ ನಿರಂಜನಾದಿತ್ಯ ನೀನಾಗಮ್ಮಾ!!!
-ಚಾಮಗೋಚರ ರೂಪ ನೀನಾದಂದು! (ವ)
-ರ ಗುರುವಿನಿಷ್ಟ ಪೂರ್ತಿಯಾದಂದು!
ಸಾಧು, ಸಜ್ಜನರುದ್ಧಾರವಾದಂದು! (ಸಂ)
-ಗ ಸರ್ವಾತ್ಮನದು ಸದಾ ಆದಂದು! (ಚೋ)
-ರ ಮಾರನಾಟ ನಡೆಯದಾದಂದು!
ಬಯಲಾಡಂಬರ ಹಾರಿ ಹೋದಂದು! (ಚಿ)
-ತ್ತುಗಳೆಲ್ಲವೂ ಅಳಿಸಿ ಹೋದಂದು! (ಪಾ)
-ವು, ಸೇರುಗಳ ಪೈಪೋಟಿ ನಿಂದಂದು! (ಒಂ)
-ದೆಂಬಾತ್ಮ ವಿಶ್ವಾಸ ನೆಲಸಿದಂದು! (ಇಂ)
-ದು ನಿರಂಜನಾದಿತ್ಯಾನಂದದಂದು!!!
-ಸ್ಸಂಗದಭ್ಯಾಸಿಯಾಗಿ ನೀನಿರು!
ಗತಿ ಸದ್ಗುರು ಪಾದವೆಂದಿರು! (ಕಾ)
-ದಿಂತತುಳಾನಂದ ಹೊಂದುತಿರು!
ದತ್ತಧ್ಯಾನ ಸದಾ ಮಾಡುತಿರು!
ದೂಷಕರನ್ನೆಂದೂ ನಂಬದಿರು! (ವ)
-ರ ಮಾರುತಿಯಾದರ್ಶದಿಂದಿರು!
ವಾಸನಾತ್ರಯ ಕಳೆಯುತಿರು! (ಯೋ)
-ಗಿರಾಜನಾಗಿ ನೀನಿರುತಿರು! (ಇ)
-ರು ನಿರಂಜನಾದಿತ್ಯನಾಗಿರು!!!
ಜೀರ್ಣವಾದರೆ ವಿಷವಾದರೂ ಸಿಹಿ! (ವ)
-ರ್ಣಧರ್ಮ ಹಾಳಾದರೆ ಸಮಾಜ ಕಹಿ!
ಹೊಣೆಯರಿತು ಬಾಳಿದರೆಲ್ಲಾ ಸಿಹಿ! (ಬ)
-ಟ್ಟೆಯಾಡಂಬರದ ಪರಿಣಾಮ ಕಹಿ (ಹೇ)
-ಗೆ ಇರಬೇಕೋ ಹಾಗಿದ್ದರೆಲ್ಲಾ ಸಿಹಿ!
ಅನಾವಶ್ಯದಾಶೆಯಿಂದ ಬಾಳು ಕಹಿ!
ಮೃತ್ಯುಂಜಯನ ಸೇವೆಯಿಂದೆಲ್ಲಾ ಸಿಹಿ!
ತನು ಮನಕ್ಕಂಟಿಕೊಂಡುದೆಲ್ಲಾ ಕಹಿ! (ಮಾ)
-ವೂ, ಬೇವೂ, ಪ್ರಸಾದವೆಂದರೆಲ್ಲಾ ಸಿಹಿ!
ಕನಕ, ಕಾಂಚನೈಶ್ವರ್ಯವೆಲ್ಲಾ ಕಹಿ! (ಸ್ನೇ)
-ಹಿ ನಿರಂಜನಾದಿತ್ಯನೆಂದೆಂದೂ ಸಿಹಿ!!!
-ರುಣೆ ಬೇಕವನದೀ ಜೀವನಕ್ಕೆ!
ಪಾಪ ಪರಿಹಾರವಾಗುವುದಕ್ಕೆ! (ಸ)
-ದಮಲ ಜ್ಞಾನ ಸಿದ್ಧಿಸುವುದಕ್ಕೆ! (ಧ)
-ಕ್ಕೆ ಮಾಯೆಯಿಂದಾಗದಿರುವುದಕ್ಕೆ! (ಪ)
-ರಮಪದದಾನಂದಾನುಭವಕ್ಕೆ!
ಗುಹ್ಯ, ಜಿಹ್ವಾ ಚಾಪಲ್ಯ ನಿಗ್ರಹಕ್ಕೆ! (ಸಾ)
-ವು, ನೋವಿನ ಭಯ ತಪ್ಪುವುದಕ್ಕೆ!
ದೇವರೊಬ್ಬನೆಂಬರಿವಾಗಲಿಕ್ಕೆ!
ತತ್ವಾರ್ಥಸೌಖ್ಯಳವಡುವುದಕ್ಕೆ! (ಅ)
-ಕ್ಕೆ ನಿರಂಜನಾದಿತ್ಯಾನಂದೆಲ್ಲಕ್ಕೆ!!!
ರಾಮನಾಮ ಘೋಷದಿಂದಾಯ್ತಾ ಸಮಾಧಿ! (ತು)
-ರು,ಕರು, ವಸ್ತು ವಾಹನಕ್ಕೂ ಸಮಾಧಿ! (ಮಾ)
-ಯಾಲಕನಂದಾ ಜಲದಲ್ಲಾ ಸಮಾಧಿ!
ತ್ರಿಮತಸ್ಥ ನರ ನಾರಿಗಾ ಸಮಾಧಿ!
ಕರುಣಾಮಯಿಗೇನಾನಂದಾ ಸಮಾಧಿ? (ಯಾ)
-ರದೇನಪಚಾರದಿಂದಾಯ್ತಾ ಸಮಾಧಿ?
-ಜಗದ್ಗುರು ಚಿತ್ತದಂತಾಯ್ತಾ ಸಮಾಧಿ (ಬಾ)
-ಲಕರಿಗೀಯಲಿ ಸದ್ಗತೀ ಸಮಾಧಿ!
ಸಮಯಾಸಮಯ ನೋಡದೀ ಸಮಾಧಿ!
ಮಾಧವ ಧ್ಯಾನದಿಂದಾಗಲೀ ಸಮಾಧಿ! (ವಿ)
-ಧಿ ನಿರಂಜನಾದಿತ್ಯ ಸದಾ ಸಮಾಧಿ!!!
-ರ್ಮ, ಕರ್ಮೊಪಕರಣಾಶಾ ಕಿರಣ!
ಲೀಲಾ ನಾಟಕದಾಧಾರಾ ಕಿರಣ! (ಗೋ)
-ಕರ್ಣ, ರಾಮೇಶ್ವರ ಸಾರಾ ಕಿರಣ! (ವ)
-ರ ಮಹಾಬಲೇಶ್ವರಾತ್ಮಾ ಕಿರಣ! (ತೃ)
-ಣ, ಕಾಷ್ಟದಲ್ಲೂ ಪ್ರವೇಶಾ ಕಿರಣ!
-ಏಕೈಕಲೋಕ ವಿಖ್ಯಾತಾ ಕಿರಣ!
-ಕೀಚಕ ಕುಲ ವಿನಾಶಾ ಕಿರಣ!
ಕಪಿಲಾದಿ ಮುನಿಕುಲಾ ಕಿರಣ!
ರಣಧೀರ ರಾಘವೇಂದ್ರಾ ಕಿರಣ! (ಗ)
-ಣಪ ನಿರಂಜನಾದಿತ್ಯಾ ಕಿರಣ!!!
-ಷ್ಟ ಸೇವೆ ಸಾಗುತ್ತಿರಲಿ!
ಸಂಮೋಹವಿಲ್ಲದಾಗಲಿ! (ಸ)
-ಹಾಯ ಅನ್ಯೋನ್ಯ ಇರಲಿ! (ಪ)
-ರನಿಂದೆಯಾಗದಿರಲಿ! (ಭ)
-ವಾಬ್ಧಿಯಿಂದ ಪಾರಾಗಲಿ! (ರಂ)
-ಗನಾಥ ಕೃಪೆ ಮಾಡಲಿ! (ಶೂ)
-ಲಿ ನಿರಂಜನಾದಿತ್ಯಾಗ್ಲಿ!!!
-ಕ್ತಿ, ಶಕ್ತಿ, ಸಾಮರ್ಥ್ಯೊಕ್ತಿ ಸಾಕು!
ಭಾಗವತೋತ್ತಮಾಗ ಬೇಕು! (ಭ)
-ವದ ಬಂಧನವಿನ್ನು ಸಾಕು!
ಭಕ್ತಿ ನಿಶ್ಚಲವಾಗಬೇಕು!
ಜಗತ್ತಿನೊಡನಾಟ ಸಾಕು!
ನೆಮ್ಮದಿಯ ಬಾಳಿರಬೇಕು!
ಬೇನೆಈವ ವಿಷಯ ಸಾಕು! (ಬೇ)
-ಕು ನಿರಂಜನಾದಿತ್ಯಾಗ್ಬೇಕು!!!
-ನ್ನಿಷ್ಟನಾನಾರಿಗೇನೊರೆವೆ! (ಕ)
-ಷ್ಟ, ಸುಖವ, ಸಹಿಸೆನುವೆ! (ಕ)
-ದಂಬವನವಾಸ್ಯಾಗೆನುವೆ! (ಸಂ)
-ತೆ, ಪುರಾಣ ಸಾಕಿನ್ನುವೆ!
ನೀಲಾಕಾಶದಂತಿರೆನುವೆ!
ನಿಶ್ಚಲ ಭಕ್ತಿ ಬೇಕೆನುವೆ! (ತ)
-ಕ್ಕುದನೇ ನಾ ಮಾಳ್ಪೆನೆನುವೆ! (ಈ)
-ವೆ, ನಿರಂಜನಾದಿತ್ಯ ಸೇವೆ!!!
ಗರ್ವವೆಲ್ಲಾ ನಾಶವಾಗಬೇಕು! (ಆ)
-ಲಿಂಗನ ಭಕ್ತಿಯಿಂದಾಗಬೇಕು!
ಗಮನ ನಾಗನಂತಿರಬೇಕು!
ಪೂ, ಪತ್ರೆಗಳಿಂದರ್ಚಿಸಬೇಕು! (ಪ್ರ)
-ಜೆಗೀ, ಶಿವಾಚಾರವಿರಬೇಕು!
ಯಾವುದನ್ನೂ ಬೇಡದಿರಬೇಕು! (ಲಿಂ)
-ಗದಲ್ಲೈಕ್ಯ ಸುಖ ಕಾಣಬೇಕು!
ಬೇಕಿನ್ನೇನೀ ಜನ್ಮಕ್ಕೆನಬೇಕು! (ಬೇ)
-ಕು ನಿರಂಜನಾದಿತ್ಯಾಗಬೇಕು!!!
ಇದ್ದು ಸತ್ತಂತಿರಲಿಕ್ಕಾಗೀಗ ಬಂದೆ! (ಸ)
-ದ್ದು ಮಾಡಿ ಹಿಂದೆಲ್ಲಾ ಬಹಳ ನಾನೊಂದೆ!
ಸರ್ವ ಸಾಕ್ಷಿಯಾಗಿರಲಿಕ್ಕೀಗ ಬಂದೆ! (ಹೆ)
-ತ್ತಂಮ ಮುಂತಾದವರ್ಗಾಗ್ಯಾಗ ನಾ ನೊಂದೆ!
ತಿರಿತಿರಿಗಿ ಅಲೆದಾಡೀಗ ಬಂದೆ! (ತ)
-ರತರದ ಕಷ್ಟದಿಂದಾಗ ನಾ ನೊಂದೆ! (ಆ)
-ಲಿಪ್ತನಾಗಿ ಇರಬೇಕೆಂದೀಗ ಬಂದೆ!(ಬೆ)
-ಕ್ಕಾಗಿ ಬೆಕ್ಕೆಗೀಡಾಗಿ ಆಗ ನಾ ನೊಂದೆ! (ಯೋ)
-ಗೀಶ್ವರನಾಗಿ ತ್ಯಾಗಿಯಾಗೀಗ ಬಂದೆ! (ನಾ)
-ಗರೀಕರೊಡಗೂಡಿ ಆಗ ನಾ ನೊಂದೆ!
ಬಂಧು, ಬಾಂಧವ ಕೃಷ್ಣನೆಂದೀಗ ಬಂದೆ! (ಬಂ)
-ದೆ, ನಿರಂಜನಾದಿತ್ಯನಾಗಿಲ್ಲಿ ನಿಂದೆ!!!
-ಷ್ಕಾಮಿಯಾಗಿರ್ಪುದಾ ದುಷ್ಟಮತಿ!
ಮದ, ಮತ್ಸರ, ಶೂನ್ಯಾ ಸುಮತಿ!
ಕದ್ದು ಒದ್ದಾಡುವುದಾ ಕುಮತಿ! (ಧ)
-ರ್ಮಿಯೆಲ್ಲಾ ಕಾಲದಲ್ಲಾ ಸುಮತಿ!
ವಿಕರ್ಮಾಸಕ್ತಿಯೆಲ್ಲಾ ಕುಮತಿ!
ಮಧುರ ಭಾವಾಗಾರಾ ಸುಮತಿ! (ಹೊ)
-ಲಸು ವಿಚಾರಾಚಾರಾ ಕುಮತಿ!
ಮಹಾತ್ಮಾತ್ಮನಿಷ್ಠಾತ್ಮಾ ಸುಮತಿ! (ಇ)
-ತಿ ನಿರಂಜನಾದಿತ್ಯಾತ್ರಿಮತಿ!!!
ಬೇಕೆಂದರೂ ಕೆಟ್ಟೆ, ಬೇಡೆಂದರೂ ಕೆಟ್ಟೆ! (ಏ)
-ಕೆಂದರೆರಡೂ ಅಹಂಕಾರೆಂದು ಬಿಟ್ಟೆ! (ಅ)
-ದಕಾಗಿ ನಾನೀಗ ಮೌನವಾಗಿ ಬಿಟ್ಟೆ!
ರೂಪ, ನಾಮಕ್ಕೆಲ್ಲಾ ತಿಲಾಂಜಲಿ ಬಿಟ್ಟೆ!
ಕೆಲ್ಲಸ ಕಾರ್ಯದಾಸಕ್ತಿಯನ್ನೂ ಬಿಟ್ಟೆ! (ಹೊ)
-ಟ್ಟೆ, ಬಟ್ಟೆಗಳ ಚಿಂತೆಯನ್ನೆಲ್ಲಾ ಬಿಟ್ಟೆ!
ಬೇಡುವಭ್ಯಾಸವನ್ನಂತೂ ಬಿಟ್ಟೇ ಬಟ್ಟೆ! (ನೋ)
-ಡೆಂದರೂ ಅಂದ ಚಂದ ಮರತೇ ಬಿಟ್ಟೆ!
ದತ್ತ ಸ್ವರೂಪ ನನ್ನದೆಂದಿದ್ದು ಬಿಟ್ಟೆ! (ಊ)
-ರೂರಲೆಯುವುದದೇಕೆಂದಿದ್ದು ಬಿಟ್ಟೆ!
ಕೆರೆ, ಭಾವಿ, ನದಿಯೊಂದೆಂದಿದ್ದು ಬಿಟ್ಟೆ! (ಬ)
-ಟ್ಟೆ ನಿರಂಜನಾದಿತ್ಯನದ್ದೆತ್ತಿ ಬಿಟ್ಟೆ!!!
ಮಮತಾವತಾರಾ ಕಿಟ್ಟಣ್ಣ! (ಅ)
-ಣ್ಣನ ಪಂಚಪ್ರಾಣಾ ಕಿಟ್ಟಣ್ಣ! (ಧ)
-ನ ಧಾನ್ಯ ಸಂಪನ್ನಾ ಕಿಟ್ಟಣ್ಣ! (ಅ)
-ನುಪಮಾತ್ಮ ಪ್ರೇಮಾ ಕಿಟ್ಟಣ್ಣ!
ಜಾತಿ ಭೇದ ನೋಡಾ ಕಿಟ್ಟಣ್ಣ!
ಕಿತ್ತಾಟಟ್ಟುವವಾ ಕಿಟ್ಟಣ್ಣ! (ಅ)
-ಟ್ಟಹಾಸ ಬಿಟ್ಟವಾ ಕಿಟ್ಟಣ್ಣ! (ಅ)
-ಣ್ಣ ನಿರಂಜನಾದಿತ್ಯಮ್ಮಣ್ಣ!!!
ಕೋಡ್ವಳೆ ಚಕ್ಲಿ, ಶ್ಯಾವಿಗೆ, ಉಂಡೆ! (ಕೊ)
-ಡ್ವಳೇಕಿದನೀಗೆನಗಂದ್ಕೊಂಡೆ! (ಹಾ)
-ಳೆಣ್ಣೆ ತಿಂಡಿ ತಿನ್ಬಾರದೆಂದ್ಕೊಂಡೆ!
ಚಪಲಕ್ಕೀಡಾಗ್ಯೆಲ್ಲಾ ತಿಂದ್ಕೊಂಡೆ!
ಕ್ಲಿಷ್ಟ ಸಮಸ್ಯೆಯಿದೆಂದ್ಕೊಂಡೆ!
ಶ್ಯಾಮನಿಷ್ಟದಂತಾಗಲಂದ್ಕೊಂಡೆ!
ವಿಧಿಲೀಲೆ ವಿಚಿತ್ರವೆಂದ್ಕೊಂಡೆ! (ಹೇ)
-ಗೆ ಬೇಕೋ ಹಾಗಿರಿಸಲೆಂದ್ಕೊಂಡೆ!
ಉಂಡವನನ್ನೇ ಸ್ಮರಿಸಿದ್ಕೊಂಡೆ! (ಉಂ)
-ಡೆ, ನಿರಂಜನಾದಿತ್ಯಾನಂದುಂಡೆ!!!
-ಡಿಸಿ ಹಸಿವಿಂಗಿಪುದಕ್ಕೆ! (ಬ)
-ಗೆಬಗೆ ಶಾಖಪಾಕದಕ್ಕೆ!
ಮಾಡದಿದ್ದರೂಟದೇತಕ್ಕೆ? (ಮಾ)
-ಡು ಧ್ಯಾನದು ನೀನಾಗಲಿಕ್ಕೆ! (ಗೋ)
-ವು ಇರ್ಪುದು ಕ್ಷೀರ ಪಾನಕ್ಕೆ!
ದೇಗುಲ ದೇವನಿರ್ಪುದಕ್ಕೆ!
ತತ್ವ “ತತ್ವಂ” ಆಗುವುದಕ್ಕೆ! (ಅ)
-ಕ್ಕೆ, ನಿರಂಜನಾದಿತ್ಯನಕ್ಕೆ!!!
ಭಾಗ್ಯವಿದು ನಿರ್ವಿವಾದ!
ವರ ಗುರುವಿನಾ ಪಾದ!
ನೆನೆದು ನೀಗೀಗ ಭೇದ!
ಆರಾಮಪ್ರದಾ ಪ್ರಸಾದ! (ಆ)
ಶೀರಾತ್ಮನೇ ದತ್ತನಾದ! (ಗೀ)
-ರ್ವಾಣಿಯನುಗ್ರಹಾ ನಾದ! (ನಾ)
-ದ ನಿರಂಜನಾದಿತ್ಯಾದ!!!
ಹಿಮಗಿರಿ ನಾಥನೆಲ್ಲರ ತಾಯಿ!
ಮೆರೆವುದೆಲ್ಲೆಲ್ಲೂ ಅ ಗುರು ತಾಯಿ!
ಹೇಳಿ ಕರೆಸಿತೀ ಮಗುವಾ ತಾಯಿ! (ತ)
-ಳಮಳ ನಿನೆಗೇಕೆಂದಿತಾ ತಾಯಿ!
ಲಕ್ಷ ನನ್ನಲ್ಲಿರಿಸೆಂದಿತಾ ತಾಯಿ! (ಹ)
-ರಿ ಭಜನಾನಂದ ಕೊಟ್ಟಿತಾ ತಾಯಿ! (ಕಾ)
-ಯ ಕಷ್ಟಕ್ಕಂಜಬೇಡೆಂದಿತಾ ತಾಯಿ!
ದೀನನೆನ್ನ ಕಾಪಾಡೆಂದಿತೀ ಬಾಯಿ!
ಬಾಯಿ ಮುಚ್ಚ್ಯಾನಂದಿಸೆಂದಿತಾ ತಾಯಿ! (ತಾ)
-ಯಿ ನಿರಂಜನಾದಿತ್ಯಾನಂದಾ ತಾಯಿ!!!
ಇಷ್ಟು ದಿನವಿದ್ದೇನುದ್ಧಾರವಾಯ್ತು? (ನಿ)
-ಷ್ಟುರ ಆರದೇನು ಕಡಿಮೆಯಾಯ್ತು?
ದಿವ್ಯ ಜೀವನವಾರಿಗೆ ಬೇಕಾಯ್ತು?
ನಶ್ವರ ಸುಖದಾಸೆಯೇ ಹೆಚ್ಚಾಯ್ತು!
ವಿಕಲ್ಪ ಸ್ವಭಾವ ಪ್ರಬಲವಾಯ್ತು! (ಕ)
-ದ್ದೇ ಜೀವಿಸುವಭ್ಯಾಸಧಿಕವಾಯ್ತು! (ನಾ)
-ನು, ನನ್ನದೆಂಬ ಸ್ವಾರ್ಥಪಾರವಾಯ್ತು! (ಶ್ರ)
-ದ್ಧಾ, ಭಕ್ತಿ ಭಾವನೆಗಳಿಲ್ಲದಾಯ್ತು!(ಪ)
-ರನಿಂದಾಸಕ್ತ್ಯಪರಿಮಿತವಾಯ್ತು!
ವಾಸುದೇವನ ಭಜನೆ ಬೇಡಾಯ್ತು! (ಆ)
-ಯ್ತು ನಿರಂಜನಾದಿತ್ಯನುದ್ಧಾರಾಯ್ತು!!!
ತ್ತ, ರಾಗಿ, ಒಳಗೆ ಭರ್ತಿಯಾಯ್ತು!
ಪರಮ ಭಕ್ತಿಯಾರಂಭವಾಯ್ತು!
ದರಿದ್ರರಿಗನ್ನ ದಾನವಾಯ್ತು!
ಕರ್ಣಾಟಕಾಂಬೆಗೆ ಕೀರ್ತಿಯಾಯ್ತು!
ಧರ್ಮ ಕರ್ಮಕ್ಕುತ್ಸಾಹ ಹೆಚ್ಚಾಯ್ತು! (ಅ)
-ರಿಕುಲಕ್ಕೆಲ್ಲಾ ಭಯ ಉಂಟಾಯ್ತು!
ಸಿರಿತನಾಡಂಬರ ದೂರಾಯ್ತು! (ಹೆ)
-ದ್ದಾರಿ ಭಜನೆಯೆಂಬರಿವಾಯ್ತು! (ಆ)
-ಯ್ತು, ನಿರಂಜನಾದಿತ್ಯ ತಾನಾಯ್ತು!!!
ರುಚಿ ಸಾಯಲಿಕ್ಕೀ ಕೃಪೆ!
ಚಿದಾನಂದಕ್ಕನುಕೂಲಾ ಕೃಪೆ!
ಯಾತನಾನಾಶಕ್ಕಿದೊಂದು ಕೃಪೆ! (ದೇ)
ಹಾಭಿಮಾನ ಹೋಗಲಿಕ್ಕೀ ಕೃಪೆ! (ವ)
-ರ ಗುರು ಧ್ಯಾನಾಭ್ಯಾಸಕ್ಕೀ ಕೃಪೆ!
ಗುಹಾನಂದ ಜೀವನಕ್ಕೀ ಕೃಪೆ! (ಕ)
-ರುಣೆಯೆಂಬರಿವವನ ಕೃಪೆ!
ಕೃತಕೃತ್ಯನಾಗಲಿಕ್ಕೀ ಕೃಪೆ (ಕೃ)
-ಪೆ ನಿರಂಜನಾದಿತ್ಯಾತ್ಮ ಕೃಪೆ!!!
ವ್ಯ ಶ್ರೀನಿವಾಸ ನಿತ್ಯಾನಂದ!
ನಾಮ, ನಾಮಿ ಅಭೇದಾನಂದ!
ಮಧುರಭಾವ ರಾಧಾನಂದ!
ಭಕ್ತ ಮಾರುತಿ ರಾಮಾನಂದ!
ಜನ್ಮವಿದೂರ ಬ್ರಹ್ಮಾನಂದ!
ನಾಮದೇವ ವಿಠ್ಠಲಾನಂದ!
ನಂದಕಂದ ಗೋವಿಂದಾನಂದ! (ಕಂ)
-ದ ನಿರಂಜನಾದಿತ್ಯಾನಂದ!!!
ಚರಾಚರಾತ್ಮನೊಳ ತುಂಬು!
ಕರ್ಮಕ್ಕೆ ಬೇಕೆರಡೂ ತುಂಬು!
ದಿಂಡಾಗಿ ಕೂತಾಗಲೀ ತುಂಬು!
ದಣಿದಾಗ ನಿಲ್ಲಿಸೀ ತುಂಬು!
ಜರಾ, ಜನ್ಮ ವಿದೂರಾ ತುಂಬು!
ಗಣಾಧಿಪತ್ಯಪ್ರದಾ ತುಂಬು!
ತುಂಬಿ ಪೂರ್ಣವಾಗಲೀ ತುಂಬು! (ತುಂ)
-ಬು, ನಿರಂಜನಾದಿತ್ಯನಿಂಬು!!!
ನೆನೆಸುವುದೊಂದು ಬರೆಸುವುದಿನ್ನೊಂದು!
ನೆಪಮಾತ್ರವೀ ಗೊಂಬೆ ನಿನ್ನಡಿಯಲ್ಲಿಂದು!
-ಸುಖ, ದುಃಖಕ್ಕೀಡಾಗಿ ನೋಯುತಿದೆ ಇಂದು! (ಆ)
-ವುದರ ಸ್ವತಂತ್ರವಿದಕಿದೆ ಹೇಳಿಂದು!
ದೊಂಬರಾಟವಾಡಿಸುತಿರುವೆ ನೀನಿಂದು! (ಬ)
-ದುಕಿ ಬರುವ ಭಾರ ನಿನ್ನಾಧೀನವಿಂದು!
ಬಳಲಿದರೂ ಬಿಡೆ ನಿನ್ನಾಟ ನೀನಿಂದು! (ಕ)
-ರೆದರೂ ಕೆಳದವನಂತಿರ್ಪೆ ನೀನಿಂದು!
ಸುಖವಾಗಿಹುದು ನಿನ್ನಾಟ ನಿನಗಿಂದು! (ಠಾ)
-ವು ನಿನಗೆಲ್ಲಾದರೇನೆಂದಿರ್ಪೆ ನೀನಿಂದು! (ಆ)
ದಿ, ಮಧ್ಯಾಂತ ರಹಿತನಾಗಿರ್ಪೆ ನೀನಿಂದು! (ಇ)
-ನ್ನೊಂದು, ಮತ್ತೊಂದಾಟದಾನಂದ ನಿನಗಿಂದು! (ಹಿಂ)
-ದು, ಮುಂದು ನಿರಂಜನಾದಿತ್ಯಾನಂದೆಂದೆಂದೂ!!!
ವರದ ಹಸ್ತ ಮಸ್ತಕದ ಮೇಲಿರಲಿ! (ಕ್ರೂ)
-ರ ಸಂಸಾರ ಸಾಗರದಿಂದ ಪಾರಾಗಲಿ!
ದಯೆಯಿದಕಾಗಿ ಸದಾ ಇರುತಿರಲಿ!
ಹಸ್ತ ಪಾದಾದಿಗಳವಳಿಗಾಗಿರಲಿ! (ಅ)
-ಸ್ತವ್ಯಸ್ತವಾಗದ ಮನಸ್ಸಿರುತಿರಲಿ!
ಮಧುರ ಭಾವದರಲ್ಲಿ ನೆಲಸಿರಲಿ! (ಪು)
-ಸ್ತಕ ವೀಣಾಪಾಣಿಯ ದರ್ಶನವಾಗಲಿ!
ಕನಿಕರದಿಂದ ಅವಳು ಕಾಪಾಡಲಿ! (ಮಂ)
-ದಮತಿಯ ದರ್ಶನ ಮತ್ತಾಗದಿರಲಿ!
ಮೇಲು, ಕೀಳೆಂಬಹಂಕಾರ ಬಾರದಿರಲಿ! (ನ)
-ಲಿನಲಿದವಳ ಸಂಕೀರ್ತನೆ ಸಾಗಲಿ! (ವ)
-ರ ಗುರುದೇವನವಳೆಂಬರಿವಾಗಲಿ! (ನ)
-ಲಿಯಲಿ ನಿರಂಜನಾದಿತ್ಯಾನಂದಲ್ಲಿ!!!
ಪುಲ್ಲನಾಭಗಿಷ್ಟನಾದಂದು! (ನ)
-ಲ್ಲನವನೆಂಬರಿವಾದಂದು!
ನಾಮ ಜಪ ಬಲವಾದಂದು!
ನಾಮ, ನಾಮಿ, ಭೇದ ಹೋದಂದು!
ಗುರುವೇ ಸರ್ವಸ್ವವೆಂದಂದು! (ಈ)
-ವುದನಾನಂದದಿಂದುಂಡಂದು! (ಒಂ)
-ದೆಂಬದ್ವೈತ ಸಿದ್ಧಿಯಾದಂದು! (ಬಂ)
-ದು, ನಿರಂಜನಾದಿತ್ಯಾಗಿಂದು!!!
-ನವರತೆನ್ನ ನೆನೆ ಪ್ರೇಮಿ! (ಯೋ)
-ಗೇಚ್ಛೆ ಈಡೇರಬೇಕು ಸ್ವಾಮಿ!
ನಾಮ ಭಜನೆ ಮಾಡು ಪ್ರೇಮಿ!
ಶೀಲವೆಂತಿರಬೇಕು ಸ್ವಾಮಿ? (ಗೀ)
-ರ್ವಾಣಿಯಂತಿರಬೇಕು ಪ್ರೇಮಿ!
ದಯಾನುಗ್ರಹ ಮಾಡಿ ಸ್ವಾಮಿ!
ಸಾಈ ಸೇವೆ ಸಾಗಲಿ ಪ್ರೇಮಿ! (ಪ್ರೇ)
-ಈ! ನಿರಂಜನಾದಿತ್ಯಾ ಸ್ವಾಮಿ!!!
ಕಾರ್ಯ ಶುದ್ಧಾರ್ಯ, ವೃದ್ಧಾತ್ಮಾ ಸಿದ್ಧ! (ಕಾ)
-ರ್ಯ, ಕಾರಣ, ತಾನಾದಾತ್ಮಾ ಸಿದ್ಧ!
ಶುದ್ಧ ಸಚ್ಚಿದಾನಂದಾತ್ಮಾ ಸಿದ್ಧ! (ಶ್ರ)
-ದ್ಧಾ, ಭಕ್ತಿಯನುಪಮಾತ್ಮಾ ಸಿದ್ಧ! (ಧೈ)
-ರ್ಯ, ಸ್ಥೈರ್ಯ ವೀರ್ಯವಂತಾತ್ಮಾ ಸಿದ್ಧ!
ವೃತ್ತಿ ರಹಿತ ಯೋಗಾತ್ಮಾ ಸಿದ್ಧ! (ಉ)
-ದ್ಧಾರ ಕರ್ತ ಶ್ರೀ ದತ್ಮಾತ್ಮಾ ಸಿದ್ಧ! (ಆ)
-ತ್ಮಾರಾಮ ಶಿವಾನಂದಾತ್ಮಾ ಸಿದ್ಧ! (ರಿ)
-ಸಿ, ಮುನಿ ಶಿರೋಮಣ್ಯಾತ್ಮಾ ಸಿದ್ಧ! (ವೃ)
-ದ್ಧ ನಿರಂಜನಾದಿತ್ಯಾತ್ಮಾ ಸಿದ್ಧ!!!
ಹರಿ ಭಜನಾನಂದಾ ಶಿವಾನಂದ!
ಜಾಗೃತ ಪ್ರೇಮಾನಂದಾ ಶಿವಾನಂದ!
ನಂದ ಗೋವಿಂದಾನಂದಾ ಶಿವಾನಂದ!
ದಾಸ ದಾಸಾತ್ಮಾನಂದಾ ಶಿವಾನಂದ!
ನಂದಿವಾಹನಾನಂದಾ ಶಿವಾನಂದ!
ದಾರಿದ್ರ್ಯ ಹರಾನಂದಾ ಶಿವಾನಂದ ಶಿವಾನಂದ!
ಶಿಷ್ಯ ಕೋಟಿಯಾನಂದಾ ಶಿವಾನಂದ!
ವಾದ್ಯ ವಾದನಾನಂದಾ ಶಿವನಂದ!
ನಂಜುಂಡೇಶ್ವರಾನಂದಾ ಶಿವಾನಂದ! (ಕಂ)
-ದ ನಿರಂಜನಾದಿತ್ಯಾ ಶಿವಾನಂದ!!!
ಗುಡಿ, ಗೋಪುರ ಕಟ್ಟಿ ಯಾರೇನಾದ? (ತು)
-ರು, ಕರು ಸೇವೆ ಮಾಡಿ ಯಾರೇನಾದ?
ಪಾಡ್ಯಾಡಿ, ಕುಣಿದಾಡಿ ಯಾರೇನಾದ?
ದರಿದ್ರರ್ಗನ್ನ ನೀಡಿ ಯಾರೇನಾದ?
ನಂದಾದೀಪ ಉರಿಸಿ ಯಾರೇನಾದ?
ಬಿಟ್ಟಶನ, ವಸನ ಯಾರೇನಾದ?
ಯಾದವೇಂದ್ರನಿಗಾಗಿ ಯಾರೇನಾದ?
ರೇಚಕಾದಿಗಳಿಂದ ಯಾರೇನಾದ?
ನಾಮ, ಭಜನೆಯಿಂದ ಯಾರೇನಾದ? (ಆ)
-ದ ನಿರಂಜನಾದಿತ್ಯ ಶಿವನಾಂದ!!!
-ಡಿದಾಗಾಗುವುದು ಸ್ವ ಸ್ವರೂಪ! (ಆ)
-ದರನಾದರಕ್ಕೀ ಸ್ಥೂಲ ರೂಪ! (ಅ)
-ರಿವಿನಲಿದ್ದಾಗಾನಂದ ರೂಪ! (ತ)
-ರು, ಲತೆಯೆಂಬ ವಿವಿಧ ರೂಪ!(ಅ)
-ವುಗಳಿಗೆ ಕಾರಣಾತ್ಮ ರೂಪ!
ದೊಂಬಿ, ದರೋಡೆಗೀ ಜಡ ರೂಪ! (ಅ)
-ದು ಅಡಗಿದಾಗ ಮೃಡ ರೂಪ!
ರೂಪ ರೇಖೆಯೆಲ್ಲಾ ನಾಶ ರೂಪ! (ನೃ)
-ಪ, ನಿರಂಜನಾದಿತ್ಯ ಪ್ರದೀಪ!!!
-ಷ್ಣ ಲೀಲಾನಂದಿತಳಾ ಯಶೋಧ!
ನಾಮ ಸ್ಮರಿಸಿದಳಾ ಯಶೋಧ! (ಪಾ)
-ಡಿ ಕುಣಿದಾಡಿದಳಾ ಯಶೋಧ! (ಈ)
-ಸಿ ಸಿಂಗರಿಸಿದಳಾ ಯಶೋಧ!
ದಧಿ, ಕ್ಷೀರ, ವಿತ್ತಳಾ ಯಶೋಧ! (ಆ)
-ಳಾಗಿ ಸೇವಿಸಿದಳಾ ಯಶೋಧ! (ತಾ)
-ಯ ಪ್ರೀತಿ ತೋರಿದಳಾ ಯಶೋಧ!
ಶೋಕವಿಲ್ಲದಿದ್ದಳಾ ಯಶೋಧ!
ಧರ್ಮಿ ನಿರಂಜನಾದಿತ್ಯೆಶೋಧ!!!
ರಸಭರಿತಮಾತಿನಲಿಂದು!
ತಳಮಳವಿಲ್ಲದಿಹುದಿಂದು!
ಭಾವಿಕರಾದರಿಸಬೇಕೆಂದು!
ರಸಿಕರಾನಂದಿಸಲಿಂದೆಂದು!
ತಿರಿದುಂಬಳ ಕಾಣಿಕೆಯೆಂದು!
ಯತೀಶನೊಪ್ಪಿಸಿರುವನಿಂದು!
ಕೈತುತ್ತಾಗಲಿದೆಲ್ಲರಿಗೆಂದು!
ಲಿಂಗ ಪ್ರಸಾದವೆಂದಿತ್ತನಿಂದು! (ಯ)
-ದುಪ ನಿರಂಜನಾದಿತ್ಯನೆಂದು!!!
-ಡುಕಿ ಬಿಡಬಾರದಾತುರದಿಂದಾ! (ಸ್ಥಿ)
-ತಿ, ಗತಿಯ ನೋಡು ಸಹನೆಯಿಂದಾ! (ವ)
-ರ ಗುರುವಿನಲ್ಲಿ ನಂಬಿಗೆಯಿಂದಾ! (ಅ)
-ನುಪಮಮೃತಾತ್ಮ ಭಾವನೆಯಿಂದಾ! (ನಿ)
-ಷ್ಠಾವಂತ ಪರಿಶುದ್ಧ ಸೇವೆಯಿಂದಾ!
ನಾಸ್ತಿಕ ಸಂಗ ಪರಿತ್ಯಾಗಾದಿಂದಾ! (ಅ)
-ನಂಗನಂಗ ಸಂಗ ಮರವೆಯಿಂದಾ!
ದತ್ತಾತ್ರೇಯನಾಜ್ಞಾ ಪಾಲನೆಯಿಂದಾ! (ಅಂ)
-ದಿಂದು, ಮುಂದೆಂಬ ನಿರ್ಯೋಚನೆಯಿಂದಾ! (ಸ)
-ದಾ ನಿರಂಜನಾದಿತ್ಯ ಧ್ಯಾನದಿಂದಾ!!!
ಚಾಕರಿಗನುಕೂಲಾಯಿತು! (ವಿ)
-ರಸಕ್ಕೆಡೆಯಿಲ್ಲದಾಯಿತು!
ತಿರುಗಾಟ ಕಮ್ಮಿಯಾಯಿತು! (ಹ)
-ಳಿದಾತ್ಮಕ್ಕೆ ಶಾಂತಿಯಾಯಿತು!
ಸಿಕ್ಕಿದ್ದಕ್ಕೆ ತೃಪ್ತಿಯಾಯಿತು! (ಒ)
-ದ್ದಾಟ ಮನಕಿಲ್ಲದಾಯಿತು! (ತಾ)
-ಯಿಯ ಆಸೆ ಪೂರ್ತಿಯಾಯಿತು! (ಇಂ)
-ತು ನಿರಂಜನಾದಿತ್ಯಾನಂದಾಯ್ತು!!!
-ಶ್ರಾಂತ್ಯಾವುದು ಗೊತ್ತೇನಪ್ಪಾ?
ತಿಳಿಸಬೇಕು ನೀನಪ್ಪಾ!
ಬೇಕಾತ್ಮಾರಾಮಾನಂದಪ್ಪಾ!
ಕೀಳಾಲೋಚನೆ ದುಃಖಪ್ಪಾ! (ಯೋ)
-ಗೇಚ್ಛೆಯಿಂದಿರಬೇಕಪ್ಪಾ! (ಅ)
-ನಶ್ವರವಿಹ ಸುಖಪ್ಪಾ! (ಅ)
-ಪ್ಪಾ ನಿರಂಜನಾದಿತ್ಯಪ್ಪಾ!!! ೧೪೭೩
ದತ್ತಗಿದಾನಂದ ಜೀವನಾ! (ದ)
-ರ್ಶನಾತ್ಮಾನುರಕ್ತ ಪಾವನಾ!
ನಾಮರೂಪಾತೀತ ಜೀವನಾ!
ಮೌಢ್ಯರಹಿತಾತ್ಮ ಪಾವನಾ!
ನಾಸ್ತಿಕನಿಸ್ಸಂಗ ಜೀವನಾ!
ಪಾದಸೇವಾನಂದ ಪಾವನಾ!
ವರನಾಮ ಪ್ರೇಮ ಜೀವನಾ!
“ನಾ” ನಿರಂಜನಾದಿತ್ಯಾತ್ಮ “ನಾ”!!!
-ರುತರ ಭಯ, ಭಕ್ತಿ, ಭಾವದಲ್ಲಿ!
ದೇಹ, ಬುದ್ಧಿಗಳ ಅರ್ಪಿಸುತಲ್ಲಿ! (ಯಾ)
-ವ ಹವ್ಯಾಸವೂ ಇಲ್ಲದಿರುವಲ್ಲಿ! (ಅ)
-ನವರತ ತದೇಕ ಧ್ಯಾನದಲ್ಲಿ! (ನು)
-ಡಿಯಿಲ್ಲದ ಕರ್ತವ್ಯ ನಿಷ್ಠೆಯಲ್ಲಿ!
ದಾರ್ಶನಿಕಾದಿತ್ಯನೆದುರಿನಲ್ಲಿ! (ಭು)
ವನೈಕ ಪರಮಾತ್ಮನಿದಿರಲ್ಲಿ! (ತೆ)
-ರೆದ ದೃಷ್ಟಿಯಿಂದಾತ್ಮಾನಂದದಲ್ಲಿ! (ಭ)
-ಯವಿನ್ನೇನಿಹುದೀ ಪ್ರಪಂಚದಲ್ಲಿ? (ಎ)
-ಲ್ಲಿ? ನಿರಂಜನಾದಿತ್ಯನಡಿಯಲ್ಲಿ!!!
-ಳಿಯದಿನ್ನೊಂದು ಮಾಯವಾಯ್ತು! (ಒಂ)
-ದೊಂದೊಂದೊಂದು ವಿಧವಾಯಿತು!
ದಯೆ ವಿಧಿಗಿಲ್ಲದಾಯಿತು! (ರಾ)
-ಗ, ದ್ವೇಷ, ಜೀವರಿಗಾಯಿತು! (ಅ)
-ಲಿಪ್ತತೆ ಆತ್ಮನಿಗಾಯಿತು! (ಅ)
-ಹೋರಾತ್ರಿ ಅವಗೊಂದಾಯಿತು! (ಬಾ)
-ಯಿ, ಕೈ, ಕಾಟ ತಪ್ಪಿ ಹೋಯಿತು! (ಹೇ)
-ತು, ನಿರಂಜನಾದಿತ್ಯಾಯಿತು!!!
ರಕ್ಷಣೆಯಿತ್ತೆನ್ನ ಕಾಪಾಡಮ್ಮಾ!
ಮಹಾ ಕಷ್ಟದಲ್ಲಿಹೆ ನಾನಮ್ಮಾ!
ಹಾನಿ, ವೃದ್ಧಿ ನಿನ್ನಾಧೀನವಮ್ಮಾ! (ಅ)
-ಲಕ್ಷಿಸಬಾರದೆನ್ನ ನೀನಮ್ಮಾ! (ಲ)
-ಕ್ಷ್ಮಿ, ಧನಲಕ್ಷ್ಮಿ ಓಡಿ ಬಾರಮ್ಮಾ!
ನೀನಿಲ್ಲದಿನ್ಯಾರು ಗತಿಯಮ್ಮಾ?
ಬಾಳು ನಿನ್ನ ವಿನಾ ವ್ಯರ್ಥವಮ್ಮಾ!
ರವಿ ಕಿರಣ ನಿನ್ನಾನಂದಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯ ನೀನಮ್ಮಾ!!!
-ರ್ಕದಿಂದಾಗುವ ಲಾಭವೇನು? (ತ)
-ನುಮಾನವಿನ್ನೂ ಹೋಗಿಲ್ಲೇನು?
ದಿವ್ಯ ಧ್ಯಾನವೆಲ್ಲಾದರೇನು?
ಸರ್ವೆಶನದನೊಪ್ಪನೇನು? (ಕಾ)
-ದಿದ್ದು ಕಾರ್ಯ ಸಾಧಿಸು ನೀನು! (ಇ)
-ದ್ದಣ್ಣು ತೃಪ್ತಿಯಿಂದ ನೀನು!
ರೇಗಿ ಹಾಳಾಗಬೇಡ ನೀನು! (ನೀ)
-ನು, ನಿರಂಜನಾದಿತ್ಯ ಸೂನು!!!
ಬಾಗಿಲನು ತೆರೆದು ದರ್ಶನವ ಕೊಡು ಗುರುವೇ! ||
ಗಿರಿಜಾಪತಿ ನೀನೆಂದು ನಂಬಿ ಬಂದೆನು ಗುರುವೇ ||ಅಪ||
ಲಜ್ಞೆ ನನಗೇನಿಹುದು ನಿನ್ನಡಿಯಲ್ಲಿ ಗುರುವೇ!
ನುಡಿ ನಡೆಗಳೆಲ್ಲಾ ನಿನ್ನಂಕಿತದಲ್ಲಿ ಗುರುವೇ!
ತೆಗೆ ನನ್ನಜ್ಞಾನ ಮುಸುಕನ್ನೀಗ ಪೂಜ್ಯ ಗುರುವೇ! (ಆ)
-ರೆನ್ನನಾದರಿಸುವರು ನಿನ್ನ ಹೊರತು ಗುರುವೇ?
ದುಡಿದು ಬೆಂಡಾಗಿಹೆ ನಾನೀ ಭವದಲ್ಲಿ ಗುರುವೇ!
ದಯೆದೋರಿ ಕಾಪಾಡೆಂದು ಬೇಡುವೆನು ಶ್ರೀ ಗುರುವೇ! (ದ
-ರ್ಶನ ನಿನ್ನ ಪಾದಪದ್ಮದ್ದಾಗಲಿ ಸದಾ ಗುರುವೇ!
ನನ್ನ ನಿನ್ನಂತೆ ಮಾಡುವ ಭಾರ ನಿನ್ನದು ಗುರುವೇ!
ವಸ್ತು, ವಾಹನಾದಿಗಳೆನಗೆ ಬೇಕಿಲ್ಲ ಗುರುವೇ!
ಕೊಡು ಸತತ ನಿಶ್ಚಲ ಭಕ್ತಿ ನನಗೆ ಗುರುವೇ! (ಬೀ)
-ಡು, ಬಿಡಾರವೆಲ್ಲಾ ನಿನ್ನಡಿ ನನಗೆ ಶ್ರೀ ಗುರುವೇ!
ಗುಡಿ ನಿನಗೀ ಶರೀರವಾಗಲಿ ದತ್ತ ಗುರುವೇ! (ಅ)
-ರುಹಲೇನಾನಿನ್ನು ಸರ್ವಶಕ್ತಾಂತರ್ಯಾಮಿ ಗುರುವೇ?
ವೇದವೇದಾಂತ ಸಾರ ನಿರಂಜನಾದಿತ್ಯ ಗುರುವೇ!!!
-ಕ್ಷಾತ್ಕಾರವಿದರ ಗುರಿಯಮ್ಮಾ! (ಸಂ)
-ಬಂಧಂತರ್ಯಾಮಿಯದಾಗಲಮ್ಮಾ!
ಧರಿಸಿ ನಿತ್ಯ ಸುಖಿಯಾಗಮ್ಮಾ!
ನಶ್ವರೇಂದ್ರಿಯ ಸಂಬಂಧವಮ್ಮಾ!
-ವಾಸುದೇವಾತ್ಮ ಸ್ವರೂಪನಮ್ಮಾ! (ಯೋ)
-ಗದಿಂದದ ಸಾಧಿಸಬೇಕಮ್ಮಾ!
ಬೇಕಿದಕೆ ಶ್ರದ್ಧಾ, ಭಕ್ರಿಯಮ್ಮಾ!
ಕರ್ಮ, ಧರ್ಮ ಬಿಡಬಾರದಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾದರ್ಶಮ್ಮಾ!!!
-ರ್ಶಕ್ಕದೆಟಕೆದಂತಾಗಿದೆ!
ನಯನ ನೋಡದಂತಾಗಿದೆ!
ಸುಖ, ದುಃಖಲಕ್ಷ್ಯವಾಗಿದೆ!
ಖತಿ ಮತಿ ಶಾಂತವಾಗಿದೆ!
ಹೆದರಿಕೆ ಕಿತ್ತೋಡುತಿದೆ! (ಹು)
-ಚ್ಚು ವ್ಯಾಮೋಹ ನುಚ್ಚಾಗುತಿದೆ!
ತಿತಿಕ್ಷೆ ಸ್ಥಿರವಾಗುತಿದೆ! (ಇ)
-ದೆ, ನಿರಂಜನಾದಿತ್ಯಾಗಿದೆ!!!
ಗಂಡ, ಮಕ್ಕಳ ಸುಖ ಸಾಕು ಸ್ವಾಮಿ! (ಎ)
-ಡರಿದೆಲ್ಲಾಧ್ಯಾತ್ಮ ಸುಖಕ್ಕೆ ಸ್ವಾಮಿ!
ಮನಕ್ಕೆಳ್ಳಷ್ಟೂ ಶಾಂತಿಯಿಲ್ಲ ಸ್ವಾಮಿ! (ತ)
ಕ್ಕ ಉಪಾಯವಿದಕ್ಕರುಹಿ ಸ್ವಾಮಿ! (ತ)
-ಳಮಳವಿಲ್ಲದೆ ಭಜಿಸು ಪ್ರೇಮಿ!
-ಸುಕಾಲ ಪ್ರಾಪ್ತಿಯಾಗುವುದು ಪ್ರೇಮಿ! (ಸು)
-ಖ ನಿನಗೆ ಸದಾ ಶ್ರೀ ಗುರು ಪ್ರೇಮಿ!
ಸಾರ್ಥಕವಾಗುವುದೀಜನ್ಮ ಪ್ರೇಮಿ!
ಕುಜನರ ದೂರವಿರಿಸು ಪ್ರೇಮಿ!
ಸ್ವಾಧ್ಯಾಯ ಸದಾ ಮಾಡುತಿರು ಪ್ರೇಮಿ! (ಸ್ವಾ)
-ಈ, ನಿರಂಜನಾದಿತ್ಯಾನಂದ ಪ್ರೇಮಿ!!!
-ಟವನದು ನೋಡಬೇಕಯ್ಯಾ!
-ರಾಗ, ತಾಳಾನಂದವನಯ್ಯಾ!
ಜಗದೀಶ್ವರನವನಯ್ಯಾ!
ಬಂಧು ಬಾಂಧವನವನಯ್ಯಾ!
ದತ್ತನಲ್ಲಿವನೈಕ್ಯವಯ್ಯಾ!
ನೋಡುವರಿಗೆ ಹುಚ್ಚನಯ್ಯಾ! (ಒ)
-ಡಲೆಲ್ಲಾ ಹೆಣ ಬೂದಿಯಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾತಯ್ಯಾ!!!
ದುರ್ಬುದ್ಧಿಯ ಉಚ್ಚಾಟನೆಯಾಗಬೇಕು! (ಜ)
-ರ್ಬುವಭ್ಯಾಸ ಹುಟ್ಟಡಗಿ ಹೋಗಬೇಕು! (ಸಿ)
-ದ್ಧಿಗಿದತ್ಯಾವಶ್ಯಕವಾಗಿರಬೇಕು! (ಭ)
-ಯ, ಭ್ರಾಂತಿಗಳೆಲ್ಲಾ ನಾಶವಾಗಬೇಕು!
ಉತ್ತಮ ಸಂಗ ಸತತವಿರಬೇಕು! (ಹು)
-ಚ್ಚಾಟ, ಕಚ್ಚಾಟಗಳಿಲ್ಲದಿರಬೇಕು! (ಆ)
-ಟ, ಪಾಠ, ಕ್ರಮಬದ್ಧವಾಗಿರಬೇಕು!
ನೆರವಿದಕೆ ಸದ್ಗುರುವಾಗಬೇಕು! (ಕಾ)
ಯಾ, ವಾಚಾ, ಮನಸಾ ಸೇವೆ ಸಾಗಬೇಕು!
ಗರ್ವ ಬಿಟ್ಟವನಾಜ್ಞೆ ಪಾಲಿಸಬೇಕು!
ಬೇಡದೇ ಸಿಕ್ಕಿದ್ದಕ್ಕಾನಂದಿಸಬೇಕು! (ಬೇ)
-ಕು, ನಿರಂಜನಾದಿತ್ಯಾನಂದಾಗಬೇಕು!!!
ನಾಗಲಿಂಗ ಪುಷ್ಪ ರತ್ನಾರ್ಚನೆ! (ಲಿಂ)
-ಗಕ್ಕಿದೊಂದಮೌಲ್ಯ ಪುಷ್ಪಾರ್ಚನೆ! (ಮೇ)
-ಲಿಂದ ಮೇಲಾಗಬೇಕೀ ಅರ್ಚನೆ! (ಯೋ)
-ಗ ಜೀವನಕ್ಕಿದಾದರ್ಶಾರ್ಚನೆ!
ಪುನರ್ಜನ್ಮನಾಶಕ್ಕೀ ಅರ್ಚನೆ (ಪು)
ಷ್ಪದಂತ ಮಾಡಿದ್ದನೀ ಅರ್ಚನೆ! (ಹ)
-ರನಿಷ್ಟದಂತಾಯಿತಾ ಅರ್ಚನೆ (ರ)
-ತ್ನಾಭರಣಕ್ಕಧಿಕಾ ಅರ್ಚನೆ! (ಅ)
ರ್ಚಕನುದ್ಧಾರಗೈವಾ ಅರ್ಚನೆ! (ದಿ)
-ನೆಶ ನಿರಂಜನಾದಿತ್ಯಾರ್ಚನೆ!!!
-ಖಕ್ಕೆ ಕಾರಣ ಆಸೆಗಳಪ್ಪಾ!
ವಾಸನಾ ನಾಶವಾಗಬೇಕಪ್ಪಾ!
ಗಿರಿಜಾಪತಿಯ ಭಜಿಸಪ್ಪಾ!
ಜನ್ಮ ಪಾವನವಾಗುವುದಪ್ಪಾ! (ಮ)
ನ್ಮಥಾರಿಯ ಮರೆಯಬೇಡಪ್ಪಾ!
ಮುಕ್ತಿ ಪ್ರದಾತಾ ಗುರು ಶಿವಪ್ಪಾ! (ಬಿ)
-ಗಿ ಹಿಡಿಯಬೇಕಿಂದ್ರಿಯವಪ್ಪಾ!
ಸದಾಚಾರ ಸಂಪನ್ನನಾಗಪ್ಪಾ! (ಅ)
-ಪ್ಪಾ ನಿರಂಜನಾದಿತ್ಯಾನಂದಪ್ಪಾ!!!
-ನೆ ನಿನ್ನದೇ ನಿನಗೆ ಸುಖವಪ್ಪಾ!
ಮಲಿನವೆಲ್ಲಾಗಾಗ ತೊಳೆಯಪ್ಪಾ!
ನೆನೆಯುತಿರು ಸ್ವಸ್ವರೂಪವಪ್ಪಾ!
ಯಮ, ನಿಯಮಾಭ್ಯಾಸಿ ನೀನಾಗಪ್ಪಾ! (ಕ)
-ಲೆಯದಿರು ಕಳ್ಳಕಾಕರೊಳಪ್ಪಾ!
ದಾಸ ನೀನಾಗು ಶ್ರೀ ಗುರುವಿಗಪ್ಪಾ! (ತ)
-ಟ ಸೇರಿಸುವ ಅಪ್ಪ ಅವನಪ್ಪಾ!
ಸಾಧನೆಗೆ ಶ್ರದ್ಧಾ ಭಕ್ತಿ ಬೇಕಪ್ಪಾ!
ಕಡೆತನಕೆದೆಗೆಡಬೇಡಪ್ಪಾ! (ಅ)
-ಪ್ಪಾ ನಿರಂಜನಾದಿತ್ಯ ಜಗಕಪ್ಪಾ!!!
-ರಮ ಪುರುಷನವ ಕಾಣೆ!
ಲೀಲಾವತಾರಿಯವ ಕಾಣೆ!
ಕೃಪಾಸಾಗರನವ ಕಾಣೆ! (ಪೂ)
-ಷ್ಣ ಸ್ವರೂಪ ಶ್ರೀ ಕೃಷ್ಣ ಕಾಣೆ!
ಬಂಧು ಬಾಂಧವನವ ಕಾಣೆ!
ದರ್ಶನ ಬಹ್ಮಾನಂದ ಕಾಣೆ!
ಕಾಮಕೋಟಿ ತೇಜಾತ್ಮ ಕಾಣೆ! (ಎ)
ಣೆ ನಿರಂಜನಾದಿತ್ಯ ಕಾಣೆ!!!
-ಶಾಚಿ ಮನಕಿರ್ಪುದಾ ಕಾಮ!
ತುಕಾರಾಮ ಸತತಾರಾಮ!
ರಕ್ಕಸ ರಾವಣಗಾ ಕಾಮ!
ನಿರ್ಮಲಾಂತಃಕರಣಾ ರಾಮ! (ಭೋ)
-ಗಿಯ ಜೀವನವೆಲ್ಲಾ ಕಾಮ! (ಉ)
-ಲ್ಲಾಸಿ ತಾಪಸಿ ಸದಾರಾಮ!
ರಾಗ, ದ್ವೇಷಗಳೆಲ್ಲಾ ಕಾಮ! (ರಾ)
-ಮ ನಿರಂಜನಾದಿತ್ಯಾರಾಮ!!!
ಚಿತ್ರೀಕರಣ ಪ್ರದರ್ಶನವೆಲ್ಲಾ ಸಾಕಯ್ಯಾ! (ಧಾ)
-ತ್ರೀ ಸಂಬಂಧದಿಂದೇನೇನೂ ಸುಖವಿಲ್ಲಯ್ಯಾ!
ಕಣ್ಣಿಂದ್ರಿಯಾನಂದ ನಿಜಾನಂದವಲ್ಲಯ್ಯಾ!
ರಕ್ತ ಮಾಂಸದ ಗೊಂಬೆಯಾಟೆಷ್ಟು ದಿನವಯ್ಯಾ? (ಹ)
-ಣ ಕಾಸನ್ನವಲಂಬಿಸುವುದೀ ಆಟವಯ್ಯಾ!
ಪ್ರಗತಿಗಿದೆಂದಿಗೂ ಸಹಾಯವಾಗದಯ್ಯಾ!
ದರಿದ್ರಾವಸ್ಥೆಯಿದರಿಂದ ಹೆಚ್ಚುವುದಯ್ಯಾ! (ದ)
-ರ್ಶನ ಪರಮಾತ್ಮನದಾದರೆ ಸುಖವಯ್ಯಾ!
ನರಜನ್ಮವಿದರಿಂದಲೇ ಸಾರ್ಥಕವಯ್ಯಾ!
ವೆಗ್ಗಳದಾ ಲಾಭಕ್ಕಾಗಿ ದುಡಿಯಬೇಕಯ್ಯಾ! (ಚೆ)
-ಲ್ಲಾಟ ಮನೋವೃತ್ತಿಗಳೆಲ್ಲಾ ನಿಲ್ಲಬೇಕಯ್ಯಾ!
ಸಾಧು, ಸಜ್ಜನ, ಸಂಗವಿದಕಗತ್ಯವಯ್ಯಾ!
ಕರ್ಮ ಫಲಾಪೇಕ್ಷೆಯಿಲ್ಲದೆ ಮಾಡಬೇಕಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾತ್ಮಾನಂದ ಗುರಿಯಯ್ಯಾ!!!
ಮಾಡಿದ ಕರ್ಮಕ್ಕೆ ಫಲವೇ ಸಾಕ್ಷಿ! (ತೋ)
-ಡಿದ ಬಾವಿಗೆ ಉದಕವೇ ಸಾಕ್ಷಿ! (ಉ)
-ದಯವಾದುದಕೆ ಬೆಳಕೇ ಸಾಕ್ಷಿ!
ಕರ್ತವ್ಯನಿಷ್ಠೆಗೆ ತೃಪ್ತಿಯೇ ಸಾಕ್ಷಿ! (ಚ)
-ರ್ಮವ್ಯಾಧಿಗದರ ಬಣ್ಣವೇ ಸಾಕ್ಷಿ! (ರೆ)
-ಕ್ಕೆ ಮುರಿದುದಕೆ ಹಾರದ್ದೇ ಸಾಕ್ಷಿ! (ಕ)
-ಫ ತುಂಬಿದಕುಸಿರಾಡದ್ದೇ ಸಾಕ್ಷಿ! (ಕು)
-ಲ, ಶೀಲಗಳಿಗಾಚಾರವೇ ಸಾಕ್ಷಿ!
ವೇದಾಂತಕ್ಕೆ ನಿಷ್ಕರ್ಮ ತಾನೇ ಸಾಕ್ಷಿ!
ಸಾಧು ಭಾವನೆಗೆ ಶಾಂತಿಯೇ ಸಾಕ್ಷಿ! (ಸಾ)
-ಕ್ಷಿ, ನಿರಂಜನಾದಿತ್ಯ ಸರ್ವ ಸಾಕ್ಷಿ!!!
ಪರಮಾತ್ಮನಾಗಲದು ಬೇಕು!
ವೇಶ್ಯಾವೃತ್ತಿ ಸಾಯಲದು ಬೇಕು!
ಕೆಲಸ ಸಿದ್ಧಿಸಲದು ಬೇಕು!
ಸರ್ವೇಂದ್ರಿಯ ಜಯಕ್ಕದು ಬೇಕು!
ದಾಸಾಂಜನೇಯನಾಗಲದು ಬೇಕು!
ಮಾಯಾಮೃಗ ಕೊಲ್ಲಲದು ಬೇಕು! (ಕೋ)
-ಡಗರಾತ್ಮೋದ್ಧಾರಕ್ಕದು ಬೇಕು!
ಬೇಡದಂತಿರಲಿಕ್ಕದು ಬೇಕು! (ಬೇ)
-ಕು, ನಿರಂಜನಾದಿತ್ಯಾಗಬೇಕು!!!
-ಡನಾಟ ಸಭ್ಯರದಾಗಬೇಕು!
ವಾದಕ್ಕೆಡೆಯಿಲ್ಲದಿರಬೇಕು!
ದರ್ಪ, ದಂಭವಿರದಿರಬೇಕು! (ಉ)
-ದ್ದೇಶಾತ್ಮಾನಂದವಾಗಿರಬೇಕು!
ಕೆಟ್ಟಯೋಚನೆ ಬಿಟ್ಟಿರಬೇಕು!
ಬಲವೃದ್ಧಿ ಮನಕಾಗಬೇಕು! (ವ)
-ರಗುರು ಭಜನೆ ಮಾಡಬೇಕು!
ಬೇಲಿಯಿದು ಮನೆಗಾಗಬೇಕು! (ಬೇ)
-ಕು, ನಿರಂಜನಾದಿತ್ಯ ತಾ ಬೇಕು!!!
ರಾಗ, ದ್ವೇಷ ರಹಿತಾಮೃತ!
ಮನೋ ಶಾಂತಿ ಪ್ರದಾತಾಮೃತ! (ಅ)
-ನಾದಿ ಸನಾತನಾತ್ಮಾಮೃತ!
ಮಹೇಶ ನಾಮ ಪ್ರೇಮಾಮೃತ! (ಯೋ)
-ಗಾತ್ಮ ಸರಯೂವಾಸಾಮೃತ!
ನಾಮ ಭಜನಾನಂದಾಮೃತ!
ಮೃತ್ಯುಂಜಯಾಂಜನೇಯಾಮೃತ! (ಶಾಂ)
-ತ, ನಿರಂಜನಾದಿತ್ಯಾಮೃತ!!!
-ನ್ನ, ವಸ್ತ್ರ ಬೇಡ ನಿನಗಯ್ಯಾ! (ಮ)
-ಹಾ ಶಕ್ತಿಸಂಪನ್ನ ನೀನಯ್ಯಾ! (ಯೋ)
-ಗಿ ರಾಜಾತ್ಮಾನಂದ ನೀನಯ್ಯಾ! (ಸ)
-ನ್ಯಾಸ ಧರ್ಮಾದರ್ಶ ನೀನಯ್ಯಾ!
ರಿಪು ಕುಲಾಂತಕ ನೀನಯ್ಯಾ!
ಹರಿ, ಹರ, ಬ್ರಹ್ಮ ನೀನಯ್ಯಾ?
ರಘುರಾಮಗಾರ್ಯ ನೀನಯ್ಯಾ (ಅ)
-ಯ್ಯಾ, ಶ್ರೀ ನಿರಂಜನಾದಿತ್ಯಯ್ಯಾ!!!
ಪತಿ ಕೈ ಬಿಟ್ಟಾಗ ಮಾಡಿದ ಭಕ್ತಿ!
ದಿವ್ಯ ರೀತಿಯಲ್ಲಿ ತಂದಿತು ಶಕ್ತಿ! (ಕಾ)
-ಯ, ಮಾನಉಳಿಸೆಂದೊರೆದ ಭಕ್ತಿ! (ಅ)
-ಭಯ ಪ್ರದಾನ ಮಾಡಿತಂದು ಶಕ್ತಿ! (ಯು)
-ಕ್ತಿಯಿಲ್ಲದವಳ ಅನನ್ಯ ಭಕ್ತಿ!
ಕೃಷ್ಣಗವಕಾಶ ತೋರಲು ಶಕ್ತಿ! (ಕೃ)
-ಷ್ಣ ಗತಿಯೆಂದೊರಲಿತಂದು ಭಕ್ತಿ! (ಆ)
-ನತೋದ್ಧಾರ ಮಾಡಿತಾಗಂದು ಶಕ್ತಿ!
ಶಶಿಮುಖಿಯ ಕಾಪಾಡಿತು ಭಕ್ತಿ! (ಭ)
-ಕ್ತಿ, ನಿರಂಜನಾದಿತ್ಯಾನಂದ ಶಕ್ತಿ!!!
ಹಾಲ್ಬೆಣ್ಣೆ ಹೆಚ್ಚಾಯ್ತೇನಯ್ಯಾ? (ಆ)
-ಯಾಸ ಶಾಂತಿ ನಿನ್ನಿಂದಯ್ಯಾ!
ಸರ್ವಾಧಿಕಾರಿ ನೀನಯ್ಯಾ! (ಗೋ)
-ವಿಂದಾನಂದ ನಿನ್ನಿಂದಯ್ಯಾ!
ದೇಹ, ಬುದ್ಧಿ ನಿನ್ನದಯ್ಯಾ!
ಕರ್ಮ ಕಾರಣ ನೀನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಯ್ಯಾ!!!
ದಯೆಯಿನ್ನೂ ಬಂದಿಲ್ಲವೇ ಸ್ವಾಮಿ? (ಮಾ)
-ಯೆಯಾಟವಿನ್ನೂ ಸಾಲದೇ ಸ್ವಾಮಿ? (ಆ)
-ಯಿತಿನಿತನೇಕಜನ್ಮ ಸ್ವಾಮಿ! (ನ)
-ನ್ನೂಳಿಗದಲ್ಲೇನು ತಪ್ಪು ಸ್ವಾಮಿ?
ಬಂಧು ನಿನ್ನ ಹೊರತ್ಯಾರು ಸ್ವಾಮಿ?
ದಿನ, ರಾತ್ರಿ, ನಿನ್ನ ಧ್ಯಾನ ಸ್ವಾಮಿ! (ಎ)
-ಲ್ಲವೂ ನಿನೋಬ್ಬನೆನಗೆ ಸ್ವಾಮಿ!
ವೇಷದಾಸೆನಗೇನಿದೆ ಸ್ವಾಮಿ?
ಸ್ವಾಮಿಭಕ್ತ ನಾನಲ್ಲವೇ ಸ್ವಾಮಿ?
ಮಿತ್ರ ನಿರಂಜನಾದಿತ್ಯಾ ಸ್ವಾಮಿ!!!
-ರ್ವ ಕಾರಣ ಕರ್ತೇಕಾತ್ಮ!
ನಾರಾಯಣ ರೂಪೇಕಾತ್ಮ!
ಮಹೇಶ ಸ್ವರೂಪೇಕಾತ್ಮ!
ರೂಪ, ರೇಖಾತೀತೇಕಾತ್ಮ! (ಜ)
-ಪೇಶ, ತಪೇಶ, ಗೋಪಾತ್ಮ!
ಕಾಮಾಕ್ಷಿ, ಈನಾಕ್ಷ್ಯೇಕಾತ್ಮ! (ಆ)
-ತ್ಮ ನಿರಂಜನಾದಿತ್ಯಾತ್ಮ!!!
ಪರಮಾತ್ಮ ಸೇವೆಯೊಂದೇ ಉಳಿಯಿತು!
ವಾಸನೆಗಳೆಲ್ಲಾ ತೊಳೆದು ಹೋಯಿತು!
ದಮ, ಶಮಾದಿಗಳು ಬಲವಾಯಿತು! (ಸ)
-ದಿಂಬು ಸರ್ವದಾ ಲಭಿಸುವಂತಾಯಿತು!
ದುರ್ಜನ ಸಹವಾಸ ತಪ್ಪಿ ಹೋಯಿತು!
ಪದ್ಮಪ್ರಿಯನನುಗ್ರಹವುಂಟಾಯಿತು!
ಕಾಯದಭಿಮಾನ ನಿರ್ನಾಮವಾಯಿತು! (ವ)
-ರ ಗುರು ಸೇವಾಸಕ್ತಿ ನೂರ್ಮಡ್ಯಾಯಿತು!
ವಾಜ್ಮನಗಳವನಲ್ಲೈಕ್ಯವಾಯಿತು! (ಬಾ)
-ಯಿ ವೇದಾಂತದಲ್ಲಿ ಜಿಗುಪ್ಸೆಯಾಯಿತು!
ತುರಿಯಾತೀತ ನಿರಂಜನಾದಿತ್ಯಾಯ್ತು!!!
-ಲ್ಪನೆಗಳಿಂದೆಲ್ಲಾ ಶಾಂತಿ ಭಂಗ! (ಪ)
-ರಮಾರ್ಥಕ್ಕಿರಬೇಕು ಸತ್ಸಂಗ!
ಸಂಪತ್ತೆಂಬುದಾ ಸಜ್ಜನ ಸಂಗ (ರಂ)
-ಗ ನೀನಾಗು, ಬಿಟ್ಟನಂಗ ಸಂಗ! (ಸ್ವಾ)
-ಭಿಮಾನಿ ಬ್ರಹ್ಮಾನಂದಾ ಸಾರಂಗ!
ಮಾಯಾ, ಮೋಹ ನಿಸ್ಸಂಗಾ ಸಾರಂಗ!
ನಲಿದಾಡಿ ಪಾಡಿದಾ ಗೌರಂಗ!
ಭಂಜನಾ, ತ್ರಿಲೋಚನಾ ಸಾರಂಗ! (ಖ)
-ಗ ನಿರಂಜನಾದಿತ್ಯ ಸಾರಂಗ!!!
-ಷಿಯೆಂದಿಗೂ ಆಗದಿರಪ್ಪಾ!
ಸದಾ ಗುರುಧ್ಯಾನ ಮಾಡಪ್ಪಾ! (ಆ)
-ಲ್ಪರ ಸಂಗ ಮಾಡಬೇಡಪ್ಪಾ! (ಮ)
-ಡದಿ, ಮಕ್ಕಳಾಸೆ ಸಾಕಪ್ಪಾ!
ಬಾಳು ಬ್ರಹ್ಮಾನಂದಕ್ಕಾಗಪ್ಪಾ! (ತ)
-ರ ತರಾಸೆಯಿಂದಾ ದುಃಖಪ್ಪಾ!
ದಮನ ಮಾಡಿಂದ್ರಿಯವಪ್ಪಾ! (ಅ)
-ಪ್ಪಾ ಶ್ರೀ ನಿರಂಜನಾದಿತ್ಯಪ್ಪಾ!!!
-ಳ ಲೋಚನಾತ್ಮಾ ನಿರಂಜನಪ್ಪಾ!
ಸೀತಾರಮಣನಿವ ಕಾಣಪ್ಪಾ!
ಛಾಯಾಪತಿ ರೂಪನವನಪ್ಪಾ! (ಕಾ)
-ಯಾಭಿಮಾನವನಿಗೇನಿಲ್ಲಪ್ಪಾ!
ನಂಬಿದವರಿಗಿಂಬನೀವಪ್ಪಾ!
ದತ್ತರೂಪವನಿಗಿಷ್ಟವಪ್ಪಾ!
ನಾಮ ಭಜನಾನಂದವನಪ್ಪಾ!
ರವಿ ವಂಶದಾದಿ ಪುರುಷಪ್ಪಾ! (ಅ)
-ಪ್ಪಾ ನಿರಂಜನಾದಿತ್ಯಾನಂದಪ್ಪಾ!!!
-ಳ್ಳನೆನಿಸಬೇಡೆನ್ನ ನೀನಪ್ಪಾ!
ಬಳಕೆಯಲ್ಲೆಲ್ಲಾ ಕಾಣಲಪ್ಪಾ! (ಬೇ)
ರೆನಗೇನೂ ಆಸೆಗಳಿಲ್ಲಪ್ಪಾ!
ಸತ್ಯ, ಧರ್ಮ, ಉಳಿಯಬೇಕಪ್ಪಾ!
ಬೇಸತ್ತಿಹೆನಿಹ ಸುಖಕ್ಕಪ್ಪಾ! (ಬ)
-ಡತನವೇ ಸದಾ ಇರಲಪ್ಪಾ!
ನೀನು ಮಾತ್ರ ಕೈ ಬಿಡಬೇಡಪ್ಪಾ!
ನನ್ನುದ್ಧಾರ ನಿನ್ನಾಧೀನವಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯಾನಂದಪ್ಪಾ!!!
-ರಂಗಾನುಗ್ರಹದಿಂದಈಗ!
ಜನನ, ಮರಣದ ರೋಗ!
ನಶಿಸಿ ಹೋದಂತಾಯಿತೀಗ!
ದಶೇಂದ್ರಿಯಗಳಾಶಾ ಭೋಗ! (ಸ್ಪ)
-ರ್ಶ ಮಾಡದಂತಿರುವುದೀಗ!
ನಶ್ವರದಾಸ್ತಿಯನುರಾಗ!
ಯೋಚಿಸಿದಂತಾಗಿಹುದೀಗ! (ತ್ಯಾ)
-ಗ ನಿರಂಜನಾದಿತ್ಯ ಯೋಗ!!!
-ರುಕುಳಿಗಳಿಗವಕಾಶವಿಲ್ಲ!
ವಾಸುದೇವ ಭಜನೆಗಡ್ಡಿಯಿಲ್ಲ! (ಲಿ)
-ಪ್ರ ವ್ಯವಹಾರಕ್ಕೆ ಪ್ರೋತ್ಸಾಹವಿಲ್ಲ! (ಹ)
-ರಿ, ಹರ, ಬ್ರಹ್ಮರಲ್ಲಿ ಭೇದವಿಲ್ಲ!
ಗದ್ದಲಕ್ಕಿನಲ್ಲಿ ಅನುಮತಿಯಿಲ್ಲ!
ನಾಳೆಯ ಮಾತು ಹೇಳುವ ಹಾಗಿಲ್ಲ!
ದರ್ಶನ ವಿನಹ ಈಗೇನೂ ಇಲ್ಲ! (ವ)
-ರ ಗುರುಕೃಪೆಗೆ ಲೋಪವೇನಿಲ್ಲ!
ವಿಶ್ವಾಸಿಗಳರಿಯಬೇಕಿದೆಲ್ಲ! (ಪು)
-ಲ್ಲ, ನಿರಂಜನಾದಿತ್ಯನ್ಯನೇನಲ್ಲ!!!
ರಂಗನಾಥ ಪ್ರಿಯನಯ್ಯಾ!
ಜಗದ್ಗುರು ಅವನಯ್ಯಾ!
ನರಹರಿ ಸದೃಶಯ್ಯಾ!
ಶಿಖಿವಾಹನವನಯ್ಯಾ?
ವರ ಗಣನಾಯಕಯ್ಯಾ!
ನರ ನಾರಾಯಣಾತಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಯ್ಯಾ!!!
-ಕ್ಕಿ ಭತ್ತ ಹೆಕ್ಕುವ ಹಬ್ಬ!
ಗಗನ ವಿಹಾರ ಹಬ್ಬ! (ಗಾ)
-ಳಿ, ಮಳೆಯೆನ್ನದ ಹಬ್ಬ! (ಆ)
-ಗಾಗೆಲ್ಲೋ ತಂಗುವ ಹಬ್ಬ!
ವನವಾಸವೊಂದು ಹಬ್ಬ!
ಹಗಲಿರುಳೆಲ್ಲಾ ಹಬ್ಬ! (ಹ)
-ಬ್ಬ ನಿರಂಜನಾದಿತ್ಯೋಬ್ಬ!!!
-ನಂತರ್ಯಾಮಿಯೆಂಬರಿವಾರಾಮ!
ತನು, ಮನ, ಪ್ರಾಣವಲ್ಲಾರಾಮ! (ತೀ)
-ವ್ರ ಸಾಧನೆಯಿಂದಹುದಾರಾಮ!
ತಾಳ್ಮೆಯಿಂದಿದ್ದರಹುದಾರಾಮ!
ನಂಬಿದರೆ ಗುರುವನ್ನಾರಾಮ!
ತರಣಿಯಾದರ್ಶ ಸದಾರಾಮ!
ರಾಗ, ದ್ವೇಷ ರಹಿತಾತ್ಮಾರಾಮ!
ರಾವಣ ಮದ ಮರ್ದನಾರಾಮ! (ವಿ)
-ಮಲ ನಿರಂಜನಾದಿತ್ಯಾರಾಮ!!!
-ನ್ಯ ನೀನಾಗುವುದಕೆ ಮರೆಯಬೇಡ! (ಪ)
-ರನಿಂದೆ, ಪರಹಿಂಸೆ ಮಾಡಲೂ ಬೇಡ! (ಅ)
-ನುಪಮಾತ್ಮ ಚಿಂತನೆ ಬಿಡಲೂ ಬೇಡ!
ತುಚ್ಛ ಮನೋಭಾವಕ್ಕೆಡೆ ಕೊಡಬೇಡ! (ಗಾ)
-ಳಿಗೋಪುರ ಕಟ್ಟಿ ಕೆಟ್ಟು ಹೋಗಬೇಡ! (ಕಾ)
-ಯದಭಿಮಾನವೆಳ್ಳಷ್ಟೂ ಇಡಬೇಡ! (ಜ್ವಾ)
-ಲೆ ವಿಷಯಾಸೆಗಳಿಗಾಳಾಗ ಬೇಡ! (ಪ)
-ತ್ನಿ ಪುತ್ರ, ಪುತ್ರಿಯರಿಗಾಶಿಸಬೇಡ!
ಸರ್ವಾತ್ಮ ಸಾಕ್ಷತ್ಕರಿಸದಿರಬೇಡ!
ಬೇರೆಯವರೇಳ್ಗೆಗಸಹನೆ ಬೇಡ! (ಮಂ)
-ಡಲಾಧಿಪತಿ ನಿರಂಜನಾದಿತ್ಯಾಡ!!!
ರಂಜಿಸುತಿಹ ತಾ ನಿಶಿದಿನ!
ಜನಾರ್ದನಾ ಜನುಮ ಪಾವನ!
ನರ ನಾರಾಯಣಾ ಸನಾತನ!
ಮನಮೋಹನಾ ಮಧುಸೂದನ!
“ನ ಗುರೋರಧಿಕಂ” ಸಂಜೀವನ!
ನಿರುಪಮಾತ್ಮಾ ಸುಂದರಾನನ!
ರಂಗ ಸಾರಂಗಾ ಕಮಲಾಸನ!
ಜಪ, ತಪ ಸಾಧನಾ ಮೋಚನ!
ನಮೋ ನಿರಂಜನಾದಿತ್ಯಾನನ!!!
ರಂಗನಾಥಾನಂದಾ ರಾಮದಾಸ!
ಜನದೀಶಾನಂದಾ ರಾಮದಾಸ!
ನಾಗರಾಜಾನಂದಾ ರಾಮದಾಸ!
ನಂದ ಕಂದಾನಂದಾ ರಾಮದಾಸ!
ದಾಸ ದಾಸಾನಂದಾ ರಾಮದಾಸ!
ರಾಮನಾಮಾನಂದಾ ರಾಮದಾಸ!
ಮರ್ಕಟೇಶಾನಂದಾ ರಾಮದಾಸ!
ದಾಸಿ ಈರಾನಂದ ರಾಮದಾಸ!
ಸಖ ನಿರಂಜನಾದಿತ್ಯಾ ದಾಸ!!!
-ನ್ನ ಮನ ನನಗೆ ಮನೆಯಾಗಲಿ!
ಮದ, ಮತ್ಸರಗಳಿಲ್ಲದಾಗಲಿ!
ನಗುನಗುತ ಭಜನೆ ಸಾಗಲಿ!
ನಿಶ್ಚಲ ಭಕ್ತಿ ಬೆಳಗುತ್ತಿರಲಿ! (ಉ)
-ನ್ನತದ ಸಾಯುಜ್ಯ ಸಿದ್ಧಿಯಾಗಲಿ!
ಮರಣದ ಭಯ ತಪ್ಪಿ ಹೋಗಲಿ!
ನೆರವು ಸದಾ ನಿನ್ನಿಂದೊದಗಲಿ!
ಯಾಗ, ಯೋಗ ನಿನ್ನ ಸಂಗವಾಗಲಿ!
ಗಮನ ಬೇರೆಡೆಗಾಗದಿರಲಿ! (ಮಾ)
-ಲಿಕ ಶ್ರೀ ನಿರಂಜನಾದಿತ್ಯಾಗಲಿ!!!
ಗಾಬರಿಯೇಕೆಂಬನಾ ತ್ರಿಪುರಾರಿ!
ವರದಾಪ್ರಿಯಾತ್ಮನಾ ತ್ರಿಪುರಾರಿ!
ಲಾವಣ್ಯಸ್ವರೂಪನಾ ತ್ರಿಪುರಾರಿ!
ಗಿರಿಜಾರಮಣನಾ ತ್ರಿಪುರಾರಿ!
ಹರಸಿ ಪೊರೆವನಾ ತ್ರಿಪುರಾರಿ!
ನಾದಪ್ರಿಯ ಶಿವನಾ ತ್ರಿಪುರಾರಿ!
ತ್ರಿಭುವನಾಧಿಪನಾ ತ್ರಿಪುರಾರಿ!
ಪುಣ್ಯ, ಪಾಪ, ಶೂನ್ಯನಾ ತ್ರಿಪುರಾರಿ!
ರಾಮನಾಮ ಪ್ರಿಯನಾ ತ್ರಿಪುರಾರಿ! (ಅ)
-ರಿ ನಿರಂಜನಾದಿತ್ಯಾ ತ್ರಿಪುರಾರಿ!!!
ನಾಟ್ಯಕಲಾ ಪ್ರವೀಣೆ ಚಂದ್ರಮ್ಮಾ! (ಭೇ)
-ಟ್ಯನುಕೂಲವಾಯ್ತಿಂದು ಚಂದ್ರಮ್ಮಾ!
ಕಣ್ಣಿಗೀಗಿಷ್ಟೇ ಪ್ರಾಪ್ತಿ ಚಂದ್ರಮ್ಮಾ!
ಲಾಭ ಮುಂದಾಗುವುದು ಚಂದ್ರಮ್ಮಾ!
ಪ್ರಭು ಅಗಸ್ತ್ಯೇಶ್ವರ ಚಂದ್ರಮ್ಮಾ!
ವೀತರಾಗಾ ಯೋಗೀಶ ಚಂದ್ರಮ್ಮಾ! (ಜಾ)
-ಣೆ ನೀನವನ ದಾಸಿ ಚಂದ್ರಮ್ಮಾ!
ಚಂದ್ರಚೂಡ ನಿನ್ನಾತ್ಮ ಚಂದ್ರಮ್ಮಾ!
ದ್ರವ್ಯಾಸೆ ಅವಗಿಲ್ಲ ಚಂದ್ರಮ್ಮಾ! (ಅ)
-ಮ್ಮಾ ನಿರಂಜನಾದಿತ್ಯ ಚಂದ್ರಮ್ಮಾ!!!
-ಡಿದರೆ ಹರಿನಾಮಾರಾಮಣ್ಣಾ!
ಸಿಟ್ಟು ಬಿಟ್ಟುಬಿಟ್ಟರಾರಾಮಣ್ಣಾ! (ಮ)
-ದ್ದುಂಡರೆ ರೋಗಕ್ಕೆ ಆರಾಮಣ್ಣ! (ಹೆಂ)
-ಡದಭ್ಯಾಸ ಬಿಟ್ಟರಾರಾಮಣ್ಣಾ! (ನೆ)
-ರೆ ಸಭ್ಯರದಾದರಾರಾಮಣ್ಣಾ!
ಆಸೆಯಿಲ್ಲದಿದ್ದರಾರಾಮಣ್ಣಾ!
ರಾಮನಾಮ ಪರಮಾರಾಮಣ್ಣಾ!
ಮತ್ಸರ ಸತ್ತರೆ ಆರಾಮಣ್ಣಾ! (ಅ)
-ಣ್ಣಾ ನಿರಂಜನಾದಿತ್ಯಾರಾಮಣ್ಣಾ!!!
ಗುಡಿ ತನ್ನೊಡಲಾಗಬೇಕು! (ಹ)
-ರುಷ ಮನಸಿಗಿರಬೇಕು!
ಸೇತು ಬಂಧ ಮುಗಿಸಬೇಕು!
ವೆಚ್ಚವಾಗುವುದಾಗಬೇಕು!
ಮಾರಾರಿಯ ಜಪಿಸಬೇಕು! (ಕ)
-ಡಲ ಜಲವ ದಾಟಬೇಕು!
ಬೇರೆಡೆ ನೋಡದಿರಬೇಕು! (ಬೇ)
-ಕು ನಿರಂಜನಾದಿತ್ಯಾಗ್ಬೇಕು!!!
ರಾಜ್ಯ ಕೋಶವೆಲ್ಲಾ ಹೋಯ್ತೇನಯ್ಯಾ! (ವ್ಯಾ)
-ಜ್ಯ ಹೂಡಿ ವೃಥಾ ಕೆಡಬೇಡಯ್ಯಾ!
ಕೋಪ, ತಾಪ ನಿಷ್ಛಲ ಕಾಣಯ್ಯಾ!
ಶಮೆ, ದಮೆಯ ಸಾಧಿಸೀಗಯ್ಯಾ! (ಸ)
-ವೆಯಬೇಕು ಪ್ರಾರಬ್ಧ ಕರ್ಮಯ್ಯಾ! (ಉ)
-ಲ್ಲಾಸದಿಂದಾತ್ಮಧ್ಯಾನ ಮಾಡಯ್ಯಾ!
ಹೋಗತಕ್ಕದ್ದೆಲ್ಲಾ ಹೋಗಲಯ್ಯಾ! (ಆ)
-ಯ್ತೇನದರಿಂದ ಸ್ವರೂಪಕ್ಕಯ್ಯಾ!
ನಮಿಸು ಸದ್ಗುರು ಪಾದಕ್ಕಯ್ಯಾ! (ಅ)
-ಯ್ಯಾ ನಿರಂಜನಾದಿತ್ಯನಾಗಯ್ಯಾ!!!
ಕಾಲಾಧೀನ ನಾ ಕೃಷ್ಣ ಕಾಕಾ!
ಕಾಲಾತೀತ ನೀ ಕೃಷ್ಣ ಕಾಕಾ! (ಬಾ)
-ಯೆಂಬರಿಲ್ಲೆನ್ನ ಕೃಷ್ಣ ಕಾಕಾ!
ಬೆರೆಯೆನ್ನ ನೀ ಕೃಷ್ಣ ಕಾಕಾ!
ಕೃಷ್ಣಾರ್ಪಣ ನಾ ಕೃಷ್ಣ ಕಾಕಾ! (ಪೂ)
-ಷ್ಣ ಸಮಾನ ನೀ ಕೃಷ್ಣ ಕಾಕಾ!
ಕಾಯ್ದುಕೊಳ್ಳೆನ್ನ ಕೃಷ್ಣ ಕಾಕಾ!
ಕಾ ನಿರಂಜನಾದಿತ್ಯ ಕಾಕಾ!!!
ಷಡ್ರಿಪು ಸಾಯಲಿ ಪ್ರೇಮಿ! (ಕಾ)
-ಣೆ ನಿಮ್ಮಲ್ಲದನು ಸ್ವಾಮಿ!
ಸಾಗಲಿ ಸ್ಮರಣೆ ಪ್ರೇಮಿ! (ಬ)
-ಲ ಅನುಗ್ರಹಿಸಿ ಸ್ವಾಮಿ!
ದುರಭ್ಯಾಸ ಬೇಡ ಪ್ರೇಮಿ!
ಸ್ವಾಈ ಚಿತ್ತವೆಲ್ಲಾ ಸ್ವಾಮಿ! (ಪ್ರೇ)
-ಈ, ನಿರಂಜನಾದಿತ್ಯೋಸ್ಮಿ!!!
-ತ್ತವರತ್ತರೆ ಬರುವರೇನು?
ರೇಖೆ, ರೂಪಗಳು ಸ್ಥಿರವೇನು? (ತ)
-ನು, ಮನಾತೀತಾತ್ಮನಲ್ಲವೇನು? (ಇ)
-ಹುದಿವಗನಂತ ರೂಪಲ್ಲೇನು?
ಸಿರಿಯರಸಾರಾಮಲ್ಲವೇನು?
ಸರಸಿಜಾಸನನಯ್ಯಲ್ಲೇನು? (ದ)
-ತ್ತನಲ್ಲವನೈಕ್ಯವಲ್ಲವೇನು? (ಹ)
ರೇ ರಾಮನಾಮಾನಂದವಲ್ಲೇನು? (ತಾ)
-ನು ನಿರಂಜನಾದಿತ್ಯನಲ್ಲೇನು???
ದಾಶರಥಿಯ ಚಿತ್ತಪ್ಪಾ!
ವರಾತ್ಮ ಬೋಧೆಯಿದಪ್ಪಾ!
ಬಂಧನ ಹರಿವುದಪ್ಪಾ!
ಧರ್ಮ ಕರ್ಮಾದರ್ಶಾವಪ್ಪಾ!
ಹೇಳಲಿನ್ನೇನು ನಾನಪ್ಪಾ? (ಒ)
-ಳ, ಹೊರಗೆಲ್ಲವನಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯಪ್ಪಾ!!!
ಯತಿಗಣ ಪ್ರಾಸದಿಂದಪ್ಪಾ!
ಜನ್ಮ ಪಾವನವಪ್ಪುದಪ್ಪಾ!
ಯದುಪನಾನಂದವಿದಪ್ಪಾ!
ವೆಂಕಟೇಶನ ಕೊಂಡಾಡಪ್ಪಾ!
ದುರಿತ ದೂರವಾಗ್ವುದಪ್ಪಾ!
ಹಾಸು, ಹೊಕ್ಕು ಬಾಳಾಗಿದಪ್ಪಾ! (ಬ)
-ಡತನವಿದ್ದರೇನಾಯ್ತಪ್ಪಾ? (ಅ)
-ಪ್ಪಾ, ನಿರಂಜನಾದಿತ್ಯಪ್ಪಾ!!!
ದುಗುಡವಿದಕೇಕೆ ಮಂಕು ಮರುಳೇ!
ಹರೆಯದಿರವು ಸ್ಥಿರವಲ್ಲ ಬಾಲೆ!
ಸುಖ, ದುಃಖ, ಬೆಳಕು, ಕತ್ತಲೆ ಲೀಲೆ! (ಮ)
-ರೆಯಬಾರದಿದನು ವಿಷಯ ಲೋಲೆ! (ಕೊ)
-ಲೆ ಸುಲಿಗೆಗಳಿಗಲ್ಲ ಪಾಠಶಾಲೆ!
ಮುಂಜಾನೆ ಬೇಗೆದ್ದು ಓದು ಸ್ತೋತ್ರ ಮಾಲೆ!
ದುರ್ಬುದ್ಣಿ ನಾಶಕ್ಕಿದು ಸರ್ವಾನುಕೂಲೆ!
ತತ್ವ ಚಿಂತನೆ ತಪ್ಪದೆ ಮಾಡಾಮೇಲೆ (ವ)
-ರ ಗುರುಕೃಪೆಯಿಂದಾಗುವೆ ಸುಶೀಲೆ! (ಬ)
-ಗೆಬಗೆಯಲರ್ಗಳಿಂದ ವನಮಾಲೆ! (ಮಾ)
-ಲೆ, ನಿರಂಜನಾದಿತ್ಯನಡಿಗಾ ಬಾಲೆ!!!
-ನ್ನಿಗ ನಾಮ ನಿನಗಿರಲಿ! (ದು)
-ಷ್ಟ ಸಂಹಾರವಾಗುತ್ತಿರಲಿ!
ವೇದೋಕ್ತಿ ಸುಳ್ಳಾಗದಿರಲಿ!
ನೆಮ್ಮದಿ ಮನಸ್ಸಿಗಿರಲಿ! (ಪ)
-ರಮಾರ್ಥ ಜೀವನಕ್ಕಿರಲಿ!
ವೇಷಾಡಂಬರ ಹೋಗಿರಲಿ! (ನ)
-ರ, ನಾರಾಯಣನಾಗಿರಲಿ! (ಶೂ)
-ಲಿ ನಿರಂಜನಾದಿತ್ಯಾಗಲಿ!!!
ಉಪ್ಪು ಹಾಕಿಲ್ಲ, ಸಪ್ಪೆ ಬೇಕಿಲ್ಲಾ! (ತ)
-ಪ್ಪು ತಬ್ಬಲಿ ಮಕ್ಕಳ ಮೇಲೆಲ್ಲಾ!
ಹಾಸು, ಹೊಕ್ಕಾಗಿರ್ಪಾತ್ಮನೆಲ್ಲೆಲ್ಲಾ!
ಕಿರುಕುಳ ಅನ್ಯೋನ್ಯ ತಪ್ಪಿಲ್ಲಾ! (ಬ)
-ಲ್ಲವರಿಗೇನೂ ಕಡಿಮೆಯಿಲ್ಲಾ!
ಸತ್ಯ, ಧರ್ಮಾಚರಣೆಯಲ್ಲಿಲ್ಲಾ! (ಕ)
-ಪ್ಪೆ, ಹಾವುಗಳ ಬಾಳೇ ಎಲ್ಲೆಲ್ಲಾ!
ಬೇರಾರೂ ಕಾರಣರಿದಕಲ್ಲಾ!
ಕಿವಿ, ಬಾಯ್ಕಣ್ಣಿತ್ತು ಕೊಂದಾ!! “ಅಲ್ಲಾ”! (ಎ)
-ಲ್ಲಾ, ನಿರಂಜನಾದಿತ್ಯಾನಂದಲ್ಲಾ!!!
ನಾನಾದೆ ನಿನಗಾಗಿ ತೆಂಗಿನಕಾಯಿ! (ನೀ)
-ನಾದೆ ನನಗಾಗಿ ದತ್ತ ಗುರು ತಾಯಿ! (ಬಂ)
-ದೆನ್ನನೆತ್ತಿಕೋ ತ್ರಿಮೂರ್ತಿ ರೂಪಿ ತಾಯಿ!
ನಿತ್ಯ ನೈವೇದ್ಯವಾಗಲಿದು ಹೇ ತಾಯಿ!
ನನ್ನನುಪೇಕ್ಷಿಸಬಾರದಮ್ಮಾ ತಾಯಿ!
ಗಾನಾಮೃತ ತುಂಬಬೇಕೊಳಗೆ ತಾಯಿ! (ತ್ಯಾ)
-ಗಿ ನಾನಾಗಿಹೆನು ನಿನಗಾಗಿ ತಾಯಿ!
ತೆಂಗಿನಕಾಯಿಯಿಂಗಿತವಿದು ತಾಯಿ! (ಯೋ)
-ಗಿಯಾಗಿ ವಿರಾಗಿಯಾಗಬೇಕು ತಾಯಿ!
ನಶ್ವರದ ರೂಪ ಸಾಕು ಮಾಡು ತಾಯಿ!
ಕಾದಿಹೆನು ನಿನ್ನಾಜ್ಞೆಗೆ ನಾನು ತಾಯಿ! (ತಾ)
-ಯಿಗರ್ಪಣೆ ನಿರಂಜನಾದಿತ್ಯ ಕಾಯಿ!!!
-ಜ್ಜರದಾಸೆ ಅವರಿಗೇನಿಲ್ಲ!
ನಮ್ರತೆಯನವರು ಬಿಟ್ಟಿಲ್ಲ! (ಹ)
-ರಿ ಸ್ಮರಣೆಯನು ಮರೆತಿಲ್ಲ! (ಹ)
-ಗೆತನ ಸಾಧಿಸುವವರಲ್ಲ!
ಸದಾಶಿವಗೇಕೆ ಕೃಪೆಯಿಲ್ಲ? (ಮ)
-ಹಾದೇವನಿಗಿದುಚಿತವಲ್ಲ! (ಧ್ಯೇ)
-ಯಸಿದ್ಧಿ ಮಾಡಬೇಕವನೆಲ್ಲ!
ವಿಚಾರವಿನ್ನೇನೂ ಬಾಕಿಯಿಲ್ಲ! (ಬ)
-ಲ್ಲ ನಿರಂಜನಾದಿತ್ಯ ಹೇಳೆಲ್ಲ!!!
-ರ ದಾಸ್ಯ ಬೇಸರವಾಯ್ತು! (ಭ)
-ವದ ಬಂಧನ ಬಲವಾಯ್ತು! (ದೆ)
-ಸೆಗೆಟ್ಟಲೆಯುವಂತಾಯ್ತು!
ಬಳಲಿ ಕಳವಳವಾಯ್ತು!
ರಸ್ತೆ ಗೋಚರಿಪಂತಾಯ್ತು! (ಓ)
-ಡಾಟ ಸಾಕೆಂಬರಿವಾಯ್ತು! (ಆ)
-ಯ್ತು ನಿರಂಜನಾದಿತ್ಯಾಯ್ತು!!!
ಮತಿ ವಿಕಾಸಕರ ದತ್ತ!
ಲಕ್ಷ ಜೀವರಾಧಾರ ದತ್ತ!
ಮಾರಹರ ಶಂಕರ ದತ್ತ! (ಕ)
-ಲಾತೀತ ಗುರುವರ ದತ್ತ!
ಧರ್ಮ, ಕರ್ಮದಾಗರ ದತ್ತ!
ರಕ್ಷಿಸುವನಾರ್ತರ ದತ್ತ!
ದಯಾ, ಪ್ರೇಮ, ಸಾಗರ ದತ್ತ! (ದ)
-ತ್ತ ನಿರಂಜನಾದಿತ್ಯ ದತ್ತ!!!
-ಳಸಬೇಕು ನೀನೆಂದಿತ್ತೆ!
ಸೀತಾಪತಿ ನೀನೆಂದಿತ್ತೆ!
ಮಾನ, ಪ್ರಾಣ ನೀನೆಂದಿತ್ತೆ! (ಮಾ)
-ಲೆ ಮೈ ಮೇಲಿರಲಿಂದಿತ್ತೆ!
ನಾಮ ಜಪಿಸಿ ಮಾಡಿತ್ತೆ!
“ನಿನ್ನಿಚ್ಛೆ” ಯೆಂದದನಿತ್ತೆ! (ಇ)
-ತ್ತೆ, ನಿರಂಜನಾದಿತ್ಯತ್ತೆ!!!
-ನುಭವಕಿದಿರಬೇಕಕ್ಕಾ!
ಮಾಧವನಾಗಬೇಕಿಲ್ಲ್ಯಕ್ಕಾ!
ನರಜನ್ಮ ಬಹು ಶ್ರೇಷ್ಠಕ್ಕಾ!
ಸತ್ಸಂಗದಕಿರಬೇಕಕ್ಕಾ!
ಮಂಗ ರಂಗನಿದರಿಂದಕ್ಕಾ!
ದಿವ್ಯನಾಮ ಸೀತಾರಾಮಕ್ಕಾ! (ವ)
-ರ ಗುರೂಪದೇಶವಿದಕ್ಕಾ! (ಅ)
-ಕ್ಕಾ, ಶ್ರೀ ನಿರಂಜನಾದಿತ್ಯಕ್ಕಾ!!!
-ದವನ ಪಾದದಲತಿ ಉಚ್ಛ! (ಭ)
-ವದ ಬಂಧನ ಬೇಡೆಂಬುದಾ ಗುಚ್ಛ!
ನಿತ್ಯಾನಂದವೆಂಬುದತಿ ಉಚ್ಛ!
ಗೊಂಬೆಯಾಟ ಸಾಕೆಂಬುದಾ ಗುಚ್ಛ!
ದುರ್ವಿಷಯ ವಿಜಯ ಅತ್ಯುಚ್ಛ!
ಪುಣ್ಯ, ಪಾಪ ಭ್ರಾಂತ್ಯೆಂಬುದಾ ಗುಚ್ಛ! (ಪು)
-ಷ್ಪವೃಷ್ಟಿಯ ಮಧ್ಯಾ ಗುಚ್ಛ ಉಚ್ಛ!
ಗುಣಾತೀತವಾಗಿಹುದಾ ಗುಚ್ಛ! (ಗು)
-ಚ್ಛ ನಿರಂಜನಾದಿತ್ಯತಿ ಉಚ್ಛ!!
ಸಂಗೀತ ಸಾರ್ಥಕ ಸನ್ನಿಧಿಯಲ್ಲಿ! (ಯೋ)
-ಗೀಶ್ವರನ ದಿವ್ಯ ಸನ್ನಿಧಿಯಲ್ಲಿ!
ತನ್ಮಯಾನಂದಾತ್ಮ ಸನ್ನಿಧಿಯಲ್ಲಿ!
ಸಾಯುಜ್ಯನಾಥನ ಸನ್ನಿಧಿಯಲ್ಲಿ! (ಪಾ)
-ರ್ಥಸಾರಥಿಯಗ್ರ್ಯ ಸನ್ನಿಧಿಯಲ್ಲಿ!
ಕಬ್ಬದಂಗನೆಯ ಸನ್ನಿಧಿಯಲ್ಲಿ!
ಸರೋಜಾಸನನ ಸನ್ನಿಧಿಯಲ್ಲಿ! (ಚೆ)
-ನ್ನಿಗ ಶ್ರೀ ಹರಿಯ ಸನ್ನಿಧಿಯಲ್ಲಿ! (ವಿ)
-ಧಿ, ಹರಿ, ಹರನ ಸನ್ನಿಧಿಯಲ್ಲಿ!
ಯಜ್ಞ ಪುರುಷನ ಸನ್ನಿಧಿಯಲ್ಲಿ! (ಇ)
-ಲ್ಲಿ, ನಿರಂಜನಾದಿತ್ಯನಡಿಯಲ್ಲಿ!!!
ಮಲಗಿದವನೆಬ್ಬಿಸಿ ಪ್ರಸಾದವಿತ್ತ (ಬಾ)
-ಲನೆಂಬ ಪ್ರೀತಿಯಿಂದ ಅದನವನಿತ್ತ! (ಬಾ)
-ಗಿದೆನವನಡಿಗದನು ಸೇವಿಸುತ್ತ!
“ದತ್ತ ನೀನಲ್ಲದಿನ್ಯಾರು ಗತಿಯೆನುತ್ತ”!
ವರ್ತಮಾನ ಪ್ರವರ್ತಕನವನೆನುತ್ತ!
ನೆನೆನೆನೆದು ಮನದ ಪ್ರಾರ್ಥಿಸುತ್ತ! (ಉ)
-ಬ್ಬಿ ಸಂತೋಷದಲಾತನನು ಕೊಂಡಾಡುತ್ತ!
ಸಿರಿ, ಶಾರದೆಯರರಸಾತನೆನುತ್ತ!
ಪ್ರತ್ಯಕ್ಷ ಪರಮಗುರು ಅವನೆನುತ್ತ!
ಸಾರ್ಥಕವಾಯಿತೀನರಜನ್ಮವೆನುತ್ತ!
ದರ್ಶನವಿತ್ತೆನ್ನ ಕರೆಸಿಕೊಳ್ಳೆನುತ್ತ!
ವಿರಮಿಪೆನಿದ ವಿಜ್ಞಾಪನೆ ಮಾಡುತ್ತ (ದ)
-ತ್ತಗುರು ಶ್ರೀ ನಿರಂಜನಾದಿತ್ಯನೆನುತ್ತ!!!
-ನಸಿದರೆ ರೋಮಾಂಚಪ್ಪುದಪ್ಪಾ!
ಸರ್ವರೊಳಗಿರ್ಪಾತ್ಮ ನೀನಪ್ಪಾ!
ಕಂಗಳಿಗದಗೋಚರವಪ್ಪಾ! (ಇ)
-ಡು ಕರುಣೆ ಸದಾ ನನ್ನಲ್ಲಪ್ಪಾ!
ಬಂಧನದಿಂದ ಪಾರು ಮಾಡಪ್ಪಾ! (ಎಂ)
-ದೆನಗಿನ್ನೀ ದರ್ಶನ ಸುಖಪ್ಪಾ? (ಧ)
-ನ, ಕನಕ ನನಗೆ ಬೇಡಪ್ಪಾ! (ನೆ)
-ಮ್ಮದಿಯಿಂದ ಪಾದ ಸೇರಿಸಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯ ನಮ್ಮಪ್ಪಾ!!!
ಜೈ ಜೈ ಶಂಕರ ವಿಜಯ!
ಜೈ ಜೈ ಓಂಕಾರ ವಿಜಯ!
ಜೈ ಜೈ ಕುಮಾರ ವಿಜಯ!
ಜೈ ಜೈ ಶ್ರೀಧರ ವಿಜಯ!
ವಿಮಲಾಕಾರ ವಿಜಯ!
ಜಗದಾಧಾರ ವಿಜಯ! (ಜ)
-ಯ ನಿರಂಜನಾದಿತ್ಯಾಯ!!!
-ನ್ನಿಷ್ಟವೆಂಬುದೊಂದುಳಿಯಲಿ! (ದು)
-ಷ್ಟ ಬುದ್ಧಿ ನಿರ್ನಾಮವಾಗಲಿ!
ವೆಂಕಟೇಶ ಧ್ಯಾನವಿರಲಿ!
ಬುಡಬುಡ್ಕೆಯಾಟ ಸಾಯಲಿ!
ದತ್ತಜಪವಾಗುತ್ತಿರಲಿ! (ಗೂ)
-ಳಿ ಕಾಳಗ ಅಂತ್ಯವಾಗಲಿ!
ಯಮಾದಿಯಭ್ಯಾಸ ಸಾಗಲಿ! (ಕೂ)
-ಲಿ ನಿರಂಜನಾದಿತ್ಯಾಗಲಿ!!!
ಭಕ್ತಿ, ಮುಕ್ತಿದಾತಾತಲ್ಲೇನೇ?
ವಿಕಲ್ಪಾತನಿಗಿದೆಯೇನೇ?
ಗೆಳೆತನಲ್ಪರಲ್ಲಿದ್ಯೇನೇ?
ನಿನ್ನ ಹಿತೈಷ್ಯವನಲ್ಲೇನೇ? (ತ)
-ನ್ನಾನಂದದಲ್ಲವನಿಲ್ಲೇನೇ? (ಪ್ರ)
-ಜ್ಞೆ ಸ್ಥಿತಪ್ರಜ್ಞೆಯಲ್ಲವೇನೇ? (ಕಾ)
-ಯೇಚ್ಛೆಯವನಿಗಿಹುದೇನೇ? (ನಾ)
-ನೇ ನಿರಂಜನಾದಿತ್ಯ? ನೀನೇ??
-ಮನ ಮಧುರ ಮುರಲೀ ವಾದನ! (ಬ)
-ಲವರ್ಧನ ಸತತವೀ ಪ್ರಾಶನ!
ಅನುಪಮಾತ್ಮಾನಂದದ ಸಾಧನ! (ವಿ)
-ಶ್ವನಾಥನನುಗ್ರಹಾ ಸಂಜೀವನ!
ಗಂಭೀರ ಮುಖಮುದ್ರೆಯ ಚೇತನ! (ದ)
-ಧಿ, ಕ್ಷೀರಾನಂದಾ ದೇವಕೀ ನಂದನ! (ವ)
-ರ ಗೀತಾಚಾರ್ಯಾ ಪರಮ ಪಾವನ!
ಸಾರ್ಥಕ ಜನ್ಮಾ ಗೋಸಂವರ್ಧನ!
ಯದುಕುಲಂ ದೀಪಾ ಮನಮೋಹನ!
ನಮೋ ನಿರಂಜನಾದಿತ್ಯ ವದನ!!!
-ರು ಸೇವಾನಿರತ ನರಸಿಂಹ
ದಯಾ ಗುಣಾನ್ವಿತ ನರಸಿಂಹ! (ದ)
-ತ್ತ ಭಜನಾಸಕ್ತ ನರಸಿಂಹ!
ಭವಬಂಧ ಮುಕ್ತ ನರಸಿಂಹ! (ಯು)
-ಕ್ತ ದಾನ, ಧರ್ಮಾತ್ಮ ನರಸಿಂಹ!
ನಯ, ವಿನಯಾತ್ಮ ನರಸಿಂಹ! (ಪ)
-ರನಿಂದಾ ವಿದೂರ ನರಸಿಂಹ!
ಸಿಂಗ, ಮಂಗ, ರಂಗ, ನರಸಿಂಹ!
ಹರಿ ನಿರಂಜನಾದಿತ್ಯಾ ಸಿಂಹ!!!
ಪಾಪ ದೂರ ಪರಮಾತ್ಮನವನಯ್ಯಾ!
ದತ್ತಾತ್ರೇಯ ಕೃಪಾವಾಸವನದಯ್ಯಾ!
ಸೇವಕರಿಷ್ಟಾರ್ಥ ಸಲಿಸುವನಯ್ಯಾ!
ವಾದ, ಭೇದಭಾವವನಿಗಾಗದಯ್ಯಾ!
ನಂದಿವಾಹನನವನ ಸಖನಯ್ಯಾ!
ದರಿದ್ರರಾಶ್ರಯದಾತನವನಯ್ಯಾ! (ಅ)
-ನನ್ಯ ಭಕ್ರರ ಗುಲಾಮನವನಯ್ಯಾ!
ರಮಾದೇವಿಯವನಗಲಿರಳಯ್ಯಾ!
ಸಿಂಹ ಸ್ವರೂಪ ಧೂರ್ತ ಜನರಿಗಯ್ಯಾ!
ಹರಿ ಭಜನಾನಂದಾತ್ಮನವನಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾನಂದವನಯ್ಯಾ!!!
ಇಷ್ಟವಿದ್ದರೆ ಕಷ್ಟ ಕಾಣುವುದಿಲ್ಲ! (ಕ)
-ಷ್ಟ ಕಂಡರೆ ಇಷ್ಟವಲ್ಲಿರುವುದಿಲ್ಲ!
ವಿಚಾರಿಗಿದರರಿವಾಗದೇನಿಲ್ಲ! (ಸ)
-ದ್ದಡಗಿದರೆ ಗದ್ದಲವಲ್ಲೇನಿಲ್ಲ! (ಬೆ)
-ರೆತಾಗ ವಿರಸದ ಸುಳಿವಲ್ಲಿಲ್ಲ!
ಕರ್ತವ್ಯನಿಷ್ಠನಿಗಾವ ಭಯವಿಲ್ಲ (ಭ್ರ)
-ಷ್ಟನಾದವನಿಗಿಹಪರ ತಾನಿಲ್ಲ!
ಕಾಮ್ಯರ್ಥಿಗೆ ಅಶಾಂತಿ ತಪ್ಪುವುದಿಲ್ಲ! (ಉ)
-ಣುವಾಗ ಅಡಿಗೆಯ ಯೋಚನೆಯಿಲ್ಲ! (ಹಾ)
-ವು ಸತ್ತಾಗಾಯುಧದಗತ್ಯವೇನಿಲ್ಲ! (ಮು)
-ದಿಯಾದರೂ ಮುಕ್ತನೆನ್ನುವ ಹಾಗಿಲ್ಲ! (ಬ)
-ಲ್ಲ ನಿರಂಜನಾದಿತ್ಯಾತ್ಮ ತಾನೆಲ್ಲೆಲ್ಲ!!!
-ರಿ ನಿನ್ನವನಾಗಿರುವನಮ್ಮಾ!
ತಾಳ್ಮೆಯಿಂದವನ ಭಜಿಸಮ್ಮಾ!
ಪರಂಜ್ಯೋತಿ ರೂಪನವನಮ್ಮಾ!
ಪತಿತ ಪಾವನನಾತನಮ್ಮಾ! (ದು)
-ಡುಕಬಾರದವನ ಮುಂದಮ್ಮಾ! (ಕಾ)
-ವುದವನ ಕರ್ತವ್ಯ ಕಾಣಮ್ಮಾ!
ದೇಗುಲ ನಿನ್ನ ದೇಹವಗಮ್ಮಾ!
ಕಶ್ಮಲವಲ್ಲಿರಬಾರದಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಾನಂದಮ್ಮಾ!!!
ಹುಸ್ಯಾಟದ ದಿಟ ನಾನು!
ಪಾಪ, ಪುಣ್ಯಾನಂದ ನಾನು!
ತ್ರಯ ಲೋಕಾಧಿಪ ನಾನು!
ಧಾಮ ರಹಿತಾತ್ಮ ನಾನು!
ರಿಪುಕುಲ ಕಾಲ ನಾನು!
ನಾಮ ರೂಪಾತೀತ ನಾನು! (ಭಾ)
-ನು ನಿರಂಜನಾದಿತ್ಯಾನು!!!
ರಾತ್ರಿ, ದಿನಾತ್ಮ ನಿರತನಾದ!
ನಾಟ್ಯ, ನಾಟಕಕ್ಕಾಧಾರನಾದ! (ಪಂ)
-ಥ, ಪರಮಾರ್ಥಕ್ಕುದ್ಧಾಮನಾದ! (ನಿ)
-ತ್ಯಾನಿತ್ಯ ನಿರ್ದೆಶಾತ್ಮಕನಾದ!
ಗಗನಾದಿ ಲೋಕಕ್ಕಾಪ್ತನಾದ!
ರಾಮ, ಕೃಷ್ಣ ಗಾನಾನಂದನಾದ!
ಜರಾ, ಜನ್ಮ ದುಃಖ ದೂರನಾದ ನಾಮ, ರೂಪ ಗುಣಾತೀತನಾದ!
ದತ್ತ ನಿರಂಜನಾದಿತ್ಯನಾದ!!!
-ತ್ತನಿಳಿಪುದಾ ಚಕ್ಕೋತ!
ಪ್ರಬೋಧಪ್ರದಾ ಚಕ್ಕೋತ!
ಸಾಕೇತನಾಥಾ ಚಕ್ಕೋತ!
ದಾರಿ ದರ್ಶಕಾ ಚಕ್ಕೋತ!
ಚರಿತ್ರಾರ್ಹವಾ ಚಕ್ಕೋತ! (ಮುಂ)
-ಕ್ಕೋಪ ಶಮನಾ ಚಕ್ಕೋತ! (ಸಂ)
-ತ ನಿರಂಹನಾದಿತ್ಯಾತ!!!
-ರಿ ಸಹಜ ಸಮಾಧಿಯಯ್ಯೂ!
ಭಕ್ತ, ಭಗವಂತಭೇದಯ್ಯೂ!
ಜನನ, ಮರಣ ಶೂನ್ಯಯ್ಯೂ! (ಮ)
-ನೆ, ಮಠವೆಲ್ಲಾಲಯವಯ್ಯೂ!
ಹತ್ತವತಾರ ನಿತ್ಯವಯ್ಯೂ! (ಘ)
-ರ್ಷಣೆಗವಕಾಶವಿಲ್ಲಯ್ಯೂ!
ವರ ಗುರುಕೃಪೆಯಿಂದಯ್ಯೂ! (ಅ)
-ಯ್ಯೂ, ಶ್ರೀ ನಿರಂಜನಾದಿತ್ಯಯ್ಯೂ!!!
ಮಹಿಮೆ ಚಿರ ಸ್ಮರಣೀಯ! (ಗು)
-ಣವಿದರದವರ್ಣನೀಯ!
ಗೀರ್ವಾಣಿ ಸದಾ ಪೂಜನೀಯ! (ಗೀ)
-ತೆಯಿದೆಲ್ಲರಿಗೂ ಆತ್ಮೀಯ! (ಸಾ)
-ರದರದಮೃತ ಪಾನೀಯ!
ಮಲಿನ ದಾಹ ಶೋಚನಿಯ! (ವಾ)
-ಣೀಶ್ವರನಾಜ್ಞಾ ಪಾಲನೀಯ!
ಯಮ ನಿರಂಜನಾದಿತ್ಯೇಯ!!!
-ನೇ ಕರುಣಿಸಿ ಕಾಯಬೇಕು!
ಕೆಲಸ ನಿನ್ನದಾಗಬೇಕು!
ದುಃಖ, ಸುಖ, ಸಹಿಸಬೇಕು! (ಸು)
-ಖ ನಿನ್ನಾನಂದವಾಗಬೇಕು!
ಪರಮಾರ್ಥಿ ಹೀಗಾಗಬೇಕು! (ಖಂ)
-ಡದಿಂದಖಂಡನಾಗಬೇಕು!
ಬೇಗ ನೀನೇ ನಾನಾಗಬೇಕು! (ಬೇ)
-ಕು, ನಿರಂಜನಾದಿತ್ಯಾಗ್ಬೇಕು!!!
ಗಳಿಗೆ ಬೇಗ ಕೂಡಿಬರಲಿ! (ಅ)
-ಳಿಯವಿವೇಕಿಯಾಗದಿರಲಿ! (ಹೊಂ)
-ಗೆಯ ನೆರಳಂತವನಿರಲಿ!
ಮಹಾತ್ಮರ ದಾಸನಾಗಿರಲಿ!
ದುಸ್ಸಹವಾಸ ಮಾಡದಿರಲಿ! (ದಾ)
-ವೆ, ದರೋಡೆಗೆ ಹೋಗದಿರಲಿ! (ದಾ)
-ಯಾದಿ ಮತ್ಸರವಿಲ್ಲದಿರಲಿ! (ರಂ)
-ಗನಾಥನ ಭಕ್ತನಾಗಿರಲಿ! (ಒ)
-ಲಿಸಿ ನಿರಂಜನಾದಿತ್ಯಾಗಲಿ!!!
ತೆರೆ ಹರಿದಪ್ಪ ದರ್ಶನಾತ್ಮಾನಂದ!
ಯಮ, ನಿಯಮಭ್ಯಾಸದಿಂದಾತ್ಮಾನಂದ!
ಸಂಧ್ಯಾವಂದನೆಯ ಗುರಿ ಆತ್ಮಾನಂದ!
ದೇವ, ದೇವಿಯರೊಂದಾದರಾತ್ಮಾನಂದ!
ಶಾಸ್ತ್ರದ ತತ್ವಾರ್ಥರಿತರಾತ್ಮಾನಂದ!
ನುಡಿ, ನಡೆಗಳೊಂದಾದರಾತ್ಮಾನಂದ!
ಭಕ್ತಿ, ಶ್ರದ್ಧಾ ಸಾಧನೆಯಿಂದಾತ್ಮಾನಂದ!
ವಾದ, ಭೇಧಗಳಳಿದಾಗಾತ್ಮಾನಂದ! (ಆ)
-ತ್ಮಾನಾತ್ಮ ಸದ್ವಿಚಾರದಿಂದಾತ್ಮಾನಂದ!
ನಂದ ಕಂದನ ಗೀತಾಮೃತಾತ್ಮಾನಂದ!
ದತ್ತ ನಿರಂಜನಾದಿತ್ಯ ನಿತ್ಯಾನಂದ!!!
-ಲ್ಕು ಮುಖದವನೊಬ್ಬನೇ ಬಲ್ಲ!
ಗಂಟೆಯ ಲೆಃಖ ಬಿಡುವುದಿಲ್ಲ! (ಮೂ)
-ಟೆ ಹೇರಲಿಕ್ಕೆ ಹೇಸುವುದಿಲ್ಲ!
ಗೇಣಿ ಬಾಕಿ ಬೇಡೆನ್ನುವುದಿಲ್ಲ!
ಕೆರೆಗೆ ನೀರು ಕೊಡುವುದಿಲ್ಲ!
ಬಲಾಲ ತಿಳಿಯುವುದಿಲ್ಲ!
ರಜಾದಲ್ಲೂ ದುಡಿಸದೇನಿಲ್ಲ! (ಕೂ)
-ಲಿ ಕೇಳಿದರದಕೆ ಮಾತಿಲ್ಲ! (ನ)
-ಲ್ಲ, ನಿರಂಜನಾದಿತ್ಯಶ್ಲೀಲಲ್ಲ!!!
ಮನಕಿದೆಲ್ಲಾ ಪರದಾಟ! (ಕಂ)
-ಠ ಶೋಷಣೆಯಿಂದಾಗದೂಟ!
ಈಶ್ವರನೆಲ್ಲೆಲ್ಲಿಹ ದಿಟ!
ಮದೋನ್ಮತ್ತನಾಗಿಲ್ಲಿ ಕಾಟ! (ಪಾ)
-ಠಕ್ಕಡಚಣ್ಯಯೋಗ್ಯ ಕೂಟ!
ಜಂಗಮಕ್ಕಾಸೆ ಬಹು ನೋಟ!
ಝಾಡಿಸಬೇಕೀ ಮಾಯೆಯಾಟ! (ದಿ)
-ಟೆ ನಿರಂಜನಾದಿತ್ಯ ಮಠ!!!
-ನುಕುಲೇಶನಾಪ್ತನಿಗಾ ಮಾಲೆ!
ಮಂಗಳಮೂರ್ತಿಗಾ ಜಾಜೀಮಾಲೆ!
ತತ್ವಾರ್ಥನಿರತನಿಗಾ ಮಾಲೆ!
ನಿಶ್ಚಲಾತ್ಮನಿಗ ಜಾಜೀಮಾಲೆ! (ಹ)
-ಗೆಗಳಡಗಿಪನಿಗಾ ಮಾಲೆ!
ಜಾತ್ಯಾತೀತನಿಗಾ ಜಾಜೀಮಾಲೆ! (ಸಂ)
-ಜೀವಿನಿ ತಂದವನಿಗಾ ಮಾಲೆ!
ಮಾರ್ಗದರ್ಶಕಗಾ ಜಾಜೀಮಾಲೆ! (ಲೀ)
-ಲೆ ನಿರಂಜನಾದಿತ್ಯಗಾ ಮಾಲೆ!!!
ದತ್ತನೇ ನೀನೆಂದು ನಾನು ಬಂದೆ! (ಚಿ)
-ತ್ತ ನಿನ್ನಂತೆಲ್ಲಾ ಆಗಲೆಂದಂದೆ!
ನೇಮ, ನಿಷ್ಠಾವಂತಾತ್ಮ ನಾನೆಂದೆ!
ನೀನೆಲ್ಲಾ ನೋಡಿಕೊಳ್ಳಬೇಕೆಂದೆ!
ನೆಂಟರೆನಗನ್ಯರಾರಿಲ್ಲೆಂದೆ!
ದುರ್ವಿಷಯ ಬೇಡ ನನಗೆಂದೆ!
ನಾನೇ ನೀನೆಂದು ನೀನೆನಗಂದೆ! (ತ)
-ನು ನಿನಗಾಗಿರಲೆಂದಾನಂದೆ!
ಬಂಧಿಯಾಗಿರಲಾರೆ ನಾನೆಂದೆ! (ತಂ)
-ದೆ ನಿರಂಜನಾದಿತ್ಯ ನೀನೆಂದೆ!!!
-ಲ್ಲಿನ ಮೂರ್ತಿಯಲ್ಲೂ ಆ ಪದ್ಮನಾಭ! (ಘ)
-ನೋದ್ದೇಶದಿಂದಿಹನಾ ಪದ್ಮನಾಭ! (ಮ)
-ಡಿ ಮೈಲಿಗೆಯರಿಯಾ ಪದ್ಮನಾಭ!
ದತ್ತಾತ್ರೇಯ ಸ್ವರೂಪಾ ಪದ್ಮನಾಭ!
ರಘುಪತಿ ರಾಘವಾ ಪದ್ಮನಾಭ! (ಬ)
-ಲ್ಲಿದರಿಗೆಲ್ಲಾ ನಲ್ಲಾ ಪದ್ಮನಾಭ!
ಪಯೋನಿಧಿ ಶಯನಾ ಪದ್ಮನಾಭ! (ಪ)
-ದ್ಮಪಾದ ಸದ್ಗುರುವಾ ಪದ್ಮನಾಭ!
ನಾಮ ಭಜನಾನಂದಾ ಪದ್ಮನಾಭ! (ಶು)
-ಭ ನಿರಂಜನಾದಿತ್ಯಾ ಪದ್ಮನಾಭ!!!
ಪೂಜೆಯಿಲ್ಲದೆ ಅನುಗ್ರಹವಾಗದು! (ಪೂ)
-ಜೆ ಅನುಗ್ರಹವಿಲ್ಲದೆ ಆಗದು! (ಬಾ)
-ಯಿ ಬಡಾಯಿಯಿಂದ ಕಾರ್ಯವಾಗದು! (ಅ)
-ಲ್ಲ, ಶಿವ, ಬೇರೆಂದರಾನಂದಾಗದು! (ಹಿಂ)
-ದೆ, ಮುಂದೇನೆಂದರಭ್ಯಾಸ ಸಾಗದು!
ಅನ್ಯ ಧರ್ಮದಿಂದ ಭಯ ತಪ್ಪದು! (ಅ)
-ನುಮಾನಪಟ್ಟರಭೀಷ್ಟ ಸಿಕ್ಕದು!
ಗ್ರಹಗತಿಗತ್ತರದು ಹೋಗದು!
ಹಾಡದೆ ಹರಿನಾಮ ಶಾಂತ್ಯಾಗದು! (ರಂ)
-ಗನಾಥಗೆರಗದೇನೂ ಆಗದು! (ಕುಂ)
-ದು ನಿರಂಜನಾದಿತ್ಯನಿಂದಾಗದು!!!
-ತ್ತವತಾರವೆತ್ತಿದತ್ಯುತ್ತಮ ನೀನೇ!
ಮೋಸ, ಕೃತ್ರಿಮದಧಮಾಧಮ ನೀನೇ! (ಚಿ)
-ತ್ತ ಶುದ್ಧಿಯ ಪುರುಷೋತ್ತಮನೂ ನೀನೇ!
ಮದ, ಮತ್ಸರದ ಮಾನವನೂ ನೀನೇ!
ಅರಸನಾಗಿ ಮೆರೆವಾತನೂ ನೀನೇ
ಧನಹೀನನಾದ ದರಿದ್ರನೂ ನೀನೇ!
ಮಾರಹರ ಪರಮೇಶ್ವರನೂ ನೀನೇ! (ಅಂ)
-ಧಕಾರಾವೃತ ನರಕುರಿಯೂ ನೀನೇ!
ಮಮಕಾರ ರಹಿತ ವಿರಕ್ತನೂ ನೀನೇ!
ನೀತಿಬಾಹಿರಾಚಾರಸಕ್ತನೂ ನೀನೇ! (ನೀ)
-ನೇ ನಿರಂಜನಾದಿತ್ಯ ಸರ್ವಾತ್ಮ ನೀನೇ!!!
ಇನ್ನೂ ನೂರು ವರ್ಷ ಬದುಕಬೇಕಪ್ಪಾ! (ನಿ)
-ನ್ನೂಳಿಗಕ್ಕಾಗಿನ್ನೂರಾದರೂ ಆಗ್ಲಪ್ಪಾ!
ನೂರೆಂಟು ನಮಸ್ಕಾರ ನಿನ್ನಡಿಗಪ್ಪಾ! (ಗು)
-ರುದೇವನಾನಂದವೇ ನನ್ನಾಂದವಪ್ಪಾ!
ವರಯೋಧ್ಯಾಧಿಪ ಶ್ರೀರಾಮ ನೀನಪ್ಪಾ! (ಹ)
-ರ್ಷ ಜೀವನ ನಿನ್ನನುಗ್ರಹದಿಂದಪ್ಪಾ!
ಬಲವಾಗಿರಬಹುದು ಪ್ರಾರಬ್ಧ ಕರ್ಮಪ್ಪಾ!
ದುರ್ಬಲನಿಗೆ ಬಲದಾನ ಮಾಡಪ್ಪಾ!
ಕರ್ಮಬಂಧನ ಛೇದನಾ ರಾಘವಪ್ಪಾ!
ಬೇಕೆನಗೆ ನಿನ್ನ ದರ್ಶನವೀಗಪ್ಪಾ!
ಕರ ಮುಗಿದು ಪ್ರಾರ್ಥಿಪೆ ನಿನ್ನನಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯಾನಂದಾರಾಮಪ್ಪಾ!!!
ಅಯ್ಯಪ್ಪನ ಸೇವೆ ಮಾಡಿ ಬಾರಪ್ಪಾ! (ಕೈ)
-ಯ್ಯನವನೆಂದೆಂದಿಗೂ ಬಿಡನಪ್ಪಾ! (ಇ)
-ಪ್ಪನವ ಶಬರಿಮಲೆಯಲ್ಲಪ್ಪಾ!
ನಡೆದೇ ಬೆಟ್ಟವನ್ನೇರಬೇಕಪ್ಪಾ!
ಸೇವೆಯನವನದು ದುರ್ಲಭವಪ್ಪಾ! (ನಾ)
-ವೆಯವನು ಭವಸಾಗರಕ್ಕಪ್ಪಾ!
ಮಾರಹರ, ಹರಿಯಂಶವನಪ್ಪಾ! (ಅ)
-ಡಿಗಡಿಗವನನ್ನು ಭಜಿಸಪ್ಪಾ!
ಬಾಗವನ ಶ್ರೀಪಾದ ಪದ್ಮಕ್ಕಪ್ಪಾ! (ಸು)
-ರ, ನರೋರಗ ವಂದ್ಯನವನಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯಾತ್ಮವನಪ್ಪಾ!!!
ಕಟ್ಟಿಕೊಂಡರಿಷ್ಟ ಸಿದ್ಧಿಯಯ್ಯಾ!
ಮುಕ್ಕಣ್ಣನಿಷ್ಟ ವಸ್ತುವಿದಯ್ಯಾ! (ಸು)
-ಖ, ದುಃಖದರಿವಿದಕ್ಕಿಲ್ಲಯ್ಯಾ! (ಗು)
-ರುಪೀಠಕ್ಕಿದು ಭೂಷಣವಯ್ಯಾ!
ದ್ರಾಮಕ್ಷರವಿದರೊಳಗಯ್ಯಾ! (ಸಾ)
-ಕ್ಷಿ ಸ್ವರೂಪದಿಂದದಿಹುದಯ್ಯಾ! (ಬಾ)
-ಯಿಮುಚ್ಚಿ ಸ್ವಚ್ಛವಾಗಿಹುದಯ್ಯಾ!
ದರ್ಶನ ಲಾಭದಾಯಕವಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾತ್ಮದಯ್ಯಾ!!!
ನಿನ್ನೊಳಗಿನ ವೈಕುಂಠದಲ್ಲಿ ನೀನು! (ನ)
-ನ್ನೊಡನೆ ಸುಖದಿಂದಿರಬಾರದೇನು? (ಒ)
-ಳ, ಹೊರಗೋಡಾಡಿಪುದೇಕೆನ್ನ ನೀನು? (ಅಂ)
-ಗಿ, ಲುಂಗಿಯಾಸೆ ಕೊಡುವುದೇಕೆ ನೀನು?
ನಗ್ನನನ್ನನಾದರಿಪುದೇಕೆ ನೀನು?
ವೈಖರಿ ಮಾತುಗಳಿಂದಾಗುವುದೇನು?
ಕುಂದಿಲ್ಲದಾನಂದ ಕೊಡಬೇಕು ನೀನು! (ಹ)
-ಠ ಮಾಡುವೆನೆಂದರಿಯಬೇಡ ನೀನು!
ದಯಾಭಿಕ್ಷೆ ಕರುಣಿಸಬೇಕು ನೀನು! (ಕ)
-ಲ್ಲಿನಂತೆ ಕಠಿಣನಾದರಾಗ್ವುದೇನು!
ನೀನೇ ನಾನಾಗಿ ಶೋಭಿಸಬೇಕು ನೀನು! (ನೀ)
-ನು ನಿರಂಜನಾದಿತ್ಯನಲ್ಲದಿನ್ನೇನು??
ಮೃತ್ಯುಂಜಯ ಪೂಜೆ ನಿತ್ಯ ಆಗಬೇಕು! (ಮೃ)
-ತ್ಯುಂಜಯಂತರ್ಯಾಮಿಯೆಂದರಿಯಬೇಕು!
ಜಗನ್ನಾಥನವನನ್ನೊಲಿಸಬೇಕು!
ಯಮನ ಭಯದಿಂದ ಪಾರಾಗಬೇಕು!
ಪೂಜೆ ಶ್ರದ್ಧಾ, ಭಕ್ರಿಗಳಿಂದಾಗಬೇಕು! (ಬಂ)
-ಜೆಯರೂ ಪುತ್ರವತಿಯರಾಗಬೇಕು!
ನಿರಂಜನನ ಸದಾ ಸ್ಮರಿಸಬೇಕು! (ಭೃ)
-ತ್ಯ ನಂಜುಂಡೇಶ್ವರನಿಗೆ ಆಗಬೇಕು!
ಆತನಾಜ್ಞಾಧಾರಕರಾಗಿರಬೇಕು!(ಭ)
-ಗವತ್ಸ್ವರೂಪ ಶಿವ ತಾನಾಗಬೇಕು!
ಬೇಕಿದಕೆ ಗುರುಕೃಪೆ ಬೇಕೇ ಬೇಕು! (ಮಂ)
-ಕು ನಿರಂಜನಾದಿತ್ಯ ಕಳೆಯಬೇಕು!!!
ಕರುಣಿಸು ವಿಜಯಾ ಮೃತ್ಯುಂಜಯಾ! (ಗು)
-ರುಗುಹನಾಪ್ತ ಪಿತಾ ಮೃತ್ಯುಂಜಯಾ! (ಫ)
-ಣಿಹಾರ ಭೂಷಣಾಂಗಾ ಮ್ಯುತ್ಯುಂಜಯಾ!
ಸುರುಚಿರ ಭಾಸ್ಕರಾ ಮೃತ್ಯುಂಜಯಾ!
ವಿಷಕಂಠ ಶ್ರೀಕಂಠಾ ಮೃತ್ಯುಂಜಯಾ!
ಜರಾಜನ್ಮ ರಹಿತಾ ಮೃತ್ಯುಂಜಯಾ!
ಯಾಗ, ಯೋಗಾನುಭೋಗಾ ಮೃತ್ಯುಂಜಯಾ!
ಮೃಡಾಣಿಯನುಗುಣಾ ಮೃತ್ಯುಂಜಯಾ! (ಅ)
-ತ್ಯುಂಬವರಿಗೊದಗಾ ಮೃತ್ಯುಂಜಯಾ!
ಜಪಾಜಪ ಪ್ರದೀಪಾ ಮೃತ್ಯುಂಜಯಾ! (ಪ್ರಿ)
-ಯಾ ನಿರಂಜನಾದಿತ್ಯ ಮೃತ್ಯುಂಜಯಾ!
ಸಾರೂಪ್ಯವಾಗದ ಸಾಈಪ್ಯ ವ್ಯರ್ಥ! (ಬೇ)
-ರೂರು ಪ್ರವಾಸದಿಂದಲ್ಲ ಇಷ್ಟಾರ್ಥ! (ಗೋ)
-ಪ್ಯವಿದರರ್ಥರಿತವ ಕೃತಾರ್ಥ!
ವಾಕ್ಚಾತುರ್ಯದಿಂದಾಗುವುದಪಾರ್ಥ!
ಗರ್ವವಿದರಿಂದಾಗುವುದನರ್ಥ!
ದರ್ಶನೋಪದೇಶವೀಯದಿಷ್ಟಾರ್ಥ!
ಸಾಯುಜ್ಯವೇ ಪರಮ ಪುರುಷಾರ್ಥ!
ಈರಾಬಾಯಿ ಸಾಧಿಸಿದಳೀ ಅರ್ಥ! (ಜಾ)
ಪ್ಯಮೂರ್ತಿ ತಾನಪ್ಪುದೇ ಪರಮಾರ್ಥ!
ವ್ಯವಹಾರಾದಿಗಳೆಲ್ಲಾ ಸ್ವಾರ್ಥಾರ್ಥ! (ಅ)
-ರ್ಥ ನಿರಂಜನಾದಿತ್ಯಾತ್ಮಾನಂದಾರ್ಥ!!!
ನನಗೆ ಸ್ನಾನಾನ್ನ ಪಾನ ಬೇಕಿಲ್ಲ! (ನೀ)
-ನದಕೇನೂ ಚಿಂತಿಸಬೇಕಾಗಿಲ್ಲ! (ಬ)
-ಗೆ ಬಗೆಯ ಭೋಗ ಶಾಶ್ವತವಲ್ಲ!
ಸ್ನಾನೊಂದು ನೇಮವಲ್ಲದಿನ್ನೇನಿಲ್ಲ!
ನಾರದಿರಲು ಕಲಿಯಬೇಕೆಲ್ಲ! (ನ)
-ನ್ನ ನಿನ್ನದೆಂಬುದು ನಿರ್ಮಲವಲ್ಲ!
ಪಾಠ ಪ್ರವಚನವೇ ಗುರಿಯಲ್ಲ! (ಅ)
-ನಧ್ಯಯನ ಸುಖ ಕಾಣಬೇಕೆಲ್ಲ!
ಬೇಡಿ, ಕಾಡುವುದಕೀ ಜನ್ಮವಲ್ಲ!
ಕಿವಿ, ಬಾಯ್ಮುಚ್ಚ್ಯಾನಂದಿಸಬೇಕಲ್ಲ! (ಬ)
-ಲ್ಲ ನಿರಂಜನಾದಿತ್ಯಾತ್ಮನಂತೆಲ್ಲ!!!
-ಲವಾಗಿರಬೇಕಾರೋಗ್ಯ ಧ್ಯಾಸ!
ನಾಯಕಗಾಳಾಗ್ಬೇಕು ಮನಸಾ! (ಈ)
-ಶ ನಿರಂಜನಾದಿತ್ಯಾತ್ಮ ದಾಸ! (ಇ)
-ಕ್ಕೆನಬೇಕು ಹಸಿದಾಗಾ ದಾಸ!
ಬೇಕದಿದೆಂದರಾಗ್ವುದು ಮೋಸ!
ಕುರುಕುಲಾರೀ ಕೆಟ್ಟ ಅಭ್ಯಾಸ!
ಪರಿತೋದ್ಧಾರಾ ದ್ವಾರಕಾ ವಾಸ!
ವಾಸುದೇನಾನಂದಾ ಉಪವಾಸ! (ವಾ)
-ಸವೇಶಾ ನಿರಂಜನಾದಿತ್ಯೇಶ!!!
ಜ್ವರ ಬರಬೇಕು, ನಿರ್ಜರನಾಗಬೇಕು! (ಪ)
-ರಮಾತ್ಮಾನುಗ್ರಹವಿದೆಂದರಿಯಬೇಕು!
ಬಗೆಬಗೆಯಾನಂದವನದೆನಬೇಕು! (ಪ)
-ರಮಾನಂದ ಪ್ರಾಪ್ತಿಗೀ ಜ್ಞಾನವೇ ಬೇಕು!
ಬೇರಾವ ದಾರಿಯೂ ಯಿಲ್ಲೆಂದರಿಯಬೇಕು!
ಕುಲ ಶೀಲವೆನ್ನದೀ ಅಭ್ಯಾಸವಾಗ್ಬೇಕು!
ನಿಶ್ಚಲವಾದ ಭಕ್ರಿಯಿದಕಿರಬೇಕು! (ಮಾ)
-ರ್ಜನಾದಿ ದೇಹಾನಂದ ಕಮ್ಮಿಯಾಗಬೇಕು! (ವ)
-ರ ಗುರುಪಾದದಲ್ಲಿ ಲಕ್ಷ್ಯವಿರಬೇಕು!
ನಾಮ, ರೂಪಕ್ಕೆ ಮರುಳಾಗದಿರಬೇಕು!
ಗಣಪತಿ ಸದ್ಗುರುವೆಂದರಿಯಬೇಕು!
ಬೇಡ ಜೀವನಾನುಕರಣೆ ಬಿಡಬೇಕು!
ಕುಲಕೆ ನಿರಂಜನಾದಿತ್ಯ ಗುರು ಬೇಕು!!!
ಸಾರಂಗ ರಂಗನಾಥನಲ್ಲಯ್ಯಾ! (ತಾ)
-ಯಿ, ತಂದೆ, ಬಂಧು, ಮಿತ್ರವನಯ್ಯಾ! (ಅ)
-ಘ, ನಾಶಿನಿಯವನೇ ಕಾಣಯ್ಯಾ! (ಅ)
-ಟ್ಟಹಾಸಕ್ಕವನೊಲಿಯನಯ್ಯಾ! (ಸ)
-ವೆದಾಗ ಕರ್ಮೆಷ್ಟ ಸಿದ್ಧಿಯಯ್ಯಾ! (ಎ)
-ಲ್ಲಿಲ್ಲದಾನಂದಾತ್ಮ ಧ್ಯಾನವಯ್ಯಾ! (ಬ)
ಹು ಮತಸ್ಥರಾಶ್ರಯವಿದಯ್ಯಾ!
ದರ್ಪ, ದಂಭಕ್ಕೆಡೆಯಿಲ್ಲಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾ ಘಟ್ಟಯ್ಯಾ!!!
ಗೀತಾ ಶ್ರವಣ ಅಲ್ಲಾಗುವುದಯ್ಯಾ!
ತತ್ವ ಪರಿಪೂರ್ಣವಾಗಿಹುದಯ್ಯಾ!
ಸರ್ವಾತ್ಮಾಕರ್ಷಣೆಯಾಗ್ವುದಯ್ಯಾ! (ಶೋ)
-ಭೆಯದಕೆ ತಾಳ ಮೇಳಗಳಯ್ಯಾ! (ತಾ)
-ಯೂಡಿಸುವಳಲ್ಲಮೃತ ಪಾನಯ್ಯಾ!
ಸರ್ವಶಕ್ತನ ಸನ್ನಿಧಿಯದಯ್ಯಾ! (ತ)
ತ್ಸಂಬಂಧದಾಲಾಪವಲ್ಲಿಹುದಯ್ಯಾ!
ಗರ್ವಿಗಳ್ಗಿದರರ್ಥವಾಗದಯ್ಯಾ!
ವರದಾ ಪ್ರಸಾದವಿಲ್ಲಾಗ್ವುದಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯೋಚ್ಛ ಭಾವಯ್ಯಾ!!!
ಶುಕ್ಲ, ಶೋಣಿತಾನಲ್ಲೆನಬೇಕು!
ಪರ ಧರ್ಮಾಸಕ್ತಿ ಬಿಡಬೇಕು!
ಶುಚ್ಯಾದಂತರಂಗವಿರಬೇಕು!
ಪರಮಾತ್ಮಾರ್ಥ ತಿಳಿಯಬೇಕು!
ತಿಳಿದದರಂತಿರಲೂ ಬೇಕು!
ಯಾತ್ರಾಸ್ಥಳ ತನ್ನೊಳಗಾಗ್ಬೇಕು!
ಗಯಾ, ಗಂಗಾ ಸ್ನಾನವಿಲ್ಲಾಗ್ಬೇಕು!
ಬೇರಿನ್ನೇನಿದಕೆ ಆಗಬೇಕು? (ಬೇ)
-ಕು ನಿರಂಜನಾದಿತ್ಯನಿಗೆ ಸಾಕು!!!
ನಾನೇಕೇಳೋಲ್ಲೆಂದೀಗ ಹೇಳೋಲ್ಲ! (ನೀ)
-ನೇನೀ ಜನ್ಮ ಸಾರ್ಥಕ ಮಾಡಿಲ್ಲ!
ಕೇಡಿಗತನ ನನ್ನಲ್ಲೇನಿಲ್ಲ! (ಗೋ)
-ಳೋ ಎಂದತ್ತರೂ ಕೇಳ್ವವರಿಲ್ಲ! (ಕೊ)
-ಲ್ಲೆಂದರೂ, ಅಹಂಕಾರ ಸತ್ತಿಲ್ಲ!
ದೀನನಿಗನ್ಯಾಯ ನ್ಯಾಯವಲ್ಲ!
ಗರ್ವಿ ನಾನೆಂದರೆ ನಿಜವಲ್ಲ!
ಹೇಳಿ ಪ್ರಯೋಜನವೇನಿನ್ನಿಲ್ಲಿ! (ಬಾ)
-ಳೋದೀ ರೀತಿ ಸಮಂಜಸವಲ್ಲ! (ಬ)
-ಲ್ಲ, ನಿರಂಜನಾದಿತ್ಯಾತ್ಮನೆಲ್ಲ!!!
-ಹಾದಿ ಲೋಕಕರ್ತಾ ಗುರುದತ್ತ!
ಮಾಯಾ ಜಾಲ ಹಸ್ತಾ ಗುರುದತ್ತ! (ಕಾ)
-ಟ, ಪೇಚಾಟ ಹರ್ತಾ ಗುರುದತ್ತ!
ಗಾನಲೋಲ ಚಿತ್ತಾ ಗುರುದತ್ತ! (ಪ)
-ರ ತತ್ವ ಸಿದ್ದಾರ್ಥಾ ಗುರುದತ್ತ!
ಗುಣ, ದೋಷಾತೀತಾ ಗುರುದತ್ತ! (ಕ)
-ರುಬಿಲ್ಲದುದಾತ್ತಾ ಗುರುದತ್ತ!
ದತ್ತ ಗೀತದಾತಾ ಗುರುದತ್ತ! (ದ)
-ತ್ತಗುರು ನಿರಂಜನಾದಿತ್ಯಾತ!!!
ನಿತ್ಯಾನಂದವಾರಿಗೂ ಬೇಡೀಗಯ್ಯಾ! (ನೃ)
-ತ್ಯಾನಂದಕ್ಕೇ ಮರುಳಾಗುವರಯ್ಯಾ!
ನಂಬಿಗೆಗೀಗಲ್ಪಾಯುಷ್ಯ ಕಾಣಯ್ಯಾ!
ದಕ್ಷ ಸೇವೆಗನುಕೂಲವಿಲ್ಲಯ್ಯಾ!
ವಾದ, ಭೇದಾನಂದಕ್ಕೀಗ ಕಾಲಯ್ಯಾ! (ಹ)
-ರಿ ಭಜನೆ ಇಹ ಸುಖಕ್ಕಲ್ಲಯ್ಯಾ!
ಗೂಬೆಯಾತ್ಮ ಧ್ಯಾನಿಯೆಂಬರೇನಯ್ಯಾ!
ಬೇಕು ಆತ್ಮಾನಾತ್ಮಾ ವಿಚಾರವಯ್ಯಾ! (ಇ)
-ಡೀ ವಿಶ್ವ ನಿನ್ನಿಂದ ತುಂಬಿಹುದಯ್ಯಾ! (ರಂ)
-ಗನಾಥನೀ ಮಾತನ್ನೊಪ್ಪಿಹನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾತ್ಮಾನಂದಯ್ಯಾ!!!
ನಾನಿನ್ನು ತಿಂಡಿ ಕೇಳುವುದಿಲ್ಲಮ್ಮಾ! (ನಾ)
-ನಿನ್ನವನೆಂಬಭಿಮಾನವಿಲ್ಲಮ್ಮಾ! (ತಿ)
-ನ್ನುತ್ತಿದ್ದೆ ಪ್ರಸಾದವೆಂದೆಲ್ಲವಮ್ಮಾ!
ತಿಂದು ತೇಗುವಾಸೆ ನನಗಿಲ್ಲಮ್ಮಾ! (ಬಂ)
-ಡಿಯನ್ನ ಉಂಡವನಂತಾನೇನಮ್ಮಾ? (ಏ)
-ಕೇನಿದೆಂದೆಂದೂ ಕೇಳಿಹೆನೇನಮ್ಮಾ? (ಕೂ)
-ಳು ಗೊಂಬೆಯಾಟವೆನಗೆ ಬೇಡಮ್ಮಾ! (ಸಾ)
-ವು ಈಗಲೇ ಬಂದರೆ ಸುಖವಮ್ಮಾ!
ದಿಕ್ಕಿಲ್ಲದಂತೆನ್ನ ಮಾಡಬೇಡಮ್ಮಾ! (ಪು)
-ಲ್ಲನಾಭರಸಿ ನೀನು ಕಾಣಮ್ಮಾ! (ಅ)
ಮ್ಮಾ, ನಿರಂಜನಾದಿತ್ಯಾತ್ಮೀಯನಮ್ಮಾ!!!
-ರಮಾತ್ಮಗಾಗಿರಬೇಕು ಸದಾಚಾರ!
ಮಾತು, ಕತೆಗಳಿಗವ ಬಹು ದೂರ! (ಆ)
-ತ್ಮಧ್ಯಾನ ನಿರತನಿಗೆಲ್ಲಾ ನಿಸ್ಸಾರ! (ತ್ಯಾ)
-ಗಿಯಾಗಿರುವುದವನಿಗಿಷ್ಟಾಕಾರ! (ಬ)
-ಲ್ಲವರಿಗೆಲ್ಲಾ ಬಲ್ಲವಾ ನಿರ್ವಿಕಾರ!
ಪರತತ್ವಾಕಾಶದಲ್ಲವನೋಂಕಾರ!
ತ್ರಯಮೂರ್ತಿ ರೂಪದಿಂದ ದತ್ತಾಕಾರ! (ಭ)
-ವ್ಯ ಮಂದಿರದಲ್ಲಿ ಶಿವಲಿಂಗಾಕಾರ!
ವಸ್ತ್ರಹೀನ ತಾನಾಗಿ ಬೌದ್ಧಾವತಾರ!
ಹಾಡಿ, ನಲಿದಾಡಿದಲ್ಲಿ ಸಾಕ್ಷಾತ್ಕಾರ! (ವ)
-ರ ನಿರಂಜನಾದಿತ್ಯಾತ್ಮ ಮೌನಾಕಾರ!!!
-ರದಾ ಪ್ರಸಾದ ತಿನ್ನಬೇಕು!
ಬೇರೆಲ್ಲೂ ಹೋಗದಿರಬೇಕು!
ಕರ ಜೋಡಿಸಿ ನಿಲ್ಲಬೇಕು! (ಅ)
-ಮ್ಮಾರಿಗೂ ಅಂಜದಿರಬೇಕು!
ಬಟ್ಟೆ ಗಟ್ಟಿ ಕಟ್ಟಿರಬೇಕು!
ರವಕೆ ಬಿಚ್ಚದಿರಬೇಕು!
ಬೇಸರದೆ ಕುಣಿಯಬೇಕು! (ಬೇ)
-ಕು ನಿರಂಜನಾದಿತ್ಯಾಗ್ಬೇಕು!!!
ಗಣಿತ ಕಲಿತು ಫಲ ಸಾರು! (ಬ)
-ಲಿಯಾಗಿ ಸದ್ಗುರು ಪಾದ ಸೇರು!
ಹಾಡಿ, ಪಾಡಿ, ಹರಿ ಕೃಪೆ ಕೋರು! (ಸ)
-ರಿಗಮ ಹೇಳ್ಯಾಯೂರಾಗ ತೋರು!
ಗಣ್ಯವಾಗಿ ಅಗ್ರಸ್ಥಾನವೇರು!
ಗಣವಾಗಿ ಶಿವಕೂಟ ಸೇರು!
ನದಿಯಾಗಿ ಉದಧಿಯ ಸೇರು!
ಹಾಲಿಗೆ ನೀರು ಹಾಕದೆ ಮಾರು! (ಸೇ)
-ರು ನಿರಂಜನಾದಿತ್ಯಾತ್ಮನೂರು!!!
ಮಧುರ ಗಾನಾನಂದದಲಾತ!
ರೆಪ್ಪೆ ಮುಚ್ಚಿ ಬಾರಿಸುವನಾತ!
ತಿರುಗಿ ನೋಡ ಸುತ್ತುಮುತ್ತಾತ!
ಹಣಕಾಸೆ ಪಡುವುದಿಲ್ಲಾತ!
ನುಡಿದಂತೆ ನಡೆವವನಾತ!
ವಿಷಯಾಸೆಯಿಲ್ಲದವನಾತ!
ಶ್ವಪಚನತನವಿಲ್ಲದವನಾತ!
ನಾದ ಬ್ರಹ್ಮಾನಂದ ವೈಣಿಕಾತ! (ನಾ)
-ಥ ನಿರಂಜನಾದಿತ್ಯ ವಿಧಾತ!!!
ನಾನ್ಯಾರಿಗೂ ನಮಸ್ಕರಿಸುವುದಿಲ್ಲ! (ನೀ)
-ನ್ಯಾರೆಂದರಿತರದ್ರಲ್ಲೇನೂ ತಪ್ಪಿಲ್ಲ! (ಹ)
-ರಿ ಸ್ಮರಣೆ ಮಾಡದಿದ್ರೆ ಸುಖವಿಲ್ಲ!
ಗೂಳಿಯಂತೋಡಾಡಲಿಕ್ಕೆ ಜನ್ಮವಲ್ಲ!
ನಳಿನನಾಭನೇ ದೇವ ಜಗಕೆಲ್ಲ!
ಮನನ ಮಾಡಬೇಕಹೋ ರಾತ್ರಿಯೆಲ್ಲ! (ಭಾ)
-ಸ್ಕರ ರೂಪನವನೆಂಬುದು ಸುಳ್ಳಲ್ಲ!
ರಿಪು ಕುಲಾಂತಕಾತ ಸಾಮಾನ್ಯನಲ್ಲ!
ಸುಧಾವೃಷ್ಟಿಯಾಗ್ವುದವನಿಂದೆಲ್ಲೆಲ್ಲ! (ನಾ)
-ವು, ನಮ್ಮವರೆಂಬ ಸ್ವಾರ್ಥವನಿಗಿಲ್ಲ!
ದಿವ್ಯಾತ್ಮ ಭಾವವನ ಹೃದಯವೆಲ್ಲ! (ತ)
-ಲ್ಲಣ ನಿರಂಜನಾದಿತ್ಯಾನಂದಗಿಲ್ಲ!!!
ವೃದ್ಧಾಪ್ಯವಡಸಿತೇನೇ ತುಳಸಿ? (ಶ್ರ)
-ದ್ಧಾ, ಭಕ್ತಿಯಲ್ಲನುಪಮಾ ತುಳಸೀ! (ಆ)
-ಪ್ಯಯನಕಾರಿ ಹರಿಗಾ ತುಳಸೀ!
ವನಮಾಲೆಗೆ ಪ್ರಧಾನಾ ತುಳಸೀ! (ಒ)
-ಡಲಾರೋಗ್ಯಕ್ಕತ್ಯಗತ್ಯಾ ತುಳಸೀ!
ಸಿರಿಯರಸಿ ಸ್ವರೂಪಾ ತುಳಸೀ!
ತೇಜಸ್ಸೋಜಸ್ಸಿಗಾಧಾರಾ ತುಳಸೀ!
ನೇಮ, ನಿಷ್ಠಾಮಣಿಮಾಲಾ ತುಳಸೀ!
ತುರೀಯಾಶ್ರಮಿಗಾದರ್ಶಾ ತುಳಸೀ! (ಬ)
-ಳಸಿದಂತೆ ಬೆಳೆವಳಾ ತುಳಸೀ! (ದಾ)
-ಸಿ ನಿರಂಜನಾದಿತ್ಯಗಾ ತುಳಸೀ!!!
-ಳಿ, ಕೇಳಿ ಬರಿದಾಗದಿರೋ!
ರೋಗಿಯಾಗದೆಚ್ಚರಾಗಿರೋ!
ನಿತ್ಯ ನೇಮ ನಿಷ್ಠೆಯಿಂದಿರೋ! (ಚಿ)
-ನ್ನದೊಡವೆಯಾಸೆ ಬಿಟ್ಟರೋ!
ನೀಲಮೇಘಶ್ಯಾಮನಾಗಿರೋ!
ನಾಮ, ರೂಪಾತೀತನಾಗಿರೋ! (ಬಾ)
-ಳಿ ಬ್ರಹ್ಮಾನಂದಾತ್ಮನಾಗಿರೋ! (ಇ)
-ರೋ ನಿರಂಜನಾದಿತ್ಯಾಗಿರೋ!!!
ದುರಿತ ದೂರ ಹರ ಶ್ರೀಕಂಠ!
ಮದನ ವೈರ್ಯುದಾರಿ ಶ್ರೀಕಂಠ!
ಧುರ, ಧೀರ, ಗಂಭೀರ ಶ್ರೀಕಂಠ!
ರಸ ಸುಧಾಸಾಗರ ಶ್ರೀಕಂಠ!
ಕಂಚಿ ಕಾಮಾಕ್ಷೀಶ್ವರ ಶ್ರೀಕಂಠ! (ವಿ)
-ಠಲ ನಾಮ ಸುಸ್ವರ ಶ್ರೀಕಂಠ!
ಶ್ರೀಕರ, ಶುಭಕರ, ಶ್ರೀಕಂಠ!
ಕಂಗಳಿಗಗೋಚರ ಶ್ರೀಕಂಠ! (ಕಂ)
-ಠ ನಿರಂಜನಾದಿತ್ಯ ಶ್ರೀಕಂಠ!!!
-ಯಕ್ಲೇಶಕ್ಕಂಜದಿರಬೇಕಯ್ಯಾ!
ದಾಸಿ ಈರಾಳಾದರ್ಶವದಯ್ಯಾ!
ಗಜೇಂದ್ರನ ಭಕ್ತಿ ಹಾಗಿತ್ತಯ್ಯಾ!
ದಿನ, ರಾತ್ರಿ ಮೂರೆಯಿಟ್ಟನಯ್ಯಾ! (ದು)
-ಷ್ಟ ನಕ್ರನ ಕಾಟ ತಪ್ಪಿತಯ್ಯಾ! (ಘಾ)
-ಸಿಯಾಗದು ಗುರುಭಕ್ತಗಯ್ಯಾ! (ಸಿ)
-ದ್ಧಿ ವಿನಾಯಕ ರೂಪವನಯ್ಯಾ!
ಯದುಪತಿಯ ಬೋಧೆಯದಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಸಾಕ್ಷ್ಯಯ್ಯಾ!!!
ನಾಯಿ ಬಂದಿದೆ ಹಾಲಿಗಾಗಿ ತಾಯಿ! (ಕಾ)
-ಯಿಸುವುದದದನ್ನ್ಯಾವ ನ್ಯಾಯ ತಾಯಿ?
ಬಂದಾಗ ಹೊಡೆದಟ್ಟಬೇಡ ತಾಯಿ!
ದಿಕ್ಕಿಲ್ಲದನಾಥ ನಾಯಿಗೀ ತಾಯಿ! (ನಿಂ)
-ದೆ ನಾಯಿಗರಿವಾಗುವುದೇ ತಾಯಿ?
ಹಾಯಾಗಿರಲಿ ನಿನ್ನಡಿಲಿ ತಾಯಿ! (ಮಾ)
-ಲಿಕನಲ್ಲದಕತಿ ಪ್ರೀತಿ ತಾಯಿ! (ತ)
-ಗಾದೆಯಿನ್ನೆಲ್ಲಿ ಮಾಡ್ಬೇಕದು ತಾಯಿ? (ಕೂ)
-ಗಿ ಕದ ಕೆರೆಯುವುದು ತಾಯಿ!
ತಾಳೆಂದರೆ ಕಾಯದದಿನ್ನು ತಾಯಿ! (ನಾ)
-ಯಿಗಿಕ್ಕೋ ನಿರಂಜನಾದಿತ್ಯ ತಾಯಿ!!!
ಧರ್ಮವೆಂದಧರ್ಮಕ್ಕೆಳೆವುದಾ ಕಾಯಕಾ!
ಕಾಮ್ಯಾರ್ಥಿಗಳ ಸಹವಾಸಪ್ರಯೋಜಕಾ!
ನಿನ್ನ ಬಿಡುಗಡೆಗದು ಪ್ರತಿಬಂಧಕಾ!
ನಡೆ, ನುಡಿಗಳೆಲ್ಲಲ್ಪ ಸುಖದಾಯಕಾ!
ಗೆರೆ ದಾಟ ಬಿಡ ಸಂಪ್ರದಾಯ ನಾಯಕಾ!
ವ್ಯಸನ ಪಡಬೇಕಾಗ ಭಕ್ತ ಗಾಯಕಾ!
ವರ್ಣ, ಲಿಂಗ ಭೇದ ಬಹು ದುಃಖಕಾರಕಾ!
ಹಾಯಾಗಿರಲಿಕ್ಕೆ ಸ್ವತಂತ್ರ ಸಹಾಯಕಾ!
“ರಘುಪತಿ ರಾಘವ” ಮಂತ್ರ ಪ್ರಚೋದಕಾ!
ಬಾರಿಬಾರಿಗೂ ಹಾಡಬೇಕಿದ ಬಾಲಕಾ!
ಧರ್ಮವಿದೊಂದೇ ಸದ್ಗುರು ಪ್ರತಿಪಾದಕಾ!
ಕಾಯಲೆಮ್ಮಾ ನಿರಂಜನಾದಿತ್ಯಾಧ್ಯಾತ್ಮಿಕಾ!!!
ಲಕ್ಷ್ಮೀರಮಣಾನೆಂದು ಬಂದಾ!
ಬಂಧಿಪರಾರೆನ್ನೆಂದು ಬಂದಾ!
ದಾಸರ ದಾಸಾನೆಂದು ಬಂದಾ!
ಗೋಪಿಕಾನಂದಾನೆಂದು ಬಂದಾ!
ಪಾಪ ವಿದೂರಾನೆಂದು ಬಂದಾ!
ಲಕ್ಷ್ಯವೆಲ್ಲಕ್ಕಾನೆಂದು ಬಂದಾ!
ಬಂಧು, ಭಾಂಧವಾನೆಂದು ಬಂದಾ!
ದಾತ, ನಿರಂಜನಾದಿತ್ಯೆಂದಾ!!!
ಪರಿ ಪರ್ಯಾನಂದ ಲೀಲಾ!
ಬಾಳ ಬೆಳಕ್ಕೆಲ್ಲಾ ನೀಲಾ!
ಲಾವಣ್ಯಾತ್ಮಾ ವನಮಾಲಾ!
ಗೋ, ಬ್ರಾಹ್ಮಣ ಪರಿಪಾಲಾ!
ಪೀತವಸನಾ ವಿಶಾಲಾ!
ಲೋಭ ವ್ಯಾಮೋಹ ನಿರ್ಮೂಲಾ! (ಮೂ)
-ಲಾ, ನಿರಂಜನಾದಿತ್ಯಲಾ!!!
ರೊಟ್ಟಿ ತಿಂದೆ ನಿನ್ನಿಷ್ಟದಂತದ ನಾ ತಿಂದೆ! (ಸಿ)
-ಟ್ಟಿನ್ನೇತಕೆ ನಿನಗೆಂದದ ನಾನು ತಿಂದೆ!
ತಿಂತ್ರಿಣಿ, ಖಾರ ಸೇರಿಸಿದ ನಾನು ತಿಂದೆ! (ತಂ)
-ದೆ ಕೊಟ್ಟಿದ್ದೆಲ್ಲಾ ಅಮೃತವೆಂದು ನಾ ತಿಂದೆ!
ನಿಶ್ಚಲ ಭಕ್ತಿಗಿದಗತ್ಯವೆಂದು ನಾ ತಿಂದೆ! (ಕು)
-ನ್ನಿ ನಿನ್ನಡಿಯಡಿಯಲ್ಲಿ ನಾನೆಂದು ತಿಂದೆ! (ಕ)
-ಷ್ಟ ಪರಿಹರಿಸುವವ ನೀನೆಂದು ತಿಂದೆ! (ಕೋ)
-ದಂಡರಾಮನ ಪ್ರಸಾದವದೆಂದು ತಿಂದೆ!
ತನು, ಮನ ನಿನಗಾಗಿರಲೆಂದು ತಿಂದೆ!
ದತ್ತ ರಾಮರಲ್ಲಿ ಭೇಧವಿಲ್ಲೆಂದು ತಿಂದೆ!
ನಾಮ ಜಪ ಜಪಿಸುತ್ತ ನಾನದ ತಿಂದೆ!
ತಿಂದದ್ದೆಲ್ಲಾ ನಿನಗರ್ಪಣೆಯೆಂದು ತಿಂದೆ! (ತಂ)
-ದೆ ನಿರಂಜನಾದಿತ್ಯ ನೀನೆಂದು ನಾ ತಿಂದೆ!!!
-ರುಷವದೆಂಬ ಹುಚ್ಚಿನಲ್ಲಿ! (ಭ)
-ವ ಭಯದ ಸಾಗರದಲ್ಲಿ!
ರಜೋಗುಣಾವರಣದಲ್ಲಿ! (ಮಾ)
-ನ್ಯ ತಾನೆಂಬಹಂಕಾರದಲ್ಲಿ! (ಕ)
-ರುಬೆಂಬ ವಿಷ ಜ್ವಾಲೆಯಲ್ಲಿ! (ದು)
-ರ್ವಿಷಯದಂಧಕಾರದಲ್ಲಿ! (ಧ್ಯೇ)
-ಯ ಸಿದ್ಧಿಯಾಗಬೇಕೀಗಿಲ್ಲಿ! (ಎ)
-ಲ್ಲಿ? ನಿರಂಜನಾದಿತ್ಯನಲ್ಲಿ!
ಕಲ್ಪನೆಯಿಂದ ಬಹು ರೂಪಯ್ಯಾ!
ನಾಮ ರೂಪವನ ಲೀಲೆಯಯ್ಯಾ! (ಪಂ)
-ಥಗಳೆಲ್ಲಾ ಸಂತೆ ವ್ಯಾಪಾರಯ್ಯಾ!
ಲೋಭ, ಮೋಹ, ಕಾರಣದಕಯ್ಯಾ!
ಕಲ್ಮಷಾಂತಃಕರಣಾಪತ್ತಯ್ಯಾ!
ನಾಮ, ಜಪ, ಶುದ್ಧ ಮಾಳ್ಪುದಯ್ಯಾ! (ಮ)
-ಥನ ಮಾಡ್ಯಮೃತ ಕುಡಿಯಯ್ಯಾ!
ನರನಾಗ ನಾರಾಯಣನಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯವನಯ್ಯಾ!!!
-ಲವರ್ಧಕಾ ಬಲಿ ಧ್ವಂಸಕಾ!
ತಿರುಮಲೇಶಾ ಸುಧಾರಕಾ!
ಲವ, ಕುಶಾ, ರಘುನಾಯಕಾ!
ಕಾಮ ಕೋಟಿ ರೂಪಾ ಕಾರ್ತಿಕಾ!
ಗೋಪಾ ಗೋವರ್ಧನೋದ್ಧಾರಕಾ!
ಪಾರ್ವತ್ಯಾತ್ಮಾ ಗಣನಾಯಕಾ!
ಲಯಕಾರಾಕಾ ವಿನಾಯಕಾ! (ಮೂ)
-ಕಾ ನಿರಂಜನಾದಿತ್ಯಾತ್ಮಕಾ!!!
-ಯೆಯಾಣ್ಮಗಾಗ್ತಿದೆ ತಿರಸ್ಕಾರ!
ಗಾಡಿಗಾಗುತಿದೆ ಪುರಸ್ಕಾರ!
ಗುಣಾಶ್ವಕಾಗ್ತಿದೆ ತಿರಸ್ಕಾರ! (ಜಾ)
-ತಿ, ಮತಕಾಗ್ತಿದೆ ಪುರಸ್ಕಾರ! (ಒಂ)
-ದೆನಲಾಗುತಿದೆ ತಿರಸ್ಕಾರ!
ಪುಟ್ಟು ಸಾವ್ಗಾಗ್ತಿದೆ ಪುರಸ್ಕಾರ! (ಪ)
-ರಮಾರ್ಥಕಾಗ್ತಿದೆ ತಿರಸ್ಕಾರ! (ಸಂ)
-ಸ್ಕಾರ ಬಲಿಸುತಾಗ್ಬೇಕೋಂಕಾರ! (ಈ)
-ರ ನಿರಂಜನಾದಿತ್ಯಾತ್ಮಾಕಾರ!!!
ಕರ್ಮ ಮಾಡುವುದು ಕರ ಚರಣ!
ವಾತ, ಪಿತ್ಥ ಕಾಟ ಬಹು ಕಠಿಣ!
ಸತ್ಸಂಗದಿಂದಳಿವುದು ದುರ್ಗುಣ!
ನೆಮ್ಮದಿಗಾಗಿರಬೇಕು ಸುಗುಣ!
ಶೋಚನೀಯನ್ಯಮಾರ್ಗಾನುಸರಣ!
ಕಟ್ಟಿ ಬುತ್ತಿ ಸೇರು ರಂಗ ಪಟ್ಟಣ! (ಧ)
-ಕ್ಕೆಯಾಗದಾಗುವುದಿಲ್ಲುದ್ಧರಣ!
ಕಾದಿರುವನಲ್ಲಿ ರಮಾರಮಣ! (ವ)
-ರ ಗುರು ಸ್ವರೂಪಾ ಸರ್ವ ಕಾರಣ! (ಗು)
-ಣ, ದೋಷ ನಿರಂಜನಾದಿತ್ಯಾರ್ಪಣ!!!
ರಂಗನಾಯಕಿಯ ಸೇವಾ ಶಾಂತಿ!
ಗಣ್ಯನಿವನಾಶೀರ್ವಾದಾ ಶಾಂತಿ!
ನಿಂದೆ,ವಂದನೆ ಸಮತಾ ಶಾಂತಿ! (ಹಿಂ)
-ದೆ, ಮುಂದೆ ನೋಡದಿದ್ದರಾ ಶಾಂತಿ! (ಚೆ)
-ಲ್ಲಾಟ, ಮನವಳಿದರಾ ಶಾಂತಿ!
ರೋದನೆಯವಗಾದರಾ ಶಾಂತಿ!
ಗರ್ವರಹಿತನಾದರಾ ಶಾಂತಿ (ಆ)
-ಶಾಂತಃಕರಣ ಸತ್ತರಾ ಶಾಂತಿ!(ಸ್ಮೃ)
ತಿ ಶ್ರೀ ನಿರಂಜನಾದಿತ್ಯ ಕೃತಿ!!!
-ರಿಪರಿಯ ರೂಪಿನೊಳಗಯ್ಯಾ! (ಆ)
-ವರ ಗುರು ಅಂತರ್ಯಾಮಿಯಯ್ಯಾ!
ರಕ್ತ, ಮಾಂಸದ ಗೊಂಬೆಯಲ್ಲಯ್ಯಾ!
ದನುಜದಮನವನಯ್ಯಾ!
ನೆರೆ ನಂಬಿದವರಾಪ್ತನಯ್ಯಾ! (ಆ)
-ಲ್ಲಿಲ್ಲೆಂಬ ಭೇದವನಿಗಿಲ್ಲಯ್ಯಾ!
ಹನ್ನೆರಡನೇ ತತ್ವವನಯ್ಯಾ! (ಧ್ಯಾ)
-ನದಿಂದದು ಸಿದ್ಧಿಸಬೇಕಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯವನಯ್ಯಾ!!!
-ಡ್ಲೇ ಬೇಡಿನ್ನೆಂದಳಾ ತಾಯಿ!
ನಶ್ವರ ಹರಿದಾ ತಾಯಿ! (ಕೈ)
-ಯ್ಯಾರೆ ಕೊಟ್ಟಳಂಬಾ ತಾಯಿ!
ಕರ್ಮ ಕಳೆದಿರ್ಪಾ ತಾಯಿ! (ಕೂ)
-ಡ್ಲೆತ್ತಿದಳೂರ್ಧ್ವಕ್ಕಾ ತಾಯಿ!
ಕಾಪಾಡಲೆಲ್ಲರಾ ತಾಯಿ! (ಕಾ)
-ಯಿ, ನಿರಂಜನಾದಿತ್ಯೇಯಿ!!!
ನಡೆ, ನುಡಿಯೆಲ್ಲಾ ಕಲುಷಿತ!
ವಸ್ತ್ರ ಭೂಷಣದಿಂದಲಂಕೃತ!
ನಾಸ್ತಿಕ ಭಾವದಿಂದ ಶೋಭಿತ! (ಹೊ)
-ಸೆದುಂಬುವಭ್ಯಾಸನವರತ!
ಅತ್ಯಾಚಾರನಾಚಾರ ನಿರತ! (ಉ)
-ಪನ್ಯಾಸಪಪ್ರಚಾರ ಭರಿತ! (ಮು)
-ರಿ, ಹರಿಯೆಂಬ ಗುಣ ಸಂಭೂತ!
ಮಿಥ್ಯಾಸುಖಕ್ಕಾಸಕ್ತಿ ಸತತ! (ಪಿ)
-ತ, ನಿರಂಜನಾದಿತ್ಯವಧೂತ!!!
ವಿದ್ಯುತ್ತುತ್ಪಾದನಾ ಯಂತ್ರವಿದಯ್ಯಾ!
ದ್ಯುಮಣಿಯಿದು ಅಸಾಮಾನ್ಯವಯ್ಯಾ! (ಹೊ)
-ತ್ತು ಹೊತ್ತಿಗಿದರ ದ್ಯುತ್ಯಗತ್ಯಯ್ಯಾ! (ಸ)
-ತ್ಪಾತ್ರದಲ್ಲಿದು ಜ್ವಲಿಸುವುದಯ್ಯಾ! (ಉ)
-ದಯಾಸ್ತ ಬಹು ರಮಣೀಯವಯ್ಯಾ!
ನಾಮ, ರೂಪಗಳೆಲ್ಲದರಿಂದಯ್ಯಾ! (ಭ)
-ಯಂಕರವಿದರ ಸಾಈಪ್ಯವಯ್ಯಾ!
ತ್ರಯ ಮೂರ್ತಾತ್ಮ ಸ್ವರೂಪವಿದಯ್ಯಾ!
ವಿಮಲಾತ್ಮ ಶಿವಾನಂದವಿದಯ್ಯಾ!
ದರ್ಶನದಿಂದಶಾಂತಿ ನಾಶವಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾ ರೂಪವಯ್ಯಾ!!!
-ಕುಸ್ಥ್ಯಾತ್ಮನ ಸದಾ ನೆನೆಯನುಜಾ!
ಮತ್ಸರದಿಂದಧೋಗತಿಯನುಜಾ!
ನುಡಿದಂತೆ ನಡೆಯಬೇಕನುಜಾ!
ಜರಾ ಜನ್ಮ ದುಃಖ ದೂರಾಗನುಜಾ!
ನಾಳೆಯ ಮಾತೀಗಾಡಬೇಡನುಜಾ! (ಈ)
-ಗ ಮಾಡತಕ್ಕುದೀಗಾಗಲನುಜಾ!
ಬೇರಾರ ಮಾತೂ ಆಡದಿರನುಜಾ! (ಬ)
-ಡತನ ಸಿರಿತನಸ್ಥಿರನುಜಾ! (ಅ)
-ನುಪಮಾತ್ಮ ಮಾತ್ರ ಶಾಶ್ವತನುಜಾ! (ನಿ)
-ಜಾನಂದ ನಿರಂಜನಾದಿತ್ಯನುಜಾ!!!
-ಷ್ಟ ಸಹವಾಸನುಚಿತಕ್ಕಾ!
ಕಾಮ್ಯಾರ್ಥದಿಂದೇನು ಸುಖಕ್ಕಾ?
ಲಕ್ಷ್ಯ ನಿಜಾನಂದಕ್ಕಾಗ್ಲಕ್ಕಾ! (ತಿ)
-ಕ್ಕಾಟದಿಂದಶಾಂತಿ ಕಾಣಕ್ಕಾ!
ರಮಿಸು ನಿನ್ನಲ್ಲಿ ನೀನಕ್ಕಾ!
ಹರಿ, ಹರಾತ್ಮವೇ ನೀನಕ್ಕಾ! (ಈ)
ರಹಸ್ಯ ಮರೆಯಬೇಡಕ್ಕಾ! (ಅ)
-ಕ್ಕಾ! ನಿರಂಜನಾದಿತ್ಯಪ್ಪಕ್ಕಾ!!!
ನನ್ಯ ಗುರುಭಕ್ತಾ ವೆಂಕಟಾಚಾರ್ಯ!
ಕಲಿಮಲ ನಾಶಾ ಸಂಗೀತಾಚಾರ್ಯ! (ಬಾ)
-ಲಾ, ಪ್ರಸನ್ನಾನಂದಾ ವೆಂಕಟಾಚಾರ್ಯ!
ಕೋಪ, ತಾಪ, ವಿದೂರಾ ವಾದ್ಯಾಚಾರ್ಯ!
ವಿನಯಶೀಲಾತ್ಮಾ ವೆಂಕಟಾಚಾರ್ಯ!
ದಾನಿ, ಸನ್ಮಾನೀ “ವಾದ್ಯ ಕೋಣಾಚಾರ್ಯ” | (ಸಂ)
-ಗೀತ ಸಾಹಿತ್ಯಾತ್ಮ ವೆಂಕಟಾಚಾರ್ಯ!
ತಾಳ ಮೇಳ, ಲೋಲಾತ್ಮಾ ವಿದ್ಯಾಚಾರ್ಯ! (ಆ)
-ಚಾರ, ವಿಚಾರಾತ್ಮಾ ವೆಂಕಟಾಚಾರ್ಯ! (ಆ)
-ರ್ಯ, ನಿರಂಜನಾದಿತ್ಯಾನಂದಾಚಾರ್ಯ!!!
ಬಿಲ್ವಫಲಪ್ರಸಾದದಿಂದಿಷ್ಟ ಸಿದ್ಧಿ! (ಹ)
-ಲ್ವ ವಿದರದೀವುದಾರೋಗ್ಯ ಸಿದ್ಧಿ!
ಫಲಕಾರೀ ಸೇವನೆಂಬುದು ಪ್ರಸಿದ್ಧಿ! (ಫಾ)
-ಲ ನೇತ್ರನ ಕೃಪೆಯಿಂದ ನಾನಾ ಸಿದ್ಧಿ!
ಪ್ರಮಥಗಣ ಸ್ಥಾನವಿದೀವ ಸಿದ್ಧಿ!
ಸಾಧನೆ ಶ್ರದ್ಧೆಯಿಂದಾದರೆಲ್ಲಾ ಸಿದ್ಧಿ!
ದರ್ಪ, ದಂಭಗಳಿಂದ ವಿರೋಧ ಸಿದ್ಧಿ! (ಸ)
-ದಿಂಬೊದಗಲಿಕೆ ಬೇಕು ಜಪ ಸಿದ್ಧಿ!
ದಿಗಂಬರಾನುಗ್ರಹದಿಂದಾತ್ಮ ಸಿದ್ಧಿ! (ದು)
-ಷ್ಟ ನಿಗ್ರಹ ಕಾರ್ಯಕ್ಕೆ ಪ್ರಾಮುಖ್ಯಾ ಸಿದ್ಧಿ! (ನಿ)
-ಸಿ, ದಿನವನ ನೆನೆದರಾಗಾ ಸಿದ್ಧಿ! (ಸಿ)
-ದ್ಧಿ, ನಿರಂಜನಾದಿತ್ಯ ಸಾಯುಜ್ಯ ಸಿದ್ಧಿ!!!
ದಿವ್ಯ ರೂಪಾತ್ಮರು ನೀವೆಂಬುದಕಾಗಿ!
ಹರಿ ನಾಮ ಸ್ಮರಣಾ ತಲ್ಲೀನನಾಗಿ!
ನುಡಿಯದೇ ಮೌನ ವ್ರತಸ್ಥ ತಾನಾಗಿ!
ಕಷ್ಟ ಸುಖದರಿವಿರದವನಾಗಿ!
ರುಚಿಯೂಟದಲ್ಲನಾಸಕ್ತತಾನಾಗಿ! (ಪ್ರಾ)
-ಣಾಯಾಮಾದ್ಯಷ್ಟಾಂಗ ಯೋಗೇಶ್ವರನಾಗಿ! (ಬಾ)
-ಳು ಸಾರ್ಥಕ ಗೊಳಿಸಲಿಕ್ಕಿಷ್ಟನಾಗಿ!
ನಿಮ್ಮಂತರಂಗ ಶುದ್ಧಾಗ್ಬೇಕವಗಾಗಿ!
ಮದನಾರಿಯ ಕೃಪೆ ಬೇಕಿದಕಾಗಿ!
ಗಾನ ಭಾವಪೂರ್ಣವಾಗ್ಬೇಕದಕಾಗಿ! (ತ್ಯಾ)
-ಗಿ ನಿರಂಜನಾದಿತ್ಯಾತ್ಮ ಸುಖಕ್ಕಾಗಿ!!!
ನಮಿಸುತ್ತರ್ಪಿಸಿದ್ದತ್ಯಾನಂದ! (ಶ್ರೀ)
-ಕಾಂತನಲಂಕಾರಮೃತಾನಂದ!
ಬಗೆ ಬಗೆ ಪುಷ್ಪಾರ್ಚನಾನಂದ! (ವ)
-ರ ಪಾದತೀರ್ಥ ನಿರ್ಮಲಾನಂದ! (ಬ)
-ಲ ವರ್ಧಕವದು ಬ್ರಹ್ಮಾನಂದ! (ಧ)
-ರ್ಮಾತ್ಮ ವಿಚಾರ ಶಂಕರಾನಂದ! (ಲೀ)
-ಲಾ ನಾಟಕಾನಂದ ಕೃಷ್ಣಾನಂದ!
ನಂದ ಕಂದಾನಂದೋದ್ಧವಾನಂದ!
ದತ್ತ ನಿರಂಜನಾದಿತ್ಯಾನಂದ!!!
-ದ್ರೆ ಸಾವಿತ್ರಿ ನೀನೆಂದರಿತ್ಯೇನೇ? (ಬಾ)
-ಯಿಂದ ಆಡಿ ಪ್ರಯೋಜನವೇನೇ? (ನಿಂ)
ದೆಗೆ ಕಿವಿಗೊಡಬಹುದೇನೇ! (ಮ)
-ಚ್ಚರ ಬಚ್ಚಲು ನೀರಲ್ಲವೇನೇ!
ರಮಣನಾರೆಂದು ತಿಳಿದ್ಯೇನೇ?
ವಾಸುದೇವನೆನಬಾರದೇನೇ? (ಬಾ)
-ಯಿ ಮುಚ್ಚಿ ಅವನಾಗಿರು ನೀನೇ! (ಮಾ)
-ತೇ ಮೃತ್ಯು, ಮಾತೇ ಮುತ್ತಲ್ಲವೇನೇ? (ನಾ)
-ನೇ ನಿರಂಜನಾದಿತ್ಯಾತ್ಮ ನೀನೇ!!!
-ದ್ರಾಕಾರ ಶಾಂತವಾಗಲಿ! (ಅ)
-ಭಿಲಾಷೆ ನೆರವೇರಲಿ! (ಶೇ)
-ಷೇನೂ ಉಳಿಯದಿರಲಿ!
ಕರ್ಮ ಬಂಧ ಹರಿಯಲಿ! (ಭ)
-ವಾಬ್ಧಿಯಿಂದ ಪಾರಾಗಲಿ! (ಮಂ)
-ಗಳ ವಾದ್ಯ ಮೊಳಗಲಿ! (ಶೂ)
-ಲಿ ನಿರಂಜನಾದಿತ್ಯಾಗ್ಲಿ!!!
ದನುಜ ದಮನಾಂಜನೇಯ!
ನಾಮ ಭಜನಾನಂದಾ ರಾಯ! (ಹಾ)
-ರಿ ಲಂಕೆಗೆ ಬೆಂಕಿಟ್ಟಾ ರಾಯ!
ಮಾತೆಯಾಜ್ಞೆ ಪಡೆದಾ ರಾಯ! (ಮ)
-ರುಗಿದನಾಕೆಗಾಗೀ ರಾಯ! (ಧೃ)
-ತಿಗೆಡದೋಡಿ ಬಂದಾ ರಾಯ!
ರಾಮನಡಿ ಸೇರಿದಾ ರಾಯ! (ಜೀ)
-ಯ ನಿರಂಜನಾದಿತ್ಯಾ ರಾಯ!!!
ನಿರ್ಮಲ ತಾಳಗತಿಯಿವರದಯ್ಯಾ!
ಧಿಮಿ, ಧಿಮ್ಯೆಂದೆಲ್ಲರ ಕುಣಿಪುದಯ್ಯಾ!
ಸಿಂಗಾರಾದ್ಯೆಲ್ಲಾ ಭಾವರಸದಿಂದಯ್ಯಾ!
ಗಾಯಕರಿದರಿಂದುತ್ಸಾಹಿಗಳಯ್ಯಾ!
ರಿವಾಜಿನಲ್ಲೆಳ್ಳಷ್ಟೂ ತಪ್ಪಿಲ್ಲವಯ್ಯಾ!
ಬಹು ಸರಳ ಜೀವಿಗಳಿವರಯ್ಯಾ!
ಸತ್ಸಂಗ ಪ್ರೇಮಿಗಳಾಗಿರುವರಯ್ಯಾ!
ವರ ಗುರು ಚರಣ ಕಿಂಕರರಯ್ಯಾ!
ಮೂರ್ತಿತ್ರಯರಿವರಿಗೆ ಪೂಜ್ಯರಯ್ಯಾ!
ಗರ್ವವಿವರಲ್ಲೇನೇನೂ ಇಲ್ಲವಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾರಾಮಯ್ಯಾ!!!
ನಿರ್ದಿಷ್ಟ ಲೆಃಖಾಚಾರ ತಾಳದಲ್ಲಯ್ಯಾ!
ಧಿಕ್ಕಾರಾರನ್ನೂ ಮಾಡುವುದಿಲ್ಲವಯ್ಯಾ!
ಸಿಂಗಾರಾದಿ ಭಾವೈಕ್ಯಾ ಮೃದಂಗವಯ್ಯಾ!
ಗಾಯಕಗಿದು ಯುಕ್ತ ಸಹಾಯವಯ್ಯಾ!
ರಿವಾಜು ಬದ್ಧ ಸಂಚಾರದರದಯ್ಯಾ!
ಬಡಾಯಿ ಕೊಚ್ಚಿಕೊಳ್ಳುವುದಿಲ್ಲವಯ್ಯಾ!
ಸತ್ಸಂಗ ಸದಾ ಬಿಟ್ಟಿರುವುದಿಲ್ಲಯ್ಯಾ!
ವಾದ, ಭೇದಕ್ಕೆಡೆ ಕೊಡುವುದಿಲ್ಲಯ್ಯಾ!
ರಾಮ ಸೇವೆಗಾಗೀ ಜನ್ಮ ಈಸಲಯ್ಯಾ!
ಮಹಾದೇವಾತ್ಮ ಭಾವವೆಲ್ಲರಲ್ಲಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾನಂದಾ ಮೂಗಯ್ಯಾ!!!
-ಲ ಕಾರಣರಿಯದೆಲ್ಲಾ ನೋವು!
ಗರ್ವಾತ್ಮಗೆಂದೆಂದೂ ಸಾವು, ನೋವು!
ಗೊಬ್ಬರದ ಹುಳಕ್ಕಾವ ನೋವು? (ಒ)
-ಡಲೇ ನಾನೆನುತ್ತ ಸಾವ ನೋವು!
ದುರ್ವಿಚಾರದಿಂದಾಗಿದೆ ನೋವು!
ಹಸ್ತಾದಿಂದ್ರಿಯ ವ್ಯಾಪಾರಾ ನೋವು! (ಕೊ)
-ಲ್ಲುವುದಿದೇ ಯಮರೂಪೀ ನೋವು! (ಮ)
-ನೋಜಯದಿಂದ ನಿರ್ನಾಮಾ ನೋವು! (ಸಾ)
-ವು, ನಿರಂಜನಾದಿತ್ಯಾತ್ಮಾವು???
-ತ್ಯತೀತನವನೆಂಬರಿವಿರಲಿ!
ನಾಮ ಭಜನೆಗೆ ಜಾಗವಿರಲಿ!
ರಾತ್ರಿ, ದಿನವೆಲ್ಲದಾಗುತ್ತಿರಲಿ! (ಕಾ)
-ಯದಭಿಮಾನವಿಲ್ಲದಂತಾಗಲಿ! (ಗ)
-ಣನಾಯಕಗುಚ್ಚಸ್ಥಾನವಿರಲಿ!
ಪೂರ್ಣಾನಂದಾನುಗ್ರಹ ಲಭಿಸಲಿ! (ಪೂ)
-ಜೆ ಬಹು ಭಯ, ಭಕ್ತಿಯಿಂದಾಗಲಿ!
ಸಾಧು, ಸಜ್ಜನರ ಸಂಗವಿರಲಿ!
ಗದಕಾವೇಶಗಳಿಲ್ಲದಿರಲಿ! (ಒ)
-ಲಿದು ನಿರಂಜನಾದಿತ್ಯನಿರಲಿ!!!
-ಕರ್ತವ್ಯವಲ್ಲೇನೆಂದು ಗೊತ್ತೇನಮ್ಮಾ?
ಸರ್ವ ಹಿತದೃಷ್ಟಿಯಿರಬೇಕಮ್ಮಾ! (ಪ್ರ)
-ಭೆ ಬೀರುವುದು ಮಾತಿನಿಂದಲ್ಲಮ್ಮಾ! (ಹ)
-ಗೆತನ ಸಾಧನೆಗಾ ಜಾಗಲ್ಲಮ್ಮಾ!
ನಿರ್ಮಲಾಂತಃಕರಣಕ್ಕಾ ಸ್ಥಾನಮ್ಮಾ! (ತ)
-ನ್ನೋನ್ನತಿಯ ಸ್ವಾರ್ಥ ಸುಖಕ್ಕಲ್ಲಮ್ಮಾ! (ಬೂ)
-ಟಾಟದಿಂದಾವುದೂ ಸಿದ್ಧಿಸದಮ್ಮಾ! (ಹಾ)
-ರಿ ಊರೂರಲೆದಾರಿಗೇನಾಯ್ತಮ್ಮಾ?
ಗತಿ, ಸ್ಥಿತಿ ನೋಡಿ ಮತ ನೀಡಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಾನಂದದಮ್ಮಾ!!!
ಗುಟ್ಟು ಬಿಟ್ಟು ಓಟು ಕೊಟ್ಟು ಪಟ್ಟಕಟ್ಟು! (ಸು)
-ಟ್ಟು ಅಹಂಕಾರಟ್ಟಹಾಸ ಪಟ್ಟ ಕಟ್ಟು!
ಬಿರುದಾವಳಿಗಳ್ಬಿಟ್ಟು ಪಟ್ಟ ಕಟ್ಟು! (ಇ)
-ಟ್ಟು ಶಿಷ್ಟ ಸಂಪ್ರದಾಯವ ಪಟ್ಟ ಕಟ್ಟು!
ಓಜಸ್ಸು, ತೇಜಸ್ಸು ನೋಡಿ ಪಟ್ಟ ಕಟ್ಟು! (ಹ್ಯಾ)
-ಟು, ಬೂಟ್ಗಳ ತೆಗೆದಿಟ್ಟು ಪಟ್ಟ ಕಟ್ಟು!
ಕೊಟ್ಟು ಮೃಷ್ಟಾನ್ನ ಭೋಜನ ಪಟ್ಟ ಕಟ್ಟು! (ಮು)
-ಟ್ಟು, ಮೈಲಿಗೆ, ಬದಿಗಿಟ್ಟು ಪಟ್ಟಾ ಕಟ್ಟು!
ಪರಮಾರ್ಥದಂಗಿ ತೋಟ್ಟು ಪಟ್ಟ ಕಟ್ಟು! (ಬೆ)
-ಟ್ಟದಯ್ಯಗೆ ಮುಡಿಕೊಟ್ಟು ಪಟ್ಟ ಕಟ್ಟು!
ಕಟ್ಟು! ರಾಮರಾಜ್ಯ ಕಟ್ಟಿ ಪಟ್ಟ ಕಟ್ಟು! (ಕ)
-ಟ್ಟು ನಿರಂಜನಾದಿತ್ಯಾತ್ಮ ಪಟ್ಟ ಕಟ್ಟು!!!
-ಲ್ಲಮ್ಮ ನೀನಲ್ಲವೇನಮ್ಮಾ? (ಆ)
-ರೂ ಮರೆತಿಲ್ಲ ನಿನ್ನಮ್ಮಾ!
ಕ್ಷೇಮದಾಯಕಿ ನೀನಮ್ಮಾ!
ಮಹಿಮಾನ್ವಿತಳ್ನೀನಮ್ಮಾ!
ವೇದ ಮಾತೆ ನೀ ನಮ್ಮಮ್ಮಾ!
ನಮಸ್ಕಾರ ನಿನಗಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಮ್ಮಾ!!!
-ನ್ನಂಥಾ ತಾಯಿಗದೇ ಸೌಭಾಗ್ಯಮ್ಮಾ! (ವೃ)
-ಥಾಲಾಪದಿಂದಾವ ಸುಖವಮ್ಮಾ?
ಮಕ್ಕಳ್ಗೆ ಮಾತೃಭಕ್ತಿ ಮುಖ್ಯಮ್ಮಾ! (ಮಿ)
-ಕ್ಕದ್ದೆಲ್ಲಾ ಲೆಃಖಕ್ಕೆ ಹೊರಗಮ್ಮಾ! (ಬಾ)
-ಳಿ ಸುಖವಾಗಿರಿ ನೀವೆಲ್ಲಮ್ಮಾ! (ವ)
-ರ ಗುರು ಶಿವ ನಿಮಗಪ್ಪಮ್ಮಾ!
ಬೇಕಿನ್ನೇನು ಭಾಗ್ಯ ನಿಮಗಮ್ಮಾ?
ಕರ ಮುಗಿದು ಪ್ರಾರ್ಥಿಸಿರಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾತ್ಮಪ್ಪಮ್ಮಾ!!!
ಗ್ಗವಾಗಿ ಬದುಕಿರಲೂ ಬೇಡ!
ಬೇರಿನ್ಯಾರೂ ಗತಿಯೆನಬೇಡ! (ಮೃ)
-ಡನ ಧ್ಯಾನ, ಜಪ, ಬಿಡಬೇಡ!
ನೀಚರೊಡನಾಟ ಮಾಡಬೇಡ! (ಅ)
-ನುಮಾನ ಗುರುವಿನಲ್ಲಿ ಬೇಡ!
ಕುಕರ್ಮಾಸಕ್ತನಾಗಿರಬೇಡ! (ಸ)
-ಗ್ಗವನ್ನಾದರೂ ಬಯಸಬೇಡ!
ಬೇರೆಯವರ ದೂಷಿಸಬೇಡ! (ಮೃ)
-ಡ ನಿರಂಜನಾದಿತ್ಯ ಕೇಡ್ಮಾಡ!!!
-ಡಿಸಬೇಕವುಗಳನ್ನು ಕಣೇ! (ಎ)
-ದೆ ಗಟ್ಟಿ ಮಾಡಿ ನಿಲ್ಬೇಕು ಕಣೇ! (ಅ)
-ವ್ವ ನೀನು ಜಗದಮ್ಮಯ್ಯಾ ಕಣೇ! (ಮ)
-ಗ ನಿನಗೆ ಕಾರ್ತಿಕೇಯ ಕಣೇ! ()
-ಳಿಯಲ್ಲೇ ಅವನಿರಲಿ ಕಣೇ!
ಗಣಪತಿಯೂ ಬಂದಿರ್ಲಿ ಕಣೇ! (ಕ್ಷು)
-ಲ್ಲಕ ದೆವ್ವಗಳೋಡ್ವವು ಕಣೇ!
ಕರ, ಚರಣಕ್ಕಾಳಾಗ್ಬೇಡ್ಕಣೇ! (ಗ)
-ಣೇಶ ನಿರಂಜನಾದಿತ್ಯ ಕಣೇ!!!
ತಿಂಡಿ ತಿಂದೆ, ಪುರಿ ಉಂಡೆ ತಿಂದೆ! (ಪು)
-ಡಿ ಮಾಡಿ ಚೆನ್ನಾಗ್ಯಗಿದು ತಿಂದೆ!
ತಿಂದೆ, ಜೀರ್ಣವಾಗುವಷ್ಟೇ ತಿಂದೆ! (ತಂ)
-ದೆಯನ್ನು ನೆನೆನೆನೆದು ತಿಂದೆ!
ಪುರಾಣ, ಕತೆ ಸ್ಮರಸಿ ತಿಂದೆ! (ಹ)
-ರಿ ಕರುಣಾಳೆಂದರಿತು ತಿಂದೆ!
ಉಂಡಾಡಿ ನಾನಲ್ಲವೆಂದು ತಿಂದೆ! (ಬಿ)
-ಡೆ ಗುರುಪಾದವನ್ನೆಂದು ತಿಂದೆ!
ತಿಂದೆ, ತಿಂದೆ ಕಂಠಪೂರ್ತಿ ತಿಂದೆ! (ತಂ)
-ದೆ ನಿರಂಜನಾದಿತ್ಯಗಾಗ್ಯೆಂದೆ!!!
ಜಗನ್ಮಯಾ, ಚಿನ್ನಯಾ ಮನೋಜಯಾ! (ಭ)
-ಯಾಭಯಾ, ದಯಾಮಯಾ ಮನೋಜಯಾ! (ಅ)
-ದಿತೇಯಾ, ದತ್ತಾತ್ರೇಯಾ ಮನೋಜಯಾ! (ವಾ)
-ಗ್ವಿಲಾಸಾಪ್ರಿಯಾಶ್ರಯಾ ಮನೋಜಯಾ!
ಜಯಾಪಜಯ ಪ್ರಿಯಾ ಮನೋಜಯಾ! (ಮಾ)
-ಯಾಮಯಾ ಲೀಲಾಮಯಾ, ಮನೋಜಯಾ!
ಮನೋಮಯಾ ವಾಙ್ಮಯಾ ಮನೋಜಯಾ! (ಧ್ಯಾ)
-ನೋದಯಾ ಜ್ಞಾನೋದಯಾ ಮನೋಜಯಾ!
ಜಪೇಯಾ ಅಜಪೇಯಾ ಮನೋಜಯಾ! (ಛಾ)
-ಯಾ ನಿರಂಜನಾದಿತ್ಯಾನಂದಾ ಜಯ!!!
-ಮಲಾ, ಸದಮಲಾ, ವಿಮಲಾ! (ಬ)
-ಲಾ ಬಲಾತ್ಮಬಲಾ ವಿಮಲಾ!
ಕೋಲಾ, ಕೋಲಾಹಲಾ ವಿಮಲಾ!
ಮರಾಲಾ, ಮಾರ್ಮಲಾ ವಿಮಲಾ! (ಲೀ)
-ಲಾಜಾಲಾ, ಸುಶೀಲಾ ವಿಮಲಾ!
ವಿಪುಲಾ, ವಿಶಾಲಾ, ವಿಮಲಾ!
ಮಹಾಬಲಾ, ಬಾಲಾ, ವಿಮಲಾ! (ಜ್ವಾ)
-ಲಾ, ನಿರಂಜನಾದಿತ್ಯಮಲಾ!!!
-ಗಿಸುವುಪಾಯ ಕಾಣೆನಲ್ಲಾ! (ಕು)
-ಲುಕುಲು ನಕ್ಕರಾಗ್ವುದಿಲ್ಲಾ!
ಹಾಡಿದರೆ ಪರವಾಯಿಲ್ಲಾ!
ಕಿರಿಕಿರಿ ಮಾಡದಿರ್ಯೆಲ್ಲಾ! (ಗು)
-ರು ಭಜನೆ ಮಾಡೋಣ ಎಲ್ಲಾ! (ಅ)
-ವರಿವರ ಮಾತು ಬೇಕಿಲ್ಲಾ!
ರಜಾ ದಿನ ಹರಟೆಗಲ್ಲಾ! (ಗು)
-ಲ್ಲಾ ನಿರಂಜನಾದಿತ್ಯನೊಲ್ಲಾ!!!
ವರ್ಣಾತೀತಳೀ ವರಲಕ್ಷ್ಮಿ! (ಏ)
-ಳೇಳೆಂಬಳೀ ವಿಜಯಲಕ್ಷ್ಮಿ!
ತಾಳ್ತಾಳೆಂಬಳೀ ಗಜಲಕ್ಷ್ಮಿ! (ನೀ)
-ನೇ ನಾನೆಂಬಳೀ ಜ್ಞಾನಲಕ್ಷ್ಮಿ! (ದಾ)
-ಸೀಸಮಾನಳೀ ತ್ಯಾಗಲಕ್ಷ್ಮಿ!
ತಾಯಿ ರೂಪಳೀ ಭಾಗ್ಯಲಕ್ಷ್ಮಿ! (ಕಾ)
-ಲ ಸ್ವರೂಪಳೀ ಮಹಾಲಕ್ಷ್ಮಿ! (ಲ)
-ಕ್ಷ್ಮಿ, ನಿರಂಜನಾದಿತ್ಯಾ ಲಕ್ಷ್ಮಿ!!!
ಗಾನ ಸುಧಾಕರ ಮಂದಾರಾ!
ರಾಧವರಾ ಮನ್ಮಥಾಕಾರಾ!
ಶ್ರಿಕರ ಶುಭಕರಾಚಾರಾ!
ರಂಗನಾಯಕಿಯಾತ್ಮಾಗಾರಾ!
ಗರುಡಗಮನಾ ಶ್ರೀಧರಾ!
ವಿವಿಧ ನಾಮರೂಪಾಪಾರಾ!
ಹಾಡಿ, ಪಾಡುವರಾತ್ಮೋದ್ಧಾರಾ! (ಹ)
-ರಾ, ನಿರಂಜನಾದಿತ್ಯಾಕಾರಾ!!!
-ಷವದರ ಮೇಲೆ ಆರೋಪಿಸಬೇಡ! (ಅ)
-ಧಿಕಾರ ಶಾಶ್ವತವೆಂದರಿಯಬೇಡ!
ಯಮ, ನಿಯಮದಭ್ಯಾಸ ಬಿಡಬೇಡ! (ಅ)
-ನ್ನದಗತ್ಯವಿಲ್ಲದಾಗ ಉಣ್ಣಬೇಡ!
ವಸ್ತ್ರ, ಭೂಷಣದತ್ಯಾಡಂಬರ ಬೇಡ!
ಲಂಚದಿಂದಲ್ಪ ಸ್ವಾರ್ಥ ಸಾಧಿಸಬೇಡ!
ಬಿಟ್ಟಿಯಾಗಿ ಯಾರನ್ನೂ ದುಡಿಸಬೇಡ!
ಸಿರಿತನಕ್ಕಹಂಕಾರ ಪಡಬೇಡ! (ಪ)
-ರ ದಾರಾ, ಧನಕ್ಕೆಂದೂ ಆಶಿಸಬೇಡ!
ಬೇಕು ಸದ್ಗುರು ಸೇವೆ! ಮರೆಯಬೇಡ! (ಆ)
-ಡ ನಿರಂಜನಾದಿತ್ಯನೃತವನ್ನಾಡ!!!
ಫಲ ಪುಷ್ಪವಿಟ್ಟಾ ಬೆಳ್ಳಿಯ ತಟ್ಟೆ! (ಕು)
-ಲದೈವದ ಮುಂದಾನಂದದಿಂದಿಟ್ಟೆ!
ಪುನರ್ಜನ್ಮ ಬೇಡೆನಗೆಂದು ಬಿಟ್ಟೆ! (ಭಾ)
-ಷ್ಪಲೋಚನೆಯಾಗಿ ಸಂಕಟ ಪಟ್ಟೆ!
ವಿಧಿಯಾಜ್ಞೆ ಈರಲಾರದೇ ಕೆಟ್ಟೆ! (ಕೊ)
-ಟ್ಟಾತವನಲ್ಲವೇ ನನಗೀ ಬಟ್ಟೆ?
ಬೆಸಸೀಗೇನಾಜ್ಞೆನಗೆಂದು ಉಟ್ಟೆ! (ತ)
-ಳ್ಳಿದರಾಗದೀಗೆನ್ನನೆಂದೆ ದಿಟ್ಟೆ! (ಭ)
-ಯ ಪಡಬೇಡೆಂದಭಯಂದು ಕೊಟ್ಟೆ!
ತಡವೇಕೆಂಬೀ ಬಿನ್ನಹವೀಗಿಟ್ಟೆ! (ಸು)
-ಟ್ಟೆ ನಿರಂಜನಾದಿತ್ಯನಾಗ್ಯಾ ಬಟ್ಟೆ!!!
ವಿಶ್ವ ಬಂದಾ ಸಪ್ತಾಶ್ವಾರೂಢ ಬಂದಾ! (ನ)
-ಶ್ವರದಾಸೆ ಬಿಟ್ಟುಬಿಡಬೇಕೆಂದಾ!
ಬಂಧು ಬಳಗವೆಲ್ಲವು ನಾನೆಂದಾ!
ದಾಮೋದರ ನಾನೆಂದರಿ ನೀನೆಂದಾ!
ಸಕಲ ನಿಗಮಾಗಮಾತ್ಮಾನೆಂದಾ! (ಲಿ)
-ಪ್ತಾಲಿಪ್ತಾವಧೂತ ದತ್ತ ನಾನೆಂದಾ!
ಶ್ವಾಸೋಚ್ಛ್ವಾಸ ಸಂಪೂರ್ಣಾತ್ಮ ನಾನೆಂದಾ!
ರೂಪ, ನಾಮಾತೀತ ಗುರು ನಾನೆಂದಾ!
ಡಮರುಧರ ಈಶ್ವರ ನಾನೆಂದಾ!
ಬಂದಾ, ನಿಂದಾ, ಶಿವಾನಂದ ನಾನೆಂದಾ! (ಸ)
-ದಾ, ನಿರಂಜನಾದಿತ್ಯಾನಂದಾನೆಂದಾ!!!
ಲಭ್ಯವಿಲ್ಲದಿರೆ ವ್ಯರ್ಥಮ್ಮಾ! (ಅ)
-ಭ್ಯರ್ಥಿಯಾದರಾಯಿತೇನಮ್ಮಾ? (ಸೇ)
-ವೆಗೂ ಪ್ರಾಪ್ತಿಯಿರಬೇಕಮ್ಮಾ! (ಸೃ)
-ಷ್ಟಿ ಕರ್ತಗೂ ಕಷ್ಟ ಕಾಣಮ್ಮಾ! (ಪೆ)
-ದ್ದನೂ ಬುದ್ಧ ಲಭ್ಯದಿಂದಮ್ಮಾ!
ರೇಗಿದರೇನು ಫಲವಮ್ಮಾ?
ನಶಿಸುವ ದೇಹವಿದಮ್ಮಾ! (ಅ)
-ಮ್ಮಾ ನಿರಂನಾತ್ಯನಾಗಮ್ಮಾ!
-ಗೀತ ಕೇಳ್ಲಿಕ್ಕೆ ಬನ್ಯೆನದಿರಬೇಕು!
ತನಗೆ ತಾನಾಕರ್ಷಣೆಯಾಗ್ಬೇಕು!
ಕೇಶವನ ಕೊಳಲಿನಂತಾಗಬೇಕು! (ಕೇ)
-ಳಿ ರಾಸಕೇಳಿಯೇ ಅಲ್ಲಾಗಬೇಕು!
ಸಚ್ಚಿದಾನಂದ ಸುಖ ಕಾಣಬೇಕು! (ಪ್ರ)
-ಭೆ ಗುರುವಿನದು ಹರಡಬೇಕು!
ಸೇವೆ ನಿಷ್ಕಾಮದಿಂದ ಸಾಗಬೇಕು!
ರಸಾಸ್ವಾದನೆ ಪ್ರಸಾದಾಗಬೇಕು!
ಬೇನೆಗಳೆಲ್ಲಾ ಹಾರಿ ಹೋಗಬೇಕು!
ಕುಟ ನಿರಂಜನಾದಿತ್ಯಗಾಗ್ಬೇಕು!!!
-ರ ಗುರುಭಕ್ತನವನೈಸೆ?
ಬೇರಾವುದಕ್ಕಿಲ್ಲವಗಾಸೆ! (ಬೇ)
-ಕೆಂದಿಹನು ಸತ್ಸಂಗದಾಸೆ! (ಭೇ)
-ದವಲ್ಲಿರಬಾರದೆಂಬಾಸೆ!
ವಸ್ತ್ರಾಲಂಕಾರಕ್ಕೊಲ್ಲದಾಸೆ!
ನಿಶಿ, ದಿನಧ್ಯಾತ್ಮಿಕದಾಸೆ!
ಗಾನ, ಶಾಂತಿಗಾಗ್ಯವಗಾಸೆ! (ಆ)
-ನೆ ನಿರಂಜನಾದಿತ್ಯಾತ್ಮಾಸೆ!!!
-ರಧನಕ್ಕಿಷ್ಟ ಪಡದಿರೋ! (ಪ)
-ದವಿ ಅಧರ್ಮಕ್ಕಲ್ಲೆಂದಿರೋ! (ರ)
-ಕ್ಷಿಸುವ ಸದ್ಗುರುವೆಂದಿರೋ! (ಹೊ)
-ಣೆ ನಿನ್ನದೇನೆಂದರಿತಿರೋ!
ಬೇಡ ಅಲ್ಪಸುಖವೆಂದಿರೋ! (ಒ)
-ಡಗೂಡಿ ಸಜ್ಜನರಲ್ಲಿರೋ! (ಮ)
-ದಿರಾಸೇವನೆ ಮಾಡದಿರೋ! (ಬಾ)
-ರೋ, ನಿರಂಜನಾದಿತ್ಯಾಗಿರೋ!!!
-ಡೆನವುಗಳೀಗದರಿಂದೇನು? (ವಂ)
-ಚನೆಯದಾರೋಗ್ಯಕ್ಕಲ್ಲವೇನು? (ಇ)
ಕ್ಕುವಾಗೆಚ್ಚರವಿರಬೇಡ್ವೇನು? (ಕ)
-ಲಿತವ ನಿನ್ನಂತೆ ಅವನೇನು? (ಸಂ)
-ಗಡಿಗ ನೀನಾಗಿರಲಿಲ್ಲೇನು? (ಗೋ)
-ಳುಂಬಾಗ ಬೇಡವೆಂದಿದ್ದೆ ನಾನು! (ಬಿ)
-ಡೆ ನಾನದರಾಸೆ ಹೋಗು ನೀನು!
ಯೇನೆಂಬೆ ನಿನ್ನವಿವೇಕಕ್ಕಾನು? (ನೀ)
-ನು ನಿರಂಜನಾದಿತ್ಯಾಗ್ಬಾರ್ದೇನು???
ಅರಿವಿಲ್ಲದ ಮುಂಡಕ್ಕಿನ್ನೂ ಮೊಂಡಾಟವೇ?
ರಿವಾಜೆನ್ನ ಬೇಡೆಂದರಿನ್ನೂ ಮೊಂಡಾಟವೆ?
ವಿದ್ಯಾರ್ಥಿ ನೀನಾಗೆಂದರಿನ್ನೂ ಮೊಂಡಾಟವೇ? (ನ)
-ಲ್ಲನಲ್ಲೊಂದಾಗಿರೆಂದರಿನ್ನೂ ಮೊಂಡಾಟವೇ?
ದತ್ತಜಪ ಮಾಡೆಂದರಿನ್ನೂ ಮೊಂಡಾಟವೇ?
ಮುಂಗೋಪವದೇಕೆಂದರಿನ್ನೂ ಮೊಂಡಾಟವೇ? (ಸ)
-ಡಗರ ಸಾಕಿನ್ನೆಂದರಿನ್ನೂ ಮೊಂಡಾಟವೇ? (ಇ)
-ಕ್ಕಿದ್ದನ್ನುಣ್ಣಬೇಕೆಂದರಿನ್ನೂ ಮೊಂಡಾಟವೇ?(ನಿ)
-ನ್ನೂರಿಗೇ ಹೋಗಿರೆಂದರಿನ್ನೂ ಮೊಂಡಾಟವೇ?
ಮೊಂಡಿ ಮುಂಡೇಕಾಗ್ವೆಂದರಿನ್ನೂ ಮೊಂಡಾಟವೇ? (ಓ)
-ಡಾಡಬೇಡಲ್ಲಿಲ್ಲೆಂದರಿನ್ನೂ ಮೊಂಡಾಟವೇ? (ನೆಂ)
-ಟ ಶ್ರೀರಾಮಗೆ ನೀನಾಗಿನ್ನೂ ಮೊಂಡಾಟವೇ?
ವೇದಾಂತಿ ನಿರಂಜನಾದಿತ್ಯನಾಗ್ಬೇಡವೇ???
-ಡೆ ಮುಂಡೆಯೆಂದರೇನಾ ಪುಂಡ? (ಬಾ)
-ಯೆಂದರೆ ಬರದಿರ್ಪಾ ಭಂಡ!
ಬಯಲಾಟಾಟಗಾರಾ ಪುಂಡ!
ನಿಜವೇನೆಂದರಿಯಾ ಭಂಡ! (ಕ)
-ನ್ನ, ಕತ್ರಿಯಿಂದಾನಂದಾ ಪುಂಡ! (ಚಿ)
-ನ್ನಾಭರಣಾಶಾತುರಾ ಭಂಡ!
ಭಂಡ, ಮುಂಡ, ಪಾಷಂಡಾ ಪುಂಡ! (ಗಂ)
-ಡ, ನಿರಂಜನಾದಿತ್ಯಜಾಂಡ!!!
ನಾಳಿನದಿಂದು ಮಾಡದಾ ಚಿತ್ತ! (ಕ)
-ದ ಮುಚ್ಚೆನೆ ತೆರೆವುದಾ ಚಿತ್ತ (ನೂ)
-ರೊಂದೆಂದರೊಂದಾಗುವುದಾ ಚಿತ್ತ!
ದಬ್ಬೆಂದರೆ ತಬ್ಬುವುದಾ ಚಿತ್ತ! (ಬ)
-ಡ್ಡಿಯೆಂದರೆಲ್ಲಸ್ಲೆಂಬುದಾ ಚಿತ್ತ!
ಗುಟ್ಟೆಂದರೆ ರಟ್ಟೆಂಬುದಾ ಚಿತ್ತ!
ರುಚ್ಯೆಂದರರುಚ್ಯೆಂಬುದಾ ಚಿತ್ತ!
ಚಿತ್ತಾಚಿತ್ತಾವಧೂತಾಪ್ತಾ ಚಿತ್ತ! (ದ)
-ತ್ತ ನಿರಂಜನಾದಿತ್ಯಾತ್ಮಾ ಚಿತ್ತ!!!
-ಡವಾಗಿಹದರೆಲ್ಲಾ ಬೆಣೆ ಹೊಣೆ! (ಕಾ)
-ಲಾಧಿಕ್ಯದದರ ವಯಸ್ಸು ಹೊಣೆ! (ಪ)
-ರರಲ್ಲದರ ದುಸ್ಥಿತಿಗೆ ಹೊಣೆ! (ಇ)
ದದು ಕಾರಣೆಂಬೂಹೆಗಾರು ಹೊಣೆ!
ಗಾರುಗೆಟ್ಟು ಕೆಟ್ಟಾ ಮನಸ್ಸೇ ಹೊಣೆ! (ಗಾ)
-ಡಿ ಬೇರೆತರುವುದದರ ಹೊಣೆ!
ಗಾಡಿ ಬೇಡಾದರೆ ಬಿಡುವ ಹೊಣೆ! (ಗು)
-ರುಪಾದ ಸೇರಿದರಿನ್ನಾವ ಹೊಣೆ?
ಹೊಣೆ, ಭವಬಂಧ ಹರಿವ ಹೊಣೆ! (ಹೊ)
-ಣೆ ನಿರಂಜನಾದಿತ್ಯಗೇನೂ ಕಾಣೆ!!!
ಉತ್ಸಾಹವಿಲ್ಲದುತ್ಸವವಾಗದು! (ಪ್ರೋ)
-ತ್ಸಾಹವೀಯದೆ ಉತ್ಸಾಹ ತೋರದು!
ಹರಿ ಭಕ್ತನಲಕ್ಷಿಸಬಾರದು!
ವಿಧಿಯೆಂದವನ ತಳ್ಳಕೂಡದು! (ಬ)
-ಲ್ಲ ಸುಜ್ಞಾನಿಗೆ ಕಾಠಿಣ್ಯ ಸಲ್ಲದು!
ದುಡಿಸ್ಯುಪವಾಸವಿಡಲಾಗದು! (ಸ)
-ತ್ಸಹವಾಸ ವ್ಯರ್ಥವಾಗಬಾರದು! (ಭ)
-ವಪಾಶವೇಕಿನ್ನೂ ಬಂಧಿಸಿಹುದು?
ವಾದಿಸದ ಸಾಧನೆ ಬೇಕಿಹುದು!
ಗತಿ, ಸ್ಥಿತಿ ಸ್ಥಿರವಾಗಾಗುವುದು! (ಜಾ)
-ದು, ನಿರಂಜನಾದಿತ್ಯಗಾಗದು!!!
ಮಹಾತ್ಮ ನಾನೆಂದು ಸಂಜೀವಾ! (ಪೇ)
-ಟೆ, ಬೀದಿಲಿ ನಿಂದು ಸಂಜೀವಾ!
ಹೊಲೆಯಾನಲ್ಲೆಂದು ಸಂಜೀವಾ! (ಗು)
-ಡಿಯೊಡೆಯಾನೆಂದು ಸಂಜೀವಾ!
ಯೋಗೇಶ್ವರಾನೆಂದು ಸಂಜೀವಾ!
ಸಂಪೂಜ್ಯಾತ್ಮಾನೆಂದು ಸಂಜೀವಾ!
ಜೀವನ್ಮುಕ್ತಾನೆಂದು ಸಂಜೀವಾ! (ಜೀ)
-ವಾ ನಿರಂಜನಾದಿತ್ಯ ಶಿವಾ!!!
-ವ ಶಿವೈಕ್ಯಾನಂದಾನೆಂದು ಕುಣಿದಾ!
ಕುಲ, ಗೋತ್ರಾತೀತಾನೆಂದು ಕುಣಿದಾ! (ವಾ)
-ಣಿಯಾಣ್ಮ ಬ್ರಹ್ಮ ನಾನೆಂದು ಕುಣಿದಾ! (ಸ)
-ದಾ ಸಚ್ಚಿದಾನಂದಾನೆಂದು ಕುಣಿದಾ!
ಸಂಕಟಹರ ನಾನೆಂದು ಕುಣಿದಾ!
ಜೀವಕೋಟ್ಯಂತರ್ಯಾಮೆಂದು ಕುಣಿದಾ!
ವರ ಗುರುದತ್ತಾನೆಂದು ಕುಣಿದಾ!
ಕುರುಕುಲ ಕಾಲಾನೆಂದು ಕುಣಿದಾ! (ರಾ)
-ಣಿ ದಾಕ್ಷಾಯಿಣ್ಯಾತ್ಮಾನೆಂದು ಕುಣಿದಾ! (ಇ)
-ದಾ ನಿರಂಜನಾದಿತ್ಯ ತಾ ನುಡಿದಾ!!!
ಕ್ಷಣ ಕ್ಷಣಕ್ಕೊಂದೊಂದು ಲೀಲೆ! (ತೃ)
-ಣ, ಪಾಷಾಣಾದಿಗಳಾ ಲೀಲೆ! (ನ)
-ಕ್ಷತ್ರ, ಗ್ರಹಾದಿಗಳಾ ಲೀಲೆ! (ಕಾ)
-ಣಲಚ್ಚರಿಯಾಗಿಹಾ ಲೀಲೆ! (ತ)
-ಕ್ಕೊಂಬ, ಮಾರುವರಾರಾ ಲಿಲೇ? (ಅ)
-ದೊಂದಾರೂ ಅರುಹದಾ ಲೀಲೆ! (ಇ)
-ದು “ಗುರುಚಿತ್ತ” ವೆಂಬಾ ಲೀಲೆ!
ಲೀಲಾತ್ಮಗೆಲ್ಲಿಹುದಾ ಲೀಲೆ? (ಲೀ)
-ಲೆ, ನಿರಂಜನಾದಿತ್ಯ ನೆಲೆ!!!
ನೇಮದಂತೆದ್ದೆಂದು ನಾನಿದ್ದೆ!
ಕಿಂಡಿಯಿಂದ ನಿನ್ನ ಕಂಡಿದ್ದೆ!
ದುಡಿಮೆ ನಿನ್ನಿಷ್ಟವೆಂದೆದ್ದೆ!
ಬಡಿಸಿದ್ದುಣಬೇಕೆಂದೆದ್ದೆ!
ಹುಟ್ಟ ಸಾವ ಗುಟ್ಟೇನೆಂದೆದ್ದೆ!
ಬೇಕು ಧ್ಯಾನವಿದಕ್ಕೆಂದೆದ್ದೆ!
ಗೆಳತಿ ತಾರೆ ನೀನೆಂದೆದ್ದೆ! (ಗೆ)
-ದ್ದೆ ನಿರಂಜನಾದಿತ್ಯಾಗ್ಯೆದ್ದೆ!!!
ದೇಹಕ್ಕಾಗಾಗ ಬೇಕೀ ಹುದ್ದೆ!
ಕಿಂಡಿಯಿಂದಂದೆಯೆಂದು ಹೊದ್ದೆ!
ದೀರ್ಘಕಾಲ ಬೇಕಿಲ್ಲಾ ಹುದ್ದೆ!
ಪಂಚೇಂದ್ರ್ಯ ಶಾಖಕ್ಕೀಗ ಹೊದ್ದೆ!
ಚೆನ್ನಾಗಿದೆ ನಿನ್ನಾಜ್ಞಾ ಹುದ್ದೆ!
ನೀಡಿದಾತ ನೀನೆಂದು ಹೊದ್ದೆ!
ಹೊಸದಲ್ಲ ನನಗೀ ಹುದ್ದೆ! (ಹು)
-ದ್ದೆ, ನಿರಂಜನಾದಿತ್ಯಾನೊದ್ದೆ!!!
-ಗಳಿರುವವನು ನೋಡ್ಯಾನು! (ತಾ)
-ಳಿ ಬಾಳಿದವನು ಆಳ್ಯಾನು!
ದರ್ಪವಿದ್ದವನು ಬಿದ್ದಾನು!
ವರ ಗುರುಭಕ್ತ ಗೆದ್ದಾನು! (ಸಂ)
-ತೆ ವ್ಯಾಪಾರಾಸಕ್ತ ಸೋತಾನು!
ಗದ್ದೆ ಮಾಡಿದವ ಮೆದ್ದಾನು! (ವೀ)
-ಳ್ಯಾಮೃತ ಸಿಕ್ಕಿದಾತೆದ್ದಾನು! (ತ)
-ನು, ನಿರಂಜನಾದಿತ್ಯನೇನು???
ಸ್ವಿಚ್ಚು ಕೆಟ್ಟ ಮೇಲೆಲ್ಲಾ ಕತ್ತಲೆ! (ಅ)
-ಚ್ಚುಕಟ್ಟಿನ ಮನೆಯೂ ಕತ್ತಲೆ!
ಕೆಲಸ ಕಾರ್ಯಕ್ಕಡ್ಡೀ ಕತ್ತಲೆ! (ಪ)
-ಟ್ಟಣಗಳಲಾಗಾಗಾ ಕತ್ತಲೆ!
ಮೆಲ್ವಿಚಾರಿಲ್ಲದ್ರಿಂದಾ ಕತ್ತಲೆ (ತ)
-ಲೆಹರಟೆಯಿಂದೆಲ್ಲಾ ಕತ್ತಲೆ! (ಉ)
-ಲ್ಲಾಸೋತ್ಸಾಹಕ್ಕಾತಂಕಾ ಕತ್ತಲೆ!
ಕರುಣೆಯಿಂದ ಅಂತ್ಯಾ ಕತ್ತಲೆ! (ಚಿ)
-ತ್ತ ಶುದ್ಧಿಯಾದರಿಲ್ಲಾ ಕತ್ತಲೆ! (ಲೀ)
-ಲೆ ನಿರಂಜನಾದಿತ್ಯಾತ್ಮ ಜ್ವಾಲೆ!!!
-ಳೆಯಬೇಕು ಸ್ನೇಹ ಸತತವೆಂದೆ! (ನ್ಯಾ)
-ಯವಾದ ದಾರಿ ಬಿಡಬಾರದೆಂದೆ!
ನಮಗನ್ಯ ಸಹವಾಸ ಬೇಡೆಂದೆ! (ಭೋ)
-ಗೇಚ್ಛೆ ಕಡಿಮೆಯಾಗುತ್ತಿರಲೆಂದೆ! (ಚೋ)
-ಟುದ್ದದ ಬಟ್ಟೆ ನಮಗೆ ಸಾಕೆಂದೆ!
ದಾಸರ ದಾಸರ್ನಾವಾಗಾಗಲೆಂದೆ! (ಕು)
-ಟಿ ನಈ ದೇಹ ದತ್ತಗಾಗಲೆಂದೆ
ಸಿರಿ ಮದ ನಮಗೆ ಬೇಡವೆಂದೆ!
ಬಂಧನದಿಂದ ಪಾರಾಗ್ವುದೆಂದೆಂದೆ! (ತಂ)
-ದೆ ನಿರಂಜನಾದಿತ್ಯಾನಂದನೆಂದೆ!!!
ಗೀರ್ವಾಣಿಯ ಪಾದತಲದಲ್ಲಪ್ಪಾ!
ತನ್ಮಯತೆಯಿಂದ ಹಾಡು ನೀನಪ್ಪಾ!
ಕರ ವಿನ್ಯಾಸ ಕಮ್ಮಿಯಾಗಲಪ್ಪಾ!
ಚೇಷ್ಟೆಗಳೇನೂ ಕಾಣಬಾರದಪ್ಪಾ!
ರಿವಜಿಗೇನೂ ಕೊರತೆ ಬೇಡಪ್ಪಾ!
ಗೆಲಬೇಕೆಲ್ಲರ ಮನವನಪ್ಪಾ! (ಕ)
-ಲ್ಲಿನಲ್ಲೂ ಚೈತನ್ಯ ಮೂಡಬೇಕಪ್ಪಾ!
ಜಾತಿ, ಮತದುಚ್ಛ, ನೀಚ ಸಾಕಪ್ಪಾ!
ಗಗನಮಣಿಯಾದರ್ಶ ತೋರಪ್ಪ! (ಅ)
-ಪ್ಪಾ ನಿರಂಜನಾದಿತ್ಯಾತ ಕಾಣಪ್ಪಾ!!!
ಪ್ರವಾಸದಭ್ಯಾಸ ಬೇಡಯ್ಯಾ!
ತಿಳಿ ನಿನ್ನ ನೀನಾರೆಂದಯ್ಯಾ! (ನಿ)
-ಷ್ಠೆಯಿಂದಿದನು ಸಾಧಿಸಯ್ಯಾ!
ಸಾವಿಗಂಜಿರಬಾರದಯ್ಯಾ!
ಕುತ್ಸಿತ ಸ್ವಭಾವ ಬಿಡಯ್ಯಾ!
ಮಾತತಿಕಡಿಮೆ ಮಾಡಯ್ಯಾ! (ಮೃ)
-ಡನೊಡೆಯನೆಂದು ನಂಬಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾತಯ್ಯಾ!!!
-ಷ್ಣವನವ ಸದಾ ಬ್ರಹ್ಮಾನಂದ! (ಅ)
-ನನ್ಯ ಭಕ್ತಿಯ ವಿನಯಾನಂದ!
ತೀರ್ಥರೂಪನುಪಮಾತ್ಮಾನಂದ! (ವ್ಯ)
-ರ್ಥವೆನುವನಿವ ಮಿಥ್ಯಾನಂದ!
ಪ್ರತಿಕ್ಷಣ ರಾಮನಾಮಾನಂದ!
ಸಾಮಗಾನಾನಂದ ಶಿವಾನಂದ! (ಸ)
-ದಾ ಸಚ್ಚಿದಾನಂದ ದತ್ತಾನಂದ!
ನಂಬಿಗೆಗಿಂಬಾದನಂತಾನಂದ! (ಅಂ)
-ದ ಶ್ರೀ ನಿರಂಜನಾದಿತ್ಯಾನಂದ!!!
ದೇವಿ ಬಂದ್ಲು, ಲಕ್ಷ್ಮಿದೇವಿ ಬಂದ್ಲು!
ವಿಧಿಗೆ ತಾಯಿ ತಾನಾಗಿ ಬಂದ್ಲು!
ಬಂಧ ಬಿಡಿಸಲಿಕ್ಕಾಗಿ ಬಂದ್ಲು! (ಬಂ)
-ದ್ಲು, ಸದ್ಗುರು ಸೇವೆಗಾಗಿ ಬಂದ್ಲು! (ಬಾ)
-ಲಕರ ಏಳಿಗೆಗಾಗಿ ಬಂದ್ಲು! (ಲ)
-ಕ್ಷ್ಮಿಪತಿಯ ದಾಸಿಯಾಗಿ ಬಂದ್ಲು!
ದೇಹಮೋಹ ತ್ಯಾಗಿಯಾಗಿ ಬಂದ್ಲು!
ವಿರಕ್ತೆ ಏಕಾಂಗಿಯಾಗಿ ಬಂದ್ಲು!
ಬಂದ್ಲು, ಹೋದ್ಲು, ಹೋದ್ಲು ಬಂದ್ಲು! (ಹೊ)
-ದ್ಲು, ನಿರಂಜನಾದಿತ್ಯಾಗೀಗ್ಬಂದ್ಲು!!!
ಲಕ್ಷ್ಮೀಬಾರೇ, ವಿಜಯಲಕ್ಷ್ಮೀ ಬಾರೇ! (ಲ)
-ಕ್ಷ್ಮೀರಮಣನೊಡಗೂಡಿರು ಬಾರೇ!
ಬಾರ್ಬಾರಿಗವನ ನೋಡಿರು ಬಾರೇ! (ಹ)
-ರೇರಾಮ ಮಂತ್ರ ಪ್ರಿಯಳೆಂದು ಬಾರೇ!
-ವಿವೇಕಿ, ವಿರಕ್ತೆ ನೀನೆಂದು ಬಾರೇ!
ಜನ ಸಂಘದ ಹಂಗೇನೆಂದು ಬಾರೇ!
ಯಜ್ಞವೀ ಸಂಕೀರ್ತನೆಯೆಂದು ಬಾರೇ!
ಲಕ್ಷಾರ್ಚನೆ ಶ್ರೀಪಾದಕ್ಕೆಂದ ಬಾರೇ! (ಲ)
-ಕ್ಷ್ಮೀಶಗಿಷ್ಟ ಸೇವೆಯಿದೆಂದು ಬಾರೇ!
ಬಾರೇ, ಬೇಗ್ಬಾರೇ, ಹೊತ್ತಾಯ್ತೆಂದು ಬಾರೇ! (ತೋ)
-ರೇ, ನಿರಂಜನಾದಿತ್ಯನನ್ನು ಸೇರೇ!!!
-ನ್ನ ಪೂರ್ಣಾನುಗ್ರಹವೆನಗಾದಾಗ!
ಪುಣ್ಯ, ಪಾಪ ಕೂಪ ಮುಚ್ಚಿಬಿಟಾಗ!
ರಾಗ, ದ್ವೇಷಾದಿಗಳಿಲ್ಲದಾದಾಗ! (ಗು)
-ಣತ್ರಯದಾವರಣ ದಾಟಿದಾಗ!
ಮುಟ್ಟು, ಮಡಿ ಹುಟ್ಟಡಗಿ ಹೋದಾಗ! (ತ್ಯಾ)
-ಗಿ, ಯೋಗಿಯೆಂಬಹಂಕಾರ ಸತ್ತಾಗ! (ನಾ)
-ವು, ನಮ್ಮವರೆಂಬ ಭೇದ ಸುಟ್ಟಾಗ!
ದಾರಿದ್ರೈಶ್ವರ್ಯ ದ್ವಂದ್ವವಳಿದಾಗ!
ವಾಙ್ಮನಾದಿಂದ್ರಿಯ ಜಯವಾದಾಗ! (ಸಂ)
-ಗ ನಿರಂಜನಾದಿತ್ಯನಲ್ಲಾದಾಗ!!!
-ರಿಹಾರವಾಗ್ವುದೆಲ್ಲಾ ರೋಗಯ್ಯಾ!
ಭವಬಂಧ ಹರಿಯುವುದಯ್ಯಾ! (ಭು)
-ಕ್ತಿ ಮುಕ್ತಿಗಿದುತ್ತಮ ಪಾನಯ್ಯಾ!
ಸಾಧನೆ ಸದಾ ಸಾಗಬೇಕಯ್ಯಾ! (ವ)
-ರ ಗುರುಸೇವೆ ಅತ್ಯಗತ್ಯಯ್ಯಾ!
ಕುಮಾರ್ಗಗಾಮಿಯಾಗ್ಬಾರದಯ್ಯಾ! (ಅ)
-ಡಿಗಡಿಗೆ ಭಜನೆ ಮಾಡಯ್ಯಾ!
ಯಜ್ಞವಿದಜ್ಞಾನ ನಾಶಕ್ಕಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾ ಯೋಗಯ್ಯಾ!!!
ಕರಿ ಚರ್ಮಾಂಬರಧರಾ ಈಶ್ವರಾ!
ರಾಜೀವಸಖೇಶ್ವರಾ ಜೀವೇಶ್ವರಾ!
ಸುಮನೋಹರ ಹರಾ ಗಂಗಾಧರಾ!
ಖಂಡ ರಹಿತಾಕಾರಾ ಚಂಡೀಶ್ವರಾ!
ಕಲಿಮಲ ಹರಾ ಕಾಳಿಕಾವರಾ!
ರಾಜರಾಜೇಶ್ವರೀರಾ ನಿರ್ಜರಾ!
ಗುರುಗುಹಾತ್ಮೇಶ್ವರಾ ದಿಗಂಬರಾ!
ರುಜು ಮಾರ್ಗೆಶ್ವರಾ ನಂಜುಂಡೇಶ್ವರಾ!
ವರ ಪರಮೇಶ್ವರಾ ಮಹೇಶ್ವರಾ!
ರಾಮಾತ್ಮಾ ನಿರಂಜನಾದಿತ್ಯೇಶ್ವರಾ!!!
-ವಾನಂದಾಧಾರೀ ಮಾಲತಿ!
ಸರ್ವಾರಿಷ್ಟಾರೀ ಮಾಲತಿ!
ನಾನಾಲಂಕಾರೀ ಮಾಲತಿ!
ಲಲಿತಾಕಾರೀ ಮಾಲತಿ! (ಧ)
-ರ್ಮಾತ್ಮ ಕುಮಾರೀ ಮಾಲತಿ! (ಜ್ಯೋ)
-ತಿ, ನಿರಂಜನಾದಿತ್ಯೇತಿ!!!
ಹಾರ ಹಾಕಿ ಹವಾಲೊಪ್ಪಿಸಬೇಕೇನು? (ಭಾ)
-ರವದು ನಿನಗಾಗುವುದಿಲ್ಲವೇನು?
ಹಾಕಲೇ ಬೇಕೆಂದು ನಾನು ಅಂದೆನೇನು? (ಹಾ)
-ಕಿದಮೇಲೆ ಹಾಸ್ಯೋಕ್ತಿ ಉಚಿತವೇನು?
ಹಸಿದಾಗ ಹಸಾದ ಕೊಟ್ಟಿಲ್ಲವೇನು?
ವಾಸುದೇವನದ್ರ ಬೆಲೆ ಕೇಳಿದ್ನೇನು? (ಹಾ)
-ಲೊಡೆಯದಿರಲೆಂತಿರಬೇಕು ನೀನು? (ಉ)
-ಪ್ಪಿಲ್ಲದ ಪಾತ್ರೆ ಬಳಸಬೇಡವೇನು?
ಸದ್ಭಾವ ಶೂನ್ಯ ಸೇವೆಯಿಂದಾಗ್ವುದೇನು?
ಬೇಯದನ್ನದಿಂದನಾರೋಗ್ಯವಲ್ಲೇನು? (ಸಾ)
-ಕೇತನಾಥನನನ್ಯ ಭಕ್ತನಾಗ್ನೀನು! (ನೀ)
-ನು ನಿರಂಜನಾದಿತ್ಯಗಾ ಹಾರಾಗಿನ್ನು!!!
ಪರರಿಗುಪಕಾರವಾಗ್ಬೇಕು ಸ್ವಾಮಿ! (ಕ)
-ರ, ಚರಣ ನೆರವಾಗಬೇಕು ಪ್ರೇಮಿ! (ಅ)
-ರಿಗಳಾರ್ಭಟಧಿಕವಾಗಿದೆ ಸ್ವಾಮಿ!
ಗುರು ಕೃಪೆಯಿಂದದ ಗೆಲ್ಬೇಕು ಪ್ರೇಮಿ!
ಪದ್ಮಪಾದಕ್ಕೆಂದೋ ಶರಣಾದೆ ಸ್ವಾಮಿ!
ಕಾಮ್ಯಾರ್ಥಿ ನೀನಾಗದಿರಬೇಕು ಪ್ರೇಮಿ! (ವಿ)
-ರಕ್ತಿ ಬರಲಿಕ್ಕುಪಾಯವೇನು ಸ್ವಾಮಿ? (ಶಿ)
-ವಾನಂದಾಸಕ್ತಿ ಹೆಚ್ಚಾಗಬೇಕು ಪ್ರೇಮಿ! (ಹೇ)
-ಗ್ಬೇಕೋ ಹಾಗಿರಿಸಬೇಕು ನೀವು ಸ್ವಾಮಿ!
ಕುಹಕರ ಸಂಗ ಬಿಡಬೇಕು ಪ್ರೇಮಿ!
ಸ್ವಾಗತ ನಿಮ್ಮಾಜ್ಞೆಗೆ ನಾನಿವೇ ಸ್ವಾಮಿ! (ಸ್ವಾ)
-ಈ, ನಿರಂಜನಾದಿತ್ಯಾನಂದಾತ್ಮ ಪ್ರೇಮಿ!!!
-ಚ್ಚ, ನಿರ್ಮಲ, ನಿಚ್ಚಟಾಚ್ಚುತ!
ರಜತಾದ್ರ್ಯೋಚ್ಚವಾಸಾಚ್ಚುತ!
ದತ್ತ ನಿಶ್ಚಲ ತತ್ವಾಚ್ಚುತ! (ಎ)
-ಲ್ಲೆಲ್ಲಚ್ಚಳಿಯದಚ್ಚಾಚ್ಚುತ! (ನಿ)
-ಚ್ಚಲೋಚ್ಚನೀಚಾತೀತಾಚ್ಚುತ! (ನಿ)
-ರಾಮಯ, ನಿಚ್ಚಿಂತಾತ್ಮಾಚ್ಚುತ! (ಮು)
-ಚ್ಚು, ಮರೆಯಿಲ್ಲದಿಚ್ಛಾಚ್ಚುತ! (ಪಿ)
-ತ ನಿರಂಜನಾದಿತ್ಯಾಚ್ಚುತ!!!
-ಲದಿಂದ ಫಲವಿಲ್ಲದೋಡಾಟ!
ಮಡದಿ, ಮಕ್ಕಳಾಸೆ ಒದ್ದಾಟ!
ನೆನೆಯದಿದನೈಸೆ ಗುದ್ದಾಟ! (ಭೋ)
-ಗೇಚ್ಚೆಯಿಂದ ಉಂಟಾಯ್ತು ಸುತ್ತಾಟ!
ಕೆಟ್ಟ ಬುದ್ಧಿಯಿಂದಾಯ್ತು ಕಿತ್ತಾಟ!
ಹೊಟ್ಟೆಗಿಲ್ಲದಂತಾಗಿ ಪೇಚಾಟ! (ನ)
-ಡೆ, ನುಡಿ ವ್ಯತ್ಯಾಸಾಗಿ ಕಚ್ಚಾಟ!
ದಾರಿ ತಪ್ಯನು ನಿತ್ಯ ನೀಚಾಟ! (ನೆಂ)
-ಟ ನಿರಂಜನಾದಿತ್ಯಾತ್ಮೋಚ್ಚಾಟ!!!
-ನು ಕಣ್ಣು ಮುಚ್ಚಿರುವೆ ನಾರಾಯಣಾ!
ಬರುವವರನೇಕ ನಾರಾಯಣಾ! (ಬ)
-ರೆದುದನೋದ್ವರೆಲ್ಲಾ ನಾರಾಯಣಾ! (ಅ)
-ದರಂತಿರ್ಪವರಾರು ನಾರಾಯಣಾ?
ರೇಗಿ, ಕೂಗುವರೆಲ್ಲಾ ನಾರಾಯಣಾ! (ಅ)
-ನುದಿನ ಆಟ, ನೋಟ ನಾರಾಯಣಾ!
‘ನಾ’ನಾರೆಂದರಿತಿಲ್ಲಾ ನಾರಾಯಣಾ!
ರಾಮನಾಮ ಬೇಕಿಲ್ಲಾ ನಾರಾಯಣಾ! (ಮಾ)
-ಯ, ಮಂತ್ರ, ಯಂತ್ರಕ್ಕಾಸೆ ನಾರಾಯಣಾ! (ಜಾ)
-ಣಾ ನಿರಂಜನಾದಿತ್ಯ ನಾರಾಯಣಾ!!!
ಮಾಡುತಿಹ ಸೇವೆಯಾರಾಮಾ!
ನಿತ್ಯ, ನಿರ್ಮಲ ಭಾವಾರಾಮಾ! (ನಿ)
-ನ್ನಿಂದನ್ಯರಾರೀವರಾರಾಮಾ? (ಎ)
-ದೆ ಕರಗಿಪ ಮಾತಾರಾಮಾ! (ಗೊ)
-ಲ್ಲ ನೀನೆಲ್ಲರ ನಲ್ಲಾರಾಮಾ!
ರಾಘವನಾಗೈತಂದಾ ರಾಮಾ!
ರಾತ್ರಿ, ದಿನಾತ್ಮಾನಂದಾರಾಮಾ! (ಶ್ಯಾ)
-ಮಾ ನಿರಂಜನಾದಿತ್ಯಾರಾಮಾ!!!
ಪರಮಾತ್ಮನಾದವಗೇ!
ಲಕ್ಷ್ಯ ತಾನಾಗಿರ್ಪವಗೇ!
ವಿಶ್ವಬಂಧು ಶ್ರೀನಿಧಿಗೆ! (ನ)
-ಲ್ಲ ಲಕ್ಷ್ಮಿಗಾಗಿರ್ಪವಗೇ!
ನಿಗಮಾಗಮಾತ್ಮನಿಗೇ!
ನತ ಜನೋದ್ಧಾರನಿಗೇ! (ಹಂ)
-ಗೇ ನಿರಂಜನಾದಿತ್ಯಂಗೇ???
-ಕ್ತ ಗುರುವಿನಡಿಯಲೆಲ್ಲಾ!
ರಾತ್ರಿ, ತಾಳ, ಮೇಳದಿಂದೆಲ್ಲಾ!
ಗಿರಿಧರ ಗೋಪಾಲೆಂದೆಲ್ಲಾ!
ಕುಡಿದೆವಮೃತವೆಂದೆಲ್ಲಾ! (ತ)
-ಣಿಯದುತ್ಸಾಹದಿಂದಂದೆಲ್ಲಾ!
ದತ್ತನಾನಂದವಿದೆಂದೆಲ್ಲಾ! (ಮ)
-ರೆತು ದೇಹಭಾವವನೆಲ್ಲಾ! (ಬ)
-ಲ್ಲಾ ನಿರಂಜನಾದಿತ್ಯನೆಲ್ಲಾ!!!
ರಂಗನಾಥಾನಂಗಪಿತನಾ!
ಜರಾ, ಜನ್ಮ ದುಃಖಾತೀತನಾ!
ನರನಾರಾಯಣರೂಪನಾ!
ನಾದ ಬ್ರಹ್ಮಾನಂದಾಧಿಪನಾ!
ಸಂಧ್ಯಾವಂದನಾನಂದಾತ್ಮನಾ!
ಜೀವ, ದೇವ ಭಾವೈಕ್ಯಾತ್ಮನಾ! (ಭ)
-ವರೋಗವೈದ್ಯನೆಂಬೆನು ನಾ! (ನೀ)
-ನಾದ ನಿರಂಜನಾದಿತ್ಯನಾ!!!
ಕಕ್ಷಿಗಾರನಿಗೆ ಬಿಡುಗಡೆಯಾಯ್ತು! (ರ)
ಕ್ಷಿಸಿದ ಗುರುದೇವನೆಂಬರಿವಾಯ್ತು!
ಗಾಡಿ ತನ್ನೂರಿನ ಕಡೆಗೆ ಬಿಟ್ಟಾಯ್ತು! (ವ)
-ರ ವಕೀಲಗೇನು ಸಂಭಾವನೆಯಾಯ್ತು?
ನಿಶ್ಚಲ ಭಕ್ತಿಯ ಫಲದರಿವಾಯ್ತು!
ಗೆದ್ದೆ ನಾನೆಂಬೊಂದು ಸಂತೋಷವುಂಟಾಯ್ತು!
ಬಿಸಿಯೇರಿದ್ದ ತಲೆಗೆ ತಂಪುಂಟಾಯ್ತು! (ನೋ)
-ಡುತ್ತಿದ್ದವರಿಗೆ ಆಶ್ಚರ್ಯವುಂಟಾಯ್ತು!
ಗಹಗಹಿಸಿ ನಕ್ಕ ಮುಖ ಪೆಚ್ಚಾಯ್ತು! (ಒ)
ಡೆಯನ ಲೀಲೆಯನ್ನರಿಯದಂತಾಯ್ತು!
ಯಾದವೇಂದ್ರನ ಭಕ್ತಿ ಹೆಚ್ಚುವಂತಾಯ್ತು! (ಆ)
-ಯ್ತು, ನಿರಂಜನಾದಿತ್ಯನಿಷ್ಟದಂತಾಯ್ತು!!!
-ರಗಿನವರು ಹೋಗಲೆಂದಿದ್ದೆ!
ದಿವ್ಯ ಸಂದೇಶವನ್ನರುಹಿದ್ದೆ! (ತಾ)
-ಯೊಡಗೂಡಿ ಮಾತು ಮುಗಿಸಿದ್ದೆ! (ತ)
-ಪ್ಪಿದ್ದರೆ ಕ್ಷಮಿಸು ನೀನೆಂದಿದ್ದೆ!
ಸಮಯ ಸಾಧಿಸಲು ಕಾದಿದ್ದೆ!
“ಬೇಕು ಕಾಲ” ವೆನೆ ಸುಮ್ಮನಿದ್ದೆ! (ಏ)
-ಕೆಂಬ ಪ್ರಶ್ನೆ ನನಗೇಕೆಂದಿದ್ದೆ!
ದಿವ್ಯ ಚಿತ್ತದಂತಾಗಲೆಂದಿದ್ದೆ! (ಇ)
-ದ್ದೆ ನಿರಂಜನಾದಿತ್ಯಾನೆಂದೆದ್ದೆ!!!
ರಜ ಕಳೆಯದೆ ಕದ ತೆರೆಯದು! (ಲು)
-ಬ್ಧತನ ಹೋಗದೆ ನಿಮ್ಮಡಿ ಸಿಗದು!
ಮುದ್ರೆಯೊತ್ತದೆ ಬಟವಾಡೆಯಾಗದು!
ಗಿರಿಜೆಯಿಲ್ಲದೆ ಗಿರೀಶಗಾಗದು!
ಯಮ, ನಿಯಮವಿಲ್ಲದೆ ಯೋಗಾಗದು!
ದೆವ್ವ ಹೋಗದೆ ಪಾಣಿಗ್ರಹಣಾಗದು!
ಪ್ರಾರ್ಥನೆಯಿಲ್ಲದೆ ಸಾಧನೆ ಸಾಗದು! (ವ್ರ)
-ಣ ಗುಣವಾಗದೆ ತ್ರಾಣ ಬರ್ಲಾರದು!
ಹೋಮ ನಡೆಯದೆ ಆರಾಮವಾಗದು! (ತ್ಯಾ)
-ಗವಿಲ್ಲದೆ ಯಾಗ ನಡೆಯಲಾರದು!
ದುಡುಕು ನಿರಂಜನಾದಿತ್ಯಗಾಗದು!
-ನುಭವವಿಲ್ಲದ ದೀನಬಾಲೆ ನಾನಪ್ಪಾ!
ರೂಪ, ಲಾವಣ್ಯಗಳೇ ಪ್ರಾಮುಖ್ಯವಲ್ಲಪ್ಪಾ!
ಪರಮಾರ್ಥದಭ್ಯಾಸಿಯಾಗಿರ ಬೇಕಪ್ಪಾ!
ನಾನಾ ತರದಾಸೆಗಳಿರಬಾರದಪ್ಪಾ!
ದರಿದ್ರ ತಾನಾದರೂ ಪರವಾಯಿಲ್ಲಪ್ಪಾ!
ವಸ್ತ್ರ, ಭೂಷಣಾದ್ಯಲಂಕಾರದಿಂದೇನಪ್ಪಾ? (ವಾ)
-ರ ಗುರುಭಕ್ತನಾಗಿದ್ದರೊಳ್ಳೆಯದಪ್ಪಾ!
ನೆಲ, ಹೊಲ, ಮನೆಯಾಸೆ ನನಗಿಲ್ಲಪ್ಪಾ!
ನಗುನಗುತೊಡಗೂಡಿದ್ದರೆ ಸಾಕಪ್ಪಾ!
ಗಾನಾನಂದನಾಗಿದ್ದರೆ ನೆಮ್ಮದಿಯಪ್ಪಾ!
ರಮೇಶ, ಉಮೇಶರಂತಿದ್ದರಾನಂದಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯನುರೂಪ ಕಾಣಪ್ಪಾ!!!
-ರಬೇಕವಳ ಸೇವೆಗಾಸಕ್ತಿ! (ತಂ)
-ದೆ, ತಾಯಿಯವಳೆಂಬುದೇ ಭಕ್ತಿ! (ಯೋ)
-ಗಿನಿಯವಳೇ ಅನಂತ ಶಕ್ತಿ! (ಕ)
-ಷ್ಟ ಪರಿಹರಿಸೀವಳು ಮುಕ್ತಿ!
ಚಂಪಕಾದಿ ಹೂಗಳೆಲ್ಲಾ ತೃಪ್ತಿ!
ದಯೆಯಿಂದೆಲ್ಲಾ ಸೌಭಾಗ್ಯ ಪ್ರಾಪ್ತಿ!
“ನ ಗುರೋರಧಿಕಂ” ಅವಳೋಕ್ತಿ!
ಬಹು ಸುಂದರ ಅವಳಾಕೃತಿ! (ಬು)
-ತ್ತಿ ನಿರಂಜನಾದಿತ್ಯಗಾ ಮೂರ್ತಿ!!!
ಮಹಾವೀರ ಮೂರುತ್ಯೆಂಬಾ ಕೂಸು!
ಸ್ವಾಮಿ ಸೇವಾ ದುರುಂಧರಾ ಕೂಸು!
ಮಿಥಿಲೇಶಾತ್ಮಜೆಯಾತ್ಮಾ ಕೂಸು!
ಗೊಂಡಾರಣ್ಯದಗ್ರಗಣ್ಯಾ ಕೂಸು!
ದುರ್ಮದ ಮರ್ದನ ಧೀರಾ ಕೂಸು!
ಗಂಗಾಜಲ ಪಾನಾನಂದಾ ಕೂಸು! (ಬಿ)
-ಡುವಿಲ್ಲದ ಧ್ಯಾನಾಸಕ್ತಾ ಕೂಸು! (ತ್ರಿ)
-ಕೂಟಾಚಲಾಚಲ ಪ್ರೇಮಾ ಕೂಸು! (ಲೇ)
-ಸು, ನಿರಂಜನಾದಿತ್ಯಾತ್ಮಾ ಕೂಸು!!!
-ರಮಾತ್ಮಾನುಗ್ರಹಾಗಲಿಕ್ಕೆ!
ಮಾಯಾ ಬಂಧನ ತಪ್ಪಲಿಕ್ಕೆ! (ಅ)
-ರ್ಥಾಪೇಕ್ಷೆಯಿಂದಡ್ಡಿ ಇದಕ್ಕೆ! (ಲ)
-ಭ್ಯಾಲಭ್ಯವೆಲ್ಲಾ ಐಹಿಕಕ್ಕೆ!
ಸಚ್ಚಿದಾನಂದಮರತ್ವಕ್ಕೆ!
ವೇದ, ವೇದಾಂತೋತ್ಪತ್ತ್ಯದಕ್ಕೆ!
ತತ್ವಾರ್ಥದರಿವಾಗಲಿಕ್ಕೆ! (ಅ)
-ಕ್ಕೆ, ನಿರಂಜನಾದಿತ್ಯಾನಕ್ಕೆ!!!
ರಿವಾಜೆಂಬುದರುದ್ದೇಶವಿದಂತೆ!
ತನು, ಮನದಿಂದಿವ ಹೊರಗಂತೆ!
ವರ ಸದ್ಗುರು ಸ್ವರೂಪವಿದಂತೆ!
ನಿತ್ಯ ನೇಮ, ನಿಷ್ಠೆಗಳಿದಕಂತೆ!
ವರ್ಣಾಶ್ರಮದಾತಂಕವಿಲ್ಲವಂತೆ!
ನಾಮ, ರೂಪಾತೀತ ನಮ್ಮಾತ್ಮನಂತೆ! (ತ್ಯಾ)
-ಗ ಬುದ್ಧಿಯಿದರ ಸಾಧನೆಗಂತೆ!
ಬೇಕಿದಕೆ ಸಜ್ಜನ ಸಂಗವಂತೆ! (ಏ)
-ಕಂಬರೇಶ್ವರಾ ದಿಗಂಬರನಂತೆ! (ಅಂ)
-ತೆ ನಿರಂಜನಾದಿತ್ಯನಿವನಂತೆ!!!
ದೇಹಕ್ಕೇನು ಮಾಡಿದ್ರೂ ಸುಖವಿಲ್ಲ!
ಹರಿಕೃಪೆಯಿಂದಾಗುತಿದೆ ಎಲ್ಲ! (ವಾ)
-ಕ್ಕಾಯಕ್ಕಂಟರಬಾರದು ನಾವೆಲ್ಲ! (ಸಾ)
-ವು, ನೋವಿದಕ್ಕೆಂದೆಂದೂ ತಪ್ಪಿದ್ದಲ್ಲ! (ಉ)
-ದಯಾಸ್ತ ತಪ್ಪಿಸಲಾಗುವುದಿಲ್ಲ! (ತ)
-ಕ್ಕೂಳಿಗ ಮಾಡಿ ಹೋಗಬೇಕಿದೆಲ್ಲ!
ಕರ್ತವ್ಯ ಮಾಡಿಸದವನೇನಿಲ್ಲ! (ನ)
-ಮ್ಮಿಷ್ಟದಂತಾವುದೂ ಆಗುವುದಿಲ್ಲ!
ಇದ್ದರೀ ಸುಜ್ಞಾನ ದುಃಖವೇನಿಲ್ಲ! (ಬ)
-ಲ್ಲ ನಿರಂಜನಾದಿತ್ಯನಿದನೆಲ್ಲ!!!
ನನ್ನಲ್ಲಿರುವುದು ಬರೀ ಎರಡಾಣೆ! (ನಿ)
-ನ್ನ ಮರೆಯದಿರಲ್ಕೆ ನನಗೊಂದಾಣೆ! (ನಿ)
-ಲ್ಲಿಸಲು ನಿನ್ನ ಭಕ್ತಿ ನಿನಗೊಂದಾಣೆ! (ಮಾ)
-ರು ಹೋಗದಿರ್ಲನ್ಯಕ್ಕೆ ನನಗೊಂದಾಣೆ! (ಸಾ)
-ವು, ನೋವ್ತಪ್ಪಿಸಲಿಕ್ಕೆ ನಿನಗೊಂದಾಣೆ!
ದುರ್ಬುದ್ಧ್ಯಾಗದಿರಲ್ಕೆ ನನಗೊಂದಾಣೆ!
ಬಲಾನುಗ್ರಹಿಸಲಿಕ್ಕೆ ನಿನಗೊಂದಾಣೆ!
ರೀತ್ಯುತ್ತಮಾಗಿರಲ್ಕೆ ನನಗೊಂದಾಣೆ!
ಎಲ್ಲೆಲ್ಲೂ ಕಾಪಾಡಲ್ಕೆ ನಿನಗೊಂದಾಣೆ! (ವ)
-ರಗುರು ದಾಸಾಗಲ್ಕೆ ನನಗೊಂದಾಣೆ! (ಓ)
-ಡಾಟಗಳೋಡಿಸಲ್ಕೆ ನಿನಗೊಂದಾಣೆ! (ಹೊ)
-ಣೆ, ನಿರಂಜನಾದಿತ್ಯನೆನಲ್ಕೊಂದಾಣೆ!!!
ಗಡಿ ವಾದ ಬೇಡೆಂಬಾ ರಾಜಾ!
ರಾಜ್ಯಭಾರ ಕೈಕೊಂಬಾ ರಾಜಾ!
ಜಾತಿ, ಮತ ಒಂದೆಂಬಾ ರಾಜಾ!
ಸಾಮ, ದಾನ ಬೇಕೆಂಬಾ ರಾಜಾ!
ರಂಗು ಭೇದವೇಕೆಂಬಾ ರಾಜಾ!
ಗಣಾಧಿಪ ನಾನೆಂಬಾ ರಾಜಾ!
ರಾಗ, ದ್ವೇಷ ಸಾಕೆಂಬಾ ರಾಜಾ! (ರಾ)
-ಜಾ ನಿರಂಜನಾದಿತ್ಯ ರಾಜಾ!!!
ಬಡವರ ಪ್ರಾಣಾಧಾರಂಬಲಿ!
ಲಾಭದಾಯಕ ರೋಗಿಗಂಬಲಿ!
ರಕ್ತದೋಟಕ್ಕನುಕುಲಂಬಲಿ!
ದಾನವಾಗಲನುದಿನಂಬಲಿ!
ಗಾಯ ಮಾಯಲಿಕ್ಕೆ ಬೇಕಂಬಲಿ!
ಹಾಯಾಗಿರುವುದೂಟಕ್ಕಂಬಲಿ!
ರಂಗಗಾನಂದ ಮೊಸರಂಲಲಿ!
ಬಲವೆಲ್ಲರಿಗೀವುದಂಬಲಿ! (ಮಾ)
-ಲಿಕ ನಿರಂಜನಾದಿತ್ಯಾಂಬಲಿ!!!
-ರಳು ಕುಳಿಯನ್ನ ಚರಮ ಸುಖ! (ಬಾ)
-ಳ ನೇತ್ರನ ಗಾನ ಪರಮ ಸುಖ!
ಜೀನನ ವಾಗ್ದಾನ ಚರಮ ಸುಖ!
ವರ ಗುರು ಧ್ಯಾನ ಪರಮ ಸುಖ!
ನಶ್ವರಾಭಿಮಾನ ಚರಮ ಸುಖ!
ಪಯೋನಿಧಿ ಪಾನ ಪರಮ ಸುಖ!
ರಕ್ತಾಂಬುಧಿ ಸ್ನಾನ ಚರಮ ಸುಖ! (ಅ)
-ಮರತ್ವ ಸಾಧನ ಪರಮ ಸುಖ! (ಆ)
-ಸುರೀ ಸಂವಿಧಾನ ಚರಮ ಸುಖ! (ಸ)
-ಖ ನಿರಂಜನಾದಿತ್ಯ ಪರಮ ಸುಖ!!!
-ಸಿದವರಿಗುತ್ತಮಾನ್ನ ದಾನ!
ಬೇಸರವಿಲ್ಲದಾಗಲೀ ದಾನ! (ನಾ)
-ಳೆಯೆನ್ನದೆ ಆಗಲೀಗಾ ದಾನ!
ಹುಚ್ಚಾಟ, ಕಚ್ಚಾಟಕ್ಕಲ್ಲಾ ದಾನ! (ಬಾ)
-ಳಿನ ಜೀವಾಳವಿದೊಂದೇ ದಾನ!
ಯಜ್ಞಪುರುಷಗೆ ತೃಪ್ತೀ ದಾನ! (ಉ)
-ನ್ನತಾತ್ಮ ಸ್ಥಿತಿಗೆ ಬೇಕೀ ದಾನ!
ದಾರಿ ಗುರು ಸನ್ನಿಧಿಗೀ ದಾನ! (ದಾ)
-ನ ನಿರಂಜನಾದಿತ್ಯಾಮೃತಾನ್ನ!!!
-ಕ್ಕಪಕ್ಕವ ಲೆಕ್ಕಿಸದ ಕುಣಿತ!
ಮನಶ್ಯುದ್ಧಿಯ ಭಕ್ತಿಯ ಕುಣಿತ! (ಚೊ)
-ಕ್ಕಮಾತು, ತಕ್ಕ ಹಾಡಿನ ಕುಣಿತ! (ತ)
-ಳಮಳವಿಲ್ಲದಮಲ ಕುಣಿತ! (ಅ)
-ಕ್ಕತಂಗಿಯರು ನಾವೆಂಬ ಕುಣಿತ! (ಬೆ)
-ರೆತೊಮ್ಮತದಿ ಕುಣಿದ ಕುಣಿತ! (ನ)
-ಯ ವಿನಯ ಭಾವಮಯ ಕುಣಿತ!
ಕುತಂತ್ರಲ್ಲದ ಸ್ವತಂತ್ರ ಕುಣಿತ! (ಕು)
-ಣಿ ಕುಣಿದಾವೇಶ ತಂದ ಕುಣಿತ! (ಪಿ)
-ತ ನಿರಂಜನಾದಿತ್ಯಗರ್ಪಿತ!!!
-ನ ಬಂದಂತಾಡದಿರ್ಪವನಾಗು! (ಹೀ)
-ನಾಚಾರಾಚರಿಸದವನಾಗು!
ಗುಡಿಯೊಡೆಯನ ದಾಸನಾಗು!
ಜಿಹ್ವಾ ಚಾಪಲ್ಯ ಬಿಟ್ಟವನಾಗು! (ಜಾ)
-ತೇಂದ್ರಿಯದಧಿನಾಥ ನೀನಾಗು! (ನಿ)
-ದ್ರಿಸಿ ಕಾಲ ಕೊಲ್ಲದವನಾಗು! (ಭ)
-ಯ, ಭಕ್ತಿ ಭಾವಸಂಪನ್ನನಾಗು!
ನಾಮಜಪ ಮಾಡುವವನಾಗು! (ಮ)
-ಗು ಶ್ರೀ ನಿರಂಜನಾದಿತ್ಯಗಾಗು!!!
-ರುವುದಾಮೇಲೆ ಬಿಟ್ಟನುತಾಪ! (ಅ)
-ವುದರಿಂದಾಗುವುದೀ ಸಂತಾಪ?
ದೇಶ ವಿದೇಶ ಸುತ್ತ್ಯಾಯ್ತು ತಾಪ!
ಬಯಲಾಯಿತಿಲ್ಲಾ ಪರಿತಾಪ!
ಹತ್ತಿಕೊಂಡಿತಾ ಹೃದಯ ದೀಪ! (ಬೆ)
-ಳಗುತಿಹನಾ ಶ್ರೀರಂಗಾಧಿಪ!
ಪಲಾಯನ ಮಾಡುತಿದೆ ಪಾಪ!
ರೂಪ ನೋಡಿ ಓಡಿತೆಲ್ಲಾ ಕೋಪ!
ಪತಿ ನಿರಂಜನಾದಿತ್ಯಾ ದೀಪ!!!
-ನ್ಯೋಪದೇಶ ಕೇಳುತ್ತಿರಬೇಕು! (ಅ)
-ನ್ಯ ದೂಷಣೆ ಮಾಡದಿರಬೇಕು! (ಅ)
-ನುದಿನಾಭ್ಯಾಸಿಯಾಗಿರಬೇಕು!
ಕಂಡಲ್ಲೆಲ್ಲಾ ಓಡದಿರಬೇಕು!
ಪರಮಾತ್ಮ ಭಕ್ತಿ ಇರಬೇಕು!
ವಿಚಾರಶೀಲನಾಗಿರಬೇಕು! (ವ)
-ರ ಗುರು ಸೇವಾಳಾಗಿರಬೇಕು!
ಬೇಗನೇ ತನ್ನೂರು ಸೇರಬೇಕು! (ಬೇ)
-ಕು ನಿರಂಜನಾದಿತ್ಯ ಪರಾಕು!!!
-ರುವನಾಪ್ತ ಭಕ್ತಗಾ ಕೃಷ್ಣ!
ವಾತಾವರಣಾನಂದಾ ಕೃಷ್ಣ! (ವಾ)
-ಯೂರ್ಧ್ವಗತಿಯಲ್ಲಿರ್ಪಾ ಕೃಷ್ಣ! (ಊ)
-ರದೀ ದೇಹವಲ್ಲಿರ್ಪಾ ಕೃಷ್ಣ! (ಅ)
-ಲ್ಲಿಲ್ಲೆಲ್ಲೆಲ್ಲ ಕಾದಿರ್ಪಾ ಕೃಷ್ಣ!
ಶ್ರೀಗುರು ತಾನಾಗಿರ್ಪಾ ಕೃಷ್ಣ!
ಕೃಪಾಮೂರ್ತಿಯಾಗಿರ್ಪಾ ಕೃಷ್ಣ! (ಕೃ)
-ಷ್ಣ ನಿರಂಜನಾದಿತ್ಯಾ ಕೃಷ್ಣ!!!
ಹರಿ, ಹರ, ಬ್ರಹ್ಮರಿಗೀ ಗುಡಿ!
ವಿಶಾಲಾಕ್ಷಿ, ಕಾಮಾಕ್ಷಿಗೀ ಗುಡಿ!
ದೆವ್ವಾದಿಗಳಿಗೂ ಇದೇ ಗುಡಿ! (ಎ)
-ಲ್ಲಾ ತೀರ್ಥಗಳ ಸಂಗಮಾ ಗುಡಿ!
ದೇಶ, ವಿದೇಶದಲ್ಲೆಲ್ಲಾ ಗುಡಿ! (ಅ)
-ವರವರಿಷ್ಟ ಸೇವೆಗೀ ಗುಡಿ! (ವ)
-ರಗುರು ಕೃಪೆಯೆಲ್ಲರ್ಗಿ ಗುಡಿ!
ಗುಟ್ಟದರಿತಗಿನ್ನಾವ ಗುಡಿ? (ನೋ)
-ಡಿಲ್ಲಿ ನಿರಂಜನಾದಿತ್ಯ ಗುಡಿ!!!
ಊದಿನ ಕಡ್ಡಿ ತಂದಿಟ್ಟರಾಯ್ತೇನು? (ಅ)
-ದಿಟ್ಟು ಕಡ್ಡಿ ಪೊಟ್ಣವಿಡಬೇಡ್ವೇನು? (ದಾ)
-ನವಿಲ್ಲದ ಧನವೆಷ್ಟಿದ್ದರೇನು?
ಕರ್ಮಕ್ಕೆ ಧರ್ಮವಿರದಾಗ್ವುದೇನು? (ಬ)
-ಡ್ಡಿ ಸಿಕ್ಕದ ಠೇವಣಾತಿಯಿಂದೇನು?
ತಂದೆಗೆದುರಾಡ್ವ ಮಗನಿಂದೇನು?
ದಿಕ್ಕಿಲ್ಲದಗೆ ಸಿಟ್ಟಿರ್ಬಹುದೇನು? (ಪ)
-ಟ್ಟ ಹೋದ ಮೇಲಟ್ಟಹಾಸದಿಂದೇನು?
ರಾಗ, ದ್ವೇಷಾಸಕ್ತ ವಿರಕ್ತನೇನು? (ಆ)
-ಯ್ತೇನು ಸಾರ್ಥಕವೀ ಜನ್ಮದಿಂದೇನು? (ನಾ)
-ನು, ನಿರಂಜನಾದಿತ್ಯನಲ್ಲವೇನು???
ನನ್ನ ಕೆಲಸ ನಾ ಮಾಡ್ಬೇಕೆಂಬ ನಾಯಣ್ಣ! (ನಿ)
-ನ್ನ ಕೃಪೆ ನನ್ನ ಮೇಲಿರಲೆಂಬ ನಾಯಣ್ಣ!
ಕೆಟ್ಟವನೆಂದೆನ್ನಟ್ಟದಿರೆಂಬ ನಾಯಣ್ಣ!
ಲಜ್ಜೆ ನನಗೇನು ನಿನ್ನಲ್ಲೆಂಬ ನಾಯಣ್ಣ!
ಸದಾ ನಿನ್ನಡಿಯಲ್ಲಿ ನಾನೆಂಬ ನಾಯಣ್ಣ!
ನಾಯಿ ರೂಪದಲ್ಲಿಹೆ ನಾನೆಂಬ ನಾಯಣ್ಣ!
ಮಾತುಕತೆ ಬಾರದೆನಗೆಂಬ ನಾಯಣ್ಣ! (ಓ)
-ಡ್ಬೇಕು ನಿನ್ನಾಜ್ಞೆಯಾದಾಗಾನೆಂಬ ನಾಯಣ್ಣ!
ಕೆಂಗಣ್ಣನ ದಾಸದಾಸಾನೆಂಬ ನಾಯಣ್ಣ!
ಬನಶಂಕರಿ ನನ್ನಮ್ಮನೆಂಬ ನಾಯಣ್ಣ!
ನಾನು, ನೀನೆಂಬವರಲ್ಲಾನೆಂಬ ನಾಯಣ್ಣ!
ಯಮಪಿತನೇ ನನ್ನಯ್ಯನೆಂಬ ನಾಯಣ್ಣ! (ಅ)
-ಣ್ಣ ನಿರಂಜನಾದಿತ್ಯಾನಂದೆಂಬ ನಾಯಣ್ಣ!!!
-ಕಾರಾತ್ಮನ ನೋಡು ಕತ್ತೆತ್ತೀ! (ದೇ)
-ಶ ದೇಶಾಧೀಶಾತೆಂಬ ಖ್ಯಾತೀ!
ದಯಾಂಬುಧಿಯೆಂಬ ಪ್ರಖ್ಯಾತೀ! (ಸೊ)
-ಲ್ಲೇನಿಲ್ಲದೆ ನೋಡೆಂಬ ಪ್ರೀತೀ! (ಅ)
-ನುಪಮಾತ್ಮ ನಾನೆಂಬ ಜ್ಯೋತೀ!
ನೋವಿಗಂಜಬೇಡಂಬ ರೀತೀ! (ಕಂ)
-ಡು ಧನ್ಯ ತಾನಾದ ಮಾರುತೀ! (ಇ)
-ತ್ತೀ, ನಿರಂಜನಾದಿತ್ಯಕೃತೀ!!!
-ವಾವೇಶ ನಿನಗಿದೆಯೇನು? (ನೀ)
-ವನುಗ್ರಹಿಸಬೇಕದನ್ನು!
ಕಾಮ್ಯಾರ್ಥಿ ನೀನಾಗಿಹೆಯೇನು?
ಶಕ್ತಿ ಬೇಕೆಂದರೆ ತಪ್ಪೇನು?
ವಿರಾಗಿಯಾಗಬೇಕು ನೀನು! (ತಂ)
-ದೆ ನಿನಗರುಹಲಾನೇನು? (ತಾ)
-ಯೇ ಕಾಯೆನುತೆರಗು ನೀನು! (ನಾ)
-ನು ನಿರಂಜನಾದಿತ್ಯಮ್ಮಾನು!!!
ಶ್ರೀಕಂಠಾ! ನೀಲಕಂಠಾ!! ಬಾ ನೆಂಟಾ!!!
ಕಂಠಾಭರಣಗಳ ತೊಟ್ಟು ಬಾ ನೆಂಟಾ!
ಠಾವಾಗಿಹ ಕೈಲಾಸ ಬಿಟ್ಟು ಬಾ ನೆಂಟಾ!
ನೀನಿಲ್ಲದಿನ್ಯಾರೂ ದಿಕ್ಕಿಲ್ಲ ಬಾ ನೆಂಟಾ!
ಲಯಗೊಳಿಸೆನ್ನ ನಿನ್ನಲ್ಲಿ ಬಾ ನೆಂಟಾ!
ಕಂಪಿಸುತಿಹೆ ಭವದಲ್ಲಿ ಬಾ ನೆಂಟಾ!
ಠಾವೆನಗೆ ನಿನ್ನ ಶ್ರೀಪಾದ ಬಾ ನೆಂಟಾ!
ಬಾಲೇಂದುಧರ ಗಂಗಾಧರ ಬಾ ನೆಂಟಾ!
ನೆಂಟ, ಭಂಟ, ಶ್ರೀಶಿಥಿಕಂಠ ಬಾ ನೆಂಟಾ! (ಊ)
-ಟಾ ನಿರಂಜನಾದಿತ್ಯಾನಂದ ಬಾ ನೆಂಟಾ!!!
ನೇಮದಂತೇಕಿಂದಿಲ್ಲಾನೆಂದರಿಯದಿಹೆ! (ತ)
-ನು ಸ್ಥಿತಿಯೆಂತಿಹುದೆಂದಾನರಿಯದಿಹೆ!
ಮಾಡಿಸಿದಂತೆ ಮಾಡೋಣವೆಂದಿರುತಿಹೆ! (ನೋ)
-ಡುವುದೇನಾಡುವುದೇನೆಂದಾನಿರುತಿಹೆ!
ತಿಳಿದದ್ದಾಚರಿಸುತ್ತಾನಂದದಿಂದಿಹೆ!
ಹೆಚ್ಚುನಾನೆಂಬಹಂಕಾರವಿರದಂತಿಹೆ!
ನೆಂಟ, ಭಂಟ, ಯಾದವನಾಗಿಹನೆಂದಿಹೆ!
ದಯಾಮಯ ದತ್ತನೆಂದಾನಂದವಾಗಿಹೆ! (ಪ)
-ರಿಪರಿಯೂಟವನುಂಡುನ್ಮತ್ತನಾಗಿಹೆ!
ಯಮನಯ್ಯ ನಾನೆಂಬಾನಂದದಿಂದಾನಿಹೆ!
ದಿಟವಿದೆಲ್ಲರಿಗರಿವಾಗ್ಬೇಕೆಂದಿಹೆ! (ಇ)
-ಹೆ ನಿರಂಜನಾದಿತ್ಯಾತ್ಮ ಶಿವಾನೆಂದಿಹೆ!!!
ರಿಪು ಸಂಘ ಭಂಗ ರಂಗ! (ಸ್ವ)
-ಯಂಭು ಅಂಗನಂಗ ರಂಗ! (ಲಿಂ)
-ಗದಂಗ ಸಂಗಮ ರಂಗ!
ರಂಗನಂಗ ಪ್ರೇಮ ರಂಗ!
ಗುರು ದತ್ತೋತ್ಪತ್ತೀ ರಂಗ! (ಸಾ)
-ರಂಗಾಂಗ ಛಾಯಾಂತರಂಗ! (ರಂ)
-ಗ, ನಿರಂಜನಾದಿತ್ಯಾಂಗ!!!
-ಗಡಿಗಳಾಗಿದ್ದಳಾ ತುಳಸಿ! (ಮ)
-ಲಿನ ವಾಸನಾ ಶೂನ್ಯಾ ತುಳಸಿ!
ಹೋಗಿ ಸೇರ್ದಳಾಣ್ಮನಾ ತುಳಸಿ!
ದತ್ತಾತ್ರೇಯ ಭಕ್ತಳಾ ತುಳಸಿ! (ಸೆ)
-ಳೆದಳೆಲ್ಲರ ಮನಾ ತುಳಸಿ! (ಅ)
-ಮ್ಮನಾಗಿದ್ದಳೆಲ್ಲರ್ಗಾ ತುಳಸಿ! (ಮಾ)
-ತು ಬಿಟ್ಟರುತಿದ್ದಳಾ ತುಳಸಿ! (ತ)
-ಳಮಳ ರಹಿತಳಾ ತುಳಸಿ! (ದಾ)
-ಸಿ ನಿರಂಜನಾದಿತ್ಯ ತುಳಸಿ!!!
-ರವಿದ ಕಳಕ್ಕೊಳ್ಳಬೇಡ! (ಓ)
-ಡಾಡಿ ದುರ್ಬಲವಾಗಬೇಡ!
ಗಿರೀಶನ ಮರೆಯಬೇಡ!
ಬಸವನ ತಾತ್ಸಾರಬೇಡ! (ಜ)
-ಯವಹುದು ಸಂದೇಹಬೇಡ!
ಸತಿ, ಪತಿ ಬೇರೆನಬೇಡ!
ಬೇಕೀ ಐಕ್ಯ! ಅಸಡ್ಡೆ ಬೇಡ! (ಗಂ)
-ಡ, ನಿರಂಜನಾದಿತ್ಯನಾಡ!!!
-ಡುವವರು ಮಾಡುವುದಿಲ್ಲಾ! (ಅ)
-ವರಿವರಂದು ಫಲವಿಲ್ಲಾ!
ವರ ಗುರುಚಿತ್ತದಂತೆಲ್ಲಾ! (ಹಾ)
-ರಾಡುವರಿದರಿಯದೆಲ್ಲಾ! (ಗು)
-ಡುಗುವರು ಕ್ರೋಧದಿಂದೆಲ್ಲಾ (ನೋ)
-ವು ಹೋದೀತೇನಿದರಿಂದೆಲ್ಲಾ?
ದಿವ್ಯ ಜ್ಞಾನಿಗಳಾಗಿರೆಲ್ಲಾ! (ಬ)
-ಲ್ಲಾ ನಿರಂಜನಾದಿತ್ಯನೆಲ್ಲಾ!!!
-ಲಕಿದ ಮನ ಮೌನವಾಗ್ವುದೇನು?
ಹೆಸರಿಟ್ಟಡ್ಡಹೆಸ್ರು ಕೂಗ್ವುದೇನು?
ಕೇರದಕ್ಕಿಯನ್ನ ಮಾಡುವುದೇನು? (ಗಾ)
-ಳಿ ಹೊಡೆತಕ್ಕೆದೆಯೊಡ್ದುವುದೇನು?
ಛತ್ರಿ ಮಳೆಯಲ್ಲಿ ಮುಚ್ಚುವುದೇನು? (ಬಾ)
-ಲಕರ ಬಲಾತ್ಕರುಸುವುದೇನು?
ಫಲ, ವೃಕ್ಷ ಕತ್ತರಿಸುವುದೇನು?
ಲಜ್ಜೆ ಲಲನೆ ಬಿಟ್ಟಿರುವುದೇನು?
ವೇದಾಭ್ಯಾಸ ವಿಪ್ರ ಬಿಡುವುದೇನು? (ಏ)
-ನು? ನಿರಂಜನಾದಿತ್ಯನೃತನೇನು???
-ಟಕೂಟಕ್ಕನಿವಾರ್ಯ ಕಿಚ್ಚು!
ಕಲ್ಪನಾತೀತವೆನ್ನಾ ಹುಚ್ಚು!
ದಹಿಸುವುದೆಲ್ಲವಾ ಕಿಚ್ಚು!
ನಗಿಸುವುದೆನ್ನನಾ ಹುಚ್ಚು! (ಮು)
-ನ್ನ ಮಾಡಿದ ಕರ್ಮಕ್ಕಾ ಕಿಚ್ಚು!
ಈರೇಳು ಲೋಕದಾಟಾ ಹುಚ್ಚು!
ಹುಟ್ಟು, ಸಾವುಗಳೂಟಾ ಕಿಚ್ಚು! (ಕಿ)
-ಚ್ಚು, ನಿರಂಜನಾದಿತ್ಯಗಚ್ಚು!!!
ಬಿಸಿ ಹೆಚ್ಚಿದಾಗ ಬೇಕೊಂದು ತೈಲಾ ತಲೆಗೆ! (ಹ)
-ಸಿಯಾಮಲಾದಿಯಿಂದಾದಚ್ಚ ತೈಲಾ ತಲೆಗೆ!
ಹೆಚ್ಚು ಬಿಸಿ ಹೆಚ್ಚಿಸುವುದು ಹುಚ್ಚಾ ತಲೆಗೆ! (ಕಿ)
-ಚ್ಚಿಗಿಂತಲೂ ಹೆಚ್ಚು ಅಪಾಯಾ ಹುಚ್ಚಾ ತಲೆಗೆ!
ದಾಶರಥಿಯ ನಾಮಾಮಲ ತೈಲಾ ತಲೆಗೆ! (ಹ)
-ಗಲಿರುಳೆನ್ನದೆ ತಿಕ್ಕಬೇಕಿದಾ ತಲೆಗೆ!
ಬೇರಿನ್ನೇನಿದಕ್ಕಿಂತುತ್ತಮವಿಲ್ಲಾ ತಲೆಗೆ!
ಕೊಂಚವೂ ತೊಂದರೆ ಮಾಡದಿದು ಆ ತಲೆಗೆ!
ದುರ್ಬುದ್ಧಿ ಮತ್ತೆಂದೆಂದಿಗೂ ಬಾರದಾ ತಲೆಗೆ!
ತೈಲಾಭ್ಯಂಜನದು ಶಾಸ್ತ್ರ ಸಮ್ಮತಾ ತಲೆಗೆ! (ಕೈ)
-ಲಾಸಪತಿಯುಪಯೋಗಿಪನಿದಾ ತಲೆಗೆ!
ತನ್ನ ಸತಿಗೂ ಬೇಕಿದನುದಿತಾ ತಲೆಗೆ! (ಕ)
-ಲೆತೊಂದಾಗಿರಲು ಸದಾ ಬೇಕಿದಾ ತಲೆಗೆ! (ಬೇ)
-ಗೆ ಶಾಂತಿ ನಿರಂಜನಾದಿತ್ಯಾನಂದಾ ತಲೆಗೆ!!!
ರಂಗನೊಡನಾಟ ಬೇಕೆನಗೆ! (ಅಂ)
-ಗಪೂಜೆ ಮಾಡ್ಬೇಕು ನಾನವಗೆ!
ಬರಬಾರದೇಕವನೆಡೆಗೆ? (ವ)
-ರ ಸೇವೆ ಮಾಡು ನೀನಲ್ಲವಗೆ!
ಬೇಕು, ಬೇಡೆನ್ನದಾ ರಂಗನಿಗೆ!
ಕುಲ, ಗೋತ್ರ ಕೇಳದಾ ಸ್ವಾಮಿಗೆ!
ಮನಶ್ಯುದ್ಧಿಯಾಗ್ಬೇಕು ನಿನಗೆ! (ಮ)
-ನೆ ನಿನ್ನ ಮನವಾಗಲವಗೆ! (ನೆ)
-ಗೆ ನಿರಂಜನಾದಿತ್ಯನಡಿಗೆ!!!
ಅರಿ ವಾಯುಗಳಿಗೆ ಶ್ಯಾಮನ ಹರಿ ವಾಯು! (ಜೀ)
-ರಿಕಾದಿ ರಸಾಯನ ನಾಮದಾ ಹರಿ ವಾಯು!
ವಾತ, ಪಿತ್ಥ ಕತ್ತರಿಪಾ ದಿವ್ಯ ಹರಿ ವಾಯು!
ಯುಕ್ತೌಷಧ ಜಠರ ವ್ಯಾಧಿಗೀ ಹರಿ ವಾಯು!
ಗಗನಾದ್ಯೆಲ್ಲಾ ಲೋಕ ವ್ಯಾಪಕಾ ಹರಿ ವಾಯು! (ಆ)
-ಳಿನಿಂದರಸರ ಪರ್ಯಂತವಾ ಹರಿ ವಾಯು! (ಹ)
-ಗೆತನದ ರೋಗ ವಿನಾಶಕ್ಕೀ ಹರಿ ವಾಯು!
ಶ್ಯಾಮಸುಂದರ ಮನಮೋಹನಾ ಹರಿ ವಾಯು!
ಮಲ ನಿರ್ಮೂಲನಕ್ಕುಪಕಾರೀ ಹರಿ ವಾಯು!
ನರ, ನಾರಿಯರಿಗೆಲ್ಲಾಧಾರೀ ಹರಿ ವಾಯು!
ಹರಿ, ಹರ, ಬ್ರಹ್ಮಾದಿಗಳೆಲ್ಲಾ ಹರಿ ವಾಯು! (ಗಿ)
-ರಿ, ನದಿ, ಕರಿ, ತುರಗವೆಲ್ಲಾ ಹರಿ ವಾಯು! (ಭ)
-ವಾಬ್ಧಿ ತಾರಕಾ, ಸುಖಕಾರಕಾ ಹರಿ ವಾಯು! (ಆ)
-ಯುರ್ವೇದಾತ್ಮಾ ನಿರಂಜನಾದಿತ್ಯ ಹರಿ ವಾಯು!!!
ಅಂದಿನ ಸುಲ್ತಾನನ ಪಟ್ಟಣವೆಂತಿತ್ತು? (ಇಂ)
-ದಿನ ಅದರ ರೂಪ ಮಾರ್ಪಾಟವೆಂತಾಯ್ತು?
ನನ್ನದೆಂಬಹಂಕಾರವೇನುಳಿದಂತಾಯ್ತು?
ಸುತ್ತಲಿದ್ದೆತ್ತರದ ಕೋಟೆ ಬಿದ್ದು ಹೋಯ್ತು! (ಸು)
-ಲ್ತಾನನರಮನೆ ಹೆಸರಿಲ್ಲದಂತಾಯ್ತು!
ನಗರದಂದಿನ ಶೋಭೆ ಗಬ್ಬೆದ್ದು ಹೋಯ್ತು!
ನಗಾರಿ, ನೌಬತ್ತಿನ ಸದ್ದಿಲ್ಲದಂತಾಯ್ತು!
ಪರಿಪರಿಯಾಟ, ನೋಟಗಳಿಲ್ಲದಾಯ್ತು! (ಪ)
-ಟ್ಟದಾನೆ, ಕುದುರೆಯೋಡಾಟ ನಿಂತತಾಯ್ತು! (ರ)
-ಣದುಂದುಭಿಯಾರ್ಭಟಕ್ಕೆಡೆಯಿಲ್ಲದಾಯ್ತು! (ಹಾ)
-ವೆಂದದ್ದೆಲ್ಲಾ ಹಗ್ಗವಾಗಿ ಚೂರಾದಂತಾಯ್ತು!
ತಿರುಗುವಾ ಕಾಲಚಕ್ರಕ್ಕೆಲ್ಲಾಹುತ್ಯಾಯ್ತು! (ಸೊ)
-ತ್ತು ನಿರಂಜನಾದಿತ್ಯಾತ್ಮನುಳಿದಂತಾಯ್ತು!!!
ನಿನಗೂಟ ಕೊಟ್ಟಾಗ ನಾನೇಕೆ ನೀರು ತಂದಿಟ್ಟೆ?
ನನಗೆ ಬೇಕಾದದ್ದು ನಿನಗೂ ಬೇಕೆಂದದಿಟ್ಟೆ!
ಗೂಢವಿದರಿತು ಸೇವೆ ಸಾಗಬೇಕೆಂದದಿಟ್ಟೆ! (ಆ)
-ಟ, ನೋಟವೆಲ್ಲಾ ಪಾಠವಾಗಬೇಕೆಂದದನಿಟ್ಟೆ!
ಕೊರತೆ ಗೌರವಕ್ಕದೆಂಬುದು ಹೋಗಲೆಂದಿಟ್ಟೆ! (ಕೆ)
ಟ್ಟಾಚಾರ, ವಿಚಾರವಿರಬಾರದೆಂದು ತಂದಿಟ್ಟೆ!
ಗಮನಾರ್ಹವಾಗಬೇಕು ನಡೆ, ನುಡಿಯೆಂದಿಟ್ಟೆ!
ನಾರಾಯಣ ಸ್ವರೂಪ ಸಕಲವೆಂದು ತಂದಿಟ್ಟೆ!
ನೇಮ, ನಿಷ್ಠೆಗಳಲ್ಲಿದೂ ಸೇರಿದೆಂದು ತಂದಿಟ್ಟೆ!
ಕೆಟ್ಟ ದಾರಿ ಬಿಟ್ಟೆಲ್ಲರೂ ಶಿಷಾರಾಗಲೆಂದಿಟ್ಟೆ!
ನೀಚೋಚ್ಛ ಭಾವವಿಲ್ಲದಾತ್ಮೀಯರಾಗಲೆಂದಿಟ್ಟೆ!
ರುದ್ರಾಭಿಷೇಕಕ್ಕಿದೆಂಬ ಭಕ್ತಿಯಿಂದ ತಂದಿಟ್ಟೆ!
ತಂದೆ, ತಾಯಿ ಸೇವೆಯೆಂಬಾನಂದದಿಂದ ತಂದಿಟ್ಟೆ!
ದಿವ್ಯ ಜೀವನಾದರ್ಶವಿದೆಂದರಿತು ತಂದಿಟ್ಟೆ! (ಬ)
-ಟ್ಟೆ, ನಿರಂಜನಾದಿತ್ಯಾತ್ಮನದಿದೆಂದು ತಂದಿಟ್ಟೆ!!!
-ರೆಲ್ಲಗೋ ಮನಸ್ಸು ಹೋದುದಕೆ!
ದರ್ಶನಾಸಕ್ತಿ ಕುಂದಿದುದಕೆ! (ಬೇ)
-ರೂರ ವ್ಯಾಪಾರ ಹೆಚ್ಚಾದುದಕೆ!
ಕೇಶವ ಧ್ಯಾನ ನಿಂತದುದಕೆ! (ಗಾ)
-ಳಿ ಗೋಪುರಕ್ಕಾಸೆಯಾದುದಕೆ!
ಸಜ್ಜನ ಸಂಗ ಸಾಕಾದುದಕೆ!
ದಕ್ಷತೆ ಕಾರ್ಯಕ್ಕಿಲ್ಲಾದುದಕೆ!
ದೇಹ ಮೋಹಧಿಕವಾದುದಕೆ! (ಏ)
-ಕೆ? ನಿರಂಜನಾದಿತ್ಯಗನ್ಬೇಕೆ???
ಆಸೆ ಬಿಟ್ಟವ ದ್ವೇಷ ಬಿಟ್ಟಾನು! (ಪೈ)
-ಸೆ ಬಚ್ಚಿಟ್ಟವ ಮತಿ ಕೆಟ್ಟಾನು! (ನಂ)
-ಬಿಗೆ ಇಟ್ಟವ ಸುಖ ಪಟ್ಟಾನು! (ಕೊ)
-ಟ್ಟಣವಿಟ್ಟವ ಅಕ್ಕಿ ಕೊಟ್ಟಾನು!
ವಸ್ತ್ರ ಕೊಟ್ಟವ ರೇಶ್ಮೆ ಉಟ್ಟಾನು! (ಉ)
-ದ್ವೇಗ ಸುಟ್ಟವ ಭೋಗ ಬಿಟ್ಟಾನು! (ವಿ)
-ಷವನ್ನಿಟ್ಟವ ಕೆಟ್ಟು ಹುಟ್ಯಾನು!
ಚಿತ್ತಗೊಟ್ಟುವ ಬುತ್ತಿ ಕಟ್ಯಾನು! (ಕೆ)
-ಟ್ಟಾಳ್ಗಳಿಟ್ಟವ ಕಷ್ಟ ಪಟ್ಟಾನು! (ಮ)
-ನು ನಿರಂಜನಾದಿತ್ಯೋತ್ಕೃಷ್ಟಾನು!!!
ಬಂತು ದೇವರ ನಾಮಕ್ಕಾಹ್ವಾನೆ! (ನಿಂ)
-ತು ಹೋಯಿತನಾರೋಗ್ಯ ಸೂಚನೆ!
ದೇಹಕ್ಕಾಯ್ತು ವಿಮಾನ ಚಲನೆ!
ವರವಿತ್ತಳು ಬಾಲಾ ಲಲನೆ! (ನ)
-ರ ಗಾಯಕಗಾಯ್ತು ಸಂಭಾವನೆ!
ನಾಮ ಸಂಗೀತ ಕಲೋಪಾಸನೆ!
ಮಹಿಮೆಯಿಂದ ಪರಿವರ್ತನೆ! (ವಾ)
-ಕ್ಕಾಯ, ಮನಕ್ಕೆಲ್ಲಾ ವಿಮೋಚನೆ! (ಆ)
-ಹ್ವಾನೆ, ಗುರುವಿನಾಜ್ಞಾ ಪಾಲನೆ! (ಎ)
-ನೆ, ನಿರಂಜನಾದಿತ್ಯನ ನೆನೆ!!!
ಜಯ ತಾರಾನಾಥನ್ನೋ ತ್ಯಾಗರಾಜ! (ಜ)
-ಯ ಗುರುಪಾದಕ್ಕನ್ನೋ ತ್ಯಾಗರಾಜ! (ಮ)
-ಧ್ವ, ಶಂಕರರೊಂದನ್ನೋ ತ್ಯಾಗರಾಜ!
ಜಗನ್ನಾಥನೊಬ್ಬನ್ನೋ ತ್ಯಾಗರಾಜ! (ನಾ)
-ವೆ ಶ್ರೀರಾಮನಾಮನ್ನೋ ತ್ಯಾಗರಾಜ! (ಹ)
-ತ್ತೋ! ರಜತಾದ್ರಿಯನ್ನೋ ತ್ಯಾಗರಾಜ!
ತ್ಯಾಗೀಶನ ನೋಡನ್ನೋ ತ್ಯಾಗರಾಜ!
ಗತಿದಾತನಾನ್ನೋ ತ್ಯಾಗರಾಜ!
ರಾಇ, ದಿನ, ಹಾಡನ್ನೋ ತ್ಯಾಗರಾಜ! (ನಿ)
-ಜ ನಿರಂಜನಾದಿತ್ಯಾ ತ್ಯಾಗರಾಜ!!!
ನನಗಾ ಜಾಗೀ ಜಾಗೆಂದಿಲ್ಲಪ್ಪಾ!
ಗಾಳಿಯಿಲ್ಲದ ಜಾಗವಾವುದಪ್ಪಾ? (ಪ)
-ವನನಿಗಿಂತ ಸೂಕ್ಷ್ಮನಾನಪ್ಪಾ!
ಜಾಗೃತ್ತಾದ್ಯವಸ್ಥಾತೀತಾನಪ್ಪಾ!
ಗಮನಾಗಮನ ರಹಿತಪ್ಪಾ!
ಹಿತಾಹಿತ ನನಗೇನಿಲ್ಲಪ್ಪಾ!
ತನುವಿನಾಟಶಾಶ್ವತವಪ್ಪಾ! (ಜೀ)
-ವನೆನಿಸಿಹೆನಿದರಿಂದಪ್ಪಾ! (ಅ)
-ಪ್ಪಾ ನಿರಂಜನಾದಿತ್ಯನಾದ್ಯಪ್ಪಾ!!!
-ಬ್ಬರಾರ್ಭಟವ ಸಾಕು ಮಾಡಿರೋ! (ವ)
-ರ ಗುರುಧ್ಯಾನ ಸದಾ ಮಾಡಿರೋ!
ನೊಸಲ್ಗಣ್ಣನೇ ಗುರು ಕಾಣಿರೋ! (ಇ)
-ಬ್ಬರಣುಗರಂತಿದ್ದುಕ್ಕೊಳ್ಳಿರೋ!
ರಾಗ, ದ್ವೇಷಗಳೆಲ್ಲಾ ಬಿಡಿರೋ! (ಒ)
-ಡಲಿದದಕಾಗ್ರಲ್ಲ ನೋಡಿರೋ!
ಬೇಗ್ಬೇಗ್ಬಂದು ಶ್ರೀಪಾದ ಸೇರಿರೋ! (ಹಾ)
-ಡಿ ಹರಿನಾಮ ಹೆಜ್ಜೆ ಹಾಕಿರೋ! (ಸೇ)
-ರೋ, ಜೈ ನಿರಂಜನಾದಿತ್ಯನ್ನಿರೋ!!!
ಕಣ್ಣು, ಕಿವಿಗಳೆಲ್ಲಾ ಇವೆ ಕೇಳೇ! (ಆ)
-ರೀ ರೀತಿ ಮಾಡಿದವರೆಂದು ಹೇಳೇ! (ಕ)
-ಡಲಶಯನನ ತನುಜ ಕೇಳೇ! (ಒ)
-ಬ್ಬನಿದೆಲ್ಲಾ ಹೇಗೆ ಮಾಡಿದ ಹೇಳೇ! (ಅ)
-ದವನಿಚ್ಛಾ ಶಕ್ತಿಯ ಬಲ ಕೇಳೇ! (ಎ)
-ಲ್ಲೇನಿನ್ನೇನೇನು ಮಾಡಿದ್ದಾನೆ ಹೇಳೇ! (ಅ)
-ನಿತ್ಯ ಚರಾಚರವೆಲ್ಲೆಲ್ಲೂ ಕೇಳೇ! (ತಂ)
-ದೆ, ತಾಯಿ ನಮಗವ ತಾನೇ ಹೇಳೇ!
ಹೇಳಲೇನವನೇ ಸರ್ವವೂ ಕೇಳೇ! (ಹೇ)
-ಳೇ, ಜೈ ನಿರಂಜನಾದಿತ್ಯೆಂದು ಬಾಳೇ!!!
-ರಿ ಸ್ಮರಣೆ ಮಾಡುತ್ತಿರಯ್ಯಾ! (ನಿಂ)
-ತೋ, ಕೂತೋ ಸದಾ ಜಪಿಸಯ್ಯಾ! (ವಿ)
-ಷಯಾಸಕ್ತಿ ಬಿಟ್ಟು ಬಿಡಯ್ಯಾ!
ಕರ್ತವ್ಯಾತ್ಮ ಚಿಂತನೆಯಯ್ಯಾ!
ಬೇಕು ಸದ್ಗುರು ಕೃಪೆಯಯ್ಯಾ!
ಕೇಡೆಣಿಸಬೇಡನ್ಯರ್ಗಯ್ಯಾ!
ನಶ್ವರ ಈ ಶರೀರವಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾಗಯ್ಯಾ!!!
-ರಿ ಚರಣ ಸೇವಾ ಭಾಗ್ಯಯ್ಯಾ! (ಸಂ)
-ತೋಷವಿದೇ ಶಾಶ್ವತವಯ್ಯಾ! (ವಿ)
-ಷಯ ಸುಖ ಕ್ಷಣಿಕವಯ್ಯಾ!
ಕರಗಬೇಕಂತರಂಗಯ್ಯಾ! (ಭ)
-ವಾಬ್ಧಿಯಾಗ ದಾಟಬೇಕಯ್ಯಾ! (ರೇ)
-ವು ಸದ್ಗುರು ಸನ್ನಿಧಿಯಯ್ಯಾ! (ಇ)
ದಲಭ್ಯ ದುರಾಚಾರಿಗಯ್ಯಾ! (ಅ)
ಯ್ಯಾ, ನಿರಂಜನಾದಿತ್ಯಮ್ಮಯ್ಯಾ!!!
ಮಿತವಾಗಿ ಮಾತನಾಡಬೇಕು!
ಸಮಯೋಚಿತವಾಗಿರಬೇಕು!
ಬೇರೇನೂ ಬಯಸದಿರಬೇಕು!
ಕೀಳು, ಮೇಲೆಂಬುದ ಬಿಡಬೇಕು!
ಸುಧಾಮನ ಭಕ್ತಿಯಿರಬೇಕು!
ಕೊಟ್ಟದ್ದನ್ನು ಸ್ವೀಕರಿಸಬೇಕು! (ಕ)
-ಳ್ಳತನವನ್ನುಪೇಕ್ಷಿಸಬೇಕು!
ಬೇಲಿ ಮನಸ್ಸಿಗೆ ಹಾಕಬೇಕು! (ಹಾ)
-ಕು ನಿರಂಜನಾದಿತ್ಯನಾಗ್ಬೇಕು!!!
-ಚ್ಚರಿಪ ಸ್ವಭಾವಚ್ಚುತಗಿಲ್ಲ!
ರಿಪುಗಳಾಧೀನೇಂದ್ರಿಯವಿಲ್ಲ!
ಯಜ್ಞೇಶ್ವರನೆಂದಾಹುತಿಯೆಲ್ಲ! (ರ)
-ಮೆಯರಸನೆಂದೊರೆವರೆಲ್ಲ! (ಮು)
-ಚ್ಚು ಮರೆಯಿಲ್ಲದಿರ್ಪನೆಲ್ಲೆಲ್ಲ! (ಭ)
-ವರೋಗಕ್ಕನ್ಯ ವೈದ್ಯರಾರಿಲ್ಲ!
ವರಗುರುದತ್ತನೊಬ್ಬನೆಲ್ಲ! (ಹ)
-ರಿ, ಹರ, ಬ್ರಹ್ಮ ಭೇದವಗಿಲ್ಲ! (ನ)
-ಲ್ಲ, ನಿರಂಜನಾದಿತ್ಯ ಪ್ರಪುಲ್ಲ!!!
-ಧಿರನಾಲಿಸುವ ಚಪಲ ಬಿಡಲಿ!
ಕಾಮ್ಯ ಭಾವ ಕರ್ಮದಲ್ಲಿಲ್ಲದಿರಲಿ! (ಪ)
-ರ ಪೀಡೆಯಿಂದೇನೂ ಬೇಕಾಗದಿರಲಿ!
ನಾಮಸ್ಮರಣೆ ಸದಾ ಸಾಗುತ್ತಿರಲಿ! (ಕಾ)
-ಯಾಭಿಮಾನವಿಲ್ಲದೆ ಸೇವೆ ಸಾಗಲಿ!
ಸತ್ಸಂಗಾಸಕ್ತಿ ಬಲವಾಗುತ್ತಿರಲಿ!
ವಾಗಾಡಂಬರಕ್ಕೆಡೆಯಿಲ್ಲದಿರಲಿ! (ತ್ಯಾ)
-ಗಿಯಾಗಿ ಸ್ಥಾನ, ಮಾನ, ಸ್ಥಿರವಾಗಲಿ!
ಬಲ ಸಾತ್ವಿಕಾಹಾರದಿಂದುಂಟಾಗಲಿ!
ರಸನೇಂದ್ರಿಯ ಹತೋಟಿಯಲ್ಲಿರಲಿ! (ಮಾ)
-ಲಿಕ ಶ್ರೀ ನಿರಂಜನಾದಿತ್ಯನಾಗಲಿ!!!
-ನೇನೂ ಯೋಚಿಸಬೇಕಾಗಿಲ್ಲಾ!
ಹಾಡಿದ ಕೀರ್ತಿ ನಿನಗೆಲ್ಲಾ! (ಬಿ)
-ಡು, ನಾನು, ನೀನೆಂಬುದನೆಲ್ಲಾ!
ವರ ದಾನ ಸುಳಾಗ್ವುದಿಲ್ಲಾ!
ವರ ಗುರು ಸಾಮಾನ್ಯನಲ್ಲಾ!
ನೀಲ ಮೇಘ ಶ್ಯಾಮ ಬೇರಲ್ಲಾ!
ನತಜನೋದ್ಧಾರೆಂಬರೆಲ್ಲಾ! (ಬ)
-ಲ್ಲಾ ನಿರಂಜನಾದಿತ್ಯನೆಲ್ಲಾ!!!
ಹೆಣ್ಣಿನ ಮೇಲೆಲ್ಲರಿಗಾಶಾ ದೃಷ್ಟಿ! (ಹು)
-ಣ್ಣಿನ ಮೇಲವರಿಗಸಹ್ಯ ದೃಷ್ಟಿ! (ಧ)
ನ, ಧಾನ್ಯಕ್ಕೆಲ್ಲರ್ಗಪಾರಾಶಾ ದೃಷ್ಟಿ!
ಮೇವಿಲ್ಲದ ಭೂಮಿಗಸಹ್ಯ ದೃಷ್ಟಿ! (ನಾ)
-ಲೆ ನೀರಿಗೆ ಸಕಲರಾಶಾ ದೃಷ್ಟಿ! (ಇ)
-ಲ್ಲದಾದಾಗ ಬಹಳಸಹ್ಯ ದೃಷ್ಟಿ! (ದಾ)
-ರಿ ತನ್ನೂರಿಗಾದರೆ ಆಶಾ ದೃಷ್ಟಿ!
ಗಾಡಿ ತಡವಾದರಸಹ್ಯ ದೃಷ್ಟಿ!
ಶಾಖ, ಪಾಕದಡಿಗೆಗಾಶಾ ದೃಷ್ಟಿ! (ಅ)
-ದೃಷ್ಟ ಕೆಟ್ಟರೆಲ್ಲರ್ಗಸಹ್ಯ ದೃಷ್ಟಿ! (ದೃ)
-ಷ್ಟಿ, ನಿರಂಜನಾದಿತ್ಯನದೊಂದೇ ದೃಷ್ಟಿ!!!
ಸತ್ತೆ, ಸತ್ತಮೇಲೆಲ್ಲಾ ಸತ್ತೆ! (ಮ)
-ತ್ತೆಮತ್ತೆ ಅದೇ ಪ್ರಜಾ ಸತ್ತೆ!
ಸತ್ಯಾಸತ್ಯಕ್ಕಾಗ್ಯೆಲ್ಲಾ ಸತ್ತೆ! (ಮ)
-ತ್ತದು ಗೊಬ್ಬರಗುಂಡಿ ಸತ್ತೆ!
ಮೇಲು, ಕೀಳೆಂಬಾ ರಾಜ್ಯ ಸತ್ತೆ! (ತ)
-ಲೆ ಕೆಳಗಾಗ್ಯಾಗ್ವುದು ಸತ್ತೆ! (ಚೆ)
-ಲ್ಲಾಟಡಗಿಸಲಾದ ಸತ್ತೆ!
ಸತ್ವ ಹೀನಾಗಿ ಮತ್ತೆ ಸತ್ತೆ! (ಎ)
-ತ್ತೆ ನಿರಂಜನಾದಿತ್ಯ ಮತ್ತೆ!!!
ಭಕ್ತಿ ಭಾವ ಬಲಿಸದಿರಬೇಡಾ!
ಬೇನೆ, ಭವರೋಗ ಮರೆಯಬೇಡಾ! (ಉಂ)
-ಡಾಡಿ ನಾಡಾಡಿಯೆನಿಸಿರಬೇಡಾ! (ಸಾ)
-ಲೌಕ್ಯ, ಸಾಮಿಪ್ಯ ದಾಟದಿರಬೇಡಾ!
ಕಿಡಿಗಣ್ಣನ ಧ್ಯಾನ ಬಿಡಬೇಡಾ!
ಕತೆಯಲ್ಲೇ ಕಾಲ ಕಳೆಯಬೇಡಾ! (ಕ)
-ಲಾತೀತಾನಂದನಾಗದಿರಬೇಡಾ!
ಭಯದಿಂದಭ್ಯಾಸ ನಿಲ್ಲಿಸಬೇಡಾ!
ಬೇರೆ ಬೇರೆ ಸಾಧನೆ ಮಾಡಬೇಡಾ! (ಬಿ)
-ಡಾ, ನಿರಂಜನಾದಿತ್ಯಾನಂದೋದ್ದಂಡಾ!!!
ದಂಡಿನೊಳಗೆ ಧೀರ ಸಂಗ್ರಾಮಿ! (ಗಂ)
-ಡರ ಒಳಗೆ ಆದರ್ಶ ನಾಮಿ!
ಸ್ವಾರ್ಥವಿಲ್ಲದ ನಿಸ್ವಾರ್ಥ ಸ್ವಾಮಿ!
ಮಿತ್ರಕಾಲದ ಪವಿತ್ರ ನಾಮಿ!
ಉಮಾಪತಿಗೆ ಆತ್ಮೀಯ ಸ್ವಾಮಿ! (ಬಿ)
-ದ್ದಂಗನೆಯನೆಬ್ಬಿಸಿದ ನಾಮಿ! (ಮ)
-ಡದಿ ಸೀತೆಗೆ ಆರಾಧ್ಯ ಸ್ವಾಮಿ!
ಪ್ರೇಮಾಂಜನೇಯನ ರಾಮ ನಾಮಿ! (ನೇ)
-ಮಿ ಶ್ರೀ ನಿರಂಜನಾದಿತ್ಯ ಸ್ವಾಮಿ!!!
-ರುಹು ತಡಮಾಡದಿವತ್ತೇ!
ದೇಹ ನಿನ್ನದೇ ಗುಡಿಯಂತೇ! (ಅ)
-ವನಿರುವದರೊಳಗಂತೆ!
ನಾಮ, ರೂಪ ಬಹಳವಂತೆ! (ಯಾ)
-ರೆಂತ ನೀನೇ ನೋಡಬೇಕಂತೆ! (ಹಿಂ)
-ದು, ಮುಂದು ಓಡಬಾರದಂತೆ! (ಕಂ)
-ಗೊಳಿಪ ನಿನ್ನಾತ್ಮ ತಾನಂತೆ! (ಗೊ)
-ತ್ತೇ? ನಿರಂಜನಾದಿತ್ಯಾತಂತೆ!!!
-ಡಬೇಡಲೋ ನೋಡದೇ ಅವನಾ!
ಬಾಳವನಿಂದಾಗ್ವುದು ಪಾವನಾ! (ಮ)
-ರೆಯದೇ ಮಾಡವನ ಕೀರ್ತನಾ!
ಲೋಕ ವ್ಯವಹಾರ ದುರ್ವಾಸನಾ!
ಗುಣದಾಯಕ ದಿವ್ಯ ಜೀವನಾ! (ಗು)
-ರುಸೇವೆ ಮಾಡು ನೀನನುದಿನಾ!
ದೇವ, ಜೀವರೈಕ್ಯಕ್ಕೆ ಸಾಧನಾ! (ಭ)
-ವರೋಗ ವೈದ್ಯಾತ್ಮನ ಚಿಂತನಾ! (ಜ್ಞಾ)
-ನಾನಂದ ನಿರಂಜನಾದಿತ್ಯನಾ!!!
-ಳೆಯ ಮೋಹ ಹುಟ್ಟಿಸಿ ಬಿಟ್ಟಿ! (ಭ)
-ಯ, ಭ್ರಾಂತಿಗಳ ಜೋಡ್ಸಿಬಿಟ್ಟಿ! (ಊ)
-ರೊಡೆಯನ ಮರೆಸಿ ಬಿಟ್ಟಿ! (ಗು)
-ಟ್ಟಿನಲ್ಲೆಲ್ಲವನ್ನಿಟ್ಟು ಬಿಟ್ಟಿ!
ಕೊರತೆಯೇನಿದೆಂದು ಬಿಟ್ಟಿ! (ಜು)
-ಟ್ಟು ಹಿಡಿದು ಕೂರಿಸಿ ಬಿಟ್ಟಿ!
ಬಿಡಿಸಿಕೋ ನೀನೆಂದು ಬಿಟ್ಟಿ! (ದಿ)
-ಟ್ಟ ನಿರಂಜನಾದಿತ್ಯಗಿಟ್ಟಿ!!!
-ನಸ್ಸು ಕೊಡಬೇಕು ನೀನಪ್ಪಾ! (ಈ)
-ಗ ಬರೆಸಿದವರಾರಪ್ಪಾ?
ಸಾಧ್ಯವಾಗಲಿಲ್ಲಾಗೇಕಪ್ಪಾ? (ದ)
-ಧ್ಯನ್ನ ಉಂಡಂತಾಯಿತೀಗಪ್ಪಾ! (ಯಾ)
-ವಾಗಲೂ ದಯೆಯಿರಲಪ್ಪಾ! (ಸಾ)
-ವು, ನೋವಿನ ಭಯ ಸಾಕಪ್ಪಾ!
ದರ್ಶನ ಭಾಗ್ಯವ ನೀಡಪ್ಪಾ! (ಅ)
-ಪ್ಪಾ ಶ್ರೀ ನಿರಂಜನಾದಿತ್ಯಪ್ಪಾ!!!
-ಳೆಗೇನೆಂಬ ಯೋಚನೆಯೇಕಿಟ್ಟೆ?
ಹುಟ್ಟಿಸಿ ಎಷ್ಟೆಷ್ಟೋ ಕಷ್ಟ ಕೊಟ್ಟೆ! (ಬಾ)
-ಳಿನಲ್ಲಿನ್ನೂ ಆಶೆಯನ್ನೇಕಿಟ್ಟೆ?
ಈ ಪಾತ್ರಾಭಿನಯವೇನೋ ಕೊಟ್ಟೆ!
ಗೆಳೆಯನಿಂದೆನ್ನ ದೂರೇಕಿಟ್ಟೆ?
ನನಗಾಗ ಭರವಸೆ ಕೊಟ್ಟೆ! (ಬೇ)
-ಗೆಯೆಲ್ಲೆನ್ನ ಬೇಯಲಿಕ್ಕೇಕಿಟ್ಟೆ?
ಕೊಡೀಗೆನಗೆ ಸಾರಂಗ ಬಟ್ಟೆ! (ಕೊ)
-ಟ್ಟೆ, ನಿರಂಜನಾದಿತ್ಯನೆಂದುಟ್ಟೆ!!!
-ನ್ನ, ವಸ್ತ್ರವೆಲ್ಲಿದ್ದರೂ ಈಸಲು!
ಪಾಪಿ, ಪರದೇಶಿಗೂ ಈಸಲು!
ಲುಬ್ಧನಾದರೂ ಇದು ಈಸಲು!
ನಿನ್ನಾನಂದ ನಿನಗೆ ಈಸಲು! (ದೀ)
-ನ ಬಾಂಧವಾರ್ತನಿಗೆ ಈಸಲು!
ಗೆಳತಿ ಗೆಳೆಯಗೆ ಈಸಲು!
ಈನಾಕ್ಷಿ ಫಾಲಾಕ್ಷಗೆ ಈಸಲು!
ಸತ್ಸಂಗ ಸದ್ಭಾವಕ್ಕೆ ಈಸಲು! (ಮಾ)
-ಲು ನಿರಂಜನಾದಿತ್ಯಗೆಲ್ಲೆಲ್ಲೂ!!!
ರಮಿಸಿ ರಾಗ, ರಾಗಿಣಿಯಲ್ಲಾವಾಸ!
ಲೀನನಾಗ್ಯೆಲ್ಲರಾಕರ್ಷಿಪನಾ ಶ್ರೀಶ!
ವಾಣಿಯ ಅನನ್ಯ ಭಕ್ತಾ ರುಕ್ಮಿಣೇಶ! (ಮಂ)
-ದಹಾಸ ವದನಾರವಿಂದಾ ಲಕ್ಷ್ಮೀಶ!
ನಾಮ ಸಂಕೀರ್ತನಾನಂದಾ ಯಾದವೇಶ!
ನಂದಕಂದ ಗೋವಿಂದಾ ದ್ವಾರಕಾವಾಸ!
ದಾಸದಾಸ ವಿಠ್ಠಲಾ ಪಂಡರೀವಾಸ!
ಶ್ರೀವತ್ಸ ಕೌಸ್ತುಭಾಲಂಕಾರಾ ರಾಧೇಶ!
ನಿತ್ಯ ನಿರಂಜನ ಮನೋರಂಜನೇಶ! (ದೇ)
-ವಾನುಗ್ರಹೇಂದ್ರ್ಯನಿಗ್ರಹಾ ಹೃದಯೇಶ!
ಸಪ್ತ ಸ್ವರೇಶಾ ನಿರಂಜನಾದಿತ್ಯೇಶ!!!
-ಲಲ್ಲಂದುಗೆ ಗೆಜ್ಗೆಯಿದೆ!
ಕೃಷ್ಣವರ್ಣ ಕಾಣುತಿದೆ! (ಪೂ)
-ಷ್ಣಸಮಾನ ತೇಜಸ್ಸಿದೆ!
ಬಂಗಾರದುಡ್ಗೆಜ್ಜೆಯಿದೆ! (ಹಿಂ)
-ದಂಗೆನೆಯರ ಗುಂಪಿದೆ! (ಪ್ರೀ)
-ತಿಯಿಂದಪ್ಪಿಕೊಂಡಂತಿದೆ! (ಆ)
-ದೆ ನಿರಂಜನಾದಿತ್ಯಂದೆ!!!
-ರ ನಿಂದಕ ಪರಮಾರ್ಥಿಯೇನಲ್ಲ!
ಮಾಯಾ ಬಂಧನ ಪರಮಾರ್ಥಿಗಿಲ್ಲ! (ಸ್ವಾ)
-ರ್ಥಿ ಅನ್ಯ ದೂಷಣೆ ಬಿಡುವುದಿಲ್ಲ!
ಪವಾಡ ಪರಮಾರ್ಥಿಗೆ ಬೇಕಿಲ್ಲ!
ರಗಳೆ, ರಂಪ ನಿಂದಕನದೆಲ್ಲ!
ನಿಂತ ಮೇಲೆ ಭಕ್ತ ಓಡುವುದಿಲ್ಲ!
ದರಿದ್ರನಾದರೂ ದುರ್ಮಾಗ್ಯಾಗೋಲ್ಲ!
ಕಷ್ಟ ಪರಂಪರೆಗಂಜುವುದಿಲ್ಲ!
ನಯ, ವಿನಯ, ಬಿಟ್ಟರುವುದಿಲ್ಲ! (ಪು)
-ಲ್ಲ, ನಿರಂಜನಾದಿತ್ಯಲ್ಪಾತ್ಮನಲ್ಲ!!!
ಲಕ್ಷ್ಯ ಅವನಲ್ಲಿಟ್ಟು ಅದನಿಟ್ಟೆ!
ತಿರೆಯಾಣ್ಮನವನೆಂದದನಿಟ್ಟೆ!
ಲಕ್ಷಣ ನೋಡುತ್ತಾನಂದದಿಂದಿಟ್ಟೆ!
ಕರ್ತವ್ಯವೇನೆಂದು ಕೇಳುತ್ತದಿಟ್ಟೆ!
ಗೆಳೆಯನಾಗಿ ನೀನು ಇರೆಂದಿಟ್ಟೆ!
ತಿಳಿಯದೇ ನಿನ್ನ ಕೆಟ್ಟೆನೆಂದಿಟ್ಟೆ! (ಅ)
-ಲಕ್ಷ್ಯ ಮಾಡದಿರೆನ್ನನೆಂದದಿಟ್ಟೆ!
ಕಳಂಕಾರೋಪಿಸಬೇಡೆಂದದಿಟ್ಟೆ!
ವಿಜಯ ಪ್ರಾಪ್ತಿಗಾಗಿ ಅದನಿಟ್ಟೆ! (ಇ)
-ಟ್ಟೆ, ನಿರಂಜನಾದಿತ್ಯ ನೀನೆಂದಿಟ್ಟೆ!!!
ಕಾಯುತಿಹ ಶಿವರಾತ್ರಿ ಸ್ವಾಮಿಯಿಲ್ಲಿ!
ಯುಕ್ತ ಸೇವೆಯ ನಿರೀಕ್ಷಾನಂದದಲ್ಲಿ!
ತಿತಿಕ್ಷಾ ಪರಿಪೂರ್ಣ ಸ್ವಭಾವದಲ್ಲಿ!
ಹಗಲು, ರಾತ್ರಿಯರಿವಿರದೀಗಿಲ್ಲಿ!
“ಶಿವಾಯ ನಮಃ ಓಂ” ಮಂತ್ರ ಜಪದಲ್ಲಿ! (ಭ)
-ವರೋಗ ನಿವಾರಣಾ ವೈದ್ಯನಾಗಿಲ್ಲಿ!
ರಾರಾಜಿಸುತಿಹ ಯೋಗಾನಂದದಲ್ಲಿ!
ತ್ರಿಲೋಕೋದ್ಧಾರದ ಮಹಾ ಕಾರ್ಯದಲ್ಲಿ!
ಸ್ವಾಯಂಭು ತಾನಾಗಿ ಮೈಮರೆತಿಂದಿಲ್ಲಿ!
ಮಿತ್ರ ತಾನೆಂಬ ನಿತ್ಯ ನಿಯಮದಲ್ಲಿ! (ಬಾ)
-ಯಿ ಮೊದಲಾದಿಂದ್ರಿಯ ನಿಗ್ರಹದಲ್ಲಿ! (ಎ)
-ಲ್ಲಿ? ನೋಡಿಲ್ಲಿ ನಿರಂಜನಾದಿತ್ಯನಲ್ಲಿ!!!
ಕೃಷ್ಣ ಬಂದಾ ಗೋಪಾಲ ಕೃಷ್ಣ ಬಂದಾ! (ಪೂ)
-ಷ್ಣ ಶ್ರೀ ಕೃಷ್ಣಾತ್ಮ ಸ್ವರೂಪ ತಾನೆಂದಾ!
ಬಂದೆ ನಂದನಂದನನಾಗ್ಯಂದೆಂದಾ!
ದಾಮೋದರನೆಂದೂ ಕರೆದರೆಂದಾ!
ಗೋವರ್ಧನೋದ್ಧಾರಿ ಯಾದವಾನೆಂದಾ!
ಪಾರ್ಥಸಾರಥಿಯಾದೆ ನಾನಂದೆಂದಾ! (ಕಾ)
-ಲ ಕುರುಕುಲಕಾದವ ನಾನೆಂದಾ!
ಕೃಷ್ಣವೇಣ್ಯಕ್ಷಯಾಂಬರೆನ್ನಿಂದೆಂದಾ! (ಕೃ)
-ಷ್ಣ, ಬಲರಾಮಾನುಜ, ರಾಮಾನೆಂದಾ!
ಬಂಧ, ಭವಬಂಧ ಹರ ನಾನೆಂದಾ! (ಇಂ)
-ದಾ, ನಿರಂಜನಾದಿತ್ಯಾನೆಂದು ಬಂದಾ!!!
-ಗಿ ಶಿವಾನಂದ ನೀನೇ ಸ್ವಾಮಿ!
ಬರಲೆನ್ನ ಮೇಲ್ದಯೆ ಸ್ವಾಮಿ! (ಬ)
-ರ್ತೇನೆಂದುದು ನಿನ್ನಿಷ್ಟ ಸ್ವಾಮಿ! (ಮ)
-ನೆಯಿದೆಲ್ಲಾ ನಿನ್ನದು ಸ್ವಾಮಿ!
ಮನಕೆ ಶಾಂತಿ ಕೊಡು ಸ್ವಾಮಿ! (ಮ)
-ಹಾ ಶಿವರಾತ್ರಿಯಿಂದು ಸ್ವಾಮಿ!
ಸ್ವಾಮಿ ಸೇವೆಯಲ್ಲಾಗ್ಲಿ ಸ್ವಾಮಿ! (ಸ್ವಾ)
-ಮಿ, ನಿರಂಜನಾದಿತ್ಯಾ ಸ್ವಾಮಿ!!!
-ಟವನರಿಯೆನೆಂದಳವಳು!
ರಾತ್ರಿಯಾಗಲೆಂದಳೀಗವಳು!
ಜನ್ಮ ಪಾವನವೆಂದಳವಳು!
ನೆನಪದಿರಲೆಂದಳವಳು! (ಋ)
-ಣಿ ಶಿವಪಾದಕ್ಕೆಂದಳವಳು!
ಸಿಕ್ಕಿತುಚ್ಚಿಷ್ಟವೆಂದಳವಳು! (ಇ)
-ದಕಾಗಿ ಬಂದೆನೆಂದಳವಳು! (ಅ)
-ನೇಕ ಜನ್ಮದ್ದಿದೆಂದಳವಳು! (ಆ)
-ಳು, ನಿರಂಜನಾದಿತ್ಯಗವಳು!!!
ಜರಾಯುಜಾಂಡಜಕ್ಕೆ ಶಿವ ಪ್ರಸಾದ! (ನಿ)
-ರಾಯಾಸದಿಂದಾ ಶಿವರಾತ್ರಿ ಪ್ರಸಾದ! (ಆ)
-ಯುರ್ಬಲಾತ್ಮ ಬಲಾದಿಗೆಲ್ಲಾ ಪ್ರಸಾದ! (ನಿ)
-ಜಾಂಶವರಿತಾಗ ಸಾರ್ಥಕಾ ಪ್ರಸಾದ!
ಡಮರುಧರನವತಾರಾ ಪ್ರಸಾದ!
ಜಗಜ್ಜನನಿಗಾಯ್ತಾ ವರ ಪ್ರಸಾದ! (ಅ)
-ಕ್ಕೆ ಲೋಕ ಕಲ್ಯಾಣವೆಂದಿತ್ತನಾ ಪ್ರಸಾದ!
“ಶಿವಾಯ ನಮಃ ಓಂ” ಮಹಿಮಾ ಪ್ರಸಾದ!
ವರ ಗುರುದತ್ತ ಸ್ವರೂಪಾ ಪ್ರಸಾದ!
ಪ್ರವೃತ್ತಿ, ನಿವೃತ್ತಿಪ್ರದವಾ ಪ್ರಸಾದ!
ಸಾವು, ನೋವು ತಪ್ಪಿಸುವುದಾ ಪ್ರಸಾದ!
ದತ್ತ ನಿರಂಜನಾದಿತ್ಯಾತ್ಮ ಪ್ರಸಾದ!!!
-ಟು ನೀನೆನ್ನೆಣಿಕೆಯನ್ನಕ್ಕಾ!
ಬೇಜಾರು ನಿನಗಾಯ್ತೇನಕ್ಕಾ?
ಗತಿಸಿತು ಕಾಲ ನೋಡಕ್ಕಾ! (ಸ)
-ಖಾತ್ಮ ನಾ ನಿನಗೆ ಕಾಣಕ್ಕಾ! (ಒ)
-ಲಿಸು ಶಿವನ ನೀನೀಗಕ್ಕಾ!
ಮಾಯಾವಿ ಕಳ್ಳ ಅವನಕ್ಕಾ! (ಬಿ)
-ಡಬಾರದವನ ನೀನಕ್ಕಾ! (ಅ)
-ಕ್ಕಾ ನಿರಂಜನಾದಿತ್ಯಾತ್ಮಕ್ಕಾ!!!
ಶಿವಗಣ ಕುಣಿಯುವಾ ಶಿವರಾತ್ರಿ! (ಜೀ)
-ವಕೋಟಿಯುದ್ಧಾರ ಗೈವಾ ಶಿವರಾತ್ರಿ!
ಗಣಪತಿಯಾ ಕುಣಿವಾ ಶಿವರಾತ್ರಿ! (ರ)
-ಣಧೀರ ಕುಮಾರ ದೇವಾ ಶಿವರಾತ್ರಿ!
ಕುಣಿದು ಮೈಮರೆಯುವಾ ಶಿವರಾತ್ರಿ! (ರಾ)
-ಣಿ ಮೃಡಾಣಿಯೋಡಾಡುವಾ ಶಿವರಾತ್ರಿ! (ಆ)
-ಯುರಾರೋಗ್ಯ ಭಾಗ್ಯವೀವಾ ಶಿವರಾತ್ರಿ! (ಶಿ)
-ವಾನಂದಾನುಭವಾಗುವಾ ಶಿವರಾತ್ರಿ!
ಶಿವ, ಶಿವ, ಶಿವೆನ್ನುವಾ ಶಿವರಾತ್ರಿ!
ವರ ಗುರು ನೀನೆನ್ನುವಾ ಶಿವರಾತ್ರಿ!
ರಾರಾಜಿಸ್ಯೆಲ್ಲೆಲ್ಲಿರುವಾ ಶಿವರಾತ್ರಿ! (ಅ)
-ತ್ರಿಜ ನಿರಂಜನಾದಿತ್ಯಾನಂದಾ ಶಿವರಾತ್ರಿ!!!
-ಡಿಯಲ್ಲಿ ಹುಟ್ಟುವಾ ಕಲ್ಲು ದೇವ!
ಬಿಸಿ ನೇವೇದ್ಯಕ್ಕಾಗಿಲ್ಲಾ ದೇವ! (ಭ)
-ಟ್ಟೋಪಾಧ್ಯಾಯನ ಹೊಟ್ಟೆಗಾ ದೇವ! (ದು)
-ಡುಕಿದರೂ ಮಾತನಾಡಾ ದೇವ!
ವಾದಿಸನನ್ಯರೊಡನಾ ದೇವ!
ಜೀವರಿಗೆ ತೃಪ್ತಿಯದೇ ದೇವ!
ವಸ್ತ್ರಾಭರಣಾಲಂಕೃತಾ ದೇವ!
ದೇಹಭಾವ ಬಿಟ್ಟರೆಲ್ಲಾ ದೇವ! (ದೇ)
-ವ ನಿರಂಜನಾದಿತ್ಯಗಾ ಭಾವ!!!
ಎಲ್ಲಾ ಬಿಟ್ಟವನನ್ನೇನು ನೋಡುವುದು? (ಉ)
-ಲ್ಲಾಸ ಸಲ್ಲಾಪಕ್ಕಾಸ್ಪದವೇನಿಹುದು?
ಬಿಸಿಯೂಟೋಪಚಾರ ಅಲ್ಲೇನಿಹುದು? (ಹು)
-ಟ್ಟಡಗಬೇಕೆಂಬವನಲ್ಲೇನಿಹುದು?
ವಸ್ತ್ರಬಿಟ್ಟವನನ್ನು ನೋಡ್ಯೇನಹುದು?
ನಮ್ಮ ಸುಖಕ್ಕೆ ಅವನಿಂದೇನಹುದು? (ಇ)
-ನ್ನೇತಕ್ಕಾಗಿ ಅವನ ಬಯಸಿಹುದು? (ಅ)
-ನುದಿನ ನಾವೇ ದುಡಿಯಬೇಕಿಹುದು!
ನೋಡಿದವರ ಪಾಡು ಏನಾಗಿಹುದು? (ನಾ)
-ಡು, ಬೀಡು ನಮಗೆಲ್ಲಾ ಬೇಕಾಗಿಹುದು! (ಸಾ)
-ವು, ನೋವು ಯಾರನ್ನೇನೆಲ್ಲಿ ಬಿಟ್ಟಹುದು? (ಹೌ)
-ದು ! ನಿರಂಜನಾದಿತ್ಯಗರಿವಿಹುದು!!!
-ಶಾಂತರಂಗಸಹಕಾರಕ್ಕೆ ಕಾರಣ! (ಪ್ರೀ)
-ತಿಯನ್ಯೋನ್ಯವಿಲ್ಲದ್ದಾಶೆಗೆ ಕಾರಣ! (ಬ)
-ಗೆಬಗೆಯ ಮತ ದ್ವೇಷಕ್ಕೆ ಕಾರಣ!
ಅಜ್ಞಾನವೇ ಮತಭೇದಕ್ಕೆ ಕಾರಣ!
ಸತ್ಯಾನಂದಾಭಾವಾಜ್ಞಾನಕ್ಕೆ ಕಾರಣ! (ದೇ)
-ಹ ಮೋಹಾತ್ಮಾನಂದಾಭಾವಕ್ಕೆ ಕಾರಣ!
ಕಾಮಾಸಕ್ತಿ ದೇಹ ಮೋಹಕ್ಕೆ ಕಾರಣ! (ವಿ)
-ರಕ್ತಿಯಭಾವ ವ್ಯಾಮೋಹಕ್ಕೆ ಕಾರಣ!
ಕಾಸು ವಿರಕ್ತಿಯಭಾವಕ್ಕೆ ಕಾರಣ! (ವ)
-ರಗುರುಚಿತ್ತ ಸಕಲಕ್ಕೆ ಕಾರಣ! (ಗ)
-ಣಪ, ನಿರಂಜನಾದಿತ್ಯಾದಿ ಕಾರಣ!!!
-ಲಾನುಗ್ರಹ ಮಾಡು ಶಿವ ಬಾ!
ಸಹವಾಸ ನೀಡು ಶಿವ ಬಾ! (ಬಂ)
-ದಿಂದೊಂದಾಗದಾದೆ ಶಿವ ಬಾ! (ಮುಂ)
-ದೋಡಿ ಬಾರದಾದೆ ಶಿವ ಬಾ! (ಹಾ)
-ಡಿ ಕುಣಿಯದಾದೆ ಶಿವ ಬಾ!
“ಶಿವಾಯ ನಮಃ ಓಂ” ಶಿವ ಬಾ!
ವರ ಗುರುದೇವ ಶಿವ ಬಾ!
ಬಾ, ಶ್ರೀ ನಿರಂಜನಾದಿತ್ಯ ಬಾ!!!
ಹುಟ್ಟಿದಾಗೊಂದೂಟ, ಸತ್ತಾಗೊಂದೂಟ! (ಹು)
-ಟ್ಟಿದಾಗಾಗುವುದು ಸಂತೋಷದೂಟ! (ಹೋ)
-ದಾಗಾಗುವುದತ್ಯಂತ ದುಃಖದೂಟ! (ಹಾ)
-ಗೊಂದೂಟ, ಹೀಗೊಂದೂಟ, ನಿತ್ಯದೂಟ! (ಒಂ)
-ದೂಟವೂ ಇಲ್ಲದಾಗುಪವಾಸ್ದೂಟ! (ಆ)
-ಟ, ಪಾಠ, ನೋಟವೆಲ್ಲಾ ಮನಕ್ಕೂಟ!
ಸಚ್ಚಿದಾನಂದದೂಟಮೃತದೂಟ! (ವಿ)
-ತ್ತಾರ್ಜನೆಯೂಟ ಸಾವು ನೋವಿನೂಟ!
ಗೊಂಬೆಯಾಟದೂಟ ಉಂಬಲಾಗದೂಟ! (ಅಂ)
-ದೂಟ, ಇಂದೂಟ, ಎಂದೆಂದಿದೇ ಊಟ! (ದಿ)
-ಟ ನಿರಂಜನಾದಿತ್ಯಾನಂದದೂಟ!!!
-ಚಾರದಲ್ಲಿರುತ್ತಿರಬೇಕು! (ವ)
-ರ ಗುರು ಕೃಪೆ ತೋರಬೇಕು!
ಮಾರಾರಿ ಬೇಗ ಬರಬೇಕು! (ಬೀ)
-ಡು ನಿರ್ಮಲವಾಗಿರಬೇಕು! (ಬ)
-ತ್ತಿ ಉರಿಯುತ್ತಲಿರಬೇಕು! (ಆ)
-ರದಂತೆಚ್ಚರಾಗಿರಬೇಕು!
ಬೇಗಾ ಶ್ರೀಪಾದ ಸೇರಬೇಕು! (ಬೇ)
-ಕು ನಿರಂಜನಾದಿತ್ಯಾಗ್ಬೇಕು!!!
ಕಾಪಿ, ತಿಂಡಿ ತುಂಬಿತು ಹೊಟ್ಟೆ! (ಕಾ)
-ಪಿನ ಭಾರ ನಿನಗೇ ಬಿಟ್ಟೆ!
ತಿಂಗಳು, ವರ್ಷ ಏಕ ನಿಷ್ಠೆ! (ಅ)
-ಡಿಗೆರಗಿ ಪ್ರಾರ್ಥನೆ ಇಟ್ಟೆ!
ತುಂಬು ಮನಕಾಗಿಷ್ಟ ಪಟ್ಟೆ!
ಬಿಟ್ಟಿಯಾಗ್ಯೆಲ್ಲವನು ಕೊಟ್ಟೆ! (ಮಾ)
-ತು, ಕತೇಕೆಂಬ ಹಠ ತೊಟ್ಟೆ!
ಹೊಡೆತ ಬಲವಾಗಿ ಕೆಟ್ಟೆ! (ಉ)
-ಟ್ಟೆ, ನಿರಂಜನಾದಿತ್ಯ ಬಟ್ಟೆ!!!
ನಾರಾಯಣಾ ಸೌ“ಮಿತ್ತಾ”ತ್ಮ ನಾರಾಯಣಾ!
ರಾಜರಾಜ ರಾಮಾ “ರವಿ” ನಾರಾಯಣಾ!
ಯಜ್ಞ ಸಂರಕ್ಷಣಾ “ಸೂರ್ಯ” ನಾರಾಯಣಾ! (ರ)
-ಣಾಗ್ರಗಣ್ಯ ಕರ್ಣಾ “ಭಾನು” ನಾರಾಯಣಾ!
ಸೌಖ್ಯಾಹಸನ್ಮುಖಿ “ಖಗ” ನಾರಾಯಣಾ! (ಅ)
-ಮಿತ ಗುಣ ತ್ರಾಣಾ “ಪೂಷ್ಣ” ನಾರಾಯಣಾ! (ಸ್ತೋ)
-ತ್ರಾನಂದಾ “ಹಿರಣ್ಯಗರ್ಭ” ನಾರಾಯಣಾ! (ಆ)
-ತ್ಮಜ್ಞಾನಾಸಕ್ತಾ ಮರೀಚಿ ನಾರಾಯಣಾ!
ನಾಮ, ರೂಪಾತೀ “ತಾದಿತ್ಯ” ನಾರಾಯಣಾ!
ರಾಜೀವ ಸಖಾ “ಸವಿತೃ” ನಾರಾಯಣಾ!
ಯಮಧರ್ಮಾತ್ಮಯ್ಯಾ “ಅರ್ಕ” ನಾರಾಯಣಾ! (ಕ)
-ಣಾ ನಿರಂಜನಾದಿತ್ಯಾ “ಭಾಸ್ಕರ” ನಾರಾಯಣಾ!!!
-ಬ್ಬಕ್ಕಣಿ ಮಾಡಿಟ್ಟ ಕೊಡುಗೆ! (ಒ)
-ಮ್ಮತ, ಸಮ್ಮತವಿದ್ದಡಿಗೆ! (ತಿ)
-ನಲಿಕ್ಕಾದರ್ಶನ ಕೊಡುಗೆ!
ಹಗಲಿರುಳ್ಮಾಡಿದಡಿಗೆ! (ಇ)
-ಬ್ಬರೊಡಗೂಡಿತ್ತ ಕೊಡುಗೆ! (ನಂ)
-ದನಂದನನಿಷ್ಟದಡಿಗೆ! (ಮ)
-ಡಿಯಿಂದ ತಂದಿಟ್ಟಾ ಕೊಡುಗೆ! (ಧ)
-ಗೆ, ನಿರಂಜನಾದಿತ್ಯನಿಗೆ!!!
ನಿತ್ಯೋಪಚಾರ ಸಂತೃಪ್ತಾ ಕಾಗೆ! (ಪ್ರೀ)
-ತ್ಯೋದ್ಗಾರ ಕೇಳಿ ಬರಲಾ ಕಾಗೆ!
ಪತಿತಪಾವನನೆಂಬಾ ಕಾಗೆ! (ಪಂ)
-ಚಾಮೃತಾದ್ಯನ್ನವನ್ನುಂಡಾ ಕಾಗೆ!
ರವೆಯುಂಡೆ, ವಡೆ ತಿಂದಾ ಕಾಗೆ!
ಸಂತೋಷದಿಂದಾಗ, ಬಂದಾ ಕಾಗೆ!
ತೃಪ್ತಿಯಿಂದ ಹೋಯಿತೀಗಾ ಕಾಗೆ! (ಪ್ರಾ)
-ಪ್ತಾಪ್ರಾಪ್ತಕ್ಕಳದಾ ಕಪ್ಪು ಕಾಗೆ!
ಕಾಗೆ ಹೋದಮೇಲಿನ್ನೆಲ್ಲಾ ಕಾಗೆ? (ಕಾ)
-ಗೆ ನಿರಂಜನಾದಿತ್ಯಾತ್ಮಾ ಕಾಗೆ!!!
ಪೋಷಣೆ ಮಾಳ್ಪುದೆಲ್ಲರನ್ನನ್ನ! (ದೋ)
-ಷವಪ್ಪುದಮಿತಾಹಾರದನ್ನ! (ಕಾ)
-ಣೆ ಹಸಿದಾಗುಣ್ಣುವವರನ್ನ!
ಮಾಡಿಕ್ಕುವರು ಪಂಚ ಭಕ್ಷ್ಯಾನ್ನ! (ಮಾ)
-ಳ್ಪುದನಾರೋಗ್ಯ ದೇಹಕ್ಕಾ ಅನ್ನ! (ಇ)
-ದೆಲ್ಲರರಿತು ತಿನ್ನಬೇಕನ್ನ! (ಪು)
-ಲ್ಲನಾಭವ ಪ್ರಸಾದ ಈ ಅನ್ನ! (ಪ)
-ರಮಾರ್ಥಭ್ಯಾಸಕ್ಕೆ ಬೇಕೀ ಅನ್ನ! (ನ)
-ನ್ನ, ನಿನ್ನದೆಲ್ಲಾ ಗುರುಕೃಪಾನ್ನ! (ಅ)
-ನ್ನವಿದು ನಿರಂಜನಾದಿತ್ಯಾನ್ನ!!!
-ಮರಜ್ಯೋತಿ ಸ್ವರೂಪಾ ಪ್ರಭಾ! (ಫಾ)
-ಲನೇತ್ರನ ಸೇವೆಗಾ ಪ್ರಭಾ! (ಅ)
-ಮ್ಮ, ನಮ್ಮಮ್ಮ, ಗೌರಮ್ಮಾ ಪ್ರಭಾ!
ಗೌರವಾಂಗಿ ವಿಮಲಾ ಪ್ರಭಾ! (ಹ)
-ರನರಸಿ ಪಾರ್ವತೀ ಪ್ರಭಾ! (ಒ)
-ಮ್ಮತದ ತ್ರೀಕರಣಾ ಪ್ರಭಾ!
ಪ್ರಭುವಿನಾತ್ಮಾನಂದಾ ಪ್ರಭಾ! (ಪ್ರ)
-ಭಾ, ನಿರಂಜನಾದಿತ್ಯಾ ಪ್ರಭಾ!!!
ವರ ಗುರುದತ್ತ ದೀಕ್ಷೆಯೂ ಹೋಮ!
ಮಾಯಾಂಬರ ಹರಿವ ರುದ್ರ ಹೋಮ!
ರಮೇಶೋಮೇಶರಿಗೂ ಬೇಕೀ ಹೋಮ! (ಗ)
-ಣಪ ತಾನೇ ತಾನಾಗಿರುವಾ ಹೋಮ!
ಹೋಮಕ್ಕಾಸಕ್ತ್ಯಾಹುತಿಯಪ್ಪಾ ಹೋಮ!
ಮಹೇಶ ದಿಗಂಬರನಾದಾ ಹೋಮ!
ಮದ, ಮತ್ಸರಳಿದು ಹೋದಾ ಹೋಮ!
ಹಾನಿ, ವೃದ್ಧಿಗಳೆಣಿಸದಾ ಹೋಮ! (ಅ)
-ಹೋರಾತ್ರ್ಯಾತ್ಮಾನಂದ ಸ್ಥಿತಿಗಾ ಹೋಮ! (ಮ)
-ಮ ನಿರಂಜನಾದಿತ್ಯಗಿಷ್ಟಾ ಹೋಮ!!!
-ಯ್ಯನ ಚಿಂತನಾನಂದದಲ್ಲಿ! (ತ)
-ಪ್ಪನೆಣಿಸದಾರ ಮೇಲಿಲ್ಲಿ!
ಬಂಧು, ಬಳಗ ತಾನಾಗಿಲ್ಲಿ! (ಆ)
-ದಿತ್ಯನಮಲ ಜ್ಯೋತಿಯಲ್ಲಿ! (ಗು)
-ರು ಸೇವಾವಕಾಶವಿತ್ತಿಲ್ಲಿ! (ದೇ)
-ವ ಶ್ರೀ ರಂಗನಾಥನೂರಲ್ಲಿ!
ನಿಜಾನಂದಾನುಭವದಲ್ಲಿ! (ಎ)
-ಲ್ಲಿ? ನಿರಂಜನಾದಿತ್ಯನಲ್ಲಿ!!!
ನೆರೆ ಶಿವಗಣವಾಗಲಿ!
ಕೈ, ಬಾಯಿ ಅಂಕೆಯಲ್ಲಿರಲಿ!
ಲಾಭ, ನಷ್ಟ ವೃತ್ತಿ ಸಾಯಲಿ!
ಸದಾ ಶಿವಗಾನ ಸಾಗಲಿ!
ವಾಣಿಯಾಶೀರ್ವಾದವಿರಲಿ!
ಗಿರಿಜೆ ಗೃಹಿಣಿಯಾಗಲಿ!
ರತಿಪತಿ ಹೊರಗಿರಲಿ! (ಶೂ)
-ಲಿ ನಿರಂಜನಾದಿತ್ಯಾಗಲಿ!!!
ಸತ್ಯಕ್ಕೊಲಿವ ದೇವರಿಲ್ಲಯ್ಯಾ! (ನಿ)
-ತ್ಯ, ಸತ್ಯನವನಾಗಿರ್ಪನಯ್ಯಾ! (ತ)
-ಕ್ಕೊಳ್ಳುವೀವಭ್ಯಾಸವಗಿಲ್ಲಯ್ಯಾ! (ಅ)
-ಲಿಪ್ತತೆಯವನ ಸ್ಥಿತಿಯಯ್ಯಾ!
ವರ ಗುರುವಿಗೇನು ಬೇಕಯ್ಯಾ? (ಅ)
-ದೇಕಿದೇಕೆನ್ನುವವನಲ್ಲಯ್ಯಾ! (ಭ)
-ವಲೀಲೆಯೊಂದು ವಿಚಿತ್ರವಯ್ಯಾ! (ಆ)
-ರಿದೇಕೆಂದು ಹೇಳಬಲ್ಲರಯ್ಯಾ? (ಎ)
-ಲ್ಲ ವೃತ್ತಿ ರೂಪ ನಾಟಕವಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾ ಸತ್ಯಯ್ಯಾ!!!
-ಪ್ಪಾದ ಕರಿಕಲ್ಲು ಅದಾದರೇನು? (ಅ)
-ದರೊಳಗೆಲ್ಲಾ ಅಪ್ಪನಿಲ್ಲವೇನು? (ಆ)
-ರೇನೆಂದರೂ ಕಾರಣವನಲ್ಲೇನು? (ಅ)
-ನುಮಾನ ಬಿಟ್ಟಾತ್ಮಜ್ಞಾನಿಯಾಗ್ನೀನು!
ಬೆಚ್ಚಿ ಬೆದರಬೇಡ ಇನ್ನು ನೀನು! (ಯೋ)
-ಗಸಿದ್ಧಿಯಿದರಿಂದೆಂದರಿ ನೀನು! (ಉ)
-ಡಾಯಿಸಹಂಕಾರದಕಾಗಿ ನೀನು!
ದತ್ತನಿಗಾಗಿ ತ್ಯಾಗಿಯಾಗು ನೀನು! (ಈ)
-ರೇಳು ಲೋಕಾಧೀಶನಾಗುವೆ ನೀನು! (ನಾ)
-ನು ನಿರಂಜನಾದಿತ್ಯೆನೆಂಬೆ ನೀನು!!!
ಬಣ್ಣ ಕಟ್ಟಿ ಗಿಟ್ಟಿಸಿದ್ದೇನು? (ಬ)
-ಣ್ಣ ಸುಟ್ಟು ನಷ್ಟವಾದದ್ದೇನು?
ಕಟ್ಟಡುವಭ್ಯಾಸಾಗಿತ್ತೇನು? (ಕ)
-ಟ್ಟಿಡಬೇಕೆನಿಪುದೀಗೇನು? (ಯೋ)
-ಗಿ ಆಗ ಆಗಿದ್ದಿಲ್ಲವೇನು? (ದಿ)
-ಟ್ಟಿ ಈಗ ಕೆಟ್ಟಿರುವುದೇನು? (ದಾ)
-ಸಿಯರು ಆಗ ಮಾಡಿದ್ದೇನು? (ಎ)
-ದ್ದೇನಾದರೀಗ ಹೋದರೇನು? (ಭಾ)
-ನು ನಿರಂಜನಾದಿತ್ಯ ನಾನು!!!
-ನಮಲಿನಯ್ಯಾ, ನಾ ಮಲಿನಯ್ಯಾ!
ಬಡವಾಯ್ತಯ್ಯಾ, ಜಡವಿದಯ್ಯಾ!
ಲಯ ಮಾಡಯ್ಯಾ, ಜಯ ನೀಡಯ್ಯಾ! (ಅ)
-ಯ್ಯಾ ಶಂಕರಯ್ಯಾ, ಸುಖಂಕರಯ್ಯಾ!
ನೀ ಖೇಚರಯ್ಯಾ, ನಾ ಭೂಚರಯ್ಯಾ!
ಸದಾನಂದಯ್ಯಾ, ಚಿದಾನಂದಯ್ಯಾ!
ಬಟ್ಟೆದೋರಯ್ಯಾ, ಹೊಟ್ಟೆ ಭಾರಯ್ಯಾ!
ಲಕ್ಷ್ಯ ನೀನಯ್ಯಾ, ಅಲಕ್ಷ್ಯಾನಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯ ನಮ್ಮಯ್ಯಾ!!!
ನೀನೆಂದೆಂದೂ ಸರ್ವಜ್ಞ ದೇವಯ್ಯಾ! (ನಾ)
-ನೆಂದೆಂದಿಗೂ ಅಲ್ಪಜ್ಞ ಜೀವಯ್ಯಾ! (ಎಂ)
-ದೆಂದೂ ನಿನ್ನಾಜ್ಞೆಯಂತೆಲ್ಲವಯ್ಯಾ!
ದೂರಿ ನನ್ನನ್ನು ಫಲವೇನಯ್ಯ?
ಸರಿಪಡಿಸಬೇಕು ನೀನಯ್ಯಾ! (ಗ)
-ರ್ವಕ್ಕೆ ಅಜ್ಞಾನ ಕಾರಣವಯ್ಯಾ!
ಜ್ಞಪ್ತಿ ನಿನ್ನದೆನಗಿರಲಯ್ಯಾ! (ಏ)
-ದೇದಿ ಎದೆ ಬತ್ತಿ ಹೋಯಿತಯ್ಯಾ! (ಅ)
-ವರಿವರೆಂಜಲೆಷ್ಟು ದಿನಯ್ಯಾ? (ಅ)
-ಯ್ಯಾ, ನಿರಂಜನಾದಿತ್ಯ ಕಾಯಯ್ಯಾ!!!
ವರ ಗುರು ಕೃಪಾಕಾರೀ ಚಿತ್ರಾ!
ಪೂಜಾ ಮಂದಿರಾಲಂಕಾರೀ ಚಿತ್ರಾ! (ವ)
-ರ್ಣಾನಂದ ಸುರ ಸುಂದರೀ ಚಿತ್ರಾ! (ಅ)
-ನಂಗಯ್ಯನೂರ ಕುಮಾರೀ ಚಿತ್ರಾ!
ದೈವ ಬ್ರಾಹ್ಮಣರಾಧಾರೀ ಚಿತ್ರಾ! (ಪು)
-ಸಿಮಾಯಾ ನಾಟಕಕ್ಕರೀ ಚಿತ್ರಾ! (ಶ)
-ರೀರೀ ತ್ರಿಭುವನೇಶ್ವರೀ ಚಿತ್ರಾ!
ಚಿರ ಸುಮಂಗಲಿ ಗೌರೀ ಚಿತ್ರಾ! (ಚಿ)
-ತ್ರಾ, ನಿರಂಜನಾದಿತ್ಯೋಭಯತ್ರಾ!!!
ನನ್ನ ನಿನ್ನ ವಿಚಿತ್ರ ಚಿತ್ರ! (ನಿ)
-ನ್ನ ಚಿತ್ರ ನನಗೆ ಪವಿತ್ರ!
ನಿತ್ಯ ನಿರ್ವಿಷಯದಾ ಚಿತ್ರ! (ನ)
-ನ್ನ ಚಿತ್ರ ನಿನಗಪವಿತ್ರ!
ವಿಷಯ ವಾಸನೆಯಾ ಚಿತ್ರ!
ಚಿದಾನಂದ ಚಿತ್ರ ಪವಿತ್ರ! (ಪು)
-ತ್ರ, ಕಳತ್ರಪವಿತ್ರ ಚಿತ್ರ! (ಸಂ)
-ಚಿತ ಸುಟ್ಟ ಚಿತ್ರ ಪವಿತ್ರ! (ಮಿ)
-ತ್ರ, ನಿರಂಜನಾದಿತ್ಯ ಚಿತ್ರ!!!
ಭಗನಿಂಬು ಬಿಡಬೇಡ!
ಮಾಡಕ್ಕಾಸೆ ಪಡಬೇಡ!
ಡಿಳ್ಳನಾಗಿ ಓಡಬೇಡ!
ಕೆರ ಮೆಟ್ಟಿ ಆಡಬೇಡ!
ಡಗೆಯೆಂದೂ ಮಾಡಬೇಡ!
ಬೇಡಿ ಬಡ್ಡಿಗಿಡಬೇಡ! (ಬಿ)
-ಡ ನಿರಂಜನಾದಿತ್ಯಾಡ!!!
-ನ ದಿನ, ಕ್ಷಣಕ್ಷಣದಾ ಲೀಲೆ!
ಹೇಸಿಕೆಯನ್ನೂ ಹೇಸಿಲ್ಲಾ ಲೀಲೆ! (ಬೆ)
-ಳಕೆಂದಾಗ ಕತ್ತಲೆಯ ಲೀಲೆ! (ನ)
-ಲಿವಾಗ ಕಾಲ್ಮುರಿಯುವ ಲೀಲೆ!
ನಾಯಿ, ಬೆಕ್ಕುಗಳ ಸ್ನೇಹ ಲೀಲೆ!
ನಿಶ್ಚಲ, ಚಂಪಲ, ಭಾವ ಲೀಲೆ! (ನ)
-ನ್ನ, ನಿನ್ನದೆಂಬುದು ಭಾರೀ ಲೀಲೆ!
ಲೀಲಾ ನಾಟಕ ಗೋಪಾಲ ಲೀಲೆ! (ಬಾ)
-ಲೆ, ನಿರಂಜನಾದಿತ್ಯಾತ್ಮ ಲೋಲೆ!!!
-ವಿ ವಿಕಲ್ಪ ರಹಿತನೇನಲ್ಲ!
ಕಂಡದ್ದ ಮನಸ್ಸಲ್ಲದೇನಲ್ಲ!
ಡವುಲು ಸ್ವಭಾವ ರವಿಗಿಲ್ಲ! (ಬಿ)
-ದ್ದು ಎದ್ದೋಡವವನಾತನಲ್ಲ!
ರವಿ ನಿರ್ವಿಕಾರನೆಂಬರೆಲ್ಲ!
ವಿಧಿ, ಹರಿ, ಹರ ತಾನೇ ಎಲ್ಲ!
ಕಂಡೂ ಕಾಣದಂತಿಹಾತನೆಲ್ಲ!
ಡಿಕ್ಕಿ ಹೊಡಿಯದ ಕವಿಯಿಲ್ಲ! (ಪು)
-ಲ್ಲ ನಿರಂಜನಾದಿತ್ಯ ಹಾಗಿಲ್ಲ!!!
-ವ ಹವ್ಯಾಸವಿಲ್ಲದೀಗ! (ನಾ)
-ನೆಂಬಹಂಕಾರ ಸುಟ್ಟೀಗ!
ತಿತಿಕ್ಷಾನಂದದಲ್ಲೀಗ! (ತಿ)
-ರುಗಾಟವಿಲ್ಲದಿಲ್ಲೀಗ!
ವಸ್ತ್ರಾಲಂಕಾರ ಬಿಟ್ಟೀಗ!
“ನೀ”, “ನಾ” ನೊಂದೆಂದುಮೆಗೀಗ! (ಯೋ)
-ಗ ನಿರಂಜನಾದಿತ್ಯಾಗ!!!
-ಡಬಾರದವರನ್ನೀಗ ಶಿವ!
ದಿವ್ಯ ಜ್ಞಾನಾನಂದನೀಗ ಶಿವ!
ಮಮತಾ ರಹಿತನೀಗ ಶಿವ! (ತ)
-ಕ್ಕ ಆಚ್ಞೆಯಿತ್ತಿಹನೀಗ ಶಿವ! (ವೇ)
-ಳೆಗೊಪ್ಪುವ ಬಾಳಲ್ಲೀಗ ಶಿವ! (ತ)
-ಲ್ಲೀನನಾಗಿರುವನೀಗ ಶಿವ! (ಲಿಂ)
-ಗಪೂಜಾ ನಿರತನೀಗ ಶಿವ!
ಶಿವೆಗೊಳಗಿರೆಂದೀಗ ಶಿವ!
ವರ ನಿರಂಜನಾದಿತ್ಯ ಶಿವ!!!
ದೇವ ದತ್ತಾತ್ರೇಯಾ ರೂಪಯ್ಯಾ! (ಬೇ)
-ರೂಹೆಗೆಡೆಗೊಡಬೇಡಯ್ಯಾ!
ಪಿನಾಕ ಧರ ಹರನಯ್ಯಾ! (ವ)
-ನಮಾಲಾಧರ ಹರಿಯಯ್ಯಾ! (ಎ)
-ಲ್ಲೆಲ್ಲೇನೇನೋ ಸೃಷ್ಟಿಪಜಯ್ಯಾ! (ನ)
-ಲ್ಲಗೆಲ್ಲಾ ನಾಮ ಮಾನ್ಯವಯ್ಯಾ! (ಜೀ)
-ವ, ದೇವನೀ ಜ್ಞಾನದಿಂದಯ್ಯಾ! (ಅ)
-ಯ್ಯಾ, ಶ್ರೀ ನಿರಂಜನಾದಿತ್ಯಯ್ಯಾ!!!
ಗೊಲ್ಲ ಬಾಲ ಶ್ರೀ ಕೃಷ್ಣಾ ಪ್ರಪುಲ್ಲ! (ಎ)
-ಲ್ಲರ ಮನೆಯಲ್ಲೂ ಬೇಕಾಗೊಲ್ಲ!
ಈರೇಳು ಲೋಕನಾಥಾ ಪ್ರಪುಲ್ಲ!
ಗೊಲ್ಲ ನಲ್ಲೆಯರ್ಗೆ ಬೇಕಾಗೊಲ್ಲ! (ಮ)
-ಲ್ಲಮರ್ದನ ಗೋಪಾಲಾ ಪ್ರಪುಲ್ಲ!
ಬೇಡಿದ್ದೀಯಲಿಕ್ಕೆ ಬೇಕಾಗೊಲ್ಲ!
ಕಾಮಧೇನು ಸಮಾನಾ ಪ್ರಪುಲ್ಲ!
ಗೊಡ್ಡಾವನೀಂಟಲ್ಕೆ ಬೇಕಾಗೊಲ್ಲ! (ಗೊ)
-ಲ್ಲ ನಿರಂಜನಾದಿತ್ಯಾ ಪ್ರಪುಲ್ಲ!!!
ವಿಶ್ವ ಕವಿ ಯಾರೆಂಬರಿವಿದೆಯೇ?
ಯೇನಾದರೊರೆದರವ ಕವಿಯೇ?
ಭವರೋಗವಿಲ್ಲದವ ಭವಿಯೇ?
ವಿಖ್ಯಾತನಾದರವನುಭವಿಯೇ?
ಯೇನೆಂದರೂ ವರಕವಿ ರವಿಯೇ!
ಅನನ್ಯ ಪತಿಭಕ್ತೆ ಶಾಂಭವಿಯೇ!
ನುಡಿದಂತಿರುವವನುಭವಿಯೇ!
ಭಕ್ತಸೂರದಾಸಾದರ್ಶ ಕವಿಯೇ!
ವಿಶ್ವಾಮಿತ್ರನೊಬ್ಬಾದರ್ಶ ಭವಿಯೇ! (ಛಾ)
-ಯೇಶ ನಿರಂಜನಾದಿತ್ಯನುಭವ್ೇ!!!
-ತಿತ ಪಾವನ ಸ್ವರೂಪಾ ವೀಣಾ!
ದಿವ್ಯ ಜೀವನೋಪಯೋಗಾ ವೀಣಾ!
ನಾಶಗೈವುದೆಲ್ಲಾ ದುಃಖಾ ವೀಣಾ! (ಅ)
-ಭ್ಯಾಸಿಗಾನಂದವೀವುದಾ ವೀಣಾ!
ಸತ್ಸಂಗ ಸಾಕಾರಾಕಾರಾ ವೀಣಾ!
ಮಾತುಕತೆಗತಿದೂರಾ ವೀಣಾ! (ಬೀ)
-ಡೇ ಬ್ರಹ್ಮಾಂಡವೆನಿಪುದಾ ವೀಣಾ! (ಭಾ)
-ವೀ ನಿಜಸುಖಕ್ಕಾಧಾರಾ ವೀಣಾ! (ವೀ)
-ಣಾ ನಿರಂಜನಾದಿತ್ಯಾತ್ಮಾ ವೀಣಾ!!!
ನಿನಗವನೇ ಗುರು ವಿಜಯಾ!
ವಾದ್ಯ ಕೋವಿದನವ ವಿಜಯಾ!
ಸದ್ಗುರುಗೆ ಕೀರ್ತಿ ತಾ ವಿಜಯಾ!
ಶ್ರೀರಂಗಾಶೀರ್ವಾದದು ವಿಜಯಾ!
ಗುರುಭಕ್ತಿಗಾ ಫಲ ವಿಜಯಾ!
ರುಕ್ಮಿಣೀಶ ಶ್ರೀಕಾಂತ ವಿಜಯಾ!
ವಿಷಯಿಯಲ್ಲಾ ನಲ್ಲ ವಿಜಯಾ!
ಜಗದೊಡೆಯಾ ಕೃಷ್ಣ ವಿಜಯಾ! (ಜೀ)
-ಯಾ ನಿರಂಜನಾದಿತ್ಯ ವಿಜಯಾ!!!
ಹರಿ ಕೃಪೆಯಿಂದಾಯ್ತಾ ಬುರುಡೆ!
“ತ್ವಮೇವ ಸರ್ವ”ವೆಂಬಾ ಬುರುಡೆ!
ದತ್ತಾತ್ರೇಯ ಸ್ವರೂಪಾ ಬುರುಡೆ!
ತಂತಿ ಪ್ರಾಣಕ್ಕಾಶ್ರಯಾ ಬುರುಡೆ! (ತಂ)
-ಬೂರಿ ಪ್ರಣವಾನಂದಾ ಬುರುಡೆ!
ರಿಪುಗಳಡಗಿಪಾ ಬುರುಡೆ!
ಬುಧ ಜನಾದಿ ಮದ್ಯಾ ಬುರುಡೆ! (ಪಾ)
-ರುಗೈವ ತಾರಕಾತ್ಮಾ ಬುರುಡೆ! (ನೋ)
-ಡೆ, ನಿರಂಜನಾದಿತ್ಯಾ ಬುರುಡೆ!!!
-ರ ಗುರುಪಾದ ಸದಾ ಸ್ಮರಿಸು! (ತೃ)
-ಣ ಸಮಾನೈಹಿಕವೆಂದೆಣಿಸು!
ನಾಮ ಜಪ ಮನದಲ್ಲಿರಿಸು!
ಗಿರಿಧರನ ಗೀತೆ ಪಠಿಸು!
ಮೋಸ ಬುದ್ಧಿಯನ್ನು ನೀ ತ್ಯಜಿಸು!
ಕ್ಷಮಾ ಸುಶೀಲ ಪರಿಗ್ರಹಿಸು!
ಘಮ-ಘಮಾತ್ಮ ವಾಸನೆ ಮೂಸು! (ನ)
-ಳಿನನಾಭನ ನೀನಿಂತೊಲಿಸು! (ಅ)
-ಸು ನಿರಂಜನಾದಿತ್ಯಗರ್ಪಿಸು!!!
ಕಾವೇರಿ! ನೀನೆಷ್ಟು ಜನರನ್ನ ತಿಂದೆ?
ವೇಗಾತಿರೇಕದಿಂದನೇಕರ ತಿಂದೆ! (ಭಾ)
-ರಿ ಪ್ರವಾಹದಲ್ಲೇನೇನೋ ತಂದೆ, ತಿಂದೆ!
ನೀಚೋಚ್ಛ ಭಾವವಿಲ್ಲದೆ ಎಲ್ಲಾ ತಿಂದೆ!
ನೆಲ, ಹೊಲವೆಂದೆನ್ನದೆ ಸಹ ತಿಂದೆ! (ಇ)
-ಷ್ಟು ತಿಂದೂ ಈ ಕ್ಷಣದಲ್ಲೂ ಅಷ್ಟೇ ತಿಂದೆ!
ಜಗಜ್ಜನನಿಯೆನಿಸಿದೆಲ್ಲಾ ತಿಂದೆ!
ನಗ್ನೆಯಾಗಿ, ಯೋಗಿನಿಯಾಗ್ಯೆಲ್ಲಾ ತಿಂದೆ!
ರಸಿಕ ಮನೋರಂಜಿನಿಯಾಗಿ ತಿಂದೆ! (ಉ)
-ನ್ನತದ ಶಿಖರದಿಂದ ಬಂದು ತಿಂದೆ!
ತಿಂಡಾಡಿ, ಉಂಡಾಡಿಯಾಗಿದೆಲ್ಲಾ ತಿಂದೆ! (ತಂ)
-ದೆ, ನಿರಂಜನಾದಿತ್ಯಾತ್ಮನಾನೆಂದು ತಿಂದೆ!!!
-ಟಾನಂದಕ್ಕುಪಯೋಗಿಸಬೇಕು!! (ಧ)
-ಣಿಗೊಪ್ಪುವಡಿಗೆ ಮಾಡಬೇಕು!
ಕಾಳು ಚೆನ್ನಾಗಿ ಬೆಂದಿರಬೇಕು! (ಹ)
-ಳೇ ಮಸಾಲೆ ಹಾಕದಿರಬೇಕು! (ತಿ)
-ನುವಾಗ ಆನಂದ ಉಕ್ಕಬೇಕು!
ಮಾಧವನ ನೆನಪಾಗಬೇಕು! (ನೋ)
-ಡಬೇಕೆಂಬ ಆಸೆ ಹುಟ್ಟಬೇಕು!
ಬೇರೆ ಭಾವ ಬಾರದಿರಬೇಕು! (ಬೇ)
-ಕು ನಿರಂಜನಾದಿತ್ಯಾನ್ನವಿಕ್ಕು!!!
ಶಿವನೂರಲ್ಲದಿರುವುದಂತೆ!
ಪ್ರೇಮಕ್ಕಾ ಜಾಗ ಸದಾ ಬೇಕಂತೆ!
ಮಾರಾರಿಯ ತಲೆಯ ಮೇಲಂತೆ!
ಊರ್ಧ್ವ ಮುಖವಾಗಿರುವುದಂತೆ!
ರವಿಯಾಜ್ಞಾನುಸಾರದಂತಂತೆ! (ಅ)
-ಲ್ಲಿದ್ದಿಲ್ಲಿಗೆಲ್ಲಾ ಪ್ರಕಾಶವಂತೆ! (ನ)
-ಲ್ಲನನ್ನಗಲಿ ಅದಿರದಂತೆ!
“ವಂದೇ ಮಾತರಂ” ಹಾಡದಕಂತೆ! (ಜೊ)
-ತೆ ನಿರಂಜನಾದಿತ್ಯಾತ್ಮನಂತೆ!!!
ಬೇಗ ಬಾರೋ ದಾಮೋದರಾ! (ರಂ)
-ಗ ಶ್ರಿರಂಗ ರಮಾವರಾ!
ಮುರಾರಿ ಕರುಣಾಕರಾ!
ರತ್ನ ಕಿರೀಟಾಲಂಕಾರಾ!
ಲೀಲಾ ಶರೀರಾವತಾರಾ!
ಧರ್ಮ ಸಂಸ್ಥಾಪನಾಕಾರಾ! (ಧೀ)
-ರಾ ನಿರಂಜನಾದಿತ್ಯಾರಾ!!!
-ರಬೇಕೋಡಾಡಿಕ್ಕೊಂಡೊಳಗಯ್ಯಾ!
ಗೋವಳರೆತ್ತಿಕೊಂಡೋಡ್ವರಯ್ಯಾ! (ಕೂ)
-ಡಾಡ್ಯೆನಗೆ ಸಂತೋಷ ನೀಡಯ್ಯಾ! (ಗಂ)
-ಡ, ಹೆಂಡಿರಾಟ ಸಾಕು ಮಾಡಯ್ಯಾ!
ಬೇಕೆನೆಗೆ ನಿನ್ನೊಡನಾಟಯ್ಯಾ (ಬ)
-ಡವಾದೆ ನಿನ್ನ ಬೆನ್ನಟ್ಟ್ಯಾನಯ್ಯಾ!
ಕೃಪೆದೋರಿನ್ನಾದರೂ ನನ್ನಯ್ಯಾ! (ಕೃ)
-ಷ್ಣ ನೀನೆನ್ನ ಸರ್ವಸ್ವ ಕಾಣಯ್ಯಾ (ಅ)
-ಯ್ಯಾ ನಿರಂಜನಾದಿತ್ಯ ಕೃಷ್ಣಯ್ಯಾ!!!
-ರಿವಿಲ್ಲದಂಧಕಾರಾ ಗೋಳಯ್ಯಾ! (ತ)
-ಗಾದೆಗಾರಧಿಕಾರಿಯೇನಯ್ಯಾ? (ಪ)
-ರ ಹಿಂಸಾತ್ಮಧಿಕಾರಿಯೇನಯ್ಯಾ? (ಅ)
-ಧಿಕಾಸೆಯವಧಿಕಾರ್ಯೇನಯ್ಯಾ?
ಕಾಮುಕನಧಿಕಾರಿಯೇನಯ್ಯಾ? (ಹ)
-ರಿ ವಿರೋಧ್ಯಧಿಕಾರಿಯೇನಯ್ಯಾ?
ಹೇಡಿ ಜೀವಧಿಕಾರಿಯೇನಯ್ಯಾ? (ಥ)
-ಳಕಿನವಧಿಕಾರಿಯೇನಯ್ಯಾ? (ಅ)
-ಯ್ಯಾ ನಿರಂಜನಾದಿತ್ಯಾನಂದಯ್ಯಾ!!!
ಲಾಭದಾಯಕವಲ್ಲವನಿಗೀ ಜಂಭ!
ಮನವ ಮಲಿನಗೊಳಿಪುದೀ ಜಂಭ! (ಪ)
-ರದಾರಾ, ಧನಕ್ಕಾಶಿಸುವುದೀ ಜಂಭ!
ಗುಹ್ಯಾದಿಂದ್ರಿಯೋದ್ವೇಗ ಮಾಳ್ಪುದೀ ಜಂಭ! (ಕು)
-ಲಾಚಾರಗಳ ಕೆಡಿಸುವುದೀ ಜಂಭ!
ಮಡದಿ ಮಕ್ಕಳ ಕಾಡುವುದೀ ಜಂಭ!
ನಿತ್ಯ ಜಗಳ ತಂದಿಡುವುದೀ ಜಂಭ!
ಗೇಯುವಭ್ಯಾಸ ತಪ್ಪಿಸುವುದೀ ಜಂಭ!
ಕೀರ್ತಿತರುವಿಗೆ ಕುಠಾರವೀ ಜಂಭ!
ಜಂಟಿ ಜೀವನಾನಂದ ವಿರೋಧೀ ಜಂಭ!
ಭಗ ನಿರಂಜನಾದಿತ್ಯಗಿಲ್ಲಾ ಜಂಭ!!!
-ನ, ರಾತ್ರಿ ಇದೇ ಗೋಳಾಯ್ತಲ್ಲಾ!
ಕಾಲ ವ್ಯರ್ಥವಾಗಿ ಹೋಯ್ತಲ್ಲಾ!
ರಾಮಾನುಗ್ರಹಾಗಿಲ್ಲವಲ್ಲಾ! (ರಾ)
-ಮ ರಾವಣ ಸತ್ತಿಲ್ಲವಲ್ಲಾ!
ವಿಭಿಷಣನಾಗಿದ್ದೇನಲ್ಲಾ! (ಎ)
-ಲ್ಲ ರಾಮಗೊಪ್ಪಿಸಿಹೆನಲ್ಲಾ!
ವರಾಂಜನೇಯನಿದ್ದಾನಲ್ಲಾ (ಬ)
-ಲ್ಲಾ ನಿರಂಜನಾದಿತ್ಯನೆಲ್ಲಾ!!!
-ಸಿದವರಿಗಿಕ್ಕುವವರಿಲ್ಲ! (ಸ)
-ವೆದರೂ ದೇಹಕ್ಕೆ ಸುಖವಿಲ್ಲ! (ಬಾ)
-ಯಿ ಬಡಾಯಿಗೆ ಕಮ್ಮಿಯೇನಿಲ್ಲ! (ನ)
-ಲ್ಲ, ನಲ್ಲೆಯರಲ್ಲಿ ಐಕ್ಯವಿಲ್ಲ!
ಬರಡಾಸೆಗೆ ಮಿತಿಯೇ ಇಲ್ಲ!
ವರ ಗುರು ಸೇವೆಗಿಷ್ಟವಿಲ್ಲ!
ಸೆರೆಮನೆಯ ವಾಸ ತಪ್ಪಿಲ್ಲ! (ತಾ)
-ಯಿಗಿನ್ನೂ ಕನಿಕರ ಹುಟ್ಟಿಲ್ಲ! (ಪು)
-ಲ್ಲ, ನಿರಂಜನಾದಿತ್ಯನಿಂದೆಲ್ಲ!!!
-ತು ಅಶಾಂತಿಗೆ ನೀನಾಗಬೇಡ!
ಕೊಡುಗೈಗೆ ತಡೆ ಮಾಡಬೇಡ! (ಮು)
-ಟ್ಟು, ಮಡಿಗೆ ಲಕ್ಷ್ಯ ಕೊಡಬೇಡ
ಮೋಕ್ಷ ಸಾಧನೆಯ ಬಿಡಬೇಡ!
ಸದ್ಗುರು ಧ್ಯಾನಕ್ಕಸಡ್ಡೆ ಬೇಡ!
ಮಾಯಾಜಾಲದಲೊದ್ದಾಡಬೇಡ!(ಬ)
-ಡತನಕ್ಕೆ ಭಯಪಡಬೇಡ!
ಬೇರೆಯವರಂಗಿ ತೊಡಬೇಡ! (ತೊ)
-ಡ ನಿರಂಜನಾದಿತ್ಯಾತ್ಮ ಬೇಡ!!!
-ರಾಜಿಸುತಿಹ ರವಿಯಿಂದು! (ಕಾ)
-ಯಾಭಿಮಾನ ಕಾಣೆ ನಾನಿಂದು! (ರ)
-ಸದೂಟ ಪ್ರಾಪ್ತವಾಯಿತಿಂದು!
ದತ್ತನಿಗಾನಂದವದಿಂದು! (ಮ)
-ತವಿತ್ತ ಮರುದಿನವಿಂದು!
ಪತಿತೋದ್ಧಾರಪ್ಪುದು ಮುಂದು! (ಗೋ)
-ವಿಂದನ ಕೃಪೆಯಿಂದೆಂದೆಂದು! (ಎಂ)
-ದು? ನಿರಂಜನಾದಿತ್ಯಂದಂದು!!!
ಧರ್ಮ, ಕರ್ಮ, ತಂದೆ, ತಾಯಿಯಯ್ಯಾ! (ಮ)
-ರ್ಮ ಮಾನವನರಿಯಬೇಕಯ್ಯಾ!
ಕಣ್ಣು “ಕಣ್ಣನ” ಕಾಣಬೇಕಯ್ಯಾ! (ಚ)
-ರ್ಮ ಪರಬ್ರಹ್ಮಾಲಿಂಗನಕ್ಕಯ್ಯಾ!
ತಂದೆ ಸರ್ವ ಕಾರಣ ಕರ್ತಯ್ಯಾ! (ಹಿಂ)
-ದೆ, ಮುಂದೆ, ಇಂದಾಧಾರವನಯ್ಯಾ!
ತಾಯಿಯವನ ಸೇವಕಳಯ್ಯಾ! (ಬಾ)
-ಯಿ, ಕೈಯವಳೋಪಕರಣಯ್ಯಾ (ಭ)
-ಯ, ಭಕ್ತ್ಯವಳ ಭೂಷಣವಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾತ್ಮಮ್ಮಯ್ಯಾ!!!
ಬಿಟ್ಟು ಹೋಗಿ ಕೆಟ್ಟು ಹೋದೆಯಲ್ಲಾ! (ನಿ)
-ಟ್ಟುಸಿರು ಬಿಡುವಂತಾಯಿತಲ್ಲಾ! (ಅ)
-ಹೋರಾತ್ರ್ಯಳುವ ಹಾಗಾಯಿತಲ್ಲಾ (ರಾ)
-ಗಿಯಾಗಿ ವೈರಾಗ್ಯ ತಪ್ಪಿತಲ್ಲಾ!
ಕೆಲಸ ವ್ಯಾಪಾರವಾಯಿತಲ್ಲಾ! (ಹು)
-ಟ್ಟು, ಸಾವಿನ ಮೂಟೆ ಹೊತ್ತೆಯಲ್ಲಾ!
ಹೋಟೆಲೂಟ ಹಿತವಾಯಿತಲ್ಲಾ! (ತಂ)
-ದೆ, ತಾಯಿಗನ್ಯಾಯವಾಯಿತಲ್ಲಾ! (ಕಾ)
-ಯವಳಿಯುವ ಕಾಲ ಬಂತಲ್ಲಾ! (ನ)
-ಲ್ಲಾ, ನಿರಂಜನಾದಿತ್ಯ ಸಾಯೋಲ್ಲಾ!!!
ದಿನ ಲೆಃಖ ಹಾಕಿ ಸುಖವೇನು? (ಅ)
-ನನ್ಯ ಭಕ್ತಿಯಿಂದ ಇರು ನೀನು!
ಬಲಿಷ್ಠನಾಗಬೇಕಿಂತು ನೀನು!
ದತ್ತನಿಗೆ ಶರಣಾಗು ನೀನು! (ಲೀ)
-ಲಾನಾಟಕ ನೋಡುತ್ತಿರು ನೀನು! (ಭ)
-ವರೋಗ ವಿಮುಕ್ತನಾಗು ನೀನು! (ಗ)
-ಣೆಯ ಮೇಲಿನಾಟ ಬಿಡು ನೀನು!
ಏರಿಳಿತವಿಲ್ಲದಾತ್ಮ ನೀನು! (ಸೂ)
-ನು ನಿರಂಜನಾದಿತ್ಯಗೆ ನೀನು!!!
ದುಡ್ಡು ಕಾಸಿಗೆ ಹೆಂಡತಿ ಮಕ್ಕಳು! (ಜ)
-ಡ್ಡು ಹಿಡಿದಾಗಾಸ್ಪತ್ರೆ ಜನಗಳು!
ಕಾಪಿ, ತಿಂಡಿಗೆ ಹೆಂಡತಿ ಮಕ್ಕಳು! (ಹ)
-ಸಿದು ಕಂಗೆಟ್ಟಾಗನ್ಯ ಜನಗಳು! (ಹೊ)
-ಗೆಯಡಗಿದಾಗ ಹೆಂಡ್ತಿ, ಮಕ್ಕಳು!
ಹೆಂಚು ಸಿಡಿದಾಗನ್ಯ ಜನಗಳು! (ನಾ)
-ಡಗೌಡನಾದಾಗ ಹೆಂಡ್ತಿ, ಮಕ್ಕಳು!
ತಿರುಕನಾದಾಗನ್ಯ ಜನಗಳು!
ಮನೆ, ಮಠಕ್ಕೆ ಹೆಂಡತಿ ಮಕ್ಕಳು! (ಹ)
-ಕ್ಕವಗಿಲ್ಲದಾಗನ್ಯ ಜನಗಳು! (ಗೋ)
-ಳು, ನಿರಂಜನಾದಿತ್ಯಗುಂಟೇ ಹೇಳು!!!
-ವಭಕ್ತಿಯಿಲ್ಲದಿದ್ದರಾಗ್ವುದೇನು?
ಸಜ್ಜನ ಪೀಡೆಯಲ್ಲದೆ ಮತ್ತೇನು? (ವ)
-ರ ಗುರೂಪದೇಶ ಕೇಳೀಗ ನೀನು!
ಕಾಮುಕನಾಗದಿರಬೇಕು ನೀನು! (ಪ)
-ರಮಾರ್ಥಕ್ಕೆ ಬೆಲೆ ಕೊಟ್ಟಾಳು ನೀನು!
ಆಗ ನೆಮ್ಮದಿಯ ನೋಡುವೆ ನೀನು! (ಊ)
-ಳಿಗ ನಿಸ್ವಾರ್ಥಿಯಾಗಿ ಮಾಡು ನೀನು! (ಮ)
-ದ, ಮತ್ಸರ ಬಿಟ್ಟು ಮೇಲೇಳು ನೀನು! (ಈ)
-ರೇಳು ಲೋಕಾಧಿಪನಾಗುವೆ ನೀನು! (ಏ)
-ನು? ನಿರಂಜನಾದಿತ್ಯಾನಂದ ನೀನು!!!
-ಲರೂಪದಾಹಾರ ಕೊಡಬೇಕು!
ವಿಷೌಷಧಿಯಿಲ್ಲದಿರಬೇಕು!
ಸಮಯವಿದಿರು ನೋಡಬೇಕು! (ದೌ)
-ರ್ಜನ್ಯತೆ ತೋರಿಸದಿರಬೇಕು! (ಮ)
-ನೆ ಜನ ಸಹಕರಿಸಬೇಕು! (ಆ)
-ಯಾಸ ಮಾಡಿಕೊಳ್ಳದಿರಬೇಕು!
ಗತಿ ಶ್ರೀಪಾದದತ್ತಾಗಬೇಕು!
ಬೇಡಿ, ಕಾಡಿ ತಿನ್ನದಿರಬೇಕು! (ಟಾ)
-ಕು, ನಿರಂಜನಾದಿತ್ಯನಾಗ್ಬೇಕು!!!
ಮಿಂಚುತ್ತಿರಲಿ “ಧ್ಯಾನಮಿಂಚು” ನಿನ್ನಲ್ಲಿ!
ಚುನಾವಣೆಯಾಗಲಿ ವಿಜಯದಲ್ಲಿ! (ಹ)
-ತ್ತಿ ಸಿಂಹವಾಹಿನಿಯಾಗು ಅದರಲ್ಲಿ! (ಕ)
-ರ ಚರಣ ಗಳುಳಿಯಲದರಲ್ಲಿ (ಅ)
-ಲಿಪ್ತತೆಗಿರ್ಪುದಗ್ರಸ್ಥಾನದರಲ್ಲಿ!
ಧ್ಯಾನಮಗ್ನಳಾಗು ಸತತದರಲ್ಲಿ! (ದಿ)
-ನ, ರಾತ್ರಿ ತಲ್ಲೀನಳಾಗು ಅದರಲ್ಲಿ!
ಮಿಂದು, ತಿಂದು, ಸಂತೃಪ್ತಳಾಗದರಲ್ಲಿ! (ಸಂ)
-ಚು, ಹೊಂಚುಗಳಿಗೆಡೆಯಿಲ್ಲದರಲ್ಲಿ!
ನಿತ್ಯ, ನಿಜಾನಂದ ಸುಖವದರಲ್ಲಿ (ಅ)
-ನ್ನ, ವಸ್ತ್ರ ಲಾಭ ಯಥೇಚ್ಛ ಅದರಲ್ಲಿ! (ಇ)
-ಲ್ಲಿ, ನಿರಂಜನಾದಿತ್ಯಾನಂದದರಲ್ಲಿ!!!
-ಲ್ಲಿನದ್ದು ನೋಡಿಕೋ ನಾನಾಗಿ!
ಗೇಯ್ಬೇಕಹೋರಾತ್ರಿ ನಾನಾಗಿ!
ಕೋಟೆ ಭದ್ರ ಮಾಡು ನಾನಾಗಿ! (ದು)
-ಡುಕಬಾರದೀಗ ನೀನಾಗಿ! (ನೋ)
-ವೆನಗಿಲ್ಲೆನ್ನೀಗ ನಾನಾಗಿ!
ನೀಡೆಲ್ಲರಿಗನ್ನ ನಾನಾಗಿ!
ನಾಸ್ತಿಕನಲ್ಲ ನೀ ನಾನಾಗಿ! (ಯೋ)
-ಗಿ, ನಿರಂಜನಾದಿತ್ಯಾನಾಗಿ!!!
ಕಿವಿ ಚೆನ್ನಾಗಿ ತೊಳಕ್ಕೊಂಡಿರಯ್ಯಾ!
ವಿಜಯ ವಾರ್ತೆ ಕೇಳುವುದಕ್ಕಯ್ಯಾ!
ಚೆಲುವಾಂಬಾ ಧರ್ಮಸ್ಥಾಪಕಳಯ್ಯಾ! (ಇ)
-ನ್ನಾರಿಗೂ ಅದು ಶಕ್ಯವಿಲ್ಲವಯ್ಯಾ! (ಯೋ)
-ಗಿರಾಜವಳ ಸಹಾಯಕನಯ್ಯಾ!
ತೊಡೆದು ಹಾಕುವಳು ಕೊಳೆಯಯ್ಯಾ! (ಒ)
-ಳ, ಹೊರಗೆಲ್ಲಾ ಶುದ್ಧವಾಗ್ವುದಯ್ಯಾ! (ತ)
-ಕ್ಕೊಂಡವಳಾಜ್ಞೆಯಂತೆ ನಡಿಯಯ್ಯಾ! (ಹೇ)
-ಡಿಯಾಗಿ ಕುಳಿತಿರಬೇಡವಯ್ಯಾ!
ರಘುಪತಿಯ ಭಜನೆ ಮಾಡಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾಜ್ಞೆಯದಯ್ಯಾ!!!
-ನಗೊಪ್ಪುವಂತಿರಲೀಯೋ ಮತಿ! (ಬೇ)
-ಗೆ ತಪ್ಪಿಸೀಗ ಕೊಡೂರ್ಧ ಗತಿ!
ನೀಡಬೇಡೆನಗೆ ದುಷ್ಟ ಮತಿ! (ಅ)
-ನಸೂಯಾತ್ಮಜ ದತ್ತ ನೀ ಗತಿ! (ಪ)
-ಲ್ಲವಿಸಲಿ ನಿನ್ನಿಂದೆನ್ನ ಮತಿ! (ಸ)
-ದಾ ನಿನ್ನಾಶೀರ್ವಾದೆನಗೆ ಗತಿ! (ಕ)
-ರುಣಿಸೀಗೆನಗೆ ಸೇವಾ ಮತಿ! (ಸಂ)
-ಗ ನಿನ್ನದೊಂದೇ ನನಗೆ ಗತಿ! (ಗ)
-ತಿ ನಿರಂಜನಾದಿತ್ಯಾತ್ಮ ಮತಿ!!!
ದೇಹ ಮನ ನಿನ್ನದಾಗಿಹುದು ಪ್ರಿಯಾ!
ಹಸಿದಾಗನ್ನವಿತ್ತವ ನೀನು ಪ್ರಿಯಾ!
ವೇದ, ವೇದಾಂತಕ್ಕೆ ಸಾಗರಾ ಹೃದಯಾ!
ಕಿರುಕುಳ ತಪ್ಪಿಸಿದಾರ್ಯ ನೀ ಪ್ರಿಯಾ! (ನಿ)
-ನ್ನುಪಕಾರ ಮರೆಯಲಾರೆ ನಾ ಪ್ರಿಯಾ!
ಸರ್ವರುದ್ಧಾರಕ್ಕಾಗಿಹುದಾ ಹೃದಯಾ!
ದರ್ಶನ ಸದಾ ಕೊಡು ನನಗೆ ಪ್ರಿಯಾ!
ಯಜ್ಞವಾಗುತ್ತಿದೆ ನಿನಗಾಗಿ ಪ್ರಿಯಾ!
ಹೃತ್ಪೂರ್ವಕ ಸೇವೆಯಿದು ಶ್ರೀ ಹೃದಯಾ!
ದಯೆಯಿಂದ ಸ್ವೇಕರಿಸಿದನು ಪ್ರಿಯಾ! (ದ)
-ಯಾಮಯಾ ನಿರಂಜನಾದಿತ್ಯಾತ್ಮ ಪ್ರಿಯಾ!!!
ನರಜನ್ಮದಿಂದಾಗಬೇಕುಪಯೋಗ! (ಪು)
-ಸಿಯಾಸೆಗಳಿಂದ ಆಗದುಪಯೋಗ (ಅ)
-ನವರತಾತ್ಮಧ್ಯಾನದಿಂದುಪಯೋಗ!
ಭೋಗ ತ್ಯಾಗಾತ್ಮ ಚಿಂತನೆಗುಪಯೋಗ! (ಯೋ)
-ಗದಭ್ಯಾಸದಿಂದಾಗುವುದುಪಯೋಗ! (ಅಂ)
-ದಿಂದು, ಮುಂದೆನ್ನದಾದರದುಪಯೋಗ!
ದೇಹ ದೇವಾಲಯವಾದಾಗುಪಯೋಗ! (ಅ)
-ನುದಿನ ಗುರುಸೇವೆಯಿಂದುಪಯೋಗ!
ಪರಬ್ರಹ್ಮನವನೆಂದಾಗುಪಯೋಗ! (ವ)
-ಯೋಮಿತಿ ಅವಗಿಲ್ಲೆಂದಾಗುಪಯೋಗ! (ತ್ಯಾ)
-ಗರಾಜ ನಿರಂಜನಾದಿತ್ಯೋಪಯೋಗ!!!
ರಂಗನಾಥನ ಪುಜೆ ನಿತ್ಯವಾಗುತಿದೆ! (ಮಂ)
-ಗನಾಟ, ನೋಟ, ಪರಮಾನಂದವಾಗಿದೆ!
ನಾಮಕರಣ ಪರಮಾತ್ಮನೆಂದಾಗಿದೆ! (ಪಂ)
-ಥ, ಪಿಶಾಚಿ ಹುಚ್ಚಿನಿಂದ ಕುಣಿಯುತಿದೆ!
“ನ ಗುರೋರಧಿಕಂ” ಬೋಧೆ ಕೇಳುತ್ತಲಿದೆ!
ಪೂಜ್ಯ ಪಾದ ಸೇವೆ ಕಾಣದಾಗುತ್ತಲಿದೆ! (ಸಂ)
-ಜೆಯಾರತಿ ಕರ್ಪೂರವಿಲ್ಲದಾಗುತಿದೆ!
ನಿತ್ಯ ನೈವೇದ್ಯದಾಸಕ್ತಿ ತಪ್ಪುತ್ತಲಿದೆ! (ಭೃ)
-ತ್ಯ ನಾನೆಂಬ ಭಾವ ಮಾಯವಾಗುತ್ತಲಿದೆ!
ವಾಸುದೇವನ್ಯನಲ್ಲವೆಂದನ್ನಿಸುತ್ತದೆ!
ಗುಣಾತೀತ ಸ್ಥಿತಿ ಪ್ರಾಪ್ತವಾಗುತ್ತಲಿದೆ!
ತಿರುಗಾಟವೀರೇಳು ಲೋಕದಲ್ಲಾಗಿದೆ! (ಎ)
-ದೆ ನಿರಂಜನಾದಿತ್ಯಾತ್ಮನಿಂದ ತುಂಬಿದೆ!!!
-ದೇಪದೇ ತಿನ್ನುವೇಚ್ಛೇಕೀಗ?
ಕೇಟ್ಟಭ್ಯಾಸವಿದ ಬಿಡೀಗ!
ನಿಶ್ಚಲ ತತ್ವದಲ್ಲಿರೀಗ!
ನಶ್ವರದಾನಂದ ಸಾಕೀಗ! (ಯೋ)
-ಗೀಶ್ವರ ಶಿವನಾಗಿರೀಗ!
ಹುದುಗಿಸಾಶೆಗಳನೀಗ! (ನೆ)
-ಚ್ಚೀ ಗುರುಪಾದಪದ್ಮವೀಗ! (ಸೊ)
-ಗ ನಿರಂಜನಾದಿತ್ಯನೀಗ!!!
ಎಷ್ಟು ಸುಂದರಾ ಗುರುದತ್ತ ಮಂದಿರಾ! (ಎ)
-ಷ್ಟು ಮನೋಹರಾ ಶ್ರೀ ಗುರು ದಿಗಂಬರಾ!
ಸುಂದರಾಂಗನುಟ್ಟಿಹ ಕಾಷಾಯಾಂಬರಾ!
ದರ್ಶನಾಪೇಕ್ಷಿಗಳಾನಂದಾ ಶೃಂಗಾರಾ!
ರಾತ್ರಿ, ದಿನ ಬಗೆ ಬಗೆಯಾಲಂಕಾರಾ!
ಗುರುಭಕ್ತರ ಭಕ್ತಿ ಪೂಜೋಪಚಾರಾ! (ಗು)
-ರುನಾಮ ಸಂಕೀರ್ತನೆಯಾನಂದಾಪಾರಾ!
ದತ್ತ ಪ್ರಸಾದವೆಲ್ಲರ ಪ್ರಾಣಾಧಾರಾ! (ಹ)
-ತ್ತವತಾರವೆತ್ತಿದ ಹರಿಯಾಚಾರಾ!
ಮಂದಮತಿಗರಿವಾಗದ ವಿಚಾರಾ!
ದಿವ್ಯಜೀವಿಗಳಿಗಿದೊಂದು ವಿಹಾರಾ!
ರಾರಾಜಿಪ ನಿರಂಜನಾದಿತ್ಯಾಗಾರಾ!!!
ಜನನ ಮರಣ ದೇಹಕ್ಕಯ್ಯಾ! (ಸ)
-ಯ್ಯಾದ್ರೀಶ ಸರ್ವಂತರ್ಯಾಮಿಯಯ್ಯಾ!
ಪುಣ್ಯ, ಪಾಪವನಿಗಿಲ್ಲವಯ್ಯಾ!
ತ್ರಯಮೂರ್ತಿ ಸ್ವರೂಪವನಯ್ಯಾ!
ಶೋಕವೆಂಬುದು ಮನೋವೃತ್ತ್ಯಯ್ಯಾ!
ಕಲ್ಲಾಗಬೇಕೀಗ ಮನಸ್ಸಯ್ಯಾ!
ವೇದಾಂತಾತ್ಮ ನಿನ್ನ ಮಗನಯ್ಯಾ!
ಕರ್ಮ ಕಳೆದೀಗಾತ್ಮಾರಾಮಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾನಂದಯ್ಯಾ!!!
-ಯವಾಗಲನ್ಯಾಯ ಇಂದಿರಾ!
ಜಗಳ ಸಾಕಿನ್ನು ಇಂದಿರಾ!
ಗರಿಷ್ಠಳಾಗ್ಯಾಳು ಇಂದಿರಾ!
ದಂಭ, ದರ್ಪ ಬೇಡ ಇಂದಿರಾ!
ಬಾಯಿ, ಕೈಯ್ಯೊಂದಾಗ್ಲಿ ಇಂದಿರಾ!
ಇಂದಿನದ್ದಿಂದಾಗ್ಲಿ ಇಂದಿರಾ!
ದಿವ್ಯ ಜ್ಞಾನಿಯಾಗು ಇಂದಿರಾ! (ಹ)
-ರಾ ನಿರಂಜನಾದಿತ್ಯೇಂದಿರಾ!!!
ಭಕ್ತರಭೀಷ್ಟ ಸಲ್ಲಿಸಿ ಭಕ್ತಿ ಬಲಿಸಪ್ಪಾ! (ಶ)
-ಕ್ತ ನೀನೆಂಬುದರರಿವೆಲ್ಲರಿಗಾಗಲಪ್ಪಾ! (ಶ)
-ರಣಾಗತರ ನಿರಾಶೆಗೊಳಿಸಬೇಡಪ್ಪಾ!
ಭೀರುಗಳವರೆಂದೆನಿಸಬಹುದೇನಪ್ಪಾ? (ಭ್ರ)
-ಷ್ಟರಾಗಿ ಅವರು ಕೆಟ್ಟುಹೋಗಬಾರದಪ್ಪಾ!
ಸರ್ವ ಕಾರಣಕರ್ತ, ಸರ್ವ ಶಕ್ತ ನೀನಪ್ಪಾ! (ಬ)
-ಲ್ಲಿದ ಬಡವನೆಂಬ ಭೇದ ನಿನಗಿಲ್ಲಪ್ಪಾ!
ಸಿರಿದೇವಿಗೊಲಿದಂತೆಲ್ಲರಿಗೊಲಿಯಪ್ಪಾ!
ಭವಭಯವೆಡೆಬಿಡದೆ ಕಾಡುವುದಪ್ಪಾ! (ಶ)
-ಕ್ತಿ ನೀನಿತ್ತು ತರಳರ ಕಾಪಾಡಬೇಕಪ್ಪಾ!
“ಬಸಿರ್ಗುಂಟು ಬಾಯ್ಗಿಲ್ಲ” ವೆಂದಾಗಬಾರದಪ್ಪಾ! (ನ)
-ಲಿನಲಿದು ಭಜನೆ ನಿನ್ನದು ಮಾಡಿಸಪ್ಪಾ!
ಸಖನಾಗಿ ಬಂದು ನಿನ್ನೊಡನಾಟ ನೀಡಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯಾನಂದನುಗ್ರಹಿಸಪ್ಪಾ!!!
-ರಮಾನಂದದ ಊಟಮೃತಾ!
ತನು, ಮನ ಸುಂದರಾಮೃತಾ!
ರಾಜೀವಾ ಸಖಾನಂದಾಮೃತಾ!
ಲಂಕೇಶ್ವರಾರಿಯಾತ್ಮಾಮೃತಾ!
ಕಾಮಾರಿಯರ್ಧನಾರ್ಯಮೃತಾ! (ಆ)
-ರ್ಯ ವೀಣಾವಾದ್ಯಾನಂದಾಮೃತಾ!
ಮೃಗನಯನಾ ವಾಣ್ಯಮೃತಾ!
ತಾ, ನಿರಂಜನಾದಿತ್ಯಾಮೃತಾ!!!
ಹೊಗಳಿದರೂ ಹಿಗ್ಗನಯ್ಯಾ ಭಕ್ತ! (ತೆ)
-ಗಳಿದರೆಂದೂ ಕುಗ್ಗನಯ್ಯಾ ಭಕ್ತ! (ತಾ)
-ಳಿ, ಬಾಳುವಭ್ಯಾಸಿ ತಾನಯ್ಯಾ ಭಕ್ತ!
ದರ್ಶನಾನಂದದಲ್ಲಿರ್ಪಯ್ಯಾ ಭಕ್ತ!
ರೂಪ, ನಾಮ ಬಿಟ್ಟವನಯ್ಯಾ ಭಕ್ತ!
ಹಿರಿಯರಭಿಮಾನಿಯಯ್ಯಾ ಭಕ್ತ! (ಕ)
-ಗ್ಗನನ್ನೂ ಕಡೆಗಾಣನಯ್ಯಾ ಭಕ್ತ!
ನಯ, ವಿನಯಾನ್ವಿತನಯ್ಯಾ ಭಕ್ತ!(ಕೈ)
-ಯ್ಯಾರೆ ಸೇವಾ ತತ್ಪರನಯ್ಯಾ ಭಕ್ತ!
ಭಜನಾಭ್ಯಾಸ ನಿರತಯ್ಯಾ ಭಕ್ತ! (ಶ)
-ಕ್ತ, ನಿರಂಜನಾದಿತ್ಯಾನಂದ ಭಕ್ತ!!!
ಲಾಭಾತುರ ಕಲಾಪ್ರೇಮಿಯೇನಲ್ಲ!
ಪ್ರೇಮ ಲೋಭಕ್ಕೆಡೆಗೊಡುವುದಿಲ್ಲ! (ನಿ)
-ಮಿಷನಿಮಿಷ ಮೌಲ್ಯವನಿಗೆಲ್ಲ! (ಏ)
-ಕಾಂತದಾಭ್ಯಾಸಾತ ಬಿಡುವುದಿಲ್ಲ!
ಚಕ್ಕಂದವಾಡುತ್ತಾತಿರುವುದಿಲ್ಲ!
ನಟನೆಯಾಟವನಿಗೆ ಬೇಕಿಲ್ಲ!
ಪ್ರೇಕ್ಷಕರಿಗಾಗಿ ಅವನೇನಿಲ್ಲ!
ಮಿತಾಹಾರ ಆತ ಬಿಡುವುದಿಲ್ಲ! (ಭ)
-ಯ ಕಲೋಪಾಸಕನಿಗೇನೇನಿಲ್ಲ! (ನ)
-ಲ್ಲ, ನಿರಂಜನಾದಿತ್ಯಾಂಕಿತವೆಲ್ಲ!!!
ಒಕ್ಕಲಿಗ ನುತ್ತು, ಬಿತ್ತಿ, ಬೆಳೆಯಬೇಕು! (ಅ)
-ಕ್ಕರೆಯಿಂದಾದಮೇಲೆ ನೈವೇದ್ಯವಾಗಬೇಕು! (ಖಾ)
-ಲಿಬಿಟ್ಟ ನೆಲ ಪೋಲಾಗದೇನಾಗಬೇಕು? (ರಂ)
-ಗನಾಥನೊಲುಮೆಗೆ ಸೇವಾಭಾಗ್ಯ ಬೇಕು! (ಅ)
-ನುದಿನದಲ್ಲಿದು ಶ್ರದ್ಧೆಯಿಂದಾಗಬೇಕು! (ಹೊ)
-ತ್ತು, ಹೆತ್ತಾತನಿಗಿದು ತೃಪ್ತಿಯಾಗಬೇಕು!
ಬಿನ್ನಹವನ ಶ್ರೀ ಪಾದಕ್ಕೊಪ್ಪಿಸಬೇಕು! (ಎ)
-ತ್ತಿಯವನಿಂದ ಮುದ್ದಾಡಿಸಿಕೊಳ್ಳಬೇಕು!
ಬೆರೆತು ಅವನಲ್ಲಿ ಲಯವಾಗಬೇಕು! (ಗೆ)
-ಳೆತನ ಐಹಿಕಕ್ಕಾಗದಂತಿರಬೇಕು! (ಭ)
-ಯ, ಭಕ್ತಿ ತನ್ನಲ್ಲಿ ಮೂರ್ತಿಭವಿಸಬೇಕು!
ಬೇರೆಯವರ ಠೀಕೆ ಮಾಡದಿರಬೇಕು!
ಕುಮಾರ ನಿರಂಜನಾದಿತ್ಯಗಾಗಬೇಕು!!!
-ರೇಚ್ಛೆಗೆ ಶೀರ ಬಾಗು ನೀನು!
ನಾಮ ಜಪಿಯಾಗಿರು ನೀನು!
ಲೋಕೇಶ್ವರನಾಗಿರು ನೀನು!
ಚಿದಾನಂದನಾಗಿರು ನೀನು! (ಪು)
-ಸಿ ಮಾತು ನಂಬದಿರು ನೀನು!
ದಮೆ, ಶಮೆಯಿಂದಿರು ನೀನು!
ರೇಣುಕಾತ್ಮಜಾನೆಂಬೆ ನೀನು! (ನೀ)
-ನು ನಿರಂಜನಾದಿತ್ಯಲ್ಲೇನು???
-ಕಲ್ಪವೆಂದಿಗೂ ಮಾಡಬೇಡ! (ಸ್ವ)
-ಲ್ಪವೆಂದತೃಪ್ತಿ ಪಡಬೇಡ!
ಮಾಯಾ ಮೋಹಿತನಾಗಬೇಡ (ಆ)
-ಡಿ ಶಾಂತಿ ಕಳಕ್ಕೊಳ್ಳಬೇಡ! (ಶಂ)
-ಕೆ ಪ್ರಸಾದದಲ್ಲಿಡಬೇಡ! (ಮೃ)
-ಡನ ಭಜನೆ ಬಿಡಬೇಡ!
ಬೇರಿನ್ನೇನೂ ಯಾಚಿಸಬೇಡ! (ಬೇ)
-ಡ, ನಿರಂಜನಾದಿತ್ಯನಾಡ!!!
-ಗನಾಥ ತಾನಕ್ಕೆ ಭಜನೆ!
ಭಾವಾತೀತನಕ್ಕೆ ಭಜನೆ! (ಯೋ)
-ಗ್ಯ ವಿರಾಗಿಯಕ್ಕೆ ಭಜನೆ! (ರ)
-ಕ್ಕೆಸಾರಿ ತಾನಕ್ಕೆ ಭಜನೆ! (ಎ)
-ಲ್ಲರೂ ರಾಮನಕ್ಕೆ ಭಜನೆ!
ಭವ ನಿರ್ನಾಮಕ್ಕೆ ಭಜನೆ!
ಜನ್ಮ ಪಾವನಕ್ಕೆ ಭಜನೆ! (ನೆ)
-ನೆ, ನಿರಂಜನಾದಿತ್ಯ ನೀನೇ!!!
ಮಳೆಯ ಜಲಾತ್ಮ ನಿರ್ಮಲ! (ಮ)
-ಲಯಮಾರುತಾಪ್ತಾತ್ಮ ಬಲ!
ಸರ್ವಾಂತರ್ಯಾಮಿ ಸರ್ವ ಬಲ! (ಮ)
-ಲಿನ ಜನ ನಿರ್ಜಿವ ಬಲ! (ಬ)
-ಲಾಬಲಾ ವಿಚಾರಾತ್ಮ ಬಲ!
ಯುದ್ಧ ಬುದ್ಧ್ಯಹಂಕಾರ ಬಲ! (ದು)
-ರ್ಬಲ ವಿಷಯೇಂದ್ರಿಯ ಬಲ! (ಬ)
-ಲ, ನಿರಂಜನಾದಿತ್ಯ ಬಲ!!!
-ಳ, ಮೇಳ ರಸಿಕ ತಪಸಿ!
ಮನ ಸದಾರಾಮ ತಪಸಿ! (ಒ)
-ಳ, ಹೊರಗಮಲ ತಪಸಿ!
ಗೊಡ್ಡಾಕಳೇನಲ್ಲ ತಪಸಿ! (ಕು)
-ಳ್ಳ ಅಗಸ್ತ್ಯ ಪುಲ್ಲ ತಪಸಿ!
ತರಣಿ ಸಮಾನ ತಪಸಿ!
ಪತಿತ ಪಾವನ ತಪಸಿ! (ದ)
-ಸಿ ನಿರಂಜನಾದಿತ್ಯ ರಿಸಿ!!!
ಮಹಾ ಕಲಾಕೋವಿದನವನು!
ಗಾನಲೋಲ ರಾಘವನವನು!
ಗಿರಿಜಾಪತಿಯಾಪ್ತನವನು!
ಕಾರ್ಯ, ಕಾರಣ, ಕರ್ತನವನು!
ದಿನಮಣಿ ವಂಶಜನವನು! (ಕ)
-ರುಣಾಪೂರ್ಣ ಹೃದಯನವನು! (ಶಿ)
-ವೆಯ ಆರಾಧ್ಯ ದೇವನವನು!
ನಾಮ ಭಜನಾನಂದನವನು! (ಹ)
-ನುಮ ನಿರಂಜನಾದಿತ್ಯವನು!!!
-ಳಸಿಕೋ ನಿನ್ನಿಷ್ಟದಂತಯ್ಯಾ!
ಸೀತಾರಾಮ ಪ್ರಸಾದದಯ್ಯಾ!
ಕಾರ್ಯಜಯಕ್ಕಿದು ಬೇಕಯ್ಯಾ! (ಶ್ರೇ)
-ಷ್ಠತೆಯ ಹೇಳಿ ತೀರದಯ್ಯಾ!
ಬೇರೆ ಗಿಡದಂತಿದಲ್ಲಯ್ಯಾ!
ಕೇಶವಗಿದು ಪ್ರೀತಿಯಯ್ಯಾ! (ದಿ)
-ನ, ರಾತ್ರಿಯಿದ ಧರಿಸಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾಗಯ್ಯಾ!!!
-ರಿ ಖರ್ಚಿಗೇರ್ಪಾಡು ಮಾಡಿತ್ತಲ್ಲಮ್ಮಾ! (ಹೋ)
-ಗಿ ಹೊರಗೆಷ್ಟು ಕಾಲವಿರ್ಪುದಮ್ಮಾ? (ನಿ)
ನ್ನೂರು ನಿನಗೆ ಕಾಶಿಯಲ್ಲೇನಮ್ಮಾ?
ಬಲು ಹಿಂಸೆ ಪರದೇಶವಾಸಮ್ಮಾ! (ಮ)
-ರಳಿ ಶಿವನ ದರ್ಶನ ಮಾಡಮ್ಮಾ!
ಬಾಗಿಲು ಸದಾ ತೆರೆದಿಹುದಮ್ಮಾ! (ಹ)
-ರ ಸೇವೆಗಿಂತ ಮಿಗಿಲಾವುದಮ್ಮಾ?
ದೇವಿ ನೀನಾಗಿ ಶೋಭಿಸುವೆಯಮ್ಮಾ!
ನಷ್ಟ, ಕಷ್ಟಕ್ಕೊಳಗಾಗ ಬೇಡಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯನ ಸೇರಮ್ಮಾ!!!
ಆತ್ಮ ತೃಪ್ತಿಯ ಸೇವೆ ಸಂಪತ್ತು! (ಆ)
-ತ್ಮನಾತ್ಮ ಜ್ಞಾನ ಮಹಾ ಸಂಪತ್ತು!
ತೃಣ ಸಮಾನ ಲೋಕ ಸಂಪತ್ತು! (ಪ್ರಾ)
-ಪ್ತಿ ನಿತ್ಯಾಭ್ಯಾಸದಿಂದಾ ಸಂಪತ್ತು!
ಯದುಪನುಪದೇಶಾ ಸಂಪತ್ತು!
ಸೇವಾಭಾಗ್ಯತ್ಯಮೌಲ್ಯ ಸಂಪತ್ತು! (ಸ)
-ವೆಸುವುದು ಪ್ರಾರಬ್ಧಾ ಸಂಪತ್ತು!
ಸಂಜೀವಿನಿ ಸಮಾನಾ ಸಂಪತ್ತು!
ಪವಿತ್ರಾತ್ಮಾನುಗ್ರಹಾ ಸಂಪತ್ತು! (ಸೊ)
-ತ್ತು, ನಿರಂಜನಾದಿತ್ಯಾ ಸಂಪತ್ತು!!!
ಗಾಯಿತ್ರೀ ತಾಯಿಯಾಶಯ!
ದಿವ್ಯಾತ್ಮ ಜೀವನಾಶಯ!
ಯದುನಾಥನಾಪ್ತಾಶಯ!
ಶುದ್ಧ ಭಕ್ತಿ ಭಾವಾಶಯ!
ಭಾನುಕುಲೇಶನಾಶಯ!
ಶಶಿಧರಾನಂದಾಶಯ! (ಜ)
-ಯ ನಿರಂಜನಾದಿತ್ಯಾಯ!!!
ಬನ್ನಿರೆ! ತನ್ನಿರೇ!! ತಿನ್ನಿರೇ!!! (ಸ)
-ನ್ನಿಧಿಯ ಸೇವೆ ಬೇಕೆನ್ನಿರೇ!
ರೇಖೆ, ರೂಪವಿನ್ನೇಕೆನ್ನಿರೇ!
ತತ್ವಾರ್ಥದಲ್ಲಿರಿಸೆನ್ನಿರೇ! (ನ)
-ನ್ನಿ, ಲೋಕಸುಖವಲ್ಲೆನ್ನಿರೇ!
ರೇಗದಿರೆನ್ನ ಮೇಲೆನ್ನಿರೇ!
ತಿನ್ನಿಸಮೃತವನೆನ್ನಿರೇ! (ಮ)
-ನ್ನಿಸಪರಾಧಗಳೆನ್ನಿರೇ! (ತೋ)
-ರೇ ನಿರಂಜನಾದಿತ್ಯನಾರೇ???
ವೃತ್ತಿ ನೀನು, ನಿವೃತ್ತಿ ನಾನು! (ಸು)
-ತ್ತಿ ಬೇಸತ್ತಸತ್ತಾಗ್ವೆ ನೀನು!
ನೀತಿ, ರೀತ್ಯತೀತಾಗಿಹೆ ನಾನು!
ನುಡಿ, ನಡೆಯಿಂದೋಡಾಡ್ವೆ ನೀನು!
ನಿಶ್ಚಲ ಸ್ಥಿತಿಯಲ್ಲಿಹೆ ನಾನು!
ವೃದ್ಧಿ ಕ್ಷಯಗಳಾಧೀನ ನೀನು! (ಬು)
-ತ್ತಿ ಖಾಲಿಯಾದವಧೂತ ನಾನು!
ನಾಮ, ರೂಪಾವರಣಾತ್ಮ ನೀನು! (ನಾ)
-ನು, ನಿರಂಜನಾದಿತ್ಯನಲ್ಲೇನು???
ಕರ್ಮನಿಷ್ಠರಿಗಿದೊಂದು ವ್ರತ! (ಇ)
-ಷ್ಟಸಿದ್ಧಿಗಾಗಿ ಮಾಳ್ಪರೀ ವ್ರತ!
ಹಗಲುಪವಾಸದಿಂದಾ ವ್ರತ! (ವ)
-ರ ಪ್ರಸಾದ ಲಾಭ ರಾತ್ರೀ ವ್ರತ! (ಆ)
-ಗಮಿಕ, ಮಾಡಿಸುವನೀ ವ್ರತ! (ಗ)
-ಣೇಶ ಮಹಿಮೆಯೋದುವಾ ವ್ರತ!
ಶಕ್ತಿ, ಭಕ್ತಿ, ಭುಕ್ತಿಪ್ರದಾ ವ್ರತ! (ತೀ)
-ವ್ರ ಫಲದಾಯಕನೆಂಬಾ ವ್ರತ! (ನು)
-ತ ನಿರಂಜನಾದಿತ್ಯಾತ್ಮ ವ್ರತ!!!
-ಳಿಗ ಮಾಡುವೆ ನಾನೆಂದನಾಗ! (ಆ)
-ಗ್ಗೆನ್ನ ಹರಸಬೇಕೆಂದನಾಗ!
ಬಲ ನಿನ್ನದೆನಗೆಂದನಾಗ! (ಅ)
-ರುಹೆಲ್ಲವಾಗೆನಗೆಂದನಾಗ! (ಈ)
-ವೆ ಕಾಣಿಕೆ ನಿನಗೆಂದನಾಗ!
ನೆಂಟ ನೀನು ನನಗೆಂದನಾಗ!
ದತ್ತಾತ್ರೇಯನೇ ನೀನೆಂದನಾಗ!
ನಾಮಜಪ ಬಿಟ್ಟಿಲ್ಲೆಂದನಾಗ! (ನಾ)
-ಗ ನಿರಂಜನಾದಿತ್ಯಾನಂದಾಗ!!!
ಗಣೇಶನಾಗಿಡ್ಲಿ, ಕಡುಬು ತಿಂದೆ! (ಪ್ರಾ)
-ಣೇಶಗರ್ಪಣೆ ಮಾಡಿ ನಾನು ತಿಂದೆ!
ಶಕ್ತಿಮಾತೆಯೊಪ್ಪಿಗೆಯಿಂದ ತಿಂದೆ!
ನಾಶವಾಗಲರಿಷ್ಟವೆಂದು ತಿಂದೆ!
ಗಿರೀಶನನುಗ್ರಹದೆಂದು ತಿಂದೆ! (ಕೊ)
-ಡ್ಲಿ ಸಂಪೂರ್ಣ ಬೆಂಬಲವೆಂದು ತಿಂದೆ!
ಕಷ್ಟ ಸುಟ್ಟು ಹಿಟ್ಟಾಗಲೆಂದು ತಿಂದೆ! (ನೋ)
-ಡುತ್ತ, ಕೂಡುತ್ತಾನಂದದಿಂದ ತಿಂದೆ!
ಬುದ್ಧಿ ಶುದ್ಧವಾಗಿರಲೆಂದು ತಿಂದೆ!
ತಿಂಗಳಾಯ್ತು ಬಂದು ನಾನೆಂದು ತಿಂದೆ! (ತಂ)
-ದೆ ನಿರಂಜನಾದಿತ್ಯನಾಗಿ ತಿಂದೆ!!!
-ನುಗ್ರಹ ಮಾಡುವುದು ಶುದ್ಧ ಮನಸು!
ಗ್ರಹಿಸಿದ ತೊಳೆಯಬೇಕು ಮನಸು!
ಹರಿ ನಾಮ ಜಪಿಸಬೇಕು ಮನಸು!
ಬಹಳ ಶೋಭಿಸುವುದಾಗ ಮನಸು! (ಭ)
-ಯ, ಭಕ್ತಿಯಿಂದ ತುಂಬಬೇಕು ಮನಸು!
ಸುಧಾರಿಸಿಕ್ಕೊಳ್ಳುವುದಾಗ ಮನಸು! (ಆ)
-ವುದಕ್ಕೂ ಅಂಜದಿರಬೇಕು ಮನಸು!
ದುಸ್ಸಂಗ ದೂರ ಮಾಡಬೇಕು ಮನಸು!
ಮಮಕಾರ ವರ್ಜಿಸಬೇಕು ಮನಸು!
ನವೋದಯ ನೋಡುವುದಾಗ ಮನಸು!
ಸುಖಿ ನಿರಂಜನಾದಿತ್ಯಾತ್ಮ ಮನಸು!!!
ಚಿತ್ತೈಸಬೇಕು ಗುರುದೇವ ದತ್ತಾ! (ಎ)
-ತ್ತೈದಲಿ ನಿನ್ನ ಬಿಟ್ಟು ನಾನು ದತ್ತಾ?
ಸಚ್ಚಿದಾನಂದ ಸುಖ ತೋರು ದತ್ತಾ!
ಬೇಡೆನಗಿಹ ಲೋಕ ಸುಖ ದತ್ತಾ! (ಟಾ)
-ಕು ನೀನಾಗಿ ಕಾಪಾಡಬೇಕು ದತ್ತಾ!
ಗುರುವಿಂದಧಿಕರಾರಿಲ್ಲ ದತ್ತಾ! (ಕ)
-ರುಣಾನಿಧಿ ನೀನಲ್ಲವೇನು ದತ್ತಾ?
ದೇಹಮೋಹ ದಹಿಸಬೇಕು ದತ್ತಾ!
ವಸನಾಶನ ನಿನ್ನ ಧ್ಯಾನ ದತ್ತಾ!
ದರ್ಶನಾನಂದವಿತ್ತು ಎತ್ತು ದತ್ತಾ! (ದ)
-ತ್ತಾ! ನಿರಂಜನಾದಿತ್ಯ ಗುರುದತ್ತಾ!!!
ದಾಸಿ ನೀನು ದಾಮೋದರಗಮ್ಮಾ!
ಮುಕ್ಕೋಟಿ ದೇವರ್ಕಳಿಗಮ್ಮಾ! (ಇ)
-ತ್ತೈ ಭಗೀರಥನಭೀಷ್ಟವಮ್ಮಾ! (ಐ)
-ದೆ ನಿನ್ನರಸ ಮಹೇಶ್ವರಮ್ಮಾ!
ನೀಚೋಚ್ಟ ಭೇದ ನಿನಗಿಲ್ಲಮ್ಮಾ! (ಅ)
-ನುದಿನದ ಸೇವೆ ಸ್ತುತ್ಯವಮ್ಮಾ!
ಗಂಗಾಧರ ನಾಮ ನಿನ್ನಿಂದಮ್ಮಾ! (ಭ)
-ಗನಡಿಯಲ್ಲಿ ನಿನ್ನ ಊರಮ್ಮಾ! (ಅ)
-ಮ್ಮಾ ನಿರಂಜನಾದಿತ್ಯ ಗಂಗಮ್ಮಾ!!!
ವರದಾನಂದಾ ನಂದಾನಂದ!
ನಾರದಾನಂದಾ ನಂದಾನಂದ!
ನಂದನಾನಂದಾ ನಂದಾನಂದ!
ದಾಸರಾನಂದಾ ನಂದಾನಂದ! (ಅ)
-ನಂಗನಾನಂದಾ ನಂದಾನಂದ! (ಬೃಂ)
-ದಾವನಾನಂದಾ ನಂದಾನಂದ!
ನಂಬಲಾನಂದಾ ನಂದಾನಂದ! (ಅಂ)
-ದ ನಿರಂಜನಾದಿತ್ಯಾನಂದ!!!
ಪ್ರೇಮಧಾಮ ನಿರಂಜನಾದಿತ್ಯನಿಲಯ! (ಸೋ)
-ಮಶೇಖರನ ನಿತ್ಯ ಪೂಜೆಗದಾಲಯ! (ವಿ)
-ಧಾನ ಪ್ರತಿಪಾದನೆಗದಾದರ್ಶಾಲಯ!
ಮಧುರ ವೀಣಾ ರವ ಕೇಳುವಾಲಯ!
ನಿತ್ಯಾತಿಥಿ ಸೇವೆ ನಡೆಯುವ ನಿಲಯ!
ರಂಗನಾಥನ ಪೂರ್ಣಾನುಗ್ರಹದಾಲಯ!
ಜಗಜ್ಜನನಿ ಗಾಯಿತ್ರೀ ದೇವಿಯಾಲಯ!
ನಾದ ಕಲೋಪಾಸಕರಿಗಾಶ್ರಯಾಲಯಾ!
ದಿಗಂಬರಾನಂದನ ಪರಿಶುದ್ಧಾಲಯ! (ಜಾ)
-ತ್ಯತೀತವಾದ ಪರಬ್ರಹ್ಮಾನಂದಾಲಯ!
ನಿತ್ಯ ಗುರುಪಾದ ಪೂಜೋಪಚಾರಾಲಯ!
ಲಕ್ಷ್ಮಿಯಾನಂದ ನಿಲಯಾ ಸುಭಿಕ್ಷಾಲಯ!
ಯದುಪ ನಿರಂಜನಾದಿತ್ಯಾತ್ಮ ನಿಲಯ!!!
-ತು ಬದುಕಿರಬೇಕಪ್ಪಾ!
ಉದ್ಯೋಗ ಮಾಡಬೇಕಪ್ಪಾ! (ಬಾ)
-ಳಿಗಿದು ಬೇಕೇ ಬೇಕಪ್ಪಾ!
ಸತ್ಯಾತ್ಮನಾಗಬೇಕಪ್ಪಾ!
ಬೇಸರ ಬಿಡಬೇಕಪ್ಪಾ!
ಕಷ್ಟ ಸಹಿಸಬೇಕಪ್ಪಾ! (ಅ)
-ಪ್ಪಾ ನಿರಂಜನಾದಿತ್ಯಪ್ಪಾ!!!
-ಗನಾಥಗೆ ಪೂಜೆಯಾಗುತ್ತಿದೆ! (ಬೆ)
-ಳಕು ಕತ್ತಲೆಯನ್ನಟ್ಟುತ್ತಿದೆ!
ವಾಸಸ್ಥಾನ ಪ್ರಶಾಂತಾಗುತ್ತಿದೆ! (ವಿ)
-ದ್ಯಮಾನ ಬದಲಾಗುತ್ತಲಿದೆ! (ಸಂ)
-ಕೇತ ಪ್ರೋತ್ಸಾಹವೀಯುತ್ತಲಿದೆ! (ಕೀ)
-ಳು, ಮೇಲೆಂಬುದಳಿಯುತ್ತಲಿದೆ! (ಚಿ)
-ತ್ತ, ನಾಥನಲ್ಲೈಕ್ಯವಾಗುತ್ತಿದೆ! (ಮಾ)
-ಲಿಕನಿಷ್ಟ ವ್ಯಕ್ತವಾಗುತ್ತಿದೆ! (ತಂ)
-ದೆ, ತಾಯಿ ನಿರಂಜನಾದಿತ್ಯಾದೆ!!!
-ಟ್ಟದ್ದನ್ನುಣ್ಣುವಭ್ಯಾಸವಾಗಿಲ್ಲ!
ಹಾಳು ಹರಟೆ ಕೇಳದಾಗಿಲ್ಲ! (ರೇ)
-ಗಿ ಕೂಗಾಡುವುದನ್ನು ಬಿಟ್ಟಿಲ್ಲ! (ಪ)
-ರಧನದಾಸೆಯಿನ್ನೂ ಹೋಗಿಲ್ಲ!
ಗೊಡ್ಡಾಕಳ ಜೀವನಳಿದಿಲ್ಲ! (ಮ)
-ಡಿ ಬಟ್ಟೆಗಿಷ್ಟ ಪಡುತ್ತಲಿಲ್ಲ!
ಸತ್ಸಂಗ ನಿಷ್ಠೆಯಿಂದಾಗುತ್ತಿಲ್ಲ! (ಮಾ)
-ಲಿಕನಲ್ಲನನ್ಯ ಭಕ್ತಿಯಿಲ್ಲ! (ನ)
-ಲ್ಲ, ನಿರಂಜನಾದಿತ್ಯನಾಗಿಲ್ಲ!!!
ರಘುಪತಿಗೆ ಪೂರ್ಣ ಬಲವೀಗ!
ರಾಮದಾಸಗೆ ನಾಯಕತ್ವವೀಗ!
ವನವಾಸಿ ಸೀತೆಗಾನಂದವೀಗ! (ರ)
-ಣ ದುಂದುಭಿಯ ಕೇಳಿರೆಲ್ಲರೀಗ! (ಆ)
-ನಂದೋತ್ಸಾಹ ವಾನರ ಸೈನ್ಯಕ್ಕೀಗ! (ಸ)
-ತ್ಯಕ್ಕೆ ವಿಜಯವಾಗುವುದು ಈಗ!
ಕಾಮಾಸುರನೇದುತ್ತಿರುವನೀಗ!
ಲಕ್ಷ್ಮಣನುಗ್ರಾವತಾರ ನೋಡೀಗ!
ವೀರ ರಾಘವ ಬಾಣ ಬಿಟ್ಟನೀಗ!
ಗಣೇಶ ನಿರಂಜನಾದಿತ್ಯನೀಗ!!!
ಪತ್ರ, ಮೇಲೊಂದು ಚಿತ್ರ, ವಿಚಿತ್ರ! (ಪು)
-ತ್ರ, ಕಳತ್ರಗಳೆಂಬಾ ವಿಚಿತ್ರ!
ಮೇರೆಯಿಲ್ಲದ ಮೋಹಾ ವಿಚಿತ್ರ! (ಮಾ)
-ಲೊಂದರಲ್ಲಿರುವುದಾ ವಿಚಿತ್ರ!
ದುಡಿಯದಿದ್ದರಿಲ್ಲಾ ವಿಚಿತ್ರ!
ಚಿತೆಯ ಮೇಲೆ ಮಾಯಾ ವಿಚಿತ್ರ!
ತ್ರಯಲೋಕದಲ್ಲೆಲ್ಲಾ ವಿಚಿತ್ರ!
ವಿಕಲ್ಪ, ಸಂಕಲ್ಪದಾ ವಿಚಿತ್ರ!
ಚಿದಾಕಾಶದಲ್ಲಿಲ್ಲಾ ವಿಚಿತ್ರ! (ಮಿ)
-ತ್ರ ನಿರಂಜನಾದಿತ್ಯಾತ್ಮಾ ಪತ್ರ!!!
ಮುತ್ತಿಹುದು ಕಾರ್ಮುಗಿಲೆಂದಂಜಬೇಡ! (ಬು)
-ತ್ತಿ ಕಟ್ಟಿಹೆನೆಂದು ಗರ್ವ ಪಡಬೇಡ!
ಹುಸಿ ಮಾಯೆಯಾಟ ದಿಟವೆನಬೇಡ! (ಹಿಂ)
-ದು, ಮುಂದಿನ ಗುಣಾಕಾರ ಮಾಡಬೇಡ!
ಕಾರ್ಯವೀಗಿನದು ಮಾಡದಿರಬೇಡ! (ವೈ)
-ರ್ಮುಡಿಯುತ್ಸವವ ನೋಡದೋಡಬೇಡ!
ಗಿರಿಧರನ ವಿಶ್ವಾಸ ಬಿಡಬೇಡ! (ಹಾ)
-ಲೆಂಜಲೆಂದುಪೇಕ್ಷೆ ಮಾಡಿ ಕೆಡಬೇಡ
ದಂಟು ಮುರಿದು ಹೂವಿಗಾಶಿಸಬೇಡ!
ಜನನ, ಮರಣದಲ್ಲೊದ್ದಾಡಬೇಡ!
ಬೇಯದನ್ನ ಉಣಬಡಿಸಲೇ ಬೇಡ! (ಉಂ)
-ಡರೆ ನಿರಂಜನಾದಿತ್ಯ ಮಾತನಾಡ!!!
-ಕಾಧಿಪನ ದಿವ್ಯ ದರ್ಶನವೀಗ! (ಮಂ)
-ದಮತಿಯ ನಿರ್ನಾಮವಾಗ್ಬೇಕೀಗ!
ಶಾಮಸುಂದರನ ಹಿರಿಮೆಈಗ!
ಧ್ಯಾನಿಗಳಿಗೆ ಸುಸಮಯವೀಗ!
ಯಮಸುತನಿಗೆ ವಿಜಯವೀಗ!
ಪ್ರಾಣಪ್ರಿಯಳಿಗೆ ಆನಂದವೀಗ!
ರಂಗನ ಸುದರ್ಶನದಾಟವೀಗ!
ಭಕ್ತ ಜನರ ಹರ್ಷೋದ್ಗಾರವೀಗ!
ವೀಣಾ, ಮೃದಂಗ ವಾದನಗಳೀಗ! (ಈ)
-ಗ ನಿರಂಜನಾದಿತ್ಯನ ಸುಯೋಗ!!!
ರೊಟ್ಟಿ ಬಂದಾಗ ಗಂಜಿ ಕುಡಿದಾಗಿತ್ತು! (ಮೆ)
-ಟ್ಟಿ ನಿಲ್ಲಲು ಪ್ರಾರಬ್ಧ ಕಷ್ಟವಾಗಿತ್ತು!
ಬಂದ ರೊಟ್ಟಿಗಾಗ ಜಾಗವಿಲ್ಲದಾಯ್ತು! (ಇಂ)
-ದಾಗತಕ್ಕದ್ದಿಂದಾಯ್ತೆಂಬರಿವುಂಟಾಯ್ತು!
ಗರಿಷ್ಠನೂ ವಿಧಿಯಾಧೀನವೆಂದಾಯ್ತು!
ಗಂಗೆಯೂ ಭೂಮಿಗಿಳಿಯಲೇಬೇಕಾಯ್ತು!
ಜಿಪುಣ ದಾಸದಾಸನಾಗಬೇಕಾಯ್ತು!
ಕುಕರ್ಮಿ ರಾಮಾಯಣ ಬರೀಬೇಕಾಯ್ತು! (ಚಂ)
-ಡಿಕೇಶ್ವರಿ ಶಬರಿಯಾಗಬೇಕಾಯ್ತು!
ದಾಶರಥಿ ವನವಾಸ್ಯಾಗಬೇಕಾಯ್ತು!
ಗಿರೀಶ ಕಾಪಾಲಿಯೆನಿಸಬೇಕಾಯ್ತು! (ಹೊ)
-ತ್ತು ಕಾದು ನಿರಂಜನಾದಿತ್ಯೋದಯಾಯ್ತು!!!
-ನ್ನಿಷ್ಟದಿಂದಾಗುವುದು ನೋವೇ! (ದು)
-ಷ್ಟತನ ಸಾಯಲಿಕ್ಕೆ ಸೇವೆ! (ಮಿ)
-ಕ್ಕೆಲ್ಲಾ ವ್ಯವಹಾರವೂ ನೋವೇ!
ಬಂಧ ವಿಮೋಚನೆಗೆ ಸೇವೆ!
ದಾರಿ ತಪ್ಪಿದಾಗೆಲ್ಲಾ ನೋವೇ!
ಗತಿ, ಮತಿ, ಶುದ್ಧಿಗೆ ಸೇವೆ!
ಸೇರಲಯೋಗ್ಯ ಸಂಘ ನೋವೇ! (ನಾ)
-ವೆ ನಿರಂಜನಾದಿತ್ಯ ಸೇವೆ!!!
-ಡುವನು ಗೌರವ ಮುನಿ!
ಕಿರುಕುಳವೀವ ಶನಿ! (ವಿ)
-ನಯದಿಂದಿರುವ ಮುನಿ!
ಗುಲ್ಲೆಬ್ಬಿಸುವವ ಶನಿ! (ಕ)
-ರುಣೆ ತೋರುವವ ಮುನಿ!
ಶಕ್ತಿ, ಯುಕ್ತಿವಂತ ಶನಿ! (ಮು)
-ನಿ ನಿರಂಜನಾದಿತ್ಯ ನೀ!!!
ಛಾಯಾತ್ಮಜಾ ಶನಿ, ಯಮಾಗ್ರಜಾ! (ನ್ಯಾ)
-ಯಾ ನ್ಯಾಯ ವಿಚಾರ ರೂಪಾಗ್ರಜಾ! (ಆ)
-ತ್ಮವಿದ್ಯಾ ಗುರುವರೇಣ್ಯಾಗ್ರಜಾ!
ಜಾತಿ, ಮತ, ಭೇದ ದೂರಾಗ್ರಜಾ!
ಶಕ್ತಿ, ಭಕ್ತಿ, ಭುಕ್ತಿ ದಾತಾಗ್ರಜಾ!
ನಿತ್ಯ ಸಚ್ಚಿದಾನಂದಾತ್ಮಾಗ್ರಜಾ!
ಯಮ, ನಿಯಮ, ಯೋಗಾತ್ಮಾಗ್ರಜಾ!
ಮಾನಾಭಿಮಾನ ಶೂನ್ಯಾತ್ಮಾಗ್ರಜಾ!
ಗ್ರಹಣಕೂಟಾಗ್ರಗಣ್ಯಾತ್ಮಾಗ್ರಜಾ! (ನಿ)
-ಜಾ ನಿರಂಜನಾದಿತ್ಯಾತ್ಮಾತ್ರಿಜಾ!!!
-ಳೆ ಬೆಳೆಯದ ನೆಲ ವ್ಯರ್ಥ! (ತಾ)
-ಯಿ ಕೈ ಬಿಟ್ಟಿಹ ಬಾಳು ವ್ಯರ್ಥ! (ಬೆ)
-ಲ್ಲವಿಲ್ಲದಮೃತಾನ್ನ ವ್ಯರ್ಥ!
ದಯೆಯಿಲ್ಲದ ಮಾತು ವ್ಯರ್ಥ!
ಕಬ್ಬವಿಲ್ಲದ ಭಾಷೆ ವ್ಯರ್ಥ! (ತ)
-ಲೆಯಿಲ್ಲದ ಒಡಲು ವ್ಯರ್ಥ!
ವ್ಯಭಿಚಾರ ಜೀವನ ವ್ಯರ್ಥ! (ಸಾ)
-ರ್ಥಕ ನಿರಂಜನಾದಿತ್ಯಾರ್ಥ!!!
-ಪ್ಪಿಗೆಯಾದರೀ ಮಾತನ್ನೊಪ್ಪು!
ತತ್ವವರಿಯದೆಲ್ಲಾ ತಪ್ಪು! (ಮು)
-ಪ್ಪಿಗೆ ಮೊದಲೇ ಇದನ್ನೊಪ್ಪು!
ದತ್ತನೊಲಿದರಿಲ್ಲಾ ತಪ್ಪು! (ವ)
-ರ ಗುರುದ್ರೋಹ ತಪ್ಪೆಂದೊಪ್ಪು!
ದುರಭ್ಯಾಸದಿಂದೆಲ್ಲಾ ತಪ್ಪು!
ತನು, ಮನ ಮಲವೆಂದೊಪ್ಪು! (ಒ)
-ಪ್ಪು, ನಿರಂಜನಾದಿತ್ಯ ನೆಪ್ಪು!!!
ಸರ್ವವೂ ಗುರುಚಿತ್ತವೆಂದರಿತು!
ಮಾಯಾಮೋಹದಾಟವಿದೆಂದರಿತು!
ಧಾಮವೀ ದೇಹ ಅದಕ್ಕೆಂದರಿತು! (ಮೌ)
-ನದಿಂದ ಪ್ರಾರ್ಥಿಸಬೇಕು ನೀನಿಂತು!
ಪತಿತನೆಂಬೀ ನರಜನ್ಮವಾಯ್ತು!
ರಿಪುಗಳಾಟ ಬಲಿಯುತ್ತಾ ಹೋಯ್ತು!
ಹಾಲಿನಂತಿದ್ದ ಮನ ಮಲಿನಾಯ್ತು! (ವ)
-ರ ಗುರುಪಾದ ಸೇವೆ ತಪ್ಪಿ ಹೋಯ್ತು! (ಹೂ)
-ವೆಂಬ ಹೃದಯ ಅರಳದಂತಾಯ್ತು! (ಸೋ)
-ತು, ನಿರಂಜನಾದಿತ್ಯಾ ಶರಣಿಂತು!!!
-ರುವಳ್ತುಳಸ್ಯೆಂದವರಾರು? (ಸಂ)
-ಗಡಿಗರಾಗಿರ್ಬೇಕಿಬ್ಬರೂ!
ಬೇಕೆಂದರಿರುವವರಾರು? (ಬೇ)
-ಡೆಂದರೆ ಹೋಗುವವರಾರು?
ದತ್ತನ ಇಷ್ಟಕ್ಕಿದಿರಾರು?
ವರ ಪೂಜೆಗೆ ಬೇಕೀರ್ವರೂ! (ವಿ)
-ರಾಜಿಸಿರಿ ವರ್ಷ ನೂರಾರು! (ಇ)
-ರು, ನಿರಂಜನಾದಿತ್ಯಾಗಿರು!!!
ಕೂಲಿ ಸಿಗಬೇಕು, ಬಾಳು ಸಾಗಬೇಕು! (ಒ)
-ಲಿದ ಮನದಿಂದ ಸೇವೆಯಾಗಬೇಕು!
ಸಿಕ್ಕಿದ್ದನ್ನಾನಂದದಿಂದ ತಿನ್ನಬೇಕು!
ಗಮನ ಶ್ರದ್ಧಾಪೂರ್ಣವಾಗಿರಬೇಕು!
ಬೇಸರ ಕಾರ್ಯದಲ್ಲಿರದಿರಬೇಕು!
ಕುಕಲ್ಪನೆಗೆಡೆಯಿಲ್ಲದಿರಬೇಕು!
ಬಾಯಿ ಮುಚ್ಚ್ಯಾತ್ಮ ವಿಚಾರ ಮಾಡಬೇಕು! (ಆ)
-ಳು ತಾನೆಂದುತ್ಸಾಹ ಕುಗ್ಗದಿರಬೇಕು!
ಸಾರ್ಥಕವೀಜನ್ಮ ಜ್ಞಾನದಿಂದಾಗ್ಗೇಕು! (ಸಂ)
-ಗ ಸಜ್ಜನರದ್ದೇ ಸದಾ ಇರಬೇಕು!
ಬೇಕು ಗುರುಕೃಪೆಯೆಂದರಿಯಬೇಕು! (ಮ)
-ಕುಟ ನಿರಂಜನಾದಿತ್ಯಗಿರಬೇಕು!!!
ಶೋಕ ವಿನಾಶಕನಪ್ಪಾ! (ಶ್ರ)
-ದ್ಧಾ, ಭಕ್ತಿಯುಳ್ಳವನಪ್ಪಾ!
ರಘುಪತಿ ದಾಸನಪ್ಪಾ!
ಕರ್ಮನಿಷ್ಠನವನಪ್ಪಾ!
ನಾಮಜಪ ಪ್ರೇಮಿಯಪ್ಪಾ! (ಪ)
-ರ ಪೀಡೆ ಮಾಡದಾತಪ್ಪಾ! (ಅ)
-ಪ್ಪಾ ನಿರಂಜನಾದಿತ್ಯಪ್ಪಾ!!!
ಪೂಜೆ ಶ್ರದ್ಧಾ ಭಕ್ತಿಯಿಂದ ಮಾಡಮ್ಮಾ! (ಬಂ)
-ಜೆ ನಾನೆಂಬ ದುಃಖ ಬಿಟ್ಟು ಬಿಡಮ್ಮಾ!
ಶ್ರಮವೆಂದುದ್ಯೋಗ ಬಿಡಬೇಡಮ್ಮಾ! (ಉ)
-ದ್ಧಾರವಾಗುವುದು ಮುಂದೆ ನೋಡಮ್ಮಾ!
ಭಕ್ತಿ ಗೀತೆಗಳ ನಿತ್ಯ ಹಾಡಮ್ಮಾ! (ಮು)
-ಕ್ತಿಗಿದು ದಾರಿ ಸಂದೇಹ ಬೇಡಮ್ಮಾ! (ಕೈ)
-ಯಿಂದ ಗುರುಪಾದ ಸೇವೆ ಮಾಡಮ್ಮಾ! (ಆ)
-ದರದಿಂದವಗೆ ಭಿಕ್ಷೆ ನೀಡಮ್ಮಾ!
ಮಾತೆ ನೀನೆಂದು ಆನಂದ ಪಡಮ್ಮಾ!
ಡಮರುಧರನನ್ನೊಡಗೂಡಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಾನಂದದಮ್ಮಾ!!!
-ಲ ಕಳೆಯಲಿಕ್ಕೆನಗಾ ಸಂಗಾತಿ! (ಬ)
-ಗೆಬಗೆಯೋಪದೇಶಾತ್ಮಾ ಸಂಗಾತಿ!
ಬರಡು ಮಾತುಗಳಾಡಾ ಸಂಗಾತಿ!(ಭಾ)
-ಳನೇತ್ರನ ಕೊಂಡಾಡುವಾ ಸಂಗಾತಿ!
ಪರನಿಂದೆ ಮಾಡದಿರ್ಪಾ ಸಂಗಾತಿ! (ನೋ)
-ವೆನಗೇನಿಲ್ಲವೆಂದಿರ್ಪಾ ಸಂಗಾತಿ! (ಉ)
-ನ್ನತದ ಆತ್ಮ ನಾನೆಂಬ ಸಂಗಾತಿ!
ಸಂದೇಹವೆಳ್ಳಷ್ಟಿಲ್ಲದಾ ಸಂಗಾತಿ! (ಆ)
-ಗಾಗ ಶೂನ್ಯನಾಗಿರುವಾ ಸಂಗಾತಿ! (ಪ)
-ತಿ ನಿರಂಜನಾದಿತ್ಯಾತ್ಮಾ ಸಂಗಾತಿ!!!
ಪ್ರಿಯದರ್ಶಿನೀ, ಹಸು, ಕರು, ರೂಪಿಣೀ! (ಜ)
-ಯ ಜವಹರಲಾಲನಾ ಕುಮಾರಿಣೀ!
ದಯಾ ಸ್ವಭಾವಿನೀ, ಮಧುರ ಭಾಷಿಣೀ! (ಸ್ಪ)
-ರ್ಶಿನೀ ಭೂಮಂಡಲ ಪ್ರದಕ್ಷಿಣಾಗ್ರಣೀ! (ದಾ)
-ನೀ ಆನಂದಭವನದಾಶಾ ತ್ಯಾಗಿಣೀ!
ಹರ್ಷವರ್ಧಿನೀ ದೀನಜನೋದ್ಧಾರಿಣೀ!
ಸುವರ್ಣಾಂಗಿನೀ, ಸರ್ವೊದಯಕಾರಿಣೀ!
ಕಷ್ಟ ಸಹಿಷ್ಣು ನೀ, ಶ್ರೇಷ್ಟೇಂದಿರಾ ಮಣೀ!
ರುಚಿ, ಶುಚ್ಯಾತ್ಮನೀ, ಪೇಚು ನಿವಾರಿಣೀ!
ರೂಢಮೂಲ ಹಕ್ಕು ಸ್ಥಾಪಿನೀ ತಾರಿಣೀ!
ಪಿರಿಯಾಭಿಮಾನೀ, ಪ್ರಿಯ ಮಂತ್ರೀಮಣೀ! (ರಾ)
-ಣೀ, ನಿರಂಜನಾದಿತ್ಯಾನಂದಾಕಾರಿಣೀ!!!
ಗೋವರ್ಧನ ಗಿರಿ ನಾದದಿಂದ ತುಂಬಿತು! (ಭ)
-ವತಾರಕ ಕೃಷ್ಣನನುಗ್ರಹವಾಯಿತು! (ನಿ)
-ರ್ಧರದದರ ಜಡತ್ವ ಮಾಯವಾಯಿತು!
ನಭೋಮಂಡಲಕ್ಕೆ ಹಾರುವೇಚ್ಛೆಯಾಯಿತು!
ಗಿರಿಧರನಭಯ ಹಸ್ತ ತಡೆಯಿತು! (ವೈ)
-ರಿ ದೇವೆಂದ್ರನಿಗೆ ಭಯವಿಮ್ಮಡಿಸಿತು!
ನಾದ ಜಯಜಯವೆಂದು ಭೋರ್ಗರೆಯಿತು!
ದನ, ಕರುಗಳ ಸಂರಕ್ಷಣೆಯಾಯಿತು!
ದಿಂಡಾಗಿಂದ್ರನ ಶ್ರೀಪಾದಕ್ಕೆರಗಿಸಿತು!
ದಯಾಮಯನಿಂದ ಕ್ಷಮಾಪಣೆಯಾಯಿತು!
ತುಂಬುರು ನಾರದರ ಗಾನ ಕೇಳಿಸಿತು!
ಬಿರುಗಾಳಿ ಯತ್ನವಿಲ್ಲದೆ ಅಡಗಿತು! (ಓ)
-ತು ನಿರಂಜನಾದಿತ್ಯನುದಯವಾಯಿತು!!!
ತ್ರಿಶಂಕು ಸ್ವರ್ಗವಾಗಬಾರದೀಗ!
ಮಂದಮತಿಯ ತ್ಯಜಿಸಬೇಕೀಗ! (ಮಂ)
-ಡಲೇಶ್ವರನುತ್ತಮನಾಗ್ಬೇಕೀಗ! (ಛ)
-ಲದಿಂದೆಲ್ಲಾ ಕಾರ್ಯ ಕೆಡುವುದೀಗ! (ಪ)
-ರ ಪಕ್ಷ ನಗುವಂತಾಗ್ಬಾರದೀಗ! (ಸಂ)
-ಚಿನಿಂದ ಧಕ್ಕೆಯಾಗಬಾರದೀಗ!
ಸತ್ಯಸಂಧತೆ ತೋರಿಸಬೇಕೀಗ!
ಬೇರೆ ದಾರಿ ಹಿಡಿದರಾಗದೀಗ!
ಕೀಳಬೇಕಂತಃಕಲಹವನ್ನೀಗ! (ಸೊ)
-ಗ ನಿರಂಜನಾದಿತ್ಯ ಮಾಳ್ಪನಾಗ!!!
-ಹಿತಿಗಳಿಂದಾಗದಿರಲಿ ತಾತ್ಸಾರ! (ಸ)
-ತ್ಯ ವಿಚಾರಗಳ್ಗಾಗಲಿ ಪುರಸ್ಕಾರ!
ಮಾತೆಗಿದೂ ಒಂದು ಭೂಷಣಾಲಂಕಾರ!
ತೆಗೆದೊಗೆದರಾಗುವುದಪಚಾರ! (ತ್ಯಾ)
-ಗೀಶ್ವರ ಮಾಡಿಸಿಹನೀ ಉಪಚಾರ!
ಹರಿ, ಹರ, ಬ್ರಹ್ಮಾ ಗೆಳೆಯನಾಕಾರ! (ವ)
-ರಗುರು ಸ್ವರೂಪಾ ಯೋಗೀಶಾವತಾರ!
ಕರ್ಮಕರ್ತಾ ಲೋಕಭರ್ತಾ ಆರ್ತೊದ್ಧಾರ! (ಲೀ)
-ಲಾಂಗಾ ಮಾರಹರ ಶಿವಲಿಂಗಾಕಾರ!
ಬನಶಂಕರಿಯ ಹೃದಯ ವಿಹಾರ! (ಹ)
-ರ ನಿರಂಜನಾದಿತ್ಯತ್ಮಾನಂದಾಗಾರ!!!
-ರ್ಮೊಗನಯ್ಯ ಮುಕ್ಕಣ್ಣನಲ್ಲಿ! (ರಂ)
-ಗನಾಥನ ಸತ್ಸಂಗದಲ್ಲಿ! (ಸ)
-ದಾ ಆತ್ಮಾನುಸಂಧಾನದಲ್ಲಿ! (ಮಾ)
-ರ್ಗದರ್ಶನದಾನಂದದಲ್ಲಿ! (ಕೈ)
-ಯ್ಯಲ್ಲಿ ಅಭಯ ಮುದ್ರೆಯಲ್ಲಿ!
“ನೀ” “ನಾ” ನೆಂಬ ಅಭೇದದಲ್ಲಿ! (ನ)
-ಗೆ ಸೂಸುತ್ತ ವದನದಲ್ಲಿ! (ಇ)
-ಲ್ಲಿ ನಿರಂಜನಾದಿತ್ಯನಲ್ಲಿ!!!
“ಓಂ ದ್ರಾಂ ಓಂ” ಸಾಯುಜ್ಯ ಸಿದ್ಧಿ ಮಂತ್ರ!
“ದ್ರಾಂ” ಹಂಸಾರ್ಥ ಸೂಚಿಸುವ ಮಂತ್ರ!
“ಓಂ” ಸರ್ವವ್ಯಾಪಕೇಕಾತ್ಮ ಮಂತ್ರ!
ಸಾಕಾರ ನಿರಾಕಾರಕ್ಕಾ ಮಂತ್ರ! (ಕಾ)
-ಯುವುದೆಲ್ಲಾ ಕಾಲದಲ್ಲಾ ಮಂತ್ರ! (ರಾ)
-ಜ್ಯ ವೈಭೋಗಕ್ಕಾಶಿಸದಾ ಮಂತ್ರ! (ಹು)
-ಸಿ ಮಾಯೆಯ ಲೆಕ್ಕಿಸದಾ ಮಂತ್ರ! (ವೃ)
-ದ್ಧಿ, ಕ್ಷಯಗಳಂಟಿಲ್ಲದಾ ಮಂತ್ರ!
ಮಂತ್ರ, ಯಂತ್ರಗಳಾಧಾರಾ ಮಂತ್ರ! (ನೇ)
-ತ್ರ ನಿರಂಜನಾದಿತ್ಯಗಾ ಮಂತ್ರ!!!
ಪೂರಿ, ಪಲ್ಯಾ ಶ್ರದ್ಧಾ, ಭಕ್ತ್ಯಮೌಲ್ಯ! (ಅ)
-ರಿತಿದ ತಿಂದ ಜನ್ಮ ಸಾಫಲ್ಯ!
ಪರಿಪರಿಯಾಸೆಗಿಲ್ಲಾ ಮೌಲ್ಯ!(ಬಾ)
ಲ್ಯಾದ್ಯವಸ್ಥಾ ರಾಹಿತ್ಯಾ ಸಾಫಲ್ಯ! (ಆ)
-ಶ್ರಯ ಸದ್ಗುರುವಿನದ್ದಮೌಲ್ಯ! (ಶು)
-ದ್ಧಾಚಾರದಿಂದಾಗ್ವುದಾ ಸಾಫಲ್ಯ!
ಭಕ್ತಿ ಸಂಕೀರ್ತನಾಭ್ಯಾಸಮೌಲ್ಯ! (ಶ)
-ಕ್ತ್ಯನುಭವವಾಗ್ಯೆಲ್ಲಾ ಸಾಫಲ್ಯ!
ಮೌನದಿಂದಾಗುವ ಲಾಭಮೌಲ್ಯ! (ಮೌ)
-ಲ್ಯ ನಿರಂಜನಾದಿತ್ಯಾ ಸಾಫಲ್ಯ!!!
-ನಗುಂಟಾಗಿದೆ ಹಾಹಾಕಾರ!
ಗಿರಿಶಿಖರ ನಿನ್ನಾಗಾರ! (ಇ)
-ದೆ ನನಗೂರೂರು ಸಂಚಾರ!
ಸನ್ನಿಧಿ ನಿನ್ನದಲಂಕಾರ! (ದು)
-ರ್ವಾಸನೆ ನನ್ನದಹಂಕಾರ! (ವಿ)
-ಧಿ, ಹರಿ, ಹರರಾ ಓಂಕಾರ!
ಕಲಾಧೀನ ಜೀವ ವಿಕಾರ! (ಹ)
-ರ ನಿರಂಜನಾದಿತ್ಯಾಕಾರ!!!
-ಳಬಲ್ಲವರೆಲ್ಲೂ ಇಲ್ಲಾ!
ಬಣ್ಣದ ಮಾತಾಡ್ವರೆಲ್ಲಾ! (ನ್ಯಾ)
-ಯ ದೊರಕಿಸುವರಿಲ್ಲಾ!
ಸುಖಿಗಳೆಲ್ಲರಾಗಿಲ್ಲಾ!
ವಸ್ತ್ರಾನ್ನಾಭಾವ ಹೋಗಿಲ್ಲಾ! (ಕೆ)
-ರೆ ನೀರು ಸಾಕಾಗುತ್ತಿಲ್ಲಾ! (ಬ)
-ಲ್ಲಾ, ನಿರಂಜನಾದಿತ್ಯೆಲ್ಲಾ!!!
ಹೆತ್ತಮ್ಮಗೆ ಹೆಗ್ಗಣ ಮುದ್ದು! (ಚಿ)
-ತ್ತ ಶುದ್ಧನಿಗೆಲ್ಲವೂ ಮುದ್ದು! (ತ)
-ಮ್ಮದು ತಮಗೆ ಸದಾ ಮುದ್ದು! (ಗಂ)
-ಗೆಗೆಲ್ಲಾ ಚರಾಚರ ಮುದ್ದು!
ಹೆರವರೆನ್ನದಾತ್ಮ ಮುದ್ದು! (ಸ)
-ಗ್ಗ, ನರಕಾತನಿಗೆ ಮುದ್ದು! (ಗು)
-ಣ, ಅವಗುಣವೆಲ್ಲಾ ಮುದ್ದು!
ಮುಕುಂದನೆಲ್ಲರಿಗೂ ಮುದ್ದು! (ಮು)
-ದ್ದು, ನಿರಂಜನಾದಿತ್ಯ ಮುದ್ದು!!!
-ಮ ಬುದ್ಧಿ ರಾವಣಗಪಜಯ!
ಬುದ್ಧಿ ಶುದ್ಧಾಂಜನೇಯಗೆ ಜಯ! (ರಿ)
-ದ್ಧಿ, ಸಿದ್ಧಿಯಕ್ಷಯಗಪಜಯ!
ಸೀತಾರಾಮ ನಾಮ ದಿಗ್ವಿಜಯ! (ಸಂ)
-ತೆ ಕಂತೆ ವ್ಯವಹಾರಪಜಯ! (ಬಾ)
-ಗೆ ಸದ್ಗುರು ಪಾದಕ್ಕೆಲ್ಲಾ ಜಯ!
ವಿಕಲ್ಪದಿಂದಾಗ್ವುದಪಜಯ!
ಜಪ, ತಪಾದಿಂದಾತ್ಮ ವಿಜಯ! (ಪ್ರಿ)
-ಯ, ನಿರಂಜನಾದಿತ್ಯಾತ್ಮಜೇಯ!!!
ಪಾಪಲೇಪವಿಲ್ಲದಾ ಯುಗಾದಿ!
ದತ್ತಭಕ್ತರ್ಗಾನಂದಾ ಯುಗಾದಿ!
ಪೂರ್ಣ ಆರೋಗ್ಯಪ್ರದಾ ಯುಗಾದಿ! (ಪ್ರ)
-ಜೆಗನುಕೂಲವಾದಾ ಯುಗಾದಿ! (ಆ)
-ಯಿಂಗುತ್ಸಾಹ ನೀಡದಾ ಯುಗಾದಿ! (ಸ)
-ದಾಳ್ವಿಕೆಯುದಯದಾ ಯುಗಾದಿ!
ಯುದ್ಧ ಬುದ್ಧಿ ನಾಶದಾ ಯುಗಾದಿ! (ಯೋ)
-ಗಾನಂದಾನುಭವದಾ ಯುಗಾದಿ! (ಹಾ)
-ದಿ ನಿರಂಜನಾದಿತ್ಯ ಯುಗಾದಿ!!!
ಸ್ಥಾನ, ಮಾನಕ್ಕೆಲ್ಲಾ ಕಚ್ಚಾಟ! (ಜ)
-ನಹಿತಕ್ಕೇನಲ್ಲಾ ಕಾದಾಟ!
ಮಾತ್ಸರ್ಯದಿಂದೆಲ್ಲಾ ಕಚ್ಚಾಟ! (ಧ)
-ನ, ಧಾನ್ಯಕ್ಕಾಗ್ಯೆಲ್ಲಾ ಕಾದಾಟ! (ದ)
-ಕ್ಕೆ ಶಾಂತಿ, ಸುಖಕ್ಕಾ ಕಚ್ಚಾಟ! (ಚೆ)
-ಲ್ಲಾಟವಲ್ಲವೇನು ಕಾದಾಟ?
ಕರ್ಮನಿಷ್ಠಗುಂಟೇ ಕಚ್ಚಾಟ? (ಹು)
-ಚ್ಚಾಟ, ಒದ್ದಾಟ ಆ ಕಾದಾಟ! (ಆ)
-ಟ ನಿರಂಜನಾದಿತ್ಯಗೂಟ!!!
-ದೆ, ತಾಯಿಗೆಲ್ಲಾ ನೀನೇ ಮೋಹನಾ!
ಬಂಧು, ಬಾಂಧವ ನೀನೇ ಮೋಹನಾ!
ದಡ್ಡತನವದೇಕೋ ಮೋಹನಾ?
ರಾಮ ಭಜನೆ ಮಾಡೋ ಮೋಹನಾ!
ನಂಬಿಕೆ ಇರಬೇಕೋ ಮೋಹನಾ!
ದಾರಿಯಿದು ಸರಾಗಾ ಮೋಹನಾ!
ಮೋಸದಿಂದಧೋಗತಿ ಮೋಹನಾ!
ಹಸ್ತ ಶುದ್ಧವಾಗಿರ್ಲಿ ಮೋಹನಾ! (ನೀ)
-ನಾಗ್ನಿರಂಜನಾದಿತ್ಯ ಮೋಹನಾ!!!
-ನ್ನತಿ ನಿನಗಿಹುದು ನೋಡು!
ಕನಸು ನೆನಸಲ್ಲೂ ಮಾಡು! (ಆ)
-ರ್ತರುದ್ಧಾರವಾಗ್ವುದು ನೋಡು!
ವ್ಯಭಿಚಾರ ಭಕ್ತಿ ಬಿಟ್ಟ್ಮಾಡು!
ನೀನೊಬ್ಬನೇ ತಿನ್ಬೇಡ ನೋಡು!
ನುಡಿಯದೆಲ್ಲವನು ಮಾಡು!
ಮಾಯೆಯಾಗೋಡುವಳು ನೋಡು! (ನೋ)
-ಡು, ನಿರಂಜನಾದಿತ್ಯ ನಾಡು!!!
ಹಿತವಚನಗಳಿರಬೇಕು! (ಮ)
-ತಿ ಪ್ರಚೋದಕವಾಗಿರಬೇಕು!
ಗಮನ ದೈವಿಕಕ್ಕಿರಬೇಕು! (ಕೀ)
-ಳಾಲೋಚನೆಯಿಲ್ಲದಿರಬೇಕು!
ಗುರುಸೇವೆಗೆಡೆಯಿರಬೇಕು! (ವೃ)
-ತ್ತಿ ಪರಿಶುದ್ಧವಾಗಿರಬೇಕು! (ಪ)
-ರ ನಿಂದೆಯಭ್ಯಾಸ ಹೋಗಬೇಕು!
ಬೇಯುವ ತನಕ ಕಾಯಬೇಕು (ಟಾ)
-ಕು ನಿರಂಜನಾದಿತ್ಯಾಗಬೇಕು!!!
-ಷ್ಟು ಹೇಳಬೇಕು ನಿನಗಮ್ಮಾ? (ಸಂ)
-ದಿತಾಯುಷ್ಯ ವ್ಯರ್ಥವಾಗ್ಯಮ್ಮಾ!
ನಲ್ಲನಲ್ಲೈಕ್ಯಳಾಗಿರಮ್ಮಾ!
ಈಗಾದ್ರೂ ವಿವೇಕಿಯಾಗಮ್ಮಾ!
ಚೇತರಿಸಿ ಸುಖಿಯಾಗಮ್ಮಾ! (ದು)
-ಷ್ಟೆಯಾದರೇನು ಸುಖವಮ್ಮಾ?
ಯದುನಾಥ ನಿನ್ನವನಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾತಮ್ಮಾ!!!
-ಕ್ಷಯಾಗ ವಿಧ್ವಂಸ ವಿಶ್ವೇಶ್ವರಗೆ! (ಗ)
-ಣಾಧಿಪನಪ್ಪ ಗಿರಿಜಾಧವಗೆ!
ಭಾಗೀರಥಿಯಾಪ್ತ ಸದಾಶಿವಗೆ! (ವ)
-ರ ಗುರುದತ್ತ ಸ್ವರೂಪಾದವಗೆ!
ಗುಣಾತೀತ ಗುರುಗುಹೇಶ್ವರಗೆ! (ವ)
-ರುಣೇಂದ್ರಾದಿ ವಂದ್ಯ ಯೋಗೀಶ್ವರಗೆ!
ದೇವಿಂದ್ರಾಣಿಯಾನಂದ ಸುಂದರಗೆ!
ವಸುಧಾದ್ಯೆಲ್ಲಾ ಲೋಕ ಪಾಲಕಗೆ!
ನಿಶ್ಚಲ ಭಕ್ತೀಷ್ಟ ಪ್ರದಾತನಿಗೆ!
ಗೆಳೆಯಾ ನಿರಂಜನಾದಿತ್ಯನಿಗೆ!!!
-ಹುದಾಧಾರವಾಗ್ಯೆಲ್ಲರ್ಗಾ ಊರು!
ದೂರ ಗಾಢಾಂಧಕಾರಕ್ಕಾ ಊರು! (ವ)
-ರಗರು ವಾಸವಾಗಿರ್ಪಾ ಊರು!
ವಿಶ್ವಾಸಿಗಳ್ಗೆ ಹತ್ತಿರಾ ಊರು! (ತು)
-ರು, ಕರುಗಳಿಗೂ ಬೇಕಾ ಊರು! (ಆ)
-ವುದಕ್ಕೂ ಕಮ್ಮಿಯಿಲ್ಲದಾ ಊರು!
ದೊಂಬಿ, ದರೋಡೆ ಕಾಣದಾ ಊರು! (ಹಿಂ)
-ದೂ, ಮುಸಲ್ಲಾನ, ಕ್ರೈಸ್ತರಾ ಊರು! (ಸೇ)
-ರು ನಿರಂಜನಾದಿತ್ಯನಾ ಊರು!!!
ಕೊಟ್ಟಂಗಿಯ ತೊಟ್ಟೊಗೆದು ಬಿಡು! (ಕೆ)
-ಟ್ಟಂಬರದಿಷ್ಟಡಗಿಸಿ ಬಿಡು! (ತ್ಯಾ)
-ಗಿ ನಾಮ ಸಾರ್ಥಕ ಮಾಡಿಬಿಡು!
ಯಮಭಯವಿಲ್ಲದಿದ್ದುಬಿಡು!
ತೊಳೆದು ನಿರ್ಮಲವಾಗಿ ಬಿಡು! (ಸಿ)
-ಟ್ಟೊಳಗೆ ಬರದಂತಿದ್ದು ಬಿಡು!
ಗೆಳೆಯ ಶಿವನೆಂದಿದ್ದು ಬಿಡು!
ದುರ್ಜನರ ಸಂಗ ಬಿಟ್ಟು ಬಿಡು! (ಅಂ)
-ಬಿಕೆಗೆ ಮಗು ನೀನಾಗಿ ಬಿಡು! (ನೋ)
-ಡು ನಿರಂಜನಾದಿತ್ಯ ನಾಡು!!! ೧೮೬೧ ||
ದೇಶಕ್ಕೆ ಸೌಖ್ಯ ಕೊಡಲಾ ದೇವಾ! (ತ)
-ನು, ಮನ ಸ್ವಚ್ಛವಿಡಲಾ ದೇವಾ!
ಸಂಗ್ರಾಮ ಬುದ್ಧಿ ಸುಡಲಾ ದೇವಾ!
ದೇಹ ಮೋಹ ಬಿಡಿಸಲಾ ದೇವಾ! (ಈ)
-ಶ ಸೇವೆಯಲ್ಲಿರಿಸಲಾ ದೇವಾ!
ಗುರುಭಕ್ತಿ ಹೆಚ್ಚಿಸಲಾ ದೇವಾ! (ಕ)
-ರುಣೆಯಿಂದ ಹರಸಲಾ ದೇವಾ! (ಮುಂ)
-ದೇನೆಂಬುದ ಮರೆಸಲಾ ದೇವಾ! (ದೇ)
-ವಾ ನಿರಂಜನಾದಿತ್ಯ ಮಾಧವಾ!!!
-ಡಿಬಿಡಿ ಮಾಡುವವಾನಲ್ಲೆಂದ!
ಬಂದೆನುತ್ಸಾಹದಿಂದಿಲ್ಲಿಗೆಂದ! (ಮುಂ)
-ದೆ ನಾನೇನು ಮಾಡಬೇಕೆಂದ!
ನನ್ನಲ್ಲಿ ಸ್ವಾರ್ಥಾಪೇಕ್ಷೆಯಿಲ್ಲೆಂದ! (ಕಂ)
-ಗಾಲಾಗಿರುವರೂರವರೆಂದ! (ಪ್ರ)
-ಜ್ಞೆ ಸ್ಥಿರವಾಗ್ಲಾಶೀರ್ವದಿಸೆಂದ! (ತಾ)
-ಯೇ! ನೀನಲ್ಲದಾರು ಕಾಯ್ವರೆಂದ! (ನಾ)
-ನೆಂಬುದನೆನ್ನಿಂದ ತೆಗೆಯೆಂದ! (ಬಂ)
-ದ, ನಿರಂಜನಾದಿತ್ಯಮ್ಮಾ ಎಂದ!!!
ವಿಷಯಾಸಕ್ತನಾಗಿ ಕೆಟ್ಟುಹೋಗಬೇಡ! (ದೂ)
-ಷ್ಯವಾದುದಾವುದನ್ನೂ ಸ್ವಾಗತಿಸಬೇಡ! (ಸಂ)
-ಕೇತಾರ್ಥವರಿಯದೆ ಮುಂದರಿಯಬೇಡ! (ಹೂ)
-ಳಿಟ್ಟರ್ಥ ಶೋಧನಾಸಕ್ತನಾಗಿರಬೇಡ!
ಭಗವದ್ಭಕ್ತಿಯನ್ನೆಂದಿಗೂ ಬಿಡಬೇಡ!
ಯಮ, ನಿಯಮಾಭ್ಯಾಸಕ್ಕನಾದರ ಬೇಡ!
ಗ್ರಹಶಾಂತಿಯನ್ಯರಿಂದ ಮಾಡಿಸಬೇಡ! (ಹ)
-ಸ್ತ, ಪಾದಾದಿಂದ್ರ್ಯೋಲ್ಬಣಕ್ಕೆಡೆಗೊಡಬೇಡ!
ನಾಮ, ಜಪ ಸಾಮಾನ್ಯವೆಂದರಿಯಬೇಡ! (ಹ)
-ಗಲಿರುಳೀ ಅಭ್ಯಾಸ ಮಾಡದಿರಬೇಡ!
ಬೇರಿನ್ಯಾವ ದಾರಿಗೂ ಮರಳಾಗಬೇಡ! (ಬೇ)
-ಡ ನಿರಂಜನಾದಿತ್ಯಾಗಲಿನ್ನೇನೂ ಬೇಡ!!!
-ತು ವ್ಯರ್ಥವಾಗಿ ಕಾಲ ತಳ್ಳಬೇಡ!
ರಜೆಯೆಂದು ಜಾಸ್ತಿ ನಿದ್ರಿಸಬೇಡ!
ವಾತಾವರಣ ಹಾಳು ಮಾಡಬೇಡ! (ಬಿ)
-ಗಿ ತಪ್ಪಿ ಯಾವ ಮಾತೂ ಆಡಬೇಡ!
ಏರಿಳಿತದ ಬಾಳಿಗಂಜಬೇಡ!
ನೂರಾರು ದಾರಿಗಳಲ್ಲೋಡಬೇಡ!
ಮಾತಾ, ಪಿತರನ್ನು ನೋಯಿಸಬೇಡ! (ಕ)
-ಡ ಮಾಡಿ ಯಾವುದನ್ನೂ ತರಬೇಡ!
ಬೇರೆಯವರಾಸ್ತಿಗಾಶಿಸಬೇಡ! (ಮೃ)
-ಡ, ನಿರಂಜನಾದಿತ್ಯಾವಧೂತಾಡ!!!
-ಗನಾಮಣಿಗ ಗುಣ ರಂಗು!
ನಾರಾಯಣ ಸ್ಮರಣಾ ರಂಗು!
ಯಶಸ್ಸಿಗೆ ಕಾರಣಾ ರಂಗು!
ಕಿತ್ತು ಹೋಗದಾ ಶುದ್ಧ ರಂಗು!
ಗಾನದಲ್ಲಿ ತಲ್ಲೀನಾ ರಂಗು!
ವರ ಶ್ರೀ ಪಾದ ಸೇವಾ ರಂಗು!
ರಂಗನಾಥ ಸಾಯುಜ್ಯ ರಂಗು! (ರಂ)
-ಗು, ನಿರಂಜನಾದಿತ್ಯಾ ರಂಗು!!!
ಶಾರೆದೇ, ವರೆದೇ, ಆನಂದ ನಿಧೇ! (ಸು)
-ರ, ನರ, ಕಿನ್ನರಾತ್ಮಾನಂದ ನಿಧೇ!
ದೇಶ, ವಿದೇಶಾದ್ಯಂತಾನಂದ ನಿಧೇ!
ವನಜಸಂಭವನಾನಂದ ನಿಧೇ!
ರೆತಿಪತಿ ಪಿತಾತ್ಮಾನಂದ ನಿಧೇ!
ದೇವಾದಿದೇವ ಶಿವಾನಂದ ನಿಧೇ!
ಆಶಾಪಾಶ ವಿನಾಶಾನಂದ ನಿಧೇ!
ನಂದಕಂದ ಗೋವಿಂದಾನಂದ ನಿಧೇ!
ದತ್ತ ಚಿತ್ತ ಸ್ವರೂಪಾನಂದ ನಿಧೇ!
ನಿತ್ಯ, ಸತ್ಯ ಸಚ್ಚಿದಾನಂದ ನಿಧೇ! (ನಿ)
-ಧೇ, ನಿರಂಜನಾದಿತ್ಯಾನಂದ ನಿಧೇ!!!
-ದ್ವದ್ಧಿಯದರಿಂದಾಗಬೇಕು! (ವೃ)
-ತ್ತಿ ನಿವೃತ್ತಿಗನ್ಕೂಲಾಗ್ಬೇಕು!
ಸಹನೆ ಕೆಡದಿರಬೇಕು!
ದಾರಿ ಹೆದ್ದಾರಿಯಾಗಬೇಕು!
ಇತ್ತತ್ತ ನೋಡದಿರಬೇಕು! (ವ)
-ರ ಗುರುಧ್ಯಾನ ಮಾಡಬೇಕು!
ಬೇಗ ಶಾಂತಿ ದೊರಕಬೇಕು! (ಟಾ)
-ಕು ನಿರಂಜನಾದಿತ್ಯಾಗ್ಬೇಕು!!!
ಗುಲ್ಲು, ಜಗವೆಲ್ಲಾ ಬರೀ ಗುಲ್ಲು! (ಅ)
-ಲ್ಲು, ಇಲ್ಲು, ಎಲ್ಲೆಲ್ಲೂ ಆಶಾ ಸೊಲ್ಲು!
ಜನ, ಮನಕೆಲ್ಲಾ ಬೇಕಾ ಗುಲ್ಲು! (ಆ)
-ಗಬೇಕದಿದೆಂಬಾ ವ್ಯರ್ಥ ಸೊಲ್ಲು! (ಸ)
-ವೆಸದಿಹುದು ಪ್ರಾರಬ್ಧಾ ಗುಲ್ಲು! (ಇ)
-ಲ್ಲಾರಲ್ಲೂ ನಿಜಾನಂದದ ಸೊಲ್ಲು!
ಬಹಳಾಸೆಯಿಂದಾಗ್ವುದಾ ಗುಲ್ಲು!
ರೀತಿ, ನೀತಿಯೆಂದರಾತ್ಮ ಸೊಲ್ಲು!
ಗುರುಭಕ್ತ ಮಾಡನಾವ ಗುಲ್ಲು! (ಗು)
-ಲ್ಲು, ನಿರಂಜನಾದಿತ್ಯಗಿಲ್ಲೆಲ್ಲೂ!!!
ಊರವರಾಡುವರು, ಹಾಡುವರು!
ರುಕ್ಮಿಣೀಶನಾ ಪರಿಚಾರಕರು!
ಈಶ್ವರಾರ್ಪಣಾ ಬುದ್ಧಿಯುಳ್ಳವರು!
ಊಳಿಗ ಮಾಡಿ ತೃಪ್ತರಾಗುವರು!
ರುಜು ಮಾರ್ಗದಲ್ಲಿರಿಸೆನ್ನುವರು!
ಗುಡಿ ನಿನಗೀ ದೇಹವೆನ್ನುವರು!
ರುಚಿ ಪ್ರಸಾದ ನಿನ್ನದೆನ್ನುವರು!
ವಾಸವಾಗಿರ್ಪೆ ನೀನಿಲ್ಲೆನ್ನುವರು!
ಯಾಥಪತಿಯಾಗಿರುತ್ತೆನ್ನುವರು! (ಇ)
ರು, ನಿರಂಜನಾದಿತ್ಯಾಗ್ಯೆನ್ನುವರು!!!
-ತ, ಭವಿಷ್ಯದ ಭ್ರಾಂತಿ ಬತ್ತಿಹೋಯ್ತೇನು?
ಕೋಪ, ತಾಪ ಪರ್ಯವಸಾನವಾಯ್ತೇನು? (ಭೇ)
-ಟಿ ರಘುಪತಿ ರಾಘವನದಾಯ್ತೇನು?
ನಾನು, ನನ್ನದೆಂಬುದು ನಿರ್ನಾಮವಾಯ್ತೇನು?
ಮದ, ಮತ್ಸರ ಮಣ್ಣುಪಾಲು ಆಯ್ತೇನು?
ಬರಡು ಕಾಲಕ್ಷೇಪ ಬರಿದಾಯ್ತೇನು? (ಮ)
-ರೆ, ಮೋಸ ಬುದ್ಧಿಯ ಮರಣವಾಯ್ತೇನು?
ದರ್ಪ, ದಂಭಗಳ ದಹನವಾಯ್ತೇನು?
ರಾಗ, ದ್ವೇಷಗಳ ದಘನವಾಯ್ತೇನು? (ಆ)
-ಯ್ತೇನು? ಗುರುಪಾದ ದರ್ಶನವಾಯ್ತೇನು? (ನೀ)
-ನು, ನಿರಂಜನಾದಿತ್ಯನೆಂದರಿತ್ಯೇನು???
ಬಿತ್ತಿದ್ದೆಲ್ಲಾ ಗಿಡಗಳಾಗಿಲ್ಲ! (ಕೆ)
-ತ್ತಿದ್ದೆಲ್ಲಾ ಪೂಜಾಮೂರ್ತಿಯಾಗಿಲ್ಲ! (ನಿ)
-ದ್ದೆಗೆಟ್ಟವ್ರೆಲ್ಲಾ ಸಿದ್ಧರಾಗಿಲ್ಲ! (ಉ)
-ಲ್ಲಾಸಿಗಳೆಲ್ಲಾ ಬಲ್ಲವ್ರಾಗಿಲ್ಲ!
ಗಿರಿಗೆಳೆಲ್ಲಾ ಕೈಲಾಸಾಗಿಲ್ಲ! (ಮೃ)
-ಡನ ಲೀಲೆ ತಿಳಿದವರಿಲ್ಲ! (ಯೋ)
-ಗವಿಲ್ಲದೇನೂ ಆಗುವುದಿಲ್ಲ! (ಗೋ)
-ಳಾಡಿ ಪ್ರಯೋಜನವೇನೂ ಇಲ್ಲ! (ಯೋ)
-ಗಿರಾಜನಿಷ್ಟದಂತಾಗುವುದೆಲ್ಲ! (ಬ)
-ಲ್ಲ ನಿರಂಜನಾದಿತ್ಯನ್ಯ ಸೊಲ್ಲ!!!
-ತರೂ ಸಾಧನೆ ಬಿಡಬೇಡಯ್ಯಾ! (ಅ)
-ದೃಷ್ಟ ಬದಲಾಗದಿರದಯ್ಯಾ! (ಕ)
-ಷ್ಟ, ಸುಖ ಸದ್ಗುರು ಚಿತ್ತವಯ್ಯಾ!
ನೆಂಟ, ಶ್ರೀಕಂಠನ ನಂಬಿರಯ್ಯಾ!
ದಯಾನಿಧಿಯವನು ಕಾಣಯ್ಯಾ!(ತ)
-ಳಮಳ ಬಿಟ್ಟುತ್ಸಾಹಿಯಾಗಯ್ಯಾ!
ಬೇರಾರಿಗೂ ಶಿರ ಬಾಗ್ಬೇಡಯ್ಯಾ! (ದ)
-ಡ ಸೇರಿಸುವವ ಮೃಡನಯ್ಯಾ! (ಅ)
ಯ್ಯಾ, ನಿರಂಜನಾದಿತ್ಯತ್ಮಾತಯ್ಯಾ!!!
ದೊಂಬಿಗಾರನಿಗೆ ಕ್ರೌರ್ಯ ವಿಶಿಷ್ಟ ಗುಣ!
ದಯೆ ಸಜ್ಜನರಿಗೆ ವಿಶಿಷ್ಟ ಗುಣ!
ರತಿಪತಿಗೆ ಕಾಮ ವಿಶಿಷ್ಟ ಗುಣ! (ಎ)
-ಲ್ಲೊಂದಾದವಗಾನಂದ ವಿಶಿಷ್ಟ ಗುಣ!
ದೊಂಬರವಗೆ ಧೈರ್ಯ ವಿಶಿಷ್ಟ ಗುಣ!
ದುರ್ಬಲನಗೆ ಭಯ ವಿಶಿಷ್ಟ ಗುಣ!
ವಿರಕ್ತನಿಗೆ ಶಾಂತಿ ವಿಶಿಷ್ಟ ಗುಣ!
ಶಿವ, ಶಕ್ತಿಗನ್ಯೋನ್ಯ ವಿಶಿಷ್ಟ ಗುಣ! (ಕ)
-ಷ್ಟಜೀವಿಗೆ ಅತೃಪ್ತಿ ವಿಶಿಷ್ಟ ಗುಣ!
ಗುರುಭಕ್ತಗೆ ಸದ್ವೃತ್ತಿ ವಿಶಿಷ್ಟ ಗುಣ! (ಗ)
-ಣಪ ನಿರಂಜನಾದಿತ್ಯ ನಿರ್ಗುಣ!!!
ರಾಣಿ ಸೀತಾ ಸಮೇತ ಬಾ!
ಮಾರುತಿಯೊಡಗೂಡಿ ಬಾ!
ರತ್ನ ಕಿರೀಟವಿಟ್ಟು ಬಾ! (ಲ)
-ಘುಬಗೆಯಿಂದೊಳಗೆ ಬಾ! (ಆ)
-ರಾಮಾನುಗ್ರಹ ಮಾಡು ಬಾ!
ಮತ್ತೇನೂ ಬೇಡೆನಗೆ ಬಾ!
ಬಾ! ನಿರಂಜನಾದಿತ್ಯ ಬಾ!!!
ಬೇಸರ ಕಳೆಯುವಯ್ಯನಡಿಗೇ!
ಗಗನಮಣಿ ಬೆಳಗುವಡಿಗೇ!
ಗುಣಾವಗುಣವೆಣಿಸದಡಿಗೇ!
ರುಚಿ, ಶುಚಿ ಚಿತ್ರಾನ್ನವೀವಡಿಗೇ!
ಪುತ್ರ, ಪುತ್ರಿಯರಾಶ್ರಯದಡಿಗೇ!
ತ್ರಯಲೋಕ ವಿಖ್ಯಾತವಾದಡಿಗೇ! (ಕ)
-ಪ್ಪ ಕಾಣಿಕೆಯನ್ನಾಶಿಸದಡಿಗೇ!
ನಲ್ಲ ಶ್ರೀದೇವಿಗಾದವನಡಿಗೇ! (ಪಾ)
-ಡಿದರೊಲಿದೊಡಗೂಡುವಡಿಗೇ! (ತ್ಯಾ)
-ಗೇಶ ನಿರಂಜನಾದಿತ್ಯನಡಿಗೇ!!!
-ದ್ಧಿ ಕಾರ್ಯಕ್ಕಿಲ್ಲದಾಯಿತು!
ಓಡಿದ್ದು ವ್ಯರ್ಥವಾಯಿತು! (ಆ)
-ಡಳಿತ ತಪ್ಪಿಹೋಯಿತು!
ದಂಭ ನೀತಿ ಹೆಚ್ಚಾಯಿತು!
ತಾಳ್ಮೆ ತಾನಿಲ್ಲದಾಯಿತು! (ಬಾ)
-ಯಿ ಬೊಗಳೆ ಜೋರಾಯಿತು! (ನಿಂ)
-ತು ನಿರಂಜನಾದಿತ್ಯಾಯ್ತು!!!
ಡು ಸತತವನ ಧ್ಯಾನ ನೀನಮ್ಮಾ!
ಹಗರಣದ ಸಂಸಾರ ಸಾಕಮ್ಮಾ! (ಪ)
-ರಿಪರಿಯ ದುಃಖವದರಿಂದಮ್ಮಾ!
ಗುರು ನಿರಂಜನನಾಗಿರ್ಪನಮ್ಮಾ! (ಗ)
-ಣ ನಾಯಕನವನೆಂದರಿಯಮ್ಮಾ!
ಗಾಢ ವಿಶ್ವಾಸವನಲ್ಲಿರಿಸಮ್ಮಾ!
ನಡೆ, ನುಡಿ ಶುದ್ಧವಿರಬೇಕಮ್ಮಾ!
ಬಾರಿ ಬಾರಿಗವನ ಸ್ಮರಿಸಮ್ಮಾ! (ವ)
-ರ ಸಾಯುಜ್ಯದಿಂದ ಸುಖಿಯಾಗಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾನಂದದಮ್ಮಾ!!!
-ಡರುಗಳಾಗಾಗ ಬಿಡಿಸಿಕೋ!
ದಂಟಿಗಾಧಾರ ಕೋಲು ಕೊಟ್ಟುಕೋ! (ಮಾ)
-ತೆ ನೀನೆಂಬುದ ನೆನಪಿಟ್ಟುಕೋ!
ಗಿಡ, ಹೂ ಬಿಟ್ಟಾಗದ ಕಿತ್ತುಕೋ! (ಕಂ)
-ಡವರ ಪಾಲಾಗದಂತಿರ್ಸಿಕೋ!
ವರ ಗುರುಪಾದಕ್ಕರ್ಪಿಸಿಕೋ!
ನೋಡಿ ನಿಜಾನಂದದಲ್ಲಿದ್ದು ಕೋ! (ಅ)
-ಡಿಗಡಿಗಾ ದೃಶ್ಯ ಸ್ಮರಿಸಿಕೋ! (ಅ)
-ಕೋ, ನಿರಂಜನಾದಿತ್ಯನಾಗಿಕೋ!!!
-ರರಿಗಾಮೇಲೆ ದಾರಿ ತೋರು!
ಸುರಲೋಕವಾಗ ನಿನ್ನೂರು! (ದುಃ)
-ಖಿಗಳಾಗ ಬಿಡರಾ ಊರು!
ಯಾತ್ರಾಸ್ಥಳ ಆಗ ಆ ಊರು!
ಗಿರಿಧರನಾವಾಸಾ ಊರು!
ನೀತಿ, ರೀತಿಗಾದರ್ಶಾ ಊರು!
ನಿಶ್ಚಲ ಭಕ್ತಿಯಿರ್ಪಾ ಊರು! (ಗು)
-ರು ನಿರಂಜನಾದಿತ್ಯನೂರು!!!
-ರಿ ಭಜನೆ ಸಹಜೋಪಕಾರಿ!
ಹೇಳಿದ್ದು ಕೇಳದಾದೆ ಪರಾರಿ! (ಗಾ)
-ಳಿಗಿಟ್ಟ ದೀಪವಾದೆ ಸಂಸಾರಿ! (ಎ)
-ದೆಯ ಬೆಳಕುರಿಸು ವಿಚಾರಿ!
ನೂಪುರಾದ್ಯಲಂಕಾರಿ ಮುರಾರಿ!
ರಾಜೀವ ಸಖಾಕಾರಿ ಖರಾರಿ! (ಇ)
-ರು ನೀನವನಾಗಿ ಅಹಂಕಾರಿ!
ಬಾಲ ಲೀಲಾವತಾರಿ ಕಂಸಾರಿ! (ಹ)
-ರಿ ನಿರಂಜನಾದಿತ್ಯಾವತಾರಿ!!!
ಪಾರಮಾರ್ಥಿಕದಲ್ಲುಪಾಯವಿಲ್ಲಯ್ಯಾ!
ಯಮ, ನಿಯಮದಿಂದದು ಶುದ್ಧವಯ್ಯಾ!
ವರ ಗುರುಭಕ್ತಿ ಕಾವಲವದಕಯ್ಯಾ! (ಉ)
-ನ್ನತಾತ್ಮ ಸಾಕ್ಷಾತ್ಕಾರವೇ ಗುರಿಯಯ್ಯಾ! (ಅ)
-ಪಾಯೈಹಿಕೋಪಾಯಕ್ಕೆ ನಿಶ್ಚಯವಯ್ಯಾ!(ಕಾ)
-ಯಸುಖಕ್ಕಾಗಿ ವಿವಿಧೋಪಾಯವಯ್ಯಾ!
ಬಿದ್ದೆದ್ದೊದ್ದಾಡುವ ಪರಿಣಾಮವಯ್ಯಾ! (ಕೆ)
-ಟ್ಟಿಹ ಜೀವ ಅನಿತ್ಯ ಸ್ವಾರ್ಥದಿಂದಯ್ಯಾ! (ಪ)
-ರಮಾನಂದ ಪ್ರಾಪ್ತಿ ಪರಮಾರ್ಥಕಯ್ಯಾ!
ದಮೆ, ಶಮೆಗಳಂಗರಕ್ಷಕರಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಗಿಲ್ಲಪಾಯಯ್ಯ!!!
ಕಾರ್ಗತ್ತಲೆಯದಕೆ ಸಾಕಾಗಿದೆ! (ಬಾ)
-ಯೆಂದು ತನ್ನವರ ಕರೆಯುತಿದೆ!
ದುಡಿಯುವಾಸೆ ಅದಕ್ಕುಂಟಾಗಿದೆ! (ಸ)
-ಕಾಲವಿದೆಂಬರಿವದಕಾಗಿದೆ! ಹೋ)
-ಗೆನನ್ಯರೆಡೆಗೆಂದದನ್ನುತಿದೆ!
ಕೂಗೀಗ ಸಾರ್ಥಕಾಗಬೇಕಾಗಿದೆ!
ಗುರುಚಿತ್ತಕ್ಕದೀಗ ಬಂದಂತಿದೆ! (ಆ)
-ತನಿಂದೀಗದಕಾಶೀರ್ವಾದಾಗಿದೆ! (ನ)
-ಲಿ ನಲಿದಮೃತಾನ್ನ ತಿನ್ನುತಿದೆ! (ಆ)
-ದೆ, ನಿರಂಜನಾದಿತ್ಯನೆನ್ನುತಿದೆ!!!
ಚಿಲಿಪಿಲಿ ಗುಟ್ಟುತಿದೆ ಗುಬ್ಬಚ್ಚಿ! (ಕ)
-ಲಿಯೋ ನನ್ನಿಂದೆನ್ನುತಿದೆ ಗುಬ್ಬಚ್ಚಿ!
ಪಿತ ನಾನಾದೆನ್ನುತಿದೆ ಗುಬ್ಬಚ್ಚಿ! (ಮಾ)
-ಲಿಕನಿಚ್ಛೆಯೆನ್ನುತಿದೆ ಗುಬ್ಬಚ್ಚಿ!
ಗುಟುಕು ಬೇಕೆನ್ನುತಿದೆ ಗುಬ್ಬಚ್ಚಿ!(ಕ)
-ಟ್ಟು ಭವಕ್ಕಾಯ್ತೆನ್ನುತಿದೆ ಗುಬ್ಬಚ್ಚಿ! (ಸ)
-ತಿಯೊಡಗೂಡ್ಯೆನ್ನುತಿದೆ ಗುಬ್ಬಚ್ಚಿ! (ತಂ)
-ದೆ, ತಾಯ್ದೇವರೆನ್ನುತಿದೆ ಗುಬ್ಬಚ್ಚಿ!
ಗುರು ಅವನೆನ್ನುತಿದೆ ಗುಬ್ಬಚ್ಚಿ! (ತ)
-ಬ್ಬಲಿ ನಾನಾದೆನ್ನುತಿದೆ ಗುಬ್ಬಚ್ಚಿ! (ನೆ)
-ಚ್ಚಿ, ನಿರಂಜನಾದಿತ್ಯಾಯ್ತೂ ಗುಬ್ಬಚ್ಚಿ!!!
-ಲಸಕ್ಕಾಲಸ್ಯ ತೋರಬೇಡ!
ವಿಚಾರ ಶೂನ್ಯನಾಗಬೇಡ! (ಕೀ)
-ಳಂಗಡಿ ವ್ಯಾಪಾರವಿಡ್ಬೇಡ! (ಹಂ)
-ಬಲ ಹೆಚ್ಚಿಸಿಕೊಳ್ಳಬೇಡ!
ಮಾಲಿಕನ ಮರೆಯಬೇಡ! (ಒ)
-ಡನಾಟಲ್ಪರಲ್ಲಿಡಬೇಡ!
ಬೇಡುವಭ್ಯಾಸವೆಂದೂ ಬೇಡ! (ಆ)
-ಡ ನಿರಂಜನಾದಿತ್ಯ ಬೇಡ!!!
ನಸೆ ಕೊಟ್ಟ ನಾಯಿ ನೊಸಲು ನೆಕ್ಕೀತು! (ಆ)
-ಸೆಪಟ್ಟ ಮನಸು ಅಶಾಂತಿ ಪಟ್ಟೀತು!
ಕೊಳ್ಳೆಯೈಸಿರಿ ಕಳ್ಳರ ಪಾಲಾದೀತು (ಕೆ)
-ಟ್ಟ ಜನರ ಇಷ್ಟ ಕಷ್ಟ ತಂದಿಟ್ಟೀತು!
ನಾಳೆ, ನಾಳೆಯಿಂದ ಬಾಳು ಗೋಳಾದೀತು! (ತಾ)
-ಯಿ, ತಂದೆ, ನೊಂದಬಂಧ ಅಂದಗೆಟ್ಟೀತು!
ನೊರೆವಾಲ್ನೀರ್ಸೇರಲ್ನಿಸ್ಸಾರವಾದೀತು!
ಸತಿ, ಪತಿ ನೀತಿ ಬಿಟ್ರನರ್ಥಾದೀತು! (ಪಾ)
-ಲು ಮಾರಿಕೆ ಸೋಲಿಗಾಲಯವಾದೀತು! (ಸೋ)
-ನೆ ಸುರಿದರೊಲೆಯುರಿಯದಾದೀತು! (ದ)
-ಕ್ಕೀತೆಂದು ಕಿತ್ತನ್ಯರಾಸ್ತಿ ಕೈಬಿಟ್ಟೀತು! (ಮಾ)
-ತು ನಿರಂಜನಾದಿತ್ಯನೆಂದಂತಾದೀತು!!!
-ಟ್ಟು ಸಾವಿನಲ್ಲೀಗ ಸಿಕ್ಬಿಟ್ಟೆ!
ಪಡ್ಬಾರದ ಕಷ್ಟ ಪಟ್ಟಿಟ್ಟೆ!
ದೇಶದೇಶವೆಲ್ಲಾ ಸುತ್ಬಿಟ್ಟೆ!
ಶರೀರದಲ್ಲೀಗ ಸೋತ್ಬಿಟ್ಟೆ!
ವರಗುರುವ ಮರೆತ್ಬಿಟ್ಟೆ!
ಬಿಟ್ಟಿ ಬಸವನಂತಾಗ್ಬಿಟ್ಟೆ! (ತೊ)
ಟ್ಕೊಳ್ಳುವುದಕ್ಕಿಲ್ಲದಾಗ್ಬಿಟ್ಟೆ! (ಅ)
-ಟ್ಟೆ, ನಿರಂಜನಾದಿತ್ಯಾಗ್ಬಿಟ್ಟೆ!!!
-ಭ್ಯಾಗತರಾದರಿಸು ಸುಭಾಷಿ!
ಸೀತಾಪತಿಯತಿಥಿ ನಿರ್ದೋಷಿ!
ನೀಗಾಡು ಕಾಮ, ಕ್ರೋಧ ಹಿತೈಷಿ!
ನಾಸ್ತಿಕನಾಗ್ಬೇಡ ಸತ್ಯಾನ್ವೇಷಿ!
ಗುಣಾತೀತ ಸದ್ಗುರು ಹಿತೈಹಿ!
ಮಿಥ್ಯೈಹಿಕ ಸುಖ ಸತ್ಯಾನ್ವೇಷಿ!
ತತ್ವಾರ್ಥ ಸಾಧಿಸು ಮಿತಭಾಷಿ!
ಭಾವ, ಭಕ್ತಿ ಬಲಿಸು ಸುಭಾಷಿ! (ಋ)
-ಷಿ, ನಿರಂಜನಾದಿತ್ಯ ನಿರ್ದೊಷಿ!!!
ಗತಿಸುತಿದೆ ಕಾಲ ನಾಗರಾಜ!
ಬಾಯೊಣಗಿತು ಕೂಗಿ ನಾಗರಾಜ!
ರಾಮ, ಕೃಷ್ಣ ಸ್ವರೂಪಾ ನಾಗರಾಜ!
ಜರಾ, ಜನ್ಮ ವಿದೂರಾ ನಾಗರಾಜ!
ರಾಜೀವ ಸಖಾನಂದಾ ನಾಗರಾಜ!
ಜಗದೋದ್ಧಾರಾಧಾರಾ ನಾಗರಾಜ!
ನಾದ, ಬಿಂದು ಕಲಾತ್ಮಾ ನಾಗರಾಜ!
ಗರ್ವರಹಿತೋಂಕಾರಾ ನಾಗರಾಜ!
ರಾರಾಜಿಪನೆಲ್ಲೆಲ್ಲಾ ನಾಗರಾಜ! (ರಾ)
-ಜ ನಿರಂಜನಾದಿತ್ಯಾ ನಾಗರಾಜ!!!
ಕರದಲ್ಲಿ ಧರಿಸಿಹಾ ಪಾತ್ರೆ! (ವ)
-ರೆ ಗುರುಭಕ್ತರ್ಗಾಶ್ರಯಾ ಪಾತ್ರೆ! (ಗಂ)
-ಗೆ, ಪಾರ್ವತಿಯರುಣಿಪಾ ಪಾತ್ರೆ!
“ಶಂಭೋ ಮಹಾದೇವ” ಎಂಬಾ ಪಾತ್ರೆ! (ಸು)
-ಖ, ಶಾಂತಿಪ್ರದವಾಗಿರ್ಪಾ ಪಾತ್ರೆ!
ಭಿಕ್ಷೆ ಸಮಸ್ತ ಲೋಕಕ್ಕಾ ಪಾತ್ರೆ!
ಪಾವನ ಪತಿತರಿಗಾ ಪಾತ್ರೆ! (ಪಾ)
-ತ್ರೆ ನಿರಂಜನಾದಿತ್ಯನಾ ಪಾತ್ರೆ!!!
ಭಿಕ್ಷೆ ನೀಡಮ್ಮನ್ನಪೂರ್ಣಮ್ಮಾ! (ರ)
-ಕ್ಷೆ ಸರ್ವರಿಗೂ ನಿನ್ನದಮ್ಮಾ!
ನೀನೆಲ್ಲಾ ಲೋಕಗಳಮ್ಮಮ್ಮಾ! (ಮೃ)
-ಡನರಸಿ ನೀನು ಕಾಣಮ್ಮಾ! (ನೆ)
-ಮ್ಮದಿ ನಿನ್ನಿಂದಾಗಬೇಕಮ್ಮಾ! (ನಿ)
-ನ್ನ ಪ್ರಸಾದ ಪರಮಾನ್ನಮ್ಮಾ!
ಪೂಣಾನುಗ್ರಹದಿಂದಿಕ್ಕಮ್ಮಾ! (ವ)
-ರ್ಣ ಭೇದದಕ್ಕಿಹುದೇನಮ್ಮಾ? (ಅ)
-ಮ್ಮಾ, ನಿರಂಜದಾದಿತ್ಯಯ್ಯಮ್ಮಾ!!!
-ದ ತೆರೆದು ಮೈ ಮರೆತಿರಬೇಡ!
ಚಂಚಲ ಮನಕ್ಕಾಳಗೊಡಬೇಡ! (ಸೋ)
-ದರರಿಗನ್ಯಾಯ ಬಗೆಯಬೇಡ! (ಬೆ)
-ಕ್ಕೆ ಗೀಡಾಗಿ ಕಗ್ಗೊಲೆ ಮಾಡಬೇಡ!
ಮಸೂದೆಗೆದುರಾಳಿಯಾಗಬೇಡ! (ತು)
-ರು, ಕರುಗಳ ಕೊಂದು ತಿನಬೇಡ! (ಬೋ)
-ಳಾದ ತಲೆ ಮೇಲೇನೂ ಹೇರಬೇಡ!
ಗಟ್ಟಿಗನೆಂಬಹಂಕಾರವೇ ಬೇಡ!
ಬೇಗೆಗಂಜಿ ವೈರಾಗ್ಯ ಬಿಡಬೇಡ! (ಬಿ)
-ಡ ನಿರಂಜನಾದಿತ್ಯಯೋಗ ಬಿಡ!!!
ಮಲಿನಾಸೆಗೆಲ್ಲ ಸಮರ! (ಪ)
-ರ ಹಿತರಿಗಿಲ್ಲ ಸಮರ! (ಮೋ)
-ಸಗಾರರಿಗೆಲ್ಲ ಸಮರ! (ಸಾ)
-ಕಿದವರಿಗಿಲ್ಲ ಸಮರ! (ಕ್ಷು)
-ಲ್ಲ ಬಾಲರಿಗೆಲ್ಲ ಸಮರ!
ಸಜ್ಜನರಿಗಿಲ್ಲ ಸಮರ!
ಮರ್ಕಟರಿಗೆಲ್ಲ ಸಮರ! (ಹ)
-ರ ನಿರಂಜನಾದಿತ್ಯಮರ!!!
ರಾಮನಾಮ ಬರೆಯುತ್ತಿರು ಭಾಮಾ!
ಮಕ್ಕಳೇಳಿಗೆಗದು ದಾರಿ ಭಾಮಾ!
ವಾದ ಅಶಾಂತಿಗೆ ಕಾರಣ ಭಾಮಾ! (ಯೋ)
-ಗಿನಿಯಾಗಿ ಜನ್ಮ ಸಾಗಿಸು ಭಾಮಾ! (ಎ)
-ದ್ದೀಗಿಂದಾನಂದವಾಗಿ ಇರು ಭಾಮಾ! (ಛಾ)
-ಯೇಶ್ವರಿಯೇ ನೀನಾಗಿ ಇರು ಭಾಮಾ!
ನಮಿಸು ಶ್ರೀಪಾದಕ್ಕಾಗಾಗ ಭಾಮಾ! (ದು)
-ಮ್ಮಾನದಿಂದೇನೂ ಫಲಿವಿಲ್ಲ ಭಾಮಾ!
ಭಾವ, ಭಕ್ತಿಯೇ ಬಾಹುಬಲ ಭಾಮಾ! (ರಾ)
-ಮಾ ನಿರಂಜನಾದಿತ್ಯ ಸತ್ಯಭಾಮಾ!!!
ಸದ್ದಿಲ್ಲದ ಮುದ್ದು ಮಗು ನಿನ್ನದಮ್ಮಾ! (ಎ)
-ದ್ದಿಲ್ಲದಿನ್ನೂ ಮಲಗಿಸಿದಲ್ಲಿಂದಮ್ಮಾ! (ಇ)
-ಲ್ಲ ಸಲ್ಲದ ಚಪಲದಕ್ಕೇನಿಲ್ಲಮ್ಮಾ!
ದಯೆಯಿಂದುಣಿಸಿದರುಣುವುದಮ್ಮಾ!
ಮುನಿಸೆಂಬುದೇ ಅದರಲ್ಲಿಲ್ಲವಮ್ಮಾ! (ಕ)
-ದ್ದು, ಮೆದ್ದು ಅಬದ್ಧಾಡುವುದದಲ್ಲಮ್ಮಾ!
ಮಲಿನವೆಂದರದು ಹೇಸುವುದಮ್ಮಾ!
ಗುರುವಿಗದಚ್ಚುಮೆಚ್ಚಾಗಿದೆಯಮ್ಮಾ! (ತ)
-ನ್ನ ತಾನೇ ಮರೆತು ಕುಣಿಯುವುದಮ್ಮಾ! (ಪಾ)
-ದಕ್ಕಾಗಾಗ ನಮಸ್ಕರಿಸುವುದಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಾನಂದ ಅದಮ್ಮಾ!!!
-ಶ್ಚಯ ಬುದ್ಧಿಯುಳ್ಳವ ಮುದ್ದಣ್ಣ!
ಲಕ್ಷ್ಯಾರ್ಥಾನು ಸಂಧಾನಿ ಮುದ್ದಣ್ಣ!
ಭಗವದ್ಗೀತಾಪ್ರೇಮಿ ಮುದ್ದಣ್ಣ! (ಮು)
-ಕ್ತಿ ಸಾಮ್ರಾಜ್ಯಾಧಿಕಾರಿ ಮುದ್ದಣ್ಣ!
ವರ ಗುರುವಿಗಾಪ್ತ ಮುದ್ದಣ್ಣ!
ಮುಚ್ಚು ಮರೆಯನ್ನೊಲ್ಲ ಮುದ್ದಣ್ಣ! (ಸ)
-ದ್ದಡಗಿಪ ಪ್ರಬುದ್ಧ ಮುದ್ದಣ್ಣ! (ಅ)
-ಣ್ಣ, ನಿರಂಜನಾದಿತ್ಯಾ ಮುದ್ದಣ್ಣ!!!
ವರ ಭಕ್ತಿ ಭಾವಾ ಪೂವಯ್ಯಾ!
ಪಾಪ ಪರಿಹಾರಾ ಪೂವಯ್ಯಾ!
ದಾರಿದ್ರ್ಯ ಶಮನಾ ಪೂವಯ್ಯಾ! (ದ)
-ರ್ಪ, ದಂಭ ದಮನಾ ಪೂವಯ್ಯಾ! (ಪ್ರಾ)
-ಣಾಧಾರರವಿಂದಾ ಪೂವಯ್ಯಾ!
ಪೂರ್ವ ಪುಣ್ಯೋದಯಾ ಪೂವಯ್ಯಾ!
ವರ ಗುರು ಕೃಪಾ ಪೂವಯ್ಯಾ! (ಅ)
-ಯ್ಯಾ ಶ್ರೀ ನಿರಂಜನಾದಿತ್ಯಯ್ಯಾ!!!
-ಯೆಯಾಟ ಈ ಭವ ಸಾಗರಾ!
ದೋಣಿ ನೀ ದಾಟಲೀ ಸಾಗರಾ! (ನೀ)
-ರು ಬಹಳಾಳ ಈ ಸಾಗರಾ! (ವಂ)
-ದನೆಯಂಗೀಕರಿಸೀಶ್ವರಾ! (ಜ)
-ಯಾಪಜಯ ನಿನ್ನದೀಶ್ವರಾ!
ಸಾಧ್ಯಾಸಾಧ್ಯಾ ಧಾರೆ ಈಶ್ವರಾ! (ಸಂ)
-ಗ ನಿನ್ನಲ್ಲಾಗಬೇಕೀಶ್ವರಾ! (ಹ)
-ರಾ ನಿರಂಜನಾದಿತ್ಯೇಶ್ವರಾ!!!
ಸಾಧು ಜನಮನ ಪ್ರಕಾಶಾ!
ಶ್ರೀನಿಧಿ, ದಯಾಂಬುಧಿ, ಶ್ರೀಶಾ!
ಹಗಲಿರುಳು ಗೈವಾಭ್ಯಾಸಾ!
ರಿಪುವರ್ಗವಿಲ್ಲದಾವಾಸಾ!
ಕೃಷ್ಣನಲ್ಲಿ ಸತತವಾಸಾ!
ಪಾವನ ಬೃಂದಾವನಾ ವಾಸಾ!
ವಾಸುದೇವಾನಂದನಾ ವಾಸಾ! (ದಾ)
-ಸಾ, ನಿರಂಜನಾದಿತ್ಯಾವಾಸಾ!!!
-ಗೀತ ಸಾಹಿತ್ಯಕ್ಕಲಂಕಾರ!
ತತ್ವವರಿಯದಹಂಕಾರ! (ಇ)
-ಕ್ಕೆ ಅನ್ನ ಮಾತ್ರೇನುಪಕಾರ!
ಸಾಮರಸ್ಯ ದಾಹಾರಾಹಾರ!
ಹಿರಿಮೆಯದರದಪಾರ!
ತಾಗಯ್ಯನರಿತಾ ವಿಚಾರ! (ಸು)
-ಧಾ ಸಮಾನಾ ಸಂಗೀತ ಸಾರ! (ಸ್ವ)
-ರ ನಿರಂಜನಾದಿತ್ಯಾಗಾರ!!!
-ಣ್ಣು ತುಂಬಾ ನಾ ನಿನ್ನ ಕಂಡೆ ತಂದೆ!
ಕಾಮ್ಯಾರ್ಥಿಯಾಗಿ ನಾನೀಗ ಬಂದೆ! (ತಾ)
-ಯಿ ನೀನಾಗಿ ಉಣಿಸೀಗ ತಂದೆ!
ತಳಮಳಗೊಂಡಾನೀಗ ಬಂದೆ! (ಪ)
-ರಮಾನುಗ್ರಹ ಮಾಡೀಗ ತಂದೆ!
ದೇವರೇ ಗತಿಯೆಂದಿಲ್ಲಿ ಬಂದೆ!
ನಾನಿನ್ನೇನೂ ಹೇಳಲಾರೆ ತಂದೆ!
ಬಂಧು, ಬಳಗ ನೀನೆಂದು ಬಂದೆ! (ತಂ)
-ದೆ ನಿರಂಜನಾದಿತ್ಯ ನೀನೆಂದೆ!!!
-ತಃಕರಣ ಶುದ್ಧಾದಾಗ ಶಾಂತಿ!
ಕರ್ತವ್ಯ ನಿಷ್ಠನಾದಾಗ ಶಾಂತಿ! (ಕಾ)
-ಲಲೀಲೆಯನ್ನರಿತಾಗ ಶಾಂತಿ!
ಹರಿನಾಮ ಹಾಡಿದಾಗ ಶಾಂತಿ! (ಹಾ)
-ವೆಂದ ಹಗ್ಗ ನೋಡಿದಾಗ ಶಾಂತಿ!
ದಿವ್ಯಾತ್ಮ ರೂಪನಾದಾಗ ಶಾಂತಿ! (ಬ)
-ಗೆ ಬಗೆಯಾಸೆ ಸತ್ತಾಗ ಶಾಂತಿ!
ಶಾಂಭವಿ ತಾನೊಲಿದಾಗ ಶಾಂತಿ! (ಶಾಂ)
-ತಿ ನಿರಂಜನಾದಿತ್ಯಾತ್ಮ ಶಾಂತಿ!!!
-ನೊರೆವುದು ಬಾಕಿನ್ನೇನಿದೆ? (ಇ)
-ರೆ ನೆರವು ಭಯವೇನಿದೆ? (ಉ)
-ದಯ ನಿನ್ನದೆನ್ನಲ್ಲಾಗಿದೆ! (ಮು)
-ದ್ದು ಮಗು ನಿನಗಿದಾಗಿದೆ!
ನಾನು, ನೀನೆಂಬುದಿನ್ನೆಲ್ಲಿದೆ?
ಬದುಕಿನೊಡಕು ಹೋಗಿದೆ! (ಪೊ)
-ರೆ ಹರಿದು ನೇತ್ರ ಶುಭ್ರಾಗಿದೆ! (ಎ)
-ದೆ ನಿರಂಜನಾದಿತ್ಯಗಾಗಿದೆ!!!
ಕಗ್ಗತ್ತಲೆಯನಟ್ಟಿದ ರಾಮಕೃಷ್ಣ! (ಜ)
-ಗ್ಗದುದನು ಬಗ್ಗಿಸಿದ ರಾಮಕೃಷ್ಣ! (ಮ)
-ತ್ತರಾದವರನ್ನೆತ್ತಿದ ರಾಮಕೃಷ್ಣ! (ಕೊ)
-ಲೆಗಾರರ ಕ್ಷಮಿಸಿದ ರಾಮಕೃಷ್ಣ! (ಭ)
-ಯ ನಿವಾರಣೆ ಮಾಡಿದ ರಾಮಕೃಷ್ಣ!
ನರೇಂದ್ರರಾಧಾರನಾದ ರಾಮಕೃಷ್ಣ! (ಜ)
-ಟ್ಟಿಯ ಹುಟ್ಟಡಗಿಸಿದ ರಾಮಕೃಷ್ಣ!
ದಯಾಮಯನೆನಿಸಿದ ರಾಮಕೃಷ್ಣ!
ರಾಗ, ದ್ವೇಷ, ಬಿಡಿಸಿದ ರಾಮಕೃಷ್ಣ!
ಮತಭೇದ ಸುಡಿಸಿದ ರಾಮಕೃಷ್ಣ!
ಕೃತಿಯಿಂದೆಲ್ಲಾ ತೋರಿದ ರಾಮಕೃಷ್ಣ! (ಪೂ)
-ಷ್ಣ ನಿರಂಜನಾದಿತ್ಯ ಶ್ರೀ ರಾಮಕೃಷ್ಣ!!!
-ಲ್ಲರಿಗಿದರರ್ಥರಿವಾಗೆ! (ಬಿ)
-ಲ್ಲಿಗೆ ಬಾಣೋಪಯೋಗವಾಗೆ!
ನಲ್ಲಗೆ ನಲ್ಲೆ ನೆರವಾಗೆ!
ದುರ್ಬುದ್ಧಿ ಸದ್ಬುದ್ಧಿ ತಾನಾಗೆ!
ಅನಲನಿಂದಡಿಗೆಯಾಗೆ! (ಪು)
-ಲ್ಲ ಸದ್ವಿಚಾರಗಳಿಂದಾಗೆ! (ಬ)
-ಲ್ಲಿದ ಗುರುಕೃಪೆಯಿಂದಾಗೆ! (ಸೀ)
-ಗೆ ನಿರಂಜನಾದಿತ್ಯನಾಗೆ!!!
-ಷ್ಣನ ಗುಣಗಾನವಾಗುತಿದೆ!
ರಾತ್ರಿ, ದಿನ, ಇದು ಸಾಗುತಿದೆ!
ಜನ ಜಾಗೃತಿಯುಂಟಾಗುತಿದೆ!
ಪೇಯ ಹರಿನಾಮವಾಗುತಿದೆ! (ಸ)
-ಟೆಯನ್ನು ದಿಟ ಬೆನ್ನಟ್ಟುತಿದೆ! (ಜ)
-ಯ ಸದ್ಗುರು ಪಾದಕ್ಕಾಗುತಿದೆ!(ಅ)
-ಲ್ಲೇನಿಲ್ಲೇನೆಂಬ ಭ್ರಾಂತಿ ಹೋಗಿದೆ!
ನಿಶ್ಚಿಂತೆ ತಾಂಡವವಾಡುತಿದೆ! (ಸೊ)
-ದೆ ನಿರಂಜನಾದಿತ್ಯಾನಂದಾದೆ!!!
-ಡುವುದು ಮಾಡಬಾರದ್ದನ್ನಾ ಪಿಶಾಚಿ!
ತಿನ್ನೇನು ಬೇಕಾದರೆಂಬುದಾ ಪಿಶಾಚಿ! (ತಂ)
-ದೆ, ತಾಯಿಯಲಕ್ಷಿಸುವುದಾ ಪಿಶಾಚಿ!
ಸತಿಯ ಕತ್ತು ಹಿಂಡುವುದಾ ಪಿಶಾಚಿ!
ತಲೆಯೂಡೆಯಲೂ ಹೇಸದಾ ಪಿಶಾಚಿ!
ತಪಸ್ಸಿಗೂ ಕಂಟಕಪ್ರಾಯಾ ಪಿಶಾಚಿ!
ಧರ್ಮಾಧರ್ಮವನ್ನರಿಯದಾ ಪಿಶಾಚಿ!
ನಯನಾದಿಂದ್ರಿಯ ಲಂಪಟಾ ಪಿಶಾಚಿ!
ಪಿರಿಯಾತ್ಮಾನಂದ ನೀಡದಾ ಪಿಶಾಚಿ!
ಶಾಶ್ವತ ದೇಹವೆಂದಿಹುದಾ ಪಿಶಾಚಿ! (ಶು)
-ರಂಜನಾದಿತ್ಯಾನಂದ ದಧೀಚಿ!!!
ಕ್ರಮವಲ್ಲೆಂದರೆ ಕ್ರೋಧ ವೃತ್ತಿ!
ಮನ ಕ್ಲೇಶದಿಂದ ಯುದ್ಧ ವೃತ್ತಿ! (ರ)
-ಣರಂಗದಲ್ಲತಾಚ್ಯಾರ ವೃತ್ತಿ!
ನೀಚ ಸ್ವಾರ್ಥಕ್ಕಾಗೀಕ್ರೂರ ವೃತ್ತಿ!
ತಿರಿತಿರಿಗೀ ರಾಕ್ಷಸೀ ವೃತ್ತಿ!
ಲೋಕ ಶಾಂತಿಗೆ ಬೇಕೊಳ್ಳೇ ವೃತ್ತಿ!
ಕರ್ತವ್ಯ ಪಾಲನೆಯೇ ಸದ್ವೃತ್ತಿ!
ವೃತ್ತಿ ನಿರೋಧವೇ ಯೋಗ ವೃತ್ತಿ! (ವೃ)
-ತ್ತಿ, ನಿರಂಜನಾದಿತ್ಯ ನಿವೃತ್ತಿ!!!
ಭಿನ್ನಾಭಿಪ್ರಾಯದಿಂದಾಳಬಲ್ಲಿರೇನಯ್ಯಾ? (ಚೆ)
-ನ್ನಾಗಿ ಆಲೋಚಿಸಿ ನಿರ್ಧಾರ ಮಾಡಿರಯ್ಯಾ! (ಅ)
-ಭಿಮಾನ ನಿಷ್ಕಾಮ ಸೇವೆಗಿರಬೇಕಯ್ಯಾ!
ಪ್ರಾಮಾಣಿಕತೆ ಎಲ್ಲರಲ್ಲಿರಬೇಕಯ್ಯಾ! (ಜ)
-ಯಮಾಲೆ ಕಂಠದಲ್ಲಾಗ ಶೋಭಿಪುದಯ್ಯಾ!
ದಿಂಡೊಳಗಿಲ್ಲದ ಬಾಳೆ ಬೀಳುವುದಯ್ಯಾ!
-ದಾರಿ ನೇರಾಗಿಲ್ಲದ ಯಾತ್ರೆ ಕಷ್ಟವಯ್ಯಾ! (ಬ)
-ಳಸಬೇಕು ಬಲ್ಲವರನುಭವವಯ್ಯಾ!
ಬರೀ ಗುಲ್ಲು ನಿದ್ದೆಗೇಡಾಗಬಾರದಯ್ಯಾ! (ಮ)
-ಲ್ಲಿಕಾರ್ಜುನನಲ್ಲಿ ಭಕ್ತಿಯಿರಬೇಕಯ್ಯಾ!
ರೇಗಾಟ, ಕೂಗಾಟದಿಂದ ಫಲವಿಲ್ಲಯ್ಯಾ!
ನಮಸ್ಕಾರ ಸದ್ಗುರು ಪಾದಕ್ಕೆ ಮಾಡಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯೋಪದೇಶವಿದಯ್ಯಾ!!!
-ರ್ದಮದಲ್ಲದ್ದ ಬೇಡವೋ ಕಮಲಾಕ್ಷಾ! (ಪ್ರ)
-ಯತ್ನ ಸಫಲ ಮಾಡೋ ಸರಸಿಜಾಕ್ಷಾ!
ನಾನು ನಿನಗನ್ಯನೇನೋ ವನಜಾಕ್ಷಾ? (ಯೋ)
-ಗ ಭಾಗ್ಯ ನೀಡಬಾರದೇನೋ ಫಾಲಾಕ್ಷಾ?
ಬೇಯುತಿದೆ ದೇಹ, ನೋಡೋ ಸಹಸ್ರಾಕ್ಷಾ! (ತ)
-ಡ ಮಾಡದೀಗ ಬೀರೋ ಕೃಪಾಕಟಾಕ್ಷಾ! (ಜೀ)
-ವೋತ್ಪತ್ತಿ, ಲಯ, ನಿನ್ನಿಂದ ಬಿಸಜಾಕ್ಷಾ!
ನೀನೊಲಿಯದ ಬಾಳೇಕೋ ಜಲಜಾಕ್ಷಾ! (ವ)
-ರಗುರು ನೀನಲ್ಲವೇನೋ ಸಾರಸಾಕ್ಷಾ? (ನಿ)
-ಜಾನಂದ ಸುಖ ಪ್ರದಾತರವಿಂದಾಕ್ಷಾ! (ಸಾ)
-ಕ್ಷಾತ್ಪರಬ್ರಹ್ಮ ನಿರಂಜನಾದಿತ್ಯಾಕ್ಷಾ!!!
ದಯಾಮಯಾ ಗೋಪಾಲ ಕೃಷ್ಣ! (ದ)
-ರ್ಶನಾನಂದ ಮುಕುಂದಾ ಕೃಷ್ಣ!
ಗೃಹಿಣೀ ಸಮೇತಾತ್ಮಾ ಕೃಷ್ಣ! (ಅ)
-ಹರ್ನಿಶಿ ಸೇವಾತುರಾ ಕೃಷ್ಣ! (ಸ್ವ)
-ಸ್ಥ ಚಿತ್ತಾ ಗುರುಭಕ್ತ ಕೃಷ್ಣ!
ಶ್ರೀಪಾದ ಪೂಜಾಸಕ್ತಾ ಕೃಷ್ಣ!
ಕೃತಿಯಲ್ಲೆಲ್ಲಾ ತೋರ್ಪಾ ಕೃಷ್ಣ! (ಪೂ)
-ಷ್ಣ ನಿರಂಜನಾದಿತ್ಯಾ ಕೃಷ್ಣ!!!
ಪಾತ್ರಾಪಾತ್ರ ನೋಡಿ ದಾನ ಮಾಡು! (ಪಿ)
-ತ್ರಾರ್ಜಿತವಿದಕ್ಕೆಂದೀಗ ಮಾಡು!
ಪಾಲುಮಾರಿಕೆಯಿಲ್ಲದೇ ಮಾಡು! (ಪು)
-ತ್ರ, ಮಿತ್ರ, ಕಳತ್ರರಿಗೂ ಮಾಡು!
ನೋವೆಳ್ಳಷ್ಟೂ ಆಗದಂತೆ ಮಾಡು! (ಅ)
-ಡಿಗಡಿಗಾತ್ಮ ಚಿಂತನೆ ಮಾಡು!
ದಾನಶೂರ ಕರ್ಣನಂತೆ ಮಾಡು!
ನಮೋ ನಾರಾಯಣಾಯೆಂದು ಮೂಡು!
ಮಾಯೆಗೆ ಮರುಳಾಗದೇ ಮಾಡು! (ಮಾ)
-ಡು ನಿರಂಜನಾದಿತ್ಯನ ಕೂಡು!!!
ಸರ್ವರುನ್ನತಿಗೆ ಸ್ಥಿತಿಪ್ರಜ್ಞೆ, ಬೇಕು! (ಆ)
-ರ್ಜವವೆಲ್ಲರಲ್ಲೂ ಮನೆ ಮಾಡಬೇಕು! (ವಿ)
-ನಾಶಕಾರಕ ವಿಚಾರ ಬಿಡಬೇಕು!
ವಾದವಿಲ್ಲದೊಗ್ಗಟ್ಟಂಕುರಿಸಬೇಕು!
ಹರ್ಷ, ತತ್ವಚಿಂತನೆಯಿಂದಾಗಬೇಕು!
ನಾಮಜಪವೆಡೆಬಿಡದಾಗಬೇಕು!
ಗೊಂಬೆಯಾಟಕ್ಕೆ ಹುಚ್ಚಾಗದಿರಬೇಕು!
ದಯಾಹೃದಯ ವಿಸ್ತಾರವಾಗಬೇಕು!
ಲಕ್ಷ್ಯ ಸದ್ಗುರುಪಾದದಲ್ಲಿರಬೇಕು!
ಸಾಯುಜ್ಯವಿದೇ ಜನ್ಮದಲ್ಲಾಗಬೇಕು!
ಕುಲ ನಿರಂಜನಾದಿತ್ಯನದ್ದಾಗ್ಬೇಕು!!!
ಕಾಳಸಂತೆ ವ್ಯಾಪಾರ ಹೆಚ್ಚಾಯ್ತು! (ಕೂ)
-ಳನಾಥರಿಗೆ ಸಿಕ್ಕದಂತಾಯ್ತು!
ಸಂವಿಧಾನವೆಲ್ಲಾ ಸಡಿಲಾಯ್ತು!
ತೆರಿಗೆಗೆ ಮಿತಿಯಿಲ್ಲದಾಯ್ತು (ಹ)
-ವ್ಯಾಸಗಳೆಲ್ಲೆಲ್ಲೂ ಹೊಲಸಾಯ್ತು!
ಪಾರಮಾರ್ಥ ರುಚಿಸದಂತಾಯ್ತು! (ಪ)
-ರದಾಟ ಜೀವನದಲ್ಲುಂಟಾಯ್ತು!
ಹೆದ್ದಾರಿ ದರೋಡೆ ಬಹಳಾಯ್ತು! (ಕ)
-ಚ್ಚಾಟದಿಂದುಟ್ಟ ಬಟ್ಟೆಯೂ ಹೋಯ್ತು! (ಆ)
-ಯ್ತು, ನಿರಂಜನಾದಿತ್ಯ ನೋಡ್ಯಾಯ್ತು!!!
-ರಿಗೆ ಸದಾ ಮೊರೆಯಿಡಬೇಕಪ್ಪಾ! (ಅ)
-ಹಾರ, ವಿಹಾರ ಸಾತ್ವಿಕಾಗ್ಬೇಕಪ್ಪಾ! (ಪ)
-ರರನುಕರಣೆ ಬಿಡಬೇಕಪ್ಪಾ!
ವಿದ್ಯೆ, ಬುದ್ಧಿ, ಶುದ್ಧಿಗಾಗಬೇಕಪ್ಪಾ! (ಪಾ)
-ದ ಸೇವೆ ಗುರುವಿನದ್ದಾಗ್ಬೇಕಪ್ಪಾ! (ಮಿ)
-ಕ್ಕೆಲ್ಲಾ ಕೆಲಸಕ್ಕಿದು ಬಲವಪ್ಪಾ! (ಚೆ)
-ಲ್ಲಾಟ, ಕೊಲ್ಲಾಟದಿಂದೇನಾಗ್ವುದಪ್ಪಾ?
ಎಕೈಕಾತ್ಮ ನಿಷ್ಠೆಯಿರಬೇಕಪ್ಪಾ!
ನಶ್ವರದಾಸೆ ತ್ಯಜಿಸಬೇಕಪ್ಪಾ! (ಅ)
-ಪಾ, ನಿರಂಜನಾದಿತ್ಯನಂತಿರಪ್ಪಾ!!!
ಕಾಮನಿಗೆ ಕಣ್ಣಿಲ್ಲ, ರಾಮನಿಗೆ ಹುಣ್ಣಿಲ್ಲ!
ಮಲಿನ ವಾಸನಾ ದೇಹ ರಾಮಗಿಲ್ಲವಲ್ಲಾ!
ನಿರ್ಮಲ ಸ್ವಭಾವ ಕಾಮನಿಗೇನಿಲ್ಲವಲ್ಲಾ!
ಗೆಳೆಯ ರಾಮನಿಗೆ ಸೂರ್ಯನಾಗಿಹನಲ್ಲಾ!
ಕಳ್ಳ, ಸುಳ್ಳರ ಪಾಲು ಕಾಮನಾಗಿಹನಲ್ಲಾ (ಹೆ)
-ಣ್ಣಿನ ಗುಲಾಮ ಶ್ರೀರಾಮಚಂದ್ರನಲ್ಲವಲ್ಲಾ! (ಕ್ಷು)
-ಲ್ಲ ಕಾಮನಿಗೆ ಮಾನ, ಮರ್ಯಾದೆಯಿಲ್ಲವಲ್ಲಾ!
ರಾಮ ಪೂಜಾರ್ಹನಾಗಿ ಮರೆಯುತಿಹನಲ್ಲಾ! (ಕಾ)
-ಮ ತೇಜೋಹೀನನಾಗಿ ಅಲೆಯುತ್ತಿಹನಲ್ಲಾ!
ನಿಜಾನಂದದಲ್ಲಿ ರಾಮನಿರುತಿಹನಲ್ಲಾ! (ಹೆಂ)
-ಗೆಳೆಯರ ಬೆನ್ನಟ್ಟಿ ಕಾಮ ಓಡುವನಲ್ಲಾ!
ಹುಸಿಯಾಡುವಭ್ಯಾಸ ರಾಮನಿಗಿಲ್ಲವಲ್ಲಾ! (ಬ)
-ಣ್ಣಿಸುತ ಮಾಯೆಯನು ಕಾಮನಿರುವನಲ್ಲಾ! (ಎ)
-ಲ್ಲಕ್ಕೂ ಸಾಕ್ಷಿ ನಿರಂಜನಾದಿತ್ಯಾಗಿಹನಲ್ಲಾ!!!
-ಳೆಗುಪಕಾರವದಾಯ್ತು!
ಬಂಜರು ಭೂಮಿ ತಂಪಾಯ್ತು!
ತುರು, ಕರುಗೆ ಮೇವಾಯ್ತು!
ಕೊಳದ ನೀರು ಹೆಚ್ಚಾಯ್ತು! (ಹೊ)
-ಳೆ ಸ್ನಾನಕ್ಕನುಕೂಲಾಯ್ತು! (ಅ)
-ಹೋರಾತ್ರಿ ಭಜನೆಯಾಯ್ತು! (ಆ)
-ಯ್ತು ನಿರಂಜನಾದಿತ್ಯಾಯ್ತು!!!
ಅಧಿಕಾರವಿರುವಾಗಾರ್ತರಾಧಾರನಾಗಪ್ಪಾ!
ಧಿಕ್ಕರಿಸಿ ಅವರನ್ನು ಹೊರಗಟ್ಟಬೇಡಪ್ಪಾ!
ಕಾಲಚಕ್ರದ ಮುಂದೆ ಯಾವುದು ಶಾಶ್ವತವಪ್ಪಾ? (ಪ)
-ರರ ಕಷ್ಟಕ್ಕೀಗಾದರೂ ನೆರವಾಗುತ್ತಿರಪ್ಪಾ!
ವಿಷಯಈಗಿತರರನ್ನು ನೋಯಿಸಬೇಡಪ್ಪಾ! (ಕ)
-ರುಣಾ ಬುದ್ಧಿಯುಳ್ಳವನಾಗಿ ಸೇವೆ ಸಲ್ಲಿಸಪ್ಪಾ!
ವಾಕ್ಚಾತುರ್ಯದಾವೆಷ್ಟು ದಿನ ನಡೆದೀತಪ್ಪಾ?
ಗಾಳಿಗೆ ಬಿಟ್ಟ ಪಟದಂಥಾ ಬಾಳಿದಪ್ಪಾ! (ವ)
-ರ್ತಕ ನಾಗ್ಯನ್ಯಾಯದಿಂದಪಾರ ಲಾಭ ಬೇಡಪ್ಪಾ!
ರಾಗ, ದ್ವೇಷದಿಂದ ಯಾರಿಗೂ ಸುಖವಿಲ್ಲವಪ್ಪಾ! “(ರಾ)
-ಧಾಕೃಷ್ಣಜೈಕುಂಜವಿಹಾರಿ”ಯೆಂದು ಕುಣಿಯಪ್ಪಾ! (ಪ)
-ರತರ ಪರಮಾನಂದ ಪ್ರಾಪ್ತಿಯಾಗುವುದಪ್ಪಾ!
ನಾಮಸಂಕೀರ್ತನೆಯಿಂದ ಸರ್ವ ಕಲ್ಯಾಣವಪ್ಪಾ (ತ್ಯಾ)
-ಗರಾನನಿದನ್ನನುಭವಿಸಿ ತೋರಿಹನಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯಾನಂದವದರಿಂದಪ್ಪಾ!!!
ವರುಷವಾರುರುಳಿದವೀ ರೀತಿಯಿಂದ! (ಗು)
-ರುಕೃಪಾ ಬಲದಿಂದ ನಿಶ್ಚಿಂತೆಯಿಂದ!
ಸುಭದ್ರಾಗ್ರಜನಾತ್ಮೀಯ ಪ್ರೇಮದಿಂದ!
ರಿಪುಕುಲವಡಗಿ ಹೋಯ್ತದರಿಂದ! (ಸ್ನಾ)
-ಯುಬಲ ಸಮೃದ್ಧಿಯಾಯಿತದರಿಂದ!
ತಿನ್ನುವಾಸೆ ನಾಶವಾಯಿತದರಿಂದ! (ನಿಂ)
-ದೆ, ವಂದನೆಗಳೊಂದಾದುವದರಿಂದ!
ದೇವತ್ವದುದಯವಾಯಿತದರಿಂದ!
ಹಗಲಿರುಳಾತ್ಮ ಧ್ಯಾನ ಬಲದಿಂದ! (ಹೋ)
-ದಿಂಬು ಮತ್ತೆ ಕತ್ತೆತ್ತಿತೀಗದರಿಂದ!
ದತ್ತ ನಿರಂಜನಾದಿತ್ಯಾದದರಿಂದ!!!
ರಾಜೀವ ಸಖ ಕುಲ ತಿಲಕ ಶ್ರೀ ರಾಮ!
ಮರಾಮರಾ ಜಪಕ್ಕೊಲಿದ ಜಯ ರಾಮ!
ಜನಕಜಾತೆಗೆ ಪತಿಯಾದ ಶ್ರೀ ರಾಮ!
ಯಜ್ಞಸಂರಕ್ಷಣೆ ಮಾಡಿಡ ಜಯರಾಮ!
ರಾವಣಾದಿ ರಕ್ಕಸರ ಕೊಂದ ಶ್ರೀರಾಮ!
ಮಹಾ ಭಕ್ತ ಮಾರುತಿಯಾತ್ಮ ಜಯರಾಮ!
ಜನಿಸಿದನಯೋಧ್ಯೆಯಲ್ಲಂದು ಶ್ರೀರಾಮ!
ಯದುಪ ದ್ವಾಪರದಲ್ಲಾದ ಜಯರಾಮ!
ಜನನೀ ಜನಕರಾತ್ಮಾರಾಮ ಶ್ರೀರಾಮ!
ಯಶಸ್ಸಾಮ್ರಾಜ್ಯ ಚಕ್ರವರ್ತಿ ಜಯರಾಮ!
ರಾಮ ರಾಮ ಜಯ ಸೀತಾರಾಮ ಶ್ರೀರಾಮ!
ಮಹಾತ್ಮ ನಿರಂಜನಾದಿತ್ಯಾ ಜಯರಾಮ!!!
-ಳಿವಿಂಡಲರಿನೆಡೆಗೋಡಿತು!
ಬೀಗುವಷ್ಟುಮೃತ ಪಾನಾಯಿತು!
ಸಿಹಿಯಮಲು ತಲೆಗೇರಿತು!
ತುರೀಯಾತೀತಾನಂದವಾಯಿತು!
ಧೂರ್ತರಾಟ ನಡೆಯದಾಯಿತು! (ಬಾ)
-ಳು ಗುರುಲೀಲೆಂಬರಿವಾಯಿತು!
ಹೋರಾಟ ವಿಜಯಪ್ರದಾಯಿತು! (ಬಾ)
-ಯಿ ಮುಚ್ಚ್ಯಾನಂದಿಸೆಂದಾಜ್ಞೆಯಾಯ್ತು! (ಮಾ)
-ತು ನಿರಂಜನಾದಿತ್ಯ ಬಿಟ್ಟಾಯ್ತು!!!
ಒಬ್ಬರನ್ನೊಬ್ಬರು ತುಚ್ಛ ಮಾಡಬೇಡಿರೋ! (ಇ)
-ಬ್ಬರ ಜಗಳನ್ಯನಿಗಾದಾಯ ಕಾಣಿರೋ! (ವ)
-ರ ಗುರುವಿನಡಿ ಸೇರಿ ಶರಣೆನ್ನಿರೋ! (ಇ)
-ನ್ನೊಬ್ಬನಿಲ್ಲ ನಿಮ್ಮ ಹಿತಕೆಂದರಿಯಿರೋ! (ಅ)
-ಬ್ಬರಾರ್ಭಟದಿಂದೇನು ಲಾಭ ಪಡೆದಿರೋ? (ಕ)
-ರುಬು ಕಾಲಕೂಟ ವಿಷವೆಂದರಿಯಿರೋ!
ತುಷ್ಟಿ ಶುದ್ಧಾಂತರಂಗದಿಂದೆಂದರಿಯಿರೋ! (ಉ)
-ಚ್ಚ, ನೀಚವೆಂದು ಗುದ್ದಾಡುತ್ತಿರಬೇಡಿರೋ!
ಮಾಯೆಗೆ ಮರುಳಾಗಿ ಹಾಳಾಗಬೇಡಿರೋ! (ಬ)
-ಡವರನ್ನೆಂದಿಗೂ ಕಡೆಗಾಣಬೇಡಿರೋ!
ಬೇರೆಯವರಲ್ಲಿ ತಪ್ಪೆಣಿಸಬೇಡಿರೋ! (ಅ)
-ಡಿಗಡಿಗಾತ್ಮ ಧ್ಯಾನ ನಿರತನಾಗಿರೋ! (ಬಾ)
-ರೋ, ನಿರಂಜನಾದಿತ್ಯನಲ್ಲೈಕ್ಯವಾಗಿರೋ!!!
ಭ್ರಮೆ ಕಳೆಯಿತಾ ಪಟ್ಟಾಭಿಷೇಕ!
ಮನವೊಲಿಸಿತಾ ಪಟ್ಟಾಭಿಷೇಕ! (ಸ)
-ದಿಂಬೆಲ್ಲರ್ಗಿತ್ತಿತಾ ಪಟ್ಟಾಭಿಷೇಕ!
ದಾಶರಥಿಗಾಯ್ತಾ ಪಟ್ಟಾಭಿಷೇಕ! (ಅ)
-ಯ್ತು ಉತ್ಸಾಹದಿಂದಾ ಪಟ್ಟಾಭೀಷೇಕ!
ಪತಿತ ಪಾವನಾ ಪಟ್ಟಾಭೀಷೇಕ! (ಕೆ)
-ಟ್ಟಾಚಾರ ಸುಟ್ಟಿತಾ ಪಟ್ಟಾಭಿಷೇಕ! (ಸು)
-ಭಿಕ್ಷೆ ದೇಶಕ್ಕೆಲ್ಲಾ ಪಟ್ಟಾಭಿಷೇಕ! (ದೋ)
-ಷೇನಿಲ್ಲದಾಯಿತಾ ಪಟಾಭಿಷೇಕ! (ಶ್ರೀ)
-ಕರ ನಿರಂಜನಾದಿತ್ಯಾಭಿಷೇಕ!!!
-ರ್ಮಲ ಜೀವನೇ ರಾಜ್ಯಪಾಲ!
ವೀತರಾಗನೇ ರಾಜ್ಯಪಾಲ! (ತ)
-ರಣಿಯಂಶನೇ ರಾಜ್ಯಪಾಲ!
ನೇಮ, ನಿಷ್ಠನೇ ರಾಜ್ಯಪಾಲ! (ಆ)
-ರಾಮ ದಾತನೇ ರಾಜ್ಯಪಾಲ! (ವ್ಯಾ)
-ಜ್ಯರಹಿತನೇ ರಾಜ್ಯಪಾಲ!
ಪಾಪದೂರನೇ ರಾಜ್ಯಪಾಲ! (ಬಾ)
-ಲ ನಿರಂಜನಾದಿತ್ಯಾ ಪಾಲ!!!
-ಳುವುದದರಂತದೆನ್ನಿಸ್ಟ! (ಸಾ)
-ವು, ನೋವಿಲ್ಲದಿರ್ಪುದೆನ್ನಿಷ್ಟ!
ದೀನದಾಸನಾಗ್ವುದೆನ್ನಿಷ್ಟ! (ತ್ಯಾ)
-ಗ ಮೂರ್ತಿಯಾಗಿರ್ಪುದೆನ್ನಿಷ್ಟ!
ನಲಿದು ಪಾಡುವುದೆನ್ನಿಷ್ಟ!
ನಶ್ವರ ಸಾಕೆಂಬುದೆನ್ನಿಷ್ಟ! (ಯೋ)
-ಗಿ ರಾಜನಾಗಿರ್ಪುದೆನ್ನಿಷ್ಟ! (ಶ್ಲಿ)
-ಷ್ಟ, ನಿರಂಜನಾದಿತ್ಯಗಿಷ್ಟ!!!
ಅನುಭವಿಯೊಂದು ಮಾತು ಸಾಕುದ್ಧಾರಕ್ಕೆ!
ನುಡಿ ಪಂಡಿತನದ್ಬೇಕು ವ್ಯವಹಾರಕ್ಕೆ!
ಭಗವದ್ಭಕ್ತನ ಸಂಗ ಬೇಕುದ್ಧಾರಕ್ಕೆ!
ವಿಷಯಿಯ ಸಂಗ ಸಾಕು ವ್ಯವಹಾರಕ್ಕೆ! (ಬಾ)
-ಯೊಂದರ ಸಂಯಮಗತ್ಯ ಬೇಕುದ್ಧಾರಕ್ಕೆ! (ಅ)
-ದು ಜೋರಾಗಿದ್ದರೆ ಸಾಕು ವ್ಯವಹಾರಕ್ಕೆ!
ಮಾಯಾ ಸುಖದಾಸೆ ಬಿಡಬೇಕುದ್ಧಾರಕ್ಕೆ! (ಹೇ)
-ತುವಾಗ್ಯದೊಂದೇ ಸಾಕೆಲ್ಲಾ ವ್ಯವಹಾರಕ್ಕೆ!
ಸಾಧನೆಡೆಬಿಡದಾಗಬೇಕುದ್ಧಾರಕ್ಕೆ!
ಕುಲ, ಗೋತ್ರದಾಟ ಸಾಕು ವ್ಯವಹಾರಕ್ಕೆ! (ಉ)
-ದ್ಧಾಮ ಗುರುವಿನಾಶ್ರಯ ಬೇಕುದ್ಧಾರಕ್ಕೆ! (ಊ)
-ರ ಗಣ್ಯರಿದ್ದರೆ ಸಾಕು ವ್ಯವಹಾರಕ್ಕೆ! (ಅ)
-ಕ್ಕೆ ನಿರಂಜನಾದಿತ್ಯಾತ್ಮಾನಂದುದ್ಧಾರೆಕ್ಕೆ!!!
ನಿನ್ನ ನಾ ಗುರುವಾಯೂರಲ್ಲಿ ಕಾಣಬೇಕಪ್ಪಾ! (ನಿ)
-ನ್ನಲ್ಲಿನ ಭಕ್ತಿಗದು ಸಾಧ್ಯವಾಗಬೇಕಪ್ಪಾ!
ನಾನು ಅಲ್ಲಿರದಿದ್ದರಿನ್ನೆಲ್ಲಿರಬೇಕಪ್ಪಾ?
ಗುರುವಿನಂಶ ನಾವೆಂಬರಿವಾಗಬೇಕಪ್ಪಾ! (ಗು)
-ರು ಕೃಪೆಯಿಂದ ಅದು ಸಿದ್ಧಿಯಾಗಬೇಕಪ್ಪಾ!
ವಾಸುದೇವನ ಮಾತು ಸತ್ಯವಾಗಬೇಕಪ್ಪಾ! (ವಾ)
-ಯೂರಾಗಿರುವುದವಗೆಂದರಿಯ ಬೇಕಪ್ಪಾ! (ಪ)
-ರಮಾರ್ಥದರ್ಥನ್ವರ್ಥ ನೀನು ಮಾಡಬೇಕಪ್ಪಾ! (ಬ)
-ಲ್ಲಿದನೆಂಬಹಂ ಬಿಟ್ಟರ್ಜುನನಾಗಬೇಕಪ್ಪಾ!
ಕಾಮಧೇನು ನೀನೆಂಬ ಅರಿವಾಗಬೇಕಪ್ಪಾ! (ಗು)
-ಣ, ದೋಷವೆಣಿಸದೆ ಶರಣಾಗಬೇಕಪ್ಪಾ!
ಬೇಡಿಕೆಯ ನೀನೀಡೇರಿಸಿ ಕೊಡಬೇಕಪ್ಪಾ!
ಕರ್ತವ್ಯನಿಷ್ಠನಾಗಿ ಕರ್ಮ ಮಾಡಬೇಕಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯ ಕೃಷ್ಣನಲ್ಲಿ ನೋಡಪ್ಪಾ!!!
ಅಂಗಿ ತೆಗೆದೊಗೆದು ಬಿಗಿಯಾಗಪ್ಪು! (ಸಂ)
-ಗಿಗಂಗಿಯಡಚಣೆಯೆಂದರಿತಪ್ಪು! (ಕ)
-ತೆ, ಪುರಾಣ ಮರೆತಾನಂದದಿಂದಪ್ಪು! (ಬೇ)
-ಗೆ ಸಹಿಸ್ಯನನ್ಯ ವಿಶ್ವಾಸದಿಂದಪ್ಪು!
ದೊರಕುವುದು ನಿತ್ಯ ಶಾಂತಿಯೆಂದಪ್ಪು! (ಗಂ)
-ಗೆ, ಪಾರ್ವತಿಯರಂತೆ ಪ್ರೀತಿಯಿಂದಪ್ಪು!
ದುರ್ವ್ಯಾಪಾರಕ್ಕೆಡೆಗೊಡದೆ ಬಂದಪ್ಪು!
ಬಿಸಿಯುಸಿರ್ಬಿಡದಾರಾಮದಿಂದಪ್ಪು!
ಗಿರಿಜಾಪತಿಯೇ ನಾನೆಂದರಿತಪ್ಪು! (ದ)
-ಯಾಸಾಗರ ಪರಮೇಶ್ವರನೆಂದಪ್ಪು! (ಯೋ)
-ಗಭಾಗ್ಯ ಸ್ಥಿರವಾಗಿರಬೇಕೆಂದಪ್ಪು! (ಕ)
-ಪ್ಪು ನಿರಂಜನಾದಿತ್ಯನಲ್ಲವೆಂದಪ್ಪು!!!
ಹುಸಿ, ದಿಟವೆಂದರಿತು ಕೆಟ್ಟೆ!
ಬಲಾತ್ಮಬಲವೆನ್ನೆದೇ ಕೆಟ್ಟೆ!
ಯಮ, ನಿಯಮವಿಲ್ಲದೇ ಕೆಟ್ಟೆ!
ಕೆಟ್ಟ ಸಹವಾಸ ಮಾಡಿ ಕೆಟ್ಟೆ! (ತಾ)
-ಯಿಂಬಿಗೆ ಬೆಲೆ ಕೊಡದೇ ಕೆಟ್ಟೆ!
ದತ್ತ ಭಜನೆ ಬಿಟ್ಬಿಟ್ಟು ಕೆಟ್ಟೆ!
ನೀತಿ, ರೀತಿಯರಿಯದೇ ಕೆಟ್ಟೆ!
ಕೆಲಸಾಲಸ್ಯದಿಂದಾಗಿ ಕೆಟ್ಟೆ! (ಬ)
-ಟ್ಟೆ ನಿರಂಜನಾದಿತ್ಯಾತ್ಮ ನಿಷ್ಠೆ!!!
ನಾನೇನೋ ಕೆಟ್ಟೆ, ನೀನೇಕೆ ಕೈ ಬಿಟ್ಟೆ?
ನೇತೃ ನೀನಾಗಿ ಮೈ ಮರೆತು ಬಿಟ್ಟೆ!
ನೋವು ನೋಡಿ ನಗುತ್ತ ಕೂತು ಬಿಟ್ಟೆ!
ಕೆಲಸಕ್ಕುತ್ಸಾಹ ತಪ್ಪಿಸಿ ಬಿಟ್ಟೆ! (ಹೊ)
-ಟೆ, ಬಟ್ಟೆಗೇ ಕಷ್ಟ ತಂದಿಟ್ಟುಬಿಟ್ಟೆ!
ನೀಚರಾಟಕ್ಕೆ ದಾರಿ ತೆರೆದಿಟ್ಟೆ!
ನೇರ್ಪಡಿಸದೇ ಸುಮ್ಮಗಿದ್ದುಬಿಟ್ಟೆ!
ಕೆಸರು ಮೈಗೆಲ್ಲಾ ಬಳಿದು ಬಿಟ್ಟೆ!
ಕೈಗಳೆರಡನ್ನೂ ಬಂಧಿಸಿಬಿಟ್ಟೆ!
ಬಿಡಿಸೆಂದರೂ ಕಿವುಡಾಗಿ ಬಿಟ್ಟೆ! (ಸು)
-ಟ್ಟೆ ನಿರಂಜನಾದಿತ್ಯಗಾಗೀ ಹೊಟ್ಟೆ!!!
ನುಡಿವೆಣ್ಪ್ರೇಮಾತ್ಮ ನಿರಂಜನ!
ನಿಶಾಶಾಪಾಶಾತ್ಮ ನಾನಂಜನ!
ರಂಗನಾಥಸ್ವಾಮಿ ನಿರಂಜನ!
ಜರಾಜನ್ಮ ಕ್ರಿಮಿ ನಾನಂಜನ!
ನತಜನೋದ್ಧಾರಿ ನಿರಂಜನ!
ನಾದಾರಿ, ಭಿಕಾರಿ ನಾನಂಜನ!
ನಂದಕಂದಾನಂದ ನಿರಂಜನ!
ಜಗತ್ಸುಖಾನಂದ ನಾನಂಜನ!
ನಒ ನಿರಂಜನಾದಿತ್ಯಾನನ!!!
ದಾರಿ ಸಾಗುತಿದೆ ಸುಸೂತ್ರವಾಗಿ! (ಹ)
-ರಿಕೃಪಾಬಲದಿಂದಾನಂದವಾಗಿ!
ಸಾಕಾರ ದರ್ಶನೋತ್ಸಾಹದಿಂದಾಗಿ!
ಗುರುವಚನದರ್ಥ ನೆನಪಾಗಿ!
ತಿನ್ನುವಾಪೇಕ್ಷೆಯಿಲ್ಲದವನಾಗಿ! (ತಂ)
-ದೆ, ತಾಯ್ಯವನೆಂಬ ಭಕ್ತಿಯಿಂದಾಗಿ!
ಸುಧಾಮನ ನಾಮಸ್ಮರಣೆಯಾಗಿ!
ಸೂತ್ರಧಾರನ ಲೀಲೆಯರಿವಾಗಿ! (ಪು)
-ತ್ರ, ಮಿತ್ರರ ಸಹಕಾರದಿಂದಾಗಿ!
ವಾಸುದೇವನ ಭಜನೆಯಿಂದಾಗಿ! (ತ್ಯಾ)
-ಗಿ ನಿರಂಜನಾದಿತ್ಯನೂರಿಗಾಗಿ!!!
ಪಾರ್ಥಸಾರಥೀ ರಾಧಾಕೃಷ್ಣಾ! (ಬ)
-ಲರಾಮಾನುಜಾ ರಾಧಾಕೃಷ್ಣಾ!
ಕೃಷ್ಣಶರೀರಾ ರಾಧಾಕೃಷ್ಣಾ! (ಕೃ)
-ಷ್ಣಾಷ್ಟಮ್ಯೋದ್ಭವಾ ರಾಧಾಕೃಷ್ಣಾ!
ರಾಕ್ಷಸಾಂತಕಾ ರಾಧಾಕೃಷ್ಣಾ! (ಆ)
-ಧಾರ ಸ್ವರೂಪಾ ರಾಧಾಕೃಷ್ಣಾ! (ಆ)
ಕೃಪಾ ಸಾಗರಾ ರಾಧಾಕೃಷ್ಣಾ! (ಪೂ)
-ಷ್ಣಾ ನಿರಂಜನಾದಿತ್ಯ ಕೃಷ್ಣಾ!!!
-ಗ ಶರೀರ, ನಿರೋಗ ಶರೀರ!
ಶಕ್ತಿ ಶರೀರ, ಭಕ್ತಿ ಶರೀರ!
ರೀತಿ ಶರೀರ, ಖ್ಯಾತಿ ಶರೀರ!
ರಮ್ಯ ಶರೀರ, ಸೌಮ್ಯ ಶರೀರ!
ರೋಷ ಶರೀರ, ದೋಷ ಶರೀರ!
ಗಟ್ಟಿ ಶರೀರ, ಜಟ್ಟಿ ಶರೀರ!
ಶಶಿ ಶರೀರ, ಕುಶಿ ಶರೀರ! (ಧು)
-ರೀಣ ಶರೀರ, ಗೌಣ ಶರೀರ! (ಹ)
-ರ ನಿರಂಜನಾದಿತ್ಯ ಶರೀರ!!!
ನಮಿಸಿದರುಂಟು ಭಾವ, ಭಕ್ತಿ ಗಂಟು! (ಹು)
-ಸಿ ಮಾಯೆಯಂಟು ಆಶಾ ಜೀವನಿಗುಂಟು!
ನಯ, ವಿನಯಕ್ಕುಂಟು ನಿರ್ಭಯ ಗಂಟು!
ಗಂಗಾದೇವಿಗುಂಟು ಗಂಗಾಧರನಂಟು! (ಚೋ)
-ಟು ಬಟ್ಟೆಯಂಟು ಬೂಟಾಟಿಕೆಯ ಗಂಟು! (ಮ)
-ನೆ, ಮಠದಂಟು ಮಾಯಾಮೋಹಿತಗುಂಟು! (ಆ)
-ನತಗುಂಟು ಪತಿತ ಪಾವನ ನಂಟು!
ಸತ್ಯ ಸಂಧಗುಂಟು ನಿತ್ಯ ಸುಖದಂಟು!
ದಯಾಶೂನ್ಯಗುಂಟು ಭವಭಯದಂಟು!
ನೆಂಟ, ಭಂಟನಂಟು ಶ್ರೀಕಂಠನಿಗುಂಟು! (ಗಂ)
-ಟು ನಿರಂಜನಾದಿತ್ಯಾತ್ಮಾನಂದದಂಟು!!!
ರಕ್ತಿ ರಹಿತ ರಮಣಾನಂದ! (ಭ)
-ಕ್ತಿ, ಮುಕ್ತಿ, ದಾತ ನಿಶ್ಚಲಾನಂದ!
ಯುಕ್ತ ಸದ್ಬಕ್ತಾಂಜನೇಯಾನಂದ!
ತರಣಿ ವಂಶಾತ್ಮ ರಾಮಾನಂದ!
ವಿಶ್ವವಂದ್ಯ ರಾಮಕೃಷ್ಣಾನಂದ!
ಮಹಾಮಹಿಮ ಮಾಧವಾನಂದ!
ಲಾವಣ್ಯಮೂರ್ತಿ ಲಕ್ಷೀಶಾನಂದ!
ನಂದಾನಂದ ಶಿವಾನಂದಾನಂದ!
ದತ್ತ ನಿರಂಜನಾದಿತ್ಯಾನಂದ!!!
ಕೃತ್ರಿಮ ದೂರಾರಾಮಾನಂದ!
ತಿಳಿ ನೀರು ಪಾನೀಯಾನಂದ!
ಚಿತ್ತ ಶುದ್ಧಿಯಮೃತಾನಂದ!
ಕಿಚ್ಚಡಿಯನ್ನಾಹಾರಾನಂದ! (ಉ)
-ತ್ಸಾಹವೀವ ಸಹಜಾನಂದ! (ಆ)
-ತ್ಮಾರಾಮ ಸೀತಾರಾಮಾನಂದ!
ನಂದಕಂದ ಮುಕುಂದಾನಂದ! (ಆಂ)
-ದ ನಿರಂಜನಾದಿತ್ಯಾನಂದ!!!
-ತುಗೀತಾಡಬೇಡಿರಲ್ಲಿ!
ಕೊಳಲನಾಲಿಸಿರಲ್ಲಿ! (ಒ)
-ಳ್ಳಿತಾಗಲಿದರಿಂದಲ್ಲಿ! (ಕೆ)
-ರೆಯ ಸ್ನಾನ ಮಾಡಿರಲ್ಲಿ! (ಎ)
-ಲ್ಲ ತೀರ್ಥವಿರ್ಪುದದ್ರಲ್ಲಿ! (ವ)
-ರಗುರುವಾಯೂರಿನಲ್ಲಿ! (ಇ)
ಲ್ಲಿ ನಿರಂಜನಾದಿತ್ಯಲ್ಲಿ!!!
ಪಾದಪೂಜಾ ಸಾಮಗ್ರಿಗಳ ತನ್ನಿ!
ರಾಧಾರಮಣ ಜಯಗೋವಿಂದೆನ್ನಿ!
ಧರ್ಮಕರ್ಮವಿದೆಂದರಿತು ಅನ್ನಿ!
ನೆರೆ ಭಕ್ತಿಯಿಂದ ಹಾಡುತ್ತ ಬನ್ನಿ!
ಯಾತ್ರೆ ಸಾರ್ಥಕವಾಗಬೇಕೆಂದನ್ನಿ!
ಗುರುವಾಯೂರಪ್ಪನೇ ಗತಿಯೆನ್ನಿ!
ತಿರಿತಿರಿಗಿ ಮೊರೆಯಿಡುತ್ತನ್ನಿ! (ತಂ)
-ದೆ, ತಾಯಿ, ಬಂಧು, ಬಳಗ ನೀನೆನ್ನಿ!
ಬರಡು ಮಾಡಬೇಡ ಬಾಳನ್ನೆನ್ನಿ! (ಬ)
-ನ್ನಿ, ನಿರಂಜನಾದಿತ್ಯ ಕೃಷ್ಣನೆನ್ನಿ!!!
-ಡೆಯ ರುಕ್ಮಿಣೀ ಪತಿಯ!
ಕನಕಾಂಬರ ಹರಿಯ! (ಗು)
-ರುವಾಯೂರ ಶ್ರೀ ಪತಿಯ! (ಪ್ರಾ)
-ಣಾಧಾರ ಗುರು ದೊರೆಯ!
ನಿತ್ಯಾತ್ಮಾನಂದಮಯಿಯ! (ವ್ಯಾ)
-ಧಿಹರಧನ್ವಂತರಿಯ! (ಜ)
-ಯ ನಿರಂಜನಾದಿತ್ಯಾಯ!!!
ಜ್ಞಾನವೃದ್ಧಿಗಿದಾಧಾರೌಷಧಿ!
ಪಾಪ ಪರಿಹಾರಕ್ಕಾರ್ಯೌಷಧಿ!
ಲಕ್ಷ್ಯ ಸಿದ್ಧಿಗಿದು ಸಿದ್ಧೌಷಧಿ!
ನೆಮ್ಮದಿಗಿದೊಂದ ಮೌಲ್ಯೌಷಧಿ!
ಪತಿತೆಗಿದು ಪಾವನೌಷಧಿ!
ರಕ್ತಶುದ್ಧಿಗಿದು ರಸೌಷಧಿ!
ಮೌನಾಪೇಕ್ಷಿಗಿದು ಮಹೌಷಧಿ!
ಷಡ್ರಿಪು ನಾಶಕ್ಕಾಶ್ವಾಸೌಷಧಿ! (ವ್ಯಾ)
-ಧಿಗೆ ನಿರಂಜನಾದಿತ್ಯೌಷಧಿ!!!
-ಡಿಗೆರಗಿಕ್ಕಮ್ಮಾ ಸರಸ್ವತಿ! (ನ)
-ಗೆಮೊಗ ತೋರಮ್ಮಾ ಸರಸ್ವತಿ!
ಮಾತಂಗಿ ನೀನಮ್ಮಾ ಸರಸ್ವತಿ! (ತ)
-ಡಮಾಡಬೇಡಮ್ಮಾ ಸರಸ್ವತಿ! (ದು)
-ಮ್ಮಾನವದೇಕಮ್ಮಾ ಸರಸ್ವತಿ?
ಸದಾ ಸುಖಿಯಮ್ಮಾ ಸರಸ್ವತಿ! (ಸ್ವ)
-ರ ಮಾಧುರಿಯಮ್ಮಾ ಸರಸ್ವತಿ!
ಸ್ವರೂಪಾನಂದಮ್ಮಾ ಸರಸ್ವತಿ ! (ಅ)
-ತಿಥಿ ನಿರಂಜನಾದಿತ್ಯ, ಸತಿ!!!
ಶ್ರದ್ಧಾ, ಭಕ್ತಿಯ, ವೃದ್ಧ ಶಾಸ್ತ್ರಿ! (ಉ)
ದ್ಧಾರಾಗಬೇಕೆಂದನಾ ಶಾಸ್ತ್ರಿ!
ಭಬ್ಧಿಯಿಂದೆಂದನಾ ಶಾಸ್ತಿ! (ಮು)
-ಕ್ತಿಯೇ ಗುರಿಯೆಂದನಾ ಶಾಸ್ತ್ರಿ! (ಕಾ)
-ಯಬೇಕು ನೀನೆಂದನಾ ಶಾಸ್ತ್ರಿ!
ವೃತ್ತಿ ನಿಲ್ಲಿಸೆಂದನಾ ಶಾಸ್ತ್ರಿ! (ಸ)
-ದ್ಧರ್ಮಾತ್ಮ ಧ್ಯಾನೆಂದನಾ ಶಾಸ್ತ್ರಿ!
ಶಾಸ್ತ್ರಾರ್ಥವಿದೆಂದನಾ ಶಾಸ್ತ್ರಿ! (ಶಾ)
-ಸ್ತ್ರಿ, ನಿರಂಜನಾದಿತ್ಯಾ ಶಾಸ್ತ್ರಿ!!!
-ರ್ಖತನಕ್ಯಿಲ್ಲದೇನಿಲ್ಲ!
ನಿರ್ಮಾಪಕನೆಲ್ಲಾ ಬಲ್ಲ! (ಯೋ)
-ಗೌಚಿತ್ಯ ಅವನಿಗಿಲ್ಲ!
ಪಟ್ಕ್ರಯಾ ಶಕ್ತ್ಯವಗಿಲ್ಲ! (ವ್ಯಾ)
-ಧಿಹರ ಜಪದಿಂದೆಲ್ಲ! (ಜ)
-ಯಿಸಲರಿಷ್ಟದ್ರಿಂದೆಲ್ಲ! (ಬ)
-ಲ್ಲ ನಿರಂಜನಾದಿತ್ಯೆಲ್ಲ!!!
ಕಗ್ಗೊಲೆಗಾಗಲೀಗ ಪ್ರಾಯಶ್ಚಿತ್ತ! (ಜ)
-ಗ್ಗೊರಗಿಸಬೇಕವರಾರ್ಯ ಚಿತ್ತ! (ಬಾ)
-ಲೆಯರಾರ್ತನಾದ ಕೇಳಲೀ ಚಿತ್ತ!
ಗಾನಲೋಲನೀನಾಗಾಗ್ಬಾರದಾ ಚಿತ್ತ!
ಗಮನಿಸಲಿ ಮಕ್ಕಳನ್ನಾ ಚಿತ್ತ! (ಶೂ)
-ಲೀಶ್ವರ ವರ ಗುರುವಿನಾ ಚಿತ್ತ! (ವಂ)
-ಗ ದೇಶಿಯರಂತರಂಗದಾ ಚಿತ್ತ!
ಪ್ರಾರ್ಥನೆಯಂಗೀಕರಿಸಲಾ ಚಿತ್ತ! (ನ್ಯಾ)
-ಯ ದೂರಕಿಸಲೇ ಬೇಕೀಗಾ ಚಿತ್ತ! (ಪಾ)
-ಶ್ಚಿಮಾತ್ಯರ ಕಣ್ತೆರೆಯಲಾ ಚಿತ್ತ! (ಚಿ)
-ತ್ತ, ನಿರಂಜನಾದಿತ್ಯನಾಪ್ತ ಚಿತ್ತ!!!
ದರ್ಶನಾನಂದರಿವಾಯ್ತು! (ಮ)
-ದ್ದಾನೆಯ ನಡಿಗೆಯಾಯ್ತು! (ಆ)
-ಯ್ತು ಹುಣ್ಣೆಲ್ಲಾ ಮಾಯವಾಯ್ತು!
ಬಂಧನ ಹರಿದು ಹೋಯ್ತು!
ದತ್ತನಾಟರಿಯದಾಯ್ತು! (ಒ)
-ದ್ದಾಟವೆಲ್ಲಾ ನಿಂತುಹೋಯ್ತು! (ಆ)
-ಯ್ತು ನಿರಂಜನಾದಿತ್ಯಾಯ್ತು!!!
-ಕ್ಕಿಬಿಕ್ಕೀಗಳುವುದೇಕಯ್ಯಾ?
ಹಾಡಿದಾಗದು ಬೇಡಾಯ್ತಯ್ಯೂ! (ಹ)
-ರಿ ಭಕ್ತಗಪಚಾರಾಯ್ತಯ್ಯಾ!
ಹೋದದ್ದು ಬರುವುದೇನಯ್ಯಾ? (ಬಾ)
-ಯಿ ಮುಚ್ಚೀಗ ಧ್ಯಾನ ಮಾಡಯ್ಯಾ!
ತಾರಕನಾಮ ಜಪಿಸಯ್ಯಾ! (ಸಂ)
-ಗ ಸದ್ಗುರುವಿನದಿರ್ಲಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾತಯ್ಯಾ!!!
-ಗೈಕ್ಯ ಗುರುಪಾದದಲ್ಲಮ್ಮಾ!
ಮೇರೆಯಿಲ್ಲದಾನಂದದಮ್ಮಾ! (ಲೀ)
-ಲಾವತಾರಿ ನಿರಂಜನಮ್ಯಾ! (ನೋ)
-ಡು ಅವನಾಕಾರೊಳಗಮ್ಮಾ! (ವ)
-ಸುಂಧರಾ ಸ್ವಾಮಿ ಅವನಮ್ಮಾ!
ದತ್ತ ಸ್ವರೂಪ ಗುರುವಮ್ಮಾ! (ವ)
-ರ ಸಾಯುಜ್ಯಪ್ರದವನಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾತಮ್ಮಾ!!!
-ವರೋಗ ವೈದ್ಯ ಸದಾಶಿವಮ್ಮಾ!
ನಾಮ, ರೂಪಾತೀತನವನಮ್ಮಾ!
ರೆಂಬೆ, ಕೊಂಬೆಗಾಧಾರವನಮ್ಮಾ!
ದಶಕಂಠನಿಷ್ಟಮೂರ್ತ್ಯವನಮ್ಮಾ!
ರಿಪುಕುಲ ಕಾಲೇಶ್ವರನಮ್ಮಾ! (ಸ)
-ತಿ ಪಾರ್ವತಿಯ ಪ್ರಾಣವನಮ್ಮಾ! (ಪ್ರಾ)
-ಯೇಚ್ಛಾನುಸಾರವಾಗಿರ್ಪುದಮ್ಮಾ!
ನಗೇಂದ್ರಾಗ್ರದಲ್ಲಿ ವಾಸವಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾನಂದಮ್ಮಾ!!!
ಪಿರಿಯ ಜಟೆಯಾ ಸಾಂಬಶಿವ! (ಗಂ)
-ಗೆಯ ನಿತ್ಯ ಹೊತ್ತಾ ಸಾಂಬಶಿವ!
ಮುನಿಜನ ವಂದ್ಯಾ ಸಾಂಬಶಿವ! (ಖಂ)
-ಡಿಪ ಭಂಡರನ್ನಾ ಸಾಂಬಶಿವ!
ದಾಶರಥಿಗಿಷ್ಟಾ ಸಾಂಬಶಿವ!
ಸಾಂಗ ವೇದಾನಂದಾ ಸಾಂಬಶಿವ!
ಬನಶಂಕರ್ಯಾಪ್ತಾ ಸಾಂಬಶಿವ!
“ಶಿವಾಯ ನಮಃ ಓಂ” ಸಾಂಬಶಿವ! (ಭ)
-ವ ನಿರಂಜನಾದಿತ್ಯಾತ್ಮ ಶಿವ!!!
-ಲಾವತಾರಿ ಮುರಾರೀ ಗೋಪಾಲ! (ಸ್ವಾ)
-ಭಿಮಾನ ಸಂರಕ್ಷಕಾ ಗೋಪಾಲ! (ಶೇ)
-ಷಶಾಯಿ ವಿಜಯ ಗೋಪಾಲ!
ಕಾಮಕೋಟಿ ಸುಂದರಾ ಗೋಪಾಲ!
ನಂದಕಂದ ಗೋವಿಂದಾ ಗೋಪಾಲ!
ದಾತ, ಪತಿತೋದ್ಧಾರಾ ಗೋಪಾಲ!
ಗೋಬ್ರಾಹ್ಮಣರಾಧಾರಾ ಗೋಪಾಲ! (ಕೃ)
-ಪಾಸಾಗರ ಶ್ರೀಧರಾ ಗೋಪಾಲ! (ಬಾ)
-ಲ ನಿರಂಜನಾದಿತ್ಯ ಗೋಪಾಲ!!!
-ಲೆಗಾನಂದವಿತ್ತಾ ಶ್ರೀ ಪಾದ! (ಕಾ)
-ಯ ಕ್ಲೇಶ ಹರಿದಾ ಶ್ರೀ ಪಾದ! (ರಾ)
-ಮೇಶ್ವರೇಶ್ವರನಾ ಶ್ರೀ ಪಾದ! (ಲೀ)
-ಲೆ ಅವರ್ಣನೀಯಾ ಶ್ರೀ ಪಾದ!
ಶಿವಗಣದ ಪ್ರಾಣಾ ಶ್ರೀ ಪಾದ!
ವರಗುರು ಸ್ವರೂಪಾ ಶ್ರೀ ಪಾದ!
ಪಾರ್ಥಗಾಯುಧವಿತ್ತಾ ಶ್ರೀ ಪಾದ! (ಪಾ)
-ದ, ನಿರಂಜನಾದಿತ್ಯ ಪಾದ!!!
ತಿರುಪೆ ಎತ್ತಿ ತಿರುಪತಿಗೇಕೆ ಹೋಗಬೇಕು? (ಗು)
-ರುಪಾದದಲ್ಲಿ ಎಲ್ಲವನು ನೋಡುತ್ತಿರಬೇಕು!
ಪೆರ್ಮಾತನಿದನಲಕ್ಷಿಸದೆ ಪಾಲಿಸಬೇಕು!
ಎತ್ತೆತ್ತ ಸುತ್ತಿ ಬೇಸತ್ತೇಕೆ ಹೊತ್ತು ಹಾಕಬೇಕು? (ಇ)
-ತ್ತಿಹನು ಗುರುದೇವನಿಲ್ಲ್ಯೆಲ್ಲವೆಂದಿರಬೇಕು!
ತಿತಿಕ್ಷೆಯಭ್ಯಾಸ ಸತತ ಮಾಡುತ್ತಿರಬೇಕು! (ತಿ)
-ರುಪತಿಯ ಕ್ಷೆತ್ರ ನಿನ್ನ ಹೃದಯವಾಗಬೇಕು!
ಪರರ ದಾಕ್ಷಿಣ್ಯಕ್ಕಾಗ್ಯೇನೂ ಮಾಡದಿರಬೇಕು!
ತಿಳಿದಿದನು ಧರ್ಮ ಕರ್ಮವಾಚರಿಸಬೇಕು! (ನಾ)
-ಗೇಶ ಶೇಷಶಾಯಿ ನಿನ್ನಾತ್ಮನೆಂದರಿಯಬೇಕು!
ಕೆಲಸ ಕಾರ್ಯಾ ಶ್ರೀಪಾದಕ್ಕರ್ಪಿಸಿ ಮಾಡಬೇಕು!
ಹೋರಾಟಾ ಪರಮಾರ್ಥ ಸಿದ್ಧಿಗಾಗಿ ಸಾಗಬೇಕು!
ಗಟ್ಟಿಮನಸ್ಸು ಮಾಡಿ ಕೆಟ್ಟಾಭ್ಯಾಸ ಬಿಡಬೇಕು!
ಬೇಸಿಗೆಯ ರಜೆಯಿದಕ್ಕುಪಯೋಗಿಸಬೇಕು!
ಕುಲ, ಶೀಲ ನಿರಂಜನಾದಿತ್ಯನದ್ದಾಗಬೇಕು!!!
ಹುಟ್ಟುಗುಣ ಬೆಟ್ಟ ಹತ್ತಿದ್ರೆ ಹೋದಿತೇ? (ಜು)
-ಟ್ಟು ಹೋದ ಮೇಲೆ ಹೂ ಮುಡಿಯಲಾದೀತೇ?
ಗುರುಸೇವಾನಿರತಗನ್ಯಾಯಾದಿತೇ? (ಕ)
-ಣಜ ತುಂಬಿದ ಮೇಲುಪವಾಸಾದೀತೇ?
ಬೆರಳು ಹೋದ ಮೇಲ್ಬರಿಯಲಾದೀತೇ? (ಅ)
-ಟ್ಟಡಿಗೆ ಸುಟ್ಟು ಹೋದರುಣಲಾದೀತೇ?
ಹಠ ಮಾಡಿದರೆ ರೋಗ ಹರಿದೀತೇ? (ಬ)
-ತ್ತಿದ ಕೆರೆ ಬಿತ್ತನೆಗನ್ಕೂಲಾದೀತೇ? (ಮು)
-ದ್ರೆಯೊತ್ತದ ಎತ್ತು ಬಸವನಾದೀತೇ?
ಹೋಟೆಲೂಟ ಆರೋಗ್ಯಪ್ರದವಾದೀತೇ?
ದಿರ್ಘಾಭ್ಯಾಸವಿಲ್ಲದೆ ಸಿದ್ಧಿಯಾದೀತೇ?
ತೇಜ ತಿರಂಜನಾದಿತ್ಯನ ಬಿಟ್ಟೀತೇ???
“ನ ಗುರೋರಧಿಕಂ” ಎಂಬಾತಯ್ಯಾ!
ಯಜ್ಞ, ಯೋಗಾನಂದನವನಯ್ಯಾ!
ಶಿತೇಂದುಧರ ಶಿವಾನಂದಯ್ಯಾ! (ಕೈ)
-ಲಾಸ ವಾಸಾನಂದನವನಯ್ಯಾ!
ವಿಷಪಾನೋನ್ಮತ್ತ ಶ್ರೀಕಂಠಯ್ಯಾ!
ಶ್ವೇತ ವೃಷಭಾರೂಢವನಯ್ಯಾ! (ಈ)
-ಶ್ವರನೀರೇಳು ಲೋಕೇಶ್ವರಯ್ಯಾ!
ರಮಣ ಪಾರ್ವತೀ ದೇವಿಗಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾನಂದಯ್ಯಾ!!!
ಮಾತಾ ಪಿತರ ಹಾಗಿರೋ ಕಾಮಾ!
ಶ್ರಿಪತಿ ಸೀತಾಪತಿಯಾರಾಮಾ!
ರಾತ್ರಿ, ದಿನೇಂದ್ರಿಯ ದಾಸಾ ಕಾಮಾ!
ಮದನಾರಿಯಾಪ್ತ ರಘುರಾಮಾ!
ಸೇರು ನೀನವನನ್ನೀಗ ಕಾಮಾ!
ವೆಗ್ಗಳದಾನಂದವೀವಾ ರಾಮಾ!
ಯಾಕೀ ದುರ್ಬುದ್ಧಿ ನಿನಗೆ ಕಾಮಾ?
“ರಾಮ ರಾಮ ಜಯ ರಾಜಾ ರಾಮಾ! (ರಾ)
-ಮಾ ನಿರಂಜನಾದಿತ್ಯ ನಿಷ್ಕಾಮಾ!!!
-ರ್ತೇನೆಂದೋಡಿ ಹೋದೆ ನೀನೇಕಮ್ಮಾ?
ನೆಂಟವನ ಹೊರತಿನ್ಯಾರಮ್ಮಾ?
ದುಷ್ಟರ ಸಂಗ ಮಾಳ್ಪರೇನಮ್ಮಾ?
ಬಲು ಕಷ್ಟ ಈ ಮಾಯಾ ಮೋಹಮ್ಮಾ! (ವ)
-ರ ಗುರುವಿನಾಜ್ಞೆಯಂತಿರಮ್ಮಾ! (ಅ)
-ಲಿಪ್ತನಾಗ್ಯವನಾತ್ಯಾರಾಮಮ್ಮಾ! (ಸೊ)
-ಲ್ಲೇನಿಲ್ಲದೆ ಅವನಿರ್ಪನಮ್ಮಾ!
ಕಳಂಕವಿಲ್ಲದೈಕ್ಯಳಾಗಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಾತ್ಮೀಯಮ್ಮಾ!!!
-ಯಿ ಇಕ್ಕಿದ್ದುಂಡರಾರಾಮಾದಾನು!
ಇದದರಾಸೆಯಿಂದ ಬಿದ್ದಾನು! (ಇ)
-ದ್ದದ್ರಲ್ಲಿ ತೃಪ್ತಿಯಿದ್ದರೆದ್ದಾನು!
ಮದ, ಮತ್ಸರದಿಂದ ಬಿದ್ದಾನು!
ಗರ್ವರಹಿತನಾದರೆದ್ದಾನು!
ಬಲಹೀನನಾದರೆ ಬಿದ್ದಾನು!
ದುಸ್ಸಂಗ ದೂರನಾದರೆದ್ದಾನು! (ಐ)
-ಕ್ಯಾನಂದ ತಪ್ಪಿದರೆ ಬಿದ್ದಾನು! (ಭಾ)
-ನು ನಿರಂಜನಾದಿತ್ಯಾಗ್ಯೆದ್ದಾನು!!!
ಸ್ತಿಮಿತ ಬುದ್ಧಿಗಿನ್ನೂ ಬಂದಿಲ್ಲ!
ಕರ್ಮಕ್ಕೆ ಕರ್ತನ ಬೆಂಬಲವಿಲ್ಲ!
ನಾಮ, ರೂಪಗಳನ್ನೆನೂ ನಂಬಿಲ್ಲ! (ತ್ಯಾ)
-ಗಿಯಾದರೂ ಯೋಗ ಸಿದ್ಧಿಯಾಗಿಲ್ಲ! (ಅ)
-ಲ್ಲಸಲ್ಲದ ಮಾತುಗಳಾಡುತ್ತಿಲ್ಲ!
ನಾಮಸ್ಮರಣೆಯನ್ನೇನೂ ಬಿಟ್ಟಿಲ್ಲ! (ಆ)
-ಸ್ತಿ, ಪಾಸ್ತಿಗಾಗಿ ಹೊಡೆದಾಡುತ್ತಿಲ್ಲ!
ಕರ್ತವ್ಯನಿಷ್ಠೆಯಿನ್ನೆಂತೋ? ಗೊತ್ತಿಲ್ಲ! (ಅ)
-ನನ್ಯ ಭಕ್ತಿಗೇನೂ ಕಮ್ಮಿಯಾಗಿಲ್ಲ! (ನ)
-ಲ್ಲ ನಿರಂಜನಾದಿತ್ಯನಂತಾಗಿಲ್ಲ!!!
ಹಲ್ಲೊಂದೊಂದೇ ಬಿದ್ದು ಹೋಗುತ್ತಿದೆ! (ಎ)
-ಲ್ಲೊಂದೆಂಬುದಿನ್ನೂ ತಿಳಿಯದಿದೆ!
ದೊಂಬಿ, ದರೋಡೆಯಿನ್ನೂ ಸಾಗಿದೆ!
ದೇಶ ಸುತ್ತುವಾಸೆ ಹೆಚ್ಚಾಗಿದೆ!
ಬಿರುಗಾಳಿ ಸಹಿಸದಾಗಿದೆ! (ತಿ)
-ದ್ದುಪಾಡು ಬಾಳಲ್ಲಿಲ್ಲದಾಗಿದೆ!
ಹೋಗುವ ದಿನರಿಯದಾಗಿದೆ!
ಗುರುಕೃಪೆಯಿನ್ನೂ ಬಾರದಿದೆ! (ಬು)
-ತ್ತಿಯನ್ನ ಮುಗಿಯುತ್ತಾ ಬಂದಿದೆ! (ತಂ)
-ದೆ ನಿರಂಜನಾದಿತ್ಯಾ! ಬಾ ಮುಂದೆ!!!
-ಕ್ತಾತ್ಮ ವಿಚಾರಿಯವನಣ್ಣಾ! (ಉ)
-ಗ್ರತಪೋನಿಷ್ಠಾತ ಕಾಣಣ್ಣಾ! (ಸಂ)
-ಗ ಶಿವನದವನಿಗಣ್ಣಾ! (ಗ)
-ಣ್ಯನವ ಶಿವಗಣಕ್ಕಣ್ಣಾ!
ಬರಡಾಸೆ ಅವನಿಗಿಲ್ಲಣ್ಣಾ!
ಸರ್ವ ಹಿತೈಷಿಯವನಣ್ಣಾ!
ವರ್ಣಭೇದ ರಹಿತಾತಣ್ಣಾ (ಅ)
-ಣ್ಣಾ ನಿರಂಜನಾದಿತ್ಯಾತಣ್ಣಾ!!!
-ಕ್ಕಾಚಾರ, ವಿಚಾರವಿರಲಕ್ಕಾ!
ಮಲ್ಲಿಕಾರ್ಜುನನ ಭಜಿಸಕ್ಕಾ!
ಹಾಲಭಿಷೇಕವಗೆ ಮಾಡಕ್ಕಾ!
ದೇಹ ದೇವಾಲಯ ತಿಳಿಯಕ್ಕಾ!
ವಿಶ್ವೇಶ್ವರ ನಿನ್ನಾತ್ಮ ಕಾಣಕ್ಕಾ!
ನೀಲಕಂಠನೆಂಬರವನಕ್ಕಾ!
ನಾನು, ನೀನೆಂಬುದವಗಿಲ್ಲಕ್ಕಾ!
ಗಣಾಧಿಪ ತಾನಾಗಿಹನಕ್ಕಾ! (ಅ)
-ಕ್ಕಾ ನಿರಂಜನಾದಿತ್ಯವನಕ್ಕಾ!!!
-ರಮಾತ್ಮ ನೀನೆನುತ್ತಾ ಗುರುರಾಯಾ! (ಭ)
-ವರೋಗ ಹೋಯ್ತೆನುತ್ತಾ ಗುರುರಾಯಾ!
ನಿಶ್ಚಿಂತನಾಗೆನುತ್ತಾ ಗುರುರಾಯಾ! (ದ)
-ತ್ತಚಿತ್ತವಿದೆನುತ್ತಾ ಗುರುರಾಯಾ! (ಮ)
-ದನಾರಿ ನೀನೆನುತ್ತಾ ಗುರುರಾಯಾ! (ಹೆ)
-ತ್ತವ್ವೆ ಧನ್ಯಳೆನುತ್ತಾ ಗುರುರಾಯಾ!
ಗುಪ್ತವಾಗಿರೆನ್ನುತ್ತಾ ಗುರುರಾಯಾ! (ತೋ)
-ರು ಲೀಲೆಯನೆನ್ನುತಾ ಗುರುರಾಯಾ! (ವಿ)
-ರಾಗಿಯಾಗಿರೆನ್ನುತಾ ಗುರುರಾಯಾ! (ಜೀ)
-ಯಾ ನಿರಂಜನಾದಿತ್ಯದತ್ತಾತ್ರೇಯ!!!
ವರ ಗುರುಚಿತ್ತವೆಲ್ಲಕ್ಕಾದಿ ಮೂಲಾಧಾರ!
ರಹಸ್ಯವಿದನರಿತರಾಗದಪಚಾರ!
ವಲಸೆಗಾರರಿಗಾಗಬಾರದು ಧಿಕ್ಕಾರ!
ರೂಢಮೂಲ ಹಕ್ಕನ್ನುಳಿಸಬೇಕು ಸರ್ಕಾರ!
ರಗಳೆಯಾಗದಂತಿರಬೇಕು ರಾಜ್ಯಭಾರ! (ಎ)
-ಲ್ಲರೂ ಸದ್ಗುರು ಪರಮಾತ್ಮನ ಪರಿವಾರ!
ವಸ್ತ್ರಾನ್ನವೆಲ್ಲರಿಗೀವಾ ದೀನಜನೋದ್ಧಾರ!
ರಘುಪತಿಯ ಭಜಿಸಬೇಕೆಲ್ಲಾ ಸಂಸಾರ!
ವರಾಂಜನೇಯನಂತಿರಬೇಕು ಸದಾಚಾರ! (ಭ)
-ರತ ಬಂಧುವಿನಂತಿರಬೇಕು ಭಕ್ತ್ಯಪಾರ! (ವಿ)
-ಧಿ ಸೃಷ್ಟ್ಯಾಗ ಸಮಸ್ತ ಸುಖ, ಶಾಂತಿಗಾಗಾರ!
ಕಾರ್ಯಕರ್ತ, ಧರ್ಮವೀರ ರಾಮ ರಘುವೀರ! (ಧು)
-ರ ಧೀರ ಗಂಭೀರಾ ನಿರಂಜನಾದಿತ್ಯಾಕಾರ!!!
ವಿರಕ್ತಗಾಗ್ವುದಪಚಾರ!
ಗಾದೆ, ಬೋಧೆಗೆ ಉಪಚಾರ!
ಗುಣಾತೀತನಿಗಪಚಾರ! (ನೋ)
-ವು ಇಲ್ಲದಿದ್ದಾಗುಪಚಾರ!
ದುಮ್ಮಾನವಿದ್ದಾಗಪಚಾರ!
ಪರ ಹಿಂಸಕಗುಪಚಾರ! (ಆ)
-ಚಾರ ಶುದ್ಧನಿಗಪಚಾರ! (ನೇ)
-ರ ನಿರಂಜನಾದಿತ್ಯಾಚಾರ!!!
ಭಕ್ತನ ಮೇಲೆ ಸೋಲಿನ ಸುರಿಮಳೆ! (ವ್ಯ)
-ಕ್ತವಾಗದಿಹುದು ಗುರುಲೀಲಾ ಮಳೆ! (ಅ)
-ನನ್ಯ ಭಕ್ತಿಗಮಿತಾಘಾತದಾ ಮಳೆ!
ಮೇಲಿಂದ ಮೇಲೆ ಗೋಳಿನ ಗಾಳಿ ಮಳೆ! (ತ)
-ಲೆಯೆತ್ತ್ಯೋಡಾಡಗೊಡದಾ ಜಡಿ ಮಳೆ!
ಸೋತವನ ಪ್ರಾಣ ಹಿಂಡುವುದಾ ಮಳೆ! (ಒ)
-ಲಿದು ಪಾಲಿಸೆಂದರೂ ನಿಲ್ಲದಾ ಮಳೆ! (ಅ)
-ನವರತದಭ್ಯಾಸಕ್ಕಡ್ಡಿ ಆ ಮಳೆ!
ಸುಮುಹೂರ್ತೊದಯಕ್ಕಡಚಣ್ಯಾ ಮಳೆ!
ರಿಪುಕುಲಕ್ಕನುಕೂಲಾ ಕೆಟ್ಟ ಮಳೆ!
ಮಹಾದೇವನೇ ತಡೆಯಬೇಕಾ ಮಳೆ! (ಕೊ)
-ಳೆಸದು ನಿರಂಜನಾದಿತ್ಯನಾ ಮಳೆ!!!
ದಿವ್ಯ ಜ್ಞಾನಾನಂದಾತ್ಮಾನಂದ!
ರಾಮನಾಮಾ ಭಜನಾನಂದ!
ನಂದ ಕಂದಾ ಮುಕುಂದಾನಂದ!
ದಾತ, ನಾಥಾ ವಿರಕ್ತಾನಂದ!
ಪೂಷ್ಣರೂಪಾ ವೈಷ್ಣವಾನಂದ! (ವ)
-ರ್ಣಾಶ್ರಮೋದ್ಧಾರಾ ಕೃಷ್ಣಾನಂದ! (ಕಂ)
-ದ ನಿರಂಜನಾದಿತ್ಯಾನಂದ!!!
-ಗ ಸೀತೆಯದವಗೆ ನಿತ್ಯರಾಮ! (ಸ)
-ದ್ವೇದ, ವೇದಾಂತ ಸಾರಾ ಸೀತಾರಾಮ!
ಷಡ್ರಿಪು ನಿಗ್ರಹಾಂಜನೇಯಾ ರಾಮ! (ಭ)
-ರತ ಬಂಧು, ದಯಾಸಿಂಧು ಶ್ರೀರಾಮ!
ಹಿತಕಾರೀಶ್ವರ ಪ್ರಿಯಾ ಶ್ರೀ ರಾಮ!
ತಾರಕನಾಮ ರಘುವೀರಾ ರಾಮ! (ವ)
-ರಗುರು ಸ್ವರೂಪಾನಂದಾ ಶ್ರೀರಾಮ! (ರ)
-ಘುಪತಿ ರಾಘವ ಜೈ ರಾಜಾರಾಮ!
“ರಾಮ ರಾಮ ಜಯ ಜಾನಕಿ ರಾಮ”! (ರಾ)
-ಮ ನಿರಂಜನಾದಿತ್ಯಾನಂದಾರಾಮ!!!
ಉತ್ಸಾಹವೆಷ್ಟಿದ್ದರೇನೋ ಮಿತ್ರಾ? (ಪ್ರೋ)
-ತ್ಸಾಹ ನೀಡಬೇಡವೇನೋ ಮಿತ್ರಾ?
ಹರ್ಷವಾಗಿರುವುದೆಂತೋ ಮಿತ್ರಾ? (ಸ)
-ವೆಯುತಿದೆ ದೇಹ ನೋಡೋ ಮಿತ್ರಾ! (ದೃ)
-ಷ್ಟಿಯಿನ್ನೂ ಬಿದ್ದಿಲ್ಲವೇಕೋ ಮಿತ್ರಾ? (ಇ)
-ದ್ದ ಮಾತಾಡಿಹೆನು, ಕೇಳೋ ಮಿತ್ರಾ! (ಆ)
-ರೇನ ಗೈವರೀ ವಿಧಿಗೆ? ಮಿತ್ರಾ!
ನೋವೆಲ್ಲಾ ತೊಡೆದು ಹಾಕೋ ಮಿತ್ರಾ!
ಮಿತ್ರಧರ್ಮದಲ್ಲವೇನೋ ಮಿತ್ರಾ?
ತ್ರಾಹಿ, ನಿರಂಜನಾದಿತ್ಯ ಮಿತ್ರಾ!!!
ನೋಟ, ಕೂಟೋಟಾಟಿಕ್ಕಾಗೀ ಬಾಳೇನು?
ಜನ್ಮ ಸಾರ್ಥಕವಿದರಿಂದಾಯ್ತೇನು?
ಯಜ್ಞ, ಯಾಗಗಳ ಉದ್ದೇಶವೇನು?
ವಿಕಲ್ಪ, ಸಂಕಲ್ಪ ನಾಶಕ್ಕಲ್ಲೇನು? (ಕೊ)
-ಲ್ಲಬೇಕು ವೈರಿಗಳಾರನ್ನು ನೀನು!
ದೇವದೇವನಾಗುವೆ ಆಗ ನೀನು!
ನಿತ್ಯ ನೇಮಾನುಷ್ಠಾನ ಮಾಡು ನೀನು! (ಸ)
-ದ್ದಡಗಿ ಶಾಂತನಾಗಬೇಕು ನೀನು! (ಹ)
-ರೇಚ್ಛೆಯಿದೆಂದರಿತು ಬಾಳು ನೀನು! (ಸೂ)
-ನು ನಿರಂಜನಾದಿತ್ಯಗಾಗ ನೀನು!!!
-ವರದಕಂಜ್ಯಳಬೇಕಾಗಿಲ್ಲ! (ಹ)
-ರಿಕೃಪೆಯದು, ಸಂಶಯವಿಲ್ಲ! (ಹ)
-ಗೆತನ ಸಾಧಿಪಾತವನಲ್ಲ!
ಕರ್ಮ ಫಲಿಸದಿರುವುದಿಲ್ಲ! (ನಿ)
-ರ್ಮಲ ಮನದಿಂದಾಗಬೇಕೆಲ್ಲ!
ತಳಮಳದಿಂದ ಸುಖವಿಲ್ಲ! (ಒ)
-ಪ್ಪಿದಮೇಲಪ್ಪ ಬಿಡುವುದಿಲ್ಲ! (ಬಿ)
-ದ್ದವರನ್ನೆಬ್ಬಿಸದಿರ್ಪುದಿಲ್ಲ! (ನ)
-ಲ್ಲ ಶ್ರೀ ನಿರಂಜನಾದಿತ್ಯ ಕೊಲ್ಲ!!!
ಆರಿಂದೇಕೆಂದಾಯಿತೆಂತೀ ಸೃಷ್ಟಿ? (ಆ)
-ರಿಂದಾಗುವುದರಿಯಲೀ ಸೃಷ್ಟಿ?
ದೇವರಿಂದಾಯಿತೆಂಬರೀ ಸೃಷ್ಠಿ! (ಏ)
-ಕೆಂದರವನಿಚ್ಛೆಂಬರೀ ಸೃಷ್ಟಿ! (ಎಂ)
-ದಾಯ್ತೆಂದರೆ ಹಿಂದೆಂಬರೀ ಸೃಷ್ಠಿ!
ಯಿದೆಂತೆನೆ ಲೀಲೆಂಬರೀ ಸೃಷ್ಟಿ! (ಇಂ)
-ತೆಂದು ತೋರುವವರಾರೀ ಸೃಷ್ಟಿ? (ಅ)
-ತೀತನಾದಾಗೆಲ್ಲಿದೆ ಈ ಸೃಷ್ಟಿ?
ಸೃಷ್ಟಿ, ಸ್ಥಿತಿ, ಲಯ, ಮನೋ ಸೃಷ್ಟಿ! (ಸೃ)
-ಷ್ಟಿ, ನಿರಂಜನಾದಿತ್ಯಾತ್ಮ ದೃಷ್ಟಿ!!!
ನರಜನ್ಮ ಸಾರ್ಥಕಾಗಲಿ!
ಗೆಳೆಯರುತ್ತಮರಾಗಲಿ!
ನಾಮ ಜಪ ಸಾಗುತ್ತಿರಲಿ!
ನೇತೃ ಸದ್ಗುರುವಾಗಿರಲಿ!
ನುಡಿಯಂತೆ ನಡೆಯಿರಲಿ!
ಹೇಸಿಕೆ ತೊಳೆಯಲ್ಪಡಲಿ! (ಖ)
-ಳಕುಲ ನಿರ್ನಾಮವಾಗಲಿ! (ಶೂ)
-ಲಿ ನಿರಂಜನಾದಿತ್ಯಾಗಲಿ!!!
-ರೆದಕ್ಷಿಯಿಂದೋದಲಿಕ್ಕಾಗಿ!
ಯುದ್ಧ ಬುದ್ಧ್ಯಡಗಲಿಕ್ಕಾಗಿ! (ಸಾ)
-ವು ಭಯ ತಪ್ಪಿಸಲಿಕ್ಕಾಗಿ!
ದುರ್ವ್ಯಾಪಾರ ಬಿಡಲಿಕ್ಕಾಗಿ!
ನಿತ್ಯ ಸುಖಾನುಭವಕ್ಕಾಗಿ!
ನಡೆ, ನುಡಿ, ತಿದ್ದಲಿಕ್ಕಾಗಿ! (ಆ)
-ಗಾಗ ಗುರುದರ್ಶನಕ್ಕಾಗಿ! (ಯೋ)
-ಗಿ ನಿರಂಜನಾದಿತ್ಯನಾಗಿ!!!
-ದ್ದಾನೆಯಂತಡ್ಡಾಡಿದರಾವ ಫಲ? (ಯೋ)
-ಗೀಶ್ವರ ತಾನಾಗದಿದ್ದೇನು ಫಲ?
ಯಮಾಭ್ಯಾಸದಿಂದೀ ಜನ್ಮ ಸಫಲ! (ಯಾ)
-ದವೇಂದ್ರನ ಕೃಪೆಯಿಂದಾ ಸುಫಲ! (ಅ)
-ವನೊಲಿಯದಿದ್ದರೆಲ್ಲಾ ನಿಷ್ಫಲ!
ನಿತ್ಯ ನಿಜಾನಂದವೇ ಆ ಸತ್ಫಲ! (ಸ)
-ದ್ದೇನಿಲ್ಲದೋದ್ಧಾಮ ಸ್ಥಿತಿ ಆ ಫಲ! (ಅ)
-ನುಭವಿಗೆ ಪರಮಾನಂದಾ ಫಲ!
ಫಲಾಪೇಕ್ಷಾತೀತ ಭಾವಕ್ಕಾ ಫಲ! (ಬ)
-ಲ ನಿರಂಜನಾದಿತ್ಯಾನಂದಾ ಫಲ!!!
-ಠಾರಿಯನ್ನೆಸೆದು ಬಿಡಬೇಕು! (ಅ)
-ಧಿಕಾರಾಹಂಕಾರ ಸುಡಬೇಕು!
ಪರಹಿಂಸೆ ಮಾಡದಿರಬೇಕು!
ತಿತಿಕ್ಷೆ ಬಲವಾಗಿರಬೇಕು!
ನೀಚವೃತ್ತಿಗಳಡಗಬೇಕು!
ನಾಮ ಜಪ ಸದಾ ಮಾಡಬೇಕು! (ಸಂ)
-ಗ ಸಾಧು ಸಂತರದಾಗಬೇಕು!
ಬೇಕಾದವನೆಲ್ಲರ್ಗಾಗಬೇಕು! (ಟಾ)
-ಕು ನಿರಂಜನಾದಿತ್ಯಾಗಬೇಕು!!!
-ಶದಲ್ಲಿ ಬಿದ್ದೊದ್ದಾಡಬೇಡ! (ಭ)
-ಕ್ತನಾಗಿ ಬಾಳದಿರಬೇಡ!(ಅ)
-ನಾವಶ್ಯ ಮಾತನ್ನಾಡಬೇಡ! (ಯೋ)
-ಗ್ಯರೊಡನಾಟ ಬಿಡಬೇಡ! (ಗೊ)
-ಡ್ಡಾಚಾರಕ್ಕೆಡೆಗೊಡಬೇಡ! (ಮೃ)
-ಡನಡಿ ಸೇವೆ ಬಿಡಬೇಡ!
ಬೇಡಿ, ಕಾಡ್ಯೇನೂ ತಿನ್ನಬೇಡ! (ಕಾ)
-ಡ, ನಿರಂಜನಾದಿತ್ಯ ಬೇಡ!!!
-ಗೆ ತೇಲಿ ಹೋಗುತ್ತಲಿರಲಿ!
ಹಗಲಿರುಳಿದು ಸಾಗಲಿ! (ಹ)
-ರಿಕೃಪೆಯೆಂಬರಿವಿರಲಿ! (ಆ)
-ಯುಷ್ಯ ಅವನಿಗಾಗಿರಲಿ! (ತ)
-ತ್ತರಿಸದ ಚಿತ್ತವಿರಲಿ! (ಸ)
-ಲಿಲೇಂದ್ರನಲ್ಲೈಕ್ಯವಾಗಲಿ! (ನ)
-ರ ನಿಂತು ಅಮರನಾಗಲಿ! (ಶೂ)
-ಲಿ ನಿರಂಜನಾದಿತ್ಯಾಗಲಿ!!!
ದಹಿಸಿದನನಂಗನ ತಪೋಬಲದಿಂದ ಶಿವ! (ಸ)
-ಹಿಸಿದನು ಸತೀ ವಿರಹವಾ ಬಲದಿಂದ ಶಿವ! (ಪು)
-ಸಿ ಮಾಯೆಗೊಡೆಯನೆನಿಸಿದಾ ಬಲದಿಂದ ಶಿವ! (ಕಂ)
-ದನಿಗೆ ತಂದೆ ತಾನಾದನು ಆ ಬಲದಿಂದ ಶಿವ! (ಮ)
-ನಸಿಜನಯ್ಯನಾಪ್ತ ತಾನಾದಾ ಬಲದಿಂದ ಶಿವ!
ನಂಜುಂಡು ನಂಜುಂಡಸ್ವಾಮಿಯಾದಾ ಬಲದಿಂದ ಶಿವ! (ಯೋ)
-ಗರಾಜನಾಗಿ ತ್ಯಾಗಿ ತಾನಾದಾ ಬಲದಿಂದ ಶಿವ!
ನಗಾಧಿಪ ಸುತೆಯರಸಾದಾ ಬಲದಿಂದ ಶಿವ! (ಸಂ)
-ತ ಜ್ಞಾನೇಶ್ವರನೆನಿಸಿದನಾ ಬಲದಿಂದ ಶಿವ! (ಪೈ)
-ಪೋಟಿಯಿಲ್ಲದ ನಿಷ್ಕಪಟ್ಯಾದಾ ಬಲದಿಂದ ಶಿವ!
ಬಗೆಬಗೆ ರೂಪಿಗೆ ಸಾಕ್ಷ್ಯಾದಾ ಬಲದಿಂದ ಶಿವ! (ಜ)
-ಲಜಭವನಿಂದಧಿಕನಾದಾ ಬಲದಿಂದ ಶಿವ! (ಒ)
-ದಿಂಗಳವಡದಾತ್ಮಾನಂದಾದಾ ಬಲದಿಂದ ಶಿವ!
ದಮ, ಶಮಾ, ಯೋಗ ಸಿದ್ಧನಾದಾ ಬಲದಿಂದ ಶಿವ!
ಶಿವ ಮಹಿಮೆಯ ಮೆರೆಸಿದಾ ಬಲದಿಂದ ಶಿವ!
ವರಗುರು ನಿರಂಜನಾದಿತ್ಯಾ ಬಲದಿಂದ ಶಿವ!!!
ರಂಜಿಪುದಿದು ವಿಚಾರಿಯ ಮನ!
ಜರಾ, ಜನ್ಮ, ದುಃಖ ಶೀಘ್ರ ಶಮನ!
ನಾರಾಯಣಾನುಗ್ರಹಾ ಸಂಜೀವನ!
ದಿನ, ರಾತ್ರಿ, ಮಾಡಬೇಕು ಮನನ! (ಸ)
-ತ್ಯಜ್ಞಾನಾನಂದ ಪರಮ ಪಾವನ!
ಛಂದಸ್ಸಿನಲ್ಲಿದಪೂರ್ವ ಸಾಧನ!
ದೋಷವೆಣಿಸದಾಗಲಿ ಸೇವನ!
ವರಗುರುಕೃಪಾಶೀರ್ವಾದಾಂಜನ!
ಚರಾಚರಾತ್ಮ ತಾನೆಂಬಾಶ್ವಾಸನ!
ನಮೋ ಶ್ರೀ ನಿರಂಜನಾದಿತ್ಯಾನನ!!!
-ರೆದಿಡು ಕದ ವಿಶ್ವಾಸದಿಂದೀಗ!
ದರ್ಶನಾಸಕ್ತಿ ಬಲವಾಗಲೀಗ! (ಬೇ)
-ರೆ ಯೋಚನೆ ಮಾಡಬೇಡ ನೀನೀಗ!
ಬಾಯಿ ಮುಚ್ಚಿ ಧ್ಯಾನಿಸವನನ್ನೀಗ! (ವ)
-ರ ಗುರುಲೀಲೆಯರಿವಾಗ್ವುದಾಗ!
ಬಂಧು, ಬಾಂಧವನವನಾಗ್ವನಾಗ!
ದಶಮುಖನ ವಧೆಯಾಗ್ವುದಾಗ! (ಧ)
-ರೆಗರಸ ನೀನೆಂಬರೆಲ್ಲರಾಗ! (ಅ)
-ಹೋರಾತ್ರ್ಯಾತ್ಮಾನಂದ ರಾಮ ನೀನಾಗ! (ಯೋ)
-ಗರಾಜ ನಿರಂಜನಾದಿತ್ಯನಾಗ!!!
ನಮ್ಮ ಮನೆಗೆ ಬರುವುದು ಯಾವಾಗ? (ನಿ)
-ಮ್ಮ ಸರ್ವಸ್ವವೂ ನಿರಂಜನನಾದಾಗ!
ಮನೆಯವನದೇ ಮಂದಿರವಾದಾಗ!
ನೆನಸು, ಕನಸಲ್ಲೂ ಅವನಾದಾಗ!
ಗೆಳೆತನನ್ಯರದು ಬೇಡವಾದಾಗ!
ಬಸಿರಲ್ಲೊಂದು ಬಾಯಲ್ಲೊಂದಿಲ್ಲದಾಗ!
ರುದ್ರಭೂಮಿಯ ಹೆದರಿಕೆ ಹೋದಾಗ! (ನಾ)
-ವು, ನೀವೆಂಬ ಭೇದಭಾವವಳಿದಾಗ!
ದುರ್ವಿಷಯದಾಸೆ ನಿರ್ನಾಮವಾದಾಗ!
ಯಾರೇನೆಂದರು ಲಕ್ಷ್ಯವಿಲ್ಲದಾದಾಗ!
ವಾದವಿಲ್ಲದ ಪೂಜ್ಯಬುದ್ಧಿ ಬಂದಾಗ! (ಖ)
-ಗ ನಿರಂಜನಾದಿತ್ಯನಲ್ಲೊಂದಾದಾಗ!!!
-ತತವನಾತ್ಮ ಚಿಂತನೆಯಪಾರ! (ಅ)
-ನಿತ್ಯೈಹಿಕ ಸುಖವಗೆ ನಿಸ್ಸಾರ!
ಗೂಢವಾಗಿದ್ದು ಮಾಳ್ಪನು ವಿಚಾರ!
ಸಂಗ ಸಜ್ಜನರದವಗಾಧಾರ! (ಕ)
-ತೆ, ಪುರಾಣ ಕೇಳ್ವುದವನಾಚಾರ!
ಗೂಳಿಯಂತೇನವಗಿಲ್ಲ ವಿಕಾರ!
ಬಹಳಾನಂದವನಿಗೆ ಓಂಕಾರ!
ಹುರುಡವನಿಗೇನಿಲ್ಲಾ ಸಂಸಾರ!
ದೂಷಣೆ, ಭೂಷಣೆ ಏಕ ಪ್ರಕಾರ! (ಹ)
-ರ, ನಿರಂಜನಾದಿತ್ಯನಾಕಾರ!!!
-ರುವ್ಯಾಸನಿಗೇನೀಗಡಚಣೆ?
ತಿರೆಗೆ ಬೇಕೀಗ ಸಂರಕ್ಷಣೆ!
ಗೀತಾಪತಿಗೇಕನಾದರಣೆ? (ಯೋ)
-ಗೆಶ್ವರನಿಗೀಗೇಕೀ ಧೋರಣೆ? (ಸಾ)
-ಕಿನ್ನಯ್ಯಾ ನಿನ್ನ ಮೌನಧಾರಣೆ! (ಎ)
-ಲ್ಲಾ ಕಾರ್ಯಕ್ಕೂ ನಿನ್ನದೇ ಪ್ರೇರಣೆ!
ಕರುಣಿಸು ಬಂಗ್ಲಾಕ್ಕೆ ಮನ್ನಣೆ! (ಪಾ)
-ರು ಮಾಡಿ ನೀಡು ಮಾನ ರಕ್ಷಣೆ! (ಕಾ)
-ಣೆ, ನಿರಂಜನಾದಿತ್ಯಗೆಣೆ!!!
ಯಾಕಬಲೆಯರ ಮೇಲೀ ಅತ್ಯಾಚಾರಾ?
ಸಾಯುತಿಹರನಾಥ ಮಕ್ಕಳಪಾರಾ!
ಗತಿ ದಾತನದಿದೇನು ಉಪಕಾರಾ?
ರಾಗ, ದ್ವೇಷ, ನಿರ್ಮೂಲ ಮಾಡೋ ದಾತಾರಾ!
ಕಾಲ ವಿಳಂಬ ಸಾಕೋ ಕೃಪಾಕರಾ! (ಕಾ)
-ಯೋದ್ವೇಗ ನಿಲ್ಲಿಸೋ ಚಂದ್ರಶೇಖರಾ!
ಬಂಧು ನೀನಲ್ಲವೇನೋಂಕಾರೇಶ್ವರಾ?
ಗ್ಲಾನಿ ಧರ್ಮಕ್ಕಾಗುತಿದೆ ಈಶ್ವರಾ!
ದಾರಿ ತೋರು, ಬಾ, ಗುರುಗುಹೇಶ್ವರಾ! (ಕ)
-ರ್ತವ್ಯಲೋಪವೇಕೋ ಪರಮೇಶ್ವರಾ? (ಹ)
-ರಾ ನಿರಂಜನಾದಿತ್ಯ ಲೋಕೇಶ್ವರಾ!!!
ಗೀಳಿಟ್ಟರೆ ಕೂಳು ಹುಟ್ಟುವುದೇನಯ್ಯಾ? (ಆ)
-ಳಿಗಾಳಾಗಿ ಸದಾ ದುಡಿಯಬೇಕಯ್ಯಾ! (ಅ)
-ಟ್ಟಹಾಸಕ್ಕೆ ಬೆಟ್ಟ ನಡುಗೀತೇನಯ್ಯಾ? (ಹಾ)
-ರೆ ಗುದ್ದಲಿಗಳಿಂದದು ಪುಡಿಯಯ್ಯಾ!
ಕೂಲಿ, ಕೆಲಸವಾಗದೆ ಸಿಗದಯ್ಯಾ! (ಕಿ)
-ಳು, ಮೇಲೆಂದರೆ ಕೆಲಸ ಸಾಗದಯ್ಯಾ!
ಹುಟ್ಟು, ಸಾವಿನ, ಕರ್ಮ ಸಾಕುಮಾಡಯ್ಯಾ! (ಜು)
-ಟ್ಟು, ಜನಿವಾರ ಕಿತ್ತೆಸೆದು ಬಿಡಯ್ಯಾ! (ಯಾ)
-ವುದೂ ಸ್ಥಿರವಲ್ಲೆಂದರಿಯಬೇಕಯ್ಯ!
ದೇಹ ದೇವಾಲಯದಲ್ಲಿಹ ದೇವಯ್ಯಾ! (ಅ)
-ನವರತಾಭ್ಯಾಸಿಗಾ ದರ್ಶನವಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾತ್ಮ ಸಾಕ್ಷಿಯಯ್ಯಾ!!!
-ಟ್ಟಬುದ್ಧಿಯವಗಿಲ್ಲದಿರಲಿ!
ವಾಸುದೇವನ ಧ್ಯಾನವಿರಲಿ! (ದಾ)
-ರಿ ವೈಕುಂಠಕ್ಕೆ ಸಾಗುತ್ತಿರಲಿ!
ಗಾಳಿ, ಮಳೆಯಂಜಿಕೆ ಹೋಗಲಿ!
ದರ್ಶನೇಚ್ಛೆ ಸ್ವಚ್ಛವಾಗಿರಲಿ!
ರೂಪ, ನಾಮಾತೀತದಾಗಿರಲಿ!
ಬಸವನಂತೆ ಭಕ್ತಿಯಿರಲಿ! (ವ)
-ರ ಗುರುಕೃಪೆ ಸದಾ ಇರಲಿ! (ಕೂ)
-ಲಿ ನಿರಂಜನಾದಿತ್ಯ ಕೊಡಲಿ!!!
-ಳಿಯ ಕೊರಳಲಂಕಾರ ವಸ್ತು! (ಸ)
-ದಾನಂದವೀವಮೌಲ್ಯ ಸಂಪತ್ತು!
ಸರ್ವಾಕ್ಷಿಯನೆಳೆವ ದೌಲತ್ತು!
ನರನುನ್ನತಕ್ಕೊಯ್ವ ತಾಕತ್ತು!
ಕಿಪಿಶ್ರೇಷ್ಠನಾರಾಮದಂತಸ್ತು! (ಕ)
-ಡಲೊಡೆಯನರಸಿಗೆ ದತ್ತು! (ನೀ)
-ಲಕಂಠಗೀವುದು ಪುರುಸೊತ್ತು!
ಮುನಿವರನ ಭಕ್ತಿಯ ಬಿತ್ತು! (ಎ)
-ತ್ತು ನಿರಂಜನಾದಿತ್ಯನಿಗಿತ್ತು!!!
ದಿನ ನಿತ್ಯ ಸ್ವಚ್ಛಮಾಡಬೇಡವೇನು? (ಪ)
-ರಮಾತ್ಮನಲ್ಲಿ ಬೆಳಗಬೇಡವೇನು?
ವೆಚ್ಚ ತನು, ಮನ, ಧನದ್ದಾಗ್ಬೇಡ್ವೇನು? (ನಿ)
-ಷ್ಟುರ ಸ್ವಭಾವವಡಗಬೇಡವೇನು?
ಸುಂದರೇಶನಿಗೆ ಶರಣಾಗ್ಬೇಡ್ವೇನು?
ದರ್ಶನದಿಂದ ದಾರಿದ್ರ್ಯ ಹೊಗ್ಬೇಡ್ವೇನು? (ವ)
-ರಗುರು ಮಹಿಮೆ ಕಾಣಬೇಡವೇನು? (ಭಾ)
-ವಾತೀತನಾಗಿ ಬೆರೆಯಬೇಡವೇನು?
ದರ್ಪ, ದಂಭ ದಹನವಾಗ್ಬೇಡವೇನು?
ರೇಗಾಟ, ಕೂಗಾಟ ನಿಲ್ಲಬೇಡವೇನು? (ತ)
-ನು, ನಿರಂಜನಾದಿತ್ಯ ನಿಲಯಲ್ವೇನು???
-ನ್ಮ ಮುಗಿಸದಿರೈಹಿಕದಲ್ಲಿ! (ಜ್ಞೇ)
-ಯ ಸಾಧಕನಾಗು ಬಾಳಿನಲ್ಲಿ!
ನಾರಾಯಣನಾಗು ನಾಮದಲ್ಲಿ!
ಗುಹೇಶ್ವರನಾಗು ಗುಣದಲ್ಲಿ!
ಚಿರಾಯುವಾಗು ಚಿದ್ರೂಪದಲ್ಲಿ! (ಮ)
-ನ್ಮಥಾರಿಯಾಗು ಮನಸ್ಸಿನಲ್ಲಿ! (ಭ)
-ಯದೂರನಾಗು ಭವಾಬ್ಧಿಯಲ್ಲಿ!
“ನ ಗುರೋರಧಿಕಂ” ಭಕ್ತಿಯಲ್ಲಿ! (ಇ)
-ಲ್ಲಿ ನಿರಂಜನಾದಿತ್ಯಾತ್ಮನಲ್ಲಿ!!!
ನಿನ್ನನ್ನಾಶ್ರಯಿಸುವುದೇತಕ್ಕೆ? (ನ)
-ನ್ನ ಕಷ್ಟ ಪರಿಹಾರಾಗಲಿಕ್ಕೆ! (ಮ)
-ನ್ನಾಥ ಜಗನ್ನಾಥಾಗಿರ್ಪುದಕ್ಕೆ! (ಆ)
-ಶ್ರಮ ಭೇದವಿಲ್ಲವೆಂದುದಕ್ಕೆ! (ತಾ)
-ಯಿ, ತಂದೆ, ಬಂಧು ನೀನಾದುದಕ್ಕೆ! (ಪ)
-ಸುಳೆ ನಾನು ನಿನಗಾದುದಕ್ಕೆ! (ಠಾ)
-ವು ನನಗೆ ಬೇರಿಲ್ಲದುದಕ್ಕೆ!
ದೇವದೇವೇಶ ನೀನಾದುದಕ್ಕೆ!
ತತ್ವಮಸ್ಯರ್ಥದನುಭವಕ್ಕೆ! (ಅ)
-ಕ್ಕೆ, ನಿರಂಜನಾದಿತ್ಯಾನಂದಕ್ಕೆ!!!
-ನ್ನ ಪಾದಕ್ಕೆ ಕೀರ್ತಿ ತರಬೇಕು!
ಕೋದಂಡ ಪಿಡಿದು ಬರಬೇಕು! (ಅ)
-ರಿಕುಲವನಪ್ಪಳಿಸಬೇಕು!
ಕೆಲಸ, ಕಾರ್ಯ, ಮಾಡಿಸಬೇಕು!
ಸರ್ವ ಸಮನ್ವಯೂಡಿಸಬೇಕು! (ಮಾ)
-ಲಿಕ ನೀನೆಂದು ಹಾಡಿಸಬೇಕು!
ಸರ್ವರ ಪಾರುಗಾಣಿಸಬೇಕು!
ಬೇರೆ ಬೇಡದಂತಿರಿಸಬೇಕು! (ಟಾ)
-ಕು ಶ್ರೀನಿರಂಜನಾದಿತ್ಯಾಗ್ಬೇಕು!!!
ಬಾಹ್ಯಾಕಾಶದಲ್ಲಿ ಹಾರುತಿದೆ ವಿಮಾನ! (ಯಾ)
-ಹ್ಯಾಖಾನನಿಗಾಗ್ವುದಿದರಿಂದ ಪತನ!
ಕಾಲ ಪ್ರತಿಕೂಲಾದ್ರಿಂದಾಗದು ಸಂಧಾನ!
ಶತೃಭಾವದಿಂದುಳಿಯದು ಸಂವಿಧಾನ!
ದಶಗ್ರೀವನ ಗತಿ ಯೋಚಿಸು ನಿಧಾನ! (ಎ)
-ಲ್ಲಿ ನೋಡಿದರಲ್ಲಿ ರಾಮಸೇನಾ ಪ್ರಧಾನ!
ಹಾಡುವವರೆಲ್ಲೆಲ್ಲೂ ರಾಮಕೃಷ್ಣ ಭಜನ! (ಕ)
-ರುಣೆ ತೋರದಿರನೆಂದಿಗೂ ನಿರಂಜನ! (ಪ)
-ತಿತ ಪಾವನನಾ ಭವಭಯ ಭಂಜನ! (ತಂ)
-ದೆ, ತಾಯಿ, ಬಂಧು, ಬಳಗಾ ರಘುನಂದನ!
ವಿಶ್ವ ಶಾಂತಿಗಾಗ್ಯಾಯಿತವನ ಜನನ!
ಮಾರಹರನಿಂದಾಯ್ತವನ ಗುಣಗಾನ!
ನಮೋ ನಿರಂಜನಾದಿತ್ಯನಸೂಯಾನನ!!!
-ಹ್ಯಾಗಿಹನವನೆಲ್ಲರಿಗಲ್ಲಾ!
ನೀತಿ, ನೇಮವವನಿಗಿಲ್ಲಲ್ಲಾ!
ಗರ್ವಾಂಧನಾಗಿಹನವನಲ್ಲಾ!
ಡಕ್ಕಾ ಬಾಲೆಯರ್ಗೋಳು ಕೇಳಲ್ಲಾ! (ಆ)
-ಗಿಹುದತ್ಯಾಚಾರವರ್ಮೇಲಲ್ಲಾ!
ಸಹಿಸುವುದಿದನೆನಿತಲ್ಲಾ?
ಬೇಗ ಮುಗಿಸವನ ನೀನಲ್ಲಾ!
ಕಲ್ಲಾಗಬಾರದೀಗ ನಾಥಲ್ಲಾ! (ಬ)
-ಲ್ಲಾ ನಿರಂಜನಾದಿತ್ಯ ತನಲ್ಲಾ!!!
-ಗುರಿಂದದ ಕೀಳ್ವ ಮನ ಮಾಡಿದೆ! (ಬೇ)
-ರೊಂದು ಯೋಚನೆ ನಂತರ ಮೂಡಿದೆ! (ಕಾ)
-ದು ನೋಡಬೇಕೆಂದಾಗ ನಿಶ್ಚೈಸಿದೆ!
ಬಾಡಿದ್ದು ಮರುದಿನ ಮೇಲೆದ್ದಿದೆ! (ಮಾ)
-ಡಿದ ನಿರ್ಧರದಿಂದೊಳ್ಳೇದಾಗಿದೆ!
ದುಡುಕು ಹಾನಿಯೆಂಬರಿವಾಗಿದೆ!
ದತ್ತನಿಗಾವುದಸಾಧ್ಯವೆನ್ಸಿದೆ! (ಮ)
-ನೋಬಲವಿಲ್ಲದೆಲ್ಲಾ ಹಾಳಾಗಿದೆ! (ಹಾ)
-ಡಿ ಅವನ ಮಹಿಮೆ ಕೊಂಡಾಡಿದೆ! (ತಂ)
-ದೆ, ನಿರಂಜನಾದಿತ್ಯನಂತಾನಾದೆ!!!
ಧರ್ಮ ಕೆಟ್ಟಿತು ನಿನ್ನಿಂದಯ್ಯಾ! (ಧ)
-ರ್ಮ ಪ್ರೇಮಿಯ ಕೇಳ್ವರಿಲ್ಲಯ್ಯಾ!
ಕೆಟ್ಟತನಕ್ಕಾದರವಯ್ಯಾ! (ಸು)
-ಟ್ಟಿಹರು ದೇವಾಲಯವಯ್ಯಾ!
ತುಡುಗರಡಿಗ್ಸಿಲ್ಲೇಕಯ್ಯಾ?
ನಿನ್ನವರ ನೀನೆತ್ತಿಲ್ಲಯ್ಯಾ! (ನ)
-ನ್ನಿಂದೇನಪರಾಧ ಹೇಳಯ್ಯಾ!
ದರ್ಶನಾನುಗ್ರಹ ಮಾಡಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾಡಯ್ಯಾ!!!
ರೋಷ ನಿನಗೆ ಸಲ್ಲದಯ್ಯಾ!
ಪಿತನೆಲ್ಲರಿಗೆ ನೀನಯ್ಯಾ! (ಪು)
-ಸಿಮಾತ ನಾನಂದಿಲ್ಲವಯ್ಯಾ! (ಕಂ)
-ದೆರೆದು ಕಾಪಾಡಬೇಕಯ್ಯಾ! (ನಿ)
-ನ್ನಬಿಟ್ಟರಾರು ಗತಿಯಯ್ಯಾ?
ಬೇಯುತಿದೆ ಬಂಗ್ಲಾ ದೇಶಯ್ಯಾ (ತ)
-ಡಮಾಡದುದ್ಧಾರ ಮಾಡಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾರ್ಯಯ್ಯಾ!!!
ಧರ್ಮ ಸಂಸ್ಥಾಪಕ ನೀನಲ್ಲವೇನಯ್ಯಾ? (ಕ)
-ರ್ಮ ನಿನಗೊಪ್ಪುವಂತೆ ನೀ ಮಾಡಿಸಯ್ಯಾ!
ಸಂಪೂರ್ಣಾಧಿಕಾರ ನಿನಗಿಹುದಯ್ಯಾ!
ಸ್ಥಾವರ, ಜಂಗಮಾತ್ಮ ನೀನೆಂಬರಯ್ಯಾ (ಅ)
-ಪರಾಧಿಗಳು ಮಕ್ಕಳೆನಬೇಡಯ್ಯಾ!
ಕನಿಕರ ತೋರಿಸಬಾರದೇನಯ್ಯಾ?
ನೀತಿ, ರೀತಿ, ನೀನೇ ಕಲಿಸಬೇಕಯ್ಯಾ!
ನಮಿಸುವೆನು ನಿನ್ನಡಿಗಳಿಗಯ್ಯಾ! (ಬ)
ಲ್ಲವನಿಗೆ ನಾನು ಹೇಳಬೇಕೇನಯ್ಯಾ?
ವೇದ, ವೇದಾಂತಜ್ಞ, ನೀನಲ್ಲವೇನಯ್ಯಾ?
ನನ್ನ ಸರ್ವಸ್ವ ನೀನಾಗಿರುವೆಯಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಗುರು ಬಾರಯ್ಯಾ!!!
ಮದ್ದು, ಗುಂಡು, ಮಾರಿ ಮಾರಣ ಮಾಡಬೇಡಿರಣ್ಣಾ! (ಇ)
-ದ್ದುದು ಮುಗಿದ ಮೇಲವರ ಪಾಡು ನೋಡಿರಣ್ಣಾ!
ಗುಂಡು ಹಾರಿಸಿ ಮಂಡೆಯೊಡೆಯಬಹುದೇನಣ್ಣಾ? (ಗಂ)
-ಡು, ಹೆಣ್ಣೆನ್ನದಾಗುತಿದೆ ನರಮೇಧ ನೋಡಣ್ಣಾ!
ಮಾನವತಿಯರ ಮಾನ ಕಳೆಯುವುದೇಕಣ್ಣಾ? (ಹ)
-ರಿಯುತಿದೆ ರಕ್ತದ ಕಾಲುವೆ ಊರಲ್ಲೆಲ್ಲಣ್ಣಾ!
ಮಾಲು, ಮತ್ತುಗಳೆಲ್ಲಾ ಕಿತ್ತೋಡುತ್ತಿರುವರಣ್ಣಾ! (ಮಾ)
-ರನಾಟ, ಚೋರಕೂಟ, ಭಾರೀ ಸಂಕಟ ಕಾಣಣ್ಣಾ! (ಹ)
-ಣಕಂಡರೆ ಹೆಣ ಬಾಯಿಬಿಡುವುದೆಂಬರಣ್ಣಾ!
ಮಾನಹೀನರ ವರ್ತನೆಯಿದಕ್ಕಿಂತಧಿಕಣ್ಣಾ! (ನೋ)
-ಡಲಾಗದೀ ಅತ್ಯಾಚಾರಗಳನ್ನೆಂದೆಂದಿಗಣ್ಣಾ!
ಬೇಟೆಯಾಡುತ್ತಿರುವರಬಲಾ, ಮಕ್ಕಳನ್ನಣ್ಣಾ! (ಕ)
-ಡಿದಿಕ್ಕುತ್ತಿಹರು ಗಂಡಂದಿರ ರುಂಡಗಳಣ್ಣಾ! (ಕ)
-ರಗಬಾರದೇ ಮನ ಗುರುಪರಮಾತ್ಮಗಣ್ಣಾ? (ಕ)
-ಣ್ಣಾದರೂ ನಿರಂಜನಾದಿತ್ಯ ಬಿಡಲೆನ್ನಿರಣ್ಣಾ!!!
-ಯಹರ ಪರಮೇಶ್ವರನ್ನೆನ್ನಿರೋ!
ಸಚ್ಚಿದಾನಂದ ರೂಪವನೆನ್ನಿರೋ! (ಮ)
-ದ್ಗುರು ಸ್ವಾಮಿ ಶ್ರೀ ಶಿವಾನಂದೆನ್ನಿರೋ! (ಕ)
-ರುಣಾಸಾಗರನವನೆಂದೆನ್ನಿರೋ!
ಚರಾಚರಾತ್ಮನವನೆಂದೆನ್ನಿರೋ! (ಧೀ)
-ರ, ಗಂಭೀರ ಸ್ವಭಾವ್ಯವನೆನ್ನಿರೋ! (ಗ)
-ಣನಾಯಕನಯ್ಯನವನೆನ್ನಿರೋ! (ಅ)
-ಕ್ಕೆ ಲೋಕಕಲ್ಯಾಣವನಿಂದೆನ್ನಿರೋ! (ತ)
-ನ್ನಿ, ಹಾರ, ತುರಾಯಿಯವಗೆನ್ನಿರೋ! (ಬಾ)
-ರೋ, ನಿರಂಜನಾದಿತ್ಯವನೆನ್ನಿರೋ!!!
-ನವ ಸಡಿಲು ಬಿಡಬೇಡ! (ಯೋ)
-ಗಸಾಧನೆಗಸಡ್ಡೆ ಬೇಡ! (ಮಾ)
-ನ್ಯ ನಾನೆಂಬಹಂಕಾರ ಬೇಡ!
ವಿಮಲನಾಗದಿರಬೇಡ!
ಚಾಡಿ ಮಾತನ್ನು ಕೇಳಬೇಡ! (ವ)
-ರ ಗುರುವ ನಿಂದಿಸಬೇಡ! (ಕು)
-ಬೇರನಾಗಲಾಶಿಸಬೇಡ! (ಕಾ)
-ಡ, ನಿರಂಜನಾದಿತ್ಯನಾದ!!!
ಪರಮಾರ್ಥಸಾಧಕನಾಗು! (ಇ)
-ತ್ತಿಂದತ್ತೋಡಾಡದವನಾಗು! (ತಂ)
-ದೆ, ತಾಯಿಯ ಸೇವಕನಾಗು! (ಇ)
-ದ್ದದರಲ್ಲಿ ಸಂತೃಪ್ತನಾಗು!
ಮತ್ಸರ ಮಾಡದವನಾಗು! (ಧೀ)
-ರ ಸತ್ಯ ಹರಿಶ್ಚಂದ್ರನಾಗು!
ನಾನಾರೆಂದರಿತವನಾಗು!(ಬಾ)
-ಗು, ನಿರಂಜನಾದಿತ್ಯನಾಗು!!!
ಕಣ್ಣ ಮುಂದಿದ್ರೂ ಕಾಲ ಬರದೆ ಕಾಣದು! (ಬ)
-ಣ್ಣ ಬಿಳ್ಯಾದ್ರೂ ಗುಣವಿಲ್ಲದೆ ಶೋಭಿಸದು!
ಮುಂಗೋಪದಿಂದ ಕೆಲಸ ಕೆಡದಿರದು!
ದಿವ್ಯಮಂತ್ರಜಪ ಶಾಂತಿ ನೀಡದಿರದು! (ತ)
-ದ್ರೂಪ ಸಿದ್ಧಿಗಿದು ನೆರವಾಗದಿರದು!
ಕಾಮ್ಯ ಕರ್ಮದಿಂದ ಮೋಕ್ಷಪ್ರಾಪ್ತಿಯಾಗದು! (ಕಾ)
-ಲ ಕಾಯದೆ ಗುರುಲೀಲೆಯರಿವಾಗದು!
ಬಟ್ಟೆ, ಬರೆಯಿಂದ ಕೆಟ್ಟ ಬುದ್ಧಿ ಸಾಯದು! (ಪ)
-ರಧನ ಪರಮಾನಂದಪ್ರದವಾಗದು! (ನಿಂ)
-ದೆಗಂಜಿದರೆ ಸಾಧನೆ ಸಾಗಲಾರದು!
ಕಾರ್ಮೋಡಾದಿತ್ಯನನ್ನೇನೂ ಮಾಡಲಾರದು! (ಹ)
-ಣದಾಸೆ ಗಣನಾಯಕಗಿರಬಾರದು!
ದುರಾಗ್ರಹ ನಿರಂಜನಾದಿತ್ಯಗಾಗದು!!!
-ಗಮೇಶ್ವರನಲ್ಲಿರ್ಪ ನೋಟ! (ಸ)
-ದ್ಗುರು ಭಕ್ತರಿಗಾಗ್ವುದೂಟ!
ರುಚಿ, ಅರುಚಿಗಲ್ಲಿ ಗೂಟ!
ಮಡದಿ, ಮಕ್ಕಳ್ಗಲ್ಲಾ ಪೀಠ!
ಠಕ್ಕು, ಠೌಳಿಗಳಿಗುಚ್ಚಾಟ!
ವೀತರಾಗಾಗೆಂಬಾ ಶ್ರೀಕಂಠ! (ಅ)
-ಘಹರಾ ಗುರು ನೀಲಕಂಠ! (ನೆಂ)
-ಟ, ನಿರಂಜನಾದಿತ್ಯ ಭಂಟ!!!
-ಳ ಸಂತೆ ನಿಂತುಹೋಗಬೇಕು! (ಅ)
-ಕ್ಕೆ, ಲೋಕಶಾಂತಿಯೆನಬೇಕು!
ವೇದಾಂತಾಚಾರಕ್ಕಾಗಬೇಕು! (ನಾ)
-ಳೆಯ ವಿಚಾರ ಬಿಡಬೇಕು!
ಬದುಕೀಗಿನದ್ದಾಗಬೇಕು! (ವ)
-ರ ಗುರುಭಕ್ತಿಯಿರಬೇಕು!
ಬೇರೂರಿದು ಫಲಿಸಬೇಕು! (ಟಾ)
-ಕು ನಿರಂಜನಾದಿತ್ಯಾಗ್ಬೇಕು!!!
-ತ್ರ, ದೂರದಿಂದೆಲ್ಲಾ ಬಂದಿದ್ರು!
ಮಠಾಧಿಪತಿಗಳೂ ಇದ್ರು!
ಹಾರುವರಿಗನ್ನ ಹಾಕಿದ್ರು!
ಯಾಗದುದ್ದೇಶ ತಿಳಿಸಿದ್ರು! (ರಾ)
-ಗ, ದ್ವೇಷಗಳೊಗಿರ್ಸಿದ್ರು!
ಮಾತಿನಲ್ಲೆಲ್ಲಾ ಮುಗಿಸಿದ್ರು! (ಮಾ)
-ಡಿಸಿದವನ ದೂರಿರ್ಸಿದ್ರು! (ತಿಂ)
-ದ್ರು, ನಿರಂಜನಾದಿತ್ಯನೆದ್ರು!!!
ಗಿಡದಲ್ಲೇ ಹಣ್ಣಾದರೆ ಬಹು ರುಚಿ! (ಕ)
-ಡಲಲ್ಲೇ ಇರುವ ಈನು ಸದಾ ಶುಚಿ!
ದಯಾಸಾಗರದ ನೀರು ಬಹು ರುಚಿ! (ಎ)
-ಲ್ಲೇ ಇದ್ದರೂ ಗುರುದೇವ ಸದಾ ಶುಚಿ!
ಹರಿಭಕ್ತಿಸಾರಾಮೃತ ಬಹು ರುಚಿ! (ಹೆ)
-ಣ್ಣಾಗಿದ್ದರೂ ಸರಸ್ವತಿ ಸದಾ ಶುಚಿ! (ಮ)
-ದನಾರಿಯ ಮಾತುಕತೆ ಬಹು ರುಚಿ! (ಧಾ)
-ರೆಯಾಗಿ ಸುರಿವ ಮಳೆ ಸದಾ ಶುಚಿ!
ಬಡತನ ಭಕ್ತನಿಗೆ ಬಹು ರುಚಿ!
ಹುಸಿ, ದಿಟಾತೀತ ದತ್ತ ಸದಾ ಶುಚಿ! (ಕು)
-ರುಕುಲಾರಿಯಂತರ್ವಾಣಿ ಬಹು ರುಚಿ! (ರು)
-ಚಿ, ನಿರಂಜನಾದಿತ್ಯ ಚಿತ್ತತಿ ಶುಚಿ!!!
ಮುನಿಜನ ಮನಕ್ಕಾನಂದವಾಯ್ತು! (ಶಂ)
-ಖ, ಚಕ್ರಧಾರಿಯನುಗ್ರಹವಾಯ್ತು! (ಬೆ)
-ಕ್ಕೆ ಸಮೂಲವಾಗಿ ನಿರ್ಮೂಲವಾಯ್ತು!
ಮಂದಿರ ಬಹಳ ಪ್ರಶಾಂತವಾಯ್ತು! (ಯೋ)
-ಗಸಿದ್ಧಿಯುದಯ ಗೋಚರವಾಯ್ತು! (ಬೋ)
-ಳಾ ಶಂಕರಗಣಕ್ಕೆ ಹರ್ಷವಾಯ್ತು! (ಪ)
-ರಮಾರ್ಥ ಜೀವನಕ್ಕೆ ಜಯವಾಯ್ತು (ಜಾ)
-ತಿ, ಮತ, ಭೇದ ಸುಳ್ಳೆಂಬರಿವಾಯ್ತು! (ಕಾ)
-ಯಾಭಿಮಾನ ಹೋಗ್ಯಾತ್ಮಜ್ಞಾನವಾಯ್ತು! (ಆ)
-ಯ್ತು, ನಿರಂಜನಾದಿತ್ಯಾನಂದವಾಯ್ತು!!!
-ಲಿಸದಿರುವಗ್ನಿಯದೇಕೆ?
ಸತ್ವವಿಲ್ಲದಾಹಾರವೇಕೆ?
ದಾನ ನೀಡದೆ ಧನವೇಕೆ? (ಸು)
-ಶೀಲೆಯಲ್ಲದ ಸತಿಯೇಕೆ? (ಸ)
-ರ್ವಾತ್ಮಾಭಾವದ ಭಕ್ತಿಯೇಕೆ?
ದಯೆಯಿಲ್ಲದ ದೈವವೇಕೆ?
ವೇತನ ಶೂನ್ಯೋದ್ಯೋಗವೇಕೆ? (ಈ)
-ಕೆ ನಿರಂಜನಾದಿತ್ಯನಾಕೆ!!!
-ಟ್ಟಹಂಕಾರ ವರ್ಜದಿಂದ!
ವೇದಾಂತ ಜೀವನದಿಂದ!
ರೊಟ್ಟಿಯಾಶಾಭಾವದಿಂದ! (ನ)
-ಮ್ಮ, ನಿಮ್ಮೆಂಬಭೇದದಿಂದ!
ತರಣಿಯಾದರ್ಶದಿಂದ! (ತ)
ದಿಂಗಿತಾನುಭವದಿಂದ! (ಇ)
-ದ ನಿರಂಜನಾದಿತ್ಯಂದ!!!
-ತ್ತವತಾರೆತ್ತಿದ ನೀನೆನ್ನಯ್ಯಾ!
ಜರಾಜನ್ಮ ದೂರ ನಿನೆನ್ನಯ್ಯಾ!
ನಮಿಪೆ ನಾ ನಿನ್ನಡಿಗೆನ್ನಯ್ಯಾ! (ಕೈ)
-ಯ್ಯ ಪಿಡಿದು ನೀ ನಡೆಸೆನ್ನಯ್ಯಾ!
ಸರ್ವ ಕಾರ್ಯಕರ್ತ ನೀನೆನ್ನಯ್ಯಾ!
ಲಕ್ಷ್ಮೀನರಸಿಂಹ ನೀನೆನ್ನಯ್ಯಾ!
ಹೆರವ ನಾನಲ್ಲ, ನೀನೆನ್ನಯ್ಯಾ! (ಅ)
-ನ್ನ, ವಸನವೀವ ನೀನೆನ್ನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯನೆನ್ನಯ್ಯಾ!!!
ನೃಸಿಂಹ ಸ್ವರೂಪಿ ಸವಿತಾ!
ತನು, ಮನದಲ್ಲ ಖಚಿತಾ!
ನಾರಾಯಣಮೂರ್ತಿ ಸವಿತಾ!
ನಶ್ವರವದಲ್ಲ ಖಚಿತಾ! (ಎ)
-ಲ್ಲರೊಳಗಿರುವ ಸವಿತಾ! (ಸು)
-ಖ, ದುಃಖವಗಿಲ್ಲ ಖಚಿತಾ!
ಚಿದಾಕಾಶ ವಾಸ ಸವಿತಾ!
ತಾ ನಿರಂಜನಾದಿತ್ಯಾತಾ!!!
ನಿನ್ನಭಿಷೇಕದೆಣ್ಣೆಯಿದು ಕೃಷ್ಣಾ! (ನಿ)
-ನ್ನ ಕೃಪೆಯಿಂದ ಸಿಕ್ಕಿತಿದು ಕೃಷ್ಣಾ! (ಅ)
-ಭಿಲಾಷೆಯೀಡೇರಿಸಬೇಕು ಕೃಷ್ಣಾ! (ದೋ)
-ಷೇನೂ ಉಳಿಯಬಾರದಿನ್ನು ಕೃಷ್ಣಾ!
ಕರಮುಗಿದು ಪ್ರಾರ್ಥಿಪೆನು ಕೃಷ್ಣಾ! (ಕಂ)
-ದೆರೆದೆನ್ನನುದ್ಧರಿಸೀಗ ಕೃಷ್ಣಾ! (ಎ)
-ಣ್ಣೆಯಿದರ ಮಹಿಮೆ ತೋರು ಕೃಷ್ಣಾ! (ಬಾ)
-ಯಿಮಾತು ಪ್ರಯೋಜನವಿಲ್ಲ ಕೃಷ್ಣಾ! (ಬಂ)
-ದು ಸಂದೇಹ ಪರಿಹರಿಸು ಕೃಷ್ಣಾ!
ಕೃಷ್ಣಾರ್ಪಣವಾಗಿಹೆ ನಾನು ಕೃಷ್ಣಾ! (ಕೃ)
-ಷ್ಣಾ, ನಿರಂಜನಾದಿತ್ಯಾನಂದ ಕೃಷ್ಣಾ!!!
ತನಯನೆಂದೆತ್ತಿಕೊಳ್ಳಯ್ಯಾ ನೀನೆನ್ನ!
ತಪ್ಪು ಮಾಡದಂತೆ ನಡೆಸು ನೀನೆನ್ನ! (ಅ)
-ನುಮಾನದಲ್ಲಿರಿಸಬೇಡ ನೀನೆನ್ನ! (ಜಾ)
-ತಿ, ಮತವೇಕೆಂದಿರಿಸಿಹೆ ನೀನೆನ್ನ!
ಸಿರಿತನ ಬೇಡೆಂದಿಟ್ಟಿಹೆ ನೀನೆನ್ನ!
ಭಜನಾನಂದನಾಗಿರ್ಸಿಹೆ ನೀನಿನ್ನ!
ಜಿತೇಂದ್ರಿಯನಾಗಿ ಮಾಡಿಹೆ ನೀನೆನ್ನ!
ಪೆತ್ತವ್ವೆಯಾಗಿ ಕಾಯಬೇಕು ನೀನೆನ್ನ!
ನಾ ನಿನಗಾಗಳುವೆ ಸೇರು ನೀನೆನ್ನ!
ನಿರಂಜನನೆನ್ನವನೆಂದಪ್ಪು ನೀನೆನ್ನ! (ಅ)
-ನ್ನದಿರನ್ಯ ನಿರಂಜನಾದಿತ್ಯೆಂದೆನ್ನ!!!
-ಗನಾಮಣಿ ಲಕ್ಷ್ಮಿಯಿಂದೆಲ್ಲಾ!
ನಾಶವಾಗ್ವುದಧರ್ಮವೆಲ್ಲಾ! (ಮ)
-ಥನ ಮಾಳ್ಪಳ್ಭವಾಬ್ಧಿಯೆಲ್ಲಾ!
ನಾಥನ ತೋರುವಳೆಲ್ಲೆಲ್ಲಾ! (ಆ)
-ನಂದವಾಗ್ವುದು ಮಂದಿಗೆಲ್ಲಾ (ಮ)
-ದ ಮತ್ಸರಳಿವುದಾಗೆಲ್ಲಾ! (ಸ)
-ವೆಯುವುದು ಪ್ರಾರಬ್ಧವೆಲ್ಲಾ! (ಬ)
-ಲ್ಲಾ ನಿರಂಜನಾದಿತ್ಯನೆಲ್ಲಾ!!!
-ಫಲವಾಗಲೀ ಜನ್ಮವೆಂದ! (ಕಾ)
-ರ್ಖಾನೆಯ ಬಳಿಯಿಂದ ಬಂದ!
ನಮಸ್ಕರಿಸಿ ಮುಂದೆ ನಿಂದ!
ಹೂವಾಗಿ ಮಾಡ್ಬೇಕೆನ್ನನೆಂದ!
ಹಣ, ಕಾಸ್ಬೇಡ ನನಗೆಂದ! (ಕ)
-ಣ್ಣು ಸದಾ ನಿನ್ನ ನೋಡ್ಬೇಕೆಂದ!
ತಂದೆ, ತಾಯ್ನೀನು ನನಗೆಂದ! (ಕಂ)
-ದ, ನಿರಂಜನಾದಿತ್ಯಗೆಂದ!!!
ಎಣ್ಣೆ ನೀರು ಹಾಕಿಕೊಂಡು ದತ್ತ! (ಎ)
-ಣ್ಣೆ ಗುರುವಾಯೂರು ಕೃಷ್ಣನಿತ್ತ!
ನೀಲಾಕಾಶದಲ್ಲಿಂದಿರುತ್ತತ್ತ! (ನೀ)
-ರು ಬಿಸಿಬಿಸಿಯಾಗ್ಯೆರೆಯುತ್ತ!
ಹಾಡು ಗುರುನಾಮ ನೀನೆನುತ್ತ! (ಬೇ)
-ಕಿಲ್ಲ ನಿನಗನ್ಯ ಸೇವೆನುತ್ತ!
ಕೊಂಚ ಹೊತ್ತಿಂತಿರಬೇಕೆನುತ್ತ!
ಡಮರಧರ ನೀ ಮತ್ತೆನುತ್ತ!
ದಯಾನುಗ್ರಹವಾಯಿತೆನುತ್ತ!(ದ)
-ತ್ತ ನಿರಂಜನಾದಿತ್ಯನೆನುತ್ತ!!!
ದಯೆದೋರೆಂದಾ ಸುಕುಮಾರ! (ನೀ)
-ನೊಲಿದು ಸೇರ್ಸೆಂದ ತನ್ನೂರ! (ತ)
-ಬ್ಬಲಿ ನಾನೆಂದಿಂತೆಂದಾ ಧೀರ!
“ಸಂಪೂಜ್ಯ” ಗುರು ನೀನುದಾರ! (ಅಂ)
-ಗೀಕರಿಸೆನ್ನ ನಮಸ್ಕಾರ!
ತಪ್ಪಾಯ್ತು ಪ್ರಾರಬ್ಧಾನುಸಾರ! (ಆ)
-ಗಾಗ ಬಹೆನಾಜ್ಞಾನುಸಾರ! (ಹ)
-ರ ನಿರಂಜನಾದಿತ್ಯಾಧಾರ!!!
-ನೊಬ್ಬ ಸರ್ವಾಂತರಂಗ ಭಂಗಾರ! (ತ)
-ಬ್ಬಲಿಗೀಗಾಗಬೇಕುಪಕಾರ!
ವಾಸುದೇವ ರೂಪ ನಿನ್ನಾಕಾರ! (ವಾ)
-ದ್ಯವಾದನವೆನ್ನಾಚಾರಾಕಾರ!
ಸಂಪೂಜ್ಯ ನಿನ್ನದಾ ನಾದಾಕಾರ!
ಗೀರ್ವಾಣಿಯಿಂದಾ ಸುಸ್ವರಾಕಾರ!
ತಪ್ಪು ಕ್ಷಮಿಸಿ ಮಾಡು ಸ್ವೀಕಾರ!
ಗಾನಪಾನದಿಂದಾಗಲೋಂಕಾರ! (ಹ)
-ರ ಶ್ರೀ ನಿರಂಜನಾದಿತ್ಯಾಕಾರ!!!
-ನಾಗಿರುವೆ ಸೀತಾರಾಮ ರತ್ನ! (ರೋ)
-ಗಿ ನಾನಾಗಿರುವೆ ಕಾಮ ರತ್ನ! (ಇ)
-ರುವೆ ನೀನಾರಾಮ ರಾಮರತ್ನ! (ನೋ)
-ವೆನಗಿರಲಾಗಿ ಕಾಮರತ್ನ!
ಸಂಜೀವ ನೀನಾಗಿ ರಾಮರತ್ನ! (ಭೋ)
-ಗೀಶನೆನಿಸಿ ನಾ ಕಾಮರತ್ನ! (ವೀ)
-ತರಾಗೆನಿಸಿ ನೀ ರಾಮರತ್ನ! (ಮ)
-ರಣಕ್ಕೀಡಾಗಿದು ಕಾಮರತ್ನ! (ರ)
-ತ್ನ ನಿರಂಜನಾದಿತ್ಯಾತ್ಮ ರತ್ನ!!!
-ಕ್ಕದರೊಳಗೆ ನೋಡಮ್ಮಾ! (ದು)
-ಮ್ಮಾನವಿಬ್ಬರಿಗೊಂದಮ್ಮಾ!
ಬೆಸ್ತರ್ಬಲೆ ಬೀಸ್ವರಮ್ಮಾ! (ಇ)
-ಕ್ಕು ಅದಕ್ಕೊಳಗನ್ನಮ್ಮಾ!
ಸಾವಿಗಂಜುವರೆಲ್ಲಮ್ಮಾ!
ಕರುಣಾಳು ನೀನಾಗಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಮ್ಮಾ!!!
-ನೆಮಂದಿಗಾಧಾರಾದವನ! (ಸಾ)
-ಯುವ ಭಯ ತಪ್ಪಿಸುವನ!
ತಿರಿಗಿ ಹುಟ್ಟಿಸದವನ! (ಪ)
-ರಮಾತ್ಮನೆನಿಸಿದವನ!
ಬೇಸರ ಕಳೆಯುವವನ!
ಕರುಣಾಮೂರ್ತಿಯಾದವನ!
ವರ ಗುರು ದತ್ತಾತ್ರೇಯನ! (ಘ)
-ನ ನಿರಂಜನಾದಿತ್ಯಾತ್ಮನ!!!
-ಟ್ಟರೂ ಹುಟ್ಟಿಹನೆಲ್ಲೆಲ್ಲಾ ಕಾಮ!
ರೂಪ, ನಾಮಕ್ಕಂಟಿರುವಾ ಕಾಮ!
ಬಿಸಜಾಕ್ಷನಿಗಣುಗಾ ಕಾಮ! (ಮೃ)
-ಡನಿಂದಂದು ಸುಡಲ್ಪಟ್ಟಾ ಕಾಮ!
‘ನಾ’, ‘ನೀ’ ನಾಟಕದ ನಟಾ ಕಾಮ!
ಕೆರೆ, ಬಾವಿಗೂ ತಳ್ಳುವಾ ಕಾಮ! (ಹು)
-ಟ್ಟಡಗಿಸುವಾರಾಮ ನಿಷ್ಕಾಮ! (ಓಂ)
-ಕಾರಾತ್ಮಾರಾಮ ಪಾವನ ನಾಮ!
ಮಮ ನಿರಂಜನಾದಿತ್ಯಾ ರಾಮ!!!
ಬರುವಾಸೆ, ಇರುವಾಸೆ, ಬೆರೆವಾಸೆ! (ಊ)
-ರು ಬಿಟ್ಟು ಕಷ್ಟಪಟ್ಟೀಗ ಬರುವಾಸೆ! (ಭ)
-ವಾಬ್ಧಿಯಿಂದೆದ್ದೀಗ ಊರಲ್ಲಿರುವಾಸೆ! (ಆ)
-ಸೆ ಸುಟ್ಟು ಈಶನೊಟ್ಟೀಗ ಬೆರೆವಾಸೆ!
ಇಹ ಸುಖ ತ್ಯಜಿಸೀಗ ಬರುವಾಸೆ! (ಗು)
-ರುಮನೆಯಲ್ಲೀಗ ನಿತ್ಯವಿರುವಾಸೆ! (ಶೀ)
-ವಾನಂದದಲ್ಲೀಗ ಸದಾ ಬೆರೆವಾಸೆ!
ಸೆರೆಮನೆಯ ಬಿಟ್ಟೀಗ ಬರುವಾಸೆ!
ಬೆನಕನೊಡನಾಟದಲ್ಲಿರುವಾಸೆ! (ತೆ)
-ರೆ, ಹರಿದು ಹರನಲ್ಲಿ ಬೆರೆವಾಸೆ! (ದೇ)
-ವಾದಿ ದೇವನನ್ನು ನೋಡಬರುವಾಸೆ! (ಆ)
-ಸೆ ನಿರಂಜನಾದಿತ್ಯನೊಟ್ಟಿರುವಾಸೆ!!!
ಎಡೆತೊಡೆಯೆಡೆಯ ನರ ಹಿಡಿದಿತ್ತು! (ಮಾ)
-ಡಲು ಸೂರ್ಯನಮಸ್ಕಾರ ಕಷ್ಟವಾಗಿತ್ತು!
ತೊಡರುಗಳನುಭವ ಎಷ್ಟೋ ಆಗಿತ್ತು! (ತ)
-ಡೆದುಕೊಂಡೇ ಸಾಧನೆಗಳಾಗುತ್ತಿತ್ತು! (ದ)
ಯೆಯಯ್ಯನದಿರ್ಪಾಗೇನೂ ಗೊತ್ತಾಗದಿತ್ತು!(ಬಿ)
-ಡೆ ಕೈಯ್ಯನೆಂಬಭಯ ನೆನಪಾಗುತ್ತಿತ್ತು! (ಕಾ)
-ಯದತ್ತ ವ್ಯಾಮೋಹ ಮಾಯವಾಗುತ್ತಲಿತ್ತು! (ಅ)
-ನವರತಮರಾನೆಂದರಿವಿರುತ್ತಿತ್ತು! (ಯಾ)
-ರ ಸಹವಾಸವೂ ಬೇಕಾಗದಿರುತ್ತಿತ್ತು!
ಹಿತೈಷಿ ಗುರುವೆಂದು ಖಚಿತವಾಗಿತ್ತು! (ಅ)
-ಡಿಗಡಿಗವನ ಪರೀಕ್ಷೆ ನಡೆದಿತ್ತು! (ಈ)
-ದಿನ ನರನಾಡಿಯೆಲ್ಲಾ ಶುದ್ಧವಾಗಿತ್ತು! (ಚಿ)
-ತ್ತು ನಿರಂಜನಾದಿತ್ಯಗಿಲ್ಲೆಂಬರಿವಾಯ್ತು!!!
-ನ್ನೆನಿತು ಮಾಡಬೇಕವನ ಪಾರ್ಥನೆ! (ಎ)
-ಷ್ಟುತ್ಸಾಹದಿಂದ ಮಾಡಿದೆನು ಭಜನೆ?
ದಿವ್ಯಾನುಭವವಾಗ್ಬೇಕೆಂದೇ ಭಾವನೆ! (ಅ)
-ನವರತಾಗ್ತಿದೆ ಪ್ರಸಾದ ಸೇವನೆ!
ಈಶ್ವರಾರ್ಪಣದಿಂದಾಗ್ತಿದೆ ಸಾಧನೆ!(ಧ)
-ನ, ಧಾನ್ಯಕ್ಕಾಗಿ ಮಾಡುತ್ತಿಲ್ಲಾ ಯೋಚನೆ! (ವ)
-ರಗುರು ಪರಮಾತ್ಮನದ್ದೇ ಚಿಂತನೆ!
ಕಲಿ ಕಲ್ಮಷವನಿಂದ ವಿಮೋಚನೆ! (ದ)
-ಯಾಮಯನವಯಿಂದ ಧರ್ಮ ಸ್ಥಾಪನೆ!
ತತ್ವಮಸಿ ತತ್ವಾರ್ಥದ ಪ್ರವರ್ತನೆ! (ನೆ)
-ನೆ ನಿರಂಜನಾದಿತ್ಯ ಸ್ವರೂಪವನೆ!!!
-ಶರೀರದಿಂದೇನೂ ಮಾಡೆ, ಆಡೆ! (ಈ)
-ರೀತಿ ತರತರ ಗುಣ ನೋಡೆ! (ವ)
-ರಗುರು ಧ್ಯಾನ ನಾನೇನೂ ಬಿಡೆ! (ಎಂ)
-ದಿಂಗಿದಕೆ ಫಲವೆನ ಬ್ಯಾಡೆ!
ದತ್ತ ನೀನೇ ಗತಿಯೆಂದು ಹಾಡೆ!
ಪತನವಕ್ಕವನ ಬಿಟ್ಟೋಡೆ!
ರಕ್ಕಸರ ಪಾಡೇನಾಯ್ತು ನೋಡೆ!
ಪೀಯೂಷ ಶ್ರೀಪಾದ ತೀರ್ಥ ನೀಡೆ! (ಕೊ)
-ಡೆ ಶ್ರೀ ನಿರಂಜನಾದಿತ್ಯನೆಡೆ!!!
ದಾಕ್ಷಿಣ್ಯಕ್ಕೊಳಗಾಗಿ ದಾರಿ ಬಿಡಬೇಡ! [ರ]
-ಕ್ಷಿಪನವನೆಂಬ ನಂಬಿಗೆ ಬಿಡಬೇಡ! (ಗ)
-ಣ್ಯನಾಗಲಿಕ್ಕವರಿವರಾಶ್ರಯ ಬೇಡ!(ಹೊ)
-ಕ್ಕೊಳಗಾತ್ಮ ಚಿಂತನೆ ಮಾಡದಿರಬೇಡ! (ಪ)
-ಳಗಿದಾನೆಯಲ್ಲಪನಂಬಿಗೆ ತೋರ್ಬೇಡ! (ಆ)
-ಗಾಗದರ ಶುಶ್ರೂಷೆ ಮಾಡದಿರಬೇಡ!
ಗಿಡ, ಮರನ್ಯಾಯವಾಗಿ ಕೀಳಿಸಬೇಡ!
ದಾರಿಗಡ್ಡವಾದದ್ದನ್ನೆಳೆಸದಿರಬೇಡ! (ಊ)
-ರಿನಿಂದೂರಿಗೆ ವೃಥಾ ಓಡಾಡಿಸಬೇಡ!
ಬಿಸಿಲ್ಬಂದಾಗ ನೀರಲ್ಲಿಳಿಸದಿರಬೇಡ! (ಒ)
-ಡನಾಟ ಅದರದ್ದೆಂದಿಗೊ ಬಿಡಬೇಡ!
ಬೇಕಿದರ ಸಹಕಾರ, ಮರೆಯಬೇಡ! (ನೋ)
-ಡ ನಿರಂಜನಾದಿತ್ಯಡ್ಡದಾರಿಯಲ್ಲೋಡ!!!
-ದುಕು, ಬಾಳಿಗಾರು ಹೊಣೆ ತಿಳ್ಯೋಣ! (ನಾ)
-ವೆಯೋಡ್ತಿದೆ, ದಡ ಸೇರಿ ಆಡೋಣ!
ಹೇರಿನೊಡೆಯನಾರೆಂದರಿಯೋಣ!
ಗಾಳಿ ನಿಲ್ಲುವ ತನಕ ಕಾಯೋಣ!
ಗುರುದೇವನ ನಾಮ ಸ್ಮರಿಸೋಣ! (ರೇ)
-ವು ದೊರೆತಾಗಾರಾಮ ಪಡೆಯೋಣ!
ದುರ್ನಾಥ ಒಣಗಿಸ್ತಿರುತ್ತಿರೋಣ!
ನೋಟ ಪ್ರಕೃತಿಯದಾನಂದಿಸೋಣ! (ಓ)
-ಡೋಡ್ತಿರುವ ಮೋಡಗಳೀಕ್ಷಿಸೋಣ (ಗ)
-ಣಪ ನಿರಂಜನಾದಿತ್ಯನೆನ್ನೋಣ!!!
ಅಲ್ಲಿಲ್ಲಿ ಹೋದರಶಾಂತಿ ಕಾಣಮ್ಮಾ! (ಗ)
-ಲ್ಲಿಗಲ್ಲಿಯಲ್ಲೂ ಕುಚೋದ ನೋಡಮ್ಮಾ! (ಗು)
-ಲ್ಲಿನಲ್ಲಿ ನಿಜಸೊಲ್ಲು ಕೇಳದಮ್ಮಾ!
ಹೋಗ್ವಾಗಿದ್ದಾನಂದ ಬರ್ವಾಗಿಲ್ಲಮ್ಮಾ! (ಮಂ)
-ದಮತಿಗಳ ಸಂಗ ಬಿಡ್ಬೇಕಮ್ಮಾ! (ಊ)
-ರವರ ಮಾತಿನಿಂದೇನು ಲಾಭಮ್ಮಾ?
ಶಾಂತಿದಾತನೆಡೆ ಬಿಡಬೇಡಮ್ಮಾ! (ಭೀ)
-ತಿದಾಯಕ ಅಲ್ಪರೊಡನಾಟಮ್ಮಾ!
ಕಾಯುವವ ಗುರುದೇವನೊಬ್ಬಮ್ಮಾ! (ಪ್ರಾ)
-ಣನಾಥನವನೆಂದರಿತಿರಮ್ಮಾ! (ಅ)
-ಮ್ಮಾ ನಿರಂಜನಾದಿತ್ಯನವನಮ್ಮಾ!!!
ಉಬ್ಬೆಗೆ ಹಾಕಿದ ಮೇಲೆ ಗಬ್ಬಿನ ಮಾತೇಕೆ? (ಅ)
-ಬ್ಬೆಯ ಬಳಿಯಿರುವಾಗ ತಬ್ಬಲ್ಯೆನಲೇಕೆ?
ಗೆಳೆಯ ಸದ್ಗುರುವಾಗಿರುವಾಗ್ಭಯವೇಕೆ?
ಹಾರ ಹಾಕಿ ವರಿಸಿದ ಮೇಲ್ಸಂದೇಹವೇಕೆ?
ಕಿವುಡಾದ ಮೇಲೆ ಕೇಳುವ ಚಪಲವೇಕೆ?
ದನ ಕರೆವಾಗ ಹಾಲಿಲ್ಲವೆನುವುದೇಕೆ?
ಮೇಳ ತಾಳ, ಗಂಟಲಿದ್ದೂ ಹಾಡಬಾರದೇಕೆ? (ಒ)
-ಲೆಯುರಿಯಿರುವಾಗಡಿಗೆ ಮಾಡ್ಬಾರದೇಕೆ?
ಗಗನಮಣಿಯಿರುವಾಗೊದ್ದೆಯುಡ್ವುದೇಕೆ? (ಡ)
-ಬ್ಬಿಯಲ್ಲೂಟಾರೋಗ್ಯವಿರ್ಪಾಗುಪವೇಕೆ?
ನದಿ ನೀರಿರುವಾಗ ಸ್ನಾನಬಿಡುವುದೇಕೆ?
ಮಾರ್ಗದರ್ಶಿಯಿರುವಾಗ ಅನುಮಾನವೇಕೆ?
ತೇಲ್ಬುರ್ಡೆಯಿರ್ಪಾಗ ಮುಳುಗುವ ಭಯವೇಕೆ? (ಏ)
-ಕೆ ನಿರಂಜನಾದಿತ್ಯನಂತಿಬಾರದೇಕೆ???
ರೋಗಕ್ಕೆ ತಕ್ಕ ಚಿಕಿತ್ಸೆಯಾಗಬೇಕು! (ಭೋ)
-ಗ ಜೀವನ ಹತೋಟಿಯಲ್ಲಿಡಬೇಕು! (ಪ)
-ಕ್ಕೆ ಹಿಡಿದಾಗ ತಿಕ್ಕಿ ಸರಿ ಮಾಡ್ಬೇಕು!
ತಲೆ ಭಾರಾದಾಗಾರಾಮವಿರಬೇಕು! (ಕ)
-ಕ್ಕಸು ನಿರಾಯಾಸವಾಗಿ ಹೋಗಬೇಕು!
ಚಿತ್ತ ವಿಭ್ರಮಾದಾಗಾಪ್ತ ಮಾತು ಬೇಕು!
ಕಿವುಡಾದಾಗ ಕೊಳೆ ತೆಗೆಯಬೇಕು! (ವ)
-ತ್ಸೆ ಮೂರ್ಛೆ ಹೋದಾಗುಪಚರಿಸಬೇಕು! (ಆ)
-ಯಾಸಾದಾಗ ದ್ರವಾಹಾರ ಕೊಡಬೇಕು!
ಗರ್ಭಾಗದಾಗ ಭರ್ಗನಾರಾಧಿಸ್ಬೇಕು!
ಬೇಸರಾದಾಗ ಗುರುಧ್ಯಾನ ಮಾಡ್ಬೇಕು! (ಬೇ)
-ಕು ನಿರಂಜನಾದಿತ್ಯನೆಲ್ಲಕ್ಕೂ ಬೇಕು!!!
-ಹ್ಮಜ್ಞಾನ ಭರಿತರಾದವರು! (ಗು)
-ಣ, ದೋಷ ನಿರ್ಣಯ ಸಮರ್ಥರು! (ಧ)
-ರೆಗಾಧಾರರೆನಿಸಿದವರು! (ಬ)
-ಲ್ಲವರೆಂಬಹಂಕಾರ ಶೂನ್ಯರು! (ಪ)
-ರ ಪೀಡೆಗೇಡೆಗೊಡದವರು! (ಅ)
-ನಾದರಾರಿಗೂ ತೋರದವರು! (ಆ)
-ಳಿಗಾಳಾಗಿ ಸೇವೆ ಗೈದವರು!
ದರ್ಪ ದಂಭಗಳಿಲ್ಲದವರು! (ಗು)
-ರು ನಿರಂಜನಾದಿತ್ಯಂದವರು!!!
-ತ್ಯ ಕೊಲ್ಲುವೆನೆಂದರವನಿಗೂ ಸೋಲು!
ಕಾಲನಾದರೂ ಕಾಲಚಕ್ರದ ಪಾಲು! (ಅ)
-ಲಕ್ಷ್ಯದಿಂದಹಂಕಾರಿಯಾದರೆ ಸೋಲು!
ಬಂಧು ಬಾಂಧವರೆಲ್ಲಾ ಕಾಲನ ಪಾಲು!
ದಾಶರಥಿಯಿಂದ ರಾವಣಗೆ ಸೋಲು!
ಗಂಗೆ ಗುರು ಸಂಗಮೇಶ್ವರನ ಪಾಲು!
ತರಣಿ ಕರುಣಿಸದಿದ್ದರೆ ಸೋಲು!
ಕಮಲಾಂಬೆ ಕಮಲನಾಭನ ಪಾಲು! (ಮ)
-ನಸಿಜಗೆ ಮದನಾರಿಯಿಂದ ಸೋಲು!
ಪಾದ ಭಜನಾನಂದ ಭಕ್ತನ ಪಾಲು (ಬ)
-ಲುಮೆ ನಿರಂಜನಾದಿತ್ಯಾತ್ಮನ ಪಾಲು!!!
ನಿದ್ರೆಗೆ ದಯೆಯಿಲ್ಲ ಭಯವಿಲ್ಲ! (ಮು)
-ದ್ರೆಯೊತ್ತಿದಮೇಲಭದ್ರತೆಯಿಲ್ಲ!
ಗೆಜ್ಜೆ ಕಟ್ಟಿದ ಮೇಲೆ ಲಜ್ಜೆಯಿಲ್ಲ! (ಮಂ)
-ದಮತಿಗೆ ಮಾನ, ಮರ್ಯಾದೆಯಿಲ್ಲ! (ಛಾ)
-ಯೆಗರ್ಕನಲ್ಲದನ್ಯ ಗತಿಯಿಲ್ಲ! (ಬಾ)
-ಯಿ ಮುಚ್ಚಿದರೆ ಜಗಳವೇ ಇಲ್ಲ! (ನ)
-ಲ್ಲನೆಡೆಯಿದ್ದರಪವಾದವಿಲ್ಲ!
ಭಾವಾಬ್ಧಿಯಲ್ಲಿ ಶಾಂತಿ ಸುಖವಿಲ್ಲ!
ಯಮನಿಗೆ ದಾಕ್ಷಿಣ್ಯವೆಂಬುದಿಲ್ಲ!
ವಿರಕ್ತನಿಗೆ ಯಾರ ಹಂಗೂ ಇಲ್ಲ! (ನ)
-ಲ್ಲ ನಿರಂಜನಾದಿತ್ಯನೆನ್ನಿರೆಲ್ಲ!!!
ನನಗೆ ಸದಾ ದರ್ಶನವಾಗಲಿ! (ಆ)
-ಗಾಗ ಪಾದಸೇವೆ ಪ್ರಾಪ್ತವಾಗಲಿ!
ಗಿರೀಶ ನೀನೆಂಬುದೊಳಗಿರಲಿ!
ಮಾತನ್ಯರದೆನಗೆ ಬೇಡಾಗಲಿ!
ನಗುನಗುತ ನಿನ್ನಲ್ಲೈಕ್ಯಾಗಲಿ!
ಪ್ರಾರ್ಥನೆಯಿದು ವಿಜಯಕ್ಕಾಗಲಿ! (ಗು)
-ಣಗಣ ನಿನ್ನದು ನನ್ನದಾಗಲಿ!
ಹೋದದ್ದಕ್ಕೆ ದುಃಖವಾಗದಿರಲಿ!
ಗರ್ವವೆನ್ನಿಂದ ದೂರವಾಗಿರಲಿ! (ಶೂ)
-ಲಿ ನಿರಂಜನಾದಿತ್ಯ ನಾನಾಗಲಿ!!!
ಮದನಾರಿಗೆ ಮದನಡ್ಯಾಳು!
ನಿರಂಜನಗಾಂಜನೇಯಡ್ಯಾಳು! (ಗಂ)
-ಗೆಗೆ ಭಗೀರಥ ಅಡಿಯಾಳು!
ಕಾಲ ಪುರುಷಗೆ ಲೋಕಡ್ಯಾಳು!
ಮಿತ್ರನಿಗೆ ಮೈತ್ರೇಯಿ ಅಡ್ಯಾಳು!
ಯದುಪನಿಗರ್ಜುನಡಿಯಾಳು! (ಚಂ)
-ಡಿಕೇಶ್ವರಗೆಲ್ಲಾ ಗಣಡ್ಯಾಳು! (ಜ)
-ಯಾಪಜಯಕ್ಕೆ ಜೀವಡಿಯಾಳು! (ಹೇ)
-ಳು, ನಿರಂಜನಾದಿತ್ಯಾರಡ್ಯಾಳು???
ಚಾತುರ್ವರ್ಣಕ್ಕೆ ಬೆಲೆಯಿಲ್ಲಾಯ್ತು! (ಪ)
-ರಮಾರ್ಥಿಗೆ ದಿಕ್ಕು ತೋಚದಾಯ್ತು!
ವೇದಾಂತ ಬರೀ ಬಾಯಿ ಮಾತಾಯ್ತು!
ಪ್ರಾರ್ಥನೆ ಫಲ ಬಿಡದೇ ಹೋಯ್ತು!
ಮುನಿಜನಕ್ಕೆಡೆಯಿಲ್ಲದಾಯ್ತು! (ಸಾಂ)
-ಖ್ಯಯೋಗ ಸಿದ್ಧಿ ಕಾಣದಂತಾಯ್ತು!
ವೀರಾವೇಶ ಪರಿಪೀಡೆಗಾಯ್ತು!
ಗಾಢ ವಿಶ್ವಾಸ ಗೋಚರವಾಯ್ತು! (ಆ)
-ಯ್ತು ನಿರಂಜನಾದಿತ್ಯೋದಯೂಯ್ತು!!!
-ದೆ ನೀನಿಲ್ಲಿಗೀಗೇತಕಮ್ಮಾ?
ನೋಡಿ ಹೋಗಬೇಕೆಂದೇನಮ್ಮಾ? (ಗೋ)
-ವು ಕರೆದವರಾರಿಂದಮ್ಮಾ?
ಹೇಳಿ ಸಂತೋಷಪಡಿಸಮ್ಮಾ!
ಗಿರಿಧಾರಿ ಭಕ್ತಾಧೀನಮ್ಮಾ! (ಎ)
-ದೆಯೊಳಗಿರಿಸವನಮ್ಮಾ! (ಭ)
-ಯ ನಿವಾರಕನವನಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯಾತಮ್ಮಾ!!!
ಮಾಲಿಕನಿಚ್ಛೆಯಂತಾಯ್ತೂದಿನ ಕಡ್ಡಿ! (ಒ)
-ಲಿಸಿಕೊಂಡಿತು ಪ್ರೇಮಿಯ ಮನಾ ಕಡ್ಡಿ!
ಕರ್ಮದಿಂದಾಯ್ತದು ಸುವಾಸನಾ ಕಡ್ಡಿ!
ನಿರ್ಮಲ ಪರಿಮಳ ಸರ್ವಾಂಗಾ ಕಡ್ಡಿ! (ಇ)
-ಚ್ಛೆಯುರಿ ತಗಲ್ಲ್ಯೆಲ್ಲರ್ಗಾನಂದಾ ಕಡ್ಡಿ! (ಸ್ವ)
-ಯಂಭು ಸ್ವರೂಪ ಗಂಧ ತುಂಬಿದಾ ಕಡ್ಡಿ!
ತಾನೇ ತಾನಾಗೊಂದೆಡೆಯಿರ್ಪುದಾ ಕಡ್ಡಿ!(ಆ)
-ಯ್ತೂಪಯೋಗಗ್ನಿ ಸಂಪರ್ಕದಿಂದಾ ಕಡ್ಡಿ! (ಮಂ)
-ದಿರದ ದುರ್ನಾಥಡಗಿಪುದಾ ಕಡ್ಡಿ! (ಮ)
-ನಕುತ್ಸಾಹಾ ವಾಸನೆ ಸೂಸುವಾ ಕಡ್ಡಿ!
ಕರಚರಣವಿಲ್ಲದ ಲಿಂಗಾ ಕಡ್ಡಿ! (ಕ)
-ಡ್ಡಿ ನಿರಂಜನಾದಿತ್ಯಾನಂದದಾ ಬುಡ್ಡಿ!!!
ಕಡ್ಲೇಕಾಯಿ ಕಾಣಿಕೆ ತಂದಿಟ್ಟ! (ಕೂ)
-ಡ್ಲೇ ಹವಾಲೆಲ್ಲಾ ಒಪ್ಪಿಸಿಬಿಟ್ಟ!
ಕಾಟ ಕಮ್ಮ್ಯಾಯ್ತೆಂದಾನಂದ ಪಟ್ಟ! (ಬಾ)
-ಯಿಗನ್ನ ಸೇರುತ್ತೆಂದ್ಸಂತೋಷ್ಪಟ್ಟ!
ಕಾಯ್ಬೇಕು ನೀನೆನ್ನನೆಂದತ್ಬಿಟ್ಟ! (ಧ)
-ಣೆ ನೀನೆನಗೆಂದಡ್ಡಿ ಬಿದ್ಬಿಟ್ಟ!
ಕೆಲ್ಸಾನ್ಕೂಲಾಗ್ಬೇಕೆಂದ್ಮೊರೆಯಿಟ್ಟ!
ತಂಟೆ, ತಕ್ರಾರ್ತಪ್ಪಿಸೆಂದ್ಗೋಳಿಟ್ಟ!
ದಿವ್ಯ ಪ್ರಸಾದ ತಿಂದು ಹೋಗ್ಬಿಟ್ಟ! (ಸು)
-ಟ್ಟ ನಿರಂಜನಾದಿತ್ಯವ್ನ ಕಷ್ಟ!!!
ಸಸ್ಯಾಹಾರ ಹೆಚ್ಚಾಗ್ಮಾಡು ಪ್ರೇಮಿ! (ಉ)
-ಣ್ಣಬಾರ್ದೇನೆನ್ನೆರಡ್ಸಲ ಸ್ವಾಮಿ (ಆ)
-ಗಾಗಿನ್ನೇನನ್ನೂ ತಿನ್ಬಾರ್ದು ಪ್ರೇಮಿ!
ಗೆಡ್ಡೆ ಗೆಣಸು ತಿನ್ಬೌಹ್ದೇ ಸ್ವಾಮಿ?
ಬೇಯ್ಸದೇ ತಿಂದ್ರೊಳ್ಳೆಯದು ಪ್ರೇಮಿ! (ಬೇ)
-ಕ್ಮನೆಯವ್ರ ಸಹಕಾರ ಸ್ವಾಮಿ! (ಆ)
-ಹಾರ ನೇಮೆಲ್ಲರಿಗೂ ಬೇಕ್ಪ್ರೇಮಿ!
ಸ್ವಾಮಿಯಾಶೀರ್ವಾದವಿರ್ಲಿ ಸ್ವಾಮಿ! (ಸ್ವಾ)
-ಮಿ ನಿರಂಜನಾದಿತ್ಯಾ! ನಮಾಮಿ!!!
-ತಮೌಲ್ಯದಪರೂಪ ಭಾಗ್ಯ!
ಪೂಜೆ ಮಾಡುವುದೊಂದು ಭಾಗ್ಯ! (ಪೂ)
-ಜೆ ಮಾಡ್ಸಿಕೊಂಬುದ್ಬಹು ಭಾಗ್ಯ! (ಆ)
-ಯಿತಿಬ್ಬರುನ್ನತಿಗಾ ಭಾಗ್ಯ! (ಹಿಂ)
-ದೆಂದಾರಿಗೂ ಸಿಕ್ಕಿಲ್ಲಾ ಭಾಗ್ಯ! (ವೃ)
-ಥಾಲಾಪಕ್ಕೆ ಸಿಕ್ಕದಾ ಭಾಗ್ಯ!
ಭಾನುದೇವಾನುಗ್ರಹಾ ಭಾಗ್ಯ! (ಯೋ)
-ಗ್ಯ ನಿರಂಜನಾದಿತ್ಯನ್ಭಾಗ್ಯ!!!
ಬೆಳೆಯುತಿದೆ ಚೆನ್ನಾಗಿ ಪಚ್ಚೆತೆನೆ! (ಮ)
-ಳೆಗರೆದನದಕಾಗಿ ಅಚ್ಚುತನ! (ಸಾ)
-ಯುವರ್ಗನ್ನ ನೀರ್ಕೊಡ್ವವನವನೆ!
ತಿಳಿದಿರು ನೀನಿದನು ಬಾಲಕನೆ! (ತಂ)
-ದೆ, ತಾಯಿ, ಬಂಧು, ಬಳಗೆಲ್ಲರ್ಗವನೆ! (ಆ)
-ಚೆ, ಈಚೆಯೋಡಬೇಡ ಪ್ರಿಯ ಸುತನೆ! (ನಿ)
-ನ್ನಾಟ, ನೋಟಗಳಿಂದಾಗ ನೀನವನೆ!
ಗಿರಿಧರ ಗೋಪಾಲ ಬಾಲನವನೆ!
ಪರಧರ್ಮ ಭಯವೆಂದವನವನೆ, (ಕೆ)
-ಚ್ಚೆದೆಯರ್ಜುನ ನೀನಾಗ್ಬೇಕು ಮಗನೆ! (ಜೊ)
-ತೆಗಾರನಾಗಿ ಕಾಯ್ವ ನಿನ್ನನವನೆ! (ನೆ)
-ನೆ ನಿರಂಜನಾದಿತ್ಯಾತೆಂದು ಮಗನೆ!!!
ಗುರುಗುಹ ನೀನೇಕಾದ್ಯೋ ಗುಹ್ಯಾ? (ತೋ)
-ರು ನಿಜರೂಪವೆನ್ನಲ್ಲಿ ಗುಹ್ಯಾ!
ಗುಹನಯ್ಯನಂತಾಗಿ ಬಾ ಗುಹ್ಯಾ!
ಹದನ ಬೇಡೆನಗನ್ಯ ಗುಹ್ಯಾ! (ಅ)
-ನೀತ್ಯತ್ಯಾಚಾರ ಹೆಚ್ಚಾಯ್ತು ಗುಹ್ಯಾ!
ನೇತೃ ನೀನಾಗಬೇಕೀಗ ಗುಹ್ಯಾ!
ಕಾಮ ನಿರ್ನಾಮವಾಗ್ಬೇಕು ಗುಹ್ಯಾ! (ಉ)
-ದ್ಯೋಗವಿದೀಗತ್ಯಗತ್ಯ ಗುಹ್ಯಾ!
ಗುಣಾತೀತಕ್ಕಿದಾವಶ್ಯ ಗುಹ್ಯಾ! (ಗು)
-ಹ್ಯಾ! ನಿರಂಜನಾದಿತ್ಯಾಗೀಗ್ಬಾಹ್ಯ!!!
ನನ್ನ ಕರೆಗೆ ನೀನೋಗೊಟ್ಟು ಬಾರೋ! (ನಿ)
-ನ್ನವನೆಂಬಭಿಮಾನವಿಟ್ಟು ಬಾರೋ!
-ಕರ್ತವ್ಯವಿದೆಂದರಿತೊಟ್ಟು ಸೇರೊ! (ಬೇ)
-ರೆಲ್ಲಾ ಕೆಲಸ ಕಾರ್ಯ, ಬಿಟ್ಟು ಬಾರೋ!
ಗೆಳೆಯ ನಾನೆಂದು ಪ್ರೀತ್ಯಿಟ್ಟು ಬಾರೋ!
ನೀನೇ ನಾನೆಂಬಭಯ ಕೊಟ್ಟು ಸೇರೋ!
ನೋಡದೆನ್ನ ಮೈಲಿಗೇ ಕಟ್ಟು ಬಾರೋ! (ಕಂ)
-ಗೊಳಿಪ ಪೀತಾಂಬರ ಉಟ್ಟು ಬಾರೊ! (ತೊ)
-ಟ್ಟುತ್ತಮೂಲಂಕಾರದಿಂದೊಟ್ಟು ಸೇರೊ!
ಬಾರೋ, ಮುರಲೀಧರ ಕೃಷ್ಣ ಬಾರೋ! (ಬಾ)
-ರೋ, ನಿರಂಜನಾದಿತ್ಯನನ್ನು ಸೇರೋ!!!
ಮಳೆ, ಬಿಸ್ಲೊಂದಾಗಿ ಬಂತೋಡೋಣಾಡೋಣಾ! (ಕೊ)
-ಳೆಯೆಲ್ಲಾ ಹೋಯ್ತ್ನೆಲವೆಲ್ಲೊಣಗ್ತಾಡೋಣಾ!
ಬಿಲ್ವೆಲ್ಲಾ ಮುಚ್ತ್ಹುಳ್ವೆಲ್ತಾ ಸತ್ತಿತಾಡೋಣಾ! (ಫ)
-ಸ್ಲೊಂದೆಡೆಗಾಯ್ತಸ್ಲೊಂದೆಡೆಗಾಯ್ತಾಡೋಣಾ!
ದಾರಿ ಶುಭ್ರಾಯ್ತೂರು ಹತ್ರಾಯ್ತೋಡಾಡೋಣಾ!
ಗಿಲ್ಗಿಲ್ಸದ್ದಾಯ್ತ್ಮನೆಯವ್ರೆದ್ದಾಯ್ತಾಡೋಣಾ!
ಬಂದ್ಹೋದದ್ದಾಯ್ತ್ನಿಂದು ತಿಂದದ್ದಾಯ್ತಾಡೋಣಾ!
ತೋಳು ಮೇಲಾಯ್ತ್ಕಾಲ್ಕೆಳಗಾಯ್ತೋಡಾಡೋಣಾ!
ಡೋಲ್ತಮ್ಟೆ ಬಡ್ದಾಯ್ತ್ಗೆಜ್ಜೆ ಕಟ್ಯಾಯ್ತಾಡೋಣಾ! (ಬಾ)
-ಣಾ, ಬಿಲ್ಹಿಡ್ದಾಯ್ತ್ಗುರಿಯೆದ್ರ್ನಿಂತಾಯ್ತಾಡೋಣಾ! (ಹಾ)
-ಡೋರ್ಬಂದಾಯ್ತ್ನೋಡೋ ರ್ಸೇರ್ಯಾಯ್ತ್ಕುಣ್ದಾಡ್ಯಾಡೋಣಾ! (ಗು)
-ಣಾವ್ಗುಣ್ಕೆ ನಿರಂಜನಾದಿತ್ಯೆಂದಾಡೋಣ!!!
ವೇದ, ಪುರಾಣ, ಬರೆದಾ ಚಿರಂಜೀವಿ ವ್ಯಾಸ! (ಅ)
-ದರನುಭವ ಮಾಡಿಕೊಡಬೇಕೀಗಾ ವ್ಯಾಸ!
ಪುಸಿಯಾಡಿದನೆಂಬಪಖ್ಯಾತಿಗಂಜಾ ವ್ಯಾಸ!
ರಾಜ ಮರ್ಯಾದೆಯಿಂದ ಮೆರೆದಾ ವೇದ ವ್ಯಾಸ! (ರ)
-ಣರಂಗದ ಗೀತೋಪದೇಶ ಬರೆದಾ ವ್ಯಾಸ!
ಬಲರಾಮ, ಕೃಷ್ಣಾದಿಗಳಾಪ್ತ ಭಕ್ತಾ ವ್ಯಾಸ! (ನೆ)
-ರೆ ಜ್ಞಾನ ಸಿದ್ಧನೆನ್ಸಿದ ಶುಕನಯ್ಯಾ ವ್ಯಾಸ!
ದಾನವಿತ್ತಜ್ಞಾನಿ ಜೀವರಿಗೆ ಜ್ಞಾನಾ ವ್ಯಾಸ!
ಚಿರ ಸ್ಮರಣೀಯ ಪರಾಶರ ಪುತ್ರಾ ವ್ಯಾಸ! (ಶ್ರೀ)
-ರಂಗನಾಥ ಭಾಗವತ ಬರೆದಾತಾ ವ್ಯಾಸ!
ಜೀವ ಶೀವೈಕ್ಯ ಬ್ರಹ್ಮಸೂತ್ರ ಬರೆದಾ ವ್ಯಾಸ!
ವಿಧವಿಧ ವೈದಿಕಾಚಾರರುಹಿದಾ ವ್ಯಾಸ! (ಯಾ)
-ವ್ಯಾವುದು, ಹೇಗ್ಹೇಗೆ ಮಾಡ್ಬೇಕೆನ್ನಲೀಗಾ ವ್ಯಾಸ! (ವ್ಯಾ)
-ಸ ನಿರಂಜನಾದಿತ್ಯ ಸರ್ವಜ್ಞಾ ವೇದಭ್ಯಾಸ!!!
ನಾನೊಂದು ಸಂತೆ, ನೀನೊಂದು ಮೆಂತೆಕಂತೆ!
ನೊಂದ್ಕೊಳ್ದೆ ಮಾರಾಟವಾಗ್ಯೋಗ್ಯತೆಯಂತೆ!
ದುರಾಗ್ರಹಬೇಡ ಕೋಸುಗೆಡ್ಡೆಯಂತೆ!
ಸಂತೆ ನಿನ್ಗೊಂದು ಜಾಗ ಕೊಟ್ಟಿರ್ವುದಂತೆ!
ತೆರೆದಿಡ್ನಿನ್ನ ಬಿದಿರ್ಬುಟ್ಯೇಕೆ ಚಿಂತೆ?
ನೀನಾಗ್ವೆ ರುಚಿ ಪಲ್ಯ ಆರೋಗ್ಯಕ್ಕಂತೆ!
ನೊಂದ್ಕೊಳ್ವುದೇನಿಲ್ಲ ನೀನ್ಬಂದ್ಯೆಂದು ಸಂತೆ!
ದುಡ್ಗಿಡ್ಡು ನಿನ್ನಿಂದ ಸಂತೆಗ ಬೇಡ್ವಂತೆ!
ಮೆಂತೆ ನೀನೆಲ್ಲರಿಗೂ ಬೇಕೇಬೇಕಂತೆ!
ತೆರೆದ್ಮನದಿಂದ ನಿನ್ಗೆ ಸ್ವಾಗತಂತೆ!
ಕಂತೆ ಹುಳುಗಳಿಲ್ಲದಿರಬೇಕಂತೆ! (ಸಂ)
-ತೆ ನಿರಂಜನಾದಿತ್ಮಾನಂದವಾ ಮೆಂತೆ!!!
ದತ್ತನೆದ್ರುರಿಯುವಾ ಬತ್ತಿಗಳು! (ಆ)
-ರ್ಯಾತ್ಮಾನಂದದಿಂದಾದಾ ಬತ್ತಿಗಳು! (ವ)
-ರ ಸುವಾಸನಾಯುಕ್ತಾ ಬತ್ತಿಗಳು! (ಗೋ)
-ವಿಂದಾನಂದ ವಾಸನಾ ಬತ್ತಿಗಳು!
ದಾಸಿ ಈರಾ ಉರ್ಸಿದಾ ಬತ್ತಿಗಳು!
ದಿವ್ಯನಾಮ ಕೀರ್ತನಾ ಬತ್ತಿಗಳು!
ಬದುಕ ಭವ್ಯ ಗೈವಾ ಬತ್ತಿಗಳು! (ಹೊ)
-ತ್ತಿಸ್ಬೇಕೆಲ್ಲೆಲ್ಲಾ ರೋಜಾ ಬತ್ತಿಗಳು!
ಗಬ್ಬನ್ನಡಗಿಸುವಾ ಬತ್ತಿಗಳೂ (ಆ)
-ಳು ನಿರಂಜನಾದಿತ್ಯಗಾದವ್ಗಳು!!!
ಬರೆದೊರೆದು ಮೆರೆದ್ರಾಯ್ತೇನು? (ಬೆ)
-ರೆತನುದಿನಾನಂದಿಸ್ಬೇಡ್ವೆನು?
ದೊರೆತನಾಧಿಕಾರ್ಬಂದ್ರಾಯ್ತೇನು? (ಕೆ)
-ರೆ, ಬಾವಿಗಳ ತೋಡಿಸ್ಬೇಡ್ವೇನು?
ದುರ್ಜನರಡಗಿಸಬೇಡ್ವೇನು? (ಶ)
-ಮೆ, ದಮೆ, ದೊರೆಗಿರಬೇಡ್ವೇನು? (ಜ)
-ರೆದನ್ಯ ದೂಷಣೆ ಮಾಡ್ಬೌಹ್ದೇನು? (ನಿ)
-ದ್ರಾಹಾರ ಮಿತವಾಗಿರ್ಬೇಡ್ವೇನು? (ಆ)
-ಯ್ತೇನೀ ಜನ್ಮ ಸಾರ್ಥಕವಾಯ್ತೇನು? (ನೀ)
-ನು ನಿರಂಜನಾದಿತ್ಯಾಗ್ಬೇಡ್ವೇನು???
-ನ್ನೆ ನಾನೀಗದನು ನಿನಗೇ! (ಎ)
-ಷ್ಟು ಕೂಗಿದ್ರೂ ಕೇಳದವಗೇ!
ದಿವ್ಯ ಮಂತ್ರ ಗತಿ ನಿನಗೇ! (ಮ)
-ನಕೆ ಶಾಂತಿ ನೀಡೆನ್ನವಗೇ!
ವರ ಸೇವಾ ಭಾಗ್ಯ ನಿನಗೇ! (ಇ)
-ಪ್ಪಾಗ ಹೇಳ್ವುದಿನ್ನೇನವಗೇ?
ಹೀನಾವಸ್ಥೆಯಿಲ್ಲ ನಿನಗೇ! (ಹೀ)
-ಗೆ ನಿರಂಜನಾದಿತ್ಯನಾಗೇ!!!
ಆಡು ಬಾ, ಕೂಡು ಬಾ, ಮುದ್ದಾಡು ಬಾ (ಬಿ)
-ಡು ನೀನೀಗಾ ಸಂಗಾತಿಗಳ ಬಾ!
ಬಾಯ್ತುಂಬಾ ಬೆಣ್ಣೆ ನಿನಗೀವೆ ಬಾ! (ದು)
-ಕೂಲವುಡ್ಸಿ, ಹೂ ಮುಡಿಸ್ವೆನು ಬಾ! (ಕಂ)
-ಡು ಅದನ್ನಾನಂದಿಸುವೆನು ಬಾ!
ಬಾ, ಬಾ, ಬಾಲ ಗೋಪಾಲಕೃಷ್ಣ ಬಾ!
ಮುದ್ದು, ಮುಖವ ಮುದ್ದಾಡ್ವೆನು ಬಾ! (ಮ)
-ದ್ದಾದ ಮೇಲೆಲ್ಲಾದ್ರೂ ಹೋಗೀಗ ಬಾ! (ಹು)
-ಡುಗಾಟ ಮಾಡದೆ ಬೇಗೋಡಿ ಬಾ!
ಬಾ, ನಿರಂಜನಾದಿತ್ಯಾನಂದ ಬಾ!!!
ಕ್ರಮಬದ್ಧವಾಗಿಹುದು ಪ್ರಕೃತಿ!
ಮಾವು ಬೇವಾಗದಿರುದೇ ಶಾಂತಿ!
ತಿಳಿನೀರ್ತಂಪಾಗಿರ್ಪುದು ಪ್ರಕೃತಿ! (ಅ)
-ಕ್ರಮದಿಂದ ಮರಳಿಸಿದ್ರಶಾಂತಿ!
ಮದ, ಮತ್ಸರಾತೀತಾತ್ಮ ಪ್ರಕೃತಿ! (ರಾ)
-ಗ, ದ್ವೇಷಗಳಿಂದಾಗುವುದಶಾಂತಿ! (ಕಾ)
-ಳಿಂದ ಬೆಳೆಯಾಗುವುದು ಪ್ರಕೃತಿ! (ಅ)
-ದಗ್ನಿಯಲಿ ಬೆಂದರಾಗ್ವುದಶಾಂತಿ!
ಶಾಂಭವಿಗೆ ಸಾಂಬ ಸೇವೆಪ್ರಕೃತಿ! (ಪ್ರೀ)
-ತಿ, ನಿರಂಜನಾದಿತ್ಯನಿಗೆ ಶಾಂತಿ!!!
ಮೈಮೇಲೋಡಾಡ್ತಿರ್ವೆ ಅಜ್ಞಾನಿಯಿರ್ವೆ!
ಮೇಲಿಂದ್ಮೇಲೆ ಬೇಸರುಂಟುಮಾಡ್ತಿರ್ವೆ! (ಆ)
-ಲೋಚ್ಸು, ತಪ್ಪು ನನ್ನದಲ್ಲೆನುತ್ತಿರ್ವೆ! (ಓ)
-ಡಾಡುವನಾಹಾರಕ್ಕಾಗೆನುತ್ತಿರ್ವೆ! (ಹೆಂ)
-ಡ್ತಿ, ಮಕ್ಳ ಸಾಕುವುದಕ್ಕೆನುತ್ತಿರ್ವೆ! (ಇ)
-ರ್ವೆ, ನಿರ್ಭಯವಾಗಿ ನಾನೆನ್ನುತ್ತಿರ್ವೆ!
ಅನ್ಯಾಯ ನನಗಾಗ್ತಿದೆನ್ನುತ್ತಿರ್ವೆ!
ಜ್ಞಾನದಾನ ಮಾಡೆನಗೆನುತಿರ್ವೆ!
ನಿನಗಿರಲಿ ದಯೆಯೆನುತ್ತಿರ್ವೆ! (ಸಾ)
-ಯಿಸ್ಬೇಡ ಬಡವನನ್ನೆನುತ್ತಿರ್ವೆ! (ಇ)
-ರ್ವೆ ನಿರಂಜನಾದಿತ್ಯಯ್ಯೆನುತ್ತಿರ್ವೆ!!!
-ಕ್ಕರೆಗಿಂತ ಸವಿಯಾದ ಪಾಠ!
ವರ ಜ್ಞಾನೋದಯ ಗೈವ ಪಾಠ! (ಹ)
-ರಿ ಮಹಿಮೆಯರುಹುವ ಪಾಠ! (ಸಂ)
-ಗ ಸತ್ಸಂಗವಾಗ್ಬೇಕೆಂಬ ಪಾಠ! (ಅ)
-ಕ್ಕ ಪಕ್ಕ ಚೊಕ್ಟಾಗ್ಬೇಕೆಂಬ ಪಾಠ! (ಮ)
-ರೆತರಿದ ಕಷ್ಟವೆಂಬ ಪಾಠ! (ಜ)
-ಯ ಗುರುಕೃಪೆಯಿಂದೆಂಬ ಪಾಠ!
ಪಾಲುಮಾರಿಕೆ ಹಾಳೆಂಬ ಪಾಠ! (ಪಾ)
-ಠ ನಿರಂಜನಾದಿತ್ಯನೊಂದಾಟ!!!
ಶ್ವೇತಾಶ್ವ ರಥಾರೂಢನಾ ಪಾಠ! (ವಿ)
-ಶ್ವಮಾನ್ಯ ಭಗವದ್ಗೀತಾ ಪಾಠ! (ಪ)
-ರ ಧರ್ಮಅಧರ್ಮವೆಂದಾ ಪಾಠ!
ನರನಜ್ಞಾನ ಕಳೆದಾ ಪಾಠ!
ಸಂಪೂರ್ಣ ಶರಣಾಗೆಂದಾ ಪಾಠ! (ತ್ಯಾ)
-ಗೀಶ್ಖರ, ಯೋಗೇಶ್ವರನಾ ಪಾಠ! (ಸು)
-ತ ದೇವಕಿಗಾದವನಾ ಪಾಠ! (ಗೋ)
-ಪಾಲಕರಾಪ್ತ ಮಿತ್ರನಾ ಪಾಠ! (ಪಾ)
-ಠ ನಿರಂಜನಾದಿತ್ಯಗೊಂದೂಟ!!!
ಗೀತಾಮಾತೆಯನೊಲಿಸಿಕೊಂಡ!
ತನ್ನರ್ಧಾಂಗ್ಯುಮೆಯೆಂದಪ್ಪಿಕೊಂಡ!
ಪ್ರಿಯ ಕುಮಾರಗಯ್ಯನೆನ್ಸ್ಕೊಂಡ! (ಭ)
-ಯಹರ ಗುರುವರನೆನ್ಸ್ಕೊಂಡ!
ಸ್ವಾಮಿ ರಾಮನ ಪ್ರೇಮ್ಯೆನಿಸ್ಕೊಂಡ!
ಮಿತ್ರನನ್ನೇ ನೇತ್ರವಾಗಿಟ್ಕೊಂಡ! (ಅ)
-ನಂಗಾರಿ ಲೋಕೋಪಕಾರ್ಯೆನ್ಸ್ಕೊಂಡ! (ನಂ)
-ಜುಂಡು ಜಗದ್ರಕ್ಷಕನೆನ್ಸ್ಕೊಂಡ! (ಮೃ)
-ಡ ನಿರಂಜನಾದಿತ್ಯನೆನ್ಸ್ಕೊಂಡ!!!
-ರತರ್ದಾಟ ಪರಿಪರ್ಯಾಸೆಗಯ್ಯಾ! (ಉ)
-ಮೆಯರಸನಿಗಾವಾಸೆಯಯ್ಯಾ? (ಸ)
-ಚ್ಚಿದಾನಂದ ತಾನಾಗಿಹನಯ್ಯಾ! (ಸ)
-ಸ್ಯಾದ್ಯೆಲ್ಲಕ್ಕೂ ಸ್ವಾಮಿಯವನಯ್ಯಾ! (ಇ)
-ರುವನವ ನಿರ್ಲಿಪ್ತನಾಗ್ಯಯ್ಯಾ! (ಬಾ)
-ಳಿಗದೇ ನಿಜಾದರ್ಶ ಕಾಣಯ್ಯಾ!
ದಮೆ, ಶಮೆಯಿಂದವನಾಗಯ್ಯಾ! (ನ)
-ರಕ ಭಯವಾಗ ಮಾಯವಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಳಿಯಯ್ಯಾ!!!
-ರನಾಗಿ ಕಲಿತು ಮರಳಿ ಬಾರೆಂದು! (ಹ)
-ಸಿದವನಂತಿರಬೇಕು ವಿದ್ಯಾರ್ಥ್ಯೆಂದು!
ಕಷ್ಟಪಟ್ಟಿಷ್ಟ ಸಾಧಿಸಬೇಕ್ನೀನೆಂದು! (ಹಾ)
-ಳು ಹವ್ಯಾಸಕ್ಕೆ ಹೋಗದಿರು ನೀನೆಂದು!
ಹಿರಿಯ ಸ್ಥಾನ ಘಳಿಸಿ ಬಾ ನೀನೆಂದು! (ತಂ)
-ದೆ, ತಾಯಿಗಾನಂದ ನಿನ್ನಿಂದಾಗಲೆಂದು!
ನಗುನಗುತ ಹೊರಡೀಗ ನೀನೆಂದು!
ವರ ಗುರುವಿನಾಪ್ತ ಭಕ್ತನಾಗೆಂದು!
ನಲ್ಲೆಯ ದುಃಖ ಶಾಂತಿ ಮಾಡು ನೀನೆಂದು! (ನ)
-ನ್ನಿಂದ ನೀನು, ನಿನ್ನಿಂದ ನಾನೆಂದಿರೆಂದು! (ಬಂ)
-ದು, ನಿರಂಜನಾದಿತ್ಯಾನಂದನಾಗೆಂದು!!!
ಧರ್ಮಸಂಸ್ಥಾಪನೆ ನಿನ್ನಲ್ಲಾಗಲೀಗ! (ನಿ)
-ರ್ಮಲ ಬುದ್ಧಿಯಿಂದಧರ್ಮ ಸಾಯಲೀಗ!
ಸಂಜೆಯಾಯ್ತೆಂಬಂಜಿಕೆಯಳಿಯಲೀಗ!
ಸ್ಥಾನ, ಮಾನದಾಸೆಯಿರದಿರಲೀಗ!
ಪರರನುಕರಣೆ ಕರಗಲೀಗ! (ಮ)
-ನೆ ಮಾಡಲಿ ಮನ ಶ್ರೀಪಾದದಲ್ಲೀಗ!
ನಿತ್ಯ ಸುಖದಲ್ಲಿ ಕಾಣುತ್ತಿರಲೀಗ! (ನಿ)
-ನ್ನವ ಶ್ರೀ ಗುರುವೆಂಬರಿವಾಗಲೀಗ! (ಉ)
-ಲ್ಲಾಸವದರಿಂದ ಹೆಚ್ಚುತ್ತಿರಲೀಗ! (ಯೋ)
-ಗವಿದುಪಕಾರಿಯಾಗುತ್ತಿರಲೀಗ!
ಲೀಲಾವತಾರಿಯವತಾರವಲ್ಲಾಗ! (ರಂ)
-ಗನಾಥ ನಿರಂಜನಾದಿತ್ಯನಲ್ಲೀಗ!!!
ತಪೋವೃತ್ತಿಯಿಂದ ತಾಪ ನಿವೃತ್ತಿ! (ಕೋ)
-ಪೋದ್ರೇಕದಿಂದ ಸಂಮೋಹ ಸಂಪ್ರಾಪ್ತಿ!
ವೃತ್ತಿ ನಿವೃತ್ತಿಯಿಂದ ಜೀವನ್ಮುಕ್ತಿ! (ಬು)
-ತ್ತಿ ಹಳಸಿದರನಾರೋಗ್ಯ ಪ್ರಾಪ್ತಿ (ನಾ)
-ಯಿಂದ ಮುನಿದರೆ ಕ್ಷೌರ ಅತೃಪ್ತಿ!
ದಧಿ ಕ್ಷೀರದಿಂದ ಸಾತ್ವಿಕ ವೃತ್ತಿ!
ತಾಮಸಾಹಾರದಿಂದಾಸುರೀ ವೃತ್ತಿ (ಅ)
-ಪಕಾರಾಪಚಾರಾಚಾರ ದುರ್ವೃತ್ತಿ!
ನಿಶ್ಚಲ ಭಕ್ತ್ಯುಪಚಾರ ಸದ್ವೃತ್ತಿ!
ವೃಷಭೇಂದ್ರನ ಭಕ್ತ್ಯಾದರ್ಶ ವೃತ್ತಿ! (ವೃ)
-ತ್ತಿ, ನಿರಂಜನಾದಿತ್ಯಾತ್ಮ ಸಂತೃತ್ತಿ!!!
ತ್ಯಾಗೇಂದ್ರ ಬಾರಯ್ಯಾ, ರಾಗೇಂದ್ರ ಹೋಗಯ್ಯಾ (ಯೋ)
-ಗೇಂದ್ರೇಂದ್ರ ಬಾರಯ್ಯಾ, ಭೋಗೇಂದ್ರ ಹೋಗಯ್ಯಾ! (ಭ)
-ದ್ರಪೀಠವನೇರು ಶ್ರೀರಾಮಚಂದ್ರಯ್ಯಾ!
ಬಾರಿಬಾರಿಗೂ ನಾಮಜಪ ಮಾಡ್ಸಯ್ಯಾ!
ರಮಿಸದಿರಲಿ ಮನ ಮಾಯೆಗಯ್ಯಾ! (ಅ)
-ಯ್ಯಾತ್ಮಾರಾಮನೆಂಬ ಸುಜ್ಞಾನ ನೀಡಯ್ಯಾ!
ರಾಮಭಕ್ತಾಂಜನೇಯನಂತೆ ಮಾಡಯ್ಯಾ! (ನಾ)
-ಗೇಂದ್ರ ಸುಬ್ರಹ್ಮಣ್ಯನಂತಾಗಬೇಕಯ್ಯಾ! (ಕ್ಷು)
-ದ್ರ ಕಾಮಾದಿಗಳು ನಾಶವಾಗಲಯ್ಯಾ! (ಅ)
-ಹೋರಾತ್ರ್ಯಾತ್ಮಾನುಸಂಧಾನವಿರಲಯ್ಯಾ! (ರೋ)
-ಗಗಳೆಲ್ಲಾ ಉರಿದು ಹೋಗಲೀಗಯ್ಯಾ! (ಅ)
-ಯ್ಯಾ ನಿರಂಜನಾದಿತ್ಯ ತಾನೆಲ್ಲವಯ್ಯಾ!!!
ಲಭ್ಯವಿಲ್ಲದ ತಬ್ಬಲಿಗಾವ ಹಬ್ಬ? (ಸ)
-ಭ್ಯನಾಗಿರುವುದೇ ಅವನಿಗೆ ಹಬ್ಬ!
ವಿಷಯಾಸೆ ಬಿಟ್ಟರದೇ ನಿತ್ಯ ಹಬ್ಬ! (ಗೊ)
-ಲ್ಲರಿಗೆ ಗೋಪಾಲನಾ ಸೇವೆಯೇ ಹಬ್ಬ!
ದರ್ಶನವವನದವರಿಗೆ ಹಬ್ಬ!
ತಪಸ್ಸು ತಾಪಸರಿಗೆ ಭಾರೀ ಹಬ್ಬ! (ಕ)
-ಬ್ಬ ಸಾಹಿತಿಗಳಿಗೊಂದು ದೊಡ್ಡ ಹಬ್ಬ! (ಮಾ)
-ಲಿಕನೊಲಿಯಲ್ವಿಮಲಾನಂದ ಹಬ್ಬ! (ಯೋ)
-ಗಾನಂದವೆಂಬುದಪೂರ್ವಮರ ಹಬ್ಬ!
ವರಗುರು ಶ್ರೀಪಾದದಲ್ಲೆಲ್ಲಾ ಹಬ್ಬ!
ಹಗಲಿರುಳೆನ್ನದಾಗುವುದಾ ಹಬ್ಬ! (ಹ)
-ಬ್ಬ, ನಿರಂಜನಾದಿತ್ಯಗಿದೊಂದೇ ಹಬ್ಬ!!!
-ಳೆ ಬಂದಾಗ್ಬೆಳೆಗನ್ಕೂಲವಿಲ್ಲ!
ಬಂಜರು ಭೂಮಿ ಹೆಚ್ಚಿತೆಲ್ಲೆಲ್ಲ! (ಆ)
-ದಾಯದ ದಾರಿ ಬೇರಿನ್ನೇನಿಲ್ಲ! (ಭೋ)
-ಗಜೀವನದ ಗೋಳಳಿದಿಲ್ಲ! (ಕ)
-ಬೀರನಂತಾದರೆ ದುಃಖವಿಲ್ಲ! (ನಿ)
-ಜಧರ್ಮ ಆತ ಬಿಡಲೇ ಇಲ್ಲ! (ಬೀ)
-ಬಿಯೊಡಗೂಡಿ ಬಾಳದೇನಿಲ್ಲ! (ವೃ)
-ತ್ತಿ ಭಕ್ತಿಯಾಗಿ ಮುಕ್ತನಾದ್ನಲ್ಲ! (ಬ)
-ಲ್ಲ ನಿರಂಜನಾದಿತ್ಯದನೆಲ್ಲ!!!
ನಿನ್ನುದಾಸೀನದಿಂದ ನಿನಗೇ ಕಷ್ಟ! (ತಿ)
-ನ್ನು ಎಂದಿತ್ತನ್ನ ಚೆಲ್ಲಲಾರಿಗೆ ಕಷ್ಟ?
ದಾರಿ ಕಾಡ್ದಾರಿಯಾದರಾರಿಗೆ ಕಷ್ಟ?
ಸೀತೆ, ಸೌಮಿತ್ರಿ ಮಾತು ಈರ್ಯಾಯ್ತು ಕಷ್ಟ! (ಮ)
-ನಸಿಜವಿವೇಕಿಯಾದ್ರಿಂದಾಯ್ತು ಕಷ್ಟ!
ದಿಂಡೆ ಶೂರ್ಪನಖಿಗಾಯ್ತು ಬಹು ಕಷ್ಟ!
ದಶೇಂದ್ರಿಯಗಳ್ಗಾಳಾದರೆಲ್ಲಾ ಕಷ್ಟ!
ನಿಜ ಗುರಿ ಬಿಡದಿದ್ದರಿಲ್ಲ ಕಷ್ಟ!
ನರಹರಿಯ ಭಕ್ತನಿಗಿಲ್ಲ ಕಷ್ಟ! (ಯೋ)
-ಗೇಶ್ವರನೊಲಿದರ್ಜುನಗಾವ ಕಷ್ಟ?
ಕರ್ತವ್ಯಲೋಪವಾದ್ರಾಗುವುದು ಕಷ್ಟ! (ಇ)
-ಷ್ಟ, ನಿರಂಜನಾದಿತ್ಯಾತ್ಮಗಿಲ್ಲ ಕಷ್ಟ!!!
ವ್ಯಾಸನಿಂದು ಬಂದೇ ತೀರಬೇಕು! (ವ್ಯ)
-ಸನಗಳೆಲ್ಲಾ ನಿರ್ಮಾಲಾಗ್ಬೇಕು!
ನಿಂದಾ, ಸ್ತುತಿಗಾನಂದಿಸಬೇಕು!
ದುರ್ಮದ ಮರ್ದನವೀಗಾಗ್ಬೇಕು!
ಬಂಧ ವಿಮೋಚನಾಮೇಲಾಗ್ಬೇಕು!
ದೇಶ, ವಿದೇಶೈಕ್ಯದಿಂದಿರ್ಬೇಕು!
ತೀರ್ಥ, ಕ್ಷೇತ್ರೋದ್ಧಾರವಾಗಬೇಕು! (ಪ)
-ರಮಾರ್ಥ ಜ್ಯೋತಿ ಬೆಳಗಬೇಕು!
ಬೇನೆಯ ಹುಟ್ಟಡಗಿ ಹೋಗ್ಬೇಕು! (ಟಾ)
-ಕು ನಿರಂಜನಾದಿತ್ಯನಾಗ್ಬೇಕು!!!
ಪೂರ್ಣಿಮೋತ್ಸವಷ್ಟಮಿಯಂದೆಂತಾದೀತು? (ಕ)
-ರ್ಣಿಕಾರ ಸರೋವರದಲ್ಲೆಂತಿದ್ದೀತು?
ಮೋಡಿ ವಿದ್ಯೆಯಲ್ಲಿ ನಿಜವೆಂತಿದ್ದೀತು? (ತ)
-ತ್ಸರ್ವಮೆಂಬುದಜ್ಞಾನಿಗೆಂತರ್ವಾದೀತು?
ವನವಾಸಿಗೆ ಪಟ್ಣವೆಂತು ರುಚ್ಸೀತು? (ಶಿ)
-ಷ್ಟರಿಗೆ ದುಷ್ಟರಿಷ್ಟ ಹೇಗೆ ಹಿಡ್ಸೀತು? (ಅ)
-ಮಿತಾಹಾರಿಗಾರೋಗ್ಯ ಹೇಗುಂಟಾದೀತು? (ಸಾ)
-ಯಂಕಾಲ ಪ್ರಾತಃಕಾಲವದೆಂತಾದೀತು?
ದೆಂಟಿಗೆ ಹಣ್ಣಿನ ಗುಣ ಹೇಗ್ಬಂದೀತು?
ತಾಯಿಯಂತಃಕರಣಯ್ಯಗೆಂತಿದ್ದೀತು?
ದೀಪದಾನಂದ ಕುರುಡಗೆಂತಾದೀತು? (ಮಾ)
-ತು ನಿರಂಜನಾದಿತ್ಯಗೆಂತೊಪ್ಪೀತು!!!
ನೆಲಾನಿಲಾನಲಾದ್ಯಲ್ಲೆಲ್ಲೆಲ್ಲಿ! (ಇ)
-ಲ್ಲೆಂಬ ಜಾಗವೆನಗಿಲ್ಲೆಲ್ಲೆಲ್ಲಿ!
ಬುಧಾದಿ ಗ್ರಹದಲ್ಲಾನೆಲ್ಲೆಲ್ಲಿ!
ದಶಾವತಾರದಲ್ಲಾನೆಲ್ಲಿಲ್ಲಿ! (ಉ)
-ನ್ನತಾಕಾಶ ಲೋಕದಲ್ಲೆಲ್ಲಿ! (ಕ)
-ರಿ, ಕುರಿ, ಹರಿಗಳೆಲ್ಲೆಲ್ಲೆಲ್ಲಿ! (ತಾ)
-ಯಿ, ತಂದೆ, ಬಂಧುಗಳೆಲ್ಲೆಲ್ಲೆಲ್ಲಿ! (ಸ)
-ರಿ, ಗ, ಮ, ಪ, ದ, ನಿ ಯಲ್ಲೆಲ್ಲೆಲ್ಲಿ! (ಇ)
-ಲ್ಲಿ, ನಿರಂಜನಾದಿತ್ಯಾತ್ಮನಲ್ಲಿ!!!
ಬರಬೇಕೆಂದಿದ್ದರೂ ಆಗದೇ ಹೋಯಿತು! (ಕಾ)
-ಲ ಕಳೆಯುವುದೇ ಬಹು ಕಷ್ಟವಾಯಿತು!
ವೇಷ, ಭೂಷಣಕ್ಕಿಚ್ಛೆಯಿಲ್ಲದಂತಾಯಿತು!(ಹಾ)
-ಳು ಸಂಸಾರ ವ್ಯಾಪಾರ ಸಾಕಾಗಿ ಹೋಯಿತು!
ಜನನ, ಮರಣದಲ್ಲೊದ್ದಾಡಿದ್ದಾಯಿತು! (ಚಿ)
-ನ್ಮಯನ ದರ್ಶನದಾಸೆ ಬಲಯಾಯಿತು! (ಎ)
-ದ್ದಿಂದು ದಾರಿ ನಡೆವುದೇ ತ್ರಾಸವಾಯಿತು!
ದುರ್ದೆವ ದೂರ ಸರಿದಂತೆ ಭಾಸಾಯಿತು!
ಫಲಿಸುತಿದೆ ಭಕ್ತಿಯೆಂಬರಿವಾಯಿತು ! (ಕಾ)
-ಲಿನಲ್ಲಿ ನವ ಚೈತನ್ಯೋದಯವಾಯಿತು!
ಸಿಹಿಯೂಟ ಪ್ರಸಾದಲಾಭವುಂಟಾಯಿತು! (ಇಂ)
-ತು ನಿರಂಜನಾದಿತ್ಯನೊಡಗೂಡ್ಯಾಯಿತು!!!
-ತ್ಮೀಯರಿಗಾಡಂಬರವಿಲ್ಲ! (ಭ)
-ಯ, ಭಕ್ತಿಯುತರವರೆಲ್ಲ!
ರೂಢಿಯೇ ಪ್ರಾಮುಖ್ಯವರ್ಗಲ್ಲ!
ರಗಳೆ ಮಾಡ್ವವರವ್ರಲ್ಲ! (ದೈ)
-ವ ಗುರುವೇ ಅವರಿಗೆಲ್ಲ!
ರಂಗಿನ ಮಾತವರ್ಗ್ಬೆಕಿಲ್ಲ!
ತಪ್ಪು ಹುಡ್ಕುವವರವ್ರಲ್ಲ! (ಬ)
-ಲ್ಲ ನಿರಂಜನಾದಿತ್ಯನೆಲ್ಲ!!!
-ಣ್ಣು ಜಾತಿಯವ ನೀನಾಗು ಬಾಯಿ!
ತಿನ್ನುತ್ತ ತೃಪ್ತ ನೀನಾಗು ಬಾಯಿ! (ಹೊ)
-ನ್ನು ಬೇಡೆನ್ನುವವನಾಗು ಬಾಯಿ! (ದೇ)
-ವ ಭಾವ ಕೇಳ್ವವನಾಗು ಬಾಯಿ! (ಭ)
-ವ ದುಃಖ ಸಾಕೆನ್ವವ್ನಾಗು ಬಾಯಿ!
ನಾಮ ಭಜ್ನೆ ಮಾಡ್ವವ್ನಾಗು ಬಾಯಿ!
ಗುರುಗಾಗುಣ್ಣುವವ್ನಾಗು ಬಾಯಿ!
ಬಾಯ್ಮುಚ್ಚಿರುವವನಾಗು ಬಾಯಿ! (ತಾ)
-ಯಿ, ನಿರಂಜನಾದಿತ್ಯನಾಗ್ಬಾಯಿ!!!
ಪರೀಕ್ಷೆ ಫಲತಾಂಶ ತಿಳ್ಸಿಲ್ಲ! (ನಿ)
-ರೀಕ್ಷಿಸಿದಂತೆ ಅದಾಗಲಿಲ್ಲ! (ದೀ)
-ಕ್ಷೆಯುಪಯೋಗ ಮಾಡಿಕೊಂಡಿಲ್ಲ! (ವಿ)
-ಫಲರಾದೆವೆಂದೀಗಳ್ಬೇಕಿಲ್ಲ! (ಪಾ)
-ಲಿಸ್ಬೇಕು ಹಿರಿಯರಾಜ್ಞೆಯೆಲ್ಲ! (ಚಿಂ)
-ತಾಂಬುಧಿಯಿಂದೆದ್ದು ಬನ್ನಿರೆಲ್ಲ!
ಶಕ್ತಿವಂತರಾಗ್ಬೇಕ್ಮಕ್ಕಳೆಲ್ಲ!
ತಿರುಗಾಟ ಸುಖಪ್ರದವಲ್ಲ! (ಉ)
-ಳಿಸ್ಕೊಳ್ಬೇಕು ಸ್ಥಾನ, ಮಾನವೆಲ್ಲ! (ಪು)
-ಲ್ಲ ನಿರಂಜನಾದಿತ್ಯಗಾಗ್ಯೆಲ್ಲ!!!
-ಳಿತಲ್ಲಿಗೀಗ ನುಗ್ಗಿ ಬಂತಾ ಮಳೆ! (ಬಾ)
-ಯೊಣಗಿದ್ದಾಗ ಬೇಕಾಗಿತ್ತಾ ಮಳೆ! (ಮೃ)
-ಡನಿಚ್ಛಾನುಸಾರೋಡಿ ಬಂತಾ ಮಳೆ! (ಗಂ)
-ಗೂ ತಾಯಿಯ ದಿವ್ಯ ಸ್ವರೂಪಾ ಮಳೆ! (ಗ)
-ಡಿಬಿಡಿಯಾದ್ರೂ ಹಿತಕಾರೀ ಮಳೆ!
ಬಂದಂತೆ ಹೊರಟು ಹೊಯ್ತೀಗಾ ಮಳೆ!
ತೀರ್ಥಾನುಗ್ರಹಾದ್ಮೇಲಿನ್ನೇಕಾ ಮಳೆ? (ರಂ)
-ಗನಾಥನ ಶ್ರೀಪಾದ ತೀರ್ಥಾ ಮಳೆ!
ಮಲಿನವೆಲ್ಲಾ ತೊಳೆಯಿತಾ ಮಳೆ! (ಮ)
-ಳೆ, ನಿರಂಜನಾದಿತ್ಯಾನಂದಾ ಮಳೆ!!!
ಮಂಕ್ತಿಮ್ನಿಂದ್ಮಹತ್ಕಾರ್ಯ ಮಾಡ್ಸಯ್ಯಾ! (ಭ)
-ಕ್ತಿಯೋಗವಾಗಬ್ಬೆಯಾಗ್ವುದಯ್ಯ! (ಕಾ)
-ಮ್ನಿಂದೆಲ್ಲಾ ಕುಲಗೆಡ್ತಿದೆಯಯ್ಯಾ! (ಪ)
-ದ್ಮನಾಭಗಾವುದಸಾಧ್ಯವಯ್ಯಾ?
ಹಗ್ಲಿರ್ಳುರುಳ್ಯರ್ವತ್ನಾಲ್ಕಾಯ್ತಯ್ಯಾ! (ಸ)
-ತ್ಕಾರ್ಯಕ್ಕಾನಾದ್ರ ತೋರ್ಬಾರದಯ್ಯಾ! (ಆ)
-ರ್ಯರುಕ್ತ್ಯನುಭವವಾಗ್ಬೇಕಯ್ಯಾ!
ಮಾತ್ಮಾತ್ರದಿಂದೇನೂ ಸಾಗದಯ್ಯಾ! (ಬಿ)
-ಡ್ಸದಿರ್ನಿನ್ನ ಭಜನೆಯನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯ ಶರ್ಣಯ್ಯಾ!!!
-ಲಿಯಾದ್ರೂ ಕಾಪಾಲಿಯಾದಾಗ ಅಗ್ಗ! (ಗಂ)
-ಗೆಯಾದ್ರೂ ಅಂಗಳಕ್ಕೆ ಬಂದಾಗಗ್ಗ! (ದ)
-ಯಾನಿಧಿಯೂ ದರಿದ್ರನಾದಾಗಗ್ಗ! (ನಿ)
-ದ್ರೆಯಲ್ಲಿದ್ದಾಗ ಸುಭದ್ರೆಯೂ ಅಗ್ಗ!
ಸರ್ವೊತ್ತಮನೂ ಜೀವಾತ್ಮಾದಾಗಗ್ಗ!
ಲಕ್ಷ್ಮಿಯಾದ್ರೂ ಅಲಕ್ಷ್ಯವಾದಾಗಗ್ಗ!
ಗರುಡನೂ ಹರಿ ಕೈ ಬಿಟ್ಟಾಗಗ್ಗ! (ಆ)
-ವೂರಾದ್ರೂ ಮಖೆ, ಬೆಳೆ ಹೋದಾಗಗ್ಗ!
ಅಮೃತಾನ್ನವೂ ಹಳಸಿದಾಗಗ್ಗ! (ಜ)
-ಗ್ಗ, ನಿರಂಜನಾದಿತ್ಯನಾಗನಗ್ಗ!!!
-ರದಿರು ನಿರಾಶೆಯಿಂದಲನುಜಾ! (ನಾ)
-ಳಿನ ಹಣ್ಣಿಂದಿನ ಹೀಚು ತನುಜಾ! (ಕಾ)
-ಯಬೇಕೆಚ್ಚರದಿಂದದ ಮನುಜಾ! (ರ)
-ತ್ನಕ್ಕಾಗಿ ಪ್ರಯತ್ನಿಸಬೇಕನುಜಾ! (ಶಿ)
-ವನಿಚ್ಛೆಯಂತಾಗ್ಲೆಂದು ಮಾಡ್ತನುಜಾ!
ಮಾಯದ್ಹುಣ್ಣೆಣ್ಣೆಯಿಲ್ಲದೆ ಮನುಜಾ! (ಮಾ)
-ಡು ಶ್ರದ್ಧೆಯಿಂದೆಲ್ಲಾ ಕೆಲಸನುಜಾ! (ನೇ)
-ಮ, ನಿಷ್ಠೆ ಜಯಕ್ಕಗತ್ಯ ತನುಜಾ! (ಹ)
-ನುಮಂತನಾದರ್ಶ ಬೇಕು ಮನುಜಾ! (ನಿ)
-ಜಾನಂದ ನಿರಂಜನಾದಿತ್ಯನುಜಾ!!!
-ರಮಾತ್ಮ ನೀನಲ್ಲದಾರು ಗುರುದೇವಾ? (ದಾ)
-ರಿ ತೋರಬಾರದೇ ವರ ಗುರುದೇವಾ? (ಭಾ)
-ವ ಶುದ್ಧವಾಗುವುದೆಂತು ಗುರುದೇವಾ? (ಕ)
-ರೆದರೂ ಬರಬಾರದೇ ಗುರುದೇವಾ? (ನ)
-ನ್ನಭೀಷ್ಟ ಸಿದ್ಧಿಪುದೆಂದು ಗುರುದೇವಾ?
ಕರಮುಗಿದ್ಪ್ರಾರ್ಥಿಪೆನು ಗುರುದೇವಾ! (ದು)
-ಷ್ಟತನವೆನ್ನಲ್ಲೇನಿದೆ ಗುರುದೇವಾ? (ಮ)
-ಗು ನಾನಲ್ಲವೇ ನಿನಗೆ ಗುರುದೇವಾ? (ಇ)
-ರುತಿರುವೆ ನಿನಗಾಗಿ ಗುರುದೇವಾ! (ಇಂ)
-ದೇ ಹೋಗಲೆನ್ನ ದುಃಖಸದ್ಗುರುದೇವಾ! (ದೇ)
-ವಾ ನಿರಂಜನಾದಿತ್ಯ ಮಹಾನುಭಾವಾ!!!
ಬಿತ್ತೊಂದು ಮಾಲೆ ಕತ್ತಿಗಿಂದು! (ಹ)
-ತ್ತೊಂಭತ್ತೆಪ್ಪತ್ತೊಂದಿಸ್ವಿಯಂದು! (ಇಂ)
-ದು ಆಷಾಢ ದ್ವಾದಶಿಯಂದು!
ಮಾಯಾನಂದಾತ್ಮಾನಂದಾದಂದು! (ಲೀ)
-ಲೆಯವನದದ್ಭುತವಂದು!
ಕರಾದಿಂದ್ರ್ಯಕ್ಕೆ ಸಾಕ್ಷ್ಯಾದಂದು! (ಹ)
-ತ್ತಿರ, ದೂರಗಳೊಂದಾದಂದು! (ಆ)
-ಗಿಂದಾಗಂತರ್ಮುಖವಾದಂದು! (ಇಂ)
-ದು, ನಿರಂಜನಾದಿತ್ಯಾದಂದು!!!
-ಕ್ಕರೆ ಹಾಲು ಧ್ಯಾನಮಿಂಚಕ್ಕಾ! (ಉ)
-ಣ್ಣಬೇಕಿದಾನಂದದಿಂದಕ್ಕಾ!
ನೊಸಲ್ಗಣ್ಣನಿಷ್ಟವಿದಕ್ಕಾ! (ನಿ)
-ಕ್ಕದಿದು ಸಾಮಾನ್ಯರಿಗಕ್ಕಾ! (ಹೊ)
-ಣೆಗಾರನೆಲ್ಲಕ್ಕವನಕ್ಕಾ! (ಆ)
-ಯಿಬಿಟ್ಟಾಡುವವನಲ್ಲಕ್ಕಾ! (ಮ)
-ದನಾರಿಯೆಂಬರವನಕ್ಕಾ! (ಅ)
-ಕ್ಕಾ, ನಿರಂಜನಾದಿತ್ಯಾತಕ್ಕಾ!!!
ಗಾಳಿಯಲ್ಲಿದೆ ಕಂಪು ಜಾಜಿಯದೆಲ್ಲಾ! (ಬೆ)
-ಳಿಗ್ಗಿನ ವೇಳೆಗದು ಹೊಂದಿಹುದಲ್ಲಾ!
ಬಲವರ್ಧಕ ಮನಕಾಗಿಹುದಲ್ಲಾ! (ಹ)
-ರುಷ ನಿತ್ಯಕರ್ಮಕ್ಕಾಗಿದೆಯಲ್ಲಾ!
ತತ್ವ ಗೀತಾಗಾನ ಕೇಳುತಿದೆಯಲ್ಲಾ! (ಮಾ)
-ಲಿಕನ ದಯೆಯಿಂದಿದಾಗಿಹುದಲ್ಲಾ! (ಎ)
-ದೆಯೊಳಗವ ವಾಸವಾಗಿಹನಲ್ಲಾ! (ಉ)
-ಮೆಯೊಡಗೂಡ್ಯಾನಂದದಿಂದಿಹನಲ್ಲಾ! (ಒ)
-ಲ್ಲನವನೀಗನ್ಯ ವಿಚಾರವನ್ನೆಲ್ಲಾ! (ದ)
-ಮೆ, ಶಮಯಿಂದ ಶಕ್ತನಾಗಿಹನಲ್ಲಾ! (ಘು)
-ಲ್ಲಾ ನಿರಂಜನಾದಿತ್ಯನಿಷ್ಟವಿದೆಲ್ಲಾ!!!
ವ್ಯರ್ಥವೆಲ್ಲಾ, ಸಂಸಾರದಲ್ಲರ್ಥವಿಲ್ಲಾ! (ಸ್ವಾ)
-ರ್ಥ ವಿಷಯಾಸೆಯಿಂದಾಯ್ತನರ್ಥವೆಲ್ಲಾ! (ಸೇ)
-ವೆ ಪರಮಾರ್ಥವರಿತಾಗುತ್ತಲಿಲ್ಲಾ! (ಸ)
-ಲ್ಲಾಪನ್ಯರ ಮೇಲಧಿಕಾರಕ್ಕೆಲ್ಲೆಲ್ಲಾ!
ಸಂಪಾದನೆಯಧರ್ಮದಿಂದಲೆಲ್ಲೆಲ್ಲಾ!
ಸಾಧನೆ ಬೋಧನೆಗಾಗುತಿದೆಲ್ಲೆಲ್ಲಾ! (ಹ)
-ರಗಾಗಿ ಮಾರನ ಮರೆತಿರುತ್ತಿಲ್ಲಾ! (ಮಂ)
-ದಮತಿಗಳಿಗಿನ್ನೂ ಬುದ್ಧಿ ಬಂದಿಲ್ಲಾ! (ಬ)
-ಲ್ಲವರ್ಮಾತಿನಲ್ಲೇ ಮುಗಿಸುತ್ತಾರೆಲ್ಲಾ! (ಪಾ)
-ರ್ಥಸಾರಥ್ಯುಪದೇಶದಾಚಾರವಿಲ್ಲಾ!
ವಿಧಿಲಿಪಿಯೆಂದಳುವುದು ಬಿಟ್ಟಿಲ್ಲಾ! (ನ)
-ಲ್ಲಾ ನಿರಂಜನಾದಿತ್ಯನಂತೇಕಾಗಿಲ್ಲಾ???
-ರ್ಶರಿವಿಲ್ಲದಾಗುತ್ತಲಿದೆ! (ಮ)
-ಸುತ್ತಮ ಸ್ಥಿತಿಗೇರ್ತಿದೆ! (ಭ)
-ವಾಭ್ದ್ಯೋದಕ ಕಹಿಯಾಗ್ತಿದೆ!
ಗುರಿಯೇನೆಂಬರಿವಾಗ್ತಿದೆ! (ಉ)
-ತ್ತಮರ ಸಂಗ ಸಿಕ್ಕುತ್ತಿದೆ! (ತ)
-ಲೇಭಾರವಿಳಿಯುತ್ತಲಿದೆ!
ಇದ್ದದ್ರಲ್ಲಿ ತೃಪ್ತ್ಯುಂಟಾಗ್ತಿದೆ! (ಎ)
-ದೆ ನಿರಂಜನಾದಿತ್ಯಾಗ್ತಿದೆ!!!
-ತಿ, ನೀತಿಯಿಂದ ಕಾರ್ಯ ಮಾಡಯ್ಯಾ! (ಧ)
-ನ, ಧಾನ್ಯ ಧರ್ಮದಿಂದಾರ್ಜಿಸಯ್ಯಾ!
ಮನಕಿದು ಶಾಂತಿಪ್ರದವಯ್ಯಾ! (ಅ)
-ಲ್ಲಸಲ್ಲದಾಲಾಪ ವ್ಯರ್ಥವಯ್ಯಾ!
ನಾಚಿಕೆ ಬಿಟ್ಟು ದಾಸನಾಗಯ್ಯಾ! (ರಾ)
-ಗ, ದ್ವೇಷಕ್ಕೆಡೆಗೊಡಬೇಡಯ್ಯಾ!
ಬೇಟೆ ದುಷ್ಟ ಮೃಗದ್ದಾಗಲಯ್ಯಾ! (ಮೃ)
-ಡನ ಕೃಪೆಯಿದಕೆ ಬೇಕಯ್ಯಾ! (ಅ)
-ಯ್ಯಾ ನಿರಂಜನಾದಿತ್ಯವನಯ್ಯಾ!!!
-ಧಿಕಾರಿಯಾದಾಗನ್ಯಾಯ ಮಾಡಬೇಡ!
ಕಾಲ, ಕರ್ಮ, ಧರ್ಮ, ಮರೆತಿರಬೇಡ!
ರಕ್ಕಸರನ್ನೊಕ್ಕಲಿಕ್ಕದಿರಬೇಡ! (ಬೆ)
-ಕ್ಕಾಗಿ, ಬೆಕ್ಕೆಗೀಡಾಗಿ ಹಾಳಾಗಬೇಡ!
ಗಿರಿಧರನಾದರ್ಶ ಬಿಟ್ಟಿರಬೇಡ!
ಅನಾಥರಿಗನಾಶ್ರಯನಾಗಬೇಡ! (ಕಿ)
-ಳು, ಮೇಲೆಂಬಹಂಕಾರಿ ನೀನಾಗಬೇಡ! (ಹ)
-ತ್ತಿ, ಕುಳಿತ ಪೀಠದಿಂದುರಳಬೇಡ! (ವ)
-ರ ಗುರುಸೇವೆಯನ್ನೆಂದೂ ಬಿಡಬೇಡ! (ಕು)
-ಬೇರನಾದ್ರೂ ಕೌರವನಂತಾಗಬೇಡ! (ಮೃ)
-ಡ ನಿರಂಜನಾದಿತ್ಯ ಬಿಟ್ಕೆಡ್ಬೇಡ!!!
ಎಲ್ಲಾ ದೇವರು ಎಲ್ಲೆಲ್ಲೂ ತುಂಬಿಹನು! (ಎ)
-ಲ್ಲಾರಲ್ಲೂ ಸದಾ ಬಂದು, ಹೋಗುತ್ತಿಹನು!
ದೇಶ, ಕಾಲಗಳ ಹಂಗಿಲ್ಲದಿಹನು! (ಅ)
-ವರವರ ಇಷ್ಟಮೂರ್ತಿಯಾಗಿಹನು! (ಉ)
-ರು ಭಕ್ತಿಯ ಕೂಗಿಗೊಳಿಯುತಿಹನು!
ಎಡೆಬಿಡದಾದರವ ನೀನಹನು! (ನ)
-ಲ್ಲೆಯಾಗಿ, ನಲ್ಲನಾಗ್ಯೆಲ್ಲಾ ತಾನಹನು! (ಕೊ)
-ಲ್ಲೂರಮ್ಮ, ಬೇಲೂರಯ್ಯ, ಎಲ್ಲವಹನು!
ತುಂಗೆಯೂ ಅಹನು, ಗಂಗೆಯೂ ಅಹನು!
ಬಿಳಿ, ಕಪ್ಪು, ಕೆಂಪು ಹಳದ್ಯಾದ್ಯಹನು!
ಹರಿ, ಹರ, ಸುರ, ನರರೆಲ್ಲಹನು! (ಅ)
-ನುಪಮ ನಿರಂಜನಾದಿತ್ಯಾಗಿಹನು!!!
ಸಜ್ಜನ ಸಂಗಕ್ಕೆ ಹಾತೊರೆಯಬೇಕು! (ಅ)
-ಜ್ಜ ನೆಟ್ಟಾಲೋಪಕಾರಿಯಾಗಿರಬೇಕು! (ಮ)
-ನ ಬಂದಂತಲ್ಲಿಲ್ಲೋಡಾಡದಿರಬೇಕು!
ಸಂಭಾವನೆಗಾಗ್ಯೇನೂ ಮಡದಿರ್ಬೇಕು! (ಯೋ)
-ಗಕ್ಕಾಗಿ ಸದಾ ತ್ಯಾಗಿಯಾಗಿರಬೇಕು! (ಬೆ)
-ಕ್ಕೆಯ ರೆಕ್ಕೆಗಳ ಹರಿದಿಕ್ಕಬೇಕು!
ಹಾಲಿನಂಥಾ ಶುದ್ಧ ಪ್ರೇಮವಿರಬೇಕು!
ತೊಡರೆಡರುಗಳ್ಗಂಜದಿರಬೇಕು! (ಮ)
-ರೆಯದೇ ಹರಿಭಜನೆ ಮಾಡಬೇಕು!
ಯಮನೂ ರಾಮನಾಗೆಂದರಿಯಬೇಕು!
ಬೇಕಿದಕೆ ಗುರುಕೃಪೆಯೆನಬೇಕು!
ಕುಲ ನಿರಂಜನಾದಿತ್ಯನದ್ದಾಗ್ಬೇಕು!!!
ಗುರುಭಕ್ತಿಯೊಂದು ಮಹದ್ಭಾಗ್ಯ! (ಗು)
-ರುಕೃಪೆಯಿಂದಾಗಬೇಕಾ ಭಾಗ್ಯ!
ಭವಬಂಧಡಗಿಪುದಾ ಭಾಗ್ಯ! (ಯು)
-ಕ್ತಿಯಿಲ್ಲದ ವಿರಕ್ತಿಗಾ ಭಾಗ್ಯ!(ಕಾ)
-ಯೊಂದು ಗುಡಿಯಾದವಗಾ ಭಾಗ್ಯ!
ದುರ್ವಿಷಯ ದೂರನಿಗಾ ಭಾಗ್ಯ!
ಮನ ಮಾಧವಾಗಲಿಕ್ಕಾ ಭಾಗ್ಯ!
ಹಗಲಿರುಳಿರಬೇಕಾ ಭಾಗ್ಯ! (ಸ)
-ದ್ಭಾವ ವೃದ್ಧಿ ಮಾಡುವುದಾ ಭಾಗ್ಯ! (ಯೋ)
-ಗ್ಯ ನಿರಂಜನಾದಿತ್ಯಗೀ ಭಾಗ್ಯ!!!
ವಿದ್ಯಾರ್ಥಿಗೆ ವಿದ್ಯೆಯಲಂಕಾರ! (ಅ)
-ದ್ಯಾತಕ್ಕವನಿಗೆ ದೇಹಾಲಂಕಾರ? (ಪಾ)
-ರ್ಥಿವಶರೀರ ಸ್ಥಿರಾಲಂಕಾರ! (ತೆ)
-ಗೆದಿದ ಪಡೆಯಾತ್ಮಾಲಂಕಾರ!
ವಿಷಯಾನಂದವಲ್ಲಾಲಂಕಾರ! (ವಿ)
-ದ್ಯೆ ನಿತ್ಯಾನಂದಕ್ಕಾದ್ರಲಂಕಾರ? (ಭ)
-ಯ ತಪ್ಪಿಸುವುದೀ ಅಲಂಕಾರ!
ಲಂಕೇಶಗಾಯ್ತೇನೀ ಅಲಂಕಾರ?
ಕಾಮಿಯಾಗಿ ಹಾಳಾಯ್ತಲಂಕಾರ! (ಹ)
-ರ ನಿರಂಜನಾದಿತ್ಯಾಲಂಕಾರ!!!
-ಕ್ತವಕಾಶ ಸಿಕ್ಕಿತಿಂದು! (ನ)
-ರ, ನಾರಿಯರಿಗದಿಂದು! (ಉ)
-ದಾರಿ ಶ್ರೀ ಗುರುವೆಂದೆಂದು!
ಸರ್ವರಾಪ್ತವನೆಂದೆಂದು!
ನಾ, ನೀ ಭೇದವಿಲ್ಲೆಂದೆಂದು!
ನಿಂದ್ಯಾಸ್ತುತ್ಯಾತೀತೆಂದೆಂದು! (ಇ)
-ದು, ನಿರಂಜನಾದಿತ್ಯಂದು!!!
-ದೇನಿತ್ತೋ ಅದೊಂದೇ ಇಂದೂ ಪ್ರೇಮಿ! (ಅ)
-ನುಭವವದೆನಗೆಂದು ಸ್ವಾಮಿ?
ವಿಮುಖನಾಗ್ಬೇಕ್ವಿಷಯಕ್ಪ್ರೇಈ! (ನಾ)
-ಶೇಕಾಗಿಲ್ಲಾ ವಿಷಯಾಸೆ ಸ್ವಾಮಿ?
ಷಡ್ಭುಜೇಶನನ್ನೊಲಿಸು ಪ್ರೇಮಿ!
ಮನವೆಲ್ಲೆಲ್ಲೋಡಾಡ್ತಿದೆ ಸ್ವಾಮಿ! (ದೇ)
-ಹಾನಂದಕ್ಕುಪೇಕ್ಷೆ ಮಾಡು ಪ್ರೇಮಿ!
ಸ್ವಾಮಿಯನುಗ್ರಹವಾಗ್ಲಿ ಸ್ವಾಮಿ! (ಸ್ವಾ)
-ಈ, ನಿರಂಜನಾದಿತ್ಯಾತ್ಮ ಪ್ರೇಮಿ!!!
ಸೂರ್ಯನಾರಾಯಣನಿಗೆ ಧ್ಯಾನಮಿಂಚಿಷ್ಟ! (ಕಾ)
-ರ್ಯ ನಿರ್ವಹಣಾ ಶಕ್ತಿಪ್ರದವಿದೆಂದಿಷ್ಟ!
ನಾನಾರೆಂದರುಹುವಾ ವಾಣಿ ಬಹಳಿಷ್ಟ! (ಆ)
-ರಾಮವಿದರಿಂದನಿತ್ಯ ಜಿವಗೆಂದಿಷ್ಟ! (ಜ)
-ಯವೆಲ್ಲಾ ದೇಶ, ಕಾಲ, ಸ್ಥಿತಿಗಿದೆಂದಿಷ್ಟ! (ಪ್ರಾ)
-ಣ ಬಿಡುವಾಗೀ ನೆನಪಿರಬೇಕೆಂದಿಷ್ಟ!
ನಿತ್ಯಮುಕ್ತನಾಗಲಿಕ್ಕಿದಗತ್ಯೆಂದಿಷ್ಟ!
ಗೆಳೆಯನಿದೆಂದು ಸದಾಕಾಲದಲ್ಲಿಷ್ಟ! (ಸಂ)
-ಧ್ಯಾ ವಂದನಾದಿಗಳ ಸಾರವಿದೆಂದಿಷ್ಟ! (ಅ)
-ನವರತದೂಟದಂತಿದೆಂದವನಿಷ್ಟ!
ಮಿಂದರಾಗುವಾನಂದವಿದರಿಂದೆಂದಿಷ್ಟ! (ಸಂ)
-ಚಿತ ನಾಶವಿದರಿಂದಾಗುವುದೆಂದಿಷ್ಟ! (ಸ್ಪ)
-ಷ್ಟ, ನಿರಂಜನಾದಿತ್ಯೋಕ್ತಿ ಸರ್ವರಿಷ್ಟ!!!
-ರುದೇವನ ಪಾದುಕಾ ರಕ್ಷೆ! (ಎ)
-ಡೆಬಿಡದೆ ಕಾಯ್ವುದಾ ರಕ್ಷೆ! (ಜ)
-ಯಪ್ರದವಾಗಿಹುದಾ ರಕ್ಷೆ! (ಗು)
-ಡಿಯಾಗಿಹ ದೇಹಕ್ಕಾ ರಕ್ಷೆ! (ಈ)
-ಗೊಂದು ಮಹತ್ಕಾರ್ಯಕ್ಕಾ ರಕ್ಷೆ!
ದುಷ್ಟ ದಮನಕ್ಕಾಗೀ ರಕ್ಷೆ (ಸು)
-ರ, ನರರೆಲ್ಲರಿಗಾ ರಕ್ಷೆ! (ರ)
-ಕ್ಷೆ ನಿರಂಜನಾದಿತ್ಯನೀಕ್ಷೆ!!!
ಉತ್ತರಾಧಿಕಾರ್ಯುತ್ತರನಾಗ್ಬಾರದು! (ಮ)
-ತ್ತನಾದವ ಸಿಂಹಾಸನವೇರ್ಬಾರದು!
ರಾಣೀವಾಸದಲ್ಲಿ ಸದಾ ಇರ್ಬಾರದು!
ಧಿಕ್ಕಾರಾರನ್ನೂ ಮಾಡ್ವವನಾಗ್ಬಾರದು!
ಕಾಲು ಕೆದ್ರಿ ಜಗಳಕ್ಕೆ ಹೋಗ್ಬಾರದು! (ವೈ)
-ರುಗ್ರನಾಗಿಹನೆಂದು ಅಂಜಿರ್ಬಾರದು! (ಕ)
-ತ್ತರಿಸದೇ ಅವನನ್ನು ಬಿಡ್ಬಾರದು! (ಶ)
-ರಣಾಗತರನ್ನೆಂದೂ ನೋಯಿಸ್ಬಾರದು!
ನಾಮ ಭಜನೆಯನ್ನುಪೇಕ್ಷಿಸ್ಬಾರದು! (ಹೋ)
-ಗ್ಬಾರದ ಜಾಗಕ್ಕೇನಾದ್ರೂ ಹೋಗ್ಬಾರದು! (ವ)
-ರ ಗುರು ದ್ರೋಹಿಯನ್ನೆಂದೂ ನೊಡ್ಬಾರದು! (ತಿಂ)
-ದು, ನಿರಂಜನಾದಿತ್ಯಗೆ ಕೊಡ್ಬರದು!!!
ದೋಷಕಾರೀ ಮನಸ್ಚಂಚಲ!
ಮಾಧವನೆಂದೆಂದೂ ನಿಶ್ಚಲ! (ಕಾ)
-ಕಾಡಿ, ಬೇಡಿದರೆಲ್ಲಾ ದುಷ್ಛಲ! (ಮು)
-ದ್ದಣ್ಣನಾದರೆಲ್ಲಾ ಸತ್ಫಲ! (ಇ)
-ಕ್ಕೆಂದು ಮಾಡಬೇಡೀಗ ಛಲ!
ದೋಸೆ ತಿಂದು ಬಂದಾಯ್ತು ಮಲ! (ಕ)
-ಫ ಹೆಚ್ಚಾಗ್ಯಾಗಿಹೆ ದುರ್ಬಲ! (ಬಾ)
-ಲ ನಿರಂಜನಾದಿತ್ಯಮಲ!!!
ಕಾರುರುಳಿದಾಗಾರು ಕಾಯ್ದರಮ್ಮಾ? [ಗು]
-ರುದೇವನಲ್ಲದಿನ್ಯಾರು ಮಾಲಮ್ಮಾ? (ಅ)
-ರುಹುವರಾರವನ ಲೀಲೆಯಮ್ಮಾ? (ಬ)
-ಳಿಯಿದ್ದರೂ ನಿರ್ಭಾಗ್ಯರ್ಕಾಣರಮ್ಮಾ!
ದಾರಿ ತಪ್ಪದಂತೆಚ್ಚರಿಪನಮ್ಮಾ!
ಗಾಢ ವಿಶ್ವಾಸವನಲ್ಲಿಡ್ಬೇಕಮ್ಮಾ! (ಇ)
-ರುವನವ ನಿನ್ನಂತರ್ಯಾಮ್ಯಾಗಮ್ಮಾ!
ಕಾಲಾಕಾಲವೆನ್ನದೇ ಧ್ಯಾನಿಸಮ್ಮಾ! (ಕಾ)
-ಯ್ದನಂದು ದ್ರೌಪದಿಯ ಮಾನವಮ್ಮಾ! (ಇ)
-ರಲ್ಯವನ ನೆನಪು ಸತತಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಾನಂದವ್ನಮ್ಮಾ!!!
ನಿನಗದು ತಿಳಿಯದಿಲ್ಲ! (ನಿ)
-ನ್ನ ದರ್ಶನ ನೀ ಮಾಡಿಸಿಲ್ಲ! (ಮ)
-ನೆ, ಮನೆ ನಾನಲೆಯುತ್ತಿಲ್ಲ! (ಜ)
-ನಕೂಟ ನನಗೆ ಬೇಕಿಲ್ಲ!
ಪುರುಷೋತ್ತಮನೆಲ್ಲಾ ಬಲ್ಲ!
ಬಿನ್ನಹವಿನ್ನೇನೂ ಮಾಡೋಲ್ಲ! (ಬಿ)
-ಟ್ಟಿರುವುದೆಂತೆಂದರುಹೆಲ್ಲ! (ನ)
-ಲ್ಲ ನಿರಂಜನಾದಿತ್ಯನೆಲ್ಲ!!!
ನೂರಾರು ನಾಮ ದೇವಗಮ್ಮಾ!
ನೀನಿದರಿತರಾನಂದಮ್ಮಾ!
ನೂಕು, ನುಗ್ಗಲೈಹಿಕವಮ್ಮಾ!
ಒಂದಾಗಿರ್ಪುದೇ ದೈವಿಕಮ್ಮಾ!
ದೇಹ ಭಾವ ಮರೆತಿರಮ್ಮಾ!
ಕಾಲಗಾಗಂಜಬೇಕಿಲ್ಲಮ್ಮಾ! (ಪ್ರಾ)
-ಣ, ಮನವನಿಗರ್ಪಿಸಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಾತಮ್ಮಾ!!!
-ನ್ನ ಸೊತ್ತು ನಾನು ತಮ್ಮಯ್ಯಾ!
ಸೊಗಸೀ ಸಂಬಂಧವಯ್ಯಾ!
-ತ್ತು, ಹುಟ್ಟುವರಾವಲ್ಲಯ್ಯಾ!
ನೀಲಮೇಘ ಶ್ಯಾಮಪ್ಪಯ್ಯಾ! (ಧ)
-ನಲಕ್ಷ್ಮಿಯೇ ನಮ್ಮಮ್ಮಯ್ಯಾ! (ಬ)
-ಣ್ಣ ಬೇರಾದರೇನಾಯ್ತಯ್ಯಾ? (ಅ)
-ಯ್ಯಾ! ನಿರಂಜನಾದಿತ್ಯಯ್ಯಾ!!!
-ಳ್ಳಲ್ಲ, ಹುಡುಕು ನಿನ್ನೊಳಗೇ! (ಮ)
-ನಸಿಜನೆಂಬ ನಾಮವಗೇ! (ಬೇ)
-ಡವನೊಡನಾಟ ನಿನಗೇ! (ಬಾ)
-ಗಿ ತೆರೆದಿಟ್ಟ ಹೊರಗೇ!
ಹಸ್ತ, ಪಾದಗಳಿಲ್ಲವಗೇ!
ನೊಸಲ್ಗಣ್ಣನಿಂದಾದ ಹಾಗೇ! (ಖೂ)
-ಳ ರಕ್ಕಸರ್ಮಿತ್ರರವಗೇ! (ಹಂ)
-ಗೇನು, ನಿರಂಜನಾದಿತ್ಯಂಗೇ!!!
-ನುದಿನ ತಲೆ ಬಿಸ್ಯಾಗೀ ಕಷ್ಟ! (ಹೇ)
-ಸಿಕೆಯ ಸಂಸಾರದಿಂದಾ ಕಷ್ಟ! (ತ)
-ಕ್ಕ ಪರಿಹಾರ ಕಾಣದೇ ಕಷ್ಟ! (ತಂ)
-ದೆ ನೀನಾಗಿರುವಾಗೇಕೀ ಕಷ್ಟ? (ಧ)
-ನಹೀನನಾದೆನೆಂದೆಲ್ಲಾ ಕಷ್ಟ! (ಸಂ)
-ಗಾತಿ ತಿನಾಗದಾಯ್ತೆಲ್ಲಾ ಕಷ್ಟ! (ಹೋ)
-ಯ್ತು ಶಾಂತಿಯಿದರಿಂದಾಗೀ ಕಷ್ಟ!
ಕರುಣೆದೋರಿ ಕಳೆಯೀ ಕಷ್ಟ! (ಶ್ರೇ)
-ಷ್ಟ ನಿರಂಜನಾದಿತ್ಯ ನೀನಿಷ್ಟ!!!
ಧರ್ಮಬದ್ಧವಾದರದುತ್ತಮ ಕ್ರಮ!
ನೆಟ್ಟ ಮನದಿಂದಾದ್ರೆ ಸಫಲಾ ಕ್ರಮ! (ಬಾ)
-ಯೆಂದ ಮಾತ್ರಕ್ಕೆ ಬಾರನಾ ತ್ರಿವಿಕ್ರಮ! (ಇಂ)
-ಬು ದೊರಕುವವರೆಗಾಗ್ಬೇಕಾ ಕ್ರಮ! (ಇಂ)
-ದೊಂದು, ಮತ್ತೊಂದು ತರಾಗ್ಬಾರದಾ ಕ್ರಮ!
ದುಷ್ಟರಿಣಾಮಕಾರೀ ಚಂಚಲ ಕ್ರಮ!
ಜೀವೇಶನಾಗಲ್ಕೆ ಬೇಕಾಜನ್ಮಾ ಕ್ರಮ! (ಭ)
-ವಬಂಧ ನಾಶಕ್ಕಾತ್ಮಸಂಬಂಧಾ ಕ್ರಮ!
ನಡೆ, ನುಡಿಯಲ್ಲೊಂದಾಗಿರ್ಬೇಕಾ ಕ್ರಮ!
ಕ್ರಮ ತಪ್ಪಿದರೆ ವ್ಯರ್ಥಾ ಪರಾಕ್ರಮ! (ಕ್ರ)
-ಮ ನಿರಂಜನಾದಿತ್ಯನದ್ದೊಂದೇ ಕ್ರಮ!!!
ಜೀವನ್ಮುಕ್ತಿಯಪೂರ್ವಾತ್ಮ ಸಿದ್ಧಿ! (ದೇ)
-ವ ತಾನಾಗಿ ಪೂಜ್ಯಾಯೋಗ ಸಿದ್ಧಿ! (ಚಿ)
-ನ್ಮುದ್ರೆಯಲ್ಲಿ ಶೋಭಿಪುದಾ ಸಿದ್ಧಿ! (ಶ)
-ಕ್ತಿಯಿದಕ್ಕೆದುರಿಲ್ಲನ್ಯ ಸಿದ್ಧಿ! (ಕಾ)
-ಯದಭಿಮಾನ ಬಿಟ್ಟರಾ ಸಿದ್ಧಿ!
ಪೂಜಾ ವಿಧಿಯ ಗುರಿಯಾ ಸಿದ್ಧಿ! (ಅ)
-ರ್ವಾಚೀನ ವಿದ್ಯೆಗಾಗದಾ ಸಿದ್ಧಿ! (ಆ)
-ತ್ಮ, ಅನಾತ್ಮ, ಜ್ಞಾನದಿಂದಾ ಸಿದ್ಧಿ! (ಜೈ)
-ಸಿದರಿಂದ್ರ್ಯಂಗಳಾಗ್ವುದೀ ಸಿದ್ಧಿ! (ಸಿ)
-ದ್ಧಿ, ನಿರಂಜನಾದಿತ್ಯಗೀ ಸಿದ್ಧಿ!!!
-ವನೊಲಿಯಲ್ಲಾರ್ಕಂಡೇಯನುಳಿದನಯ್ಯಾ!
ಮುಕ್ತಿದಾತ, ಶಕ್ತಿನಾಥ, ವಿಶ್ವನಾಥಯ್ಯಾ!
ನಿತ್ಯದಲ್ಲವನ ಸೇವೆ ಸಾರ್ಥಕವಯ್ಯಾ!
ದಶಮುಖನ ಭಕ್ತಿಗೆ ಮೆಚ್ಚಿದನಯ್ಯಾ! (ಬೆ)
-ರೆತುಮೆಯರ್ಧನಾರೀಶ್ವರನಾದನಯ್ಯಾ! (ನಿ)
-ಜಭಕ್ತ ಬಸವನೆಂದೊಪ್ಪಿಕೊಂಡನಯ್ಯಾ!
ವರಗುರು ದಕ್ಷಿಣಾಮೂರ್ತಿಯಾದನಯ್ಯಾ! (ನೀ)
-ನೂ, ನಾನೊಂದೆಂದು ಶಂಕರನಾಗ್ಯೆಂದನಯ್ಯಾ!
ಶಶಿಯ ಹೊತ್ತು ಚಂದ್ರಚೂಡನಾದನಯ್ಯಾ! (ಭಾ)
-ವ, ಭಕ್ತಿಯಕ್ಕನ ಚೊಕ್ಕು ಮಾಡಿದನಯ್ಯಾ!
ವರನಸೂಯೆಗಿತ್ತು ದತ್ತನಾದನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾ ಸದ್ಗುರು ಶಿವಯ್ಯಾ!!!
ದುರ್ಬಲಕಾರಿ ಮನಕದೆಲ್ಲಾ! (ಕಾ)
-ಮ ಕಾರಣವೆಂಬೆನಿದಕೆಲ್ಲಾ!
ಬೇಟೆಯಾಡು ವೃತ್ತಿಗಳನೆಲ್ಲಾ! (ಆ)
-ಕಾಶ ಸದೃಶಾಗ ಮನವೆಲ್ಲಾ!
ವೇದಾಂತವಿಂತಾನಂದಿಸಿರೆಲ್ಲಾ! (ವ)
-ಶವಾಗುವುದಾಗ ಲೋಕವೆಲ್ಲಾ!
ವರ ಗುರುವೇ ಆಗ ಎಲ್ಲೆಲ್ಲಾ! (ಮ)
-ನೆ, ಮಠಗಳಾಗ ಜಗವೆಲ್ಲಾ! (ಪು)
-ಲ್ಲಾ ನಿರಂಜನಾದಿತ್ಯ ತಾನೆಲ್ಲಾ!!!
-ಗಲಿರುಳ್ನಿನ್ನ ಧ್ಯಾನ ಸಾಗಲಿ! (ಬ)
-ಲಿದೆನ್ನ ಜನ್ಮ ಪಾವನಾಗಲಿ!
ನಿನ್ನ ಕೀರ್ತಿ ಪತಾಕೆಯೇರಲಿ! (ನ)
-ನ್ನಿಷ್ಟದಂತೆಲ್ಲಾ ಜಯವಾಗಲಿ! (ದು)
-ಷ್ಟರಿಷ್ಟಗಳಡಗಿ ಹೋಗಲಿ! (ಚಿ)
-ದಂಬರಾನಂದವೆನಗಾಗಲಿ!
ತಾಳ್ಮೆ ವಿಫಲವಾಗದಿರಲಿ! (ರಂ)
-ಗನಾಥನೆನ್ನಾಪ್ತನಾಗಿರಲಿ! (ಶೂ)
-ಲಿ ನಿರಂಜನಾದಿತ್ಯನಾಗಲಿ!!!
-ಜೋತ್ಪತ್ತಿ ಕಾರಣಾ ಸೂರ್ಯ! (ವಿ)
-ಮಲ ಗುರುವರಾ ಸೂರ್ಯ!
ಯಮ, ಶನಿಯಯ್ಯಾ ಸೂರ್ಯ!
ನಾಗಬ್ರಹ್ಮಾನಂದಾ ಸೂರ್ಯ! (ಧೈ)
-ರ್ಯ, ಸ್ಥೈರೈ ವೀರ್ಯಾರ್ಯಾ ಸೂರ್ಯ!
ಸೂತ್ರಾತ್ಮ ಸ್ವರೂಪಾ ಸೂರ್ಯ! (ಸೂ)
-ರ್ಯ, ನಿರಂಜನಾದಿತ್ಯಾರ್ಯ!!!
-ರು ಮಾತು ಶಿಷ್ಯನಾಡಬಹುದೇನು?
ಚಪಲಚಿತ್ತನಾಗಬೇಡ ನೀನು! (ಮಾ)
-ರ, ಚೋರರ ಮಾತು ಕೇಳ್ಬೇಡ ನೀನು! (ಹ)
-ಣ, ಕಾಸಿಗೆ ಮರುಳಾಗ್ಬೇಡ ನೀನು! (ಠ)
-ಕ್ಕರ ಸಂಬಂಧ ಬೆಳೆಸ್ಬೇಡ ನೀನು!
ಪರಮಾತ್ಮಗೆ ಶರಣಾಗು ನೀನು! (ಆ)
-ಚಾರವನೊಪ್ಪುವಂತಿರಿಸು ನೀನು! (ಹ)
-ರಕೆಯೊಪ್ಪಿಸಬೇಡಲ್ಲಿಲ್ಲಿ ನೀನು!
ವೇದೋಪನಿಷತ್ಸಾರರಿತಿರು ನೀನು! (ಸೂ)
-ನು ನಿರಂಜನಾದಿತ್ಯಗಾಗು ನೀನು!!!
ತೇಜೋಮಯನ ಮೋಡ ಮುಚ್ಚಿಹುದಯ್ಯಾ! (ನಿ)
-ಜೋಪಯೋಗವನಿಂದೀಗಾಗ್ತಿಲ್ಲವಯ್ಯಾ! (ರಾ)
-ಮನಾಮ ಜಪವೀಗಾಗ್ತಿರಬೇಕಯ್ಯಾ! (ಭ)
-ಯ ನಿವಾರಣೆಯದರಿಂದಾಗ್ವುದಯ್ಯಾ! (ಅ)
-ನವರತವಾ ಹುಚ್ಚು ಹೆಚ್ಚಬೇಕಯ್ಯಾ!
ಮೋಸ ಹೋಗದಿರಬೇಕು ಮಾಯೆಗಯ್ಯಾ! (ಮೋ)
-ಡದಿಂದ ಬಿಡುಗಡೆಯಾಗಬೇಕಯ್ಯಾ! (ಕಾ)
-ಮುಕನಾದರಾವುದೂ ಸಿದ್ಧಿಸದಯ್ಯಾ! (ಸ)
-ಚ್ಚಿದಾನಂದ ಸುಖ ನಿಜ ಗುರಿಯಯ್ಯಾ!
ಹುಸಿಯ್ಯೆಹಿಕಾನಂದವೆಂದರಿಯಯ್ಯಾ!
ದಮೆ, ಶಮೆಯಭ್ಯಾಸ ಮಾಡುತ್ತಿರಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯ ನೀನಾಗಿರಯ್ಯಾ!!!
ಹಸಿದ ಹೊಟ್ಟೆಗೆ ಹಳೆಯ ರೊಟ್ಟಿ! (ಮಾ)
-ಸಿದ ಬಟ್ಟೆಗೆ ಕೊಳೆ ನೀರ ತೊಟ್ಟಿ! (ಇ)
-ದದೆನ್ನದೆಲ್ಲಾ ಜೋಪಾನವಾಗಿಟ್ಟಿ!
ಹೊರಗೊಳಗೆಲ್ಲೆಲ್ಲಾ ನಿನ್ನ ದಿಟ್ಟಿ! (ಕೆ)
-ಟ್ಟೆನೆಂದಾಗನ್ನ, ಬಟ್ಟೆಗಳ ಕೊಟ್ಟಿ!
ಗೆಳೆಯ ನೀನೊಬ್ಬ ಕೋಮಟಿ ಶೆಟ್ಟಿ!
ಹಗಲಿರುಳೆನ್ಗಾಗಿ ಕಷ್ಟ ಪಟ್ಟಿ! (ಮ)
-ಳೆ ಬಂದಾಗ ತೆರೆಯೆಳೆದು ಬಿಟ್ಟಿ! (ಆ)
-ಯ ತಪ್ಪಿದಾಗ ಆದಾಯ ತಂದಿಟ್ಟಿ!
ರೊಚ್ಚಿಗೆದ್ದವರ ಕೆಚ್ಚ ಕೊಚ್ಚಿಟ್ಟಿ! (ಶೆ)
-ಟ್ಟಿ, ನಿರಂಜನಾದಿತ್ಯ ಬಲು ಗಟ್ಟಿ!!!
ಯೋಗ್ಯತೆ ತೋರಿ ಭಾಗ್ಯವಂತನಾಗಯ್ಯಾ! (ನೀ)
-ಗ್ಯನುಮಾನ ಗಟ್ಟಿ ಮನದಿಂದೋದಯ್ಯಾ!
ತೆರೆವುದಾಗ ಜಯದ ಬಾಗಿಲಯ್ಯಾ!
ತೋರೀಗ ನಿನ್ನ ಧೈರ್ಯ, ಸ್ಥೈರ್ಯಗಳಯ್ಯಾ!
ರಿಪು ಭಯಂಕರನೆನಿಸಬೇಕಯ್ಯಾ!
ಭಾರತಾಂಬೆಯಾದರ್ಶ ಮಗನಾಗಯ್ಯಾ! (ಕೂ)
-ಗ್ಯವಳ ಪುಣ್ಯನಾಮ ಗಣ್ಯನಾಗಯ್ಯಾ!
“ವಂದೇ ಮಾತರಂ” ಆಚರಿಸಿ ತೋರಯ್ಯಾ!
ತರಣಿಯೆಂತಿಹನೆಂದರಿತ್ಯೇನಯ್ಯಾ?
ನಾನಾ ಜಾತಿ, ಮತ ಸಮನ್ವಯನಯ್ಯಾ!
ಗತಿ, ಸ್ಥಿತಿಯಲ್ಲನುಪಮವನಯ್ಯಾ! (ಅ)
ಯ್ಯಾ! ನಿರಂಜನಾದಿತ್ಯ ನೀನೀಗಾಗಯ್ಯಾ!!!
-ಷ್ಟ, ನಿಷ್ಟೂರ ಸಹಿಸುವವನಾಗಬೇಕು!
ದರಿದ್ರರಿಗನುಕಂಪ ತೋರಿಸಬೇಕು!
ಮದ, ಮತ್ಸರಾದಿಗಳಿರದಿರಬೇಕು! (ಮ)
ನಸ್ಸಿಗೆಂದೂ ಸ್ವತಂತ್ರ ಕೊಡದಿರಬೇಕು! (ತ)
-ಕ್ಕ ವಿವೇಕದಿಂದೆಲ್ಲಾ ಕಾರ್ಯ ಮಾಡಬೇಕು! (ಅ)
-ಧಿಕಾರ ದುರುಪಯೋಗಾಗದಿರಬೇಕು!
ಕಾಳಸಂತೆರಳನ್ನಡಗಿಸಲೇ ಬೇಕು! (ಸ)
-ರಕಾರ ಸತ್ಯನಿಷ್ಠೆಯುಳ್ಳದ್ದಾಗಬೇಕು!
ಬದಲಾವಣೆ ಆಗಾಗಾಗದಿರಬೇಕು!
ಲಕ್ಷ್ಯ ವಿಶ್ವಕಲ್ಯಾಣದೆಡೆಗಿರಬೇಕು!
ಬೇಸಾಯಕ್ಕೆಲ್ಲೆಲ್ಲೂ ಬೆಂಬಲವಿರಬೇಕು!
ಕುಲಗುರು ನಿರಂಜನಾದಿತ್ಯನಾಗ್ಬೇಕು!!!
ಮಾಲಿಕಾ! ನಾ ನಿನ್ನ ಸಮಕಾಲಿಕಾ! (ಒ)
-ಲಿದು ಸ್ವೀಕರಿಸಬೇಕೀ ಮಾಲಿಕಾ!
ಕಾಮ ವೈರಿ ನೀನೆನ್ನ ಕಾಪಾಲಿಕಾ!
ನಾನಿನ್ನಚ್ಚುಮೆಚ್ಚಿನುಮಾ ಬಾಲಿಕಾ!
ನಿನ್ನ ಹೊರತೆನಗಾರು ರಕ್ಷಕಾ? (ನಿ)
-ನ್ನರಸಿಯೆಂದೆನ್ನಪ್ಪಿಕೋ ನಾಯಕಾ!
ಸಕ್ಕುಮಾರನೆಮಗೆ ವಿನಾಯಕ! (ರಾ)
-ಮನಾಮ ನಮ್ಮಿಬ್ಬರಿಗೂ ಹಾರ್ದಿಕಾ!
ಕಾಪಾಡೀಡೇರಿಸೆನ್ನಿಷ್ಟ ಕೋರಿಕಾ! (ನಿ)
-ಲಿಸಿಕೊಳ್ಳೆನ್ನನೊಳಗಾಂತರಿಕಾ!
ಕಾಪಾಲಿ ನಿರಂಜನಾದಿತ್ಯಾತ್ಮಿಕಾ!!
-ನ್ನೂರು ಕಡೆ ನೋಡದೇ ನಡೆ! (ಗು)
-ರುಮಂತ್ರ ಜಪಿಸುತ್ತ ನಡೆ!
ಕಲ್ಲು, ಮುಳ್ಳಿಗಂಜದೇ ನಡೇ! (ಒ)
-ಡೆಯ ರಕ್ಷಿಪನೆಂದು ನಡೆ!
ನೀರ್ಗುಳ್ಳೆಈ ಬಾಳೆಂದು ನಡೆ! (ಅ)
-ನುಭವಿಯಾಗಿ ಮುಂದೆ ನಡೆ! (ಮ)
-ನಕತಿಶಯಾನಂದಾ ನಡೆ! (ನ)
-ಡೆ, ನಿರಂಜನಾದಿತ್ಯನೆಡೆ!!!
ಅಂದು ಹಾರ ಹಾಕಿಸಿಕೊಂಡಾ ಗಂಡ! (ಇಂ)
-ದು ಹಾರ ಹಾಕಿ ನಿಂತು ಬೇಡಿಕೊಂಡ!
ಹಾರಾಟವಾರಿಗೂ ಬೇಡವೆಂದ್ಕೊಂಡ! (ಪ)
-ರಮಾರ್ಥಿಯೇ ನಿತ್ಯ ಸುಖಿಯೆಂದ್ಕೊಂಡ! (ದೇ)
-ಹಾಭಿಮಾನವಿರಬಾರದೆಂದ್ಕೊಂಡ!
ಕಿರುಕುಳ ಸಂಸಾರ ಸಾಕೆಂದ್ಕೊಂಡ! (ಘಾ)
-ಸಿಯಾಗುವುದಜ್ಞಾನದಿಂದೆಂದ್ಕೊಂಡ!
ಕೊಂದಿಕ್ಕಬೇಕರಿಗಳನ್ನೆಂದ್ಕೊಂಡ! (ದುಂ)
-ಡಾವರ್ತನೆಯಿರಬಾರದೆಂದ್ಕೊಂಡ!
ಗಂಡಾಗುಂಡಿಯಿಂದಶಾಂತಿಯೆಂದ್ಕೊಂಡ! (ಗಂ)
-ಡ ನಿರಂಜನಾದಿತ್ಯಾದರ್ಶದ್ಕೊಂಡ!!!
ಆದಿತ್ಯಾಮೃತ ಧನ್ವಂತರೀ ಕೃಪೆಯಿಂದಯ್ಯಾ! (ಹ)
-ದಿನಾಲ್ಕು ಲೋಕಕ್ಕಿದಾಧಾರವಾಗಿರ್ಪುದಯ್ಯಾ! (ಸ)
-ತ್ಯಾಸತ್ಯ ಅನುಭವದಿಂದರಿಯಬೇಕಯ್ಯಾ! (ಅ)
-ಮೃತ ಸಮಾನವಿದೆಲ್ಲಾ ರೋಗಗಳಿಗಯ್ಯಾ! (ಸ)
-ತತವಿದರ ಉಪಯೋಗ ಮಾಡಬೇಕಯ್ಯಾ!
ಧರ್ಮ, ಕರ್ಮದ ಸಾರವಿದರಲ್ಲಿಹುದಯ್ಯಾ! (ಮ)
-ನ್ವಂತರದಿಂದಲೂ ಇದಕ್ಕೆ ಪ್ರಾಶಸ್ತ್ಯವಯ್ಯಾ!
ತಪ್ಪು ಮಾಡಿ ಕಪ್ಪು ಬಳ್ಕೊಂಡರಾರ ತಪ್ಪಯ್ಯಾ? (ಪ)
-ರೀಕ್ಷೆಯಲ್ಲಿ ಜಯ ಭಕ್ತಿ, ವಿಶ್ವಾಸದಿಂದಯ್ಯಾ!
ಪೆತ್ತ ತಾಯಿಗೆರಡೆಣಿಸಬಹುದೇನಯ್ಯಾ? (ಬಾ)
-ಯಿಂದೆಷ್ಟುಪಚಾರ ಹೇಳಿದರೂ ವ್ಯರ್ಥವಯ್ಯಾ! (ಸ)
-ದಮಲಾಂತಃಕರಣದಿಂದ ಸೇವೆ ಮಾಡಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾನಂದ ಅಮೃತವಯ್ಯಾ!!!
ದುಷ್ಟ ವೈರಿಗಳಿಂದ ದೂರರಸ!
ರಂಜಿಸ್ಬೇಕ್ತನ್ನವರನ್ನೀಗರಸ!
ಗಡಿಬೆಡಿಗೈದರಾಗ್ದೀಗರಸ!
ಬಹ್ಳೆಚ್ಚರವಾಗಿರ್ಬೇಕೀಗರಸ! (ಅ)
-ಲಕ್ಷ್ಯದಿಂದ ಪದಚ್ಯುತನರಸ!
ದೊಡ್ಡಸ್ತಿಕೆ ಬಿಡಬೇಕೀಗರಸ! (ಒ)
-ಳ, ಹೊರ ನೋಡ್ಯಾಳಬೇಕೀಗರಸ! (ರಂ)
-ಗನಾಥಗೀಗಾಳಾಗಬೇಕೆರಸ! (ವ)
-ರಗುರು ಅವನೆನಬೇಕರಸ! (ದಾ)
-ಸ ನಿರಂಜನಾದಿತ್ಯನಿಗರಸ!!!
ಕೈ, ಕಾಲು ಸ್ವಾಧೀನವಿಲ್ಲವಿದಕಪ್ಪಾ!
ಕಾಪಾಡಬೇಕು ದಯದೋರಿ ನೀನಪ್ಪಾ! (ಬ)
-ಲುಕಷ್ಟವಿದರ ನಿತ್ಯ ಜೀವನವಪ್ಪಾ!
ಸ್ವಾಮಿಯಡಿಗಿದನೊಪ್ಪಿಸಿಹೆನಪ್ಪಾ! (ಅ)
-ಧೀಶ ನೀನೀರೇಳು ಲೋಕಗಳಿಗಪ್ಪಾ!
ನನಗಿನ್ನಾವ ದಾರಿಯೂ ತೋರದಪ್ಪಾ!
ವಿವೇಕಶೂನ್ಯ ನಾನಾಗಿರುವೆನಪ್ಪಾ! (ಬ)
-ಲ್ಲವ ನೀನೆಂದು ಶರಣಾಗಿಹೆನಪ್ಪಾ!
ವಿಷಯ ವಾಸನೆನ್ನಿಂದ ತೆಗೆಯಪ್ಪಾ! (ಮಂ)
-ದಭಾಗ್ಯ ನಾನಾದೆನೀ ಜಗದಲ್ಲಪ್ಪಾ!
ಕಲ್ಯಾಣ ನಿನ್ನಿಂದೆಲ್ಲಾ ಜೀವರಿಗಪ್ಪಾ!
-ಪ್ಪಾ! ನಿರಂಜನಾದಿತ್ಯಾನಂದ ನೀನಪ್ಪಾ!!!
ಸದ್ಗುರು ಕೃಪಾ ಪಾತ್ರಾ ಚಿತ್ರ! (ಮ)
-ದ್ಗುರು ಶಿವ ಪ್ರಸಾದಾ ಚಿತ್ರ! (ಗು)
-ರಚರಣಕ್ಕರ್ಪಣಾ ಚಿತ್ರ! (ಸು)
-ಕೃತಶಾಲೀ ಸುಂದರ ಚಿತ್ರ!
ಪಾದದಡಿ ಶಯನಾ ಚಿತ್ರ!
ಪಾಪದೂರಾತ್ಮಾನಂದಾ ಚಿತ್ರ! (ನೇ)
-ತ್ರಾನಂದದಾಯಕವಾ ಚಿತ್ರ!
ಚಿರಕಾಲವಿರ್ಪುದಾ ಚಿತ್ರ! (ಮಿ)
-ತ್ರ, ನಿರಂಜನಾದಿತ್ಯಾ ಚಿತ್ರ!!!
-ಧಾರಣೆಗೆ ಯೋಗ್ಯ ವ್ಯವಸ್ಥೆ ಮಾಡಿ!
ವಿದ್ಯಾರ್ಥಿಗಳನ್ನೆತ್ತಿ ಕಟ್ಟಬೇಡಿ! (ಸಂ)
-ಗವೆಂತಿರ್ಬೆಕೆಂದುಪದೇಶ ಮಾಡಿ! (ಆ)
-ಳಬಲ್ಲವರಿಗಾಡಳಿತ ನೀಡಿ! (ಹೊ)
-ನ್ನು, ಮಣ್ಣಿಗಾಗಿ ಹೊಡೆದಾಡಬೇಡಿ! (ಮಾ)
-ತು ಕಮ್ಮಿಮಾಡಿ ದೇಶಸೇವೆ ಮಾಡಿ! (ಗೂ)
-ಳಿ ಕಾಳಗದ ಬಾಳ ಗೋಳು ಬೇಡಿ! (ನ್ಯಾ)
-ಯ ಸಮ್ಮತಾಚಾರದಿಂದೊಡಗೂಡಿ!
ಬೇಜವಾಬ್ದಾರಿಯಿಂದೇನೂ ಮಾಡ್ಬೇಡಿ! (ಪಾ)
-ಡಿ ನಿರಂಜನಾದಿತ್ಯ ಪೂಜೆ ಮಾಡಿ!!!
ದುಡ್ಡು ಕೊಟ್ಟು ಗೊಡ್ಡೆಮ್ಮೆ ತರುವುದೇನಯ್ಯಾ? (ಜ)
-ಡ್ಡು ಹಿಡಿದವ್ಗೆ ಮಗಳ ಕೊಡ್ವುದೇನಯ್ಯಾ?
ಕೊಲೆಗೆಡುಕಗಾಶ್ರಯ ನೀಡ್ವುದೇನಯ್ಯಾ? (ಹೊ)
-ಟ್ಟು ಬೆರೆಸಿದಕ್ಕಿ ಮಾರಬಹುದೇನಯ್ಯಾ?
ಗೊಬ್ಬರ ಹಾಕದೇ ಅದೆಂಥಾ ಬೇಸಾಯಯ್ಯಾ? (ಗೆ)
-ಡ್ಡೆ, ಗೆಣಸು ಗುಡ್ಡದ ಮೇಲಾದೀತೇನಯ್ಯಾ? (ಹೆ)
-ಮ್ಮೆಯಿಂದ ಕಾರ್ಯ ಸಾಧನೆಯಾದೀತೇನಯ್ಯಾ?
ತಪಸ್ವಿಯ ತಾತ್ಸಾರ ಮಾಡಬಾರದಯ್ಯಾ! (ಗು)
-ರುವಚನಕ್ಕಿನ್ನಾದರೂ ಬೆಲೆ ಕೊಡಯ್ಯಾ! (ಬೇ)
-ವು ಬಿತ್ತಿ ಮಾವಿನಹಣ್ಣಿನಾಸಿ ಬೇಡಯ್ಯಾ!
ದೇವರ ಸೇವೆಗುದಾಸೀನ ಮಾಡ್ಬೇಡಯ್ಯಾ! (ಕ)
-ನಸಿನ ಗಂಟನ್ನು ನಂಬಿ ಕೆಡಬೇಡಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನ ನಂಬಿ ಬಾಳಯ್ಯಾ!!!
-ನಗಳನೇನೇನೂ ಯಾಚಿಸುವ! (ಅ)
-ವರಿವರ ಕೈ, ಕಾಲ್ಕಟ್ಟಿಸುವ! (ಅ)
-ನೇಕ ಜನರೊಟ್ಟು ಸೇರಿಸುವ!
ನೇತೃ ನಾನಾದೆಂದು ಘೋಷಿಸುವ! (ಮ)
-ನೋಜಯವಿಲ್ಲದೆಲ್ಲಾಶಿಸುವ!
ಯೋಚಿಸಿದ್ದಾಗದೆ ದುಃಖಿಸುವ! (ವಂ)
-ಚಿತನಾದೆನೆಂದು ಚಿಂತಿಸುವ!
ಸುತ್ತಿ, ಗುರುಪಾದ ಸೇವಿಸುವ! (ಜೀ)
-ವ, ನಿರಂಜನಾದಿತ್ಯೆನಿಸುವ!!!
ಜಯಿಸಲನ್ಯಾಯವನ್ನು ಬಂದ! (ತಾ)
-ಯಿಯಾಜ್ಞಾ ಪಾಲನೆಗಾಗಿ ಬಂದ!
ಯಾದವೇಂದ್ರನಾಪ್ತನಾಗಿ ಬಂದ! (ಭೋ)
-ಗಿಸಲು ಪ್ರಾರಬ್ಧವನ್ನು ಬಂದ!
ಕುರುವಂಶ ನಾಶಕ್ಕಾಗಿ ಬಂದ! (ಉ)
-ಮಾಪತಿಯ ವರಕ್ಕಾಗಿ ಬಂದ! (ಸು)
-ರಪತಿಯ ಮಗನಾಗಿ ಬಂದ! (ಸಂ)
-ಬಂಧಿ ಶ್ರೀ ಕೃಷ್ಣನಿಗಾಗಿ ಬಂದ! (ನಂ)
-ದ ನಿರಂಜನಾದಿತ್ಯೆಂದು ಬಂದ!!!
ಜಾತಿ, ಮತ, ಭೇದ ನಿನಗೇಕೋ ನಾಯಕಾ? (ನಿ)
-ತಿ, ರೀತಿಯಲ್ಲಿ ಶುದ್ಧ ನೀನಾಗೋ ನಾಯಕಾ!
ಮದ್ಯಪಾನದಿಂದ ಮತಿಗೇಡೋ ನಾಯಕಾ!
ತಪ್ಪಿ ನಡೆದರಪ್ಪನೊಪ್ಪನೋ ನಾಯಕಾ!
ಭೇದಿಸಿ ಕತ್ತಲೆಯಿಂದಿತ್ತ ಬಾ ನಾಯಕಾ! (ಉ)
-ದಯ ರವಿಯಂತೆ ಪ್ರಕಾಶಿಸೋ ನಾಯಕಾ!
ನಿನ್ನಾತ್ಮ ಸರ್ವಾತ್ಮನೆಂದರಿಯೋ ನಾಯಕಾ! (ಅ)
-ನವರತ ಗುರು ಧ್ಯಾನ ಮಾಡೋ ನಾಯಕಾ!
ಗೇರ್ಬಿಜದಂತವನಿಗಂಟಿರೋ ನಾಯಕಾ
ಕೋಪ ಬಿಟ್ಟಿವನಿಷ್ಟದಂತಿರೋ ನಾಯಕಾ! (ಅ)
-ನಾದರಾರಿಗೂ ತೋರಬೇಡವೋ ನಾಯಕಾ!
ಯಮ ಹೆಡತಲೆಯಲ್ಲಿಹನೋ ನಾಯಕಾ!
ಕಾಯುತಿಹಾ ನಿರಂಜನಾದಿತ್ಯ ನಾಯಕಾ!!!
ನೇತ್ರ ನೋಟಕ್ಕಾಶಿಸದಿಂದು!
ನಾಲಿಗೆ ರುಚಿ ಕೇಳದಿಂದು!
ನಾಸಿಕ ಮೂಸಿ ನೋಡದಿಂದು! (ಅಂ)
-ಗಿ ಬೇಡಾಗಿಹುದಂಗಕಿಂದು! (ಇ)
-ಹೆನು ಕಿವಿ ಕುವುಡಾಗಿಂದು!
ನಾನಾ ಮಾತ ಬಾಯಾಡದಿಂದು!
ನಿಂತೆದ್ದು ಕಾಲ್ಕೈ ಮಾಡದಿಂದು! (ಇಂ)
-ದು ನಿರಂಜನಾದಿತ್ಯಾನೆಂದು!!!
ಮುಂದೆ, ಮುಂದೆ, ಮುಂದ್ಮುಂದೆ ನಾ ನಡೆದೆ! (ಹಿಂ)
-ದೆ, ಹಿಂದೆ, ಹಿಂದ್ಹಿಂದೆ, ನೀನಡಗಿದೆ!
ಮುಂದೇನೆಂದ್ಯೋಚಿಸದೇ ನಾ ನಡೆದೆ! (ತಂ)
-ದೆ ನೀನೆನ್ನಿಂದ ದೂರಾಗ್ಯಡಗಿದೆ!
ಮುಂದಾವ ದಾರಿಯನ್ನೂ ಕಾಣದಾದೆ! (ಕಾ)
-ದ್ಮುಂದೇನೆಂದು ನಾ ನಿನ್ನ ಪ್ರಾರ್ಥಿಸಿದೆ! (ತಂ)
-ದೆ ನಿನ್ನಿಂದುತ್ತರ ಪಡೆಯದಾದ!
ನಾನಿನ್ನರಸೀಗ ಬಂದವನಾದೆ! (ಕಾ)
-ನನದಲ್ಲಿ ಭಯಪಟ್ಟವನಾದೆ! (ಓ)
-ಡೆ, ನಿನ್ನ ಶ್ರೀಪಾದ ಕಂಡವನಾದೆ! (ನಿಂ)
-ದೆ, ನಿರಂಜನಾದಿತ್ಯನಲ್ಲೊಂದಾದೆ!!!
ಹಿಂದೆ, ಹಿಂದೆ, ಹಿದ್ಹಿಂದೇ ನಾ ಬಂದೆ! (ಮುಂ)
-ದೆ, ಮುಂದೆ, ಮುಂದ್ಮುಂದೇ ನೀ ನಡೆದೆ!
ಹಿಂದೆ, ಮುಂದೆಯ ಮಧ್ಯ ನಾ ನಿಂದೆ! (ಹಿಂ)
-ದೆಯೇ ಬಾರೆಂದು ಹೋದೆ ನೀ ಮುಂದೆ!
ಹಿಂದಿರುಗಿ ನೋಡದೇ ನೀನ್ಹೋದೆ! (ಹಿಂ)
-ದ್ಹಿಂದೇ ನಾ ನಡೆದೀಗ ಸುಸ್ತಾದೆ!
ದೇಹಾರೋಗ್ಯವಿಲ್ಲದವನಾದೆ!
ನಾನಿನ್ನಿಂದೀಗ್ಬಹು ದೂರವಾದೆ!
ಬಂದುದ್ಧರಿಸೆಂದಳ್ವವನಾದೆ! (ತಂ)
-ದೆ ನಿರಂಜನಾದಿತ್ಯ ನೀನ್ಬಂದೆ!!!
ಗಂಡ ನಂಜುಂಡ ಹಾರ ಹಾಕ್ಸಿಕೊಂಡ! (ದಂ)
-ಡಪಾಣಿಗೆ ತಂದೆ ತಾನೆನ್ಸಿಕೊಂಡ!
ನಂದಿವಾಹನನೆಂದೆನಿಸಿಕೊಂಡ! (ನಂ)
-ಜುಂಡು ಭೂಮಂಡಲೇಶನೆನ್ಸಿಕೊಂಡ! (ಕ)
-ಡಲೊಡೆಯನಾಪ್ತನೆನಿಸಿಕೊಂಡ! (ಮ)
-ಹಾಮಾಯೆಗೀಶ್ವರನೆನಿಸಿಕೊಂಡ! (ವ)
-ರ ಗುರುದತ್ತನಲ್ಲೊಂದಾಗಿಕೊಂಡ!
ಹಾವುಗಳನ್ನೇ ಹಾರ ಮಾಡಿಕೊಂಡ! (ಹಾ)
-ಕ್ಸಿ ಭಿಕ್ಷೆಯ ಕಾಪಾಲಿಯೆನ್ಸಿಕೊಂಡ!
ಕೊಂದಸುರರಸುರಾರ್ಯೆನ್ಸಿಕೂಂಡೆ! (ಮೃ)
-ಡ ನಿರಂಜನಾದಿತ್ಯನೆನ್ಸಿಕೊಂಡ!!!
ಕಾಲ ಬರುವ ತನಕ ಕಾಲ ಕಳೆವುದೆಂತು? (ಫ)
-ಲ ಕಾಣದಿದ್ದರೆ ಧರ್ಮ, ಕರ್ಮ, ಸಾಗುವುದೆಂತು?
ಬರಡಾಕಳ ಸಾಕಿ ತೃಪ್ತಿಯಿಂದಿರುವುದೆಂತು? (ಕ)
-ರುಣೆಯಿಲ್ಲದ ನಲ್ಲನೊಡನಿರುವುದದೆಂತು?
ವರಿಸಿದ ಮೇಲೆ ಸೇವೆ ಮಾಡದಿರುವುದೆಂತು?
ತತ್ವವೇತ್ತ ಕತ್ತೆಯಾದರೆ ಮುಕ್ತನಾಗ್ವುದೆಂತು?
ನರ, ನಾರಾಯಣನಲಕ್ಷಿಸಿದ್ರೊಪ್ಪವುದೆಂತು?
ಕರ, ಚರಣವಿಲ್ಲದೆ ಕರ್ತವ್ಯ ಮಾಳ್ಪುದೆಂತು?
ಕಾಮ ಹೋಗದೆ ಶ್ರೀರಾಮ ವಿರಾಜಿಸುವುದೆಂತು?
ಲಕ್ಷ್ಯೈಹಿಕಕ್ಕಾದರೆ ಪರಲೋಕ ಪ್ರಾಪ್ತಿಯೆಂತು?
ಕಟ್ಟಿ ಹಾಕಿದರೆ ಇಷ್ಟಸಿದ್ಧಿಯಾಗುವುದೆಂತು? (ಮ)
-ಳೆ ಬೀಳದಿದ್ದರೆ ಬೆಳೆ ಬೆಳೆಸುವುದದೆಂತು? (ಕೀ)
-ವು ಹೋಗದಿದ್ದರೆ ಬಾವು ಬತ್ತುವ ಬಗೆಯೆಂತು? (ಒಂ)
-ದೆಂಬರಿವಾಗದಿದ್ದ್ರದ್ವೈತವನ್ನೊಪ್ಪವುದೆಂತು? (ಹೇ)
-ತು, ನಿರಂಜನಾದಿತ್ಯನ ಪ್ರಾರ್ಥಿಸಬೇಕು ನಿಂತು!!!
-ನ್ನ ತಾ ಜೈಸಿ ಸರಿಪಡಿಸ್ಬೇಕ್ಬಾಳ!
ತಾಪಸೋತ್ತಮನಾರನ್ನೇನೂ ಕೇಳ! (ಅ)
-ನಾವಶ್ಯವಾಗಿ ಯಾರಿಗೇನೂ ಹೇಳ! (ಆ)
-ಳ ತಿಳಿಯದೇ ಹಾಕ್ಬಾರದು ಗಾಳ! (ಅಂ)
-ದ ಚಂದ ಕ್ಷಣಕಾಲದೊಂದು ಮೇಳ! (ಭಾ)
-ವ, ಭಕ್ತಿ ಗಾನಕ್ಕಿರಬೇಕು ತಾಳ! (ಅ)
-ನ್ಯ ವ್ಯವಹಾರದ ರೂಪ ಕರಾಳ! (ವ)
-ರ ಗುರು ಹೃದಯ ಸದಾ ಧಾರಾಳ! (ಮ)
-ನ್ನಾಥನಾಥನಾಥ ದತ್ತ ಕೃಪಾಳ! (ಬೋ)
-ಳ, ನಿರಂಜನಾದಿತ್ಯ ಬಲ್ಲನಾಳ!!!
-ಮ್ಮ ಸ್ವಾರ್ಥಕ್ಕಾಗಿಹದು ದುರ್ಮತ!
ತರಣಿ ಮತ ಲೋಕೈಕ ಮತ!
ಮದ, ಮತ್ಸರಕ್ಕಾಗಲ್ಲ ಮತ! (ಆ)
-ತ, ಈತೆನ್ನದಭೇದಕ್ಕೆ ಮತ!
ಧರ್ಮವಿದಾದರಾದರ್ಶ ಮತ! (ಕ)
-ರ್ಮವಿದಕ್ಕಾದರದೊಳ್ಳೇ ಮತ!
ಸಹಜಾನಂದವೀವುದೀ ಮತ! (ಅ)
-ಮ್ಮ, ಬೊಮ್ಮರೊಂದೆಂಬುದಿದೇ ಮತ! (ಮ)
-ತ, ನಿರಂಜನಾದಿತ್ಯಗೀ ಮತ!!!
-ವೆ ಶಕ್ತಿಗಾಗಿ ಮಾಡ್ಬೇಕಮ್ಮಾ!
ಗಾಢ ವಿಶ್ವಾಸವಿರ್ಬೇಕಮ್ಮಾ! (ಈ)
-ಗಿನದ್ದೀಗಲೇ ಆಗ್ಬೇಕಮ್ಮಾ!
ಶಶಿ, ಸೂರ್ಯರೆಂತಿರ್ಬೇಕಮ್ಮಾ! (ಶ)
-ಕ್ತಿ, ಸೇವೆಗಳಿಂತನ್ಯೋನ್ಯಮ್ಮಾ!
ಬೇಕು ಗುರುಕೃಪೆಯಿದ್ಕಮ್ಮಾ!
ಕರ್ಮಕ್ಕೆ ತಕ್ಕ ಫಲವಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಾಗಮ್ಮಾ!!!
ಪರಮಾತ್ಮನಾಗ್ಯೆಲ್ಲೆಲ್ಲೂ ಇದ್ದಾನಪ್ಪಾ!
ಸೇವೆಯವನದೇಕೆ ಮಾಡಬೇಕಪ್ಪಾ? (ಶಾ)
-ಶ್ವತ ಸುಖಾನುಭವಿಯಾಗಲಿಕ್ಕಪ್ಪಾ! (ವ)
-ರ ಪ್ರಸಾದನುಗ್ರಹಿಸುವನೇನಪ್ಪಾ?
ನೆನಪವನದಿದ್ರೆಲ್ಲಾ ಸಿಗ್ವುದಪ್ಪಾ! (ಅ)
-ಲ್ಲಿ, ಇಲ್ಲಿ, ಹೇಗಿಹನೆಂದು ಧ್ಯಾನಿಸ್ಲಪ್ಪಾ!
ಗಿಡ, ಮರಾದಿಗಳೂ ಅವನೇನಪ್ಪಾ?
ಹದಿನಾಲ್ಕು ಲೋಕದೆಲ್ಲವೂ ಅವನಪ್ಪಾ!
ನಮ್ಮೆಲ್ಲರ ನಿಜರೂಪವನೇನಪ್ಪಾ? (ಅ)
-ಪ್ಪಾ! ನಿರಂಜನಾದಿತ್ಯಾ ತಾಪಸಿಯಪ್ಪಾ!!!
ಕಟ್ಟಿಕೊಟ್ಬುತ್ತಿ, ಹೇಳಿಕೊಟ್ಬುದ್ಧ್ಯೆಷ್ಟು ದಿನ? (ಹು)
ಟ್ಟಿ, ಸಾಯ್ವವರೆಗ್ಬಿಡದು ಕರ್ಮ ಜೀವನ!
ಕೊಳೆಯಾದಾಗೆಲ್ಲಾ ತೊಳೆಯಬೇಕ್ವಸನ! (ಕೆ)
ಟ್ಟುದ್ಧಿ ಹುಟ್ಟಡಗದಿದ್ರಾಗದು ಪಾವನ! (ಸು)
ತ್ತಿ, ಬೇಸತ್ತರಾಗವುದು ವ್ಯರ್ಥ ಜೀವನ! (ದೇ)
ಹೇಚ್ಛೆ ಬಿಟ್ಟರಾಗುವುದಮೃತ ಪ್ರಾಶನ! (ನ)
ಳಿನನಾಭನ ಭಜನೆ ಜನ್ಮ ಪಾವನ!
ಕೊಲಲ್ಜೀವ ಭಾವವಿದೊಳ್ಳೆಯ ಸಾಧನ! (ಜು)
ಟ್ಬುಡ ಸಹಿತ ಕೀಳದಾಗದು ಮುಂಡನ! (ವ)
ಧ್ಯೆ, ಮೋಹ, ಮಾಯೆಂದರಿತ್ಕೊಲ್ಬೇಕು ಕಾಮನ! (ನಿ)
ಷ್ಟುರ ಸ್ವಭಾವದಿಂದಾಗ್ವುದಧಃಪತನ!
ದಿನ, ರಾತ್ರಿ, ಮನನ ಮಾಡ್ಬೇಕ್ಗುರ್ವಚನ!
ನರನಾಗ ನಿರಂಜನಾದಿತ್ಯ ಚೇತನ!!!
ಸದಾ ಮನಕೇನಾದರೊಂದು ಯೋಚನಾ!
ನಾನೀ ಶರೀರವೆಂಬ ತಪ್ಪು ಭಾವನಾ!
ಹೊಲ, ಮನೆ ಸಂಪಾದಿಸುವ ಕಾಮನಾ! (ಛ)
-ಲದಿಂದನ್ಯರ ಪೀಡಿಸುವ ಜೀವನಾ!
ಸುಖವಿಲ್ಲೆಂದಳುವನು ಪ್ರತಿದಿನಾ!
ವಿಚಾರವಿಲ್ಲದಾಗುತಿದೆ ಪತನಾ!
ಷಡ್ರಿಪುಗಳ ಕಾಟದಿಂದೀ ಬಂಧನಾ! (ಕಾ)
-ಯಾಭಿಮಾನ ಬಿಟ್ಟು ಮಾಡನುಪಾಸನಾ!
ವಾಸುದೇವನಲ್ಲದಾರ್ಕಾಯ್ಬೇಕಾತನಾ?
ಸತ್ಯವಿದೆಂದು ನಂಬಿ ಮಾಡ್ಬೇಕ್ಭಜನಾ! (ಜ)
-ನಾರ್ಧನಾ, ನಿರಂಜನಾದಿತ್ಯ ದೇವನಾ!!!
ಗಂಗೆಯರಸಗೆ ಮಂಗಳಾರತಿಯೆತ್ತು! (ಹೋ)
-ಗೆ ಹೊರಗಿನ್ನೆಂದು ನಮಸ್ಕರಿಸಿ ಎತ್ತು! (ಭ)
-ಯದ ಬಹಿರ್ವ್ಯಾಪಾರ ಸಾಕೆನಗೆಂದೆತ್ತು! (ನಿ)
-ರತ ನಿನ್ನ ಸೇವೆಗೆನ್ನನಿರಿಸೆಂದೆತ್ತು!
ಸರ್ವಾಪರಾಧ ನೀ ಕ್ಷಮಿಸೆಂದದನ್ನೆತ್ತು! (ಹಂ)
-“ಗೆನಗೇನನ್ಯರದು” ನೀನಿರಲೆಂದೆತ್ತು!
ಮಂಗಳ ಸರ್ವಮಂಗಳೆಗೆ ಮಾಡೆಂದೆತ್ತು! (ಸಂ)
-ಗ ನಿನ್ನದಾದರದೇ ಸತ್ಸಂಗವೆಂದೆತ್ತು! (ಮಾ)
-ರಹರ ಮಹೇಶ್ವರ ನೀನೆಂದದನ್ನೆತ್ತು! (ಪ)
-ತಿಯೇ ಪರದೈವವೆನಗೆಂದದನ್ನೆತ್ತು! (ಮಾ)
-ಯೆಯೆಂದಾಡಿಸಬೇಡ ನೀನೆನ್ನನೆಂದೆತ್ತು! (ಚಿ)
-ತ್ತು, ನಿರಂಜನಾದಿತ್ಯ ನಿನಗಿಲ್ಲೆಂದೆತ್ತು!!!
ಗುರುವಾದ ಗೀತೋಪದೇಶದಿಂದಪ್ಪಾ! (ಕು)
-ರುವಂಶವನ್ನು ಧ್ವಂಸ ಮಾಡಿದನಪ್ಪಾ!
ಕೂಡಾಡ್ಗೋವಳರ ಗೆಳೆಯನಾದಪ್ಪಾ!
ದರಿದ್ರ ಸುಧಾಮನ ಪೊರೆದನಪ್ಪಾ! (ಬಾ)
-ಲಲೀಲೆಯಿವನದವರ್ಣನೀಯಪ್ಪಾ! (ಕೂ)
-ರಂಬಿಗೀಡಾಗಿ ಲೀಲೆ ಮುಗಿಸಿದಪ್ಪಾ! (ವಂ)
-ಗದೇಶೋದ್ಧಾರಕ್ಕಾಗೀಗ ಬರಲಪ್ಪಾ!
ನಿಶಿ, ದಿನಾಗ್ತಿದೆ ಘೋರ ಮಾರಣಪ್ಪಾ! (ಅ)
-ವರಿಗಾಗ್ವನ್ಯಾಯಕ್ಕೆ ಮಿತಿಯಿಲ್ಲಪ್ಪಾ! (ದೀ)
-ನಬಂಧುವೆಂಬ ನಾಮನ್ವರ್ಥವಾಗ್ಲಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯಾ!! ದಯೆದೋರಪ್ಪಾ!!!
ಮಮತಾ ಬಂಧದಿಂದಿರುವೆ!
ಜೀವನ ಸರಳಾಗಿರುವೆ!
ವಿಚಾರರಿಯದಾಗಿರುವೆ!
ನೀರ್ಮೆಲ ಗುಳ್ಳೆಯಂತಿರುವೆ!
ನಾಮ ಪ್ರೇಮವಿಲ್ಲದಿರುವೆ!
ಗಿರಿಧರಾತ್ಮನಾಗಿರುವೆ! (ಅ)
-ರುಚಿ, ಅಶುಚ್ಯೆನ್ನದಿರುವೆ! (ಸೇ)
-ವೆ ನಿರಂಜನಾದಿತ್ಯಗೆನ್ವೆ!!!
ನೊಣಗಳನ್ನೂ ಆಹುತಿ ತಗೊಳ್ತಿರುವೆ! (ದಿ)
-ಬ್ಬಣದ ಮೆರವಣ್ಗಿಯಂತೆ ಹೋಗ್ತಿರುವೆ!
ಪಡ್ಬಾರದ ಕಷ್ಟಕ್ಕಾದ್ರೂ ಅಂಜದಿರುವೆ! (ವ)
-ರ ಗಿರಿ ಶಿಖರವಾದ್ರೂ ಹತ್ತುತಿರುವೆ!
ಮನೆಮನೆಯಲ್ಲೂ ಕಾಣ್ಸಿಕೊಳ್ಳುತ್ತಿರುವೆ!
ಸಾವು, ನೋವುಗಳ ಭಯವಿಲ್ಲದಿರುವೆ!
ಹಸಿ, ಒಣಗಿದ್ದೆನ್ನದೆ ತಿನ್ನುತ್ತಿರುವೆ!
ಸಿರಿವಂತರು, ಬಡವರೆನ್ನದಿರುವೆ!
ಯಾವಾಗಲೂ ಕರ್ತವ್ಯ ಮಾಡುತ್ತಲಿರುವೆ!
ಗಿಡ, ಮರಗಳಲ್ಲೂ ಓಡಾಡುತ್ತಿರುವೆ! (ಹು)
-ರುಪು ನಿನ್ನದು ಅನುಪಮವಾಗಿರುವೆ! (ಸೇ)
-ವೆ, ನಿರಂಜನಾದಿತ್ಯಗಾಗಿ ಮಾಡ್ತಿರುವೆ!!!
-ಳೇ ವಾಸನೆಯ ಫಲವೀ ರುಚಿ!
ಕಾಲ, ಲೀಲೆಯಿಂದಾಯ್ತೆಲ್ಲಾ ರುಚಿ! (ಬಾ)
-ಯ್ಬಾಯ್ಬಿಡುತಿರುವುದೀಗಾ ರುಚಿ! (ಒ)
-ಳ, ಹೊರಗೆಲ್ಲಾ ವಿಷಯ ರುಚಿ!
ಕಷ್ಟಕ್ಕೀಡು ಮಾಡಿಹುದಾ ರುಚಿ!
ಬಹು ಜನ್ಮಕ್ಕೆ ಕಾರಣಾ ರುಚಿ!
ಹುಸಿಯ ನಿಜವೆಂಬುದಾ ರುಚಿ! (ಗು)
-ರು ಸ್ಮರಣೆ ಮರೆಸ್ವುದಾ ರುಚಿ! (ರು)
-ಚಿ, ನಿರಂಜನಾದಿತ್ಯತೀ ರುಚಿ!!!
-ಮ್ಮನಿಷ್ಟಾನುಸಾರ ವರ್ತಿಸಯ್ಯಾ! (ಕಾ)
-ದಿರವಳಾಜ್ಞೆಗನುದಿನಯ್ಯಾ! (ತಾ)
-ಯಿಂದಧಿಕ ದೈವ ಬೇರಿಲ್ಲಯ್ಯಾ!
ದಿವ್ಯ ಭಾವ ಬಲಿಸು ನೀನಯ್ಯಾ! (ಪ)
-ರಮಾನಂದಾನುಭವ ವಾಗ್ವುದಯ್ಯಾ!
ಬೇಸರವಿಲ್ಲದಭ್ಯಾಸ ಮಾಡಯ್ಯಾ!
ಕೇನೋಪನಿಷತ್ಸಾರವಿದಯ್ಯಾ!
ನರಜನ್ಮೇಂದ್ರ್ಯ ಸುಖಕ್ಕಲ್ಲಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನಮ್ಮಯ್ಯಾ!!!
ದಯವಾಣೀ, ನಯವಾಣ್ಗೀರ್ವಾಣಿ! (ಜ)
-ಯವಾಣೀ, ವಿಜಯವಾಣ್ಗೀರ್ವಾಣಿ! (ಜೀ)
-ವಾತ್ಮವಾಣೀ, ಅಂತರ್ವಾಣ್ಗೀರ್ವಾಣಿ! (ವಾ)
-ಣೀ ವಾಣೀ, ಆಕಾಶವಾಣ್ಗೀರ್ವಾಣಿ!
ರಾಮವಾಣೀ, ಶ್ಯಾಮವಾಣ್ಗೀರ್ವಾಣಿ! (ಫ)
-ಣೀಶವಾಣೀ, ಯಶವಾಣ್ಗೀರ್ವಾಣಿ!
ಗೀತಾವಾಣೀ, ಸತ್ಯವಾಣ್ಗೀರ್ವಾಣಿ! (ಸ)
-ರ್ವಾತ್ಮವಾಣೀ, ನಿತ್ಯವಾಣ್ಗೀರ್ವಾಣಿ! (ವಾ)
-ಣಿ, ನಿರಂಜನಾದಿತ್ಯಾ ಗೀರ್ವಾಣಿ!!!
ಚಂದ್ರಯಾತ್ರೆಯದೊಂದದ್ಭುತ ಸಾಹಸ! (ಭ)
-ದ್ರವದರಿಂದಾಗದಿಳೆಯ ನಿವಾಸ! (ಮಾ)
-ಯಾ ಜೀವನುದ್ಧಾರ ಕರ್ತ ಶ್ರೀನಿವಾಸ! (ಪಾ)
-ತ್ರೆಯಶುದ್ಧಗೊಳಿಸುವುದೀ ಪ್ರವಾಸ! (ಕಾ)
-ಯದಭಿಮಾನ ಬಿಟ್ಟಾಗಬೇಕು ದಾಸ!
ದೊಂಬಿ, ದರೋಡೆಯಿಂದ ಬಹಳಾಯಾಸ!
ದತ್ತ ಕೃಪೆಯಿಂದಾಗ್ವುದು ನಿರಾಯಾಸ! (ಅ)
-ದ್ಭುತದಾತ್ಮಾನುಭವಕ್ಕಾಗ್ಬೇಕಭ್ಯಾಸ!
ತತ್ತಬಡಿಕನಾದರದೊಂದಾಭಾಸ!
ಸಾಧು, ಸಜ್ಜನರದ್ದಾಗ್ಬೇಕ್ಸಹವಾಸ!
ಹಗಲಿರುಳಪ್ಪನ ಧ್ಯಾನ ಶ್ರೇಯಸ!
ಸದ್ಗುರು ನಿರಂಜನಾದಿತ್ಯ ಸರ್ವೆಶ!!!
ಸಹನೆಯಿಂದ ಸದಾ ಸಂತುಷ್ಟ!
ಹಠ ಸಾಧನೆಯಿಂದ ಸಂಕಷ್ಟ! (ಮ)
-ನೆಮನೆ ಸುತ್ತಾಟತಿ ನಿಕೃಷ್ಟ! (ತಾ)
-ಯಿಂದಾಗದೆಂದೆಂದಿಗೂ ಅನಿಷ್ಟ!
ದತ್ತ ಕಳೆವನೆಲ್ಲಾ ಅರಿಷ್ಟ!
ಪಾದಸೇವೆ ಸದಾ ಸರ್ವೊತ್ಕೃಷ್ಟ!
ರತಿಪತಿಯಿಷ್ಟ ಬಹು ಕಷ್ಟ!
ನಳಿನಸಖನೆಲ್ಲರಾಪ್ತೇಷ್ಟ! (ಶ್ರೇ)
-ಷ್ಟ, ನಿರಂಜನಾದಿತ್ಯಾನಂದೇಷ್ಟ!!!
-ದಮ್ಮಯ್ಯರೈಕ್ಯವಾಗಬೇಕಪ್ಪಾ!
ವೀತರಾಗನಾಗಿರಬೇಕಪ್ಪ! (ಸ್ವ)
-ಧರ್ಮನಿಷ್ಠೆಯಿಂದಿರಬೇಕಪ್ಪಾ! (ವ)
-ರಗುರು ಸೇವೆ ಮಾಡಬೇಕಪ್ಪಾ!
ನಾಮಜಪಿಯಾಗಿರಬೇಕಪ್ಪಾ! (ಸಂ)
-ಗ ಸಜ್ಜನರಿದ್ದಿರಬೇಕಪ್ಪಾ!
ಬೇರೆ ಹವ್ಯಾಸ ಬಿಡಬೇಕಪ್ಪಾ!
ಕರಗತವಾಗ ಕೈವಲ್ಯಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯನದಪ್ಪಾ!!!
ಕೈವಲ್ಯ ಪದವಿ ಯಾವುದು ಸ್ವಾಮಿ? (ಭ)
-ವಬಂಧ ಹರಿದರಾಗ್ವುದು ಕಾಈ! (ಬಾ)
-ಲ್ಯದಿಂದಭ್ಯಾಸವಾಗ್ಬೇಕಲ್ವೇ ಸ್ವಾಮಿ?
ಪರಮಾತ್ಮ ಭಕ್ತಿ ಪ್ರಾಮುಖ್ಯ ಕಾಈ! (ಪ)
-ದವಿಗೆ ಕಾಲಾವಧಿಯೆಷ್ಟು ಸ್ವಾಮಿ?
ವಿಧಿಗೂ ತಿಳಿಯದಾ ಕಾಲ ಕಾಈ! (ಮಾ)
-ಯಾತೀತನಾಗಬೇಕಲ್ಲವೇ ಸ್ವಾಮಿ! (ಯಾ)
-ವುದರಾಸೆಯೂ ಇರ್ಬಾರದು ಕಾಈ!
ದುಃಖ ಸಹಿಸುವುದು ಹೇಗೆ ಸ್ವಾಮಿ?
ಸ್ವಾಮಿ ಕೃಪೆಯಿಂದದು ಸಾಧ್ಯ ಕಾಈ! (ಸ್ವಾ)
-ಈ, ನಿರಂಜನಾದಿತ್ಯ ತಾನೇ ಸ್ವಾಮಿ!!!
ಸೆರೆ ಜೀವಗಿದರಿಂದಯ್ಯಾ!
ಗಂಗಾಧರನ ಭಜಿಸಯ್ಯಾ!
ತ್ಯಜಿಸೆಲ್ಲಾಸೆಗಳನ್ನಯ್ಯಾ!
ವಿಚಾರಾತ್ಮನದ್ದು ಮಾಡಯ್ಯಾ!
ದೆವ್ವಗಳೇನೂ ಮಾಡವಯ್ಯಾ (ಕಾ)
-ಯೇಚ್ಛೆಯಿಂದೆಲ್ಲಾ ಕಷ್ಟವಯ್ಯಾ!
ನಮಿಸು ಗುರುಪಾದಕ್ಕಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾಪ್ತಯ್ಯಾ!!!
ಆಗತಕ್ಕದ್ದಾಗುತ್ತಿರಲು ನಿನಗೇಕೆ ಜಂಭ?
ಗಣನಾಯಕ ತಾನಾಗಿರುತಿಹನು ಹೇರಂಬ!
ತನ್ನ ಚಿತ್ತಕ್ಕೆ ಬಂದಾಗ ಮಾಡನವ ವಿಳಂಬ! (ಅ)
-ಕ್ಕ ಪಕ್ಕದವರೇನಾಡಿದರೇನು ನನಗೆಂಬ! (ಗು)
-ದ್ದಾಡಿ, ಒದ್ದಾಡಿ, ಭೋಗಿಸಿರೀಗ ಪ್ರಾರಬ್ಧವೆಂಬ!
ಗುರು ವಚನ ರುಚಿಯಾಗದೀಗವರಿಗೆಂಬ! (ಸು)
-ತ್ತಿ, ಬೇಸತ್ತು ಸುಸ್ತಾದಾಗನಾಥ ನಾನಾದೆನೆಂಬ! (ಪ)
-ರಮಾರ್ಥಿಯಿದನರಿತಲಿಪ್ತನಾಗಬೇಕೆಂಬ! (ಬ)
-ಲು ಕಷ್ಟವೀಸಿ ಪಾರಾಗಲೀ ಸಂಸಾರಾರ್ಣವೆಂಬ!
ನಿನ್ನ ನೀ ತಿಳಿದಾತ್ಮಾನಂದದಲ್ಲಿರು ನೀನೆಂಬ! (ಮ)
-ನಸೇಂದ್ರಿಯಗಳಾಟಕ್ಕೆ ಮರುಳಾಗಬೇಡೆಂಬ!
ಗೇಲಿಗೀಡಾಗುವೆ ನೀನು ಈ ದುಸ್ಸಂಗದಿಂದೆಂಬ!
“ಕೆಟ್ಟಮೇಲ್ಬುದ್ಧಿ, ಅಟ್ಟಮೇಲ್ಸಿದ್ಧಿ” ಯೆಂಬರಿವೆಂಬ!
ಜಂಗಮ, ಸ್ಥಾವರಗಳೆಲ್ಲಾ ಮಾಯಾಧೀನವೆಂಬ!
ಭಗವಾನ್ ನಿರಂಜನಾದಿತ್ಯಾನಂದ ತಾನೆಂಬ!!!
ಮಾವು ಹೂ ಬಿಟ್ಟಾಗ ಮಾಲಿಕಗಾನಂದ! (ಹೂ)
-ವು ಹೀಚಿನಿಂದೊಡಗೂಡಲತ್ಯಾನಂದ!
ಹೂ ಬಿದ್ದು, ಹೀಚ್ಕಾಯಾದಾಗಮಿತಾನಂದ!
ಬಿಸಿಲ್ಗಾಳಿಗೆ ಬೀಳದಾಗ್ಪೂರ್ಣಾನಂದ! (ಪ)
-ಟ್ಟಾ ಶ್ರಮ ಸಾರ್ಥಕವಾದರೆಲ್ಲಾನಂದ! (ಪ್ರ)
-ಗತಿ ಕಾಣದಿದ್ದರೆಲ್ಲಿಹುದಾನಂದ?
ಮಾತಿನ ಮಲ್ಲಿಗೆಗಿಲ್ಲ ಗಂಧಾನಂದ! (ಕ)
-ಲಿತ ವಿದ್ಯೆ ಬಾಳ್ಬೆಳಕಾದಾಗಾನಂದ!
ಕಣ್ತೆರೆಯದಂಧನಾದರೇನಾನಂದ?
ಗಾಡಿ ಪ್ರಯಾಣಕನ್ಕೂಲಾದರಾನಂದ!
ನಂಬಿಗೆಗಿಂಬಿಲ್ಲದಿದ್ದರಿಲ್ಲಾನಂದ! (ಕಂ)
-ದ ನಿರಂಜನಾದಿತ್ಯ ಸಹಜಾನಂದ!!!
ಕ್ಷಾತ್ರ ತೇಜ ಪರಿಪೂರ್ಣವಾ ಸಂಬಂಧ!
ಬಂಧು, ಬಾಂಧವ ನೀನೆಂಬುದಾ ಸಂಬಂಧ!
ಧನ, ಕನಕಾಪೇಕ್ಷೆಗಲ್ಲಾ ಸಂಬಂಧ!(ಅ)
-ನವರತ ಶ್ರೀಪಾದೈಕ್ಯಕ್ಕಾ ಸಂಬಂಧ!
ವೆಂಕಟೇಶ್ನನನ್ಯ ಭಕ್ತಿಗಾ ಸಂಬಂಧ! (ಅಂ)
-ಬುಜಾಸನೆಯಂತಾಗಲಿಕ್ಕಾ ಸಂಬಂಧ (ಇ)
-ದೊಂದಾದರ್ಶದ ಗುರು ಶಿಷ್ಯ ಸಂಬಂಧ!
ದುರ್ಮದ ಮರ್ದನೆಗಾ ದಿವ್ಯ ಸಂಬಂಧ!
ಸಂಸಾರ ಸಾಗರ ದಾಟಲ್ಕಾ ಸಂಬಂಧ!
ಬಂಧನವಿಲ್ಲದಾನಂದಕ್ಕಾ ಸಂಬಂಧ!
ಧರ್ಮ ನಿರಂಜನಾದಿತ್ಯಾತ್ಮ ಸಂಬಂಧ!!!
ಪಾರ್ವತೀಶ್ವರ ದಾಂಪತ್ಯ!
ಲಕ್ಷ್ಯಾತ್ಮಕ್ಕಿರ್ಪಾ ದಾಂಪತ್ಯ!
ನಿತ್ಯ ಸುಖದಾ ದಾಂಪತ್ಯ! (ಕ)
-ಷ್ಟ ವಿಷಯಾಶಾ ದಾಂಪತ್ಯ!
ದಾಂಭಿಕೈಹಿಕಾ ದಾಂಪತ್ಯ!
ಪತನಕಾರೀ ದಾಂಪತ್ಯ! (ಸ್ತು)
-ತ್ಯ ಶ್ರೀ ನಿರಂಜನಾದಿತ್ಯ!!!
-ರ್ಶನೇಚ್ಛೆಗೀಗಿಷ್ಟ ನೀ ಪಟ್ಟೆ!
ನಾನಾ ಪ್ರಶ್ನೆಗಳ ಕೇಳ್ಬಿಟ್ಟೆ!
ವರ ಪ್ರಧಾನ ಮಾಡೆಂದ್ಬಿಟ್ಟೆ!
ಕಾರ್ಯ ಗೌರವ ಮರೆತ್ಬಿಟ್ಟೆ! (ವ)
-ಶವಾಗ್ಬೇಕಾಸ್ತಿ ಪಾಸ್ತ್ಯೆಂದ್ಬಿಟ್ಟೆ!
ನಾಶವಾಗ್ವುದಕಾಶಿಸ್ಬಿಟ್ಟೆ!
ಕೊಟ್ಟದ್ದುಡೆಂದಿದ ನಾ ಕೊಟ್ಟೆ! (ಕೊ)
-ಟ್ಟೆ ನಿರಂಜನಾದಿತ್ಯ ಬಟ್ಟೆ!!!
-ನವನಾಜ್ಞೆ ಪಾಲಿಸಿದ್ಯೇನು?
ದಾತ, ನಾಥಾತನಾಗಿಹನು!
ಸದಾ ನಿನ್ನ ಕಾಯುತಿಹನು!
ನೆಂಟ, ಭಂಟ ತಾನಾಗಿಹನು! (ಮ)
-ದದಿಂ ಜೀವ ಮರೆತಿಹನು! (ದು)
-ರಾಗ್ರಹದಿಂದ ಕೆಟ್ಟಿಹನು! (ಆ)
-ಯ್ತೇನವನರಿವೀಗಾಯ್ತೇನು? (ಭಾ)
-ನು, ನಿರಂಜನಾದಿತ್ಯವನು!!!
-ರ್ದನವಾಗುತಿದೆ ವಾಸುದೇವಾ! (ನ್ಯಾ)
-ಯ ದೊರಕಿಸೀಗ ಗುರುದೇವಾ!
ನೀಚರಡಗಿಸು ಮಹಾದೇವಾ! (ಅ)
-ನಾಚಾರತ್ಯಾಚಾರತ್ಯಾಯ್ತು ದೇವಾ!
ದುರಿತದೂರಲ್ಲವೇ ನೀ ದೇವಾ?
ದೇಶವೆಲ್ಲಾಯ್ತು ನಾಶ ಹೇ ದೇವಾ! (ಏ)
-ಕೆ ಬಂಗ್ಲಾ ಬಂಧುಗೀ ಗತಿ ದೇವಾ? (ಇಂ)
-ದೇ ಬಂದುದ್ದರಿಸವರ ದೇವಾ! (ದೇ)
-ವಾ, ನಿರಂಜನಾದಿತ್ಯ ಕೇಶವಾ!!!
ಮಕ್ಕಳಿಗೆ ಧ್ಯಾನಮಿಂಚಿಕ್ಕಬೇಕೆಂದ ಸುಬ್ಬಣ್ಣ! (ಸ)
-ಕ್ಕರೆ, ಹಾಲು, ಸವಿದಂತಿದೆಂದ ಗುರು ಸುಬ್ಬಣ್ಣ! (ಪೀ)
-ಳಿಗೆ ಭಾರತದ್ದುದ್ಧಾರಾಗಬೇಕೆಂದ ಸುಬ್ಬಣ್ಣ!
ಗೆಳೆತನದಾದರ್ಶದರಲ್ಲಿದೆಂದ ಸುಬ್ಬಣ್ಣ! (ಅ)
-ಧ್ಯಾಪಕರಿದಭ್ಯಾಸ ಮಾಡಬೇಕೆಂದ ಸುಬ್ಬಣ್ಣ! (ಅ)
-ನವರತಾಹಾರವಿದಮೃತವೆಂದ ಸುಬ್ಬಣ್ಣ!
ಮಿಂದರಿದರಲ್ಲಿ ಪಾಪಹರವೆಂದ ಸುಬ್ಬಣ್ಣ!
ಚಿದಾನಂದ ಸುಖವಿದರಲ್ಲಿದೆಂದ ಸುಬ್ಬಣ್ಣ (ಸಿ)
-ಕ್ಕಲಾರದಿದು ಸಂತೆಗಳಲ್ಲೆಂದಾಪ್ತ ಸುಬ್ಬಣ್ಣ!
ಬೇಕಿದಕೆ ಹಿಂದಿನ ಸುಕೃತವೆಂದ ಸುಬ್ಬಣ್ಣ (ಸಾ)
-ಕೆಂದರೂ ಸಾಕಾಗದಿರುವುದಿದೆಂದ ಸುಬ್ಬಣ್ಣ!
ದಯೆಯಿದು ಸದ್ಗುರು ಶಿವನದೆಂದ ಸುಬ್ಬಣ್ಣ!
ಸುಪ್ರಭಾತ ದತ್ತಗಿದರಿಂದಾಗ್ಲೆಂದ ಸುಬ್ಬಣ್ಣ! (ಹ)
-ಬ್ಬದೂಟಕ್ಕಿಂತಧಿಕ ತನಗಿದೆಂದ ಸುಬ್ಬಣ್ಣ! (ಅ)
-ಣ್ಣ ನರಂಜನಾದಿತ್ಯಗೆ ಶರಣೆಂದ ಸುಬ್ಬಣ್ಣ!!!
ಬಂದರು, ಹೋದರು, ಬಹಳ ಮಂದಿ ನಾರಾಯಣಾ!
ದರ್ಶನ ನಿನ್ನದವರಿಗಾನಂದ ನಾರಾಯಣಾ! (ಗು)
-ರುಭಕ್ತಿಯವರದ್ನಿನಗೆ ತೃಪ್ತಿ ನಾರಾಯಣಾ!
ಹೋಗಲಾರರು ನಿನ್ನ ಬಿಟ್ಟವರು ನಾರಾಯಣಾ!
ದಯೆ ನಿನ್ನದಪಾರವರ ಮೇಲೆ ನಾರಾಯಣಾ!
ರುಚಿ ನಿನ್ನ ಪಾದ ತೀರ್ಥವರಿಗೆ ನಾರಾಯಣಾ!
ಬಳಲಿಕೆ ನಿನ್ನಡ್ಯಲ್ಲಿಲ್ಲವರ್ಗೆ ನಾರಾಯಣಾ!
ಹಸಿದವರಲ್ಲವರ್ನಿನ್ನಡ್ಯಲ್ಲಿ ನಾರಾಯಣಾ! (ಒ)
-ಳ, ಹೊರಗೆಲ್ಲಾ ನೀನೇ ಅವರಿಗೆ ನಾರಾಯಣಾ!
ಮಂದಿರ ನಿನಗವರ ಹೃದಯ ನಾರಾಯಣಾ!
ದಿನ, ರಾತ್ರಿ ನೀನಲ್ಲಿರುತ್ತಿಹಾರ್ಯ ನಾರಾಯಣಾ!
ನಾದ, ಬಿಂದು, ಕಲಾತೀತ ಶ್ರೀಕಾಂತ ನಾರಾಯಣಾ!
ರಾಮಭಕ್ತಾಂಜನೇಯನಂತರಾತ್ಮ ನಾರಾಯಣಾ!
ಯಮಸ್ವರೂಪ ನೀನು ರಾವಣಗೆ ನಾರಾಯಣಾ! (ಗ)
-ಣಾಧಿಪ ನಿರಂಜನಾದಿತ್ಯನಪ್ಪ ನಾರಾಯಣಾ!!!
-ರೇರಾಮ ಜಪಿಸುವವಗೆ! (ನೀ)
-ನೆಂದರಾರೆಂದರಿತವಗೆ! (ಮ)
-ದ, ಮತ್ಸರವಿರದವಗೆ!
ರೇಗುವಭ್ಯಾಸ ಬಿಟ್ಟವಗೆ! (ತ)
-ನು, ಮನಪ್ಪನದ್ದೆಂಬವಗೆ! (ಅ)
-ನಿತ್ಯ ಮಾಯೆಂದರಿತವಗೆ! (ಧ)
-ನದಾಸೆನಗಿಲ್ಲೆಂಬವಗೆ! (ಬಾ)
-ಗೆ ನಿರಂಜನಾದಿತ್ಯನಿಗೆ!!!
ಯಾವ ಸ್ಟೇಶನ್ನಿನಲ್ಲಿದೆಯೋ ಗಾಡಿ? (ಬಾ)
-ವ ಭಕ್ತಿಯಿಂದೀಗ ಭಜನೆ ಮಾಡಿ!
ಸ್ಟೇಶನ್ ವಿಚಾರ ನಮ್ಗೀಗ ಬೇಡಿ! (ಕೇ)
-ಶವನ ಕೃಪೆಯನ್ನಿದಿರು ನೋಡಿ! (ಸ)
-ನ್ನಿಧಿಯ ಸೇವೆಗೀಗ ಮನ ಮಾಡಿ! (ದೀ)
-ನನನ್ನುದ್ಧರಿಸೆಂದವ್ನನ್ನು ಬೇಡಿ! (ಅ)
-ಲ್ಲಿಲ್ಲೋಡಾಡಿದರೆ ಸಿಗದು ಗಾಡಿ! (ತಂ)
-ದೆ ಸದ್ಗುರುವಿಗೆ ವಂದನೆ ಮಾಡಿ!
ಯೋಗೇಶಾತನನ್ನೊಡಗೂಡಿ ನೋಡಿ!
ಗಾಡಿಗಾರಾತನನ್ಮರೆಯ ಬೇಡಿ! (ಕೂ)
-ಡಿ, ನಿರಂಜನಾದಿತ್ಯ ಪಾದಾ ಗಾಡಿ!!!
ಮುಚ್ಚಿದ ಕದ ತೆರೆದೋಡ್ಬಾರದಮ್ಮಾ! (ಹು)
-ಚ್ಚಿಯೆಂದೆನಿಸಿಕೊಳಬೇಕಾದೀತಮ್ಮಾ! (ಕ)
-ದ ತೆಗೆದ್ಕೆಲ್ಸ ಮುಗ್ಸಿ ಮುಚ್ಚಬೇಕಮ್ಮಾ!
ಕರ್ಮ ವಿಚಾರ ಪೂರ್ವಕವಾಗ್ಬೇಕಮ್ಮಾ! (ಇ)
-ದರಿಂದ ನೆಮ್ಮದಿಯುಳಿಯುವುದಮ್ಮಾ! (ಕ)
-ತೆ, ಪುರಾಣಗಳಿನ್ನು ಸಾಕು ಮಾಡಮ್ಮಾ! (ತೆ)
-ರೆ ಬಿದ್ದ ಮೇಲೆ ನಾಟಕವುಂಟೇನಮ್ಮಾ? (ಇಂ)
-ದೋ, ನಾಳೆಯೋ, ಮೊಕ್ಕಾಂ ಮುಕ್ತಾಯಾಗ್ವುದಮ್ಮಾ! (ಪ)
-ಡ್ಬಾರದಾಮೇಲಾರೂ ಪರಿತಾಪವಮ್ಮಾ!
ರಮಣಗೀಗಚ್ಚುಮೆಚ್ಚಾಗಿ ಬಾಳಮ್ಮಾ! (ಪಾ)
-ದಸೇವಾ ಭಾಗ್ಯ ವ್ಯರ್ಥವಾಗ್ಬಾರದಮ್ಮಾ! (ಅ)
-ಮ್ಮಾ ನಿರಂಜನಾದಿತ್ಯ ಯಾತ್ರಿಕನಮ್ಮಾ!!!
ಗಂಡಾಂತರದಿಂದ ಪಾರಾದ ನಂಜುಂಡ! (ಗಂ)
-ಡಾಂತ್ರ ಉಮೆ ಕಳೆದಳೆಂದ ನಂಜುಂಡ!
ತಡಾದ್ರನರ್ಥಾಗುತ್ತಿತ್ತೆಂದ ನಂಜುಂಡ! (ಸು)
-ರರ್ಗಮೃತ ಸಿಗ್ತಿರ್ಲಿಲ್ಲೆಂದ ನಂಜುಂಡ! (ಅಂ)
-ದಿಂದಾದೆ ನೀಲಕಂಠಾನೆಂದ ನಂಜುಂಡ!
ದಕ್ಷಕನ್ಯಾದರ್ಶ ಸತ್ಯೆಂದ ನಂಜುಂಡ!
ಪಾಪವಿದೂರಳವಳೆಂದ ನಂಜುಂಡ!
ರಾಮನಾಮ ಪ್ರೇಮ್ಯವಳೆಂದ ನಂಜುಂಡ!
ದಯಾಂಬಾ ಭವಾನ್ಯವಳೆಂದ ನಂಜುಂಡ! (ಅ)
-ನಂಗಾಕ್ಷಿ ತಾನಾಗಿಹಳೆಂದ ನಂಜುಂಡ! (ನಂ)
-ಜುಂಡನ ಪ್ರಾಣ ಅವಳೆಂದ ನಂಜುಂಡ! (ಬಿ)
-ಡವಳ ನಿರಂಜನಾದಿತ್ಯ ನಂಜುಂಡ!!!
ಒಂದೊಂದಾಗೇನೊನೋ ನಾನಿಂದು ತಿಂದೆ! (ಇ)
-ದೊಂದು ಸುಯೋಗವೆಂದು ನಾನು ತಿಂದೆ! (ಸಂ)
ದಾಯವಾಗಲಿ ಋಣವೆಂದು ತಿಂದೆ! (ಯೋ)
-ಗೇಶ್ವರನಿಚ್ಛೆಯಿದೆಂದು ನಾ ತಿಂದೆ!
ನೇಮಕ್ಕೆ ವಿರೋಧವಾದರೂ ತಿಂದೆ! (ಮ)
-ನೋದೌರ್ಬಲ್ಯವೆಂದರಿತರೂ ತಿಂದೆ!
ನಾಮಜಪ ಮಾಡುತ್ತೆಲ್ಲಾ ನಾ ತಿಂದೆ!
ನಿಂತು, ನಮಸ್ಕಾರವೆನ್ನುತ್ತ ತಿಂದೆ!
ದುಷ್ಪರಿಣಾಮಾಗದಿಂದೆಂದು ತಿಂದೆ!
ತಿಂದೆ, ಗುರುಪ್ರಸಾದವೆಂದು ತಿಂದೆ! (ತಂ)
-ದೆ, ನಿರಂಜನಾದಿತ್ಯಗತ್ಯೆಂದೆ!!!
ಮಂತ್ರ, ಹೇಳಿದ, ತಂತ್ರ ಹೂಡಿದ! (ಪ)
-ತ್ರ, ಪುಷ್ಪಾರ್ಚನೆಯನ್ನೂ ಮಾಡಿದ!
ಹೇರಂಬನನ್ನೇನೋ ಕೇಳಿದ! (ಬಾ)
-ಳಿನ ಸುಖಕ್ಕೆ ವರ ಬೇಡಿದ! (ಬಂ)
-ದವರಿಗೆ ಪ್ರಸಾದ ನೀಡಿದ!
ತಂದೆ, ತಾಈನೆಂದು ವಂದಿಸಿದ! (ಸ್ತೋ)
-ತ್ರ ಮಾಡಿ ಅಪ್ಪನ ಪ್ರಾರ್ಥಿಸಿದ! (ಬಾ)
-ಹೂರ್ಧ್ವಕ್ಕೆತ್ತಿಳಾಶಾಂತ್ಯಾಶಿಸಿದ! (ಕೂ)
-ಡಿ, ಆಡಿ, ಪಾಡಿ ನಲಿದಾಡಿದ! (ಕಂ)
-ದ ನಿರಂಜನಾದಿತ್ಯಾನಂದಾದ!!!
ಹಣ್ಣೆಂದದ್ದದ್ದು ಹೀಚೆಂಬರಿವಾಯ್ತು! (ಬೆ)
-ಣ್ಣೆಂದದ್ದದು ಸುಣ್ಣದ ಮುದ್ದೆಯಾಯ್ತು! (ಮಂ)
-ದಮತಿಗೆ ಬುದ್ಧಿಯಿಲ್ಲದದಾಯ್ತು! (ಕ)
-ದ್ದವಗೆ ಬಿದ್ದವನ ಸಲಾಮಾಯ್ತು!
ದುರ್ವಿಧಿಯ ಸ್ವರೂಪ ಬಯಲಾಯ್ತು!
ಹೀನನಿಗೂ ಮಾನ ಧನದಿಂದಾಯ್ತು! (ಹೀ)
-ಚೆಂಬರಿವು ಗುರುಕೃಪೆಯಿಂದಾಯ್ತು!
ಬಯಲಾಕಾರ ಭ್ರಾಂತ್ಯೆಂಬರಿವಾಯ್ತು! (ಅ)
-ರಿತಮೇಲದು ತಿಪ್ಪೆಯ ಪಾಲಾಯ್ತು! (ಜೀ)
-ವಾತ್ಮ, ಪರಮಾತ್ಮ ತತ್ವ ಗೊತ್ತಾಯ್ತು! (ಅ)
-ಯ್ತು ನಿರಂಜನಾದಿತ್ಯನರ್ಥವಾಯ್ತು!!!
ಜಡನಾಗಿ ಇದ್ದೆ, ಮೃಡನಾಗಿ ಎದ್ದೆ! (ಬ)
-ಡವನಾಗಿ ಇದ್ದೆ, ಒಡೆಯನಾಗ್ಯೆದ್ದೆ!
ವಾದಿಯಾಗಿ ಇದ್ದೆ, ಪ್ರವಾದಿಯಾಗ್ಯೆದ್ದೆ! (ರಾ)
-ಗಿ ನಾನಾಗಿ ಇದ್ದೆ, ವಿರಾಗಿಯಾಗ್ಯೆದ್ದೆ!
ಇಲ್ಲಿ, ಅಲ್ಲಿ ಇದ್ದೆ, ಎಲ್ಲೆಲ್ಲಾನಾಗ್ಯೆದ್ದೆ! (ನಿ)
-ದ್ದೆ ಮಾಡುತ್ತಾ ಇದ್ದೆ, ಸದ್ದಡಗ್ಯಾನೆದ್ದೆ!
ಮೃತನಂತೆ ಇದ್ದೆ, ಅಮೃತನಾಗ್ಯೆದ್ದೆ! (ಒ)
-ಡಲ್ನಾನೆಂದು ಇದ್ದೆ, ವಿಮಲಾತ್ಮಾಗ್ಯೆದ್ದೆ! (ಅ)
-ನಾಥನೆಂತ ಇದ್ದೆ, ಜಗನ್ನಾಥಾಗ್ಯೆದ್ದೆ! (ಸಂ)
-ಗಿ ನಾನಾಗಿ ಇದ್ದೆ, ನಿಸ್ಸಂಗಿಯಾಗ್ಯೆದ್ದೆ!
ಎರವಾಗಿ ಇದ್ದೆ, ನೆರವಾಗೀಗೆದ್ದ! (ಎ)
-ದ್ದೆ, ನಿರಂಜನಾದಿತ್ಯ ನಾನಾಗೀಗ್ಯೆದ್ದೆ!!!
ಗಾಡಿಯ ಶಕ್ತಿ, ಚಾಲಕನಾಸಕ್ತಿ, ಪ್ರಯಾಣ ತೃಪ್ತಿ! (ಅ)
-ಡಿಗೆಯ ಶಕ್ತಿ, ಅಡಿಗೆಯವ್ನಾಸಕ್ತಿ, ಊಟ ತೃಪ್ತಿ!
ಯಜ್ಞದ ಶಕ್ತಿ, ಯಾಜ್ಞಿಕನಾಸಕ್ತಿ, ಸುಜ್ಞಾನ ತೃಪ್ತಿ!
ಶಶಿಯ ಶಕ್ತಿ, ಶಶಿಧರನಾಸಕ್ತ್ಯನಿಶ ತೃಪ್ತಿ! (ಭ)
-ಕ್ತಿಯ ಶಕ್ತಿ, ಭಕ್ತನಚಲಾಸಕ್ತಿ, ಮುಕ್ತಿ ಸಂತೃಪ್ತಿ!
ಚಾಕರಿಯ ಶಕ್ತಿ, ಚಾಕರನಾಸಕ್ತ್ಯಾಚಾರ ತೃಪ್ತಿ!
ಲಕ್ಷ್ಯಿಯ ಶಕ್ತಿ, ಲಕ್ಷ್ಮೀಶನಾಸಕ್ತಿ, ಲಕ್ಷ್ಯ ಸಂತೃಪ್ತಿ!
ಕರದ ಶಕ್ತಿ, ಕಾರ್ಯದಾಸಕ್ತಿ, ಕರ್ತವ್ಯ ಸಂತೃಪ್ತಿ!
ನಾಮದ ಶಕ್ತಿ, ನಾಮಿಯಾಸಕ್ತಿ, ಆರಾಮ ಸಂತೃಪ್ತಿ!
ಸತ್ಯದ ಶಕ್ತಿ, ನಿತ್ಯನಾಸಕ್ತಿ, ಸ್ವಸ್ಥಿತಿ ಸಂತೃಪ್ತಿ! (ವ್ಯ)
ಕ್ತಿಯ ಶಕ್ತಿ, ಅವ್ಯಕ್ತನಾಸಕ್ತಿ, ವ್ಯವಸ್ಥೆ ಸಂತೃಪ್ತಿ!
ಪ್ರಭಾವ ಶಕ್ತಿ, ಪ್ರಭಾಕರನಾಸಕ್ತ್ಯಭೀಷ್ಟ ತೃಪ್ತಿ! (ಮಾ)
-ಯಾಶಕ್ತಿ, ಮಾಧವನಾಸಕ್ತಿ, ಲೀಲಾನಾಟಕ ತೃಪ್ತಿ! (ಗು)
-ಣಗುಣ ಶಕ್ತಿ, ಗಣೇಶನಾಸಕ್ತ್ಯಗಣಿತ ತೃಪ್ತಿ!
ತೃಣ, ಪರ್ಣ ಶಕ್ತ್ಯತ್ರಿತನಯನಾಸಕ್ತ್ಯಾತ್ಮ ತೃಪ್ತಿ! (ತೃ)
-ಪ್ತಿ ನಿರಂಜನಾದಿತ್ಯಾನಂದ ಶಿವಾನಂದ ಸಂತೃಪ್ತಿ!!!
ಗಣ್ಯನಾಗೋ ಸುಬ್ರಹ್ಮಣ್ಯನಾಗೋ! (ನಾ)
-ಣ್ಯಗಳಾಸೆ ಬಿಟ್ಟು ಜ್ಞಾನಿಯಾಗೋ!
ನಾಮದೊಳಗಿನ ಸ್ವಾಮಿಯಾಗೋ!
ಗೋಸೇವೆ ಮಾಡಿ ಗೋಪಾಲನಾಗೋ!
ಸುಖವಿದರನುಭವಿಯಾಗೋ!
ಬ್ರಹ್ಮಚರ್ಯದಿಂದ ಬ್ರಹ್ಮನಾಗೋ! (ಬ)
-ಹ್ಮದ್ವೇಷ ಬಿಟ್ಟು ಬ್ರಾಹ್ಮಣನಾಗೋ! (ಪು)
-ಣ್ಯ ಪಾಪದಂಟಿಲ್ಲದವನಾಗೋ!
ನಾದ, ಬಿಂದು, ಕಲಾತೀತನಾಗೋ! (ಆ)
-ಗೋ, ನಿರಂಜನಾದಿತ್ಯ ನೀನಾಗೋ!!!
ಕಲ್ಪನಾ ಸಂಕಲ್ಪ, ವಿಕಲ್ಪ ಕಲ್ಪನಾ! (ಅ)
-ಲ್ಪ ವಿಷಯ ಸುಖಕ್ಕಾಗ್ಯೇಕ ಕಲ್ಪನಾ?
ನಾಮ, ರೂಪ, ಕುಲ, ಗೋತ್ರವೂ ಕಲ್ಪನಾ!
ಸಂಕಲ್ಪ ಮಾಡ್ಯಳುವುದೇಕೆ ಕಲ್ಪನಾ?
ಕರ, ಚರಣಕ್ಕಾಳಾಗ್ದಿರು ಕಲ್ಪನಾ! (ಶಿ)
-ಲ್ಪ ಕಲೆಯೊಳಗಿನ ಮೂರ್ತಿ ಕಲ್ಪನಾ!
ವಿವೇಕಿಯಾಗ್ಜೈಸ್ನಿನ್ನ ನೀನು ಕಲ್ಪನಾ!
ಕಲ್ಯಾಣ ನಿನಗಾಗುವುದು ಕಲ್ಪನಾ! (ಅ)
-ಲ್ಪರ ಸಂಗ ಮಾಡಬಾರದು ಕಲ್ಪನಾ!
ಕಲಿಮಲ ಕಳೆಯಬೇಕು ಕಲ್ಪನಾ! (ತ)
-ಲ್ಪ ಶಯನಕ್ಕಾಶಿಸಬೇಡ ಕಲ್ಪನಾ!
“ನಾ” ನಿರಂಜನಾದಿತ್ಯಾನಂದ ಪಾವನಾ!!!
ದಯಾಮಯಾ ಮಾಯಾಧಿಪತಿ! (ದ)
-ರ್ಶನಾನಂದಾತ್ಮಾರಾಮ ಪತಿ!
ಪತಿತ ಪತೀ ಪಶುಪತಿ!
ತೀರ್ಥ, ಕ್ಷೇತ್ರ ಪತೀ ಶ್ರೀಪತಿ!
ಉದಾತ್ತ ಪತೀ ದತ್ತ ಪತಿ!
ಮಾಲಾ, ಕಮಂಡ್ಲು ಧರಾಪತಿ!
ಪರಮಾತ್ಮಾವಧೂತ ಪತಿ! (ಗ)
-ತಿ, ನಿರಂಜನಾದಿತ್ಯ ಪತಿ!!!
-ವಬಂಧದಲ್ಲಿಡುವುದಾ ಪ್ರಕರಣ!
ನಿಮಿಷ, ನಿಮಿಷಕ್ಕೂಂದೊಂದ್ಪ್ರಕರಣ! (ಭೋ)
-ಗಿಗನವರತನೇಕ ಪ್ರಕರಣ!
ಹುಚ್ಚು ಹಿಡಿಸುವುದೆಲ್ಲಾ ಪ್ರಕರಣ!
ದುಸ್ಸಂಗದಲ್ಲದ್ದುವುದಾ ಪ್ರಕರಣ!
ನಾಳೆಗಳೆಣಿಸುವುದಾ ಪ್ರಕರಣ!
ನಾಶವಾಗುವ ದೇಹಕ್ಕಾ ಪ್ರಕರಣ!
ಪ್ರವೃತ್ತಿ ಮಾರ್ಗಕ್ಕೇನೇನೋ ಪ್ರಕರಣ!
ಕತೆ, ಪುರಾಣ, ಕಟ್ಟಿತಾ ಪ್ರಕರಣ! (ವ)
-ರಗುರು ಶರಣಗಿಲ್ಲಾ ಪ್ರಕರಣ! (ಗ)
-ಣಪ ನಿರಂಜನಾದಿತ್ಯೇಕೀಕರಣ!!!
-ಥಿ, ಸಾರಥಿ, ಶ್ರೀಪತಿ, ವೈಕುಂಠಪತಿ!
ಪದ್ಮಪತಿ, ಸಿದ್ಧಪತಿ, ಶುದ್ಧಪತಿ! (ದಿ)
-ತಿಪತಿ, ಅದಿತಿಪತಿ, ಅಧಿಪತಿ!
ಪರಪತಿ, ಸ್ಥಿರಪತಿ, ಗೌರೀಪತಿ!
ತಿರುಪತಿ, ಪುರಪತಿ, ಸುರಪತಿ!
ಪತಿತಪತಿ, ಭೂಪತಿ, ರಘುಪತಿ!
ತಿರುಕಪತಿ, ಚಿತ್ಪತಿ, ದತ್ತಪತಿ! (ರೂ)
-ಪಪತಿ, ಆರೂಪಪತಿ, ಆತ್ಮಪತಿ!
ಶುಚಿಪತಿ, ರುಚಿಪತಿ, ಛಾಯಾಪತಿ! (ಕೋ)
-ಪಪತಿ, ತಾಪಪತಿ, ಪಾರ್ವತೀಪತಿ! (ಪ)
-ತಿ ನಿರಂಜನಾದಿತ್ಯಾ ತ್ರಿಲೋಕಪತಿ!!!
-ನ್ನ ದಾರಿಯೇ ನನಗೆ ಸರಿ!
ದಾರಿಯ ಗುರಿಯೊಂದೇ ಸರಿ! (ಪ)
-ರಿಪರಿ ಕ್ರಮದಕ್ಕೆ ಸರಿ!
ನಿಷ್ಠೆಯದಕ್ಕಿದ್ದರೆ ಸರಿ!
ನಷ್ಟವಾಗದಿದ್ದರೆ ಸರಿ!
ಗೆದ್ದು ಬಂದರಿಬ್ಬರೂ ಸರಿ!
ಸಚ್ಚಿದಾನಂದಾದರೆ ಸರಿ! (ಅ)
-ರಿ, ನಿರಂಜನಾದಿತ್ಯಾ ಹರಿ!!!
ಮುದ್ದು ಮುಖಾ ಗುರುದತ್ತ ಮುಖ! (ಮು)
-ಖ ಮೂರೊಂದಾಗಲಾ ದತ್ತ ಮುಖ!
ಈರೈದಿಂದ್ರ್ಯ ಜಯಾ ದತ್ತ ಮುಖ!
ಮುನಿಜನಾನಂದಾ ದತ್ತ ಮುಖ! (ಸು)
-ಖದುಃಖೇಕರಸಾ ದತ್ತ ಮುಖ!
ದತ್ತತ್ರಿಋಷಿಗಾ ದತ್ತ ಮುಖ! (ಹ)
-ತ್ತವತಾರೆತ್ತಿತಾ ದತ್ತ ಮುಖ!
ಮುಪ್ಪು, ಸಾವಿಲ್ಲದ್ದಾ ದತ್ತ ಮುಖ!
ಖಗ, ನಿರಂಜನಾದಿತ್ಯಾ ಮುಖ!!!
ರೋಗ ರಹಿತಾ ಶುದ್ಧ ಮುಖ! (ಭಾ)
-ಗ್ಯವಿದೆಲ್ಲರಿಗೀವ ಮುಖ!
ಮುಟ್ಟು, ಮಡಿಯೆನ್ನದಾ ಮುಖ!
ಖಾರ, ಹುಳಿಯಭೇದ ಮುಖ!
ಗುಣದೋಷರಿಯದಾ ಮುಖ! (ಕ)
-ರುಣಾಪೂರ್ಣಾ ಗಣೇಶ ಮುಖ!
ಮುಕುಂದಾನಂದ ಕಂದ ಮುಖ! (ಸು)
-ಖ ನಿರಂಜನಾದಿತ್ಯ ಮುಖ!!!
-ರಿವಾಗಿರುವುದೇ ಕತ್ತಿಗೆ? (ಮ)
-ಹಾಬಲೇಶ್ವರನಾ ಕತ್ತಿಗೆ! (ಬಾ)
-ಕಿನ್ನೇನೇನಿಹುದಾ ಕತ್ತಿಗೆ?
ದತ್ತಗುರುವಿನಾ ಕತ್ತಿಗೆ! (ಬೇ)
-ರೇನೂ ಬೇಡವಿನ್ನಾ ಕತ್ತಿಗೆ!
ಕಲ್ಪನಾತೀತದಾ ಕತ್ತಿಗೆ! (ಎ)
-ತ್ತಿರಾರತಿಈಗಾ ಕತ್ತಿಗೆ! (ಬಾ)
-ಗೆ, ನಿರಂಜನಾದಿತ್ಯನಾಗೆ!!!
ಕಾಲ, ದೇಶಾವಸ್ಧಾತೀತಾಕಾರೋಂಕಾರ!
ರಮೇಶ, ಉಮೇಶ, ವಾಣೀಶರೋಂಕಾರ!
ಉಚ್ಚ, ನೀಚ, ಸ್ವಚ್ಛಾಸ್ವಚ್ಛಾಕಾರೋಂಕಾರ!
ಕಾರ್ಯ, ಕಾರಣಕರ್ತಾಕಾರ ಓಂಕಾರ! (ಸು)
-ರ, ನರ, ಕಿನ್ನರೋರಗಾಕಾರೋಂಕಾರ! (ಕಾ)
-ಮ, ರಾಮ, ಶ್ಯಾಮ, ಸೋಮರಾಕಾರೋಂಕಾರ!
ಕಾಮಾಕ್ಷಿ, ಈನಾಕ್ಷಿಯರಾಕಾರೋಂಕಾರ! (ವ)
-ರಗುರು ದತ್ತಾತ್ರೇಯಾಕಾರ ಓಂಕಾರ!
“ಓಂ, ಐಂ, ಕ್ಲೀಂ, ಸೌ” ಸರಸ್ವತ್ಯಾಕಾರೋಂಕಾರ!
ಕಾಶ್ಯಪ, ವಿಶ್ವಾಮಿತ್ರಾದ್ಯಾಕಾರೋಂಕಾರ! (ವ)
-ರದನಿರಂಜನಾದಿತ್ಯಾಕಾರೋಂಕಾರ!!!
ಗಂಟು ಬಿತ್ತು ಜಾಜಿ ದಾರಕ್ಕೆ! (ಗಂ)
-ಟು ಬಿದ್ದಾಯ್ತು ಹಾರ ಲಿಂಗಕ್ಕೆ!
ಬಿದಿ ನೇಮವಿದಾಯ್ತದಕ್ಕೆ! (ಹೊ)
-ತ್ತು ಕಾಯುತ್ತಿತ್ತದು ದಾರಕ್ಕೆ!
ಜಾಜಿ ಹೋಗದನ್ಯ ಸಂಗಕ್ಕೆ! (ಪೂ)
-ಜಿಸಿಕೊಂಬಂತಾಈಗದಕ್ಕೆ!
ದಾರಾನುಕೂಲವಾಯ್ತದಕ್ಕೆ! (ಸ)
-ರ ಭಂಗಾರದ್ದು ಬೇಡದಕ್ಕೆ! (ಅ)
-ಕ್ಕೆ ನಿರಂಜನಾದಿತ್ಯದಕ್ಕೆ!!!
ಅಷ್ಟಮಿಯರ್ಧರಾತ್ರಿಯಲ್ಲಿ ಕೃಷ್ಣ ಬಂದ! (ದು)
-ಷ್ಟ ಸಂಹಾರ ಮಾಡುವೆನು ನಾನೆಂದು ಬಂದ!
ಮಿತ್ರಾರ್ಜುನನಜ್ಞಾನ ಕಳೆಯಲ್ಕೆ ಬಂದ!
ಯದುವಂಶ ಶಿರೋಮಣಿಯಾಗಿ ತಾ ಬಂದ! (ದು)
ರ್ಧರ ಸ್ಥಿತಿ ಮಾತಾ, ಪಿತರ್ಗಾದಾಗ ಬಂದ!
ರಾಧೆಯ ಮನೋರಥ ಪೂರ್ತಿಗಾಗಿ ಬಂದ!
ತ್ರಿಲೋಕನಾಥನಾಗ್ಯವತರಿಸಿ ಬಂದ! (ಜ)
-ಯ ಪಾಂಡುಪುತ್ರರಿಗೀಯಲಿಕ್ಕಾಗಿ ಬಂದ! (ಅ)
-ಲ್ಲಿಲ್ಲೆಲ್ಲೆಲ್ಲಾನೆಂದು ತೋರಲಿಕ್ಕಾಗಿ ಬಂದ! (ಸು)
-ಕೃತಶಾಲಿ ಸುಧಾಮೋದ್ಧವರ್ಗಾಗಿ ಬಂದ! (ಕೃ)
-ಷ್ಣವೇಣಿಯ ಪರಮಾಪ್ತ ತಾನಾಗಿ ಬಂದ!
ಬಂಧು ಗೋಪಾಲಕರಿಗಾಗಿ ತಾನು ಬಂದ! (ನಂ)
-ದಕಂದ ನಿರಂಜನಾದಿತ್ಯನಾಗಿ ಬಂದ!!!
ಧ್ಯಾನಮಿಂಚಿನ ಶಬ್ದವಾಲಿಸಲೀ ಕಿವಿ! (ಹೀ)
-ನ ವಿಚಾರಗಳ ಕೇಳದಿರಲೀ ಕಿವಿ!
ಮಿಂದಿದರಲ್ಲೀಗ ಸ್ವಚ್ಛವಾಗಲೀ ಕಿವಿ!
ಚಿದಾನಂದದಲ್ಲಿ ಲಯವಾಗಲೀ ಕಿವಿ! (ಕ)
-ನಸು, ನೆನಸಿನಲ್ಲೂ ಹೀಗಿರಲೀ ಕಿವಿ!
ಶಬರಶಂಕರೇಚ್ಛೆಗಾಳಾಗಲೀ ಕಿವಿ! (ಲು)
ಬ್ಧರುಲಿಗೆ ಕಿವಿಗೊಡದಿರಲೀ ಕಿವಿ!
ವಾದ, ಭೇದಕ್ಕೆ ಕಿವುಡಾಗಿರಲೀ ಕಿವಿ! (ಶೂ)
-ಲಿಯ ಗುಣಗಾನ ಕೇಳುತ್ತಿರಲೀ ಕಿವಿ!
ಸರ್ವಕಾಲದಲ್ಲದಕ್ಕಾಗಿರಲೀ ಕಿವಿ!
ಲೀನವಾಗಿ ತಲ್ಲೀನವಾಗಿರಲೀ ಕಿವಿ! (ಬೇ)
-ಕಿದಾತ್ಮೋದ್ಧಾರಕ್ಕೆಂದರಿತಿರಲೀ ಕಿವಿ! (ಸ)
-ವಿತೃ, ನಿರಂಜನಾದಿತ್ಯಗಾಗಿರ್ಲೀ ಕಿವಿ!!!
ಕಣ್ಣು ನಿನ್ನಂತಿರಬೇಕು ಕೃಷ್ಣಪ್ಪಾ! (ಹೆ)
-ಣ್ಣು, ಹೊನ್ಮಣ್ಣಿಗದಲಿಪ್ತ ಕೃಷ್ಣಪ್ಪಾ!
ನಿತ್ಯಾನಂದ ನಾದಾನಂದ ಕೃಷ್ಣಪ್ಪಾ! (ನಿ)
-ನ್ನಂತರಂಗ ದೃಷ್ಟಿ ಶುದ್ಧ ಕೃಷ್ಣಪ್ಪಾ!
ತಿಳಿಗೇಡ್ಯರಿಯನಿದ ಕೃಷ್ಣಪ್ಪಾ! (ಹೊ)
-ರಗೊಳಗದು ವ್ಯಾಪಕ ಕೃಷ್ಣಪ್ಪಾ!
ಬೇಕ್ನಿನ್ನನುಗ್ರಹದಕ್ಕೆ ಕೃಷ್ಣಪ್ಪಾ! (ವ್ಯಾ)
-ಕುಲವೆಳ್ಳಷ್ಟಿಲ್ಲದಕ್ಕೆ ಕೃಷ್ಣಪ್ಪಾ!
ಕೃಪಾಮೃತದರಲ್ಲಿದೆ ಕೃಷ್ಣಪ್ಪಾ! (ಉ)
-ಷ್ಣ, ಶೀತವೆಂದನ್ನದದು ಕೃಷ್ಣಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯಾ ಕಣ್ಕೃಷ್ಣಪ್ಪಾ!!!
ಸುವಿಚಾರಿಗಿರ್ಪುದೊಬ್ಬ ದೇವ!
ದೇಶ, ಕಾಲಕ್ಕಪ್ಪಾ ರೂಪಾ ದೇವ!
ವೇದ, ಬೈಬಲ್ಕುರಾನ್ದೇವಾ ದೇವ!
ಸುವಾರ್ತೆ ಗೀತೋಪದೇಶೀ ದೇವ!
ದೇಹ ಮೋಹ, ಬೇಡೆಂಬನಾ ದೇವ!
ವೇಶ, ಭೂಷಣಾಶಾಶೂನ್ಯಾ ದೇವ!
ಕರ್ಮ, ಧರ್ಮೋದ್ಧಾರಕರ್ತಾ ದೇವ! (ತ)
-ದೇಕನಿಷ್ಠ ಸರ್ವೋತ್ಕೃಷ್ಟಾ ದೇವ! (ದೇ)
-ವ ನಿರಂಜನಾದಿತ್ಯೇಸು ಶಿವ!!!
-ಷ್ಟು ಕಾಲ ಹೀಗಿರಬೇಕ್ನಾನಪ್ಪಯ್ಯಾ?
ದಾರಿ ತಪ್ಪಿರುವೆನೇ ನಾನಪ್ಪಯ್ಯಾ?
ಸೀತಾರಾಮ ನೀನಲ್ಲವೇನಪ್ಪಯ್ಯಾ? (ಅ)
-ನವರತ ದರ್ಶನ ಕೊಡಪ್ಪಯ್ಯಾ!
ನಿನ್ನ ದಾಸನಲ್ಲವೇ ನಾನಪ್ಪಯ್ಯಾ?
ನನಗೆ ಬೇರಾರು ಗತಿಯಪ್ಪಯ್ಯಾ? (ಭೋ)
-ಗೇಚ್ಛೆಯಿಂದ ಬಂದಿಲ್ಲ ನಾನಪ್ಪಯ್ಯಾ!
ಕರುಣೆ ತೋರಿ ಕಾಪಾಡ್ಬೇಕಪ್ಪಯ್ಯಾ! (ಕ)
-ಪ್ಪ, ಕಾಣಿಕೆ ನಿನಗೇತಕ್ಕಪ್ಪಯ್ಯಾ? (ಅ)
-ಯ್ಯಾ ನಿರಂಜನಾದಿತ್ಯನಾಗಪ್ಪಯ್ಯಾ!!!
-ಪ್ಪನಾಗಿ ಕುಳಿತಿದ್ದಾಗಾಯ್ತಾ ಕೃಪೆ! (ತಾ)
-ನೊಡನೆ ಲೋಪ ಸರಿಗೈದಾ ಕೃಪೆ! (ಅ)
-ಪ್ಪನಲ್ಲದಾರು ಮಾಡಬೇಕಾ ಕೃಪೆ?
ಮಾರಹರನಿಂದ ಸತತಾ ಕೃಪೆ! (ಅ)
-ಡಿಗಡಿಗೆತ್ತಿಕೊಂಬಾದರ್ಶ ಕೃಪೆ! (ಸ)
-ತತ ಬೆಂಗಾವಲಾಗಿರುವಾ ಕೃಪೆ! (ತ)
-ಪ್ಪ ಮಾಡಬೇಡಿನ್ನೆಂಬನ್ಯೋನ್ಯ ಕೃಪೆ! (ಅ)
-ನನ್ಯ ಭಕ್ತಿಯೊಂದಿರಲೆಂಬ ಕೃಪೆ!
ಕೃತ ತ್ರೇತಾನಂದವಿದೆಂಬ ಕೃಪೆ! (ಕೃ)
-ಪೆ, ನಿರಂಜನಾದಿತ್ಯಾತ್ಮನಾ ಕೃಪೆ!!!
-ರ್ವರೊಳಗಿಹ ಗುರು ಮಹೇಶ್ವರನ! (ಗ)
-ತಿ ಶಿವಗಣಕಾಗಿರುತಿರ್ಪವನ!
ಕಂಠದಲಿ ವಿಷವಿರಿಸಿರ್ಪವನ!
ಡಮರುಧರ ನಟರಾಜೇಶ್ವರನ! (ತು)
-ಳುಕಿಳೆಗಿಳಿಯುವ ಗಂಗಾಧರನ!
ಪತಿತರ ಪಾಪನಾಶ ಗೈವವನ! (ವ)
-ರ ರಾಮನಾಮ ಸದಾ ಜಪಿಸುವನ! (ಉ)
-ಮೇಶನನೆನಿಸಿದರ್ಧನಾರೀಶ್ವರನ! (ವಿ)
-ಶ್ವನಾಥನಾಥ ನಾಥ ತಾನಾಗಿಹನ!
ರಕ್ಕಸಾಂತಕ ಕಲಿಮಲಾಂತಕನ! (ಜ)
-ನಕ ನಿರಂಜನಾದಿತ್ಯನಾದವನ!!!
-ಸ್ತಮಾನವಾದ್ಮೇಲಿನ ಮರೀಚಿಪ್ರಾಯಿ!
ಕಲಿತದ್ದುಪಯೋಗಾಗ್ದಿದ್ರದೇಕ್ತಾಯಿ?
ದೊಡ್ಡಸ್ತಿಕೆಯ ಮಾತು ಸಾಕ್ಮಾಡು ತಾಯಿ! (ಒ)
-ಳಗನ್ನವಿದೆಂದರೂಟಾಯ್ತೇನು ತಾಯಿ?
ಗಿಡದಲ್ಲಿ ಹಣ್ಣಿದ್ದರೇನಾಯ್ತು ತಾಯಿ? (ಮ)
-ನಸಿಗಾನಂದ ತಿಂದಾಗಲ್ಲವೇ ತಾಯಿ?
ಬಣ್ಣದ ಮಾತ್ಕಣ್ಣಿಗೆ ಕಾಣದು ತಾಯಿ!
ದರ್ಶನವೀಯದ ದೇವರೇಕೆ ತಾಯಿ?
ನೇದಾದಮೇಲ್ದರದ ನಿರ್ಧರ ತಾಯಿ!
ಕಾದು ಕಾರ್ಯಸಿದ್ಧಿಯಾದ್ಮೇಲ್ಮಾತು ತಾಯಿ! (ತಾ)
-ಯಿ, ನಿರಂಜನಾದಿತ್ಯ ಕೈಗ್ಬಂದ ಕಾಯಿ!!!
-ಟವಿಟ್ಟಪ್ಪಟ ನೀನಾಗಯ್ಯಾ! (ಮ)
-ನೋಮಯ ಕೋಶ ಹರಿಯಯ್ಯಾ! (ಗೂ)
-ಟಕ್ಕದನ್ನಾಮೇಲ್ಬಿಗಿಯಯ್ಯಾ!
ಕಾಟವಾಗ ತಪ್ಪುವುದಯ್ಯಾ! (ನಾ)
-ಟಕವೀಗ ಸಾಕು ಮಾಡಯ್ಯಾ!
ಕಾಲಾನ್ಕೂಲವಿಹುದೀಗಯ್ಯಾ! (ಗ)
-ಣನಾಯಕನಿಷ್ಟವಿದಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾಗಯ್ಯಾ!!!
ಬಿಗಿದಪ್ಪಪ್ಪನಡ್ಯೆಂಬಂಬಿಗಯ್ಯಾ! (ಬ)
-ಗೆಯ್ಬೇಡ್ಕೇಡನ್ಯರಿಗೆಂಬಂಬಿಗಯ್ಯಾ!
ಬೇಗ ಸಾಗ್ಲೀ ಯಾತ್ರೆಯೆಂಬಂಬಿಗಯ್ಯಾ!
ಕಿಂಕರನಾ ನಿನಗೆಂಬಂಬಿಗಯ್ಯಾ!
ಬಿಡ್ಬೇಡೆನ್ನ ಕೈ ನೀನೆಂಬಂಬಿಗಯ್ಯಾ! (ಹೋ)
-ಗೆಂದಿಗೂ ನಿನ್ನ ಬಿಟ್ಟೆಂಬಂಬಿಗಯ್ಯಾ!
ಬಂಧು, ಬಾಂಧವ ನೀನೆಂಬಂಬಿಗಯ್ಯಾ! (ಹೊಂ)
-ಬಿಸಿಲ್ನಿನ್ನ, ಕೃಪೆಯೆಂಬಂಬಿಗಯ್ಯಾ! (ಭೋ)
-ಗ, ತ್ಯಾಗ, ಯೋಗೆವಿದೆಂಬಂಬಿಗಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯನಿಂದಿಂಬಯ್ಯಾ!!!
-ನಾಗಿ ತಗೊಳ್ಳುವ ರಜಾ ಕೆಲವು! (ಮು)
-ಗಿಯುತಿದೆಯಿಂತುದ್ಯೋಗದಿರುವು!
ಕೊಡುವ ಕೂಲಿ ಸಾಕಾಗ್ದೇ ಹಸಿವು! (ದು)
-ಡುಕಿದರಾಗ್ದಧಿಕಾರಿಯೊಲವು! (ಭಾ)
-ವ, ಭಕ್ತಿಗೀಗ ಬಾರದು ದಯವು! (ಊ)
-ರ ಬಿಟ್ಟರೂ ಬಿಡದು ಪ್ರಾರಬ್ಧವು!
ಜಾತಿ ದ್ವೇಷದಿಂದಾಗ್ವುದನ್ಯಾಯವು!
ಕೆಟ್ಟಿಹುದಜ್ಞಾನದಿಂದೀ ಜಗವು!
ಲಕ್ಷ್ಯ ಸಿದ್ಧಿಯಿಂದ ನಿತ್ಯ ಸುಖವು! (ಈ)
-ವುದದ ನಿರಂಜನಾದಿತ್ಯಾತ್ಮವು!!!
ಮದಾಂಧ ಕನ್ಯಾಪಿತನಧ್ವರಾಲಾಪ! (ಗ)
-ಣನಾಯಕ ವೀರಭದ್ರನ ಪ್ರತಾಪ! (ಗಂ)
-ಗೆ, ಭಾಗೀರಥಿಯಾತ್ಮೀಯ ಅನುಕಂಪ!
ಕೋಪಾಗ್ನಿಗಾಹುತಿಯಾದ ದಕ್ಷ ಭೂಪ!
ಪರ್ವತೇಶನಲ್ಲುದಿಸಿತೊಂದು ದೀಪ! (ಅ)
-ರಸಿ ಬಂದನಲ್ಲಿಗೆ ಕೈಲಾಸಾಧಿಪ!
ಮಗಳನಿತ್ತವನು ಹಿಮಾಚಲಾಧಿಪ! (ರಾ)
-ಣಿಯೊಡಗೂಡ್ಯಾದನು ಗಿರಿಜಾಧಿಪ! (ಕಾ)
-ಗೆ ಸರ್ವರನ್ನಾಸಚರಾಚರಾಧಿಪ!
ತಾಳ, ಮೇಳ, ಭಜನಾನಂದಾತ್ಮಾಧಿಪ!
ಪರಾತ್ಪರ ನಿರಂಜನಾದಿತ್ಯಾಧಿಪ!!!
-ದೆಯೇ ಅವಕಾಶವೀಗೆಂದ!
ಪಾಪಿ ನಾನಾಗಿರುವೆನೆಂದ!
ದರ್ಶನಕೆ ಕಾಯ್ಲಾರೆನೆಂದ! (ಬಂ)
-ದ ಹಾಗೇ ಹೋಗಲೇ ನಾನೆಂದ! (ದ)
-ರ್ಶನವಾಗ್ವುದೆಂದಿಂದು ಅಂದ! (ಹೀ)
-ನ ಭಾಗ್ಯಗಾಗದಾತ್ಮಾನಂದ! (ಬೇ)
-ಕೆಂಬ ಭಕ್ತಗಾಳು ಗೋವಿಂದ! (ಬಂ)
-ದ ನಿರಂಜನಾದಿತ್ಯಾನಂದ!!!
ತಂತ್ರಗಾರ ನೀನೆಂಬುದಾ ನಾಲಿಗೆ! (ಮಿ)
-ತ್ರದ್ರೋಹ ಮಾಡ್ಬೇಡೆಂಬುದಾ ನಾಲಿಗೆ!
ವಿವಿಧ ರುಚ್ಯೇಕೆಂಬುದಾ ನಾಲಿಗೆ! (ಪು)
-ಲ್ಲನಾಭನ ಹಾಡೆಂಬುದಾ ನಾಲಿಗೆ! (ಆ)
-ದಿತ್ಯನೆನ್ನಯ್ಯನೆಂಬುದಾ ನಾಲಿಗೆ!
ಹುಸಿಯಾಡೆ ನಾನೆಂಬುದಾ ನಾಲಿಗೆ!
ದಾಸದಾಸ ನಾನೆಂಬುದಾ ನಾಲಿಗೆ!
ನಾನೇಕೆ ನೀಚನೆಂಬುದಾ ನಾಲಿಗೆ! (ಪಾ)
-ಲಿಸು ಪತಿತನೆಂಬುದಾ ನಾಲಿಗೆ! (ಹ)
-ಗೆ ನಿರಂಜನಾದಿತ್ಯನಾರಿಗೆ???
ತ್ರಯಕ್ಷರೀ ಮಂತ್ರಾರ್ಥನೆಂದವಗೆ ಬಾಗು!
ನುಡಿ, ನಡೆಯಲ್ಲಿ ಅವನಂತೆ ನೀನಾಗು!
ಪಜ್ಜೆ, ಪಜ್ಜೆಗವನ ನೋಡುವವನಾಗು!
ಕಾರ್ಯದಕ್ಷತೆಯಾದರ್ಶದಲ್ಲವನಾಗು! (ಪ)
-ರಬ್ರಹ್ಮನವನ ಪ್ರೀತಿಪಾತ್ರ ನೀನಾಗು! (ಬೆ)
-ಕ್ಕೆಗೀಡಾಗಿಸ್ಬೇಡೆಂದವಗೆ ಶರಣಾಗು!
ಚಿದಾನಂದಾನುಗ್ರಹ ಮಾಡೆಂಬವನಾಗು!
ರಘುಪತಿ ರಾಘವ ರಾಜಾರಾಮನಾಗು!
ಋಣಾನುಬಂಧ ಬಿಡಿಸಿಕೊಂಡವನಾಗು! (ರಾ)
-ಣಿಯೊಡಗೂಡಿ ಪಟ್ಟಾಭಿಷಿಕ್ತ ನೀನಾಗು! (ಮಾ)
-ಯಾ, ಮಾಧವರೈಕ್ಯಾನಂದಾನುಭವಿಯಾಗು! (ಆ)
-ಗು, ನಿರಂಜನಾದಿತ್ಯಾನಂದನೇ ನೀನಾಗು!!!
-ಠ್ಠಲ ರುಕ್ಮಿಣಿಯೂ ಆದ!
ಲಯಕಾರಕನೂ ಆದ! (ಮ)
-ನೆಗೆಲಸದಾಳೂ ಆದ! (ಬ)
-ಲ್ಲವನಾಗಿ ಗುರೂ ಆದ! (ಆ)
-ವೂರೀವೂರರಸೂ ಆದ!
ಆಲಯದ್ಗೊಂಬೆಯೂ ಆದ! (ಆ)
-ದ ನಿರಂಜನಾದಿತ್ಯಾದ!!!
ಮನೆಯೊಳಗಲ್ಲಿಲ್ಲಿ ಸೋರುತ್ತಿದೆ! (ಸೋ)
-ನೆ ದಿನ, ರಾತ್ರಿ ಸುರಿಯುತ್ತಲಿದೆ! (ತಾ)
-ಯೊಲವು ಬಾಲನ ಮೇಲಾಗದಿದೆ! (ಥ)
-ಳಕಿನ ಬಾಳು ಬೇಸರವಾಗಿದೆ! (ಸಂ)
-ಗ ಅಪ್ಪನದ್ದು ದೊರೆಯದಾಗಿದೆ! (ಎ)
-ಲ್ಲಿ ನೋಡಿದರಲ್ಲವನಿರುವಾಗಿದೆ! (ಅ)
-ಲ್ಲಿಲ್ಲೋಡಾಡಿ ಬಹಳ ಸುಸ್ತಾಗಿದೆ!
ಸೋದರರಾದರವಿಲ್ಲದಾಗಿದೆ! (ಕ)
-ರುಣಿಸಿರೆಂಬ ಪ್ರಾರ್ಥನೆಯಾಗಿದೆ! (ಹ)
-ತ್ತಿರವಿರಬೇಕೆಂಬಿಚ್ಛೆಯಾಗಿದೆ! (ತಂ)
-ದೆ ನಿರಂಜನಾದಿತ್ಯನೆಂದಾಗಿದೆ!!!
ಶಕ್ತಿ, ಬೆಳಕಿನ ಬಿಂಬ ಜಗದಾಂಬ! (ಭ)
ಕ್ತಿ ವಿಚಾರದಿಂದ ಭಕ್ತನಿದ ಕಾಂಬ!
ಬೆಳಕಾಧಾರ ಸಕಲ ಕಾರ್ಯಕ್ಕೆಂಬ! (ಕ)
-ಳವಳ ಬುದ್ಧಿಗಿದರಿವಾಗದೆಂಬ! (ಬೆಂ)
-ಕಿಯಿದರೊಳಗಡಗಿರುವುದೆಂಬ! (ಅ)
-ನವರತಾಭ್ಯಾಸದಿಂದ ತಾನದೆಂಬ!
ಬಿಂಬವಾಗ ಶುದ್ಧ ಶಿವಲಿಂಗವೆಂಬ!
ಬಯ್ಲಾಡಂಬರಕ್ಕದಳವಡದೆಂಬ!
ಜರಾ, ಜನ್ಮದುಃಖ ಅದಕ್ಕಿಲ್ಲವೆಂಬ!
ಗತಿಯಾದರದು ನಿಜಸ್ಥಿತಿಯೆಂಬ! (ಮ)
-ದಾಂಧತೆಗದರಲ್ಲೆಡೆಯಿಲ್ಲವೆಂಬ! (ಅಂ)
-ಬ ನಿರಂಜನಾದಿತ್ಯಾನಂದನಾ ಬಿಂಬ!!!
ಧರ್ಮವೆಂದು ಚರ್ಮ ಸುಲಿಯಬೇಡಯ್ಯಾ! (ಕ)
-ರ್ಮ, ತನ್ನಾತ್ಮೋದ್ಧಾರಕ್ಕಿರಬೇಕಯ್ಯಾ!
ವೆಂಕಟೇಶನ ಸ್ವರೂಪ ನಿನ್ನದಯ್ಯಾ!
ದುರ್ವಿಷಯಿಗೆಂದೂ ದುಃಖ ತಪ್ಪದಯ್ಯಾ!
ಚರಾಚರಾಂತರ್ಯಾಮಿ ನಿನ್ಮಾತ್ಮನಯ್ಯಾ! (ಮ)
-ರ್ಮವಿದನರಿತಿನ್ನಾದರೂ ಬಾಳಯ್ಯಾ!
ಸುಖವಾಗಿರು ಗುರಧ್ಯಾನದಿಂದಯ್ಯಾ!
ಲಿಪ್ತನಾಗಬೇಡ ಕೆಟ್ಟಭ್ಯಾಸಕ್ಕಯ್ಯಾ! (ಭ)
-ಯ, ಭಕ್ತಿಯಿಂದ ತೃಪ್ತಜೀವಿಯಾಗಯ್ಯಾ!
ಬೇರಿನ್ಯಾವ ದಾರಿಯೂ ಸುಖವಿಲ್ಯಯ್ಯಾ! (ಮ)
-ಡದಿ, ಮಕ್ಕಳ ಹೊಣೆಗಾರನಾರಯ್ಯಾ? (ಅ)
-ಯ್ಯಾ! ನಿರಂಜನಾದಿತ್ಯನಾಗಿಹನಯ್ಯಾ!!!
ತಾಯಾಗಿ ಫಲಕಾರಿ ಈ ಬಣ್ಣ!
ಲಕ್ಷ್ಯ ಸಿದ್ಧಿಗುಪಕಾರೀ ಬಣ್ಣ! (ಲ)
-ಕ್ಷ್ಯಿಯ ಪಾವನ ಗೈದುದೀ ಬಣ್ಣ!
ಬಲ ಪತಿಸೇವೆಗಿದೇ ಬಣ್ಣ! (ಅ)
-ಣ್ಣ, ತಮ್ಮಕ್ಕ ತಂಗ್ಯೆಂಬುದೀ ಬಣ್ಣ!
ನಯ, ವಿನಯ ಸಂಕೇತಾ ಬಣ್ಣ! (ಅ)
-ನ್ನಪೂರ್ಣೆದೇವಿಗಾನಂದಾ ಬಣ್ಣ!
ಬಹುದಿನದ ಸುಕೃತಾ ಬಣ್ಣ! (ಅ)
-ಣ್ಣ, ನಿರಂಜನಾದಿತ್ಯನಾ ಬಣ್ಣ!!!
ಮಳೆ ಸುರ್ಸಿ, ದೀಪಾರ್ಸಿ, ಸೇವೆ ತಕ್ಕೊಂಡ! (ವೇ)
ಳೆ ಹೇಳದೇ ಭಜನೆ ಮಾಡಿಸಿಕ್ಕೊಂಡ!
ಸುತ್ತುಮುತ್ತೆಲ್ಲರನ್ನು ಕೂಡ್ರಿಸಿಕ್ಕೊಂಡ! (ತ)
ರ್ಸಿ ಹಣ್ಣು, ಹಂಪಲು ಸ್ವೀಕರಿಸಿಕ್ಕೊಂಡ!
ದೀನ ರೋಗಿಗಳ ವಿಚಾರಿಸಿಕ್ಕೊಂಡ!
ಪಾದ ಕೊಟ್ಟು ನಮಸ್ಕಾರ ಮಾಡ್ಸಿಕ್ಕೊಂಡ! (ಇ)
ರ್ಸಿ ಪುರುಷಸೂಕ್ತದಿಂದ ತೊಳ್ಸಿಕ್ಕೊಂಡ!
ಸೇವೆ ಸಾರ್ಥಕವಾಯ್ತೆಂದೆನಿಸಿಕ್ಕೊಂಡ! (ಸ)
-ವೆಯಬೇಕು ಪ್ರಾರಬ್ಧ ಹೀಗೆಂದುಕ್ಕೊಂಡ!
ತಪ್ಪಿಸಿ ನಡೆಯೆವೆಂದು ಭಾಷೆ ತಕ್ಕೊಂಡ! (ತ)
-ಕ್ಕೊಂಡ, ಬೀಳ್ಕೊಂಡ, ಗರುಡನೇರೀ ಗಂಡ! (ಗಂ)
-ಡ ನಿರಂಜನಾದಿತ್ಯಾನಂದಾ ಪ್ರಚಂಡ!!!
ಸಿಡಿಲ್ಮಿಂಡು, ಮಳೆ, ಗಾಳೀ, ಬಾಳು! (ಅ)
-ಡಿಗೆಟ್ಟುರುಳಿಸುವುದಾ ಬಾಳು! (ಕೋ)
-ಲ್ಲಿಂಚಿನಂತನಿತ್ಯದ್ದಾಶಾ ಬಾಳು! (ಚಾ)
-ಡುವುದು ಕೈಯ್ಯ ಧನಕ್ಕಾ ಬಾಳು!
ಮನ ಬಂದಂತಾಡುವುದಾ ಬಾಳು! (ಹ)
-ಳೆಯ ವಾಸನೆಗಳಾಳಾ ಬಾಳು (ರಂ)
-ಗಾಧಿಪನ ನೆನೆಯದಾ ಬಾಳು! (ಕಾ)
-ಳೀ, ಬೋಳೀಯೆಂಬಸಹ್ಯದಾ ಬಾಳು!
ಬಾಹ್ಯಾಡಂಬರದಾ ಕೀಳು ಬಾಳು! (ಬಾ)
-ಳು! ನಿರಂಜನಾದಿತ್ಯನಾಗ್ಯೇಳು!!!
-ಗನಾಥ ಜಿನನೆಂದು ಭಾರತೀ! (ಕ)
-ಳಾನಿಧ್ಯಾಲಾಪಿಸುತ್ತ ಭಾರತೀ! (ವ)
-ರ ನಿನಗವನೀವ ಭಾರತೀ!
ತಿಳಿದವನಂತಾಗು ಭಾರತೀ! (ಮಾ)
-ಯೆಗೊಳಗಾಗಬೇಡ ಭಾರತೀ! (ಸ)
-ತ್ತು, ಹುಟ್ಟುವ ಬಾಳ್ಸಾಕು ಭಾರತೀ!
ಭಾಗ್ಯ ಭಜನಾನಂದ ಭಾರತೀ!
ರಮಿಸದರಲ್ನೀನು ಭಾರತೀ! (ಪ)
-ತೀ, ನಿರಂಜನಾದಿತ್ಯಾಧಿಪತೀ!!!
-ವ ಗುಣ ಸಂಪನ್ನಾ ಶಶಿಧರ! (ರಂ)
-ಗಾಧಿಪನಾಪ್ತಾತ್ಮಾ ಶಶಿಧರ! (ದಾ)
-ನವಕುಲ ಕಾಲಾ ಶಶಿಧರ!
ಪ್ರಿಯಾಪ್ರಿಯ ವರ್ಜ್ಯಾ ಶಶಿಧರ!
ಯಾಗ, ಯೋಗಾಧಾರಾ ಶಶಿಧರ!
ಶಕ್ತಿ, ಮುಕ್ತಿ, ದಾತಾ ಶಶಿಧರ!
ಶಿವ, ಶಕ್ತ್ಯೇಕಾತ್ಮಾ ಶಶಿಧರ!
ಧರ್ಮ, ಕರ್ಮಾಕಾರಾ ಶಶಿಧರ! (ವ)
-ರ ನಿರಂಜನಾದಿತ್ಯಾತ್ಮಾಕಾರ!!!
ದಿನ ಬಹಳಾಯ್ತು ಹೋಗಿ ನೀ ತಂಗೀ!
ಹರೆಯದಾಟವೆಷ್ಟು ದಿನ ತಂಗೀ? (ಜ)
-ನಕನ ಸೇವೆಯಿನ್ಯಾವಾಗ ತಂಗೀ? (ಕೈ)
-ಯ್ಯಲ್ಲಿದ್ದಾಗ ಮಾಡ್ಬೇಕು ದಾನ ತಂಗೀ!
ನಿನ್ನೊಬ್ಬಳ ಸ್ವಾರ್ಥಕ್ಕಿದೇನೇ ತಂಗೀ? (ದೀ)
-ನ, ದರಿದ್ರರಲ್ಲೂ ನಿನ್ನಾತ್ಮ ತಂಗೀ! (ಆ)
-ಗಾಗಾತ್ಮ ವಿಚಾರ ಮಾಡಮ್ಮ ತಂಗೀ! (ಯೋ)
-ಗಿರಾಜ, ಶಿವ ಜಗದಯ್ಯ ತಂಗೀ!
ತಂದೆಗೆ ತಕ್ಕ ಮಗಳಾಗು ತಂಗೀ (ತಂ)
-ಗೀ ನಿರಂಜನಾದಿತ್ಯಮ್ಮಯ್ಯ ತಂಗೀ!!!
ನುಡಿದಂತೆ ನೀನಿರಬಾರದೇನೇ?
ವಿಧಿಲೀಲೆ ವಿಚಿತ್ರವಲ್ಲವೇನೇ?
ಗೂಗೆ, ಕಾಗೆಗೂ ಇದನ್ವಯ ತಾನೇ?
ಅವನಾಟವನಿಗೇ ಚಂದ ತಾನೇ! (ಒ)
-ಡ್ಡಿ ಜಾಲವನದರಲ್ಲಿರ್ಪ ತಾನೇ!
ಆಗ್ಬೇಕಾ ಶೀಪಾದಕ್ಕೆ ದಾಸಿ ನೀನೇ!
ತಂದೆಯ ಮುಂದೆ ನಿನ್ನ ಜಂಭವೇನೇ?
ಕರುಣೆಯವನದಮೃತ ಸೋನೇ!
ವೇದನೆಯದರಿಂದ ನಾಶ ದೀನೇ! (ನೀ)
-ನೇ ನಿರಂಜನಾದಿತ್ಯನಾಗ್ಬಾರದೇನೇ???
-ರ್ತಮಾನ ಪ್ರವರ್ತಕಳಾಗ್ಬೇಡ್ವೇನೇ?
ವ್ಯಸನ ವಿಷಯಾಸೆಯಿಂದಲ್ವೇನೇ?
ವಿಚಾರ ಮಾಡಿ ಬಿಡಲ್ಪಯೋಚನೇ! (ಸಂ)
-ದೇಹಬಿಟ್ಟು ಮಾಡು ಗುರುಭಜನೇ!
ನೇಮ ನಿಷ್ಠೆ ಬೇಕು ಮೃಗನಯನೇ!
ಭಾರತಿಗಿದಾದರ್ಶ ಮಂದಯಾನೇ! (ದು)
-ಷ್ಟರಿಣಾಮಕಾರೀ ಲೋಕವಾಸನೇ!
ಲೋಭ, ಮೋಹಕ್ಕಾಗದು ಪ್ರಚೋದನೆ!
ಚರಾಚರಾತ್ಮ ನೀನೆಂದ್ಮಾಡ್ಸಾಧನೇ! (ನೀ)
-ನೇ ನಿರಂಜನಾದಿತ್ಯಾಗ್ಯಾಗ್ಪಾವನೇ!!!
ಭಾರತೀ! ನಿನಗೆ ಶ್ರೀ ಕೃಷ್ಣ ಸಾರಥಿ! (ವ)
-ರ ಗೀತಾಮೃತನಾ ರಥದ ಸಾರಥಿ!
ತೀರ್ಥ, ಕ್ಷೇತ್ರದರ್ಥ ಬೋಧಕಾ ಸಾರಥಿ!
ನಿಶ್ಚಲ ತತ್ವ ಮುಕ್ತ್ಯೆಂಬಾ ಸಾರಥಿ!
ನನ್ನಲ್ಲೀರೇಳು ಲೋಕವೆಂಬಾ ಸಾರಥಿ!
ಗೆಲುವು, ಸೋಲು, ನನ್ನಿಂದೆಂಬಾ ಸಾರಥಿ!
ಶ್ರೀಗುರು ದತ್ತಾತ್ರೇಯನೆಂಬಾ ಸಾರಥಿ!
ಕೃಷ್ಣ, ರಾಧಾಕೃಷ್ಣ ನಾನೆಂಬಾ ಸಾರಥಿ! (ಉ)
-ಷ್ಣ, ಶೀತ ಸಮ ನನಗೆಂಬಾ ಸಾರಥಿ!
ಸಾಮವೇದಾನಂದ ನಾನೆಂಬಾ ಸಾರಥಿ!
ರವಿ ಸ್ವರೂಪ ನನ್ನದೆಂಬಾ ಸಾರಥಿ! (ರ)
-ಥಿ ನಿರಂಜನಾದಿತ್ಯಗಾತ ಸಾರಥಿ!!!
-ವಬಂಧದಿಂದವ ನಿವೃತ್ತ! (ತಾ)
ನ್ಮುನಿಯೆನಿಸಿಹನಾ ದತ್ತ! (ಭ)
-ಕ್ತರುದ್ಧಾರಕ್ಕಾಗಿದು ಯುಕ್ತ! (ನೀ)
-ನೇ ಅವನಾಗ್ಬೇಕಾ ಪ್ರಯುಕ್ತ!
ಸತತಾಭ್ಯಾಸಿಗದು ಪ್ರಾಪ್ತ! (ಸ)
-ರ್ವಸಂಗತ್ಯಾಗ್ಯಾಗಾ ನಿಮಿತ್ತ! (ನಾ)
-ಶವಾಗುವುದಾಗಾಶಾ ಚಿತ್ತ! (ಮು)
-ಕ್ತ ನಿರಂಜನಾದಿತ್ಯಾ ಶಕ್ತ!!!
ಪುಲ್ಲಿಂಗ, ಸ್ತ್ರಿಲಿಂಗ, ನಪುಂಸಕಾ ಲಿಂಗ! (ಕ)
-ಲ್ಲಿಂದಲೂ ಮಾಡಿ ಪೂಜಿಸುವರಾ ಲಿಂಗ!
ಗತಿಗೇಡಿಂದ ಪಾರಾದರಾತ್ಮ ಲಿಂಗ!
ಸ್ತ್ರಿ ರೂಪಿನಿಂದದು ದಾಕ್ಷಾಯಿಣೀ ಲಿಂಗ!
ಲಿಂಗಾಕಾಶ ಭೇದಿಸಿದಾಗ್ಮಹಾ ಲಿಂಗ! (ಸಂ)
-ಗಮ್ನದ್ದಾದಾಗರ್ಧನಾರಿಶ್ವರ ಲಿಂಗ!
ನರ್ತನ ಗೈದಾಗ ನಟರಾಜ ಲಿಂಗ!
ಪುಂಡರನ್ನಡಗಿಸಿದಾಗಗ್ನಿ ಲಿಂಗ!
ಸಚ್ಚಿದಾನಂದನಾದಾಗ ಜ್ಞಾನ ಲಿಂಗ!
ಕಾಮನಳಿದಾಗ ಕಾಮೇಶ್ವರ ಲಿಂಗ!
ಲಿಂಗಪೂಜೆಯಿಂದ ಸದಾ ರಾಮ ಲಿಂಗ! (ಖ)
-ಗನಿರಂಜನಾದಿತ್ಯಾ ಲೋಕೈಕ ಲಿಂಗ!!!
ಅತ್ತೆಯೊಡೆದ ಪಾತ್ರೆಗೆ ಬೆಲೆಯಿಲ್ಲ! (ಸ)
-ತ್ತೆನೆಂದರೂ ಸೊಸೆಯ ಕೇಳ್ವವರಿಲ್ಲ! (ತಾ)
-ಯೊಡನಿರುವ ಭಾಗ್ಯ ಅವಳಿಗಿಲ್ಲ! (ಒ)
-ಡೆಯನಧಿಕಾರಕ್ಕೆ ಪಾರವೇ ಇಲ್ಲ!
ದರಿದ್ರ ದಾಸನಿಗೆ ದೇಶವೇ ಇಲ್ಲ!
ಪಾಪಿ ನೀನೆಂದು ಮೂದಲಿಸುವರೆಲ್ಲ! (ಯಾ)
-ತ್ರೆ ಮುಗಿಸುವುದೆಂತೆಂದೆಂಬವರಿಲ್ಲ!
ಗೆಳೆಯ ಕೃಷ್ಣಲ್ಲದನ್ಯ ಗತಿಯಿಲ್ಲ!
ಬೆಟ್ಟವನೆತ್ತಿದವ ಸಾಮಾನ್ಯನಲ್ಲ! (ಲೀ)
-ಲೆಯವನದು ಬಣ್ಣಿಸಲಳವಲ್ಲ! (ಬಾ)
-ಯಿಯಲ್ಲಿ ಬ್ರಹ್ಮಾಂಡ ತೋರಿಸಿದಾ ಗೊಲ್ಲ! (ಬ)
-ಲ್ಲ ನಿರಂಜನಾದಿತ್ಯನನ್ನಾ ಪ್ರಪುಲ್ಲ!!!
-ಲ್ಲವಗೇನೆಂದೆನಲಿ ಗಣೇಶಾ?
ರಂಭಾ ಫಲ ತಿನ್ನು ಬಾ ಗಣೇಶಾ! (ಕ)
-ತೆ, ಪುರಾಣಾಮೇಲಾಗ್ಲಿ ಗಣೇಶಾ!
ನಾ ನಿನ್ನ ನೊಡ್ಲೇಬೇಕು ಗಣೇಶಾ!
ನನ್ನಣ್ಣ ನೀನಲ್ಲವೇ ಗಣೇಶಾ? (ಅ)
-ಲ್ಲವಾದರಲ್ಲವೆನ್ನು ಗಣೇಶಾ!
ಗತಿಸುತಿದೆ ಕಾಲ ಗಣೇಶಾ! (ಹ)
-ಣೇ ಬರಹವಾರಿಗೆ ಗಣೇಶಾ? (ಈ)
-ಶಾ ನಿರಂಜನಾದಿತ್ಯ ಗಣೇಶಾ!!!
ನಾನು ನಿನಗನ್ಯನೇ ಗೌರೀ? (ಆ)
-ದ್ರೂ ನಿನಗೆಷ್ಟನಾದ್ರ ಗೌರೀ? (ಅ)
-ಬಲನ ಮೇಲ್ಕೋಪೇಕೆ ಗೌರೀ? (ಇ)
-ರ್ಬಾರ್ದು ಹೀಗಾದ್ರಾನಿನ್ನು ಗೌರೀ! (ಹ)
-ರನರಸಿ! ಬಾ ಬೇಗ ಗೌರೀ!
ದೇಶ, ಕಾಲಾನ್ಕೂಲ್ವಿದೆ ಗೌರೀ!
ಗೌಪ್ಯ ನನ್ನಲ್ಲೇನಿಲ್ಲ ಗೌರೀ! (ಹ)
-ರೀ ನಿರಂಜನಾದಿತ್ಯ ಗೌರಿ!!!
ಗಣೇಶನಿಗೆ ನಾನಾ ಭಕ್ಷ್ಯ ನೇವೇದ್ಯ! (ಗ)
-ಣೇಶನ ಹೆಸ್ರಲ್ಲಾಯ್ತೆಲ್ಲರ್ಗಾ ನೇವೇದ್ಯ! (ದೇ)
-ಶದಲ್ಲೆಲ್ಲಾಗ್ವುದಿಂದಾ ಮಹಾ ನೇವೇದ್ಯ!
ನಿಶ್ದಿನವನ ಸ್ಮರಣೆಯಾ ನೇವೇದ್ಯ! (ಗಂ)
-ಗೆ, ಗೌರಿಯರಿಗೂ ಈ ದಿನಾ ನೇವೇದ್ಯ!
ನಾಶವಾಗ್ವುದೆಲ್ಲಾ ಮಲಾನುಭವ ವೇದ್ಯ!
ನಾಮ, ರೂಪಾತೀತ ಭವರೋಗ ವೈದ್ಯ! (ಶು)
-ಭ ಸಂದೇಶವಿದೆಲ್ಲರ್ಗಾಗ್ಲಿ ಪ್ರಚೋದ್ಯ! (ಲ)
-ಕ್ಷಸಿದ್ಧಿಗಿರ್ಬೇಕತ್ಯಗತ್ಯ ವೈರಾಗ್ಯ! (ನಾ)
-ನೇ ನೀನಾಗುವಾನಂದ ಪರಮ ಭಾಗ್ಯ!
ವೇದಾಂತಕ್ಕಿರ್ಪ ಹೆಗ್ಗುರಿ ಈ ಸೌಭಾಗ್ಯ! (ವಂ)
-ದ್ಯ, ನಿರಂಜನಾದಿತ್ಯನಿಗೆಲ್ಲಾ ವೇದ್ಯ!!!
ಪಾದುಕೆಯಿತ್ತಾದತ್ತ, ಭಾರವ ಹೊತ್ತು! (ಪಾ)
-ದುಕೆ ಹೊತ್ತಾ ಭಕ್ತ ಕುಣಿದ ಹಾಡುತ್ತ! (ಶಂ)
-ಕೆಯಾಯಿತಿತರರಿಗಿದೇನೆನುತ್ತ! (ನಾ)
-ಯಿಯಾ ಬಂದು ಮಲಗಿತಿದ ನೋಡುತ್ತ! (ಹೊ)
-ತ್ತಾದರೂ ಭಾವ ಸಾಗಿತು ಪಾದದತ್ತ!
ದತ್ತಲೀಲೆಯರಿವಾಗದಾಯಿತಿತ್ತ! (ಕ)
-ತ್ತಲೆ ಕವಿದಾವರಿಸಿತು ಸುತ್ಮುತ್ತ!
ಭಾವಾವೇಶಕ್ಕೇರಿತಾಗೆಲ್ಲರ ಚಿತ್ತ! (ಪ)
-ರಮಾನಂದ ಪರವಶನಾದ ದತ್ತ!
ವರ ಗುರು ಸ್ವರೂಪವಿದೆಂದೆನುತ್ತ!
ಹೊರಗೊಳಗೆ ಬೆಳಕಾಯ್ತಾಗ ಸುತ್ತ! (ದ)
-ತ್ತು ನಿರಂಜನಾದಿತ್ಯಾನಂದನೆನುತ್ತ!!!
-ದಿರದೊಳಗಿಹ ನೋಡಪ್ಪಾ!
ಹದನ ನಿನ್ನದೀಗೇನಪ್ಪಾ? (ಮ)
-ನೆಗೆಲಸ ಬಾಕ್ಯೇನಿಲ್ಲಪ್ಪಾ!
ನನ್ನ ಕೂಗು ಕೇಳ್ಸಿತೇನಪ್ಪಾ? (ಆ)
-ಗಾಗ್ಬರುತಿರ್ಬೇಕು ನೀನಪ್ಪಾ! (ಬೇ)
-ಗೆಶಾಂತಿ ನಿನ್ನಿಂದದಾಗ್ಬೇಕಪ್ಪಾ! (ಅ)
-ಲ್ಲ ಸಲ್ಲದಾಸೆನಗಿಲ್ಲಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯ ಬಾಪ್ಪಾ!!!
-ನ್ನಂಗ ತಾನಲ್ಲೆಂಬವಗೆ ಸಾಧ್ಯ! (ಸಂ)
-ತಾನಕ್ಕಾಶಿಸದವಗೆ ಸಾಧ್ಯ!
ಗುರುವಿನ ಗುಲಾಮಗೆ ಸಾಧ್ಯ! (ಸಾ)
-ವು, ನೋವಿಗಳದವಗೆ ಸಾಧ್ಯ! (ಸ)
-ದಾತ್ಮ ಧ್ಯಾನ ನಿಷ್ಠನಿಗೆ ಸಾಧ್ಯ! (ಅ)
-ರಿಗಳ ಜೈಸಿದವಗೆ ಸಾಧ್ಯ! (ಆ)
-ಗೆ ಸರ್ವೋದಯೆಂಬವಗೆ ಸಾಧ್ಯ! (ಸಂ)
-ಸಾರ ನಿಸ್ಸಾರಾದವಗೆ ಸಾಧ್ಯ! (ಸಾ)
-ಧ್ಯ ನಿರಂಜನಾದಿತ್ಯಗೆ ಸಾಧ್ಯ!!!
-ಣಕಿಪುದಕ್ಕನ್ಯರನ್ನಲ್ಲಾ ಉತ್ಸವ!
ಪರಾಭಕ್ತಿಯಿಂದಾದ್ರದು ಮಹೋತ್ಸವ! (ಮ)
-ತಿಗೆಟ್ಟು ಮರೆವುದಕ್ಕೆಲ್ಲಾ ಉತ್ಸವ!
ಮಂಗಳಕರಾಚಾರ ನಿರ್ಮಲೋತ್ಸವ!
ಗಣಪತಿಗಿದತ್ಯಂತ ತೃಪ್ತ್ಯೋತ್ಸವ! (ಆ)
-ಳಾಗಿ ಗುರುವಿಗೆ ಮಾಡ್ಬೇಕೀ ಉತ್ಸವ! (ತ)
-ರತರದಾಟ, ನೋಟಕ್ಕಲ್ಲಾ ಉತ್ಸವ!
ತಿಳಿದಿದ ಮಾಡ್ಬೇಕು ಗಣೇಶೋತ್ಸವ! (ಕಾ)
-ಯುವುದಾಗೆಲ್ಲರನ್ನಾ ಆದರ್ಶೊತ್ಸವ! (“ತ)
-ತ್ಸರ್ವಂ” ಭಾವದಿಂದಾಗ್ಬೇಕೆಲ್ಲಾ ಉತ್ಸವ! (ಶಿ)
-ವಗೆ ನಿರಂಜನಾದಿತ್ಯಾನಂದೋತ್ಸವ!!!
ಬಹು ದಿನವಾಯ್ತು ನೋಡ್ಯೆಂದು ಬಂದೆ! [ಅ]
-ಹುದಾರೋಗ್ಯ ದರ್ಶನದಿಂದೆಂದ್ಬಂದೆ!
ದಿವ್ಯ ಜೀವನಾಶೀರ್ವದಿಸೆಂದ್ಬಂದೆ!
ನರಜನ್ಮ ಸಾರ್ಥಕವಾಗ್ಲೆಂದ್ಬಂದೆ! (ಭ)
-ವಾಬ್ಧಿಯಿಂದ ಪಾರಾಗಬೇಕೆಂದ್ಬಂದೆ! (ಆ)
-ಯ್ತು ವ್ಯರ್ಥ ಕಾಲಕ್ಷೇಪಲ್ಲಿಲ್ಲೆಂದ್ಬಂದೆ! (ಮ)
-ನೋಶಾಂತಿ ಕಳಕ್ಕೊಂಡಿಲ್ಲಿಗೀಗ್ಬಂದೆ! (ನೀ)
-ಡ್ಯೆಂಡು ಶಾಂತಿಭಿಕ್ಷೆ ಬೇಡಲೀಗ್ಬಂದೆ!
ದುರಿತದೂರ ಗುರು ನೀನೆಂದ್ಬಂದೆ!
ಬಂಧು, ಬಾಂಧವರ್ಬೇರಿಲ್ಲೆಂದ್ನಾ ಬಂದೆ! (ತಂ)
-ದೆ ಶ್ರೀ ನಿರಂಜನಾದಿತ್ಯನೆಂದ್ಬಂದೆ!!!
ಶುದ್ಧಪ್ರೇಮವೆಂದರೇನು ಸ್ವಾಮಿ? [ಬ]
-ದ್ಧನಾಗದಾತ್ಮ ಪ್ರೇಮದು ಕಾಈ!
ಪ್ರೇಮ ಮನೋವೃತ್ತಿ ತಾನೇ ಸ್ವಾಮಿ? (ಕಾ)
-ಮವಿಲ್ಲದ ಪ್ರೇಮಾರಾಮ ಕಾಈ! (ಸಾ)
-ವೆಂಬುದದಕ್ಕಿಲ್ಲಲ್ಲವೇ ಸ್ವಾಮಿ?
ದತ್ತ ಸ್ವರೂಪಕ್ಕದಿಲ್ಲ ಕಾಈ! (ಈ)
-ರೇಳ್ಲೋಕ ಸ್ವಾಮಿಯವ್ತಾನೇ ಸ್ವಾಮಿ? (ಅ)
-ನುಭವದಿಂದರಿತುಕೋ ಕಾಈ!
ಸಾಈ ಧ್ಯಾನಮಾಡ್ಬೇಕಲ್ವೇ ಸ್ವಾಮಿ? (ಅ)
ನುಭವದಿಂದರಿತುಕೋ ಕಾಈ!
ಸ್ವಾಮಿ ಧ್ಯಾನಮಾಡ್ಬೇಕಲ್ವೇ ಸ್ವಾಮಿ? (ಕಾ)
-ಈ! ನಿರಂಜನಾದಿತ್ಯಾಂತರ್ಯಾಮಿ!!!
ಗಿರೀಶ್ವರನ ನಾಮದಲ್ಗೈಕ್ಯನಾದ!
ಯಾಜ್ಞವಲ್ಕ್ಯನಾರೆಂದರಿತವನಾದ!
ಗಿಡ, ಮರದಲ್ಲವ್ನ ಕಂಡವನಾದ!
ಬಂಧ ತನಗಿಲ್ಲೆಂದೊರೆದವನಾದ!
ದತ್ತ ಸ್ವರೂಪ ತನ್ನದೆಂದವನಾದ!
ಯೋಗಾಭ್ಯಾಸದಲ್ಲಿ ಸಮಾಧಿಸ್ಥನಾದ! (ತ್ಯಾ)
-ಗಿಯಾಗಿ ವಾಸನಾತ್ರಯ ದೂರನಾದ! (ಮಾ)
-ಯಾಜಾಲವ ಹರಿದೊಗೆದವನಾದ!
ಗಿರಿಸುತೆ ತಾಯಿಯೆಂದಾನಂದನಾದ! (ಅ)
-ಹೋರಾತ್ರಿಯವಳಿಂದ ಪೋಷಿತನಾದ! (ಆ)
-ದ ನಿರಂಜನಾದಿತ್ಯ ದತ್ತ ತಾನಾದ!!!
-ಳ್ಳಾಗ ದಾನ ಮಾಡದಿರಬೇಡಿ!
ಕಷ್ಟವೆಂದು ಕರ್ತವ್ಯ ಬಿಡ್ಬೇಡಿ! (ಒ)
-ಳ, ಹೊರಗೆ, ಸದಾ ಶುಚಿ ಮಾಚಿ!
ಕಪಿಯಂತಲ್ಲಿಲ್ಲೋಡಾಡಬೇಡಿ! (ಗು)
-ತ್ತಿಗೆ ಸಂದಾಯ ಮಾಡದಿರ್ಬೇಡಿ!
ಗೊಂಬೆಯಾಟಕ್ಕೆ ಮರುಳಾಗ್ಬೇಡಿ!
ದುಸ್ಸಹವಾಸವೆಂದೂ ಮಾಡ್ಬೇಡಿ!
ದತ್ತ ಭಜನೆ ತಪ್ಪದೆ ಮಾಡಿ! (ನೋ)
-ಡಿ, ನಿರಂಜನಾದಿತ್ಯನ ಕೂಡಿ!!!
ಓಡಿ ಬಂದು ಚಾಡಿಯಾಡಿ ಕೇಡಿಯಾದ! (ಆ)
-ಡಿದರನ್ಯರ ಮಾತಾಗ್ವುದು ಪ್ರಮಾದ!
ಬಂಧಮುಕ್ತನಾಗಲ್ಕಿರ್ಬೇಕಾತ್ಮ ವಾದ!
ದುರ್ಬಲಗೊಳಿಸುವುದು ಮಿಥ್ಯಾ ವಾದ! (ವಿ)
-ಚಾರಿಯ ಮಾತಿಗಾಗ್ವುದು ಧನ್ಯವಾದ! (ಆ)
-ಡಿದಂತಿರದಿದ್ದರದು ವ್ಯರ್ಥ ವಾದ!
ಯಾತ್ರೆ ಹರಟೆಗಾದ್ರಾಗದು ಪ್ರಸಾದ! (ಹಾ)
-ಡಿದರೆ ಹರಿನಾಮ ಮನಕಾಹ್ಲಾದ!
ಕೇಳಿ, ಕೇಳದಂತಿರ್ಬಾರದಾರ್ತ ನಾದ! (ಮಾ)
-ಡಿದರನಾಚಾರ ತಪ್ಪದಪವಾದ! (ಮಾ)
-ಯಾಜಾಲ ಹರಿವುದು ಗೀತಾನುವಾದ!
ದತ್ತ ನಿರಂಜನಾದಿತ್ಯಾನಂದನಾದ!!!
ಸಾರ್ಥಕವಿಲ್ಲದಾಯ್ತೈಹಿಕ ಸಂಬಂಧ! (ಸಾ)
-ರ್ಥಕ ಗೈವುದು ಪರಮಾತ್ಮ ಸಂಬಂಧ!
ಕಳಂಕರಹಿತಾಗಿರ್ಪುದಾ ಸಂಬಂಧ!
ವಿಷಯ ವಾಸನೆಯಿಲ್ಲದಾ ಸಂಬಂಧ! (ಎ)
-ಲ್ಲವೂ ತಾನೆಂಬರಿವಿನಾತ್ಮ ಸಂಬಂಧ!
ದಾರಿ ತೋರುವುದು ಮುಕ್ತಿಗೀ ಸಂಬಂಧ! (ಹೋ)
-ಯ್ತೈಸಿರಿಯೆಂದಳದಿರ್ಪುದೀ ಸಂಬಂಧ!
ಹಿಮಗಿರಿ ಸುತೆ ತಾಯೆಂಬಾ ಸಂಬಂಧ!
ಕಪರ್ದಿಯ ಕೃಪೆಯಿಂದಾಯ್ತಾ ಸಂಬಂಧ! (ಅ)
-ಸಂಬಂಧ ಹೋಗಲಾಡಿಸಿತಾ ಸಂಬಂಧ!
ಬಂಡಾಯಗಾರರನ್ನಟ್ಟಿತಾ ಸಂಬಂಧ!
ಧರ್ಮ ನಿರಂಜನಾದಿತ್ಯಗಾನಂದ!!!
-ರುಕರುಗಳಿಗಾಗಿತ್ತೊಂದು ಕಾಲ! (ನ್ಯಾ)
-ಯಾನ್ಯಾಯ ತೀರ್ಮಾನಕ್ಕದೊಂದು ಕಾಲ! (ನೂ)
-ರೆಂಟು ನಾಮ ಜಪಿಸಲ್ಕೊಂದು ಕಾಲ! (ಅ)
-ದರ ಪ್ರತಿಫಲಕ್ಕಿನ್ನೊಂದು ಕಾಲ! (ಕು)
-ರು ಭೂಪತಿಯಾರ್ಭಟಕ್ಕೊಂದು ಕಾಲ! (ಇ)
-ಹುದು ಪಾಂಡವರಿಗೂ ಒಂದು ಕಾಲ! (ಆ)
-ವುದೂ ಒಂದೇರೀತಿರಿಸದೀ ಕಾಲ!
ದುರ್ಜನನೂ ಸಜ್ಜನನೊಂದು ಕಾಲ!
ಕಾಲಾಕಾಲ್ದರಿವಿಗೂ ಒಂದು ಕಾಲ! (ಕಾ)
-ಲ ನಿರಂಜನಾದಿತ್ಯಾನಂದ ಲೀಲಾ!!!
ಗುರು ಕೃಪೆಯಿಂದುಳಿಯಿತೊಂದು ಮನೆ! (ಕ)
-ರುಣೆಯವನದಪಾರವೆಂದು ನೆನೆ!
ಕೃಪಣರಾಟದಿಂದ ಪಾರಾಯ್ತಾ ಮನೆ!
ಪೆತ್ತ ತಾಯಿ ಗುರುವೆಂದು ಸದಾ ನೆನೆ! (ತ್ಯಾ)
-ಯಿಂದಲೇ ಉಳಿಯಬೇಕೆಲ್ಲರ ಮನೆ!
ದುರ್ಬುದ್ಧಿ ಬಿಡಿಸೆಂದಪ್ಪನನ್ನು ನೆನೆ! (ಧಾ)
-ಳಿಯಾದ ಮೇಲಿನ್ನೆಲ್ಲಿ ನಿನಗೆ ಮನೆ? (ಬಾ)
-ಯಿ ಮುಚ್ಚ್ಯೇಕ ನಿಷ್ಠೆಯಿಂದವನ ನೆನೆ!
ತೊಂದರೆಗೀಡಾಗದಾಗ ನಿನ್ನ ಮನೆ!
ದುರ್ಮದ ಮರ್ದನನವನೆಂದು ನೆನೆ!
ಮನ ಶುದ್ಧಿಯಾದರದುತ್ತಮ ಮನೆ! (ಮ)
-ನೆ ನಿರಂಜನಾದಿತ್ಯಗದೆಂದು ನೆನೆ!!!
ನಿತ್ಯಾದಿತ್ಯೋದಯಾಗ್ತಲಿದೆ!
ವಾರಿಜವರಳುತ್ತಲಿದೆ! (ಸ)
-ರಸ್ವತ್ಯಾವಾಹ್ನೆಯಾಗ್ತಲಿದೆ! (ಅ)
-ಹೋರಾತ್ರಿಯಿದಾಗುತ್ತಲಿದೆ!
ಗುಡಿ ಸ್ವಚ್ಛವಾಗುತ್ತಲಿದೆ! (ಕ)
-ತ್ತಲೆತ್ತಲೋ ಓಡುತ್ತಲಿದೆ! (ಮಾ)
-ಲಿಕನಾಕಾರ ಕಾಣ್ತಲಿದೆ! (ಕಾ)
-ದೆ ನಿರಂಜನಾದಿತ್ಯನಾದೆ!!!
ಭಾನುವಾರ ಬಂತು, ನೋಡುವೆ ನಿಂತು! [ತ]
-ನುಜ ನಾನೆಂಬ ನಿನ್ನಡಿಯೊಳ್ನಿಂತು! (ಆ)
-ವಾಗೇನಾಗಬೇಕೋ ಮಾಡೆಂಬೆ ನಿಂತು! (ವ)
-ರಗುರು ನಿನ್ನ ಸ್ತುತಿಪೆ ನಾ ನಿಂತು! (ಸಂ)
-ಬಂಧ ಸಾರ್ಥಕವಾಗಲೆಂಬೆ ನಿಂತು!
ತುರೀಯಾತೀತಾತ್ಮ ನೀನೆಂಬೆ ನಿಂತು!
ನೋಡುವುದದೆಂತೀ ಕಣ್ಣೆಂಬೆ ನಿಂತು! (ಕೊ)
-ಡು ದಿವ್ಯ ಶಕ್ತಿ ನನಗೆಂಬೆ ನಿಂತು! (ಸೇ)
-ವೆ ಸದಾ ಮಾಡಿಸಿಕೊಳ್ಳೆಂಬೆ ನಿಂತು! (ನೀ)
-ನಿಂತುಪೇಕ್ಷೆ ಮಾಡ್ಬಾರದೆಂಬೆ ನಿಂತು! (ಇಂ)
-ತು ನಿರಂಜನಾದಿತ್ಯಗೆಂಬೆ ನಿಂತು!!!
-ಡಬೇಕೆನಿಸಿದಾಗೊಡನೆ ಹಾಡು!
ಬೇಜಾರಾದಾಗ ಗುರುಸ್ಮರಣೆ ಮಾಡು!
ಕೆರ ಹರಿದಾಗ್ಚಮ್ಮಾರನೆಡೆಗೋಡು!
ನಿದ್ರೆಯವೇಳೆಯಲ್ಲಿ ಬಂದಾಗಡ್ಡಾಡು! (ಹ)
-ಸಿವು ಕಂಡಾಗಾಹಾರ ಸ್ವೀಕಾರ ಮಾಡು!
ದಾಹಾದಾಗ ಶುದ್ಧೋದಕ ಪಾನ ಮಾಡು!
ಗೊಡ್ಡಾಗಿಲ್ಲದಾಕಳನ್ನು ದಾನ ಮಾಡು! (ಹೆಂ)
-ಡ ಕುಡಿವ ದುರಭ್ಯಾಸ ದೂರ ಮಾಡು!
ನೆರೆಯವರ ಸ್ನೇಹ ಯೋಚಿಸಿ ಮಾಡು! (ಮ)
-ನೋ ನಿಗ್ರಹಕ್ಕೆ ಸದಾ ಪ್ರಯತ್ನ ಮಾಡು! (ಹಾ)
-ಡು, ನಿರಂಜನಾದಿತ್ಯನ ಸೇವೆ ಮಾಡು!!!
-ಷ್ಕರ್ಮಕ್ಕಿದು ಕಾಲವಂತೆ! (ಸಂ)
-ಜೀವ ದಯಾಮಯನಂತೆ! (ಭಾ)
-ವ, ಭಕ್ತಿಗೊಲಿವನಂತೆ! (ಮ)
-ನಸ್ಸೇ ಮಾಧವ ತಾನಂತೆ!
ವಿಷಯಾಸೆ ಅಡ್ಡಿಯಂತೆ!
ದಂಭ, ದರ್ಪ, ಬಿಡ್ಬೇಕಂತೆ! (ಮಾ)
-ತೆ ನಿರಂಜನಾದಿತ್ಯಂತೆ!!!
-ಲೆಗಳು ಮರಕ್ಕೆ ಚಂದ!
ಕೊಳಕ್ಕೆ ತಿಳ್ನೀರು ಚಂದ!
ರಮೆ ರಮೇಶಗೆ ಚಂದ! (ಬಾ)
-ಳಿಗೆ ಭಯ, ಭಕ್ತಿ ಚಂದ!
ಗೆಳೆಯನಿಳೆಗೆ ಚಂದ!
ಚಂದ್ರನಾಕಾಶಕ್ಕೆ ಚಂದ! (ಕಂ)
-ದ ನಿರಂಜನಾದಿತ್ಯಂದ!!!
ಗಭಸ್ತಿಯ ಬೆಳಕು ವ್ಯಾಪಿಸಿದಾಗ! (ಮು)
ತ್ತಿದ ಮುಗಿಲೆಲ್ಲಾ ಚದರಿ ಹೋದಾಗ! (ಅ)
-ನನ್ಯ ಭಕ್ತಿಯಿಂದ ಕಾಲ ಕಾದಿದ್ದಾಗ!
ಕರುಣೆ ಗುರುದೇವನಿಗೆ ಬಂದಾಗ! (ಚಿ)
-ತ್ತವನ ಪಾದದಲ್ಲಿ ಲಯಿಸಿದಾಗ! (ಬೆ)
-ಲೆ ಮಾಯೆಯಾಟಕ್ಕೇನೇನಿಲ್ಲದಾದಾಗ!
ನಾನು, ನೀನೆಂಬಹಂಕಾರಡಗಿದಾಗ!
ಶಕ್ತಿ ಶಿವನಿಗಾಗಿ ವ್ಯಯವಾದಾಗ! (ಜ)
-ಯಾಪಜಯವನಿಚ್ಛೆಯೆಂದರಿತಾಗ!
ವಾಙ್ಮನಸುಗಳು ಮೌನ ತಳೆದಾಗ! (ಸಂ)
-ಗ ನಿರಂಜನಾದಿತ್ಯಾತ್ಮನದ್ದಾದಾಗ!!!
ಸೃಜಿಸಿ, ವಿಸರ್ಜಿಸುವಾತ್ಮ ಆರಾಮ! (ತ್ಯ)
-ಜಿಸಿ, ಭಜಿಸಿ, ಮುಕ್ತನಾಗ್ವಾತ್ಮಾರಾಮ!
ಸಿರಿಯರಸ ಶ್ರೀರಾಮ ಸದಾರಾಮ!
ವಿಧಿ, ಹರಿ, ಹರರೊಂದಾದಾತ್ಮಾರಾಮ!
ಸತಿ, ಪತ್ಯೊಂದಾದರ್ಧನಾರೀಶಾರಾಮ! (ಆ)
-ರ್ಜಿಸಿದರ್ಥ ಸದ್ವ್ರಯವಾದರಾರಾಮ!
ಸುಪುತ್ರ, ಪುತ್ರಿಯರಮ್ಮಯ್ಯರ್ಗಾರಾಮ!
ವಾಸನಾ ತ್ರಯ ನಾಶವಾದರಾರಾಮ! (ಆ)
-ತ್ಮಭಾವ ವಿರಾಜಿಸಲ್ಚಗಕ್ಕಾರಾಮ!
ಆತ್ಮಾನಾತ್ಮವಿಚಾರ ಮನಕ್ಕಾರಾಮ!
ರಾಮನಾಮವೆಲ್ಲಾ ಕಾಲದಲ್ಲಾರಾಮ! (ನೇ)
-ಮ, ನಿಷ್ಠೆ, ನಿರಂಜನಾದಿತ್ಯಗಾರಾಮ!!!
ನಾನೇ ಉಪವಾಸ, ನಿನಗೇನಿಕ್ಲಪ್ಪಾ? (ಅ)
-ನೇಕ ಮನೆ ಸುತ್ತಿದ್ರೂ ವ್ಯರ್ಥವಾಯ್ತಪ್ಪಾ!
ಉದಾರಿ ಅಪ್ಪನೆಂಬುದೆಂತು ನಂಬ್ಲಪ್ಪಾ?
ಪರಿಪರಿಯ ಪ್ರಾರ್ಥನೆಗಳಾಯ್ತಪ್ಪಾ!
ವಾದಿಸಲಿನ್ನೇಕನ್ಯರಲ್ಲಿ ನಾನಪ್ಪಾ?
ಸದಾ ಸ್ಮರಿಸಿ ಸಾಯ್ವುದೇ ದಾರಿಯಪ್ಪಾ!
ನಿನಗಿದೊಪ್ಪಿದರೆ ನೀನೂ ಮಾಡಪ್ಪಾ!
ನಶ್ವರದ ದೇಹ ಸಾಯಲೇಬೇಕಪ್ಪಾ!
ಗೇಣಿ ಆದಷ್ಟು ಬೇಗ ಸಂದಾಯಾಗ್ಲಪ್ಪಾ!
ನಿಜ ವಿಚಾರ ತಿಳಿಸಿರುತ್ತೇನಪ್ಪಾ! (ಶು)
-ಕ್ಲ ಭಾದ್ರಪದ ದ್ವಾದಶಿಂದು ನೋಡಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯಾ ದಯೆದೋರಪ್ಪಾ!!!
-ತುಹೋಗಿರ್ಪೆ ಅದರಿಂದಪ್ಪಾ! (ಸ್ವ)
-ಕರ್ಮದಲ್ಲಿ ತಲ್ಲೀನಾಗಪ್ಪಾ! (ಜೊ)
-ತೆಗಾರಾತ್ಮನೊಬ್ಬ ಕಾಣಪ್ಪಾ!
ಸಾವು, ನೋವವನಿಗಿಲ್ಲಪ್ಪಾ!
ಕುಚೋದ್ಯಗಾರವನಲ್ಲಪ್ಪಾ!
ಮಾತಾ, ಪಿತವನೇ ನೋಡಪ್ಪಾ!
ಡಮರುಧರನವನಪ್ಪಾ (ಅ)
-ಪ್ಪಾ ಶ್ರೀ ನಿರಂಜನಾದಿತ್ಯಪ್ಪಾ!!!
-ಗಿರಾಜ ನೀನಾಗಿರುವೆಯೆಂದೆ! (ಕಾ)
-ಲ್ತೆಗೆಯಬೇಡಿರ್ಸಿದಲ್ಲಿಂದೆಂದ! (ಧ)
-ರೆಗಾನಂದ ನಿನ್ನಿಂದಾಗ್ವುದೆಂದ!
ದುಮ್ಮಾನ ಪಡಬಾರದೀಗೆಂದ!
ಭಾರ್ಗವನ ಮಾತ್ಸುಳ್ಳಾಗದೆಂದ! (ಸ್ವ)
ರ್ಗ, ಮರ್ತ, ಪಾತಾಳಾಧಿಪಾನೆಂದ!
ವರ ಗುರುರೂಪ ನಿನ್ನದೆಂದ!
ಬಂದೆನೀಗ ನಿನ್ನ ನೋಡಲ್ಕೆಂದ!
ದತ್ತ ನಿರಂಜನಾದಿತ್ಯಾನಂದ!!!
ಶಕ್ತಿವಂತ ನೀನಾದುದೆಂತೋ ಭಾರ್ಗವಾ? (ಮು)
-ಕ್ತಿದಾತ ಪೂಜ್ಯಗುರು ನೀನು ಭಾರ್ಗವಾ!
ವಂದಿಪೆನು ನಾನಿನ್ನಡಿಗೆ ಭಾರ್ಗವಾ!
ತರಳನೆಂದನ್ನಪ್ಪಿಕೋ ಭಾರ್ಗವಾ!
ನೀತಿ, ರೀತ್ಯೆನಗೆ ಕಲಿಸೋ ಭಾರ್ಗವಾ!
ನಾಮವೆನ್ನದನ್ವರ್ಥ ಮಾಡೋ ಭಾರ್ಗವಾ!
ದುರಿತ ದೂರ ನೀನಲ್ವೇನೋ ಭಾರ್ಗವಾ? (ಎಂ)
-ದೆಂದಿಗೂ ಕೈ ಬಿಡಬೇಡವೋ ಭಾರ್ಗವಾ!
ತೋರಾ ಭಾರ್ಗವ ರೂಪಾಗಾಗ ಭಾರ್ಗವಾ!
ಭಾಗಿ ನಾನು ನಿನ್ನ ಶಕ್ತಿಗೆ ಭಾರ್ಗವಾ! (ಕಾ)
-ರ್ಗತ್ತಲ್ಕವಿದಿಹುದೆಲ್ಲೆಲ್ಲೂ ಭಾರ್ಗವಾ! (ದೇ)
-ವಾ, ನಿರಂಜನಾದಿತ್ಯಾನಂದ ಭಾರ್ಗವಾ!!!
-ನ್ನಾನಂದದಂತಿರಿಸುವಾ ದೇವ!
ಹಸೆ, ಮಣೆಯಿಟ್ಕರೆವಾ ಜೀವ!
ಮಾತಿಲ್ಲದೆ ಮಾಯವಾಗ್ವಾ ದೇವ! (ನೋ)
-ಡುವೆನಾಡುವೆನೆಂಬನಾ ಜೀವ! (ಜ)
-ವನಾಗಿ ಬಂದೆಳೆವನಾ ದೇವ!
ನಾನು, ನೀನೆಂದು ಕುಣಿವಾ ಜೀವ! (ಆ)
-ಶಾರಹಿತ ನಿರ್ವಿಕಾರಾ ದೇವ! (ರಾ)
-ಜೀವ ಸಖನ ಪೂಜಿಪಾ ಜೀವ! (ಶಿ)
-ವ ನಿರಂಜನಾದಿತ್ಯಾತ್ಮಾ ದೇವ!!!
ಅನಂತಾತ್ಮನಿರುವನೊಳಗಂತರ್ಯಾಮಿಯಾಗಿ!
ನಂದಕಂದನಾಗಿ ನಿನ್ನೊಳಗಂತರ್ಯಾಮಿಯಾಗಿ!
ತಾಮಸಾದಿ ಗುಣಾತೀತನಾಗ್ಯಂತರ್ಯಾಮಿಯಾಗಿ! (ಆ)
-ತ್ಮ ಸಚ್ಚಿದಾನಂದರೂಪಿಯಾಗ್ಯಂತರ್ಯಾಮಿಯಾಗಿ!
ನಿರವಧಿ ಸುಖಾನಂದನಾಗ್ಯಂತರ್ಯಾಮಿಯಾಗಿ! (ಗು)
-ರುಸ್ವರೂಪನಾಗಿ ಚರಾಚರಾಂತರ್ಯಾಮಿಯಾಗಿ!
ವರ್ಣಾಶ್ರಮಾತೀತ ಪದ್ಮನಾಭಾಂತರ್ಯಾಮಿಯಾಗಿ! (ತಾ)
-ನೊಡೆಯನೀರೇಳ್ಲೋಕಕ್ಕೆನಿಸ್ಯಂತ ರ್ಯಾಮಿಯಾಗಿ! (ಒ)
-ಳ, ಹೊರಗೆಲ್ಲಾ ತಾನಾಗಿ ನಿನ್ನಂತರ್ಯಾಮಿಯಾಗಿ!
ಗಂಗಾ, ಯಮುನಾ, ಕಾವೇರಿಯ್ಯಾಗ್ಯಂತರ್ಯಾಮಿಯಾಗಿ!
ತಪೋನಿರತ ಶಿವ ತಾನಾಗ್ಯಂತರ್ಯಾಮಿಯಾಗಿ! (ಧೈ)
-ರ್ಯಾದ್ಯೆಲ್ಲಾ ಗುಣ ಸಂಪನ್ನನಾಗ್ಯಂತರ್ಯಾಮಿಯಾಗಿ!
ಮಿತ್ರ, ಶತ್ರುಭಾವ ವರ್ಜನಾಗ್ಯಂತರ್ಯಾಮಿಯಾಗಿ! (ಮಾ)
-ಯಾನಾಟಕ ಸೂತ್ರಧಾರನಾಗ್ಯಂತರ್ಯಾಮಿಯಾಗಿ! (ತ್ಯಾ)
-ಗಿ, ಯೋಗಿ, ನಿರಂಜನಾದಿತ್ಯಾ ತ್ಮಾಂತರ್ಯಾಮಿಯಾಗಿ!!!
-ಕಳಂಕಾತ್ಮನೆಲ್ಲಿಲ್ಲ ಹೇಳಯ್ಯಾ! (ಫ)
-ಲ, ಪುಷ್ಪದಲ್ಲೆಲ್ಲಾ ಅವನಯ್ಯಾ! (ಮಾ)
-ವೂ, ಬೇವೂ, ಅವಗಾನಂದವಯ್ಯಾ!
ಪೂಜೆಗಿರಬೇಕ್ಭಕ್ತಿ ಭಾವಯ್ಯಾ! (ನಿ)
-ಜರೂಪದಲ್ಲವನ ನೋಡಯ್ಯಾ!
ನೀಚೋಚ್ಛವೆಂದೆಣಿಸಬೇಡಯ್ಯಾ! (ಕಾ)
-ಯದಲ್ಲಿಹ ಕಾರಣವನಯ್ಯಾ!
ವರ ಗುರುದೇವನವನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾನಂದಯ್ಯಾ!!!
-ತ್ರ, ಪುಷ್ಪಾಲಂಕೃತನಾಗಿ ನಿಂದ!
ರೂಢಿಯಂತೆ ಭಕ್ಷ್ಯ. ಭೋಜ್ಯ ತಿಂದ!
ಪರಿಹಾರಾಗಲಿ ಕಷ್ಟವೆಂದ!
ದರ್ಶನಕ್ಕೆ ತಪಸ್ಸು ಮಾಡೆಂದ! (ಚಿ)
-ಲ್ಲರೆ ದೈವವ ನಂಬಬೇಡೆಂದ!
ನಂಬಿಗೆ ನಿಜದಲ್ಲಿರಲೆಂದ!
ತರಣಿಯಾದರ್ಶದಂತಿರೆಂದ!
ಬಂಧ ಹರಿವುದದರಿಂದೆಂದ! (ಕಂ)
-ದ ನಿರಂಜನಾದಿತ್ಯನಂತಂದ!!!
ಭೀರುವಾಗಿರದಿರಬೇಕು!
ರಘುರಾಮನಂತಿರಬೇಕು!
ನೀಚ ಸ್ವಾರ್ಥ ಬಿಟ್ಟಿರಬೇಕು!
ನಾಮಸ್ಮರಣೆ ಮಾಡಬೇಕು!
ಗಿಟುಕು ಕಾಯಿಯಾಗಬೇಕು!
ರಸನೆಗಾಳಾಗದಿರಬೇಕು!
ಬೇನೆ ಸಹಿಸುತ್ತಿರಬೇಕು! (ಟಾ)
-ಕು ನಿರಂಜನಾತ್ಯಾಗ್ಬೇಕು!!!
-ಕೇತಾಧಿಪ ರೂಪದಿಂದ ಬಾ! (ವಂ)
-ಶಜನ ಮೇಲಿಷ್ಟು ದ್ವೇಷವಾ?
ವಾದ ಮಾಡದೇ ನೀನೀಗ ಬಾ! (ಮಾ)
-ತೆ ಮಾಡುವಳೇನು ಮೋಸವಾ? (ನ)
-ಗೆಮೊಗದಿಂದ ಬೇಗೋಡಿ ಬಾ!
ವೇದಾಂತ ಸಾರಾರಾಮ ಶಿವಾ!
ಷಷ್ಠಿ ಕಳೆದೈದಕ್ಕೋಡಿ ಬಾ! (ದೇ)
-ವಾ, ನಿರಂಜನಾದಿತ್ಯಾ ಶಿವಾ!!!
ಚಮತ್ಕಾರ ತೋರದೇ ಮಾಡು! (ತ)
-ದಿಂಬಿಗಾಗ್ಯೆಲ್ಲವನು ಮಾಡು!
ದಂಭಾಚಾರ ಕಟ್ಟಿಟ್ಟು ಮಾಡು!
‘ಚುಡಾಲೆ’ಯಂತೆ ಕಾರ್ಕ ಮಾಡು!
ಸತೀಧರ್ಮವಿದೆಂದು ಮಾಡು!
ರಿಪುಗಳಡಗಿಸಿ ಮಾಡು!
ಮಾತನಾಡದೇ ಸೇವೆ ಮಾಡು! (ಮಾ)
-ಡು, ನಿರಂಜನಾದಿತ್ಯಗೂಡು!!!
ತನುಭಾವ ಮರೆತ ನೀನೇ ಸುಖಿ! (ಆ)
-ರ್ಮುಖನನ್ನೊಡಗೂಡಿ ನೀನೇ ಸುಖಿ! (ಸ)
-ಖೀಜನರನ್ಬಿಟ್ಟಂದ ನೀನೇ ಸುಖಿ!
ನೀತಿವಂತೆ ನೀನಾಗಿ ನೀನೇ ಸುಖಿ!
ನೇಮವಿದೇ ಇದ್ದರೆ ನೀನೇ ಸುಖಿ!
ಪತಿಸೇವಾ ನಿರತೆ ನೀನೇ ಸುಖಿ! (ವ)
-ರ ಗುರುಕೃಪೆಯಿಂದ ನೀನೇ ಸುಖಿ! (ನಾ)
-ಮಜಪ ಬಲದಿಂದ ನೀನೇ ಸುಖಿ!
ಸುವಿಚಾರಿ ನೀನಾಗಿ ನೀನೇ ಸುಖಿ! (ಸು)
-ಖಿ ನಿರಂಜನಾದಿತ್ಯಾತ್ಮ ಮುಖಿ!!!
-ರಂಗ ಸ್ವರೂಪಾ ಶ್ರೀರಂಗ! (ಗ)
-ಗನದಲ್ಲವ ನಿಸ್ಸಂಗ! (ಯೋ)
-ಗಿರಾಜನಾಗಿ ಸತ್ಸಂಗ! (ಉ)
-ಲ್ಲಾಸಿ ತಾನಾಗಿ ಶುಭಾಂಗ!
ಶಾಶ್ವತನಾಗಿ ಸ್ಥಿರಾಂಗ!
ಭಂಡಾರಿಯಾಗಿ ಧೃಡಾಂಗ! (ರಂ)
-ಗ ನಿರಂಜನಾದಿತ್ಯಾಂಗ!!!
-ಗಾಗ ಕಣ್ತೆರೆದು ನೋಡಿದ ಶಿವ! (ಅ)
-ವಳನುಗ್ರಹಿಸುವೆನೆಂದ ಶಿವ!
ತಲೆಯಮೇಲಿರಿಸಿಕೊಂಡ ಶಿವ! (ಸು)
-ರ, ನರರಿಗಾನಂದವಿತ್ತ ಶಿವ! (ಗ)
-ಣಗಳಿಂದ ಪೂಜಿಸಿಕೊಂಡ ಶಿವ! (ಅ)
-ಕ್ಕೆ ಕಲ್ಯಾಣವೆಲ್ಲರಿಗೆಂದ ಶಿವ!
ಕಾಮಾಕ್ಷಿಯೊಡಗೂಡಿಂತೆಂದ ಶಿವ!
ದತ್ತ ಗುರು ಲೀಲೆಯಿದೆಂದ ಶಿವ! (ನಿ)
-ಶಿ, ದಿನ ಭಜಿಸ್ಯವನೆಂದ ಶಿವ! (ಅ)
-ವ ನಿರಂಜನಾದಿತ್ಯನೆಂದ ಶಿವ!!!
-ರ್ಯ ಸದ್ಗುರುವಿಗವ ಪುತ್ರ!
ನಾಸ್ತಿಕಗೂ ಅವನೇ ನೇತ್ರ!
ರಾಮನವನ ಕೃಪಾ ಪಾತ್ರ!
ಯಮನವನಿಗೊಬ್ಬ ಪುತ್ರ! (ರ)
-ಣರಂಗದಲ್ಲವನ ಸ್ತ್ರೋತ್ರ!
ನೇಮ, ನಿಷ್ಠೆಯವನ ಸೂತ್ರ! (ಅ)
-ಮಿತ ತೇಜೋರಾಶಿ ಸರ್ವತ್ರ! (ಮಿ)
-ತ್ರ ನಿರಂಜನಾದಿತ್ಯಾ ಪುತ್ರ!!!
-ತ್ತಿರಾರೂ ಸೇರದಂತಿರಬೇಕು!
ನಿವೃತ್ತಿ ಸುಖ ಸುಖಿಸಬೇಕು! (ಅ)
-ನವರತಾಭ್ಯಾಸ ಮಾಡಬೇಕು! (ತ್ಯಾ)
-ಗಿಯಾಗಿ ಯೋಗಿ ನೀನಾಗಬೇಕು! (ಬ)
-ಲ್ಲವನಾದ್ರೂ ಕಲ್ಲಾಗಿರಬೇಕು!
ದಿವ್ಯ ಜೀವನವಿಂತಾಗಬೇಕು! (ವ)
-ರ ಗುರುನಾಮ ಸ್ಮರಿಸಬೇಕು!
ಬೇರೆಯವ್ರಿಗಿಂತಾದರ್ಶಾಗ್ಬೇಕು! (ವಾ)
-ಕು, ನಿರಂಜನಾದಿತ್ಯಗೇಕ್ಬೇಕು???
-ರಾದಿಂದ್ರಿಯ ಕಳಕೊಂಡೆ ಕಾಮಾ! (ಖೂ)
-ಳತನವಿನ್ನಾದ್ರೂ ಬಿಡೋ ಕಾಮಾ! (ಅ)
-ಮೃತತ್ವಕ್ಕಡ್ಡಿ ಮಾಡ್ದಿರೋ ಕಾಮಾ! (ಅ)
-ತ್ಯುಪಕಾರಿಯಾಗೋ ಭ್ರಾತೃ ಕಾಮಾ!
ನೀಚನುತ್ತಮನಹನು ಕಾಮಾ!
ನಾರಾಯಣಾತ್ಮಜ ನೀನು ಕಾಮಾ! (ತಂ)
-ದೆಗಪಕೀರ್ತಿ ತರ್ಬೆಡ ಕಾಮಾ!
ಕಾಲ್ಗೆ ಬಿದ್ದು ಕ್ಷಮೆ ಬೇಡೋ ಕಾಮಾ! (ಕಾ)
-ಮಾ! ನಿರಂಜನಾದಿತ್ಯಾತ್ಮಾ ರಾಮಾ!!!
ಪ್ರದಕ್ಷಿಣೆ ದಕ್ಷಿಣೆಗಲ್ಲದಿರ್ಬೆಕು!
ದಾನ ಧರ್ಮ ಆತ್ಮಪೇಮದಿಂದಾಗ್ಬೇಕು!
ಯಮ, ನಿಯಮಾಭ್ಯಾಸ ಮಾಡುತ್ತಿರ್ಬೆಕು!
ಸಂತತ ಗುರುಸೇವೆ ಸಾಗುತ್ತಿರ್ಬೆಕು!
ತೋಡಿದ ಭಾವಿಯಲ್ಲಿ ನೀರು ಕಾಣ್ಬೇಕು! (ವಿ)
-ಷಯ ವಾಸನೆಯಂಟಿಲ್ಲದಂತಾಗ್ಬೇಕು!
ಪ್ರಯತ್ನ ಕೃಷ್ಣಾರ್ಪಣವೆಂದು ಮಾಡ್ಬೇಕು!
ದಯಾಸ್ವಭಾವವುಳ್ಳವನಾಗಿರ್ಬೆಕು!
ವಾಸುದೇವನನ್ನು ಸ್ಮರಿಸುತ್ತಿರ್ಬೆಕು! (ಸಾ)
-ಗ್ಬೇಕವನ ಕೃಪೆಯಿಂದೆಲ್ಲಾ ಆಗ್ಬೇಕು! (ಟಾ)
-ಕು ನಿರಂಜನಾದಿತ್ಯಾತ್ಮನಾಗ್ಬೇಕು!!!
ಅನ್ನ, ಪಾನ ಬಿಟ್ಟು ಕಟ್ಟಿದಂದಿನ ಗುಡಿ! (ಚಿ)
-ನ್ನ, ಬೆಳ್ಳಿ ವ್ಯಾಪಾರಕ್ಕಾಗಿಹುದಿಂದಂಗಡಿ!
ಪಾಪ, ಪುಣ್ಯದಡಿಗಟ್ಟಿನಂದಿನಾಗುಡಿ! (ಜ)
-ನರ ಹೊಟ್ಟೆ, ಬಟ್ಟೆಗಾಗಿಹುದಿಂದಂಗಡಿ! (ನಂ)
-ಬಿಗೆ ದೇವರಲ್ಲಿಡಿರೆಂದಂದಿನಾ ಗುಡಿ! (ಗು)
-ಟ್ಟು, ವಂಚನೆಗಳಿಗಾಗಿಹುದಿಂದಂಗಡಿ!
ಕಲಿ, ಮಲ ಕಳೆಯುತ್ತಿದ್ದಂದಿನಾ ಗುಡಿ! (ಹು)
-ಟ್ಟಿ, ಸಾಯುವ ಬಾಳಿಗಾಗಿಹುದಿಂದಂಗಡಿ!
ದಂಡಯಾತ್ರೆಯಡಗಿಸಿದಂದಿನಾ ಗುಡಿ!
ದಿನ, ರಾತ್ರಿ ಕಳ್ಳರ್ಗಾಗಿಹುದಿಂದಂಗಡಿ! (ಕ)
-ನಸು, ನೆನಸಿನಲ್ಲಾನಂದಂದಿತ್ತಾ ಗುಡಿ! (ಜಿ)
-ಗುಪ್ಸೆಯಿಂದಳ್ವುದಕ್ಕಾಗಿಹುದಿಂದಂಗಡಿ! (ಮಾ)
-ಡಿ ನಿರಂಜನಾದಿತ್ಯಗಾಗೀ ದೇಹ ಗುಡಿ!!!
ಅಳುವ ಮಕ್ಕಳ ವಿಚಾರ್ಸಿಕೊಳ್ಳಮ್ಮಾ! (ಕೇ)
-ಳುವವರಿನ್ಯಾರು ನೀ ಕೈ ಬಿಟ್ಟರಮ್ಮಾ?
ವರದೆ ನೀನೆಂಬುದ ನಿಜ ಮಾಡಮ್ಮಾ! (ನೇ)
-ಮ, ನಿಷ್ಠೆ ನೀನೇ ಕಲಿಸಿ ಕಾಪಾಡಮ್ಮಾ! (ತ)
-ಕ್ಕ ಮಕ್ಕಳಾದ್ರೆ ನಿನಗೇ ಕೀರ್ತಿಯಮ್ಮಾ! (ತ)
-ಳಮಳಗೊಳಿಸಬೇಡೆನ್ನ ನೀನಮ್ಮಾ!
ವಿದ್ಯಾ, ಬುದ್ಧಿ ನಿನ್ನ ಸೇವೆಗಿರಲಮ್ಮಾ! (ಆ)
-ಚಾರ, ವಿಚಾರ ನಿನ್ನೊಲುಮೆಗಾಗ್ಲಮ್ಮಾ! (ಹೊ)
-ರ್ಸಿ ಅಪರಾಧಗಳ ಕೊಲ್ಲಬೇಡಮ್ಮಾ!
ಕೊಲೆಗಾರ್ತಿ ನೀನಾದ್ರಾರುಳಿವರಮ್ಮಾ? (ಉ)
-ಳ್ಳವಳೆಲ್ಲಾ ಜಗಕ್ಕೆ ನೀನೊಬ್ಬಳಮ್ಮಾ! (ಅ)
-ಮ್ಮಾ, ಶ್ರೀ ನಿರಂಜನಾದಿತ್ಯ ಪರಬ್ರಹ್ಮ!!!
ತ್ಯಜಿಸಿದರಾಸೆಲ್ಲಾ ಭಯವಿಲ್ಲ!
ವಿಚಾರಾತ್ಮನದ್ದಾದ್ರೆ ಭಯವಿಲ್ಲ! (ತ)
-ದ್ದರ್ಶನವಾದ್ರೇನೇನೂ ಭಯವಿಲ್ಲ! (ಬೆ)
-ರೆತಾದ ಮೇಲೆಂದೆಂದೂ ಭಯವಿಲ್ಲ! (ಉ)
-ತ್ತಮರ ಸಂಗವಾದ್ರೆ ಭಯವಿಲ್ಲ!
ಲೂಟಿಗಾರರದ್ದಾದ್ರೆ ಸುಖವಿಲ್ಲ!
ಭಕ್ತಿಯಿಲ್ಲದ ಭಾವ ಸುಖವಿಲ್ಲ! (ಸಂ)
-ಯಮವಿಲ್ಲದಭ್ಯಾಸ ಸುಖವಿಲ್ಲ! (ಸಂ)
-ವಿಧಾನ ಕೊಳೆಯಾದ್ರೆ ಸುಖವಿಲ್ಲ! (ಪು)
-ಲ್ಲ ನಿರಂಜನಾದಿತ್ಯಗೆಣೆಯಿಲ್ಲ!!!
-ನ್ನತದಲ್ಲಿಹುದವನ ಪ್ರಜ್ಞೆ!
ದಾನಿ ತಾನಾಗಿ ಮಾಡುವನಾಜ್ಞೆ! (ಆ)
-ತನಂತಿರ್ಬೇಕೆಲ್ಲರಿಗೆ ಪ್ರಜ್ಞೆ!
ನಿತ್ಯ ಪಾಲಿಸಬೇಕವನಾಜ್ಞೆ! (ಯೋ)
-ಗಾಭ್ಯಾಸಿಗಾಗ್ವುದು ಸ್ಥಿತಪ್ರಜ್ಞೆ! (ಪ)
-ರಮ ಪಾವನ ಗುರುವಿನಾಜ್ಞೆ!
ದೇಶ, ಕಾಲಾತೀದುದಾ ಪ್ರಜ್ಞೆ!
ನಾಮ, ರೂಪವೆಲ್ಲಾ ಅವನಾಜ್ಞೆ! (ಆ)
-ಜ್ಞೆ, ನಿರಂಜನಾದಿತ್ಯಾತ್ಮ ಪ್ರಜ್ಞೆ!!!
-ದಿ, ಪ್ರತಿವಾದಿಗಳ ಕಾದಾಟ! (ಹು)
-ಸಿ, ದಿಟದೊಳಗಿನಾ ಕಚ್ಚಾಟ!
ದಾರಿ ಹೋಕರ್ಗಚ್ಚರಿಯ ನೋಟ! (ಮ)
-ನೆಮಂದಿಗಾಯ್ತು ಬಹಳ ಕಾಟ! (ಅಂ)
-ಗಡಿ ಬೀದಿಗಳಲ್ಲೆಲ್ಲಾ ಕೂಟ! (ಕಾ)
-ಳಸಂತೆಗಾಗಲ್ಲಿ ಕಣ್ಮುಚ್ಚಾಟ!
ಓದುವ ವಿದ್ಯಾರ್ಥಿಯ ಕೂಗಾ! (ಗಂ)
-ಡಾಗುಂಡಿಯಿಂದೆಲ್ಲೆಲ್ಲೂ ಪೇಚಾಟಾ! (ದಿ)
-ಟ ನಿರಂಜನಾದಿತ್ಯಗೊಂದೂಟ!!!
-ರುಣೆಯಿಂದ ನೆರವಾದರೇನು? (ಸಂ)
-ಚಿತದಿಂದ ಬಿಡಿಸಿದರೇನು? (ಶ್ರೀ)
-ರಂಗನುತ್ತರ ಹೇಳುವನೇನು?
ಜೀವರಾಧಾರವನಲ್ಲವೇನು?
ವಿಶ್ವಾಸ ಕೆಡಿಸಬಹುದೇನು?
ಯಾದವೇಂದ್ರನ ಗೀತೆ ಸುಳ್ಳೇನು?
ದರ್ಶನಾನುಗ್ರಹ ಮಾಡ್ಬೇಡ್ವೇನು? (ಯಾ)
-ರೇನೆಂದರದರಿಂದಾಗ್ವುದೇನು? (ಭಾ)
-ನು ನಿರಂಜನಾದಿತ್ಯನಾಗ್ನೀನು!!!
ವರಭಕ್ತಿಯಿಂದ ಪತಿತ ಪಾವನ! (ಅ)
-ನವರತವನದಾದರೆ ದರ್ಶನ!
ಈಸಬಹುದೀ ಸಂಸಾರ ಜೀವನ!
ವರ ಗುರುದತ್ತನೆನಿಸಿದವನ!
ನರಕ ಯಾತನೆ ತಪ್ಪಿಸುವವನ!
ತಂಗಾಳಿ ಸಮಾನ ತಂಪನೀಯುವನ! (ಎ)
-ದೆಒಳಗೆಲ್ಲರಲ್ಲಿರ್ಪ ಚೇತನನ!
ಯಾತ್ರೆಯಿದಕಾಗ್ಯಾಗಬೇಕೆಂಬವನ!
ದರಿದ್ರಗೂ ಸುಲಭವಿದೆಂಬವನ!
ವಸುಧೇನಪ್ಪನಿನಿತೆನ್ನುವನ!
ನಳಿನಸಖ ನಿರಂಜನಾದಿತ್ಯನ!!!
ಶ್ರೀರಾಮ ಪಾದುಕಾ ಪೂಜಾ ಮಹಿಮೆ! (ಆ)
-ರಾಮವೆಂದುದು ವಾಲ್ಮೀಕಿ ಹಿರಿಮೆ!
ಮಹಾತ್ಮಾಂಜನೇಯರಿತ್ತಾ ಮಹಿಮೆ!
ಪಾಪಿ ಪಾವನೆಯಾದುದೇ ಹಿರಿಮೆ!
ದುಷ್ಟ ದಾನವ ನಿಗ್ರಹಾ ಮಹಿಮೆ!
ಕಾದ ಶಬರಿಯ ಕಾಯ್ತಾ ಹಿರಿಮೆ!
ಪೂಜ್ಯ ಭರತಾದುದದ್ರ ಮಹಿಮೆ!
ಜಾತಿ, ಮತಾತೀತದರ ಮಹಿಮೆ!
ಮದ, ಮತ್ಸರ ರಹಿತಾ ಮಹಿಮೆ! (ಸ)
-ಹಿಸದು ಗುರುದ್ರೋಹಾ ಮಹಿಮೆ!
ಮೆಚ್ಚಿದ ನಿರಂಜನಾದಿತ್ಯ ಮೈಮೆ!!!
ವೇಳೆ ಬಂದಾಗದಾಗ್ವುದೆಂದೇಕರಿಯಬಾರದು?
ಕಷ್ಟವನ್ಯರ ಮಾತೆಂಬುದ ಮರೆಯಬಾರದು! (ದೇ)
-ವದೇವನ ಮುಂದೆ ನಿನ್ನ ಬಾಲ ಬಿಚ್ಚಬಾರದು!
ನಿನ್ನೋನ್ನತಿಯ ಸಾಧನೆ ನೀನು ಬಿಡಬಾರದು!
ಗೊಂಬೆಯಾಟಕ್ಕೆಂದೆಂದಿಗೂ ಮರುಳಾಗಬಾರದು!
ದುಸ್ಸಂಗದಿಂದ ನಿನಗೆ ದುಃಖ ತಪ್ಪಲಾರದು!
ಪರೋಪಕಾರಿಗಹಂಕಾರವಿರಲೇಬಾರದು! (ಪು)
-ತ್ರ, ಪೌತ್ರರಿಗೆಂದು ಹಣ ಕೂಡಿಡಲೇಬಾರದು!
ಬಡಬಗ್ಗರಿಗೆ ನೆರವಾಗದಿರಬಾರದು! (ಮ)
-ರೆತು ನಿಜ ಗುರಿಯ ಕಾಲ ಕಳೆಯಬಾರದು!
ಯಜಮಾನನಿಗೆ ಕೇಡು ಬಗೆಯಲೇಬಾರದು!
ಬಾಯಿ ಬ್ರಹ್ಮದಿಂದ ಶಾಂತಿ ಪ್ರಾಪ್ತವಾಗಲಾರದು! (ವ)
-ರ ಗುರುಸೇವೆಗಾವುದೂ ಸಮವಾಗಲಾರದು! (ಇ)
-ದು ನಿರಂಜನಾದಿತ್ಯೋಪದೇಶ ವಾಗಿರುವುದು!!!
ಯಮಾನುಗ್ರಹವಾಯ್ತೀಗ ನಿನ್ನ ಮೇಲೆ!
ಗಾಳಿಗೋಪುರ ಕಟ್ಟಬೇಡಿನ್ನುಮೇಲೆ! (ನ)
-ಳಿನ ಸಖ ನಿನಗಾಪ್ತನಾದಮೇಲೆ!
ಬೀಳಬೇಡ ವಿಷಯಸುಖಕ್ಕಿನ್ಮೇಲೆ!
ಸುಶೀಲನೀನಾಗಿರಬೇಕಿನ್ನುಮೇಲೆ!
ತಿನ್ನು ಪ್ರಸಾದವೆಂದನ್ನವ ನಿನ್ಮೇಲೆ!
ದೆವ್ವಗಳ ನಂಬಬಾರದಿನ್ನು ಮೇಲೆ!
ನಿಶ್ಚಲ ಭಕ್ತನಾಗಿರಬೇಕಿನ್ಮೇಲೆ! (ನಿ)
-ನ್ನ ನೀನರಿತು ಸುಖಿಯಾಗಿರಿನ್ಮೇಲೆ!
ಮೇಲ್ಮೇಲೆ ಗುರುಧ್ಯಾನ ಮಾಡಿನ್ನುಮೇಲೆ (ಮಾ)
-ಲೆ ನಿರಂಜನಾದಿತ್ಯಗೆ ಹಾಕಿನ್ಮೇಲೆ!!
ಗುರು ಸಾನ್ನಿಧ್ಯದಿಂದುರು ಶಾಂತಿ! (ಕ)
-ರುಣಿಸುವನವನಾತ್ಮ ಶಾಂತಿ!
ಸಾಕಾರ ದರ್ಶನದಿಂದಾ ಶಾಂತಿ! (ತ)
-ನ್ನಿಷ್ಟಸಿದ್ಧಿಯಿಂದಾಗ್ವುದಾ ಶಾಂತಿ! (ವಿಂ)
-ಧ್ಯ, ಹಿಮಾಚಲದಷ್ಟಾತ್ಮ ಶಾಂತಿ! (ಅ)
-ದಿಂದು ಮನಕೆ ಬಹಳ ಶಾಂತಿ!
ದುರ್ವಿಷಯವಿಲ್ಲದಾತ್ಮ ಶಾಂತಿ! (ಗು)
-ರುಪಾದ ಸೇವೆಯ ಫಲಾ ಶಾಂತಿ!
ಶಾಂತಿ! ಶಾಂತಿ!! ಭ್ರಾಂತಿ ದೂರಾ ಶಾಂತಿ!
ತಿಳಿ, ನಿರಂಜನಾದಿತ್ಯಾ ಶಾಂತಿ!!!
-ಳರಾತ್ರಿಯ ಭಯವಿನ್ನಿಲ್ಲವಯ್ಯಾ!
ಕಾಗೆ ‘ಕಾ ಕಾ’ಯೆನ್ನುತಿದೆ ಕೇಳಯ್ಯಾ! (ತಾ)
-ಯಿ ಕಲ್ಯಾಣಿಯೊಡಗೂಡಿ ಬಾರಯ್ಯಾ! (ಮಾ)
-ತೇನಿಲ್ಲೈಹಿಕದ್ದೆನ್ನಲ್ಲೀಶ್ವರಯ್ಯಾ! (ಬಾ)
-ಳು ನಿನ್ನಲ್ಲೈಕ್ಯಗೊಳಿಸು ಕಾಲಯ್ಯೂ!
ಗಂಗೆ ಪಾರ್ವತಿಯಂತೆನ್ನ ಮಾಡಯ್ಯಾ!
ಗಾನ ಮಾಡಿಸು ನಿನ್ನ ನಾಮವಯ್ಯಾ!
ಧರ್ಮವೇನೆಂದು ನೀನೇ ಕಲಿಸಯ್ಯಾ! (ಬ)
-ರಲಿ ಶ್ರೀ ರಾಮರಾಜ್ಯ ಧರೆಗಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾತ್ಮ ನೀನಯ್ಯಾ!!!
-ರೆಯರಸ ದಾಮೋದರನಾ! (ಕಾ)
-ಯಮೋಹವಿಲ್ಲದಿರ್ಪವನಾ!
ದಿಗಂಬರನೆನಿಸಿಹನಾ!
ರೋಗಾರಿಷ್ಟ ನಿವಾರಕನಾ!
ಮಾಯಾತೀತನಾಗಿರ್ಪವನಾ!
ಧರ್ಮಾಧರ್ಮಾವರಿತವನಾ!
ವರಗುರು ದತ್ತಾತ್ರೇಯನಾ!
ನಾಥ ನಿರಂಜನಾದಿತ್ಯನಾ!!!
-ರೆಸಿ ಕತ್ತುಕೊಯ್ಯುವನಾ! (ಧ್ಯೇ)
-ಯಸಿದ್ಧಿಗಡ್ಡಿಗೈವನಾ!
ದಿವ್ಯ ಜ್ಞಾನವಿಲ್ಲದನಾ!
ರೋಗಿ, ಭೋಗಿಯಾದವನಾ!
ಕಾಲವಶನಾಗಿಹನಾ!
ಮದ, ಮತ್ಸರಾನ್ವಿತನಾ! (ವಿ)
-ನಾ ನಿರಂಜನಾದಿತ್ಯನಾ!!!
-ನು ಬರುವೆನಾಗಲ್ಲಿಗೆ ದತ್ತಾ!
ಕನಿಕರ ಬರಲೀಗ ದತ್ತಾ! (ಬೆ)
-ರೆವೆ ನಾನಾಗ ನಿನ್ನಲ್ಲಿ ದತ್ತಾ! (ಜ)
-ಯ ಶ್ರೀಪಾದಕ್ಕಾಗಬೇಕು ದತ್ತಾ!
ಬೇಗೆ ಶಾಂತವಾಗಲೀಗ ದತ್ತಾ!
ಕೆಡುಕಾಗದು ನಿನ್ನಿಂದ ದತ್ತಾ! (ಉ)
-ನ್ನತಿಗೊಯ್ಯವವ ನೀನು ದತ್ತಾ!
ದರ್ಶನಾನುಗ್ರಹ ಮಾಡು ದತ್ತಾ (ದ)
-ತ್ತಾ ನಿರಂಜನಾದಿತ್ಯಾತ್ಮ ದತ್ತಾ!!!
-ಲಕ್ಷ್ಯ ಮಾಡಿದವರಿಗವ ಕಾಳ್ಗಿಚ್ಚು!
ಗಣಗಳಿಗವನಲ್ಲಿ ಪ್ರೀತಿ ಹೆಚ್ಚು! (ತೃ)
-ಣಸಮಾನವನಿಗೈಹಿಕದ ಹುಚ್ಚು!
ಪರಮಾರ್ಥಿಗಿರಬೇಕಾ ರೂಪದಚ್ಚು!
ತಿಳಿದು ನೀನವನಹಂಕಾರ ಕೊಚ್ಚು!
ಶಿವ ಸಾಯುಜ್ಯವವನಂತೆ ನೀ ನೆಚ್ಚು! (ಶಿ)
-ವ ಸನ್ನಿಧಿಯಲ್ಲತರಂಗವ ಬಿಚ್ಚು!
ಗರ್ವವನ್ನವನ ಶೂಲದಿಂದ ಚುಚ್ಚು! (ಮು)
-ಚ್ಚು, ಮರೆ ಬಿಟ್ಟು ಸೇವೆಗೆ ನಿನ್ನ ಹಚ್ಚು! (ಉ)
-ಮೆಯರಸನಿಂದ ಪಾಪವೆಲ್ಲಾ ನುಚ್ಚು! (ಮೆ)
-ಚ್ಚು ನಿರಂಜನಾದಿತ್ಯವನೆಂದು ಹೆಚ್ಚು!!!
-ರ್ವರಹಿತನಾಗಿ ತಾನಿರಬೇಕು!
ಶರಣ ತಾನಾಗಿ ಜೀವಿಸಬೇಕು! (ಭ)
-ಕ್ತಿ ಗುರುಚರಣದಲ್ಲಿಡಬೇಕು!
ಸಂಭಾವನೆಗಳಾಸೆ ಬಿಡಬೇಕು!
ಪರತತ್ವದರ್ಥ ತಿಳಿಯಬೇಕು! (ತ)
-ನ್ನ ತಾನರಿತು ಮುಕ್ತನಾಗಬೇಕು!
ನಾಮಜಪ ಸತತವಿರಬೇಕು! (ರಂ)
-ಗನಾಥನ ಸಾಯುಜ್ಯ ಸೇರಬೇಕು!
ಬೇರಾವುದನ್ನೂ ಬೇಡದಿರಬೇಕು!
ಕುಶಿ ನಿರಂಜನಾದಿತ್ಯಗಾಗ್ಬೇಕು!!!
ಅನುದಿನದಭ್ಯಾಸದಿಂದಾಯ್ತೆನ್ನ ರೂಪ! (ಅ)
-ನುಭವಿಸಿದೆನದಕಾಗಿ ಬಹು ತಾಪ!
ದಿವ್ಯ ನಾಮಸ್ಮರಣೆಯಿಂದ ಹೋಯ್ತು ಕೋಪ! (ದಿ)
-ನಮಣಿ ಬೆಳಗಿದನು ಹೃದಯ ದೀಪ!
ದತ್ತ ಕೃಪೆಯಿಂದ ನಾಶವಾಯ್ತೆಲ್ಲಾ ಪಾಪ! (ಅ)
-ಭ್ಯಾಸ ಬಲದಿಂದಾದೆ ನಾನೀಗ ನಿರ್ಲೆಪ!
ಸಚ್ಚಿದಾನಂದದಲ್ಲಿರ್ಪಾಗಿಲ್ಲಾವ ಲೋಪ! (ಸ)
-ದಿಂಬಿನಿಂದ ಕರಗಿ ಹೋಗುವುದು ಶಾಪ!
ದಾಶರಥಿಯಿಹನಿದಕೆ ಹೊತ್ತು ಚಾಪ! (ಕಾ)
-ಯ್ತೆಲ್ಲನಾಥರನ್ನವನಮಿತ ಪ್ರತಾಪ! (ಉ)
-ನ್ನತಿಯನೆಲ್ಲರಿಗೆ ಮಾಡುವಾತ ಭೂಪ!
ರೂಢಿಸಿದ್ದನಿದ ಚಕ್ರವರ್ತಿ ದಿಲೀಪ! (ದೀ)
-ಪ ನಿರಂಜನಾದಿತ್ಯಾತ್ಮಾನಂದ ಪ್ರದೀಪ!!!
ಧನ್ಯನಾಗು ಗುರು ಸನ್ನಿಧಿಯಲ್ಲಿ! (ಅ)
-ನ ವ್ಯವಹಾರ ಮಾತಾಡದಿರಲ್ಲಿ!
ನಾಮ, ಜಪ, ಧ್ಯಾನ ಮಾಡುತಿರಲ್ಲಿ!
ಗುಹ್ಯಾದಿಂದ್ರಿಯಗಳನು ಜೈಸಲ್ಲಿ!
ಗುಡಿಯಾಗಲಿ ನಿನ್ನ ದೇಹ ಅಲ್ಲಿ! (ಗು)
-ರುದೇವನೋಡಿ ಬರುವನಾಗಲ್ಲಿ! (ವಾ)
-ಸ ಮಾಡುವನು ಬಹುಕಾಲವಲ್ಲಿ! (ನಿ)
-ನ್ನಿಷ್ಟಸಿದ್ಧಿಯಾಗುವುದಾಗ ಅಲ್ಲಿ! (ಸಾ)
-ಧಿಸಿ ಸಾಯುಜ್ಯ ಸುಖಿಯಾಗಿರಲ್ಲಿ! (ಭ)
-ಯದಿಂದ ಪಾರಾಗುವಿಂತು ನೀನಲ್ಲಿ! (ಇ)
-ಲ್ಲಿ ನಿರಂಜನಾದಿತ್ಯನಡಿಯಲ್ಲಿ!!!
ಪಥ ಕಾಣದೆ ಕಳವಳವಾಯಿತು!
ಹೋಗಲೆತ್ನಿಸಿದ ಊರು ದೂರಾಯಿತು! (ಬಾ)
-ಯಿಮುಚ್ಚಿ ಧ್ಯಾನಿಸಲಿಚ್ಛೆಯುಂಟಾಯಿತು!
ತುಸ ಸಮಯದಲ್ಲಿ ಬೆಳಕಾಯಿತು!
ಕರ್ಮಕ್ಕೆ ತಕ್ಕ ಫಲ ಪ್ರಾಪ್ತಿಯಾಯಿತು! (ಅ)
-ತ್ತ ಕಣ್ಣುಗಳ ಉರಿ ಶಾಂತವಾಯಿತು! (ತ)
-ಲೆಯ ಭಾರ ಕೆಳಗಿಳಿದಂತಾಯಿತು! (ಲೋ)
-ಕನಾಥದಲ್ಲಿ ನಂಬಿಗೆ ಹೆಚ್ಚಾಯಿತು!
ವಿರೋಧ ಭಾವ ಮಾಯವಾಗಿ ಹೋಯಿತು! (ಬಾ)
-ಯಿ ಬಡಾಯಿಗೆ ಜಾಗವಿಲ್ಲದಾಯಿತು! (ಹೇ)
-ತು ನಿರಂಜನಾದಿತ್ಯನೆಂಬರಿವಾಯ್ತು!!!
-ಮರಾಜ ತಾನಾಗಬೇಕಯ್ಯಾ! (ದೀ)
-ನರುದ್ಧಾರಾಗಾಗುವುದಯ್ಯಾ!
ಜನ್ಮ ಸಾರ್ಥಕವಾಗ್ವುದಯ್ಯಾ! (ತಾ)
-ಯಿಯಾತ್ಮಕ್ಕಾಗ ಶಾಂತಿಯಯ್ಯಾ!
ಸಕಲ ಸೌಭಾಗ್ಯವಿದಯ್ಯಾ!
ಬೇರಿಲ್ಲ ಎಣೆಯಿದಕಯ್ಯಾ!
ಕಷ್ಟ ನಷ್ಟವಗಿಲ್ಲವಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾತ್ಮಯ್ಯಾ!!!
-ಚ್ಚರವಿಲ್ಲದಾ ಮಹಾ ತಾಯಿ (ಪ)
-ರಮೇಶ್ವರನರ್ಧಾಂಗೀ ತಾಯಿ!
ವಿರಕ್ತಿ ಸದಾನಂದದಾಯಿ! (ಸು)
-ತ್ತಮುತ್ತೆಲ್ಲೆಲ್ಲೂ ಹುಚ್ಚು ನಾಯಿ! (ಕ)
-ಳಂಕ ಹಚ್ಚುವುದಾ ಅನ್ಯಾಯಿ!
ಬಾಯ್ಜೊಲ್ಲಿಂದದು ಮೃತಪ್ರಾಯಿ!
ತಾಳೆಂದರೆ ಕೇಳದಾ ಬಾಯಿ! (ತಾ)
-ಯಿ, ನಿರಂಜನಾದಿತ್ಯಾ ತಾಯಿ!!!
-ಚ್ಚರ ಬೇಡೆಂದಳಾ ಮಲ್ಲಮ್ಮಾ! (ವ)
-ರಗುರು ಭಕ್ತಳಾ ನಾಗಮ್ಮಾ!
ಕೊಲೆ, ಸುಲಿಗೆಯೊಲ್ಲಳಮ್ಮಾ! (ಕೆ)
-ಟ್ಟ ವಿಚಾರಟ್ವೆಂದಳಾ ಅಮ್ಮಾ! (ಬಾ)
-ಳು ಬಂಗಾರಕ್ಕಿದೆಂದಳಮ್ಮಾ!
ಎಲ್ಲರೈಕ್ಯ ಬೇಕೆಂದಳಮ್ಮಾ! (ಎ)
-ಲ್ಲ ಗುರುಸ್ವರೂಪೆಂದಳಮ್ಮಾ! (ಅ)
-ಮ್ಮಾ ನಿರಂಜನಾದಿತ್ಯ ಬ್ರಹ್ಮಾ!!!
-ಡೆ, ಮುಡಿ, ಧರಿಸಿರುವವನ!
ನಾಮ, ರೂಪಾನಂತವಾಗಿಹನ!
ಗಂಗೆ, ಪಾರ್ವತಿಯರೊಡೆಯನ! (ಕ)
-ಡು ತ್ಯಾಗಿಯಾಗಿರುವಾ ಶಿವನ!
ಹೆತ್ತಮ್ಮ ತಾನೆಲ್ಲರ್ಗಾಗಿಹನ! (ಕ)
-ಣ್ಣಾದಿಂದ್ರಿಯ ಜಯಿಸಿರ್ಪವನ!
ದತ್ತಾತ್ರೇಯ ಸ್ವರೂಪಾದವನ!
ವರ ಭಕ್ತಿಗೊಲಿಯುತಿಹನ! (ಜ)
-ನಕ ಶ್ರೀ ನಿರಂಜನಾದಿತ್ಯನ!!!
ಭಾಷೆಗಳೆಲ್ಲಾ ಬ್ರಹ್ಮನ ವಾಣಿ! (ದ್ವೇ)
-ಷೆಣಿಸಳಾರಲ್ಲವನಾ ರಾಣಿ!
ಗರ್ವಿಯಿದರಿಯದಲ್ಪ ಪ್ರಾಣಿ! (ಬೆ)
-ಳೆಸಬೇಕು ಪ್ರೇಮ ಭಾವ ಜಾಣಿ! (ಚೆ)
-ಲ್ಲಾಟಗಳಿಂದಪ್ಪ ತಾ ನಿತ್ರಾಣಿ!
ಬ್ರಹ್ಮಜ್ಞಾನಾತ್ಮನೇ ಪರಿತ್ರಾಣಿ! (ಬ್ರ)
-ಹ್ಮ ತಾನಾಗ್ಬೇಕು ಮಾನವ ಪ್ರಾಣಿ! (ದಿ)
-ನಪನೆಲ್ಲರಿಗೂ ಹಿರೇ ಮಾಣಿ! (ಭ)
-ವಾಬ್ಧಿ ತಾರಕಾ ಸತ್ಯ ಪ್ರಮಾಣಿ! (ರಾ)
-ಣಿ ನಿರಂಜನಾದಿತ್ಯಗಾ ವಾಣಿ!!!
ಸುತ್ತು ಮುತ್ತು ನೋಡಿ ಮಾತನಾಡು! (ಗೊ)
-ತ್ತು ಮಾಡಿದ ಹೊತ್ತು ಈರದಾಡು!
ಮುಕ್ತ ಕಂಠದಿಂದ ಮುಕ್ತಾಯ ಮಾಡು! (ಕ)
-ತ್ತು, ಮೂತಿ ಸೊಟ್ಟ ಮಾಡದೇ ಆಡು!
ನೋವು ಯಾರಿಗೂ ಆಗದಂತಾಡು! (ಆ)
-ಡಿದಂತೆ ನಡೆವುದಾದರಾಡು!
ಮಾರಹರನ ಸ್ಮರಿಸುತ್ತಾಡು!
ತತ್ವವೇನೆಂದರಿತು ಕೊಂಡಾಡು!
ನಾ, ನೀನೆಂಬಹಂಕಾರ ಬಿಟ್ಟಾಡು! (ಆ)
-ಡು, ನಿರಂಜನಾದಿತ್ಯಾನೆಂದಾಡು!!!
ಮಲಿನ ವಾಸನಾ ದೂರಾ ಸ್ವಾಮಿ!
ನಾದ, ಬಿಂದು, ಕಲಾತೀತಾ ಸ್ವಾಮಿ! (ಗ್ರಂ)
-ಥ ವಾಸನೆಯಿಲ್ಲದವಾ ಸ್ವಾಮಿ!
ನೆಪ ಮಾತ್ರಕ್ಕೆ ಸಂಸಾರೀ ಸ್ವಾಮಿ! (ತ)
-ಲ್ಲಣಗೊಳ್ಳದಾತ್ಮ ನಿಷ್ಠಾ ಸ್ವಾಮಿ!
ರಿಪುಕಾಲ ಕಾಲಾ ಮಹಾ ಸ್ವಾಮಿ! (ಬ)
-ಗೆಬಗೆಯ ರೂಪಧಾರೀ ಸ್ವಾಮಿ!
ಸ್ವಾವಲಂಬವ ನಿರತಾ ಸ್ವಾಮಿ! (ಸ್ವಾ)
-ಮಿ, ನಿರಂಜನಾದಿತ್ಯಾತ್ಮ ಪ್ರೇಮಿ!!!
ಆಪ್ತಮಿತ್ರಹೋಬಿಲ ನರಸಿಂಹಯ್ಯಾ! (ಗು)
-ಪ್ತವಾಗಿರುವನವನೆಲ್ಲರಲ್ಲಯ್ಯಾ! (ಸ್ವಾ)
-ಮಿಯವನೀರೇಳು ಲೋಕಗಳಿಗಯ್ಯಾ!
ತ್ರಯಮೂರ್ತಿ ಸ್ವರೂಪನಾಗಿಹನಯ್ಯಾ! (ಅ)
-ಹೋರಾತ್ರಿಯವನ ಭಜಿಸಬೇಕಯ್ಯಾ!
ಬಿಡದೇ ರಕ್ಷಿಪನು ಭಕ್ತರನ್ನಯ್ಯಾ!
ಲಕ್ಷ್ಮಿಯವನ ಚರಣ ದಾಸಿಯಯ್ಯಾ! (ವೈ)
-ನತೇಯಗಲ್ಲಿ ದರ್ಶನವಿತ್ತನಯ್ಯಾ! (ಹಿ)
-ರಣ್ಯಕಶ್ಯಪನುದರ ಬಗೆದಯ್ಯಾ!
ಸಿಂಹಾಸನಕ್ಕೇರಿಸಿದ ಮಗನಯ್ಯಾ!
ಹರಿನಾಮ ಸ್ಮರಣಾ ಫಲವಿದಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾ ನರಸಿಂಹಯ್ಯಾ!!!
-ರ್ಯದಿಂದಾಗುವುದು ಕಾರ್ಯವೆಲ್ಲ!
ನಾನು ಹೆಚ್ಚೆಂಬಹಂಕಾರವಿಲ್ಲ! (ದ)
-ರಿದ್ರರನ್ನನಾದರಿಪುದಿಲ್ಲ!
ಗೂಢವೆಂಬುದವನಲ್ಲೇನಿಲ್ಲ!
ಈರಾ, ಕಬೀರರರಿತರೆಲ್ಲ!
ಸತ್ಸಂಗ ಮಾಡಿರವನದೆಲ್ಲ! (ವಿ)
-ಲಾಸಪ್ರಿಯನಾಗಿ ಆತನಿಲ್ಲ! (ತಾ)
-ಗಿ ಜೀವನವವನ ಬಾಳೆಲ್ಲ! (ಪು)
-ಲ್ಲನಿರಂಜನಾದಿತ್ಯನೆಲ್ಲಿಲ್ಲ???
-ಣಗು ವಿಷಯಿ ಸನ್ಯಾಸಿಯೇ? (ಘ)
-ನತೆಯಿಲ್ಲದವ ಸ್ವಾಮಿಯೇ?
ಮುಂಗೋಪದವ ಮುತ್ಸದ್ದಿಯೇ? (ನಿಂ)
-ದೆಗಂಜಿದವ ನಿಧಾನಿಯೇ? (ಸಾ)
-ಕಿ ಸಲಹಿದವ ವೈರಿಯೇ? (ನ)
-ನ್ನ, ನಿನ್ನೆನದವ ಭವಿಯೇ? (ಹ)
-ರಿಪಾದ ಸೇವಕ ಪಾಪಿಯೇ? (ಕಾ)
-ಯೇ ನಿರಂಜನಾದಿತ್ಯ ತಾಯೇ!!!
-ರ್ಥಸಾರಥಿಯೇ ನರಸಿಂಹಪ್ಪಾ!
ಕರ್ತವ್ಯ ನಿಷ್ಠೆಗಾದರ್ಶಾತಪ್ಪಾ!
ಜೀವಭಾವ ಕಳೆಯಬೇಕಪ್ಪಾ!
ವರ ಗುರು ಗುಲಾಮನಾಗಪ್ಪಾ! (ಅ)
-ನವರತ ಭಜನೆ ಮಾಡಪ್ಪಾ! (ಅ)
-ವರಿವರ ಮಾತು ಕೇಳ್ಬೇಡಪ್ಪಾ!
ರುಜು ಮಾರ್ಗಾವಲಂಬಿಯಾಗಪ್ಪಾ! (ಕು)
-ಹಕರೊಡನೆ ಸೇರಬೇಡಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯನೆನ್ನಪ್ಪಾ!!!
-ರ ಗುರುಕೃಪೆಗೆ ಪಾತ್ರಪ್ಪಾ!
ಸತ್ಸಂಗಿಯಾಗಿರಬೇಕಪ್ಪಾ! (ಇ)
-ಪ್ಪಾಗ ದಾನ, ಧರ್ಮ ಮಾಡಪ್ಪಾ!
ನೀತಿ, ರೀತಿಯರಿತಿರಪ್ಪಾ!
ನರಸಿಂಹ ದಾಸ ನೀನಪ್ಪಾ! (ನಿ)
-ರತವನ ಧ್ಯಾನಿಸಿರಪ್ಪಾ!
ಸರ್ವ ಕಲ್ಯಾಣವಪ್ಪುದಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯಪ್ಪಾ!!!
ತಿಳಿದಿದ ಸೇವೆ ಮಾಡಮೃತಾ! (ಕಾ)
-ಯೇಚ್ಛೆ ಕಡಿಮೆಯಾಗಲಮೃತಾ!
ಪರಮಾರ್ಥವರಿತಿರಮೃತಾ! (ವ)
-ರಗುರುವಂತರ್ಯಾಮಿಯಮೃತಾ!
ದೈನ್ಯ ಭಾವಕ್ಕೊಲಿವನಮೃತಾ! (ಅ)
-ವನಿಚ್ಛೆಯಂತಾಗ್ವುದೆಲ್ಲಮೃತಾ! (ಭ)
-ವರೋಗ ವೈದ್ಯನವನಮೃತಾ!
ಮೃಗಜಲ ಸಂಸಾರವಮೃತಾ!
ತಾ, ನಿರಂಜನಾದಿತ್ಯನಮೃತಾ!!!
-ವಗಿಲ್ಲನ್ಯೊಂದೇ ರೂಪವಿನ್ನೆಲ್ಲೂ (ಪ)
-ರಮಾತ್ಮನಿಹನೀ ಯುಗದಲ್ಲೂ!
ನೋವು, ಸಾವಿನೆಲ್ಲಾ ದೇಹದಲ್ಲೂ! (ಕೂ)
-ಡಿಯಾಡುತಿರ್ಪ ತ್ರಿಕಾಲದಲ್ಲೂ! (ತೆ)
-ರೆ ಹರಿದೀಗ ನೋಡು ನಿನ್ನಲ್ಲೂ! (ಇ)
-ಲ್ಲವನಿಗೆ ಕೈಲಾಸ ಬೇರೆಲ್ಲೂ! (ನೆ)
-ರೆ ಭಕ್ತಿಯಿಂದ ಸಾಧಿಸೀ ಸೊಲ್ಲೂ! (ನ)
-ಲ್ಲೆ, ನಲ್ಲರಾಟದಿಂದೆಲ್ಲಾ ಗುಲ್ಲೂ! (ಎ)
-ಲ್ಲೂರ ನಿರಂಜನಾದಿತ್ಯನಿಲ್ಲೂ!!!
-ದಿನ, ಮುಂದಿನದೆಂಬುದು ಭ್ರಾಂತಿ!
ನಲ್ಲನೊಡನಿರ್ಪುದೇ ವಿಶ್ರಾಂತಿ!
ದಿವ್ಯ ಜೀವನಾನಂದ ಸಂಪ್ರಾಪ್ತಿ! (ಅ)
-ನನ್ಯ ಭಕ್ತಗಂದೊಂದೇ ಸಂಗಾತಿ!
ಸುಗುಣಾವಳಿಯಿಂದೂರ್ಧ್ವ ಗತಿ! (ಅ)
-ದಿಲ್ಲದಿದ್ದರಾಗ್ವುದಧೋ ಗತಿ! (ದಿ)
-ನಪನದ್ದಾದರ್ಶ ಆತ್ಮ ಸ್ಥಿತಿ!
ಶಾಂಭವಿಯಂತಿರಬೇಕು ಸತಿ! (ಪ)
-ತಿ ನಿರಂಜನಾದಿತ್ಯಾಧಿಪತಿ!!!
-ರರನುಕರಣೆ ಬಿಡಬೇಕು! (ಒ)
-ಳ, ಹೊರಗೆ ಶುಚಿಯಾಗಬೇಕು!
ಜೀವತ್ವದಿಂದ ಪಾರಾಗಬೇಕು!
ವರ ಗುರುಸೇವೆ ಸದಾ ಬೇಕು! (ಮ)
-ನಸಿಜನಾಟ ಮಡಿಯಬೇಕು!
ವಿಚಾರ ಆತ್ಮನದ್ದಾಗಬೇಕು! (ಪ)
-ರ ದೂಷಣೆ ಮಾಡದಿರಬೇಕು!
ಬೇಲಿ ಹಾಕಿ ಬೇಸಾಯ ಮಾಡ್ಬೇಕು! (ಟಾ)
-ಕು ನಿರಂಜನಾದಿತ್ಯನಾಗ್ಬೇಕು!!
-ನ್ಮತ್ತನಾಗಿ ಮನ್ಮಥಗಾಳಾಗದಿರಲಿ!
ದಾರಿ ಗುರುಪಾದದತ್ತ ಸಾಗುತ್ತಿರಲಿ!
ತಪ್ಪೊಪ್ಪುಗಳ ಹೊಣೆ ಅವನಿಗಿರಲಿ!
ನಡೆ, ನುಡಿಗಳವನೇ ಸರಿ ಮಾಡಲಿ!
ಸೇರಿಸಿ ಸಜ್ಜನರಾತ್ಮ ಶಾಂತಿ ಕೊಡಲಿ!
ವೆಚ್ಚ ಆದಾಯಗಳ ಹುಚ್ಚು ಬಿಡಿಸಲಿ!
ಯಾತ್ರೆ ಅಂತರ್ಯೂಮಿಯ ಚಿಂತನೆಗಾಗಲಿ!
ಜಡದೇಹದಭಿಮಾನ ತೊಲಗಿಸಲಿ! (ಚಿ)
-ನ್ಮಯ ತಾನೆಂಬಾತ್ಮಜ್ಞಾನದಲ್ಲಿರಿಸಲಿ!
ವಿಶ್ವಾಸವನ್ನವನೇ ಬಲಪಡಿಸಲಿ! (ನ)
-ರಜನ್ಮವೀ ರೀತಿ ಸಾರ್ಥಕಗೊಳಿಸಲಿ! (ಕ)
-ಲಿಮಲ ನಿರಂಜನಾದಿತ್ಯ ಕಳೆಯಲಿ!!!
-ದವರ್ಗುಕ್ಕಿತು ಭಕ್ತಿ ರಸ!
ಪೂಜೆಯಲ್ಲಿತ್ತಾತ್ಮ ವಿಶ್ವಾಸ! (ಪೂ)
-ಜೆಗೊಂಡವಾ ಕೈಲಾಸವಾಸ!
ಯಾಗ, ಯೋಗಕ್ಕವನರಸ! (ಆ)
-ಈಗ ಪಾವನಾ ನವಾವಾಸ! (ಇ)
-ದಿಲ್ಲದಿದ್ದರಾಗ್ತಿತ್ತಾಭಾಸ! (ಅ)
-ವರಿವರ ಮಾತೆಲ್ಲಾ ಮೋಸ! (ವ್ಯಾ)
-ಸ, ನಿರಂಜನಾದಿತ್ಯ ದಾಸ!!!
-ಲು ತಿನ್ನದಿರಬೇಡವೇನು?
ಎಷ್ಟು ಜಪ ಮಾಡಿದರೇನು? (ಎ)
-ಷ್ಟು ಕ್ಷೇತ್ರವ ಸುತ್ತಿದರೇನು?
ಕುಕರ್ಮ ಬಿಡಬೇಡವೇನು? (ಮ)
-ಡಿಮಡಿಯೆಂದರಾಯಿತೇನು? (ಮ)
-ದ, ಮತ್ಸರಡಗಬೇಡ್ವೇನು? (ದೊ)
-ರೇ ಮಗನೇ ತಾನಾದರೇನು? (ತಾ)
-ನು ನಿರಂಜನಾದಿತ್ಯಾದ್ನೇನು???
-ದ್ದೆಳ್ಳಷ್ಟಿಲ್ಲವಾಗಿತ್ತು ಆಗ! (ನಾ)
-ನಾನಂದಿಸಿದೆನಾಗ ಯೋಗ!
ನಿಂದಾ, ಸ್ತುತಿ ದತ್ತಗಾಯ್ತಾಗ!
ದುರ್ದೈವವೆಂಬುದೊಂದು ರೋಗ!
ಬಹುಕಾಲದಿಂದಾಯ್ತಾ ಭೋಗ!
ಹುಮ್ಮಸ್ಸಿಲ್ಲ ಬಾಳಿನಲ್ಲೀಗ!
ಬೇಕು ಪರಿಹಾರದಕ್ಕೀಗ!
ಗತಿ ನಿರಂಜನಾದಿತ್ಯಾಗ!!!
ಎಬ್ಬಿಸಿದಾಗೇಳದಿದ್ದರಿಲ್ಲ ಹಬ್ಬ! (ತ)
-ಬ್ಬಿಬ್ಬಾದಾಗ ಗತಿ ಗುರುದೇವನೊಬ್ಬ! (ಬ)
-ಸಿರಲ್ಲಿ ಕೂಸಿಲ್ಲದಿದ್ದರೇಕಾ ಗಬ್ಬ?
ದಾರಿಯಲ್ಲಿರಬಾರದು ಹಳ್ಳ ದಿಬ್ಬ!
ಗೇಣಿಯೆಳೆವಾಗ ಬೇಡ ತೂತು ಡಬ್ಬ! (ಬೆ)
-ಳಕ ಬೀರದಿದ್ದರದು ವ್ಯರ್ಥ ಕಬ್ಬ! (ಹಂ)
-ದಗೇಕುತ್ತಮ ರೇಶ್ಮೆಯ ಶುಭ್ರ ಜುಬ್ಬ? (ಗ)
-ದ್ದಲವಿಲ್ಲದೆ ಕರಗಿಸಬೇಕು ಕೊಬ್ಬ! (ಹ)
-ರಿಶರಣ ಕಾಮದಿಂದಾರನ್ನೂ ತಬ್ಬ! (ಎ)
-ಲ್ಲರಲ್ಲೂ ತಾನೆಂಬುದವನಿಗೆ ಹಬ್ಬ!
ಹದಿಬದೆ ಹಾರಿಸುವಳೇನು ಹುಬ್ಬ? (ಒ)
-ಬ್ಬ ನಿರಂಜನಾದಿತ್ಯನೆಂದೆಲ್ಲಾ ಹಬ್ಬ!!!
-ನವರತ ಮಾಡಭ್ಯಾಸ ಮಾನವಾ!
ವಾಗಾಡಂಬರ ಸಾಕಿನ್ನು ಮಾನವಾ!
ಬಹು ಕಷ್ಟವದರಿಂದ ಮಾನವಾ!
ಯಮ, ನಿಯಮದಿಂದಿರು ಮಾನವಾ! (ಮೇ)
-ಲು ನಿನಗದರಿಂದಕ್ಕು ಮಾನವಾ!
ಮಾನಾಪಮಾನ ಸಹಿಸು ಮಾನವಾ! (ಕಾ)
-ಡು, ಮೇಡಿಗೋಡಬೇಕಿಲ್ಲ ಮಾನವಾ!
ಮನೆಯಲ್ಲಾಗದ್ದಿನ್ನೆಲ್ಲಿ? ಮಾನವಾ!
ನರನೇ ನಾರಾಯಣಪ್ಪ ಮಾನವಾ! (ದೇ)
-ವಾ ನಿರಂಜನಾದಿತ್ಯಾತ್ಮ ಮಾನವಾ!!!
-ಲ್ಲಿನ ಮಾತು ಅಲ್ಲಾಡಬೇಡ! (ದಿ)
-ನ, ರಾತ್ರಿ ಜಪ ಬಿಡಬೇಡ!
ಮಾಯೆಗೆ ಮರುಳಾಗಬೇಡ!
ತಿಕ್ಕಾಟಕ್ಕೆಡೆಗೊಡಬೇಡ! (ಅ)
-ಲ್ಲಾಡುವ ಮನೋಸ್ಥಿತಿ ಬೇಡ! (ಒ)
-ಡನಾಟಯೋಗ್ಯರದು ಬೇಡ! (ಕು)
-ಬೇರನಾಗಲೆತ್ನಿಸಬೇಡ! (ಗಂ)
-ಡ ನಿರಂಜನಾದಿತ್ಯಖಂಡ!!!
ಸತ್ಯಕ್ಕಪಾರ್ಥ ಮಾಳ್ಪರು ಮೂರ್ಖರಯ್ಯಾ! (ಅ)
-ತ್ಯಮೂಲ್ಯ ಭಕ್ತಿ ಅವರಿಗಿಲ್ಲವಯ್ಯಾ! (ಮಿ)
-ಕ್ಕವರ ನಿಂದೆ ಅವರಿಗಿಷ್ಟವಯ್ಯಾ!
ಪಾಪ ಭೀತಿ ಅವರಿಗೇನಿಲ್ಲವಯ್ಯಾ! (ಸ್ವಾ)
-ರ್ಥ ಪಿಶಾಚಿಯಾರಾಧಕರವರಯ್ಯಾ!
ಮಾತನಾಟಕ್ಕವರಾಳಾಗಿಹರಯ್ಯಾ! (ಮಾ)
-ಳ್ಪತ್ಯಾಚಾರನಾಚಾರವಪಾರಯ್ಯಾ! (ಗು)
-ರುವಿಗೇ ತಿರುಮಂತ್ರ ಹೇಳುವರಯ್ಯಾ!
ಮೂರ್ಖರಿವರಿಗೆ ಅಧೋಗತಿಯಯ್ಯಾ! (ಮೂ)
-ರ್ಖ ಸಂಗದಿಂದ ದೂರವಿರಬೇಕಯ್ಯಾ!
ರಘುಪತಿಯ ಧ್ಯಾನ ಸದಾ ಮಾಡಯ್ಯಾ! (ಅ)
-ಯ್ಯಾ ನಿರಂಜನಾದಿತ್ಯ ನೀನಾಗಿರಯ್ಯಾ!!!
-ರ್ಶಕ್ಕವಕಾಶ ಕೂಟದಲ್ಲಿಲ್ಲಯ್ಯಾ! (ಅ)
-ನಾದರ ಮಾಡ ಗುರುವಾರನ್ನಯ್ಯಾ!
ಪೇಚಾಡಬೇಡ ಸಂದೇಹದಿಂದಯ್ಯಾ! (ಕ)
-ಕ್ಷೆಯಾತನದತಿ ಪವಿತ್ರವಯ್ಯಾ! (ಆ)
-ತನಾರೋಪದಿಂದವನತಿಯಯ್ಯಾ! (ಪ)
-ರಮಾರ್ಥಿಯಿದನರಿಯಬೇಕಯ್ಯಾ!
ತನು, ಮನ, ಧನಾರ್ಪಣೆ ಮಾಡಯ್ಯಾ!
ರಕ್ಷಿಸುವನು ನಿನ್ನನವನಯ್ಯಾ! (ಅ)
-ವರಿವರ ಮಾತು ನಿನಗೇಕಯ್ಯಾ? (ಅ)
-ಯ್ಯಾ! ನಿರಂಜನಾದಿತ್ಯನ ನಂಬಯ್ಯಾ!!!
-ರ್ವವೇಕೆ ಮಾನವನಿಗಯ್ಯಾ? (ಯ)
-ಜದಿಂದಜ್ಞಾನ ಕಳೆಯಯ್ಯಾ!
ದೇವರ ಧ್ಯಾನಾ ಯಜ್ಞವಯ್ಯಾ!
ವರ ಗುರುವಾ ದೇವನಯ್ಯಾ! (ಬೇ)
-ರೊಬ್ಬ ದೇವರಿನ್ನಿಲ್ಲವಯ್ಯಾ! (ಅ)
-ಬ್ಬರಾರ್ಭಟವಗಿಲ್ಲವಯ್ಯಾ! (ಅ)
-ನಸೂಯಾತ್ಮಾ ದತ್ತಾತ್ರೇಯಯ್ಯಾ! (ಅ)
-ಯ್ಯಾತ ನಿರಂಜನಾದಿತ್ಯಯ್ಯಾ!!!
ದುಸ್ಸಂಗ ಮಾಡ್ಬಾರದೆಂದೂ!
ಇಂದಿನದ್ದಿಂದೇ ಮಾಡೆಂದೆಂದೂ! (ಅಂ)
-ದು, ಮುಂದಿನಾಸೆ ಬೇಡೆಂದೆಂದೂ!
ಮುಂಗೋಪಿಯಾಗ್ಬಾರದೆಂದೆಂದೂ!
ದುರ್ವಿಧಿಯೆನಬೇಡೆಂದೆಂದೂ!
ಎಂಟಂಗ ಯೋಗಿಯಾಗೆಂದೆಂದೂ! (ನಿಂ)
-ದೆಂಬುದ ಬಿಡಬೇಕೆಂದೆಂದೂ! (ಇಂ)
-ದೂ ನಿರಂಜನಾದಿತ್ಯೆಂದೆಂದೂ!!!
ರಂಗನಾಥಸ್ವಾಮಿರೂಪಾ ಬಾಬಾ!
ಜಗದಾದಿ ಗುರುದೇವಾ ಬಾಬಾ!
ನಾಮ, ರೂಪ, ಗುಣಾತೀತಾ ಬಾಬಾ!
ದಿವ್ಯ ಜ್ಞಾನಾನಂದಮಯಾ ಬಾಬಾ!
ತ್ಯಾಗಮೂರ್ತಿ, ಯೋಗಮೂರ್ತಿ ಬಾಬಾ!
ನಂಜುಂಡ ಧೀರ ಮಾರ್ತಾಂಡಾ ಬಾಬಾ!
ದಾನವ ಧ್ವಂಸ ಶ್ರೀಧರಾ ಬಾಬಾ!
ಬಾಲಲೀಲಾನಂದಲೋಲಾ ಬಾಬಾ!
ಬಾಬಾ ನಿರಂಜನಾದಿತ್ಯ ಬಾಬಾ!!!
-ದ್ಯೋಜಾತ ಕೊಡಬೇಕದಿಲ್ಲೇ! (ಮು)
-ಗಿಸಬೇಕು ಜನ್ಮವನ್ನಿಲ್ಲೇ! (ನ್ಯಾ)
-ಯಾನ್ಯಾಯವರಿಯಬೇಕಿಲ್ಲೇ! (ಆ)
-ಗ್ಬೇಕು ದಿಗ್ವಿಜಯವಿದ್ದಲ್ಲೇ!
ಕುರುಕುಲಾಂತ್ಯವಾಗ್ಬೇಕಿಲ್ಲೇ!
ನೀ, ನಾನೆಂಬುದಳಿಯಲಿಲ್ಲೇ!
ನಿತ್ಯಾನಂದವೊದಗಲಿಲ್ಲೇ! (ಇ)
-ಲ್ಲೇ ನಿರಂಜನಾದಿತ್ಯನಲ್ಲೇ!!!
-ರುಣಾಕರವನೆಂದ್ಕುಣಿಯೋಣ!
ದರ್ಶನವಾಯ್ತೆಂದು ಕುಣಿಯೋಣ! (ಅ)
-ತ್ತ, ಇತ್ತ ನೋಡದೇ ಕುಣಿಯೋಣ!
ಬಂಧು, ಮಿತ್ರವನೆಂದ್ಕುಣಿಯೋಣ!
ದಣಿದೆನೆನ್ನದೇ ಕುಣಿಯೋಣ!
ಕುಕಲ್ಪನೆ ಬಿಟ್ಟು ಕುಣಿಯೋಣ! (ಫ)
-ಣಿಶಾಯಿಯಿವನೆಂದ್ಕುಣಿಯೋಣ!
ಯೋಗೀಶ್ವರವನೆಂದ್ಕುಣಿಯೋಣ! (ತ್ರಾ)
-ಣ ನಿರಂಜನಾದಿತ್ಯ! ಕುಣ್ಯೋಣ!!
ಹರಿಭಜನೆಯಿಂದುಂಟಾಯ್ತು ಶಾಂತಿ! [ಅ]
-ರಿಭಯದಿಂದ ಪಾರಾಗೀಗ ಶಾಂತಿ!
ಭಕ್ತೋತ್ತಮರ ಸಂಗದಿಂದ ಶಾಂತಿ!
ಜಗದ ವ್ಯಾಪಾರ ಬಿಟ್ಟೀಗ ಶಾಂತಿ! (ಮ)
-ನೆಮನೆಯಲೆದಾಟ ತಪ್ಪಿ ಶಾಂತಿ! (ನಾ)
-ಯಿಂದನ ಹಂಗಿನ್ನೇನೆಂದೀಗ ಶಾಂತಿ!
ದುಂಬು ಹೋಗಿ ಸ್ವಚ್ಛವಾಗೀಗ ಶಾಂತಿ! (ಬೂ)
-ಟಾಟಿಕೆಯ ಬಾಳಳಿದೀಗ ಶಾಂತಿ! (ಕಾ)
-ಯ್ತು ಗುರುಕೃಪೆಯೆಂದರಿತು ಶಾಂತಿ! (ಆ)
-ಶಾಂಕುರಿಸದಂತಾದುದರಿಂದ ಶಾಂತಿ! (ಪ್ರೀ)
-ತಿ ನಿರಂಜನಾದಿತ್ಯ ತೋರಿ ಶಾಂತಿ!!!
-ಷ್ಟೊಂದು ರೂಪ ಧರಿಸಿರ್ಪೆಯಪ್ಪಾ?
ದುರಿತದೂರ ನೀನೆಂಬರಪ್ಪಾ!
ಹೆಚ್ಚಾಯ್ತು ಕಷ್ಟಾಸೆಗಳಿಂದಪ್ಪಾ!
ಸಹಜ ಸ್ಥಿತಿಯಲ್ಲಿರಿಸಪ್ಪಾ! (ಕ)
-ರುಣಾಕರ ನೀನಲ್ಲವೇನಪ್ಪಾ?
ನಿಶ್ಚಲ ಭಕ್ತಿ ಇನ್ನೂ ಹೇಗಪ್ಪಾ?
ನನ್ನಲ್ಲಿನ್ನೇನು ತಪ್ಪಿಹುದಪ್ಪಾ? (ಸಂ)
-ಗ ಸರ್ವದಾ ನಿನ್ನದೇ ನೀಡಪ್ಪಾ! (ಅ)
-ಪ್ಪಾ ನಿರಂಜನಾದಿತ್ಯನೆನ್ನಪ್ಪಾ!!!
-ಗ ಜೀವನ ಪ್ರಾಪ್ತಿಯಾಯ್ತು! (ಅ)
-ಹೀ ರಾತ್ರಿ ಭಜನೆಯಾಯ್ತು! (ತಾ)
-ಯ್ತಾನಾಗೆತ್ತಿಕೊಂಡಂತಾಯ್ತು!
ರೋದನವಿಲ್ಲದಂತಾಯ್ತು! (ಭಾ)
-ಗ್ಯವಿದೆಂಬ ಅರಿವಾಯ್ತು! (ಭ)
-ವಾಬ್ಧಿ ಬತ್ತಿ ಹೋದಂತಾಯ್ತು! (ಆ)
-ಯ್ತು ನಿರಂಜನಾದಿತ್ಯಾಯ್ತು!!!
-ಗಿತ ತಿಳಿಯಿತು ಸ್ವಾಮಿ! (ಸಂ)
-ಬಂಧ ಭದ್ರವಾಯ್ತು ಸ್ವಾಮಿ! (ಮುಂ)
-ದೆ ಉತ್ತಮ ಸ್ಥಿತಿ ಸ್ವಾಮಿ!
ನೀನೆಲ್ಲಕ್ಕಾಧಾರ ಸ್ವಾಮಿ! (ಮಂ)
-ಗಳಾರತಿ ಮಾಡ್ಲೇ ಸ್ವಾಮಿ?
ಸ್ವಾಮಿ ದಾಸ ನಾನು ಸ್ವಾಮಿ! (ನೇ)
-ಮಿ ನಿರಂಜನಾದಿತ್ಯಾತ್ಮಿ!!!
-ಲ್ಲಾಟ ಮನಸ್ಸಿಗತಿಯಾಯಿತು!
ಬಲಗುಂದಿ ದೇಹ ಹಾಳಾಯ್ತು! (ಉ)
-ಣ್ಣಲಿಕಿಸ್ಕಿದನ್ನು ಬೇಡಾಯ್ತು!
ಮಹೇಶನ ನೆನಪಾಗಾಯ್ತು! (ಹು)
-ಸಿ ಮಾಯಾ ಸಂಗ ತಪ್ಪಿಯೋಯ್ತು! (ತಾ)
-ನುಂಡನ್ನ ಅಗಮೃತವಾಯ್ತು! (ಭೋ)
-ಗಿಯಾಗ ಯೋಗಿಯಾದಂತಾಯ್ತು! (ಹೇ)
-ತು ನಿರಂಜನಾದಿತ್ಯನಾಯ್ತು!!!
-ಮ್ಮುತಿದೆ ಅವನಲ್ಲತ್ಯಾನಂದ! (ಶ್ರ)
ದ್ಧಾ, ಭಕ್ತಿಯಿಂದವ ಪೂರ್ಣಾನಂದ! (ವ)
-ರ ಗುರುಕೃಪಾ ಪಾತ್ರಾತ್ಮಾನಂದ! (ವಾ)
-ಕ್ಕಾಯ ಮನಶ್ಯುದ್ಧಾ ನಿತ್ಯಾನಂದ! (ಮ)
-ಗನಾಗಿ ಶಿವಕುಮಾರಾನಂದ!
ವಸ್ತ್ರ ಭೂಷಣ ರಹಿತಾನಂದ! (ಅ)
-ನುದಿನಾನುಷ್ಠಾನಚಲಾನಂದ!
ಬಂಧ ಮುಕ್ತನಾ ಸಹಜಾನಂದ!
ದತ್ತ ನಿರಂಜನಾದಿತ್ಯಾನಂದ!!!
-ಣ್ಣಿಗೆ ಕಾಣಿಸದಿರ್ಪುದೊಂದು ಹಿರಿಮೆ!
ಸಚ್ಚಿದಾನಂದನೆಂಬುದೊಂದು ಹಿರಿಮೆ! (ಅ)
-ಲಕ್ಷ್ಯ ಮಾಯೆಗಿರುವುದೊಂದು ಹಿರಿಮೆ!
ಸರ್ವಾಂತರ್ಯಾಮಿಯೆಂಬುದೊಂದು ಹಿರಿಮೆ!
ದಯಾಸಾಗರನೆಂಬುದೊಂದು ಹಿರಿಮೆ! (ಒ)
-ಳ, ಹೊರಗೆ ನೀನೆಂಬುದೊಂದು ಹಿರಿಮೆ!
ನಿರ್ವಿಕಾರನಾಗಿರ್ಪುದೊಂದು ಹಿರಿಮೆ! (ನಿ)
-ನ್ನ ನೀನೇ ಬಂಧಿಸಿರ್ಪುದೊಂದು ಹಿರಿಮೆ!
ಹಿತೈಷಿ ನೀನಾಗಿರ್ಪುದೊಂದು ಹಿರಿಮೆ! (ಪ)
-ರಿ ಪರಿಯವತಾರದೊಂದು ಹಿರಿಮೆ! (ಶ)
-ಮೆ, ದಮೆ ನಿರಂಜನಾದಿತ್ಯ ಹಿರಿಮೆ!!!
ಆಸೆ ಬಿಟ್ಟೀಶನಾದ ಮೇಲಿನ್ನೇನು? (ನೊ)
-ಸೆ ಮೇಲ್ಪುಟ್ಟುದವ ಸಾಮಾನ್ಯನೇನು?
ಬಿಸಿಲಂಗಿಗ್ಬಿಸಿಲ ಭಯವೇನು? (ಮು)
-ಟ್ಟೀಶ್ವರನ ಮೈಲಿಗೆನ್ಬಹುದೇನು? (ವ)
-ಶವಾದ ಮೇಲಿಂದ್ರಿಯ ಜೀವನೇನು?
ನಾಮ, ರೂಪಾತೀತಾತ್ಮನಲ್ಲವೇನು?
ದರ್ಶನವಾದ್ಮೇಲ್ದುಃಖವಿದೆಯೇನು? (ಉ)
-ಮೇಶ, ರಮೇಶ ಗುರುವಲ್ಲವೇನು? (ಕ)
-ಲಿಮಲವಿಲ್ಲದಾತವನಲ್ವೇನು? (ಇ)
-ನ್ನೇನೆಂದು ಬಣ್ಣಿಸಲವನ ನಾನು? (ತಾ)
-ನು ನಿರಂಜನಾದಿತ್ಯನಾಗಿಹನು!!!
ತಿನ್ನಬೇಕಿನ್ನೊಂದು ಮಾವಿನ ಹಣ್ಣೀಗ! (ನಿ)
-ನ್ನ ಪ್ರಸಾದವೆಂದದ ತಿನ್ನುವೆನೀಗ!
ಬೇಡವೆಂಬಧಿಕಾರವಿಲ್ಲವೆನಗೀಗ! (ಸಾ)
-ಕಿದವಗದರ್ಪಣೆಯಾಗ್ಲೆಂಬೆನೀಗ! (ನ)
-ನ್ನೊಂದು ಬಿನ್ನಹವಿರ್ಪುದವನಲ್ಲೀಗ!
ದುಡಿಸೀ ದೇಹವನು ನಿನಗಾಗೀಗ!
ಮಾಯೆಗೆ ಮರುಳಾಗದಂತಿರಿಸೀಗ!
ವಿಕಲ್ಪವೆಂದೂ ಬಾರದಂತೆ ಮಾಡೀಗ!
ನನ್ನದು, ನಿನ್ನದೆಂಬುದ ಬಿಡಿಸೀಗ!
ಹರಿ, ಹರ, ಬ್ರಹ್ಮ ದತ್ತ ಬರಲೀಗ! (ಕ)
-ಣ್ಣೀರೆನ್ನದು ಬತ್ತದಾಗಿದೆ ಬಾ ಬೇಗ! (ಬೇ)
-ಗ ನಿರಂಜನಾದಿತ್ಯನವನಾಗೀಗ!!!
ಹರನಿಂದುರಿಪ ಹತಿ ಪುತ್ರ! (ಅ)
-ರಿಯದಾ ವಿಧಿ ಲೀಲೆ ವಿಚಿತ್ರ!
ಗೀರ್ವಾಣಿಯರಸ ತಾ ಪವಿತ್ರ! (ನ)
-ಶ್ವರದುತ್ಪತ್ತಿ ಗೈವ ಸರ್ವತ್ರ!
ರಮೇಶಾರ್ಚನೆಗೆ ತುಳ್ಸೀ ಪತ್ರ!
ನಾಗೇಶ್ವರಗೆ ಕಪಾಲ ಪಾತ್ರ! (ಲಿ)
-ಪ್ತನಲ್ಲ ತಾನೆಂಬಾ ಬ್ರಹ್ಮ ಮಾತ್ರ!
ಮಿತ್ರನೊಬ್ಬ ಜಗಕೆಲ್ಲಾ ನೇತ್ರ! (ಮಿ)
-ತ್ರ ನಿರಂಜನಾದಿತ್ಯಾತ್ಮ ಕ್ಷೇತ್ರ!!!
ಮೃಡಾಣಿಯಂತಿರ್ಬೇಕು ಸತತಾ!
ತಾಳ್ಮೆಯಿಂದವಳು ಪೂಜ್ಯ ಮಾತಾ! (ವ್ರ)
-ತೋಪವಸಗಳ್ಗಧಿ ದೇವತಾ! (ಗು)
-ರು ಶಿವನಲ್ಲಿ ಪರವಶೆ ತಾ!
ನೀತಿ, ರೀತಿಲಾದರ್ಶ ವನಿತಾ! (ಅ)
-ನುದಿನ ಭಜಿಪಳ್ರಾಮ ಸೀತಾ! (ತ)
-ನಯರುದ್ಧಾಕ್ಕವಳ್ವಿಖ್ಯಾತ್ಯಾ! (ನ)
-ಮ್ರತೆಯಿಂದ ಬುದ್ಧಿ ಪ್ರಚೋದಿತಾ!
ತಾ, ನಿರಂಜನಾದಿತ್ಯ ನಮ್ರತಾ!!!
-ಖ ಖಗನೆಂಬುದ ಮರೆಯ್ಬೇಡ! (ವ)
-ಸ್ತು, ವಾಹನ ಸ್ಥಿರವೆನಬೇಡ!
ತಿತಿಕ್ಷೆಯಭ್ಯಾಸ ಬಿಡಬೇಡ! (ಬಾ)
-ಯಿಂದಾಡದೇ ಮಾಡದಿರಬೇಡ! (ಮ)
-ದ, ಮತ್ಸರಕ್ಕೆಡೆಗೊಡಬೇಡ!
ಹಿತೈಷಿಗೆರಡೆಣಿಸಬೇಡ! (ಅ)
-ಗ್ಗವೆಂದ್ಬಗ್ಗಡ ಕುಡಿಯಬೇಡ!
ಬೇಜಾರೆಂದಲ್ಲಿಲ್ಲೋಡಾಡಬೇಡ! (ಆ)
-ಡ ನಿರಂಜನಾದಿತ್ಯನೃತಾಡ!!!
ವಿದ್ಯಾರ್ಥಿಗೆ ವಿನಯ ಮಹಾಬಲ!
ಧೇನು ಕ್ಷೀರ ಪಾನ ಬುದ್ಧಿಗೆ ಬಲ!
ಯಮ, ನಿಯಮಗಳಿಂದಾತ್ಮ ಬಲ! (ಕ)
-ತೆಗಾರನಿಗೆ ಸದ್ವಿಚಾರ ಬಲ! (ಮಂ)
-ಗಳಕ್ಕೆ ಶ್ರದ್ಧಾ, ಭಕ್ತ್ಯುತ್ತಮ ಬಲ! (ವ್ಯಾ)
-ಧೋನ್ನತಿಗಹಿಂಸಾಚಾರತಿ ಬಲ! (ಯೋ)
-ಗಸಿದ್ಧಿಗೆ ತ್ಯಾಗ ಬುದ್ದಿಯೇ ಬಲ!(ಸ)
-ತಿಗೆ ಪತಿಸೇವೆ ಪರಮ ಬಲ!
ಫಲಾಫಲ ಕರ್ಮಧರ್ಮದ ಬಲ! (ಬ)
-ಲ ನಿರಂಜನಾದಿತ್ಯ ಕೃಪಾ ಫಲ!!!
ಕಾರ್ಯ ಕೈಗೂಡದಿರ್ಪುದು ಕಾರಣ! (ರೋ)
-ಗಿಯಾಗಿರುವುದಿನ್ನೊಂದು ಕಾರಣ! (ಗು)
-ರುಕೃಪೆಯಾಗದ್ದು ಮುಖ್ಯ ಕಾರಣ! (ಬೇ)
-ವು, ಬೆಲ್ಲದಸಮ ದೃಷ್ಟಿ ಕಾರಣ! (ಕಂ)
-ದರ್ಪನ ಸಂಗವದೊಂದು ಕಾರಣ! (ಹ)
-ಕ್ಕೇನೆನಗೆಂದರಿಯದ್ದೂ ಕಾರಣ! (ತ)
-ನುಭಾವ ಬಿಡಿದಿರ್ಪುದೂ ಕಾರಣ!
ಕಾಮಿನೀ ಕಾಂಚನದಾಸೆ ಕಾರಣ! (ಪ)
-ರರೇಳಿಗೆಯಸಹನೆ ಕಾರಣ! (ಗು)
-ಣ ನಿರಂಜನಾದಿತ್ಯ ಕಾರಣ!!!
ರಾಗ, ದ್ವೇಷವಿಲ್ಲದ ಮನುಜಾರಾಮ! (ಯೋ)
-ಗಎಮ ಭಾರವನದೆಂದವಾರಾಮ! (ಉ)
-ದ್ವೇಅ ಪವೃತ್ತಿಯಿಲ್ಲದವನಾರಾಮ!
ಷಇಪುಗಳನ್ನು ಗೆದ್ದವನಾರಾಮ!
ವಿಅಯವಾಸನೆಯಳಿದವಾರಾಮ! (ಎ)
-ಲ್ಲಅಲ್ಲೂ ತಾನೆಂದರಿತವನಾರಾಮ!
ದಆತ್ರೇಯನದ್ವಿತೀಯ ಭಕ್ತಾರಾಮ!
ಮಅ, ಮತ್ಸರಗಳಿಲ್ಲದವಾರಾಮ! (ತ)
-ನುಆವ ಮರೆತು ಬಾಳಿದವಾರಾಮ!
ಜಾಇ, ಮತ ಭಿನ್ನಭಾವಾತೀರಾರಾಮ!
ರಾಇವ ಸಖನಾದರ್ಶದವಾರಾಮ! (ರಾ)
-ಮನಿರಂಜನಾದಿತ್ಯನೆಂದವಾರಾಮ!!!
ಸ್ವಸ್ಥಿತಿಯೇ ದತ್ತ ಸ್ವರೂಪ! [ದುಃ]
-ಸ್ಥಿಇಯೂ ಆತನದ್ದೇ ರೂಪ!
ತಿಇ ನೀನೆಲ್ಲಾತನ ರೂಪ! (ಕಾ)
-ಯೇಎಯಿಂದೆಲ್ಲಾ ಪುಣ್ಯ ಪಾಪ! (ಅ)
-ದಇಂದಹುದು ಕೋಪ, ತಾಪ! (ಸ)
-ತ್ತಮನಸ್ಸಿಗೆಲ್ಲಾ ನಿರ್ಲೆಪ!
ಸ್ವತಂತ್ರವಾ ಜ್ಞಾನ ಪ್ರದೀಪ! (ಊ)
-ರೂರು ಸ್ವಾಧೀನ ಮಿಥ್ಯಾಲಾಪ! (ದೀ)
-ಪ ನಿರಂಜನಾದಿತ್ಯ ಭೂಪ!!!
-ಹಂ ಮಂತ್ರಕ್ಕಹಂಕಾರಿ ವಿರೋಧಿ!
ಕಾಮಾಂಧತೆಯಿಂದವಪರಾಧಿ! (ಪ)
-ರನಿಂದೆಯವಗಾಕಳ ದಧಿ! (ಅ)
-ಕ್ಕಪಕ್ಕದ, ಹೊಲ್ಸವನ ನಿಧಿ!
‘ನಾ’, “ನೀ”ನೆಂಬರ್ಗವ ಪ್ರತಿನಿಧಿ! (ಮ)
-ದ, ಮಾತ್ಸರ್ಯವನ ಪೂಜಾವಿಧಿ!
ರೌದ್ರ ಸ್ವರೂಪವನ ಸನ್ನಿಧಿ!
ಷಡ್ರಿಪುಗಳ್ಗಾತಾಪ್ತ ಸಂಬಂಧಿ! (ಅ)
-ಧಿಪ ನಿರಂಜನಾದಿತ್ಯಕ್ಕ್ರೋಧಿ!!!
ನನ್ನ ನಿನ್ನಂತಿರಿಸಪ್ಪಯ್ಯಾ! (ತ)
-ಗಾದೆ ಹೂಡಿ ದಣಿದೆನಯ್ಯಾ! (ಭಾ)
-ವಶುದ್ಧಿಯ ನೀನೇ ಮಾಡಯ್ಯಾ!
ಕರ್ತವ್ಯ ತಂದೆಯದಿದಯ್ಯಾ! (ಆ)
-ರ್ತನಾಗಿ ಬೇಡಿಕೊಂಬೆನಯ್ಯಾ!
ವ್ಯವಹಾರ ನನಗೇಕಯ್ಯಾ? (ಜೀ)
-ವ, ಶಿವೈಕ್ಯವಾಗ್ಬೇಡ್ವೇನಯ್ಯಾ? (ಅ)
-ಯ್ಯಾ, ನಿರಂಜನಾದಿತ್ಯಾನಯ್ಯಾ!!!
-ಳಿ, ಮಳೆಗಂಜದವನಳಿಯ!
ಯಾತ್ರಾ ಕ್ಷೇತ್ರಪ್ರಿಯನವಳಿಯ!
ನಶ್ವರಕ್ಕಾಶಿಸದವಳಿಯ! (ವ)
-ರ ಗುರು ಸ್ವರೂಪ ತಾನಳಿಯ!
ಸಮದರ್ಶಿಯಾದಾತ್ಮನಳಿಯ! (ಅ)
-ಪ್ಪನಾದರ್ಶ ಮಗ ತಾನಳಯ! (ಕೈ)
-ಯ್ಯ ಪಿಡಿದೆತ್ತುವಾತಳಿಯ! (ಬಾ)
-ಳಿನ ಗುರಿಯರಿತವಳಿಯ! (ಜೀ)
-ಯ ನಿರಂಜನಾದಿತ್ಯಾತ್ಮಳಿಯ!!!
-ಗಿದನು ಗುರುಪಾದಕ್ಕಾತ!
ಬಹು ವಿನಯಶಾಲಿಯಾತ!
ರುಜು ಮಾರ್ಗಾವಲಂಬಿಯಾತ! (ನೀ)
-ವೆನ್ನಾಶೀರ್ವದಿಸಿರೆಂದಾತ!
ನೆಂಟರಿನ್ನಾರೆನಗೆಂದಾತ!
ದತ್ತ ಪುತ್ರರು ನೀವೆಂದಾತ!
ನಾನು ನಿಮ್ಮವನಾದೆಂದಾತ! (ಸಂ)
-ತಶ್ರೀ ನಿರಂಜನಾದಿತ್ಯಾತ!!!
ಶಾಂತಿಯಿಂದಾಯ್ತೆಲ್ಲರಿಗೆ ಮಜಾ! (ರೀ)
-ತಿ, ನೀತಿಯೆಲ್ಲಾ ಬಹಳ ಮಜಾ! (ಬಾ)
-ಯಿಂದುಸುರಲಸದಳಾ ಮಜಾ! (ಮ)
ದಾರಿಯಲ್ಲವನ ಧ್ಯಾನ ಮಜಾ! (ಕಾ)
-ಯ್ತೆಲ್ಲರನ್ನವನ ಕೃಪೆ ಮಜಾ! (ಮ)
-ಲ್ಲಮರ್ದನನ ದರ್ಶನ ಮಜಾ! (ಕ)
-ರಿಯ ಗುಮ್ಮಟನ ನೋಟ ಮಜಾ! (ಬ)
-ಗೆಬಗೆ ಸೃಷ್ಟಿ ಸೌಂದರ್ಯ ಮಜಾ!
ಮರಳಿ ಬಂದಾತ್ಮಾನಂದ ಮಜಾ! (ನಿ)
-ಜಾ ನಿರಂಜನಾದಿತ್ಯಾನಂದಜಾ!!!
-ವಾಬ್ಧಿಯಿಂದಾಗ ಪಾರೆನಿಸಬೇಕು!
ತೀರ್ಥ, ಕ್ಷೇತ್ರ ನಿನ್ನಲ್ಲೇ ನೋಡಬೇಕು! (ಮ)
-ತ, ಜಾತಿಗಳ ಭ್ರಾಂತಿ ಹೋಗಬೇಕು!
ನಾಮಸ್ಮರಣೆ ಸದಾ ಮಾಡಬೇಕು! (ತ್ಯಾ)
-ಗಿಯಾಗಿ ಯೋಗಿ ನೀನಾಗಿರಬೇಕು!
ನಾಕ, ನರಕ ಭಯ ತಪ್ಪಬೇಕು!
ನಾರದಾದಿಗಳಂತೆ ಬಾಳಬೇಕು! (ನಾ)
-ಗರಾಜನಂತೆ ಜ್ಞಾನಿಯಾಗಬೇಕು!
ಬೇಗೆಗಂಜದೆ ತಪ ಸಾಗಬೇಕು! (ವ್ಯಾ)
-ಕುಲ ನಿರಂಜನಾದಿತ್ಯಳಿಸ್ಬೇಕು!!!
ಸದಾ ನಿನ್ನ ಧ್ಯಾನವೆನ್ನ ಭಾಗ್ಯ! (ಅ)
-ದಾರಿಗೂ ಸಿಗದ ಮಹಾಭಾಗ್ಯ!
ನಿನ್ನಂತಾಗದಿದ್ದರೇಕಾ ಭಾಗ್ಯ? (ನಿ)
-ನ್ನ ದರ್ಶನದಿಂದಾರೋಗ್ಯ ಭಾಗ್ಯ!
ಧ್ಯಾನ ಸಿದ್ಧಿಗೆ ವೈರಾಗ್ಯ ಭಾಗ್ಯ! (ಧ)
-ನ, ಕನಕಾದಿಗಳಲ್ಲಾ ಭಾಗ್ಯ! (ಠಾ)
-ವೆನಗೆ ಶ್ರೀಪಾದಾದುದು ಭಾಗ್ಯ! (ಉ)
-ನ್ನತದ ಸಾಯುಜ್ಯಲಾಭ ಭಾಗ್ಯ!
ಭಾಗವತ ಸಂಗವೆನ್ನ ಭಾಗ್ಯ! (ಭಾ)
-ಗ್ಯ ನಿರಂಜನಾದಿತ್ಯಾತ್ಮ ಯೋಗ್ಯ!!!
ಬಯಸಿದ್ದೊಂದಾದದ್ದಿನ್ನೊಂದು! (ಧ್ಯೇ)
-ಯಸಿದ್ಧಿಯಾಗುವುದಿನ್ನೆಂದು? (ಪು)
-ಸಿಯಾಟಕ್ಕೇ ವಿಜಯವಿಂದು! (ಮ)
-ದ್ದೊಂದು, ರೋಗ ಮತ್ತೊಂದಾಯ್ತಿಂದು!
ದಾರಿ ರೋಗಿಗಳಿಗೇನ್ಮುಂದು?
ದತ್ತ ಭಕ್ತಿಯೇ ಗತಿಯಿಂದು! (ಸ)
-ದ್ದಿಲ್ಲದಿರ್ಪ ಕಾಲವದೆಂದು? (ಹ)
-ನ್ನೊಂದಿಂದ್ರಿಯ ನಿಗ್ರಹಾದಂದು! (ಅ)
-ದು, ನಿರಂಜನಾದಿತ್ಯಗಿಂದು!!!
ದತ್ತಾವತಾರ ತತ್ವ ಬಾಹ್ಯಾಂತರಾ!
ವೀತರಾಗ, ಭಯ, ಕ್ರೋಧಾ ಶಂಕರಾ!
ಧರ್ಮ, ಕರ್ಮ ಕಿಂಕರಾ ಸುಖಂಕರಾ!
ರಾವಣಾಸು ಹರಾ ರಾಘವೇಶ್ವರಾ!
ಇಹಪರಕ್ಕಾಧಾರಾ ವಿಶ್ವೇಶ್ವರಾ! (ಗು)
-ರುಸ್ವರೂಪನಾಗೀತಾ ಗುಹೇಶ್ವರಾ!
ನೀಚೋಚ್ಛವಿಲ್ಲದತೀತಾ ಭಾಸ್ಕರಾ!
ನೀಲಮೇಘಶ್ಯಾಮವರ್ಣಾ ಶ್ರೀಧರಾ!
ತತ್ವಾರ್ಥಸಾರ ತಾನಾಗಿ ಓಂಕಾರಾ! (ಆ)
-ರಾಮ ಶ್ರೀ ನಿರಂಜನಾದಿತ್ಯಾಕಾರಾ!!!
ಹೆಂಡತಿಯಾಯ್ತು, ಮಂಡೆ ಬೋಳಾಯ್ತು! (ಕಂ)
-ಡವರಿಗೆ ಕೈಚಾಚುವಂತಾಯ್ತು!
ತಿನ್ನುವುದಕ್ಕನ್ನವಿಲ್ಲದಾಯ್ತು! (ಆ)
-ಯಾಸ ದಿನದಿನಕ್ಕೂ ಹೆಚ್ಚಾಯ್ತು (ಹೋ)
-ಯ್ತು ಮಾನ, ಮರ್ಯಾದೆಯೆಲ್ಲಾ ಹೋಯ್ತು!
ಮಂಕು ಮುಸುಕಿ ಮುಖ ಪೆಚ್ಚಾಯ್ತು! (ಒ)
-ಡೆಯನ ಸೇವೆಗಶ್ರದ್ಧೆಯಾಯ್ತು!
ಬೋಧನೆಗೆ ಕಿವಿಗೊಡದಾಯ್ತು! (ಹಾ)
-ಳಾಗಿ ಬಾಳು ಬರಿದಾದಂತಾಯ್ತು! (ಆ)
-ಯ್ತು, ನಿರಂಜನಾದಿತ್ಯೋದಯಾಯ್ತು!!!
ನಿನ್ನಿಷ್ಟದಂತೆ ನಾನೊಳಗಿದ್ದೆ! (ಬ)
ನ್ನಿರೆಂದಾಗ ಬರಬೇಕೆಂದಿದ್ದೆ! (ಕ)
-ಷ್ಟ ನನ್ನಿಂದಾಗಬಾರದೆಂದಿದ್ದೆ!
ದಂಭ, ದರ್ಪ ನನಗೇಕೆಂದಿದ್ದೆ! (ಸಂ)
-ತೆ ವ್ಯಾಪಾರ ಸುಖವಿಲ್ಲೆಂದಿದ್ದೆ!
ನಾಶಪ್ಪುದಕ್ಕೇಕೆ ಚಿಂತೆಂದಿದ್ದೆ!
ನೊಸಲ್ಗಣ್ಣಾನಲ್ಲದಾರೆಂದಿದ್ದೆ! (ತ)
-ಳಮಳಕ್ಕಾಸ್ಪದವಿಲ್ಲೆಂದಿದ್ದೆ! (ಯೋ)
-ಗಿಯಾದೆನೆಂಬಾನಂದದಿಂದಿದ್ದೆ! (ಇ)
-ದ್ದೆ, ನಿರಂಜನಾದಿತ್ಯಾನೆಂದಿದ್ದೆ!!!
-ಡುಂಬೊಲದಲ್ಲಿ ಜೀರ್ಣಿಸಿಕೊಂಡೆ! (ಕ)
-ಡೆಗೊಂದೆಡೆ ವಿಶ್ರಮಿಸಿಕೊಂಡೆ!
ಯಾಕಿನ್ನಾಟವೆಂದು ನಾನಂದ್ಕೊಂಡೆ!
ದತ್ತನೇ ಗತಿ ನನಗಂದ್ಕೊಂಡೆ! (ಆ)
-ಸೆಂಬುದಿರಬಾರದೆಂದುಕೊಂಡೆ! (ಅ)
-ಡಿಗೆರಗಿ ವರ ಬೇಡಿಕೊಂಡೆ! (ಕಂ)
-ಗೆಡದೆ ಸಾಧನೆ ಮಾಡಿಕೊಂಡೆ! (ತಾ)
-ಯುಂಬೆಡೆಗೋಡಿ ನಾ ಕೂದಿಕೊಂಡೆ! (ಕಂ)
-ಡೆ ನಿರಂಜನಾದಿತ್ಯನಂದ್ಕೊಂಡೆ!!!
-ಲ್ಲ ತಂದ ಗೋಪಾಲನವನೇ! (ತ)
-ಕ್ಕೂಳಿಗವಿತ್ತಾಳ್ವವವನೇ!
ಕಾಳಿಂಗಮರ್ದನನವನೇ! (ಪ)
-ರಮಾರ್ಥ ಬೋಧಕನವನೇ! (ರ)
-ಣಧೀರ ರಾಘವನವನೇ!
ನರ ನಾರಾಯಣನವನೇ!
ವರ ಗುರುದತ್ತನವನೇ! (ತಾ)
-ನೇ, ನಿರಂಜನಾದಿತ್ಯ ತಾನೇ!!!
-ನಶ್ಯುದ್ಧಿ ಮಾಡದಿರಬೇಡ!
ಬೇರೆ ಕಡೆ ದಿಟ್ಟಿಸಬೇಡ! (ಬ)
-ಡವ ನಾನೆಂದು ಅಳಬೇಡ! (ಅ)
-ನುದಿನ ಧ್ಯಾನ ಬಿಡಬೇಡ!
ಮಾಯೆಗೆ ಮಾರುಹೋಗಬೇಡ! (ಧ)
-ನದಾಸೆಗೆರವಾಗಬೇಡ!
ಬೇಸರವೆಂದೂ ಪಡ ಬೇಡ! (ಕೇ)
-ಡ ನಿರಂಜನಾದಿತ್ಯ ಮಾಡ!!!
ವೇಷ ಸಾಕು, ಶ್ರೀನಿವಾಸನಾಗಬೇಕು! [ಭಾ]
-ಷಣದಿಂದದಲ್ಲೆಂದರಿತಿರಬೇಕು!
ಸಾಧನೆಯಿಂದದು ಸಿದ್ಧಿಯಾಗಬೇಕು!
ಕುಕಲ್ಪನೆಯೆಂದೂ ಮಾಡದಿರಬೇಕು!
ಶ್ರೀದೇವಿಯಂತೆ ಸೇವೆ ಸಲ್ಲಿಸಬೇಕು!
ನಿತ್ಯನೇಮಕ್ಕಡ್ಡಿಯಾಗದಿರಬೇಕು!
ವಾಸುದೇವನಾಜ್ಞಾನುಸಾರಾಗಬೇಕು!
ಸಚ್ಚಿದಾನಂದವಿದರಿಂದಾಗಬೇಕು!
ನಾಡಿನೊಡೆತನಕ್ಕರ್ಹನಾಗಬೇಕು!
ಗರ್ವವೆಳ್ಳಷ್ಟೂ ಇಲ್ಲದಂತಿರಬೇಕು!
ಬೇಟೆಯಾಟದ ಕೂಟ ಬಿಟ್ಟಿರಬೇಕು! (ಬೇ)
-ಕು ನಿರಂಜನಾದಿತ್ಯಾನುಗ್ರಹ ಬೇಕು!!!
ಇಚ್ಚಾಭೇದಿಯಾಗಿ ಸ್ವಚ್ಛವಾಯ್ತು! [ಉ]
-ಚ್ಛಾಟನೆ ಪಿಶಾಚಿಗಳಿಗಾಯ್ತು!
ಭೇದ ಭಾವನೆಯಳಿದಂತಾಯ್ತು!
ದಿವಾಕರನ ದರ್ಶನವಾಯ್ತು!
ಯಾಜ್ಞವಲ್ಕ್ಯ ತಾನೆಂಬರಿವಾಯ್ತು!
ಗಿರಿಧರನ ಗೀತಾರ್ಥವಾಯ್ತು!
ಸ್ವಧರ್ಮ ಪ್ರೇಮಾಭಿವೃದ್ಧಿಯಾಯ್ತು! (ಉ)
-ಚ್ಛಸ್ಥಿತಿಯತ್ತ ನಡೆದದ್ದಾಯ್ತು!
ವಾಸುದೇವನೊಳಗೈಕ್ಯವಾಯ್ತು! (ಆ)
-ಯ್ತು ನಿರಂಜನಾದಿತ್ಯ ತಾನಾಯ್ತು!!!
ಪ್ರಶ್ನೆ ಕೇಳುವುದೊಂದು ಹುಚ್ಚು! [ಪ್ರ]
-ಶ್ನೆಗುತ್ತರವೀವ್ದೊಂದು ಹುಚ್ಚು!
ಕೇಡಿಗತನ ದೊಡ್ಡ ಹುಚ್ಚು! (ಕೀ)
-ಳು, ಮೇಲೆಂಬುದದೊಂದು ಹುಚ್ಚು! (ಸಾ)
-ವು, ನೋವು ಭಯವೊಂದು ಹುಚ್ಚು! (ಹಿಂ)
-ದೊಂದು, ಮುಂದೊಂದೆಂಬೊಂದು ಹುಚ್ಚು!
ದುರ್ವ್ಯಾಜ್ಯವೆಂಬುದೊಂದು ಹುಚ್ಚು! (ಬ)
-ಹು ಭಾಗ್ಯವಂತೆಂಬೊಂದು ಹುಚ್ಚು! (ಹ)
-ಚ್ಚು, ನಿರಂಜನಾದಿತ್ಯನಚ್ಚು!!!
-ನವರತಗಧ್ಯಾತ್ಮ ಬುದ್ಧಿ!
ಸಿರಿತನ ಬಯಸದಾ ಬುದ್ಧಿ! (ಒ)
ಲ್ಲನವನಾ ಅಷ್ಟಸಿದ್ಧಿ, ರಿದ್ಧಿ!
ದಮೆ, ಶಮೆಯಿಂದ ಪೂರ್ಣ ಶುದ್ಧಿ!
ವರ ಗುರು ರೂಪವನ ಸಿದ್ಧಿ!
ಗಾಯತ್ರಿ ಸ್ವರೂಪವನ ಸಿದ್ಧಿ! (ಭ)
-ವವೈದ್ಯ ಧನ್ವಂತರಿಯ ಸಿದ್ಧಿ! (ಘಾ)
ಸಿಯಿಲ್ಲದಂತರಾತ್ಮನ ಸಿದ್ಧಿ! (ಸಿ)
-ದ್ಧಿ ನಿರಂಜನಾದಿತಾನಂದಾಬ್ಧಿ!!!
ಯಾಸವಿದ್ದಾಗ ಸ್ವಲ್ಪ ಮಾಡು!
ಮದನಾನಂದ ಬಿಟ್ಟು ಮಾಡು!
ಪ್ರಸನ್ನವಕ್ಕು ಮನ ಮಾಡು! (ಭೀ)
-ತಿ ಬಿಟ್ಟುತ್ಸಾಹದಿಂದ ಮಾಡು!
ದಿನದಾರಂಭದಲ್ಲೇ ಮಾಡು! (ಏ)
-ನನ್ನೂ ತಿನ್ನುವ ಮೊದ್ಲೇ ಮಾಡು!
ಮಾತು ಕತೆಯಿಲ್ಲದೇ ಮಾಡು! (ನೋ)
-ಡು, ನಿರಂಜನಾದಿತ್ಯ ನಾಡು!!!
ಬೆಕ್ಕಿನ ಮರಿ ಬೇಕೇನು ಸ್ವಾಮಿ? (ದಿ)
-ಕ್ಕಿಲ್ಲದ ಬಿಕ್ಕುಗದೇಕೆ ಪ್ರೇಮಿ? (ಅ)
-ನಘ ಖಗ ಬಿಕ್ಕುವೇನು ಸ್ವಾಮಿ?
ಮರೆಯ್ಬೇಡದು ಬಂಧನ ಪ್ರೇಮಿ! (ಸ)
-ರಿ! ಈ ಮಾತಿಗೆನ್ನೊಪ್ಪಿಗೆ ಸ್ವಾಮಿ!
ಬೇಕೆಂಬವ ವಿರಕ್ತನೇ ಪ್ರೇಮಿ? (ಸಾ)
-ಕೇಕಾ ಮಾತೂಟಕ್ಕೆ ಬನ್ನಿ ಸ್ವಾಮಿ! (ಅ)
-ನುದಿನ ಉಂಡಾದದ್ದೇನು ಪ್ರೇಮಿ?
ಸ್ವಾಮಿಯ ಪ್ರಸಾದ ಲಾಭ ಸ್ವಾಮಿ! (ಪ್ರೇ)
-ಈ! ನಿರಂಜನಾದಿತ್ಯಾತ್ಮ ಪ್ರೇಮಿ!!!
-ರಮಾರ್ಥವಾರಿಗಿಷ್ಟವಾಗಿದೆ? (ಭ)
-ಕ್ತರಿಗೈಶ್ವರ್ಯದಾಸೆಯಾಗಿದೆ! (ಅ)
-ನವರತಾಭ್ಯಾಸ ಬೇಡಾಗಿದೆ!
ಬಗೆಬಗೆಯಾಸೆ ಹೆಚ್ಚಾಗಿದೆ! (ಬಾ)
-ಳಿನ ಗುರಿ ಮರೆತೇ ಹೋಗಿದೆ! (ಮಾ)
-ಯ, ಮಂತ್ರಗಳ ಹುಚ್ಚು ಹತ್ತಿದೆ! (ಎ)
-ಲ್ಲೇನೇನಾಶ್ಚರ್ಯವೆಂಬಂತಾಗಿದೆ!
ನಿಜ ಭಕ್ತಿ ಕಣ್ಮರೆಯಾಗಿದೆ! (ತಂ)
-ದೆ, ನಿರಂಜನಾದಿತ್ಯೆಂದಾಗಿದೆ!!!
-ನ್ನದಾತ ದತ್ತ ಗುರುವಯ್ಯಾ! (ಸ)
-ದಾ ನೀನವನ ನೆನೆಯಯ್ಯಾ! (ಪ)
-ರಿಹರಿಪ ಕಷ್ಟಗಳಯ್ಯಾ!
ಹೆದರಲೇಬೇಡ ನೀನಯ್ಯಾ! (ಗು)
-ದ್ದಾಡ್ವವನೊದ್ದಾಡುವನಯ್ಯಾ! (ಅ)
-ರಿತಿದ ನಿಶ್ಚಿಂತನಾಗಯ್ಯಾ! (ಕಾ)
-ಯಬೇಕವನ ಕೃಪೆಗಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಪ್ಪಯ್ಯಾ!!!
-ಹಿತವನ್ನಾರಿಗೂ ಮಾಡನಯ್ಯಾ!
ತಪ್ಪವನಲ್ಲೆಳ್ಳಷ್ಟಿಲ್ಲವಯ್ಯಾ! (ಧ)
-ನ, ಧಾನ್ಯವನಲ್ಲಪಾರವಯ್ಯಾ!
ವರ ಗುರು ಸ್ವರೂಪದಯ್ಯಾ!
ನೆಲೆಯವಗಾಕಾಶದಲ್ಲಯ್ಯಾ! (ಕ)
-ಲನ್ನಾದರೂ ಕರಗಿಪನಯ್ಯಾ! (ವೈ)
-ರಿಗಳಿಗಾತ ನರಸಿಂಹಯ್ಯಾ! (ಮ)
-ಗನವನಿಗೆ ವೃಕೋದರಯ್ಯಾ! (ಆ)
-ಯ್ಯಾ, ಶ್ರೀ ನಿರಂಜನಾದಿತ್ಯಾತಯ್ಯಾ!!!
ಭತ್ತ ಕುಟ್ಟಿ, ಕೇರಿದ ಮೇಲಕ್ಕಿ! [ಉ]
-ತ್ತಮ ಸಂಸ್ಕಾರದ ಮನವಕ್ಕಿ!
ಕುಶಲತೆಯಿಂದನ್ನ ಮಾಡಿಕ್ಕಿ! (ಒ)
-ಟ್ಟಗೆ ಕೂತ ಮೇಲೆಲ್ಲರಿಗಿಕ್ಕಿ!
ಕೇಳಿದವರಿಗೆ ಮತ್ತೊಮ್ಮಿಕ್ಕಿ! (ಮಾ)
-ರಿಕೊಳ್ಳಬಾರದಿಂಥಾ ಸಣ್ಣಕ್ಕಿ!
ದಯಾವೃಷ್ಟಿಯಿಂದ ಬಳಸಕ್ಕಿ! (ಉ)
-ಮೇಶಗರ್ಪಣೆಯಾಗ್ಬೇಕಾ ಅಕ್ಕಿ! (ಅ)
-ಲಕ್ಷ್ಯದಿಂದ ಪೋಲಾಗುವುದಕ್ಕಿ! (ಮು)
-ಕ್ಕಿ, ನಿರಂಜನಾದಿತ್ಯಗದಿಕ್ಕಿ!!!
-ರಸಿಕೊಂಡಜನರಸಿಯಾಕೆ! (ಭ)
-ವರೋಗದಂಟಿಲ್ಲದವಳಾಕೆ! (ಸೊ)
-ಸೆ ಸರಸಿಜನಾಭಾಗಾದಾಕೆ!
ಪರಮಾನಂದಭರಿತಳಾಕೆ! (ಒ)
-ಡೆಯಗಚ್ಚು ಮೆಚ್ಚಿನವಳಾಕೆ!
ದಯಾಮಯಿಲೋಕಮಾತೆಯಾಕೆ!
ವರ ಗುರುದತ್ತ ಪುತ್ರಿಯಾಕೆ! (ಕ)
-ಳಾನಿಧಿಯಾಗಿ ದೇವತೆಯಾಕೆ! (ಏ)
-ಕೆ, ನಿರಂಜನಾದಿತ್ಯಾನಂದಾಕೆ!!!
-ರಿಕುಲಾನಲ ಶ್ರೀ ನರಹರಿ! (ಭ)
-ಯತೋರ್ಯಭಯವೀವಾ ಶ್ರೀಹರಿ!
ನೆಪ ಮಾತ್ರ ಸಂಸಾರೀ ಶ್ರೀ ಹರಿ! (ನ)
-ಲ್ಲ, ನಲ್ಲೆ ತಾನಾಗಿರ್ಪಾ ಶ್ರೀ ಹರಿ! (ಅ)
-ರಿಯದರ್ಗಹಂಕಾರೀ ಶ್ರೀಹರಿ!
ಗಾನಲೋಲ, ಮಾಲೋಲಾ ಶ್ರೀ ಹರಿ!
ಶ್ರೀಗುರು ದತ್ತಾತ್ರೇಯಾ ಶ್ರೀ ಹರಿ!
ಹದಿನಾಲ್ಕ್ಲೋಕೇಶ್ವರಾ ಶ್ರೀ ಹರಿ! (ಹ)
-ರಿ ಶ್ರೀ ನಿರಂಜನಾದಿತ್ಯಾಕಾರಿ!!!
ತಿಂಡಿ ಬೇಡೆವೇಕೆಂದನಾ ಕೃಷ್ಣ! [ಉಂ]
-ಡಿಹೆನಪಾರವೆಂದನಾ ಪೂಷ್ಣ!
ಬೇಕಾದದ್ದಿನ್ನೇನೆಂದನಾ ಕೃಷ್ಣ! (ಬೇ)
-ಡತಕ್ಕದ್ದೇನಿದೆಂದನಾ ಪೂಷ್ಣ!
ವೇದಾಂತಜ್ಞ ನೀನೆಂದನಾ ಕೃಷ್ಣ! (ಸಾ)
-ಕೆಂದಿರ್ಬಾರದೇನೆಂದನಾಪೂಷ್ಣ!
ದತ್ತಗೇನೆನ್ನಲೆಂದನಾ ಕೃಷ್ಣ!
ನಾನೂ, ನೀನವನೆಂದನಾ ಪೂಷ್ಣ!
ಕೃಪಾಶೀರ್ವಾದದೆಂದನಾ ಕೃಷ್ಣ! (ಕೃ)
-ಷ್ಣ ನಿರಂಜನಾದಿತ್ಯಾತ್ಮಾ ಪೂಷ್ಣ!!!
-ದುಕುವ ರೀತ್ಯರಿಯದಾಯ್ತು! (ನಾ)
-ವೆಯ ವೇಗ ನಿಧಾನವಾಯ್ತು!
ಯಾತ್ರೆಯುತ್ಸಾಹ ಕಮ್ಮಿಯಾಯ್ತು! (ಆ)
-ಯ್ತು ಕತ್ತಲೆ ಕವಿದಂತಾಯ್ತು!
ಮನೆಯ ಯೋಚನೆ ಹೆಚ್ಚಾಯ್ತು! (ಅ)
-ಕ್ಕ ಪಕ್ಕ ತಕ್ಕುದಲ್ಲದ್ದಾಯ್ತು! (ಗೋ)
-ಳಾಡಬೇಡವೆಂಬಾಜ್ಞೆಯಾಯ್ತು! (ಆ)
-ಯ್ತು, ನಿರಂಜನಾದಿತ್ಯಾತ್ಮಾಯ್ತು!!!
-ಕ್ಯವಿರ್ಪನುಷ್ಠಾನಮಾಡಬೇಕು! (ಹ)
-ಕ್ಕಾರದೇನೆಂದರಿತಿರಬೇಕು! (ರೇ)
-ಗಿಸುವ ಸ್ವಭಾವ ಬಿಡಬೇಕು!
ಶೃಂಗಾರ ಕಡಿಮೆಯಾಗಬೇಕು! (ವಂ)
-ಗದಾರೋಗ್ಯ ಕಾಪಾಡಲೇಬೇಕು!
ಸರ್ವ ಸಮನ್ವಯವಿರಬೇಕು! (ಶೋ)
-ಭೆಯಿದರಿಂದೆಂದರಿಯಬೇಕು!
ಬೇಕು ಶಿಕ್ಷೆ, ರಕ್ಷೆಯಾಗ್ಲೇಬೇಕು! (ಟಾ)
-ಕು, ನಿರಂಜನಾದಿತ್ಯನಾಗ್ಬೇಕು!!!
-ಗ ಸಾಧನೆ ಬಿಟ್ಟಿರುವುದೇಕೆ? (ಆ)
-ದಿತ್ಯೋದಯಕ್ಕೆ ಸಂಶಯವೇಕೆ? (ಇ)
-ದ್ದದ್ದನ್ನುಂಬಾನಂದ ಬೇಕದಕೆ! (ಶ)
-ರೀರ ಮೋಹ ಬಿಡಬೇಕದಕೆ! (ರಂ)
-ಗನಾಥ ಸಹಾಯಕನದಕೆ! (ಕೀ)
-ಳು, ಮೇಲೆಂದು ಜಗಳಾಡ್ವುದೇಕೆ? (ಸಾ)
-ವು ಸಿದ್ಧ, ರಾಜಮನೆತನಕೆ! (ವಿ)
ದೇಹ ಮುಕ್ತನಾಗಬೇಕದಕೆ! (ಶಂ)
-ಕೆ, ನಿರಾಂಜನಾದಿತ್ಯನಲ್ಲೇಕೆ???
-ಗೀತ ಶಾಸ್ತ್ರಾನುಕೂಲವದಕ್ಕೆ!
ತತ್ವಚಿಂತನೆಯವಕಾಶಕ್ಕೆ!
ಬೇಸರ ನಿವಾರಿಸುವುದಕ್ಕೆ!
ಕುಶಿ ಮನಸ್ಸಿಗಾಗುವುದಕ್ಕೆ!
ಸಚಿದಾನಂದಕ್ಕೊಯ್ಯುವುದಕ್ಕೆ!
ತಮೋಗುಣ ನಾಶವಾಗಲಿಕ್ಕೆ! (ಮಾ)
-ತೆ, ಶಾರದೆಯನ್ನೊಲಿಸಲಿಕ್ಕೆ! (ಪು)
-ಲ್ಲನಾಭನ ಸೇವೆ ಸಾಗಲಿಕ್ಕೆ! (ಅ)
-ಕ್ಕೆ ನಿರಂಜನಾದಿತ್ಯಾನಂದಕ್ಕೆ!!!
ಬುದ್ಧಿ ಕೆಟ್ಟಾಯ್ತು ಗಲೀಜು ಸೀಸೆ! (ಶು)
-ದ್ಧಿಯಾದಾಗದಕೆ ತುಂಬುವಾಸೆ!
ಕೆಲವರಿಗದ ಮಾರುವಾಸೆ! (ಕೊ)
-ಟ್ಟಾದ ಮೇಲದಕಾಗಿ ದುರಾಸೆ! (ಆ)
-ಯ್ತು ಸರ್ವನಾಶವೆಂಬ ನಿರಾಸೆ! (ಅಂ)
-ಗಡಿಯಿಡಬೇಕೆಂಬಿನ್ನೊಂದಾಸೆ! (ಗ)
-ಲೀಜು ಸೀಸೆಗಾಗ್ಯಲೆಯುವಾಸೆ! (ಮೇ)
-ಜು ಕುರ್ಚಿಗಳ ಕೊಂಡುಕೊಂಬಾಸೆ!
ಸೀಸೆಯೊಡೆದಾಗಾಯ್ತು ಹತಾಸೆ! (ಆ)
-ಸೆ, ನಿರಂಜನಾದಿತ್ಯಗಿಲ್ಲೈಸೆ!!!
ಅಳತೆಯಿಲ್ಲದ ವ್ಯಾಪಾರಕ್ಕುಳಿತಾಯವಿಲ್ಲ! [ಬ]
-ಳಸಬೇಕು ಮಾನ್ಯವಾದಳತೆ ಪಾತ್ರೆಗಳೆಲ್ಲ! (ಸಂ)
-ತೆಯಲ್ಲಾದರೂ ನಿಶ್ಚಿಂತೆಯಿಂದಿರಲಿಕ್ಕಿದೆಲ್ಲ! (ಬಾ)
-ಯಿ, ಕೈಗಳ ಶುದ್ಧವಾದರಾರಿಗೂ ಲಾಭವಿಲ್ಲ! (ಚಿ)
-ಲ್ಲರೆ ವ್ಯಾಪಾರಿಗಳೂ ಗಮನಿಸಬೇಕಿದೆಲ್ಲ!
ದಡ್ಡರಾದರೂ ಮೋಸ ಹೋಗದಂತಿರಬೇಕೆಲ್ಲ!
ವ್ಯಾಜ್ಯವಿಲ್ಲದೇ ವ್ಯವಹಾರ ನಡೆಸಬೇಕೆಲ್ಲ!
ಪಾಪ ಭೀತಿಯಿಲ್ಲದಾರ್ಜನೆಯಿಂದ ಸುಖವಿಲ್ಲ! (ಪ)
-ರಮಾರ್ಥ ಸಾಧಕರಿಗಾರದೇನೂ ಭಯವಿಲ್ಲ! (ಸಿ)
-ಕ್ಕುವಾದಾಯಲ್ಪವಾದರೂ ಅವರತೃಪ್ತರಲ್ಲ! (ತಾ)
-ಳಿದವ ಬಾಳ್ಯಾನೆಂಬುದವರ ಸಿದ್ಥಾಂತವೆಲ್ಲ!
ತಾಳ್ಮೆಯೇ ಅವರ ಕ್ಷೇಮನಿಧಿ! ತಿಳಿಯಿರೆಲ್ಲ! (ಮಾ)
-ಯ, ಮಂತ್ರಗಳ ಹುಚ್ಚು ಅವರಿಗೆಳ್ಳಷ್ಟೂ ಇಲ್ಲ!
ವಿಕಲ್ಪದಿಂದವರ್ವಿರೋಧ ಸಾಧಿಸುವುದಿಲ್ಲ (ಘು)
-ಲ್ಲ, ನಿರಂಜನಾದಿತ್ಯನಾಗಲ್ಕಗತ್ಯವಿದೆಲ್ಲ!!!
-ಳೆಯೊಂದೇ ಸಮ ಬೀಳುತಿದೆಯಲ್ಲಾ! (ಕಾ)
-ಯದಿದ್ದರೆ ಗತ್ಯಂತರವೇ ಇಲ್ಲಾ!
ನಿರ್ಜಿವವನಿಲ್ಲದೆ ಜಗವೆಲ್ಲಾ! (ತ)
-ನ್ನೂಳಿಗದವ್ರಲ್ಲೇಕೆ ದಯೆಯಿಲ್ಲಾ?
ಬಾ, ಬೇಗ ಬಾರೆಂದು ಕರೆವರೆಲ್ಲಾ! (ವ)
-ರ ಗುರು ರೂಪ ತೋರೋ ನಮಗೆಲ್ಲಾ!
ದಿಕ್ಕಿಲ್ಲದಾಗ್ಬಾರದು ಮಕ್ಕಳೆಲ್ಲಾ!
ಹರಿ, ಹರ, ಬ್ರಹ್ಮ ಬೇರಿನ್ಯಾರಿಲ್ಲಾ!
ನಮಿಸುವೆವು ನಿನ್ನ ಪಾದಕ್ಕೆಲ್ಲಾ! (ಬ)
-ಲ್ಲಾ ನಿರಂಜನಾದಿತ್ಯ ನಮ್ಮನ್ನೆಲ್ಲಾ!!!
ರುಕ್ಮಿಣಿ ರಮಣಾ ಲೋಕ ಮಿತ್ರ! (ಎ)
-ಣೆಯಿಲ್ಲದ ಗುಣಾಢ್ಯನಾ ಮಿತ್ರಾ! (ಸಂ)
-ತೋಷಪ್ರದನೆಲ್ಲರಿಗಾ ಮಿತ್ರ! (ಸು)
-ರಿಸುವನು ಸುವೃಷ್ಟಿಯಾ ಮಿತ್ರ!
ದವಸ, ಧಾನ್ಯಕ್ಕಾಧಾರಾ ಮಿತ್ರ!
ನಿಂತಲ್ಲಿಂದ ಕದಲನಾ ಮಿತ್ರ!
ದುರ್ಬುದ್ಧಿ ವಿನಾಶಕನಾ ಮಿತ್ರ! (ಅ)
-ಮಿತಾತ್ಮಾನಂದ ಸುಂದರಾ ಮಿತ್ರ! (ಮಿ)
-ತ್ರ ನಿರಂಜನಾದಿತ್ಯಾ ಮಿತ್ರ!!!
-ನ್ನ ಕಂಡಾನಂದಿಸಿದವರ್ವಿರಳ!
ಕೊಂಡುಕೊಳ್ಬೇಕೆಂಬವರು ಬಹಳ! (ಗಂ)
-ಡಾಗುಂಡಿಯಿಲ್ಲದಿರ್ಪವರ್ವಿರಳ! (ಅ)
-ಡಿಗೆಯುದ್ಯೋಗದವರು ಬಹಳ! (ಆ)
-ದರಾರೋಗ್ಯದೃಷ್ಟಿಯವರಿರ್ವಿರಳ!
ವರ ಗುರು ಸೇವಕರು ಬಹಳ! (ಗು)
-ರುವಿನಿಷ್ಟದಂತಿರ್ಪವರ್ವಿರಳ!
ಬಹು ಧನವುಳ್ಳವರು ಬಹಳ!
ಹಸಿದವರ್ಗಿಕ್ಕುವವರ್ವಿರಳ! (ಬೋ)
-ಳ ಶ್ರೀ ನಿರಂಜನಾದಿತ್ಯ ಧಾರಾಳ!!!
-ಕು ನಿನಗೀಗ್ಬಿಸಿ ನೀರೂಟ! (ನೇ)
-ಮಾನುಷ್ಠಾನಕ್ಕಿದೊಳ್ಳೆಯೂಟ! (ನೋ)
-ಡೀಗಿಲ್ಲ ರೋಗಗಳ ಕಾಟ! (ಯೋ)
-ಗವೇ ನಿನಗೆ ರಸದೂಟ!
ಮೊದ್ಮೊದ್ಲು ರುಚಿಸದೀ ಊಟ!
ಸರಿಹೋಗ್ವುದಾಮೇಲಾ ಊಟ! (ಸಾ)
-ರೂಟವಂತೂ ಬಲು ಪೇಚಾಟ! (ಊ)
-ಟ ನಿರಂಜನಾದಿತ್ಯಗಾಟ!!!
-ರಣಿಯಾಳ್ವನು ಸದಾ ಸಂಚರಿಸುತ್ತ!
ಮತಾತೀತನಾಗ್ಯೆಲ್ಲರ ಕಾಪಾಡುತ್ತ!
ದಮೆ, ಶಮೆಯ ಕವಚ ಧರಿಸುತ್ತ! (ಮಾ)
-ಯಾ, ಮಂತ್ರ, ತಂತ್ರಗಳ ಕತ್ತರಿಸುತ್ತ! (ಉ)
-ಳುವವನ ಯೋಗಕ್ಷೇಮ ವಹಿಸುತ್ತ!
ಪತಿತರಾದವರುದ್ಧಾರ ಮಾಡುತ್ತ! (ನಿ)
-ರಹಂಕಾರಿಯಾಗಿ ಸದಾ ತಾನಿರುತ್ತ!
ಮಾನಾಪಮಾನಗಳೆಲ್ಲಾ ಸಹಿಸುತ್ತ! (ಆ)
-ತ್ಮಸ್ಥಿತಿಯಲ್ಲೇ ತಲ್ಲೀನನಾಗಿರುತ್ತ! (ಉ)
ದಯಾಸ್ತದಲ್ಲಿ ಸಮದೃಷ್ಟಿ ತೋರುತ್ತ! (ದ)
-ತ್ತ ನಿರಂಜನಾದಿತ್ಯ ತಾನಾಗಿರುತ್ತ!!!
ಹೊಸ್ತಿಲ ಮೇಲ್ಕೂತೋದುತ್ತಲಿದ್ದ! (ಆ)
-ಸ್ತಿ ಪಾಸ್ತಿ ಲೆಕ್ಕ ಹಾಕುತ್ತಲಿದ್ದ! (ಕಾ)
-ಲ ಕೆಟ್ಟು ಹೋಯಿತೆನ್ನುತ್ತಲಿದ್ದ!
ಮೇಷ, ವೃಷಭವೆಣಿಸುತ್ತಿದ್ದ! (ನಾ)
-ಲ್ಕೂಟವಿನ್ನಿಲ್ಲೆನಗೆನ್ನುತ್ತಿದ್ದ! (ಹ)
-ತೋಟಿಯಲ್ಲಿರ್ಬೇಕಾಸೆನ್ನುತ್ತಿದ್ದ!
ದುಸ್ಸಂಗವಿರ್ಬಾರದೆನ್ನುತ್ತಿದ್ದ! (ಚಿ)
-ತ್ತ ಶುದ್ಧಿಯಾಗಬೇಕೆನ್ನುತ್ತಿದ್ದ! (ಶೂ)
-ಲಿಯನುಗ್ರಹಾಗ್ಬೇಕೆನ್ನುತ್ತಿದ್ದ! (ಎ)
-ದ್ದ, ನಿರಂಜನಾದಿತ್ಯ ನೋಡ್ತಿದ್ದ!!!
-ವಾಗಿನಂತೆ ಅವನಿಂದೂ ಬಂದ! (ಆ)
-ನಂದದಿಂದ ನಮಸ್ಕಾರವೆಂದ!
ದರ್ಶನವಾದದ್ದು ಭಾಗ್ಯವೆಂದ!
ಬಂದೆನೀಗ ತಾನೇ ಊರಿಂದೆಂದ!
ದಯೆಯಿರಬೇಕು ನಿಮ್ಮದೆಂದ!
ಹರಸ್ಬೇಕು ಪ್ರಸಾದವಿತ್ತೆಂದ! (ಹ)
-ಲ್ವ ತಿಂದು ಆನಂದವಾಯಿತೆಂದ!
ತಿಂದು, ಹೋಗಿ ಬರ್ತೇನೆ ನಾನೆಂದ!
ದತ್ತ ನಿರಂಜನಾದಿತ್ಯಾನಂದ!!|
-ಳೆಗೆರಡೂ ಬೇಕೆಂಬ ತೀರ್ಮಾನ!
ಬಿಸಿಲೊಂದೇ ಇದ್ದರೇನು ಧ್ಯಾನ?
ಸಿರಿಯರಸಗೆಲ್ಲಾ ಸಮಾನ! (ಅ)
-ಲಕ್ಷ್ಯ ಮಾಡ್ಬಾರದೆಂದೂ ಅವನ! (ಅ)
-ಲ್ಲೇನಿಲ್ಲೇನೆನ್ನದಿರ್ಪುದೇ ಜ್ಞಾನ! (ಅ)
-ನನ್ಯ ಭಕ್ತಿಯಿಂದಾಗ್ಬೇಕ್ಭೋಜನ (ಅ)
-ನುಮಾನ ಬಿಟ್ಟಾಗ್ಬೇಕಾರಾಧನ! (ಭ್ರ)
-ಷ್ಟಾಚಾರಗಳೊಲಿಸವವನ! (ಘ)
-ನ, ನಿರಂಜನಾದಿತ್ಯಾನಂದನ!!!
ಕೊಡ್ಲೇಬೇಡೈದಾರಿಡ್ಲಿ ತಿನ್ಲೇ ಬೇಡ! [ಆ]
-ಡ್ಲೇ ಬೇಡನೃತವೆಂದೂ ಆಡ್ಲೇ ಬೇಡ!
ಬೇಡ್ಲೇಬೇಡಸಂತೃಪ್ತಿಪಡ್ಲೇ ಬೇಡ! (ಬೇ)
-ಡೈಶ್ವರ್ಯವದಕ್ಕಾಗಾಶಿಸ್ಲೇ ಬೇಡ!
ದಾಕ್ಷಿಣ್ಯ ಬೇಡಶಾಂತಿ ತರ್ಲೇ ಬೇಡ! (ವೈ)
-ರಿಯೇ ಬೇಡವ್ನ ಸಂಗ ಮಾಡ್ಲೇ ಬೇಡ! (ಕೊ)
-ಡ್ಲಿನೇ ಬೇಡ, ಕೊಲೆಗಡ್ಕಾಗ್ಲೇ ಬೇಡ!
ತಿಕ್ಕಾಟ ಬೇಡರೊಟ್ಟೂ ಸೇರ್ಲೇ ಬೇಡ! (ತಿ)
-ನ್ಲೇಬೇಡ, ತಿಂದು ವಾಂತಿ ಮಾಡ್ಲೇ ಬೇಡ!
ಬೇಸರ ಬೇಡಜ್ಞಾನಿಯಾಗ್ಲೇ ಬೇಡ! (ಆ)
-ಡ, ನಿರಂಜನಾದಿತ್ಯದ್ಲುಬದ್ಲಾಡ!!!
ಜಗದಲ್ಲಿದ್ದಿಲ್ಲದಂತಿಹುದೀ ಬಾಳು! [ಅ]
-ಗತ್ಯವಿನ್ನಿಲ್ಲನ್ಯ ವ್ಯವಹಾರಗಳು! (ವಾ)
-ದಕ್ಕತೀತವಾಗಿವೆ ಸಮಸ್ಯೆಗಳು! (ಎ)
-ಲ್ಲಿ ಹುಡುಕಿದರೂ ಮಾಯಾಜಾಲಗಳು! (ಅ)
-ದ್ದಿ ಮುಳುಗಿಸುವುವಾ ಪ್ರವಾಹಗಳು! (ಇ)
-ಲ್ಲದಾಗಿದೆ ಪರಿಹಾರೋಪಾಯಗಳು!
ದಂಗ, ದರೋಡೆಗೆಲ್ಲಾವಕಾಶಗಳು! (ಗ)
-ತಿಗೆಟ್ಟಹವೆಲ್ಲಾ ಮತಾಚಾರಗಳು!
ಹುಸಿಗೆ ಎಲ್ಲೆಲ್ಲೂ ಜಯಕಾರಗಳು!
ದೀರ್ಘ ತಪಕ್ಕೂ ಬಾರವುತ್ತರಗಳು!
ಬಾಯ್ಬಿಟ್ಟರಾಗುವುದಪಚಾರಗಳು (ಬಾ)
-ಳು! ನಿರಂಜನಾದಿತ್ಯಗೊಪ್ಪಿಸೀ ಗೋಳು!!!
-ಕ್ಷಾರ್ಚನೆ ಲಕ್ಷ್ಯಕ್ಕಾಗಬೇಕು! (ಸ)
-ತ್ಕಾರ ಸಂಸ್ಕೃತಿಗಾಗಬೇಕು! (ತ)
-ರತರದಾಸೆ ಬಿಡಬೇಕು!
ವಾದ, ಭೇದ ರದ್ದಾಗಬೇಕು!
ಗತಿ ಶ್ರೀ ಪಾದವೆನಬೇಕು!
ಲೇಪ ಮಾಯೆಯದ್ದೊರಸ್ಬೇಕು!
ಬೇಜವಾಬ್ದಾರಿಯಡಗ್ಬೇಕು! (ಟಾ)
-ಕು, ನಿರಂಜನಾದಿತ್ಯಾಗ್ಬೇಕು!!!
ಅನಾಥೋ ದೈವ ರಕ್ಷಕನೆಂಬರಿವಾಗ್ಲಿ! [ಅ]
-ನಾಗರೀಕರ್ಗೂ ಇದರನುಭವವಾಗ್ಲಿ! (ವೃ)
-ಥೋಪದೇಶಕ ನೀನಲ್ಲೆಂಬರ್ಥವಾಗ್ಲಿ!
ದೈನ್ಯ, ಭಕ್ತಿ ನಿನ್ನಲ್ಲೆಲ್ಲರ್ಗಧಿಕವಾಗ್ಲಿ!
ವರ ಗುರುದತ್ತ ನೀನೆಂಬರಿವುಂಟಾಗ್ಲಿ! (ಕ)
-ರಣತ್ರಯಗಳು ಶುದ್ಧವಾಗುತ್ತಲಿರ್ಲಿ! (ಪ)
-ಕ್ಷದ್ವೇಷಗಳೆಲ್ಲಾ ಸಮೂಲನಾಶವಾಗ್ಲಿ!
ಕರುಣಾ ಸ್ವಭಾವವೆಲ್ಲೆಲ್ಲೂ ತೋರಿ ಬರ್ಲಿ! (ನೀ)
-ನೆಂಬ, ನಾನೆಂಬ ಅಜ್ಞಾನ ನಿರ್ನಾಮವಾಗ್ಲಿ!
ಬರೀ ಗುಲ್ಲು ನಿದ್ದೆಗೇಡೆಂದದ ನಿಲ್ಲಿಸ್ಲಿ! (ದಾ)
-ರಿಯಿದು ಸುಖ ಪ್ರಯಾಣಕ್ಕನುಕೂಲವಾಗ್ಲಿ! (ಭ)
-ವಾಬ್ಧಿ ಭಯ ತಪ್ಪಿ ಎಲ್ಲರೂ ಮುಕ್ತರಾಗ್ಲಿ! (ಆ)
ಗ್ಲಿ, ಶ್ರೀ ನಿರಂಜನಾದಿತ್ಯನಿಷ್ಟದಂತಾಗ್ಲಿ!!!
-ನ್ನಿಧಿ ಸೇವೆಯೊದಗಿಸಬೇಕು! (ಕ)
-ಷ್ಟವೆಲ್ಲವನ್ನೂ ತಪ್ಪಿಸಬೇಕು!
ದಂಡ ನೀತಿ ಬಿಟ್ಟು ಬಿಡಬೇಕು! (ಸಂ)
-ತೆಗೆನ್ನನ್ನೋಡಿಸದಿರಬೇಕು!
ನಾವಿಬ್ಬರೂ ಒಂದಾಗಿರಬೇಕು!
ನಿತ್ಯಾನಂದನುಭವಿಸಬೇಕು! (ನ)
-ರಜನ್ಮದಾಸೆಯಿದಾಗಬೇಕು!
ಬೇಗಬೇಗಿದು ಕೈಗೂಡಬೇಕು! (ಬೇ)
-ಕು, ನಿರಂಜನಾದಿತ್ಯನಾಗ್ಬೇಕು!!!
ಮಾತೆ ಸಕಲರಿಗೀ ಹೆಣ್ಣು! (ಸಾ)
-ಕ್ಷಿಯಲ್ಲಕ್ಕಾಗಿಹಳೀ ಹೆಣ್ಣು! (ನ್ಯಾ)
-ಯಾನ್ಯಾಯ ಬಲ್ಲವಳೀ ಹೆಣ್ಣು! (ಯೋ)
-ಗಿರಾಜನಿಗರ್ಧಾಂಗೀ ಹೆಣ್ಣು!
ಹರ್ಷವಾಗಿರುವಳೀ ಹೆಣ್ಣು! (ಬಾ)
-ಳೀರೀತಿಯಿಂದ ಸುಖೀ ಹೆಣ್ಣು! (ಇ)
-ಹೆನೆಲ್ಲರಲ್ಲೆಂಬಳೀ ಹೆಣ್ಣು! (ಹೆ)
-ಣ್ಣು, ನಿರಂಜನಾದಿತ್ಯಾ ಹೆಣ್ಣು!!!
-ಲವೆತ್ತಿ ಹಾಕಬೇಕೆಲ್ಲಾ!
ಕಾರಣ ಕೇಳ್ಯಾಮೇಲೆಲ್ಲಾ!
ದಿವ್ಯ ರೂಪ ನಿಮ್ಮದೆಲ್ಲಾ! (ತ)
-ರಿಯಿರರಿಗಳನೆಲ್ಲಾ!
ನೀಡಿಹೆನೆನ್ನ ಶಕ್ತ್ಯೆಲ್ಲಾ! (ಸಾ)
-ವೆನ್ನ ನಂಬಿದವರ್ಗಿಲ್ಲಾ! (ಬ)
-ಲ್ಲಾ ನಿರಂಜನಾದಿತ್ಯೆಲ್ಲಾ!!!
ಹೊತ್ತಾಗ್ಯೆದ್ದರೆಲ್ಲರಿಲ್ಲಿಂದು! (ಗೊ)
-ತ್ತಾಯ್ತದಾಮೇಲೆಲ್ಲರಿಗಿಂದು! (ಭಾ)
-ಗ್ಯೆ ನಾನೆಲ್ಲರಿಗಿಂತ ಇಂದು! (ಇ)
-ದ್ದದ್ರಲ್ಲಿ ತೃಪ್ತಿಯೆನಗಿಂದು! (ಬೆ)
-ರೆತವರಿಗಾನಂದವಿಂದು! (ತ)
-ಲ್ಲಣವಿಲ್ಲದಾಗುವುದಿಂದು! (ಹ)
-ರಿಸ್ಮರಣೆಗನ್ಕೂಲವಿಂದು! (ಪು)
-ಲ್ಲಿಂಗ, ಸ್ತ್ರೀಲಿಂಗ ಭೇದವಿಂದು! (ಇ)
-ದು ನಿರಂಜನಾದಿತ್ಯಗಿಂದು!!!
-ಗತ್ತಂತೂ ನನಗೂ ಬೇಡ! (ಕ)
-ತ್ತಿ ಮಸೆಯುವುದೂ ಬೇಡ!
ಗೆದ್ದೆನೆಂಬ ಹಮ್ಮೂ ಬೇಡ!
ನಾಳೆಯಾಸೆಯೆಂದೂ ಬೇಡ! (ಅ)
-ನುಮಾನ ಪಡ್ವುದೂ ಬೇಡ!
ಬೇಜಾರಾಗುವುದೂ ಬೇಡ! (ಮೃ)
-ಡ ನಿರಂಜನಾದಿತ್ಯಾಡ!!!
-ದೇ ಕೆಟ್ಟ ವಿಷಯ ವಾಸನೆ!
ನಾಶ ಹೇತುವಾದಾ ವಾಸನೆ!
ಹೊರಗೊಳಗೆಲ್ಲಾ ವಾಸನೆ!
ಲಕ್ಷ್ಯ ಸಿದ್ಧಿಗಡ್ಡೀ ವಾಸನೆ!
ಸುಸಂಸ್ಕೃತಿಗಿಲ್ಲಾ ವಷನೆ! (ಯಾ)
-ವಾಗ್ಲಿರಬೇಕಾತ್ಮ ವಾಸನೆ!
ಸರ್ವರುದ್ಧಾರಕ್ಕೀ ವಾಸನೆ! (ನೆ)
-ನೆ, ನಿರಂಜನಾದಿತ್ಯಾತ್ಮಾನೇ!!!
ಬಿಸಿಲ್ಬಂದಾಗ ಬಟ್ಟೆಯೊಣಗ ಹಾಕು! (ಬ)
-ಸಿರಿದ್ದಾಗೆಚ್ಚರದಿಂದ ಹೆಜ್ಜೆ ಹಾಕು! (ಹಾ)
-ಲ್ಬಂದಾಗ ಹಿಂಡಿ ಪಾತ್ರೆಯೊಳಗೆ ಹಾಕು! (ಆ)
-ದಾಯವಿಲ್ಲದಾಗ ಖರ್ಚು ಕಮ್ಮಿ ಹಾಕು!
ಗಲಾಟೆ ನಿಂತ ಮೇಲ್ಕೆಲ್ಸಕ್ಕೆ ಕೈ ಹಾಕು!
ಬರೀ ಗುಲ್ಲು ಸಮಾರಂಭ ವಜಾ ಹಾಕು! (ಪ)
-ಟ್ಟೆ ಪೀತಾಂಬರದ ಹುಚ್ಚು ಸುಟ್ಟು ಹಾಕು! (ಬಾ)
-ಯೊಣಗಿದಾಗ್ತುಸತುಸ ನೀರು ಹಾಕು! (ಗು)
-ಣ ದೋಷ ವಿಮರ್ಶೆ ಮಾಡಿ ಮತ ಹಾಕು! (ಭ)
-ಗವತ್ಧ್ಯಾನದಲ್ಲಿ ಸದಾ ಕಾಲ ಹಾಕು! (ಆ)
-ಹಾರ, ವಿಹಾರಕ್ಕೆಲ್ಲಾ ಅಳತೆ ಹಾಕು! (ಹಾ)
-ಕು ನಿರಂಜನಾದಿತ್ಯಾಂಘ್ರಿಗೆ ಹೂ ಹಾಕು!!!
-ಡೆಯನಿಗಲಕ್ಷ್ಯವಾಗಿದೆ! (ಕ್ಷ)
-ಯ ಕ್ಷಣಕ್ಷಣಕ್ಕಾಗುತ್ತಿದೆ! (ಹ)
-ಲ್ಲಿ ಅವುಗಳ ತಿನ್ನುತಿದೆ! (ಹೀ)
-ಗೆ ಕಾಟ ಕಡಿಮೆಯಾಗಿದೆ! (ಗೆ)
-ಜ್ಲು ಮಾರ್ಗ ಬದಲಾಯಿಸಿದೆ!
ಬಂಧನದಕ್ಕಾಗ್ಬೇಕಾಗಿದೆ!
ದಿನ ಬೇಗ ಬರ್ಬೇಕಾಗಿದೆ! (ತಂ)
-ದೆ ನಿರಂಜನಾದಿತ್ಯೆಂದಿದೆ!!!
-ಲವರ್ಧಕ, ಜೀರ್ಣಕಾರಕಾ ಹಣ್ಣು!
ಸಿಹಿ ಹುಳಿಯ ಮಿಶ್ರ ರುಚಿಯಾ ಹಣ್ಣು! (ಜ)
-ನರಿಗೆ ಬಹು ಪ್ರಿಯಕರಾ ಹಣ್ಣು!
ಹಕ್ಕಿ, ಪಕ್ಕಿಗಳಿಗೂ ಬೇಕಾ ಹಣ್ಣು! (ಉ)
-ಣ್ಣುವ ಶಾಖ, ಪಾಕಕ್ಕೂ ಯೋಗ್ಯಾ ಹಣ್ಣು!
ಮಾರಾಟಕ್ಕೂ ಬರುವವೆಲ್ಲಾ ಹಣ್ಣು!
ವಿಕ್ರಯವಾಗುವುವು ಬೇಗಾ ಹಣ್ಣು! (ಮ)
-ನಕ್ಕಾಕರ್ಷಣೆಯವೆರಡೂ ಹಣ್ಣ!
ಹರಿ, ಹರಾದಿಗಳ್ಗೂ ಇಷ್ಟಾ ಹಣ್ಣು! (ಹ)
-ಣ್ಣು ನಿರಂಜನಾದಿತ್ಯಾನಂದಾ ಹಣ್ಣು!!!
ಸರ್ವರೊಪ್ಪಿಗೆ ಲಭಿಸಿತು!
ನಿರಂಜನಾಶೀರ್ವಾದಾಯಿತು! (ದು)
-ಷ್ಟಸಂಪರ್ಕ ತಪ್ಪಿಹೋಯಿತು! (ಮ)
-ನೆಯವ್ರಲ್ಲೈಕ್ಯವುಂಟಾಯಿತು! (ಪ)
-ರಸ್ಪರ ಪ್ರೀತಿ ಬೆಳೆಯಿತು!
ವೇಷ, ಭೂಷಣ ಬೇಡಾಯಿತು! (ಗು)
-ರಿ ಸಿದ್ಧಿಗೆ ಸಂಕಲ್ಪಾಯಿತು! (ಹೇ)
-ತು ನಿರಂಜನಾದಿತ್ಯಾಯಿತು!!!
ದಾರಿಗಗಿರಬೇಕಾದಾಸೆ!
ಮಾರಹರನ ದರ್ಶನಾಸೆ! (ಸ್ವ)
-ರ್ಗಸುಖಕ್ಕಿಂತುತ್ತಮದಾಸೆ! (ಪಾ)
-ದಸೇವೆಯನುದಿನದಾಸೆ! (ಸ್ಪ)
-ರ್ಶದಿಂದ ಪಾವನಾಗುವಾಸೆ!
ನರ ಜನ್ಮದ ಕೊನೆಯಾಸೆ! (ಸ)
-ದಾ ಸಚ್ಚಿದಾನಂದಾಗಿರ್ಪಾಸೆ! (ಆ)
-ಸೆ ನಿರಂಜನಾದಿತ್ಯಪ್ಪಾಸೆ!!!
-ರ ಚರಣಾದಿಂದ್ರಿಯಕ್ಕಾಳಾಗಬೇಡ!
ಮಾಯಾಜಾಲದಲ್ಲಿ ಬಿದ್ದೊದ್ದಾಡಬೇಡ! (ಆ)
-ತ್ಮಚಿಂತನೆಯನ್ನೆಂದಿಗೂ ಬಿಡಬೇಡ! (ಜ)
-ನನ, ಮರಣಕ್ಕೆ ಭಯಪಡಬೇಡ! (ಹ)
-ಲ್ಲಿ, ಹಾವುಗಳ ಕೊಲ್ಲಲೆತ್ನಿಸಬೇಡ!
ತನ್ನಂತೆಲ್ಲರೆಂಬುದ ಮರೆಯಬೇಡ! (ಸ)
-ಪ್ಪೆ ಮುಖ ಹಾಕಿಕೊಂಡಳುತಿರಬೇಡ! (ಋ)
-ಣಿ ಗುರುಚರಣಕ್ಕಾಗದಿರಬೇಡ!
ಸಚ್ಚಿದಾನಂದಕ್ಕಾಶಿಸದಿರಬೇಡ!
ಬೇರಾವುದೂ ಬಯಸಿ ಬೆಂಡಾಗಬೇಡ! (ಮೃ)
-ಡ ನಿರಂಜನಾದಿತ್ಯನಾರೋಪ ಬೇಡ!!!
ಕಾಳು ಬಿತ್ತಲಿಕ್ಕೊಂದು ಜಈನು! [ಗೋ]
-ಳು ತಪ್ಪಿಸಲಿಕ್ಕೊಂದು ಕಾನೂನು!
ಬಿಡಿಸಿಕೊಳ್ಲಿಕ್ಕೊಂದು ಜಾಮಿನು! (ಹ)
-ತ್ತಲಾದ ಬಳ್ಳಿಗೊಂದು ಕಮಾನು! (ನೀ)
-ಲಿಯಾಕಾಶಕ್ಕವನೊಬ್ಬ ಭಾನು! (ತ)
-ಕ್ಕೊಂಬನೆಲ್ಲರ ಕಪ್ಪನ್ನವನು! (ಅಂ)
-ದು, ಇಂದು, ಮುಂದು, ಆಧಾರವನು!
ಜರಾ ಜನ್ಮ ದುಃಖಾತೀತವನು!
ಈಸಲಾಗಿಲ್ಲಾರಿಗೂ ಅವನು! (ತಾ)
-ನು ನಿರಂಜನಾದಿತ್ಯಾಗಿಹನು!!!
ರೋಮರೋಮವೂ ಅವನಾಗಿ!
ಗೀತಾಮೃತಾಭಿಷಿಕ್ತನಾಗಿ!
ನಿಚೋಚ್ಛವಿಲ್ಲದವನಾಗಿ!
ನೇತ್ರ ಹಣೇಲಿರ್ಪವನಾಗಿ!
ಶಿರದಲ್ಲಿಂದುಧರನಾಗಿ!
ವರಗುರುದತ್ತ ತಾನಾಗಿ!
ಯೋಚನಾತೀತ ಚಿತ್ತನಾಗಿ! (ಯೋ)
-ಗಿ ನಿರಂಜನಾದಿತ್ಯನಾಗಿ!!!
-ಗ ಬಿಟ್ಟು ನಿಸ್ಸಂಗಿಯಾದಂಗಳಾ! (ಕ)
-ಳಾನಿಧಿ ಶಾರದೆಯೊಲ್ದಂಗಳಾ!
ಬೆನಕನೊಡನಾಡಿದಂಗಳಾ! (ಸ್ಥ)
-ಳ ಪುರಾಣದಲ್ಲಿಲ್ಲದಂಗಳಾ! (ಸ)
-ದಿಂಬಿನಿಂದಾತ್ಮಾನಂದಾದಂಗಳಾ!
ಗರ್ವದ ಹೆಸರಳಿದಂಗಳಾ! (ಕ)
-ಳಂಕಾತಂಕವೇನಿಲ್ಲದಂಗಳಾ! (ರಂ)
-ಗನಾಥ ಪವಡಿಸಿದಂಗಳಾ! (ಬೋ)
-ಳಾ ನಿರಂಜನಾದಿತ್ಯನಂಗಳಾ!!!
-ಳೆಗಾಗಿ ಆವನುಪಕಾರಪಾರ! (ಸಂ)
-ಗಾತಿಗಳ ಹಿಂದಿದ್ದೀಗ ಸಂಚಾರ! (ಜ)
-ಲ ಭರ್ತಿಯಾದಾಗ ತೋರ್ಪನಾಕಾರ! (ಉ)
-ದಯಾಸ್ತಗಳಲ್ಲೂ ಈಗ ನಕಾರ! (ಅ)
-ಲ್ಲಿಲ್ಲಿ, ಎಲ್ಲೆಲ್ಲೀಗ ಗಾಢಾಂಧಕಾರ! (ಬ)
-ಗೆ ಬಗೆರೀತಿಯಲ್ಲವನಾಧಾರ! (ಇ)
-ಳೆಗವ್ನಂತಾರು ಮಾಳ್ಪರುಪಕಾರ? (ಭ)
-ಯ, ಭಕ್ತಿಯಿಂದಿರ್ಪುದೇ ಸದಾಚಾರ!
ಬಾ, ಬೇಗೆಂದು ಮೊರೆಯಿಡ್ವ ನಿರ್ಧಾರ! (ಹ)
-ರ, ನಿರಂಜನಾದಿತ್ಯಾ ಮಿತ್ರಾಕಾರ!!!
-ಜ, ಭಕ್ತೋತ್ತಮಾ ತ್ಯಾಗರಾಜ! (ಬಾ)
-ಯಿ, ಕೈ, ವಿಶುದ್ಧಾ ತ್ಯಾಗರಾಜ!
ಯಾದವಪ್ರಿಯಾ ತ್ಯಾಗರಾಜ!
ದಾನ, ಧರ್ಮಾತ್ಮಾ ತ್ಯಾಗರಾಜ! (ನಿ)
-ತಾನಂದ ಕಂದಾ ತ್ಯಾಗರಾಜ!
ಗರ್ವರಹಿತಾ ತ್ಯಾಗರಾಜ!
ರಾಮ, ಸೀತಾತ್ಮಾ ತ್ಯಾಗರಾಜ! (ನಿ)
-ಜ ನಿರಂಜನಾದಿತ್ಯಾ ರಾಜ!!!
-ಟಿಯಾಗಿರಲಾಗದೀಗಾ ಗುಬ್ಬಿ! (ಹಾ)
-ಯಾಗಿ ಮಲಗಬೇಕೀಗಾ ಗುಬ್ಬಿ! (ಕೂ)
-ಗಿದರೂ ಮಾತಾಡದೀಗಾ ಗುಬ್ಬಿ! (ಗು)
-ರುಮನೆಯಲ್ಲಿರ್ಪುದೀಗಾ ಗುಬ್ಬಿ! (ಮೇ)
-ವು ಹಾಕಿದ್ರೂ ತಿನ್ನದೀಗಾ ಗುಬ್ಬಿ!
ದೀಪವೇಕಿನ್ನೆಂಬುದೀಗಾ ಗುಬ್ಬಿ! (ಸಂ)
-ಗಾತಿಯೊಡನೆ ಬೆಳಿಗ್ಗಾ ಗುಬ್ಬಿ!
ಗುಟುಕಾರಿಸುವುದಾಗಾ ಗುಬ್ಬಿ! ಗುಬ್ಬಿ! (ಗು)
-ಬ್ಬಿನಿರಂಜನಾದಿತ್ಯೆಂದು ತಬ್ಬಿ!!!
-ದ್ದಳೆಯಿಲ್ಲದೊಂದು ಸಂಗೀತ ಸಭೆ! (ಛ)
-ಲ, ಬಲದ್ದ್ಯುದ್ಧವಿದ್ದರದು ಸಭೆ!
ವಿಷಯ ನಿರ್ಧಾರಕ್ಕಾಗಿಂಥಾ ಸಭೆ! (ಬೆ)
-ಲ್ಲದಂತಾಡ್ಯೇನೂ ಮಾಡ್ದಿದ್ರೇಕಾ ಸಭೆ?
ದರ್ಪ, ದಂಭಕ್ಕಲ್ಲ ವಿಧಾನ ಸಭೆ!
ವಿವೇಕಿಗಳಿಲ್ಲದ್ದಯೋಗ್ಯ ಸಭೆ!
ಧಾರ್ಮಿಕ ವೃತ್ತಿಯದ್ದುತ್ತಮ ಸಭೆ! (ಜ)
-ನತೆಯುದ್ಧಾರಕ್ಕತ್ಯಗತ್ಯಾ ಸಭೆ!
ಸಮತಾವಾದಕ್ಕಿದು ತಕ್ಕ ಸಭೆ! (ಶೋ)
-ಭೆ ನಿರಂಜನಾದಿತ್ಯನಿಗಾ ಸಭೆ!!!
ರಾತ್ರಿಯಿದ್ದಂತಿಲ್ಲ ಹಗ್ಲು ಮನ!
ಟಗರು ಸತ್ಮೇಲಿಲ್ಲ ಕದನ!
ಗಟ್ಟಿಗರ್ನಾವೆನ್ನುವರು ಜನ! (ಮ)
-ಳೆ, ಬೆಳೆಗಳಾಗ್ದಿದ್ರಿಲ್ಲ ಧನ! (ಸ)
-ಲ್ಲಾಪ, ವಿಲಾಪಗ್ಳಾಗ ನಿಧನ!
ನಾರುವುದಾಗ ರಾಜ ಭವನ! (ಹಾ)
-ಲ್ಕುಡಿಸ್ಯಾವುದಕ್ಕಾಗ ಚುಂಬನ?
ದಿವ್ಯಜ್ಞಾನದಿಂದೆಲ್ಲಾ ಶಮನ! (ಧ)
-ನ ನಿರಂಜನಾದಿತ್ಯ ಭಜನ!!!
-ರಗುರು ಧ್ಯಾನ ಮಾಡುತ್ತಿರಬೇಕು!
ಕಥಾಶ್ರವಣವಾಗುತ್ತಿರಬೇಕು!
ಪ್ರಾಮಾಣಿಕನಾಗಿ ತಾನಿರಬೇಕು! (ತೃ)
-ಪ್ತಿ ಜೀವನದಭ್ಯಾಸ ಮಾಡಬೇಕು! (ಕಾ)
-ಯಾಭಿಮಾನ ಕತ್ತರಿಸಿಡಬೇಕು! (ರಾ)
-ಗ, ದ್ವೇಷ, ಧ್ವಂಸವಾಗುತ್ತಿರಬೇಕು!
ದಿಗಂಬರದಾಸ ತಾನಾಗಬೇಕು! (ಪ)
-ರಮಪದವಿಗರ್ಹನಾಗಬೇಕು! (ಕು)
-ಬೇರಾದಿಗಳನ್ನೆಲ್ಲಾ ಈರಬೇಕು! (ಮು)
-ಕುತಿ ನಿರಂಜನಾದಿತ್ಯ ಕೊಡ್ಬೇಕು!!!
ಸತ್ತಮೇಲೆತ್ತಿ ಹಾಕುವುದೇನೋ ನಿಜ! (ಬೆ)
-ತ್ತಲೆಯಿದ್ದರೊಪ್ಪುವುದೇನು ಸಮಾಜ?
ಮೇಲ್ನೋಟಕ್ಕೀ ಭಾವನೆಯೇನೋ ಸಹಜ! (ಬೆ)
-ಲೆ ಮಾಯೆಗೀಯದವನು ಮಾಡ ಮಜ! (ವೃ)
-ತ್ತಿಶೂನ್ಯನಾದವನಿಗೆಲ್ಲವೂ ವಜ! (ಮ)
-ಹಾತ್ಮ ತಾನಾಗಿ ಅವನೇ ಯೋಗಿರಾಜ!
ಕುಲ, ಗೋತ್ರವೆಣಿಸದಾದರ್ಶ ಪ್ರಜ! (ಹೂ)
-ವುಗಳ ಮಧ್ಯದಲ್ಲದೊಂದು ವನಜ!
ದೇಶ, ಕಾಲಾತೀತನಾಗ್ವಿಜಯ ಧ್ವಜ! (ಮ)
-ನೋಜಯದಿಂದಿರುವುದವನಲ್ಲೋಪ!
ನಿತ್ಯವಿರುವುದವನಲ್ಲಾತ್ಮ ತೇಜ! (ನಿ)
-ಜ, ನಿರಂಜನಾದಿತ್ಯಾನಂದದಿತಿಜ!!!
ಕೋಟಿ ಸೂರ್ಯ ಪ್ರಭಾ ಗುರು ಪರಮಾತ್ಮ! (ಸಾ)
-ಟಿ ತಾನೆಂತಹನವನಿಗೆ ದುರಾತ್ಮ!
ಸೂತ್ರಧಾರಿಯಾಗಿಹನು ಪರಮಾತ್ಮ! (ಆ)
-ರ್ಯರಾದರ್ಶ ಮರೆತಿಹನು ದುರಾತ್ಮ!
ಪ್ರಜಾಪತ್ಯೆನಿಸಿರ್ಪನು ಪರಮಾತ್ಮ!
ಭಾವಶುದ್ಧಿಯಿಲ್ಲದಿಹನು ದುರಾತ್ಮ!
ಗುಡಿಯಲ್ಲಿ ಮಾತ್ರವಲ್ಲ ಪರಮಾತ್ಮ! (ಇ)
-ರುವನೆಲ್ಲರರಲ್ಲೆಂದ್ರೂ ನಂಬ ದುರಾತ್ಮ!
ಪತಿತ ಪಾವನ ದತ್ತ ಪರಮಾತ್ಮ! (ಪ)
-ರಪೀಡಾಸಕ್ತನಾಗಿಹನು ದುರಾತ್ಮ!
ಮಾಯಾಮೋಹಿತನಾಗಿಲ್ಲ ಪರಮಾತ್ಮ! (ಆ)
-ತ್ಮ, ಶ್ರೀ ನಿರಂಜನಾದಿತ್ಯ ಸ್ವರೂಪಾತ್ಮ!!!
ಹೊರಗಟ್ಟಿ ದಿಟ್ಟಿ ನಿನ್ನದಿಟ್ಟಿ! (ವ)
-ರ ಗುರುಸೇವೆಯಲ್ಲೆನ್ನನ್ನಿಟ್ಟಿ!
ಗರ್ವವನ್ನೆನ್ನಿಂದ ಕಿತ್ತುಬಿಟ್ಟಿ! (ರೊ)
-ಟ್ಟಿ, ಹಾಲ್ಮೊಸ್ರು ಹೊಟ್ಟೆ ತುಂಬಾ ಕೊಟ್ಟಿ!
ದಿವ್ಯ ಜೀವ್ನಕ್ಕೆ ಕಟ್ಟಿ ಹಾಕ್ಬಿಟ್ಟಿ! (ಭೆ)
-ಟ್ಟಿ ನಿನ್ನದು ಪ್ರತಿದಿನ ಕೊಟ್ಟಿ!
ನಿತ್ಯನುಷ್ಠಾನಕ್ಕೆ ಜಾಗ ಕೊಟ್ಟಿ! (ತ)
-ನ್ನ ಹಾಗೆಲ್ಲರೆಂಬ ಜ್ಞಾನ ಕೊಟ್ಟಿ!
ದಿಕ್ಕಿಲ್ಲದವಗೆ ದಿಕ್ಕಾಗ್ಬಿಟ್ಟಿ! (ಇ)
-ಟ್ಟಿ, ನಿರಂಜನಾದಿತ್ಯನಾಗ್ಬಿಟ್ಟಿ!!!
ನಿನ್ನ ನಾನೇನೆಂದು ಕರೆಯ್ಲಪ್ಪಾ? (ನ)
-ನ್ನ ಜನ್ಮದಾತ ನೀನಲ್ವೇನಪ್ಪಾ?
ನಾನೂ, ನೀನೂ, ಒಂದಲ್ಲವೇನಪ್ಪಾ?
ನೇರಾಗಿ ನಿಂತುತ್ತರ ಹೇಳಪ್ಪಾ! (ನಾ)
-ನೆಂಥಾ ಪೇಚಿನಲ್ಲಿಹೆ? ನೋಡಪ್ಪಾ! (ಇ)
-ದು ದಯೆಯ ಲಕ್ಷಣವೇನಪ್ಪಾ?
ಕನಿಕರವಿನ್ನಾದ್ರೂ ಬರ್ಲಪ್ಪಾ! (ಕ)
-ರೆದು ಹತ್ರ ಕೂರಿಸಿಕೊಳ್ಳಪ್ಪಾ! (ಬಾ)
-ಯ್ಲನ್ನುವ ವಿಚಾರವಿದಲ್ಲಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯ ನೀನಪ್ಪಾ!!!
-ಖನಾಗು ನನಗೆ ನೀನೆನ್ನುತಿದೆ!
ನಿನ್ನ ಸೇವೆ ಸದಾ ಕೊಡೆನ್ನುತಿದೆ! (ಆ)
-ಲಿಂಗಿಸಿ ಧನ್ಯನಾಗಿಸೆನ್ನುತಿದೆ! (ರಂ)
-ಗನಾಥನಿಗಿದಿಷ್ಟವೆನ್ನುತಿದೆ! (ತಂ)
-ದೆ, ತಾಯಿ, ನನಗೆ ನೀನೆನ್ನುತಿದೆ! (ನೀ)
-ಡೆನಗೀಗ ಸಾಯುಜ್ಯವೆನ್ನುತಿದೆ! (ಗಂ)
-ಗೋದಕಾಭಿಷೇಕ ಮಾಡೆನ್ನುತಿದೆ! (ಕಂ)
-ಡು ಧನ್ಯನಾದೆ ನಾನಿಂದೆನ್ನುತಿದೆ!
ತಿನ್ನಿಸು ನಿನ್ನುಚ್ಚಿಷ್ಟವೆನ್ನುತಿದೆ! (ಬಂ)
-ದೆ ನಿರಂಜನಾದಿತ್ಯಾಗ್ಯೆನ್ನುತಿದೆ!!!
ಮಾಡಿಸುವವ ನೀನಾಗಿರ್ಲೇನು ಭಯ? (ಬಿ)
-ಡಿಸು ನ್ನನ್ನಿಂದ ಹುಟ್ಟು ಸಾವಿನ ಭಯ! (ಮಿ)
-ಸುಕಾಡದಂತಿಟ್ಟು ಕೊಡು ನಿನ್ನಾಶ್ರಯ! (ಅ)
ವರಿವರದೇಕೆನಗೆ ಪರಿಚಯ?
ವರ ಗುರು ನಿನ್ನ ಸೇವೆಯತಿಶಯ!
ನೀರು ಪಾಲಾಗಲೆಲ್ಲಾ ನೀಚ ನಿಚಯ!
ನಾವೆ ನೀನಾಗಿ ಮಾಡುತ್ತಮರ್ಗಾದಾಯ! (ಯೋ)
-ಗಿರಾಜ ವಿಷ ಕುಡಿದಂತಿರ್ಲಿ ದಯ! (ತ)
-ರ್ಲೇ, ತಂಟೆ, ತಕ್ರಾರುಗಳಿಗಾಗ್ಲಿ ಕ್ಷಯ! (ತ)
-ನುಜರೆಲ್ಲಾ ನಿನ್ನಂತಾದರೆ ವಿಜಯ! (ಜಂ)
-ಭಗಾರರಿಗಾವುದುದಾಗಪಜಯ!
ಯಮ ಶ್ರೀ ನಿರಂಜನಾದಿತ್ಯ ತನಯ!!!
ದೇವರಿಗೆ ಗೊತ್ತೇನು ಕೊಡ್ಬೇಕೆಂತ! (ಅ)
-ವನ ನಂಬಿದವರ್ಗೆಶ್ವರ್ಯನಂತ! (ವೈ)
-ರಿಗಳು ಅವನಿಗೆ ಪಾದಾಕ್ರಾಂತ! (ಮಿ)
-ಗೆ ಶಾಂತಿ ಕುಸುಮವಾಗಿ ವಸಂತ!
ಗೊಲ್ಲ ಬಾಲನ ಕತ್ತ ವೈಜಯಂತ! (ಚಿ)
-ತ್ತೇಕಾಗ್ರತೆಯಿಂದಪ ಬಲವಂತ! (ತ)
-ನು, ಮನ, ಧನಾರ್ಪಣೆಯಿಂದ ಸಂತ!
ಕೊಳೆ ಮನವ ತೊಳೆದ ಧೀಮಂತ! (ಬಿ)
-ಡ್ಬೇಕು ದುಸ್ಸಂಗವೆಂಬ ಗುಣವಂತ! (ಬೇ)
-ಕೆಂದಾವುದೂ ಬಯಸದ ಶ್ರೀಮಂತ! (ಆ)
-ತ ನಿರಂಜನಾದಿತ್ಯಾನಂದಾನಂತ!!!
ಮೂರು ಮೂರ್ತಿಯಾದೊಬ್ಬಗೆ ಮೂರು ಹಾರ! [ತೋ]
-ರುತಿಹನೆಲ್ಲರಿಗೆ ಕೃಪೆಯಪಾರ!
ಮೂರು ಲೋಕಗಳಲ್ಲಿವನ ಸಂಚಾರ! (ಕಾ)
-ರ್ತಿಕೇಯ ತಾನಾಗಿರುವಾ ಗುರುವೀರ!
ಯಾದವೇಂದ್ರನಾಗಿರ್ಪಾ ಕುಂಜವಿಹಾರ! (ಬಂ)
-ದೊದಗುವರಿಷ್ಟ ಹರಾ ವಿಘ್ನೇಶ್ವರ! (ಒ)
-ಬ್ಬನೇ ದೇವ ಜಗಕ್ಕೆಂಬಾ ನಿರ್ವಿಕಾರ!
ಗೆಳೆಯನೆಲ್ಲರಿಗಾಗಿ ಮಿತ್ರಾಕಾರ! (ಮಾ)
-ಮೂಲಿನಂತೆ ತಾನಿರುತ್ತ ನರಾಕಾರ! (ಮ)
-ರುತಾತ್ಮಜನಾಗೀತ ಮಾರುತ್ಯಾಕಾರ! (ಮ)
-ಹಾಬಲೇಶ್ವರನಾಗಿವ ಲಿಂಗಾಕಾರ! (ಮಾ)
-ರಹರ ಶ್ರೀ ನಿರಂಜನಾದಿತ್ಯಾಕಾರ!!!
ದರ್ಶನಕ್ಕಾಮೇಲೆ ಸಿದ್ಧವಾಗು!
ಹಾದಿಯುದ್ದ ನೋಡಿ ಮುಂದೆ ಸಾಗು!
ಕಿರಿ, ಹಿರಿಯರಿಗೆಲ್ಲಾ ಬಾಗು!
ಕಷ್ಟಕ್ಕೆಲ್ಲರಿಗೂ ನೆರವಾಗು! (ತ)
-ಕ್ಕ ಪರಿಹಾರ ತೋರ್ಪವನಾಗು!
ಸಿಟ್ಟಾರಲ್ಲೂ ಮಾಡದವನಾಗು! (ಬ)
-ಗೆಬಗೆಯಾಸೆಗಳನ್ನು ನೀಗು! (ಅ)
-ಹೋರಾತ್ರಿ ಗತಿ ನೀನೆಂದು ಕೂಗು! (ಆ)
-ಗು ನಿರಂಜನಾದಿತ್ಯನಂತಾಗು!!!
-ದೇ ಯಾತ್ರೆಯಾತುರೆನ್ನುವುದು! (ತ)
-ನುವಿಗಾಯಾಸದಾಗಿಹುದು!
ಭಯವದು ತಂದೊಡ್ಡುವುದು! (ಗ)
-ರ್ಭಕ್ಕೂ ದಕ್ಕೆಯುಂಟಾಗುವುದು! (ಮೇ)
-ರೆ ಈರಿ ಮೋಟಾರೋಡುವುದು! (ತ)
-ನ್ನುದ್ಧಾರದರಿವೆಲ್ಲಿಹುದು? (ಸಾ)
-ವು ಬೆನ್ನ ಹಿಂದೆ ಕಾದಿಹುದು (ಇ)
-ದು ನಿರಂಜನಾದಿತ್ಯಗಾಗ್ದು!!!
ಮೇಲ್ಪುಂಕ್ತಿಯಕ್ಷರವೆಣ್ಸಿಕೋ! [ಶಿ]
-ಲ್ಪಕಾರಪ್ಪನನ್ನು ಸ್ಮರಿಸ್ಕೋ! (ಪ)
-ಕ್ತಿಲೆಕ್ಕ ಮನದಲ್ಲಿರ್ಸಿಕೋ! (ನ್ಯಾ)
-ಯವಾಗಿರ್ಪ ಪದ ಜೋಡ್ಸಿಕೋ! (ಪ)
-ಕ್ಷ ಭಾವನೆಯಿಂದ ಬಿಡ್ಸಿಕೋ! (ವ)
-ರ ಗುರುಕೃಪೆ ಸಂಪಾದ್ಸಿಕೋ! (ಸೇ)
-ವೆಗೋಸ್ಕರ ಜೀವವಿರ್ಸಿಕೋ! (ದ)
-ಣ್ಸಿ ಸಾಯ್ಸದಾಪ್ತರನ್ನಾರ್ಸಿಕೋ! (ಅ)
-ಕೋ, ನಿರಂಜನಾದಿತ್ಯೆನ್ಸಿಕೋ!!!
-ಷ್ಟು ಕಷ್ಟವೇನಾಗಿದೆ ಪ್ರೇಮಿ?
ದಿಕ್ಕೇ ತೋಚದಾಗಿದೆ ಸ್ವಾಮಿ!
ನಗ್ನಗುತ್ತಿರಬೇಕು ಪ್ರೇಮಿ! (ಭಾ)
-ವೀ ಜೀವನವದೆಂತು ಸ್ವಾಮಿ?
ಪರಮಾತ್ಮನ ನಂಬು ಪ್ರೇಮಿ! (ಮಿ)
-ಥ್ಯ, ಸತ್ಯದರ್ಥವೇನು ಸ್ವಾಮಿ?
ಸ್ವಾಮಿಯೊಬ್ಬನೇ ಸತ್ಯ ಪ್ರೇಮಿ! (ಪ್ರೇ)
-ಈ ನಿರಂಜನಾದಿತ್ಯ ಸ್ವಾಮಿ!!!
-ಜೂ, ಬಾಜೂ ಸಿಕ್ಕುವುದಾ ಹಣ್ಣು! (ವ)
-ರಗುರುದತ್ತಗಿಷ್ಟಾ ಹಣ್ಣು! (ಸಾ)
-ವೊಂದ ತಪ್ಪಿಸದಾವ ಹಣ್ಣು!
ದೊರೆ ಮೇಲೂ ಯಮನ ಕಣ್ಣು! (ಸು)
-ಳ್ಳೆಲ್ಲವನ್ನೂ ಸುಡ್ವುದಾ ಕಣ್ಣು! (ಭ)
-ಯಪಡ್ವುದನಂತಗಾ ಕಣ್ಣು!
ಹರಿನಾಮನಂತನಾ ಕಣ್ಣು! (ಹ)
-ಣ್ಣು, ನಿರಂಜನಾದಿತ್ಯಾಗುಣ್ಣು!!!
-ರ್ಶವಾದಾಗಾನಂದದಿಂದ ಗೈವೆ!
ನನ್ನಾನಂದಾಮೇಲೆಲ್ಲರಿಗೀವೆ!
ವಿಧಿವಶಳಾಗೀಗ ನಾ ನೋವೆ! (ಹೊ)
-ತ್ತಾಯ್ತೆಂದವನಂದಾಗ ನಾ ಸಾವೆ! (ತ್ಯಾ)
-ಗಾನಂದವೀಗನುಭವಿಸುವೆ!
ತಪ್ಪೊಪ್ಪನ್ನವನಿಗೊಪ್ಪಿಸುವೆ! (ಮ)
-ನಸ್ಸಿಗದನ್ನೀಗಾಜ್ಞಾಪಿಸುವೆ!
ಸೇರುವವರೆಗೆಲ್ಲಾ ಬರೆವೆ! (ಧ)
-ವೆ, ನಿರಂಜನಾದಿತ್ಯಗಾಗಿರ್ವೆ!!!
-ನುಗ್ರಹಕಾರಿ ಗಾಯತ್ರೀ ಶಕ್ತಿ! (ಉ)
-ಗ್ರ ತಪಸ್ಸಿಗೊಲಿವುದಾ ಶಕ್ತಿ! (ಆ)
-ಹಿತವೆಂದಿಗೂ ಮಾಡದಾ ಶಕ್ತಿ! (ಪು)
-ಸಿ ಮಾತುಗಳನ್ನೊಪ್ಪದಾ ಶಕ್ತಿ!
ಜ್ಞಾನ ನಿಧಿಯಾ ವಿಮಲ ಶಕ್ತಿ!
ಪದಕೆರಗಿ ಪಡೆಯಾ ಶಕ್ತಿ!
ಕರುಣಾಮಯಿಯಾ ದಿವ್ಯ ಶಕ್ತಿ!
ಶರಣರ ಪೊರೆವುದಾ ಶಕ್ತಿ! (ಶ)
-ಕ್ತಿ, ನಿರಂಜನಾದಿತ್ಯಾನಂದೋಕ್ತಿ!!!
-ಸಿದ ಹೊಟ್ಟೆಗಿದೊಳ್ಳೆಯೂಟ!
ಮಲಬದ್ಧ ಮಾಡದೀ ಊಟ! (ಬೊ)
-ಜ್ಜಿಳಿಸಲಿಕ್ಕಿದುತ್ತಮೂಟ! (ಬ)
-ಗೆಬಗೆಯೂಟ ಬಹು ಕಾಟ!
ರೊಟ್ಟಿ ಜಿಡ್ಡಲ್ಲಿ ಬೆಂದ್ರೆ ಕಾಟ! (ಗ)
-ಟ್ಟಿ ಕೆಂಡದ ರೊಟ್ಯುತ್ತಮಮೂಟ! (ಸಾ)
-ಯೂಜ್ಯಕ್ಕೆ ಬೇಕು ಯೋಗದೂಟ! (ಊ)
-ಟ ನಿರಂಜನಾದಿತ್ಯ ನೋಟ!!!
-ತ್ಯಕ್ಕೆಂದಿಗೂ ಮರಣವಿಲ್ಲ! (ಧ)
-ಕ್ಕೆ ಭಕ್ತನಿಗಾಗುವುದಿಲ್ಲ!
ಸಂದೇಹ ಬಿಟ್ಟುಬಿಡಿರೆಲ್ಲ!
ಕೋತಿ ಮನವ ಕಟ್ಟಿರೆಲ್ಲ!
ಚರಾಚರಾತ್ಮಾರಾಮನೆಲ್ಲ!
ವೇದ, ವೇದಾಂತಾರ್ಥವಿದೆಲ್ಲ!
ನಿತ್ಯಾನುಷ್ಠಾನ ಮಾಡಿರೆಲ್ಲ! (ಬ)
-ಲ್ಲ ನಿರಂಜನಾದಿತ್ಯನೆಲ್ಲ!!!
ಳಬಳಿಗೇನು ಹೇಳ್ಲಮ್ಮಾ?
ಹಾಡಿಗದಿರ್ಲೇ ಬೇಕಮ್ಮಾ!
ಕಷ್ಟಪಟ್ಟು ಕಲಿಯಮ್ಮಾ!
ಬೇಸರ ಪಡಬೇಡಮ್ಮಾ! (ಬೇ)
-ಡ್ವೇ ಪಾಠ ನಿನಗೀಗಮ್ಮಾ?
ನಗುನಗುತ ಹಾಡಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಮ್ಮಾ!!!
-ನದಾಸೆಯೆಂಬುದೊಂದು ಮಹಾ ರೋಗ!
ದಿವ್ಯ ಜೀವನಕ್ಕೆ ವೈರಿಯಾ ರೋಗ! (ಮಾ)
-ನವಗೆ ಬೇಕೀಗ ವಿಷಯ ಭೋಗ! (ತ)
-ಕ್ಕೊಂಬ ಸಾಲ ಹೆಚ್ಚಾಗಿ ಮನೋರೋಗ!
ದೊಂಬಿ, ದರೋಡೆಗೆ ಕಾರಣಾ ರೋಗ!
ದುರ್ಬುದ್ಧಿಯಿಂದಾಗ್ವುದು ದುಷ್ಟಯೋಗ!
ಹೊಸ ಹೊಸಾಸೆಯಿಂದಾಪ್ತ ವಿಯೋಗ!
ಸಚ್ಚಿದಾನಂದಕ್ಕಾಗೈಹಿಕ ತ್ಯಾಗ!
ರೋಗ ಮುಕ್ತನಾದವ ಮಹಾ ಭಾಗ! (ರೋ)
-ಗ, ನಿರಂಜನಾದಿತ್ಯನಿಲ್ಲದಾಗ!!!
ಇಷ್ಟೂಟ ಮಾಡ್ಯೆಷ್ಟೋ ವರ್ಷವಾಯ್ತು! [ಎ]
-ಷ್ಟೂರು ಸುತ್ತಿದ್ರೂ ಕಷ್ಟ ಹೆಚ್ಚಾಯ್ತು! (ಕೂ)
-ಟ, ನೋಟದಿಂದ ಪೇಚಾಟವಾಯ್ತು!
ಮಾತ್ಕತೆಯಿಂದ ಹೊತ್ತು ಹಾಳಾಯ್ತು! (ಕೂ)
-ಡ್ಯೆಲ್ಲರೊಡನಾಡ್ಯಪಮಾನಾಯ್ತು! (ಅ)
-ಷ್ಟೋತ್ತರ ಕೇಳಿ ದೃಷ್ಟಿ ತೆರೆಯ್ತು!
ವರ ಗುರುವೇ ಗತಿಯೆಂದಾಯ್ತು (ಹ)
-ರ್ಷ ಮನಸ್ಸಿಗೆ ಸಾಕಷ್ಟುಂಟಾಯ್ತು!
ವಾದ, ವಿವಾದಗಳ್ಬೇಡವಾಯ್ತು! (ಆ)
-ಯ್ತು ನಿರಂಜನಾದಿತ್ಯಾನಂದಾಯ್ತು!!!
-ದಮತಿ ನೀನಲ್ಲವೆಂದಂದನಿಂದು! (ಹ)
-ರನ ಪ್ರಿಯ ಪುತ್ರ ನೀನೆಂದನಿಂದು!
ವಾಸುದೇವ ನಿನ್ನಾಪ್ತನೆಂದನಿಂದು! (ಯೋ)
-ಗಿರಾಜ ಮುರುಗ ನೀನೆಂದನಿಂದು!
ಬಹುಶೇಷ್ಠವೀ ನಾಮವೆಂದನಿಂದು!
ರೆಪ್ಪೆ ತೆರ್ದಪ್ಪನ ನೋಡೆಂದನಿಂದು!
ಸಿದ್ಧಿಗಳು ನಿನಗೇಕೆಂದನಿಂದು!
ದತ್ತ ಸ್ವರೂಪ ನಿನ್ನದೆಂದನಿಂದು!
ನಿಂದಾ ಸ್ತುತಿವಗಿಷ್ಟವೆಂದನಿಂದು! (ಇ)
-ದು, ನಿರಂಜನಾದಿತ್ಯನೆಂದನಿಂದು!!!
ಮರಳಿತು ಸ್ವಸ್ಥಾನಕ್ಕೆ ಲೇಖನಿ! [ವಿ]
-ರಮಿಸಿತಾಮೇಲಾ ಪ್ರಿಯ ಲೇಖನಿ! (ಹೇ)
-ಳಿತು ತನ್ನ ಕಥೆಯನ್ನಾ ಲೇಖನಿ! (ಮಾ)
-ತು ಮಿತ ತನಗೆಂದಿತಾ ಲೇಖನಿ!
ಸ್ವಸ್ಥಚಿತ್ತ ತಾನೆಂದಿತಾ ಲೇಖನಿ!
ಸ್ಥಾನ ಶ್ರೀಪಾದವೆಂದಿತಾ ಲೇಖನಿ! (ಮೌ)
-ನದಿಂದ ಸೇವೆಯೆಂದಿತಾ ಲೇಖನಿ! (ಅ)
-ಕ್ಕೆ, ಸುಖವೆಲ್ಲಕ್ಕೆಂದಿತಾ ಲೇಖನಿ!
ಲೇಶವೂ ಸುಳ್ಳಾಡೆಂದಿತಾ ಲೇಖನಿ!
ಖಗ ಬಲ್ಲದನ್ನೆಂದಿತಾ ಲೇಖನಿ!
ನಿಧಿ, ನಿರಂಜನಾದಿತ್ಯ ಲೇಖನಿ!!!
-ರವರಿಗಿದರಿಂದೊಂದಾಕರ್ಷಣ!
ಬೇಜಾರಿಲ್ಲದಾಗುವುದು ಪ್ರಯಾಣ!
ಕೆಂಗಣ್ಣನೊಲುಮೆಯಿಂದ ರಕ್ಷಣ!
ದೀನದಾಸರಿಗವ ಪಂಚಪ್ರಾಣ! (ಕಾ)
-ಸ್ಗೊಂದು ದೋಸೆಯಂತಲ್ಲವನ ಋಣ! (ಬಿ)
-ಡದೇ ಮಾಡವನ ಗುಣ ಗ್ರಹಣ!
ನಾಮಜಪದಿಂದಾಗ್ಬೇಕಾರೋಹಣ! (ಆ)
-ರಾಮದಿಂದಾಗ್ವನಾಗ ಶಿವಗಣ! (ಭ)
-ಯ ತಪ್ಪಿ ನಿಲ್ಲುವುದಾಗ ಭ್ರಮಣ! (ತಾ)
-ಣ, ನಿರಂಜನಾದಿತ್ಯ ರಾಮಬಾಣ!!!
-ಣಕಿದರಾತತೀ ಭಯಂಕರ!
ಸಾಮ, ದಾನ, ಭೇದ, ದಂಡಾಕಾರ!
ಗಗನಮಣಿಯ ಸ್ನೇಹಾಪಾರ!
ರಾಮಭಕ್ತ ಆಂಜನೇಯಾಕಾರ!
ರಾಧಾರಮಣಾ ನಂದ ಕಿಶೋರ! (ನಿ)
-ಜಭಕ್ತರ ಕಷ್ಟ ಪರಿಹಾರ!
ಶೇಷಾಚಲಾದ್ರಿ ವಾಸ ಸುಂದರ!
ಖರ, ದೂಷಣಾರಿ ರಘುವೀರ! (ನಿ)
-ರತ, ನಿರಂಜನಾದಿತ್ಯಾಕಾರ!!!
-ರಣತ್ರಯ ಶುದ್ಧವಾಗ್ಬೇಕು!
ಮಾತು ಕತೆ ಕಮ್ಮಿಯಾಗ್ಬೇಕು! (ಆ)
-ತ್ಮ ತತ್ವಾರ್ಥ ತಿಳಿದಿರ್ಬೆಕು! (ಸಂ)
-ಧ್ಯಾವಂದನೆಯದಕ್ಕಾಗ್ಬೇಕು! (ಜ)
-ನಸಂಘದಿಂದ ದೂರಾಗ್ಬೇಕು!
ಮಾಲಿಕನಿಷ್ಟದಂತಿರ್ಬೇಕು! (ಮಾ)
-ಡ್ಬೇಕ್ಸತ್ಸಂಗವೆಂದರಿಯ್ಬೇಕು! (ಬೇ)
-ಕು, ನಿರಂಜನಾದಿತ್ಯಾಸ್ತಾಕ್ಕೂ!!!
-ಟ್ಟ ಹಾಗಿರಬೇಕ್ನೀನೆನ್ನುವನು!
ಕಳವಳ ಪಡ್ಬೇಡೆನ್ನುವನು! (ಎ)
-ಡೆಬಿಡದೆ ಜಪಿಸೆನ್ನುವನು! (ಸಾ)
-ಯದಿರದೀ ದೇಹವೆನ್ನುವನು! (ಅ)
-ತೀತನಾಗಿ ನಾನಾಗೆನ್ನುವನು! (ದು)
-ರ್ಮಾರ್ಗಿ ನೀನಾಗಬೇಡೆನ್ನುವನು!
ನಮಿಸು ತ್ರೀಪಾದಕ್ಕೆನ್ನುವನು! (ನೇ)
-ವೇದ್ಯವಾದನ್ನ ತಿನ್ನೆನ್ನುವನು! (ನಾ)
-ನು, ನಿರಂಜನಾದಿತ್ಯೆನ್ನುವನು!!!
-ವಬಂಧ ಹರಿದೊಗೆಯಿರಿ! (ಚಿ)
-ತ್ತೇಕಾಗ್ರತೆಗಾಗ್ದುಡಿಯಿರಿ!
ನುಡಿ, ನಡೆಯಲ್ಲೊಂದಾಗಿರಿ! (ಸಾಂ)
-ಬನ ಧ್ಯಾನ ಮಾಡುತ್ತಲಿರಿ! (ನೆ)
-ರೆಯವ್ರಲ್ಲನ್ಯೋನ್ಯವಾಗಿರಿ!
ದಿವ್ಯ ಜೀವನ ನಡೆಸಿರಿ! (ತ)
-ದ್ದೀಪ್ಸಿತಾತ್ಮಾರ್ಥ ಸಾಧಿಸಿರಿ! (ಗು)
-ರಿ ನಿರಂಜನಾದಿತ್ಯ ಹರಿ!!!
ಏನಾದ್ರೂ ತಿನ್ನುತ್ತಿರುವುದೇಕೆ? (ಅ)
-ನಾರೋಗ್ಯವಾದಾಗಳುವುದೇಕೆ? (ತ)
-ದ್ರೂಪ ಚಿಂತನೆ ಬೇಕಾನಂದಕ್ಕೆ! (ಸ)
-ತಿ, ಸುತರೊದಗರು ದುಃಖಕ್ಕೆ (ಹೊ)
-ನ್ನು, ಮಣ್ಣುಗಳಾಸೆ ಪತನಕ್ಕೆ! (ಬಿ)
-ತ್ತಿದುದೇ ಬರುವುದು ಫಲಕ್ಕೆ! (ನೀ)
-ರು, ಗೊಬ್ಬರದ ನೆರಬದಕ್ಕೆ! (ಕಾ)
-ವು ಹೆಚ್ಚಾದರೆ ವಿನಾಶದಕ್ಕೆ!
ದೇವ್ರ ಬೈದು ಫಲವಿಲ್ಲದಕ್ಕೆ! (ಶಂ)
-ಕೆ, ನಿರಂಜನಾದಿತ್ಯನಲ್ಲೇಕೆ???
ಬಿಡ್ಬೇಕೆಲ್ಲಾ ಭಾರವನಿಗಯ್ಯಾ! (ಕುಂ)
-ದನ್ನವನಲ್ಲೆಣಿಸಬಾರ್ದಯ್ಯಾ! (ಅ)
-ವನ ಸ್ವರೂಪವೇನೆಂದರ್ಯಯ್ಯಾ!
ಹುಂಬ್ತನದರಿಂದ ನಾಶವಯ್ಯಾ! (ಬೆಂ)
-ಬಲವನದಿದ್ದೇ ಇದೆಯಯ್ಯಾ!
ನಾಶವಿಲ್ಲದಾತ್ಮ ನೀನಾಗಯ್ಯಾ! (ಜಂ)
-ಗಮ, ಸ್ಥಾವರಾತ್ಮನವನಯ್ಯಾ!
ನಶ್ವರವೀ ಸ್ಥೂಲ ರೂಪವಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಮೃತಯ್ಯಾ!!!
-ರೆದೊರೆದು ತೆರೆ ಹರಿದೆ!
ಬರೆದೊರೆದಂತಿದ್ದದಾದೆ! (ಹೊ)
-ರೆಯ ಹೊರಲು ಶಕ್ತನಾದೆ!
ದುಡುಕದಿರುವವನಾದೆ!
ಬಟ್ಟೆ, ಹೊಟೆಷ್ಟ ಬಿಟ್ಟವ್ನಾದೆ! (ಕು)
-ರಿ ನರಿಗೂ ಬೇಕಾದವ್ನಾದೆ! (ಸ)
-ದಾನಂದ ನಂದಕಂದನಾದೆ! (ತಂ)
-ದೆ, ನಿರಂಜನಾದಿತ್ಯಾನಾದೆ!!!
ಏಕಾದಶೀ ಸೇವೆಯಿಂದ ಶತ್ರು ಸಂಹಾರ! (ಏ)
-ಕಾಗ್ರಚಿತ್ತದಿಂದರಿಷ್ಟಗಳ್ಪರಿಹಾರ!
ದತ್ತಭಕ್ತಿಯಿಂದರ್ಯತಕ್ಕ ವಿಚಾರ! (ವ)
-ಶೀಕರವನಿಗೆಲ್ಲಾ ಲೋಕ ವ್ಯವಹಾರ!
ಸೇನೆಯವನದು ಮಾನವಗಗೋಚರ! (ಸಾ)
-ವೆನಗಿಲ್ಲವೆಂಬ ಸದ್ಗುರು ಮಹಾವೀರ! (ಬಾ)
-ಯಿಂದೆನ್ನ ದರ್ಶನಕ್ಕೆಂಬಾ ಕರುಣಾಕರ! (ಕಂ)
-ದಮ್ಮಗಳು ನೀವೆನಗೆಂಬಾ ಹರಿಹರ!
ಶಮೆ, ದಮೆಯಭ್ಯಾಸದಿಂದತ್ಯುಪಕಾರ! (ಶ)
-ತ್ರುಗಳಬ್ಬರಾರ್ಭಟಗಳೆಲ್ಲಾ ನಿಸ್ಸಾರ!
ಸಂಯಮಶಕ್ತಿಯ ಮಹಿಮೆ ಅತ್ಯಪಾರ! (ದೇ)
-ಹಾಭಿಮಾನ ಸುಟ್ಟಾ ಶಕ್ತ್ಯೇಕಾದಶ್ಯಾಕಾರ! (ವ)
-ರಗುರು ನಿರಂಜನಾದಿತ್ಯಾನಂದಾಕಾರ!!!
ಉಪವಾಸ ಮಾಡದೆ ಗತ್ಯಂತರವಿಲ್ಲ! (ನೆ)
-ಪಮಾತ್ರಕ್ಕೇನಾದ್ರೂ ತಿಂದ್ರೂ ಪರವಾ ಇಲ್ಲ!
ವಾಸನೆ ಹೊಟ್ಟೆಯದು ಹೋಗಲೇಬೇಕೆಲ್ಲ!
ಸಡಿಲ್ಪಿಟ್ರೆ ಮನಸ್ಸ ಉಳಿಗಾಲವಿಲ್ಲ!
ಮಾಯಾಜಾಲ ಕತ್ತರಿಸ್ಬೇಕ್ವಿವೇಕಿಗ್ಳೆಲ್ಲ! (ಒ)
-ಡನಾಡ್ಬೇಕು ಸಾಧು, ಸತ್ಪುರುಷರಲ್ಲೆಲ್ಲ!
ದೆವ್ವಗಳಲ್ಲಿ ನಂಬಿಗೆ ಬಿಡಬೇಕೆಲ್ಲ! (ತ್ಯಾ)
-ಗಬುದ್ದಿಯಿಂದ ನೆಮ್ಮದಿ! ಸಂಶಯವಿಲ್ಲ! (ಅ)
-ತ್ಯಂತೋಪಕಾರಿ ಯೋಗಾಭ್ಯಾಸ, ಮಾಡಿರೆಲ್ಲ!
ತತ್ವ ಚಿಂತನೆಗೆ ದಾರಿಯಾಗ್ವುದಿದೆಲ್ಲ! (ವ)
-ರಗುರುಸೇವೆ ತಪ್ಪದೇ ಮಾಡಬೇಕೆಲ್ಲ!
ವಿಘ್ನಗಳನ್ನವನೇ ತಪ್ಪಿಸುವನೆಲ್ಲ! (ಸೊ)
-ಲ್ಲ ನಿರಂಜನಾದಿತ್ಯನದ್ದು ಕೇಳಿರೆಲ್ಲ!!!
-ಕ್ಷಾಧ್ವರವಾಗ ಧ್ವಂಸಾಗ್ಬೇಕು! (ತಾ)
-ಯಿ ಪಾರ್ವತಿಯಾಗ್ಜನಿಸ್ಬೇಕು! (ಫ)
-ಣೀಶನೆಂಬ ಮಗನಾಗ್ಬೇಕು! (ಯೋ)
-ಗಾರೂಢನಿವನಾಗಿರ್ಬೇಕು! (ಬಾ)
-ಳಿನ ಬೆಳಕವ್ನಿಂದಾಗ್ಬೇಕು!
ಬೀಜ ಸಂಸಾರದ್ದಳಿಯ್ಬೇಕು! (ಬೀ)
-ಸೆಕಾ ಗಾಳಿ ಎಲ್ಲೆಲ್ಲೆನ್ಬೇಕು! (ಟಾ)
-ಕು ನಿರಂಜನಾದಿತ್ಯಾಗ್ಬೇಕು!!!
ನಿನಗೆ ಬೇಕಾದದ್ದು ನಿನ್ನಲ್ಲೇ ಇದೆ! [ಅ]
-ನಗತ್ಯವಾದದ್ದು ಬಿಡಬೇಕಾಗಿದೆ! (ಹೊ)
-ಗೆ ಕಣ್ಣೀರಿಗೆ ಕಾರಣವೆನಿಸಿದೆ!
ಬೇಗ ಬೆಂಕಿಯನ್ನುರಿಸಬೇಕಾಗಿದೆ!
ಕಾರ್ಯತತ್ಪರನಾಗ್ಧೆ ಕಷ್ಟವಾಗಿದೆ! (ಸೌಂ)
-ದರ್ಯಕ್ಕೆ ಮನಸೋತು ಸೋಲುಂಟಾಗಿದೆ! (ಸ)
-ದ್ದು ಮಾಡದೆ ಮೆದ್ದು ಮದ್ದಾನೆಯಾಗಿದೆ!
ನಿನ್ನ ನೀನರಿಯದನ್ಯಾಯವಾಗಿದೆ! (ಉ)
-ನ್ನತಶಿಖರದಿಂದ್ಬಿದ್ದು ನೋವಾಗಿದೆ! (ಇ)
-ಲ್ಲೇ ನನ್ನ ಸ್ಥಾನವೆಂಬಜ್ಞಾನ ಮುಚ್ಚಿದೆ!
ಇಲ್ಲಿಂದೆದ್ದು ಮೇಲಕ್ಕೇರಬೇಕಾಗಿದೆ! (ತಂ)
-ದೆನಿರಂಜನಾದಿತ್ಯನಾಗ್ಬೇಕಾಗಿದೆ!!!
-ನ್ನು ಬಿಡದೆ ಕಾಯ್ವ ನೀನು ಧಣಿ!
ಪರಮಾರ್ಥ ಸಂಪತ್ತಿನ ಗಣಿ!
ದೇಹ ನಾನೆಂಬ ನಾನೊಂದು ಗಿಣಿ!
ಶಕ್ತಿ ಪಾದಕ್ಕೆ ಭಕ್ತಿ ಸಾಂಬ್ರಾಣಿ! (ಇ)
-ಕ್ಕೆ, ಉಕ್ಕಿ ಹರಿದುದಂತರ್ವಾಣಿ!
ನಾನಾದೆ ಆಸ್ತಿಕ ಶಿರೋಮಣಿ! (ಅ)
-ನುಪಮಾತ್ಮ ಶಕ್ತಿ ನಾರಾಯಣಿ!
ಋಕ್ಸಾಮಾದಿ ವೇದ ಸಾರಾ ವಾಣಿ! (ರಾ)
-ಣಿ, ನಿರಂಜನಾದಿತ್ಯ ಗೀರ್ವಾಣಿ!!!
ತುಳಸೀಮಾಲಾಧರಾ ಮಾಧವಾ! (ಬಾ)
-ಳಿನ ಸರ್ವಸ್ವ ನೀನೇ ಭೂಧವಾ! (ದಾ)
-ಸಿ ಈರೋದ್ಧಾರ ನೀ ರಾಧಾಧವಾ!
ಕೊಡೆನಗೆ ಸದ್ಬುದ್ಧಿ ಯಾದವಾ! (ಕೊ)
-ಳ್ಳೋ ನೀನೆನ್ನ ಸೇವೆ ವಾಸುದೇವಾ!
ಮರೆಸೀಗ ನೀನೆನ್ನಾಯಾಸವಾ!
ಹಾಲ್ಮೊಸರ್ನೀಡೆನಗೂ ಕೇಶವಾ! (ಪ)
-ದೇಪದೇನ ಹೇಳ್ಲೆನ್ನ ಕಷ್ಟವಾ? (ಈ)
-ವಾ ನಿರಂಜನಾದಿತ್ಯಾಭೀಷ್ಟವಾ!!!
-ಮ್ಮ ಸ್ವಾರ್ಥ ಬಿಟ್ಟವರ್ಯಾರಿಹರು!
ನಂಬಿದವರ್ಧನ್ಯರಾಗುವರು? (ವೃ)
-ಥಾಲಾಪಿಗಳೆಲ್ಲಾ ಸೋಲುವರು! (ಆ)
-ಪ್ತತೆಯ ಕಳೆದುಕೊಳ್ಳುವರು!
ರಿಪು ಸಮೂಹಕ್ಕಾಳಾಗುವರು!
ನ್ಯಾಯಬಾಹಿರರ್ತಾವಾಗುವರು! (ಪ)
-ರಿಪರ್ಯರಿಷ್ಟಕ್ಕೀಡಾಗುವರು! (ಅ)
-ಹರ್ನಿಶ್ಯಳಲಾರಂಭಿಸುವರು! (ಸೇ)
-ರು ನಿರಂಜನಾದಿತ್ಯಮ್ಮನೂರು!!!
ಗತ ವೈಭವದುದ್ಧಾರಮಕ್ಕೆ! (ಕಾ)
-ಳ ಸಂತೆಗಳ ನಿರ್ನಾಮಮಕ್ಕೆ!
ಮದ, ಮತ್ಸರ ವಿದೂರಮಕ್ಕೆ! (ಅ)
-ಕ್ಕೆ, ಧರ್ಮ, ಕರ್ಮದಿಂದೆಲ್ಲಮಕ್ಕೆ!
ಕರ್ತವ್ಯ ನಿಷ್ಠೆಗೆ ಸ್ಥಾನಮಕ್ಕೆ! (ನಿ)
-ರ್ನಾಮ ಜಾತಿ, ಮತ ಭೇದಕ್ಕಕ್ಕೆ! (ಛ)
-ಟ ಮಾದಕದ್ದವಸಾನಮಕ್ಕೆ! (ಲೋ)
-ಕಕ್ಕೇಕದೇವನೆಂಬರಿವಕ್ಕೆ! (ಅ)
-ಕ್ಕೆ, ನಿರಂಜನಾದಿತ್ಯಾನಂದಕ್ಕೆ!!!
-ಗ, ಸಜ್ಜನರದ್ದಾಗಿ ಸೊಗಮಕ್ಕೆ! (ಒ)
-ಳ, ಹೊರ ಶುಚಿಯಿಂದಾರೋಗ್ಯಮಕ್ಕೆ!
ಕನ್ನಡನುಡಿವೆಣ್ಣಿರಂಜೀವ್ಯಕ್ಕೆ! (ನಿ)
-ರ್ನಾಮನಾಚಾರತ್ಯಾಚಾರಗಳಕ್ಕೆ! (ಕಾ)
-ಟ ಕಾಳಸಂತೆಗಳದ್ದಂತ್ಯಮಕ್ಕೆ!
ಕರ್ತವ್ಯನಿಷ್ಠೆಯಭಿವೃದ್ಧಿಯಕ್ಕೆ!
ದೇವನೊಬ್ಬನೆಂಬ ಸುಜ್ಞಾನಮಕ್ಕೆ! (ದೇ)
-ಶ, ವಿದೇಶಗಳೈಕ್ಯ ಸ್ಥಿರಮಕ್ಕೆ! (ಅ)
-ಕರೆಯಿಂದೆಲ್ಲರಿಗಾರಾಮಮಕ್ಕೆ! (ಅ)
-ಕ್ಕೆ, ನಿರಂಜನಾದಿತ್ಯಾನಂದೆಲ್ಲಕ್ಕೆ!!!
-ಬ್ಬರಾರ್ಭಟ ಮಾಡಲೇಬೇಡ!
ಬೇರಾವ ಹವ್ಯಾಸವೂಬೇಡಾ! (ಮೃ)
-ಡನೊಡನಾಡದಿರಬೇಡ!
ನೀನೇ ನಾನಾಗದಿರಬೇಡ!
ನುಡಿದಂತಿರದಿರಬೇಡ! (ಕ)
-ಬ್ಬದಬ್ಬೆಯ ಮರೆಯಬೇಡ!
ಬೇಸತ್ತಸತ್ತಾಗಲೂ ಬೇಡ! (ಕಾ)
-ಡ, ನಿರಂಜನಾದಿತ್ಯನಾಡ!!!
-ಯ್ತೇನೊಳಗಿನ ದುರಭ್ಯಾಸ? (ಅ)
-ನವರತ ಮಾಡ್ನಿಧಿಧ್ಯಾಸ! (ಅ)
-ನುಪಮಾತ್ಮನಾಗಿ ಸನ್ಯಾಸ!
ದಿಗಂಬರನಾಗಿ ಪ್ರವಾಸ! (ನಿ)
-ನಗಾಗೀಗವ ಶ್ರೀನಿವಾಸ!
ದರ್ಶನವೀವಾ ಗಿರಿವಾಸ! (ಅ)
-ಭ್ಯಾಗತರಾದರಿಪಾ ಶ್ರೀಶ! (ದಾ)
-ಸ ನಿರಂಜನಾದಿತ್ಯ ವ್ಯಾಸ!!!
ಅತೃಪ್ತಿಯೆಂಬುದಜ್ಞಾನ ಚಿಹ್ನೆ! (ಮಾ)
-ತೃಭಕ್ತನಲ್ಲೆಲ್ಲಾ ಜ್ಞಾನ ಚಿಹ್ನೆ! (ವ್ಯಾ)
-ಪ್ತಿವಳದೆಲ್ಲೆಲ್ಲೆಂಬುದಾ ಚಿಹ್ನೆ! (“ಕಾ”)
-ಯೆಂದ ಮಾತ್ರಕ್ಕೆ ಕಾಯ್ವುದಾ ಚಿಹ್ನೆ! (ಕಂ)
-ಬುಕಂಠಿ ಮಹೇಶ್ವರಿಯಾ ಚಿಹ್ನೆ!
ದಯಾಮಯಿಯಾಕೆಂಬುದಾ ಚಿಹ್ನೆ!
ಜ್ಞಾನವೇ ಗುರುವೆಂಬುದಾ ಚಿಹ್ನೆ! (ಅ)
-ನನ್ಯ, ಭಕ್ತಿಯಿಂದಾಗ್ವುದಾ ಚಿಹ್ನೆ!
ಚಿದಾನಂದ ಪರಿಪೂರ್ಣಾ ಚಿಹ್ನೆ! (ಚಿ)
-ಹ್ನೆ, ನಿರಂಜನಾದಿತ್ಯಾತ್ಮಾ ಚಿಹ್ನೆ!!!
ಸತ್ಯಪ್ರೇಮಕ್ಕಪಚಾರವಾಗದಿರ್ಲಿ! (ಭೃ)
-ತ್ಯರಾದವರೆಲ್ಲರಿದ ಗಮನಿಸ್ಲಿ!
ಪ್ರೇತಗಳ್ತಾವಾಗಿ ಕಷ್ಟಪಡದಿರ್ಲಿ!
ಮದ, ಮತ್ಸರ ಬಿಟ್ಟನ್ಯೋನ್ಯವಾಗಿರ್ಲಿ! (ಬಿ)
-ಕ್ಕಟ್ಟುಗಳನ್ನು ಜಾಣ್ಮೆಯಿಂದ ಬಿಡಿಸ್ಲಿ!
ಪರಮಾತ್ಮನಲ್ಲಿ ಪೂರ್ಣ ಭಕ್ತಿಯಿರ್ಲಿ! (ಆ)
-ಚಾರ, ವಿಚಾರದಲ್ಲೆಚ್ಚರವಾಗಿರ್ಲಿ!
ರಕ್ಷಣೆ ಸದ್ಗುರುವಿನಿಂದಾಗುತ್ತಿರ್ಲಿ!
ವಾಸ ಶ್ರೀಪಾದದಡಿಯಲಾಗುತ್ತಿರ್ಲಿ! (ಸಂ)
-ಗ ದುಷ್ಟ ಜನರದ್ದಾಗದಿರುತ್ತಿರ್ಲಿ!
ದಿವ್ಯನಾಮ ಜಪ ಸತತಾಗುತ್ತಿರ್ಲಿ! (ಇ)
-ರ್ಲಿ ನಿರಂಜನಾದಿತ್ಯಾನಂದದಲ್ಲಿರ್ಲಿ!!!
ಮಾಡಿ ಮುಗಿಸಿದೆನನುಷ್ಠಾನವನ್ನು! [ನೋ]
-ಡಿದೆನವಿರಳವಾಗೀಗಪ್ಪನನ್ನು!
ಮುಗಿಲೊಳಡಗಿ ಓಡುತ್ತಿಹನನ್ನು! (ರಂ)
-ಗಿನಂಗಿಯ ಧರಿಸಿರುವವನನ್ನು!
ಸಿರಿಯರಸನಾಗಿರುವಾತನನ್ನು! (ತಂ)
-ದೆ, ತಾಯಿ ಸರ್ವರಿಗಾಗಿರ್ಪವನನ್ನು!
ನಮಿಸಿ ಸ್ಮರಿಸುವೆನಾ ಪಾದವನ್ನು! (ತ)
-ನು, ಮನ, ಧನದರ್ಪಣೆಯಿಂದದನ್ನು! (ಕಾ)
-ಷ್ಠಾದ್ಯೆಲ್ಲಾ ಚರಾಚರ ವ್ಯಾಪಕನನ್ನು! (ಅ)
-ನವರತ ಧ್ಯಾನಿಸಲ್ಭಯವೇನಿನ್ನು? (ಭ)
-ವಬಂಧನದ ಭಯವೆನಗೇನಿನ್ನು? (ಅ)
-ನ್ನು, ನಿರಂಜನಾದಿತ್ಯ ಕೃಪೆಯಿದೆನ್ನು!!!
ಗುರುಪಾದಕ್ಕೆ ಸಹಸ್ರ ನಾಮಾರ್ಚನೆ! [ಗು]
-ರುಪೂರ್ಣಿಮಾ ರಾತ್ರಿಯಲ್ಲಾಯ್ತಾ ಆರ್ಚನೆ!
ಪಾಮರ, ಪಂಡಿತರ್ಸೇರ್ಯಾಯ್ತೀ ಅರ್ಚನೆ!
ದತ್ತಾತ್ರೇಯಗೆ ಪ್ರೀತಿಯಾಯ್ತೀ ಅರ್ಚನೆ! (ಬೆ)
-ಕ್ಕೆಯ ಗಂಧವೇನಿಲ್ಲದಾಯ್ತೀ ಅರ್ಚನೆ!
ಸಕಲರಿಗಾನಂದವಾಯ್ತೀ ಅರ್ಚನೆ!
ಹರನ ಭಜನೆಯಿಂದಾಯ್ತೀ ಅರ್ಚನೆ! (ಮೊ)
-ಸ್ರನ್ನಾದಿ ನೇವೇದ್ಯದಿಂದಾಯ್ತೀ ಅರ್ಚನೆ!
ನಾರಿಯರಿಂದೊಡಗೂಡ್ಯಾಯ್ತೀ ಅರ್ಚನೆ!
ಮಾಲೆಗಳರ್ಪಣೆಯಿಂದಾಯ್ತೀ ಅರ್ಚನೆ! (ವ)
-ರ್ಚಸ್ಸಿಗೆ ಕಳೆ ಕೊಟಆಂತಾಯ್ತೀ ಅರ್ಚನೆ! (ಮ)
-ನೆ, ನಿರಂಜನಾದಿತ್ಯ ನಿಲಯ ತಾನೇ???
-ವನನುದಿನ ಧ್ಯಾನ ನಿಷ್ಕಾಮ!
ರಾಣಿ ದಾಕ್ಷಾಯಿಣಿಯಾತ್ಮ ಪ್ರೇಮ!
ಮಗನಿಗೆ ಆಯ್ತು ಗುಹ ನಾಮ!
ನಾದ, ಬಿಂದು, ಕಲಾತೀತಾರಾಮ! (ಯೋ)
-ಗಿ ಜೀವನವನ ನಿತ್ಯ ನೇಮ!
ಶಶಿಯ ಹೊತ್ತು ತಾನಾದ ಸೋಮ! (ಭ)
-ವಪಾಶ ಬಂಧಿತರ್ಗಿತ ಯಮ!
ಕಾರುಣ್ಯಮೂತೀಯಾಗಿ ಶ್ರೀರಾಮ! (ರಾ)
-ಮ, ಶ್ರೀ ನಿರಂಜನಾದಿತ್ಯ ಶ್ಯಾಮ!!!
ಗುಂಡಿಗೆ ತನ್ಕ ಗಂಡು, ಹೆಣ್ಣಾಗುಂಡಿ! (ನ)
-ಡೀಲಿಕ್ಕಾಗ್ದಡಿಗೆಡುವ ತನ್ಕುಂಡಿ! (ಹಾ)
-ಗುಂಡ್ಹೀಗುಂಡಿ, ಗುಂಡಿ ಸೇರ್ವಾಗ್ಲೂ ಉಂಡಿ! (ನಾ)
-ಡಿನಲ್ಲೂ ಉಂಡಿ, ಕಾಡಿನಲ್ಲೂ ಉಂಡಿ!
ಹೊಡೆದಾಡಿ ಗಂಡಾಗುಂಡಿ ಮಾಡ್ಯುಂಡಿ!
ರಕ್ಕಸನಾಗಿ ಕಕ್ಕಸ್ಸೆಲ್ಲಾ ಉಂಡಿ!
ಗೊಬ್ಬರಗುಂಡಿಯ ಗಬ್ಬನ್ನೂ ಉಂಡಿ! (ಹ)
-ಳತು, ಹುಳತದ್ದೆಲ್ಲವನ್ನೂ ಉಂಡಿ!
ಗುಂಡಾಗಿ ಬೆಳೆದು ಸೇರುವುದ್ಗುಂಡಿ! (ಹಿ)
-ಡಿ, ನಿರಂಜನಾದಿತ್ಯಾನಂದನಡಿ!!!
ಧಿಕ್ಕಾರಾರನ್ನೂ ಮಾಡದಿರ್ಪುದೇ ಗುಣ!
ಕಾಲಚಕ್ರದಡಿಯಲ್ಲೆಲ್ಲವೂ ತೃಣ! (ವ)
-ರ ಗುರುಭಕ್ತನಾಗಿರ್ಪವನೇ ಜಾಣ!
ತತ್ವಾರ್ಥ ತಿಳಿಯದವನೊಬ್ಬ ಕೋಣ! (ತ)
-ಪ್ಪಿ ನಡೆವವನೆಂದಿಗೂ ಸುಖ ಕಾಣ! (ಕ)
-ದನ ವಿರಾಮಕ್ಕೆ ಸುಜ್ಞಾನವೇ ತ್ರಾಣ! (ಪ)
-ರರಾಸ್ತಿಯಾಸೆಯಿಂದುಳಿಯದು ಪ್ರಾಣ! (ಕ)
-ರ, ಚರಣಕ್ಕಾಳಾದ್ರೆ ಬುದ್ಧಿ ಭ್ರಮಣ!
ಸೂಕರನಾಗುವನು ಕಾಲ ಕ್ರಮೇಣ!
ಹೆದರದೇ ಮಾಡೀಗ ಧ್ಯಾನ ಧಾರಣ! (ತ್ರಾ)
-ಣ, ನಿರಂಜನಾದಿತ್ಯಾನಂದ ಸ್ಮರಣ!!!
ಮೂರ್ತಿಯುದ್ದೇಶ ಬಾಳಿನಾದರ್ಶಾ! (ಕೀ)
-ರ್ತಿ, ಅಪಕೀರ್ತಿಯಲಕ್ಷಾಯಾದರ್ಶ! (ಸಾ)
-ಯುಜ್ಯ ಸುಖಾನುಭವದಾದರ್ಶಾ! (ಸ)
-ದ್ದೇನಿಲ್ಲದ ಸಮರಸಾದರ್ಶ!
ಶಕ್ತಿ, ಸಾಮರ್ಥ ತೋರದಾದರ್ಶ!
ಬಾಯಿ ಮುಚ್ಚಿ ಸಹಿಸುವಾದರ್ಶ! (ಅ)
-ಳಿದ್ರೂ, ಉಳಿದ್ರೂ ಆನಂದಾದರ್ಶ!
ನಾನು, ನೀನೆಂಬುದಿಲ್ಲದಾದರ್ಶ!
ದನುಜರಲ್ಲೂ ತಾನೆಂಬಾದರ್ಶ! (ದ)
-ರ್ಶನ, ನಿರಂಜನಾದಿತ್ಯಾದರ್ಶ!!!
ಮಣ್ಣುಪಾಲು ಮಾಡಿದವರೆಲ್ಲಾ ಮಣ್ಣುಪಾಲು! (ಕ)
-ಣ್ಣು ಮುಚ್ಚಿದ ಮೇಲೆ ಹೊನ್ನು, ಹೆಣ್ಣೂ, ಮಣ್ಣುಪಾಲು!
ಪಾಲ್ಮೊಸ್ರು, ಬೆಣ್ಣೆಯುಂಡವರೆಲ್ಲಾ ಮಣ್ಣುಪಾಲು! (ಮೇ)
-ಲು, ಕೀಳೆಂದು ಜಗ್ಳಾಡಿದವರೂ ಮಣ್ಣುಪಾಲು!
ಮಾತಿನಿಂದೆಲ್ಲರ ಗೆದ್ದವರೂ ಮಣ್ಣುಪಾಲು! (ಕೂ)
-ಡಿ, ಆಡಿ, ಕುಣಿದಾಡಿದವರೂ ಮಣ್ಣು ಪಾಲು!
ದರಿದ್ರ, ಶ್ರೀಮಂತಾದಿಗಳೆಲ್ಲಾ ಮಣ್ಣು ಪಾಲು!
ವಸ್ತ್ರಾಭರಣ ಭೂಷಣವೆಲ್ಲಾ ಮಣ್ಣುಪಾಲು! (ಹ)
-ರೆಯದವರೂ ವೃದ್ಧರೂ ಎಲ್ಲಾ ಮಣ್ಣುಪಾಲು! (ಮ)
-ಲ್ಲಾನೆಂದೆಲ್ಲೆಲ್ಲೂ ಮೆರೆದವನೂ ಮಣ್ಣುಪಾಲು!
ಮಕ್ಕಳು, ಮರಿ ಮೊದ್ಲಾದವರೂ ಮಣ್ಣುಪಾಲು! (ಹ)
-ಣ್ಣು, ಹಂಪಲು ತೋಟಗಳೆಲ್ಲವೂ ಮಣ್ಣುಪಾಲು!
ಪಾಡುತ್ತ ಹರಿನಾಮ ಆಗ್ಬೇಕು ಮಣ್ಣುಪಾಲು! (ಮೇ)
-ಲು, ನಿರಂಜನಾದಿತ್ಯಾನಂದದಖಂಡ ಪಾಲು!!!
-ರ್ಶಸುಖಕ್ಕರ್ಹತೆ ಅವಗಿಲ್ಲ!
ನಡ್ತೆ ಅವನದು ಸರಿ ಇಲ್ಲ! (ಬ)
-ಲಾತ್ಕಾರದಿಂದೇನೂ ಫಲವಿಲ್ಲ!
ಭಕ್ತ ತಾನೆಂಬ ನಟನೆಯೆಲ್ಲ!
ನಿಂತ ಮನೋವೃತ್ತಿ ಅವಗಿಲ್ಲ!
ದಯೆಯವನಲ್ಲೆಳ್ಳಷ್ಟೂ ಇಲ್ಲ!
ಕರ್ಮಭ್ರಷ್ಟ ಬಾಳವನದೆಲ್ಲ! (ಮು)
-ಗಿವುದೀ ಜನ್ಮ ವ್ಯರ್ಥವಾಗ್ಯೆಲ್ಲ! (ಬ)
-ಲ್ಲ, ನಿರಂಜನಾದಿತ್ಯನಿದೆಲ್ಲ!!!
-ಲ ತೀರಿಸಲ್ತಡಾಗ್ವುದೊಂದು ಲೀಲೆ! (ಯೋ)
-ಗಾನಂದನಿಗೆಲ್ಲವೂ ಗುರು ಲೀಲೆ! (ಪ)
-ರರಿಗೆ ನೆರವಾಗ್ವುದೊಂದು ಲೀಲೆ!
ನಾಮ ರೂಪಿಯಾಗಿರ್ಪುದೊಂದು ಲೀಲೆ!
ಗುಡಿ, ಗೋಪುರವಾಸವೊಂದು ಲೀಲೆ! (ಸಾ)
-ವು, ನೋವೆಂದಳುವುದದೊಂದು ಲೀಲೆ!
ದೊಂಬರಾಟವಾಡುವುದೊಂದು ಲೀಲೆ! (ಅಂ)
-ದು, ಇಂದು, ಮುಂದೆಂಬುದದೊಂದು ಲೀಲೆ! (ಮಾ)
-ಲೀಶ್ಮಾಡ್ಸಿ ಕೊಳ್ಳುವುದೊಂದು ಲೀಲೆ! (ಲೀ)
-ಲೆ, ನಿರಂಜನಾದಿತ್ಯಾನಂದ ಲೀಲೆ!!!
ತನ್ನ ಬೆಲೆ ತಾನೇ ಕಳಕೊಂಡ ಚಿನ್ನ! (ತ)
-ನ್ನನ್ನು ಮಣ್ಣಲ್ಲಿ ಬೆರೆಸಿಕೊಂಡಾ ಚಿನ್ನ!
ಬೆಟ್ಟ, ತಿಟ್ಟುಗಳಡಿಯಲ್ಲಿದ್ದಾ ಚಿನ್ನ! (ನೆ)
-ಲೆಬಿಟ್ಟು ಹೊರಗೆ ಬರದಿದ್ದಾ ಚಿನ್ನ!
ತಾನ್ಯಾರೆಂದಾರಿಗೂ ಹೇಳದಿದ್ದಾ ಚಿನ್ನ!
ನೇತ್ರಕ್ಕಾಕರ್ಷಣೆ ನೀಡದಿದ್ದಾ ಚಿನ್ನ!
ಕಲ್ಮಷ ಬಳಿದುಕೊಂಡಿರ್ತಿದ್ದಾ ಚಿನ್ನ! (ಥ)
-ಳಥಳಿಸಿ ಹೊಳೆವಾಗಮೌಲ್ಯ ಚಿನ್ನ!
ಕೊಂಡುಕೊಳ್ಳಲಿಕ್ಕೂ ಸಿಕ್ಕದಾಗಾ ಚಿನ್ನ! (ಒ)
-ಡನಾಟೋತ್ತಮವಾಗೀಗದೊಳ್ಳೇ ಚಿನ್ನ!
ಚಿರ ಸ್ಮರಣೀಯವಾದುದೀಗಾ ಚಿನ್ನ! (ಚೆ)
-ನ್ನ, ಶ್ರೀನಿರಂಜನಾದಿತ್ಯಾನಂದ ಚಿನ್ನ!!!
ತಪ್ಪಿಗಾಗ್ಬೇಕು ಪ್ರಾಯಶ್ಚಿತ್ತ! (ಅ)
-ಪ್ಪಿ, ಅಪ್ಪನಂತಾಗ್ಬೇಕು ಚಿತ್ತ! (ತಂ)
ಗಾಳಿಯಾಗಿ ಬೀಸ್ಬೇಕಾ ಚಿತ್ತ! (ಆ)
-ಗ್ಬೇಕದ್ರಿಂದ ಪ್ರಪುಲ್ಲ ಚಿತ್ತ! (ವ್ಯಾ)
-ಕುಲವಿಲ್ಲದಿರ್ಬೇಕಾ ಚಿತ್ತ!
ಪ್ರಾಮಾಣಿಕನಾಗ್ಬೇಕಾ ಚಿತ್ತ! (ಧ್ಯೇ)
-ಯಕ್ಕನ್ಕೂಲವಾಗ್ಬೇಕಾ ಚಿತ್ತ! (ನಿ)
-ಶ್ಚಿತ ಕಾರ್ಯ ಮಾಡ್ಬೇಕಾ ಚಿತ್ತ! (ದ)
-ತ್ತ ನಿರಂಜನಾತ್ಯ ಚಿತ್ತ!!!
ದರ್ಶನಾಪೇಕ್ಷಿ ತಾನೆಂಬ ಬಾಯ್ಬಡ್ಕ!
ತಪ್ಪಿತಸ್ಥ ನಾನಲ್ಲೆಂಬ ಘಾತಕ! (ದಿ)
-ಟ್ಟಿಯವನದು ನೀಚ ಪೈಶಾಚಿಕ! (ಮ)
-ದ, ಮತ್ಸರ ತುಂಬಿರುವ ಡಾಂಭಿಕ!
ವರಭಕ್ತ ತಾನೆನ್ನುವ ಕುಹಕ! (ತಾ)
-ನೊಬ್ಬ ಸಾಧಕನೆಂಬ ಪ್ರಚಾರಕ! (ತ)
-ಬ್ಬಲಿಯ ಮೇಲ್ಕೈ ಮಾಡಿದ ಪಾತಕ!
ಕೆನೆವಾಲ ವಿಷವೆಂದ ನಿಂದಕ! (ಕೊ)
-ಡುಗೈಗೆ ಕತ್ತರಿಕ್ಕಿದ ವಂಚಕ! (ತು)
-ಕ, ನಿರಂಜನಾದಿತ್ಯಾನಂದಾತ್ಮಿಕ!!!
-ರಿಯಿಚ್ಛೆಯಂತೆಲ್ಲಾ ಆಗುತ್ತಿದೆ! (ಸ್ವೇ)
-ಚ್ಛೆಯಹಂಕಾರಡಗಿ ಹೋಗಿದೆ!
ಯಾರಲ್ಲೂ ತಪ್ಪೆಣಿಸದಾಗಿದೆ!
ವಾಙ್ಮನಸ್ಸವನಲ್ಲೊಂದಾಗಿದೆ! (ಭ)
-ಗವದ್ರೂಪವೆಲ್ಲವೆಂದಾಗಿದೆ! (ಸ)
-ಫಲವೀ ಜನ್ಮವಾಗ್ಬೇಕಾಗಿದೆ! (ಮಾ)
-ಲಿಕನಿಷ್ಟಕ್ಕೆ ಶಿರಬಾಗಿದೆ! (ಹು)
-ಸಿಯಾಸೆಗಳ ಬಿಡಲಾಗಿದೆ! (ಎ)
-ದೆ, ನಿರಂಜನಾದಿತ್ಯಗಾಗಿದೆ!!!
ಯಮಾಭ್ಯಾಸ ಬಿಟ್ಟವ ಯಮನ ಪಾಲು!
ಮನೋಜಯದಿಂದಾನಂದದಿಂದ ಬಾಳು!
ವಿಶ್ವನಾಥಗೊಪ್ಪಿಸು ನಿನ್ನ ಹವಾಲು! (ತ)
-ಲ್ಲಣವ ಕಳೆವಾ ಗುರು ಕರುಣಾಳು!
ದರ್ಶನವಾವಾಗೆಂದು ಹಾಕು ಸವಾಲು?
ಬಾಲನಾಗಿ ಕುಡಿಯುವನೆದೆ ಹಾಲು! (ಅ)
-ಳುತಳುತಲ್ಲಾಡಿಸಬೇಡ ಕೈ ಕಾಲು!
ನಿನಗಾಗದಾಗ ನರನಾಡಿ ಸೋಲು! (ಸ)
-ತ್ಯವಿದ ಪಾಲಿಸಿದವಗಿಲ್ಲ ಜೈಲು!
ಗೋಪಾಲನೊಬ್ಬನೆಲ್ಲರಿಗೆ ಕಾವಲು! (ಬೀ)
-ಳು ನಿರಂಜನಾದಿತ್ಯನಡಿಗಾವಾಗ್ಲೂ!!!
ಆತ್ಮೀಯರೆಂದಾದರಿಸಿದ್ದಾಯ್ತು! (ಬಾ)
-ತ್ಮೀದಾರರನ್ನನಾದರಿಸ್ಯಾಯ್ತು! (ಸಾ)
-ಯಲೂ ಅದಕ್ಕಾಗಿನಿರ್ಧರಾಯ್ತು! (ಯಾ)
-ರೆಂದ್ರೂ ಚಿತ್ತ ಚಂಚಲಾಗದಾಯ್ತು! (ಸ)
-ದಾ ಗುರುಧ್ಯಾನ ಮನಸ್ಸಿಗಾಯ್ತು!
ದತ್ತ ಸ್ವರೂಪದರಿವುಂಟಾಯ್ತು! (ಅ)
-ರಿಗಳ ಕಡೆಗೆ ನಿರ್ಲಕ್ಷ್ಯಾಯ್ತು!
ಸಿಕ್ಕಿದ್ದುಂಬಭ್ಯಾಸ ಸ್ಥಿರವಾಯ್ತು! (ಗು)
-ದ್ದಾಟವೆಂದೆಂದಿಗೂ ಬೇಡವಾಯ್ತು! (ಆ)
-ಯ್ತು, ನಿರಂಜನಾದಿತ್ಯಾನಂದಾಯ್ತು!!!
ರಂಗನಾಥಗವನದೇ ರಂಗು! (ಮಂ)
-ಗಳ ಮಾಳ್ಪನವ ಸರ್ವರಿಂಗು!
ನಿತ್ಯವನ ನಾಮಾಮೃತ ನುಂಗು!
ಗಾಬ್ರಿಯಿಂದಾಗಬೇಡ ಕುರಂಗು! (ವ)
-ರಗುರುವನ್ನಾಶ್ರಯಿಸಿ ತಂಗು! (ವಿ)
-ದೇಶೀ ಪದ್ಧತಿಯಿಂದಾದೆ ಪೆಂಗು! (ಅ)
-ನುಪಮಾತ್ಮನಿಗಿಲ್ಲಾವ ಡಿಂಗು! (ಸೋ)
-ಹಂ ಮಂತ್ರ ಜಪದಿಂದಾಗಾ ರಂಗು!
ಗುರು ನಿರಂಜನಾದಿತ್ಯಾ ರಂಗು!!!
-ರೋದ್ಧಾರ ಕೆಲಸ ಮಾಡುವವರೆಲ್ಲ!
ಪರಿಪರಿ ಕಾರಣ ಕೊಡುವರೆಲ್ಲ! (ಸ್ವ)
-ಕಾರ್ಯಾರ್ಥಿಯಿನ್ನೇನುತಾನೇ ಮಾಡಬಲ್ಲ? (ಪ)
-ರಹಿತೈಷಿ ಬಾಯಿಯಿಂದಾಡುವುದಿಲ್ಲ! (ಆ)
-ದಷ್ಟು ಮಾಡಿ ತೋರಿಸುತ್ತಿರುವನೆಲ್ಲ!
ಮಾಧವನಾದರ್ಶವನಲ್ಲಿಲ್ಲದಿಲ್ಲ!
ತಾಮಸವೃತ್ತಿಗಳ ಸೋಂಕವಗಿಲ್ಲ! (ದು)
-ಡುಕಿ ಯಾವುದನ್ನೂ ಮಾಡುವುದೇ ಇಲ್ಲ!
ವರ ಗುರುಭಕ್ತಿ ಜೀವಾಳವ್ನದೆಲ್ಲ! (ಕ)
-ರೆದ್ರೂ ಯಾರೊಡನೆಯೂ ಸೇರುವುದಿಲ್ಲ! (ಘು)
-ಲ್ಲ, ನಿರಂಜನಾದಿತ್ಯಗಿಷ್ಟವಿದೆಲ್ಲ!!!
ನಿಂಬೆ ಚಟ್ನಿ ಸೇರ್ಸಿ ತಿಂದೆ!
ದತ್ತನಿಷ್ಟವೆಂದು ತಿಂದೆ! (ನಿ)
-ರ್ಧರಿಸಿ, ಪ್ರಾರ್ಥಿಸಿ ತಿಂದೆ!
ದೋಷಿ ನಾನಲ್ಲೆಂದು ತಿಂದೆ! (ಆ)
-ಸೆ ನನಗಿಲ್ಲೆಂದು ತಿಂದೆ!
ತಿಂಡಿ ಪ್ರಸಾದ್ವೆಂದು ತಿಂದೆ? (ತಿಂ)
-ದೆ, ನಿರಂಜನಾದಿತ್ಯಾದೆ!!!
-ರ್ಧಾರದಂತಿದ್ದರಿನ್ನೂ ಒಳ್ಳೇದು! (ವ)
-ರಗುರುಧ್ಯಾನ ಮಾಳ್ಪುದೊಳ್ಳೇದು!
ಮಾತವ್ನದ್ಕೇಳಿದ್ರಿನ್ನೂ ಒಳ್ಳೇದು! (ಕಾ)
-ಡು, ಮೇಡ್ಗಳಿಗೋಡದಿದ್ರೊಳ್ಳೇದು! (ಆ)
-ವುದೂ ಇದ್ದಲ್ಲಾದ್ರಿನ್ನೂ ಒಳ್ಳೇದು!
ದೊಡ್ಡವನೆನಿಸಿದ್ರೊಳ್ಳೆಯದು! (ಸು)
-ಳ್ಳೆಳ್ಳೆಷ್ಟಿಲ್ಲದಿದ್ರಿನ್ನೂ ಒಳ್ಳೇದು!
ಯದುಪನ ಗೀತಾಭ್ಯಾಸೊಳ್ಳೇದು! (ಇ)
-ದು ನಿರಂಜನಾದಿತ್ಯಾಗ್ಲೊಳ್ಳೇದು!!!
ಹುಣ್ಣು ತೊಳೆದೌಷಧಿ ಹಾಕಿ ಕಟ್ಟು! (ಮ)
-ಣ್ಣು ಧೂಳೊಳಗೆ ಸೇರದಂತೆ ಕಟ್ಟು!
ತೊಳೆದ ಮೇಲೊದ್ದೆಯೊರಸಿ ಕಟ್ಟು! (ಕೊ)
-ಳೆತ ಚರ್ಮ ಕಿತ್ತೊಗೆದದ ಕಟ್ಟು!
ದೌರ್ಜನ್ಯ ತೋರದೇ ನಿಧಾನ ಕಟ್ಟು! (ವಿ)
-ಷ ಹೆಚ್ಚಿಲ್ಲ ದೌಷಧಿಯಿಟ್ಟು ಕಟ್ಟು (ಅ)
ಧಿಕಾರ ದರ್ಪ ತೋರಿಸದೇ ಕಟ್ಟು! (ಆ)
-ಹಾರ ನೇಮ ಬೇಕೆಂದು ಹೇಳಿ ಕಟ್ಟು! (ಸೋ)
-ಕಿಸ್ಬಾರದು ನೀರಾಗಾಗೆಂದು ಕಟ್ಟು!
ಕಡೆಗಾಣ್ಬಾರ್ದುಪ್ದೇಶವೆಂದು ಕಟ್ಟು! (ಕ)
-ಟ್ಟು, ನಿರಂಜನಾದಿತ್ಯನಿಗೊಕ್ಕಟ್ಟು!!!
-ನ್ನಾರಿಗೂ ಹೇಳಬಾರದದಮ್ಮಾ!
ನಂಬದವರಿಗಿಂಬಿಲ್ಲವಮ್ಮಾ! (ಮ)
-ದ, ಮತ್ಸರದ ಜಗತ್ತಿದಮ್ಮಾ! (ಮಂ)
-ದಮತಿಗೆಷ್ಟು ಹೇಳಿದ್ರೇನಮ್ಮಾ? (ನಿ)
-ಲ್ಲಿಸು ಬುದ್ಧಿ ಶ್ರೀಪಾದದಲ್ಲಮ್ಮಾ!
ನೀನಾಗ ಪರಮಪಾವ್ನೆಯಮ್ಮಾ!
ನಿನ್ನ ಸ್ವರೂಪ ನಿತ್ಯಾನಂದಮ್ಮಾ! (ಹ)
-ರ, ಹರಿ, ಬ್ರಹ್ಮಾದಿಗಳದಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯೆನೆಲ್ಲಮ್ಮಾ!!!
-ವಾಗಲೇ ಆಗಿಹೋಗ್ಲಾ ಕೆಲಸ! (ಆ)
-ಗ, ಈಗೆಂದನ್ನುವುದೆಲ್ಲಲಸ!
ಮಾತು ಹೆಚ್ಚಿದರೆಲ್ಲಾ ಹೊಲಸ! (ಆ)
-ಡದೇ ಮಾಡುವುದೆಲ್ಲಾ ಸಲೀಸ!
ಬೇಡಿ, ಕಾಡುವವ ಕಾಲಕಸ!
ಕೀಲ್ಮುರಿದ್ರೆ ಮುಂದಕ್ಕೆ ಚಲಿಸ!
ಕೆಟ್ಕಲ್ಸಗಾರಾರನ್ನೂ ಒಲಿಸ!
ಲಕ್ಷ್ಯ ತಪ್ಪಿದವ್ನೆಲ್ಲೂ ನೆಲಸ!
ಸಖ ಶ್ರೀ ನಿರಂಜನಾದಿತ್ಯೇಶ!!!
ಬಚ್ಚಲು ನೀರಿಗುಳಿಗಾಲವಿನ್ನಿಲ್ಲ! [ಮು]
-ಚ್ಚಲಾರದಿನ್ಮೇಲೆ ತೂಬಿನ ಬಾಯೆಲ್ಲ! (ಕಾ)
-ಲು, ಕೈ ತೊಳೆಯಲೀಗಡಚಣೆಯಿಲ್ಲ!
ನೀರೀಗ ಸರಾಗ ಹರಿಯದೇನಿಲ್ಲ! (ಹ)
-ರಿವ ದಾರಿಯಲ್ಲೀಗ ಹಳ್ಳ, ತಿಟ್ಟಿಲ್ಲ!
ಗುರುಚಿತ್ತಕ್ಕೆ ಯಾವುದೂ ಎದುರಿಲ್ಲ! (ಅ)
-ಳಿವುದುಳಿವುದವನಾಜ್ಞೆಯಿಂದೆಲ್ಲ!
ಗಾಳಿಗೋಪುರ ಕಟ್ಟುವಾತವನಲ್ಲ!
ಲಕ್ಷ್ಯಬಿಟ್ಟು ದೃಷ್ಟಿಚಲಿಸುವುದಿಲ್ಲ!
ವಿಶ್ವೇಶನಲ್ಲಿ ವಿಶ್ವಾಸವಿಡಿರೆಲ್ಲ! (ಸ)
-ನ್ನಿಧಾನದಲ್ಲಿ ಕಳಂಕವೇನೇನಿಲ್ಲ! (ಘು)
-ಲ್ಲ, ನಿರಂಜನಾದಿತ್ಯನ ನೋಡಿರೆಲ್ಲ!!!
-ರಮಾತ್ಮನೆಲ್ಲರಿಗೆ ಸಹಾಯ!
ದಾದಿ ಅಸುಗೂಸಿಗೆ ಸಹಾಯ! (ಸಿ)
-ರಿಸದಾ ಶ್ರೀಹರಿಗೆ ಸಹಾಯ! (ತ್ಯಾ)
-ಗ, ಯೋಗಸಾಧಕಗೆ ಸಹಾಯ! (ಈ)
-ದೆಮ್ಮೆ ಹಾಲ್ಮಾರ್ವವಗೆ ಸಹಾಯ! (ನಿ)
-ಷ್ಟುರೋಕ್ತಿ ದುಷ್ಟನಿಗೆ ಸಹಾಯ!
ಸತ್ಸಂಗ ಸಜ್ಜನಗೆ ಸಹಾಯ!
ಹಾಡು, ಪಾಡುವವಗೆ ಸಹಾಯ! (ಜೀ)
-ಯ, ನಿರಂಜನಾದಿತ್ಯಪ್ರಮೇಯ!!!
-ರ್ವನಿಗೊಂದೋರ್ವನಿಗೊಂದಾದ್ರಲ್ಪ ಸುಖ!
ಸತ್ವ ಗುಣಾಭಿವೃದ್ಧಿಯಿಂದಾತ್ಮ ಸುಖ!
ಮಾಧುರ್ಯವಿದರದೇಕರಸ ಸುಖ! (ಅ)
-ನವರತಾಭ್ಯಾಸದಿಂದಾ ಯೋಗ ಸುಖ!
ಭಿನ್ನರುಚಿಯಿಂದಾಗದಮಲ ಸುಖ! (ದೀ)
-ಕ್ಷೆಯುದ್ದೇಶ ಅಭೇದಾತ್ಮಾನಂದ ಸುಖ!
ಬಣ್ಣ ಬದ್ಲಾಯಿಸಿದರಾಗದಾ ಸುಖ!
ಹಗ್ಲಿರುಳ್ದುಡಿದ್ರುದ್ದೇಶ ಸಿದ್ಧಿ ಸುಖ! (ಹ)
-ಳಬ್ನಾದ ಮಾತ್ರಕ್ಕಾಗದು ಜ್ಞಾನ ಸುಖ!
ಸುವಿಮಲಾನಂದ ಗುರುಕೃಪಾಸುಖ!
ಖಗ ನಿರಂಜನಾದಿತ್ಯಾನಂದ ಸುಖ!!!
ಭೂಷಣ ಪ್ರದರ್ಶನಕ್ಕಲ್ಲ ಭಾಷಣ! [ದೋ]
-ಷನ್ಯರದ್ದೆಣಿಸಲಿಕ್ಕಲ್ಲ ಭಾಷಣ! (ಹ)
-ಣ ಸಂಪಾದನೆ ಮಾಡ್ಲಿಕ್ಕಲ್ಲ ಭಾಷಣ!
ಪ್ರತಿಷ್ಠೆ ಬೆಳೆಸಲಿಕ್ಕಲ್ಲ ಭಾಷಣ!
ದಯಾಶೂನ್ಯನಾಗಲಿಕ್ಕಲ್ಲ ಭಾಷಣ! (ಸ್ಪ)
-ರ್ಶಸ್ಪರ್ಶ ಭೇದ ತೋರ್ಲಿಕ್ಕಾಲ್ಲ ಭಾಷಣ!
ನಶ್ವರದಾಶಾಪೂರ್ತಿಗಲ್ಲ ಭಾಷಣ! (ಅ)
-ಕ್ಕಪಕ್ಕದ ವಿರೋಧಕ್ಕಲ್ಲ ಭಾಷಣ! (ಚಿ)
-ಲ್ಲರೆ ದೈವಕ್ಕಾಳಾಗ್ಲಿಕ್ಕಲ್ಲ ಭಾಷಣ!
ಭಾನುವಿನೊಲ್ಮೆಗಾಗ್ಯಾಗ್ಲೆಲ್ಲ ಭಾಷಣ (ದೋ)
-ಷದೂರನಾಗ್ಲಿಕ್ಕಾಗ್ಯಾಗ್ಲೆಲ್ಲ ಭಾಷಣ! (ಕಾ)
-ಣ, ನಿರಂಜನಾದಿತ್ಯನಿಂಥಾ ಭಾಷಣ!!!
-ರತರದ ತಿಂಡಿ, ತೀರ್ಥ ಸಮರ್ಪಣೆ!
ಮಾರುಹೋಗುವ ಸುಗಂಧ ಸಮರ್ಪಣೆ! (ಸೋ)
-ತ್ಮನಸ್ಸು ಮಾಡುವುದೆಲ್ಲಾ ಸಮರ್ಪಣೆ!
ನಿತ್ಯಾರ್ಚನೆಗೆ ಕುಂಕುಮ ಸಮರ್ಪಣೆ! (ಸೀ)
-ಗೇಕಾಯಿ, ಸಾಬೂನುಗಳ ಸಮರ್ಪಣೆ! (ಏ)
-ನೇನ್ತನ್ಗಿಷ್ಟವೋ ಅದವ್ಗೂ ಸಮರ್ಪಣೆ! (ಮ)
-ನೋನೈರ್ಮಲ್ಯದಮೌಲ್ಯಾತ್ಮ ಸಮರ್ಪಣೆ!
ಸದ್ಭಕ್ತನ ಸರ್ವಸ್ವವೂ ಸಮರ್ಪಣೆ!
ಮಹದಾನಂದಕ್ಕಾಗ್ಬೇಕೀ ಸಮರ್ಪಣೆ! (ಚ)
-ರ್ಪಟ ಮಾಡುವನೇನಿಂಥಾ ಸಮರ್ಪಣೆ? (ಗೆ)
-ಣೆಯ ನಿರಂಜನಾದಿತ್ಯಗಾಗ್ಲರ್ಪಣೆ!!!
-ಟ, ನೋಟ ಬಿಟ್ಟವಗೆ ಕಾಟವಿಲ್ಲ!
ಬಟ್ಟಬಯಲ್ಮನಕ್ಕಿಷ್ಟವೇನಿಲ್ಲ! (ಎ)
ಲ್ಲರಾತ್ಮನಾದವಗನ್ಯ ಸೊಲ್ಲಿಲ್ಲ!
ವರಗುರುಸ್ವರೂಪವನದೆಲ್ಲ!
ನಿತ್ಯ ತೃಪ್ತಿಯ ಬಾಳವನದೆಲ್ಲ!
ಗೆಳೆಯ ಸೂರ್ಯನಂತಾಚಾರವೆಲ್ಲ!
ರೋದನಜೀವನವನದೇನಲ್ಲ!
ಗರ್ವಕ್ಕವನಲ್ಲಿ ಜಾಗವೇ ಇಲ್ಲ!
ವಿಕಲ್ಪ, ಸಂಕಲ್ಪದ ಸುಳಿವಿಲ್ಲ! (ಘು)
-ಲ್ಲ ನಿರಂಜನಾದಿತ್ಯಾತ್ಮ ಪ್ರಪುಲ್ಲ!!!
ತಂಡ ತಂಡ ಮೋಡವಿದ್ದರೇನೋ ಗಂಡ? (ಹೆಂ)
-ಡತಿಯ ಬಿಟ್ಟಿರಬಹುದೇನೋ ಗಂಡ?
ತಂದೆ, ತಾಯಿ ನೀನೆಂದಿಲ್ಲವೇನೋ ಗಂಡ? (ಭಂ)
-ಡಳೆಂದೆನ್ನ ಷಂಡನಾಗ್ವುದೇಕೋ ಗಂಡ?
ಮೋಸವಿನ್ನಾದ್ರೂ ಮಾಡಬೇಡ್ವೋ ಗಂಡ! (ಗಂ)
-ಡ, ಹೆಂಡಿರಖಂಡವೆಂದೀಗ್ತೋರೋ ಗಂಡ!
ವಿಧಿ, ಹರಿ, ಹರರ್ಯಾರು ಹೇಳೋ ಗಂಡ! (ತ)
-ದ್ದರ್ಶನಾನಂದವನ್ನೀಗ ನೀಡೋ ಗಂಡ!
ರೇಗಿದ್ರೆ ಬಿಟ್ಟುಬಿಡ್ವೆನೇನೋ ನಾ ಗಂಡ?
ನೋವ್ಸಾವಪ್ಪಿ ಸೇರುವೆನಾ ನಿನ್ನ ಗಂಡ!
ಗಂಗೆಯ ಗಂಡ ಮಾರ್ತಾಂಡನೆನ್ನ ಗಂಡ! (ಮೋ)
-ಡವಟ್ಟಿ ಬಾ ನಿರಂಜನಾದಿತ್ಯ ಗಂಡ!!!
-ನ್ನನ್ನು ವೃಥಾ ಮೇಲೆ ದೂರಬೇಡ!
ಹೊರಗಿರಿಸಿ ಮರೆಸಬೇಡ! (ತ)
-ರತರದಾಸೆ ತೋರಿಸಬೇಡ! (ಕ)
-ತೆ, ಪುರಾಣಗಳೆನಗೆ ಬೇಡ! (ಅ)
-ನನ್ಯ ಭಕ್ತಿ ಕೊಡದಿರಬೇಡ! (ಭೋ)
-ಗೇಚ್ಛೆಯಿತ್ತು ಹುಚ್ಚು ಮಾಡಬೇಡ! (ನಾ)
-ನೂ, ನೀನೂ ಬೇರಾಗುವುದೇ ಬೇಡ!
ಬೇಡಿದ್ದೀಡೇರಿಸದಿರಬೇಡ! (ಗಂ)
-ಡ ನಿರಂಜನಾದಿತ್ಯನೇಕ್ಬೇಡ???
-ಸಿದ್ದು ಸಾರ್ಥಕವಾಯ್ತೆಂದ್ಕೊಂಡೆ!
ಬಿಡ್ಬಾರ್ದನುಷ್ಠಾನವೆಂದ್ಕೊಂಡೆ! (ಬಿ)
-ಸಿಲಿನುಪಕಾರರಿತ್ಕೊಂಡೆ!
ನೀಚ, ರೋಗ ಹೋಯ್ತೆಂದಂದ್ಕೊಂಡೆ! (ಬೇ)
-ರೆ ಔಷಧ್ಯೇಕೆನಗಂದ್ಕೊಂಡೆ! (ಮ)
-ರೆತಿರಬಾರದಿದಂದ್ಕೊಂಡೆ! (ಅಂ)
-ದ್ಕೊಂಡೇ ತಪಸ್ಸು ಮುಗಿಸ್ಕೊಂಡೆ! (ಉಂ)
-ಡೆ ನಿರಂಜನಾದಿತ್ಯನ್ಕಂಡೆ!!!
-ನು ಮಾಡ್ಲೀಗ ನಾನೆಂದಪ್ಪಾ! (ವಿ)
-ಯೋಗ ದುಃಖವೆನಗಪ್ಪಾ! (ವಂ)
-ಚಿಸಬೇಡ ನನ್ನನ್ನಪ್ಪಾ! (ಆ)
-ಸ್ತಿ, ಪಾಸ್ತ್ಯೆನಗೆ ಬೇಡಪ್ಪಾ! (ಚಿ)
-ದ್ದೀಪ ಬೆಳಗು ಬೇಗಪ್ಪಾ! (ಕಾ)
-ಯಲಾರೆನಿನ್ನು ನಾನಪ್ಪಾ! (ಬಾ)
-ಪ್ಪಾ! ನಿರಂಜನಾದಿತ್ಯಪ್ಪಾ!!!
-ಗ್ಲು ದರೋಡೆ ಹೆಚ್ಚಿಹೋಯ್ತಮ್ಮಾ!
ಹಾದಿ ಬೀದಿಯಲ್ಲೀ ಗೋಳಮ್ಮಾ!
ಕಿತ್ತಾಟ ನಮ್ಮಲ್ಲಿ ಬೇಡಮ್ಮಾ!
ಕೊಚ್ಚೆಗುಂಡಿಯಾಗ್ಬಾರ್ದೂರಮ್ಮಾ! (ಕೇ)
-ಳ್ತೀಯಾದ್ರೆ ಕೇಳೆನ್ನ ಮಾತಮ್ಮಾ! (ಛಾ)
-ಯೇಶ್ವರಗಿಂತಾಪ್ತರಾರಮ್ಮಾ? (ಮ)
-ನ ಮಾಡವನ ಸೇವೆಗಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯವ್ನಮ್ಮಾ!!!
ಕಾಯಿಸಿದ್ದು ಕುಡೀಬೇಡ ನೀರು!
ದಾರಿನಡೆದು ನಿನ್ನೂರು ಸೇರು! (ಗ)
-ಗನಮಣ್ಯಸ್ತಮಾನ್ಕ್ಮುಂಚೆ ಸೇರು!
ಕುಣ್ಕುಣಿದಾನಂದದಿಂದ ಸೇರು! (ತ)
-ಡ್ಕೊಳ್ಳದಿದ್ರೆ ಕಷ್ಟ ಸಿಗದೂರು! (ಸು)
-ಳ್ಳೆನಬೇಡಿರೆನ್ನ ಮಾತನ್ನಾರು! (ಇ)
-ಳೆಗೆ ನನ್ನಥಾ ಮಿತ್ರರಿನ್ಯಾರು?
ನೀತಿವಂತರಾಗಿರೆಲ್ಲವರು! (ಆ)
-ರು, ನಿರಂಜನಾದಿತ್ಯಗೆದುರು???
ಪೂರ್ವದ ತಪಸ್ಪಶ್ಚಿಮದಲ್ಲಂತ್ಯ! [ಸ]
-ರ್ವರಾತ್ಮನಾದವನಿಗುಂಟೇನಂತ್ಯ? (ಬಂ)
-ದ ಉದ್ದೇಶ ಪೂರ್ತಾದಾಗಾಗ್ವುದಂತ್ಯ!
ತನ್ನ ತಾನರಿತಿದಾದ್ಮೇಲಿಲ್ಲಂತ್ಯ!
ಪತಿತ ಪಾವನನಾಗದಿದ್ರಂತ್ಯ! (ಆ)
-ಸ್ಪದ ಮಾಯೆಗಾದರೆ ಬಂಧನಾಂತ್ಯ! (ವೃ)
-ಶ್ಚಿಕ, ಪೂರ್ಣಿಮೆಯವತಾರ ನಿತ್ಯ!
ಮನುಜರಿಗರಿವಾಗ್ಬೇಕೀ ಸತ್ಯ!
ದತ್ತ ತಾನಾಗಿರ್ಪೆನೆಂಬುದಾನಿತ್ಯ! (ಎ)
-ಲ್ಲಂತರಂಗದಲ್ಲದೆಂಬುದಾ ಸತ್ಯ! (ಸ)
-ತ್ಯ, ನಿರಂಜನಾದಿತ್ಯಾನಂದ ನಿತ್ಯ!!!
ಹಂಸಾತ್ಮನ ಮರೆತಾಯ್ತು ಖಂಡ!
ಕಾಮ ಕಾರಣವಾಗ್ಯಾಯ್ತು ಖಂಡ! (ಹ)
-ರ, ಹರಿ ಭೇದಗಳೆಲ್ಲಾ ಖಂಡ! (ತ)
-ದಿಂಗಿತವರಿತರಿಲ್ಲಾ ಖಂಡ!
ದತ್ತ ದರ್ಶನದಿಂದದಖಂಡ!
ಖಂಡ ತುಂಡಕ್ಕಾಗಿ ಕರ್ಮಕಾಂಡ! (ಮಾ)
-ಡದಾದನಿದ ಮಾನವ ಭಂಡ! (ಅ)
-ಖಂಡಾತ್ಮವೀ ತೋರುವ ಬ್ರಹ್ಮಾಂಡ! (ಗಂ)
-ಡ, ನಿರಂಜನಾದಿತ್ಯನಖಂಡ!!!
ತಿಂಡಿಗಾಗಿ ತಟ್ಟೆ ತಂದಿಟ್ಟೆ! [ನೋ]
-ಡಿ ಹಣ್ಣನ್ನು ನಿರಾಶೆಪಟ್ಟೆ! (ಆ)
-ಗಾಗ್ತಿಂಡಿ ಕೊಡ್ಬೇಡಿರೆಂದ್ಬಿಟ್ಟೆ! (ಈ)
-ಗಿನಭ್ಯಾಸಾರೋಗ್ಯವೆಂದ್ಬಿಟ್ಟೆ!
ತಪ್ಪುತಿಳ್ಕೊಳ್ಬೇಡಿರೆಂದ್ಬಿಟ್ಟೆ! (ಹೊ)
-ಟ್ಟೆ ಕೆಟ್ಟೆ ಕೆಟ್ರೆ ವಾಸ್ನೆಂದ್ಬಿಟ್ಟೆ!
ದಿವ್ಯ ಜೀವನಕ್ಕಿದೆಂದ್ಬಿಟ್ಟೆ! (ಉ)
-ಟ್ಟೆ ನಿರಂಜನಾದಿತ್ಯ ಬಟ್ಟೆ!!!
-ತ್ಸಂಬಂಧಕ್ಕಿರಬೇಕು ವೈರಾಗ್ಯ! (ಭಾ)
-ಗವತನಾಗ್ವುದು ದೊಡ್ಡ ಭಾಗ್ಯ! (ಮಾ)
-ಲಾಧರನದ್ದಾದರ್ಶ ವೈರಾಗ್ಯ!
ಭಕ್ತವತ್ಸಲಾತ್ಮನಿಗಾ ಭಾಗ್ಯ!
ಪರಶಿವಗಾನಂದ ವೈರಾಗ್ಯ! (ಪ)
-ರಮೇಶ್ವರಗೀ ಸತ್ಸಂಗ ಭಾಗ್ಯ! (ಕಾ)
-ಮನಸುವ ಹೀರಿತಾ ವೈರಾಗ್ಯ! (ಸ)
-ಭಾಪತಿ ಹುಟ್ಟಿದ್ದೆಲ್ಲರ ಭಾಗ್ಯ! (ಭಾ)
-ಗ್ಯ, ನಿರಂಜನಾದಿತ್ಯಗ್ವೈರಾಗ್ಯ!!!
-ವೆಗರಸನಾಗಿರ್ಪವನ!
ಮಾತುಕತೆಯಿಲ್ಲದವನ!
ಡೋಲು ವಾದ್ಯ ನಾದಪ್ರಿಯನ! (ದಂ)
-ಡಾದ್ಯಾಯುಧ ಧರಿಸಿಹನ! (ದಂ)
-ಡಪಾಣಿಗಪ್ಪನಾದವನ!
ದತ್ತಾತ್ರೇಯ ತಾನಾದವನ! (ಭ)
-ವರೋಗ ವೈದ್ಯನಾದವನ! (ದಿ)
-ನಪ ನಿರಂಜನಾದಿತ್ಯನ!!!
ಬುರುಡೆ ಇದ್ದಾಗೆಡರಿಲ್ಲ!
ಒಪ್ಪಲೇಂತೀ ಕತೆಗಳೆಲ್ಲ? (ಮ)
-ದ ಮತ್ಸರ ಕಮ್ಮಿಯೇನಿಲ್ಲ! (ಅಂ)
-ಗಿ, ಲುಂಗಿಗಳಬ್ಬರವೆಲ್ಲ!
ದಾರಿಯೇನೂ ನೇರವಾಗಿಲ್ಲ! (ಈ)
-ಗಿಂದಾಲೋಚಿಸಬೇಕಿದೆಲ್ಲ!
ಬಿಡುವಾಮೇಲೆ ಸಿಕ್ಲಿಕ್ಕಿಲ್ಲ! (ಎ)
-ಲ್ಲ ನಿರಂಜನಾದಿತ್ಯ ಬಲ್ಲ!!!
ನನಗನಾರೋಗ್ಯ ದೇಹದಿಂದಡ್ಡಿ! (ಹೀ )
-ಗೆ ನಮ್ಮಿಬ್ಬರಿಗೂ ಏನೇನೋ ಅಡ್ಡಿ!
ಮುಪ್ಪು ಕೆಲವರಿಗಾಗಿರುವಡ್ಡಿ!
ಗಿರಿಜಾಪತಿಗೇತರದ್ದೇನಡ್ಡಿ? (ಕ)
-ಲಾತೀತ ಕಳೆಯಬೇಕೆಲ್ಲರಡ್ಡಿ! (ಸ್ವ)
-ಚ್ಛಾತ್ಮಾನಂದ ಬೇಡಿರೆಲ್ಲ ಸೆರ್ಗೊಡ್ಡಿ!
ದಮೆ, ಶಮೆಯಭ್ಯಾಸಿಗೇಕೆ ಚಡ್ಡಿ?
ನೆರೆ ಸುವಾಸನಾ ಹಾಲ್ಮಡ್ಡೀ ಕಡ್ಡಿ!
ಯತಿಪತಿ ದತ್ತಾತ್ರೇಯನಾ ಕಡ್ಡಿ! (ಕ)
-ಡ್ಡಿಯಾದ್ನಿರಂಜನಾದಿತ್ಯಗಾರಡ್ಡಿ???
-ಶವಾಂಶೆಂದರಿಯ್ಬೇಡ್ವೇನು? (ನಿ)
-ವಾಸರಮನೆಯಾದ್ರೇನು? (ಕೀ)
-ವು, ರಕ್ತದ ದೇಹಾನೇನು? (ಸ)
-ದಾತ್ಮ ಚಿಂತನೆ ಮಾಡ್ನೀನು! (ಬಂ)
-ದ ದಾರ್ಹಿಡಿದಾಗ್ನೀ ನಾನು! (ಯಾ)
-ರೇನೆಂದರೆ ನಿನಗೇನು? (ನೀ)
-ನು ನಿರಂಜನಾದಿತ್ಯಾನು!!!
-ಷ್ಟ ಸಂಗ ಕಟ್ಬೇಡದಕ್ಕೆ! (ಸ)
-ವೆಸಿದ ಗುರುಧ್ಯಾನಕ್ಕೆ! (ಕ್ಷು)
-ಲ್ಲರೂಪವಿಡ್ಬೇಡದಕ್ಕೆ!
ವೀತರಾಗನಾದಾತ್ಮಕ್ಕೆ! (ಪ)
-ದೇಪದೇ ನಮಿಸದಕ್ಕೆ!
ಹಗಲಿರುಳಿಲ್ಲದಕ್ಕೆ! (ಅ)
-ಕ್ಕೆ ನಿರಂಜನಾದಿತ್ಯಕ್ಕೆ!!!
ಅಂತ್ಯಕಾಲಕ್ಕಾರಿಗಾರರುಹಯ್ಯಾ! (ಅಂ)
-ತ್ಯ ಸಂಸ್ಕಾರೊಡಲಿಗಾಗ್ಲೇಬೇಕಯ್ಯಾ!
ಕಾಲಿಗೆ ಬಿದ್ದ್ರೂ ಕಾಲ ಬಿಡನಯ್ಯಾ! (ಛ)
-ಲ, ಬಲವನ ಮುಂದೆ ಫಲಿಸ್ದಯ್ಯಾ! (ಧಿ)
-ಕ್ಕಾರವನನ್ನು ಮಾಡಬಾರದಯ್ಯಾ! (ಹ)
-ರಿಭಕ್ತ ಸಾವಿಗಂಜ್ಬೇಕಿಲ್ಲವಯ್ಯಾ! (ಸಂ)
-ಗಾತಿ ಅವನ ದಿವ್ಯನಾಮವಯ್ಯಾ! (ಪ)
-ರಮಪದವಿಯದು ಕೊಡ್ವುದಯ್ಯಾ! (ಗು)
-ರು ಭೋಧೆ ಕೇಳಿ ನಿಶ್ಚಿಂತನಾಗಯ್ಯಾ!
ಹರಿ, ಹರಾದಿ ರೂಪವನದಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯನವನಯ್ಯಾ!!!
-ನೆಯ ಹೊಸ್ತಿಲ ಮೇಲ್ಪ್ರಾಣಾರ್ಪಣೆಯಯ್ಯಾ! (ತೂ)
-ಗಾಡುತ್ತಾಡುತ್ತದೊಳಗೆ ಬಂದಿತ್ತಯ್ಯಾ! (ಕಾ)
-ಲಲೀಲೆಯದಕ್ಕೆಂತರಿಯ ಬೇಕಯ್ಯಾ?
ದರ್ಶನ ಸ್ವಾಮಿಯದ್ದದಕ್ಕಾಗಿಲ್ಲಯ್ಯಾ!
ನೆನೆನೆನೆದದು ಪ್ರಾಣ ಬಿಟ್ಟಿತಯ್ಯಾ!
ನರನಾದ್ರೇನು, ನಾಯಿಯಾದ್ರೇನಯ್ಯಾ?
ಪರಮಾತ್ಮನ ನೆನೆದು ಸಾಯ್ಬೇಕಯ್ಯಾ! (ಅ)
-ಪ್ಪನಡಿಯಲ್ಲದಕ್ಕಾಗ ಜಾಗವಯ್ಯಾ! (ಜ)
-ನನ ಮತ್ತದಕ್ಕುಚ್ಚ ಜಾತಿಯಲ್ಲಯ್ಯಾ!
ದತ್ತನದನ್ನೆಂದಿಗೂ ಕೈ ಬಿಡನಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾ ದತ್ತಾತ್ರೇಯಯ್ಯಾ!!!
ಕಣ್ಣೀರ್ಸುರ್ಸಿದ್ರೆಲ್ಲರದಕ್ಕಾಗಿ! [ತ]
-ಣ್ಣೀರ್ಸಹ ಕುಡಿಯ್ದೆ ಸತ್ತದ್ಕಾಗಿ! (ನೀ)
-ರ್ಸುರಿಸಿ ಹೊಸ್ತ್ಲಲ್ಲೇ ಸತ್ತದ್ಕಾಗಿ (ಇ)
-ರ್ಸಿ ಪಶ್ಚಿಮಕ್ತಲೆ ಸತ್ತದ್ಕಾಗಿ! (ನಿ)
-ದ್ರೆಯಿಂದೆಚ್ಚಂತಿದ್ದು ಸತ್ತದ್ಕಾಗಿ! (ಎ)
-ಲ್ಲರನ್ನೂ ತೊರೆದು ಸತ್ತದ್ಕಾಗಿ! (ವ)
-ರಗುರು ಸನ್ನಿಧಿ ಸಿಕ್ಕಿದ್ಕಾಗಿ!
ದತ್ತ ಮಣ್ಣು ಮಾಡಿಸಿದ್ದಕ್ಕಾಗಿ! (ಮಿ)
-ಕ್ಕಾರ ಬಳಿಗೂ ಹೋಗದ್ದಕ್ಕಾಗಿ! (ತ್ಯಾ)
-ಗಿ, ನಿರಂಜನಾದಿತ್ಯನಿಗಾಗಿ!!!
-ಟ್ಟ ಸಲಹೆಯಂತಿರಬೇಕಯ್ಯಾ! (ನ)
-ಡತೆಯನ್ನು ತಿದ್ದಿಕೊಳ್ಬೇಕಯ್ಯಾ! (ಬಿ)
-ಗಿಯಾಗಿರಬಾರದಂಗಿಯಯ್ಯಾ!
ಸಲೀಸಾಗಿ ಗಾಳಿಯಾಡ್ಬೇಕಯ್ಯಾ!
ಬೇನೆಯ ಕಾರಣರಿಯ್ಬೇಕಯ್ಯಾ! (ಹಾ)
-ಕು ಅದಕ್ಕೆ ತಡೆ ಮೊದಲಯ್ಯಾ! (ಆ)
-ರೋಪಿಗಳ ಮಾತು ಕೇಳ್ಬೇಡಯ್ಯಾ! (ನಾ)
-ಗರ ಕಲ್ಲಿಗಡ್ಡ ಬೀಳ್ಬೇಡಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯನಾಗಯ್ಯಾ!!!
ಶಾರೀರಿಕ ಸುಖ ಶಾಶ್ವತವಲ್ಲ!
ನಾಮಜಪೈಹಿಕಸುಖಕ್ಕೇನಲ್ಲ! (ವ)
-ಶವಾಗಬೇಕು ಇಂದ್ರಿಯಗಳೆಲ್ಲ! (ಭ)
-ವಾಬ್ಧಿ ದಾಟ್ಲಕ್ಕೆ ಬೇರೆ ದಾರಿಯಿಲ್ಲ!
ಗಣಪತಿ ನಿನ್ನಿಂದ ದೂರವಿಲ್ಲ! (ಕಂ)
-ದೆರೆದು ನೋಡ್ಬೇಕುಪನಿಷತ್ತೆಲ್ಲ! (ಅ)
-ಶಾಂತಚಿತ್ತನಿಗೆ ಸಾಯುಜ್ಯವಿಲ್ಲ!
ತಿಳಿದಿದ ಸಾಧಿಸ್ಬೇಕು ನೀವೆಲ್ಲ!
ಇನ್ನೇನೂ ಹೇಳಲಿಕ್ಕೆ ಬಾಯಿ ಇಲ್ಲ! (ಪು)
-ಲ್ಲ ನಿರಂಜನಾದಿತ್ಯಾನಂದವೆಲ್ಲ!!!
ನೋವ್ಸಾವು ಸಹಿಸ್ಲಿಕ್ಕಾಗಿ ಜಪ!
ದರ್ಶನಾತ್ಮನದ್ದಕ್ಕಾಗಿ ಜಪ! (ಕಾ)
-ಯಮೋಹ ದಹಿಸ್ಲಿಕ್ಕಾಗಿ ಜಪ!
ವಾಸನಾಕ್ಷಯಾಗ್ಲಿಕ್ಕಾಗಿ ಜಪ! (ಹ)
-ಗ್ಲಿರುಳಾತ್ಮಾನಂದಕ್ಕಾಗಿ ಜಪ! (ತಿ)
-ಕ್ಕಾಟವಿಲ್ಲದಿರ್ಲಿಕ್ಕಾಗಿ ಜಪ!
ಗಿರಿಜೆಯಂತಾಗ್ಲಿಕ್ಕಾಗಿ ಜಪ!
ಜನ್ಮ ಸಾರ್ಥಕಾಗ್ಲಿಕ್ಕಾಗಿ ಜಪ! (ಭೂ)
-ಪ ನಿರಂಜನಾದಿತ್ಯ ನಿರ್ಲೆಪ!!!
ನಾಲ್ಕು ದಿನದ ಸತ್ಸಂಗವಾಯ್ತು! (ಹಾ)
-ಲ್ಕುಡಿದಂತಾಗಿ ಶಾಂತಿಯುಂಟಾಯ್ತು!
ದಿವ್ಯನಾಮ ಜಪದರ್ಥವಾಯ್ತು!
ನಶ್ವರ ಸುಖದಾಸಕ್ತಿ ಹೋಯ್ತು!
ದರ್ಶನ ನಿರಾತಂಕವಾಗ್ಯಾಯ್ತು!
ಸಮಯವೇಗದಿಂದೋಡಿಹೋಯ್ತು! (ಸ)
-ತ್ಸಂಪ್ರದಾಯದುಪದೇಶವಾಯ್ತು!
ಗತಿ ಗುರುಚರಣದತ್ತಾಯ್ತು!
ವಾದಿಸ್ಲಿಕ್ಕಿಷ್ಟವಿಲ್ಲದಂತಾಯ್ತು! (ಆ)
-ಯ್ತು, ನಿರಂಜನಾದಿತ್ಯಾನಂದಾಯ್ತು!!!
ತಲೆಗೆ ತೈಲ ತಿಕ್ಕಿದ್ಲು ಗಂಗಾತಾಯಿ! (ಜ್ವಾ)
-ಲೆಯೆಲ್ಲಾ ಇಳಿಸಿಬಿಟ್ಟಾ ಗಂಗಾತಾಯಿ! (ಬ)
-ಗೆಬಗೆಯ ತತ್ವಹಾಡಿದ್ಲಾಗಾ ತಾಯಿ!
ತೈಲ ಕೈಗೇನಂಟಿಲ್ಲೆಂದ್ಲಾ ಮಹಾತಾಯಿ! (ಕಾ)
-ಲವೆನಗಿನ್ನಾವಾಗೆಂದ್ಲಾ ಪ್ರಿಯ ತಾಯಿ!
ತಿರಿಗೊಮ್ಮೆ ಬರ್ತೇನೆಂದ್ಲಾ ಪೂಜ್ಯ ತಾಯಿ! (ಉ)
-ಕ್ಕಿ ಬಂದ ದುಃಖ ನುಂಗಿಕೊಂಡ್ಲಾಗಾ ತಾಯಿ! (ತಿಂ)
-ದ್ಲು ಗುರುಪ್ರಸಾದಾನಂದದಿಂದಾ ತಾಯಿ!
ಗಂಟ್ಲು ಕೆರೆತವೀಗಿಲ್ಲೆಂದಳಾ ತಾಯಿ!
ಗಾರುಡಿಗಾರ ನೀನು ಎಂದಳಾ ತಾಯಿ!
ತಾನೇತಾನಾಗೈಕ್ಯ ಸುಖ ಕಂಡ್ಳಾ ತಾಯಿ! (ತಾ)
-ಯಿ, ನಿರಂಜನಾದಿತ್ಯಾನಂದಪ್ರದಾಯಿ!!!
ಪ್ರತಿಭಾ ಶಾಂತಿಯರ್ಹಾಡಿದರಿಂದು! (ಪ್ರೀ)
-ತಿಯಿಂದಾಲಿಸುತ್ತಿದಾ ದೇವನಿಂದು!
ಭಾವ ಪರಿಪೂರ್ಣವಾಗಿತ್ತದಿಂದು!
ಶಾಂತ ಸನ್ನಿವೇಶದಲ್ಲಾಯ್ತದಿಂದು! (ಅ)
-ತಿಶಯಾತ್ಮಾನಂದವದಿತ್ತಿತಿಂದು! (ಭ)
-ಯ, ಭಕ್ತಿ ತುಂಬಿ ತುಳುಕುತ್ತಿತ್ತಿಂದು! (ಯಾ)
-ರ್ಹಾಡಿದ್ರೂ ಗುರುವ ಮರೆತ್ರೆ ಕುಂದು! (ಅ)
-ಡಿಗಡಿಗವ್ನ ನೆನೆದ್ರೆಲ್ಲಾ ಒಂದು!
ದತ್ತ ಭಕ್ತಿಗೆ ಫಲವಿದೆಂದೆಂದು! (ಆ)
-ರಿಂದಾರಿಗೆ ಸುಖ ಜಗದೊಳಿಂದು? (ಕಾ)
-ದು, ನಿರಂಜನಾದಿತ್ಯಾನಂದಾಗಿಂದು!!!
ಪಡಲಾರೆ ಕಷ್ಟವಿನ್ನು ಮುಂದು! (ಹ)
-ವಾಮಾನ ಸರಿಯಾಗಿಲ್ಲವಿಂದು! (ಅ)
-ಸಮಾಧಾನ ಚಿತ್ತವಿದೆ ಇಂದು!
ಮಾಡಲಾರೆನಾವ ಕೆಲ್ಸವಿಂದು! (ಬಿ)
-ಡ್ಲೇಬಾರದಾರನ್ನೂ ಒಳಗಿಂದು!
ಬೇಸರ ಪಡ್ಬಾರ್ದಾರಿದಕ್ಕಿಂದು! (ಬೇ)
-ಕ್ನಾನಾದ್ರೆ ಕರೆದಾಗ್ಬನ್ನಿ ಮುಂದು!
ನಿಂದೆಗಲಕ್ಷ್ಯ ನನಗೆಂದೆಂದು! (ಇ)
-ದು ನಿರಂಜನಾದಿತ್ಯೇಚ್ಛೆಯಿಂದು!!!
ಪಠಾಣನವನೊಬ್ಬ ಜಿಪುಣ! (ಹ)
-ಣವೆಂದರೆ ಹಿಂಡುವನು ಪ್ರಾಣ!
ಮಾಡನು ಉಪಕಾರ ಸ್ಮರಣ!
ತಿನ್ನನವನುತ್ತಮ ಭಕ್ಷಣ! (ದಿ)
-ನ, ರಾತ್ರಿ ಹಣಕ್ಕಾಗಿ ಭ್ರಮಣ! (ಅ)
-ಲ್ಲಿಲ್ಲಿನದ್ದಾಡಿ ಕಾಲಕ್ರಮಣ!
ನಿತ್ಯಸಾಧನೆ ಮಾಟ, ಮಾರಣ!
ಪುರುಷೋತ್ತಮಾನೆಂಬ ಭಾಷಣ! (ತೃ)
-ಣ ನಿರಂಜನಾದಿತ್ಯಗೆ ಹಣ!!!
-ನಸ್ಸನ್ನು ಸಡಿಲು ಬಿಟ್ಟಿರಶಕ್ತಿ! (ಜ)
-ನ್ಯಗುಣವಾಗಿ ಬಂದಿದೆ ಕುಯುಕ್ತಿ!
ಭಗವತ್ಸೇವೆಯಿಂದದಕ್ಕೆ ಮುಕ್ತಿ! (ಭು)
-ಕ್ತಿಗಾಗ್ಯಲ್ಲ ಭಕ್ತಿಯೆಂಬುದಾರ್ಯೋಕ್ತಿ! (ಯೋ)
-ಗಸಾಧಕನೊಬ್ಬ ಆದರ್ಶ ವ್ಯಕ್ತಿ!
ಪ್ರಭುವಿನ ರೀತಿ, ನೀತಿ ಮೇಲ್ಪಂಕ್ತಿ! (ಭ್ರಾಂ)
-ತಿ ಜೀವನ ಬಿಡುವುದೇ ವಿರುಕ್ತಿ!
ಮಹಾಮಾಯೆಯೇ ಜಗದಾದಿ ಶಕ್ತಿ! (ವ)
-ಶವದಕ್ಕೆಲ್ಲಾ ಸುರಾಸುರ ಶಕ್ತಿ! (ಶ)
-ಕ್ತಿ, ನಿರಂಜನಾದಿತ್ಯನಿಚ್ಛಾ ಶಕ್ತಿ!!!
-ಕಾವಾಗ್ಲೂ ದಿವ್ಯ ಜೀವನ! (ಆ)
-ಯ್ತೇನೋ ಬಂಧ ವಿಮೋಚನ? (ಮ)
-ನೋವಿಕಾರವೇ ಬಂಧನ!
ಸಂಸಾರವೆಲ್ಲಾ ಮಲಿನ!
ದತ್ತ ಪರಮ ಪಾವನ! (ಸ್ಪ)
-ರ್ಶ ಸುಖಕ್ಬೇಕು ಪ್ರಾರ್ಥನ! (ಘ)
-ನ ನಿರಂಜನಾದಿತ್ಯನ!!!
ಮದ, ಮತ್ಸರಾಸುರ ಸಂಹರಾ! (ವಿ)
-ಶೇಷ ಸುಂದರಾ ಸೀತಾಮಂದಿರಾ! (ಸು)
-ಖಕರಾ ಅಯೋಧ್ಯಾಪುರೇಶ್ವರಾ!
ರಾಮೇಶ್ವರಾ ಶ್ರೀರಾಘವೇಶ್ವರಾ!
ರಾಜರಾಜೇಶ್ವರಾ ಸೀತಾವರಾ!
ಮನೋಹರಾ ಲಕ್ಷ್ಮಣ ಸೋದರಾ!
ಸಾಮ, ದಾನ, ಭೇದ ದಂಡೇಶ್ವರಾ! (ಖ)
-ಗಕುಲ ತಿಲಕಾ ಲೋಕೇಶ್ವರಾ! (ಆ)
-ರಾಮಾ ನಿರಂಜನಾದಿತ್ಯೇಶ್ವರಾ!!!
ಧರೆಯ ವಾಸ ಸಾಕಾಗಿಬಿಟ್ಟಿದೆ!
ಹರಿ, ಹರರಾನೆಂಬರಿವಾಗಿದೆ!
ರಿಪುಕುಲವೆಲ್ಲಡಗಿಹೋಗಿದೆ!
ವರ ಗುರುಸೇವೆ ಸಾಗುತ್ತಲಿದೆ!
ದಿನ, ರಾತ್ರಿಯೆನ್ನದಿದಾಗುತ್ತಿದೆ!
ನಡೆ, ನುಡಿಯೆರಡೂ ಒಂದಾಗಿದೆ!
ಬಂದಿಲ್ಲಿಗೆ ಬಹಳ ಕಾಲಾಗಿದೆ!
ದಂಡನೆ ದೇಹಕ್ಕೆ ಸಾಕಷ್ಟಾಗಿದೆ!
ತಿರಿಗೂರು ಸೇರುವಾಸೆಯಾಗಿದೆ!
ದೆವ್ವವೂ ನಿರಂಜನಾದಿತ್ಯಾಗಿದೆ!!!
ಪತಿತನಾಗಲ್ಬಿಡನಯ್ಯಾ! (ಮ)
-ದ್ಬಾಂಧವನಾ ದತ್ತಾತ್ರೇಯಯ್ಯಾ!
ಧರ್ಮ, ಕರ್ಮ ಬಲ್ಲವನಯ್ಯಾ!
ವರ ಗುರೀರೇಳ್ಲೋಕಕ್ಕಯ್ಯಾ!
ನಿಶಿ ದಿನ ಧ್ಯಾನ ಮಾಡಯ್ಯಾ! (ಭ)
-ವರೋಗ ವೈದ್ಯನಿವನಯ್ಯಾ! (ಗಾ)
-ನಲೋಲ ವೇಣುಗೋಪಾಲಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯೆಲ್ಲಯ್ಯಾ!!!
ನಂಬು ಶ್ರೀಪತಿಯನ್ನೆಂದ್ಲಾ ಲಕ್ಷ್ಮಿ!
ದರ್ಶನ ನಿತ್ಯ ಮಾಡೆಂದ್ಲಾ ಲಕ್ಷ್ಮಿ! (ವೇ)
-ಳಾವೇಳೆ ನೋಡಬೇಡೆಂದ್ಲಾ ಲಕ್ಷ್ಮಿ!
ವರಗುರು ಅವನೆಂದ್ಲಾ ಲಕ್ಷ್ಮಿ! (ಹೊ)
-ರಗೊಳಗೆಲ್ಲವನೆಂದ್ಲಾ ಲಕ್ಷ್ಮಿ!
ಮಡದಿ, ಮಕ್ಕ್ಳಾಸೇಕೆಂದ್ಲಾ ಲಕ್ಷ್ಮಿ!
ಹಾಯಾಗೊಡಗೂಡಿರೆಂದ್ಲಾ ಲಕ್ಷ್ಮಿ!
ಲಕ್ಷ್ಯ ಪಾದದಲ್ಲಿರ್ಲೆಂದ್ಲಾ ಲಕ್ಷ್ಮಿ! (ಲ)
-ಕ್ಷ್ಮಿ, ನಿರಂಜನಾದಿತ್ಯನ ರಶ್ಮಿ!!!
ಅಳಿಯದು ಸತ್ಯ, ಉಳಿಯದು ಮಿಥ್ಯ! (ಹೂ)
-ಳಿಟ್ಟು ಕೊಳೆಸದಂತಿರುವುದು ಸತ್ಯ! (ಜ)
-ಯ, ಅಪಜಯಾದಿ ದ್ವಂದ್ವವೆಲ್ಲಾ ಮಿಥ್ಯ!
ದುಷ್ಟ ದಾನವಧ್ವಂಸಿ ಸದ್ಗುರು ಸತ್ಯ!
ಸಮಸ್ತ ಜಾತಿ, ಮತಾಚಾರವೂ ಮಿಥ್ಯ! (ಅ)
-ತ್ಯಮ್ಯೂಲ್ಯ ನಿಶ್ಚಲಾತ್ಮಾನಂದವೇ ಸತ್ಯ!
ಉದಾನಾಪಾನಾದಿ ಪ್ರಾಣವೆಲ್ಲಾ ಮಿಥ್ಯ! (ಆ)
-ಳಿ, ಬಾಳ್ಯಳಿದವರಂತರಾತ್ಮ ಸತ್ಯ! (ಪ್ರಾ)
-ಯ, ವೃದ್ಧಾಪ್ಯಾದ್ಯವಸ್ಥೆಗಳೆಲ್ಲಾ ಮಿಥ್ಯ!
ದುರ್ವಿಷಯ ಲೇಪವಿಲ್ಲದಾತ್ಮ ಸತ್ಯ!
ಮಿತಿಯಿಲ್ಲದ ಸಮಿತಿಗ್ಳೆಲ್ಲಾ ಮಿಥ್ಯ! (ಮಿ)
-ಥ್ಯ, ಸತ್ಯಾತ್ಮ ನಿರಂಜನಾದಿತ್ಯ ಸತ್ಯ!!!
-ಜ್ಜನ ಸಂಗದಲ್ಲಿದ್ದು ತಿಂದ!
ಬಂದೆ ದೂರದಿಂದೆಂದು ತಿಂದ!
ದತ್ತನಿಷ್ಟವಿದೆಂದು ತಿಂದ!
ಕಷ್ಟೇಷ್ಟವ್ನಿಷ್ಟವೆಂದು ತಿಂದ! (ಕ)
-ಜ್ಜಾಯಾತ್ಮಧ್ಯಾನವೆಂದು ತಿಂದ! (ಕ್ರ)
-ಯಕ್ಕೆ ಸಿಕ್ಕದಿದೆಂದು ತಿಂದ!
ತಿಂದು ತೇಗಿದೆನೆಂದು ತಿಂದ! (ತಿಂ)
-ದ, ನಿರಂಜನಾದಿತ್ಯಾನಂದ!!!
-ನ್ನಬಳಿಯಿರ್ಸಿಕೊಳ್ದಿರ್ಬೇಡ!
ನೀನೇನಾನೆಂದನ್ಯಾಯ್ಮಾಡ್ಬೇಡ!
ಹೊರ್ಗಿನ್ಬೆಕ್ಕಿಗೆನ್ನ ಕೊಡ್ಬೇಡ! (ಮ)
-ರಣಕ್ಕಂಜಿಹೆನೆಂದೆನ್ಬೇಡ! (ಖ)
-ಗನಂಶನಾವ್ಗಳ್ಮರೆಯ್ಬೇಡ! (ದಿ)
-ಟ್ಟತನದಿಂದ್ಕೆಟ್ಟು ಹೊಗ್ಬೇಡ!
ಬೇಸರದಿಂದ್ಕದ ಮುಚ್ಚೇಡ! (ಕಾ)
-ಡ, ನಿರಂಜನಾದಿತ್ಯದೂಡ!!!
ಏಕಿಂಥಾ ಜನ್ಮವೆಂದ್ನಾನಾರನ್ನು ಕೇಳ್ಲಿ?
ಕಿಂಚಿತಾದ್ರೂ ದಯೆದೋರೆಂದರೇನ್ಹೇಳ್ಲಿ? (ಅಂ)
-ಥಾದ್ದಿಂಥಾದ್ಬೇಕೆಂಬವರಿಗೇನು ಕೊಡ್ಲಿ?
ಜನ್ಮದಾತನಾರೆಂದೆಲ್ಲರರಿತಿರ್ಲಿ! (ಚಿ)
-ನ್ಮಯಾತ್ಮ ಬೇರೆ, ನಾನ್ಬೇರೆಂದನ್ನದಿರ್ಲಿ! (ಸಾ)
-ವೆಂಬುದವನಿಗಿಲ್ಲೆಂಬುದ ನಂಬಿರ್ಲಿ! (ತ)
-ದ್ನಾಮಜಪದಿಂದೆಲ್ಲಾಸೆಗಳ್ಸತ್ತಿರ್ಲಿ!
ನಾಳೆಯ ಮಾತ್ಬಿಟ್ಟು ನೆಮ್ಮದಿಯಿಂದಿರ್ಲಿ! (ಪ)
-ರಮಾತ್ಮ ತಾನೆಂದು ಸಂತೋಷದಿಂದಿರ್ಲಿ! (ಹೊ)
-ನ್ನು, ಹೆಣ್ಣಿಗಾಗ್ತಲೆ ಕೆಡಿಸ್ಕೊಳ್ದಿರ್ಲಿ!
ಕೇಕೆ ಹಾಕಿ ಕುಣಿವವನ್ಕುಣೀತಿರ್ಲಿ! (ಆ)
-ಳ್ಲಿ, ನಿರಂಜನಾದಿತ್ಯನೆಂದ್ಮೂರೆಯಿಡ್ಲಿ!!!
ದುರಭ್ಯಾಸ ಬಿಡುವುದಾದ್ಯ ಕರ್ತವ್ಯ! (ವ)
-ರಗುರುವಿನಾಜ್ಞಾಪಾಲನೆ ಕರ್ತವ್ಯ! (ಸ)
-ಭ್ಯಾತ್ಮನಾಗುವುದು ಮಾನವ ಕರ್ತವ್ಯ!
ಸದಾತ್ಮಧ್ಯಾನ ಸಾಧಕನ ಕರ್ತವ್ಯ!
ಬಿಡದಿರುವುದು ಸತ್ಸಂಗ ಕರ್ತವ್ಯ! (ಬಿ)
-ಡುವುದು ದುಸ್ಸಂಗವೆಲ್ಲರ ಕರ್ತವ್ಯ! (ಆ)
-ವುದೂ ಪ್ರಸಾದವೆನ್ನುವುದು ಕರ್ತವ್ಯ!
ದಾತ ದತ್ತನೆಂದರಿವುದು ಕರ್ತವ್ಯ! (ಗ)
-ದ್ಯ, ಪದ್ಯದಿಂದ ಪ್ರಾರ್ಥಿಸುವುದು ಕರ್ತವ್ಯ!
ಕಲ್ಮಷದೂರನಾಗುವುದು ಕರ್ತವ್ಯ! (ಆ)
-ರ್ತರಿಗೆ ನೆರವಾಗುವುದು ಕರ್ತವ್ಯ! (ಸು)
-ವ್ಯವಸ್ಥೆ ನಿರಂಜನಾದಿತ್ಯ ಕರ್ತವ್ಯ!!!
ಹಿತೈಷಿಯಾಗಿರೆಲ್ಲರಿಗೆ ಸಾಹಿತೀ!
ತೀರ್ಥಯಾತ್ರೇ ಮಾಡ್ಬಂದೆನೆಂದ್ರೂ ಸಾಯುತೀ!
ನೀಚವೃತ್ತಿ ಬಿಟ್ಟು ಖ್ಯಾತನಾಗ್ಸಾಹಿತೀ!
ನೂತ್ನ, ಪ್ರಾಚೀನವೆಂದ್ಗುದ್ದಾಡ್ಯೇಕ್ಸಾಯುತೀ?
ಒಂದೆರಡಾಯ್ತೆಂದರಿತಿರು ಸಾಹಿತೀ!
ದುಡಿಯದೇ ಅಪ್ಪನಿಗಾಗ್ಯೇಕ್ಸಾಯುತೀ?
ದಿಕ್ಕುಗೆಟ್ಟು ಹೋಗಿ ಮುಳುಗ್ಬೇಡ್ಸಾಹಿತೀ! (ಅ)
-ನವರತ ಧ್ಯಾನ ಮಾಡದೇಕ್ಸಾಯುತೀ?
ಸಾಕಾರದ ಹುಚ್ಚು ಸಾಕಿನ್ನು ಸಾಹಿತೀ! (ಸಾ)
-ಯುಜ್ಯಕ್ಕಾಕಾರ ಕಲ್ಪಿಸ್ಯೇಕೆ ಸಾಯುತೀ? (ಪ)
-ತೀ, ನಿರಂಜನಾದಿತ್ಯನಂತಾಗ್ಸಾಹಿತೀ!!!
ದಿವ್ಯ ನಾಮವನದು ಬೊಮ್ಮಾ! (ಜಿ)
-ದ್ದುಗಿದ್ದವನಿಗಿಲ್ಲವಮ್ಮಾ!
ಕಂದೆರೆವ ಕರುಣಾಳ್ಬೊಮ್ಮಾ! (ಕ)
-ಡು ಪಾಪಿಯನ್ನುದ್ಧರಿಪಮ್ಮಾ!
ಬಂಧುವಾಗಿಹನೆಲ್ಲರ್ಗ್ಬೊಮ್ಮಾ! (ಸೊ)
-ದೆಯಂತವ್ನ ವಚನವಮ್ಮಾ! (ಅ)
-ನನ್ಯ, ಭಕ್ತಿಗೊಲಿವಾ ಬೊಮ್ಮಾ! (ಬೊ)
-ಮ್ಮಾ, ನಿರಂಜನಾದಿತ್ಯನಮ್ಮಾ!!!
-ದಿ, ಮಧ್ಯಾಂತ ರಹಿತಾದಿಯೇನೇ?
ಯೇಸು ದಿನ ಹೀಗಿರುವುದೇನೇ?
ನೇರದಾರಿ ಹಿಡೀಬಾರದೇನೇ?
ನೀಚ ಸಂಗ ಬಿಡಬಾರದೇನೇ?
ನಾನಾರೆಂದರಿತಿರುವೆಯೇನೇ?
ನಾದ, ಬಿಂದು, ಕಲಾತೀತಲ್ವೇನೇ?
ದಿಗಂಬರನಾನೆಂದರಿಯ್ದೇನೇ? (ಛಾ)
-ಯೇಶ್ವರಿಯೆಂಬವಳ್ನೀನಲ್ವೇನೇ? (ನೀ)
-ನೇ, ಶ್ರೀ ನಿರಂಜನಾದಿತ್ಯ ನಾನೇ!!!
-ಳಿ, ಮಳೆಗಂಜಳಿಯಾ ಗೆಳೆಯ! (ಕಾ)
-ಯ ಮೋಹಳಿದಳಿಯಾ ಗೆಳೆಯ! (ಆ)
-ನತೋದ್ಧಾರನಳಿಯಾ ಗೆಳೆಯ!
ದೇವನಾದವಳಿಯಾ ಗೆಳೆಯ!
ಕಪಟಾತೀತಳಿಯಾ ಗೆಳೆಯ! (ಅ)
-ಮ್ಮಾನೆಂಬಾತ್ಮನಳಿಯಾ ಗೆಳೆಯ! (ಹ)
-ಗೆತನ ಬಿಟ್ಟಳಿಯಾ ಗೆಳೆಯ! (ಇ)
-ಳೆಯಧಿನಾಥಳಿಯಾ ಗೆಳೆಯ! (ಪ್ರಿ)
-ಯ, ನಿರಂಜನಾದಿತ್ಯಾ ಗೆಳೆಯ!!!
ಬಂದ್ಯೇನೆ ಪ್ರಸಾದ ತಿಂದ್ಯೇನೇ? (ವೈ)
-ದ್ಯೇಶ್ವರಾರೋಗ್ಯದಾತಲ್ವೇನೇ? (ದಿ)
-ನೇದಿನೇ ಗುಣ ಕಾಣ್ಬೇಕ್ತಾನೇ?
ಪ್ರಯತ್ನ ಮಾಡ್ದಿರ್ಬಹುದೇನೇ?
ಸಾಯುಜ್ಯ ಸುಮ್ಮಗಾಗ್ತದೇನೇ? (ಉ)
-ದಯವಾದ್ರೂ ಏಳ್ಬಾರ್ದೇನೇ?
ತಿಂದ್ಮಜಾ ಮಾಡ್ಲಿಕ್ಜನ್ಮವೇನೇ? (ಆ)
-ದ್ಯೇನೇ, ಶಬರಿಯಂತಾದ್ಯೇನೇ? (ಏ)
-ನೇ, ನಿರಂಜನಾದಿತ್ಯಾದ್ಯೇನೇ???
ಮಾರ್ಗದರ್ಶಿ ನೀನು ಗುರುದೇವಾ! (ಸ್ವ)
-ರ್ಗ, ಮರ್ತ, ಪಾತಾಳಾಧೀಶ ದೇವಾ!
ದಯೆ ನಿನ್ನದೆನ್ನ ಬಲ ದೇವಾ! (ಸ್ಪ)
-ರ್ಶಿಸೀ ಪಾದ ಧನ್ಯನಾದೆ ದೇವಾ!
ನೀನೇ ನಾನಾದ್ಮೇಲೇನ್ಭಯ ದೇವಾ? (ಅ)
-ನುಮಾನ ಬರದಿರಿಸು ದೇವಾ!
ಗುಣಾವಗುಣಕ್ಕಾರ್ಹೊಣೆ ದೇವಾ?
ರುಜುಮಾರ್ಗಿ ನೀನೇ ಗುರುದೇವಾ!
ದೇವನೆನಗನ್ಯನಿಲ್ಲ ದೇವಾ! (ಶಿ)
-ವಾ, ಶ್ರೀ ನಿರಂಜನಾದಿತ್ಯ ದೇವಾ!!!
-ರದಾಗಿಹುದಿದರಿಂದ ನಿಜರೂಪ! (ಹ)
-ಗೆತನಕೆ ಕಾರಣಜ್ಞಾನ ಸ್ವರೂಪ!
ಆನಂದ ಕೆಟ್ಟಾಗ್ವುದು ರಾಕ್ಷಸರೂಪ!
ರೋಗಾದಿಗಳಿಂದಾಗುವುದು ಕುರೂಪ!
ಪರಮಪಾವನ ಪರಮಾತ್ಮ ದೀಪ!
ಒಳ, ಹೊರಗಿನ ಬೆಳಕೀ ಪ್ರದೀಪ! (ಕಾ)
-ಳಸಂತೆಯ ನಾಶಕ್ಕೆ ಬೇಕ್ಙ್ಞಾನ ದೀಪ! (ನ)
-ಗೆಮೊಗದಿಂದಾಗ ಶೋಭಿಪುದು ರೂಪ!
ಪ್ರತಿಕ್ಷಣಾಗ್ಲಿದಕ್ಕಾಗಿ ರಾಮ ಜಪ!
ಲಾಭಪ್ರದವಿಹ ಪರಕ್ನಾಮ ಜಪ! (ದೀ)
-ಪ, ನಿರಂಜನಾದಿತ್ಯಾನಂದ ಸ್ವರೂಪ!!!
ಸಮಯ ಸಿಕ್ಕಿದಾಗಪ್ಪನ ನೋಡ್ಕಣ್ಣೇ [ಕಾ]
-ಮಭಾವದಿಂದ ಕನ್ಯೆಯ ನೋಡ್ಬೇಡ್ಕಣ್ಚೇ! (ಕಾ)
-ಯಮೋಹದಾನಂದವೆಷ್ಟು ದಿವಸ್ಕಣ್ಣೇ! (ಪು)
-ಸಿಮಾಯೆಗ್ಮರುಳಾಗಿ ಹಾಳಾಗ್ಬೇಡ್ಕಣ್ಣೇ! (ಇ)
-ಕ್ಕಿ, ಸಾಕಿದ ತಾಯ್ಸ್ವರೂಪೆಲ್ಲೆಲ್ನೋಡ್ಕಣ್ಣೇ!
ದಾಶರಥಿಯ ಸದಾ ನೋಡುತ್ತಿರ್ಕಣ್ಣೇ! (ನಿ)
-ಗರ್ವಿಯಾಗ್ಯವನ ಶ್ರೀಪಾದ ನೋಡ್ಕಣ್ಣೆ! (ಕ)
-ಪ್ಪ, ಕಾಣಿಕೆಯದಕ್ಕೊಪ್ಪಿಸು ನೀನ್ಕಣ್ಣೇ! (ವಿ)
-ನಯದಿಂದ ನಮಿಸ್ಯದ್ನೊತ್ತಿಕೊಳ್ಕಣ್ಣೇ!
ನೋವೆಲ್ಲಾ ಪರಿಹಾರವಾಗ್ವುದದ್ರಿಂದ್ಕಣ್ಣೇ! (ಕು)
-ಡ್ಕನ ಕಣ್ಣುಗಳಂತಾದ್ರದು ಭೂತ್ಕಣ್ಣೇ! (ಕ)
-ಣ್ಣೇ! ನಿರಂಜನಾದಿತ್ಯಾತ್ಮನ ನೋಡ್ಕಣ್ಣೇ!!!
-ವ ಶ್ರೀ ಕೃಷ್ಣನಿಗೆ ಆ ಅಮ್ಮ!
ದೋಷವಾಗದಿದ್ರಿಂದೆಂದ್ಲಮ್ಮ! (ದೋ)
-ಸೆ ಕೂಡ್ಲೇ ತಂದುಬಿಟ್ಲಾ ಅಮ್ಮ!
ತಿನ್ನಿಸಿಯೆ ಬಿಟ್ಟಳದಮ್ಮ! (ಏ)
-ನ್ಬೇಕೀಗ ಕುಡೀಲಿಕ್ಕೆಂದ್ಲಮ್ಮ! (ಏ)
-ಕೆಂಬಷ್ಟ್ರಲ್ಲಿ “ಟೀ” ತಂದಳಮ್ಮಾ! (ಕ)
-ದ್ಲದೇ ಹಿಡ್ಕೊಂಡು ನಿಂತಿದ್ಲಮ್ಮ! (ಬೊ)
-ಮ್ಮಾ, ನಿರಂಜನಾದಿತ್ಯೆಂದ್ಲಮ್ಮ!!!
-ತ್ರದಂತೆಲ್ಲಾ ಕೆಲಸವಾಗಿಲ್ಲ! (ತ)
-ಗಾದೆ ಮಾಡಿದ್ರೆ ಫಲವೇನಿಲ್ಲ! (ಪ)
-ರಮಾತ್ಮನಿಷ್ಟದಂತಾಗ್ಬೇಕೆಲ್ಲ!
ನೇಮವನದು ತಪ್ಪಿಪರಿಲ್ಲ!
ಕಿವಿ ಮಾತಿದೆಂದನ್ನಬೇಕಿಲ್ಲ! (ನಿ)
-ನ್ನೂರವರೆಲ್ಲಾ ತಿಳೀಲಿದೆಲ್ಲ!
ಬಂಧನವನಿಗಾರೆದೇನಿಲ್ಲ!
ದಿನ, ರಾತ್ರಿ ಸೇವೆ ಮಾಡದಿಲ್ಲ! (ಘ)
-ಲ್ಲ, ನಿರಂಜನಾದಿತ್ಯಜ್ಞಾನ್ಯಲ್ಲ!!!
-ನ್ನ, ಪಾನಾದಿಗಳ ಕೊಡ್ವವರಿನ್ಯಾರು?
ಮಾತಾ, ಪಿತನಾಗಿರ್ಪವನಾ ಸದ್ಗುರು!
ತಿಳಿಯಬೇಕಿದ ಭಕ್ತರಾದವರು!
ಗೆಳೆಯನಾಗಿಯೂ ಇರುವನಾ ಗುರು!
ದುಷ್ಟರವನಿಂದ ದೂರವಾಗಿಹರು!
ರಾಗ, ದ್ವೇಷದಿಂದ ಮದಾಂಧರವರು! (ಕ)
-ಡುಪಾಪಿಗಳೆಂದೆನೆಸಿದಂಥವರು!
ವರಗುರು ದ್ರೋಹಿಗಳಾದಾ ನೀಚರು! (ಅ)
-ವರವರ ಕರ್ಮಕ್ಕವ್ರವರ್ಪಾತ್ರರು! (ಆ)
-ರಾಮವನಿಂದೆಲ್ಲಾ ಸಾಧು ಸಜ್ಜನರು! (ಗು)
-ರು ಶ್ರೀ ನಿರಂಜನಾದಿತ್ಯನೆಂಬುವರು!!!
-ವಗರ್ಪಿಪಾಹಾರ ಜೀವರಿಗಾಹಾರ!
ನಾನಾರೀತಿ ಕಟ್ಟಿ ಹಾಕುವರಾಹಾರ!
ಹಾದಿ, ಬೀದಿಯಲ್ಲಿ ಮಾರುವರಾಹಾರ! (ದ)
-ರಗಳಾದರೋ ಸ್ವೇಚ್ಛಾನುಸಾರಾಹಾರ!
ಜೀನಗೂ ಬೇಕೊಂದಲ್ಲೊಂದು ದಿನಾಹಾರ!
ವೇಷ, ಭೂಷಣಗಳಿಗಾಧಾರಾ ಹಾರ!
ಶರೀರ ಸೌಂದರ್ಯಕ್ಕ್ಬೇಕೊಳ್ಳೆಯಾಹಾರ!
ಗೇದುಂಬುವನಿಗಿದೊಂದುದ್ಯೋಗಾಹಾರ! (ಅ)
-ನುದಿನ ಬೇಕೆಲ್ಲರಿಗೆಲ್ಲೆಲ್ಲಾಹಾರ!
ಭಾವಿಕ ಭಕ್ತನಿಗೆ ಪ್ರಸಾದಾಹಾರ! (ವ)
-ರದ ನಿರಂಜನಾದಿತ್ಯಗಿಂಥಾ ಹಾರ!!!
ಅತಿ ಆದ್ರೆ ಶ್ರೀಪತಿಗೂ ಅಪಖ್ಯಾತಿ! (ದಿ)
-ತಿಸುತೇಂದ್ರತಿಕಾಮಿಯಾಗ್ಯೇನಾಯ್ತ್ಗತಿ?
ಆರಾದರೇನೆಲ್ಲಕ್ಕಿರಬೇಕೊಂದ್ಮಿತಿ! (ನಿ)
-ದ್ರೆಯತಿಯಾದ್ಕುಂಭಕರ್ಣಗಧೋಗತಿ!
ಶ್ರೀವತ್ಸ ಹೋಗ್ಯಾಯ್ತು ಭೃಗುಗೆ ದುಃಸ್ಥಿತಿ!
ಪರಮೇಶ್ವರಗಾಯ್ತು ಕಾಪಾಲಿ ಸ್ಥಿತಿ! (ಸ)
-ತಿಪತಿಯರ ಐಕ್ಯವೇ ಮುಕ್ತಿ ಸ್ಥಿತಿ!
ಗೂಡೊಳಗಿನ ಗಿಳಿಗಾರಾಮ ಗತಿ!
ಅನವರತದಕ್ಕವನದೇ ಸ್ಮೃತಿ!
ಪತಿತ ಪಾವನನಪ್ಪುದೇ ಸಂಸ್ಕೃತಿ!
ಖ್ಯಾತಿಯಾತನಿಗೆ ನಿರತಾತ್ಮ ಶಾಂತಿ! (ಪ್ರೀ)
-ತಿ, ನಿರಂಜನಾದಿತ್ಯನ ನಿಜಸ್ಥಿತಿ!!!
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ