ಧ್ಯಾನ ಮಿಂಚು: ಭಾಗ 5

ದೇಹಕ್ಕೆಷ್ಟು ಮಾಡಿದ್ರೂ ಸಾಲ!

ರಿನಾಮಕ್ಕಿಲ್ಲೆಂದೂ ಸೋಲ! (ಬೆ)
-ಕ್ಕೆಯೆಂಬುದದೇ ಮಾಯಾಜಾಲ! (ನಿ)
-ಷ್ಟುರೋಕ್ತಿ ಘೋರ ವಿಷಜ್ವಾಲ!
ಮಾಧವ ಹೃದಯ ವಿಶಾಲ! (ನೋ)
-ಡಿದವನ ಜನ್ಮ ಸಫಲ! (ತ)
-ದ್ರೂಪಿಯಾಗಿರ್ಪ ಬಹುಕಾಲ!
ಸಾಯುಜ್ಯ ಕೊನೇ ಪ್ರತಿಫಲ! (ಬಾ)
-ಲ ನಿರಂಜನಾದಿತ್ಯಾ ಫಲ!!!

ಅತ್ಯಾಸೆಯ ಕಪ್ಪು ಕಾಗೆಯಪ್ಪ ಕಾಗೆ! (ನಿ)

-ತ್ಯಾನಂದದ ದಾರಿ ತೋರುವಪ್ಪ ಕಾಗೆ! (ದೋ)
-ಸೆ ಚೂರ್ಗಳೊಂದೇ ತಿನ್ಬಾರ್ದೆಂಬಪ್ಪ ಕಾಗೆ! (ಸಾ)
-ಯ ಬೇಡಿ ಕುಕ್ಕ್ಯೊಬ್ರನ್ನೊಬ್ರೆಂಬಪ್ಪ ಕಾಗೆ!
ಳ್ಳರಂತೊಳಗ್ಬರ್ಬೇಡ್ಯೆಂಬಪ್ಪ ಕಾಗೆ! (ತ)
-ಪ್ಪು ಮಾಡಿದ್ರೆ ಶಿಕ್ಷೆಯಿದೆಂಬಪ್ಪ ಕಾಗೆ!
ಕಾಯ್ವನೆಲ್ಲರ ನಾನೆಂಬಪ್ಪ ಕಾಗೆ!
ಗೆಳೆಯಾನೆಲ್ಲಾ ಲೋಕಕ್ಕೆಂಬಪ್ಪ ಕಾಗೆ! (ಗಾ)
-ಯ ಮಾಯಿಸುವವ ನಾನೆಂಬಪ್ಪ ಕಾಗೆ! (ಹ)
-ಪ್ಪಳ ಸೆಂಡಿಗೆನಗಿಷ್ಟೆಂಬಪ್ಪ ಕಾಗೆ!
ಕಾರ್ಯ ಕಾರಣ ಕರ್ತಾನೆಂಬಪ್ಪ ಕಾಗೆ! (ಕಾ)
-ಗೆ ನಿರಂಜನಾದಿತ್ಯನೆಂಬಪ್ಪ ಕಾಗೆ!!!

ಶರೀರಾರೋಗ್ಯಕ್ಕಗ್ರ ಸ್ಥಾನ!

ರೀತಿ ನೀತಿಯಿದ್ದರಾ ಸ್ಥಾನ!
ರಾಜಸಾಹಾರಕ್ಕಿಲ್ಲಾ ಸ್ಥಾನ!
ರೋಗ ಬರದಂತಿದ್ರಾ ಸ್ಥಾನ! (ಯೋ)
-ಗ್ಯ ಸ್ವಾತಿಕಾಹಾರಕ್ಕಾ ಸ್ಥಾನ! (ಸಿ)
-ಕ್ಕ ಬೇಕಲ್ಲರಿಗಾತ್ಮ ಸ್ಥಾನ!
ಗ್ರಹಚಾರ ಬಿಟ್ರೆಲ್ಲಾ ಸ್ಥಾನ!
ಸ್ಥಾನ, ಮಾನಕ್ಕೆ ಮುಖ್ಯಾ ಸ್ಥಾನ! (ಜ್ಞಾ)
-ನ ನಿರಂಜನಾದಿತ್ಯ ಸ್ಥಾನ!!!

ನಮಸ್ಕಾರವೆಂಬುದೊಂದು ಸಂಪ್ರದಾಯ!

ನಸ್ಸು ಶುದ್ಧವಿದ್ದ್ರರಿಂದಾದಾಯ! (ಮಿ)
-ಸ್ಕಾಡ್ಬಾರದದ್ಗುರಿಯಿಂದೆಂಬುದೇ ಧ್ಯೇಯ! (ವ)
-ರ ಗುರುವಿನಾಜ್ಞೆಯಂತಾಗ್ಬೇಕ್ಸ್ವಾಧ್ಯಾಯ!
ವೆಂಕಟೇಶನಿದಕ್ಕೆ ಸದಾ ಸಹಾಯ!
ಬುತ್ತಿಯಿದುತ್ತಮಾರೋಗ್ಯಕ್ಕೆ ಆಶ್ರಯ! (ಹಿಂ)
-ದೊಂದು, ಮುಂದೊಂದೆಂದರಾಗುವುದು ಕ್ಷಯ!
ದುಸ್ಸಂಗದಿಂದುಂಟಾಗ್ವುದು ಸದಾಪಾಯ!
ಸಂತ ಸಮಾಗಮಾವಾಗ್ಲಮೃತ ಪ್ರಾಯ!
ಪ್ರಗತಿಯಿದ್ರಿಂದೆಂಬುದಾರ್ಯಾಭಿಪ್ರಾಯ!
ದಾತ, ನಾಥ, ದಯಾಮಯ ದತ್ತಾತ್ರೇಯ! (ಪ್ರಿ)
-ಯ, ನಿರಂಜನಾದಿತ್ಯಾತ್ಮಾನಂದೋದಯ!!!

ಭಕ್ತವತ್ಸಲಾ ನೀಡೋ ಸತ್ಫಲಾ! (ಯು)

-ಕ್ತ ಸೇವೆ ತಗೊಳ್ಳೋ ಶೇಷಾಚಲ!
ತ್ಸ ನಾನಲ್ಲೇನೋ ಆದಿ ಮೂಲಾ? (ಸ)
-ತ್ಸಹವಾಸ್ಯಾನಲ್ವೇನೋ ನಿರ್ಮಲಾ? (ಮಾ)
-ಲಾ, ಕಮಂಡಲುಧರಿತ್ರಿ ಬಾಲಾ!
ನೀನೇ ಗತಿಯೆನಗೆ ಮಾಲೋಲಾ! (ಕೊ)
-ಡೋ ದರ್ಶನವೀಗ ವನಮಾಲಾ!
ಕಲ ಕಲಾ ಮೂರ್ತಿ ಗೋಪಾಲಾ! (ಚಿ)
-ತ್ಫಲವಿತ್ತುದ್ಧರಿಸೋ ನೃಪಾಲಾ! (ಕಾ)
-ಲಾ ನಿರಂಜನಾದಿತ್ಯಾತ್ಮ ಜ್ವಾಲಾ!!!

ನಾನಿರಬಾರದೆಂದಳ್ಚಿನ್ನಮ್ಮ!

ನಿನಗಿಲ್ಲ ಸಾವೆಂದನಾ ಬೊಮ್ಮ! (ತೋ)
-ರಬೇಕದೆನಗೆಂದಳ್ಚಿನ್ನಮ್ಮ!
ಬಾ





ಕಾಲ್ನೀನಲ್ಲೆಂದನಾ ಬೊಮ್ಮ! (ಪ)
-ರಮಾರ್ಥಾನರಿಯೆಂದಳ್ಚಿನ್ನಮ್ಮ! (ಅ)
-ದೆಂಬಾತ್ಮನೇ ನೀನೆಂದನಾ ಬೊಮ್ಮ! (ಆ)
-ದನುಗ್ರಹ ಮಾಡೆಂದಳ್ಚಿನ್ನಮ್ಮ! (ಕ)
-ಳ್ಚಿಹೋಗ್ಲೆಲ್ಲಾ ಬಂಧವೆಂದಾ ಬೊಮ್ಮ! (ನ)
-ನ್ನ ಜ್ಞಾನ ಹೋಯ್ತಿಗೆಂದಳ್ಚಿನ್ನಮ್ಮ! (ಅ)
-ಮ್ಮ ನಿರಂಜನಾದಿತ್ಯನೆಂದ್ಬೊಮ್ಮ!!!

ಹೊಗಳಿಕೆಯಿಂದಾವ ಲಾಭವೂ ಇಲ್ಲ! (ತೆ)

-ಗಳಿಕೆಯಿಂದ ಯಾವ ನಷ್ಟವೂ ಇಲ್ಲ! (ಬಾ)
-ಳಿನ ಸೂತ್ರಾತ್ಮಗಾರ ಅಡ್ಡಿಯೂ ಇಲ್ಲ!
ಕೆಟ್ಟ ಮನಸ್ಸಿಗವನಡಿಯಾಳಲ್ಲ! (ಬಾ)
-ಯಿಂದಾಡದೇನೇ ಮಾಡಿಬಿಡುವನೆಲ್ಲ!
ದಾಸ, ದಾಸಿಯರ ಹಂಗವನಿಗಿಲ್ಲ! (ಭ)
-ವರೋಗಕ್ಕಾತ ದಾರಿ ತೋರದೇನಿಲ್ಲ!
ಲಾಲನೆ, ಪಾಲನೆಯುದ್ಯೋಗ ಬಿಟ್ಟಿಲ್ಲ!
ಜನಾನಂದನುಭವಿಸದೇನಿಲ್ಲ! (ಆ)
-ವೂರೀವೂರಲೆಯುವವನವನಲ್ಲ!
ದ್ದಲ್ಲಿದ್ದಾಗುವುದು ಸೇವೆಗಳೆಲ್ಲ! (ಬ)
-ಲ್ಲ, ನಿರಂಜನಾದಿತ್ಯರಿತಿಹನೆಲ್ಲ!!!

ಉಗ್ರಾಣದಲ್ಲಿದೆ ಹೆಗ್ಗಣದ ಹೆಣ!

ಗ್ರಾಮಸ್ಥರೊಂದಾಗ್ಯೆತ್ತಿಹಾಕ್ಬೇಕಾ ಹೆಣ! (ಕ್ಷ)
-ಣಕ್ಷಣಕ್ಕೂ ಕೊಳೆಯುತ್ತಿಹುದಾ ಹೆಣ!
ಫೇದಾರಗೆ ಹೆದ್ರಿ ಓಡದಾ ಹೆಣ! (ಅ)
-ಲ್ಲಿ, ಇಲ್ಲಿ ತಡಕಿದ್ರೆ ಸಿಕ್ಕದಾ ಹೆಣ! (ಎ)
-ದೆಗೆಡ್ದರಸ್ಬೇಕುಗ್ರಾಣದಲ್ಲಾ ಹೆಣ!
ಹೆಚ್ಚು ವಿಳಂಬವಾದ್ರನಾರೋಗ್ಯಾ ಹೆಣ! (ಜ)
ಗ್ಗದಾವ ಯಂತ್ರ, ಮಂತ್ರ, ತಂತ್ರಕ್ಕಾ ಹೆಣ! (ಜಾ)
-ಣತನದಿಂದ ಹೊರಗೆ ತಂದ್ರೆ ಗುಣ!
((ತಂ)) ದಮೇಲೊಳಗೆಲ್ಲಾ ತೊಳೆದ್ರೆಲ್ಲಾ ಗುಣ!
ಹೆರವರಿಗೂ, ತನಗೂ ಆಗ ಗುಣ! (ಹೆ)
-ಣ, ನಿರಂಜನಾದಿತ್ಯಗೆ ರೋಗ ಗಣ!!!

ಈಗ ಮಾಡತಕ್ಕದ್ದನ್ನೀಗಲೇ ಮಾಡು! (ಆ)

-ಗತಕ್ಕದ್ದಾಗ್ವಾಗಾನಂದದಿಂದ ನೋಡು!
ಮಾಡುವಾಗ ಪೂರ್ಣ ಶ್ರದ್ಧೆಯಿಂದ ಮಾಡು! (ಮಾ)
-ಡಲಿಕ್ಕಾಗದೇ ಹೋದಾಗ ಬಿಟ್ಟೇ ಬಿಡು!
ಪ್ಪು ತಿದ್ದಿಕೊಂಡಿನ್ನೊಮ್ಮೆ ಯತ್ನ ಮಾಡು! (ಸ)
-ಕ್ಕರೆ ಸಿಹಿಯೆಂಬುದನ್ನು ತಿಂದ್ನೋಡ್ಯಾಡು! (ಉ)
-ದ್ದಗ್ಲಳ್ತೆ ನೋಡಿ ಬಟ್ಟೆ ಖರೀದಿ ಮಾಡು! (ನ)
-ನ್ನೀ ಮಾತಿನ ಗುಣನುಭವಿಸಿ ನೋಡು!
ಡ್ಬಿಡಿಲ್ಲದೆಲ್ಲಾ ನಿಧಾನವಾಗ್ಮಾಡು!
ಲೇಶವು ಸಂಶಯಪಡದೆಲ್ಲಾ ಮಾಡು!
ಮಾತನ್ಯರದ್ದಕ್ಕೆ ಕಿವಿಗೊಡ್ದೇ ಮಾಡು! (ಕೂ)
-ಡು ನಿರಂಜನಾದಿತ್ಯಾನಂದವ ನೋಡು!!!

ಸಮಯ ಸಿಕ್ಕಿದಾಗಲೇ ಸುಮುಹೂರ್ತ!

ನಸ್ಸಿಗೆ ಹರ್ಷವಿದ್ದಾಗಾ ಮುಹೂರ್ತ!
ದುನಾಥನಿಗಾನಂದಾ ಸುಮುಹೂರ್ತ! (ಘಾ)
-ಸಿ ಮಾಡದೆಂದೆಂದಿಗೂ ಆ ಸುಮುಹೂರ್ತ! (ದ)
-ಕ್ಕಿಸಿಕೊಳ್ಳದಿರ್ಬಾರ್ದೆಂದಿಗಾ ಮುಹೂರ್ತ!
ದಾರಿ ತೆರೆವುದು ಶಾಂತಿಗಾ ಮುಹೂರ್ತ! (ಯೋ)
-ಗಸಾಧಕನಿಗೆ ಸದಾ ಸುಮುಹೂರ್ತ!
ಲೇಸು ಸದ್ಗುರು ಸೇವೆಗೀ ಸುಮುಹೂರ್ತ!
ಸುರಧೇನು ಸಮಾನವೀ ಸುಮುಹೂರ್ತ!
ಮೂನ್ನೂರರ್ವತ್ತೈದು ದಿನಾ ಸುಮುಹೂರ್ತ!
ಹೂ, ಹಣ್ಣುಗಳ ಕಾಯದಾ ಸುಮುಹೂರ್ತ! (ಕ)
-ರ್ತ, ನಿರಂಜನಾದಿತ್ಯಗಾವ ಮುಹೂರ್ತ???

ಬಹಳ ತಡವಾಯ್ತಿಂದು ಸ್ವಾಮಿ!

ಗ್ಲೆಲ್ಲಾ ದುಡ್ದಾಯಾಸಲ್ವೇ ಪ್ರೇಮಿ? (ಬೆ)
-ಳಕಾದ್ಮೇಲೆ ನಾನಿಂದೆದ್ದೆ ಸ್ವಾಮಿ!
ಪ್ಪೇನಾಗಿಲ್ಲದರಿಂದ ಪ್ರೇಮಿ! (ಬಿ)
-ಡಬಾರದಲ್ಲವೇ ನೇಮ ಸ್ವಾಮಿ? (ಜ)
-ವಾಬ್ದಾರಿ ಪರಮಾತ್ಮಗೆ ಪ್ರೇಮಿ! (ಆ)
-ಯ್ತಿಂದಿವನಿಷ್ಟದಂತಲ್ವೇ ಸ್ವಾಮಿ? (ಅಂ)
-ದು, ಇಂದು, ಮುಂದವನಿಂದ್ಲೇ ಪ್ರೇಮಿ!
ಸ್ವಾಮಿಯಾಜ್ಞೆ ನನಗೇನು ಸ್ವಾಮಿ? (ಸ್ವಾ)
-

, ನಿರಂಜನಾದಿತ್ಯಾತ್ಮ ಪ್ರೇಮಿ!!!

ಮನಸ್ತಾಪಕ್ಕೆಡೆಗೊಡಬೇಡ! (ಅ)

-ನವಶ್ಯವಾಗ್ಯೆಲ್ಲೂ ಹೋಗಬೇಡ! (ಹ)
-ಸ್ತಾದಿಂದ್ರಿಯ ಸಡಿಲ್ಬಿಡಬೇಡ!
(ಉ)ಪಯೋಗವಿಲ್ಲದ ಮಾತಾಡ್ಬೇಡ! (ಬೆ)
-ಕ್ಕೆಗೀಡಾಗಿ ದುಃಖ ಪಡಬೇಡ! (ನ)
-ಡೆವಾಗೆಚ್ಚರ ತಪ್ಪಿರಬೇಡ!
ಗೊಡ್ಡಾಚಾರಕ್ಕೆ ಹುಚ್ಚಾಗಬೇಡ! (ಒ)
-ಡನಾಟ ಕುಡ್ಕರದ್ದೆಂದೂ ಬೇಡ!
ಬೇರೆ ಯಾರ ವಿಚಾರವೂ ಬೇಡ! (ಮೃ)
-ಡ ನಿರಂಜನಾದಿತ್ಯಪದ್ಧಾಡ!!!

ಬ್ರಹ್ಮಜ್ಞಾನಿ ಬ್ರಾಹ್ಮಣನಯ್ಯಾ! (ಬ್ರಾ)

-ಹ್ಮಣಾರನ್ನೂ ದ್ವೇಷಿಸನಯ್ಯಾ!
ಜ್ಞಾನವನದು ಪಕ್ವವಯ್ಯಾ!
ನಿಶ್ಚಲ ತತ್ತ್ವ ಸ್ಥಿತಾತಯ್ಯಾ! (ಸಾಂ)
-ಬ್ರಾಣಿಧೂಪಾತ್ಮಧ್ಯಾನವಯ್ಯಾ! (ಬ್ರ)
-ಹ್ಮಕರ್ಮ ಪರಿಶುದ್ಧವಯ್ಯಾ! (ತೃ)
-ಣ ಕಾಷ್ಠ ವ್ಯಾಪಿಯವನಯ್ಯಾ! (ಅ)
-ನನ್ಯಭಕ್ತಿಗಾದರ್ಶನಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾತಯ್ಯಾ!!!

ರಾಮಮಂದಿರ ಭಜನೆಗಯ್ಯಾ!

ತ್ಯಾವ ವ್ಯವಹಾರಕ್ಕಲ್ಲಯ್ಯಾ!
ಮಂಗ ರಂಗನಾಗಲಿಕ್ಕದಯ್ಯಾ!
ದಿವ್ಯನಾಮ ಜಪಲ್ಲಾಗ್ಬೇಕಯ್ಯಾ!
(ಪ)ರನಿಂದೆಯಾರೂ ಮಾಡ್ಬಾರದಯ್ಯಾ!
ವರೋಗ ಶಾಂತಿಗಿದ್ಮುಖ್ಯಯ್ಯಾ! (ಅ)
-ಜ, ಹರಿ, ಹರರಾಜ್ಞೆಯಿದಯ್ಯಾ!
ನೆರೆ ನಂಬಿ ಧನ್ಯನಾಗ್ಬೇಕಯ್ಯಾ! (ಸಂ)
-ಗ ದುಷ್ಟರದ್ದಿರಬಾರದಯ್ಯಾ! (ಅ)
-ಯ್ಯಾ ನಿರಂಜನಾದಿತ್ಯನಾಗಯ್ಯಾ!!!

ಗುರುದೇವನೊಬ್ಬ ನುರಿತ ಹಜಾಮ! (ನಾ)

-ರುವ ಮಂಡೆಯ ಬೋಳಿಸುವಾ ಹಜಾಮ!
ದೇವರಿಗೆ ಮುಡಿಯಿದೆಂಬಾ ಹಜಾಮ! (ನ)
-ವಯುಗಕ್ಕೂ ನಾನು ಬೇಕೆಂಬಾ ಹಜಾಮ! (ತಾ)
-ನೊಪ್ಪಿದ್ರೆಲ್ಲರೊಪ್ಪಿದಂತೆಂಬಾ ಹಜಾಮ! (ಹ)
-ಬ್ಬಗಳಲ್ಲಾದಾಯ ಹೆಚ್ಚೆಂಬಾ ಹಜಾಮ! (ಅ)
-ನುಯಾಯಿಗಳ್ತನಗ್ತುಂಬೆಂಬಾ ಹಜಾಮ!
ರಿಯಾಯ್ತಿ ತನ್ನಿಂದೆಲ್ಲರ್ಗಂಬಾ ಹಜಾಮ! (ಈ)
-ತಪಸ್ಸೇಕಾಗ್ರತೆಯಿಂದೆಂಬಾ ಹಜಾಮ!
ರಿ, ಹರರೆನಗೊಂದೆಂಬಾ ಹಜಾನು!
ಜಾತಿ, ಮತ, ಭೇದವಿಲ್ಲೆಂಬಾ ಹಜಾಮ!
ಹಾತ್ಮ ನಿರಂಜನಾದಿತ್ಯಾ ಹಜಾಮ!!!

ನಿನ್ನ ಬಳಿ ಸದಾ ಇರಲೇನುಪಾಯ! (ನಿ)

-ನ್ನನ್ನು ತಿಳಿಯುವುದು ಪ್ರಥಮೋಪಾಯ!
ಬಿಳಿಕಿಷ್ಟಸಿದ್ಧಿಗೆ ದುಡಿವೋಪಾಯ! (ಹೇ)
-ಳಿ ದಂತಿರುವಾಭ್ಯಾಸಾಮೇಲಿನೋಪಾಯ!


ಈಪ ಸೇರಲಿಕ್ಕಿದೊಳ್ಳೆಯೋಪಾಯ!
ದಾರಿಯುತ್ಸಾಹದಿಂದ ನಡೆವೋಪಾಯ!
ಳೆಯಸುಖದಾಸೆ ಬಿಡುವೋಪಾಯ! (ಪ)
-ರತತ್ತ್ವ ಸ್ವರೂಪೇಚ್ಛೆ ಸತತೋಪಾಯ!
ಲೇಶವೂ ಎದೆಗುಂದದಿರುವೋಪಾಯ! (ತ)
-ನುಭಾವದಿಂದ ಹೊರಗಾಗುವೋಪಾಯ! (ಕೃ)
-ಪಾಫಲದಾ ಸಾ

ಈಪ್ಯಕ್ಕಿದೆಲ್ಲೋಪಾಯ! (ಪ್ರಿ)
-ಯ ನಿರಂಜನಾದಿತ್ಯನಿಂದ ಸಹಾಯ!!!

ದಾರವಿದೆ ಬಟ್ಟೆಗಾಗುವಷ್ಟು! (ಬಾ)

-ರದುಪಯೋಗಕ್ಕೀಗೆಲ್ಲಾ ಗಂಟು!
ವಿವೇಕ್ಬೇಕು ಬಿಚ್ಲಿಕ್ಕೆ ಸಾಕಷ್ಟು! (ಕಂ)
-ದೆರೆಯದಿದ್ರೆ ತೋರದಾ ಗಂಟು!
ಲವೇನೋ ಇದೆ ಬೇಕಾದಷ್ಟು! (ಹೊ)
-ಟ್ಟೆಗಿಷ್ಟು ಹಾಕಿಕ್ಕೊಂಡ್ಬಿಚ್ಚಾ ಗಂಟು! (ಭೋ)
-ಗಾಸಕ್ತಿಯಿರಬಾರದೊಂದಿಷ್ಟು!
ಗುರುಭಕ್ತಿಯಿಂದ್ಬಿಚ್ಚೇಕಾ ಗಂಟು! (ಅ)
-ವಕಾಶ ಬೇಕು ಸಾಕಾಗುವಷ್ಟು! (ಎ)
-ಷ್ಟು? ನಿರಂಜನಾದಿತ್ಯ ಕೊಟ್ಟಷ್ಟು!!!

ಕುಡಿಕನಾಗಬಾರದರಸ! (ಆ)

-ಡಿದಂತಿರಲಾರನಂಥರಸ!
ಳ್ಳ, ಸುಳ್ಳರೊಡನೆ ಸರಸ!
ನಾಳೆಯಾಸೆ ತೋರಿ ಮಾಳ್ಪ ಮೋಸ! (ಸಂ)
-ಗಡಿಗರಲ್ಲಾಗಾಗ ವಿರಸ!
ಬಾಳಿನ ಗುರಿಯವ ಯೋಚಿಸ! (ವ)
-ರಗುರು ಉಪದೇಶ ಲಕ್ಷಿಸ! (ಅ)
-ದರಿಂದವನಿಗಾಗ್ವುದಾಯಾಸ! (ಊ)
-ರವಗೇನುಪಯೋಗಾ ಅರಸ?
ದಾ ನಿರಂಜನಾದಿತ್ಯರಸ!!!

ಮಂತ್ರಿ ಕುಡ್ಕನಾದ್ರೋಡದು ರಾಜ್ಯ ಯಂತ್ರ!

ತ್ರಿಕಾಲದಲ್ಲೂ ಮಾಡುತ್ತಿರ್ಪ ಕುತಂತ್ರ!
ಕುಲ, ಶೀಲಕ್ಕೊಪ್ಪದಂಥಾ ಯಂತ್ರ ಮಂತ್ರ! (ಕೆ)
ಡ್ಕರೊಡಗೂಡ್ಕಳ್ಳೊಳ್ಳುವನು ಸ್ವತಂತ್ರ!
ನಾಡಿಗದರಿಂದುಂಟಾಗ್ವುದ್ಪರತಂತ್ರ!
ದ್ರೊ

ಹಿ ತಾನಾಗದೇ ಆಗ್ಬೇಕು ಸತ್ಪುತ್ರ! (ಬ)
-ಡವರ ಬಂಧುವಾಗಿರಬೇಕಾ ಪುತ್ರ!
ದುಸ್ಸಹವಾಸದಿಂದ ನಾಶ ಸರ್ವತ್ರ!
ರಾಜಕಾರಣಿಯಾಗ್ಬೇಕು ಕೃಪಾ ಪಾತ್ರ! (ತ್ಯಾ)
-ಜ್ಯವಾಗ್ಬೇಕೆಲ್ಲಾ ದುರ್ವಿಷಯ ಚರಿತ್ರ! (ತ್ರ)
-ಯಂಬಕನಿಗಾಗ್ಬೇಕವ ಗುರುಪುತ್ರ!
(ಮಿ)-ತ್ರ ನಿರಂಜನಾದಿತ್ಯಾ ಸದ್ಗುರುಪುತ್ರ!!!

ಮುದ್ದಿಸಿದರ್ಗೋಪಿಯರೆಲ್ಲಾ ಕೆಂಗಲ್ಲಾ! (ಸ)

-ದ್ದಿಲ್ದೇ ಹಾಲ್ಮೊಸ್ರು ಕದ್ದವನಾ ಕೆಂಗಲ್ಲಾ!
ಸಿಕ್ಕನಾರ ಕೈಗೆಂಬವನಾ ಕೆಂಗಲ್ಲಾ!
ಯೆ ಗೋವ್ಗಳ್ಗೆ ತೋರ್ದವನಾ ಕೆಂಗಲ್ಲಾ! (ಊ)
-ರ್ಗೋಲ್ಹೆಳವರಿಗಾದವನಾ ಕೆಂಗಲ್ಲಾ! (ಪಾ)
-ಪಿಯ ಪಾವನಗೈವವನಾ ಕೆಂಗಲ್ಲಾ!
ಜ್ಞ ರಕ್ಷಣೆ ಮಾಳ್ಪವನಾ ಕೆಂಗಲ್ಲಾ! (ಊ)
-ರೆನಗೆ ಜಗತ್ತೆಂಬವನಾ ಕೆಂಗಲ್ಲಾ! (ಉ)
-ಲ್ಲಾಸವೆಲ್ಲರ್ಗೀವಾ ಗೊಲ್ಲನಾ ಕೆಂಗಲ್ಲಾ! (ಏ)
-ಕೆಂಬವರ್ಗೆ ಜೋಕೆಂಬವನಾ ಕೆಂಗಲ್ಲಾ! (ಮಾ)
-ಗಧಾದಿಗಳ ಕೊಂದವನಾ ಕೆಂಗಲ್ಲಾ! (ಎ)
-ಲ್ಲಾ ನಿರಂಜನಾದಿತ್ಯೆಂಬವ್ನಾ ಕೆಂಗಲ್ಲಾ!!!

ಗಧಾಧರ ದಗಾಕೋರನೇನಯ್ಯಾ?

ಧಾರ್ಮಿಕ ಸ್ವಭಾವ ಅವನದಯ್ಯಾ!
ಕ್ಕೆ ಶಾಂತಿಗವನಿಂದಾಗದಯ್ಯಾ!
ಮಾದೇವಿಗವನೇ ಪತಿಯಯ್ಯಾ!
ರ್ಶನೇಂದ್ರಿಯ ನಿಗ್ರಹದಿಂದಯ್ಯಾ!
ಗಾಡ್ಯರ್ಜುನನದ್ದೋಡಿಸಿದನಯ್ಯಾ!
ಕೋದಂಡಧಾರಿಯೂ ಅವನೇ ಅಯ್ಯಾ!
ತಿಪತಿ ಪಿತ ಶ್ರೀಹರಿಯಯ್ಯಾ!
ನೇಮ, ನಿಷ್ಠೆಗವನಾರ್ಧನಯ್ಯಾ!
ಶ್ವರದಾಸೆ ಅವನಿಗಿಲ್ಲಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾ ಗಧಾಧರಯ್ಯಾ!!!

ಎಂದೂ ಕಾಣದ ಬಣ್ಣವಿಂದೇಕೆ ಸ್ವಾಮಿ?

ದೂರದೃಷ್ಟಿಯುಳ್ಳವ ನಾನಲ್ಲ ಸ್ವಾಮಿ!
ಕಾಣುತಿದೆ ಕೃಷ್ಣವರ್ಣವೀಗ ಸ್ವಾಮಿ! (ತೃ)
ಸಮಾನವಿದೆಲ್ಲಾ ನಿಮಗೆ ಸ್ವಾಮಿ!
ಯಾವಿಟ್ಟದೇಕಾಯ್ತೆಂದು ಹೇಳಿ ಸ್ವಾಮಿ!
ಲು ಸೋಜಿಗಾಗಿಹುದೆನಗೆ ಸ್ವಾಮಿ! (ಸ)
-ಣ್ಣವನೆನ್ನಪೇಕ್ಷಿಸಬೇಡಿ ಸ್ವಾಮಿ! (ಗೋ)
-ವಿಂದನಾನಂದವಿದೆಂದು ತಿಳಿ ಪ್ರೇಮಿ!
ದೇವಕೀಸುತನನುಗ್ರಹದು ಪ್ರೇಮಿ!
ಕೆಟ್ಟಬುದ್ಧಿಗಿದರ್ಥವಾಗದು ಪ್ರೇಮಿ!
ಸ್ವಾಮಿಭಕ್ತನಿಗಿದು ಗೋಚರ ಪ್ರೇಮಿ! (ಪ್ರೇ)
-

, ನಿರಂಜನಾದಿತ್ಯಾ ಗೋಪಾಲಸ್ವಾಮಿ!!!

ದೇಹಾಡಂಬರ ಬೇಡೆಂದ ಹಿಪ್ಪಿ! [ಆ]

-ಹಾರ ಸಿಕ್ಕಿದ್ದುಂಬೆನೆಂಬ ಹಿಪ್ಪಿ! (ಒ)
-ಡಂಬಡದೀ ಜಗವೆಂದ ಹಿಪ್ಪಿ!
ರಬೇಕು ಶಾಂತಿಯೆಂದ ಹಿಪ್ಪಿ!
(ಪ)ರಮಾತ್ಮ ಕೃಪೆ ಬೇಕೆಂದ ಹಿಪ್ಪಿ!
ಬೇರೇನೂ ಬೇಡೆನಗೆಂದ ಹಿಪ್ಪಿ! (ಬೇ)
-ಡೆಂಬುದ್ಬೇಕೆಂಬುದಿಲ್ಲೆಂದ ಹಿಪ್ಪಿ! (ಮ)
-ದ, ಮತ್ಸರೆನಗಿಲ್ಲೆಂದ ಹಿಪ್ಪಿ! (ದ)
ಹಿಸಿತಾಸೆಯಮಲೆಂದ ಹಿಪ್ಪಿ! (ಒ)
-ಪ್ಪಿ, ನಿರಂಜನಾದಿತ್ಯನನ್ನಪ್ಪಿ!!!

ಮಿತ ಸಂತಾನವಿರಬೇಕು!

ಪ್ಪು ದಾರಿ ಬಿಟ್ಟಿರಬೇಕು!
ಸಂಭೋಗಪರೂಪಕ್ಕಾಗ್ಬೇಕು!
ತಾಮಸಾಹಾರ ಬಿಡಬೇಕು! (ವ)
-ನಸ್ಸನ್ನದುಮಿಟ್ಟಿರಬೇಕು!
ವಿಚಾರ ಸ್ವರೂಪದ್ದಾಗ್ಬೇಕು! (ವ)
-ರ ಗುರುಸೇವೆ ಮಾಡಬೇಕು!
ಬೇಜಾರಿಲ್ಲದದಾಗಬೇಕು! (ಟಾ)
-ಕು, ನಿರಂಜನಾದಿತ್ಯಾಗ್ಬೇಕು!!!

ತುಂಬಿತುತ್ಸವದಲ್ಲಿ ಮನೆ (ಬೆಂ)

-ಬಿಡದೆ ಕಾಯ್ವ ರಾಮಾ ಮನೆ! (ಮಾ)
-ತು, ಕತೆ, ರಾಮಮಯಾ ಮನೆ! (ಮ)
-ತ್ಸರ, ಮದ ವಿದೂರಾ ಮನೆ! (ಭಾ)
-ವ, ಭಕ್ತಿ ಪರಿಪೂರ್ಣಾ ಮನೆ!
(ಮ)ದನಾರಿಗತಿಹಿತಾ ಮನೆ! (ಮ)
-ಲ್ಲಿಕಾದಿ ಸುಮ ಕಂಪಾ ಮನೆ! (ರಾ)
-ಮನಾಮದಿಂದಾರಾಮಾ ಮನೆ! (ಮ)
-ನೆ, ನಿರಂಜನಾದಿತ್ಮಾತ್ಮನೇ!!!

ಗಾಡಿ ಓಡುತ್ತಲಿರ್ಬೇಕು! (ಬಾ)

-ಡಿಗೆ ಕಮ್ಮಿಯಾಗದಿರ್ಬೇಕು!
ಡಾಟತಿಯಾಗದಿರ್ಬೇಕು! (ದುಂ)
-ಡಾವರ್ತಿಗೆ ಹೋಗದಿರ್ಬೇಕು! (ಕಾ)
-ಡುದಾರಿ ಹಿಡಿಯದಿರ್ಬೇಕು!(ಹ)
-ತ್ತರ, ದೂರವೆನದಿರ್ಬೇಕು! (ಖಾ)
-ಲಿಯಾದಾಗ ಊರು ಸೇರ್ಬೇಕು! (ಬ)
-ರ್ಬೇಕ್ಮತ್ತೆ ಹೊರಡುತ್ತಿರ್ಬೇಕು! (ಟಾ)
-ಕು, ನಿರಂಜನಾದಿತ್ಯಾಗ್ಬೇಕು!!!

ಮಲಗಿದವರೆಬ್ಬಿಸ್ಲುದಿಸಿ ಬಂದ! (ಮ)

-ಲವಿಸರ್ಜನೆ ಮೊದಲಲ್ಲಾಗಲೆಂದ! (ಮು)
-ಗಿಸಿ ಮುಖ ಮಾರ್ಜನಾದಿಗ್ಳಾಮೇಲೆಂದ!
ರ್ಶನ ಗುರುವಿನದ್ದಾಮೇಲಾಗ್ಲೆಂದ! (ಭ)
-ವಬಂಧನ ಹರಿವುದವನಿಂದೆಂದ! (ನೆ)
ರೆ ಭಕ್ತಿಯನ್ನವನಲ್ಲಿಡಬೇಕೆಂದ! (ಕೊ)
-ಬ್ಬಿ ಮಾಯಾಪರವಶರಾಗ್ಬಾರದೆಂದ!
(

ಈ)ಸ್ಲು ತಾನಾರಿಗೆಂದೆಂದಿಗೂ ಆಗಿಲ್ಲೆಂದ!
ದಿವ್ಯ ಜೀವನಕ್ಕೆ ತಾನಾದರ್ಶವೆಂದ!
ಸಿರಿಯರಸ ಸ್ವರೂಪ ತನ್ನದೆಂದ!
ಬಂಧು, ಬಾಂಧವನೆಲ್ಲರಿಗೆ ತಾನೆಂದ!
ತ್ತ ನಿರಂಜನಾದಿತ್ಯಾನಂದಾನೆಂದ!!!

ಋಣಾನುಬಂಧದಿಂದ ಸಂಬಂಧ! (ಗು)

-ಣಾತೀತನಿಗೆ ಶೂನ್ಯ ಸಂಬಂಧ! (ತ)
-ನು ತಾನೆಂಬವಗೆ ಭವಬಂಧ! (ನಿ)
-ಬಂದನೆಯಿಂದಲ್ಲಾತ್ತ ಸಂಬಂಧ!
ರ್ಮಕರ್ಮದಿಂದಾ ಸತ್ಸಂಬಂಧ! (ತ)
-ದಿಂಗಿತಜ್ಞಗದ್ವೈತಾ ಸಂಬಂಧ!
ಮೆ, ಶಮೆಗಳಿಂದಾ ಸಂಬಂಧ!
ಸಂಕಟ ಪರಿಹಾರಾ ಸಂಬಂಧ!
ಬಂಧು, ಬಳಗ ದೇಹ ಸಂಬಂಧ! (ಬಂ)
-ಧ, ನಿರಂಜನಾದಿತ್ಯಗಿಲ್ಲೆಂದ!!!

ದೇವರೇ ಗತಿಯೆಂದತ್ತು ಸತ್ತರಯ್ಯಾ! (ಅ)

-ವರಿಗಾಯ್ತನುಗಾಲತಿ ಕಷ್ಟವಯ್ಯಾ! (ಯಾ)
-ರೇ ಸತ್ತ್ರೂ ಯದುನಾಥನೆತ್ತ ಹೋದಯ್ಯಾ! (ಹ)
-ಗಲಿರ್ಳಳುವವರಾರು ಕೇಳ್ವರಯ್ಯಾ! (ಮಿ)
ತಿಯಿಲ್ಲ ಹೇಳುವ ಕಥೆಗಳಿಗಯ್ಯಾ!
ಯೆಂದಿಗಿದನುಭವವೋ? ಕಾಣೆನಯ್ಯಾ!
ಯಾಮಯಾತನೆಂಬುದ್ಬಾಯ್ಮಾತೇನಯ್ಯಾ? (ಇ)
-ತ್ತು ದರ್ಶನ ಸಂಶಯ ನಿವಾರಿಸಯ್ಯಾ!
ತ್ಯ ನಿನ್ನ ಮಾತೆಂಬರಿವಾಗಲಯ್ಯಾ! (ಎ)
-ತ್ತಲೂ ಭಕ್ತರಿಗೇ ಜಯವಾಗಲಯ್ಯಾ! (ವ)
-ರಗುರು ನಿನ್ನನಿಂತು ಬೇಡುವೆನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯ ನೀನೆಂಬೆನಯ್ಯಾ!!!

ಚಪಲಾ! ನೀನಾವಾಗಲಬಲ!

ರಮಾರ್ಥಿಯಾಗ್ಯಾಗ್ಮಹಾಬಲ! (ಹಾ)
-ಲಾಹಲ ಪಾನಕ್ಕೆ ಬೇಕಾ ಬಲ!
ನೀಲಮೇಘ ಶ್ಯಾಮಗದೇ ಬಲ!
ನಾದ, ಬಿಂದು, ಕಲಾತೀತಾ ಬಲ!
ವಾತ, ಪಿತ್ಥ, ಕಫ ದೇಹಬಲ!
ಣಪತ್ಯಾಗಲ್ಬೇಕಾತ್ಮ ಬಲ!
ಯವಾಗಬೇಕಿಂದ್ರಿಯ ಬಲ!
ಹು ಸುಖಾ ಗುರುಕೃಪಾ ಬಲ! (ಬಾ)
-ಲ ನಿರಂಜನಾದಿತ್ಯಗೀ ಬಲ!!!

ನೋಡಿ, ನೋಡಿ, ಬಾಡಿಹೋಯಿತಾ ವನಜ! [ಅ]

ಡಿಗಡಿಗಡಿಗೆರಗಿತ್ತಾ ವನಜ!
ನೋವು, ಸಾವಿಗಂಜದಿರ್ತಿತ್ತಾ ವನಜ!
(ತಿಂ)ಡಿ, ತೀರ್ಥ ದರ್ಶನವೆಂದಿತ್ತಾ ವನಜ!
-ಬಾ, ಬಾ ಭಾನುದೇವೆನುತಿತ್ತಾ ವನಜ! (ಕಾ)
-ಡಿ, ಬೇಡೆ ನಾನಿನ್ನನೆಂದಿತ್ತಾ ವನಜ!
ಹೋಮ, ನೇಮೆನಗೇಕೆಂದಿತ್ತಾ ವನಜ! (ತಾ)
-ಯಿ, ತಂದೆ ನೀನೆನಗೆಂದಿತ್ತಾ ವನಜ!
ತಾಪಸ್ಯಾದೆ ನಿನ್ಗಾಗ್ಯೆಂದಿತ್ತಾ ವನಜ!
ರದರಾಜ ನೀನೆಂದಿತ್ತಾ ವನಜ!
“ನಗುರೋರಧಿಕಂ” ಎಂದಿತ್ತಾ ವನಜ! (ನಿ)
-ಜ, ನಿರಂಜನಾದಿತ್ಯಾನಂದಾ ವನಜ!!!

ಮಚ್ಚರದಿಂದೆಚ್ಚರ ತಪ್ಪಬೇಡಪ್ಪಾ! (ಅ)

-ಚ್ಚರಿಯಾಗ್ತಿದೆನಗೆ ನಿನ್ನ ನೋಡ್ಯಪ್ಪಾ! (ನ)
-ರಜನ್ಮ ಬರುವುದು ದುರ್ಲಭವಪ್ಪಾ! (ಅಂ)
-ದಿಂದಿನದ್ದಾಡಿದರೇನು ಲಾಭವಪ್ಪಾ? (ನಿಂ)
-ದೆ ಮಾಡಿ ಸಂದಿಯ ಹಂದಿಯಾಗ್ಬೇಡಪ್ಪಾ! (ಸ)
-ಚ್ಚರಿತನಾಗಿನ್ನುಮೇಲಾದ್ರೂ ಇರಪ್ಪಾ! (ವ)
-ರ ಗುರುಸೇವೆ ಮಾಡಿ ಧನ್ಯನಾಗಪ್ಪಾ!
ತ್ವಮಸಿ ಪದದರ್ಥ ಸಾಧಿಸಪ್ಪಾ! (ಮು)
-ಪ್ಪಡಸಿದ ಮೇಲಾವುದೂ ಸಾಗದಪ್ಪಾ!
ಬೇಸರಪಡದೀಗಲೇ ಮಾಡೆಲ್ಲಪ್ಪಾ! (ಮ)
-ಡದಿ ಮಕ್ಕಳಾಸೆಯೆಲ್ಲಾ ಬಿಟ್ಟಿಡಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯಾನಂದನಾಗಪ್ಪಾ!!!

ವೇದೋಪನಿಷತ್ಪುರಾಣವೆನ್ನ ಸಂದೇಶ!

ದೋಷರಹಿತಾತ್ಮ ನೀನೆಂಬುದಾ ಸಂದೇಶ!
ರಮಾತ್ಮೆಲ್ಲೆಲ್ಲಿಹನೆಂಬುದಾ ಸಂದೇಶ!
ನಿತ್ಯ, ನಿರಾಮಯಾತನೆಂಬುದಾ ಸಂದೇಶ!
ಣ್ಮುಖಾದಿ ರೂಪವನೆಂಬುದಾ ಸಂದೇಶ! (ತ)
-ತ್ಪುಣ್ಯನಾಮಗಳ್ಸ್ಮರಿಸೆಂಬುದಾ ಸಂದೇಶ!
ರಾಗ, ದ್ವೇಷಗಳ ಬಿಡೆಂಬುದಾ ಸಂದೇಶ!
ಣ, ಕಾಸು ಅಶಾಶ್ವತವೆಂಬುದಾ ಸಂದೇಶ! (ನಾ)
-ವೆ ಭವಾಬ್ಧಿಗೆ ನಾಮವೆಂಬುದಾ ಸಂದೇಶ! (ತಿ)
-ನ್ನಬಾರದು ಪಾಪಾನ್ನವೆಂಬುದಾ ಸಂದೇಶ!
ಸಂಗಸಜ್ಜನರದ್ದೇಕೆಂಬುದಾ ಸಂದೇಶ!
ದೇವದೇವನಾಜ್ಞೆಯಿದೆಂಬುದಾ ಸಂದೇಶ! (ಈ)
-ಶ ನಿರಂಜನಾದಿತ್ಯನೆಂಬುದಾ ಸಂದೇಶ!!!

ಶಿವಾನಂದ ರೂಪ ಅಮಿತ ಪ್ರತಾಪ!

ವಾಮಾಂಗಿಯೊಡಗೂಡ್ಯರ್ಧನಾರಿ ರೂಪ!
ನಂದಕಂದ ರೂಪ ತನ್ನಿಷ್ಟ ಸ್ವರೂಪ!
ಯಾಮಯ ರೂಪಾ ವಿಶ್ವನಾಥ ರೂಪ!
ರೂಪರೇಖಾತೀತ ಪ್ರಣವ ಸ್ವರೂಪ!
ರತತ್ವ ಬೋಧಾನಂದಾ ಗುರುರೂಪ!
ನುಪಮ ರೂಪಾ ಸುಂದರೇಶ ರೂಪ!
ಮಿತ್ರ, ಶತ್ರು ಸಮಾ ಸ್ಥಿತಪ್ರಜ್ಞ ರೂಪ!
ನು, ಮನಾರ್ಪಣರೂಪಾ ತಾಂಡವ ರೂಪ!
ಪ್ರಮಥಗಣರೂಪ ತಾಂಡವ ರೂಪ!
ತಾಳ, ಮೇಳಾನಂದ ರೂಪಾ ವಾಣಿ ರೂಪ! (ತಾ)
-ಪಸಿ ರೂಪಾ ನಿರಂಜನಾದಿತ್ಯ ರೂಪ!!!

ನಿರಂಜನಾದಿತ್ಯಗರ್ವತ್ತಾರು!

ರಂಗನಾಥನ ಊರವನೂರು!
ಗತ್ತಿನಿಂದತಿದೂರಾ ಊರು!
ನಾನು, ನೀನೆಂಬುದಿಲ್ಲದಾ ಊರು!
ದಿವ್ಯ ಜೀವನಕ್ಕಾದರ್ಶಾ ಊರು!
ತ್ಯಜಿಸಲ್ಕೈಹಿಕ ಸುಖಾ ಊರು!
ಗನಮಣಿಗಾನಂದಾ ಊರು! (ಓ)
-ರ್ವನೇ ದೇವ ಲೋಕಕ್ಕೆಂಬುದಾ ಊರು! (ಹ)
-ತ್ತಾವತಾರಗಳೆತ್ತಿದಾ ಊರು! (ಸೇ)
-ರು ನಿರಂಜನಾದಿತ್ಯನಾ ಊರು!!!

ಉದಯವಾಯ್ತರ್ವತ್ತಾರೆನ್ನುವರು!

ರ್ಶನವಿದು ಭಾಗ್ಯವೆನ್ನುವರು! (ಭ)
-ಯ, ಭಕ್ತಿಯಿಂದ ಕಾಪಾಡೆನ್ನುವರು! (ಭ)
-ವಾಬ್ಧಿಯಿಂದುದ್ಧಾರ ಮಾಡೆನ್ನುವರು! (ಹೋ)
-ಯ್ತಜ್ಞಾನ ನಿನ್ನಾಜ್ಞೆಯಿಂದೆನ್ನುವರು! (ಸ)
-ರ್ವ ಕಾರಣಕರ್ತ ನೀನೆನ್ನುವರು!
(ಕಿ)ತ್ತಾಟ, ಸುತ್ತಾಟ ಸಾಕಿನ್ನೆನ್ನುವರು! (ಕ)
-ರೆಸಿಕೋ ನಿನ್ನ ಪಾದಕ್ಕೆನ್ನುವರು! (ತಿ)
-ನ್ನುವೆವ್ನಾವ್ನಿನ್ನ ಪ್ರಸಾದೆನ್ನುವರು! (ಗು)
-ರು ನಿರಂಜನಾದಿತ್ಯನೆನ್ನುವರು!!!

ಅರ್ವತ್ತಾರರುದಯವಾಯ್ತು! (ಸ)

-ರ್ವರ ಕಾಲ್ಯಾಣಕ್ಕದೀಗಾಯ್ತು! (ದ)
-ತ್ತಾವತಾರದೆಂಬರಿವಾಯ್ತು! (ನಿ)
-ರತದಭ್ಯಾಸದಿಂದದಾಯ್ತು! (ಗು)
-ರು ಶಿವನಿಚ್ಛೆಯಂತದಾಯ್ತು!
ರ್ಶನಾನಂದವೆಲ್ಲರ್ಗಾಯ್ತು! (ಜ)
-ಯಘೋಷದಿಂದಜ್ಞಾನ ಹೋಯ್ತು! (ದೇ)
-ವಾದಿ ದೇವನೇ ಎಲ್ಲೆಲ್ಲಾಯ್ತು! (ಆ)
-ಯ್ತು, ನಿರಂಜನಾದಿತ್ಯೇರ್ಯಾಯ್ತು!!!

ನಾಮಾವಳಿಗೊಂದು ಮುನ್ನುಡಿ!

ಮಾಯೆ ನೀಡಿದಳಾ ಮುನ್ನುಡಿ!
ರಪ್ರಸಾದದಾ ಮುನ್ನುಡಿ! (ನ)
-ಳಿನಾಕ್ಷಗಾನಂದಾ ಮುನ್ನುಡಿ!
ಗೊಂದಲವಿಲ್ಲದಾ ಮುನ್ನುಡಿ!
ದುರ್ವಿಷಯ ದೂರಾ ಮುನ್ನುಡಿ!
ಮುಮುಕ್ಷುಗಾಧಾರಾ ಮುನ್ನುಡಿ!
(ತ)ನ್ನುನ್ನತಿಗಗತ್ಯಾ ಮುನ್ನುಡಿ! (ಹಿ)
-ಡಿ, ನಿರಂಜನಾದಿತ್ಯನಡಿ!!!

ಅರ್ವತ್ತಾರರಾದೇಶಾಲಿಸಿರಿ! (ಸ)

ರ್ವ ಸಮನ್ವಯನುಸರಿಸಿರಿ! (ಕಿ)
-ತ್ತಾಡದೇ ಜೀವನ ಸಾಗಿಸಿರಿ! (ವ)
-ರ ಗುರುವಿನಾಜ್ಞೆ ಪಾಲಿಸಿರಿ!
ರಾಮಜಪ ಸದಾ ಸಾಧಿಸಿರಿ!
ದೇಶಭಾವವನ್ನು ವರ್ಜಿಸಿರಿ!
ಶಾಶ್ವತದಾತ್ಮನನ್ನೊಲಿಸಿರಿ! (ಮ)
-ಲಿನ ವಾಸನೆಯನ್ನೋಡಿಸಿರಿ!
ಸಿರಿಯರಸನ ಧ್ಯಾನಿಸಿರಿ! (ಹ)
-ರಿ, ನಿರಂಜನಾದಿತ್ಯರ್ಚಿಸಿರಿ!!!

ಅರ್ವತ್ತಾರರ ಆರ್ಯೋಕ್ತಿ! (ಓ)

-ರ್ವ ದೇವರಲ್ಲಿರ್ಬೇಕ್ಭಕ್ತಿ! (ಹೊ)
-ತ್ತಾದ್ರೂ ಆಗ್ಬೇಕ್ನಿತ್ಯ ವೃತ್ತಿ! (ಪ)
-ರಮಾರ್ಥದಿಂದಾತ್ಮ ತೃಪ್ತಿ! (ವ)
-ರಗುರುಸೇವೆ ಸದ್ವೃತ್ತಿ!
ಗ್ಬೇಕದ್ರಿಂದ ನಿವೃತ್ತಿ! (ವೀ)
-ರ್ಯೋರ್ಧ್ವಮುಖವಾದ್ರೆ ಶಕ್ತಿ! (ಶ)
-ಕ್ತಿ ನಿರಂಜನಾದಿತ್ಯೋಕ್ತಿ!!!

ತೀರ್ಮಾನವಾದಮೇಲ್ವರಮಾನ! (ದು)

-ರ್ಮಾರ್ಗ ದೂರನಾದಮೇಲ್ಸನ್ಮಾನ!
ಶ್ವರಕ್ಕಿರ್ಬಾರದಭಿಮಾನ!
ವಾದದಿಂದಳಿಯದನುಮಾನ!
ತ್ತನಿಗಿಲ್ಲ ಮಾನಾಪಮಾನ! (ಉ)
-ಮೇಶನಿಗಿಲ್ಲ ಯಾರೂ ಸಮಾನ! (ಚೆ)
-ಲ್ವರಾಯನಿಗಿಲ್ಲ ಉಪಮಾನ!
ವಿಯಿರ್ಪನಂತ ಶತಮಾನ! (ಕಾ)
-ಮಾತೀತನಿಗಿಲ್ಲ ಕಾಲಮಾನ! (ಜ್ಞಾ)
-ನ ನಿರಂಜನಾದಿತ್ಯಾತ್ಮ ಧ್ಯಾನ!!!

ಅರುವತ್ತಾರಾರಂಭವಾಯ್ತೀಗ! (ಗು)

-ರುಕೃಪೆಯಾಗಲೆಲ್ಲರಿಗೀಗ! (ಜೀ)
-ವಭಾವ ಹರಿದು ಹೋಗಲೀಗ! (ದ)
-ತ್ತಾವತಾರಕ್ಕೆ ಶಿರಬಾಗೀಗ!
ರಾಗ, ದ್ವೇಷ ಬಿಟ್ಟುಬಿಡ್ಬೇಕೀಗ!
ರಂಗನಾಥ ಸಾಕ್ಷಿಯದಕೀಗ!
ಕ್ತಿ ನಿಶ್ಚಲವಾಗ ಬೇಕೀಗ!
ವಾದ, ಭೇದ ಹುಟ್ಟಡಗ್ಬೇಕೀಗ! (ಆ)
-ಯ್ತೀಶ್ವರನಿಂದಾಜ್ಞೆ ನಮಗೀಗ! (ಈ)
-ಗ ನಿರಂಜನಾದಿತ್ಯನೆಲ್ಲಾಗ!!!

ಹನ್ನೊಂದಾರರ್ವತ್ತಾರಿಂದು! (ನಿ)

-ನ್ನೊಂದು ನಿರ್ಧಾರ ಆಗ್ಲಿಂದು! (ಸ)
-ದಾತ್ಮ ಧ್ಯಾನ ಮಾಳ್ಪೆನೆಂದು! (ಪ)
-ರನಿಂದೆ ಮಾಡೆ ನಾನೆಂದು! (ಸ)
-ರ್ವರಾತ್ಮ ನನ್ನಾತ್ಮನೆಂದು! (ದ)
-ತ್ತಾತ್ರೇಯನೇ ಗುರುವೆಂದು! (ಆ)
-ರಿಂದೇನೂ ಬಯಸೆನೆಂದು! (ಅ)
-ದು, ನಿರಂಜನಾದಿತ್ಯೆಂದು!!!

ಅರ್ವತಾರರ ಮೊತ್ತವೀರಾರು! (ಸ)

-ರ್ವರಂತರ್ಯಾಮಿಯಾಗಿರ್ಪಾ ಗುರು! (ಹ)
-ತ್ತಾವತಾರವೆತ್ತಿದನಾ ಗುರು! (ಕ)
-ರ, ಚರಣಾದಿಂದ್ರಿಯಲ್ಲಾ ಗುರು! (ಹ)
-ರ, ಹರಿ, ಬ್ರಹ್ಮಾದ್ಯರೆಲ್ಲಾ ಗುರು!
ಮೊರೆಯಿಡಲೊಲಿವನಾ ಗುರು! (ಉ)
-ತ್ತಮಾತ್ಮ ಸ್ಥಿತಿಯವನಾ ಗುರು!
ವೀತರಾಗೀ ಯೋಗೀಶ್ವರಾ ಗುರು!
ರಾಮನಾಮಾರಾಮವೆಂಬಾ ಗುರು! (ಗು)
-ರು ನಿರಂಜನಾದಿತ್ಯನೂರ್ಸೇರು!!!

ಏನು ಬೇಡಾ, ನನಗೇನೂ ಬೇಡ! [ನಾ]

-ನು, ನಿನ್ನ ಬಿಟ್ಟಿರುವುದೇ ಬೇಡ!
ಬೇರೆಕಡೆಗೆನ್ನೋಡಿಸಬೇಡ! (ಮೊಂ)
-ಡಾಟವಿದೆಂದಾರೋಪಿಸಬೇಡ!
ರಜನ್ಮ ವ್ಯರ್ಥ ಮಾಡಬೇಡ!
ನಗಿನ್ಯಾರ ಸೇವೆಯೂ ಬೇಡ! (ಯೋ)
-ಗೇಶ್ವರನಾಜ್ಞೆ

ಈರಿಸಬೇಡ! (ನೀ)
-ನೂ, ನಾನೊದೆಂಬುದಲ್ಲೆನಬೇಡ!
ಬೇಡಿದಿಷ್ಟ ಕೊಡದಿರಬೇಡ! (ಬಿ)
-ಡ, ನಿರಂಜನಾದಿತ್ಯ ಬಾಯ್ಬಿಡ!!!

ನಾ ಕಂಡ ಸೂರ್ಯನಿಗಿಲ್ಲೇಳು ಕುದುರೆ!

ಕಂಡವರಿದ್ದರೆ ತೋರಲಾ ಕುದುರೆ! (ಚಂ)
-ಡ, ಪ್ರಚಂಡ, ಮಾರ್ತಾಂಡನಿಗದೆದುರೇ?
ಸೂತ್ರಧಾರಿಯಾದಾತ್ಮನಿಗಾರಾಸರೆ? (ಕಾ)
-ರ್ಯ, ಕಾರಣಕ್ಕೆಲ್ಲವನೊಬ್ಬನೇ ದೊರೆ!
ನಿಧಿ ಸರ್ವ ಶಕ್ತಿಗವ್ನೆಂಬುದು ಖರೆ! (ತ್ಯಾ)
ಗಿಯಾಗಿ ಬೆಳಗುವನವನೀ ಧರೆ! (ಎ)
-ಲ್ಲೇನಿದ್ದರೂ ಆಗದವನಿಂದ ಮರೆ (ಕೀ)
-ಳು, ಮೇಲೆನ್ನದಿಳ್ದಿದೆ ಕಿರಣಧಾರೆ! (ಬೇ)
-ಕು ಬೇರೆ ವರವೆಂದರಾನೊಪ್ಪಲಾರೆ!
ದುಡಿಯದಿದ್ರವ್ನಂತೆ ಪಾರಾಗಲಾರೆ! (ಬೆ)
-ರೆತು ನಿರಂಜನಾದಿತ್ಯನಲ್ಲಾಗ್ಧೊರೆ!!!

ಹಗುರವಾಗಿದೆ ದೇಹವಿಂದು!

ಗುರುಕೃಪೆಯಿದೆನಗೆ ಇಂದು! (ಪ)
-ರಮಾರ್ಥದಿಂದ ಸೌಖ್ಯವೆಂದೆಂದು! (ಸೇ)
-ವಾಭಾಗ್ಯವೊಂದಿರಬೇಕೆಂದೆಂದು!
ಗಿಡ, ಮರಕ್ಕೂ ಸಿಗ್ಲದೆಂದೆಂದು! (ತಂ)
-ದೆ, ತಾಯಿ, ಬಂಧುವವನೆಂದೆಂದು!
ದೇಶ, ವಿದೇಶವ್ನಾಧೀನೆಂದೆಂದು!
ರಿ, ಏಸು, ಅಲ್ಲಾ ಒಂದೆಂದೆಂದು! (ನಾ)
-ವಿಂದರಿತರಾನಂದೆಂದೆಂದು! (ಇ)
-ದು ನಿರಂಜನಾದಿತಾಜ್ಞೆಯಿಂದು!!!

ಚಕ್ಲಿ ತಿನ್ನೋಣವೆಂದ್ಕೊಂಡ್ಬಿಟ್ಟೆ!

ಕ್ಲಿಷ್ಟ ಹಲ್ಲಿಗದೆಂದ್ಬಿಟ್ಟಿಟ್ಟೆ!
ತಿನ್ಬೇಕ್ಹಸಿದ್ರೆ ಮಾತ್ರೆಂದ್ಬಿಟ್ಟೆ! (ತಿ)
-ನ್ನೋದ್ಕುಡ್ಯೋದೆಷ್ಟ್ಕಾಲವೆಂದ್ಬಿಟ್ಟೆ! (ಕ್ಷ)
-ಣಕ್ಕೊಂದ್ಬುದ್ಧಿಯಿರ್ಬಾರ್ದೆಂದ್ಬಿಟ್ಟೆ! (ಸೇ)
-ವೆಂಬುದಿರಲೆಂದೆಂದೆದ್ಬಿಟ್ಟೆ! (ನೊಂ)
-ದ್ಕೊಂಡು ಮಾಡ್ಬಾರದದೆಂದ್ಬಿಟ್ಟೆ! (ಗ)
ಡ್ಬಿಡಿಯಿಂದಡ್ದಿಯದ್ಕೆಂದ್ಬಿಟ್ಟೆ! (ಬ)
-ಟ್ಟೆ, ನಿರಂಜನಾದಿತ್ಯನ್ದುಟ್ಟೆ!!!

ದಾಸಯ್ಯನಾಗಬೇಕಯ್ಯಾ!

ದಾಜಪ ಅದಕಯ್ಯಾ!
(ಅ)ಯ್ಯ ಬೇರಾರನ್ನಿಲ್ಲವಯ್ಯಾ! (ನೀ)
-ನಾತನೆಂದು ತಿಳಿಯಯ್ಯಾ!
ರ್ವ ನಿರ್ನಾಮವಾಗ್ಲಯ್ಯಾ!
ಬೇರಾವಾಸೆಯೂ ಬೇಡಯ್ಯಾ!
ರ್ತವ್ಯವ್ನ ಸೇವೆಯಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಯ್ಯಾ!!!

ನೀನರಿ ಹರಿಯು ದಾರಿ!

ಮಿಸಾ ಪಾದವೇ ಗುರಿ!
ರಿಪುಕುಲುಕಾಲಾ ಹರಿ!
ದಿನಾಲ್ಕ್ಲೋಕೇಶಾ ಹರಿ!
ರಿಸಿ, ಮುನಿ ದಾಸಾ ಹರಿ!
ಯುಕ್ತಾಯುಕ್ತಾತ್ಮಾ ಶ್ರೀಹರಿ!
ದಾತ, ನಾಥ ದತ್ತಾ ಹರಿ! (ಹ)
-ರಿ, ನಿರಂಜನಾದಿತ್ಯರಿ!!!

ಶ್ರೀ ಕೃಷ್ಣಾರ್ಪಣರ್ವತ್ತಾರರ ಸಂದೇಶ!

ಕೃಪೆದೋರಿ ಬರೆಸಿದನೀ ಸಂದೇಶ! (ತೃ)
-ಷ್ಣಾದಿಗಳಿರ್ಬಾರದೆಂಬುದೀ ಸಂದೇಶ! (ದ)
-ರ್ಪ, ದಂಭ, ಬಿಡಬೇಕೆಂಬುದೀ ಸಂದೇಶ!(ಪ್ರ)
-ಣವ ಸ್ವರೂಪ ನೀನೆಂಬುದೀ ಸಂದೇಶ! (ಸ)
-ರ್ವಕಾರಣ ಕರ್ತದೆಂಬುದೀ ಸಂದೇಶ!
(ದ)ತ್ತಾತ್ರೇಯಾನಂದವಿದೆಂಬುದೀ ಸಂದೇಶ! (ಪ)
-ರತತ್ವದ ಗುರಿದೆಂಬುದೀ ಸಂದೇಶ! (ನಿ)
-ರತಾಭ್ಯಾಸ ಮಾಡದೆಂಬುದೀ ಸಂದೇಶ!
ಸಂತಸ ನೀಡ್ವುದದೆಂಬುದೀ ಸಂದೇಶ!
ದೇವದೇವ ನೀನಾಗ್ವೆಂಬುದೀ ಸಂದೇಶ! (ಈ)
-ಶ ನಿರಂಜನಾದಿತ್ಯೆಂಬುದೀ ಸಂದೇಶ!!!

ದಯೆದೋರು ಪೂಜ್ಯ ಗುರುವೇ! (ಮಾ)

-ಯೆಯಿಂದ ಬಿಡಿಸು ಪ್ರಭುವೇ!
ದೋಷವೆಣಿಸ್ಬೇಡ ಗುರುವೇ! (ತು)
-ರು, ಕರು, ನೀ, ನಾನು ಪ್ರಭುವೇ!
ಪೂಜೆ ನಾಮ ಜಪ ಗುರುವೇ! (ತ್ಯಾ)
-ಜ್ಯ ಐಹಿಕ ಸುಖ ಪ್ರಭುವೇ!
ಗುರಿ ನಿನ್ನೊಳೈಕ್ಯ ಗುರುವೇ! (ತೋ)
-ರು ದಿವ್ಯ ಸ್ವರೂಪ ಪ್ರಭುವೇ! (ಸೇ)
-ವೇ ನಿರಂಜನಾದಿತ್ಯಗೀವೇ!!!

ಕಷ್ಟಕ್ಕಂಜಿ ಕರ್ತವ್ಯ ಬಿಟ್ಟಿಲ್ಲ! (ದು)

-ಷ್ಟ ಸಹವಾಸ ಕಟ್ಟಿಕೊಂಡಿಲ್ಲ! (ಚ)
-ಕ್ಕಂದವಾಡುವಭ್ಯಾಸೆನಗಿಲ್ಲ!
ಜಿಪುಣತನ ನನ್ನಲ್ಲೇನಿಲ್ಲ!
ಳ್ಳತನ ಮಾಳ್ಪದ ನಾನಲ್ಪ! (ಧೂ)
-ರ್ತತನ ತನ್ನಲ್ಲಿಲ್ಲವೇ ಇಲ್ಲ!
ವ್ಯಭಿಚಾರ ಭಕ್ತಿ ನನ್ನದಲ್ಲ!
ಬಿಚ್ಚು ಮನದ ಬಾಳ್ನನ್ನದೆಲ್ಲ! (ಮೆ)
-ಟ್ಟಿ ನಿಂತಿಹೆನಪಮಾನವೆಲ್ಲ! (ಪು)
-ಲ್ಲ ನಿರಂಜನಾದಿತ್ಯನೆಲ್ಲಿಲ್ಲ???

ಯಾರ್ಯಾರ್ಬಂದಿಹರೂಟಕ್ಕೆ! (ಭಾ)

-ರ್ಯಾ, ಭರ್ತರೊಟ್ಟಾಗ್ಯೂಟಕ್ಕೆ! (ನಿ)
-ರ್ಬಂಧಾತೀತಾಪ್ತನೂಟಕ್ಕೆ!
ದಿವ್ಯ ಪ್ರಸಾದದೂಟಕ್ಕೆ!
ರ್ಷಪ್ರದವಾದೂಟಕ್ಕೆ! (ತಿ)
-ರೂರ್ಗೃಹಕ್ಕೊಯ್ಯುವೂಟಕ್ಕೆ! (ಮಾ)
-ಟ, ಮದ್ದೀಡಿಲ್ಲದೂಟಕ್ಕೆ! (ಇ)
-ಕ್ಕೆ ನಿರಂಜನಾದಿತ್ಯಕ್ಕೆ!!!

ಶಿವ ನೀ ಹೇಗಾದ್ಯೋ ತಾಯಿಗಂಡ? (ದೇ)

-ವದೇವನೆಂಬ ನೀ ತಾಯಿಗಂಡ!
ನಿಚೋಚ್ಚೊಂದೆಂಬ ನೀ ತಾಯಿಗಂಡ! (ಮ)
-ಹೇಶ ನಾನೆಂಬ ನೀ ತಾಯಿಗಂಡ! (ಯೋ)
-ಗಾನಂದಾನೆಂಬ ನೀ ತಾಯಿಗಂಡಾ! (ಉ)
-ದ್ಯೋಗಿಯಾಗೆಂಬ ನೀ ತಾಯಿಗಂಡ!
ತಾಪಸ್ಯಾನೆಂಬ ನೀ ತಾಯಿಗಂಡ! (ಬಾ)
-ಯಿ ಮಾತೇಕೆಂಬ ನೀ ತಾಯಿಗಂಡ!
ಗಂಡ್ಹೆಣ್ಣೊಂದೆಂಬ ನೀ ತಾಯಿಗಂಡ! (ಮೃ)
-ಡ ನಿರಂಜನಾದಿತ್ಯಾ ತಾಯ್ಗಂಡ!!!

ಹಿಂದೂ ಸಂಸ್ಕೃತಿಯೌಚಿತ್ಯ!

ದೂರದೃಷ್ಟಿಗಾಗ್ಯೌಚಿತ್ಯ!
ಸಂಬಂಧ್ಯಾತ್ಮಗಾಗ್ಯೌಚಿತ್ಯ! (ಸಂ)
-ಸ್ಕೃತ್ಯಾಧ್ಯಾತ್ಮಿಕಾಗ್ಯೌಚಿತ್ಯ!
ತಿರು ಸೇವೆಗಾಗ್ಯೌಚಿತ್ಯ! (ಪ್ರಿ)
-ಯೌಷಧೀವಗಾಗ್ಯೌಚಿತ್ಯ!
ಚಿದಾನಂದಕ್ಕಾಗ್ಯೌಚಿತ್ಯ! (ನಿ)
-ತ್ಯ ಶ್ರೀ ನಿರಂಜನಾದಿತ್ಯ!!!

ಸದಾ ಹಲಗೆ ಬಳಪ ಹಿಡಿದ್ರೇನು ಗತಿ?

ದಾರಿಯಿದರಿಂದೆಲ್ಲರಿಗಾಗ್ವುದು ಸನ್ಮತಿ!
ರ್ಷವಾಗಿರು! ಇದೆ ನಿನಗನ್ನವಸತಿ!
ಕ್ಷ್ಯ ನನ್ನಲ್ಲಿದ್ದರೆ ನೀನೇ ಆಧರ್ಶ ಸತಿ! (ಬ)
-ಗೆಬಗೆಯಾಸೆಗಳಿಂದಾಗುವುದಧೋಗತಿ!
ರೆಸುತಿಹನೆನ್ನಿಂದಾರ್ಯನುತ್ತಮ ಕೃತಿ! (ಒ)
-ಳಗೊಳಗೇ ಆನಂದಿಸುತ್ತಿಹನುಮಾಪತಿ!
ತಿತಪಾವನನೊಲ್ಮೆಗಾಗಿರ್ಬೇಕೀ ರೀತಿ!
ಹಿತವಾಗಿರುವುದೀ ಅಭ್ಯಾಸ ದಿನಂಪತ್ರಿ! (ಹಿ)
-ಡಿದರತ್ರಿ ಸತಿಯ ದಾರಿ ಪುತ್ರ ತ್ರಿಮೂರ್ತಿ!
(ಉ)ದ್ರೇಕೋದ್ವೇಗಗಳಿಂದುಂಟಾಗುವುದಪಖ್ಯಾತಿ! (ಅ)
-ನುಮಾನದಿಂದೆನ್ನ ಬಿಟ್ಟರೆ ನಿನಗೆ ಚ್ಯುತಿ! (ಭೋ)
-ಗ ಜೀವನದಿಂದಾಗುವುದು ಅತ್ಯಲ್ಪ ತೃಪ್ತಿ!
ತಿರುಪತಿ ನಿರಂಜನಾದಿತ್ಯಾತ್ಮ ಸಂತೃಪ್ತಿ!!!

ಪ್ರತಿ ದಿನ ಪೊರಕೆಯಾಡ್ಲೇ ಬೇಕು! (ಅ)

-ತಿ, ಶ್ರದ್ಧೆಯಿಂದಭ್ಯಾಸ ಮಾಡ್ಲೇ ಬೇಕು! (ಸಂ)
-ದಿ, ಸಂದಿಗಳಲ್ಲೂ ಗುಡಿಸ್ಲೇ ಬೇಕು! (ಅ)
-ನಗತ್ಯದ ಹೊಲಸು ಹೋಗ್ಲೇ ಬೇಕು!
ಪೊರಕೆಗೊಂದು ಜಾಗವಿರ್ಲೇ ಬೇಕು! (ಹ)
-ರನ ಸೇವೇಕಾಂತದಲ್ಲಾಗ್ಲೇ ಬೇಕು!
ಕೆಟ್ಟ ಮಾಯಾಜಾಲ ಹರಿಯ್ಲೇ ಬೇಕು! (ಪ್ರ)
-ಯಾಸವಿಲ್ಲದೆ ಪ್ರಯಾಣಾಗ್ಲೇ ಬೇಕು! (ನೋ)
-ಡ್ಲೇಬೇಕು, ಶ್ರೀಪಾದ ಹಿಡಿಯ್ಲೇ ಬೇಕು!
ಬೇರೇನು ಕೊಟ್ರೂ ಬೇಡವೆನ್ಲೇ ಬೇಕು! (ಟಾ)
-ಕು, ನಿರಂಜನಾದಿತ್ಯನಾಗ್ಲೇ ಬೇಕು!!!

ಸದ್ಗುಣಿಯಾಗಿ ಸದ್ಗುರುವ ಸೇರು! (ಮ)

-ದ್ಗುರು ಜಗದ್ಗುರುವೆಂದವ್ನ ಸೇರು! (ಅ)
-ಣಿಮಾದಿಸಿದ್ಧಿಗಳ್ಬಯಸ್ದೇ ಸೇರು!
ಯಾಗ, ಯಜ್ಞವ್ನ ಸೇವೆಯೆಂದು ಸೇರು! (ಬಾ)
-ಗಿ ವಿನಯದಿಂದ ಶ್ರೀಪಾದ ಸೇರು!
ದಾ ಧ್ಯಾನಿಸುತ್ತವನನ್ನು ಸೇರು! (ಅ)
-ದ್ಗುರಿಯೆಂದರಿತವನನ್ನು ಸೇರು! (ಗು)
-ರುವಿಗೆ ಗುಲಾಮನಾಗೀಗ್ಲೇ ಸೇರು! (ಅ)
-ವನಾಜ್ಞಾಧಾರಕ ನಾನೆಂದು ಸೇರು!
ಸೇವೆಗಾಗಿ ತ್ಯಾಗಿಯಾಗೀಗ ಸೇರು! (ಸೇ)
-ರು ನಿರಂಜನಾದಿತ್ಯಾತನೆಂದ್ಸೇರು!!!

ಮಾಡ್ಬಾರದದ್ಮಾಡಿದ್ರಾಗ್ಬಾರದದ್ದಾದೀತು! (ಬೇ)

-ಡ್ಬಾರದದ್ಬೇಡಿದ್ರೆ ಪಡ್ಬಾರದ್ಪಾಡಾದೀತು! (ವ)
-ರ ಗುರುವಿನ ಸೇವೆಯಿಂದ್ಸುಖವಾದೀತು!
ಮೆ, ಶಮೆಯಿಂದ ನೆಮ್ಮದಿಯುಂಟಾದೀತು! (ಪ)
-ದ್ಮಾನಂದಾದರ್ಶದಿಂದ ದರ್ಶನವಾದೀತು! (ಗಾ)
-ಡಿಯೆಚ್ಚರದಿಂದೋಡಿಸಿದ್ರೂರು ಸೇರಿತು! (ನಿ)
-ದ್ರಾಹಾರ್ಮೆ

ಥುನತಿಯಾದ್ರನಾರೋಗ್ಯಾದೀತು! (ಹೋ)
-ಗ್ಬಾರದಲ್ಲಿಗೆ ಹೋದ್ರಪಮಾನವಾದೀತು! (ನಿ)
-ರತಾತ್ಮಧ್ಯಾನದಿಂದಾರಾಮವುಂಟಾದೀತು! (ಮ)
-ದ, ಮತ್ಸರದಿಂದದ್ವೈತಾನಂದ ಕೆಟ್ಟೀತು! (ಗು)
-ದ್ದಾಟದಿಂದ್ಗುರಿ ತಪ್ಪಿ ಒದ್ದಾಟವಾದೀತು!
ದೀನನಾನ್ದಾನಿ ನೀನೆಂದರಾನಂದಾದೀತು! (ಇಂ)
-ತು ನಿರಂಜನಾದಿತ್ಯಾನಂದ ನಿತ್ಯಾದೀತು!!!

ವಾಸನಾನಾಶವಾದಲರಿದಯ್ಯಾ!

ಮಯ ಕಾದಿದೆ ಕಣ್ಮರೆಗಯ್ಯಾ!
ನಾಸ್ತಿಪಾಪ, ಪುಣ್ಯದಂಟದಕ್ಕಯ್ಯಾ!
ನಾಸಿಕ ಯಾತ್ರೆಯ ಹುಚ್ಚೀಗಿಲ್ಲಯ್ಯಾ!
ಶಿಮುಖಿ ಬಳಿಗೀಗ್ಬಾರಳಯ್ಯಾ!
ವಾಸುದೇವಾರ್ಪಣವಾಯ್ತದೀಗಯ್ಯಾ!
ತ್ತನಾಶೀರ್ವದಿಸಿಹನದಯ್ಯಾ!
ಕ್ಷ್ಯದಲ್ಲದು ಲಯವಾಗಿರ್ಪುದಯ್ಯಾ!
ರಿಪುಕುಲಕ್ಕದೀಗಭೇದ್ಯವಯ್ಯಾ!
ರ್ಶನದರದ್ದೀಗಸಾಧ್ಯವಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾ ಅಲರಯ್ಯಾ!!!

ಯಾರ್ಹೊಗಳಿದ್ರೇನ್ತೆಗಳಿದ್ರೇನಣ್ಣಾ? (ಊ)

-ರ್ಹೊರಗೆ ವಾಸವಾದ್ರೇನ್ಸುಖವಣ್ಣಾ? (ಭ)
-ಗವತ್ಕೃಪಾಪಾತ್ರನಾಗಬೇಕಣ್ಣಾ! (ನ)
-ಳಿನಾರ್ಕರಂತಾಪ್ತರಾಗಿರ್ಬೇಕಣ್ಣಾ! (ತೊಂ)
-ದ್ರೇನೇ ಬಂದ್ರೂ ಧೈರ್ಯ ಬಿಡ್ಬಾರದಣ್ಣಾ! (ತಾ)
-ನ್ತೆರೆ ಮರೆ ಕಾಯಿಯಂತಿರ್ಬೇಕಣ್ಣಾ! (ಯೋ)
-ಗಸಾಧನೆಡೆಬಿಡದಾಗ್ಬೇಕಣ್ಣಾ! (ಗೂ)
-ಳಿಯಂತೋಡಾಡಿದ್ರೇನೂ ಆಗದಣ್ಣಾ! (ಉ)
-ದ್ರೇಕತಿಯಾದ್ರದಕ್ದೊಣ್ಣೆಯೇಟಣ್ಣಾ!
ಗುನಗ್ತಾ ಗುರುಸೇವೆ ಮಾಡಣ್ಣಾ! (ಉ)
-ಣ್ಣಾ ನಿರಂಜನಾದಿತ್ಯಾನಂದ ಪಣಾ



!!!

ಭಕ್ತಿಯ ಹೊನಲ್ಹರಿಯಬೇಕು! (ಮು)

ಕ್ತಿಯಿದ್ರಲ್ಮುಳುಗಿಯಾಗಬೇಕು! (ಭ)
-ಯವೆಳ್ಳಷ್ಟೂ ಪಡದಿರಬೇಕು!
ಹೊತ್ತು, ಗಿತ್ತು ನೋಡದಿರಬೇಕು! (ಜ)
-ನರ ಮಾತಿಗಂಜದಿರಬೇಕು! (ಹಾ)
-ಲ್ಹಣ್ನುಗಳಾಹಾರವಿರಬೇಕು! (ಕ)
-ರಿದ ತಿಂಡಿ ತಿನ್ನದಿರಬೇಕು!
ಮ, ನಿಯಮದಿಂದಿರಬೇಕು!
ಬೇರಾರ್ಮಾತೂ ಆಡದಿರಬೇಕು! (ಬೇ)
-ಕು ನಿರಂಜನಾದಿತ್ಯನೆನ್ಬೇಕು!!!

ನುತಿಪೆ, ನಮಿಪೆ ನಿನ್ನಡಿಗಳಯ್ಯಾ! (ಮ)

-ತಿಗೆ ಬೆಳಕ ನೀನೇ ನೀಡಬೇಕಯ್ಯಾ!
ಪೆರತೇನೂ ನನಗೆ ಕೊಡಬೇಡಯ್ಯಾ!
ಶ್ವರವೀ ಜಗವೆಂಬರಿವಾಯ್ತಯ್ಯಾ!
ಮಿತ್ರ ನೀನೊಬ್ಬನೇ ಚರಾಚರಕ್ಕಯ್ಯಾ!
ಪೆಣ್ಣು, ಗಂಡೆಂಬ ಭೇದ ನಿನಗಿಲ್ಲಯ್ಯಾ!
ನಿನ್ನ ನಂಬಿದವರ್ಗನ್ಯಾಯಾಗದಯ್ಯಾ! (ನಿ)
-ನ್ನ ಮಕ್ಕಳ ಯೋಗಕ್ಷೇಮ ನಿನ್ನದಯ್ಯಾ! (ಕೂ)
-ಡಿಯಾಡಬೇಕು ನಾನು ನಿನ್ನೊಡನಯ್ಯಾ! (ಸಂ)
-ಗ ಬೇರಾರದೂ ನನಗೆ ಬೇಕಿಲ್ಲಯ್ಯಾ!
(ಬ)ಳಲಿ ಬೆಂಡಾಗಿಹೆನಲ್ಲಿಲ್ೋಡಾಡ್ಯಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾ! ನೀನೇಗತ್ಯಯ್ಯಾ!!!

ಮಲಗಿ ನಿದ್ರಿಸಿರೀಗೆನ್ನ ಮಕ್ಕಳೇ! (ಫ)

-ಲವಿಲ್ಲಲ್ಲಿಲ್ಲೋಡಾಡಿದರೆ ಮಕ್ಕಳೇ! (ತೂ)
-ಗಿ ಪಾಡುವೆ ಜೋಗುಳದಿಂದ ಮಕ್ಕಳೇ!
ನಿಮಗದಾರೋಗ್ಯದಾಯಕ ಮಕ್ಕಳೇ! (ಇಂ)
-ದ್ರಿಯಗಳು ನೀವು ನನಗೆ ಮಕ್ಕಳೇ! (ಘಾ)
-ಸಿ ನಿಮಗಾದ್ರೆ ನೋವೆನಗೆ ಮಕ್ಕಳೇ!
ರೀತ್ಯೆನ್ನದಾದರ್ಶ ನಿಮಗೆ ಮಕ್ಕಳೇ! (ಬ)
-ಗೆಬಗೆಯಾಸೆಗಳೇ ರೋಗ ಮಕ್ಕಳೇ! (ಅ)
-ನ್ನ, ಪಾನ ಸಾತ್ವಿಕವಾಗ್ಬೇಕು ಮಕ್ಕಳೇ!
ಡ್ಡಿ, ಮಾಂಸ ತಿನ್ನಬಾರದು ಮಕ್ಕಳೇ! (ಸ)
-ಕ್ಕರೆ ಸದಾ ತಿಂದ್ರನಾರೋಗ್ಯ ಮಕ್ಕಳೇ! (ಏ)
-ಳೇಳಿ! ನಿರಂಜನಾದಿತ್ಯಾಗಿ!! ಮಕ್ಕಳೇ!!!

ಬರಲಿರುವ ಧ್ರುವ ಧರೆಗೆ! (ವ)

-ರದರಾಜನ ಪಾದದೆಡೆಗೆ! (ಕ)
-ಲಿಮಲ ತೊಳೆವವನ್ಬಳಿಗೆ! (ಗು)
-ರುವಿನಾಜ್ಞೆಯಾಗಿಹುದವಗೆ! (ನ)
-ವ ವಿಧ ಭಾವ ಭಕ್ತಿಯವಗೆ!
ಧ್ರುವಾನಂದದರಿವುಳ್ಳವಗೆ!
ರವನೀವ ಗುರು ಅವಗೆ!
ರ್ಮಕರ್ಮಿಯಾಗಿರೆಂದವಗೆ! (ಮ)
-ರೆಯದಿರ್ಗುರುವನೆಂದವಗೆ! (ನ)
-ಗೆ ನಿರಂಜನಾದಿತ್ಯಾದವಗೆ!!!

ಜೀವನ ಕ್ರಮದಿಂದ ಜೀವನರ್ಥ!

ರ ಗುರು ಸೇವಾಸಕ್ತ ಕೃತಾರ್ಥ!
ಶ್ವರಕ್ಕಾಶಿಸುವ ಜನ್ಮ ವ್ಯರ್ಥ!
ಕ್ರಯಕ್ಕೆ ಸಿಗೋದಲ್ಲ ಪರಮಾರ್ಥ!
ನೋಜಯ ಉತ್ತಮ ಪುರುಷಾರ್ಥ! (ಅಂ)
-ದಿಂದಿನನುಭವದಿಂದಾಗ್ವುದರ್ಥ!
ತ್ತ ಕೃಪೆಯಿಂದಾಗ್ಬೇಕು ಸಮರ್ಥ!
ಜೀವನ ಸರಳವಾದ್ರಾಗ್ದನರ್ಥ! (ಭ)
-ವ ಬಂಧನಕ್ಕೆ ಕಾರಣ ಅಪಾರ್ಥ!
ರನಜ್ಞಾನದಿಂದಾಗಿರ್ಪ ಸ್ವಾರ್ಥ! (ವ್ಯ)
-ರ್ಥ ನಿರಂಜನಾದಿತ್ಯಾನಂದಕ್ಕರ್ಥ!!!

ಹೇಳಿ, ಕೇಳಿ, ಆದದ್ದೇನು? (ಬಾ)

-ಳಿನಿಷ್ಟ ಕೈಗೂಡಿತೇನು?
ಕೇಶವನ ನೊಡೀದ್ಯೇನು? (ಗಾ)
-ಳಿ ಗೋಪುರಾಯ್ತೆಲ್ಲಲ್ವೇನು?
ಡದೇ ಮಾಡ್ಸೇವೆಯನು!
ತ್ತಗೊಪ್ಪಿಸ್ಯೆಲ್ಲವನು! (ಉ)
-ದ್ದೇಶ ಪೂರ್ತಿ ಮಾಡುವನು! (ನೀ)
-ನು ನಿರಂಜನಾದಿತ್ಯಾನು!!!

ಸ್ವರೂಪ ಸ್ಥಿತನಾಗೀಗಯ್ಯಾ! (ಕು)

-ರೂಪಜ್ಞಾನದಿಂದುಂಟಾಯ್ತಯ್ಯಾ!
ರಿವರ್ತನೆಯಾಗ್ಬೇಕಯ್ಯಾ!
ಸ್ಥಿರವಾಗುಳಿವುದಿದಯ್ಯಾ!
“ತತ್ವಮಸಿ” ಸುಳ್ಳಲ್ಲವಯ್ಯಾ!
ನಾಮಜಪ ಬಿಡಬೇಡಯ್ಯಾ!
ಗೀತಾಭ್ಯಾಸ ನಿತ್ಯ ಮಾಡಯ್ಯಾ! (ಯೋ)
-ಗದಿಂದ ನಿತ್ಯ ಸುಖವಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾಗಯ್ಯಾ!!!

ಬೆಚ್ಚಿಬೀಳ್ಬೇಡಚ್ಚುತನ ಮರೆಯ್ಬೇಡ! (ಹು)

-ಚ್ಚಿಯ ಹಾಗೆ ಬಾಯಿಗೆ ಬಂದಂತಾಡ್ಬೇಡ!
ಬೀದಿಯಲ್ಲಿ ವ್ಯರ್ಥವಾಗಿ ಓಡಾಡ್ಬೇಡ! (ಕೇ)
-ಳ್ಬೇಡಾರೊ

ಈ ಮೂರ್ಕಾಸಿಗೂ ಕೈಯ್ಯೊಡ್ಬೇಡ! (ಗಂ)
-ಡನಾಜ್ಞೆಯನ್ನೆಂದೂ ಪಾಲಿಸದಿರ್ಬೇಡ! (ಪೆ)
-ಚ್ಚು ಮುಖ ಹಾಕಿಕೊಂಡಿನ್ನು ಕೂತಿರ್ಬೇಡ!
ರ್ತರದಾಸೆಯಿಂದಬಲೆಯಾಗ್ಬೇಡ!
ಗ್ನಗುತ್ತ ಮನೆಗೆಲ್ಸ ಮಾಡ್ದಿರಬೇಡ!
ನಸ್ಮಾಧವನಲ್ಲಿರಿಸದಿರ್ಬೇಡ! (ನೆ)
-ರೆಮನೆಗೆ ಹೋಗಿ ಹರಟುತ್ತಿರ್ಬೇಡ! (ಬೈ)
-ಯ್ಬೇಡ, ಮಕ್ಕಳಿಗೆ ಬುದ್ಧಿ ಹೇಳ್ದಿರ್ಬೇಡ! (ಗಂ)
-ಡ ನಿರಂಜನಾದಿತ್ಯನೆಂದೂ ಕೈಯ್ಬಿಡ!!!

ಜ್ಞಾನಾನಂದ ಜ್ಯೋತಿ ನಿರಂಜನಾದಿತ್ಯ ಪ್ರೀತಿ!

ನಾರಾಯಣ ಸ್ಮರಣೆ ಸದ್ಗುರುವಿಗೆ ಪ್ರೀತಿ!
ನಂಬಿಗೆಯಿಂದ ಬೆಳೆಸಿಕೊಳ್ಳಬೇಕಾ ಪ್ರೀತಿ!
ರ್ಶನ ಪಡೆಯಲ್ಕಿರಬೇಕು ಸದಾ ಪ್ರೀತಿ! (ರಾ)
-ಜ್ಯೋನ್ನತಿಗಿರಬೇಕಿಂಥಾ ಪರಿಶುದ್ಧ ಪ್ರೀತಿ!
ತಿಳಿದಿದನು ಬಿಡಬೇಕನಾತ್ಮದ ಪ್ರೀತಿ!
ನಿಶಿ, ದಿನ ಆತ್ಮಚಿಂತನೆಯೇ ನಿಜ ಪ್ರೀತಿ!
ರಂಗನಾಥನನುಗ್ರಹದಿಂದಾಗ್ಬೇಕೀ ಪ್ರೀತಿ!
ರಾ, ಜನ್ಮ ದುಃಖದಿಂದ ಪಾರ್ಮಾಳ್ಪುದೀ ಪ್ರೀತಿ!
ನಾಳೆಯೆನ್ನದಿಂದೇ ಸಂಪಾದಿಸಬೇಕೇ ಪ್ರೀತಿ!
ದಿವ್ಯಜೀವನಸಂಘದ ಸಂಪತ್ತಿಂಥಾ ಪ್ರೀತಿ!
ತ್ಯಜಿಸಬೇಕು ದುರ್ಜನ ಸಹವಾಸ ಪ್ರೀತಿ! (ಸು)
-ಪ್ರೀತನಾಗುವನು ಗುರು ಇದ್ದರಿಂಥಾ ಪ್ರೀತಿ!
ತಿಳಿ, ನಿರಂಜನಾದಿತ್ಯಾನಂದವಿದೇ ಪ್ರೀತಿ!!!

ದೂರು ಹೇಳ್ಬೇಡ ಊರು ಬಿಡ್ಬೇಡ! (ಯಾ)

-ರು ಏನಂದ್ರೂ ತಲೆಗ್ಹಚ್ಕೊಳ್ಬೇಡ!
ಹೇಸಿಕೆ ಸಂಸಾರ ಬೆಳೆಸ್ಬೇಡ! (ಬಾ)
-ಳ್ಬೇಕ್ವಿರಕ್ತನಾಗಿ ; ಮರೆಯ್ಬೇಡ! (ತ)
-ಡಮಾಡಿ ಕಜ್ಜಾಯ ಬಡಿಸ್ಬೇಡ!
ಹಾಪೋಹದಿಂದ ಹುಚ್ಚಾಗ್ಬೇಡ! (ಗು)
-ರುಪಾದಕ್ಕೆ ಶರಣಾಗ್ದಿರ್ಬೇಡ!
ಬಿಟ್ಟ ಬಸವನಂತೋಡಾಡ್ಬೇಡ! (ಕೆ)
-ಡ್ಬೇಡ, ಕೈ ಬಾಯ್ಸಡಿಲ ಬಿಡ್ಬೇಡ! (ಆ)
-ಡ, ನಿರಂಜನಾದಿತ್ಯಪದ್ಧಾಡ!!!

ಬಣ್ಣಿಸಲೆಂತು ನಾ ನಿನ್ನ ನಂಬುಜಾ! (ಕ)

-ಣ್ಣಿಗೌಷಧಿ ಮಧು ನಿನ್ನದಂಬುಜಾ!
ರ್ವರಿಗಾಧಾರ ನಿನ್ನಾಪ್ತಂಬುಜಾ! (ಸೋ)
-ಲೆಂಬುದಿಲ್ಲದವನೀಶಾತಂಬುಜಾ!
ತುರಿಯಾತೀತಾರ್ಯ ಸೂರ್ಯಾತಂಬುಜಾ!
ನಾರಾಯಣ ಸ್ವರೂಪವನಂಬುಜಾ!
ನಿನ್ನವನ ಸ್ನೇಹನುಪಮಾಂಬುಜಾ! (ಉ)
-ನ್ನತಾದರ್ಶವಿದೆಲ್ಲರಿಗಂಬುಜಾ! (ನಿ)
-ನ್ನಂತರಾತ್ಮನಾಗಿಹನಾತಂಬುಜಾ! (ತುಂ)
-ಬು ಸಹ ಜೀವನ ನಿಮ್ಮದಂಬುಜಾ! (ನಿ)
-ಜಾತ ತಾ ನಿರಂಜನಾದಿತ್ಯಂಬುಜಾ!!!

ಮೋಡ ಮುಸುಕಿದ ದಿನವಿಂದು! [ನೋ]

-ಡಲಾಗದಾಯ್ತು ಮಿತ್ರನನ್ನಿಂದು!
ಮುಖ ಸುತ್ತು ಕೆಲಸದಲ್ಲಿಂದು!
ಸುದಿನ ದುರ್ದಿನದ್ದರಿವಾಯ್ತಿಂದು!
ಕಿವಿಗೊಡಲಿಲ್ಲಾರ ಮಾತ್ಗಿಂದು!
ತ್ತನಿಚ್ಛೆಯಂತಾಗ್ವುದೆಂದೆಂದು!
ದಿವ್ಯನಾಮಜಪಗತ್ಯೆಂದೆಂದು!
ಮಿಸ್ಬೇಕ್ಪಾದವೇ ಗತಿಯೆಂದು! (ಹೂ)
-ವಿಂದರ್ಚಿಸಬೇಕದನ್ನೆಂದೆಂದು! (ಅ)
-ದು ನಿರಂಜನಾದಿತ್ಯನದ್ದೆಂದು!!!

ಕಾಮ ದಹನ, ಕುಮಾರ ಜನನ!

ಹಾದೇವ ಪಾರ್ವತಿಯರ್ಮಿಲನ! (ಕಂ)
-ದನೆಂದ್ಕರೆದರಾ ಸುಬ್ರಹ್ಮಣ್ಯನ!
ರ್ಷ ತುಂಬಿದನೆಲ್ಲರ್ಲ್ಕ್ಷಡಾನನ! (ತ)
-ನಯನ ಕಂಡುಬ್ಬಿತುಮಾವದನ!
ಕುಣಿಯಿತ್ಯಿವಗಣ, ನೋಡ್ಯವನ! (ರ)
-ಮಾರಮಣ ಕೊಂಡಾಡಿದನ್ಯಿವನ! (ಸು)
-ರಸಮೂಹಕ್ಕಭಯವಿತ್ತವನ!
ಗದ್ಗುರುವಾಗಿ ಮೆರೆದವನ! (ದಾ)
ವಕುಲ ನಿರ್ನಾಮಗೈದವನ! (ದಿ)
-ನಪ ನಿರಂಜನಾದಿತ್ಯಾವನ!!!

ಪ್ರಪುಲ್ಲ ಕಮಲ ವಿಜಯಾನಂದ!

ಪುಲ್ಲನಾಭನ ಸೇವೆ ಬ್ರಹ್ಮಾನಂದ! (ಕ್ಷು)
-ಲ್ಲ ವಿಷಯವಾಸನೆ ತ್ಯಾಗಾನಂದ!
ರಣತ್ರಯ ಶುದ್ಧ ಯೋಗಾನಂದ!
ದ, ಮತ್ಸರ ನಾಶ ಆತ್ಮಾನಂದ!
ಕ್ಷ್ಯ ಸಿದ್ಧಿಯ ಗುರಿ ನಿಜಾನಂದ!
ವಿಕಾರಾತೀತ ನಿರಾಕಾರಾನಂದ!
ಗದ್ಗುರು ಶ್ರೀಗುರು ಶಿವಾನಂದ!
ಯಾಗಯೋಗಾರಾಮ ಶ್ರೀ ರಾಮಾನಂದ!
ನಂದಕಂದ ಗೋವಿಂದಾಚ್ಚುತಾನಂದ!
ತ್ತ ಶ್ರೀ ನಿರಂಜನಾದಿತ್ಯಾನಂದ!!!

ಸಾಧನೆ ಮೊದಲ್ಮುಗಿಸ್ಬೇಕು! [ಬೋ]

-ಧನೆ ಆಮೇಲ್ಯುರು ಮಾಡ್ಬೇಕು! (ಮ)
-ನೆಮನೆಗೂ ಹೋಗ್ಯದಾಗ್ಬೇಕು!
ಮೊತ್ತವೇನೂ ಎತ್ತದಿರ್ಬೇಕು!
ತ್ತ ಗುರುವೆಂದು ಸಾರ್ಬೇಕು! (ಮೇ)
-ಲು



ಸುಕು ತೆಗೆದೊಗೆಯ್ಬೇಕು! (ಯೋ)
-ಗಿರಾಜನನ್ನು ತೋರಿಸ್ಬೇಕು! (ಕ)
-ಸ್ಬೇನೂ ಬೇರೆ ಹೂಡದಿರ್ಬೇಕು! (ಟಾ)
-ಕು ನಿರಂಜನಾದಿತ್ಯಾಗ್ಬೇಕು!!!

ಸೇರು ಬಾ; ಊರು ಸೇರು ಬಾ ಬಾ! [ಗು]

-ರುವಿನ ಗುಲಾಮನಾಗ್ಬಾ ಬಾ!
ಬಾಯಲ್ಲಾಡಿದಂತೆ ಮಾಡ್ಬಾ ಬಾ!
ರೂರಲೆದದ್ದು ಸಾಕ್ಬಾ ಬಾ! (ಏ)
-ರುಪೇರ್ತೋರದಿಲ್ಲೇ ಇರ್ಬಾ ಬಾ!
ಸೇವಾನಂದನುಭವಿಸ್ಬಾ ಬಾ! (ತೋ)
-ರು ನಿನ್ನನನ್ಯಭಕ್ತೀಗ್ಬಾ ಬಾ!
ಬಾ, ಬೇಗ, ಸಕಾಲವೀಗ್ಬಾ ಬಾ!
ಬಾ, ನಿರಂಜನಾದಿತ್ಯಾಗ್ಬಾ ಬಾ!!!

ನನ್ನ ಹುಟ್ಟಿದ ಹಬ್ಬವಿಂದು! [ನಿ]

-ನ್ನ ನೋಡುವೆನು ನಾನಿಲ್ಲಿಂದು!
ಹುಟ್ಟಡಗ್ಲೆಲ್ಲಾಸೆಗಳಿಂದು! (ಜ)
-ಟ್ಟಿಯಾಗ್ಬೇಕಧ್ಯಾತ್ಮದಲ್ಲಿಂದು!
ರ್ಶನಾನಂದ ಪಡ್ಬೇಕಿಂದು!
ರ್ಷದಿಂದ ಕುಣೀಬೇಕಿಂದು! (ಹ)
-ಬ್ಬದೂಟ ಉಂಡು ತೇಗ್ಬೇಕಿಂದು! (ಸಾ)
-ವಿಂದ ಪಾರಾಗಿದರಿಂದ್ಮುಂದು! (ಇ)
-ದು ನಿರಂಜನಾದಿತ್ಯೇಚ್ಛೆಂದು!!!

ಗುಪ್ತ ಸುಪ್ತ್ಯಾತ್ಮಾನಂದ ಸ್ಥಿತಿ! [ಪ್ರಾ]

-ಪ್ತವಾದರಿದೇಂ ಮುಕ್ತಿ ಸ್ಥಿತಿ!
ಸುಜ್ಞಾನಸೂರ್ಯನಾರ್ಯ ಸ್ಥಿತಿ! (ದೀ)
-ಪ್ತ್ಯಾತ್ಮಜ್ಞಪ್ತಿಯಾರಾಮ ಸ್ಥಿತಿ! (ಆ)
-ತ್ಮಾನಾತ್ಮ ಚಿಂತನಾಂತ್ಯ ಸ್ಥಿತಿ!
ನಂದಕಂದನಾನಂದ ಸ್ಥಿತಿ!
ತ್ತಾತ್ರೇಯನ ನಿಜ ಸ್ಥಿತಿ!
ಸ್ಥಿತಿ, ಲಯಾತೀತವೀ ಸ್ಥಿತಿ! (ಇ)
-ತಿ, ನಿರಂಜನಾದಿತ್ಯ ಸ್ಥಿತಿ!!!

ಪ್ರಾರ್ಥನೆ ಫಲಿಸುವುದು ನಿನ್ನದು! (ಸಾ)

-ರ್ಥಕ ಜನ್ಮವಿದರಿಂದ ನಿನ್ನದು!
ನೆನೆಸುವುದೆನ್ನ ಭಾರ ನಿನ್ನದು!
ಲವ ಕೊಡುವಾನಂದ ನಿನ್ನದು! (ಬ)
-ಲಿಯಬೇಕ್ಭಕ್ತಿ ನಿನ್ನಲ್ಲಿ ನನ್ನದು!
ಸುರಿಯುವುದಾಗಮೃತ ನನ್ನದು! (ಸಾ)
-ವು, ನೋವಿಲ್ಲದಾನಂದಾಗ ನಿನ್ನದು!
ದುರ್ದೈವದೂರ ಬಾಳಾಗ ನಿನ್ನದು!
ನಿನ್ನ, ನನ್ನೈಕ್ಯಾನಂದಾಗ ನಿನ್ನದು! (ಉ)
-ನ್ನತದ ಕೈಲಾಸಾವಾಸ ನನ್ನದು! (ಇ)
-ದು ನಿರಂಜನಾದಿತ್ಯಾತ್ಮ ನಿನ್ನದು!!!

ಬಟ್ಟೆ ತೊಳೆವಭ್ಯಾಸ ಬಿಟ್ಟಿಡ್ಬೇಡ! (ಹೊ)

-ಟ್ಟೆ ಕೆಟ್ಟುಹೋಗ್ವಷ್ಟಾಹಾರ ತಿನ್ಬೇಡ!
ತೊಟ್ಟಿ ತುಂಬಿಸಿಟ್ಟುಕೊಳ್ಳದಿರ್ಬೇಡ! (ಕೊ)
-ಳೆ ಹೊಳೆ ನೀರು ತಂದಿಟ್ಟುಕೊಳ್ಬೇಡ!
ರ ಗುರುಸೇವೆಯೆಂದೂ ಬಿಡ್ಬೇಡ! (ಅ)
-ಭ್ಯಾಗತರನ್ನನಾದರ ಮಾಡ್ಬೇಡ!
ತಿಗೆ ಸ್ವತಂತ್ರವೆಂದೂ ಕೊಡ್ಬೇಡ!
ಭಿನ್ನಹದ ಬಾಯ್ಗೆ ಮಣ್ಣು ಹಾಕ್ಬೇಡ! (ಕ)
-ಟ್ಟಿದ್ದು ದಾಕ್ಷಿಣಕ್ಕೆ ಕೆಟ್ಟು ಹೋಗ್ಬೇಡ! (ಬೇ)
-ಡ್ಬೇಡಿ ಕೂಡಿಟ್ಟು ಜನ್ಮ ಮುಗಿಸ್ಬೇಡ! (ಇ)
-ಡ, ನಿರಂಜನಾದಿತ್ಯೇನೂ ಮುಚ್ಚಿಡ!!!

ಸದಾರಾಮಾ ಶ್ರೀ ಮನೋರಮಾ!

ದಾಸಿ

ಈರಾ ಸ್ವರೂಪಾರಾಮಾ!
ರಾಗರಸ ಭಜನಾರಾಮಾ!
ಮಾಲಾಧರನ ಸಂಗಾರಾಮಾ!
ಶ್ರೀಕರ ಶುಭಕರಾರಾಮಾ!
ನಮಂದಿರ ರಾಜಾರಾಮಾ!
ನೋವು, ಸಾವೇನಿಲ್ಲದಾರಾಮಾ!
ತಿಪತಿಯಳಿದಾರಾಮಾ! (ರ)
-ಮಾ, ನಿರಂಜನಾದಿತ್ಯಾರಾಮಾ!!!

ಕಾದಿರಬೇಕು ಮನೋಹರನಿಗಾಗಿ!

ದಿನ ರಾತ್ರಿಸ್ಮರಿಸ್ಬೇಕು ಕೃಪೆಗಾಗಿ!
ಹಸ್ಯವನದು ತಿಳಿಯಲಿಕ್ಕಾಗಿ!
ಬೇರೆಡೆಗೋಡದಂತಿರುವುದಕ್ಕಾಗಿ!
ಕುಕಲ್ಪನೆಗಳಡಗಿಸಲಿಕ್ಕಾಗಿ!
ಲಿನ ವಾಸನೆ ತೊಳೆಯಲಿಕ್ಕಾಗಿ!
ನೋವು, ಸಾವುಗಳ ಜಯಿಸಲಿಕ್ಕಾಗಿ!
ಸ್ತಾದಿಂದ್ರಿಯಗಳ ನಿಗ್ರಹಕ್ಕಾಗಿ!
ಮಾರಮಣವನಾಗಿರ್ಪುದಕ್ಕಾಗಿ!
ನಿಶಿ, ದಿನ ಪಾದಸೇವಾ ಲಾಭಕ್ಕಾಗಿ!
ಗಾಢಾಲಿಂಗನಾನಂದಾನುಭವಕ್ಕಾಗಿ! (ಯೋ)
-ಗಿ, ನಿರಂಜನಾದಿತ್ಯನಲ್ಲೈಕ್ಯಕ್ಕಾಗಿ!!!

ಚಂದ, ಗೋವಿಂದ, ಮುಕುಂದ, ನಿಜಾನಂದ!

ರ್ಶನ ಮನೋಹರ ಯಶೋದಾನಂದ!
ಗೋವರ್ಧನ ಗಿರಿಧಾರಿ ಗೋಪಾನಂದ!
ವಿಂಧ್ಯ ಹಿಮಾಚಲ ರೂಪಾ ಆತ್ಮಾನಂದ!
ತ್ತ ಸ್ವರೂಪಿ ತಾನಾಗ್ಯಭೇದಾನಂದ!
ಮುಕ್ತಿ, ಭುಕ್ತಿದಾತ ಮಾತಾಪಿತಾನಂದ!
ಕುಂತೀ ಕುಮಾರರಾಪ್ತಾ ದ್ವಾರಕಾನಂದ!
ನುಜ ದಮನ ದಾಮೋದರಾನಂದ!
ನಿತ್ಯ, ಸತ್ಯ, ಸದ್ಗುರು ಶ್ರೀ ಶಿವಾನಂದ!
ಜಾಗ್ರತ್ಯಾದ್ಯವಸ್ಥಾತೀತಾ ಬ್ರಹ್ಮಾನಂದ! (ಅ)
-ನಂಗಪಿತ ಹರಿ ಜಿತ ಕಾಮಾನಂದ! (ನಂ)
-ದಕಂದ ಶ್ರೀ ನಿರಂಜನಾದಿತ್ಯಾನಂದ!!!

ಅಚ್ಚುತನ ಸೇರಲೆಚ್ಚರದಿಂದ ಬಾ! (ಚು)

-ಚ್ಚುವ ಮುಳ್ಳುಗಿಡಗಳ ಸರಿಸಿ ಬಾ!
ನ್ನ ಸುಖಕ್ಕಾಗ್ಯದ ನೋಯಿಸದೆ ಬಾ!
ನ್ನಾನಂದಾಮೇಲೆ ಅನುಭವಿಸು ಬಾ!
ಸೇವೆಯಿಂದ ಸಾಯುಜ್ಯವೆಂದರತು ಬಾ!
ಘುಪತಿಯ ಭಜನೆ ಮಾಡುತ್ತ ಬಾ! (ತ)
-ಲೆಬಾಗಿ ಶ್ರೀ ಪಾದಕ್ಕೆ ಭಕ್ತಿಯಿಂದ ಬಾ! (ಮ)
-ಚ್ಚರ ಬಿಟ್ಟ ಸಚ್ಚರಿತನಾಗೀಗ ಬಾ! (ತ)
-ರತರದಾಸೆಗಳ ಸವರುತ್ತ ಬಾ!
ದಿಂಬು ಹಾಸಿಗೆಗಳೊತ್ತಟ್ಟಿಗಿಟ್ಟು ಬಾ! (ಉ)
-ದಯ ಕಾಲಕ್ಕೆ ಮೊದಲೆದ್ದಿತ್ತನೀ ಬಾ!
ಬಾ! ನಿರಂಜನಾದಿತ್ಯಾಚ್ಚುತನಾಗು ಬಾ!!!

ಕೃಷ್ಣ ಬಾ, ರಾಮ ಬಾ, ರಾಮಕೃಷ್ಣ ಬಾ! (ಉ)

-ಷ್ಣ ಸಂಸಾರದ್ದು ಸಹಿಸಲಾರೆ ಬಾ!
ಬಾಲಕರ ಭಾರ ಹೊರಲಾರೆ ಬಾ! (ಶ್ರೀ)
-ರಾಗ ಹಾಡುವೆನೀಗ ಕೇಳು ಬಾ!
ಧ್ಯದಲ್ಲೆದ್ದು ಹೋಗಲಾಗದು ಬಾ!
ಬಾಣ, ಬಿಲ್ಲುಗಳೀಗನಗತ್ಯ ಬಾ!
ರಾಗಾನಂದದಲ್ಲೊಂದಾಗಲೀಗ ಬಾ!
ಲಗ್ಯೆದ್ದೆನ್ನ ನೀ ಮಲಗಿಸು ಬಾ!
ಕೃಪೆ ನಿನ್ನದೆನಗಾಗಬೇಕು ಬಾ!
(ವೈ)ಷ್ಣವಿ ನನ್ನನುಪೇಕ್ಷಿಸ ಬೇಡ!
ಬಾ! ನಿರಂಜನಾದಿತ್ಯನಾಗೀಗ ಬಾ!!!

ಕಂಡು ಕೊಂಡಾಡಬೇಕಯ್ಯಾ! (ಹು)

-ಡುಗಾಟವೆನಬೇಡಯ್ಯಾ!
ಕೊಂಕು ಡೊಂಕೆಲ್ಲಾ ತಿದ್ದಯ್ಯಾ!
ಡಾವರಿಸೆನ್ನ ನೀನಯ್ಯಾ! (ಬಿ)
-ಡ ಬೇಡೀಗೆನ್ನ ಕೈಯ್ಯಯ್ಯಾ!
ಬೇಯುತಿದೆನ್ನೊಡಲಯ್ಯಾ!
ರುಣೆ ತೋರಿ ಬಾರಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಯ್ಯಾ!!!

ಇಂದ್ರಿಯಕ್ಕಾಳಾಗ್ಯಾಯ್ತು ಸರ್ವನಾಶ! (ಪಾ)

-ದ್ರಿಗಳ ಮನೆಯಾಯ್ತು ಹಿಂದೂದೇಶ! (ಕಾ)
-ಯ ಮೋಹದಿಂದಾಯ್ತು ಸ್ವರೂಪನಾಶ! (ತಿ)
-ಕ್ಕಾಟಕ್ಕಾಯ್ತು ಕಾರಣ ನಾನಾ ಆಶ! (ಗೋ)
-ಳಾಟ ತಪ್ಪಿಸಬಾರದೇಕಾ ಈಶ? (ಯೋ)
-ಗ್ಯಾಯೋಗ್ಯ ವಿಚಾರವೇ ಧರ್ಮೋದ್ದೇಶ! (ಆ)
-ಯ್ತು ಅಜ್ಞಾನದಿಂದ ಸಂಸಾರ ಪಾಶ!
ರ್ವ ಕಲ್ಯಾಣಕ್ಕಾಗಿರ್ಲಿ ಸರ್ವೇಶ! (ಗ)
-ರ್ವ ಬೇಡೆಂಬುದಾ ಸದ್ಗುರೂಪದೇಶ!
ನಾಮಸ್ಮರಣೆ ಮಾಡೆಂಬನಾ ಶ್ರೀಶ! (ಶ್ರೀ)
-ಶ, ನಿರಂಜನಾದಿತ್ಯ ಸ್ವಪ್ರಕಾಶ!!!

ಎಲ್ಲೋಡಿ ಹೋಗಿ ಬಂದೆ ಕಂದಯ್ಯಾ! (ಅ)

-ಲ್ಲೋಲ ಕಲ್ಲೋಲ ಮಾಡಬೇಡಯ್ಯಾ! (ಅ)
-ಡಿದಾವರೆಯಲ್ಲೇಕೆ ಧೂಳಯ್ಯಾ!
ಹೋಳಿಯಾಗೆಷ್ಟ ದಿನವಾಯ್ತಯ್ಯಾ!
ಗಿರಿಧರ ಗೋಪಾಲ ಬಾರಯ್ಯಾ!
ಬಂಡು ಮಾಡಿ ಭಂಡನಾಗ್ಬೇಡಯ್ಯಾ! (ತಂ)
-ದೆ, ತಾಯಿ, ಬಂಧು, ಮಿತ್ರ ನೀನಯ್ಯಾ!
ಕಂದೆರೆದೊಮ್ಮೆ ನನ್ನ ನೋಡಯ್ಯಾ!
ರ್ಶನಾಪೇಕ್ಷಿ ದಾಸಿ ನಾನಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯ ಕೃಷ್ಣಯ್ಯಾ!!!

ವಿಕಲ್ಪ ಹೋದಾಗ, ವಿರಕ್ತಿ ಬಂದಾಗ!

ಲ್ಯಾಣಮಕ್ಕು ನಿನ್ನಿಂದ ಲೋಕಕ್ಕಾಗ! (ತ)
-ಲ್ಪ ಸುಖಾದಿಗಳಾಸೆಗಳಳಿದಾಗ!
ಹೋರಾಟವೇನಿಲ್ಲ ಸಂಸಾರದಲ್ಲಾಗ!
ದಾರಿ ಗುರುಪಾದದತ್ತ ನಡೆದಾಗ!
ತಿಗೇಡಿನ ಭಯ ನಿನಗೇಕಾಗ?
ವಿಧಿ, ಹರಿ, ಹರರೊಂದೆಂದರಿತಾಗ! (ಪ)
-ರಮಾರ್ಥಿ ನೀನೆಂಬೆ ನಾನು ನಿನ್ನನ್ನಾಗ! (ಭು)
-ಕ್ತಿಗಾಗಿ ಭಕ್ತಿಯಲ್ಲೆಂಬರಿವಾದಾಗ!
ಬಂಧನ ಹರಿಯುವುದು ನಿನ್ನದಾಗ!
ದಾತ, ನಾಥ ಶ್ರೀ ಗುರುದತ್ತನೆಂದಾಗ!
ಭಸ್ತಿ ನಿರಂಜನಾದಿತ್ಯ ನೀನಾಗ!!!

ನೈವೇದ್ಯವನ್ನಿಂದುಂಡಾಯ್ತು!

ವೇದವಾಗ್ಯಮೃತವಾಯ್ತು! (ಆ)
-ದ್ಯವಸಾನವಿಲ್ಲದಾಯ್ತು!
ರ ಗುರುವೇ ತಾನಾಯ್ತು! (ತ)
-ನ್ನಿಂದ ಬೇರೊಂದಿಲ್ಲದಾಯ್ತು! (ಔ)
-ದುಂಬರಂಬರದಲ್ಲಾಯ್ತು! (ಓ)
-ಡಾಟವೆಲ್ಲಾ ನಿಂತು ಹೋಯ್ತು! (ಆ)
-ಯ್ತು, ನಿರಂಜನಾದಿತ್ಯಾಯ್ತು!!!

ಆರೊಳಗೆಷ್ಟಿದ್ದರೇನು?

ರೊಟ್ಟಿಗೆ ಹಿಟ್ಟು ಬೇಡ್ವೇನು? (ಕ)
-ಳವಳದಿಂದಾಗ್ವುದೇನು? (ನ)
-ಗೆಮೊಗದಿಂದಿರು ನೀನು! (ಸೃ)
-ಷ್ಟಿಸಿದಾತ ದೇವ ತಾನು! (ಸ)
-ದ್ದಡಗಿಸಿ ಬಾಳು ನೀನು! (ಯಾ)
-ರೇನೆಂದರೆ ನಿನಗೇನು? (ನೀ)
-ನು ನಿರಂಜನಾದಿತ್ಯಾನು!!!

ತನ್ನಾಟವೆಲ್ಲಾ ಶಾಸ್ತ್ರೋಕ್ತಂತೆ!

ನ್ನಾನಂದ ಬ್ರಹ್ಮಾನಂದವಂತೆ! (ಕಾ)
-ಟದೂಟವಳು ಮೊಡಳಂತೆ! (ಸಾ)
-ವೆನಗಿಲ್ಲೆಂದಿರುವಳಂತೆ!
(ಎ)ಲ್ಲಾ ಕಡೆ ತಾನಿರುವಳಂತೆ!
ಶಾಸಕಳೆಲ್ಲಕ್ಕವಳಂತೆ! (ಅ)
-ಸ್ತ್ರೋಪಯೋಗ ಮಾಡಳೀಗಂತೆ! (ಭ)
-ಕ್ತಂಗಾಕೆ ವರದಾತೆಯಂತೆ! (ಮಾ)
-ತೆ, ನಿರಂಜನಾದಿತ್ಯನಂತೆ!!!

ವಿಶ್ವಾಸಘಾತುಕನಾಗಬೇಡ!

ಶ್ವಾನ ಸೂಕರರಂತಿರಬೇಡ!
ತ್ಯಕ್ಕೆಂದೂ ಚ್ಯುತಿ ತರಬೇಡ!
ಘಾಯಕ್ಕಿನ್ನೂ ಹುಳಿ ಹಿಂಡಬೇಡ!
ತುದಿ ಮೊದಲಿಲ್ಲದಾಸೆ ಬೇಡ!
ದ್ದು ಒಡಲ ಪೋಷಿಸಬೇಡ!
ನಾಮಸ್ಮರಣೆ ಬಿಡಲೇ ಬೇಡ!
ಣಿಕೆಯರ ಹಿಂದೋಡಬೇಡ!
ಬೇಜಾರನ್ಯರಿಗೆ ಮಾಡಬೇಡ! (ಆ)
-ಡ ನಿರಂಜನಾದಿತ್ಯದ ಮಾಡ!!!

ನನ್ನನ್ನು ಹೊರಗಿಟ್ಟವ ನೀನೇ! (ನಿ)

-ನ್ನ ನಂಬಿದ್ದಕ್ಕಿದೇ ಫಲ ತಾನೇ? (ನ)
-ನ್ನುತ್ಸಾಹ ಕೆಡಿಸಿದವ ನೀನೇ!
ಹೊರಗೊಳಗೆಲ್ಲಾ ನೀನು ತಾನೇ? (ಪ)
-ರಮಾರ್ಥವಿದೆಂದವನು ನೀನೇ!
(ಯೋ)ಗಿ ರಾಜನೆಂಬವ ನೀನು ತಾನೇ? (ಕ)
-ಟ್ಟಕಡೆಗೆಲ್ಲಕ್ಕೂ ಗತಿ ನೀನೇ! (ಭ)
-ವರೋಗಕ್ಕೆ ವೈದ್ಯ ನೀನು ತಾನೇ?
ನೀನೂ ನಾನೂ ಒಂದೆಂದವ ನೀನೇ! (ನೀ)
-ನೇ, ಆ ನಿರಂಜನಾದಿತ್ಯ ತಾನೇ???

ನನ್ನನಿಷ್ಟು ದೂರವಿಟ್ಟವನು ನೀನೇ! (ನಿ)

-ನ್ನವನು ನಾನೆಂದಾಪ್ತ ಪ್ರೇಮಿಯೂ ನೀನೇ! (ನಿ)
-ನ್ನಿಷ್ಟದೀ ಜಗನ್ನಿಯಾಮಕನೂ ನೀನೇ! (ಎ)
-ಷ್ಟುರಿದರಾರದ ನಂದಾದೀಪ ನೀನೇ!
ದೂರ, ಹತ್ತಿರ, ಎಲ್ಲೆಲ್ಲೂ ಒಬ್ಬ ನೀನೇ! (ಮ)
-ರ, ಗಿಡ, ಗಿರಿ, ಗುಹೆಗಳಲ್ಲೂ ನೀನೇ!
ವಿಧಿ, ಹರಿ, ಹರ ದತ್ತಾತ್ರೇಯ ನೀನೇ! (ಕೆ)
-ಟ್ಟರಿಗಳ ಮಟ್ಟಹಾಕಿದವ ನೀನೇ!
ರದರಾಜ, ರಂಗನಾಥನೂ ನೀನೇ! (ಅ)
-ನುಪಮಾನಂದ ಶಿವಾನಂದನೂ ನೀನೇ!
ನೀಲಮೇಘಶ್ಯಾಮ ಶ್ರೀರಾಮನೂ ನೀನೇ! (ನೀ)
-ನೇ, ಶ್ರೀ ನಿರಂಜನಾದಿತ್ಯಾನಂದ ತಾನೇ???

ಕಾದು ಕಪ್ಪಾಗದಿರಬೇಕು! (ಗೇ)

-ದು ಮುಪ್ಪಾಗದೇ ಇರಬೇಕು!
ರ್ತವ್ಯರ್ಥರಿತಿರಬೇಕು!
(ಒ)ಪ್ಪಾಗ್ಯೆಲ್ಲವನ್ನೂ ಮಾಡಬೇಕು!
ಡಿಬಿಡಿಯ ಬಿಡಬೇಕು!
ದಿನಮಣಿಯಾದರ್ಶ ಬೇಕು!
ಹಸ್ಯಾಗ ತಿಳಿಯಬೇಕು!
ಬೇರೆ ಇನ್ನೇನಾಮೇಲಾಗ್ಬೇಕು? (ಬೇ)
-ಕು, ನಿರಂಜನಾದಿತ್ಯಾಗ್ಬೇಕು!!!

ಇಂದೋ ನಾಳೆಯೋ ಸಾವೀ ದೇಹಕ್ಕೆ!

ದೋಷಾರೋಪಣೆ ಮಾಳ್ಪುದೇತಕ್ಕೆ!
ನಾನಾರೆಂದರಿತಿಲ್ಲವೇತಕ್ಕೆ? (ಕೊ)
-ಳೆಯೆಲ್ಲಾ ತೊಳೆಯಬೇಕಿದಕ್ಕೆ!
ಯೋಗದಿಂದ ಮುಕ್ತಿ ಈ ಜೀವಕ್ಕೆ!
ಸಾಧನೆ ಹೆಚ್ಚೇಕ್ದಿನದಿನಕ್ಕೆ!
ವೀತರಾಗ ತಾನಾಗುವುದಕ್ಕೆ!
ದೇವ ಮಾನವನಾಗುವುದಕ್ಕೆ!
ರಿ ಸ್ಮರಣೆ ದಾರಿಯದಕ್ಕೆ! (ಅ)
-ಕ್ಕೆ ನಿರಂಜನಾದಿತ್ಯಾನಂದಕ್ಕೆ!!!

ಅನ್ಯರೊಡವೆಗಾಶಿಸಬೇಡ! (ಅ)

-ನ್ಯ ದೇವರ ಪೂಜೆ ಮಾಡಬೇಡ! (ಬೇ)
-ರೊಬ್ಬರನ್ನೆಂದೂ ನೋಯಿಸಬೇಡ! (ಮೃ)
-ಡನ ಸೇವೆ ವ್ಯರ್ಥವೆನಬೇಡ!
(ಶಿ)ವೆ ನೀನಾಗಿ ಶವವಾಗಬೇಡ!
ಗಾಳಿ ಗೋಪುರ ಕಟ್ಟಲೇಬೇಡ!
ಶಿಷ್ಟ ಸಂಪ್ರದಾಯ ಬಿಡಬೇಡ!
ದಾಶಿವನ ಮರೆಯಬೇಡ!
ಬೇರಿನ್ನೇನನ್ನೂ ಬಯಸಬೇಡ! (ಗಂ)
-ಡ ನಿರಂಜನಾದಿತ್ಯ ಮಾರ್ತಾಂಡ!!!

ಅನ್ಯರೊಡವೆಗಾಶಿಸಬೇಡ! [ಧ]

-ನ್ಯನಾಗುವ ದಾರಿ ಬಿಡಬೇಡ! (ಯಾ)
-ರೊಡನೆಯೂ ಜಗಳಾಡಬೇಡ! (ಬ)
-ಡವನಾದರೂ ಒದ್ದಾಡಬೇಡ! (ಸಾ)
-ವೆ ನಾನೆಂಬ ಭಯಪಡಬೇಡ! (ಯೋ)
-ಗಾಭ್ಯಾಸ ಮಾಡದಿರಲೇಬೇಡ!
ಶಿವನೇ ನೀನಾಗದಿರಬೇಡ!
ಮಯ ವ್ಯರ್ಥ ಕಳೆಯಬೇಡ!
ಬೇಡಿ ಕಾಡಿ ದುಃಖಿಯಾಗಬೇಡ! (ಸು)
-ಡ, ನಿರಂಜನಾದಿತ್ಯ ಕೈ ಬಿಡ!!!

ಅನ್ಯರೊಡವೆಗಾಶಿಸಬೇಡಿ! [ಧ]

-ನ್ಯರಾಗುವ ದಾರಿ ಬಿಡಬೇಡಿ!
ರೊಕ್ಕಕ್ಕಾಗಕ್ಕರೆ ತೋರಬೇಡಿ! (ಒ)
-ಡನಾಟಲ್ಪರದು ಮಾಡಬೇಡಿ!
(ಸೇ)ವೆ ಗುರುವಿನದು ಬಿಡಬೇಡಿ!
ಗಾಢಾಂಧಕಾರದಲ್ಲಿರ ಬೇಡಿ!
ಶಿವ, ಜೀವೈಕ್ಯ ಸುಳ್ಳೆನಬೇಡಿ!
ಜ್ಜನರನ್ನು ಪೀಡಿಸಬೇಡಿ!
ಬೇಡಿ, ಕಾಡಿ, ಉಡಿ ತುಂಬಬೇಡಿ! (ಹಾ)
-ಡಿ, ನಿರಂಜನಾದಿತ್ಯನ ಕೂಡಿ!!!

ಕಷ್ಟ, ನಷ್ಟ, ಭ್ರಷ್ಟಾತುರದಿಂದ! (ಇ)

ಷ್ಟಸಿದ್ಧಿಗಾಗಿರು ತಾಳ್ಮೆಯಿಂದ!
ಮಿಸು ಪಾದಕ್ಕೆ ಭಕ್ತಿಯಿಂದ! (ತು)
-ಷ್ಟನಾಗಪ್ಪನ ಪ್ರಸಾದದಿಂದ!
ಭ್ರಮಾ ನಿವಾರಣೆಯದರಿಂದ! (ಶಿ)
-ಷ್ಟಾಚಾರ ತಿಳಿ ಹಿರಿಯರಿಂದ! (ಮಾ)
-ತು ಕೊಟ್ಟು ತಪ್ಪಬಾರದಾದ್ರಿಂದ! (ಪ)
-ರಧನದಾಸೆ ಬಿಡು ಆದ್ರಿಂದ! (ಅಂ)
-ದಂದಿನ ಮಾತೆಲ್ಲಾ ವ್ಯರ್ಥಾದ್ರಿಂದ! (ಅಂ)
-ದದ ನಿರಂಜನಾದಿತ್ಯಾನಂದ!!!

ನೀತಿ, ರೀತಿಗಳರುಹಿದೆಯಂದು!

ತಿಳಿದದ ಬಾಳುವರಿಲ್ಲ ಇಂದು! (ಬ)
-ರೀಬಾಯಿ ವೇದಾಂತ ಹೆಚ್ಚಾಯಿತಿಂದು!
ತಿನ್ನುವಾಹಾರ ಹೊಲಸಾಯಿತಿಂದು!
(ಸಂ)ಗ ಸಜ್ಜನರದ್ದು ಬೇಡವಾಯ್ತಿಂದು! (ಥ)
ಕು ಜೀವನಕ್ಕೆ ಮರ್ಯಾದೆಯಿಂದು!
ರುಜುಮಾರ್ಗಿಗಳಪರೂಪವಿಂದು!
ಹಿತಶತೃಗಳಾಡಳಿತವಿಂದು! (ಕಂ)
-ದೆರೆವಂತೆ ಮಾಡೆಲ್ಲರ ನೀನಿಂದು! (ಸ್ವ)
-ಯಂಪ್ರಭೆ ಬೆಳಗಬೇಕೆಲ್ಲೆಲ್ಲಿಂದು! (ಬಂ)
-ದು ನಿರಂಜನಾದಿತ್ಯನೇ ನೀನೆಂದು!!!

ನನ್ನ ನಾ ನೋಡುವೆನು ಬಹು ಭಂಗಿಯಲ್ಲಿ! (ಚೆ)

-ನ್ನಕೇಶವನಾಗಿಹೆನೊಂದು ರೂಪಿನಲ್ಲಿ!
ನಾಮ, ರೂಪಾತೀತಾತ್ಮ ನಾನು ನಿಜದಲ್ಲಿ! (ಮ)
-ನೋವಿಕಾರಗಳಿಲ್ಲ ಈ ಸ್ವಸ್ಥಿತಿಯಲ್ಲಿ! (ಮಾ)
-ಡುತ್ತಿರಬೇಕಭ್ಯಾಸ ಗುರುಭಕ್ತಿಯಲ್ಲಿ!
ವೆಚ್ಚವಾಗಬಾರದು ಶಕ್ತಿಂದ್ರಿಯದಲ್ಲಿ! (ತ)
-ನುಭಾವವಳಿಯಬೇಕವಸಾನದಲ್ಲಿ!
ಲಿ ಕೊಡಬೇಕು ಬಯಕೆ ನಿತ್ಯದಲ್ಲಿ!
ಹುಸಿ ಮಾಯೆ ಕಾಣಿಸಳಾಗಾ ಜಾಗದಲ್ಲಿ!
ಭಂಡಾರ ಭರ್ತಿಯಾಗ ನಿಮಿಷಾರ್ಧದಲ್ಲಿ!
ಗಿರಿಧರ ಗೋಪಾಲಸ್ವಾಮಿಯಾಗೆಲ್ಲೆಲ್ಲಿ!
ದುನಾಥನ ವೇಣುನಾದ ಕಿವಿಯಲ್ಲಿ! (ಇ)
-ಲ್ಲಿ ನಿರಂಜನಾದಿತ್ಯನ ಸನಿಧಿಯಲ್ಲಿ!!!

ನನ್ನ ನಾ ನೋಡುವೆನು ಬಹು ಭಂಗಿಯಲ್ಲಿ! (ಉ)

-ನ್ನತದ ಗಿರಿಶಿಖರ ನಿವಾಸದಲ್ಲಿ!
ನಾಮ ನನ್ನದು ಶಿವನೆಂಬರೆಲ್ಲರಲ್ಲಿ! (ಮ)
-ನೋನಿಗ್ರಹದಿಂದ ಸೇರಬೇಕವನಲ್ಲಿ! (ಕ)
-ಡುಬಡವನಿಗೂ ಜಾಗ ಸಿಗುವುದಲ್ಲಿ! (ಸೇ)
-ವೆ ಗೈವಳು ದಿನ ರಾತ್ರಿ ಭವಾನಿ ಅಲ್ಲಿ! (ತ)
-ನು, ಮನ, ಧನಾರ್ಪಣೆಯಿಂದಾ ಪಾದದಲ್ಲಿ!
ಯಲಾಡಂಬರಕ್ಕವಕಾಶವಿಲ್ಲಲ್ಲಿ!
ಹುಟ್ಟು, ಸಾವುಗಳ ಭಯವೆಂಬುದಿಲ್ಲಲ್ಲಿ!
ಭಂ, ಭಂ, ಭಂ, ಭಂ ಮಹಾದೇವ ಭಜನೆ ಅಲ್ಲಿ!
ಗಿರಿರಾಜಸುತೆಯ ಆಡಳಿತದಲ್ಲಿ!
ಮಾದ್ಯಷ್ಟ ದಿಕ್ಪಾಲಕರು ಕಾವಲಲ್ಲಿ! (ಇ)
-ಲ್ಲಿ, ನಿರಂಜನಾದಿತ್ಯನಾಗಿ ತಪದಲ್ಲಿ!

ವತ್ಸಲಾ! ಬಾ ಭಕ್ತವತ್ಸಲಾ! (ತ)

-ತ್ಸಮಾನವಿಲ್ಲದ್ದಾ ವತ್ಸಲಾ!
ಲಾಭದಾಯಕವಾ ವತ್ಸಲಾ!
ಬಾಲಲೀಲಾನಂದಾ ವತ್ಸಲಾ!
ಯಹರಾ ಗುರು ವತ್ಸಲಾ! (ಯು)
-ಕ್ತಸೇವಾನಿರತಾ ವತ್ಸಲಾ!
ರ ರಾಗ ಸುಧಾ ವತ್ಸಲಾ!
(ಉ)ತ್ಸವಮೂರ್ತಿ ಸದಾ ವತ್ಸಲಾ! (ಕಾ)
-ಲಾ, ನಿರಂಜನಾದಿತ್ಯ ಬಾಲಾ!!!

ನಾನೇನ ನೀಡಲಿ ನಿನಗಮ್ಮಾ?

ನೇಮದಿಂ ಭಜಿಪೆ ನಿನ್ನನಮ್ಮಾ!
ನ್ನ ಮೇಲಿರಲಿ ದಯೆಯಮ್ಮಾ!
ನೀನೊಲಿದರೆ ಧನ್ಯ ನಾನಮ್ಮಾ!
ಮರುಧರನಾಣ್ಮೆ ನೀನಮ್ಮಾ! (ಲ)
-ಲಿತಾಂಬೆಯೆಂಬರು ನಿನ್ನನಮ್ಮಾ!
ನಿತ್ಯ ನಿರ್ಮಲ ರೂಪವದಮ್ಮಾ!
ಮಿಪೆ ನಾನಾ ಶ್ರೀಪಾದಕ್ಕಮ್ಮಾ! (ಯೋ)
-ಗಭಾಗ್ಯವೀಗ ನೀಡಬೇಕಮ್ಮಾ! (ನ)
-ಮ್ಮಾ, ನಿರಂಜನಾದಿತ್ಯ ನೀನಮ್ಮಾ!

ಶೀಲ ಬೇಕು ಸೀತಾರಾಮಗಾಗಿರ್ಬೇಕು!

ಕ್ಷ್ಮಿಯಂತೆ ಸೇವೆಯವನದ್ಮಾಡ್ಬೇಕು!
ಬೇರೆ ಕಡೆ ಲಕ್ಷ್ಯ ಹರಿಸದಿರ್ಬೇಕು!
ಕುಜನರ ಸಂಗವೆಂದೆಂದೂ ಬಿಡ್ಬೇಕು!
ಸೀತಾರಾಮ ತತ್ವವೇನೆಂದರಿಯ್ಬೇಕು!
ತಾಯ್ತಂದೆಗಳಿಗೆದುರಾಡದಿರ್ಬೇಕು!
ರಾತ್ರಿ, ದಿನ, ರಾಮಸ್ಮರಣೆ ಮಾಡ್ಬೇಕು!
ಕ್ಕಳೆಲ್ಲಾ ಲವ, ಕುಶರಂತಾಗ್ಬೇಕು!
ಗಾನ ಶ್ರೀಪಾದದ ಸ್ತೋತ್ರವಾಗಿರ್ಬೇಕು!
ಗಿರಿಸುತೆಯಾದರ್ಶವಿಟ್ಟುಕೊಳ್ಬೇಕು! (ಬೇ)
-ರ್ಬೇರೆ ಮೂರ್ತಿಗಳ ಪೂಜೆ ಬಿಟ್ಟಡ್ಬೇಕು!
ಕುಲ ನಿರಂಜನಾದಿತ್ಯನದ್ದಾಗ್ಬೇಕು!!!

ನಾನೆಂತು ನಿನ್ನನುಪಚರಿಸಲಿ?

ನೆಂಟತನವಿಬ್ಬರದ್ದೇನೆನಲಿ?
ತುಷ್ಟನಾದೆ ನಿನ್ನ ನೋಡಿಳೆಯಲಿ! (ನಾ)
-ನಿನ್ನವನೆಂಬಭಿಮಾನವಿರಲಿ! (ನ)
-ನ್ನಭೀಷ್ಟಗಳೆಲ್ಲವೂ ಸಿದ್ಧಿಸಲಿ! (ಅ)
-ನುಮಾನಗಳಿನ್ನೇನಿಲ್ಲದಿರಲಿ!
ರಮಾತ್ಮ ನೀನೆಂಬರಿವಾಗಲಿ!
ತುರ್ವೇದಾರ್ಥ ನಿನ್ನಿಂದುಂಟಾಗಲಿ!
ರಿಸಿ ಕುಲದ ಕೀರ್ತಿ ಬೆಳಗಲಿ!
ಹಜ ಸಮಾಧಿ ಸದಾ ಇರಲಿ! (ಮಾ)
-ಲಿಕ ನಿರಂಜನಾದಿತ್ಯನೆನಲಿ!!!

ಇನ್ಯಾವ ದೇವರನು ನಾ ಕಾಣೆ!

ನ್ಯಾಯ ದೊರಕಿಪನ್ಯರ ಕಾಣೆ!
ರ ಗುರು ನೀನೆಲ್ಲಕ್ಕೂ ಹೊಣೆ!
ದೇವ ನಿನಗೆನ್ನ ದೇಹ ವೀಣೆ!
ರ ಸ್ವರಾವಳಿಗಳ ಠಾಣೆ!
ಮಿಸದಿದ್ದರದ್ರಲ್ಲಿ ಮಾಣೆ!
ನುಡಿಸಿದಂತೆ ಕೂಗ್ವ ಭವಣೆ!
ನಾದಾನಂದ ನೀನೇ ತಕ್ಕ ತೊಣೆ!
ಕಾಲಕ್ಷೇಪಕ್ಕಾಗ್ಬೇಕು ಪೋಷಣೆ! (ಗೆ)
-ಣೆಯ ನಿರಂಜನಾದಿತ್ಯ ಎಣೆ!!!

ಶಿಷ್ಟರ ಸಂಗ ಎಂದೆಂದಿಗೂ ಇರ್ಲಿ! (ದು)

-ಷ್ಟರ ಸಂಗ ಎಂದೆಂದೂ ಇಲ್ಲದಿರ್ಲಿ! (ಪ)
-ರಮಾರ್ಥ ಸಿದ್ಧಿಗಗತ್ಯವಿದಿರ್ಲಿ!
ಸಂದೇಹವಿರಲ್ಲಿ ಇಲ್ಲದಿರ್ಲಿ!
ರ್ವ ಬಿಟ್ಟು ಸಾಧನೆ ಸಾಗುತ್ತಿರ್ಲಿ!
ಎಂದೆಂದೂ ಗುರುಕೃಪಾದೃಷ್ಟಿ ಇರ್ಲಿ! (ಒಂ)
-ದೆಂಬಿಬ್ಬರ ಗಂಟು ಬಿಚ್ಚದೇ ಇರ್ಲಿ!
ದಿವ್ಯ ಜ್ಯೋತ್ಯೆಲ್ಲೆಲ್ಲೂ ಬೆಳಗುತ್ತಿರ್ಲಿ!
ಗೂಡಿದಶಾಶ್ವತವೆಂಬರಿವಿರ್ಲಿ!
ದರರ್ಥ ಅಭ್ಯಾಸಿ ಅರಿತಿರ್ಲಿ! (ಇ)
-ರ್ಲಿ ನಿರಂಜನಾದಿತ್ಯನಂತಾಗಿರ್ಲಿ!!!

ಶಿವಭಕ್ತ ಪರಮ ಪೂಜ್ಯನಯ್ಯಾ! (ಅ)

-ವನನ್ಯರೊಡವೆಗಾಶಿಸನಯ್ಯಾ!
ವದ ಭಯವನಿಗಿಲ್ಲವಯ್ಯಾ! (ಮು)
-ಕ್ತನವನು ಜೀವಭಾವದಿಂದಯ್ಯಾ!
ರಮಾರ್ಥ ಪರಮೋದ್ದೇಶವಯ್ಯಾ! (ಪ)
-ರಮಾಪ್ತ ಪರಮ ಗುರುವಿಗಯ್ಯಾ!
ನೋನಿಗ್ರಹಿಯಾಗಿ ಮಾನ್ಯನಯ್ಯಾ!
ಪೂರ್ಣತತ್ವದಿಂದ ಪೂರ್ಣಾನಂದನಯ್ಯಾ! (ರಾ)
-ಜ್ಯಪಟ್ಟದಟ್ಟಹಾಸವಗಿಲ್ಲಯ್ಯಾ! (ಅ)
-ನನ್ಯಭಕ್ತಿಯಲ್ಲಾತ ಲೀನನಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾನಂದಾತಯ್ಯಾ!!!

ಹಿಡಿವುದು, ಬಿಡುವುದೊಡೆಯನಿಷ್ಟ! (ಅ)

-ಡಿಗಡಿಗವನ ನೆನೆವುದು ಶ್ರೇಷ್ಟ! (ಬೇ)
-ವು ಬಿತ್ತಿ ಮಾವು ಪಡೆಯುವುದು ಕಷ್ಟ!
ದುರಿತದೂರನವನೆಂಬುದು ಸ್ಪಷ್ಟ!
ಬಿಟ್ಟರವನ ಶ್ರೀಪಾದಗಳ ನಷ್ಟ! (ದು)
-ಡುಕಿ ನಡೆದರಾಗ್ವುದು ಯೋಗಭ್ರಷ್ಟ! (ಆ)
-ವುದಕ್ಕೂ ಹೇಸ ಪರಮ ಪಾಪೀ ದುಷ್ಟ!
ದೊರಕಿದ್ದನ್ನುಂಬ ತೃಪ್ತ ತಪೋ ನಿಷ್ಟ! (ಕ)
-ಡೆಗಣ್ಣಿಂದ ಕನಿಷ್ಟನ ಕಾಣಾ ಜೇಷ್ಟ!
ದುಪತಿಯ ಸೇವೆಯಿಂದವ ತುಷ್ಟ!
ನಿತ್ಯಾತ್ಮಧ್ಯಾನದಿಂದವನೊಬ್ಬ ಶಿಷ್ಟ! (ಇ)
-ಷ್ಟ, ಶ್ರೀ ನಿರಂಜನಾದಿತ್ಯ ಸರ್ವೋತ್ಕೃಷ್ಟ!!!

ಸಲಿಗೆಯಿಂದಾಗ್ವುದು ಸುಲಿಗೆ! (ನಾ)

-ಲಿಗೆಯಿಂದಾಗುವುದು ಮೈಲಿಗೆ!
(ಬ)ಗೆ(ಬ)ಗೆಯಾಸೆಯಿಂದ ಜೈಲಿಗೆ! (ಕೈ)
-ಯಿಂದ ಹಾಕ್ಬೇಕು ನಾಟ ಸಾಲಿಗೆ!
ದಾರಿಯಾಗ್ಬೇಕುತ್ತಮ ಮಾಲಿಗೆ! (ಆ)
-ಗ್ವುದಾಗ ಭರ್ತ್ತ್ಯಾತನ ಜೋಲಿಗೆ!
ದುರ್ವ್ಯಾಪಾರ ದುಷ್ಟರ ಪಾಲಿಗೆ!
ಸುಸಂಸ್ಕೃತರ ನಿಂದೆ ಪೋಲಿಗೆ! (ಶೂ)
-ಲಿಯಾಗ್ರಹ ಕಾರಣ ಸೋಲಿಗೆ! (ನೆ)
-ಗೆ, ನಿರಂಜನಾದಿತ್ಯನಲ್ಲಿಗೆ!!!

ಗಟ್ಟಿ ಮನಸು ಮಾಡಿ ಗಿಟ್ಟಿಸಿಕೋ! (ದಿ)

-ಟ್ಟಿಸಿ ನೋಡಿ ಗುಟ್ಟು ನೀನರಿತುಕೋ!
ರೆಯದೇ ಸ್ಥಾನ ನಿನ್ನದುಳ್ಸಿಕೋ! (ಅ)
-ನಗತ್ಯವಾದುದನೆಲ್ಲಳಿಸಿಕೋ!
ಸುವ್ಯವಸ್ಥೆಯಿಂದಾಪ್ತರಾದರ್ಸಿಕೋ!
ಮಾತುಕತೆ ಮಿತವಾಗಿರಿಸಿಕೋ! (ಅ)
-ಡಿಗಡಿಗಪ್ಪನ ಪಾದ ಸ್ಮರ್ಸಿಕೋ!
ಗಿರಿಧರನ ಗೀತಾಭ್ಯಾಸಿರ್ಸಿಕೋ! (ಜ)
-ಟ್ಟಕಾಳಗದ ಭ್ರಾಂತಿ ನಿವಾರ್ಸಿಕೋ!
ಸಿರಿಯೀಳನಾದರ್ಶವಿರಿಸಿಕೋ! (ತ)
-ಕೋ, ನಿರಂಜನಾದಿತ್ಯಾನಂದಾರ್ಸಿಕೋ!!!

ನಿನ್ನೋದಿಗೆ ನೆರವಾಯ್ತೀಗೆನ್ನ ತೊಡೆ! (ಮು)

-ನ್ನೋದುವರ ಲಭ್ಯವರಿಯದಾ ತೊಡೆ!
ದಿವ್ಯರಕ್ತ ತುಂಬಿಹಂಥಾ ಗುರು ತೊಡೆ!
ಗೆಳೆತನಕ್ಕಾಶ್ರಯವೀವಂಥಾ ತೊಡೆ!
ನೆನೆದರೆ ಮೇಲೇರಿಸುವಂಥಾ ತೊಡೆ!
ಸಾಸ್ವಾದಿಗಾಧಾರವಾದಂಥಾ ತೊಡೆ!
ವಾರಿಜಭವಾದಿಗಳಾಡಿದಾ ತೊಡೆ! (ಕಾ)
-ಯ್ತೀಗ, ಸಂಗೀತ, ಸಾಹಿತಿಗಳಾ ತೊಡೆ! (ಹ)
-ಗೆಗಳಿಗೆಲ್ಲಾ ಸಿಂಹಸ್ವಪ್ನವೀ ತೊಡೆ! (ಬ)
-ನ್ನಪಡುವವರರಿಷ್ಟಹರಾ ತೊಡೆ!
ತೊಣೆ ನಂಬಿದ ಭಕ್ತಗಾಗಿಹಾ ತೊಡೆ! (ಬಿ)
-ಡೆ, ನಿರಂಜನಾದಿತ್ಯನಾ ನನ್ನ ತೊಡೆ!!!

ನಿನ್ನನ್ನು ನಾನು ನೋಡಬೇಕೆಲ್ಲಿ? (ಉ)

-ನ್ನತದ ಗಿರಿ ನಿವಾಸದಲ್ಲಿ! (ನಿ)
-ನ್ನುರಿವ ಹೃದಯಮಧ್ಯದಲ್ಲಿ!
ನಾಮ, ರೂಪವಾದನಂತದಲ್ಲಿ! (ಮಿ)
-ನುಗುವ ತಾರಾ ಸಮೂಹದಲ್ಲಿ!
ನೋಡಲಾಶಿಪಾತ್ಮೀಯರಿರ್ಪಲ್ಲಿ! (ಖಂ)
-ಡವಿಲ್ಲದಖಂಡ ಬ್ರಹ್ಮನಲ್ಲಿ!
ಬೇಸರ ಕಳೆವ ಗಾನದಲ್ಲಿ!
ಕೆಚ್ಚೆದೆಯ ರಾಮ, ಕೃಷ್ಣರಲ್ಲಿ! (ಇ)
-ಲ್ಲಿ, ಶ್ರೀ ನಿರಂಜನಾದಿತ್ಯನಲ್ಲಿ!!!

ಜಗತ್ತಿಗಾಗಿ ನೀನು ಕಾಮಾ!

ರ್ವಿಯಾಗಿ ನೀನಿಹೆ ಕಾಮಾ! (ಬಿ)
-ತ್ತಿಹೆ ವಿಷಬೀಜವ ಕಾಮಾ! (ಸಂ)
-ಗಾತಿಗಳ್ಹತ್ತು ಜನ ಕಾಮಾ! (ಯೋ)
-ಗಿಗಳ ವೈರಿ ನೀನು ಕಾಮಾ!
ನೀಚಾಚಾರ ನಿನ್ನದು ಕಾಮಾ! (ತ)
-ನುಭಾವ ನಿನ್ನಿಂದಾಯ್ತು ಕಾಮಾ!
ಕಾಲನ ಭೃತ್ಯ ನೀನು ಕಾಮಾ! (ಕಾ)
-ಮಾ! ನಿರಂಜನಾದಿತ್ಯಾರಾಮಾ!!!

ತಂದೆ ನಿನಗೆ ನಾನು ಕಾಮಾ! (ನಿಂ)

-ದೆಗೀಡುಮಾಡ್ಬೇಡೆನ್ನ ಕಾಮಾ!
ನಿನ್ನವಸ್ಥೆ ನೋಡಲಾರೆ ಕಾಮಾ!
ನ್ನಲ್ಲಿ ಐಕ್ಯವಾಗಿರೋ ಕಾಮಾ!
ಗೆಳೆಯರನ್ಯರೇಕೋ ಕಾಮಾ?
ನಾನೆಲ್ಲವೆಂದರಿಯೋ ಕಾಮಾ!
ನುತಿಸು ಸತತೆನ್ನ ಕಾಮಾ!
ಕಾಲ ಭಯವಿಲ್ಲಾಗ ಕಾಮಾ! (ಕಾ)
-ಮಾ,! ನಿರಂಜನಾದಿತ್ಯಾರಾಮಾ!!!

ನನ್ನಲ್ಲಿ ನೀನೇಕೆ ಬೆರೆತಿರಬೇಕು? (ನಿ)

-ನ್ನ ನಿತ್ಯ ಸುಖಕ್ಕಾಗಿ ಹಾಗಿರಬೇಕು!
(ಗ)ಲ್ಲಿ(ಗ)ಲ್ಲಿಯೋಡಾಟ ತಪ್ಲಿಕ್ಕದು ಬೇಕು!
ನೀಚರ ಸಂಗದಿಂದ ಪಾರಾಗ್ಲದು ಬೇಕು!
ನೇಮ, ನಿಷ್ಠೆಯಿಂದಿರ್ಲೆನ್ನ ಸಂಗ ಬೇಕು!
ಕೆಡುಕಾರಿಗೂ ಆಗದಿರ್ಲದು ಬೇಕು!
ಬೆಡಗಿನ ಬಾಳು ಬಿಡ್ಲಿಕ್ಕದು ಬೇಕು! (ಧ)
-ರೆಗೆ ಮಾದರಿಯಾಗಿರ್ಲಿಕ್ಕದು ಬೇಕು!
ತಿಳಿದು ನೀನಿದ ಒಳಗಿರಬೇಕು!
ಮಿಸಿ ಮೈಮರೆತಾನಂದಿಸಬೇಕು!
ಬೇಕಿದಕೆ ಕೃಪೆಯೆಂದರಿಯ ಬೇಕು! (ಟಾ)
-ಕು, ನಿರಂಜನಾದಿತ್ಯನೇ ನೀನಾಗ್ಬೇಕು!!!

ರಾಧೆಗೆ ಹುಚ್ಚು ಹಿಡಿಯಿತಂತೆ! (ಬೋ)

-ಧೆ ಯಾರದೂ ಬೇಡವಾಯಿತಂತೆ! (ಬ)
-ಗೆದು ಕೃಷ್ಣನ ಬೇಡಿದಳಂತೆ!
ಹುಸಿ ನಗು ಸಾಕಿನ್ನೆಂದಳಂತೆ! (ಕೊ)
-ಚ್ಚು ನನ್ನ ಮೌಢ್ಯವನ್ನೆಂದಳಂತೆ! (ಬ)
-ಹಿರ್ವ್ಯಾಪಾರ ಭ್ರಮೆಯೆಂದಳಂತೆ! (ಅ)
-ಡಿದಾವರೆ ಮುಡಿಸೆಂದಳಂತೆ! (ಬಾ)
-ಯಿಗಿಕ್ಕಧರಾಮೃತೆಂದಳಂತೆ!
ತಂದೆ ನೀನೆಲ್ಲರಿಗೆಂದಳಂತೆ! (ಪ್ರೀ)
-ತೆ, ನಿರಂಜನಾದಿತ್ಯಗವ್ಳಂತೆ!!!

ಕಾಪಿಯ ಕೊಟ್ಟಾ ಕೌಶಿಕ ಮಿತ್ರ!

ಪಿನಾಕಧರನಿಗಾಪ್ತಾ ಮಿತ್ರ! (ಜ)
-ಯ ಶ್ರೀ ಗುರುಪಾದಕ್ಕೆಂದಾ ಮಿತ್ರ!
ಕೊಡಾತ್ಮಜ್ಞಾನೆನಗೆಂದಾ ಮಿತ್ರ! (ಕೆ)
-ಟ್ಟಾಚಾರ ಸಾಕೆನಗೆಂದಾ ಮಿತ್ರ!
ಕೌಮಾರಿ ರೂಪಿ ನೀನೆಂದಾ ಮಿತ್ರ!
ಶಿಷ್ಟಚಾರವಳದೆಂದಾ ಮಿತ್ರ!
ರುಣಾನಿಧಿಯದೆಂದಾ ಮಿತ್ರ!
ಮಿಲನದ್ರಲ್ಲಾಗ್ಬೇಕೆಂದಾ ಮಿತ್ರ! (ಮಿ)
-ತ್ರ ನಿರಂಜನಾದಿತ್ಯ ಸರ್ವತ್ರ!!!

ಕಾಪಿಯ ಕುಡಿಸಿದ ಕೌಶಿಕನಾಪ್ತ!

ಪಿತೃವಾಕ್ಯಪರಿಪಾಲಕನೀ ಆಪ್ತ!
ತ್ನಿಸುವೆ ಸಾಕ್ಷಾತ್ಕಾರಕ್ಕೆಂದಾ ಆಪ್ತ!
ಕುವಿದ್ಯೆ, ಹೊಟ್ಟೆ, ಬಟ್ಟೆಗಾಗ್ಯೆಂದಾ ಆಪ್ತ! (ಮಾ)
-ಡಿ ನನ್ನ ಮೇಲನುಗ್ರಹವೆಂದಾ ಆಪ್ತ!
ಸಿರಿತನದಾಸೆನಗಿಲ್ಲೆಂದಾ ಆಪ್ತ!
ಮೆ, ಶಮೆಯಭ್ಯಾಸಿ ತಾನೆಂದಾ ಆಪ್ತ!
ಕೌಟಿಲ್ಯ ತನ್ನಲ್ಲೆಳ್ಳಷ್ಟಿಲ್ಲೆಂದಾ ಆಪ್ತ!
ಶಿರ ಬಾಗುವೆ ಶ್ರೀಪಾದಕ್ಕೆಂದಾ ಆಪ್ತ!
ರುಣೆ ತೋರಿ ಕಾಪಾಡ್ಬೇಕೆಂದಾ ಆಪ್ತ!
ನಾಳೆ, ನಿನ್ನೆಯ ಮಾತೀಗೇಕೆಂದಾ ಆಪ್ತ! (ಲಿ)
-ಪ್ತ ನಿರಂಜನಾದಿತ್ಯನಲ್ಲೆಂದಾ ಆಪ್ತ!!!

ಸಾಕ್ಷಾತ್ಕಾರದುದ್ದೇಶವೇನು! (ದೀ)

-ಕ್ಷಾಬದ್ಧನಾಗೀಗರಿ ನೀನು! (ಸ)
-ತ್ಕಾರಕ್ಕಾಶಿಸಬೇಡ ನೀನು! (ವ)
-ರ ಗುರುವಿನಂತಾಗು ನೀನು!
ದುರ್ವಿಧಿಗಾಗರಸು ನೀನು! (ಸ)
-ದ್ದೇನಿಲ್ಲದ ಮನಸ್ಸೇ ನೀನು!
ರಣಾಗು ಶಿವಗೆ ನೀನು! (ನಿ)
-ವೇದಿಸೆಲ್ಲಾ ಪಾದಕ್ಕೆ ನೀನು! (ಭಾ)
-ನು ನಿರಂಜನಾದಿತ್ಯ ನೀನು!!!

ನನ್ನಿರುವು ನಿನ್ನರಿವಿಗಡ್ಡಿ! (ಚೆ)

-ನ್ನಿಗನ ದರ್ಶನಕ್ಕಿರ್ಬಾರ್ದಡ್ಡಿ! (ಕಿ)
-ರುಕುಳಾಧಿಕಾರಿಯೆಲ್ಲಕ್ಕಡ್ಡಿ! (ನಾ)
-ವು, ನಮ್ಮವರೆಂಬವನಿಂದಡ್ಡಿ!
ನಿನ್ನನರಿಯದ್ದರಿಂದೀ ಅಡ್ಡಿ! (ನಿ)
-ನ್ನವ್ರೆಲ್ಲರೆಂದರಿತರಿಲ್ಲಡ್ಡಿ! (ಹ)
-ರಿಶರಣರಿಗಾರದೇನಡ್ಡಿ?
ವಿಕಲ್ಪವಿರುವಾಗೆಲ್ಲಾ ಅಡ್ಡಿ!
ರ್ವವೆಂಬ ನಾನೆಲ್ಲಕ್ಕೂ ಅಡ್ಡಿ! (ದ)
-ಡ್ಡಿ, ನಿರಂಜನಾದಿತ್ಯಾದ್ರಾರ್ದಡ್ಡಿ???

ಕಾಮನೊಳಗೆ ಬಿಟ್ಟೆ ಕಳ್ಕೊಂಡೆ ಬಟ್ಟೆ!

ನಸೇಚ್ಛೆ ಎಲ್ಲೆಲ್ಲೋ ನೀನೋಡಾಡ್ಬಿಟ್ಟೆ!
ನೊಸಲನ್ನಾಮೇಲೆ ನೀನ್ಚಚ್ಚಿಕೊಂಡ್ಬಿಟ್ಟೆ! (ಬ)
-ಳಲಿ ಬೆಂಡಾಗಿ ಸದಾ ರೋಗಿಯಾಗ್ಬಿಟ್ಟೆ!
ಗೆಳೆಯರೆನ್ಸಿದವ್ರಿಂದ ಬೇರಾಗ್ಬಿಟ್ಟೆ!
ಬಿಟ್ಟು ಹೋಗದ ಕೆಟ್ಟಾಸೆಗೀಡಾಗ್ಬಿಟ್ಟೆ! (ಹೊ)
-ಟ್ಟೆಗೂ ಹಿಟ್ಟು ಸೇರದೆ ಚಡ್ಪಡಿಸ್ಬಿಟ್ಟೆ!
ರುಣೆ ಬಾರದೇ ದೇವ್ರಿಗೆಂದತ್ಬಿಟ್ಟೆ! (ಕೇ)
-ಳ್ಕೊಂಡು ಸದ್ಗುರುಸನ್ನಿಧಿಗೆ ಬಂದ್ಬಿಟ್ಟೆ! (ಬಿ)
-ಡೆ ನಿನ್ನ ಪಾದವಿನ್ನೆಂದು ಭಾಷೆ ಕೊಟ್ಟೆ!
ದಲಿಲ್ಲದೊಲವಿನಲ್ಮುಳುಗ್ಬಿಟ್ಟೆ! (ದಿ)
-ಟ್ಟೆ, ನಿರಂಜನಾದಿತ್ಯ ನೀನಾಗ್ಬಿಟ್ಟೆ!!!

ಸ್ಥಾನ ಮಾನ ಬದಲಾವಣೆಯಾಯ್ತು! (ದಿ)

-ನಮಣಿಯ ಬಿಂಬ ಕಣ್ಣ ಮುಂದಾಯ್ತು!
ಮಾಲೆಯ ಸ್ಥಾನ ಭದ್ರವಾದಂತಾಯ್ತು! (ಮ)
-ನಮೋಹನ ರೂಪಕ್ಕೇಕಾಂತವಾಯ್ತು!
ಗೆಬಗೆಯಾಸೆಗಳೋಡಿ ಹೋಯ್ತು!
ತ್ತಾತ್ರೇಯ ತಾನೆಂಬರಿವುಂಟಾಯ್ತು! (ಲೀ)
-ಲಾನಾಟಕ ಯಥೋಚಿತಾಡ್ವಂತಾಯ್ತು!
ಸ್ತ್ರವಿಲ್ಲದಿರಲಭ್ಯಾಸವಾಯ್ತು! (ಹ)
-ಣೆ ಬರಹದ ಭ್ರಾಂತಿ ಬಿಟ್ಟುಹೋಯ್ತು!
ಯಾವಾಗಲೂ ಸ್ವಸ್ಥಿತಿ ಪ್ರಾಪ್ತವಾಯ್ತು! (ಆ)
-ಯ್ತು, ನಿರಂಜನಾದಿತ್ಯೋದಯವಾಯ್ತು!!!

ನನ್ನ ಸೇವೆ ಯಾರೆಷ್ಟು ಮಾಡಿದರೇನು? (ನಿ)

-ನ್ನ ಭಕ್ತಿ ಭಿಕ್ಷೆ ನೀನುಣಿಸ್ಬಾರ್ದೇನು?
ಸೇಡಿನ ಮನೋಭಾವ ಬಿಟ್ಟಿಡು ನೀನು! (ಧ)
-ವೆ ನೀನು ಯೋಗೇಶ್ವರನಿಗಲ್ಲವೇನು?
ಯಾವಾಗೇನಾಗ್ವುದೆಂದ್ನಿನಗೆ ಗೊತ್ತೇನು?
ರೆಪ್ಪೆ ಮುಚ್ಚಿ ತೆರೆಯುವಷ್ಟ್ರಲ್ಲೆಲ್ಲೋ ನಾನು! (ಇ)
-ಷ್ಟು ತಿಳಿದೀಗ ಸುಧಾರಿಸಿಕೋ ನೀನು!
ಮಾತುಗಳ ಹಿಡಿತದಲ್ಲಿಟ್ಕೋ ನೀನು! (ಸ)
-ಡಿಲು ಬಿಟ್ರೆ ಡಿಕ್ಕಿ ಹೊಡೆಯುವೆ ನೀನು!
ತ್ತ ಜಪದಿಂದ ಧನ್ಯನಾಗು ನೀನು!
ರೇಗಾಡಿ, ಕೂಗಾಡಿ, ಹಾಳಾಗ್ಬೇಡ ನೀನು! (ನಾ)
-ನು ನಿರಂಜನಾದಿತ್ಯೆಂದರಿ ನೀನು!!!

ಸೇತುವೆಯ ಸದುಪಯೋಗ ಮಾಡಿಕೋ!

ತುಕ್ಕು ಹಿಡಿಯದಂತಾಗಾಗೊರಸಿಕೋ! (ಸ)
-ವೆದಾಗಧಿಕಾರಿಗೆ ವಿಜ್ಞಾಪಿಸಿಕೋ! (ಭ)
-ಯವಿಲ್ಲದ ಸಂಚಾರಾನ್ಕೂಲ ಬೇಡಿಕೋ!
ಕಾಲದಲ್ಲೆಲ್ಲಾ ಸೌಲಭ್ಯೊದಗ್ಸಿಕೋ!
ದುರ್ವ್ಯಾಪಾರಕ್ಕೆಡೆಯಾಗದಂತಿದ್ದುಕೋ!
ವಿತ್ರ ಸ್ವದೇಶೀ ಸರಕು ಸಾಗ್ಸಿಕೋ! (ವ)
-ಯೋವೃದ್ಧರನ್ನು ಕೈ ಹಿಡಿದು ದಾಟ್ಸಿಕೋ!
ಮನಾಗಮನಕ್ಕೆ ಬೆಳಕಿಟ್ಟುಕೋ!
ಮಾದರೀ ವ್ಯವಸ್ಥೆಯೆಂದರಿತುಕೋ! (ನಾ)
-ಡಿನಭ್ಯುದಯಕ್ಕಿದನ್ನಳವಡ್ಸಿಕೋ!
ಕೋರಿಕೆ ನಿರಂಜನಾದಿತ್ಯಗೊಪ್ಸಿಕೋ!!!

ತಿರುಗಣೆ ತಿರುಗಿತು ಬಲಕ್ಕೆ! (ನೀ)

-ರು ಬರುವುದು ನಿಂತಿತು ಹೊರಕ್ಕೆ!
ಳಗಳನಳುವುದೇಕಿದಕ್ಕೆ? (ಹೊ)
-ಣೆ ನಿರ್ವಹಣೆ ಸರಿಮಾಡದಕ್ಕೆ!
ತಿರುಗಿಸೀಗೆಚ್ಚರದಿಂದೆಡಕ್ಕೆ! (ನೀ)
-ರು ಬರಲು ದಾರಿಯಾಯ್ತೀಗದಕ್ಕೆ!
ಗಿಲ್ಗಿಲಿ ನಗ್ಬೇಡ ನೀರ್ಬಂದುದಕ್ಕೆ!
ತುಸಾಲೋಚ್ಸಿ ಹಚ್ಬೇಕು ಕೈ ಕೆಲ್ಸಕ್ಕೆ!
ದ್ಕಿಗಾಶಿಸಿ ಬೀಳ್ಬಾರ್ದು ಕೆಂಡಕ್ಕೆ! (ಸು)
-ಲಗ್ನಹರ್ನಿಶಿ ದಿವ್ಯ ಜೀವನಕ್ಕೆ! (ಅ)
-ಕ್ಕೆ, ನಿರಂಜನಾದಿತ್ಯಾದರ್ಶೆಲ್ಲಕ್ಕೆ!!!

ಕುಂಟು ನೆಪವಿನ್ನು ಸಾಕ್ಮಾಡಯ್ಯಾ! (ನಂ)

-ಟುತನ ಹೂಡಿ ಯೋಗ್ಯನಾಗಯ್ಯಾ!
ನೆನೆದುಕೋ ಕುಲ ಗೋತ್ರವಯ್ಯಾ!
ರಮಾತ್ಮೇಚ್ಛಾ ಮದ್ವೆಯಿದಯ್ಯಾ!
ವಿಧಿವತ್ತಾಗ್ಯೆಲಾದ್ರೂ ಆಗ್ಲಯ್ಯಾ! (ನಿ)
-ನ್ನುನ್ನತಿಗೀ ಉಪದೇಶವಯ್ಯಾ!
ಸಾಲಮಾಡಿ ಏನೂ ಮಾಡ್ಬೇಡಯ್ಯಾ! (ಯಾ)
-ಕ್ಮಾಡಿಲ್ಲವೆಂದ್ಯಾರೂ ಕೇಳರಯ್ಯಾ! (ಒ)
-ಡನಾಟ ಸಾರ್ಥಕವಾಗಲಯ್ಯಾ! (ಕೈ)
-ಯ್ಯಾ, ನಿರಂಜನಾದಿತ್ಯ ಬಿಡಯ್ಯಾ!!!

ನೀನಿಲ್ಲಿಗೇಕೆ ಬಂದೆ ಕಂದಾ?

ನಿನಗಾಗ್ಬಂದೆ ಶಿವಾನಂದಾ! (ಅ)
-ಲ್ಲಿಲ್ಲೆಲ್ಲೆಲ್ಲೂ ನಾನಿಲ್ವೇ ಕಂದಾ? (ನಾ)
-ಗೇಶ ನಾ ಧನ್ಯ ಶಿವಾನಂದಾ! (ಬೇ)
-ಕೆನಿಸಿದಾಗೆಲ್ಲಾ ಬಾ ಕಂದಾ!
ಬಂದು ಹೋಗ್ವೆ ನಾ ಶಿವಾನಂದಾ! (ಇಂ)
-ದೆನಗಾನಂದವಾಯ್ತು ಕಂದಾ!
ಕಂಡು ನಾನಾದೆ ಶಿವಾನಂದಾ! (ಕಂ)
-ದಾ, ನಿರಂಜನಾದಿತ್ಯ ಕಂದಾ!!!

ಸಾಹಿತಿ ನಾನಲ್ಲ, ಸಾಯ್ವುರವರೆಲ್ಲಾ!

ಹಿಮಗಿರಿ ಸುತೆಗೆ ನಾನನ್ಯನಲ್ಲಾ!
ತಿಳಿದ್ಬಾಳಿದರೆ ನನ್ನಂತವರೆಲ್ಲಾ!
ನಾನ್ದಿಗಂಬರನಾದ್ರೂ ನಾಚ್ಕೆ ನನ್ಗಿಲ್ಲಾ!
ಲ್ಲ ನಲ್ಲೆಯರ್ನಾನೆಂದ್ರೆ ನಗ್ವರೆಲ್ಲಾ! (ಅ)
-ಲ್ಲ, ಏಸು ನಾನೆಂದ್ರೆ ಗುಲ್ಲೆಬ್ಬಿಸುವ್ರೆಲ್ಲಾ!
ಸಾಯುಜ್ಯವಾದರರಿವಾಗ್ವುದಿದೆಲ್ಲಾ!
(ಕಾ)ಯ್ವ ಕರುಣಾಳೊಬ್ಬನೇ ಜಗತ್ತಿಗೆಲ್ಲಾ! (ವ)
-ರಗುರು ದತ್ತಾತ್ರೇಯರುಹಿದ್ದನೆಲ್ಲಾ! (ಅ)
-ವನೊಬ್ಬ ಹುಚ್ಚನೆಂಬರ್ಮೂರ್ಖ ಜನ್ರೆಲ್ಲಾ! (ಹ)
-ರೆ

ದಧಿಕಾರಾದಿ ಮದವಿದೆಲ್ಲಾ! (ಬ)
-ಲ್ಲಾ, ನಿರಂಜನಾದಿತ್ಯ ತಾನಿದೆಲ್ಲಾ!!!

ಬಯಲಿಗೆ ಬಂದೆ, ಮೈಲಿಗೆಯಾಯ್ತಂದೆ!

ಮ, ನಿಯಮದಿಂದ ಶುದ್ಧನಾಗೆಂದೆ! (ಬ)
-ಲಿಸಬೇಕು ಸದ್ಗುರುಭಕ್ತಿಯನ್ನೆಂದೆ!
ಗೆಳೆಯನೀರೇಳು ಲೋಕಕ್ಕವನೆಂದೆ!
ಬಂಧ ಮುಕ್ತನವನ ಕೃಪೆಯಿಂದೆಂದೆ! (ಸ)
-ದೆಬಡಿಯಬೇಕಾರರಿಗಳನ್ನೆಂದೆ!
ಮೈಮರೆಯಬಾರದು ಮಾಯೆಯಲ್ಲೆಂದೆ! (ಸ)
-ಲಿಗೆಯಿಂದ ಸಲಗವೂ ಅಗ್ಗವೆಂದೆ! (ಹೋ)
-ಗೆ ನಾನಿನ್ನೆಲ್ಲೂ ಎಂದು ಪಣ ತೊಡೆಂದೆ!
ಯಾದವೇಂದ್ರನ ಗೀತಾಭ್ಯಾಸ ಮಾಡೆಂದೆ! (ತಾ)
-ಯ್ತಂದೆಯಂತದು ನಿನ್ನ ಕಾಯುವುದೆಂದೆ! (ತಂ)
-ದೆ ನಿರಂಜನಾದಿತ್ಯನೇ ನೀನಾಗೆಂದೆ!!!

ಹಾಡಬೇಕು ನಿನ್ನ ನಾ ನೋಡಬೇಕು! (ಒ)

-ಡನಾಡಿಯಾಗಿ ಕುಣಿದಾಡಬೇಕು!
ಬೇಡೆನ ನ್ನೇನೆಂದರಿಯಬೇಕು!
ಕುಕಲ್ಪನೆನ್ನಲ್ಲಿ ಮೂಡದಿರ್ಬೇಕು!
ನಿನ್ನ, ನನ್ನ ಬಂಧಮರವಾಗ್ಬೇಕು! (ಮ)
-ನ್ನಣೆಯೀ ಪ್ರಾರ್ಥನೆಗೆ ಸಿಗಬೇಕು!
ನಾಳೆ, ನಾಡಿದ್ದೆನ್ನದೀಗ್ಲೇ ಆಗ್ಬೇಕು! (ಮ)
-ನೋನಾಶವಾಗಿ ನೀನೇ ನಾನಾಗ್ಬೇಕು! (ಹೆಂ)
-ಡತಿ ನಿನಗಾಗ್ಯುಮೆಯಂತಿರ್ಬೇಕು! (ಕು)
-ಬೇರನಾಸ್ತಿ ಕೊಟ್ರೂ ಬೇಡೆನಬೇಕು! (ಬೇ)
ಕು, ನಿರಂಜನಾದಿತ್ಯನೆನಬೇಕು!!!

ಕಾದಿರುವುದಾರಿಗಲಂಕಾರೀ?

ದಿಕ್ಕು ಕೆಟ್ಟೋಡ್ಬೇಡ ಮುಗ್ಧೆ ನಾರೀ! (ನಾ)
-ರು ವೀ ಶರೀರ ವಂಚನಾಕಾರೀ! (ಸಾ)
-ವು, ನೋವುಗಳ್ಗಿದು ಸಂಚುಕಾರೀ!
ದಾರಿ ತಪ್ಪಿ ಬೀಳ್ಬೇಡ ಕಾಲ್ಜಾರೀ!
ರಿಪುಗಳ್ಕಾದಿಹರ್ಮದವೇರೀ! (ಸಂ)
-ಗ ಸದ್ಗುರುವಿನದ್ಫಲಕಾರೀ!
ಲಂಗ್ಲಗಾಮಿಲ್ಲದ ಮದ ಮಾರೀ!
ಕಾವೇರೀ ಸ್ವರೂಪ ತಾಪಹಾರೀ! (ನಾ)
-ರೀ, ನಿರಂಜನಾದಿತ್ಯನಾಗ್ಸೇರೀ!!!

ತಾವರೆಲೆಯಲ್ಲಿ ನೀರು ಮುತ್ತಿನಂತೆ!

ರ ಗುರುವಿನಲ್ಲೈಹಿಕದರಂತೆ!
(ಧ)ರೆಯ ಜೀವಿಗಳಿಗಿದಂಟಿಕೊಂಡಂತೆ! (ನೆ)
-ಲೆನಿಂತ ಮನಸ್ಸಲಿಪ್ತವಾಗ್ವುದಂತೆ!
ಮ, ನಿಯಮಾಭ್ಯಾಸದಕೆ ಬೇಕಂತೆ! (ಅ)
-ಲ್ಲಿಲ್ಲಿ ಹುಡುಕಿದರದು ಸಿಕ್ಕದಂತೆ!
ನೀಚರೊಡನಾಟವಿರಬಾರದಂತೆ! (ಪು)
-ರುಷೋತ್ತಮನೊಬ್ಬನೇ ಆತ್ಮೀಯನಂತೆ!
ಮುನಿಸೆಂಬುದವನಿಗೇನಿಲ್ಲವಂತೆ! (ಸು)
-ತ್ತಿಹನವನೀರೇಳು ಲೋಕಗಳಂತೆ!
ನಂಬಿದವರಿಗಿಂಬು ಅವನಿಂದಂತೆ! (ಸೀ)
-ತೆ ನಿರಂಜನಾದಿತ್ಯನ ದಾಸಿಯಂತೆ!!!

ಗುಲ್ಲೇಗುಲ್ಲು ನೋಡಿದರೆಲ್ಲೆಲ್ಲು! (ಎ)

-ಲ್ಲೇನಾಯ್ತೆಂದರಿಯದೇ ಈ ಗುಲ್ಲು!
ಗುತ್ತಿಗೆಗಾರನಿನ್ನಿಲ್ಲೆಂದ್ಗುಲ್ಲು! (ಕ)
-ಲ್ಲು, ಮಣ್ಣು, ನೀರು ನನ್ನದೆಂದ್ಗುಲ್ಲು! (ಮ)
-ನೋ ಪಿಶಾಚಿಯಾಶಾಪಾಶದ್ಗುಲ್ಲು! (ಕ)
-ಡಿ, ಬಡಿಯೆಂಬ ಬೀಜ್ಮಂತ್ರದ್ಗುಲ್ಲು!
ರ್ಪ, ದಂಭಗಳಾದರದ್ಗುಲ್ಲು! (ನೆ)
-ರೆಮನೆ ಸೆರೆಮನೆಯೆಂದ್ಗುಲ್ಲು! (ನ)
-ಲ್ಲೆ, ನಲ್ಲರ ಭಿನ್ನಭವದ್ಗುಲ್ಲು (ನಿ)
-ಲ್ಲು, ನಿರಂಜನಾದಿತ್ಯಗಾಗ್ದ್ಗುಲ್ಲು!!!

ನಾ ನಿನ್ನ ನೆನೆವೆ ನಿತ್ಯಾ! (ಅ)

-ನಿತ್ಯ ಮಾಯೆಯಿಂದಕೃತ್ಯಾ! (ಉ)
-ನ್ನತಿ ನಿನ್ನಿಂದೆಂಬ ಭೃತ್ಯಾ! (ನೀ)
-ನೆರವಾದ್ರೆನ್ನ ದಾಂಪತ್ಯಾ!
ನೆರೆ ಸುಖಪ್ರದ ಸತ್ಯಾ! (ಸೇ)
-ವೆ ನಿನ್ನದೆನಗಗತ್ಯಾ!
ನಿನ್ನ ದಾಸಿ ಆಡ್ಳಸತ್ಯಾ! (ಸ)
-ತ್ಯಾ, ಶ್ರೀ ನಿರಂಜನಾದಿತ್ಯಾ!!!

ಅಲ್ಲಿಲ್ಲೋಡಾಡೀಗ್ಮಗ್ಬನೆಂದ್ಯಾ? (ಮ)

-ಲ್ಲಿಕಾರ್ಜುನನ ಕಾಣ್ಬಂದ್ಯಾ? (ಅ)
-ಲ್ಲೋಲಕಲ್ಲೋಲ ಮಾಡೀಗ್ಬಂದ್ಯಾ? (ಗಂ)
-ಡಾಗುಂಡಿ ಸುಖವಿಲ್ಲೆಂದ್ಬಂದ್ಯಾ? (ಮೋ)
-ಡೀಗಾರರ ಸಂಗ ಬಿಟ್ಬಂದ್ಯಾ? (ಬೇ)
-ಗ್ಮಡಿ ಮಾಡಿಕೊಳ್ಬೇಕೆಂದ್ಬಂದ್ಯಾ? (ನೆ)
-ನೆದ್ಪತಿ ಪಾದವನ್ನೀಗ್ಬಂದ್ಯಾ? (ದಿ)
-ಗ್ಬಂಧನವಾಗ್ಬಾರದೆಂದ್ಬಂದ್ಯಾ? (ವಂ)
-ದ್ಯಾ, ನಿರಂಜನಾದಿತ್ಯಂದ್ಬಂದ್ಯಾ???

ಮಾಡಿದೆ! “ನಿನ್ನಿಚ್ಛೆಯೆಂದೆಲ್ಲಾ” ಮಾಡಿದೆ! (ನು)

-ಡಿದಂತೆ ನಡೆಯುವಭ್ಯಾಸ ಮಾಡಿದೆ!
(ತಂ)ದೆ, ತಾಯಿ, ನೀನೆಂದು ನಾ ಸೇವೆ ಮಾಡಿದೆ!
ನಿತ್ಯ ಗುರುಮಂತ್ರ ಭಜನೆ ಮಾಡಿದೆ! (ಹೊ)
-ನ್ನಿನಾಸೆ ಬಿಟ್ಟು ಧರ್ಮ, ಕರ್ಮ, ಮಾಡಿದೆ! (ಇ)
-ಚ್ಛೆ ವಿಷಯ ಸುಖಕ್ಕಾಗ್ದಂತೆ ಮಾಡಿದೆ! (ಬಾ)
-ಯೆಂದು ನಿನ್ನ ಪ್ರಾರ್ಥಿಸಿ ಧ್ಯಾನ ಮಾಡಿದೆ! (ನಿಂ)
-ದೆಗಳಲಕ್ಷಿಸಿ ಸಾಧನೆ ಮಾಡಿದೆ! (ಎ)
-ಲ್ಲಾ ಮತ ಸಾರ ಒಂದೆಂದದ ಮಾಡಿದೆ!
ಮಾತಿನಿಂದಶಾಂತಿಯೆಂದ್ಮೌನ ಮಾಡಿದೆ! (ತಿಂ)
-ಡಿ, ತೀರ್ಥಗಳಾಸೆ ಕಡಿಮೆ ಮಾಡಿದೆ! (ತಂ)
-ದೆ, ನಿರಂಜನಾದಿತ್ಯನೆಂದು ಮಾಡಿದೆ!!!

ಬಲ್ಲಿದೇ! ಧನ ನಿನ್ನದನ್ನೇನು ಮಾಡಿದೆ? (ಮ)

-ಲ್ಲಿಕಾರ್ಜುನನಿಗೇನೇನು ದಾನ ಮಾಡಿದೆ?
ದೇಶ, ವಿದೇಶ ಸುತ್ತಿ ಎಲ್ಲಾ ಹಾಳ್ಮಾಡಿದೆ!
ರ್ಮಾಧರ್ಮವರಿಯದೇನೇನೋ ಮಾಡಿದೆ! (ಜ)
-ನಸಂದಣಿಯ ಮುಂದೆ ಭಾಷಣ ಮಾಡಿದೆ!
ನಿನ್ನವರೆಂಬವರಿಗೂ ದ್ರೋಹ ಮಾಡಿದೆ! (ಅ)
-ನ್ನ, ಬಟ್ಟೆಗೂ ಗತಿಯಿಲ್ಲದಂತೆ ಮಾಡಿದೆ!
ಯೆ ನಿನ್ನಗಿನ್ಯಾದರೂ ಬರಬಾರದೇ? (ಇ)
-ನ್ನೇನೇನ್ಮಾಡ್ಬೇಕೆಂದಿರುವೆ ಹೇಳಬಾರದೇ? (ಮ)
-ನುಜ ಶರೀರ ಸಾರ್ಥಕಗೊಳಿಸ್ಬಾರದೇ?
ಮಾತು ಮಾತಿಗೂ ಶ್ರೀ ಹರಿಯೆನಬಾರದೇ?
(ಮಾ)ಡಿ ಸದ್ಗುರು ಸೇವೆ ಧನ್ಯಳಾಗಬಾರದೇ? (ತಂ)
-ದೆ ನಿರಂಜನಾದಿತ್ಯನೆಂದರಿಯ್ಬಾರದೇ???

ನೋಡಿದಮೇಲೇನಾಗುವುದೋ? ನಾ ಕಾಣೆ! (ನು)

-ಡಿಸಿ ಮೈ ಮರೆಸೆಂಬುದೀ ನನ್ನ ವೀಣೆ!
ತ್ತಗುರುವೇ ಸರಸ್ವತಿಯಾಗ್ಯೆಣೆ!
ಮೇರೆ

ಈರಿದಾತ್ಮಾನಂದಾತ್ಮಾ ಪ್ರವೀಣೆ!
ಲೇಶವೂ ಸಂಶಯವಿಲ್ಲೆಂಬೆ ನನ್ನಾಣೆ!
ನಾನೆಂತಿರಬೇಕೆಂಬುದವಳ ಹೊಣೆ!
ಗುರಿ ಸೇರ್ಲಿಕ್ಕಿರಬೇಕವಳ ರಕ್ಷಣೆ! (ಯಾ)
-ವುದಕ್ಕೂ ಬೇಕಾ ಶ್ರೀ ಪಾದದ ಕರುಣೆ!
ದೋಷಿಗೂ ಅವಳೆಡೆಯಲ್ಲಿ ಮನ್ನಣೆ!
ನಾಚ್ಕೆ ಬಿಟ್ಟಾಗ್ಬೇಕವಳಿಗ್ಸಮರ್ಪಣೆ!
ಕಾಯಾ, ವಾಚಾ, ಮನ್ನಾ ಕಾರ್ಯನಿರ್ವಹಣೆ! (ವೀ)
-ಣೆಗೀಗ ನಿರಂಜನಾದಿತ್ಯಾವಾಹನೆ!!!

ಶಿವನೊಲಿದರೆ ನಿತ್ಯ ಹೋಳಿ! (ಜೀ)

-ವರಿಗಿಲ್ಲಾಗ ಕಾಮನ ಧಾಳಿ!
ನೊಸಲ್ಗಣ್ಣ ನಾಗ ಮಹಾ ಕಾಳಿ! (ಬ)
-ಲಿಯಾಕೆಗಾಗೆಲ್ಲಾ ಕುರಿ, ಕೋಳಿ!
ಯೆ ತೋರ್ಪಳು ದುಷ್ಟರ ಸೀಳಿ!
(ಧ)ರೆಯನುದ್ಧರಿಸುವಳೆದ್ದೇಳಿ!
ನಿತ್ಯಾನಂದದಲ್ಲೆಲ್ಲರು ಬಾಳಿ! (ಕೃ)
-ತ್ಯದ್ಭುತವಳ್ದೆಂದು ಧೈರ್ಯ ತಾಳಿ! (ಅ)
-ಹೋರಾತ್ರಿ ಸಂಚರಿಪುದಾ ಗಾಳಿ! (ಕಾ)
-ಳಿ, ನಿರಂಜನಾದಿತ್ಯ ಕರಾಳಿ!!!

ನಾಯ್ಕೊಡೆ, ಈ ವಾಯ್ಪಡೆ ಮಳೆಯಿದ್ದೆಡೆ! (ಕೈ)

-ಯ್ಕೊಳ್ಬೇಕು ಮುಂಜಾಗ್ರತೆಯನ್ನಾ ವಾಯ್ಪಡೆ! (ಒ)
ಡೆಯನಾರೆಂದರಿತಿರಬೇಕಾ ಪಡೆ!
ರ್ಷಾಸೂಯೆಗಳ ಬಿಟ್ಟಿರ್ಬೇಕಾ ಪಡೆ!
ವಾಗ್ಜಾಲ ವ್ಯರ್ಥವೆಂದರಿಯ್ಬೇಕಾ ಪಡೆ! (ಸಾ)
-ಯ್ಪರಮಾರ್ಥಕ್ಕಾಗಿ ಎಂದಿರ್ಬೇಕಾ ಪಡೆ! (ಕೊ)
-ಡೆ ಸುಳಿವರಿಗಳ್ಗೆಂದಿರ್ಬೇಕಾ ಪಡೆ!
ನನ ಮಾಡ್ತಿರ್ಬೇಕ್ಸ್ವರೂಪಾ ಪಡೆ! (ಕ)
-ಳೆಯ್ಬೇಕು ಕಾಲವೀರೀತಿಯಲ್ಲಾ ಪಡೆ! (ಬಾ)
-ಯಿ, ಕೈ, ಕಚ್ಚೆ ಭದ್ರಪಡಿಸ್ಬೇಕಾ ಪಡೆ! (ನಿ)
-ದ್ದೆಯಲ್ಲೂ ಎಚ್ಚರವಾಗಿರ್ಬೆ

ಕಾ ಪಡೆ! (ಒ)
-ಡೆಯ ನಿರಂಜನಾದಿತ್ಯಗಿಷ್ಟಾ ಪಡೆ!!!

ಆರಡಿ ನಾ ನಿನ್ನಡಿದಾವರೆಯಲ್ಲಿ!

ಸಭರಿತದೂಟವಿರ್ಪುದದ್ರಲ್ಲಿ! (ಅ)
-ಡಿಗಡಿಗಮ್ಲೇರಿ ನಿದ್ರಿಪೆನದ್ರಲ್ಲಿ!
ನಾಮ, ಗೋತ್ರ ವಿಚಾರಿಪರಿಲ್ಲದ್ರಲ್ಲಿ!
ನಿತ್ಯ ನಿರ್ಮಲ ಸಚ್ಚಿದಾನಂದದ್ರಲ್ಲಿ! (ನ)
-ನ್ನವ್ರನ್ಯರವ್ರೆಂಬ ಭೇದವಿಲ್ಲದ್ರಲ್ಲಿ! (ಉ)
-ಡಿಗೆ, ತೊಡಿಗೆಯಾಡಂಬ್ರವಿಲ್ಲದ್ರಲ್ಲಿ!
ದಾಸರ ದಾಸರಿಗಾಶ್ರಯವದ್ರಲ್ಲಿ!
ರ ಗುರುಭಕ್ತಿಗೆ ಗೌರವದ್ರಲ್ಲಿ! (ಧ)
-ರೆಯರ್ಸನಾದ್ರೂ ನಮ್ರ ಸೇವಕದ್ರಲ್ಲಿ! (ಜ)
-ಯಪರಮೇಶ್ವರನೆಂಬ ನಾದದ್ರಲ್ಲಿ! (ಇ)
-ಲ್ಲಿ, ನಿರಂಜನಾದಿತ್ಯನಿರ್ಪೆಡೆಯಲ್ಲಿ!!!

ಇನ್ನೆಷ್ಟು ಸಹಿಸಬೇಕಯ್ಯಾ? (ನಿ)

-ನ್ನೆ ಇವತ್ತಿನ ಮಾತೇನಯ್ಯಾ? (ಬೂ)
-ಷ್ಟು ಹಿಡಿಯಿತು ಪಾತ್ರೆಗಯ್ಯಾ!
ತ್ವ ಪರೀಕ್ಷೆ ಸಾಕಿನ್ನಯ್ಯಾ!
ಹಿತೈಷಿಯೆಂಬುದ ತೋರಯ್ಯಾ!
ದಾ ಧ್ಯಾನ ನಿನ್ನದೆನ್ಗಯ್ಯಾ!
ಬೇಡುವೆನು ದರ್ಶನಕಯ್ಯಾ!
ಪಿಮುಷ್ಟಿಯಿದೆನ್ನದಯ್ಯಾ! (ಆ)
-ಯ್ಯಾ ನಿರಂಜನಾದಿತ್ಯಾನಯ್ಯಾ!!!

ಸ್ವಸ್ಥಚಿತ್ತನಾಗ್ಯಸ್ವಸ್ಥ ದೂರನಾಗು!

ಸ್ಥಳದ ಮಹಿಮೆ ತೋರುವವನಾಗು!
ಚಿರಕಾಲ ಹೆಸ್ರುಳಿಸುವವನಾಗು! (ಅ)
-ತ್ತ, ಇತ್ತ, ಸುತ್ತಾಡದಿರುವವನಾಗು!
ನಾನಾ ದೇವರ ಪೂಜಿಸದದನಾಗು! (ಭಾ)
-ಗ್ಯನಿಧಿ ನಿನ್ನಾತ್ಮನೆಂದರಿವವ್ನಾಗು!
ಸ್ವಪ್ನವೀ ಸಂಸಾರ! ನಂಬದವನಾಗು!
ಸ್ಥಳ ನಿನ್ನದು ಗುರುಸನ್ನಿಧಿ! ಹೋಗು!
ದೂರವಾದ್ರೂ ಶಾಂತಿ ಸ್ಥಾನವದು! ಸಾಗು! (ಮಾ)
-ರನಾಟಕ್ಕೆ ಮರುಳಾಗದವನಾಗು!
ನಾಮ ಸದಾ ಜಪಿಸುವವ ನೀನಾಗು!
ಗುರು ನಿರಂಜನಾದಿತ್ಯನೇ ನೀನಾಗು!!!

ನಾನಾಗಿತ್ತುದನು ಸ್ವೀಕರಿಸು! (ನೀ)

-ನಾಗ್ಕಿತ್ತುವುದ ನಿರಾಕರಿಸು!
ಗಿರ್ವಿ ಪದ್ಧತಿಯ ಸುಧಾರಿಸು! (ಹೆ)
-ತ್ತು, ಹೊತ್ತವರ ಪತಿಕರಿಸು!
ತ್ತಾತ್ರೇಯಗೆ ನಮಸ್ಕರಿಸು!
ನುಡಿದಂತೆ ನಡೆದ್ಸಂಚರಿಸು! (ಹೇ)
-ಸ್ವೀ ದುರಾಶೆಗಳ ಸೀಳಿರಿಸು!
ಟ್ಟುಕಥೆಗಳ್ಬದಿಗಿರಿಸು!
ರಿಪುಗಳಾರನ್ನು ಸಂಹರಿಸು! (ವಾ)
-ಸುಕಿ ನಿರಂಜನಾದಿತ್ಯನಸು!!!

ನಂಬಿಸಿ ಕತ್ತು ಹಿಸುಕಬೇಡಿ!

ಬಿಟ್ಟ ಮಾಲುಪಯೋಗಿಸಬೇಡಿ! (ಪು)
-ಸಿಯಾಡಿ ಗಂಟು ಮುಳುಗಿಸ್ಬೇಡಿ!
ಳ್ಳರಿಂದೇನೂ ಕೊಂಡುಕೊಳ್ಬೇಡಿ! (ಸೊ)
-ತ್ತು ಅಸ್ಥಿರ, ಅನ್ಯಾಯ ಮಾಡ್ಬೇಡಿ!
ಹಿಡಿದು ಶ್ರೀಪಾದ ಸುಳ್ಳಾಡ್ಬೇಡಿ!
ಸುದ್ದಿ ಬಂದಿದೆಂದ್ಗುಲ್ಲೆಬ್ಬಿಸ್ಬೇಡಿ!
ಂಡ್ರೂ ಪರಾಂಬರಿಸದಿರ್ಬೇಡಿ!
ಬೇಳೆ ಬೇಯದೆ ಹುಳಿ ಹಾಕ್ಬೇಡಿ! (ಅ)
-ಡಿ ನಿರಂಜನಾದಿತ್ಯನದ್ಹಿಡಿ!!!

ಪ್ರಕರಣದ ಪತ್ತೆಯಾಯ್ತು!

ತ್ತಿನಲ್ಲದು ಗೋಚರಾಯ್ತು! (ವ)
-ರ ಗುರುವಿಗೊಪ್ಪಿಸಿದ್ದಾಯ್ತು! (ಗ)
-ಣಪತಿಗಿದ ಹೇಳಿದ್ದಾಯ್ತು!
ತ್ತಲೀಲೆಯಿದೆಂದಂತಾಯ್ತು!
ದ್ಮ ಪಾದಕ್ಕೆರಗಿದ್ದಾಯ್ತು! (ಮ)
-ತ್ತೆ ಸಾಧನೆ ಭರದಿಂದಾಯ್ತು! (ಮಾ)
-ಯಾ ಮೋಹವೆಲ್ಲೋ ಹಾರಿಹೋಯ್ತು (ಆ)
-ಯ್ತು, ನಿರಂಜನಾದಿತ್ಯನಾಯ್ತು!!!

ಕರ್ಮಫಲ ಕಾದಿದೆ ನಿನಗೆ! (ಧ)

-ರ್ಮದರಿವಾಗಲೀಗ ನಿನಗೆ!
ಲಪ್ರದಡಿ ಸೇವೆ ನಿನಗೆ!
ಕ್ಷ್ಯಾತ್ಮನಲ್ಲಿರಲಿ ನಿನಗೆ!
ಕಾಮ ದೂರಾಗಿರಲಿ ನಿನಗೆ!
ದಿವ್ಯಜ್ಞಾನೋದಯಾಗ್ಲಿ ನಿನಗೆ! (ತಂ)
-ದೆ, ತಾಯಿ ಗುರುವಾಗ್ಲಿ ನಿನಗೆ! (ಅ)
-ನಿತ್ಯದರ್ಥವಾಗ್ಲೀಗ ನಿನಗೆ! (ಅ)
-ನನ್ಯ ಭಕ್ತಿ ಸಿದ್ಧಿಸ್ಲಿ ನಿನಗೆ!
ಗೆಳೆಯ ನಿರಂಜನಾದಿತ್ಯಾಗೆ!!!

ಭಕ್ತರಿಗನ್ಯಾಯವಾಗಬಾರದಮ್ಮಾ! (ಯು)

-ಕ್ತ ಸಹಾಯವರಿಗೆ ಸದಾ ಮಾಡಮ್ಮಾ! (ಕಿ)
-ರಿಯರ್ಗೆ ನಿನ್ನ ಹೊರತಾರು ದಿಕ್ಕಮ್ಮಾ?
ದರಿಸಿ ಬುದ್ಧಿ ಕಲಿಸು ನೀನಮ್ಮಾ!
ನ್ಯಾಯಾನ್ಯಾಯದರಿವವರಿಗಿಲ್ಲಮ್ಮಾ! (ಹೇ)
-ಯವಾಗಿಹ ಕಳ್ಳತನ ಮಾಳ್ಪರಮ್ಮಾ! (ಯಾ)
-ವಾಗಲೂ ಕುಹಕ ಬುದ್ಧಿ ತೋರ್ಪರಮ್ಮಾ!
ದ್ದೆ, ಹೊಲ ಮಾರಿ ಜೂಜಾಡುವರಮ್ಮಾ!
ಬಾಯಾರಿದೆಂದು ಹೆಂಡ ಕುಡಿವರಮ್ಮಾ! (ಪ)
-ರಧನ, ಪರಸ್ತ್ರೀ ಹುಚ್ಚವರಿಗಮ್ಮಾ!
ಯೆ ಅವರಮೇಲೀಗುಂಟಾಗಲಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯ ನೀನೇ ಕಾಣಮ್ಮಾ!!!

ಲಂಪಟಾ! ಪಡಬೇಡ ಸಂಕಟಾ!

ತಿತ ಪಾವನನಾ ವೆಂಕಟಾ! (ಬೂ)
-ಟಾಟಿಕೆಯಿಂದ ಎಲ್ಲಾ ಸಂಕಟಾ!
ರಮಾರ್ಥದ ಸಾರಾ ವೆಂಕಟಾ! (ಮಾ)
-ಡಬೇಕವನ ಧ್ಯಾನಾ ಲಂಪಟಾ!
ಬೇರುಸಹಿತ ನಾಶಾ ಸಂಕಟಾ! (ಅಂ)
-ಡ, ಪಿಂಡಾಂಡದಲ್ಲೆಲ್ಲಾ ವೆಂಕಟಾ!
ಸಂದೇಹಪಡಬೇಡಾ ಲಂಪಟಾ! (ಸ್ವ)
-ಕರ್ಮ ನಿರತಗಿಲ್ಲಾ ಸಂಕಟಾ! (ದಿ)
-ಟಾ ನಿರಂಜನಾದಿತ್ಯಾ ವೆಂಕಟಾ!!!

ತುಂಬಿಟ್ಟ ದುಡ್ಡು ತಂಬಿಟ್ಟಾಯ್ತೇನೇ?

ಬಿಕ್ರಿನೂ ಆಗ್ಲೇ ಮಾಡಿಬಿಟ್ಯೇನೇ? (ಕೆ)
-ಟ್ಟಬುದ್ಧಿ ಸುಟ್ಟು ಹಾಕಬಾರ್ದೇನೇ?
ದುರ್ವಿಷಯವಿನ್ನೂ ಬಿಟ್ಟಿಲ್ವೇನೇ? (ಜ)
-ಡ್ಡು ಹಿಡಿದ್ರೂ ಬಿಡಲಾರಿಯೇನೇ?
ತಂಗಮ್ಮ, ಗಂಗಮ್ಮ ನೀನಲ್ವೇನೇ?
ಬಿಟ್ಟಾವ್ಯವಹಾರ! ಒಪ್ಪಿದ್ಯೇನೇ? (ಕ)
-ಟ್ಟಾಜ್ಞೆಯಿದೆನ್ನದು, ಪಾಲಿಸ್ತ್ಯೇನೇ? (ಹೋ)
-ಯ್ತೆನೇ ಮೌಢ್ಯ? ನೀನೆಲ್ಲಕ್ಕ್ತಾಯ್ತಾನೇ? (ನಾ)
-ನೇ ನಿರಂಜನಾದಿತ್ಯಾತ್ಮ ನೀನೇ!!!

ಕೈಲಿಟ್ಟುಕೊಳ್ಳೆಂದ್ರೆ ಕೈ ಕೊಟ್ಟ! (ಹಾ)

-ಲಿಗ್ಬಂದವ್ನೆಮ್ಮೆ ಮೇಲ್ಕಣ್ಣಿಟ್ಟ! (ಮು)
-ಟ್ಟು, ಮಡಿಯೆಂದ್ರೆ ಮುಟ್ಟ್ಯೇಬಿಟ್ಟ!
ಕೊಳಕೆಂದ್ರೆ ಥಳಕ್ಮಾಡ್ಬಿಟ್ಟ! (ಮು)
ಳ್ಳೆಂದ್ರೆ ಕಲ್ಲು ತಂದು ದಾರ್ಗಿಟ್ಟ! (ನಿ)
-ದ್ರೆ ಮಾಡೆಂದ್ರೆಂದು ಕೂತ್ಕೊಂಡ್ಬಿಟ್ಟ!
ಕೈತುತ್ತಿಕ್ಕಿದ್ರೆ ಕೈ ಕಚ್ಬಿಟ್ಟ!
ಕೊನೆಗ್ದಿಕ್ಕಿಲ್ದೆ ಪರ್ದಾಡ್ಬಿಟ್ಟ! (ಸು)
-ಟ್ಟ ನಿರಂಜನಾದಿತ್ಯ ಜುಟ್ಟ!!!

ಸಂದೇಶವಿನ್ನೂ ಕಾರ್ಯಕ್ಕೇಕೆ ಬಂದಿಲ್ಲ?

ದೇವರಲ್ಲಿ ಭಯ, ಭಕ್ತಿ ಕುದುರಿಲ್ಲ? (ದೇ)
-ಶ, ಕಾಲ, ಪರಿಸ್ಥಿತಿಗಳರಿವಿಲ್ಲ!
ವಿಷಯಸುಖದಾಸೆಯಿನ್ನೂ ಹೋಗಿಲ್ಲ! (ಮು)
-ನ್ನೂರರ್ವತ್ತೈದು ದಿನವಿದೇ ಆಯ್ತಲ್ಲ!
ಕಾಲನ ದೂತರು ಕಾಯುತಿಹರಲ್ಲ! (ಕಾ)
-ರ್ಯತತ್ಪರರಾಗ್ಬೇಕೀಗ ಜನರೆಲ್ಲ! (ಅ)
-ಕ್ಕೇಳಿಗೆಯದರಿಂದ ಅವರಿಗೆಲ್ಲ!
ಕೆಟ್ಟಮೇಲ್ಕುಟ್ಟಿಕೊಂಡತ್ತು ಫಲವಿಲ್ಲ!
ಬಂದು ಹೋದ್ರೆ ಸಾರ್ಥಕವಾಗುವುದಿಲ್ಲ!
ದಿವ್ಯಪದೇಶದ ಮನನ ಮಾಡ್ರೆಲ್ಲ! (ನ)
-ಲ್ಲ ನಿರಂಜನಾದಿತ್ಯನಂತಾಗ್ಬೇಕೆಲ್ಲ!!!

ಆರ ನೆನೆದಾರಿಗೇನು ಸುಖ? (ಪ)

-ರಮಾತ್ಮನಿಂದೆಲ್ಲರಿಗೂ ಸುಖ! (ನೆ)
-ನೆದ್ರೆ ನಿನ್ನಲವನನ್ನು ಸುಖ!
ನೆಲೆ ಬೇರೊಂದಿದೆಂದ್ರಾಗ್ದು ಸುಖ! (ಸ)
-ದಾ ನೀನೇ ಅವನಾಗಿದ್ದ್ರೆ ಸುಖ! (ಅ)
-ರಿಗಳಾರೂ ಸತ್ತ್ರೆ ನಿತ್ಯ ಸುಖ! (ಯೋ)
-ಗೇಶ ನೀನಾದ್ರೆ ಪರಮ ಸುಖ! (ಅ)
-ನುಮಾನ ಪಟ್ಟರಾಗದಾ ಸುಖ!
ಸುಖ, ದುಃಖ ಸಮಾದ್ರಾತ್ಮ ಸುಖ! (ಸ)
-ಖ, ನಿರಂಜನಾದಿತ್ಯಗಾ ಸುಖ!!!

ಸೆರಗೊಡ್ಡಿ ಬೇಡಿದೆ ಬಡ್ಡಿ ದುಡ್ಡಿಗಾಗಿ! (ದು)

-ರವಸ್ಥೆ ದಿನದಿನಕ್ಕೂ ಹೆಚ್ಚಾಗಲಾಗಿ!
ಗೊಡವೆ ನನ್ನದಮ್ಮಗೆ ಬೇಡಾಗಲಾಗಿ! (ಅ)
-ಡ್ಡಿ ಮಾಳ್ಪವರು ನೆರಯವರಾಗಲಾಗಿ!
ಬೇಡ ಗುಲಾಮ್ಗಿರಿ ನನಗೆಂದಿರಲಾಗಿ! (ದು)
-ಡಿದರೂ ಪಕ್ಷಪಾತ ಕಂಡು ಬರಲಾಗಿ! (ತಂ)
-ದೆ, ತಾಯಿ, ಸದ್ಗುರುವೆಂದರಿವಾಗಲಾಗಿ!
ಲಿಸಿದೆನು ಭಕ್ತ್ಯವನ ಕೃಪೆಗಾಗಿ! (ದು)
-ಡ್ಡಿಗಿಂತಧಿಕವಿದೆಂದರಿತವನಾಗಿ!
ದುಡಿದುದವಗೊಪ್ಪಿಸಿದೆ ನಿಧಿಗಾಗಿ! (ಬ)
-ಡ್ಡಿ ಸಾಯುಜ್ಯವೆಂದು ಬೇಡಿದೆನದಕ್ಕಾಗಿ!
(ಕಂ)ಗಾಲಾದೆ ವಿಳಂಬವಾಗುತ್ತಿರ್ಪುದಕ್ಕಾಗಿ! (ಬಾ)
-ಗಿದೆ ನಿರಂಜನಾದಿತ್ಯನಿಗದಕ್ಕಾಗಿ!!!

ಮೋಡವೀಗೋಡ ಬೇಕೆಂಬೆ! (ಕ)

-ಡಲ ಪಾನ ಮಾಡ್ಬೇಕೆಂಬೆ!
ವೀರ್ಯವೃದ್ಧಿಗದ್ಬೇಕೆಂಬೆ!
ಗೋಪಾಲನೆಯಾಗ್ಬೇಕೆಂಬೆ! (ಬ)
-ಡವರುದ್ಧಾರಾಗ್ಬೇಕೆಂಬೆ!
ಬೆಗ್ಬೇಗೂರು ಸೇರ್ಬೇಕೆಂಬೆ!
ಕೆಂದಾವ್ರೆಯರಳ್ಬೇಕೆಂಬೆ! (ಆಂ)
-ಬೆ ನಿರಂಜನಾದಿತ್ಯಾಂಬೆ!!!

ಸಮಯ ಸವೆದು ಹೋಯ್ತು!

ನಸ್ಸು ಹೊಲ್ಸಾಗಿ ಹೋಯ್ತು!
ಶಸ್ಸು ಕ್ಷಯಿಸಿ ಹೋಯ್ತು!
ತ್ಯಾಂಶರಿಯದೆ ಹೋಯ್ತು!
ವೆಸನ ಹೆಚ್ಚಾಗಿ ಹೋಯ್ತು!
ದುರ್ಬುದ್ಧಿ ಬಲಿತು ಹೋಯ್ತು! (ಅ)
-ಹೋರಾತ್ರಿ ಭಜನೆಯಾಯ್ತು! (ಆ)
-ಯ್ತು ನಿರಂಜನಾದಿತ್ಯಾಯ್ತು!!!

ನಿನ್ನುದ್ಯೋಗ ನೀನು ಮಾಡುತ್ತಿರು! (ನ)

-ನ್ನುಪದೇಶ ಪಾಲಿಸುತ್ತಲಿರು! (ಪಾ)
-ದ್ಯೋಪಚಾರಗಳ ಬಿಡದಿರು!
ಮನ ಗುರಿಯೆಡೆಗಿಟ್ಟಿರು!
ನೀಚರ ಸಂಗವನ್ನು ಬಿಟ್ಟಿರು! (ಅ)
-ನುಗಾಲಾತ್ಮ ಚಿಂತನೆಯಲ್ಲಿರು!
ಮಾಯಾ ಮೋಹಕ್ಕೊಳಗಾಗದಿರು! (ದು)
-ಡುಕುವಭ್ಯಾಸ ದೂರ ಮಾಡಿರು! (ಕ)
-ತ್ತಿ ಯಾರ ಮೇಲೂ ಮಸೆಯದಿರು! (ಗು)
-ರು ನಿರಂಜನಾದಿತ್ಯನೆಂದಿರು!!!

ನೋಡಲಾರೆ ನನ್ನ ನೀನಿನ್ನು! (ಮೊಂ)

-ಡುತನ ಬಿಟ್ಟು ಸೇರ್ನನ್ನನ್ನು! (ಲೀ)
-ಲಾನಾಟಾಕದರ್ಥವಾಗ್ಲಿನ್ನು! (ಮ)
-ರೆಯ್ಬೇಡಹಂಕಾರ್ಯಾಗ್ಯೆನ್ನನ್ನು!
ಶ್ವರ ಸಂಸಾರ ಸಾಕಿನ್ನು! (ಅ)
-ನ್ನ, ಬಟ್ಟೆಗಾಗಿ ಹುಚ್ಚಿಲ್ಲೆನ್ನು!
ನೀಲಾಕಾಶ ಸದೃಶಾನೆನ್ನು!
ನಿಶ್ಚಲ ತತ್ವದಲ್ಲಿರಿನ್ನು! (ಅ)
-ನ್ನು, ನಿರಂಜನಾದಿತ್ಯಾನೆನ್ನು!!!

ಯಾರ್ಯಾರಿಗ್ಯಾವ್ಯಾವ ಟೋಪಿ ಹಾಕಿದೆ? ಹೇಳು! (ಮ)

-ರ್ಯಾದಸ್ಥರ ಮಾನಹಾನಿ ಮಾಡಿತೀ ಬಾಳು! (ದಾ)
-ರಿಯಲ್ಲಡ್ಡಗಟ್ಟಿ ದುಡ್ಡು ಕಿತ್ತಿತೀ ಬಾಳು! (ಯೋ)
-ಗ್ಯಾಯೋಗ್ಯ ವಿಚಾರವಿಲ್ಲದಾಡಿತೀ ಬಾಳು!
ವ್ಯಾಪಾರವೆಲ್ಲಾ ಕಪ್ಪು ಹಣಕ್ಕಾಯ್ತೀ ಬಾಳು! (ಅ)
-ವರಿವ್ರರ್ಥವನ್ನಪಹರಿಸಿತೀ ಬಾಳು! (ಮಾ)
-ಟೋಪಾಯಗಳಿಂದ ಕಾಟ ಕೊಟ್ಟತೀ ಬಾಳು! (ಪಾ)
-ಪಿಯಾಗ್ಯನ್ಯರಿಗೆ ತಾಪವಿಟ್ಟತೀ ಬಾಳು!
ಹಾಲಾಹಲವಿಕ್ಕಿ ಕೊಲೆಗೈದಿತೀ ಬಾಳು!
ಕಿಶೋರಿಯರ್ಕಸೆಗೆ ಕೈ ಹಾಕಿತೀ ಬಾಳು! (ತಂ)
-ದೆ, ತಾಯಿಯರ ನಿತ್ಯ ನಿಂದಿಸಿತೀ ಬಾಳು!
ಹೇಳತೀರದ ನೀಚತನಕ್ಕಾಯ್ತೀ ಬಾಳು! (ಹೇ)
-ಳು! ನಿರಂಜನಾದಿತ್ಯನಿಗೀಗಡ್ಡ ಬೀಳು!!!

ಅವರಿವರ ನಿರೀಕ್ಷೆ ಏತಕ್ಕೆ?

ರ ಗುರುಧ್ಯಾನ ಬೇಕು ಸುಖಕ್ಕೆ! (ಪ)
-ರಿಪರ್ಯಾಸೆಯಿಂದಶಾಂತಿ ಜೀವಕ್ಕೆ! (ಶಿ)
-ವನೊಲಿದ ರಾಮ ಬಂದ ರಾಜ್ಯಕ್ಕೆ! (ಮಾ)
-ರ ಗುರಿಯಾದ ಶಿವನ ಕೋಪಕ್ಕೆ!
ನಿಶಿ, ದಿನ ಕಾಯ್ಬೇಕ್ದರ್ಶನವ್ನಕ್ಕೆ! (ಪ)
-ರೀಕ್ಷೆ ಅವನದು ಬಹಳದಕ್ಕೆ!
(ಶಿ)ಕ್ಷೆಯಾಗಲೇ ಬೇಕರಿಗಳಾರಕ್ಕೆ!
ರಿಳ್ತ ಸಹಜಜೀವಭಾವಕ್ಕೆ!
ಪ್ಪು ತಿದ್ದಿಕೊಂಡಾಗಾತ್ಮ ರೂಪಕ್ಕೆ! (ಅ)
-ಕ್ಕೆ ನಿರಂಜನಾದಿತ್ಯಾನಂದೆಲ್ಲಕ್ಕೆ!!!

ವಿದ್ವತ್ವಿದ್ಯುತ್ತುತ್ಪಾದಿಸದಯ್ಯಾ! (ಅ)

-ದ್ವರ್ತನೆಯಿಂದುಂಟಾಗಬೇಕಯ್ಯಾ! (ಸಾ)
-ತ್ವಿಕತೆಯಿಂದ ಸದ್ಗತಿಯಯ್ಯಾ! (ಅ)
-ದ್ಯುಕ್ತಾಯುಕ್ತ ವಿಚಾರದಿಂದಯ್ಯಾ! (ಉ)
-ತ್ತು, ಬಿತ್ತುವೋದ್ದೇಶದಂತದಯ್ಯಾ! (ಸ)
-ತ್ಪಾತ್ರದ ದಾನ ಸಾರ್ಥಕವಯ್ಯಾ!
ದಿವ್ಯ ಜೀವನದಿಂದುದ್ಧಾರಯ್ಯಾ!
ಹನೆಯಿಂದೆಲ್ಲಾ ಸಿದ್ಧಿಯಯ್ಯಾ! (ಮ)
-ದ, ಮತ್ಸರವಿರಬಾರದಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯತೀತಯ್ಯಾ!!!

ಒಡೆಯನಡಿಗೆರಗ್ಲೇಬೇಕ್ಮಡದಿ! (ಕ)

-ಡೆಗಂಡರವನ ಬತ್ತುವುದುದಧಿ! (ಭ)
-ಯ, ಭಕ್ತಿಯಿಂದವಳಿರ್ಬೇಕು ನಿಜದಿ!
ಡೆ, ನುಡಿಯೊಂದಾಗ್ಜಪಿಸ್ಬೇಕ್ಮನದಿ! (ಹಾ)
-ಡಿ ಗುಣಗಾನ ಒಪ್ಪಿಸ್ಬೇಕು ವರದಿ!
ಗೆಳೆತನ ಹೆಚ್ಚಬೇಕ್ದಿನ ದಿನದಿ!
(ತ)ರ(ತ)ರದಾಸೆಗಳ್ಬಿಡಬೇಕೀ ಕತದಿ! (ಆಂ)
-ಗ್ಲೇಯರಾಚಾರದಲ್ಲಿರ್ಬಾರದ್ಕೆಳದಿ!
ಬೇಸರಿಸದೆ ಸುಧಾರಿಸ್ಬೇಕ್ಮುದದಿ! (ಬೇ)
-ಕ್ಮನೋನಿಶ್ಚಯವೆಲ್ಲಾ ಕಾರ್ಯಕ್ರಮದಿ! (ಗಂ)
-ಡ, ಹೆಂಡಿರಾಗ ಬಾಳುವರು ಸುಖದಿ! (ದಾ)
-ದಿ ನಿರಂಜನಾದಿತ್ಯಗವ್ಳಾಗಸದಿ!!!

ಬುಡಸಹಿತಕಿತ್ತುಹಾಕಬೇಕಪ್ಪಾ! (ತ)

-ಡವಾದರೂ ನಿಶ್ಚಿಂತೆಯಿಂದೆರ್ಬೇಕಪ್ಪಾ!
ಲಸಲಕ್ಕೂ ಅಳದಂತಾಗ್ಬೇಕಪ್ಪಾ!
ಹಿತಶತ್ರುಗಳ ಕಾಟ ಬಹಳಪ್ಪಾ!
ಪ್ಪನ್ನವರೊಪ್ಪಿಕೊಳ್ಳುವುದಿಲ್ಲಪ್ಪಾ!
ಕಿವಿ ಮಾತಿಂದ ಮರುಳು ಮಾಳ್ಪರಪ್ಪಾ! (ಇ)
-ತ್ತು ಭರವಸೆ ಕತ್ತು ಕೊಯ್ವರವ್ರಪ್ಪಾ!
ಹಾಲೆಂದು ಹಾಲಾಹಲ ಕುಡಿಸುವ್ರಪ್ಪಾ!
ಥೆ ಹೇಳಿ ವ್ಯಥೆ ತಂದಿಡುವರಪ್ಪಾ!
ಬೇರಿನ್ಯಾವೋದ್ಯೊಗವೂ ಅವ್ರಿಗಿಲ್ಲಪ್ಪಾ!
ರ್ತವ್ಯವೇನೆಂದವರರಿಯರಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯ ನೀನಾಗಿರಪ್ಪಾ!!!

ಒಬ್ಬೊಬ್ಬರಿಗೊಂದೊಂದು ಹುಚ್ಚು! (ಒ)

-ಬ್ಬೊಡೆಯಗನಂತದ ಹುಚ್ಚು!
(ಅ)ಬ್ಬರಕೆ ಅರ್ಭಟದ ಹುಚ್ಚು! (ಸಿ)
-ರಿಗೆ ನರಹರಿಯ ಹುಚ್ಚು!
ಗೊಂಬೆಗಲಂಕಾರದ ಹುಚ್ಚು!
ದೊಂಬನಿಗಾದಾಯದ ಹುಚ್ಚು!
ದುರ್ಮತಿಗಕೃತ್ಯದ ಹುಚ್ಚು!
ಹುಡುಗರಿಗಾಟದ ಹುಚ್ಚು! (ಮೆ)
-ಚ್ಚು ನಿರಂಜನಾದಿತ್ಯನಚ್ಚು!!!

ಅನರ್ಘ್ಯ ರತ್ನಗಳು ಗಂಗೆಯ ಪಾಲು! (ದಿ)

-ನ, ರಾತ್ರಿ ತೇಲ್ತಿವೆ ಹೆಣಗಳ ಸಾಲು! (ಅ)
-ರ್ಘ್ಯಪಾದ್ಯಾದಿಗಳಲ್ಲಿವಳ ಕೈ ಮೇಲು! (ಪ)
-ರಶಿವನಿಗವಳ ನಿತ್ಯ ಹವಾಲು! (ಯ)
-ತ್ನವಿಲ್ಲದೆ ಹೊತ್ತವಳಾತ ಕಂಗಾಲು!
ಭಸ್ತಿ ಹೀರುವನವಳ ದಿನಾಲು! (ಬಾ)
-ಳು ಹಾಳಾಯ್ತೆಂದಾಕೆ ಸೇರ್ವಳು ಕಡಲು!
ಗಂಡನನ್ನೊಲಿಸ್ಬೇಕೆಂದಲ್ಲಿ ಹಂಬಲು!
ಗೆಳೆಯನೌದಾರ್ಯದಿಂದ ಮೇಲೇರಲು! (ಭ)
-ಯಪಡುವಳು ಮುಗಿಲು ತಾನಾಗಲು!
ಪಾವನೆಯಿವಳ್ಮಳೆಯಾಗಿ ಬೀಳಲು! (ಕೀ)
-ಲು ನಿರಂಜನಾದಿತ್ಯ ತಿರುಗಿಸಲು!!!

ಕೇಳಬೇಡಿ, ಹೇಳಬೇಡಿ ಚಾಡಿ! (ಕ)

-ಳಕಳಿಯ ಮಾತ ತಳ್ಳಬೇಡಿ!
ಬೇಕಾತ್ಮಾನಂದಕ್ಕೆ ಶುದ್ಧನಾಡಿ! (ಕು)
-ಡಿಕರೊಡನಾಟ ಬಿಟ್ಟುಬಿಡಿ!
ಹೇತುನಾಥನ ಚಿಂತನೆಮಾಡಿ! (ಒ)
-ಳ, ಹೊರಗೆಲ್ಲಾ ಅವನೇ! ನೋಡಿ!
ಬೇರೆಲ್ಲಾ ವಾದ, ವಿವಾದ ಮೋಡಿ! (ಹಿ)
-ಡಿ, ಸದ್ಗುರುವಿನ ಪಾವನಡಿ! (ಆ)
-ಚಾರ, ವಿಚಾರವನಂತೆ ಇಡಿ! (ನೋ)
-ಡಿ, ನಿರಂಜನಾದಿತ್ಯನಂತಾಡಿ!!!

ಕಾಮನ ಹೊಡಿ, ರಾಮನ ಹಿಡಿ!

ನಶ್ಯಾಂತಿಗೆ ಇದು ಕೈಪಿಡಿ!
ರ ನಾರಿಯರಿದ್ಮಾಡಿ ನೋಡಿ!
ಹೊತ್ತು ಅನ್ಯಥಾ ಕಳೆಯಬೇಡಿ! (ಅ)
-ಡಿಗಡಿಗಾತ್ಮಚಿಂತನೆ ಮಾಡಿ!
ರಾಗ, ದ್ವೇಷಗಳ ಬಿಟ್ಟುಬಿಡಿ!
ರೆಯದಿದಾಚಾರದಲ್ಲಿಡಿ!
ಶ್ವರದಾಸೆಗಳೆಲ್ಲಾ ಸುಡಿ!
ಹಿಮಗಿರೀಶನನ್ನು ಕೊಂಡಾಡಿ! (ಹಾ)
-ಡಿ ನಿರಂಜನಾದಿತ್ಯನ ಕೂಡಿ!!!

ಸತಿಪತಿಯರೂರಲ್ಲಿ ಕ್ಷೇಮ!

ತಿಕ್ಕಾಟವಿಲ್ಲದಲ್ಲೀಗಾರಾಮ!
ತಿಸೇವ ಸತಿಗೀಗ ಪ್ರೇಮ!
ತಿದ್ದಿ ನಡಿಸೆಂದಾಕೆ ಪ್ರಣಾಮ! (ನ)
-ಯ, ವಿನಯದಿಂದಾಡುವ ನೇಮ! (ಊ)
-ರೂರಲೆತಕ್ಕೀಗಿಂದ ವಿರಾಮ! (ನಿ)
-ರತ ಜಪವೀಗ ಗುರುನಾಮ! (ಅ)
-ಲ್ಲಿ, ಇಲ್ಲಿ, ಎಲ್ಲೆಲ್ಲದೇ ವಿಕ್ರಮ!
ಕ್ಷೇತ್ರ ಸದ್ಗುರುವಿರುವ ಧಾಮ! (ಮ)
-ಮ ನಿರಂಜನಾದಿತ್ಯಾತ್ಮಾರಾಮ!!!

ಕೃಷ್ಣನದ್ದತಿಮಾನುಷ ಶಕ್ತಿ! (ವೈ)

-ಷ್ಣವನವನಲ್ಲಿರಬೇಕ್ಭಕ್ತಿ!
ರನಿಗವನಿಂದಲೇಮುಕ್ತಿ! (ಸ)
-ದ್ದಡಗಬೇಕ್ಮನಸಿನ ಯುಕ್ತಿ!
ತಿರಿಗಿ ಬರಬಾರದು ವೃತ್ತಿ!
ಮಾಯೆಯಿಂದಾಗ್ವುದಾಗ ನಿವೃತ್ತಿ! (ಅ)
-ನುಪಮಾತ್ಮಾನಂದವಾಗ ಪ್ರಾಪ್ತಿ! (ವಿ)
-ಷಯವಾಸನೆಗಾಗ ನಿಶ್ಯಕ್ತಿ!
ರಣಗಾಧಾರ ಸದ್ಗುರೂಕ್ತಿ! (ಶ)
-ಕ್ತಿ ನಿರಂಜನಾದಿತ್ಯಾತ್ಮ ಶಕ್ತಿ!!!

“ರಾಮಾ! ಕೃಷ್ಣಾ” ಎಂದೊರಲುವೆವು ನಾವು!

ಮಾತಿಗುತ್ತರವೀಯದಿಹಿರಿ ನೀವು!
ಕೃತಾರ್ಥರಾಗಬೇಕೆಂದಿಹೆವು ನಾವು! (ತೃ)
-ಷ್ಣಾಸೂಯಾದಿಗಳಿಲ್ಲದವರು ನೀವು!
ಎಂದಿಗೆ ದರ್ಶನ ಪಡೆವುದು ನಾವು?
ದೊಡ್ಡ ಮನಸ್ಸು ಮಾಡಬೇಕೀಗ ನೀವು! (ಪ)
-ರಮ ಪಾಪಿಗಳಾಗಿರ್ಬಹುದು ನಾವು! (ಕ)
-ಲುಷಿತಗಳ ಕ್ಷಮಿಸಬೇಕು ನೀವು!
ವೆಗ್ಗಳರ್ನೀವೆಂದು ನಂಬಿಹೆವು ನಾವು! (ಸಾ)
-ವು, ನೋವುಗಳ್ಭಯ ತಪ್ಪಿಸ್ಬೇಕು ನೀವು!
ನಾವ್ಯಾರೆಂದರಿಯದಿರುವೆವು ನಾವು! (ಕಾ)
-ವುದು ನಿರಂಜನಾದಿತ್ಯನಾಗಿ ನೀವು!!!

ಕಾದು, ಕಾದು ಕಪ್ಪಾಗಾಯಿತಯ್ಯಾ!

ದುಡಿಮೆಗಿದೇ ಫಲವೇನಯ್ಯಾ?
ಕಾಯ ಹೇಗಿದ್ದರೆನಗೇನಯ್ಯಾ?
ದುರ್ವ್ಯಾಪಾರ ನನ್ನಲ್ಲಿಲ್ಲವಯ್ಯಾ!
ರುಣೆ ನನ್ನ ಮೇಲಿರಲಯ್ಯಾ! (ಅ)
-ಪ್ಪನಂತಾಗದಿರಬಾರದಯ್ಯಾ!
ಗಾದೆ ಸುಳ್ಳಾಗದಿರಬೇಕಯ್ಯಾ! (ಆ)
-ಯಿತೆಲ್ಲಾ ನಿನ್ನಿಚ್ಛೆಯಂತೀಗಯ್ಯಾ!
ಪ್ಪಿದರೆ ಕ್ಷಮಿಸಿ ಬಿಡಯ್ಯಾ! (ಅ)
-ಯ್ಯಾ ನಿರಂಜನಾದಿತ್ಯ ನೀನಯ್ಯಾ!!!

ದುರ್ಬುದ್ಧಿಗಳನ್ನೆಲ್ಲಾ ಬಿಡಿಸೋ! (ಪೆ)

-ರ್ಬುಲಿ ಕಾಮನನ್ನು ಸಂಹರಿಸೋ! (ಸಿ)
-ದ್ಧಿ, ರಿದ್ಧಿಗಳಾಸೆ ಪೋಗೊಳಿಸೋ! (ಸಂ)
-ಗ ಸಜ್ಜನರದ್ದೇ ಒದಗಿಸೋ! (ಬಾ)
-ಳ ಸಾರ್ಥಕಗೊಳಿಸಿ ಹರಸೋ!
ನೆನಪು ಸದಾ ನಿನ್ನದಿರಿಸೋ! (ಚೆ)
-ಲ್ಲಾಟ ಮನಸ್ಸಿನದ್ದು ನಿಲ್ಲಸೋ! (ಕಂ)
-ಬಿ ಕಿತ್ತುಹೋಗ್ವ ಮುನ್ನ ಬಾರಿಸೋ! (ಹಾ)
-ಡಿ ನಿನ್ನ ಸೇರ್ವಂತನುಗ್ರಹಿಸೋ! (ಲೇ)
-ಸೋ, ನಿರಂಜನಾದಿತ್ಯಾಂಘ್ರಿ ಮೂಸೋ!!!

ಗೌರಿ ಪೂಜೆ ಮಾಡಿ ಗುರಿ ಸೇರ್ಬೇಕಮ್ಮಾ! (ಅ)

-ರಿಷಡ್ವರ್ಗವನ್ನು ಜಯಿಸಬೇಕಮ್ಮಾ!
ಪೂರ್ವಜರ ನೆನಸಿಕೊಳ್ಳಬೇಕಮ್ಮಾ! (ಸಂ)
-ಜೆ, ಮುಂಜಾನೆ ಸಾಧನೆ ಮಾಡಬೇಕಮ್ಮಾ!
ಮಾಯಾಜಾಲ ಹರಿದೊಗೆಯಬೇಕಮ್ಮಾ! (ಮು)
-ಡಿಯಬೇಕು ಪಾದ ಪ್ರಸಾದವನ್ನಮ್ಮಾ!
ಗುರಿವಿನಿಂದಧಿಕ ದೇವರಿಲ್ಲಮ್ಮಾ! (ಅ)
-ರಿತಿದನು ಸೇವಾ ನಿರತಳಾಗಮ್ಮಾ!
ಸೇರಬಾರದು ದುರ್ಜನ ಸಂಗಮ್ಮಾ! (ಇ)
-ರ್ಬೇಕು ತೃಪ್ತಿ ದೇವರಿತ್ತದ್ದರಲ್ಲಮ್ಮಾ!
ರಣತ್ರಯದ ಶುದ್ಧಿಯಾಗ್ಬೇಕಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಾನಂದ ಶಿವಮ್ಮಾ!!!

ಶಿವ ನಿನ್ನ ಪೂಜೆಗಾವ ಫಲ?

ಸ್ತು ವಾಹನವೆಲ್ಲಾ ವಿಷದ ಫಲ!
ನಿತ್ಯಾತ್ಮಜ್ಞಾನ ಮಾತ್ರ ಅಮೃತ ಫಲ! (ನಿ)
-ನ್ನ ಭಕ್ತಗೆ ನೀಡಬೇಕು ನೀನೀ ಫಲ!
ನಿನಗಪಕೀರ್ತಿ ಬಚ್ಚಿಟ್ಟರೀ ಫಲ! (ಸ)
-ತ್ಯಕ್ಕಪಚಾರವಾದರೇಕಂಥಾ ಫಲ?
ಪೂಜ್ಯನಾಗಿ ವ್ಯಾಜ್ಯ ಹೂಡಿದ್ರೇನು ಫಲ? (ಪ್ರ)
-ಜೆಗಳನುಭವಿಸುವರ್ಕರ್ಮ ಫಲ!
ಗಾಳಿ ಬಡಿತದಿಂದ್ಬಿತ್ತವರ ಫಲ!
ರ ಗುರು ಸೇವೆಗಾಗ್ಬಾರದ್ವಿಫಲ!
ಲಿಸಲೆನಗೀಗಾ ಸಾಯುಜ್ಯ ಫಲ! (ಫ)
-ಲ ನಿರಂಜನಾದಿತ್ಯಾನಂದ ಫಲ!!!

ಗಂಟು ಮುಳುಗಿಸುವವಳು ಗಂಗಮ್ಮಾ! (ನೆಂ)

-ಟುತನವಿವಳಿಗೆ ಶಿವನಲ್ಲಮ್ಮಾ!
ಮುನಿ, ಋಷಿಗಳಿಗಿವಳಾಶ್ರಯಮ್ಮಾ! (ಆ)
-ಳುವಳಿವಳು ಶಿವಗಣಗಳಮ್ಮಾ!
ಗಿರಿಜೆಗಿವಳೋರ್ವ ಸವತಿಯಮ್ಮಾ!
ಸುದರ್ಶನಧಾರಿವಳ ಜನಕಮ್ಮಾ!
ರಗುರುವಿಗೆ ಸ್ನಾನವಳಲ್ಲಮ್ಮಾ!
ಸ್ತ್ರಾದಿಗಳಿವಳಿಂದ ಸ್ವಚ್ಛವಮ್ಮಾ! (ಕೀ)
-ಳು, ಮೇಲೆಂಬುದಿವಳಲ್ಲೇನೇನಿಲ್ಲಮ್ಮಾ!
ಗಂಭೀರ ಸ್ವಭಾವದವಳಿವಳಮ್ಮಾ! (ಯೋ)
-ಗ, ಭೋಗ, ತ್ಯಾಗಕ್ಕಿವಳಿರಬೇಕಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯನಿಂದುದ್ಧಾರಮ್ಮಾ!!!

ಕಾಮ್ಯಾರ್ಥಿಗಳಿಗೆಷ್ಟು ಕೊಟ್ರೇನು? (ಭೂ)

-ಮ್ಯಾಕಾಶ ಸುತ್ತುವುದು ಬಿಟ್ಟ್ರೇನು? (ಆ)
-ರ್ಥಿಕ ತೃಪ್ತಿ ಎಂದಾದ್ರೂ ಪಟ್ಟ್ರೇನು? (ತ್ಯಾ)
-ಗದಿಂದ ಯಾರಾದ್ರೂ ಕೆಟ್ಟ್ರೇನು? (ಊ)
-ಳಿಗಕ್ಕವರ್ಯಾತ್ರೆ ಹೊರಟ್ರೇನು? (ಹ)
-ಗೆಗಳಿಗಾದ್ರೂ ಕಷ್ಟ ಕೊಟ್ರೇನು? (ಅ)
-ಷ್ಟು, ಇಷ್ಟು ಬೇಕೆಂದೆಂದಾದ್ರಟ್ಟ್ರೇನು?
ಕೊಟ್ಟುದ ಸಿಟ್ಟಿಂದ ಸುಟ್ಟಟ್ಟ್ರೇನು? (ಕೊ)
-ಟ್ಟ್ರೇನ್ಬಿಟ್ಟ್ರೇನಾನಂದವಾಗಿಲ್ವೇನು? (ಸೂ)
-ನು ನಿರಂಜನಾದಿತ್ಯಾಗಾಗ್ನೀನು!!!

ಮತ್ಸರವಿಲ್ಲದುತ್ಸಾಹಿ ಯಾರಪ್ಪಾ? (ವ)

-ತ್ಸ ಸದ್ಗುರುದೇವಗಾದವವಪ್ಪಾ!
ಘುಪತಿ ರಾಘವನವನಪ್ಪಾ!
ವಿಧಿಯಾಜ್ಞೆಗೆ ದುರಾಡದವ್ನಪ್ಪಾ! (ಕ)
-ಲ್ಲ ಮೆಟ್ಟಿ ಕುಲಕೆ ತಂದವನಪ್ಪಾ!
ದುಷ್ಟ ರಾಕ್ಷಸರ ಕೊಂದವನಪ್ಪಾ! (ತ)
-ತ್ಸಾಮರ್ಥ



ಮರ್ತ



ರಿನ್ಯಾರಿಗುಂಟಪ್ಪಾ?
ಹಿತೈಷಿ ಸಕಲರಿಗವನಪ್ಪಾ!
ಯಾಜಮಾನ್ಯವನದನುಕೂಲಪ್ಪಾ!
ತಿಪತಿಗವ ದಾಸನಲ್ಲಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯಾ ನೀನವ್ನಪ್ಪಾ!!!

ಸತ್ಯಸಂದನಾಗಿರುವೆ ನೀನಪ್ಪಾ!

ತ್ಯಜಿಸಿರುವೆ ವ್ಯಾಮೋಹವನ್ನಪ್ಪಾ!
ಸಂತೋಷಿಯಾಗಿರುವೆ ಸತತಪ್ಪಾ!
ರ್ಮ, ಕರ್ಮ ನಿನ್ನದಾಗಿಹುದಪ್ಪಾ!
ನಾಮಜಪ ಸದಾ ಸಾಗಿರ್ಪುದಪ್ಪಾ!
ಗಿಡ, ಬಳ್ಳಿಗೂ ನಿನ್ನ ಸೇವೆಯಪ್ಪಾ!
ರುಕ್ಮಿಣೀಶನೇ ನೀನಾಗಿಹೆಯಪ್ಪಾ!
ವೆಗ್ಗಳರ್ಗೆಲ್ಲಾ ಅಗ್ಗಳ ನೀನಪ್ಪಾ!
ನೀನಾಡುವಾಟ ನಿನಗೇ ಗೊತ್ತಪ್ಪಾ!
ಗುಮೊಗದರಸ ಲೋಕಕ್ಕಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯನೇ ನೀನಪ್ಪಾ!!!

ಯಾವ ಲಾಭಕ್ಕಾಗಿ ನಿನಗೀ ಜಂಭ?

ಸ್ತ್ರಾಲಂಕಾರವೇಕೆಂಬ ಹೇರಂಬ!
ಲಾವಣ್ಯಪೂರ್ಣ ಗುರುದತ್ತನೆಂಬ!
ಕ್ತಿಯಿಂದಾಗ್ವುದು ತದ್ರೂಪವೆಂಬ! (ಠ)
-ಕ್ಕಾಚಾರಕ್ಕಲ್ಲ ಧರ್ಮ ಕೈ ಕಂಬೆಂಬ!
(ಯೋ)ಗಿಯೇ ತಾನೆಂದರಿತಿರ ಬೇಕೆಂಬ!
ನಿತ್ಯ ತೃಪ್ತ ತಾನಾಗಿರುವನೆಂಬ!
ಗ, ನಾಣ್ಯ ಕಳ್ಳರ ಪಾಲಿಗೆಂಬ!
ಗೀಳು ಇವುಗಳ್ದಿರಬಾರದೆಂಬ!
ಜಂಗುಳಿಯಲ್ಲಿದ್ದರಶಾಂತಿಯೆಂಬ!
ಯ ನಿರಂಜನಾದಿತ್ಯಗಿಲ್ಲೆಂಬ!!!

ಹಚ್ಚಿಸಿಕೊಳ್ಳಬೇಡೀ ಹುಚ್ಚು! (ಕ)

-ಚ್ಚಿ ಸಾಯ್ಸಿಬಿಡುವುದೀ ಹುಚ್ಚು!
ಸಿಹಿ ಕಹಿ ಮಾಳ್ಪುದೀ ಹುಚ್ಚು!
ಕೊನೆಗಾಣಿಸಬೇಕೀ ಹುಚ್ಚು! (ಉ)
-ಳ್ಳ ಮಾನ ಕಳೆವುದೀ ಹುಚ್ಚು!
ಬೇಡವೆಂದ್ರೂ ಕಾಡ್ವುದೀ ಹುಚ್ಚು! (ಮಾ)
-ಡೀಗ್ಭಜನೆ! ಓಡ್ವುದೀ ಹುಚ್ಚು!
ಹುಸಿ ವ್ಯಾಮೋಹವೇ ಈ ಹುಚ್ಚು! (ಮೆ)
-ಚ್ಚು, ನಿರಂಜನಾದಿತ್ಯನಚ್ಚು!!!

ಹೋಗಿ ಬರುವೆನೆಂದೇಕಂದಿಲ್ಲ? (ಭೋ)

-ಗಿ ಜೀವನಿಗದೆಲ್ಲಾ ಬೇಕಿಲ್ಲ!
ಸವನಂತವ್ನಿನ್ನೂ ಆಗಿಲ್ಲ! (ಗು)
-ರು ಮಹಿಮೆಯಾತ ತಿಳಿದಿಲ್ಲ!
ವೆಸನ ಪಡ್ವಾಗರಿವನೆಲ್ಲ!
ನೆಂಟರಿಷ್ಟರಾಗ ಬರ್ವುದಿಲ್ಲ!
ದೇವರೇ ಗತಿಯೆಂಬರಾಗೆಲ್ಲ!
ಕಂಡ ಕಲ್ಲುಗಳ್ಪೂಜಿಪರೆಲ್ಲ!
ದಿವ್ಯ ನಾಮಜಪದ್ಮುಂದದಲ್ಲ! (ಬ)
-ಲ್ಲ ನಿರಂಜನಾದಿತ್ಯಜ್ಞಾನ್ಯಲ್ಲ!!!

ಅಹಂಕಾರದಿಂದಲಂಕಾರಮ್ಮಾ!

ಹಂಬಲ ಗುರುವಿನದ್ದಿಲ್ಲಮ್ಮಾ!
ಕಾಮ್ಯ ಜೀವನದ ಫಲದಮ್ಮಾ!
ಕ್ತ, ಮಾಂಸದ ಗೊಂಬೆಯಿದಮ್ಮಾ!
ದಿಂಡಾಗಿ ಬೆಳೆಸಿದ್ರೇನ್ಸುಖಮ್ಮಾ?
ತ್ತಗೀತೆಯನ್ನೊಮ್ಮೆ ಓದಮ್ಮಾ!
ಲಂಕೇಶನ ಗತಿಯೇನಾಯ್ತಮ್ಮಾ?
ಕಾರುಣ್ಯಮೂರ್ತಿ ಸೀತಾರಾಮಮ್ಮಾ!
ಮಣನವನಮರನಮ್ಮಾ (ಅ)
-ಮ್ಮಾ! ನಿರಂಜನಾದಿತ್ಯಾರಾಮಮ್ಮಾ!!!

ಎಷ್ಟು ಹೇಳಿದರೇನು ನಿನಗೆ ಮೂರ್ಖಾ? (ಇ)

-ಷ್ಟು ಓದಿದ್ರೂನೂ ನೀನು ಕಾಮಾಂಧ ಮೂರ್ಖಾ!
ಹೇಯವಾಗಿಹುದು ನಿನ್ನೀ ಬಾಳು ಮೂರ್ಖಾ! (ಉ)
-ಳಿಗಾಲವಿಲ್ಲ ನಿನಗಿದ್ರಿಂದ ಮೂರ್ಖಾ!
ಯೆ ದುರುಪಯೋಗಾಗದಿರ್ಲಿ ಮೂರ್ಖಾ!
ರೇಗಾಡಿ, ಕೂಗಾಡಿ ಹಾಳಾಗ್ಬೇಡ ಮೂರ್ಖಾ! (ಮ)
-ನುಜನಾಗಿ ಗುರಿ ಸೇರಬೇಕು ಮೂರ್ಖಾ!
ನಿನ್ನ ನಿಜರೂಪವೇ ಆಗುರಿ ಮೂರ್ಖಾ!
ಶ್ವರ ಮಾಯೆಗೊಳಗಾಗ್ಬೇಡ ಮೂರ್ಖಾ! (ಬ)
-ಗೆ ಬಗೆಯಾಸೆ ಅವಳ ಬಲೆ ಮೂರ್ಖಾ!
ಮೂರುಲೋಕದ ಸುಖವೂ ಮಾಯೆ ಮೂರ್ಖಾ! (ಮೂ)
ರ್ಖಾ! ನಿರಂಜನಾದಿತ್ಯಾನಂದಾ ಬಾಲಾರ್ಕ!!!

ಕಾಮನ ಒದ್ದಾನು ಯಮನ ಗೆದ್ದಾನು!

ಹಾದೇವ ಸುತ ಕುಮಾರಾಗಿದ್ದಾನು!
ರಹರಿ ಸ್ವರೂಪ ತಾನಾಗಿದ್ದಾನು!
ಲ್ಲೆ ಸಂಸಾರ ಬಂಧನವೆಂದಿದ್ದಾನು! (ಕ)
-ದ್ದಾರೊಡವೆಯನ್ನೂ ಜೀವಿಸದಿದ್ದಾನು!
ನುಡಿದಂತೆ ನಡೆವವನಾಗಿದ್ದಾನು!
ಮ, ನಿಯಮದಿಂದ ಶುದ್ಧಾಗಿದ್ದಾನು!
ತ ಭೇದವಿಲ್ಲದಾತ್ಮನಾಗಿದ್ದಾನು!
ರಕ, ಸ್ವರ್ಗದ ಭ್ರಾಂತಿಲ್ಲದಿದ್ದಾನು!
ಗೆಳೆಯನೀರೇಳು ಲೋಕಕ್ಕಾಗಿದ್ದಾನು! (ಹೆ)
-ದ್ದಾರಿ ನಾಮಸಂಕೀರ್ತನೆಯೆಂದಿದ್ದಾನು!
ನುತಿಪಾತ್ರ ನಿರಂಜನಾದಿತ್ಯಾತ್ಮಾನು!!!

ಸೇವೆ ಮಾಡು, ಮೃತ್ಯುಂಜಯನಾಗ್ಯಾಡು! (ಸ)

-ವೆಯಲ್ಸಂಚಿತ ಅಚ್ಯುತನಾಗ್ಯೋಡಾಡು!
ಮಾಯೆಯ ಜೈಸ್ಯಪ್ರಮೇಯನೊಡಗೂಡು! (ಕಾ)
-ಡು, ಮೇಡಿಗೊಡದಿಲ್ಲೇ ತಪಸ್ಸು ಮಾಡು!
ಮೃದು ಮಧುರ ಮಾತನ್ನಭ್ಯಾಸ ಮಾಡು! (ಅ)
-ತ್ಯುಂಬ ಚಾಳಿಯನ್ನಿಂದೇ ತೆರವು ಮಾಡು!
ರಾಜನ್ಮವಾರಿಗೆಂದರಿತು ನೋಡು!
ಕ್ಷ, ರಾಕ್ಷಸರರಿಯರಿದ್ರ ಜಾಡು!
ನಾರದನಂತೆ ಶ್ರೀ ಹರಿಯ ಕೊಂಡಾಡು! (ಯೋ)
-ಗಾಯೋಗ್ಯ ವಿಚಾರವಿಲ್ಲದ್ರಿಂದೀ ಪಾಡು! (ಪಾ)
ಡು, ನಿರಂಜನಾದಿತ್ಯ ನೀನಾಗಿ ನೋಡು!!!

ಮಾಯಾಜಾಲವೆಂತಿಹುದಪ್ಪಾ?

ಯಾತ್ರೆಗಳೆಷ್ಟೋ ಆದುವಪ್ಪಾ!
ಜಾಗ್ರತ್ತಿನಲ್ಲಿದು ಸ್ವಪ್ನಪ್ಪಾ!
ಕ್ಷಾಂತರ ಜನ್ಮವಾಯ್ತಪ್ಪಾ! (ಹಾ)
-ವೆಂದು ಹಗ್ಗಕ್ಕಂಜಿದ್ದಾಯ್ತಪ್ಪಾ!
ತಿಳ್ದೂ ಹಳ್ಳಕ್ಕುರುಳ್ಯಾಯ್ತಪ್ಪಾ!
ಹುಚ್ಚು ಹೆಚ್ಚಾಗಿ ಪೆಚ್ಚಾಯ್ತಪ್ಪಾ!
ಮೆ, ಶಿಮೆಯಿದ್ಕೌಷಧ್ಯಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯಾಗಪ್ಪಾ!!!

ಕೊಚ್ಬೇಕ್ಮುಚ್ಮರೆ ಮೋಸವಮ್ಮಾ! (ಹೆ)

-ಚ್ಬೇಕುಚ್ಙಗುಣ ಸಂಪತ್ತಮ್ಮಾ!
(ಏ)ಕ್ಮುಗ್ದಿಲ್ಲ ಜನ್ಮ ಗೊತ್ತೇನಮ್ಮಾ? (ನಾ)
-ಚ್ಮನೆ ಹುಚ್ಚು ಬಿಟ್ಟಿಲ್ಲಮ್ಮಾ! (ಬೆ)
-ರೆಯ್ಬೇಕ್ಗುರು ಪಾದದಲ್ಲಮ್ಮಾ!
ಮೋಕ್ಷವಿದೆಂದರಿಯ್ಬೇಕಮ್ಮಾ!
ನ್ಯಾಸದಕ್ಕೆಂದರಿಯಮ್ಮಾ!
ರಗುರುಕೃಪಾಗತ್ಯವಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯಾಗಮ್ಮಾ!!!

ಹುಟ್ಟುವುದೇಕೆ ಸಾಯುವುದೇಕೆ? (ಸು)

-ಟ್ಟು ಹಾಕಿದ್ರೂ ಕಾಮ ಸಾಯದ್ದಕ್ಕೆ! (ಸಾ)
-ವು ದೇಹಕ್ಕಲ್ಲದಿನ್ಯಾವುದಕ್ಕೆ?
ದೇವರೇ ನೀನು! ಭಯವೇತಕ್ಕೆ?
ಕೆಲಸ ಕಾರ್ಯ ಕಾಯ ಸುಖಕ್ಕೆ!
ಸಾಯುಜ್ಯದಿಂದ ಮುಕ್ತಿ ಜೀವಕ್ಕೆ!
ಯುಕ್ಯಾಯುಕ್ತಜ್ಞಾನ ಬೇಕಿದಕ್ಕೆ! (ಕಿ)
-ವುಡಾಗ್ಬೇಕು ಮಾಯಾ ವಚನಕ್ಕೆ!
ದೇಹ ಮೋಹದಡ್ಡ್ಯಾತ್ಮಸುಖಕ್ಕೆ! (ನೌ)
-ಕೆ, ನಿರಂಜನಾದಿತ್ಯನೆಲ್ಲಕ್ಕೆ!!!

ಜನಿವಾರ ಹಾಕಿಕೊಂಡ್ರಾಯ್ತೇನು?

ನಿತ್ಯಾನಿತ್ಯ ವಿವೇಕ ಬಂತ್ತೇನು?
ವಾದ, ಭೇದ ನಿರ್ನಾಮವಾಯ್ತೇನು?
(ಪ)ರಧನದಾಸೆ ಬಿಟ್ಟು ಹೋಯ್ತೇನು?
ಹಾದರ ಬುದ್ಧಿ ಹಾರಿ ಹೋಯ್ತೇನು?
ಕಿವಿ, ಬಾಯಿ ಮುಚ್ಚಿಕೊಂಡಾಯ್ತೇನು?
ಕೊಂಗರ ಸಂಗ ತ್ಯಜಿಸಿದ್ಯೇನು? (ಹೆಂ)
-ಡ್ರಾಸೆ, ಮಕ್ಳಾಸೆ ಕಮ್ಮಿ ಆಯ್ತೇನು? (ಸಾ)
-ಯ್ತೇನೆಂಬ ಭಯ ಲಯವಾಯ್ತೇನು? (ನೀ)
-ನು ನಿರಂಜನಾದಿತ್ಯನಾದ್ಯೇನು???

ಯಾರಮೇಲಾರಿಗೇನಧಿಕಾರ? (ಕ)

-ರ ಚರಣಕ್ಕೆ ಕಷ್ಟ ಅಪಾರ!
ಮೇಲ್ವಿಚಾರಿ ಮನಕ್ಕಹಂಕಾರ!
ಲಾಭದಕ್ಕಿದರಿಂದ ನಕಾರ! (ಮೈ)
-ರಿಗಳಿಂದಾಗಾಗದಕ್ಪ್ರಹಾರ! (ಯೋ)
-ಗೇಶ್ವರನಿಂದಾಗ್ಬೇಕುಪಕಾರ! (ಅ)
-ನವರತದ್ಕಿರ್ಬೇಕ್ಸದಾಚಾರ!
ಧಿಗ್ಭ್ರಾಂತಿಯಿಂದೋಡ್ಬೇಕ್ದುರಾಚಾರ!
ಕಾಲಹರನಿಗಾಗ ಜೈಕಾರ! (ಮಾ)
-ರ ನಿರಂಜನಾದಿತ್ಯಗೆ ಚಾರ!!!

ನಿನ್ನನ್ನು ನೀನೇ ದೇವರು ಮಾಡಿಕೊಳ್ಳಬೇಕು! (ಅ)

-ನ್ನ ಹಾಕಿದವಗನ್ಯಾಯ ಮಾಡಿದಿರಬೇಕು! (ಹೊ)
-ನ್ನು, ಹೆಣ್ಣು, ಮಣ್ಣಿನ ಆಸೆ ಬಿಟ್ಟುಬಿಡಬೇಕು!
ನೀತಿಬಾಹಿರನಾಗಿ ಜೀವಿಸದಿರಬೇಕು!
ನೇಮ, ನಿಷ್ಠೆಯಿಂದಾಸ್ತಿಕನಾಗಿ ಬಾಳಬೇಕು!
ದೇವ್ರಹೆಸ್ರಲ್ಲಿ ಮಂಕ್ಬೂದ್ಯೆರಚದಿರಬೇಕು!
ರ ಗುರುವೇ ಸರ್ವಸ್ವವೆಂದರಿಯಬೇಕು!
ರುಜುಮಾರ್ಗದಲ್ಲೇ ಸದಾ ಲಕ್ಷ್ಯವಿರಬೇಕು!
ಮಾಳ್ಪಾಚಾರದಲ್ಲಿ ಶ್ರದ್ಧಾ, ಭಕ್ತಿಯಿರಬೇಕು! (ಬ)
-ಡಿವಾರದ ಮಾತುಗಳನ್ನಾಡದಿರಬೇಕು!
ಕೊಳೆ, ಒಳ ಹೊರಗಿನದ್ದು ತೊಳೆಯಬೇಕು! (ಕ)
-ಳ್ಳ, ಸುಳ್ಳರ ಸಹವಾಸ ಮಾಡಿದಿರಬೇಕು!
ಬೇಸರಪಡದೇ ಪ್ರಾರಬ್ಧ ಭೋಗಿಸಬೇಕು! (ಬೇ)
-ಕು, ನಿರಂಜನಾದಿತ್ಯಾನಂದಕ್ಕಿದೆಲ್ಲಾ ಬೇಕು!!!

ಮುತ್ತು ಕೊಟ್ಟು, ಚಿತ್ತ ಕೆಟ್ಟು, ಕತ್ತು ಕುಯ್ಯ ಬೇಡ! (ಹೊ)

-ತ್ತು, ಹೆತ್ತವರಿಗುತ್ತಮ ಮಗನಾಗ್ದಿರೇಬೇಡ!
ಕೊಲಬೇಡ, ಕಳಬೇಡೆಂಬ ತತ್ವ ಬಿಡ್ಬೇಡ! (ಮು)
-ಟ್ಟು, ಮಡಿಯೆಂದಟ್ಟಹಾಸದಿಂದ್ಹೊಟ್ಟೆ ಹೊರ್ಬೇಡ!
ಚಿತ್ತ ಶುದ್ಧಿ ಮಾಡಿ ಗುರಿ ಮುಟ್ಟದಿರಬೇಡ! (ನೆ)
-ತ್ತರು ಮಾಂಸದ ಗೊಂಬೆಯನ್ನು ಮೋಹಿಸಬೇಡ!
ಕೆರ ಮೆಟ್ಟಿ ಸದ್ಗುರುವಿನೆಡೆಗೋಡಬೇಡ! (ಹು)
-ಟ್ಟು, ಸಾವಿನ ಗುಟ್ಟವ್ನಿಂದರಿಯದಿರಬೇಡ!
ಪಟತನದಿಂದವನೊಡನಾಡ ಬೇಡ!
(ಹೊ)ತ್ತು, ಕಾದು ದರ್ಶನ ಮಾಡಿ ಹೋಗದಿರಬೇಡ!
ಕೊಡುವ ಕರ್ತನವ್ನೆಂಬುದ ಮರೆಯಬೇಡ! (ಅ)
-ಯ್ಯ, ಅಮ್ಮಾ ಎಂದ್ವಿನಯದಿಂದಾಡದಿರಬೇಡ!
ಬೇರೆ ದಿಕ್ಕೆನಗಿಲ್ಲೆಂದ್ಯರಣಾಗ್ದಿರಬೇಡ! (ಗಂ)
-ಡ ನಿರಂಜನಾದಿತ್ಯನೆಂದರಪಾರ್ಥ ಬೇಡ!!!

ಮೆರೆಯರೋ ಭಕ್ತರ್ಗುರುವ ಮರೆಯರೋ! (ತೆ)

-ರೆಮರೆಯ ಕಾಯಿಯಂತವರಿರುವರೋ!
ಮ, ನಿಯಮದಿಂದವರು ಸಂತೃಪ್ತರೋ!
ರೋಮ ರೋಮದಲ್ನಾಮಾಮೃತ ತುಂಬಿಹರೋ!
ಯ, ಭಕ್ತಿಯಲ್ಲವರೆಲ್ಲರ್ಗಾದರ್ಶರೋ! (ಶ)
-ಕ್ತರಾದರೂ ನಯ ವಿನಯಸಂಪನ್ನರೋ! (ದು)
-ರ್ಗುಣದೂರರಾದ ಮಹನೀಯರವರೋ! (ಮ)
-ರು ಮಾತು ಗುರುದೇವನ ಮಾತಿಗಾಡರೋ! (ಅ)
-ವರಿವರ ಮಾತಾಡಿ ಕಾಲ ಕಳೆಯರೋ!
ಡದಿ, ಮಕ್ಕಳ ಚಿಂತೆಯಿಲ್ಲದಿಹರೋ! (ಹೊ)
-ರೆ ಹೊತ್ತಿರಲು ಹರಿ ಭಯವೇನೆಂಬರೋ!
ಮನ ಭಯವಿಲ್ಲದೆ ಅವರಿಹರೋ! (ಬಾ)
-ರೋ ನಿರಂಜನಾದಿತ್ಯಾತ್ಮನನ್ನಿಂದೇ ಸೇರೋ!!!

ನೀನೇಕೆ ಹೀಗಾದ್ಯೋ? ನಾ ಕಾಣೆ!

ನೇರದಾರಿ ನಿನ್ನಲ್ಲಿ ಕಾಣೆ!
ಕೆಟ್ಟಡಿಗಡ್ವುದೇಕೋ ಕಾಣೆ!
ಹೀನವೃತ್ತಿಯದೇಕೋ ಕಾಣೆ!
ಗಾಟಿತನ ನಿನ್ಗೇಕೋ ಕಾಣೆ! (ಉ)
-ದ್ಯೋಗ ಸದ್ಗುರುಸೇವೆ ಕಾಣೆ!
ನಾಮ ಜಪ ಬಿಡ್ಗಾರ್ದು ಕಾಣೆ!
ಕಾಮನನ್ನು ಜೈಸ್ಬೇಕು ಕಾಣೆ! (ಎ)
-ಣೆ ನಿರಂಜನಾದಿತ್ಯ ಕಾಣೆ!!!

ಮಕ್ಕಳು, ಮರಿಗಳೂಟಕ್ಕಭಾವ ತರಬೇಡಿ! (ಸೊ)

-ಕ್ಕಬೇಡಿ ದವಸ ಧ್ಯಾನಗಳ ಶೇಖರ ಮಾಡಿ! (ಕೀ)
-ಳು, ಮೇಲೆಂಬ ಭೇದ ಬಿಟ್ಟೆಲ್ಲರಿಗೆ ಧಾನ್ಯ ನೀಡಿ!
ನೆ, ಮಠಗಳ ಲೂಟಗಾಸ್ಪದ ಕೊಡಬೇಡಿ! (ಪ)
-ರಿಸ್ಥಿತಿ ಕೆಡುವತನಕ ಕುಳಿತಿರಬೇಡಿ! (ಭ)
-ಗವತ್ಸ್ವರೂಪವೆಲ್ಲರೆಂದರಿಯದಿರಬೇಡಿ! (ಕಾ)
-ಳೂರವರಿಗೆ ನ್ಯಾಯಬೆಲೆಗೆ ಕೊಡದಿರ್ಬೇಡಿ! (ಕಾ)
-ಟನ್ಯರಿಗೆ ಕೊಟ್ಟು ನೀವೂ ಕೆಟ್ಟು ಸುಟ್ಟುಹೋಗ್ಬೇಡಿ! (ಅ)
-ಕ್ಕಪಕ್ಕದೊಗ್ಗಟ್ಟಿಲ್ಲದೆ ಬಿಕ್ಕಟ್ಟಿಗೀಡಾಗ್ಬೇಡಿ!
ಭಾಷೆಕೊಟ್ಟು, ಮೋಸಮಾಡಿ ತಮಾಷೆ ನೋಡಬೇಡಿ!
ರ ಗುರುವಿನುಪದೇಶ ಪಾಲಿಸದಿರ್ಬೇಡಿ!
ನುವಿನಾಸೆಯಿಂದ ತತ್ವಕ್ಕೆ ಧಕ್ಕೆ ತರ್ಬೇಡಿ! (ಪ)
-ರದ್ರವ್ಯಾಪಹಾರಕ್ಯೆಂದೂ ಮನಸ್ಸು ಮಾಡಬೇಡಿ!
ಬೇಟೆಯಾಡಿ ಸಾಧುಪ್ರಾಣಿಗಳನ್ನು ಕೊಲ್ಲಬೇಡಿ! (ನಾ)
-ಡಿಗೊಡೆಯ ನಿರಂಜನಾದಿತ್ಯನೆಂದು ಕೂಂಡಾಡಿ!!!

ಏತಕ್ಕಾಗಿ ಬದುಕಿರಬೇಕು?

ತ್ವಾನುಭವಕ್ಕಾಗಿರಬೇಕು! (ವಾ)
-ಕ್ಕಾಯ, ಮನವ ಗೆದ್ದಿರಬೇಕು! (ಯೋ)
ಗಿಪುಂಗವ ನೀನಾಗಿರಬೇಕು!
ಯಕೆಗಳಿಲ್ಲದಿರಬೇಕು!
ದುರಾಚಾರಿಯಾಗದಿರಬೇಕು!
ಕಿರುಕುಳ ಕೊಡದಿರಬೇಕು! (ನ)
-ರ ನಾರಾಯಣ

ನಾಗಿರಬೇಕು!
ಬೇಸರಿಸದೆ ಕಾದಿರಬೇಕು! (ಟಾ)
-ಕು ನಿರಂಜನಾದಿತ್ಯಾಗಿರ್ಬೇಕು!!!

ನೀನೊಬ್ಬಾದರ್ಶಾಧ್ಯಾಪಕನಯ್ಯಾ!

ನೊಸಲ್ಗಣ್ಣನಿಗಾಪ್ತ ನೀನಯ್ಯಾ! (ದ)
-ಬ್ಬಾಳಿಕೆಗೆ ವಿರೋಧಿ ನೀನಯ್ಯಾ!
ಯೆ ನಿನ್ನ ಹುಟ್ಟು ಗುಣವಯ್ಯಾ! (ಸ್ಪ)
-ರ್ಶಾಸ್ಪರ್ಶ ಭ್ರಾಂತಿ ನಿನಗಿಲ್ಲಯ್ಯಾ!
ಧ್ಯಾನ ನಿನಗೆ ರಾಮನದಯ್ಯಾ!
ರಮ ಭಕ್ತಾಂಜನೇಯಾಪ್ತಯ್ಯಾ!
ರ್ತವ್ಯನಿಷ್ಠನಾಗಿಹೆಯಯ್ಯಾ!
ಯ, ವಿನಯಾನ್ವಿತ ನೀನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯನೆನ್ನಯ್ಯಾ!!!

ಶುಭವಾಗುವುದೆಲ್ಲಕ್ಕೆ ಸುಬ್ಬಯ್ಯಾ!

ಜನೆ ನಿತ್ಯ ಮಾಡಬೇಕ್ಸುಬ್ಬಯ್ಯಾ!
ವಾಸನೆ ನಾಶವಾಗ ಬೇಕ್ಸುಬ್ಬಯ್ಯಾ!
ಗುರುಭಕ್ತಿ ಹೆಚ್ಚಾಗ್ಬೇಕ್ಸುಬ್ಬಯ್ಯಾ! (ಗೋ)
-ವುಗಳ ವಧೆ ನಿಲ್ಲಬೇಕ್ಸುಬ್ಬಯ್ಯಾ!
ದೆವ್ವಗಳ ಪೂಜೆ ಹೊಗ್ಬೇಕ್ಸುಬ್ಬಯ್ಯಾ! (ಬ)
-ಲ್ಲವರ ಮಾತು ಬೆಲ್ಲಾಗ್ಬೇಕ್ಸುಬ್ಬಯ್ಯಾ! (ಧ)
-ಕ್ಕೆ ಧರ್ಮಕ್ಕಾಗದಿರ ಬೇಕ್ಸುಬ್ಬಯ್ಯಾ!
ಜನರ ಸಂಗವಿರ್ಬೇಕ್ಸುಬ್ಬಯ್ಯಾ! (ಅ)
-ಬ್ಬರಾರ್ಭಟ ಗಬ್ಬೆನಬೇಕ್ಸುಬ್ಬಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾಗ್ಬೇಕ್ಸುಬ್ಬಯ್ಯಾ!!!

ಮಂದಾರಗಂಧ ಮಂದಿರದಲ್ಲಿ!

ದಾನವಾಂತಕನ ಪಾದದಲ್ಲಿ!
ಮಿಸುವ ಭಕ್ತಗಾನಂದಲ್ಲಿ!
ಗಂಗಾ, ಕಾವೇರಿ ಹರಿಯುವಲ್ಲಿ!
ರ್ಮಾಧರ್ಮದರಿವಿರುವಲ್ಲಿ!
ಮಂಗಳವೆಲ್ಲಕ್ಕಾಗಲೆಂಬಲ್ಲಿ!
ದಿನ, ರಾತ್ರಿ ತಪಸ್ಸಾಗುವಲ್ಲಿ!
ವಿ ತಾನವತರಿಸಿರ್ಪಲ್ಲಿ!
ತ್ತ ಭಕ್ತಿ ವ್ಯಾಪಿಸಿರುವಲ್ಲಿ! (ಎ)
-ಲ್ಲಿ? ನಿರಂಜನಾದಿತ್ಯನಿರ್ಪಲ್ಲಿ!!!

ಯಾಕಿಂಥಾ ಸೃಷ್ಟಿಯಾಯ್ತಪ್ಪಾ?

ಕಿಂಚತ್ತಾದ್ರೂ ತಿಳಿಸಪ್ಪಾ! (ವೃ)
-ಥಾ ಕಷ್ಟ ಕೊಡಬೇಡಪ್ಪಾ!
ಸೃಷ್ಟಿಯಲ್ಲಿರ್ಲನ್ಯೋನ್ಯಪ್ಪಾ! (ದೃ)
-ಷ್ಟಿದೋಷ ನಿವಾರಿಸಪ್ಪಾ!
ಯಾಕೀ ರಾಜ್ಯಭಾರವಪ್ಪಾ? (ಆ)
-ಯ್ತ ಶಾಂತಿ ದೇಶದಲ್ಲಪ್ಪಾ! (ಅ)
-ಪ್ಪಾ ನಿರಂಜನಾದಿತ್ಯಪ್ಪಾ!!!

ಯಾರೇನಾಟಾಡಿದ್ರೆ ನಿನಗೇನು?

ರೇಗಾಟ, ಕೂಗಾಟ ನೀನ್ಬಿಟ್ಯೇನು?
ನಾರುವ ದೇಹ ಮೋಹ ಹೊಯ್ತೇನು? (ಬೂ)
-ಟಾಟಿಕೆ ಸುಟ್ಟುಹಾಕಿದಿಯೇನು? (ಹಾ)
-ಡಿ ಹರಿನಾಮ ತೃಪ್ತಿಪಟ್ಯೇನು? (ತಿಂ)
-ದ್ರೆ ಮೃಷ್ಟಾನ್ನಭೋಜನ ಆಯ್ತೇನು?
ನಿತ್ಯಾನಂದದನುಭವವಾಯ್ತೇನು?
ಟ, ವಿಟರ ಕೂಟ ಬಿಟ್ಯೇನು? (ಭೋ)
-ಗೇಚ್ಛೆ ಬಿಟ್ಟು ಯೋಗೇಚ್ಛೆಯಾಯ್ತೇನು? (ನೀ)
-ನು ನಿರಂಜನಾದಿತ್ಯನಾದ್ಯೇನು???

ನಿನ್ನಲ್ಲೆಲ್ಲಾವಾಹನೆಯಾಗಲಿ! (ನಿ)

-ನ್ನ ನೀನರಿತಮೇಲಿದಾಗಲಿ! (ಎ)
-ಲ್ಲೆಲ್ಲೂ ನೀನೆಂಬರಿವುಂಟಾಗಲಿ! (ಚೆ)
-ಲ್ಲಾಟ ಮನಸ್ಸಿನದ್ದು ನಿಲ್ಲಲ್ಲಿ!
ವಾಸುದೇವ ಸದ್ಗುರುವಾಗಲಿ!
ಗಲಿರುಳು ಸೇವೆ ಸಾಗಲಿ!
ನೆಮ್ಮದಿಯಿದರಿಂದ ಬರಲಿ! (ಆ)
-ಯಾಸದ ಮಾತೇ ಕೇಳದಿರಲಿ!
ರ್ವ ಹೆಡೆಯನ್ನೆತ್ತದಿರಲಿ! (ಮೂ)
-ಲಿಕೆ ನಿರಂಜನಾದಿತ್ಯಾಗಲಿ!!!

ಕಚ್ಚೆ ಬಿಚ್ಚಿ ಹುಚ್ಚನಾಗಬೇಡ! (ಉ)

-ಚ್ಚೆ, ಹೇಲು ಗುಂಡಿಗೆ ಬೀಳಬೇಡ!
ಬಿಗಿ ತಪ್ಪಿ ಪತಿತನಾಗ್ಬೇಡ! (ನೆ)
-ಚ್ಚಿ ಮಾಯೆಯನ್ನು ಪೆಚ್ಚಾಗಬೇಡ!
ಹುಟ್ಟು, ಸಾವಿಗೆ ಕಟ್ಟು ಬೀಳ್ಬೇಡ! (ಸ)
-ಚ್ಚರಿತೆಯನ್ನೆಂದೂ ಬಿಡಬೇಡ!
ನಾಮ ಜಪ ಬಿಟ್ಟುಬಿಡಬೇಡ! (ಗ)
-ಗನ ಸದೃಶನಾಗದಿರ್ಬೇಡ!
ಬೇರೆ ದಾರಿ ಹಿಡಿದು ಕೆಡ್ಬೇಡ! (ಎ)
-ಡರು ನಿರಂಜನಾದಿತ್ಯ ಮಾಡ!!!

ಲೋಭಿ ನೀನಾಗಬಾರದಮ್ಮಾ!

ಭಿಕ್ಷೆ ರಕ್ಷಣೆಯೀಯ್ವುದಮ್ಮಾ!
ನೀಡದ ಕೈ ಪೆಣಗೈಯ್ಯಮ್ಮಾ!
ನಾಟಕಾಲಂಕಾರವೇಕಮ್ಮಾ!
ರ್ವ ಹೆಚ್ಚುವುದಿದ್ರಿಂದಮ್ಮಾ!
ಬಾಯ್ಕೈ ಶುದ್ಧವಾಗಬೇಕಮ್ಮಾ!
ಹಸ್ಯ ಗುರೂದೇಶಮ್ಮಾ!
ಯೆ ಧನಿಕಗಿರ್ಬೇಕಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾಗಮ್ಮಾ!!!

ಯಾರ್ಯಾರ ಸೇವೆಂದೆಂದಾಗಬೇಕೋ! (ಕಾ)

-ರ್ಯಾಚರಣೆಗೆಲ್ಲೆಲ್ಲೋಡಬೇಕೋ! (ವ)
-ರ ಗುರುಕೃಪೆಯೆಂತಾಗಬೇಕೋ!
ಸೇವೆ ಯಾವ ರೀತಿ ಮಾಡಬೇಕೋ!
ವೆಂಕಟೇಶನಂತೆಂತಾಗಬೇಕೋ! (ತಂ)
-ದೆಂಬವಗಿನ್ನೆಷ್ಟು ಹೇಳಬೇಕೋ!
ದಾರಿಯಿನ್ಯಾರು ತೋರಿಸಬೇಕೋ!
ರ್ವವನ್ನೆಂತು ಬಡಿಯಬೇಕೋ!
ಬೇಸರವೆಂದು ಕಳೆಯಬೇಕೋ! (ಯಾ)
-ಕೋ? ನಿರಂಜನಾದಿತ್ಯಾಡನೇಕೋ!!!

ಪರಮಾರ್ಥ ಮೌನ ಕಾಣಮ್ಮಾ! (ನ)

-ರ ನಾರಾಯಣನೆಂದರ್ಯಮ್ಮಾ!
ಮಾತು ಬೆಳೆಸಬಾರದಮ್ಮಾ! (ಸಾ)
-ರ್ಥಕವಾಗ್ಲಿ ನಿನ್ನ ಜನ್ಮಮ್ಮಾ!
ಮೌಢ್ಯವೆಲ್ಲಾ ಓಡಿ ಹೋಗ್ಲಮ್ಮಾ!
ಶ್ವರಕ್ಕಾಶಿಸ ಬೇಡಮ್ಮಾ!
ಕಾಲ ಕಳೆಯುತ್ತಿದೆ ಅಮ್ಮಾ! (ಗ)
-ಣಪತಿಯನ್ನು ನೀನಾಗಮ್ಮಾ! (ಬೊ)
-ಮ್ಮಾ ನಿರಂಜನಾದಿತ್ಯಾತ್ಮಮ್ಮಾ!!!

ವಡೆಗಾಸೆ ಪಡೆನಯ್ಯಾ! (ಬ)

-ಡೆಯನಾಸೆ ಬಿಡೆನಯ್ಯಾ!
ಗಾಡಿಗಾರನವನಯ್ಯಾ! (ಕಾ)
-ಸೆನಗೆ ಬೇಡೆಂಬನಯ್ಯಾ!
ಯಣ ಸಾಗ್ಲೆಂಬನಯ್ಯಾ! (ಕಾ)
-ಡೆ ನಿನ್ನ ನಾನೆಂಬನಯ್ಯಾ! (ಧ್ಯಾ)
-ನ ಮಾಡೆನ್ನನೆಂಬನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಯ್ಯಾ!!!

ಬಾಲ ಗಣಪತಿಯೆಂಬ ಭಟ್ಟ! (ನಿ)

-ಲಯಲದಲ್ಲಿಂದು ದರ್ಶನ ಕೊಟ್ಟ!
ರ್ವ ಬಿಟ್ಟು ರಚನೆ ಮುಂದಿಟ್ಟ!
(ಹ)ಣದಾಸೆ ನನಗೇನಿಲ್ಲೆಂದ್ಬಿಟ್ಟ!
ದ್ಮಪಾದಕ್ಕೆಲ್ಲಾ ಒಪ್ಪಿಸ್ಬಿಟ್ಟ! (ಯ)
-ತಿರಾಜ ನೀನೆಂದಾನಂದ ಪಟ್ಟ! (ಕಾ)
-ಯೆಂದಾಂತರಿಕವಾಗಿ ಹೇಳ್ಬಿಟ್ಟ!
ರುವೆನು ಕರೆದಾಗೆಂದ್ಬಿಟ್ಟ!
ಯ ಭಕ್ತಿ ಕರುಣಿಸೆಂದ್ಬಿಟ್ಟ! (ಸು)
-ಟ್ಟ ನಿರಂಜನಾದಿತ್ಯ ಬಿಕ್ಕಟ್ಟ!!!

ನೋಡ್ಲೇಬೇಕೆಂಬವರು ನೋಡ್ತಾನೇ ಇದ್ದಾರೆ! (ಮಾ)

-ಡ್ಲೇಬೇಕೆಂಬವರೆಲ್ಲಾ ಮಾಡ್ತಾನೇ ಇದ್ದಾರೆ!
ಬೇರೆಲ್ಲೋಡ್ಬಾರ್ದೆಂಬವ್ರಿದ್ದಲ್ಲೀನೇ ಇದ್ದಾರೆ! (ಬೇ)
-ಕಂಬ್ದಿಲ್ಲದವರ್ಬೇಕೆನ್ನದೇನೇ ಇದ್ದಾರೆ!
ರೆಯ್ಬೇಕೆಂಬದರ್ಬರೀತ್ತಾನೇ ಇದ್ದಾರೆ! (ಪ್ರ)
-ವಚನಕಾರರ್ಮಾತನಾಡ್ತಾನೇ ಇದ್ದಾರೆ! (ಗು)
-ರುಭಕ್ತರೆಲ್ಲಾ ಸೇವೆ ಮಾಡ್ತಾನೇ ಇದ್ದಾರೆ!
ನೋವು ಮಾಡುವವರ್ನೋಯಿಸ್ತಾನೇ ಇದ್ದಾರೆ! (ಕೊ)
-ಡ್ತಾ ಇರುವವರೆಲ್ಲಾ ಕೊಡ್ತಾನೇ ಇದ್ದಾರೆ!
ನೇಮನಿಷ್ಟರ್ಸಾಧನೆ ಮಾಡ್ತಾನೇ ಇದ್ದಾರೆ! (ಒ)
-ದ್ದಾಡುವವರೆಲ್ಲಾ ಒದ್ದಾಡ್ತಾನೇ ಇದ್ದಾರೆ! (ಬೆ)
-ರೆತು ನಿರಂಜನಾದಿತ್ಯನಲ್ಲಾರಿದ್ದಾರೆ???

ಅರ್ವತ್ತೇಳರಲ್ಲಡಿಯಿಡುವೆ ನಾನು! (ಓ)

-ರ್ವ ದೇವ ಜಗತ್ತಿಗೆಲ್ಲವೆಂಬೆ ನಾನು! (ಮ)
-ತ್ತೇನ ಬೇಡದಿರವನನ್ನೆಂಬೆ ನಾನು! (ಕಾ)
-ಳ ಸಂತೆಗಳೇಳದಂತಾಗ್ಲೆಂಬೆ ನಾನು!
ಸ ವಿರಸವಾಗದಿರ್ಲೆಂಬೆ ನಾನು! (ಬ)
-ಲ್ಲವರ ಮಾತು ಬೆಲ್ಲವಾಗ್ಲೆಂಬೆ ನಾನು! (ನು)
-ಡಿದಂತೆ ನಡೆಯುವಂತಾಗ್ಲೆಂಬೆ ನಾನು! (ತಾ)
-ಯಿ, ತಂದೆ ಪ್ರತ್ಯಕ್ಷ ದೇವರೆಂಬೆ ನಾನು!(ದು)
-ಡುಕುವಭ್ಯಾಸ ಬಿಡಬೇಕೆಂಬೆ ನಾನು! (ಸೇ)
-ವೆಯಿಂದ ಸಂಚಿತ ನಾಶವೆಂಬೆ ನಾನು!
ನಾಮಜಪ ಮಾಡಲೇಬೇಕೆಂಬೆ ನಾನು! (ನೀ)
-ನು ನಿರಂಜನಾದಿತ್ಯನಾಗೆಂದೆ ನಾನು!!!

ಅರ್ವತ್ತೇಳು ಸಂದೇಶಾನುಗ್ರಹ! (ಸ)

-ರ್ವ ಕಲ್ಯಾಣಕ್ಕೀಶ್ವರಾನುಗ್ರಹ! (ಎ)
-ತ್ತೇನಾದ್ರನು ದತ್ತನಾನುಗ್ರಹ! (ಬಾ)
-ಳ್ರಮ್ಯಾಗ್ಲಿದು ಮಂಗಳಾನುಗ್ರಹ!
ಸಂಪತ್ಭಕ್ತಿಯಾಗ್ಲೆಂಬಾನುಗ್ರಹ!
ದೇವ ದೇಹವಲ್ಲೆಂಬಾನುಗ್ರಹ! (ಅ)
-ಶಾಪಾಶ ನಾಶಾಗ್ಲೆಂಬಾನುಗ್ರಹ! (ಮ)
-ನುಜನಜನಾಗ್ಲೆಂಬಾನುಗ್ರಹ! (ಉ)
-ಗ್ರ ಕೋಪ ಶಾಂತ್ಯಾಗ್ಲೆಂಬಾನುಗ್ರಹ! (ಸ್ನೇ)
-ಹ ನಿರಂಜನಾದಿತ್ಯಾನುಗ್ರಹ!!!

ಅರ್ವತಾರೀಗಿಲ್ಲರ್ವತ್ತೇಳಾಗಿಲ್ಲ! (ಓ)

-ರ್ವ ದೇವನೆಂಬುದಲ್ಲಗಳೆದಿಲ್ಲ! (ದ)
-ತ್ತಾತ್ರೇಯನವನೆಂಬುದು ಸುಳ್ಳಲ್ಲ!
ರೀತಿ, ನೀತಿ, ಗೀತೆ ಹೇಳಿದಂತೆಲ್ಲ! (ಬಾ)
-ಗಿ ಪೂಜಿಸ್ಬೇಕವ್ನ ಪಾದವನ್ನೆಲ್ಲ! (ಇ)
-ಲ್ಲ ಗರ್ವವನಲ್ಲೆಂದರಿಯಿರೆಲ್ಲ! (ಸ)
-ರ್ವರಂತರ್ಯಾಮ್ಯವನಾಗಿಲ್ಲದಿಲ್ಲ! (ಸ)
-ತ್ತೇನು, ಹುಟ್ಯೇನೆಂದಾತನ್ನುವುದಿಲ್ಲ! (ಕ)
-ಳಾನಿಧಿಯದೀಯುಗಾಯುಗವೆಲ್ಲ! (ಆ)
-ಗಿರ್ಲವನಂತವನ ಮಕ್ಕಳೆಲ್ಲ! (ಬ)
-ಲ್ಲ ನಿರಂಜನಾದಿತ್ಯ ದತ್ತನೆಲ್ಲ!!!

ಅರ್ವತ್ತೇಳೋಡುತ್ತೋಡುತಾ ಬಂತು! (ಸ)

-ರ್ವವೂ ಕಾಲಾಧೀನನ್ನುತ್ತಾ ಬಂತು! (ಹೊ)
-ತ್ತೇನೆಲ್ಲಾಭಾರವೆನ್ನುತ್ತಾ ಬಂತು! (ಖ)
-ಳೋನ್ಮತ್ತತೆ ಹೋಗ್ಲೆನ್ನುತ್ತಾ ಬಂತು! (ಗುಂ)
-ಡು, ಮದ್ದಿನ್ನು ಸಾಕೆನ್ನುತ್ತಾ ಬಂತು! (ದ)
-ತ್ತೋಪದೇಶವಿದೆನ್ನುತ್ತಾ ಬಂದು! (ಕೇ)
-ಡು ಮಾಡ್ಬೇಡನ್ಯರ್ಗೆನ್ನುತ್ತಾ ಬಂತು! (ಭ)
-ತ್ತಾದಿ ಧಾನ್ಯ ಹೆಚ್ಲೆನ್ನುತ್ತಾ ಬಂತು!
ಬಂಧು ಗೋವಿಂದನೆನ್ನುತ್ತಾ ಬಂತು! (ಬಂ)
-ತು ನಿರಂಜನಾದಿತ್ಯಾಗೀಗ್ಬಂತು!!!

ಅರ್ವತ್ತೇಳರಾಗಮನವೇಕಾಯ್ತು? (ಅ)

-ರ್ವತ್ತಾರರ ಮೇಲದಿರಬೇಕಾಯ್ತು! (ಪ)
-ತ್ತೇದಾರಧ್ಯಾತ್ಮ ತತ್ವಕ್ಕೆ ಬೇಕಾಯ್ತು! (ಕೇ)
-ಳಲೀ ಸಂದೇಶ ಬರಲೇ ಬೇಕಾಯ್ತು! (ಆ)
-ರಾಮ ತಪಸ್ಸಿನಿಂದಾಗಬೇಕಾಯ್ತು! (ರಂ)
-ಗ ಸಾರಂಗರೈಕ್ಯ ಕಾಣಬೇಕಾಯ್ತು!
ದ, ಮತ್ಸರ ಮರ್ದಿಸಬೇಕಾಯ್ತು!
ಶ್ವರದಾಸೆ ನಶಿಸಬೇಕಾಯ್ತು!
ವೇದಾಂತ ಸಾರ ರೂಪಾಗಬೇಕಾಯ್ತು! (ಸಾ)
-ಕಾರ ದರ್ಶನ ಪಡೆಯಬೇಕಾಯ್ತು! (ಆ)
-ಯ್ತು ನಿರಂಜನಾದಿತ್ಯನ ಕಂಡಾಯ್ತು!!!

ಧರ್ಮದೆದೆಗೊದೆಯೇನಯ್ಯಾ? (ಚ)

-ರ್ಮದ ಗೊಂಬೆಗೇನಾದ್ರೇನಯ್ಯಾ? (ತಂ)
-ದೆ ನೀನೆನಗಲ್ಲವೇನಯ್ಯಾ? (ಕಂ)
-ದೆರೆದೆನ್ನನೊಮ್ಮೆ ನೋಡಯ್ಯಾ! (ಕಂ)
-ಗೊಳಿಸ್ಬೇಕು ನಾ ನಿನ್ನಂತಯ್ಯಾ! (ಸ್ವಾ)
-ದೆನಗೆ ನಿನ್ನುಚ್ಚಿಷ್ಟವಯ್ಯಾ!
ಯೇಕೆ ಬಿಡಲೊಲ್ಲೆ ನೀನಯ್ಯಾ?
ಡೆಸೆನ್ನ ನಿನ್ನಡಿಗಯ್ಯಾ! (ಅ)
-ಯ್ಯಾ ಶ್ರೀ ನಿರಂಜನಾದಿತ್ಯಯ್ಯಾ!!!

ಹಣಾಹಣಿಗೆ ಕಾರಣ ನೀನು ಹಣಾ! (ಕೊ)

-ಣಾದ್ರೂ ಜಾಣನೆನಿಪ ನಿನ್ನಿಂದ ಹಣಾ!
ಪ್ಪಳ, ಪಾಯ್ಸದೂಟ ನಿನ್ನಿಂದ ಹಣಾ! (ಗ)
-ಣಿಕಾ ವೃತ್ತಿ ಬಂತು ನಿನಗಾಗಿ ಹಣಾ! (ಬ)
-ಗೆಬಗೆಯಾಶಾಪೂರ್ತಿ ನಿನ್ನಿಂದ ಹಣಾ!
ಕಾಳಿ, ಬೋಳಿ ನ್ಯಾಯ ನಿನಗಾಗಿ ಹಣಾ! (ನ)
-ರ ಚೋರನೆನಿಸಿದ ನಿನ್ನಿಂದ ಹಣಾ! (ತೃ)
-ಣ ಸಮಾನ ಯೋಗೇಂದ್ರಗೆ ನೀನು ಹಣಾ!
ನೀನೇನು ಬಲ್ಲೆಯವನ ಗುಣ ಹಣಾ?
ನುಡಿ ನಡೆಯವನದು ಶುದ್ಧ ಹಣಾ!
ಸಿವೆ, ತೃಷೆ ಜೈಸಿಹನವ ಹಣಾ! (ಗ)
-ಣಾಧಿಪತಿ ನಿರಂಜನಾದಿತ್ಯ ಹಣಾ!!!

ಸರ್ವಶಕ್ತಿ ಸಂಪನ್ನ ಸದ್ಗುರು ದೇವ! (ಗ)

-ರ್ವರಹಿತ ಸಚ್ಚಿದಾನಂದಾತ್ಮಾ ದೇವ!
ರಣರಿಗೆ ಶರಣಾ ಮಹಾದೇವ! (ಭ)
-ಕ್ತಿ, ಮುಕ್ತಿ ಸ್ವರೂಪ ಶಿವಾನಂದಾ ದೇವ! (ನಿಃ)
-ಸಂಗ, ನಿರ್ಮೊ

ಹ, ನಿಶ್ಚಲತತ್ವಾ ದೇವ!
ರಂಜ್ಯೋತಿ, ಪರಮಹಂಸಾತ್ಮಾ ದೇವ! (ತ)
-ನ್ನ ತಾನೇ ಮಾಯ ಮಾಡಿಕೊಂಡವಾ ದೇವ!
ಕಲ ಚರಾಚರ ವ್ಯಾಪಕಾ ದೇವ! (ಮ)
-ದ್ಗುರು, ಜಗದ್ಗುರು ದತ್ತಾತ್ರೇಯಾ ದೇವ!
(ಪೌ)ರುಷದಲ್ಲನುಪಮನಾ ಗುರುದೇವ!
ದೇಶ, ವಿದೇಶಕ್ಕವನೊಬ್ಬನೇ ದೇವ! (ಅ)
-ವನೇ ನಿರಂಜನಾದಿತ್ಯಾನಂದ ದೇವ!!!

ಸೋಮಾರಿ ನಾನಲ್ಲ ಗುರುವೇ!

ಮಾಡಿಸುವಗೆಲ್ಲ ಗೊತ್ತಿಲ್ವೆ? (ಸ)
-ರಿಯಾದ ಕೂಲಿ ಕೊಡ್ಬೇಕಲ್ವೇ?
ನಾನಲ್ಲಪರಾಧಿ ಗುರುವೇ! (ನಿ)
-ನಗುದಾಸೀನತೆ ತರವೇ? (ಹು)
-ಲ್ಲ ತಿಂದು ಹಾಲ್ಲ್ಕೊಡಬೇಕಲ್ವೆ?
ಗುರು ನಿನ್ನಲೈಕ್ಯ ಗುರುವೇ! (ಕ)
-ರುಣಿಸೀಗ ವರ ಗುರುವೇ! (ನೋ)
-ವೇ? ನಿರಂಜನಾದಿತ್ಯ ಸೇವೇ???

ಸಂದೇಶ ಸಂದೇಹವಿಲ್ಲದಿರ್ಲಿಕ್ಕೆ!

ದೇಶ, ವಿದೇಶದಲ್ಲೈಕ್ಯವಿರ್ಲಿಕ್ಕೆ!
ರಣು ಸರ್ವೇಶ್ವರಗಾಗಿರ್ಲಿಕ್ಕೆ!
ಸಂಬಂಧ ಸಜ್ಜನರದ್ದಾಗಿರ್ಲಿಕ್ಕೆ!
ದೇಹವೇ ದೇವಾಲಯವಾಗಿರ್ಲಿಕ್ಕೆ!
ಗಲಿರುಳಾತ್ಮಧ್ಯಾನವಿರ್ಲಿಕ್ಕೆ!
ವಿಷಯಗಳಾಸೆಯಿಲ್ಲದಿರ್ಲಿಕ್ಕೆ! (ಎ)
-ಲ್ಲರಂತರ್ಯಾಮಿ ದೇವರೆಂದಿರ್ಲಿಕ್ಕೆ!
ದಿವ್ಯ ಜೀವನವೆಲ್ಲರಲ್ಲಿರ್ಲಿಕ್ಕೆ! (ಇ)
-ರ್ಲಿ ಗುರುಕೃಪೆಯಿದಕ್ಕೆಂದಿರ್ಲಿಕ್ಕೆ! (ಅ)
-ಕ್ಕೆ ನಿರಂಜನಾದಿತ್ಯಾನಂದೆಲ್ಲಕ್ಕೆ!!!

ಇರಿಸಿದಂತಿದ್ದಾನೆ ಸೂರ್ಯ! (ಅ)

-ರಿತವ್ನಂತಿದ್ದಾಗ್ಬೇಕು ಕಾರ್ಯ! (ದಾ)
-ಸಿ

ಈರಾಳಂತಿರ್ಬೇಕು ಭಾರ್ಯ!
ದಂಭ, ದರ್ಪಗಳಲ್ಲಿ ಶೌರ್ಯ! (ತಿ)
-ತಿಕ್ಷೆ, ವೈರಾಗ್ಯವಿದ್ದವಾರ್ಯ! (ಗೆ)
-ದ್ದಾತರಿಗಳಾ ಗುರುವರ್ಯ! (ನೆ)
-ನೆ ಗೋವಿಂದನನ್ನೆಂಬಾಚಾರ್ಯ!
ಸೂಳೆ ಮನಸ್ಸಿಗಿಲ್ಲೌದಾರ್ಯ! (ಆ)
-ರ್ಯ ನಿರಂಜನಾದಿತ್ಯಾ ಸೂರ್ಯ!!!

ಸಹಾಯ ಬೇಸಾಯಕ್ಕಿರಬೇಕು!

ಹಾಸ್ಯ ಕುಚೋದ್ಯಗಳ ಬಿಡ್ಬೇಕು! (ಪ್ರ)
-ಯತ್ನಕ್ಯಾಲಸ್ಯವಿಲ್ಲದಿರ್ಬೇಕು!
ಬೇಲಿ ಹೊಲಕ್ಕೆ ಹಾಕಲೇಬೇಕು!
ಸಾಹಸದಲ್ಲಿ ಶ್ರದ್ಧೆ ಸೇರ್ಬೇಕು! (ಭ)
-ಯ, ಭಕ್ತಿ ಗುರುವಿನಲ್ಲಿರ್ಬೇಕು! (ಸೊ)
-ಕ್ಕಿನ ಮಾತುಗಳಾಡದಿರ್ಬೇಕು! (ಪ)
-ರಮಾರ್ಥಕ್ಕಿದು ದಾರಿಯಾಗ್ಬೇಕು!
ಬೇರ್ಸಹಿತಹಂಕಾರ ಕೀಳ್ಬೇಕು! (ಬೇ)
-ಕು ನಿರಂಜನಾದಿತ್ಯನಾಗ್ಬೇಕು!!!

ಆಗಿದೆ, ಸಾಗಿದೆ, ಮುಗಿಯಲಿದೆ! (ಯೋ)

-ಗಿರಾಜನಾಜ್ಞಾನುಸಾರವಾಗಿದೆ! (ತಂ)
-ದೆ ಅವನೆಂಬ ನಂಬಿಗೆಯಾಗಿದೆ!
ಸಾಮಿಪ್ಯ ದಾಟ ಮುಂದಕ್ಕೆ ಸಾಗಿದೆ! (ಬಿ)
-ಗಿದಪ್ಪಿ ತದ್ರೂಪವಾಗ್ಲಿಕ್ಸಾಗಿದೆ! (ಒಂ)
-ದೆನುತ ಬೆರೆತಿರಲು ಸಾಗಿದೆ!
ಮುನೀಶ್ವರನಾಗಿ ಮುಗಿಯಲಿದೆ! (ಸಂ)
-ಗಿ ನಿಸ್ಸಂಗಿಯಾಗಿ ಮುಗಿಯಲಿದೆ!
ಮ, ನಿಯಮವೂ ಮುಗಿಯಲಿದೆ! (ನ)
-ಲಿನಲಿದೀ ಬಾಳು ಮುಗಿಯಲಿದೆ! (ತಂ)
-ದೆ ನಿರಂಜನಾದಿತ್ಯಗೇನ್ಬೇಕಿದೆ???

ಮಣ್ಣು ಮುಕ್ಕಿಸುವ ಸೊಕ್ಕ ಮುಕ್ಕಣ್ಣ! (ಹೆ)

-ಣ್ಣು, ಮಣ್ಣಿನಾಸೆ ಸಾಕೆಂಬ ಮುಕ್ಕಣ್ಣಾ!
ಮುಟ್ಟು, ಮಡಿ ಸುಟ್ಹಾಕೆಂಬ ಮುಕ್ಕಣ್ಣ! (ಲೆ)
-ಕ್ಕಿಸ್ಬೇಡನ್ಯ ಛಿದ್ರವೆಂಬ ಮುಕ್ಕಣ್ಣ!
ಸುಗುಣವಾಯ್ದುಕೊಳ್ಳೆಂಬ ಮುಕ್ಕಣ್ಣ! (ಭ)
-ವರೋಗ ವೈದ್ಯ ತಾನೆಂಬ ಮುಕ್ಕಣ್ಣ!
ಸೊಗದೂರ್ಕೈಲಾಸವೆಂಬ ಮುಕ್ಕಣ್ಣ!
(ಚೊ)ಕ್ಕ ವಾತಾವರಣದೆಂಬ ಮುಕ್ಕಣ್ಣ!
ಮುನಿಜನ್ತೂಣವೆಂಬ ಮುಕ್ಕಣ್ಣ! (ಹ)
-ಕ್ಕದಕ್ಬೆಕ್ಕೆಗಿಲ್ಲವೆಂಬ ಮುಕ್ಕಣ್ಣ! (ಅ)
-ಣ್ಣ ನಿರಂಜನಾದಿತ್ಯನಾ ಮುಕ್ಕಣ್ಣ!!!

ಮಾಡಿದ್ದುಣ್ಣೋ ಮಹಾರಾಯ! (ನೋ)

-ಡಿ ಮಣ್ಣ ಮಾಡೋ ಬೇಸಾಯ! (ಹ)
-ದ್ದು, ಕಾಗೆ ಬಂದ್ರೆಲ್ಲಾ ಮಾಯ! (ಹೆ)
-ಣ್ಣೋ, ಗಂಡೋ ಅಸ್ಥಿರ ಕಾಯ!
ನಶ್ಯುದ್ಧಿಯಾದ್ರಾದಾಯ!
ಹಾಲ್ಮೊಸ್ರಿಲ್ಲದಿದ್ರೆ ಸಾಯ! (ಶ್ರೀ)
-ರಾಮನಿಂದೆಲ್ಲಾ ಸಹಾಯ! (ಜೀ)
-ಯ ನಿರಂಜನಾದಿತ್ಯಾಯ!!!

ಮೂರ್ಸಾವಿರವಾದ್ರದೇನು ಮಹಾ? [ಆ]

-ರ್ಸಾವಿರವಾದ್ರೂ ಬರನು ಗುಹಾ!
ವಿರಕ್ತಿಯದ್ದಲ್ಲಿಗೋಡಿ ಬಹಾ! (ವ)
-ರ ಗುರುವಿದನರಿತು ಇಹಾ!
ವಾದ, ಭೇದಕ್ಕವ್ನೊಲಿಯದಿಹಾ! (ಪಾ)
-ದ್ರಸದಂತವನಿಹದಲ್ಲಿಹಾ!
ದೇಹ ದೇಗುಲ ಮಾಡಿಕೊಂಡಿಹಾ! (ತ)
-ನು, ಮನ, ಧನ ಸೇವೆಗೆಂದಿಹಾ!
ದನಾರಿ ಶಿವ ತಾನಾಗಿಹಾ! (ಮ)
-ಹಾ ನಿರಂಜನಾದಿತ್ಯಾನುಗ್ರಹಾ!!!

ಅಣ್ಣನ ಬಣ್ಣವಾಗ್ಬೇಕ್ನಿನ್ಬಣ್ಣ! [ಕ]

-ಣ್ಣ ಕೋರೈಸುವಂತಿರ್ಬೇಕಾ ಬಣ್ಣ! (ಅ)
-ನಸೂಯೆಯಾಗಿರ್ಬೇಕ್ನೋಡೀ ಬಣ್ಣ! (ಡಂ)
-ಬದ ಕೊಂಬ ಮುರಿಯ್ಬೇಕೀ ಬಣ್ಣ! (ಬ)
-ಣ್ಣನೆಗ್ಮರುಳಾಗ್ಬಾರದೀ ಬಣ್ಣ!
ವಾಸುದೇವಗಾನಂದವೀ ಬಣ್ಣ! (ಸಾ)
-ಗ್ಬೇಕ್ಯಾತ್ರೆ ಅವ್ನಂತೆಂಬುದೀ ಬಣ್ಣ! (ಬೇ)
-ಕ್ನಿನಗೀಗೆಂಬೆ ನಾನಾ ಹೊಂಬಣ್ಣ! (ನಿ)
-ನ್ಬಣ್ಣಣ್ಣನ ಬಣ್ಣಾದಾಗೇಳ್ಬಣ್ಣ! (ಅ)
-ಣ್ಣ ನಿರಂಜನಾದಿತ್ಯಗೇಕ್ಬಣ್ಣ???

ಹೊಡೆದಾಡಿ ಬುಡ ಕಿತ್ತವರಿಲ್ಲ! (ಪ)

-ಡೆದಿಷ್ಟಾರ್ಧ ಸುಮ್ಮಗಿರುವರೆಲ್ಲ!
ದಾರಿ ನೇರಾಗ್ಬೇಕೆಂದಾರಿಗೂ ಇಲ್ಲ! (ಮ)
-ಡಿದವರ ಸಂಖ್ಯೆಗೆ ಮಿತಿಯಿಲ್ಲ!
ಬುದ್ಧಿಯೀಗಾದ್ರೂ ಶುದ್ಧವಾಗಿಟ್ಟಿಲ್ಲ! (ಮಾ)
-ಡದೆ ಆತ್ಮಧ್ಯಾನ ಇದಾಗೋದಿಲ್ಲ!
ಕಿತ್ತಾಟ ನಿಲ್ಲಲಿದ ಮಾಡಿರೆಲ್ಲ! (ಉ)
-ತ್ತಮ ಸಂಸ್ಕಾರ ಪಡೆವರಾಗೆಲ್ಲ!
ರ ಗುರೂಪದೇಶವಿದ್ಸುಳ್ಳಲ್ಲ! (ಅ)
-ರಿಗಳಾರರಿಂದ ಕಾಟವಲ್ಲೆಲ್ಲ! (ಬ)
-ಲ್ಲ ನಿರಂಜನಾದಿತ್ಯ ಗುರುವೆಲ್ಲ!!!

ನಿನ್ನ ನಾನೇಕೆ ಸೇರಿಕೊಂಡೆ? (ನ)

-ನ್ನವ ನೀನೆಂದರಿತುಕೊಂಡೆ!
ನಾನೂ; ನೀನೂ ಒಂದೆಂದಂದ್ಕೊಂಡೆ!
ನೇತಾಡಿ, ಜೋತಾಡಿ ಸುಟ್ಕೊಂಡೆ!
ಕೆಲಸ ಕೆಟ್ಟತೀಗಂದ್ಕೊಂಡೆ!
ಸೇವೆ ಮಾಡ್ಬೇಕಿನ್ನದಂದ್ಕೊಂಡೆ! (ಅ)
-ರಿ ಜಾಲದಿಂದ ಬಿಡಿಸ್ಕೊಂಡೆ!
ಕೊಂಚ ನಿಧಾನ್ಸೀಗ ಕೂಡ್ಕೊಂಡೆ! (ಕೊ)
-ಡೆ ನಿರಂಜನಾದಿತ್ಯಂದ್ಕೊಂಡೆ!!!

ಸಾರಂಗ ಪಟ್ಟಕ್ಕೇಕೆ ಬಂದ? (ಶ್ರೀ)

-ರಂಗನಿಷ್ಟಕ್ಕಾಗಿಲ್ಲಿಗೆ ಬಂದ!
ರಾಜ್ಯಭಾರ ನೋಡ ಬಂದ!
ರಮಾರ್ಥಸಾರರುಹ ಬಂದ! (ಉ)
-ಟ್ಟ ಪೀತಾಂಬರ ಬಿಚ್ಚಿಟು ಬಂದ! (ಹ)
-ಣ, ಗುಣಗಳನ್ನಳೆಯ ಬಂದ! (ಧ)
-ಕ್ಕೇಕೆ ಧರ್ಮಕ್ಕಾಯ್ತೆಂದ್ನೋಡ ಬಂದ! (ಬೇ)
-ಕೆನಗ್ವಿಶ್ವಪ್ರೇಮವೆಂದು ಬಂದ!
ಬಂಧು ಕೃಷ್ಣ ನನಗೆಂದು ಬಂದ!
ತ್ತ ನಿರಂಜನಾದಿತ್ಯನೆಂದ!!!

ಮಡಿಲಲ್ಲಿ ಕೆಂಡ, ಒಡಲಲ್ಲಿ ಗಂಡ! (ಮ)

-ಡಿವನೇನದರಿಂದಾ ಗಂಡ ಮಾರ್ತಾಂಡ?
ಲನಾ ಮನವೆಂಬುದೊಂದಗ್ನಿ ಕುಂಡ! (ಕೊ)
-ಲ್ಲಿದನು ನನ್ನಿಂದೆಂಬುದು ಯೋಗದಂಡ!
ಕೆಂಪಡರ್ದ ಕಣ್ಣಿಗೀಗಾಹುತೀ ರುಂಡ! (ಸು)
-ಡಬೇಡ, ಶರಣಾದೆಂಬುದಾಗ ಮುಂಡ!
ಒಪ್ಪಿ, ತಪ್ಪಿ ಬೆಪ್ಪಾದುದನಾಗ ಕಂಡ! (ಮ)
-ಡದಿ ನೀನೆನಗೆಂದು ಮರುಕಗೊಂಡ! (ಅ)
-ಲಕ್ಷ್ಯ ಮಾಡ್ಬೇಡೆನ್ನನಿನ್ನೆಂದಾ ನಂಜುಂಡ! (ಇ)
-ಲ್ಲಿನ್ನಾನಂದದಿಂದೆರೆಂದೊಡಗೂಡ್ಯುಂಡ!
ಗಂಗೆಯಿಂದ ಕೈ, ಬಾಯಿ, ತೊಳೆಸಿಕೊಂಡ! (ಗಂ)
-ಡ ನಿರಂಜನಾದಿತ್ಯನೆಂದುದ್ಬ್ರಹ್ಮಾಂಡ!!!

ಚಿಂತ್ಯಾಕ್ಮಾಡ್ತಿದ್ಯೋ? ಚಿನ್ಮಯ್ನಿದ್ದಾನೆ!

ತ್ಯಾಗಿಯಾಗ್ಯವನೆಲ್ಲೆಲ್ಲಿದ್ದಾನೆ! (ಸಾ)
-ಕ್ಮಾತೆಂದವ ಮೌನಿಯಾಗಿದ್ದಾನೆ! (ನೋ)
-ಡ್ತಿದ್ದ್ರವ ಮುಕ್ತಿಮ್ಮನಂತಿದ್ದಾನೆ! (ಸ)
-ದ್ಯೋಜಾತ ಸ್ವರೂಪನಾಗಿದ್ದಾನೆ!
ಚಿತಾಭಸ್ಮಧಾರಿಯಾಗಿದ್ದಾನೆ! (ಉ)
-ನ್ಮತ್ತ ಪಿಶಾಚ್ಯಂತೋಡಾಡ್ತಿದ್ದಾನೆ! (“ಜೈ)
-ಯ್ನಿರಂಜನ” ಎಂದ್ಕುಣಿಯ್ತಿದ್ದಾನೆ! (ಎ)
-ದ್ದಾಗ, ಕೂತಾಗ್ಮೈ ಮರೆಯ್ತಿದ್ದಾನೆ! (ತಾ)
-ನೇ ನಿರಂಜನಾದಿತ್ಯಾಗಿದ್ದಾನೆ!!!

ಸ್ವಜನರಾರೂ ನಿನಗಿಲ್ಲವೇನಯ್ಯಾ! (ಸ್ವ)

-ಜನರೆನಗಾತ್ಮಧ್ಯಾನ ನಿಷ್ಟರಯ್ಯಾ!
ಶ್ವರದ ಸೋಂಕವರಿಗಿಲ್ಲವಯ್ಯಾ!
ರಾತ್ರಿ, ದಿನವೆಲ್ಲಾತ್ಮ ಚಿಂತನೆಯಯ್ಯಾ!
ರೂಪ, ನಾಮದಿಂದವರು ಹೊರಗಯ್ಯಾ!
ನಿಮಿತ್ತ ಮಾತ್ರ ದೇಹಧಾರಿಗಳಯ್ಯಾ!
ಡೆ, ನುಡಿಯವರದಾದರ್ಶವಯ್ಯಾ!
ಗಿಡ, ಮರದಲ್ಲೂ ತಾವೆಂದಿಹರಯ್ಯಾ! (ಬ)
-ಲ್ಲವರೆಂಬಹಂಕಾರವರಿಗಿಲ್ಲಯ್ಯಾ!
ವೇದಾಂತಸಾರ ಸ್ವರೂಪರವರಯ್ಯಾ!
ಗುನಗುತ ಸದಾ ಇರುವರಯ್ಯಾ! (ಆ)
-ಯ್ಯಾ, ನಿರಂಜನಾದಿತ್ಯಾನಂದವರಯ್ಯಾ!!!

ದಿಂಬು ತಲೆಗೊಂದಿಂಬೆಂಬೆ! (ಅಂ)

-ಬುಜಕ್ಕೆಂಬರೇಶಾಪ್ತನೆಂಬೆ!
ನ್ನ ತಾ ತಿಳಿದ್ಬ್ರಹ್ಮಾಗೆಂಬೆ! (ಕೊ)
-ಲೆ, ಸುಲಿಗೆ ಮಾಡಬಾರ್ದೆಂಬೆ! (ಪ್ರ)
-ಗತಿ ಸದಾಚಾರದಿಂದೆಂಬೆ!
ದೊಂಬರಾಟವಿನ್ನು ಸಾಕೆಂಬೆ!
ದಿಂಡಾಗ್ಬೆಳೆದೇನ್ಫಲವೆಂಬೆ!
ಬೆಂಕಿಗಾಗ್ವುದಾಹುತಿಯೆಂಬೆ! (ಅಂ)
-ಬೆ ನಿರಂಜನಾದಿತ್ಯನೆಂಬೆ!!!

ದಿಂಬು ಬೇಕ್ತಲೆಗಿಂಬು ಬೇಕು!

ಬುದ್ಧಿಗೆ ಸದ್ವೃತ್ತಿಯಿರ್ಬೇಕು!
ಬೇಹುಶಾರಾಗಿರದಿರ್ಬೇಕು! (ಶ) (ಭ)
-ಕ್ತನಾಗಲು ಪ್ರಯತ್ನಿಸ್ಬೇಕು!
ಲೆಖ್ಖಾಚಾರ ಚೊಕ್ಕವಾಗ್ಬೇಕು! (ಆ)
-ಗಿಂದಾಗ ಪರಿಶೋಧಿಸ್ಬೇಕು! (ಜೇ)
-ಬು ದಿನದಿನ ತುಂಬ್ತಿರ್ಬೇಕು!
ಬೇಕಾದುದಕ್ಕೆ ಖರ್ಚಾಗ್ಬೇಕು! (ಟಾ)
-ಕು ನಿರಂಜನಾದಿತ್ಯಾಗ್ಬೇಕು!!!

ಅಬ್ಬರಾರ್ಭಟವಿಲ್ಲದುಣ್ಣು ಹಬ್ಬದೂಟ! (ಇ)

-ಬ್ಬರನ್ಯಾಯ ಒಬ್ಬಗಾದಾಯಾಗ್ಬಾರ್ದಾ ಊಟ!
ರಾತ್ರಿ, ದಿನ ದುಡಿದು ತಯಾರಾಯ್ತಾ ಊಟ! (ನಿ)
-ರ್ಭಯವಾಗುಣಬೇಕೆಲ್ಲರಾ ರುಚಿಯೂಟ! (ಕಾ)
-ಟ ನಿವಾರಣೆ ಮಾಳ್ಪುದೀ ಪ್ರಸಾದದೂಟ!
ವಿಶ್ರಾಂತಿಪ್ರದವೀ ವಿಶ್ವಾಸಪೂರ್ಣದೂಟ! (ಅ)
-ಲ್ಲವಿದು ವಿಷ ಬೆರೆಸಿದ ಮೋಸದೂಟ!
ದುರ್ವಿಷಯಕ್ಕೆಳೆಯದೀ ನಿರ್ಮಲ ಊಟ! (ಹ)
-ಣ್ಣು ಹಂಪಲಿನೂಟ ದೈವೀಸಂಪತ್ತಿನೂಟ!
ರಿ, ಹರ, ಅಜರೊಂದಾಗಿ ಉಂಬ ಊಟ! (ಕೊ)
-ಬ್ಬ ಕರಗಿಸುವುದೀ ಧನ್ವಂತರಿಯೂಟ!
ದೂಷಿಸಬಾರ್ದನ್ಯರನ್ನುಂಡ ಮೇಲೀ ಊಟ! (ದಿ)
-ಟ ನಿರಂಜನಾದಿತ್ಯಾನಂದವೇ ಆ ಊಟ!!!

ಪೂಜೆ, ಪುರಸ್ಕಾರಾರಿಗಾಗ್ಬೇಕು? (ಸಂ)

-ಜೆ, ಮುಂಜಾನೆನ್ನದಾತ್ಮಗಾಗ್ಬೇಕು!
ಪುಣ್ಯ ಪಾಪಾತೀತಾತ್ಮಗಾಗ್ಬೇಕು! (ಪ)
-ರಮಾರ್ಥ ಪ್ರವರ್ತಕಗಾಗ್ಬೇಕು! (ಕ)
-ಸ್ಕಾಯಿಯಲ್ಲದ ಹಣ್ಣಿಗಾಗ್ಬೇಕು!
ರಾಗ, ದ್ವೇಷರಹಿತಗಾಗ್ಬೇಕು! (ಅ)
-ರಿಗಳಾರ ಗೆದ್ದವಗಾಗ್ಬೇಕು!
ಗಾನಲೋಲ ಗೋಪಾಲಗಾಗ್ಬೇಕು! (ಆ)
-ಗ್ಬೇಕ್ಮನಶ್ಯಾಂತ್ಯೆಂಬವಗಾಗ್ಬೇಕು! (ಟಾ)
-ಕು ನಿರಂಜನಾದಿತ್ಯಗಾಗ್ಬೇಕು!!!

ನನ್ನ ಯೋಗ್ಯತೆ ನೀನೇನು ಬಲ್ಲೆ? (ನ)

-ನ್ನನ್ನು ಹೊಗಳಿ ನೀನೇಗಾಗ್ಬಲ್ಲೇ?
ಯೋಗಿಯಾಗಿರ್ಬೇಕ್ನನ್ನೊಳಗಿಲ್ಲೇ! (ಭಾ)
-ಗ್ಯವಿನ್ನೇನು ನಾನು ಕೊಡಬಲ್ಲೇ? (ಕ)
-ತೆ, ಪುರಾಣಗಳ ಕಟ್ಟಿಡಲ್ಲೇ!
ನೀತಿ ಬಾಹಿರಾಚಾರವಿರ್ಲಲ್ಲೇ!
ನೇಮದಿಂದಾತ್ಮಧ್ಯಾನ ಮಾಡಿಲ್ಲೇ! (ತ)
-ನು, ಮನ, ನೀನಲ್ಲೆಂದರಿ ಇಲ್ಲೇ!
ಲ್ಲವನಾಗ್ಯೆಲ್ಲಾ ನೀನಾಗಿಲ್ಲೇ! (ಇ)
-ಲ್ಲೇ ನಿರಂಜನಾದಿತ್ಯನಿರ್ಪಲ್ಲೇ!!!

ಏನು ಸಾರ್ಥಕವಾಯ್ತು ದೇಹ ಧರಿಸಿ? (ಅ)

-ನುದಿನ ಸುಖ, ದುಃಖದಲ್ಲಿ ಬೆರೆಸಿ!
ಸಾಯುವ ದಿನ ಗೊತ್ತಾಗದಂತಿರಿಸಿ! (ಅ)
-ರ್ಥ ಮೊದಲಾದಷ್ಟಮದ ತುಂಬಿರಿಸಿ!
ತೆ, ಪುರಾಣ ಹೇಳಿ ಮರುಳ್ಗೂಳಿಸಿ!
ವಾಸುದೇವನ ದರ್ಶನವ ಮರೆಸಿ! (ಹೋ)
-ಯ್ತು ಭಯ, ಭಕ್ತಿ ಮಕ್ಕಳನ್ನಿಂತುರಿಸಿ!
ದೇವಾಲಯಗಳನೇಕ ಕಟ್ಟಿರಿಸಿ!
ರಿ, ಹರ, ಬ್ರಹ್ಮರ ಗೊಂಬೆಯಿರಿಸಿ!
ರ್ಮವಿದೆಂಬ ಹೆದರಿಕೆ ಬರಿಸಿ! (ಅ)
ರಿವಿನ ಗಂಧ ಆರಿಹೋಯ್ತೆಚ್ಚರಿಸಿ! (ಉ)
-ಸಿರ್ಬಂತು ನಿರಂಜನಾದಿತ್ಯಂಕುರಿಸಿ!!!

ಚಿತ್ತಶಾಂತಿಯಿದ್ದರೊತ್ತೆಯಾಳಾದ್ರೇನು? (ಮ)

-ತ್ತನಲ್ಲದುತ್ತಮ ಸೇಮಕನವನು! (ಆ)
-ಶಾಂಕುರಿಸದಂತೆಚ್ಚರದಿಂದಿಹನು!
ತಿನ್ನುವುದಕ್ಕಲ್ಲ ಜನ್ಮವೆನ್ನುವನು! (ಬಾ)
-ಯಿ, ಕೈ ಶುದ್ಧವಾಗಿರಿಸಿಕೊಂಡಿಹನು! (ಬಿ)
-ದ್ದರೂ ಎದ್ದು ಚೇತರಿಸಿಕೊಳ್ಳುವನು! (ಯಾ)
-ರೊಡನೆಯೂ ಜಗಳವಾಡನವನು! (ಗು)
-ತ್ತೆದಾರಾತಚ್ಚುಮೆಚ್ಚಾಗಿರುತಿಹನು! (ದ)
-ಯಾಮಯ ಸದ್ಗುರುದೇವನೆನ್ನುವನು!
(ಆ)ಳಾದ್ರೇನರ್ಸಾದ್ರೇನ್ದೇಹಸ್ಥಿರೆನ್ನುವನು! (ಉ)
-ದ್ರೇಕದಿಂದ್ರಿಯ ನಿಗ್ರಹಮಾಡಿಹನು! (ಅ)
-ನುಪಮ ನಿರಂಜನಾದಿತ್ಯನವನು!!!

ನನ್ನ ಯೋಗ್ಯತೆ ನೀನೇನು ಬಲ್ಲೆ? (ನ)

-ನ್ನವ ನೀನಾದ್ರೂ ನಾನೇನ್ಮಾಡಬಲ್ಲೆ?
ಯೋಚಿಸದೆ ಮಾಡಿದ್ದೆಲ್ಲಾ ಗುಲ್ಲೇ! (ಭಾ)
-ಗ್ಯ ನನ್ನ ನೋಡ್ಲಿಕ್ಕೆ ನಿನಗಿಲ್ಲೇ!
ತೆಪ್ಪಗಿರ್ಧ್ಯಾನಿಸುತೊಳಗಿಲ್ಲೇ! (ಅ)
-ನೀತ್ಯತ್ಯಾಚಾರದೀ ಯುಗದಲ್ಲೇ!
ನೇಮದಿಂದಿರ್ಬೇಕ್ಸ್ವರೂಪದಲ್ಲೇ! (ಮ)
-ನುಜನಜನಾಗುವುದಿದ್ರಿಂದ್ಲೇ!
ದಲಾವಣೆ ನೋಡುತಿರಿಲ್ಲೇ! (ಇ)
-ಲ್ಲೇ ನಿರಂಜನಾದಿತ್ಯನಿರ್ಪಲ್ಲೇ!!!

ದೊಡ್ಡವನೆನಿಸಿಕೊಂಡಿಲ್ಲ! (ಅ)

-ಡ್ಡದಾರಿ ಹಿಡಿಯಲೂ ಇಲ್ಲ! (ಅ)
-ವರಿವರ ಮಾತಾಡುತ್ತಿಲ್ಲ! (ಮ)
-ನೆಮನೆಗಲೆಯುವುದಿಲ್ಲ!
ನಿಶ್ಚಲ ತತ್ವ ಮರೆತಿಲ್ಲ! (ಹ)
-ಸಿವೆ ನಿವಾರಣೆಯಾಗಿಲ್ಲ!
ಕೊಂಟು ಮರವಿನ್ನೂ ಆಗಿಲ್ಲ!
(ಮ)ಡಿಯುವ ಭಯ ಮನಕಿಲ್ಲ! (ಬ)
-ಲ್ಲ, ನಿರಂಜನಾದಿತ್ಯನೆಲ್ಲ!!!

ಒಪ್ಪಂದ ಮಾಡಿ ಸಂಬಂಧ ತಪ್ಪಿಸ್ಬೇಡ! (ಇ)

-ಪ್ಪಂತಿದ್ದೇನೆಂದು ಕೊರಳ ಕೊಯ್ಯಬೇಡ!
ಯೆ ದಾಕ್ಷಿಣ್ಯಕ್ಕಾಗಿ ತೋರಿಸಬೇಡ!
ಮಾತಿನ ಬೆಲೆಯನ್ನು ಮಾಯಮಾಡ್ಬೇಡ! (ಮ)
-ಡಿದರೂ ಧೃಡ ವಿಶ್ವಾಸ ಕೆಡಿಸ್ಬೇಡ!
ಸಂಪೂರ್ಣ ನಿನ್ನಲ್ಲೈಕ್ಯ ಮಾಡ್ಕೊಳ್ದಿರ್ಬೇಡ!
ಬಂಗಾರದೊಡವೆಯಾಸೆ ತೋರಿಸ್ಬೇಡ!
ರ್ಮಕ್ಕೆ ಧಕ್ಕೆಯನ್ನೆಂದಿಗೂ ತರ್ಬೇಡ!
ಪ್ಪುಗಳನ್ನೆಲ್ಲಾ ಕ್ಷಮಿಸದಿರ್ಬೇಡ! (ಹಿ)
-ಪ್ಪಿಗಳಂತೆನ್ನನ್ನೆಂದೆಂದೂ ಇರಿಸ್ಬೇಡ! (ಈ)
-ಸ್ಬೇಕಿದ್ದು ಜೈಸ್ಬೇಕೆಂಬಾದರ್ಶ ಕೀಳ್ಬೇಡ! (ಮೃ)
-ಡ ನಿರಂಜನಾದಿತ್ಯನೆಂಬುದು ಧೃಡ!!!

ಹೆಣಕೆಷ್ಟು ಶೃಂಗಾರ ಮಾಡಿದರೇನು? (ಹ)

-ಣದ ದುರುಪಯೋಗವದಲ್ಲವೇನು? (ರೆ)
-ಕ್ಕೆ, ಪುಕ್ಕ ಕಿತ್ತ ಮೇಲಲ್ಲಿರುವುದೇನು? (ನಿ)
-ಷ್ಟುರದ ಮಾತಿದೆಂದರಿಯದಿರ್ನೀನು!
ಶೃಂಗ ಕಿತ್ತೆತ್ತಿಗೆ ಶೃಂಗಾರದಿಂದೇನು?
ಗಾಡಿಯೆಳೆಯಲದಯೋಗ್ಯವಲ್ಲೇನು?
(ಪ)ರಮಾರ್ಥವನ್ನರಿತು ಪೂಜಿಸು ನೀನು!
ಮಾಯಾತೀತಾತ್ಮನ ಸದಾ ನೆನೆ ನೀನು! (ದು)
-ಡಿದಿಂತೋಂಕಾರಾಲಂಕಾರಿಯಾಗು ನೀನು!
ತ್ತಾತ್ರೇಯ ಪರಮಾತ್ಮನಾಗು ನೀನು! (ಯಾ)
-ರೇನೆಂದರೂ ಗುರುಕೃಪೆಯೆನ್ನು ನೀನು! (ಸೂ)
-ನು, ನಿರಂಜನಾದಿತ್ಯಗಲ್ಲವೇ ನೀನು???

ಪರಸ್ಪರ ಹೊಡೆದಾಡಿ ಸಾಯಬೇಡಿ! (ವ)

-ರ ಗುರೂಪದೇಶಲಕ್ಷ್ಯ ಮಾಡಬೇಡಿ! (ಅ)
-ಸ್ಪರ್ಶರೆಂದಾರನ್ನೂ ದೂರವಿಡಬೇಡಿ! (ಪ)
-ರಮಾರ್ಥವೇನೆಂದರಿತು ಮಾತನಾಡಿ!
ಹೊಣೆಗಾರಾತ್ಮನ ಧ್ಯಾನ ಸದಾ ಮಾಡಿ! (ಮಾ)
-ಡೆನುವವರ್ಮಾಡಿ ತೋರದಿರಬೇಡಿ!
ದಾರಿ ಶಾಂತಿಗಿದೆಂಬುದಲ್ಲೆನ ಬೇಡಿ! (ಕ)
-ಡಿದು, ಬಡಿದಾರನ್ನೂ ನೋಯಿಸಬೇಡಿ!
ಸಾವಾರನ್ನೂ ಬಿಡದು; ಮರೆಯಬೇಡಿ! (ನ)
-ಯ ವಿನಯದಿಂದೆಲ್ಲರೂ ಒಡನಾಡಿ!
ಬೇಕದಿದೆನ್ನುವುದ ಕಡಿಮೆ ಮಾಡಿ! (ನೋ)
-ಡಿ ನಿರಂಜನಾದಿತ್ಯನಂದಂತೆ ಮಾಡಿ!!!

ಕುಡಿಯಲಿಕ್ಕೀಗೇನು ಬೇಕು! (ಗಿಂ)

-ಡಿಯೊಳಗಿನ ತೀರ್ಥ ಬೇಕು! (ನ)
-ಯ, ವಿನಯದ ಮಾತು ಬೇಕು!
(ಮ)ಲಿನವಿಲ್ಲದ ಮನ ಬೇಕು! (ಹ)
-ಕ್ಕೀಗುಳಿಸಿ ಪಾದ ಸೇರ್ಬೇಕು!
ಗೇದದ್ದು ಸಾರ್ಥಕವಾಗ್ಬೇಕು! (ತ)
-ನುವಿನಾಸೆಯಿಲ್ಲದಿರ್ಬೇಕು!
ಬೇರು ವಿಷಯದ್ದು ಸುಡ್ಬೇಕು! (ಟಾ)
-ಕು ನಿರಂಜನಾದಿತ್ಯಾಗ್ಬೇಕು!!!

ಯೋಚನೆಗೆಂದು ವಿಮೋಚನೇ?

ಕ್ಕಳದ ಗೊಂಬೆ ವಾಸನೇ!
ನೆಲಸಮವಾದ ಮೇಲ್ತಾನೇ? (ರಾ)
-ಗೆಂಬುದಿಲ್ಲದಾದ ಮೇಲ್ತಾನೇ?
ದುಸ್ಸಂಗ ದೂರಾದ ಮೇಲ್ತಾನೇ?
ವಿಷಯಾಸೆ ಸತ್ತ ಮೇಲ್ತಾನೇ?
ಮೋಕ್ಷದಂಗಿ ತೊಟ್ಟಮೇಲ್ತಾನೇ? (ವಾ)
-ಚಸ್ಪತಿ ತಾನಾದ ಮೇಲ್ತಾನೆ? (ತಾ)
-ನೇ ನಿರಂಜನಾದಿತ್ಯ ತಾನೇ???

ಐದು ಬೆರಳೊಂದೇ ಸಮವಿಲ್ಲ!

ದುರುದ್ದೇಶವದ್ರಲ್ಲೇನೂ ಇಲ್ಲ!
ಬೆಲೆ ಅದದ್ರದದಕ್ಕುಂಟಲ್ಲ! (ಪ)
-ರಮಾರ್ಥವರಿತ್ರೆ ತಂಟೆಯಿಲ್ಲ! (ಆ)
-ಳೊಂದಿಗಾಳಂತಿದ್ರೆ ನಷ್ಟವಿಲ್ಲ!
ದೇವ್ರ ಮಕ್ಕಳಿಗೆ ದ್ವೇಷ ಸಲ್ಲ!
ಹಕರಿಸಿ ಬಾಳಬೇಕಲ್ಲ!
ತಭೇದ ನಿಜ ತತ್ವಕ್ಕಿಲ್ಲ!
ವಿಶ್ವಪ್ರೇಮ ಬೆಳೆಸಬೇಕೆಲ್ಲ! (ಗು)
-ಲ್ಲ ನಿರಂಜನಾದಿತ್ಯ ಒಪ್ಪೋಲ್ಲ!!!

ನಿನ್ನ ನೀನೇ ದೇವರೆನಿಸಿಕೊಂಡಿಹೆ! (ನ)

-ನ್ನನ್ನಿನ್ನೂ ನಿನ್ನಂತೇಕೆ ಮಾಡಿಕೊಳ್ಳದಿಹೆ?
ನೀಚೋಚ್ಚವೆನ್ನದೆಲ್ಲೆಲ್ಲೂ ನೀ ತುಂಬಿಹೆ!
ನೇಮ, ನಿಷ್ಠೆಯ ಸೇವೆಗೆಡೆ ನೀಡಿಹೆ!
ದೇಹವೇ ದೇವಾಲಯವೆಂದು ಸಾರಿಹೆ!
ರ ಪ್ರಸಾದವನ್ನಿನ್ನೂ ಕೊಡದಿಹೆ! (ಧ)
-ರೆಯಾಡಳಿತ ಮಾಯೆಗೆ ವಹಿಸಿಹೆ!
ನಿಮ್ನ ವರ್ಗವೆಂದು ಕೂಗಾಡಿಸುತಿಹೆ!
ಸಿಟ್ಟಿಗೇಳಬಾರದೆಂದುಸುರುತಿಹೆ!
ಕೊಂಚವೂ ಸ್ಥಿತಿ ಬದಲಾಯಿಸದಿಹೆ! (ಆ)
-ಡಿ ಫಲವೇನಿಲ್ಲೆಂದು ಮೌನವಾಗಿಹೆ! (ಅ)
-ಹೆ ನಿರಂಜನಾದಿತ್ಯನಾಗೀಗೆಂದಿಹೆ!!!

ಹೆಜ್ಜೆ ಹೊರಗಿಟ್ಟು ನೀನು ಕೆಟ್ಟೆ! (ಗೆ)

-ಜ್ಜೆ ಕಟ್ಟಿ ಕುಣಿದ್ಕುಪ್ಪಳಿಸ್ಬಿಟ್ಟೆ!
ಹೊಲೆಗೇರಿಯಲ್ಲಿದ್ದುಕೊಂಡ್ಬಿಟ್ಟೆ!
(ಬ)ರ(ಬ)ರ್ತಾ ಹೊಲತಿ ನೀನಾಗ್ಬಿಟ್ಟೆ! (ಈ)
-ಗಿನ್ನೇನು ಗತಿಯೆಂದತ್ತುಬಿಟ್ಟೆ! (ಗು)
-ಟ್ಟು ಗುರುಕೃಪೆಯಿಂದರಿತ್ಬಿಟ್ಟೆ!
ನೀನೇ ನಾನೆಂಬಭ್ಯಾಸ ಹಚ್ಚಿಟ್ಟೆ! (ಮ)
-ನುಜ ಜನ್ಮ ಸಾರ್ಥಕಮಾಡ್ಬಿಟ್ಟೆ! (ಬೇ)
-ಕೆನಗೀ ನಿಜಸುಖವೆಂದ್ಬಿಟ್ಟೆ! (ಬ)
-ಟ್ಟೆ, ನಿರಂಜನಾದಿತ್ಯನದುಟ್ಟೆ!!!

ಕರ್ನಾಟಕ ನಾಮಕರಣ ಗುರುವಾರದಂದು! (ನಿ)

-ರ್ನಾಮವಾಗಬೇಕು ಭ್ರಷ್ಟಾಚಾರವಿಲ್ಲಿನ್ನು ಮುಂದು! (ಕಾ)
-ಟ ಕಾಳಸಂತೆಗಳದ್ದಿರಬಾರದಿಲ್ಲೆಂದೆಂದು!
ಳ್ಳಕಾಕರ ಹಾವಳಿರಬಾರದಿಲ್ಲೆಂದೆಂದು!
ನಾಸ್ತಿಕರಾಸ್ತಿಕರಾಗಿ ಬಾಳಬೇಕಿಲ್ಲೆಂದೆಂದು!
ದ, ಮತ್ಸರದಿಂದಿರದಿರಬೇಕಿನ್ನು ಮುಂದು!
ರ್ತವ್ಯನಿಷ್ಠೆಯಿರಬೇಕೆಲ್ಲರಲ್ಲಿನ್ನು ಮುಂದು! (ಕ)
-ರಣತ್ರಯ ಶುದ್ಧಿಯಿಂದ ಬದುಕಬೇಕೆಂದೆಂದು! (ಬ)
-ಣಗಳ ನಿರ್ಮಿಸಿ ಹೊಡೆದಾಡಬಾರದೆಂದೆಂದು!
ಗುರು ಹಿರಿಯರಲ್ಲಿ ಭಕ್ತಿಯಿರಬೇಕೆಂದೆಂದು! (ಆ)
-ರು ವೈರಿಗಳ ಜೈಸಿ ರಾಜ್ಯವಾಳಬೇಕೆಂದೆಂದು!
ವಾದ, ವಿವಾದಕ್ಕೆಡೆಗೊಡದಿರಬೇಕೆಂದೆಂದು!
ಗಳೆ ಹೂಡಬಾರದು ವಿದ್ಯಾರ್ಥಿಗಳೆಂದೆಂದು!
ದಂಭ, ದರ್ಪ ತೋರಬಾರದಧ್ಯಾಪಕರೆಂದೆಂದು!
ದುಡಿಯಬೇಕು ನಿರಂಜನಾದಿತ್ಯನಂತೆಂದೆಂದು!!!

ಕರೆದಾಗ ಬರದಿದ್ದಿಯಲ್ಲಾ!

ರೆಕ್ಕೆ ಹರಿದೀಗ ಬಂದೆಯಲ್ಲಾ!
ದಾಸೀ ಧರ್ಮ ಮರೆತ್ಬಿಟ್ಟಿಯಲ್ಲಾ!
ತಿ, ಮತಿ ಕೆಡಿಸ್ಕೊಂಡಿಯಲ್ಲಾ!
ದುಕು, ಬಾಳು ಕಳ್ಕೊಂಡಿಯಲ್ಲಾ!
ಸ್ತೆ ಬಿಟ್ಟೋಡಾಡಿಬಿಟ್ಟೆಯಲ್ಲಾ!
ದಿವ್ಯ ಜೀವನ ತಪ್ಪಿಹೋಯ್ತಲ್ಲಾ! (ಕ)
-ದ್ದಿತರರನ್ನವನ್ನುಂಡೆಯಲ್ಲಾ! (ಕಾ)
-ಯಕ ಸಾರ್ಥಕವಾಗಿಲ್ಲವಲ್ಲಾ! (ನ)
-ಲ್ಲಾ ನಿರಂಜನಾದಿತ್ಯ ಪ್ರಪುಲ್ಲಾ!!!

ದುರ್ಮದ ಮರ್ದನಕ್ಕೆ ಜಗದ್ಗುರು ಸಹಾಯ! (ಕೂ)

-ರ್ಮನಂತಿರುವುದಕ್ಕೆ ಜಗದ್ಗುರು ಸಹಾಯ!
ಮೆ, ಶಮಾಭ್ಯಾಸಕ್ಕೆ ಜಗದ್ಗುರು ಸಹಾಯ!
ನಶ್ಯಾಂತಿ ಲಾಭಕ್ಕೆ ಜಗದ್ಗುರು ಸಹಾಯ! (ದು)
-ರ್ದಶಾ ಪರಿಹಾರಕ್ಕೆ ಜಗದ್ಗುರು ಸಹಾಯ!
ರಜನ್ಮೋದ್ಧಾರಕ್ಕೆ ಜಗದ್ಗುರು ಸಹಾಯ! (ಬೆ)
-ಕ್ಕೆ ರೆಕ್ಕೆ ಕೀಳ್ವುದಕ್ಕೆ ಜಗದ್ಗುರು ಸಹಾಯ!
ರಾ, ಜನ್ಮ ದೂರಕ್ಕೆ ಜಗದ್ಗುರು ಸಹಾಯ!
ಗನ ಸದೃಶಕ್ಕೆ ಜಗದ್ಗುರು ಸಹಾಯ! (ಸ)
-ದ್ಗುರುಕೃಪಾ ಪಾತ್ರಕ್ಕೆ ಜಗದ್ಗುರು ಸಹಾಯ! (ದು)
-ರುದ್ದೇಶ ವಿನಾಶಕ್ಕೆ ಜಗದ್ಗುರು ಸಹಾಯ!
ಗುಣ ನಿರ್ಗುಣಕ್ಕೆ ಜಗದ್ಗುರು ಸಹಾಯ!
ಹಾಸು ಹೊಕ್ಕಾದಾತ್ಮಕ್ಕೆ ಜಗದ್ಗುರು ಸಹಾಯ! (ಜ್ಞೇ)
-ಯ ನಿರಂಜನಾದಿತ್ಯಾನಂದಾಗಲೀ ಸಹಾಯ!

ಕಟ್ಟಕಡೆಯ ತೀರ್ಮಾನವಿಂದು! (ಪ)

-ಟ್ಟ ಕಷ್ಟದ ನಿವಾರಣೆಯಿಂದು!
ರೆ ಗುರುವಿನಿಂದ ಬಂತಿಂದು! (ಬಿ)
-ಡೆ ಶ್ರೀಪಾದವ ನಾನು ಎಂದೆಂದು! (ಭ)
-ಯ ನನಗೇನೆಂದು ಬಂದೆನಿಂದು!
ತೀರ್ಥರೂಪನವನೆನಗೆಂದು! (ಕೂ)
-ರ್ಮಾದ್ಯವತಾರಗಳವನೆಂದು! (ವಿ)
-ನಯದಿಂದೆರಗಿದೆ ನಾನಿಂದು! (ಗೋ)
-ವಿಂದನೆಂದ “ನಾವಿಬ್ಬರೊಂದೆಂದು”! (ಇಂ)
-ದು ನಿರಂಜನಾದಿತ್ಯನವನೆಂದು!!!

ಅರಳಿತೊಂದಂದದ ಗುಲಾಬಿ! (ಆ)

-ರ ಕೈಗೂ ಸಿಗಲಿಲ್ಲಾ ಗುಲಾಬಿ! (ಬಾ)
-ಳಿನಾನಂದ ಪಟ್ಟಿತಾ ಗುಲಾಬಿ!
(ಕೂ)ತೊಂದೆಡೆ ಧ್ಯಾನಿಸಿತಾ ಗುಲಾಬಿ!
ದಂಭಕ್ಕೆಡೆಗೊಟ್ಟಿಲ್ಲಾ ಗುಲಾಬಿ! (ಬಂ)
-ದ ದಾರಿ ಹಿಡಿಯಿತಾ ಗುಲಾಬಿ!
ತ್ತ ಗತಿಯೆಂದಿತಾ ಗುಲಾಬಿ!
ಗುರುತೇ ಹತ್ತದಾಯ್ತಾ ಗುಲಾಬಿ! (ಲೀ)
-ಲಾನಾಟಕಕ್ಕೆ ಸಾಕ್ಷೀ ಗುಲಬಿ! (ನಂ)
-ಬಿ ನಿರಂಜನಾದಿತ್ಯಾ ಗುಲಾಬಿ!!!

ಹಳೆಯ ನಾಮ ಹೊಸ ರೂಪಿನಲ್ಲಿಂದು! (ತ)

-ಳೆವುದಿದು ನಾನಾ ರೂಪಗಳ ಮುಂದು! (ಸಾ)
-ಯದುಳಿಯುವುದಾತ್ಮಾರಾಮವೆಂದೆಂದು!
ನಾಶವಪ್ಪ ರೂಪ ನಂಬಬೇಡೆಂದೆಂದು!
ನಕಾ ಸತ್ಯದರಿವಾಗಬೇಕಿಂದು!
ಹೊಡೆದಾಟ ಹೊಟ್ಟೆ, ಬಟ್ಟೆಗಾಗಿ ಇಂದು!
ರಕಾರದ ಕೈ ಬಲಹೀನವಾಯ್ತಿಂದು!
ರೂಢಿಯಾಯ್ತೀಂದ್ರಿಯ ವಿಷಯ ವೃತ್ತಿಂದು!
ಪಿಸುಣರಿಗಗ್ರ ಸ್ಥಾನ, ಮಾನವಿಂದು!
ಟ, ವಿಟರಿಗೆ ಸನ್ಮಾನೆಲ್ಲೆಲ್ಲಿಂದು! (ಎ)
-ಲ್ಲಿಂದೆಲ್ಲಿಗೆ ಯಾತ್ರೆಂಬರಿವಿಲ್ಲ ಇಂದು! (ಇ)
-ದು ನಿರಂಜನಾದಿತ್ಯಗರಿವೆಂದೆಂದು!!!

ಸಾದರದ ಸೇವೋಪಚಾರೆನ್ನದಯ್ಯಾ!

ಯೆ ನಿನ್ನದು ನನ್ನ ಮೇಲಿರಲಯ್ಯಾ!
ಕ್ಷಣಾ ಭಾರ ಹೊತ್ತ ತಂದೆ ನೀನಯ್ಯಾ!
ನ, ಕರುಗಳ ವಧೆ ನಿಲ್ಲಿಸಯ್ಯಾ!
ಸೇಡಿನ ಮನೋಭಾವ ಕಡಿದಿಕ್ಕಯ್ಯಾ! (ಭಾ)
-ವೋದ್ವೇಗವನ್ನು ಸಮಾಧಾನ ಮಾಡಯ್ಯಾ!
ರಮಾರ್ಥದಲ್ಲಿ ಪ್ರಗತಿ ತೋರಯ್ಯಾ!
ಚಾರ್ವಾಕ ಪದ್ಧತಿಯ ಕೊಚ್ಚಿಹಾಕಯ್ಯಾ! (ಕ)
-ರೆ ನಿನ್ನ ಪಾದದಡಿಗೀಗಾಗಲಯ್ಯಾ! (ಬ)
-ನ್ನ ಪಡುತಿದೆ ಜಗವೆಲ್ಲವೀಗಯ್ಯಾ!
ತ್ತಾತ್ರೇಯ ನೀನು ನಿಜ ಗುರುವಯ್ಯಾ! (ಅ)
-ಯ್ಯಾ ನಿರಂಜನಾದಿತ್ಯ ದತ್ತ ನೀನಯ್ಯಾ!!!

ವಿಧವೆಯರೆಂದಳುವಿರೇಕಮ್ಮಾ? (ಮಾ)

-ಧವ ಧವನಾಗಿಹನೊಳಗಮ್ಮಾ!
ವೆಸನವಿದನರಿತರಿಲ್ಲಮ್ಮಾ!
ಮನವನನ್ನೇನೂ ಮಾಡನಮ್ಮಾ! (ನೂ)
-ರೆಂಟ್ದತ್ತನಾಮ ನಿತ್ಯ ಬರಿಯಮ್ಮಾ!
ಯೆ ನಿನ್ನ ಮೇಲುಂಟಾಗುವುದಮ್ಮಾ! (ಹಾ)
-ಳು ವ್ಯಾಮೋಹ ನಾಶವಾಗುವುದಮ್ಮಾ!
ವಿಧಿ ಲಿಖಿತವಾಗ ದುರ್ಬಲಮ್ಮಾ!
ರೇಚಕ, ಪೂರಕದಲ್ಲದಿರ್ಲಮ್ಮಾ!
ರ್ತವ್ಯವಿದೊಂದೇ ನಿಮಗೀಗಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಾ ಮಾಧವಮ್ಮಾ!!!

ಪ್ರಕೃತಿ ಪ್ರಗತಿಯತ್ತೊಯ್ಯುತಿದೆ! (ವಿ)

-ಕೃತಿ ವಿನಾಶದತ್ತೆಳೆಯುತಿದೆ!
ತಿಳಿಯದೇ ಎಲ್ಲಾ ಹಾಳಾಗುತಿದೆ!
ಪ್ರಯತ್ನ ಪ್ರಯಳಕ್ಕೀಗಾಗುತಿದೆ!
ರ್ವವೆಲ್ಲೆಲ್ಲೂ ತಾಂಡವಾಡುತಿದೆ!
ತಿತಿಕ್ಷಾ ಮಹತ್ವವಳಿಯುತಿದೆ!
ಮ, ನಿಯಮ ಮಾಯವಾಗುತಿದೆ! (ಇ)
-ತ್ತೊಡೆಯನಲ್ಲಿ ಕುತ್ತೆಣಿಸುತಿದೆ! (ಮೈ)
-ಯ್ಯುಡಿಗೆಯೆಲ್ಲಾ ಹೊಲಸಾಗುತಿದೆ! (ಮ)
-ತಿಗೆಟ್ಟಡಿಗೆ ಇಷ್ಟವಾಗುತಿದೆ! (ತಂ)
-ದೆ, ತಾಯಿ ನಿರಂಜನಾದಿತ್ಯಾಗಿದೆ!!!

ಬರ್ಲಿಕ್ಕೊಂದು ಯೋಗ, ಹೋಗ್ಲಿಕ್ಕೊಂದು ರೋಗ! (ಇ)

-ರ್ಲಿಕ್ಕಾಗಿ ಒಬ್ಬೊಬ್ಬರಿಗೊಂದೊಂದುದ್ಯೋಗ! (ಹ)
-ಕ್ಕೊಂದಕ್ಕೂ ಯಾರಿಗೂ ಇಲ್ಲದಿಹುದೀಗ!
ದುರ್ವಿಷಯಕ್ಕೆ ಆಸಕ್ತಿ ಹೆಚ್ಚಿತೀಗ!
ಯೋಜನೆಗಳ ಹಿನ್ನೆಲೆ ಸ್ವಾರ್ಥವೀಗ! (ಮಾ)
-ಗದ ಹಣ್ಣು, ಕಾಯಿಗೆ ಗಿರಾಕಿಯೀಗ!
ಹೋರಾಟ ಹೊಲ, ಗದ್ದೆ ಮಾಲಿಕಗೀಗ! (ಬಾ)
-ಗ್ಲಿನಿಂದಾಚೆ ಹೋದ್ರೆ ಕಳ್ಳತನವೀಗ! (ತ)
-ಕ್ಕೊಂಬವರ್ಕಳ್ಳ ಮಾಲನ್ನಧಿಕವೀಗ!
(ಸಂ)ದುದಾಯುಷ್ಯವೆಲ್ಲಾ ದುರ್ಮಾರ್ಗದಲ್ಲೀಗ!
ರೋಗಿಗಳ ಸಂಖ್ಯೆ ಹೆಚ್ಚಾಯ್ತೆಲ್ಲೆಲ್ಲೀಗ! (ಯೋ)
-ಗಭಾಗ್ಯ ನಿರಂಜನಾದಿತ್ಯನಿಗೀಗ!!!

ಶಿವಕುಮಾರ ನಗುನಗುತ ಬಂದಾ! (ಜೀ)

-ವನ ಸಮಸ್ಯೆ ಬಿಡಿಸಲೀಗ ಬಂದಾ!
ಕುಲಕೆ ಕೀರ್ತಿ ತರಬೇಕೆಲ್ಲರೆಂದಾ!
ಮಾಯೆಗೆ ಮಾರುಹೋಗಬಾರ್ದು ನೀವೆಂದಾ! (ಪ)
-ರಮ ಗುರು ಪರಮೇಶ್ವರ ತಾನೆಂದಾ!
ತಜನರಿಷ್ಟಮೂರ್ತಿಯವನೆಂದಾ!
ಗುಡಿಯವನಿಗೆಲ್ಲರ ಒಡಲೆಂದಾ! (ದಿ)
-ನ, ರಾತ್ರಿ ಪೂಜೆ ಅವಗಲ್ಲಾಗಲೆಂದಾ!
ಗುರಿ ಅವನೇ ನೀನಾಗುವುದು ಎಂದಾ!
ಡಕಬೇಡಿವನನಿನ್ನೆಲ್ಲೂ ಎಂದಾ!
ಬಂದೆನಿದಸಾರಲು ನಿಮ್ಮಲ್ಲಿಗೆಂದಾ! (ಕಂ)
-ದಾ ನಿರಂಜನಾದಿತ್ಯ ಕುಮಾರನೆಂದಾ!!!

ಇಣಿಕಿಣಿಕಿ ಕುಣಿಕೆಯೊಳಗಾಗ್ಬೇಡ! (ಕ)

-ಣಿ ಕೇಳಿ ಕಣ್ಣೀರು ಸುರಿಸಿ ಅಳಬೇಡ!
ಕಿವಿ ಆ ಮಾತಿಗೀಮಾತಿಗೆ ಕೊಡಬೇಡ! (ಮ)
-ಣಿದು ಗುರುಪಾದಕ್ಕೆ ನಮಿಸದಿರ್ಬೇಡ!
ಕಿಚ್ಚಿಗಿಂತಧಿಕ ಹೊಟ್ಟೆಕಿಚ್ಚು! ಪಡ್ಬೇಡ!
ಕುಚೋದ್ಯದಿಂದ ಯಾರನ್ನೂ ನೋಯಿಸಬೇಡ! (ಅ)
-ಣಿಮಾದ್ಯಷ್ಟ ಸಿದ್ಧಿಗಳಿಗಾಶಿಸಬೇಡ!
ಕೆಲಸದಲ್ಲಿ ಅಶ್ರದ್ಧೆ ತೋರಿಸಬೇಡ! (ಬಾ)
-ಯೊಳಾಡಿ ಮಾಡದವನುಪದೇಶ ಬೇಡ! (ನ)
-ಳ; ಹರಿಶ್ಚಂದ್ರಾದಿಗಳಂತಿರದಿರ್ಬೇಡ!
ಗಾಡಿ, ಕುದ್ರೆಗಳನ್ಯೋನ್ನತೆ ತಪ್ಪಿಸ್ಬೇಡ! (ಬಾ)
-ಗ್ಬೇಕಿವ್ಚಾಲಕನಿಚ್ಛೆಗೆ! ಮರೆಯಬೇಡ! (ಮೃ)
-ಡ ನಿರಂಜನಾದಿತ್ಯನಾಜ್ಞೆ

ಈರಬೇಡ!!!

ಗಲೀಜ್ಮಾಡ್ಬೇಡ ಮನೆಯಮ್ಮಾ! (ಮಾ)

-ಲೀಕನಿಚ್ಛಾವರ್ತಿಯಾಗಮ್ಮಾ! (ಮೋ)
-ಜ್ಮಾಡಿ ಕಾಲ ಕಳೆಯ್ಬೇಡಮ್ಮಾ! (ಇ)
-ಡ್ಬೇಕನನ್ಯ ಭಕ್ತಿಯನ್ನಮ್ಮಾ! (ಮಾ)
-ಡಬಾರದು ಮಿಥ್ಯಾರೋಪಮ್ಮಾ!
ನೋವಾಕ್ಕಾಯೊಂದಾಗ್ಬೇಕಮ್ಮಾ!
ನೆನೆಯ್ಬೇಕವನ ಪಾದಮ್ಮಾ! (ಮಾ)
-ಯವಾಗ್ವುದೈಹಿಕ ಮೋಹಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾತಮ್ಮಾ!!!

ಅಡಿಯಾಳು ಮಹಾಬಲೇಶ್ವರಗೆ ನೀನಾಶಾ! (ಅ)

-ಡಿಗಡಿಗೆ ನೆನೆಯಬೇಕವನ ಪಾದಾಶಾ!
ಯಾಗ ಯೋಗಗಳಿಗಿಂತತ್ಯಧಿಕವಿದಾಶಾ!
(ಬಾ)ಳು ಹೊನ್ನಾಗಲವನ ಕೃಪೆ ಸದಾ ಬೇಕಾಶಾ!
ದನ ಮರ್ದನ ಸ್ವಾಮಿ ಮಹಾಬಲೇಶಾಶಾ!
ಹಾಡಿ, ಹೊಗಳಿ ಒಲಿಸಿಕೊಳ್ಳವನನ್ನಾಶಾ!
ಹು ಕರುಣಾಳು ಕೈಲಾಸಾಧಿಪತಿಯಾಶಾ!
ಲೇಸು ನಿನಗಹುದವನಿಂದ ನಂಬಿರಾಶಾ! (ನ)
-ಶ್ವರದಾಸೆಗಳ ಬಿಟ್ಟವನ ಪೂಜಿಸಾಶಾ! (ವ)
-ರ ಗುರುಸ್ವರೂಪನವನದೆಂದರಿ ನೀನಾಶಾ! (ಹ)
-ಗೆತನವಾರಲ್ಲೂ ಸಾಧಿಸದಿರಬೇಕಾಶಾ!
ನೀಚೋಚ್ಚವೆನ್ನದೆ ಸೇವೆ ಸಾಗುತಿರಲಾಶಾ!
ನಾಮವನದು ಪಾವನವೆಂದು ಸ್ಮರಿಸಾಶಾ! (ಈ)
-ಶಾ ನಿರಂಜನಾದಿತ್ಯ ಸದ್ಗುರು ಸರ್ವೇಶಾ!!!

ಮಹಾಬಲಾನ್ವರ್ಥವಾಗಲಿ!

ಹಾನಿ, ವೃದ್ಧಿ, ಸಮವಾಗಲಿ!
ಯಲಾಡಂಬರ ಸಾಯಲಿ!
ಲಾವಣ್ಯಾತ್ಮನದ್ದು ಹೆಚ್ಚಲಿ! (ಅ)
-ನ್ವಯ ಸಮನ್ವಯವಾಗಲಿ! (ಸಾ)
-ರ್ಥಕ ನರಜನ್ಮವಾಗಲಿ!
ವಾಙ್ಮನವೆರಡೊಂದಾಗಲಿ!
ರ್ವದ ನಿಗ್ರಹವಾಗಲಿ! (ಶೂ)
-ಲಿ ನಿರಂಜನಾದಿತ್ಯಾಳಲಿ!!!

ಕೆಂಡೆನಾನಾಶಂಕರನಾ! (ಎ)

-ಡೆಬಿಡದೆಲ್ಲೆಲ್ಲಿಹನಾ!
ನಾರೀಮನವಾಳುವನಾ!
ನಾಗೇಂದ್ರಿಯ ನಿಗ್ರಹನಾ!
ಶಂಕೆ ಏನೇನಿಲ್ಲದನಾ!
ಲಿಮಲ ಸಂಹರನಾ! (ವ)
-ರಗುರು ತಾನಾದವನಾ! (ನಾ)
-ನಾ ನಿರಂಜನಾದಿತ್ಯನಾ???

ಅಜ್ಜಿಯ ಬಾಳು ಆದರ್ಶವಮ್ಮಾ! (ಮ)

-ಜ್ಜಿಗೆಯಲ್ಲಿ ಬೆಣ್ಣೆಯಿದ್ದಂತಮ್ಮಾ!
ಮನ ಭಯಾಕೆಗಿಲ್ಲವಮ್ಮಾ!
ಬಾಯ್ಕೈ ಅವಳದು ಶುದ್ಧವಮ್ಮಾ! (ಹು)
-ಳುಕು ಬುದ್ಧಿಯಿಲ್ಲವಳಿಗಮ್ಮಾ!
ತ್ಮೀಯರೆಲ್ಲರವಳಿಗಮ್ಮಾ!
ತ್ತನವಳಿಗೆ ಗುರುವಮ್ಮಾ! (ದ)
-ರ್ಶನದಿಂದವಳು ಧನ್ಯಳಮ್ಮಾ! (ಭ)
-ವ ಸಾಗರದಿಂದೀಗ ಪಾರಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯ ದತ್ತಮ್ಮಾ!!!

ದೈವೀಗುಣ ಸಂಪನ್ನನಾಗು!

ವೀರ ಮಾರುತಿಯೇ ನೀನಾಗು!
ಗುರುವಿಗೆ ಗುಲಾಮನಾಗು! (ಪ್ರಾ)
-ಣನಾಥನಿಚ್ಛಾವರ್ತಿಯಾಗು!
ಸಂದೇಹ ಪಡದವನಾಗು!
ರಮಾರ್ಥಾನುಭವಿಯಾಗು! (ನಿ)
-ನ್ನನ್ನು ನೀನರಿತವನಾಗು!
ನಾಮಸ್ಮರಣಾಸಕ್ತನಾಗು! (ಆ)
-ಗು ನಿರಂಜನಾದಿತ್ಯನಾಗು!!!

ಸಂದೇಶ ಸಾಹಿತ್ಯ ಸಂಜೀವಗಾತಿಥ್ಯ!

ದೇವರ ಮಕ್ಕಳೆಲ್ಲರಿಗಿದಗತ್ಯ!
ರಣೆನಬೇಕಾ ಶ್ರೀಪಾದಕ್ಕೆ ನಿತ್ಯ!
ಸಾಯುಜ್ಯ ಸಾಧನೆಯಿಂದ ಕೃತಕೃತ್ಯ!
ಹಿಡಿತದಲ್ಲಿಡಬೇಕಿಂದ್ರಿಯ ಮರ್ತ್ಯ!
ತ್ಯಜಿಸಬೇಕು ದುಸ್ಸಂಗವನ ಭೃತ್ಯ!
ಸಂಕೀರ್ತನೆಯಿಂದ ಸರ್ವಸಿದ್ಧಿ! ಸತ್ಯ!
ಜೀವ, ಶಿವರಲಾಗುವುದೈಕ್ಯಮತ್ಯ!
ರ ಗೀತಾಮೃತವಿತ್ತ ಕೃಷ್ಣ ಸ್ತುತ್ಯ!
ಗಾಳಿ ಬಂದಾಗ ತೂರಿಕೊಂಬಾ ಸಾರಥ್ಯ!
ತಿಳಿಗೇಡಿ ಮಾಡುವನು ಕ್ರೂರಕೃತ್ಯ! (ಮಿ)
-ಥ್ಯದಲ್ಲೂ ನಿರಂಜನಾದಿತ್ಯಾಧಿಪತ್ಯ!!!

ನಾ ಬಿದ್ದೆ ಪಾದಕ್ಕೆ, ನೀನೆದ್ದೆ ಮೇಲಕ್ಕೆ!

ಬಿಸಿಲಲ್ಲೆನ್ನ ನಿಲ್ಲಿಸಿದುದೇತಕ್ಕೆ?
(ಒ)ದ್ದೆಯಾಯಿತು ಭೂಮಿ ಬೆವರು ಜಲಕ್ಕೆ!
ಪಾತ್ರ ನಿನ್ನದೆ ಮುಖ್ಯ ಈ ನಾಟಕಕ್ಕೆ!
ತ್ತಾ! ನೀನಾಡದಿರುವುದೇತಕ್ಕೆ? (ಅ)
-ಕ್ಕೆ ಮಂಗಳವೆಲ್ಲಾ ಮಾನವ ಕುಲಕ್ಕೆ!
ನೀಡು ಮಾರ್ಗದರ್ಶನವೀಗ ಲೋಕಕ್ಕೆ!
ನೆತ್ತಿಗೆ ಹತ್ತಿದೆ ಪಿತ್ಥ ಸಮಾಜಕ್ಕೆ! (ಬಿ)
-ದ್ದೆನ್ನನ್ನೆಬ್ಬಿಸು ಮದ್ದಿತ್ತೆಲ್ಲಾ ರೋಗಕ್ಕೆ!
ಮೇಲೇಳದಿದ್ದರಪಕೀರ್ತಿ ಪಾದಕ್ಕೆ!
ಕ್ಷ್ಮೀಶ ನಿನೇ ಗತಿ ಲಕ್ಷ ಜೀವಕ್ಕೆ! (ಅ)
-ಕ್ಕೆ, ನಿರಂಜನಾದಿತ್ಯನಂದವೆಲ್ಲಕ್ಕೆ!!!

ದುಃಖ ನಿವಾರಣೆಯಾಗುವುದೆಂದೆಲ್ಲಿ?

ಗವಾಹನನಾಗಿ ಬಂದು ನಿಂದಲ್ಲಿ!
ನಿರಂಜನ ನೀನೆಂಬಾಶೀರ್ವಾದಾದಲ್ಲಿ!
ವಾಙ್ಮಾಧುರ್ಯದಿಂದ ತೃಪ್ತಿಯಿತ್ತಂದಿಲ್ಲಿ!
ವಿ ಚರಿತ್ರೆ ಸತ್ಯವೆಂದರಿತಲ್ಲಿ! (ಹೊ)
-ಣೆಗಾರ ತಾನೆಂದಾತ ಧೈರ್ಯ ಕೊಟ್ಟಲ್ಲಿ!
ಯಾರೇನೆಂದರೂ ಭಕ್ತಿ ಕೆಡದಿದ್ದಲ್ಲಿ!
ಗುರುಸೇವೆ ಮಾಡಿ ದಣಿಯದಿದ್ದಲ್ಲಿ! (ಯಾ)
-ವುದರಾಸೆಯೂ ಇಲ್ಲಿದಾದಂದೆಲ್ಲೆಲ್ಲಿ! (ಎಂ)
-ದೆಂದೂ ಹಿಂದೂ ಹಿಂದೂ ಧರ್ಮ ವಿರಾಜಿಸುವಲ್ಲಿ! (ತಂ)
-ದೆ, ತಾಯಿ ಲೋಕಕ್ಕೊಬ್ಬನೆಂದರಿತಲ್ಲಿ! (ಎ)
-ಲ್ಲಿ? ನಿರಂಜನಾದಿತ್ಯನೊಲಿದಂದಿಲ್ಲಿ!!!

ಜನಕನಿವ ಶ್ರೀ ಕೃಷ್ಣರಾಯ!

ಸುನಗುತಲಿರುವಾ ರಾಯ!
ರ್ತವ್ಯ ನಿಷ್ಠಾಗ್ರೇಸರಾ ರಾಯ!
ನಿತ್ಯಾನಿತ್ಯಜ್ಞಾನೀ ಕೃಷ್ಣರಾಯ!
ರಗುರು ಸೇವಾಸಕ್ತಾ ರಾಯ!
ಶ್ರೀನಿಧಿ ಅಮರಜೇಶಾ ರಾಯ!
ಕೃಪಣತ್ವವಿಲ್ಲದವಾ ರಾಯ! (ಪೂ)
-ಷ್ಣನಾರಾಧಕಾ ಕೃಷ್ಣರಾಯ!
ರಾಗ, ದ್ವೇಷ ರಹಿತನಾ ರಾಯ! (ಪ್ರಿ)
-ಯ ನಿರಂಜನಾದಿತ್ಯಗಾ ರಾಯ!!!

ಕೃಪೆಯಿಂದ ಕೃತಾರ್ಥನಾಗ್ಬೇಕು!

ಪೆರರವಗಣಾಡದಿರ್ಬೇಕು! (ಬಾ)
-ಯಿಂದ ನಾಮಾಮೃತ ಕುಡಿಯ್ಬೇಕು!
ರ್ಶನದಿಂದ ಧನ್ಯನಾಗ್ಬೇಕು!
ಕೃತಕಕ್ಕೆ ಹುಚ್ಚಾಗದಿರ್ಬೇಕು!
ತಾಯ್ತಂದೆ ಗುರುವೆಂದರಿಯ್ಬೇಕು! (ಸಾ)
-ರ್ಥಕವನ ಭಕ್ತಿಯಿಂದಾಗ್ಬೇಕು!
ನಾನಾ ಆಸೆಗಳಳಿದಿರ್ಬೇಕು! (ಆ)
-ಗ್ಬೇಕಹಂಕಾರ ಬಿಟ್ಟೊಂದಾಗ್ಬೇಕು! (ಓ)
-ಕುಳಿ ನಿರಂಜನಾದಿತ್ಯಾಡ್ಬೇಕು!!!

ಭವಿಷ್ಯ ಕೇಳಿ ಭಯಪಡಬೇಡ!

ವಿಷಯವಾಸನೆ ಬೆಳೆಸಬೇಡ! (ಶಿ)
-ಷ್ಯವೃತ್ತಿಯಲ್ಲಿ ಉದಾಸೀನ ಬೇಡ!
ಕೇಡು ಯಾರಿಗೂ ಎಂದೂ ಮಾಡಬೇಡ! (ತಾ)
-ಳಿದವ ಬಾಳ್ಯಾನು! ಮರೆಯಬೇಡ!
ಗವದ್ಭಕ್ತಿ ಬಿಟ್ಟು ಕೆಡಬೇಡ!
ಕ್ಷಿಣೀಗಾರರನ್ನು ನಂಬಬೇಡ!
ರಮಾರ್ಥದಲ್ಲವಿಶ್ವಾಸ ಬೇಡ! (ಒ)
-ಡವೆವಸ್ತುಗಳಿಗಾಶಿಸಬೇಡ!
ಬೇಜಾರೆಂದು ಕರ್ತವ್ಯ ಬಿಡಬೇಡ! (ಕಾ)
-ಡ, ನಿರಂಜನಾದಿತ್ಯನ್ಯಾಯ ಮಾಡ!!!

ನಿನ್ನಿಷ್ಟವೆಂದಿಹೆನಿಲ್ಲಿ ನಾನು! (ನ)

-ನ್ನಿಯನಾಡುವವನಲ್ಲ ನಾನು! (ಅ)
-ಷ್ಟಮದಗಳ ಸುಟ್ಟವ ನಾನು!
ವೆಂಕಟೇಶಂಬರೇಶೆಂಬೆ ನಾನು!
ದಿವ್ಯನಾಮಕ್ಕೆ ಶರಣು ನಾನು!
ಹೆಬ್ಬಯಕೆ ಸಲಿಸೆಂಬೆ ನಾನು!
ನಿತ್ಯ ನಿಯಮ ಬಿಟ್ಟಲ್ಲ ನಾನು! (ಚೆ)
-ಲ್ಲಿಹೆನು ಬಿಸಿ ಬೆವರ ನಾನು!
ನಾನೂ, ನೀನೂ ಒಂದೆಂದಿಹೆ ನಾನೂ! (ನೀ)
-ನು ನಿರಂಜನಾದಿತ್ಯಾತ್ಮ ನಾನು!!!

ಮರೆಯದಿರೊ ನಿರಂಜನನಾ!

ರೆಪ್ಪೆ ತೆರದೆಲ್ಲಾ ತೋರ್ಪವನಾ!
ಮನಿಗೂ ತಂದೆಯಾದವನಾ!
ದಿವ್ಯಜ್ಞಾನ ಸ್ವರೂಪದವನಾ!
ರೋಗಕ್ಕಂತಕನಾಗಿರ್ಪವನಾ!
ನಿತ್ಯ ನೇಮ ನಿಷ್ಟಾಗ್ರೇಸರನಾ!
ರಂಗುರಂಗಾಗಿ ತೋರುವವನಾ!
ರನಾಗಿಳೆಯಲ್ಲಿರ್ಪವನಾ! (ತಾ)
-ನಾ ನಿರಂಜನಾದಿತ್ಯಾಗಿಹನಾ!!!

ಸ್ಪೂರ್ತಿ ಕೊಟ್ಟು ಬರೆಸಬೇಕಪ್ಪ! (ಕೀ)

-ರ್ತಿ, ಅಪಕೀರ್ತಿ ಶ್ರೀಪಾದಕ್ಕಪ್ಪ!
ಕೊಳೆ ತೊಳೆದುಳಿಯಬೇಕಪ್ಪ! (ಕ)
-ಟ್ಟುಪಾಡುಗಳ ಕಟ್ಟಿಟ್ಟೆನಪ್ಪ!
ರೆದಂತೆ ನಡೆಯಬೇಕಪ್ಪ!
ರೆಕ್ಕೆ ಪುಕ್ಕ ಕೀಳಬಾರದಪ್ಪ!
ಟೆ ಗುಣ ಬಡಿಸಬೇಕಪ್ಪ!
ಬೇಡದೇ ಪ್ರಸಾದ ಬರಲಪ್ಪ!
ಥೆಯಾದಿಮಧ್ಯಾಂತಕ್ಕೊಬ್ಬಪ್ಪ! (ಅ)
-ಪ್ಪ ನಿರಂಜನಾದಿತ್ಯ ನೀನಪ್ಪ!!!

ನಿರಂಜನಾದಿತ್ಯ ಕಿರಣಕ್ಕೆ ಮೈಯ್ಯೊಡ್ಡು!

ರಂಗನಾಥಗದರಿಂದ ಹೋಯ್ತು ಮೈ ಜಡ್ಡು!
ರಾಜನ್ಮಕ್ಕೊಳಗಾಗಿಹ ನರ ಗೊಡ್ಡು!
ನಾಮಸ್ಮರಣಾನುಗ್ರಹಕ್ಕೆ ಸೆರಗೊಡ್ಡು!
ದಿವ್ಯಾತ್ಮಾನಂದ ಸುಖಕ್ಕೆ ಬೇಕಿಲ್ಲ ದುಡ್ಡು!
ತ್ಯಜಿಸಬೇಕಿರ್ಷಾಸೂಯೆ ಮಾನವ ಹೆಡ್ಡು!
ಕಿರುಕುಳವಿತ್ತರೆ ನಾಶ ಕಣ್ಣು ಗುಡ್ಡು!
ಮಣನಿಂದಾಗ ಸಿಗದು ಸಿಹಿ ಲಡ್ಡು! (ಗ)
-ಣಪತಿಯ ಪ್ರಸಾದಕ್ಕೆ ಸದಾ ಕೈಯೊಡ್ಡು! (ಬೆ)
-ಕ್ಕೆಯೆಂಬುದದೊಂದು ಜನ್ಮಜನ್ಮದ ಜಡ್ಡು!
ಮೈ, ಕೈ ತೊಳೆದ ಮಾತ್ರಕ್ಕೆ ಹೋಗದಾ ಜಿಡ್ಡು! (ಹೊ)
-ಯ್ಯೊಳಗೆ ಜ್ಞಾನಾಮೃತಾ ಮೇಲೆ ಪಣವೊಡ್ಡು! (ಒ)
-ಡ್ಡು! ನಿರಂಜನಾದಿತ್ಯಾನಂದಕ್ಕೆದೆಯೊಡ್ಡು!!!

ಕಷ್ಟದಾರ್ಜನೆ ಇಷ್ಟಮೂರ್ತಿಯ ನೇವೇದ್ಯಕ್ಕೆ! (ದು)

-ಷ್ಟರಿಂದವರ ರಕ್ಷಣೆ ಸದಾತನಿಂದಕ್ಕೆ!
ದಾಯಾದಿ ಮತ್ಸರಕ್ಕವಕಾಶ ಬೇಡದಕ್ಕೆ! (ಆ)
-ರ್ಜವಕ್ಕೆ ಎಂದೆಂದಿಗೂ ವಿಜಯಮಾಲೆಯಕ್ಕೆ!
ನೆಪಮಾತ್ರಕ್ಕೀ ಶರೀರವೆಂಬ ಅರಿವಕ್ಕೆ!
ದರಿಂದ ಶಾಂತಿಸಾಧನೆ ಸತತವಕ್ಕೆ! (ಇ)
-ಷ್ಟಬಾಂಧವ ಸರ್ವಾಂತರ್ಯಾಮಿ ಸದ್ಗುರುವಕ್ಕೆ!
ಮೂರು ಲೋಕದ ಸುಖಕ್ಕೂ ತಿಲಾಂಜಲಿಯಕ್ಕೆ! (ಸ್ಫೂ)
-ರ್ತಿ ನಾಮಸಂಕೀರ್ತನೆಗೆಲ್ಲಕ್ಕೂ ಪ್ರಾಪ್ತಿಯಕ್ಕೆ!
ಮ ನಿಯಮಾದ್ಯಭ್ಯಾಸಕ್ಕನುಗ್ರಹವಕ್ಕೆ!
ನೇರ ದರ್ಶನದಿಂದೆಲ್ಲರೂ ಪಾವನರಕ್ಕೆ!
ವೇಶ್ಯಾವೃತ್ತಿಗಲ್ಲೆಲ್ಲೂ ಕೊನೆಗಾಲವೀಗಕ್ಕೆ! (ಗ)
-ದ್ಯ, ಪದ್ಯಗಳಿಂದಾತ್ಮಾರಾಮನ ಸ್ತೋತ್ರವಕ್ಕೆ! (ಅ)
-ಕ್ಕೆ ನಿಅಂಜನಾದಿತ್ಯಾನಂದವೆಲ್ಲಾ ಲೋಕಕ್ಕೆ!!!

ನಿರಂಜನಾದಿತ್ಯ ಕಿರಣ ನಾಮಕರಣ!

ರಂಗನಾಥನಿಗಿದು ಪಂಡಿತರಾಭರಣ!
ನಜೀವನಕ್ಕಿದರಗತ್ಯಸಾಧಾರಣ!
ನಾನಾ ಪಂಥಗಳಿಗಿದೊಳ್ಳೇ ವಾತಾವರಣ!
ದಿಕ್ಕುದಿಕ್ಕುಗಳಲ್ಲೂ ಆಗಬೇಕೀ ಧಾರಣ!
ತ್ಯಜಿಸದಿದ್ದರೆ ದ್ವೇಷ ಮೆಚ್ಚ ಮಾರಮಣ!
ಕಿನ್ನರಿಜೋಗಿಯಿಂದಾಯ್ತಿಲಿಗಳ ಮರಣ!
ಕ್ಕಸರ ನಾಶಕ್ಕವರ ಗುಣ ಕಾರಣ! (ಗ)
-ಣರಾಜ್ಯದಲ್ಲಾಗಬೇಕೀಗ ಶುದ್ಧೀಕರಣ!
ನಾಳೆಗೆಂದರಾಗುವುದಿಂದು ಪ್ರಾಣಹರಣ!
ಡದಿ, ಮಕ್ಕಳಾಸೆಯಿಂದಾಗಿದೆ ನಿತ್ರಾಣ!
ರ್ಮ ಶುದ್ಧನಿಗೆ ತಗಲದು ರಾಮಬಾಣ! (ವ)
-ರ ವಿಭೀಷಣನ ದಾರಿ ಹಿಡಿದವ ಜಾಣ! (ಗ)
-ಣಪ ನಿರಂಜನಾದಿತ್ಯನರಿವ ಶರಣ!!!

ಸ್ವಾರ್ಥವೇನಿಹುದು ಗಣಪತಿಗೆ? (ಅ)

-ರ್ಥ, ಕಾಮಗಳು ಬೇಕಿಲ್ಲವನಿಗೆ!
ವೇಷ, ಭೂಷಣ ನಮ್ಮಿಂದವನಿಗೆ!
ನಿಸ್ವಾರ್ಥ ಸೇವೆಯೇ ಸಾಕವನಿಗೆ!
ಹುಸಿ ಮಾಯೆ ಲಕ್ಷ್ಯವಿಲ್ಲವನಿಗೆ!
ದುರಿತ ದೂರದ ಕಾರ್ಯ ಅವನಿಗೆ!
ಗನ ಸದೃಶ ಭಾವವನಿಗೆ! (ತೃ)
-ಣಸಮಾನ ಶತ್ರುಗಳವನಿಗೆ!
ತಿತಪಾವನ ನಾಮವನಿಗೆ!
ತಿಳಿದಿದ ಶರಣಾಗವನಿಗೆ!
ಗೆಳೆಯ ನಿರಂಜನಾದಿತ್ಯನಿಗೆ!!!

ಬರುವುದುಂಟೇ ಮೈಮೇಲೆ ದೇವರು?

ರುಜುಮಾರ್ಗಕ್ಕೊಲಿವ ದೇವರು! (ಬೇ)
-ವು ಬೆಳೆಗೆ ಮಾವು ಕೊಡ ದೇವರು!
ದುಂಡಾವರ್ತನೆಗೆ ದಕ್ಕ ದೇವರು!
ಟೇಕಕ್ಕೆ ತಕ್ಕಂತೆ ಹೊಲಿವ ದೇವರು!
ಮೈಮನ ಶುಚಿಯಾದವ ದೇವರು!
ಮೇಷ,

ಈನಕ್ಕಗೋಚರ ದೇವರು!
ಲೆಗ್ಗೆಹತ್ತಿ ಕುಣಿದ್ರೆಂಥಾ ದೇವರು?
ದೇವತ್ವಕ್ಕೆ ಧಕ್ಕೆ ಅಂಥಾ ದೇವರು!
ರ ಗುರುದತ್ತ ನಿಜ ದೇವರು! (ಗು)
-ರುಶ್ರೀನಿರಂಜನಾದಿತ್ಯ ದೇವರು!!!

ಊಹಿಸುವುದೊಂದಾಗುವುದಿನ್ನೊಂದು!

ಹಿತೈಷೀಶ್ವರನೆಂದರಿನ್ನು ಮುಂದು!
ಸುಖ, ದುಃಖವನ ಪ್ರಸಾದವೆಂದು! (ಆ)
-ವುದೂ ಬೇಡೆನಗೆಂದಿರು ಎಂದೆಂದು!
ದೊಂಬಿ, ದರೋಡೆ ಮಾಡಬೇಡೆಂದೆಂದು!
ದಾಸಾನುದಾಸನಾಗಿ ಬಾಳೆಂದೆಂದು!
ಗುಹ್ಯಾಚಾಪಲ್ಯಕ್ಕಾಳಾಗ್ಬೇಡೆಂದೆಂದು! (ಸಾ)
-ವು ಇಲ್ಲದಾತ್ಮ ನೀನೆಂದಿರೆಂದೆಂದು!
ದಿವ್ಯ ನಾಮ ಜಪ ಬಿಡ್ಬೇಡೆಂದೆಂದು! (ಹ)
-ನ್ನೊಂದು ಜೈಸಿ ಹನ್ನೆರಡಾಗೆಂದೆಂದು! (ಬಂ)
-ದು ನಿರಂಜನಾದಿತ್ಯನಾಗೆಂದೆಂದು!!!

ರತ್ನಗಂಬಳಿ ನೋಟಕ್ಕಾನಂದ! (ಯ)

-ತ್ನ ಫಲಿಸಿದಾಗ ಮೌನಾನಂದ!
ಗಂಟೆ ಬಾರ್ಸಿದಾಗ ಪೂಜಾನಂದ!
ಯಲಾಡಂಬರ ಮಿಥ್ಯಾನಂದ! (ಬಾ)
-ಳಿಗೆ ತೃಪ್ತಿಯೇ ಮಹದಾನಂದ!
ನೋವು ಬಂದಾಗ ಸಹನಾನಂದ! (ಭಂ)
-ಟ ರಾಮನಿಗಾದ್ರೆ ಬ್ರಹ್ಮಾನಂದ! (ಹೊ)
-ಕ್ಕಾಗ ಕಾಮಬಾಣೇಂದ್ರಿಯಾನಂದ!
ನಂದಕಂದನ ಗೀತಾತ್ಮಾನಂದ!
ತ್ತ ನಿರಂಜನಾದಿತ್ಯಾನಂದ!!!

ನಿರ್ವಿಘ್ನವಾಗಿ ಸಾಗಲಿ ಯಾತ್ರೆ! (ಉ)

-ರ್ವಿಯಲ್ಲೇ ನಾಕ, ನರಕ ಯಾತ್ರೆ! (ವಿ)
-ಘ್ನರಾಜಗಾನಂದವಾಗ್ಲೀ ಯಾತ್ರೆ!
ವಾಗ್ವಾದವಿಲ್ಲದೇ ಆಗ್ಲೀ ಯಾತ್ರೆ!
ಗಿರಿಧರನಿಗಾಗ್ಯಾಗ್ಲೀ ಯಾತ್ರೆ!
ಸಾಯುಜ್ಯ ಸಂಪಾದನೆಗೀ ಯಾತ್ರೆ! (ನ)
-ಗ ನಾಣ್ಯದಾಸೆಯಿದ್ದ್ರಾಗ್ದೀ ಯಾತ್ರೆ! (ಅ)
-ಲಿಪ್ತ ಜೀವಿಗಿದಾದರ್ಶಯಾತ್ರೆ!
ಯಾತ್ರೆ! ಜೀವನ ವಿಜಯ ಯಾತ್ರೆ! (ನಿಂ)
-ತ್ರೆ ನಿರಂಜನಾದಿತ್ಯಗೆ ಜಾತ್ರೆ!!!

ಮಾನವನ ಮಾತಿಗೇನು ಬೆಲೆ?

ರಹರಿ ಕೃಪೆಗತೀ ಬೆಲೆ!
ಸ್ತ್ರ, ಭೂಷಣಕ್ಕೇನಲ್ಲಾ ಬೆಲೆ!
ಡೆ, ನುಡಿಯೊಂದಾದರಾ ಬೆಲೆ!
ಮಾನಾಪಮಾನ ಸಮಕ್ಕಾ ಬೆಲೆ!
ತಿತಿಕ್ಷಾಭ್ಯಾಸಕ್ಕಮಿತ ಬೆಲೆ!
ಗೇಯದವಗೊದಗದಾ ಬೆಲೆ!
ನುರಿತ ಪಾಂಡಿತ್ಯಕ್ಕಿಲ್ಲಾ ಬೆಲೆ!
ಬೆಕ್ಕೆ ಸೊಕ್ಕಡಗಲತಿ ಬೆಲೆ! (ಬೆ)
-ಲೆ ನಿರಂಜನಾದಿತ್ಯಾತ್ಮ ಲೆನೆ!!!

ಸಂಕಲ್ಪ ಸಡಿಲಾಯಿತು!

ರುಣೆ ತೋರಬೇಕಾಯ್ತು! (ಅ)
-ಲ್ಪತನ ಬಿಡಬೇಕಾಯ್ತು!
ಹಕಾರಗತ್ಯವಾಯ್ತು! (ಬ)
-ಡಿಸಿದ್ದನ್ನುಣ್ಣಬೇಕಾಯ್ತು!
ಲಾಭವಿದರಿಂದುಂಟಾಯ್ತು! (ತಾ)
-ಯಿ ಕರುಳು ತಣ್ಣಗಾಯ್ತು! (ಇಂ)
-ತು ನಿರಂಜನಾದಿತ್ಯಾಯ್ತು!!!

ಹುಟ್ಟು ಸಾವಿನ ಬಾಳಲ್ಲರ್ವತ್ತೇಳಾಯ್ತು! (ಜು)

-ಟ್ಟು, ಜನಿವಾರ ಕಿತ್ತು ಎಸೆದದ್ದಾಯ್ತು!
ಸಾಕಾರ, ನಿರಾಕಾರ ಸಾಧನೆಯಾಯ್ತು!
ವಿಕಲ್ಪ, ಸಂಕಲ್ಪ ಬೇಡೆಂಬಅರಿವಾಯ್ತು!
ಶ್ವರದಾಸೆಗೆ ಮನಸ್ಸೋಡದಾಯ್ತು!
ಬಾಲ್ಯಾದ್ಯವಸ್ಥೆ ದೇಹದಲ್ಲಿ ಕಂಡಾಯ್ತು! (ತ)
-ಳಮಳಕ್ಕೀಗವಕಾಶವಿಲ್ಲದಾಯ್ತು! (ಎ)
-ಲ್ಲವನು ಬಲ್ಲ ಗುರುಪಾದ ಸೇರ್ಯಾಯ್ತು! (ಸ)
-ರ್ವಂತರ್ಯಾಮಿ ತಾನೆಂಬುಪದೇಶಾಯ್ತು! (ಚಿ)
-ತ್ತೇಕಾಗ್ರತೆಯಿಂದಿದ ಮನಗಂಡಾಯ್ತು! (ಗೋ)
-ಳಾಡುತ್ತಿದ್ದ ಜೀವನೋದ್ಧಾರವಿಂತಾಯ್ತು! (ಆ)
-ಯ್ತು, ನಿರಂಜನಾದಿತ್ಯಾನಂದ ತಾನಾಯ್ತು!!!

ಸದಾ ಇರಲಿ ಶಂಕರ ಕೃಪಾ!

ದಾರಿದೀಪವಾಗಿರಲೀ ಕೃಪಾ!
ಹ ಪರ ಸುಖಾಕಾರೀ ಕೃಪಾ!
ಜ್ಜು, ಸರ್ಪ ಭ್ರಾಂತಿಹರಾ ಕೃಪಾ!
ಲಿಪ್ತನಲಿಪ್ತ ಗೈವುದೀ ಕೃಪಾ!
ಶಂಕೆಗಂಕುಶಾ ಶಂಕರ ಕೃಪಾ!
ರಿವದನನುತ್ಪತ್ತೀ ಕೃಪಾ! (ವ)
-ರರ್ಧನಾರೀಶ್ವರವಾಯ್ತಾ ಕೃಪಾ!
ಕೃಪಾತ್ಮಕೃಪಾ ಶಂಕರ ಕೃಪಾ! (ಅ)
-ಪಾರಾ, ನಿರಂಜನಾದಿತ್ಯಕೃಪಾ!!!

ಶಂಕರ ಕೃಪಾ ಚಿರಕಾಲವಿರಲಿ!

ರ್ತವ್ಯದತ್ತ ಗಮನ ಹರಿಸಲಿ!
ತಿಪತಿಯ ಸಂಬಂಧ ತಪ್ಪಿಸಲಿ!
ಕೃತಿಯಿಲ್ಲದ್ವೈತತತ್ವ ಬೆಳಗಲಿ!
ಪಾಷಂಡ ಮತಗಳಳಿದು ಹೋಗಲಿ!
ಚಿತ್ತಶುದ್ಧಿ ನಿತ್ಯಾನಂದಪ್ರದವಾಗಲಿ!
ಘುರಾಮರಾಜ್ಯಾನುಭವವಾಗಲಿ!
ಕಾಮಕೋಟ ಪೀಠದಾಸೆ ಬೇಡಾಗಲಿ!
ವಿರಕ್ತಭಾವಕ್ಕೆ ವಿಜಯವಾಗಲಿ!
ಜತಾದ್ರಿ ನಮ್ಮ ವಾಸಸ್ಥಾನವಾಗಲಿ! (ಕ)
-ಲಿಯ ನಿರಂಜನಾದಿತ್ಯನೋಡಿಸಲಿ!!!

ಶಂಕರ ಕೃಪೆಯ ಪಡೆಯಿರೆಲ್ಲಾ!

ಲಿಮಲ ಹರವಿದರಿಂದೆಲ್ಲಾ!
ಮೇಶ, ಉಮೇಶ, ಭೇದದಕಿಲ್ಲಾ!
ಕೃಪಣತನದ ಸೋಂಕೊಂದಿಷ್ಟಿಲ್ಲಾ!
ಪೆರರ್ತನ್ನವರೆಂಬ ಭೇದವಿಲ್ಲಾ!
ಮನ ಭಯವಂತೂ ಇಲ್ಲವೇ ಇಲ್ಲಾ!
ತಿತರೂ ಪಾವನರಪ್ಪರೆಲ್ಲಾ! (ಹೊ)
-ಡೆವ, ಬಡಿವ ಉದ್ಯೋಗದಕಿಲ್ಲಾ! (ಬಾ)
-ಯಿ ಬೊಗಳೆಯನ್ನಿದಿಚ್ಚಿಪುದಿಲ್ಲಾ! (ಮೆ)
-ರೆವ ಗಣಪತಿದರಿಂದೆಲ್ಲೆಲ್ಲಾ! (ಎ)
-ಲ್ಲಾ ನಿರಂಜನಾದಿತ್ಯನೊಬ್ಬ ಬಲ್ಲಾ!!!

ವ್ಯಾಸನೊರೆದ, ಗಣೇಶ ಬರೆದ!

ರ್ವರ ಬಾಯಿಯನ್ನು ಬಿಡಿಸಿದ!
ನೊರೆವಾಲೆಲ್ಲರಿಗೆ ಕುಡಿಸಿದ!
ರೆಸಿಗೆ, ಹೇಸಿಗೆಗಳ ತೊಳೆದ!
ತ್ತ ದರ್ಶನಕೆ ಕದ ತೆರೆದ!
ರ್ವಿಗಳ ತಲೆಗೇಟು ಹೊಡೆದ! (ಹ)
-ಣೇಬರಹದ ಭ್ರಾಂತಿ ಹರಿಸಿದ!
ಬರಿಯಾದರ್ಶವೆತ್ತಿ ಹಿಡಿದ!
ಟ್ಟೆ, ಹೊಟ್ಟೆಯಾಸೆಗಳಳಿಸಿದ!
ರೆಕ್ಕೆ, ಪುಕ್ಕಾತ್ಮನಲ್ಲೆಂದರುಹಿದ!
ತ್ತ ನಿರಂಜನಾದಿತ್ಯ ತಾನೆಂದ!!!

ಸಹಿಸಬೇಕು ಕಷ್ಟ, ನಷ್ಟ!

ಹಿಗ್ಗದ, ಕುಗ್ಗದಾತ್ಮ ಶ್ರೇಷ್ಟ!
ಹಿಸಾತ್ಮೋನ್ನತಿಯ ದುಷ್ಟ!
ಬೇರೊಬ್ಬ ದೇವರಿಲ್ಲ ಸ್ಪಷ್ಟ!
ಕುಕಲ್ಪನೆಯಿಂದಪ್ಪ ಭ್ರಷ್ಟ!
(ಅ)
-ಷ್ಟಮದದಿಂದಾಗ್ವುದರಿಷ್ಟ!
ಗುನಗುತ್ತಿರ್ಪಾತ್ಮನಿಷ್ಟ! (ಇ)
-ಷ್ಟ, ನಿರಂಜನಾದಿತ್ಯಾಪ್ತೇಷ್ಟ!!!

ನನ್ನ ನಂಬಿದ ಗಿಡಕ್ಕೆ ನಾ ನೀರೆರೆದೆ! (ನ)

-ನ್ನ ಆತ್ಮದರಾತ್ಮವೆಂದರಿತದ ಗೈದೆ! (ಆ)
-ನಂದವಾಯಿತದಕ್ಕೆಂದಾಗ ನಾ ಕುಣಿದೆ!
ಬಿಸಿಲ ತಾಪದಿಂದದನ್ನುದ್ಧರಿಸಿದೆ!
ತ್ತ ಚಿತ್ತವಿದೆಂದಾಗ ನಾನು ತಿಳಿದೆ!
ಗಿರಿಜಾಮತಿಯಾದಾಗ ಬ್ರಹ್ಮಾನಂದವೆಂದೇ!
ಮರುಧರಗೆ ತಕ್ಕ ಮಡದಿಯೆಂದೆ! (ಅ)
-ಕ್ಕೆ ಲೋಕ ಕಲ್ಯಾಣ ಈ ಭಾವನೆಯಿಂದೆಂದೆ!
ನಾನು, ನೀನೆಂಬುದು ಅಹಂಕಾರವೆಂದಂದೆ!
ನೀಚೋಚ್ಚ ಭಾವನೆಗಳಿರಬಾರದೆಂದೆ! (ತೊ)
-ರೆಯಬೇಕು ವಿಷಯ ವ್ಯಾಮೋಹವನ್ನೆಂದೆ! (ಪೊ)
-ರೆವ ತಾಯ್ತಂದೆ ಗುರುದೇವನೊಬ್ಬನೆಂದೆ! (ಬಂ)
-ದೆ ನಿರಂಜನಾದಿತ್ಯ ಗುರುವಾಗೀಗೆಂದೆ!!!

ಮರಳಿ ಬಾರಮ್ಮ ಮನೆಗೇ!

ತಿಪತಿಯಿರದಲ್ಲಿಗೇ! (ಬಾ)
-ಳಿನಿಷ್ಟ ಸಿದ್ಧಿಸುವಲ್ಲಿಗೇ!
ಬಾಲಗಣಪನಿಪ್ಪಲ್ಲಿಗೇ! (ಶ)
-ರವಣಭವಾಡುವಲ್ಲಿಗೇ! (ನ)
-ಮ್ಮಪ್ಪ ತಿಮ್ಮಪ್ಪನೆಂಬಲ್ಲಿಗೇ!
ಮಕಾರವಿಲ್ಲದಲ್ಲಿಗೇ!
ನೆಮ್ಮದಿ ಸದಾ ಇರ್ಪಲ್ಲಿಗೇ! (ಯೋ)
-ಗೇಶ ನಿರಂಜನನಲ್ಲಿಗೆ!!!

ಮುಕ್ತಿ? ವೃತ್ತಿಯಿಂದ ನಿವೃತ್ತಿ! (ಭ)

-ಕ್ತಿಯಿಂದಾಗುವುದಾತ್ಮ ತೃಪ್ತಿ!
ವೃಥಾಲಾಪ ಗೈದಾಯ್ತಶಕ್ತಿ! (ಅ)
-ತ್ತಿತ್ತ ಸುತ್ತಾಡೀಗ ಬೇಸತ್ತಿ!
ಯಿಂದಿನದಿಂದೆನ್ನದಿರುತ್ತೀ!
ಯೆಯಿನ್ನೂ ಬಂದಿಲ್ಲೆನ್ನುತ್ತೀ!
ನಿನ್ನ ನೀನರಿಯದಿರುತ್ತಿ!
ವೃದ್ಧಾಪ್ಯ ಬಂತೆಂದೇಕಳುತ್ತಿ? (ಬು)
-ತ್ತಿ, ನಿರಂಜನಾದಿತ್ಯಾತ್ಮೋಕ್ತಿ!!!

ಸ್ಥಾನ ಮಾನ ಬೇಡದವರಾರು?

ರ, ನಾರಿಯರಲ್ಲೀ ತಕ್ರಾರು!
ಮಾಯಾ, ಮಾಧವರಲ್ಲಿ ಮೇಲಾರು?
ಶ್ವರ ಮಾಯೆಯಿಂದ ದೂರಾರು?
ಬೇಡ, ಬೇಡೆಂದುಳಿದವರಾರು?
ಬ್ಬಿ ತುಂಬಿಟ್ಟುಣದವರಾರು?
ತ್ತ ಗುರುವೆಂದೂರೂರು ಸಾರು!
ರ್ಷವೆಲ್ಲಾ ದುಡಿದವರಾರು?
ರಾತ್ರಿ, ದಿನವೆನ್ನದವರಾರು? (ಆ)
-ರು? ನಿರಂಜನಾದಿತ್ಯಾ ಮೂರು!!!

ಕಾದು ಸಾಕಾಯ್ತು ನಿನಗಾಗಿ!

ದುಡಿಯಬೇಕು ನನಗಾಗಿ!
ಸಾರ್ಥಕ ಜನ್ಮಾಗಲಕ್ಕಾಗಿ!
ಕಾಮ, ಕ್ರೋಧ, ಬಿಡದಕ್ಕಾಗಿ! (ಆ)
-ಯ್ತು, ಹೋಯ್ತೆನಬೇಡದಕ್ಕಾಗಿ!
ನಿತ್ಯ ಸುಖಾನುಭವಕ್ಕಾಗಿ!
ಮಿಸಾ ಪಾದಕ್ಕೀಗ ಬಾಗಿ!
ಗಾಡಿ, ಕುದ್ರೆ ಬೇಡದಕ್ಕಾಗಿ! (ಯೋ)
ಗಿ ನಿರಂಜನಾದಿತ್ಯ ತ್ಯಾಗಿ!!!

ತಡಮಾಡಿ ಬಂದೆ ನೀನು! (ಒ)

-ಡನಾಟಕ್ಕಾತುರ ನಾನು!
ಮಾಯೆಗೊಳಗಾದೆ ನೀನು!
(ಆ)ಡಿ ಫಲವೇನೀಗ ನಾನು?
ಬಂದ ಮೇಲರಿವೆ ನೀನು!
ದೇವರಿಗೆ ದೇವರು ನಾನು!
ನಿಡೆಲ್ಲವೆನಗೆ ನೀನು! (ನೀ)
-ನು ನಿರಂಜನಾದಿತ್ಯಾನು!!!

ಬಾರೋ ರಾಜಾ, ನಾಗರಾಜಾ! (ತೋ)

-ರೋನಿನ್ನಾಟ ಸುಖ ರಾಜಾ!
ರಾಮ, ಕೃಷ್ಣ ರೂಪ ರಾಜಾ!
ಜಾತ್ಯಾತೀತ ದತ್ತ ರಾಜಾ!
ನಾದಾನಂದ ನೀಡೋ ರಾಜಾ!
ಜಾನನನುಜ ರಾಜಾ!
ರಾಜಯೋಗಿ ಗುರುರಾಜಾ! (ರಾ)
ಜಾ ನಿರಂಜನಾದಿತ್ಯಜಾ!!!

ವಿಷಯ ವಾಸನೆ ಅಳಿವುದೆಂದು?

ಣ್ಮುಖ ತಾನೊಲಿದೋಡಿ ಬಂದಂದು!
ಮನವನರಿಗಳಿಗೆಂದೆಂದು!
ವಾಙ್ಮನೋಕಾಯದಿಂದ ಪೂಜಿಸಿಂದು!
ರ್ವಾಂತರ್ಯಾಮಿ ನಿನ್ನಾತ್ಮವನೆಂದು!
, ಜಲಾಕಾಶ ವ್ಯಾಪಕನೆಂದು!
ನನ್ಯ ಭಕ್ತಿಯಿಂದ ಭಜಿಸಿಂದು!
(ಮಾ)ಳಿಗೆ ಮನೆ ಮಠದಾಸೆ ಸಾಕೆಂದು! (ಕಾ)
-ವುದವನ ಭಾರವೆಂದು ನಂಬಿಂದು! (ಎಂ)
-ದೆಂದೂ ಬಂಧು, ಬಾಂಧವನವನೆಂದು!
ದುಡಿ, ನಿರಂಜನಾದಿತ್ಯನಂತಿಂದು!!!

ನನಗಿನ್ಯಾರು ಗತಿ ತಂದೆ?

ರಕದಿಂದೆತ್ತೆನ್ನ ತಂದೆ!
ಗಿರಿಜಾಧವ ನೀನೇ ತಂದೆ!
ನ್ಯಾಸ ನಿನ್ನದೆನಗೆ ತಂದೆ!
ರುಚಿಸದಿನ್ನೇನೀಗ ತಂದೆ!
ಗನಮಣಿ ಸಾಕ್ಷಿ ತಂದೆ!
ತಿರಸ್ಕರಿಸಬೇಡ ತಂದೆ!
ತಂದುದೇಕಿಲ್ಲಿಗೆನ್ನ ತಂದೆ! (ಬಂ)
-ದೆ, ನಿರಂಜನಾದಿತ್ಯಾಗ್ಯೆಂದೆ!!!

ಮಹಿಳೆಯಿಂದೆಲ್ಲಾಗು ಹೋಗಯ್ಯಾ! (ಮ)

-ಹಿಷಾಸುರಮರ್ದಿನಿ ತಾನಯ್ಯಾ! (ವೇ)
-ಳೆವೇಳೆಗನ್ನವಿಕ್ಕುವಳಯ್ಯಾ!
ಯಿಂಚರಿ ಲೋಕ ಮೋಹಕಳಯ್ಯಾ!
ದೆವ್ವವಾಗಿಯೂ ಕಾಡುವಳಯ್ಯಾ! (ಕೊ)
-ಲ್ಲಾಪುರ ಭವಾನಿ ಇವಳಯ್ಯಾ!
ಗುರುದತ್ತನಿಷ್ಟಮೂರ್ತಿಯಯ್ಯಾ!
ಹೋರಾಟದಲ್ಲೆತ್ತಿದ ಕೈಯಯ್ಯಾ!
ಗ್ಗನೂ ಕವಿಯಿವಳಿಂದಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯನಮ್ಮಯ್ಯಾ!!!

ನಾ ನಿನ್ನ ಬಿಡಲಾರೆನಮ್ಮಾ!

ನಿತ್ಯ ನಿನ್ನ ನೆನೆವೆನಮ್ಮಾ! (ಉ)
-ನ್ನತಿ ನಿನ್ನಿಂದಾಗಬೇಕಮ್ಮಾ!
ಬಿರುಸಾಗಿ ಇರ ಬೇಡಮ್ಮಾ! (ಒ)
-ಡನಾಟ ನಿನ್ನದಿರಲಮ್ಮಾ!
ಲಾಭವಾಗಲಿದೆನಗಮ್ಮಾ! (ಕ)
-ರೆವೆ ಕೈ ಮುಗಿದು ನಿನ್ನಮ್ಮಾ!
ಶ್ವರವಿಂದ್ರಿಯ ಸುಖಮ್ಮಾ! (ಅ)
-ಮ್ಮಾ ನಿರಂಜನಾದಿತ್ಯನಮ್ಮಾ!!!

ಹಾಲುಣಿಸಿದವಳ್ನೀನಲ್ಲವೇನಮ್ಮಾ? (ಕಾ)

-ಲು, ಕೈಗಳ್ನಿನ್ನ ಸೇವೆಗಾಗಿರಲಮ್ಮಾ! (ದ)
-ಣಿಯಬಾರದವುಗಳೆಂದೆಂದಿಗಮ್ಮಾ!
ಸಿರಿತನದಾಸೆ ನನಗಿಲ್ಲವಮ್ಮಾ!
ತ್ತನೆನಗೆ ಮಾರ್ಗದರ್ಶಕನಮ್ಮಾ!
ರಗುರು ಮೂರುಲೋಕಕ್ಕವನಮ್ಮಾ! (ತೋ)
-ಳ್ನೀಡೀಗೆನ್ನನೆತ್ತಿಕೊಳ್ಳಬೇಕ್ನೀನಮ್ಮಾ!
ಡೆಯಲಾರೆ ಸ್ವತಂತ್ರವಾಗೀಗಮ್ಮಾ!
(ನಿ)ಲ್ಲಬೇಕು ನನ್ನ ಕಾಲಲ್ಲೀಗ ನಾನಮ್ಮಾ!
ವೇಷ, ಭೂಷಣಗಳೆಂತಿದ್ದರೇನಮ್ಮಾ?
ರಹರಿ ನಾನಾಗಬೇಡವೇನಮ್ಮಾ? (ಅ)
-ಮ್ಮಾ ನಿರಂಜನಾದಿತ್ಯ ತಾನವನಮ್ಮಾ!!!

ಅಮ್ಮ ಸುಳ್ಳಾಡುವಳೇನಪ್ಪಾ? (ಬೊ)

-ಮ್ಮ ನೀನೆಂದು ತೂಗಿದ್ದಳಪ್ಪಾ!
ಸುಮ್ಮನಾದೆ ಕೇಳುತ್ತದಪ್ಪಾ! (ಸು)
-ಳ್ಳಾಡಿ ಲಾಭವೆನಗೇನಪ್ಪಾ? (ಮಾ)
-ಡು ನನ್ನನ್ನಮ್ಮನಂದಂತಪ್ಪಾ!
ಯಸ್ಸೆಷ್ಟಾದರೇನಾಯ್ತಪ್ಪಾ? (ಹ)
-ಳೇ ವಾಸನೆ ಹೋದರಾಯ್ತುಪ್ಪಾ!
ನ್ನೆಲ್ಲಾ ಭಾರ ನಿನಗಪ್ಪಾ! (ಅ)
-ಪ್ಪಾ ನಿರಂಜನಾದಿತ್ಯಾನಪ್ಪಾ!!!

ಕಥಾ ಕವಿತಾಲಾಪ ಸಾಕಪ್ಪಾ! (ಯ)

-ಥಾನುಶಕ್ತಿ ಸಾಧಿಸಿ ಬಾಳಪ್ಪಾ!
ಲ್ಲು ದೇವರ ಸೊಲ್ಲೀಗೇಕಪ್ಪಾ?
ವಿಚಾರದಿಂದ ಗುರಿ ಸೇರಪ್ಪಾ!
ತಾಮಸ ವೃತ್ತಿ ಸತ್ತುಹೋಗ್ಲಪ್ಪಾ!
ಲಾಭ, ನಷ್ಟ ದೇವರಿಷ್ಟವಪ್ಪಾ!
ರಮಾರ್ಥ ನಿತ್ಯ ಸುಖಕ್ಕಪ್ಪಾ!
ಸಾಯುಜ್ಯವಿಲ್ಲೀಗಾಗಬೇಕಪ್ಪಾ!
ರ್ಮವಿದಕ್ಕಾಗಿ ಮಾಡ್ಬೇಕಪ್ಪಾ! (ಇ)
-ಪ್ಪಾ ನಿರಂಜನಾದಿತ್ಯ ಹಾಗಪ್ಪಾ!!!

ಕುಡಿಯಬೇಡ ಬ್ರಾಂದಿ, ವಿಸ್ಕಿ, ಬೀರು! (ಬಿ)

-ಡಿಸುವುದು ಸಜ್ಜನಸಂಗಾ ಮೂರು! (ಕಾ)
-ಯದಾರೋಗ್ಯವಿದರಿಂದೇರುಪೇರು!
ಬೇಡ ಕುಡ್ಕರ ಸಂಗ, ಮನೆ ಸೇರು! (ಕಂ)
-ಡವರ ಪಾಲಾದೀತು ಮನೆ ಮಾರು!
ಬ್ರಾಂಹಣ್ಯವೇನೆಂದಾಚರಿಸಿ ತೋರು!
ದಿವಾಕರನುನ್ನತ ಮಟ್ಟವೇರು!
ವಿಶ್ವಕಲ್ಯಾಣವನ್ನು ಸದಾ ಕೋರು! (ಕಾ)
-ಸ್ಕಿತ್ಕೊಂಬ ದಾರಿ ಬಿಟ್ಟು ದೂರ ಸಾರು!
ಬೀರು, ಧರ್ಮದ ಪ್ರಭೆ ನೂರು ಮಾರು! (ತೇ)
-ರು ನಿರಂಜನಾದಿತ್ಯನದು ಏರು!!!

ಸಕ್ಕರೆ ಸವಿ ತಿಂದವ ಬಲ್ಲ! (ಅ)

-ಕ್ಕರೆ ಬೆಲೆ ಬೆರೆತವ ಬಲ್ಲ! (ಕೆ)
-ರೆಯ ಆಳ ಇಳಿದವ ಬಲ್ಲ!
ರ್ವೇಶ್ವರನನ್ನು ಜ್ಞಾನಿ ಬಲ್ಲ!
ವಿಷಯವಾಸನೆ ಯೋಗಿಗಿಲ್ಲ!
ತಿಂಡಾಡಿ ಯಿದನೇನು ತಾ ಬಲ್ಲ?
ತ್ತಾತ್ರೇಯ ಸಾಮಾನ್ಯನೇನಲ್ಲ!
ರ್ಣ ಭೇದ ಅವನಿಗೇನಿಲ್ಲ!
ಲಾಬಲ ಶ್ರೀರಾಮ ತಾ ಬಲ್ಲ! (ಬ)
-ಲ್ಲ ನಿರಂಜನಾದಿತ್ಯನ್ಯನಲ್ಲ!!!

ದೇಹದೊಳಹೊರಗೆಲ್ಲಾ ದೇವರು!

ರಕೆ ಅನ್ಯರಿಗೆ ಹೊರುವರು!
ದೊಡ್ಡವನ ದಡ್ಡನೆಂದನ್ನುವರು! (ಕ)
-ಳವಳದಿಂದ ಕಂಗಾಲಾಗುವರು!
ಹೊತ್ತು ವ್ಯರ್ಥವಾಗಿ ಕಳೆಯುವರು!
ಹಸ್ಯವರಿಯಬೇಕೀಗವರು!
ಗೆಳೆತನದಿಂದ ಬಾಳ್ಬೇಕವರು! (ಎ)
-ಲ್ಲಾ, ಗುರುಚಿತ್ತವೆಂದಿರ್ಬೇಕವರು!
ದೇವತ್ವ ಸಾಧಿಸಬೇಕೀಗವರು! (ಭ)
-ವಬಂಧ ಮುಕ್ತರಾಗಬೇಕವರು!
ರು? ನಿರಂಜನಾದಿತ್ಯನಂಶಜರು!!!

ಏಕನಿಷ್ಠಾಭ್ಯಾಸದಿಂದ ವ್ಯಕ್ತಿ ನಿರ್ಮಾಣ!

ರ್ಮಕ್ಕೆ ತಕ್ಕ ಫಲವೆಂಬುದು ಪ್ರಮಾಣ!
ನಿರ್ನಾಮವಾಗಬೇಕನ್ಯರನುಕರಣ! (ಶಿ)
-ಷ್ಟಾಚಾರಸಂಪನ್ನಸ್ವರೂಪನೇ ಬ್ರಾಹ್ಮಣ! (ಅ)
-ಭ್ಯಾಗತಾತಿಥ್ಯವೆಂಬುದಾತ್ಮ ಸಮರ್ಪಣ!
ರ್ವೆ

ಶ್ವರ ಭಾವಕ್ಕೆ ಜ್ಞಾನವೇ ಕಾರಣ!
ದಿಂಡೆಯರಾಡಳಿತಶಾಂತಿಗಾಮಂತ್ರಣ!
ಮೆ, ಶಮೆಯಿಲ್ಲದಿದ್ದರೇಕಾ ಭಾಷಣ?
ವ್ಯವಹಾರಶೂನ್ಯಗೇಕೆ ಪೀಠಾರೋಹಣ? (ಯು)
-ಕ್ತಿಯಿಂದಾಗದಿಂದ್ರಿಯಗಳ ನಿಗ್ರಹಣ!
ನಿತ್ಯಾನಿತ್ಯ ಜ್ಞಾನ ಬಂದಾಗೇಕೀಕರಣ! (ದು)
-ರ್ಮಾರ್ಗಕ್ಕೆ ನಾಮಸ್ಮರಣೆ ಶ್ರೀರಾಮಬಾಣ! (ತ್ರಾ)
-ಣವರ್ಧಕ ನಿರಂಜನಾದಿತ್ಯ ಕಿರಣ!!!

ಬೇಕೆಂದವರು ಸಾಕೆಂದಾರು! (ಸಾ)

-ಕೆಂದವರೆಲ್ಲಾ ಬೇಕೆಂದಾರು!
ತ್ತನಿಷ್ಟ ಬಲ್ಲವರಾರು? (ಆ)
-ವನಿಂದುತ್ತಮ ಗುರುವಾರು?
ರುಜುಮಾರ್ಗದಿಂದಡಿ ಸೇರು! (ಸಂ)
-ಸಾರಾಬ್ಧಿ ದಾಟಿ ದಡ ಸೇರು!
ಕೆಂಗಣ್ಣ ಶಿವನಂತಾಗಿರು!
ದಾರಿದೀಪವಾಗಿ ನೀನಿರು! (ಸೇ)
-ರು ನಿರಂಜನಾದಿತ್ಯನೂರು!!!

ಆಡಮ್ಮಾ, ಸರಿಯಗಿ ಹಾಡಮ್ಮಾ! (ಬಿ)

-ಡಬೇಡ ಪಾತ್ರ ಚಿಕ್ಕದೆಂದಮ್ಮಾ! (ನ)
-ಮ್ಮಾತ್ಮತೃಪ್ತಿಯಾದರಾಯಿತಮ್ಮಾ!
ಭಾಂಗಣವಿದೆಲ್ಲರದಮ್ಮಾ!
ರಿಯಾಯ್ತಿ ಯಾರದಾರಿಗೇನಮ್ಮಾ? (ಮಾ)
-ಯಾಧೀನವೀ ಜಗತ್ತೆಲ್ಲವಮ್ಮಾ!
ಗಿಡ, ಮರಕ್ಕೂ ಸ್ಥಾನವುಂಟಮ್ಮಾ!
ಹಾಲೂ, ಸಕ್ಕರೆ ಸೇರಿ ಪಾಯ್ಸಮ್ಮಾ! (ಉಂ)
-ಡ ಮೇಲದ ಕೊಂಡಾಡುವರಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾನಂದಮ್ಮಾ!!!

ಗಡಿಗೆ ಇದ್ದರಡಿಗೆ! (ಅ)

-ಡಿಗೆಯಿದ್ದರೆ ಗಡಿಗೆ! (ಬ)
-ಗೆಬಗೆಯಾದ ಗಡಿಗೆ!
ಷ್ಟಾನಿಷ್ಟಗಳಡಿಗೆ! (ಅ)
-ದ್ದಬೇಕ್ನೀರಲ್ಲೀಗಡಿಗೆ! (ಹ)
-ರಗೊಪ್ಪಿಗೆಯಾಗಡಿಗೆ! (ಗು)
-ಡಿ ಒಡೆಯಗೀಗಡಿಗೆ! (ಹೀ)
-ಗೆ ನಿರಂಜನಾದಿತ್ಯಾಗೆ!!!

ಸರ್ವೊ

ತ್ತಮನ ಸಂಗ ಸದಾ ಇರಲಿ! (ಸ)

-ರ್ವೊ

ದಯಕ್ಕಿದು ಸನ್ಮಾರ್ಗವಾಗಿರಲಿ! (ಚಿ)
-ತ್ತ ಶುದ್ಧಿಗಿದು ಸಹಾಯವಾಗಿರಲಿ!
ದನಮೋಹನನುದ್ಧಾರವಾಗಲಿ!
ಶ್ವರದಾಸೆ ಕ್ಷಯವಾಗಿ ಹೋಗಲಿ!
ಸಂಕಟ ಪರಿಹಾರವಿದು ಮಾಡಲಿ!
ರ್ವವೆಂದೆಂದೂ ತಲೆಯೆತ್ತದಿರಲಿ!
ಮಭಾವನೆಯಿಂದ ಶಾಂತಿಯಾಗಲಿ!
ದಾಸದಾಸ ಕೇಶವ ತಾನೀಗಾಗಲಿ!
ಲ್ಲಿ, ಅಲ್ಲಿ ಎಲ್ಲೆಲ್ಲೂ ಆತ ಕಾಣಲಿ! (ಪ)
-ರಮಾರ್ಥದರ್ಥವಿದರರಿವಾಗಲಿ! (ನಿ)
-ಲಿಸು ಮನ ನಿರಂಜನಾದಿತ್ಯನಲಿ!!!

ಅತಿಯಾಸೆಯಾಯ್ತು, ಸ್ಥಿತಿ, ಗತಿ ಹೋಯ್ತು!

ತಿಳಿದವರನ್ನೆಲ್ಲಾ ತುಳಿದದ್ದಾಯ್ತು!
ಯಾತ್ರೆ, ಜಾತ್ರೆಗಳ ನಾಟಕ ಹೆಚ್ಚಾಯ್ತು!
ಸೆರೆ, ಸೇಂದಿಯ ಕುಡಿತ ಮಾಮೂಲಾಯ್ತು!
ಯಾಚನೆಯ ಯೋಚನೆ ಹೆಚ್ಚಿ ಹುಚ್ಚಾಯ್ತು! (ಆ)
-ಯ್ತು, ಆದರ್ಶ ಸಂಸ್ಕೃತಿಯ ನಾಶವಾಯ್ತು!
ಸ್ಥಿರತೆ ಮನಸ್ಸಿಗೆ ಇಲ್ಲದಂತಾಯ್ತು!
ತಿಪ್ಪೆ,ಗುಂಡಿಗಳಮ್ಮಯ್ಯಗಳಿಗಾಯ್ತು!
ದ್ದೆ, ಹೊಲಗಳುಳುವವರಿಗಾಯ್ತು!
ತಿನ್ನುವುದಕ್ಕೆ ಮಣ್ಣು ಬೆರೆಸಿಟ್ಟಾಯ್ತು!
ಹೋಯ್ತು ಭಾರತದ ಪ್ರಾಣ ಹಾರಿಹೋಯ್ತು! (ಆ)
-ಯ್ತು ನಿರಂಜನಾದಿತ್ಯ ಗತಿಯೆಂದಾಯ್ತು!!!

ದುರ್ಬುದ್ಧಿಗಳನೆಲ್ಲಾ ಬಿಡಿಸೋ! (ಪೆ)

-ರ್ಬುಲಿಗಳವನ್ನು ಸಂಹರಿಸೋ!
(ಶು)ದ್ಧಿಮಾಡಿ ಸದ್ದಡಗಿಸಿರಿಸೋ!
ಡಿಗೆನೈವೇದ್ಯಕ್ಕಾಗಿರಿಸೋ! (ಕ)
-ಳಕಳಿಯ ಪ್ರಾರ್ಥನೆ ಸಲಿಸೋ!
ನೆರಳನಿತ್ತು ತಂಪಾಗಿರಿಸೋ! (ಉ)
-ಲ್ಲಾಸವಿತ್ತೆನ್ನನ್ನೀಗ ಹರಸೋ!
ಬಿದಿಯ ಬರಹವನಳಿಸೋ! (ಕೂ)
-ಡಿಯಾಡುವ ಭಾಗ್ಯ ಕರುಣಿಸೋ! (ಗೈ)
-ಸೋ, ನಿರಂಜನಾದಿತ್ಯನಾಗಿರಿಸೋ!!!

ನಾನೇಕೆ ನಿನ್ನನ್ನಾಶ್ರಯಿಸಿದೆ? (ನೀ)

-ನೇ ನಾನಾಗಬೇಕೆಂದೆಣಿಸಿದೆ!
ಕೆರೆ ನೀರ ಕೆರೆಗೇ ಚೆಲ್ಲಿದೆ!
ನಿತ್ಯ ನೇಮದಾದರ್ಶ ಪಡೆದೆ! (ನ)
-ನ್ನವ ನೀನೊಬ್ಬನೆಂದೇ ತಿಳಿದೆ! (ನಿ)
-ನ್ನಾಣತಿಯನ್ನು ನಿರೀಕ್ಷಿಸಿದೆ!
ಶ್ರಮವೆಷ್ಟಾದರೂ ಸಹಿಸಿದೆ! (ಕಾ)
-ಯಿ ಹಣ್ಣಾಗುವುದೆಂದು ನಂಬಿದೆ!
ಸಿಹಿಯೂಟಕ್ಕಾಗಿ ಹಾತೊರೆದೆ! (ಆ)
-ದೆ, ನಿರಂಜನಾದಿತ್ಯ ನಾನಾದೆ!!!

ಜಾಣ ಕೋಣನೇಕಾದಾನು? (ಹ)

-ಣಕ್ಕಾಶಿಪುದಿಲ್ಲವನು!
ಕೋಪಿಷ್ಠನಾಗಿಲ್ಲವನು! (ತೃ)
-ಣದಲ್ಲೂ ತಾನೆನ್ನುವನು!
ನೇತ್ರಾನಂದಿಯಲ್ಲವನು!
ಕಾರ್ಯನಿರತನವನು!
ದಾಸದಾಸನಾಗಿಹನು! (ತಾ)
-ನು ನಿರಂಜನಾದಿತ್ಯಾನು!!!

ನಾನೇಕಿಲ್ಲಿಗೀಗ ಬಂದೆ?

ನೇರ ದಾರಿಯಲ್ಲೇ ಬಂದೆ!
ಕಿಸೆ ಬರಿದಾಗಿ ಬಂದೆ! (ಸ)
-ಲ್ಲಿಸು ಕೋರಿಕೆಯನ್ನಿಂದೇ!
ಗೀತೆಗಾಗ್ಬಾರದು ನಿಂದೆ!
ಗನಕ್ಕೇರ್ಬೇಕು ಮುಂದೆ!
ಬಂಡವಾಳ “ನಾಮ” ಒಂದೇ! (ತಂ)
-ದೆ ನಿರಂಜನಾದಿತ್ಯೆಂದೆ!!!

ಹೇಗಿರಬೇಕೋ ಹಾಗಿರು ನೀನು!

ಗಿರಿಜಾಪತಿಯ ನೆನೆ ನೀನು! (ಮಾ)
-ರನಾಟಕ್ಕೆ ಸೋಲಬೇಡ ನೀನು!
ಬೇರೆಯವರು ಏನೇನೆಂದರೇನು?
ಕೋಪಮಾಡಿಕೊಳ್ಳಬೇಡ ನೀನು!
ಹಾಲಾಹಲ ಜೀರ್ಣವಾಗಿಲ್ಲೇನು?
ಗಿರಿಜಾತ್ಮಜ ನೀನಲ್ಲವೇನು? (ಗು)
-ರುಶಿವನಾಜ್ಞೆ ಪಾಲಿಸು ನೀನು!
ನೀಚರಿಂದ ದೂರವಿರು ನೀನು! (ಸೂ)
-ನು ನಿರಂಜನಾದಿತ್ಯಗೆ ನೀನು!!!

ಆಗುವುದೆಲ್ಲಾಗ್ಲಿ, ಪಾದ ಸೇರ್ಲಿ!

ಗುರುಕೃಪೆ ಮಾತ್ರ ಸದಾ ಇರ್ಲಿ! (ನೋ)
-ವು ಮನಸ್ಸಿಗೆಂದೂ ಆಗದಿರ್ಲಿ! (ನಿಂ)
-ದೆ, ವಂದನೆ ನಿರ್ಲಕ್ಷ್ಯವಾಗಿರ್ಲಿ! (ಎ)
-ಲ್ಲಾ ದೇವರೂ ಒಂದೆಂಬರಿವಿರ್ಲಿ! (ಸಾ)
-ಗ್ಲಿ, ನಾಮಸ್ಮರಣೆ ಸದಾ ಆಗ್ಲಿ!
ಪಾನಾನ್ನ ದೇಹಧಾರಣೆಗಿರ್ಲಿ!
ತ್ತಸ್ವರೂಪ ತನ್ನದಾಗಿರ್ಲಿ!
ಸೇವೆ ಸ್ವರೂಪಸಿದ್ಧಿಗಾಗಿರ್ಲಿ! (ಬ)
-ರ್ಲಿ ನಿರಂಜನಾದಿತ್ಯ ತಾನಿರ್ಲಿ!!!

ಆಗಿನಂತೀಗಿಲ್ಲ ಈಗಿನಂತಾಗಿಲ್ಲ!

ಗಿಟ್ಟಿಸಿಕೊಳ್ಳಬೇಕೀ ಜ್ಞಾನವನ್ನೆಲ್ಲ!
ನಂಬಿಗೆಗಸಾಧ್ಯವಾದುದಾವುದಿಲ್ಲ!
ತೀರಾ ಬೆಳ್ಳಗಿದ್ದುದೀಗ ಕೆಂಪಾಯ್ತಲ್ಲ!
ಗಿರಿದಾವರೆಯಲ್ಲೀ ಮಾರ್ಪಾಟಾಯ್ತಲ್ಲ! (ಅ)
-ಲ್ಲ ಸಲ್ಲದ ಮಾತಲ್ಲೇನೂ ಹುರುಳಿಲ್ಲ!
ಶ್ವರ ಸಾಕ್ಷಾತ್ಕಾರ ಪಡೆಯಿರೆಲ್ಲ!
ಗಿರಿ, ಗುಹೆ ಸುತ್ತಿದರಾಗ್ವುದಿದಲ್ಲ!
ನಂಜುಂಡನಾದರ್ಶದಿಂದ ಬಾಳ್ಬೇಕೆಲ್ಲ!
ತಾಳ್ಮೆಯಿಂದ ಶಿಖರವೇರ್ಬೇಕ್ನಿವೆಲ್ಲ!
ಗಿರಿಜಾಂಬೆ ಕಾಪಾಡುವಳ್ನಿಮ್ಮನೆಲ್ಲ! (ಪು)
-ಲ್ಲ ನಿರಂಜನಾದಿತ್ಯ ಶಿವೇಚ್ಛೆಯೆಲ್ಲಾ!!!

ಶಿವ ಶಿವ ಶಿವ ಓಂ ನಮಃ ಶಿವಾಯ!

ರ ನಂಜುಂಡೇಶ್ವರ ನಮಃ ಶಿವಾಯ!
ಶಿವೆಯರಸೇಶ್ವರ ನಮಃ ಶಿವಾಯ!
ರಾರ್ಧನಾರೀಶ್ವರ ನಮಃ ಶಿವಾಯ!
ಶಿಖಿವಾಹನ ಪಿತ ನಮಃ ಶಿವಾಯ!
ರ ಗಣೇಶ ಪ್ರಿಯ ನಮಃ ಶಿವಾಯ!
ಓಂಕಾರ ರೂಪೇಶ್ವರ ನಮಃ ಶಿವಾಯ!
ತಜನೋದ್ಧಾರ ನಮಃ ಶಿವಾಯ! (ನ)
-ಮಃ ಶಿವಾಯ ಶಂಕರ ನಮಃ ಶಿವಾಯ!
ಶಿವ ಗಂಗಾಧರ ಓಂ ನಮಃ ಶಿವಾಯ!
ವಾಸವಾದಿವಂದ್ಯ ಓಂ ನಮಃ ಶಿವಾಯ! (ಪ್ರಿ)
-ಯ ನಿರಂಜನಾದಿತ್ಯ ನಮಃ ಶಿವಾಯ!!!

ಮೆಚ್ಚನಾ ಜಗದೀಶ್ವರನು! (ಮ)

-ಚ್ಚರ ಸ್ವಭಾವದವನನ್ನು!
ನಾಸ್ತಿಕನಾದಂಥವನನ್ನು!
ಗಳ ಮಾಡುವವನನ್ನು!
ರ್ವಿಯಾಗಿರುವವನನ್ನು!
ದೀನರನ್ನುಪೇಕ್ಷಿಪನನ್ನು! (ನ)
-ಶ್ವರಕ್ಕಾಶಿಸುವವನನ್ನು! (ಪ)
-ರ ನಿಂದೆ ಮಾಡುವವನನ್ನು! (ಸೂ)
-ನು ನಿರಂಜನಾದಿತ್ಯಗೆನ್ನು!!!

ಇಚ್ಛೆ ದೇವರದಲ್ಲದಿನ್ಯಾವನದು? (ಸ್ವೇ)

-ಚ್ಛೆ ನನ್ನವನಿಚ್ಛೆಯಲ್ಲದಿನ್ಯಾರದು?
ದೇವ, ಜೀವರೊಂದೆಂಬ ಮಾತದಾರದು?
ರ ಗುರುದತ್ತನಿದನ್ನಾಡಿದುದು!
ಕ್ತ ಮಾಂಸದ ಗೊಂಬೆ ತಾನಲ್ಲೆಂದುದು!
ಮೆ, ಶಮೆಯಿಂದದಳವಡುವುದು! (ತ)
-ಲ್ಲಣವಿದರಿಂದಳಿದು ಹೋಗುವುದು!
ದಿವ್ಯಜೀವನದಿಂದುದ್ಧಾರಾಗುವುದು! (ಸ)
-ನ್ಯಾಸವಿದರಿಂದ ಸಾರ್ಥಕಾಗುವುದು!
ರದರಾಜನ ದರ್ಶನಾಗುವುದು!
ಗ ನಾಣ್ಯದಾಶೆ ನಾಶವಾಗುವುದು! (ಇ)
-ದು ನಿರಂಜನಾದಿತ್ಯನುಸುರಿದುದು!!!

ಹಗಲೆಲ್ಲಾ ಕತ್ತಲೆ ಕುರುಡನಿಗೆ!

ಗನಮಣಿ ಕಾಣಿಸನವನಿಗೆ!
ಲೆಕ್ಕವಿಲ್ಲಾರ್ಯ ವಚನವವನಿಗೆ! (ಚೆ)
-ಲ್ಲಾಟದ ಮನಸು ಸತತವನಿಗೆ!
ಕ್ಕಸಿನ ಗುಂಡಿ ಹಿತವವನಿಗೆ! (ವಿ)
-ತ್ತದಾಶೆಯೊಂದೇ ನಿರಂತರವನಿಗೆ! (ಅ)
ಲೆದಾಟನ್ಯರಾಶ್ರಯದಿಂದವನಿಗೆ!
ಕುಮಾರ್ಗಿಗಳ ಸಹವಾಸವನಿಗೆ!
ರುಚಿರುಚಿಯೂಟದಾಸೆಯವನಿಗೆ! (ಮ)
-ಡದಿ ಮಕ್ಕಳಿಂದ ಮೋಸವವನಿಗೆ!
ನಿತ್ಯದುಃಖವೊಂದೇ ಅವನ ಪಾಲಿಗೆ! (ಹೀ)
-ಗೆ ನಿರಂಜನಾದಿತ್ಯದೃಶ್ಯವನಿಗೆ!

ಮಾನ ಸಂರಕ್ಷಣಾ ಶ್ರೀ ಕೃಷ್ಣ!

ರಗೆ ಸಾರಥೀ ಶ್ರೀ ಕೃಷ್ಣ!
ಸಂಗ ಸಜ್ಜನರಿಗೀ ಕೃಷ್ಣ! (ಕ್ರೂ)
-ರ ಕಂಸನ ಕೊಂದವಾ ಕೃಷ್ಣ! (ಅ)
-ಕ್ಷಯ ಸೀರೆಯಿತ್ತವಾ ಕೃಷ್ಣ!
ಕಾಳಿಂಗ ಮರ್ದನನಾ ಕೃಷ್ಣ!
ಶ್ರೀಪತಿ ಭೂಪತೀ ಶ್ರೀ ಕೃಷ್ಣ!
ಕೃತಿಯಂತಾಡುವವಾ ಕೃಷ್ಣ! (ಪೂ)
-ಷ್ಣ ನಿರಂಜನಾದಿತ್ಯಾ ಕೃಷ್ಣ!!!

ನಿಂದಕರುದ್ಧಾರವವನಿಂದ!

ತ್ತಲೀಲೆ ಬಹಳ ಆನಂದ!
ತ್ತಲೆಯಾಗ್ವುದವನಾನಂದ! (ಮ)
-ರುಕ್ಷಣ ಬೆಳಕವನಾನಂದ! (ಶ್ರ)
-ದ್ಧಾ, ಭಕ್ತಿ ಅವನ ಕೃಪಾನಂದ!
ಹಸ್ಯವಿದು ಪರಮಾನಂದ! (ಭ)
-ವ ಬಂಧನವೂ ಅವನಾನಂದ! (ಶಿ)
-ವ, ಜೀವೈಕ್ಯವೂ ಶಿವನಾನಂದ!
ನಿಂತಾಗ, ಕೂತಾಗ ನಿತ್ಯಾನಂದ! (ಆ)
-ದರ್ಶ ನಿರಂಜನಾದಿತ್ಯಾನಂದ!!!

ನಾ ನಿನ್ನ ನೆನೆಯುತಿರುವಾಗ!

ನಿಮಿತ್ತ ಮಾತ್ರ ಶರೀರವಾಗ! (ಅ)
-ನ್ನ, ವಸ್ತ್ರವಿದ್ದಲ್ಲೇ ಕೊಡುತ್ತಿರುವಾಗ! (ಮ)
-ನೆ, ಮನೆಯಲೆಯುವುದೇಕಾಗ?
ನೆಮ್ಮದಿ ಬೇಕೆನ್ನುತಿರುವಾಗ! (ಆ)
-ಯುಧಕ್ಕೆ ಕೈಹಾಕುವುದೇಕಾಗ?
ತಿರುಗಾಟವೇಕೆಂದನ್ನುವಾಗ! (ಗು)
-ರತಾ ಬರಬೇಕಿದ್ದಲ್ಲಿಗಾಗ!
ವಾದ, ಭೇದಗಳಳಿದಿರ್ಪಾಗ!
ತಿ ನಿರಂಜನಾದಿತ್ಯನಾಗ!!!

ಮೂರು ಸೂರ್ಯರ ಕಂಡೆ ಕನಸಿನಲ್ಲಿ! (ಗು)

-ರುದತ್ತನವರೆಂದೆ ಮನಸ್ಸಿನಲ್ಲಿ!
ಸೂರ್ಯ ಯಾತ್ರೆ ಸಾಗುತ್ತಿತ್ತಾಕಾಶದಲ್ಲಿ! (ಕಾ)
-ರ್ಯತತ್ಪರನಾಗಿ ಕೂತಿದ್ದೆ ನಾನಿಲ್ಲಿ! (ವ)
-ರ ಯೋಗದಂಡ ಹಿಡಿದಿದ್ದು ಕೈಯ್ಯಲ್ಲಿ!
ಕಂಡದ್ದ ತೋರಿಸಿದೆ ಮಾತಾಜಿಗಲ್ಲಿ! (ತ)
-ಡೆಯಲಾಗದಾನಂದವಾಯ್ತಾಕೆಗಲ್ಲಿ!
ರೆಯಲೆತ್ನಿಸಿದಳ್ಗಂಗಮ್ಮನಲ್ಲಿ!
ನ್ನಾಪ್ತ ದೊಡ್ಡಯ್ಯ ಕಾಣಿಸ್ಕೊಂಡಾಗಲ್ಲಿ! (ಪು)
-ಸಿಯಲ್ಲೆಂದಾ ಸೂರ್ಯರ ಕಂಡು ತಾನಲ್ಲಿ! (ಕ)
-ನಸಿಂದೆಚ್ಚರಾಯ್ತು ಬ್ರಾಹ್ಮೀ ವೇಳೆಯಲ್ಲಿ! (ಇ)
-ಲ್ಲಿ, ನಿರಂಜನಾದಿತ್ಯ ಮಲಗಿದಲ್ಲಿ!!!

ದರ್ಶನವಿದರಿಂದೆನ್ನ ದುಃಖ ನಾಶ! (ಸ್ಪ)

-ರ್ಶವಾಯಿತೆನ್ನ ಮನಕ್ಕವನಾದೇಶ!
ನ್ನ ಬಾಳ್ವೆಗಿದವನ ಉಪದೇಶ!
ವಿಶ್ವಾಸಿಗಳೆಲ್ಲರಿಗಿದು ಸಂತೋಷ!
ತ್ತನಿಂದ ಪರಿಹಾರೆಲ್ಲರ ದೋಷ! (ಯಾ)
-ರಿಂದ ಸಾಧ್ಯ ಅಳೆಯುವುದಕ್ಕಾಕಾಶ? (ತಂ)
-ದೆ, ತಾಯಿ, ಬಂಧು ಬಳಗವಾ ಸರ್ವೇಶ! (ತ)
-ನ್ನ ನಂಬಿದವರ ಕೈ ಬಿಡಾ ಮಹೇಶ!
ದುಃಖನಾಶ, ಭಕ್ತ ಪೋಷ ಗಿರಿಜೇಶ!
ಳಕುಲ ವಿನಾಶಾ ಕೈಲಾಸಾಧೀಶ!
ನಾಮಸ್ಮರಣಾನಂದಾ ಗುರು ನಿರ್ದೋಷ! (ಈ)
-ಶ ನಿರಂಜನಾದಿತ್ಯನೀವಾ ಸಂದೇಶ!!!

ಗುರುದರ್ಶನ ಸರ್ವಾರಿಷ್ಟಹರ! (ಗು)

-ರುಸೇವೆಯಿಂದ ಎಲ್ಲಾ ಪಾಪ ಹರ!
ಯಾಸಾಗರಾ ಶಿವ ಗುರುವರ! (ಸ್ಪ)
-ರ್ಶವವನದು ಸರ್ವವ್ಯಾಧಿ ಹರ!
ವವಿಧ ಭಕ್ತಿಯಿಂದಾತ್ಮೋದ್ಧಾರ!
ಜ್ಜನರಿಗವನೇ ಸರ್ವಾಧಾರ! (ಸ)
-ರ್ವಾವಯವ ಸುಂದರಾ ದತ್ತಾಕಾರ!
ರಿಪು ಸಂಹಾರ ಹರ ರೌದ್ರಾಕಾರ! (ಇ)
-ಷ್ಟಸಿದ್ಧಿಗವ ಕಲ್ಪತರುವರ!
ತ್ತಾವತಾರಾ ನಿತ್ಯ ಸತ್ಯ ಸಾರ! (ವ)
-ರ ನಿರಂಜನಾದಿತ್ಯಾನಂದಾಕಾರ!!!

ಸಮಾಜ ಸುಧಾರಿಸುವುದೆಂದು?

ಮಾಯಾ ಮೋಹ ಕಡಿಮೆಯಾದಂದು!
ಗಳವಿಲ್ಲದಾ ದಿನದಂದು!
ಸುಗುಣದಭಿವೃದ್ಧಿಯಾದಂದು!
ಧಾರಾಕಾರ ಜಪ ಸಾಗಿದಂದು!
ರಿಪುಗಳಾರನ್ನೂ ಜೈಸಿದಂದು!
ಸುಸ್ಥಿರತೆ ಮನಸ್ಸಿಗಾದಂದು! (ಆ)
-ವುದೂ ಶಾಶ್ವತವಲ್ಲವೆಂದಂದು! (ಅ)
-ದೆಂಬಾತ್ಮ ತಾನೆಂಬರಿವಾದಂದು! (ಅ)
-ದು ನಿರಂಜನಾದಿತ್ಯನೆಂದಂದು!!!

ಜಾತಿ, ಮತ ಯಾವುದಾದರೇನು?

ತಿಪ್ಪೆಗುಂಡಿಯಾಗಬೇಡ ನೀನು!
ದ, ಮತ್ಸರ, ಬಿಡ್ಬೇಕು ನೀನು!
ಪದಿಂದ ಶುದ್ಧವಾಗು ನೀನು!
ಯಾರ ಮಾತೂ ಆಡಬೇಡ ನೀನು! (ಕಾ)
-ವು ಪಡೆದ ಹಕ್ಕಿಯಾಗು ನೀನು!
ದಾರಿಯುದ್ದಕ್ಕೂ ಹಾಡಿ ಹಾರ್ನೀನು!
ರ್ಶನದಿಂದ ಧನ್ಯನಾಗ್ನೀನು! (ಬೇ)
-ರೇನನ್ನೂ ಆಶಿಸಬೇಡ ನೀನು! (ಸೂ)
-ನು ನಿರಂಜನಾದಿತ್ಯಗೆ ನೀನು!!!

ತಿದ್ದಿಕೊಳ್ಳುವುದಿಲ್ಲ ತನ್ನನ್ನು! (ಉ)

-ದ್ದಿಶ್ಯ ಗಣ್ಯನೆನಬೇಕ್ತನ್ನನ್ನು!
ಕೊಳ್ಳೆ ಹೊಡೆಯವನನ್ಯರನ್ನು! (ಸು)
-ಳ್ಳು ಹೇಳಿ ನಿಂದಿಪನೆಲ್ಲರನ್ನು! (ಬೇ)
-ವು ಬಿತ್ತಿ ಬಯಸುವ ಮಾವನ್ನು!
ದಿಗ್ಭ್ರಮೆ ಕೊಯ್ಯುವಾಗ ಬೇವನ್ನು! (ಬ)
-ಲ್ಲವರೇನನ್ನಬೇಕವನನ್ನು?
ನುವೇ ತಾನೆನ್ನುವವನನ್ನು! (ಚೆ)
-ನ್ನಕೇಶವ ತಿದ್ದಲವನನ್ನು! (ಅ)
-ನ್ನು ನಿರಂಜನಾದಿತ್ಯಕಾಯೆನ್ನು!!!

ಬಹುವಿಧ ಸಾಧನೆ, ಬೋಧನೆ!

ಹುಸಿ ದಿಟದ ಮೇಲಾಪದನೆ!
ವಿಷಯಗಳ ಕೆಟ್ಟ ವಾಸನೆ!
ರ್ಮ, ಕರ್ಮಗಳಿಗುಚ್ಚಾಟನೆ!
ಸಾಮರ್ಥ



ಮೆರೆಸುವ ಯೋಚನೆ!
ಕ್ಕೆ ನಿತ್ಯ ಶಾಂತಿಗೀಭಾವನೆ!
ನೆಮ್ಮದಿಗಿರ್ಬೇಕು ಸುವಾಸನೆ!
ಬೋಳಿ ಕಾಳಿ, ನ್ಯಾಯಕ್ಕಾಶ್ವಾಸನೆ!
ರೆಯ ನಾಶಕ್ಕಿದು ಸೂಚನೆ! (ನೆ)
-ನೆ ನಿರಂಜನಾದಿತ್ಯನ ನೆನೆ!!!

ನನಗನುಗ್ರಹವಾಗುವುದು! (ನಿ)

-ನಗೆ ನಿಗ್ರಹ ಬೇಗಾಗುವುದು!
ತಿ ನನಗೂರ್ಧ್ವವಾಗುವುದು! (ನೀ)
-ನು ಅಧೋಗತಿಗಿಳಿಯುವುದು!
ಗ್ರಹಾಧಿಪತಿ ನಾನಾಗುವುದು! (ಗ್ರ)
-ಹಚಾರಾಧೀನ ನೀನಾಗುವುದು!
ವಾಸುದೇವನೇ ನಾನಾಗುವುದು!
ಗುಹ್ಯಾದಿಂದ್ರಿಯ ನೀನಾಗುವುದು! (ಸಾ)
-ವು ಕೀವಿನ ಗೊಂಬೆಗಾಗುವುದು! (ಇ)
-ದು, ನಿರಂಜನಾದಿತ್ಯಾಗುವುದು!!!

ಆಸೆಗಳೇನಿವೆ ನನಗೆ?

ಸೆಕೆ, ಚಳಿಯೊಂದೇ ನನಗೆ!
ತಿ ಗುರುದತ್ತ ನನಗೆ! (ಹ)
-ಳೇ ದೇಹವೀಗಿದೆ ನನಗೆ!
ನಿತ್ಯಪೂಜೆ, ಭಿಕ್ಷೆ ನನಗೆ! (ಸಾ)
-ವೆನಗಿಲ್ಲ ನಿಜ ನನಗೆ!
ಶ್ವರವೀ ಮಾಯೆ ನನಗೆ!
ರನ ಸಾರಥ್ಯ ನನಗೆ! (ಹೀ)
-ಗೆ ನಿರಂಜನಾದಿತ್ಯನಾಗೆ!!!

ಅಕ್ಕ, ಪಕ್ಕ ಚೊಕ್ಕವಾಗಿರ್ಲಿ ಲಕ್ಕಪ್ಪಾ! (ಮ)

-ಕ್ಕಳೆಲ್ಲರಿಗೆ ಮಾರ್ಗದರ್ಶಿಯಾಗಪ್ಪಾ!
ರರಾಸ್ತಿಪಾಸ್ತಿಗಾಶಿಸ ಬೇಡಪ್ಪಾ! (ಒ)
-ಕ್ಕಲುತನಕ್ಕೆ ಶ್ರದ್ಧಾ, ಭಕ್ತಿ, ಬೇಕಪ್ಪಾ! (ಹಂ)
-ಚೊಬ್ಬೊಬ್ಬರಿಗೂ ಅವರ ಪಾಲನ್ನಪ್ಪಾ! (ಬೊ)
-ಕ್ಕಸ ಬರಿದಾದ ಮೇಲಾರಿಗಾರಪ್ಪಾ?
ವಾದಿ, ಪ್ರತಿವಾದಿಗಳಾಟ ಸಾಕಪ್ಪಾ!
ಗಿರ್ವಿಯೊಡವೆ ದುರ್ವಿನಿಯೋಗೇಕಪ್ಪಾ? (ಬ)
-ರ್ಲಿ, ಹೋಗ್ಲಿ ಧನಪಿಶಾಚಿಯನ್ನಟ್ಟಪ್ಪಾ!
ಕ್ಷ್ಯ ಸಿದ್ಧಿಗಾಗಿ ಸದಾ ದುಡಿಯಪ್ಪಾ! (ಸಿ)
-ಕ್ಕಲಾರದೀ ನರಜನ್ಮ ಆಮೇಲಪ್ಪಾ! (ಅ)
-ಪ್ಪಾ ನಿರಂಜನಾದಿತ್ಯ ನೀನೀಗಾಗಪ್ಪಾ!!!

ಓದಬೇಕೇನಿನ್ನೂ ನಾನು? (ವಾ)

-ದವಾರಲ್ಲಿ ಮಾಡ್ಬೇಕ್ನಾನು?
ಬೇಕಾದಡ್ಪಡೆದೆ ನಾನು!
ಕೇರಿದೆ ಹೊಟ್ಟನ್ನು ನಾನು!
ನಿತ್ಯ ಸ್ವಚ್ಛಾನ್ನುಂಬೆ ನಾನು! (ನ)
-ನ್ನೂರು ಸೇರ್ಬೇಕೀಗ ನಾನು!
ನಾನೇ ನೀನು, ನೀನೇ ನಾನು! (ಭಾ)
-ನು, ನಿರಂಜನಾದಿತ್ಯಾನು!!!

ಬಾಯ್ಕೈ, ಕಣ್ಣು ಕಟ್ಟಿಕೊಂಡು ನಾನು ಬಂದೆ! (ತಾ)

-ಯ್ಕೈಯಿಂದ ಹಾಲನ್ನು ಕೆಲ ಕಾಲ ತಿಂದೆ!
ಳೆದನೇಕ ವರ್ಷ ಪ್ರಾಯಕ್ಕೆ ಬಂದೆ! (ಹ)
-ಣ್ಣು, ಹಂಪಲು ಆಹಾರವಾಗಲಿನ್ನೆಂದೆ!
ರುಣೆ ನಿನಗಿನ್ನೂ ಬಾರದೇಕೆಂದೆ! (ತೊ)
-ಟ್ಟಿದ್ದ ಬಟ್ಟೆಬರೆಯೂ ಬೇಡೆನಗೆಂದೆ!
ಕೊಂದು ಹಾಕಿದ್ದಾಯ್ತಾಸೆಗಳನ್ನೆಂದೆ! (ಕಾ)
-ಡು, ಗುಡ್ಡಗಳ ಸುತ್ತಾಡಿದ್ದು ಸಾಕೆಂದೆ!
ನಾಮಸ್ಮರಣೆಯೇ ಗತಿ ನನಗೆಂದೆ! (ತ)
-ನುಭಾವ ಮರೆತಾತ್ಮಾನಂದವಾಯ್ತೆಂದೆ!
ಬಂದಾಗ ತಂದದ್ದು ಹೋಗುವಾಗೇಕೆಂದೆ? (ಅಂ)
-ದೆ ನಿರಂಜನಾದಿತ್ಯ ನಾನಾದೆನೆಂದೆ!!!

ವೇದಾಂತ ಹೇಳ್ಲಿಕ್ಕಲ್ಲ, ಬಾಳ್ಲಿಕೆ!

ದಾಂಪತ್ಯದಲ್ಲೂ ಸಾಧ್ಯ ಬಾಳ್ಲಿಕೆ!
ತ್ವಜ್ಞಾನಿಯಾಗ್ವುದದಾಗ್ಲಿಕ್ಕೆ!
ಹೇಸಿಕೆ ತೊಳೆದು ಶುದ್ಧಾಗ್ಲಿಕ್ಕೆ! (ಹೇ)
-ಳ್ಲಿಕ್ಕಸಾಧ್ಯವಾದ ಅದಾಗ್ಲಿಕ್ಕೆ! (ಸೊ)
-ಕ್ಕಡಗಿಸಿ ಮುಕ್ತ ತಾನಾಗ್ಲಿಕ್ಕೆ! (ತ)
-ಲ್ಲಣವಿಲ್ಲದೆ ಶಾಂತನಾಗ್ಲಿಕ್ಕೆ!
ಬಾಯ್ಕೈ, ಕಚ್ಚೆ ಬಿಗಿಯಾಗಿಡ್ಲಿಕ್ಕೆ! (ಬಾ)
-ಳ್ಲಿಕ್ಕಿಂದ್ರಿಯ ಜಯದಿಂದಾಳ್ಲಿಕ್ಕೆ! (ಅ)
-ಕ್ಕೆ ನಿರಂಜನಾದಿತ್ಯನಾಗ್ಲಿಕ್ಕೆ!!!

ತಲೆನೋವಿಗೇನು ಕಾರಣ? (ನೆ)

-ಲೆ ತಪ್ಪಿ ಆಡಿದ್ದು ಕಾರಣ!
ನೋಟ, ಕೂಟದಾಸೆ ಕಾರಣ!
ವಿಕಲ್ಪ, ಸಂಕಲ್ಪ ಕಾರಣ! (ಯೋ)
-ಗೇಶ್ವರನಾಗ್ರಹ ಕಾರಣ!
ನುಸುಳಿ ಬಿದ್ದದ್ದು ಕಾರಣ!
ಕಾಲನಂಜಿಕೆಯೂ ಕಾರಣ! (ಅ)
-ರಗದನ್ನಾಹಾರ ಕಾರಣ! (ಕಾ)
-ಣ ನಿರಂಜನಾದಿತ್ಯವಗುಣ!!!

ಕಾದ ಕಬ್ಬಿಣಕ್ಕೆ ಕೊಟ್ಟ ನೀರು ಮತ್ತೆ ಕಾಣೆ!

ತ್ತಮಯವಿದಾದ ಮೇಲಿನ್ನೇನನ್ನೂ ಕಾಣೆ!
ಳೆಯಬೇಕು ಕಾಲ ಅವನೇ ನಾನೆಂದಾಣೆ! (ತ)
ಬ್ಬಿಬ್ಬಾಗದಂತಿರಿಸುವುದು ಅವನ ಹೊಣೆ! (ಗ)
-ಣ ನಾಯಕನಿಗೆ ಈ ಬಿನ್ನಹ ಸಮರ್ಪಣೆ! (“ಅ)
-ಕ್ಕೆ ಕಲ್ಯಾಣ ಲೋಕಕ್ಕೆಲ್ಲಾ” ಎಂದು ಪ್ರಕಟಣೆ!
ಕೊಟ್ಟ ಮಾತಿಗೆ ತಪ್ಪನವನೆಂಬ ಘೋಷಣೆ! (ಮ)
-ಟ್ಟ ಹಾಕುವುದಕ್ಕರಿಗಳಾರನ್ನೀ ಶೋಷಣೆ!
ನೀತಿ, ರೀತಿಗೆ ಗುರುದೇವನ ನಿರೂಪಣೆ! (ನಾ)
-ರುವೀದೇಹದ ತಪ್ಪಿಗವನ ಕ್ಷಮಾಪಣೆ!
ನಸ್ಸೇ ಮಾಧವನಾಗ್ಲಿಕ್ಕವನ ರಕ್ಷಣೆ! (ಮ)
-ತ್ತೆಮತ್ತೆ ಇದಕ್ಕಾಗಿ ತಪಸ್ಸಿನಾಚರಣೆ!
ಕಾಲ, ಕರ್ಮ, ಧರ್ಮದಿಂದ ಸ್ಥಿತಿ ಸುಧಾರಣೆ! (ಎ)
-ಣೆ ನಿರಂಜನಾದಿತ್ಯನಿಗಾರನ್ನೆಲ್ಲೂ ಕಾಣೆ!!!

ಸಂಸ್ಕಾರದಿಂದ ಆಚಾರಪ್ಪಾ! (ಸಂ)

-ಸ್ಕಾರಾಚಾರದಿಂದ ಕಾಣಪ್ಪಾ!
ಮಾರಮಣಾತ್ಮಾನಂದಪ್ಪ! (ಅ)
-ದಿಂದು, ನಿನ್ನೆಯದಲ್ಲವಪ್ಪಾ! (ನಾ)
-ದ, ಬಿಂದು, ಕಲಾತೀತದಪ್ಪಾ!
ಯ, ವ್ಯಯ ಅದಕ್ಕಿಲ್ಲಪ್ಪಾ! (ವಿ)
-ಚಾರದಿಂದದರರಿವಪ್ಪಾ!
(ನಿ)ರತಾನುಸಂಧಾನ ಮಾಡಪ್ಪಾ! (ಅ)
-ಪ್ಪಾ ನಿರಂಜನಾದಿತ್ಯದಪ್ಪಾ!!!

ನಿತ್ಯದೈದೈದು ಮುಂದಿನ ನಿಧಿಯಪ್ಪಾ! (ಸ)

-ತ್ಯವಿದರರಿವಿಗೆ ತಾಳ್ಮೆ ಬೇಕಪ್ಪಾ!
ದೈವೀಗುಣ ಸಂಪನ್ನನಾಗಬೇಕಪ್ಪಾ!
ದೈವಾನುಗ್ರಹ ನಿತ್ಯ ಸೇವೆಯಿಂದಪ್ಪಾ!
ದುಡಿಯಬೇಕು ಶ್ರದ್ಧಾ, ಭಕ್ತಿಯಿಂದಪ್ಪಾ!
ಮುಂದಿನ ಮಾತಿಂದಾಡಿ ಫಲವಿಲ್ಲಪ್ಪಾ! (ಇಂ)
-ದಿನದ್ದಿಂದೇ ಮಾಡುವಭ್ಯಾಸ ಮಾಡಪ್ಪಾ! (ಮ)
-ನಸ್ಸನ್ನಿದು ಸ್ಥಿರಗೊಳಿಸುವುದಪ್ಪಾ!
ನಿಮಿತ್ತ ಮಾತ್ರ ಈ ಶರೀರ ಕಾಣಪ್ಪಾ! (ವಿ)
-ಧಿ, ಹರಿ, ಹರರೇಕ ರೂಪಿ ನೀನಪ್ಪಾ!
ದುಪತಿಯ ಗೀತಾವಾಕ್ಯವಿದಪ್ಪಾ! (ಇ)
-ಪ್ಪಾ ನಿರಂಜನಾದಿತ್ಯ ಅದಾಗೀಗಪ್ಪಾ!!!

ಒಂಟಿ ಒಂಟಿಗಳಿಂದುಂಟಾದ ನಂಟು! (ಗಂ)

-ಟಿನಲ್ಲವಸಾನವಾದರೇನುಂಟು?
ಒಂದೇ ಒಂದಾಗಿದ್ದರಾನಂದವುಂಟು! (ಧಾ)
-ಟಿಯಲ್ಲಿ ಮಾತ್ರ ತರತರವುಂಟು!
ಮನ ಸಾಹಿತ್ಯಕ್ಕಗತ್ಯವುಂಟು! (ಕಾ)
-ಳಿಂದ ಕಾಳ್ಬೇರಾದ್ರೂ ಕಣಜವುಂಟು!
ದುಂಬು ಹೊಡೆವಗತ್ಯವುಂಟೇ ಉಂಟು! (ಕಾ)
-ಟಾಚಾರವಾದರೆಲ್ಲಾ ಬರೀ ಗಂಟು! (ಉ)
-ದಯೋನ್ಮುಖನಾದರೆ ಬೆಳಕುಂಟು!
ನಂದಿವಾಹನನನುಗ್ರಹವುಂಟು! (ಗಂ)
-ಟು ನಿರಂಜನಾದಿತ್ಯನಿಗೇನುಂಟು???

ನಾನು ಗುರುದೇವದತ್ತ ನಿಜ!

ನುಡಿಯೆನ್ನದಕ್ಷರಶಃ ನಿಜ!
ಗುಣಾತೀತ ನಾನೆಂಬುದು ನಿಜ! (ಗು)
-ರುದ್ರೋಹಿಗರಿವಾಗದೀ ನಿಜ!
ದೇಹ ದೇಗುಲವೆಂಬುದು ನಿಜ!
ಸನಷ್ಟದಿಕ್ಕೆಂಬುದು ನಿಜ!
ರ್ಶನನನ್ಯಭಕ್ತಿಗೆ ನಿಜ! (ಹ)
-ತ್ತಾವತಾರ ನಾನೆಂಬುದೂ ನಿಜ!
ನಿತ್ಯ, ಸತ್ಯ, ಶಿವಾನಂದ ನಿಜ! (ನಿ)
-ಜ ನಿರಂಜನಾದಿತ್ಮಾತ್ಮ ನಿಜ!!!

ಕೃಷ್ಣ ನಿತ್ಯಾನಂದನಯ್ಯಾ! (ಪೂ)

-ಣ ಸ್ವರೂಪವನದಯ್ಯಾ!
ನಿಷ್ಟಾವಂತನವನಯ್ಯಾ!
ತ್ಯಾಗ ಜೀವಿಯವನಯ್ಯಾ!
ನಂಟರು ಸಜ್ಜನರಯ್ಯಾ!
ಯಾಮಯನವನಯ್ಯಾ!
ರ ನಾರಾಯಣನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಯ್ಯಾ!!!

ಕೃಷ್ಣನ ನೋಡಿ ಉದ್ಧಾರವಾಗಯ್ಯಾ! [ಪೂ]

-ಷ್ಣನಿಗೆ ಪರಮಾಪ್ತನವನಯ್ಯಾ!
ಗುನಗುತವನಾತಿಥ್ಯವಯ್ಯಾ!
ನೋವಿನಲ್ಲೂ ದುಡಿವನವನಯ್ಯಾ! (ಆ)
-ಡಿದಂತೆ ಕೃತಿಗಳವನದಯ್ಯಾ!
ಚ್ಚ, ನೀಚ ಅವನಿಗಿಲ್ಲವಯ್ಯಾ! (ಶ್ರ)
-ದ್ಧಾ, ಭಕ್ತಿ ಅನುಪಮವನದಯ್ಯಾ! (ಪ)
-ರನಿಂದೆ ಮಾಳ್ಪವನಲ್ಲವಯ್ಯಾ!
ರ್ವವೆಂಬುದವನಲ್ಲಿಲ್ಲವಯ್ಯಾ! (ಅ)
-ಯ್ಯಾ ನಿರಂಜನಾದಿತ್ಯನವನಯ್ಯಾ!!!

ಅರ್ಥ ಮಾಡೋ ನನ್ನ, ಸ್ವಾರ್ಥ ಬಿಡೋ ನಿನ್ನ! [ವ್ಯ]

-ರ್ಥ ಹಾಳುಮಾಡಬೇಡವೋ ಜನ್ಮ ನಿನ್ನ!
ಮಾಡೋ ಭಕ್ತಿ ನನ್ನ, ಬಿಡೋ ಯುಕ್ತಿ ನಿನ್ನ! (ಹಾ)
-ಡೋ ಗೀತೋಕ್ತಿಯನ್ನ, ಬಿಡೋ ಖತಿಯನ್ನ!
ನ್ನ ನಿನ್ನ ಸಂಬಂಧಕ್ಕೆ ಇದು ಚೆನ್ನ!
(ತ)ನ್ನ ತಾನರಿಯದಿದ್ದರೆ ಬಹು ಬನ್ನ!
ಸ್ವಾಧೀನ ಮಾಡಿಕೋ ಇಂದ್ರಿಯವ ನಿನ್ನ! (ಸಾ)
-ರ್ಥಕವದರಿಂದೀ ನರಜನ್ಮ ನಿನ್ನ!
ಬಿರುಗಾಳಿ ಬೀಸುವುದಕ್ಕಿಂತ ಮುನ್ನ! (ಬಿ)
-ಡೋ ದ್ವೇಷಾಸೂಯೆಗಳನ್ನೀಗಲೇ ನಿನ್ನ!
ನಿನ್ನ ಹಿತೈಷಿ ನಾನೆಂದು ನಂಬು ನನ್ನ! (ನ)
-ನ್ನ ನಿರಂಜನಾದಿತ್ಯಾತ್ಮಾನಂದನನ್ನ!!!

ಸರ್ವ ಬಲಾ, ಸಕಲಾ, ವಿಮಲ! [ಓ]

-ರ್ವ ತಾಯಿ ಲೋಕಕ್ಕೆಲ್ಲಾ ವಿಮಲ!
ಯಕೆಯಿಲ್ಲದಾತ್ಮಾ ವಿಮಲ!
ಲಾವಣ್ಯಮಯ ದೇವೀ ವಿಮಲ!
ದಾ ಸೇವಾ ನಿರತಾ ವಿಮಲ!
ರ ಚರಣಾತೀತಾ ವಿಮಲ! (ಲೀ)
-ಲಾ ನಾಟಕ ನಟ ಈ ವಿಮಲ!
ವಿಧಿ, ಹರಿ, ಹರಾತ್ಮಾ ವಿಮಲ!
ಲಹರಿ ರೂಪಾಣೀ ವಿಮಲ! (ಬಾ)
-ಲ ನಿರಂಜನಾದಿತ್ಯಾ ವಿಮಲ!!!

ಸತ್ಯವನು ಮರೆಸಿಹುದು ಮಿಥ್ಯಾ! (ಕೃ)

-ತ್ಯವಿದಕ್ಕೆ ಅಜ್ಞಾನದ ಸಾರಥ್ಯ!
ಧು, ವರರೊಂದಾದಮೇಲ್ದಾಂಪತ್ಯ!
(ಅ)ನುಮಾನದಿಂದಾಗುವುದು ದುಷ್ಕೃತ್ಯ!
ನಶ್ಯುದ್ಧಿಗಿರಬೇಕು ಸತ್ಕೃತ್ಯ! (ಬೆ)
-ರೆತರೆ ಶಿವನಲ್ಲಿ ಸೌಖ್ಯ ನಿತ್ಯ!
ಸಿದ್ಧಿ, ರಿದ್ಧಿಗಳ ಸುಖ ಅನಿತ್ಯ!
ಹುಟ್ಟು ಸಾವು ಆತ್ಮಾನಂದದಿಂದಂತ್ಯ!
ದುಶ್ಚಟಗಳಿಂದಾಗ್ವುದಾತ್ಮ ಹತ್ಯ!
ಮಿತ, ಹಿತಾಹಾರಾರೋಗ್ಯಕೆ ಪಥ್ಯ! (ಮಿ)
-ಥ್ಯಾ, ನಿರಂಜನಾದಿತ್ಯಗನಗತ್ಯ!!!

ನಾಗರಾಜ ಬರುವಾ, ಭಾರ ಹೊರುವಾ!

ತಿಗೆಡಿಸಿಹಸುರರ ಬಡಿವಾ!
ರಾತ್ರಿ ಕಾಮದಹನವಾದದ್ದರಿವಾ!
ಗತ್ಕಲ್ಯಾಣಕ್ಕಾಗಿ ಫಣ ತೊಡುವಾ!
ಹು ಬಗೆಯಾಸೆಗೆ ಕಿಚ್ಚನಿಡುವಾ! (ಗು)
-ರುಭಕ್ತಿ ದೀಪದ ಕಾಂತಿ ಹೆಚ್ಚಿಸುವಾ!
ವಾದ, ಭೇದಗಳನ್ನು ಅಡಗಿಸುವಾ!
ಭಾವಾವೇಶದಿಂದ ಕಂಬನಿಗರೆವಾ! (ಪ)
-ರಶಿವೆಯ ಪಾದಕ್ಕೆರಗಿ ನಿಲುವಾ!
ಹೊತ್ತು ಕಳೆಯದೆ ಕಾರ್ಯ ಕೈಗೊಳ್ಳುವಾ! (ಗು)
-ರುಶಿವನ ನಾಮಸ್ಮರಣೆ ಮಾಡುವಾ! (ಸೇ)
-ವಾ ನಿರಂಜನಾದಿತ್ಯಗೊಪ್ಪಿಸುವಾ!!!

ನೀವೇಕೆ ಎಲ್ಲೂ ಹೋಗುವುದಿಲ್ಲ? (ನೇ)

-ವೇದ್ಯವಿಲ್ಲೆ ಆಗುತ್ತಿದೆಯಲ್ಲಾ!
ಕೆಲಸವೆಲ್ಲರೂ ಮಾಡ್ತಾರಲ್ಲಾ!
ಲ್ಲರಲ್ಲೂ ನಾನೇ ಇದ್ದೇನಲ್ಲಾ! (ಅ)
-ಲ್ಲೂ, ಇಲ್ಲೂ ಒಬ್ಬನೇ ನಾನೆಲ್ಲೆಲ್ಲಾ!
ಹೋಗ್ಬೇಕಾದವರು ಹೋಗ್ತಾರಲ್ಲಾ!
ಗುರುಸೇವೆಯಿಲ್ಲೂ ಆಗ್ತದಲ್ಲಾ! (ಆ)
-ವುದೆಲ್ಲಿರಬೇಕೆಂದವ ಬಲ್ಲಾ!
ದಿವ್ಯನಾಮಾಮೃತ ಕುಡೀರೆಲ್ಲಾ! (ಪು)
-ಲ್ಲ ನಿರಂಜನಾದಿತ್ಯನೆಲ್ಲೆಲ್ಲಾ!

ನನಗಾಗಿ ನೀನಿಲ್ಲ, ನಿನಗಾಗಿ ನಾನಿಲ್ಲ! [ದಿ]

-ನ, ರಾತ್ರಿ ಕಳೆಯುತಿದೆ ಸ್ವಾರ್ಥದಿಂದೆಲ್ಲೆಲ್ಲಾ!
ಗಾಡಿ ಮುರಿದಾಗ ನಾನೂ ಇಲ್ಲ, ನೀನೂ ಇಲ್ಲ!
ಗಿರಿಜಾಪತಿಯ ತಾಂಡವ ಮಾತ್ರವೆಲ್ಲೆಲ್ಲಾ!
ನೀನಿದನರಿತು ನೀನಾರೆಂದರಿತಿರೆಲ್ಲೆಲ್ಲಾ!
ನಿತ್ಯ, ಸತ್ಯ ಸಚ್ಚಿದಾನಂದದಲ್ಲಿ ಎಲ್ಲೆಲ್ಲಾ! (ಕೊ)
-ಲ್ಲ ಬೇಕರಿಷ್ಟಕಾರಕರಿಗಳಾರನ್ನೆಲ್ಲಾ!
ನಿನಗಾಗಾವ ಭಯಕ್ಕೂ ಅವಕಾಶವಿಲ್ಲ!
ನ್ನದು, ನಿನ್ನದೆಂಬ ಭೇದವೂ ಆಗ ಇಲ್ಲ!
ಗಾಡಿಯೂ ನಿನಗಾಗ ಬೇಕೆನಿಸುವುದಿಲ್ಲ! (ಯೋ)
-ಗಿರಾಜ ಪರಮೇಶ್ವರನೇ ನೀನು ಎಲ್ಲೆಲ್ಲಾ!
ನಾನೂ, ನೀನೂ, ಅದೊಂದೇ ಆದಮೇಲಿನ್ನೇನಿಲ್ಲ!
ನಿತ್ಯಾನಂದದಲ್ಲಿರೋಣ ದಿನರಾತ್ರಿಯೆಲ್ಲಾ! (ಪು)
-ಲ್ಲ ನಿರಂಜನಾದಿತ್ಯನ ಮಾತಿದು ಸುಳ್ಳಲ್ಲಾ!!!

ನೀನೇ ನಾನಾಗುವುದೆಂದಿಗೆ! (ನೀ)

-ನೇ ಹೇಳಬೇಕದನೆನಗೆ!
ನಾನ್ಯಾರೆಂದರಿ ಮೊದಲಿಗೆ!
ನಾನಲ್ಲದ್ದನ್ನು ಬಿಡಾಮೇಗೆ!
ಗುಹ್ಯಾದಿಂದ್ರಿಯ ಜಯವಾಗೆ! (ಆ)
-ವುದೂ ಆಸೆಗಳಿಲ್ಲದಾಗೆ! (ಅ)
-ದೆಂಬಾತ್ಮ ನಾನೆಂಬರಿವಾಗೆ!
ದಿನ, ರಾತ್ರಿ ಚಿಂತನೆಯಾಗೆ! (ಹೀ)
-ಗೆ ನಿರಂಜನಾದಿತ್ಯನಾಗೆ!!!

ಅಹಿತವಾಗದು ನಿನಗೆ ನನ್ನಿಂದ!

ಹಿರಿಯರ ಹಿರಿಯನಾದ ನನ್ನಿಂದ!
ತ್ವೋಪದೇಶವಾಗಿಹುದು ನನ್ನಿಂದ!
ವಾದಿಸಿ ಬೇರೆಯಾಗದಿರು ನನ್ನಿಂದ!
ತಿ, ಸ್ಥಿತಿಗೆ ಹೇತುವಾದ ನನ್ನಿಂದ!
ದುರಿತದೂರನಾಗಿರುವ ನನ್ನಿಂದ!
ನಿನಗೆ ಬರುತಿದೆ ಶಕ್ತಿ ನನ್ನಿಂದ!
ಶ್ವರದಾಸೆಗಳಳಿದ ನನ್ನಿಂದ!
ಗೆಲುವಾಗುವುದು ನಿನಗೆ ನನ್ನಿಂದ!
ರಹರಿಯಾಗುವೆ ನೀನು ನನ್ನಿಂದ! (ನಿ)
-ನ್ನಿಂದನ್ಯ ನಾನೆನಲಾಗದು ನನ್ನಿಂದ! (ಕಂ)
-ದ ನಿರಂಜನಾದಿತ್ಯಗಾಗಿಂದಿನಿಂದ!!!

ಎಷ್ಟಾಗಬೇಕೋ ಅಷ್ಟಾಗಲಿ! (ಅ)

-ಷ್ಟಾಗ್ಬೇಕಿಷ್ಟಾಗ್ಬೇಕೆನ್ನದಿರ್ಲಿ! (ಮ)
-ಗ ಗುರುದೇವನಿಗಾಗಿರ್ಲಿ!
ಬೇರಾವ ಮಾತೇ ಇಲ್ಲದಿರ್ಲಿ!
ಕೋರಿಕೆ ಪರಮಾರ್ಥಕ್ಕಿರ್ಲಿ!
ದನ್ನು ಈಡೇರಿಸುತ್ತಿರ್ಲಿ! (ದು)
-ಷ್ಟಾರಾಧನೆಗಳಿಲ್ಲದಿರ್ಲಿ! (ಸಂ)
-ಗ ಸಜ್ಜನರದ್ದೊಂದೇ ಇರ್ಲಿ! (ಬ)
-ಲಿಷ್ಟ ನಿರಂಜನಾದಿತ್ಯಾಗ್ಲಿ!!!

ದತ್ತ ಕೃಪಾದೀಪವನಜಪಾ! (ಉ)

-ತ್ತಮ ವಾತಾವರಣವಾ ಕೃಪಾ!
ಕೃತ್ರಿಮವಿಲ್ಲದಾತ್ಮಕ್ಕಾ ಕೃಪಾ!
ಪಾದಪೂಜೆ ನಿತ್ಯದಲ್ಲಾ ಕೃಪಾ!
ದೀಪ, ಧೂಪಾದಿಗಳಿಂದ ಕೃಪಾ!
ತಿ, ಪತ್ನಿಯರ ಸೇವಾ ಕೃಪಾ!
ರ ಭಿಕ್ಷಾನ್ನ ಪ್ರಾಶನಾ ಕೃಪಾ!
ಯ, ವಿನಯದಾತಿಥ್ಯಾ ಕೃಪಾ!
ಪ, ತಪ, ಸಾಧನೆಯಾ ಕೃಪಾ! (ಅ)
-ಪಾರಾ ತಿರಂಜನಾದಿತ್ಯ ಕೃಪಾ!!!

ಮಾತು ಬೆಲ್ಲ, ಪ್ರೀತಿ ತನ್ನಲ್ಲೇನೂ ಇಲ್ಲ!

ತುರುಕರು ಸಂಗವೆಲ್ಲಾ ರಂಗಾಗಿಲ್ಲ!
ಬೆರಕೆ ಹಾಲೆಲ್ಲಾ ಮಾರಿ ಫಲವಿಲ್ಲ! (ನೆ)
-ಲ್ಲ ಬೆಳೆದು, ಹುಲ್ಲಾಕಳಿಗೇನೂ ಇಲ್ಲ!
ಪ್ರೀತಿ ಹಣ ಕಾಸಿಗಾಗಿ ಹೋಯಿತಲ್ಲ!
ತಿನ್ನುವನ್ನಕ್ಕೇ ಗತಿಯಿಲ್ಲದಾಯ್ತಲ್ಲ!
ರತರದಾಸೆ ಪ್ರಬಲವಾಯ್ತಲ್ಲ! (ಉ)
-ನ್ನತಿಯ ದಾರಿ ಮಣ್ಣುಮುಚ್ಚಿ ಹೋಯ್ತಲ್ಲ! (ಕ)
-ಲ್ಲೇ ಅದಾಗೀಗ ಕಾಣ್ಣಿಕ್ಕಿಲ್ಲದಾಯ್ತಲ್ಲ!
ನೂರ್ದಾರಿ ಹಿಡಿದೂರ್ದಾರಿ ಕಾಣದಲ್ಲ!
ನ್ನಾದ್ರೂ ಹಾಡಿ ಹರಿನಾಮವನ್ನೆಲ್ಲ! (ಪು)
-ಲ್ಲ ನಿರಂಜನಾದಿತ್ಯಗೆರಗಿರೆಲ್ಲ!!!

ನಿಮ್ಮಿಂದಾದೆ ತಪಸ್ವಿ ನಾನು! (ಒ)

-ಮ್ಮಿಂದೊಮ್ಮೆ ಗಾಡಿ ಬಿಟ್ಟೆ ನಾನು!
ದಾರಿಯುದಕ್ಕೂ ಜಪಿ ನಾನು! (ಕಂ)
-ದೆರೆದಾಗ ಬಂದಿದ್ದ ಭಾನು!
ನ್ಮಯನಾದೆ ನೋಡಿ ನಾನು!
ರಿಗ್ರಹಿಸೆನ್ನೆಂದೆ ನಾನು! (ಇ)
-ಸ್ವಿ ಅರ್ವತ್ನಾಲ್ಕರಲ್ಲಿ ನಾನು!
ನಾನು ನೀನಾಗ್ಬೇಕೆಂದೆ ನಾನು! (ಭಾ)
-ನು ನಿರಂಜನಾದಿತ್ಯ ನಾನು!!!

ಸ್ಮರಿಸುವಾ, ಬರಿಸುವಾನಂದಿಸುವಾ!

ರಿಪುಕುಲಾಂತಕನ ಸಂದರ್ಶಿಸುವಾ!
ಸುರಧೇನು ಸಮಾನಗೆ ನಮಿಸುವಾ!
ವಾಸವಾದಿವಂದ್ಯನನ್ನಾಶ್ರಯಿಸುವಾ!
ಲಹೀನರಿಗೆ ಬಲ ನೀಡೆನ್ನುವಾ!
ರಿಕ್ತಹಸ್ತರಾಗಿಹೆವು ನಾವೆನ್ನುವಾ!
ಸುಧಾರಿಸು ಪರಿಸ್ಥಿತಿಯನೆನ್ನುವಾ!
ವಾದ, ವಿವಾದ ನಮ್ಮಲ್ಲಿಲ್ಲವೆನ್ನುವಾ!
ನಂಬಿರುವೆವು ನಾವು ನಿನ್ನನ್ನೆನ್ನುವಾ!
ದಿನ, ರಾತ್ರಿಯೆಲ್ಲಾ ಭಜನೆ ಮಾಡುವಾ!
ಸುಮ ಮಾಲೆಯನ್ನವನಿಗರ್ವಿಸುವಾ!
ವಾಸುದೇವ ನಿರಂಜನಾದಿತ್ಯನವಾ!!!

ಮನೆಮನೆಯಲೆಯುವುದೇಕೆ?

ನೆರೆ ಸುಖವೀವ ಪತಿ! ಜೋಕೆ!
ನೋಹರನ ಮರವೆಯೇಕೆ?
ನೆನೆಯುತಿರವನನು! ಜೋಕೆ!
ಮನ ಭಯ ನಿನಗದೇಕೆ? (ಕಾ)
-ಲೆತ್ತಿ ಹೊರಗಿಡಬೇಡ! ಜೋಕೆ!
ಯುಕ್ತಸೇವೆಗನಾದರವೇಕೆ? (ಕಾ)
-ವುದವನಿಗೆ ಸೇರಿದ್ದು! ಜೋಕೆ!
ದೇವಿ ನಿನಗನುಮಾನವೇಕೆ? (ಹಾ)
-ಕೆ ನಿರಂಜನಾದಿತ್ಯ ಪತಾಕೆ!!!

ಹಾಡುವಾ, ಕೊಂಡಾಡುವಾ ಗುರುವಾ! (ಕ)

-ಡು ಬಡವಗೂ ದರ್ಶನವೀವಾ!
ವಾಗೀಶ್ವರಿಯ ಸ್ವರೂಪನವಾ!
ಕೊಂಬನೆಲ್ಲರ ಸೇವೆಯನ್ನವಾ! (ಬ)
-ಡಾಯ್ಕೊಚ್ಚಿಕೊಳ್ಳುವವನಲ್ಲವಾ! (ನ)
-ಡು ನೀರಲ್ಲಿ ಕೈಯ ಬಿಡನವಾ!
ವಾಸನೆಗಳಿಲ್ಲದಾತನವಾ!
ಗುರುಗುಹನಿಗೆ ಮಿತ್ರನವಾ! (ಮಾ)
-ರುತೀ ಪ್ರಿಯ ಸೀತಾರಾಮನವಾ! (ಅ)
-ವಾ ನಿರಂಜನಾದಿತ್ಯ ಕೇಶವಾ!!!

ಮಲ್ಲನವ, ಗೊಲ್ಲನವ, ಎಲ್ಲವವ! (ಬ)

-ಲ್ಲವಾ ಪುಲ್ಲಲೋಚನ ಶ್ರೀ ಕೃಷ್ಣನವ!
ಲ್ಲನವ ಬಾಲಲೀಲಾ ಕಾಲನವ!
ರಗುರು ದತ್ತಾತ್ರೇಯನಂದನವ!
ಗೊಡ್ಡಾಕಳಿಂದ ಹಾಲು ಕರೆದವವ! (ಒ)
-ಲ್ಲ ಡಾಂಭಿಕ ಭಕ್ತಿ ಭಾವಗಳನ್ನವ!
ಯ ವಿನಯದಾತಿಥ್ಯ ಕೊಳ್ಳುವವ!
ರದರಾಜ ಶ್ರೀಧರನೆಂಬುವವ!
ಲ್ಲರ ಹೃದಯದಲ್ಲೂ ಇರುವವ! (ಕ)
-ಲ್ಲ ಮೆಟ್ಟಿ ಹೆಣ್ಣು ಮಾಡಿದ ರಾಮನವ!
ಸ್ತ್ರಾದಿಗಳಿಲ್ಲದವಧೂತನವ! (ಅ)
-ವ ನಿರಂಜನಾದಿತ್ಯಾನಂದ ಮಾಧವ!!!

ಇರಲೊಂದು ದಾರಿ, ಸೇರು ಗುರಿ! [ಪ]

-ರಧರ್ಮ ನಿನಗಪಾಯಕಾರಿ! (ಹಾ)
-ಲೊಂದುತ್ತಮಾಹಾರ ಗುಣಕಾರಿ!
ದುಷ್ಟ ಪಾನೀಯನಾರೋಗ್ಯಕಾರಿ!
ದಾಯಾದಿ ಮತ್ಸರ ಲಯಕಾರಿ! (ಹ)
-ರಿನಾಮಕೀರ್ತನಾನಂದಕಾರಿ!
ಸೇವೆ ದೇವನದ್ದಾದಾಯಕಾರಿ! (ಕು)
-ರುಕುಲ ನಾಶಕ್ಕಸೂಯೆ ದಾರಿ!
ಗುಣಾತೀತನಾಗುವುದೇ ಗುರಿ! (ಅ)
-ರಿ ನಿರಂಜನಾದಿತ್ಯಾ ಶ್ರೀ ಹರಿ!!!

ಹರಿಯ ಸೇವೆಗಣಿಯಾಗೋ! [ಅ]

-ರಿತಾತ್ಮಾನುಭವಿ ನೀನಾಗೋ!
(ಕಾ)ಯಕ್ಲೇಶಕ್ಕಂಜದವನಾಗೋ!
ಸೇಡು ಬುದ್ಧಿ ಗೆದ್ದವನಾಗೋ! (ಸ)
-ವೆದು ಸಂಚಿತ ಶುದ್ಧನಾಗೋ!
ಗನ ಸದೃಶ ನೀನಾಗೋ! (ತ)
-ಣಿದ ಕೆಂಡದಂತೆ ನೀನಾಗೋ!
ಯಾಗ ಪೂರೈಸಿದವನಾಗೋ! (ಆ)
-ಗೋ, ನಿರಂಜನಾದಿತ್ಯನಾಗೋ!!!

ಭಕ್ತನಿಂದ ಭಗವಂತನಾದ! [ಭ]

-ಕ್ತ ಭಗವಂತನಿಂದ ಉಂಟಾದ!
ನಿಂದಕಗೆ ದತ್ತ ಕತ್ತೆಯಾದ!
ತ್ತನಿಂದಾತ ಕುತ್ತಿಗೀಡಾದ!
ವಭಯದಿಂದಾತ ಹುಚ್ಚಾದ!
ತಿಗೆಟ್ಟಲೆದಾಡುವಂತಾದ!
ವಂಚಕರ ಜಾಲಕ್ಕೊಳಗಾದ!
ಲೆ ಮರಸ್ಯೋಡಾಡುವಂತಾದ!
ನಾಮಜಪ ಬಿಟ್ಟು ನಾಯಿಯಾದ!
ತ್ತ ನಿರಂಜನಾದಿತ್ಯನಾದ!!!

ಗುಂಡಿ ಸಿದ್ಧವಾದ ಮೇಲೆ ಹೂಳು! [ಅ]

-ಡಿ ನಾಲ್ಕು ಆಳ ತೆಗೆಯಲಾಳು! (ಪು)
-ಸಿ ಅಳತೆ ಹೇಳಬಾರದಾಳು
(ಬ)ದ್ಧನಾಗಲಾಜ್ಞಾಪಾಲನೆಗಾಳು!
ವಾಡಿಕೆಗೆ ಕಟ್ಟು ಬೀಳ್ಬಾರ್ದಾಳು!
ಯೆ, ದಾಕ್ಷಣ್ಯ ಬೇಡೆಂದು ಹೇಳು!
ಮೇಲೊಂದು ಕಲ್ಲನ್ನೂ ಹೇರ ಹೇಳು! (ತ)
-ಲೆ ಮತ್ತೆತ್ತದಂತೆ ನೀನೇ ಹೂಳು!
ಹೂತಮೇಲಿನ್ನೇಕಳುವ ಬಾಳು? (ಏ)
-ಳು ನಿರಂಜನಾದಿತ್ಯಾ! ನೀನಾಳು!!!

ಮೂಗು, ಮುಖ, ಪಾದಕ್ಕೆ ತಿಕ್ಕಿದ!

ಗುರುದೇವ ದತ್ತನೇ ನೀನೆಂದ!
ಮುಟ್ಟು, ಮಡಿ ಬಿಟ್ಟವ ನೀನೆಂದ!
ರ, ದೂಷಣಾದ್ಯರಲ್ಲೊಂದಾದ!
ಪಾಪಿ ಸತಿಯೆಂದರಿಯದಾದ!
ದ್ತ ಪಾದಕ್ಕಪಚಾರ ಗೈದ! (ಬೆ)
-ಕ್ಕೆಗೀಡಾಗಿ ಏನೇನೋ ಕಕ್ಕಿದ!
ತಿರಿತಿರಿಗದನ್ನೇ ನೆಕ್ಕಿದ! (ಇ)
-ಕ್ಕಿದಮೃತಾನ್ನವನ್ನುಣದಾದ!
ತ್ತ ನಿರಂಜನಾದಿತ್ಯನಾದ!!!

ಗುಂಡಿ ಆಳವಾಗೀಗಲೇ ತೋಡು! (ಅ)

-ಡಿಗೆ, ಊಟಗಳಾದಮೇಲೆ ಮಾಡು!
ಅನಿಷ್ಟ ಮೊದಲ್ಮಣ್ಣು ಮಾಡು!
(ಚ)ಳವಳಿ ಹೂಡದೇ ಎಲ್ಲಾ ಮಾಡು!
ವಾಗ್ವಾದವಿಲ್ಲದೇ ಕಾರ್ಯ ಮಾಡು!
ಗೀತಾಧಾರವಿಟ್ಟುಕೊಂಡೇ ಮಾಡು!
ರ್ವವಿಲ್ಲದೇ ಕರ್ತವ್ಯ ಮಾಡು!
ಲೇಶವೂ ಭಯಪಡ್ಬೇಡ ಓಡು!
ತೋಡಿದ ಹಳ್ಳಕ್ಕದನ್ನು ದೂಡು! (ಕೂ)
-ಡು ನಿರಂಜನಾದಿತ್ಯನ ನಾಡು!!!

ದುಶ್ಚಲಕ್ಕೆ ಫಲ ದುರ್ಬಲ! (ನಿ)

-ಶ್ಚಲದಚಲಕ್ಕಾತ್ಮ ಬಲ!
ಕ್ಷ್ಯ ಮರೆತು ಕೋಲಾಹಲ! (ಧ)
-ಕ್ಕೆ ಜೀವನಕ್ಕಾ ಹಾಲಾಹಲ!
ಲಾಶಾತೀತನೇ ವಿಮಲ!
ಯ ಸೂರ್ಯನಲ್ಲಾ ಕಮಲ!
ದುರಹಂಕಾರ ಘೋರ ಮಲ! (ಮಾ)
-ರ್ಬಲ, ತೋಳ್ಬಲವೆಲ್ಲಾ ಮಲ! (ಬಾ)
-ಲ ನಿರಂಜನಾದಿತ್ಯಮಲ!!!

ಮಿಥ್ಯಕ್ಕಾದರಣೆ, ಸತ್ಯಕ್ಕನಾದರಣೆ! (ಪ)

-ಥ್ಯವಾಗದಿದಾರೋಗ್ಯಕ್ಕೆ ಸಲಕರಣೆ! (ವಾ)
ಕ್ಕಾಯ, ಮನಶ್ಯುದ್ಧಿಯಿಂದಾರೋಗ್ಯ ಧಾರಣೆ!
ರಿದ್ರ, ಧನಾಢ್ಯರಿಗೆಲ್ಲಾ ಇದೇ ದೇಣೆ!
ಜಸ್ತಮೋಗುಣಾತೀತವೇ ಸುಧಾರಣೆ! (ಹೊ)
-ಣೆಯರಿವಾಗದಿದ್ದರಾಗದರಗಣೆ!
ರ್ವೇಶ್ವರನವನೊಬ್ಬನೆಲ್ಲಕ್ಕೂ ಹೊಣೆ! (ನಿ)
-ತ್ಯದಲ್ಲಿ ಸ್ಮರಿಸುತ್ತಿವನಾಗ್ಬೇಕ್ಪಾರಣೆ! (ಚೊ)
-ಕ್ಕವಾಗಿರಬೇಕು ಎಲ್ಲಾ ಸಲಕರಣೆ!
ನಾಸ್ತಿಕನಾಗಬಾರದೆಂದೀ ನಿರೂಪಣೆ! (ಉ)
-ದಯೋನ್ಮುಖ ನೀನಾಗದೆ ಬೆಳಕ ಕಾಣೆ! (ನಿ)
-ರತಾಭ್ಯಾಸವಿದ್ದವ ಹತ್ತುವನು ಗಣೆ! (ಕಾ)
-ಣೆ, ನಿರಂಜನಾದಿತ್ಯಾನಂದಕ್ಕಾವ ಎಣೆ!!!

ವೇದನಾ, ನಿವೇದನಾ, ಪ್ರಾಥನಾ!

ತ್ತ ನಾನೆಂದು ಸದಾ ಚಿಂತನಾ!
ನಾಕಾದಿ ಲೋಕವಿನ್ನೇಕೆಂಬೆ ನಾ!
ನಿತ್ಯಾನಿತ್ಯ ವಿವೇಕದಿಂದ ನಾ!
ವೇಷ, ಭೂಷಣವಲ್ಲ ಪ್ರಧಾನಾ!
ರ್ಶನದಿಂದಾಗ್ಬೇಕು ಧನ್ಯ ನಾ!
ನಾಶವದರಿಂದೆಲ್ಲಾ ವಾಸನಾ!
ಪ್ರಾಶನಾ ಭಿಕ್ಷಾನ್ನವನುದಿನಾ! (ಸಾ)
-ರ್ಥಕವೀ ಜನ್ಮವೆಂದಾನಂದ ನಾ!
ನಾ, ನಿರಂಜನಾದಿತ್ಯಾನಂದ ನಾ!!!

ಆಸೆಯಿಲ್ಲ, ವೇಷವಿಲ್ಲ, ದೋಷವಿಲ್ಲ!

ಸೆರೆ, ಸೇಂದಿ ಆತ ಕುಡಿಯುವುದಿಲ್ಲ! (ಬಾ)
-ಯಿಯಿಂದವನೇನನ್ನೂ ಹೇಳುವುದಿಲ್ಲ! (ಎ)
-ಲ್ಲರೊಡನಿದ್ದೂ ಲಿಪ್ತನವನಾಗಿಲ್ಲ!
ವೇದಿಕೆ ಹತ್ತಿ ಭಾಷಣ ಮಾಳ್ಪುದಿಲ್ಲ! (ಶೋ)
-ಷಣೆ ಆತ ಯಾರನ್ನೂ ಮಾಡುವುದಿಲ್ಲ!
ವಿಧಿ, ಹರಿ, ಹರ, ಭೇದವನಲ್ಲಿಲ್ಲ! (ಗು)
-ಲ್ಲನ್ನೆಬ್ಬಿಸಿ ಆತ ಕುಣಿಯುವುದಿಲ್ಲ!
ದೋಬಿಯಂತವನ ನಿತ್ಯ ಕರ್ಮವೆಲ್ಲ! (ವಿ)
-ಷವಿಟ್ಟಾರನ್ನೂ ಆತ ಕೊಲ್ಲುವುದಿಲ್ಲ!
ವಿಚಾರದಲ್ಲೇ ಅವನಾಸಕ್ತಿಯೆಲ್ಲ! (ಪು)
-ಲ್ಲ ನಿರಂಜನಾದಿತನ ರೀತಿದೆಲ್ಲ!!!

ಕಳ್ಳನೆಂದಾರನ್ನೂ ಹಳಿಯಬೇಡಯ್ಯಾ! [ಬೆ]

-ಳ್ಳಗಿರುವುದೆಲ್ಲಾ ಹಾಲೆನಬೇಡಯ್ಯಾ!
ನೆಂಟರೂ, ಭಂಟರೂ ನಿನ್ನಾತ್ಮ ರೂಪಯ್ಯಾ!
ದಾಸಾಂಜನೇಯನ ಆದರ್ಶವಿದಯ್ಯಾ! (ಪ)
-ರರವಗುಣ ಹುಡುಕಬಾರದಯ್ಯಾ! (ನಿ)
-ನ್ನೂರು, ನನ್ನೂರು, ರಂಗನಾಥನೂರಯ್ಯಾ!
ತ್ತವತಾರಿ ಹೆತ್ತ ತಾಯ್ತಂದೆಯ್ಯಾ! (ಕಾ)
-ಳಿ, ಬೋಳಿ, ನ್ಯಾಯವಿನ್ನಾದರೂ ಬಿಡಯ್ಯಾ!
ದುನಾಥನ ಕೃಪೆಯಾಗುವುದಯ್ಯಾ!
ಬೇಕಾದದ್ದು ತಾನಾಗಿ ಬರುವುದಯ್ಯಾ! (ಮಾ)
-ಡಬೇಡ ನೀನಾವ ಸಂಕಲ್ಪವನ್ನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾನಂದವಿದಯ್ಯಾ!!!

ಪ್ರಚಂಡ ಚಂಡಮಾರುತನಯ್ಯಾ!

ಚಂಪಾದ್ಯೆಲ್ಲಾ ಗಿಡ ನಾಶವಯ್ಯಾ! (ರುಂ)
-ಡಮಾಲಿನಿಯಾಕ್ರೋಶವಿದಯ್ಯಾ!
ಚಂದ್ರ, ಸೂರ್ಯರೆಲ್ಲಾ ಸಾಕ್ಷಿಯಯ್ಯಾ!
ಮರುಧರ ಯೋಗದಲ್ಲಯ್ಯಾ!
ಮಾನವನಿಗಿದು ಪಾಠವಯ್ಯಾ! (ಗು)
-ರುಭಕ್ತಿ ಸಾಮಾನ್ಯವಲ್ಲಯ್ಯಾ!
ನ್ನಾಪ್ತರ ಕೈ ಬಿಡನಾತಯ್ಯಾ!
ಲವಿಂದವನ ಕೊಂಡಾಡಯ್ಯಾ! (ಅ)
-ಯ್ಯಾ ನಿರಂಜನಾದಿತ್ಯನಾತಯ್ಯಾ!!!

ದೇಹಕ್ಕನಾರೋಗ್ಯವೇಕೆ ಕೊಟ್ಟೆ? (ಅ)

-ಹರ್ನಿಶಿ ನಾ ನಿನ್ನ ನಂಬಿಬಿಟ್ಟೆ! (ತ)
-ಕ್ಕ ಪರಿಹಾರಕ್ಕೆ ಮೊರೆಯಿಟ್ಟೆ!
ನಾಳೆ, ನಾಳೆಂದು ದಣಿಸಿಬಿಟ್ಟೆ!
ರೋಸಿಹೋಗೀ ಬಾಳು ಸಾಕೆಂದ್ಬಿಟ್ಟೆ! (ಭಾ)
-ಗ್ಯ ನೀನೆನಗೆಂದು ಕಣ್ಣೀರ್ಬಿಟ್ಟೆ!
ವೇಶ್ಯಾಭಕ್ತಿಯಿನ್ನೆಂದೋ ಸುಟ್ಬಿಟ್ಟೆ!
ಕೆಟ್ಟ ಸಹವಾಸ ಬಿಡಿಸ್ಬಿಟ್ಟೆ!
ಕೊಟ್ಟ ಭಾಷೆಗೆ ತಪ್ಪೆನೆಂದ್ಬಿಟ್ಟೆ! (ನಿ)
-ಟ್ಟೆ ನಿರಂಜನಾದಿತ್ಯನಲ್ಲಿಟ್ಟೆ!!!

ಭಾರತ ಭಾರತಿಯ ಮೂರ್ತಿ! (ಪ)

-ರಮಾತ್ಮಾಂತರ್ಯಾಮಿಯೀ ಮೂರ್ತಿ!
ತ್ವಾರ್ಥವರುಹುವಾ ಮೂರ್ತಿ!
ಭಾವಾತೀತ ಸ್ಥಿತಿಯಾ ಮೂರ್ತಿ! (ವ)
-ರಗುರು ದತ್ತಾತ್ರೇಯಾ ಮೂರ್ತಿ!
ತಿಥಿ, ವಾರ ನೋಡದಾ ಮೂರ್ತಿ!
ಮಾದ್ಯಷ್ಟಾಂಗಯೋಗೀ ಮೂರ್ತಿ!
ಮೂರು ಲೋಕಕ್ಕಾಧಾರಾ ಮೂರ್ತಿ! (ಮೂ)
-ರ್ತಿ ನಿರಂಜನಾದಿತ್ಯಾ ಮೂರ್ತಿ!!!

ತಾಯಿಯಲ್ಲವಿಶ್ವಾಸೆನಗಿಲ್ಲ! (ಸಾ)

-ಯಿಸಿದರೂ ದುಃಖ ನನಗಿಲ್ಲ! (ಧ್ಯೇ)
-ಯ ನನ್ನದಪವಿತ್ರವಾಗಿಲ್ಲ! (ಬ)
-ಲ್ಲಳಿದನಾ ಪ್ರಿಯ ತಾಯಿಯೆಲ್ಲ!
ವಿಚಾರ ನನ್ನದು ತಪ್ಪಾಗಿಲ್ಲ!
ಶ್ವಾನವೂ ನನಗಪ್ರಿಯವಲ್ಲ! (ದೋ)
-ಸೆ ತೂತು ನಾನೆಣಿಸುವುದಿಲ್ಲ!
ರ ಹರನೆಂಬುದು ಸುಳ್ಳಲ್ಲ!
ಗಿರಿಜೆಯನ್ನಗಲಿವನಿಲ್ಲ! (ಪು)
-ಲ್ಲ ನಿರಂಜನಾದಿತ್ಯನ್ಯನಲ್ಲ!!!

ನಿನ್ನ ಮಾನ ನೀನೇ ಕಳ್ಕೊಂಡ್ಬಿಟ್ಟೆ! (ಅ)

-ನ್ನ ಕೊಟ್ಟವಗೆರಡು ಬಗೆದ್ಬಿಟ್ಟೆ!
ಮಾಯಜಾಲದಲ್ಲಿ ಸಿಕ್ಕಿಬಿದ್ಬಿಟ್ಟೆ!
ರರೂಪಿನ ಹಂದಿ ನೀನಾಗ್ಬಿಟ್ಟೆ!
ನೀಚರ ಸಂಗದಲ್ಲೊಬ್ಬನಾಗ್ಬಿಟ್ಟೆ!
ನೇರ ದಾರಿಗೆ ಬಹು ದೂರಾಗ್ಬಿಟ್ಟೆ!
ರಣತ್ರಯ ಕೊಳೆ ಮಾಡ್ಕೊಂಡ್ಬಿಟ್ಟೆ! (ತ)
-ಳಮಳಕ್ಕೆ ಆಮಂತ್ರಣ ಕೊಟ್ಬಿಟ್ಟೆ!
ಕೊಂಚವೂ ವಿವೇಕವಿಲ್ಲದಾಗ್ಬಿಟ್ಟೆ! (ಆ)
-ಡ್ಬಿಟ್ಟೆ, ಮಾಡ್ಬಾರದ್ಮಾಡಿ ಅಡಗ್ಬಿಟ್ಟೆ! (ಕೆ)
-ಟ್ಟೆ, ನಿರಂಜನಾದಿತ್ಯ ಮುನಿದ್ಕೆಟ್ಟೆ!!!

ತನ್ನಿಷ್ಟದಂತೆ ಎಲ್ಲಾ ಆಗ್ಬೇಕು! (ಸ)

-ನ್ನಿಧಿ ಸದಾ ಸ್ವಚ್ಛವಾಗಿರ್ಬೇಕು! (ಇ)
-ಷ್ಟಸಿದ್ಧಿಗಾರು ಕಷ್ಟ ಪಡ್ಬೇಕು?
ದಂಭ ಬಿಟ್ಟು ತಾನೇ ದುಡಿಯ್ಬೇಕು!
ತೆಗಳಿಕೆಗೆ ಕಿವುಡಾಗಿರ್ಬೇಕು!
ಲ್ಲವೂ ಪ್ರಸಾದವೆಂದಿರ್ಬೇಕು! (ಕ)
-ಲ್ಲಾದ್ರೂ ಕರಗ್ವ ಹೃದಯಾಗ್ಬೇಕು!
ತ್ಮಾನಂದ ಸತತವಿರ್ಬೇಕು! (ಆ)
-ಗ್ಬೇಕ್ಬಲ್ಲವರ ಬೆಲ್ಲಾಗಿರ್ಬೇಕು! (ಬೇ)
-ಕು ನಿರಂಜನಾದಿತ್ಯಾನಾಗ್ಬೇಕು!!!

ಮದಗಜವನ್ನೊದ್ದವ ನೀನೇ!

ಯೆ ಬಿಟ್ಟದ ಕೊಂದವ ನೀನೇ!
ಣಪತಿಯೆಂಬವನೂ ನೀನೇ!
ರಾಜನ್ಮವಿಲ್ಲದಾತ ನೀನೆ!
ರದರಾಜ ಶ್ರೀರಂಗ ನೀನೇ! (ನಿ)
-ನ್ನೊಟ್ಟಿಗ ನಾನೆಂದವ ನೀನೇ! (ಸ)
-ದ್ದಡಗಿದ ಪರಬ್ರಹ್ಮ ನೀನೇ!
ರಗುರು ದತ್ತಾತ್ರೇಯ ನೀನೇ! (ನಾ)
-ನೀನೆಂಬ ಭೇದಾತೀತಾತ್ಮ ನೀನೇ! (ನೀ)
-ನೇ ಆ ನಿರಂಜನಾದಿತ್ಯ ನಾನೇ!!!

ಎಲೆ ಹುಲ್ಲೆ! ನಾನೇ ಮೇಲೆ ಮೊಲ್ಲೆ! [ಮಾ]

-ಲೆ ನಾನಾಗಿ ಮೇಲ್ಮನೆ ಸೇರ್ಬಲ್ಲೆ!
ಹುಲ್ಲು ನೀನಾಗಿಲ್ಲೇ, ನೆಲದಲ್ಲೆ! (ಮೊ)
-ಲ್ಲೆ! ನಿಜತತ್ವ ನೀನೇನು ಬಲ್ಲೆ?
ನಾಳೆ ನೀನು ತಿಪ್ಪೆ ಪಾಲಾಗ್ಬಲ್ಲೆ! (ಅ)
-ನೇಕಾಕಳಿಗೆ ನಾ ಮೇವಾಗ್ಬಲ್ಲೆ!
ಮೇಲ್ಕೀಳೆಂಬುದ ಬಿಟ್ಟಿಡು ಮೊಲ್ಲೆ!
(ಬೆ)ಲೆಯಿಲ್ಲದ್ದಾವುದಿದೆ, ಹೇಳ್ಮೊಲ್ಲೆ!
ಮೊಟ್ಮೊದ್ಲು ನೀ, ನಾ, ನೊಂದೆಡೆಯಲ್ಲೆ! (ಇ)
-ಲ್ಲೆ ನಿರಂಜನಾದಿತ್ಮಾತ್ಮನಲ್ಲೆ!!!

ಎಲೆ ಹುಲ್ಲೇ! ಮೊಲ್ಲೆ ನನ್ನ ನೀನೇನ್ಬಲ್ಲೆ? [ಬಾ]

-ಲೆಯರ್ಮುಡಿದ್ಕೊಳ್ಳುವ ನಾ ನಿತ್ಯ ಮೊಲ್ಲೆ!
ಹುಳು ಹತ್ತಿ ಸಾಯುವೆ ನೀನು ಇದ್ದಲ್ಲೆ! (ಮೊ)
-ಲ್ಲೇ ನಿಜಸಂಗತಿಯ ನೀನೇನು ಬಲ್ಲೆ?
ಮೊಟ್ಟಮೊದಲು ನೀನೂ ಹುಟ್ಟದ್ದು ಇಲ್ಲೆ! (ಬ)
-ಲ್ಲೆ ನಾ ನಿನ್ನ ತಾಯ್ತಂದೆ ಯಾರೆಂದು ಮೊಲ್ಲೆ!
ನ್ನ ನಿನ್ನಾಟೋರ್ವ ತಾಯ ಮಡಿಲಲ್ಲೆ! (ಉ)
-ನ್ನತಿ, ಅವನತಿ, ಅಶಾಶ್ವತ ಮೊಲ್ಲೆ!
ನೀನು ನಾಳೆ ಮಲಗುವೆ ತಿಪ್ಪೆಯಲ್ಲೆ! (ಅ)
-ನೇಕಾಕಳ ಮೇವಾಗುವೆನು ನಾನಿಲ್ಲೆ! (ಧೇ)
-ನ್ಬಲಕ್ಕೆ ನೆರವಾದ ನಾ ಧನ್ಯ ಮೊಲ್ಲೆ! (ಮೊ)
-ಲ್ಲೆ! ನಿರಂಜನಾದಿತ್ಯಾನಂದೆನಗಿಲ್ಲೆ!!!

ನೂರಾರ್ಕಾಯ್ಗಳ ಗೊನೆಗಳ್ನಾವು! [ವಿ]

-ರಾಜಿಪೆವಂತರಿಕ್ಷದಲ್ನಾವು! (ದ)
-ರ್ಕಾಸ್ತು ಜ

ಈನಿನಲ್ನಾವಿಹೆವು! (ಕಾ)
-ಯ್ಗಳ್ನಮ್ಮವೆಲ್ಲಾ ಬಹು ದೊಡ್ಡವು! (ಹು)
-ಳ ಹತ್ತಿದೆ ಮರಕ್ಕೆಂದರ್ಯವು!
ಗೊಬ್ಬರ, ನೀರ್ಬೇರುಗಳ್ಕಾಣವು!
ನೆನೆಯವು ಪರಿಸ್ಥಿತಿಯವು!
ಡ್ಡೆಯೊಣಗಿ ಬಾಡಿ ಹೋದವು! (ಸೀ)
-ಳ್ನಾಲೆಗೆ ಕಾಯ್ಗಳುದುರಿದವು! (ಅ)
-ವು ಶ್ರೀ ನಿರಂಜನಾದಿತ್ಯಾಗವು!!!

ಹಸುರೆಲೆಗೀಗ ಬಹಳ ಜಂಭ!

ಸುವಾಸನೆಯ ಹೂಗಳು ಮೈ ತುಂಬ! (ಮೆ)
-ರೆಯುತಿದೆ ತನ್ನ ನೋಡಿ ಕಣ್ತುಂಬಿ! (ತ)
-ಲೆಯ ಮೇಲಿದೆ ಸದಾ ಸೂರ್ಯಬಿಂಬ! (ಮಾ)
-ಗೀಗ ಬಿದ್ದ ಹಣ್ಣೆಲೆಯ ನೋಡೆಂಬ!
ತಿ, ಸ್ಥಿತಿ ಶಾಶ್ವತವಲ್ಲವೆಂಬ!
ದಲಾವಣೆಗೆ ತಕ್ಕಂತಿರೆಂಬ!
ರೆಯದ ಗರ್ವ ನಿನಗೇಕೆಂಬ! (ಕ)
-ಲಕಳಿಯಿಂದ ವಿಚಾರ ಮಾಡೆಂಬ!
ಜಂಭದಿಂದ ಗುರಿ ಸಿದ್ಧಿಸದೆಂಬ! (ಜಂ)
-ಭ, ನಿರಂಜನಾದಿತ್ಯನಿಗಿಲ್ಲೆಂಬ!!!

ಲೇಖಕಿಯ ಸ್ವರೂಪ ಲೇಖನದಲ್ಲಿ!

ಚಿತವಿದು ವಿಚಾರಿಗದರಲ್ಲಿ!
ಕಿವಿ, ಬಾಯಿಗೇ ಪ್ರಾಶಸ್ತ್ಯವದರಲ್ಲಿ!
ದುನಾಥನ ಸ್ವರೂಪ ಗೀತೆಯಲ್ಲಿ!
ಸ್ವಪ್ನ ಸದೃಶ ಜಗವೆಂಬುದದ್ರಲ್ಲಿ!
ರೂಪ, ರೇಖೆಗೆ ಜಾಗವಿಲ್ಲದರಲ್ಲಿ!
ರಮಾತ್ಮ ತಾನೇ ತಾನಾಗಿರ್ಪದ್ರಲ್ಲಿ!
ಲೇಶವೂ ಕಪ್ಪಿಲ್ಲಾ ದಿವ್ಯಜ್ಯೋತಿಯಲ್ಲಿ!
ತಿಯ ಕಣ್ಣಿಗೆಲ್ಲಾ ತಪ್ಪದರಲ್ಲಿ!
ಯ, ವಿನಯಕ್ಕಮೃತವದರಲ್ಲಿ!
ತ್ತಗೀತೆಯ ಸಾರವೇ ಅದರಲ್ಲಿ! (ಇ)
-ಲ್ಲಿ ನಿರಂಜನಾದಿತ್ಯ ಕಿರಣದಲ್ಲಿ!!!

ಸ್ಥಾವರ ಜಂಗಮಕ್ಕೆಲ್ಲಾ ಬೆಳಕವನಿಂದ!

ಸ್ತ್ರ ತ್ಯಜಿಸಿ ದಿಗಂಬರನಾದವನಿಂದ!
ಮೇಶ, ಉಮೇಶರೆನಿಸಿಕೊಂಡವನಿಂದ!
ಜಂಭವಿಲ್ಲದೇ ಜಗತ್ಪತಿಯಾದವನಿಂದ!
ತಿ, ಸ್ಥಿತಿಗಾಧಾರವಾಗಿರುವವನಿಂದ!
ಮಕಾರವೆಳ್ಳಷ್ಟು ಇಲ್ಲದಿರ್ಪವನಿಂದ! (ಧ)
-ಕ್ಕೆ ಧರ್ಮ, ಕರ್ಮಕ್ಕುಂಟುಮಾಡದಿರ್ಪವನಿಂದ! (ಕ)
-ಲ್ಲಾದರೂ ತಿಮ್ಮಪ್ಪನೆನಿಸಿಕೊಂಬವನಿಂದ!
ಬೆರಕೆಯಿಲ್ಲದ ಶುದ್ಧಾತ್ಮನಾದವನಿಂದ! (ಒ)
-ಳ, ಹೊರಗೆಲ್ಲಾ ತಾನೇ ತಾನಾರ್ಪವನಿಂದ!
ಲಾತೀತ, ಕಲ್ಪಾಂತಕಾರಿಯಾದವನಿಂದ!
ರಗುರು ದತ್ತಾತ್ರೇಯನೆನಿಸಿಹನಿಂದ!
ನಿಂದಾ, ಸ್ತುತಿಗಲಕ್ಷ್ಯವಾಗಿರುವವನಿಂದ!
ಯಾನಿಧಿಯೆಂಬ ನಿರಂಜನಾದಿತ್ಯನಿಂದ!

ಎಂದೋ ಸಾಯುವುದಕ್ಕೇಕೀಗಳುವೆ?

ದೋಣಿ ದಡ ಸೇರಲೇಬೇಕಲ್ಲವೆ?
ಸಾಧನೆ ನಿನ್ನ ಕರ್ತವ್ಯವಲ್ಲವೆ?
ಯುದ್ಧಭೂಮಿಯರ್ಜುನನಾಗ್ಬೇಡವೆ! (ಬೇ)
-ವು ಬೆಲ್ಲಾನಂದದಿಂದುಣಬೇಡವೆ?
ತ್ತನಲ್ಲನನ್ಯ ಭಕ್ತಿ ಬೇಡವೆ? (ಸೊ)
-ಕ್ಕೇಕಿನ್ನೂ ಹುಟ್ಟಡಗಿಸದಿರುವೆ?
ಕೀಳ್ಮೇಲ ಬಿಡದೇಕೆ ಹಾಳಾಗುವೆ?
ರ್ವದಿಂದೇಕನ್ಯರನ್ನು ಚುಚ್ಚುವೆ?
(ಬಾ)ಳುದ್ಧವನಂತೆ! ಕೃಷ್ಣ ನೀನಾಗುವೆ! (ಸೇ)
-ವೆ ಸಾಗ್ಲಿ! ನಿರಂಜನಾದಿತ್ಯಾಗುವೆ!!!

ಮಕ್ಕಳ ಭಜನೆ ನಿಜಾನಂದ! [ಸಿ]

-ಕ್ಕಲಾರದೆಲ್ಲರಗೀ ಆನಂದ! (ಒ)
-ಳಗೆ, ಹೊರಗದು ಶುದ್ಧಾನಂದ!
ಕ್ತಿ, ಮುಕ್ತಿಪ್ರದಾ ನಿತ್ಯಾನಂದ!
ನ್ಮ ಸಾರ್ಥಕಕ್ಕೆ ಆತ್ಮಾನಂದ!
ನೆನಪನ್ಯಕ್ಕಿಲ್ಲದದಾನಂದ!
ನಿಶಿ, ದಿನವಿರಲೀ ಆನಂದ!
ಜಾತಿ, ಮತ ಭೇದಾತೀತಾನಂದ!
ನಂಜುಂಡೇಶ್ವರಗಿದೇ ಆನಂದ!
ತ್ತ ನಿರಂಜನಾದಿತ್ಯಾನಂದ!!!

ಕೈಗೆ ಬಂದ ತುತ್ತು ಬಾಯಿಗಿಲ್ಲ!

ಗೆದ್ದರಿಗಳನ್ನು ಬಾಳಿರೆಲ್ಲ!
ಬಂದಮೇಲೆ ಹೋಗಲೇಬೇಕೆಲ್ಲ!
ರ್ಶನಾಕಾಂಕ್ಷಿಗಳಾಗ್ಬೇಕೆಲ್ಲ!
ತುರೀಯಾತೀತ ಸಾಮಾನ್ಯವಲ್ಲ! (ಹೊ)
-ತ್ತು ಕಾದಿದ ಸಾಧಿಸಬೇಕೆಲ್ಲ!
ಬಾಳು ಸಾರ್ಥಕವಿದರಿಂದೆಲ್ಲ! (ನಾ)
-ಯಿ, ನರಿಗಳಲ್ಲ ನರರೆಲ್ಲ!
(ತ್ಯಾ)ಗಿ ಯೋಗಿಯಪ್ಪ! ಸಂದೇಹವಿಲ್ಲ! (ಬ)
-ಲ್ಲ ನಿರಂಜನಾದಿತ್ಯನಿದೆಲ್ಲ!!!

ನಿಂದಕಾ! ನೀನೊಂದು ಶುನಕ!

ರೋಡೆಗೆ ನೀ ಪ್ರತಿಬಂಧಕ!
ಕಾವಲುಗಾರನಾಗಿ ರಕ್ಷಕ!
ನೀಚ ಮಲವ ನೆಕ್ಕಿ ಸ್ವಚ್ಛಕ!
ನೊಂದಾಗ ಮಾಲಿಕನೇ ಸೇವಕ!
ದುಡಿವಾಗ ನೀನೊಬ್ಬ ಸಾಧಕ!
ಶುಷ್ಕವಾದೆಲುಬಿನಾರಾಧಕ!
ಶ್ವರಕ್ಕಾಶಿಸುವ ಅಂಧಕ!
ಲಿ ನಿರಂಜನಾದಿತ್ಯಾಂತಕ!!!

ನಿಷ್ಠೆಯಿಂದಾಗುವುದು ಪ್ರತಿಷ್ಠೆ! [ನಿ]

-ಷ್ಠೆಯನ್ನುಳಿಸಬೇಕಾ ಪ್ರತಿಷ್ಠೆ! (ಕೈ)
-ಯಿಂದ ತೋರದಾಗೇಕಾ ಪ್ರತಿಷ್ಠೆ?
ದಾಸದಾಸನಾಗಲಾ ಪ್ರತಿಷ್ಠೆ!
ಗುರಿ ಸೇರಿಸಬೇಕಾ ಪ್ರತಿಷ್ಠೆ! (ಸಾ)
-ವು ನೋವನ್ನಳಿಸ್ಬೇಕಾ ಪ್ರತಿಷ್ಠೆ!
ದುರ್ಮದ ಮರ್ದಿಸ್ಬೇಕಾ ಪ್ರತಿಷ್ಠೆ!
ಪ್ರಗತಿಗಾಗಿರ್ಬೆ

ಕಾ ಪ್ರತಿಷ್ಠೆ!
ತಿಪ್ಪೆಗೆಸೆಯ್ಬಾರದಾ ಪ್ರತಿಷ್ಠೆ! (ನಿ)
-ಷ್ಠೆ ನಿರಂಜನಾದಿತ್ಯ ಪ್ರತಿಷ್ಠೆ!!!

ಆಗ್ಬೇಕ್ನೀನ್ಸುಗುಣ ಗಣಿ!

ಳಿಕೆಯಿಂದಾಗ್ಬೇಕೀ ಗಣಿ!
ಬೇರಿನ್ಯಾರಲ್ಲ ನಿನ್ನ ಧಣಿ! (ಏ)
-ಕ್ನೀನಾಗಿಲ್ಲ ರಾಮನ ರಾಣಿ? (ಏ)
-ನ್ಸುಖಕ್ಕಾಗೀ ಮಿಥ್ಯ ಧರಣಿ?
ಗುರು ನಿನಗಾ ವೀರಾಗ್ರಣಿ! (ರ)
-ಣಧೀರ, ರಘುವೀರಾ ತ್ರಾಣಿ!
ರ್ವ ಬಿಟ್ಟಾಗು ಶ್ರೀ ರಮಣಿ! (ಗ)
-ಣಿ ನಿರಂಜನಾದಿತ್ಯ ವಾಣಿ!!!

ಕೀಳು, ಗೋಳು, ಹಾಳು ಬಾಳು! [ಚೇ]

-ಳು ಕಚ್ಚಿದ ಕೋತೀ ಬಾಳು! (ಅ)
ಗೋ ಸುರಾಪಾನದಾ ಬಾಳು! (ಕೀ)
-ಳು ಪೈಶಾಚಿಕದಾ ಬಾಳು!
ಹಾದಿ ಬಿಟ್ಟೋಡುವಾ ಬಾಳು! (ಬೋ)
ಳು ಕೈ ಮಾಡಿಕೊಂಡಾ ಬಾಳು!
ಬಾಧೆ ಸಹಿಸದಾ ಬಾಳು! (ಏ)
-ಳು ನಿರಂಜನಾದಿತ್ಯಾಳು!!!

ನಿನ್ನ ವ್ರಣವನ್ನು ಕಣ್ಣಿಟ್ಟು ನೀ ನೋಡು! [ನ]

-ನ್ನ ಚಿಕಿತ್ಸಾ ಗುಣವನ್ನಾಮೇಲೆ ನೋಡು!
ವ್ರಜನಾರಿಯರಂತೆಲ್ಲಾ ಸೇವೆ ಮಾಡು! (ಅ)
-ಣಕಿಸದಾರನ್ನೂ ಕೃಷ್ಣ ಭಕ್ತಿ ಮಾಡು!
ರ ಗುರು ಅವನೆಂದು ಧ್ಯಾನ ಮಾಡು! (ನಿ)
-ನ್ನುದ್ಧಾರಕನುದಿನ ಸಾಧನೆ ಮಾಡು!
ಣ್ಣು, ಕಿವಿ, ಬಾಯಿ ಮುಚ್ಚಿದನ್ನು ಮಾಡು! (ಹೆ)
-ಣ್ಣಿನಾಸೆ, ಮಣ್ಣಿನಾಸೆ ಬಿಟ್ಟದ ಮಾಡು! (ಸು)
-ಟ್ಟು ಅರಿಗಳಾರನ್ನೆಲ್ಲವನ್ನೂ ಮಾಡು!
ನೀನೇ ದತ್ತನೆಂಬುದನ್ನಾಗ ನೀ ನೋಡು!
ನೋಡಿ ಧನ್ಯ ನಾನಾದೆನೆಂದಾಗ ಹಾಡು! (ಓ)
-ಡು ನಿರಂಜನಾದಿತ್ಯ ದತ್ತನ ಕೂಡು!!!

ಸತ್ತ ಮೇಲೆತ್ತಿ ಹಾಕುವೀ ದೇಹವ! (ಚಿ)

-ತ್ತ ಶುದ್ಧವಿಲ್ಲದಲಂಕರಿಸುವ!
ಮೇಲಿಂದ್ಮೇಲೆ ಜೋಯ್ಸರಲ್ಲಿಗೋಡುವ! (ತ)
-ಲೆ ಕೆಡಿಸಿಕೊಂಡಲ್ಲಿಲ್ಲಲೆಯುವ! (ಬು)
-ತ್ತಿ ಕೊಳೆತನ್ನದ್ದನ್ನೀಗ ಕಟ್ಟುವ!
ಹಾರುವಾಹಾರ ಸೇರದೇ ಸಾಯುವ!
ಕುಲಕ್ಕೆ ಕಳಂಕವ ತಂದೊಡ್ಡುವ!
ವೀತರಾಗನ ಶಾಪವಿದೆನ್ನುವ!
ದೇವದೇವಗಪಚಾರಾಯ್ತೆನ್ನುವ!
ಗರಣಕ್ಕಿದು ಫಲವೆನ್ನುವ! (ಜೀ)
-ವ ನಿರಂಜನಾದಿತ್ಯಗೊಪ್ಪಿಸುವ!!!

ಮನಃಶ್ಯಾಂತಿಯ ಜಾಗ ಎಲ್ಲಿ? (ಪು)

-ನಃಪುನಃ ಪ್ರಾರ್ಥಿಪೆ ನಿನ್ನಲ್ಲಿ! (ದೇ)
-ಶಾಂತರದಲ್ಲೂ ಗಲಿಬಿಲಿ!
ತಿಳಿದು ನೀನಾರೆಂದಿರಿಲ್ಲಿ!
ಮಪಿತನಾಸ್ಥಾನದಲ್ಲಿ!
ಜಾಗ್ರತ್ಸ್ವಪ್ನ ನಿದ್ರೆ ಇಲ್ಲಲ್ಲಿ!
ಮನಾಗಮನವಿಲ್ಲಲ್ಲಿ!
ಲ್ಲರೂ ಬಂಧುಮಿತ್ರರಲ್ಲಿ! (ಎ)
-ಲ್ಲಿ? ನಿರಂಜನಾದಿತ್ಯನಲ್ಲಿ!!!

ಭಕ್ತರಾಗಲಿಲ್ಲ, ಮುಕ್ತರಾಗಲಿಲ್ಲ! (ಯು)

-ಕ್ತ ವಿಚಾರದಿಲ್ಲದೇನೂ ಆಗ್ವುದಿಲ್ಲ!
ರಾಗ, ದ್ವೇಷವೇ ಕಾರಣ ದುಃಖಕ್ಕೆಲ್ಲ!
ದ್ದೆ, ಹೊಲಗಳ ವ್ಯಾಜ್ಯವೇ ಈಗೆಲ್ಲ! (ಮ)
-ಲಿನ ವಾಸನೆಯ ದೃಶ್ಯವೇ ಎಲ್ಲೆಲ್ಲ! (ನ)
-ಲ್ಲ, ನಲ್ಲೆಯರಲ್ಲಿ ಏಕಮತವಿಲ್ಲ!
ಮುನಿಜನರ ಶುಶ್ರೂಷೆ ಬೇಕಾಗಿಲ್ಲ! (ವ್ಯ)
-ಕ್ತದಲ್ಲಿ ಅವ್ಯಕ್ತವನ್ನು ಕಾಣುತ್ತಿಲ್ಲ!
ರಾಮನಾಮ ಬರೆದಾನಂದಿಸುತ್ತಿಲ್ಲ!
ರ್ವದಿಂದ ಬೀಗಿ ಬಿರಿಯುವರೆಲ್ಲ! (ಕ)
-ಲಿತದ್ದನ್ನು ಕಾರ್ಯಕ್ಕಿಳಿಸುವುದಿಲ್ಲ! (ಪು)
-ಲ್ಲ ನಿರಂಜನಾದಿತ್ಯಾತ್ಮ ತಾವಾಗಿಲ್ಲ!!!

ಅನ್ಯರೇಳಿಗೆಗೆ ಕರುಬುವುದೇಕೆ? (ಧ)

-ನ್ಯವಾದ ಅರ್ಪಿಸಲು ಅರಿಯದ್ದಕ್ಕೆ!
ರೇಚಕ, ಪೂರಕ ಜಪವಾಗದ್ದಕ್ಕೆ! (ಬಾ)
-ಳಿನುದ್ದೇಶದರಿವಿಲ್ಲದಾದುದಕ್ಕೆ!
ಗೆಳೆತನ ದುರ್ಜನರಲ್ಲಾದದ್ದಕ್ಕೆ!
ಗೆಲಬೇಕಿಂದ್ರಿಯಚಾಪಲ್ಯ ಸುಖಕ್ಕೆ!
ಡ್ಡಾಯ ಸತತ ಜಪ ಮಾಡದಕ್ಕೆ! (ಗು)
-ರುವಿನಾಜ್ಞಾ ಪಾಲನೆ ಮುಖ್ಯವದಕ್ಕೆ!
ಬುತ್ತಿಕಟ್ಟು ಸ್ವದೇಶದ ಪ್ರಯಾಣಕ್ಕೆ!
(ಗಾ)ವುದಗಳಳತೆ ಮಿತಿಯಿಲ್ಲದಕ್ಕೆ! (ವಿ)
-ದೇಶ ಯಾತ್ರೆಯ ಹುಚ್ಚು ಬಿಡೀಗದಕ್ಕೆ! (ಏ)
-ಕೆ? ನಿರಂಜನಾದಿತ್ಯನಿಲ್ಲಿರ್ಪುದಕ್ಕೆ!!!

ಎಡರಿಲ್ಲ, ತೊಡರಿಲ್ಲ, ಸೊಡರೆಲ್ಲ! (ತ)

-ಡಮಾಡದೇ ಹೋಗಿ ನೋಡ್ಸುತ್ತುಮುತ್ತೆಲ್ಲ!
ರಿಸಿ, ಮುನಿ, ದೇವತೆಗಳೇ ಎಲ್ಲೆಲ್ಲ! (ಗೊ)
-ಲ್ಲ ಬಾಲಕೃಷ್ಣನೇ ದೇವರವರ್ಗೆಲ್ಲ!
ತೊಪ್ಪೆಯೆತ್ತಲಿಕ್ಕೂ ಸಿದ್ಧರವರೆಲ್ಲ! (ಜ)
-ಡಜಭವನೂ ದರ್ಪ ತೋರುವುದಿಲ್ಲ! (ಹ)
-ರಿನಾಮ ಕೀರ್ತನಾನಂದವೇ ಎಲ್ಲೆಲ್ಲ! (ಸೊ)
-ಲ್ಲಲ್ಲಿ ತಮ್ಮಲ್ಲಿ ವಾದ, ಭೇದವೆ ಇಲ್ಲ!
ಸೊಗಸುಗಾರ್ತಿಯರೋಡಾಟವಲ್ಲಿಲ್ಲ!
ವರುಧರನೆದುರು ಮೌನವೆಲ್ಲ! (ಮ)
-ರೆವರ್ತಮ್ಮನ್ನವನ ಕೃಪೆಯಿಂದೆಲ್ಲ! (ಪು)
-ಲ್ಲ ನಿರಂಜನಾದಿತ್ಯ ಸಾಕ್ಷಿದಕೆಲ್ಲ!!!

ಜಾತಿ, ರೀತಿ, ಭೇದದಿಂದಾಯ್ತಪ್ಪಾ!

ತಿಳಿದವರಿಗೆಲ್ಲಾ ಒಂದಪ್ಪಾ!
ರೀತಿ ಆದರ್ಶವಾಗಿರ್ಬೇಕಪ್ಪಾ!
ತಿನ್ನಬಾರದು ಕೆಟ್ಟಾಹಾರಪ್ಪಾ!
ಭೇದ ಸದಾಚಾರದಿಂದಂತ್ಯಪ್ಪಾ!
ಯೆ ಸರ್ವರಲ್ಲಿರಬೇಕಪ್ಪಾ! (ದಾ)
-ದಿಂಗಿತ ಮಗು ತಿಳಿಯದಪ್ಪಾ!
ದಾರಿ ಅವಳದು ಸರಿಯಪ್ಪಾ! (ತಾ)
-ಯ್ತನಕ್ಕೆ ಶಿರಬಾಗಬೇಕಪ್ಪಾ! (ಅ)
-ಪ್ಪಾ ನಿರಂಜನಾದಿತ್ಯಾ ತಾಯಪ್ಪಾ!!!

ಕಲಾಯಿ ಮತುಗಳೆಷ್ಟು ದಿನ?

ಲಾಭವಲ್ಲದು ಬಹಳ ದಿನ! (ಬಾ)
-ಯಿಶುದ್ಧವಿದ್ದರದೇ ಪಾವನ!
ಮಾಡನುದಿನ ವೇದಾಧ್ಯಯನ! (ತೂ)
-ತು ಪಾತ್ರಾನ್ಯ ಹೊಗೆ ವಾಸನಾನ್ನ!
ಮನವಿಟ್ಟು ನೀಡು ಪಾಯ್ಸಾನ್ನ! (ಕ)
-ಳೆಗುಂದಿದ ಮಾತೇ ಮಲಿನಾನ್ನ! (ಎ)
-ಷ್ಟಬೇಕೋ ಆಷ್ಟೇ ಇಕ್ವಿಮಲಾನ್ನ!
ದಿವ್ಯಾಮೃತವಪ್ಪುದಾಗಾ ಅನ್ನ!(ದಿ)
-ನ ನಿರಂಜನಾದಿತ್ಯನ ಮನ!!!

ಮೈಮೇಲೆ ಹಾರಿತೊಂದು ಕಂದುಬಣ್ಣದ ಹೆಣ್ಣು ನಾಯಿ! (ಆ)

ಮೇಲೆ ಪಾದುಕೆಯ ಏಟಿನಿಂದ ಸತ್ತಿತು ಆ ನಾಯಿ! (ತ)
-ಲೆ, ಮುಖಕ್ಕೆಲ್ಲಾ ಬಿದ್ದೇಟನ್ನು ಸಹಿಸದಾಯ್ತಾ ನಾಯಿ!
ಹಾದಿ ತಪ್ಪಿ ಕಕ್ಕಸ್ಗುಂಡಿಗೆ ಮುಖ ತೂರಿತಾ ನಾಯಿ!
(ಚೀ)ರಿ ಓಡಿಹೋದವು ಸಂಗಡವಿದ್ದ ಮೂರ್ನಾಲ್ಕು ನಾಯಿ!
ತೊಂದರೆಗೀಡಾಯಿತಾ ದುರ್ಬುದ್ಧಿಯ ಜೊತೆಯ ನಾಯಿ!
ದುರ್ವೃತ್ತಿಯನ್ನಡಗಿಸಿದ ಗುರು ಕರುಣಾಮಯಿ!
ಕಂಡು, ಕೇಳಿಲ್ಲದೀ ಕಥೆ ಕಣ್ತೆರೆಯಲು ಸಹಾಯಿ!
ದುಸ್ಸಂಗದೂರಳಾಗಿ ಗುರಿ ಸೇರಿದಳ್ಮೀರಾಬಾಯಿ!
ಚ್ಚಲುನೀರ ನೆಚ್ಚಿ ಹುಚ್ಚಾಗಿ ಕೊಚ್ಚಹೋಯ್ತಾ ನಾಯಿ! (ಉ)
-ಣ್ಣಬಾರದನ್ನವನ್ನುಂಡು ಹಾಳಾದಥರ್ವಣಾಧ್ಯಾಯಿ!
ತ್ತಾತ್ರೇಯನಾದರ್ಶವೆಂದೆಂದೂ ನಿಜ ಸುಖದಾಯಿ!
ಹೆತ್ತ ತಾಯಿಯಂತವನು ಸದಾ ಸರಳ ಹೃದಯಿ! (ಮ)
-ಣ್ಣುಪಾಲಾಗುವ ಈ ಶರೀರಕ್ಕೆ ಏಕಿಷ್ಟು ಬಡಾಯಿ?
ನಾಮಸ್ಮರಣಾ ಬಲದಿಂದಾದಳ್ಸೀತೆ ಮಹಾತಾಯಿ! (ಹೋ)
-ಯಿತವಳ ಭಯ, ಅದಳ್ನಿರಂಜನಾದಿತ್ಯ ಮಯಿ!!!

ಓಂ ನಮೋ ಶ್ರೀ ಗುರು ನಿರಂಜನಾದಿತ್ಯಾಯ!

ಮಿಸಿದರೆ ನಿತ್ಯಾ ಶ್ರೀ ಪಾದಕ್ಕಾದಾಯ!
ಮೋಕ್ಷಾಪೇಕ್ಷಿಗಿದುತ್ತಮ ಸತ್ಸಂಪ್ರದಾಯ!
ಶ್ರೀಗುರು ನಿರಂಜನಾದಿತ್ಯಾ ದತ್ತಾತ್ರೇಯ!
ಗುಡ್ಡಗಾಡ್ನಾಡಿಗೆಲ್ಲಾ ಅವನೇ ಒಡೆಯ!
ರುಚಿಗೆ ಗುಲಾಮನಲ್ಲಾ ರಾಮಾಂಜನೇಯ!
ನಿಯಮ ನಿಷ್ಠೆಯವನದ್ದವರ್ಣನೀಯ! (ಶ್ರೀ)
-ರಂಗನ ಭಕ್ತಿವನದ್ದನುಕರಣೀಯ!
ಗತ್ತಿನ ಜಂಝಾಟದಿಂದ ದೂರಾ ಸೂರ್ಯ!
ನಾರಾಯಣನಿವನೇ ನಮ್ಮಲ್ಲರಿಗಾರ್ಯ!
ದಿವ್ಯ ಜೀವನಾಸಕ್ತರಿಗಿವನೌದಾರ್ಯ!
ತ್ಯಾಗೀಶ್ವರನಿವನ ಕಾರ್ಯೋದ್ಧಾರಕಾರ್ಯ!
ದುನಾಥ ಶ್ರೀ ನಿರಂಜನಾದಿತ್ಯ ವರ್ಯ!!!

ಬೇವು, ಬೆಲ್ಲ ತಿನ್ನುವುದಾದರ್ಶ! (ಸಾ)

-ವು, ನೋವಿಗಂಜದಿರ್ಪುದಾದರ್ಶ!
ಬೆಕ್ಕೆಗೀಡಾಗದಿರ್ಪುದಾದರ್ಶ! (ಬ)
-ಲವರ ಬೆಲ್ಲವಾಗ್ವುದಾದರ್ಶ!
ತಿತಿಕ್ಷೆಯೆಂಬುದು ದೊಡ್ಡಾದರ್ಶ! (ಹೊ)
-ನ್ನು, ಮಣ್ಣಿನಾಶೆ ಬಿಡ್ವುದಾದರ್ಶ! (ಪಾ)
-ವು ಹಾಲಾದರೂ ತೃಪ್ತಿಯಾದರ್ಶ!
ದಾನಿಯಾಗುವುದು ದಿವ್ಯಾದರ್ಶ!
ತ್ತಭಕ್ತಿ ಅತ್ಯುತ್ತಮಾದರ್ಶ! (ಸ್ಪ)
-ರ್ಶ ನಿರಂಜನಾದಿತ್ಯನದ್ಹರ್ಷ!!!

ಹಬ್ಬದೂಟಕ್ಕೆಬ್ಬಿಸಿದಾಗೇಳಬೇಕು! [ಒ]

-ಬ್ಬಟ್ಟು ಪರಮಾನ್ನವೆಲ್ಲಾ ತಿನ್ನಬೇಕು!
ದೂರ ದಾರಿ ಶ್ರಮ ಪರಿಹಾರಾಗ್ಬೇಕು! (ಆ)
-ಟ ನೋಟ ಕೂಟವೆಲ್ಲಾ ಮೇಲಾಗಬೇಕು! (ಹೊ)
-ಕ್ಕೆ ಗುರುವಿನ ಮರೆಯನ್ನೆನಬೇಕು!
(ಕ)ಬ್ಬಿಣದ ಕಡಲೆಯನ್ನೂ ತಿನ್ನಬೇಕು!
ಸಿಟ್ಟು, ಪಟ್ಟು, ಬಿಟ್ಟಾನಂದದಿಂದುಣ್ಬೇಕು!
ದಾಯಾದಿ ಮತ್ಸರವೀಗಿಂದ ಬಿಡ್ಬೇಕು!
ಗೇರಂಡ ಸಂಹಿತೆಯನ್ನಾಗಾಗೊದ್ಬೇಕು! (ಒ)
-ಳಗೆ ಹೊರಗೆಲ್ಲಾ ನಿರ್ಮಲವಾಗ್ಬೇಕು!
ಬೇರೆಯವರ ದೂಷಣೆ ಬಿಟ್ಬಿಡ್ಬೇಕು!
ಕುಲ ನಿರಂಜನಾದಿತ್ಯನದ್ದಾಗ್ಬೇಕು!!!

ರಾಕ್ಷಸ ಬರ್ತಾನೆಂದಳಬೇಡ!

ಕ್ಷಯವಾಗ್ವುದರಿಷ್ಟಳಬೇಡ!
ದಾ ನಾಮಜಪ ಮಾಡ್ದಿರ್ಬೇಡ!
ಲವದರಿಂದ! ಅಳಬೇಡ! (ವಾ)
-ರ್ತಾಪತ್ರವನ್ನೆಂದೂ ಓದಬೇಡ!
ನೆಂಟ ನೀಲಕಂಠ! ಮರೆಯ್ಬೇಡ!
ಕ್ಷಿಣೆ, ದಾನಕ್ಕೆ ಕೈಯೊಡ್ಬೇಡ! (ಕ)
-ಳಕಳಿಯ ಪ್ರಾರ್ಥನೆ ಬಿಡ್ಬೇಡ!
ಬೇಸರವೆಂದೂ ಪಟ್ಕೊಳ್ಳಬೇಡ! (ಬಿ)
-ಡ, ನಿರಂಜನಾದಿತ್ಯ ಕೈ ಬಿಡ!!!

ಹಲ್ಲೊಂದಲ್ಲಾಡುತಿದೆ ವಸಡಿನಲ್ಲಿ! (ಇ)

-ಲ್ಲೊಂದಲ್ಲೊಂದು ಹುಳ್ಕೂ ಇದೆ ಬಳಿಯಲ್ಲಿ! (ಅ)
-ದರಾಯುಷ್ಯವಿನ್ನೂ ಮುಗಿದಿಲ್ಲ ಅಲ್ಲಿ!
(ಎ)ಲ್ಲಾ ಗುರುಚಿತ್ತವೆನಬೇಕು ನಾವಿಲ್ಲಿ! (ಗು)
-ಡುಗಿದ್ರೂ ಮಳೆಯಾಗದಿರ್ಪುದೇಕಿಲ್ಲಿ?
ತಿಳಿ! ಅವನಿಗೀಗಿಷ್ಟವಿಲ್ಲೆಂದಿಲ್ಲಿ!
ದೆವ್ವಗಳ ಸ್ವಭಾವ ಕಿರ್ಕುಳಲ್ಲಿಲ್ಲಿ!
ರ ಗುರುಭಕ್ತರಂಜುವುದೇಕಿಲ್ಲಿ?
ದಾ ನಾಮಸ್ಮರಣೆಯಾಗ್ಬೇಕೆಲ್ಲೆಲ್ಲಿ! (ಓ)
-ಡಿ ಬಹುದೂರ ಮಡಿವವೆಲ್ಲಾ ಅಲ್ಲಿ!
ರರಿದನರಿತು ಬಾಳ್ಬೇಕೆಲ್ಲೆಲ್ಲಿ! (ನಿ)
-ಲ್ಲ ನಿರಂಜನಾದಿತ್ಯಾತ್ಮ ಧ್ಯಾನದಲ್ಲಿ!!!

ನಿರಂಜನಾದಿತ್ಯ ಸಂಘ ಮನೆಮನೆಯಲ್ಲಿ!

ರಂಗನಾಥನವನೆಂಬ ನಂಬಿಕೆಯಿಂದಿರ್ಲಿ!
ನಸಂಘದಿಂದ ಬಹಳ ದೂರವಾಗಿರ್ಲಿ!
ನಾನಾಪಂಥಗಳಲ್ಲಿ ಆಸಕ್ತಿಯಿಲ್ಲದಿರ್ಲಿ!
ದಿವ್ಯನಾಮ ಸಂಕೀರ್ತನೆ ನಿತ್ಯ ಆಗುತ್ತಿರ್ಲಿ!
ತ್ಯಜಿಸಿ ದುಶ್ಚಟಗಳನ್ನು ಸುಖವಾಗಿರ್ಲಿ!
ಸಂದೇಹ ಗುರುವಿನಲ್ಲೆಂದೆಂದೂ ಇಲ್ಲದಿರ್ಲಿ!
ರ್ಷಣೆಗೇನೇನೂ ಅವಕಾಶವಿಲ್ಲದಿರ್ಲಿ!
ದಿರಾಸೇನೆಯನ್ನು ಯಾರೂ ಮಾಡದಿರ್ಲಿ!
ನೆರೆ ಸುಖ, ಶಾಂತಿಗಾಗಿ ಸಸ್ಯಾಹಾರವಿರ್ಲಿ!
ದ್ವೆ ಮುಂತಾದವ್ಗಳ್ನಿರಾಡಂಬರದಲ್ಲಾಗ್ಲಿ!
ನೆನಪು ಸದಾ ಸದ್ಗುರು ಚರಣದಲ್ಲಿರ್ಲಿ!
ಕ್ಷ, ರಾಕ್ಷಸ, ಪಿಶಾಚಿ ಭಯ ತಪ್ಪಿಹೋಗ್ಲಿ! (ನಿ)
-ಲ್ಲಿ ನಿರಂಜನಾದಿತ್ಯನ ನಿಮ್ಮ ಮನೆಯಲ್ಲಿ!!!

ನಿರಂಜನಾದಿತ್ಯಾದರ್ಶಾ ಶೀಲ!

ರಂಜಿಪುದೆಲ್ಲಾಮತಕ್ಕಾ ಶೀಲ!
ಗದೀಶತ್ವಕ್ಕೆ ಬೇಕಾ ಶೀಲ!
ನಾನು, ನೀನೆಂಬುದಿಲ್ಲದಾ ಶೀಲ!
ದಿವ್ಯ ಜ್ಞಾನಾಗ್ನಿಸ್ವರೂಪಾ ಶೀಲ!
ತ್ಯಾಗ, ಲೋಕ ಕಲ್ಯಾಣಕ್ಕಾ ಶೀಲ!
ತ್ತಸ್ವರೂಪದ ಸಾರಾ ಶೀಲ! (ಸ್ಪ)
-ರ್ಶಾಸ್ಪರ್ಶಗಳರಿಯದಾ ಶೀಲ! (ಅಂ)
-ಶೀಯರಾಗಲಿಕ್ಕೆ ಬೇಕಾ ಶೀಲ! (ಬಾ)
-ಲ ನಿರಂಜನಾದಿತ್ಯಾ ಗೋಪಾಲ!!!

ಪ್ರಯೋಗದಿಂದ ಸುಯೋಗ ಪ್ರಾಪ್ತಿ!

ಯೋಗದಿಂದಾತ್ಮಾನಂದ ಪ್ರಾಪ್ತಿ!
ತಿ ಡೊಂಕಾದರೆ ರೋಗ ಪ್ರಾಪ್ತಿ!
ದಿಂಬಿನಿಂದ ಸುಖ ನಿದ್ರಾ ಪ್ರಾಪ್ತಿ!
ಪ್ಪ ಹೆಚ್ಚಾದರೆ ನೋವು ಪ್ರಾಪ್ತಿ!
ಸುಖ, ದುಃಖ, ಕರ್ಮದಿಂದ ಪ್ರಾಪ್ತಿ!
ಯೋಗೇಶ್ವರನಿಂದ ಎಲ್ಲಾ ಪ್ರಾಪ್ತಿ!
ರ್ವಕ್ಕೆ ಭವಬಂಧನ ಪ್ರಾಪ್ತಿ!
ಪ್ರಾರ್ಥನೆಯಿಂದ ಸ್ವಸ್ಥಿತಿ ಪ್ರಾಪ್ತಿ! (ತೃ)
-ಪ್ತಿ ಶ್ರೀ ನಿರಂಜನಾದಿತ್ಯ ಜ್ಞಪ್ತಿ!!!

ನಿರಂಜನಾದಿತ್ಯ ಕಿರಣಾಮೃತ!

ರಂಗುರಂಗಿನಂಗಿಗಳ್ಗೀ ಅಮೃತ!
ಪ, ತಪ ಸಾಧನೆಗೀ ಅಮೃತ!
ನಾರಾಯಣನಾಗಲಿಕ್ಕೀ ಅಮೃತ!
ದಿನ, ರಾತ್ರಿ ಕುಡಿಯ್ಬೇಕೀ ಅಮೃತ!
ತ್ಯಜಿಸಲ್ಕಾಮ, ಕ್ರೋಧವೀ ಅಮೃತ!
ಕಿವಿ, ಬಾಯ್ಕಣ್ಣು ಶುದ್ಧಕ್ಕೀ ಅಮೃತ!
ಘುರಾಮ ಚೈತನ್ಯವೀ ಅಮೃತ! (ಗ)
-ಣಾಧಿಪತಿಗಚ್ಚುಮೆಚ್ಚೀ ಅಮೃತ!
ಮೃತ್ಯುಂಜಯನಾನಂದವೀ ಅಮೃತ! (ಸಂ)
-ತಸಕ್ಕೆ ಶ್ರೀ ನಿರಂಜನಾದಿತ್ಯಾ ಅಮೃತ!!!

ಮಾನಾಪಮಾನ ಬುದ್ಧಿಗಾಗದಾತ್ಮಸಿದ್ಧಿ!

ನಾನೇ ನೀನಾದವನಿಗೇಕೆ ರಿದ್ಧಿ, ಸಿದ್ಧಿ?
ವಮಾನಸುತನಿಗಾತ್ಮಾರಾಮ ಸಿದ್ಧಿ!
ಮಾಯಾಮೋಹಕ್ಕೊಳಗಾಗುವುದಿಲ್ಲಾ ಬುದ್ಧಿ!
ರ ನಾರಾಯಣನಪ್ಪುದೇ ಮಹಾ ಸಿದ್ಧಿ!
ಬುದ್ಧಿ ಪರಿಶುದ್ಧವಾದರಾಗ್ವುದಾ ಸಿದ್ಧಿ! (ವೃ)
ದ್ಧಿ, ಕ್ಷಯಗಳಿಲ್ಲದಿರುವುದು ಆ ಸಿದ್ಧಿ!
ಗಾರುಡಿಗಾರ ಶ್ರೀ ಕೃಷ್ಣನಿಗದೇ ಸಿದ್ಧಿ!
ರ್ವವೆಳ್ಳಷ್ಟೂ ಇಲ್ಲದಾ ಉತ್ಕೃಷ್ಟ ಸಿದ್ಧಿ!
ದಾಸರದಾಸನಾದವನಿಗೆಲ್ಲಾ ಸಿದ್ಧಿ! (ಆ)
-ತ್ಮವೊಂದೇ ಶಾಶ್ವತವೆಂದರಿಯಬೇಕ್ಬುದ್ಧಿ!
ಸಿಹಿ, ಕಹಿ ಬೇವ್ಬೆಲ್ಲಕ್ಕಲಕ್ಷ್ಯಾ ಸದ್ಬುದ್ಧಿ! (ಸಿ)
-ದ್ಧಿ ನಿರಂಜನಾದಿತ್ಯಾತ್ಮಾನಂದಾಭಿವೃದ್ಧಿ!!!

ಭಯವಿಲ್ಲದವರು ಯಾರು! (ಕಾ)

-ಯದಭಿಮಾನ ಬಿಟ್ಟವರು!
ವಿಷಯವಾಸನಾತೀತರು! (ಎ)
-ಲ್ಲವೂ ಕೃಪೆಯೆನ್ನುವವರು!
ಮೆ, ಶಮೆಯಿರುವವರು!
ರ ಗುರುವಿನ ದಾಸರು! (ಆ)
-ರು ವೈರಿಗಳ ಗೆದ್ದವರು!
ಯಾರ ಮಾತೂ ಆಡದವರು! (ಯಾ)
-ರು? ನಿರಂಜನಾದಿತ್ಯಾತ್ಮರು!!!

ವಿವಿಧ ನಾಮ ಭಜನಾನಂದ!

ವಿಶ್ವ ಕುಟುಂಬಕ್ಕಿದೇ ಆನಂದ!
ರ್ಮ, ಕರ್ಮಗಳರಿವಿದ್ರಿಂದ!
ನಾಸ್ತಿಕಾಸ್ತಿಕನಪ್ಪನಿದ್ರಿಂದ!
ನಶ್ಯುದ್ಧಿಯಾಗುವುದಿದ್ರಿಂದ!
ವಪಾಶ ಹರಿವುದಿದ್ರಿಂದ!
ಗದೀಶ ತಾನಾಗ್ವುದಿದ್ರಿಂದ!
ನಾ, ನೀ, ನೆಂಬುದಳಿವುದಿದ್ರಿಂದ!
ನಂಬಿಗೆಯಿದ್ದರೆಲ್ಲಾ ಆನಂದ!
ತ್ತ ನಿರಂಜನಾದಿತ್ಯಾನಂದ!!!

ಶಿವನಿಗಾಗಿ ಕಾದಿರು ನೀನು! (ಭ)

-ವತಾರಿಣೀ ನೀನಲ್ಲವೇನು?
ನಿತ್ಯವೂ ಪಾದಸೇವೆ ಮಾಡ್ನೀನು!
ಗಾಳಿ ಬೀಸಿದತ್ತೋಡ್ಬಾರ್ದು ನೀನು!
ಗಿರಿಯಂತಚಲವಾಗ್ಬೇಕ್ನೀನು!
ಕಾರ್ಯ ನಿನಗಿರುವುದಿನ್ನೇನು?
ದಿನ, ರಾತ್ರಿ ಬೆರೆತಿರು ನೀನು!
ರುಚಿ ನೋಡು ಶಿವಾನಂದ ನೀನು!
ನೀಡನುಭವಾಮೃತಾಮೇಲ್ನೀನು! (ನೀ)
-ನು ನಿರಂಜನಾದಿತ್ಯಾತ್ಮಲ್ಲೇನು???

ನೀನು ನಾನಾರೆಂದರಿಯದೇ ದುಃಖ! [ಅ]

-ನುಮಾನದಿಂದಾಗಿನಿನಗೀ ದುಃಖ!
-ನಾನೀ ದೇಹವೆಂಬರಿವಿಂದೀ ದುಃಖ!
ನಾ ಶಿವನೆಂದರಿತರಿಲ್ಲಾ ದುಃಖ! (ಸೇ)
-ರೆಂದಾಗ ಸೇರದಿರ್ವುದ್ರಿಂದಾ ದುಃಖ!
ತ್ತ ಜಪದಿಂದಳಿವುದಾ ದುಃಖ! (ಗು)
-ರಿಯ ಮರೆತಿರುವುದ್ರಿಂದಾ ದುಃಖ! (ಪ್ರ)
-ಯತ್ನಿಸದಿದ್ದರೆ ಹೋಗದಾ ದುಃಖ!
ದೇಹ ದೇಗುಲವಾದರಿಲ್ಲಾ ದುಃಖ!
ದುಃಸ್ಥಿತಿ ತಪ್ಪದಿದ್ದರೆಲ್ಲಾ ದುಃಖ! (ಸು)
-ಖಾ ಶ್ರೀ ನಿರಂಜನಾದಿತ್ಯಾತ್ಮ ಸುಖ!!!

ಅಲ್ಪ ಮಾನವನೇನು ಬಲ್ಲ ನರನ ಸ್ಥಾನ? [ಸ್ವ]

-ಲ್ಪವೂ ಅರ್ಥವಿಲ್ಲದಿಹುದವನ ಜೀವನ!
ಮಾಡುವುದೊಂದಾಡುವುದಿನ್ನೊಂದು ಪ್ರತಿದಿನ!
ಶ್ವರವೀ ದೇಹವೆಂಬುದರಿಯದಾ ಮನ!
ನಿತಾಸಕ್ತನಾಗಿ ವೆಚ್ಚ ಮಾಳ್ಪನು ಧನ!
ನೇಮ ನಿಷ್ಠೆಯಿಲ್ಲದ ಪಶು, ಪಕ್ಷಿ, ಜೀವನ! (ಅ)
-ನುಭವಿಗಳ ಮಾತವನಿಗಗ್ನಿಸಮಾನ!
ರಲೀಗಲಾದರೂ ಅವನಿಗೆ ಸುಜ್ಞಾನ! (ಎ)
-ಲ್ಲಿರಲ್ಲಿಹನು ಪರಮಾತ್ಮನೆಂಬಾತ್ಮಜ್ಞಾನ! (ಅ)
-ನವರತಾತ್ಮ ಚಿಂತನೆಯಿಂದಾತ ಪಾವನ! (ಪ)
-ರರವಹೇಳನಕ್ಕಲ್ಲ ನರನ ಜೀವನ!
ಮಿಸಬೇಕು ಸದ್ಗುರು ಪಾದಕ್ಕನುದಿನ!
ಸ್ಥಾನ ಮಾನಕ್ಕೆ ಭೂಷಣ ಸತ್ಪಾತ್ರಕ್ಕೆ! (ಜ್ಞಾ)
-ನ ಶ್ರೀ ನಿರಂಜನಾದಿತ್ಯನ ವರ ಪ್ರದಾನ!!!

ರಾಕ್ಷಸ ಬಂದ ಏನೇನೋ ತಿಂದ! [ಲ]

-ಕ್ಷಣವಾಗಿದೆ ಸನ್ನಿಧಿಯೆಂದ!
ತ್ಪುರುಷರ ಪೀಡಿಸೆನೆಂದ!
ಬಂಡಾಯವನ್ನು ದಂಡಿಪೆನೆಂದ!
ತ್ತಾತ್ರೇಯನಿಗಾಳು ತಾನೆಂದ!
ಕನಾಥ ಲೋಕಕ್ಕವನೆಂದ!
ನೇರ ದಾರೀ ಗುರುವಿನದ್ದೆಂದ!
ನೋಡಿ ಧನ್ಯನಾದೆ ನಾನೀಗೆಂದ!
ತಿಂದೆ ಪ್ರಸಾದವಾತನದ್ದೆಂದ!
ತ್ತ ನಿರಂಜನಾದಿತ್ಯಾನಂದ!!!

ಮುರಲೀ ನಾದದಲ್ಲಿ ಬ್ರಹ್ಮಾನಂದ!

ಮ್ಯ ಕದನಕುತೂಹಲಾನಂದ!
ಲೀಲಾಮೂರ್ತಿ ಶ್ರೀರಾಮಗಿದಾನಂದ!
ನಾರೀ ಶಿರೋಮಣಿ ಸೀತೆಗಾನಂದ!
ರ್ಶನವಾದವರಿಗೆಲ್ಲಾನಂದ!
ಯಾನಿಧಿ ರಾಘವನೆಂಬಾನಂದ! (ಕ)
-ಲಿನಲ್ಲೂ ತಾನೇ ತಾನಾಗಿಹಾನಂದ!
ಬ್ರಹ್ಮನ ರಾಣಿಗೆ ತನ್ಮಯಾನಂದ! (ಬ್ರ)
-ಹ್ಮಾ, ವಿಷ್ಣು, ಮಹೇಶ್ವರಿಗಾನಂದ!
ನಂಬಿದವರ ಬೆಂಬಿಡದಾನಂದ!
ತ್ತ ಶ್ರೀ ನಿರಂಜನಾದಿತ್ಯಾನಂದ!!!

ನನಗಿಲ್ಲ ಮಾನಾಪಮಾನ!

ನಗಿರುವುದೊಂದೇ ಜ್ಞಾನ!
ಗಿರೀಶನ ಯೋಗ ವಿಧಾನ! (ಪು)
-ಲ್ಲ ಕೃಷ್ಣನ ಗೀತಾ ಸಾಧನ!
ಮಾರುತಿಯ ಭಕ್ತಿ ಭಾವನ!
ನಾರದನಾದರ್ಶ ಪಾಲನ!
ರಮಾರ್ಥಕ್ಕಿದೇ ಚೇತನ!
ಮಾರೀಚಾದ್ಯರ ವಿನಾಶನ! (ಜ್ಞಾ)
-ನ ನಿರಂಜನಾದಿತ್ಯಾಶನ!!!

ದೇಹವೆಲ್ಲಾ ಸವೆದುಹೋಯ್ತಲ್ಲ!

ಗಲಿರುಳಾ ಚಿಂತೆಯೇನಿಲ್ಲ! (ಸಾ)
-ವೆನೆಂಬ ಭಯವೂ ಅದಕ್ಕಿಲ್ಲ! (ಕ)
-ಲ್ಲಾದ ಮನಕ್ಕಾವ ಅಂಟೂ ಇಲ್ಲ!
ದಾತ್ಮ ಚಿಂತನೆಯ ಬಿಟ್ಟಿಲ್ಲ!
ವೆಸನಗಳು ಲೇಶವೂ ಇಲ್ಲ!
ದುಸ್ಸಂಗವಂತೂ ಇಲ್ಲವೇ ಇಲ್ಲ!
ಹೋಮ, ಹವನದ ಹುಚ್ಚೂ ಇಲ್ಲ! (ಆ)
-ಯ್ತವಸಾನ ಆಸಗಳಿಗೆಲ್ಲ! (ಪು)
-ಲ್ಲ ನಿರಂಜನಾದಿತ್ಯ ಬೇವ್ಬೆಲ್ಲ!!!

ಹತ್ತಡಿಯಲ್ಲಿ ಹತ್ನೂರು ತುಂಬಿಸ್ಬೇಡ! (ಸು)

-ತ್ತಮುತ್ತಾಪ್ತರೆಂದು ಮೈ ಮರೆತಿರ್ಬೇಡ! (ಅ)
-ಡಿಗೆ ಚೆನ್ನಾಗಿದೆಂದು ಹೆಚ್ಚು ತಿನ್ಬೇಡ! (ಧ್ಯೇ)
-ಯ “ಸ್ವರೂಪಸಿದ್ಧಿ”ಯೆಂಬುದ್ಮರೆಯ್ಬೇಡ! (ಅ)
-ಲ್ಲಿ, ಇಲ್ಲಿ ಸುತ್ತಾಡಿ ಕಾಲ ಕಳೆಯ್ಬೇಡ!
ರಿನಾಮ ಸ್ಮರಣೆ ಮಾಡದಿರ್ಬೇಡ! (ತಾ)
-ತ್ನೂರೆಂದು ಸೇತ್ವೆ ಮೇಲಧಿಕಾರ ಬೇಡ! (ಮ)
-ರುಭೂಮಿಯಲ್ಲಿ ಬೀಜ ಬಿತ್ತಲೇ ಬೇಡ!
ತುಂಟರ ಸಂಗ ಮಾಡ್ಪಟೀಂಗನಾಗ್ಬೇಡ!
ಬಿರ್ಗಾಳಿಗೆ ಮುಂಚೆ ಮನೆ ಸೇರ್ದಿರ್ಬೇಡ! (ಕಾ)
-ಸ್ಬೇಕೆಂದ್ಕೂಸಿನ ಕತ್ತು ಕತ್ತರಿಸ್ಬೇಡ! (ಕೇ)
-ಡ ನಿರಂಜನಾದಿತ್ಯನಾರಿಗೂ ಮಾಡ!!!

ಮನೆಯವರಿಗೆ ಅಧಿಕಾರಿ!

ನೆರೆಮನೆಯವರ್ಗುಪಕಾರಿ! (ಧ್ಯೇ)
-ಯಸಿದ್ಧಿಗಿಂದ್ರಿಯ ಜಯಕಾರಿ!
ರ ಗುರುಶಿವನಿಷ್ಟಾಚಾರಿ!
ರಿಸಿ, ಮುನಿಗಳ ಯೋಗಾಧಾರಿ!
ಗೆಲಲರಿಗಳ ಜಪಾಕಾರಿ!
ನುದಿನ ಅರ್ಧನಾರೀಶ್ವರಿ!
ಧಿಕ್ಕಾರವಿಲ್ಲದಭಯೇಶ್ವರಿ!
ಕಾಮಕೋಟೀಶ್ವರಿ, ಶ್ರೀ ಶಂಕರಿ! (ಹ)
-ರಿ ನಿರಂಜನಾದಿತ್ಯನಾಕಾರಿ!!!

ತನು, ಮನಕ್ಕೆ ಬೇಕಿಲ್ಲನ್ಯಸಾಧನ! (ಮ)

-ನುಜಾವತಾರಕ್ಕೆ ಬೇಕಾತ್ಮ ಚಿಂತನ! (ಮ)
-ಮಕಾರಕ್ಕೆ ಕಾರಣ ದೇಹ ವಾಸನ!
ರ ನಾರಾಯಣನ್ಲಾಕ್ಕೀ ಜೀವನ! (ಅ)
-ಕ್ಕೆಲ್ಲರ ಜನ್ಮವಿದರಿಂದ ಪಾವನ!
ಬೇಕಿಲ್ಲ ಬೆಸ್ತರ ಸಂಘದ ಸ್ಥಾಪನ!
ಕಿತ್ತು ತಿನ್ನುವುದು

ಈನನ್ನೀ ಯೋಚನ! (ಪು)
-ಲ್ಲನಾಭನಿಗಿದು ಸತತ ವೇದನ! (ವ)
-ನ್ಯ ಮೃಗಗಳ್ಗಾಗ್ಬಾರ್ದು ಶಿರಚ್ಛೇದನ!
ಸಾವೀವುಗಳು ಪರಮಾತ್ಮನಾಧೀನ!
ರ್ಮ, ಕರ್ಮ ಬಿಟ್ಟವ ಪಶು ಸಮಾನ!
ರ ನಿರಂಜನಾದಿತ್ಯ ನಾರಾಯಣ!!!

ಉಪಕಾರ ಸ್ಮರಣೆ ಮಾಡು! (ಅ)

-ಪಕಾರ ಬುದ್ಧಿಯನ್ನು ಸುಡು!
ಕಾಲಚಕ್ರದ ಗತಿ ನೋಡು!
ಕ್ತಪಾತ ನಾಡಿಗೆ ಕೇಡು!
ಸ್ಮರಿಸಿ ದತ್ತನ ಕೊಂಡಾಡು! (ಪ)
-ರರ ವಿತ್ತಾಪಹಾರ ಬಿಡು! (ಜಾ)
-ಣೆ ನೀನಾಗಿ ಬಿಟ್ಟಿಡು ಸೇಡು!
ಮಾಯಾ ಮೋಹ ಬಿಟ್ಟೊಡನಾಡು! (ಬೀ)
-ಡು ನಿರಂಜನಾದಿತ್ಯ ನಾಡು!!!

ಅಡಿಗೆಗಿದೊಂದು ಗಡಿಗೆ! (ಹಾ)

-ಡಿ ಶಿವನಾಮ ಮಾಡಡಿಗೆ! (ಹಾ)
-ಗೆ ಮಾಡಿಕ್ಕಿದ್ದೊಳ್ಳೇ ಕೊಡುಗೆ! (ಯೋ)
-ಗಿಯಾಗಿ ಹೋಗ್ಯಿವನೆಡೆಗೆ!
ದೊಂಬರಾಟ ಕಾಸಿನೆಡೆಗೆ!
ದುಡಿ ಕೃಪಾ ಸಂಪಾದನೆಗೆ!
ಣ್ಯನಾಗ್ವಾಸೇಕೆ ನಿನಗೆ? (ಕೂ)
-ಡಿ ಮಾಡದ್ಯಾಗ್ಬೇಕವನಿಗೆ! (ಹೀ)
-ಗೆ ನಿರಂಜನಾದಿತ್ಯನಾಗೆ!!!

ಕರೆ ನೀಡುವ, ವರ ಬೇಡುವ! (ಬೆ)

-ರೆಯಲಾರೆ ಲೋಕದಲ್ಲೆನ್ನುವ!
ನೀನೇ ನಾನೀಗಾಗಬೇಕೆನ್ನುವ! (ದು)
-ಡುಕುವವ ನಾನೇನಲ್ಲೆನ್ನುವ!
ರ ಗುರುದತ್ತ ನೀನೆನ್ನುವ!
ನಮಾಲೆ ಕತ್ತಿಗೆ ಹಾಕುವ! (ತೋ)
-ರ ಬೇಡ ಅನಾದರವೆನ್ನುವ!
ಬೇರಾರೂ ದಿಕ್ಕೆನಗಿಲ್ಲೆನ್ನುವ! (ಮಾ)
-ಡು ನನ್ನನ್ನು ನಿನ್ನಂತೀಗೆನ್ನುವ! (ಜೀ)
-ವ ನಿರಂಜನಾದಿತ್ಯನಾಗುವ!!!

ಗುರುಭಕ್ತಿಯುಳ್ಳವನಾಗು! (ಅ)

-ರುಣೋದಯಕ್ಕೇಳ್ವವನಾಗು!
ಗವತ್ಸೇವಾ ನಿಷ್ಠನಾಗು! (ಮು)
-ಕ್ತಿಯೇ ಗುರಿಯುಳ್ಳವನಾಗು!
ಯುಕ್ತಾಯುಕ್ತಚಿಂತಕನಾಗು! (ಕ)
-ಳ್ಳರ ಕೂಟ ಬಿಟ್ಟವನಾಗು!
ನಿತಾ ಸಂಗ ದೂರನಾಗು!
ನಾಮಜಪ ನಿರತನಾಗು! (ಆ)
-ಗು, ನಿರಂಜನಾದಿತ್ಯನಾಗು!!!

ಆಡಿ ಮಡಿವವರಿಗಿಂತ (ಮಾ)

-ಡಿ ಮಡಿವವರ್ಹೆಚ್ಚಲೆಂತ!
ನಃಪೂರ್ವಕ ಪ್ರಾರ್ಥಿಸೆಂತ! (ಅ)
-ಡಿಗಡಿಗಾಶೀರ್ವಾದವೆಂತ!
ರದರಾಜ ಸಾಕ್ಷಿಯೆಂತ!
ರ ಗುರುದತ್ತ ತಾನೆಂತ!
ರಿಸಿ, ಮುನಿಗಳಿಷ್ಟವೆಂತ! (ಆ)
-ಗಿಂದಾಗ ಎಚ್ಚರಿಪೆನೆಂತ! (ನಿಂ)
-ತ ನಿರಂಜನಾದಿತ್ಯನೆಂತ!!!

ಇಲಿಗಳಿಲ್ಲದ ಮನೆಯಾಗು! [ಮ]

-ಲಿನವಿಲ್ಲದ ಮಾಲೀಕನಾಗು!
ರ್ವವಿಲ್ಲದರಸು ನೀನಾಗು! (ಊ)
-ಳಿಗವಿತ್ತು ಕೂಳಿಗನುವಾಗು! (ತ)
-ಲ್ಲಣಗೊಳ್ಳದ ಹೊಯ್ಸಳನಾಗು!
ಯಾನಿಧಿ ದಧೀಚಿ ನೀನಾಗು!
ರಣ ಭಯವಿಲ್ಲದಾತ್ಮಾಗು!
ನೆಮ್ಮದಿ ಸದಾ ಉಳ್ಳವನಾಗು!
ಯಾಜ್ಞ್ಯವಲ್ಕ್ಯನಂತೆ ಜ್ಞಾನಿಯಾಗು! (ಆ)
-ಗು ನಿರಂಜನಾದಿತ್ಯ ನೀನಾಗು!!!

ಕೃಷ್ಣನನ್ನೆತ್ತಿ ಮುದ್ದಾಡಿದರ್ಗೊ

ಪಿಯರು! (ಪೂ)

-ಷ್ಣನಿಗೆ ವಂದಿಪರು ದೂರದಿಂದವರು! (ಅ)
-ನವರತ ಕೃಷ್ಣನ ಕೂಡ್ಯಾಡಿದ್ರವರು! (ನಿ)
-ನ್ನೆದರ್ನಿಲ್ಲಲಾರೆವೆಂದರ್ಸೂರ್ಯಗವರು! (ಹ)
-ತ್ತಿ, ಉಣ್ಣೆ, ಬಟ್ಟೆಗಳಂತೆ ಇಬ್ಬರೆಂಬರು!
ಮುಖ ಭೇದದಿಂದ ಸುಖ, ದುಃಖವೆಂಬರು! (ಮ)
-ದ್ದಾನೇ ಮುಂದೆ ಮೊದ್ದಾಮೆಯಂತೆಂಬರವರು! (ವಾ)
-ಡಿಕೆಯ ಮಾತಿದಾದ್ರೂ ಒಂದೇ ಆ ಈರ್ವರು!
ಯಾನಿಧಿಗಳಾಗಿಹರವರೀರ್ವರು! (ಆ)
-ರ್ಗೊ

ಸುಗ ಬೇರ್ಬೇರಾಗಿ ಕಾಣುವರವರು?
ಪಿರಿಯೋದ್ದೇಶಕ್ಕಾಗಿ ಹಾಗಿರ್ಪವರು!
ದುಪತಿ, ಛಾಯಾಪತಿ ಆತ್ಮಾರಾಮರು! (ಗು)
-ರು ನಿರಂಜನಾದಿತ್ಯನೆಂದೀಗಿರುವರು!!!

ಸದ್ಗುರುವಿಗೆ ಸಾಷ್ಟಾಂಗ ನಮಸ್ಕಾರ! (ಮ)

-ದ್ಗುರು ಶಿವಾನಂದನಿಗೀ ನಮಸ್ಕಾರ! (ಕ)
-ರುಣಾಸಾಗರನಿಗೆನ್ನೀ ನಮಸ್ಕಾರ!
ವಿಶ್ವನಾಥನಿಗನಂತ ನಮಸ್ಕಾರ! (ನ)
-ಗೆಮೊಗದೆನ್ನ ಸ್ವಾಮಿಗೀ ನಮಸ್ಕಾರ!
ಸಾಯುಜ್ಯಾನುಗ್ರಹಕ್ಕಾಗೀ ನಮಸ್ಕಾರ! (ಅ)
-ಷ್ಟಾಂಗಯೋಗ ಸಿದ್ಧನಿಗೀ ನಮಸ್ಕಾರ!
ಗನಸದೃಶನಿಗೀ ನಮಸ್ಕಾರ!
ತಜನೋದ್ಧಾರನಿಗೀ ನಮಸ್ಕಾರ!
ಮಕಾರಾತೀತನಿಗೀ ನಮಸ್ಕಾರ! (ಕ)
-ಸ್ಕಾಯಿಯಲ್ಲದವನಿಗೀ ನಮಸ್ಕಾರ! (ಹ)
-ರ ನಿರಂಜನಾದಿತ್ಯಗೀ ನಮಸ್ಕಾರ!!!

ಆಗುವಾ, ನಾವೀರ್ವರೊಂದಾಗುವಾ!

ಗುರಿ ಸೇರಿ ಸುಖವಾಗಿರುವಾ!
ವಾದ, ವಿವಾದವಿಲ್ಲದಿರುವಾ!
ನಾವೇಕೆ ವೃಥಾ ದೂರವಿರುವಾ?
ವೀತರಾಗಿಗಳಾಗೊಂದಾಗಿರ್ವಾ! (ಸ)
-ರ್ವರ ಮಾರ್ಗದರ್ಶಕರಾಗಿರ್ವಾ! (ಯಾ)
-ರೊಂದಿಗೂ ಜಗಳಾಡದಿರುವಾ!
ದಾಸರಿಗೆ ದಾಸರಾಗಿರುವಾ!
ಗುರು ಸ್ವರೂಪ ನಾವಾಗಿರುವಾ! (ಸೇ)
-ವಾ ನಿರಂಜನಾದಿತ್ಯಗೀಯುವಾ!!!

ಗುಹ್ಯಾಂಗ ಸಂಗ ಬಿಟ್ಟವ ರಂಗ! (ಬಾ)

-ಹ್ಯಾಂಗಾಡಂಬರೊಲ್ಲದವಾ ರಂಗ!
ಣನಾಯಕ ನಮ್ಮವಾ ರಂಗ!
ಸಂಬಂಧ ನಮ್ಮಲ್ಲಾಗಿ ಶ್ರೀರಂಗ!
ರುಡವಾಹನನಾ ಶ್ರೀರಂಗ!
ಬಿಸಿಲು, ಮಳೆಗಂಜನಾ ರಂಗ! (ಕೆ)
-ಟ್ಟವಾಸನೆಯಿಲ್ಲದವಾ ರಂಗ!
ರಗುರು ದತ್ತಾತ್ರೇಯಾ ರಂಗ!
ರಂಜಿಪನೆಲ್ಲರಲ್ಲಾ ಶ್ರೀರಂಗ! (ರಂ)
-ಗ ನಿರಂಜನಾದಿತ್ಯಾ ಸಾರಂಗ!!!

ಕತ್ತೆಯಾದರೂ ಇರಬೇಕಿಲ್ಲಿ! [ಮ]

-ತ್ತೆಮತ್ತೀ ದಿವ್ಯ ಸನ್ನಿಧಿಯಲ್ಲಿ!
ಯಾರ ಕಾಟವೂ ಇಲ್ಲದಿರ್ವಲ್ಲಿ!
ರ್ಶನ ರಂಗನದ್ದಾಗುವಲ್ಲಿ!
ರೂಪ, ನಾಮ, ಏನಾದರೇನಿಲ್ಲ?
ಹಸುಖಕ್ಕಾಗಿರ್ಬಾರದಿಲ್ಲಿ! (ಪ)
-ರಮಾರ್ಥದಾತ್ಮಾರಾಮಾಗ್ಬೇಕಿಲ್ಲಿ!
ಬೇರೇನೂ ಬಯಸಬಾರದಿಲ್ಲಿ!
ಕಿವಿ, ಬಾಯ್ಕಣ್ಣು ಮುಚ್ಚಿರ್ಬೇಕಿಲ್ಲಿ! (ಇ)
-ಲ್ಲಿ ನಿರಂಜನಾದಿತ್ಯನಿರ್ಪಲ್ಲಿ!!!

ಕಂಡೆ ನಾ ನಿರಂಜನಾದಿತ್ಯ ನಾ! [ಒ]

-ಡೆಯನೀರೇಳ್ಲೋಕಕ್ಕಾದವನಾ!
ನಾರಾಯಣನಾಗಿರುವವನಾ!
ನಿತ್ಯ ದರ್ಶನ ಕೊಡುವವನಾ!
ರಂಗನಾಥ ತಾನೆಂಬ ದೇವನಾ!
ಗತ್ತಿನ ಕಣ್ಣಾಗಿರ್ಪವನಾ!
ನಾಮಜಪಾನಂದಾನುಭವನಾ!
ದಿವ್ಯ ಜ್ಞಾನ ದಾನ ಮಾಳ್ಪವನಾ! (ಭೃ)
-ತ್ಯರ ಭೃತ್ಯನಾಗಿರುವವನಾ!
ನಾ, ನಿರಂಜನಾದಿತ್ಯಾದವನಾ!!!

ತೋಚದು ಮನಕೇನೂ ತೋಚದು!

ರ್ಯೆಯೀಗ ಬದಲಾಗಿಹುದು!
ದುರ್ಬುದ್ಧಿ ಸತ್ತುಹೋಗಿರುವುದು!
ನೆ, ಮಠ ಬೇಡಾಗಿರುವುದು!
ಶ್ವರವಿದೆಂದರಿತಿಹುದು!
ಕೇಡಾರಿಗೂ ಮಾಡದಿರುವುದು!
ನೂಕು ನುಗ್ಗುಲಲ್ಲಿಲ್ಲದಿಹುದು!
ತೋಟ ತುಳಸಿಗಾಗಿರುವುದು!
ರ್ಚೆ ಬಿಟ್ಟರ್ಚನೆಯಾಗ್ತಿಹುದು! (ಅ)
-ದು ನಿರಂಜನಾದಿತ್ಯಗಿಹುದು!!!

ಅಡ್ಡಿ ಮಾಡದೆ ಬಡ್ಡೀಗೆ ಕೊಡು! [ಕ]

-ಡ್ಡಿ, ಕಸವೆತ್ತಿದ ದುಡ್ಡಿದ್ಕೊಡು!
ಮಾತಿನ ಬೆಲೆಯುಳ್ಸೀಗ ಕೊಡು! (ಬ)
-ಡವನಿಗನ್ಯಾಯ ಮಾಡ್ಬೇಡ್ಕೊಡು!
ದೆವ್ವವಾಗ್ಬಾರ್ದು ಸತ್ಮೇಲೆ ಕೊಡು!
ಲು ಕಷ್ಟದಾರ್ಜನೆನ್ನದ್ಕೊಡು! (ಮ)
-ಡ್ಡೀ, ಮಾಂಸ ತಿಂದವ್ನಲ್ಲ ನಾನ್ಕೊಡು!
ಗೆಡ್ಡೆ, ಗೆಣಸು ತಿಂದವ ನಾನ್ಕೊಡು!
ಕೊಡ್ಡಿದ್ರಪಕೀರ್ತಿ ನಿನ್ಗೆ, ಕೊಡು! (ಹಾ)
-ಡು ನಿರಂಜನಾದಿತ್ಯನ ಕೂಡು!!!

ಸುಂದರ ಸುಕುಮಾರಾ ಶ್ರೀ ವರ!

ಯೆಯವನದೆಲ್ಲರ್ಗಪಾರ!
ವಿಯಾಗಿ ಲೋಕಕ್ಕುಪಕಾರ!
ಸುಪ್ತನಂತರಂಗದಲ್ಲೂ ಧೀರ!
ಕುಮತಿಯವನಿಂದತೀ ದೂರ!
ಮಾರುತಿಗೆ ಅವನೇ ಆಧಾರ!
ರಾಕ್ಷಸರಿಗವ ಕಾಲಾಕಾರ!
ಶ್ರೀ ಸೀತೆಗಾತ ಶ್ರೀ ರಾಮಾಕಾರ!
ರ್ಣಾತೀತನಾಗೀತ ಓಂಕಾರ (ಮಾ)
-ರಾರಿ ನಿರಂಜನಾದಿತ್ಯಾಕಾರ!!!

ಕಕ್ಕಸಲ್ಲಿರುವಾಗಲೂ ಬಂದ! [ಅ]

-ಕ್ಕರೆಯಿಟ್ಟು ಬೆಕ್ಕೆ ಬಿಟ್ಟು ಬಂದ!
ದ್ಗುಣ ಸಂಪನ್ನನಾಗಿ ಬಂದ! (ಅ)
-ಲ್ಲಿಲ್ಲೆಂಬ ಭೇದವಿಲ್ಲದೆ ಬಂದ! (ಆ)
-ರುಮೊಗದಾನಂದಾನೆಂದು ಬಂದ!
ವಾರ ವಾರ ಬರ್ವೆನೆಂದು ಬಂದ!
ರಿಷ್ಟ ನೀನೇ ನಾನೆಂದು ಬಂದ!
ಲೂಟಿಗಾರ ನಾನಲ್ಲೆಂದು ಬಂದ!
ಬಂದ, ನಿಂದ, ಹೋದಾನಂದದಿಂದ! (ಕಂ)
-ದ ನಿರಂಜನಾದಿತ್ಯಾತ್ಮಾನೆಂದ!!!

ಸಾಮ್ರಾಜ್ಯದಾಸೆ ನಿನಗೇಕಯ್ಯಾ? [ಸಾ]

-ಮ್ರಾಟ ಇಂದ್ರಿಯಗಳಿಗಾಗಯ್ಯ! (ರಾ)
-ಜ್ಯ, ಕೋಶವೆಲ್ಲಾ ಅಸ್ಥಿರವಯ್ಯಾ!
ದಾಸ ಕೋಟಿ ನಿನ್ನಾಪ್ತರಾಗ್ಲಯ್ಯಾ!
ಜ್ಜೆ ಮನೆ ಗಂಗಾ ತಟಾಗ್ಲಯ್ಯಾ!
ನಿತ್ಯ ಸದ್ಗುರು ಸೇವೆ ಮಾಡಯ್ಯಾ!
ಮ್ರನಾಗಿರವ್ನ ಬಳಿಯಯ್ಯಾ!
ಗೇರ್ಹಣ್ಣಿನ ಬೀಜದಂತಿರಯ್ಯಾ!
ಣ್ಣು, ಬಾಯ್ಕಿನಿ ಮುಚ್ಚಿರ್ಬೇಕಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯನಾಗಯ್ಯಾ!!!

ಅಳಿಲಾಹಾರಕ್ಕಾಗಿ ಬಂದಿದೆ! [ಬಾ]

-ಳಿನಲ್ಲದಕ್ಕಿನ್ನೇನ್ಬೇಕಾಗಿದೆ?
ಲಾಭಾಲಾಭ ಅಲಕ್ಷ್ಯವಾಗಿದೆ!
ಹಾಯಾಗೊಂದೆಡೆ ಕೂತಿರುತ್ತದೆ! (ಮ)
-ರದಿಂದ ಮರಕ್ಕೆ ನೆಗೆಯುತ್ತದೆ! (ಬೆ)
-ಕ್ಕಾಗಾಗ ಹೊಂಚು ಹಾಕುತ್ತಲಿದೆ! (ಮಾ)
-ಗಿದ ಹಣ್ತಿಂದಾನಂದ ಪಡ್ತದೆ!
ಬಂದದ್ದನ್ನುನುಭವಿಸುತ್ತದೆ!
ದಿನ ಬಂದಾಗ ದೇಹ ಬಿಡ್ತದೆ! (ತಂ)
-ದೆ ನಿರಂಜನಾದಿತ್ಯದಾಗಿದೆ!!!

ನೆನೆಯುತಿಹರಾರೋ ನನ್ನ! [ಮ]

-ನೆ ಮಠವಿಲ್ಲದವನನ್ನ!
ಯುವಕನಾಗಿಲ್ಲದವ್ನನ್ನ!
ತಿರುಕನಾಗಿರ್ಪವನನ್ನ!
ರಿ, ಹರರೊಂದಾದವ್ನನ್ನ!
ರಾತ್ರಿ, ದಿನಾತ್ಮಾನಂದನನ್ನ!
ರೋಗ ನಿವಾರಿಸುವವ್ನನ್ನ!
ತಜನೋದ್ಧಾರಕ ನನ್ನ! (ನ)
-ನ್ನ, ನಿರಂಜನಾದಿತ್ಯನನ್ನ!!!

ಸುಖವಾಗಿರಲವರಾನಂದದಿಂದ! (ದುಃ)

-ಖ ನಿವಾರಕನ ಅನುಗ್ರಹದಿಂದ!
ವಾಸುದೇವ ತಾನಾಗಿರುವವನಿಂದ! (ಮಾ)
-ಗಿದ ಹಣ್ಣನ್ನೇ ತಿನ್ನಿಸುವವನಿಂದ! (ಪ)
-ರಮಾರ್ಥದರ್ಥಜ್ಞಾನವಿರ್ಪವನಿಂದ!
ಕ್ಷ್ಯ ಆತ್ಮನಲ್ಲಿರಿಸೆಂಬವನಿಂದ! (ಭ)
-ವರೋಗವೈದ್ಯನಾದಾ ಗುರುವಿನಿಂದ!
ರಾವಣಾದ್ಯಸುರರ ಕೊಂದವನಿಂದ!
ನಂಜುಂಡೇಶ್ವರಗಾಪ್ತನಾದವನಿಂದ!
ತ್ತಾತ್ರೇಯ ತಾನಾಗಿರುವವನಿಂದ! (ಅಂ)
-ದಿಂದೆನ್ನದಿರುವ ಕಾಲಾತೀತನಿಂದ! (ನಂ)
-ದ, ಕಂದ ಶ್ರೀ ನಿರಂಜನಾದಿತ್ಯನಿಂದ!!!

ಕಷ್ಟಿ, ಇಷ್ಟಿ, ಈ ವಿಚಿತ್ರ ಸೃಷ್ಟಿ! (ವೃ)

-ಷ್ಟಿ ಅತಿಯಾದರೆ ಬಹು ಕಷ್ಟಿ!
ದು ಮಿತವಾದರೆಲ್ಲಾ ಇಷ್ಟಿ! (ಸೃ)
-ಷ್ಟಿ, ಸ್ಥಿತಿ, ಲಯಕ್ಬೇಕ್ಸಮ ದೃಷ್ಟಿ!
ರೇಳ್ಲೊಕಗಳಾಳ್ವುದೀ ದೃಷ್ಟಿ!
ವಿಷಯವಿಷ ಸೇವಕ ಕಷ್ಟಿ!
ಚಿರ ಸ್ಥಾಯಿಯಾದಾತ್ಮಾರ್ಥಿ ಇಷ್ಟಿ!
ತ್ರಯಮೂರ್ತಿ ದರ್ಶನ ಸಂತುಷ್ಟಿ!
ಸ್ಪೃಶ್ಯಾಸ್ಪೃಶ್ಯತೆಗಳೆಂಬ ದೃಷ್ಟಿ! (ಇ)
-ಷ್ಟಿ ನಿರಂಜನಾದಿತ್ಯ ಸಂತುಷ್ಟಿ!!!

ಕಥಾ ನಿಪುಣನಿಗೆಲ್ಲಾ ಬೇಕು! (ವೃ)

-ಥಾಲಾಪವನ್ನವ ಬಿಡಬೇಕು!
ನಿತ್ಯಾನಿತ್ಯ ವಿಚಾರ ಮಾಡ್ಬೇಕು!
ಪುರಾಣಪುರುಷ ತಾನಾಗ್ಬೇಕು! (ಹ)
-ಣ, ಕಾಸಿಗಾಶಿಸದಿರಬೇಕು!
ನಿಕಟಾತ್ಮಸಂಬಂದವಿರ್ಬೇಕು!
ಗೆದ್ದಿಂದ್ರಿಯಗಳ ತಾನಿರ್ಬೇಕು! (ಉ)
-ಲ್ಲಾಸ ಸತ್ಕರ್ಮದಲ್ಲಿ ಇರ್ಬೇಕು!
ಬೇಡುವಭ್ಯಾಸ ಬಿಟ್ಟಿರಬೇಕು! (ಬೇ)
-ಕು ನಿರಂಜನಾದಿತ್ಯನೆನ್ಬೇಕು!!!

ಬೇಡವಾಯ್ತೆನಗಿಂದು ತಿಂಡಿ! (ಬ)

-ಡವನಲ್ಲೇಕೆ ಕೋಪಗೊಂಡಿ? (ಜೀ)
-ವಾತ್ಮ ಪರಮಾತ್ಮೊಂದೆಂದ್ಕೊಂಡಿ! (ಬಾ)
-ಯ್ತೆರೆಯದಂತಿರಿಸಿಕೊಂಡಿ!
ನ್ನಲ್ಲೇನೀಗ ತಪ್ಪು ಕಂಡಿ? (ಆ)
-ಗಿಂದಾಗೆನ್ನನ್ನದುಮಿಕೊಂಡಿ!
ದುಷ್ಟರನ್ನೇ ಪ್ರೋತ್ಸಾಹಿಸ್ಕೊಂಡಿ!
ತಿಂದ ಅನ್ನ ವ್ಯರ್ಥ ಮಾಡ್ಕೊಂಡಿ! (ನೋ)
-ಡಿ ನಿರಂಜನಾದಿತ್ಯಾನ್ಜೋಡಿ!!!

ಸ್ವರೂಪಸ್ಥಿತಿಯಿಂದ ಏನಾಗುತ್ತದೆ? (ಕು)

-ರೂಪದ ಹೆಸರೇ ಇಲ್ಲದಾಗುತ್ತದೆ!
ರಮಾರ್ಥ ತತ್ವಾರ್ಥ ಬೆಳಗುತ್ತದೆ!
ಸ್ಥಿರಶಾಂತಿ ಸೂರ್ಯೊ

ದಯವಾಗುತ್ತದೆ!
ತಿಕ್ಕಾಟಗಳ್ಮಣ್ಣು ಮುಕ್ಕಿಹೋಗುತ್ತದೆ! (ಬಾ)
-ಯಿಂದಾಡಿದ್ದು ಕಣ್ಣಿಗೂ ಕಾಣಿಸುತ್ತದೆ!
ತ್ತ ಗುರುದರ್ಶನವಾಗಾಗುತ್ತದೆ!
ಳಿಗೆ ಜಗತ್ತಿಗೆ ಉಂಟಾಗುತ್ತದೆ!
ನಾಶ ಅರಿ ಸಮುದಾಯಕ್ಕಾಗುತ್ತದೆ!
ಗುರು ಲೀಲಾನಾಟಕ ಮುಗಿಯುತ್ತದೆ! (ಕ)
-ತ್ತಲೆ ಸತ್ತು ಸುತ್ತೂ ಬೆಳಕಾಗುತ್ತದೆ! (ಬೆ)
-ದೆ ನಿರಂಜನಾದಿತ್ಯನದ್ದಿರುತ್ತದೆ!!!

ಪ್ರಾರಬ್ಧ ನಾಶಕ್ಕೆ ಕನಸೂ ಸಹಾಯ!

ಘುವೀರನ ಕೃಪೆಯಿದು ಆದಾಯ! (ಶ)
-ಬ್ದ, ಸ್ಪರ್ಶಾದಿ ವಿಷಯವಾಸನಾ ಕ್ಷಯ!
ನಾಮಜಪಿಗಿದು ಪಿರಿದಾದಾದಾಯ!
ಕ್ತಿ ಹೆಚ್ಚಲು ಮನಕ್ಕಿದೊಂದಾದಾಯ! (ಬೆ)
-ಕ್ಕೆಯ ಸೊಕ್ಕಡಗಲಿದೂ ಒಂದಾದಾಯ!
ನಸು, ನನಸು, ಪರಮಾತ್ಮಾಶ್ರಯ!
ಮಿಸಿದರಾ ಶ್ರೀಪಾದಕ್ಕೆ ಅಭಯ!
ಸೂತ್ರಧಾರಿ ಈತ ಸದಾ ಶಿವಮಯ!
ಕಲಾರಿಷ್ಟ ವಿದೂರಾ ದತ್ತಾತ್ರೇಯ!
ಹಾಡುವುದವನ ಗುಣಗಾನಾದಾಯ! (ಜ)
-ಯ ನಿರಂಜನಾದಿತ್ಯ ಗುರುರೂಪಾಯ!!!

ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಬೇಕೆ? (ಉ)

-ಬ್ಬಿಸಿ ಕಿಬ್ಬಿಯೊಳಕ್ಕೆ ನೂಕ್ಬೇಕೆ? (ಭ)
-ಯ, ಭಕ್ತಿಯುಳ್ಳ ಭಕ್ತ ನೋಯ್ಬೇಕೆ?
ಮೇವಿಕ್ಕಿದ್ದೇನೆಂದು ಹೊಡೆಯ್ಬೇಕೆ? (ಕ)
-ಲೆ ನೀನ್ಮಾಡಿ ಬೆಲೆ ನಾನ್ಕೊಡ್ಬೇಕೆ?
ಬ್ರಹ್ಮಜ್ಞಾನವನ್ನಜ್ಞಾನೆನ್ಬೇಕೆ? (ಬ್ರ)
-ಹ್ಮಾದಿಗಳನಾದರ ತೋರ್ಬೇಕೆ? (ಶ)
-ಸ್ತ್ರ ಹಿಡಿದವರೆಲ್ಲಾ ಕಾದ್ಬೇಕೆ?
ಬೇಕ್ಬೇಡಗಳನ್ನಿಟ್ಟು ಚುಚ್ಬೇಕೆ? (ಏ)
-ಕೆ ನಿರಂಜನಾದಿತ್ಯಗ್ಬಯಕೆ???

ಎಲ್ಲಕ್ಕೂ ನಂಬಿಗೆ ಆಧಾರ! (ನ)

-ಲನಲ್ಲಿರ್ಬಾರದನಾದರ! (ಸ)
-ಕ್ಕೂಬಾಯ್ಕಂಡದ್ದೇಕೀಗ್ನಕಾರ? (ಆ)
-ನಂದಾ ನಂದಕಂದನಾಕಾರ!
ಬಿಸಿಲ್ಗೊಣಗಿತೀ ಆಕಾರ! (ಹೀ)
-ಗೆ ನಂಬಿಗೆಗಾಯ್ತುಪಕಾರ!
ರಿಗಾಗೀ ಮಾಯಾ ಮಂದಿರ?
(ಬು)ಧಾಧಿಗಳ್ಗೇಕಿಷ್ಟು ನಿಷ್ಟುರ? (ಹ)
-ರ ನಿರಂಜನಾದಿತ್ಯಾಕಾರ!!!

ದುಃಖಮಯವಿದೆಲ್ಲಾ ಜಗತ್ತು! (ಮು)

-ಖ ಗೋಮುಖವ್ಯಾಘ್ರವೆಂದು ಗೊತ್ತು!
ಲಿನ ವಾಸನೆಯಿಂದಾಪತ್ತು! (ಕಾ)
-ಯಕ್ಕಿರಬೇಕಾರೋಗ್ಯ ಸಂಪತ್ತು!
ವಿಧಿಗೂ ಇಲ್ಲ ಸದಾ ತಾಕತ್ತು! (ತಂ)
-ದೆಯ ಮರೆತರೆಲ್ಲಾ ವಿಪತ್ತು! (ಎ)
-ಲ್ಲಾಕಳೂ ಗೋಪಾಲನದ್ದಾವತ್ತೂ!
ನ್ಮವಿತ್ತಮೇಲ್ಕೊಡ್ಬೇಕ್ಸವ್ಲತ್ತು!
ಣರಾಜ್ಯದಲ್ಲಿಲ್ಲಾ ಮಹತ್ತು! (ಎ)
-ತ್ತು, ನಿರಂಜನಾದಿತ್ಯಾ! ಮೇಲೆತ್ತು!!!

ನನಗಿಟ್ಟ ಹಣ್ಣು ನಿನಗಿಟ್ಟೆ!

ನ್ನ ನಿನ್ನ ವಿಶ್ವಾಸಕ್ಕಾಗಿಟ್ಟೆ!
ಗಿರಿಧಾರಿಗಿಷ್ಟವಿದೆಂದಿಟ್ಟೆ! (ಬೆ)
-ಟ್ಟವೇರಲ್ಬಲ ಬರಲೆಂದಿಟ್ಟೆ!
ಗಲಿರುಳ್ದುಡಿ ನೀನೆಂದಿಟ್ಟೆ! (ಹೆ)
-ಣ್ಣು, ಮಣ್ಣಿನಾಸೆ ಬಿಡ್ಬೇಕೆಂದಿಟ್ಟೆ!
ನಿತ್ಯಾನಿತ್ಯ ಜ್ಞಾನಿಯಾಗೆಂದಿಟ್ಟೆ!
ಗುನಗುತ ಹೋಗೀಗೆಂದಿಟ್ಟೆ!
ಗಿಟ್ಟಿಸು ಸ್ವರೂಪವನ್ನೆಂದಿಟ್ಟೆ! (ಇ)
-ಟ್ಟೆ, ನಿರಂಜನಾದಿತ್ಯನಾಗ್ಬಿಟ್ಟೆ!!!

ದೇವರು ಕೈ ಬಿಟ್ಟರೇನು ಗತಿ? (ಭ)

-ವ ಬಂಧನದೊಡ್ಡಾಟವೇ ಗಿತಿ! (ಕ)
-ರುಣೆ ತೋರದಿದ್ರಾತಧೋಗತಿ!
ಕೈವಲ್ಯಪತಿ ಸಹಜ ಸ್ಥಿತಿ!
ಬಿಸಿಲಲ್ಲೊಣಗಿದರಾ ಸ್ಥಿತಿ! (ಅ)
-ಟ್ಟಹಾಸಕ್ಕಳವಡದಾ ಸ್ಥಿತಿ! (ಯಾ)
-ರೇನೆಂದರೂ ಅಲಕ್ಷ್ಯ ಆ ಸ್ಥಿತಿ! (ತ)
-ನುಭಾವವಳಿದ ಆತ್ಮ ಸ್ಥಿತಿ!
ಗನಸದೃಶವೆಂಬಾ ಸ್ಥಿತಿ! (ಗ)
-ತಿ ನಿರಂಜನಾದಿತ್ಯ ಸ್ವಸ್ಥಿತಿ!!!

ಮೂರ್ತಿಪೂಜೆ ಸ್ಫೂತೀಪ್ರದಾಯಕ! (ಕೀ)

-ರ್ತಿಯದರದು ಪಾರಮಾರ್ಥಿಕ!
ಪೂಜೆಸ್ಬೇಕ್ಗುಣವಿಮರ್ಶಾತ್ಮಕ! (ಓ)
-ಜೆ ತನ್ನಲ್ಲಿ ಬೆಳೆಯ್ಬೇಕಾತ್ಮಿಕ!
ಸ್ಫೂರ್ತಿ ಕಾರ್ಯಸಿದ್ಧಿಯ ಸೂಚಕ! (ಕೀ)
-ರ್ತಿಗಪೇಕ್ಷಿಸ್ಬಾರದು ಸಾಧಕ!
ಪ್ರಗತಿಗಿದು ಪ್ರತಿಬಂಧಕ! (ಆ)
-ದಾಯ, ನಷ್ಟಗಳೆಲ್ಲಾ ಐಹಿಕ!
(ಭ)ಯ, ಭಕ್ತಿಯಿಂದಾಗ್ಬೇಕು ದೈವಿಕ! (ಲೋ)
-ಕ ನಿರಂಜನಾದಿತ್ಯ ಗಕ್ಷಿಣಿಕ!!!

ಶುಕ, ಪಿಕ, ಚಾತಕ, ಹಂಸಗಳಂತೆ ಇರು!

ಲಿತ ರಾಮಮಂತ್ರ ಶುಕದಂತನ್ನುತಿರು!
ಪಿಕದಂತೆ ದ್ರೋಹೀ ಕಾಗೆಗಳ ಸೇರದಿರು!
ಣ್ಣು ಕಿತ್ತು ತಿನ್ನುವ ಪಾತಕಿಗಳವರು!
ಚಾತಕದಂತೆ ಗುರುಕೃಪಾ ಸೋನೆಗಾಗಿರು!
ಕ್ಕುದಲ್ಲದನ್ಯವೃಷ್ಟಿಗಿಷ್ಟಪಡದಿರು!
ರ, ಚರಣಾದಿಂದ್ರಿಯಗಳ ಜಯಿಸಿರು!
ಹಂಸದಂತೆ ಸದ್ಗುಣ ಕ್ಷೀರ ಕುಡಿಯುತಿರು!
ತ್ತಸತ್ತುಗಳ ಜ್ಞಾನದಿಂದಾತ್ಮನಾಗಿರು!
ರುಡನಂತೆ ಶ್ರೀಹರಿಯ ದಾಸನಾಗಿರು! (ಕೀ)
-ಳಂಗಸಂಗದಲ್ಲಿ ಬಿದ್ದು ಸದಾ ಬೇಯದಿರು!
ತೆಗಳಿಕೆ, ಹೊಗಳಿಕೆಗಲಕ್ಷ್ಯವಾಗಿರು!
ಹಸುಖದಾಸೆ ಬಿಟ್ಟಾತ್ಮಾರಾಮನಾಗಿರು! (ಇ)
-ರು ನಿರಂಜನಾದಿತ್ಯಾನಂದಾತ್ಮ ನೀನಾಗಿರು!!!

ಸಂತೋಷವೇ ಯವ್ವನ, ಚಿಂತೆಯೇ ಮುಪ್ಪು!

ತೋಟ ಶೃಂಗಾರ್ದೊಳ್ಗಾಗ್ಬಾರ್ದು ಗೋಣೀ ಸೊಪ್ಪು!
ಡ್ವೈರಿಗಳ ಹಾವಳಿಯಿಂದ ಮುಪ್ಪು!
ವೇಷ, ಭೂಷಣಾನಂದ ಕ್ಷಣಿಕ ಒಪ್ಪು!
ಮ, ನಿಯಮವಿದ್ದರಾಗದು ತಪ್ಪು! (ಅ)
-ವ್ವನ ಪ್ರೀತಿಯಲ್ಲಿಲ್ಲಾವಾಗಲೂ ಕಪ್ಪು!
ರಹರಿಯಾದರೆ ಯವ್ವನದೊಪ್ಪು!
ಚಿಂತೆ ವಿಷಯಕ್ಕಾದ್ರೆ ದುಃಖವೆಂದೊಪ್ಪು!
ತೆರೆಯಡಗಿದ ಸಮುದ್ರಾನಂದೊಪ್ಪು! (ಜ)
-ಯೇಚ್ಛೆ ಇಂದ್ರಿಯ ಜಯಕ್ಕಾಗ್ಬೇಕೆಂದೊಪ್ಪು!
ಮುಕುಂದನ ಭಜನೆ ಬೇಕಿದಕೊಪ್ಪು! (ಒ)
-ಪ್ಪು, ನಿರಂಜನಾದಿತ್ಯಾತ್ಮಕ್ಕಿಲ್ಲ ಮುಪ್ಪು!!!

ನಿನ್ನಿಷ್ಟದಂತೆಲ್ಲಾ ಏಕಾಗ್ಬೇಕು? (ನ)

-ನ್ನಿಷ್ಟವನ್ನೂ ನಡೆಸಿಕೊಡ್ಬೇಕು! (ಜೇ)
-ಷ್ಟ ಕನಿಷ್ಟನನ್ನಾದರಿಸ್ಬೇಕು!
ದಂಭವನ್ನು ಕನಿಷ್ಟ ಬಿಡ್ಬೇಕು! (ಕ)
-ತೆ ನನ್ನದು ನಿನ್ನದಾಗಬೇಕು! (ಇ)
-ಲ್ಲಾದ್ರೆ ನಾವಿಬ್ರೊಂದೆಂದೇಕನ್ಬೇಕು?
ನಾದ್ರೂ ಮಾಡಿ ಭೇದ ಬಿಡ್ಬೇಕು!
ಕಾಠಿಣ್ಯಮೂರ್ತಿ ನೀನಾಗ್ದಿರ್ಬೇಕು! (ಆ)
-ಗ್ಬೇಕಿಬ್ಬರ ಇಷ್ಟವೊಂದಾಗ್ಬೇಕು! (ಬೇ)
-ಕು ನಿರಂಜನಾದಿತ್ಯನಾಗ್ಬೇಕು!!!

ಆಪ್ತನಹಿತವನ್ನೆಂದಿಗೂ ಮಾಡ! [ಲಿ]

-ಪ್ತನವನೆಂದು ತಿಳಿಯಲೂ ಬೇಡ!
ಶ್ವರದಾಸೆಗವ ಲಕ್ಷ್ಯಗೊಡ!
ಹಿರಿಯನಲ್ಲಿ ತಪ್ಪೆಣಿಸಬೇಡ!
ನ್ನಂತೆ ನಿನ್ನನ್ನವ ಮಾಡ್ಡೇ ಬಿಡ!
ರ ಗುರುವಿಗೆದುರಾಡಬೇಡ! (ಇ)
-ನ್ನೆಂದೂ ಪ್ರಸಾದವನ್ನುಪೇಕ್ಷಿಸಬೇಡ!
ದಿವ್ಯಾದರ್ಶವಿದು, ಮರೆಯಬೇಡ!
ಗೂಡು ಖಾಲಿಯಾದಾಗೊದ್ದಾಡಬೇಡ!
ಮಾಡು ಸಚ್ಛ, ಗಿಳಿಯಿರ್ಪಾಗ ಗೂಡ! (ಮಾ)
-ಡ, ನಿರಂಜನಾದಿತ್ಯಹಿತ ಮಾಡ!!!

ಎಲ್ಲೆಲ್ಲೂ ನಿರಂಜನಾದಿತ್ಯ ಕಿರಣ! [ಹ]

-ಲ್ಲೆಗಾರರನ್ನಡಗಿಪುದೀ ಕಿರಣ! (ಹು)
-ಲ್ಲೂಡಿ ಕಾಪಾಡ್ವುದಾಕಳನ್ನೀ ಕಿರಣ!
ನಿಗಮಾಗಮ ಸಾರಾದಿತ್ಯ ಕಿರಣ!
ರಂಜಿಪುದಿದರಲ್ಲಿ ರಾಮಾಯಣ!
ಗತ್ತಿನಲ್ಲಿದೊಂದುತ್ಕೃಷ್ಟ ಪುರಾಣ!
ನಾನಾ ಭಾಷೆಯಲ್ಲಿದರ ಪ್ರಕಟಣ!
ದಿವ್ಯಜೀವನಕ್ಕೆ ಬೇಕಾ ಪಾರಾಯಣ! (ನಿ)
-ತ್ಯಸುಖಿಯಾದದರಿಂದ ವಿಭೀಷಣ!
ಕಿವಿ, ಕಣ್ಣಿನಾಳಾಗಿ ಸತ್ತ ರಾವಣ! (ವೀ)
-ರ ಮಾರುತಿಗೆ ಶ್ರೀರಾಮ ಪಂಚಪ್ರಾಣ! (ತ್ರಾ)
-ಣ, ನಿರಂಜನಾದಿತ್ಯನಿಗೀ ಕಿರಣ!!!

ಹತ್ತೆಲೆ ನೆಕ್ಕುವ ನಾಯಿಗಾವ ಸ್ಥಾನ? (ಸ)

-ತ್ತೆ ಸದೆಯ ನಾರುವ ತಿಪ್ಪೆಯಾಸ್ಥಾನ! (ತ)
-ಲೆ, ಮೈಯೆಲ್ಲಾ ಹೊಲಸಮೇಧ್ಯ ವಾಸನ! (ಮ)
-ನೆ ಮನೆ ಸುತ್ತುವುದೇ ಸದಾ ಸಾಧನ! (ಇ)
-ಕ್ಕುವವರಾರಿದಕೆ ದಿವ್ಯ ಭೋಜನ?
ರ ಗುರುವಿಕ್ಕಬಲ್ಲ ಪ್ರತಿದಿನ!
ನಾಯಿಯಲ್ಲೂ ಕಾಣುವನು ತನ್ನಾತ್ಮನ! (ಬಾ)
-ಯಿಗೂ ತುರುಕುವನಾತೊಂದೊಂದು ದಿನ!
ಗಾಳಿ, ಮಳೆ ಬಂದಾಗ ಮಾಳ್ಪಾಚ್ಛಾದನ! (ಅ)
-ವನಲ್ಲಿಲ್ಲ ನೀಚೋಚ್ಚ ಭೇದಭಾವನ! (ಸ್ವ)
-ಸ್ಥಾನ ಪರಸ್ಥಾನವೆಲ್ಲಾ ತನ್ನಾಧೀನ! (ನೆ)
-ನಸಾ ನಿರಂಜನಾದಿತ್ಯ ಗುರುವನಾ!!!

ಧರ್ಮವನ್ನು ನೀನು ರಕ್ಷಿಸ್ಬೇಕು! (ಧ)

-ರ್ಮ ನಿನ್ನನ್ನು ರಕ್ಷಿಸಲೂ ಬೇಕು! (ಭ)
-ವರೋಗ ಗುಣಪಡಿಸಬೇಕು! (ನಿ)
-ನ್ನುದ್ಯೋಗ ನೀನು ಮಾಡಲೇಬೇಕು!
ನೀಚರ ಸಂಗ ಬಿಡಲೇಬೇಕು! (ಅ)
-ನುದಿನಾತ್ಮಧ್ಯಾನ ಮಾಡಬೇಕು!
ಸಾಸ್ವಾದಿಸಿ ನೀನದಾಗ್ಬೇಕು! (ಕ)
-ಕ್ಷಿಗಾರ ನೀನಾಗದಿರಬೇಕು! (ಈ)
-ಸ್ಬೇಕು ಇದ್ದು ಎಲ್ಲಾ ಜೈಸಬೇಕು! (ಪಾ)
-ಕು ನಿರಂಜನಾದಿತ್ಯನಾಡ್ಬೇಕು!!!

ಪ್ರತಿದಿವಸ ಪ್ರಾತಃಕಾಲದಲ್ಲೇಳು!

ತಿರು ಪಾದಕ್ಕೆ ನಮಸ್ಕರಿಸುತ್ತೇಳು!
ದಿವ್ಯನಾಮಗಳನ್ನು ಹೇಳುತ್ತಾ ಏಳು!
ರ ಗುರುವನ್ನು ಸ್ಮರಿಸುತ್ತಾ ಏಳು!
ನ್ಮಾರ್ಗದಲ್ಲೇ ನಡಿಸೆನನ್ನಂದು ಏಳು!
ಪ್ರಾಪಂಚಿಕದಾಸೆ ತಪ್ಪಿಸೆಂದು ಏಳು! (ಸ್ಥಿ)
-ತಃಪ್ರಜ್ಞೆ ಯಾವಾಗಲೂ ಇರಿಸೆಂದೇಳು!
ಕಾಮವಾಸನೆ ನಿರ್ಮೂಲ ಮಾಡೆಂದೇಳು!
ಕ್ಷ್ಯಸಿದ್ಧಿ ಈ ಜನ್ಮದಲ್ಲಾಗ್ಲೆಂದೇಳು!
ತ್ತ ಭಕ್ತಿ ಸ್ಥಿರವಾಗಿರಲೆಂದೇಳು! (ಅ)
-ಲ್ಲೇನಿಲ್ಲೇನೆಂಬ ಭ್ರಾಂತಿ ಬಿಡಿಸೆಂದೇಳು! (ಏ)
-ಳು ನಿರಂಜನಾದಿತ್ಯ ದತ್ತನೆಂದೇಳು!!!

ಯಾರಿಗೂ ತೊಂದ್ರೆ ಕೊಡ್ದೆ ಜನ್ಮ ಮುಗಿಸು! (ಪ)

-ರಿಪರಿಯಾಸೆಗಳನ್ನು ಕತ್ತರಿಸು!
ಗೂರ್ಲುಬ್ಬಸಗಳನ್ನು ಗುಣಪಡಿಸು!
ತೊಂಡರ ತೊಂಡನಪ್ಪಂತನುಗ್ರಹಿಸು! (ಮು)
-ದ್ರೆ ಶ್ರೀಪಾದದ್ದು ಎದೆಯಲ್ಲಿ ಮೂಡಿಸು!
ಕೊಳಕು ವಾಸನೆಯನ್ನೆಲ್ಲಾ ಅಳಿಸು! (ಹಾ)
-ಡ್ಡೆ ಹರಿನಾಮವನ್ನಿರದಂತಿರಿಸು!
ನ ಸಂದಣಿಯಿಂದ ದೂರವಿರಿಸು! (ತ)
-ನ್ಮಯಾತ್ಮನಾಗಿರುವಂತಾಶೀರ್ವದಿಸು!
ಮುನಿ, ಋಷಿಗಳ ಗುರಿಗೆ ಏರಿಸು!
ಗಿರಿಧರನ ಸಂದರ್ಶನ ಕೊಡಿಸು! (ಅ)
-ಸು ನಿರಂಜನಾದಿತ್ಯನಲ್ಲಿ ಬೆರೆಸು!!!

ದಿನಚರಿಗಡ್ಡಿ ಅನಾರೋಗ್ಯ! (ತಿ)

-ನದಿದ್ದರೆ ಕೆಟ್ಟಾಹಾನಾರೋಗ್ಯ! (ಪ)
-ಚನವಾಗದಿದ್ದರರಾರೋಗ್ಯ! (ಕ)
-ರಿದ ತಿಂಡಿ ತಿನ್ನದಿದ್ರಾರೋಗ್ಯ!
ಗೆಡ್ಡೆ, ಗೆಣಸು ಹಸಿ ಆರೋಗ್ಯ! (ಮ)
-ಡ್ಡಿ, ಮಾಂಸಾಹಾರಗಳನಾರೋಗ್ಯ!
ತಿ ಆಹಾರದಿಂದನಾರೋಗ್ಯ!
ನಾಮಜಪದಿಂದೆಲ್ಲಾ ಸೌಭಾಗ್ಯ!
ರೋಗಮುಕ್ತನಾಗ್ವುದಕ್ಕೂ ಯೋಗ್ಯ! (ಭಾ)
-ಗ್ಯ, ನಿರಂಜನಾದಿತ್ಯಾತ್ಮಾರೋಗ್ಯ!!!

ಮಾಣಿಕ್ಯದ ಬೆಲೆ ಮಂಗನಿಗೇನ್ಗೊತ್ತು? (ಫೇ)

-ಣಿ ಮಾಡುವ ಕಷ್ಟ ಮಾಣಿಗೇನು ಗೊತ್ತು? (ಐ)
-ಕ್ಯ ಸುಖ ಅನುಭವಿಗೆ ಮಾತ್ರ ಗೊತ್ತು!
ರಿದ್ರನ ಕಷ್ಟ ಧನಿಕನ್ಗೇನ್ಗೊತ್ತು?
ಬೆರೆತು ನೋಡಿದರಾಗ ಮಾತ್ರ ಗೊತ್ತು!
ಲೆಕ್ಕಿಸ್ಬಾರದು ಕಷ್ಟ, ನಷ್ಟವೆಂದ್ಗೊತ್ತು!
ಮಂಜು ಕವಿದ್ರೇನೂ ಕಾಣದೆಂದೂ ಗೊತ್ತು!
ತಿಗೆಟ್ಟಾಗ ಜೀವ ತಾನೊಬ್ಬ ತೊತ್ತು!
ನಿರ್ಮಲಾತ್ಮನಾದರದೊಂದೇ ಸಂಪತ್ತು!
ಗೇಣೀದಾರನಿಗೀ ತತ್ವವೇನು ಗೊತ್ತು? (ಏ)
-ನ್ಗೊತ್ತಿಲ್ಲಾದ್ರೂ, ಮಾಲಿಕ ತಾನಾದೆಂದ್ಗೊತ್ತು! (ಸೊ)
-ತ್ತು, ನಿರಂಜನಾತ್ಯಾನಂದ ಸಂಪತ್ತು!!!

ಮಡಿಕೆಯ ಬಾಯಿಂದನ್ನ ಉಕ್ಕುತಿದೆ! (ಅ)

-ಡಿಗೆಯಾದ ಪದಾರ್ಥಾರೀತ್ಯುಕ್ಕುತಿದೆ!
ಕೆಟ್ಟ ಮಾಂಸ ಬೇಯ್ಸಿದ್ರದೇ ಉಕ್ಕುತ್ತದೆ!
ಜ್ಞದಿಂದೊಳ್ಳೇ ಹವೋತ್ಪತ್ತಿಯಾಗ್ತದೆ!
ಬಾಯಿಂದ ಯೋಗ್ಯ ಮಂತ್ರೋಚ್ಚಾರವಾಗ್ತದೆ! (ಕೈ)
-ಯಿಂದ ಮಾಡುವುದು ಬಾಯಲ್ಲೂ ಬರ್ತದೆ!
ಯಾಹೀನ ಕೈ ಪ್ರಾಣಿವಧೆ ಮಾಡ್ತದೆ! (ತ)
-ನ್ನ ಬಾಯಿಂದಪಶಬ್ದ ಹೊರಡುತ್ತದೆ!
ಕ್ಕುತ್ತದೆ, ತನ್ನಲ್ಲಿದ್ದುದುಕ್ಕುತ್ತದೆ! (ತೊ)
-ಕ್ಕು, ಮಾಂಸದ ಗೊಂಬೆ ಇಟ್ಟಂತಿರುತ್ತದೆ!
ತಿಳಿದವನಾತ್ಮ ಶಾಂತಿಯಿಂದಿರುತ್ತದೆ! (ಇ)
-ದೆ, ನಿರಂಜನಾದಿತ್ಯಗೀ ಸ್ಥಿತಿಯಿದೆ!!!

ಗಾಂಭೀರ್ಯ ಉಳ್ಳವನಾಗಿರು!

ಭೀರುವಾಗಿ ನೀನಿರದಿರು! (ವೀ)
-ರ್ಯವನ್ನು ಹಾಳುಮಾಡದಿರು!
ತ್ತಮರ ಸ್ನೇಹದಲ್ಲಿರು! (ಕ)
-ಳ್ಳ ಕಾಕರಿಂದ ದೂರವಿರು!
ರಗುರುಭಕ್ತನಾಗಿರು!
ನಾಥ ನಾರಾಯಣಿಗಾಗಿರು! (ಯೋ)
-ಗಿರಾಜ ಶಿವ ನೀನಾಗಿರು! (ಸೇ)
-ರು ನಿರಂಜನಾದಿತ್ಯನೂರು!!!

ಮಾವಿನ ಹಣ್ಣು ತರಿಸುವಾಸೆ!

ವಿಷಯ ವಿಮುಖನಿಗೇಕಾಸೆ?
ಗುವನು ತನಲ್ಲೇ ಯೋಚಿಸೆ!
ರಿದಿಕ್ಕುವನು ತಕ್ಷಣಾಸೆ! (ಮ)
-ಣ್ಣು ಆಗ್ವೀ ದೇಹಕ್ಕೇನೇನೋ ಆಸೆ!
ತ್ವಜ್ಞಾನಿಗೆ ಅಂಜುವುದಾಸೆ! (ಹ)
-ರಿಸ್ಮರಣೆಗೀ ಶರೀರ ಮೂಸೆ!
ಸುಲಭವಿದಿಂದ್ರಿಯವ ಜೈಸೆ!
ವಾರನಾರೀ ಮನಕತಿಯಾಸೆ! (ಆ)
-ಸೆ, ನಿರಂಜನಾದಿತ್ಯಗಾತ್ಮಾಸೆ!!!

ವಾರಾಂಗನೆಗೆ ಮಾರನೇ ಮಿತ್ರ! (ಮಾ)

-ರಾಂತಕನಿಗೆ ರಾಮನೇ ಮಿತ್ರ!
ತಿ, ಸ್ಥಿತಿಗೆ ತಕ್ಕಂತೆ ಮಿತ್ರ!
ನೆಮ್ಮದಿ ಭಂಗಗೈವ ಕುಮಿತ್ರ!
ಗೆಳೆಯನ ಕತ್ತೇ ಕೊ

ವಾ ಮಿತ್ರ!
ಮಾಳ್ಪ ಲೋಕೋದ್ಧಾರ ಲೋಕಮಿತ್ರ!
ಘುರಾಮನಿಗೆ ಪ್ರಿಯಾ ಮಿತ್ರ!
ನೇಮ, ನಿಷ್ಠೆಗೆ ಆದರ್ಶಾ ಮಿತ್ರ!
ಮಿಸ್ಕಾಡ ಸ್ವಸ್ಥಾನದಿಂದಾ ಮಿತ್ರ! (ಮಿ)
-ತ್ರ, ನಿರಂಜನಾದಿತ್ಯಾ ಸನ್ಮಿತ್ರ!!!

ಸೋಲಲ್ಲಾ ಭಕ್ತನಿಗೆ ಸೋಲೆಲ್ಲಾ!

ಕ್ಷ್ಯಸಿದ್ಧಿಗೈಹಿಕ ಬೇಕಿಲ್ಲಾ! (ಅ)
-ಲಾಡ್ಡಿರ್ಬೇಕು ಮರ ಗಾಳಿಗೆಲ್ಲಾ!
ಜನೆಗೆ ದೀಪ ಬೇಕೆಂದಿಲ್ಲಾ! (ಶ)
-ಕ್ತನಾಗ್ಬೇಕು ರೋಗ ವಾಸ್ಯಾಗ್ಯೆಲ್ಲಾ!
ನಿರ್ಮಲ ಮನಕ್ಕೆ ಸಿದ್ಧಿಯೆಲ್ಲಾ!
ಗೆಳಯರಗತ್ಯವಿದಕ್ಕಿಲ್ಲಾ!
“ಸೋಹಂ” ಜಪದಿಂದ ಬಲವೆಲ್ಲಾ! (ತ)
-ಲೆ ಬಿಸಿಯಾರಿ ತಂಪಾಗ್ವುದೆಲ್ಲಾ! (ಪು)
-ಲ್ಲಾ ನಿರಂಜನಾದಿತ್ಯ ಲೀಲೆಲ್ಲಾ!!!

ವೈರಿಗಳಾರಾವ ಲೆಃಖ ನಿನಗೆ? [ಹಿ]

-ರಿದ ಖಡ್ಗದೆದುರ್ಧೈರ್ಯವಾರಿಗೆ!
ಡಚಿಕ್ಕುವುದ್ಕಿವಿ ಘರ್ಜನೆಗೆ! (ಗೋ)
-ಳಾಡಿದರ್ಚಂಡ, ಮುಂಡರ್ನಿನ್ನೇಟಿಗೆ!
ರಾಮನಿಗೆ ಶಕ್ತಿ ನಿನ್ನ ಕೊಡುಗೆ!
ರ ಗುರುಕೃಪೆ ಪೂರ್ಣ ನಿನಗೆ!
ಲೆಃಅಃವಿಲ್ಲದಷ್ಟು ಕೈ, ಕಾಲ್ನಿನಗೆ!
ಗಾರೂಢನ ಬೆಂಬಲ ನಿನಗೆ!
ನಿನ್ನಲ್ಲಿರಬೇಕು ಪೂರ್ಣ ನಂಬಿಗೆ!
ಮಸ್ಕಾರ ನಿನ್ನ ಪಾದಗಳಿಗೆ! (ಹಂ)
-ಗೆಲ್ಲಿ ನಿರಂಜನಾದಿತ್ಯ ನೀನಾಗೆ???

ದರ್ಶನವಾದಮೇಲೆ ಸ್ಪರ್ಶನ! (ಸ್ಪ)

-ರ್ಶನವಾದ್ಮೇಲ್ಸಾರೂಪ್ಯ ಜೀವನ! (ಅ)
-ನವರತಾಮೇಲೈಕ್ಯ ಜೀವನ!
ವಾದ, ಭೇದವಿಲ್ಲದಾ ಜೀವನ!
ಮೆ, ಶಮೆಯ ಭದ್ರ ಜೀವನ!
ಮೇರೆಯಿಲ್ಲದೇಕಾತ್ಮ ಜೀವನ! (ಸ)
-ಲೆ ಸಾಧನೆಯ ಸಿದ್ಧ ಜೀವನ! (ಆ)
-ಸ್ಪದ ಶಂಕೆಗಿಲ್ಲದಾ ಜೀವನ! (ಸ್ಪ)
-ರ್ಶಮಣಿ ಸ್ಪರ್ಶವಾದ ಜೀವನ! (ಘ)
-ನ ನಿರಂಜನಾದಿತ್ಯ ಜೀವನ!!!

ಬಲೆ ಬೀಸಿದ್ದೇನೆಂಬ ಗರ್ವ ಬೇಡಯ್ಯಾ! (ಕ)

-ಲೆಗಿಂತ ಕಲಿಯ ಪ್ರಭಾವ ಹೆಚ್ಚಯ್ಯಾ!
ಬೀಸಿದಾಕ್ಷಣ

ಈನು ಸಿಗ್ಲಾರದಯ್ಯಾ!
ಸಿಕ್ಕಿದ್ರೂ ಯೋಗ್ಯತಾನ್ಸಾರ ಬೆಲೆಯಯ್ಯಾ! (ಸ)
-ದ್ದೇನ್ಮಾಡ್ದೆ ದೇವರ ನಂಬಿ ದುಡಿಯಯ್ಯಾ! (ನಾ)
-ನೆಂಬ ದುರಹಂಕಾರ ಬಿಟ್ಟುಬಿಡಯ್ಯಾ!
ರ್ವುದೂ, ಹೋಗ್ವುದೂ, ಗುರುಚಿತ್ತವಯ್ಯಾ!
ಣಿಕೆಯ ಲೆಃಖ ತಪಾಗ್ಬಹುದಯ್ಯಾ! (ಸ)
-ರ್ವ ಕಾರಣ ಕರ್ತನಿಚ್ಛೆ ನಿಜವಯ್ಯಾ!
ಬೇಟೆಯ ಮೃಗಕ್ಕೂ ರಕ್ಷಣೆಯುಂಟಯ್ಯಾ! (ತ)
-ಡ ಮಾಡ್ದೆ ನಿತ್ಯ ಸುಖ್ದ ದಾರಿ ಹಿಡಿಯಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯನೆಂದು ನಂಬಯ್ಯಾ!!!

ಕಿವಿ, ಬಾಯ್ಕಣ್ಮುಚ್ಚಿ ಧ್ಯಾನಿಸೆನ್ನ!

ವಿಚಾರದಿಂದರಿ ನೀನು ನನ್ನ!
ಬಾಲಲೀಲೆಯಿಂದೊಲಿಸು ನನ್ನ! (ತಾ)
-ಯ್ಕರೆದುಣಿಸುವಳು ನಿನ್ನನ್ನ! (ಷ)
-ಣ್ಮುಖನಂತೆ ಗಿರಿಜೆ ನಿನ್ನನ್ನ! (ಕ)
-ಚ್ಚಿದರೆದೆಯ ಚುಚ್ಚುವಳ್ನಿನ್ನ! (ಸಂ)
-ಧ್ಯಾ ಸಮಯಕ್ಮುಂಚೆ ಸೇರವ್ಳನ್ನ!
ನಿಜಸುಖವಿತ್ತೆತ್ತುವಳ್ನಿನ್ನ! (ಆ)
-ಸೆಗಳ ಬಿಡಿಸೆಂದಪ್ಪವ್ಳನ್ನ! (ನ)
-ನ್ನ ನಿರಂಜನಾದಿತ್ಯಾದವ್ಳನ್ನ!!!

ಬರೆವೆ ನಿನ್ನಾನಂದವೆಂದೆಲ್ಲಾ! (ಕ)

-ರೆದರೂ ನೀನೇಕಿನ್ನೂ ಬಂದಿಲ್ಲಾ!
(ಹೂ)ವೆನ್ನೀ ರಚನೆ ನಿನ್ನಡಿಗೆಲ್ಲಾ!
ನಿತ್ಯಾರ್ಚನೆ ಆನಂದದಿಂದೆಲ್ಲಾ! (ನಿ)
-ನ್ನಾಜ್ಞೆಗಾಗಿರುವುದೀ ಬಾಳೆಲ್ಲಾ!
ನಂಬಿಹೆನು ತಾಯ್ತಂದೆ ನೀನೆಲ್ಲಾ!
ಯೆ ನಿನಗೇಕಿನ್ನೂ ಬಂದಿಲ್ಲಾ? (ಕಾ)
-ವೆಂದುಪೇಕ್ಷಿಸಿ ಸೇವೆ ಬಿಟ್ಟಿಲ್ಲಾ! (ತಂ)
-ದೆಯಂತೆ ಮಗ! ತೋರಿಳೆಗೆಲ್ಲಾ! (ಎ)
-ಲ್ಲಾ ನಿರಂಜನಾದಿತ್ಯನೆಲ್ಲೆಲ್ಲಾ!!!

ವರ್ಷ ಹನ್ನೊಂದು ತುಂಬುತ್ತಾ ಬಂತಲ್ಲ! (ಹ)

-ರ್ಷ ಬಾಳಲ್ಲೇನೂ ಕಾಣುತ್ತಿಲ್ಲವಲ್ಲಾ!
ಗಲಿರುಳೆಲ್ಲಾ ಧ್ಯಾನವಾಯ್ತಲ್ಲಾ! (ಇ)
-ನ್ನೊಂದು ವರ್ಷವಾದ್ರೆ ಹನ್ನೆರ್ಡಾಯ್ತಲ್ಲಾ! (ಇ)
-ದು ತಪಸ್ಸಿಗೊಂದು ಸವಾಲಾಯ್ತಲ್ಲಾ!
ತುಂಟತನವೆಲ್ಲೆಲ್ಲೂ ಹೆಚ್ಚಾಯ್ತಲ್ಲಾ!
ಬುದ್ಧಿಜೀವಿಗಳ್ಕಣ್ಮರೆಯಾದ್ರಲ್ಲಾ! (ಹ)
-ತ್ತಾವತಾರೀಗವ್ತಾರವೆತ್ಬೇಕಲ್ಲಾ!
ಬಂಧು, ಬಾಂಧನ ನೀನೇ ಆಗ್ಬೇಕಲ್ಲಾ!
ತ್ವ ಜೀವನಾನುಗ್ರಹಾಗ್ಬೇಕಲ್ಲಾ! (ಪು)
-ಲ್ಲಾ ನಿರಂಜನಾದಿತ್ಯನಿಚ್ಛೆಯೆಲ್ಲಾ!!!

ಮಾನಾವಾನವಾ ನಾಮ ರೂಪಲ್ಲದವ!

ಯನಾದಿಂದ್ರಿಯಗಳ್ಗಾತೀತಾದವ!
ವಾಸುದೇವನಾಗಿ ಕಂಸನ ಕೊಂದವ!
ರನಿಗೆ ಗೀತೋಪದೇಶ ಕೊಟ್ಟವ!
ವಾಯ್ವಗ್ನಿ ಮೊದಲಾದವರನ್ನಾಳ್ವವ!
ನಾಸ್ತಿಕರಿಗೂ ಅನ್ನವಿತ್ತು ಸಾಕ್ವವ!
ತಗಳೆಲ್ಲಕ್ಕೂ ಕಾರಣನಾದವ!
ರೂಪಾನಂತಕ್ಕೆ ಜನ್ಮದಾತನಾದವ!
ರಮಾರ್ಥದ ಪರಬ್ರಹ್ಮನಾದವ! (ಎ)
-ಲ್ಲರಲ್ಲೂ ಅಂತರ್ಯಾಮಿಯಾಗಿರುವವ!
ತ್ತನಾಗಿ ಜಗದ್ಗುರುವಾಗಿರ್ಪವ! (ಅ)
-ವಾ ನಿರಂಜನಾದಿತ್ಯಾತ್ಮನಾಗಿರ್ಪವ!!!

ಬರೆವ ಕೈಗಾಧಾರನಾದವನಾರು? (ಮ)

-ರೆಯಬೇಡ, ಅವನೇ ನಿನ್ನಾಪ್ತ ಗುರು!
ಜ್ರ, ವೈಢೂರ್ಯಕ್ಕಾಶಿಸನಾ ಸದ್ಗುರು!
ಕೈಗೆ ಬಂದ ತುತ್ತು ಬಾಯ್ಗಿಡುವಾ ಗುರು!
ಗಾರ್ಗಿ ಮೊದಲಾದವರ ಪಿತಾ ಗುರು!
ಧಾರಾಳ ಬುದ್ಧಿಯುಳ್ಳವಾ ಸಿದ್ಧ ಗುರು!
ತಿಪತಿಯ ಮರ್ದಿಸಿದವಾ ಗುರು!
ನಾಮ ಭಜನೆಯಿಂದ ತೃಪ್ತನಾ ಗುರು!
ಮೆ, ಶಮೆಯ, ಮೂರ್ತಿ ಸ್ವರೂಪಾ ಗುರು!
ಸನಾಶನಕ್ಕಾಶಿಸನಾ ಸದ್ಗುರು!
ನಾದ! ಬಿಂದು, ಕಲಾತೀತಾ ಜಗದ್ಗುರು! (ಗು)
-ರು ನಿರಂಜನಾದಿತ್ಯನೇ ದತ್ತ ಗುರು!!!

ಅಪಖ್ಯಾತ ಆಪ್ತನಿಗೂ ಅಲಕ್ಷ್ಯ!

ತಿತತೋದ್ಧಾರಪಖ್ಯಾತಗೆ ಲಕ್ಷ್ಯ!
ಖ್ಯಾತಿ ಅವನಿಗೆ ಸದಾ ಅಲಕ್ಷ್ಯ!’
ನು, ಮನ, ಧನವನಿಗುಪೇಕ್ಷ್ಯ (ಲಿ)
-ಪ್ತನಾಗಿರುವುದವನಿಗುಪೇಕ್ಷ್ಯ!
ನಿಷ್ಠೆ ಅವನದು ಸತತಪೇಕ್ಷ್ಯ!
ಗೂನ್ಬೆನ್ನಿನ ಕುಬ್ಜೆಯ ಭಕ್ತ್ಯಪೇಕ್ಷ್ಯ!
ಪ್ಪಿಕೊಂಡ ಕೃಷ್ಣನ ಪ್ರೀತ್ಯಪೇಕ್ಷ್ಯ!
ಕ್ಷ್ಯವನ್ನಲಕ್ಷಿಸುವುದುಪೇಕ್ಷ್ಯ! (ಲ)
-ಕ್ಷ್ಯ ನಿರಂಜನಾದಿತ್ಯಗಾತ್ಮ ಲಕ್ಷ್ಯ!!!

ರೂಪವಾವುದಾವರೇನು? (ದೀ)

-ಪ ಬೆಳಗಿದ್ರಾಯ್ತಲ್ವೇನು?
ವಾಸುದೇವ ಕಪ್ಪಾದ್ರೇನು? (ಗೋ)
-ವುಗಳಾನಂದಿಸಿಲ್ವೇನು?
ದಾಸಿ

ಈರಾಳಾಪ್ತಲ್ವೇನು?
ಯಾನಿಧಿ ಆತಲ್ವೇನು? (ಹ)
-ರೇ ಕೃಷ್ಣ ಜಪ ಮಾಡ್ನೀನು! (ತಾ)
-ನು ನಿರಂಜನಾದಿತ್ಯಾನು!!!

ತಪ್ಪೆಣಿಸಿದವನಪ್ಪ ಬೆಪ್ಪ! (ತ)

-ಪ್ಪೆಗೆಸೆವನವನನ್ನಯ್ಯಪ್ಪ! (ಮ)
-ಣಿಕಂಠಗೆ ಬಳಿವರಾರ್ಕಪ್ಪ?
ಸಿದ್ಧಯೋಗಿಯವನೆಲ್ಲರಪ್ಪ!
ತ್ತನ ಪಂಚಪ್ರಾಣವನಪ್ಪ!
ರಗುರು ಸ್ವರೂಪ ತಾನಪ್ಪ!
ರರ ಕಾಮಧೇನು ಅವ್ನಪ್ಪ! (ಇ)
-ಪ್ಪ ಶಬರಿಮಲೆಯ ಮೇಲಪ್ಪ!
ಬೆರೆತರವನಲ್ಲಿ ಸುಖಪ್ಪ! (ಅ)
-ಪ್ಪ, ನಿರಂಜನಾದಿತ್ಯ ತಾನಪ್ಪ!!!

ದೈವಿಕನಾಗಿವ ಬೆಳೆದುಳಿದ!

ವಿಷಯಿಯಾಗುವ ಬೆಳೆದಳಿದ!
ಷ್ಟ, ನಷ್ಟಗಳಿಗೆ ಒಳಗಾದ!
ನಾಚಿಕೆಗೇಡಿನ ಕಾರ್ಯಿ ಮಾಡಿದ!
ಗಿರಿಜಾಪತಿಗೆ ದ್ರೋಹ ಬಗೆದ!
ರದನಿವನೆಂದರಿಯದಾದ!
ಬೆಲೆ ಅಮೃತದ್ದು ತಿಳಿಯದಾದ! (ಹ)
-ಳೆಯ ಮೂಳೆಯನ್ನಗಿವವನಾದ!
ದುಸ್ಸಂಗದಲ್ಲಿ ಬಿದ್ದು ಹಾಳಾದ! (ಬಾ)
-ಳಿನಿಷ್ಟಾರ್ಥ ಸಾಧಿಸದವನಾದ! (ಕಂ)
-ದ ನಿರಂಜನಾದಿತ್ಯನಿವನಾದ!!!

ನಿತ್ಯಾನ್ನ ದಾನಿ ಶ್ರೀ ಕೃಷ್ಣ!

ತ್ಯಾಗರಾಜನಾ ಶ್ರೀ ಕೃಷ್ಣ! (ನಿ)
ನ್ನ, ನನ್ನದೆನ್ನಾ ಶ್ರೀ ಕೃಷ್ಣ!
ದಾನವಾಂತಕಾ ಶ್ರೀ ಕೃಷ್ಣ!
ನಿರಂಜನಾತ್ಮಾ ಶ್ರೀ ಕೃಷ್ಣ!
ಶ್ರೀಯರಸನಾ ಶ್ರೀ ಕೃಷ್ಣ!
ಕೃಪಣನಲ್ಲಾ ಶ್ರೀ ಕೃಷ್ಣ! (ಕೃ)
-ಷ್ಣ ನಿರಂಜನಾದಿತ್ಯೋಷ್ಣ!!!

ಸ್ವರೂಪಸ್ಥಿತಿಯಲ್ಲಿ ಬರೆಯುವುದೇನು?

ರೂಪ, ನಾಮಾತೀತನಾಗಿರ್ಪಾಗ ಅವನು!
ರಮ ಪದವಿಯಲ್ಲಿರುವಾಗವನು!
ಸ್ಥಿತಿಗತಿಗತಿದೂರವಿರ್ಪಾಗವನು!
ತಿಳಿದಿದ ಸದಾ ಹಾಗಿರಬೇಕು ನೀನು!
ದುನಾಥನ ಕೃಪಾಪಾತ್ರನಾಗು ನೀನು! (ಅ)
-ಲ್ಲಿ, ಇಲ್ಲಿ ವೃಥಾ ಓಡಾಡುವುದೇಕೆ ನೀನು?
ಳಿಯಲ್ಲೇ ಸತತವಿರುವಾಗವನು! (ಮ)
-ರೆತಿದ ಬೆರೆಯ್ಬೇಡಿಂದ್ರಿಯದಲ್ಲಿ ನೀನು!
ಯುಗಯುಗದಲ್ಲೂ ಗೋಚರಿಪನವನು! (ಹಾ)
-ವು, ಹಗ್ಗದ ಭ್ರಾಂತಿ ಕಳೆಯುವನವನು!
ದೇವರ ಸ್ವರೂಪ ತೋರಿಸುವನವನು! (ಅ)
-ನುಮಾನವೇಕೆ? ನಿರಂಜನಾದಿತ್ಯ ತಾನು!!!

ನಿತ್ಯಪೂಜೆ ನಿರಂಜನಾದಿತ್ಯನಿಗೆ! (ಭೃ)

-ತ್ಯರ ಪ್ರೀತಿಗೆ ಪಾತ್ರನಾದವನಿಗೆ!
ಪೂರ್ಣ ಪರಬ್ರಹ್ಮ ಸ್ವರೂಪಾತ್ಮನಿಗೆ! (ಸಂ)
-ಜೆಯಸ್ತಮಿಸಿ ಮುಂಜಾನೇಳ್ವವನಿಗೆ!
ನಿಶಿ, ದಿನ, ಲೋಕ ಕಲ್ಯಾಣಾತ್ಮನಿಗೆ!
ರಂಗ, ಪಾಂಡುರಂಗನಾಗಿರ್ಪವನಿಗೆ!
ಗದ ಕತ್ತಲೆ ಕಳೆಯುವವನಿಗೆ!
ನಾಸ್ತಿಕರ ಕಣ್ತೆರೆಯುವವನಿಗೆ!
ದಿವ್ಯ ಸಹಸ್ರ ಕಿರಣಾದಿತ್ಯನಿಗೆ!
ತ್ಯಜಿಸಿ ಸ್ವಾರ್ಥವನ್ನಿರುವವನಿಗೆ!
ನಿಗಮಾಗಮ ಸಾರನಾದವನಿಗೆ!
ಗೆಳೆಯ ಶ್ರೀ ನಿರಂಜನಾದಿತ್ಯನಿಗೆ!!!

ಬಂದದ್ದೆಲ್ಲಾ ಬರ್ಲಿ ಗೋವಿಂದನ ದಯೆ ಇರ್ಲಿ!

ಯಾಸಾಗರನವನೆಂಬ ನಂಬಿಗೆ ಇರ್ಲಿ! (ಬಿ)
-ದ್ದೆ ನಾನೆಂಬ ದುಃಖವೆಳ್ಳಷ್ಟೂ ಇಲ್ಲದಿರಲಿ! (ಉ)
-ಲ್ಲಾಸದಿಂದ ಸದಾ ಕರ್ತವ್ಯ ಸಾಗುತ್ತಿರಲಿ!
ರುವುದೆಲ್ಲಾ ಒಳ್ಳೇದಕ್ಕೆಂಬಾನಂದವಿರ್ಲಿ! (ಇ)
-ರ್ಲಿ, ಸಾಯ್ಲಿ, ಅವರಿಗಾಗೀ ಬಾಳು ಸದಾ ಇರ್ಲಿ!
ಗೋಕ್ಷೀರಾತ್ಮಾನಂದ ನಿತ್ಯ ಪಾನವಾಗುತ್ತಿರ್ಲಿ!
ವಿಂಧ್ಯಾದ್ರಿಯಂತೆ ಮನಸ್ಸೆಂದೆಂದೂ ಸ್ಥಿರವಿರ್ಲಿ!
ರಿದ್ರ, ಧನಿಕ ಭೇದವಿಲ್ಲದಂತಿರಲಿ!
(ಅ)ನವರತ ಅವನ ಸೇವೆ ಮುಂದರಿಯಲಿ!
ತ್ತನೇ ಸರ್ವ ನಾಮ, ರೂಪವೆಂಬರಿವಿರ್ಲಿ! (ಮಾ)
-ಯೆಯಾಟಕ್ಕೆಂದೆಂದೂ ಮನಸ್ಸು ಸೋಲದಿರಲಿ!
ಹ ಸುಖ ಅಸ್ಥಿರವೆಂಬ ಜ್ಞಾನವಿರಲಿ! (ಇ)
-ರ್ಲಿ, ನಿರಂಜನಾದಿತ್ಯನಲ್ಲಿ ಭಕ್ತಿ ಸ್ಫುರಿಸ್ಲಿ!!!

ಎದ್ದು ಬರಲಾರೆ ನಾನೀಗಿದ್ದಲ್ಲಿಂದ! (ಜಿ)

-ದ್ದು ಬಿಟ್ಟು ಬಂದಿಹೆನು ಪ್ರಯಾಸದಿಂದ!
ಹಳಾನಂದವಿಲ್ಲಿ ಬಂದಂದಿನಿಂದ!
ಮಣನ ಪ್ರಿತ್ಯೋಪಚಾರಗಳಿಂದ!
ಲಾಭವಿದುಪೇಕ್ಷಿಸಲಾಗದೆನ್ನಿಂದ! (ತೊ)
-ರೆದು ಜೀವಿಸಲಾರೆ ಚಪಲದಿಂದ!
ನಾರಾಯಣ ನನ್ನಾಪ್ತನಾದುದರಿಂದ!
ನೀರಸ ಬಾಹ್ಯ ಜಗತ್ತಾದುದರಿಂದ! (ಯೋ)
-ಗಿರಾಜನ ಸಂಗ ಸಿಕ್ಕಿದುದರಿಂದ! (ಸ)
-ದ್ದಡಗಿ ಶುದ್ಧಾತ್ಮನಾಗ್ಬೇಕಿದರಿಂದ! (ಇ)
-ಲ್ಲಿಂದ ಜಗದ್ವ್ಯಾಪಕಾತ್ಮಾನಂದದಿಂದ!
ತ್ತ ನಿರಂಜನಾದಿತ್ಯನೈಕ್ಯಾನಂದ!!!

ರಾಘವೇಂದ್ರನೆನ್ನಂತರಾತ್ಮ!

ನ ಗುಣದಾತ ಮಹಾತ್ಮ! (ದೇ)
-ವೇಂದ್ರಾದಿಗಳೂ ಅವನಾತ್ಮ!
ದ್ರವಿಸದಿಂದ್ರಿಯ ಜಿತಾತ್ಮ!
ನೆನೆಯಬೇಕಾ ಪವಿತ್ರಾತ್ಮ! (ತ)
-ನ್ನಂತೆಲ್ಲರನ್ನೂ ಕಾಣುವಾತ್ಮ!
ತ್ವವರಿತು ಬಾಳುವಾತ್ಮ!
ರಾಮ ಸೇವಕಾಂಜನೇಯಾತ್ಮ! (ಆ)
-ತ್ಮ ತಾ ನಿರಂಜನಾದಿತ್ಯಾತ್ಮ!!!

ಕೇಂದ್ರದಿಂದ ಬಂದಿದೆಯೊಂದು ತಂತಿ! [ಭ]

-ದ್ರವಾಗಿಹುದೀಗ ಜನರ ಕ್ರಾಂತಿ! (ಅಂ)
-ದಿಂದಿನದ್ದೆಲ್ಲವೂ ಸುಳ್ಳು ವದಂತಿ!
ರ್ಶನಾಪೇಕ್ಷಿಗಾಗ್ಬೇಕೀಗ ಶಾಂತಿ!
ಬಂಧಮುಕ್ತನಾದ ಮೇಲೆ ವಿಶ್ರಾಂತಿ!
ದಿವ್ಯನಾಮ ಜಪದಿಂದಾತ್ಮ ಶಾಂತಿ!
ದೆವ್ವ ಪಿಶಾಚಿಗಳ ಕಾಟ ಭ್ರಾಂತಿ! (ಈ)
-ಯೊಂದೇ ಮಾತಿನಲ್ಲೀಗ ಮನಃ ಶಾಂತಿ!
ದುರಿತದೂರವಾಗ್ದಾಗದು ಶಾಂತಿ!
ತಂದೆ, ತಾಯಿ, ಬಂಧು ಬಳಗಾ ಶಾಂತಿ! (ತಂ)
-ತಿ ನಿರಂಜನಾದಿತ್ಯನಂತರೋಕ್ತಿ!!!

ಷಟ್ಕ್ರಯಾಭ್ಯಾಸವದೊಂದು ಕಲ್ಪ! [ಕೊ]

-ಟ್ಕ್ರಯಾ ಶಕ್ತಿಯ ಕಾಯ್ವದೀ ಕಲ್ಪ! (ಮಾ)
-ಯಾಮೋಹಕ್ಕೆಡೆ ಕೊಡದೀ ಕಲ್ಪ!
(ಅ)ಭ್ಯಾಸಿಗಿರಬೇಕಾಹಾರ ಕಲ್ಪ!
ದ್ವೃತ್ತಿಗಿರಬೇಕು ಸಂಕಲ್ಪ!
ರ ಗುರುಪ್ರಸಾದವಾ ಕಲ್ಪ! (ಅ)
-ದೊಂದಕ್ಕೂ ಬೇಕಿಲ್ಲ ಮೃದು ತಲ್ಪ!
ದುರ್ಮಾರ್ಗಿಗಳವಡದೀ ಕಲ್ಪ!
ಲಿಮಲಹರದಿಂದೀ ಕಲ್ಪ! (ಕ)
-ಲ್ಲ ನಿರಂಜನಾದಿತ್ಯ ಸಂಕಲ್ಪ!!!

ಸರ್ವಸಾಕ್ಷಿಯಾಗಿರಬೇಕು! [ಗ]

-ರ್ವಕ್ಕೆಡೆ ಕೊಡದಿರಬೇಕು!
ಸಾಕ್ಷಾತ್ಕಾರಕ್ಕದಿಲ್ಲಿರ್ಬೇಕು! (ಕು)
-ಕ್ಷಿ ಭಾಧೆಗೆ ಪ್ರಸಾದ ಬೇಕು!
ಯಾದವೇಂದ್ರನ ದಯೆ ಬೇಕು!
ಗಿಟ್ಟದಿದ್ದರದು ಸಾಯ್ಬೇಕು!
ಕ್ಕಸರ ಸೊಕ್ಕಡಗ್ಬೇಕು!
ಬೇಸರವಿಲ್ಲದಾತ್ಮಾಗೇಕು! (ಬೇ)
-ಕು ನಿರಂಜನಾದಿತ್ಯಾಗ್ಬೇಕು!!!

ಭುಕ್ತಿಗಾಗಿರುವವನು ನಾನು! [ಮು]

-ಕ್ತಿ ಸ್ವರೂಪವಾದವನು ನೀನು!
ಗಾಳಿಬೀಸಿದತ್ತೋಡ್ವವ ನಾನು!
ಗಿರಿಯಂತೆ ಅಚಲಾತ್ಮ ನೀನು!
ರುಜುಮಾರ್ಗ ತೊರೆದವ ನಾನು!
ರ ಗುರು ದತ್ತಾತ್ರೇಯ ನೀನು!
ಸ್ತ್ರಾಲಂಕಾರವುಳ್ಳವ ನಾನು! (ತ)
-ನು, ಮನಾತೀತವಧೂತ ನೀನು!
ನಾಮ ರೂಪಕ್ಕಂಟರ್ಪವ ನಾನು! (ಹ)
-ನುಮ ನಿರಂಜನಾದಿತ್ಯ ನೀನು!!!

ಸಾಕಯ್ತೀ ಶರೀರ ನನಗೆ! [ಬೇ]

-ಕಾದಂತಿರಿಸಿಕೋ ನಿನಗೆ!
ಶಕ್ತಿ ತುಂಬಿಂಬಾದ್ರೆ ನಿನಗೆ! (ಆ)
-ರೀತಿರೀತಿ ಬೇಡ ನನಗೆ! (ಯಾ)
-ರದೇನಿದೆ ಹಂಗು ನಿನಗೆ? (ನಿ)
-ನಗೆ ಬೇಡಾದ್ರೇಕೆ ನನಗೆ! (ಆ)
-ನತನಾಗಿಹೆ ನಾ ನಿನಗೆ! (ಹ)
-ಗೆ ನಿರಂಜನಾದಿತ್ಯನಾರಿಗೆ???

ಏನಾದ್ರೂ ಸಿಗುತ್ತೆಂತೆ ಬಂದಿದೆ ನಾಯಿ!

ನಾಳೆಯ ಯೋಚ್ನೆಯಿಲ್ಲದಿಹುದೀ ನಾಯಿ! (ಬಂ)
-ದ್ರೂ ಹೊರಗೇ ಕಾದಿರ್ಪುದೀ ಬಡಪಾಯಿ!
ಸಿಕ್ಕಿದಷ್ಟುಂಡು ತೃಪ್ತಿ ಪಡ್ವುದೀ ನಾಯಿ!
ಗುರು ಕರುಣೆಯಿಂದ ಧನ್ಯವೀ ನಾಯಿ! (ಮ)
-ತ್ತೆಂದಿಗೀ ಲಭ್ಯವೆಂದರಿಯದೀ ನಾಯಿ!
ನ್ನ ತಾನರಿವುದೆಂದೀ ಪ್ರಿಯ ನಾಯಿ?
ಬಂಧು ದತ್ತನೆಂದರಿತಿಹುತಿಹುದೀ ನಾಯಿ!
ದಿನ, ರಾತ್ರಿಲ್ಲಿರಬೇಕೆಂಬುದೀ ನಾಯಿ! (ಆ)
-ದೆ ನಾ ನಿನ್ನ ದಾಸನೆನ್ನುವುದೀ ನಾಯಿ!
ನಾನಿನ್ನೆಂಜಲುಣ್ಣುವೆನೆಂಬುದೀ ನಾಯಿ! (ನಾ)
-ಯಿ ನಿರಂಜನಾದಿತ್ಯಗನೇಕ ಬಾಯಿ!!!

ದೂಷಿಸಬೇಡಾರನ್ನೂ ದ್ವೇಷಿಸಬೇಡ! (ಋ)

-ಷಿ, ಮುನಿಗಳ ಆದರ್ಶ ಬಿಡಬೇಡ!
ರ್ವಸಂಗತ್ಯಾಗ ಮಾಡದಿರಬೇಡ!
ಬೇರೆಯವರಾಸ್ತಿಗೆ ಆಶಿಸಬೇಡ! (ಬಿ)
-ಡಾರ ದುಷ್ಟರಿರುವಲ್ಲಿ ಮಾಡಬೇಡ!
ಘುರಾಮ ಭಜನೆ ಬಿಡಲೇಬೇಡ! (ನಿ)
-ನ್ನೂರಾವುದೆಂಬರಿವಿರದಿರಬೇಡ! (ಉ)
-ದ್ವೇಗದಿಂದ ಯಾರೊಂದಿಗೂ ಆಡಬೇಡ! (ದೋ)
-ಷಿ ನಾನೆಂದು ಸದಾ ಅಳುತ್ತಿರಬೇಡ!
ದಾತ್ಮ ಚಿಂತನೆ ಮಾಡದಿರಬೇಡ!
ಬೇರೆಡೆ ಸಾಧನೆಗೆ ಹುಡುಕಬೇಡ! (ಮೃ)
-ಡ ನಿರಂಜನಾದಿತ್ಯನಡಿ ಬಿಡ್ಬೇಡ!!!

ಹೊಗಳುವವರು ತೆಗಳದಂತಿರು!

ಣ್ಯ ನಾನೆಂದಹಂಕಾರ ಪಡದಿರು! (ಆ)
-ಳುಗಳನ್ನೆಂದೂ ಅವಲಂಬಿಸದಿರು!
ರ ಗುರುವಿನಿಷ್ಟಾನುಸಾರವಿರು!
ರಪ್ರದಾತನವನೆಂದರಿತಿರು! (ಪೌ)
-ರುಷವನ ಮುಂದೆ ಆಡಿಕೊಳ್ಳದಿರು!
ತೆರೆಮರೆಯ ಕಾಯಿಯಂತೆ ನೀನಿರು!
ಮನವನಾಚಾರದಲ್ಲಿರಿಸಿರು! (ಕ)
-ಳಕಳಿಯಿಂದವನ ಸೇವೆಗಾಗಿರು!
ದಂಡಿಸಲ್ಪಡದಂತೆಚ್ಚರವಾಗಿರು!
ತಿರುಕನವನೆಂದಲಕ್ಷ್ಯ ಮಾಡ್ದಿರು! (ಗು)
-ರು ನಿರಂಜನಾದಿತ್ಯನವನೆಂದಿರು!!!

ಏಸೊಂದು ವೇಷ ಕಾಸಿಗಾಗಿ?

ಸೊಂಟ ತೋರ್ಸಿ ನರ್ತನದ್ಕಾಗಿ!
ದುಡಿಮೆ ದುರ್ಮಾರ್ಗದ್ದದ್ಕಾಗಿ!
ವೇಷ, ಭೂಷಣದಾಟದ್ಕಾಗಿ!
ಡ್ವೈರಿಗಳಾಗ್ವುದದ್ಕಾಗಿ!
ಕಾಡುವುದನ್ಯರನ್ನದ್ಕಾಗಿ! (ಹು)
-ಸಿಯನ್ನಾಡುವುದೂ ಅದ್ಕಾಗಿ!
ಗಾರುಡಿಗಾರನಾಟದ್ಕಾಗಿ! (ಯೋ)
-ಗಿ ನಿರಂಜನಾದಿತ್ಯಗಾಗಿ!!!

ಧನಾಗಮವಿಲ್ಲೇಕೆ ಕಡಿಮೆ?

ನಾಮಸ್ಮರಣೆಗಿಲ್ಲ ಹಿರಿಮೆ!
ಗನಮಣಿಗದೇ ದುಡಿಮೆ!
ರ್ತ್ಯರೇನರಿವರೀ ಮಹಿಮೆ?
ವಿಕಲ್ಪ, ಸಂಕಲ್ಪಗಳಡೆಮೆ! (ಇ)
-ಲ್ಲೇನಲ್ಲೇನೆಂಬುದೆಲ್ಲವೂ ಭ್ರಮೆ!
ಕೆಡ್ಬಾರದಿಲ್ಲದೆ ಶಮೆ, ದಮೆ!
ಲಿಸಿರುವಳಿದನ್ನು ಉಮೆ! (ದು)
-ಡಿಮೆಗೆ ಶಿವಾನಂದವೇ ಜಮೆ! (ಭ್ರ)
-ಮೆ ನಿರಂಜನಾದಿತ್ಯಗೇನುಮೆ???

ಈಗಿನದ್ದೀಗ್ಲೆ ಆಗಿಹೋಗ್ಲಿ! (ಯೋ)

-ಗಿಗದು ಭೂಷಣವಾಗಿರ್ಲಿ!
ಶ್ವರ ದೇಹಕ್ಕದಂತಿರ್ಲಿ! (ಇ)
-ದ್ದೀಗಾತಿಥ್ಯವಂಗೀಕರಿಸ್ಲಿ! (ಹೋ)
-ಗ್ಲೆ

ಬೇಕಾದದ್ದುಳಿಯದಿರ್ಲಿ!
ತ್ಮಾನಂದ ಸತತವಿರ್ಲಿ! (ಬಾ)
-ಗಿ ಬದುಕುವಭ್ಯಾಸವಿರ್ಲಿ!
ಹೋರಾಟಕ್ಕೆಡೆಯಿಲ್ಲದಿರ್ಲಿ! (ಆ)
-ಗ್ಲಿ ನಿರಂಜನಾದಿತ್ಯಾನಾಗ್ಲಿ!!!

ರಾಘವಾ ನೀನೇ ಆ ಯಾದವ! (ಅ)

-ಘನಾಶಿನೀ ರಾಘವಾ ಯಾದವ!
ವಾದ, ಭೇದಗಳಿಲ್ಲದವ!
ನೀರಿ, ರೀತಿಗಳೊಪ್ಪಿದವ!
ನೇರ ದಾರಿ ಭಜನೆಂಬವ!
ತ್ಮಸ್ವರೂಪನಾಗಿರ್ಪವ!
ಯಾರಿಗೂ ಆಜ್ಞೆ ಮಾಡದವ!
ತ್ತಾತ್ರೇಯಗಾಪ್ತನಾದವ! (ಅ)
-ವ ನಿರಂಜನಾದಿತ್ಯಾದವ!!!

ಭಗವಂತನಿಂದ ಯೋಗಪ್ರದರ್ಶನ! (ಯೋ)

-ಗದಿಂದ ಹನುಮಂತಗಾತ್ಮ ದರ್ಶನ!
ವಂಶಕ್ಕೆ ಕೀರ್ತಿ ತಂದಿತು ರಾಮಾಯಣ!
ನ್ಮಯವಾಯ್ತದರಲ್ಲಿ ಋಷಿಮನ!
ನಿಂದಕನಿಂದಾಯ್ತು ರಾಮಗೆ ವ್ಯಸನ!
ಯೆಯಿಂದ ಸೀತೆಯ ದುಃಖ ಶಮನ!
ಯೋಗ್ಯವಾಯಿತು ಲವ, ಕುಶ ಜನನ!
ತಿ, ಸ್ಥಿತಿಗಾದರ್ಶ ಮುನಿ ಪಾವನ!
ಪ್ರಭು ರಾಮನಲ್ಲಾಯ್ತು ಮತ್ತೆ ಕದನ!
ಶರಥಾತ್ಮಗಾಯ್ತು ನಿರ್ಮಲ ಮನ! (ಸ್ಪ)
-ರ್ಶ ಮಕ್ಕಳದ್ದಾದಾಗಾಯ್ತು ವಿಮೋಚನ!
ಮೋ ನಿರಂಜನಾದಿತ್ಯ ನಾರಾಯಣ!!!

ನಿನಗಸಾಧ್ಯವಾದುದಾವುದಯ್ಯಾ?

ನ್ನನ್ನೇಕಿಂತು ಪರಿಕಿಪುದಯ್ಯಾ!
ತಿ ನೀನೆಂದರೇಕೀ ದುಃಖವಯ್ಯಾ?
ಸಾಗಿಸೆನ್ನನೀಗ ನಿನ್ನಡಿಗಯ್ಯಾ! (ಮ)
-ಧ್ಯಸ್ಥರಾರಿದಕೆ ಬೇಕಿಲ್ಲವಯ್ಯಾ!
ವಾಙ್ಮಾನೋಕಾಯವೆಲ್ಲಾ ನಿನ್ನದಯ್ಯಾ!
ದುರ್ಗುಣಗಳನ್ನೆಲ್ಲಾ ಬಿಡಿಸಯ್ಯಾ!
ದಾನವರಿವರನ್ನೆಲ್ಲಾ ಕೊಲ್ಲಯ್ಯಾ! (ನೋ)
-ವು ಸಹಿಸುವುದಿನ್ನೆಷ್ಟು? ಹೇಳಯ್ಯಾ!
ಹಿಸುತಿದೆನ್ನೊಡಲು, ನೋಡಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯ ನೀ ಕಾಯಯ್ಯಾ!!!

ಯಾರು ದ್ರೋಹಿಯೆಂದೆನ್ನ ಕರೆದರೇನು? (ಗು)

-ರು ನಿನಗೆನ್ನಂತರಂಗರಿಯದೇನು?
ದ್ರೋಣಪುತ್ರ ಚಿರಾಯುವಾಗಿಲ್ಲವೇನು?
ಹಿತಾಹಿತವನ್ನರಿತವನು ನೀನು! (ಬಾ)
-ಯೆಂದು ಕೂಗಿ ಕರೆವೆ ನಿನ್ನನ್ನು ನಾನು!
ದೆವ್ವಗಳನ್ನು ಸದೆ ಬಡೀಗ ನೀನು! (ನಿ)
-ನ್ನ ನಂಬಿದವರ ಕಾಯಬೇಕು ನೀನು!
ಲಿಯಟ್ಟಹಾಸಕ್ಕೆ ಕಾರಣ ನೀನು!
ರೆಕ್ಕೆ, ಪುಕ್ಕ ಕಿತ್ತೆಸೆಯಬೇಕು ನೀನು!
ತ್ತನಿಗಿದ ಮೊರೆಯಿಡುವೆ ನಾನು!
ರೇಗಬೇಡಿದಕೆನ್ನಮೇಲೆಂಬೆ ನಾನು! (ಸೂ)
-ನು ನಿರಂಜನಾದಿತ್ಯ ದತ್ತಗೆ ನಾನು!!!

ದತ್ತ ಗುರು ನನ್ನವನು! (ಇ)

-ತ್ತತ್ತ ಹೋಗ್ಬಾರದವನು!
ಗುಲಾಮ್ನವನಿಗೆ ನಾನು! (ಕೋ)
-ರುವೆನಿದೊಂದನ್ನು ನಾನು!
ನ್ನ ಬಿಟ್ಟಿರ್ಬಾರ್ದವನು! (ತಿ)
-ನ್ನಬಾರ್ದು ನೀಚಾನ್ನವನು! (ಅ)
-ವನಿಗಾನೆನಗವನು! (ತಾ)
-ನು ನಿರಂಜನಾದಿತ್ಯಾನು!!!

ಪಾಂಚಭೌತಿಕ ದೇಹಕ್ಕೆ ಪಂಚಾರತಿ!

ರಾಚರ ವ್ಯಾಪಕನಿಗೀ ಆರತಿ!
ಭೌದ್ಧಾದಿ ಮತ ಹೇತುವಿಗೀ ಆರತಿ!
ತಿಳಿದಿದ, ಸದಾ ಮಾಡಬೇಕಾರತಿ!
ಲ್ಲಿನ ಗೊಂಬೆಯಲ್ಲಿರ್ಪಾತ್ಮ ಗಾರತಿ!
ದೇವರೆಲ್ಲೆಲ್ಲಿಹನೆಂದರಿತಾರತಿ!
ಸ್ತ, ಪಾದನಂತವುಳ್ಳವಗಾರತಿ! (ಅ)
-ಕ್ಕೆ ಕಲ್ಯಾಣವೆಲ್ಲಾ ಲೋಕಕ್ಕೆಂದಾರತಿ!
ಪಂಥ ಪರಾಕ್ರಮಾತ್ಮಾರಾಮಗಾರತಿ!
ಚಾತುರ್ವರ್ಣಾಶ್ರಮಧರ್ಮಕ್ಕೇಕಾರತಿ! (ಪ)
-ರಸ್ಪರ ಪ್ರೀತಿ ವಿಶ್ವಾಸಾತ್ಮಗಾರತಿ! (ಇ)
-ತಿ ನಿರಂಜನಾದಿತ್ಯಾನಂದಕ್ಕಾರತಿ!!!

ಕಾಮನಳಿಯಲಿ ರಾಮನುಳಿಯಲಿ!

ಹದ್ಭಾಗ್ಯವಿದೆಲ್ಲರಿಗುಂಟಾಗಲಿ!
ರಜನ್ಮವದರಿಂದ ಪಾವನಾಗ್ಲಿ! (ಬ)
-ಳಿಯಲ್ಲಿ ಸೀತಾಂಜನೇಯರೂ ಇರಲಿ!
ಮನ ಭಯವಿದರಿಂದ ತಪ್ಪಲಿ! (ದ)
-ಲಿತ, ದೀನರೆಲ್ಲಾ ಉದ್ಧಾರವಾಗಲಿ!
ರಾಕ್ಷಸರ ವಂಶ ನಿರ್ನಾಮವಾಗಲಿ!
ರ್ತ



ಲೋಕ, ಸ್ವರ್ಗಲೋಕದಂತಾಗಲಿ! (ತ)
-ನುಜರೆಲ್ಲಾ ಲವ, ಕುಶರಂತಾಗಲಿ! (ಬಾ)
-ಳಿದರಿಂದ ಸದಾ ಬೆಳಗುತ್ತಿರಲಿ!
ದುನಾಥ, ರಘುನಾಥರೊಂದಾಗಿರ್ಲಿ! (ಕ)
-ಲಿ ನಿರಂಜನಾದಿತ್ಯಗೆ ಶರಣಾಗ್ಲಿ!!!

ಜನ್ಮ ನಿರಂಜನಾದಿತ್ಯನಿಗಾಗಿರ್ಲಿ! (ತ)

-ನ್ಮಯತೆ ಸತತ ಅವನಲ್ಲಿ ಇರ್ಲಿ!
ನಿತ್ಯಾನಿತ್ಯ ವಿಚಾರವಾಗುತ್ತಾ ಇರ್ಲಿ!
ರಂಭೆ, ಊರ್ವಶಿಯರಾಸೆ ಸತ್ತು ಹೋಗ್ಲಿ!
ಗಜೀವನ ಭಯ ಭಕ್ತಿಯಿಂದಾಗ್ಲಿ!
ನಾಮ ಭಜನೆ ಎಲ್ಲೆಲ್ಲೂ ಆಗುತ್ತಿರ್ಲಿ!
ದಿಗ್ದಿಗಂತದಲ್ಲೂ ಪ್ರತಿಧ್ವನಿಯಾಗ್ಲಿ! (ಪ್ರ)
-ತ್ಯಕ್ಷ ದೇವರವನೆಂಬ ಅರಿವಾಗ್ಲಿ!
ನಿತ್ಯಾನಂದವನ್ನವನು ಕರುಣಿಸಿ!
ಗಾರುಡಿಯಾಟಕ್ಕೆ ಮನ ಸೋಲದಿರ್ಲಿ!
ಗಿರಿಯಂತೆ ಮನಸ್ಸಚಲವಾಗಿರ್ಲಿ! (ಇ)
-ರ್ಲಿ ನಿರಂಜನಾದಿತ್ಯನ ದಯೆಯಿರ್ಲಿ!!!

ಮತಗಳೆಷ್ಟು ಹುಟ್ಟಿಕೊಂಡರೇನು?

ರಣಿಯೆಲ್ಲಕ್ಕೊಬ್ಬನಲ್ಲವೇನು?
ತಿ ಅವನಿಲ್ಲದಿದ್ದರುಂಟೇನು? (ಮ)
-ಳಗವನೇ ಕಾರಣನಲ್ಲವೇನು? (ಇ)
-ಷ್ಟು ತಿಳಿದೂ ನರಗಲಕ್ಷ್ಯವನು!
ಹುಸಿ ದೇವರನ್ನೇ ಪೂಜಿಸುವನು! (ಬಿ)
-ಟ್ಟಿ ವರಗಳನ್ನೇ ಬಯಸುವನು!
ಕೊಂಡಾಡಿ ಬೆಂಡಾದಾಗ ಖಂಡಿಸುವನು! (ಮ)
-ಡದಿ ಮಕ್ಕಳ ಮೋಹವುಳ್ಳವನು!
ರೇಗಾಡಿ ಕೂಗಾಡಿ ಹಾಳಾಗುವನು! (ತಾ)
-ನು ನಿರಂಜನಾದಿತ್ಯನಾಗ್ಬಾರ್ದೇನು???

ಯಾರು ಗತಿ ನಿನಗೆ ಮುದ್ದು ಕಂದಾ? (ಗು)

-ರುದೇವನೆಂದನ್ನು ಆನಂದದಿಂದಾ! (ಆ)
-ಗಬೇಕವನಿಂದ ನೀನೇ ಗೋವಿಂದಾ!
ತಿಳಿದರಾತನುಪದೇಶಾನಂದಾ!
ನಿತ್ಯವಲ್ಲೀ ಜಗತ್ತು ನನ್ನ ಕಂದಾ!
ರಜನ್ಮದುದ್ಧಾರ ಆತನಿಂದಾ!
ಗೆಳೆತನವನದು ಶುದ್ಧ ಕಂದಾ!
ಮುರಹರನವ ಶ್ರೀಹರಿ ಕಂದಾ! (ಸ)
-ದ್ದು ಮಾಡದೇ ಸೇರಾ ಶ್ರೀಪಾದ ಕಂದಾ!
ಕಂಡರರಿವುದು ಮಹಿಮೆ ಕಂದಾ!
ದಾತ ನಿರಂಜನಾದಿತ್ಯಾತ ಕಂದಾ!!!

ನಿನ್ನಾಜ್ಞೆಯಾಗದೇನನ್ನೂ ತಿನ್ನಲಾರೆ! (ನ)

-ನ್ನಾಜ್ಞಾತದಲ್ಲಿದ ಮರೆತಿರಲಾರೆ! (ಪ್ರ)
-ಜ್ಞೆ ತಪ್ಪಿದರೆ ನಾ ನಿನ್ನ ನೋಡಲಾರೆ!
ಯಾಕೆ ನಿರ್ದಯೆಯೀಗೆಂದರಿಯಲಾರೆ!
ತಿಗೇಡಲ್ಲೇನೂ ನಿರ್ಧರಿಸಲಾರೆ!
ದೇವಾಧಿದೇವನೇಕೀಗ ಬರಲಾರೆ?
ನ್ನನ್ನೇಕೆ ಸಂತೋಷ ಪಡಿಸಲಾರೆ? (ನಿ)
-ನ್ನೂರನ್ನು ನಾನು ಸೇರದೇ ಇರಲಾರೆ!
ತಿಳಿದವನಿಗೆ ಹೆಚ್ಚು ಹೇಳಲಾರೆ! (ನ)
-ನ್ನವ ನೀನೆಂಬುದಲ್ಲಗೆಳೆಯಲಾರೆ!
ಲಾಭ ನಷ್ಟದಲ್ಲಿಧೀರನಾಗಲಾರೆ! (ಕ)
-ರೆ ನಿರಂಜನಾದಿತ್ಯಗೀಯದಿರ್ಲಾರೆ!!!

ಸತತವಿದುವೇ ಆನಂದ!

ನ್ನ ತಾನರಿತರಾನಂದ!
ತ್ವ ಜೀವನದಿಂದಾನಂದ!
ವಿಶ್ವಾತ್ಮ ರಘುರಾಮಾನಂದ!
ದುಶ್ಚಟದುಚ್ಚಾಟನಾನಂದ!
ವೇಷ, ಭೂಷಣವಲ್ಲಾನಂದ!
ದಿ, ಮಧ್ಯಾಂತಾತೀತಾನಂದ!
ನಂದಕಂದ ಗೋವಿಂದಾನಂದ! (ನಂ)
-ದ ನಿರಂಜನಾದಿತ್ಯಾನಂದ!!!

ದೇವರ ಧ್ಯಾನಕ್ಕಾಶೀರ್ವಾದವಿರಲಿ! (ಭ)

-ವರೋಗವದರಿಂದ ಗುಣವಾಗಲಿ! (ಪ)
-ರರವಗುಣಗಳೆಣಿಸದಿರಲಿ! (ಸಾ)
-ಧ್ಯಾಸಾಧ್ಯತೆಗಳ ಸಂದೇಹ ಸಾಯಲಿ! (ಮ)
-ನಸ್ಸು ಸದಾ ನಾಮಸ್ಮರಣೆ ಮಾಡಲಿ! (ಮಿ)
-ಕ್ಕಾವ ವೃತ್ತಿಗಳೂ ಅದಕ್ಕಿಲ್ಲದಿರಲಿ!
ಶೀತೋಷ್ಣ ಸಹಿಸುವ ಸಾಮರ್ಥ



ವಿರ್ಲಿ! (ಸ)
-ರ್ವಾಧಿಕಾರಿ ಸದ್ಗುರುವೆಂಬರಿವಿರ್ಲಿ!
ರ್ಶನ ಭಾಗ್ಯ ಸದಾ ಲಭಿಸುತ್ತಿರ್ಲಿ!
ವಿಕಲ್ಪವೆಂದೆಂದೂ ತಲೆಯೆತ್ತದಿರ್ಲಿ! (ಪ)
-ರಮಾರ್ಥಿಗೆಂದೆಂದೂ ಸೋಲುಂಟಾಗದಿರ್ಲಿ! (ಮಾ)
-ಲಿನ್ಯ ನಿರಂಜನಾದಿತ್ಯ ಸುಟ್ಟು ಹಾಕ್ಲಿ!!!

ನನ್ನ ಹಠ ನಿನ್ನಮುಂದೇನು? (ನಿ)

-ನ್ನ ಇಷ್ಟದಂತಿರ್ಪವ ನೀನು!
ಳಿಯಲಾರೆ ನಿನ್ನ ನಾನು!
ಕ್ಕೇನ್ಕಂಡೆ ನನ್ನಲ್ಲಿ ನೀನು?
ನಿನ್ನ ಪ್ರಾರ್ಥಿಸಿದ್ದು ತಪ್ಪೇನು? (ಉ)
-ನ್ನತಾಧಿಕಾರಿ ನೀನಲ್ವೇನು?
ಮುಂದೆನಗೇನ್ಗತಿ? ಹೇಳ್ನೀನು!
ದೇಹ ಬೆಳೆಸಿಕೊಂಡಿರ್ಲೇನು? (ಸೂ)
-ನು ನಿರಂಜನಾದಿತ್ಯಗಾನು!

ಹಿಟ್ಟು ಬೂದಿಯ ಗುಟ್ಟನರಿಯಯ್ಯಾ! [ಸಿ]

-ಟ್ಟು ಬಿಟ್ಟುತ್ತಮಾತ್ಮ ನೀನಾಗಯ್ಯಾ!
ಬೂದಿಮುಚ್ಚಿದ ಕೆಂಡದಂತಿರಯ್ಯಾ!
ದಿವ್ಯ ಜ್ಞಾನ ಜ್ವಲಿಸುತ್ತಿರಲಯ್ಯಾ!
ಮ ಭಯವಾಗ ಹೋಗುವುದಯ್ಯಾ!
ಗುರುವೊಬ್ಬನೆಂಬರಿವಿರಲಯ್ಯಾ! (ಅ)
-ಟ್ಟಹಾಸಕ್ಕೆ ಮೋಸ ಹೋಗಬೇಡಯ್ಯಾ!
ರನುದ್ಧಾರಾತ್ಮಜ್ಞಾನದಿಂದಯ್ಯಾ!
ರಿಪುಗಳಿಗಾಗೆಡೆಯಿಲ್ಲವಯ್ಯಾ! (ಮಾ)
-ಯವಾಗುವುದೆಲ್ಲಾ ವ್ಯಾಮೋಹವಯ್ಯಾ! (ಅ)
-ಯ್ಯಾ ನಿರಂಜನಾದಿತ್ಯನಂತಿರಯ್ಯಾ!!!

ಸ್ವಾವಲಂಬಿ ಸನ್ಯಾಸಿಯಯ್ಯಾ!

ಜ್ರಮುಷ್ಟಿ ಅವನದಯ್ಯಾ!
ಲಂಪಟನವನಲ್ಲವಯ್ಯಾ!
ಬಿಟ್ಟಿಹನವ ಜಂಭವಯ್ಯಾ!
ರ್ವಾತ್ಮಭಾವವನದಯ್ಯಾ!
ನ್ಯಾಯಾನ್ಯಾಯಾತೀತನಾತಯ್ಯಾ!
ಸಿರೆಯಾಸೆ ಅವನಿಗಿಲ್ಲಯ್ಯಾ!
ಮ ನಿಯಮಿಯವನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾತಯ್ಯಾ!!!

ನಿನ್ನ ಕೊಳೆ ನೀನೇ ತೊಳೆದುಕೊಳ್ಳಯ್ಯಾ! [ನಿ]

-ನ್ನ ಕೈ, ಕಾಲು ಬಲವಾಗಿರುವಾಗಯ್ಯಾ!
ಕೊಡ್ಡಿರ್ಬೇಡಗಸನ ಸಂಬಳವಯ್ಯಾ! (ಮ)
-ಳೆ ನೀರ ಹೊಳೆ ಅಲಕ್ಷಿಸಬಾರ್ದಯ್ಯಾ!
ನೀತಿ ಬಿಟ್ಟರಧೋಗತಿ ನದಿಗಯ್ಯಾ!
ನೇರ ದಾರಿಯಿದು ಸಾಧಕನಿಗಯ್ಯಾ!
ತೊಡರನ್ಯರಿಗುಂಟು ಮಾಡಬಾರ್ದಯ್ಯಾ! (ಬೆ)
-ಳೆಸುತ್ತಿರಬೇಕು ದೈವೀ ಸಂಪತ್ತಯ್ಯಾ!
ದುಡಿಯಬೇಕು ಶ್ರದ್ಧಾ, ಭಕ್ತಿಯಿಂದಯ್ಯಾ!
ಕೊರಳಿಗುರುಳು ಈ ಸಂಸಾರವಯ್ಯಾ! (ಬೆ)
-ಳ್ಳಗಿರುವುದಿಲ್ಲಾ ಹಾಲಾದೀತೇನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯ ವಾಣಿಯಿದಯ್ಯಾ!!!

ಅಧ್ಯಾತ್ಮ ಪ್ರಚಾರವಾರಿಂದಾಗಬೇಕು?

ಧ್ಯಾನ ಧಾರಣಾ ನಿಷ್ಠರಿಂದಾಗ್ಬೇಕು! (ಆ)
-ತ್ಮಸ್ಥಿತಿಯನುಭವಿಗಳಿಂದಗಾಗ್ಬೇಕು!
ಪ್ರಪಂಚ ಸುಖ ಬಿಟ್ಟವರಿಂದಾಗ್ಬೇಕು!
ಚಾರಿತ್ರ್ಯ ಶುದ್ಧವಿದ್ದವರಿಂದಾಗಬೇಕು! (ವ)
-ರ ಗುರುವಿನ ಭಕ್ತರಿಂದಾಗಬೇಕು!
ಪಾರಿಜ ಮಿತ್ರನ ದಾಸರಿಂದಾಗ್ಬೇಕು! (ಯಾ)
-ರಿಂದೇನೂ ಬಯಸದವರಿಂದಾಗ್ಬೇಕು!
ದಾಸರ ದಾಸರಾದವರಿಂದಾಗ್ಬೇಕು!
ರ್ವವೆಳ್ಳಷ್ಟಿಲ್ಲದವರಿಂದಾಗ್ಬೇಕು!
ಬೇಕುಗಳಿಲ್ಲದವರಿಂದಾಗಬೇಕು! (ಟಾ)
-ಕು ನಿರಂಜನಾದಿತ್ಯನಾಗಿರಬೇಕು!!!

ಪದಾರ್ಥ ಕೆಟ್ಟರಡಿಗೆ ಕೆಟ್ಟೀತಯ್ಯಾ! [ಆ]

-ದಾಯಡಿಗೇಭಟ್ಟನಿಗೂ ಆಗದಯ್ಯಾ! (ಅ)
-ರ್ಥ ಕೆಟ್ಟರೆ ಅನರ್ಥವುಂಟಾದೀತಯ್ಯಾ!
ಕೆಲ್ಸಗಾರಗೀಜ್ಞಾನವಿರಬೇಕಯ್ಯಾ! (ಅ)
-ಟ್ಟಹಾಸಾಡಂಬರವೆಷ್ಟು ದಿನವಯ್ಯಾ? (ಪ)
-ರಮಾರ್ಥಿಗಿರಬೇಕು ವಿನಯವಯ್ಯಾ! (ಅ)
-ಡಿಗಡಿಗೆ ಶೋಧಿಸ್ಬೇಕ್ಪದಾರ್ಥವಯ್ಯಾ! (ಹೀ)
-ಗೆ ಮಾಡಿದ ಅಡಿಗೆ ಆರೋಗ್ಯವಯ್ಯಾ!
ಕೆಲ್ಸಕ್ಕಾಗ ಪ್ರೋತ್ಸಾಹ ಸಿಕ್ಕುವುದಯ್ಯಾ!
(ತು)ಟ್ಟೀ ಕಾಲದಲ್ಲಿ ರೊಟ್ಟಿ ಬೇಕೆನ್ಬೇಡಯ್ಯಾ!
ತ್ವವರಿತು ಸುಖದಿಂದ ಬಾಳಯ್ಯಾ! (ಅ)
-ಯ್ಯಾ ನಿರಂಜನಾದಿತ್ಯ ತತ್ವಜ್ಞನಯ್ಯಾ!!!

ಚರಮ ಗೀತೆಗೆ ತಾಳ ಮೇಳವೇನು? [ನ]

-ರನಿಗಾಗ ಪರವೆಯಿರುವುದೇನು?
ನ ಬಂದಂತೊದುರುವನಾಗವನು!
ಗೀತ ಶಾಸ್ತ್ರದಿಂದ ಹೊರಗಾಗವನು!
ತೆಪ್ಪಗಾಗುವನಳುತ್ತಳುತ್ತವನು! (ಹೀ)
-ಗೆನ್ನನ್ನೇಕಿಲ್ಲಿಟ್ಟಿರುವೆ ಎನ್ನುವನು!
ತಾರಸ್ಥಾಯಿಯಲ್ಲೇನನ್ನೋ ಹಾಡುವನು! (ಹೇ)
-ಳಲಾರ ಸ್ಪಷ್ಟವಾಗಿ ಅದನ್ನವನು!
ಮೇಲುಬ್ಬಸದಿಂದಿರುವಾಗಾ ನರನು! (ಬಾ)
-ಳನೇತ್ರನೇ ಕಳೆಯ್ಬೇಕೀ ದುಃಖವನು!
ವೇದಾಂತ ಸಾರ ತಾನಾಗಿರುವವನು! (ತಾ)
-ನು ನಿರಂಜನಾದಿತ್ಯನೆಂದನ್ನುವನು!!!

ಬೆಂಬಲ ನಿನ್ನದಗತ್ಯ!

ಳಲಿಹನೀಗ ಮರ್ತ್ಯ!
ಯ ಮನದ್ದತ್ಯಗತ್ಯ!
ನಿತ್ಯಾತ್ಮನೆಂಬುದು ಸತ್ಯ!
(ಉ)ನ್ನತಿಗಾಗಬೇಕು ಕೃತ್ಯ!
ತ್ತಗಾಗಬೇಕು ಭೃತ್ಯ!
ಮನಿಸಬಾರ್ದನಿತ್ಯ! (ಸ)
-ತ್ಯ, ಶ್ರೀ ನಿರಂಜನಾದಿತ್ಯ!!!

ನೊಂದೆ ನಿಂದೆಯಲಿ ಬೆಂದೆ! (ಎ)

-ದೆಗೆಡಿಸಬೇಡ ತಂದೇ!
ನಿಂನ್ನಾನಂದವೆಲ್ಲವೆಂದೆ! (ಆ)
-ದೆ ನಿನಗೆ ಮಗನೆಂದೆ! (ಭ)
-ಯ ಪಡಿಸಬೇಡ ಮುಂದೆ! (ಒ)
-ಲಿದು ಬಾರಯ್ಯಾ ನೀನಿಂದೇ!
ಬೆಂಗಾವಲು ನೀನೇ ತಂದೇ! (ತಂ)
-ದೆ ನಿರಂಜನಾದಿತ್ಯೆಂದೆ!!!

ಕರ್ತವ್ಯ ನಿನ್ನದು ನೀನು ಮಾಡು! (ಆ)

-ರ್ತನಾಗಿ ಸತತ ಮೊರೆಯಿಡು! (ಅ)
-ವ್ಯವಸ್ಥೆಯನ್ನು ಹೊರಗೆ ದೂಡು!
ನಿತ್ಯ ಗುರುನಾಮ ಜಪ ಮಾಡು! (ಉ)
-ನ್ನತಿಯಿದರಿಂದೆಂಬುದ ನೋಡು!
ದುಸ್ಸಂಗದಿಂದಾಗುವುದು ಕೇಡು!
ನೀನುಣ್ಣುವನ್ನನ್ಯರಿಗೂ ಕೊಡು!
ನುರಿತಮೇಲುಪದೇಶ ಮಾಡು!
ಮಾಯೆಗೊಳಗಾಗದಿದ್ದು ಬಿಡು! (ಕೂ)
-ಡು ನಿರಂಜನಾದಿತ್ಯನ ಕಂಡು!!!

ಹೆಣ್ಣು, ಮಣ್ಣು, ಹೊನ್ನಿಗಾಗಿ ಹೊಡೆದಾಟ! (ಕ)

-ಣ್ಣು, ಕಿವಿ, ಬಾಯಿ ತೃಪ್ತಿಗಾಗಿ ಕಚ್ಚಾಟ!
ಲಿನವಾಯ್ತಿದರಿಂದ ಜಗದಾಟ! (ಉ)
-ಣ್ಣುವ ಅನ್ನಕ್ಕೆ ಉಂಟಾಯ್ತ ಪರದಾಟ!
ಹೊರಗೆ ತೋರುತಿಹುದು ಸುಳ್ಳು ನೋಟ! (ಇ)
-ನ್ನಿದಕಾಗಿ ಎಲ್ಲೆಲ್ಲೂ ಕಳ್ಳರ ಕಾಟ!
ಗಾಳಿ ಬೀಸಿದತ್ತಾಗುತಿದೆ ತೂರಾಟ!
ಗಿರಿ ನದಿಗಳನ್ನು ದಾಟಿ ಹೋರಾಟ!
ಹೊಡೆತ ಸಹಿಸಲಾರದೆ ಚೀರಾಟ! (ಬಿ)
-ಡೆನಲು ಬಿಡುವರಾರೀ ಹುಚ್ಚಾಟ?
ದಾರಿಯಿದಕೆಲ್ಲೆಲ್ಲೂ ಭಜನಾ ಕೂಟ! (ದಿ)
-ಟ ನಿರಂಜನಾದಿತ್ಯನಿಗಿದೇ ಊಟ!!!

ದುರಭ್ಯಾಸವಿಲ್ಲದವನಾಗು! (ಪ)

-ರ ಸತಿಗಾಶಿಸದವನಾಗು! (ಅ)
-ಭ್ಯಾಗತರಿಷ್ಟಕ್ಕೆ ನೆರವಾಗು!
ಜ್ಜನ ಶಿರೋಮಣಿ ನೀನಾಗು!
ವಿನಾಶಿ ಸಿಗ್ರೇಟ್ವಿರೋಧಿಯಾಗು! (ಎ)
-ಲ್ಲರ ಮನ್ನಣೆಗೆ ಪಾತ್ರನಾಗು!
ಲಿತ ದೀನರಿಗಾಪ್ತನಾಗು!
ರ ಗುರುದತ್ತ ಭಕ್ತನಾಗು!
ನಾಮಸ್ಮರಣಾಸಕ್ತ ನೀನಾಗು! (ಆ)
-ಸಲ ನಿರಂಜನಾದಿತ್ಯನಂತಾಗು!!!

ಸೂರ್ಯಮಂಡಲ ನಂಜುಂಡನಾಜ್ಞಾಧೀನ! (ಕಾ)

-ರ್ಯವವನದು ವಿಮಲಾತ್ಮನಾಧೀನ!
ಮಂದಮತಿಯ ತೊಳೆಯುವಾತ್ಮಜ್ಞಾನ! (ಗಂ)
-ಡ ತಾನಾಗಿ ಪಾರ್ವತಿಯ ಪಂಚಪ್ರಾಣ!
ಯವಾದಾಗವಳಿಗೆ ವರದಾನ! (ಆ)
-ನಂದಾ ಅರ್ಧನಾರೀಶ್ವರನಾದರ್ಶನ! (ನಂ)
-ಜುಂಡಮರ ತಾನಾದಾ ದಿಗಂಬರನ!
ಮರುಧರನಾದಾ ನಟರಾಜನ!
ನಾದಪ್ರಿಯ ಶ್ರೀರಾಮನಾಮಪ್ರಿಯನ!
ಜ್ಞಾನ ಕೈಲಾಸ ಶಿಖರದಲ್ಲಿಹನ!
ಧೀರ, ಗಂಭೀರಾತ್ಮಸ್ವರೂಪದವನ! (ಘ)
-ನ ನಿರಂಜನಾದಿತ್ಯ ತಾನಾದವನ!!!

ಯಾರು ಎಲ್ಲಿಗೆ ಕರೆದರೇನು? (ಗು)

-ರುದೇವನಾಜ್ಞೆಯಾಗಬೇಡ್ವೇನು?
ಲ್ಲಾ ಬಲ್ಲವನವನಲ್ವೇನು? (ಇ)
-ಲ್ಲಿ ಇರಿಸುವವನವನು! (ಹೋ)
-ಗೆನ್ನದಲ್ಲಾಡಲಾರನಿವನು!
ಜ್ಜ ಪೂರೈಸಬೇಡೇನವನು? (ಕೆ)
-ರೆ, ಭಾವಿಗೆಲ್ಲಾ ದೂಡುತ್ತಿಹನು!
ತ್ತನಿಗೆ ಶರಣು ಇವನು! (ಈ)
-ರೇಳು ಲೋಕಕ್ಕೊಡೆಯನವನು! (ಸೂ)
-ನು ನಿರಂಜನಾದಿತ್ಯನಿವನು!!!

ದೇವರ ಸೇವೆ ಮಾಡಬೇಕು! (ಅ)

-ವನೇ ನೀನೆಂದರಿಯಬೇಕು! (ವ)
-ರ ಗುರು ಕೃಪೆಯಾಗಬೇಕು!
ಸೇರುತವನಲ್ಲೊಂದಾಗ್ಬೇಕು! (ಸ)
ವೆದು ಸಂಚಿತ ಹೋಗಬೇಕು!
ಮಾತಡಗಿ ಮುನಿಯಾಗ್ಬೇಕು! (ಮುಂ)
-ಡ ಮಾಲನದನೊಪ್ಪಬೇಕು!
ಬೇರೇನೂ ಬೇಡವೆನಬೇಕು! (ಬೇ)
-ಕು ನಿರಂಜನಾದಿತ್ಯಾಗ್ಬೇಕು!!!

ಎಂತು ಕಳೆಯಲಿ ಕಾಲವೆನಬೇಡ! (ಕಂ)

-ತುಪಿತನನ್ನು ಸ್ಮರಿಸದಿರಬೇಡ!
ಟ್ಟಳೆಗಳನ್ನು ಸೊಟ್ಟ ಮಾಡಬೇಡ!
(ಮ)ಳೆ ಬಂದಾಗುಳುವಭ್ಯಾಸ ಬಿಡಬೇಡ! (ಕಾ)
-ಯಕಲ್ಪಕ್ಕಾಗಿ ವೇಳೆ ಕಳೆಯಬೇಡ! (ಮ)
-ಲಿನ ವಾಸನೆಗೆ ಜಾಗ ಕೊಡಬೇಡ!
ಕಾಮಿನಿ, ಕಾಂಚನಕ್ಕೆ ಆಶಿಸಬೇಡ!
ಕ್ಷ್ಯ ಆತ್ಮನಲ್ಲಿರಿಸದಿರಬೇಡ!
ವೆಚ್ಚ, ತುಚ್ಛಕಾರ್ಯಕ್ಕಾಗಿ ಮಾಡಬೇಡ!
ನ್ನದು ನಿನ್ನದೆಂದು ಗುದ್ದಾಡಬೇಡ!
ಬೇಕಿದಕೆ ಜ್ಞಾನ! ಮರೆತಿರಬೇಡ! (ಅಂ)
-ಡಲೆಯುತ್ತ ನಿರಂಜನಾದಿತ್ಯ ಬಾಡ!!!

ಊಟ ಬಲ್ಲವನಿಗೆ ರೋಗವಿಲ್ಲ! (ಕೂ)

-ಟ ಬಿಟ್ಟವನಿಗೆ ಪೇಚಾಟವಿಲ್ಲ!
ಬಲ್ಲವನೊಬ್ಬ ಗುರುದೇವನೆಲ್ಲ! (ಎ)
-ಲ್ಲರಂತಾತ ಮಾಯೆಗೆ ಭೀತನಲ್ಲ! (ಭ)
-ವಬಂಧಕ್ಕಾತ ಕಟ್ಟುಬಿದ್ದೇ ಇಲ್ಲ!
ನಿಶ್ಚಲ ತತ್ವವವನ ಬಾಳೆಲ್ಲ!
ಗೆಳೆತನಲ್ಪರಲ್ಲವನಿಗಿಲ್ಲ!
ಗರಿಷ್ಠ ತಾನೆಂಬ ಗರ್ವವಗಿಲ್ಲ!
ವಿರಕ್ತ ದತ್ತ ತಾನಾಗಿಹನಲ್ಲ! (ಅ)
-ಲ್ಲ, ನಿರಂಜನಾದಿತ್ಯ ಅನ್ಯನೇನಲ್ಲ!!!

ಪ್ರಸನ್ನ ಸೀತಾರಾಮ ಸೇವೆ ಚಿರಕಾಲ ಸಾಗಲಿ!

ಚ್ಚಿದಾನಂದಾತ್ಮ ಸಾಕ್ಷಾತ್ಕಾರ ಸರ್ವರಿಗಾಗಲಿ! (ನ)
-ನ್ನದು, ನಿನ್ನದೆಂಬ ಭೇದಭಾವದ ಹುಟ್ಟಡಗಲಿ!
ಸೀತಾಮಾತೆಯಾದರ್ಶ ಮಹಿಳೆಯರು ಪಾಲಿಸಲಿ!
ತಾಮಸ, ರಾಜಸ, ಭಕ್ತಿ ಕಡಿಮೆಯಾಗುತ್ತಿರಲಿ!
ರಾಮನಾಮ ಜಪದಿಂದಾಶಾಪಾಶ ನಾಶವಾಗಲಿ!
ದನಾರಿಗಿದು ಪ್ರಿಯಮಂತ್ರವೆಂಬರಿವಿರಲಿ!
ಸೇವಾಗ್ರೇಸರಾಂಜನೇಯನಿಗೆ ವಂದನೆ ಸಲಲಿ! (ಸ)
-ವೆದುಹೋಗಲೀದೇಹ ಅವನ ಪಾದ ಸೇವೆಯಲಿ!
ಚಿರಂಜೀವಿತ್ವಕ್ಕೆ ನಿಷ್ಕಾಮ ಭಕ್ತ ಅರ್ಹನಾಗಲಿ!
ಕ್ಕಸಾಂತಕ ರಾಮನ ಸಾಯುಜ್ಯ ಸುಖ ಸಿಗಲಿ!
ಕಾಮಿನೀ ಕಾಂಚನದ ಹುಚ್ಚು ಹೆಸರಿಲ್ಲದಾಗಲಿ!
ಕ್ಷ್ಯ ಸದಾ ಪ್ರಸನ್ನ ಸೀತಾರಾಮಾತ್ಮನಲ್ಲಿರಲಿ!
ಸಾಧು, ಸಜ್ಜನರ ಸೇವೆಯಿಂದಾತ ತೃಪ್ತನಾಗಲಿ!
ರುಡಗಮನನಾಗಿ ಬಂದು ದರ್ಶನ ಕೊಡಲಿ! (ಒ)
-ಲಿದು ನಿರಂಜನಾದಿತ್ಯನೂ, ತಾನೂ ಒಂದೆಂದೆನಲಿ!!!

ಕನಸಿನಲ್ಲೂ ಅವಧೂತ ನಾನು!

ಡೆ, ನುಡಿಗೆಲ್ಲಾ ಆದರ್ಶ ನೀನು!
ಸಿದ್ಧಿ, ರಿದ್ಧಿಗಳಾಶಿಸಿಲ್ಲ ನಾನು!
ನ್ನ ನಿನ್ನಂತೆ ಮಾಡಬೇಕು ನೀನು!
(ಅ)ಲ್ಲೂ, ಇಲ್ಲೂ ನೆನೆವೆನು ನಿನ್ನ ನಾನು!
ನಾದರ ತೋರಬಾರದು ನೀನು!
ರ ಗುರುವಿನ ಗುಲಾಮ ನಾನು!
ಧೂಮದೋಪಾದಿ ವ್ಯಾಪಕನು ನೀನು!
ನುಜನಲ್ಲವೇ ನಿನಗೆ ನಾನು?
ನಾಮ, ರೂಪಾತೀತ ನಾನೆಂಬೆ ನೀನು! (ನೀ)
-ನು ನಿರಂಜನಾದಿತ್ಯನಲ್ಲವೇನು???

ದಾರಿ ನಡೆಸಿದರಾಯ್ತೇನು? [ಊ]

-ರಿಗಿನ್ನೂ ಸೇರಿಸಬಾರ್ದೇನು?
ಡೆಯಲಾರೆನಿನ್ನು ನಾನು! (ಒ)
-ಡೆಯನೆಲ್ಲಕ್ಕೆ ಒಬ್ಬ ನೀನು!
ಸಿರಿತನಕ್ಕಾಶ್ಸಿಲ್ಲ ನಾನು!
ಯೆ ತೋರಿ ಕಾಪಾಡು ನೀನು!
ರಾತ್ರಿ, ದಿನ ಧ್ಯಾನಿಪೆ ನಾನು! (ಆ)
-ಯ್ತೇನು ಲಾಭ ಹೇಳೀಗ ನೀನು! (ನಾ)
-ನು ನಿರಂಜನಾದಿತ್ಯನಲ್ಲೇನು???

ಭಾವಾತೀತನೆಲ್ಲಾ ಭಾರವ ಹೊರುವ!

ವಾನರ ವೀರ ಹನುಮಗಿಲ್ಲ ಗರ್ವ!
ತೀರ್ಥ ಪ್ರಸಾದಕ್ಕೆ ಸದಾ ಹಾತೊರೆವ!
ನ್ನ ಶ್ರೀರಾಮ ಸೇವೆಗರ್ಪಿಸಿರುವ!
ನೆನಪಿನ್ಯಾತರದೂ ಇಲ್ಲದಿರುವ! (ಎ)
-ಲ್ಲಾ ಸಿದ್ಧಿಗಳನ್ನಾತ ಪಡೆದಿರುವ!
ಭಾಗ್ಯವಿದನ್ನು ಪ್ರದರ್ಶಿಸದಿರುವ!
ಘುಪತಿ ಗತಿ ತನಗೆಂದಿರುವ!
ರ ಸತಿ ಸೀತೆ ತಾಯಿಯೆಂದಿರುವ!
ಹೊರಗೊಳಗೆ ತಾನೇ ತಾನಾಗಿರುವ! (ಮೂ)
-ರು ಲೋಕಕ್ಕೂ ಸದ್ಗುರು ತಾನಾಗಿರುವ! (ಅ)
-ವ ನಿರಂಜನಾದಿತ್ಯನೂ ಆಗಿರುವ!!!

ವಿಶ್ವಾಸ ಘಾತಕನಾಗಬೇಡ!

ಶ್ವಾನ ಸೂಕರರಂತಿರಬೇಡ!
ದಾಶಿವನ ಮರೆಯಬೇಡ!
ಘಾಸಿಯಕ್ಕು! ಮೋಸಮಾಡಬೇಡ!
ಪೋನಿಧಿಯಾಗದಿರಬೇಡ!
ಟ್ಟು ಕತೆಗಳ ನಂಬಬೇಡ!
ನಾಟಕದ ರಾಜನಾಗಬೇಡ!
ಡಿಬಿಡಿ ಮಾಡಿ ಕೆಡಬೇಡ!
ಬೇರು ಸತ್ತ ಗಿಡವಾಗಬೇಡ! (ಸು)
-ಡದೆ ನಿರಂಜನಾದಿತ್ಯ ಬಿಡ!!!

ನಾಳೆ ಬರುವನೆಂದವನಿಂದೇ ಬಂದ [ವೇ]

-ಳೆ ಬಂದಾಗ ಬರುವೆನೆಂಬುದೇ ಚಂದ!
ರುವುದು, ಹೋಗುವುದಾತನಾನಂದ!
ರುಚಿಸದು ಮಾನವನಿಗೀ ಆನಂದ!
ವೆಸನ ಪಡಬೇಕಾಯಿತಿದರಿಂದ!
ನೆಂಟರಿಷ್ಟರೆಂಬುದು ಭವದ ಬಂಧ!
ತ್ತನೇ ಗತಿಯೆಂದರೆ ಸದಾನಂದ!
ರ ಗುರುವಿಗೆ ಶರಣಾಗು ಕಂದ!
ನಿಂದಕಗೆ ಸಿಕ್ಕದಾ ಪಾದಾರವಿಂದ!
ದೇಹಭಾವವಿಲ್ಲದವನಾತ್ಮಾನಂದ!
ಬಂಧು ಸರ್ವರಿಗಾ ನಿರಂಜನಾನಂದ!
ತ್ತ ತಾನಾ ನಿರಂಜನಾದಿತ್ಯಾನಂದ!!!

ಆಗಬೇಕಾದದ್ದಾಗಲೇಬೇಕು? (ಹೋ)

-ಗಬೇಕಾದದ್ದು ಹೋಗಲೇಬೇಕು!
ಬೇಕು, ಬೇಡವೆನ್ನದಿರಬೇಕು!
ಕಾರ್ಯತತ್ಪರತೆ ಹೆಚ್ಚಬೇಕು!
ತ್ತ ಜಪ ಸದಾ ಮಾಡಬೇಕು! (ಗು)
-ದ್ದಾಡಕ್ಕೆಡೆಗೊಡದಿರಬೇಕು!
ಗನ ಸದೃಶನಾಗಬೇಕು!
ಲೇವಾದೇವಿಯಿಲ್ಲದಿರಬೇಕು! (ಬೇ)
-ಕು, ನಿರಂಜನಾದಿತ್ಯನಾಗ್ಬೇಕು!!!

ಹಲವು ಹೊಲಗಳೊಡೆಯ ನೀನು! (ಫ)

-ಲವೇನು ದುಡಿದು, ಮಡಿದು ನಾನು? (ತಾ)
-ವು ಠಿಕಾಣಿಯಿಲ್ಲದಂತಾದೆ ನಾನು!
ಹೊಸ ಹೊಸ ಮಂದಿರವಾಸಿ ನೀನು!
ಕ್ಷ್ಯ ನಿನ್ನಲ್ಲಿಟ್ಟಿಲ್ಲವೇನು ನಾನು?
ತಿಗೆಡಿಸಿಹೆ ನನ್ನನ್ನು ನೀನು! (ಕೂ)
-ಳೊಪ್ಪತ್ತೂ ಕಾಣದೊಣಗಿದೆ ನಾನು! (ಕೊ)
-ಡೆ ಹಿಡಿದೆಳೆದೆ ನೆಲವ ನೀನು! (ಭ)
-ಯದಿಂದ ಬಾಯಿ ಬಿಡದಿದ್ದೆ ನಾನು!
ನೀತಿಯಿದು ನಿನಗೆ ಸರಿಯೇನು? (ನಾ)
-ನು ನಿರಂಜನಾದಿತ್ಯನಲ್ಲವೇನು???

ಕರುಬರನ್ಯರೇಳಿಗೆಗೆ ಸಜ್ಜನರು! (ಗು)

-ರುಭಕ್ತಿ ಸಂಪನ್ನರಾಗಿರುವರವರು!
ಡವರಾದರೂ ನಿತ್ಯ ತೃಪ್ತರವರು! (ಮ)
-ರಣಕ್ಕಂಜುವುದಿಲ್ಲಾ ಸಾಧು ಸಜ್ಜನರು! (ಅ)
-ನ್ಯರೊಡವೆಗಾಶಿಸದಿರುವರವರು! (ಆ)
-ರೇನೆಂದರೂ ಆನಂದದಿಂದಿರ್ಪರವರು! (ಕಾ)
-ಳಿ, ಬೋಳಿ ನ್ಯಾಯಕ್ಕೆ ಪ್ರವೇಶಿಸರವರು!
ಗೆಳೆತನ ಉತ್ತಮರದ್ದೇ ಮಾಡುವರು! (ಕಾ)
-ಗೆ, ಗೂಗೆಗಳಂತೆ ಕಿತ್ತು ತಿನ್ನರವರು!
ತ್ಯವಂತರಾಗಿ ಬಾಳು ಮುಗಿಸುವರು! (ಮ)
-ಜ್ಜನಾದ್ಯನುಷ್ಠಾನ ತಪ್ಪದೇ ಮಾಡುವರು!
ಶ್ವರವೀ ಸಂಸಾರವೆಂದರಿತಿಹರು! (ಗು)
-ರು ನಿರಂಜನಾದಿತ್ಯನಿಗಾಪ್ತರವರು!!!

ತಂದೆ ತಾಯಿಯೆನಗೆ ದತ್ತ ಸತ್ಯ! (ತಂ)

-ದೆ, ತಾಯಿ ಬೇರೆಂದರಾಗ್ವುದಸತ್ಯ!
ತಾಪಸೋತ್ತಮನೆನ್ನ ತಂದೆ ಸತ್ಯ! (ಬಾ)
-ಯಿಗೆ ಬಂದಂತಾಡುವುದೆಲ್ಲಾ ಅಸತ್ಯ! (ಮಾ)
-ಯೆಯನು

ಈರಿದವನಾತ ಸತ್ಯ! (ತ)
-ನಯನಿದನರಿತಿಹನು ನಿತ್ಯ! (ಬ)
-ಗೆ ಬಗೆಯ ನಾಮ, ರೂಪ ಅಸತ್ಯ! (ಸು)
-ದರ್ಶನಧಾರಿಯೂ ಅವನೇ ಸತ್ಯ! (ಕ)
-ತ್ತಲೆ ಕವಿದವಗಿದು ಅಸತ್ಯ!
ರ್ವರಿದನರಿತು ಬಾಳಿ ನಿತ್ಯ! (ನಿ)
-ತ್ಯ, ನಿರಾಮಯ ನಿರಂಜನಾದಿತ್ಯ!!!

ಕಳ್ಳ, ಸುಳ್ಳನೊಡನಾಟ ಕಷ್ಟ! (ಹ)

-ಳ್ಳಕ್ಕೆ ತಳ್ಳುವುದವನಿಗಿಷ್ಟ!
ಸುಭಿಕ್ಷೆಗಾಯ್ತವನಿಂದ ನಷ್ಟ! (ಉ)
-ಳ್ಳ ಮಾನ ಕಳೆಯುವನಾ ದುಷ್ಟ!
ನೊಣದಂತವನ ಬಾಳು ಭ್ರಷ್ಟ! (ಮಾ)
-ಡದಿರುವುದವನಿಷ್ಟ ಶ್ರೇಷ್ಟ!
ನಾಸ್ತಿಕನವನ ಬಾಳಿನಿಷ್ಟ! (ಊ)
-ಟ ಕೊಟ್ಟವನಟ್ಟುವನಾ ದುಷ್ಟ!
ಡೆಗೆ ಸುಟ್ಟುಹೋಗ್ವನಾ ಭ್ರಷ್ಟ! (ಶ್ರೇ)
-ಷ್ಟ ನಿರಂಜನಾದಿತ್ಯ ಆಪ್ತೇಷ್ಟ!!!

ಅದೃಷ್ಟ ಹೀನ ಭಕ್ತ ಶ್ರೇಷ್ಟ!

ದೃಶ್ಯಾದೃಶ್ಯ ಭಗವದಿಷ್ಟ! (ಕ)
-ಷ್ಟ, ಸುಖ, ಮಾಯೆಯಾಟ, ಸ್ಪಷ್ಟ!
ಹೀನ ವೃತ್ತಿಯಿಂದೆಲ್ಲಾ ಕಷ್ಟ!
ವವಿಧ ಭಕ್ತಿಯೂ ಶ್ರೇಷ್ಟ!
ಸ್ಮವಾಗುವುದೆಲ್ಲಾ ಕಷ್ಟ! (ಮು)
-ಕ್ತನಾಗುವುದೇ ಭಕ್ತಗಿಷ್ಟ!
ಶ್ರೇಯಸ್ಸೆಂಬುದದೊಂದೇ ಸ್ಪಷ್ಟ! (ತು)
-ಷ್ಟ ನಿರಂಜನಾದಿತ್ಯಾಪ್ತೇಷ್ಟ!!!

ಉತ್ಸಾಹಕ್ಕೆ ಪ್ರೋತ್ಸಾಹವಿರಬೇಕು! (ಪ್ರೋ)

-ತ್ಸಾಹಕ್ಕೆ ಉತ್ಸಾಹವೂ ಇರಬೇಕು!
ಗಲಿರುಳ್ದುಡಿವಾಗಿಂತಿರ್ಬೇಕು! (ಧ)
-ಕ್ಕೆ ಧರ್ಮಕ್ಕುಂಟು ಮಾಡದಿರಬೇಕು!
ಪ್ರೋತ್ಸಾಹೋತ್ಸಾಹ ಅನ್ಯೋನ್ಯವಿರ್ಬೇಕು! (ತಾ)
-ತ್ಸಾರವೀರ್ವರಲ್ಲೂ ಇಲ್ಲದಿರ್ಬೇಕು! (ಇ)
-ಹ, ಪರ ಸಾಧನೆ ಹೀಗೆ ಸಾಗ್ಬೇಕು!
ವಿಶ್ವಾಸ ಗೀತೆ ಉಳಿಸಿಕೊಡ್ಬೇಕು! (ಪ)
-ರ ಮತದ ಹುಚ್ಚು ಬಿಡಿಸಬೇಕು!
ಬೇಡಿಕೆಯಿದು ಪೂರ್ತಿಯಾಗಬೇಕು! (ಸಾ)
-ಕು ನಿರಂಜನಾದಿತ್ಯಗಿನ್ನೇನ್ಬೇಕು???

ಅನುಕಂಪವಿಲ್ಲದಧಿಕಾರವೇಕೆ? (ಮ)

-ನುಜರಿದನ್ನರಿತಿರಬಾರದೇಕೆ?
ಕಂಕಣಬದ್ಧರೆಂಬರೆಲ್ಲಾಳಲಿಕ್ಕೆ!
ಕ್ಷಪಾತವೇಕೆಂದರಾಡರದಕ್ಕೆ!
ವಿಶ್ವದಾದ್ಯಂತ ಇದೇ ಗತಿ ಜನಕ್ಕೆ! (ಕೊ)
-ಲ್ಲಲೆತ್ನಿಪರಿಷ್ಟು ಮಾತ್ರ ಕೇಳಿದ್ದಕ್ಕೆ!
ಯಾಮಯ ದೇವರೇ ಸಾಕ್ಷಿಯಿದಕ್ಕೆ!
ಧಿಕ್ಕಾರವಿರಲಿಂಥಾ ಆಡಳಿತಕ್ಕೆ!
ಕಾಲ ಬರಲಿದೆ ಬುದ್ಧಿ ಬರಲಿಕ್ಕೆ! (ಮಾ)
-ರಹರನೇ ಬರುವನು ತಿದ್ದಲಿಕ್ಕೆ!
ವೇಷ, ಭೂಷಣ ಮುಖ್ಯವಲ್ಲ ಅದಕ್ಕೆ! (ಜೋ)
-ಕೆ ನಿರಂಜನಾದಿತ್ಯ ಕಾರಣದಕ್ಕೆ!!!

ನನಗೆ ನಾನೇ ಮೋಸಮಾಡಿಕ್ಕೊಂಡೆ!

ನ್ನ ನೋವವನ ನೋವೆಂದಂದ್ಕೊಂಡೆ!
ಗೆಲುವಾಗಿ ಸದಾ ಇರೆಂದಂದ್ಕೊಂಡೆ!
ನಾನಾ ಹೆಸರು ನನಗೆಂದಂದ್ಕೊಂಡೆ!
ನೇಮದಿಂದದನ್ನರಿಯೆಂದಂದ್ಕೊಂಡೆ!
ಮೋಹ ಮಿಥ್ಯಕ್ಕೆ ಬೇಡವೆಂದಂದ್ಕೊಂಡೆ!
ತ್ಯಕ್ಕೆಂದೂ ಸೋಲಿಲ್ಲವೆಂದಂದ್ಕೊಂಡೆ!
ಮಾರಾಮಾರಿ ಫಲವಿಲ್ಲೆಂದಂದ್ಕೊಂಡೆ! (ಆ)
-ಡಿದಂತೆ ನಡೆಯಬೇಕೆಂದಂದ್ಕೊಂಡೆ! (ತ)
-ಕ್ಕೊಂಡವ ಕೊಡಲೇಬೇಕೆಂದಂದ್ಕೊಂಡೆ! (ಕಂ)
-ಡೆ, ನಿರಂಜನಾದಿತ್ಯನಾಗಿ ಉಂಡೆ!!!

ವೃತ್ತಿ ಶೂನ್ಯನೇ ನಿವೃತ್ತ! (ಹ)

-ತ್ತಿಳಿದು ಹತ್ತುವ ಭಕ್ತ!
ಶೂಲಪಾಣಿಯ ನೋಡುತ್ತ! (ಧ)
-ನ್ಯನಪ್ಪನೈಕ್ಯವಾಗುತ್ತ!
ನೇರ ದಾರಿಯಿದೇ ಸೂಕ್ತ!
ನಿಜರೂಪ ಸ್ಥಿತ ಮುಕ್ತ!
ವೃದ್ಧಾಪ್ಯಕ್ಕಂಜನಾ ಶಕ್ತ! (ಇ)
-ತ್ತ ನಿರಂಜನಾದಿತ್ಯತ್ತ!!!

ಅಪೇಕ್ಷೆ, ಉಪೇಕ್ಷೆಗಳೆರಡೂ ಬೇಡ!

ಪೇಚಾಟದ ಸಂಸಾರದಲ್ಲೊದ್ದಾಡ್ಬೇಡ! (ರ)
-ಕ್ಷೆಗಾಗಿ ತಂತ್ರ, ಯಂತ್ರ ಮಾಡಿಸ್ಬೇಡ!
ತ್ತಮ ರಕ್ಷೆ “ಸದಾಜಪ”! ಬಿಡ್ಬೇಡ!
ಪೇಟೆ ಬೀದಿಯಲ್ಲಿ ವೃಥಾ ಓಡಾಡ್ಬೇಡ! (ದೀ)
-ಕ್ಷೆಯಾಗಿದೆಯೆಂದಹಂಕಾರ ಪಡ್ಬೇಡ!
ದ್ದಲವಿಲ್ಲದ ಸಾಧನೆ ಬಿಡ್ಬೇಡ! (ಹ)
-ಳೆಯ ಕೊಳೆಯ ತೊಳೆಯದೇ ಇರ್ಬೇಡ! (ಮ)
-ರ ಮರಕ್ಕೆ ನೆಗೆವ ಕಪಿಯಾಗ್ಬೇಡ! (ಉಂ)
-ಡೂಟ ಜೀರ್ಣವಾಗದೆ ಏನೂ ತಿನ್ಬೇಡ!
ಬೇಳೆ ಬೇಯದಿದ್ದಾಗ ಹುಳಿ ಹಿಂಡ್ಬೇಡ! (ಮೃ)
-ಡ ನಿರಂಜನಾದಿತ್ಯಗೆರಡೂ ಬೇಡ!!!

ಕುಣಿದವರು ಕೂತುಕೊಳ್ಳಲೇ ಬೇಕು! [ಮ]

-ಣಿದವರು ನೆಮ್ಮದಿಯಿಂದಿರ್ಲೇ ಬೇಕು!
ತ್ತನೇ ಗುರುವೆಂದು ನಂಬಿರಬೇಕು! (ಭ)
-ವರೋಗ ಅವನಿಂದ ಗುಣವಾಗ್ಬೇಕು!
ರುಜು ಮಾರ್ಗ ಅವಲಂಬಿಸಲೇ ಬೇಕು!
ಕೂತಾಗ, ನಿಂತಾಗ “ದತ್ತಾ!” ಎನ್ನಬೇಕು!
ತುರಿಯಾತೀತದ ಗುರಿಯಿರಬೇಕು!
ಕೊಳೆ ಸತತ ತೊಳೆಯುತ್ತಿರಬೇಕು! (ಕ)
-ಳ್ಳ, ಸುಳ್ಳರ ಸಹವಾಸ ಬಿಡಬೇಕು!
ಲೇಶ ಮಾತ್ರವೂ ಆಸೆಯಿಲ್ಲದಿರ್ಬೇಕು!
ಬೇರೂರಿ ಗಿಡ ಹೆಮ್ಮರವಾಗಬೇಕು!
ಕುಲ ನಿರಂಜನಾದಿತ್ಯನದ್ದಾಗ್ಬೇಕು!!!

ದಾನಕ್ಕೆ ನಿಧಾನ ಮಾಡ್ಬೇಡ!

ಶ್ವರಕ್ಕೆ ಆಶೆ ಪಡ್ಬೇಡ! (ಧ)
-ಕ್ಕೆ ಸ್ವಧರ್ಮಕ್ಕುಂಟು ಮಾಡ್ಬೇಡ!
ನಿನ್ನ ನೀ ತಿಳಿಯದಿರ್ಬೇಡ!
ಧಾರಾಳಕ್ಕೆ ಲೋಭ ತರ್ಬೇಡ!
ಮಿಸಿ ಕೊರಳ ಕೊಯ್ಬೇಡ!
ಮಾನಿನಿಯ ಮಾತು ಕೇಳ್ಬೇಡ! (ಬಿ)
-ಡ್ಬೇಡ ಜಪ ಬಿಟ್ಟು ಕೆಡ್ಬೇಡ! (ಬಿ)
-ಡ ನಿರಂಜನಾದಿತ್ಯಾ ಪಾಡ!!!

ಎಪ್ಪತ್ತರಾರಂಭ ಈ ದೇಹಕ್ಕೆ! (ದ)

-ಪ್ಪ ಸಣ್ಣವೆಂಬುದೆಲ್ಲಾ ಅದಕ್ಕೆ! (ಚಿ)
-ತ್ತಶುದ್ಧಿಯಿಂದ ಬೆಲೆ ಅದಕ್ಕೆ!
ರಾತ್ರಿ, ದಿನ ದುಡಿಯ್ಬೇಕದಕ್ಕೆ! (ಸಾ)
-ರಂಗನೇ ಶಕ್ತಿ ಕೊಡ್ಬೇಕದೆಕ್ಕೆ!
ಜಿಸಿ ಬದುಕಬೇಕದಕ್ಕೆ!
ಷಾ, ಸೂಯೆ ಬಿಡಬೇಕದಕ್ಕೆ!
ದೇಗುಲವೆಂಬ ನಾಮಾಗದಕ್ಕೆ!
ರಿ, ಹರಾಗಮನಾಗದಕ್ಕೆ! (ಅ)
-ಕ್ಕೆ ನಿರಂಜನಾದಿತ್ಯ ವರಕ್ಕೆ!!!

ಎಪ್ಪತ್ತಾದರೇನಾದಂತಾಯ್ತು? (ಅ)

-ಪ್ಪಣೆ ಪಾಲಿಸ್ಬೇಕೆಂಬಂತಾಯ್ತು! (ದ)
-ತ್ತಾತ್ರೇಯ ಗುರುವೆಂಬಂತಾಯ್ತು!
ರ್ಶನಕ್ಕಾಗಿರೆಂಬಂತಾಯ್ತು!
ರೇಗಿ ಫಲವಿಲ್ಲವೆಂಬಂತಾಯ್ತು!
ನಾಮ ಜಪ ಮಾಡೆಂಬಂತಾಯ್ತು!
ದಂಭ, ದರ್ಪ ಬೇಡೆಂಬಂತಾಯ್ತು!
ತಾನವನಾಗಿರುವಂತಾಯ್ತು!
-ಯ್ತು ನಿರಂಜನಾದಿತ್ಯನಾಯ್ತು!!!

ಯತಿಗೆ ಐದು, ಸತಿಗೆಪ್ಪತ್ತು ಐದು! (ರೀ)

-ತಿ, ನೀತಿ ಆಧುನಿಕ ಕಾಲಕ್ಕೆ ಇದು! (ಬ)
-ಗೆಬಗೆಯಲಂಕಾರಕ್ಕೆ ಕಾಲವಿದು!
ದೆರಡಿಂದ್ರಿಯ ತೃಪ್ತಿ ಕಾಲವಿದು!
ದುಸ್ಸಂಗಕ್ಕೆ ಮನವೀವ ಕಾಲವಿದು!
ಜ್ಜನರ ಪೀಡಿಸುವ ಕಾಲವಿದು!
ತಿರುಕರ ಬಂಧಿಸುವ ಕಾಲವಿದು!
ಗೆಜ್ಜೆಕಟ್ಟಿ ಕುಣಿಯುವ ಕಾಲವಿದು! (ಬೆ)
-ಪ್ಪನಿಗೆ ಪಟ್ಟಕಟ್ಟುವ ಕಾಲವಿದು! (ಸೊ)
-ತ್ತು ಕಿತ್ತು ಕತ್ತು ಕೊಯ್ಯುವ ಕಾಲವಿದು!
ಇಂದ್ರಜಾಲ ದೈವೀಕವೆಂಬ ಕಾಲವಿದು! (ಇ)
-ದು ನಿರಂಜನಾದಿತ್ಯಗಾಗದಿಹುದು!!!

ಪರಮ ಭಕ್ತನಿಗೆ ದೇವರೆಲ್ಲೆಲ್ಲೂ!

ಮಾರಮಣನಿರುವನವನಲ್ಲೂ!
ನಶುದ್ಧಿಯಿರ್ಬೇಕೆಲ್ಲಾ ಕಾಲದಲ್ಲೂ!
ವಪಾಶಬದ್ಧನಾದ ವೇಳೆಯಲ್ಲೂ! (ಶ)
-ಕ್ತನಾಗಿ ಪೂಜ್ಯನಾದ ಸಮಯದಲ್ಲೂ!
ನಿದ್ರೆ, ಜಾಗ್ರತ್ಸ್ವಪ್ನಾದ್ಯವಸ್ಥೆಗಳಲ್ಲೂ!
ಗೆಲುವು, ಸೋಲುಂಟಾದ ಸಂದರ್ಭದಲ್ಲೂ!
ದೇಹ ಬಲ ಕುಂದಿದ ವೃದ್ಧಾಪ್ಯದಲ್ಲೂ!
ರ ಗುರುದರ್ಶನವಿವಗೆಲ್ಲೆಲ್ಲೂ! (ತೆ)
-ರೆ ಮರೆಯ ಹಣ್ಣಾಗಿರುವನೆಲ್ಲೆಲ್ಲೂ! (ಕ)
-ಲ್ಲೆಸೆವವರಿಗದೃಶ್ಯನಾಗ್ಯೆಲ್ಲೆಲ್ಲೂ! (ಇ)
-ಲ್ಲೂ ನಿರಂಜನಾದಿತ್ಯನೊಬ್ಬನೆಲ್ಲೆಲ್ಲೂ!!!

ಬೇಕು, ಬೇಡವೆನ್ನದ ಸ್ಥಿತಿ ಯಾರಿಗೆ?

ಕುಲ ಗೋತ್ರಗಳಿಲ್ಲಿದಾ ದೇವರಿಗೆ!
ಬೆರ್ಬೇರೆ ನಾನೂ, ನೀನೆನ್ನದವನಿಗೆ!
ಮರುಧರ ಪರಮೇಶ್ವರನಿಗೆ!
ವೆಸನವೇತಕ್ಕೂ ಪಡದವನಿಗೆ! (ತ)
-ನ್ನ ತಾನು ತಿಳಿದಿರುವಂಥವನಿಗೆ!
ತ್ತನೇ ಗತಿಯೆಂದಿರುವವನಿಗೆ!
ಸ್ಥಿರಾಸ್ಥಿರವಾವುದೆಂದರಿತವಗೆ!
ತಿಲಾಂಜಲಿ ತ್ರಿಲೋಕಕ್ಕಿತ್ತವನಿಗೆ!
ಯಾಗ, ಯೋಗಕ್ಕೆಲ್ಲಾ ಸಾಕ್ಷಿಯಾದವಗೆ!
ರಿಪುಗಳಾರನ್ನು ಜೈಸಿದವನಿಗೆ! (ನ)
-ಗೆಮೊಗದಾ ನಿರಂಜನಾದಿತ್ಯನಿಗೆ!!!

ನಿರಾಯಾಸ ದರ್ಶನಕ್ಕಲಕ್ಷ್ಯ!

ರಾತ್ರಿ, ಹಗಲು ಎಲ್ಲೆಲ್ಲೋ ಲಕ್ಷ್ಯ!
ಯಾಗ, ಯೋಗಾದಿಗಳಿಗಲಕ್ಷ್ಯ!
ತ್ತುಹೋಗುವ ದೇಹಕ್ಕೆ ಲಕ್ಷ್ಯ!
ಮೆ, ಶಮಾದ್ಯಭ್ಯಾಸಕ್ಕಲಕ್ಷ್ಯ! (ಸ್ಪ)
-ರ್ಶಸುಖ ಸ್ತ್ರೀ ಪುರುಷರ ಲಕ್ಷ್ಯ!
ರಹರಿಯಾಗೆಂದರಲಕ್ಷ್ಯ! (ಠ)
-ಕ್ಕರ ಜೊತೆಗೋಡಾಡುವುದು ಲಕ್ಷ್ಯ!
ಕ್ಷ್ಯಾಲಕ್ಷ್ಯ ಚಿಂತನೆಗಲಕ್ಷ್ಯ! (ಲ)
-ಕ್ಷ್ಯ, ನಿರಂಜನಾದಿತ್ಯಾತ್ಮ ಲಕ್ಷ್ಯ!!!

ಸಮನ್ವಯಾಚಾರರಿಗೆಪ್ಪತ್ತೊಂದಾಯ್ತು!

ಕ್ಕಳೊಡನಾಟವಗಾನಂದಾಯ್ತು! (ಅ)
-ನ್ವರ್ಥೊ

ಪಾಧ್ಯಾಯಾಂಕಿತವಿವಗಾಯ್ತು!
ಯಾರನ್ನೂ ನಿಂದಿಸದ ಜೀವನವಾಯ್ತು!
ಚಾತುರ್ವರ್ಣ್ಯದಾದಿಯಲ್ಲಿ ಜನ್ಮವಾಯ್ತು! (ಕಾ)
-ರ



ತತ್ಪರತೆಗಿವರಾದರ್ಶವಾಯ್ತು!
ರಿಸಿ, ಸಪ್ತ ಋಷಿ ಧಾಮಕ್ಕೆ ತಾನಾಯ್ತು!
ಗೆಳೆತನ ಮಹಾನುಭಾವರಲ್ಲಾಯ್ತು! (ಅ)
-ಪ್ಪನಪ್ಪಣೆಗೆ ಶಿರಬಾಗುವಂತಾಯ್ತು! (ಹ)
-ತ್ತೊಂಬತ್ತೆಪ್ಪತ್ತಾರು ಸ್ಮರಣೀಯವಾಯ್ತು!
ದಾರಿ ನಿರ್ವಿಘ್ನವಾಗಿ ಸಾಗುವಂತಾಯ್ತು! (ಆ)
-ಯ್ತು ನಿರಂಜನಾದಿತ್ಯ ಚಿತ್ತದಂತಾಯ್ತು!!!

ರಾಜ್ಯ ಪ್ರಶಸ್ತಿ ವಿಜೇತ ಕೌಶಿಕ! (ಭೋ)

-ಜ್ಯವಿವನ ಪ್ರವಚನ ಕೌತುಕ!
ಪ್ರಗತಿಯ ದೇಶಕ್ಕೀತ ಸೇವಕ!
ರಣನಿವಗೆ ರಾಮ ತಾರಕ!
ಸ್ತಿಮಿತ ಮನೋವೃತ್ತಿಯ ಸಾಧಕ!
ವಿನಯಾದೇವಿಯ ಪ್ರಿಯಾರಾಧಕ!
ಜೇಬು ಬರಿದಾದಾಗಲೂ ಬೋಧಕ!
ಪ್ಪು ದಾರಿ ಹೋಕರಿಗೆ ಮಾರಕ!
ಕೌಟಿಲ್ಯವ ಹೇಸುವ ಶುದ್ಧಾತ್ಮಿಕ!
ಶಿಹ್ಯವೃತ್ತಿಗಾಶಿಸುವಧ್ಯಾತ್ಮಿಕ! (ಲೋ)
-ಕಕ್ಕೆ ನಿರಂಜನಾದಿತ್ಯೋದ್ಧಾರಕ!!!

ಮಂತ್ರ, ತಂತ್ರ, ಯಂತ್ರಗಳೆಷ್ಟೋ ಆಯಿತು! (ಸ)

-ತ್ರಯಾಗ, ಯೋಗಗಳು ಎಷ್ಟೋ ಆಯಿತು!
ತಂಡ ತಂಡವಾಗಿ ಭಜನೆಯಾಯಿತು!
(ಛ)ತ್ರ, ಚಾಮರಾದಿ ಸೇವೆಯೆಷ್ಟೋ ಆಯಿತು! (ಸಾ)
-ಯಂಕಾಲ, ಬೆಳಗ್ಗನುಷ್ಠಾನವಾಯಿತು! (ಪ)
ಣಪತ್ಯುತ್ಸವಗಳೆಷ್ಟೋ ಆಯಿತು! (ಮ)
-ಳೆ, ಗಾಳಿ, ಬಿಸಿಲಲ್ಲಿ ತಪಸ್ಸಾಯಿತು! (ಅ)
-ಷ್ಟೋಪಚಾರಾವರಣ ಪೂಜೆಯಾಯಿತು!
ತ್ಮಾನಾತ್ಮ ವಿಚಾರ ಮಾಡಿದ್ದಾಯಿತು! (ಬಾ)
-ಯಿ ಮುಚ್ಚಿ ಬಹಳ ವರ್ಷವೇ ಆಯಿತು! (ಹೇ)
-ತು ನಿರಂಜನಾದಿತ್ಯನರಿಯದಾಯ್ತು!!!

ಭಕ್ತ ಭಗವಂತರಿಗೆಪ್ಪತ್ತು! (ಯು)

-ಕ್ತ ಪೂಜೆಯಿಂದಾನಂದ ಜಗತ್ತು!
ಜನಾನಂದ ಪಡ್ಬೇಕೀ ಹೊತ್ತು!
ತಿಸಿಹೋಯಿತರ್ವತ್ತೊಂಬತ್ತು!
ವಂಶಜರ್ನಾವ್ಭಾರ್ಗವಾಗಾಗ್ಬೇಕು!
ವಂಚಕರಿಗೇಕೆ ಸವಲತ್ತು!
ಪಸ್ಸು ವಿರಾಜಿಸಬೇಕಿತ್ತು!
ರಿಪುಗಳಾರೂ ಸಾಯಲಿವತ್ತು!
ಗೆಳೆಯಾರ್ಕನಿಳೆಗೆಂದು ಗೊತ್ತು! (ಅ)
-ಪ್ಪಣೆಯಂತಿರದಿದ್ದರಾ ಪತ್ತು! (ಹೊ)
-ತ್ತು ನಿರಂಜನಾದಿತ್ಯ ಸಂಪತ್ತು!!!

ಶುದ್ಧ ಪ್ರೇಮ, ವಿಶ್ವಾಸಕ್ಕಿದಲ್ಲ ಕಾಲ! (ಬ)

-ದ್ಧ ಢಾಂಬಿಕರಿಗಿದತ್ಯುತ್ತಮ ಕಾಲ!
ಪ್ರೇತ, ಭೂತಗಳ ಪೂಜಿವುದೀ ಕಾಲ! (ಈ)
-ಮತಾಮತವೆಂಬ ಗುದ್ದಾಟಕ್ಕೀ ಕಾಲ!
ವಿಕಲ್ಪಕ್ಕೆ ಪ್ರಾಧಾನ್ಯವೀವುದೀ ಕಾಲ!
ಶಾಸೋಚ್ಛ್ವಾಸದಲ್ಲಿ ಜಪಿಸದೀ ಕಾಲ!
ತ್ಸಂಗಕ್ಕನಾದರ ತೋರ್ಪುದೀ ಕಾಲ! (ಠ)
-ಕ್ಕಿಗೆ ಮರುಳಾಗುವಾಧುನಿಕ ಕಾಲ!
ತ್ತನಿಗೆ ಶರಣಾಗ್ಬೇಕೆಲ್ಲಾ ಕಾಲ! (ಬ)
-ಲ್ಲನವನವನವತಾರಕ್ಕೆ ಕಾಲ!
ಕಾದಿದಿರು ನೋಡುತ್ತಿರಬೇಕಾ ಕಾಲ!
ಕ್ಷ್ಯ ನಿರಂಜನಾದಿತ್ಯಗದೀ ಕಾಲ!!!

ಬರಬೇಕಾದಂದು ನಾನೇ ಬಂದೇನು! (ಯಾ)

-ರ ಮಾತಿಗೂ ಒಡಂಬಡೆ ನೀಗಾನು!
ಬೇಸರ ಕಳೆದಾನಂದ ತಂದೇನು!
ಕಾಯಲಾರದವ ನೋಡುವುದೇನು?
ದಂಭ ಕೊಚ್ಚಿಕೊಂಡರೆ ಫಲವೇನು?
ದುರ್ಯೊ

ಧನನಿಗಾದ ಗತಿಯೇನು?
ನಾರಾಯಣನಾಜ್ಞೆ ಕಾದಿಹೆ ನಾನು!
ನೇತಾಜಿ ಮೂರು ಲೋಕಕ್ಕೆ ಅವನು!
ಬಂಜೆಗೆ ಮಕ್ಕಳನ್ನಿತ್ತನವನು!
ದೇವಾಲಯವವನಿಗೆ ಈ ತನು! (ಅ)
-ನುದಿನಾ ನಿರಂಜನಾದಿತ್ಯ ತಾನು!!!

ಇರ್ವಷ್ಟು ಕಾಲವಿರ್ಬೇಕಾದಂತಿದ್ರಾಯ್ತು! [ಸ]

-ರ್ವರಂತರ್ಯಾಮಿಯ ಮರೆಯದಿದ್ರಾಯ್ತು! (ಅ)
-ಷ್ಟು, ಇಷ್ಟೆನ್ನುವತೃಪ್ತಿಯಿಲ್ಲದಿದ್ರಾಯ್ತು!
ಕಾಯಮೋಹ ಕಡಿಮೆಯಾಗುತ್ತಿದ್ರಾಯ್ತು! (ಅ)
-ಲಕ್ಷ್ಯವಧೂತನನ್ನು ಮಾಡದಿದ್ರಾಯ್ತು!
ವಿವೇಕ ವೈರಾಗ್ಯ ಸತತವಿದ್ರಾಯ್ತು! (ಮೂ)
-ರ್ಬೇರ್ಬೇಂದರಿಯದೇಕವೆಂದರಿತ್ರಾಯ್ತು!
ಕಾರಣಕರ್ತನ ಪಾದ ಹಿಡಿದ್ರಾಯ್ತು!
ದಂಡಪಾಣಿಯಯ್ಯಗೆ ಶರಣಾದ್ರಾಯ್ತು!
ತಿನ್ನುವ ಚಪಲಕಡಿಮೆಯಾದ್ರಾಯ್ತು!
“ದ್ರಾಮೆಂಬ” ಬೀಜದರ್ಥವರಿತಿದ್ರಾಯ್ತು! (ಆ)
-ಯ್ತು, ನಿರಂಜನಾದಿತ್ಯತಾನದೀಗಾಯ್ತು!!!

ನಿರೀಕ್ಷಾ, ಪರೀಕ್ಷಾ ಮನೋಭಾವ ಬೇಡ!

ರೀತೆ, ನೀತಿ, ನೇಮಗಳ ಬಿಡಬೇಡ! (ಸಾ)
-ಕ್ಷಾತ್ಕಾರ ಸಾಧಿಸಿಕೊಳ್ಳದಿರಬೇಡ!
ರನಿಂದೆಯನ್ನೆಂದಿಗೂ ಮಾಡಬೇಡ! (ತು)
-ರೀಯಾತೀತದ ಗುರಿ ಸೇರದಿರ್ಬೇಡ!
ಕ್ಷಾಮ, ಡಾಮರಕ್ಕೆ ಬೆರಗಾಗಬೇಡ!
ನಸಿಜನಾಟಕ್ಕೆ ಕಟ್ಟು ಬೀಳ್ಬೇಡ!
ನೋಟ, ಕೂಟದಾಟಕ್ಕೊಳಗಾಗ್ಬೇಡ!
ಭಾಗ್ಯ, ಭೋಗಗಳಿಗಾಶಿಸಿ ಕೆಡ್ಬೇಡ!
ರಗುರು ಸೇವೆಯನ್ನೆಂದೂ ಬಿಡ್ಬೇಡ!
ಬೇರೊಬ್ಬ ದೇವರಿದ್ದಾನೆನಲೇ ಬೇಡ! (ಬೇ)
-ಡ, ನಿರಂಜನಾದಿತ್ಯನಿಗೇನೂ ಬೇಡ!!!

ಊಟಕ್ಕಿಲ್ಲದುಪ್ಪಿನಕಾಯ್ಮತ್ತೇತಕ್ಕೆ? (ಮಾ)

-ಟ, ಕಾಟ ಮಾರ್ಗವಲ್ಲ ನಿಜಾನಂದಕ್ಕೆ! (ಸೊ)
-ಕ್ಕಿದವರನ್ನಿಳಿಸಬೇಕ್ಪಾತಾಳಕ್ಕೆ! (ಎ)
-ಲ್ಲರುದ್ಧಾರದಿಂದ ಶೋಭೆ ಭೂತಳಕ್ಕೆ!
ದುರ್ದಶೆ ಬಂದಿಹುದು ಗಣರಾಜ್ಯಕ್ಕೆ! (ಹಿ)
-ಪ್ಪಿಗಳಾದರ್ಶ ಬೇಕಿಲ್ಲ ಭಾರತಕ್ಕೆ!
ರಹರಿಯ ಭಜನೆ ಸಾಕದಕ್ಕೆ!
ಕಾಲಕಾಲಕ್ಮಳೆ, ಬೆಳೆಯಾಗಲಿಕ್ಕೆ! (ಬಾ)
-ಯ್ಮನಾದಿಂದ್ರಿಯ ಗಳ್ಳುಚಿಯಾಲಿಕ್ಕೆ! (ಚಿ)
-ತ್ತೇಕಾಗ್ರತೆಗುತ್ತೇಜನವೀಯಲಿಕ್ಕೆ!
ನ್ನ ತಾ ತಿಳಿದಾನಂದ ಪಡಲಿಕ್ಕೆ! (ಅ)
-ಕ್ಕೆ, ನಿರಂಜನಾದಿತ್ಯ ಕೃಪೆಯದಕ್ಕೆ!!!

ಫಲಶ್ರುತಿಗಳೆಷ್ಟು ಹೇಳಿದರೇನು? (ಫ)

-ಲವಿಲ್ಲದ್ದು ಕಲ್ಪವೃಕ್ಷವಾದರೇನು?
ಶ್ರುತಿ ವಚನ ಸುಳ್ಳಾಗಬಹುದೇನು?
ತಿನ್ನಲಾಗದೂಟವೆಷ್ಟಿದ್ದರೇನು?
ಣೇಶನಿದನ್ನರಿಯಬಾರದೇನು? (ಇ)
-ಳೆಗೆ ಮಾಗದರ್ಶಕನಾಗ್ಬೇಕವನು! (ಇ)
-ಷ್ಟು ಕೂಗಿದ್ರೂ ಮುಖ ತೋರಬಾರದೇನು?
ಹೇರ್ಬಾರದು ತಪ್ಪು ನಮ್ಮ ಮೇಲವನು! (ತಿ)
-ಳಿದವನಿಗಜ್ಞಾನಿ ಹೇಳಬೇಕೇನು?
ರ್ಶನವಿತ್ತಾಶೀರ್ವದಿಸಲವನು!
ರೇಗಬಾರದು ಮಕ್ಕಳ ಮೇಲವನು! (ಸೂ)
-ನು ನಿರಂಜನಾದಿತ್ಯವಗಲ್ಲವೇನು???

ನೋಯಿಸಲೂ, ಪ್ರೀತಿಸಲೂ, ನೀನುಬಲ್ಲೆ! (ಬಾ)

-ಯಿಮುಚ್ಚಿಸಿ ಮೂಲೆಗೆ ತಳ್ಳಲೂ ಬಲ್ಲೆ!
ರ್ವೇಶ್ವರನಿವನೆನಿಸಲೂ ಬಲ್ಲೆ! (ಹಾ)
-ಲೂಟ ನಿತ್ಯವಿತ್ತು ಮುತ್ತಿಕ್ಕಲೂ ಬಲ್ಲೆ! (ಅ)
-ಪ್ರೀತನಾದ್ರೆ ಕತ್ತು ಹಿಸುಕಲೂ ಬಲ್ಲೆ!
ತಿರುಕನಂತೂರೂರ್ಸುತ್ತಿಸಲೂ ಬಲ್ಲೆ!
ರ್ವಜ್ಞನೆನೆಪಿಸಿಮರೆಸಲೂ ಬಲ್ಲೆ! (ಕಾ)
-ಲೂ, ಕೈ ಕತ್ತರಿಸುತ್ತೆಸೆಯಲೂ ಬಲ್ಲೆ!
ನೀಲಾಕಾಶದಲ್ಲಿ ಹಾರಿಸಲೂ ಬಲ್ಲೆ!
(ಅ)ನುಪಮಾತ್ಮ ನೀನೆಂಬುದ ನಾನು ಬಲ್ಲೆ!
ಲದಲ್ಲಿ ಮಹಾಬಲನೆಂದೂ ಬಲ್ಲೆ! (ಎ)
-ಲ್ಲೆ ನಿರಂಜನಾದಿತ್ಯಗೆ ಹಾಕಲೊಲ್ಲೆ!!!

ವ್ಯಕಾವ್ಯಕ್ತನೆಂಬರ್ನಿನ್ನನಯ್ಯ! (ವ್ಯ)

-ಕಾ



ನಂದ ಶಕ್ತಿ, ಜ್ಯೋತಿಯಿಂದಯ್ಯಾ! (ಅ)
-ವ್ಯಕ್ತವಾಗಿದೆ ಸ್ವರೂಪವಯ್ಯಾ! (ಭಾ)
-ಕ್ತರಿಗೆ ದರ್ಶನವೆಂತಾಯ್ತುಯ್ಯಾ? (ನಾ)
-ನೆಂಬಹಂಕಾರಿ ನೀನಲ್ಲವಯ್ಯಾ!
ಹಳಾಸೆ ನಿನ್ನ ನೋಡಲಯ್ಯಾ! (ತೋ)
-ರ್ನಿನ್ನ ಸುಂದರರೂಪವೀಗಯ್ಯಾ! (ನಿ)
-ನ್ನವನೆಂದೆನ್ನನೆತ್ತಿಕೊಳ್ಳಯ್ಯಾ! (ತ)
-ನಯನ ವಿಜ್ಞಾಪನೆಯಿದಯ್ಯಾ! (ಅ)
-ಯ್ಯಾ ನಿರಂಜನಾದಿತ್ಯ ನೀನಯ್ಯಾ!!!

ಹತ್ತೊಂಭತ್ತೆಪ್ಪತ್ತಾರರಿಂದೀ ದೇಹಕ್ಕೆಪ್ಪತ್ತು! (ಚಿ)

-ತ್ತೊಂದೇ ಶಾಶ್ವತವಾಗಿರುವ ಮೌಲ್ಯ ಸಂಪತ್ತು!
ಜನಾನಂದಖಂಡವಾಗಿರಬೇಕಿವತ್ತು! (ಸ)
-ತ್ತೆ ಸರ್ಕಾರೆದ್ತೇನೂ ಇಲ್ಲ ಇದಕ್ಕೆ ಯಾವತ್ತೂ! (ತು)
-ಪ್ಪ, ಸಕ್ಕರೆ, ಹಾಲಿದಕ್ಕೆ ಬೇಕಿಲ್ಲೆಂದು ಗೊತ್ತು! (ದ)
-ತ್ತಾವತಾರ ಸತೀತ್ವದ ಮಹತ್ವದಿಂದಾಗಿತ್ತು! (ವ)
-ರ ಗುರುರೂಪದಿಂದದು ಪ್ರಕಟವಾಗಿತ್ತು!
(ಯಾ)ರಿಂದಲೂ ಆಗದಿದು ತಪಸ್ಸಿನ ಮಹತ್ತು!
ದೀಪ, ಧೂಪಗಳೆಲ್ಲಾ ಶುದ್ಧ ಮನಸ್ಸಾಗಿತ್ತು!
ದೇಹಭಾವವಳಿದುನ್ನತದಲ್ಲಿ ಅದಿತ್ತು!
ರಿ, ಹರಾದಿಗಳೂ ತಲೆದೂಗುವಂತಿತ್ತು! (ಅ)
-ಕ್ಕೆ ಇದಾದರ್ಶ ಸುಖದಿಂದಿರಲು ಜಗತ್ತು! (ಹ)
-ಪ್ಪಳ, ಸೆಂಡಿಗೆಯೂಟಾನಂದವೆಲ್ಲಾ ಒಪ್ಪತ್ತು! (ಗೊ)
-ತ್ತು ನಿರಂಜನಾದಿತ್ಯ ಸಾಕ್ಷಿಯಿದಕ್ಕಾವತ್ತು!!!

ಗುರು ಹಿರಿಯರನುಗ್ರಹವಿರ್ಬೇಕು! (ದ)

-ರುಶನವರದ್ದಾಗಾಗಾಗುತ್ತಿರ್ಬೇಕು!
ಹಿತೋಕ್ತ್ಯೆಪ್ಪತ್ತಕ್ಕಿದೆಂದರಿತಿರ್ಬೇಕು!
ರಿಪುಗಳಾರನ್ನೂ ಜಯಿಸುತ್ತಿರ್ಬೇಕು!
ಮ, ನಿಯಮಾಭ್ಯಾಸ ಮಾಡುತ್ತಿರ್ಬೇಕು!
ಘುರಾಮನಾದರ್ಶವಿರುತ್ತಿರ್ಬೇಕು!
ನುಡಿದಂತೆ ನಡೆವ ಬುದ್ಧಿಯಿರ್ಬೇಕು!
ಗ್ರಹಶಾಂತಿ ಭಜನೆಯಿಂದಾಗ್ತಿರ್ಬೇಕು!
ದಿಬದೆಯರು ಸ್ತ್ರಿಯರಾಗಿರ್ಬೇಕು!
ವಿವೇಕ, ವೈರಾಗ್ಯ ಹೆಚ್ಚಾಗುತ್ತಿರ್ಬೇಕು! (ಸೇ)
-ರ್ಬೇಕು, ಸತ್ಸಂಗಿಯಾಗಿ ಸದಾ ಇರ್ಬೇಕು!
ಕುಮಾರ್ಗ ನಿರಂಜನಾದಿತ್ಯ ಮುಚ್ಚೇಕು!!!

ಹೊರಗೆರಂಭೆ, ಒಳಗೊಂದುಚಕ್ಕಳದಗೊಂಬೆ! (ವ)

-ರ ಗುರುವಿನ ಲೀಲಾ ಮಹಿಮೆಯ ನಾನೇನೆಂಬೆ! (ಬ)
-ಗೆಬಗೆ ರೂಪಿನಲ್ಲವನಾಟತ್ಯದ್ಭುತವೆಂಬೆ!
ರಂಗನಾಗಿ, ಮಂನಾಗಿ, ಬ್ರಹ್ಮನಾದವನೆಂಬೆ! (ಪ್ರ)
-ಭೆಯ ನಿಧಿಯನ್ನೇ ನುಂಗಲೆತ್ನಿಸಿದವನೆಂಬೆ!
“ಒಲಿದ್ರೆ ನಾರಿ ಮುನಿದ್ರೆ ಮಾರಿ” ಯಂತಿವನೆಂಬೆ! (ನ)
-ಳ ಮೊದಲಾದ ಕಪಿವೀರರ ನಾಯಕನೆಂಬೆ!
ಗೊಂದಲವೆಬ್ಬಿಸಿ ಲಂಕೆಯನ್ನು ಸುಟ್ಟವನೆಂಬೆ!
ದುಷ್ಟರಾವಣನ ಕೊಂದ ರಾಮನಾತ್ಮೀಯನೆಂಬೆ!
ರಿತ್ರೆ ಇವನದು ವರ್ಣಿಸಲಸಾಧ್ಯವೆಂಬೆ! (ಅ)
-ಕ್ಕರೆಯಲ್ಲಿವಗೆ ಸರಿಸಮಾನರಿಲ್ಲವೆಂಬೆ! (ಹ)
-ಳಬ ಜಾಂಬವಗಚ್ಚುಮೆಚ್ಚಿನವನಿವನೆಂಬೆ!
ರ್ಶನವಿವನದು ಪಡೆದವ ಧನ್ಯನೆಂಬೆ!
ಗೊಂಬೆಯಿದು ಚಿಕ್ಕದೂ, ದೊಡ್ಡದೂ ಆಗ್ಬಲ್ಲುದೆಂಬೆ!
ಬೆದರನಿವನಿಗೆ ನಿರಂಜನಾದಿತ್ಯನೆಂಬೆ!
(ಬೆದರಲೇಕೆ? ನಿರಂಜನಾದಿತ್ಯಭೇದನೆಂಬೆ!!!)

ಗುರುದರ್ಶನ ಮಾತ್ರಕ್ಕೆ ಪವಿತ್ರ! [ಗು]

-ರುದ್ರೋಹದಿಂದ ಕೌರವಪವಿತ್ರ! (ಯಾ)
ಯಾದವೇಂದ್ರನ ಉಪದೇಶ ಪವಿತ್ರ! (ಸ್ಪ)
-ರ್ಶವಾಯ್ತೆಂದರೆ ಪರಮ ಪವಿತ್ರ!
ರಜನ್ಮವನಿಂದ ಪವಿತ್ರ!
ಮಾತಿನಂತೆ ನಡೆವುದು ಪವಿತ್ರ!
ತ್ರಯಮೂರ್ತಿ ದತ್ತರೂಪ ಪವಿತ್ರ! (ಬೆ)
-ಕ್ಕೆಯಿಲ್ಲದುದರಿಂದದು ಪವಿತ್ರ!
ತಿ, ಪತ್ನಿಯರಂತಿರೆ ಪವಿತ್ರ!
ವಿಠೋಬ ರಕುಮ್ಯಾ ಎಷ್ಟು ಪವಿತ್ರ! (ಚಿ)
-ತ್ರ, ನಿರಂಜನಾದಿತ್ಯಗೆ ಪವಿತ್ರ!!!

ವಿಗ್ರಹ ಎಷ್ಟು ಸುಂದರವಾದರೇನು? [ಅ]

-ಗ್ರಸ್ಥಾನ ನಿತ್ಯ ಪೂಜೆಯಿಂದಲ್ಲವೇನು?
ರಕೆ ಸ್ವೀಕಾರಕ್ಕಿದು ಬೇಕಲ್ವೇನು?
ಲ್ಲಾ ಶ್ರದ್ಧಾ, ಭಕ್ತಿಯಿಂದೆಂದರಿ ನೀನು! (ಎ)
-ಷ್ಟು ಪುರಾಣ ಶ್ರವಣ ಮಾಡಿದರೇನು?
ಸುಂದರ ರೂಪವನ್ನುಳಿಸಬೇಕ್ನೀನು!
ತ್ತನಿಗಾದರ್ಶ ಸೇವಕ ನೀನು!
ಹಸ್ಯವಿದನ್ನರಿತಿರಬೇಕ್ನೀನು!
ವಾದ, ವಿವಾದಗಳಿಂದಾಗುವುದೇನು?
ರ್ಶನ ಪಡೆದು ಧನ್ಯನಾಗು ನೀನು!
ರೇಚಕ, ಪೂರಕದಲ್ಲಿ ಜಪಿಸ್ನೀನು! (ಸೂ)
-ನು ನಿರಂಜನಾದಿತ್ಯಗೆ ನೀನಲ್ವೇನು???

ಕನ್ನಡದಲ್ಲೇ ನೆನೆಯಬೇಕು! [ಕ]

-ನ್ನಡದಲ್ಲೇ ಮಾತನಾಡಬೇಕು! (ಮಾ)
-ಡತಕ್ಕದ್ದಕ್ಕೂ ಕನ್ನಡಾಗ್ಬೇಕು! (ಇ)
-ದಕ್ಕಚ್ಚ ಕನ್ನಡಿಗನೆನ್ಬೇಕು! (ಅ)
-ಲ್ಲೇನಿಲ್ಲೇನೆನಲ್ಕಿನ್ನೊಂದು ಬೇಕು!
ರೆಯವನ ಮಾತೇಕಾಡ್ಬೇಕು?
ನೆದಾಡಿ, ಮಾಡಿ ತೋರಿಸ್ಬೇಕು!
ಶಸ್ವೀರೀತಿಯಿಂದುಂಟಾಗ್ಬೇಕು!
ಬೇರಾರನ್ನೂ ದ್ವೇಷಿಸದಿರ್ಬೇಕು! (ಕಾ)
-ಕುಸ್ಥ ನಿರಂಜನಾದಿತ್ಯನ್ಬೇಕು!!!

ಹಿಂದಿನ ಮಾತಿಂದನುಭವವಾಗ್ಬೇಕು!

ದಿವ್ಯ ಜೀವನದ ಫಲವನ್ನುಣ್ಬೇಕು!
ವ್ಯಕ್ಕಿಂತದರತಿಶಯ ಕಾಣ್ಬೇಕು!
ಮಾನವನಿಗಾಗಭಿರುಚಿ ಮೂಡ್ಬೇಕು!
ತಿಂಗಳುಪವಾಸ ಸಾರ್ಥಕವಾಗ್ಬೇಕು!
ರ್ಶನದ ಸೂಚನೆಯಾದ್ರೂ ತೊರ್ಬೇಕು! (ಅ)
-ನುಮಾನಕ್ಕವಕಾಶವಾಗದಿರ್ಬೇಕು!
ಗವಂತ ಭಜನೆಗೊಲಿಯಬೇಕು!
ರ್ಣಿಸಲವನನ್ನುತ್ಸಾಹ ಬರ್ಬೇಕು!
ವಾಲ್ಮೀಕಿಗಾದಾನಂದ ನಮಗಾಗ್ಬೇಕು!
ಹೋಗ್ಬೇಕು, ಕುಣಿದುಕುಣಿದೊಡಲ್ಬೀಳ್ಬೇಕು! (ಮು)
-ಕುತಿ ನಿರಂಜನಾದಿತ್ಯನಿಂದಾಗ್ಬೇಕು!!!

ಚಲಾಚಲ ಗೊಂಬೆಗಳೆಲ್ಲಾ ಪೂಜಾರ್ಹ!

ಲಾಭದಾಯಕವೀಭಾವ! ಮನನಾರ್ಹ!
ರಾಚರ ವ್ಯಾಪಕಾತ್ಮ ಸ್ಮರಣಾರ್ಹ!
ಕ್ಷ್ಯಸಿದ್ಧಿಯೂ ಮಾನವ ಸ್ತೋತ್ರಾರ್ಹ!
ಗೊಂಬೆಗಲಕ್ಷ್ಯ ಮಾಡದವ ಸೇವಾರ್ಹ!
ಬೇನಕ ಗಣಾಧಿಪತಿಯಾಗಲರ್ಹ!
ಗನ ಸದೃಶ ಗುರು ಗೌರವಾರ್ಹ!(ಗೆ)
-ಳೆಯನಿಳೆಗಾದ ರವಿ ವಂದನಾರ್ಹ! (ಉ)
-ಲ್ಲಾಸದಾಯಕನ ಮಾತು ಶ್ರವಣಾರ್ಹ!
ಪೂರ್ಣಚಂದ್ರ ಸಮಾನಾತ್ಮ ದರ್ಶನಾರ್ಹ!
ಜಾದು ಮಾಡದವ ಯೋಗಿಯಾಗಲರ್ಹ! (ಅ)
-ರ್ಹ ಜಗದ್ಗುರು ನಿರಂಜನಾದಿತ್ಯಾರ್ಹ!!!

ಕೈಗಾರಿಕೋದ್ಯಮಿಯಾಗಲಿ ಬ್ರಾಹ್ಮಣ!

ಗಾಣಾಪತ್ಯದಿಂದಾಗ್ಲಿ ಸಿದ್ಧ ಬ್ರಾಹ್ಮಣ!
ರಿಪುಗಳಾರನ್ನೂ ಜೈಸಿರ್ಲಿ ಬ್ರಾಹ್ಮಣ!
ಕೋವಿದನಾಗಿ ವಿರಾಜಿಸ್ಲಿ ಬ್ರಾಹ್ಮಣ! (ಮ)
-ದ್ಯ, ಮಾಂಸಾಹಾರಿಯಾಗದ್ಲಿರಿ ಬ್ರಾಹ್ಮಣ!
ಮಿತಭಾಷಿ ತಾನಾಗಿ ಇರ್ಲಿ ಬ್ರಾಹ್ಮಣ!
ಯಾವಪಕ್ಷಕ್ಕೂ ಸೇರದಿರ್ಲಿ ಬ್ರಾಹ್ಮಣ!
ಗನಸದೃಶನಾಗಿರ್ಲಿ ಬ್ರಾಹ್ಮಣ! (ಅ)
-ಲಿಪ್ತನಾಗಿ ಸಂಸಾರಿಯಾಗ್ಲಿ ಬ್ರಾಹ್ಮಣ!
ಬ್ರಾಹ್ಮೀ ಮುಹೂರ್ತದಲ್ಲೆದ್ದಿರ್ಲಿ ಬ್ರಾಹ್ಮಣ! (ಬ್ರ)
-ಹ್ಮಜ್ಞಾನ ಸಂಪನ್ನನಾಗಿರ್ಲಿ ಬ್ರಾಹ್ಮಣ! (ಗ)
-ಣಪತಿ ನಿರಂಜನಾದಿತ್ಯ ಬ್ರಾಹ್ಮಣ!!!

ಸದ್ವಿಚಾರದಿಂದ ವಿವೇಕಿ ನೀನಾಗು!

ದ್ವಿಜನಾಗ್ವಿಪ್ರನಾಗಿ ಬ್ರಾಹ್ಮಣನಾಗು!
ಚಾತುರ್ಯ ಪ್ರದರ್ಶಿಸದಿರ್ಪವನಾಗು!
ಘುನಾಥನಾದರ್ಶವುಳ್ಳವನಾಗು! (ಅಂ)
-ದಿಂದಿನ ಬಾಳ್ವಿಮರ್ಶಿಸುವವನಾಗು!
ತ್ತಾತ್ರೇಯಗಚ್ಚುಮೆಚ್ಚಿನವನಾಗು!
ವಿಶುದ್ಧಾತ್ಮನಾಗಿ ಅವನೇ ನೀನಾಗು!
ವೇಷ, ಭೂಷಣಕ್ಕಾಶಿಸದವನಾಗು!
ಕಿವಿ, ಬಾಯಿ, ಕಣ್ಣು ಮುಚ್ಚಿ ಮೌನಿಯಾಗು!
ನೀಚರೊಡನಾಟವಿಲ್ಲದವನಾಗು!
ನಾಕ, ನರಕದಾಸೆ ಸುಟ್ಟವನಾಗು! (ಬಾ)
-ಗು ನಿರಂಜನಾದಿತ್ಯಗೆ ಶಿರಬಾಗು!!!

ಯಾರಿಗಾಗೇನು ಬರೆಯಲಯ್ಯಾ?

ರಿಸಿಗಳೆಲ್ಲಾ ಹೇಳಿಹರಯ್ಯಾ!
ಗಾರುಡಿಯಾಟ ಬಿಟ್ಟುಬಿಡಯ್ಯಾ!
ಗೇರ್ಬೀಜದಂತಾತ್ಮಗಂಟಿರಯ್ಯಾ!
ನುಡಿ, ನಡೆಯೊಂದಾಗಿರಲಯ್ಯಾ!
ಸವನಾಗಿರೀಶ್ವರಗಯ್ಯಾ! (ಸೆ)
-ರೆ ಕುಡಿವಭ್ಯಾಸ ಬೇಡಯ್ಯಾ!
ದುವಂಶಾಂತ್ಯದರಿಂದಾಯ್ತಯ್ಯಾ!
ಯವಾಗ್ಬೇಕ್ಮನೋವೃತ್ತಿಯಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯ ನಮ್ಮಯ್ಯಾ!!!

ಎತ್ತಲೂ ಕತ್ತೆತ್ತಿ ನೋಡದಾನೇ! (ಚಿ)

-ತ್ತ ವೃತ್ತಿಗಳೇನೂ ಇಲ್ಲದಾನೇ! (ಹಾ)
-ಲೂ, ತುಪ್ಪ, ರೊಟ್ಟಿಗಳುಣ್ಣುವಾನೇ!
ಪ್ಪು, ಬಿಳುಪು ಬಣ್ಣಗಳಾನೇ! (ಸ)
-ತ್ತೆ ಸದೆಯನ್ನೆತ್ತಿ ಹಾಕುವಾನೇ! (ಸು)
-ತ್ತಿ ಬೇಸತ್ತು ಕಾಡಿಗೋಡುವಾನೇ!
ನೋಯಿಸಿದವನ ಸಾಯ್ಸುವಾನೇ!
ಮರುನಾದಕ್ಕಾನಂದಿಪ್ಪಾನೇ!
ದಾಸರಿಗೆ ದಾಸ ತಾನಪ್ಪಾನೇ! (ನಾ)
-ನೇ ನಿರಂಜನಾದಿತ್ಯಾನಂದಾನೇ!!!

ವಿನಾಶ ಕಾಲಕ್ಕೆ ವಿಪರೀತ ಬುದ್ಧಿ!

ನಾಯಕನಾಗಲಿಕ್ಕಿರಬೇಕ್ಸದ್ಬುದ್ಧಿ!
ಮೆ, ದಮೆಯಿಂದಂತರಂಗ ಶುದ್ಧಿ!
ಕಾಲ್ಕೆದರಿ ಜಗಳಾಡ್ವುದಲ್ಪ ಬುದ್ಧಿ!
ವ, ಕುಶರಂತಿದ್ದರೆಲ್ಲಾ ಸಮೃದ್ಧಿ! (ಇ)
-ಕ್ಕೆನನ್ಯರಿಗೆನ್ನುವುದು ಲೋಭ ಬುದ್ಧಿ!
ವಿಕಲ್ಪ ನಾಶದಿಂದಾತ್ಮಾನಂದ ಸಿದ್ಧಿ!
ಶ್ಚಾತ್ತಾಪದಿಂದ ಪವಿತ್ರತಾ ಸಿದ್ಧಿ! (ತು)
-ರೀಯಾತೀತವೇ ಸಚ್ಚಿದಾನಂದ ಸಿದ್ಧಿ!
ನ್ನ ತಾನರಿತು ಬಾಳಿದಾಗಾ ಸಿದ್ಧಿ!
ಬುಟ್ಟಿ ನೀರಲ್ಲದ್ದಿದ್ರಲ್ಲಾ ಫಲಶುದ್ಧಿ! (ಸಿ)
-ದ್ಧಿ ನಿರಂಜನಾದಿತ್ಯಗಧ್ಯಾತ್ಮ ಸಿದ್ಧಿ!

ಬಲ್ಲವರ್ಕಲ್ಲಾದರುಲ್ಲಾಸವೆಂತಿಹುದಯ್ಯಾ? (ಹು)

-ಲ್ಲಮೇಲಮೇಧ್ಯವಿದ್ದರಾಕಳು ಮೇಯದಯ್ಯಾ!
ರದರಾಜ ಪರದೆಯೊಳಗಿರ್ಬಾರ್ದಯ್ಯಾ! (ತ)
-ರ್ಕ, ವ್ಯಾಕರಣಾಭಿಜ್ಞ ಹಿರಣ್ಯಗರ್ಭನಯ್ಯಾ (ಚೆ)
-ಲ್ಲಾಪಿಲ್ಲಿಯಾದ ಮೇಲೆ ಸಮರ ಸಾಗದಯ್ಯಾ!
ರ್ಶನವಾಗದಿದ್ದರಾ ತಪ ವ್ಯರ್ಥವಯ್ಯಾ!
ರುಜುಮಾರ್ಗವಿಲ್ಲದವನೆಂಥಾ ಸಂತನಯ್ಯಾ! (ಬೆ)
ಲ್ಲಾದರೂ ಪಾಕವೇರಾದರದು ಕಹಿಯಯ್ಯಾ!
ಜ್ಜನರ್ನೊಂದರುಳಿಯದು ಸ್ವಾತಂತ್ರ್ಯವಯ್ಯಾ!
ವೆಂಕಟೇಶ ಸಂಕಟ ಪರಿಹರಿಸ್ಬೇಕಯ್ಯಾ!
ತಿರುಪತಿಯೆಂಬ ಹೆಸರನ್ವರ್ಥವಾಗ್ಲಯ್ಯಾ!
ಹುಳುಗಳೋಡಾಡಿದರದು ತೀರ್ಥವೇನಯ್ಯಾ?
ರ್ಪ, ದಂಭವಿರ್ಬಾರದು ಭಗವಂತಗಯ್ಯಾ! (ಅ)
-ಯ್ಯಾ, “ನಿರಂಜನಾದಿತ್ಯ” ನಾಮ ಸಾರ್ಥಕಾಗ್ಲಯ್ಯಾ!!!

ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ!

ರೋಗಿಯುಪಚಾರಕ್ಕಾಗ್ಬೇಕು ದಾದಿ ದಕ್ಷೆ!
ಮಾಡಬಾರದನಾಥ ಮಕ್ಕಳುನ್ನುಪೇಕ್ಷೆ!
ಡಿಕ್ಕಿ ಹೊಡೆದ ಮೇಲೆ ಕೈಗೊಡದಪೇಕ್ಷೆ!
ಯೆಯಿಲ್ಲದಿದ್ದರೆ ಸಾಗದು ಸ

ಈಕ್ಷೆ!
ರುಣಿಯರಿಗೂ ಉಂಟು ಸನ್ಯಾಸ ದೀಕ್ಷೆ! (ಮು)
-ಪ್ಪಿನಲಾಗುವುದಾತುರ ಸನ್ಯಾಸದೀಕ್ಷೆ!
ಗೆಜ್ಗಲು ತಿಂದಮೇಲೆಸೆಯಬೇಕಾ ನಕ್ಷೆ!
ಯಾದವೇಂದ್ರನಿಗೆ ತನಗೆ ತಾನೇ ರಕ್ಷೆ!
ರಿದ್ಧಿ ಸಿದ್ಧಿಗಾಗಿರಬಾರದು. ನಿರೀಕ್ಷೆ!
ಗೋವರ್ಧನೋದ್ಯಮವೊಂದು ಭಾರೀ ಪರೀಕ್ಷೆ!
ಶಿವಸತಿ ದಾಕ್ಷಾಯಿಣಿ ಜಗದಾಧ್ಯಕ್ಷೆ! (ಭಿ)
-ಕ್ಷೆಗಿಲ್ಲ ನಿರಂಜನಾದಿತ್ಯನಿಂದುಪೇಕ್ಷೆ!!!

ತಾಯಿಯಾದರೆ ಹೆಂಡತಿ ಕೀರ್ತಿ! (ತಾ)

-ಯಿ ಹೆಂಡತಿಯಾದರಪಕೀರ್ತಿ!
ಯಾಗ, ಯಜ್ಞದಿಂದ ಭೂತ ತೃಪ್ತಿ!
ರ್ಶನವಾದಮೇಲ್ಜೀವನ್ಮುಕ್ತಿ!
(ಸೆ)ರೆ ಕುಡಿಯುವುದೊಂದು ದುರ್ವ

ತ್ತಿ!
ಹೆಂಗಸಿಗಿರಬೇಕ್ಪತಿಭಕ್ತಿ!
ಕಾಯಿತಿ ಬಹು ನೀಚ ವೃತ್ತಿ!
ತಿಳಿನೀರಂತಿರ್ಬೇಕ್ಪರಮಾರ್ಥಿ!
ಕೀಚಕನೊಬ್ಬ ಕಾಮುಕ ವ್ಯಕ್ತಿ! (ಸ್ಫೂ)!!!
-ರ್ತಿ, ನಿರಂಜನಾದಿತ್ಯಾನಂದೋಕ್ತಿ!!!

ಆಲಿಂಗನಾನಂದ ನೀಡೌ ಗುರುವೇ!

ಲಿಂಗ ಭೇಧ ನಿಮಗಿಲ್ಲ ಗುರುವೇ!
ತಿವಿಹೀನ ನಾನೀಗ ಗುರುವೇ!
ನಾಮಸ್ಮರಣೆ ಬಿಟ್ಟಿಲ್ಲ ಗುರುವೇ!
ನಂಬಿಗೆ ಕೆಡಿಸಬೇಡಿ ಗುರುವೇ!
ರ್ಶನವೀಗಾಗ್ಲೇಬೇಕು ಗುರುವೇ!
ನೀವೆನ್ನ ತಾಯ್ತಂದೆ, ಬಂಧು ಗುರುವೇ! (ಮಾ)
-ಡೌ ನರಜನ್ಮ ಸಾರ್ಥಕ ಗುರವೇ!
ಗುಣಾತೀತನಾಗ್ಮಾಡೆನ್ನ ಗುರುವೇ! (ಕ)
-ರುಣಾಮೂರ್ತಿ ದತ್ತಾತ್ರೇಯ ಗುರುವೇ! (ನೀ)
-ವೇ, ಶ್ರೀ ನಿರಂಜನಾದಿತ್ಯ ಗುರುವೇ!!!

ತನ್ನ ತಾನಾಳುವವ ದೇವರು! (ಚಿ)

-ನ್ನ, ಬೆಳೀ ಗೊಂಬೆಯಲ್ಲಾ ದೇವರು!
ತಾನೆಲ್ಲವಾಗಿರ್ಪವಾ ದೇವರು!
ನಾಮ, ರೂಪಾತೀತ್ಮಾ ದೇವರು! (ಕೀ)
-ಳು,ಮೇಲು ಇಲ್ಲದವಾ ದೇವರು!
ರ್ಣಾಶ್ರಮ ರಹಿತಾ ದೇವರು!
ರಗುರು ಸ್ವರೂಪಾ ದೇವರು!
ದೇಹಾಭಿಮಾನಾತೀತಾ ದೇವರು! (ಭ)
-ವಪಾಶ ಹರಿದವಾ ದೇವರು! (ಗು)
-ರು ನಿರಂಜನಾದಿತ್ಯಾ ದೇವರು!!!

ಒಳಗಿರುವುದೆಲ್ಲಾ ಹೊರಗೆ ಬರ್ಲಿ! (ಗಾ)

-ಳಕ್ಕೆ

ಈನು ಸಿಕ್ಕಿಬಿದ್ದಂತೀಗದಾಗ್ಲಿ!
ಗಿಳಿಯಂತೆ ರಾಮನಾಮ ಹೇಳುತ್ತಿರ್ಲಿ! (ಗು)
-ರುವಿಗಿದರಿಂದಾನಂದವಾಗುತ್ತಿರ್ಲಿ! (ಕಾ)
-ವು ನೋವುಗಳೆಲ್ಲಾ ಮಾಯವಾಗುತ್ತಿರ್ಲಿ! (ತಂ)
-ದೆ, ತಾಯಿ, ಬಂಧು, ಬಳಗಾತನಾಗಿರ್ಲಿ! (ಉ)
-ಲ್ಲಾಸ ಮನಸ್ಸಿಗವನಿಂದಾಗುತ್ತಿರ್ಲಿ!
ಹೊಟ್ಟು ತೂರುವಾಗ ಹಾರಿ ಹೋಗುತ್ತಿರ್ಲಿ!
ಫ್ತು ಆರಿಸಿದ ಕಾಳೇ ಆಗುತ್ತಿರ್ಲಿ! (ಹೀ)
-ಗೆ ಬಾಳುತ್ತಾ ಧರ್ಮಬುದ್ಧಿ ಹೆಚ್ಚುತ್ತಿರ್ಲಿ!
ರ್ಲಿ, ರಾಮರಾಜ್ಯ ಸುಖ ಕಾಣುತ್ತಿರ್ಲಿ! (ಇ)
-ರ್ಲಿ, ನಿರಂಜನಾದಿತ್ಯ ಸಾಕ್ಷಿಯಾಗಿರ್ಲಿ!!!

ಇಂದ್ರಿಯಗಳ ದುರೂಪಯೋಗಿಸ್ಬೇಡ! (ಚಂ)

-ದ್ರಿಕಾಮೋದದಲ್ಲಿ ಮೈ ಮರೆತಿರ್ಬೇಡ!
ದುಪತಿಯ ಬಾಳ್ಗಪಾರ್ಥ ಮಾಡ್ಬೇಡ!
ದ್ದೆ, ಹೊಲಗಳಿಗಾಗಿ ಗುದ್ದಾಡ್ಬೇಡ! (ಕ)
-ಳಕಳಿಯ ಪ್ರಾರ್ಥನೆ ಮಾತ್ರ ಬಿಡ್ಬೇಡ!
ದುಸ್ಸಹವಾಸದಲ್ಲೆಂದಿಗೂ ಇರ್ಬೇಡ!
ರೂಢಿಯೆಂದು ಕಣ್ಮುಚ್ಚಿ ಏನೂ ಮಾಡ್ಬೇಡ!
ತಿತಪಾವನನ ಧ್ಯಾನ ಬಿಡ್ಬೇಡ!
ಯೋಗಸಾಧನೆಗನಾದರ ತೋರ್ಬೇಡ!
ಗಿರೀಶನಂತೆ ಯೋಗಿಯಾಗದಿರ್ಬೇಡ! (ಬೈ)
-ಸ್ಬೇಡನ್ಯರನ್ನೆಂದಿಗೂ ನಿಂದಿಸ್ಬೇಡ! (ಜ)
-ಡದೇಹ ನಿರಂಜನಾದಿತ್ಯನೆನ್ಬೇಡ!!!

ನೀನೊರ್ವ ಅನುಭವಿ ಕವಿ!

ನೋಡಿದರೆ ನೀನೊಬ್ಬ ಭವಿ! (ಗ)
-ರ್ವರಹಿತೋಕ್ತ ನಿನ್ನದ್ಸವಿ!
ನುಗ್ರಹದಾತೆ ಶಾಂಭವಿ! (ಜ)
-ನುಮಾಂತರದ್ನೀನ್ಪುಣ್ಯಜೀವಿ!
ಯ ನಿನಗಿಲ್ಲೆಂಬಳ್ಭುವಿ!
ವಿಶ್ವಾಸಿ ವಿಶ್ವಕವಿ ರವಿ!
ರ್ಮಯೋಗಿಗೇತಕ್ಕೆ ಗವಿ? (ಭ)
-ವಿ, ನಿರಂಜನಾದಿತ್ಯ ರವಿ!!!

ಮಾಲಿನ್ಯ ರಹಿತ ಮಾಲಿಕೆ! (ಮಾ)

-ಲಿನ್ಯ ಸಹಿತ ಮಾನವಿಕ! (ಶೂ)
-ನ್ಯವೇ ಪರಿಶುದ್ಧ ದೈವಿಕ! (ವ)
-ರಗುರು ಸ್ವರೂಪ ತಾರಕ!
ಹಿತೋಕ್ತ್ಯವನದಧಾತ್ಮಿಕ!
ಪಸ್ಸವನದ್ಸಹಾಯಕ!
ಮಾರಾರೀಶ್ವರ ವಿನಾಯಕ! (ಒ)
-ಲಿಸಬೇಕಿವನ ಸಾಧಕ! (ಶೋ)
-ಕ ನಿರಂಜನಾದಿತ್ಯಾಂತಕ!!!

ಮನಸು ಮೂರಾರಿಯಾಗಲಿ!

ರರಿದನ್ನು ಸಾಧಿಸಲಿ!
ಸುಬ್ರಹ್ಮಣ್ಯ ಸಹಾಯವಾಗ್ಲಿ!
ಮಾತೆ ಪಾರ್ವತಿಯೊಲವಿರ್ಲಿ!
ರಾಮನಾಮ ಸ್ಮರಣೆ ಸಾಗ್ಲಿ!
ರಿಪುಗಳದರಿಂದ ಸಾಯ್ಲಿ!
ಯಾರ ನಿಂದೆಯೂ ಆಗದಿರ್ಲಿ!
ಭಸ್ತಿಯಾದರ್ಶವಿರಲಿ! (ಶೂ)
-ಲ ನಿರಂಜನಾದಿತ್ಯನಾಗ್ಲಿ!!!

ಯಾರಿಗಾವಾಗ ದರ್ಶನವೆಂದಾತ ಬಲ್ಲ!

ರಿಸಿ ಮುನಿಗಲಿಗೆ ಗೋಚರವೆಲ್ಲೆಲ್ಲ!
ಗಾರುಡಿಯಾಟಕ್ಕವನೊಲಿಯುವುದಿಲ್ಲ!
ವಾದ, ವಿವಾದಕ್ಕವ ದಕ್ಕುವವನಲ್ಲ!
ರುಡವಾಹನಗನ್ಯ ಯಾನ ಬೇಕಿಲ್ಲ!
ರಿದ್ರ, ಶ್ರೀಮಂತರೆಂಬ ಭೇದವಗಿಲ್ಲ! (ಸ್ಪ)
-ರ್ಶಮಣಿಯಂತವನ ಲೀಲಾಜಾಲವೆಲ್ಲ!
ಳಿನ ಬಾಂಧವನನ್ನರಿತವರಿಲ್ಲ! (ಮಾ)
-ವೆಂದು ಬೇವು ತಿನ್ನಿಸುವವನವನಲ್ಲ!
ದಾರಿಯುದ್ದಕ್ಕೂ ನಾಮಸ್ಮರಣೆಯೇ ಬೆಲ್ಲ!
ತ್ವಾರ್ಥಾನುಭವವಿಲ್ಲದವನೇನ್ಬಲ್ಲ?
ಹು ಸುಲಭದಿಂದೊದಗುವುದಿಲ್ಲ! (ಬ)
-ಲ್ಲ ನಿರಂಜನಾದಿತ್ಯಗಿದು ಕಷ್ಟವಲ್ಲ!!!

ಬಯಕೆ ಬೇಡ, ಬರಡು ಮಾಡ! (ಕಾ)

-ಯಕಲ್ಪಕ್ಕಾಗಿ ಸಂಕಲ್ಪ ಬೇಡ!
ಕೆಟ್ಟವರಿಷ್ಟ ಕಟ್ಟಲೇ ಬೇಡ!
ಬೇಳೆ ಬೇಯದೆ ಹುಳಿ ಹಿಂಡ್ಬೇಡ! (ಮ)
-ಡದಿ, ಮಕ್ಕಳ ವ್ಯಾಮೋಹ ಬೇಡ!
ಟ್ಟೆ, ಬರೆಯಟ್ಟಹಾಸ ಬೇಡ! (ವ)
-ರ ಗುರುಪಾದ ಸೇವೆ ಬಿಡ್ಬೇಡ! (ನ)
-ಡು ನೀರಲ್ಲಾತ ಮುಳುಗ ಬಿಡ!
ಮಾರಾರಿಯಿಲ್ಲವಿಶ್ವಾಸ ಬೇಡ! (ಮೃ)
-ಡ ನಿರಂಜನಾದಿತ್ಯ ಕೈ ಬಿಡ!!!

ನಿರಹಂಕಾರ ಗುರು ಸರ್ಕಾರ!

ಘುಪತಿಯ ಕೃಪೆ ಅಪಾರ!
ಹಂದಿ, ನಾಯಿಗೂ ಯಥೇಚ್ಛಾಹಾರ!
ಕಾಮ ರಾವಣ ವಂಶ ಸಂಹಾರ!
ಸ ವಿರಸವಾಗದಾಚಾರ!
ಗುರಿ ಸೇರಿಸುವಾತ್ಮ ವಿಚಾರ!
ರುಧಿರ ಮಾಂಸ ಶರೀರಾಸ್ಥಿರ!
ತ್ಸಂಗಕ್ಕೆ ಸದಾ ಸಹಕಾರ! (ಅ)
-ರ್ಕಾತ್ಮ ರೂಪ ಸದಾ ನಿರ್ವಿಕಾರ!
ವಿ ನಿರಂಜನಾದಿತ್ಯೋಂಕಾರ!!!

ಸತ್ತಂತಿರುವುದತ್ಯಂತ ಸುಖ! (ಹ)

-ತ್ತಂ ಜೈಸದ ಬಾಳಿಂದೇನು ಸುಖ?
ತಿನ್ನುವುದುಣ್ಣುವುದಲ್ಪ ಸುಖ! (ಗು)
-ರುಕೃಪೆಯಿಂದ ಸತತ ಸುಖ! (ಬೇ)
-ವು, ಬೆಲ್ಲ ತಿಂದರಾರೋಗ್ಯ ಸುಖ!
ತ್ತ ಜಪದಿಂದ ಸರ್ವ ಸುಖ! (ನಿ)
-ತ್ಯಂತರ್ಯಾಮಿಯ ಧ್ಯಾನಾತ್ಮ ಸುಖ!
ನುಭಾವವಳಿದಾಗಾ ಸುಖ!
ಸುಲಭ ಸಾಧ್ಯವೇನಲ್ಲಾ ಸುಖ! (ಸು)
-ಖ ನಿರಂಜನಾದಿತ್ಯಾತ್ಮ ಸುಖ!!!

ಹೊರಗೊಳ ಶುದ್ಧಿಗಳೆರಡೂ ಬೇಕು! (ಹೊ)

-ರಗಿನ ಕೊಳೆಯೊಳ ಸೇರದಿರ್ಬೇಕು!
ಗೊಲ್ಲನ ಮನೆ ಶುಚಿಯಾಗಿರಬೇಕು! (ಗೆ)
-ಳತಿಗಿದು ನೆನಪಿನಲ್ಲಿರಬೇಕು! (ಪ)
-ಶುಪತಿಗಿದಿಷ್ಟವೆಂದರಿತಿರ್ಬೇಕು! (ರಿ)
-ದ್ಧಿ, ಸಿದ್ಧಿಗಳಿಗಾಶಿಸದಿರ್ಬೇಕು!
ರ್ವ ಸಂಪೂರ್ಣವಾಗಿ ನಾಶವಾಗ್ಬೇಕು! (ಗೆ)
-ಳೆತನ ದುರ್ಜನರಲ್ಲಿರದಿರ್ಬೇಕು! (ವ)
-ರ ಗುರುಧ್ಯಾನ ನಿರತನಾಗಿರ್ಬೇಕು! (ಗ)
-ಡೂ, ಹೆಣ್ಣೂ ಘರ್ಷಣೆಯಿಲ್ಲದಿರಬೇಕು!
ಬೇರೂರಿ ಸೇವೆ ಫಲಿಸುವಂತಾಗ್ಬೇಕು! (ವ್ಯಾ)
-ಕುಲ ನಿರಂಜನಾದಿತ್ಯ ಸುಡಬೇಕು!!!

ಮದನ ಮೋಹನನ ನೆಂಟು!

ಶಕೋಟಿ ಜನ್ಮದ ಗಂಟು!
ಶ್ವರವಿದಕ್ಕಂತ್ಯವುಂಟು!
ಮೋಸಮಾಡಿತು ಮದವೆಂಟು!
ರಿ, ಹರರೂ ನೊಂದದ್ದುಂಟು!
ಯನಾನಂದಕ್ಕೆಲ್ಲೆಯುಂಟು!
ಭೋಮಣಿಗಾರ ಹಂಗುಂಟು?
ನೆಂಟಾತನಿಂದ ಸುಖವುಂಟು! (ಗಂ)
-ಟು, ನಿರಂಜನಾದಿತ್ಯನಂಟಉ!!!

ಯಾರು ಕೇಳುವರೆನ್ನ ಮೊರೆಯ? (ಗು)

-ರುದೇವಗಿನ್ನೂ ಬಂದಿಲ್ಲ ದಯ!
ಕೇಡು ಮಾಡುವವರ್ಗೆಲ್ಲಾ ಜಯ! (ಬಾ)
-ಳು ಬರಡಾದಮೇಲೇಕೀ ಕಾಯ?
ರದರಾಜ ತೆರೆಯ ಬಾಯ! (ದೊ)
-ರೆಯಬೇಕೀಗ ಭಕ್ತಗಾಶ್ರಯ! (ತ)
-ನ್ನ ತಾನರಿವುದಕ್ಬೇಕಭಯ!
ಮೊಗದೋರ್ಬೇಕೀಗಾ ದಯಾಮಯ! (ಧ)
-ರೆಗಾಗ್ವುದಾಗಾನಂದಾತಿಶಯ! (ಜ)
-ಯ ನಿರಂಜನಾದಿತ್ಯ ದೇವಾಲಯ!!!

ಬಣ್ಣ ಬಳಿದವ ಕೃಷ್ಣನೇನು? (ಕ)

-ಣ್ಣಸನ್ನೆಗಾರವ ನಾದಾನೇನು?
ಯಲಾಡಂಬರಿಯಲ್ಲವನು! (ತು)
-ಳಿದನು ಕಾಳಿಂಗನನ್ನವನು!
ನ, ಕರುಗಳಾಪ್ತನವನು!
ಸ್ತ್ರವಕ್ಷಯ ಗೈದನವನು!
ಕೃತಿಯಂತಾಡುವವನವನು! (ಪೊ)
-ಷ್ಣ ಸಮಾನ ತೇಜಸ್ವಿಯವನು! (ನಿ)
-ನೇ ನಾನೆಂದ ವೇದಾಂತಿಯವನು! (ಭಾ)
-ನು ನಿರಂಜನಾದಿತ್ಯನವನು!!!

ತಪಸಿಗೆ ನೀನೇ ಆಧಾರ! (ತ)

-ಪಸೇ ನಿನ್ನ ಇಂದಿನಾಕಾರ!
ಸಿದ್ಧಿಯ್ಬಾಗೇಕಂದಿನಾಕಾರ! (ಹ)
-ಗೆಗಳಾಗಮನತ್ನಕಾರ!
ನೀನಭ್ಯಸಿಸು ನಿರಾಕಾರ!
ನೇಮ, ನಿಷ್ಠೆ ಬೇಕು ಅಪಾರ!
ಡದೇ ಮಾಡ್ಬೇಕು ವಿಚಾರ!
ಧಾರಾಕಾರಾಗ್ಲಾತ್ಮ ಸಂಚಾರ! (ಹ)
-ರ, ನಿರಂಜನಾದಿತ್ಯಾಕಾರ!!!

ಯಜ್ಞರಕ್ಷಕಾ ರಾಘವೇಂದ್ರ! (ತ)

-ಜ್ಞ ಗೀತಾಚಾರ್ಯ ಯಾದವೇಂದ್ರ!
ಮಾಲೋಲಾ ರಾಮಕೃಷ್ಣೇಂದ್ರ!
ಕ್ಷಮಶೀಲಾ ಯೋಗ ರಾಜೇಂದ್ರ!
ಕಾಲಾಂತಕಾ ಶ್ರೀ ರಾಮಚಂದ್ರ!
ರಾಸಲೀಲಾನಂದಾ ವ್ರಜೇಂದ್ರ! (ಅ)
-ಘ ವಿನಾಶೀ ರವಿಕುಲೇಂದ್ರ!
ವೆಂಕಟಗಿರೀಂದ್ರಾ ಹರೀಂದ್ರ! (ಭ)
-ದ್ರ ನಿರಂಜನಾದಿತ್ಯ ಬ್ರಹ್ಮೇಂದ್ರ!!!

ಯಜ್ಞಕ್ಕೆ ಶ್ರೀ ರಾಮಾಶ್ರಯ! (ಯ)

-ಜ್ಞ ಶ್ರೀ ರಾಮನಿಗಾಶ್ರಯ!
(ಅ)ಕ್ಕೆ ಲೋಕಕ್ಕುಭಯಾಶ್ರಯ!
ಶ್ರೀ ಗುರುವೆಲ್ಲಕ್ಕಾಶ್ರಯ!
ರಾತ್ರಿ, ಹಗಲೆಲ್ಲಾಶ್ರಯ!
ಮಾರನಿಗಿಲ್ಲಾಶ್ರಯ!
ಶ್ರದ್ಧಾ, ಭಕ್ತಿಗಿದಾಶ್ರಯ! (ಜ)
-ಯ ನಿರಂಜನಾದಿತ್ಯಾಯ!!!

ರಾಮ ಯಜ್ಞರಕ್ಷಕ, ಯಜ್ಞ ರಾಮ ರಕ್ಷಕ!

ನನ ಮಾಡಬೇಕಿದನು ಭಕ್ತಿ ಪೂರ್ವಕ!
ದುಪತಿಯಿದನರಿತಾದನುದ್ಭೋಧಕ! (ಪ್ರಾ)
-ಜ್ಞನೆನಿಸಿದರಿಂದಾಯಿತಾ ಜನ್ಮ ಸಾರ್ಥಕ!
ಕ್ಕಸರನ್ನೊಕ್ಕಲಿಕ್ಕಿದ ಶಕ್ತಿ ದೈವೀಕ! (ರ)
-ಕ್ಷಣೆ ಪಡೆದು ರಕ್ಷಿಸಿತು ಕೌಶಿಕ ಮಖ!
ರಣತ್ರಯ ಕರಗಿದಾಗದೇ ತಾರಕ!
ಮ, ನಿಯಮಾದಿಗಳಿದಕೆ ಸಹಾಯಕ! (ಯಾ)
-ಜ್ಞ



ವಲ್ಕ್ಯನ ತಪಸ್ಸಿದ್ಧಿ ಪ್ರೋತ್ಸಾಹದಾಯಕ!
ರಾಜೀವ ಸಖ ತಾನೇಕಾಗಿಹನೀಗ ಮೂಕ?
ತಾಚಾರ್ಯರ ಮಾತಿಗೀಗ ಬರಲಿ ತೂಕ!
ತಿಪತಿ ಪಿತನಿಗೀಗಾರದೇನಾತಂಕ?
ಕ್ಷಮಿಸಬೇಕು ತನುಜನ ತಪ್ಪು ಜನಕ!
ಲಿಮಲಕ್ಕೆ ನಿರಂಜನಾದಿತ್ಯ ಮಾರಕ!!!

ಭಗವದ್ಭಕ್ತ ಹೇಗಿರಬೇಕು?

ಗನಮಣಿಯಂತಿರಬೇಕು!
ರಗಳ ಬೇಡದಿರಬೇಕು! (ತ)
-ದ್ಭಜನಾನಂದದಲ್ಲಿರಬೇಕು! (ಮು)
-ಕ್ತನಾಗಲಿಕ್ಕಿದು ಬೇಕೇಬೇಕು!
ಹೇಳಿದಂತೆ ಮಾಡುತ್ತಿರಬೇಕು!
ಗಿಡವಾಗಿ ಮರವಾಗಬೇಕು!
ಸಪುರಿ ಹಣ್ಣನಾಗುಣ್ಬೇಕು!
ಬೇಲಿಯೊಳಗಾ ಮರವಿರ್ಬೇಕು! (ಬೇ)
-ಕು ನಿರಂಜನಾದಿತ್ಯನೆಲ್ಲಕ್ಕೂ!!!

ನೀನೆನ್ನ ತುಂಬಿ, ನಾ ನಿನ್ನ ನಂಬಿ!

ನೆನೆವಾಗಾನೇಕನ್ಯಾವಲಂಬಿ? (ನ)
-ನ್ನ ನಿನ್ನಂತೆ ಮಾಡು ಸ್ವಾವಲಂಬಿ!
ತುಂಬುರು, ನಾರದರಂತಿರೆಂಬಿ!
ಬಿರಡೆ ತಿರುಗ್ವಾಗ್ತುಂಡು ಕಂಬಿ!
ನಾದವೀಗೆಂತು ಬರುವುದೆಂಬಿ?
ನಿನ್ನ ನೀನರಿತಿರ ಬೇಕೆಂಬಿ! (ಉ)
-ನ್ನತಿಗೇರಿಸುವವರಾರೆಂಬಿ?
ನಂದಕಂದ ಗೋವಿಂದ ತಾನೆಂಬಿ! (ನಂ)
-ಬಿ, ನಿರಂಜನಾದಿತ್ಯನಾಗೆಂಬಿ!!!

ವರ ಕೊಡುವ ದೇವರು ದೇವರಲ್ಲ! [ವ]

-ರವ ಬೇಡುವ ಭಕ್ತ ಭಕ್ತನೂ ಅಲ್ಲ!
ಕೊಡ್ವ, ಬೇಡ್ವ, ವೃತ್ತಿ ಇಬ್ಬರಿಗೂ ಇಲ್ಲ! (ಆ)
-ಡುವ, ಮಾಡುವೇಂದ್ರಿಯಗಳ್ದೇವರಲ್ಲ!
ರಗುರು ಭಕ್ತಗೆ ಗುರುವೇ ಎಲ್ಲ!
ದೇಹಾತೀತನ ವಿಚಿತ್ರ ಲೀಲೆಲ್ಲೆಲ್ಲ!
ಸ್ತ್ರಾಭರಣದಾಸೆ ಭಕ್ತನಿಗಿಲ್ಲಾ! (ದ)
-ರುಶನಾತ್ಮನದಾದಾಗ ಚಿಂತೆಯಿಲ್ಲ! (ತ)
-ದೇಕ ಧ್ಯಾನದಿಂದರಿವ ಭಕ್ತನೆಲ್ಲ!
ನವಾಸವಿದಕ್ಕೇನೂ ಬೇಕಾಗಿಲ್ಲ!
ತಿಸುಖದಾಸೆಯಿಂದ ಸುಖವಿಲ್ಲ! (ಬ)
-ಲ್ಲ ನಿರಂಜನಾದಿತ್ಯನೊಬ್ಬನಿದೆಲ್ಲಾ!!!

ಲಜ್ಜೆ, ಮಾನ ಬಿಟ್ಟ ಮೇಲೆ ಕಜ್ಜವೇನು? [ಹೆ]

-ಜ್ಜೆಯೊಳಗಿಡಲಾಜ್ಞೆಯಿದೆಯೇನು?
ಮಾತಿನಲ್ಲಿ ರೀತಿ, ನೀತಿ ಬೇಡವೇನು?
ರ ವಾನರನಂತಾಡಬಹುದೇನು?
ಬಿ. ಎ., ಯಂ. ಎ., ಓದಿಬಿಟ್ಟರಾಯಿತೇನು? (ಕೆ)
-ಟ್ಟ ಚಾಳಿಗಳ ಬಿಟ್ಟುಬಿಡೀಗ ನೀನು!
ಮೇಷ,

ಈನ ಲೆಃಖಾ ಹಾಕಿ ಫಲವೇನು? (ಓ)
-ಲೆಭಾಗ್ಯಕ್ಕನಸೂಯಯಾಗ್ಬೇಕು ನೀನು!
ರ್ತವ್ಯ ಶ್ರದ್ಧಾ, ಭಕ್ತಿಯಿಂದ ಮಾಡ್ನೀನು!
(ಸ)ಜ್ಜನರ ಸಂಗದಲ್ಲಿರಬೇಕು ನೀನು!
ವೇಷ, ಭೂಷಣಕ್ಕಾಶಿಸಬೇಡ ನೀನು! (ತ)
-ನು ಭಾವ ನಿರಂಜನಾದಿತ್ಯಗುಂಟೇನು!!!

ಗಣಪತಿಗಾಪ್ತ ಭಾನು! (ಉ)

-ಣಲಿಕ್ಕುವವನವನು!
ರಮ ಭಕ್ತನವನು!
ತಿರೆಗಾಧಾರನವನು!
ಗಾನ ಪ್ರಿಯನಾಗಿಹನು! (ವ್ಯಾ)
-ಪ್ತನಾಗಿರ್ಪೆಲ್ಲೆಲ್ಲವನು!
ಭಾವಾತೀತ ದತ್ತವನು! (ಭಾ)
-ನು ನಿರಂಜನಾದಿತ್ಯಾನು??

ಯಾತ್ರೆ ಪೂರೈಸಿತು ತಾಪತ್ರಯಾರಂಭಿಸಿತು! (ಪಾ)

-ತ್ರೆಗಳೆಲ್ಲಾ ಒಂದೊಂದೇ ಖಾಲಿಯಾಗುತ್ತಾ ಬಂತು!
ಪೂರ್ವದ ವೃತ್ತಿಗೇ ಮನಸ್ಸೋಡುವಂತಾಯಿತು!
ರೈಲು ಸಂಚಾರಕ್ಕೀಗ ದಾರಿಯಿಲ್ಲದಾಯಿತು!
ಸಿಪ್ಪೆ ಸಮೇತ ಹಣ್ಣು ತಿನ್ನಲೇಬೇಕಾಯಿತು!
ತುಪ್ಪ, ಹಾಲು, ಮೊಸರು ಮಾಯವಾಗಿ ಹೋಯಿತು!
ತಾನೇಕೆ ಹೀಗಾದೆಂದು ಯೋಚಿಸುವಂತಾಯಿತು!
ಡಬಾರದಷ್ಟು ಕಷ್ಟ, ನಷ್ಟ ಪಟ್ಟಾಯಿತು!
ತ್ರಯೋದಶೀ ಪ್ರದೋಷವಿಂದೆಂದರಿವಾಯಿತು!
ಯಾಗ, ಯೋಗಕ್ಕಿಂತಮೋಘ ಭಜನೆಯಾಯಿತು!
ರಂಗನಾಥನಾನಂದಕ್ಕೆಣೆಯಿಲ್ಲದಾಯಿತು!
ಭಿಕ್ಷುವಿನಭೀಷ್ಟಗಳೆಲ್ಲಾ ನೆರವೇರಿತು!
ಸಿಹಿ ಪೊಂಗಲ್ ತಿಂದೆಲ್ಲರ ಹೊಟ್ಟೆ ತುಂಬಿತು!
ತುರಿಯಾತೀತ ನಿರಂಜನಾದಿತ್ಯಗಾಯಿತು!!!

ಭವಿಷ್ಯ ತಿಳಿವ ಚಪಲ ಜನಕ್ಕೆ!

ವಿಶ್ವದಾದ್ಯಂತ ನಿತ್ಯ ಹೋರಾಟದಕ್ಕೆ! (ರ)
-ಷ್ಯ, ಅಮೇರಿಕದಲ್ಲಿ ಪೈಪೋಟಿದಕ್ಕೆ!
ತಿಳಿಯಲಸಾಧ್ಯವಿದು ವಿಜ್ಞಾನಕ್ಕೆ! (ಬಾ)
-ಳಿನ ನೆಮ್ಮದಿ ಕೆಟ್ಟು ಹಾನಿ ಲೋಕಕ್ಕೆ!
ರಗುರು ಧ್ಯಾನದಿಂದಾನಂದೆಲ್ಲಕ್ಕೆ!
ರಾಚರಾತ್ಮನಿಷ್ಠೆ ದಾರಿ ಸುಖಕ್ಕೆ!
ಕ್ಷ, ಪಂಗಡದಿಂದ ಹಾನಿ ದೇಶಕ್ಕೆ! (ಜ)
-ಲ, ಮಲಾದಿ ಬಂಧನಾರೋಗ್ಯ ದೇಹಕ್ಕೆ!
ಪ, ತಪಾಭ್ಯಾಸವೇ ಶಾಂತಿ ಮನಕ್ಕೆ!
ರ, ನಾರಾಯಣ ತಾನಪ್ಪ ಮುಂದಕ್ಕೆ! (ಅ)
-ಕ್ಕೆ, ನಿರಂಜನಾದಿತ್ಯಾನಂದವೆಲ್ಲಕ್ಕೆ!!!

ನಾಮ ರೂಪಗಳವಾಂತರ ಸಾಕಪ್ಪಾ!

ದ, ಮತ್ಸರದಿಂದ ತುಂಬಿಹುದಪ್ಪಾ!
ರೂಪ, ಲಾವಣ್ಯಕ್ಕೀಗ ಮರ್ಯಾದೆಯಪ್ಪಾ!
ತಿತನೂ ಸ್ಥಾನ, ಮಾನಕ್ಕರ್ಹನಪ್ಪಾ!
ತಿವಿಹೀನರಿಗಾರು ಗತಿಯಪ್ಪಾ? (ನ)
-ಳ, ಹರಿಶ್ಚಂದ್ರರನ್ನಾರು ಕಾಯ್ದರಪ್ಪಾ?
ವಾಂಭಿತಾರ್ಥವನ್ನೀನ ವಾಸುದೇವಪ್ಪಾ?
ತ್ವಾರ್ಥ ಜೀವನ ನಡೆಸಬೇಕಪ್ಪಾ!
ಕ್ತ ಮಾಂಸದ ಗೊಂಬೆ ಅದಲ್ಲವಪ್ಪಾ!
ಸಾವು, ಸಂಕಟವೆಲ್ಲಾ ಶರೀರಕ್ಕಪ್ಪಾ!
ರ್ಮಕ್ಕೆ ತಕ್ಕ ಫಲ ಸಿಕುವುದಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯಾನಂದನಾಗಪ್ಪಾ!!!

ಸಂಕಟ ಬಂದಾಗ ರಾಮಾಯಣ! (ಸಂ)

-ಕಟ ಹರಿದಾಗ ಮಾರಾಯಣ! (ಕೂ)
-ಟ, ನೋಟ, ಆಟಕ್ಕಪಾರ ಹಣ!
ಬಂಧು, ಬಳಗಕ್ಕೆಲ್ಲಾಮಂತ್ರಣ!
ದಾಯಾದಿಗಳಲ್ಲಿ ಹಗರಣ!
ದ್ದೆ, ಹೊಲ, ವಿತ್ತಾಪಹರಣ!
ರಾಕ್ಷಸೀ ಸ್ವಭಾವದ ದುರ್ಗುಣ!
ಮಾಡ್ವುದೊಂದಾಡ್ವುದಿನ್ನೊಂದು ಗುಣ! (ಹ)
-ಣ, ನಿರಂಜನಾದಿತ್ಯಗೀ ಗುಣ!!!

ನೀನೇನನಗೆ ಕೊಡಬಲ್ಲೆ? (ನಾ)

-ನೇ ನೀನೆಂಬುದನು ನಾ ಬಲ್ಲೆ! (ಮ)
-ನೆ ಮಠಾಧಿಪತ್ಯ ನಾನೊಲ್ಲೆ!
ಶ್ವರವದೆಂದು ನಾ ಬಲ್ಲೆ!
ಗೆಡೆ, ಗೆಣ್ಸೇ ತಿಂದಿರಬಲ್ಲೆ!
ಕೊಟ್ಟಷ್ಟಕ್ಕೇ ತೃಪ್ತಿ ಪಡಬಲ್ಲೆ! (ಬ)
-ಡತನಕ್ಕೆ ನಾನಳಲೊಲ್ಲೆ!
ರಡು ಜೀವನ ನಾನೊಲ್ಲೆ! (ಬ)
-ಲ್ಲೆ, ನಿರಂಜನಾದಿತ್ಯನೆಲ್ಲೆ!!!

ತಟ್ಟೆ ಇಟ್ಟದ್ಯಾರಿಗೋ, ಉಂಡವರ್ಯಾರೋ? (ಪ)

-ಟ್ಟೆ ಮಡಿಯುಟ್ಟುಕೊಂಡು ಬಂದವರ್ಯಾರೋ!
ಡೀ ದಿನ ಧ್ಯಾನ ಮಾಡಿದವರ್ಯಾರೋ! (ಪ)
-ಟ್ಟವೇರಿದ್ದು ಯಾರೋ, ಆಳಿದವರ್ಯಾರೋ! (ವಿ)
-ದ್ಯಾವಂತರು ಯಾರೋ, ಪಾಠ ಹೇಳಿದ್ಯಾರೋ!
ರಿಸಿ, ಮುನಿಗಳ್ಯಾರೋ ಹರಸಿದ್ಯಾರೋ!
ಗೋಪುರ ಕಟ್ಟಿದ್ಯಾರೋ, ವಾಸಿಸಿದ್ಯಾರೋ!
ಉಂಡಾಡಿಗಳ್ಯಾರೋ, ದಂಡ ತೆತ್ತವ್ರ್ಯಾರೋ!
ಮರುಧರನ್ಯಾರೋ, ಬಾರಿಸಿದ್ಯಾರೋ!
ರದನ್ಯಾರೋ, ವರಕೊಡುವುದ್ಯಾರೋ! (ಸೂ)
-ರ್ಯಾರಾಧಕಾರೋ, ವಿವರ ಹೇಳ್ವುದಾರೋ! (ಯಾ)
-ರೋ, ನಿರಂಜನಾದಿತ್ಯಾ ವಿಧಿಯ ತೋರೋ!!!

ಬಸವನಂತಿರಬೇಕು ಸೇವಕರು!

ರ್ವೆ

ಶ್ವರಗತಿಹಿತರಂಥವರು!
ರಗಳಪೇಕ್ಷಿಸುವುದಿಲ್ಲವರು!
ನಂಬಿಸಿ ಕೊರಳ ಕೊಯ್ವುದಿಲ್ಲವರು!
ತಿಗಣೆಯಂತೆ ರಕ್ತ ಹೀರರವರು!
ತಿಪತಿಗೆ ದಾಸರಾಗರವರು!
ಬೇರೆಯವರ ಮಾತೇ ಆಡರವರು!
ಕುಲಕೆ ಭೂಷಣಪ್ರಾಯರಂಥವರು!
ಸೇವೆಯನ್ನು ಮೈಮರೆತು ಮಾಡುವರು!
ಸನಾನ್ನಕ್ಕೂ ಲಕ್ಷ್ಯ ಕೊಡರವರು!
ಣ್ಣು, ಬಾಯ್ಕಿವಿ ಮುಚ್ಚಿ ಬಾಳ್ವರವರು! (ಗು)
-ರು ನಿರಂಜನಾದಿತ್ಯಗಾಪ್ತರವರು!!!

ತಪಸ್ಸೆಂದರೇನೆಂದರಿಯಪ್ಪ!

ರಮಾತ್ಮನೇ ತಾನಪ್ಪುದಪ್ಪ! (ಬು)
-ಸ್ಸೆಂದೆಲ್ಲರ ಕಚ್ಚದಿರ್ವುದಪ್ಪ!
ರ್ಪ, ದಂಭವೆಲ್ಲಾ ಬಿಡ್ವುದಪ್ಪ!
ರೇಗಾಟವಿಲ್ಲದಿರುವುದಪ್ಪ!
ನೆಂಟ, ಭಂಟ ತಾನೇ ಆಗ್ವುದಪ್ಪ!
ತ್ತನಾದರ್ಶದಂತಿರ್ಪುದಪ್ಪ!
ರಿಪುಗಳಾರ ಜೈಸವುದಪ್ಪ!
ಮ, ನಿಯಮ ಪಾಲಿಪುದಪ್ಪ! (ಅ)
-ಪ್ಪ, ನಿರಂಜನಾದಿತ್ಯಾನಂದಪ್ಪ!!!

ಕಮಲ ನೀರನಲ್ಲಿ, ಮಿತ್ರಾಕಾಶದಲ್ಲಿ!

ನಸ್ಸೊಂದಾದರಾಪ್ತತೆಗಳಿವೆಲ್ಲಿ?
ವ, ಕುಶರು ಹುಟ್ಟಿದ್ದು ಕಾಡಿನಲ್ಲಿ!
ನೀಲಮೇಘಶ್ಯಾಮ ರಾಮರಾಜ್ಯದಲ್ಲಿ!
ವಿಕುಲ ರಕ್ತ ಅವರ್ಮೂವರಲ್ಲಿ! (ಅ)
-ಲ್ಲಿ, ಇಲ್ಲಿ ಎಂಬುದೆಲ್ಲಾ ಅಜ್ಞಾನದಲ್ಲಿ!
ಮಿಥ್ಯ ಮರೆತಲ್ಲಿ ಸತ್ಯ ತಾನೆಲ್ಲೆಲ್ಲಿ!
ತ್ರಾಹಿಮಾಂ, ಪಾಹಿಮಾಂ ಎಂದು ಭಜಿಪಲ್ಲಿ!
ಕಾಲ ಜಾಲವೇನೂ ಮಾಡಲಾರದಲ್ಲಿ!
ಕ್ತಿ, ಶಿವರರ್ಧನಾರೀಶ್ವರನಲ್ಲಿ!
ತ್ತಾತ್ರೇಯನಾಗಿ ತ್ರಿಮೂರ್ತಿಗಳಲ್ಲಿ! (ಅ)
-ಲ್ಲಿಲ್ಲಿ ನಿರಂಜನಾದಿತ್ಯನಾಗ್ಯೆಲ್ಲೆಲ್ಲಿ!!!

ಪೂಜ್ಯ ಭಕ್ತಿ ಪೂಜೆಯಿಂದಾಗ್ಲಿ! (ಪೂ)

-ಜ್ಯನಿಂದ ನಿತ್ಯ ಪೂಜೆಯಾಗ್ಲಿ!
ವಭಯವೇನಿಲ್ಲದಾಗ್ಲಿ! (ಮು)
-ಕ್ತಿ ಸುಖವಾಗನುಭವಿಸ್ಲಿ!
ಪೂರ್ವಜರೋಕ್ತಿ ನಿಜವಾಗ್ಲಿ! (ಸಂ)
-ಜೆ, ಮುಂಜಾನೆ ಭಜನೆಯಾಗ್ಲಿ! (ಬಾ)
-ಯಿಂದನ್ಯ ಮಾತು ಬರದಿರ್ಲಿ!
ದಾಸರ ದಾಸ ತಾನಿಂತಾಗ್ಲಿ! (ಆ)
-ಗ್ಲಿ ನಿರಂಜನಾದಿತ್ಯನಾಗ್ಲಿ!!!

ಸ್ವತಂತ್ರವಿದೆ ಎಂದು ಹಾರಾಡ್ಬೇಡ!

ತಂದೆ ಯಾರೆಂಬುದನ್ನು ಮರೆಯ್ಬೇಡ!
ತ್ರಯಂಬಕನ ಸ್ಮರಣೆ ಬಿಡ್ಬೇಡ!
ವಿಷಯಸುಖಕ್ಕೆ ಮರುಳಾಗ್ಬೇಡ!
ದೆಸೆಗೆಡಿಪಾ ವಾಸನೆ ಮೂಸ್ಬೇಡ!
ಎಂಟು ಮದಗಳ ಭಂಟನಾಗ್ಬೇಡ!
ದುಶ್ಯಾಸನಗೆ ಸ್ವಾಗತ ನೀಡ್ಬೇಡ!
ಹಾವೆಂದು ಹಗ್ಗಕ್ಕೆ ಭಯಪಡ್ಬೇಡ!
ರಾಯಭಾರಕ್ಕಪಕೀರ್ತಿ ತರ್ಬೇಡ! (ಆ)
-ಡ್ಬೇಡನ್ಯಧರ್ಮಾವಲಂಬಿಯಾಗ್ಬೇಡ! (ತೊ)
-ಡ ನಿರಂಜನಾದಿತ್ಯಾಂಬರ ಬಿಡ!!!

ರೂಪವಿಲ್ಲದ ಮಣ್ಣಿನಿಂದೆಲ್ಲಾ ರೂಪ!

ರಾಶಕ್ತಿ ಮನಸ್ಸಿಂದನಂತ ರೂಪ!
ವಿವಿಧೇಂದ್ರಿಯ ಮೂಲಕ ಸ್ಥೂಲ ರೂಪ! (ಕ)
-ಲ್ಲಲ್ಲೂ ಆಗುತಿದೆ ಇಂಥಾನೇಕ ರೂಪ!
ರ್ಶನ, ಭಜನೆಯಿಂದಾಯ್ತಿಷ್ಟ ರೂಪ!
ಜ್ಜನಾದಿಗಳಿಂದಾಕರ್ಷಣಾ ರೂಪ! (ಕ)
-ಣ್ಣಿಗಾನಂದ ನೀಡುವುದಾ ಮೂರ್ತಿ ರೂಪ!
ನಿಂತ, ಕೂತ, ಮಲಗಿದ ಬಹು ರೂಪ!
ದೆವ್ವ ರೂಪವೆನಿಸುತಿದೆ ಕುರೂಪ! (ಎ)
-ಲ್ಲಾ ರೂಪ ತಾನಾದರೂ ನಿತ್ಯಾತ್ಮರೂಪ! (ಊ)
-ರೂರು ಮೆರೆಸುವುದಕ್ಕೀ ಸ್ಥೂಲರೂಪ!
ರಮಾತ್ಮ ನಿರಂಜನಾದಿತ್ಯ ರೂಪ!!!

ಅಗ್ರಪೂಜೆ ಅಂಬುಜಮಿತ್ರನಿಗಾಗ್ಲಿ!

ಗ್ರಹಶಾಂತಿ ಅವನ ಮೂಲಕ ಆಗ್ಲಿ!
ಪೂರ್ವದಿಕ್ಕಿನಲ್ಲವನ ಸ್ವಾಗತಾಗ್ಲಿ! (ಸಂ)
-ಜೆ ಪಶ್ಚಿಮದಿಕ್ಕವನ ಪ್ರಯಾಣಸಾಗ್ಲಿ!
ಅಂಬರ ಮಾರ್ಗವಾಗಿ ವಾಹನ ಹಾರ್ಲಿ!
ಬುಧ ಜನರಿಂದ ವೇದಘೋಷವಾಗ್ಲಿ!
ಗದಾದ್ಯಂತ ಮಲರಹಿತವಾಗ್ಲಿ!
ಮಿಥ್ಯಾ ಮೋಹ ಸತ್ಯಪ್ರೇಮದಿಂದ ತುಂಬ್ಲಿ!
ತ್ರಯಮೂರ್ತಿ ದತ್ತಾತ್ರೇಯ ಗುರುವಾಗ್ಲಿ!
ನಿಶಿ, ದಿನಾಖಂಡ ಸಂಕೀರ್ತನೆಯಾಗ್ಲಿ!
ಗಾಣಾಪತ್ಯಾಕ್ಕಿದಧ್ಯಾತ್ಮ ಶಕ್ತಿ ತುಂಬ್ಲಿ! (ಆ)
-ಗ್ಲಿ ನಿರಂಜನಾದಿತ್ಯನಿಚ್ಛೆಯಂತಾಗ್ಲಿ!!!

ಎಂಟು ಮಂದಿ ಕುರುಡರಾನೆ ದೇವರಾ? (ಎಂ)

-ಟು ಜನರಿಗೂ ನೋಡುವಾಸೆ ಕುಂಜರಾ!
ಮಂದಭಾಗ್ಯರೆಂತರಿವರ್ಪೂರ್ಣಾಕಾರಾ?
ದಿವ್ಯ ದರ್ಶನವ್ರವ್ರ ಶಕ್ತ್ಯಾನುಸಾರಾ!
ಕುಚೇಷ್ಟೆ ಮಾಡ್ಬಾರ್ದರಿತವರವರಾ! (ಅ)
-ರುಹಬೇಕ್ಬಲ್ಲವರದ್ರ ಪೂರ್ಣಾಕಾರಾ! (ನೋ)
-ಡ ಬಯಸುವವರ ಕಷ್ಟ ಅಪಾರಾ!
ರಾತ್ರಿ, ದಿನ ಸುರಿಯುವುದಶ್ರುಧಾರಾ!
ನೆಗಳ್ದಾವತಾರಿಗಳ್ತೋರ್ಬೇಕಾದರಾ!
ದೇಶದಲ್ಲೆಲ್ಲೆಲ್ಲೂ ಇದೆ ಹಾಹಾಕಾರಾ!
ರದನೇ ಕಾಪಾಡಲೆಲ್ಲಾ ಸಂಸಾರಾ!
ರಾಮ ನಿರಂಜನಾದಿತ್ಯರೇಕಾಕಾರಾ!!!

ತ್ಯಾಗರಾಜನಾಗಿ ರಾಮ ಗುಣ ಗಾನ ಹಾಡೋ! (ಭೋ)

-ಗ ಜೀವನವನ್ನಿಂದಿನಿಂದ ಕಡಿಮೆ ಮಾಡೋ!
ರಾಮರಸಮೃತವನ್ನೆಲ್ಲರಿಗೀಗ ನೀಡೋ!
ರಾ,ಜನ್ಮದಿಂದ ಪಾರಾಗುವ ದಾರಿ ನೋಡೋ!
ನಾಮ ಸಂಕೀರ್ತನಾಭ್ಯಾಸದಿಂದವನ ಕೂಡೋ!
ಗಿರಿಜಾಪತಿಯಂತರಂಗವನಲ್ಲಿ ಬೇಡೋ!
ರಾಗ, ದ್ವೇಷಾದಿಗಳ ಬೇರು ಸಹಿತ ಸುಡೋ!
ದ, ಮತ್ಸರಾಸುರರ್ಗೆ ರಾಮಬಾಣ ಹೂಡೋ!
ಗುರುಸೇವೆಗವನಂತಸು

ಈಸಲಾಗಿಡೋ! (ಗ)
-ಣನಾಯಕನಾಗಲ್ಕೀಗಿನಿಂದೀ ಪಣ ತೊಡೋ!
ಗಾಳಿಯ ಮಗನಂತಾಗಿ ರಾಮನೊಡನಾಡೋ!
ಗುನಗುತ ಸೇವೆ ಮಾಡ್ಯಾತ್ಮಾನಂದ ಪಡೋ!
ಹಾಡಿ, ಪಾಡಿ, ನಲಿದಾಡಿ ದೇಹತ್ಯಾಗ ಮಾಡೋ! (ಹಾ)
-ಡೋ, ನಿರಂಜನಾದಿತ್ಯಾನಂದ ಸವಿದು ನೋಡೋ!!!

ಕಾಡೋ, ನಾಡೋ, ಸುತ್ಮುತ್ನೋಡ್ಯಡ್ಡಾಡು! (ಮಾ)

-ಡೋದನ್ನೆಲ್ಲಾ ಶ್ರದ್ಧೆಯಿಂದ ಮಾಡು!
ನಾಮಜಪವೆಲ್ಲಿದ್ದರೂ ಮಾಡು! (ಪ)
-ಡೋ ಕಷ್ಟ ಸಹಿಸ್ಲಿಕ್ಕಾಗಿ ಮಾಡು!
ಸುಶ್ಯಾವ್ಯವಾಗಿ ಭಜನೆ ಮಾಡು! (ಹೊ)
-ತ್ಮುಳುಗಿದ್ಮೇಲೊಂದೆಡೆ ಕೂತ್ಮಾಡು! (ತಾ)
-ತ್ನ, ಅಪ್ನೋ ಗದರಿಸಿದ್ರೂ ಮಾಡು! (ಹಾ)
-ಡ್ಯವನ ಗುಣಸ್ಮರಣೆ ಮಾಡು! (ಕ)
-ಡ್ಡಾಯವಾಗಿ ಪ್ರತಿದಿನ ಮಾಡು! (ಕಂ)
-ಡು ನಿರಂಜನಾದಿತ್ಯನ ಕೂಡು!!!

ಕೃಪಾ ಕಿರಣಾಶಾಂತಿ ವ್ಯಾಧಿ ಹರ!

ಪಾಪ, ಪುಣ್ಯದಂಟು ನಿರ್ಮೂಲಕರ!
ಕಿರಿದು, ಪಿರಿದೆಂದೆನ್ನದಾದರ!
ಮೇಶೋಮೇಶರ ಭಕ್ತಾಗ್ರೇಸರ! (ಗು)
-ಣಾತೀತ ತಾನಾಗೀತ ಗುಹೇಶ್ವರ!
ಶಾಂಭವಿಗಾಗಿಹನವ ಕುಮಾರ!
ತಿತಿಕ್ಷೆ, ವೈರಾಗ್ಯದಿಂದ ಗಂಭೀರ!
ವ್ಯಾಮೋಹವಿಲ್ಲದ ವಿಶ್ವ ಸಂಸಾರ!
ಧಿಕ್ಕರಿಸಿಹನವ ವಾಮಾಚಾರ!
ರಿ ಹರರಭೇದ ದತ್ತಾಕಾರ! (ವ)
-ರಗುರು ನಿರಂಜನಾದಿತ್ಯಾಕಾರ!!!

ಜಗದಾಧಾರನೊಡನಾಡಿದಳ್ರಾಧಾ!

ಗನ ಸದೃಶ ಗುರುವಿನಾ ಪಾದಾ!
ದಾಸಿಯಾಗ್ಯನುಭವಿಸಿದಳಾಮೋದ!
ಧಾರಿಣಿ ಜೀವರಾರೋಪ ಅಪರಾಧ!
ತಿಸುಖಕ್ಕದೆಂಬುದಜ್ಞಾನದಿಂದ!
ನೊಸಲಿಗೆ ನೊಸಲಿಟ್ಟದ್ದಾತ್ಮಾನಂದ! (ಜ)
-ಡದೇಹಭಾವವಿಲ್ಲದ್ದು ನಿಜಾನಂದ!
ನಾದ, ಬಿಂದು, ಕಲಾತೀತಾ ಶುದ್ಧಾನಂದ! (ಬ)
-ಡಿಸೆಮಗೆಲ್ಲರಿಗಾ ಊಟ ಗೋವಿಂದಾ!
ರ್ಶನವೀಗಿತ್ತುದ್ಧರಿಸೋ ಮುಕುಂದಾ! (ಗೋ)
-ಳ್ರಾತ್ರಿ, ದಿನವೆನಗೇಕೋ ನಂದಕಂದಾ? (ರಾ)
-ಧಾ ಮಾಧವ ನಿರಂಜನಾದಿತ್ಯಾನಂದ!!!

ಋಣ ಸಂಬಂಧ ತೀರಿದರಿರೇನಯ್ಯಾ! (ಹ)

-ಣ, ಕಾಸು, ಕೀರ್ತಿಯಾಸೆನಗಿಲ್ಲವಯ್ಯಾ!
ಸಂಗ ಸಜ್ಜನರದ್ದಿದ್ದರಿರಲಯ್ಯಾ!
ಬಂಧು, ಬಳಗ ಕೈಲಿ ಕಾಸಿದ್ದರಯ್ಯಾ!
ರ್ಮ, ಕರ್ಮ ಯಾರಿಗೂ ಬೇಕಿಲ್ಲವಯ್ಯಾ!
ತೀರ್ಥಕ್ಷೇತ್ರ ಯಾತ್ರೆ ನೇತ್ರಾನಂದಕ್ಕಯ್ಯಾ!
ರಿಪುಕುಲವ ಜೈಸಿರ್ಪವರಾರಯ್ಯಾ?
ತ್ತಗುರು ಕೃಪೆಯಿಂದ ಜಯವಯ್ಯಾ!
ರಿಕ್ತಹಸ್ತನಿಗವನೇ ದಾತನಯ್ಯಾ!
ರೆಕ್ಕೆ, ಪುಕ್ಕ ಕೀಳ್ವ ರಕ್ಕಸಾತ್ನಲ್ಲಯ್ಯಾ!
ರಹರಿಯಿಂದುದ್ಧಾರ ಪ್ರಹ್ಲಾದಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾನಂದಾತನಯ್ಯಾ!!!

“ಉಳಿಸಿದರುಳಿ ಅಳಿಸಿದರಳಿ”! (ಆ)

-ಳಿ, ಬಾಳಿಂತುದ್ಧಾರವಾದರಸು ಬಲಿ!
ಸಿರಿ, ಸಾಮ್ರಾಜ್ಯ ಸಹಿತಳಿದಾ ಬಲಿ!
ತ್ತ ವಿತ್ತಾಪಹಾರ ಮಾಡಿಲ್ಲಾ ಬಲಿ!
ರುಜುಮಾರ್ಗಕ್ಕಾದರ್ಶಾ ರಾಜೇಶ ಬಲಿ! (ಇ)
-ಳಿದರೂ ಪಾತಾಳದಲ್ಲುಳಿದಾ ಬಲಿ!
ಳಿಯದಿರದೀ ದೇಹವೆಂದಾ ಬಲಿ! (ತು)
-ಳಿವುದಕ್ಕಾರು ವಾಮನನೆಂದಾ ಬಲಿ!
ಸಿಕ್ಕಿ ನುಜ್ಜಾಗೆ ನಾ ಹೆಜ್ಜೆಗೆಂದಾ ಬಲಿ!
ರ್ಶನ, ಸ್ಮರ್ಶನದಿಂದೈಕ್ಯಾದಾ ಬಲಿ!
ಕ್ತ ಮಾಂಸದ ಗೊಂಬೆ ತಾನಲ್ಲಾ ಬಲಿ! (ಬಾ)
-ಳಿ ನಿರಂಜನಾದಿತ್ಯ ಬಲಿಯಂತುಳಿ!!!

ಹೊತ್ತಿಗೆ ಮೊದಲೇ ಬೆತ್ತಲೆಯಾದೆ! (ಸು)

-ತ್ತಿರುವಂಬರ ನಿರ್ಮಲವಾಗಿದೆ!
ಗೆಳೆಯರ ಬಿಟ್ಟೊಳಗೆ ನಾ ಬಂದೆ!
ಮೊದಲೊರೆದದ್ದೇನೆಂದು ನೆನೆದೆ!
ತ್ತಚಿತ್ತವೆಂದು ತೀರ್ಮಾನಿಸಿದೆ!
ಲೇಖನಿಯಿಂದದ ಮತ್ತೆ ಬರೆದೆ!
“ಬೆಳಕಿನಲ್ಲಿ ಬೆತ್ಲೆ” ಸರಿಯೆಂದೆ! (ಚಿ)
-ತ್ರದಲ್ಲಾಗನ್ಯ ವೃತ್ತಿಯಿದ್ದಿಲ್ಲೆಂದೆ!
ಲೆಕ್ಕಿಸ್ಬಾರ್ದೀ

ಕೋತಿ ಮನಸ್ಸನ್ನೆಂದೆ!
ಯಾರೇನೆಂದರೆನಗೇನಾಗ್ವುದೆಂದೆ! (ಬಂ)
-ದೆ ನಿರಂಜನಾದಿತ್ಯನಾಗೀಗೆಂದೆ!!!

ದರ್ಶನಾವಕಾಶ ಇಲ್ಲ! (ಸ್ಪ)

-ರ್ಶಕ್ಕಾಗ ಘರ್ಷಣೆ ಇಲ್ಲ!
ನಾಮಜಪಕ್ಕಡ್ಡಿ ಇಲ್ಲ!
ರ ಕೇಳ್ವ ತಂಟೆ ಇಲ್ಲ!
ಕಾದು ಸುಸ್ತಾಗ್ಬೇಕಾಗಿಲ್ಲ!
ಕ್ತಿ ಸಂಪಾದಿಸ್ರಿಂತೆಲ್ಲ!
ಷ್ಟೇ ಸಾಕು ಮುಕ್ತಿಗೆಲ್ಲಾ! (ಬ)
-ಲ್ಲ, ನಿರಂಜನಾದಿತ್ಯೆಲ್ಲಾ!!!

ದರ್ಶನಾವಕಾಶಾರಿಗೇಕಿಲ್ಲ? (ದ)

-ರ್ಶನ ಶ್ರೀಗುರುಚಿತ್ತದಂತೆಲ್ಲಾ!
ನಾನಾಸೆಗಳಿಂದ ಸಖವಿಲ್ಲ! (ಭ)
-ವರೋಗ ಮುಕ್ತರಾಗಬೇಕೆಲ್ಲಾ!
ಕಾರ್ಯೋನ್ಮುಖರಾಗಿರಿದಕ್ಕೆಲ್ಲಾ!
ಶಾಸ್ತ್ರ, ಯಂತ್ರ, ತಂತ್ರ ಬೇಕಾಗಿಲ್ಲ!
ರಿಪುಗಳಾರನ್ನೂ ಜೈಸಿರೆಲ್ಲಾ! (ಯೋ)
-ಗೇಶ್ವರನ ಸದಾ ಸ್ಮರಿಸ್ರೆಲ್ಲಾ!
ಕಿವಿ, ಬಾಯ್ಕಣ್ಣುಗಳಾಳಿರೆಲ್ಲಾ! (ಪು)
-ಲ್ಲ ನಿರಂಜನಾದಿತ್ಯನೆಲ್ಲೆಲ್ಲಾ!!!

ಪ್ರಾರ್ಥನೆಗಾರದೇನಡ್ಡಿಯಿಲ್ಲ! (ವ್ಯ)

-ರ್ಥವಾಯ್ತೆಂದೀಗನ್ನಬೇಕಾಗಿಲ್ಲ!
ನೆನೆನೆನೆದವನಾಗ್ಬೇಕೆಲ್ಲಾ!
ಗಾಡಿಗಾರ ನಿರ್ದಯನೇನಲ್ಲ!
ಗಳೆಗವ ದಕ್ಕುವವ್ನಲ್ಲ!
“ದೇಹೀ” ಯೆಂದೊಲಿಸ್ಬೇಕವ್ನನ್ನೆಲ್ಲಾ!
“ನ ಗುರೂ

ರಧಿಕಂ” ಸುಳ್ಳಿದಲ್ಲ! (ಬ)
-ಡ್ಡಿ ಸೇರ್ಸಿ ಅಸ್ಲು ಕೊಡದೇನಿಲ್ಲ! (ಬಾ)
-ಯಿ ಮುಚ್ಚಿ ದಯಾಭಿಕ್ಷೆ ಬೇಡ್ರೆಲ್ಲಾ! (ನ)
-ಲ್ಲ ನಿರಂಜನಾದಿತ್ಯನ್ಯನಲ್ಲ!!!

ಬಯಕೆ ಬಹಳ, ಈಡೇರಿಕೆ ವಿರಳ!

ಮನಯ್ಯನ ಸಾಮ್ರಾಜ್ಯ ಬಹು ವಿಶಾಲ!
ಕೆಟ್ಟದೊಳ್ಳೆಯದು ಮಿಶ್ರವಾಗಿರ್ಪ ಲೀಲಾ!
ಡವರಮೇಲೆ ಬಲ್ಲವರಿಂದ್ರಜಾಲ!
ರಕು ಮುರುಕು ಮನೆಮಂದಿಗೆ ಸಾಲ! (ಹೇ)
-ಳಬೇಕಾರಿಗೀ ಬಾಳು ಬದುಕಿನ ಸೋಲ?
ಶ್ವರೇಚ್ಛೆಯೆಂಬವರಿಗೇನನುಕೂಲ?
ಡೇರೆಯೊಳಗಿರಲಿಕ್ಕೂ ಅನಾನುಕೂಲ!
ರಿಸಿ, ಮುನಿಗಳ ಮಾತು ಕೇಳರೀ ಕಾಲ!
“ಕೆಡಿಸ್ಬೇಡ್ವೋ ತಂದೆ” ಯೆಂದ್ರೆ ದೇವರೇ ಕೇಳ!
ವಿಧಿವಿಲಾಸವಿದನ್ನೇನೆನ್ನಲೀ ಬಾಲ!
ಮೇಶೋಮೇಶ, ವಾಣೀಶರೇ ಅತ್ರಿಬಾಲ! (ಆ)
-ಳಲೆಮ್ಮ ನಿರಂಜನಾದಿತ್ಯ ದತ್ತ ಬಾಳ!!!

ಹೊಟ್ಟೆಯೊಳಗೇಕೆ ಕೆಟ್ಟ ವಾಸನೆ? (ಪ)

-ಟ್ಟೆ ಮಡಿಯುಟ್ತೂ ಹೋಗದಾ ವಾಸನೆ!
(ಸ್ತ್ರೀ) ಯೊಡನಾಟೇಚ್ಛೆಯನಾದಿ ವಾಸನೆ! (ಗೆ)
-ಳತಿ ರಾಧೆಯಾದ್ರದೇ ಸುವಾಸನೆ! (ಯೋ)
-ಗೇಶ ಕೃಷ್ಣನ ಸಂಗ ಸುವಾಸನೆ!
ಕೆಡುಕ ಶಕುನಿಗಿಲ್ಲಾ ವಾಸನೆ!
ಕೆಚ್ಚೆದೆಯರ್ಜುನಗಿತ್ತಾ ವಾಸನೆ! (ಸು)
-ಟ್ಟರೂ ಹೋಗದು ವಿಷಯ ವಾಸನೆ!
ವಾತರೋಗಿಯುದರ ದುರ್ವಾಸನೆ!
ತ್ಸಂಗ ಗತ ಸಂಸ್ಕಾರ ವಾಸನೆ! (ಸೋ)
-ನೆ, ನಿರಂಜನಾದಿತ್ಯಾತ್ಮವಾಸನೆ!!!

ಕಳ್ಳ ಸುಳ್ಳನಾದ್ರೂ ನಲ್ಲೆಗನ್ಯನಲ್ಲ! (ಹ)

-ಳ್ಳಕ್ಕೆ ತಳ್ಳದ್ರೂ ಅಗಲುವವಳಲ್ಲ!
ಸುಖ ದುಃಖವಳಿಗೆ ಸಮಾನವೆಲ್ಲ! (ಬೆ)
-ಳ್ಳಗಿರುವುದೆಲ್ಲಾ ಹಾಲೆಂಬವಳಲ್ಲ!
ನಾಮ ಅವನದು ಪವಿತ್ರವೆಲ್ಲೆಲ್ಲಾ! (ತ)
-ದ್ರೂಪ ಧ್ಯಾನವೆಂದೂ ಬಿಟ್ಟಿರುವುದಿಲ್ಲ!
ಶ್ವರಕ್ಕಾಕೆ ಆಸೆ ಪಡ್ವವಳಲ್ಲ! (ಹ)
-ಲ್ಲೆ, ಹಗರಣ ಅವಳಿಗಿಷ್ಟವಿಲ್ಲ!
ಬ್ಬುವಾಸನೆ ಅವಳಲ್ಲೇನೂ ಇಲ್ಲ! (ಧ)
-ನ್ಯಳವಳು ನಿಜಸತಿಯೂಗ್ಯೆಲ್ಲೆಲ್ಲ!
ವಯುಗದ ನಾರಿಯಂತವಳಲ್ಲ! (ಪು)
-ಲ್ಲ ನಿರಂಜನಾದಿತ್ಯನವಳಗೆಲ್ಲ!!!

ಮಾಡಿದಡಿಗೆಯ ಮೊದಲು! (ಬ)

-ಡಿಸಾಮೇಲೆ ತಿನ್ನುವ ಸಲು! (ಗಂ)
-ಡನಿಗಿಷ್ಟವಾಗುವ ವೊಲು! (ಅ)
-ಡಿಗಡಿಗಾತಿಥ್ಯವಾಗಲು! (ಕಾ)
-ಗೆ ಮೊದಲ್ಗೊಂಡು ಪಾಲ್ಗೊಳ್ಳಲು!
ಜ್ಞವಿದೇ ಮೇಲ್ನೂರು ಪಾಲು!
ಮೊಟ್ಟೆ, ಮಾಂಸ ವರ್ಜ್ಯಾನೆಯೊಲು!
ಯಾನಿಧಿಗಿಲ್ಲ ಕೀಳ್ಮೇಲು! (ನಿ)
-ಲು ನಿರಂಜನಾದಿತ್ಯನೊಲು!!!

ಬಂದಂತೆ ಹೋಗ್ಲಿಕ್ಕಭ್ಯಾಸ ಮಾಡು!

ದಂಭ, ದರ್ಪ ಬಿಟ್ಟು ಅದು ಮಾಡು!
ತೆರೆಮರೆಯ ಕಾಯಂತಿದ್ದು ಮಾಡು!
ಹೋಮ, ನೇಮ ಬೇಡದಕ್ಕೆ! ಮಾಡು! (ಆ)
-ಗ್ಲಿ ಹೋಗ್ಲಿ, ನಿನ್ನ ಕರ್ತವ್ಯ ಮಾಡು! (ಚ)
-ಕ್ಕಳದ ಗೊಂಬೆಯಾಟ ಸಾಕ್ಮಾಡು! (ಸ)
-ಭ್ಯಾತ್ಮ ನೀನಾಗಿ ಜೀವನ ಮಾಡು!
ದಾಶಿವನ ಸ್ಮರಿಸಿ ಮಾಡು!
ಮಾಯಾ, ಮೋಹಕ್ಕಾಳಾಗದೇ ಮಾಡು! (ಮಾ)
-ಡು ನಿರಂಜನಾದಿತ್ಯನ ಕೂಡು!!!

ಒಬ್ಬೊಬ್ರಿಗೊಂದೊಂದ್ರಲ್ಲಭಿಮಾನ! [ಒ]

-ಬ್ಬೊಬ್ರಿಗೆ ಹಬ್ಬ ಅಸಮಾಧಾನ!
(ಸಾ)ಬ್ರಿಗೆ ರಂಜಾನೆಂಬುದು ಪ್ರಧಾನ!
ಗೊಂಬೆಗಳಿಗೂ ದೀಪಾರಾಧನ!
ದೊಂಬಿ ಮದಾಂಧತೆಯ ವರ್ತನ!
ದ್ರವ್ಯಕ್ಕಾಗಿ ಬೆತ್ತಲೆ ನರ್ತನ! (ಗೊ)
-ಲ್ಲನಿಗೆ ಗೋಪಾಲನಾ ಜೀವನ!
ಭಿಕ್ಷುವಿಗೆ ಭಿಕ್ಷಾನ್ನ ಪಾವನ!
ಮಾರಹರಗಾನಂದ ಸ್ಮಶಾನ!
ಮೋ ನಿರಂಜನಾದಿತ್ಯಾನನಾ!!!

ಪ್ರಾರ್ಥನೆ ಎಷ್ಟು ಮಾಡಿದರೇನು? [ಸಾ]

-ರ್ಥಕವಾಗದಿದ್ರೆ ಫಲವೇನು?
ನೆಪಕ್ಕೀ ತನುವೆಂದರಿ ನೀನು!
ಲ್ಲಕ್ಕೂ ಕಾರಣ ಆರ್ಯ ಭಾನು! (ನಿ)
-ಷ್ಟುರ ಮಾಡಿಕೊಂಡರಾಗ್ವುದೇನು?
ಮಾರಹರಗೊಪ್ಪಿಸೆಲ್ಲವನು! (ಮಾ)
-ಡಿದಂತಾಗಲೆಂದು ಬಾಳು ನೀನು!
ಯಾಮಯ ತಾನಾಗಲವನು!
ರೇಗ್ಬಾರದನಾಥನಾದವನು! (ಸೂ)
-ನು ನಿರಂಜನಾದಿತ್ಯನಿಗೆ ನೀನು!!!

ಕಾರಣವಿಲ್ಲದೆ ಕಾರ್ಯವಿಲ್ಲ!

ಮಣನಿಲ್ಲದೆ ಭಾರ್ಯೆಯಿಲ್ಲ! (ಪ್ರಾ)
-ಣವಿರದಿದ್ದರೆ ತ್ರಾಣವಿಲ್ಲ!
ವಿಶ್ವಾಸವಿಲ್ಲದೆ ಭಕ್ತಿಯಿಲ್ಲ! (ಬ)
-ಲ್ಲವರಿಲ್ಲದೆ ಸದ್ವಿದ್ಯೆಯಿಲ್ಲ! (ತಂ)
-ದೆಯಿರದಿದ್ದರೆ ಮಗನಿಲ್ಲ!
ಕಾಸಿಲ್ಲದೇನೂ ಸಿಕ್ಕವುದಿಲ್ಲ! (ಸೂ)
-ರ್ಯನಿಲ್ಲದಿದ್ರೆ ಪ್ರಪಂಚವಿಲ್ಲ!
ವಿಕಲ್ಪವೆಲ್ದೆ ವಿರೋಧವಿಲ್ಲ! (ಎ)
-ಲ್ಲ ನಿರಂಜನಾದಿತ್ಯ ತಾ ಬಲ್ಲ!!!

ಹೊರಗೆ ರಾಮ ಒಳಗೆ ಕಾಮ! [ಇ]

-ರಬಾರದೀ ತರ ಭಕ್ತಿ, ಪ್ರೇಮ! (ಹೇ)
-ಗೆ ಸಿಕ್ಕೀತಿಂತಿದ್ದವರಿಗಾರಾಮ?
ರಾಮನವನ ಮಾಡ್ಬೇಕ್ನಿಷ್ಕಾಮ!
ನ್ಮಥನ ಗೆದ್ದ ಶಿವಾರಾಮ!
ಲಿಯದ ರಾವಣ ನಿರ್ನಾಮ! (ನ)
-ಳ, ಹರಿಶ್ಚಂದ್ರರ್ಗಾರಾಮನಾಮ! (ಕಾ)
-ಗೆಮ್ಮನ್ನೆಲ್ಲಾ ನಾಮ ಸೀತಾರಾಮ!
ಕಾದಿದ್ದ ಶಬರಿಗಾಯ್ತಾರಾಮ! (ಪ್ರೇ)
-ಮ, ನಿರಂಜನಾದಿತ್ಯಗಾರಾಮ!!!

ಪ್ರಸಾದ ಸರ್ವಾನುಕೂಲಕರ!

ಸಾರುವರಿದ ಶಾಸ್ತ್ರಾನುಸಾರ!
ರ್ಶನವಿತ್ತಿಲ್ಲಾರ್ತರ್ಗಾ ಹರ!
ಜ್ಜನರಿಗೀಗ ಯಾರಾಧಾರ? (ಸ)
ರ್ವಾಧಿಕಾರದ್ದೀಗಿನ ಸರ್ಕಾರ!
ನುರಿತವರಿಗಿಲ್ಲಾಧಿಕಾರ!
ಕೂಟ, ನೋಟಾಟಕ್ಕೆ ಸಹಕಾರ!
ಕ್ಷ್ಯಾತ್ಮನಲ್ಲಿಟ್ಟಾಗ ಉದ್ಧಾರ!
ರಾದಿಂದ್ರಿಯಾತೀತ ಓಂಕಾರ! (ಹ)
-ರ, ನಿರಂಜನಾದಿತ್ಯನಾಕಾರ!!!

ನಿದ್ರೆ ಬಾರದೆನಗಿಂದೇಕೋ! [ಬಂ]

-ದ್ರೆದ್ದಿರಲಾರೆ ನೀ ನೋಡಿಕೋ!
ಬಾಯಿ ಮಾತ್ರ ಮುಚ್ಚಿಸಿದ್ದೇಕೋ! (ವ)
-ರ ಗುರುಕೃಪೆಯೆಂದೆಣ್ಸಿಕೋ! (ತಂ)
-ದೆ, ತಾಯಿ ಅವನೆಂದಂದುಕೋ!
ಯನಾದಿಂದ್ರಿಯ ಜೈಸಿಕೋ! (ಈ)
-ಗಿಂದಲೇ ಅಭ್ಯಾಸ ಮಾಡಿಕೋ!
ದೇವರಾ ಸ್ವರೂಪರಿತುಕೋ! (ಅ)
-ಕೋ, ನಿರಂಜನಾದಿತ್ಯನಿಕೋ!!!

ಎಚ್ಚರದಲ್ಲಾಳದವ ಕನಸಲ್ಲಾಳಿದವ! [ಅ]

-ಚ್ಚರಿಯಿದಕ್ಕೇನೆನ್ನುವನು ವಿಜ್ಞಾನಿ ಮಾನವ?
ಹಸ್ಯವಿದರದ್ದರಿತರೂ ಕಾಣ ಸುಖವ! (ಉ)
-ದಯಾಸ್ತದ ಮಧ್ಯದಲ್ಲನೇಕನಿತ್ಯಾನುಭವ!
(ಎ)ಲಾವಸ್ಥೆಗಳ ದಾಟಿದಾಗಾತ್ಮಾನಂದಾನುಭವ! (ಆ)
-ಳಾದವ, ಆಳಿದವ ಭವಬಂಧದಲ್ಲಿದ್ದವ!
ತ್ತನಾದರ್ಶ ಪಾಲಿಸಿದವ ಮುಕ್ತ ಮಾನವ!
ರ ಗುರಿವೀತ ಮಾಳ್ಪ ಸೃಷ್ಟಿ, ಸ್ಥಿತಿ, ಲಯವ!
ರ್ಮಕ್ಕೆ ತಕ್ಕಂತೆ ನಾಮ, ರೂಪಗಳ ತಾಳುವ!
ಶ್ವರವಿದೆಲ್ಲಾ ಎಂದರಿತು ಮಾಡ್ಬೇಕ್ತಪವ!
ವೆಸುತ್ತಿರಬೇಕಿದರಿಂದ ಕಾಲ ತ್ರಯವ! (ಅ)
-ಲ್ಲಾಡದೇ ಅನುಭವಿಸಬೇಕ್ಸಮಾಧಿ ಸುಖವ! (ತು)
-ಳಿದು ಪಾತಾಳಕ್ಕಿಳಿಸ್ಬೇಕಿಂದ್ರಿಯ ಚಪಲವ!
ರ್ಶನಾನಂದದಿಂದ ಭಾವಾತೀತಾತ್ಮಾನುಭವ!
ರಗುರು ನಿರಂಜನಾದಿತ್ಯಗೀ ಸ್ವಾನುಭವ!!!

ಎಲ್ಲಾ ಬಣ್ಣ ಮಸಿ ನುಂಗಿತು! (ಕ)

-ಲ್ಲಾಗ್ಯಹಲ್ಯೆ ಬೀಳಬೇಕಾಯ್ತು!
ಹು ಯೋನೀಂದ್ರ ದೇಹವಾಯ್ತು! (ಹೆ)
-ಣ್ಣ ನೆಪಕ್ಕೆ ಲಂಕೆ ಹಾಳಾಯ್ತು!
ದನಾಂಗ ಸುಟ್ಟು ಬೂದಿಯಾಯ್ತು!
ಸಿಟ್ಟಿನಿಂದ ದಾಕ್ಷಾಯ್ಣಿ ಸತ್ತಾಯ್ತು! (ತಾ)
-ನುಂಡಮೃತಾನ್ನ ವ್ಯರ್ಥವಾಯ್ತು!
ಗಿರಿಜೆ ಕಾಮಾಕ್ಷ್ಯಾಗ್ಬೇಕಾಯ್ತು! (ಹೇ)
-ತು, ನಿರಂಜನಾದಿತ್ಯ ಆಯ್ತು!!!

ದತ್ತರೂಪ ಅತ್ಯಪರೂಪ! (ಸು)

-ತ್ತಮುತ್ತೆಲ್ಲಾ ತತ್ವ ಸ್ವರೂಪ!
ರೂಪ, ನಾಮಾತೀತಾತ್ಮ ರೂಪ!
ತಿತೋದ್ಧಾರಾ ಗುರು ರೂಪ!
ವಧೂತಾತ್ಮಾನಂದ ರೂಪ! (ಭೃ)
-ತ್ಯ ನೋಡ್ಬೇಕೆಂಬಾ ಸ್ಥೂಲ ರೂಪ!
ರಿಹಾರದ್ರಿಂದೆಲ್ಲಾ ಪಾಪ! (ಊ)
-ರೂರಲೇದರೆ ಸಿಕ್ಕಾ ಭೂಪ! (ಭೂ)
-ಪ ನಿರಂಜನಾದಿತ್ಯಾಧಿಪ!!!

ಸತ್ಸಂಗ, ನಿಸ್ಸಂಗ, ನಿನ್ನೊಳಗೆ! (ತ)

-ತ್ಸಂಗೈಕ್ಯ ಅಂತರಂಗದೊಳಗೆ!
ತಿ, ಸ್ಥಿತಿ, ಲಯವೆಲ್ಲೊಳಗೆ!
-ನಿಧಿಧ್ಯಾಸಾಗ್ಬೇಕ್ಪ್ರತಿ ಘಳಿಗೆ! (ದು)
-ಸ್ಸಂಗ ದೂರಕ್ಕಿದೇ ಸುಘಳಿಗೆ! (ಗ)
-ಗನ ಸದೃಶನಾದಾಗೇಳಿಗೆ!
ನಿಶ್ಚಲ ತತ್ವಾಧಾರ ಧರೆಗೆ! (ನಿ)
-ನ್ನೊಡೆಯ ಹೊರಗಿಲ್ಲೆನ್ನಿಳೆಗೆ! (ಒ)
-ಳ, ಹೊರಗಿದ್ದೂ ಅವನೊಳಗೆ! (ಹೀ)
-ಗೆ ನಿರಂಜನಾದಿತ್ಯ ನೀನಾಗೆ!!!

ಕಾದಿಹಳ್ವಧು ವರನಿಗಾಗಿ!

ದಿನ, ರಾತ್ರ್ಯನ್ವೇಷಣದಕ್ಕಾಗಿ!
ರಿನಾಮ ಸ್ಮರಣೆಯಿಂದಾಗಿ! (ಅ)
-ಳ್ವ ಬಾಲೆಗೋರ್ವ ದೊರಕಲಾಗಿ! (ಬಂ)
-ಧುಗಳ್ಮಾಡಿದರ್ಮದ್ವೆಯೊಂದಾಗಿ! (ಭ)
-ವ ಬಂಧನ ಕಟ್ಟು ಬಿಗಿಯಾಗಿ! (ಪ)
-ರಮಾರ್ಥ ಮರೆತಶಾಂತಿಯಾಗಿ!
ನಿತ್ಯಾನಂದ ಪಡೆಯಲಿಕ್ಕಾಗಿ! (ಯೋ)
-ಗಾಭ್ಯಾಸ ಮಾಡುತ್ತಿದ್ದರೊಂದಾಗಿ! (ತ್ಯಾ)
-ಗಿ, ನಿರಂಜನಾದಿತ್ಯನಿಂದಾಗಿ!!!

ಕೈಲಿ ಕಾಸಿಲ್ಲ ಮದ್ವೆ ಹೇಗೆ ಮಾಡ್ಬಲ್ಲ?

ಲಿಪಿ ವಿಧಿಯದು ಹೇಳಲಳವಲ್ಲ!
ಕಾ

ಈ ವಧು, ವರರಿಗಿದು ಗೊತ್ತಿಲ್ಲ!
ಸಿನಿಮಾಕ್ಕೆ ಹೋಗದ ದಿನವೇ ಇಲ್ಲ! (ನ)
-ಲ್ಲನಾಗತಕ್ಕವ ಬಡವನೇನಲ್ಲ!
ನೆಯವರದ್ದಿದಕ್ಕಾತಂಕವಿಲ್ಲ! (ಮ)
-ದ್ವೆಯೆಂದೋ ಆಗಿದೆಂಬರಾ ನಲ್ಲೆ, ನಲ್ಲ!
ಹೇಳುವವರ್ಯಾರೀಗಿನವರಿಗೆಲ್ಲಾ?
ಗೆರೆ ಹಾಕ್ವವ್ರಿಲ್ಲ, ದಾಟ್ವ ಮಾತೇ ಇಲ್ಲ!
ಮಾಡಬೇಕಾದದ್ದು ಮಾಡ್ಲಿ ತಾಯ್ತಂದೆಲ್ಲಾ! (ಮಾ)
-ಡ್ಬಲ್ಲ ಶಕ್ತಿ ದೇವ್ರು ಕೊಡದಿದ್ರಾಗ್ದಲ್ಲಾ! (ಪು)
-ಲ್ಲ ನಿರಂಜನಾದಿತ್ಯ ಲೀಲೆಯಿದೆಲ್ಲಾ!!!

ಪೂಜಿಸಿಕೊಳ್ಳಬೇಕೆಂಬಹಂಕಾರಿ ದೇವರಲ್ಲ! (ಪೂ)

-ಜಿಸಿ ಕೃತಾರ್ಥರಾಗಬೇಕೆಂಬಾಸೆ ಭಕ್ತರಿಗೆಲ್ಲಾ!
ಸಿಕ್ಕಿದತಿ ದೀರ್ಘ ಸೇವಾಯೋಗ ಸಾಮಾನ್ಯರಿಗೆಲ್ಲ!
ಕೊಟ್ಟದ್ದುಂಡು, ಇಟ್ಟಿಲ್ಲಿರುವ ಸ್ವಾಮಿ ಸಾಮಾನ್ಯನಲ್ಲ! (ಕ)
-ಳ್ಳ, ಸುಳ್ಳರಿಗಿದು ಹಾಸ್ಯಾಸ್ಪದವಾದ್ರೆ ಚಿಂತೆಯಿಲ್ಲ!
ಬೇಕಿಲ್ಲ ಭಕ್ತರಿಗನ್ಯರ ನಿಂದೆ, ಸ್ತುತಿಗಳೆಲ್ಲಾ!
ಕೆಂಡವಾಗಿರವನವನಾರು ವೈರಿಗಳಿಗೆಲ್ಲಾ!
ಯಲಾಡಂಬರದ ಹರಟೆಮಲ್ಲನವನಲ್ಲ!
ಹಂಗು ಯಾರದೂ ಅತನಿಗೆಂದೆಂದೂ ಇಲ್ಲವೇ ಇಲ್ಲ!
ಕಾಮನಾಟ ಅವನ ಮುಂದೆ ಆಡಗೊಡುವುದಿಲ್ಲ!
ರಿಕ್ತ ಹಸ್ತರನ್ನವ ಬರಿಗೈಲಿ ಅಟ್ಟುವುದಿಲ್ಲ!
ದೇಹ ಬೆಳೆಸಿಕೊಳ್ಳುವಭ್ಯಾಸಾತ ಇಟ್ಟುಕೊಂಡಿಲ್ಲ!
ರದರಾಜನ ಸೇವೆಗಾಗ್ಯವನಾಯುಷ್ಯವೆಲ್ಲಾ! (ವ)
-ರ ಬೇಡುವ ಹುಚ್ಚು ಆತ ಹಿಡಿಸಿಕೊಂಡವನಲ್ಲ! (ಪು)
-ಲ್ಲ ನಿರಂಜನಾದಿತ್ಯನಾರಪೂಜೆಗೂ ಬಯಸಿಲ್ಲ!!!

ಸಾಕ್ಷಾತ್ಕಾರವಾಗುವುದೆಂದರೇನಪ್ಪಾ? (ದೀ)

-ಕ್ಷಾ ಬದ್ಧನಾಗಿ ನೀನವನಾಗ್ವುದಪ್ಪಾ! (ಸ)
-ತ್ಕಾಲಕ್ಷೇಪವಿದಕ್ಕತ್ಯಗತ್ಯವಪ್ಪಾ!
ಕ್ಕಸರಾರ ಸಂಹರಿಸಬೇಕಪ್ಪಾ!
ವಾದ, ವಿವಾದಕ್ಕೆಡೆಗೊಡ್ಬಾರದಪ್ಪಾ!
ಗುರುವೇ ಪರದೈವವೆಂದು ನಂಬಪ್ಪಾ! (ಆ)
-ವುದೂ ಅವನಾಜ್ಞೆಯಿಲ್ಲದಾಗದಪ್ಪಾ! (ಎಂ)
-ದೆಂದೂ ಅವನೇ ಗತಿ ಸರ್ವರಿಗಪ್ಪಾ!
ಮೆ, ಶಮೆಯಿಂದವ ಪ್ರತ್ಯಕ್ಷವಪ್ಪಾ!
ರೇಷ್ಮೆ ಪಂಚೆಯುಟ್ರೆ ಮಡಿಯಾಗದಪ್ಪಾ!
ಯನಾದಿಂದ್ರಿಯ ಜಯ ಮಡಿಯಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯ ನಿತ್ಯ ಶುದ್ಧಪ್ಪಾ!!!

ಕಣ್ಣೇ! ನಿನಗಾಸೆ ಈ ಹೆಣ್ಣೇ? (ಹ)

-ಣ್ಣೇನಲ್ಲ ಇದು ಬರೀ ಮಣ್ಣೇ!
ನಿನ್ನುದ್ಧಾರಕೆ ಬೇಕ್ಮುಕ್ಕಣ್ಣೇ!
ಶ್ವರಕ್ಕೇಕಿನ್ನೆಣ್ಣೆ, ಬೆಣ್ಣೇ!
ಗಾಯ ಮಾಳ್ಪುದಿದನ್ನು ಡೊಣ್ಣೇ!
ಜ್ಜೆ ಮನೆಯಲೆಲ್ಲಾ ಗೊಣ್ಣೇ!
ಗೆಚ್ಚೆತ್ಕೊಳದಿದ್ರೆ ಸೊನ್ನೇ!
ಹೆದರದೇ ಹತ್ತಿಬಾ ದಿಣ್ಣೇ! (ಕ)
-ಣ್ಣೇ ನಿರಂಜನಾದಿತ್ಯ ಹೆಣ್ಣೇ!!!

ಅಜ್ಞಾನ ಪಾತಾಳದಿಂದೇರು ಜ್ಞಾನಾಕಾಶಕ್ಕೆ! (ಪ್ರ)

-ಜ್ಞಾರಾಧಕನಾಗದವ ಬೀಳ್ವ ಭೂತಲಕ್ಕೆ!
ಶ್ವರದಾಸೆ ಸುಟ್ಟು ಬಿಡ್ಬೇಕು ವಿಜಯಕ್ಕೆ!
ಪಾರಮಾರ್ಥಿಕಾಭ್ಯಾಸ ಸದಾ ಮಾಡ್ಬೇಕಿದಕ್ಕೆ!
ತಾಮಸಾಹಾರ, ವಿಹಾರಗಳ್ವಿರೋಧದಕ್ಕೆ! (ಕೆ)
-ಳಗಿಂದೊಂದೊಂದೇ ಮೆಟ್ಲುಹತ್ತಿ ಹೋಗು ಮೇಲಕ್ಕೆ! (ಅಂ)
-ದಿಂದಿನನುಭವ ಸಹಾಯವಾಗ್ಲೀಗದಕ್ಕೆ! (ಒಂ)
-ದೇ ನೆಗೆತ ಸಾಕಾಕಾಶಕ್ಕೆಂಬುದು ನಾಶಕ್ಕೆ!
ರುಜುಮಾರ್ಗಗಾಮಿಯಾಗ್ಬೇಕಿದು ಸಿದ್ಧಿಸ್ಲಿಕ್ಕೆ! (ಆ)
-ಜಾ





ಧಾರಕನಾಗಿರಬೇಕು ಗುರುಚಿತ್ತಕ್ಕೆ!
ನಾಮ, ರೂಪದ ಭೇದವಿರಬಾರದಿದಕ್ಕೆ!
ರಣಾಗಬೇಕು ಗುರುಶಿವನ ಪಾದಕ್ಕೆ! (ಅ)
-ಕ್ಕೆ, ಸುಜ್ಞಾನ ನಿರಂಜನಾದಿತ್ಯನಿಂದೆಲ್ಲಕ್ಕೆ!!!

ಆಪ್ತ ಮಂತ್ರ ಜಪಿಸುತ್ತಲಿಪ್ತನಾಗಯ್ಯಾ! (ಗು)

-ಪ್ತವಾಗಿದು ಸತತ ಸಾಗುತ್ತಿರಲಯ್ಯಾ!
ಮಂಡೆ ಬೋಳ್ಸಿ ಯತಿಯಾಗ್ಬೇಕೆಂದಿಲ್ಲವಯ್ಯಾ!
ತ್ರಯಮೂರ್ತಿ ದತ್ತನಾಜ್ಞೆಯಂತಿದ್ರಾಯ್ತಯ್ಯಾ!
ನನ, ಮರಣವದರಿಂದಂತ್ಯವಯ್ಯಾ!
ಪಿಸುಣರ ಮಾತೆಂದಿಗೂ ಕೇಳ್ಬಾರದಯ್ಯಾ!
ಸುಷುಪ್ತಿ ಸುಖ ಸಮಾಧಿಯಿಂದಾಗಲಯ್ಯಾ! (ಚಿ)
-ತ್ತಶುದ್ಧಿಯಾಗದೆ ಇದು ಸಿದ್ಧಿಸದಯ್ಯಾ! (ಒ)
-ಲಿದರೆ ಗುರುರಾಜ ಎಲ್ಲಾ ಸಾಧ್ಯವಯ್ಯಾ! (ಆ)
-ಪ್ತನವನೊಬ್ಬನೇ ಈರೇಳು ಲೋಕಕ್ಕಯ್ಯಾ!
“ನಾನೇ ನೀನು” ಅನ್ನುವ ಉದಾರಿನ್ಯಾರಯ್ಯಾ?
ರ್ವ ವಿವರ್ಜಿತನಿದನರಿವನಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಗಿದು ಸಿದ್ಧಿಯಯ್ಯಾ!!!

ಉಷಾ! ಅನಿರುದ್ಧ ತಾನೊಬ್ಬ ಪುರುಷ! (ದೋ)

-ಷಾರೋಪಣೆ ಮಾಡುವುದಲ್ಲ ಪೌರುಷ!
ಪ್ಪನಮೇಲೆ ಬಂತು ನಿನಗೆ ರೋಷ! (ಅ)
-ನಿರುದ್ಧನೊಡನಾಟ ನಿನಗೆ ತೋಷ! (ಗು)
-ರು ಗೋಪಾಲ ನಿಮಗಿತ್ತ ಪಾರಿತೋಷ! (ಶು)
-ದ್ಧವಾದುದಾಗ ಬಾಣನಸು ಸಂತೋಷ!
ತಾಮಸ ಬುದ್ಧಿಯಲ್ಲಿ ತುಂಬಿತ್ತು ದ್ವೇಷ! (ತಾ)
-ನೊಪ್ಪದಿದ್ದನು ಬಾಣ ವೈಷ್ಣವ ವೇಷ! (ಕೊ)
-ಬ್ಬ ಮುರಿದು ಕೃಷ್ಣ ಕಳೆದನು ದೋಷ!
ಪುರಾಣದರ್ಥ ತಿಳಿದ್ಬಾಳ್ಬೇಕ್ಮಾನುಷ! (ಪ)
-ರುಷ ಸ್ಪರ್ಶದಿಂದ ಪಾಷಾಣ ನಿರ್ದೊ

ಷ! (ದೋ)
-ಷದೂರ ನಿರಂಜನಾದಿತ್ಯಾ ಪರುಷ!!!

ಗುಹ್ಯಾ! ಸಾಕ್ಮಾಡೀಗ ನಿನ್ನ ಕಾರ್ಯ! (ಬಾ)

-ಹ್ಯಾನ್ತರ ಶುದ್ಧಿಗಿರ್ಬೇಕು ವೀರ್ಯ!
ಸಾಯಜ್ಯ ಸಾಧನೆಗದೇ ಸ್ಥೈರ್ಯ! (ಏ)
-ಕ್ಮಾಡಿದ್ನೋ ನಿನ್ನನ್ನಾ ಬ್ರಹ್ಮ ಸೂರ್ಯ! (ಇ)
-ಡೀ ದೇಹಕ್ಕೇ ನಿನ್ನಾಟ ಸೌಕರ್ಯ!
ತಿಸುವ ನಿನಗೇಕೀ ಚೌರ್ಯ?
ನಿಶಿ, ದಿನ ನಿನ್ಗಾಸೆ ಸೌಂದರ್ಯ! (ಅ)
-ನ್ನ, ನೀರಿಲ್ಲದಾಗೇನಿದೆ ಶೌರ್ಯ?
ಕಾಪಾಡಿಕೋ ಸ್ಥೈರ್ಯ, ಧೈರ್ಯ, ಶೌರ್ಯ! (ಆ)
-ರ್ಯ ನಿರಂಜನಾದಿತ್ಯ ಆಚಾರ್ಯ!!!

ಕುರುಡ ಧೃತರಾಷ್ಟ್ರ ಆಳಿದ! (ಕು)

-ರುಕುಲವನ್ನೇ ಉಳಿಸದಾದ! (ಮ)
-ಡದಿಗಶಾಂತಿಯುಂಟುಮಾಡಿದ!
ಧೃತಿಗೆಟ್ಟು ರಾಷ್ಟ್ರ ಕೆಡಿಸಿದ!
ಮ್ಮನ ಮಕ್ಕಳನ್ನೋಡಿಸಿದ!
ರಾಗ, ದ್ವೇಷಕ್ಕಾದರ ತೋರಿದ! (ರಾ)
-ಷ್ಟ್ರಧ್ವಜಕ್ಕೆ ರಕ್ತಧಾರೆರೆದ!
ಳಿದ, ಬಳಲಿದ, ಅಳಿದ! (ಉ)
-ಳಿವುದಾವುದೆಂದರಿಯದಾದ! (ಇ)
-ದ, ನಿರಂಜನಾದಿತ್ಯ ನೋಡಿದ!!!

ಭಗವದ್ಭಕ್ತರೆಂದರಭಿಮಾನ!

ರ್ವಿಗಳಿಗಿದೆ ದುರಭಿಮಾನ!
ಸ್ತ್ರಾಭರಗಳಿಂದಲ್ಲ ಮಾನ! (ತ)
-ದ್ಭಜನಾನಂದರಿಗಾತ್ಮಾಭಿಮಾನ! (ಮು)
-ಕ್ತ ಜೀವನ ಆವರಿಗೆ ಸನ್ಮಾನ! (ಯಾ)
-ರೆಂದನ್ನದೇ ಮಾಡುವರು ಜೀವನ!
ತ್ತನವರಿಗೀವ ಸಂಭಾವನಾ! (ವಿ)
-ರಕ್ತಿ ಅವರಿಗೆ ಸರ್ವಾಭರಣ!
ಭಿಕ್ಷಾನ್ನ ಪಾವನವೆಂಬ ಚಿಂತನಾ!
ಮಾರಾರಿಯೇ ಗುರುವೆಂಬ ಭಾವನಾ!
ಮೋ! ನಿರಂಜನಾದಿತ್ಯಾತ್ಮಾನನಾ!!!

ಜನ ಸಂಪರ್ಕದಿಂದ ಅಶಾಂತಿ!

ಮಸ್ಕರಿಸಿ ಮಾಳ್ಪರು ವಿನಂತಿ!
ಸಂಚಿತವಿರ್ಪಾಗೆಂತು ವಿಶ್ರಾಂತಿ!
ರಮಾರ್ಥಿಯಾದರಿಲ್ಲ ಭ್ರಾಂತಿ! (ಮ)
-ರ್ಕಟ ಮನಕ್ಬೇಕ್ನಾನಾ ವದಂತಿ! (ಅಂ)
-ದಿಂದಿನ ಮಾತೇಕೆಂಬ ವೇದಾಂತಿ!
ಬ್ಬಾಳಿಕೆ ಹೆಚ್ಚಿದಾಗ ಕ್ರಾಂತಿ!
ಮರಾತ್ಮ ನಿಷ್ಠೆಯೇ ಪ್ರಶಾಂತಿ! (ಆ)
-ಶಾಂಬುಧಿವಾಸನಿಗಿಲ್ಲ ಶಾಂತಿ! (ಗ)
-ತಿ ನಿರಂಜನಾದಿತ್ಯ ಸಂಗಾತಿ!!!

ತಬ್ಬಲಿಯನ್ನೇಕೆ ನೋಯಿಸಿದೆ? (ಉ)

-ಬ್ಬಸ ಬರುವಷ್ಟೋಡಾಡಿಸಿದೆ! (ಒ)
-ಲಿದೀಗಾದರೂ ಬರಬಾರದೇ? (ಪ್ರಾ)
-ಯ ನಿನಗಾಗಿ ವ್ರಯ ಮಾಡಿದೆ! (ಇ)
-ನ್ನೇನೆನ್ನಿಂದಾಗಬೇಕಾದದ್ದಿದೆ?
ಕೆರೆಗೆ ಬೀಳುವುದುಳಿದಿದೆ!
ನೋಡ್ಬೇಕಾದರದ ಹೇಳ್ಬಾರದೇ? (ಬಾ)
-ಯಿ ಮುಚ್ಚಿಸಿದರೂ ಸಾಕಾಗದೇ? (ಘಾ)
-ಸಿಯಾದಮೇಲೇನಾದರೇನ್ತಂದೇ? (ತಂ)
-ದೆ, ನಿರಂಜನಾದಿತ್ಯ ನೀನೆಂದೆ!!!

ಮಣ್ಣಿನ ಗೊಂಬೆಯಿದನ್ನದ್ದಬೇಡ್ವೋ ನೀರಲ್ಲಿ! (ಕ)

-ಣ್ಣಿನಾನಂದಕ್ಕಾದರೂ ಇರಿಸೋ ನೆಲದಲ್ಲಿ!
“ನಶ್ವರವಿದು ದೇಹ” ಸಂದೇಹವಿಲ್ಲದ್ರಲ್ಲಿ!
ಗೊಂಬೆ ಗುಡಿಗಾರನಾನಂದಕ್ಕಾಗಿರ್ಪುದಿಲ್ಲಿ!
ಬೆಕ್ಕೆಗಳ ತುಂಬಬಾರದು ಅವನದ್ರಲ್ಲಿ! (ಬಾ)
-ಯಿ, ಕಣ್ಣು, ಕಿವಿ ಮಾಡಲೀಗ ಸೇವೆ ಅದ್ರಲ್ಲಿ!
ಶೇಂದ್ರಿಯಾಧಿಪನಾತನೆಂಬರಿವಾಗ್ಲಿಲ್ಲಿ! (ತ)
-ನ್ನ ರೀತಿ, ನೀತಿಯಂತಾಳಲೆಲ್ಲವನ್ನೀಗಿಲ್ಲಿ! (ಬಿ)
-ದ್ದರೂ, ಎದ್ದರೂ, ಇರ್ಬೇಕವನ ನೆನಪಿಲ್ಲಿ!
ಬೇರಿನ್ನೇನನ್ನೂ ಬೇಡುವುದಿಲ್ಲೀ ಜನ್ಮದಲ್ಲಿ! (ಬೇ)
-ಡ್ವೋ ಇಷ್ಟು ನಿರ್ದಯೆ ತನುಜನಾದವನಲ್ಲಿ!
ನೀಚರೊಡನಾಟವೆಂದಿಗೂ ಇಲ್ಲದಿರ್ಲಿಲ್ಲಿ!
ಮೇಶ, ಉಮೇಶ, ವಾಣೀಶರೊಂದಾಗಿರ್ಲಿಲ್ಲಿ! (ಇ)
-ಲ್ಲಿ, ನಿರಂಜನಾದಿತ್ಯಾನಂದ ನಿಲಯದಲ್ಲಿ!!!

ಕೋಪಿಯಲ್ಲಾ ಯೋಗೀಶ ಶಿವ!

ಪಿನಾಕಿಧರ ಹರಾ ಶಿವ!
ಮನ ಗೆಲಿದವಾ ಶಿವ! (ಕ)
-ಲ್ಲಾದ ಲಿಂಗದೊಳಿರ್ಪಾ ಶಿವ!
ಯೋಗಕ್ಷೇಮ ನೋಳ್ಪವಾ ಶಿವ!
ಗೀತಾರ್ಥ ಸಾರಾ ಗುರು ಶಿವ!
ರಣರಾಭರಣಾ ಶಿವ!
ಶಿವೆಯರಸಾ ಸದಾಶಿವ! (ಅ)
-ವ ನಿರಂಜನಾದಿತ್ಯ ಶಿವ!!!

ಮಣ್ಣು ಹಾಕಿಕೊಳ್ಬೇಡ ಬಾಯಿಗೆ! (ಉ)

-ಣ್ಣುವುದಕ್ಕಿಕ್ಕೆನ್ನನ್ನಪೂರ್ಣೆಗೆ!
ಹಾಲ್ಕೀರ್ಬಡಿಸುವಳ್ಮಗನಿಗೆ!
ಕಿರುಕುಳ ಕೊಡ್ಬಾರ್ದವಳಿಗೆ!
ಕೊಟ್ಟದ್ದುಂಡರಾನಂದವಳಿಗೆ! (ಕೇ)
-ಳ್ಬೇಡವಳನ್ನಸುರರಡುಗೆ!
ಮರುಧರ ಸುಖನಾಕೆಗೆ
ಬಾಳ ನೇತ್ರನೆಂಬರವನಿಗೆ! (ತಾ)
-ಯಿ, ತಂದೆ, ಅವರೀರ್ವರೆಮಗೆ!
ಗೆಳೆಯ ನಿರಂಜನಾದಿತ್ಯಾಗೆ!!!

ಪಾಲ್ಕೇಳ್ಲಿಕ್ಕೆ ಮಕ್ಳು, ಹೇಲ್ಬಾಚ್ಲಿಕ್ಕಾಳ್ಗಳು! (ನಾ)

-ಲ್ಕೇ ನಾಲ್ಕು ದಶರಥನಿಗೊಳ್ಳೇ ಮಕ್ಕು! (ಆ)
-ಳ್ಲಿಕ್ಕಯೋಗ್ಯರು ಧೃತರಾಷ್ಟ್ರನ ಮಕ್ಳು! (ಬೆ)
-ಕ್ಕೆಗೀಡಾದಿವರಿಗನೇಕಾಳುಗಳು!
ನೆಯಿಲ್ಲದಾದ್ರು ಪಾಂಡುವಿನ ಮಕ್ಲು! (ಆ)
-ಕ್ಳು, ರಾಜ್ಯ, ಕೋಶವೆಲ್ಲಾ ಕಳಕೊಂಡ್ರಾ ಮಕ್ಳು!
ಹೇಳ್ವವ್ರು, ಕೇಳ್ವವ್ರು, ಆಳ್ವರೆಲ್ಲಾಳ್ಗಳು! (ಕೀ)
-ಲ್ಬಾಗಿಲಿಗಿಕ್ಕಿದರು ತಮ್ಮನ ಮಕ್ಳು! (ಹಂ)
-ಚ್ಲಿಕ್ಕಾಸ್ತಿ, ಪಾಸ್ತಿ ಶುರು ಮಾಡಿದ್ರಾ ಮಕ್ಳು! (ಕ)
-ಕ್ಕಾಬಿಕ್ಕಿಯಾಗಿ ನೋಡ್ತಿದ್ದರಾಳುಗಳು! (ಆ)
-ಳ್ಗಳುಂಡ ಮನೆಗೆರ್ಡೆಣಿಸದಾಳ್ಗಳು! (ಆ)
-ಳುವರು ನಿರಂಜನಾದಿತ್ಯನ ಮಕ್ಳು!!!

ಯಾರಿವಳೊಳಗೆ ಬಂದವಳು? (ಹ)

-ರಿನಾಮ ಹಾಡುತ್ತಿರುತ್ತಿಹಳು!
ಸ್ತ್ರಲಂಕಾರವಿಲ್ಲದಿಹಳು! (ಬಾ)
-ಳೊಡೆಯನಿಗೊಪ್ಪಿಸುತ್ತಿಹಳು! (ಕೊ)
-ಳಕು, ಥಳಕೇನಿಲ್ಲದಿಹಳು!
ಗೆಳೆತನಕ್ಕಪೇಕ್ಷಿಸಿಹಳು!
ಬಂಧು, ಬಳಗ ನೀನೆನ್ನುವಳು!
ಯೆ ತೋರಿರ್ಸಿಕೊಳ್ಳೆನುವಳು!
ರಾಂತರ್ಮುಖಿ ಮನಸ್ಸಿನವಳು! (ಬಾ)
-ಳು ನಿರಂಜನಾದಿತ್ಯಾತ್ಮನೊಳು!!!

ದೇಶದೇಕೀಕರಣವೆಂದೋ ಆಯ್ತು!

ರಣರ ಕೇಳ್ವರಿಲ್ಲದಾಯ್ತು!
ದೇವರೆಲ್ಲಿಹನೆಂಬುದೂ ಶುರ್ವಾಯ್ತು!
ಕೀಳ್ಮೇಲೆಂಬುದೊಳ್ಗೊಳ್ಗೇ ತುಂಬಿಹೋಯ್ತು!
ರಣತ್ರಯ ಶುದ್ಧಿಗಲಕ್ಷ್ಯಾಯ್ತು!
ಕ್ಕಸ ಬುದ್ಧಿ ಕಾಡತೊಡಗಿತು! (ಗ)
-ಣ ನಾಯಕನಿಷ್ಟದಂತಿರದಾಯ್ತು!
ವೆಂಕಟೇಶಗಿಟ್ಟ ಮೊರೆ ವ್ಯರ್ಥಾಯ್ತು!
ದೋಷಾರೋಪಣೆ ಮಕ್ಕಳ ಮೇಲಾಯ್ತು!
ಗ್ಬೇಕಾದದ್ದೂ ಆಗ್ಬಾರದ್ದೂ ಆಯ್ತು! (ಆ)
-ಯ್ತು ನಿರಂಜನಾದಿತ್ಯಗೊಪ್ಪಿಸ್ಯಾಯ್ತು!!!

ಸುರುಚಿ, ಸುನೀತಿಯರಿಂದಿಹ ಪರ!

ರುಚಿ, ಶುಚಿಯಾದಾಹಾರಾರೋಗ್ಯಕರ!
ಚಿರಕಾಲವಿರಲಾರದೀ ಕುಟೀರ!
ಸುಮತಿ, ಶಾಂತಿ ಸಾಮ್ರಾಜ್ಯಕ್ಕೆ ಆಧಾರ!
ನೀಚಬುದ್ಧಿಯಿಂದ ನಷ್ಟ, ಕಷ್ಟಪಾರ!
ತಿಳಿದಿದನು ಧ್ರುವ ಬಿಟ್ಟ ತನ್ನೂರ!
ಶಸ್ಸು ತಪದಿಂದಾಗ್ಲಾಳಿದನೂರ! (ಯಾ)
ರಿಂದಾಗದುನ್ನತ ಸ್ಥಾನ ಪಡೆದ!
ದಿಕ್ಸೂಚಿಯಾಗಿ ಉತ್ತರಮುಖಿಯಾದ! (ಶ್ರೀ)
-ಹರಿಯ ಕೃಪಾಶೀರ್ವಾದದಿಂದದಾದ!
ರಮಾರ್ಥದ ಹಿರಿಮೆ ತೋರಿಸಿದ! (ವ)
-ರದರಾಜ ನಿರಂಜನಾದಿತ್ಯನಾದ!!!

ಕಲ್ಲು ಗೊಂಬೆಗಳ ನಂಬಿದ್ದೊಂದು ಕಾಲ! (ಹು)

-ಲ್ಲು ಸೊಪ್ಪುಗಳನ್ನು ತಿಂದದ್ದೊಂದು ಕಾಲ!
ಗೊಂಡಾರಣ್ಯದಲ್ಲೋಡಾಡಿದ್ದೊಂದು ಕಾಲ!
ಬೆಟ್ಟ, ಗುಡ್ಡ ಹತ್ತಿ ಕೂತದ್ದೊಂದು ಕಾಲ!
ಡ್ಡ, ಮೀಸೆ, ಕೂದ್ಲು ಬೋಳ್ಸಿದೊಂದು ಕಾಲ! (ಕೊ)
-ಳ, ನದಿ, ಭಾವಿ ನೀರ್ಸ್ನಾನ ಒಂದು ಕಾಲ!
“ನಂದಿವಾಹನಾ! ಬಾ” ಎಂದದ್ದೊಂದು ಕಾಲ!
ಬಿನ್ನಹ ವ್ಯರ್ಥಾಯ್ತೆಂದತ್ತದ್ದೊಂದು ಕಾಲ (ಇ)
-ದ್ದೊಂದೊಂದಭ್ಯಾಸವೂ ಮಾಡಿದ್ದೊಂದು ಕಾಲ!
ದುರ್ವಿಧಿಗಾಗಿ ಕೊರಗಿದ್ದೊಂದು ಕಾಲ!
ಕಾಲಕ್ರಮೇಣಾದಾತ್ಮಾನಂದಕ್ಕೀ ಕಾಲ! (ಕಾ)
-ಲ, ನಿರಂಜನಾದಿತ್ಯದತ್ತಗೀ ಕಾಲ!!!

ಉಚ್ಚೆ ಕುಡಿದ್ರೂ ತನ್ನಿಚ್ಛೆಯಲ್ಲಿರ್ಬೇಕು! [ಕೆ]

-ಚ್ಚೆದೆಗಾರಬಲರ ಕಾಡದಿರ್ಬೇಕು!
ಕುಲೀನೆ ವೇಶ್ಯಾ ಸ್ನೇಹ ಮಾಡದಿರ್ಬೇಕು! (ನೀ)
-ಡಿದ್ರೂ ಬೀಡಿ, ಸಿಗ್ರೇಟು ಸೇದದಿರ್ಬೇಕು! (ತ)
-ದ್ರೂಪ ಸಿದ್ಧಿಗಿದನ್ನೆಲ್ಲಾ ಪಾಲಿಸ್ಬೇಕು!
ತ್ವ ಚಿಂತನೆ ಸದಾ ಮಾಡುತ್ತಿರ್ಬೇಕು! (ತಿ)
-ನ್ನಿಸಲ್ತಂದ್ರೂ ಮಾಂಸಾಹಾರ ವರ್ಜಿಸ್ಬೇಕು! (ಇ)
-ಚ್ಛೆಗಳೈಹಿಕಕ್ಕೆ ಕಡಿಮೆಯಾಗ್ಬೇಕು! (ಪ್ರಾ)
-ಯಕ್ಕೆ ತಕ್ಕ ವ್ಯಾಯಾಮ ನಿತ್ಯ ಮಾಡ್ಬೇಕು!
(ಎ)ಲ್ಲಿ, ಹೇಗೆ ನಡ್ಕೊಳ್ಬೇಕೆಂದರಿತಿರ್ಬೇಕು! (ಬ)
-ರ್ಬೇಕ್ಸನ್ನಿಧಿಯಲ್ಲಿಷ್ಟ ಜಪ ಮಾಡ್ಬೇಕು!
ಕುಲ ನಿರಂಜನಾದಿತ್ಯನದ್ದಾಗ್ಬೇಕು!!!

ಹುಟ್ಟಿದಾಗಿದ್ದಂತೆ ಜಟ್ಟಿಯಾದಾಗಿಲ್ಲ! [ಬು]

-ಟ್ಟಿಯಲ್ಲಿಟ್ಟ ಕಾಯ್ಮತ್ತೆ ಹಣ್ಣಾಗ್ವುದೆಲ್ಲಾ!
ದಾಸ್ಯದ ದುಃಖ ಸ್ವಾತಂತ್ರ



ಬಂದಾಗಿಲ್ಲ!
ಗಿಡವಾಗಿದ್ದಾಗಿದ್ದಂತೆ ಮರವಿಲ್ಲ! (ಬಿ)
-ದ್ದಂದಿದ್ದ ನೋವೆದ್ದೋಡಾಡುವಾಗೇನಿಲ್ಲ!
ತೆರೆ ಬಿದ್ದಾಗಿದ್ದಂತದ್ದತ್ತಿದಾಗಿಲ್ಲ!
ವ್ವನದಾನಂದ ವೃದ್ಧಾಪ್ಯದಲ್ಲಿಲ್ಲ! (ಹಿ)
-ಟ್ಟಿನ ರುಚಿ, ರೂಪ ರೊಟ್ಟಿಯಾದಾಗಿಲ್ಲ!
ಯಾದವೇಂದ್ರನಂತವನ ಮಕ್ಕಳಿಲ್ಲ! (ಆ)
-ದಾಯ ಬಂದಾಗಾದಾನಂದ ನಷ್ಟಕ್ಕಿಲ್ಲ! (ಭೋ)
-ಗಿಯ ದುಃಖ ಯೋಗಿಯಾದವನಿಗಿಲ್ಲ! (ಪು)
-ಲ್ಲ ನಿರಂಜನಾದಿತ್ಯಗಾನಂದವೆಲ್ಲಾ!!!

ಪ್ರಕಟವಾಗೆನ್ನಲ್ಲಿಂತು ಶ್ರೀ ಗುರುವೇ! [ತ್ರಿ]

ರಣದಲ್ಲಿ ಸದಾ ಇರು ಗುರುವೇ! (ಊ)
-ಟ, ಉಪ್ಚಾರ ನಿನ್ನಿಂದೆನಗೆ ಗುರುವೇ!
ವಾಸವಾಗಿರ್ಮೂರವಸ್ಥೆಯಲ್ಲೂ ಗುರುವೇ!
ಗೆರೆ ಹಾಕ್ಯೆನ್ನನ್ನೊಳಗಿರಿಸು ಗುರುವೇ
(ನಿ)ನ್ನದೀ ಸ್ಥೂಲ, ಸೂಕ್ಷ್ಮ ಕಾರಣ ಗುರುವೇ! (ಎ)
-ಲ್ಲಿಂದ ಬಂತೋ ಅಲ್ಲೇ ನೆಲಸ್ಲಿ ಗುರುವೇ!
ತುರಿಯಾತೀತವೇ ಆ ಗುರಿ ಗುರುವೇ!
ಶ್ರೀ ಗುರು ಶಿವ ಸಾನ್ನಿಧ್ಯದು ಗುರುವೇ!
ಗುರು ದತ್ತಾತ್ರೇಯಾವಾಸದು ಗುರುವೇ! (ಇ)
-ರುವಂತಾಗ್ಲಂತು ಚಿರಕಾಲ ಗುರುವೇ!
ವೇದಾಂತ ನಿರಂಜನಾದಿತ್ಯ ಗುರುವೇ!!!

ಸತ್ತದ್ದು ಬದುಕುವುದೇನತಿಶಯ! [ದ]

-ತ್ತನ ಚಿತ್ತಕ್ಕೆ ಬಂದರೆ ನಿಸ್ಸಂಶಯ! (ಸ)
-ದ್ದು ಮಾಡದೇ ಮಲಗಿದ್ದರೆ ನಿರ್ಭಯ!
ರುತ್ತವನಾಗಿ ಮಾಡುವ ಸಹಾಯ!
ದುರುದ್ದೇಶವಿದ್ದವಗಾತನೊಲಿಯ!
ಕುತರ್ಕ ಮಾಡದೇ ಕಾಯ್ಬೇಕು ಸಮಯ! (ಆ)
-ವುದೂ ನಾವ್ನೆನದಂತಾಗದು ವಿಜಯ!
ದೇವರೆ ಗತಿಯೆಂದಿದ್ದರೆಲ್ಲಾದಾಯ!
ಕ್ರನ ಸೀಳುತುಳಿಸಿತ್ತಾಗಾನೆಯ!
ತಿಳಿದಿದನು ಸ್ಮರಿಸು ಶ್ರೀ ಹರಿಯ!
ಬರಿ ಸೇರಿದಳು ರಾಮನೆಡೆಯ!
ಮಗೆ ನಿರಂಜನಾದಿತ್ಯಾಶ್ರಯ!!!

ನಾಟಕದ ಪಾತ್ರಗಳು ಹಂಚ್ಯಾಗಿದೆ! [ಆ]

-ಟ ಶುರುವಾಗಿ ಬಹಳ ಹೊತ್ತಾಗಿದೆ!
ರುಣಾದ್ಯೊಂಬತ್ತು ರಸ ಅದ್ರಲ್ಲಿದೆ!
ರಿದ್ರ, ಶ್ರೀಮಂತರಭಿನಯವಿದೆ!
ಪಾತ್ರಕ್ಕೆ ತಕ್ಕ ವೇಷ ಹಾಕ್ಬೇಕಾಗಿದೆ! (ಹ)
-ತ್ರ ದೂರದೂರುಗಳ ದೃಶ್ಯದ್ರಲ್ಲಿದೆ!
ಗನವೆಲ್ಲಕ್ಕೂ ಛತ್ರಿಯಂತೆ ಇದೆ! (ಅ)
-ಳುವುದೂ, ಆಳುವುದೆಲ್ಲಾ ಅದ್ರಲ್ಲಿದೆ!
ಹಂದಿ, ನಾಯ್ನರಿಗಳೋಡಾಟವೂ ಇದೆ! (ಪಾ)
-ಚ್ಯಾದಿ ಕೊಳೆಯುಳ್ಳ ಕೊಳಗಳೂ ಇದೆ!
ಗಿಡ, ಮರ, ಬಳ್ಳಿ ಮುಂತಾದದ್ದೂ ಇದೆ! (ತಂ)
-ದೆ ನಿರಂಜನಾದಿತ್ಯನಲ್ಲೆಲ್ಲಾ ಇದೆ!!!

ಹೆಣ್ಣು, ಮಣ್ಣು, ಹೊನ್ನು ಶಾಂತಿ ಕೆಡಿಸಿತು! (ಕ)

-ಣ್ಣು ಮೈಯೆಲ್ಲಾಗೀಂದ್ರಗಶಾಂತಿಯಾಯಿತು!
ಣ್ಣಿಗಾಗಿ ಕೌರವನಂತ್ಯವಾಯಿತು! (ಮ)
-ಣ್ಣುಪಾಲಾಗೀವಂಶ ಹಾಳಾಗಿ ಹೋಯಿತು!
ಹೊನ್ನು ಕೂಡಿಟ್ಟದೆಲ್ಲಾ ಸರ್ಕಾರಕ್ಕಾಯ್ತು! (ತಿ)
-ನ್ನುವುದಕ್ಕೂ ಗತಿಯಿಲ್ಲದಂತಾಯಿತು!
ಶಾಂಭವಿಯಾದರ್ಶ ಮರೆತೇಹೋಯಿತು!
ತಿಪ್ಪೆಗುಂಡಿಯ ಕಂಪು ಹಿತವಾಯಿತು!
ಕೆಟ್ಟ ಕಟ್ಟಳೆಗಳು ಜಾರಿಗೆ ಬಂತು! (ಬೀ)
-ಡಿ, ಸಿಗರೇಟ್ಟ್ರಾಂದಿಗೆ ಧನ ವ್ರಯಾಯ್ತು!
ಸಿಹಿ ವಾತಾವರಣ ಕಹಿಯಾಯಿತು!


ರಿಯಾತೀತ ನಿರಂಜನಾದಿತ್ಯಾಯ್ತು!!!

ನೋಡಿದೆ, ನಾನಿನ್ನೊಡನಾಡಿದೆ! (ನೀ)

-ಡಿಷ್ಟಸಿದ್ಧಿಯನೆಂದು ಬೇಡಿದೆ! (ತಂ)
-ದೆ ನಿನ್ನಂತೆನ್ನ ಮಾಡೆಂದ್ಹಾಡಿದೆ!
ನಾಮ ಸಂಕೀರ್ತನೆಯ ಮಾಡಿದೆ!
ನಿಶಿ, ದಿನಾಖಂಡ ಸೇವೆ ಗೈದೆ! (ನ)
-ನ್ನೊಡಲೇ ನಿನ್ನ ಗುಡಿಯಾಗ್ಲೆಂದೆ! (ತ)
-ಡಮಾಡದೇ ದರ್ಶನ ಕೊಡೆಂದೆ!
ನಾಳೇನಾದೀತೆಂದರಿಯೆನೆಂದೆ! (ಬ)
-ಡಿಸು ಹಸಿದವನಿಗೀಗೆಂದೆ! (ತಂ)
-ದೆ, ನಿರಂಜನಾದಿತ್ಯಗಿಂತೆಂದೆ!!!

ನಿನ್ನ ಕರ್ತವ್ಯ ನೀನು ಮಾಡದಿದ್ದರೆ! (ನ)

-ನ್ನನ್ನು ದೂರಿ ನೀನು ಸುಖ ಪಡಲಾರೆ!
ನ್ಸು ನೆನ್ಸಲ್ಲೂ ನಾನು ದ್ರೋಹಿಯಾಗ್ಲಾರೆ! (ವ)
-ರ್ತಮಾನಕಾಲ ಬಿಟ್ಟೇನೂ ಯೋಚಿಸ್ಲಾರೆ! (ದಿ)
-ವ್ಯಜೀವನಕ್ಕಪಕೀರ್ತಿ ತರಲಾರೆ!
ನೀಚರನ್ನೆಂದಿಗೂ ಹತ್ರ ಸೇರಿಸ್ಲಾರೆ! (ತ)
-ನುವಿನಲ್ಲಾಸೆ ನಾನಿಟ್ಟುಕೊಳ್ಳಲಾರೆ!
ಮಾಯೆಯನ್ನು ನಂಬಿ ಮೋಸಹೋಗಲಾರೆ!
ಮರುಧರನಾದರ್ಶ ಬಿಡಲಾರೆ!
ದಿಕ್ಕುಗೆಟ್ಟು ನಾನವನ ಬಿಟ್ಟಿರ್ಲಾರೆ!
(ಸ)ದ್ದಡಗದಿದ್ದರೆ ನೀನು ನಾನಾಗ್ಲಾರೆ! (ಹೊ)
-ರೆ ನಿರಂಜನಾದಿತ್ಯಗೀ ವಸುಂಧರೆ!!!

ಕೊಳೆತ ಹಣ್ಣು ತಿನ್ನಬಾರದು! (ಬೆ)

-ಳೆಸಿದ್ದು ತಾವಾದ್ರೂ ತಿನ್ಬಾರದು!
ನ್ನೆಚ್ಚರಿಕೆ ತಾ ಬಿಡ್ಬಾರದು!
ಣಕ್ಕಾಗಿ ರೋಗಿಯಾಗ್ಬಾರದು! (ಉ)
-ಣ್ಣುವನ್ನ ಹೊಲಸಾಗಿರ್ಬಾರದು!
ತಿಪ್ಪೆಗೆಸೆಯಲೂ ಹೇಸ್ಬಾರದು! (ತಿ)
-ನ್ನಲಪ್ಪ ಹಣ್ಣು ತರ್ದಿರ್ಬಾರದು!
ಬಾಯಿರುಚಿಯೊಂದೇ ನೋಡಿದ್ರಾಗ್ದು!
ಕ್ತ ಪುಷ್ಟಿಕರವಾದ್ರಾಗ್ಬಹ್ದು! (ಇ)
-ದು, ನಿರಂಜನಾದಿತ್ಯ ಹೇಳಿದ್ದು!!!

ಹೃದಯಾಂತರಾಳದಿಂದ ಚಿಮ್ಮುತಿದೆ!

ತ್ತಗುರುವಿನುಪದೇಶ ವಾಕ್ಸುಧೆ! (ಮಾ)
-ಯಾಂಧಕಾರ ನಾಶಕ್ಕದು ಬೇಕಾಗಿದೆ!
ನ್ನ ತಾನರಿಯಾದೇ ಕಷ್ಟವಾಗಿದೆ!
ರಾಗ, ದ್ವೇಷಗಳಿಂದೂರುರಿಯುತ್ತಿದೆ! (ತೋ)
-ಳಗಳಾರ್ಭಟ ಕೇಳಿ ಬರುತ್ತಲಿದೆ! (ಇಂ)
-ದಿಂದಿರಾಧವನೇ ಕಾಯಬೇಕಾಗಿದೆ!
ಬ್ಬಾಳಿಕೆ ಪರರಿಂಗ್ಬಾರ್ದಾಗಿದೆ!
ಚಿತ್ತಶುದ್ಧಿಯಾಭ್ಯಾಸ ಮಾಡ್ಬೇಕಾಗಿದೆ! (ನ)
-ಮ್ಮುದ್ಧಾರ ನಮ್ಮಿಂದಲೇ ಆಗ್ಬೇಕಾಗಿದೆ!
ತಿಳಿವಿನ ತೀರ್ಥಸ್ನಾನಗತ್ಯಾಗಿದೆ! (ತಂ)
-ದೆ ನಿರಂಜನಾದಿತ್ಯೇಚ್ಛೆಯಿಂದಾಗಿದೆ!!!

ಇಳಿತ, ಭರತಳಿದಾಗಳೆಯಾಳ! (ಕು)

-ಳಿತಾಗ, ಮಲಗಿದಾಗಳೆಯ್ಬೇಡಾಳ!
ತ್ವ ನಿಶ್ಚಲ, ಕೊಂದಾಗ ವೃತ್ತಿಗಳ!
ಕ್ತ ನಿರ್ಮೂಲಮಾಡ್ಬೇಕಾರರಿಗಳ!
ಘುವೀರಗರಿ ರಾವಣ ದುರುಳ!
ರಳಗಾಗ್ಬಗೆದ ಹರಿ ಕರುಳ! (ಸೀ)
-ಳಿತು ನಕ್ರನ ಚಕ್ರ ಕೇಳ್ಯಾನೆಯ್ಗೋಳ!
ದಾಸಿ

ಈರಾಬಾಯಿಗೊಲಿದ ಗೋಪಾಲ!
ರ್ವದಿಂದಾಗ್ವುದೆಲ್ಲಕ್ಕೆ ಕಿರುಕುಳ! (ಗೆ)
-ಳೆತನಕ್ಕಿರ್ಬೇಕ್ಬುದ್ಧಿ ಬಹು ನಿರ್ಮಲ!
ಯಾದವರಾಯನ ಹೃದಯ ವಿಶಾಲ! (ಬಾ)
-ಳ, ನಿರಂಜನಾದಿತ್ಯ ಬಹು ದಯಾಳ!!!

ಬಡಕುರಿಯ ತಲೆ ಕಡಿವರಯ್ಯಾ! (ಮಾ)

-ಡಲಾರದದೇನೂ ಪ್ರತಿಕ್ರಿಯೆಯಯ್ಯಾ!
ಕುರುಬನಧಿಕಾರದರ ಮೇಲಯ್ಯಾ! (ಅ)
-ರಿತವರು ಕನಿಕರ ಪಡ್ಬೇಕಯ್ಯಾ!
ಮಧರ್ಮನಿದನ್ನೆಂತೊಪ್ಪುವನಯ್ಯಾ?
ನ್ನ ಸುಖಕ್ಕನರ್ಬಲಿಯಾಗ್ಬಾರ್ದಯ್ಯಾ! (ಒ)
-ಲೆಯುರಿಯದಿದ್ರಕ್ಕಿಯ ತಪ್ಪೇನಯ್ಯಾ?
ಷ್ಟಕ್ಕವ್ರಿವ್ರು, ಸುಖವಿದ್ರೆಮ್ಮವ್ರಯ್ಯಾ! (ಸ)
-ಡಿಲ್ಬಿಡ್ಬಾರದು ಕಡಿವಾಣವನ್ನಯ್ಯಾ!
ರ ಗುರುಕೃಪೆಯಲ್ಲಕ್ಕೂ ಬೇಕಯ್ಯಾ!
ಕ್ಕಸರ ಸೊಕ್ಕನ್ನವ್ನೇ ಮುರಿಯ್ಲಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾತ್ಮ ಸಾಕ್ಷಿಯಯ್ಯಾ!!!

ಸತ್ತರೂ ಸಾಯರರಿಗಳಪ್ಪಾ! (ದ)

-ತ್ತ ತಾನಾದ್ಮೇಲ್ಮತ್ತವರೇಳ್ರಪ್ಪಾ!
ರೂಪ ಬೇರಾದ್ರೂ ಬರ್ವರವ್ರಪ್ಪಾ!
ಸಾಕಾರ ನಿರ್ವಿಕಾರಾಗ್ಬೇಕಪ್ಪಾ!
ಜ್ಞ, ಯಾಗಗಳುಪಾಯವಪ್ಪಾ!
ತಿಯ ನಾಟ್ಯ ದುರ್ಜಯವಪ್ಪಾ!
ರಿಸಿ ಋಷ್ಯಶೃಂಗನೂ ಸೋತ್ನಪ್ಪಾ!
ಜೇಂದ್ರನಂತೆ ಮೊರೆಯಿಡಪ್ಪಾ! (ತ)
-ಳಮಳಗೊಳ್ಳದಿರಬೇಕಪ್ಪಾ! (ಅ)
-ಪ್ಪಾ! ಕಾಯೋ ನಿರಂಜನಾದಿತ್ಯಪ್ಪಾ!!!

ರಂಗನಾಯಕಿಗಿಷ್ಟ ಸದ್ಗುರು ಸೇವಾ! (ರಂ)

-ಗನಾಥನ ಸನ್ನಿಧಿಯಲ್ಲೇ ಆ ಸೇವಾ!
ನಾಮಸ್ಮರಣಾ ಪೂರ್ವಕವಾಗೀ ಸೇವಾ!
ದುಪತಿಯ ಗೀತಾಸಾರವಾ ಸೇವಾ!
ಕಿಡಿಕಿಡ್ಯಾಗ್ವಳ್ಕಂಡ್ರೆ ದುಃಸ್ವಭಾವವಾ! (ಯೋ)
-ಗಿರಾಜ ತಾ ಬಲ್ಲನವಳ ದುಃಖವಾ! (ಇ)
-ಷ್ಟ ಮೂರುತಿಯವಳಿಗೆ ಆ ಕೇಶವಾ!
ತ್ಸಂಗದಲ್ಲೇ ಕಳೆವಳು ಕಾಲವಾ! (ಸ)
-ದ್ಗುರು ದತ್ತನಿತ್ತ ಸ್ವಪ್ನ ದರ್ಶನವಾ! (ಇ)
-ರುತದೇ ಧ್ಯಾನದಲಿಚ್ಛಿಪಳೈಕ್ಯವಾ!
ಸೇವೆಯೇ ದಾರಿ ಸೇರಲಾ ಶ್ರೀ ಪಾದವಾ! (ದೇ)
-ವಾ, ನಿರಂಜನಾದಿತ್ಯಾನಂದ ಮಾಧವಾ!!!

ಆರ್ಯಾನುಸಾರಿ, ಕಾರ್ಯಾನುಸಾರಿ! (ಮ)

-ರ್ಯಾದಾ ರಾಮಚಂದ್ರ ಅಸುರಾರಿ!
ನುಡಿದಂತಿದ್ದಾ ಧರ್ಮಾಧಿಕಾರಿ!
ಸಾಯುಜ್ಯವಿತ್ತಾಂಜನೇಯಾಕಾರಿ!
ರಿಸಿ, ಮುನಿಗಳುಪಕಾರಿ!
ಕಾದ ದಾಸಿ ಶಬರಿಯೋದ್ಧಾರಿ! (ಸೂ)
-ರ್ಯಾನುಗ್ರಹ ಪಡೆದ ಉದಾರಿ! (ಅ)
-ನುಪಮ ಮಕ್ಕಳಪ್ಪ ಸಂಸಾರಿ!
ಸಾಮಗಾನ ಪ್ರಿಯ ನರಹರಿ!
ರಿಸಿ ನಿರಂಜನಾದಿತ್ಯೆಂದರಿ!!!

ಜವ್ವನವಿದ್ದಾಗ ಜೋಗುಳ! [ಅ]

-ವ್ವ ಅಜ್ಜಿಯಾದಾಗ ಬೈಗಳ!
ಷ್ಟ, ಕಷ್ಟದಾಗ ಜಗಳ!
ವಿಷಯ ಸುಖಕ್ಕೆ ಹೇರಳ! (ಗು)
-ದ್ದಾಟವಾದಾಗ ಕೈಗೆ ಕೋಳ!
ತಿಗೆಟ್ಟಾಗಾರ್ಕೇಳ್ವರ್ಗೋಳ?
ಜೋಡಿದಾರಗಾಸ್ತಿ ಬಹಳ!
ಗುತ್ಗೆಯವನೀಗ ಮಾತ್ಕೇಳ! (ತಾ)
-ಳ ನಿರಂಜನಾದಿತ್ಯಾ ಗೋಳ!!!

ದತ್ತಾತ್ರೇಯಾನಸೂಯಾ ತನಯಾ! [ಹ]

-ತ್ತಾವತಾರಿಯೂ ನೀನೇ ಆದಿಯಾ!
ತ್ರೇತ ದ್ವಾಪರಕ್ಕಿತ್ತೆ ಶಾಂತಿಯಾ!
ಯಾಗ, ಯೋಗೋಪದೇಶವಿತ್ತಿಯಾ!
ರನ ದಾರಿ ನೇರ ಗೈದಿಯಾ!
ಸೂತ್ರಧಾರಿಯೆಂದನ್ವರ್ಥಾದಿಯಾ!
ಯಾಕೀಗ ದಯೆಯಿಲ್ಲದಾದಿಯಾ?
ತ್ವಸಿದ್ಧ ನೀ ತೋರು ದಾರಿಯಾ!
ಮ್ಬಿಹೆ ನಿನ್ನಡಿದಾವರೆಯಾ! (ಜೀ)
-ಯಾ, ನಿರಂಜನಾದಿತ್ಯಾ ಹೃದಯಾ!!!

ಜಗದೀಶ ನೀನು ಗುರುದೇವಾ!

ಣಪತಿ ಮಗ ಮಹಾದೇವಾ!
ದೀನಬಂಧು ಗುರುಗುಹ ದೇವಾ!
ರಣು ನಿನಗಂಬಿಕಾಧವಾ!
ನೀನೆನ್ನ ತಾಯ್ತಂದೆ ದತ್ತ ದೇವಾ!
ನುಡಿ, ನಡೆ ನಿನ್ನಂತಿರ್ಲಿ ದೇವಾ!
ಗುಡಿ ನಿನ್ನದೀ ಶರೀರ ದೇವಾ! (ಇ)
-ರು ನಿತ್ಯಾನಂದದಲ್ಲಿಲ್ಲಿ ದೇವಾ!
ದೇವಾದಿ ದೇವ ಮಹಾನುಭಾವಾ! (ಈ)
-ವಾ ನಿರಂಜನಾದಿತ್ಯಾನಂದವಾ!!!

ಅವಿರೋಧದಾಯ್ಕೆಯಾಗ್ಬೇಕು!

ವಿವೇಕಿಯವನಾಗಿರ್ಬೇಕು!
ರೋಗಿಯಲ್ಲದವನಾಗ್ಬೇಕು!
ರ್ಮ, ಕರ್ಮನಿಷ್ಠನಾಗ್ಬೇಕು!
ದಾಶರಥಿಯಂತೆ ಆಳ್ಬೇಕು! (ಆ)
-ಯ್ಕೆಯುದ್ದೇಶ ಸಿದ್ಧಿಯಾಗ್ಬೇಕು!
ಯಾರ ಚಾಡಿಯೂ ಕೇಳ್ದಿರ್ಬೇಕು! (ಆ)
-ಗ್ಬೇಕು ಶಾಂತಿ, ತಾಂಡವಾಡ್ಬೇಕು! (ಟಾ)
-ಕು ನಿರಂಜನಾದಿತ್ಯಾಗ್ಬೇಕು!!!

ವಾರಗಳುರುಳುತಿವೆ ವಿದ್ಯುದ್ವೇಗದಲ್ಲಿ!

ಸ, ಕಸದೂಟ ನಿತ್ಯ ಹೋಟೆಲುಗಳಲ್ಲಿ!
ಗನ ಯಾತ್ರೆಯಿಂದ ಜೀವನಷ್ಟವೆಲ್ಲೆಲ್ಲಿ!
(ಕೂ)ಳು ಸಿಕ್ಕುವುದೇ ದುರ್ಲಭವೀಗ ದೇಶದಲ್ಲಿ!
ರುಧಿರ ದಾನ ಹೆಚ್ಚಿಹುದೀಗಾಸ್ಪತ್ರೆಯಲ್ಲಿ! (ಕೀ)
-ಳು, ಮೇಲಿಲ್ಲದಂತಾಗ್ಬೇಕೆಂಬ ಹಂಬಲದಲ್ಲಿ!
ತಿಳಿಯಬೇಕಿದರ ಗುಣಾನುಭವದಲ್ಲಿ!
ವೆಸನ ನಾಶದ ಶಕ್ತಿ ಶುದ್ಧ ರಕ್ತದಲ್ಲಿ!
ವಿಜ್ಞಾನವರಿಯದು “ಶುದ್ಧ”ದರ್ಥವನ್ನಿಲ್ಲಿ! (ಪ್ರ)
-ದ್ಯುಮ್ನನ ಬಾಳು ವಿಮರ್ಶೆಯಾಗಬೇಕೀಗಿಲ್ಲಿ! (ಉ)
-ದ್ವೇಗಾದಿ ವಿಕಾರಕ್ಕೆ ರಕ್ತ ಕಾರಣಾಯ್ತಲ್ಲಿ!
ರ್ವ ನಾಶಕ್ಕಿರ್ಬೇಕು ಸಾತ್ವಿಕಾಹಾರದಲ್ಲಿ!
ತ್ತನಾದರ್ಶದವಗೆ ಕಾಲ ಭಯವೆಲ್ಲಿ? (ಸ)
-ಲ್ಲಿಸುತ್ತಿಹ ಸೇವೆ ನಿರಂಜನಾದಿತ್ಯನಿಲ್ಲಿ!!!

ಕೆಟ್ಟ ಬುದ್ಧಿಯ ಮಟ್ಟ ಹಾಕ್ವುದೆಂತಪ್ಪಾ? (ಮೊ)

-ಟ್ಟಮೊದಲ್ದುಷ್ಟ ಸಹವಾಸ ಬಿಡಪ್ಪಾ! (ಉಂ)
-ಬುವಾಹಾರ ಶುದ್ಧ ಸಾತ್ವಿಕವಾಗ್ಲಪ್ಪಾ! (ವೃ)
-ದ್ಧಿ, ಕ್ಷಯದಲ್ಲಿ ಸಮ ಬುದ್ಧಿಯಿರ್ಲಪ್ಪಾ!
ಶಸ್ಸು ನಾಮಸ್ಮರಣೆಯಿಂದಾಗ್ಲಪ್ಪಾ!
ದನಬಾಧೆಯಾದಾಗೆದ್ದೋಡಾಡಪ್ಪಾ! (ಮು)
-ಟ್ಟಬೇಡ ಮಾದಕ ಪಾನಗಳನ್ನಪ್ಪಾ!
ಹಾಡು ಹರಿನಾಮ ಕೀರ್ತನೆಯನ್ನಪ್ಪಾ! (ಉ)
-ಕ್ವುದಾಗ ವಿವೇಕ, ವೈರಾಗ್ಯಗಳಪ್ಪಾ!
(ಎಂ)ದೆಂದಿಗೂ ವೇಶ್ಯಾ ಸಂಬಂಧ ಮಾಡ್ಬೇಡಪ್ಪಾ!
ನು, ಮನ, ಧನ ಗುರುಸೇವೆಗಪ್ಪಾ! (ಅ)
-ಪ್ಪಾ}, ನಿರಂಜನಾದಿತ್ಯ ಹಿತೈಷಿಯಪ್ಪಾ!!! {\



(ಅ)

ರಾತ್ರಿ, ಹಗ್ಲೂ ಓದ್ಯದಿ ಹೀಗಾಯ್ತು!

ತ್ರಿದೋಷ ಹೆಚ್ಚಾಗ್ಲಾಗಿ ಹುಚ್ಚಾಯ್ತು!
ಗರಣದಿಂದೀ ಗತಿಯಾಯ್ತು! (ಆ)
-ಗ್ಲೂ, ಈಗ್ಲೂ ದುರ್ವ್ರಯದಿಂದಿಂತಾಯ್ತು!
ಜಸ್ಸಿನ ದಾರಿ ತಪ್ಪಿಂತಾಯ್ತು! (ಉ)
-ದ್ಯೋಗಕ್ಕರ್ಹತೆಯಿಲ್ಲದಿಂತಾಯ್ತು!
ದಿವ್ಯಾದರ್ಶ ತಪ್ಪಿದ್ದಕ್ಕಿಂತಾಯ್ತು!
ಹೀನಕೃತ್ಯವನ್ನಪ್ಪಿ ತಪ್ಪಾಯ್ತು!
ಗಾಯಕ್ಕುಪ್ನೀರೆರೆದಂತೆಲ್ಲಾಯ್ತು! (ಆ)
-ಯ್ತು ನಿರಂಜನಾದಿತ್ಯನೆದ್ದಾಯ್ತು!!!

ದಿನ, ರಾತ್ರಿ ಬೀದ್ಬೀದ್ಯಲೆದಿಂತಾಯ್ತು!

ಯನಾದಿಂದ್ರಿಯಕ್ಕಾಳಾಗಿಂತಾಯ್ತು!
ರಾವಣನ ಸೈನ್ಯಕ್ಕೆ ಸೇರಿಂತಾಯ್ತು!
ತ್ರಿನೇತ್ರನ ವರವೂ ವ್ಯರ್ಥವಾಯ್ತು!
ಬೀದಿ ನಾಯಿಯಂತೆ ಬೊಗಳಿಂತಾಯ್ತು! (ಸ)
-ದ್ಬೀಜ ಬಿತ್ತದೇ ಉಪವಾಸವಾಯ್ತು! (ವಂ)
-ದ್ಯನ ಮಂದಮತಿ ನಿಂದಿಸಿಂತಾಯ್ತು!
(ತ)ಲೆ ಮೇಲೆ ಬಂಡೆಯುರುಳಿದಂತಾಯ್ತು! (ಅ)
-ದಿಂದಿನ ಗತಿಯರಿವಿಲ್ಲದಾಯ್ತು!
ತಾನೇ ತಾನಾಗಿರುವ ಭಾಗ್ಯ ಹೋಯ್ತು! (ಆ)
-ಯ್ತು, ನಿರಂಜನಾದಿತ್ಯಾನಂದವಾಯ್ತು!!!

ಅರಿವಾಯ್ತು ಪೀಡೆಗೆ ಕಾರಣ!

ರಿಪುಗಳುಳಿದದ್ದೇ ಕಾರಣ!
ವಾತಾತ್ಮಜ ಬಾರದ್ದೇ ಕಾರಣ! (ಆ)
-ಯ್ತು ಬರಲ್ಕಾಲಾದಿತ್ಯ ಕಾರಣ!
ಪೀಡಾ ಪರಿಹಾರಕ್ಕದೇ ಬಾಣ! (ಹೆ)
-ಡೆಯೆತ್ತಲ್ಸುಟ್ಟುಹೋಗ್ವುದಾಕ್ಷಣ! (ಕಾ)
-ಗೆ, ಕೋಗಿಲೆಯನ್ನಟ್ಟಲ್ನಿತ್ರಾಣ!
ಕಾಲಕ್ಕಾಳೇನಲ್ಲ ಮುಖ್ಯ ಪ್ರಾಣ!
ಘುರಾಮ ಗೈವ ಸಂರಕ್ಷಣಾ! (ಗು)
-ಣ ನಿರಂಜನಾದಿತ್ಯಗೀಕ್ಷಣ!!!

ಹರಿ ಪುರಾಣವ ಸಾಕ್ಮಾಡು! (ಹ)

-ರಿಕಥಾ ಶ್ರವಣವೀಗ್ಮಾಡು!
ಪುರಂಧರ ದಾಸರಂತ್ಹಾಡು!
ರಾಮ, ಕೃಷ್ಣ, ಹರಿಯೆಂದ್ಹಾಡು! (ತೃ)
-ಣ ಕಾಷ್ಟದಲ್ಲಿದ್ದಾನೆಂದ್ಹಾಡು!
ರ ಗುರು ದತ್ತನ್ಹೆಂದಾಡು!
ಸಾಧನೆ ಸತತ ಹೀಗ್ಮಾಡು! (ಏ)
-ಕ್ಮಾತೆಂದು ಬಾಯ್ಮುಚ್ಚಿ ನೀನ್ಮಾಡು! (ನೋ)
-ಡು ನಿರಂಜನಾದಿತ್ಯ ನಾಡು!!!

ತಲೆಯ ಮೇಲಿರುವುದಾರಲರು? (ಮಾ)

-ಲೆ ಮಾಡಿ ಮಾರುವವರದೆಂಬರು! (ನ್ಯಾ)
-ಯವಲ್ಲಾ ಮಾತೆಂಬರ್ಬೆಳೆದವರು!
ಮೇಲ್ಮೇಲದಕೆ ನೀರೆರೆದವರು! (ನಿ)
-ಲಿಸಿಕೊಂಡಳು ಭೂ ತಾಯಿಯೆಂಬರು! (ತು)
-ರು, ಕರು, ತೊಪ್ಪೆ, ಗೊಬ್ರದಕ್ಕೆಂಬರು! (ಮೇ)
-ವುಣ್ಸಿ ನಾವ್ಸಾಕಿದೆವವ್ಗಳೆಂಬರು! (ಆ)
-ದಾಯ ಪಡೆವುದಾರೆಂದರಿಯರು! (ಹ)
-ರಟೆಯಲ್ಲೇ ಕಾಲ ಕಳೆಯುವರು!
ಕ್ಷ್ಯವೇನೆಂಬುದ ಮರೆತಿಹರು! (ಗು)
-ರು ನಿರಂಜನಾದಿತ್ಯನರಿಯರು!!!

ಅವ್ರವ್ರ ವಿಶ್ವಾಸದಂತವ್ರವ್ರಾಗ್ಹೋಗು!

ವ್ರತೋಪವಾಸದಿಂದಾರೋಗ್ಯವಂತನಾಗು!
ವ್ರಜ ಸ್ತ್ರೀಯರಂತಚಲ ಭಕ್ತನಾಗು!
ವಿಶ್ವಾಮಿತ್ರನ ಹಾಗೆ ತಪಸ್ವಿಯಾಗು!
ಶ್ವಾನ, ಸೂಕರರಂತಿರದವನಾಗು!
ತೀ ಸಾವಿತ್ರಿಯಂತೆ ಸಾಹಸಿಯಾಗು!
ದಂಭ, ದರ್ಪ ಮೆಟ್ಟಿ ನಿಲ್ಲುವವನಾಗು!
ತ್ವ ಚಿಂತೆನೆ ಸದಾ ಮಾಳ್ಪವನಾಗು! (ತೀ)
-ವ್ರ ಸಾಧನೆಯಿಂದೀಗಲೇ ಮುಕ್ತನಾಗು! (ದೇ)
-ವ್ರಾಗಿ ನಿಗ್ರಹಾನುಗ್ರಹ ಶಕ್ತನಾಗು! (ಆ)
-ಗ್ಹೋದ ದುರ್ದೆಶೆಯ ಮರೆತವನಾಗು!
ಗುರು ನಿರಂಜನಾದಿತ್ಯನಂತೀಗಾಗು!!!

ಬರ್ವುದೂ ಗೊತ್ತಿಲ್ಲ, ಹೋಗ್ವುದೂ ಗೊತಿತ್ಲ! (ಇ)

-ರ್ವುದೆಷ್ಟು ಸಮಯವೆಂಬುದೂ ಗೊತ್ತಿಲ್ಲ!
ದೂರುವುದನ್ನರನ್ನು ಮಾತ್ರ ಬಿಟ್ಟಿಲ್ಲ!
ಗೊಣ್ಣೆ ಸುರಿಯುತ್ತಿರುವುದು ನಿಂತಿಲ್ಲ! (ನೆ)
-ತ್ತಿಗೌಷಧಿ ತಿಕ್ಕಂದರೆ ಲಕ್ಷ್ಯವಿಲ್ಲ! (ಒ)
-ಲ್ಲದ ಗಂಡನಿಗೆ ಮೊಸ್ರಲ್ಲಿ ಕಲ್ಲೆಲ್ಲಾ!
ಹೋರಾಡಿ ಐಹಿಕಕ್ಕೆ ಫಲವೇನಿಲ್ಲ! (ಆ)
-ಗ್ವುದನ್ನು ತಪ್ಪಿಸುವರಾರೂ ಇಲ್ಲ!
ದೂತ ಅವಧೂತಗಾದ್ರೆ ತಪ್ಪೇನಿಲ್ಲ!
ಗೊಡ್ಡಾಕಳನ್ನೂ ಆತ ಕರಿಯಬಲ್ಲ! (ಸು)
-ತ್ತಿ ಸುಣ್ಣವಾಗುವುದರಲ್ಲರ್ಥವಿಲ್ಲ! (ಪು)
-ಲ್ಲ ನಿರಂಜನಾದಿತ್ಯ ಆತ್ಮನ ಕೊಲ್ಲ!!!

ಗುರುಭಕ್ತನಿಗೆ ಶ್ರದ್ಧಾಂಜಲಿ! (ಸೇ)

-ರು ಗುರುಪಾದ ಸಂತೋಷದಲಿ!
ಕ್ತಿ ಜನ್ಮಜನ್ಮಕ್ಕೂ ಇರಲಿ! (ಭ)
-ಕ್ತವತ್ಸಲ ದತ್ತಾತ್ರೇಯನಲಿ!
ನಿತ್ಯ ನಿರಂಜನಾನಂದನಲಿ! (ಬ)
-ಗೆಬಗೆ ನಾಮ, ರೂಪಗಳಲಿ!
ಶ್ರದ್ಧೆಯಿರಲಿ ಸಾಧನೆಯಲಿ! (ಶು)
-ದ್ಧಾಂತಃಕರಣ! ಸದಾ ಇರಲಿ!
ಗತ್ತಿಗಿದಾದರ್ಶವಾಗಲಿ! (ನ)
-ಲಿ ನಿರಂಜನಾದಿತ್ಯಾತ್ಮನಲಿ!!!

ನಿರಪರಾಧಿಗೆ ಸೇವೆ ದೊರಕಲಿ!

ಘುವೀರನಿಗೆ ದಯೆಯುಂಟಾಗಲಿ!
ತಿ, ಪತ್ನಿ ಸೀತಾ, ರಾಮರಂತಿರಲಿ!
ರಾತ್ರಿ, ಹಗಲು ಸನ್ನಿಧಿಯಲ್ಲಿರಲಿ!
ಧಿಕ್ಕಾರ ಮಾಡದೆ ಅಕ್ಕರೆ ತೋರಲಿ!
ಗೆಜ್ಲುಗೂಡಿಗೆ ಸರ್ಪ ಸೇರದಿರಲಿ!
ಸೇವೆ ನಿಶ್ಚಿಂತೆಯಿಂದ ಸಾಗುತ್ತಿರಲಿ!
ವೆಚ್ಚಾದಾಯದ ಹುಚ್ಚು ಕೊಚ್ಚಿ ಹೋಗಲಿ!
ದೊರೆತದ್ದಷ್ಟಕ್ಕೇ ತೃಪ್ತಿಯುಂಟಾಗಲಿ!
ಹಸ್ಯ ಶಾಂತಿಗಿದೆಂಬರಿವಾಗಲಿ!
ರಣತ್ರಯ ಸದಾ ಶುದ್ಧವಿರಲಿ! (ಒ)
-ಲಿದೀಗ ನಿರಂಜನಾದಿತ್ಯ ಬರಲಿ!!!

ತನ್ನ ತಾ ತಿದ್ದಿಕೊಂಡಾಗಾನಂದ! (ಭಿ)

-ನ್ನ ಭಾವವಿಲ್ಲದಾದಾಗಾನಂದ!
ತಾಯಿ ಶ್ರೀ ದೇವಿಯಾದಾಗಾನಂದ!
ತಿಮ್ಮಪ್ಪ ನಮ್ಮಪ್ಪಾದಾಗಾನಂದ! (ಸ)
-ದ್ದಿಲ್ಲದಿದ್ದಾಗ ಸಹಜಾನಂದ!
ಕೊಂದರರಿಷಡ್ವರ್ಗವಾನಂದ! (ದುಂ)
-ಡಾವರ್ತಿ ಬಿಟ್ಟಾಗ ರಾಮಾನಂದ!
ಗಾರ್ಧಭದಂತಿದ್ದರೇನಾನಂದ?
ನಂದಕಂದನಂತಿದ್ದ್ರಾತ್ಮಾನಂದ!
ತ್ತ ನಿರಂಜನಾದಿತ್ಯಾನಂದ!!!

ಮಾದರಿಯ ಮಾನವ ಸಮಾಜವಿಂತಿರಲಿ!

ಯಾಬುದ್ಧಿಯೆಲ್ಲರನ್ಯೋನ್ಯವಾಗಿರಲಿ!
ರಿಪುಗಳಾರ ಜೈಸಲು ಹೋರಾಟ ಸಾಗಲಿ!
ಮ, ನಿಯಮಾಭ್ಯಾಸ ನಿರಂತರವಿರಲಿ!
ಮಾತಿನಂತೆ ನಡೆಯುವ ಪ್ರತಿಜ್ಞೆಯಾಗಲಿ!
ಲ್ಲ, ನಲ್ಲೆಯರಲ್ಲೊಮ್ಮತವಿರುತ್ತಿರಲಿ!
ರ ಗುರು ಸೇವೆ ಈರ್ವರೂ ಮಾಡುತ್ತಿರಲಿ!
ತ್ಸಂಗಕ್ಕನಾದರವಿಲ್ಲದಿರುತ್ತಿರಲಿ!
ಮಾರ, ಚೋರರ ಪ್ರೇರಣೆಗಲಕ್ಷ್ಯವಿರಲಿ!
ಪಯಜ್ಞ ಪ್ರತಿಮನೆಯಲ್ಲೂ ನಿತ್ಯಾಗಲಿ!
ವಿಂಧ್ಯಾದ್ರಿಯಂತೆ ಚಿತ್ತಸ್ಥೈರ್ಯವಿರುತ್ತಿರಲಿ!
ತಿಳಿದಿದೆಲ್ಲರ ಅನುಷ್ಠಾನಕ್ಕೆ ಬರಲಿ!
ಣರಂಗಗಳೆಲ್ಲೆಲ್ಲೂ ಇಲ್ಲದಂತಾಗಲಿ! (ಒ)
-ಲಿದು ನಿರಂಜನಾದಿತ್ಯ ನಮ್ಮನ್ನೆಲ್ಲಾಳಲಿ!!!

ಪಾಮರನ ಮೇಲೆ ಕರುಣೆಯಿರಲಿ!

ನೆಮನೆಗಲೆಯುವುದು ತಪ್ಪಲಿ!
ವಾನೆ ಗುರುಪಾದದೆಡೆಗಾಗಲಿ!
ಶ್ವರವಿದರ ವ್ಯಾಮೋಹ ಹೋಗಲಿ!
ಮೇಲ್ವಿಚಾರ ಪರಮೇಶ್ವರ ಮಾಡಲಿ!
ಲೆಃಖಾಚಾರ ಜೀವ ಸರಿಯಾಗಿಡಲಿ!
ಳ್ಳತನಕ್ಕೆಡೆಗೊಡಿದಿರಿಸಲಿ!
ರುಜುಮಾರ್ಗಿಯಾಗುವ ಭಾಗ್ಯ ಕೊಡಲಿ! (ಹೊ)
-ಣೆಯೆಲ್ಲಾ ಕಾಲಕ್ಕವನೇ ಆಗಿರಲಿ! (ಬಾ)
-ಯಿಮುಚ್ಚಿ ಕೂತದ್ದು ಸಾರ್ಥಕವಾಗಲಿ!
ಹಸ್ಯ ಸೃಷ್ಟಿಯದು ಅರವಾಗಲಿ! (ಮಾ)
-ಲಿನ, ನಿರಂಜನಾದಿತ್ಯ ಕಳೆಯಲಿ!!!

ಕ್ಷೇಮ ಸಮಾಚಾರ ತಿಳಿದಾಗ್ವುದೇನು?

ನದಲ್ಲಾತ್ಮಚಿಂತನೆ ಮಾಡು ನೀನು!
ದಾ ಸತ್ಕಾಲಕ್ಷೇಪದಲ್ಲಿರು ನೀನು!
ಮಾನವ ಜನ್ಮ ಸಾರ್ಥಕಮಾಡು ನೀನು!
ಚಾಪೆಯುದ್ದ ನೋಡಿ ಕಾಲು ಚಾಚು ನೀನು!
ತಿಸುಖಕ್ಕಾಶಿಸಿ ಕೆಡ್ಬೇಡ ನೀನು!
“ತಿಪ್ಪೆಗೆಸೆ ತೊಪ್ಪೆ!” ನೆನಪಿಡು ನೀನು! (ಗಾ)
-ಳಿ ಬೀಸಿದಾಗ ತೂರಿಕೊಳ್ಬೇಕು ನೀನು!
ದಾರಿ ಊರಿಗೆ ನೇರ ಮಾಡಿಕೋ ನೀನು! (ಆ)
-ಗ್ವುದ, ಹೋಗ್ವುದ ಯೋಚಿಸಬೇಡ ನೀನು!
ದೇವರನ್ನು ನಂಬಿ ಮುಂದುವರಿ ನೀನು! (ನೀ)
-ನು ನಿರಂಜನಾದಿತ್ಯನಾಗ್ಬೇಡ್ವೇನು???

ಪರಬ್ರಹ್ಮ ಪರಂಪರೆ ಚರಾಚರವೆಲ್ಲಾ!

ಹಸ್ಯ ವೀ ಸೃಷ್ಟಿಯದ್ದರಿತವರಾರಿಲ್ಲಾ!
ಬ್ರಹ್ಮ, ಕ್ಷತ್ರಿಯಾದಿಗಳ್ಗುಣ, ಕರ್ಮದಿಂದೆಲ್ಲಾ! (ಬ್ರಾ)
-ಹ್ಮಣ ಸಾಕಾರ ಬ್ರಹ್ಮನೆಂದರೆ ತಪ್ಪೇನಿಲ್ಲಾ!
ತಿತರಾದರ್ದುರಾಚಾರದಿಂದವರೆಲ್ಲಾ!
ರಂಭೆ, ಊರ್ವಶಿಯರ ಪಾತ್ರದಲ್ಲಿಲದಿಲ್ಲಾ!
ರಂಪರೆಗೀಗತಿಯಾಯ್ತು ಸೃಷ್ಟಿಯಲ್ಲೆಲ್ಲಾ! (ಬೆ)
-ರೆತೊಂದ್ರಲ್ಲಿನ್ನೊಂದುಂಟಾಯ್ತು ಮಿಶ್ರರೂಪವೆಲ್ಲಾ!
ಪಲ ಚಿತ್ತವೇ ಕಾರಣವಾಯ್ತಿದಕ್ಕೆಲ್ಲಾ!
ರಾಮ, ಕೃಷ್ಣರೂ ಇದಕ್ಕೆ ಹೊರತಾಗಿರ್ಲಿಲ್ಲಾ!
ರಾಚರರುದ್ಧಾರಕ್ಕಿಂತಿರಬೇಕಾಯ್ತುಲ್ಲಾ!
ಸಾತಲದಿಂದೆದ್ದಾಕಾಶಕ್ಕೇರಬೇಕೆಲ್ಲಾ!
ವೆಸನದಿಂದಳುವುದಕ್ಕಿದು ಕಾಲವಲ್ಲಾ! (ಕ)
-ಲ್ಲಾದಹಲ್ಯೆ ನಿರಂಜನಾದಿತ್ಯನಿಂದೆದ್ಲಲ್ಲಾ!!!

ಓರ್ವ ತಂದೆಯ ಮಕ್ಕಳೀ ಜೀವರೆಲ್ಲಾ! (ಓ)

-ರ್ವನಿಗಿನ್ನೊರ್ವ ನೆರವಾಗಿರ್ಬೆ

ಕೆಲ್ಲಾ!
ತಂದೆ ಕಣ್ಮುಚ್ಚಿ ಕೂತ್ರೆ ಹಾಳಾಗ್ವರೆಲ್ಲಾ! (ನಿಂ)
-ದೆ ವಂದನೆಯ ಭ್ರಾಂತಿ ಬಿಡಬೇಕೆಲ್ಲಾ! (ಭ)
-ಯಪಡದೇ ಸ್ವಧರ್ಮ ಕರ್ಮ ಮಾಡ್ರೆಲ್ಲಾ!
ದನಾರಿಯಾದರ್ಶ ಸ್ವಾಗತಿಸ್ರೆಲ್ಲಾ! (ಉ)
-ಕ್ಕ ಬಾರ್ದುದ್ವೇಗ ಸೋಲ್ಗೆಲವಿನಲ್ಲೆಲ್ಲಾ! (ಬಾ)
-ಳೀ ಜನ್ಮದಲ್ಲೇ ಹೊನ್ನಾಗ್ಲೆಂದ್ಬೇಡಿರೆಲ್ಲಾ!
ಜೀವ ಶಿವೈಕ್ಯವೇ ಗುರಿ! ಸುಳ್ಳಲ್ಲಾ!
ರಗುರು ದತ್ತಾತ್ರೇಯನಾಜ್ಞೆಯೆಲ್ಲಾ! (ಮ)
-ರೆಯ್ಬಾರ್ದಿದ ಸುರಾಸುರ, ನರರೆಲ್ಲಾ! (ಚೆ)
-ಲ್ಲಾಟ ನಿರಂಜನಾದಿತ್ಯಾನಂದಗಿಲ್ಲಾ!!!

ಕ್ಷಣಕ್ಕೊಂದು ರೋಗ ಈ ದೇಹಕ್ಕೆ! (ಗು)

-ಣ ಕಾಣುವೌಷಧಿ ಬೇಕದಕ್ಕೆ! (ತ)
-ಕ್ಕೊಂಡದ್ದಾವುದೂ ನಾಟಿಲ್ಲದಕ್ಕೆ!
ದುರ್ವಿ



ಯೇ ಕಾರಣ ಅದಕ್ಕೆ!
ರೋಗಾಂತಕ ನೀನಾಗೀಗದಕ್ಕೆ!
ತಿ ನೀನೇ ಅನಾಥ ಜೀವಕ್ಕೆ!
ರೈದಿಂದ್ರಿಯ ನಿಗ್ರಹವಕ್ಕೆ!
ದೇವ ನಿನ್ನಂತೆ ನಾನಾಗ್ವುದಕ್ಕೆ!
ಗ್ಲಿರುಳು ಪ್ರಾರ್ಥಿಪೆನದಕ್ಕೆ! (ಅ)
-ಕ್ಕೆ ನಿರಂಜನಾದಿತ್ಯಾನಂದಕ್ಕೆ!!!

“ಅಮ್ಮಾ,” ಎಂದಳುವಾಗಮ್ಮ ಗುಮ್ಮಾಗ್ಬಹುದೇ? (ನ)

-ಮ್ಮಾಚಾರ, ವಿಚಾರಕ್ಕೀ ಗತಿಯಾಗ್ಬಹುದೇ?
ಎಂಜಲು ಪ್ರಸಾದವೆಂದರಿತುಣ್ಬಾರದೇ?
ರ್ಶನಾನುಗ್ರಹಾಸೆ ವ್ಯರ್ಥವಾಗ್ಬಹುದೇ? (ಬಾ)
-ಳುವುದಿನ್ನೆಂತೆಂದಾದರೂ ತಿಳಿಸ್ಬಾರದೇ?
ವಾಸನಾ ನಾಶದಭ್ಯಾಸವಾಗುತ್ತಲಿದೆ!
ರ್ವದಿಂದ ಮರೆಯುವುದಿಲ್ಲದಾಗಿದೆ! (ನ)
-ಮ್ಮ ತೀರ್ಥಕ್ಷೇತ್ರ ನಾಲ್ಕು ಗೋಡೆಯೊಳಗಿದೆ!
ಗುರುದತ್ತನೇ ನಮಗೆಲ್ಲವೂ ಆಗಿದೆ! (ನ)
-ಮ್ಮಾನಂದವನಾನಂದವೆಂದು ನಂಬ್ಯಾಗಿದೆ! (ಈ)
-ಗ್ಬರದಿದ್ದರಿನ್ಯಾವಾಗ ಬರುವೆ ತಂದೇ?
ಹುರಿಸಿಕೊಂಡು, ಸುಟ್ಟು, ಕೆಟ್ಟ ಬಣ್ಣವಾದೆ!
ದೇವ, ದೇವ ನಿರಂಜನಾದಿತ್ಯ ನೀನೆಂದೆ!!!

ದುರುದ್ದೇಶದ ತಪಕ್ಕೂ ವರವಿತ್ತೆ! (ಗು)

-ರು ಭಕ್ತನ ತಪಕ್ಕೇಕೆ ವ್ಯಥೆಯಿತ್ತೆ? (ಉ)
-ದ್ದೇಶ ಶುದ್ಧವಿಹುದೆಂದು ಕರೆಯಿತ್ತೆ!
ಮ ದಮಾಭ್ಯಾಸಿಯಾಗಿಹೆನೆಂದತ್ತೆ!
ಯಾನಿಧಿ ನೀನೇ ಗತಿಯೆಂದೆ ಮತ್ತೆ!
ರುಣಿ ಭೂದೇವಿಯನ್ನಂದು ನೀ ಹೊತ್ತೆ!
ರಮ ಪದವಿಯ ದ್ರವನಿಗಿತ್ತೆ!
(ಹ)ಕ್ಕೂರೂರಲ್ಲುಳುವವರ್ಗೀಗ ನೀನಿತ್ತೆ!
ರದ ನಾಮಾನ್ವರ್ಥ ನೀ ಮಾಡೀ ಹೊತ್ತೆ!
ಕ್ಕಸರಿರ್ಬಾರ್ದೆನ್ನುತಿದೆ ಜಗತ್ತೇ!
ವಿಶ್ವನಾಥ ನೀನಾಗಿರಲು ವಿಪತ್ತೇ? (ಇ)
-ತ್ತೆ, ನಿರಂಜನಾದಿತ್ಯಾನಂದವೀಗಿತ್ತೆ!!!

ಸ್ಥೂಲ, ಸೂಕ್ಷ್ಮ ಕಾರಣಿವೆಲ್ಲಾ ಕಳಂಕ!

ಕ್ಷ್ಯ ತಾನೇ ತಾನಾಗುವಾಗ ಕಳಂಕ!
ಸೂತ್ರಕ್ಕೆ ಮಣಿ ಪೋಣಿಸಲು ಕಳಂಕ! (ಸೂ)
-ಕ್ಷ್ಮಕ್ಕೆಲ್ಲಾ ಬಹು ಬಹು ಸೂಕ್ಷ್ಮ ಕಳಂಕ!
ಕಾಮ್ಯ ಜಗತ್ತಿನೊಡನಾಟ ಕಳಂಕ!
ಜಸ್ತಮಾದಿ ಗುಣಾತೀತ ಕಳಂಕ! (ತೃ)
-ಣ, ಕಾಷ್ಠ, ಪಾಷಾಣಗಳೆಲ್ಲಾ ಕಳಂಕ!
ವೆಚ್ಚ ನೀಚೋಚ್ಚಕ್ಕೆ ಆದಾಗ ಕಳಂಕ! (ಎ)
-ಲ್ಲಾ ವಿಷಯೇಂದ್ರಿಯ ಸಂಬಂಧ ಕಳಂಕ!
ರ್ಮ ಧರ್ಮಸಂಯೋಗದಿಂದ ಕಳಂಕ! (ವಿ)
-ಳಂಬ ಮಾಡದೇ ಅಳಿಸೆಲ್ಲಾ ಕಳಂಕ! (ಲೋ)
-ಕನಾಥ ನಿರಂಜನಾದಿತ್ಯ ಕಳಂಕ!!!

ಅವ್ರಿವ್ರ ಸಂಗಕ್ಕಾಶಿಪುದೊಂದು ರೋಗ! (ದೇ)

-ವ್ರಿಗಾದರಾ ಆಸೆ, ಇಲ್ಲ ಭವರೋಗ!
ವ್ಯಯವಾಗಲ್ವೀರ್ಯ ಕಾರಣಾನುರಾಗ!
ಸಂಚಯವಾದರದೇ ತ್ರಿನೇತ್ರ ಯೋಗ!
ತಿಗೇಡ ತಂದೊಡ್ಡುವುದಿಹ ಭೋಗ! (ಹೊ)
-ಕ್ಕಾಗಿ, ಹಾಸಾಗಿರ್ಬೇಕ್ಸದಾ ಜಪ ಯೋಗ!
ಶಿವ, ಜೀವರೈಕ್ಯಕ್ಕಿದ್ದು ಉಪಯೋಗ!
ಪುಣ್ಯ, ಪಾಪ ಭೀತಿ ಹರಾ ಭಕ್ತಿಯೋಗಾ!
ದೊಂಬರಾಟವೆಲ್ಲದಿನ್ನೇನ್ಹಠಯೋಗ!
ದುರ್ಬಲ ಶರೀರಕ್ಕದೊಂದೊಳ್ಳೇ ಯೋಗ!
ರೋಗ ನಿವಾರಣೋಪಕಾರಿ ಈ ಯೋಗ! (ಯೋ)
-ಗ ನಿರಂಜನಾದಿತ್ಯನಾಗ್ವುದ್ಸುಯೋಗ!!!

ಸದ್ಗುರುವಿನ ಚಿತ್ರ ಪವಿತ್ರ! (ಸ)

-ದ್ಗುಣಿ ಅತ್ರಿಗಾದವನ ಪುತ್ರ! (ಹ)
-ರುಷ ಅವನಿಂದಾಯ್ತು ಸರ್ವತ್ರ!
ವಿಧಿ, ಹರ ಸಮೇತಾ ತ್ರಿನೇತ್ರ! (ತ)
-ನಯನಾಗಿ ಬೆಳಗಿದಾ ಗೋತ್ರ!
ಚಿತ್ತಶುದ್ಧಗಾತ ಅತೀ ಹತ್ರ!
ತ್ರಯಮೂರ್ತಿ ಲೀಲೆ ವಿಚಿತ್ರ!
ರಮ ಪೂಜ್ಯ ಅವನ ಸೂತ್ರ!
ವಿರಕ್ತ ಅವನ ಕೃಪಾ ಪಾತ್ರ! (ಮಿ)
-ತ್ರ ನಿರಂಜನಾದಿತ್ಯಾ ಸತ್ಪುತ್ರ!!!

ಮೋಸ ಕೊಟ್ಟಿತು ನಿನ್ನಾಸೆ ನಿನಗೆ!

ಮಯ ನೋಡಿ ಬಂತದು ಹೊರಗೆ!
ಕೊರಳಿಗುರುಳಾಯ್ತುದು ಕೊನೆಗೆ! (ಕ)
-ಟ್ಟಿ ನೀನಿಟ್ಟಿದ್ದ ಬುತ್ತಿ ಬರಿದಾಗೆ!
ತುಚ್ಛವೀ ಸಂಸಾರವೆಂದರಿವಾಗೆ!
ನಿಶ್ಚಲ ಭಕ್ತನಾಗು ಗುರುವಿಗೆ! (ತ)
-ನ್ನಾನಂದದಲ್ಲೀವ ಪಾಲು ನಿನಗೆ!
ಸೆರೆಯಾಳಂತಿರು ನೀನವನಿಗೆ!
ನಿನ್ನುದ್ಧಾರವಕ್ಕು ಕಾಲವೊದಗೆ!
ಮಿಸು ಸದಾ ಶ್ರೀ ಪಾದಂಗಳಿಗೆ! (ಬಾ)
-ಗೆದ್ದು ನಿರಂಜನಾದಿತ್ಯನಡಿಗೆ!!!

ಮಾನವಾ! ಆಗ್ಬೇಡವೋ ದಾನವಾ!

ರಹರಿಯೋರ್ವನೇ ನಿನ್ನವಾ!
ವಾರಿಜಾಂಬಕಿಗಚ್ಚುಮೆಚ್ಚುವಾ!
ಗವನಿಗೆ ದಾಸ ಪುಂಗವಾ! (ತೂ)
ಗ್ಬೇಡವನ ಹಾಡ್ಯನ್ಯ ನಾಮವಾ! (ಜ)
-ಡದೇಹ ತಾನಲ್ಲವೆಂದನವಾ! (ಭಾ)
-ವೋದಯದ ಸ್ವಾಮಿ ಛಾಯಾದವಾ!
ದಾರಿ ಮಾಡ್ಯಾಕಾಶದಲ್ಲೋಡುವಾ!
ಮಸ್ಕರಿಸಿಲ್ಲಿಂದ್ಲೇ ಹೇಳೆಲ್ಲವಾ! (ಈ)
-ವಾ ನಿರಂಜನಾದಿತ್ಯಾದ್ವೈತವಾ!!!

ಪ್ರಮಾಣಮಾಡ್ಯಪ್ರಮಾಣಿಕನಾಗ್ಬೇಡ!

ಮಾಟ ಮಾರಣ ಮಾಡಿ ಮಡಿಯಬೇಡ!
(ಉ)ಣಲಿಕ್ಕುವನ್ನಕ್ಕೆ ವಿಷವಿಕ್ಕ ಬೇಡ!
ಮಾದಕ ಪದಾರ್ಥ ಸೇವಿಸಲೇ ಬೇಡ! (ಕಾ)
-ಡ್ಯನ್ಯರಿಂದೇನನ್ನೂ ಪಡೆಯಲೇ ಬೇಡ!
ಪ್ರಜಾಪ್ರಭುತ್ವವೆಂದನ್ಯಾಯ ಮಾಡ್ಬೇಡ!
ಮಾಡಿದುಪಕಾರ ಮರೆಯಲೇ ಬೇಡ! (ಕ)
-ಣಿ ಕೇಳುವಭ್ಯಾಸವೆಂದೆಂದಿಗೂ ಬೇಡ!
ರ್ತವ್ಯ ಪಾಲನೆಯಲ್ಲಶ್ರದ್ಧೆ ಬೇಡ!
ನಾಮಸ್ಮರಣೆ ಸದಾ ಮಾಡದಿರ್ಬೇಡ! (ಆ)
-ಗ್ಬೇಡ, ಗುರುದ್ರೋಹಿಯಾಗಿ ಬದುಕ್ಬೇಡ! (ಮೃ)
-ಡ ನಿರಂಜನಾದಿತ್ಯವ್ನ ಸುಡ್ದೆ ಬಿಡ!!!

ಅಂದು ಮದುವೆಯಾಗ್ಲಿಕೋಡಾಟ! (ಇಂ)

-ದು ಮದುವೆ ಮಾಡ್ಲಿಕ್ಕೆ ಪೇಚಾಟ!
ಡದಿ ಬಂದಾಗಾಪ್ತರ ಕೂಟ! (ಮ)
-ದುವೆ ಮಗಳಿಗೆಂದಾಗ ಕಾಟ! (ಇ)
-ವೆಲ್ಲಾ ಸಂಸಾರಿಗೆ ಒಳ್ಳೆ ಪಾಠ! (ದ)
-ಯಾಮಯ ದೇವರೆಂಬುದು ದಿಟ! (ಆ)
-ಗ್ಲಿ ಅವನಿಗಾನಂದವನಾಟ! (ನೆ)
-ಕ್ಕೋದವನ ಪಾದ ಭಕ್ತಗೂಟ!
ಡಾಕು ತಾನುಣ್ಣುವ ಪಾಪದೂಟ! (ಘ)
-ಟ ನಿರಂಜನಾದಿತ್ಯಗೆ ಮಠ!!!

ಯಾರಾಳಬಲ್ಲರೆಮ್ಮ ನಾಡ?

ರಾಕ್ಷಸರು ಹೆಚ್ಚಿದಾ ನಾಡ! (ಕಾ)
-ಳ ಸಂತೆಯ ಬಾಳಿನಾ ನಾಡ!
ಯಲಾಡಂಬರದಾ ನಾಡ! (ಬ)
-ಲ್ಲವರನ್ನು ಒಲ್ಲದಾ ನಾಡ! (ಸೆ)
-ರೆ ಸೇಂದಿ ಕುಡಿಯುವಾ ನಾಡ! (ಒ)
-ಮ್ಮತವಿಲ್ಲದಿರುವಾ ನಾಡ!
ನಾಸ್ತಿಕತೆ ಹೆಚ್ಚಿದಾ ನಾಡ! (ತ)
-ಡ ನಿರಂಜನಾದಿತ್ಯ ಮಾಡ!!!

ನಿನ್ನಿಂದ ನಾನು ದೂರಟ್ಟಲ್ಪಟ್ಟೆ! [ನ]

-ನ್ನಿಂದ ನೀನೂ ದೂರ ಅಟಲ್ಪಟ್ಟೆ! (ಭೇ)
-ದವಳಿದಾಗ ನಾವೀರ್ವರೊಟ್ಟೆ!
ನಾಮ, ರೂಪ ನಾ ನಿನಗೆ ಕೊಟ್ಟೆ! (ನೀ)
-ನು ನನ್ನನ್ನಲಕ್ಷ್ಯ ಮಾಡಿಬಿಟ್ಟೆ!
ದೂರವಿಂತಾಗಿ ನಾನೀಗ ಕೆಟ್ಟೆ! (ಇ)
-ರಬಾರದಿಂತೆಂದು ಮೊರೆ ಇಟ್ಟೆ! (ಕೆ)
-ಟ್ಟ ಮೇಲೆ ಬುದ್ಧಿ ಬಂತೆಂದತ್ಬಿಟ್ಟೆ! (ಕ)
-ಲ್ಪನಾತೀತ ನೀನಾಗಿ ನಿಂತ್ಬಿಟ್ಟೆ! (ತೊ)
-ಟ್ಟೆ ನಾ ನಿರಂಜನಾದಿತ್ಯ ಬಟ್ಟೆ!!!

ಅಧಿಕಾರಕ್ಕೊಂದವಧಿ ಉಂಟು!

ಧಿಕ್ಕರಿಸಿದ್ರನ್ಯರ ಕೇಡುಂಟು!
ಕಾತುರಾತುರದಿಂದ ಸೋಲುಂಟು!
ತಿ ರೂಪಕ್ಕೂ ವೃದ್ಧಾಪ್ಯವುಂಟು! (ತ)
-ಕ್ಕೊಂಡವ ಕೊಡಬೇಕಾದದ್ದುಂಟು!
ಡ ಸೇರದಿದ್ರಪಾಯ ವುಂಟು!
ರ ಗುರುವಿಂದಾದಾಯಉಂಟು! (ವಿ)
-ಧಿ ನಿಯಮವೂ ಸುಳ್ಳಾಗ್ವುದುಂಟು!
ಉಂಬಾಹಾರಕ್ಕೊಂದಳತೆಯುಂಟು! (ಗಂ)
-ಟು ನಿರಂಜನಾದಿತ್ಯಗೇನುಂಟು???

ನಿತ್ಯ ಪ್ರತ್ಯಕ್ಷ ಸತ್ಯನಾರಾಯಣ! (ಭೃ)

-ತ್ಯ ನೋಡುವನವನ ಪ್ರತಿಕ್ಷಣ!
ಪ್ರಸಾದದಿಂದ ಸದಾ ಸಂರಕ್ಷಣ! (ಅ)
-ತ್ಯಮೂಲ್ಯವದೊದಗದು ತಕ್ಷಣ!
ಕ್ಷಮಾಶೀಲ ಅವನ ದೊಡ್ಡ ಗುಣ!
ಕಲರಿಗೂ ಆತ ಪಂಚಪ್ರಾಣ! (ಸ್ತು)
-ತ್ಯ ಅವನ ಸೇವೆ! ಲೋಕ ಕಲ್ಯಾಣ!
ನಾಕ, ನರಕದಲ್ಲಿ ಭೇದ ಕಾಣ!
ರಾಮಾವತಾರಕ್ಕಿವನೇ ಕಾರಣ!
ಜುಸ್ಸಾಮಾದಿ ವೇದಕ್ಕೆ ಪ್ರಮಾಣ! (ಹ)
-ಣ ನಿರಂಜನಾದಿತ್ಯಗೆ ತೃಣ!!!

ವೈದ್ಯನಿಗೆ ಬಿರುದುಗಳೆಷ್ಟಿದ್ರೇನು? (ಉ)

-ದ್ಯಮಾಭಿವೃದ್ಧಿಗೆ ಕೈಗುಣ ಬೇಡ್ವೇನು?
ನಿರ್ವಂಚನೆಯಿಂದ ಸೇವೆ ಮಾಡ್ಬೇಡ್ವೇನು?
ಗೆಳೆಯನಂತೆ ಕಾಣ್ಲಿ ರೋಗಿಯನ್ನವ್ನು!
ಬಿಗಡೈಸದಂತೆಚ್ಚರವಾಗಿರ್ಲವ್ನು!
ರುಜುಮಾರ್ಗಾವಲಂಬಿಯಾಗ್ಬೇಕವನು!
ದುರಭ್ಯಾಸಗಳಿಲ್ಲದಿರ್ಬೇಕವನು!
ಟ್ಟಿ ಮನಸ್ಸುಳ್ಳವನಾಗ್ಬೇಕವನು! (ವೇ)
-ಳೆ, ಅವೇಳೆಯೆನ್ನದಿರಬೇಕವನು! (ಅ)
-ಷ್ಟಿಷ್ಟೆನ್ನದೇ ಕಷ್ಟಕ್ಕೊದಗ್ಬೇಕವನು! (ಉ)
-ದ್ರೇಕವೆಳ್ಳಷ್ಟೂ ಇಲ್ಲದಿರ್ಬೇಕವನು! (ತ)
-ನುಜ ನಿರಂಜನಾದಿತ್ಯನಿಗವನು!!!

ಗಟ್ಟಿಗನಿಗೆ ಪಟ್ಟ ಕಟ್ಟಬೇಕಯ್ಯಾ! (ದಿ)

ಟ್ಟಿಯವನದು ವಿಶಾಲವಿರ್ಬೇಕಯ್ಯಾ!
ಭಸ್ತಿಯಂತೆ ನಿಸ್ಪೃಹನಾಗ್ಬೇಕಯ್ಯಾ!
ನಿತ್ಯಾನಿತ್ಯ ವಿವೇಕಿಯಾಗಿರ್ಬೇಕಯ್ಯಾ! (ಹ)
-ಗೆಗಳಿಗೆ ಯಮರೂಪಿಯಾಗ್ಬೇಕಯ್ಯಾ!
ರರೇಳಿಗೆಗಸೂಯೆ ಪಡ್ಬಾರ್ದಯ್ಯಾ! (ಕೆ)
-ಟ್ಟ ಮಂತ್ರಿಗಳನ್ನಿಟ್ಟುಕೊಳ್ಳಬಾರ್ದಯ್ಯಾ!
ಳ್ಳ, ಸುಳ್ಳರಿಗಾಶ್ರಯ ಕೊಡ್ಬಾರ್ದಯ್ಯಾ! (ಕೊ)
-ಟ್ಟ ಭಾಷೆಗೆ ತಪ್ಪಿ ನಡೆಯಬಾರ್ದಯ್ಯಾ!
ಬೇಲಿಯೇ ಹೊಲವನ್ನು ಮೇಯ್ಬಾರ್ದಯ್ಯಾ!
ರ್ತವ್ಯ ನಿಷ್ಠಾವಂತ ತಾನಾಗ್ಬೇಕಯ್ಯಾ! (ಅ)
-ಯ್ಯಾ ನಿರಂಜನಾದಿತ್ಯ ಮಾದರಿಯಯ್ಯಾ!!!

ಮಹಿಮಾ ಶೂನ್ಯ ಮರೆಯಾಗಿರಬೇಕು!

ಹಿತಾಹಿತಾತೀತ ಒಳಗಿರಬೇಕು!
ಮಾತುಕಥೆಯನ್ನಂತೂ ಬಿಡಲೇಬೇಕು!
ಶೂದ್ರ, ಬ್ರಾಹ್ಮಣ ಭೇದವೇಕಿರಬೇಕು? (ಜ)
-ನ ಗುಣ ವಲಯ ದಾಟಿ ಹೋಗಬೇಕು!
ನಸ್ಸಿನ ಚಂಚಲತೆ ಗೆಲಬೇಕು! (ಕೆ)
-ರೆ ನೀರಿನಂತೆ ಪ್ರಶಾಂತವಾಗಬೇಕು!
ಯಾರನ್ನೂ ನೋಯಿಸದೇ ತಾನಿರಬೇಕು!
ಗಿರೀಶ್ವರನಂತೆ ಯೋಗಿಯಾಗಬೇಕು!
ಘುಪತಿಯ ಭಜನೆ ಮಾಡಬೇಕು!
ಬೇಡರ ಶಬರಿಯಂತೆ ಇರಬೇಕು! (ಕಾ)
-ಕುಸ್ಥ ನಿರಂಜನಾದಿತ್ಯನೆನಬೇಕು!!!

ಅಕ್ಕರೆಯ ಸಕ್ಕರೆಯ ಬಿಟ್ಟಾಯ್ತು! (ಅ)

-ಕ್ಕ ಪಕ್ಕದವರಿಗೆ ದುಃಖವಾಯ್ತು! (ದೊ)
-ರೆತದ್ದರಲ್ಲೇ ತೃಪ್ತಿಯೀಗುಂಟಾಯ್ತು!
ಶಸ್ಸಿಗಿದರಿಂದ ನಾಂದಿಯಾಯ್ತು!
ದಾಶಿವ ಭಜನಾನಂದವಾಯ್ತು!
(ಚೊ)ಕ್ಕಟವಾದ ಮನೆಯಿದರಿಂದಾಯ್ತು! (ಮ)
ರೆಯಬಾರ್ದವನನ್ನೆಂಬರಿವಾಯ್ತು! (ಸಾ)
ಲೇಬೇಕೀ ದೇಹವೆಂದರಿವಾಯ್ತು!
ಬಿಡ್ಬೇಕಿದ್ರ ಮೋಹವೆಂದಿದ್ದದ್ದಾಯ್ತು! (ಗು)
-ಟ್ಟಾಗೀಗ ಸಾಧನೆ ಸಾಗುವಂತಾಯ್ತು! (ಆ)
-ಯ್ತು ನಿರಂಜನಾದಿತ್ಯಗೊಪ್ಪಿಸ್ಯಾಯ್ತು!!!

ತನಗೆ ಬೇಕಾದರನೃತವೂ ಅಮೃತ!

ರಹರಿ ಹಿರಣ್ಯಕಶ್ಯಪಗನೃತ!
ಗೆಳೆಯನಾಗಿ ಬಾಲ ಪ್ರಹ್ಲಾದಗಮೃತ!
ಬೇವಾರಸಿ ಬೀದಿನಾಯಿಗಮೇಧ್ಯಮೃತ!
ಕಾರಿರುಳಿಗೆ ಬೆಳಕಾದರೂ ಅನೃತ!
ತ್ತನಾಮ ಅವನ ಭಕ್ತನಿಗಮೃತ!
ತಿಯ ಬಿಟ್ಟಿನ್ನೆಲ್ಲವೂ ಕಾಮಗನೃತ!
ನೃತ್ಯ, ನಾಟಕ ರಸಿಕನಿಗೆ ಅಮೃತ!
ತ್ವ ಚಿಂತಕನಿಗೆ ಅವೆಲ್ಲಾ ಅನೃತ! (ಆ)
-ವೂರಾದರೂ ವಿರಕ್ತನಿಗೆ ಪಂಚಾಮೃತ!
ದ್ವೈತಿಗೆ ದ್ವೈತವೆಂಬುದೆಲ್ಲಾ ಅನೃತ!
ಮೃತ್ಯುಂಜಯಗೆಲ್ಲಾ ಸಿದ್ಧಾಂತವೂ ಅಮೃತ! (ಆ)
-ತ ನಿರಂಜನಾದಿತ್ಯಾನಂದನಾಗ್ಯಮೃತ!!!

ನರ ಹರನಾಗುವುದೆಂದು? (ಮಾ)

-ರನಿಗೆ ಮರಣವು ಆದಂದು!
ಸ್ತ, ಪಾದ, ಸ್ವಸ್ಥವಾದಂದು! (ರಾಂ)
-ರಸ ರಸನೆ ಸವಿದಂದು!
ನಾಟಕ ಸಂಘ ಬಿಟ್ಟಂದಂದು!
ಗುರುಕೃಪಾ ಪಾತ್ರನಾದಂದು! (ಹಾ)
-ವು, ಹಗ್ಗ, ಭ್ರಾಂತಿ ಹರಿದಂದು! (ಒಂ)
-ದೆಂಬ ನಿಜದರಿವಾದಂದು! (ಅ)
-ದು, ನಿರಂಜನಾದಿತ್ಯಂದಂದು!!!

ಎಲ್ಲೆಲ್ಲೂ ಅಣ್ಣ ತಮ್ಮಂದಿರಲ್ಲೊಡಕು! (ನ)

-ಲ್ಲೆಯರ ಮಾತು ಕೇಳಿದ್ರೆಲ್ಲಾ ತೊಡಕು! (ಕೊ)
-ಲ್ಲೂರಮ್ಮನ ಬಳಿಯಲ್ಲೂ ಈ ಬದುಕು!
ವಳಿಂದಾರಿಗೂ ಆಗದು ಕೆಡಕು! (ಉ)
-ಣ್ಣಲಿದೆ ಕರ್ಮಫಲ! ಇದು ನಿರಖು!
ನ್ನ ತಾನರಿಯದೇ ಎಲ್ಲಾ ಥಳಕು! (ನ)
-ಮ್ಮಂತೆಲ್ಲರೆಂಬ ಸದ್ಬುದ್ಧಿ ಬಂದ್ರೆ ಸಾಕು!
ದಿವ್ಯೋಪದೇಶವಿದರಂತಿರಬೇಕು!
ಕ್ಕಸರಿಗೆದೆಂತರಿವಾಗಬೇಕು? (ಬಿ)
-ಲ್ಲೊಳಗಿನ ಬಾಣ ಎದೆ ಸೀಳಬೇಕು! (ಕೆಂ)
-ಡಗಣ್ಣಿಂದುರಿದು ಬೂದಿಯಾಗಬೇಕು!
ಕುತಂತ್ರ, ನಿರಂಜನಾದಿತ್ಯ ಸುಡ್ಬೇಕು!!!

ಹುಚ್ಚು ದರ್ಬಾರಿಗೆ ತುಚ್ಛ ಪರಿವಾರ! (ಕ)

-ಚ್ಚುವ ನಾಯಿಗೆ ಏಟೊಂದೇ ಪರಿಹಾರ!
ಯಾ, ದಾಕ್ಷಿಣ್ಯಗಳಿಗದು ಬಾಹಿರ! (ಸೇ)
-ರ್ಬಾರದದೆಂದಿಗೂ ನಿತ್ಯಾನಂದ ಮಂದಿರ!
ರಿಪುಗಳಿಂದ ಹಾಳಾರಾಮ ಸರ್ಕಾರ!
ಗೆಳೆಯನದಕ್ಕೆ ಮಾರುತಿಯಾಕಾರ!
ತುಂಬುವನವ ಶ್ರೀ ರಾಮನಾಮ ಸಾರ! (ಸ್ವ)
-ಚ್ಛವಾಗುಳಿಯುವುದು ನಿರಂತರ!
ತಿತ ಪಾವನ ಸ್ವಾಮಿ ರಘುವೀರ!
ರಿಸಿ, ಮುನಿಗಳಿಂದ ಶಕ್ತಿ ಸ್ವೀಕಾರ!
ವಾಮಾಂಗಿ ಸೀತಾ ಸಹಿತ ರಾಜ ಭಾರ! (ಕಿ)
-ರಣ ನಿರಂಜನಾದಿತ್ಯಗಲಂಕಾರ!!!

ಶ್ರೀ ಗುರು ವೆಂಕಟೇಶನೆಂದರಿ ನೀನು!

ಗುಹ್ಯಾದಿಂದ್ರಿಯ ಚಪಲ ಬಿಡು ನೀನು! (ಇ)
-ರುವಷ್ಟ್ರಲ್ಲೇ ಮಕ್ಕಳ ಸಾಕು ನೀನು!
ವೆಂಕಟೇಶೇಚ್ಛೆಯಂತೆಲ್ಲಾಯ್ತೆನ್ನು ನೀನು!
ಪಟ ವಿಶ್ವಾಸ ತೋರ್ಬಾರದು ನೀನು! (ಪೇ)
-ಟೆ ಬೀದಿಗಳಲ್ಲೋಡಾಡಬೇಡ ನೀನು!
ಬರಿಯಂತಾಗ್ವ ಶಪಥ ಮಾಡ್ನೀನು!
ನೆಂಟರಿಷ್ಟರೆಲ್ಲಾತನೆಂದರಿ ನೀನು!
ತ್ತ ಭಜನೆ ನಿತ್ಯ ಮಾಡ್ಬೇಕು ನೀನು! (ಯಾ)
-ರಿಗೂ ಅಧೀನಳಾಗಿರ್ಬಾರ್ದು ನೀನು!
ನೀತಿ, ರೀತಿ ಶುದ್ಧವಾಗಿಟ್ಟುಕೋ ನೀನು! (ತ)
-ನುಜೆ ನಿರಂಜನಾದಿತ್ಯನಿಗೆ ನೀನು!!!

ನಾನಿರ್ವ ತನ್ಕ ಏನೂ ಯೋಚಿಸ್ಬೇಡೆಂದಾ ಭಕ್ತ!

ನಿನ್ನ, ನನ್ನ ಸಖ್ಯ ಸದಾ ಇರಲೆಂದಾ ಮುಕ್ತ! (ಈ)
-ರ್ವರೊಂದಾಗಿರುವುದೆಂದೆಂದಿಗೂ ಉಪಯುಕ್ತ!
ಪ್ಪಿ ನಡೆಯಬಾರದಿಬ್ಬರೂ ಈ ಪ್ರಯುಕ್ತ! (ಏ)
-ನ್ಕನಸು ಕಂಡ್ರೂ ಹಿಗ್ಗ, ಕುಗ್ಗ ನಿಜ ವಿರಕ್ತ!
ರ್ಪೇರೆಲ್ಲಾ ಮಟ್ಟವಾದ್ಮೇಲೆ ಎತ್ಬೇಕು ಕತ್ತ!
ನೂರಾರ್ಮಾತ್ಗಿಂತೋರೊಂದು ಕಾರ್ಯಗೈವುದೇ ಸೂಕ್ತ!
ಯೋಗಶಕ್ತಿಯಿಂದ ಜೈಸಬೇಕು ಈ ಜಗತ್ತ!
ಚಿತ್ತ ಶುದ್ಧಿಯಿಂದಾಗುವ ಸಾಧಕ ಶಕ್ತ! (“ಈ)
-ಸ್ಬೇಕಿದ್ದು ಜೈಸ್ಬೇಕು!” ಈಗಿಹ ವಿಪತ್ತ ! (ನೀ)
-ಡೆಂದರೆ ಕೊಡದಿರುವವನಾವ ಉದಾತ್ತ?
ದಾಹ ಶಾಂತಿಯಾಗದು ಹೋದ್ರೆ ಕಡಲಿನತ್ತ!
ಯ, ಭಕ್ತಿಯ ಸಜ್ಜನನೆಡೆಗೆ ಪೋಗತ್ತ! (ಭ)
-ಕ್ತವತ್ಸಲ ನಿರಂಜನಾದಿತ್ಯಮುಕ್ತ ಭಕ್ತ!!!

ನಿನ್ನ ನೆನೆದು ನಾ ಕಾಲ ಕಳೆವೆ! (ನ)

-ನ್ನ ನೀನಿಂತಿಸಿದದಕ್ಕಳುವೆ!
ನೆತ್ತರೆಲ್ಲಾ ಬತ್ತಿಹೋಯ್ತೆಂದೊರೆವೆ!
ನೆಮ್ಮದಿ ನೀಡೆಂದು ಮೊರೆಯಿಡುವೆ!
ದುರ್ಬುದ್ಧಿ ಬಿಡಿಸೆಂದು ಪ್ರಾರ್ಥಿಸುವೆ!
ನಾಮ ಜಪ ಸಾದಾ ಮಾಡುತ್ತಿರುವೆ!
ಕಾಮನಾಟಕ್ಕೊಳಗಾಗದಿರುವೆ!
ಭಿಸ್ಬೇಕ್ದರ್ಶನವೆಂದಾಶಿಸುವೆ! (ತ್ರಿ)
-ಕರಣ ಶುದ್ಧವಾಗಿ ಇಟ್ಟಿರುವೆ! (ಹ)
-ಳೆಯ ವಾಸನೆಯ ತೊಳೆದಿರುವೆ! (ಧ)
-ವೆ, ನಿರಂಜನಾದಿತ್ಯಗಾಗಿರುವೆ!!!

ಅರಿಯೋ ಶ್ರೀಹರಿಯ ನೀನರಿಯೋ! (ಪ)

-ರಿಪರಿ ಹೆಸರವಗೆಂದರಿಯೋ!
ಯೋಗೇಶ್ವರ ತಾನವನೆಂದರಿಯೋ!
ಶ್ರೀದೇವಿಗರಸವನೆಂದರಿಯೋ!
ರನ ಮೋಹಿನೀತನವನೆಂದರಿಯೋ! (ಅ)
-ರಿಕುಲಾಂತಕನವನೆಂದರಿಯೋ!
ದುವೀರಾ ರಾಧಾವರ! ಅರಿಯೋ!
ನೀಲಮೇಘಶ್ಯಾಮಾರಾಮ! ಅರಿಯೋ! (ತ್ರಿ)
-ನಯನನಿಷ್ಟಮೂರ್ತಿಯೆಂದರಿಯೋ! (ಹ)
-ರಿ ನಾರದನ ತಾತನೆಂದರಿಯೋ!
ಯೋಗಿ ನಿರಂಜನಾದಿತ್ಯೆಂದರಿಯೋ!!!

ಶಿವ ತಾ ದತ್ತಾವಧೂತ!

ರ ಕೈಲಾಸವಾಸಾತ!
ತಾರಕ ಮಂತ್ರ ಪ್ರೇಮಿತ!
ಕ್ಷಕನ್ಯಾ ಪತಿ ಆತ! (ಹ)
-ತ್ತಾರನೇ ತತ್ವಾತೀತಾತ! (ಭ)
-ವರೋಗ ವೈದ್ಯ ರಾಜಾತ!
ಧೂರ್ತ ದಾನವಾಂತಕಾತ! (ಈ)
-ತ ನಿರಂಜನಾದಿತ್ಯಾತ!!!

ನಂಜುಂಡವನಂಜುವನೇ ಜವಗೆ? (ಗಾ)

-ಜುಂಬ ನರನಂಜಲೇಬೇಕವಗೆ! (ಜ)
-ಡ ದೇಹದ ಹಂಗೇನಿಲ್ಲಾ ಶಿವಗೆ!
ರ ವಿನಾಯಕ ಪುತ್ರಾ ಶಿವಗೆ!
ನಂದೀಶ್ವರನೇ ವಾಹನಾ ಶಿವಗೆ!
ಜುಟ್ಟಿನಲ್ಲಿಹಳು ಗಂಗಾ ಶಿವಗೆ!
ರದೆ ಪಾರ್ವತಿ ಸತೀ ಶಿವಗೆ!
ನೇತ್ರಗಳ್ಮೂರಿರುವುದೀ ಶಿವಗೆ!
ರಾ, ಜನ್ಮ ದುಃಖವಿಲ್ಲಾ ಶಿವಗೆ!
ಸನ ಗಜ ಚರ್ಮವಾ ಶಿವಗೆ!
ಗೆಳೆಯ ನಿರಂಜನಾದಿತ್ಯವಗೆ!!!

ಪ್ರಳಯಾಂತಕಗೂ ಅನುಕಂಪ ಉಂಟು! (ಬ)

-ಳಲಿದ್ದು ಹಾಲಾಹಲದಿಂದೆಲ್ಲರುಂಟು! (ಮಾ)
-ಯಾಂಧಕಾರ ಜಗತ್ತ ಮುಸುಕಿದ್ದುಂಟು!
ಳಮಳಗೊಂಡು ಮೂರ್ಛೆ ಬಂದದ್ದುಂಟು!
ಣ್ಣೀರು ಸುರಿಸುತ್ತಿದ್ದವರೂ ಉಂಟು!
ಗೂಡ್ರಿಸಿ ತಲೆ ಮೇಲ್ಕೈಯಿಟ್ಕೂತವ್ರುಂಟು!
“ಅನಾಥರ ಕಾಯಪ್ಪಾ ”! ಎಂದವ್ರೂ ಉಂಟು!
ನುಡಿ ನಿಂತು ಕಲ್ಗೊಂಬ್ಯಂತಾದವ್ರುಂಟು!
ಕಂಡಿದ ಶಿವನೆದ್ದು ನಿಂತದ್ದೂ ಉಂಟು!
ರಮೇಶ್ವರನ ತಡೆದವ್ರಾರುಂಟು?
ಉಂಡದ್ದು ವಿಷವನ್ನೊಂದೇ ಗುಟ್ಕಗಂಟು! (ಉಂ)
-ಟು ನಿರಂಜನಾದಿತ್ಯಗಾ ನೆನಪುಂಟು!!!

ಯೋಗ್ಯಾಯೋಗ್ಯ ತೀರ್ಮಾನಕ್ಕಾತುರ ಬೇಡ! (ರೇ)

-ಗ್ಯಾಡಿ, ಕೂಗಾಡಿ, ಹೊಡೆದಾಡಲೂ ಬೇಡ!
ಯೋಗಾಭ್ಯಾಸ ನಿತ್ಯ ಮಾಡದಿರಬೇಡ! (ಭಾ)
-ಗ್ಯಲಕ್ಷ್ಮಿಯೊಲಿವುದ್ರಲ್ಲನುಮಾನ್ಬೇಡ!
ತೀರ್ಥ, ಪ್ರಸಾದ ಗುರುವಿನದ್ಬಿಡ್ಬೇಡ! (ದು)
-ರ್ಮಾರ್ಗಿಯಾಗ್ಯೆಂದಿಗೂ ಬದುಕಿರಬೇಡ!
ಭೋಮಣಿಯ ಆದರ್ಶ ಬಿಡಬೇಡ! (ಸಿ)
-ಕ್ಕಾಗವಕಾಶ ಕಣ್ಣು ಮುಚ್ಚಿರಬೇಡ!
ತುಕ್ಕು ಹಿಡಿಸಿ ಪಾತ್ರೆ ತೂತು ಮಾಡ್ಬೇಡ!
ಕ್ಕಸರ ಠಕ್ಕಿಗೆ ಮರುಳಾಗ್ಬೇಡ!
ಬೇಸಿಗೆಯಲ್ಲುಣ್ಣೆಯಂಗಿ ತೊಡಬೇಡ! (ಮೃ)
-ಡ ನಿರಂಜನಾದಿತ್ಯನ್ಯರಂಗಿ ತೊಡ!!!

ಕಾಮನ ಜಯಿಸಿದವ ಶಿವ!

ಹೇಶನ ಕೆಣಕಿದನವ! (ತ್ರಿ)
-ನಯನ ತೆರೆದನಂಬಕವ! (ಧ್ವ)
-ಜ ಸಹಿತ ಸುಟ್ಟುಹೋದನವ! (ತಾ)
-ಯಿಯಕ್ಷಿಗಳಲ್ಲುಳಿದನವ! (ಬ)
-ಸಿರ್ಕಂಡಿತು ಗುಹನುದಯವ!
ನುಜರ ದಂಡಿಸಿದನವ! (ದೇ)
-ವತೆಗಳಿಗಿತ್ತ ವಿಜಯವ!
ಶಿವ ಪಾರ್ವತಿಗಿತ್ತಾನಂದವ! (ಶಿ)
-ವ ನಿರಂಜನಾದಿತ್ಯನೆಂಬವ!!!

ಜೋಕೆ ತಪ್ಪಿದವನಿಂದಾಗುತಿದೆ ಠೀಕೆ! (ಏ)

-ಕೆ ಬೇಕೆಮಗನ್ಯ ರಾಜ್ಯಗಳ ಪತಾಕೆ?
ನ್ನ ತಾನರಿತಿರ್ಪುದೇ ದಾರಿ ಸುಖಕೆ! (ಹಿ)
-ಪ್ಪಿಗಳನುಕರಣೆಯೇಕೆ ಭಾರತಕೆ?
ಮೆ, ಶಮೆಯಭ್ಯಾಸ ಸಾಕಧ್ಯಾತ್ಮಿಕಕೆ!
ರದನೊಳಗಿರ್ಪಾಗನ್ಯ ದೇವರೇಕೆ?
ನಿಂದಾ ಸ್ತುತಿಗಳಿಂದ ಧೃತಿಗೆಡ್ವುದೇಕೆ?
ದಾರಿ ಹುಡುಕಬೇಕು ಕ್ಷೀರಸಾಗರಕೆ!
ಗುರು ದತ್ತಾತ್ರೇಯನ ಕೃಪೆ ಬೇಕದಕೆ!
ತಿರುಗುವನೀ ಭೂಮಂಡಲದಲ್ಲದಕೆ!
ದೆವ್ವಗಳು ಬಾರವವನ ಹತ್ತಿರಕ್ಕೆ!
(ಕಂ)ಠೀರವನವನೆಲ್ಲಾ ಮೃಗ ಮಂಡಲಕೆ! (ಠೀ)
-ಕೆ ಮಾಡ್ದಿರು ನಿರಂಜನಾದಿತ್ಯನ! ಜೋಕೆ!!!

ನಾಮ, ರೂಪ, ಸುಟ್ಟಮೇಲ್ವಿಭೂತಿ!

ನಸ್ಸಿಗೆ ಶಾಂತಿ ಆ ವಿಭೂತಿ!
ರೂಢಿಯಂತಿರ್ಪಂತಲ್ಲಾ ವಿಭೂತಿ!
ರಮಾರ್ಥ ಸಿದ್ಧಿಗೀ ವಿಭೂತಿ!
ಸುಟ್ಟ ಮೇಲೆ ತ್ರಿಲೋಕ ವಿಖ್ಯಾತಿ! (ದಿ)
-ಟ್ಟ ಹೆಜ್ಜೆಗೆ ಗಿಟ್ಟುವುದಾ ಖ್ಯಾತಿ!
ಮೇನಕಾ ಸಂಗದಿಂದಧೋಗತಿ! (ಬಿ)
-ಲ್ವಿದ್ಯಾ ಪ್ರವೀಣನದ್ದೂ ದುಃಸ್ಥಿತಿ!
ಭೂಮಾನಂದ ಪರಬ್ರಹ್ಮ ಸ್ಥಿತಿ! (ಯ)
-ತಿ ನಿರಂಜನಾದಿತ್ಯಾಗಾ ಸ್ಥಿತಿ!!!

ತೆಪ್ಪೆಗಿರ್ಪವ ಸಪ್ಪೆ ಏನಯ್ಯಾ? [ದ]

-ಪ್ಪವಾಗಿರ್ಪವ ಬೆಪ್ಪನೇನಯ್ಯಾ?
ಗಿರಿಧಾರಿ ಸಾಮಾನ್ಯನೇನಯ್ಯಾ? (ತೋ)
-ರ್ಪಡಿಸಿಕೊಳ್ಳರ್ಮಹಾತ್ಮರಯ್ಯಾ!
ನವಾಸ್ಯಾಗ್ಬೇಕೆಂದಿಲ್ಲವಯ್ಯಾ!
ರ್ವಸಂಗ ತ್ಯಾಗಿಗಳವ್ರಯ್ಯಾ! (ತಿ)
-ಪ್ಪೆಯೂ ಉಪ್ಪರಿಗೆ ಮನೆಯಯ್ಯಾ!
ರಿಳಿತ ಅವರ್ಗಿಲ್ಲವಯ್ಯಾ!
ಭೋಮಣಿಯಂತಿರುವರಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯನಂತಯ್ಯಾ!!!

ನಮ್ಮದು ಅವಿಭಕ್ತ ಕುಟುಂಬ! (ಬೊ)

-ಮ್ಮನಾಸ್ತಿಗೆ ಹಕ್ಕು ನಮ್ಮದೆಂಬ!
ದುಡಿವವಗದು ಸಿಗ್ವುದೆಂಬ!
ನಧಿಕಾರಿಗೆ ದಕ್ಕದೆಂಬ!
ವಿಷಯಿಗೇನೂ ಲಭಿಸದೆಂಬ!
ಕ್ತನಿಗೆ ಬಹು ಭಾಗವೆಂಬ! (ಮು)
-ಕ್ತನಿಗಾಸ್ತಿಯ ಪೂರ್ಣಹಕ್ಕೆಂಬ!
ಕುಪುತ್ರರ್ನೀವಾಗಬೇಡಿರೆಂಬ! (ಗಂ)
-ಟುಂಡಷ್ಟೂ ವೃದ್ಧಿಯಾಗುವುದೆಂಬ! (ಸಾಂ)
-ಬ, ನಿರಂಜನಾದಿತ್ಯ ತಾನೆಂಬ!!!

ಎಷ್ಟು ನಾಮ, ಎಷ್ಟು ರೂಪ ನಿನಗಿಷ್ಟ? (ಅ)

-ಷ್ಟು, ಇಷ್ಟು ಅನ್ನುವುದೇ ಬಹಳ ಕಷ್ಟ!
ನಾಶವಾಗದ್ದಾವುದೆಂದು ಹೇಳು ಸ್ಪಷ್ಟ!
ನೆ, ಮಠ ಕಟ್ಟಿಸಿ ಆಯ್ತಲ್ಲಾ ನಷ್ಟ!
ನ್ನವರೆಂಬವರಿಂದ ಆದೆ ಭ್ರಷ್ಟ! (ಇ)
-ಷ್ಟು ಆದ್ರೂ ಅನ್ನಿಸುತ್ತಿದೆ ಅದೇ ಶ್ರೇಷ್ಟ!
ರೂಪಮೋಹದಿಂದಾದ ಮಾನವ ದುಷ್ಟ!
ಡದಾದ ತಾನೆಷ್ಟಿದ್ದರೂ ಸಂತುಷ್ಟ!
ನಿತ್ಯಾನಿತ್ಯವರಿತವ ನರ ಶ್ರೇಷ್ಟ!
ಡೆ, ನುಡಿಯಲ್ಲಿ ಆತ ಆತ್ಮನಿಷ್ಟ! (ತ್ಯಾ)
-ಗಿಯಾದವನಿಗುಂಟೇನು ಇಷ್ಟಾನಿಷ್ಟ? (ಇ)
-ಷ್ಟ ನಿರಂಜನಾದಿತ್ಯನಮರ ಸ್ಪಷ್ಟ!!!

ಮನೋಹರೀ! ನೀನೆನಗೆ ವೈರಿ!

ನೋಟ ಕೂಟದಿಂದಾದೆ ಭಿಕಾರಿ!
ಸ್ತ, ಪಾದದಿಂದ್ರಜಾಲ ಭಾರಿ!
ರೀತಿ, ನೀತಿ ಕೆಟ್ಟು ದ್ರೋಹಕಾರಿ!
ನೀನಾಗಬೇಕು ಸದಾಚಾರಿ!
ನೆನಪಿಟ್ಟು ಹಿಡಿ ನನ್ನ ದಾರಿ!
ರಜನ್ಮ ಸಾರ್ಥಕವೀ ಪರಿ!
ಗೆಳೆಯ ನಿನಗೊಬ್ಬಾನೆಂದರಿ!
ವೈಕುಂಠದಲ್ಲಿರ್ಬೇಕಿಬ್ರೂ ಸೇರಿ!
ರಿಸಿ ನಿರಂಜನಾದಿತ್ಯಾ ಹರಿ!!!

ನಿದ್ದೆಯಲ್ಲಿದ್ದವಗೆದ್ದ ಮೇಲುದ್ಯೋಗ! (ಬಿ)

-ದ್ದೆ ಪಾದಕ್ಕೆಂದ್ರೂ ಮಾಡನವನುದ್ಯೋಗ! (ಭ)
-ಯ ತೋರಿದ್ರೂ ಆಗದವನಿಂದುದ್ಯೋಗ! (ನಿ)
-ಲ್ಲಿಸಿದ್ರೂ ಒಲ್ಲೆನೆನ್ನುವನಾ ಉದ್ಯೋಗ! (ಎ)
-ದ್ದಮೇಲೆಲ್ಲರಲ್ಲೂ ಬೇಡುವನುದ್ಯೋಗ! (ಅ)
-ವನ ದುರ್ವಿಧಿಗೀಗಾರ್ಕೊಡ್ವರುದ್ಯೋಗ?
ಗೆಳೆಯರಿಗೂ ಬೇಡವಾಗುವನಾಗ! (ಬಿ)
-ದ್ದವನ ಮೇಲ್ಕಲ್ಲೆತ್ತಿ ಹಾಕ್ವರೆಲ್ಲರಾಗ!
ಮೇಷ,

ಈನವೆಣಿಪರವ್ನ ಕಂಡಾಗ! (ಹಾ)
-ಲು, ರೊಟ್ಟಿ ಕೊಟ್ಟವರಾರೂ ಬಾರರಾಗ! (ಉ)
-ದ್ಯೋಗ ನರ ನಾರಾಯಣನಪ್ಪಾ ಯೋಗ! (ಜ)
-ಗತ್ತಿಗೆ ನಿರಂಜನಾದಿತ್ಯೋದಯೋಗ!!!

ಇದ್ದಾಗ ಇತ್ತಿಲ್ಲ, ಸತ್ತಾಗ ಸದ್ದಿಲ್ಲ! [ಒ]

-ದ್ದಾಡುವುದೇ ಆಯ್ತು ಜೀವಮಾನವೆಲ್ಲಾ!
ಜೇಂದ್ರನಂತಳುವುದಕ್ಕೆ ಗೊತ್ತಿಲ್ಲ!
ಹಸುಖದಾಸೆ ಸತ್ರೂ ಸಾಯೋದಿಲ್ಲ! (ಬು)
-ತ್ತಿ ಕಟ್ಲಿಕ್ಕೆ ನಿತ್ಯ ಉಪವಾಸಾಯ್ತಲ್ಲಾ! (ತ)
-ಲ್ಲಣ ಬೇಡೆಂದವ ಕರುಣಿಸಿಲ್ವಲ್ಲಾ!
ರ್ವವೂ ಪ್ರಸಾದವೆನ್ಲೇಬೇಕಾಯ್ತಲ್ಲಾ! (ದ)
-ತ್ತಾತ್ರೇಯನ ಲೀಲೆ ತಿಳಿದವರಿಲ್ಲ!
ರುಡನಂತೆ ಹೊರ್ಲಿಕ್ಕವ ಸಿಕ್ಕಿಲ್ಲ!
ತತ ಪ್ರಾರ್ಥಿಸದೆ ನಿರ್ವಾಹವಿಲ್ಲ! (ಮ)
-ದ್ದಿಕ್ಕಿ ಸಾಯುವ ಸಾಹಸ ಬೇಕಿಲ್ಲ! (ಒ)
-ಲ್ಲ, ನಿರಂಜನಾದಿತ್ಯಡ್ಡದಾರಿಹಿಡಿಯೋಲ್ಲ!!!

ಕಾಮ ಕುಲ ಸಕಲ ವ್ಯಾಕುಲ!

ದನಾರಿಯುಂಡಾ ಹಾಲಾಹಲ!
ಕುರುವಂಶವಾಯಿತು ನಿರ್ಮೂಲ!
ಯವಾಯ್ತು ಯದುವಂಶವಲಾ!
ದ್ಧರ್ಮ ಮರೆಯಾಗಿ ಹೋಯ್ತುಲಾ!
ಳ್ಳ, ಸುಳ್ಳರ್ಗಾಯ್ತೀ ಕಾಲವಲಾ! (ಕಾ)
-ಲ ಚಕ್ರದಿಂದ ನುಜ್ಜಾಗ್ವುದೆಲ್ಲಾ!
ವ್ಯಾಪಾರಕ್ಕೆ ಪರಮಾರ್ಥವಲ್ಲಾ!
ಕುಹಕತನ ಬಿಡಬೇಕೆಲ್ಲಾ! (ಬ)
-ಲ ನಿರಂಜನಾದಿತ್ಯಗೀ ಕಾಲ!!!

ಬರೆಯುವ ವಿಷಯ “ಸತ್ಯ”! [ಒ]

-ರೆಯುವುದು ಸದಾ ಅಸತ್ಯ!
ಯುವಜನಕ್ಯಾಳ್ವಾಸೆ ನಿತ್ಯ!
ರ್ತನೆಗಳೆಲ್ಲಾ ದುಷ್ಕೃತ್ಯ!
ವಿವೇಕ, ವೈರಾಗ್ಯತ್ಯಗತ್ಯ!
ಡ್ರಿಪುಗಳ ರಾಜ್ಯನಿತ್ಯ! (ದ್ಯೇ)
-ಯಸಿದ್ಧಿಗವ್ರ ಸಾವಗತ್ಯ!
ತ್ಸಂಗಿಯಾಗಿರನು ನಿತ್ಯ! (ಸ)
-ತ್ಯ ನಿರಂಜನಾದಿತ್ಯ ಸ್ತುತ್ಯ!!!

ಮಾತುಳಿಸದ ನಾಲಿಗೆ ಏಕೆ?

ತುಪ್ಪಾನ್ನ ಚಪ್ಪರಿಸಿದ್ರೆ ಸಾಕೇ? (ಬಾ)
-ಳಿರ್ಬಾರದನೃತವಾಡ್ವುದಕೆ?
ತ್ಯದನುಭವವಾಗ್ಲದಕೆ! (ಅ)
-ದನ್ನಾಗ ಹೇಳಲೆಲ್ಲಾ ಜನಕೆ!
ನಾಮಸಂಕೀರ್ತನೆ ಬೇಕದಕೆ! (ನಾ)
-ಲಿಗೆಗಿದು ದಾರಿ ಪಾವನಕೆ! (ಆ)
-ಗೆ ನಾರದ ಗುರು ತಾನದಕೆ!
ಳಿಗೆಯಿದರಿಂದ ಜೀವಕ್ಕೆ! (ಏ)
-ಕೆನ್ನು, ನಿರಂಜನಾದಿತ್ಯ ಠೀಕೆ!!!

ಕೊಟ್ಟದ್ದುಂಡಾನಂದವಾಗಿರು! (ಬೆ)

-ಟ್ಟದಷ್ಟು ಬೇಕೆಂದನ್ನದಿರು! (ಕ)
-ದ್ದುಂಬಭ್ಯಾಸ ಬೆಳೆಸದಿರು!
ಡಾಮರು ನೆಲ ಮೆಟ್ಟದಿರು!
ನಂದೀಶನ ನೆನೆಯುತಿರು!
ರ್ಶನಕ್ಕಾಗಿ ಕಾಯುತಿರು!
ವಾದವಾರಲ್ಲೂ ಮಾಡದಿರು! (ಮಾ)
-ಗಿ ಹಣ್ಣಾದ ಮೇಲೆ ಉದುರು! (ಸೇ)
-ರು, ನಿರಂಜನಾದಿತ್ಯನೂರು!!!

ಮಾತು ಕೊಟ್ಟು ಕೈ ಕೊಟ್ಟವರೇ ಹೆಚ್ಚು!

ತುತ್ತು ಹಾಕದೇ ಸತ್ತವರೇ ಹೆಚ್ಚು!
ಕೊಟ್ಟ ಸಾಲ ತೀರಿಸದವ್ರೇ ಹೆಚ್ಚು! (ಹೊ)
-ಟ್ಟು ಬೆರೆಸಿ ದಿನ್ಸಿ ಕೊಟ್ಟವ್ರೇ ಹೆಚ್ಚು!
ಕೈಲೊಂದು ಬಾಯ್ಲೊಂದೆಂಬುವರೇ ಹೆಚ್ಚು!
ಕೊನೆಗೂ “ಶಿವಾ” ಅನ್ನದವ್ರೇ ಹೆಚ್ಚು! (ಸು)
-ಟ್ಟ ಮೇಲೆ ಯಾರಿಗೆ ಯಾರಪ್ಪಾ ಹೆಚ್ಚು?
ರ ಗುರು ಭಕ್ತರಾಗ್ಬಿಡ್ರೀ ಹುಚ್ಚು!
ರೇಗಿ ಯಂತ್ರ ನಡೆಸಿದ್ರಕ್ಕಿ ನುಚ್ಚು!
ಹೆರವರು ತನ್ನವ್ರೆಂಬುದೂ ಹುಚ್ಚು! (ಮೆ)
-ಚ್ಚು ನಿರಂಜನಾದಿತ್ಯನನ್ನು ಹೆಚ್ಚು!!!

ದೇವರೇ ಮನಸ್ಸಾಗಿ ಬೇಡುತ್ತಾನೆ! (ಅ)

-ವನೇ ಆಗಿ ಮನಸ್ಸು ನೀಡುತ್ತಾನೆ! (ಯಾ)
-ರೇನು ಧ್ಯಾನಿಸ್ತಾರೋ ತಾನದಾಗ್ತಾನೆ!
ನುಜನಿದನ್ನರಿಯದಿದ್ದಾನೆ!
ರ ನಾರಾಯಣಾಗ್ಬೇಕಾಗಿದ್ದಾನೆ! (ನಿ)
-ಸ್ಸಾರೇಂದ್ರಿಯ ಸುಖಕ್ಕಾಶಿಸುತ್ತಾನೆ! (ಯೋ)
-ಗಿ ನೀನಾಗೆಂದರೆ ಗ್ರಾಬಿಯಾಗ್ತಾನೆ!
ಬೇಡ್ವವ, ಕೊಡ್ವವ ತಾನಾಗಿದ್ದಾನೆ! (ನೋ)
-ಡುವುದಕ್ಕೆ ತನ್ನ ಮರೆತಿದ್ದಾನೆ! (ದ)
-ತ್ತಾತ್ರೇಯಾರ್ತ ರಕ್ಷಕನಾಗಿದ್ದಾನೆ! (ತಾ)
-ನೇ ನಿರಂಜನಾದಿತ್ಯನೆಂದಿದ್ದಾನೆ!!!

ಸಾಕ್ಷಿ ಸ್ವರೂಪ ಆದಿತ್ಯ!

ಕ್ಷಿತಿಗತಿ ಹಿತಾದಿತ್ಯ!
ಸ್ವಧರ್ಮ ಕರ್ಮಾತ್ಮಾದಿತ್ಯ!
ರೂಪ, ನಾಮಾನಂದಾದಿತ್ಯ!
ರಬ್ರಹ್ಮ ರೂಪಾದಿತ್ಯ!
ದಿ, ಮಧ್ಯಾಂತಾತ್ಮಾದಿತ್ಯ!
ದಿವ್ಯಜ್ಞಾನಾನಂದಾದಿತ್ಯ! (ನಿ)
-ತ್ಯ ಶ್ರೀ ನಿರಂಜನಾದಿತ್ಯ!!!

ಎಲ್ಲೆಲ್ಲೂ ಇರುವವ ನಿನ್ನಲ್ಲೂ! (ನ)

-ಲ್ಲೆಗಿದನೆಂದ ಶಿವ ನಿನ್ನಲ್ಲೂ! (ಇ)
-ಲ್ಲೂಟಲ್ಲೂಟವಗೂಟ ನಿನ್ನಲ್ಲೂ!
ಕ್ಕಾನಂದದಿಂದೂಟವಿಂದಿಲ್ಲೂ!
ರುಚಿ, ಶುಚಿಯೂಟ ನಿತ್ಯದಲ್ಲೂ!
ರ ಗುರು ಪ್ರಸಾದವಾಗ್ಲಿಲ್ಲೂ!
ಶವರ್ತಿಯಾಗ್ತ್ರಿಕಾಲದಲ್ಲೂ!
ನಿತ್ಯ, ಶುದ್ಧ, ಬುದ್ಧ ತಾನೆಲ್ಲೆಲ್ಲೂ! (ತಿ)
-ನ್ನನವ ತಾಮಸಾಹಾರವೆಲ್ಲೂ! (ಎ)
-ಲ್ಲೂರ ನಿರಂಜನಾದಿತ್ಯನಿಲ್ಲೂ!!!

ಅನಧಿಕಾರಿಗಧಿಕಾರವಿತ್ತರನರ್ಥ!

ಶ್ವರವಿದೆಂದರಿತಾಳದಿದ್ದರನರ್ಥ!
ಧಿಕ್ಕಾರ ಅಂಥಾ ಸರ್ಕಾರಕ್ಕೆಂದರೂ ಅನರ್ಥ!
ಕಾರ್ಯತತ್ಪರನಾಗಿರುವರಸ ಸಮರ್ಥ!
ರಿಪುಗಳಾರನೂ ಜೈಸಿರಬೇಕಾ ಸಮರ್ಥ!
ಣಸಮುದಾಯಕ್ಕೆ ಶಿವನಾಗಾ ಸಮರ್ಥ! (ಸಾ)
-ಧಿಸಿದರೆ ಪ್ರಜಾಹಿತವನ್ನಾತ ಸಮರ್ಥ!
ಕಾಮಿನೀ ಕಾಂಚನಕ್ಕಾಳಾಗ್ಬಾರದಾ ಸಮರ್ಥ!
ಕ್ಕಸರಿಗೆ ಶ್ರೀರಾಮನಾಗ್ಬೇಕಾ ಸಮರ್ಥ!
ವಿಕಲ್ಪ ಶೀಲನಾಗಿರಬಾರದಾ ಸಮರ್ಥ! (ದ)
-ತ್ತ ಗುರುವಿಗೆ ಗುಲಾಮನಾದವ ಸಮರ್ಥ!
ಘುವಿರನಿದನ್ನರಿತಿದ್ದಾದ ಸಮರ್ಥ!
ಯ, ವಿನಯದಿಂದಿದ್ದಾರ್ತರಲ್ಲಾ ಸಮರ್ಥ! (ಸಾ)
-ರ್ಥಕ ನಿರಂಜನಾದಿತ್ಯಾನಂದದಾ ಸಮರ್ಥ!!!

ತನ್ನಾರೋಗ್ಯ ತಾನೀವಾ ಸೂರ್ಯ! (ತ)

-ನ್ನಾರಾಧನೆ ಮಾಡೆನ್ನಾ ಆರ್ಯ!
ರೋಗಿಗಿರ್ಬೇಕು ಮನೋಸ್ಥೈರ್ಯ! (ಭಾ)
-ಗ್ಯವಿದಕ್ಛಕ್ತಿ ಅನಿವಾರ್ಯ!
ತಾಳಿದ್ರೆ ಬಾಳ್ಯಾನೆಂಬ ಧೈರ್ಯ!
ನೀರ ಮೇಲ್ಪರೆವಂತಾ ಕಾರ್ಯ!
ವಾದಕ್ಕರಿವಾಗ್ದಾ ಆಶ್ಚರ್ಯ!
ಸೂಕ್ತಾನುಗ್ರಹ ಮಾಡ್ಲಾಚಾರ್ಯ! (ಆ)
-ರ್ಯ ನಿರಂಜನಾದಿತ್ಯಾಚಾರ್ಯ!!!

ಆಗ್ಬೇಕಾದದ್ದಾದೀತೆಂದಿರ್ಪವಗೆ ನಿಶ್ಚಿಂತೆ! (ಹೋ)

-ಗ್ಬೇಕ್ಬರ್ಬೇಕೆಂಬ ಸಂಕಲ್ಪವೆಲ್ಲಾ ಸದಾ ಚಿಂತೆ!
ಕಾರಣಕರ್ತನಿಷ್ಟದಂತೆಲ್ಲಾಗ್ವಾಗೇಕ್ಚಿಂತೆ?
ಶರಥನಿದ ಮರೆತಿದ್ರಿಂದಾಯ್ತು ಚಿಂತೆ! (ಒ)
-ದ್ದಾಡಿಸಿತು ಮಗನ ವನವಾಸದ ಚಿಂತೆ!
ದೀನಾನಾಥ ನಾಥನಿಷ್ಟದಂತಾಯ್ತೆಂದ್ರೇನ್ಚಿಂತೆ? (ಚಿಂ)
-ತೆಂಬುದು ಮಿಥ್ಯಾ ಮೋಹ ವ್ಯವಹಾರದ ಸಂತೆ!
ದಿವ್ಯ ಜೀವನದಿಂದಿದು ಪರಿಹಾರವಂತೆ! (ದ)
-ರ್ಪ, ದಂಭ ಸಮರ್ಪಣೆಯಾದರಾನಂದವಂತೆ!
ಜ್ರಮುಷ್ಟಿಯ ಹೊಡೆತಕ್ಕಾಗಾರಿದಿರಂತೆ?
ಗೆಲ್ಬೇಕಿಂದ್ರಿಯಗಳ ಗುರುಕೃಪೆಯಿಂದಂತೆ!
ನಿಶಿ, ದಿನ ನಾಮಸ್ಮರಣೆ ಮಾಡಬೇಕಂತೆ! (ನಿ)
-ಶ್ಚಿಂತೆಗಿದು ಅತ್ಯಂತ ಸುಲಭ ದಾರಿಯಂತೆ! (ಜೊ)
-ತೆಗಾರ ನಿರಂಜನಾದಿತ್ಯನಾಗುವನಂತೆ!!!

ನೋಡಲಾರೆ ನಿನ್ನ ಸುಟ್ಟು ಮುಖ ಕಾಮಾ! (ಮೃ)

-ಡನ ಕೆಣಕಿ ಸುಟ್ಟು ಬೂದ್ಯಾದೆ ಕಾಮಾ!
ಲಾಭ ನಿನ್ನ ದರ್ಶನದಿಂದಿಲ್ಲ ಕಾಮಾ! (ತೆ)
-ರೆಯಲಾರೆ ನಿನಗೆನ್ನ ಕದ ಕಾಮಾ!
ನಿರ್ಧರವಿದೆ ನೀ ತಪ್ಪಿಸ್ಲಾರೆ ಕಾಮಾ!
(ನಿ)ನ್ನಪ್ಪ ಶ್ರೀಹರಿಯಾದರೇನಾಯ್ತು ಕಾಮಾ?
ಸುರೇಶನೊಡಲ್ಯೋನಿಮಯಾಯ್ತು ಕಾಮಾ! (ಕ)
-ಟ್ಟಿ ಕೀಚಕ ನಿನ್ನ ಸಂಗದಿಂದ ಕಾಮಾ!
ಮುಕ್ತಿಗೆ ನಿನ್ನಿಂದ ಅಡಚಣೆ ಕಾಮಾ!
ರ, ದೂಷಣರರಸ ನೀನು ಕಾಮಾ!
ಕಾಡಬೇಡ ನೀನಿನ್ಮೇಲಾರನ್ನೂ ಕಾಮಾ!
ಮಾತ್ಕೊಡು ನಿರಂಜನಾದಿತ್ಯಗೆ ಕಾಮಾ!!!

ನಂಬಿದೆನು ನಾ ನಿನ್ನ ಮಾತ!

ಬಿಸಿಲೆನ್ನದೇ ಮಾಡಿದೆ ಜೀತ! (ತಂ)
-ದೆ ನೀನೀಗಾದೆ ಅಪಖ್ಯಾತ!
ನುಡಿಯಲೇನಾ ಪಕ್ಷಪಾತ?
ನಾಯಿಯಂತಾದೆ ನಾನನಾಥ!
ನಿತ್ಯ ನೀನಾದೆ ಲೋಕನಾಥ! (ನ)
-ನ್ನ ನಿನ್ನಲ್ಲೇಕೀ ಭಿನ್ನ ಕಥಾ?
ಮಾಯೆಯಿಂದ ನಾನವನತ! (ಖ್ಯಾ)
-ತ ನಿರಂಜನಾದಿತ್ಯ ಶಾಂತ!!!

ಮಾಡಬಾರದ್ದು ಮಾಡಿದ ಮಾನವ! (ಮಾ)

-ಡಬಹುದಾದದ್ದೂ ಮಾಡಿದನವ!
ಬಾಯ್ಕೈ ದುರುಪಯೋಗ ಗೈದನವ! (ಪ)
-ರನಿಂದೆಯಿಂದ ಪಾಪಿಯಾದನವ!
(ಕ)ದ್ದು ತಿಂದೊಡಲ ಬೆಳೆಸಿದನವ!
ಮಾಯಾ ಮೋಹದಿಂದ ಹಾಳಾದನವ! (ಮಾ)
-ಡಿದನು ಕಾಮ್ಯ ಕರ್ಮಗಳನ್ನವ!
ಣಿದೊದ್ದಾಡಿ ಬಿದ್ದುಹೋದನವ!
ಮಾರಾರಿಯ ಮರೆತೇಬಿಟ್ಟನವ!
ರಳಿ, ಹೊರಳಿ ಅಳಿದನವ! (ಶಿ)
ನಿರಂಜನಾದಿತ್ಯ ತಾನಾದವ!!!

ಪರಮಾತ್ಮನಿಗಸಾಧ್ಯವಾದುದಿಲ್ಲ! (ನ)

-ರನವನಿಗನ್ಯನೆಂದೆಂದಿಗೂ ಅಲ್ಲ!
ಮಾಯೆಯಾಗಿ ಮಾಳ್ಪನದ್ಬುತಗಳೆಲ್ಲ! (ಆ)
-ತ್ಮನಾಗಿ ವ್ಯಾಪಿಸಿಹನಾದ್ಯಂತವೆಲ್ಲ!
ನಿರ್ಮಾಣ, ನಿರ್ಯಾಣಗಳಂಟಿವಗಿಲ್ಲ!
ತಿ, ಸ್ಥಿತಿಯುಳ್ಳವ ಅಚ್ಯುತನಲ್ಲ!
ಸಾಕಾರ ವಾದದಲ್ಲಿ ಹುರುಳೇನಿಲ್ಲ! (ಮ)
-ಧ ಸ್ಥರಾಗ್ಯಾರೂ ತೋರಿಸುವವರಿಲ್ಲ!
ವಾರಿಜಮಿತ್ರದಲ್ಲಿ ವಂಚನೆಯಿಲ್ಲ!
ದುಡಿಮೆಯೊಂದೇ ಅವನ ಬಾಳಲ್ಲೆಲ್ಲ!
ದಿವ್ಯ ಜೀನಕ್ಕದು ಹೊರತಾಗಿಲ್ಲ! (ಪು)
-ಲ್ಲ ನಿರಂಜನಾದಿತ್ಯನಂತಿದ್ರಾಯ್ತೆಲ್ಲ!!!

ಮಾಯೇ! ನಿನ್ನ ಮೇಲಾರದೇನಸೂಯೆ? (ತಾ)

-ಯೇ ನೀನೆಲ್ಲಾ ಜೀವರಾಶಿಗಾಶ್ರಯೆ!
ನಿನ್ನಾನಂದಕ್ಕಾರದೇನ್ಪ್ರತಿಕ್ರಿಯೆ? (ತ)
-ನ್ನ ತಾನರಿತವಗೆ ನೀನಭಯೆ!
ಮೇರೆ

ಈರಿದಾಶಾತುರಗಪ್ರಿಯೆ!
ಲಾಭ ನಿನ್ನಿಂದಹುದಂಬಕತ್ರಯೆ!
ಜತಾದ್ರಿ ವಾಸನ ಪ್ರಿಯೆ ಜಾಯೆ!
ದೇಹ ಕೊಟ್ಟದ ಬಿಟ್ಟಾರೆಂಬೆ ತಾಯೇ!
ಡೆಸು ನಿನ್ನಿಷ್ಟದಂತೆ ನೀ ತಾಯೇ!
ಸೂನು ನಿನ್ನವನಿಳಿಸ್ಬೇಡ ತಾಯೇ! (ತಾ)
-ಯೆ! ನಿರಂಜನಾದಿತ್ಯಗಿಲ್ಲಸೂಯೆ!!!

ನೀನೇಕಾದೆ ಹೀಗೆ ಮನವೇ?

ನೇರ ದಾರಿ ತೊರೆದಿರುವೆ!
ಕಾಡು ದಾರಿ ಹಿಡಿದಿರುವೆ!
ದೆವ್ವದ ಸಂಗ ಕಟ್ಟಿರುವೆ!
ಹೀನ ಕೃತ್ಯ ಮಾಡುತ್ತಿರುವೆ!
ಗೆಳೆಯನ ಮರೆತಿರುವೆ!
ದನನ ವರಿಸಿರುವೆ!
ಲ್ಲನನ್ನೇಕೆ ಬಿಟ್ಟಿರುವೆ! (ಧ)
-ವೇ! ನಿರಂಜನಾದಿತ್ಯಾಧವೇ!!!

ಸತ್ತೂ ಆಯ್ತು, ಅತ್ತೂ ಆಯ್ತು! [ಕಿ]

-ತ್ತೂರ್ಚೆನ್ನಮ್ಮನಂತ್ಯವಾಯ್ತು!
ಳಿದ್ದು ಸಾರ್ಥಕವಾಯ್ತು! (ಆ)
-ಯ್ತು ನವೋದಯವೀಗಾಯ್ತು!
ದದ್ಕಾಲಕ್ಕದದಾಯ್ತು! (ಹೊ)
-ತ್ತೂರೂರ್ಮೆರೆಸಿದ್ದೂ ಆಯ್ತು!
ಗೀಗಿನದ್ಬೇರ್ಬೇರಾಯ್ತು! (ಆ)
-ಯ್ತು, ನಿರಂಜನಾದಿತ್ಯಾಯ್ತು!!!

ಭಕ್ತಿಯೋಗ್ದಿಂದ ರೋಗ ಹೋಗ್ದಿದ್ರದೂ ರೋಗ್ವೇ! (ತ)

-ಕ್ತಿಗನುಸರಿಸಿದ ಭಕ್ತಿ ಸಾಕಲ್ಲವೇ?
ಯೋಗಕ್ಕಂತೆ, ಅಳತೆಗಳೇನಿಲ್ಲಲ್ಲವೆ? (ಆ)
-ಗ್ದಿಂದೂ, ಮುಂದೂ ಯಾವಾತನಿಗೂ ಕೇಡಲ್ಲವೇ?
ತ್ತನನಿದೆಲ್ಲಾ ನಿತ್ಯ ಕೇಳುತ್ತಿರುವೆ!
ರೋಗಕ್ಕವನ ಜಪ ಸಾಕೆನ್ನುತ್ತಿರುವೆ!
ತಿಸಿತ್ಕಾಲ ದುಃಖದಲ್ಲೆನ್ನುತ್ತಿರುವೆ!
ಹೋರಾಟವಿನ್ನು ಸಾಕ್ಮಾಡೆನ್ನುತ್ತಲಿರುವೆ! (ದಿ)
-ಗ್ದಿಗಂತಕ್ಕೂ ದೈವೀಕ ಹರಡ್ಲೆನ್ನುತ್ತಿರ್ವೆ! (ಭ)
-ದ್ರ ಸರ್ಕಾರಕ್ಕಿದೇ ದಾರಿಯೆನ್ನುತ್ತಿರುವೆ!
ದೂರುತ್ತನ್ಯರ ಹಾಳಾಗಿ ಹೋಗುತ್ತಿರುವೆ! (ವಿ)
-ರೋಧ ಪಕ್ಷ ತನ್ನಲ್ಲೇ ತುಂಬಿದೆನ್ನುತ್ತಿರ್ವೆ! (ಬಾ)
-ಗ್ವೇ, ನಿರಂಜನಾದಿತ್ಯನಿಗೆ ಮೊರೆಯಿಡ್ವೆ!!!

ನೆಟ್ಟದ್ದೆಲ್ಲಾ ಫಲಿಸೀತೆಂಬುದೆಂತಯ್ಯಾ? (ಪ)

-ಟ್ಟ ಕಷ್ಟಕ್ಕಿಷ್ಟ ದೊರೆಯದಿದ್ರಾಗ್ದಯ್ಯಾ! (ಗ)
-ದ್ದೆ ಉಳುವಾಗೆಷ್ಟು ಬೆವರ್ಸುರಿಯ್ತಯ್ಯಾ! (ಕ)
-ಲ್ಲಾದ್ರೂ ಕರಗ್ದಿರಲಾರ್ದೆನ್ನ ಕಂಡಯ್ಯಾ!
ಸ್ಲಾಗ್ದಿದ್ರೆ ಉಳಿಗಾಲ ಉಂಟೇನಯ್ಯಾ! (ಆ)
-ಲಿಸಬೇಕೆನ್ನ ಮೊರೆಯ ನೀನೀಗಯ್ಯಾ!
ಸೀತಾಪತಿಗಸಾಧ್ಯವಾದುದಾವ್ದಯ್ಯಾ?
ತೆಂಗು ಬಾಳೆಗಳೊಳಗೂ ಅವನಯ್ಯಾ!
ಬುದ್ಧಿ ಜೀವಿಗಳಲ್ಲಿ ಸಿದ್ಧಿ ಅವ್ನಯ್ಯಾ! (ಎಂ)
-ದೆಂದಿಗೂ ಅವನೇ ಗತಿ ನಮಗಯ್ಯಾ!
ಪ್ಪಿ ನಡೆದ್ರೆ ರಾವಣನ ಗತ್ಯಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾನಂದವಯ್ಯಾ!!!

ಪರಹಿತವನ್ನೆಣಿಸ ಸ್ವಾರ್ಥಿ ಮಾನವ!

ಮೇಶನೆಲ್ಲರಲ್ಲಿಹನೆಂದರ್ಯನವ!
ಹಿರಿಯರ ಹಿತವಚನ ಕೇಳನವ!
ಪ್ಪನ್ನೇ ಎಲ್ಲರಲ್ಲೂ ಹುಡುಕನವ!
ಶವಾಗಿರ್ಬೇಕೆಲ್ಲರ್ತನಗೆಂಬನವ! (ತ)
-ನ್ನೆಲ್ಲಾ ಕಾರ್ಯಕ್ಕಾಳ್ಗಳನ್ನವಲಂಬಿಸುವ! (ದ)
-ಣಿಸಿ ಅವರಿಗೆ ಬಹುಕಷ್ಟ ಕೊಡುವ!
ರಿಯಾಗಿ ಸಂಬಳವೂ ಕೊಡದಿರುವ!
ಸ್ವಾಗತ ಸಜ್ಜನರಿಗೆ ನೀಡದಿರುವ!
(ಆ)ರ್ಥಿಕಾನುಕೂಲ ಯಾರಿಗೂ ಮಾಡದಿರುವ!
ಮಾತಿನಲ್ಲೇ ಮಂಡಿಗೆಯೂಟ ಉಣ್ಣಿಸುವ!
ಮಸ್ಕಾರ ಗುರುವಿಗೆ ಮಾಡದಿರುವ! (ಇ)
-ವಗೂ ನಿರಂಜನಾದಿತ್ಯಾಶೀರ್ವದಿಸುವ!!!

ಒಂದೊಂದಕ್ಕೆ ಒಂದೊದು ಕಾಲ!

ದೊಂದಣಕ್ಕೆ ಬಾಲಾಪ್ಯ ಕಾಲ!
ರ್ಪಕ್ಕೆ ಜವ್ವನದ ಕಾಲ! (ಬೆ)
-ಕ್ಕೆಗಿದು ಅತ್ಯುತ್ತಮಕಾಲ!
ಒಂಟಿತನಕ್ಕಾರೋಗ್ಯ ಕಾಲ!
ದೊಂಬಿಗೆಲ್ಲಾ ಕಾಲ ಸಕಾಲ!
ದುಡಿಮೆಗೆ ಹಗಲು ಕಾಲ!
ಕಾರಿರುಳು ಪಿಶಾಚಿ ಕಾಲ! (ಕಾ)
-ಲ ನಿರಂಜನಾದಿತ್ಯ ಲೀಲ!!!

ಗುಟ್ಟನರಿತಟ್ಟು ತಟ್ಟೆ ಇಟ್ಟ! (ಕೆ)

-ಟ್ಟ ಬುದ್ಧಿ ಬಿಟ್ಟಾಮಂತ್ರಣ ಕೊಟ್ಟ!
ಗುನಗುತ ಉಣಿಸಿಬಿಟ್ಟ!
ರಿಸಿಗಳಿಂದ ಹರಸಲ್ಪಟ್ಟ!
ತ್ವಚಿಂತನೆಯ ಪಣ ತೊಟ್ಟ! (ಮು)
-ಟ್ಟು, ಮಡಿ ಭ್ರಾಂತಿ ತ್ಯಜಿಸಿಬಿಟ್ಟ!
ನ್ನವ್ರೆಲ್ಲರೆಂದಾನಂದ ಪಟ್ಟ! (ಹೊ)
-ಟ್ಟೆ ಬಟ್ಟೆಗೂ ವಿರಕ್ತನಾಗ್ಬಿಟ್ಟ!
ಹ ಬಿಟ್ಟು ಪರದಲ್ಕಾಲಿಟ್ಟ! (ಪ)
-ಟ್ಟ ನಿರಂಜನಾದಿತ್ಯನೇರ್ಬಿಟ್ಟ!!!

ಹಣ್ಣು ತಿನ್ನಬೇಕೆಂದೆಣಿಸಿದೆ! (ಹೆ)

-ಣ್ಣು ಕೊಡುವಳದೆಂದೂಹಿಸಿದೆ!
ತಿಥಿ, ವಾರದ ಲೆಃಖ ಹಾಕಿದೆ! (ತ)
-ನ್ನ ದೇಹಸ್ಥಿತಿ ಪರೀಕ್ಷಿಸಿದೆ!
ಬೇಗ್ಬೇಗ ಕೈ ಬಾ

ಗಳ ತೊಳೆದೆ!
ಕೆಂಪೇಕೆ ಕಣ್ಣೆಂದು ಯೋಚಿಸಿದೆ! (ಹಿಂ)
-ದೆ ನೋಡದೇ ಮುಂದಕ್ಕೆ ನಡೆದೆ! (ದ)
-ಣಿದೆ, ಮಲಗಿದೆ, ನಿದ್ರಿಸಿದೆ! (ಹು)
-ಸಿಯಿದೆಲ್ಲಾ ಎಂದು ನಾ ತಿಳಿದೆ! (ಆ)
-ದೆ ನಿರಂಜನಾದಿತ್ಯ ನಾನಾದೆ!!!

ಮನಸ್ಸಾಕಾಶಕ್ಕೆ, ವಿಧಿ ಪಾತಾಳಕ್ಕೆ!

ರ ತಾನಿಂತು ಗುರಿಯಾದ ದುಃಖಕ್ಕೆ! (ನಿ)
-ಸ್ಸಾರವಾದರೂ ಬಯಕೆ ಸಂಸಾರಕ್ಕೆ!
ಕಾಡುವುದು ವಿಧಿ ಇದ ತಪ್ಪಿಸ್ಲಿಕ್ಕೆ! (ಅ)
-ಶಕ್ತನಾಗಿಹ ಕಾಮನ ಜಯಿಸ್ಲಿಕ್ಕೆ! (ರೆ)
-ಕ್ಕೆ, ಪುಕ್ಕ ಕಿತ್ತಮೇಲ್ಹಾರ್ವುದೆಂತಾಗ್ಸಕ್ಕೆ?
ವಿವೇಕ ವೈರಾಗ್ಯವಿರಬೇಕದಕ್ಕೆ! (ಬಂ)
-ಧಿಸಬೇಕು ಮನವ ಶಿವಜಪಕ್ಕೆ!
ಪಾರ್ವತಿಯಂತರ್ಧನಾರೀಶ್ವರಾಗ್ಲಿಕ್ಕೆ!
ತಾಳ, ಮೇಳಗಳೇನೂ ಬೇಕ್ಕಿಲ್ಲದಕ್ಕೆ! (ಕ)
-ಳಕಳಿಯ ಪ್ರಾರ್ಥನೆಯೇ ಸಾಕದಕ್ಕೆ! (ಅ)
-ಕ್ಕೆ ನಿರಂಜನಾದಿತ್ಯಾದರ್ಶವೆಲ್ಲಕ್ಕೆ!!!

ಸುಖಿಗಳಾರೀ ಜಗದೊಳಗೆ? (ದುಃ)

-ಖಿಗಳೇ ಹೆಚ್ಚೀ ಇಳೆಯೊಳಗೆ! (ಆ)
-ಗ ಬಾರದನ್ಯಾಯ ಮಕ್ಕಳಿಗೆ! (ಗೋ)
-ಳಾಡಿಸಿ ಲಾಭವೇನಪ್ಪನಿಗೆ?
ರೀತಿ, ನೀತಿ, ಕಲಿಸಲೆಮಗೆ!
ಗಳ ತಪ್ಪಿಸಲೀ ಗಳಿಗೆ!
ಣಗಳ್ಸ್ವಧರ್ಮನಿಷ್ಠರಾಗೆ!
ದೊರಕಲಿ ನ್ಯಾಯ ಸರ್ವರಿಗೆ! (ಉ)
-ಳದವಗೂ ಹಕ್ಕಿದೆ ಭೂಮಿಗೆ!
ಗೆಳೆಯ ನಿರಂಜನಾದಿತ್ಯಾಗೆ!!!

ಹಲವಂಗಗಳ ದೇಹವೇ ಸರ್ಕಾರ!

ಕ್ಷ್ಯವದರದು ಸತ್ಯ ಸಾಕ್ಷಾತ್ಕಾರ!
ವಂಚನೆ ಎಳ್ಳಷ್ಟಾದರೂ ಗಂಡಾಂತರ!
ಣಿಕಾ ಬುದ್ಧಿಯಿಂದಾಗ್ವುದು ವಿಕಾರ!
ಟ್ಟಿ ಮನಸ್ಸಿಂದ ಮೂಡ್ಬೇಕ್ಸದಾಚಾರ! (ಬ)
-ಳಕೆಯಲ್ಲಿರಬಾರ್ದು ದುರ್ವ್ಯವಹಾರ!
ದೇಹದ ವಿನಾಶಕ್ಕೆ ಇದಸ್ತಿವಾರ!
ದಗೆಡಬಾರದುಸಿರುಸಂಚಾರ!
ವೇಳಾವೇಳೆ ನೋಡಿಕ್ಬೇಕುತ್ತಮಾಹಾರ!
ದ್ಬುದ್ಧಿಗಾಗಿರಬೇಕು ಸಮಾಚಾರ! (ಸ)
-ರ್ಕಾರ ಹೀಗಿದ್ದರೆ ಸರ್ವರ ಉದ್ಧಾರ! (ವ)
ಗುರು ನಿರಂಜನಾದಿತ್ಯ ನೇತಾರ!!!

ನಿನ್ನ ಮಗು ನಿನಗೆ ಚಂದ! (ನಿ)

-ನ್ನ ಹಾಗೆಲ್ಲರಂದಾರೇನ್ಕಂದಾ?
ನನೊಂದ್ಕೊಳ್ಪಾರದದ್ರಿಂದ!
ಗುಟ್ಟಾಗಿಟ್ಟುಕೋ ನಿನ್ನಾನಂದ!
ನಿನಗಿರ್ಲಭೇದ ಸಂಬಂಧ!
ರಹರಿ ಪ್ರಹ್ಲಾದರಂದ! (ಹೇ)
-ಗೆ ಸಹಿಸ್ಯಾನಿದ ಕಾಮಾಂಧ?
ಚಂಚಲತೆಯೇ ಭವಬಂಧ! (ಚಂ)
-ದ ನಿರಂಜನಾದಿತ್ಯಾನಂದ!!!

ನಾನು ದೇಹವಲ್ಲಾ, ದೇಹ ನಾನಲ್ಲಾ! (ಅ)

-ನುಮಾನ ವಿದರಲ್ಲೇನೂ ಇಲ್ಲಾ!
ದೇಹಕ್ಕೆ ಸಾವು, ನೋವುಗಳೆಲ್ಲಾ!
ಸಿವೆ, ತೃಷೆಗಳದಕ್ಕೆಲ್ಲಾ!
-ಲ್ಲಾ ಉಸಿರಿರುವಾಗ ಬೇಕಲ್ಲಾ!
ದೇವರಿಲ್ಲದ ಜಾಗವೇ ಇಲ್ಲಾ!
ಗಲಿರುಳು ಅವನಿಗಿಲ್ಲಾ!
ನಾನವನಿಂದ ಆನ್ಯನೇನಲ್ಲಾ!
ರ ನಾರಾಯಣರೊಂದೇ ಎಲ್ಲಾ! (ಎ)
-ಲ್ಲಾ ನಿರಂಜನಾದಿತ್ಯ ಪ್ರಫುಲ್ಲಾ!!!

ಸತತಾಭ್ಯಾಸವೇ ಸಿದ್ಧಿ ರೂಪ!

ತ್ವ ಚಿಂತನೆಯಿಂದ ಸ್ವರೂಪ!
ತಾಮಸ ವೃತ್ತಿಯಿಂದ ಕುರೂಪ! (ಲ)
-ಭ್ಯಾಲಭ್ಯ ಸಿದ್ಧಾಂತ ಆಶಾರೂಪ!
ಚ್ಚಿದಾನಂದವೇ ನಿಜರೂಪ!
ವೇಷ ಭೂಷಣ ಕೃತಕ ರೂಪ! (ರಿ)
-ಸಿ, ಮುನಿಗಳೆಲ್ಲಾ ತಪೋ ರೂಪ! (ವೃ)
-ದ್ಧಿ, ಕ್ಷಯಾದಿಗಳು ಮಾಯಾರೂಪ!
ರೂಪ ರೇಖೆಗಳ್ಸಂಕಲ್ಪ ರೂಪ! (ಶ್ರೀ)
-ಪತಿ, ನಿರಂಜನಾದಿತ್ಯ ರೂಪ!!!

ಬಹುಭಾಗ ದೈವಿಕವಿದ್ದರವತಾರಿ!

ಹುಟ್ಟು, ಸಾವು ಶರೀರಕ್ಕೆಂಬುದ ನೀನರಿ!
ಭಾಗ್ಯ, ಭೋಗ್ಯವೆಲ್ಲಾ ಅವನಿಗೆ ಶ್ರೀಹರಿ!
ರ್ವವಿಲ್ಲದಿರುವುದೇ ಅವನ ಪರಿ!
ದೈವೇಚ್ಛೆಯಿದ್ದಂತಾಗಲೆಂಬುದವನ ದಾರಿ!
ವಿಕಲ್ಪ, ಸಂಕಲ್ಪವಿಲ್ಲದಿರ್ಪಾ ಉದಾರಿ!
ರ್ತವ್ಯಪಾಲನಾದರ್ಶಕ್ಕಾತ ಸಾಕಾರಿ!
ವಿಶ್ವನಾಥನಾದ ತಾನು ವಿಶ್ವ ಸಂಸಾರಿ! (ಸ)
-ದ್ದಡಗಿ ತಾನೇ ತಾನಾದಾಗ ನಿರಾಕಾರಿ!
ಮಾ, ಉಮಾ, ಸರಸ್ವತಿಯರಿಗಾಧಾರಿ!
ರಗುರು ದತ್ತಾತ್ರೇಯಾವಧೂತಾಕಾರಿ!
ತಾನಾರ್ತರಕ್ಷಕನಾಗಿ ಧೂರ್ತ ಸಂಹಾರಿ! (ಅ)
-ರಿಕುಲಕಾಲ ನಿರಂಜನಾದಿತ್ಯಾಕಾರಿ!!!

ದರ್ಶನವಾಗಿ ಏನಾಯ್ತು! (ಸ್ಪ)

-ರ್ಶ, ಸುಖ ದೊರೆತಂತಾಯ್ತು!
ಡೆ, ನುಡಿ ನಿಂತೇಹೋಯ್ತು!
ವಾಸನೆಯ ನಾಶವಾಯ್ತು!
ಗಿರಿಜಾಶಂಕರಾನಾಯ್ತು!
ರಿಳಿತವಿಲ್ಲದಾಯ್ತು!
ನಾಮ ರೂಪಾತೀತಾತ್ಮಾಯ್ತು! (ಆ)
-ಯ್ತು, ನಿರಂಜನಾದಿತ್ಯಾಯ್ತು!!!

ನನ್ನಿಷ್ಟ ಮೊದಲೀಡೇರಲಿ! (ನಿ)

-ನ್ನಿಷ್ಟಾ ಮೇಲೆ ನೆರವೇರಲಿ! (ಕ)
-ಷ್ಟ ಪಟ್ಟದ್ದು ಸಾರ್ಥಕವಾಗಲಿ!
ಮೊರೆಯಿಡು ನೀನವನಲಿ!
ತ್ತನಾಜ್ಞೆ ನನಗಾಗಲಿ!
ಲೀಲೆ ಬೇಗ ಪ್ರಕಟಾಗಲಿ! (ನೋ)
-ಡೇ ನೊಡ್ವೆನ್ನ ನಿನ್ನೂರಿನಲಿ! (ಅ)
-ರವಿಂದಾರ್ಕರಾದರ್ಶಾಳಲಿ! (ಶೂ)
-ಲಿ ನಿರಂಜನಾದಿತ್ಯಾಗಲಿ!!!

ನಿನ್ನಳುವೆನ್ನ ಕರುಳ ಕೊಯ್ಯುತಿದೆ! (ನ)

-ನ್ನಳುವಿನ್ನೂ ಆತನಿಗೆ ಕೇಳದಿದೆ! (ಬಾ)
-ಳು ಗಾಳಿಯಗೋಪುರ ವಾಯ್ತೆನ್ನಿಸಿದೆ!
ವೆಚ್ಚ ಮಾಲಧನದಿಂದಾಗುತ್ತಲಿದೆ! (ಉ)
-ನ್ನತಿಯ ದಾರಿಗೆ ಕತ್ತಲೆ ಮುಚ್ಚಿದೆ!
ನಿಕರ ತೋರ್ಪವರ ಕಾಣದಾದೆ!
ರುಕ್ಷ್ಮಿಣೀ ರಮಣನಿಗೆ ಶರಣಾದೆ! (ಕೊ)
-ಳಲ ನಾದ ಸ್ವಲ್ಪ ಸ್ವಲ್ಪ ಕೇಳುತಿದೆ!
ಕೊರಗಬೇಡೆಂಬ ಧೈರ್ಯ ತುಂಬುತಿದೆ! (ಹೊ)
-ಯ್ಯುವೆನಮೃತ ಬಾಯಿಗೆನ್ನುತಲಿದೆ! (ಪ್ರೀ)
-ತಿ, ವಿಶ್ವಾಸ, ಸದಾ ಇರಲೆನ್ನುತಿದೆ! (ತಂ)
-ದೆ, ನಿರಂಜನಾದಿತ್ಯ ತಾನೆನ್ನುತಿದೆ!!!

ನೀನೆನಗೆಲ್ಲಾ ಕಲಿಸಿದವನು!

ನೆನೆಯದಿರಲಾರೆ ನಿನ್ನ ನಾನು!
ಶ್ವರವೀಜಗತ್ತೆಂದಿಹೆ ನೀನು!
ಗೆಳೆಯ ನೀನೆನಗೆಂದಿಹೆ ನಾನು! (ಉ)
-ಲ್ಲಾಸ ತುಂಬಬೇಕು ನನ್ನಲ್ಲಿ ನೀನು!
ಣ್ಣಿಂದ ಸಾಕಾರ ಕಾಣ್ಬೇಕು ನಾನು! (ಒ)
-ಲಿದು ಬೇಗ ಬರಬೇಕೀಗ ನೀನು!
ಸಿರ ಬಾಗಿ ಬೇಡುತ್ತಿರುವೆ ನಾನು!
ತ್ತನಾಗಿ ದರ್ಶನ ನೀಡು ನೀನು!
ರವಿನ್ನಾವುದನ್ನೂ ಬೇಡೆ ನಾನು! (ನಾ)
-ನು ನಿರಂಜನಾದಿತ್ಯ ದತ್ತ ನೀನು!!!

ವಿಮಲನೆನ್ನುವರು ನಿನ್ನ!

ಲ ತುಂಬಿದೆ ಮನ ನಿನ್ನ!
ಯವಾಗ್ನಲ್ಲನಲಿ ನಿನ್ನ!
ನೆನೆಯಬೇಡ ಅನ್ಯರನ್ನ! (ತಿ)
-ನ್ನು ಅವನಿಗಾಗನ್ನವನ್ನ! (ಅ)
-ವಗರ್ಪಿಸೆಲ್ಲಾ ಕಾರ್ಯವನ್ನ! (ಗು)
-ರುದತ್ತ ನೆತ್ತುವನು ನಿನ್ನ!
ನಿಶಿ, ದಿನ, ಧ್ಯಾನಿಸವ್ನನ್ನ! (ನಿ)
-ನ್ನ ನಿರಂಜನಾದಿತ್ಯನನ್ನ!!!

ಜ್ಞಾನ ದಾನವಾಗುತ್ತಿರಲಿ!

ಶ್ವರಕ್ಕಾಶಿಸದಿರಲಿ!
ದಾರಿ ಸುಗಮವಾಗಿರಲಿ!
ಡೆಗೊಂದು ನೀತಿಯಿರಲಿ!
ವಾರಾಂಗನೆಯಾಗದಿರಲಿ!
ಗುರುಸೇವೆ ಸಾಗುತ್ತಿರಲಿ! (ನೆ)
-ತ್ತಿಗೆ ಪಿತ್ಥ ಹತ್ತದಿರಲಿ! (ಹ)
-ರನೂರಿಗೆ ಯಾತ್ರೆ ಸಾಗಲಿ! (ಶೂ)
-ಲಿ ನಿರಂಜನಾದಿತ್ಯಾಗಲಿ!!!

ಧ್ಯೇಯಸಿದ್ಧಿ ಈಗಾಗಬೇಕು! (ಬಾ)

-ಯನ್ನಾಮೇಲೆ ತೆರೆಯಬೇಕು!
ಸಿಹಿ ತಿಂದರಿವಾಗಬೇಕು! (ಬು)
-ದ್ಧಿ ಶುದ್ಧವಾಗಿರಲೇ ಬೇಕು!
ರ್ಷಾಸೂಯೆ ಸತ್ತಿರಬೇಕು!
ಗಾಳಿ, ಮಳೆ ಸಹಿಸಬೇಕು!
ಣಪತಿ ತಾನಾಗ ಬೇಕು!
ಬೇಯದನ್ನರ್ಪಿಸದಿರ್ಬೇಕು! (ಬೇ)
-ಕು ನಿರಂಜನಾದಿತ್ಯಾಗ್ಬೇಕು!!!

ಸ್ಫೂರ್ತಿ ಆದರ್ಶಪಾಲನೆಗೆ ಮೂರ್ತಿ! (ಕೀ)

-ರ್ತಿ ಅದರನುಷ್ಠಾನಕ್ಕಾಸಕ್ತಿ!
ಚಾರ ವಿಚಾರದ್ರಂತಿದ್ದ್ರೆ ಮುಕ್ತಿ!
ಶೇಂದ್ರಿಯದಲ್ಲೂ ಕಾಣ್ಬೇಕು ಭಕ್ತಿ! (ಸ್ಪ)
-ರ್ಶವಾಗ್ಲೇಬಾರದು ಮಾಯೆಯ ಯುಕ್ತಿ!
ಪಾರ್ಥಿವ ಸುಖಕ್ಕಿರ ಬೇಕ್ವಿರಕ್ತಿ!
ಕ್ಷ್ಯದಲ್ಲಿಡಬೇಕ್ಹಿರಿಯರುಕ್ತಿ!
ನೇಗಳ್ದಾಳಿ, ಬಾಳಿತ್ತು ಆತ್ಮಶಕ್ತಿ!
ಗೆಡ್ಡೆ, ಗೆಣಸು ತಿಂದ್ರೂ ಇತ್ತು ತೃಪ್ತಿ!
ಮಾರ್ತಿತ್ರಯರನ್ನೂ ಗೆದ್ದಿತಾ ಶಕ್ತಿ! (ಸ್ಥೂ)
-ರ್ತಿ ನಿರಂಜನಾದಿತ್ಯಾನಂದ ಮೂರ್ತಿ!!!

ಅನತನಿಗೆ ಸುಸ್ವಾಗತ!

ತದೃಷ್ಟನಿಗನ್ಯೋನ್ಯತಾ!
ತ್ವಚಿಂತನಯೇ ಸತ್ಪಥ!
ನಿಸ್ಸಂಗ, ನಿರ್ಮೊ

ಹ ಸ್ವಸ್ಥತಾ!
ಗೆಲ್ಬೇಕಿಂದ್ರಿಯಂಗಳನ್ನಾತ!
ಸುದರ್ಶನ ಜೀವನ್ಮುಕ್ತತಾ!
ಸ್ವಾಮಿ, ಭಕ್ತರ ಸಾಯುಜ್ಯತಾ!
ತಿ, ಸ್ಥಿತಿ, ಲಯಾತೀತತಾ!
ತ್ವ ನಿರಂಜನಾದಿತ್ಯತಾ!!!

ಸಂಶೋಧನಾ ಕಾರ್ಯದಿಂದ ಪ್ರಕೃತಿ ವ್ಯತ್ಯಾಸ!

ಶೋಚನೀಯಾವಸ್ಥೆಗೆ ಕಾರಣ ಈ ದುರಾಶಾ!
ರ್ಮ, ಕರ್ಮಗಳಿಗೆ ಲೋಪವಾಗಿ ಅಭಾಸ!
ನಾಕಾರಣದಿಂದ್ರಿಯೋಲ್ಬಣವಾಗ್ಯಾಯಾಸ!
ಕಾಮಾಧಿಕ್ಯದಿಂದೊಡಲ್ಬಲಗುಂದಿ ವಿನಾಶ! (ಆ)
-ರ್ಯಸಂಸ್ಕೃತಿಗಳು ಕ್ಷೀಣವಾಗಿ ಸರ್ವನಾಶ! (ಎಂ)
-ದಿಂದಿನರಿಷ್ಟಾಂತ್ಯವೆಂದರಿಯದೇ ಹತಾಶಾ!
ಮನವಾಗ್ಬೇಕೆಲ್ಲಾ ಕ್ಷಣಿಕ ಸುಖದಾಶಾ!
ಪ್ರಗತಿ ಹೆಸರಲ್ಲಾಗುತಿದೆ ದುರ್ವಿಲಾ ಸ!
ಕೃತಿಯಲ್ಲೊಂದು ಬಾಯಲ್ಲೊಂದಾಗಿ ಎಲ್ಲಾ ಮೋಸ!
ತಿರೆಯ ಸುಖ ಹೆಚ್ಚಿಸಲ್ಕಾಕಾಶ ಪ್ರವಾಸ!
ವ್ಯತಿರಿಕ್ತವಾಗಿಲ್ಲದಾಗ್ವುದಿಲ್ಲಿ ನಿವಾಸ!
ತ್ಯಾಗ ಜೀವನದಿಂದ ಉದ್ಧಾರ ಎಲ್ಲಾ ದೇಶ!
ದ್ಗುರು ನಿರಂಜನಾದಿತ್ಯನದ್ದೀ ಸಂದೇಶ!!!

ಮನೋಜಯವಿಲ್ಲದವಗಾವಸುಖ?

ನೋವು, ಸಾವಿಗಂಜಿ ನರಳುವಾ ಸಖ!
ವಾಬ್ದಾರಿ ನಿರ್ವಹಿಸಲಾರಾ ಸಖ!
ಮ, ನಿಯಮದಭ್ಯಾಸ ಮಾಡಾ ಸಖ!
ವಿವೇಕ, ವೈರಾಗ್ಯಗಳನ್ನೊಲ್ಲಾ ಸಖ! (ಅ)
-ಲ್ಲ ಸಲ್ಲದ ವ್ಯವಹಾರ ಶೂರಾ ಸಖ!
ರ್ಪ, ದಂಭಕ್ಕಗ್ರಗಣ್ಯಾ ಸಖ!
ರ ಗುರುವಿನಾಜ್ಞೆಯಂತಿದ್ರೆ ಸುಖ!
ಗಾಳಿ ಮೂಟೆ ಕಟ್ಟುವುದು ಬಿಟ್ರೆ ಸುಖ!
ರ್ತಮಾನ ಕಾಲ ಕಾರ್ಯಾಸಕ್ತಿ ಸುಖ!
ಸುಜನರ ಸಹವಾಸ ಸದಾ ಸುಖ!
ಗ ನಿರಂಜನಾದಿತ್ಯ ಲೋಕ ಸಖ!!!

ಕಷ್ಟ ನಿವಾರಣೆಗಿಷ್ಟ ಸೇವೆ ಮಾಡ್ಬೇಕು! (ದು)

-ಷ್ಟ ಸಹವಾಸದಿಂದ ದೂರವಿರಬೇಕು!
ನಿತ್ಯಾನಿತ್ಯ ವಿಚಾರಪರನಾಗಿರ್ಬೇಕು!
ವಾಸ ಸಜ್ಜನರಿರುವೆಡೆಯಲ್ಲಾಗ್ಬೇಕು!
ಜಸ್ತಮೋಗುಣಗಳಿಲ್ಲದಿರಬೇಕು! (ಹ)
-ಣೆ ಬರಹವೆಂದಳುತ್ತಿರದಿರಬೇಕು!
ಗಿರಿಜೆಯಂತೆ ಶಿವನಿಗಾಗಿರಬೇಕು! (ಅ)
-ಷ್ಟಮದಗಳನ್ನು ಸುಟ್ಟು ಬೂದಿ ಮಾಡ್ಬೇಕು!
ಸೇವಕರನ್ನವಲಂಬಿಸದಿರ ಬೇಕು!
ವೆಚ್ಚ ವರಮಾನಕ್ಕೆ ತಕ್ಕಂತೆ ಮಾಡ್ಬೇಕು!
ಮಾತಿಗಿಂತ ಕಾರ್ಯನಿಷ್ಠೆ ಹೆಚ್ಚಾಗಿರ್ಬೇಕು! (ಹಾ)
-ಡ್ಬೇಕು ಗುರು ಗುಣಗಾನ ಮಾಡುತ್ತಿರ್ಬೇಕು!
ಕುಲಪತಿ ನಿರಂಜನಾದಿತ್ಯನಾಗ್ಬೇಕು!!!

ಮನಕೆ ಸದಾ ಹರ್ಷವೇಕಿಲ್ಲ?

ಶಿಸಿಹುದದ್ರ ರೂಪವೆಲ್ಲಾ!
ಕೆಟ್ಟ ಸಂಗದ ದೆಸೆಯಿಂದೆಲ್ಲಾ!
ಚ್ಚಿದಾನಂದವಾಗೀಗದಿಲ್ಲ!
ದಾರಿ ನೇರವಾಗದದಾಗೋಲ್ಲ!
ಳೇ ವಾಸನೆಯಿನ್ನೂ ಹೋಗಿಲ್ಲ! (ವ)
-ರ್ಷಗಳಿಂತೆಷ್ಟಾಯ್ತೆಂಬರಿವಿಲ್ಲ!
ವೇಷ ಭೂಷಣಕ್ಕೆ ಆಸೆಯೆಲ್ಲಾ!
ಕಿತ್ತಾಟ ಅದಕ್ಕಾಗಿ ಎಲ್ಲೆಲ್ಲಾ! (ಬ)
-ಲ್ಲ ನಿರಂಜನಾದಿತ್ಯನಿದೆಲ್ಲಾ!!!

ನಾನೇಕೆ ಬಂದಿಹೆನಿಲ್ಲಿಗೆ? (ನೀ)

-ನೇ ಕರೆತಂದವನಿಲ್ಲಿಗೆ! (ಯಾ)
-ಕೆ ಕರೆಸಿಲ್ಲ ನಿನ್ನಲ್ಲಿಗೆ?
ಬಂದ ಕೆಲ್ಸಾದ್ಮೇಲೆನ್ನಲ್ಲಿಗೆ! (ಆ)
-ದಿತ್ಯಾ! ನೀನೂ ಬಾ ಬೇಗಿಲ್ಲಿಗೆ!
ಹೆತ್ತ ತಾಯ್ತಂದೆ ನೀನೆನಗೆ!
ನಿನ್ನಿಂದ ವಿಜಯ ನನಗೆ! (ಇ)
-ಲ್ಲಿಬ್ರೊಂದಾಗಿದ್ರಾನಂದೆನಗೆ! (ಹೀ)
-ಗೆ ನಿರಂಜನಾದಿತ್ಯನಾಗೆ!!!

ಬಹುವೇಷಧಾರಿಯಾದ್ರೂ ನಾನು ನಾನೇ!

ಹುರುಳೇನಿದರಲ್ಲಿಲ್ಲೆಂಬವ ನಾನೇ!
ವೇದಾಂತ ಸಾರವಾಗಿರುವಾತ್ಮ ನಾನೇ!
ಡ್ಭುಜ ಮೂರ್ತಿ ದತ್ತಾತ್ರೇಯನೂ ನಾನೇ!
ಧಾತುವರ್ಗಕ್ಕಾಧಾರವಾದವ ನಾನೇ!
ರಿದ್ಧಿ, ಸಿದ್ಧಿಗತೀತನಾದವ ನಾನೇ!
ಯಾದವಕುಲತಿಲಕ ಕೃಷ್ಣ ನಾನೇ! (ಇ)
-ದ್ರೂ, ಸತ್ರೂ ಸದಾ ಸರ್ವವ್ಯಾಪಕ ನಾನೇ!
ನಾನೇ ಮತ, ಪಂಥಕ್ಕೆ ಕಾರಣ ನಾನೇ!
ನುಡಿ, ನಡೆಯೊಂದಾಗಿದ್ದಾರಾಮ ನಾನೇ!
ನಾದ ಯೋಗಾನಂದ ತ್ಯಾಗರಾಜ ನಾನೇ!
ನೇಮ, ನಿಷ್ಠ ನಿರಂಜನಾದಿತ್ಯ ನಾನೇ!!!

ಗುಣದೋಷವೆಣಿಸುವುದು ಗಣ! (ಕಾ)

-ಣದಾ ತಪ್ಪೊಪ್ಪುಗಳ ಶಿವಗುಣ!
ದೋಸೆಯಲ್ಲಿ ತೂತು ಅದರ ಗುಣ! (ದೋ)
-ಷವದರಲ್ಲಿ ತಿನ್ನುವವ ಕಾಣ! (ನೋ)
-ವೆನ್ನುವುದು ದೇಹದ ಹುಟ್ಟು ಗುಣ! (ಎ)
-ಣಿಸನದ ದೇಹಾತೀತ ಶರಣ!
ಸುರಜನರ ಕಾಡುವುದರಿಗಣ! (ಕಾ)
-ವುದವರ ಗುರುಕೃಪಾಕಿರಣ!
ದುರ್ಬುದ್ಧಿ ಬಿಟ್ಟು ಸೇರ್ಬೇಕಾ ಚರಣ! (ನಾ)
-ಗಜರಾಜನಿಗೂ ಸಿಕ್ಕಿತು ರಕ್ಷಣಾ! (ತೃ)
-ಣ ನಿರಂಜನಾದಿತ್ಯಗವ ಗುಣ!!!

ಏನೇನೆಲ್ಲೆಲ್ಲಿರ್ಬೇಕೋ ಅದಲ್ಲಲ್ಲಿರ್ಲಿ!

ನೇಮವಿದು ಪ್ರಕೃತಿಗೆಂಬರಿವಿರ್ಲಿ!
ನೆಲ, ಜಲಾಕಾಶಾತ್ಮಗಳಲ್ಲಲ್ಲಿರ್ಲಿ! (ಎ)
-ಲ್ಲೆ

ಈರಿದ್ರವ್ಯವಸ್ಥೆಯೆಂದರಿತಿರ್ಲಿ! (ಸ)
-ಲ್ಲಿಸುತ್ತಿರ್ಬೇಕವ್ರವ್ರ ಕರ್ತವ್ಯಲ್ಲಲ್ಲಿ! (ಹಾ)
-ರ್ಬೇಕೆಂಬ ನರ ಬೀಳ್ವ ಪಾತಾಳದಲ್ಲಿ!
ಕೋತಿ ಮನವನ್ನಿಡ್ಬೇಕ್ಹದ್ಬಸ್ತಿನಲ್ಲಿ!
ವಿಧೇಯತೆಗಧೋಗತ್ಯಂತ್ಯದಲ್ಲಿ!
ತ್ತನುಪದೇಶವಿದೆಲ್ಲರ್ಗೀಗಿಲ್ಲಿ! (ಎ)
-ಲ್ಲರ ಹಿತೈಷಿ ಅವನಲ್ಲದ್ಯಾರಿಲ್ಲಿ? (ಸ)
-ಲ್ಲಿಸ್ಬೇಕ್ನಿತ್ಯಪೂಜೆ ಅವನಿಗೆಲ್ಲೆಲ್ಲಿ! (ಇ)
-ರ್ಲಿ, ನಿರಂಜನಾದಿತ್ಯಾನಂನನಾಗಿಲ್ಲಿ!!!

ಪ್ರಕೃತಿಯನ್ನನುಸರಿಸಿ ಸೇವೆ ಮಾಡು!

ಕೃತ್ರಿಮ ಮನೋಭಾವವಿಲ್ಲದೆಲ್ಲಾ ಮಾಡು!
ತಿಳಿದವರ ನೆರವಿನಿಂದದ ಮಾಡು!
ತ್ನ ಫಲಿಸಲಿಕ್ಕೆ ದೇವರನ್ನು ಬೇಡು! (ತ)
-ನ್ನ ವರೆಲ್ಲರೆಂಬಭಿಮಾನದಿಂದ ಮಾಡು!
ನುತಿ, ಸ್ತುತಿಗಾಶಿಸದೇ ಕರ್ತವ್ಯ ಮಾಡು!
ರೋಜನಂತೆ ಸನ್ಮಿತ್ರನ ಸೇವೆ ಮಾಡು!
ರಿಪುಗಳ ಜಯಿಸುವ ಪ್ರತಿಜ್ಞೆ ಮಾಡು!
ಸಿಕ್ಕದೇ ಆ ಬಲೆಗೆಚ್ಚರದಿಂದ ಮಾಡು!
ಸೇರ್ಬೇಕಿದೇ ಜನ್ಮದಲ್ಲ್ಗುರಿಯೆಂದು ಮಾಡು!
ವೆಗ್ಗಳದ ಭ್ಯಾಗವದೊಂದೇ ಸಾಕೆಂದ್ಮಾಡು!
ಮಾರಹರ ಶ್ರೀ ಗುರುವೆಂದು ನಂಬಿ ಮಾಡು! (ಕೂ)
-ಡು ನಿರಂಜನಾದಿತ್ಯಾತ್ಮನನ್ನೊಡಗೂಡು!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ