ಧ್ಯಾನ ಮಿಂಚು: ಭಾಗ 1

ನಮ್ಮ ಶಾಂತಿಗೆ ಬೇಕಾದ ಯೋಚ್ನೆ ಇದ್ರೆ ಮಾತ್ರ ಸಾಕು! ಭೂತ

ಬೂದಿ ಆಯ್ತು! ಅದ್ರ ಯೋಚ್ನೆಯಿಂದ ನಮ್ಮ ಉರಿ ನಿಲ್ಲೋಲ್ಲ!
ವರ್ತಮಾನ ನರ್ತಿಸುತ್ತಿದೆ. ನರ್ತನಕ್ಕೆ ತಕ್ಕ ತಾಳ ಮೇಳಗಳನ್ನು ಜೋಡಿಸಿ
ಕೊಂಡು, ವರ್ತಮಾನ ನರ್ತನವನ್ನು ಶಿವತಾಂಡವವಾಗಿ ಮಾಡಿದ್ದೆ ಭೂತದ
ಬೂದಿಯೂ ಹೆಸರಿಲ್ಲದಂತೆ ದಿಕ್ಕಾಪಾಲಾಗಿ ಹೋಗುತ್ತೆ! ಭವಿಷ್ಯವಂತು
ತಾಂಡವ ನೃತ್ಯದ ಸವಿ ನೆನಪಿಂದ ಭವಯವಾಗ್ಲಿಕ್ಕೇ ಬೇಕು!!!

ಭಾವಶೂನ್ಯನೇನು ಬರೆಯಲಿಕೆ ಪೇನಾ ಬೇಕಯ್ಯಾ?

ವರ್ತಮಾನ ಪ್ರವರ್ತನಿಗೇಕೆ ಗಂಟೆ ಗಡೆಯಾರವಯ್ಯಾ?
ಮೂಲ ತತ್ವವನರಿತು ಬಾಳುವ ಕಾಪಾಲಿಗೆ ಮಾಲೆ ಏಕಯ್ಯಾ?
ಲಕ್ಷ್ಯದಲಿ ಮನನೆಟ್ತು ಸನ್ಯಾಸಿಗೆ ನಗನಾಣ್ಯ ಅಲಕ್ಶ್ಯವಲ್ಲವೇನಯ್ಯಾ?
ಶ್ರೀಗುರು ಚಿತ್ತಕಾಗಿ ಶಿರ ಬಾಗಿ ನಿಶ್ಚಿಂತನಾಗಬೇಕಯ್ಯಾ!!!

ನಿರಂಜನನೆಲ್ಲರಲಿರುವ ಗುರುದೇವ!

ರಂಗನಾಗನಂಗನಾಗನಂತ ರೂಪಿಯಾಗಿಹನು!
ಜಯಂತ್ಯುತ್ತವಗಳುವನಿಗೆ ನಿತ್ಯ ನಿಜಾನಂದ!
ನಡೆಯುತಿದೆ ಅವನ ಲೀಲಾನಾಟಕ ಬಹು ಮು

ದಿ!
ನಾಯಕನಾಗಿ ನಾಯಕಿಯಾಗಿ ನಾನಾ ಪಾತ್ರನಾಗಿಹನು!
ರುಚಿಸುವುದೀ ನಾಟಕ ಸರ್ವಂ ಬ್ರಹ್ಮವಾದವಗೆ!
ದರ್ಶನವಿದಕಿಅಂತಿನ್ಯಾವ ದರ್ಶನವೂ ಬೇರಿಲ್ಲ!
ಶುಭೋ ಶಂಕರ ಗುರೀಶಾ ಶಿವ ನಿರಂಜನೇಶ್ವರ ಮಂಗಳಂ!

ನಾನಾರೆಂಬುದೆನಗರುಹೆದ ನಿರಂಜನ!

ನುಡಿಬೇಡಿದನೆಲ್ಲರಿಗೆಂದ ನಿರಂಜನ!
ಗೇವರ ಸಂಗೇವನೇ ನಾನೆಂದ ನಿರಂಜನ!
ವಸು ರುದ್ರಾದಿ ಗಣ ನಾನೆಂದ ನಿರಂಜನ!
ನೇಮಾನುಷ್ಟಾನ ಸಿದ್ದ ನಾನೆಂದ ನಿರಂಜನ
ನಿರಂಜನನೇ ಭವ ಭಂಜನ! ನಿರಂಜನ
ರಂಗಿಪನು ವಿರಾಗಿಪನು ಶ್ರೀ ನಿರಂಜನ
ಜಪಿಸುವನು ಭಜಿಸುವನು ನಿರಂಜನ
ನನ್ನಂತಿರಲು ನೀನೆಂದನು ಗುರು! ನಿರಂಜನ

ನಿರಂಜನಾತ್ಯಾನಂದ ವಿಜಯ!

ರಂಗುರಂಗಾಗೆ ಶೋಬಿಪ ವಿಜಯ!
ನ್ಮ ಸಫಲಾಯ್ತೆನ್ನುವ ವಿಜಯ!
ನಾಲ್ದೆಸೆಗು ಹರಡಿದ ವಿಜಯ!
ದಿನಮಣಿ ಶಾಂತಿ ತಂದ ವಿಜಯ!
ತ್ಯಾಗೀಶಗಾನಂದ ವಿತ್ತ ವಿಜಯ!
ನಂಬುಗೆಗಿಂಬು ದುರೆತ ವಿಜಯ!
ತ್ತ ನಿರಂಜನನೆಂದ ವಿಜಯ!
ವಿದಿ ವಿಲಾಸವರಿತ ವಿಜಯ!
ಯ ಗುರುಪದಕ್ಕೆಂದ ವಿಜಯ!
ಮ ನಿರಂಜನಾದಿತ್ತ ವಿಜಯ!

ನಿರಂಜನ ಸದಾಶಿವನಾಗಿಹನು

ರಂಗಾಂಗ ಸಾರಂಗ ಪ್ರಿಯನಾಗಿಹನು!
ಗದಲಿದ್ದು ತಾ ಇಲ್ಲದಂತಿಹನು!
ನ್ನದೆಂಬುದು ಇಲ್ಲದಿರುತಿಹನು!
ಹಜದಲಿ ಸದಾ ತಾನಿದ್ದಿಹನು!
ದಾತನನಾಥರಿಗೆ ನಾಥ ತಾನಾಗಿಹನು!
ಶಿವನಾದರು ಭವಿಯಂತೆ ತಾನಿಹನು!
ರ ಗುರುಭಕ್ತನಾಗಿರುತಿಹನು!
ನಾನಾರೆಂಬುದರಿತವನಾಗಿಹನು!
ಗಿರಿಜಾರಮಣ ಪ್ರಿಯನಾಗಿಹನು!
ರಿ ಹರ ಅಜರೊಂದೆನುತಿಹನು!
ನುಡಿ ಏಕೆ? ನಿರಂಜನನಾಗಿಹನು!!!

ಮತಿ ಹೊಲಸು, ಗತಿ ಹೊಲಸು, ಸ್ತಿತಿ ಹೊಲಸು!

ತಿಲಿ ನೀನು ಸಕಲ ದುಃಖಗಳಿಗೆ ಕಾರಣವೀ ಮನಸು!
ಹೊಲಿಯುತಿದೆ, ಹೊಸೆಯುತಿದೆ, ಹೊಡೆಯುತಿದೆ ಕ್ಕೆಗಳಿಂದೀ ಮನಸು!
ಕ್ಷ, ವಿಲಕ್ಷಣ ನೋಟಗಳು ನೋಡುತಿದೆ ನೇತ್ರಗಳಿಂದೀ ಮನಸು!
ರ್ವದಲಿ ಗುರುನಿಂದೆ, ಪರನಿಂದೆಗಳು ಮಾಡುತಿದೆ ಬಾಯೆಯೆಂದೆಂ ಮನಸು!
ತಿರುಗುತಿದೆ ಊರಿಂದುರಿಗೆ ಮನೆಯಿಂದ ಮನೆಗೆ ಕಾಲ್ಗಳೆಂದೀ ಮನಸು!
ಹೊಲಸಮೇಧ್ಯವ ಹೊರಗೆ ಹೊರಡಿಸುತಿದೆ ಪಾಯುವಿನಿಂದೀ ಮನಸು!
ವಣವಿದು, ಸಕ್ಕರೆ ಇದೆಂದು ರುಚಿಸುತಿದೆ ಜೆಹ್ವೆಯೆಂದೇ ಮನಸು!
ಸುಮನೋಹರ ಸ

ಗೀತ ಸಾಹಿತ್ಯಗಳನಾಲಿಸುತಿದೆ ಕಿವಿಗಳಿಂದಿ ಮನಸು!
ಸ್ಥಿತಿ, ಗತಿಗಳ ಹದಗೆಡಿಸಿ ಸಂಬೋಗ ಮಾಡುತಿದೆ ಗುಹ್ಯದಿಂದೀ!
ತಿವಿತ, ಇರಿತ, ಶೀತ, ಉರಿಗಳ ಬಾಧೆಗಳಳವಡಿಸುವುದು ಚರ್ಮದಿಂದೀ ಮನಸು!
ಹೊಲಸು ಮತಿಯೆಂದ ಗತಿ, ಸ್ಥಿತಿಗಳೆಲ್ಲಾ ಹೊಲಸೆಂದರಿತಿರಿಸು ಶುಚಿ ಮನಸು!
ಕ್ಷ್ಯನಾಗಿಹ ಗುರುಗುಹೇಶ್ವರನ ಸೇರುವುದಕೆ ಬೇಉ ಶುದ್ದ ಮನಸು!
ಸುಖ ಶಾಂತಿಯ ಮನಸು, ಪತಿತ ಪಾವನ ಮನಸು, ಇದೇ ನಿತ್ಯ ನಿರಂಜನ ಮನಸು!!!

ಯಾವ ಊರಿಗೆ ಹೋಗಬೇಕಯ್ಯಾ?

ನಜಸಖನೂರೆಮ್ಮೂರಯ್ಯಾ!
ರು ಬಿಟ್ಟು ಬಹು ದಿನಾಯ್ತಯ್ಯಾ!
ರಿಸಿ ಯಾಜ್ಞವಲ್ಕ್ಯ ಕಂಡಿದ್ದಯ್ಯಾ!
ಗೆಜ್ಜೆ, ತಾಳ ಕೈಗಳಲಿತ್ತಯ್ಯಾ!
ಹೊ

ಗುತಿಹೆ ನಾನೀಗಲ್ಲಿಗಯ್ಯ!
ರುಡಗಮನ ಗತಿಯಯ್ಯಾ!
ಬೇರಾವ ಊರು ಬೇಡೆನಗಯ್ಯಾ!
ಜ್ಜವೆನಗೇನಿಲ್ಲಿಲ್ಲವಯ್ಯಾ! (ಅ)
-ಯ್ಯಕಾದಿಹ ನಿರಂಜನಗಯ್ಯಾ!!!

ನಿರ್ಮಲನಾಗುತಿರು ಮಲ ಮರೆಯುತಿರು!

ರಂಗನಾಗಿರುವೆ ಮಂಗನಂತೇ ಕಾಡುತಿಹೆ!
ಜಗದಿಂದ ನೀನಲ್ಲ ನಿನ್ನಿಂದ ಜಗವೆಲ್ಲ!
ನಮಸ್ಕರಿಸು ಗುರು ಪಾದಕ್ಕೆ ಇಡು ಹೆಜ್ಜೆ ಮುಂದಕ್ಕೆ!
ನಾಳೆ ನಿನ್ನೆಗಳಿಗಳಬೇಡ ಇಂದಿನದ ಬಿಡಬೇಡ!
ರುಚಿ, ಶುಚಿ ನೋಡದಿರು ಗುರುಸೇವೆ ಮಾಡುತಿರು!
ದನ, ಧನ, ಧಾನ್ಯಗಳ ದೃಶ್ಯ, ಗುರುಕರುಣೆ ಸಾದೃಶ್ಯ!
ಶಂಭೋ ಶಂಕರ ಕಾಯೆನ್ನು! ಅವನಾಗುವೆ ನೀನಿನ್ನು!!!

ಉತ್ತಮ ಕಾಲ ... ಅಂತ್ಯ ಕಾಲ!

ಉತ್ತಮ ಲಕ್ಷ್ಯ ... ನಿರ್ಲಕ್ಷ

!
ಉತ್ತಮ ಚಕ್ರ ... ಕಾಲ ಚಕ್ರ!
ಉತ್ತಮ ಕ್ರಮ ... ತ್ರಿವಿಕ್ರಮ!

ನಿನಗೆ ಬೇಕಾದುದು ನಿತ್ಯ ಶಾಂತಿ!

ನ್ನಲ್ಲಿಟ್ಟಿಹೆ ಅದಕಾಗನನ್ಯ ಭಕ್ತಿ!
ಗೆಲುವಾಗಿರು ತುಂಬುವೆನು ಸ್ಫೂರ್ತಿ!
ಬೇರೇನು ಬೇಕು ನೀನು ಪರಮಾರ್ಥಿ!
ಕಾಲ ಕರ್ಮದಿ ನೋಡೆನ್ನ ನಿಜಸ್ಥಿತಿ!
ದುಡುಕಿದರೆ ಬರುವುದು ಅಶಾಂತಿ!
ದುಃಖ ನಾಶಕವನ ನಾಮವೇ ಗತಿ!
ನಿನಗಿರದಿರಲಂಗ ಸಂಗ ಭ್ರಾಂತಿ!
ತ್ಯಗಿಸೆಲ್ಲ ಭೀತಿ ಇರುತೆನ್ನ ರೀತಿ!
ಶಾಂಭವಿ ನಿನಗಿಲ್ಲ ಭವದ ಭೀತಿ!
ತಿರುಕ ”ನಿರಂಜನ” ಗೈವನಿಷ್ಟಪೂರ್ತಿ!!!

ಆಗಬೇಕಾದುದೇ ಆಗುತಿರುವಾಗ ಬೇರಾವ ಯೋಚನೆ ಏಕೆ?

ತಿ, ಸ್ಥಿತಿಗಳೆಲ್ಲ ಗೋಚರವಾದೊಂದದ್ಭುತ ಶಕ್ಕಿಯೆಂದೆಂದರಿಯದೇಕೆ?
ಬೇಕೆನ್ನುವುದು ಸಿಗುತಿಲ್ಲ ಬೇಡೆಂದರದು ಬೆನ್ನ ಬಿಡುವುದಿಲ್ಲವೆನೆ ಚಿಂತಿಪುದೇಕೆ?
ಕಾಮ್ಯವಲ್ಲದ ನಿಷ್ಕಾಮ ಕರ್ಮವನೇ ಮಾಡುತಿರಲದೇಕೆ ಕಾಟ ತಪ್ಪದಿರುವುದೇಕೆ?
ದುಷ್ಕರ್ಮ ಧರ್ಮಬಾಹಿರವೆಂದರೂ ಅದಕೆಲ್ಲೆಲ್ಲೂ ಜಯವಾಗುತಿರುವುದೇಕೆ?
ದೇಶ ವಿದೇಶಗಳೆಲ್ಲಾ ಗುರುದೇವನಧೀನವಾಗಿರೆಲ್ಲರಲ್ಲನ್ಯೋನ್ಯವಿಲ್ಲವೇಕೆ?
ದಂತಾಗಲೆಂದಿದ್ದರೂ, ಸದಾ ಗುರುಸ್ಮರಣೆಗೈದರೂ ಶಾಂತಿ ಇಲ್ಲವದೇಕೆ?
ಗುರುಹಿರಿಯರುಪದೇಶ ನಂಬಿ ಬದುಕಿದರೂ ನಂಬಿಕೆ ಸಾರ್ಥಕವಾಗದೇಕೆ?
ತಿರುಗುತಿಹ ಕಾಲಚಕ್ರದ ಗತಿಯಿಂದೆಲ್ಲಾ ಸರಿಯಾಗುತಿದೆಂದರದು ಕಾಣದೇಕೆ?
ರುಕ್ಮಿಣೀಮಣನುದ್ಧರಿಸುವನು ಸಜ್ಜನರೆಂಬ ಸತ್ತಪ್ರದರ್ಶನವಾಗದೇಕೆ?
ವಾಸನೆಗಳಿಂದೆನ್ನ ಬಿಡಿಸೆಂದು ಬೇಡಿದರೂ ಅದರಲ್ಲೇ ಅದ್ದಿ ಕೆಡಿಸುವುದೇಕೆ?
ತಿವಿಹೀನನಾದೆನಗೆ ಸದ್ಗತಿ ತೋರಿ ಕಾಪಾಡೆಂದರೂ ದುಃಸ್ಥಿತಿ ಬಿಡಿಸದಿಹುದೇಕೆ?
ಬೇಡುವುದಿಲ್ಲ ನಾನಿನ್ನ ನೀಡುತಕ್ಕುದನಿತ್ತು ದುಃಖ ಶಾಂತಿ ಮಾಡದಿರುವುದೇಕೆ?
ರಾಮಾಯಣ, ಭಾರತ, ಭಾಗವತ ಕಥೆಗಳ ದೈವಿಕದ ಅನುಭವ ಕೊಡದಿರುವುದೇಕೆ?
ನವಾಸ ಉಪವಾಸಗಳೆಲ್ಲ ತವಪ್ರಸಾದವೆಂದಿದ್ದರೂ ಕರುಣೆ ಬಾರದದೇಕೆ?!
ಯೋಚನೆ ಬಿಡಿಸಿ ಸದಾ ನಿರ್ಯೊ

ಚನೆಯಲಿರಿಸೆಂದರೂ ಹಾಗಿರಿಸದಿಹುದೇಕೆ?
ಪಲಗಳ ನಿರ್ಮೂಲಗೊಳಿಸುತ ಭೇದ ನಿಜ ಬೋಧದಲಿರಿಸದಿರುವುದೇಕೆ?
ನೆರೆನಂಬಿಹೆನು ನಾ, ನಿನ್ನ! ಎನ್ನ ನೀ ಕೈಬಿಡಬೇಡೆಂದತ್ತರೂ ಕನಿಕರವಿಲ್ಲವೇಕೆ?
ನಾಗಬೇಕೋ ಅದೇ ಆಗಲಿ! ಪ್ರತಿಭಟಿಸಿ ಬದುಕುವ ಭ್ರಾಂತಿ ನನಗೇಕೆ?
ಕೆಸರು ಮೊಸರಾಗುವುದು ಮೊಸರು ಕೆಸರಾಗುವುದು “ನಿರಂಜನನಿಚ್ಛೆ” ಬೇರೆ ಮಾತೇಕೆ???

ನಿರಂಜನಾದಿತ್ಯನೇ ಸರ್ವ ಮತೀಯರಿಗೂ ಪ್ರತ್ಯಕ್ಷ ದೇವರೆಂದರೆ ತಪ್ಪಾಗದು!

ರಂಗುರಂಗಾಗಿ ಕಂಗೊಳಿಸುವ ಅವನ ಕಿರಣಗಳು ಸರ್ವ ಶಕ್ತಿ ಸಂಪದ್ಭರಿತವಾಗಿವೆ!
ಜಗದೀಶ್ವರನಿಗಿರಬೇಕಾದ ಸರ್ವಗುಣ ಲಕ್ಷಣಗಳನ್ನು ಅವನಲ್ಲಿ ಕಾಣಬಹುದು!
ನಭೋಮಂಡಲದಲ್ಲಿನ ಅವನ ದಿನಚರಿ, ಆದರ್ಶ, ಜಗದ್ಗುರುವಿನಂತಿರುವುದು!
ನಾನಾ ನಾಮರೂಪಗಳೆಲ್ಲವೂ ಆವನಿಂದೆಂಬರಿವು ಋಷಿಮುನಿಗಳಿಗಾಗಿರುವುದು!
ರುಚಿಯಾದವನಿಂದ ಪ್ರಾಪ್ತವಾದ “ರವಿ ರಸಾಯನ” ಬಾಳ ಬೆಳಕಾಗಿರುವುದು!
ದರ್ಶನವವನದಿಲ್ಲದ ದಿನ ನಿಸ್ಸಾರವಾಗಿರುವುದು ಉತ್ಸಾಹ ಶೂನ್ಯವಾಗಿರುವುದು!
ಶಕ್ತಿ-ಬೆಳಕುಗಳ ಅಗಾಧ ನಿಧಿಯಾದಿವನು ಸೃಷ್ಟಿ, ಸ್ಥಿತಿ ಲಯಕರ್ತನಾಗಿ
ಸರ್ವೆ

ಶ್ವರನಾಗಿಹನು!!!

ಏನಾದರೂ ಬರಿ ಅನ್ನಿಸುತ್ತಿದೆ!

ನಾನೇನು ಬರೆದೇನಾಗಬೇಕೆನಿಸುತಿದೆ!
ತ್ತನಂತಿರಬೇಕೆನಿಸುತಿದೆ!
ರೂಪ ನಾಮಗಳಿಗಧೀನವಿರದಿರೆನಿಸುತಿದೆ!
ಯಕೆಗಳಳಿದಷ್ಟು ನಿಶ್ಚಿಂತೆ ಎನಿಸುತಿದೆ!
ರಿಪುಗಳು ನಿನ್ನಲ್ಲೆ ಇರುವರೆನಿಸುತಿದೆ!
ಲ್ಲಿಲ್ಲಿಹರೆಂದನ್ನದಿರೆನಿಸುತಿದೆ!
ನಿತ್ಯ ನೇಮದ ತಪಸು ಸಾಗಲೆನಿಸುತಿದೆ!
ಸುಖವಿದರಲಿಹುದೆಂದೆನಿಸುತಿದೆ!
ತಿಳಿದಿದನು ಬದುಕಿ ಬಾಳೆನಿಸುತಿದೆ!
ದೆ

ವ ನೀನಾಗಲಿದೇ ದಾರಿ ಅನಿಸುತಿದೆ!!!

ಭಾವ ಬಲವಂತಕಾಗಿ ಬಹಿರಂಗವಾಗದಿರಲಿ!

ರ್ತಕನಂಗಡಿ ವ್ಯಾಪಾರದಂತಿದಲ್ಲೆಂದು ನೆನಪಿರಲಿ!
ರಬೇಕುತ್ತಮ ಭಾವ ಬಂದಾ ಭಾವ ಬಾಳಿಗೆ ಬರುತಿರಲಿ!
ಕ್ಷ್ಯವಾಗಿಹ ಸಾಯುಜ್ಯದಲಾ ಬಾಳು ಐಕ್ಯವಾಗಿರಲಿ!
ವಂಚನೆಯ ಲೋಕವ್ಯಾಪಾರಕಾಗಿ ಭಾವ ಬಯಲಾಗದಿರಲಿ!
ನ್ನನಾರೆಂದರಿವುದಕಾಗಿ ಭಾವ ಸದಾ ಸ್ಫುರಿಸುತಿರಲಿ!
ಕಾಮಭಾವ ನಿರ್ನಾಮವಾಗಿ, ರಾಮಭಾವ ಸದಾ ಇರುತಿರಲಿ!
ಗಿರಿಜೆ ರಾಮಭಾವ ಬಲಿಸಿ, ಶಿವನ ಸೇರಿದ್ದು ಮರೆಯದಿರಲಿ!
ಕನ ಕಾಮಭಾವ ಪ್ರಕಟವಾಗಿ ಸಾವಿಗೀಡಾದುದರಿವಿರಲಿ!
ಹಿರಣ್ಯಕನ ಸುತನ ಶ್ರೀ ಹರಿ ಭಾವವನನುದ್ಧರಿಸಿದಂತಿರಲಿ!
ರಂಗ ಶ್ರೀರಂಗದಲ್ಲಿ ಮಲಗಿರುವಂತೆ ಭಾವ ಸಮಯ ಸಾಧಿಸಲಿ!
ರ್ವದಲಿ ಭವ ಬಯಲಾದ ಶಿಶುಪಾಲನ ಗತಿ ಮನಸಿನಲಿರಲಿ!
ವಾಸವನ ಕಾಮಭಾವ ಹೊರಬರಲೇನಾಯ್ತೆಂಬ ಜ್ಞಾಪಕವಿರಲಿ!
ಜಪತಿಯ ಭಾವ ಬಯಲಾಗಿ ಹರಿಕರುಣೆ ಪಡೆದಂತಿರಲಿ!
ದಿಗಂಬರನಾಗಿ ಭಾವಶೂನ್ಯನಾಗಿ ಪರಬ್ರಹ್ಮ ತಾನಾದ ಗುರುವಿನ ಗುರಿ ಇರಲಿ!
ವಿಯಂತೆ ಸದಾ ಭಾವ ಕಾರ್ಯಗತವಾಗಿ ಬೆಳಗುತಿರಲಿ!
ಲಿಪಿಗಾರನಾಗಿ ಧನಾರ್ಜಿಸುವ ಭಾವವೆಂದೆಂದೂ ಬರದಿರಲಿ!

ನಿರಂಜನಗಿರದಿರಲಿ!!!

ವಿಶ್ವಾಮಿತ್ರನಾಗಿರುತಿಹೆನು!

ಶ್ವಾಸೋಚ್ಛ್ವಾಸದೀಶ್ವರನ ತುಂಬಿಹೆನು!
ಮಿತ್ರನೆನಿಸಿ ಸರ್ವರ ಸರ್ವಸ್ವವಾಗಿಹೆನು!
ತ್ರಾಹಿಮಾಂ ನಿರಂಜನ ಪಾಹಿ! ಎನುತಿಹೆನು!
ನಾಳೆ ನಿನ್ನೆಗಳ ಚಿಂತೆಗೆದೆಗೊಡದಿಹೆನು!
ಗಿರಿಸುತೇಶ್ವರನ ನೆಚ್ಚಿನ ಮಗನಾಗಿಹೆನು!
ರುಧಿರ ಮಾಂಸದ ಗೊಂಬೆ ನಾನಲ್ಲೆಂದರಿತಿಹೆನು!
ತಿಥಿ, ವಾರ, ಮಾಸಗಳೆನಗಿಲ್ಲೆಂದಿರುತಿಹೆನು!
ಹೆರವರಾರೆನ್ನವರಾರೆಂದರಿಯದವನಾಗಿಹೆನು!
ನುಡಿಯಂತೆ ನಡೆವಾ ನಿರಂಜನ ನಾನಾಗಿಹೆನು!!!

ನಿರಂಜನನಾರೆಂದರಿತ ರಾಮಯ್ಯ ತಾತ!

ರಂಗು ವಸ್ತ್ರದ ಕಾವಿಯಂಗಿಯವನಿವನಲ್ಲೆಂದ ತಾತ!
ಗದುದ್ಧಾರಕಾಗಿ ಬಂದಿರುವ ಜಗತ್ಪತಿಯೆಂದ ತಾತ!
ಮಿಸಿದರೆ ನಮಿಸಿ, ಪೂಜಿಸಿರಿವನನೆಂದ, ತಾತ!
ನಾನಿವನ ಆಳವನಲೆಯಲಸಮರ್ಥನೆಂದ, ತಾತ!
ರೆಂಬೆ ಕೊಂಬೆ ಚಿಗುರೆಲೆಗಳಲೂ ವ್ಯಾಪಿಸಿಹನೆಂದ, ತಾತ!
ತ್ತ ಗುರು ಪರಮ ಪೂಜ್ಯ ಅವಧೂತನಿವನೆಂದ, ತಾತ!
ರಿಪುಗಳಾರಿವಗೆದುರು? ಈತನ ರೀತಿ ವಿಚಿತ್ರವೆಂದ, ತಾತ!
ಬ್ಬಲಿಗಳನಬ್ಬೆಯ ತೆರದಿ ತಬ್ಬಿಕೊಳ್ಳುವ ಕರುಣಾಳುವೆಂದ, ತಾತ!
ರಾ

ಯ್ಯ
ತಾನು, ತನ್ನದೆಂಬಹಂಕಾರವಿವನಲೆಳ್ಳಷ್ಟಿಲ್ಲೆಂದ, ತಾತ!
ನ್ನಿಷ್ಟದೇವನಿವನೆಂದಿವನ ಘಟ ಸಹಿತ ಮುಕ್ತನಾದ ತಾತ!!!ಶಿವೈಕ್ಯನಾದ

ಜೀವನದ ಆರು ದಶಕದ ಕಥೆ

ಜೀವನ ಕರ್ಮಕನುಗುಣವಾಗಿ ಸಾವಿರದೊಂಭೈನೂರೇಳರಲಿ ಜನ್ಮವಾಯ್ತು!

ವಸುಧೆಗಿಳಿವಾಗಲೇ ಪಿತನಳಿದು ಭಾರ ತಾಯಿಯ ಮೇಲಾಯ್ತು!
ನಷ್ಟ ಕಷ್ಟಗಳಿಂದೈದಾರು ವರ್ಷಗಳು ಕಳೆದು ವಿದ್ಯಾರಂಭವಾಯ್ತು!
ದಯಾಮಯ ಪರಮೇಶ್ವರನ ಕೃಪೆಯಿಂದ ಸಾಕಷ್ಟು ವಿದ್ಯಾಭ್ಯಾಸವಯ್ತು!
ಆಗ ಉದ್ಯೋಗ ಮಾಡಿ ಸುಖವಾಗಿರಬೇಕೆಂಬ ಹಂಬಲವಾಯ್ತು!
ರುಕ್ಮಿಣೀರಮಣ ಗೋಪಾಲನೀ ಹಂಬಲವನೀಡೇರಿಸದಂತಾಯ್ತು!
ದಯೆಯೇಕೆ ಬಾರದೆಂಬ ಚಿಂತನೆಯಿಂದ ದಿಕ್ಕು ತೋಚದಂತಾಯ್ತು!
ಶಶಿಧರನ ಅನುಗ್ರಹದಿಂದಲ್ಲದಿದು ಬಗೆಹರಿಯದೆಂಬ ನಿರ್ಧರವಾಯ್ತು!
ಕಡು ಸಾಹಸದಿ ಗುರುಶಿವನ ಬಳಿಗೈದಿ ಸನ್ಯಾಸ ಪ್ಪಾಪ್ತವಾಯ್ತು!
ದತ್ತಗುರು ಕೃಪೆಯಿಂದವನ ಸೇವೆ ನಿತ್ಯ ಜೀವನಕುಂಟಾಯ್ತು!
ಕಳೆಯಿತಿಂತೀ ಐವತ್ತೊಂಬತ್ತು ಪ್ರಾಯದಲಿ ಅನುಭವ ಬಹಳಾಯ್ತು!
ತೆರೆದಿದೆಯೊಂದು ಮಹಾದ್ವಾರವೆಂಬರಿವೀಗುದಯವಾಯ್ತು!!!

ಪ್ರತ್ಯಕ್ಷಗುರು ಸಾರಂಗನಿರಲನ್ಯಾಯ ಕೆಡುವಿರೇತಕಯ್ಯಾ?

ತ್ಯಜಿಸುತೆಲ್ಲ ಸಂದೇಹವನನವನನವರತವನೆದುರಿಷ್ಟದೇವನ ಜಪಿಸಿರಯ್ಯಾ!
ಕ್ಷಮಿಸುವನೆಲ್ಲ ತಪ್ಪುಗಳ ಶರಣಾಗತ ರಕ್ಷಕನವನೆಂದರಿಯಿರಯ್ಯಾ!
ಗುರುಗಳಿಗಲ್ಲ ಪರಮ ಗುರು, ಗುರುಸಾರ್ವಭೌಮನಿವನೆಂದು ನಂಬಿರಯ್ಯಾ!
ರುಚಿಯರುಚಿಯೆಂಬುದ ಮರೆತವನಿತ್ತುದನುಂಡು ಭಜಿಸಿ ಬಾಳಿರಯ್ಯಾ!
ಸಾರಂಗನೀತನಾದಿ, ಮಧ್ಯಾಂತರಹಿತ ಸರ್ವ ಸಾಕ್ಷಿಯೆಂದು ಸಾರುವೆನಯ್ಯಾ!
ರಂಗುರಂಗಿನನಂತ ಕಿರಣಗಳಿಂದೀ ಸೃಷ್ಟಿಯೆಲ್ಲವ ಪಾಲಿಸುತಿಹನಯ್ಯಾ!
ಗನಮಣಿಯಮೂಲ್ಯ ಗುಣಮಣಿಯೆಂಬುದನನುಭವಿಸಿರಯ್ಯಾ!
ನಿತ್ಯ ನೇಮದ ಸೇವೆಯೊಂದೇ ಇವನ ಅನುಗ್ರಹಕೆ ದಾರಿಯಯ್ಯಾ!
ಮಣನೀತ, ಪಾರ್ವತೀರಮಣ ಶಿವ, ಶಕ್ತಿ ಸ್ವರೂಪನಾಗಿರುವನಯ್ಯಾ!
ಯಗೊಳಿಸುವನೀತನೆಲ್ಲಾ ಮಲಗಳ, ಕಾರ್ಗತ್ತಲೆಗೆ ಕಾಲನಯ್ಯಾ!
ನ್ಯಾಯಾನ್ಯಾಯ ಶೋಧಿಸಿ, ಸಾಧುಜನರನುದ್ಧಾರ ಮಾಡುವನಿವನಯ್ಯಾ!
ಮ, ನಿಯಮಾದಿ ಯೋಗ ಸೂತ್ರಗಳಿಗೆಲ್ಲಾ ಆಧಾರನಿವನಯ್ಯಾ!
ಕೆಡುವುದೆಲ್ಲಾ ಬಾಳು ಇವನ ಮರೆತರೆಂಬುದದು ಸಿದ್ಧಾಂತ ಮಾತಯ್ಯಾ!
ಡುಮುಡುಮ್ಮೆಂದಂಬರವೆಲ್ಲಾ ಗುಡುಗಿದರೂ ಸ್ವಸ್ಥಿತಿ ಬಿಡಿದವನಯ್ಯಾ!
ವಿಷಪಾನವನನವರತ ಮಾಡಿ ಅಮೃತಧಾರೆಯ ಸುರಿಸುವವನೀತನಯ್ಯಾ!
ರೇತನಿವ, ಸುವರ್ಣ ರೇತನೆನಿಸಿ, ದಿವ್ಯಕಾಂತಿಯ ಕರುಣಿಸುವನಯ್ಯಾ!
ರತರದ ವ್ಯಾಧಿ, ಪೀಡೆಗಳಿಗೆಲ್ಲಾ ಧನ್ವಂತರಿ ತಾನಾಗಿರುತಿಹನಯ್ಯಾ!
ರ ಮುಗಿದು ನಿಂತು, ಭಾವಭಕ್ತಿಯಲಿವನ ಸದಾ ಪ್ರಾರ್ಥಿಸಿರಯ್ಯಾ!
ಯ್ಯಜು ಮೊದಲಾದೆಲ್ಲಾ ವೇದಗಳು ಪಾಡುವ ‘ನಿರಂಜನ’ನಿವನಯ್ಯಾ!

ವಿಮಲ, ವಿಜಯ ಜಯಭೇರಿ ಬಾರಿಸುತಿದೇ!

ಲಿನ ಮನಸುಗಳಳಿದು, ಮಹಾಬಲೇಶನ ಮಹಿಮೆ ಬೆಳಗಲಿದೇ!
ಕ್ಷ್ಯವಾಗಿಹ ಗುರುಮೂರ್ತಿ ಎಲ್ಲೆಲ್ಲೂ ವಿರಾಜಿಪ ಶುಭೋದಯವಾಗುತಿದೇ!
ವಿಚಾರಿಗಳ ವಿಚಾರಗಳಿಗಳವಡದ ವಿಶ್ವಾಸದ ಫಲ ಕಂಡಾನಂದಿಸಲಿದೇ!
ರಾಜನ್ಮ ದುಃಖಪೀಡಿತರೆಲ್ಲ ಶಾಂತಿ ಪಡೆವ ಮಹಾದ್ವಾರ ತೆರೆಯಲಿದೇ!
ತಿಪತಿ ಗುರು ನಿರಂಜನನ ಖ್ಯಾತಿ ದೇಶದಾದ್ಯಂತ ಹರಡಲಿದೇ!


ಭೇದಾಭೇದಗಳಳಿದೆಲ್ಲರೊಂದಾಗಿ ಆತನ ಭಜಿಸಿ ಕೊಂಡಾಡಲಿದೇ!
ರಿವಾಜುಗಳರ್ಕನಿಗರ್ಘ್ಯವಿತ್ತವಧೂತನಿಗೆ “ಜೈ ನಿರಂಜನ” ಅನ್ನಲಿದೇ!
ಬಾ, ಬೇಗ ಬಾರೆಂಬ ಕೂಗು ಗುರುದತ್ತನ ದಿವ್ಯ ಚಿತ್ತಕೆ ಬಂದಂತಿದೇ!
ರಿಸಿ, ಮುನಿಗಳೆಲ್ಲರ ಜಯಘೋಷದ ಧ್ವನಿ ಕೇಳಿಬರುತಲಿದೇ!
ಸುರಿಯುತಿಹ ಹೂ ಮಳೆಯ ಸುವಾಸನೆ ನಾಸಿಕನೇರುತಿದೇ!
ತಿರುಗುತಿಹ ಕಾಲಚಕ್ರದ ಗತಿ, ಅಚ್ಚರಿಯನುಂಟುಮಾಡುತಿದೇ!
ದೇವದೇವ ಗುರುದೇವ ನಿರಂಜನಾದಿತ್ಯನಾಗಮನದ ಜೈಕಾರ ಕೇಳುತಿದೇ!!!

ಬಾಗುವೆನು ಬಾಗಿಲು ತೆಗೆದವನಡಿಗಳಿಗೆ ಭಾವ ಭಕ್ತಿಯಿಂದ!

ಗಿರಿಧಾರಿ ಒಳಗೆ ಕುಳಿತಿಹನು ಗಂಭೀರ ಮ

ನ ಮುದ್ರೆಯಿಂದ!
ಲುಬ್ಧತನವೇನಿವಗೆ ಅನುಗ್ರಹ ಮಾಡಲಿಕೆ, ನಾ ಬಯಸುವಾನಂದ!
ತೆಗೆದಿರಿಸಿ ನಿನ್ನ ಬಟ್ಟೆ, ಬರೆಗಳನೆಲ್ಲ ಬಳಿಗೆ ಬಾ ಹೇಳುವುದ ಕೇಳೆಂದ!
ಗೆಜ್ಜೆ ಕಟ್ಟುವೆನು ಕಾಲ್ಗಳಿಗೆ ನಾಚಿಕೆ, ಸಂಕೋಚಗಳೆಲ್ಲ ಬಿಡಬೇಕೆಂದ!
ದಿಮಿದಿಮಿದಿಮಿಕೆಂದು ಕುಣಿದು ಭಜಿಸು ನೋಡುವೆನು ನಾನೆಂದ!
ದೆಸೆದೆಸೆಯಲೂ ತುಂಬಬೇಕೀ ನಾದಾನಂದ ಕೇಳುವೆನು ನಾನೆಂದ!
ಬಯಲಾಡಂಬರದ ಬೂಟಾಟಿಕೆಯ ಭಜನೆ ನಾಟ್ಯ ನಾನೊಲ್ಲೆನೆಂದ!
ರೆಪ್ಪೆಯಲುಗದೆನ್ನನೇ ನೋಡಿ, ಪಾಡಿ ಕುಣಿದರಾಗುವುದು ಪರಮಾನಂದ!
ಯಿನಿತಿರಲನವನ ಅವನೆನ್ನ ನೋದುತಿರಲಾಗಾದಾನಂದ ನಿತ್ಯನಿಜಾನಂದ!
ರಿವಾಜು, ರೀತಿ, ನೀತಿ ನಿನಗಿಲ್ಲೆಂದು ಕೂತಿದ್ದ ತಿರಿಗಿ ಮೌನ ಮುದ್ರೆಯಿಂದ!!!

ಸ್ಥಾಪಿಸಿದ ವ್ಯಾಪಿಸಿದ ತೆರೆಮರೆಯಾದ!

ಪಿರಿದಾದ ಹಿಮಾಚಲದಿಂದಿಳಿದು ಬಂದ!
ಸಿರಿ ಹರಿಯಾನಂದದಲಿ ಭಜಿಸುತ ನಿಂದ!
ತ್ತ ಮೂರ್ತಿಯ ಮಂದಿರ ರಚಿಸಿ ಬನ್ನಿರೆಂದ!
ವ್ಯಾಧಿ, ವಿಷ ಪೀಡೆಗಳಿಂದ ಬಂತು ಭಕ್ತವೃಂದ!
ಪಿನಾಕಿಧರ ಗುರುಶಿವಗೆ ಶಿರ ಬಾಗಿರೆಂದ!
ಸಿಹಿ ಮಾತಿನಲುಪದೇಶಿಸುತ ಶಾಂತಿ ತಂದ!
ಯೆಯಿಂದೆಲ್ಲರ ಸೇವೆ ನಾನೇ ಮಾಡುವೆನೆಂದ!
ತೆಗೆದೊಗೆದು ಭಿನ್ನ ಭಾವಗಳ ಭಜಿಸುತಿರೆಂದ!
ರೆಪ್ಪೆ ಮುಚ್ಚದೆ ಅಖಂಡ ಸಪ್ತಾಹಗಳಾಚರಿಸಿರೆಂದ!
ನುಜ ಶರೀರವಿದೇಕೇನಿತು ಸುಖಗಳೆಂದ!
ರೆಸಿಗೆಯಾಡಿ ಹುಳ ಹತ್ತಿದ ರೋಗಕ್ಕೆಲ್ಲಾ ಗುಣ ತಂದ!
ಯಾಕೆ ನಿರ್ದಯನಾದೆ ಗುರುದೇವ ನಾನಿರಲಾರೆನೆಂದ!
ಮೆ, ಶಮೆ, ತಿತಿಕ್ಷೆಗಳ ನಿರಂಜನಾನಂದ!!!

ಶಿವಾನಂದವೇ ನಿರಂಜನಾನಂದ!

ನಿರಂಜನಾನಂದವೇ ಅಭೇದಾನಂದ!
ಅಭೇದಾನಂದವೇ ಸದಾಶಿವಾನಂದ!
ಸದಾಶಿವಾನಂದವೇ ವಿಮಲಾನಂದ!
ವಿಮಲಾನಂದವೇ ಸಹಜಾನಂದ!
ಸಹಜಾನಂದವೇ ನಿತ್ಯ ಸತ್ಯ ಸಚ್ಚಿದಾನಂದ!
ಸಚ್ಚಿದಾನಂದವೇ ನಿರಂಜನಾದಿತ್ಯಾನಂದ!!!

ವಿಚಾರಸಾಗರದ ವಿಸ್ತಾರ ಅತಿ ವಿಶಾಲ!

ಚಾಣಾಕ್ಷರಾದ ಕವಿಗಳಿಗೂ ನಿಲುಕದಿದರಾಳ!
ಕ್ಷಣೆ, ರಚನೆ, ಯೋಜನೆ ಇದರಲಿವೆ ಅತುಳ!
ಸಾಗರಗಳೇಳು ಸೇರಿದರೂ ತುಂಬದಿದರಾಳ!
ಗನವೆಲ್ಲಾ ಒಳಗಿರಿಸಿದರೂ ಇದೇ ವಿಶಾಲ!
ವಿಯಾದರೂ ಇದನಾರಿಸದಷ್ಟು ಜಲಜಾಲ!
ತ್ತಗುರು ಪರಮಾತ್ಮನನೇ ಮರೆಸಿಹಿಂದ್ರಜಾಲ!
ವಿಷಭರಿತತಿ ಘೋರ ಫಣಿಗಳದರಲಿ ನಿರ್ಮೂಲ!
ಸ್ತಾನ, ಮಾನಗಳೆಲ್ಲಾ ಇದರಲಡಗಿರುವಂತರಾಳ!
ಸ, ರಸದೂಟಗಳಡಿಗೆಗಿದರಲಿದೆ ಜಲ ಸುಶೀಲ!
ಮೃತವನನಾದರೂ ವಿಷಗೊಳಿಸುವುದಿದೇಕರಾಳ!
ತಿರುಕನಾದರೂ ತಿರುಮಲೇಶನೆನಿಸಲಿದೇ ಮಂತ್ರಜಾಲ!
ವಿಶಾಲ ವಿಸ್ತಾರವಿದರಿಂದಾಗುತಿದೆ ಭವ್ಯ ಭವ್ಯ ಲೀಲ!
ಶಾಪಾನುಗ್ರಹದಾ ಸರ್ವಶಕ್ತಿಗೆಲ್ಲಾ ಇದೇ ಜೀವಾಳ!
ಕ್ಷ್ಯವಾಗಿ ಎಲ್ಲರಲಿರುವ “ನಿರಂಜನ”ನಿದರ ಮೂಲ!!!

ಕಿರಿಯ ಸಾಹಿತಿಗಳಿಗೆ ವರ ಪ್ರಧಾನ!

ರಿವಾಜಿಲ್ಲ ಭಾವ, ಭಕ್ತಿಗೆ ಕೇಳಿರೀ ವಚನ!
ಕ್ಷಿಣೀ ವಿದ್ಯೆಯಲ್ಲದು ಭಾವ ಪ್ರಚೋದನ!
ಸಾಹಿತ್ಯ, ಸಂಗೀತಕ್ಕೆಲ್ಲಾ ಭಕ್ತಿ ಪ್ರಧಾನ!
ಹಿಡಿತದಲ್ಲಿಡಬೇಕು ಮನವ ತನ್ನಧೀನ!
ತಿಳಿ! ಭಾವ ಪ್ರಚೋದನೆಗುತ್ತಮ ಭಾವ ಕಾರಣ!
ತಿ, ಸ್ಥಿತಿ, ಮತಿಗಡಿಸದಿರಬೇಕು ಲೇಖನ!
ಳಿಪಿ, ಶುದ್ಧ, ಮುದ್ದಾದರೆ ಬೆಳಗುವುದು ಕವನ!
ಗೆಳೆತನವಿರಬೇಕು ಉತ್ತಮರದು ಅನುದಿನ!
ರ್ಚಸ್ಸು ಹೆಚ್ಚುವುದು ಮಾಡು ಇಂದ್ರಿಯ ದಮನ!
ಚನೆಗಳಾಗುವುದು ಪಂಚಾಮೃತ ರಸಾಯನ!
ಪ್ರತಿ ನಿಮಿಷ ಮನಸಿನಲಿರಲಿ ಗುರುಧ್ಯಾನ!
ದಾರಿ ನೇರಾಗಿದೆ, ಬೇಡ ಅನುಮಾನ!
ಡಿಸುತಿರು ಮನ ಸ

ಈಪ ನಿರಂಜನ!!!

ವಿಜಯದಶಮಿಗಿದು ಅಮೃತ ಪಾನ!

ಗದ ಕತ್ತಲೆ ಕಳೆಯಲಿಕೆ ಜ್ಞಾನ ಪಾನ!
ದುಕುಲೇಶನ ಲೀಲೆಗಿದು ಸ್ತನ್ಯಪಾನ!
ಣಿದ ಧಾರ್ಮಿಕರಿಗಿದು ನವೋದಯ ಪಾನ!
ರಣರಿಗಿದಭಯವನೀವ ಶಕ್ತಿವರ್ಧಕ ಪಾನ!
ಮಿತ್ರಭಾವದುತ್ತಮದ ಭಕ್ತಿಗಿದು ಧೇನುಕ್ಷೀರ ಪಾನ!
ಗಿರಿ, ಗುಹೆಗಳ ಘೋರ ತಪಸಿಗಿದು ಸೋಮ ಪಾನ!
ದುಃಖಿಗಳ ದುಃಖ ಶಾಂತಿಗಿದು ಅಭಯ ಪಾನ!
ರ್ಕನತ್ಯುಗ್ರ ಬಿಸಿಲ ತಾಪಕಿದು ಎಳನೀರು ಪಾನ!
ಮೃತ್ಯು ಶಯ್ಯೆಗೆ ತುತ್ತಾದವನಗಿದು ಸಂಜೀವಿನೀ ಪಾನ!
ಲೆ ಬಿಸಿಯೇರಿ ನಿದ್ರೆ ಬಾರದಿರದು ಅಮಲು ಪಾನ!
ಪಾಪಿ, ಪರದೇಶಿಗಳಸರೆಗಿದು ಗಂಗಾಪಾನ!
“ನ ಚಲತಿ ತೃಣ ತೇನವಿನಾ”! ಭಕ್ತಿಗಿದು ನಿರಂಜನಾಮೃತ ಪಾನ!!!

ಬರಬೇಕಾದಾಗ ಬರುವೆನೆಂದ ನಿರಂಜನ!

ಗಳೆಗಳಿಂದೇನಾಗುವುದೆಂದ ನಿರಂಜನ!
ಬೇಡ ಬೇಕಾದಗತ್ಯವೇನಿಲ್ಲೆಂದ ನಿರಂಜನ!
ಕಾಡದೆ, ಬೇಡದೆ, ನೀಡುವೆನೆಂದ ನಿರಂಜನ!
ದಾರಿ ತೋರಿದಂತೆ ನಡೆಯಿರೆಂದ ನಿರಂಜನ!
ಮನಾಗಮನವನಾಧೀನೆಂದ ನಿರಂಜನ!
ರಗಾಲ, ಸಿರಿಗಾಲವನಿಷ್ಟೆಂದ ನಿರಂಜನ!
ರುಚಿಯೂಟಕಾಗಿಲ್ಲಿ ಬಂದಿಲ್ಲೆಂದ ನಿರಂಜನ!
ವೆಗ್ಗಳದ ಗುರಿಗಾಗಿಹೆನೆಂದ ನಿರಂಜನ!
ನೆಂಟನೂ, ಭಂಟನೂ ಆದಿತ್ಯನೆಂದ ನಿರಂಜನ!
ಯೆಯವನದೆನಗಪಾರೆಂದ ನಿರಂಜನ!
ನಿತ್ಯದ ನಿಷ್ಠೆ ನೆಡೆಯುತಿದೆಂದ ನಿರಂಜನ!
ರಂಜಿಸಿಹನಾತೆನ್ನಂಗದಲೆಂದ ನಿರಂಜನ!
ಯ ಸರ್ವ ನಾಮರೂಪಗಳ್ಗೆಂದ ನಿರಂಜನ!
ಡಿಸೆನ್ನ ನಿನ್ನಡಿಯೆಡೆಗೆಂದ ನಿರಂಜನ!

ದೇಹ ಮೋಹ ದಹಿಸು, ದೇವ ಭಾವ ಬಲಿಸು!

ಸಿವೆ ಶಾಂತಿಗೊಳಿಸು, ಹರ್ಷ ವೃದ್ಧಿಪಡಿಸಿ!
ಮೋಸದಂಗಿ ಸುಡಿಸು, ಮೋಕ್ಷದಂಗಿ ತೊಡಿಸು!
ರೆಯ ಭ್ರಮೆಯನಳಿಸು, ಹರಿಯ ಪ್ರೇಮವಿರಿಸು!
ಣಿಯುವಾಟ ಬಿಡಿಸು, ಧಣಿಯ ಬದಿಯಲಿರಿಸು!
ಹಿಂದೆ, ಮುಂದೆ ಮರೆಸು, ಇಂದಿರಾಧವನಲಿರಿಸು!
ಸುಡುವ ಪಾಡಾ ಹರಿಸು, ಕೆಡದ ಪಾಡಿನಲಿರಿಸು!
ದೇಶ, ಕೋಶ ಬಿಡಿಸು, ಜಗದೀಶನೆಡೆಗೆ ನಡಿಸು!
ಸ್ತು ವಾಹನ ಬಿಡಿಸು, ನಿತ್ಯ ದೇವನಾಸೆಯಿರಿಸು!
ಭಾಗ್ಯ ಭೋಗವೆಲ್ಲ ತೆಗೆಸು, ಅರ್ಘ್ಯ ಪಾದ್ಯ ಪತಿಕರಿಸು!
ರ್ಣ ಭಿನ್ನ ಭೇದ ಮರೆಸು, ಸುವರ್ಣ ನಿನ್ನ ಪಾದದಲ್ಲಿರಿಸು!
ರಡು ಮಾತು ಬಿಡಿಸು, ಭವ್ಯ ಭಾವದಲಿರಿಸು!
ಲಿಂಗದಂಗ ಸುಡಿಸು, ಶಿವಲಿಂಗ ಒಡಲಲಿರಿಸು!
ಸುಜನಾರಿಷ್ಟ ಪೋಗೊಳಿಸು, ನಿರಂಜನನಿಷ್ಟ ಸಲಿಸು!!! ೨೮

ಎಂದೇನಾಗುವುದೆಂದರಿತವರಾರು? ಮನವೇನಾಗುವುದೆಂದರಿತವನಾರು?

ದೇಶ ಬಿಟ್ಟಿಹಿರಿ! ಮತ್ತೆ ಬರಬೇಕೆನ್ನುವರು, ಈಶ್ವರನಿಚ್ಛೆ ತಿಳಿದವರಾರು? ಬರುವುದಿಲ್ಲೆಂದವರಾರು?
ನಾವು ಮಾಡುವೆವು ಸೇವೆಯೆನ್ನುವರು, ಆವ ಠಾವಿನಲಾರಿಗಾವ ಸೇವೆಯೆಂದರುಹುವರಾರು?
ಗುರುದರ್ಶನ ಭಾಗ್ಯ ಕಳೆದುಕೊಂಡೆವೆನ್ನುವರು, ತೋರಿದ ದಾರಿಯೇ ದರ್ಶನವೆಂದರರಿತವರಾರು?
ವುಪೇಕ್ಷಿಸುತಲಗಲಿದರೆಲ್ಲರನೆನ್ನುವರು; ಅಪೇಕ್ಷೆಯುಪೇಕ್ಷೆ ಗುರುಗಿಲ್ಲೆಂದರೆ ತಿಳಿದವರಾರು?
ದೆಂಟಿಲ್ಲದ ಗಂಟೆಗಳು ನಾವಾದೆವೆನ್ನುವರು, ಅಂದಿಗದಾನಂದ, ಇಂದಿಗಿ ದೆಂದರಿಯುವರಾರು?
ತ್ತನೇ ನೀವಾಗಿರುವಿರೆಂದುಸುರುವರು, ಮತ್ತಾ ಭಕ್ತಿಯಲಿ ಯುಕ್ತಿ ಬೆರಸದಿರುವವರಾರು?
ರಿಕ್ತಹಸ್ತರಾಗಿ ತೆರಳಿದ ಮಹಾತ್ಯಾಗಿ ಅನ್ನುವರು, ಭಕ್ತರೇಕೆ ಮತ್ತೆವಗೆ ಕಾಟದ ಕೂಟ ಕತ್ತುವರು?
ಡೆಯಲಾರೆವು ನಾವೀ ವಿಯೋಗವೆನ್ನುವರು, ನೋಡು ಯೋಗ, ವಿಯೋಗದಲೆಂದರೀಕ್ಷಿಪರಾರು?
ನವಾಸವಿದೇಕೆ ನಿಮಗೆನ್ನುವರು, ನಾನರಿಯೆನದನೆಂದರದ ನಂಬುವವರಾರು?
ರಾರಾಜಿಸಿ ವಿರಾಜಿಸಿ ಕುಟೀರದಲೆನ್ನುವರು, ಗುರುಕರುಣೆ ಬಂದಾಗಾಗಲೆಂದರದನೊಪ್ಪುವರಾರು?
ರುಜನೆ ವಿಷ ದೋಷಗಳ ಹರಿಸಿ ಹರಸುವವರಾರು? ಭಜಿಸಿರೆಲ್ಲರೊಂದಾ ಗೆಂದರದರಂತೆ ನಡೆವವರಾರು?
ಳೆ ಬೆಳೆಗಳಿಲ್ಲದೆ ಬಡವಾಗಿಹೆವೆನ್ನುವರು, ಮಳೆ ಬೆಳೆಯಾಗುವುದು ಪ್ರಾರ್ಥಿಸೆಂದರೆ ಕೇಳುವರಾರು?
ಮ್ಮಿಂದೇನಪರಾಧವಾಯಿತೆನ್ನುವರು, ನಿಮ್ಮಿಂದಿಲ್ಲೆಲ್ಲಾ ದತ್ತನಿಂದದೆಂದರವನಿಂಬು ಬೇಡುವವರಾರು?
ವೇದ್ಯವಾಯಿತೀಗೆಲ್ಲ ನಮಗನ್ನುವರು, “ಜೈ ನಿರಂಜನ” ನಿನಗಿದಿರಾಡುವ ಸಮರ್ಥರವರಾರ?

ಎಂದೇನಾಗುವುದೆಂದರಿತವರಾರು?

ದೇಹವಸ್ಥಿರವೆಂದು ಹೇಳದವರಾರು?
ನಾಳೆಯ ಕಥೆಯೇನೆಂದರುಹುವರಾರು?
ಗುರುಚಿತ್ತವೆಂದರಿತು ಬಾಳುವವರಾರು?
ವುದ್ಯೋಗಬಿಟ್ಟು ಕುಳಿತುಳಿದವರಾರು?
ದೆಂಟಿಲ್ಲದೆಲೆಯಲುಂಡವರಾರು?
ಯೆಯಿಲ್ಲದೆ ಶಾಂತರಾಗಿರುವವರಾರು?
ರಿಸಿ, ಮುನಿ, ಮನೋಗತ ತಿಳಿದವರಾರು?
ರಣಿ ಧರಣಿಯ ಕಣ್ಣೆಂದುಸುರದವರಾರು?
ರ್ಣ, ಧರ್ಮ ಬೇಕೆಂದು ಬರೆಸಿದವರಾರು?
ರಾಗ ದ್ವೇಷಗಳ ಬಿಟ್ಟಿರುತಿರುವವರಾರು?
ರುಚಿಯರಿಯದ ನಾಲಿಗೆಯವವರಾರು???

ತಿರುಕನೆನುವೇಕೆ? ಭಿಕ್ಷುವೆನುವೇಕೆ? ನೀನಾಗಿಹೆ ತ್ರಿಲೋಕೇಶ ಗುರುರಾಯ?

ರುಧಿರ, ಮಾಂಸದ ದೇಹದಲಿ ಮಾಯೆ ಮನಸಾಗಿ ಅಲ್ಲಿಲ್ಲಲೆದರೆ ತಿರುಕ ನೀನಲ್ಲ ಗುರುರಾಯ!
ಷ್ಟ, ನಷ್ಟಗಳಿಗಂಜಿ ಒಂದಿಷ್ಟು ಜಾಗದಲಿದ್ದು ಭ್ರಷ್ಟನೆನಿಸದಿರಬೇಕೆಂತ! ತಿರುಗುತಿಹೆ ಗುರುರಾಯ!
ನೆಪಮಾತ್ರಕ್ಕಲ್ಲಲ್ಲಿ ಸುತ್ತಾಡಿ, ನಿನ್ನ ನೀನೇ ಬಚ್ಚಿಟ್ಟಿರುವೆಯೆಂಬುದ ನಾನರಿತಿರುವೆ ಗುರುರಾಯ!
ನುಡಿಯಿಲ್ಲದೆ ನಡೆಮಾತ್ರದಿಂದಿರುತ ನೋಡುವವರ ಕಣ್ಣಿಗೆ ಮೂಢ ನಂತಿರುತಲೆಯುತಿಹೆ ಗುರುರಾಯ!
ವೇಷ ಭೂಷಣಗಲಳಿಲ್ಲರನು ಭ್ರಮೆಗೊಳಿಸುತಿಹ ನೀನೊಬ್ಬ ಅಧಿಕಾರಿ ತಿರುಕನೆಂದರಿತೆ ಗುರುರಾಯ!
ಕೆಲಸಕೆ ಬಾರದ ವ್ಯವಹಾರಗಳಿಗಂಟಿಸಿಕೊಂಡು ಗತಿಗೆಡಬಾರದೆಂಬುದಕೆ ನೀನು ತಿರುಕನಂತಿರುವೆ ಗುರುರಾಯ!
ಭಿಕ್ಷೆ ಜಗಕೆಲ್ಲಾ ಕಾಲಕಾಲಕ್ಕಿಕ್ಕುವ ಜಗದ್ರಕ್ಷಕನಾಗಿರಲು ಭಿಕ್ಷು ನಾನೆನುತ ನಟಿಸುತಿಹೆ ನೀನು ಗುರುರಾಯ!
ಕ್ಷುದ್ಭಾದ ನಿನಗುಂಟೆ? ಸದಾ ಸ್ವಸ್ಥಾನದ ಪಂಚ ಭಕ್ಷ್ಯಭೋಜನ ಗೈವ ನೀನೆಂತು ಭಿಕ್ಷುಕನಹೆ ಗುರುರಾಯ!
ವೆಗ್ಗಳದ ವಿಶ್ವ ಸಾಮ್ರಾಜ್ಯವೇ ನಿನ್ನಾಜ್ಞಾಬದ್ಧವಾಗಿರಲದೇಕೆ ನಿನ್ನ ನೀ ಭಿಕ್ಷುಕನಂತಿರುವೆ ಗುರುರಾಯ!
ನುತಿ, ತುತಿಗಳಿಂದೆಲ್ಲರ ಮತಿಗೆಡಿಸದಿಕ್ಕಿದನುಂಡು ಆನಂದಪಡುವ ನೀ ಭಿಕ್ಷುಕನೆಂತಹೆ ಗುರುರಾಯ!
ವೇಷ ಹಾಕಿ ಮೋಸಗೊಳಿಸುತೆಲ್ಲರ ಭವಿಷ್ಯ ಹೇಳಿ ಕಾಸು ಕೀಳದ ನೀನು ಭಿಕ್ಷುಕನೆಂತಹೆ ಗುರುರಾಯ!
ಕೆಟ್ಟ ಯೋಚನೆಗಳಿಲ್ಲದೆ ಕೊಟ್ಟುದ ಹೊಟ್ಟೆಗಿಟ್ಟು ಗುಟ್ಟಾಗಿ ನೀನೇ ನೀನಾಗುವ ನೀನು ಭಿಕ್ಷುಕನೆಂತಹೆ ಗುರುರಾಯ!
ನೀತಿ, ಜಾತಿ ವಿಶ್ವಕ್ಕೆಲ್ಲಾ ಒಂದೇ ಒಂದು ಶುದ್ಧ ಪ್ರೀತಿ ಅನ್ನುವ ನೀನು ತ್ರಿಲೋಕೇಶ ಗುರುರಾಯ!
ನಾನಾ ನಾಮ ರೂಪ ಮತಗಳಿಗೆಲ್ಲಾ ನಾನೇ ವಿಧಾತನೆನುವ ನೀನು ತ್ರಿಲೋಕೇಶ ಗುರುರಾಯ!
ಗಿರಿ, ಗುಹೆ, ಹೊಲ, ಮನೆ, ಕಾಡು, ನಾಡುಗಳಲ್ಲೆಲ್ಲಾನಂದದಿಂದೋಡಾ ಡುವ ನೀನು ತ್ರಿಲೋಕೇಶ ಗುರುರಾಯ!
ಹೆಸರಿಲ್ಲದಾಗಿದೆನ್ನೂರು ಮನೆಗಳಿಗೆಂಬ ನಿನ್ನ ವ್ಯಂಗ್ಯ ಮಾತು ಸಾಕು ನೀನು ತ್ರಿಲೋಕೇಶ ಗುರುರಾಯ
ತ್ರಿಕಾಲದ ಹಾಳು ಹಂಬಲವಿಲ್ಲದೆ ಹೆರವರಿಗರಿಯದಂತಿರುತಿರುವ ನೀನು ತ್ರಿಲೋಕೇಶ ಗುರುರಾಯ!
ಲೋಕವಾಸನೆಗಳಾದ ಶೋಕ ಸುಖ ದುಃಖಗಳಾನಂದದಿದನುಭವಿಸುತಿಹ ನೀನು ತ್ರಿಲೋಕೇಶ ಗುರುರಾಯ!
ಕೇಳುತೆಲ್ಲರ ಹೇಳಿಕೆಗಳ ತಳೆದೂಗುತೊಳಗೊಳಗೇ ನಗುತಲಿರುವತಿರು ನೀನು ತ್ರಿಲೋಕೇಶ ಗುರುರಾಯ!
ಕ್ತಿಯಿಲ್ಲದಶಕ್ತ ನಾನಾಗಿಹೆನೆಂದಶಕ್ಯ ಶಾಖದಲಿ ತಪವಾಚರಿಸುತಿಹ ನೀನು ತ್ರಿಲೋಕೇಶ ಗುರುರಾಯ!
ಗುರಿಗಾಗಿ ಕಾದಿಹೆನೆನುತ ಸದಾ ಗುರಿಯಲಿರುವ ಗುರುಗುಹೇಶ್ವರನಾಗಿಹ ನೀನು ತ್ರಿಲೋಕೇಶ ಗುರುರಾಯ!
ರುಜುಮಾರ್ಗಿಯಾಗಿ

ತುಗಳಿಗಂಜದೆ ”ಗುರುನಿರಂಜನ”ನಾಗಿಹ ನೀನು ತ್ರಿಲೋಕೇಶ ಗುರುರಾಯ!
ರಾಮ ಶ್ಯಾಮ ಗುಣ ನಾಮ ಸಂಕೀರ್ತನಾನಂದ ನೀಡುವ ನಿರಂಜನಾನಂದ ನೀನು ತ್ರಿಲೋಕೇಶ ಗುರುರಾಯ!
ದುನಾಥನುಸುರಿದ ಗೀತಾಮೃತದ ಸಾರ ನಿರಂಜನಾಮೃತವನಿತ್ತ ”ನಿರಂಜನ” ನೀನು ತ್ರಿಲೋಕೇಶ ಗುರುರಾಯ!

ದೂರದಲಿರುತನುಗ್ರಹಿಸುವೆನು ಸಮಿಪ ಸುಖ! ಅನುಭಾವಿಸಿ ನೋಡಿ!

ಕ್ತ ಮಾಂಸಕಂಟಿಹ ಚರ್ಮದಂತೆ ನೀವೆನಗಂಟಿಹಿರಿ, ಹೀಗಿರಬೇಡಿ!
ತ್ತ ಗುರುವಿನುತ್ತಮ ಮಕ್ಕಳಾಗಿಹ ನೀವವನ ನಿಮ್ಮೊಳಗಿರಿಸಿಹಿರಿ ನೋಡಿ!
ಲಿಂಗದೇಹದಂದ ಚಂದವೀಂತಾಗಿಹುದೆಂದು ನೋಡೆಂದರೆ ನಗಬೇಡಿ!
ರುಜುಮಾರ್ಗಿ ”ನಿರಂಜನ ಗುರುಮೂರ್ತಿ” ನಿಮ್ಮೆಲ್ಲರ ವ್ಯಾಪಿಸಿಹ ನೋಡಿ!
ನಯರಾದ ನಿಮಗೆಲ್ಲವನಿತ್ತನೆಂಬಿಪ್ಪತ್ತೈದು ವರ್ಷದನುಭವ ಕೆಡಿಸಬೇಡಿ!
ನುಡಿಯದೆ ನಡೆಮಾತ್ರದಿಂದಿರುವುದೆಂತು ಶಾಂತಿಯಿಂದೆಂಬುದರಿತು ನೋಡಿ!
ಗ್ರಹಗಳುಗ್ರವಾದಾಗೆಲ್ಲಾ ಪೂರ್ಣ ಶಾಂತಿಯಿತ್ತ ಗುರುಮಂತ್ರ ಮರೆಯಬೇಡಿ!
ಹಿತ ಶತೃಗಳಿಗೂ ಸದಾ ಹಿತವನ್ನೇ ಕೋರುವ ಗುರುವೇ ನೀವಾಗಿರುವ ಆಶ್ಚರ್ಯ ನೋಡಿ!
ಸುರಿಯುತಿದೆ ಮಳೆ, ತಂಪಾಗುತಿದೆ ನೆಲ, ಮೋಡವೆಲ್ಲಿದ್ದರೇನೆಂಬುದನರಿತು ನೋಡಿ!
ವೆಂಕಟೇಶ ತಿರುಪತಿಯಲ್ಲಿ, ಸಂಕಟ ಪರಿಹಾರ ಮನೆಯಲ್ಲಿ, ಏ ಆದರ್ಶ ವೆನ್ನಲಿ ನೋಡಿ!
ನುಸುಳಿ ಹೊಕ್ಕನು ಹನುಮ ಲಂಕೆಯನು, ಭೀಮ ಬಲರಾಮನಗಿ ರಾಮನಿದ್ದೆಡೆ ಮರೆಯಬೇಡಿ!
ತ್ಯವಿದೆಂಬೆನ್ನಭಯ ನಂಬಿ ನನ್ನ ದಾರಿಯೇ ನಾನೆಂಬೆನ್ನ ಸಾ

ಈಪ್ಯ ಸುಖ ನೋಡಿ!
ಮೀರಲಾರರಾರೀ ಮಾತ ನಿಮ್ಮ ನಾ ಬಿಡಾಲಾರೆ, ನೀವೆನ್ನ ಬಿಡಲಾರಿರಿದರ ತತ್ವ ಮರೆಯಬೇಡಿ!
ಡಾಬೇಡಿ ನಿರಾಶೆ! ನಾ ನಿಮ್ಮ ಕರೆಯ ಮನ್ನಿಸಿಹೆ! ಕಾಲ ಬರಲಿದೆ, ಬಂದೇ ಬರುವೆನು ನಿಮಗಾಗಿ ನೊಂಡಿ!
ಸುಡುತಿಹೆನು ಸರ್ವಾಂಗ, ಸರ್ವ ಕಲ್ಯಾಣಾದ ಸರ್ವ ಸಿದ್ಧಿಗಾಗೆಂಬುದ ಖಡಿತ ಮರೆತಿರಬೇಡಿ!
ಂಡವಿಲ್ಲದಖಂಡ ಬ್ರಹ್ಮಾಂಡಾವನೇ ಬೆಳಗುತಿಹನೆನ್ನಯ್ಯನೆನ್ನ ನಿಮಗಿಅ

ಯುವನೆಂಬುದ ಮುಂದೆ ನೋಡಿ!
ರಿತಿರುವಿರಂದಿನಾ ಯುಗ ಪುರಾಣ, ಅದನಿಂದು ನೀವು ನೋಡುತಿಹಿ ರೆಂಬುದೆ ಮರೆಯಬೇಡಿ!
ನುಡಿ ಸಾಕು, ನಡೆ ಬೇಕು! ಅಡಸುತಿಹೆಡರುಗಳಡಗಿಸಲಿಕಿರಬೇಕು ದೇಹ ಮೋಹ ತ್ಯಾಗ ನೋಡಿ!
ವ ಬೀಜ ಬಂದಾಯ್ತು, ಭುಂಜಿಸಲಿದ್ದಾಯ್ತು, ಅದರಿಂದ ಬಿಡಿಸಿಕೊಳದಿನ್ನಿರಬೇಡಿ!
ವಿಷವನುಂಡು ದಿವ್ಯನಾಮಾಮೃತ ಧರೆಗಿತ್ತವನ ದಿವ್ಯ ನಾಮವೇ ನಿಜ ಸಾಮೀಪ್ಯ ನೋಡಿ!
ಸಿಕ್ಕಿದಳು ದಒ

ಪದಿ ದುಶ್ಯಾಸನನ ಕೈಗೆ, ಅಕ್ಕರೆಯ ಕೃಷ್ಣನಾಮವೇ ರಕ್ಷಿಸಿಹ ರೂಪ (ಎಲ್ಲಿದ್ದರೇನೆಂಬ ಕಥೆ) ಮರೆಯಬೇಡಿ!
ನೋಡಿ, ಪಾಡಿ, ಅಡಿಗಡಿಗೆ ಜಪಮಾಡಿ! ಮುಂದೇನಾಗುವುದೆಂದಿದಿರು ನೋಡಿ!
ಡಿಂಗರಿಗವನಂಗ ಸಾಮೀಪ್ಯವ ಮರೆತು, ನಿಸ್ಸಂಗ ನಿರ್ಮೊ

ಹದಲಿ “ನಿರಂಜನಾನಂದ’’ ನೋಡದಿರಬೇಡಿ!!!

ಇವರೇ ನಿರಂಜನನ ಆಪ್ತರು!

ನವಾಸಿಯಾದರೂ ಸೇವಿಪರು!
ರೇಗಾಟ, ಕೂಗಾಟವಿಲ್ಲದಿಹರು!
ನಿತ್ಯ ಸಂಕೀರ್ತನೆಯ ಮಾಡುವರು!
ರಂಗು ಥಳಕಿಲ್ಲದಿರುತಿಹರು!
ಗಳಾಕಾಸ್ಪದವೀಯದಿಹರು!
ಯ ಭಯದಿಂದ ವರ್ತಿಪರು!
ಡಿಯಲವನಿಷ್ಟವೆನ್ನುವರು!
ದರವೆಲ್ಲರಿಗೆ ತೋರುವರು! (ಆ)
-ಪ್ತ, ನಿರಂಜನನೆಂದರಿತಿಹರು!
ರುಚಿಸರಿತರ ಗುರುವರರು!!!

ನಿರಂಜನನ ಗ್ರಹ ಗುಣ ಚಕ್ರ

ನ್ನಪೂಣೆಒಪಾಸಕ ಬ್ರಹ್ಮ ಕುಲೋದ್ಧವ ಶ್ರೀ ನಿರಂಜನ!
ದಿತ್ಯಾಂಶ ಸಂಭೊತನಾದೀತ ಕಾಶ್ಯಪೇಯ ನಿರಂಜನ!
ವ ಸರಸ್ವತಿಗೆ ಸೋಮ ಪ್ರದೋಷ ಫಲ ನಿರಂಜನ!
ತ ಪರಮೇಶ್ವರ ಶರ್ಮನ ತನುಜಾತ ನಿರಂಜನ!
ದ್ಯೋಗ ಬೇಡಾಯ್ತಿವನುತ್ತಮ ವಿದ್ಯಾವಂತ ನಿರಂಜನ!
ರೂರಲೆಯುತಲೇರಿದನು ಹಿಮಗಿರಿ ನಿರಂಜನ!
ಗಾದಿ ವೇದವೇದಾಂತಿ ಶಿವಗುರು ಪುತ್ರ ನಿರಂಜನ!
ಆಕ್ಷ ಮೊದಲಾದ ಮತದವರೆಲ್ಲರಾಪ್ತ ನಿರಂಜನ!
ಲ್ಲರ ಬೆರೆಯದೆ ಎಲ್ಲವನರಿತವ ನಿರಂಜನ!
ಕಿಲ್ಲಿನ್ನಿರಲೆನ್ನುತ ಬಂದನು ಮಂಡ್ಯಕೆ ನಿರಂಜನ!
ಹಿಕ ಖಂಡನ ದೈನಿಕ ಮಂಡನ ಗುರು ನಿರಂಜನ!
ಲಿದಉ ವಿಮಲಗೆ ತೊಳೆದೀ ಮಲವನು ನಿರಂಜನ!
ಜಸ್ಸುಳ್ಳವ, ತೇಜಸ್ಸುಳ್ಳೆಲ್ಲವ ಬಲ್ಲವ ನಿರಂಜನ!
ದುಂಬರ ತಲವಸಿ, ರೋಗಕ್ಕೆಲ್ಲಾ ವಿನಾಶಿ ನಿರಂಜನ!
ಅಂಬರವಿಲ್ಲದ ದಿಗಂಬರ ತಾನೇ ತಾ ಶ್ರೀ ನಿರಂಜನ!
ಅಃಸ್ವರಕಂತ್ಯಾಕ್ಷರ ಇವ ಲೋಕಾಂತೇಶ್ವರ ನಿರಂಜನ!
ಕ್ಕಸವೆನ್ನುವ ಮತಿಗಾ ಕಕ್ಕಸ ಕರ್ಮಿ ನಿರಂಜನ!
ಂಡಾವಿಲ್ಲದಖಂಡ ರೂಪನು ಶ್ರೀಗುರು ನಿರಂಜನ!
ತಿ, ಚ್ಯುತಿಗಳುಕದ ನಿಜ ಮತಿದಾತ ನಿರಂಜನ!
ರ್ಘರ ಮುದ್ರೆಯ ತೆಗೆದಮೃತವಿತ್ತನು ನಿರಂಜನ!
ಕಾರಕಗೋಚರ ಅನಂತ ರೂಪನಿವ ನಿರಂಜನ!
ರ್ಪಟರನ್ನು ಛಿದ್ರಗೈದ ಸಹನಾಮೂರ್ತಿ ನಿರಂಜನ!
ಛುದೋಲಯದಿಂದ ಬರೆಯಲು ಕಲಿಸಿದ ನಿರಂಜನ!
ನಗಣ ಮಂಗಳದಾಯಕ ಮಂಗಳಾಂಗ ನಿರಂಜನ!
ಣಝಣ ತಾಳದಿ ಭಜನೆಯ ಬೋಧಿಪ ನಿರಂಜನ!
ಕಾರವಲ್ಲದ ತಾ ಪರಬ್ರಹ್ಮನಂತಿಹ ನಿರಂಜನ!
ಕ್ಟಕ್ಕೆಂದೆಬ್ಬಿಸಿ ನಿತ್ಯ ನೇಮದೊಳಿಟ್ತವ ನಿರಂಜನ!
ಕ್ಕರ ಠಉಳರ ಚೊಕ್ಕಟ ಮಾಡುವ ಗುರು ನಿರಂಜನ!
ಂಕಾನಂದಾ ಡಮರುಗ ಹಸ್ತಾ ಕಾಪಾಲಿಕಾ ನಿರಂಜನ!
ಣಢಣ ಡೋಲಿಗೆ ಭಕ್ತರ ಕುಣಿಸಿದ ನಿರಂಜನ!
, ನಕಾರದ ಭೇದವನಳಿದ ನಿರ್ವಿಕಾರ ನಿರಂಜನ!
ರಣಿಯ ತಾಪದಿ ತಪವನು ಗೈದವ ನಿರಂಜನ!
ಳಥಳ ಹೊಳೆದಾ ದೇಹಭ್ರಾಂತಿಯ ಸುಟ್ತವ ನಿರಂಜನ!
ರ್ಪ ದಂಭ ರಹಿತುದಾತ್ತ ಸೇವಾನಿರತ ನಿರಂಜನ!
ನಔಷದನ್ನ, ವದನ ದೀನರಿಗಿತ್ತನು ನಿರಂಜನ!
”ನ ಚಲತಿ ತೃಣ ತೇನವಿನಾ” ನಂಬಿಕೆಯ ನಿರಂಜನ!
ಶುಪಾಲನಾದರ್ಶ ರೀತಿಯ ಕಲಿಸಿದ ನಿರಂಜನ!
ಲಕಾರಿ ಸಂಕಿರ್ತನೆಯ ದಾರಿಯೆಂದನು ನಿರಂಜನ!
ರದಿರೆ ಗುರುಶಿವ ಭಾವಾತೀತಾದವ ನಿರಂಜನ
ಜಿಸುತ ಬಾಳುವೆ ಬಾ ಬೇಗ ಬಾರೆಂದನು ನಿರಂಜನ!
ದುವೆ ಮುಂಜಿ ಭಜನೆಲಿ ಮಾಡಿರೆಂದವ ನಿರಂಜನ!
ತಿಗಣ ಪ್ರಾಸ ಗುರು ಪ್ರಸಾದದಿಂದೆಂದ ನಿರಂಜನ!
”ರಕ್ಷಮಾಂ ನಿರಂಜನ!’’ ತನ್ನ ತಾನೇ ಪ್ರಾರ್ಥಿಪ ನಿರಂಜನ!
ಯಗೊಳಲೀ ಮನ ಶಿರ

ಪಾದದಲೆನ್ನುವ ನಿರಂಜನ!
ಸ್ತು, ವಾಹನ, ಸಂಘ ಶಾಂತಿಭಂಗವೆಂದನು ನಿರಂಜನ!
ರಣಾಗತನಾನು, ಪೊರೆವಾತ ನೀನೆಂದ ನಿರಂಜನ!
ಡಂಗ ಯೋಗ ಸಿದ್ಧ, ನೀನುದ್ಧಾರ ಮಾಡೆಂದ ನಿರಂಜನ!
ರ್ವನಾಮ ರೂಪಗಳಿಗಾಧಾರ ನೀನೆಂದ ನಿರಂಜನ!
ರಡಿದನು ಸರ್ವ ನಾಮ ಸಂಕೀರ್ತನೆ ನಿರಂಜನ!
, ಲ ಅಭೇದವದರಿಂ ಳಯ ಸ್ಥಿತಾನೆಂದ ನಿರಂಜನ!
ಕ್ಷಣಾ ಯುಗವಾಗುವುದು ಆಸೆಗಳಿಂದೆಂದ ನಿರಂಜನ!
ಜ್ಞಪ್ತಿ ಚಿತ್ತಾಗನ್ವರ್ಥ ವಿಮಲ ನೀನಾಗೆಂದ ನಿರಂಜನ!
”ಣ” ಆದ್ಯಕ್ಷರದ ನಾಮವೊಂದೆನಗಿಲ್ಲೆಂದ ನಿರಂಜನ!

ಸದಾ ಸುಖ ಇದರಲಿದೆ!

ದಾರಿಯಿದು ಸರಾಗಾಗಿದೆ!
ಸುಖ, ದುಃಕಾಸೆಯಿಂದಾಗಿದೆ!
ಂಡಿತ ಬಿಡಬೇಕಾಗಿದೆ!
ಷ್ಟಾನಿಷ್ಟ ಪ್ರಸಾದಾಗಿದೆ!
ತ್ತನಾಮವೆನಗಾಗಿದೆ!
ಕ್ಷಣೆ ಅವನದಾಗಿದೆ!
ಲಿಪಿಗದು ನಿಲುಕದಿದೆ!
ದೆ

ವಗಿದು ತಿಳಿದೇ ಇದೆ!!! ೩೫

ಸರ್ವ ಕಾರಣಕರ್ತ ನಾನಾಗಿರನ್ಯರನು ದೂಷಿಪುದನ್ಯಾಯವಯ್ಯಾ!

ತರತತದಾಸೆಗಡಿಯಾಳಾಗಿ ನನ್ನ ಮರೆತಿರುವೆನಯ್ಯಾ!
ತರಣಿ ಕಿರಣಗಳ ಮೋಡಗಳಡಗಿಸಿದರಪವಾದವನಿಗೆ ಸಲ್ಲದಯ್ಯಾ!
ಧ್ಯಾನದಲಿದನರಿತು, ನನ್ನ ನಾನನವರತ ಉತ್ಸಾಹದಲಿರಿಸಿಹೆನಯ್ಯಾ!
ನನ್ನ ನಾನರಿತು, ನಿತ್ಯನಿರಂಜನಾನಂದದಲಿರುವುದೆನ್ನ ಸ್ವಧರ್ಮವಯ್ಯಾ!!!

ಶ್ರೀ ಗುರು ಶಿವಪುತ್ರನಿಗಿದು ಷಷ್ಠಿ ಕಾಲ!

ನಿತ್ಯದಲಾದಿತ್ಯನನು ಸೇವಿಸುವ ಕಾಲ!
ರಂಗಿನಂಬರವಿರದ ದಿಗಂಬರ ಕಾಲ!
ಜನಕಾನಂದವೀವ ಜಗತ್ಕಲ್ಯಾಣ ಕಾಲ!
”ನ ಗುರೋರಧಿಕಂ” ಭಜನೆಗೆ ಯೋಗ್ಯಕಾಲ!
ಷಷ್ಠಿ ವರ್ಷವಿದು ಪತಿತಪಾವನ ಕಾಲ! (ಇ)
-ಷ್ಠಿಯಿದು ನಿರಂಜನಾದಿತ್ಯರ ಯೋಗ ಕಾಲ!!!

ಎಲ್ಲಾದರೂ, ಹೇಗಾದರೂ ಇರು! ನೀನೆನಗೆ ಗುರು!

(ಉ)-ಲ್ಲಾ ಸುತ್ಸಾಹಗಳಾ ತುಂಬುತಿರು! ನಿನೆನಗೆ ಗುರು!
ದತ್ತ ನೀನಲ್ಲದೆ ಬೇರಿನ್ಯಾರು? ನೀನೆನಗೆ ಗುರು!
ರೂಪವಿರಲೇಬೇಕೆನ್ನುವರು! ನೀನೆನಗೆ ಗುರು!
ಹೇಳಿದಿರಾ ಮಾತನೆನ್ನುವರು! ನೀನೆನಗೆ ಗುರು!
ಗಾಯಕಿಕ್ಕದಿರು ಉಪ್ಪು ನೀರು! ನೀನೆನಗೆ ಗುರು!
ದಯೆಯೆನ್ನ ಮೇಲಿರಿಸುತಿರು! ನೀನೆನಗೆ ಗುರು!
ರೂಡಿಯೇನದನರುಹುತಿರು! ನೀನೆನಗೆ ಗುರು!
ಇಲ್ಲ ಗತಿಯಿತರರಿನ್ಯಾರು! ನೀನೆನಗೆ ಗುರು!
(ಉ)-ರುತರದಾಪ್ತನೆನಗೆ ಗುರು ಶ್ರೀ ನಿರಂಜನ ಗುರು!ನೀ ನಿರಂಜನ ಗುರು!

ಬಳಲಿಸಿದೆ ನಾ ನಿನ್ನ ಬಹುಕಾಲದಿಂದ! (ಅ)

-ಳವಡಿಸಿತೆಲ್ಲ ವಿವರ ವಿಚಾರದಿಂದ!
ಲಿಖಿತವೆಲ್ಲವ ನೋಡಿದೆನಾನಂದದಿಂದ!
ಸಿದ್ಧಿ ನಿನಗಾಗುವುದು ಶೀಘ್ರ ಗತಿಯಿಂದ!
ದೆಸೆಗೆಟ್ಟಿಹ ದಾರಿ ತೆರೆವುದು ನಿನ್ನಿಂದ!
ನಾ
ನಿನಗಭಯವಿತ್ತಿಹೆನೀ ರಾತ್ರಿಯಿಂದ!
ನಿನ್ನ ಜನ್ಮ

ಅ ಗುರಿ ಸಾಧಿಪುದಿಂದಿನಿಂದ! (ಅ)
-ನ್ನ ದಾನಾದಿ ಸೇವೆಗಳಾಗಲಿವೆ ನಿನ್ನಿಂದ!
ರಡು ಭರವಸೆಗಳು ಬಾರವೆನ್ನಿಂದ!
ಹುಸಿಯ ಮಾತಲ್ಲ ಹಿಡಿ ಭಾಷೆ ನನ್ನಿಂದ!
ಕಾಮನನು ಕೊಂದು ರಾಮ ನೀನಾದೆ ನನ್ನಿಂದ!
ಕ್ಷ್ಯದಲಿ ನಿಂತನುಭವಿಸು ಸದಾನಂದ! (ಇ)
-ದಿಂಬಿನಧಿಕಾರಿಗಳಿಗಿತ್ತು ಪಡಾನಂದ!
ತ್ತನಿತ್ತೀ ವರವ ನೀಡು ಗೋಪ್ಯದಲೆಂದ!!!

ಮಾಲೆ ಹಾಕಿ ವರನ ಸ್ವೀಕರಿಸು!

ಲೆಃಖ ಹೇಳಿ ಸಮಾಧಾನ ಬರಿಸು!
ಹಾಡು ಹಾಡಿ ಸಂಭಾವನೆ ತರಿಸು!
ಕಿರಿದಗಿ ಹಿರಿದಾಗಬಯಸು!
ಶಮಾಡಿ ಸ್ಥಿರವಾಗಿ ಇರಿಸು!
ಜವ ಧರಿಸಿ, ಭಜಿಸಿ ಲೈಸು!
ಡೆದ ಮೇಲೆ ನುಡಿಯ ಕಲಿಸು!
ಸ್ವೀಕರಿಸಿ ಮತ್ತೆ ಮಾಲೇಕೆನಿಸು!
ರವ ಮುಗಿದಾದರೆ ಪ್ರಾರ್ಥಿಸು! (ಉ)
-ರಿಸಿ ಒಲೆಯ ತಪ್ಪಲೆ ಇರಿಸು!
ಸುನೀತಿ ನಿರಂಜನನ ತಪಸು!!!

ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ ಸಾಯುಜ್ಯ ನಾಮದಿಂದ!

ಲೋಕ ಗ್ರಂಥವಾಸನೆಗಳಳಿವವಿದರಿಂದ! (ಐ)
-ಕ್ಯ ಸುಖ, ಶಾಂತಿ, ಸರ್ವಸ್ವ ಪ್ರಾಪ್ತಿಯಹುದಿದರಿಂದ!
ಸಾಕಾರ, ನಿರಾಕರ, ಸಿದ್ಧಿ ಜಪ ಭಜನೆಯಿಂದ!
ಮೀನಾಕ್ಷಿ, ಕಾಮಾಕ್ಷಿಯರ ಅನುಗ್ರಹವಿದರಿಂದ! (ಗೋ)
-ಪ್ಯವಾಗಿದ್ದಿದನು ಹೇಳುವೆನು ನಾನನುಭವದಿಂದ!
ಸಾರೂಪ್ಯ ತಾನಾಗುವುದು ಸದಾ ನಾಮಜಪದಿಂದ!
ರೂಪದರ್ಶನವಾಗುವುದು ಮಂತ್ರಾರ್ಥ ಜ್ಞಾನದಿಂದ! (ಆ)
-ಪ್ಯಯನಕಾರಿಯಿದೆಂದರಿವುದು ಸಾಧನೆಯಿಂದ!
ಸಾನುರಾಗದ ಸಾಯುಜ್ಯ ಸತತದಭ್ಯಾಸದಿಂದ!
ಯುಕ್ತಿ, ಭುಕ್ತಿ, ಭಾವಗಳಿಗಿದರಿವಾಗದಾನಂದ! (ಆ)
-ಜ್ಯ, ಭಜನೆ, ಜಪ, ಕರ್ಮದಿಂದ ನಿರಂಜನಾನಂದ!
ನಾಮವೃತ್ತಿ, ಬಿಡಿಸುವುದಿತರ ವೃತ್ತಿಗಳಿಂದ!
ನದೆಲ್ಲಾ ವಾಸನೆ ಅಳಿವುದೇ ಸಾಯುಜ್ಯ ಅಂದ! (ಇ)
-ದಿಂಬು ಬಾಳಿಗೆ ಬರುವುದಿದರ ಅಭ್ಯಾಸದಿಂದ!
ತ್ತ, ಗೀತೆಯ ನಿರಂಜನಾನಂದವೀನಾಮದಿಂದ!!!

ಅಪಮಾನಪವಾದದಂಗಿ ನಿರ್ಮೊ

ಹ ನಿಸ್ಸಂಗಿ!

ರೇಚ್ಛಾ, ಸ್ವೇಚ್ಛಾ, ಪ್ರಾರಬ್ಧ ಫಲಪಮಾನದಂಗಿ!
ಮಾಯಾಜಾಲ ಹಾಕುವುದು ಅಪವಾದದ ಅಂಗಿ!
ರ, ನಾರಾಯಣನಾಗುವುದಕಿದೊಳ್ಳೆ ಅಂಗಿ!
ರಶಿವ ತಾನಾಗುವುದಕಿದುತ್ತಮದಂಗಿ!
ವಾಸನಾರಹಿತ ನಿಸ್ಸಂಗಕಿದು ಶಾಖದಂಗಿ!
ಯೆ, ಶಮೆಗಳಿಗಿದು ಗುರುಕೃಪೆಯ ಅಂಗಿ!
ದಂಭ, ದರ್ಪವಳಿದ ನಿರ್ಮೊ

ಹಕೆ ಚಿಂದಿಯಂಗಿ!
ಗಿರಿ, ಗುಹೆಗಳ ಸೇರಲಿದು ವಿರಕ್ತಿಯಂಗಿ!
ನಿತ್ಯಾನುಷ್ಠಾನದಲಿರಿಸಲಿದು ರೇಷ್ಮೆಯಂಗಿ! (ಧ)
ರ್ಮೊ

ಜ್ವಲನಕಿದುರಿ ಬಿಸಿಲ ಕಿರಣದಂಗಿ!
ರಯ ಭ್ರಮೆಯ ಹರಿಸಲಿದು ಮಂತ್ರದಂಗಿ!
ನಿರ್ವಿಷಯ ಪ್ರೇಮಕಿದು ಅನುಗ್ರಹದ ಅಂಗಿ! (ದು)
ಸ್ಸಂಘ ಬಿಡಿಸಲಿದು ಆಯುಧ ಕವಚದಂಗಿ!
ಗಿರಿಧರ, ನಿರಂಜನಗಿದು ಪ್ರೀತಿಯ ಅಂಗಿ!!!

ಸತ್ತಮೇಲೇನಾದರೇನು ಸುಖ? (ಅ)

ತ್ತರೆ ಮಿಥ್ಯ ಸುಖವೇನು ಸುಖ?
ಮೇವು ಹಸಿದಾಗಿಟ್ಟರೆ ಸುಖ!
ಲೇಸು ಮಾಡಿದರೀ ಗೀತ ಸುಖ!
ನಾಳೆಗೆಂದರೆ ಏಗೇನು ಸುಖ!
ತ್ತ ತೋರೆನಗೀಗಾ ಸುಮುಖ!
ರೇಸಿ ಹೋಗಿದೆನಗೀ ಕುಮುಖ!
ನುಂಗಿ ಸಾಕಾಯ್ತೆನಗೆ ಏ ದುಃಖ!
ಸುಖ! ನೀನಿಲ್ಲದಿರೆಲ್ಲಾ ದುಃಖ!
ತಿಗೊಳದೀಗ ನಿಡಾ ಸುಖ!!!

ಮಂತ್ರಾರ್ಥ ಜ್ಞಾನ ಅನುಗ್ರಹದಿಂದ!

ತ್ರಾಹಿಯೆಂಬುದದಕೆ ದೈನ್ಯದಿಂದ! (ಅ)
-ರ್ಥ ಜ್ಞಾನ ನಂತರ ಸುಲಭದಿಂದ!
ಜ್ಞಾನಾನಂದವೇ ಮಹದರ್ಥಾನಂದ!
ಟನೆಗಿದು ನಿಲುಕದಾನಂದ!
ಲೆಗಳಡಗಬೇಕದರಿಂದ! (ಅ)
-ನುಷ್ಠಾನ ಬೇಕದಕೆ ಶ್ರದ್ಧೆಯಿಂದ!
ಗ್ರಹಿಸಬೇಕೆಲ್ಲ ವಿಚಾರದಿಂದ!
ರಿವುದು ಆಗರ್ಥ ಧಾರೆಯಿಂದ! (ಇ)
-ದಿಂಬಾಗುವುದು ಅನುಗ್ರಹದಿಂದ!
ರ್ಶನವಿದು ನಿರಂಜನಾನಂದ!!!


ಪರಮ ಗುರಿಗೆ ನಿರಂಜನಾದಿತ್ಯಾದರ್ಶ!

ವಿಯುದಯಾಸ್ತ ಗತಿ ಜೀವನಕಾದರ್ಶ!
ಮತೆ ನಿರ್ಮೊ

ಹದಲಿದೆಂಬ ನಿಜಾದರ್ಶ!
ಗುಡಿ, ಮಠ, ಗುರಿಯಲ್ಲೆನ್ನುವುದೀ ಆದರ್ಶ!
ರಿಪುಗಳೆನಗಿಲ್ಲೆಂಬಖಂಡ ಪ್ರೇಮಾದರ್ಶ!
ಗೆಳೆತನಕರವಿಂದಾದಿತ್ಯರ ಆದರ್ಶ!
ನಿಶ್ಚಲತತ್ವ ಸ್ಥಿತಿಗಿದತ್ಯುತ್ತಮಾದರ್ಶ!
ರಂಗನಾಗಿ ನಿಸ್ಸಂಗಿಯಾಗಲಿದೇ ಆದರ್ಶ!
ಗತ್ಪತಿಯಿಆತ ನಿಸ್ಪೃಹತೆಗೆ ಆದರ್ಶ!
ನಾಳೆ, ನಿನ್ನೆ ಇರದನ್ವರ್ಥಾವಧೂತಾದರ್ಶ!
ದಿನಕರತ್ಯುಗ್ರ ನಿರಹಂಕಾರಕಾದರ್ಶ!
ತ್ಯಾಗರಾಜನಿವ ಭೂಮಂಡಲೇಶ್ವರಾದರ್ಶ!
ರ್ಶನ ನಿತ್ಯವಾದರಾರರಿಯದಾದರ್ಶ! (ದ)
ರ್ಶನಾನಂದವದು ನಿರಂಜನಾದಿತ್ಯಾದರ್ಶ!!!

ಬಂಧವಿಮೋಚನೆಯಿಂದ ನೀ ಗೋವಿಂದ!

ಗಧಗಿಪರ್ಜಿ

ವರ್ವಿಷಯದಿಂದ!
ವಿಷಯದ ವಾಸನೆಯೆ ಭವ ಬಂಧ!
ಮೋಹ ಜೀವನಿಗೊಂದು ಪ್ರಾರಬ್ಧ ಬಂಧ!
ರಣಾದಿಂದ್ರಿಯ ಸಂಬಂಧವೇ ಬಂಧ!
ನೆಪ ಮಾತ್ರ ಕಾಯ! ಎಲ್ಲಾ ಮನದಿಂದ!
ಯಿಂಬಿಗಾಗಿರಬೇಕು ನಾಮ ಸಂಬಂಧ!
ರ್ಶನದಿಂದಾಗುವ ಜೀವ ಗೋವಿಂದ!
ನೀನು ಆಗ ನಿತ್ಯ ನಿರಂಜನಾನಂದ!
ಗೋಪಾಲನಿದನಂದು ಅರ್ಜುನಗಂದ! (ರ)
-ವಿಂದ ಸಖ ನಾನೇ ನೋಡು ಗೋವಿಂದ!
ತ್ತ ನಿರಂಜನಾನಂದ ನೀ ಗೋವಿಂದ!!!

ಸನ್ಯಾಸಿಯ ಸಂದರ್ಶನಾನಂದ!

ನ್ಯಾಸ ಆಶಾ ರಹಿತಾತ್ಯಾನಂದ!
ಸಿದ್ಧಿ ಇದು ನಿತ್ಯ ನಿಜಾನಂದ!
ತಿಪತಿಗಿದೇ ಸದಾನಂದ!
ಸಂದರ್ಶನಕೈತಹರೂರಿಂದ!
ರ್ಶನದಿಂದಾಗಬೇಕಾನಂದ! (ಸ್ಪ)
-ರ್ಶ ಅಸ್ಪರ್ಶ ಅಭೇದಾನಂದ!
ನಾಮ ಜಪವಿರಲದರಿಂದ!
ನಂಬಿಕೆಗಿಂಬಿಹುದಿದರಿಂದ!
ತ್ತ ನಿರಂಜನಾದಿತ್ಯಾನಂದ!!!

ನಿರಂಜನಗೀಗ ನಿತ್ಯ ಕರ್ಪೂರಾರತಿ!

ರಂಗಿಲ್ಲದಂಗಿಗಾಗುತಿದೆ ಈಗಾರತಿ!
ರಾಂಗಿಗಾಗುತಿದೆ ನಾಗರತ್ನಾರತಿ!
ಶ್ವರವಿದಕೇಕಿದೆಂದರೀ ಆರತಿ!
ಗೀತೆ, ಭಜನೆಗಳಿಲ್ಲದಿದಕಾರತಿ!
ಜ, ತುರಗಗಳಿಲ್ಲದಿದ್ದಾರತಿ!
ನಿಜ ಗುಣ ತೋರದ ಇದಕೆ ಆರತಿ!
ತ್ಯಜಿಸಿದನೆಂದರೆ ಕರ್ಪೂರಾರತಿ!
ಷ್ಟ ಕಳೆಯಲಿದರಿಂದೆಂದಾರತಿ (ಇ)
-ರ್ಪೂರ ಗೃಹಿಣಿಗಿದಾನಂದದ ಆರತಿ
ರಾತ್ರಿ ನಿತ್ಯದಲಾಗುತಿದೆ ಈ ಆರತಿ!
ತ್ನದಾರತಿ ನಿತ್ಯ ನಿರಂಜನಾರತಿ!
ತಿರುಕನಿಗಿದೊಂದು ನಿರಂಜನಾರತಿ!

ಬೇಕಾದುದು ಬೇಕಾದಾಗ ಬರುವುದು!

ಕಾಮವದು ದುಃಖಕೀಡುಮಾಡುವುದು!
ದುಡುಕಿದರೆ ಕೆಡಕು ಆಗುವುದು!
ದುಮ್ಮಾನ ಮನಸಿಗೆ ಉಂತಾಗುವುದು!
ಬೇಡಿ ನೀಡದಿರೆ ವಿರೋಧವಾಗುವುದು!
ಕಾಡಿ ಕೈಗೂಡದಿರೆ ಕ್ರೋಧ ಅಹುದು!
ದಾನವದು ದಾಸ್ಯಕೆಡೆಯಾಗುವುದು!
ತಿ, ನಿಜಸ್ಥಿತಿಗನ್ಯಾಯವಾಗುವುದು!
ಯಸಿದರೆ ಬಾಳು ಹಾಳಾಗುವುದು!
ರುಚಿಯಾದಮೃತಪಾನ ತಪ್ಪುವುದು!
(ಉ)-ವುಪೇಕ್ಷಿಸನು ಶ್ರೀ ಗುರು, ನಂಬುವುದು!
ದುಃಖ ದೂರ ನಿರಂಜನಾನಂದವಿದು!!!

ಸ್ವರೂಪ ದರ್ಶನಾನುಗ್ರಹ ಪ್ರಸಾದ!

ರೂಪ ದರ್ಶನಾಗದಾಗುತಿದೆ ಖೇದ!
ರಿಪರಿಯ ಮಾತಿಂದಾಯ್ತು ಪ್ರಮಾದ!
ಯೆಯೆಲ್ಲರಿಗಿದ್ದೇ ಇದೆ ಅಗಾಧ! (ದ)
-ರ್ಶನವಾಗದಿರುದೊಂದು ವಿನೋದ!
ನಾರಾಯಣನೆಲ್ಲರಲಿರುವ ಸದಾ!
ನುಡಿಯಿದು ಪೂರ್ಣ ಸತ್ಯ ನಿರ್ವಿವಾದ!
ಗ್ರಹಿಸೀ ಸ್ಥಿತಿಗೇಕೆ ನರನೀಡಾದ?
ತ್ತಿಂದ್ರಿಯದಾಟಕವನೊಳಗಾದ!
ಪ್ರತಿ ನಿಮಿಷವೂ ಆಶಾಬದ್ದನಾದ!
ಸಾಗುವುದು ಗುರುಲೀಲೆಯವನೆಂದ!
ರ್ಶನವಿದುವೇ ನಿರಂಜನಾನಂದ!!!

ನಿರಂಜನ ಬಂದ ಮನಸಾಗಿ!

ಕುಟೀರ ಕಟ್ಟಿದ ಮನಸಾಗಿ!
ಕೃಷಣನ ಮಾಡಿದ ಮನಸಾಗಿ!
ಭಜನೆ ಹೇಳಿದ ಮನಸಾಗಿ!
ಪೂಜಾರಿ ತಾನಾದ ಮನಸಾಗಿ!
ಪ್ರಸಾದ ಹಂಚಿದ ಮನಸಾಗಿ!
ಕಸ ಗುಡಿಸಿದ ಮನಸಾಗಿ!
ಆಸನ ಹಾಕಿದ ಮನಸಾಗಿ!
ವೈದ್ಯನೆನಿಸಿದ ಮನಸಾಗಿ!
ಮಾಂತ್ರಿಕನೆನಿಸಿದ ಮನಸಾಗಿ!
ಪೀಡೆ ಹರಿಸಿದ ಮನಸಾಗಿ!
ವಿಷ ಇಳಿಸಿದ ಮನಸಾಗಿ!
ಕುಷ್ಟ ಹರಿಸಿದ ಮನಸಾಗಿ!
ಅಂಗಿ ತೊಡಿಸಿದ ಮನಸಾಗಿ!
ಅಲ್ಲಿಲ್ಲೋಡಾಡಿದ ಮನಸಾಗಿ!
ರಂಗನೇ ತಾನಾದ ಮನಸಾಗಿ!
ಮಂಗನೂ ತಾನಾದ ಮನಸಾಗಿ!
ಆಳಿಗೆ ಆಲಾದ ಮನಸಾಗಿ!
ಹಸುಗಳಾ ತಂದ ಮನಸಾಗಿ!
ಮೇಕೆಗಳ ತಂದ ಮನಸಾಗಿ!
ಜಾಗ ಬೆಳೆಸಿದ ಮನಸಾಗಿ!
ಅಡಿಗೆ ಮಾಡಿದ ಮನಸಾಗಿ!
ಕಾಫಿ ಟೀ ಹಾಕಿದ ಮನಸಾಗಿ!
ಊಟ ಬಡಿಸಿದ ಮನಸಾಗಿ!
ತಟ್ಟೆತಾ ತೊಳೆದ ಮನಸಾಗಿ!
ಉಂಡೆಲೆ ತೆಗೆದ ಮನಸಾಗಿ!
ಗೋಮಯ ಮಾಡಿದ ಮನಸಾಗಿ!
ಹಸು ತಾ ತೊಳೆದ ಮನಸಾಗಿ!
ಹಾಲನು ಕರೆದ ಮನಸಾಗಿ!
ಮೋಸರು ಕಡೆದ ಮನಸಾಗಿ!
ಕೊಟ್ಟಿಗೆ ತೊಳೆದ ಮನಸಾಗಿ!
ಬೆರಣಿ ತಟ್ಟಿದ ಮನಸಾಗಿ!
ಕಕ್ಕಸು ತೊಳೆದ ಮನಸಾಗಿ!
ಉತ್ಸವ ಮಾಡಿದ ಮನಸಾಗಿ!
ಉತ್ಸಾಹ ತೋರಿದ ಮನಸಾಗಿ!
ಉಳುಕು ತಿಕ್ಕಿದ ಮನಸಾಗಿ!
ಬೇನೆಗೆ ನೀವಿದ ಮನಸಾಗಿ!
ಬಾವು ಬತ್ತಿದ ಮನಸಾಗಿ!
ರಸಿಗೆ ತೊಳೆದ ಮನಸಾಗಿ!
ಗಾಯ ಮಾಯಿಸಿದ ಮನಸಾಗಿ!
ವ್ಯಾಯಾಮ ಮಾಡಿದ ಮನಸಾಗಿ!
ಆಸನ ತೋರಿದ ಮನಸಾಗಿ!
ಮೂರ್ಛೆ ಬಿಡಿಸಿದ ಮನಸಾಗಿ!
ಭ್ರಮೆ ಹರಿಸಿದ ಮನಸಾಗಿ!
ತತ್ವ ಕಲಿಸಿದ ಮನಸಾಗಿ!
ಎಲ್ಲವ ಮಾಡಿದ ಮನಸಾಗಿ!
ಎಲ್ಲಾ ಸಹಿಸಿದ ಮನಸಾಗಿ!
ಎಲ್ಲಾ ಕ್ಷಮಿಸಿದ ಮನಸಗಿ!
ಎಲ್ಲಾ ತ್ಯಜಿಸಿದ ಮನಸಾಗಿ!
ತಾಪಸಿ ತಾನಾದ ಮನಸಾಗಿ!

ಸಾಮೀಪ್ಯ ಯಾರು, ಯಾರಿಗೆ, ಯಾಕೆ ಬೇಕು?

ಮೀನು ಬದುಕಲಿಕೆ ನೀರಿರಬೇಕು! (ಆ)
-ಪ್ಯಯನಕಾರಿಯದು ಅದಕೆಬೇಕು!
ಯಾರಿಗಾದರೂ ಸದಾ ಸುಖವೇಬೇಕು! (ಉ)
-ರು ತರದ, ಪ್ರೇಮಿ ಬಳಿ ಇರಬೇಕು!
ಯಾರಿಗೂ ಪ್ರೇಮಿ ದೂರಿಲ್ಲೆಂದರಿಬೇಕು! (ಆ)
-ರಿಗೆಂದರೀ ಮನದಾನಂದಕೆ ಬೇಕು!
ಗೆಲಬೇಕಿಂದ್ರಿಯಗಳ! ವಶಸಾಕು!
ಯಾವಾಗಲೂ ಜಪ ಮಾತ್ರವಿರಬೇಕು!
ಕೆಟ್ಟ ವಿಷಯಕೆ ದೂರವಿರಬೇಕು!
ಬೇರೆ ಇನ್ನೆಲ್ಲೂ ಹುಡುಕದಿರಬೇಕು!
ಕುಳಿತೊಳಗಿನಾಪ್ತನ ನೋಡಬೇಕು!!!

ಶ್ರೀ ಗುರು ಶಿವನಂದನಗಿದು ಷಷ್ಠಿ!

ಗುರು ಹರಸಿದ ನಿರಂಜನ ಷಷ್ಠಿ!
ರುಚಿ ಶುಚಿಯಳಿಯದವಧೂತ ಷಷ್ಠಿ!
ಶಿವ ಶಕ್ತಿ ನಿರಂಜನಾದಿತ್ಯ ಷಷ್ಠಿ!
ರ್ಷಧಾರೆ ಸುರಿದ ಸಮೃದ್ದಿ ಷಾಷ್ಠಿ!
ನಂಬಿದವರಿಂಬು ಕಂಡಾನಂದ ಷಷ್ಠಿ!
ತ್ತ ನಿರಂಜನಾದಿತ್ಯನೆಂದ ಷಷ್ಠಿ!
“ನ ಗುರೋರಧಿಕೆಂ”ದು ಕುಣಿದಾ ಷಷ್ಠಿ!
ಗಿರಿಧರಾನಂದ ರಾಸಲೀಲಾ ಷಷ್ಠಿ!
ದುರಾತ್ಮರಳಿದ ನಿಜಾನಂದ ಷಷ್ಠಿ!
ಣ್ಮುಖ ನಿರಂಜನಾದಿತ್ಯೈಕ್ಯ ಷಷ್ಠಿ! (ಇ)
ಷ್ಟಿಯಿದು “ನಿರಂಜನ” ಕಲ್ಯಾಣ ಷಷ್ಠಿ!!!

ಶ್ರೀಗುರು ಶಿವತನಯಗಿದು ನಿರಂಜನ ಷಷ್ಠಿ!

ಗುರುಗುಹ ಸಹೋದರನಿಷ್ಠಿ ನಿರಂಜನ ಷಷ್ಠಿ!
ರುಚಿ ಶುಚಿಯಳಿದ ಸಂತುಷ್ಟಿ ನಿರಂಜನ ಷಷ್ಠಿ!
ಶಿವಗಿಷ್ಠಿ, ವಿಗತ ಸಂಕಷ್ಠಿ ನಿರಂಜನ ಷಷ್ಠಿ!
ರ್ಷ ವೃಷ್ಠಿ ; ಧನ ಧಾನ್ಯ ಪುಷ್ಠಿ ನಿರಂಜನ ಷಷ್ಠಿ!
ರಣಿಗಿಷ್ತಿ, ಧರಣಿಗಿಷ್ಟಿ ನಿರಂಜನ ಷಷ್ಠಿ!
ರರಿಗಿಷ್ಟಿ, ಸುರರಿಗಿಷ್ಟಿ ನಿರಂಜನ ಷಷ್ಠಿ!
ಮೇಂದ್ರಾದಿ ದಿಕ್ಪಾಲಕರಿಷ್ಟಿ ನಿರಂಜನ ಷಷ್ಠಿ!
ಗಿರಿಧರ ಗೋಪಾಲಗಿದಿಷ್ಟಿ ನಿರಂಜನ ಷಷ್ಠಿ!
ದುರಾತ್ಮರುದ್ಧಾರಾಮೃತದಿಷ್ಟಿ ನಿರಂಜನ ಷಷ್ಠಿ!
ನಿಷ್ಠೆ, ನೇಮಾನುಷ್ಟಾನಗಳಿಷ್ಟಿ ನಿರಂಜನ ಷಷ್ಠಿ!
ರಂಗ ಶ್ರೀರಂಗರಿಗಿದು ಇಷ್ಟಿ ನಿರಂಜನ ಷಷ್ಠಿ!
ಪೇಷ್ಟಿ, ತಪೇಸ್ತಿ, ಪರಮೇಷ್ಟಿ ನಿರಂಜನ ಷಷ್ಠಿ!
“ನಗುರೋರಧಿಕಂ!” ಭಜನೇಷ್ಟಿ ನಿರಂಜನ ಷಷ್ಠಿ!
ಷ್ಟಿಷ್ಟಿ, ಸರ್ಪಾಭೀಷ್ತ ಸಂತುಷ್ಟಿ ನಿರಂಜನ ಷಷ್ಠಿ! (ಇ)
-ಷ್ಠಿ ನಿರಜನಾದಿತ್ಯ ದತ್ತೇಷ್ಟಿ ನಿರಂಜನ ಷಷ್ಠಿ!

ಎಡ, ಬಲ ನೋಡಬೇಡ! ಎಡರಿಗಂಜಬೇಡ!

(ಅ) -ಡಸುವುದೆಡರೊಳ್ಳೆದಕೆ ; ಅನುಮಾನ ಬೇಡ!
ರುತಿಹ ಮೋಡಗಳಿಗಾದಿತ್ಯ ಅಡ್ಡಿಮಾಡ!
ಕ್ಷಸ್ವಧರ್ಮದಲಿರಬೇಕವನಂತೆ ಗಾಢ!
ನೋಡುವವರ ಮೆಚ್ಚಿಸಲಿಕವನಲ್ಲ ಮೂಢ!
(ಅ) -ಡಗಿದರವ ಮೋಡಗಳೊಳಗೆ ಕರ್ಮ ಬಿಡ!
ಬೇಕು ಇವನಂತೆ ಕರ್ಮನಿಷ್ಠೆ ಕಂಗೆಡಬೇಡ!
(ಒ) -ಡಲ ಮೋಹಕಾಗಿ ಕರ್ಮವ ಬಿಟ್ಟು ಕೆಡಬೇಡ!
ಷ್ಟು ದಿನ ಕಷ್ಟಪಡಲೆಂಬಧೀರತೆ ಬೇಡ!
(ಅ) -ಡಚಣೆ ಬರಲಿ, ಸೇವೆ ಸಾಗಲಿ! ಮಾಡು ದೃಢ!
(ಅ) -ರಿಗಳಿಂದೇನಾಗುವುದಾದಿತ್ಯನ ಬಿಡಬೇಡ!
ಗಂಭೀರನಾಗವನ ಮಗನಾಗದಿರಬೇಡ!
ಗತ್ಪತಿಯಿವನೆಂಬರಿವಾಗದಿರಬೇಡ!
ಬೇಡಾದೇ ನೀಡುವವನಿವ ಸಂದೇಹವೇ ಬೇಡ!
ಮರುಧರ ನಿರಂಜನೇಶ್ವರನಿವ ಮೃಡ!!!

ಬೇಕಿರದ ಸುಖಿ ನಾನು ; ಬೇಕೆನುವ ದುಃಖಿ ನೀನು!

ಕಿರುಕುಳಕೊಳಗಾಗಿರುವಿ, ಬೇಕಿರುವ ನೀನು!
ಗಳೆಗಳಿರದೇನೂ ಬೇಕಿರದ ಸುಖಿ ನಾನು!
ಯೆಯಿಲ್ಲ ಗುರುದೇವನಿಗೆಂದಳುತಿಹೆ ನೀನು!
ಸುರಿಯುತಿದೆ ಸದಾ ದಯಾಸುಧೆಂದೆನ್ನುವೆ ನಾನು!
ಖಿನ್ನನಾಗಿರುವಿ ಬಹಳ ಬೇಕುಗಳಿಂದ ನೀನು!
ನಾನೇಕೆ ಬೇಡಲಿ? ನೀನಿತ್ತುದೆ ಸಾಕೆನುವೆ ನಾನು!
ನುಡಿಯಂತೆ ನಡೆಯದುದಕಾಗಿಹೆ ದುಃಖಿ ನೀನು!
ಬೇಕಾದಾಗ ಬೇಕಾದುದನೀವನೆಂಬ ಸುಖಿ ನಾನು!
ಕೆಟ್ಟೆ ನಾನೆಂಬಳುವಿನಲಿ ಮುಳುಗಿ, ದುಃಖಿ ನೀನು!
ನುಡಿ ಬೇಡೆಲ್ಲವನ ಪ್ರಸಾದವೆ

ಬ ಸುಖಿ ನಾನು!
ನವಾಸ, ಉಪವಾಸಗಳೇಕೆಂಬ ದುಃಖಿ ನೀನು!
ದುಃಖ, ಸುಖಗಲನಿಷ್ಟೆಂದಿರುವ ಸುಖಿ ನಾನು!
ಖಿಲವಾಗಿಹ ದುರ್ಬಲ ಮನದಿಂದ ದುಂಖಿ ನೀನು!
ನೀನೊಳಗಿರುತಿರಲೆನಗೇನೆಂಬ ಸುಖಿ ನಾನು!
ನುಡಿಯಂತೆ ನಡೆಯುತೊಂದಾಗಬೇಕು ನಾನು, ನೀನು!ನುಡಿ, ನಡೆ ನಿರಂಜನಾದಿತ್ಯನಂತಿರಿಸು ನೀನು!!!

ಹಿಂದಿನ ರೂಪವಿರಬೇಕೆಂಬೆನಯ್ಯಾ!

ದಿವಾಕರಾನುಗ್ರಹದಿಂದಪ್ಪುದಯ್ಯಾ!
ನಗಾಸೆ ಶ್ರೀಪಾದ ದರ್ಶನವಯ್ಯಾ!
ರೂಪಕತಿ ಮೋಹವಿರಬಾರದಯ್ಯಾ!
ತಿತನ ಪಾವನ ಮಾಡುಬೇಕಯ್ಯಾ!
ವಿಶ್ವಾಸ ನಿಶ್ಚಲವಗಿ ಇರಲಯ್ಯಾ!
ಕ್ಷಿಸುತಿರು ಸದಾ, ಪ್ರಾರ್ಥಿಪೆನಯ್ಯಾ!
ಬೇಡ ಭಯ ; ತಪಸು ಕಾಯುವುದಯ್ಯಾ!
ಕೆಂಗಾವಿ ವಸನ ನೀನುಡಬೇಕಯ್ಯಾ!
ಬೆತ್ತಲಾದಿತ್ಯನೆನಗಾದರ್ಶವಯ್ಯಾ!
ನ್ನಾಸೆ ವಿಜ್ಞಾಪಿಸಿಕೋಡಿಹೆನಯ್ಯಾ!!!
(ಅ) -ಯ್ಯಾನಾಜ್ಞೆಗಾನು ಸದಾ ಕಾದಿಹೆನಯ್ಯಾ!!!

ಮಂದಿರದಂದ ಮಾಧವನಿಂದ!

ದಿನದಿಂದ ದಿನಕರನಿಂದ!
ಜನಿಯಂದ ಚಂದ್ರಮನಿಂದ!
ದಂಡದಂದ ದಂಡಪಾಣಿಯಿಂದ!
ರ್ಶನದಂದಾ(ಆ)ತ್ಮ ಭಾವದಿಂದ!
ಮಾತಿನಂದ ಮನ ಶುಚಿಯಿಂದ!
ರಣಿಯಂದ ಮರಗಳಿಂದ!
ನದಂದ ವನಜಗಳಿಂದ!
ನಿಂತೆಡೆಯಂದ ಶ್ರೀಧರನಿಂದ!
ತ್ತನಂದ ನಿರಂಜನನಿಂದ!!!

ನಿರಂಜನ ಷಷ್ಟಿ ವಿಜಯೇಷ್ಟಿ!

ರಂಗ ಸಾರಂಗೇಷ್ತಿ ಸಂಘ ಪುಷ್ಟಿ!
ಜಗತ್ಕಲ್ಯಾಣೇಷ್ಟಿ ಭಾಗ್ಯ ವೃಷ್ತಿ!
ನತಜನರೇಷ್ಟಿ ಭೂತ ತುಸ್ಟಿ!
ಷಡ್ಭುಜನಾಪ್ತೇಷ್ಟಿ ಜಯ ದಿಷ್ಟಿ!
(ಇ) -ಷ್ಟಿ ವಿಮಲೇಷ್ಟಿ ನಿರಂಜನೇಷ್ಟಿ!!!

ಆದಿತ್ಯನನೊಲಿಸಿದಳು ಭಾರತದ ಕುಂತಿ!

ದಿಟವೋ, ಸಟೆಯೋ? ಕಳೆಯುವರಾರು ಈ ಭ್ರಾಂತಿ!
ತ್ಯಜಿಸಿದಳರ್ಕನರ್ಭಕನನಾ ಕನ್ಯೆ ಕುಂತಿ!
ಮಿಸಿದೊಡನಾಯ್ತು ಅವಳಿಗೆ ಪುತ್ರ ಪ್ರಾಪ್ತಿ!
ನೊ

ದು, ಬೇದು, ಬೆಂಡಾದವರಿಗೆ ಇಲ್ಲ ಈ ಶಾಂತಿ!
ಲಿಪಿ ಬ್ರಹ್ಮನದರಿಯದೆ ಅಳಿದಿದೆ ಸ್ಪೂರ್ತಿ!
ಸಿಥಿಲವಾಗುತಲಿದೆ ಅದರಿಂದಾಗಿ ಭಕ್ತಿ!
ಯೆದೋರಿ ನೀಡೆನಗದನರಿಯುವಾ ಶಕ್ತಿ!
(ಇ) -ಳುಹದಿರೀ ಶಂಕೆಯನು ನನಗೊಲ್ಲಾತ್ಮ ತೃಪ್ತಿ!
ಭಾರತ ಸುಳ್ಳೆನಲಾರೆ ; ಬೇಡೆನಗಾ ಕುಯುಕ್ತಿ!
ವಿಯ ಮೇಲಿರುವುದೆನಗೆ ಅಪಾರ ಪ್ರೀತಿ!
ರಣಿ ಕರುಣಾಮಯನು, ಆತ ಶಿವ ಶಕ್ತಿ!
ರ್ಶನಾನುಗ್ರಹವೇ ಕಳೆಯಬೇಕೀ ಅಶಾಂತಿ!
ಕುಂದನೆಣಿಸಬಾರದಯ್ಯಾ! ನಾನು ಶರಣಾರ್ತಿ!
ತಿರುಕ ನಿರಂಜನನಿಷ್ಟ, ನೀನೇ ಗುರುಮೂರ್ತಿ!!!

ಅರ್ಜುನನಾರ್ಜುನೆ ಕದನದಲಿ ವೆಚ್ಚ! (ಅ)

-ರ್ಜುನಗೆ ಪ್ರಸಾದವಾದರೂ ಮನಕಚ್ಚ!
ರಗೆ ಶಿವನಿತ್ತ ಪಾಶುಪತದಿಚ್ಛಾ!
ನಾರಾಯಣನ ಸಾರಥ್ಯ ಪರಮ ಉಚ್ಛಾ!
(ಆ) -ರ್ಜುನೆಯೆಲ್ಲಾ ಲೌಕಿಕವಾಗಿ ವ್ಯಥ್ಯ ವೆಚ್ಚ!
ನೆನೆ ಹರಿಯ, ಹರಿಗಾಗಿದುವೇ ಸ್ವಚ್ಛ!
ಳವಳ ಕಳೆವುದು ಸತ್ಸಂಘದಿಚ್ಛಾ!
ರ್ಪ, ದಂಭದ ಕರ್ಮದಿಂದ ಮನಕಚ್ಚ!
ಶ್ವರವಿದಿಹ ಸೌಖವೆಂಬುದೇ ಸ್ವಚ್ಛ!
ಣಿದರೂ ದುಡಿಯಬೇಕಿದಕಾಗಿಚ್ಛಾ!
ಲಿಂಗಭೇದವಿದಕೇನಿಲ್ಲವಿದು ಸವಚ್ಛ!
ವೆಗ್ಗಳದೀ ಭಾಗ್ಯಕಿರಬೇಕಾರ್ಜನೇಚ್ಛಾ! (ಆ)
-ಚ್ಚಳಿಯದ ನಿರಂಜನಾರ್ಜನೆ ಸ್ವಚ್ಛ!!!

ನಾನಗಸರ ಕಲ್ಲಾಗಿಹೆನಯ್ಯಾ!

ನಗೆ ಕೊಳೆ, ಮಳೆ ಇಲ್ಲವಯ್ಯಾ!
ಗನವನೀಕ್ಷಿಸುತಿಹೆನಯ್ಯಾ!
ರ್ವರಂಬರ ಶುಭ್ರ ನನ್ನಿಂದಯ್ಯಾ!
ಕ್ಷಣೆಯೆನಗೆ ಬೇಕಿಲ್ಲವಯ್ಯಾ!
(ಅ) -ಲ್ಲಾಡದೊಂದೆಡೆ ಬಿದ್ದಿರುವೆನಯ್ಯಾ!
ಗಿರಿಧರನಿಗಾಸನ ನಾನಯ್ಯಾ!
ಹೆಣ್ಣು, ಗಂಡೆಂಬ ಭೇದವಿಲ್ಲಯ್ಯಾ!
ನಗೆ ಫಲಾಪೇಕ್ಷೆಯಿಲ್ಲವಯ್ಯಾ!
(ಅ) -ಯ್ಯಾ, ನಿರಂಜನ ನಾನಾಗಿಹೆನಯ್ಯಾ!!

ಗಂಗಾನದಿ ನಾನಾಗಿಹೆನಯ್ಯಾ!

ಗಾಳವಿಕ್ಕುವರು ಮೀನಿಗಯ್ಯಾ!
ರ, ನಾರೀಷ್ಟ ತೀರ್ಥ ನಾನಯ್ಯಾ!
ದಿನ, ರಾತ್ರಿ ನಾನೆಚ್ಚರವಯ್ಯಾ!
ನಾರಾಯಣನಡಿ ಜನ್ಮವಯ್ಯಾ!
ನಾಶವಹುದು ಪಾಪೆನ್ನಿಂದಯ್ಯಾ!
ಗಿರೀಶಗಭಿಷೇಕ ನಾನಯ್ಯಾ!
ಹೆಣಗಳಭಿಮಾನಿ ನಾನಯ್ಯಾ!
ರರುತ್ತರಕ್ರಿಯೆಗಾನಯ್ಯಾ! (ಅ)
-ಯ್ಯಾ, ನಿರಂಜನ ನೀ ಗಂಗೆಯಯ್ಯಾ!!!

ಹನುಮನ ಬಾಲ ಬೆಳೆಯಿತು!

ನುಡಿ, ನಡೆ ಆಗ ಹಾಳಾಯಿತು!
ರ್ಕಟನಾರ್ಭಟ ರ್ಜೊರಾಯಿತು!
ಡುಕ ಅಸುರರಿಗುಂಟಾಯಿತು!
ಬಾಣ, ಬರ್ಜಿ ಬರಿದಾದಂತಾಯ್ತು!
ಕ್ಷ್ಯಸುರರಿಗರಿಯದಾಯ್ತು!
ಬೆದರಿಕೆ ಎಲ್ಲಾ ವ್ಯರ್ಥವಾಯ್ತು! (ಉ)
-ಳೆಗಾಲವರಿಗೆ ಇಲ್ಲದಂತಾಯ್ತು!
ಯಿದರಿಂದಾಂಜನೇಯ ಹೋಗಾಯ್ತು!
ತುಡುಗರ ಜೀವ ಪೆಚ್ಚಾಯ್ತು!!!

ದೇವ ದೇವ ಜೀವಭಾವದಿಂದ ಭವದ ಬಂಧನಾ!

ಭಾವ ಶುದ್ಧಿಯಿಂದ ಸಿದ್ಧಿ, ಬುದ್ಧಿಗಹುದು ರಂಜನಾ!
ಮಾತಾಪಿತರ ಪ್ರೀತಿಯಿಂದ ಬಂತು ಜಗದ ಜೀವನಾ!
ಮತ್ತೆ ಬೆಳೆಯಿತಿಂದ್ರಿಯಗಳ ಭಾವದಾ ವಾಸನಾ!
ಕಳೆಯಿತಿಂತು ಕಾಲವೆಲ್ಲ ತಳಮಳ ಯೌವನಾ!
ಗಾಳಿಗಿಟ್ಟ ದೀಪದಂಥಾ ಬಾಳು ಬಯಲ ಮೋಹನಾ!
ಸಾನುರಾಗದಿ ನಿನ್ನ ನಾಮ ಪಾನಗೈವ ಬಾಲನಾ!
ದೀನನಿವನ ನೀನು ಭಾನು ಕಾಯೋ ಶ್ರೀ ನಿರಂಜನಾ!!!

ನಾನೇ ರಾಧೆ! ನೀನೇ ಕೃಷಣ! ನಿನ್ನ ಬಿಡೆನಾ ರಾಧಾಕೃಷಣ !

ಎನ್ನಲೇನೂ ತಪ್ಪ ಕಾಣೆ, ನಿನ್ನಲೆಲ್ಲಾ ಒಪ್ಪಿಸಿಹೆನೋ!
ಬನ್ನಬಟ್ಟೆ ಬಹಳ ಜನ್ಮ, ನಿನ್ನಲೆನ್ನ ಬೆರೆಸೋರನ್ನಾ (ಕಣ್ಣಾ)!
ಅನ್ಯರೆನ್ನ ಕಾಯ್ವರಾರೋ? ಸನ್ನುತಾಂಗ ನಿರಂಜನಾಂಗ!
ಶ್ಯಾಮಲಾಂಗ ಕೋಮಲಾಂಗ, ಭಾಮಾರಂಗ, ಮೋಹನಾಂಗ!
ಪ್ರೇಮ ಸಂಘಾರಾಮ, ರಾಧಾಂಗ, ನಿರ್ಮಲಾಂಗ, ನಿರಂಜನಾಂಗ!!!

ರಚಿಸಿದನು ಪತಿದೇವ ಗೃಹವೊಂದಾನಂದದಿಂದ!

ಇಚ್ಛೆ! ನಿನ್ನಂತಿರಲಾಡಳಿತ, ನಿನ್ನಾನಂದವೆಂದ!
ಶುಚಿಯಾಗದನಿರಿಸಲಿಕೆ ಸವತಿಯನು ತಂದ!
ಮೆಚ್ಚಿದೆನು ನಿನಗೆಂದು ಪ್ರಾಣೇಶ್ವರಿಗವನಂದ!
ಸತಿಯರಿಬ್ಬರಲೆಮಗೆ ಮಕ್ಕಳು ಹತ್ತಾನಂದ!
ಪ್ರೀತಿಯಲೆಲ್ಲರೊಂದಾಗಿರಬೇಕೆಂದು ಆವನಂದ!
ಪತಿಯಾಜ್ಙೆ ನಡೆಯದಂತಾಯ್ತು ಕಾಲಗತಿಯಿಂದ!
ಸತಿಯರಿಬ್ಬರಲಿಲ್ಲವಾಯ್ತು ಒಮ್ಮತದ ಅಂದ!
ಮಕ್ಕಳಿಗೆ ಒಬ್ಬೊಬ್ಬರಿಗೆ ಆಯ್ತೊಂದೊಂದು ಆನಂದ!
ಸಕ್ಕರೆಯಂತಿರಬೇಕಾದಕ್ಕರೆ ಹೋಯ್ತಿದರಿಂದ!
ಚೊಕ್ಕಟದ ಪ್ರಾಣೇಶ್ವರಿಗಾಯ್ತು ಕಷ್ಟವದರಿಂದ!
ಅಕ್ಕನಿಗದರಿಂದಾಯ್ತು ದೂರ ಪತಿಯ ಸಂಬಂಧ!
ಯಜಮಾನನಿಗೆ ಆಯ್ತು ಅವನತಿಯಿದರಿಂದ!
ನಿಜಾನಂದ ಹೋಗಾಯ್ತವಗೆ ಜೀವನ ಭವಬಂಧ!
ಯಜಮಾನಿಯರಿಬ್ಬರೊಂದಾಗರೇಕಾಯ್ತದರಿಂದ!
ನಿಜ ಸುತರೊಪಿಗೆಯಿಂದಾಯ್ತು ನಿರಂಜನಾನಂದ!!!

ನಿರಂಜನಾಂದ ವನಮಾಲಾ!

ರಂಜಿಪನಿದರಿಂದ ಗೋಪಾಲಾ!
ಲಜಭವಗೆ ಜಾಜಿಮಾಲಾ!
ನಾರದನಿಗಿದು ನಾಮಮಾಲಾ!
ನಂಜುಂಡನಿಗಿದು ಬಿಲ್ವಮಾಲಾ!
ತ್ತನಿಗಿದು ತುಳಸಿ ಮಾಲಾ!
ನಜೆಗಿದು ಕಮಲ ಮಾಲಾ!
ಗಜೆಗಿದು ಚಂಪಕ ಮಾಲಾ!
ಮಾತಂಗಿಗಿದು ಮಲ್ಲಿಕಾಮಾಲೆ!
ಲಾಭವಿದೆಲ್ಲರ ಪ್ರೇಮ ಮಾಲಾ!!!

ದತ್ತಾತ್ರೇಯ, ಅತ್ರಿ ತನಯ! ಎತ್ತಿಕೊಳ್ಳಿವ ಅತ್ರಿ ತನಯ !

ಭಕ್ತಿಯನಿತ್ತು, ಶಕ್ತಿಯನಿತ್ತು, ಯುಕ್ತ ಸೇವೆ ಕೊಳ್ಳೋ ಗುರುವೆ!
ವಿರಕ್ತಿಯರಿಯೆ ಆಸಕ್ತಿಯನರಿಯೆನೆಲ್ಲಾ ಕತ್ತಲೆ!
ಕರುಣೆಯಿಂದ ಬೆಳಕನಿತ್ತು ಕಾಯಬೇಕು ನಿತ್ಯ ಗುರುವೆ!
ಯೋಗವರಿಯೆ, ತ್ಯಾಗವರಿಯೆ, ಎಲ್ಲಾ ಭಾಗ್ಯ ನೀನೇ ಗುರುವೆ!
ಬೇಗವೆನಗಾ ಯೋಗಭಾಗ್ಯವಿತ್ತು ನೀ ಕಾಯೋ ದತ್ತ ಗುರುವೇ!!!

ನಿತ್ಯ ಸುಖದ ನಿರಂಜನನಿಷ್ಟ ಜೀವನ!

ತ್ಯಜಿಸಬೇಕು ಮನದ ಸಂಕಲ್ಪ ಭಾವನ!
ಸುಖ ದುಃಖಗಳಿಗೆಲ್ಲಾ ಗುರುವೇ ಕಾರಣ!
ತಿಗೊಳಡಿರಲಿದರಿಂದ ನಿನ್ನ ಮನ!
ಯೆಯಿಂದೆಲ್ಲಾ ಸಾಗುತುದೆಂದು ನಂಬವನ!
ನಿಜವೆಂದಿದನನುಭವಿಸಾನಂದವನ!
ರಂಜನೆಯ ವಿಷಯದಾಸೆ ದುರ್ವಾಸನ!
ಯಿಸಬೇಕಿದನು! ನಂಬು ಗುರುವಚನ!
ಡೆವಾಗ ನುಡಿವಾಗಿರಬೇಕು ಮನನ!
ನಿತ್ಯ ನಿನಗೀಯುವನಾತ ಬೇಕಾದುದನ!
(ಅ) -ಷ್ಟರಲಿರಬೇಕು ತೃಪ್ತಿ ; ಇರಲಿ ಸಹನ!
ಜೀವ ಭಾವವಳಿಯಲಿಕಿರಲಿ ಭಜನ!
ರ್ತಮಾನ ಕರ್ತವ್ಯ ಮಾಡು ಪರಿಪಾಲನ!
ಮಿಸುತಿರು ಸದಾ ನಿರಂಜನಾದಿತ್ಯನ!!!

ಜಾಗ ಬದಲಾಯಿಸಲಾ?

ಮನೊಂದಿರಬೇಕೆಲಾ!
ದಲಿಸಿದರೇನೆಲಾ?
ಯೆಯೆಲ್ಲಿಲ್ಲಿದ್ದರೊಂದೆಲಾ!
ಲಾಲಿಪನೆಲ್ಲೆಡೆಯಲಾ!
ಯಿರಿಸಖಂಡ ಭಾವಲಾ!
ಲಹುವನವನಲಾ!
ಲಾಯಕ ನಿರಂಜನಲಾ!!!

ತ್ಯಾವವಿರುವಾಗ ಮರಳ ಒರೆಸಬೇಡ!

ಡವೆ ವಸ್ತುಗಳಿರೆ ಗುಡಿಸಲು ಬೇಡ!
ವಿಷಯದಾಸೆಯಿರೆ ಸನ್ಯಾಸಿಯಾಗಬೇಡ!
ರುಚಿ ಬೇಕಾಗಿರುವಾಗ ಭಿಕ್ಷುವೆನಬೇಡ!
ವಾಯು ಬೀಸುವಾಗ ಛತ್ರಿ ಬಿಡಿಸಬೇಡ!
ಂಟಲಡಗಿರುವಾಗ ಹಾಡಹೋಗಬೇಡ!
ಲಿನ ವಸನದಿಂದ ಸಭೆ ಸೇರಬೇಡ!
ಗಳೆ ಮಾತುಗಳೆಡೆ ಕಿವಿಗೊಡಬೇಡ! (ಅ)
-ಳತೆಗಳವಡದಂಬರವಳೆಯಬೇಡ!
ಳಗಿಹ ಗುರುವ ಮರೆತೊಂಡಾಡಬೇಡ!
ರೆಸಿಗೆಯಾಡುವಾಗ ಎಣ್ಣೆ ಸವರಬೇಡ!
ತ್ಸಂಘದಲಿರುವಾಗತ್ತಿತ್ತ ನೋಡಬೇಡ!
ಬೇಸರದಿಂದ ವಾಸುದೇವ ಸ್ಮರಣೆ ಬೇಡ!
(ಅ) -ಡವಿಯಲಬ್ಬರದೂಟ ನಿರಂಜನ ಮಾಡ!!!

ಹಿಟ್ಟು ಕೊಡಿಸಿ, ರೊಟ್ಟಿ ತಟ್ಟಿಸಿ, ಚೇಷ್ಟೆ ಬೇಡ!

ತನು ಕೊಡಿಸಿ, ಮನವಿಡಿಸಿ, ಬೇನೆ ಬೇಡ!
ವಸುಧೆಗಿಳ್ಸಿ, ಭಾರ ಹೊರಿಸಿ, ಜಾರಬೇಡ!
ಚಪಲ ಹೂಡಿ, ವಿಫಲಮಾಡಿ, ದೂಡಬೇಡ!
ನರನಮಾಡಿ, ನರಕ ನೀಡಿ, ನೂಕಬೇಡ!
ಮಂತ್ರವನಿತ್ತು, ತಂತ್ರದಿ ಕತ್ತು ಕೊಯ್ಯಬೇಡ!
ಧುರದಿ ನಿಂತು, ಧೈರ್ಯವನಿತ್ತು, ಸೋಲು ಬೇಡ!
ರಮಣನೆಂದು, ರಮಣಿಗಿಂದು ನೀಗಬೇಡ!
ಪಾವನವೆಂದು, ನಾಮವನಿಂದು ಸುಡಬೇಡ!
ನನ್ನವನೆಂದು, ನಿರಂಜನನೆಂದು ಭೇದಬೇಡ!!!

ಬಾಲಾದಿತ್ಯನಿಂದ ಪ್ರಥಮ ಸ್ವಾಗತ!

ಲಾಘವ, ಲಾಂಛನ ಹಚ್ಚಿದನು ದತ್ತ!
ದಿಗ್ಭ್ರಮೆಯಾಯಿತು ಮನಸು ಅತ್ತಿತ್ತ!
ತ್ಯಜಿಸು ಕುಟೀರವೆಂದಾಜ್ಙೆಯನಿತ್ತ!
ನಿಂತಂತೆ ಹೊರಡಲನುಖೂಲವಿತ್ತ!
ಶದಿಯಿಂದ ಮಳೆ ಸುರಿಸುತ್ತ!
ಪ್ರಯಾಣ ಬೆಳೆಯಿತು ಬೆಂಗಳೂರತ್ತ!
ರಥರಿಸಿತು ವಾಹನ ಜಾರುತ್ತ!
ತ್ತೆ ಗಾಡಿ ತಿರುಗಿತು ಮದ್ಸಾಸತ್ತ!
ಸ್ವಾಗತವಿತ್ತ ರವಿ ತಕ್ಕೋಲದತ್ತ!
ಭಸಿಯ ದರ್ಶನವಂದು ಪ್ರಶಸ್ಥ!
ನಯ ನಿರಂಜನನಿಲ್ಲಿರೆನುತ್ತ!!!

ಪರಮಾರ್ಥತಿಗೆ ದಾಕ್ಷಿಣ್ಯ ಅಡ್ದ!

ಗಳೆಗಾಗಿ ಕದ ತೆಗೆಯಬೇಡ!
ಮಾತಿಗಂಜಿ ನಿನ್ನ ಕರ್ಮ ಬಿಡಬೇಡ! (ಅ)
-ರ್ಥಕಾಗಿ ಇಷ್ಟ ದಾರಿಯ ತೊರೆಯಬೇಡ!
ತಿರುಕನಾದರೂ ಅನಾದರ ಬೇಡ!
ಗೆಲುವುದಕಾಗಿ ಹೊಲಸಾಗಬೇಡ!
ದಾನ ಪ್ರಶಂಸೆಗೋಸುಗ ಮಾಡಬೇಡ!
ಕ್ಷಿತಿಪತಿ ಬಂದರೂ ಉದ್ವೇಗ ಬೇಡ! (ಅ)
(ನ್ಯ) -ಣ್ಯರೌತಣಕ್ಕೆ ನಿತ್ಯಾನ್ನ ಬಿಡಬೇಡ!
ವರಿವರಿಗಾಗಳುತಿರಬೇ

ಡ! (ಅ)
-ಡ್ಡ ದಾಕ್ಷಿಣ್ಯ! ನಿರಂಜನಗಿದು ಬೇಡ!!!

ಮಕ್ಕಳ ಖುಶಿಗಕ್ಕರೆಯ ಋಷಿ ತಕ್ಕ ಗುರು! (ಉ)!

-ಕ್ಕಡದ ಗೌಡನಿವಗಂಜುವರು ದಾರಿಗರು! (ಉ)
-ಳಮೆಯಿವನಿಂದೆಂದಾದಿರಾಜರರಿತಿಹರು!
ಖುದಾ, ಕ್ರಿಸ್ತಾದಿಗಳೆಲ್ಲರಿವನತ್ಯಂತಾಪ್ಪರು!
ಶಿವಾನಂದರೆಂದರೆ ಇವನ ಪಂಚಪ್ರಾಣರು!
ಂಗಾ ಯಮುನೆಯರು ಇವನಿಂದ ಪಾವನರು! (ಉ)
-ಕ್ಕಬಾರದು ನದಿಗಳೆಂದಿವನ ಪ್ರಾರ್ಥಿಪರು!
ರೆಸಿಗೆಯಾಡಳುವವರಿವಗೆ ಶರಣರು!
ಮೇಂದ್ರಾದಿ ದೇವತೆಗಳಿವನಿಗೆ ವಶರು!
ಷಿ ಮುನಿಗಳೆಲ್ಲನುದಿನ ಕೊಂಡಾಡುವರು!
(ಶಿ) -ಷಿಷ್ಟಾಚಾರಗಳಿಗಿವನಾದರ್ಶವೆನ್ನುವರು!
ರಣಿ, ಧರಣಿಯ ಕಣ್ಮಣಿಯೆಂದನ್ನುವರು! (ಉ)
-ಕ್ಕದಿರೆ ನಿಜ ಸ್ಫೂರ್ತಿ, ಇವನ ಬೇಡುತಿಹರು!
ಗುಡಿ, ಗೋಪುರದಲಿವನ ಬಂಧಿಸದಿಹರು!
ರುಚ್ಯರುಚಿರದೀತ! ನಿರಂಜನಾದತ್ಯ ಗುರು!!!

ಗುರುರಾಜಪ್ಪಾ! ರುದ್ರಾತ್ಮಜಪ್ಪಾ ರಾಮಾನುಜಪ್ಪಾ! ಜಲಜ ಮಿತ್ರಪ್ಪಾ! !

ರುಚಿ ನೀನಪ್ಪಾ! ಚಿರವಿರಪ್ಪಾ! ನೀನು ರಂಗಪ್ಪಾ ನನ್ನ ರವಿಯಪ್ಪಾ!
ರಾಮನಾಮಪ್ಪಾ! ಮನ ಮಾಡಪ್ಪಾ! ನಾನಿನಗಪ್ಪಾ ಮಗನಹೆನಪ್ಪಾ!
ಪ ನೀನಪ್ಪಾ! ಪಥವಿದಪ್ಪಾ! ನೀನೇ ಬೇಕಪ್ಪಾ ನಮಿಪೆ ನಾನಪ್ಪಾ!
(ಅ)-ಪ್ಪಾ! ಬಾ, ನೀನಪ್ಪಾ! ಬಾಳಲಾರಪ್ಪಾ!
ರುದ್ದದೇವಪ್ಪಾ! ದ್ರವ್ಯವೆನ್ನಪ್ಪಾ! ದೇಹ ಮಾಯಪ್ಪಾ ವಶವಿರಿಸಪ್ಪಾ!
ದ್ರಾಂ ಆಕಾರಪ್ಪಾ! ಆರ್ತ ನಾನಪ್ಪಾ ಕಾಲ ಹೋಯ್ತಪ್ಪಾ! ರಕ್ಷಿಸು ನನ್ನಪ್ಪಾ!
(ಆ)-ತ್ಮ ಜೀವವಪ್ಪಾ! ಜೀವ ಶಿವಪ್ಪಾ! ವನಜಾಪ್ತಪ್ಪಾ ವರಿಸು ಕೂಸಪ್ಪಾ!
ರಾ ದೂರಪ್ಪಾ! ರಾಜ ರಾಜಪ್ಪಾ! ದೂರ ಬೇಡಪ್ಪಾ ರಮಿಸು ಬಾಳಪ್ಪಾ!
(ಅ)-ಪ್ಪಾ! ಅತೀತಪ್ಪಾ! ಅದ್ವಿತೀಯಪ್ಪಾ ರ್ತಿರ್ಥಾಹಾರಪ್ಪಾ! ತರಣಿರಪ್ಪಾ!
ರಾಧಾರಾಮಪ್ಪಾ! ಧಾತ್ರೀನಾಥಪ್ಪಾ! ರಾಮಾನುಜಪ್ಪಾ ಮರೆಯಬೇಡಪ್ಪಾ!
ಮಾಯಗಾರಪ್ಪಾ! ಯದು ರಾಯಪ್ಪಾ! ಗಾಡಗಾರಪ್ಪಾ ರವಿಯೇ ತಾನಪ್ಪಾ!
ನುತಿಪನಪ್ಪಾ! ತಿರುಕನಪ್ಪಾ! ಪತಿತನಪ್ಪಾ ನಂದನ ನಾನಪ್ಪಾ!
ಯ ನೀನಪ್ಪಾ! ಯಶ ನೀನಪ್ಪಾ! ನೀನೇ ನನ್ನಪ್ಪಾ ನನ್ನ ನೀ ಕಾಯಪ್ಪಾ!
(ಅ)-ಪ್ಪಾ! ಕುಮಾರಪ್ಪಾ! ಕುಲವೊಂದಪ್ಪಾ ಮಾನ್ಯ ಮಾಡಪ್ಪಾ! ರಜ ಹರಸಪ್ಪಾ!
ಗಾಧಾರಪ್ಪಾ! ಯಮಧರ್ಮಪ್ಪಾ! ನೀನೇ ಸೋಮಪ್ಪಾ ನರನೇ ಶಿವಪ್ಪಾ!
ಯ ನೀನಪ್ಪಾ ಜನಿಸನಪ್ಪಾ! ನಿಜಸೂನಪ್ಪಾ! ಸರ್ವೆ

ಶನಪ್ಪಾ! ನನಗೆ ನೀನಪ್ಪಾ!
ಮಿತ್ರ ನೀನಪ್ಪಾ! ತ್ರಯಂಬಕನಪ್ಪಾ! ನೀನೀಶ್ವರಪ್ಪಾ ನಂದಿವಾಹನಪ್ಪಾ!
ತ್ರಯ ಲೋಕಪ್ಪಾ! ಯಾದವೇಂದ್ರಪ್ಪಾ ಲೋಕನಾಥಪ್ಪಾ! ಕಂಸಾರಿ ನೀನಪ್ಪಾ!
(ಅ)-ಪ್ಪಾ! ಬಾ, ಭಾನಪ್ಪಾ! ಬಾಗುವೆನಪ್ಪಾ ಬಾಗಿ ನಾನಪ್ಪಾ (ಆ)ನು ನಿರಂಜನಪ್ಪಾ!!!

ಮತ್ಸ್ಯನಾಗಿ ನೀ ಕೊಂದೆ ತಮಸಾಸುರನ “ಗುರುಚಿತ್ಯವೆಂದು”!

ಕೂರ್ಮನಾಗಿ ನೀ ಹೊತ್ತೆ ಮಂಧರನ ಗುರುಚಿತ್ತವೆಂದು!
ವರಾಹನಾಗಿ ಕೊಂದೆ ಹಿರಣ್ಯಾಕ್ಷನ ಗುರುಚಿತ್ತವೆಂದು!
ನರಹರಿ ನೀ ಕೊಂದೆ ಹಿರಣ್ಯಕನ ಗುರುಚಿತ್ತವೆಂದು!
ವಾಮನನಾಗಿ ತುಳಿದೆ ನೀ ಬಳಿಯ ಗುರುಚಿತ್ತವೆಂದು!
ಪರಶುಧರ ನೀ ಕೊಂದೆ ಕ್ಷತ್ರಿಯರ ಗುರುಚಿತ್ತವೆಂದು!
ರಾಮನಾಗಿ ಕೊಂದೆ ರಾವಣೇಶ್ವರನ ಗುರುಚಿತ್ತವೆಂದು!
ಕೃಷ್ಣನಾಗಿ ಮರ್ದಿಸಿದೆ ಕಾಳಿಂಗನ ಗುರುಚಿತ್ತವೆಂದು!
ಬೌದ್ಧನಾಗಿ ಕೊಂದೆ ತ್ರಿಪುರಾಸುರರ ಗುರುಚಿತ್ತವೆಂದು!
ಕಲ್ಕ್ಯನಾಗಿ ನೀನು ಮಾಡಿದೆ ಪ್ರಳಯ ಗುರುಚಿತ್ತವೆಂದು!
ತಾಪಸನಾಗಾದೆ “ನಿರಂಜನಾದಿತ್ಯ” ಗುರುಚಿತ್ತವೆಂದು!

ದೇಹ ದೂರಾದರೂ ಸುಖವಾಗಿರು ಭಾವೈಕ್ಯದಿಂದ!

ತ್ತಿರವಿದ್ದರೂ ಸುಖವಿಲ್ಲ ಭಾವಭೇದದಿಂದ!
ದೂರ ಸೂರ್ಯನಿಂದೆಲ್ಲಾನಂದವನ ಪ್ರತಿಭೆಯಿಂದ!
ರಾಮನಾಜ್ಞಾಪಾಲನೆ ಮಾರುತಿಯ ವಿಜಯಾನಂದ!
ತ್ತನೊಳಗಿದ್ದರೂ ತತ್ತರಿಪರಜ್ಞಾನದಿಂದ!
ರೂಪವೀವ ಭಾವದಲಿ ಭಾವ ಬೆರೆತಾಗಾನಂದ!
ಸುಖಕೆ ಭಾವ, ಭಕ್ತಿ ಪಾಲನೆ ಮುಖ್ಯವದರಿಂದ!
ಡ್ಗದುಪಯೋಗವಾಗುವುದದರಾಘಾತದಿಂದ!
ವಾಸನೆ ಮೂಗಿಗಾಗುವುದೆಲ್ಲೋ ಇರುವ ಪೂವಿಂದ!
ಗಿರಿಧರಲ್ಲಿದ್ದರೂ ಶಾಂತಿಯಿಂದ!
ರುಚಿ ನಾಲಿಗೆಗಾರ್ದಊ ಅದು ಭಾವಾದಾರದಿಂದ!
ಭಾವ ಸಂಬಂಧ ಬೆಳೆದು ಬೆಳಗಬೇಕದರಿಂದ!
ವೈದ್ಯನೆಲ್ಲಿದ್ದರೇನುಪಕಾರನೌಷಧಿ ಇಂದ! (ಐ)
-ಕ್ಯಸುಕ ದೇಹ ಬಾವ ಬೇದವಳಿದರಾನಂದ! (ಇ)
-ದಿಂಬಿಲ್ಲದಾಪ್ತ ಸದಾ ಸಮೀಪಲ್ಲಿದ್ದೇನಾನಂದ?
ತ್ತ ನಿರಂಜನಾದಿತ್ಯ ರಸಾಯನವೈಕ್ಯಾನಂದ!!!

ಮಕ್ಕಳಾಕಳುಗಳೊಡನಾಟದಾಟವೆನಗಿಂದು! (ಉ)

-ಕ್ಕಬಾರದುದ್ವೇಗವೆಂದಿರುವೆ ಸಹಜದಲಿಂದು! (ಒ)
-ಳಾಂಗಣದೊಳಗಿಲ್ಲೇನೇನೂ ಕೊಳೆಗಳಿಲ್ಲವಿಂದು!
ರುಣೆ ಇದು ಬಹಳನುಕೂಲವೆಂದಿಹೆನಿಂದು! (ಉ)
-ಳುವಾಳುಳುತಿಹೆನೆನ್ನಲದಲಾನಂದದಿಂದು!
ಗಮಣಿ ಬರದಿರುವುದೇ ಕೊರತೆಯಿಂದು! (ಒ)
ಳೊಳಗಾಗಿತಿದೆ ಖೇದವದರಿಂದಯ್ಯ ಬಾರೆಂದು! (ಒ)
-ಡನಾಟದಾನಂದಕಾವನ ಪ್ರಾರ್ಥಿಪೆನಾನಿಂದು!
ನಾನಿದನೊರೆಯುತಿರುವಾಗ ರವಿ ಬಂದನಿಂದು! (ಓ)
-ಟವಾಗಲೇ! ಅಡಗಿದನು ಮೋಡಗಳೊಳಗಿಂದು!
ದಾರಿಕಾಣದಾದೆನು ಮತ್ತೆ ಉತ್ಸಾಹವಿಲ್ಲದಿಂದು! (ಓ)
-ಟದಾಟಡಗಾಟಗಳೆಂಬವನದೀ ಪಾಠವಿಂದು!
ವೆಚ್ಚಮಾಡೆನು ವ್ಯರ್ಥವಾಗಿದನು ನಾನು ಎಂದೆಂದೂ!
ಂಬಿಹೆನಾತ ಮಾಡುವುದೆಲ್ಲಾ ನನ್ನೊಳ್ಳೆದಕೆಂದು!
ಗಿಂಡಿ ನೀರಿಗಾಧಾರವೆಂದು ಹೇಳುವುದೇನಿದೆಂದು!
ದುರಿತದೂರ ನಿರಂಜನಾದಿತ್ಯಾ! ಕಾದಿಹೆನಿಂದು!!!

ಜನವೇನೆಂದರೇನು? ನನಗಿರಲಿದೇ ಹುಚ್ಚು!

ನಗೆ ಜನ್ಮವಿತ್ತವನೇ ನನಗತಿ ಹೆಚ್ಚು!
ವೇಷಭೂಷಣಗಳಾಸೆಯೆನಗಿಲ್ಲಾ ಹುಚ್ಚು!
ನೆಂಟ ಭಂಟನಾದೆನ್ನಯ್ಯ ನನಗತ್ಯಂತ ಹೆಚ್ಚು!
ನ, ಧನ ಕೊಡಿಡಬೇಕೆಂದೆನಗಿಲ್ಲಾ ಹುಚ್ಚು!
ರೇಚಕ ಪೂರಕದೆನ್ನಲಾಡುವೆನ್ನಯ್ಯ ಹೆಚ್ಚು!
ನುತಿ ಸ್ತುತಿಗಳಿಂದ ಗತಿಗೇಡು! ಬೇಡಾ ಹುಚ್ಚು!
“ನ ಗುರೋರಧಿಕಂ” ಭಜನೆಯೇ ನನಗೆ ಹೆಚ್ಚು!
ರ, ನಾರಿಯರ ಕೂಡಿ ಕುಣಿತ ಸಾಕಾ ಹುಚ್ಚು!
ಗಿರಿರಾಜಗುರು ಶಿವಾನಂದನೆನಗೆ ಹೆಚ್ಚು!
ಮಿಸೆನಿನ್ಯಾರಲ್ಲೂ! ನನಗೇಕಿತರ ಹುಚ್ಚು!
ಲಿಪಿಗ ಗೋಚರನಾದಾದಿತ್ಯನೆನಗೆ ಹೆಚ್ಚು!
ದೇ

ಅ, ದೇವಿಯರೆಂಬ ಭೇದವೆನಗಿಲ್ಲಾ ಹುಚ್ಚು!
ಹುಟ್ಟು ಸಾವುಗಳ ಕಟ್ಟಿಲ್ಲದೆನ್ನ ಗುರು ಹೆಚ್ಚು! (ಹು)
-ಚ್ಚು! ದತ್ತ ನಿರಂಜನಾದಿತ್ಯ ತಾನಾಗಿಹಾ ಹುಚ್ಚು!!!

ಅಮ್ಮಾ!, ವಿಮಲ, ವಿಜಯ, ನಾಗಮ್ಮಾ! (ಅ)

-ಮ್ಮಾ! ಜಯ, ಕಾಮಾಕ್ಷಿ, ಭಿಕ್ಷೆ ಹಾಕಮ್ಮಾ!
ವಿಶಾಲ, ಸುಮತಿ, ಶಕುಂತಲಮ್ಮಾ!
ಲಗಿರುವಿರೇಕೆ ಸುಂದರಮ್ಮಾ!
ಕ್ಷ್ಮಮ್ಮ, ದೇವಮ್ಮ, ಸರಸ್ವತಮ್ಮಾ!
ವಿಶಾಂತಿ ಸಾಕಿನ್ನು ಎದ್ದೇಳಿರಮ್ಮಾ!
ಗಲವಿನ್ನೂ ನಿಂತಿಲ್ಲವೇನಮ್ಮಾ!
ತಿಪತಿ ಅತ್ರಿಯ ತನಯಮ್ಮಾ!
ನಾಳೆ, ನೆನ್ನೆ ಅನ್ನದೆ ನೀಡಿರಮ್ಮಾ!
ಂಟಲೊಣಗಿ ಹಸಿದಿಹೆನಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯ ನಿಮ್ಮವಮ್ಮಾ!!!

ನಡೆಸಿದಂತೆ ನಡೆಯುತಿಹೆ! (ಎ)

-ಡೆಬಿಡದೆನ್ನ ನಾ ನೋಡುತಿಹೆ!
ಸಿರಿತನವ ಬಯಸದಿಹೆ!
ದಂಡನೆಗೆಡೆಗೊಡದಂತಿಹೆ!
ತೆರೆಮರೆಯಾಗಿ ಬಾಳಿತಿಹೆ!
ನ್ನವ ಗುರುವೆಂದು ನಂಬಿಹೆ! (ಎ)
ಡೆ ದೊರೆತರೆ ಜಪಿಸುತಿಹೆ!
ಯುಕ್ತಿಯಿಲ್ಲದ ಭಕ್ತಿಯಲಿಹೆ!
ತಿಳಿಯೆನು ನಾನೇನನೆಂದಿಹೆ!
ಹೆತ್ತವ ನಿರಂಜನೆಂದಿಹೆ!!

ಆಗಬೇಕಾದುದಾಯಿತು! ಆಗುತಿದೆ! ಆಗಲಿದೆ!

ತಿಸಿದುದಕಾಗೀಗ ಚಿಂತಿಸಿ ಫಲವೇನಿದೆ!
ಬೇಕು, ಬೇಡೆಂದರೆ ನಮ್ಮಿಚ್ಛೆಯೇನು ನಡೆಯುತಿದೆ?
ಕಾಲಕಾಲಕ್ಕೇನಾಗಬೇಕೋ ಅದೇ ಆಗುತಿದೆ!
ದುಸ್ತರವಿದರ ಕಾರಣ ತಿಳಿಯದಂತಾಗಿದೆ!
ದಾರಿ, ಬಂದುದಾನಂದದಿ ಸ್ವೀಕರಿಸುವುದಾಗಿದೆ!
ಯಿನ್ನೇನೂ ಉಪಾಯವಿದಕೆ ತೋಚದಂತೆ ಆಗಿದೆ!
ತುದಿ, ಮೊದಲೆಲ್ಲಿ? ಮನದ ಭಾಂತಿ ಬಹಳಾಗಿದೆ!
ಗವುದೆಲ್ಲಾಗುತಿರಲೆಂದು ಇರಬೇಕಾಗಿದೆ!
ಗುರಿಯಾಗಿರುವ ಚಿರಶಾಂತಿಗೀ ಕೃಪೆಯಾಗಿದೆ!
ತಿರಿರಿಗಿ ಮನಕರಗಿ ಮಾಡುವುದೇನಿದೆ?
ದೆವ್ವ ಕಾಟಗಳೆಂಬ ಭ್ರಮೆಯ ಬಿಡಬೇಕಾಗಿದೆ!
ನಂದವಿದು ಗುರುವಿಗೆಂದರಿಯಬೇಕಾಗಿದೆ!
ಮನಾಗಮನ ನಿರ್ಗಮನ ಆವನದಾಗಿದೆ!
ಲಿಂಗ ದೇಹದಲವನ ಆಟ ಬಹಳವಾಗಿದೆ! (ಎ)
-ದೆಗುಂದದೆ ನಿರಂಜನನ ನೆನೆಯಬೇಕಾಗಿದೆ!!!

ದೀನರ ಮೇಲೆ ವಿಶ್ವಾಸವಿರಲಿ

ನ್ನ ಧ್ಯಾನ ಮಿಂಚಿನಂತಿರಲಿ!
ನ್ನವಿದ ಕಾಪಾಡಿಕೊಳಲಿ!
ಮೇಲಿನ ಭಾರವನಿಗಿರಲಿ!
ಲೆಃಖಾಚಾರ ಶುದ್ಧವಾಗಿರಲಿ!
ವಿರಾಮ ನಾಮಕ್ಕಿರದಿರಲಿ!
ಶ್ವಾಸೋಚ್ಛ್ವಾಸದಲಿ ತುಂಬಿರಲಿ!
ದಾನಂದನುಭವವಾಗಲಿ!
ವಿಶ್ವಾಸ ಫಲ ಅರಿವಾಗಲಿ!
ವಿ ಕಿರಣ ತುಂಬುತಿರಲಿ!
ಲಿಪಿ ನಿರಂಜನಗಾಗಿರಲಿ!!!

ದತ್ತ ಗುರುಚಿತ್ತದಂತೆನ್ನ ನಿತ್ಯ ದಿವ್ಯಜೀವನ! (ಅ)

-ತ್ತ ಇತ್ತ ಚಲಿಸದಂಥಾ ಮನದ ಧ್ಯಾನ ಜೀವನ!
ಗುನಾವಗುಣಗಳೆಣಿಸದ ಶುದ್ಧ ಜೀವನ!
ರುಚಿ, ಅರುಚಿಗಳರಿಯದ ತ್ಯಾಗಜೀವನ!
ಚಿಂತೆ, ಬೋತೆಗಳೇನೂ ಇರದ ಶಾಂತಿ ಜೀವನ! (ಅ)
-ತ್ತ, ಸುತ್ತ ಸುತ್ತಿ ಬೇಸರಿಸದ ತೃಪ್ತಿ ಜೀವನ!
ದಂಡವಿರದ, ಬಂಧ ಹರಿದ ಹಂಸ ಜೀವನ!
ತೆಗೆದು ವಸ್ತ್ರ ದುರವೆಸೆದ ಯೋಗಿ ಜೀವನ! (ಅ)
-ನ್ನ, ಪಾನಕನಾಸಕ್ತಿ ತೋರಿದ ತಪೋ ಜೀವನ!
ನಿತ್ಯದಲಾದಿತ್ಯನ ಬೆರೆತ ಭಕ್ತಿ ಜೀವನ!
ತ್ಯಜಿಸಿ ದೇಹ, ಮೋಹವ ಸುಟ್ಟ ಮುಕ್ತಿ ಜೀವನ!
ದಿನ, ರಾತ್ರಿ ವಿಚಾರದಲಿದ್ದ ಶಕ್ತಿ ಜೀವನ!
ವ್ಯಹಾರಗಳೆಲ್ಲವ ಬಿಟ್ಟ ಭಿಕ್ಷು ಜೀವನ!
ಜೀವಬಾವವನು ಮರೆತಿದ್ದ ನಿಜ ಜೀವನ!
ರುಣೇಂದ್ರಾದಿಗಳ ನೆನೆದ ಪ್ರೇಮ ಜೀವನ!
ಮೋ ನಿರಂಜನಾದಿತ್ಯನೆಂದ ದತ್ತ ಜೀವನ!!!

ಕಣ್ಣು ನಿನ್ನಿಷ್ಟ ಮೂರ್ತಿಯನೆಲ್ಲರೆಲ್ಲೆಲ್ಲೂ ನೋಡಲಿ!

ಕಿವಿಯವನುಪದೇಶ ಗುಣ ಗಾನಗಳ ಕೇಳಿರಲಿ!
ಮೂಗವನ ಪಾದಧೂಳಿಯ ವಾಸನೆಯಾಘ್ರಾಣಿಸಲಿ!
ನಾಲಿಗೆಯವನ ಪಾದ ರ್ತಿರ್ಥದ ರುಚಿ ನೋಡತಿರಲಿ!
ದೇಹವನ ಪಾದಕ್ಕೆ ಸಾಷ್ಟಾಂಗ ಪ್ರಣಾಮ ಮಾಡುತಿರಲಿ!
ಬಾಯಿಯವನುಚ್ಚಿಷ್ಟ ಭುಂಜಿಸಿ, ನಾಮ ಭಜಿಸುತಿರಲಿ!
ಕರಗಳವನುಪಚಾರ, ಪಾದ ಸೇವೆಗಳ ಮಡಲಿ!
ಚರಣಗಳವನಾಶ್ರಮಕೆ ಪ್ರದಕ್ಷಿಣೆ ಮಾಡಿರಲಿ!
ಪಾಯು, ಗುಹ್ಯಗಳು ದೇಹದ ಮಲಿನ ಕಳೆಯುತಿರಲಿ!
ಮನವೆಲ್ಲರ ಸಹಾಯಕನಾಗಿ ನಿರಂಜನನಾಗಲಿ!!!

ದತ್ತ ಮಂತ್ರ ಜಗಕೊಂದು “ರಕ್ಷಾಬಂಧ”! (ಅ)

ತ್ತರೆ, ಬೇಸತ್ತರೆ ಇದು ಶಾಂತಿ ಬಂಧ!
ಮಂಕು, ಶಂಕೆಗಳಿಗಿದು ಅಗ್ನಿ ಬಂಧ!
ತ್ರಯವಸ್ಥೆಗಳಲಿದು ಪ್ರಾಣ ಬಂಧ!
ಗಳಗಳಲ್ಲಿ ಇದು ಜಯ ಬಂಧ!
ತಿ, ಸ್ಥಿತಿಗೆಟ್ಟರಿದು ಮತಿ ಬಂಧ!
ಕೊಂಡಾಡಿಸಿಕೊಳ್ಳಲಿದು ಪ್ರೀತಿ ಬಂಧ!
ದುಷ್ಟ ಕಾಟಗಳಿಗಿದು ತಡೆ ಬಂಧ!
ಸ ವಿಷಹರಕಿದು ಖಗ ಬಂಧ!
ಕ್ಷಾಮ ಡಾಮರದಲಿದು ವೃಷ್ಟಿ ಬಂಧ!
ಬಂಧ ವಿಮೋಚನೆಗಿದು ಜ್ಞಾನ ಬಂಧ!
ರ್ಮ ನಿರಂಜನಗಿದು ಸರ್ವ ಬಂಧ!!!

ನಾನೇ ರಾಜಾಧಿರಾಜ! ನಾನಿರುವ ಮನೆ ನಾಯಿಗಳೆಲ್ಲಕೂ ಮನೆ!

ನೇತ್ರಮ್ಮ, ಮೂಗಮ್ಮ, ಬಾಯಮ್ಮ, ಕಾಲಮ್ಮ ಕೆಳಮ್ಮರಿಗೆಲ್ಲ ಏ ಮನೆ!
ರಾಜಭವನದೆಲ್ಲಾ ಕೆಲಸಮಾಡುವ ಕರಾಂಬುಜಮ್ಮಗೀ ಮನೆ!
ಜಾತಿಭೇದವಿಲ್ಲದೆಲ್ಲರ ರುಚಿಯೂಟಕ್ಕಿದು ಪ್ರೇಮ ಜಿಹ್ವಾ ಮನೆ!
ಧಿ

ರನೆನಗೆ ಸ್ಪರ್ಶಾನಂದವೀವ ಚರ್ಮರಂಗಿಗಾಧಾರವೀಮನೆ!
ರಾತ್ರಿ ಹಗಲೆನ್ನದೆಲ್ಲಾ ಕೊಳೆ ತೆಗೆವ ಪ್ರಿಯ ಗುಹ್ಯ ಮೂಲಾಮನೆ!
ಗಳಗಳೇಳದಂತಾಳುವ ಮನೋರಂಜನಿಗಿದು ಅರಮನೆ!
ನಾಯಿ, ಬೆಕ್ಕುಗಳಿಗೆಲ್ಲಾ ಸದಾ ಕದ ತೆರೆದಿರುವಿದೆನ್ನ ಮನೆ!
ನಿಶಿ, ದಿನವೆನ್ನದಾಗಂತು ಕರಿಗಾದರವೀಯುವುದೆನ್ನ ಮನೆ!
ರುಧಿರ, ಮಾಂಸದ ಮುದ್ದೆ ಸದಾ ಅಲ್ಲಲ್ಲಿ ಬಿದ್ದಿರುವಿದೆನ್ನ ಮನೆ!
ಡವೆ ವಸ್ತುಗಳೆಲ್ಲಾ ಸದಾ ಕೊಳ್ಳೆಯಾಗಲಿದು ಒಳ್ಳೆಯ ಮನೆ!
ನೋ ಮಥನಮಾಡಿ, ಶಾಂತಿ ಪಡೆಯಲಿದೆನ್ನ ತಪಸಿನ ಮನೆ!
ನೆರೆಹೊರೆಯವರ ಭಜನೆಗವಕಾಶವೀಯುವುದೆನ್ನ ಮನೆ!
ನಾಗಶಯನ, ನಾರಾಯಣ, ಸತತಯೊಂಗಕ್ಷೇಮ ನೋಡುವ ಮನೆ!
ಯಿದು ಗಾಳಿ, ಮಳೆ, ಬಿಸಿಲಿಗೆ ಸದಾ ಸುಸ್ವಾಗತವೆಂಬೆನ್ನ ಮನೆ!
ತಿ, ಸ್ಥಿತಿ, ಭೇದ ಗಂಡು, ಹೆಣ್ಣುಗಳಿಗಿರದಂತಿರುವುದೀ ಮನೆ! (ಎ)
-ಳೆದಾಟ, ಬಡಿದಾತಗಳಿಗೆಡೆಯಿಲ್ಲದಿರುವುದು ನನ್ನ ಮನೆ! (ಎ)
-ಲ್ಲರ ಚಿರಕಲ್ಲಾಣಕಾಗಿಯೇ ಭದ್ರವಾಗಿ ನಿಂತಿರುವುದೀ ಮನೆ!
ಕೂಗಾಟ ರೇಗಾಟಗಳಿಲ್ಲದೆ ಮೌನವಾಗಿರುವುದು ನನ್ನ ಮನೆ!
ಕ್ಕಳೆಲ್ಲಾ ಅಕ್ಕರೆಯಿಂದ ಸಕ್ಕರೆ ಹಂಚುವ ಇದು ನನ್ನ ಮನೆ!
ನೆಗಡಿ, ಜ್ವರಗಳಿರದೇ“ನಿರಂಜನಾದಿತ್ಯ” ನಿರುವ ಮನೆ!!!

ಭಾಷಾ ಬದಲಾದರೂ, ಭಾವ, ಗುಣ ಬೇರಾಗದಮ್ಮಾ!

-ಷಾಢ ಭಾಷಾ ಭೇದದಿಂದ ಕಾರ್ತಿಕವಾಗದಮ್ಮಾ!
ದಲಾಸೆ ನಿಜ ಧ್ಯಾನಕಡ್ಡಿ ಮಾಡುವುದಮ್ಮಾ!
ತ್ತನಿತ್ತ ಭಾಷೆಯಲಿ ನಿನ್ನ ಭಾವ ತೋರಮ್ಮಾ!
ಲಾಭವಿದರಿ

ದಾಗಿ ಗುರಿಯ ಸೇರುವಿಯಮ್ಮಾ!
ರಿದ್ರನಿಗಾದರೂ ದಾರಿಯೊಂದಲ್ಲವೇನಮ್ಮಾ? (ಆ)
-ರೂ ವಿವಿಧ ವೇಶದಿಂದ ವ್ಯಕ್ತಿ ಬೇರಾಗಿಲ್ಲಮ್ಮಾ!
ಭಾಷಾ ಭೇದದಿಂದ ಭಾನು ಬೆಂರಾಗಿಹನೇನಮ್ಮಾ!
ರ್ತಮಾನ ಕರ್ಮ ನಿಜಗುರಿಗಾಗಿರಲಮ್ಮಾ!
ಗುರುದೇವನುಪದೇಶದಂತೆ ಸದಾ ಇರಮ್ಮಾ! (ಅ)
-ಣಕಿಸಿ ಯಾರೇನಾಉ ಲಾಭ ಪಡೆಯಲಾರರಮ್ಮಾ!
ಬೇಕಾದುದನೆಲ್ಲಾ ಬೇಕಾದಾಗೀವನವನಮ್ಮಾ!
ರಾತ್ರಿ, ಹಗಲೆನ್ನದೆ ಸದ್ಗುರು ಕಾಯುವನಮ್ಮಾ!
ರ್ವದ ಭಾಷಾ ಪಾಂಡಿತ್ಯ ಪ್ರಯೋಜನವಿಲ್ಲಮ್ಮಾ!
ಯೆಯವನದಾಗಲಿಕೆ ಭಾವ ಮುಖ್ಯವಮ್ಮಾ! (ಅ)
-ಮ್ಮಾ! ಭಾಷಾ ಭ್ರಾಂತಿ ನಿರಂಜನಾದಿತ್ಯಗಿಲ್ಲಮ್ಮಾ!

ಅನಂತ ಭಾವದನಂತ ರೂಪಾನಂತ ನಾಮಿ!

ನಂಬೀ ಜಗಕೊಬ್ಬನೇ ದೇವ ಸರ್ವಾಂತರ್ಯಾಮಿ!
ರತರದ ಭಾವದಿಂದಾದ ವಿಶ್ವಪ್ರೇಮಿ!
ಭಾವ, ರೂಪಗಳಿಂದವನಾದನಂತ ನಾಮಿ! (ಇ)
-ವನೊಂದೆಡೇಕ ರೂಪದಲಿರದಾಪ್ತ ಸ್ವಾಮಿ!
ರ್ಶನ ಕೊಡುವನು ಭಾವನಾನುಸಾರ ನಾಮಿ!
ನಂದಿ ಏಶ್ವರನಾದನೀಶರ ಗುಣ ಪ್ರೇಮಿ!
ರಣಿ ದಿನಕರನಾದನಾ ಗುಣ ನಾಮಿ!
ರೂಪವೊಂದನಂತನಾಗುವುದಾ ಗುಣ ನಾಮಿ!
ಪಾಡು ಪಡುತಿಹನಜ್ಞಾನಿ ದರ್ಶನ ಪ್ರೇಮಿ!
ನಂದಕಂದನುಪದೇಶ ಗೀತೆಯಿದೇ ಸ್ವಾಮಿ!
ನ್ನ ವಿಶ್ವರೂಪ ತೋರಿದಾತ್ಮ ಭಾವ ಪ್ರೇಮಿ!
“ನಾಮ” ಹನುಮನ “ರಾಮ” ಮಾಡಿತಿಂತು ನಾಮಿ!
ಮಿತ್ರ ನಿರಂಜನಾದಿತ್ಯಾ ಯೋಗಾ ಗುಣ ಸ್ವಾಮಿ!!!

ಪಂಚ ಕನ್ಯಾ ಗುರುಸೇವೆ

ಅಶನ, ಪಾನ ಬೇಡ ಬಾಯಮ್ಮ!
ಪುರಾಣ ಸಾಕು ಈಗ ನಾಲ್ಗಮ್ಮ!
ಮೇಲಿನ ಬಟ್ಟೆ ತೆಗೆ ತೊಗ್ಲಮ್ಮ!
ಲಂಗೋಟಿ ಕಟ್ಟು ಗಟ್ಟಿ ಗುದಮ್ಮ!
ಸಡಿಲು ಮಾಡಾಬೇಡ ಲಿಂಗಮ್ಮ!
ನಿರಂಜನಾದಿತ್ಯ ನಿಮ್ಮವಮ್ಮಾ!!!

ನಿರಂಜನಾದಿತ್ಯ ಪಂಚಾಂಗಯೋಗ

ಆದಿತ್ಯ ಬಂದ ನಡ್ಯೋ ಕಾಲಪ್ಪ!
ಎದಿರು ನಿಂದು ನಮ್ಸೋ ಕರಪ್ಪ!
ತೆರೆದು ನೇತ್ರ ನೋಡೋ ಕಣ್ನಪ್ಪ!
ಉಸಿರು ಕಟ್ಟಿ ಜಪ್ಸೋ ಮೂಗಪ್ಪ!
ನಿನಾದ ಕೇಳಿ ಲಯ್ಸೋ ಕರ್ಣಪ್ಪ!
ನಿಮ್ಮಪ್ಪ, ನಿರಂಜನಾದಿತ್ಯಪ್ಪ!!!

ಆದಿತ್ಯನೇನೆನಗಿತ್ತ? (ಅ)

-ದಿದೊಂದೆಂದುತ್ತರವಿತ್ತ! (ಅ)
-ತ್ಯಗತ್ಯದಾರೋಗ್ಯವಿತ್ತ!
ನೇಮಾನುಷ್ಠಾನವಿತ್ತ!
ನೆನೆವಾವಕಾಶವಿತ್ತ!
ಂಬಿಸಿ ನೆಮ್ಮದಿ ಇತ್ತ!
ಗಿರಿಯಂಥಾ ಮನವಿತ್ತ! (ಅ)
-ತ್ತ ರಿಲ್ಲದಾನಂದವಿತ್ತ!!!

ಅವಿವೇಕಿಯಪಚಾರವೆನಗುಪಕಾರ!

ವಿಷಯೇಂದ್ರಿಯಗಳೊಡನಾಟ ಅಪಚಾರ!
ವೇದ್ಯವಾದರೆ ಇದೊಂದು ಮಹದುಪಕಾರ!
ಕಿರುಕುಳದ ಜಗದಿಂದೆಲ್ಲಾ ಅಪಚಾರ!
ಮ, ನಿಯಮವಿದಕೆ ಬಹಳುಪಕಾರ!
ರಮಾರ್ಥವರಿಯದಾಗಿದೆ ಅಪಚಾರ!
ಚಾಗಿಯಾಗುವುದಿದಕೆ ಅತಿ ಉಪಕಾರ!
ಸದೂಟದಾಸೆ ಮಡುವುದು ಅಪಚಾರ! (ಠಾ)
-ವೆನಗಿಹುದು ಗುರುಕರುಣೆಯುಪಕಾರ!
ನನ್ಯಾರಿನ್ನೇನು ಮಾಡುವರಪಚಾರ?
ಗುಡಿ, ಗುಡಾರಗಳಂಟಿಲ್ಲದಾಯ್ತುಪಕಾರ!
ಡಲಾರೆ ನಾನದಕಿಷ್ತ! ಅದಪಚಾರ!
ಕಾಲ ಕಳೆಯುವುದಿಂತೆನಗೆ ಉಪಕಾರ!
ಕ್ಷಕ ನಿರಂಜನದಿತ್ಯಾಗದಪಚಾರ!!!

ಜಪ, ತಪವಿರುವುದು ನಿತ್ಯ ಶಾಂತಿಗಾಗಿ!

ಡಲೇಕೆ ದುಃಖ ಪದಾರ್ಥಾಪಹಾರಕಾಗಿ?
ಳಮಳವೇಕೆಂದಿಹ ಗುರುವಿದಕಾಗಿ!
ತಿತರಾದರು ಕದ್ದು, ಆಸೆ ಬರಲಾಗಿ!
ವಿಷಬೀಜ ಬಿತ್ತಿದರು ದುರಾಸೆಯಿಂದಾಗಿ!
ರುಜುಮಾರ್ಗ ಬಿಡದಿರಬೇಕು ಅದಕಾಗಿ!
ವುಪೇಕ್ಷೆಯೊಂದೇ ಇರಲಿ ಸದಾ ಮಾಯೆಗಾಗಿ!
ದುರ್ವಿಷಯಾಸಕ್ತಿ ಸಾಯಲಿ ನಿರ್ಮೂಲವಾಗಿ!
ನಿನಗೇನಾಯ್ತು ಸುಖ, ಅದೆಲ್ಲಾ ಇರಲಾಗಿ!
ತ್ಯಜಿಸಾ ಚಿಂತೆ! ನಾನಿರುವೆನೆಲ್ಲವೂ ಆಗಿ!
ಶಾಂತಿ ಜೀವನಕಿರಬೇಕು ನಿರ್ಮೊ

ಹಿಯಾಗಿ!
ತಿಳಿದೆನ್ನಾದರ್ಶದಂತೆ ನೀನಿರೆನಗಾಗಿ!
ಗಾಳಿಗೋಪುರದಾಸೆ ಹೋಗುತಿದೆ ಹಾಳಾಗಿ!
ಗಿರಿ, ನಿರಂಜನಾದಿತ್ಯ ದತ್ತನಾಗೊಂದಾಗಿ!!!

ಇರಬಾರದೆಂದೆಂದಿಗೂ ಚಿಂತೆ ದರ್ಶನದಿಂದ! (ಅ)

-ರವಿಂದ ಸುಕ ಬಂದಾಗೋಡುವ ಕತ್ತಲೆಯಿಂದ!
ಬಾಧಿಪುದು ದುಃಕ, ಕಣ್ಮರೆಯ ದರ್ಶನದಿಂದ!
ಮ್ಯದ ರೂಪ ದರ್ಶನದಿಂದ ಕ್ಷಣಿಕಾನಂದ! (ಅ)
-ದೆಂತಿಹುದು ಶಾಶ್ವತ ಸುಖದ ದರ್ಶನಾನಂದ? (ಅ)
-ದೆಂತಿಹುದೆಂದರುಹುವೆನು, ತಿಳಿ ನೀನೆನ್ನಿಂದ!
ದಿಟವನಿಟ್ತು, ಸಟೆಯನಟ್ಟಲು ಸದಾನಂದ!
ಗೂಟಕೆ ಕಟ್ಟಿ, ಮೇವೆಷ್ಟು ಹಾಕಿದರೇನಾನಂದ?
ಚಿಂತೆಯ ವಿಷಯ ಗೂಟ ಕೀಳಬೇಕದರಿಂದ!
ತೆರೆ ಹರಿದುಳಿವುದೇ ಸದಾ ದರ್ಶನಾನಂದ!
ರ್ಶನವಿದೇ ಶಾಶ್ವತವಾಗಿಹುದದರಿಂದ! (ದ)
-ರ್ಶನವಿದಾಗಿ ಸದಾ ಸುಖಿಯಾದರೆ ಆನಂದ!
ಯನಾನಂದದ ದರ್ಶನಾಸೆ ಬಿಡದರಿಂದ! (ಅ)
-ದಿಂಬಿನ ದರ್ಶನವಲ್ಲ! ತ್ವರೆ ಮಾಡಿದರಿಂದ!
ತ್ತ ನಿರಂಜನಾದಿತ್ಯ ದರ್ಶನ ಸದಾನಂದ!!!

ನಾನು ನಾನಾಗಿರುತಿಹೆನೆನ್ನ ಕಿಟೀರದಲ್ಲಿ!

ನುಡಿಗಳವಡದಾಗಿದೆನ್ನ ಸ್ಥಿತಿ ಅದ್ರಲ್ಲಿ!
ನಾನಾ ನಾಮದಲಿರುವೆನು ನಾನು ನಿಜದಲ್ಲಿ!
ನಾನಿದನೇನೆಂದಾರಿಗೆಂತು ಬಿಚ್ಚಿ ತೋರಿಸಲಿ?
ಗಿರಿಜಾಧವನ ಆಪ್ತ ಭಕ್ತರೇ ಅರಿಯಲಿ! (ಇ)
-ರುವೆಡೆಯೇ ನನಗೆ ಕುಟೀರವಾಗಿದೆಲ್ಲೆಲ್ಲಿ!
ತಿಳಿದಿದನೆಲ್ಲರೆನ್ನ ನೋಡಬೇಕು ಎಲ್ಲೆಲ್ಲಿ!
ಹೆಗ್ಗಳಿಕೆ ನನಗೇನಿಲ್ಲೆನುವೆನೆಲ್ಲರಲಿ!
ನೆರೆ ಭಾಜಿಸಿದರರಿವಾಗುವುದಿದಲ್ಲಲ್ಲಿ! (ಇ)
-ನ್ನದಕೇನೂ ಅನ್ಯ ದಾರಿಯಿಲ್ಲೆಂಬೆನೆಲ್ಲರಲ್ಲಿ!
ಕಿಹಕು, ಕುಚೋದ್ಯ ಮಾಡಲಾಗದು ಇದರಲ್ಲಿ!
ಟೀಕೆ, ಠಿಕಾಣಿಗಳಿಗೆ ಆದಿ, ಮಧ್ಯಾಂತವೆಲ್ಲಿ?
ಮಿಸಿರಬೇಕಾಗಿರುವುದೊಂದೇ ನಿಜದಲ್ಲಿ!
ರ್ಶನವಿದಾಗಬೇಕು ದತ್ತನ ಭಕ್ತರಲ್ಲಿ! (ಇ)
-ಲ್ಲಿ, ಅಲ್ಲಿಹ, ನಿರಂಜನಾದಿತ್ಯನಿಹ ನಿಮ್ಮಲ್ಲಿ!!!

ಅರವಿಂದ ಸಖಾನಂದ ನಿಂದೆಯಿಂದ!

ವಿ ತೆರೆದೆನ್ನ ಅಂಧ ನಿಂದೆಯಿಂದ!
ವಿಂಧ್ಯಾದ್ರಿ ನಾನಾದಾನಂದ ನಿಂದೆಯಿಂದ!
ತ್ತನಾದಿತ್ಯನೆಂದಂದ ನಿಂದೆಯಿಂದ!
ತತವನ ಸಂಬಂಧ ನಿಂದೆಯಿಂದ!
ಖಾಸಾತ್ಮಜನೆಂಬ ಬಂಧ ನಿಂದೆಯಿಂದ!
ನಂಬಿಗೆಯ ಬಲ ಬಂಧ ನಿಂದೆಯಿಂದ!
ರ್ಶನಾನುಭವದಂದ ನಿಂದೆಯಿಂದ!
ನಿಂದೆಯೇ ಗುರುವೆಂಬಂದ ನಿಂದೆಯಿಂದ!
ದೆಸೆಗೇಡಳಿದಾನಂದ ನಿಂದೆಯಿಂದ!
ಯಿಂಬಿನಾತ್ಮಾರಾಮಾನಂದ ನಿಂದೆಯಿಂದ!
ತ್ತ ನಿರಂಜನಾನಂದ ನಿಂದೆಯಿಂದ!!!

ಉದ್ವೇಗ ಮಾಯೆಗಂದನುದ್ವೇಗೀಶ್ವರಗಂದ! (ಉ)

-ದ್ವೇಗಕಿರುವುದು ಮರ್ಯಾದೆ ಜಗದಿಂದ!
ತಿಯಿದನುದ್ವೇಗದಿಂದ ವಂದ್ಯ ಗೋವಿಂದ!
ಮಾಯೆ ಮಾಡುವುದು ಅನಿತ್ಯದಾ ಮೋಹಾನಂದ!
ಯೆಲ್ಲಾ ಸುಳ್ಳು, ಪೊಳ್ಳೆಂದಿರಲದೇ ಆತ್ಮಾನಂದ!
ಗಂಗೆ ಧರಣಿಗಿಳಿದಳು ಉದ್ವೇಗದಿಂದ! (ಅ)
-ದ ಧರಿಸಿಹನು, ಶಿವ ಅನುದ್ವೇಗದಿಂದ! (ಅ)
-ನುದ್ವೇಗ ನೀಡುವುದು ಸತ್ಯ ಸಹಜಾನಂದ!
ದ್ವೇಷಾಸೂಯೆಗೆಡೆಯಾಗುವುದುದ್ವೇಗದಿಂದ!
ಗೀತೆಯುಸುರಿದೀ ನುಡಿ ನಿಜವದರಿಂದ! (ಅ)
-ಶ್ವಮೇಧಾದಿಗಳಾನಂದವೆಲ್ಲುದ್ವೇಗದಿಂದ!
ಮಿಸಬೇಕದರಿಂದನುದ್ವೇಗಾತ್ಮಾನಂದ!
ಗಂಗಾಧರ ಕಾಪಾಲಿಯಾದುದುದ್ವೇಗದಿಂದ! (ಅ)
-ದರಿಂದ ನಿರಂಜನಾದಿತ್ಯನುದ್ವೇಗಾನಂದ!!!

ನಿರೀಕ್ಷಿಸದಿರಲಿ! ನಿತ್ಯ ಸುಖಯಾಗಿರಲಿ!

ರೀತಿ ರಿವಾಜೆನ್ನದೆ ಭಜನೆ ಸಾಗುತಿರಲಿ!
ಕ್ಷಿತಿಪತಿಗೆಲ್ಲಾ ಸಮರ್ಪಣೆಯಾಗುತಿರಲಿ!
ಮಯಾಸಮಯವೆಂಬ ಭ್ರಮೆಯ ಬಿಟ್ಟಿರಲಿ!
ದಿನಕರನಂತೆ ಕರ್ಮನಿಷ್ಠೆ ಸದಾ ಇರಲಿ!
ಚನೆ, ರಂಜನೆಗಳ ಯೊ

ಚಿಸಿರದಿರಲಿ!
ಲಿಪಿ ಅದೃಷ್ಟವೆಂದ ಮನ ಮರುಗದಿರಲಿ!
ನಿಜ ಧರ್ಮ ನಿಶ್ಚಿಂತೆಯಿಂದ ಪಾಲಿಸುತಿರಲಿ!
ತ್ಯಜಿಸಿ ದುಸ್ಸಂಘದಿಂದ ದೂರವಿರುತಿರಲಿ!
ಸುಜನರಲಿ ಬಳಕೆ ಸದಾ ಬೆಳೆಸಿರಲಿ!
ಖಿನ್ನನಾಗದನವರತ ಜಪಿಸುತಿರಲಿ!
ಯಾಗವಿದರಿಂದ ನಿಜಯೊಂಗ ಪ್ರಾಪ್ತಿಯಾಗಲಿ!
ಗಿರಿಧರನಿದರ್ಜುನಗಂದ ನೆನಪಿರಲಿ! (ಇ)
-ರಬೇಕು ಗಮನ, ಗುರಿಯತ್ತ ಮನಸಿನಲಿ! (ಈ)
-ಲಿಖಿತ ನಿರಂಜನಾದಿತ್ಯ ಪ್ರಸಾದದಾಗಲಿ!!!

ನಿರಂಜನಗಿದು ಶ್ಯಾವಿಗೆ ಪಾಯಸ!

ರಂಗ ಸಾರಂಗನೀವ ಕಿರಣರಸ!
ನನ, ಮರಣ ದೂರಮರ ರಸ!
ರ, ನಾಡಿಗಳಿಗಿದು ಶಕ್ಕಿ ರಸ!
ಗಿರಿಜೆ ಸವಿದ ದಿವ್ಯ ರಾಮ ರಸ!
ದುರ್ಮದ ಮರ್ದನ ಧರ್ನ, ಕರ್ಮ ರಸ!
ಶ್ಯಾಮಮೋಹನನ ವೇಣುಗಾನ ರಸ!
ವಿಷಹರ ಪಂಚಾಕ್ಷರಿ ಮಂತ್ರ ರಸ!
ಗೆಳೆತನದ ಆದಿತ್ಯಾಂಬುಜ ರಸ!
ಪಾರ್ಥಸಾರಥಿಯ ಗೀತಾಮೃತ ರಸ!
ದುವೀರನ ಸುದರ್ಶನಾಪ್ತ ರಸ!
ವೇಶ ನಿರಂಜನಾದಿತ್ಯೇಕ ರಸ!!!

ಕಳವಳವಿಲ್ಲ! ತಳಮಳವಿಲ್ಲವನೇ ಎಲ್ಲಾ! (ಅ)

-ಳವಡುತಿಹುದೇಗೊಂದೊಂದೇ ಅನುಭವದಿಂದೆಲ್ಲಾ! (ಅ)
-ವರಿವರ ಮಾತುಗಳಿಂದಾಗುವುದೆಲ್ಲಾ ವಿಫಲಾ! (ಅ)
-ಳತೆಗೊಳಗಾಗದಿಹುದನನ್ಯ ಭಕ್ತಿಯ ಫಲಾ!
ವಿಚಾರ, ವಿಮರ್ಶೆಗಳಿಂದಾಗುವುದೆಲ್ಲಾ ಸಫಲಾ! (ಅ)
-ಲ್ಲವನಿಲ್ಲ ; ಇಲ್ಲವನಿಲ್ಲೆಂಬುದು ಬಲ್ಲವಗಿಲ್ಲ!
ಲ್ಲಣಗೊಳದೆ ಮಾಡೆಬೇಕು ಸ್ವಧರ್ಮವನೆಲ್ಲಾ (ಅ)
-ಳಬಾರದಿಳೆಗಾಗಿಯೆಂಬುದರಿವಾಯಿತೀಗೆಲ್ಲಾ!
ನಸಿಗಾಗುತಿಹ ಖೇದ ಭೇದವೆಲ್ಲಾ ಚಪಲಾ! (ಅ)
-ಳದಿರುವವರಾರಿದರಿಂದ ಈ ಜಗದಲೆಲ್ಲಾ!
ವಿವರಿಸುವುದಸಾಧ್ಯವಾಗಿಹುದವನ ಲೀಲಾ! (ಅ)
-ಲ್ಲಲ್ಲೋಡಾಡದಿರೆ ಮನ ಶಾಂತಿಯಾಗುವುದೆಲ್ಲಾ!
ಶವಾಗುವುದಿದು ಸತ್ಸಂಘದಿಂದರಿವುದೆಲ್ಲಾ!
ನೇಮ, ನಿಷ್ಠೆಯ ಸಾಧಕನಿಗಿದು ಹೊಸದೇನಲ್ಲಾ!
ಲ್ಲಾ ಬಲ್ಲ ಮನೋವಲ್ಲಭನಾಧಾರವಿದಕೆಲ್ಲಾ! (ಅ)
-ಲ್ಲಾ ಡದಂಬರವಾಸಿ ನಿರಂಜನಾದಿತ್ಯನೇ ಎಲ್ಲಾ!!!

ಕೊಳಕಿಲ್ಲ! ಥಳಕಿಲ್ಲ! (ಅ)

-ಳತೆಯಿಲ್ಲ! ಆಳವಿಲ್ಲ!
ಕಿರಿದಲ್ಲ! ಹಿರಿದಲ್ಲ! (ಅ)
-ಲ್ಲದುದಿಲ್ಲ! ಗುಲೆನಿಲ್ಲ!
ಂಡಿಯಿಲ್ಲ! ಗಂಡಿಯಿಲ್ಲ! (ಅ)
-ಳವಡಿಲ್ಲ! ಗೂಢವೆಲ್ಲ!
ಕಿವುಡಿಲ್ಲ! ಕೇಳಿದೆಲ್ಲ! (ಅ)
-ಲ್ಲ! ನಿರಂಜನನೇ ಎಲ್ಲ!!!

ಶ್ಯಾಮಸುಂದರನಾಗಿಹನೊಬ್ಬ ನಂಟ!

ನಸಾಗಿ ಅವನಾದನೀಗ ಭಂಟ!
ಸುಂದರನಾಗಿ ಕಾಲ್ಕುಂತಾಗೀಗ ನಂಟ!
ತ್ತನಾಮದೀಗೆಲ್ಲರಿಗು ಭಂಟ!
ಕ್ಷಣೆಯ ಭಾರ ಹೊತ್ತಿಹನು ನಂಟ!
ನಾಚಿಕೆಯಿಲ್ಲದ ಅವನೊಬ್ಬ ಭಂಟ!
ಗಿರಿಯಂತಿಹವನೇ ಪ್ರೀತಿಯ ನಂಟ!
ರಿ, ಹರ ಭೇದವಿಲ್ಲದವ ಭಂಟ!
ನೊಸಲಿಗಿದೆ ವಿಭೂತಿ ಸದಾ ನಂಟ! (ಅ)
-ಬ್ಬರದುಬ್ಬರವಿಲ್ಲದಾತೊಬ್ಬ ಭಂಟ!
ನಂಬಿಗೆಯಪಾರ ಹಿರಿಮೆಯ ನಂಟ! (ಅ)
-ಟಕಿಪರಾರ್ನಿರಂಜನಾದಿತ್ಯ ಭಂಟ!!!

ರಾಜಶೇಖರ ದಿವಾಕರ ರಾಮಚಂದ್ರಯ್ಯ!

ಗಳವೇತಕೊಳಗೊಳಗಿರುವುದಯ್ಯ!
ಶೇಕರಿಸಿರೊಂದಾಗುತೆಲ್ಲ ಭಜಿಸಿರಯ್ಯ!
ತಿಗೊಳಗಾಗುವ ಪರಿ ಬಾಳು ಬೇಡಯ್ಯ!
ವಿರಾಮರಾಜಶೇಖನೆಂದರೊಂದಯ್ಯ!
ದಿತಿ ಸುತರನಡಗಿಸಿದಾತೊಬ್ಬನಯ್ಯ!
ವಾಸುದೇವಾನಂದ ಶ್ಯಾಮಸುಂದರನೆಂಬಯ್ಯ!
ನಸು, ಮನಸಿನಲಿವನ ನೆನೆಯಯ್ಯ!
ಘುಪತಿಯಿತ ದತ್ತಾತ್ರೇಯ ಶಿಷ್ಯನಯ್ಯ!
ರಾಗ, ರಗಳೆಯೆಲ್ಲಾ ಮನದ ಭ್ರಾಂತಿಯಯ್ಯಾ!
ದ, ಮತ್ಸರಾದಿಗಳಾನಿವನೊಪ್ಪನಯ್ಯ!
ಚಂದ್ರನಾಗೀತ ಸದಾ ಶಾಂತಿ ನೀಡುವನಯ್ಯ!
ದ್ರವ್ಯದಾಸೆ, ಲೋಭ, ಮೋಹಗಳಿವಗಿಲ್ಲಯ್ಯ! (ಅ)
-ಯ್ಯ ನಿರಂಜನಾದಿತ್ಯ ರಾಜಶೇಖರನಯ್ಯ!!!

ಚಳಿ ಎನಲೇಕೆ? ಸ್ನಾನಗೈಯಲೇಕೆ? (ಎ)

-ಳಿಯಲಾಗದ ಭಾರ ಹೇರುವುದೇಕೆ?
ತ್ತಿನ ಕತ್ತನು ಮುರಿಯುವುದೇಕೆ?
ಮಿಸುವುದೇಕೆ? ನಿಂದಿಸುವುದೇಕೆ?
ಲೇಪಿಸುವುದೇಕೆ? ಒರೆಸುವುದೇಕೆ?
ಕೆಡುವುದೇಕೆ? ಒಡನಾಡುವುದೇಕೆ?
ಸ್ನಾನದಾಸೇಕೆ? ಮಾಡದಿರುವುದೇಕೆ?
ಗುವುದೇಕೆ? ಮತ್ತೆ ಅಳುವುದೇಕೆ?
ಗೈಯುವುದೇಕೆ? ಗೊನಗುವುರೇಕೆ?
ಯಲೇಜುರ್ಶಾಖೆಂಬೇಕೆ? ನಿಷ್ಠೆಯಿಲ್ಲವೇಕೆ?
ಕೆಟ್ಟರೂ ನಿರಂಜನಾದಿತ್ಯ ಬೆಳಕೇ!!!

ಉಪನಯನವಾಗಬೇಕು! ಜ್ಞಾನ ಬರಬೇಕು!

ರದಾಸ್ಯ ಹೋಗಬೇಕು! ಸ್ವತಂತ್ರ ಇರಬೇಕು!
ರಳಾಟ ತಪ್ಪಬೇಕು! ಆರೋಗ್ಯವಾಗಬೇಕು!
ಮ ನಿಯಮವಿರಬೇಕು! ತಪ ಸಾಗಬೇಕು!
ಗುಮೊಗವಿರಬೇಕು! ಸದಾ ಜಪಿಸಬೇಕು!
ವಾಸವಾಗಿರಬೇಕು! ಬಾಳು ಬೆಳಕಾಗಬೇಕು!
ತಿ ಸ್ಥಿರವಿರಬೇಕು! ಗುರುಕರುಣೆ ಬೇಕು!
ಬೇಡದಿರಬೇಕು! ಬಂದುದಕಾನಂದಿಸಬೇಕು!
ಕುಪಿತನಾಗದಿರಬೇಕು! ಶಾಂತಿ ಕಾಣಬೇಕು!
ಜ್ಞಾನ ಮೂಡುತಿರಬೇಕು! ಮಾಯೆಯಡಗಬೇಕು!
ಯ, ವಿನಯ ಬೇಕು! ನಡೆ ಶುದ್ಧವಾಗಬೇಕು!
ಯಲಾಸೆ ಬಿಡಬೇಕು! ಬ್ರಹ್ಮ ತಾನಾಗಬೇಕು!
ಜ ಧರಿಸಬೇಕು! ಬುದ್ಧಿ ವೃದ್ಧಿಯಾಗಬೇಕು!
ಬೇಕುಲ, ನಿರಂಜನಾದಿತ್ಯನದೆಂದು ಇರಬೇಕು!!!

ನಿಜ ಗುರುಭಕ್ತ ಏಕಲವ್ಯ!

ಗಕಾದರ್ಶನಾಗಿಹ ಯೋಗ್ಯ!
ಗುರುಮೂರ್ತಿ ಪೂಜೆಯಿಂದ ಸಿದ್ಧ!
ರುಕ್ಮಿಣೀಶನಿಷ್ಟ ಪ್ರಿಯ ಭಕ್ತ!
ಕ್ತಿಗೆ ಯುಕ್ತಿ ಬೆರೆಸದಾಪ್ತ! (ರ)
-ಕ್ತ ಕಾಣಿಕೆಯಿತ್ತ ಗುರುಭಕ್ತ!
ಕಿಂತಾಯ್ತೆನ್ನದನನ್ಯ ಗುರುಭಕ್ತ!
ಷ್ಟವಿತ್ತ ಗುರುಗಿಷ್ಟ ಭಕ್ತ!
ಕ್ಷ್ಯವಿಂತಿರಲವನೇ ಶಿಷ್ಯ!
ವ್ಯಕ್ತ, ನಿರಂಜನಾದಿತ್ಯನಾಪ್ತ!!!

ದತ್ತಮೂರ್ತಿಯ ನಿತ್ಯಪೂಜೆ ಭಕ್ತರ ಸುಯೋಗ (ಅ)!

-ತ್ತನುಮಾನಿಸದ ಭಕ್ತಿ ಸೇವೆಯಿಂದೀ ಸುಯೋಗ!
ಮೂರ್ತಿ ರೂಪಿನಲಿರುವುದಾತ ನಿಮ್ಮ ಸುಯೊಂಗ! (ಅ)
-ರ್ತಿಯಲಿ ತಾ ಪೂಜಿಸಿ, ನಿಮಗಿತ್ತುದು ಸುಯೋಗ!
ದುಪತಿ, ದತ್ತನೊಂದಾಗಲ್ಲಿಪ್ಪುದು ಸುಯೋಗ!
ನಿಜಭಕ್ತಿ, ನಂಬಿಗೆಯಿಂದಾಗಲಿದು ಸುಯೋಗ! (ಅ)
-ತ್ಯಮೂಲ್ಲದೀ ಸೇವೆ ಕಳಕೊಳ್ಳಬೇಡೀ ಸುಯೋಗ!
ಪೂಜಾರಿ ಭಾವಿಕ ಭಕ್ತನಾದರದು ಸುಯೋಗ!
ಜೆಗದ ಗೌರವಕಾಗಿ ಸುವ್ಯವಸ್ಥಾ ಸುಯೋಗ!
ಕ್ತರಲೇಕ ಮತವಿದ್ದರದೊಂದು ಸುಯೋಗ! (ಯು)
-ಕ್ತ ಕಾರ್ಯಕ್ರಮದಿಂದಾನಂದವಾದರೆ ಸುಯೋಗ!
ಗಳೆಗೆಡೆಗೊಡದಂತಿದ್ದರದು ಸುಯೋಗ!
ಸುಲಭದೀ ದಾರಿಯಿಂದ ಗುರಿ ಸೇರೆ ಸುಯೋಗ!
ಯೋಗವಿದು ಶ್ರದ್ಧಾ, ಭಕ್ತಿಯಿಂದಾದರೆ ಸುಯೋಗ!
ತಿ ನಿರಂಜನಾದಿತ್ಯನಲಿಹುದೀ ಸುಯೋಗ!!!

ಪಲ, ಪತ್ರ, ಪುಷ್ಪ ಸಮರ್ಪಣಾ!

ಕ್ಷ್ಯ ಸೂರ್ಯನಿಗೆ ಸಮರ್ಪಣಾ!
ತ್ರ ಶಿವನಿಗೆ ಸಮರ್ಪಣಾ!
ತ್ರಯಲೋಕದಾಸೆ ಕೃಷ್ಣಾರ್ಪಣಾ!
ಪುಣ್ಯ, ಪಾಪ ಭಾಂತಿ ದತ್ತಾರ್ಪಣಾ! (ಪು)
-ಷ್ಪಗಳೆಲ್ಲಾ ಗುರು ಪಾದಾರ್ಪಣಾ!
ತ್ಯ, ಮಿಥ್ಯ ಆತ್ಮ ರಾಮಾರ್ಪಣಾ!
ನ ಮಾಧವಗೆ ಸಮರ್ಪಣಾ! (ಅ)
-ರ್ಪಣಾ! ಭಜನೆಗೆ ಜನ್ಮಾರ್ಪಣಾ! (ಗು)
-ಣಾವಗುಣ ನಿರಂಜನಾರ್ಪಣಾ!!!

ಚಪಾತಿ ಭಿಕ್ಷಾ ಬೋಜನ!

ಪಾವನ ಪಾಪ ಭಾಂಜನ!
ತಿನುವನಿತ್ತಾ ಭಕ್ಷಣ!
ಭಿಕ್ಷುಕನಿಚ್ಛಾ ಜೀವನ!
ಕ್ಷಾಮ ಪೀಡಾ ಸಂಜೀವನ!
ಬೋಗ ತ್ಯಾಗಾನಂದ ಘನ!
ಯ ರಾಧಾ! ಭಿಕ್ಷಾಶನ!
ಮೋ “ಭಿಕ್ಷು” ನಿರಂಜನ!!!

ಗುರುದೇವನಿಗೆ ನಮಸ್ಕಾರ! (ಅ)

-ರುಹೆನಗೆಲ್ಲಾ ನಿಜ ವಿಚಾರ!
ದೇಶ, ಕಾಲ, ಸ್ಥಿತಿಗನುಸಾರ!
ರ ಬೇಕೇಕಾ ರಸಗಂಭೀರ!
ನಿತ್ಯವಲ್ಲದ ರಸ ನಿಸ್ಸಾರ!
ಗೆಳೆಯನೊಬ್ಬನೇ ಗುರುವೀರ! (ಅ)
-ನವರತ ಇವನೇ ಆಧಾರ!
ಗನ ಮೇಲೇಕೋ ಅನಾದರ? (ಹೊ)
-ಸ್ಕಾಲದಾಚಾರ ಭೂಮಿಗೆ ಭಾರ!
ಸ! ನಿರಂಜನಾದಿತ್ಯಾಚಾರ!!!

ಪರಮಪುರುಷನಿಗೆ ಪುರಸ್ಕಾರ!

ಮಾನಾಥನಿಗೆ ಆದರೋಪಚಾರ!
ದನಾರಿಗೆ ವಂದನಾದ್ಯುಪಚಾರ!
ಪುದ್ಭವನಿಗೆ ಜಾಜಿ ಹಾರ!
ರುಚಿ ಗಾನವಾಹಿನಿಗೆ ಜಯ ಹ

ದ್ಗಾರ!
ಡಾನನನಿಗೆ ಪ್ರಣವದುಚ್ಚಾರ!
ನಿರ್ಗುಣ ನಿರ್ವಿಕಾರ ನಿಜಾಲಂಕಾರ!
ಗೆಜ್ಜೆ, ತಾಳ ನಾರದಗೆ ನಮಸ್ಕಾರ!
ಪುನರ್ಜನ್ಮವಿಲ್ಲದ ಮುಕ್ತಿ ಸ್ವೀಕಾರ!
ಗಳೆ ರೋಗದ ದೇಹಕ್ಕೆ ಧಿಕ್ಕಾರ! (ಕ)
-ಸ್ಕಾದ ಮೋಹದ ಸಿಹಿಗೆ ತಿರಸ್ಕಾರ!
ವಿ ನಿರಂಜನಾದಿತ್ಯನೆನ್ನಾಕಾರ!!!

ಸರ್ವ ದೇವತಾ ವಶ ಗುರು ಶರಣ! (ಓ)

-ರ್ವ ದೇವನೇ ಸೃಷ್ಟಿಯೆಲ್ಲಕ್ಕೂ ಕಾರಣ!
ದೇವತಾನಂತ ನಾಮದಿಂದ ಭರಣ!
ರ ಗುರುವಿದನರಿತಿಹ ಜಾಣ!
ತಾರಕನಿವ ಸರ್ವಶಾಸ್ತ್ರ ಪ್ರಮಾಣ! (ಅ)
-ವನಿಗೆಲ್ಲಾ ದೇವತೆಗಳೂ ಆಧೀನ!
ಕ್ತನಾರ್ದಊ ಭಕ್ತಿಯಿಂದ ಜೀವನ!
ಗುಡುಗಿದರೂ ನಡುಗದಾ ಭಾವನ! (ಅ)
-ರುಹಿ ತಿಳಿಸಲಾಗುವುದಿಲ್ಲವನ!
ರಣರರಿವರಿವನ ಕರುಣ! (ಅ)
-ರಸಿದರೆ ಸಿಗುವುದೆಲ್ಲೀ ಚರಣ? (ರ)
-ಣಧೀರ ನಿರಂಜನಾದಿತ್ಯ ಶರಣ!!!

ಸಕಲಾರಿಷ್ಟ ವಿನಾಶ ಗುರು ಸರ್ವೆ

ಶ!

ರ ಚರಣ ಕಟ್ಟಿ ಆಗವನ ವಶ!
ಲಾಭಾಲಾಭಗಳಿಗೆ ಇವನೇ ಅಧೀಶ!
ರಿಪುಗಲಾರಕೆ ಪ್ರಳಯಾಗ್ನಿ ಗಿರೀಶ! (ಅ)
-ಷ್ಟ ಮದಗಳಿವನ ನೆನೆದರೆ ನಾಶ!
ವಿಷಗಳಿಗೆಲ್ಲಾ ಕಾಲ ತ್ರಿನಯನೇಶ!
ನಾರುವ ವ್ರಣಗಳ್ಗಿವ ಗುಣ ಗಣೇಶ!
ಮೆ, ದಮೆಯ ಸಿದ್ಧಿಗಿವನೇ ಯೋಗೀಶ!
ಗುರಿಗಡಚಣೆ ಬಂದರಿಂತ ವಿಘ್ನೇಶ!
ರುಧಿರ ಶುದ್ಧಿ, ವೃದ್ಧಿಗೆ ಧನ್ವಂತರಿಂಶ!
ರ್ವ ಯಂತ್ರ, ತಂತ್ರಗಳಿಗಿವನಿಂದ ಧ್ವಂಸ! (ಸ)
-ರ್ವೆ

ಶನೀತನರಿಕುಲಕಾಲ ಚಕ್ರೇಶ!
ಕ್ತಿ, ನಿರಂಜನಾದಿತ್ಯ ಶಿವ ಶಕ್ತೀಶ!!!

ಸರ್ವ ಯಂತ್ರ, ತಂತ್ರ ಹರ ಗುರುವರ! (ಸ)

-ರ್ವ ಹಿತಕರ, ತ್ರಿಮೂರ್ತಿಯವತಾರ!
ಯಂತ್ರವಿದುತ್ತಮ ಯಂತ್ರ ಗುರುಮಂತ್ರ!
ತ್ರಲೋಕವಡಗಿಸಿಹುದೀ ಮಂತ್ರ!
ತಂದೆ, ತಾಯಿ, ಬಂದು ಬಲಗಿವೀ ಮಂತ್ರ!
ತ್ರಯೋದಶೀ ಪ್ರದೋಷ ರೂಪವೀ ಮಂತ್ರ!
ರಸಿದನು ಶಂಕರನು ಈ ಮಂತ್ರ! (ಅ)
-ರಸಿಗುಪದೇಶಿಸಿದ ಸಿದ್ಧ ಮಂತ್ರ!
ಗುರುಭಕ್ತಿ ಹೀನಗೆಲ್ಲಾ ಅಬ್ಯಂತರ! (ಅ)
-ರುಹಲೆಂತಿರದ ಮಹಿಮೆಯಪಾರ!
ನವಾಸ್ಯಾಗಿಹನಿದರ ದಾತಾರ! (ಅ)
-ರಸಿ ನಿರಂಜನಾದಿತ್ಯನಿತ್ತ ಸಾರ!!!

ತ್ರಿಲೋಕದಾಶಾರಹಿತ ಅವದೂತ!

ಲೋಭವಿನಿತಿಲ್ಲದಾತ ಅವದೂತ!
ರ್ಮಬಂಧವಿಲ್ಲದಾತ ಅವದೂತ!
ದಾಸ್ಯಭಾವ ಹರಿದಾತ ಅವದೂತ!
ಶಾಖ, ಶೀತ, ಮರೆತಾತ ಅವದೂತ!
ನ್ನ, ಹೊನ್ನು, ಮಣ್ಣೆಂಬಾತ ಅವದೂತ!
ಹಿತಾಹಿತ ದತ್ತೆಂಬಾತ ಅವದೂತ!
ನ್ನದೆಂಬುದಿಲ್ಲದಾತ ಅವದೂತ!
ಳಿದುದಕಳದಾತ ಅವದೂತ!
ರ್ತಮಾನಕ್ಕಿರುವವಾತ ಅವದೂತ!
ದೂಮ ಭವಿಷ್ಯವೆಂಬಾತ ಅವದೂತ!
ರಣಿ ನಿರಂಜನಾದಿತ್ಯಾವದೂತ!!!

ನಿರಂಜನಾದಿತ್ಯ ಗುರುದತ್ತ ನಾನೇ!

ರಂಗುರಂಗಾಗಿರುವುದೆಲ್ಲಾ ನಾ ತಾನೇ!
ಡ ದೇಹಕ್ಕಾಗಾನಿಲ್ಲ ನಿಜ ತಾನೇ!
ನಾನಿರುವುದಕಾಗಿ ಅದಿದೆ ತಾನೇ
ದಿಟವಿದ ಮರೆಯಬಾರದು ತಾನೇ!
ತ್ಯಜಿಸಿದರಿದ ದುಃಖವಿಲ್ಲ ತಾನೇ!
ಗುರಿಯಲಿರುವುದು ಪ್ರಾಮುಕ್ಯ ತಾನೇ!
ರುಚಿ, ವಿಷಯದಿಂದಟ್ಟಬೇಕು ತಾನೇ!
ಯಾನುಗ್ರಹವಿದಾಗಬೇಕು ತಾನೇ! (ಎ)
-ತ್ತ, ನಾನತ್ತಿತ್ತೊಡಾಡಬೇಕಿಲ್ಲ ತಾನೇ!
ನಾನೇಮ, ನಿಷ್ಠ ನಿರಂಜನಾದಿತ್ಯ ತಾನೇ!!!

ಜಯ, ವಿಜಯ, ಸುಶೀಲದಿಂದ!

ದುಪತಿ ಖ್ಯಾತಿ ಲೀಲೆಯಿಂದ!
ವಿಜಯಾನಾನಂದ ಸಖ್ಯದಿಂದ!
ರಾಸಂಧನಂದ ಮದದಿಂದ!
ಮಸೂನಾನಂದ ಧರ್ಮಯಿಂದ!
ಸುಧಾಮನಾನಂದ ಭಕ್ತಿಯಿಂದ!
ಶೀಲಾನಂದಾನಂದ ನಂದ ಕಂದ!
ಯಿಪುದಿವನ ರಾಧಾನಂದ! (ಇ)
-ದಿಂಗಿತವೇನೆಂಬೆ ಕ್ರೀಡಾನಂದ!
ತ್ತ ನಿರಂಜನಾದಿತ್ಯಾನಂದ!!!

ನಿಜಧರ್ಮದಲಿರುವುದೇ ಸುಶೀಲ!

ಗದೀಶನನರಿವುದೇ ಸುಶೀಲ!
ರ್ಮವೊಬ್ಬೊಬ್ಬರಿಗೊಂದೊಂದು ಸುಶೀಲ! (ಕ)
-ರ್ಮ ತ್ರಿಕರಣಾತ್ಮಕವಿರೆ ಸುಶೀಲ! (ಅ)
-ದರಿಂದದನರಿಯಬೇಕು ಸುಶೀಲ!
ಲಿಪ್ತನಾಗಬಾರದನ್ಯಕೆ ಸುಶೀಲ!
ರುದ್ರನಾದರ್ಧನಾರೀಶ್ವರ ಸುಶೀಲ! (ಅ)
ವುಗಳಿವುಗಳಾಟಕಿಲ್ಲ ಸುಶೀಲ!
ದೇಶ, ಕಾಲಕೊಪ್ಪಿರಲಿದು ಸುಶೀಲ!
ಸುತ, ಪಿತಾದಿಗೊಂದೊಂದಿದೆ ಸುಶೀಲ!
ಶೀತಲದ ಭೂತಲ ಧರ್ಮ ಸುಶೀಲ! (ಅ)
-ಲ

ರಂಜನಾದಿತ್ಯ ಧರ್ಮ ಸುಶೀಲ!!!

ಪರಲೋಕದಲಿರುವ ನಮ್ಮ ತಂದೆ (ಏ)

-ರಗಬೇಕಡಿಗೆಂದಾನು ಬಂದು ನಿಂದೆ!
ಲೋಕ ಅವನದೆಂತಿಹುದೆಂಬೆ ಮುಂದೆ!
ರ, ಚರಣ, ದೇಹವಾ ಲೋಕವೆಂಬೆ!
ಮನೇಂದ್ರಿಯದಿಂದಾಗುವುದದೆಂಬೆ!
ಲಿಪ್ತ ವಿಷಯಗಿದಿಹ ಲೊ

ಕವೆಂಬೆ!
ರುದ್ರನಿಗದಾನಂದ ಕೈಲಾಸವೆಂಬೆ!
ರ ಗುರು ಪಿತಗಾಗಿರಲಿದಂಬೆ!
ನ್ನಯ್ಯನಿನ್ನೆಲ್ಲಿಲ್ಲೆಂದರಿ ನೀನೆಂಬೆ! (ಎ)
-ಮ್ಮಯ್ಯನಿಹುದೇ ಪರಲೋಕವೆಂದೆಂಬೆ!
ತಂದೆಯೊಪ್ಪಿನಿದನನುಭವಿಸೆಂಬೆ! (ಎ)
-ದೆಗಾರ ನಿರಂಜನಾದಿತ್ಯ ತಂದೆಂಬೆ!!!

ನಿರಂಜನನ ಕಂಡಿರೇನಪ್ಪಾ?

ರಂಜಿಪನಾ ಮಂಟಪದಲಿಪ್ಪಾ!
ಗಳ ಮಾಡದಿರಬೇಕಪ್ಪಾ!
“ನ ಗುರೋರಧಿಕಂ” ನಂಬಿರಪ್ಪಾ!
ಗುನಗುತ ಭಜಿಸಿರಪ್ಪಾ!
ಕಂಗೆಡದಿರಿ ನಾನಿಲ್ಲೆಂದಪ್ಪಾ! (ಅ)
-ಡಿಯಡಿ ಸದಾನಿದ್ದಿಹೆನಪ್ಪಾ!
ರೇಚಕ ಪೂರಕಾಂತರ್ಗತಪ್ಪಾ! (ಅ)
-ನವರತ ಪಾಡಿ ಕುಣೀರಪ್ಪಾ! (ಅ)
ಪ್ಪಾ! ನಿರಂಜನಾದಿತ್ಯ ದತ್ತಪ್ಪಾ!!!

ಬೆಕ್ಕು ಮಲಗಿಹುದು ಬೆಚ್ಚಗಿದೆಂದು! (ಉ)

-ಕ್ಕವ ಭಾವ ಭಕ್ತಿ ಗೊತ್ತಿಲ್ಲವೇನೆಂದು!
ನಸು ಇಂದ್ರಿಯದ ಮೇಲಿರುತಿಹುದು
ಕ್ಷ್ಯವಿದು ಕಚ್ಛವೆಂದರಿಯುವುದು! (ಉ)
-ಗಿದರೆ ಮತ್ತೆ ಕಹಿಯೆಂದರಾಗದು!
ಹುಸಿಗಾಗಿ ಮನ ಸಡಿಲಾಗಿಹುದು!
ದುರ್ವಿಷಯ ಮರಳು ಮಾಡುತಿಹುದು!
ಬೆದರದದನಡಗಿಸಿಟ್ಟಿಹುದು! (ಉ)
-ಚ್ಚ ಸ್ಥಿತಿಯಲಿ ಅದ ಬಚ್ಚಿಟ್ಟಿಹುದು!
ಗಿರಿಧರನ ಶಿರೋಮಣ್ಯಾಗಿಹುದು! (ಅ)
-ದೆಂತೆಂದು ಸದಾ ಧ್ಯಾನ ಮಾಡುತಿಹುದು! (ಅ)
-ದು ನಿರಂಜನಾದಿತ್ಯಗರಿತಿಹುದು!!!

ದೊಡ್ಡಯ್ಯಾ! ವಿಚಾರ ತಿಳಿಯಿತಯ್ಯಾ! (ಅ)

-ಡ್ಡ ದಾರಿ ನೀನು ಹಿಡಿದಿಲ್ಲವಯ್ಯಾ! (ಅ)
-ಯ್ಯಾ! ನೀನು ದತ್ತನಿಗೆ ಮಗನಯ್ಯಾ!
ವಿಷಾದ ಪಡದೆ ನೀ ಭಜಿಸಯ್ಯಾ!
ಚಾಡಿ, ಗೀಡಿ ಕೇಳದಿರಬೇಕಯ್ಯಾ!
ತ್ನ ಬಚ್ಚಿಟ್ಟು ಮಣ್ಣುಣ್ಣದಿರಯ್ಯಾ!
ತಿರುಕ ನೀ ಮರೆಯದಿರಯ್ಯಾ! (ಅ)
-ಳಿದರೂ ನಿನ್ನಲಿ ಭಕ್ತಿ ಭಾವಯ್ಯಾ!
ರುವರು ಗುರು ಪ್ರಸಾದವಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಕಾಯ್ವನಯ್ಯಾ!!!

ಶ್ರೀಪಾದಕೆ ವನ ಕುಸುಮಾಲಂಕಾರ!

ಪಾದಕೊಪ್ಪುವುದೆಲ್ಲ ಪ್ರೇಮಾಲಂಕಾರ!
ಯೆಯಿಂದೊದಗಿತೊಂದು ವನಹಾರ!
ಕೆಟ್ಟಲ್ಲ, ಕಟ್ತಿಲ್ಲದೊಂದು ನೈಜಹಾರ! (ಅ)
ಸರವಸರದಿಂದ ಬಂತೀ ಹಾರ!
ಗುತೆಲ್ಲರೀಕ್ಷಿಸಿದರು ಈ ಹಾರ!
ಕುಳಿತದ ನೋಡದ ರಾಜಶೇಖರ!
ಸುತ್ತು, ಮುತ್ತು ಸುತ್ತಿ ಬಂತೀ ವನಹಾರ!
ಮಾತಾಜಿಯೇರಿಸಿದರು ಮನಸಾರ! (ಅ)
-ಲಂಕಾರ ಪಾದುಕೆಗಾಯ್ತಿದು ಸುಂದರ!
ಕಾಲವಿದು ಸಪ್ತಾಹದಾರಂಭ ವಾರ! (ಅ)
-ರವಿಂದಾಪ್ತ ನಿರಂಜನಾರಾಮ ವಾರ!!!

ಕಾಲಿಲ್ಲದ ಬಾಳಿಗೆ ಗೋಳಿಲ್ಲದ ಕೂಳು! (ಉ)

-ಲಿಯದ ನಾಲಿಗೆಗರಿಯದ ಸವಾಲು! (ಉ)
-ಲ್ಲಸವಿಲ್ಲದ ಮನಕೊಬ್ಬ ದೇವನಾಳು!
ರ್ಶನವಿಲ್ಲದ ದೇವಗೆಲ್ಲಾ ಕುಶಾಲು!
ಬಾಯಿಗಿಲ್ಲದ ಬೆಲ್ಲಕ್ಕೆ ಊರೇ ಕಾವಲು! (ಉ)
-ಳಿವಿಲ್ಲದ ಮೂಲಕ್ಕೆ ಮನೆಯೆಲ್ಲಾ ಗೋಳು!
ಗೆಲುವಿಲ್ಲದಾನನಕಾಪ್ತ ಬಣ್ಣಗಳು!
ಗೋಶಾಲೆಗೊಲ್ಲದಾಕಳು ಸಾಬರ ಕೂಳು! (ಉ)
-ಳಿಯಿಲ್ಲದಾಚಾರಿಗೆ ಕೂಲಿ ಮತ್ತು ಕೂಳು! (ಉ)
-ಲ್ಲಟ ಪಲ್ಲದಾಳಿಗ್ಮನೆ ಮತ್ತು ಮಾಲು!
ತ್ತಯ್ಯಮ್ಮಯ್ಯ ಎಂಬವಗೀ ಬಾಳು ಗೋಳು!
ಕೂಸಿಲ್ಲದವಳಿಗೆ ಎದೆ ತುಂಬಾ ಹಾಲು! (ಉ)
-ಳುಹುವ ನಿರಂಜನಾದಿತ್ಯನೆಲ್ಲಾ ಬಾಳು!!!

ಅಬ್ಬೆಯನಗಲಿದ ತಬ್ಬಲಿ ಮೇಕೆ! (ಎ)

-ಬ್ಬೆಲದಾರಿಲ್ಲದಿದಿಲ್ಲಿ ಬಂತೇತಕೆ?
ತ್ನವಿಲ್ಲದಗೇ ಮನೆಯಾಗಬೇಕೆ?
ಡೆವಿಲ್ಲದಗೀ ಮನೆಯಾಗಬೇಕೆ?
ಗನಮಣಿಪೋದನು ಪಶ್ಚಿಮಕೆ! (ಆ)
-ಲಿಸದಿಹನಿನ್ನೂ ಮಾಲಿಕನದೇಕೆ?
ಣಿದು ಅಳುತಲಿದೆ ಮರಿ ಮೇಕೆ!
ಪ್ಪಿಸಿ ಹೋಯಿತೆತ್ತೆಂತೋ ತಾಯಿ ಮೇಕೆ! (ಇ)
-ಬ್ಬರ ಋಣವಿನ್ನೂ ಇರಬಾರದೇಕೆ?
ಲಿಪಿಗಾರನಗಿಷ್ಟು ಕಾಠಿಣ್ಯವೇಕೆ?
ಮೇಸ್ತ್ರಿಯ ಮರಿ ಹೋಯ್ತವನ ವಶಕೆ!
ಕೆಟ್ಟಿತೇ? ನಿರಂಜನಾದಿತ್ಯನಾ ಮೇಕೆ???


ದೇಶ, ಕಾಲ, ಕಟ್ಟು ಹರಿದಾಪ್ತ ನಿರಂಜನಾದಿತ್ಯ!

ಕ್ತಿಯಾಸಕ್ತಿ, ಭಕ್ತಿ, ಭುಕ್ತಿ, ಮುಕ್ತಿದಾತನಾದಿತ್ಯ!
ಕಾರ್ಯ, ಕಾರಣ, ಧರ್ಮ, ಕರ್ಮ, ನೇಮ, ನಿಷ್ಠನಾದಿತ್ಯ!
ಯ, ಸ್ಥಿತಿ, ಗತಿಗಳಿವನಿಜಸ್ಥಿತಿಯಾದಿತ್ಯ!
ಥಿಣದೋರಿ, ಕರುಣೆಬೀರಿ, ಕಾಯುವನಾದಿತ್ಯ! (ಅ)
-ಟ್ಟು, ಸುಟ್ಟು, ಹೊಟ್ಟೆಲಿಟ್ಟು, ಗುಟ್ಟು ರಟ್ಟುಗೈವನಾದಿತ್ಯ!
ರಸಿ, ಮೆರೆಸಿ, ಮರಸಿ ಬೆರೆಸುವನಾದಿತ್ಯ!
ರಿಕ್ತನಾದ, ವಿರಕ್ತನಾದ, ಗುರುದೇವನಾದಿತ್ಯ!
ದಾನಶೂರ, ಪ್ರಾಣಾಧಾರ, ವರಗಂಭೀರನಾದಿತ್ಯ! (ಆ)
-ಪ್ತರಾಪ್ತಾಪದ್ಭಾಂದವನಂಬುಜಾಪ್ತ ಮಿತ್ರನಾದಿತ್ಯ! (ಆ)
ನಿಶಿ, ಹುಸಿ, ವಿಪ, ಬಿಸಿ ಘಾಸಿಗೈವವನಾದಿತ್ಯ!
ರಂಗನಂಗನಾಗಿ ಸಂಗಡಿಗನಾಗಿಹನಾದಿತ್ಯ!
ಯ, ವಿಜಯ, ವಿಮಲ ನಿಧಿಗಾಶ್ರಯನಾದಿತ್ಯ!
ನಾಗಶಯನ, ನಾರಾಯಣ ನಾಮಾನಂದನಾದಿತ್ಯ!
ದಿಗಂಬರಗಿಷ್ಟಾಂಬ ರೌದುಂಬರಾನಂದನಾದಿತ್ಯ!
ತ್ಯಜಿಸುವನೆಲ್ಲರನು ಸಂಜೆ ನಿರಂಜನಾದಿತ್ಯ!!!

ಕನ್ನಡದರ್ಪಣೆ ವಿಮಲ ವಿಜಯ ಜಯಕ್ಕೆ! (ಎ)

-ನ್ನನರಿಯಲಿಕಿದು ಆಧುನಿಕ ಕನ್ನಡಕೆ! (ಎ)
-ಡರು, ತೊಡರುಂಟಾಗದಂತಿಹುದೀ ಸುಮುಖಕೆ!
ರ್ಶನವಿದರಿಂದಾಗುವುದಾನಂದ ಮನಕೆ! (ಅ)
-ರ್ಪಣಾನಂದನುಭವಿಸಲಿಕೆ ಬೇಕೆಚ್ಚರಿಕೆ! (ಎ)
-ಣೆಯಿಲ್ಲದಿದಿನಧಿಕಾರಿಗೀಯಬೇಡ! ಜೋಕೆ!
ವಿಚಿತ್ರವಾಗಿಹುದಿದರ ರಚನೆ ಜಗಕೆ!
ಲಿನವಿದರಿಂದುಂಟಾಗದೆಂದಿಗೂ ರೂಪಕ್ಕೆ!
ಕ್ಷಣವಾಗಿರುವಿದು ಭೂಷಣ ಕನ್ನಡಕ್ಕೆ!
ವಿಷಯ ವಿಷವಿಲ್ಲದಿದಾರೋಗ್ಯ ಜೀವನಕೆ!
ನಿಸುವಾಗಲೇ ಹೋಯ್ತು ಮನದ ಬೇಸರಿಕೆ!
ದುನಾಥನಾರ್ಶದಿದು ವಿಜಯ ಪತಾಕೆ!
ನ್ಮಜನ್ಮಾಂತರದ ವಾಸನೆ ಸಾಕಾಯ್ತಿದಕೆ!
ಮಳಾರ್ಜುನ ಭಂಜನನೇ ಬೇಕಾಯ್ತು ಅದಕೆ! (ಅ)
-ಕ್ಕೆ! ನಿರಂಜನಾದಿತ್ಯ ಮುಖ ಶೋಭೆ ಕನ್ನಡಕೆ!!!

ಅಪಚಾರ ಕೂಟ ಅನಾದರಕಟ್ಟ

ಡುತಲಿದೆ ಮನ ಕೂಟದಾ ಕಷ್ಟ!
ಚಾಕರರಪಚಾರದಿಂದಾಗಿಕ್ಕೂಟ! (ಅ)
-ರಗದೆ ಅಜೀರ್ಣವಾದರೂ ತಿಕ್ಕಾಟ!
ಕೂಗಾಟ, ಹಾರಾಟ, ಓಡಾಟ, ಭಂಡಾಟ! (ಅ)
-ಟಕಿಸಿದನಟ್ಟಿದರೆ ಸಿಗ್ವುದಟ್ಟ!
ನಾದರವೊಂದೇ ಇದಕೆಲ್ಲಾ ಶ್ರೇಷ್ಠ!
ನಾಳೆ, ಮತ್ತೆನ್ನದಿರಬೇಕೀ ನಿರ್ದಿಷ್ಟ!
ಣಿದು ಸಾಯಬೇಕುಪವಾಸಾ ಕೂಟ!
ಗಳೆ ಮಾಡ್ಲಿ! ಬಿಡಬಾರದು ಹಠ!!
ಡೆಗಟ್ಟದಾ ಪಟ್ಟ ಸಿದ್ಧಿಪುದಿಷ್ಟ! (ಅ)
-ಟ್ಟ! ನಿರಂಜನಾದಿತ್ಯಗಿಟ್ಟರದಿಷ್ಟ!!!

ಇಟ್ಟಂತಿದ್ದರೆ ಕಟ್ಟಿಲ್ಲ ಸಿಟ್ಟಿಲ್ಲ! (ಅ)

-ಟ್ಟಂಥೂಟುಂಡರಾಕೆಆ

ಪಕೆಡೆಯಿಲ್ಲ!
ತಿರುಗುವ ಚಕ್ರ ನೂಕಬೇಕಿಲ್ಲ! (ಅ)
-ದ್ಧಲಾಗದ ಜಲಕಾತಂಕವಿಲ್ಲ! (ಅ)
-ರೆದ ಮಸಾಲೆ ಹುರಿಯಬೇಕಿಲ್ಲ!
ಟ್ಟಿದ್ದಾಕಳಿಗೆ ಗೂಟ ಬೇಕಿಲ್ಲ! (ಅ)
-ಟ್ಟಿಟ್ಟಡಿಗೆಗೆ ಯೋಚನೆ ಬೇಕಿಲ್ಲ! (ಅ)
-ಲ್ಲಹನ ಇಲ್ಲಿ ಹುಡುಕಬೇಕಿಲ್ಲ!
ಸಿಹಿಯುಂಬಾಗ ಕಹಿ ನೆನಪಿಲ್ಲ! (ಅ)
ಟ್ಟಿದ್ದ ಉರಗನ ಭಯ ಮತ್ತಿಲ್ಲ! (ಅ, ಒ)
-ಲ್ಲದ್ದು ನಿರಂಜನಾದಿತ್ಯನಿಗಿಲ್ಲ!!!

ವೈಕುಂಠ ತೋರಯ್ಯ! ಏಕಾದಶಿ ಇಂದಯ್ಯ!

ಕುಂಟರೂ, ಭಂಟರೂ ಅಂದಿರಬೇಕಯ್ಯ! (ಹ)
-ಠ ಮಾಡಿದರದ ತೋರುವವರಾರಯ್ಯ?
ಮಾರಮಣನಲ್ಲಿರುವನೆಂಬರಯ್ಯ!
ಯ್ಯಜುಸ್ಸಾಮ ಗಾನವಾಗುತಿದೆಂಬರಯ್ಯ!
ಕಾದಶಿಗಿಂದಲ್ಲಿರಬೇಕೆಂಬರಯ್ಯ!
ಕಾಲಿಲ್ಲದವನ ಎತ್ತಿಕೊಂಡು ಹೋಗಯ್ಯ!
ರ್ಶನದ ಕಥೆ ಕೇಳಿ ಸಾಕಾಗಿದಯ್ಯ!
ಶಿಶುವ ಹೊರಟಟ್ಟಿ ಸುಖ ತಾಯ್ಗೇನಯ್ಯ!
ಇಂದಾದರೂ ನೀ ಕನಿಕರ ತೋರಿಸಯ್ಯ! (ಆ)
-ದರಿಸದಿರಲಪಕೀರ್ತಿ ನಿನಗಯ್ಯ! (ಅ)
-ಯ್ಯ! ನಿರಂಜನಾದಿತ್ಯ ಕಾದಿರುವನಯ್ಯಾ!!!

ತಪಸು, ಕನಸು, ಮನಸು, ಇರಿಸು!

ತಿಸು, ಗತಿಸು, ಮತಿಸು, ಸ್ಥಿತಿಸು!
ಸುರಿಸು, ಕೇರಿಸು, ಆರಿಸು, ಕೂರಿಸು!
ಲಿಸು, ನಿಲಿಸು, ಬಲಿಸು, ಜ್ವಲಿಸು!
ಡೆಸು, ಕೂಡ್ಸಿಸು, ಆಡಿಸು, ನಿದ್ರಿಸು!
ಸುಲಿಸು, ಇಳಿಸು, ಘಳಿಸು, ಸಲಿಸು!
ರಿಸು, ಹರಿಸು, ತರಿಸು, ಬೆರಿಸು!
ಮಿಸು, ದಮಿಸು, ಶಮಿಸು, ಗಮಿಸು!
ಸುಡಿಸು, ಗುಡಿಸು, ಬಡಿಸು, ಬಿಡಿಸು!
ಡಿಸು, ಕೂಡಿಸು, ತೊಡಿಸು, ಓಡಿಸು!
ರಿಪಿಸು, ಕುಪಿಸು, ಶಪಿಸು, ದಪಿಸು!
ಸುಪುತ್ರನಿರಂಜನಾದಿತ್ಯನೆನಿಸು!!!

ಮನ ಸತ್ತ ಮೇಲೆ ವೈಕುಂಠ!

ಯನಡಗಲು ವೈಕುಂಠ!
ವಿ ಮರೆಯಲು ವೈಕುಂಠ! (ಅ)
-ತ್ತಲೆಯದಿರಲು ವೈಕುಂಠ!
ಮೇವುಣದಿರಲು ವೈಕುಂಠ!
ಲೆಃಖಿಸದಿರಲು ವೈಕುಂಠ!
ವೈರಳಿದಿರಲು ವೈಕುಂಠ!
ಕುಂದಿಲ್ಲದಿರಲು ವೈಕುಂಠ! (ಹ)
-ಠ ನಿರಂಜನನಾ ವೈಕುಂಠ!

ದ್ವಾದಶಾದಿತ್ಯ ದರ್ನನ!

ಶೇಂದ್ರೈಕಾದಶೀ ಮನ!
ಶಾಸ್ತ್ರಾರ್ಥಮಾಡು ಮನನ!
ದಿಟ ಮಾಡಿನ್ನು ಜೀವನ!
ತ್ಯಜಿಸು ಭ್ರಾಂತಿ ಭಾವನ!
ತ್ತ ನೀ ಅರ್ಥ ಪಾವನ! (ದ)
-ರ್ನಮ, ದ್ವಾದಶೀ ಪಾರಣ! (ಅ)
-ನರ್ಥನಲ್ಲ ನಿರಂಜನ!!!

ಏಕಾದಶಿಯ ಉಪವಾಸ ಜಾಗರ!

ಕಾಮುಕ ಮನಸೇ ಏಕಾದಶಿ ಗಾರ!
ಶೇಂದ್ರಿಯ ದಮನುಪವಾಸ ಸಾರ!
ಶಿರವೆತ್ತಿದರೆ ವಿಷಯ ಜಾಗರ!
ಮ, ನಿಯಮವದಕೆ ಪಲಾಹಾರ!
ಪೇಕ್ಷಾಸೆಗಿರಲುಪವಾಸಗಾರ! (ಅ)
-ಪಚಾರವಾಗದಿರುವುದೇ ಜಾಗರ!
ವಾಸುದೇವನಿಗಿದೇ ವೈಕುಂಠಪುರ!
ತತ ಜಪ ಸಾಮೂಪ್ಯ ಸುಖ ಸಾರ!
ಜಾಗ್ರತ್ಸ್ವಪ್ನದಂತಿರೆ ಸಾರೂಪ್ಯಸಾರಾ!
ತಿ, ಸ್ಥಿತಿಯೊಂದಾಗಿ ಸಾಯುಜ್ಯ ಸಾರ! (ಅ)
-ರ ನಿರಂಜನಾದಿತ್ಯ ದ್ವಾದಶೀ ಸಾರ!!!

ರೀತಿ, ನೀತಿ, ಎಂಬುದು ಪದ್ಧತಿ!

ತಿಳಿಯದೆ ಗೈದರದೋಗತಿ!
ನೀತಿಗಾರತಿ ಬಾಳು ದುಸ್ಥಿತಿ!
ತಿಳಿಯದೆ ಅರ್ಥ ಮನ ಭ್ರಾಂತಿ
ಎಂದರಿದ ಹೋಗುವುದು ಪ್ರೀತಿ!
ಬುಧ ಜನಕಾಗಿದೆ ದುರ್ಮತಿ!
ದುರ್ಬುದ್ಧಿ ಎಲ್ಲೆಲ್ಲೂ ಕಾಣುತ್ತತಿ!
ಡುವುದು ದುಃಖ ಜನತತಿ! (ಶು)
-ದ್ಧವಾಗಿರಬೇಕು ಸದಾ ಮತಿ!
ತಿಳಿ! ನಿರಂಜನಾದಿತ್ಯ ಗತಿ!!!

ಜಯ ಸುಶೀಲ! ವಿಜಯ ಲೀಲ!

ಮ ಸ್ವಧರ್ಮ! ನಿಯಮ ಕರ್ಮ!
ಸುಮ ಸುಂದರ! ಸುಮನ ಅರ!
ಶೀಲ ವಿಮಲ! ಸುಶೀಲ ಬಲ!
ಯ ಸಕಾಲ! ಪ್ರಳಯ ಕಾಲ!
ವಿಧಿ ಹರಣ! ದುರ್ವಿಧಿ ರಣ!
ಗ ಜೀವನ! ಅಜಗ ಘನ!
ತಿ ಸ್ವಸ್ಥಿತಿ! ಶ್ರೀಪತಿ ಸ್ಥಿತಿ!
ಲೀಲ ಅನಿಲ! ಸಲೀಲ ಜಲ!
ಕ್ಷ್ಯ ನಿರಂಜನಾದಿತ್ಯ ಬಾಲ!!!

ಗುರುದತ್ತ ಜನುಮ ಇಂದು! (ಉ)

-ರುತರದಾನಂದೆನಗಿಂದು!
ಯೆಯಾಗ್ವುದೆಲ್ಲರಿಗಿಂದು! (ಉ)
ತ್ತರಾನುಗ್ರಹಕಾಗಿರಿಂದು!
ನಿಸಲಾರೆ ತಿರಿಗೆಂದು!
ನುತಿಸಲೆಂತು ನೀನೇ ಬಂಧು!
ಗನಿಗೆ ನಾನೆಂದೆಂದು!
ಇಂಗಿತ ಹೇಳಲದೇನೆಂದು!
ದುಷ್ಟಾರಿ ನಿರಂಜನ ಸಿಂಧು!!!

‘ಓಂ’ ದ್ರಾಂ ಓಂ ಗುರು ದತ್ತಾಯ ನಮಃ!

‘ದ್ರಾಂ’ ಕಾರಾದ್ವೈತ ಸಿದ್ಧಾಯ ನಮಃ!
‘ಓಂ’ ಕಾರ ಗುರು ಶಿವಾಯ ನಮಃ!
‘ಗು’ಹೆ ಗುಂಡಿ ಆನಂದಾಯ ನಮಃ!
‘ರು’ಚಿ ಪ್ರಸಾದಾನಂದಾಯ ನಮಃ!
‘ದ’ತ್ತ ತ್ರಿಮೂರ್ತಿ ರೂಪಾಯ ನಂಅ! (ಅ)
‘ತ್ತಾ’ಪ್ತರುದ್ಧಾರ ಗುರುವೇ ನಮಃ!
‘ಯ’ತಿಗಣ ಗಣ್ಯಾಂಗಾಯ ನಂಅಃ!
‘ಮಃ’ ಶ್ರೀ ನಿರಂಜನಾಂಗಾಯ ನಮಃ!

ಗೋವಿಂದ ನಿನ್ನರಸಿ ನಾ ಬಂದೆ!

ವಿಂಧ್ಯಾದ್ರಿ ಹಾದೆನಗಾಗ್ನೀ ಬಂದೆ!
ತ್ತನಾಗವತರಿಸಿ ಬಂದೆ!
ನಿಜವೆನ್ನಲಿರುವುದದೊಂದೆ! (ಎ)
-ನ್ನ ನೀ ಪರಿಕಿಸದಿರು ಮುಂದೆ!
ಸ ವಿರಸ ಮಾಡಿಲ್ಲ ನಿಂದ!
ಸಿಹಿ ನೀನೊಬ್ಬನೇ ನನ್ನ ತಂದೆ!
ನಾಥನೀನಾಗಿಹೆಯೆಂದು ನಿಂದೆ!
ಬಂಡಾಟ, ಬಡೆದಾಟ ಬಿಡಿಸಿಂದೆ! (ಎ)
-ದೆಗುಂಡಿಲಿ ನಿರಂಜನನೆಂದೆ!!!

ರಂಜನಾ! ಭವ ಭಂಜನಾ!! ಶ್ರೀನಿರಂಜನಾ || ಪ

ಯದೇವನ ಜನ್ಮ ಪಾವನ, ಮೋಹನಾ || ಅ.ಪ. ||
ನಾಗಮರ್ದನ, ಗೋವಧನಾಪ್ತ ಪಾಲನ!
ಗವಂತನ ಧೀಮಂತನಾಪ್ತ ಶಾಂತನ! ೧
ವಾಸುದೇವನಾತ್ಮ ಜಾತನ, ಶ್ರೀಕಾಂತನ!
ಭಂಡಕಂಸನ ಕೊಂದ ದೇವನ ಕೃಷ್ಣನ! ೨
ರಾಸಂಧನಾ, ವಧಿಸಿದಾತನಿಷ್ಟನ!
ನಾಶ ನರಕನಾರ್ತನಾಥನ ಗೋಪನ! ೩
ಶ್ರೀಧರನ, ರಾಧಾನಂದನ, ಮಾಧವನ!
ನಿಧಿಗರಸನ, ಕೃಷ್ಣನಾ, ಸುದರ್ಶನಾ! ೪
ರಂಗನ, ಪಾಂಡುರಂಗನ, ನಂದಕಂದನ!
ಗನ್ನಾಥನ ಭಕ್ತಿಪ್ರೀತನ, ಶ್ಯಾಮನ!
ನಾಥನೀನೆನಗೆಂದು ನಿತ್ಯ ಪ್ರಾರ್ಥಿಪೆನಾ!!!

ಚಿಕ್ಕಣ್ಣಾ! ಜಗವೆಲ್ಲಾ ದೊಡ್ಡಣ್ಣ! (ಅ)

-ಕ್ಕರೆಯಿಲ್ಲದಿಹುದು ಚಿಕ್ಕಣ್ಣ! (ಅ)
-ಣ್ಣಾ! ಬೊಮ್ಮಣ್ಣಾ, ರಾಮಣ್ಣ, ಕೆಂಗಣ್ಣ!
ನಿಸದಿರಲಿ ಕಲಹಣ್ಣ!
ಮನಿಸದಿರಲೆಲ್ಲಾ ಪಾಳಣ್ಣ! (ಅ)
-ವೆಲ್ಲಾ ಬಿಟ್ತು ಭಜಿಸಬೇಕಣ್ಣ! (ಅ)
-ಲ್ಲಾಡದಿರಬೇಕು ಮನಸಣ್ಣ! (ಅ)
-ದೊಡಲಾಮೇಲೆಲ್ಲಾ ಬೂದಿಯಣ್ಣಾ! (ಅ)
-ಡ್ಡಡಚಣೆಯ ಜನ್ಮ ಸಾಕಣ್ಣ! (ಅ)
-ಣ್ಣಪ್ಪ ನಿರಂಜನಾದಿತ್ಯಪ್ಪಣ್ಣ!!!

ದತ್ತನಿಗೆ ಕರ್ಪೂರ ಮಂಗಳಾರತಿ! (ಇ)

-ತ್ತ ದರ್ಶನವೆಲ್ಲರಿಗಿತ್ತಾರತಿ!
ನಿದರ್ಶನವತ್ತ ತೋರಿದಗಾರತಿ!
ಗೆಜ್ಜೆ, ತಾಳ, ಡೋಲು, ಬಾರಿಸಿ ಆರತಿ!
ಣ್ಣಿಗಾನಂದವಿತ್ತ ಮೂರ್ತಿಗಾರತಿ! (ಇ)
-ರ್ಪೂರ ಗುಡಿಸಿಲಲಿ ಇಷ್ಟದಾರತಿ!
ಸಭಕ್ಷ್ಯ ನೆ

ವೇದ್ಯ ಸಹಿತಾರತಿ!
ಮಂಗಲ ಸುಮ ಹಾರಾಲಂಕಾರಾರತಿ!
ಗನ ತೊಬಿತಿಂದಾ ಭಜನಾರತಿ! (ಇ)
-ಳಾವಲಯಕೆಲ್ಲಾ ಶಾಂತಿಯಾರತಿ!
-ರಬೇಕೆಲ್ಲೆಲ್ಲೂ ಸತತವಿಂತಾರತಿ!
ತಿರುಕ ನಿರಂಜನಾದಿತ್ಯಗಾರತಿ!!!

ನಿರಂಜನ ಶಿವ ಲಿಂಗ!

ರಂಜಿಸುವೊಡಲಾ ಲಿಂಗ!
ಯ! ವಿಜಯಗಾ ಲಿಂಗ!
ಯನಾನಂದಕಾ ಲಿಂಗ!
ಶಿವ ಸನ್ನಿಧಿಯಾ ಲಿಂಗ!
ರ ತೇಜಸ್ವಿಯಾ ಲಿಂಗ!
ಲಿಂಪಿಸಿದೆ ಭಸ್ಮಾ ಲಿಂಗ!
ತಿ “ನಿರಂಜನ” ಲಿಂಗ!

ವಿಮಲ ಪ್ರದಕ್ಷಿಣಾ ಸಾರಂಗ!

ನ ಸಂರಕ್ಷಣೆಗಾ ಸಾರಂಗ!
ಕ್ಷ್ಯ ಸಿದ್ಧಿಸಲಿಕಾ ಸಾರಂಗ!
ಪ್ರತ್ಯಕ್ಷ ಪರಮಾತ್ಮ ಸಾರಂಗ!
ಕ್ಷಾಧ್ವರ ಧ್ವಂಸನಾ ಸಾರಂಗ!
ಕಿತಿಪತಿ ವಿಖ್ಯಾತ ಸಾರಂಗ!
-ಣಾಧಿಪ ಗುಣಗಣ ಸಾರಂಗ!
ಸಾಕ್ಷಿಭೂತರೂಪನಾ ಸಾರಂಗ!
ರಂಗ ಪಾಂಡೂರಂಗನಾ ಸಾರಂಗ! (ಅ)
-ಗಮ್ಯನೀ “ನಿರಂಜನ” ಸಾರಂಗ!

ಎಲ್ಲಾ ಆಯಿತಂತೆ! (ಎ)

-ಲ್ಲಾ ದರೇನಾದಂತೆ?
ಗೋದಿದೆಯಂತೆ!
ಯಿದಿರು ನೋಡಂತೆ!
ತಂದೆ, ತಾಯ್ನಾನಂತೆ!
ತೆರೆ ಮರೆಯಂತೆ!!!

ವಿಜಯ ಶಾಂತಿ, ವಿಶ್ವೇಶ್ವರ ಪ್ರೀತಿ!

ಗಳ ಭ್ರಾಂತಿ, ಸಮರಸ ಶಾಂತಿ!
ದುನಾಥ ಪ್ರೀತ್ಯರ್ಜುನ್ನ ಕ್ಯಾತಿ!
ಶಾಂಭವಿ ಪ್ರೀತಿ, ಶಂಕರನ ಶಾಂತಿ!
ತಿತಿಕ್ಷಾ ರೀತಿ, ಮನಕೀ ಸ್ವಸ್ಥಿತಿ!
ವಿಕಲ್ಟದಾ ಮತ್ಯಾಜನ್ಮಾಪಖ್ಯಾತಿ!
ಶ್ವೇತಾಂಬರಿಯಾರಾಧ್ಯ ಸರಸ್ವತಿ! (ವಿ)
-ಶ್ವನಾಥ ಭಕ್ತಿ ಶಿವಾನಂದಾಸಕ್ತಿ!
ಘುವರನಾಸ್ತಿ, ಮಾರುತಿ ಕೀರ್ತಿ!
ಪ್ರೀತಿ ನಾಮಾಸಕ್ತಿ ಸೀತೆಯ ಶಾ

ತಿ!
ತಿಳಿ! ನಿರಂಜನಾದಿತ್ಯ ನೀ ಶಾಂತಿ!!!

ನಿರಂಜನ ನಿತ್ಯ ಬ್ರಹ್ಮಚಾರಿ!

ರಂಜನಿ ಅಂದಳು ವ್ಯಭಿಚಾರಿ!
ಪ, ತಪದಿವ ಸದಾಚಾರಿ!
ರನೇನರಿತಿಹಾ ಕಂಸಾರಿ?
ನಿಜವೇನರಿವಳಾ ಹಾದರಿ?
ತ್ಯಜಿಸಿಹನಾತಿಂದ್ರಿಯ ವೈರಿ! (ಇ)
-ಬ್ರರಸಿಯರಾತ ಬ್ರಹ್ಮಚಾರಿ! (ಬ್ರ)
-ಹ್ಮಕುಲಕೆಲ್ಲಾ ಏತ ಮಾದರಿ!
ಚಾಣಾಕ್ಷನಿವ ಲೊಕೋಪಕಾರಿ! (ಇ)
-ರಿ, ನಿರಂಜನಾದಿತ್ಯಗಾಗಿರಿ!!!

ಮುಗಿಲು ಮುಸುಕಿದಂಬರ!

ಗಿಡ, ಮರವೆಲ್ಲಾ ಸುಂದರ! (ಅ)
-ಲುಗಾಡದಿದೆ ಈ ಮಂದಿರ!
ಮುದದಿದೆ ಮನವೆಲ್ಲರ!
ಸುಳಿವಿಲ್ಲೆನ್ನಂಬರೇಶ್ವರ!
ಕಿವಿಗಾಯ್ತು ಬಂಡಿಯ ಸ್ವರ! (ಅ)
-ದಂಗದಲಿದೊಂದು ಗೋಪುರ!
ಲು ಸೋಜಿಗ್ವಿಜಯೋದರ!
ವಿ ನಿರಂಜನ ಗಂಭೀರ!!!

ಮಂಜುಳ ಜಲ ನಾದಸ್ವರ!

ಜುಳು ಜುಳು ಹರಿವಾ ನೀರ! (ಅ)
-ಳತೆ ಮಾಳ್ಪವರಾರೀ ನೀರ?
ಳಕಕಿದೊಳ್ಳೆಯ ನೀರ! (ಅ)
-ಲರ್ಗಿಡಗಳಿಗಿದಾಹಾರ!
ನಾರಾಯಣಾಗಿದರ್ಘಾಸಾರ! (ಅ)
-ದರಲಿನ್ನೇನಿಲ್ಲ ನಿಸ್ಸಾರ!
ಸ್ವರವಿದು ಬಹು ಗಂಭೀರ!
ನ್ನ “ನಿರಂಜನ” ಶೃಂಗಾರ!!!

ಗುರು ನಿರಂಜನಾದಿತ್ಯ ದತ್ತ! (ಅ)

-ರುಣ ಸಾರಥ್ಯಂಬರದಿ ದತ್ತ!
ನಿಗಮಾಗಮ ಗೋಚರ ದತ್ತ!
ರಂಗಿ ಛಾಯಾ ದರ್ಶನದಿ ದತ್ತ!
ಗದಾದ್ಯಂತ ವಂದ್ಯನಾ ದತ್ತ!
ನಾರದ ಭೂಮಿಗಿಳಿಸಿದ ದತ್ತ!
ದಿಗಂಬರೌದುಂಬರಾಪ್ತ ದತ್ತ! (ಅ)
-ತ್ಯಪಾರಾಕಾಶದಂತೀತ ದತ್ತ!
ಯಾಮೂರ್ತಿ ದನುಜಾರಿ ದತ್ತ! (ಅ)
-ತ್ತ, ಇತ್ತ, ಆಕಾಶದತ್ತ ದತ್ತ!!!

ಕೊಡು ‘ಪಾಸು’ ಕೆ

ಲಾಸಕ್ಕಮ್ಮಾ! (ಅ)

-ಡ ಬೇಗೂಟ ಕಪಾಲಕ್ಕಮ್ಮಾ!
ಪಾಯ್ಸದೂಟೆನಗೆ ಬೇಕಮ್ಮಾ!
ಸುಮ್ಮನೆ ಕಾಲ ಹೋಗ್ತಿದಮ್ಮಾ!
ಕೆ

ಧಾರಾಳವಿರಿಲ್ಲ ಸುಂದ್ರಮ್ಮಾ!
ಲಾಭ ನನ್ನಿಂದೇನಿಲ್ಲವಮ್ಮಾ!
ಸುಜ್ಜನನೆಂದು ತಿಳಿಯಮ್ಮಾ! (ಅ)
-ಕ್ಕರೆಯ ತಾಯಿ ನೀನಾಗಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯ ಸಿಂಹ!!!

ಪಾತಕ ಮಲ ಬಿಡಿ, ಪಾದ ಕಮಲ ಪಿಡಿ!

ರಲೆ ತಂಟೆ ಬಿಡಿ, ತಂದೆಯಡಿಗೆ ಓಡಿ!
ಪಟದ ಆಟ ಬಿಡಿ, ಅಪ್ಪನಾಟ ನೋಡಿ!
ನೆ ಮಠ ಬಿಡಿ, ಮಠಾಧೀಶನನು ಕೂಡಿ!
ಜ್ಜೆ, ಗೆಜ್ಜೆ ಬೇಡಿ, ಅಜ್ಜ ಬೊಮ್ಮನನು ಬೇಡಿ!
ಬಿಳಿ. ಕಪ್ಪೆನಬೇಡಿ, ಅಪ್ಪನ ಬಿಡಬೇಡಿ! (ಇ)
-ಡಿಯಡಿ ಮುಂದಿಡಿ, ಕಾಲು ಜಾರಿ ಬೀಳಿಬೇಡಿ!
ಪಾಡ್ಯಾಡಿ, ಕುಣಿದಾಡಿ, ದಣಿದೆನೆನಬೇಡಿ! (ಇ)
-ದಕದಕೆಂದಿರಬೇಡಿ, ನಿಜ ಬಿಡಬೇಡಿ!
ಷ್ಟಕೋಟಲೆಗಂಜಬೇಡಿ, ಭಜನೆ ಮಾಡಿ!
ದ್ವೆ, ಮುಂಜಿಗಳ ಬೇಡಿ, ಗುರುನಾಮ ಪಾಡಿ!
ಕ್ಕ ಲೆಃಖ ಬೇಡಿ, ಇಕ್ಕಿದನು ತಳ್ಳಬೇಡಿ!
ಪಿರಿ,ಕಿರಿದೆನಬೇಡಿ, ವಿರೋಧಿಸಬೇಡಿ! (ಇ)
-ಡಿ! ನಿರಂಜನಾದಿತ್ಯನಲ್ಲಿ ವಿಶ್ವಾಸವಿಡಿ! ೧೫೫

ಬೆಟ್ಟದಂಥಾ ಮುಗಿಲು ಹಿಟ್ಟಿನಂತರೆ ಕ್ಷಣದಲ್ಲಿ!

-ಟ್ಟಂತಿರುವಾಗ ಕಾಲಾಕಾಲ ಚಿಂತೇಕೆ ಮನದಲ್ಲಿ?
ದಂಗುಡಿದಂತಿಹುದು ಈ ದೃಶ್ಯ ಗಗನದಲ್ಲಿ! (ಇಂ)
-ಥಾ ಲೀಲೆಯನು ಕಂಡರೂ ತಾಳ್ಮೆಗೆಡುವುದಲ್ಲಿಲ್ಲಿ!
ಮುದಗೆಡದಡಿಗಡಿಗೆ ನಿಲಿಸೊಂದೆಡೆಯಲ್ಲಿ!
ಗಿರಿಗಂಜಿ ಗುರಿ ಕಡೆಗೋಡದಿರಲರ್ಥವೆಲ್ಲಿ?
ಲುಬ್ದತನ ಬಿಟ್ಟಿರು ಧಾರಾಳದಲ್ಲೆಲ್ಲಿ!
ಹಿತಕಾರಿ ತಪಕಿರಿಸಿರಲೇನು ಸಂದೇಹೆಲ್ಲಿ? (ಇ)
-ಟ್ಟಿಹನೊಂದು ಗುಟ್ಟನು ಭವಿಷ್ಯಕಾಗೆನ್ನಂಗದಲ್ಲಿ!
ನಂಬಿ ಕಾದಿರಬೇಕು ಕಾಲ ಬರುವ ತನಕಿಲ್ಲಿ!
ಡವಾಗುತಿದೆಂದಾತುರಿಸದಿರು ಮನದಲ್ಲಿ!
ರೆಸಿಗೆ ತುಂಬದೆ ಚುಚ್ಚದಿರಬೇಕು ಗಾಯದಲ್ಲಿ!
ಕ್ಷಣದಸಹನೆ ಗತಿಗೇಡು ಪರಿಣಾಮದಲ್ಲಿ! (ಅ)
-ಣಕಿಸಲಿ, ನಿಂದಿಸಲಿ, ಕರ್ಮಿರಲಿ ನಿಜದಲ್ಲಿ!
ತ್ತನೀವಮೃತ ತುತ್ತಿಗಾಗಿರಲಿ ಜನ್ಮವಿಲ್ಲಿ! (ಇ)
ಲ್ಲಿ ನಿರಂಜನಾದಿತ್ಯನಿರುವ ಭರವಸದಲ್ಲಿ!!!

ಚಕ್ರ ತಿರುಗಿತು! ವಕ್ರ ಹರಿಯಿತು!

ಕ್ರಮ ಜರುಗಿತು! ಭ್ರಮೆ ಕಳೆಯಿತು!!
ತಿಥಿ ಮುಗಿಯಿತು! ಮತಿ ಬೆಳಗಿತು!!
ರುಚಿ ಅಳಿಯಿತು! ಶುಚಿ ಉಳಿಯಿತು!!
ಗಿರಿ ನಡುಗಿತು! ಧೆ

ರ್ಯ ಪಡಿಸಿತು!!
ತುಟಿ ಅದುರಿತು! ದಿಟ ಬದುಕಿತು!!
ನ ಉರಿಯಿತು! ಘನ ಉದಿಸಿತು!!
ಕ್ರತು ನಡೆಯಿತು! ವ್ರತ ಫಲಿಸಿತು!!
ಸ್ತ ಸ್ವಸ್ಥವಾಯ್ತು! ಸ್ಥಿತಿ ಸ್ಥಿರವಾಯ್ತು!!
ರಿಪು ಅಡಗಿತು! ಪುರಿ ಅಡಸಿತು!!
ಯಿಂಪು ಕೇಳಿಸಿತು! ತಂಪು ಸುಳಿಯಿತು!!
ತುಷ್ಟಿ ನಿರಂಜನಾದಿತ್ಯಗುಂಟಾಯಿತು!!!

ಶಿವಾನಂದ ಕಾರ್ಯದರ್ಶಿ!

ವಾಸುದೇವ ಮಾರ್ಗದರ್ಶಿ!
ನಂಜುಂಡಯ್ಯ ದೂರದರ್ಶಿ!
ತ್ತಾತ್ರೇಯ ನಿಜದರ್ಶಿ!
ಕಾರ್ತಿಕೇಯ ಗುಣದರ್ಶಿ! (ಆ)
-ರ್ಯ ಕಾಶ್ಯಪ ಜ್ಞಾನದರ್ಶಿ!
ಂಡಧರ ಧರ್ಮದರ್ಶಿ! (ಇ)
-ರ್ಶಿ! ನಿರಂಜನಾದಿತ್ಯರ್ಶಿ ಒ

ಶ್ರೀ!!!

ವಿಮಲ ನಿರಂಜನಾದಿತ್ಯರ್ಧನಾರೀಶ್ವರನಯ್ಯ!

ಲವಿರದ ಇಚ್ಛಾಶಕ್ತಿ ಸ್ವರೂಪ ಜಯವಯ್ಯ!
ಯಕಾರಿ ಕ್ರಿಯಾಶಕ್ತಿ ಸ್ವರೂಪ ವಿಜಯವಯ್ಯ!
ನಿರ್ಮಲ ಶೀತ ಶಿವ ಶಿರ ಗಂಗಾ ಸುಶೀಲವಯ್ಯ!
ರಂಗುರಂಗಾಗಿ ಶೋಭಿಪಾದಿತ್ಯೆಲ್ಲಕೂ ಮೂಲನಯ್ಯ!
ಗಕೆಲ್ಲಾ ಬೇರ್ಬೇರಾದರೂ ಅವರೆಲ್ಲರೊಂದಯ್ಯ!
ನಾತದ ಸಂಸಾರದಂಟಿಂದಿದ ಮರೆತಿಹರಯ್ಯ!
ದಿಟವಿದರಿಯಲಿಕೆ ಗುರುಕರುಣೆ ಬೇಕಯ್ಯ! (ಅ)
-ತ್ಯಗತ್ಯ ಶ್ರದ್ಧಾ, ಭಕ್ತಾಸಕ್ತಿ, ವಿರಕ್ತಿ ಇದಕಯ್ಯ! (ಅ)
-ರ್ಧನಾರೀಶ್ವರ ಪರಮೇಶ್ವರ ನಿಂತಿರುವನಯ್ಯ!
ನಾಮ ಶ್ರೀರಾಮದಿವಗೆ ಪರಮ ಪ್ರಿಯವಯ್ಯ! (ಆ)
-ರೀತಗೆ ಸಮಾನರಾಗಿಹರು ತ್ರಿಲೋಕದಲಯ್ಯ! (ಅ)
-ಶ್ವಮೇಧಾದಿ ಯಾಗಗಳಿವಗೇನೂ ಬೇಕಿಲ್ಲವಯ್ಯ!
ಸವಾದ ಭಕ್ತಿ, ಭಜನೆಯಿಂದಿದು ಸಿದ್ಧಿ ಅಯ್ಯ!
ರರಿದನಾದರಿಸಿ ವೃಥಾ ದುಃಖಿಸುವರಯ್ಯ! (ಅ)
-ಯ್ಯ! ನಿರಂಜನಾದಿತ್ಯನಿದ ನಿತ್ಯ ತೋರುವನಯ್ಯ!!!

ನಾನೇನ ಬೇಡಲಿ ನಿನ್ನನೆನ್ನಯ್ಯ?

ನೇಮಿಸಿದಂತೆ ಇರುವೆ ನಾನಯ್ಯ!
ನ್ನದೆಂಬುದು ನನಗಿಲ್ಲವಯ್ಯ!
ಬೇಸರ ನಾನೇಕೆ ಪಡಬೇಕಯ್ಯ? (ಅ)
-ಡಗಿರುವ ನೀನೆನ್ನೂಳೊಳಗಯ್ಯ! (ಆ)
-ಲಿಪಿ, ಪಾಲಿಪ ಕರ್ತ ನೀನೇ ಅಯ್ಯಾ!
ನಿಶಿ, ದಿನವಿಂತು ನಂಬಿಹೆನಯ್ಯಾ! (ಅ)
-ನ್ನ, ಪಾನಗಳಿತ್ತಿರಿಸಿಹೆ ಅಯ್ಯಾ!
ನೆನಪು ನಿನ್ನದು ಸದಾಗುತ್ತಯ್ಯ! (ಅ)
-ನ್ನಲೇನಿದೆಲ್ಲಾ ನೀನೇ ಬಲ್ಲೆಯಯ್ಯಾ! (ಅ)
-ಯ್ಯ! ನಿರಂಜನಾದಿತ್ಯನಿಷ್ಟವಯ್ಯಾ!!!

ಶಾಮಮೋಹನನಿರುವನು ಧ್ಯಾನ ಗುಂಡಿಯಲ್ಲಿ!

ನಸೋತು ಭಕ್ತ ಮೂರಾ ಭಜಿಸುತಿಹಳಿಲ್ಲಿ!
ಮೋಹನ ಗಿರಿಧಾರಿ ಗಿರಿಯಾಗ್ನಿಂದಿಹನಲ್ಲಿ!
ದನವಿದನರಿಯದಿಹಳು ರಾಧೆಯಲ್ಲಿ!
ಗಧರನ ಪರಿ ವಿಚಿತ್ರವಾಗಿಹುದಿಲ್ಲಿ!
ನಿರುಪಾಯಲಾದಬಲೆಯಳುತಿರುವಳಲ್ಲಿ! (ಅ)
-ರುಹಬೇಕಾರಿವನಂತರಂಗವನವಳಲ್ಲಿ! (ಅ)
-ವಳೇ ಅರಿತು ತಾನವನಂತಿರುತಿಹಳಲ್ಲಿ!
ನುಡಿಯಿಲ್ಲದೇ ಪ್ರದಕ್ಷಿಣೆ ಹಾಕುತಿಹಳಲ್ಲಿ!
ಧ್ಯಾನಿ, ಶ್ಯಾಮನಿಹನಿಲ್ಲಿ ಸಹಜಾನಂದದಲ್ಲಿ!
ಯನಗಳವನದೈಕ್ಯವಂಬರದಲಲ್ಲಿ!
ಗುಂಡಿ, ಹೃದ್ಗುಂಡಿ! ಪಾವನ ಧ್ಯಾನಕಾನಂದವಿಲ್ಲಿ!
ಡಿಕ್ಕಿ ಹೊಡೆಸುವೇರುಪೇರೇನಿಲ್ಲವಿದರಲ್ಲಿ!
ಮ, ನಿಯಮಾದ್ಯಷ್ಟ ದಿಕ್ಪಾಲಕರಿಗಿಷ್ಟವಿದರಲ್ಲಿ! (ಇ)
-ಲ್ಲಿ ನಿಂದಿಹ ನಿರಂಜನಾದಿತ್ಯನ ನೋಡಿರಿಲ್ಲಿ!!!

ವಿಜಯ, ನಾಮಗಿರಿ, ಗುರು ಗುಹೇಶ! (ಅ)

-ಜ ಹರಿ, ಹರನಿವ ದತ್ತ ಸರ್ವೆ

ಶ!
ದುಪತಿಗತಿ ಹಿತ ಬಾನಿನೀಶ!
ನಾಶಗೈವಾಶಾಪಶ ತ್ರಿಭುವನೇಶ! (ಅ)
-ಮರ ಪದವನೀವ ಕಾಲ ಚಕ್ರೇಶ!
ಗಿರಿಜಾಶಂಕರ ತಿರಕೂಟಾಚಲೇಶ! (ಅ)
-ರಿಕುಲ ಕಾಲ ಧೀರ ವೀರಭದ್ರೇಶ!
ಗುಣ ಗಣ ಕಾರಣ ಪರಬ್ರಹ್ಮೇಶ! (ಅ)
-ರುಣ ಸಾರಥಿ, ಗುರು ಮಾರುತಿಗೀಶ!
ಗುಣಮಣಿ, ಘನ ಫಣಿ ಭೂಷಣೇಶ!
ಹೇಯ ದೇಹ ಭಯದೂರ ಭಾರತೀಶ! (ಅ)
-ಶನ ನಿರಂಜನಾದಿತ್ಯ ಮಾಯಾಧೀಶ!!!

ಪಾಡಿದರು ತಾಯಂದಿರು! (ಉ)

-ಡಿಸಿ ರಾಗ ಪೀತಾಬರ! (ಅ)
-ದನಾಲಿಸೆ ಮನೋಹರ!
ರುಜು ಸಾರ ನಿಜಾಪಾರ!
ತಾಪಹರ ಪಾಪದೂರ!
ಯಂಬುಗಾರ ಬಿಂಬಮಾರ!
ದಿಟ ಮೀರ ಸಟೆದೂರ!
ರುಚಿ ನಿರಂಜನಾಕಾರ!!!

ಅಮೃತಾ! ನೀನಿರನವರತಾ || ಪ ||

ಮೃತ ನೀನಲ್ಲ ಭಜಿಸಿರುತಾ || ಅ.ಪ ||
ತಾಳ, ಮೇಳ ಸರಿಯಾಗಿರುತಾ!
ನೀತಿಲೆನ್ನನನುಸರಿಸುತ || ೧ ||
ನಿಜದಲೆನ್ನನರಿತಿರುತ!
ಸವೆಲ್ಲರಿಗುಣಿಸಿರುತಾ || ೨ ||
ಡೆ, ನುಡಿ ಸರಿಪಡಿಸುತ!
ಡಲಿಗಾಶಿಸದೆ ಇರುತಾ || ೩ ||
ಮಣ ರಮಿಪನಿದನಾತಾ!
ತಾ! ನಿರಂಜನಾದಿತ್ಯ ವೀಣಾ ತಾ ೪

ಸುದರ್ಶನ ಪ್ರತಿಭಾ ಶಾಂತಿಯ ಶೋಭಾ! || ಪ ||

ಮನಾ ಶಮನಾ ಈ ಮನ ಜಮುನಾ (ಸ್ಪ) || ಅ. ಪ. ||
ರ್ಶದ ಜೀವನ ಮೋಹನ ಪಾವನ!
ಯನ ನಳಿನ ಸುಂದರವದನಾ || ೧ ||
ಪ್ರಣವಾನಂದನ ಕಂದ ಮುಕುಂದಾ!
ತಿಮಿರವಜ್ಞಾನ ಹರಿವಾ ಕರುಣಾ || ೨ ||
ಭಾರವ ಹೊರುವ ಗುರುವೇ ಶ್ರೀವರ!
ಶಾಂತಾಕಾರ ಉದಾರ ಮಹಿಮಾಪಾರ || ೩ ||
ತಿಳಿಯುವದಳವೀ ಚಂಚಲಾ!
ದುಕುಲ ಸುಶೀಲ ಭೂ ಪರಿಪಾಲಾ || ೪ ||
ಶೋಕಾಕುಲ ಕಾಲ ಗೋಪಾಲ ಗೋವಳ!
ಭಾವಿಕ ನಿರಂಜನಾದಿತ್ಯ ನೀ ಬಾಲ || ೫ ||

ಭಾನುವಿನಾ ಸುದರ್ಶನ ವಿಶ್ವ ಪ್ರೀತಿ! (ಅ)

-ನುಭವಿಸಿದರೆ ಬರುವುದು ಕೀರ್ತಿ!
ವಿಜಯ ಜಯ ಸಾಧಿಸಬೇಕೀ ಖ್ಯಾತಿ!
ನಾರಾಯಣನಡಿಗಿರಬೇಕು ಭಕ್ತಿ!
ಸುಮನೋಹರವಾಗಿದೆ ಗೀತಾಸಕ್ತಿ!
ತ್ತನಿದಕಿತ್ತಿಹನು ಎಲ್ಲಾ ಸ್ಫೂರ್ತಿ! (ದ)
-ರ್ಶನ ಭಾಗ್ಯಾನಂದ ಸದಾ ಮನ ತೃಪ್ತಿ!
ನಗಿದೊಂದೆ

ಅತುಳ ಬಲ ಶಕ್ತಿ!
ವಿಷಯ ವಿಚಾರ ದೂರ ಪರಮಾರ್ಥಿ! (ವಿ)
-ಶ್ವನಾಥ ಗೋಪೀನಾಥ ನೀ ಗುರುಮೂರ್ತಿ!
ಪ್ರೀತಿಯಿವನದಕಾಗಿ ನಾನು ಸ್ವಾರ್ಥಿ!
ತಿರುಪತಿ ನಿರಂಜನಾದಿತ್ಯ ನೀತಿ!!!

ಗುರುಕೃಪಾ ಸಪ್ತಾಹ ಸಮಾಪ್ತಿ! (ಇ)

-ರುವೆಡೆಗೇ ಬಂದಾಗಾಯ್ತು ಸ್ಫೂರ್ತಿ!
ಕೃಪೆಯಿದು ದೆ

ವಿಕ ಸಂಪತ್ತಿ!
ಪಾರಮಾರ್ಥಿಕ ದರ್ಶನ! ತೃಪ್ತಿ!
ತತವಿರಬೇಕು ಈ ಪ್ರೀತಿ! (ಆ)
-ಪ್ತಾ ತುರಳಿಗಿದು ನಿಜಾಸಕ್ತಿ!
ರ್ಷ ತುಂಬಿತು, ಹೆಚ್ಚಿತು ಭಕ್ತಿ!
ರ್ವಮಂಗಳಕಿದೇ ಸುನೀತಿ!
ಮಾಡುವುದೇನು ಜಾತಿ, ವಿಜಾತಿ? (ಆ)
-ಪ್ತಿಷ್ಟ! ನಿರಂಜನಾದಿತ್ಯ ಮೂರ್ತಿ!!!

ಹಳೆಯ ಮಲವೀಗಿನ ತಲೆ ಭಾರ! (ಅ)

-ಳೆಯದನೀಗ, ಕುಡಿ ಬೇದ್ಯುಪ್ನೀರ!
ತಿ, ಗಣ, ಪ್ರಾಸ, ನೇಮ, ಛಂದಸ್ಸಾರ!
ತಿಗೆಡಿಸಬೇಡೀಗದಕಪಾರ!
ಯವಾಗಿ ಬರೆದರು ಹೀಗೆಂತಾರ?
ವೀತರಾಗನಾಗೆಂಬಾ ಗಾವಿಲ ಧೀರ!
ಗಿರಿ ಮನವಿರದಹನೇ ಗಂಭೀರ!
ಡೆ, ನುಡಿಯೊಂದಾಗ್ವುದೇ ಗೀತಾಚಾರ!
ತ್ವವಿದರಿತೀಗುಳುದವ ಶೂರ! (ಅ)
-ಲೆದಾಡಿ ಬೇಸತ್ತಾಗ್ವುದೇನುಪಕಾರ? (ಆ)
-ಭಾಸದ ಬಾಳು ಸಾಕಯ್ಯ! ಸಹೋದರ!
“ರವಿ ರಸಾಯನ” ನಿರಂಜನ ಸಾರ!!!

ಸುವಾಸನಾ ಕುಂಕುಮ ಪ್ರಸಾದ!

ವಾಸನಾ ನಾಶಕಿದೇ ಪ್ರಸಾದ!
ಹನಾ ಸ್ಥಿತಿಗಿದೇ ಪ್ರಸಾದ!
ನಾಮ ವಿಶ್ವಾಸಕಿದೇ ಪ್ರಸಾದ!
ಕುಂದಿಲ್ಲದಿರಲಿದೇ ಪ್ರಸಾದ!
ಕುಹಕಳಿಯಲಿದೇ ಪ್ರಸಾದ!
ತಿ ಬೆಳಗಲಿದೇ ಪ್ರಸಾದ!
ಪ್ರತಿಭಾ ಶಕ್ತಿಗಿದೇ ಪ್ರಸಾದ!
ಸಾಧನೆ ಸಿದ್ಧಿಗಿದೇ ಪ್ರಸಾದ!
ತ್ತ ನಿರಂಜನನ ಪ್ರಸಾದ!!!

ಬಾದಾಮಿ ಗೋಧಿ ಹಲ್ವ ನೈವೇದ್ಯ!

ದಾಶರಥಿಗಾ ರುಚಿ ನೈವೇದ್ಯ!
ಮಿಶ್ರೇಕರಸಾ ಪ್ರಿಯ ನೈವೇದ್ಯ!
ಗೋವಿಂದನಿಷ್ಟಾ ಸಿಹಿ ನೈವೇದ್ಯ! (ಅ)
-ಧಿಕಾರಿಗಿದಾ ಸಿದ್ಧ ನೈವೇದ್ಯ!
ರಿ ಭಜನಾ ನಿಜ ನೈವೇದ್ಯ! (ಹ)
-ಲ್ವ, ಶಿವನಾಮಾ ತೃಪ್ತಿ ನೈವೇದ್ಯ!
ನೈಜಾನಂದದಾ ಸ್ಥಿತಿ ನೈವೇದ್ಯ!
ವೇದಾಂತಾನಂದಾ ಜ್ಞಾನ ನೈವೇದ್ಯ! (ಆ)
-ದ್ಯಂತ ನಿರ

ಜನಾದಿತ್ಯ ನೈವೇದ್ಯ!!!

ಪ್ರಾಯಶ್ಚಿತ್ತವಾಯ್ತಂತೆ! ಆನಂದವಂತೇ!

ಶ ದೊರಕುವುದು ಖಂಡಿತವಂತೆ! (ನಿ)
-ಶ್ಚಿತನಾಗಿ ನಿಶ್ಚಿಂತೆಯಿಂದಿರುವಂತೆ! (ಎ)
-ತ್ತಲೂ ಭಯಪಡದೆ ಇರಬೇಕಂತೆ!
ವಾಸ್ತವವಿದನುಭವಿಸುವನಂತೆ! (ತಾ)
-ಯ್ತಂದೆಯಾಗಿ ಕಾಯುವವನವನಂತೆ!
ತೆರೆ ಮರೆ ಹರಿದು ಬರುವನಂತೆ!
ತುರಪಡದೆ ನಂಬಿರಬೇಕಂತೆ!
ನಂಬಿಗೆ ವ್ಯರ್ಥವೆಂದಿಗೂ ಆಗದಂತೆ!
ತ್ತನಿಗಿದು ಕೀರ್ತಿ ತರುವುದಂತೆ!
ವಂಚಕನವನಲ್ಲಿದು ನಿಜವಂತೆ!
ತೇರು ನಿರಂಜನಾದಿತ್ಯುತ್ಸವವಂತೆ!!!

ವಿಜಯ ಸ್ವದೇಶದಲ್ಲಿ!

ಯ ನಿಜಸ್ಥಿಯಿಯಲ್ಲಿ!
ಮ ಧರ್ಮ ಕರ್ಮದಲ್ಲಿ! (ಅ)
-ಸ್ವಸ್ಥ ಅನ್ಯ ದಾರಿಯಲ್ಲಿ!
ದೇಶ ತನ್ನ ಮನದಲ್ಲಿ!
ಕ್ತಿ ನಿತ್ಯ ನಿಷ್ಠೆಯಲ್ಲಿ!
ಯೆ ವಿಧೇಯತೆಯಲ್ಲಿ! (ಅ)
-ಲ್ಲಿ! ನಿರಂಜನಾದಿತ್ಯೆಲ್ಲಿ!!!

ಹಲವು ಮಾತೇಕೆನಗೆ ಬೇಕವನೊಲಿಮೆ!

ಕ್ಷ್ಯವೆನಗಿಲ್ಲಿತರ ಹವ್ಯಾಸದುಡಿಮೆ!
ವುಪೇಕ್ಷೆಯಪೇಕ್ಷೆಯಳಿದರವನ ಒಲಿಮೆ!
ಮಾನಾಪಮಾನವೆಲ್ಲರೆಕ್ಷಣದ ದುಡಿಮೆ!
ತೇಜೋರಾಶಿ ಸೂರ್ಯನದು ಇರಲಿ ಒಲಿಮೆ!
ಕೆಡಿಸುವುದಿಡಿಸುವುದವನ ದುಡಿಮೆ!
ತನಾಗಿರಲಾಗದಿರದವನೊಲಿಮೆ!
ಗೆಲುವು, ಸೋಲಿನ ಬದುಕವನ ದುಡಿಮೆ!
ಬೇರೇನು ಬೇಡೆನಗೆ, ಇರಲವನೊಲಿಮೆ!
ನಿಕರ ತೋರಿಸುವುದವನ ದುಡಿಮೆ!
ರಪ್ರಾಸಾದವೆಲ್ಲಾ ಅವನದೇ ಒಲಿಮೆ!
ನೊರೆಹಾಲು ನಿತ್ಯಸುಖ ಅವನ ಒಲಿಮೆ!
ಲಿಪಿ, ಪ್ರಾರಬ್ಧಾದಿಗಳೆಲ್ಲವನ ದುಡಿಮೆ!
ಮೆಚ್ಚಿಹೆನು ನಿರಂಜನಾದಿತ್ಯನ ಒಲಿಮೆ!!!

ಕರೆಯುವವರಾರೋ! ಕಳುಹುವವರಾರೋ! (ಒ)

-ರೆಯುವವರಾರೋ! ಅರಿಯುವವರದಾರೋ!
ಯುಕ್ತಾಯುಕ್ತ ಕಾಲ ಕರ್ಮವರಿತವರಾರೋ!
ಣ ಜಂಭದಹಂಕಾರ ಬಿಟ್ಟು ಹತ್ರ ಬಾರೋ!
ರಿಸುವವರಾರೋ! ಮೆರೆಸುವವರಾರೋ!
ರಾಧಾರಮಣ ಗೋವಿಂದ ಮುಂದೆ ನೀನು ಬಾರೋ!
ರೋಚ್ಚಿಗೆದ್ದವರ ಕೆಚ್ಚಡಾಗಿಸೆನ್ನ ಸೇರೋ!
ರುಣೆದೋರಿ ಬಳಿಯಸೇರಿ ಕೀರ್ತಿ ತಾರೋ! (ಉ)
-ಳುಹಲಿಕೀ ನಿಜ ಧರ್ಮ ನೀನು ಬೇಗ ಬಾರೋ!
ಹುಸಿ ದಿಟವಲ್ಲವೆಂದರಿವ ದಾರಿ ತೋರೋ!
ನವಾಸಿ ರಾಮನೇಕಾದೆಂದರಿವರಾರೋ?
ನಜ ಸಖಾದಿತ್ಯವಂಶಜನೆದುರಾರೋ?
ರಾವಣನವಸಾನಕಿದು ನೆಪವೆಂದಿರೋ!
ರೋಷ ನಿರಂಜನಾದಿತ್ಯನದಕಿದಿರಾರೋ???

ಬರೆಯುವ ಕರ ಭಾವ ನಿನ್ನದಯ್ಯಾ! (ಅ)

-ರೆಘಳಿಗೆ ನಾನಿನ್ನ ಬಿಟ್ಟಿಲ್ಲವಯ್ಯಾ!
ಯುಕ್ತಿ ದುರಾಸೆಗಳೆನಗಿಲ್ಲವಯ್ಯಾ!
ರ್ತಮಾನ ವರ್ತನೆಯೇ ನನ್ನದಯ್ಯ!
ಳೆದುದಕೆ ಚಿಂತಿಸುತಿಲ್ಲವಯ್ಯಾ!
ವಿ ನೀನೆನಗೆ ಮಾರ್ಗ ಬಂಧುವಯ್ಯಾ!
ಭಾಗವತನಾಗಿ ನಾನಿರುವೆನಯ್ಯಾ!
ಳಗೂ ಹೊರಗೂ ನೀ ತುಂಬಿಹೆಯಯ್ಯಾ!
ನಿನ್ನ ಬಿಟ್ಟರೆನಗಿಲ್ಲ ಗತಿಯಯ್ಯಾ! (ಅ)
-ನ್ನ, ವಸ್ತ್ರದ ಹಂಗು ಬೇಕಾಗಿಲ್ಲವಯ್ಯಾ!
ತ್ತಾತ್ರೇಯ ನೀನೆನ್ನನೆತ್ತು ಹೆತ್ತಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಕರುಣಾಳಯ್ಯಾ!!!

ನಿನ್ನ ಮಕ್ಕಳ ಖಾಪಾಡುವಾತ ನೀನೇ! (ಎ)

-ನ್ನವರೆಂಬಭಿಮಾನಿ ನೀನೊಬ್ಬ ಟಾನೇ?
ಮತೆ ನಿನ್ನಂತಾರಿಗೂ ಇಲ್ಲ ತಾನೇ? (ಅ)
-ಕ್ಕರೆಯಿಂದಾಲಿಸುವ ತಾಯಿ ನೀ ತಾನೇ? (ಹೆ)
-ಳವನೂ ಗಿರಿಯನೇರುವನು ತಾನೇ?
ಕಾಡಿಬೇಡುವಗತ್ಯವೇನಿಲ್ಲ ತಾನೇ?
ಪಾಡುತಿರಬೇಕು ನಿನ್ನ ನಾನು ತಾನೇ? (ಆ)
-ಡುವಾಟವೆಲ್ಲ ನಿನಗೆ ಪ್ರೀತಿ ತಾನೇ?
ವಾದ ಭೇದವೇನಿಲ್ಲ ನಿನಗೆ ತಾನೇ?
ರಳನ ಉದ್ಧಾರ ನಿನ್ನಿಂದ ತಾನೇ?
ನೀನೇ ನಾನೇನಾದರೂ ಕಾರಣ ತಾನೇ?
ನೇತ್ರ ನಿರಂಜನಾದಿತ್ಯ ನೀನೇ ತಾನೇ???

ನೀಡುವ ಕೈಗಡ್ಡಿ ಮಾಡಬೇಡ! (ಅ)

-ಡುವಡಿಗೆಗೆ ಆತಂಕ ಬೇಡ! (ಅ)
-ವರಿವರ ಮಾತು ಕೇಳಬೇಡ!
ಕೈಗೆ ಬಂದ ತುತ್ತು ತಳ್ಳಬೇಡ!
ಡಸಾಗಿ ಬಾಲ ಬಿಚ್ಚಬೇಡ! (ಅ)
-ಡ್ಡಿಯಡಚಣೆಗೆ ಅಂಜಬೇಡ!
ಮಾಡುವ ಕೆಲಸ ಬಿಡಬೇಡ! (ಅ)
-ಡಗಿಸಿ ಕೊಡುವಭ್ಯಾಸ ಬೇಡ!
ಬೇಡಿ, ಕಾಡಿ, ಪೀಡಿಸಿರಬೇಡ! (ಅ)
-ಡಗಿ ನಿರಂಜನನಾಡಬೇಡ!!!

ಇರಲೆನಗೆ ನಿರತ ನಿನ್ನ ಸೇವೆ ಒಂದೇ! (ಎ)

-ರಗಲಾರಿಗೆ? ಗತಿ ನಿನ್ನಡಿಯೊಂದೇ! (ಎ)
-ಲೆ ಮರೆಯ ಕಾಯಾಗಿರಲಿನ್ನು ಮುಂದೆ!
ಗೆಗೇಡಿಗೀಡು ಮಾಡದಿರು ತಂದೆ!
ಗೆಜ್ಜೆ, ತಾಲಾದಿಂದಾನಂದಿಸಿದೆನ್ನಿಂದೆ!
ನಿನಗದೀಗ ಬೇಡಾಯ್ತದೇಕೆ ತಂದೆ?
ಮಿಸಲೀ ಮನಸು ನಿನ್ನಲಿ ಮುಂದೆ!
ಪ್ಪೇನಿದ್ದರೂ ನೀ ಕ್ಷಮಿಸೆನ್ನ ತಂದೆ!
ನಿನ್ನಿಷ್ಟದಂತಿರಬೇಕೆಂಬಾಸೆಯೊಂದೇ! (ಎ)
-ನ್ನದೀಪ್ರಾರ್ಥನೆಯನಂಗೀಕರಿಸಿಂದೇ!
ಸೇರಿಸೆನ್ನನು ನಿನ್ನೊಳಗೆ ಈಗಿಂದೇ! (ಎ)
-ವೆಯಿಕ್ಕದೇ ನೋಡುವೆನಾನಂದದಿಂದೆ!
ಒಂದಲ್ಲದೆರಡೆನಗೆ ಬೇಡ ತಂದೆ!
ಬೇವ ನಿರಂಜನಾದಿತ್ಯನವನೊಂದೇ!!!

ನಿದ್ದೆ ಮುಗಿದೆದ್ದು ನಾನು ಬಂದೆ! (ಎ)

-ದ್ದೆನಜ್ಞಾನ ಗಾಢ ನಿದ್ರೆಯಿಂದೆ!
ಮುಗಿಯಿತಿಂದಿಗೆಲ್ಲಾ ಆ ನಿಂದೆ!
ಗಿಡುಗ ಹಾರಿತಿಲಿಯ ಹಿಂದೆ!
ದೆವ್ವ ಬಡಿಯಿತಿದನು ಮುಂದೆ! (ಎ)
-ದ್ದು ಕಂಡೆನಿದನಾನಂದದಿಂದೆ!
ನಾನಾಗಿ ನೋಡಿದೆನಿದನಿಂದೆ! (ಏ)
-ನು ಕನಿಕರನಿನಗೆಂದೆ!
ಬಂಧು, ಬಳಗವೆಲ್ಲಾ ನೀನೆಂದೆ! (ಎಂ)
-ದೆ ನಿರಂಜನಾದಿತ್ಯನದೆಂದೆ!!!

ಒಂದೇ ಸಮವಾಗಿ ಯಾವುದೂ ಇರವುದಿಲ್ಲ!

ದೇಹ ಹುಟ್ಟಿದಾಗಿದ್ದಂತೆ ಮತ್ತಿರುವುದಿಲ್ಲ!
ತ್ತ ಮೇಲಾ ರೂಪಾಕಾರಗಳಿರುವುದಿಲ್ಲ!
ನೆ, ಮಾರು, ಬದ್ಕು, ಬಾಳಿಂದಿನಂತೆ ನಾಳಿಲ್ಲ!
ವಾದ, ಭೇದಗಳು ಹಿಂದಿನಂತೆ ಇಂದೂ ಇಲ್ಲ!
ಗಿರಿಯಾದರೂ ಹಿಂದಿದ್ದಂತೆಯೇ ಇಂದಿಗಿಲ್ಲ!
ಯಾಗ, ಯೋಗದ ದೇಶದಲ್ಲಿಂದವುಗಳಿಲ್ಲ!
ವುದಯದಲಿ ಕಂಡಂತೆ ಅಸ್ತಮಾನಕ್ಕಿಲ್ಲ!
ದೂರಿ ಮೆರೆದವರು ದೂಷಿಸಲ್ಪಡದಿಲ್ಲ!
ದ್ದೂರಿಂದನ್ಯರೂರಿಗೆ ಹೋಗದವರಿಲ್ಲ!
ರುಚಿ ಸವಿದವರ್ಕಹಿ ವಾಕರಿಸದಿಲ್ಲ!
ವುಂಡವರುಪವಾಸವಿರದೆ ಎಲ್ಲೂ ಇಲ್ಲ!
ದಿಟವದುದೂ ಸಟೆಯೆನ್ನಿಸದಿರಲಿಲ್ಲ! (ಅ)
-ಲ್ಲ, ನಿರಂಜನಾದಿತ್ಯ, ಏಸುಕ್ರಿಸ್ತ ಬೇರಲ್ಲ!!!

ವಿಮಲ ಮನೋ ಸಂಕಲ್ಪ ನಿಶ್ಚಯ ಜಯ!

ಮಕಾರ ರಹಿತ ಪ್ರಯತ್ನಕ್ಕೆ ಜಯ!
ಯ ಗುರುದೇವನಲಾದರಾಗ ಜಯ!
ನಸನ್ಯರೂನವೆಣಿಸದಿರೆ ಜಯ!
ನೋವಿನಲಿ ಕನಿಕರ ತೋರಲು ಜಯ!
ಸಂಗಾತಿ ನಿಸ್ಸಂಗಿಯಾಗಿರಲಾಗ ಜಯ!
ನಸು ನೆನಸುತಳದಿರಲು ಜಯ! (ಅ)
ಲ್ಪರ ಸಹವಾಸ ತೊರೆದರಾಗ ಜಯ!
ನಿಜಗತಿಯಲ್ಲಿದ್ದರಾಗ ಜಯ! (ಆ)
ಶ್ಚರ್ಯವೇನಿಲ್ಲ! ಇರುವಂತಿದ್ದರೆ ಜಯ!
ಜ್ಞ, ಯಾಗಗಳಿಗಿರುವೀ ಗುರಿ ಜಯ!
ನನ, ಮರಣ ಹರಿಯುವುದೇ ಜಯ!
ತಿ ನಿರಂಜನಾದಿತ್ಯ ಸಾಯುಜ್ಯ ಜಯ!!!

ಅಲ್ಲಿನದು ಇಲ್ಲಿ! ಇಲ್ಲಿನದು ಅಲ್ಲಿ! (ಇ)

-ಲ್ಲಿರುವ ಗುರುದೇವನಿಹಲ್ಲೆಲ್ಲಿ!
ಡೆಯುವುದೆಲ್ಲಾ ಅವನಂತೆಲೆ

ಲ್ಲಿ!
ದುರಿತದೂರ ನೀ ಗುರುಕಾರ್ಯದಲ್ಲಿ!
ದರಿಯದಾಗಿದೆ ಕಳವಳದಲ್ಲಿ! (ಇ)
-ಲ್ಲಿ ವ್ಯವಸ್ಥೆಯಾಗುತಿದೆ ಜನರಲ್ಲಿ!
ದನುಭವಿಸಿದಾಗಾನಂದವಿಲ್ಲಿ! (ಇ)
-ಲ್ಲಿದೆಯೊಂದು ಸುಯೋಗ ಭಾವನೆಯಲ್ಲಿ!
ಯನಕಿದದೃಶ್ಯವಾಗಿಹುದಿಲ್ಲಿ!
ದುರ್ಭಾವವಳಿದಾಗಾನಂದವೆಲ್ಲೆಲ್ಲಿ!
ದಕಿರಬೇಕು ಸದಾ ಜಪದಲ್ಲಿ! (ಇ)
-ಲ್ಲಿಹ ನಿರಂಜನಾದಿತ್ಯಾ ರೀತಿಯಲ್ಲಿ!!!

ಭರವಸೆಯ ಮಾತುಗಳಿಗೆ ಕಾದಿಹೆನು!

ವಿಯುದಯಾಸ್ತ ನಿತ್ಯ ಸೇವಿಸುತಿಹೆನು!
ರ್ಷವೆರಡವನಿಗಾಗಿ ಕಳೆದಿಹೆನು!
ಸೆಖೆ, ಚಳಿ, ಮಳೆ, ಗಾಳಿಯಲಿ ನಿಂದಿಹೆನು!
ಶಕಾಗವನ ಸದಾ ಪ್ರಾರ್ಥಿಸುತಿಹೆನು!
ಮಾನಾವಮಾನ ಅವನಡಿಗರ್ಪಿಸಿಹೆನು!
ತುಚ್ಛಾತುಚ್ಛವೆನ್ನದೆ ಬಾಳುತಿರುತಿಹೆನು!
ರ್ವಕೆಡೆಗೊಡದಂತೆಚ್ಚರವಾಗಿಹೆನು! (ಉ)
-ಳಿಸಳಿವ ಭಾರವನದೆಂದಿಹೆನು! (ಹ)
-ಗೆತನವಿರಬಾರದೆಂದು ಬೇಡುತಿಹೆನು!
ಕಾಯಬೇಕು ಸನ್ನಿಧಿಯನೆಂದು ಪ್ರಾರ್ಥಿಪೆನು!
ದಿನ, ರಾತ್ರಿ ಧ್ಯಾನಮಗ್ನನಾಗಿರುತಿಹೆನು!
ಹೆದ್ದಾರಿ ಭಾಜನೆಯಾಗಬೇಕೆನುತಿಹೆನು! (ಅ)
-ನುದಿನ ನಿರಂಜನಾದಿತ್ಯ ನಾನಾಗಿಹೆನು!!!

ಏಕಾಗ್ರತೆಯೇ ಸಾರೂಪ್ಯ!

ಕಾಮಶೂನ್ಯವಾ ಸಾರೂಪ್ಯ!
ಗ್ರಹಿಸವನಾ ಸಾರೂಪ್ಯ!
ತೆರೆ ಹರಿದಾ ಸಾರೂಪ್ಯ!
ಯೇಕ ನಾಮವಾ ಸಾರೂಪ್ಯ!
ಸಾಧುತನವಾ ಸಾರೂಪ್ಯ!
ರೂಪ ಮರೆತಾ ಸಾರೂಪ್ಯ! (ಗೋ)
-ಪ್ಯವಾ ನಿರಂಜನಾದಿತ್ಯ!!!

ನಿಶ್ಚಲ ತತ್ವ ಸಮಾಧಿ ಸಾಯುಜ್ಯ! (ಉ)

-ಶ್ಚಲದ ನಿಜ ಸ್ಥಿತಿಯಾ ಸಾಯುಜ್ಯ!
ಯದ ಸಮಾಧಿಯದಾ ಸಾಯುಜ್ಯ!
ನ್ನಿಷ್ಟಮೂರ್ತಿ ತಾನಾಗಾ ಸಾಯುಜ್ಯ! (ತ)
-ತ್ವದರ್ಥವೆಲ್ಲಾ ಅದೊಂದಾ ಸಾಯುಜ್ಯ!
ತತಭ್ಯಾಸದಿಂದಾ ಸಾಯುಜ್ಯ!
ಮಾತಿಗಿದು ನಿಲುಕದಾ ಸಾಯುಜ್ಯ! (ಅ)
-ಧಿಕಾರಿ ಭಕ್ತಗಹುದಾ ಸಾಯುಜ್ಯ!
ಸಾಕಾರ, ನಿರಾಕಾರದಾ ಸಾಯುಜ್ಯ!
ಯುಕ್ತಿಯಲ್ಲದ ನಿಜದಾ ಸಾಯುಜ್ಯ! (ಆ)
-ಜ್ಯ ನಿರಂಜನಾದಿತ್ಯಗಿದಾ ಭೋಜ್ಯ!!!

ಯಮ, ನಿಯಮ, ಆಸನ, ಸತ್ಸಂಘ ಸಾಲೋಕ್ಯ!

ದ, ಮತ್ಸರವಳಿದಿದರಿಂದಾ ಸಾಲೋಕ್ಯ!
ನಿಗ್ರಹವಾಗಿಂದ್ರಿಯ ಇರುವುದಾ ಸಾಲೋಕ್ಯ!
ಶಕಾಗಿ ಬ್ರಹ್ಮಚಾರಿಯಾಗಿ ಆ ಸಾಲೋಕ್ಯ!
ನ ನಿರ್ಮಲವಾಗಿ ಸತ್ಯದಿಂದಾ ಸಾಲೋಕ್ಯ!
ಸ್ತೇಯನಾದಾಗ ಆಗುವದದಾ ಸಾಲೋಕ್ಯ!
ತತ ಜಪ, ಶ್ರವಣಾದಿಯಿಂದಾ ಸಾಲೋಕ್ಯ!
ಶ್ವರದಾಸ್ತಿ, ಧನಾಪರಿಗ್ರಹಾ ಸಾಲೋಕ್ಯ!
ತತಾಸನಾನುಷ್ಠಾನಗಳಿಂದಾ ಸಾಲೋಕ್ಯ! (ಸ)
-ತ್ಸಂಘಾಸಕ್ತಿಯಲಿರುವುದರಿಂದಾ ಸಾಲೋಕ್ಯ! (ಅ)
-ಘ ಹರಿದು ನಿಜಗುರಿಗಿರಲಾ ಸಾಲೋಕ್ಯ!
ಸಾಧಿಸೀ ಪರಿ ನಿತ್ಯವಿರಲಾಗಾ ಸಾಲೋಕ್ಯ!
ಲೋಕವಾಸನಾ ನಾಶವಾದರಾಗಾ ಸಾಲೋಕ್ಯ! (ಐ)
-ಕ್ಯ ನಿರಂಜನಾದಿತ್ಯನಲಾದಾಗಾ ಸಾಲೋಕ್ಯ!

ಪ್ರಾಣಾಯಾಮ, ಪ್ರತ್ಯಾಹಾರ, ನಿಸ್ಸಂಘಾ ಸಾ

ಈಪ್ಯ!

-ಣಾವ ಗುಣ ಚಿಂತಿಸಿ ನಿಸ್ಸಂಘದಾ ಸಾ

ಈಪ್ಯ!
ಯಾವ ವಿಷಯಕ್ಕೂ ಮನವೋಡದಾ ಸಾ

ಈಪ್ಯ!
ನ ಪ್ರಾಣಗಳ ಅನ್ಯೋನ್ಯದಿಂದಾ ಸಾ

ಈಪ್ಯ!
ಪ್ರತ್ಯಾಹಾರ, ಪ್ರಾಣಾಯಾಮಾನುಬಂಧಾ ಸಾ

ಈಪ್ಯ!
ತ್ಯಾಗ ಮಾಯೆಯಾಗಿ ಸತ್ಸಂಘದಿಂದಾ ಸಾ

ಈಪ್ಯ!
ಹಾದಿ ಸುಗಮವಿದೆಲ್ಲಕಾ “ನಾಮಾ” ಸಾ

ಈಪ್ಯ!
ಮಿಸಿದರಿದ್ರಲ್ಲಿ ಮನ ಸದಾ ಸಾ

ಈಪ್ಯ!
ನಿಸ್ಸಂಘವೆಂದರಿಂದ್ರಜಯದಿಂದಾ ಸಾ

ಈಪ್ಯ!
ಸ್ಸಂ!
ಸಿಯಿಲ್ಲದನುಸಂಧಾನದಿಂದಾ ಸಾ

ಈಪ್ಯ!
ಸಾಧನೆ ಶ್ರದ್ಧಾ, ಭಕ್ತಿಯಿಂದಾದಾಗ ಸಾ

ಈಪ್ಯ!


ರಾ, ಕಬೀರರನುಭವಿಸಿಹಾ ಸಾ

ಈಪ್ಯ! (ಪ್ರಾ)
-ಪ್ಯ ನಿರಂಜನಾದಿತ್ಯಾಗ್ರಹದಾ ಸಾ

ಈಪ್ಯ!!!

ಸತ್ಯಭಾಮಾ ಸಮಾನ ಸತಿ (ಇ)

-ತ್ಯರ್ಥದಿಂದೆಲ್ಲರಿಗೂ ಪ್ರೀತಿ!
ಭಾಮಾ ಭಕ್ತಿಯಿಂದಿರ್ಪಾ ಸತಿ!
ಮಾನ, ಮರ್ಯಾದೆಯೆಲ್ಲಾ ಪ್ರೀತಿ!
ರಳ ವಿಜಯಶಂಕರ ಸತಿ!
ಮಾತಿಲ್ಲದಿಹ ಕಾರ್ಯ ಪ್ರೀತಿ!
ಯ, ವಿನಯ ಪ್ರಿಯ ಸತಿ!
ರ್ವಾಪ್ತೇಷ್ಟರಿಗೆಲ್ಲಾ ಪ್ರೀತಿ!
ತಿಳಿ, ನೀ, ನಿರಂಜನ ಸತಿ!!!

ಗುಹಗುಣ ಗಣದೊಡನಾಟ ವಿಮಲಾಪೇಕ್ಷೆ!

ಲವು ಕಾಲದಾಪ್ತ ಸಖ್ಯವಿರಲೆಂಬಾಕಾಂಕ್ಷೆ!
ಗುರುಚಿತ್ತವಿದಕನುಕೂಲವಾದುದು ರಕ್ಷೆ! (ಹ)
-ಣ ಕಾಸಿನ ವ್ಯಾಪಾರಕಿದು ದೊರಕಿದ ಈಕ್ಷೆ!
ರ್ವ ದೂರವಾಗಿ ದುಸ್ಸಂಘಕಿರಬೇಕುಪೇಕ್ಷೆ! (ಹೆ)
-ಣವಾದರೂ ಬಿಡಲಾಗದಾ ಒಡನಾಟಕಾಂಕ್ಷೆ!
ದೊರಕಬೇಕಾದುದಕಾಗಿರಬೇಕು ತಿತಿಕ್ಷೆ! (ಎ)
-ಡರುತೊಡರನು ಬಿಡಿಸುವುದು ಗುರು ರಕ್ಷೆ!
ನಾಚಿಕೆ ಲಜ್ಜೆಗಳ ಬಿಟ್ಟ ತಿನಬೇಕು ಭಿಕ್ಷೆ! (ಇ)
-ಟಕದೆತ್ತರದಲ್ಲಿ ಕಟ್ಟಾದಿರು ಗುರು ನಕ್ಷೆ!
ವಿಚಾರ ಮರೆತಿರಬಾರದು ಶ್ರೀಗುರು ದೀಕ್ಷೆ!
ನವೀ ಸಂಬಂಧಕಾಗಿ ಬೇಡದರೇನು ಭಿಕ್ಷೆ?
ಲಾಭಾಲಾಭಗಳನೆಣಿಸದಿರಬೇಕಾಕಾಂಕ್ಷೆ!
ಪೇಚಾಟಪಡಿಸದೆ ಕಾಯ್ವದವನ ರಕ್ಷೆ! (ಭಿ)
-ಕ್ಷೆ, ಪರೀಕ್ಷೆ! ನಿರೀಕ್ಷೆ ನಿರಂಜನಾದಿತ್ಯ ರಕ್ಷೆ!!!

ಜಾತಿ ಬೇಕಾಗಿಲ್ಲ! ನೀತಿ ಉಳಿದಿಲ್ಲ!!

ತಿರುಗಬೇಕಿಲ್ಲ! ಹಗುರವಾಗಿಲ್ಲ!
ಬೇನೆ ಇಷ್ಟವಿಲ್ಲ! ಬಾವು ಇಳಿದಿಲ್ಲ!!
ಕಾಮ ಸುಖವಿಲ್ಲ! ರಾಮ ಮುಖವಿಲ್ಲ!!
ಗಿಡ ಹತ್ಬೇಕಿಲ್ಲ! ಹಣ್ಣು ಉದರ್ಲಿಲ್ಲ!! (ಅ)
-ಲ್ಲದ ಮಾಡ್ಬೇಕಿಲ್ಲ! ನಲ್ಲನ ಸೊಲ್ಲಿಲ್ಲ!!
ನೀಡು ಬೇಕಾಗಿಲ್ಲ! ಬೇಡು ಬಿಡಲಿಲ್ಲ!!
ತಿಥಿ ಹಾಕ್ಬೇಕಿಲ್ಲ! ಗತಿ ತಿಳೀಲಿಲ್ಲ!!
ರಿ ಹಚ್ಬೇಕಿಲ್ಲ! ಶೀತ ಹೋಗಲಿಲ್ಲ!! (ಅ)
-ಳಿಯುವಾಸೆ ಇಲ್ಲ! ಬಾಳು ನೇರಾಗಿಲ್ಲ!!
ದಿಕ್ಕು ದೆಸೆ ಇಲ್ಲ! ಹಕ್ಕು ಸಾಧಿಸಿಲ್ಲ!! (ಅ)
-ಲ್ಲಲ್ಲಾ, ನಿರಂಜನಾದಿತ್ಯನೆಲ್ಲಾ ಬಲ್ಲ!!!

ಮಾನಾಭಿಮಾನ ಮಾಧವನದಮ್ಮಯ್ಯಾ!

ನಾವೇಕದಕೆ ಚಿಂತಿಸಬೇಕಮ್ಮಯ್ಯಾ!
ಭಿಕ್ಷುಕನಿಗಕ್ಷಯನ ಚಿಂತಮ್ಮಯ್ಯಾ!
ಮಾಡಿಸಿದ ಮಾಡಿ ಮುಗಿಸ್ಬೇಕಮ್ಮಯ್ಯಾ!
ಯ, ವಿನಯವೊಂದೇ ನಮ್ಮದಮ್ಮಯ್ಯಾ!
ಮಾಯೆಯಾಟ ಕಳದಿರಬೇಕಮ್ಮಯ್ಯಾ!
ನವಂತರ ಮಾಯೆ ಮುಚ್ಚಿನಮ್ಮಯ್ಯಾ! (ಅ)
-ವರವರ ಕರ್ಮವರವರ್ಗಮ್ಮಯ್ಯಾ!
ಗುವಳು ಪೆಡತಲೆ ಮೃತ್ಯಮ್ಮಯ್ಯಾ!
ತ್ತನಿಗಿದೆಲ್ಲಲಕ್ಷ್ಯ ಕಾಣಮ್ಮಯ್ಯಾ! (ಅ)
-ಮ್ಮಗಲ್ಲದಿನ್ಯಾರಿಗೊರೆಯಲಮ್ಮಯ್ಯಾ? (ಅ)
-ಯ್ಯಾ! ನಿರಂಜನಾದಿತ್ಯನೇ ನಮ್ಮಮ್ಮಯ್ಯ!!!

ರಾಧಾಕೃಷ್ಣ ಬ್ರಹ್ಮಜ್ಞಾನಿ! (ನಿ)

-ದಾನಿ ದ್ವಾರಕಾಭಿಮಾನಿ!
ಕೃತ್ಯಧ್ಭುತಸುರ ಹಾನಿ! (ಕೃ)
-ಷ್ಣವರ್ಣಿ ಮುರಲೀಗಾನಿ!
ಬ್ರಹ್ಮಾನಂದ ಶಿರೋಮಣಿ! (ಬ್ರ)
-ಹ್ಮಚಾರಿ ನಿತ್ಯಭಿದಾನಿ!
ಜ್ಞಾನಾರ್ಜುನಗಿತ್ತ ದಾನಿ!
ನಿರಂಜನಾದಿತ್ಯ ಮೌನಿ!!!

ನಿರಂಜನಾದಿತ್ಯ ಮಹಾನುಭಾವ! (ಸಾ)

-ರಂಗೆನ್ನಂಗ ಸರ್ವಾಂಗ ಪ್ರಾದುರ್ಭಾವ!
ಗಕಿವನೊಬ್ಬನೇ ಗುರುದೇವ! (ಅ)
-ನಾದಿಮಧ್ಯಾಂತ ಹರಿ ವಾಸುದೇವ! (ಆ)
-ದಿತ್ಯನಾದಿವ್ಯಭಾವ ಸರ್ವಜೀವ! (ಅ)
-ತ್ಯಗತ್ಯ ಸೃಷ್ಟಿಗೆಲ್ಲಾಪ್ತ ಸಂಜೀವ!
ರೆಯಾದರಿವ ನಿರ್ಜಿ

ವ ಜೀವ!
ಹಾಲಿನಂತಿಹುದು ಶಕ್ತಿಪ್ರಭಾವ! (ಅ)
-ನುಗ್ರಹದಿಂದಳಿಯ್ವುದ್ಭೇದ ಪ್ರಭಾವ!
ಭಾವ, ವಿಶ್ವಸೇವಾ ಪ್ರೇಮ ಸ್ವಭಾವ! (ಅ)
-ವನೇ, ನಿರಂಜನಾದಿತ್ಯ ಮಾಧವ!!!

ಆದಿಶಕ್ತಿ, ಭಯ, ಭಕ್ತಿ, ಸದಾ ಸ್ಫೂರ್ತಿ!

ದಿವ್ಯ ಜ್ಯೋತಿ ವಿಶ್ವಪ್ರೀತಿ, ಕೃಪಾಮೂರ್ತಿ! (ಅ)
-ಶಕ್ತಿ ಹತಿ, ಹರ ಭೀತಿ, ಚಿರ ಕೀರ್ತಿ! (ಭ)
-ಕ್ತಿ, ಮುಕುತಿ, ರೀತಿ, ನೀತಿ, ಏಕ ಜಾತಿ! (ಗ)
-ಭಸ್ಥಿ ಸ್ಥಿತಿ, ಅಂತ್ಯ ಕ್ರಾಂತಿ, ಭ್ರಾಂತಿ ಶಾಂತಿ!
ತಿಪತಿ, ಅಜಗತಿ, ನಿಜಮತಿ!
ರ್ತಿ ತೃಪ್ತಿ! ಛಾಯಾಪತಿ, ಧರ್ಮಜ್ಞತಿ! (ರ)
-ಕ್ತಿ, ವಿರಕ್ತಿ, ಕರ್ಮಾಸಕ್ತಿ, ಸ್ವಸ್ಥವೃತ್ತಿ!
ಸ್ಯ ಜಾತಿ, ವರ್ಣದಾತಿ, ರಂಗನರ್ತಿ!
ದಾರಿಗಾರ್ತಿ, ಶಿವಶಕ್ತಿ, ಲೋಕನಾಥಿ!
ಸ್ಫೂರ್ತಿ, ಕೀರ್ತಿ, ಗುರುಮೂರ್ತಿ, ಮಾಯಾತೀತಿ! (ಅ)
-ರ್ತಿ ನಿರಂಜನಾದಿತ್ಯ ನಾಮ “ಅನ್ವರ್ಥಿ”!!!

ವೀರ್ಯದಾನಿ, ಕಲ್ಯಾಣಿ ಭವಾನಿ! (ಆ)

-ರ್ಯ ಋಷಿ ಮುನಿ ವಂದ್ಯ ಗೀರ್ವಾಣಿ!
ದಾನಿ, ನಿಧಾನಿಯಂಬಿಕಾ ಭವಾನಿ!
ನಿಜಮತಿಯನೀವಾ ಗೀರ್ವಾಣಿ!
ಣ್ಣಲಿ ಕಾಮನಿಹಾ ಭವಾನಿ! (ಇ)
-ಲ್ಯಾವುದೆನಗೀವಾಳಾ ಗೀರ್ವಾಣಿ? (ಉ)
-ಣಿಸಮೃತವೆನಗಾ ಭವಾನಿ!
ಕ್ತಿ ಕುಸುಮಾರ್ಪಣಾ ಗೀರ್ವಾಣಿ!
ವಾಕ್ಕಿನಲೇನೇನಿಲ್ಲ ಭವಾನಿ!
ನಿರಂಜನಾದಿತ್ಯನಾ ಗೀರ್ವಾಣಿ!!!

ಗಿರಿಜಮ್ಮ ಸಾಕಮ್ಮ ನಿನ್ನ ಮಾಯಮ್ಮ! (ಅ)

-ರಿತೆ ನಾನಿನ್ನನೆನ್ನ ಟಾಯಿಯೆಂದಮ್ಮ!
ನ್ಮವಿತ್ತು ಬನ್ನಪಡಿಪುದೇನಮ್ಮ! (ಅ)
-ಮ್ಮಮ್ಮಾ! ನಿನ್ನ ಆಟ ವಿಚಿತ್ರ ಕಾಣಮ್ಮಾ!
ಸಾಕಿ, ಸಲಹಿ, ಹೊಳಗೆ ತಳ್ಳಬೇಡಮ್ಮಾ!
ಠನತನ ನಿನಗೇಕನ್ನಲಮ್ಮಾ? (ಅ)
-ಮ್ಮರಮನೆಯಿಂದಿಳಿದೋಡಿ ಬಾರಮ್ಮ!
ನಿನ್ನ ಬಿಟ್ಟರೆನಗಾರು ಗತಿಯಮ್ಮ? (ಅ)
-ನ್ನ, ಪಾನ, ನಿನ್ನ ಕರುಣೆಯನಗಮ್ಮಾ!
ಮಾರಬೇಡನ್ಯರಿಗೆನ್ನನು ನನ್ನಮ್ಮಾ! (ಬ)
-ಯಲಾಟ, ಹುಯಿಲಾಟ, ಸಾಕಾಯ್ತೆನ್ನಮ್ಮಾ! (ಅ)
-ಮ್ಮ! ನಿರಂಜನಾದಿತ್ಯ ಮಾಯಾಧೀಶಮ್ಮಾ!

ವ್ಯೆದ್ಯ ನಾರಾಯಣ ವಿರಾಜಿಸಲಿ! (ಮೇ)

-ದ್ಯವಾಗಿಹುದೆಲ್ಲಾ ಒರಲಿನಲಿ! (ಅ)
-ನಾಯಾಸ ಧ್ಯಾನಕರಿವಾಯ್ತಾ ಉಲಿ!
ರಾಮಚಂದ್ರ ಕರುಣಿಸಿದಂತಾಗ್ಲಿ!
ತಿರಾಜನ ನುಡಿ ನಿಜವಾಗ್ಲಿ! (ಹ)
-ಣ, ಕಾಸಿನಭಾವ ಹೋಗುವಂತಾಗ್ಲಿ!
ವಿಜಯಗುರು ಚರಣಕ್ಕಾಗಲಿ! (ಆ)
-ರಾಮ ದೀನ ಭಕ್ತನಿಗುಟಾಗಲಿ!
ಜಿತ ಮನದಲಿನ್ನು ಮುಂದಿರಲಿ!
ತ್ಯ ಜೀವನ ಸಾರ್ಥಕವಾಗಲಿ! (ಬ)
-ಲಿ ನಿರಂಜನಾದಿತ್ಯ ಬೆಳಾಗಲಿ!!!

ನಾಗರತ್ನ ತಿಲಕದ ಚಲಚಿತ್ರ!

ಮನ ಬೆಳೆಯಿತು ಅದರ ಹತ್ರ!
ಥ ಸಾಗಿತತ್ತ ಕಡೆಗೆ ಉತ್ತರ! (ಯ)
-ತ್ನ ಫಲಿಸದಾಯ್ತು ಕೂಸಿನ ಹತ್ತಿರ!
ತಿರಿಗಿ ಬರಮಾಡಿದರು ತಾಯ್ಹತ್ರ! (ಅ)
-ಲಕ್ಕಾಗಿ ಬಂದಳು ಭಿಕ್ಷು ತಾನು ಮಾತ್ರ!
ಥೆ ಸ್ವಾರಸ್ಯ ಹೇಳಿದಳು ಗುರ್ಹತ್ರ! (ಅ)
-ದರಲಿತ್ತೊಂದು ಸಾರ ನಿಮಿಷ ಮಾತ್ರ!
ಪಲತೆ ಕಥೆಗೆ ಕಾರಣ ಯಂತ್ರ! (ಅ)
-ಲಕ್ಷ್ಯ ವ್ಯಸನ ನಿವಾರಣ ಸ್ವತಂತ್ರ!
ಚಿತ್ತ ಶುದ್ಧಿಗಿರಬೇಕು ದೇಶಾಂತರ! (ಚಿ)
-ತ್ರ, ನಿರಂಜನಾದಿತ್ಯ ಅತಿ ವಿಚಿತ್ರ!!!

ಗಟ್ಟಿ ಹಿಟ್ಟಿನ ದಟ್ಟ ರೊಟ್ಟಿ! (ಹಿ)

-ಟ್ಟಿಹುದೊಂದಿಷ್ಟ ರೊಟ್ಟಿ ತಟ್ಟಿ!
ಹಿತವಾಗಲೆಂದದು ಗಟ್ಟಿ! (ಇ)
-ಟ್ಟಿರಬೇಕದರ ಮೇಲ್ದಿಟ್ಟಿ! (ತಿ)
-ನಬೇಕದನು ಮನಮುಟ್ಟಿ!
ತ್ತನಿದಬೇಡನು ಬಿಟ್ಟಿ! (ಅ)
-ಟ್ಟ ಕಷ್ಟಕವನೀವ ತುಷ್ಟಿ!
ರೊಟ್ಟಿ ಜೀವನಿಗಿದು ಪುಷ್ಟಿ! (ದಿ)
-ಟ್ಟಿ ನಿರಂಜನಾದಿತ್ಯ ಗಿಷ್ಟಿ!!!

ಸುಗ್ರೀವ ಶ್ರೀರಾಮ ಪ್ರಿಯ!

ಗ್ರೀವ ಸುಖ ಸರ್ವ ಪ್ರಿಯ!
ನವಾಸ ಮತ್ಸ್ಯ ಪ್ರಿಯ!
ಶ್ರೀನಿವಾಸ ಲಕ್ಷ್ಮಿ ಪ್ರಿಯ!
ರಾಜೀವಾಕ್ಷ ರಾಧಾ ಪ್ರಿಯ!
ದನಾಂಗ ರತಿ ಪ್ರಿಯ!
ಪ್ರಿಯಪದ್ಮ ಸೂರ್ಯ ಪ್ರಿಯ!
ಮ ನಿರಂಜನ ಪ್ರಿಯ!

ಉಗುಳದ ಆಹಾರ ಬಾಯಿಗಿರಲಿ!

ಗುರುವಿನನುಗ್ರಹ ಬಾಳಿಗಿರಲಿ! (ಸೀ)
-ಳದಂಥಾ ಮರಗಳು ಉಳಿದಿರಲಿ!
ಯಾಪೂರ್ಣವಾದ ಮನಸಿರಲಿ!
ಳಲಾಗುವ ಪ್ರಜೆಗಳು ಇರಲಿ!
ಹಾದರವರಿಯದ ಸತಿ ಇರಲಿ!
ತ್ನಹಾರ ಸತ್ಯಭಾಮೆಗೇ ಇರಲಿ!
ಬಾನಿನಲಾದಿತ್ಯನೇ ವಿರಾಜಿಸಲಿ!
ಯಿಷ್ಟ ಅವನೊಬ್ಬನಲ್ಲೇ ಆಗಿರಲಿ!
ಗಿರಿಧರನಾಪದ್ಬಂಧುವಾಗಿರಲಿ!
ಘುನಾಥನಾಥ ನಾಥನಾಗಿರಲಿ (ಅ)
-ಲಿಪ್ತ ನಿರಂಜನಾದಿತ್ಯನಾಗಿರಲಿ!!!

ಜಾಂಬವ ರಾಮಸೇವಾ ನಾಯಕ!

ಳಲಿದ ಭಕ್ತಿ ವಿಧಾಯಕ!
ನಚರ ವಾನರ ನಾಯಕ!
ರಾತ್ರಿ, ಹಗಲೆನ್ನದ ಭಾವಿಕ!
ತಿ, ಗತಿಗೀತ ವಿನಾಯಕ!
ಸೇತು ಬಂಧನದ ಸಂಚಾಲಕ!
ವಾಸುದೇವ ಮಾವ ಭೂಪಾಲಕ!
ನಾಮ ಜಪ ಸದಾ ಮಾನಸಿಕ!
ಮ ಫಾಶಕಂಜದ ಮುದುಕ!
ರ್ತ, ನಿರಂಜನಾದಿತ್ಯ ಮೂಕ!!!

ಜಲಜಮಿತ್ರನಾಪ್ತ ಆಂಜನೇಯ!

ಕ್ಷ್ಯವಿವನದು ಶ್ರೀರಾಮ ಜಯ!
ನನ ಮರಣ ವಿದೂರ ಭಯ!
ಮಿತ್ರನೊಲಿದವಗೆಲ್ಲಾ ವಿಜಯ!
ತ್ರಯಲೋಕ ವಿಖ್ಯಾತನಾದ ಜೇಯ!
ನಾಮ ಜಪವಿವನಿಗತಿ ಪ್ರಿಯ! (ಆ)
-ಪ್ತ ಶ್ರೀರಾಮಭಕ್ತ ಸದಾ ವಿನಯ!
ಆಂಜನೇಯನಾನಂದ ಬ್ರಹ್ಮಚರ್ಯ!
ಗದ್ವಂದ್ಯನಿವ ನಿತ್ಯ ನಿರ್ಭಯ!
ನೇಮಾನುಷ್ಠಾನದಲಿ ಅದ್ವಿತೀಯ!
ಜಮಾನ ನಿರಂಜನಾದಿತ್ಯೇಯ!!!

ಸೂರ್ಯನಾರಾಯಣಾಶೀರ್ವಾದ! (ಆ)

-ರ್ರ್ಯನಿವಗರ್ಪಣಾ ಸಂವಾದ! (ಅ)
-ನಾಮಧೇಯನ ಗುಣ ಸೀದ! (ವಿ)
-ರಾಗಿಯಿವನ ಗತ್ಯ ಬೇದ!
ತಿಪತಿಗಾಯಿತಾಮೋದ! (ಗು)
-ಣಾವಗುಣವೆಲ್ಲಪವಾದ! (ಆ)
-ಶೀರ್ವಾದಕೆ ಹಿಡಿದಾ ಪಾದ! (ದು)
-ರ್ವಾಸನೆಯಿಂದಹುದು ಕ್ರೋಧ!
ತ್ತ ನಿರಂಜನಾದಿತ್ಯಂದ!!!

ತಿನುವಾಸೆ ಹೋಗಿಲ್ಲ!

ನುಡಿವಾಸೆ ಬಂದಿಲ್ಲ!
ವಾಸದಾಸೆ ಹೋಗಿಲ್ಲ!
ಸೆಜ್ಜೆಯಾಸೆ ಬಂದಿಲ್ಲ!
ಹೋಗುವಾಸೆ ಹೋಗಿಲ್ಲ!
ಗಿರಿಯಾಸೆ ಬಂದಿಲ್ಲ! (ಎ)
-ಲ್ಲ ನಿರಂಜನ ಬಲ್ಲ!!!

ನಾದವಾಗುತಲಿದೆ ಬಂಧ ಹರಿಯದಿದೆ!

ಯೆ ಕಾಣುತಲಿದೆ, ಮಾಯೆಯಳಿಯದಿದೆ!
ವಾಕ್ನಿಲ್ಲುತಲಿದೆ, ಸಾಕು, ಬೇಕು, ನಿಲ್ಲದಿದೆ!
ಗುರಿ ತೋರುತಿದೆ, ದುರಿತ ದೂರಾಗದಿದೆ!
ಳ ಕಾಣುತಲಿದೆ, ಆಳ ತಿಳಿಯದಿದೆ! (ಕ)
-ಲಿತದ್ದು ನೆನಪಿದೆ, ಬಲಿತು ಬಾರದಿದೆ! (ಎ)
-ದೆ ವಿಮಲವಾಗಿಎ, ಹಾದಿ ತೆರೆಯದಿದೆ!
ಬಂಧು ಬಂದಾಗಿದೆ, ನಿಂದಾನಂದಿಸದಾಗಿದೆ!
ರಣಿ ಬೇಡಾಗಿದೆ, ತರಣಿ ಗಡ್ಡಾಗಿದೆ!
ಸಿವೆ ಹೆಚ್ಚಾಗಿದೆ, ಕಪಾಲ ಖಾಲಿಯಿದೆ! (ಅ)
-ರಿವೆ ತುಂಬಾ ಇದೆ, ಧರಿಸುವುದ್ಬೇಡಾಗಿದೆ!
ತ್ನ ಸಾಗುತಲಿದೆ, ರತ್ನ ದೊರೆಯದಿದೆ!
ದಿಟ ಬೆಳಗುತಿದೆ, ಸಟೆ ಸಾಯದೆ ಇದೆ! (ಇ)
-ದೆಲ್ಲಾ ನಿರಂಜನಾದಿತ್ಯನಿಗರಿತೇ ಇದೆ!!!

ಕೌಸಲ್ಲಾತ್ಮಜ ಶ್ರೀರಾಮಚಂದ್ರ!

ರ್ವಗುಣಸಂಪನ್ನ ರಾಜೇಂದ್ರ! (ಎ)
-ಲ್ಲಾರಿಹರವನಂಥಾ ಧರ್ಮೆ

ಂದ್ರ! (ಆ)
-ತ್ಮ ಜ್ಞಾನ ಪರಿಪೂರ್ಣ ಬ್ರಹ್ಮೇಂದ್ರ!
ನಕನಿಚ್ಛಾವರ್ತಿಸುತೇಂದ್ರ!
ಶ್ರೀ ಸೀತಾಪತಿ

ಈ ಸುಂದರೇಂದ್ರ!
ರಾವಣನ ಗೆಲಿದ ವೀರೇಂದ್ರ! (ಅ)
-ಮರ ಮಾರುತಿಗಿವ ಪ್ರಾಣೇಂದ್ರ!
ಚಂಚಲ ಮತಿಗೀತ ಯೋಗೇಂದ್ರ! (ತ)
-ದ್ರಮಣ ನಿರಂಜನಾದಿತ್ಯೇಂದ್ರ!!!

ಸರ್ವ ಕಲ್ಯಾಣ ಸರ್ವೆ

ಶ್ವರನಿಷ್ಟ! (ಓ)

-ರ್ವನಿಂದವಹೇಳನ ಮಾಡಿ ಪಿಷ್ಟ!
ರುಣೆ ಇನ್ನೊಬ್ಬನಿಂದ ತೋರ್ಪಿಷ್ಟ! (ಕ)
-ಲ್ಯಾಣವಾಗ್ವುದು ಕೊನೆಗವನಿಷ್ಟ! (ಗ)
-ಣ ರಾಜ್ಯದಲ್ಲಿ ಸತ್ಯಾಗ್ರಹದಿಷ್ಟ!
ನ್ಯಾಸಿ ಹಠ ಮಾಡ್ವುವುದನಿಷ್ಟ! (ಸ)
-ರ್ವೆ

ಂದ್ರಿಯನೊಡನಾಟ ಅವನಿಷ್ಟ! (ಈ)
-ಶ್ವರ ಜಿತೇಂದ್ರ್ಯನೆಂದುದವನಿಷ್ಟ!
ಕ್ಷಕವನಾದುದವನಿಷ್ಟ!
ನಿರ್ದಯ ರಾಕ್ಷಸ ರೂಪಿನಲಿಷ್ಟ! (ಇ)
-ಷ್ಟ ನಿರಂಜನಾದಿತ್ಯಗೆಲ್ಲಾ ಇಷ್ಟ!!!

ಸಂಕೀರ್ತನೆ ಸರ್ವಸಿದ್ಧಿ ಪ್ರದವೆಂದ!

ಕೀರ್ತಿಯದರಿಂದ ಬಹುಕಾಲ ತಂದ! (ಕ)
-ರ್ತನಾಗಿ ನಾನಾ ಸೇವೆ ಮಾಡಿಸಿ ನಿಂದ!
ನೆಪಹೂಡಿ ಅಪಕೀರ್ತಿಯನು ತಂದ!
ರ್ವಬಂಧು, ಬಳಗ, ಅವನೇ ಅಂದ! (ಗ)
-ರ್ವ ಸುಟ್ಟು ಉಣಿಸಿದ ಭಜನಾನಂದ!
ಸಿಟ್ಟಡಗಲಿಕೆ ಮೌನವಾಗಿರೆಂದ! (ಸಿ)
-ದ್ಧಿ, ನಿತ್ಯ ನೇಮಾನುಷ್ಠಾನಗಳಿಂದೆಂದ!
ಪ್ರಯಾಣವಿನ್ನೊಂದೂರಿಗೆ ಬೆಳೆಸೆಂದ! (ಪಾ)
-ದ ಸೇವೆಯಾದಿತ್ಯನಿದಿರು ಮಾಡೆಂದ! (ನೋ)
-ವೆಂಬುದಿಲ್ಲದೆ ಮನಕಾನಂದ ತಂದ!
ತ್ತಗುರು ನಿರಂಜನಾದಿತ್ಯನೆಂದ!

ಕೈಕೆಯ ಬಯಕೆ ಆರಾಮಲೋಕಕ್ಕೆ!

ಕೆಟ್ಟ ದಾನವ ಸಂಹಾರ ಕಾರಣಕ್ಕೆ!
ಶವಾಯ್ತು ಶ್ರೀರಾಮಾನುಜ ಭಾವಕ್ಕೆ!
ಲ ಬಂತು ರಾಘವನ ಪ್ರಭಾವಕ್ಕೆ!
ತ್ನ ಫಲಿಸಿತು ವಾನರ ಕೂಟಕ್ಕೆ!
ಕೆಚ್ಚೆದೆಯಾಂಜನೇಯಾತ್ಮ ದರ್ಶನಕ್ಕೆ!
ರಾಮನಿಂದಾಯ್ತು ಸುಖ ತ್ರಿಲೋಕಕ್ಕೆ!
ರಾವಣನಿಷ್ಟರಿವಾಯ್ತು ಜಗಕ್ಕೆ!
ನ ತೃಪ್ತಿಯಾಯ್ತು ಶಬರಿ ಜೀವಕ್ಕೆ!
ಲೋಪಾರೋಪ ಹೋಯ್ತು ಭಕ್ತಿ ಜೀವನಕ್ಕೆ!
ರ್ಮ, ಧರ್ಮದರಿವಾಯ್ತು ಭೂವನಕ್ಕೆ! (ಅ)
-ಕ್ಕೆ! ನಿರಂಜನಾದಿತ್ಯ ಕೃಪೆ ದೇಶಕ್ಕೆ!!!

ಭರತನಾದರ್ಶ ವಿಶ್ವ ಭಾರತಕಿರಬೇಕಿಂದು!

ಸವಿರಸಾವಾಗಿ ಕಾಣುತಿದೆ ಕಲಹದಿಂದು!
ನ್ನವರಲ್ಲರೆಂಬುದಿಲ್ಲವಾಗಿದೆಲ್ಲೆಲ್ಲೂ ಇಂದು!
ನಾನಾಮತಗಳಲಿ ಐಕ್ಯವಿಲ್ಲದಾಗಿದೆ ಇಂದು!
ಶರಥಸುತ ಭರತನ ಭ್ರಾತೃಪ್ರೇಮವೆಂದು? (ದ)
-ರ್ಶನಗಳೆಲ್ಲಾ ಬಾಯಿಮಾತಾಗಿರುತಿಹುದು ಇಂದು!
ವಿದೇಶದನುಕರಣೆ ಪ್ರಬಲವಾಗಿಹುದಿಂದು! (ವಿ)
-ಶ್ವದಲೆಲ್ಲಾ ಕಪಟ ವಿಶ್ವಾಸ ಹೆಚ್ಚಾಗಿದೆ ಇಂದು!
ಭಾವನೆ ಎಲ್ಲಾ ವಿಷಯಾನಂದಕಾಗಿರುವುದಿಂದು
ಚನೆ, ಯೋಚನೆಗಳಿಗೆ ಮಿತಿ ತೋರದಿಲ್ಲಿಂದು!
ರತರದ ಯಂತ್ರ, ತಂತ್ರಗಳುಬ್ಬರ ಬಂತಿಂದು!
ಕಿರುಕುಳವೇನೂ ಕಡಿಮೆಯಾಗಿಲ್ಲದರಿಂದಿಂದು!
ತಿಪತಿಯ ದರ್ಶನ ಸುಲಭವಾಗಿದೆ ಇಂದು!
ಬೇಡವಾರ್ದಊ ಹಾಡುಗಳ ಸಮಾರಾಧನೆ ಇಂದು!
ಕಿಂಕರರೆಂದರೆ ಬರುವುದು ಸಿಟ್ಟೆಲ್ಲರಿಗಿಂದು!
ದುರಾಗ್ರಹವಿಲ್ಲ ನಿರಂಜನಾದಿತ್ಯಗೆಂದೆಂದೂ!!!

ವಾಸವಿಲ್ಲದ ದೇಶ, ಮನವಿಲ್ಲದ ದೇಹ ವ್ಯರ್ಥ!

ತ್ಯವಿಲ್ಲದ ನೀತಿ, ಪ್ರೀತಿಯಿಲ್ಲದ ರೀತಿ ವ್ಯರ್ಥ!
ವಿದ್ಯೆಯಿಲ್ಲದ ಬುದ್ಧಿ, ಸಿದ್ಧಿಯಿಲ್ಲದ ಶುದ್ಧಿ ವ್ಯರ್ಥ! (ನ)
-ಲ್ಲನಿಗಿಲ್ಲದ ನಾರಿ, ಮೆಲ್ಲಲಾಗದ ಪೂರಿ ವ್ಯರ್ಥ!
ಯೆಯಿಲ್ಲದ ತಾಯಿ, ನ್ಯಾಯವಿಲ್ಲದ ನೇಹಿ ವ್ಯರ್ಥ!
ದೇವನಿಲ್ಲದ ಗುಡಿ, ಭಾವವಿಲ್ಲದ ನುಡಿ ವ್ಯರ್ಥ!
ಕ್ತಿಯಿಲ್ಲದ ಯುಕ್ತಿ, ಮುಕ್ತಿಯಿಲ್ಲದ ಭಕ್ತಿ ವ್ಯರ್ಥ!
ರವಿಲ್ಲದ ಧರೆ, ಅರಿವಿಲ್ಲದ ನೆರೆ ವ್ಯರ್ಥ!
ಗುವಿಲ್ಲದ ಒಗು, ಆಗು ಇಲ್ಲದ ಹೋಗು ವ್ಯರ್ಥ!
ವಿಧಿಯಿಲ್ಲದ ದಧಿ, ನದಿಯಿಲ್ಲದ ಬದಿ ವ್ಯರ್ಥ! (ಅ)
-ಲ್ಲನರಿಯದ ಗುರು, ಪಲ್ಲವಿಸದ ತರು ವ್ಯರ್ಥ!
ಮೆಯಿಲ್ಲದ ಶಮೆ, ಗೈಮೆಯಿಲ್ಲದುಳುಮೆ ವ್ಯರ್ಥ!
ದೇಹವಿಲ್ಲದ ಫ್ರಾಣ, ತ್ರಾಣವಿಲ್ಲದ ಬಾಣ ವ್ಯರ್ಥ!
ಸಿದಿಲ್ಲದ ಊಟ, ಹುಮ್ಮಸ್ಸಿಲ್ಲದ ಆಟ ವ್ಯರ್ಥ!
ವ್ಯವಸ್ಥೆ ಇಲ್ಲದಾಸ್ತಿ, ಸ್ವಸ್ಥವಿಲ್ಲದಾಸಕ್ತಿ ವ್ಯರ್ಥ! (ಅ)
-ರ್ಥ, ನಿರಂಜನಾದಿತ್ಯನಿರದಿರೆಲ್ಲಾ ವ್ಯರ್ಥ!

ಕಲ್ಲು ಸಕ್ಕರೆಯಾದಾ ಪ್ರಸಾದ! (ಹ)

-ಲ್ಲುಪುಡಿ ಮಾಡದದಾ ಪ್ರಸಾದ!
ಮರ್ಪಣ ತಿಲಕಾ ಪ್ರಸಾದ! (ಅ)
-ಕ್ಕರೆಯ ಉಷ್ಣ ಶಾಂತೀ ಪ್ರಸಾದ! (ಬೆ)
-ರೆತರೆ ಅರಗುವಾ ಪ್ರಸಾದ! (ಆ)
-ಯಾಸ ಆರಾಮಪ್ರದಾ ಪ್ರಸಾದ!
ದಾಹ ಶಾಂತಿಗಾನಂದಾ ಪ್ರಸಾದ!
ಪ್ರಸನ್ನತೆಗುತ್ತಮಾ ಪ್ರಸಾದ!
ಸಾಧು ಮನಕಾಲಯಾ ಪ್ರಸಾದ! (ಅ)
-ದಾ, ನಿರಂಜನಾದಿತ್ಯ ಪ್ರಸಾದ!

ಮಂಗಳವಾರ ಮಹದಾನಂದ! (ಅ)

-ಗರು ಬತ್ತಿಯ ವಾಸನಾನಂದ! (ಕ)
-ಳವಳ ನಿರ್ಮೂಲ ದಿನಾನಂದ!
ವಾಸುದೇವ ಮಾಧವನಾನಂದ!
ಮ್ಯ ಸಾರಂಗ ದರ್ಶನಾನಂದ! (ವಿ)
-ಮಲ ಶೀಲದ ಸುಮನಾನಂದ! (ಗ)
-ಹನ ಭಜನ, ಭೋಜನಾನಂದ!
ದಾರಿ, ವಿರಾಗ ಜೀವನಾನಂದ!
ನಂದ ನಂದನ ಸುಜನಾನಂದ!
ತ್ತ ನಿರಂಜನಾದಿತ್ಯನಂದ!!!

ಮಾಧುರೀ ಮಾದರೀ ವಿಶ್ವ ಸಹೋದರೀ! (ಮ)

-ಧುಮನ ಮಂದರೀ ಸುಂದರೀ ಅಂಬರಿ! (ಆ)
-ರೀ ಕೃಪಾಕರೀ ಸುಖಂಕರೀ ಶಂಕರಿ?
ಮಾನಾಧಾರೀ, ಪ್ರಾಣಾಧಾರೀ ವಸುಂಧರಿ! (ಆ)
-ದರೀಶ್ವರನರ್ಧನಾರೀ ಮನೋಹರಿ! (ಅ)
-ರೀ ನೀಲಾಂಬರೀ ಉದಾರೀ ಬಿಂಬಾದರಿ!
ವಿಷಹಾರೀ, ರಸವಾರೀ, ಮಹಿಷಾರಿ! (ಅ)
-ಶ್ವಸವಾರೀ, ಶಾಖಂಬರೀರ್ಷಾಂತಕಾರಿ!
ದಾಚಾರೀ, ದುರಿತಾರೀ, ವೀರನಾ

ರಿ! (ಸ)
-ಹೋದರೀ, ಪರಮೇಶ್ವರೇಚ್ಛಾನುಸಾರಿ! (ಮ)
-ದನಾರೀಶ್ವರ ಶರೀರಿಗಾಧಾರಿ! (ಅ)
-ರೀ! ನಿರಂಜನಾದಿತ್ಯ ಶಕ್ತಿ “ಹ್ರೀಂ”ಕಾರಿ!!!

ವಿರಕ್ತ ನಿರಂಜನಾದಿತ್ಯ ದತ್ತ! (ವ)

-ರ, ಕಪಾಲ ಭಿಖ್ಷಾಹಾರೀ ದತ್ತ! (ಶ)
-ಕ್ತನಾದರೂ ಸದಾ ಗುಪಿತಾ ದತ್ತ! (ಮೌ)
-ನಿ, ಯಮ, ನಿಯಮದ ಸತ್ಯಾ ದತ್ತ! (ಆ)
-ರಂಭ, ಸಮಾರಂಭನಾಸಕ್ತಾ ದತ್ತ! (ಅ)
-ಜ, ಹರಿ, ಹರರೇಕ ರೂಪಾ ದತ್ತ! (ಅ)
-ನಾಮಧೇಯನೆಲ್ಲೆಲ್ಲಿರುವಾ ದತ್ತ!
ದಿಕ್ಕಿಲ್ಲದ ದೀನರಿಗೆಲ್ಲಾ ದತ್ತ! (ಸ)
-ತ್ಯತೋರುವನು ನಂಬಿದರಾ ದತ್ತ!
ಯಾಸಾಗರನಾಗಿಹನಾ ದತ್ತ! (ಇ)
-ತ್ತ ನಿರಂಜನಾದಿತ್ಯನಾದಾ ದತ್ತ!

ಮಳೆ ಬರುತಿರುವುದು ಮಂಗಳ! (ಬೆ)

-ಳೆ ಉಳಿಯುವುದರಿಂದ ಮಂಗಳ!
ಡ ಜನಕದರಿಂದ ಮಂಗಳ! (ಗು)
-ರು ಕರುಣೆಯದರಿಂದ ಮಂಗಳ!
ತಿಮಿರ ಹರಿದದ್ರಿಂದ ಮಂಗಳ! (ತು)
-ರು ಕರುಗಳದರಿಂದ ಮಂಗಳ! (ಕಾ)
-ವು ಕಮ್ಮಿಯಾದುದರಿಂದ ಮಂಗಳ! (ಸ)
-ದುಪಯೋಗವದರಿಂದ ಮಂಗಳ!
ಮಂದಮಾರುತ ಸಂಬಂಧ ಮಂಗಳ!
ಗನ ಶುಭ್ರವಾದ್ರಿಂದ ಮಂಗಳ! (ಬಾ)
-ಳ, ನಿರಂಜನಾದಿತ್ಯೆಂದ ಮಂಗಳ!!!

ಕಾಲ ಕಾದಿದ್ದ ತೆಂಗಿನಕಾಯಿ! (ಕೆ)

-ಲ ಕಾಲದ ಹಿಂದೆ ಬಿತ್ತಾ ಕಾಯಿ!
ಕಾರಣಾಂತರದಿಂದಿಲ್ಲಿತ್ತಾ ಕಾಯಿ!
ದಿನ ಕಳೆದಂತೊಣಗಿತಾ ಕಾಯಿ! (ಸ)
-ದ್ದಡಗಿ ಗಿಟಿಕಾಗುತ್ತಿತ್ತಾ ಕಾಯಿ!
ತೆಂಗಿನ ಕಾಯ್ಬಣ್ಣಾಗುಂದಿತ್ತಾ ಕಾಯಿ! (ಬ)
-ಗಿಯಲ್ಪಡಲು ಕಾಯುತ್ತಿತ್ತಾ ಕಾಯಿ!
ಮ್ರವಾಗೊಳಗಿರುತ್ತಿತ್ತಾ ಕಾಯಿ!
ಕಾಮ ಜಲ ಕಾಲಿಯಾಗಿತ್ತಾ ಕಾಯಿ!
ಯಿದೇ ನಿರಂಜನಾದಿತ್ಯನಾ ಕಾಯಿ!!!

ಮಾತೆಯಾ ಬೆಂಗಾವಲು ಬಾಲಕನಿಗೆ!

ತೆರದಿಹಳು ಕದವನವನಿಗೆ! (ಭ)
-ಯಾಪಡದಿರೆಂದಳವನಿಗೆ!
ಬೆಂಕಿ ಬಳಿ ಹೋಗ್ಬೇಡೆಂದಳವನಿಗೆ!
ಗಾಳಿಯಲಾಡದಿರೆಂದಳವನಿಗೆ
ನಧಿಗಿಳಿಯ್ಬೇಡೆಂದಳವನಿಗೆ! (ಬ)
-ಲು ಹೊಲಸು ಮಣ್ಣಾಟೆಂದಳವನಿಗೆ!
ಬಾನನೇ ನೋಡುತಿರೆಂದಳವನಿಗೆ!
ಕ್ಷ್ಯಮ್ಮನದಿರಲೆಂದಳವನಿಗೆ!
ಠಿಣವಾ

ತಾಯಾಜ್ಞೆ ಅವನಿಗೆ!
ನಿರುಪಾಯನಾಗಿರ್ಪಂತಾಯ್ತವನಿಗೆ! (ಧ)
-ಗೆ! ನಿರಂಜನಾದಿತ್ಯ ಕೃಪೆಯವಗೆ!!!

ಈ ಜಮ್ಮದಲಿನ್ನೇನಿಹುದಯ್ಯಾ?

ನಿಸಿದಾಗಿಂದೀ ಪರಿಯಯ್ಯಾ! (ತ)
-ನ್ಮಯನಾಗಿ ಮುಗಿಸು ಬೇಗಯ್ಯಾ! (ಪಾ)
-ದ ಸೇವೆ ಬಾಕಿಯೇನಿಹುದಯ್ಯಾ? (ಬ)
-ಲಿದಾನ ತೃಪ್ತಿಯಾಗಿಲ್ಲವೇನಯ್ಯಾ? (ಇ)
-ನ್ನೇನೂ ಬೇಡುವುದಿಲ್ಲವಯ್ಯಾ!
ನಿನ್ನದಾದೀ ಕಪ್ಪನಳಿಸಯ್ಯಾ?
ಹುಲುಸಾಗಿ ಹೊಲಸೇತಕಯ್ಯಾ?
ತ್ತಯ್ಯಾ! ಚಿತ್ತಕಿದ ತಾರಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ನೀನಯ್ಯಾ!!!

ಮಕ್ಕಳಾಟ ಮಾತೆಗಾನಂದ! (ಚೊ)

-ಕ್ಕಟಾಟ ವಿಮಲಗಾನಂದ! (ಗೋ)
-ಲಾಟ ಗೋವಿಂದನಿಗಾನಂದ! (ನೋ)
-ಟದಾಟ ನಯನಕಾನಂದ!
ಮಾಯಾಟ ಮಾಧವಗಾನಂದ!
ತೆಗ್ಳಾಟ ನಿಂದಕಗಾನಂದ! (ನ)
-ಗಾಟ ವಿದೂಷಕಗಾನಂದ! (ಅ)
ನಂಟನಾಟ ಕಾಮಿಗಾನಂದ! (ನಾ)
-ದ ನಿರಂಜನಾದಿತ್ಯಾನಂದ!!!

ಬರಲಿ ಮಳೆ, ಗಾಳಿ, ಚಳಿ, ಬಿಸಿಲು! (ಇ)

-ರಲಿ ಹಗಲಿರುಳು ಅವನೊರಲು! (ಚ)
-ಲಿಸದಂತಿರಲಿ ಮನ ಜಪದಲು!
ನೆ, ಮಠ ಹಾರಿಹೋಗುತ್ತಿದ್ದಾಗಲು! (ಮ)
-ಳೆಗೆ ಉರುಳಿ ಬೀಳುತ್ತಿರುವಾಗಲು! (ಧ)
-ಗಾಯಾಸಗಳನುಭವಿಸುವಾಗಲು! (ಚ)
-ಳಿಯಿಂದತಿ ನಡುಗುತ್ತಿರುವಾಗಲು!
ರಾಚರವೆಲ್ಲಾ ಅವನಾಗಿರಲು! (ಉ)
-ಳಿಯಬೇಕವಗಾಗಿ ಹಗಲಿರುಳು!
ಬಿಗಿಯಿರಲಿ ಭಾವ ಭಜನೆಯಲು! (ಹು)
-ಸಿಯಳಿದುಳಿಯಲಸಿ ನಿಜದಲು! (ನಿ)
-ಲು, ನಿರಂಜನಾದಿತ್ಯಾಚಲ ಬಿಸಿಲು!!!

ಭೂಮಂಡಲೇಶ್ವರ ಗುರು ಶಿವಾನಂದ! (ಧೀ)

-ಮಂತ, ಶ್ರೀಮಂತ, ಸರ್ವನ ಹಿತಾನಂದ! (ಬ)
-ಡ ರೋಗಪೀಡಿತರಾಪ್ತ ಭಾವಾನಂದ!
ಲೇಶವೊ ಲೋಭವಿಲ್ಲದದಾರಾನಂದ! (ನ)
-ಶ್ವರವೀ ದೇಹವೆಂದು ಸಾರಿದಾನಂದ!
ಸದೂಟ ಭಜನೆಯಲೆಂದಾನಂದ!
ಗುಟ್ಟೂ ರಟ್ಟು ಮಾಡಿ ಜ್ಞಾನವಿತ್ತನಂದ!
ರುಚಿ ಪರಮಾರ್ಥದಲಿದೆಂದಾನಂದ!
ಶಿರೋಮಣಿ ಯತಿಗಣ ಫ್ರಾಣಾನಂದ!
ವಾದ, ಬೇದಗಳಳಿದ ನಿಜಾನಂದ!
ನಂದಕಂದನಿತ್ತ ಗೀತಾಮೃತಾನಂದ!
ತ್ತ ನಿರಂಜನಾದಿತ್ಯ ಶಿವಾನಂದ!!!

ದತ್ತ ಮಂತ್ರ ದೀಪಿಕಾ ಶಂಕರಾನಂದ! (ಎ)

-ತ್ತರದ ಹಿಮಾಲಯದಲಾದಾನಂದ!
ಮಂದಿರದ ಗುಹೆಯಲಾದುದಾನಂದ!
ತ್ರಯಕ್ಷರಿ ಮಹಿಮೆ ತೋರಿದಾನಂದ!
ದೀಪವಿದು ಕತ್ತಲೆಯಲೆಂದಾನಂದ!
ಪಿಡಿ ಭದ್ರವಾಗೆಂದುಸುರಿದಾನಂದ!
ಕಾಲ ಕರ್ಮದಲರಿವಾದುದಾನಂದ!
ಶಂಕೆ ಹರಿದುಟಾದುದಾ ನಿಜಾನಂದ!
ಳವಳ ಕಳೆದುಳಿದುದಾನಂದ!
ರಾರಾಜಿಸುತಿರುತಿಹುದಿದಾನಂದ!
ನಂದಿ ಹೋಗದಂಥಾ ಸಹಜದಾನಂದ! (ಸ)
ದಾ, ನಿರಂಜನಾದಿತ್ಯ ಶಂಕರಾನಂದ!!!

ದಿವ್ಯಜ್ಞಾನದೃಷ್ಟಿಯಿಂದ ನೋಡು!

ವ್ಯಸನದೀ ದೃಷ್ಟಿ ಸಾಕು ಮಾಡು!
ಜ್ಞಾನಾಜ್ಞಾನ ನಾಶದಿಂದ ನೋಡು!
ಶಿಸುವಾಸೆಯ ಸಾಕು ಮಾಡು!
ದೃಷ್ಟಿಯಿದೇ ಜ್ಞಾನದೀಕ್ಷೆ ನೋಡು! (ಪು)
-ಷ್ಟಿಯಹುದೈಹಿಕ ಸಾಕು ಮಾಡು!
ಯಿಂಬಿದರಿಂದೆಲ್ಲಹುದು ನೋಡು!
ರ್ಶನ ಸ್ಥೂಲದಿ ಸಾಕು ಮಾಡು!
ನೋಡಿಯೋಡ್ವುದೇನು ಸುಖ ನೋಡು! (ಕೂ)
-ಡು! ನಿರಂಜನಾದಿತ್ಯನಂತಾಡು!!!

ಕತ್ತಲಾಗುತಿದೆ ನೋಡು! (ತ)

-ತ್ತರಿಸಲಾಗದು ಓಡು! (ಆ)
-ಲಾಕ್ಕಾಗಿರಬೇಕು ನೋಡು!
ಗುಡಿ ತೆರೆದಿದೆ ಓಡು!
ತಿರುಗಾಡಬೇಡ ನೋಡು! (ಎ)
-ದೆಗೆಡದೊಡನೆ ಓಡು!
ನೋಟ ಗುರುಮೂರ್ತಿ ನೋಡು! (ಕೂ)
-ಡು ನಿರಂಜನನ ಓಡು!!!

(“ಓಂ ಹರ ಹರ ಹರ ಮಹದೇವ!”)

ದಂಡ ಕಮಂಡಲು ಪಾದುಕಾ ಯಾತ್ರೆ!

ಮರುಧರನ ವಿಜಯ ಯಾತ್ರೆ!
ರೆ ಕಳುಹಿನ ನಿರ್ಧರ ಯಾತ್ರೆ!
ಮಂಗಳವಿದೆಲ್ಲರ ಭಾಗ್ಯ ಯಾತ್ರೆ! (ಸ)
-ಡಗರದ ಭಕ್ತಿ, ಪೂಜೆಯ ಯಾತ್ರೆ! (ಮ)
ಹರಿ ವಿಮಲ ವಿಜಯ ಯಾತ್ರೆ!
ಪಾದುಕಾಚ್ಛಾದನಾ ಸಹಿತ ಯಾತ್ರೆ!
ದುರ್ಮದ ಮರ್ದನ ಗೈದ ಯಾತ್ರೆ!
ಕಾಷಾಯಾಂಬರ ಪ್ರಸಾದದ ಯಾತ್ರೆ! (ಆ)
-ಯಾಸವಿಲ್ಲದ ಗುರುಕೃಪಾ ಯಾತ್ರೆ! (ರಾ)
-ತ್ರೆ ನಿರಂಜನಾದಿತ್ಯ ಜಯ ಯಾತ್ರೆ!!! ೨೨೭

ಪೊಂಗಲ್ಲಿರಂಜನನಕ್ಕರೆ ಪೊಂಗಲ್!

ತಿ,ಸ್ಥಿ, ಮತಿ ಸಕ್ಕರ ಪೊಂಗಲ್! (ಬ)
-ಲ್ಲಿಜದಲಿದನರಿತರೆ ಪೊಂಗಲ್!
ರಂಗ, ಸಾರಂಗ ಬೆರೆತರೆ ಪೊಂಗಲ್!
ಗದಾನಂದವಿದಾದರೆ ಪೊಂಗಲ್!
ರನಾಯರೊಂದಾದರೆ ಪೊಂಗಲ್!
ಯ ವಿನಯ ಕೂಡಿದರೆ ಪೊಂಗಲ್! (ಸ)
-ಕ್ಕರೆ ಸರ್ವಕ್ಕರೆಯಾಗಿರೆ ಪೊಂಗಲ್! (ಕ)
-ರೆದೆಲ್ಲರಿಗಿದ ಕೊಟ್ಟರೆ ಪೊಂಗಲ್!
ಪೊಂದಿದರಿದ ಸುಗಾಸರೆ ಪೊಂಗಲ್!
ಹನವಿದ ಸವಿದರೆ ಪೊಂಗಲ್! (ಮೆ)
-ಲ್! ನಿರಂಜನಾದಿತ್ಯಕ್ಕರೆ ಪೊಂಗಲ್!!!

ಅರಿಶಿನ ಹರಸುತ ಹಚ್ಚಿದಾಶೀರ್ವಾದ!

ರಿವಿವಾರ ಸುಮಂಗಲಿಯರಿಗಾಶೀರ್ವಾದ!
ಶಿರ, ಹಣೆಗಿದ ತೀಡಿ ಮಾಡಿದಾಶೀರ್ವಾದ!
ರ್ತಆದಾಗ ಶ್ರೀಪಾದದಿಂದಾಶೀರ್ವಾದ!
ಸ್ತಪಾದಕ್ಕೆಲ್ಲಾ ತಿಕ್ಕಿ ಸ್ನಾನದಾಶೀರ್ವಾದ!
ಮಣಿಯರಿಗಿಂದಾನಂದದಾಶೀರ್ವಾದ!
ಸುಭೋಜ್ಯ ಪೊಂಗಲ್ಮರುದಿವಸಾಶೀರ್ವಾದ!
ರಣಿ ಕಿರಣ ಸುರಿದಾನಂದಾಶೀರ್ವಾದ!
ರಿದ್ರಾ ಕುಂಕುಮ ತಿಲಕದಿಂದಾಶೀರ್ವಾದ! (ಸ)
-ಚ್ಚಿದಾನಂದ ಗುರು ಕರುಣಿಸಿದಾಶೀರ್ವಾದ!
ದಾರಿ, ಧರ್ಮ, ಕರ್ಮ ಪಾಲನೆಯೆಂದಾಶೀರ್ವಾದ!
ಶೀಲ ಸರಳವಾಗಿರಬೇಕೆಂದಾಶೀರ್ವಾದ! (ಸ)
-ರ್ವಾತ್ಮ ಭಾವ ಬಲಿಯುತಿರಲೆಂದಾಶೀರ್ವಾದ!
ತ್ತ ನಿರಂಜನಾದಿತ್ಯನೊಂದೆಂದಾಶೀರ್ವಾದ!!!

ಆಜ್ಞಾಪಿಸಲೇಕೆ? ಅವಿಧೇಯನೆನಲೇಕೆ?

ಜ್ಞಾನಿಯಾಜ್ಞಾಪಿಸುವುದಿಲ್ಲದರಿಯದೇಕೆ?
ಪಿರಿದ, ಕಿರಿದಿಲ್ಲದಂತಿರಬಾರದೇಕೆ?
ದಾ ನಿಜದಲಿರುವವನ ಚಿಂತೆಯೇಕೆ?
ಲೇಸದೇ ಶಾಂತಿ ಜೀವನಕೆಂದರಿಯದೇಕೆ?
ಕೆಸರೆಂದರಿತರೂ ಹೆಜ್ಜೆಯಿಡುವುದೇಕೆ?
ವಿಧೇಯತೆಗಾಗಿ ನಿನಗುದ್ರೇಕವೇಕೆ?
ವಿಧೇಯ ನಾನಾಗುವುದು ನನ್ನಾವ ಸುಖಕೆ?
ಧೇನು ಒದೆದರೂ ಮೊಲೆ ಹಿಂಡೂವುದೇಕೆ?
ತಿಯಾಗಿದಕೆ ವ್ಯಥೆಪಡುವುದೇಕೆ?
ನೆಗಡಿಯಾದರೌಷಧಿ ಮಾಡಬಾರದೇಕೆ?
ನ್ನಂತಿರುವ ನಿಶ್ಚಿಂತನಾಗಲಿಲ್ಲವೇಕೆ?
ಲೇಪವಿಲ್ಲದ ಮನಸಿನ್ನೂ ಬಂದಿಲ್ಲವೇಕೆ? (ಏ)
-ಕೆ? ನಿರಂಜನಾದಿತ್ಯ ಮರೆಯಾದನದೇಕೆ???

ಮಹಿಮೆ ತಿಳಿದು ಬಳಿಗೆ ಬರಬೇಕು!

ಹಿತವಚನವಿದನು ತಿಳಿದಿರಬೇಕು!
ಮೆಲುಕುಹಾಕದಾಕಳು ವ್ಯರ್ಥವೆನಬೇಕು!
ತಿರಿತಿರಿಗಿ ತತ್ವ ಮನನವಾಗಬೇಕು! (ಉ)
-ಳಿಯುವಾ ಸಾರದಿಂದಾಗ ತೃಪ್ತನಾಗಬೇಕು!
ದುಡುಕದೆ ಕಾದಾನಂದನುಭವಿಸಬೇಕು!
ಸವಳಿದು ನಿರಾಶೆಯಾಗದಿರಬೇಕು! (ಹು)
-ಳಿ ರಸ ಮಧುವಾಗದೆಂದರಿತಿರಬೇಕು! (ಹೊ)
-ಗೆಯಡಗುರಿ ಕಂಡಾಗಡಿಗೆ ಮಾಡಬೇಕು!
ಯಲಾಟ ಮುಗಿದ ಮೇಲೆ ಮಲಗಬೇಕು!
ತ್ನ ದೊರೆತ ನಂತರುಂಗುರ ಕಟ್ಟಬೇಕು!
ಬೇಲಿ ಹಾಕಿಸಿ ಬೆಳೆ ಬೆಳೆಸುತಿರಬೇಕು! (ಮು)
-ಕುಳಿತ ನಿರಂಜನಾದಿತ್ಯನಾಗ್ಬರಬೇಕು!!!

ಜಯ ನಿರಂಜನ ಜಯ!

ದುಪ ಭಜನ ಪ್ರಿಯ!
ನಿಶ್ಚಯ ಮನಕಭಯ!
ರಂಜನೆ ಐಹಿಕಾಪ್ರಿಯ!
ಪವೇ ಸರ್ವದಾಭಯ!
ಮನ ವಾಮನ ಪ್ರಿಯ!
ಗತ್ತು ಚಂಚಲ ಭಯ!
ತಿ ನಿರಂಜನ ಪ್ರಿಯ!!!

ಮೌನ ಮನ ಜೀವ ಮಹಾದೇವ!

ಮನ ದಮನ ದೇವ ಭಾವ!
ಲ ವಿಮಲ ಮಹಾನುಭಾವ!
ಕಾರ, ಸಾಕಾರ, ಏಕ ಭಾವ!
ಜೀವನಾಶಾರಹಿತಾತ್ಮ ಭಾವ!
ರ ಗುರು ಸರ್ವೆ

ಶ್ವರ ಭಾವ!
ಮತಾ ದೂರ ನಿರ್ಮೊ

ಹ ಭಾವ!
ಹಾನಿ, ವೃದ್ಧಿ, ಕ್ಷಯ ಶೂನ್ಯ ಭಾವ!
ದೇಶ, ಕಾಲ ಜಿತ ನಿತ್ಯ ಭಾವ!
ಸ್ತು ನಿರಂಜನಾದಿತ್ಯ ಭಾವ!!!

ಸುಬ್ರಹ್ಮಣ್ಯ ವಿಜಯ ರಾಯ!

ಬ್ರಹ್ಮಣ್ಯ ಗುಹ ಜಯ ರಾಯ!(ಬ್ರ)
-ಹ್ಮಚರ್ಯಾಂಗಾಂಜನೇಯ ರಾಯ! (ಗ)
-ಣ್ಯ ಗಜಾನನ ಗಣ ರಾಯ!
ವಿಮಲಾಂಗ ಸಾರಂಗ ರಾಯ!
ಯ ವಿಜಯಾದಿತ್ಯ ರಾಯ!
ದಪತಿ ಶ್ರೀಕೃಷ್ಣ ರಾಯ!
ರಾಜೀವ ಮಿತ್ರ ರಾಮ ರಾಯ! (ಪ್ರಿ)
-ಯ, ನಿರಂಜನಾದಿತ್ಯ ರಾಯ!


ಎಷ್ಟು ಹೇಳಿದರೂ ಇಷ್ಟ ಸಿದ್ಧಿಗೆ ನಿಷ್ಠೆ ಬೇಕು

-ಷ್ಟುರದ ಮಾತೆಲ್ಲಾ ಬಿಟ್ಟು ಇಷ್ಟದಭ್ಯಾಸ ಬೇಕು!
ಹೇಳುವ ಚಪಲ ಕಡಿಮೆಯಾಗುತಿರಬೇಕು! (ಕೇ)
-ಳಿ, ಆಲಕ್ಷ್ಯ ಮಾಡುವುದನು ಬಿಡತಿರಬೇಕು!
ಯೆಗಾಗಿ ಸದಾ ಶ್ರದ್ಧಾವಂತನಾಗಿರಬೇಕು!
ರೂಪ ಭ್ರಾಂತಿಯನು ಸಮೂಲ ಕತ್ತರಿಸಬೇಕು!
ದಕ್ಕಾಗಿ ಶ್ರವಣ ಆಚಾರಕ್ಕೆ ಬರಬೇಕು! (ಕ)
-ಷ್ಟವಾದರೂ ಸಾಧನೆ ಸದಾ ಆಗುತಿರಬೇಕು!
ಸಿಕ್ಕುವುದು ಫಲವೆಂಬ ನಂಬಿಗೆ ಇರಬೇಕು! (ಬು)
-ದ್ಧಿ, ವಿಚಾರದಿಂದ ವಿಶುದ್ಧವಾಗುತಿರಬೇಕು!
ಗೆಳೆತನ ಸಾಧು, ಸಜ್ಜನರದು ಮಾಡುಬೇಕು!
ನಿಬಿಡವಾದಜ್ಞಾನವಿದರಿಂದ ಹೋಗಬೇಕು! (ನಿ)
ಷ್ಠೆಯಿಂದ ಗುರುವಿನುಪದೇಶ ಸಾಧಿಸಬೇಕು!
ಬೇಡದೇ ಸಿಕ್ಕಿದುದರಿಂದ ತೃಪ್ತಿಯಾಗಬೇಕು!
ಕುರುಹು ನಿರಂಜನಾದಿತ್ಯನದು ಇರಬೇಕು!!!


ಸಹಜಾನಂದ ನಿರಂಜನಾನಂದ!

ರಿ, ಹರರಜರೊಂದಾದಾದಾನಂದ!
ಜಾಗ್ರತ್ಸಪ್ನದಂತೆ ನೋಡಿದಾನಂದ! (ಆ)
-ನಂದ ಹೇಳುವುದಕಾಗದಾನಂದ! (ಅ)
-ದನುಭವಿಸಿದರರಿವಾನಂದ!
ನಿರವಧಿ ಸಖವೀ ನಿಜಾನಂದ! (ಸಾ)
-ರಂಗನಿನಿತು ನಿತ್ಯ ತೃಪ್ತಾನಂದ!
ಗದ ವ್ಯಾಮೋಹವಿಲ್ಲದಾನಂದ!
ನಾಕಾರ, ವಿಕಾರವಿರದಾನಂದ!
ನಂದಕಂದನೆಂದಾ ವಿಜಯಾನಂದ!
ತ್ತ ನಿರಂಜನಾದಿತ್ಯಾಂಗಾನಂದ!!!

ನಿರಂಜನ ಕಣ್ಣಾಗಬೇಕಣ್ಣಾ!

ರಂಗನಾಗಿ ಬದುಕಬೇಕಣ್ಣಾ!
ವನಯ್ಯನಾಗಿರಬೇಕಣ್ಣಾ!
ಡೆ, ನುಡಿಯೊಂದಿರಬೇಕಣ್ಣಾ!
ಚ್ಚೆ ಬಿಗಿಯಾಗಿರಬೇಕಣ್ಣಾ! (ಕ)
-ಣ್ಣಾ ತನಿಷ್ಟದಂತಿರಬೇಕಣ್ಣಾ!
ತಿ ಸರಳವಿರಬೇಕಣ್ಣಾ!
ಬೇಕು ಅವನ ಸ್ಮರಣೆಯಣ್ಣಾ!
ನಸು, ಮನಸಿರಬೇಕಣ್ಣಾ! (ಕ)
-ಣ್ಣಾ! ನಿರಂಜನಾದಿತ್ಯ ಮುಕ್ಕಣ್ಣಾ!!!

ಅವಿಶ್ವಾಸದಿಂದ ಒಡಕು ತೊಡಕು!

ವಿಕಲ್ಪದಿಂದಾಗುವುದೆಲ್ಲಾ ಕೆಡೆಕು!
ಶ್ವಾನ, ಸೂಕರರಂತೊದ್ದಾಟ ಬದುಕು!
ಮನ್ವಯವಿಲ್ಲದೆಲ್ಲೆಲ್ಲೂ ಉಡಕು! (ಸ್ವಾ)
-ದಿಂಬಿಗಾಗುತಿದೆಲ್ಲಾ ತಲೆ ಹೊಡಕು!
ಯೆ, ದಾಕ್ಷಿಣ್ಯಕಾಗುತಿದೆ ತಡಕು!
ಬ್ಬರ ಮೇಲಿನ್ನೊಬ್ಬರಿಗೆ ಕುದಕು!
ಕಾಯಿತರಿಗಾಗುತಿದೆ ಸರಕು!
ಕುಲ, ಶೀಲಗಳಿಗೆ ಬಂತು ಕೊರಕು!
ತೊಗಲ ಮೋಹ ಹೆಚ್ಚಾಗಾಯ್ತು ಕೊಳಕು! (ಸ)
-ಡಗರದಾಡಂಬರವೆಲ್ಲಾ ಥಳಕು! (ಬೇ)
-ಕು, ನಿರಂಜನಾದಿತ್ಯನಿಂದ ಬೆಳಕು!!!

ಬೇಕು, ಬೇಡ, ಸಾಕುಮಾಡಿ ನೀನೇ ನಾನಾಗಾಡಯ್ಯ!

ಕುಮನದ ಕುಹಕು ಕುಚೋದ್ಯ ಸಾಕುಮಾಡಯ್ಯ!
ಬೇನೆ ಬೇಸರದಿಂದ ಬೇಗ ದೂರವಿರಿಸಯ್ಯ! (ತ)
-ಡಬಡಿಸದಡಿಗಡಿಗೆ ನೀನೇ ಕಾಣಲಯ್ಯ!
ಸಾಮ, ದಾನ, ಭೇದ, ದಂಡೋಪಾಯವಿನ್ನು ಸಾಕಯ್ಯ!
ಕುಲ, ಶೀಲವರಿಯದ ಬಾಲನಂತೆ ಮಾಡಯ್ಯ!
ಮಾರನಾಟ, ಚೋರಕೂಟ ಭಾರೀ ಸಂಕಟವಯ್ಯ! (ಬ)
-ಡಿವಾರದ ಸಂಸಾರದ ಮಾತೆಲ್ಲಾ ಮಾಯೆಯಯ್ಯ!
ನೀಚ, ಉಚ್ಚ, ತುಚ್ಛಭಾವ ಭ್ರಾಂತಿ ಅಂತ್ಯ ಮಾಡಯ್ಯ!
ನೇಮ, ನಿಷ್ಠೆ, ನೀನಾಗಿರಲಿಕಾಗಿದ್ದಿರಲಯ್ಯ!
ನಾನಾ ಜಾತಿ, ಮತವೆಲ್ಲಕಾಧಾರ ಒಬ್ಬನಯ್ಯ!
ನಾಮಾನಂತದಿಂದ ಪೂಜಿಸಲ್ಪಡುವೆ ನೀನಯ್ಯ!
ಗಾಳಿ ಗೋಪುರದ ಬಾಳೆಲ್ಲಾ ಸುಳ್ಳು ಕನಸಯ್ಯ! (ತ)
-ಡಮಾಡದಭೀಷ್ಟ ಸಿದ್ಧಿ ಬೇಗ ಕರುಣಿಸಯ್ಯ! (ಅ)
-ಯ್ಯ! ನಿಂಜನಾದಿತ್ಯಯ್ಯ!! ಆನಂದದಿಂದಾಡಯ್ಯ!!!

ಶ್ರೀ ಪಾದ ಪ್ರೇಮಾನಂದ ಲೀಲ!

ಪಾದಾಶ್ರಯದಾಸಕ್ತಿ ಲೀಲ! (ಅ)
-ದಕಾಗಿ ಆಳುವುದು ಲೀಲ!
ಪ್ರೇರಣಾಂತರ್ಯಾಮಿಯ ಲೀಲ!
ಮಾತಿಲ್ಲದಾನಂದಿಪ ಲೀಲ!
ನಂಬಿಗೆ ಅಕಳಂಕ ಲೀಲ! (ಅ)
-ದವನದೊಂದು ಬಾಲ ಲೀಲ
ಲೀನ ಮನಕಾನಂದ ಲೀಲ! (ಕಾ)
-ಲ ನಿರಂಜನಾದಿತ್ಯ ಲೀಲ!!!

ಮೈಥಿಲಿಗೆ ಇಷ್ಟ ನಿರಂಜನ ಸ್ವಾಮಿ! (ರ)

-ಥಿ ದಾಶರಥಿಯವಳ ನಿಜ ಸ್ವಾಮಿ! (ಕ)
-ಲಿ ರಾವಣಾಂತಕನವಳಿಗೆ ಸ್ವಾಮಿ!
ಗೆದ್ದನವಳ ಸ್ವಯಂವರದೀ ಸ್ವಾಮಿ!
ಳೆಯ ಭಾರವನಿಳುಹಿದಾ ಸ್ವಾಮಿ! (ಕ)
-ಷ್ಟ ಸಹಿಸಿ, ಇಷ್ಟ ಸಾಧಿಸಿದಾ ಸ್ವಾಮಿ!
ನಿತ್ಯದಲವಳಾರಾಧ್ಯ ಗುರು ಸ್ವಾಮಿ!
ರಂಜಿಪನವಳ ಮನ ಸದಾ ಸ್ವಾಮಿ!
ನಕಸುತೆಗೀತ ಶ್ರೀರಾಮ ಸ್ವಾಮಿ! (ವಾ)
-ನರಾಂಜನೇಯ ಪ್ರಿಯನಾಕೆಯ ಸ್ವಾಮಿ!
ಸ್ವಾಮಿಭಕ್ತಳಿವಳಿಗೆ ಪ್ರಾಣಾ ಸ್ವಾಮಿ!
ಮಿತ್ರ ನಿರಂಜನಾದಿತ್ಯ ಸ್ವಾಮಿ!!!

ಕಾಲ, ಕರ್ಮ, ರೀತಿ ಫಲ!

ಕ್ಷ್ಯದ ನಿತ್ಯ ಕರ್ಮ ಫಲ!
ಲೆತು ಕಾಲದೀ ಫಲ! (ಮ)
-ರ್ಮ ಸೂಕ್ಷ್ಮವರಿತು ಫಲ!
ರೀತಿಯ ಕರ್ಮವೇ ಫಲ!
ತಿಳಿದು ಕಾದರೆ ಫಲ! (ಸ)
-ಫಲವೀ ತ್ರಿಕೂಟ ಫಲ! (ಬಾ)
-ಲ ನಿರಂಜನಾದಿತ್ಯಲಾ!!!

ಇಂದಿರಾ! ನೀನಿರುವ ಮನೆ ಸುಂದರ!

ದಿನ, ರಾತ್ರಿ ಅಲ್ಲಿ ಗಾನ ಮನೋಹರ!
ರಾರಾಜಿಪನಲ್ಲಿ ಶ್ರೀಹರಿ ಶೃಂಗಾರ!
ನೀನೇಕೆ ಶೋಕಿಪುದಾತ ಗುಡಿಗಾರ!
ನಿನ್ನಾಗುಹೋಗಿಗವನೇ ಸದಾಧಾರ!
ರುಚಿ ವಾಸನೆಯಿಂದ ನೀನಿಹೆ ದೂರ!
ಸನಾಶನಗಳವನಲ್ಲಪಾರ!
ರಣ ನಿನ್ನವಗಿಲ್ಲಾತನಮರ!
ನೆರೆ ನಂಬಿರುತಿರಾತನನುಸಾರ! (ವ)
-ಸುಂಧರೆಗರಸನವ ಸವಾಧಾರ! (ಅ)
-ದನರಿತಾನಂದಿಸವನ ಆಕಾರ!
ಮಣ “ನಿರಂಜನಾದಿತ್ಯ ಓಂಕಾರ”!!!

“ಭಂ ಭಂ ಭಂ ಭಂ ಭಂ ಮಹಾದೇವ”!

ಶಿವ ಶಿವ ಶಿವ ಜಯ!
ವಧ ವಧ ಅರಿ ಭಯ!
ತಾಂಡವ ಥೈ ಥೈ ಥೈ ಜಯ!
ಡಮರು ಡಂ ಡಂ ಅಬಯ!
ವರ ಗಿರಿಪ್ರಿಯ ಜಯ!
ನಾಟ್ಯಾನಂದ ಶಿವ ಜಯ! (ಭೇ)
-ಟ್ಯಲಭ್ಯ ಭಂ ಭಂ ಭಂ ಭಯ!
ಲೀಲಾಜಾಲ ಕಾಲ ಜೈ ಜೈ! (ಲೀ)
-ಲಾ ನಿರಂಜನ ಶಿವ ಜೈ!!!

ಶಂಭೋ ಶಂಕರ ಭಂ ಭಂ ಹರ ಹರ!

ಭೋಳಾ ಶಂಕರ ಗಜ ಚರ್ಮಾಂಬರ!
ಶಂಕರೀ ವರ ವಿಜಯ ಶಂಕರ!
ಪಾಲಧರ ಕೈಲಾಸೀ ಈಶ್ವರ!
ಕ್ಕಸ ಸಂಹರ ರಾಗ ಶಂಕರ!
ಭಂಗನಂಗ ಮಾರ ಹರ ಠಂಕಾರ!
ಭಂ ಸ್ವರ ಭೀಕರ ಫಾಲ ಅಂಗಾರ!
ರ ಹರ ಶಂಕರ ಶಾಂತಾಕಾರ!
ಘುಪತಿ ಕಿಂಕರ ಯೋಗೀಶ್ವರ!
ರ ಗಂಗಾಧರ ಶ್ರೀ ಗುರುವರ!
ವಿ ನಿರಂಜನರಿ ಭಯಂಕರ!!!

ತೂಗಿದರು ತಲೆದೂಗಿದರು!

ಗಿರಿಜಾಪತಿಯ ನೋಡಿದರು! (ಮ)
-ದನಾರಿಯಾಡಿದಂತಾಡಿದರು! (ಮ)
-ರುಗಿದರ್ಮತ್ತೆ ಕೊಂಡಾಡಿದರು!
ಕ ತಕ ಕುಣಿದಾಡಿದರು! (ಭ)
-ಲೆ! ನಟರಾಜನಾಟವೆಂದರು!
ದೂರದರ್ಶಿಯ ಕೂಡಿದರು! (ತೆ)
-ಗಿ ನಿನ್ನ ತ್ರಿಶೂಲವೆಲ್ಲೆಂದರು! (ಹ)
-ದವಾಗಿದೆ ಸಂದರ್ಭವೆಂದರು! (ಗು)
-ರು ನಿರಂಜಣಾದಿತ್ಯನೆಂದರು!!!

ನೀನು ನೀನಾಗಬೇಕು! ಜಯ ವಿಜಯ ವಿಮಲ ಕಂದನಾಗಬೇಕು!

ನುಡಿಯುವಾಮಾತು ನಿಜವರಿತಾಡುತಿರುವಭ್ಯಾಸವಿರಬೇಕು!
ನೀತಿ, ರೀತಿಗಳು ಸದಾ ಗುರಿಗಾಗಿ ನಿನ್ನೊಳಗೆ ಸ್ಫುರಿಸಬೇಕು!
ನಾಮ, ಜಪ, ಭಜನೆ, ಧ್ಯಾನ ಮಾತ್ರದಿಂದ ಸಂತುಷ್ಟನಾಗಿರಬೇಕು!
ಗನದಲಾದಿತ್ಯನಿರುವಂತೆ ನಿಶ್ಚಿಂತೆಯಿಂದಿರುತಿರಬೇಕು!
ಬೇರಾವ ಚಪಲಕಿನ್ನು ವಿಚಾರವನು ದಿನವಿರದಿರಬೇಕು!
ಕುದಿಯುತಿರಬೇಕು ಧ್ಯೇಯಸಿದ್ಧಿಗಾಗಿ, ಆಜ್ಞೆಯ ಪಾಲಿಸಬೇಕು!
ಗಕಾಗಿ ನಿನ್ನ ಜನ್ಮವಾಗಿಲ್ಲವೆಂಬುದನು ತಿಳಿದಿರಬೇಕು!
ದುನಾಥನಂದಾಡಿದುದಿಂದು ಕಾರ್ಯಗತವಾಗುತಿರಲೇಬೇಕು!
ವಿಜಯ, ದ್ರೌಪದಿಯರಂತೆ ಪೂರ್ಣ ಶರಣಾಗತನಾಗಿರಬೇಕು!
ನ್ಮಸಾರ್ಥಕವನ್ಯಬಗೆಯಿಂದ ಬಗೆಹರಿಯದರಿಯಬೇಕು!
ತ್ನವೆಂದಿಗೂ ವಿಫಲವಾಗದೆಂಬ ಧೈರ್ಯ ಬಲವಾಗಿರಬೇಕು!
ವಿಶುದ್ಧದಲಿ ಮನ ನಿಂತು ಸತತ ಕಾರ್ಯಸಾಧನೆಯಾಗಬೇಕು!
ತಿ ಹೊಲಸಾಗುವುದು ವಾದ, ವಿವಾದದಿಂದ; ಗಮನಿಸಬೇಕು!
ಗುಬಗೆಯಿಂದ ನೀನು ವಿಚಾರ ನಡೆಸಿ ಬಾಳುತಿರಬೇಕು!
ಕಂದ ಕುಂದಳಿಯುತಿದೆ ದೇಹವಿದರಿಯದಂತೆಂದರಿಯಬೇಕು!
ಯೆಯಿಂದ

ಭಿಸಿದೀ ಉಪದೇಶವಾಚರಿಸ್ಯಾನಂದಿಸಬೇಕು!
ನಾಳೆ ಸಾಧಿಸುವೆನೆಂದಿಂದು ನೀನು ನಿರುತ್ಸಾಹಿಯಾಗದಿರಬೇಕು!
ತಿಸುತಿದೆ ಕಾಲ ಮಾಯಾಜಾಲದಿಂದೆಚ್ಚರವಾಗಿರಬೇಕು!
ಬೇಗ ಬರಲಿದೆ ನಿನ್ನಭೀಷ್ಟಸಿದ್ಧಿಯದಿನ ಕಾಯುತಿರಬೇಕು!
“ಕುಪಿತ ನಿರಂಜನಾದಿತ್ಯನಾಗುವವನಲ್ಲ, ಅಪ್ಪಾ! ಎನಬೇಕು!!!

ದೊಡ್ಡವರ ದೊಡ್ಡಯ್ಯ ಮಾರ್ತಾಂಡಯ್ಯ! (ಹೆ)

-ಡ್ಡರಹಂಕಾರದಿಂದುಬ್ಬಿಹರಯ್ಯ!
ರ ಋಷಿಗಳಿಗುಪೇಕ್ಷೆಯಯ್ಯಾ!
ಗಳೆರಾಗ ಹೆಚ್ಚಿರುವುದಯ್ಯಾ!
ದೊರೆತನವೆಲ್ಲರಿಗೆ ಬೇಕುಯ್ಯಾ! (ದ)
-ಡ್ಡರಿಗೂ ಉನ್ನತಾಧಿಕಾರವಯ್ಯಾ! (ಕೈ)
-ಯ್ಯ ಚಾಚುವರು ಅಲ್ಪಲಂಚಕಯ್ಯಾ!
ಮಾರುವರಾಹಾರತ್ಯಾಸೆಯಿಂದಯ್ಯಾ! (ಮಾ)
-ರ್ತಾಂಡ ಮಂಡಲಕೇರುವಾಸೆಯಯ್ಯಾ! (ಒ)
-ಡಲೆಷ್ಟು ದಿನವೆಂದರಿಯರಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯನೇ ದತ್ತಯ್ಯ!!!

ಮಹಾ ಶಿವರಾತ್ರಿ ಹೇಗೆ ಎಲ್ಲ?

ಹಾಕಿದ ವಿಭೂತಿ ಹಣೆಯಲ್ಲಿ!
ಶಿವಸ್ಮರಣೆ ಮನಸಿನಲ್ಲಿ!
ರ ಪ್ರಸನ್ನತೆ ಮುಖದಲ್ಲಿ!
ರಾತ್ರೆಲ್ಲಾ ಭಾವ ಭಜನೆಯಲ್ಲಿ!
ತ್ರಿಶೂಲಿ ಪೂಣ

ದಾವೇಶದಲ್ಲಿ!
ಹೇರಂಭಾದಿಗಳ್ತಾಂಡವದಲ್ಲಿ!
ಗೆಜ್ಜೆ ತಾಳಗಳ ಮೇಳದಲ್ಲಿ!
ಲ್ಲೆಲ್ಲಿ ಶಿವಸನ್ನಿಧಿಯಲ್ಲಿ! (ನಿ)
-ಲ್ಲ! ನಿರಂಜನಾದಿತ್ಯನಿರ್ಪಲ್ಲಿ!!! ೨೪೯

ನಿನ್ನನೆಂತೆಲ್ಲಿರಿಸಬೇಕೆಂದು ನನಗೆ ಗೊತ್ತು! (ಖಿ)

-ನ್ನನಾಗದಿರು ನಾನಾ ಯೋಚನೆಯಿಂದ ಬೇಸತ್ತು!
ನೆಂಟನಾಗಿಹೆ, ಭಂಟನಾಗಿಹೆ ನಾನು ಎಲ್ಲಾ ಹೊತ್ತು!
ತೆರೆಗಳಡಗಿ ಲಯವಾಗ್ವುದೆನ್ನ ಸುತ್ತು! (ಎ)
-ಲ್ಲಿ, ಹೇಗೆಂಬುದದೇಕೆ ನಿನಗೆ ಚಿಂತೆ ಇವತ್ತು? (ಆ)
-ರಿತೆಲ್ಲರ ಯೋಗಕ್ಷೇಮ ನೋಡುವೆನು ಮುಫತ್ತು!
ತ್ಯವಿದನುಭವಿಸು ಕರ್ಮಾಸಕ್ತಿ ಇತ್ತು!
ಬೇರೆ ಮಾತುಗಳಿಗಡಿಯಾಲಾಗದಿರು ಸೋತು!
ಕೆಂಗಣ್ಣಿಂದಿಲ್ಲದೆ ಶುಭ್ರವಾಗಿದೆ ವಿಷ ಸತ್ತು!
ದುರಿತಹರ ನಾನಿರಲು ಭಯವೇಕೆನಿತು?
ಗುನಗುತಲಿರು, ಜವಾಬ್ದಾರಿ ನನಗಿತ್ತು!
ನ್ನ ಕರ್ತವ್ಯ ನಾ ಮಾಡಬೇಕೆಂದೆನಗೆ ಗೊತ್ತು!
ಗೆರೆ ದಾಟಿದರೆ ಆಗುವುದು ಎಲ್ಲಾ ವಿಪತ್ತು!
ಗೊತ್ತಾಯಿತು ಸೀತೆಗಾ ಲಕ್ಷ್ಮಣನ ಮಾತಾವತ್ತು? (ಹೊ)
-ತ್ತು, ನಿರಂಜನಾದಿತ್ಯನೊಬ್ಬನಿಗೆ ಮಾತ್ರ ಗೊತ್ತು!!!

ಬರೆಯುವೆನು ಕೈಯಿಂದ ನಿನ್ನಿಷ್ಟವೆಂದೆ!

ರೆಪ್ಪೆ ಕೆರೆದು ನವೆ ಹೋದುದಿಷ್ಟವೆಂದೆ!
ಯುಕ್ತವೀಗೇನೆಂದು ಯೋಚಿಪುದಿಷ್ಟವೆಂದೆ! (ನ)
-ವೆ ಮೂಗಿಗಾಯ್ತೆಂದರಿತು ನಿನ್ನಿಷ್ಟವೆಂದೆ!
ನುಡಿಗಳ ಲೆಃಖ ಹಾಕಿದ್ನಿನ್ನಿಷ್ಟವೆಂದೆ!
ಕೈ ತಡವರಿಸಿದುದು ನಿನ್ನಿಷ್ಟವೆಂದೆ! (ಕೈ)
-ಯಿಂದ ತಲೆ ಕೆರೆದುದು ನಿನ್ನಿಷ್ಟವೆಂದೆ (ಪ)
-ದಗಳ ಬದಲಾಯಿಸಿದುದಿಷ್ಟವೆಂದೆ!
ನಿಧಾನಿಸಿ ಯೋಚಿಸಿದ್ದು ನಿನ್ನಿಷ್ಟವೆಂದೆ! (ತಿ)
-ನ್ನಿಸಿದ್ದು ತಿಂದು ತೇಗಿದ್ದು ನಿನ್ನಿಷ್ಟವೆಂದೆ! (ಕ)
-ಷ್ಟವಾಗಾಗ್ಯೆ ಬರವುದು ನಿನ್ನಿಷ್ಟವೆಂದೆ! (ನೋ)
-ವೆಂಬುದದು ಮಲಹರ ನಿನ್ನಿಷ್ಟವೆಂದೆ! (ಮುಂ)
-ದೆ, ನಾ ನಿರಂಜನಾದಿತ್ಯ ನಿನ್ನಿಷ್ಟವೆಂದೆ!!!

ಸದಾನಂದದನ ನಿತ್ಯ ಜೀವನ!

ದಾರಿತೋರಿತು ಗುರು ಕರುಣ!
ನಂಬಬೇಕವನ ಸದ್ವಚನ!
ರ್ಶನಕೆ ಕಾಯಬೇಕವನ!
ಯೆಯಿಂದ ಜನುಮ ಪಾವನ!
ನಿರ್ಮಲವಾಗಿರೆಲೆಲ್ಲ ಮನ!
ತ್ಯಜಿಸಿರಿ ಕುಹಕ ಭಾವನ!
ಜೀವಿಸಿರಿ ಭಜಿಸುತವನ!
ರವೀವ ಗುರು ನಿರಂಜನ!
ಮಿಸುತಿರಿ ಪಾದಕವನ!!!

ನೀನಿರಬೇಕು ಸ್ವಧರ್ಮದಲೇ ಸದಾ!

ನಿಲಿಸಲಾರೆವು ಅನ್ಯರಾಡುವುದಾ!
ತಿಪತಿಯ ಆಟ ಸಂಸಾರ ಬಂಧಾ!
ಬೇಕು ರತಿಪತಿ ಪಿತನ ಸಂಬಂಧಾ!
ಕುಹಕ ನಾಶವಹುದು ಅದರಿಂದಾ!
ಸ್ವಸ್ಥಿತಿಯಲಿರಬೇಕು ನಿಜದಿಂದಾ!
ರ್ಮವಿದು ಜೀವರಿಗೆ ಸುಖಪ್ರದಾ! (ಕ)
-ರ್ಮ ಕಾಲದಿ ಕಲೆತಾಗುವುದಾಮೋದಾ!
ತ್ತನಾಡಿ ಮಾಡುವುದೆಲ್ಲವೂ ಸೀದಾ!
ಲೇವಡಿಗಾರನಿದನರಿಯದಾದಾ!
ರಳತನಕಹುದು ಬಹು ಬಾಧಾ!
ದಾರಿ ನಿರಂಜನಾದಿತ್ಯನ ಪ್ರಸಾದಾ!!!

ಇನ್ನೇನು ಬೇಕೆನಗೆ? (ಎ)

-ನ್ನೇಳಿಗೆ ಸಾಕೆನಗೆ!
ನುಡಿವುದಿಲ್ಲೆನಗೆ!
ಬೇರಿಲ್ಲ ಚಿಂತೆನಗೆ!
ಕೆಲಸ ಹೋಯ್ತೆನಗೆ!
ಮಿಪೆ ನಿನ್ನಡಿಗೆ!
ಗೆಳೆಯ ನಾನಿನಗೆ!!!

ಸ್ಮಶಾನ ಗುಡಿ ನನ್ನದಯ್ಯಾ!

ಶಾರೀರಿಕ ಬಂಧ ಸಾಕಯ್ಯಾ!
ನ್ನ ನೀನಿರ್ಪಲ್ಲಿ ಕಾಣಯ್ಯಾ!
ಗುರು ಭಕ್ತಿ ಶಿವ ತಾನಯ್ಯಾ! (ಅ)
-ಡಿಗಡಿಗೆನ್ನ ನೆನೆಯಯ್ಯಾ!
ಶ್ವರದ ಮೋಹ ಬಿಡಯ್ಯಾ! (ಅ)
-ನ್ನ ಪಾನಕಾಸೆ ಬೇಡವಯ್ಯಾ!
ತ್ತನಾದರ್ಶವೆನದಯ್ಯಾ! (ಅ)
-ಯ್ಯಾ! ತಿಳಿಯೆನ್ನ ಚಿಕ್ಕಣ್ಣಯ್ಯಾ!!!

ಹಣ್ಣುರಸ, ಬೆಣ್ಣೆ ಪುಷ್ಟಿಯಾಹಾರವಯ್ಯಾ! (ಹ)

-ಣ್ಣುರಸ, ರೊಟ್ಟಿ ಸಹಿತನುಕೂಲವಯ್ಯಾ!
ಸದೊಡನೆ ಬೆಣ್ಣೆ ಪ್ರತಿಕೂಲವಯ್ಯಾ!
ತ್ಸಂಘವಿರಬೇಕು ತನಗೊಪ್ಪುವುದಯ್ಯಾ!
ಬೆಣ್ಣೆ ಬಿಸಿಯನ್ನದಲುಪಕಾರಿಯಯ್ಯಾ! (ಹ)
-ಣ್ಣೆನುತವೇಳೆಯಲಿ ತಿನ್ನಬಾರದಯ್ಯಾ!
ಪುರುಷ ಸ್ತ್ರೀಯರಲಾತ್ಮೀಯಾದರ್ಶವಯ್ಯಾ! (ಅ)
-ಷ್ಟಿರಲದು ಪರಮ ಸುಖಪ್ರದವಯ್ಯಾ!
ಯಾದವ ಗೋಪಿಯರೆ ವಿಶ್ವಾಸವಿದಯ್ಯಾ!
ಹಾದರದ ಆರೋಪ ಅಪಚಾರವಯ್ಯಾ!
ಸ, ವಿಷವಾಗ್ವುದವಿವೇಕದಿಂದಯ್ಯಾ!
ರ ಗುರೂಪದೇಶವಿದು ಸಾಧಕಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ

ಶ್ರೀ ಗುರುವಯ್ಯಾ!!!
ದತ್ತತಾನಯ್ಯಾ
ಸರ್ವಜ್ಞನಯ್ಯಾ
ಸರ್ವಾತ್ಮನಯ್ಯಾ

ನಿರಂಜನಾದಿತ್ಯನಲ್ಲಿಲ್ಲಿ ಅಲೆವವನಲ್ಲ!

ರಂಗನಾಥನ ತಾನಿದ್ದಲ್ಲಿಂದ ನೋಡದೇನಿಲ್ಲ!
ನ ಮೆಚ್ಚಲಿಕಾಗಿ ಧರ್ಮ ಬಿಡುವವನಲ್ಲ!
ನಾನು ದೊಡ್ಡವನೆಂಬಹಂಕಾರವಿವನಿಗಿಲ್ಲ!
ದಿನ, ರಾತ್ರಿ ಕರ್ತವ್ಯ ಮಾಡದೆ ತಾನುಳಿದಿಲ್ಲ! (ಅ)
-ತ್ಯಗತ್ಯವೀ ಆದರ್ಶ ಸುಖಕೆಂದರೆ ತಪ್ಪಿಲ್ಲ!
ಭೋಮಮಂಡಲವೀಕ್ಷಿಸುತಿಹನು ದಿನವೆಲ್ಲ! (ಅ)
-ಲ್ಲಿರುವನೊಮ್ಮೊಮ್ಮೆ ಮೋಡ ಮುಸುಕಿನೊಳಗೆಲ್ಲ! (ಅ)
-ಲ್ಲಿಲ್ಲಿಣಿಕಿ ಉತ್ಸಾಹ ಕೊಡುವನು ಜಗಕೆಲ್ಲ!
ವನ ಕಾಣದಿದ್ದರೆ ನಿರ್ಜಿ

ವಾಗುವರೆಲ್ಲ! (ಅ)
-ಲೆದಾಡದಿರಿ! ನಿಮಗಾಗಿಹೆನೆಂದನ್ನದಿಲ್ಲ!
ಳಗಿರುತ ಮಳೆ ಗತಿಸದೇನವನಿಲ್ಲ!
ರ ಋಷಿ ಮುನಿ ಮಾತು ಸುಳ್ಳುನುತವನಿಲ್ಲ!
ಲವಿಂದೆಲ್ಲರ ಯೋಗಕ್ಷೇಮ ನೋಡದೇನಿಲ್ಲ! (ಅ)
-ಲ್ಲಗಳೆದರವನಿಗೇನೂ ಲಾಭ ನಷ್ಟವಿಲ್ಲ!!!

ಲೋಕಮಿತ್ರನೆನ್ನ ನೇತ್ರದಲ್ಲಿ!

ಷ್ಟವೇನಿಲ್ಲ ಅವನಿಂದಲ್ಲಿ!
ಮಿಲನವಾಗಿಹನಾತ್ಮನಲ್ಲಿ!
ತ್ರಯಲೋಕ ಬೆಳಗಿಪನಲ್ಲಿ!
ನೆರವೀವನಲ್ಲಿಂದೆಲ್ಲೆಲ್ಲಿ! (ಇ)
-ನ್ನನ್ಯರಾಶ್ರಯವೇಕೆನಗಿಲ್ಲ?
ನೇಮ, ನಿಷ್ಠೆಯೊಳಿರುವೆನಲ್ಲಿ!
ತ್ರಯಕ್ಷರಿ ಮಂತ್ರ ಜಪದಲ್ಲಿ!
ತ್ತನೀ ರೂಪಿನಲಿಹನಿಲ್ಲಿ! (ಇ)
-ಲ್ಲಿ, ನಿರಂಜನಾದಿತ್ಯೈಕ್ಯದಲ್ಲಿ!!!

ಅಂಬರದಲಿರುವಂಬುಜ ಸಖ!

ಲರಾಮಾನುಜ ವಿಜಯ ಸಖ!
ಘುಕುಲತಿಲಕ ಧರ್ಮ ಸಖ!
ರ್ಶನವಿತ್ತರೆ ಪರಮ ಸಖ!
ಲಿಪಿಗಾರರ ಸ್ಫೂರ್ತಿ ಸುಧಾರಕ!
ರುಧಿರ ಶುದ್ಧಿಗೆ ದಿವ್ಯೌಷಧಿಕ!
ವಂದಿಸುವರ ಕಷ್ಟ ನಿವಾರಕ!
ಬುದ್ಧಿ ವೃದ್ಧಿಗಾದರ್ಶ ದಾರ್ಶನಿಕ!
ರಾಮರಣ ಕಳೆವ ಆತ್ಮೀಕ!ಳ ಕುಲಕೆ ನಿರಂಜನಾಂತಕ!
ರೆ! ನಿರಂಜನಾದಿತ್ಯ ತಾರಕ!!!

ಮಹಾತ್ಮನಿಗೆಲ್ಲೆಲ್ಲೂ ಮನೆ, ಮಂದಿರ!

ಹಾಯಾಗಿದ್ದಲ್ಲಿರುವಾತ ಪ್ರಭಾಕರ! (ಆ)
-ತ್ಮ ಚಿಂತಕನಿಗಿನ್ನೇನು ಬೇಸರ?
ನಿತ್ಯ ತೃಪ್ತಿ, ನಿರಾಸೆಯವನಾಚಾರ!
ಗೆಳೆಯನ ಗೆಳೆಯನಿಗಿಲ್ಲಾತುರ! (ಅ)
-ಲ್ಲೆನ್ನಾದರಿಪವನಿಲ್ಲೂ ಕೃಪಾಕರ! (ಅ)
-ಲ್ಲೂ, ಇಲ್ಲೂ ತಾನಿರುವನವನಂತರ!
ಹಿಮಾನಂದದಲಿರ್ಪ ಬಾಹ್ಯಾಂತರ!
ನೆಗಳಿಯೆಂಬುದಾತಗವಾಂತರ!
ಮಂದಿರವಾತನದೀತನು ಸುಂದರ!
ದಿತ್ಯತ್ಯಾತ್ಮಜರೆಲ್ಲಾ ಪ್ರಿಯಕರ!
ಸ, ನಿರಂಜನಾದಿತ್ಯ ರುಚಿಕರ!!!

ಬಟ್ಟೆಯುಡಿಸಿತೆನ್ನ ಬೇನೆ ಬೆನ್ನು! (ಉ)

-ಟ್ಟೆನಾದರೂ ಬಿಚ್ಚದುಳಿಯದೆನ್ನು!
ಯುಕ್ತಿಯಿದೆಲ್ಲ ಮನಸಿನದೆನ್ನು! (ಉ)
-ಡಿಸುಣಿಸುವಾಟ ಅದರದೆನ್ನು!
ಸಿಕ್ಕಿಕೊಂಡು ಮತ್ತಳಬಾರದೆನ್ನು!
ತೆರೆಮರೆಯಾಟ ಸಾಕುಮಾಡೆನ್ನು! (ಉ)
-ನ್ನತಿಗಾಗಿ ದುಡಿಯುವುದೇ ಚೆನ್ನು!
ಬೇಗ ಬಾರೆಂದು ಕರೆವ ನನ್ನನ್ನು!
ನೆರವು ನೀಡದಿರಲಾರನಿನ್ನು!
ಬೆಳಕಾಯ್ತು! ಹೋಗಿ ನೋಡವನನ್ನು! (ಅ)
-ನ್ನು, ನಿರಂಜನಾದಿತ್ಯ ಬಂದನೆನ್ನು!!!

ಶಿವ ವಿರಕ್ತಿ ಆದಿಶಕ್ತಿಗಾಸಕ್ತಿ!

ರಿಸಿದಳು ಭಿಹಾಕಿ ಪರಾಶಕ್ತಿ!
ಲವಿಂದ ಕಲಿಸಿದನು ಗುರುಭಕ್ತಿ!
ವಿನಯದಿ ಪಾದಕರಗಿದಲಾ ಶಕ್ತಿ!
ತಿಪತಿಯಕ್ಷಿಲಡಗಿಸಿದಾ ಶಕ್ತಿ! (ಭ)
-ಕ್ತಿಯಿಂದಾದಳಾಗರ್ಧನಾರಿ ಶಿವಶಕ್ತಿ!
ಗ ಬಂತು ಅವಳಿಗೆ ಅತುಳ ಶಕ್ತಿ!
ದಿಕ್ಕುದಿಕ್ಕಿಗೂ ಹರಡಿತಾ ಶಿವ ಶಕ್ತಿ!
ಶಿಶೇಖರನಿಗಾಯಿತಮಿತ ಶಕ್ತಿ! (ಶ)
-ಕ್ತಿ, ಶಿವರಿಗಾಯಿತಾಗ ಮಂಗಳಾರತಿ!
ಗಾನ ಮಾಡಿದರಾಗೆಲ್ಲಾ ಅಮರತತಿ!
ಹವಾಸವಿದು ವರ ಸಾಯುಜ್ಯ ಗತಿ! (ಶ)
-ಕ್ತಿ, ನಿರಂಜನಾದಿತ್ಯ ರೂಪಾ ಶಿವಶಕ್ತಿ!!!

ಶಿವನ ವಿರಕ್ತಿಯಾಸಕ್ತಿ!

ರಸತಿ ವಿಯೋಗವೃತ್ತಿ!
ಗಾಧಿಪ ಸುತೆಯ ಭಕ್ತಿ!
ವಿಶ್ವೇಶ್ವರ ವಿವಾಹಾಸಕ್ತಿ!
ಕ್ಕಸರ ಅನ್ಯಾಯವೃತ್ತಿ! (ಇ)
ಕ್ಕಿದೆ ಕುಮಾರಸಂಭವೋಕ್ತಿ!
ಯಾತನೆಯ ವಿಮರ್ಶಾವೃತ್ತಿ!
ತಿಗಾಯ್ತುಪದೇಶ ಭಕ್ತಿ! (ಶ)
-ಕ್ತಿ! ನಿರಂಜನಾದಿತ್ಯಾಪ್ತಿ!!!

ಇರಿಸಿದಂತಿರಬೇಕಯ್ಯಾ! (ಅ)

-ರಿಯಲುದಾಸೀನನಾಗಯ್ಯಾ!
ಸಿಡಕು ಮಾತಾಡದಿರಯ್ಯಾ!
ದಂಭಾಚಾರ ಸಾಕುಮಾಡಯ್ಯಾ!
ತಿಳಿದು ನೀ ತಿದ್ದಿಕೊಳ್ಳಯ್ಯಾ!
ವಿಯಂತಿರಲೆತ್ನಿಸಯ್ಯಾ!
ಬೇಕು, ಬೇಡ ನೂಕಿಬಿಡಯ್ಯಾ!
ರ್ಮನಿಷ್ಠೆ ಬಲಿಯಲಯ್ಯಾ! (ಅ)
ಯ್ಯಾ! ನಿರಂಜನಾದಿತ್ಯಮ್ಮಯ್ಯಾ!!!

ದಾರಿ ಸಾಗಬೇಕೂರು ಸೇರಬೇಕು! (ಊ)

-ರಿನಲಿ ಸುಖ ಪಡೆಯಲೇಬೇಕು!
ಸಾಹಸ ಸದಾ ಕುಂದದಿರಬೇಕು!
ಮನವನ್ಯ ಇರದಿರಬೇಕು!
ಬೇಸರ ಬಾರದಂತೆ ಇರಬೇಕು!
ಕೂತು ಕಾಲ ಕಳೆಯದಿರಬೇಕು!
ರುಚಿಯೂಟಕಾಶಿಸದಿರಬೇಕು!
ಸೇವೆ ಸದ್ಗುರುವಿನದಿರಬೇಕು!
ಥಕೆ ನಿರೀಕ್ಷಿಸದಿರಬೇಕು!
ಬೇಡವ ಅಭ್ಯಾಸ ಬಿಡಲೂಬೇಕು!
ಕುಲಕೆ ನಿರಂಜನಾದಿತ್ಯ ಬೇಕು!!!

ಉಂಡು, ತಿಂದುಟ್ಟಳುವ ಬಾಳೇತಕಯ್ಯಾ?

-ಡುವುದೊಂದು ಮಾಡುವುದಿನ್ನೊಂದೇಕಯ್ಯಾ?
ತಿಂದಜೀರ್ಣ ಮಾಡಿಕೊಳಬಾರದಯ್ಯಾ!
ದುರಿತಾಂತಕನ ಸೇವೆಗಾಗುಣ್ಣಆ! (ಅ)
-ಟ್ಟಹಾಸದ ಬಟ್ಟೆ, ಬರೆ ವ್ಯರ್ಥವಯ್ಯಾ! (ಆ)
-ಳುಗಳವಲಂಬನದ ಬಾಳ್ಗೋಳಯ್ಯಾ!
ಡೆವೆ, ವಸ್ತು ಕಳ್ಳರ ಪಾಲಿಗಯ್ಯಾ!
ಬಾಗಿ ಗುರು ಪಾದಕ್ಕೆ ಬಾಳಬೇಕಯ್ಯಾ! (ಆ)
-ಳೇ ತನಗೆ ತಾನಾಗಿ ಅನದಿಸಯ್ಯಾ!
ತ್ವ ಚಿಂತನೆ ನಿರಂತರಮಾಡಯ್ಯಾ!
ಮಲ ಮಿತ್ರನಿಂದಿದ ಕಲಿಯಯ್ಯಾ! (ಅ)
-ಯ್ಯಾ! ಆತನೇ ನಿರಂಜನಾದಿತ್ಯನಯ್ಯಾ!!!

ಕರೆವ ಕಾರ್ಯವೇನು? ಬರವ ಭಾಗ್ಯವೇನು?

ರೆಸಿಗೆಯಾಡುತಿಹ ಹುಣ್ಣೂಗಳಿವೆಯೇನು?
ಧು, ವರರ ಹರಿಸಲಿಕೆ ಬರಲೇನು?
ಕಾಲಿನ ಮೂಳೆಗೆ ಹುಳು ಹತ್ತಿರುವುದೇನು? (ಉ)
-ರ್ಯತ್ಯಧಿಕವಾದ ವಿಷ ಸೋಂಕಿರುವುದೇನು?
ವೇಷ, ಭೂಷಣಗಳಿಂದಲಂಕರಿಪಿರೇನು?
ನುತಿಸಿ ಕಾವ್ಯ, ಕವನ ಅರ್ಪಿಸುವಿರೇನು?
ರವ, ಹೋಗುವ ಕೆಲಸಗಳಿಲ್ಲವಿನ್ನು! (ಉ)
-ರುಳಿಸುವ ಮಾಯಾ ಮೋಹಿನಿಯಾಟ ಬೇಡಿನ್ನು!
ಧು, ವರರಿಗಾಶೀರ್ವಾದವಿದ್ದಲ್ಲಿಂದಿನ್ನು!
ಭಾರೀ ರೋಗಕ್ಕೆಲ್ಲಾ ಆದಿತ್ಯನೇ ಗತಿ ಇನ್ನು! (ಉ)
-ಗ್ಯಲೆತ್ನಿಸಿದುದನ್ನು ನುಂಗಲಾಗದಾನಿನ್ನು!
ವೇದ ವೇದ್ಯನ ಸ್ಮರಣೆಯೇ ಭೂಷಣವಿನ್ನು!
ನುತಿ, ಕೃತಿ, ನಿರಂಜನಾದಿತ್ಯನದು ಇನ್ನು!

ಕ್ರಮಬದ್ಧ ಶುದ್ಧ ಜೀವಿಯಾಗಯ್ಯಾ!

ನೆಮನೆಯಲೆಯುವುದೇಕಯ್ಯಾ!
ರಡು ಮಾತಿಂದೇನಾಗುವುದಯ್ಯಾ! (ಸ)
-ದ್ಧರ್ಮ ಸಕಲರಿಗಿರಬೇಕಯ್ಯಾ!
ಶುಚಿಗಾಗಿ ಸ್ನಾನ, ಧ್ಯಾನ ಮಾಡಯ್ಯಾ! (ಬ)
-ದ್ಧ ಸಂಸಾರಿಯಾಗಿರಬಾರದಯ್ಯಾ!
ಜೀವಾತ್ಮೈಕ್ಯಕ್ಕೆ ಶ್ರಮಿಸಬೇಕಯ್ಯಾ!
ವಿಮಲಾನಂದ ಸ್ವಸ್ಥಿತಿಯಿದಯ್ಯಾ!
ಯಾಗ, ಯೋಗಗಳು ಇದಕಾಗಯ್ಯಾ!
ತಿಸುತಿದೆ ಕಾಲ ಮೋಹಕಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಕಾಯ್ವನಯ್ಯಾ!!!

ಮುಗಿಲು ಮಾಲಾ ಕಾಲ ಲೀಲೆ!

ಗಿರಿಯಂತಿಹುದೊಂದು ಲೀಲೆ!
ಲುಪ್ತವಾಗ್ವುದಿನ್ನೊಂದು ಲೀಲೆ!
ಮಾಸಿದಂತಿರ್ಪದೊಂದು ಲೀಲೆ!
ಲಾಭ ಮಳೆಯಾಗುವ ಲೀಲೆ!
ಕಾತುರಾತುರೋಟದ ಲೀಲೆ!
ಕ್ಷಣ ಬಣ್ಣ ತೋರ್ಪ ಲೀಲೆ!
ಲೀಲೆಯಿದೊಂದು ಮಾಯಾ ಲೀಲೆ!
ಲೆಕ್ಕಿಸನಾದಿತ್ಯನೀ ಲೀಲೆ!

ನಿನಗಿರಲಿ ನಿನ್ನೆಲೆ ಲಕ್ಷ್ಯ!

ನಗಾಗಿ ಬರುತಿದೆ ಭಕ್ಷ್ಯ!
ಗಿರಿಯಂತಿರದಗಿಲ್ಲಪೇಕ್ಷ್ಯ!
ಗಳೆ ಮಾಡಿದರಾಗುಪೇಕ್ಷ್ಯ!
ಲಿಖಿತ ಜಪಕೇಕೆ ಅಲಕ್ಷ್ಯ?
ನಿನ್ನ ಧರ್ಮಕೆ ಇದು ಅಪಥ್ಯ! (ಅ)
-ನ್ನೆ ನಾನಿನಗೆಂದಿಗೂ ಅಸತ್ಯ!
ಲೆಕ್ಕಿಸಬೇಡವಗುಣ ಮಿಥ್ಯ!
ಯಗೊಳಿಸು ಮನಸ ನಿತ್ಯ! (ಲ)
-ಕ್ಷ್ಯ, ನಿರಂಜನಾದಿತ್ಯಗಪೇಕ್ಷ್ಯ!!!

ಸಂತೋಷಕಿರಬೇಕು ಸದ್ಭಾವ!

ತೋರಿಕೆಯ ಭಕ್ತಿ ಭಾವಾಭಾವ!
ಷ್ಟಿಷ್ಟ ದೇವಾರ್ಪಣಾ ಸ್ವಭಾವ!
ಕಿರುಕುಳ ಮನಕಿದಭಾವ!
ಮಿಪುದವನಲಿ ಸದ್ಭಾವ!
ಬೇಡವದರಿಂದ ಭಿನ್ನ ಭಾವ!
ಕುಹಕಕೆ ಕಾರಣ ದುರ್ಭಾವ!
ಂಕೀರ್ತನೆಯಿಂದ ನಾಶಾಭಾವ! (ಸ)
-ದ್ಭಾವದಿಂದ ಮುಕ್ತನಹ ಜೀವ!
ರ ನಿರಂಜನಾದಿತ್ಯ ದೇವ!!!

ಅಳೆವ, ಸುರಿವ, ಸೇರಿಗಮೃತ ಸಿಗದಯ್ಯಾ! (ಆ)

-ಳೆನುತ ಹೀನೆ

ಸಲ್ತಾ ವಿಧೇಯನಾಗನಯ್ಯಾ!
ರಿಸಿದರಸಿಯೂ ಹಿಂಸೆಗಳವಡೆಳಯ್ಯಾ!
ಸುತನಿಂದ ಪಿತೃಸೇವೆ ಕಶ್ಯಪಗಾಯ್ತೇನಯ್ಯಾ? (ಅ)
-ರಿ, ಹರಿಯೆಂದ ಶಿಶುಪಾಲನೇನಾದ ಹೇಳಯ್ಯಾ!
ಸ್ತ್ರಾಪಹರಣದ ಗರ್ವಿಗೇನಾಯ್ತರಿಯಯ್ಯಾ!
ಸೇನಾಬಲಳೆದು, ಸುರಿದಾಳ್ಲಿಲ್ಲ ಕೌರವಯ್ಯಾ!
-ರಿತ ಪಂಡಿತ ಮಂಡನಮಿಶ್ರನೂ ಸೋತನಯ್ಯಾ!
ಣೇಶನೂ ಗರ್ವದಿ ಗಜಮುಖನಾದನಯ್ಯಾ! (ಅ)
-ಮೃತ ಮಥನದಿಂದಸುರರಮರರೇನಯ್ಯಾ?
ರಣಿಯೇ ಕಾರಣಿ! ಧೋರಣೆಗಲಭ್ಯನಯ್ಯಾ!
ಸಿರಿಯರಸನೂ ಅತ್ರಿಗೆ ಪುತ್ರನಾದಬಯ್ಯಾ!
ರಳಧರನೂ ಕಾಪಾಲಿಯಾಗಬೇಕಾಯ್ತಯ್ಯಾ!
ತ್ತ ಗುರುವೇ ಅಳೆಯಲಾಗದಮೃತವಯ್ಯಾ! (ಅ)
-ಯ್ಯಾ! ಗುರುದೇವನೇ ನಿರಂಜನಾದಿತ್ತಾತ್ಮನಯ್ಯಾ!!!

ದತ್ತ ಜಯಂತಿಗೆ ಶುಭ ಮಂಗಳ! (ಅ)

-ತ್ತ, ಇತ್ತ, ಇತ್ತೆತ್ತ ಮಳೆ ಮಂಗಳ!
ಯಾಭ್ಯಂಜನ ಸ್ನಾನದ ಮಂಗಳ! (ಅ)
-“ಯಂ ಆತ್ಮ ಬ್ರಹ್ಮ”! ಸ್ಥಿತಿ

ಈ ಮಂಗಳ!
ತಿಳಿದಂತಿರಲು ಸರ್ವ ಮಂಗಳ!
ಗೆಜ್ಜೆ, ತಾಳ, ಮೇಳದಲಿ ಮಂಗಳ!
ಶುಚಿ, ರುಚಿ, ನೆ

ವೇದ್ಯದಿ ಮಂಗಳ!
ಕ್ತಿ, ಭಾವಾವೇಶದಿಂದ ಮಂಗಳ!
ಮಂಗಳವಿದೇ ಜಗಕೆ ಮಂಗಳ!
ಗನಮಣಿ ರವಿಗೂ ಮಂಗಳ!
(ಲ)} {\

-ಳಯಿ ನಿರಂಜನಾದಿತ್ಯ ಮಂಗಳ!!!
(“ಚರಿಸುವ ಜಲದಲಿ ಮತ್ಸ್ಯನಿಗೆಂಬಂತೆ”)

ಮಂಗಳಂ ನಿತ್ಯ ಶುಭ ಮಂಗಳಂ!

ಚರಾಚರಾತ್ಮಕ ಶ್ರೀ ನಿರಂಜನಗೆ!
ಪರಾತ್ಪರಾ ಗುರು ಶಿವಾನಂದನಿಗೆ!
ವರ ಮಹಾ ಸಂಕೀರ್ತನಾ ಯೋಗಿಗೆ!
ವರಪ್ರದಾಯಕ ಗುರುಮೂರುತಿಗೆ!
ಭೂಸುರ ಕುಲ ಸಂಭೂತನಿಗೆ!
ಕಾಶ್ಯಪ ಗೋತ್ರ ವರ ಸಂಜಾತನಿಗೆ!
ಪಶುಪತಿ ವರ ಪ್ರಸಾದಾತ್ಮನಿಗೆ!
ನಿಶಿ, ದಿನ ಗುರು ಗುಣಾನಂದನಿಗೆ!
ಯೋಗ, ಭೋಗ, ತ್ಯಾಗೇಂದ್ರನಿಗೆ!
ರಾಗ, ದ್ವೇಷ, ಸದಾ ವಿವರ್ಜಿತಗೆ!
ಮಾರ್ಗಶಿರೋತ್ಪನ್ನ ಗುರುಮೂರುತಿಗೆ!
ಶ್ರೀ ಗುರು ನಿರಂಜನಾದಿತ್ಯ ದತ್ತನಿಗೆ!

ಬಿನ್ನಹ ಬರಲಿ! ಉನ್ನತಿಯಾಗಲಿ! (ಇ)

-ನ್ನಸೂಯೆ ಸಾಯಲಿ! ಸನ್ನುತರಾಗಲಿ!
ರಣ ಹೋಗಲಿ! ಹರನ ಕಾಣಲಿ!
ರಡು ಬತ್ತಲಿ! ಹಸುರು ತೋರಲಿ!
ಜನಿಯೋಡಲಿ! ರವಿಯುದಯಿಸಲಿ! (ಇ)
-ಲಿಗಳಡಗಲಿ! ಬಿಲಗಳ್ಮುಚ್ಚಲಿ!
ದ್ರೇಕ ನಿಲ್ಲಲಿ! ಚಿದ್ರೂಪ ತಾಳಲಿ! (ಇ)
-ನ್ನಪವಾದಿಂಗಲಿ! ಶ್ರೀ ಪಾದ ತಂಗಲಿ!
ತಿಮಿರಳಿಯಲಿ! ತಿಳಿವುಂಟಾಗಲಿ!
ಯಾತ್ರೆಗಳ್ಲಿಲ್ಲಲಿ! ಜಾತ್ರೆಗಳಾಗಲಿ!
ರ್ವ ಹರಿಯಲಿ! ಗುರು ಕಾಣಿಸಲಿ!
ಲಿಪ್ತನಲ್ಲ ನಿರಂಜನಾದಿತ್ಯನಲಿ!!!

ಆದರನಾದರ ದೂರೆಲ್ಲಿ! (ಇ)

-ದರಿಯದೆ ದುಃಖ ಅಲ್ಲಿಲ್ಲಿ! (ಇ)
-ರಲಾಸೆ ಅನಾದರಲ್ಲಿಲ್ಲಿ!
ನಾಮ ತುಂಬಲಾದರಲಿಲಲ್ಲಿ! (ಇ)
-ದಕಂತರ್ಮುಖಿಯಾಗಲ್ಲಿಲ್ಲಿ!
ಸ, ವಿರಸ ಮನದಲ್ಲಿ!
ದೂರದಿರನ್ಯರನಲ್ಲಿಲ್ಲಿ! (ಇ)
-ರೆಯಿಂತಾದರೆವಿಹುದಲ್ಲಿ! (ಇ)
-ಲ್ಲಿ, ನಿರಂಜನಾದಿತ್ಯಲ್ಲಿ!!!

ನೀನೆಲ್ಲವಾಗಿಹೆ! ಎಲ್ಲಾ ನೀನಾಗ್ವುದೆಂದಿಗಪ್ಪಾ?

ನೆರವಿತ್ತು ಸರ್ವರನು ಕಾಯುವವ ನೀನಪ್ಪಾ! (ಅ)
-ಲ್ಲದಿರೆ ಬಾಳುವುದು ಜಗಕೆ ಅಸಾಧ್ಯವಪ್ಪಾ!
ವಾದ, ಭೇದಗಳಿಂದೆಲ್ಲರೂ ನೀನಾಗಿಲ್ಲವಪ್ಪಾ!
ಗಿರಿ, ಗುಹೆಯಲಾಗುತಿದೆ ತಪಸಿದಕಪ್ಪಾ!
ಹೆರೆವರು, ತನ್ನವರೆಂಬುದನು ಅಳಿಸಪ್ಪಾ!
ಲ್ಲರೂ ನಿನ್ನಂತಾದರೆ ಆ ಕೀರ್ತಿ ನಿನಗಪ್ಪಾ! (ಅ)
-ಲ್ಲಾಡುತಿದೆ ಜೀವರಾಶಿ ಅಹಂಕಾರದಿಂದಪ್ಪಾ!
ನೀತಿ, ರೀತಿಗಳ ಕಲಿಸಿ ನಿನ್ನಂತಿರಿಸಪ್ಪಾ!
ನಾಮ ಭಜನೆ ನಿತ್ಯ ಮಾಡುವುದು ತಪ್ಪಿಲ್ಲಪ್ಪಾ! (ಆ)
-ಗ್ವುದಾಗದೇನೂ ಉಳಿದಿದೆಯೇ? ನೀನೇ ಹೇಳಪ್ಪಾ! (ಅ)
-ದೆಂದಿಗಾಗುವುದೋ ನಿನ್ನ ಕರುಣೆ ಕಾಣೆನಪ್ಪಾ!
ದಿನ, ರಾತ್ರಿ ಇದೇ ಚಿಂತೆ ನನಗಾಗಿಹುದಪ್ಪಾ!
ತಿ ನೀನಲ್ಲದೆ ಅನ್ಯಥಾ ಬೇರೊಂದಿಲ್ಲವಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯಾನುಗ್ರಹ ಬೇಗಾಗಲಪ್ಪಾ!!!

ಮುಖ ಪೆಚ್ಚ! ಕನ್ನಡಿ ಸ್ವಚ್ಛ!

ತಿ, ಚ್ಯುತಿ ಮನಸಿನಿಚ್ಛ!
ಪೆಸರು! ರೂಪ ಮನದಿಚ್ಛ! (ಅ)
-ಚ್ಚಳಿಯದಾತ್ಮ ಸದಾ ಸ್ವಚ್ಛ!
ರ್ಮ, ಧರ್ಮ ಮನಸಿನಿಚ್ಛ! (ಅ)
-ನ್ನ, ಪಾನಗಳೊಡಲಿನಿಚ್ಛ! (ಅ)
-ಡಿಗಡಿಗಾಡ್ವುದು ಜಿಂಹೇಚ್ಛ!
ಸ್ವರೂಪದಾ ಸ್ಥಿತಿ ನಿರಿಚ್ಛ (ಸ್ವ)
-ಚ್ಛ, ನಿರಂಜನಾದಿತ್ಯನಿಚ್ಛ!

ಆಡದವರು ನೋಡುವರಯ್ಯಾ! (ಅ)

-ಡಗುವರು ಆಡಿದವರಯ್ಯಾ!
ರ್ಶನ ಅನಿರೀಕ್ಷಿತವಯ್ಯಾ! (ಅ)
-ವರಿವರಾಕ್ಷೇಪ ವ್ಯರ್ಥವಯ್ಯಾ! (ಆ)
-ರು ಬಲ್ಲರು ಭವಿಷ್ಯವನಯ್ಯಾ?
ನೋಡುವಾಸೆಗೆ ತಾಳ್ಮೆ ಬೇಕಯ್ಯಾ! (ಆ)
-ಡುತಾಡುತಶಾಂತಿಯಹುದಯ್ಯಾ!
ರ ಪ್ರಸಾದ ಜಪದಿಂದಯ್ಯಾ! (ಆ)
-ರ ಹಂಗು ದತ್ತನಿಗೆ? ಹೇಳಯ್ಯಾ! (ಅ)
-ಯ್ಯಾ! “ಜೈ ನಿರಂಜನಾದಿತ್ಯ” ನ್ನಯ್ಯಾ!

ನಿನಗಾಗಿರುವವರಾರು ನಿರಂಜನಾದಿತ್ಯ ದೇವಾ?

ಶ್ವರದ ಸಂಸಾರದಲ್ಲೇ ಇರುತಿಹನು ಜೀವಾ!
ಗಾಳಿಗೋಪುರ ಕಟ್ಟುತಿರುವುದೆಲ್ಲರ ಮನೋಭಾವಾ! (ಆ)
-“ಗಿನದು ಈಗಿಲ್ಲ, ಈಗಿನದು ಮುಂದಿಲ್ಲ!” ಮಾಯಾಪ್ರಭಾವಾ! (ಆ)
-ರು ಕಾರಣವೆಂದರಿಯದಳುತಿಹನು ನಿತ್ಯ ಜೀವಾ! (ಆ)
-ವ ಕಾರ್ಯಕಾಗೀ ಲೀಲೆಯೆಂದು ಅರಿಯದಾಗಿದೆ ದೇವಾ!
ರ ಋಷಿ, ಮುನಿಗಳೆಷ್ಟ ಆಗಿಹೋದರು, ಹೇ ದೇವಾ!
ರಾಮಾಯಣ, ಭಾರತಗಳೆಲ್ಲವರು ಬಿಚ್ಚಿದ ಭಾವಾ! (ಅ)
-ರುಹಿದರೂ, ಅರಿತಿರದಂತಿದೆಯಲ್ಲಾ ಗುರುದೇವಾ! (ಅ)
-ನಿಶವೂ ನೀನೆಲ್ಲರಿಗಾಗಿರುವುದನರಿವ ಜೀವಾ!
ರಂಜನೆಯ ಈ ಮಾಯೆಗೇ ಪ್ರಿಯವಾಗಿಹುದೇಕೆ?
ರಾ, ಜನ್ಮ ದುಃಖವಾದರೂ ದೇಹಮೋಹವೇಕೆ ದೇವಾ? (ಅ)
-ನಾಚಾರದನ್ನಾಯದ ಜೀವನ ಬಿಡಿಸು ಗುರುದೇವಾ!
ದಿಕ್ಕು ತೋರದನಾಥರನು ನಿನಗಾಗಿರಿಸು ದೇವಾ! (ಅ)
-ತ್ಯಧಿಕ ನೀನೊಬ್ಬನಲ್ಲದೆ ಬೇರ್ಯಾರಿಲ್ಲ ಗುರುದೇವಾ!
ದೇವಾ! “ನೀನೆನಗಾಗಿ, ನಾನಿನಗಾಗಿ”ರಬೇಕು ದೇವಾ!
ವಾಸವಾದಿ ವಂದ್ಯ ನಿರಂಜನಾದಿತ್ಯ ಮಹಾನುಭಾವಾ!!!

ವಿರಕ್ತ ನಿಜಸುಖ ಶಾಂತಿದಾತ!

ಸ, ವಿರಸ ವಿವರ್ಜಿನಾತ! (ಶ)
-ಕ್ತನಿವಶಕ್ತರ ಶಕ್ತಿದಾತ! (ಅ)
-ನಿತ್ಯ ವಿಷಯಾದಿಗಳ ವಿಘಾತ! (ಅ)
-ಜ, ಹರಿ, ಹರರೇಕ ರೂಪವೀತ!
ಸುರಾಸುರರೆಲ್ಲರ ಗುರುನಾಥಾ!
ಗವಾಹನನಾದ ಶ್ರೀಪತೀತ
ಶಾಂಭವಿಯರಸ ಶಂಕರನೀತ!
ತಿಳಿ, ಸೃಷ್ಟೀಶ ಬ್ರಹ್ಮರೂಪನೀತ!
ದಾರಿ ತೊಂರಿ ಪಾರುಮಾಡುವನಾಶ!ಪಸಿ ನಿರಂಜನಾದಿತ್ಯನಾತ
ದ್ರೂಪಿ ನಿರಂಜನಾದಿತ್ಯ ದಾತ!!!

ಇಲ್ಲಾ ಪೂಜ ಮನಸಿನಲ್ಲಿ! (ಇ)

-ಲ್ಲಾವ ಪೂಜೆ ಅದಿಲ್ಲದಲ್ಲಿ!
ಪೂಜೆ, ಕಂಡಾಗ ಸ್ಥೂಲದಲ್ಲಿ!
ಜಾತಿ, ನಿತ್ಯುಚ್ಛ ಭಕ್ತಿಯಲ್ಲಿ!
ನೋಪೂಜೆ ಮರೆಯಾದಲ್ಲಿ!
ಡೆಸಿದಂತಿರವನಲ್ಲಿ!
ಸಿಕ್ಕದಿರು ಸಂಶಯದಲ್ಲಿ!
ಲವಿಂದಿರಬೇಕೆಲ್ಲೆಲ್ಲಿ! (ಇ)
-ಲ್ಲಿ! ನಿರಂಜನಾದಿತ್ಯನಲ್ಲಿ!!!

ಸೇವೆಗೆ ಸಾ

ಈಪ್ಯ ಬೇಕೆಂತಿಲ್ಲ!

ವೆಗ್ಗಳದಭಿಮಾನ ಬೇಕಲ್ಲಾ!
ಗೆಲವಿಲ್ಲದೆ ಆವುದೂ ಇಲ್ಲ!
ಸಾಧನತ್ರಯ ಸೇವೆಗುಂಟಲ್ಲ!


ಯಲಿಕೆ ನೀರಿತ್ತರಾಯ್ತಲ್ಲಾ! (ಆ)
-ಪ್ಯಾಯನಕಾರಿ ಬಾಯಿ ಮಾತಲ್ಲ!
ಬೇಕು ಕಾರ್ಯಾಚರಣೆಯಿಂದೆಲ್ಲಾ!
ಕೆಂದಾವರೆಯಾಪ್ತಾರ್ಕನಂತೆಲ್ಲಾ!
ತಿಳಿದು ಸೇವೆ ಸಲ್ಲಿಸಲೆಲ್ಲಾ! (ಅ)
-ಲ್ಲದೆ ನಿರಂಜನಾದಿತ್ಯನೊಲ್ಲ!!! ||

ದೇವರು ಸಾಕ್ಷಿ ಸ್ವರೂಪಪ್ಪಾ! (ಅ)

-ವನಾಗಿಹನೆಲ್ಲಾ ರೂಪಪ್ಪಾ! (ಅ)
-ರುಣ ಸಾರಥಿಯ ರೂಪಪ್ಪಾ!
ಸಾರಂಗ ಮಾಲಿಕ ರೂಪಪ್ಪಾ! (ಅ)
-ಕ್ಷಿಗಳಲಾ ದಿವ್ಯ ರೂಪಪ್ಪಾ!
ಸ್ವರೂಪ ಸಿಯ ರೂಪಪ್ಪಾ!
ರೂಪಾರೂಪ ಅವನಿಷ್ಟಪ್ಪಾ!
ರಬ್ರಹ್ಮರೂಪವದಪ್ಪಾ! (ಅ)
-ಪ್ಪಾತ, ನಿರಂಜನಾದಿತ್ಯಪ್ಪಾ!!!

ನಿರಂಜನಾದಿತ್ಯನ ಪೂಜೆ ನಿತ್ಯಾನಂದ!

ರಂಗನಾಥನಲ್ಲವನಿರ್ಪ ಸದಾನಂದ!
ಗಕಾಗುದವನಿಂದ ಮಹಾನಂದ!
ನಾಗದಂಡಧರನವ ಶಂಕರಾನಂದ! (ಆ)
-ದಿತ್ಯನವನಕ್ಷಿಯಾಗಿಹ ಯೊಂಗಾನಂದ! (ಅ)
-ತ್ಯಮೂಲನಾದವನಕ್ಷಯ ಸುಖಾನಂದ!
ಭೋ ಮಂಡಲದವನ ಸ್ಥಾನಾತ್ಮಾನಂದ!
ಪೂರ್ಣನವ ಕಾಶ್ಯಪ ಕುಲ ದೀಪಾನಂದ! (ಅ)
-ಜೆ

ಯನಾದವನು ಸದಾ ವಿಜಯಾನಂದ!
ನಿಜಮತಿಯನೀವ ವಿಶ್ವ ವಂದ್ಯಾನಂದ!
ತ್ಯಾಗೀಶ, ಯೋಗೀಶ, ಶ್ರೀ ಗುರು ಶಿವಾನಂದ!
ನಂಬಿದವರಿಗಿಂಬನೀವ ಹೃದಯಾನಂದ!
ತ್ತ, ನಿರಂಜನಾದಿತ್ಯನಾಗಿರ್ಪಾನಂದ!!!

ನಿರಂಜನ ಭಾವ, ನಿರಂಜನಾದಿತ್ಯ ದೇವ!

ರಂಗಿ ಛಾಯಾಧವ, ವಿರಾಗಿ ಗಿರಿಜಾಧವ!
ನನ, ಮರಣ ಭಾವ, ಪರಬ್ರಹ್ಮ ದೇವ!
ರನಾಗೀ ಜೀವ, ಗುರುವರನಾಗಿ ದೇವ!
ಭಾವಿಕ ಮಹಾನುಭಾವ ಆ ಶ್ರೀ ಗುಹದೇವ!
ಸನಶನಕನಾಸಕ್ತಾವಧೂತ ದೇವ!
ನಿರ್ವಿಕಾರ, ನಿರಾಮಯ ಗುಣಾತೀತ ದೇವ!
ರಂಗ, ನಿರಂಜನ ಭಜನಾನಂದನುಭಾವ! (ಅ)
-ಜ, ಹರಿ, ಹರ ಭೇದ ಹರಿದಭೇದ ಭವ!
ನಾನಾ ಜಾತಿ, ಮತ ಸಮನ್ವಯಕೀತ ದೇವ!
ದಿನ, ರಾತ್ರಿ, ಸರ್ವಹಿತಕಾಗಿರ್ಪಾತ್ಮ ಭಾವ! (ಅ)
-ತ್ಯಪಾರ ಕರುಣಾಮೂರ್ತಿ ಶ್ರೀ ಗುರು ಸಂಜಿವ!
ದೇವದೇವ ಗುರುದೇವ ಮಹಿಮಾನುಭಾವ!
ರ ಪ್ರಸನ್ನಾತ್ಮ ನಿರಂಜನಾದಿತ್ಯ ದೇವ!!!

ಗುರುದೇವ ಅನ್ಯಾವಲಂಬಿಯಲ್ಲ!

ರುಚಿ ಶ್ರೀಮಂತಿಕೆಂದನ್ನುವಿರಲ್ಲ?
ದೇಶ, ಕಾಲದಂತವನಿರಬಲ್ಲ! (ಅ)
-ವನಾರೋಪಣೆಯಿಂದ ಲಾಭವಿಲ್ಲ!
ವ ದೈವಾಜ್ಞೆ

ಈರುವ

ನಲ್ಲ!
ನ್ಯಾಯಾನ್ಯಾಯ ವಿಚಾರಶೂನ್ಯನಲ್ಲ! (ಅ)
-ವನಿಗಾಗನ್ಯ ದೂಷಣೆ ಬೇಕಿಲ್ಲ!
ಲಂಪಟತನ ಅವನಲ್ಲೇನಿಲ್ಲ!
ಬಿರುನುಡಿ ಶಿಷ್ಯಗೊಪ್ಪುವುದಿಲ್ಲ!
ದುಪತಿಯ ಗೀತೆಯೊಂದಿರೆಲ್ಲ! (ಅ)
-ಲ್ಲ, ನಿರಂಜನಾದಿತ್ಯನ್ಯರಂತಲ್ಲ!!!

ಅವರಿವರ ಮಾತಿನಿಂದ ಶಾಂತಿ!

ರ ನಾಮಜಪದಿಂದಲೇ ಶಾಂತಿ!
ರಿಪುಕುಲಾಂತಕಾದಿತ್ಯನೇ ಕಾಂತಿ!
ರ ಪ್ರಸಾದ ಕಳೆವುದು ಭ್ರಾಂತಿ! (ಇ)
-ರಲೇಕಾಂತದಲಾಗುವುದು ಶಾಂತಿ!
ಮಾಡಿದರೆ ವ್ಯರ್ಥಾಲಾಪ ಅಶಾಂತಿ!
ತಿದ್ದಿಕೋ ನಿನ್ನನದರಿಂದ ಶಾಂತಿ!
ನಿಂದಕರ ಸಹವಾಸ ಅಶಾಂತಿ!
ರ್ಶನದ ಮರ್ಮ ತಿಳಿಯೆ ಶಾಂತಿ!
ಶಾಂತಿ ಮನೋವೃತ್ತಿ ಸ್ಥಿತಿಯೇ ಶಾಂತಿ!
ತಿಳಿ! ನಿರಂಜನಾದಿತ್ಯ ನೀ ಶಾಂತಿ

ಆಜ್ಞಾಪಾಲನೆಯೇ ಅನನ್ಯಾ ಭಕ್ತಿ!

ಜ್ಞಾನೋದಯಕಿದೇ ಪರಮ ಶಕ್ತಿ!
ಪಾಮರನೂ ಪಾರಾಗಲಿದೇ ಶಕ್ತಿ!
ಯವಾಗ್ದುದಿದರಿಂದ ಕುಯುಕ್ತಿ!
ನೆನೆಯುತಿರಬೇಕು ಸದ್ಗುರೂಕ್ತಿ!
ಯೇಸು ಸಾರಿದ ದಶಾಜ್ಞಾಮರೋಕ್ತಿ!
ಹಿಂಸಾ ಸಿದ್ಧಿಗಿರಬೇಕೀ ಶಕ್ತಿ!
ಯನುಡಿಯಾಡಿದರಲ್ಲ ಭಕ್ತಿ!
ನ್ಯಾಯವಿದು ಧರ್ಮ ಸಮ್ಮತದೋಕ್ತಿ!
ಕ್ತಿಯೋಗಕಿರಬೇಕೀ ಆಸಕ್ತಿ! (ಶ)
-ಕ್ತಿ, ನಿರಂಜನಾದಿತ್ಯನಲೀ ಭಕ್ತಿ!!

ಮಲಗಿದವನಿಗೂಟವಿಕ್ಕುವರೇನಯ್ಯಾ? (ಅ)

-ಲ

ಳದಿರ್ಪಾಗದ ಕೀಳಬಾರದಯ್ಯಾ!
ಗಿಡಿವಾಗಿರುವಾಗ ಕಿತ್ತು ನೆಡಬೇಕಯ್ಯಾ! (ಆ)
-ದರವಿಲ್ಲದಮೃತಾನ್ನ ವಿಷದೂಟವಯ್ಯಾ! (ಆ)
-ವ ವೇಳೆಗೇನು ಬೇಕೋ ಅದ ಕೊಡಬೇಕಯ್ಯಾ! (ಅ)
-ನಿಮಿಷರಿಗಮೃತ ಸಿಕ್ಕಿತಲ್ಲವೇನಯಾಯ?
ಗೂರಲಿರುವಾಗ ಗುಗ್ಗರಿಯನ್ನಬೇಡಯ್ಯಾ! (ಆ)
-ಟ, ಪಾಠ, ನೋಟ, ಕೂಟಕ್ಕೊಂದೊಂದು ಕಾಲವಯ್ಯಾ! (ಅ)
-ವಿವೇಕದಿಂದಸಮಾಥಾನವಾಗುವುದಯ್ಯಾ! (ಅ)
-ಕ್ಕ, ಸರ್ವಸುಖ ಸಮನ್ವಯ ಬುದ್ಧಿಯಿಂದಯ್ಯಾ! (ಅ)
-ವರವರ ಬುತ್ತಿಯವರವರುಣಲಯ್ಯಾ!
ರೇಗಾಟ, ಕೂಗಾಟಗಳಾಗ ತಪ್ಪುವುದಯ್ಯಾ! (ಅ)
-ನವರತ ಗುರುವಚನ ಪಾಲಿಸಿರಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನುಪದೇಶವಿದಯ್ಯಾ!!!

ಮೋಡ ಮುಚ್ಚಿದಾಗ ನೋಡುವುದೇನಯ್ಯಾ? (ಅ)

-ಡಸಿರುವೆಡರ ಕಳೆದು ನೋಡಯ್ಯಾ!
ಮುಸಿಕಿನಲಿ ಮೂರ್ತಿ ಕಾಣಿಸದಯ್ಯಾ! (ಅ)
-ಚ್ಚಿನಲಿಪ್ಪಾಗ ರೂಪ ತಿಳಿಯದಯ್ಯ!
ದಾರಿ ಹರಿದಾಗ ಸಂಚಾರವಿಲ್ಲಯ್ಯಾ!
ತಿಟ್ಟಾಗ ದಾನವೆಂತಹುದಯ್ಯಾ?
ನೋವಿನ ಕಾಲು ನಡೆಯುವುದೇನಯ್ಯಾ? (ಅ)
-ಡುವಾಗ ಬಡಿಸಿ ಉಣಿಪುದೆಂತಯ್ಯಾ? (ಆ)
-ವುದಕ್ಕೂ ಸಂದರ್ಭಾನುಕೂಲ ಬೇಕಯ್ಯಾ!
ದೇಹಾರೋಗ್ಯ ಕರ್ಮಕನುಕೂಲವಯ್ಯಾ! (ಅ)
-ನವರತ ನೆನೆದಿದನು ಬಾಳಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನೀಗಿಹನಯ್ಯಾ!!!

ಅನುಮಾನವಿದ್ದರೆ ಅದೆಂಥಾ ಭಕ್ತಿ?

ನುಸುಳಿದರೆ ಬೀಸುವುದೆಂತಾ ಕತ್ತಿ?
ಮಾಲಿಕನಿಲ್ಲದೆಂತಿಹುದು ವಸತಿ?
ಡೆ, ನುಡಿ ವ್ಯತ್ಯಾಸದಿಂದ್ಯಾವ ಕೀರ್ತಿ?
ವಿಚಾರವಿಲ್ಲದ ಜ್ಞಾನಕ್ಕಿಲ್ಲ ಸ್ಫೂರ್ತಿ! (ಇ)
-ದ್ದರಿರಬೇಕು ಒಂದಾಗಿ ಸತಿ, ಪತಿ!
ರೆಪ್ಪೆ ಬಡಿದರೆಂತು “ತ್ರಾಟಕ” ಸ್ಥಿತಿ?
ರೆವ ಕಲ್ಲಲುಗಬಾರದೆಂದುಕ್ತಿ! (ಇ)
-ದೆಂಥಾ ಭಕ್ತಿ, ಯುಕ್ತಿ ಬೆರೆತಿಹ ಪ್ರೀತಿ? (ಯ)
-ಥಾರ್ಥ ಸ್ಥಿತಿಗಿರಬೇಕು ಶುದ್ಧ ಪ್ರೀತಿ!
ಕ್ತಿಗಿರಬೇಕು ನಿಸ್ಸಂಶಯ ವೃತ್ತಿ! (ಉ)
-ಕ್ತಿ, ನಿರಂಜನಾದಿತ್ಯಗಿದು ಸಂತೃಪ್ತಿ!!!

ಆದಿತ್ಯಾಕ್ಷಿ, ಸರ್ವಸಾಕ್ಷಿ! (ಇ)

-ದಿರದಕ್ಷಿ ಬದಿರಾಕ್ಷಿ!
ತ್ಯಾಗದಕ್ಷಿ, ಯೋಗದಕ್ಷಿ! (ಈ)
-ಕ್ಷಿಸುವಕ್ಷಿ, ಅಪೇಕ್ಷಾಕ್ಷಿ!
ಗುಣಾಕ್ಷಿ, ಬಂಧನಾಕ್ಷಿ! (ಈ)
-ರ್ವರ ಅಕ್ಷಿ, ಸೇರುವಾಕ್ಷಿ!
ಸಾನಂದಾಕ್ಷಿ, ಕ್ಷಣಿಕಾಕ್ಷಿ! (ಈ)
-ಕ್ಷಿ, ನಿರಂಜನಾದಿತ್ಯಾಕ್ಷಿ!!!

ಅತ್ತಿ ಮರದ ನಿರಂಜನಾದಿತ್ಯ! (ಅ)

-ತ್ತಿತ್ತಾಡದೆ ನೋಡುತಲಿಹ ಕೃತ್ಯ!
ರೆಯದಿಹನಾರನಿದು ಸತ್ಯ!
ಮಿಸುತಿಹನಾದರದಾರತ್ಯ!
ಮಿಸುತಿಹನಿಂದ್ರಿಯದಾಸಕ್ತ್ಯ!
ನಿರಾಕಾರನಾಗಿ ಇಲ್ಲೆಲ್ಲೂ ಸಾಕ್ಷ್ಯ!
ರಂಗಿನಿಂದೆಸೆವನೊಳಗೆ ಪ್ರೀತ್ಯ!
ನಮನದಾನಂದವಗಗತ್ಯ!
ನಾಮಜಪವಲ್ಲಾಗುತಿದೆ ಭಕ್ತ!
ದಿನ, ರಾತ್ರಿ ಅವನ ಸೇವೆ ಸ್ತುತ್ಯ! (ಸ)
-ತ್ಯ, ನಿರಂಜನಾದಿತ್ಯನಿರ್ಪ ನಿತ್ಯ!!!

ನಾಮಧಾರಿ ಆಂಜನೇಯ ಭಕ್ತ!

ನ ಗುರು ರಾಮನಲಿಡುತ್ತ!
ಧಾವಿಸಿದನು ಶ್ರೀಪಾದದತ್ತ!
ರಿಸಿ, ಮುನಿ ಮಾತು ನೆನಸುತ್ತ!
ಆಂಜನೇಯ ನಾದವಾಲಿಸುತ್ತ!
ಪದಲಿದ್ದ ಮೈಮರೆಯುತ್ತ!
ನೇತ್ರದಲಿ ನೀರು ಸುರಿಸುತ್ತ!
ತೀಶನ ಸ್ಮರಣೆ ಮಾಡುತ್ತ!
ಕ್ತಿ ಭಾವಾವೇಶದಿಂದಿರುತ್ತ! (ವ್ಯ)
-ಕ್ತ ನಿರಂಜನಾದಿತ್ಯ ಭಕ್ತ!!!

ಶಿವ ದೀಪ ಉರೀತಲಿದೆ!

ರ ಜ್ಯೋತಿ ಕಾಣುತಲಿದೆ!
ದೀಪ ಹೃದಯಾಕಾರವಾಗಿದೆ!
ರಿಸ್ಥಿತಿ ಉತ್ತಮವಿದೆ!
ತ್ತರಮುಖಿಯಾಗಿ ಇದೆ!
ರೀತಿ ವಿಚಿತ್ರವಾಗಿರುತ್ತಿದೆ!
ನ್ಮಯತೆ ಮನಕಾಗುತಿದೆ! (ಎ)
-ದೆ, ನಿರಂಜನಾದಿತ್ಯಗಾಗಿದೆ!!!

ರಾಗ-ಭೀಂ ಪಲಾಸ್-ರೂಪಕತಾಳ

ಪ್ರೇಮನಾಮ ಶ್ರೀರಾಮ!
ಮನಕಾ ನಾಮಾ (ಆ) ರಾಮ!
ನಾಶಕಾಮ ಶ್ರೀರಾಮ! (ಅ)
ಸಾಧಕನಿದರಿತರಾನಂದ!
ದಾಯವಾದಕಿದಲಭ್ಯಾನಂದ!
ನಂಬಿದ ಪಾರ್ಥ ಕಂಡನಾನಂದ!
ದತ್ತ ನಿರಂಜನಾದಿತ್ಯಾನಂದ!!!

ಶಿವ, ಕಾಮಾಕ್ಷಿ ಸನ್ನಿಧಿಯಲ್ಲಿ! (ಇ)

-ವನು ಎಲ್ಲೆಲ್ಲಿರ್ಪ ನಿಜದಲ್ಲಿ!
ಕಾಮಾಕ್ಷಿ ಶಿವನ ಬಿಡಲೆಲ್ಲಿ?
ಮಾರಹರನರ್ಧಾಂಗದಲ್ಲಿ!
ಕ್ಷಿ, ಗತಿ ಇಬ್ಬರಿಂದೆಲ್ಲೆಲ್ಲಿ!
ರಸ, ವಿರಸ ಯೋಗದಲ್ಲಿ! (ಇ)
-ನ್ನಿದನರಿತಿರು ಧ್ಯಾನದಲ್ಲಿ!
ಧಿಕ್ಕಾರವಿರಲಿ ಮೋಹದಲ್ಲಿ!
ಜ್ಞ, ಯಾಗ ಗುರುಜಪದಲ್ಲಿ! (ಇ)
-ಲ್ಲಿ,ನಿರಂಜನಾದಿತ್ಯನಲ್ಲಿ!!!

ಅಖಂಡ ಭಜನಾ ಗದ್ದಲ!

ಖಂಡ, ತಂಡಗಳ್ಕೋಲಾಹಲ!
ಕ್ಕಾ, ಡಮರುಗ, ಮದ್ದಲ!
ಕ್ತಿ, ಭಾವಗಳು ಉಜ್ವಲ!
ಪ, ತಪಗಳ್ಕುತೂಹಲ!
ನಾಮ ಸಂಕೀರ್ತನಾ ಗೊಂದಲ!
ಮನ ದತ್ತನಲಚಲ! (ಆ)
-ದ್ದರಿಂದದರಿಂದೆಲ್ಲಾ ಬಲ! (ಅ)
-ಲಖ್ಕಿರಂಜಾದಿತ್ಯ ಲೋಲ!!!

ಮಂಗಳ ಗೀತಾಮೃತಾನಂದ! (ಅ)

-ಗರು ಬತ್ತಿ ಸುಗಂಧಾನಂದ! (ಅ)
-ಳತೆ

ಈರಿದ ನಾದಾನಂದ!
ಗೀತಾ ಭಾವ ಪ್ರಬೋಧಾನಂದ!
ತಾಳ, ಮೇಳ, ಲಯದಾನಂದ! (ಅ)
-ಮೃತ ಪ್ರಸಾದ ಪೂರ್ಣಾನಂದ!
ತಾರಕ ಗುರು ಸೇವಾನಂದ! (ಆ)
-ನಂದವಿದು ದತ್ತಗಾನಂದ!ದತ್ತ ನಿರಂಜನಾದಿತ್ಯಾನಂದ!!!
ದತ್ತ ನಿರಂಜ್ನಾದಿತ್ಯಾನಂದ!!!

ನಾಮಕ್ಕೆ ತಕ್ಕ ನೇಮವಯ್ಯಾ!

ನೆಗೆ ತಕ್ಕ ಮಾಲಿಕಯ್ಯಾ! (ಅ)
-ಕ್ಕೆ, ಸದಾ ಸುಖವಕ್ಕುದಯ್ಯಾ!
ರಣಿಯಾದರ್ಶ ಬೇಕಯ್ಯಾ! (ಅ)
-ಕ್ಕರೆ ಕಾಟಕ್ಕಾಗಲ್ಲವಯ್ಯಾ!
ನೇಗಿಲ ಕೈ ಬರೆಯದಯ್ಯಾ!
ನದಂತೆ ಮಾಧವನಯ್ಯಾ!
ರ ಗುರು ಸರ್ವಜ್ಞನಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಜ್ಞೇಯ!!!

ಮಚ್ಚರ, ಬಚ್ಚಲು ನೀರಯ್ಯಾ! (ಅ)

-ಚ್ಚ ಮನವಿರೆ ಸುಖವಯ್ಯಾ!
ಗಳೆಗಳದರಿಂದಯ್ಯಾ!
ಲಗೇಡದರಿಂದಲಯ್ಯಾ! (ಅ)
-ಚ್ಚಳಿಯದ ಪ್ರೀತಿ ಬೇಕಯ್ಯಾ!
ಲುಚ್ಚತನ ಬಿಡಬೇಕಯ್ಯಾ!
ನೀಲಾಕಾಶದಂತಿದ್ದಿರಯ್ಯಾ!
ವಿ ಗುಣಾಗುತಿಪ್ಪುದಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಜೀಯ!!!

ಮೈಲುದ್ದವಿದ್ದರೇನು ಮೇಘಮಾಲೆ? (ಎ)

-ಲುಬಿಲ್ಲದ ಗೊಂಬೆ ಆ ಮೇಘ ಬಾಲೆ! (ಎ)
“-ದ್ದರೆ ಗಿರಿ, ಬಿದ್ದರೆ ವಾರೀ”! ಲೀಲೆ!
ವಿಚಾರದಿಂದಾಗಲಿ ತಪೋ ಮಾಲೆ! (ಎ)
-ದ್ದಡಗುವಂತಲ್ಲ ಶ್ರೀ ಗುರುಲೀಲೆ!
ರೇಚಕ, ಪೂರಕದೀ ದೀರ್ಘ ಮಾಲೆ!
ನುಡಿಯಡಗಿ ಗುರು ಸಿದ್ಧಿ ಲೀಲೆ!
“ಮೇರುವೂ ನುಚ್ಚುನೂರು”! ಕಾಲ ಮಾಲೆ!
ರ್ಷಣೆ, ಪ್ರಕಟಣೆ, ಮಾಯಾ ಲೀಲೆ!
ಮಾಡುತಿರು ಸ್ವಧರ್ಮ ಕರ್ಮ ಮಾಲೆ!
ಲೆಕ್ಕಿಸ ನಿರಂಅಜನಾದಿತ್ತಾ ಲೀಲೆ!!!

ಮನಾಕಾಶದಲಿ ನಾಮಾದಿತ್ಯ!

ನಾಮ ಮನದಲಿರೆ ನಿರ್ಭಯ!
ಕಾರ್ಮೊ

ಡ ಅರ್ಕನಿಗೇನು ಭಯ?
ಕ್ತಿ ನಾಮಕಿಹುದತಿಶಯ! (ಅ)
-ದರಿತ ಸದಾ ಜಪಿಸೆ ಜಯ! (ಅ)
-ಲಿಪ್ತವಹುದ

ರಿಂದ ಮಾಯೆ! (ಅ)
-ನಾಯಾಸದಿ ಸಾಯುಜ್ಯ ನಿಶ್ಚಯ!
ಮಾಧವನೋಕ್ತಿಯಿದಪ್ರಮೇಯ!
ದಿಟವಿದು! ಬೇಡ ಪರಾಶ್ರಯ! (ಅ)
-ತ್ಯಗ್ಯನೀ ನಿರಂಜನಾದಿತ್ಯ!!!

ಅಲ್ಲಿಲ್ಲಲೆವವನಲ್ಲ ಸೂರ್ಯಪ್ಪಾ! (ಅ)

-ಲ್ಲಿಲ್ಲಲೆವುದಿಳೆಯವಗಾಪಪ್ಪಾ! (ಅ)
-ಲ್ಲವಗುನ್ನತ ಸ್ಥಾನವಿಹುದಪ್ಪಾ! (ಅ)
-ಲೆವ ಮುಗಿಲು ಮುಚ್ಚಿರುವುದಪ್ಪಾ!
ರ ನಿರ್ಧರಾತ್ಮನಾಗಿಹೆನಪ್ಪಾ! (ಅ)
-ವನಾವರಣಕಂಜದವನಪ್ಪಾ! (ಅ)
-ನವರತದಾ ಸೇವೆ ನಿಸ್ವಾರ್ಥಪ್ಪಾ! (ಅ)
-ಲ್ಲಗಳೆವವರಾರು ಅರುಹಪ್ಪಾ!
ಸೂತ್ರಧಾರಿಯ ಪಾತ್ರವನದಪ್ಪಾ! (ಆ)
-ರ್ಯ ಋಷಿಗಳಿದ ಸಾರಿಹರಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯದೇವರಪ್ಪಾ!!!

ಕುಟ್ಟೀರಕಾಗಿ ದತ್ತನಲ್ಲವಯ್ಯಾ!

ಟ್ಟೀಕಿಸದಿರು ಹಾಗೆಂದಿಗೂ ಅಯ್ಯಾ! (ಅ)
-ರಸಿ ಬಹದತ್ತ ಇದ್ದೆಡೆಗಯಾ!
ಕಾಯಬೇಕು ಶುದ್ಧ ಭಕ್ತಿಯಿಂದಯ್ಯಾ!
ಗಿರಿ, ಗುಹೆಗಳಾಲಿಂತಿಹರಯ್ಯಾ!
ತ್ತನಾಟದ ಗೊಂಬೆಯಲ್ಲವಯ್ಯಾ! (ಅ)
-ತ್ತತ್ತೂ ಮನ ಕರಗಿಸಿ ಕೂಗಯ್ಯಾ! (ಅ)
-ನಗತ್ಯದ ನುಡಿಯೆಲ್ಲ ಬಿಡಯ್ಯಾ! (ಅ)
-ಲ್ಲಲ್ಲಿ ಮುಗ್ಗಿರಿಸಿ ಬೇಳಬೇಡಯ್ಯಾ!
ರ ಕರುಣಾಳು ಶ್ರೀ ಗುರುವಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನಭೇದಯ್ಯಾ!!!ವೇದ್ಯನಯ್ಯಾ!!!

ಅತಿಯಾದರಮೃತವೂ ವಾಂತಿ!

ತಿಳಿ! ಮಿತ ಜೀವನವೇ ಶಾಂತಿ!
ಯಾಚನಾ ವೃತ್ತಿಯಿಂದ ಅಶಾಂತಿ! (ಇ)
-ದಕಾಗಿದ್ದುದರಲಾಗು ತೃಪ್ತಿ! (ಇ)
-ರಲಿ ದಿವ್ಯ ಜೀವನಕೆ ಪ್ರೀತಿ!
ಮೃತ್ಯುಗಂಜನು ನಿಜ ವೇದಾಂತಿ!
ತ್ವ ದರ್ಶನದ ಬಾಳೇ ಶಾಂತಿ!
ವೂನ, ನ್ಯೂನವೆಲ್ಲಾ ಮನೋಭ್ರಾಂತಿ!
ವಾಂಛಲ್ಯ ಮಾಯೆಗಾದರಶಾಂತಿ!
ತಿತಿ, ನಿರಂಜನಾದಿತ್ಯ ಪ್ರೀತಿ!!!

ಎಬ್ಬಿಸಿದಾಗ ಮಲಗಬೇಡ! (ಹ)

-ಬ್ಬಿಸಿದ ಬಳ್ಳಿ ಕೆಡಿಸಬೇಡ!
ಸಿರಿವಂತನಾಗಿ ಲೋಭ ಬೇಡ!
ದಾರಿ ತಪ್ಪಿದಾಗಾತುರ ಬೇಡ
ತಿಗೆಟ್ಟಾಗ ಮುನ್ನುಡಿ ಬೇಡ! (ಅ)
-ಲಗುವಾಗ ಮರ ಹತ್ತಬೇಡ!
ತಿಗೆಟಾಗೂರು ಬಿಡಬೇಡ!
ಬೇಯುವಾಗುರಿಯಾರಿಸಬೇಡ! (ಅ)
-ಡಗಿ ನಿರಂಜನಾದಿತ್ಯ ಆಡ!!!

ಸಕಾಲದಲಿ ಸಂಚಿತದ ವೆಚ್ಚ!

ಕಾರ್ಮೊ

ಡ ಮಳೆಗಾಲದಲಿ ವೆಚ್ಚ!
ಲಕ್ಷದೀಪ ಕಾರ್ತಿಕದಲ್ಲಥೇಚ್ಛ!
ದಳಾಬಲ ಸಮರದಲಿ ವೆಚ್ಚ! (ಅ)
-ಲಿಪ್ತನಾಗುವುದು ಗುರುವಿನಿಚ್ಛ!
ಸಂಸಾರಿಗೆ ಸಂಪಾದನೆಯ ಇಚ್ಛ!
ಚಿರ ಶಾಂತಿ ತಾಪಸೋತ್ತಮರಿಚ್ಛ!
ತರಣಿಗೆ ಸದಾ ಧರ್ಮ, ಕರ್ಮೆ

ಚ್ಛಾ!
ದಯಾಮಯತೆ ಸರ್ವೆ

ಶ್ವರನಿಚ್ಛಾ!
ದರ್ಶನವಾಗುವ ಕಾಲವನಿಚ್ಛಾ!
ವೆಚ್ಚ, ನಿರಂಜನಾದ್ತಿನ ಯೋಗೇಚ್ಛಾ!

ನಾವಿಬ್ಬರೊಂದೆಂಬುದನ್ವರ್ಥವಾಗಲಯ್ಯಾ!

ವಿಶ್ವರೂಪ ದರ್ಶನಿ ಅರ್ಜುನನಂತಯ್ಯಾ! (ಅ)
-ಬ್ಬರಾರ್ಭಟದಿಂದ ಫಲವೇನಿಲ್ಲವಯ್ಯಾ! (ಆ)
-ರೊಂದಿಗೂ ಹೇಳಿದರಿದು ಸಿದ್ಧಿಸದಯ್ಯಾ! (ಅ)
-ದೆಂತಿರಿಸಿರುವನೋ ಅಂತಿರುತಿರಯ್ಯಾ!
ಬುದ್ಧಿ ಶುದ್ಧಿಗಾಗಿ ಅನುಗ್ರಹ ಬೇಕಯ್ಯಾ! (ಅ)
-ದಕಾಗನವರತ ಗುರುಜಪವಯ್ಯಾ! (ಅ)
ನ್ವರ್ಥವಾದರೆ ಈ ಜನ್ಮ ಸಾರ್ಥಕವಯ್ಯಾ! (ಅ)
-ರ್ಥಕಪಾರ್ಥ ಕಲ್ಪನೆ ಅಜ್ಞಾನದಿಂದಯ್ಯಾ! (ಆ)
-ವಾಗಲೂ ಸತ್ಸಹವಾಸವಿರಬೇಕಯ್ಯಾ!
ಡಿಬಿಡಿ ಸ್ವಭಾವ ಇರಬಾರದಯ್ಯಾ!
ಕ್ಷ್ಯ ಲಾಭಕ್ಕಾಗಿ ಇದೆಲ್ಲಾ ಪಾಲಿಸಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಅನುಭವಿಯಯ್ಯಾ!!!

ತಾನಟ್ಟಡಿಗೆ ತನಗಾರೋಗ್ಯ!

ಡೆಯಂತೆ ನುಡಿವವ ಯೊಂಗ್ಯ! (ಅ)
-ಟ್ಟಹಾಸ, ಕೆಟ್ಟ ಮಾತು, ಅಯೋಗ್ಯ! (ಅ)
-ಡಿಗಟ್ಟು ಭದ್ರದ ಮನೆ ಭವ್ಯ!
ಗೆಜ್ಜಲು ಹತ್ತಿದರೆಲ್ಲಯೊಂಗ್ಯ!
ಡವಾಗೇಳ್ವಭ್ಯಾಸನಾರೋಗ್ಯ! (ಅ)
-ನಗತ್ಯದಾಹಾರ ಅನಾರೋಗ್ಯ!
ಗಾನ ಕೇಳುವಭ್ಯಾಸ ಆರೋಗ್ಯ!
ರೋಧಿಸುತ್ತಿರುವುದನಾರೋಗ್ಯ! (ಯೋ)
-ಗ್ಯ! ನಿರಂಜನಾದಿತ್ಯೆಲ್ಲಾ ಭಾಗ್ಯ!!!

ಪ್ರದರ್ಶನ ಭಾವ ಅಜ್ಞಾನದ ಪ್ರಾದುರ್ಭಾವ!

-ದರಿಯದೆಲ್ಲರ ಸ್ತುತಿಗಾಶಿಪುದೀ ಭಾವ! (ದ)
-ರ್ಶನದುದ್ದೇಶವರಿಯದರಿಂದಾ

ಭಾವ! (ಅ)
-ನವರ್ತ ಸ್ವಧರ್ಮದಲಿರಬೇಕು ಭಾವ!
ಭಾವಭೇದದಿಂದಾಗುತಿದೆಲ್ಲೆಲ್ಲೂ ದುರ್ಭಾವ! (ಅ)
-ವರಿವರ ಪ್ರಶಂಸೆಯಿಂದಲ್ಲ ಸುಸ್ವಭಾವ!
ತಿಶಯದ ಕರ್ತವ್ಯ ನಿಷ್ಠೆಯಿಂದೀ ಭಾವ!
ಜ್ಞಾನ ಲಾಭಕಿರಬೇಕು ಸತತ ಸದ್ಭಾವ!
ರನೂ ನಾರಾಯಣನಾಗುವ ನಿಜಭಾವ!
ರ್ಶನಾಪೇಕ್ಷೆಗಿರಬೇಕಾದ ಮೌಲ್ಲ ಭಾವ!
ಪ್ರಾದುಭಾವವಿಂತಾದರೆ ಉದ್ಧಾರನೀ ಜೀವ! (ಅ)
-ದುದಿಸುವುದು ವರ ಗುರುಕೃಪಾ ಪ್ರಭಾವ! (ದು)
-ರ್ಭಾವದಿಂದೊದಗದೀ ವರ ಪ್ರಸಾದ ಭಾವ!
ರ ನಿರಂಜನಾದಿತ್ಯನೀ ವಿಮಲ ಭಾವ!

ಎದ್ದರೂ ಮಲಗೆನುತಿದೆ ಮೆತ್ತಗೆ ಹಾಸಿಗೆ! (ಎ)

-ದ್ದಮೇಲೆ ಸದ್ದಿಲ್ಲದಾಗುವುದಾಕರೆ ಹೇಸಿಗೆ!
ರೂಡಿಯನುಷ್ಠಾನಕಾ ಕರೆ ಅಡ್ಡಿ ಮನಸಿಗೆ!
ಲಗದಿರು ಮತ್ತೆ! ಎದ್ದನುವಾಗು ರೂಡಿಗೆ!
ಕ್ಷ್ಯಸಿದ್ಧಿಗಿದತ್ಯಾವಶ್ಯಕ ಸಾಧಕನಿಗೆ!
ಗೆಜ್ಜೆ ಕಟ್ಟಿದ ನಂತರ ಸ್ಫೂರ್ತಿ ನರ್ತಕನೊಗೆ!
ನುರಿತರಿಂತಪ್ಪುದು ಸಿದ್ಧಿ ನಿಷ್ಠಾವಂತನಿಗೆ!
ತಿತಿಕ್ಷೆಯಿಲ್ಲದಾಗದು ನಿಜರೂಪ ಸ್ಥಿತಿಗೆ! (ಎ)
-ದೆಗೆಡದಡಿಯಿಡುತಿರಬೇಕು ಆ ಕಡೆಗೆ!
ಮೆರೆವಾಸೆ, ಇರುವಾಸೆಗಳಾತಂಕ ಗುರಿಗೆ! (ಎ)
-ತ್ತಲೂ ಗಮನವಿರಸದಿರಬೇಕಾ ಸ್ಥಿತಿಗೆ!
ಗೆಳೆಯನಿದಕೆ ಗುರುನಾಮ ಜಪ! ನಿನಗೆ!
ಹಾಡುತಿಹುದವನ ಗುಣಾನಂದ ಮನಸಿಗೆ!
ಸಿರಿತನದಗ ಸುಖ ಅಲಕ್ಷ್ಯ ಯೋಗಿಗೆ!
ಗೆಳೆಯ ನಿರಂಜನಾದಿತ್ಯ ಸರ್ವ ಜೀವರಿಗೆ!!!

ಯಾವಾಗೆಲ್ಲಿರಬೇಕೆಂದವ ಬಲ್ಲ! (ಆ)

-ವಾವುದೆಂದೆಂದಾ ಗುರುದೇವ ಬಲ್ಲ! (ಅ)
-ಗೆದರೆಲ್ಲಿ ಜಲ? ಎಂತಾತ ಬಲ್ಲ! (ಅ)
-ಲ್ಲಿಲ್ಲರಸುವಗತ್ಯವನಿಗಿಲ್ಲ!
ಕ್ತ, ಮಾಂಸದ ಗೊಂಬೆ ಅವನಲ್ಲ!
ಬೇನೆ, ಬೇಸರಕಂಜುವವನಲ್ಲ!
ಕೆಂಜೆಡೆಯಾ ಶಿವನೆಲ್ಲವ ಬಲ್ಲ! (ಅ)
-ದರಿತವಗೆ ಶರಣಾಗಿರೆಲ್ಲ!
ಸ್ತ್ರ, ಭೂಷಣಗಳು ಬೇಕಾಗಿಲ್ಲ!
ರಬೇಕು ಶಿದ್ಧ ಭಕ್ತಿಯಿಂದೆಲ್ಲ! (ಅ)
-ಲ್ಲದಿರೆ ನಿರಂಜನಾದಿತ್ಯನೊಲ್ಲ!!!

ಬರುವಾ! ಇರುವಾ! ಅರಿವಾ ಹೊರಡುವಾ!!

-ರು ಹೀಗಿರುವನೋ ಅವ ಮಹಾನುಭಾವ!
ವಾದಾನುವಾದಗಳಿಲ್ಲದ ಮನೋಭಾವ!
ರುತಿರುವುದವನಲ್ಲಿ ಪೂಜ್ಯಭಾವ!
ರುಚಿಸದವನಿಗೆ ಕುಚೋದ್ಯ ಸ್ವಭಾವ!
“ವಾಸುದೇವನೇ ಗತಿ ” ಯೆಂಬ ದೀನ ಭಾವ!
ನ್ಯ ದೂಷಣೆ ಅವನಿಗಾಗದ ಭಾವ! (ಅ)
-ರಿತವನಾದರೂ ಗರ್ವವಿಲ್ಲದ ಭಾವ!
ವಾಚಾಳತನವಿಲ್ಲದ ಮೌನ ಸ್ವಭಾವ!
ಹೊತ್ತಿದದೆಂಬುದಿಲ್ಲದ ಸಹಜ ಭಾವ!
ವಿಯಾದರ್ಶದನುಷ್ಠಾನಾಸಕ್ತ ಭಾವ! (ಹಾ)
-ಡುತ್ತ ಗುರುನಾಮದಲೈಕ್ಯವಹ ಭಾವ!
ವಾರಿಜಮಿತ್ರ, ನಿರಂಜನಾದಿತ್ಯ ದೇವ!!!

ಸತಿ, ಪತಿಯರ ಐಕ್ಯ ಸೌಖ್ಯ!

ತಿರುಪತೀಶನ ಸೇವೆ ಸೌಖ್ಯ!
ರಶಿವ, ಶಕ್ತಿ ಯೋಗ ಸೌಖ್ಯ! (ಅ)
-ತಿಥಿಯಭ್ಯಾಗತಾದರ ಸೌಖ್ಯ!
ಮ, ನಿಯಮದಿಂದಿರೆ ಸೌಖ್ಯ!
ಘಪತಿಯ ಭಜನೆ ಸೌಖ್ಯ!
ಕ್ಯ ದಾಂಪತ್ಯವಿಂತಿರೆ ಸೌಖ್ಯ! (ಶ)
-ಕ್ಯವಿದು ಅಭ್ಯಾಸದಿಂದ ಸೌಖ್ಯ!
ಸೌಭ್ಯಾವಿದೆಲ್ಲರಿಗೆ ಸೌಖ್ಯ! (ಆ)
-ಖ್ಯ! ನಿರಂಜನಾದಿತ್ಯವಲೋಕ್ಯ!!!

ಪರಾಶ್ರಯಿ ಎಲ್ಲಿದ್ದರೇನಯ್ಯಾ?

ರಾಮನಿಚ್ಛೆ

ಈರುವುದೆಂತಯ್ಯಾ?
ಶ್ರಮ ಶಬರಿಗಾದರೇನಯ್ಯಾ? (ಆ)
-ಯಿತವಳಿಗನುಗ್ರಹವಯ್ಯಾ!
ಲ್ಲಾ ಸದ್ಗುರು ಚಿತ್ತದಂತಯ್ಯಾ! (ಅ)
-ಲ್ಲಿಲ್ಲಿ ನಿಜ ಭಕ್ತಿಯಿಂದಿರಯ್ಯಾ! (ಆ)
-ದ್ದರಿಂದಾವನುಮಾನ ಬೇಡಯ್ಯಾ! (ಆ)
-ರೇನಂದರೂ ರೇಗಬಾರದಯ್ಯಾ!
ಯ, ವಿನಯದಿಂದ ಬಾಳಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾಶ್ರಯಯ್ಯಾ!!!

ಸಾಧೂ ಸಜ್ಜನ ಸಮಾಗಮಾನಂದ!

ಧೂರ್ತತನವಿಲ್ಲದ ಸೇವಾನಂದ!
ರಳವಾದೆಲ್ಲರ ಬಾಳಾನಂದ! (ಕ)
-ಜ್ಜಗಳೆಲ್ಲಾ ಸದಾ ನಿಸ್ವಾರ್ಥಾನಂದ!
“ನ ಗುರೋರಧಿಕೆಂ”ಬ ಭಾವಾನಂದ!
ರ್ವ ಸಮನ್ವಯ ಸದ್ಗುಣಾನಂದ!
ಮಾಧುರ್ಯ ಮಾತಿನಲಿರ್ಪುದಾನಂದ!
ಮನ ಗುರುಪಾದಾರ್ಪಣಾನಂದ!
ಮಾರಮಣನ ಭಜನೆಯಾನಂದ!
ನಂಬಿಗೆ ಅಚಲವಿರ್ಪುದಾನಂದ!
ತ್ತ ನಿರಂಜನಾದಿತ್ಯತ್ಯಾನಂದ!!!

ಈಗ ಕತ್ತಲಾದರೆ ಮತ್ತೆ ಬೆಳಕಾಗದೇ?

ಗನವನೀಗ ಮುಗಿಲು ಮುಚ್ಚೇನಾಗಿದೆ?
ಳಕಳದಿಂದೊಳಗೋಡದಿರಬಾರದೇ? (ಎ)
-ತ್ತಲೇನಾದರೇನು? ಇತ್ತ ಶುಭ್ರವಾಗದೇ? (ಎ)
-ಲಾ! ವಿಮರ್ಶೆಯಿಂದ ನಿಶ್ಚಲನಾಗಬಾರದೇ?
ಯೆಗಾಸಮಯ, ಈ ಸಮಯವೆಂದೇನಿದೆ?
ರೆಪ್ಪೆ ಮುಚ್ಚುವಷ್ಟರಲ್ಲಿ ಬದಲಾಯಿಸದೇ?
ನ ಬಿಗಿಮಾಡ್ಯಾನುಷ್ಠಾನ ಮಾಡಬಾರದೇ? (ಎ)
-ತ್ತೆತ್ತೋಡಬಾರದೆಂದು ತಿಳಿದಿರಬಾರದೇ?
ಬೆರಗಾದರೇಕಾಗ್ರತೆ ಮನಕಾಗುವುದೇ? (ಎ)
-ಳದಾಟ, ಸುಳಿದಾಟವಿರದಿರಬಾರದೇ?
ಕಾರ್ಯನಿರತನಿಗ್ಯಾವಾಗಾವ ಭಯವಿದೆ?
ಗಮಣಿಯಂತಿರುತಿರಬೇಕಾಗಿದೆ!
ದೇಶ, ಕಾಲ ನಿರಂಜನಾದಿತ್ಯಗೆಲ್ಲೇನಿದೆ?

ಗುರುದೇವನೆನ್ನ ಪಂಚ ಪ್ರಾಣಾಮ್ಮಾ! (ಆ)

-ರು ಸಮನಿವಗೀತನೇ ತ್ರಾಣಮ್ಮಾ!
ದೇವರು ಬೇರೆನಗಿಲ್ಲ ಕಾಣಮ್ಮಾ! (ಅ)
-ವನಂಥಾ ದಯಾಳುಯಾರಿಹರಮ್ಮಾ!
ನೆಪಮಾತ್ರಕಾಗಿಹುದೀ ಕಾಯಮ್ಮಾ! (ಅ)
-ನ್ನ, ಬಟ್ಟೆ ಕೊಟ್ಟಿಟ್ಟುಕೊಂಡಿಹನಮ್ಮಾ!
ಪಂಚಾಂಗ ಯೊಂಗ ಕಲಿಸಿಹನಮ್ಮಾ!
ರಾಚರವೆಲ್ಲಾ ತಾನಾಗಿರ್ಪಮ್ಮಾ!
ಪ್ರಾಪಂಚಿಕಾಸೆ ಇವನಿಲ್ಲಮ್ಮಾ! (ಅ)-ಣಕಿಸಬೇಡಿವನನೆಂದಿಗಮ್ಮಾ! (ಅ)
-ಣಕಿಸಿದರೆ ಸಹಿಸೆ ನಾನಮ್ಮಾ! (ಅ)
-ಮ್ಮಾ! ನಿರಂಜನಾದಿತ್ತಾ ಗುರುವಮ್ಮಾ!!!

ನೀನಾತುರನಾಗಿ ಬಂದಿದ್ದೆ!

ನಾನೆನ್ನ ತಪದಲಿದ್ದಿದ್ದೆ!
ತುಸ ವೇಳೆ ನೀನು ಕಾದಿದ್ದೆ!
ಮ್ಯ ಮೋಡದಲವಿತಿದ್ದೆ!
ನಾನು ಭೇಟಿಗಾಗಿ ಬೇಗೆದ್ದೆ!
ಗಿರಿಯಂತಚಲನಾಗಿದ್ದೆ!
ಬಂದಾಗ ಬರಲಿ ಎಂದೆದ್ದೆ!
ದಿಟ್ಟ, ಆಗ ಬಂದೇಬಿಟ್ಟಿದ್ದೆ! (ಎ)
-ದ್ದೆ! ನಿರಂಜನಾದಿತ್ಯನೆದ್ದೆ!!!

ಸನ್ನಿಧಿಯಪಚಾರ ಕಾರಣಹಂಕಾರ (ಅ)

-ನ್ನಿಸಿದರಧಿಕಾರಿಯಿಂದಾಯ್ತಪಕಾರ!
ಧಿಕ್ಕಾರಕ್ಕಾಗುವುದು ತಕ್ಕ ಪರಿಹಾರ!
ತಿಪತಿಯ ಸ್ಥಾನಕ್ಕಿಲ್ಲ ಪೂರ್ಣಾದರ!
ರಿಣಾಮ ನಿಧಾನ! ಈಗೇಕಾ ವಿಚಾರ? (ಅ)
-ಚಾತುರ್ಯಲ್ಲಾ ಮನದಿಂದಾದ ವಿಕಾರ!
ಗಳೆಮಾಡಿದರಾಗದು ವ್ಯವಹಾರ!
ಕಾದು ನೋಡಿ ಅಡಗಿಸಬೇಕತ್ಯಾಚಾರ!
ಕ್ತ, ಮಾಂಸದ ಗೊಂಬೆಯಿಂದ ದುರಾಚಾರ! (ಅ)
-ಣಜಿಸಿ ಉಣಿಸಿದರದೆಂಥಾ ಆಚಾರ?
ಹಂಗಿಗನಾದರಾಗುವುದು ದುಃಖಪಾರ!
ಕಾಲ ಕಳೆಯಇರು! ಕ್ಷಣಿಕ ಸಂಸಾರ! (ಅ)
-ರಸ ನಿರಂಜನಾದಿತ್ಯಗೈವ ಸಂಹಾರ!!!

ಭಾವ ಗಾನ, ಭಜನಾನಂದಾರಾಮ!

ರ ಕವಿತೆಯನಾಲಿಸಲಾರಾಮ!
ಗಾಡಿಗುತ್ತಮಾಶ್ವವಿಡಲಾರಾಮ!
ಯನ ರವಿಯಂತಿದ್ದರಾರಾಮ!
ಕ್ತಿ, ಭಾವ ಶುದ್ಧಿಮಾಡಲಾರಾಮ!
ನ್ಮ, ಧರ್ಮ, ಕರ್ಮಕಾದರಾರಾಮ!
ನಾಮಸಂಕೀರ್ತನೆಯಿಂದಲಾರಾಮ!
ನಂಬಿಗೆಗಿಂಬು ದೊರೆತರಾರಾಮ!
ದಾತ, ನಾಥನಾತನನಾದರಾರಾಮ!
“ರಾಮ ರಾಮ ಶ್ರೀರಾಮ ಸೀತಾರಾಮ”!
ಮ ನಿರಂಜನಾದಿತ್ಯನಾರಾಮ!!!

ಶಾಂತಿ, ಸಂತುಷ್ಟಿಯಾಗಲ್ಲೆಲ್ಲಾ! (ಅ)

-ತಿಯಾಸೆಯಿಂದತೃಪ್ತಿಯೆಲ್ಲೆಲ್ಲಾ!
ಸಂತಸವಿಲ್ಲ ಜಗದಲ್ಲೆಲ್ಲಾ!
ತುರು, ಕರು, ಹತ್ಯ ಊರಲ್ಲೆಲ್ಲಾ! (ಅ)
-ಷ್ಟಿಷ್ಟೂ ಕರುಣೆ ಕಾಣುತಲಿಲ್ಲಾ!
ಯಾತನೆಯ ರೋಗಗಳೆಲ್ಲೆಲ್ಲಾ! (ಆ)
-ಗದಾರೋಗ್ಯ ಗತ್ಯಂತರವಿಲ್ಲಾ! (ಅ)
-ಲೆವುದಾಗಿದೆ ನೋಟಕೆಲ್ಲೆಲ್ಲಾ! (ಅ)
-ಲ್ಲೆ ಮಗಿಹುದಿಲ್ಲಿರದೇನಿಲ್ಲಾ! (ಅ)
-ಲ್ಲಾಡಿ ನಿರಂಜನಾದಿತ್ಯಲ್ಲಾ!!!

ಸಹನಾಮೂರ್ತಿ ಏಸುಕ್ರಿಸ್ತ! (ಅ)

-ಹರ್ನಿಶಿ ನಿಸ್ವಾರ್ಥ ಸೇವಾಸಕ್ತ! (ಅ)
-ನಾಚಾರ ಅಡಗಿಸಿದ ಶಕ್ತ! (ಅ)
-ಮೂಲ್ಯ ಉಪದೇಶವಿತ್ತ ಭಕ್ತ! (ಅ)
-ರ್ತಿಯಿಂದರಿಷ್ಟ ದೂರ ಗೈದಾಪ್ತ!
ನಾದರೂ ಸ್ಥಿತಪ್ರಜ್ಞಾಲಿಪ್ತ!
ಸುದರ್ಶನ ದೀಕ್ಷಾ ಸ್ನಾನಾಸಕ್ತ!
ಕ್ರಿಯಾಸಿದ್ಧಿಯಾತ ಸರ್ವಶಕ್ತ! (ಹ)
-ಸ್ತ, ನಿರಂಜನಾದಿತ್ಯನಂತಾಪ್ತ!

ನಮ್ಮ ಮನೆಗೆ ಬರುವುದ್ಯಾವಾಗ?

-ಮ್ಮನ ಅನುಮತಿಯು ದೊರೆತಾಗ!
ನೆ, ಮನೆಯಲೆಯಬಾರದೇಗ!
ನೆರೆ ತಪವಾಚರಿಸಬೇಕೀಗ!
ಗೆಳೆಯರೊಡನಾಟ ಬೇಕಿಲ್ಲೀಗ!
ರಡು ಬಯಲಾಗಿರುವುದೇಗ! (ಅ)
-ರುಹುವೆನು ಮಳೆ ಹನಿ ಬಿದ್ದಾಗ! (ಅ)
-ವುಗಳಿವುಗಳ ಚಿಂತೆ ಬೇಡೀಗ! (ಅ)
-ದ್ಯಾಕಿಷ್ಟಾತುರ ಮಾಡುತಿಹಿರೀಗ?
ವಾದಿಸದೆ ಹಿಂದಿರುಗಬೇಕೀಗ! (ಅ)
-ಗತ್ಯ ನಿರಂಜನಾದಿತ್ಯಲ್ಲೀಗ!!!

ನೆರೆವಾಗಬೇಕೆಲ್ಲರೆನ್ನ ತಪಕ್ಕೆ! (ಎ)

-ರಡಾಡದಿರಬೇಕೆನ್ನನುಷ್ಠಾನಕ್ಕೆ!
ವಾಸುದೇವನ ದಯೆ, ಶಾಂತಿ ಜೀವಕ್ಕೆ!
ಮನಿಸಿ ಪ್ರಾರ್ಥಿಸಿರೆಲ್ಲರದಕ್ಕೆ!
ಬೇರೆ ದಾರಿಯಿನ್ನೇನಿಲ್ಲವದಕ್ಕೆ!
ಕೆಲಸ, ಕಾರ್ಯಗಳಡ್ಡಿಯಿಲ್ಲದಕ್ಕೆ! (ಎ)
-ಲ್ಲವನ ಸೇವೆಯಿಂದಿರಬೇಕದಕ್ಕೆ!
ರೆಕ್ಕೆ ಬಿಚ್ಚಿ ಹಾರಬೇಕು ಗಗನಕ್ಕೆ! (ಎ)
-ನ್ನಲ್ಲಿ ಸದಾ ವಿಶ್ವಾದ ಕಲ್ಲಾಣಕ್ಕೆ!
ರಮಾನುಗ್ರಹವಹುದು ಲೋಕಕ್ಕೆ! (ಅ)
-ಕ್ಕೆ! ನಿರಂಜನಾದಿತ್ಯ ಗುರು ಸರ್ವಕ್ಕೆ!!!

ಸೇವೆ ನಿನ್ನಿಷ್ಟದಂತಯ್ಯಾ! (ಆ)

-ವೆಡೆಯಲಾದರಂತಯ್ಯಾ!
ನಿನಗಾರಡ್ಡಿ ಹೇಳಯ್ಯಾ! (ಎ)
-ನ್ನಿಷ್ಟವಾರು ಕೇಳರಯ್ಯಾ? (ಅ)
-ಷ್ಟ ಐಶ್ವರ್ಯ ಬೇಕಿಲ್ಲಯ್ಯಾ!
ದಂಡ ಹೊರಿಸಬೇಡಯ್ಯಾ!
ಕ್ಕ ಮಗನಾಗಿಸಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಯ್ಯಾ!!!

ನಾ ನಿನ್ನ ಬಿಡನಯ್ಯಾ! (ಅ)

-ನಿಶವೀ ಕಣ್ಣೀರಯ್ಯಾ! (ಎ)
-ನ್ನ ನೀ ಸ್ವೀಕರಿಸಯ್ಯಾ!
ಬಿಟ್ಟಿರಬಾರದಯ್ಯಾ! (ನ)
-ಡೆ, ನುಡಿ ನಿನ್ನದಯ್ಯಾ!
ಮಿಪೆ ಪಾದಕಯ್ಯಾ! (ಅ)
-ಯ್ಯಾರ್ಕ ನಿರಂಜನಯ್ಯಾ!!!

ನನಗಾಗೆಲ್ಲಾ ಬರಿಸಯ್ಯಾ!

ನಗೇನೂ ತಿಳಿಯದಯ್ಯಾ!
ಗಾಳಿಗಿಟ್ಟ ದೀಪ ನಾನಯ್ಯಾ!
ಗೆಳೆಯ ನೀನು ಮಾತ್ರವಯ್ಯಾ! (ಅ)
-ಲ್ಲಾಡುತಲಿದೆ ಪ್ರಾಣವಯ್ಯಾ!
ರಡೀ ಬಾಳನ್ಯರಿಂದಯ್ಯಾ! (ಆ)
-ರಿದ್ದರೇನು ಸುಖವಯ್ಯಾ?
ಕಲವೂ ನೀನೊಬ್ಬನಯ್ಯಾ! (ಅ)
-ಯ್ಯಾ! ನಿರಂಜನಾದಿತ್ತಾತ್ರೇಯ!!!

ಆಂಜನೇಯಭಕ್ತ! ಬಾ! ಬೇಗ ಬಾ!!

ನ್ಮ ನಿನ್ನದು ಧನ್ಯ! ಬೇಗ ಬಾ!!
ನೇಮವಾಗಿದೆ ಸೇವಾ!! ಬೇಗ ಬಾ!!
ಶಸ್ಸು ನಿನಗಿದೆ! ಬೇಗ ಬಾ!!
ಕ್ತಿ ನಿನ್ನದಾದರ್ಶ! ಬೇಗ ಬಾ!! (ಶ)
-ಕ್ತ! ಕರ್ಮನಿಷ್ಠಾಸಕ್ತ! ಬೇಗ ಬಾ!!
ಬಾ! ದರ್ಶನಕಾಗಿ ಬಾ! ಬೇಗ ಬಾ!!
ಬೇಕಿಲ್ಲ ನಿನ್ನ ಮೂರ್ತಿ! ಬೇಗ ಬಾ!!
ತಿಸುತಿದೆ ಕಾಲ! ಬೇಗ ಬಾ!!
ಬಾ! ನಿರಂಜನಾದಿತ್ಯಗಾಗಿ ಬಾ!!!

ಅನುಗ್ರಹಕ್ಕೆ ದೇಶ, ಕಾಲವಿಲ್ಲಾ! (ಅ)

-ನುಮಾನಿಸದೆ ಭಜಿಸಿ ನೀವೆಲ್ಲಾ!
ಗ್ರಹ ಶಾಂತಿಗೆಲ್ಲೂ ಹೋಗಬೇಕಿಲ್ಲಾ!
ಲಿರಗುಳಿಲ್ಲೇ ಆಗುವುದೆಲ್ಲಾ! (ಅ)
-ಕ್ಕೆ, ಸರ್ವ ಮಂಗಳ, ಜೀವರಿಗೆಲ್ಲಾ! (ಆ)
-ದೇಶವಿದ ನಂಬಿ ಸಜ್ಜನರೆಲ್ಲಾ!
ರಣರ ಶಿವ ಕಾಯ್ವನೆಲ್ಲೆಲ್ಲಾ!
ಕಾಲ, ಕರ್ಮ, ಗತಿ, ವಿಚಿತ್ರವೆಲ್ಲಾ! (ಅ)
-ಲಕ್ಷ್ಯ ಮಾಡಬಾರದೀ ಮಾತನ್ನೆಲ್ಲಾ!
ವಿಶ್ವಾಸಕ್ಕೆ ದೂರ, ಬಳಿಯೆಂದಿಲ್ಲಾ! (ಅ)
-ಲ್ಲಾಡ ನಿರಂಜನಾದಿತ್ಯ ಹಾಗೆಲ್ಲಾ!!!

ಮಾಯೆಯಾಟ ಮಾಧವನೋಟ!

ಯೆಲ್ಲೆಲ್ಲೂ ವಂಚನೆಯ ಆಟ!
ಯಾತ್ರೆ, ಜಾತ್ರೆಗಳಲೆದಾಟ! (ಆ)
-ಟ, ನೋಟಗಳ ಬಯಳಟ!
ಮಾಯಾ ಸುಖಕೆಕಲ್ಲಾ ಹೋರಾಟ!
ನಾಸೆಯಿಂದ ಬಡೆದಾಟ!
ರ ಧರ್ಮಕ್ಕೆಲ್ಲೆಲ್ಲೂ ಕಾಟ!
ನೋಡಲಶಾಂತೀ ಮನದಾಟ! (ಆ)
-ಟ, ನಿರಂಜನಾದಿತ್ಯಟ!!!

ವಿಚಿತ್ರ ದಿನ ಮಾನ!

ಚಿರವಿರಲೀ ಜ್ಞಾನ!
ತ್ರಯ ಮೂರುತಿ ಧ್ಯಾನ!
ದಿಟ ಸುಖದ ಸ್ಥಾನ!
ದಿ ನೀರಿನ ಸ್ನಾನ!
ಮಾಘ ಮಾಸಾನುಷ್ಠಾನ! (ಅ)
-ನಘೊರ್ಕ ನಿರಂಜನ!!!

ಮಂಗಳ ದಿನಾರಾಮ ಭಿಕ್ಷಾ!

ತಿಗುಕಾರೀ ಸುಭಿಕ್ಷಾ! (ಆ)
-ಳವಟ್ಟಿತು ತಿಂದಾಗೀ ಭಿಕ್ಷಾ!
ದಿನರಾತ್ರಿರಬೇಕೀ ಭಿಕ್ಷಾ!
ನಾಮ, ಶ್ರೀರಾಮಾಮೃತ ಭಿಕ್ಷಾ!
ರಾಗಾರಾಮವಾದಂಥಾ ಭಿಕ್ಷಾ! (ಅ)
-ಮಲಾತ್ಮಾರಾಮಾನಂದ ಭಿಕ್ಷಾ! (ಅ)
-ಭಿಷ್ಟವಾದಿದೆನೆಗೆ ಭಿಕ್ಷಾ! (ರ)
-ಕ್ಷಾ, ನಿರಂಜನಾದಿತ್ಯ ಭಿಕ್ಷಾ!

ಮೋಡದಲಡಗಿದ ಶಕ್ತಿ ನಿಬಿಡ! (ಅ)

-ಡಗಿದರೇಂತಡಗೀತಾಶಕ್ತಿ? ಗಾಢ! (ಅ)
-ದರಿಂದಹುದು ಮನಸಿಗೆ ಪವಾಡ! (ಆ)
-ಲಯದೊಳಗಿನಮ್ಮನ ಪ್ರೀತಿಗಾಢ! (ಆ)
-ಡದೇ ಮಾಡುತಿರ್ಪುದವಳ ಕೈವಾಡ!
ಗಿರಿಜಾಪತಿಗಿವಳ ಪ್ರೀತಿ ಗೂಢ! (ಅ)
-ದರಿಯದೆ ಭಿನ್ನವೆನ್ನುವನು ಮೂಢ (ಆ)
-ಶರೀರೀಶರೀರಿಯಾದುದವನಾಡ! (ಭ)
-ಕ್ತಿ ಯಿಂದದರಿತರಾಗುವನಾರೂಢ!
“ನಿನಗಾಗಿ ನಿನ್ನೊಳಗೆಂ” ಬಾಟ ಗೂಢ!
ಬಿಡಿಸಿ ನೋಡಲರಿವುದು ಪವಾಡ! (ಅ)
-ಡಾಗಿಲ್ಲ! ನಿರಂಜನಾದಿತ್ಯನಾರೂಢ!!!

ಸನ್ಮಾನಕಾಗಿ ಕಾದಿಹನೇನಾ ಸೂರ್ಯ? (ಜ)

-ನ್ಮಾದಿ ಪರ್ಮಂತೊಂದೇ ತೆರನಾಗಿಹಾರ್ಯ! (ತ)
-ನಗಾಗಿ ತಾನಿರುವಾದರ್ಶದಾಚಾರ್ಯ!
ಕಾಲ, ಕರ್ಮ, ಧರ್ಮಕಿಹುದು ಗಾಂಭೀರ್ಯ! (ಆ)
-ಗಿ

ಗ, ಮತ್ತೆನ್ನದ ನಿಷ್ಠಾ ಗುರುವರ್ಯ!
ಕಾರಣಿ, ಸರ್ವಕಾ ತರಣಿ ಔದಾರ್ಯ! (ಆ)
-ದಿತ್ಯಾನುಗ್ರಹದಿಂದಹುದು ಆರೋಗ್ಯ!
ರಿ, ಹರರಜಾದಿ ರೂಪ ಸೌಂದರ್ಯ!
ನೇತನೀತ, ಸರ್ವಕಲ್ಲಾಣನಗಮ್ಯ!
ನಾನಾಜಾತಿ, ಮತಗಳಿಗಿವಮ್ಮಯ್ಯ! (ಅ)
-ಸೂಯೆಯೆಳ್ಳಪ್ಟಿಲ್ಲದನುಪಮ! ಸೇವ್ಯ! (ಆ)
-ರ್ಯ! ನಿರಂಜನಾದಿತ್ಯ ಜನ್ಮ ಸಾಫಲ್ಯ!!!

ಬಯಸಿ ಬಳಲಬೇಡ

ತ್ನ ಮಾಡದಿರಬೇಡ!
ಸಿಗದಿದ್ದರಳಬೇಡ!
ರುವಾಗ ನಗಬೇಡ! (ಆ)
-ಳನವಲಂಬಿಸಬೇಡ! (ಆ)
-ಲಯದಿ ಜಗಳ ಬೇಡಾ!
ಬೇರಾವ ಮಾತಾಡಬೇಡ! (ಆ)
-ಡ, ನಿರಂಜನಾದಿತ್ಯಾಡ!!!

ಕೊಟ್ಟಮೇಲೆ ಮುಟ್ಟಬೇಡ! (ಅ)

-ಟ್ಟ ಮೇಲುಣದಿರಬೇಡ! (ಆ)
-ಮೇಲೀಮೇಲೆಂದೆನಬೇಡ! (ಅ)
-ಲೆದಾಟದಭ್ಯಾಸ ಬೇಡ!
ಮುದುರಿ ಕೂತಿರಬೇಡ! (ಅ)
-ಟ್ಟಹಾಸ ತೋರಿಸಬೇಡ!
ಬೇಹುಶಾರಾಗಿರಬೇಡ! (ಬೇ)
-ಡ
ನಿರಂಜನನೇನೂ ಒ

ಆದಿತ್ಯಗೇನೂ ಬೇಡ!!!

ತಿಂಡಿಗಾಗಿ ತಪಸಲ್ಲವಯ್ಯಾ! (ಅ)

-ಡಿಗೆಯೂಟ ಮಿತವಾಗಲಯ್ಯಾ! (ಆ)
-ಗಾಗ ತಿನುವಾಸೆ ಬೇಡವಯ್ಯಾ!
-ಗಿರಿಜಾಪತಿ ವಿರಕ್ತನಯ್ಯಾ! (ಆ)
-ತನಂತಿರಬೇಕು ತಪಕಯ್ಯಾ!
ರಿಣಾಮ ನಿತ್ಯ ಸುಖವಯ್ಯಾ! (ಆ)
-ಸನ, ಪ್ರಾಣಾಯಾಮವಿರಲಯ್ಯಾ! (ಅ)
-ಲ್ಲದಿರಲಾರೋಗ್ಯ ಹಾನಿಯಯ್ಯಾ! (ಅ)
-ವರಿವರ ಮಾತುಗಳೇಕಯ್ಯಾ? (ಅ)
-ಯ್ಯಾ! ನಿರಂಜನಾದಿತ್ತಾ ಶಿವಯ್ಯಾ!!!

ದಿಗಂಬರನೆಲ್ಲರಲಿರುವಾದಿತ್ಯ!

ಗಂಗಾ, ಕಾವೇರಿಯರಿಂದ ಸದಾತಿಥ್ಯ!
ನಗಳಲೆಲ್ಲಿವನ ಪಾರುಪತ್ಯ! (ಅ)
-ರಮನೆ, ಗುರುಮನೆಯಲಿವ ಸ್ತುತ್ಯ!
ನೆಪವದರಿಂದಾಗಿದೆಲ್ಲಾ ಸಾಹಿತ್ಯ! (ಅ)
-ಲ್ಲ, ಬುದ್ಧ, ಪೈಗಂಬರರಲ್ಲಿಹ ಪ್ರೀತ್ಯ! (ಅ)
-ರಸದಾರಿಗೂ ಅಳಾವಡನು ಸತ್ಯ! (ಆ)
-ಲಿಸಿ ಗುರುಬೋಧೆಯಂತಿಹಗೆ ಭೃತ್ಯ! (ಅ)
-ರುನೋದಯದಾರತಿ ಕೊಳ್ಳುವ ನಿತ್ಯ! (ಆ)
ವಾಗಾರ ಕಣ್ಣಿಗೂ ಕಾಣದಿರ್ಪ ಕೃತ್ಯ!
ದಿಟ! ಅವನನುಗ್ರಹವತ್ಯಗತ್ಯ!
ತ್ಯಾಗೀ ನಿರಂಜನ ದಿಗಂಬರಾದಿತ್ಯ!!!

ಆಸಕ್ತಿಯಿದ್ದರೂ ಆತಂಕವೇಕಯ್ಯಾ?

ತತ ನಿನ್ನದೇ ಚಿಂತೆ ನನಗಯ್ಯಾ! (ವ್ಯ)
-ಕ್ತಿ ನಿನ್ನದೇ ಕಣ್ಣ ಮುಂದಿರುವುದಯ್ಯಾ!
ಯಿನಿತಾದರೂ ವೃತ್ತಿಯಡಗಿಲ್ಲಯ್ಯಾ! (ಎ)
-ದ್ದ ಹೊತ್ತು ಸರಿಯಾಗಿತ್ತಲ್ಲವೇನಯ್ಯಾ?
ರೂಢಿಯಂತೆಲ್ಲಕ್ಕೂ ಸಿದ್ಧವಾಗಿತ್ತಯ್ಯಾ!
ದರೆಲ್ಲವೂ ಹಿಂದು ಮುಂದಾಯ್ತಯ್ಯಾ!
ತಂದಿರಿಸುವರಾಹಾರೆನ್ನ ಮುಂದಯ್ಯಾ!
ನಿಕರ ನಿನ್ನದನುಪಮವಯ್ಯಾ!
ವೇದ್ಯ ನಿನಗಾನೇನ ಅರುಹಲಯ್ಯಾ?
ಮಲಸುಖ ನೀನಿನ್ನೂ ಬಂದಿಲ್ಲಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನಿಷ್ಟವಿದಯ್ಯಾ!!!

ಸೇವಾವಕಾಶವಿದೆಯೇನಪ್ಪಾ?

ವಾಸುದೇವನೆಲ್ಲರವನಪ್ಪಾ! (ಅ)
-ವನೊಪ್ಪುವ ಪ್ರೇಮ ಸೇವೆಯಪ್ಪಾ!
ಕಾಡಿ, ಬೇಡಿ, ಮಾಡೆನುತಿಲ್ಲಪ್ಪಾ!
ಕ್ತಿ, ಬಕ್ತಿಯಂತೆ ಸಲಿಸಪ್ಪಾ!
ವಿಇಶ್ವಾಸ ಸಾ

ಈಪ್ಯವಾಗಲಪ್ಪಾ! (ಅ)
-ದೆಲ್ಲಾ ತಾನೇ ಕಲಿಸುವುದಪ್ಪಾ!
ಯೇನು ತನಗೋ ಅದವಗಪ್ಪಾ!
ನ್ನಂತವನೆಂದು ತಿಳಿಯಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯ ನೀನಪ್ಪಾ!!!

ಸೇತುಬಂಧನಕಾವ ಕೂಲಿಯಪ್ಪಾ?

ತುದಿ ಮೊದಲಿಲ್ಲದನುಗ್ರಹಪ್ಪಾ!
ಬಂಡೆಗಳೆಲ್ಲಾ ಮರಳಾದುವಪ್ಪಾ!
ನ, ದಾನವೇನೂ ಮಾಡಿಲ್ಲವಪ್ಪಾ!
ಗುನಗುತ ದಾರಿಯಾಯಿತಪ್ಪಾ! (ಆ)
-ಕಾಶ, ಭೂಮಿಯೊಂದಾದಂತೆ ಇತ್ತಪ್ಫಾ!
ನಚರರಾನಂದ ಹಾಗಿತ್ತಪ್ಪಾ!
ಕೂಲಿಗಾಗಿದು ಮಾಡುವುದೆಂತಪ್ಪಾ? (ಅ)
-ಲಿಪ್ತ ಭಕ್ತಿ, ಭಾವ ಕಾರಣವಪ್ಪಾ!
ಕ್ಷ, ರಾಕ್ಷಸರರಿದರಿಯರಪ್ಪಾ! (ಅ)
-ಪ್ಪಾ! ನಿರಾಂಜನಾದಿತ್ಯ ಲೀಲೆಯಪ್ಪಾ!!!

ಯಾವಾಗೆದ್ದೇನು ಮಾಡಿದೆನೋ!

ವಾರ, ಶನಿವಾರವದೇನೋ! (ಬೇ)
-ಗೆದ್ದಂಬರ ನೋಡಿದೆನೇನೋ! (ಎ)
-ದ್ದೇನಿಲ್ಲಿನ್ನೂ ಚಂದ್ರಮನೇನೋ! (ಅ)
-ನುಮಾನಾಯ್ತಕಾಲವೆಂದೇನೋ!
ಮಾಡಿದೆ ದಿನಚರಿಯೇನೋ! (ಓ)
-ಡಿ ನೋಡಿದೆ ಸುತ್ತುಮುತ್ತೇನೋ! (ಅ)
-ದೆಲ್ಲೆಲ್ಲೂ ಶಾಂತಿವಾಗಿತ್ತೇನೋ! (ಏ)
-ನೋ! ನಿರಂಜನಾದಿತ್ಯನೇನೋ!!!

ಮರ ಸಿಕ್ಕಿದೆ, ಕಾರ್ಯವಾಗಲಿದೆ! (ಎ)

ಸಿಡುಕಿಲ್ಲದಿದೆ, ಸೇವೆಯಾಗಲಿದೆ! (ಅ)
-ಕ್ಕಿಯಾರಿಸಿದೆ, ನೈವೇದ್ಯಾಗಲಿದೆ! (ಎ)
-ದೆ ಶುದ್ಧವಿದೆ, ಮುದವಾಗಲಿದೆ!
ಕಾಡು ಹೋಗಿದೆ, ಜಡ ನೋಡಲಿದೆ! (ವೀ)
-ರ್ಯ ಸೇರುತಿದೆ, ಜಯವಾಗಲಿದೆ!
ವಾದವೋಡಿದೆ, ಪಾದ ಮೂಡಲಿದೆ!
ಡಿ ಹಾಕಿದೆ, ಗಡಣ ನಿಲ್ಲಲಿದೆ! (ಕ)
-ಲಿತುದಾಗಿದೆ ಕಲೆ ಕಾಣಲಿದೆ! (ಎ)
-ದೆ, ನಿರಂಜನಾದಿತ್ಯಾಪ್ತನಲಿದೆ!!!

ನಿರಂಜನ ನರಸಿಂಹನಯ್ಯಾ!

ರಂಗ ಲಕ್ಷ್ಮೀನಾರಾಯಣನಯ್ಯಾ!
ನಕಜೆಯರಸ ರಾಮಯ್ಯಾ!
ರನಾಪ್ತ ಸಖ ಶ್ರೀ ಕೃಷಣಯ್ಯಾ!
ಗೇಶ, ಯೋಗೀಶ ಶಿವನಯ್ಯಾ!
ಮೇಶ ಪಂಢರಿವಿಠಲಯ್ಯಾ!
ಸಿಂಹಾದ್ರಿಪ್ರಿಯ ದತ್ತಾತ್ರೇಯಯ್ಯಾ! (ಅ)
-ಹರ್ನಿಶಿಯಿವನ ಭಜಸಯ್ಯಾ! (ಆ)
-ನತರುದ್ಧಾರಕನೀತನಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಪೂವಯ್ಯಾ!!!

ಶಿರ ಬಾಗಿದರೆಲ್ಲರು ಗುರುಪಾದಕ್ಕೆ! (ಎ)

-ರಗಿದರನನ್ಯ ಭಕ್ತಿಯಿಂದಾ ಪಾದಕ್ಕೆ!
ಬಾಲ, ಬೃದ್ಧರೆಲ್ಲರ ಕಾಣಿಕಾ ಪಾದಕ್ಕೆ!
ಗಿರಿಜಾಪತೊಯನುಗ್ರಹದಾ ಪಾದಕ್ಕೆ!
ರ್ಶನ ಮನೋಹರದಾ ಪದ್ಮ ಪಾದಕ್ಕೆ!
ರೆಕ್ಕೆ, ಪುಕ್ಕಿಲ್ಲದಾ ಶೀಘ್ರಗಾಮಿ ಪಾದಕ್ಕೆ!
ಲ್ಲರಕ್ಷಿ ತೀರ್ಥದಿಂದಭಿಷಿಕ್ತ ಪಾದಕ್ಕೆ!
ರುಚಿಯನ್ನ ನೈವೇದ್ಯವಾದ ಶ್ರೀ ಪಾದಕ್ಕೆ!
ಗುರುಶಿವ ಭಜನೆ ತುಂಬಿದಾ ಪಾದಕ್ಕೆ!
ರುದ್ರಾಭಿಷೇಕ ಸ್ನಾನಾನಂದದಾ ಪಾದಕ್ಕೆ!
ಪಾನಾಮೃತ ಗೀತಾಪಾನಗೈದಾ ಪಾದಕ್ಕೆ!
ಯೆಯಿಂದೆಲ್ಲರ ಶಾಂತಿಗೈದಾ ಪಾದಕ್ಕೆ! (ಅ)
-ಕ್ಕೆ! ಮಂಗಳ ನಿರಂಜನಾದಿತ್ಯ ಪಾದಕ್ಕೆ!

ಶಿವ ಪಾದೈಕ್ಯ ಜಲಜ!

ರ ಕುಸುಮ ಜಲಜ! (ಅ)
-ಪಾರ ಸಂಸ್ಕಾರಿ ಜಲಜ!
ದೈವ ಅಂಶಜೆ ಜಲಜ! (ಐ)
-ಕ್ಯ, ಭಜನೆಲಿ ಜಲಜ!
ನ್ಮ ಸಾಫಲ್ಯ ಜಲಜ! (ಅ)
-ಲರ್ಕಾಣಿಕೆಯಾ ಜಲಜ!
ಯಾದಿತ್ಯಾಪ್ತ ಜಲಜ!!!

ನಿನಗಾಗುವುದೆಲ್ಲಾ ನನಗಾಗುತಿದಯ್ಯಾ! (ಅ)

-ನವರತದ ಪೂಜೆ ನನಗಾಗುತಿದೆಯ್ಯಾ! (ಆ)
-ಗಾಗಾಪ್ತರ ದರ್ಶನ ನನಗಾಗುತಿದಯ್ಯಾ!
ಗುಣ ಗಾನ ಸತತ ನನಗಾಗುತಿದಯ್ಯಾ! (ಆ)
-ವುದರೆಲ್ಲೂ ಭೇದಾಭೇದ ನೀ ಮಾಡಿಲ್ಲವಯ್ಯಾ! (ಅ)
-ದೆಲ್ಲಾದರೂ ನನಗೇಕೆ ಹರ್ಷವಿಲ್ಲವಯ್ಯಾ? (ಅ)
-ಲ್ಲಾಡದ ನಂಬಿಗೆ ನನ್ನಲ್ಲಿ ಇರುವುದಯ್ಯಾ!
ಮಸ್ಕಾರ ಸದಾ ನಿನಗೆ ಮಾಡುವೆನಯ್ಯಾ! (ಅ)
-ನಗತ್ಯದ ಯೊಂಚನೆ ನನಗೇನಿಲ್ಲವಯ್ಯಾ!
ಗಾಡಿಗಾರ ನೀನು ಬಹು ಚಮತ್ಕಾರಿಯಯ್ಯಾ!
ಗುರುಪೀಠದಲೆನ್ನ ಕೂರಿಸಿರುವೆಯಯ್ಯಾ! (ಅ)
-ತಿ ವಿಚಿತ್ರ ಲೀಲಾನಾಟಕವು ಅಯ್ಯಾ!
ಯೆ ನಿನ್ನದೆನ್ನ ಮೇಲೆ ಸದಾ ಇರಲಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ನೀನಾಗಿರುವೆ ಅಯ್ಯಾ!!!

ಮಹಾ ಪ್ರಸಾದ ಸದಾ ದೇಹಾರೋಗ್ಯ! (ಆ)

-ಹಾರ ಹಸಿವೆಗಾಗಿದ್ದರಾರೋಗ್ಯ!
ಪ್ರವಾಸದಲ್ಲಿಲ್ಲ್ಯಾಹಾನಾರೋಗ್ಯ!
ಸಾರ ಭರಿತ ಶಾಖಾಹಾರಾರೋಗ್ಯ! (ಅ)
-ದಲಕ್ಷಿದರಹುದನಾರೋಗ್ಯ! (ಅ)
-ಸಮಯದಾಹಾರವೆಲ್ಲನಾರೋಗ್ಯ!
ದಾಹಶಾಂತಿಗುತ್ತಮೋದಕಾರೋಗ್ಯ!
ದೇಶ, ಕಾಲಕ್ಕೊಪ್ಪುವಾಹಾರಾರೋಗ್ಯ!
ಹಾಲು, ಹಣ್ಣುಗಳೆಲ್ಲರಿಗಾರೋಗ್ಯ! (ಆ)
-ರೋಗ್ಯವಿಲ್ಲದ ಸ್ವರ್ಗವೂ ಅಯೋಗ್ಯ! (ಯೋ)
-ಗ್ಯ! ನಿರಂಜನಾದಿತ್ಯ ನಿತ್ಯಾರೊಂಗ್ಯ!!!

ಅಪ್ಪನಾ ಸ್ಥಾನಕ್ಕಧಿಕಾರಿ ಪುತ್ರ! (ಆ)

-ಪ್ಪನಾದರ್ಶದಂತಿರಬೇಕಾ ಪುತ್ರ! (ಅ)
-ನಾಚಾರಿಯಾಸ್ಥಾನಕ್ಕಯೋಗ್ಯ ಪುತ್ರ!
ಸ್ಥಾನ ಬೆಳಗಿಪನು ಧರ್ಮ ಪುತ್ರ! (ಅ)
-ನವರತ ಸ್ವಕರ್ಮನಿಷ್ಠಾ ಪುತ್ರ! (ಅ)
-ಕ್ಕರೆಯಲಿಪ್ಪನಪ್ಪಂತಾ ಪುತ್ರ! (ಅ)
-ಧಿಕಾರ ಮನವಿಲ್ಲದಿಹಾ ಪುತ್ರ!
ಕಾಲ, ಧರ್ಮ, ಕರ್ಮ ಜ್ಞಾನಿ ಆ ಪುತ್ರ!
ರಿಪುಕುಲ ಕಾಲನಾ ಆರ್ಯ ಪುತ್ರ!
ಪುಣ್ಯಾಪುಣ್ಯಾತೀತನಾ ಗುರು ಪುತ್ರ!
ತ್ರಯಂಬಕ ನಿರಂಜನಾರ್ಕ ಪುತ್ರ!!!

ಅಸುರ ನಾಶ, ವಿಜಯ ಘೋಷ!

ಸುರರಾವೇಶ, ಅಮೃತ ಪ್ರಾಶ!
ಮೇಶಗಾಶ, ಮೋಹಿನಿ ವೇಶ!
ನಾಟ್ಯದುಲ್ಲಾಸ, ರಾಹು ಹತಾಶ!
ಶಿಯ ಹಾಸ, ಕೇತುಗಾಕ್ರೋಶ!
ವಿಧಿ ವಿಲಾಸ, ಜೀವರಾಭಾಸ!
ನನ ದೋಷ, ಜಗದ ಪಾಶ!
ತಿಪತೀಶ, ತ್ರಿಭುವನೇಶ!
ಘೋರ ಫಣೀಶ, ವಿಷ ಹರೇಶ!
ಣ್ಮುಕ ನಿರಂಜನಾದಿತ್ಯೇಶ!!!

ಅದೇಕಿಂದು ವಿರಾಮ?

ದೇಶ, ಕಾಲೇಚ್ಛಾರಾಮ!
ಕಿಂಚಿದಿರಲಾರಾಮ!
ದುರ್ಬಲಕ್ಕೆ ವಿರಾಮ!
ವಿಜಯಕ್ಕಿದಾರಾಮ!
“ರಾಮ ಜೈ ಸೀತಾರಾಮ”!
ಮಾದಿತ್ಯನಾರಾಮ!!!

ಲಿಖಿತ ಜಪಾರಾಮ ಪ್ರೇಮ! (ಅ)

-ಖಿಳ ಬಲದಾಯಕಾರಾಮ!
ನು, ಮನೈಕ್ಯಕಿದಾರಾಮ!
ಗದ, ಜೀವರಿಗಾರಾಮ!
ಪಾವನ ನಾಮ ಜಪಾರಾಮ!
“ರಾಮ ರಾಮ ಜೈ ರಾಜಾ ರಾಮ”!
ರ್ಕಟ ವೀರಗಿದಾರಾಮ!
ಪ್ರೇಮ ಸೀತಾ ಪ್ರಾಣಾ ಶ್ರೀರಾಮ!
ಮ ನಿರಂಜನ ಶ್ರೀರಾಮ!!!

ಅನುಬವಕಿಲ್ಲದಮೃತವೇನಾದರೇನಯ್ಯ? (ಅ)

-ನುಕೂಲಮರರಿಗಾದರೆ ನಮಗೇನಯ್ಯಾ? (ಅ)
-ಭಯವಚನದರಿವಾಗದಿದ್ದರೇನಾಯ್ತಯ್ಯಾ?
ರ ಋಷಿಗಳಂಶಜರು ನಾನಲ್ಲವೇನಯ್ಯಾ?
ಕಿರಿಯರಿಗವರ ಬೆಂಬಲ ಬೇಡವೇನಯ್ಯಾ? (ಅ)
-ಲ್ಲದಿರೆಲ್ಲಾ ಬರೀ ಕಂತೆ, ಬೊಂತೆಯಲ್ಲವೇನಯ್ಯಾ?
ಳಪತಿ ಮೈಮರೆತ ಸೈನ್ಯವೆಂತಿಹುದಯ್ಯಾ?
ಮೃದು ನುಡಿ ಮಾತ್ರದಿಂದ ಹಸಿವಡೆಗದಯ್ಯಾ?
ರಳರುಪಚರಿಸದಾಕೆ ತಾಯಿಯೇನಯ್ಯಾ?
ವೇದ, ಪುರಾಣಗಳೂಟ ನಾವೂ ಉಣಬೇಕಯ್ಯಾ! (ಅ)
-ನಾಥರನಾದರ ಅಪ್ಪನಿಗೊಪ್ಪುವುದೇನಯ್ಯಾ?
ಯೆದೋರಿ ಕಾಪಾಡುವುದವನ ಧರ್ಮವಯ್ಯಾ!
ರೇಗುವುದಾತನಾರಮೇಲಾವ ತಪ್ಪಿಗಯ್ಯಾ?
ತರಾದವರನೊದ್ದು ನೋಯಿಸಬಾರದಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನಿಗಿನ್ನೂ ರಾತ್ರಿಯೇನಯ್ಯಾ???

ವಿಶ್ರಮಿಸಬೇಕೆನ್ನುವರಯ್ಯಾ! (ಆ)

-ಶಯದಾತನ ಇಷ್ಟವಿದಯ್ಯಾ!
ಮಿತ್ರನಿಗಿದೇನಾನಂದವಯ್ಯಾ?
ರ್ವಜ್ಞನವನೇ ಬಲ್ಲನಯ್ಯಾ!
ಬೇಡನಲಾರು ಸಮರ್ಥರಯ್ಯಾ?
ಕೆಲಸಗಳ್ಳ ನಾನಲ್ಲವಯ್ಯಾ! (ಅ)
-ನ್ನುವುದೆಲ್ಲವನಿಚ್ಛೆಯಿಂದಯ್ಯಾ!
ರ್ತನೆಯವನಾಜ್ಞೆಯಂತಯ್ಯಾ! (ಅ)
-ರಸನವ ಲೋಕತ್ರಯಕಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯವನಯ್ಯಾ!!!

ಸ್ನಾನಕೊಂದು ಮರೆ! ಧ್ಯಾನಕೊಂದು ತೆರೆ!

ಯನವನ್ಯೆಡೆಗೊಡದಂತೀ ತೆರೆ!
ಕೊಂಚಕಾಲ ಮಾತ್ರವಿರುವುದೀ ಮರೆ! (ಎ)
-ದುರಿದ್ದರೂ ತಿಳಿಯದಮನ ತೆರೆ!
ನಸಳಿದ ತೆರೆಯೇ ಮಹಾ ಮರೆ! (ಎ)
-ರೆದುಕೊಳ್ಳಲಿದೇ ಅತ್ಯುತ್ತಮ ತೆರೆ!
ಧ್ಯಾನೈಕ್ಯವಾಗಲಿರಬೇಕೊಂದು ಮರೆ!
ಡೆ, ನುಡಿಯಡಗಲಿದೊಂದು ತೆರೆ!
ಕೊಂಡಾಡಿಸಿಕೊಳಲಿಕಲ್ಲ ಈ ಮರೆ!
ದುರ್ಮನ ದಮನಕಾಗೀ ಬಟ್ಟೆ ತೆರೆ!
ತೆಗೆಯಬೇಕಿದ ಮನ ಚಿರ ಮರೆ! (ಎ)
-ರೆ! ನಿರಂಜನಾದಿತ್ಯನಲ್ಲಿ ನಿಂತಿರೆ

ವಿಶ್ರಮಿಸಂದ, ಸೇವೆ ಬೇಕೆಂದ!

ಶ್ರಮವಿಲ್ಲದಾಯ್ತು ಸೇವಾನಂದ! (ಅ)
-ಮಿತುತ್ಸಾಹವಿತ್ತುದತ್ಯಾನಂದ!
ಸಂಘದಿಂದಾಯ್ತು ಅಪಾರಾನಂದ!
ರ್ಶನ ಮನೋಹರದಾನಂದ!
ಸೇರುತೊಂದಾದುದಮಲಾನಂದ! (ಅ)
-ವೆರಡು ನಿಮಿಷ ಯೊಂಗಾನಂದ!
ಬೇಕಾದುದೆನಗಾ ಸದಾನಂದ!
ಕಂದನಿಷ್ಟಪೂರ್ತವನಾನಂದ!
ಯೆ, ನಿರಂಜನಾದಿತ್ಯಾನಂದ!

ಅನ್ಯ ಸಮಾಚಾರವೇತಕಯ್ಯಾ? (ಧ)

-ನ್ಯ ವಿಚಾರ ಮಾಡುತಿರಯ್ಯಾ!
ರ್ವ ಸುಖ ನಿನ್ನಲ್ಲಿಹುದಯ್ಯಾ!
ಮಾತಿನ ಮಲ್ಲಿಗೆ ಬೇಡವಯ್ಯಾ!
ಚಾಕ, ಚಕ್ಯವೆಲ್ಲೈಹಿಕವಯ್ಯಾ!
ಮಿಸು ನಿನ್ನಲಿ ನೀನಿದ್ದಯಾ!
ವೇದಾಂತಾಚಾರವಾಗಬೇಕಯಾ!
ರ್ಕ, ವಿತರ್ಕಕಂತ್ಯವಿಲ್ಲಯ್ಯಾ!
ರ್ಮಶುದ್ಧಿಯಿಂದ ಸಿದ್ಧಿಯಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನಂತಯ್ಯಾ!!!

ಹಾಲಿಗೆ ಬಂದವಗೆ ಹಸು ಬೆಲೆ ಏಕಯ್ಯಾ? (ಆ)

-ಲಿಸ ಬಂದವಗೆ ಹಾಡುವಗತ್ಯವೇನಯ್ಯಾ!
ಗೆಳೆಯನಿಗೆ ಹಗೆತನ ಯೋಗ್ಯವೇನಯ್ಯಾ?
ಬಂದುದ್ದೇಶ ಸಾಧಿಸಿ ಹೋಗ್ವುದು ಸಭ್ಯವಯ್ಯಾ! (ಅ)
-ದರಿಂದಹುದು ಮನಕೆ ಸದಾ ಶಾಂತಿಯಯ್ಯಾ! (ಅ)
-ವರಿವರ ವಿಚಾರಗಳಸಂಬದ್ಧವಯ್ಯಾ!
ಗೆರೆ

ಈರಿದರಾರ್ಯಪುತ್ರ ವಿಯೋಗವಯ್ಯಾ!
ಗಲಿರುಳು ಸ್ವಕಾರ್ಯ ನಿರತನಾಗಯ್ಯಾ! (ಅ)
-ಸು ಅಳಿವುದೆಂದಿಗೆಂದರಿಯದಿಹುದಯ್ಯಾ!
ಬೆಜ್ಜರ, ಬೇನೆಗಳಿಂದ ಕಂಗೆಡಬೇಡಯ್ಯಾ! (ಆ)
-ಲೆ ಮನೆಯ ಬೆಲ್ಲವೀ ಸಂಸಾರ ಸುಖವಯ್ಯಾ!
ನಾದರೂ ನಿಜ ಗುರಿ ಬಿಡಬಾರದಯ್ಯಾ!
ಥೆ, ಪುರಾಣ, ಕಣ್ಣು ತೆರೆಯಲಿಕಾಗಯ್ಯಾ! (ಅ)
ಯ್ಯಾ! ನಿರಂಜನಾದಿತ್ಯ ಸ್ವಕರ್ಮ ನಿಷ್ಠನಯ್ಯಾ!!!

ತನ್ನ ತಾ ಹೊಗಳಿಕೊಳಬಾರದಯ್ಯಾ! (ಅ)

-ನ್ನದಾತ ದೇವರಂತೆ ಇರಬೇಕಯ್ಯಾ! (ಆ)
-ತಾವುದೂ ಅರಿಯದಂತಿಲ್ಲವೇನಯ್ಯಾ?
ಹೊಗಳಿದರೂ ಹಿಗ್ಗದಿರಬೇಕಯ್ಯಾ!
ರ್ವದಿಂದ ಪತನವಾಗುವುದಯ್ಯಾ! (ಆ)
-ಳಿಗೂ ಆಳಿಂಬ ವಿನಯವಿರಲಯ್ಯಾ!
ಕೊಡುವ ದಾತನಿಗೆ ಲೋಭವಿಲ್ಲಯ್ಯಾ! (ಅ)
-ಳವಟ್ಟರಿದು ಸುಖದಾಯಕವಯ್ಯಾ!
ಬಾಯಿ ವೇದಾಂತ ಕನಸಿನ ಗಂಟಯ್ಯಾ!
ತ್ನ ಪೀಠವೇರಿದರಾನಂದವಯ್ಯಾ!
ರ್ಬಾರು ಆವಾಗ ಶೋಭಿಸುವುದಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಹರಿರಾಯಯ್ಯಾ!!!

ಮೋಹದಿಂದ ದೈವಿಕ ನಷ್ಟ!

ರಿ, ಹರರಿಗೂ ಈ ಕಷ್ಟ! (ಅ)
-ದಿಂಗಿದರೆಲ್ಲಾ ಮಾತು ಸ್ಪಷ್ಟ!
ತ್ತಗುರುವಾಗೆ ಪ್ರತಿಷ್ಟ!
ದೈವಾನುಗ್ರಹ “ನಾಮ” ಶ್ರೇಷ್ಠ! (ಅ)
-ವಿವೇಕದಪಚಾರ ಕಷ್ಟ!
ರುಬಿನಿಂದತ್ಯಂತ ನಷ್ಟ!
ರರಿದ ಮರೆತು ಕಷ್ಟ! (ಇ)
-ಷ್ಟ! ನಿರಂಜನಾದಿತ್ಯ ಶ್ರೇಷ್ಠ!!!

ಭಾವ ಶೂನ್ಯನಾದವ ಬರೆಯುವುದೇನಯ್ಯಾ? (ಅ)

-ವನಿಗಾಗ ಯಾವುದರಲ್ಲೂ ಇಷ್ಟಲ್ಲಯ್ಯಾ!
ಶೂನ್ಯವೇ ಹೊರಗೊಳಗೆ ತೋರುತಿಹುದಯ್ಯಾ! (ಅ)
-ನ್ಯರು, ತನ್ನವರೆಂಬುದರಿಯದಿಹನಯ್ಯಾ!
ನಾಮ, ರೂಪದಲನಾಸಕ್ತಿ ಕಾಣುವುದಯ್ಯಾ!
ಯೆಗಾಗಿ ಆತನಾಗ ಪ್ರಾರ್ಥಿಪುದಿಲ್ಲಯ್ಯಾ! (ಅ)
-ವನಿಗೇನು ಬೇಕೆಂಬುದವನರಿಯನಯ್ಯಾ!
ಲವಂತ ಮಾಡಿದರೂ ಮನವಾರಾಮಯ್ಯಾ! (ಅ)
-ರೆಷ್ಟು ಕೂಗಿದರೂ ಕಿವುಡನಂತಿರ್ಪನಯ್ಯಾ!
ಯುಕ್ತಾಯುಕ್ತ ವಿಚಾರವನಾಗ ಕೇಳನಯ್ಯಾ (ಆ)
-ವುದಾ ಸ್ಥಿತಿಯೋ ಹೇಳಲು ಅಸದಳವಯ್ಯಾ!
ದೇಹ ಮಾತ್ರ ಜೀವ ಸಹಿತವಿರುವುದಯ್ಯಾ! (ಅ)
-ನವಧಿಕಾಲವಿದ್ದರಿದು ಸ್ವಸ್ಥಿತಿಯಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನಿದರಿತಿಹನಯ್ಯಾ!!!

ಕಾಮ ದಹನ ಕಾಮಾಕ್ಷಿ ಮಿಲನ!

ಹೇಶನಿಗಾಯ್ತು ತಪೋ ಜೀವನ!
ಕ್ಷಕನ್ಯೆಯ ಮರಣ ಕಾರಣ!
ರನ ತಪೋಜ್ವಾಲೆ ಕಠಣ!
ಗಜೆಯಾಗಿ ದಕ್ಷಜೆ ಜನನ!
ಕಾದಿದ್ದಳವಳು ಸದಾ ಶಿವನ!
ಮಾರನಾಸ್ತ್ರವೆಬ್ಬೆಸಿತು ಹರನ! (ಅ)
-ಕ್ಷಿಯಲಿ ತುಂಬಿಕೊಡಳನಂಗನ! (ಅ)
-ಮಿತಾನಂದ ಗೌರೀಶ್ವರ ಮಿಲನ!
ಕ್ಷ್ಮೀರಮಣನಿಗಾಯ್ತು ವ್ಯಸನ!
ಮೋ! ನಿರಂಜನಾದಿತ್ಯ ಪಾವನ!!!

ಬರೆದುಕೊಡರೆ ಸಾಲದು, ನಾನಾಗಬೇಕು! (ಉ)

-ರೆ ಮನನದಿಂದಾಚಾರ ಶುದ್ಧವಾಗಬೇಕು!
ದುಡಿಮೆ ಸದಾ ಗುರಿಗಾಗಿರುತಿರಬೇಕು!
ಕೊಂಡಾ ಕೋತಿ ಮನವನು ಅಡಗಿಸಬೇಕು!
ಮರುಧರನ ಜಪ ಸದಾ ಇರಬೇಕು!
ರೆಪ್ಪೆ ಮುಚ್ಚದೆ ಇಷ್ಟಮೂರ್ತಿಯ ನೋಡಬೇಕು!
ಸಾಧು ಸಜ್ಜನರ ಸಹವಾಸವಿರಬೇಕು!
ಕ್ಷ್ಯವಿಟ್ಟಾವರ ನಡೆ, ನುಡಿ ನೋಡಬೇಕು!
ದುಷ್ಟ ಜನರ ಸಂಘ ಮಾಡದಂತಿರಬೇಕು!
ನಾಳೆ ಹೇಗೆಂಬ ಭಯಪಡದೆ ಇರಬೇಕು!
ನಾಡಾ ವಾರ್ತೆಗಳಿಗೆ ಕಿವುಡಾರಬೇಕು!
ತಿ ಸದಾ ವರ್ತಮಾನ ಕಾಲದ್ದಿರಬೇಕು!
ಬೇಸರ ಕರ್ತವ್ಯದಲ್ಲಿ ಇರದಿರಬೇಕು!
ಕುಲ ನಿರಂಜನಾದಿತ್ಯನದ್ದಾಗಲೂ ಬೇಕು!!!

ಸಜ್ಜನ ಸಂದರ್ಶನ ಕಾಲ ಪರ್ವ ಕಾಲ! (ಮ)

-ಜ್ಜನಗೈದೆಲ್ಲರು ಬರುವ ಪುಣ್ಯಕಾಲ!
ಮಿಸಿ, ಸೇವೆಯೊಪ್ಪಿಸುವ ದಿವ್ಯಕಾಲ!
ಸಂಕಟ ಪರಿಹಾರಕ್ಕಿದು ರ್ತಿರ್ಥಕಾಲ!
ತ್ತ ಭೇಟಿಗಿದು ಬ್ರಾಹ್ಮೀ ಮುಹೂರ್ತಕಾಲ! (ಆ)
-ರ್ಶ ಬ್ರಹ್ಮ ಕರ್ಮಾನುಷ್ಠಾನಕ್ಕೆ ಸೂಕ್ತ ಕಾಲ! (ಅ)
-ನಘನಮಲಾತ್ಮಾರಾಮನ ಧ್ಯಾನ ಕಾಲ!
ಕಾಯಿ, ಕಡ್ಲೆಳ್ಳು ಬೆಲ್ಲ ಪ್ರಸಾದದ ಕಾಲ! (ಅ)
-ಲಕ್ಷ್ಯ ಮಾಡಲಾಗದಿಂಥಾ ಅಮೃತ ಕಾಲ!
ರನಿಂದೆ, ದ್ವೇಷಾಸೂಯೆ ಬಿಡವ ಕಾಲ! (ಸ)
-ರ್ವರಲ್ಲಿ ಮೈತ್ರಿ ಬೆಳೆಸಲಿದಿಳ್ಳೇ ಕಾಲ!
ಕಾಮನಳಿದು, ಗೌರೀಶವರರೈಕ್ಯ ಕಾಲ! (ಬಾ)
-ಲ ನಿರಂ

ನಾದಿತ್ಯ ಗುರೋದಯ ಕಾಲ!!!

ಆಹಾರಾನ್ವೇಷಣದಿರುವೆ!

ಹಾಳು ಹೊಟ್ಟೆಗಲೆದಿರುವೆ!
ರಾಗ ದ್ವೇಷವಿಲ್ಲದಿರುವೆ! (ಅ)
-ನ್ವೇಷಣ ಮುಗಿಸದಿರುವೆ! (ವಿ)
-ಷವನು ಸೇವಿಸದಿರುವೆ! (ಗ)
-ಣದಿ ಹೊಡೆದಾಡದಿರುವೆ!
ದಿಟವ ಮರೆಯದಿರುವೆ! (ತಿ)
-ರುಗುತಿದ್ಧಾನಂದದಿರುವೆ! (ಸೇ)
-ವೆ ನಿರಂ

ನಗೆಂದಿರುವೆ!!!

ಆರಾಮ ಶ್ರೀರಾಮ ಸೀತಾರಾಮ ನಾಮ!

ರಾಗ, ತಾಳ ಸೇರಿ ಭಜಿಸಲಾರಾಮ!
ನ ಕರಗಿ ಸೀತಾರಾಮನಾರಾಮ!
ಶ್ರೀ ಗುರುನಾಮ ಶ್ರೀರಾಮನಿಗಾರಾಮ!
ರಾಮನಾಮ ಗುರು ಹೃದಯಕಾರಾಮ!
ತ್ಸರವಿಲ್ಲದಭೇದ ರೂಪಾರಾಮ!
ಸೀತಾರಾಮ, ಶ್ರೀ ಗುರು ರಾಮಾತ್ಮಾರಾಮ!
ತಾರಕನಾಮ, ಮಾರುತಿ ಪ್ರೇಮಾರಾಮ!
ರಾಕ್ಷಸ ಭೀಮ, ರಾಜಾರಾಮ ಶ್ರೀರಾಮ!
ರ, ಮರವೆಂದ ವಾಲ್ಲೀಕಿಗಾರಾಮ!
ನಾಮಾಮೃತ ಪಾನವೆಲ್ಲರಿಗಾರಾಮ!ಮ ನಿರಂಜನಾದಿತ್ಯಾ ಗುರುರಾಮ!
ಮ ಗುರು ನಿರಂಜನಾದಿತ್ಯಾರಾಮ!

ಏನು ಬರೆಯಬೇಕಪ್ಪಾ? (ಆ)

-ನು ತಿಳಿಯೆನೊಂದನಪ್ಪಾ!
ರೆವಾಸೆನಗಿಲ್ಲಪ್ಪಾ! (ಅ)
-ರಿವಿರಲಿ ನಿನ್ನದಪ್ಪಾ! (ಆ)
-ಯವ್ಯಯನು ನಿನ್ನದಪ್ಪಾ!
ಬೇಕು ನಿನ್ನನುಗ್ರಹಪ್ಪಾ!
ಳ್ಲೂ ಪೂಜ್ಯ ನಿನ್ನಿಂದಪ್ಪಾ!!!

ಅಂದಿನ “ಗೀತೆ” ಇಂದಿನ “ಧ್ಯಾನಮಿಂಚಮ್ಮಾ”!

ದಿನಕೊಂದು ಸಂದೇಶವೀ ಧ್ಯಾನಮಿಂಚಮ್ಮಾ!
ಲವಿಂದಾದಿತ್ಯನೀವಾ ಧ್ಯಾನಮಿಂಚಮ್ಮಾ!
ಗೀತಾಮೃತ ಸಾರವಿದು ಧ್ಯಾನಮಿಂಚಮ್ಮಾ!
ತೆಗೆವುದಜ್ಞಾನವಿದು ಧ್ಯಾನಮಿಂಚಮ್ಮಾ!
ಂದಿನ ಅಗತ್ಯವಿದು ಧ್ಯಾನಮಿಂಚಮ್ಮಾ!
ದಿನ ಪಾರಾಯಣಕಿದು ಧ್ಯಾನಮಿಂಚಮ್ಮಾ!
ಮಸ್ಕಾರರ್ಕನಿಗಿದು ಧ್ಯಾನಮಿಂಚಮ್ಮಾ!
ಧ್ಯಾನ ಬೆಳೆಗಿಸಲಿದೆ ಧ್ಯಾನಮಿಂಚಮ್ಮಾ!
ಡೆ, ನುಡಿ ತಿದ್ದಲಿದು ಧ್ಯಾನಮಿಂಚಮ್ಮಾ!
ಮಿಂಚಲಿ ಎಲ್ಲರಲಿದು ಧ್ಯಾನಮಿಂಚಮ್ಮಾ!
ರಣಕರ್ಪಣವಿದು ಧ್ಯಾನಮಿಂಚಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯನೇ ಧ್ಯಾನಮಿಂಚಮ್ಮಾ!!!

ವೀರ ಪುತ್ರ ಪರಶುರಾಮ!

ಘುವೀರನಲೈಕ್ಯಾರಾಮ!
ಪುನೀತ ಪಿತೃಭಕ್ತಾರಾಮ!
ತ್ರಯಲೋಕವಂದ್ಯನಾರಾಮ!
ರಾಕ್ರಮಿ ಬ್ರಾಹ್ಮಣಾರಾಮ! (ಅ)
-ರಸರ ಗರ್ವಧ್ವಂಸಾರಾಮ!
ಶುದ್ಧ ಧರ್ಮ, ಕರ್ಮಿಯಾರಾಮ!
ರಾಮ, ಮಾತೃಪ್ರೇಮಿಯಾರಾಮ!
ಮ ನಿರಂಜನಾರ್ಕಾರಾಮ!

ಅಸಹನೆ ಅಜ್ಞಾನದಿಂದಮ್ಮಾ!

ರ್ವೆ

ಶ್ವರ ಎಲ್ಲರವನಮ್ಮಾ!
ಗಲಿರುಳವನಾಜ್ಞೆಯಮ್ಮಾ!
ನೆನೆಯುತಿರಬೇಕವನಮ್ಮಾ!
ನ್ಯಥಾಲೋಚಿಸಬಾರದಮ್ಮಾ!
ಜ್ಞಾನದಿಂದ ಸಖವಿದೆಯಮ್ಮಾ!
ಶ್ವರವಿದೆಲ್ಲಾ ಬೋಗವಮ್ಮಾ!
ದಿಂಬಾಗಬೇಕು ತತ್ವಗಳಮ್ಮಾ!
ತ್ತಸೇವೆ ವ್ಯರ್ಥವಾಗದಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯ ತಾಯಮ್ಮಾ!

ಭಾವದಲಿ ಭಗವಂತನಯ್ಯಾ!

ರಗುರುವಚನವಿದಯ್ಯಾ! (ಅ)
-ದರಂತೆ ನಡೆಯಲೇಬೇಕಯ್ಯಾ! (ಆ)
-ಲಿಸಬಾರದನ್ಯರ ಮಾತಯ್ಯಾ!
ಜಿಸಿ ಭಾವಿಕ ನೀನಾಗಯ್ಯಾ! (ಆ)
-ಗ, ಈಗ, ಮತ್ತೆನಬಾರದಯ್ಯಾ!
ವಂದಿಸಿ ಧನ್ಯನಾಗಬೇಕಯ್ಯಾ!
ನು, ಮನ, ಧನವನದಯ್ಯಾ!
ರಜನ್ಮವಿದಲಭ್ಯವಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯದೇವಯ್ಯಾ!

ನಾನೇಕೆ ಉಂಡೆನಪ್ಪಾ?

ನೇಮವಾ ಊಟವಪ್ಪಾ!
ಕೆನೆ ಮೊಸ್ರೂಟವಪ್ಪಾ!
ಉಂಡಮೇಲಾಲಸ್ಯಪ್ಪಾ! (ಎ)
-ಡೆಯೊಳಗೇನಿಲ್ಲಪ್ಪಾ!
ಡೆಬೇಕು ಕೊಂಚಪ್ಪಾ! (ಅ)
-ಪ್ಪಾದಿತ್ಯಾ! ಕೈಕೊಡಪ್ಪಾ!!!

ಅಟ್ಟ ಮೇಲುರಿಯಯ್ಯಾ! (ಕೆ)

-ಟ್ಟ ಮೇಲೆ ಬುದ್ಧಿಯಯ್ಯಾ!
ಮೇಡೂ ನೆಲಸಮಯ್ಯಾ! (ಅ)
-ಲುಗದಿರ್ನೇಗಿಲಯ್ಯಾ! (ಅ)
-ರಿವಾಗಲಾಮೇಲಯ್ಯಾ!
ತ್ನ ಫಲಪ್ರದಯ್ಯಾ! (ಅ)
-ಯ್ಯಾದಿತ್ಯ ಸಾಕ್ಷಿಯಯ್ಯಾ!!!

ಜನುಮ ಭೋಗಿಸಲಿಕಾಗಯ್ಯಾ! (ಅ)

-ನುಮಾನವಿಲ್ಲೆಲ್ಲಾ ನಿನ್ನಿಂದಯ್ಯಾ!
ನಸು ನಿನ್ನಂತಾಗಬೇಕಯ್ಯಾ!
ಭೋಗ, ಭಾಗ್ಯವದು ನಿಜವಯ್ಯಾ!
ಗಿರಿಯನೆತ್ತಿದ್ದು ಸತ್ಯವಯ್ಯಾ!
ರ್ವಶಕ್ತ ನೀನಾಗಿಹೆ ಅಯ್ಯಾ! (ಆ)
-ಲಿಸಬೇಕು ನಿನ್ನ ಗೀತೆಯಯ್ಯಾ!
ಕಾಣಬೇಕು ತತ್ವಾರ್ಥವನಯ್ಯಾ!
ತಿ ನೀನೆಂದು ನಂಬಿಹೆನಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಭೋಗ್ಯಯ್ಯಾ!!!

ನಂಜುಂಡನಲೈಕ್ಯ ಕಾಮಾಕ್ಷಮ್ಮಾ! (ನಂ)

-ಜುಂಡಾ ಭಾವೈಕ್ಯ ಆತ್ಮನಲಮ್ಮಾ! (ಆ)
-ಡಲೇನಾ ಕಾಮಾಕ್ಷಿ ಸ್ಥಿತಿಯಮ್ಮಾ! (ಅ)
-ನನ್ಯ ಭಕ್ಟಿ ನಲ್ಲನಲದಮ್ಮಾ! (ಆ)
-ಲೈಸೋಲೈಸಿದಳವನಲಮ್ಮಾ! (ಶ)
-ಕ್ಯವಿಲ್ಲವಿದನ್ಯ ಭಾವಕಮ್ಮಾ!
ಕಾಯ ಅಶಾಶ್ವತ ತಿಳಿಯಮ್ಮಾ!
ಮಾತೆ ಕಾಮಾಕ್ಷಿಯಾಗಬೇಕಮ್ಮಾ! (ಅ)
-ಕ್ಷಯ ಸುಖವದರಿಂದಲಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯದಮ್ಮಾ!

ಪರನಿಂದೆ ಮಾಡದಿದ್ದರೆ ಸುಮತಿ!

ಸ, ವಿರಸವಾಗದಿರೆ ಸುಮತಿ!
ನಿಂತರೆ ಮನ ಸ್ವಧರ್ಮದಿ ಸುಮತಿ! (ಇ)
-ದೆನ್ನುದ್ಧಾರಕೆಂದರಿತರೆ ಸುಮತಿ!
ಮಾತಿನಲಿ ದೈವಿಕವಿರೆ ಸುಮತಿ!
-ಡಲಿಷ್ಟದೇವನಲಕ್ಕರೆ ಸುಮತಿ!
ದಿನ, ರಾತ್ರಿ ಜಪದಲಿರೆ ಸುಮತಿ! (ಇ)
-ದ್ದದರಲಿ ತೃಪ್ತಿಯಿಂದಿರೆ ಸುಮತಿ! (ಇ)
-ರೆ, ಸಜ್ಜನರೊಡಗೂಡಿರೆ ಸುಮತಿ!
ಸುಖ, ದುಃಖ ಸಮವಾಗಿರೆ ಸುಮತಿ!
ದ, ಮತ್ಸರವಿಲ್ಲದಿರೆ ಸುಮತಿ!
-ತಿ, ನಿರಂಜನಾದಿತ್ಯ ಗತಿ ಸುಮತಿ!!!

ವಿಶ್ವಾಮಿತ್ರನಿಗೆ ತಪಸು ಕರ್ತವ್ಯ! (ಆ)

-ಶ್ವಾಸವೀವುದು ಶ್ರೀರಾಮನ ಕರ್ತವ್ಯ!
ಮಿಥಿಲೇಶಿಗೆ ರಾಮ ಜಪ ಕರ್ತವ್ಯ!
ತ್ರಯಂಬಕಗಜ್ಞಾನ ನಾಶ ಕರ್ತವ್ಯ! (ಅ)
-ನಿಮಿಷರಿಗೆ ಹರಿಭಕ್ತಿ ಕರ್ತವ್ಯ!
ಗೆಳೆಯಾದಿತ್ಯಗೆ ಕಲ್ಯಾಣ ಕರ್ತವ್ಯ!
ನಯಗೆ ತಾಯ್ತಂದೆ ಸೇವೆ ಕರ್ತವ್ಯ!
ತಿಗೆ ಏಕಪತ್ನೀವ್ರತ ಕರ್ತವ್ಯ!
ಸುಶಿಷ್ಯಗೆ ಗುರುಸ್ಮರಣೆ ಕರ್ತವ್ಯ!
ಡು ಪಾಪಿಗೆ ಪಶ್ಚಾತ್ತಾಪ ಕರ್ತವ್ಯ! (ಆ)
-ರ್ತ ರಕ್ಷಣೆ ಜಗತ್ಕರ್ತನ ಕರ್ತವ್ಯ! (ಭ)
-ವ್ಯ ನಿರಂಜನಾದಿತ್ಯಗೆಲ್ಲಾ ಕರ್ತವ್ಯ!!!

ರಾಕ್ಷಸರುಪಟಳ ಹೆಚ್ಚ ಬೇಕಯ್ಯಾ!

ಕ್ಷಯಕಾರಿ ಈಶ್ವರ ಬರಬೇಕಯ್ಯಾ!
ತ್ಯ ಪರಿಪಾಲನೆಯಾಗಬೇಕಯ್ಯಾ! (ಆ)
-ರು, ದುಃಖಿಸಬೇಕಾಗಿಲ್ಲ ; ನಂಬಿರಯ್ಯಾ!
ರಮಾತ್ಮನೆಲ್ಲವನು ಬಲ್ಲನಯ್ಯಾ! (ಆ)
-ಟವನದು ಇದೆಲ್ಲವೂ ನೋಡಿರಯ್ಯಾ! (ಆ)
-ಳವನಾದರೂ ಅರಿಯದಿಹರಯ್ಯಾ!
ಹೆದರುವಗತ್ಯ ಭಕ್ತಗಿಲ್ಲವಯ್ಯಾ! (ಅ)
-ಚ್ಚರಿಯ ತೋರಿ ರಕ್ಷಿಪನವನಯ್ಯಾ!
ಬೇಕು ಅಚ್ಚಳಿಯದ ಭಕ್ತಿಭಾವಯ್ಯಾ!
ರುಣಾಕರನಾತನಾಗಿರ್ಪನಯ್ಯಾ! (ಅ)
ಯ್ಯಾ! ನಿರಂಜನಾದಿತ್ಯ ರುದ್ರತಾನಯ್ಯಾ!!!

ನಿನ್ನ ಕೆಲಸ ನೀನು ಮಾಡು! (ಉ)

-ನ್ನತಿ ನಿನಗಿಹುದು ನೋಡು!
ಕೆಡಿಸ ಗುರು ನಿನ್ನ ಬೀಡು!
ಕ್ಷಿಸಬೇಡನ್ಯರ ಪಾಡು!
ಜ್ಜನರಲ್ಲಿ ಒಡನಾಡು!
ನೀತಿ, ಸತ್ಯವಿದ್ದೆಡೆಗೋಡು!
ನುಡಿ ನಡೆಯಲೊಂದು ಗೂಡು!
ಮಾಡದಿರನ್ಯರಿಗೆ ಕೇಡು! (ಉ)
-ಡುಪಾದಿತ್ಯನು ನೀ ಬೇಡು!!!

ಭೀತಿಹರ ಶ್ರೀರಾಮ ಜಯ ಮಂತ್ರ!

ತಿಳಿದಿದ ನಿತ್ಯ ಬರೆಯಾ ಮಂತ್ರ!
ರನ ವಿಷವಿಳಿಸಿತೀ ಮಂತ್ರ!
ಕ್ಕಸರ ಸೂಕ್ಕಿಳಿಸಿತೀ ಮಂತ್ರ!
ಶ್ರೀ ಸೀತಾಮಾತೆಗಿದು ಪ್ರಿಯ ಮಂತ್ರ!
ರಾತ್ರಿ, ಹಗಲೆಲ್ಲಾ ಜಪಿಸೀ ಮಂತ್ರ!
ರ್ಕಟರ್ಗೆ ಮೋಕ್ಷವಿತ್ತಿತೀ ಮಂತ್ರ!
ನ್ಮ ಪಾವನಕಿದುತ್ತಮ ಮಂತ್ರ!
ಮಪಾಶ ಕತ್ತರಿಪುದೀ ಮಂತ್ರ!
ಮಂಗೇಶಗೆ ಬ್ರಹ್ಮತ್ವವಿತ್ತೀ ಮಂತ್ರ!
ತ್ರಯೋದಶಾಕ್ಷರೀ ಶ್ರೀರಾಮ ಮಂತ್ರ!
ನಿರಂಜನಾದಿತ್ಯನಾ ಪ್ರಾಣ ಮಂತ್ರ!!!

ಹೊಗೆಯ ಕಡೆಗೆ ಬೆನ್ನು ತೋರಯ್ಯಾ! (ಹ)

-ಗೆಯ ಮಾತುಗಳ ಅಲಕ್ಷಿಸಯ್ಯಾ!
ತ್ನ ಶುದ್ಧ ಜೀವನಕಾಗಲಯ್ಯಾ!
ಸವಿಸಿ ಮಾಡಿಕೊಳದಿರಯ್ಯಾ! (ಹ)
-ಡೆದಮ್ಮ ವಿಷವಿಕ್ಕಿ ಕೊಲ್ಲಳಯ್ಯಾ!
ಗೆಲವು ಮನಕೆ ನಾಮ ಜಪಯ್ಯಾ!
ಬೆಳೆಗಿನ ಕಾಲ ಪ್ರಶಾಂತವಯ್ಯಾ! (ಅ)
-ನ್ನುತಾಲಿಸುತ ಕೂತಿರಬೇಡಯ್ಯಾ!
ತೋಡಿದ ಭಾವಿಗೆ ಜಲ ಸಾಕ್ಷ್ಯಯ್ಯಾ! (ಪ)
-ರಮಾರ್ಥ ಚಿಂತನೆ ಮಾಡುತಿರಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾತ್ಮೀಯನಯ್ಯಾ!!!

ಸುಜನನಿಂತಿರ ಬೇಕಮ್ಮಾ!

ನ್ಮ ಸಾರ್ಥಕಕಿಹನಮ್ಮಾ!
ಮ್ರ ಭಾವದಿಂದಿಹನಮ್ಮಾ!
ನಿಂದೆ ಅವನಿಗಾಗದಮ್ಮಾ!
ತಿಕ್ಕಾಟವನಲಿಲ್ಲವಮ್ಮಾ! (ಆ)
-ರನೂ ದ್ವೇಷಿಸನವಮ್ಮಾ!
ಬೇಕಿಲ್ಲದಲ್ಲಿ ಸೇರನಮ್ಮಾ!
ಲಿಯುವನೆಲ್ಲರಿಂದಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯಾತಮ್ಮಾ!!! ೩೮೭

ಹಗಲಿರುಳುರುಳುತಿದೆ!

ತಿ, ಸ್ಥಿತಿ ಅರಿಯದಿದೆ! (ಮ)
-ಲಿನ ಮನದಲ್ಲಿಲ್ಲದಿದೆ! (ತಾ)
-ರುಣ್ಯವೆಲ್ಲಾ ಕಳೆದಾಗಿದೆ! (ಬಾ)
-ಳು ದೈವಿಕವಾಗಿಯೇ ಇದೆ! (ದಾ)
-ರುಣಾ ಚಿಂತೆ ದೂರಾಗದಿದೆ! (ಹೇ)
-ಲುವುದಿನ್ನೇನು ಬಾಕಿ ಇದೆ?
ತಿಳಿಸೆಂದು ಮನ ಬೇಡಿದೆ! (ಎ)
-ದೆ ನಿರಂಜನಾದಿತ್ಯಾಗಿದೆ!!!

ಅಮನಸ್ಕನಾಗುವುದೆಂದಯ್ಯಾ?

ನದಮಾಟ ಕಠಿಣವಯ್ಯಾ!
ಟೆನೆಮಾಡಿ ಕುಣಿವುದಯ್ಯಾ! (ತ)
-ಸ್ಕರನಂತೆ ವಂಚಿಪುದಿದಯ್ಯಾ!
ನಾಯಿಯಂತಮೇಧ್ಯಕೋಡ್ವುದಯ್ಯಾ!
ಗುರಿಯನು ಮರೆಯುವುದಯ್ಯಾ! (ಆ)
-ವುದು ಸುಖವೆಂದರಿಯದಯ್ಯಾ! (ಅ)
-ದೆಂಥಾ ಮಾಯಾಜಾಲ ನಿನ್ನದಯ್ಯಾ?
ಯಾನುಗ್ರಹ ಮಾಡಿ ಕಾಯಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಮನಯ್ಯಾ!!!

ಸಾವನಾದರೂ ನೀಡಯ್ಯಾ! (ಆ)

-ವದಕಾಗಿರಬೇಕಯ್ಯಾ? (ಅ)
-ನಾದರೆವನ್ಯಾಯವಯ್ಯಾ! (ಆ)
-ದರಿಸುವರಿನ್ಯಾರಯ್ಯಾ? (ಆ)
-ರೂರ ಸೇರಿದರೇನಯ್ಯಾ!
ನೀನಿರು ಊರ ತೋರಯ್ಯಾ! (ಆ)
-ಡಲಿನ್ನೇನೆನಗಿಲ್ಲವಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಯ್ಯಾ!!!

ಕೃಪೆಯಾದರೆ ಕೃಪಣನೂ ದಾನಿ!

ಪೆರ್ಮೆಗೆಲ್ಲಾ ವಾಸುದೇವ ಕಾರಣಿ!
ಯಾದವೇಂದ್ರನೆಲ್ಲರ ಅಭಿಮಾನಿ!
ರಿದ್ರ ಕುಚೇಲನಾಪ್ತ ಸನ್ಮಾನಿ! (ಇ)
-ರೆ ಅವನ ಕರುಣೆ, ಪೂರ್ಣಜ್ಞಾನಿ!
ಕೃತಿಯವನದದ್ಭುತಾತ್ಮ ವಾಣಿ!
ತಿತನೂ ಅವನಿಂದ ಪಾವನಿ! (ರ)
-ಣಧೀರ ಅರ್ಜುನನ ಸಂಭಾವನಿ!
ನೂರೊಂದು ತಪ್ಪಿಗೆ ಕಾದ ಸಹನಿ!
ದಾರಿಯಿವನದಾಪ್ತ ಸಂಜೀವಿನಿ!
ನಿರಂಜನಾದಿತ್ಯನಾ ಗುಣಗಾನಿ!!!

ಸ್ವಧರ್ಮ ನಿರ್ಭಯಾನಂದ!

ರ್ಮರಾಜಗಿದಾನಂದ! (ಕ)
-ರ್ಮನಿಷ್ಠೆ ವಿಮಲಾನಂದ!
ನಿಶಿ, ದಿನ ಜಪಾನಂದ! (ಅ)
-ರ್ಭಕಗೆ ಕರುಣಾನಂದ!
ಯಾತ್ರೆ ಭಕ್ತರಿಗಾನಂದ!
ನಂಬಿಗೆಗಿಂಬತ್ಯಾನಂದ!
ಯೆ, ನಿರಂಜನಾನಂದ!!!

ಗುರುಕೃಪೆ ನಿರಂಜನ ಸದನಮ್ಮಾ! (ಅ)

-ರುಹಲೇನದರ ಮಹಿಮೆಯನಮ್ಮಾ?
ಕೃತಾಪರಾಧವೆಲ್ಲಲ್ಲಿ ಕ್ಷಯವಮ್ಮಾ!
ಪೆಣಕಾದರೂ ಜೀವ ಬರುವುದಮ್ಮಾ!
ನಿತ್ಯ ಪೂಜಾ, ಭಜನೆ ಕಾರಣವಮ್ಮಾ!
ರಂಗನಾಥನಲ್ಲಿ ವಾಸವಿರ್ಪನಮ್ಮಾ! (ಅ)
-ಜ, ಹರಿ, ಹರರಿಗಿದು ಪ್ರಿಯವಮ್ಮಾ!
ರರಿದಕಾಗಿ ದುಡಿಯಬೇಕಮ್ಮಾ!
ರಸಿಜಾಪ್ತ ತೃಪ್ತನಿದರಿಂದಮ್ಮಾ!
ತ್ತಚಿತ್ತವಿದೇ ಜನ್ಮಪಾವನಮ್ಮಾ! (ಅ)
-ನವರತ ಜಪಿಸಿ ಬದುಕಿರಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯಾನಂದವಿದಮ್ಮಾ!!!

ನಿರಂಜನಾದಿತ್ಯ ನಿಲಯದಲೇನು ವಿಶೇಷ?

ರಂಗಿನ ನಿರಂಜನನ ಚಿತ್ರವೊಂದು ವಿಶೆಷ!
ನರಿಗಾತಿಥ್ಯವಿನ್ನೊಂದು ಸತತ ವಿಶೆಷ!
ನಾಮಸಂಕೀರ್ತನೆ ಆಗಾಗ್ಯೆ ಮತ್ತೊಂದು ವಿಶೆಷ!
ದಿನ ನೊತ್ಯೆಲ್ಲಾ ಬೆಳಿಗ್ಗೆ ಬೇಗೇಳ್ವುದು ವಿಶೆಷ! (ಅ)
-ತ್ಯಪಾರ ಭಕ್ತಿಪೂಜೆ ನಿತ್ಯಾನುಷ್ಠಾನ ವಿಶೆಷ!
ನಿರತ ನಿರ್ಮಲಾದರ್ಶ ಗುರುಸೇವೆ ವಿಶೆಷ!
ಕ್ಷದೀಪ ಹಚ್ಚುವ ಸಂಕಲ್ಪ ಬಹು ವಿಶೆಷ! (ಆ)
-ಯ, ವ್ಯಯ ಶಿವಾನಂದವೆಂಬ ಭಾವ ವಿಶೆಷ!
ತ್ತನ ಮಂತ್ರ ಸದಾ ಹೇಳುವಭ್ಯಾಸ ವಿಶೆಷ!
ಲೇಶವೂ ಬೂಟಾಟವಿಲ್ಲದಿರುವುದು ವಿಶೆಷ!
ನುಡಿಯಂತೆ ನಡೆಯುವ ದಿವ್ಯ ಗುಣ ವಿಶೆಷ!
ವಿಕಲ್ಪವೆಳ್ಳಷ್ಟಿಲ್ಲದ ಪರಮಾರ್ಥ ವಿಶೆಷ!
ಶೇಷವಿಲ್ಲದ ಪೂರ್ಣಾದರೋಪಚಾರ ವಿಶೆಷ!
ಷ್ಠಿ ನಿರಂಜನಾದಿತ್ಯಗಾದುದತಿ ವಿಶೆಷ!!!

ಭಾವಿಕ ಬಾಲೆಯರಿವರಯ್ಯಾ!

ವಿಕಲ್ಪವಿಲ್ಲದಿದ್ದಿದ್ದರಮ್ಮಾ!
ಣ್ಣೀರು ಸುರಿಸುತಿದ್ದರಮ್ಮಾ!
ಬಾಯ್ಬಿಡದೆ ಕುಳಿತಿದ್ದರಮ್ಮಾ! (ತ)
-ಲೆಬಾಗಿ ಜಪಿಸುತಿದ್ದರಮ್ಮಾ! (ತಾ)
-ಯ ಪ್ರೇಮವವರದಾಗಿತ್ತಮ್ಮಾ! (ಆ)
-ರಿವರು?

ನ್ಯ ಜೀವಿಗಳಮ್ಮಾ!
ರ ಕುಸುಮಾರ್ಚನೆಯಾಯ್ತಮ್ಮಾ! (ಕ)
-ರ ಮುಗಿದಾಜ್ಞೆ ಬೇಡಿದರಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯಾನಂದಮ್ಮಾ!!!

ಆಗಿನಂತೆ ಈಗಿಲ್ಲಾ!

ಗಿಡ ಕಿತ್ತದ್ದಾಯ್ತಲ್ಲಾ!
ನಂಬಿಗೆ ಹಾಲಾಯ್ತಲ್ಲಾ!
ತೆಗಳಿಕೆ ಹೆಚ್ತಲ್ಲಾ!
ರ್ಷಾಸೂಯೆ ಹುಟ್ಟಲ್ಲಾ!
ಗಿರೀಶಗಾಸಕ್ತಿಲ್ಲಾ! (ಅ)
-ಲ್ಲಾದಿತ್ಯ ಬೇಕಾಗಿಲ್ಲಾ!!!

ಈಗ ಕಾಸಿದ ನೀರಿಂದೇಗ ಬಿಸಿ ಸ್ನಾನ! (ಆ)

“ಗಣದಾಗ, ಈಗಿನದೇಗ!” ಇದೇ ಜ್ಞಾನ!
ಕಾಲ, ಕರ್ಮದ ವಿಜಾರವತಿ ಗಹನ!
ಸಿಹಿಯಡಿಗೆಗೆ ಸಿಹಿಯೂಟ ಪ್ರಮಾಣ! (ಅ)
-ದರಿತ ಜೀವನಿಗಿದೆ ನಿತ್ಯ ಕಲ್ಯಾಣ!
ನೀಲಾಕಾಶಕ್ಕೆ ಶುಭ್ರ ರವಿಯೇ ಭೂಷಣ! (ಆ)
-ರಿಂದಲೇನಹುದು ಮನಸ್ಸಿಗೆ ದುಮ್ಮಾನ?
ದೇಪ ಉರಿವಾಗೇಕೆ ಕತ್ತಲನುಮಾನ?
ರ್ವದಿಂದಾಗುವುದು ಅಶಾಂತಿ ಜೀವನ!
ಬಿಡಬೇಕೈಹಿಕದ ಬಯಲ ಮೋಹನ!
ಸಿದ್ಧಿಪುದದರಿಂದಾತ್ಮಾನಂದ ಪಾವನ!
ಸ್ನಾನ, ಪಾನ, ಅಶನಗಳಾತನಾಧೀನ!
ಮಸ್ತೇ! ನಿರಂಜನಾದಿತ್ಯ ಬಿಂಬಾನನ!!!

ನಿನಗಾಗಿ ನನ್ನದೇ ತಪಸು ರಾಘವೇಂದ್ರಾ!

ನಗಾಗಿ ನಿನ್ನ ಲೋಕಸೇವೆ ರಾಘವೇಂದ್ರಾ!
ಗಾಳಿ ಬೀಸಿದರುರಿ ವ್ಯಾಪಕ ರಾಘವೇಂದ್ರಾ!
ಗಿರಿ ತರುಗಳಿಗೆ ಆಧಾರ ರಾಘವೇಂದ್ರಾ!
ಡೆ, ನುಡಿಗೆ ಪ್ರಾಣಾಧಾರ ಶ್ರೀ ರಾಘವೇಂದ್ರಾ! (ಅ)
-ನ್ನ ಔಷದ್ಯೋಪಚಾರ ನಿನ್ನದು ರಾಘವೇಂದ್ರಾ!
ದೀರ್ಘ ಕಾಲದ ದುಡಿಮೆ ಧನ್ಯ ರಾಘವೇಂದ್ರಾ!
ಪಸಿನಿಂದಸುರ ಸಂಹಾರ ರಾಘವೇಂದ್ರಾ!
ವಮಾನಸುತಗಿದಾನಂದ ರಾಘವೇಂದ್ರಾ!
ಸುಜನ ಶಿರೋಮಣಿ ಹನುಮ ರಾಘವೇಂದ್ರಾ!
“ರಾಮ, ರಾಮ ಜಯ ಸೀತಾರಾಮ” ರಾಘವೇಂದ್ರಾ!
ಮ, ಘಮಿಸುತಿದೆ ಸುಗಂಧ ರಾಘವೇಂದ್ರಾ!
ವೇದವೇದ್ಯಗಿದು ಸಮರ್ಪಣೆ ರಾಘವೇಂದ್ರಾ! (ಸಾ)
-ನ್ದ್ರಾ! ನಿರಂಜನಾದಿತ್ಯ (ಗುರುಶ್ರೀ) ರಾಘವೇಂದ್ರಾ!!! ೩೯೮ಮಾರುತಿ

ಆರ ಕಂಬನಿಗನುಗ್ರಹವಯ್ಯಾ? (ಆ)

-ರದಾಗಿದೆ ಉರಿ ಕಠಣವಯ್ಯಾ?
ಕಂಗೆಡುತಿದ್ದಾರೆ ಭಕ್ತಜನಯ್ಯಾ!
ಲಗುಂದಿಹರನ್ನವಿಲ್ಲದಯ್ಯಾ!
ನಿನಗೇಕಿನ್ನೂ ದಯೆಬಂದಿಲ್ಲಯ್ಯಾ?
ತ ವೈಭವ ಬರಲೆಂಬರಯ್ಯಾ! (ಅ)
-ನುಭವಿಸಲಾರರೀ ವಿಯೋಗಯ್ಯಾ!
ಗ್ರರಾಜ ನೀನಾಗಿರುವೆಯಯ್ಯಾ!
ಸುಳೆಗಳಭೀಷ್ಟ ಸಲಿಸಯ್ಯಾ!
ರ ದಯಾಮಯ ಗುರು ನೀನಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಬಾ ಬೇಗಯ್ಯಾ!!!

ಗಣರಾಜ್ಯದಿಪ್ಪತ್ತೊಂದು ವರ್ಷ! (ಹ)

-ಣ, ಕಾಸನ್ನ ಕಾಣದಾದ ವರ್ಷ!
ರಾಜ್ಯಾಡಳಿತದಧ್ವಾನ ವರ್ಷ! (ಆ)
-ಜ್ಯ, ಭೋಜ್ಯಗಳ ತುಟ್ಟಿಯ ವರ್ಷ!
ದಿನಸಿಗಾಗಲೆಯುವ ವರ್ಷ! (ಅ)
-ಪ್ಪಟ್ಟ ತುಪ್ಪ ಸಿಗದಾದ ವರ್ಷ! (ಅ)
-ತ್ತೊಂಬತ್ತನೂರರ್ವತ್ತೆಂಟೀ ವರ್ಷ!
ದುಡಿವವರಿಗಿಲ್ಲದ ವರ್ಷ!
ನವಾಸ ಹರಿಯಲೀ ವರ್ಷ! (ಹ)
-ರ್ಷ, ನಿರಂಜನಾದಿತ್ಯಗೀ ವರ್ಷ!

ಸತ್ಯಕ್ಕೆ ಸಹಾಯ ಸದ್ಗುರು ನಾಥ! (ಅ)

-ತ್ಯಧಿಕ ಪುತ್ರವತ್ಸಲನಾ ನಾಥ! (ಅ)
-ಕ್ಕೆಲ್ಲರಿಷ್ಟ ಸಿದ್ಧಿಗಾತನೇ ನಾಥ!
ತತ ಭಜನಾಪ್ರಯನಾ ನಾಥ!
ಹಾತೊರೆವಾತ್ಮರಿಗಾತನೇ ನಾಥ!
ಶವೀಯುವಾತನನಾಥ ನಾಥ!
ಕಲನರಿವಾ ಗುರು ನಾಥ! (ಸ)
-ದ್ಗುರು ದತ್ತಾತ್ರೇಯನಾ ಗುರು ನಾಥ! (ಅ)
-ರುಹಿರ್ಪನವಧೂತ ಗೀತಾ ನಾಥ!
ನಾದಬಿಂದು ಕಲಾತೀತನಾ ನಾಥ! (ಪ)
-ಥ ನಿರಂಜನಾದಿತ್ಯ ರಾಮ ನಾಥ!!!

ಪ್ರಕಟನಾ ಕಾಲ ಸ

ಈಪಿಸಿತಮ್ಮಾ!

ಪಟ ನಾಟಕದ ಅಂತ್ಯ ಬಂತಮ್ಮಾ! (ಅ)
-ಟಕಿಪನಪಮಾನದ್ಭುತದಿಂದಮ್ಮಾ!
ನಾಮಜಪದ ಬಲನುಪಮವಮ್ಮಾ!
ಕಾಯುವನು ಆರ್ತರ ಖಡಿತವಮ್ಮಾ! (ಆ)
-ಲಯ ಗುರುವಿನದು ಪಾವನವಮ್ಮಾ!
ರ್ವಾಂತರ್ಯಾಮಿಯ ಲೀಲೆ ವಿಚಿತ್ರಮ್ಮಾ!


ರಲಸಾಧ್ಯ ಅವನಾಜ್ಞೆಯಮ್ಮಾ!
ಪಿಸುಣರೆಲ್ಲಾ ಪರಿವರ್ತನೆಯನಮ್ಮಾ! (ಆ)
-ಸಿಸಿದ್ದೆಲ್ಲವೂ ಸಿ

ಯಾಗುವುದಮ್ಮಾ!
ರಳ ಪ್ರಹ್ಲಾದನ ನೆನೆಯಿರಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯಗೆ ಜಯಮ್ಮಾ!!!


ಕಾಲ ಬರೆದೆ ಕಾಲನಾದರೂ ಕದಲಿಸಲಾರ! (ಅ)

-ಲಕ್ಷಿಸುತನ್ಯ ವೃತ್ತಿಗಳ, ಮಾಡು ಆತ್ಮವಿಚಾರ!
ಪ್ಪದು ತಪ್ಪದೆಂದರಿತು ಸಾಕುಮಾಡು ಸಂಸಾರ! (ಆ)
-ರಯೋಗ್ಯರಾದರೇನು? ನಿನಗಿರಲಿ ಸದಾಚಾರ!
ದೆವ್ವಗಳ ಕೂಗಾಟಗಳೇನು ಮಾಡ್ಯಾವು ದೇವರ?
ಕಾಲವಶವಾಗಳಿವವೆಲ್ಲಾ ದುಷ್ಟ ಪರಿವಾರ!
ಕ್ಷ್ಯ ನಿನಗಿರಬೇಕು ಸದ್ಗುರುವಿನ ಆಕಾರ!
ನಾಮ ಜಪಿಸುತಲಿರಬೇಕು ಉಸಿರು ಸಂಚಾರ!
ಹಿಸುವುದಿದರಿಂದೆಲ್ಲಾ ಅಕ್ರಮದನಾಚಾರ! (ಆ)
-ರೂಹೆಗೂ ನಿಲುಕದ ಗುರುವಿನ ಮಹಿಮೆಯಪಾರ!
ಲಿತುದನಾಚರಣೆಗೆ ತಂದವ ಕಡುಧೀರ!
ಶರಥಾತ್ಮಜ ರಾಮನಿದಕೆ ಸದಾ ಆಧಾರ!
ಲಿಖಿತವಿದು ಯೋಗವಾಸಿಷ್ಠದಲಿರುವ ಸಾರ!
ರಸಿಜಾಸನಸುತನುಪದೇಶ ವೇದ ಸಾರ!
ಲಾಲಿಸುತನುಭವಕೆ ತಂದವನೇ ರಘವೀರ!
ಘಪತಿ ನಿರಂಜನಾದಿತ್ಯ ರಾಘವ ಗಂಭೀರ!!!

ವಿಚಾರಧಾರೆ ಹರಿಯುತ್ತಿರಲಿ!

ಚಾರು ಚರಿತೆ ಧರೆಗಾಗಿರಲಿ!
-ರಗಳೆಯಿಂದ ಮನಹಾರಿರಲಿ!
ಧಾಮ, ಸಾಯುಜ್ಯಧಾಮವಾಗಿರಲಿ! (ಇ)
-ರೆ ಅಲ್ಲಿ ನಿಜಾನಂದವೆಂದಿರಲಿ!
ರಿ, ಹರರಜರೆಲ್ಲಲ್ಲಿರಲಿ! (ಇ)
-ರಿತ ಮಾಯೆಯದಲ್ಲಿಲ್ಲದಿರಲಿ!
ಯುಗವಿದುತ್ತಮ ಗತಿಗಿರಲಿ! (ಇ)
-ತ್ತಿರುವ ಜನ್ಮ ಗುರುಗಾಗಿರಲಿ!
ಸಾಸ್ವಾದನೆ ನಾಮದಲಿರಲಿ!
ಲಿಪ್ತ ನಿರಂಜನಾದಿತ್ಯಲ್ಲೆನಲಿ!!!


ಶಿವನ ಹೊತ್ತು ಗಿರಿ ಹತ್ತುತಿಹೆನಯ್ಯಾ!

ರ ಮಾಯೆಯ ಚಿಕಿತ್ಸೆಗೆ ಸಾಕ್ಷಿಯಯ್ಯಾ!
ಶ್ವರ ಕಾಂಚನ ತಿಪ್ಪೆಯಲಿಹುದಯ್ಯಾ!
ಹೊತ್ತೇರುವಾಗ ಜಗ್ಗುವ ಬಲವಾಗಯ್ಯಾ! (ಆ)
-ತ್ತು ಆಧೀರನಾಗಿ ನಾನಿರುತಿಲ್ಲವಯ್ಯಾ!
ಗಿರಿ, ಮರ ಗಿಡಗಳಿಲ್ಲದಿಹುದಯ್ಯಾ (ಆ)
-ರಿನ್ನಾರೂ ಬಳಿಯಲ್ಲಿಲ್ಲದಿರುವರಯ್ಯಾ!
ತ್ತುವಾಗ ಸೂಂಟ ಬಾಗಿರುತಿಹುದಯ್ಯಾ! (ಕ)
-ತ್ತು ಮೇಲ್ಮುಖವಾಗಿ ಬಲವಗಿಹುದಯ್ಯಾ!
ತಿಳಿಯದಂತೆ ಮಾತುಗಳಾಡುವನಯ್ಯಾ!
ಹೆಜ್ಜೆ ಹೆಜ್ಜೆಗೂ ಭಾರ ಹೆಚ್ಚಿಸುವನಯ್ಯಾ!
ಗುತ ಬೆನ್ನಿಂದಿಳಿದು ನಿಲುವನಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಪ್ರಸನ್ನ ಶಿವಯ್ಯಾ!!!ನನ್ನ ಹೊತ್ತ ನಿನ್ನ ಕಷ್ಟ ಪರಿಹಾರ! (ಅ)

-ನ್ನ ಹಾಕಿ ಹೊರಿಸಿದೆನು ಬಹು ಭಾರ!
ಹೊರಲಾರದೆ ಬಳಲಿದೆ ಕುಮಾರ! (ಅ)
-ತ್ತ, ಇತ್ತ, ಎತ್ತೆತ್ತ ಬೆಂಗಾಡು ಭೀಕರ!
ನಿಲ್ಲದೆ ಬೆಟ್ಟ ಹತ್ತಿದ ನೀನೇ ಧೀರ! (ಅ)
-ನ್ನಬೇಡ ಅನಧಿಕಾರಿಗೀ ವಿಚಾರ!
ಥೆಯಿದಲ್ಲ! ಮುಂದಿನ ಸಮಾಚಾರ!! (ಅ)
-ಷ್ಟ ದಿಕ್ಪಾಲಕರಿಗಿಷ್ಟವೀ ಆಚಾರ!
ತಿತಪಾವನ ನಾ ಪರಮೇಶ್ವರ!
ರಿಪುಕುಲ ಕಾಲನರ್ಧನಾರೀಶ್ವರ!
ಹಾಡಿ, ಭಜಿಸುತಿರು ಇಷ್ಟಾನುಸಾರ!
ಥಿ ನಿರಂಜನಾದಿತ್ಯನಲಂಕಾರ!!!


ಮುಂದಾಗುವುದನಿಂದು ಹೇಳುವವನಾವನಯ್ಯಾ?

ದಾನ, ದಕ್ಷಿಣೆ ಕೇಳುವವಗಿದರಿಯದಯ್ಯಾ! (ಆ)
-ಗು, ಹೋಗುಗಳರಿತಿರುವನಂತರ್ಯಾಮಿಯಯ್ಯಾ! (ಅ)
-ವುಗಳವನಾರಿಗೂ ಹೇಳುವುದಪರೂಪಯ್ಯಾ! (ಆ)
-ದರಿಸಿ ಹೇಳುವನು ತನಗಿಷ್ಟವಾದರಯ್ಯಾ!
ನಿಂದಾ, ಸ್ತುತಿಗಳಿಗಾತನೊಲಿಯಲಾರನಯ್ಯಾ!
ದುಡಿಮೆಯ ನೋಡಿ ನೀಡುವ ಸ್ವಾಮಿಯವನಯ್ಯಾ!
ಹೇಳದೇ ಮಾಡುವುದು ಅವನ ಸ್ವಭಾವವಯ್ಯಾ! (ಆ)
-ಳು, ಅರಸನೆಂಬ ಭೇದ ಅವನಿಲ್ಲವಯ್ಯಾ!
ರ ಶರಣಾಗತ ಪರಿಪಾಲಕಾತನಯ್ಯಾ!
ಸ್ತ್ಯಾಭರಣಾಲಂಕಾರವನಿಗೆ ಬೇಡವಯ್ಯಾ!
ನಾಮಸ್ಮರಣೆ ಮಾತ್ರದಿಂದ ಆತ ತೃಪ್ತನಯ್ಯಾ!
ರ ಋಷಿ, ಮುನಿಗಳಿಗಿದು ಗೊತ್ತಿಹುದಯ್ಯಾ! (ಅ)
-ನವರತದಭ್ಯಾಸವಿಲ್ಲದೇನೂ ಆಗದಯ್ಯಾ! (ಅ)
-ಯ್ಯಾ! ಸರ್ವಾಂತರ್ಯಾಮಿಯೇ ನಿರಂಜನಾದಿತ್ಯನಯ್ಯಾ!!!


ಅಭಯಪ್ರದಾನದನುಭವವೆಂದಿಗಯ್ಯಾ?

ರವಸೆಯ ನಂಬಿ ಬದುಕುತಿಹೆನಯ್ಯಾ!
ತ್ನ ನೀನು ಮಾಡಿಸಿದಂತಾಗುತಿದೆ ಅಯ್ಯಾ!
ಪ್ರತಿ ನಿಮಿಷವೂ ಪ್ರತ್ಸಾಹ ನೀಡಬೇಕಯ್ಯಾ!
ದಾತ ನೀನು ಉದಾಸೀನ ಮಾಡುಬಾರದಯ್ಯಾ!
ನಗೆ ನೀನಲ್ಲದಿನ್ಯಾರು ಗತಿ ಹೇಳಯ್ಯಾ!
ರ್ಶನಾನುಗ್ರಹಕಾಗಿ ಕಾದಿರುವೆನಯ್ಯಾ! (ಅ)
-ನುಸರಿಸಿಹೆನು ಪೂರ್ವಜರಾಚಾರವಯ್ಯಾ!
ಕ್ತಿ, ಭಾವ, ಪ್ರಜ್ವಲಿಸಬೇಕು ನಿನ್ನಿಂದಯ್ಯಾ! (ಅ)
-ವ ಠಾವಿನಲೆಂತಿರಬೇಕೋ ಅಂತಿಹೆನಯ್ಯಾ!
ವೆಂಕಟೇಶ ನೀನು ಸಂಕಟ ದೂರ ಮಾಡಯ್ಯಾ!
ದಿಗಂಬರ ಗುರು ಗಂಗಾಧರನು ನೀನಯ್ಯಾ! (ಅ)
-ಗಣಿತ ಗುಣಗಣ ಪ್ರಾಣ ಸಾಂಬಶಿವಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ನೀನೆಂದಿರುವೆನಯ್ಯಾ!!!


ಭ್ರಾತೃ, ಭಗಿನೀ ಪ್ರೇಮಸಿದ್ಧಿ ಹೀಗಮ್ಮಾ!

ತೃಣ ಸಮ ವಿಷಯಾಸೆಯಾಗಲಮ್ಮಾ!
ರತನಾದರ್ಶದಂತಿರಬೇಕಮ್ಮಾ!
ಗಿರಿ, ತಟಾಕ ವಿಹಾರದಿಂದಲ್ಲಮ್ಮಾ!
ನೀತಿ, ರೀತಿಗಿರಬೇಕು ಗಮನಮ್ಮಾ!
ಪ್ರೇಮ ಸೇವಾತ್ಮ ಭಾವದಿಂದಾಗಲಮ್ಮಾ!
ನ ಮರ್ಕಟನಂತಿರಬಾರದಮ್ಮಾ!
ಸಿನಿಮಾಕ್ಕೊಡಗೂಡಿ ಹೋದರಲ್ಲಮ್ಮಾ! (ಸಿ)
-ದ್ಧಿ ನೀರಲೊಟ್ಟಿಗೆ ಮಿಂದರಲ್ಲದಮ್ಮಾ!
ಹೀನ ವ್ಯಾಪಾರಕ್ಕೆಡೆಯಿದರಿಂದಮ್ಮಾ! (ಅ)
-ಗತ್ಯದ ನಿವಾರ್ಯಕ್ಕೆ ನೆರವಾಗಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯ ಬೋಧೆಯಿದಮ್ಮಾ!!!


ಮಸಾಲೆಗೆ ತಕ್ಕ ವಾಸನೆಯಮ್ಮಾ!

ಸಾಧನೆಗೆ ತಕ್ಕ ಪ್ರತಿಫಲಮ್ಮಾ! (ಅ)
-ಲೆದಾಟದ ಮನಕಶಾಂತಿಯಮ್ಮಾ!
ಗೆಳೆಯನಾತ್ಮೀಕನಾಗಬೇಕಮ್ಮಾ!
ರಣಿ, ಲೋಕಮಿತ್ರನಂತಿರಮ್ಮಾ! (ಅ)
-ಕ್ಕ, ತಮ್ಮಾ ಪ್ರೇಮ ಚೊಕ್ಕವಿರಲಮ್ಮಾ!
ವಾರಿಜಾದಿತ್ಯರಂತಿರಬೇಕಮ್ಮಾ!
ರ್ವಾಂತರ್ಯಾಮಿತ್ವಳವಡಲಮ್ಮಾ!
ನೆನಪಾಗುರುವಿನದಿರಲಮ್ಮಾ!
ದುಪತಿಯಾಚಾರ ಹೀಗಿತ್ತಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯಾಚಾರ್ಯನಮ್ಮಾ!


ರಾಮ ಅಪ್ಪ ನಾಮ ನೆಪ್ಪ ನೀಡಪ್ಪಾ!

ಮತಾ ಮೋಹಗಳ ಬಿಡಿಸಪ್ಪಾ!
ಡಚಣೆಯೆಲ್ಲವ ಸುಡಿಸಪ್ಪಾ! (ಅ)
-ಪ್ಪಣೆ ನಿನ್ನದು ಪಾಲಿಸುವೆನಪ್ಪಾ!
ನಾಳೆಯನಾಕವೆನಗೆ ಬೇಡಪ್ಪಾ!
ಗುವಿನ ಮೊರೆಯನು ಕೇಳಪ್ಪಾ!
ನೆರವಿತ್ತು ಕರುಣಿಸು ಇಂದಪ್ಪಾ! (ಅ)
-ಪ್ಪಟ ಸಹಜ ಸುಖವ ಕೊಡಪ್ಪಾ!
ನೀನುದಾಸೀನ ಮಾಡಬಾರದಪ್ಪಾ! (ಆ)
-ಡಲರಿಯೆನು ಇನ್ನೇನು ನಾನಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯ ಶ್ರೀ ರಾಮಪ್ಪಾ!!!


ವಿಶ್ವರೂಪ ಶಿವಪ್ಪ! (ಶಾ)

-ಶ್ವತ ರೂಪ ಶಿವಪ್ಪ!
ರೂಪಾನಂತ ಶಿವಪ್ಪ!
ರಮಾತ್ಮ ಶಿವಪ್ಪ!
ಶಿವಗುರು ಶಿವಪ್ಪ!
ರದಾತ ಶಿವಪ್ಪ! (ಅ)
-ಪ್ಪ, ಜೈ ನಿರಂಜನಪ್ಪ!!!

ಸಚ್ಚಿದಾನಂದ ಸ್ಥಿತಿಗೊಯ್ಯುವುದೆಲ್ಲಾ ಸತ್ಸಂಘ! (ಬ)

-ಚ್ಚಿಟ್ಟಚ್ಚುತನಿಚ್ಛೆಯಿಂದ ಬಿಡಿಸಲು ಸತ್ಸಂಘ!
ದಾರಿಯಾವುದಾದರೂ ಕಾರ್ಯವಾದರೆ ಸತ್ಸಂಘ!
ನಂಬಿಗೆಯಿಂದ ಮಾಡಬೇಕು ಸತತ ಸತ್ಸಂಘ!
ಡ ಸೇರಿದರೂ ಬಿಡದಿರಬೇಕು ಸತ್ಸಂಘ!
ಸ್ಥಿತಿಯಿಂದಿಳಿಯದಿರುವುದಕಾಗ ಸತ್ಸಂಘ!
ತಿಳಿಯದೇ ಮಾಯೆಯುರುಳಿಸದಂತೆ ಸತ್ಸಂಘ!
ಗೊಡವೆ ಲೌಕಿಕಕೆ ಓಡದಂತಿರಲು ಸತ್ಸಂಘ! (ಸಾ)
-ಯ್ಯುಜ್ಯ, ಸಚ್ಚಿದಾನಂದ ಸ್ಥಿತಿಗೀ ನಿಜ ಸತ್ಸಂಘ! (ಆ)
-ವುದಿದಕಾತಂಕವೋ ಅದಲ್ಲಾದರ್ಶ ಸತ್ಸಂಘ!!
ದೆಸೆದೆಸೆಗೂ ದಿಟ್ಟಿಸಿ ಹೂಡಬೇಕು ಸತ್ಸಂಘ! (ಅ)
-ಲ್ಲಾಡಿದರೆ ಮನಸು ಸಿದ್ಧಿಯಾಗದು ಸತ್ಸಂಘ!
ರ್ವೆ

ಶ್ವರನ ಪೂರ್ಣಾನುಗ್ರಹದಿಂದ ಸತ್ಸಂಘ! (ಸ)
-ತ್ಸಂಪ್ರದಾಯ ತ್ರಿಕರಣಗಳಲಿರ ಸತ್ಸಂಘ!
ನ ಮಹಿಮ ನಿರಂಜನಾದಿತ್ಯನಾ ಸತ್ಸಂಘ!!!

ಸಗ್ಗವೂ ಅಗ್ಗ ಸಲಿಗೆಯಿಂದ! (ಹ)

-ಗ್ಗವೂ ಹಾವು ಪ್ರಾಣ ಭಯದಿಂದ! (ಹಾ)
-ವೂ ಹಗ್ಗ ಏಕಾಗ್ರ ಮನದಿಂದ!
ರಸನೂ ಆಳು ಕರ್ಮದಿಂದ! (ಅ)
-ಗ್ಗಳದ ಭಾಗ್ಯನುಗ್ರಹದಿಂದ!
ದಾ ಆನಂದ ಸತ್ಸಂಘದಿಂದ!
ಲಿಪ್ತನಾದರೆ ಭವದ ಬಂಧ!
ಗೆಳೆಯಾದಿತ್ಯ ದರ್ಶನಾನಂದ!
ಯಿಂಬನೀವ ಗುರು ನಿತ್ಯಾನಂದ!
ತ್ತ ನಿರಂಜನಾದಿತ್ಯಾನಂದ!!!

ಇದೆ ಒಂದಾಣೆ, ಬೇಕೊಂದಾನೆ (ಎ)

-ದೆಯಳತೆಯಂತಂಗಿ ತಾನೆ?
ಒಂದಕ್ಕೊಂದನ್ವಯ ಬೇಕ್ತಾನೆ?
ದಾರಿಗೆ ತಕ್ಕ ಗಾಡಿ ತಾನೇ? (ಎ)
-ಣೆಸರಿಯಿರೆ ಸುಖ ತಾನೇ?
ಬೇನೆಗೆ ತಕ್ಕ ಔಷಧಿ ತಾನೇ?
ಕೊಂಬಿಗಪ್ಪ ಕೊಳವೆ ತಾನೇ?
ದಾತ, ನಾಥ, ದತ್ತನೇ ತಾನೇ? (ಎ)
-ನೆ, ನಿರಂಜನಾದಿತ್ಯ ನಾನೇ!!!

ಜುಲಾಬಿಗೂ ತಗೊಳ್ಳಲೇ ಬೇಕಯ್ಯಾ! (ಹಾ)

-ಲಾನ್ನವೇ ಬೇಕೆಂದರುಹುದೇನಯ್ಯಾ?
ಬಿಸಿಲೇ ಇದ್ದರಾಗುವುದೇನಯ್ಯಾ!
ಗೂಡ್ರಿಸಿ ಮೋಡವೂ ಮುತ್ತಬೇಕಯ್ಯಾ? (ಆ)
-ತನ ಲೀಲೆಗೆಲ್ಲಾ ಇರಬೇಕಯ್ಯಾ!
ಗೊಬ್ಬರ ಹಾಕಿದ್ರೆ ನೀರೂ ಬೇಕಯ್ಯಾ! (ಹ)
-ಳ್ಳವಿದ್ದಲ್ಲಿ ದಿಣ್ಣೆಯೂ ಇದೆಯಯ್ಯಾ!
ಲೇಸೂ, ಹೊಲಸೂ ಸೃಷ್ಟಿ ಕ್ರಮವಯ್ಯಾ!
ಬೇಕು ಸಾಕಾಗಿ ಬೇಡವಾಗ್ವುದಯ್ಯಾ!
ಮಲ ಅರಳಿ ಮುಚ್ಚುವುದಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾದರ್ಶನಯ್ಯಾ!!!

ಏನು ನಿನ್ನ ಲೀಲೆಯೋ ಅರಿಯೆನಯ್ಯಪ್ಪಾ!

ನುಡಿಗಳವಡದಾಗಿಹುದದಯ್ಯಪ್ಪಾ!
ನಿಮಿಷ ನಿಮಿಷಕಾಶ್ಚರ್ಯವದಯ್ಯಪ್ಪಾ! (ಅ)
-ನ್ನದಾತನಾಗೆಲ್ಲರ ಕಾಯುವವಯ್ಯಪ್ಪಾ!
ಲೀಲಾಜಾಲದಿಂದ ಕಷ್ಟ ಕಳೆವಯ್ಯಪ್ಪಾ!
ಲೆಕ್ಕಿಸಲಾರೆ ನಿನ್ನ ಭಕ್ತರನಯ್ಯಪ್ಪಾ!
ಯೋಗಪುರುಷ ಪರಮಾನಂದನಯ್ಯಪ್ಪಾ!
ಗಣಿತ ಗುಣಗಣ ಗುರುವಯ್ಯಪ್ಪಾ!
ರಿಪುಕುಲ ಕಾಲಭೈರವನವಯ್ಯಪ್ಪಾ!
ಯೆಲ್ಲಾ ರೂಪ ತಾನಾಗಿರುತಿಹನಯ್ಯಪ್ಪಾ!
ಮಸ್ಕಾರ ನಿನಗೆ ಶರಣಮಯ್ಯಪ್ಪಾ! (ಅ)
-ಯ್ಯ, ಅಮ್ಮ, ನೀನೆಲ್ಲರವನಾಗಿರ್ಪಯ್ಯಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯ ಶಬರಿಯಯ್ಯಪ್ಪಾ!!!

ಕಾಶಿ, ರಾಮೇಶ್ವರ ನಿನ್ನ ಭಾವದಲ್ಲಿ!

ಶಿವಪೂಜೆ ಮಾಡು ದೇಹ ಕಾಶಿಯಲ್ಲಿ!
ರಾಮಸೇವೆ ಸದಾ ಭಾವಾಯೋಧ್ಯೆಯಲ್ಲಿ!
ಮೇಲೆ, ಕೆಳಗೆಲ್ಲಾ ನಿನ್ನ ಮನದಲ್ಲಿ! (ಈ)
-ಶ್ವರನಿಗಾಗಲೆಯುವುದೇಕೆಲ್ಲೆಲ್ಲಿ?
ತ್ನ ಮಂಟಪವಿದೆ ಹೃದಯದಲ್ಲಿ!
ನಿತ್ಯರ್ಚನಾಭಿಷೇಕ ಮಾಡುತಿರಲ್ಲಿ! (ಅ)
-ನ್ನ, ನೇವೇದ್ಯವಾಗಲಿ ಸತತವಲ್ಲಿ!
ಭಾವದಲಡಗದುದೇನೇನಿದೆಲ್ಲಿ?
ರ ಸಾಕ್ಷಾತ್ಕಾರವ ಮಡಿಕೊಳ್ಳಿಲ್ಲಿ!
ರ್ಶನವಿದಭ್ಯಾಸದಿಂದ ನಿನ್ನಲ್ಲಿ! (ಇ)
-ಲ್ಲಿ, ನಿರಂಜನಾದಿತ್ಯ ಸನ್ನಿಧಿಯಲ್ಲಿ!!!

ರಂಗನಾಥಗೆ ರಥೋತ್ಸವ ಮಾಡಯ್ಯಾ!

ರ್ವ ಬಿಟ್ಟವನ ನೋಡು ನಿನ್ನಲ್ಲಯ್ಯಾ!
ನಾಮವನದನುದಿನ ನೆನೆಯಯ್ಯಾ!
ಳಕು, ಕೊಳಕಿನ ಭಾವ ಬಿಡಯ್ಯಾ! (ಆ)
-ಗೆಳೆಯಬೇಕು ರಥ ಬೀದಿಯಲಯ್ಯಾ!
ಥ ಪಂಚಭೂತಾತ್ಮಕ ದೇಹವಯ್ಯಾ! (ಯ)
-ಥೋಚಿತಲಂಕಾರವದಕಿರಲಯ್ಯಾ! (ಸ)
-ತ್ಸಂಘದಿಂದದಕೆ ದಿವ್ಯ ಕಾಂತಿಯಯ್ಯಾ!
ರ ಗುರು ರಂಗನಲ್ಲಿಡಬೇಕಯ್ಯಾ!
ಮಾಲೆಯಾತಗೆ ವಿಮಲ ಮನವಯ್ಯಾ!
ಕ್ಕಾ, ಬಜಂತ್ರಿಯೆಲ್ಲಾ ಭಜನೆಯಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ರಂಗನಾಥಯ್ಯಾ!!!

ನಿರಂಜನ ನಾಮಕೆಲ್ಲರಿಗೂ ಹಕ್ಕು!

ರಂಗನಿಂದ ವಿರಾಜಿಸಲಲ್ಲೀ ಹಕ್ಕು!
ರಾಜನ್ಮವಿಲ್ಲದಾತ್ಮಾರಾಮ ಹಕ್ಕು!
ಯನ ಮನೋಹರಕೊಲ್ಲದೀ ಹಕ್ಕು!
ನಾದ, ಬಿಂದು, ಕಲಾತೀತವಾದ ಹಕ್ಕು!
ನೋನಾಶದಿಂದ ಬೆಳಗುವ ಹಕ್ಕು!
ಕೆಲಸ, ಕಾರ್ಯಗಳರಿಯದ ಹಕ್ಕು! (ಉ)
-ಲ್ಲಸ, ಜಿಗುಪ್ಸೆಗಳೇನಿಲ್ಲದ ಹಕ್ಕು! (ಉ)
-ರಿ, ಶೀತ, ವಾತಗಳಿಲ್ಲದಂಥಾ ಹಕ್ಕು!
ಗೂಡವರಿತರೆ ಸಾರ್ಥಕವೀ ಹಕ್ಕು!
ರಿ, ಹರ, ಅಜರೊಂದಾದುದೀ ಹಕ್ಕು! (ಉ)
-ಕ್ಕುತಿದೆ ನಿರಂಜನಾದಿತ್ಯನೀ ಹಕ್ಕು!

ಗಂಧವಿದ್ದರೆ ಬಂಧವಯ್ಯಾ!

ಗೆ ಬಿಸಿಲ ಭಯಕಯ್ಯಾ!
ವಿಷಯಾಸೆ ಮನದಿಂದಯ್ಯಾ! (ಸ)
-ದ್ದಡಗೆ ಕೇಳುವುದೇನಯ್ಯಾ?
ರೆಪ್ಪೆ ಮುಚ್ಚೆ ನೋಡ್ವುದೇನಯ್ಯಾ?
ಬಂಧು, ಬಳಗ ಭ್ರಮೆಯಯ್ಯಾ!
ರ್ಮ, ಕರ್ಮ ಮಾಡಬೇಕಯ್ಯಾ!
ರ ಗುರುಚಿತ್ತವದಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾತಯ್ಯಾ!

ಧರ್ಮಸಂಸ್ಥಾಪಕಯಾದವೇಂದ್ರ! (ಕ)

-ರ್ಮನಿಷ್ಠಾವತಾರಿ ಯಾದವೇಂದ್ರ!
ಸಂಕಲ್ಪ ರಹಿತ ಯಾದವೇಂದ್ರ!
ಸ್ಥಾವರ, ಜಂಗಮ ಯಾದವೇಂದ್ರ!
ರಮಾತ್ಮ ಗುರು ಯಾದವೇಂದ್ರ!
ಲಿ ಮಲ ಹರ ಯಾದವೇಂದ್ರ!
ಯಾಗ, ಯೋಗೇಶ್ವರ ಯಾದವೇಂದ್ರ! (ಆ)
-ದರ್ಶ ಆರ್ಯಪುತ್ರ ಯಾದವೇಂದ್ರ!
ವೇದಾಂತದಾಚಾರ್ಯ ಯಾದವೇಂದ್ರ! (ಸಾ)
-ನ್ದ್ರ! ನಿರಂಜನಾದಿತ್ಯ ಭೂಪೇಂದ್ರ!!!

ಕರ್ಮನಿಷ್ಟನಿಂದ ಕಷ್ಟ ಪರಿಹಾರವಯ್ಯಾ! (ಮ)

-ರ್ಮವಿವನರಿತಿಹನು ಸದ್ಧರ್ಮದಿಂದಯ್ಯಾ!
ನಿಶ್ಚಲ ಭಕ್ತಿಯಿಂದಿವನು ಪರಿಶುದ್ಧನಯ್ಯಾ! (ಆ)
-ಷ್ಟ ಮದಗಳಿವನಲೇನೇನೂ ಇಲ್ಲವಯ್ಯಾ!
ನಿಂದಾ, ಸ್ತುತಿಗಳಿಂದಿವ ಮತಿಗೆಡನಯ್ಯಾ! (ಆ)
-ದರಿಸುವನೆಲ್ಲರನು ವಿಶ್ವಾಸದಿಂದಯ್ಯಾ!
ನಿಕರವಿವನಲಿಹುದಪಾರವಯ್ಯಾ! (ಅ)
-ಷ್ಟ ಐಶ್ವರ್ಯಗಳಿಗಿವನು ಆಶಿಸನಯ್ಯಾ!
ರಮಾರ್ಥವಿವಗೆ ಪರಮಪ್ರಿಯವಯ್ಯಾ! (ಅ)
-ರಿ ಷಡ್ವರ್ಗದಿಂದ ಇವನು ವಿಮುಕ್ತನಯ್ಯಾ!
ಹಾರ, ತುರಾಯಿಗಳಿವನಿಗೆ ಬೇಡವಯ್ಯಾ! (ಆ)
-ರ ವ್ಯವಹಾರಗಳಿಗೂ ತಲೆ ಹಾಕನಯ್ಯಾ!
ರ ಮಾದರಿಯ ಜೀವನವಿವನದಯ್ಯಾ! (ಅ)
-ಯ್ಯಾ! ಕಾಲ, ಕರ್ಮಜ್ಞ ನಿರಂಜನಾದಿತ್ಯನಯ್ಯಾ!!!

ಬಾಳುವವ ಹೇಳುತಲೆಯನಯ್ಯಾ! (ಹಾ)

-ಳು ಹವ್ಯಾಸ ಅವನಿಗಾಗದಯ್ಯಾ!
ನಚರ ಮರುತಿಯಾದಂತಯ್ಯಾ!
ನವನ ಹಾರುತಲೀಗಿಲ್ಲಯ್ಯಾ!
ಹೇಳಿಯಾಗ ಬೇಕಾದುದೇನಿದಯ್ಯಾ! (ಅ)
-ಳುತನ್ಯ ವಿಚಾರದಿಂದಿರನಯ್ಯಾ!
ತ್ವ ಚಿಂತನೆಯೇ ಅವನಿಗಯ್ಯಾ! (ಅ)
-ಲೆದಾಟಕಿಂದ್ರಿಯಗಳೋಡವಯ್ಯಾ! (ಆ)
-ಯ ವ್ಯಯವನಿಗೆಲ್ಲಾ ರಾಮನಯ್ಯಾ!
ರ ನಾಡಿಯಾರಾಮಮಯವಯ್ಯಾ! (ಅ)
ಯ್ಯಾ! ಮಾರುತಿ ನಿರಂಜನಾದಿತ್ಯಯ್ಯಾ!!!

ಅಪ್ಪನಿಗಾಗದ ಮನೆ ಮಗನಿಗೇಕಪ್ಪಾ? (ಅ)

-ಪ್ಪನ ಇಷ್ಟದಂತೆ ಮಗನಿದ್ದಿರಬೇಕಪ್ಪಾ!
ನಿಜವಿದ ಮಗ ಮರೆಯದಿರಬೇಕಪ್ಪಾ!
ಗಾಡಿ, ಎತ್ತು ಎಳೆದ ಕಡೆ ಹೋಗುವುದಪ್ಪಾ!
ರ್ವದಿಂದೇನೇನೋ ಪ್ರಯೋಜನವಿಲ್ಲವಪ್ಪಾ!
ಶರಥನಿಷ್ಟ ರಾಮ ಸಲಿಸಿದನಪ್ಪಾ!
ಮತಾಶೆಗಳನೆಲ್ಲಾ ಆತ ಬಿಟ್ಟಿನಪ್ಪಾ!
ನೆಚ್ಚಿ, ಮೆಚ್ಚಿ ವನವಾಸ ಮಾಡಿದನಾತಪ್ಪಾ!
ರಣಕಾದರೂ ಸಿದ್ಧನಾಗಿದ್ಧಿದ್ದನಪ್ಪಾ!
ತಿಗೇಡಿನ ಬಾಳಿಗಿಂತ ಇದು ಲೇಸಪ್ಪಾ!
ನಿಜ ಸುಖವಿರದಿರೇಕೆ ಇರಬೇಕಪ್ಪಾ?
ಗೇಣುಹೊಟ್ಟೆಗಾಗಿ ನರಜನ್ಮವಲ್ಲವಪ್ಪಾ!
ಲಿಸಿಹನಿದ ಜಗಕೆ ಗುರುದೇವಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯಗಿದೊಂದೇ ಗುರಿಯಪ್ಪಾ!!!

ಕಲ್ಲು, ಮರ, ದೇವರೆಂಬ ನೀನೇಕಲ್ಲಾ? (ಗು)

-ಲ್ಲು ಮಾಡಿಯಡ್ಡಬೀಳುವರ್ಕಲ್ಲಗೆಲ್ಲಾ!
ನ ಮಾಡಿದ ಮೂರ್ತಿಗಳೇ ಎಲ್ಲೆಲ್ಲಾ!
ಥೋತ್ಸವಾಲೋಹಗೊಂಬೆಗೆ ಊರೆಲ್ಲಾ! (ಅ)
-ದೇಕೆ ನಿನ್ನನೀನದರೆಂತೆ ಮಾಡಿಲ್ಲಾ? (ಅ)
-ವರಿವರಂತೆ ನೀನಿರಬೇಕಾಗಿಲ್ಲಾ! (ಆ)
-ರೆಂದರೇನು? ನಿನ್ನ ದಾರಿ ನೀ ನೋಡಪ್ಪಾ!
ಡಿದಿಕ್ಕು ಮಾಯಾವೃತ್ತಿಗಳನೆಲ್ಲಾ!
ನೀನಾಗುವೆ ಪೂಜ್ಯ ದೇವನೆಂಬೆನಲ್ಲಾ!
ನೇಮ, ನಿಷ್ಠೆ ನಿತ್ಯವಿದಕೆ ಬೇಕಲ್ಲಾ!
ರ್ಮ, ಕಾಲ, ಗತಿ ಮಾಡುತಿಹುದೆಲ್ಲಾ! (ಬ)
-ಲ್ಲಾ ನಿರಂಜನಾದಿತ್ಯದೇವ ನೋಡಲ್ಲಾ!!!

ಒಬ್ಬರನ್ನೊಬ್ಬರಾಡಿ ದೊಡ್ಡವರಾಗರಯ್ಯಾ! (ಅ)

-ಬ್ಬರಟ್ಟಹಾಸ ಬಂಜೆಯ ಸೌಂದರ್ಯದಂತಯ್ಯಾ! (ಅ)
-ರಳಿಸಿ ತನ್ನ ರೂಪ ತಾನಿದ್ದರೊಳ್ಳಿತಯ್ಯಾ!
ನೊರೆಹಾಲಿರಲು, ನೆರೆಮನೆ ಕಳ್ಳೇಕಯ್ಯಾ? (ಕ)
-ಬ್ಬನೊಳಗಿಟ್ಟು, ಜೊಂಡು ಹಿಂಡುವುದೇತಕಯ್ಯಾ?
ರಾಮನ ಬಿಟ್ಟು ಕಾಮನ ಹಿಡಿಯಬೇಡಯ್ಯಾ! (ಹಾ)
-ಡಿ, ಪಾಡಿ ಗುರುಭಜನೆಯಲೈಕ್ಯವಾಗಯ್ಯಾ!
ದೊಡ್ಡವರಂಥವರೆಂದು ತಿಳಿಯಬೇಕಯ್ಯಾ! (ಅ)
-ಡ್ಡದಾರಿ ಹಿಡಿದರಧೋಗತಿ ಬಹುದಯ್ಯಾ!
ರ ಸಾಧು, ಸಂತರ ಹಾದಿ ಸುಗಮವಯ್ಯಾ!
ರಾಗ, ತಾಳ, ಮೇಳವಿರಲೇಬೇಕೆಂದಿಲ್ಲಯ್ಯಾ! (ಅ)
-ಗತ್ಯವಿದಕಿರಬೇಕನನ್ಯ ಭಕ್ತಿಯಯ್ಯಾ! (ಮ)
-ರ, ಮರವೆಂದವಗೂ ರಾಮನೊಲಿದನಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಗುರು ಹಿರಿಯನಯ್ಯಾ!!!

ಮಡಿಲಿಗೆ ಬಿದ್ದ ಬಡವನಿವನಯ್ಯಾ! (ಅ)

-ಡಿಗಡಿಗಪರಿಮಿತ ಕಷ್ಟಗಳಯ್ಯಾ! (ಆ)
-ಲಿಸಿ, ಪಾಲಿಸುವವರಿನ್ಯಾರಿಲ್ಲವಯ್ಯಾ!
ಗೆಳೆಯ ನೀನು ಒಬ್ಬನೇ ಇವನಿಗಯ್ಯಾ!
ಬಿಡದಿರು ಕೈಯ್ಯ! ಹಿಡಿದು ಎಬ್ಬಿಸಯ್ಯಾ! (ಅ)
-ದ್ದಲಾಗದಿನ್ನೂ ದುಃಖಸಾಗರದಲಯ್ಯಾ!
ಳಲುತಿಹನು ಬಹುಕಾಲದಿಂದಯ್ಯಾ! (ಆ)
-ಡಲಾರನಾರಲ್ಲೂ ಈ ದುಃಸ್ಥಿತಿಯನಯ್ಯಾ!
ಸ್ತ್ರಾನ್ನ, ಪಾನಗಳಿಗೂ ಅಭಾವವಯ್ಯಾ!
ನಿರತ ಮಾಡುವನು ರಾಮ ಜಪವಯ್ಯಾ! (ಆ)
-ವ ತಪ್ಪಿದ್ದರೂ ಕ್ಷಮಿಸುತ ರಕ್ಷಿಸಯ್ಯಾ!
ಮಿಸಿಹನು ಶ್ರೀಪಾದಕಮಲಕಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾ!! ಮೌನವೇತಕಯ್ಯಾ!!!

ರಾಜರಾಜೇಶ್ವರಿ ಹೇಗಿಹಳಮ್ಮಾ?

ಗ ಮೂರಲ್ಲೂ ವ್ಯಾಪಿಸಿಹಳಮ್ಮಾ!
ರಾರಾಜಿಪ ದಿವ್ಯ ರೂಪವದಮ್ಮಾ! (ಅ)
-ಜೇಯಾತ್ಮನೇ ಈ ರೂಪಾಗಿಹಳಮ್ಮಾ! (ನ)
-ಶ್ವರದ ಸಂಸಾರಿಯವಳಲ್ಲಮ್ಮಾ! (ಅ)
-ರಿ ಭಯಂಕರಿ ರಾಜೇಶ್ವರಿಯಮ್ಮಾ!
ಹೇರಂಬ ಗಣಪನ ಮಾತೆಯಮ್ಮಾ!
ಗಿರೀಶ ಶಿವನರ್ಧಾಂಗೀಕೆಯಮ್ಮಾ!
ಗಲಿರುಳೂ ಶಿವೈಕ್ಯವಳಮ್ಮಾ! (ಅ)
-ಳದಟ್ಟರೆ ಈ ದೇವಿಯೇ ನೀನಮ್ಮಾ! (ಅ)
-ಮ್ಮಾ! ನೀನೇ ನಿರಂಜನಾದಿತ್ಯನಮ್ಮಾ!!!

ಮಾತಿಲ್ಲ, ಕಥೆಯಿಲ್ಲ, ಏಕಪ್ಪಾ? (ಅ)

-ತಿಶಯವಾದ ಸ್ಥಿತಿ ಇದಪ್ಪಾ! (ಅ)
-ಲ್ಲ ಸಲ್ಲದ ಮಾತನರ್ಥವಪ್ಪಾ!
ಥೆ, ವ್ಯಥೆಗೆ ಕಾರಣವಪ್ಪಾ! (ವ್ಯ)
-ಥೆ, ಗುರಿಗೆ ವಿಘ್ನಕಾರಿಯಪ್ಪಾ! (ಆ)
-ಯಿತನುಭವ ನನಗೀಗಪ್ಪಾ! (ಅ)
-ಲ್ಲಲ್ಲಲೆದೇನೂ ಫಲವಿಲ್ಲಪ್ಪಾ!
ನಿದ್ದರೂ ಎಲ್ಲಾ ನಿನ್ನಲ್ಲಪ್ಪಾ!
ಲೆತಿರಬೇಕಾತ್ಮನಲ್ಲಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯನಿಂತಿಪ್ಪಾ!!!

ಶರೀರ ಪೋಷಣೆ ಸಾಕಾಯ್ತಯ್ಯಾ!

ರೀತಿ, ರಿವಾಜೆನಗಿಲ್ಲವಯ್ಯಾ! (ಅ)
-ರವಿಂದ ಸಖನಿಷ್ಟವಿದಯ್ಯಾ!
ಪೋಷಾಕೆಂದೋ ತ್ಯಜಿಸಿದ್ದಾಯ್ತಯ್ಯಾ!
ಷ್ಠಿ ವರ್ಷ ಕಳೆದುಹೋಯ್ತಯ್ಯಾ! (ಆ)
-ಣೆ, ನಿನ್ನಾಣೆ! ಪ್ರಸನ್ನನಾಗಯ್ಯಾ!
ಸಾಹಸವೆನ್ನಲೇನಿಹುದಯ್ಯಾ?
ಕಾಲ, ಕರ್ಮಾತ್ಮಕನು ನೀನಯ್ಯಾ! (ಆ)
ಯ್ತವಸಾನಾಸೆಗಳೆಲ್ಲವಯ್ಯಾ! (ಅ)
-ಯ್ಯಾ! ಕಾಯೋ ನಿರಂಜನಾದಿತ್ಯಯ್ಯಾ!!!

ನಿರುತ್ಸಾಹಕ್ಕೆ ಅನಾದರ ಕಾರಣ! (ಅ)

-ರುಚಿಗೆ ಅಜೀರ್ಣವೇ ಮೂಲ ಕಾರಣ! (ತಾ)
-ತ್ಸಾರಕ್ಕೆ ಕಡು ಬಡತನ ಕಾರಣ!
ರ್ಷಕ್ಕೆ ಸತತ ಸಂತೃಪಿ ಕಾರಣ! (ಅ)
-ಕ್ಕೆ, ಸುಖವೆಲ್ಲಕ್ಕನುಗ್ರಹ ಕಾರಣ!
ನುಮಾನವೇ ಅಶಾಂತಿಗೆ ಕಾರಣ!
ನಾಳೆ ಚಿಂತೆ ಕಳವಳಕೆ ಕಾರಣ!
ರ್ಪಕ್ಕೆ ದುರಂಹಕಾರವೇ ಕಾರಣ! (ಅ)
-ರಸಿಕತೆಗೆ ಅವಿದ್ಯೆಯೇ ಕಾರಣ!
ಕಾಮಾತುರತೆಗೆ ಮಾಯೆಯೇ ಕಾರಣ!
ಗಳೆಗೆಲ್ಲಾ ದ್ವೇಷಾಸೂಯೆ ಕಾರಣ! (ತೃ)
-ಣ ನಿರಂಜನಾದಿತ್ಯಗೆಲ್ಲಾ ಕಾರಣ!!!

ದತ್ತ ನೀನೆನ್ನನೆತ್ತಿಕೋ! ಆಪತ್ತುಗಳೆಲ್ಲವ -ಕಿತ್ತು ಕೋ! (ಅ)

-ತ್ತತ್ತು ಸಾಕಾಯ್ತೆನ್ನನೆತ್ತಿಕೋ! ದತ್ತ ನೀನೀಗೆನ್ನ ಹೊತ್ತುಕೋ!
ನೀನೆನೆನ್ನ ತಾಯ್ತಂದೆತ್ತಿಕೋ! ದತ್ತ ನೀನೆನ್ನಾಪ್ತಾ ಅಪ್ಪಿಕೋ!
ನೆರೆ ಆಯಾಸೆನ್ನನೆತ್ತಿಕೋ! ದತ್ತ ನಿನ್ನವಾನೆಂದೊಪ್ಪಿಕೋ!
(ಅ)-ನ್ನ, ವಸ್ತ್ರ ಸಾಕೀಗೆತ್ತಿಕೋ! ಬಾ ದತ್ತ ನಿನ್ನಂತೆನ್ನ ಮಾಡಿಕೋ!
ನೆಲ, ಹೊಲವೆನಗೇತಕೋ? ದತ್ತ ಈಗೆನ್ನ ನೀ ಕೂಡಿಕೋ!
(ಅ)-ತ್ತಿತ್ತೆನ್ನ ಅಟ್ಟುವುದೇತಕೋ? ದತ್ತ ನಿನ್ನಲ್ಲೆನ್ನನ್ನಿಟ್ಟುಕೋ!
ಕೋಪ ಮಾಡದೆನ್ನ ತಬ್ಬಿಕೋ! ದತ್ತ ನೀ ಹೊಣೆಲ್ಲಾ -ಕಾರ್ಯಕೋ!
ರೋಪವೆಲ್ಲಾ ಇನ್ನು ಸಾಕೋ! ದತ್ತ ಕೃಪೆ ಈಗಾಗಬೇಕೋ!
ತಿತನಾನಾಗ್ವುದೇತಕೋ? ದತ್ತನಡಿಗೆನ್ನನೊಯ್ದುಕೋ!
(ಎ)-ತ್ತು ನೀನೆನ್ನ ದಿವ್ಯಚಿತ್ತಕೋ! ದತ್ತ ನಾ ಬಿದ್ದೆನು ಪಾದಕೋ!
ತಿ ನೀನೇ ಎಲ್ಲಾ ಕಾಲಕೋ! ದತ್ತಗುರು ತ್ರಯ ಲೋಕಕೋ!
(ಗೆ)-ಳೆಯರು ಬೇರೆನಗೇತಕೋ? ದತ್ತ ನೀನೊಬ್ಬನಿದ್ದರ್ಸಾಕೋ!
(ಎ)-ಲ್ಲವನು ಹೇಳಿದೆ ಕೇಳಿಕೋ? ದತ್ತ ನಿನ್ನಲ್ಲೆನ್ನ ಸೇರ್ಸಿಕೋ!
ಚನ ನಿನ್ನಂತೆ ಇರ್ಸಿಕೋ! ದತ್ತ ಪುತ್ರನ ಉದ್ಧರ್ಸಿಕೋ!
ಕಿರುಕುಳ ಮಾಯಾ ಮೋಹಕೋ! ದತ್ತ ಬಿಡದೆನ್ನ ನೋಡಿಕೋ!
(ಸ)-ತ್ತು, ಹುಟ್ಟುವ ಜನ್ಮ ವೇತಕೋ! ದತ್ತ ಮಾತೆನ್ನದ ನೊಪ್ಪಿಕೋ!
ಕೋರಿಕೆ ಸಲಿಸಿ ಕಾಯ್ದುಕೋ! ದತ್ತ ನಿರಂಜನಾದಿತ್ಯಕೋ!

ಬೇಡವಾದುದ ಬಿಟ್ಟಿಲ್ಲ, ಬೇಕಾಗಿಹುದು ಸಿಕ್ಕಿಲ್ಲ! (ಆ)

-ಡದೇ ನೀಡುವ ಉತ್ತಮ ಸ್ವಭಾವವಿನ್ನೂ ಹುಟ್ಟಿಲ್ಲ!
ವಾದ, ವಿವಾದದ ಹುಚ್ಚೇನೇನೂ ಕಡಿಮೆಯಾಗಿಲ್ಲ!
ದುಷ್ಟತನದ ಹಿಂಸಾಕೃತ್ಯಗಳಿನ್ನೂ ಅಡಗಿಲ್ಲ!
ಮನ ಇಂದ್ರಿಯಗಳದು ಜನ ಮನಕಾಗಿಲ್ಲ!
ಬಿತ್ತಿದ ಬೀಜಕ್ಕೆ ತಕ್ಕ ಫಲವೆಂದರಿವಾಗಿಲ್ಲ! (ಅ)
-ಟ್ಟಿ, ಅಟ್ಟಿ ಬೇಸತ್ತರೂ ಬೇಲಿಯಿನ್ನೂ ಹಾಕಿಸಲಿಲ್ಲ! (ಅ)
ಲ್ಲಲ್ಲಿನ ಹಳ್ಳ, ದಿಣ್ಣೆಗಳು ನೆಲಸಮವಾಗಿಲ್ಲ!
ಬೇಲಿಯಿಲ್ಲದ ಹೊಲದ ಕಾಳೂ ಕೈಗೆ ಬರೋದಿಲ್ಲ!
ಕಾಡು, ಕಳೆಗಳ ಕೀಳದಿದ್ದರೆ ಗಿಡ ಏಳೋಲ್ಲ!
ಗಿಳಿಗಳ ಅಟ್ಟಿದ ಮಾತ್ರಕ್ಕೆ ಲಾಭ ಹೆಚ್ಚೋದಿಲ್ಲ!
ಹುಸಿಯಾಡಿ ಮೋಸಮಾಡುವುದೇ ಆಗಿದೆಯೆಲ್ಲ!
ದುಡಿಮೆಯಲಿ ಶ್ರದ್ಧಾ, ಭಕ್ತಿ ಲೋಪವಾಗಿಹುದಲ್ಲ!
ಸಿರಿತನದಾಡಂಬರವೇ ಹೆಚ್ಚಾಗುತಿದೆಯಲ್ಲ! (ಅ)
-ಕ್ಕಿ ರೂಪಾಯಿಗೆ ಮೂರು ಪಾವೂ ಸಿಗುತಲಿಲ್ಲವಲ್ಲ! (ಅ)
-ಲ್ಲನನು ನಿರಂಜನಾದಿತ್ಯನೆಂದು ಭಜಿಸಿರೆಲ್ಲ!

“ರಾಮ ರಾಮ, ರಾಮ, ರಾಮ, ರಾಮ, ರಾಮ, ರಾಮ, ರಾಮ!!”

ಪ್ರೇಮಪೂರ್ಣಭಾವದಲ್ಲಿ ಹೇಳೋ ರಾಮ, ರಾಮ, ರಾಮ!(ಅ)

ಮತಾ ಬಂಧಹರಿಯೆ ಹೇಳೋ, ರಾಮ, ರಾಮ, ರಾಮ!
ಪೂಜ್ಯ ಹರಿನಾಮ ರಾಮ ಹೇಳೋ ರಾಮ, ರಾಮ, ರಾಮ!
(ವ)-ರ್ಣಭೇದ, ಲಿಂಗಭೇದೊಲ್ಲ ಹೇಳೋ ರಾಮ, ರಾಮ, ರಾಮ!
ಭಾಗ್ಯ ಭೋಗ್ಯವೆಲ್ಲಾ ಇದೇ ಹೇಳೋ ರಾಮ, ರಾಮ, ರಾಮ!
ರ ಮಾರುತಿಯಾಗುವೆ ಹೇಳೋ ರಾಮ, ರಾಮ, ರಾಮ!
ತ್ತಗಿದೇ ಗುರುಮಂತ್ರ ಹೇಳೋ ರಾಮ, ರಾಮ, ರಾಮ!
(ಅ)-ಲ್ಲಿಲ್ಲಿ, ಎಲ್ಲೆಲ್ಲಿಹನವ ಹೇಳೋ ರಾಮ, ರಾಮ, ರಾಮ!
ಹೇಳಲರಿಯೆ ಮಹಿಮೆ ಹೇಳೋ ರಾಮ, ರಾಮ, ರಾಮ!
(ಅ)-ಳೋ! ನಿರಂಜನಾದಿತ್ಯಗೆ! ಹೇಳೋ ರಾಮ, ರಾಮ, ರಾಮ!

ನಿರಂಜನಾದಿತ್ಯ ವಂಶೀ ರಘುವೀರ!

ರಂಗ ಮುರಲೀಧರನೀ ರಘುವೀರ
ನಗಣ ಮನಾಧಾರ ರಘುವೀರ
ನಾಮವಿದು ವರಗುರು ರಘುವೀರ!
ದಿನ, ರಾತ್ರಿ ಜಪಾನಂದ ರಘುವೀರ! (ಅ)
-ತ್ಯಮೂಲ್ಯ ಮಾರುತಿ ಪ್ರೇಮ ರಘುವೀರ!
ವಂಶ ಪಾವನ ನಾಮವೀ ರಘುವೀರ!
ಶೀಲ, ಬಹುಲೀಲಾರಾಮ ರಘುವೀರ!
ಶಿಪತಿಪಿತ ಹರಿ ರಘುವೀರ! (“ರ)
-ಘುಪತಿ ರಾಘವ” ಮಂತ್ರ ರಘುವೀರ!
ವೀರ, ಧೀರ, ಗಂಭೀರನೀ ರಘುವೀರ
ಥಿ ನಿರಂಜನಾದಿತ್ಯ ರಘುವೀರ!!!

ಚಿಕ್ಕಪ್ಪನೊಪ್ಪಿದ ದತ್ತಪ್ಪ! (ಸ)

-ಕ್ಕರೆ, ತುಪ್ಪಾಗಿಪ್ಪ ದತ್ತಪ್ಪ! (ಅ)
-ಪ್ಪಪ್ಪಾತ, ದೇವಪ್ಪ, ದತ್ತಪ್ಪ! (ಅ)
-ನೊಪ್ಪಿದರೊಪ್ಪುವ ದತ್ತಪ್ಪ! (ಅ)
-ಪ್ಪಿ, ಒಪ್ಪಿ, ಬಪ್ಪವ ದತ್ತಪ್ಪ! (ಅ)
ರಪ್ಪ, ಅಜಪ್ಪ ದತ್ತಪ್ಪ! (ಆ)
-ದರಿಪ್ಪ, ರಕ್ಷಿಪ್ಪ, ದತ್ತಪ್ಪ! (ಹ)
-ತ್ತರಿಪ್ಪ, ದೂರಿಪ್ಪ, ದತ್ತಪ್ಪ! (ತ)
-ಪ್ಪ, ನಿರಂಜನಾದಿತ್ಯ ನೊಪ್ಪ!!!

ವಿಚಿತ್ರ ವಿಶ್ವರೂಪ ದತ್ತಪ್ಪ!

ಚಿರತೆ, ಹುಲಿ, ಸಿಂಹ ದತ್ತಪ್ಪ!
ತ್ರಯ ಲೋಕವ್ಯಾಪಕ ದತ್ತಪ್ಪ!
ವಿಷಸರ್ಪ ನಾಗಪ್ಪ ದತ್ತಪ್ಪ! (ಅ)
-ಶ್ವ, ಆನೆ, ನರಿ, ನಾಯಿ ದತ್ತಪ್ಪ!
ರೂಪಾರೂಪ, ಕುರೂಪ ದತ್ತಪ್ಪ!
ಶು, ಪಕ್ಷಿ, ಪತಂಗ ದತ್ತಪ್ಪ!
ರ್ಶನವಿಂತಾದರೆ ದತ್ತಪ್ಪ!
-ತ್ತ, ಇತ್ತ, ಎತ್ತೆತ್ತಲೂ ದತ್ತಪ್ಪ!
-ಪ್ಪ, ನಿರಂಜನಾದಿತ್ಯ ದತ್ತಪ್ಪ!

ಆ ಮತ, ಈ ಮತವೆಂದೇಕೆ ಗುದ್ದಾಟವಯ್ಯಾ?

ತಾಚಾರ್ಯರೊಳಹೊಕ್ಕು ನೋಡಿದಿಯೇನಯ್ಯಾ?
ಮಾಷೆ ಮಾತನಾಡಿದರೇನು ಫಲವಯ್ಯಾ?
ಗಿನಾಗಿನ ಗ್ರಂಥ ಠೀಕೆ ಸಾಕುಮಾಡಯ್ಯಾ?
ನ ನಿನ್ನದೆಂತಿಹುದೆಂದು ವಿಮರ್ಶಿಸಯ್ಯಾ!
ತ್ವ ಚಿಂತನೆ ಮಾಡ್ಯಾರೂಢನಾಗಬೇಕಯ್ಯಾ!
ವೆಂಗ್ಯಮಾತಿನಿಂದ ಜ್ಞಾನ ಸಿದ್ಧಿಯಾಗದಯ್ಯಾ!
ದೇಶ, ಕಾಲ, ಸ್ಥಿತಿ, ಗತಿಯಂತವತಾರಯ್ಯಾ!
ಕೆಟ್ಟ ಮಾಯೆಯ ಹುಟ್ಟಡಗಿಸಿ ಬದುಕಯ್ಯಾ!
ಗುದ್ದಾಟ, ಒದ್ದಾಟಗಳಿಂದ ಅಶಾಂತಿಯಯ್ಯಾ! (ಎ)
-ದ್ದಾಗ ಕೂತಾಗಲೆಲ್ಲಾ ಶಿವನಾಮ ಹೇಳಯ್ಯಾ!
ಗರು ಕಾಳಗ ಶಿವಜೀವೈಕ್ಯವಲ್ಲಯ್ಯಾ!
ರ ಬಸವೇಶ್ವರ ಆಡಿ, ಮಾಡಿಸಿದ್ಧಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾಮೃತ ಮತವಿದಯ್ಯಾ!!!

ಶ್ರೀರಾಮ ಪಟ್ಟಾಭಿಷೇಕವಂತೆ!

ರಾಮಾಯಣ ಪಾರಾಯಣವಂತೆ!
ಕ್ಕಳು, ಮರಿ ಸೇರುವರಂತೆ!
ರಮಾತ್ಮರಾಮ ಪೂಜೆಯಂತೆ! (ಕೆ)
-ಟ್ಟಾಚಾರ ರೀತಿಗಳಿಲ್ಲವಂತೆ!
ಭಿಕ್ಷೆ ಹಾಕಿ ಗುರುಸೇವೆಯಂತೆ! (ಶೇ)
-ಷೇಷ್ಟ ಪ್ರಸಾದವಾಗುವುದಂತೆ!
ಲ್ಯಾಣವಿದು ಜಗತ್ತಿಗಂತೆ!
ವಂಚನೆಯಿಲ್ಲ ಇದರಲ್ಲಂತೆ! (ಅಂ)
-ತೆ, ನಿರಂಜನಾದಿತ್ಯನಿಷ್ಟಂತೆ!!!

“ಜೈ ಗುರುದೇವ ದತ್ತ”

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ