ಹಂಡೆಯಲ್ಲಿ ತುಂಬಾ ತಣ್ಣೀರಿರ್ಲಿ! (ಮಂ)   6(3569)

-ಡೆ ತೊಳೆಯ್ಲಿಕ್ಕುಪಯೋಗವಾಗ್ಲಿ!
ದುನಾಥನ ಗೀತೆ ಅದಾಗ್ಲಿ! (ಅ)
-ಲ್ಲಿ, ಇಲ್ಲಿ, ಚೆಲ್ಲಿ ಹಾಳಾಗದಿರ್ಲಿ!
ತುಂಟ ಮಕ್ಕಳು ದೂರದಲ್ಲಿರ್ಲಿ!
ಬಾಯಿ, ಕೈ, ಮೈಯೆಲ್ಲಾ ಮಡಿಯಾಗ್ಲಿ!
ರಳರಾಮೇಲೆ ಹತ್ರ ಬರ್ಲಿ! (ಕ)
-ಣ್ಣೀರೊರೆಸಿಕೊಂಡೊಟ್ಟಿಗೆ ಬರ್ಲಿ! (ಹು)
-ರಿಗಡ್ಲೇ ಕೈಯಲ್ಲೀಸ್ಕೊಂಡು ತಿನ್ಲಿ! (ಬ)
-ರ್ಲಿ ನಿರಂಜನಾದಿತ್ಯನೂರ್ಸೇರ್ಲಿ!!!

ಹಂಬಲವಾದಾಗೆಲ್ಲಾ ಉಂಬಲಾಗದಯ್ಯಾ!   6(4199)

ಲ ಮಹಾಬಲನದ್ದಿಲ್ಲದಾಗದಯ್ಯಾ!
ಕ್ಷ್ಯ ಅವನಲ್ಲಿದ್ದ್ರೆ ಸದಾ ಹಬ್ಬವಯ್ಯಾ!
ವಾಸನಾ ಕ್ಷಯವಾಗದಿದ್ದ್ರೆಲ್ಲಾ ಗಬ್ಬಯ್ಯಾ!
ದಾರಿ ಊರಿನ ಕಡೆಗಾಗಿರಬೇಕಯ್ಯಾ! (ಕಾ)
-ಗೆ, ಗೂಗೆ, ನರಿಗಳಿಗೆ ಯಾವುದೂರಯ್ಯಾ? (ಚೆ)
-ಲ್ಲಾಪಿಲ್ಲಿ ಮನಸ್ಸಿಗಿಲ್ಲ ಸ್ವ ನೆಲೆಯಯ್ಯಾ!
ಉಂಬುದೊಂದೇ ಕುಂಬಾರಗೆ ಹಂಬಲವಯ್ಯಾ!
ಳಲುತ್ತಿರ್ಪನವ ಸಂಸಾರದಲ್ಲಯ್ಯಾ!
ಲಾಭ ನಷ್ಟದ ಬದುಕು ಅವನದಯ್ಯಾ! (ಯೋ)
-ಗವೆಂಬುದವನಿಗೆ ಸ್ವಪ್ನ ನಿಧಿಯಯ್ಯಾ!
ಯೆದೋರಿದ್ರೆ ಗುರು ಮೂಕ ವಾಚಾಲಯ್ಯಾ! (ಅ)
-ಯ್ಯಾ ನಿರಂಜನಾದಿತ್ಯ ಸೇವೆಯಿದಕ್ಕಯ್ಯಾ!!!

ಹಂಬಲವೇಳುಜನ್ಮದ್ದಿಂದು ಫಲಿಸಿತು!   4(2070)

ರಬೇಕೆಂದಿದ್ದರೂ ಆಗದೇ ಹೋಯಿತು! (ಕಾ)
-ಲ ಕಳೆಯುವುದೇ ಬಹು ಕಷ್ಟವಾಯಿತು!
ವೇಷ, ಭೂಷಣಕ್ಕಿಚ್ಛೆಯಿಲ್ಲದಂತಾಯಿತು!(ಹಾ)
-ಳು ಸಂಸಾರ ವ್ಯಾಪಾರ ಸಾಕಾಗಿ ಹೋಯಿತು!
ನನ, ಮರಣದಲ್ಲೊದ್ದಾಡಿದ್ದಾಯಿತು! (ಚಿ)
-ನ್ಮಯನ ದರ್ಶನದಾಸೆ ಬಲಯಾಯಿತು! (ಎ)
-ದ್ದಿಂದು ದಾರಿ ನಡೆವುದೇ ತ್ರಾಸವಾಯಿತು!
ದುರ್ದೆ

ವ ದೂರ ಸರಿದಂತೆ ಭಾಸಾಯಿತು!
ಲಿಸುತಿದೆ ಭಕ್ತಿಯೆಂಬರಿವಾಯಿತು! (ಕಾ)
-ಲಿನಲ್ಲಿ ನವ ಚೈತನ್ಯೋದಯವಾಯಿತು!
ಸಿಹಿಯೂಟ ಪ್ರಸಾದಲಾಭವುಂಟಾಯಿತು! (ಇಂ)
-ತು ನಿರಂಜನಾದಿತ್ಯನೊಡಗೂಡ್ಯಾಯಿತು!!!

ಹಂಬಲಿಸಿ ಹುಂಬನಾಗಬೇಡ!   3(1340)

ಯಕೆಗೆ ಬಲಿಯಾಗಬೇಡ! (ನಾ)
-ಲಿಗೆಗೆ ಸಲಿಗೆ ಕೊಡಬೇಡ! (ಹು)
-ಸಿ ಮಾಯೆಗಾಶ್ರಯ ನೀಡಬೇಡ!
ಹುಂಜನಂತೆ ಕಾಳಗಾಡ ಬೇಡ!
ಸವನಂತಿರದಿರಬೇಡ!
ನಾಮ, ರೂಪಕ್ಕೆ ಹುಚ್ಚಾಗಬೇಡ! (ಭ)
-ಗವಂತನ್ಯನೆಂದರಿಯ ಬೇಡ!
ಬೇಸತ್ತು ಬೇಸಾಯ ಬಿಡಬೇಡ! (ಕಾ)
-ಡ, ನಿರಂಜನಾದಿತ್ಯ ಬಿಟ್ಟೋಡ!!!

ಹಕ್ಕಿ ಹಾರಿಹೋಯಿತಾಗಯ್ಯಾ! (ಬಿ)   4(1947)

-ಕ್ಕಿಬಿಕ್ಕೀಗಳುವುದೇಕಯ್ಯಾ?
ಹಾಡಿದಾಗದು ಬೇಡಾಯ್ತಯ್ಯೂ! (ಹ)
-ರಿ ಭಕ್ತಗಪಚಾರಾಯ್ತಯ್ಯಾ!
ಹೋದದ್ದು ಬರುವುದೇನಯ್ಯಾ? (ಬಾ)
-ಯಿ ಮುಚ್ಚೀಗ ಧ್ಯಾನ ಮಾಡಯ್ಯಾ!
ತಾರಕನಾಮ ಜಪಿಸಯ್ಯಾ! (ಸಂ)
-ಗ ಸದ್ಗುರುವಿನದಿರ್ಲಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾತಯ್ಯಾ!!!

ಹಕ್ಕಿಗಳಿಗಾವ ಹಬ್ಬ? (ಅ)   4(1508)

-ಕ್ಕಿ ಭತ್ತ ಹೆಕ್ಕುವ ಹಬ್ಬ!
ಗನ ವಿಹಾರ ಹಬ್ಬ! (ಗಾ)
-ಳಿ, ಮಳೆಯೆನ್ನದ ಹಬ್ಬ! (ಆ)
-ಗಾಗೆಲ್ಲೋ ತಂಗುವ ಹಬ್ಬ!
ನವಾಸವೊಂದು ಹಬ್ಬ!
ಗಲಿರುಳೆಲ್ಲಾ ಹಬ್ಬ! (ಹ)
-ಬ್ಬ ನಿರಂಜನಾದಿತ್ಯೋಬ್ಬ!!!

ಹಕ್ಕಿರುವವಗೆ ಸೂಕ್ಕಿಲ್ಲ! (ಸೊ)   6(4123)

-ಕ್ಕಿರುವವನಿಗೆ ಹಕ್ಕಿಲ್ಲ! (ಗು)
-ರು ಚಿತ್ತಕ್ಕೆ ವೇದ್ಯವಿದೆಲ್ಲ! (ಪಾ)
-ವನರಾಗ್ಬೇಕವನಿಂದೆಲ್ಲ! (ಸೇ)
-ವಕರಾಗ್ಬೇಕವನಿಗೆಲ್ಲ! (ಬ)
-ಗೆಬಗೆಯಾಸೆ ಬಿಡ್ಡೇಕೆಲ್ಲ!
ಸೊಕ್ಕಿಗಾಗಿ ಜಾಗವೇ ಇಲ್ಲ! (ಹ)
-ಕ್ಕಿನಾಸೆಯೂ ಇರುವುದಿಲ್ಲ! (ಬ)
-ಲ್ಲ ನಿರಂಜನಾದಿತ್ಯನೆಲ್ಲ!!!

ಹಗಲಿರುಳುರುಳುತಿದೆ!   1(386)

ತಿ, ಸ್ಥಿತಿ ಅರಿಯದಿದೆ! (ಮ)
-ಲಿನ ಮನದಲ್ಲಿಲ್ಲದಿದೆ! (ತಾ)
-ರುಣ್ಯವೆಲ್ಲಾ ಕಳೆದಾಗಿದೆ! (ಬಾ)
-ಳು ದೈವಿಕವಾಗಿಯೇ ಇದೆ! (ದಾ)
-ರುಣಾ ಚಿಂತೆ ದೂರಾಗದಿದೆ! (ಹೇ)
-ಲುವುದಿನ್ನೇನು ಬಾಕಿ ಇದೆ?
ತಿಳಿಸೆಂದು ಮನ ಬೇಡಿದೆ! (ಎ)
-ದೆ ನಿರಂಜನಾದಿತ್ಯಾಗಿದೆ!!!

ಹಗಲೆಲ್ಲಾ ಕತ್ತಲೆ ಕುರುಡನಿಗೆ!   5(2832)

ಗನಮಣಿ ಕಾಣಿಸನವನಿಗೆ!
ಲೆಕ್ಕವಿಲ್ಲಾರ್ಯ ವಚನವವನಿಗೆ! (ಚೆ)
-ಲ್ಲಾಟದ ಮನಸು ಸತತವನಿಗೆ!
ಕ್ಕಸಿನ ಗುಂಡಿ ಹಿತವವನಿಗೆ! (ವಿ)
-ತ್ತದಾಶೆಯೊಂದೇ ನಿರಂತರವನಿಗೆ! (ಅ)
ಲೆದಾಟನ್ಯರಾಶ್ರಯದಿಂದವನಿಗೆ!
ಕುಮಾರ್ಗಿಗಳ ಸಹವಾಸವನಿಗೆ!
ರುಚಿರುಚಿಯೂಟದಾಸೆಯವನಿಗೆ! (ಮ)
-ಡದಿ ಮಕ್ಕಳಿಂದ ಮೋಸವವನಿಗೆ!
ನಿತ್ಯದುಃಖವೊಂದೇ ಅವನ ಪಾಲಿಗೆ! (ಹೀ)
-ಗೆ ನಿರಂಜನಾದಿತ್ಯದೃಶ್ಯವನಿಗೆ!

ಹಗುರವಾಗಿದೆ ದೇಹವಿಂದು!   5(2547)

ಗುರುಕೃಪೆಯಿದೆನಗೆ ಇಂದು! (ಪ)
-ರಮಾರ್ಥದಿಂದ ಸೌಖ್ಯವೆಂದೆಂದು! (ಸೇ)
-ವಾಭಾಗ್ಯವೊಂದಿರಬೇಕೆಂದೆಂದು!
ಗಿಡ, ಮರಕ್ಕೂ ಸಿಗ್ಲದೆಂದೆಂದು! (ತಂ)
-ದೆ, ತಾಯಿ, ಬಂಧುವವನೆಂದೆಂದು!
ದೇಶ, ವಿದೇಶವ್ನಾಧೀನೆಂದೆಂದು!
ರಿ, ಏಸು, ಅಲ್ಲಾ ಒಂದೆಂದೆಂದು! (ನಾ)
-ವಿಂದರಿತರಾನಂದೆಂದೆಂದು! (ಇ)
-ದು ನಿರಂಜನಾದಿತಾಜ್ಞೆಯಿಂದು!!!

ಹಚ್ಚಿಕೊಂಡಿಲ್ಲಾರನ್ನೂ ನಾನು! (ಮು)   6(3387)

-ಚ್ಚಿಸಿದೆ ಬಾ

ಯನ್ನೆಂದೋ ನಾನು!
ಕೊಂದಿಹೆನಾಸೆಯನ್ನು ನಾನು!
(ದು)-ಡಿದೆನವನಿಗಾಗಿ ನಾನು!
(ಉ)-ಲ್ಲಾಸೋತ್ಸಾಹದಿಂದಿಲ್ಲ ನಾನು!
ತಿಸುಖವೇಕೆಂಬೆ ನಾನು?
(ನ)-ನ್ನೂರು ಸೇರಬೇಕೀಗ ನಾನು!
ನಾಕಸುಖಸಾಕೆಂಬೆ ನಾನು!
(ನಾ)-ನು, ನಿರಂಜನಾದಿತ್ಯನವ್ನು!!!

ಹಚ್ಚಿಕೊಳ್ಳುವುದಕ್ಕೊಂದು ಕಾಲ! (ಬಿ)   6(4318)

-ಚ್ಚಿಕೊಳ್ಳವುದಕ್ಕಿನ್ನೊಂದು ಕಾಲ!
ಕೊಳೆ ತೊಳೆಯದಾಗುವುದಿಲ್ಲ! (ಸು)
-ಳ್ಳು, ತಟವಟದಿಂದಾನಂದಲ್ಲ! (ಸಾ)
-ವು, ನೋವು ಆತ್ಮಾರಾಮನಿಗಿಲ್ಲ!
ಶಗ್ರೀ ಸಾಯದುಳಿದಿಲ್ಲ! (ತ)
-ಕ್ಕೊಂಡದ್ದೀಯದಿದ್ರಾಗುವುದಿಲ್ಲ!
ದುರ್ಮತಿಗಿದರರಿವೇ ಇಲ್ಲ!
ಕಾಡುವನನ್ಯರನ್ಯಾಯುಷ್ಕಾಲ! (ಬಾ)
-ಲ, ನಿರಂಜನಾದಿತ್ಯ ನಿರ್ಮಲ!!!

ಹಚ್ಚಿಸಿಕೊಳ್ಳಬೇಡೀ ಹುಚ್ಚು! (ಕ)   5(2686)

-ಚ್ಚಿ ಸಾಯ್ಸಿಬಿಡುವುದೀ ಹುಚ್ಚು!
ಸಿಹಿ ಕಹಿ ಮಾಳ್ಪುದೀ ಹುಚ್ಚು!
ಕೊನೆಗಾಣಿಸಬೇಕೀ ಹುಚ್ಚು! (ಉ)
-ಳ್ಳ ಮಾನ ಕಳೆವುದೀ ಹುಚ್ಚು!
ಬೇಡವೆಂದ್ರೂ ಕಾಡ್ವುದೀ ಹುಚ್ಚು! (ಮಾ)
-ಡೀಗ್ಭಜನೆ! ಓಡ್ವುದೀ ಹುಚ್ಚು!
ಹುಸಿ ವ್ಯಾಮೋಹವೇ ಈ ಹುಚ್ಚು! (ಮೆ)
-ಚ್ಚು, ನಿರಂಜನಾದಿತ್ಯನಚ್ಚು!!!

ಹಣವಿದ್ದವ ಕೋಣನಾದರೂ ಜಾಣ! (ಹ)   6(3626)

-ಣವಿಲ್ಲದವ ಜಾಣನಾದರೂ ಕೋಣ!
ವಿದ್ಯಾ, ಬುದ್ದಿಗೆಲ್ಲಿರುವುದೀಗ ಮಾನ? (ತಿ)
-ದ್ದದಿದ್ದರೀ ಬುದ್ಧಿ ಆಗದು ಪಾವನ! (ಅ)
-ವರವ್ರ ಯೋಗ್ಯತಾನ್ಸಾರಾಗ್ಲಿ ಸನ್ಮಾನ!
ಕೋಡಗನೇರಬಾರದು ಸಿಂಹಾಸನ! (ಗ)
-ಣಗಳುದ್ಧಾರ ಮಾಳ್ಪವಗಾಗ್ಲಾ ಸ್ಥಾನ!
ನಾಶವಾಗ್ಲಿ ನಾನಾ ಜಾತಿ, ಮತ, ಮನ!
ರಿದ್ರರಿಗೂ ಇರ್ಲಿ ಹಕ್ಕು ಸಮಾನ!
ರೂಪ, ಲಾವಣ್ಯವಿರವು ಬಹು ದಿನ!
ಜಾಗ್ರತ್ಸ್ವಪ್ನದಲ್ಲೂ ಇರ್ಲಿ ಆತ್ಮಜ್ಞಾನ! (ಗು)
-ಣ ನಿರಂಜನಾದಿತ್ಯಗೆ ಪ್ರಧಾನ!!!

ಹಣಾಹಣಿಗೆ ಕಾರಣ ನೀನು ಹಣಾ! (ಕೊ)   5(2722)

-ಣಾದ್ರೂ ಜಾಣನೆನಿಪ ನಿನ್ನಿಂದ ಹಣಾ!
ಪ್ಪಳ, ಪಾಯ್ಸದೂಟ ನಿನ್ನಿಂದ ಹಣಾ! (ಗ)
-ಣಿಕಾ ವೃತ್ತಿ ಬಂತು ನಿನಗಾಗಿ ಹಣಾ! (ಬ)
-ಗೆಬಗೆಯಾಶಾಪೂರ್ತಿ ನಿನ್ನಿಂದ ಹಣಾ!
ಕಾಳಿ, ಬೋಳಿ ನ್ಯಾಯ ನಿನಗಾಗಿ ಹಣಾ! (ನ)
-ರ ಚೋರನೆನಿಸಿದ ನಿನ್ನಿಂದ ಹಣಾ! (ತೃ)
-ಣ ಸಮಾನ ಯೋಗೇಂದ್ರಗೆ ನೀನು ಹಣಾ!
ನೀನೇನು ಬಲ್ಲೆಯವನ ಗುಣ ಹಣಾ?
ನುಡಿ ನಡೆಯವನದು ಶುದ್ಧ ಹಣಾ!
ಸಿವೆ, ತೃಷೆ ಜೈಸಿಹನವ ಹಣಾ! (ಗ)
-ಣಾಧಿಪತಿ ನಿರಂಜನಾದಿತ್ಯ ಹಣಾ!!!

ಹಣ್ಣ ಮುತ್ತಿತು ಕರಿ ಇರುವೆ! [ಕ]   3(1225)

-ಣ್ಣ ಬಿಟ್ಟೇಕೆ ನೀ ನೋಡುತಿರುವೆ?
ಮುಗಿಸಲಿ ತನ್ನಾಸೆ ಇರುವೆ! (ಮ)
-ತ್ತಿನ್ಯಾರು ಗತಿಯೆಂದಾನಿರುವೆ! (ಮಾ)
-ತು, ಕಥೆ ಬಲ್ಲುದೇನಾ ಇರುವೆ?
ರ್ಮವಿದದಕೆಂದಾನಿರುವೆ! (ಅ)
-ರಿಯದಿನ್ಯಾವ ಧರ್ಮಾ ಇರುವೆ!
ರಿಸಿದವ ನಾನಾಗಿರುವೆ! (ಆ)
-ರು ನಾನೆಂದರಿಯದಾ ಇರುವೆ! (ಈ)
-ವೆ, ನಿರಂಜನಾದಿತ್ಯಾಗಿರುವೆ!!!

ಹಣ್ಣಾಗುತ್ತಾಗುತ್ತಾ ರಸ ಉಕ್ಕೀತು! (ಹ)   6(3942)

-ಣ್ಣಾದದ್ದು ತಿನ್ನತಕ್ಕದ್ದದಾದೀತು!
ಗುಣಾವಗುಣ ವಿಮರ್ಶೆಯಾದೀತು! (ಹ)
-ತ್ತಾರು ಕಣ್ಣುಗಳನ್ನಾಕರ್ಷಿಸೀತು!
ಗುಡಿಗಳಿಗೊಯ್ಯಲ್ಪಡಲಾದೀತು! (ಮ)
-ತ್ತಾರಿಗೆಲ್ಲೂ ಅದು ಸಿಕ್ಕದಾದೀತು!
ಮಾರಮಣ ಗರ್ಪಣೆಯಾದೀತು!
ರ್ವರಿಗೂ ಪ್ರಸಾದವದಾದೀತು!
ದಯಾಸ್ತದ ಸ್ತೋತ್ರ ಕೇಳಿಸೀತು! (ಸಿ)
-ಕ್ಕೀತು ನಿಜಾನಂದವಾಗ ದಕ್ಕೀತು! (ಇಂ)
-ತು ನಿರಂಜನಾದಿತ್ಯಾನಂದಾದೀತು!!!

ಹಣ್ಣು ಕಾಯಿ ತರದೇ ನಾ ಬಂದೆ! (ಕ)   4(1901)

-ಣ್ಣು ತುಂಬಾ ನಾ ನಿನ್ನ ಕಂಡೆ ತಂದೆ!
ಕಾಮ್ಯಾರ್ಥಿಯಾಗಿ ನಾನೀಗ ಬಂದೆ! (ತಾ)
-ಯಿ ನೀನಾಗಿ ಉಣಿಸೀಗ ತಂದೆ!
ಳಮಳಗೊಂಡಾನೀಗ ಬಂದೆ! (ಪ)
-ರಮಾನುಗ್ರಹ ಮಾಡೀಗ ತಂದೆ!
ದೇವರೇ ಗತಿಯೆಂದಿಲ್ಲಿ ಬಂದೆ!
ನಾನಿನ್ನೇನೂ ಹೇಳಲಾರೆ ತಂದೆ!
ಬಂಧು, ಬಳಗ ನೀನೆಂದು ಬಂದೆ! (ತಂ)
-ದೆ ನಿರಂಜನಾದಿತ್ಯ ನೀನೆಂದೆ!!!

ಹಣ್ಣು ತಿನ್ನಬೇಕೆಂದೆಣಿಸಿದೆ! (ಹೆ)   5(3276)

-ಣ್ಣು ಕೊಡುವಳದೆಂದೂಹಿಸಿದೆ!
ತಿಥಿ, ವಾರದ ಲೆಃಖ ಹಾಕಿದೆ! (ತ)
-ನ್ನ ದೇಹಸ್ಥಿತಿ ಪರೀಕ್ಷಿಸಿದೆ!
ಬೇಗ್ಬೇಗ ಕೈ ಬಾ

ಗಳ ತೊಳೆದೆ!
ಕೆಂಪೇಕೆ ಕಣ್ಣೆಂದು ಯೋಚಿಸಿದೆ! (ಹಿಂ)
-ದೆ ನೋಡದೇ ಮುಂದಕ್ಕೆ ನಡೆದೆ! (ದ)
-ಣಿದೆ, ಮಲಗಿದೆ, ನಿದ್ರಿಸಿದೆ! (ಹು)
-ಸಿಯಿದೆಲ್ಲಾ ಎಂದು ನಾ ತಿಳಿದೆ! (ಆ)
-ದೆ ನಿರಂಜನಾದಿತ್ಯ ನಾನಾದೆ!!!

ಹಣ್ಣು ತಿನ್ನುವವನಾಗು ಬಾಯಿ! (ಹೆ)   4(2072)

-ಣ್ಣು ಜಾತಿಯವ ನೀನಾಗು ಬಾಯಿ!
ತಿನ್ನುತ್ತ ತೃಪ್ತ ನೀನಾಗು ಬಾಯಿ! (ಹೊ)
-ನ್ನು ಬೇಡೆನ್ನುವವನಾಗು ಬಾಯಿ! (ದೇ)
-ವ ಭಾವ ಕೇಳ್ವವನಾಗು ಬಾಯಿ! (ಭ)
-ವ ದುಃಖ ಸಾಕೆನ್ವವ್ನಾಗು ಬಾಯಿ!
ನಾಮ ಭಜ್ನೆ ಮಾಡ್ವವ್ನಾಗು ಬಾಯಿ!
ಗುರುಗಾಗುಣ್ಣುವವ್ನಾಗು ಬಾಯಿ!
ಬಾಯ್ಮುಚ್ಚಿರುವವನಾಗು ಬಾಯಿ! (ತಾ)
-ಯಿ, ನಿರಂಜನಾದಿತ್ಯನಾಗ್ಬಾಯಿ!!!

ಹಣ್ಣುರಸ, ಬೆಣ್ಣೆ ಪುಷ್ಟಿಯಾಹಾರವಯ್ಯಾ! (ಹ)   1(256)

-ಣ್ಣುರಸ, ರೊಟ್ಟಿ ಸಹಿತನುಕೂಲವಯ್ಯಾ!
ಸದೊಡನೆ ಬೆಣ್ಣೆ ಪ್ರತಿಕೂಲವಯ್ಯಾ!
ತ್ಸಂಘವಿರಬೇಕು ತನಗೊಪ್ಪುವುದಯ್ಯಾ!
ಬೆಣ್ಣೆ ಬಿಸಿಯನ್ನದಲುಪಕಾರಿಯಯ್ಯಾ! (ಹ)
-ಣ್ಣೆನುತವೇಳೆಯಲಿ ತಿನ್ನಬಾರದಯ್ಯಾ!
ಪುರುಷ ಸ್ತ್ರೀಯರಲಾತ್ಮೀಯಾದರ್ಶವಯ್ಯಾ! (ಅ)
-ಷ್ಟಿರಲದು ಪರಮ ಸುಖಪ್ರದವಯ್ಯಾ!
ಯಾದವ ಗೋಪಿಯರೆ ವಿಶ್ವಾಸವಿದಯ್ಯಾ!
ಹಾದರದ ಆರೋಪ ಅಪಚಾರವಯ್ಯಾ!
ಸ, ವಿಷವಾಗ್ವುದವಿವೇಕದಿಂದಯ್ಯಾ!
ರ ಗುರೂಪದೇಶವಿದು ಸಾಧಕಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ
ಅಥವಾ
ಶ್ರೀ ಗುರುವಯ್ಯಾ!!!
ದತ್ತತಾನಯ್ಯಾ
ಸರ್ವಜ್ಞನಯ್ಯಾ
ಸರ್ವಾತ್ಮನಯ್ಯಾ

ಹಣ್ಣೆಂದದ್ದದ್ದು ಹೀಚೆಂಬರಿವಾಯ್ತು! (ಬೆ)   4(2163)

-ಣ್ಣೆಂದದ್ದದು ಸುಣ್ಣದ ಮುದ್ದೆಯಾಯ್ತು! (ಮಂ)
-ದಮತಿಗೆ ಬುದ್ಧಿಯಿಲ್ಲದದಾಯ್ತು! (ಕ)
-ದ್ದವಗೆ ಬಿದ್ದವನ ಸಲಾಮಾಯ್ತು!
ದುರ್ವಿಧಿಯ ಸ್ವರೂಪ ಬಯಲಾಯ್ತು!
ಹೀನನಿಗೂ ಮಾನ ಧನದಿಂದಾಯ್ತು! (ಹೀ)
-ಚೆಂಬರಿವು ಗುರುಕೃಪೆಯಿಂದಾಯ್ತು!
ಯಲಾಕಾರ ಭ್ರಾಂತ್ಯೆಂಬರಿವಾಯ್ತು! (ಅ)
-ರಿತಮೇಲದು ತಿಪ್ಪೆಯ ಪಾಲಾಯ್ತು! (ಜೀ)
-ವಾತ್ಮ, ಪರಮಾತ್ಮ ತತ್ವ ಗೊತ್ತಾಯ್ತು! (ಅ)
-ಯ್ತು ನಿರಂಜನಾದಿತ್ಯನರ್ಥವಾಯ್ತು!!!

ಹತ್ತಡಿಯಲ್ಲಿ ಹತ್ನೂರು ತುಂಬಿಸ್ಬೇಡ! (ಸು)   5(2932)

-ತ್ತಮುತ್ತಾಪ್ತರೆಂದು ಮೈ ಮರೆತಿರ್ಬೇಡ! (ಅ)
-ಡಿಗೆ ಚೆನ್ನಾಗಿದೆಂದು ಹೆಚ್ಚು ತಿನ್ಬೇಡ! (ಧ್ಯೇ)
-ಯ “ಸ್ವರೂಪಸಿದ್ಧಿ”ಯೆಂಬುದ್ಮರೆಯ್ಬೇಡ! (ಅ)
-ಲ್ಲಿ, ಇಲ್ಲಿ ಸುತ್ತಾಡಿ ಕಾಲ ಕಳೆಯ್ಬೇಡ!
ರಿನಾಮ ಸ್ಮರಣೆ ಮಾಡದಿರ್ಬೇಡ! (ತಾ)
-ತ್ನೂರೆಂದು ಸೇತ್ವೆ ಮೇಲಧಿಕಾರ ಬೇಡ! (ಮ)
-ರುಭೂಮಿಯಲ್ಲಿ ಬೀಜ ಬಿತ್ತಲೇ ಬೇಡ!
ತುಂಟರ ಸಂಗ ಮಾಡ್ಪಟೀಂಗನಾಗ್ಬೇಡ!
ಬಿರ್ಗಾಳಿಗೆ ಮುಂಚೆ ಮನೆ ಸೇರ್ದಿರ್ಬೇಡ! (ಕಾ)
-ಸ್ಬೇಕೆಂದ್ಕೂಸಿನ ಕತ್ತು ಕತ್ತರಿಸ್ಬೇಡ! (ಕೇ)
-ಡ ನಿರಂಜನಾದಿತ್ಯನಾರಿಗೂ ಮಾಡ!!!

ಹತ್ತಿಯ ಬತ್ತಿಯಾರತಿಯನೆತ್ತಿ! (ಹ)   2(791)

-ತ್ತರ ಬಂದದನೆಚ್ಚರದಿಂದೆತ್ತಿ! (ಜ)
-ಯ ಜಯ ಸೀತಾರಾಮೆಂದೆನುತೆತ್ತಿ!
ತ್ತಿ ತುಪ್ಪದಲದ್ಧಿ ಹೊತ್ತಿಸೆತ್ತಿ! (ನೆ)
-ತ್ತಿಗ ಮಂತ್ರಾಕ್ಷತೆ ಹಾಕುತದೆತ್ತಿ!
ಯಾವಾಗಲೀ ಸೇವೆ ಸಿಗಲೆಂದೆತ್ತಿ!
ಮಾರಮಣ ಗತಿ ನೀನೆಂದೆತ್ತಿ!
ತಿಥಿ, ವಾರಕ್ಕೆ ಪತಿ ನೆನೆಂದೆತ್ತಿ!
ದುನಾಥ ಗುರುನಾಥನೆಂದೆತ್ತಿ! (ಕೆ)
-ನೆ ಹಾಲು, ಸಕ್ಕರೆಯನರ್ಪಿಸುತೆತ್ತಿ! (ಎ)
-ತ್ತಿ ನಿರಂಜನಾದಿತ್ಯಗಾರತ್ಯೆತ್ತಿ!!!

ಹತ್ತೆಲೆ ನೆಕ್ಕುವ ನಾಯಿಗಾವ ಸ್ಥಾನ? (ಸ)   5(2971)

-ತ್ತೆ ಸದೆಯ ನಾರುವ ತಿಪ್ಪೆಯಾಸ್ಥಾನ! (ತ)
-ಲೆ, ಮೈಯೆಲ್ಲಾ ಹೊಲಸಮೇಧ್ಯ ವಾಸನ! (ಮ)
-ನೆ ಮನೆ ಸುತ್ತುವುದೇ ಸದಾ ಸಾಧನ! (ಇ)
-ಕ್ಕುವವರಾರಿದಕೆ ದಿವ್ಯ ಭೋಜನ?
ರ ಗುರುವಿಕ್ಕಬಲ್ಲ ಪ್ರತಿದಿನ!
ನಾಯಿಯಲ್ಲೂ ಕಾಣುವನು ತನ್ನಾತ್ಮನ! (ಬಾ)
-ಯಿಗೂ ತುರುಕುವನಾತೊಂದೊಂದು ದಿನ!
ಗಾಳಿ, ಮಳೆ ಬಂದಾಗ ಮಾಳ್ಪಾಚ್ಛಾದನ! (ಅ)
-ವನಲ್ಲಿಲ್ಲ ನೀಚೋಚ್ಚ ಭೇದಭಾವನ! (ಸ್ವ)
-ಸ್ಥಾನ ಪರಸ್ಥಾನವೆಲ್ಲಾ ತನ್ನಾಧೀನ! (ನೆ)
-ನಸಾ ನಿರಂಜನಾದಿತ್ಯ ಗುರುವನಾ!!!

ಹತ್ತೊಂಭತ್ತೆಪ್ಪತ್ತಾರರಿಂದೀ ದೇಹಕ್ಕೆಪ್ಪತ್ತು! (ಚಿ)   5(3078)

-ತ್ತೊಂದೇ ಶಾಶ್ವತವಾಗಿರುವ ಮೌಲ್ಯ ಸಂಪತ್ತು!
ಜನಾನಂದಖಂಡವಾಗಿರಬೇಕಿವತ್ತು! (ಸ)
-ತ್ತೆ ಸರ್ಕಾರೆದ್ತೇನೂ ಇಲ್ಲ ಇದಕ್ಕೆ ಯಾವತ್ತೂ! (ತು)
-ಪ್ಪ, ಸಕ್ಕರೆ, ಹಾಲಿದಕ್ಕೆ ಬೇಕಿಲ್ಲೆಂದು ಗೊತ್ತು! (ದ)
-ತ್ತಾವತಾರ ಸತೀತ್ವದ ಮಹತ್ವದಿಂದಾಗಿತ್ತು! (ವ)
-ರ ಗುರುರೂಪದಿಂದದು ಪ್ರಕಟವಾಗಿತ್ತು!
(ಯಾ)ರಿಂದಲೂ ಆಗದಿದು ತಪಸ್ಸಿನ ಮಹತ್ತು!
ದೀಪ, ಧೂಪಗಳೆಲ್ಲಾ ಶುದ್ಧ ಮನಸ್ಸಾಗಿತ್ತು!
ದೇಹಭಾವವಳಿದುನ್ನತದಲ್ಲಿ ಅದಿತ್ತು!
ರಿ, ಹರಾದಿಗಳೂ ತಲೆದೂಗುವಂತಿತ್ತು! (ಅ)
-ಕ್ಕೆ ಇದಾದರ್ಶ ಸುಖದಿಂದಿರಲು ಜಗತ್ತು! (ಹ)
-ಪ್ಪಳ, ಸೆಂಡಿಗೆಯೂಟಾನಂದವೆಲ್ಲಾ ಒಪ್ಪತ್ತು! (ಗೊ)
-ತ್ತು ನಿರಂಜನಾದಿತ್ಯ ಸಾಕ್ಷಿಯಿದಕ್ಕಾವತ್ತು!!!

ಹನಿ ಕೂಡಿ ಹಳ್ಳಮ್ಮಯ್ಯಾ!   2(599)

ನಿತ್ಯ ಧ್ಯಾನ ಮಾಡಮ್ಮಯ್ಯ!
ಕೂಲಿಗಾಗಿ ಅಲ್ಲಮ್ಮಯ್ಯಾ! (ಹಾ)
-ಡಿ ಪಾಡಿ ಭಜಿಸಮ್ಮಯ್ಯಾ!
ರಿ, ಹರರೊಂದಮ್ಮಯ್ಯಾ! (ಕ)
-ಳ್ಳರು ಆಸೆಗಾಳಮ್ಮಯ್ಯಾ! (ಒ)
-ಮ್ಮನದಿಂದೋಡಸಮ್ಮಯ್ಯಾ! (ಅ)
-ಯ್ಯಾ! ನಿರಂಜನನಮ್ಮಯ್ಯಾ!!!

ಹನುಮ ಬಾ ಮಮಾರಾಮ ಪ್ರೇಮ ಬಾ!   2(850)

ನುತಿ, ತುತಿಯಾಸೆ ನಿನಗಿಲ್ಲ ಬಾ!
ರಮರವೆಂದವನಾಪ್ತ ನೀ ಬಾ!
ಬಾ, ಬೇಗ ಬಾ, ಭಜನೆ ಮಾಡೋಣ ಬಾ!
ತ್ತೆ ಬರುವೆನೆನದೀಗಲೇ ಬಾ!
ಮಾಯೆ ಯಾವಾಗೇನು ಮಾಡುವಳೋ? ಬಾ!
ರಾಮಾನಂದ ನಿನ್ನಿಂದಾಗಬೇಕು ಬಾ!
ರ್ಕಟಾಪ್ತ ಭಕ್ತರೊಡಗೂಡಿ ಬಾ!
ಪ್ರೇಮಮೂರ್ತಿ ಮಾರುತೀ ನೀನೋಡಿ ಬಾ!
ರೆಸು ಮೈ ಭಜನೆಯಲೀಗ ಬಾ!
ಬಾ! ನಿರಂಜನಾದಿತ್ಯ ಮಿತ್ರ ನೀ ಬಾ!!!

ಹನುಮಂತನಿಗೆ ಜಾಜೀ ಮಾಲೆ! (ಭಾ)   4(1555)

-ನುಕುಲೇಶನಾಪ್ತನಿಗಾ ಮಾಲೆ!
ಮಂಗಳಮೂರ್ತಿಗಾ ಜಾಜೀಮಾಲೆ!
ತ್ವಾರ್ಥನಿರತನಿಗಾ ಮಾಲೆ!
ನಿಶ್ಚಲಾತ್ಮನಿಗ ಜಾಜೀಮಾಲೆ! (ಹ)
-ಗೆಗಳಡಗಿಪನಿಗಾ ಮಾಲೆ!
ಜಾತ್ಯಾತೀತನಿಗಾ ಜಾಜೀಮಾಲೆ! (ಸಂ)
-ಜೀವಿನಿ ತಂದವನಿಗಾ ಮಾಲೆ!
ಮಾರ್ಗದರ್ಶಕಗಾ ಜಾಜೀಮಾಲೆ! (ಲೀ)
-ಲೆ ನಿರಂಜನಾದಿತ್ಯಗಾ ಮಾಲೆ!!!

ಹನುಮನ ಬಾಲ ಬೆಳೆಯಿತು!   1(64)

ನುಡಿ, ನಡೆ ಆಗ ಹಾಳಾಯಿತು!
ರ್ಕಟನಾರ್ಭಟ ರ್ಜೊರಾಯಿತು!
ಡುಕ ಅಸುರರಿಗುಂಟಾಯಿತು!
ಬಾಣ, ಬರ್ಜಿ ಬರಿದಾದಂತಾಯ್ತು!
ಕ್ಷ್ಯಸುರರಿಗರಿಯದಾಯ್ತು!
ಬೆದರಿಕೆ ಎಲ್ಲಾ ವ್ಯರ್ಥವಾಯ್ತು! (ಉ)
-ಳೆಗಾಲವರಿಗೆ ಇಲ್ಲದಂತಾಯ್ತು!
ಯಿದರಿಂದಾಂಜನೇಯ ಹೋಗಾಯ್ತು!
ತುಡುಗರ ಜೀವ ಪೆಚ್ಚಾಯ್ತು!!!

ಹನುಮನಾಗಿ ಜಲಧಿಯ ದಾಟಿದೆನಂದು! (ಅ)   3(1355)

-ನುಪಮ ಸಾಹಸಿ ಭಕ್ತನೆನಿಸಿದೆನಂದು!
ರ್ಕಟ ಮನೋಜಯನೆಂದೆನಿಸಿದೆನಂದು!
ನಾಮ ಭಜನಾನಂದದಿ ಲಯಿಸಿದೆನಂದು!
ಗಿರಿಯ ಕಿತ್ತು ತಂದ ಧೀರನಾದೆ ನಾನಂದು!
ನಕಜಾತೆಯ ದೀನದಾಸನಾದೆನಂದು!
-ಲಯಗೊಳಿಸಿದೆ ಅಶೋಕವನವನಂದು! (ವಿ)
-ಧಿಯ ಪಾಶಕ್ಕೆ ಕಟ್ಟು ಬಿದ್ದೆ ಮೌನದಿಂದಂದು!
ಮ, ನಿಯಮಾದ್ಯಷ್ಠಾಂಗ ಯೋಗಿಯಾದೆನೆಂದು!
ದಾಶರಥಿಯ ಪ್ರಿಯ ಭಂಟನಾದೆ ನಾನಂದು! (ಭೇ)
-ಟಿ ಭರತ ಬಂಧುಗಿತ್ತೆ ಆನಂದದಿಂದಂದು! (ಸ)
-ದೆಬಡಿದಿಕ್ಕಿದೆ ರಕ್ಕಸರನ್ನು ನಾನಂದು! (ಅ)
-ನಂತ ನಾಮ ರೂಪಿಯಾಗಿಹೆನು ನಾನೆಂದೆಂದು! (ಇಂ)
-ದು ನಿರಂಜನಾದಿತ್ಯನಾಗಿಹೆ ನೋಡು ಬಂದು!!!

ಹನುಮಾನಗನುಮಾನವಿಲ್ಲ!   6(3474)

ನುಡಿ, ನಡೆಯಲ್ಲಂತರವಿಲ್ಲ!
ಮಾನಾಪಮಾನದ ಲಕ್ಷ್ಯವಿಲ್ಲ!
ಶ್ವರಕ್ಕೊಂದಿಷ್ಟು ಆಸೆಯಿಲ್ಲ!
ಗನಕ್ಕೂ ತಾ ನೆಗೆಯಬಲ್ಲ! (ತ)
-ನು, ಮನ, ಧನ, ರಾಮನಿಗೆಲ್ಲ!
ಮಾರಾರಿಯ, ಮರೆತವನಲ್ಲ! (ವಾ)
-ನರ ವೀರನಿವ ಮಹಾಮಲ್ಲ!
ವಿಧಿ ಪಟ್ಟ ಗಿಟ್ಟಿಸಿದ ಪುಲ್ಲ! (ಪು)
-ಲ್ಲ, ನಿರಂಜನಾದಿತ್ಯ ಪ್ರಪುಲ್ಲ!!!

ಹನ್ನೊಂದಾರರ್ವತ್ತಾರಿಂದು! (ನಿ)   5(2543)

-ನ್ನೊಂದು ನಿರ್ಧಾರ ಆಗ್ಲಿಂದು! (ಸ)
-ದಾತ್ಮ ಧ್ಯಾನ ಮಾಳ್ಪೆನೆಂದು! (ಪ)
-ರನಿಂದೆ ಮಾಡೆ ನಾನೆಂದು! (ಸ)
-ರ್ವರಾತ್ಮ ನನ್ನಾತ್ಮನೆಂದು! (ದ)
-ತ್ತಾತ್ರೇಯನೇ ಗುರುವೆಂದು! (ಆ)
-ರಿಂದೇನೂ ಬಯಸೆನೆಂದು! (ಅ)
-ದು, ನಿರಂಜನಾದಿತ್ಯೆಂದು!!!

ಹಪ್ಪಳ ಸೆಂಡಿಗೆ ನೀ ತಿಂದೆ! (ತ)   4(1433)

-ಪ್ಪದಾಗಿ ಬಂತು ಉರಿಗಂದೆ! (ಬ)
-ಳಸಬಾರದೆಣ್ಣೆ ನೀನೆಂದೆ! (ಆ)
-ಸೆಂಬದು ಬಹಳ ಹಾಳೆಂದೆ! (ಖಂ)
-ಡಿತ ತಿನ್ನಬೇಡಿನ್ನು ಮುಂದೆ! (ಮೈ)
-ಗೆ ಆಗದೆ ಆಗಾಗ ನೊಂದೆ!
ನೀತಿ, ನಿಯಮಗತ್ಯವೆಂದೆ!
ತಿಂದು ಕೆಟ್ಟೆನೆಂಬುದೇಕೆಂದೆ! (ತಂ)
-ದೆ ನಿರಂಜನಾದಿತ್ಯಾಗೆಂದೆ!!!

ಹಬ್ಬಕ್ಕಾದರೂ ಬರಬಾರದೇನಮ್ಮಾ? (ಒ)   6(4135)

-ಬ್ಬರಾದ್ರೂ ನೋಡಿ ಸಂತೋಷ ಪಡಲಮ್ಮಾ! (ಹ)
-ಕ್ಕಾವ ಮಕ್ಕಳಿಗೂ ಇಲ್ಲದಾಯ್ತೇನಮ್ಮಾ?
ರ್ಶನ ಕೊಡದ ತಾಯಿಯೇತಕ್ಕಮ್ಮಾ! (ಸು)
-ರೂಪಿ ನೀನೆಂದು ಕಥೆ ಹೇಳುವುದಮ್ಮಾ!
ಣ್ಣನೆ ಕಣ್ಣಿಗಾನಂದವೀಯದಮ್ಮಾ! (ಪ)
-ರವಶತೆ ರೂಪ ದರ್ಶನದಿಂದಮ್ಮಾ!
ಬಾರಮ್ಮಾ! ಶಾರದಮ್ಮಾ!! ರಾಜೇಶ್ವರಮ್ಮಾ!!!
ತ್ನದಾಭರಣ ಧರಿಸಿ ಬಾರಮ್ಮಾ!
ದೇಶದಲ್ಲೆಲ್ಲೂ ನಿನ್ನುತ್ಸವವೀಗಮ್ಮಾ!
ಶ್ವರದ ಮೇಲ್ಲಿನ್ನ ಜಂಭ ಬೇಡಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಷ್ಟವಿದಮ್ಮಾ!!!

ಹಬ್ಬದೂಟಕ್ಕೆಬ್ಬಿಸಿದಾಗೇಳಬೇಕು! [ಒ]   5(2915)

-ಬ್ಬಟ್ಟು ಪರಮಾನ್ನವೆಲ್ಲಾ ತಿನ್ನಬೇಕು!
ದೂರ ದಾರಿ ಶ್ರಮ ಪರಿಹಾರಾಗ್ಬೇಕು! (ಆ)
-ಟ ನೋಟ ಕೂಟವೆಲ್ಲಾ ಮೇಲಾಗಬೇಕು! (ಹೊ)
-ಕ್ಕೆ ಗುರುವಿನ ಮರೆಯನ್ನೆನಬೇಕು!
(ಕ)ಬ್ಬಿಣದ ಕಡಲೆಯನ್ನೂ ತಿನ್ನಬೇಕು!
ಸಿಟ್ಟು, ಪಟ್ಟು, ಬಿಟ್ಟಾನಂದದಿಂದುಣ್ಬೇಕು!
ದಾಯಾದಿ ಮತ್ಸರವೀಗಿಂದ ಬಿಡ್ಬೇಕು!
ಗೇರಂಡ ಸಂಹಿತೆಯನ್ನಾಗಾಗೊದ್ಬೇಕು! (ಒ)
-ಳಗೆ ಹೊರಗೆಲ್ಲಾ ನಿರ್ಮಲವಾಗ್ಬೇಕು!
ಬೇರೆಯವರ ದೂಷಣೆ ಬಿಟ್ಬಿಡ್ಬೇಕು!
ಕುಲ ನಿರಂಜನಾದಿತ್ಯನದ್ದಾಗ್ಬೇಕು!!!

ಹರಸಿ ಕಳುಹಿದೆನವನನ್ನಿಂದು! (ಧೀ)   4(2060)

-ರನಾಗಿ ಕಲಿತು ಮರಳಿ ಬಾರೆಂದು! (ಹ)
-ಸಿದವನಂತಿರಬೇಕು ವಿದ್ಯಾರ್ಥ್ಯೆಂದು!
ಷ್ಟಪಟ್ಟಿಷ್ಟ ಸಾಧಿಸಬೇಕ್ನೀನೆಂದು! (ಹಾ)
-ಳು ಹವ್ಯಾಸಕ್ಕೆ ಹೋಗದಿರು ನೀನೆಂದು!
ಹಿರಿಯ ಸ್ಥಾನ ಘಳಿಸಿ ಬಾ ನೀನೆಂದು! (ತಂ)
-ದೆ, ತಾಯಿಗಾನಂದ ನಿನ್ನಿಂದಾಗಲೆಂದು!
ಗುನಗುತ ಹೊರಡೀಗ ನೀನೆಂದು!
ರ ಗುರುವಿನಾಪ್ತ ಭಕ್ತನಾಗೆಂದು!
ಲ್ಲೆಯ ದುಃಖ ಶಾಂತಿ ಮಾಡು ನೀನೆಂದು! (ನ)
-ನ್ನಿಂದ ನೀನು, ನಿನ್ನಿಂದ ನಾನೆಂದಿರೆಂದು! (ಬಂ)
-ದು, ನಿರಂಜನಾದಿತ್ಯಾನಂದನಾಗೆಂದು!!!

ಹರಸಿ ಹಾಡಿಸುವವ ನೀನು! (ತ)   3(1326)

-ರತರದ ರಾಗಲಾಪ ನೀನು!
ಸಿತಾರು, ವೀಣಾ ಸಾರಂಗಿ ನೀನು!
ಹಾವ, ಭಾವ, ತಾಳ, ಮೇಳ ನೀನು! (ಹಾ)
-ಡಿ ಮೈಮರೆವ ರಸಿಕ ನೀನು!
ಸುಶ್ರಾವ್ಯ ಗೀತಾ ಸಾಹಿತ್ಯ ನೀನು!
ರ ಸಂಕೀರ್ತನಾನಂದ ನೀನು!
ರ ಗುರು ದತ್ತಾತ್ರೇಯ ನೀನು!
ನೀಲಾಕಾಶ ಸದೃಶಾತ್ಮ ನೀನು! (ನೀ)
-ನು ನಿರಂಜನಾದಿತ್ಯನಲ್ಲೇನು???

ಹರಿ ಪುರಾಣವ ಸಾಕ್ಮಾಡು! (ಹ)   5(3202)

-ರಿಕಥಾ ಶ್ರವಣವೀಗ್ಮಾಡು!
ಪುರಂಧರ ದಾಸರಂತ್ಹಾಡು!
ರಾಮ, ಕೃಷ್ಣ, ಹರಿಯೆಂದ್ಹಾಡು! (ತೃ)
-ಣ ಕಾಷ್ಟದಲ್ಲಿದ್ದಾನೆಂದ್ಹಾಡು!
ರ ಗುರು ದತ್ತನ್ಹೆಂದಾಡು!
ಸಾಧನೆ ಸತತ ಹೀಗ್ಮಾಡು! (ಏ)
-ಕ್ಮಾತೆಂದು ಬಾಯ್ಮುಚ್ಚಿ ನೀನ್ಮಾಡು! (ನೋ)
-ಡು ನಿರಂಜನಾದಿತ್ಯ ನಾಡು!!!

ಹರಿ ಭಜನೆ ಹರ್ಷವಯ್ಯೂ! (ಗು)   4(1548)

-ರಿ ಸಹಜ ಸಮಾಧಿಯಯ್ಯೂ!
ಕ್ತ, ಭಗವಂತಭೇದಯ್ಯೂ!
ನನ, ಮರಣ ಶೂನ್ಯಯ್ಯೂ! (ಮ)
-ನೆ, ಮಠವೆಲ್ಲಾಲಯವಯ್ಯೂ!
ತ್ತವತಾರ ನಿತ್ಯವಯ್ಯೂ! (ಘ)
-ರ್ಷಣೆಗವಕಾಶವಿಲ್ಲಯ್ಯೂ!
ರ ಗುರುಕೃಪೆಯಿಂದಯ್ಯೂ! (ಅ)
-ಯ್ಯೂ, ಶ್ರೀ ನಿರಂಜನಾದಿತ್ಯಯ್ಯೂ!!!

ಹರಿ, ಹರ, ಕುಮಾರರೆನ್ನ ಲೇಖನಿ! [ಸು]   3(1161)

-ರಿಸುವುದು ಧ್ಯಾನಮಿಂಚಾ ಲೇಖನಿ! (ಅ)
-ಹರ್ನಿಶಿ ವಿರಾಮವಿಲ್ಲದಾ ಲೇಖನಿ! (ವ)
-ರಮೃತಪಾನ ಮಾಡಿಸುವಾ ಲೇಖನಿ! (ವ್ಯಾ)
-ಕುಲ ನಿರ್ಮೂಲಗೊಳಿಸುವಾ ಲೇಖನಿ!
ಮಾರನಾಟ ಸುಟ್ಟು ಹಾಕುವಾ ಲೇಖನಿ! (ವ)
ರಾಮನಾಮ ಬರೆಯುವಾ ಲೇಖನಿ! (ಧ)
-ರೆಯ ಕಲ್ಯಾಣಕ್ಕಿದಾದರ್ಶ ಲೇಖನಿ! (ನ)
-ನ್ನ, ನಿನ್ನೆಂಬಹಂಕಾರ ಬಿಟ್ಟಾ ಲೇಖನಿ!
ಲೇಸಿದೇ ಚಿರಕಾಲವಿರ್ಪಾ ಲೇಖನಿ! (ಸು)
-ಖ, ದುಃಖವೇಕರಸ ಗೈವಾ ಲೇಖನಿ!
ನಿತ್ಯ ಶ್ರೀ ನಿರಂಜನಾದಿತ್ಯಾ ಲೇಖನಿ!!!

ಹರಿಕೆ ಹೊತ್ತು ಹರಸಿಕೊಳ್ಳಬೇಕೇನು? (ಹ)   3(1258)

-ರಿನಾಮ ಸ್ಮರಣೆಗವನೊಲಿಯನೇನು?
ಕೆಟ್ಟು ಹೋಗುವುದಾ ದೇವನಿಗಿಷ್ಟವೇನು?
ಹೊಟ್ಟೆಗಿಕ್ಕಿ ಕಕ್ಕಿಸುವುದು ನ್ಯಾಯವೇನು? (ಅ)
-ತ್ತು, ಕಾಡಿ, ಬೇಡೀ ಒಡಲ ಸಾಕಬೇಕೇನು?
ರಿಯೇ, ತಾಯಿ ತಂದೆಯೆಂಬುದು ಸುಳ್ಳೇನು? (ತೋ)
-ರ ಬೇಕವನಾಗಿ ಕರುಣೆಯಲ್ಲವೇನು?
ಸಿಟ್ಟವಗಿಲ್ಲೆಂಬುದು ಸತ್ಯವಲ್ಲವೇನು?
ಕೊಳೆಯವನೇ ತೊಳೆಯ ಬೇಕಲ್ಲವೇನು? (ಹ)
-ಳ್ಳಕ್ಕೆ ತಳ್ಳಿ ಕೊಲ್ಲುವುದಧರ್ಮವಲ್ಲವೇನು?
ಬೇಕಾದಂತರಿಸಿ ಕೊಳ್ಳಲೆಂದಿರ್ಪೆ ನಾನು!
ಕೇಳಲೂ, ಹೇಳಲೂ ಶಕ್ತನಾಗಿಲ್ಲ ನಾನು! (ಅ)
-ನುಪಮಾತ್ಮ ನಿರಂಜನಾದಿತ್ಯನವನು!!!

ಹರಿದಾಸನಾಗಬೇಕಯ್ಯಾ! (ಅ)   2(569)

-ರಿ ದಾಸ್ಯ ಹರಿಯಬೇಕಯ್ಯಾ! (ಅ)
ಅಥವಾ
-ರಿಗಳಾರ ಜೈಸಬೇಕಯ್ಯಾ!
ದಾರಿ ನೇರಾಗಿರಬೇಕಯ್ಯಾ!
ರ್ವ ಪರಿತ್ಯಾಗ ಬೇಕಯ್ಯಾ!
ನಾಮವೊಂದೇ ಇರಬೇಕಯ್ಯಾ!
ತಿ ಮುಕ್ತಿಗಾಗಬೇಕಯ್ಯಾ!
ಬೇರೆ ಮಾತು ಬಿಡಬೇಕಯ್ಯಾ!
ರ್ಮ, ಧರ್ಮವಿರಬೇಕಯ್ಯಾ! (ಅ)
-ಯ್ಯಾ! ನಿರಂಜನನಾ ದಾಸಯ್ಯಾ!!!

ಹರಿಭಕ್ತಿ ಸಾರ ಕುಡಿಯಯ್ಯಾ! (ಪ)   4(1653)

-ರಿಹಾರವಾಗ್ವುದೆಲ್ಲಾ ರೋಗಯ್ಯಾ!
ವಬಂಧ ಹರಿಯುವುದಯ್ಯಾ! (ಭು)
-ಕ್ತಿ ಮುಕ್ತಿಗಿದುತ್ತಮ ಪಾನಯ್ಯಾ!
ಸಾಧನೆ ಸದಾ ಸಾಗಬೇಕಯ್ಯಾ! (ವ)
-ರ ಗುರುಸೇವೆ ಅತ್ಯಗತ್ಯಯ್ಯಾ!
ಕುಮಾರ್ಗಗಾಮಿಯಾಗ್ಬಾರದಯ್ಯಾ! (ಅ)
-ಡಿಗಡಿಗೆ ಭಜನೆ ಮಾಡಯ್ಯಾ!
ಜ್ಞವಿದಜ್ಞಾನ ನಾಶಕ್ಕಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾ ಯೋಗಯ್ಯಾ!!!

ಹರಿಭಜನೆಯಿಂದುಂಟಾಯ್ತು ಶಾಂತಿ! [ಅ]   4(2298)

-ರಿಭಯದಿಂದ ಪಾರಾಗೀಗ ಶಾಂತಿ!
ಕ್ತೋತ್ತಮರ ಸಂಗದಿಂದ ಶಾಂತಿ!
ಗದ ವ್ಯಾಪಾರ ಬಿಟ್ಟೀಗ ಶಾಂತಿ! (ಮ)
-ನೆಮನೆಯಲೆದಾಟ ತಪ್ಪಿ ಶಾಂತಿ! (ನಾ)
-ಯಿಂದನ ಹಂಗಿನ್ನೇನೆಂದೀಗ ಶಾಂತಿ!
ದುಂಬು ಹೋಗಿ ಸ್ವಚ್ಛವಾಗೀಗ ಶಾಂತಿ! (ಬೂ)
-ಟಾಟಿಕೆಯ ಬಾಳಳಿದೀಗ ಶಾಂತಿ! (ಕಾ)
-ಯ್ತು ಗುರುಕೃಪೆಯೆಂದರಿತು ಶಾಂತಿ! (ಆ)
-ಶಾಂಕುರಿಸದಂತಾದುದರಿಂದ ಶಾಂತಿ! (ಪ್ರೀ)
-ತಿ ನಿರಂಜನಾದಿತ್ಯ ತೋರಿ ಶಾಂತಿ!!!

ಹರಿಯ ಸೇವೆಗಣಿಯಾಗೋ! [ಅ]   5(2874)

-ರಿತಾತ್ಮಾನುಭವಿ ನೀನಾಗೋ!
(ಕಾ)ಯಕ್ಲೇಶಕ್ಕಂಜದವನಾಗೋ!
ಸೇಡು ಬುದ್ಧಿ ಗೆದ್ದವನಾಗೋ! (ಸ)
-ವೆದು ಸಂಚಿತ ಶುದ್ಧನಾಗೋ!
ಗನ ಸದೃಶ ನೀನಾಗೋ! (ತ)
-ಣಿದ ಕೆಂಡದಂತೆ ನೀನಾಗೋ!
ಯಾಗ ಪೂರೈಸಿದವನಾಗೋ! (ಆ)
-ಗೋ, ನಿರಂಜನಾದಿತ್ಯನಾಗೋ!!!

ಹರಿವ ಹೊಳೆಗೆ ಮಳೆಯೇ ಬೇಕಯ್ಯಾ! (ಬ)   2(949)

-ರಿವ ಕೈಗೆ ವಿಚಾರಧಾರೆ ಬೇಕಯ್ಯಾ!
ಸುಧೆಗೆ ಸತ್ಪುತ್ರರಿರ ಬೇಕಯ್ಯಾ!
ಹೊಳಪಿಗೆ ನಿರ್ಮಲ ನೆಲ ಬೇಕಯ್ಯಾ! (ಮ)
-ಳೆಗೆ ಶೀತಲ ಗಾಳಿ ಬೀಸಬೇಕಯ್ಯಾ! (ಮಿ)
-ಗೆ ಶಾಂತಿಗೆ ಸಂತೃಪ್ತಿಯಿರಬೇಕಯ್ಯಾ!
ನದೇಕಾಗ್ರತೆಗೆ ಜಪ ಬೇಕಯ್ಯಾ! (ವೇ)
-ಳೆ ಕಳೆಯಲಿಕೆ ಸತ್ಸಂಗ ಬೇಕಯ್ಯಾ! (ಛಾ)
-ಯೇಶ್ವರಗೆ ವಿಮಲಾಕಾಶ ಬೇಕಯ್ಯಾ!
ಬೇಗುದಿಯನ್ನಕ್ಕೆ ಮುಚ್ಚಳ ಬೇಕಯ್ಯಾ!
ರ್ಮಕ್ಕೆ ಧರ್ಮನಿಷ್ಠೆಯಿರಬೇಕಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾನಂದ ಬೇಕಯ್ಯಾ!!!

ಹರಿಹರ ಭಾರತಿಯಪ್ಪಾ! (ಹ)   2(953)

-ರಿನಾಮ ಹರಡಿದನಪ್ಪಾ!
ಗಲಿರುಳೊಂದೇ ಸಮಪ್ಪಾ! (ವ)
-ರಗುರು ಭಕ್ತನವನಪ್ಪಾ!
ಭಾಗವತ ಶಿರೋಮಣ್ಯಪ್ಪಾ! (ಸ)
-ರಳಸ್ವಭಾವಿಯವನಪ್ಪಾ!
ತಿರುಗಾಡಿದ ನೂರೂರಪ್ಪಾ!
ಮಪಿತನಾಪ್ತವನಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯೆಂಬಪ್ಪಾ!!!

ಹಲಗೆ ಬಳಪವೆನ್ನ ಸಂಗಾತಿ! (ಕಾ)   4(1841)

-ಲ ಕಳೆಯಲಿಕ್ಕೆನಗಾ ಸಂಗಾತಿ! (ಬ)
-ಗೆಬಗೆಯೋಪದೇಶಾತ್ಮಾ ಸಂಗಾತಿ!
ರಡು ಮಾತುಗಳಾಡಾ ಸಂಗಾತಿ!(ಭಾ)
-ಳನೇತ್ರನ ಕೊಂಡಾಡುವಾ ಸಂಗಾತಿ!
ರನಿಂದೆ ಮಾಡದಿರ್ಪಾ ಸಂಗಾತಿ! (ನೋ)
-ವೆನಗೇನಿಲ್ಲವೆಂದಿರ್ಪಾ ಸಂಗಾತಿ! (ಉ)
-ನ್ನತದ ಆತ್ಮ ನಾನೆಂಬ ಸಂಗಾತಿ!
ಸಂದೇಹವೆಳ್ಳಷ್ಟಿಲ್ಲದಾ ಸಂಗಾತಿ! (ಆ)
-ಗಾಗ ಶೂನ್ಯನಾಗಿರುವಾ ಸಂಗಾತಿ! (ಪ)
-ತಿ ನಿರಂಜನಾದಿತ್ಯಾತ್ಮಾ ಸಂಗಾತಿ!!!

ಹಲಗೆಗಳನೇಕಕ್ಕೊಂದು ಬಳಪ!   6(4224)

ಕ್ಷ್ಯವಿಲ್ಲದೇ ಬರೆವುದಾ ಬಳಪ!
ಗೆರೆ, ರೂಪಾದಿಗಳಾಗರಾ ಬಳಪ!
ರ್ವಿ ನಿಗರ್ವಿಯೆನಿಪುದಾ ಬಳಪ! (ಆ)
-ಳ ತನ್ನದನ್ನು ಅರಿಯದಾ ಬಳಪ!
ನೇಮ, ನಿಷ್ಠೆನಗಿಲ್ಲೆಂಬುದಾ ಬಳಪ!
ತ್ತಲೆಯಲ್ಲೂ ಬರೆವುದಾ ಬಳಪ! (ಹೊ)
-ಕ್ಕೊಂದೆಡೆ ಬಿದ್ದಿರಬಲ್ಲುದಾ ಬಳಪ!
ದುರ್ಮತಿ, ಸುಮತಿಗಳ್ಗಿಷ್ಟಾ ಬಳಪ!
ರೆಸಿದಂತೆ ಬರೆವುಡಾ ಬಳಪ! (ತ)
-ಳಮಳಗೊಳ್ಳದಿರುವುದಾ ಬಳಪ! (ನೆ)
-ಪ, ಬಳಪ ನಿರಂಜನಾದಿತ್ಯಾಧಿಪ!!!

ಹಲವಂಗಗಳ ದೇಹವೇ ಸರ್ಕಾರ!   5(3279)

ಕ್ಷ್ಯವದರದು ಸತ್ಯ ಸಾಕ್ಷಾತ್ಕಾರ!
ವಂಚನೆ ಎಳ್ಳಷ್ಟಾದರೂ ಗಂಡಾಂತರ!
ಣಿಕಾ ಬುದ್ಧಿಯಿಂದಾಗ್ವುದು ವಿಕಾರ!
ಟ್ಟಿ ಮನಸ್ಸಿಂದ ಮೂಡ್ಬೇಕ್ಸದಾಚಾರ! (ಬ)
-ಳಕೆಯಲ್ಲಿರಬಾರ್ದು ದುರ್ವ್ಯವಹಾರ!
ದೇಹದ ವಿನಾಶಕ್ಕೆ ಇದಸ್ತಿವಾರ!
ದಗೆಡಬಾರದುಸಿರುಸಂಚಾರ!
ವೇಳಾವೇಳೆ ನೋಡಿಕ್ಬೇಕುತ್ತಮಾಹಾರ!
ದ್ಬುದ್ಧಿಗಾಗಿರಬೇಕು ಸಮಾಚಾರ! (ಸ)
-ರ್ಕಾರ ಹೀಗಿದ್ದರೆ ಸರ್ವರ ಉದ್ಧಾರ! (ವ)
ಗುರು ನಿರಂಜನಾದಿತ್ಯ ನೇತಾರ!!!

ಹಲವರ ನೀತಿ, ರೀತಿ ಒಂದಾದ್ರದೇ ಸಂಘ!   6(3368)

ಭ್ಯವಾಗುವುದಾಗ ಪರಸ್ಪರ ಸತ್ಸಂಗ!
ರದರಾಜನ ಮಕ್ಕಳಿಗಿದೊಂದು ರಂಗ!
ಕ್ಕಸರೊಡನಾಟದಿಂದಕ್ಕು ತೇಜೋಭಂಗ!
ನೀರಮೇಲಿನ ಗುಳ್ಳೆಯಂತಸ್ಥಿರ ರಾಜ್ಯಾಂಗ!
ತಿಳಿದಿದನು ಬಹುದೂರವಿರ್ಪಾ ಸಾರಂಗ!
ರೀತಿಯಿವನದಿದಕಂಜಿಹನು ಅನಂಗ!
ತಿತಿಕ್ಷೆಯಿಂದ ಸಿದ್ಧಿ, ರಾಜಯೋಗದಷ್ಟಾಂಗ!
ಒಂದರಿಂದ ಉಂಟಾಗಿರುವುದು ನಾನಾ ಅಂಗ!
ದಾರಿ ವಿವಿಧ ಆಗುವುದಕ್ಕೆ ಶಿವಲಿಂಗ!
(ಭ)-ದ್ರವಾಗಿರಿಸಬೇಕು ವೀರ್ಯ ಮಾನವನಂಗ!
ದೇಶಭಕ್ತರಿಗಿರ್ಬಾರದಧಿಕ ಪ್ರಸಂಗ!
ಸಂವಿಧಾನ ಮಾಡ್ಬಾರದು ಸ್ಥಾನ, ಮಾನ, ಭಂಗ!
ರ್ಷಣಾತೀತ ನಿರಂಜನಾದಿತ್ಯ ರಾಜ್ಯಾಂಗ!!!

ಹಲವು ಮಾತೇಕೆನಗೆ ಬೇಕವನೊಲಿಮೆ!   1(173)

ಕ್ಷ್ಯವೆನಗಿಲ್ಲಿತರ ಹವ್ಯಾಸದುಡಿಮೆ!
ವುಪೇಕ್ಷೆಯಪೇಕ್ಷೆಯಳಿದರವನ ಒಲಿಮೆ!
ಮಾನಾಪಮಾನವೆಲ್ಲರೆಕ್ಷಣದ ದುಡಿಮೆ!
ತೇಜೋರಾಶಿ ಸೂರ್ಯನದು ಇರಲಿ ಒಲಿಮೆ!
ಕೆಡಿಸುವುದಿಡಿಸುವುದವನ ದುಡಿಮೆ!
ತನಾಗಿರಲಾಗದಿರದವನೊಲಿಮೆ!
ಗೆಲುವು, ಸೋಲಿನ ಬದುಕವನ ದುಡಿಮೆ!
ಬೇರೇನು ಬೇಡೆನಗೆ, ಇರಲವನೊಲಿಮೆ!
ನಿಕರ ತೋರಿಸುವುದವನ ದುಡಿಮೆ!
ರಪ್ರಾಸಾದವೆಲ್ಲಾ ಅವನದೇ ಒಲಿಮೆ!
ನೊರೆಹಾಲು ನಿತ್ಯಸುಖ ಅವನ ಒಲಿಮೆ!
ಲಿಪಿ, ಪ್ರಾರಬ್ಧಾದಿಗಳೆಲ್ಲವನ ದುಡಿಮೆ!
ಮೆಚ್ಚಿಹೆನು ನಿರಂಜನಾದಿತ್ಯನ ಒಲಿಮೆ!!!

ಹಲವು ಹೊಲಗಳೊಡೆಯ ನೀನು! (ಫ)   5(3048)

-ಲವೇನು ದುಡಿದು, ಮಡಿದು ನಾನು? (ತಾ)
-ವು ಠಿಕಾಣಿಯಿಲ್ಲದಂತಾದೆ ನಾನು!
ಹೊಸ ಹೊಸ ಮಂದಿರವಾಸಿ ನೀನು!
ಕ್ಷ್ಯ ನಿನ್ನಲ್ಲಿಟ್ಟಿಲ್ಲವೇನು ನಾನು?
ತಿಗೆಡಿಸಿಹೆ ನನ್ನನ್ನು ನೀನು! (ಕೂ)
-ಳೊಪ್ಪತ್ತೂ ಕಾಣದೊಣಗಿದೆ ನಾನು! (ಕೊ)
-ಡೆ ಹಿಡಿದೆಳೆದೆ ನೆಲವ ನೀನು! (ಭ)
-ಯದಿಂದ ಬಾಯಿ ಬಿಡದಿದ್ದೆ ನಾನು!
ನೀತಿಯಿದು ನಿನಗೆ ಸರಿಯೇನು? (ನಾ)
-ನು ನಿರಂಜನಾದಿತ್ಯನಲ್ಲವೇನು???

ಹಲಸಿನ ಹಣ್ಣು, ಮಾವಿನ ಹಣ್ಣು! [ಬ]   4(2367)

-ಲವರ್ಧಕ, ಜೀರ್ಣಕಾರಕಾ ಹಣ್ಣು!
ಸಿಹಿ ಹುಳಿಯ ಮಿಶ್ರ ರುಚಿಯಾ ಹಣ್ಣು! (ಜ)
-ನರಿಗೆ ಬಹು ಪ್ರಿಯಕರಾ ಹಣ್ಣು!
ಕ್ಕಿ, ಪಕ್ಕಿಗಳಿಗೂ ಬೇಕಾ ಹಣ್ಣು! (ಉ)
-ಣ್ಣುವ ಶಾಖ, ಪಾಕಕ್ಕೂ ಯೋಗ್ಯಾ ಹಣ್ಣು!
ಮಾರಾಟಕ್ಕೂ ಬರುವವೆಲ್ಲಾ ಹಣ್ಣು!
ವಿಕ್ರಯವಾಗುವುವು ಬೇಗಾ ಹಣ್ಣು! (ಮ)
-ನಕ್ಕಾಕರ್ಷಣೆಯವೆರಡೂ ಹಣ್ಣ!
ರಿ, ಹರಾದಿಗಳ್ಗೂ ಇಷ್ಟಾ ಹಣ್ಣು! (ಹ)
-ಣ್ಣು ನಿರಂಜನಾದಿತ್ಯಾನಂದಾ ಹಣ್ಣು!!!

ಹಲ್ಲಿಲ್ಲದ ಬಾಯ್ಗಲ್ಲ ಕಡಲೆ! (ಅ)   6(4357)

-ಲ್ಲಿಲ್ಲಲೆಯುವವಗಲ್ಲ ಬೆಲೆ! (ಗೊ)
-ಲ್ಲ ಗೋಪಾಲನಿಗಿತ್ತೊಂದು ನೆಲೆ!
ಮನಗೈದನು ವಿಷಜ್ವಾಲೆ!
ಬಾಲಕೃಷ್ಣನದ್ದದ್ಭುತ ಲೀಲೆ! (ತಾ)
-ಯ್ಗರುಳ್ಕಂಡಿದಾಯ್ತಾನಂದ ಲೋಲೆ! (ಬ)
-ಲ್ಲನಿವ ವಶೀಕರಣ ಕಲೆ!
ತ್ತಲೆಯಲ್ಲೋಡಿ ಬಂದಳಬಲೆ! (ಮ)
-ಡದಿಯಾದಳವನಿಗಾಮೇಲೆ! (ಲೀ)
-ಲೆ ನಿರಂಜನಾದಿತ್ಯಗೆ ಕಲೆ!!!

ಹಲ್ಲೊಂದಲ್ಲಾಡುತಿದೆ ವಸಡಿನಲ್ಲಿ! (ಇ)   5(2917)

-ಲ್ಲೊಂದಲ್ಲೊಂದು ಹುಳ್ಕೂ ಇದೆ ಬಳಿಯಲ್ಲಿ! (ಅ)
-ದರಾಯುಷ್ಯವಿನ್ನೂ ಮುಗಿದಿಲ್ಲ ಅಲ್ಲಿ!
(ಎ)ಲ್ಲಾ ಗುರುಚಿತ್ತವೆನಬೇಕು ನಾವಿಲ್ಲಿ! (ಗು)
-ಡುಗಿದ್ರೂ ಮಳೆಯಾಗದಿರ್ಪುದೇಕಿಲ್ಲಿ?
ತಿಳಿ! ಅವನಿಗೀಗಿಷ್ಟವಿಲ್ಲೆಂದಿಲ್ಲಿ!
ದೆವ್ವಗಳ ಸ್ವಭಾವ ಕಿರ್ಕುಳಲ್ಲಿಲ್ಲಿ!
ರ ಗುರುಭಕ್ತರಂಜುವುದೇಕಿಲ್ಲಿ?
ದಾ ನಾಮಸ್ಮರಣೆಯಾಗ್ಬೇಕೆಲ್ಲೆಲ್ಲಿ! (ಓ)
-ಡಿ ಬಹುದೂರ ಮಡಿವವೆಲ್ಲಾ ಅಲ್ಲಿ!
ರರಿದನರಿತು ಬಾಳ್ಬೇಕೆಲ್ಲೆಲ್ಲಿ! (ನಿ)
-ಲ್ಲ ನಿರಂಜನಾದಿತ್ಯಾತ್ಮ ಧ್ಯಾನದಲ್ಲಿ!!!

ಹಲ್ಲೊಂದೊಂದೇ ಬಿದ್ದು ಹೋಗುತ್ತಿದೆ! (ಎ)   4(1960)

-ಲ್ಲೊಂದೆಂಬುದಿನ್ನೂ ತಿಳಿಯದಿದೆ!
ದೊಂಬಿ, ದರೋಡೆಯಿನ್ನೂ ಸಾಗಿದೆ!
ದೇಶ ಸುತ್ತುವಾಸೆ ಹೆಚ್ಚಾಗಿದೆ!
ಬಿರುಗಾಳಿ ಸಹಿಸದಾಗಿದೆ! (ತಿ)
-ದ್ದುಪಾಡು ಬಾಳಲ್ಲಿಲ್ಲದಾಗಿದೆ!
ಹೋಗುವ ದಿನರಿಯದಾಗಿದೆ!
ಗುರುಕೃಪೆಯಿನ್ನೂ ಬಾರದಿದೆ! (ಬು)
-ತ್ತಿಯನ್ನ ಮುಗಿಯುತ್ತಾ ಬಂದಿದೆ! (ತಂ)
-ದೆ ನಿರಂಜನಾದಿತ್ಯಾ! ಬಾ ಮುಂದೆ!!!

ಹಳಬ ನಿನ್ನನ್ಯಾರು ಲಕ್ಷಿಪರಯ್ಯಾ? (ಆ)   6(3937)

-ಳ ನಿನ್ನದನ್ನರಿತವರಿಲ್ಲವಯ್ಯಾ!
ಹು ಗುಟ್ಟಾಗಿಟ್ಟಿಹೆ ನಿನ್ನ ನೀನಯ್ಯಾ!
ನಿಶ್‍, ದಿನ ಜಾಗೃತ್ಸ್ಥಿತಿ ನಿನಗಯ್ಯಾ! (ಉ)
-ನ್ನತಿ ನಿನ್ನಿಂದಾಗಬೇಕೆಲ್ಲರಿಗಯ್ಯಾ!
ನ್ಯಾಯಾನ್ಯಾಯ ಬಲ್ಲವ ನೀನೊಬ್ಬನಯ್ಯಾ!
ರುಜುಮಾರ್ಗಾವಲಂಬಿ ನೀನೆಂಬೆನಯ್ಯಾ!
ಯ, ಸೃಷ್ಟಿ, ಸ್ಥಿತಿ ಎಲ್ಲಾ ನಿನ್ನಿಂದಯ್ಯಾ! (ದ)
-ಕ್ಷಿಣಾಮೂರ್ತಿ ನೀನಲ್ಲದಿನ್ಯಾರೆನ್ನಯ್ಯಾ?
ರಮೇಶ್ವರ ಪರಮಾತ್ಮ ನೀನಯ್ಯಾ! (ತ)
-ರಳರ ತಪ್ಪೊಪ್ಪು ಮಾಡ್ಯಪ್ಪಿಕೊಳ್ಳಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯ ಶಿವ ನೀನಯ್ಯಾ!!!

ಹಳಸಲನ್ನಕ್ಕೂ ಹಸಿದನಾಯಿಗೂ ಗಂಟು! (ಬಾ)   6(4374)

-ಳ ಮೇಳದಲ್ಲಿ ಇಂಥಾರೂಢಿ ಅನೇಕ ಉಂಟು!
ರ್ವೆಶ್ವರನಾಟಕ್ಕಾರದೇನಾತಂಕ ಉಂಟು?
ಕ್ಷಾಧಿಪತಿ ಭಿಕ್ಷಾಧಿಪತಿಯಾದದ್ದುಂಟು! (ತ)
-ನ್ನ ಸತಿ, ಸುತರಿಂದ ವಂಚಿತನಾದದ್ದುಂಟು! (ಒ)
-ಕ್ಕೂಟ ಮುಕ್ಕೋಟಿ ನುಚ್ಚು ಚೂರುಚೂರಾದದ್ದುಂಟು!
ಗಲಿರುಳುಗಳ ಹೋರಾಟ ಉಂಟೇ ಉಂಟು!
ಸಿದ್ಧನಿಗೆ ಸಿಕ್ಕಿದುದರಲ್ಲಿ ತೃಪ್ತಿಯುಂಟು!
ತ್ತ ದರ್ಶನವೇ ಅವನಿಗಮೌಲ್ಯಗಂಟು!
ನಾಸ್ತಿಕಗಿರುವುದೆಲ್ಲಾ ಬರೀ ಗಾಳಿಗಂಟು! (ಬಾ)
-ಯಿ ಬೊಗಳೆ ಹೆಚ್ಚಾದರಾಗುವುದುಕಾಲ್ಕುಂಟು!
ಗೂಢವಿದರಿತು ಬಾಳಿದರೆ ಸುಖವುಂಟು!
ಗಂಗಾಧರೇಶ್ವರ ತಾನಾಗುವಲಭ್ಯವುಂಟು! (ಉಂ)
-ಟ್ಟು, ನಿರಂಜನಾದಿತ್ಯಾನಂದಾಗಲಿಕ್ಕುಂಟು!!!

ಹಳೆಯ ಕಥೆಗಿಳೆಯಲ್ಲಿಲ್ಲ ಬೆಲೆ! (ಹೊ)   6(4151)

-ಳೆವ ವಿಜ್ಞಾನಕ್ಕೀಗ ಬಹಳ ಬೆಲೆ!
ಜ್ಞ, ಯಾಗಕ್ಕೂ ತಪ್ಪಿಹುದೇಗ ನೆಲೆ!
ರ್ಮ ಭ್ರಷ್ಟರಿಂದ ಈಗೆಲ್ಲೆಲ್ಲೂ ಕೊಲೆ! (ಕ)
-ಥೆ ಕಟ್ಟಿ ಕೆಡೆಪರುತ್ತಮರ ಬೆಲೆ!
ಗಿರಿಜನೋದ್ಧಾರೆಂದಾಳ್ವುದೊಂದು ಕಲೆ (ಕೊ)
-ಳೆ ತುಂಬಿಹುದು ತಮ್ಮ ತಲೆಯ ಮೇಲೆ!
ಮ, ನಿಯಮ ಜನಕ್ಕೆ ತಲೆ ಶೂಲೆ! (ಎ)
-ಲ್ಲಿ ನೊ

ಡಿದರೂ ಸಮಾಜೋನ್ನತಿ ಶಾಲೆ! (ಬ)
-ಲ್ಲವರ ಮೇಲಿಲ್ಲಿ ನಿಂದಾ ಸುರಿಮಳೆ!
ಬೆಳೆವ ಮಕ್ಕಳಿಗಿರ್ಬೇಕ್ತಾಯ್ಸು ಶೀಲೆ! (ಬಾ)
-ಲೆ ಶ್ರೀ ನಿರಂಜನಾದಿತ್ಯಮ್ಮ ಸುಶೀಲೆ!!!

ಹಳೆಯ ನಾಮ ಹೊಸ ರೂಪಿನಲ್ಲಿಂದು! (ತ)   5(2761)

-ಳೆವುದಿದು ನಾನಾ ರೂಪಗಳ ಮುಂದು! (ಸಾ)
-ಯದುಳಿಯುವುದಾತ್ಮಾರಾಮವೆಂದೆಂದು!
ನಾಶವಪ್ಪ ರೂಪ ನಂಬಬೇಡೆಂದೆಂದು!
ನಕಾ ಸತ್ಯದರಿವಾಗಬೇಕಿಂದು!
ಹೊಡೆದಾಟ ಹೊಟ್ಟೆ, ಬಟ್ಟೆಗಾಗಿ ಇಂದು!
ರಕಾರದ ಕೈ ಬಲಹೀನವಾಯ್ತಿಂದು!
ರೂಢಿಯಾಯ್ತೀಂದ್ರಿಯ ವಿಷಯ ವೃತ್ತಿಂದು!
ಪಿಸುಣರಿಗಗ್ರ ಸ್ಥಾನ, ಮಾನವಿಂದು!
ಟ, ವಿಟರಿಗೆ ಸನ್ಮಾನೆಲ್ಲೆಲ್ಲಿಂದು! (ಎ)
-ಲ್ಲಿಂದೆಲ್ಲಿಗೆ ಯಾತ್ರೆಂಬರಿವಿಲ್ಲ ಇಂದು! (ಇ)
-ದು ನಿರಂಜನಾದಿತ್ಯಗರಿವೆಂದೆಂದು!!!

ಹಳೆಯ ಮಲವೀಗಿನ ತಲೆ ಭಾರ! (ಅ)   1(168)

-ಳೆಯದನೀಗ, ಕುಡಿ ಬೇದ್ಯುಪ್ನೀರ!
ತಿ, ಗಣ, ಪ್ರಾಸ, ನೇಮ, ಛಂದಸ್ಸಾರ!
ತಿಗೆಡಿಸಬೇಡೀಗದಕಪಾರ!
ಯವಾಗಿ ಬರೆದರು ಹೀಗೆಂತಾರ?
ವೀತರಾಗನಾಗೆಂಬಾ ಗಾವಿಲ ಧೀರ!
ಗಿರಿ ಮನವಿರದಹನೇ ಗಂಭೀರ!
ಡೆ, ನುಡಿಯೊಂದಾಗ್ವುದೇ ಗೀತಾಚಾರ!
ತ್ವವಿದರಿತೀಗುಳುದವ ಶೂರ! (ಅ)
-ಲೆದಾಡಿ ಬೇಸತ್ತಾಗ್ವುದೇನುಪಕಾರ? (ಆ)
-ಭಾಸದ ಬಾಳು ಸಾಕಯ್ಯ! ಸಹೋದರ!
“ರವಿ ರಸಾಯನ” ನಿರಂಜನ ಸಾರ!!!

ಹಳೆಯ ರೊಟ್ಟಿ ಕೊಟ್ಟು ಬಿಟ್ಟ! (ಇ)   4(1721)

-ಳೆಯ ಮೋಹ ಹುಟ್ಟಿಸಿ ಬಿಟ್ಟಿ! (ಭ)
-ಯ, ಭ್ರಾಂತಿಗಳ ಜೋಡ್ಸಿಬಿಟ್ಟಿ! (ಊ)
-ರೊಡೆಯನ ಮರೆಸಿ ಬಿಟ್ಟಿ! (ಗು)
-ಟ್ಟಿನಲ್ಲೆಲ್ಲವನ್ನಿಟ್ಟು ಬಿಟ್ಟಿ!
ಕೊರತೆಯೇನಿದೆಂದು ಬಿಟ್ಟಿ! (ಜು)
-ಟ್ಟು ಹಿಡಿದು ಕೂರಿಸಿ ಬಿಟ್ಟಿ!
ಬಿಡಿಸಿಕೋ ನೀನೆಂದು ಬಿಟ್ಟಿ! (ದಿ)
-ಟ್ಟ ನಿರಂಜನಾದಿತ್ಯಗಿಟ್ಟಿ!!!

ಹಳೆಯ ಹಪ್ಪಳಕೆ ಹೊಸಕಳೆ! (ಮ)   2(877)

-ಳೆ ಗಾಳಿಯಿಂದ ಹಾಳಾಗಿತ್ತು ಕಳೆ!
ಜಮಾನಗಿಷ್ಟ ವಿಜಯ ಕಳೆ!
ರಡಿ ಬಿಸಿಲಿನಲಾಯ್ತು ಕಳೆ! (ಅ)
-ಪ್ಪನ ಕಿರಣದಿಂದಾ ಹೊಸ ಕಳೆ! (ಒ)
-ಳ ಹೊರಗೆಲ್ಲಾ ಶುದ್ಧಾನಂದ ಕಳೆ!
ಕೆರೆ, ಭಾವಿ, ತುಂಬುವುದಿದೇ ಕಳೆ!
ಹೊಟ್ಟೆ ಬಟ್ಟೆಗಾಧಾರವಿದೇ ಕಳೆ!
ವಿತ್ರೀರೇಳು ಭುವನದ ಕಳೆ!
ಮಲಮಿತ್ರನಾ ವಿಮಲ ಕಳೆ! (ಕ)
-ಳೆ, ನಿರಂಜನಾದಿತ್ಯ ನಿತ್ಯ ಕಳೆ!!!

ಹವ್ಯಾಸವೇನಾದರಿರಬೇಕು!   3(1214)

ವ್ಯಾಪ್ತಿ ದೈವಿಕದಲ್ಲಿರಬೇಕು!
ತ್ಯಹವಾಸ ಸತತ ಬೇಕು!
ವೇದಾಂತಾಚಾರಕ್ಕೆ ಬರಬೇಕು!
ನಾಮ ಜಪದ ಸಹಾಯ ಬೇಕು!
ರ್ಪ, ದಂಭವಿರದಿರಬೇಕು! (ಅ)
-ರಿಷಡ್ವರ್ಗವನ್ನು ಜೈಸಬೇಕು! (ವ)
-ರಗುರು ಪಾದಕ್ಕಾಳಾಗಬೇಕು!
ಬೇಡುವಭ್ಯಾಸ ಬಿಡಿಸಬೇಕು! (ಬೇ)
-ಕು ನಿರಂಜನಾದಿತ್ಯಾಗಬೇಕು!!!

ಹಸಿದ ಹೊಟ್ಟೆಗೆ ಹಳೆಯ ರೊಟ್ಟಿ! (ಮಾ)   4(2110)

-ಸಿದ ಬಟ್ಟೆಗೆ ಕೊಳೆ ನೀರ ತೊಟ್ಟಿ! (ಇ)
-ದದೆನ್ನದೆಲ್ಲಾ ಜೋಪಾನವಾಗಿಟ್ಟಿ!
ಹೊರಗೊಳಗೆಲ್ಲೆಲ್ಲಾ ನಿನ್ನ ದಿಟ್ಟಿ! (ಕೆ)
-ಟ್ಟೆನೆಂದಾಗನ್ನ, ಬಟ್ಟೆಗಳ ಕೊಟ್ಟಿ!
ಗೆಳೆಯ ನೀನೊಬ್ಬ ಕೋಮಟಿ ಶೆಟ್ಟಿ!
ಗಲಿರುಳೆನ್ಗಾಗಿ ಕಷ್ಟ ಪಟ್ಟಿ! (ಮ)
-ಳೆ ಬಂದಾಗ ತೆರೆಯೆಳೆದು ಬಿಟ್ಟಿ! (ಆ)
-ಯ ತಪ್ಪಿದಾಗ ಆದಾಯ ತಂದಿಟ್ಟಿ!
ರೊಚ್ಚಿಗೆದ್ದವರ ಕೆಚ್ಚ ಕೊಚ್ಚಿಟ್ಟಿ! (ಶೆ)
-ಟ್ಟಿ, ನಿರಂಜನಾದಿತ್ಯ ಬಲು ಗಟ್ಟಿ!!!

ಹಸಿದವಗನ್ನ, ಬಾಯಾರಿದವಗೆ ಪಾನ!   6(4081)

ಸಿಕ್ಕದ ಹಾಗೆಲ್ಲಾ ನೀಡಬಾರದನ್ನ ಪಾನ!
ಣಿವಾರಿದ ನಂತರ ಮಾಡಬೇಕು ಸ್ನಾನ!
ಸ್ತ್ರವಿಲ್ಲದವಗೆ ಮಾಡಾಬೇಕ್ವಸ್ತ್ರ ದಾನ!
ಗನಮಣಿಯ ಆದರ್ಶದಿಂದ ಪಾವನ! (ಉ)
-ನ್ನತದಲ್ಲವನದ್ದು ನಿಸ್ಪೃಹತಾ ಜೀವನ!
ಬಾಯಿಬಡಕತನದಿಂದೇನು ಪ್ರಯೋಜನ? (ಆ)
-ಯಾಸಮಾಡಿಕೊಳ್ಳುವನು ವೃಥಾ ಪ್ರತಿದಿನ! (ಅ)
-ರಿತಿದನು ಆಗಬೇಕು ಮಾನವ ಸಜ್ಜನ!
ಯಾನಿಧಿ ಪರಮಾತ್ಮನದ್ದಾಗ್ಬೇಕ್ದರ್ಶನ! (ಭ)
-ವಭಯದಿಂದಾಗ ನರನಿಗೆ ವಿಮೋಚನ! (ಬ)
-ಗೆಬಗೆಯಭಿಲಾಷೆಯಿಂದಾಗ್ವುದು ಬಂಧನ!
ಪಾಪಕೂಪದಲ್ಲದ್ದುವುದು ಮಾಯಾ ಚಿಂತನ! (ಅ)
-ನವರತ ಪ್ರಾರ್ಥಿಸು ನಿರಂಜನಾದಿತ್ಯನ!!!

ಹಸಿವಿದ್ದವಗೆ ಕದಾನ್ನವೂ ಸುಧಾನ್ನ! (ಹ)   6(3900)

-ಸಿವಿಲ್ಲದವಗೆ ಸುಧಾನ್ನವೂ ಕದಾನ್ನ!
ವಿಶ್ವಾಸವಿದ್ದರೆ ವಿಷವೂ ಅಮೃತಾನ್ನ! (ಸ)
-ದ್ದರ್ಶನ ಪಡೆಯುವನಾ ಗುಣಸಂಪನ್ನ!
ರ ಗುರು ಅವನಲ್ಲಿ ಸದಾ ಪ್ರಸನ್ನ!
ಗೆರೆ ದಾಟಿದರೆ ಆಗುವುದು ವಿಪನ್ನ!
ಷ್ಟಕ್ಕೀಡಾದಳು ಸೀತೆ ಮರೆತಿದನ್ನ!
ದಾಶರಥಿಯ ಪ್ರೀತಿ ಎತ್ತಿತವಳನ್ನು! (ತ)
-ನ್ನನ್ಯಾಯಕ್ಕಾಗ್ಯುಂಡ ರಾವಣ ಫಲವನ್ನ! (ಹಾ)
-ವೂ ಹಗ್ಗವಾಗಿ ಮಾಡಿದರ್ಮಥನವನ್ನ!
ಸುರರುಂಡರಾನಂದದಿಂದಮೃತವನ್ನ!
ಧಾವಿಸಿದರಸುರರು ಒಪ್ಪಿ ಸೋಲನ್ನ! (ಉ)
-ನ್ನತಿಗೆ ನೆನೆ ನಿರಂಜನಾದಿತ್ಯನನ್ನ!!!

ಹಸಿವೆಯಾದರೆ, ಬಿಸಿಯಾಗಿದ್ದರೆ ತಿನ್ನೋಣ!   6(3971)

ಸಿಕ್ಕಿದ್ದೆಲ್ಲಾ ತಿಂದ್ರೆ ರೋಗ ಬಂದರೇನು ಮಾಡೋಣ? (ನೀ)
-ವೆಲ್ಲರೂ ಪ್ರೀತಿಯಿಂದ್ಲೇ ಕೊಡುತ್ತೀರೆಂದು ನಂಬೋಣ!
ಯಾಕೆ ನಿಮ್ಮೆಲ್ಲರನ್ನೂ ಆಮೇಲೆ ವೃಥಾ ದೂರೋಣ?
ತ್ತಾತ್ರೇಯನ ದರ್ಶನಕ್ಕಾಗ್ಯೆಲ್ಲಾ ಶ್ರಮಿಸೋಣ! (ಧ)
-ರೆಯ ಸುಖವನ್ನೆಲ್ಲಾ ಅದಕ್ಕಾಗಿ ಮರೆಯೋಣ!
ಬಿಡಬಾರದೆಷ್ಟು ಕಷ್ಟ ಬಂದರೂ ಆ ಧಾರಣ!
ಸಿಕ್ಕಿದಾಗ ಸಮಯ ಅದೇಕೆ ಬುದ್ಧಿ ಭ್ರಮಣ?
ಯಾವಾಗ ಮುಗಿಸುವನೋ ಯಮರಾಯ ಪ್ರಯಾಣ?
ಗಿರಿಧಾರಿಯ ಪಾದ ಸೇರಿ ಅಲ್ಲಿ ನಿದ್ರಿಸೋಣ! (ಎ)
-ದ್ದರೂ, ಬಿದ್ದರೂ, ಅಲ್ಲಿಯೇ ಇದ್ದು ಧನ್ಯರಾಗೋಣ! (ಹ)
-ರೆಯದ ದಿನಗಳನ್ನು ವ್ಯರ್ಥ ಮಾಡದಿರೋಣ!
ತಿರಿಗಿ, ತಿರಿಗಿ, ಹುಟ್ಟಿ ಸತ್ತು ಹುಟ್ಟದಿರೋಣ! (ತಿ)
-ನ್ನೋಣ ಅಮೃತವನ್ನೇ ಕುಡಿದಮರರಾಗೋಣ! (ಋ)
-ಣ ನಿರಂಜನಾದಿತ್ಯನದ್ದು ಹೀಗೆ ತೀರಿಸೋಣ!!!

ಹಸಿವೆಯಿಲ್ಲ, ಬವಸೆಯಿಲ್ಲ! (ಹ)   4(1778)

-ಸಿದವರಿಗಿಕ್ಕುವವರಿಲ್ಲ! (ಸ)
-ವೆದರೂ ದೇಹಕ್ಕೆ ಸುಖವಿಲ್ಲ! (ಬಾ)
-ಯಿ ಬಡಾಯಿಗೆ ಕಮ್ಮಿಯೇನಿಲ್ಲ! (ನ)
-ಲ್ಲ, ನಲ್ಲೆಯರಲ್ಲಿ ಐಕ್ಯವಿಲ್ಲ!
ರಡಾಸೆಗೆ ಮಿತಿಯೇ ಇಲ್ಲ!
ರ ಗುರು ಸೇವೆಗಿಷ್ಟವಿಲ್ಲ!
ಸೆರೆಮನೆಯ ವಾಸ ತಪ್ಪಿಲ್ಲ! (ತಾ)
-ಯಿಗಿನ್ನೂ ಕನಿಕರ ಹುಟ್ಟಿಲ್ಲ! (ಪು)
-ಲ್ಲ, ನಿರಂಜನಾದಿತ್ಯನಿಂದೆಲ್ಲ!!!

ಹಸಿವೆಯೆಂದಮೇಧ್ಯ ತಿನ್ನಬಾರ್ದಯ್ಯಾ!   6(3917)

ಸಿಕ್ಕದಿದ್ದ್ರನ್ನ ಪ್ರಾಣ ಬಿಡಬೇಕಯ್ಯಾ!
ವೆಸನಗಳನ್ನು ಜಯಿಸಬೇಕಯ್ಯಾ! (ಥೂ)
-ಯೆಂದವುಗಳ ಮೇಲುಗುಳಬೇಕಯ್ಯಾ!
ರ್ಶನೇಚ್ಛೆಗೆ ಮನೋಜಯ ಬೇಕಯ್ಯಾ!
ಮೇಧಾವಿಯಾದರೆ ಮಾತ್ರ ಸಾಲದಯ್ಯಾ! (ಅ)
-ಧ್ಯಕ್ಷ ಭಾಷಣವೇನೂ ದೊಡ್ಡದಲ್ಲಯ್ಯಾ!
ತಿಳಿದದ್ದಾಚಾರಕ್ಕೆ ಬರಬೇಕಯ್ಯಾ! (ತ)
-ನ್ನ ತಾನರಿತಾಗ ಜ್ಞಾನ ಪೂರ್ಣವಯ್ಯಾ!
ಬಾಳಿನ ಸಾರ್ಥಕತೆ ಅದರಿಂದಯ್ಯಾ! (ನಿ)
-ರ್ದಯತೆ ಆಗೂರು ಬಿಟ್ಟೋಡುವುದಯ್ಯಾ! (ಅ)
-ಯ್ಯಾ ನಿರಂಜನಾದಿತ್ಯ ಜ್ಞಾನೇಶ್ವರಯ್ಯಾ!!!

ಹಸುರೆಲೆಗಳಿಗಡಿ ಗಿಡದ ಕಸ ಕಡ್ಡಿ!   2(856)

ಸುಸಮಯದಲಿದಕೀಳುತಿದ್ದರಿಲ್ಲ ಅಡ್ಡಿ!
ರೆಕ್ಕೆಗಳಿಗಪಾಯವಾಗದಂತಿದ್ದರಿಲ್ಲಡ್ಡಿ! (ಎ)
-ಲೆಗಳಾಗ ಕಂಗೊಳಿಪವು ಕಳೆದೆಲ್ಲಾ ಅಡ್ಡಿ!
ತಿಗೆಡಿಸುವಾಸೆಗಳೇ ನಿಜ ಸುಖಕಡ್ಡಿ! (ತಿ)
-ಳಿದು ಸಂಯಮಿಯಾದರಿಲ್ಲಾವತರದಡ್ಡಿ!
ಮನ ಶ್ರೀ ಗುರುಪಾದದಲಿದ್ದರಿಲ್ಲಾವಡ್ಡಿ! (ಅ)
-ಡಿಗಳಳಿದಂತರ್ಮುಖಿಗೆ ಯಾರದೇನಾವಡ್ಡಿ?
ಗಿಡಿವಾದ ಜಡದೇಹಕ್ಕನುಚಿತಾಹಾರಡ್ಡಿ! (ಮ)
-ಡಡಿ ಮನವೊಲಿದು ಸೇವಿಸಿದಾಗಿಲ್ಲ ಅಡ್ಡಿ! (ಮ)
-ದ, ಮತ್ಸರ ಕ್ರಿಮಿನಾಶವಾಗದಿದ್ದರೆ ಅಡ್ಡಿ!
ಲಿ ವಿಷಹರ ನಾಮತೀರ್ಥದಿಂದ ದೂರಡ್ಡಿ!
ಚ್ಚಿದಾನಂದಾತ್ಮಾನಂದ ಸಿದ್ಧಗಾರದೇನಡ್ಡಿ!
ರ್ತವ್ಯ ಕರ್ಮನಿರತನಾದವಗಿಲ್ಲ ಅಡ್ಡಿ! (ಅ)
-ಡ್ಡಿ ನಿರಂಜನಾದಿತ್ಯನಿಲ್ಲದಿರಲೆಲ್ಲಾ ಅಡ್ಡಿ!!!

ಹಸುರೆಲೆಗೀಗ ಬಹಳ ಜಂಭ!   5(2894)

ಸುವಾಸನೆಯ ಹೂಗಳು ಮೈ ತುಂಬ! (ಮೆ)
-ರೆಯುತಿದೆ ತನ್ನ ನೋಡಿ ಕಣ್ತುಂಬಿ! (ತ)
-ಲೆಯ ಮೇಲಿದೆ ಸದಾ ಸೂರ್ಯಬಿಂಬ! (ಮಾ)
-ಗೀಗ ಬಿದ್ದ ಹಣ್ಣೆಲೆಯ ನೋಡೆಂಬ!
ತಿ, ಸ್ಥಿತಿ ಶಾಶ್ವತವಲ್ಲವೆಂಬ!
ದಲಾವಣೆಗೆ ತಕ್ಕಂತಿರೆಂಬ!
ರೆಯದ ಗರ್ವ ನಿನಗೇಕೆಂಬ! (ಕ)
-ಲಕಳಿಯಿಂದ ವಿಚಾರ ಮಾಡೆಂಬ!
ಜಂಭದಿಂದ ಗುರಿ ಸಿದ್ಧಿಸದೆಂಬ! (ಜಂ)
-ಭ, ನಿರಂಜನಾದಿತ್ಯನಿಗಿಲ್ಲೆಂಬ!!!

ಹಸುವಿರುವಲ್ಲಿ ಹಸುರಿಲ್ಲ! (ಹ)   2(982)

-ಸುರು ಇರುವಲ್ಲಿ ಹಸುವಿಲ್ಲ!
ವಿಧಿ ವಿಲಾಸ ವಿಚಿತ್ರವೆಲ್ಲ! (ಬ)
-ರುವವರ ಕರೆಯುವವರಿಲ್ಲ!
ರಾಮಂತ್ರಣ ಬಾರದರ್ಗೆಲ್ಲ! (ಮ)
-ಲ್ಲಿಕಾರ್ಜುನಗಾನಂದವಿದೆಲ್ಲ!
ರಿ ಶರಣರ ಕೇಳ್ವರಿಲ್ಲ!
ಸುಶೀಲವದಾರಿನೂ ಬೇಕಿಲ್ಲ! (ಹ)
-ರಿಕಥಾ ಪ್ರವಚನವೆಲ್ಲೆಲ್ಲ! (ಅ)
-ಲ್ಲಿ, ಏಸು, ನಿರಂಜನರ್ಬೇರಲ್ಲ!!!

ಹಸೆ ಹಾಸಿದ್ದಾಯ್ತು ಹೊರಗೆ!   6(3809)

ಸೆಣ್ಗಳ್ಬರಬಹುದಲ್ಲಿಗೆ!
ಹಾರಾರ್ಪಿಸ್ಬಹ್ದು ಗುರುವಿಗೆ!
ಸಿರ ಬಾಗಬೇಕವನಿಗೆ! (ಸ)
-ದ್ದಾದರೆ ಆಗದವನಿಗೆ! (ಆ)
-ಯ್ತು, ಕೆಲ್ಸ, ಹೋಗ್ಬಹುದೂರಿಗೆ!
ಹೊತ್ತಿರ್ವಾಗ್ಲೇ ಹೋಗಿ ಮನೆಗೆ!
ಸ್ತೆ ನಿಮಗೆಲ್ಲಾ ಗೊತ್ತಿದೆ! (ಹೀ)
-ಗೆ ನಿರಂಜನಾದಿತ್ಯನಾಗೆ!!!

ಹಾಕಿದ್ರೆ ತಿನ್ನು! ಸಾಕುವವ ನೀನೆನ್ನು! (ಬಾ)   6(4292)

-ಕಿ ಮಾತುಗಳಾಡಿ ಫಲವಿಲ್ಲ ಇನ್ನು! (ಆ)
-ದ್ರೆ, ಹೋದ್ರೆ ಅಂದು, ನೀನು ಮಾಡಿದ್ದೇನನ್ನು?
ತಿರ್ತಿರಿಗಿ ಹುಟ್ಟಿ ಮರೆತೆ ನಿನ್ನನ್ನು! (ಹೊ)
-ನ್ನು, ಹೆಣ್ಣು, ಮಣ್ಣಿನಾಸೆ ಇಲ್ಲದಿರ್ಲಿನ್ನು!
ಸಾವು ನಿನಗಿಲ್ಲೆಂದರಿತಿರ್ನೀನಿನ್ನು!
ಕುಲ, ಗೋತ್ರಗಳಿಲ್ಲದಾತ್ಮ ನೀನೆನ್ನು! (ಭ)
-ವಸಾಗರದಿಂದ ಪಾರಾದೆನೆಂದೆನ್ನು!
ರಗುರುಕೃಪೆಯಾಯಿತೆನಗೆನ್ನು!
ನೀನೂ, ನಾನೂ ಒಂದೆಂದು ಧೈರ್ಯದಿಂದನ್ನು!
ನೆಕ್ಕಬೇಡೆಂಜಲನ್ನವನ್ನು ನೀನಿನ್ನು! (ಅ)
-ನ್ನು ನಿರಂಜನಾದಿತ್ಯಾನಂದ ನಾನೆನ್ನು!!!

ಹಾಗಾಗ್ಬೇಕು, ಹೀಗಾಗ್ಬೇಕೆಂಬುದಜ್ಞಾನ!   6(3726)

ಗಾಳಿ ಬೀಸಿದತ್ತ ಸಾಗಿದೆ ಜೀವನ! (ಬಾ)
-ಗ್ಬೇಕು ಸದ್ಗುರು ಪಾದಕ್ಕೆ ಪ್ರತಿದಿನ!
ಕುಚೋದ್ಯ ಮಾಡಬಾರದು ನೀನವನ!
ಹೀನಕೃತ್ಯದತ್ತೋಡಬಾರದು ಮನ!
ಗಾನ ಹಾಡಬೇಕು ಕೊಂಡಾಡಿ ದತ್ತನ! (ಹೋ)
-ಗ್ಬೇಕು ಒಳ ಹೊರಗಿನೆಲ್ಲಾ ಮಲಿನ!
ಕೆಂದಾವರೆಯಡಗೆ ಹಚ್ಚೇಕ್ಚಂದನ! (ಇಂ)
-ಬು ದೊರತಾಗುವುದು ಜನ್ಮ ಪಾವನ!
ಹಿಸಿ ಹೋಗುವುದು ಭವ ಬಂಧನ!
ಜ್ಞಾನದೃಷ್ಟಿಗಾಗ ಗೋಚರ ದರ್ಶನ!
ಮೋ ನಿರಂಜನಾದಿತ್ಯ ನಾರಾಯಣ!!!

ಹಾಡಬೇಕು ನಿನ್ನ ನಾ ನೋಡಬೇಕು! (ಒ)   5(2636)

-ಡನಾಡಿಯಾಗಿ ಕುಣಿದಾಡಬೇಕು!
ಬೇಡೆನ ನ್ನೇನೆಂದರಿಯಬೇಕು!
ಕುಕಲ್ಪನೆನ್ನಲ್ಲಿ ಮೂಡದಿರ್ಬೇಕು!
ನಿನ್ನ, ನನ್ನ ಬಂಧಮರವಾಗ್ಬೇಕು! (ಮ)
-ನ್ನಣೆಯೀ ಪ್ರಾರ್ಥನೆಗೆ ಸಿಗಬೇಕು!
ನಾಳೆ, ನಾಡಿದ್ದೆನ್ನದೀಗ್ಲೇ ಆಗ್ಬೇಕು! (ಮ)
-ನೋನಾಶವಾಗಿ ನೀನೇ ನಾನಾಗ್ಬೇಕು! (ಹೆಂ)
-ಡತಿ ನಿನಗಾಗ್ಯುಮೆಯಂತಿರ್ಬೇಕು! (ಕು)
-ಬೇರನಾಸ್ತಿ ಕೊಟ್ರೂ ಬೇಡೆನಬೇಕು! (ಬೇ)
ಕು, ನಿರಂಜನಾದಿತ್ಯನೆನಬೇಕು!!!

ಹಾಡಿಕೆಯೇನೋ ವಾಡಿಕೆಯಂತಾಯ್ತು!(ಹಾ)   6(4281)

-ಡಿಸಿಕೊಂಡವನೊಡನಾಡದಾಯ್ತು (ಏ)
-ಕೆ ಅವನಿಗೆ ದಯೆಯಿಲ್ಲವಾಯ್ತು?
ಯೇನಪಚಾರ ನಮ್ಮಿಂದ ಉಂಟಾಯ್ತು?
ನೋಡದ ಮನಸ್ಸಿಗೆ ದುಃಖವಾಯ್ತು!
ವಾಸುದೇವನ ಸಾರೂಪ್ಯ ಬೇಕಾಯ್ತು! (ಹಿ)
-ಡಿದ ದಾರಿ ಸರಿಯೆಂಬರಿವಾಯ್ತು! (ಶಂ)
-ಕೆಗಳೆಲ್ಲಕ್ಕೂ ಪರಿಹಾರವಾಯ್ತು! (ಸಾ)
-ಯಂಕಾಲ ಸಮಯ ಗೋಚರವಾಯ್ತು!
ತಾಳ, ಮೇಳ, ಭಜನಾರಂಭವಾಯ್ತು! (ಆ)
-ಯ್ತು, ನಿರಂಜನಾದಿತ್ಯಾನಂದವಾಯ್ತು!!!

ಹಾಡು ಹರಿಗುಣಗಾನ ಬಾರಮ್ಮ! (ಮಾ)   4(1878)

ಡು ಸತತವನ ಧ್ಯಾನ ನೀನಮ್ಮಾ!
ಗರಣದ ಸಂಸಾರ ಸಾಕಮ್ಮಾ! (ಪ)
-ರಿಪರಿಯ ದುಃಖವದರಿಂದಮ್ಮಾ!
ಗುರು ನಿರಂಜನನಾಗಿರ್ಪನಮ್ಮಾ! (ಗ)
-ಣ ನಾಯಕನವನೆಂದರಿಯಮ್ಮಾ!
ಗಾಢ ವಿಶ್ವಾಸವನಲ್ಲಿರಿಸಮ್ಮಾ!
ಡೆ, ನುಡಿ ಶುದ್ಧವಿರಬೇಕಮ್ಮಾ!
ಬಾರಿ ಬಾರಿಗವನ ಸ್ಮರಿಸಮ್ಮಾ! (ವ)
-ರ ಸಾಯುಜ್ಯದಿಂದ ಸುಖಿಯಾಗಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾನಂದದಮ್ಮಾ!!!

ಹಾಡುವಾ, ಕೊಂಡಾಡುವಾ ಗುರುವಾ! (ಕ)   5(2871)

-ಡು ಬಡವಗೂ ದರ್ಶನವೀವಾ!
ವಾಗೀಶ್ವರಿಯ ಸ್ವರೂಪನವಾ!
ಕೊಂಬನೆಲ್ಲರ ಸೇವೆಯನ್ನವಾ! (ಬ)
-ಡಾಯ್ಕೊಚ್ಚಿಕೊಳ್ಳುವವನಲ್ಲವಾ! (ನ)
-ಡು ನೀರಲ್ಲಿ ಕೈಯ ಬಿಡನವಾ!
ವಾಸನೆಗಳಿಲ್ಲದಾತನವಾ!
ಗುರುಗುಹನಿಗೆ ಮಿತ್ರನವಾ! (ಮಾ)
-ರುತೀ ಪ್ರಿಯ ಸೀತಾರಾಮನವಾ! (ಅ)
-ವಾ ನಿರಂಜನಾದಿತ್ಯ ಕೇಶವಾ!!!

ಹಾದರ ದಾರೋಪಕ್ಕಲ್ಲಾದರೋಪಚಾರ ಪೂಜೆ!   6(3933)

ರ್ಶನ, ಸ್ಪರ್ಶನದಿಂದ ಧನ್ಯಳಾದಳ್ಗಿರಿಜೆ!
ಹಸ್ಯ ರಾಸಲೀಲೆಯದ್ದರಿತಿದ್ದಳು ಕುಬ್ಜೆ!
ದಾಮೋದರನನ್ನರಿತಿದ್ದಳು ರುಕ್ಮಿಣಿಯನುಜೆ!
ರೋಮ, ರೋಮವೂ ಕಂಡಿತ್ತಾನಂದನ ರಾಧೆಯೋಜೆ! (ಗೋ)
-ಪನ ನೋಡಲೋಡಿದರ್ಗೋಪಿಯರು ಪ್ರತಿ ಸಂಜೆ! (ಹೊ)
-ಕ್ಕರವನ ಮಂದಿರುವ, ಮಾಡಿದರೆಲ್ಲಾ ಪೂಜೆ! (ಎ)
-ಲ್ಲಾ, ಕೆಲಸ, ಕಾರ್ಯಗಳಿಗಾಗ ಸಂಪೂರ್ಣ ರಜೆ!
ನುಜರಿಗೆಲ್ಲಾ ಆಗುತ್ತಿತ್ತು ಕಠಿಣ ಸಜೆ!
ರೋಗಮುಕ್ತರಾಗುತ್ತಿದ್ದರವನ ಎಲ್ಲಾ ಪ್ರಜೆ!
ತಿತೋದ್ಧಾರದಿಂದ ಪವಿತ್ರವಾಯಿತು ಪ್ರಜೆ!
ಚಾರಿತ್ರ್ಯ ವಧೇಚ್ಛೆಯ ಮನಸ್ಸು ಆಯ್ತು ಬಂಜೆ!
ಹಸ್ಯವರಿತಾನಂದಿಸಿದಳ್ರಾಧಾಯೋನಿಜೆ!
ಪೂರ್ಣಾನುಗ್ರಹ ಪಡೆದಳು ದ್ರುಪದ ತನುಜೆ! (ಓ)
-ಜೆ ನಿರಂಜನಾದಿತ್ಯನದ್ದನ್ನರಿಯಿತಂಬುಜೆ!!!

ಹಾರ ಬೇಕೆಂದೀಸ್ಗೊಂಡ ನಾರಾಯಣ! [ಊ]   4(2402)

-ರವರಿಗಿದರಿಂದೊಂದಾಕರ್ಷಣ!
ಬೇಜಾರಿಲ್ಲದಾಗುವುದು ಪ್ರಯಾಣ!
ಕೆಂಗಣ್ಣನೊಲುಮೆಯಿಂದ ರಕ್ಷಣ!
ದೀನದಾಸರಿಗವ ಪಂಚಪ್ರಾಣ! (ಕಾ)
-ಸ್ಗೊಂದು ದೋಸೆಯಂತಲ್ಲವನ ಋಣ! (ಬಿ)
-ಡದೇ ಮಾಡವನ ಗುಣ ಗ್ರಹಣ!
ನಾಮಜಪದಿಂದಾಗ್ಬೇಕಾರೋಹಣ! (ಆ)
-ರಾಮದಿಂದಾಗ್ವನಾಗ ಶಿವಗಣ! (ಭ)
-ಯ ತಪ್ಪಿ ನಿಲ್ಲುವುದಾಗ ಭ್ರಮಣ! (ತಾ)
-ಣ, ನಿರಂಜನಾದಿತ್ಯ ರಾಮಬಾಣ!!!

ಹಾರ ಹಾಕಿ ಹವಾಲೊಪ್ಪಿಸಬೇಕೇನು? (ಭಾ)   4(1656)

-ರವದು ನಿನಗಾಗುವುದಿಲ್ಲವೇನು?
ಹಾಕಲೇ ಬೇಕೆಂದು ನಾನು ಅಂದೆನೇನು? (ಹಾ)
-ಕಿದಮೇಲೆ ಹಾಸ್ಯೋಕ್ತಿ ಉಚಿತವೇನು?
ಸಿದಾಗ ಹಸಾದ ಕೊಟ್ಟಿಲ್ಲವೇನು?
ವಾಸುದೇವನದ್ರ ಬೆಲೆ ಕೇಳಿದ್ನೇನು? (ಹಾ)
-ಲೊಡೆಯದಿರಲೆಂತಿರಬೇಕು ನೀನು? (ಉ)
-ಪ್ಪಿಲ್ಲದ ಪಾತ್ರೆ ಬಳಸಬೇಡವೇನು?
ದ್ಭಾವ ಶೂನ್ಯ ಸೇವೆಯಿಂದಾಗ್ವುದೇನು?
ಬೇಯದನ್ನದಿಂದನಾರೋಗ್ಯವಲ್ಲೇನು? (ಸಾ)
-ಕೇತನಾಥನನನ್ಯ ಭಕ್ತನಾಗ್ನೀನು! (ನೀ)
-ನು ನಿರಂಜನಾದಿತ್ಯಗಾ ಹಾರಾಗಿನ್ನು!!!

ಹಾರ ಹಾಕಿದರೇ ಕತ್ತಿಗೆ? (ಭಾ)   4(2174)

-ರಿವಾಗಿರುವುದೇ ಕತ್ತಿಗೆ? (ಮ)
-ಹಾಬಲೇಶ್ವರನಾ ಕತ್ತಿಗೆ! (ಬಾ)
-ಕಿನ್ನೇನೇನಿಹುದಾ ಕತ್ತಿಗೆ?
ತ್ತಗುರುವಿನಾ ಕತ್ತಿಗೆ! (ಬೇ)
-ರೇನೂ ಬೇಡವಿನ್ನಾ ಕತ್ತಿಗೆ!
ಲ್ಪನಾತೀತದಾ ಕತ್ತಿಗೆ! (ಎ)
-ತ್ತಿರಾರತಿಯೀಗಾ ಕತ್ತಿಗೆ! (ಬಾ)
-ಗೆ, ನಿರಂಜನಾದಿತ್ಯನಾಗೆ!!!

ಹಾರಾಟ, ಹೋರಾಟ, ಹೀರಾಟ ಇನ್ನಿಲ್ಲ!   6(3326)

ರಾತ್ರಿ, ಹಗಲು, ವಿಮಾನ ಯಾತ್ರೆ ಇಲ್ಲ! (ಆ)
-ಟ, ನೋಟ, ಕೂಟಕ್ಕೂ ಆಮಂತ್ರಣವಿಲ್ಲ!
ಹೋಗಾಚೆಗೆನ್ನುವವರೇ ಈಗೆಲ್ಲೆಲ್ಲಾ!
ರಾಗ, ದ್ವೇಷಾಸೂಯೆಗೆ ಕಡಿಮೆಯಿಲ್ಲ! (ಕಾ)
-ಟ ದಿನದಿನಕ್ಕೂ ಹೆಚ್ಚಿ ಶಾಂತಿಯಿಲ್ಲ!
ಹೀನಕೃತ್ಯಕ್ಕಧಿಕಾರಾನ್ಕೂಲವಿಲ್ಲ!
ರಾಮನಾಮ ಜಪದಲ್ಲಾಸಕ್ತಿಯಿಲ್ಲ! (ಕ)
-ಟಕ ತಾನಾದ್ರೆ ಸೊಂಟಮುರಿವರೆಲ್ಲ!
ಳೀವಯಸ್ಸಿನಲ್ಲೀ ಪ್ರಾರಬ್ಧವೆಲ್ಲ! (ಮ)
-ನ್ನಿಸಬೇಕಾ ಸದ್ಗುರು ತಪ್ಪುಗಳೆಲ್ಲ! (ಪು)
-ಲ್ಲ ನಿರಂಜನಾದಿತ್ಯ ನಿರ್ದಯನಲ್ಲ!!!

ಹಾರಾಟಗಳೆಲ್ಲಾ ನಾಲ್ಕು ದಿನ!   4(2378)

ರಾತ್ರಿಯಿದ್ದಂತಿಲ್ಲ ಹಗ್ಲು ಮನ!
ಗರು ಸತ್ಮೇಲಿಲ್ಲ ಕದನ!
ಟ್ಟಿಗರ್ನಾವೆನ್ನುವರು ಜನ! (ಮ)
-ಳೆ, ಬೆಳೆಗಳಾಗ್ದಿದ್ರಿಲ್ಲ ಧನ! (ಸ)
-ಲ್ಲಾಪ, ವಿಲಾಪಗ್ಳಾಗ ನಿಧನ!
ನಾರುವುದಾಗ ರಾಜ ಭವನ! (ಹಾ)
-ಲ್ಕುಡಿಸ್ಯಾವುದಕ್ಕಾಗ ಚುಂಬನ?
ದಿವ್ಯಜ್ಞಾನದಿಂದೆಲ್ಲಾ ಶಮನ! (ಧ)
-ನ ನಿರಂಜನಾದಿತ್ಯ ಭಜನ!!!

ಹಾಲಲ್ಲಿ ನೀರು ಬೆರೆತ್ರೆ ಬೆಲೆ ಬರುತ್ತೆ! (ಹೇ)   6(3974)

-ಲಲ್ಲದು ಬೆರೆತ್ರೆ ದುರ್ವಾಸನೆ ಬರುತ್ತೆ! (ಕ)
-ಲ್ಲಿನಲ್ಲಿ ಮೂರ್ತಿ ಕೆತ್ತಿದ್ರೆ ಪೂಜೆಯಾಗುತ್ತೆ!
ನೀರಿನಲ್ಲಿ ಹಾಕಿದ್ರೆ ಮುಳುಗಿ ಹೋಗುತ್ತೆ! (ಯಾ)
-ರು ಹೇಗಿರ್ಬೇಕೋ ಹಾಗಿದ್ರೆ ಮಾನ ಬರುತ್ತೆ!
ಬೆಟ್ಟದಮೇಲಂಗಡಿ ಇಟ್ರೇನು ಬರುತ್ತೆ? (ಕ)
-ರೆದ್ರೂ ಗಿರಾಕಿ ಬಾರದೆಲ್ಲಾ ಹಾಳಾಗುತ್ತೆ! (ಮಾ)
-ತ್ರೆ ನುಂಗಿದರೆ ರೋಗ ಶಮನವಾಗುತ್ತೆ!
ಬೆಲ್ಲವನ್ನೇ ತಿನ್ನುತ್ತಿದ್ರೆ ಕ್ರಿಮಿ ಹೆಚ್ಚುತ್ತೆ! (ತ)
-ಲೆ ಬಾಗಿದ್ರೆ ಗುರುವಿಗುದ್ಧಾರವಾಗುತ್ತೆ!
ಯಲಾಡಂಬರದಿಂದ ಪತನಾಗುತ್ತೆ! (ಕು)
-ರುವಂಶದಂತಾಗಿ ಜನ್ಮ ವ್ಯರ್ಥವಾಗುತ್ತೆ! “(ಎ)
-ತ್ತೆನ್ನ, ನಿರಂಜನಾದಿತ್ಯಾ!” ಎನ್ಬೇಕಾಗುತ್ತೆ!!!

ಹಾಲಹಲ ವಿಷಪಾನ ಗೈದ ಶಿವ   2(449)

ಲಾಭವಾಯ್ತುದರಿಂದೆಲ್ಲರಿಗೆ ಶಿವ!
ರಗುರು ಶಂಕರ ಗೌರೀಶ ಶಿವ!
ಯಪತಿ, ಪಶುಪತಿ, ಸಾಂಬ ಶಿವ!
ವಿಷಕಂಠ, ಶ್ರೀಕಂಠನಾಭಂಟ ಶಿವ!
ಣ್ಮುಖ ವೀರನುತ್ಪತ್ತಿದಾತ ಶಿವ!
ಪಾಪಹರ, ತಾಪಹರ, ಯೋಗಿ ಶಿವ!
ಟನ ವಿಖ್ಯಾತ ನಟರಾಜ ಶಿವ! (ಆ)
-ಗೈಕ್ಯವಿವನಲಿದ್ದರೆ ಸದಾ ಶಿವ!
ತ್ತಾತ್ರೇಯಾವಧೂತನೀ ತ್ಯಾಗಿ ಶಿವ!
‘ಶಿವಾಯ ನಮಃ ನಮಃಶಿವಾಯ’ ಶಿವ!
ರುಗುರು ನಿರಂಜನಾದಿತ್ಯ ಶಿವ!!!

ಹಾಲಿಗೆ ಬಂದವಗೆ ಹಸು ಬೆಲೆ ಏಕಯ್ಯಾ? (ಆ)   1(361)

-ಲಿಸ ಬಂದವಗೆ ಹಾಡುವಗತ್ಯವೇನಯ್ಯಾ!
ಗೆಳೆಯನಿಗೆ ಹಗೆತನ ಯೋಗ್ಯವೇನಯ್ಯಾ?
ಬಂದುದ್ದೇಶ ಸಾಧಿಸಿ ಹೋಗ್ವುದು ಸಭ್ಯವಯ್ಯಾ! (ಅ)
-ದರಿಂದಹುದು ಮನಕೆ ಸದಾ ಶಾಂತಿಯಯ್ಯಾ! (ಅ)
-ವರಿವರ ವಿಚಾರಗಳಸಂಬದ್ಧವಯ್ಯಾ!
ಗೆರೆ ಮೀರಿದರಾರ್ಯಪುತ್ರ ವಿಯೋಗವಯ್ಯಾ!
ಗಲಿರುಳು ಸ್ವಕಾರ್ಯ ನಿರತನಾಗಯ್ಯಾ! (ಅ)
-ಸು ಅಳಿವುದೆಂದಿಗೆಂದರಿಯದಿಹುದಯ್ಯಾ!
ಬೆಜ್ಜರ, ಬೇನೆಗಳಿಂದ ಕಂಗೆಡಬೇಡಯ್ಯಾ! (ಆ)
-ಲೆ ಮನೆಯ ಬೆಲ್ಲವೀ ಸಂಸಾರ ಸುಖವಯ್ಯಾ!
ನಾದರೂ ನಿಜ ಗುರಿ ಬಿಡಬಾರದಯ್ಯಾ!
ಥೆ, ಪುರಾಣ, ಕಣ್ಣು ತೆರೆಯಲಿಕಾಗಯ್ಯಾ! (ಅ)
ಯ್ಯಾ! ನಿರಂಜನಾದಿತ್ಯ ಸ್ವಕರ್ಮ ನಿಷ್ಠನಯ್ಯಾ!!!

ಹಾಲಿನ ಬಣ್ಣ ನೋಡ್ಯಾನಂದವಾಯ್ತು! (ಹಾ)   6(3557)

-ಲಿನ ರುಚಿ ಸವಿದು ತೃಪ್ತಿಯಾಯ್ತು! (ಘ)
-ನ ಗುಣವದರದ್ದನುಭವವಾಯ್ತು!
ದುಕಿಗದೇ ಬೇಕೆಂದದ್ದೂ ಆಯ್ತು! (ಉ)
-ಣ್ಣದಿರ್ಲಿಕ್ಕೀಗದನ್ನಸಾಧ್ಯವಾಯ್ತು!
ನೋಡ್ನೋಡಿ ಗೊಲ್ಲನ ದಾರಿ ಸುಸ್ತಾಯ್ತು! (ಓ)
-ಡ್ಯಾಡಿ, ಅಡ್ಡಾಡೀಗೇನೋ ಬಂದಂತಾಯ್ತು!
ನಂಬಿಗೆಯಿದ್ದ ಹಾಲೀಗ ನೀರಾಯ್ತು! (ಅ)
-ದರಲ್ಲಿದ್ದ ಗುಣವೂ ಕಮ್ಮಿಯಾಯ್ತು!
ವಾದಿಸಿ ಫಲವಿಲ್ಲೆಂಬರಿವಾಯ್ತು! (ಆ)
-ಯ್ತು, ನಿರಂಜನಾದಿತ್ಯ ತಟಸ್ಥಾಯ್ತು!!!

ಹಾಲು ಎಷ್ಟು ಕುಡಿದರೇನು? [ಹೇ]   4(2286)

-ಲು ತಿನ್ನದಿರಬೇಡವೇನು?
ಷ್ಟು ಜಪ ಮಾಡಿದರೇನು? (ಎ)
-ಷ್ಟು ಕ್ಷೇತ್ರವ ಸುತ್ತಿದರೇನು?
ಕುಕರ್ಮ ಬಿಡಬೇಡವೇನು? (ಮ)
-ಡಿಮಡಿಯೆಂದರಾಯಿತೇನು? (ಮ)
-ದ, ಮತ್ಸರಡಗಬೇಡ್ವೇನು? (ದೊ)
-ರೇ ಮಗನೇ ತಾನಾದರೇನು? (ತಾ)
-ನು ನಿರಂಜನಾದಿತ್ಯಾದ್ನೇನು???

ಹಾಲು, ಹಣ್ಣು, ಗೋಧಿ ರೊಟ್ಟಿ! (ಬ)   2(671)

-ಲು ಮಿತದಾಹಾರ ಪುಷ್ಟಿ!
ರಿ, ಹರ, ಅಜರಿಷ್ಟಿ! (ಕ)
-ಣ್ಣು, ಕೈ, ಕಾಲ್ಕಿವ್ಯಂಗ ಸೃಷ್ಟಿ!
ಗೋ, ಬ್ರಾಹ್ಮಣ ಹಿತ ದೃಷ್ಟಿ! (ಸಾ)
-ಧಿಸಿದರಾತ್ಮ ಸಂತುಷ್ಟಿ! (ಬೇ)
-ರೊಡೆತನವೆಲ್ಲಾ ತುಟ್ಟಿ! (ದಿ)
-ಟ್ಟಿ ನಿರಂಜನಾದಿತ್ಯೇಷ್ಟಿ!!!

ಹಾಲುಣಿಸಿದವಳ್ನೀನಲ್ಲವೇನಮ್ಮಾ? (ಕಾ)   5(2810)

-ಲು, ಕೈಗಳ್ನಿನ್ನ ಸೇವೆಗಾಗಿರಲಮ್ಮಾ! (ದ)
-ಣಿಯಬಾರದವುಗಳೆಂದೆಂದಿಗಮ್ಮಾ!
ಸಿರಿತನದಾಸೆ ನನಗಿಲ್ಲವಮ್ಮಾ!
ತ್ತನೆನಗೆ ಮಾರ್ಗದರ್ಶಕನಮ್ಮಾ!
ರಗುರು ಮೂರುಲೋಕಕ್ಕವನಮ್ಮಾ! (ತೋ)
-ಳ್ನೀಡೀಗೆನ್ನನೆತ್ತಿಕೊಳ್ಳಬೇಕ್ನೀನಮ್ಮಾ!
ಡೆಯಲಾರೆ ಸ್ವತಂತ್ರವಾಗೀಗಮ್ಮಾ!
(ನಿ)ಲ್ಲಬೇಕು ನನ್ನ ಕಾಲಲ್ಲೀಗ ನಾನಮ್ಮಾ!
ವೇಷ, ಭೂಷಣಗಳೆಂತಿದ್ದರೇನಮ್ಮಾ?
ರಹರಿ ನಾನಾಗಬೇಡವೇನಮ್ಮಾ? (ಅ)
-ಮ್ಮಾ ನಿರಂಜನಾದಿತ್ಯ ತಾನವನಮ್ಮಾ!!!

ಹಾಲ್ಬಿಟ್ಟೋಡಿತು ಹೇಲ್ತಿನ್ಲಿಕ್ನಾಯಿ (ಕಿ)   6(3997)

-ಲ್ಬಿಷಿಗೇನು ಮಾಡಿದ್ರೇನು ಸ್ನೇಹಿ? (ಕೊ)
-ಟ್ಟೋರ್ಗಂಟ್ಮುಳುಗಿಸುವನಾ ದ್ರೋಹಿ! (ಚಾ)
-ಡಿ, ತರ್ಲೆಯವ್ನಾಗ ಗುಣಗ್ರಾಹಿ!
ತುಚ್ಛ ಲುಚ್ಛರಿಗವ ಸಹಾಯಿ!
ಹೇಳುವುದಾವಾಗಲೂ ಬಡಾಯಿ! (ಕಾ)
-ಲ್ತಿವಿದಾಗವಿತ್ಕೊಂಬುದಾ ನಾಯಿ! (ತಿ)
-ನ್ಲಿಕ್ಕಿಕ್ಕದಾಗಳುವುದಾ ನಾಯಿ! (ಸಾ)
-ಕ್ನಾಯಿಯಾಯ್ತೀಗೋಡಾಡ್ವ ಹುಚ್ನಾಯಿ! (ತಾ)
-ಯಿ ನಿರಂಜನಾದಿತ್ಯಾ! ನೀ ತ್ರಾಹಿ!!!

ಹಾವು ಸಾಯದಿದ್ರೆ ಏಟೆಷ್ಟು ಕೊಟ್ರೇನು? (ಬಾ)   6(3424)

-ವು ಬತ್ತದಿದ್ದ್ರೆಷ್ಟು ಪಟ್ಟು ಹಾಕಿದ್ರೇನು?
ಸಾಯುಜ್ಯ ಸಿಕ್ಕದ ಸಾಧನೇನಾದ್ರೇನು?
ಜ್ಞ, ಯಾಗ, ರುಚ್ರುಚಿಯಾದೂಟಕ್ಕೇನು?
ದಿವ್ಯ ಜೀವನ ಚಿತ್ತಶಾಂತಿಗಲ್ವೇನು?
(ನಿ)-ದ್ರೆ ಯೋಗ ಸಮಾಧಿಯಾಗಬಲ್ಲುದೇನು?
ನೇಮಾಡಿದ್ರೂ ಫಲವುಣ್ಣೇ ಬೆಕ್ನೀನು!
(ಸ)-ಟೆಯಾಡಿ ದಿಟವನ್ನಟ್ಟಲಾರೆ ನೀನು?
(ಎ)-ಷ್ಟು ತಿದ್ದಿದ್ರೂ ನಾಯ್ಬಾಲ ಡೊಂಕಲ್ಲವೇನು?
ಕೊಳೆ ತೊಳೆವತನಕ ಶುದ್ಧ ನೀನು!
(ಕೊ)-ಟ್ಟ್ರೇನು, ಬಿಟ್ಟ್ರೇನು, ಹೊಟ್ಟೆತುಂಬಿಸ್ಬೇಕ್ನೀನು!
(ಅ)-ನುಭವಿಸಿ ನಿರಂಜನಾದಿತ್ಯನಾಗ್ನೀನು!!!

ಹಾವೂ ಶಿವನಿಗೆ ಹೂಗಳ ಹಾರ! (ಹೂ)   6(3930)

-ವು ಭವನಿಗೆ ಹಾವುಗಳ ಹಾರ!
ಶಿವನ ಹೃದಯ ಪರಮೋದಾರ! (ಭ)
-ವನ ಮನ ಕಾಮದಿಂದ ವಿಕಾರ!
ನಿತ್ಯಾನಿತ್ಯ ನಿರ್ಧಾರ ನಿರ್ವಿಕಾರ!
ಗೆಳೆಯ ಲೋಕಕ್ಕೆಲ್ಲಾ ದಿವಾಕರ!
ಹೂವಾದ ಪದ್ಮಕ್ಕವನಿಂದಾಕಾರ! (ಸಂ)
-ಗವದರದ್ದು ಭ್ರಮರಕ್ಕಾಹಾರ! (ಒ)
-ಳ, ಹೊರ, ಶುಚಿಗಾಗಿ ಸದಾಚಾರ!
ಹಾಲಾಹಲವುಂಡ ಶಿವಶಂಕರ! (ಹ)
-ರ, ನಿರಂಜನಾದಿತ್ಯಾನಂದಾಕಾರ!!!

ಹಾಸಿಗೆ ಎಷ್ಟು ಸೊಗಸಾಗಿದ್ದರೇನು? (ಹೇ)   6(3476)

-ಸಿಗೆ ಮೈಮೇಲೆ ಗಮನಿಸಿದಿಯೇನು?
ಗೆಲಬೇಕಾಸೆಗಳೆಲ್ಲವನ್ನೂ ನೀನು!
ಷ್ಟಿದ್ದರಷ್ಟಕ್ಕೇ ತೃಪ್ತಿಪಡು ನೀನು! (ನಿ)
-ಷ್ಟುರಕ್ಕವಕಾಶ ಕೊಡಬಾರ್ದು ನೀನು!
ಸೊರಗಿ, ಕರಗ್ಬಾರ್ದಾಸೆಯಿಂದ ನೀನು!
ದ್ದಲ ಮಾಡದೇ ಭಜಿಸ್ಬೇಕು ನೀನು!
ಸಾಯುಜ್ಯ ಸುಖಕ್ಕರ್ಹನಾಗ್ಬೇಕು ನೀನು!
ಗಿಡ, ಮರದಂತಲ್ಲ, ಮಾನವ ನೀನು! (ಇ)
-ದ್ದದ್ದನ್ನು ಹಂಚಿ ತಿನ್ನಲೂಬೇಕು ನೀನು! (ಯಾ)
-ರೇನೇ ಅಂದರೂ ಮೌನವಾಗಿರು ನೀನು! (ಅ)
-ನುಪಮ ನಿರಂಜನಾದಿತ್ಯ-ನಾಗ್ನೀನು!!!

ಹಿಂದಿನ ಮಾತಿಂದನುಭವವಾಗ್ಬೇಕು!   5(3084)

ದಿವ್ಯ ಜೀವನದ ಫಲವನ್ನುಣ್ಬೇಕು!
ವ್ಯಕ್ಕಿಂತದರತಿಶಯ ಕಾಣ್ಬೇಕು!
ಮಾನವನಿಗಾಗಭಿರುಚಿ ಮೂಡ್ಬೇಕು!
ತಿಂಗಳುಪವಾಸ ಸಾರ್ಥಕವಾಗ್ಬೇಕು!
ರ್ಶನದ ಸೂಚನೆಯಾದ್ರೂ ತೊರ್ಬೇಕು! (ಅ)
-ನುಮಾನಕ್ಕವಕಾಶವಾಗದಿರ್ಬೇಕು!
ಗವಂತ ಭಜನೆಗೊಲಿಯಬೇಕು!
ರ್ಣಿಸಲವನನ್ನುತ್ಸಾಹ ಬರ್ಬೇಕು!
ವಾಲ್ಮೀಕಿಗಾದಾನಂದ ನಮಗಾಗ್ಬೇಕು!
ಹೋಗ್ಬೇಕು, ಕುಣಿದುಕುಣಿದೊಡಲ್ಬೀಳ್ಬೇಕು! (ಮು)
-ಕುತಿ ನಿರಂಜನಾದಿತ್ಯನಿಂದಾಗ್ಬೇಕು!!!

ಹಿಂದಿನ ರುಚಿ ಇಂದಿನಭಿರುಚಿ!   6(3747)

ದಿನ, ರಾತ್ರಿಂತಾದ್ರಾಗ್ದು ಮನ ಶುಚಿ!
ಶ್ವರದಾಸೆ ಅಳಿದಾಗ ಶುಚಿ!
ರುಜುಮಾರ್ಗ ತಪ್ಪಿದರೆ ಅರುಚಿ!
ಚಿರಾಯುರಾರೋಗ್ಯವಂತ ಮರೀಚಿ!
ಇಂದ್ರಜಾಲವೆಂಬುದೊಂದು ಪಿಶಾಚಿ!
ದಿವ್ಯ ಜೀವನಾನಂದಕ್ಕಿದು ಪಾಚಿ!
ತದೃಷ್ಟನೆಂಬುದಕಿದು ಸೂಚಿ!
ಭಿಕ್ಷು ಸೇರನಿದರ ಬಳಿ ನಾಚಿ! (ದು)
-ರುಳ ತಬ್ಬಿಕೊಳ್ಳುವನಿದ ಬಾಚಿ! (ಶು)
-ಚಿ ನಿರಂಜನಾದಿತ್ಯನಿಗೆ ರುಚಿ!!!

ಹಿಂದಿನ ರೂಪವಿರಬೇಕೆಂಬೆನಯ್ಯಾ!   1(57)

ದಿವಾಕರಾನುಗ್ರಹದಿಂದಪ್ಪುದಯ್ಯಾ!
ನಗಾಸೆ ಶ್ರೀಪಾದ ದರ್ಶನವಯ್ಯಾ!
ರೂಪಕತಿ ಮೋಹವಿರಬಾರದಯ್ಯಾ!
ತಿತನ ಪಾವನ ಮಾಡುಬೇಕಯ್ಯಾ!
ವಿಶ್ವಾಸ ನಿಶ್ಚಲವಗಿ ಇರಲಯ್ಯಾ!
ಕ್ಷಿಸುತಿರು ಸದಾ, ಪ್ರಾರ್ಥಿಪೆನಯ್ಯಾ!
ಬೇಡ ಭಯ ; ತಪಸು ಕಾಯುವುದಯ್ಯಾ!
ಕೆಂಗಾವಿ ವಸನ ನೀನುಡಬೇಕಯ್ಯಾ!
ಬೆತ್ತಲಾದಿತ್ಯನೆನಗಾದರ್ಶವಯ್ಯಾ!
ನ್ನಾಸೆ ವಿಜ್ಞಾಪಿಸಿಕೋಡಿಹೆನಯ್ಯಾ!!!
(ಅ) -ಯ್ಯಾನಾಜ್ಞೆಗಾನು ಸದಾ ಕಾದಿಹೆನಯ್ಯಾ!!!

ಹಿಂದಿನ ವಾಸನೆ ಮುಂದುವರಿಯಲಿಂದಿನ ಜನ್ಮ!   6(4191)

ದಿಟವಿದೆಂದರಿತು ಶ್ರದ್ಧೆಯಿಂದ ಮಾಡೀಗ ಕರ್ಮ!
ಯನಾದಿಂದ್ರಿಯ ಜೈಸಿ ಮಾಡು ಸತತ ಸತ್ಕರ್ಮ!
ವಾತ, ಪಿತ್ಥ, ಕಫ ನಾಶಕ್ಕೆ ಮಾಡಾಸನಾದಿ ಕರ್ಮ!
ರ್ವರೋಗ ಹರ ಈ ಅನುಭವ ಸಿದ್ಧ ಷಟ್ಕರ್ಮ!
ನೆರೆ ನಂಬಿ ಪ್ರತಿ ದಿನ ಮಾಡು ತಿಳಿದಿದ್ರ ಮರ್ಮ!
ಮುಂದೆ ಹುಟ್ಟಿ, ಸಾಯದಿಂದೇ ಮುಕ್ತನಾಗುವುದು ಧರ್ಮ!
ದುಡಿಮೆ ಇದಕ್ಕಾದರದೇ ಪವಿತ್ರಾಧ್ಯಾತ್ಮ ಕರ್ಮ!
ರ ಗುರುದತ್ತ ಆಚರಿಸಿ ತೋರಿದನೀ ಕರ್ಮ! (ದು)
-ರಿತ ದೂರನಾಗಲಿಕ್ಕಿದೇ ಸೂಕ್ತ ಆದರ್ಶ ಕರ್ಮ!
ದುನಾಥ ಬಣ್ಣಿಸಿಹನು ಕರ್ಮಾಕರ್ಮ ವಿಕರ್ಮ!
ಲಿಂಗ, ವರ್ಣ, ಭೇದವಿಲ್ಲದ್ದಾತ್ಮ ಚಿಂತನಾ ಸ್ವಧರ್ಮ!
ದಿನ ದಿನಕೆ ಸೌಂದರ್ಯ ಕಳಕೊಳ್ಳುತಿದೆ ಚರ್ಮ!
ರ, ನಾರಿಯರಿದನ್ನರಿತೀಗ ಮಾಡ್ಲಿ ಸ್ವಕರ್ಮ!
ರಾಜನ್ಮಾತೀತವಾಗಲಿಕ್ಕಿದಾಗ್ಬೇಕ್ವಿಶ್ವ ಧರ್ಮ! (ಮ)
-ನ್ಮಥಾರಿ ನಿರಂಜನಾದಿತ್ಯ ಶಿವನದ್ದಿದೇ ಧರ್ಮ!!!

ಹಿಂದಿನ ವಾಸನೆ, ಇಂದಿನ ಯೋಚನೆ! (ಇಂ)   6(3643)

ದಿನ ಯೋಚನೆ ಮುಂದಿನಾಶಾ ಭಾವನೆ! (ಮ)
-ನಸ್ಸಿಂತಾದರದೆಂತು ಶಾಂತಿ ಪಾಲನೆ?
ವಾಸನಾ ನಾಶಕ್ಕಾಗ್ಬೇಕೀಗ ಸಾಧನೆ!
ತತ ಮಾಡ್ಬೇಕಿದಕ್ಕಾತ್ಮೋಪಾಸನೆ!
ನೆಮ್ಮದಿ ನೆಲಸುವುದೆಂದಾಶ್ವಾಸನೆ!
ಇಂಗಿ ಭವಾಬ್ಧಿ ಆಗ್ವನು ತಾನವನೆ!
ದಿವ್ಯ ನಾಮಾಮೃತ ಸಾರ್ಥಕ ಸೇವನೆ!
ರ, ನಾರಿಯರಲ್ಲಿರ್ಬಾರದ ಸಹನೆ!
‘ಯೋಗಿ’ ಅರ್ಧ ನಾರೀಶ್ವರ ಶಿವ ತಾನೇ?
ರಾಚರ ವ್ಯಾಪಕನು ಈತ ತಾನೇ? (ನೆ)
-ನೆ ನಿರಂಜನಾದಿತ್ಯನೆಂದಾತನನ್ನೇ!!!

ಹಿಂದಿನದ್ದರಿಯೆ, ಮುಂದಿನದ್ದೊರೆಯೆ! (ಇಂ)   6(4017)

-ದಿನದ್ದಕ್ಕಿಂದೇ ಕೂಲಿಕೊಡು ಹರಿಯೇ!
ನಗನ್ಯ ಗತಿಯಿಲ್ಲ ಶ್ರೀ ಹರಿಯೇ! (ಎ)
-ದ್ದರೆ, ಕೂತ್ರೆ ನಿನ್ನ ಜಪ ಶ್ರೀ ಹರಿಯೇ!
ರಿದ್ಧಿ, ಸಿದ್ಧಿಯಾಸೆ ನನಗಿಲ್ಲ ಹರಿಯೇ! (ದ)
-ಯೆ ನಿನ್ನದಿದ್ದರೆ ಸಾಕು ಶ್ರೀ ಹರಿಯೇ!
ಮುಂಡಾಸು ಮಂಡೆಗೆ ರಕ್ಷಣೆ ಹರಿಯೇ!
ದಿವ್ಯ ದರ್ಶನವೀಗಾಗ್ಬೇಕು ಹರಿಯೇ!
ನ್ನಳಿಲು ಸೇವೆ ಕಾಣಿಕೆ ಹರಿಯೇ! (ಇ)
-ದ್ದೊಡಲು ಚರಣ ಸೇವೆಗೆ ಹರಿಯೇ! (ಹ)
-ರೆಯದ ದಿನದಂತೀಗಲ್ಲ ಹರಿಯೇ! (ಪ್ರಿ)
-ಯೆ ನಿರಂಜನಾದಿತ್ಯಗಾನು ಹರಿಯೇ!!!

ಹಿಂದಿಲ್ಲದಿಂದಿಲ್ಲ, ಇಂದಿಲ್ಲದೆ ಮುಂದಿಲ್ಲ!   6(3670)

ದಿನ, ರಾತ್ರಿ ಇಲ್ಲದಿದ್ದರಿದಾವ್ದೂ ಇಲ್ಲ! (ಎ)
-ಲ್ಲಕ್ಕೂ ಕಾರಣಕರ್ತನೊಬ್ಬನಿಲ್ಲದಿಲ್ಲ! (ಅಂ)
-ದಿಂದಿನ ಸಂಬಂಧದರಿವಿನ್ನೂ ಆಗಿಲ್ಲ!
ದಿವ್ಯ ಜ್ಞಾನವಿಲ್ಲದೇ ಇದಾಗುವುದಿಲ್ಲ! (ಬ)
-ಲ್ಲ ನಾರದಂದಿನಂತಿಂದೂ ಬಾರ್ದಾಗ್ವುದಿಲ್ಲ!
ಇಂದಿನ ಪರಿಸ್ಥಿತಿ ಕೆಟ್ಟಿರುವುದೆಲ್ಲಾ!
ದಿಕ್ಕೇ ತೋಚದಾಯ್ತು ಹರಿ, ಹರರಿಗೆಲ್ಲಾ! (ತ)
-ಲ್ಲಣಿಸಿದ್ದು ಚಂಡಿ ದ್ರೌಪದಿಯ ಕಂಡೆಲ್ಲಾ! (ಬಂ)
-ದೆನೆಂದು ನಾರದ ಬಂದು ಒರೆದನೆಲ್ಲಾ!
ಮುಂದೆ ಸುಖ, ಶಾಂತಿಯಿಂದಿದ್ದರವರೆಲ್ಲಾ!
ದಿವ್ಯ ಜೀವನ ಮಹಿಮೆ ತೋರ್ಬೇಕೀಗೆಲ್ಲಾ! (ಬ)
-ಲ್ಲ ನಿರಂಜನಾದಿತ್ಯಗೆಲ್ಲಾ ಹೇಳ್ಯಾಯ್ತಲ್ಲಾ!!!

ಹಿಂದು, ಮುಂದು ನೋಡದೆಲ್ಲರ ನಾ ನಂಬಿದೆ!   6(3767)

ದುರ್ವಿಧಿಯಿಂದ ನಾನೀಗ ವಂಚಿತನಾದೆ!
ಮುಂದೇನು ಮಾಡಬೇಕೆಂಬುದರಿಯದಾದೆ!
ದುಸ್ಸಂಗ ಫಲವಿದೆಂದರಿತವನಾದೆ!
ನೋವನ್ನೀಗ ನಾನು ಸಹಿಸದವನಾದೆ! (ಬಿ)
-ಡಬೇಕೆಲ್ಲಾ ಸಂಗವೆಂದು ನಿರ್ಧರಗೈದೆ! (ಕಂ)
-ದೆರೆದೆ ನಾ ನಿನ್ನ ದಯೆಯಿಂದೀಗ ತಂದೇ! (ನಿ)
-ಲ್ಲಲೆನ್ನ ಕಣ್ಣೆದುರು ನಿನ್ನ ಮೂರ್ತಿಯೊಂದೇ! (ಇ)
-ರದಿರಲಿಹದ ಸಂಬಂಧ ಇನ್ನು ಮುಂದೆ!
ನಾನೂ, ನೀನೂ ಸದಾ ಒಂದಾಗಿರ್ಬೇಕು ತಂದೇ!
ನಂಬಿಗೆ ದ್ರೋಹಿಗಳ ಶಿಕ್ಷಿಸು ನೀನಿಂದೇ!
ಬಿಸಿಯಾಗ್ದೇ ಬೆಣ್ಣೆ ಕರಗ್ದಲ್ಲವೇ ತಂದೇ? (ತಂ)
-ದೆ

! ನಿರಂಜನಾದಿತ್ಯತ್ಮನೂ ನೀನೂ ಒಂದೇ!!!

ಹಿಂದೂ ಮತದಲ್ಲಿ ದೇವರ ಸೇವೆ ತರತರ!   6(3956)

ದೂರ್ಬಾರದಾವುದನ್ನೂ, ಸರ್ವ ಮಾನ್ಯವೆಲ್ಲಾ ತರ!
ನಸ್ಸಿನ ಬೆಳವಣಿಗೆಗೆ ತಕ್ಕಂತೀ ತರ!
ತ್ವಮಸಿ ಸಿದ್ಧಾಂತ ಕೈಲಾಸ ಗಿರಿ ಶಿಖರ!
ರ್ಶನ ಪರಶಿವನದ್ದಿಲ್ಲಿ ಪ್ರಣವಾಕಾರ! (ಕ)
-ಲ್ಲಿನ ಲಿಂಗ, ಮೂರ್ತಿಯಲ್ಲಿದಿರ್ಪುದೂ ಸತ್ಯಸಾರ!
ದೇಶ, ಕಾಲಾತೀತವಾದುದಾ ಪರಿಪೂರ್ಣಾಕಾರ! (ಅ)
-ವರವರ ಭಕ್ತಿಗೆ ತಕ್ಕಂತವರ್ಗೆ ಗೋಚರ!
ಘುಪತಿಗೂ ಪ್ರೀತಿ ರಾಮೇಶ್ವರ ಲಿಂಗಾಕಾರ!
ಸೇತುಬಂಧನದ ಶ್ರಮವದ್ರಿಂದ ಪರಿಹಾರ! (ಧ)
-ವೆ ಸೀತಾ ಸಮೇತವಾದಾ ಸೇವೆ ಶಿವ ಸ್ವೀಕಾರ!
ನು, ಮನ, ಧನಾರ್ಪಣೆಯಿಂದಾಗಿತ್ತಾ ಆಚಾರ! (ನ)
-ರ, ನಾರಿಯರಿದನ್ನರಿತು ಮಾಡ್ಬೇಕು ಸಂಸಾರ!
ನುಜರ್ಲವ, ಕುಶರಂತಾಗುದಿಸಿ ಜೈಕಾರ! (ತ)
-ರ ತರ ಗುರು ನಿರಂಜನಾದಿತ್ಯನಿಂದುದ್ಧಾರ!!!

ಹಿಂದೂ ಸಂಸ್ಕೃತಿಯೌಚಿತ್ಯ!   5(2556)

ದೂರದೃಷ್ಟಿಗಾಗ್ಯೌಚಿತ್ಯ!
ಸಂಬಂಧ್ಯಾತ್ಮಗಾಗ್ಯೌಚಿತ್ಯ! (ಸಂ)
-ಸ್ಕೃತ್ಯಾಧ್ಯಾತ್ಮಿಕಾಗ್ಯೌಚಿತ್ಯ!
ತಿರು ಸೇವೆಗಾಗ್ಯೌಚಿತ್ಯ! (ಪ್ರಿ)
-ಯೌಷಧೀವಗಾಗ್ಯೌಚಿತ್ಯ!
ಚಿದಾನಂದಕ್ಕಾಗ್ಯೌಚಿತ್ಯ! (ನಿ)
-ತ್ಯ ಶ್ರೀ ನಿರಂಜನಾದಿತ್ಯ!!!

ಹಿಂದೆ, ಹಿಂದೆ, ಹಿದ್ಹಿಂದೇ ನಾ ಬಂದೆ! (ಮುಂ)   4(2127)

-ದೆ, ಮುಂದೆ, ಮುಂದ್ಮುಂದೇ ನೀ ನಡೆದೆ!
ಹಿಂದೆ, ಮುಂದೆಯ ಮಧ್ಯ ನಾ ನಿಂದೆ! (ಹಿಂ)
-ದೆಯೇ ಬಾರೆಂದು ಹೋದೆ ನೀ ಮುಂದೆ!
ಹಿಂದಿರುಗಿ ನೋಡದೇ ನೀನ್ಹೋದೆ! (ಹಿಂ)
-ದ್ಹಿಂದೇ ನಾ ನಡೆದೀಗ ಸುಸ್ತಾದೆ!
ದೇಹಾರೋಗ್ಯವಿಲ್ಲದವನಾದೆ!
ನಾನಿನ್ನಿಂದೀಗ್ಬಹು ದೂರವಾದೆ!
ಬಂದುದ್ಧರಿಸೆಂದಳ್ವವನಾದೆ! (ತಂ)
-ದೆ ನಿರಂಜನಾದಿತ್ಯ ನೀನ್ಬಂದೆ!!!

ಹಿಗ್ಗಬೇಡ, ನೀನು, ಕುಗ್ಗಬೇಡ! (ಅ)   4(1618)

ಗ್ಗವಾಗಿ ಬದುಕಿರಲೂ ಬೇಡ!
ಬೇರಿನ್ಯಾರೂ ಗತಿಯೆನಬೇಡ! (ಮೃ)
-ಡನ ಧ್ಯಾನ, ಜಪ, ಬಿಡಬೇಡ!
ನೀಚರೊಡನಾಟ ಮಾಡಬೇಡ! (ಅ)
-ನುಮಾನ ಗುರುವಿನಲ್ಲಿ ಬೇಡ!
ಕುಕರ್ಮಾಸಕ್ತನಾಗಿರಬೇಡ! (ಸ)
-ಗ್ಗವನ್ನಾದರೂ ಬಯಸಬೇಡ!
ಬೇರೆಯವರ ದೂಷಿಸಬೇಡ! (ಮೃ)
-ಡ ನಿರಂಜನಾದಿತ್ಯ ಕೇಡ್ಮಾಡ!!!

ಹಿಗ್ಗುವನು ಕುಗ್ಗುವನು ಜೀವ! (ಹಿ)   6(3724)

-ಗ್ಗು, ಕುಗ್ಗುಗಳಿಲ್ಲದವ ದೇವ! (ಜೀ)
-ವ ದೇವನಾಗಲ್ಬೇಕ್ಸಮ ಭಾವ! (ತಾ)
-ನು ಮಾಡ್ಬೇಕಿದಕ್ಕೆ ಗುರುಸೇವಾ!
ಕುಟಿಲತನವನ್ನೊಪ್ಪನವ! (ಗು)
-ಗ್ಗುರಿಯನ್ನವಾದ್ರೂ ತಿನ್ಬೇಕಿವ! (ಶಿ)
-ವನೆಂದರಿಯಬೇಕು ಗುರುವ! (ಅ)
-ನುಮಾನಪಟ್ಟರಾಗುವೆ ಶವ!
ಜೀರ್ಣಿಸಿಕೊಳ್ಬೇಕುಪದೇಶವ! (ಜೀ)
-ವ ನಿರಂಜನಾದಿತ್ಯನಾಗುವ!!!

ಹಿಟ್ಟು ಕೊಡಿಸಿ, ರೊಟ್ಟಿ ತಟ್ಟಿಸಿ,    1(73)

ಚೇಷ್ಟೆ ಬೇಡ!
ತನು ಕೊಡಿಸಿ, ಮನವಿಡಿಸಿ, ಬೇನೆ ಬೇಡ!
ವಸುಧೆಗಿಳ್ಸಿ, ಭಾರ ಹೊರಿಸಿ, ಜಾರಬೇಡ!
ಚಪಲ ಹೂಡಿ, ವಿಫಲಮಾಡಿ, ದೂಡಬೇಡ!
ನರನಮಾಡಿ, ನರಕ ನೀಡಿ, ನೂಕಬೇಡ!
ಮಂತ್ರವನಿತ್ತು, ತಂತ್ರದಿ ಕತ್ತು ಕೊಯ್ಯಬೇಡ!
ಧುರದಿ ನಿಂತು, ಧೈರ್ಯವನಿತ್ತು, ಸೋಲು ಬೇಡ!
ರಮಣನೆಂದು, ರಮಣಿಗಿಂದು ನೀಗಬೇಡ!
ಪಾವನವೆಂದು, ನಾಮವನಿಂದು ಸುಡಬೇಡ!
ನನ್ನವನೆಂದು, ನಿರಂಜನನೆಂದು ಭೇದಬೇಡ!!!

ಹಿಟ್ಟು ಬೂದಿಯ ಗುಟ್ಟನರಿಯಯ್ಯಾ! [ಸಿ]   5(3025)

-ಟ್ಟು ಬಿಟ್ಟುತ್ತಮಾತ್ಮ ನೀನಾಗಯ್ಯಾ!
ಬೂದಿಮುಚ್ಚಿದ ಕೆಂಡದಂತಿರಯ್ಯಾ!
ದಿವ್ಯ ಜ್ಞಾನ ಜ್ವಲಿಸುತ್ತಿರಲಯ್ಯಾ!
ಮ ಭಯವಾಗ ಹೋಗುವುದಯ್ಯಾ!
ಗುರುವೊಬ್ಬನೆಂಬರಿವಿರಲಯ್ಯಾ! (ಅ)
-ಟ್ಟಹಾಸಕ್ಕೆ ಮೋಸ ಹೋಗಬೇಡಯ್ಯಾ!
ರನುದ್ಧಾರಾತ್ಮಜ್ಞಾನದಿಂದಯ್ಯಾ!
ರಿಪುಗಳಿಗಾಗೆಡೆಯಿಲ್ಲವಯ್ಯಾ! (ಮಾ)
-ಯವಾಗುವುದೆಲ್ಲಾ ವ್ಯಾಮೋಹವಯ್ಯಾ! (ಅ)
-ಯ್ಯಾ ನಿರಂಜನಾದಿತ್ಯನಂತಿರಯ್ಯಾ!!!

ಹಿಡಿವುದು, ಬಿಡುವುದೊಡೆಯನಿಷ್ಟ! (ಅ)   5(2614)

-ಡಿಗಡಿಗವನ ನೆನೆವುದು ಶ್ರೇಷ್ಟ! (ಬೇ)
-ವು ಬಿತ್ತಿ ಮಾವು ಪಡೆಯುವುದು ಕಷ್ಟ!
ದುರಿತದೂರನವನೆಂಬುದು ಸ್ಪಷ್ಟ!
ಬಿಟ್ಟರವನ ಶ್ರೀಪಾದಗಳ ನಷ್ಟ! (ದು)
-ಡುಕಿ ನಡೆದರಾಗ್ವುದು ಯೋಗಭ್ರಷ್ಟ! (ಆ)
-ವುದಕ್ಕೂ ಹೇಸ ಪರಮ ಪಾಪೀ ದುಷ್ಟ!
ದೊರಕಿದ್ದನ್ನುಂಬ ತೃಪ್ತ ತಪೋ ನಿಷ್ಟ! (ಕ)
-ಡೆಗಣ್ಣಿಂದ ಕನಿಷ್ಟನ ಕಾಣಾ ಜೇಷ್ಟ!
ದುಪತಿಯ ಸೇವೆಯಿಂದವ ತುಷ್ಟ!
ನಿತ್ಯಾತ್ಮಧ್ಯಾನದಿಂದವನೊಬ್ಬ ಶಿಷ್ಟ! (ಇ)
-ಷ್ಟ, ಶ್ರೀ ನಿರಂಜನಾದಿತ್ಯ ಸರ್ವೋತ್ಕೃಷ್ಟ!!!

ಹಿರಣ್ಯಗರ್ಭಗಾಗಿರಲೆಲ್ಲಾ ಹಬ್ಬ!   6(3886)

ವಿಯುದಿಸಿದರುಂಟು ಎಲ್ಲಾ ಹಬ್ಬ! (ಗ)
-ಣ್ಯ ಹದಿನಾಲ್ಕು ಲೋಕಕ್ಕೂ ಅವನೊಬ್ಬ!
ಗನಮಣಿಯಂತಾಗ್ಬೇಕ್ಪ್ರತಿಯೊಬ್ಬ! (ದ)
-ರ್ಭಶಾಯಿ ಅವನಂತಾದವರಲ್ಲೊಬ್ಬ!
ಗಾರುಡಿಗಾರನಾದರೂ ಕೃಷ್ಣನೊಬ್ಬ!
ಗಿರಿಜಾಧವ ನಿಸ್ಸಂದೇಹವಾಗೊಬ್ಬ!
ಮೇಶ ಅವನೇ ಆದವರಲ್ಲೊಬ್ಬ!
ಲೆಃಖಕ್ಕೆ ಸಿಗ್ಬಹುದಿನ್ಯಾರಾದ್ರೊಬ್ಬಿಬ್ಬ! (ಎ)
-ಲ್ಲಾ ಬಲ್ಲವರ್ಬರೆದಿಹರಿವ್ನ ಕಬ್ಬ!
ರನಾಗಿ ಹೀರುವನೆಲ್ಲರ ಕೊಬ್ಬ! (ಒ)
-ಬ್ಬ ನಿರಂಜನಾದಿತ್ತಗೀ ಎಲ್ಲಾ ಹಬ್ಬ!!!

ಹಿರಿಮೆ, ಕಿರಿಮೆಗಳ ಜಗಳ ಸಾಕಪ್ಪ! (ವೈ)   6(3951)

-ರಿ ನಿಗ್ರಹವೆರಡ್ರಿಂದ್ಲೂ ಆಗುವುದಿಲ್ಲಪ್ಪಾ!
ಮೆಲುಕು ಹಾಕಿ ಗುರುಬೋಧೆ ಸಿದ್ಧನಾಗಪ್ಪ!
ಕಿರುಕುಳ ವೃತ್ತಿ ತರಿವುದು ಕೊರಳಪ್ಪಾ! (ಅ)
-ರಿತಿದನ್ನಿರು ಸತತ ಸದ್ವೃತ್ತಿಯಲ್ಲಪ್ಪಾ!
ಮೆಟ್ಟಿ ಪಾತಾಳಕ್ಕಿಳಿಸಬೇಕು ಸಿಟ್ಟನ್ನಪ್ಪಾ!
ತಿಗೇಡು ಬರಲಿಕ್ಕಿದೇ ಕಾರಣವಪ್ಪಾ! (ಆ)
-ಳವಾಗ್ಯೆಲ್ಲವನ್ನೂ ಯೋಚನೆ ಮಾಡಿ ನೋಡಪ್ಪಾ!
ನನ, ಮರಣದಿಂದ ಪಾರಾಗಬೇಕಪ್ಪಾ!
ಗನ ಸದೃಶ ನೀನಾದರಿದಾಗ್ವುದಪ್ಪಾ! (ಥ)
-ಳಕು, ಕೊಳಕುಗಳೆಲ್ಲಾ ತೊಳೆಯಬೇಕಪ್ಪಾ!
ಸಾಧಿಸಿದರೆ ಸಬಳ ನುಂಗಬಹುದಪ್ಪಾ!
ಣ್ಣಾರೆ ಕಂಡ್ರೂ ಪರಾಂಬರಿಸಿ ನೋಡ್ಬೇಕಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯನೇ ನೀನಾಗಬೇಕಪ್ಪಾ!!!

ಹಿರಿಯನೆಲ್ಲರಿಗಾ ಶ್ರೀ ಹರಿ! [ಅ]   4(2339)

-ರಿಕುಲಾನಲ ಶ್ರೀ ನರಹರಿ! (ಭ)
-ಯತೋರ್ಯಭಯವೀವಾ ಶ್ರೀಹರಿ!
ನೆಪ ಮಾತ್ರ ಸಂಸಾರೀ ಶ್ರೀ ಹರಿ! (ನ)
-ಲ್ಲ, ನಲ್ಲೆ ತಾನಾಗಿರ್ಪಾ ಶ್ರೀ ಹರಿ! (ಅ)
-ರಿಯದರ್ಗಹಂಕಾರೀ ಶ್ರೀಹರಿ!
ಗಾನಲೋಲ, ಮಾಲೋಲಾ ಶ್ರೀ ಹರಿ!
ಶ್ರೀಗುರು ದತ್ತಾತ್ರೇಯಾ ಶ್ರೀ ಹರಿ!
ದಿನಾಲ್ಕ್ಲೋಕೇಶ್ವರಾ ಶ್ರೀ ಹರಿ! (ಹ)
-ರಿ ಶ್ರೀ ನಿರಂಜನಾದಿತ್ಯಾಕಾರಿ!!!

ಹುಚ್ಚನಿಗುಚ್ಚೆ ಕುಡಿಯಬೇಕೆಂಬಿಚ್ಛೆ! (ಬೆ)   6(3584)

-ಚ್ಚಗಿನ ಹಚ್ಚಡ ಚಳಿ ಬಂದಾಗಿಚ್ಛೆ!
ನಿನ್ನಿಚ್ಛೆ, ನನ್ನಿಚ್ಛೆ, ಎಲ್ಲಾ ದೇವರಿಚ್ಛೆ!
ಗುಣ, ದೋಷ ನೋಡಿ ಪಡಬೇಕು ಇಚ್ಛೆ! (ಕ)
-ಚ್ಛೆ, ಕೈ, ಬಾ

ಸ್ವಚ್ಛವಿರ್ಬೇಕೆಂಬುದಾರ್ಯೇಚ್ಛೆ!
ಕುಜನರಿಗರಿವಾಗದೀ ಸದಿಚ್ಛೆ! (ಹೊ)
-ಡಿ, ಬಡಿ, ಕಡಿಯೆಂಬುದವನಿಗಿಚ್ಛೆ!
ದುಪನ ಸಂತಾನಕ್ಕೂ ಬಂತಾ ಇಚ್ಛೆ!
ಬೇಡೆಂದ್ರೂ ಕೃಷ್ಣನಾಜ್ಞೆ ಮೀರಿತಾ ಇಚ್ಛೆ!
ಕೆಂಡವಾಯ್ತವರನ್ನು ಸುಡ್ಲಿಕ್ಕಾ ಇಚ್ಛೆ!
ಬಿಟ್ಟಿ ಬಸವನ ಕಟ್ಟಬಾರದಿಚ್ಛೆ! (ಇ)
-ಚ್ಛೆ, ನಿರಂಜನಾದಿತ್ಯಗೆ ನಿರಿಚ್ಛೆ!!!

ಹುಚ್ಚಪ್ಪಾ! ನಿನಗಿಚ್ಛೆ ಉಚ್ಚೆಗುಂಡಿ ಏನಪ್ಪಾ!   6(3320)

(ಅ)-ಚ್ಚರಿಯಾಗುತಿದೆ ನಿನ್ನ ನೋಡಿ ನನಗಪ್ಪಾ!
(ತು)-ಪ್ಪಾನ್ನ ತಿಂದು ಬೆಪ್ಪನೀನಾಗಬಹುದೇನಪ್ಪಾ?
ನಿನ್ನಪ್ಪನೆಂತಿರ್ಪನೆಂದರಿತರತಿರ್ಬೇಕಪ್ಪಾ!
ರಕ ಯಾತನೆ ನಿನಗಾಗುಂಡಿಯಲ್ಲಪ್ಪಾ!
ಗಿಡಬಳ್ಳಿಯಂತಾಗಬಾರದೀ ಜನ್ಮವಪ್ಪಾ!
(ಇ)-ಚ್ಛೆ ಸ್ವಚ್ಛವಾದಾಗ ಹುಚ್ಚುಬಿಟ್ಟು ಹೋಗ್ವುದಪ್ಪಾ!
ತ್ತಮರ ಸಂಗವಿದಕ್ಕತ್ಯಗತ್ಯವಪ್ಪಾ!
(ಕ)-ಚ್ಚೆ, ಕೈ, ಬಾ

, ಸ್ವಚ್ಛವಾಗ್ಯಚ್ಚುತನಾಗಬೇಕಪ್ಪಾ!
ಗುಂಡಿನೇಟಿಗೂ ಆಗಂಜಬೇಕಾಗಿಲ್ಲವಪ್ಪಾ!
(ಆ)-ಡಿ ಮಾಡದವ ಅಧಮನೆಂದೆನಿಪನಪ್ಪಾ!
ಕೆ ಸಾವಕಾಶ ಪರಿವರ್ತನೆಗೀಗಪ್ಪಾ!
ರಜನ್ಮ ಬಂದಾಗ ಗುರುಸೇವೆ ಮಾಡಪ್ಪಾ!
(ಅ)-ಪ್ಪಾ, ನಿರಂಜನಾದಿತ್ಯನಿರ್ಪಬಗೆ ಹೀಗಪ್ಪಾ!!!

ಹುಚ್ಚಪ್ಪಾ! ಮಾಯಾ ಮೋಹ ಹುಚ್ಚಪ್ಪಾ! (ಮ)   2(631)

-ಚ್ಚರದಾಚಾರಾತುರ ಹುಚ್ಚಪ್ಪಾ! (ತ)
-ಪ್ಪದಾಹಾರ, ವಿಹಾರ ಹುಚ್ಚಪ್ಪಾ!
ಮಾನಾಭಿಮಾನಾತುರ ಹುಚ್ಚಪ್ಪಾ! (ಕಾ)
-ಯಾಡಂಬರಾಲಂಕಾರ ಹುಚ್ಚಪ್ಪಾ!
ಮೋಸ ಮಾಡುವ ನರ ಹುಚ್ಚಪ್ಪಾ!
ಗರಣದಾಚಾರ ಹುಚ್ಚಪ್ಪಾ!
ಹುಸಿ ಮಾತಾಡ್ವ ನರ ಹುಚ್ಚಪ್ಪಾ! (ಬ)
-ಚ್ಚಲ ಕೊಚ್ಚೆಯುಂಡರೆ ಹುಚ್ಚಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯ ಉಚ್ಚಪ್ಪಾ!!!

ಹುಚ್ಚು ದರ್ಬಾರಿಗೆ ತುಚ್ಛ ಪರಿವಾರ! (ಕ)   5(3235)

-ಚ್ಚುವ ನಾಯಿಗೆ ಏಟೊಂದೇ ಪರಿಹಾರ!
ಯಾ, ದಾಕ್ಷಿಣ್ಯಗಳಿಗದು ಬಾಹಿರ! (ಸೇ)
-ರ್ಬಾರದದೆಂದಿಗೂ ನಿತ್ಯಾನಂದ ಮಂದಿರ!
ರಿಪುಗಳಿಂದ ಹಾಳಾರಾಮ ಸರ್ಕಾರ!
ಗೆಳೆಯನದಕ್ಕೆ ಮಾರುತಿಯಾಕಾರ!
ತುಂಬುವನವ ಶ್ರೀ ರಾಮನಾಮ ಸಾರ! (ಸ್ವ)
-ಚ್ಛವಾಗುಳಿಯುವುದು ನಿರಂತರ!
ತಿತ ಪಾವನ ಸ್ವಾಮಿ ರಘುವೀರ!
ರಿಸಿ, ಮುನಿಗಳಿಂದ ಶಕ್ತಿ ಸ್ವೀಕಾರ!
ವಾಮಾಂಗಿ ಸೀತಾ ಸಹಿತ ರಾಜ ಭಾರ! (ಕಿ)
-ರಣ ನಿರಂಜನಾದಿತ್ಯಗಲಂಕಾರ!!!

ಹುಚ್ಚು ಬಿಡಸುವವನನ್ನೊಡನಾಡು! (ಹು)   6(4246)

-ಚ್ಚು ಹಿಡಿಸುವವನನ್ನೊಡನೇ ಬಿಡು!
ಬಿದಿ, ಹರಿ, ಹರರೇಕ ರೂಪ ನೋಡು! (ಸು)
-ಡಿಯ ಗೊಂಬೆಗಡ್ಡಬೀಳುವುದ ಬಿಡು!
ಸುಮತಿಯ ಪ್ರೇರಣೆಗೆ ಸದಾ ಬೇಡು!
ಕ್ರ ಬುದ್ಧಿಯನ್ನು ಬಹುದೂರ ಮಾಡು!
ಸುದೇವಾತ್ಮಜನ ಗೀತೆಯ ಹಾಡು!
ರನಂತೆ ಸ್ವಧರ್ಮಪಲನೆ ಮಾಡು! (ನಿ)
-ನ್ನೊಡಲಿನಂತನ್ಯರೊಡಲನ್ನೂ ನೋಡು! (ಎ)
-ಡರ್ಗಂಜದೇ ಸಾಧಿಸಿ ನಿನ್ನೂರಿಗೋಡು!
ನಾಮಸ್ಮರಣಾಬಲದಿಂದದ ಮಾಡು! (ಮಾ)
-ಡು ನಿರಂಜನಾದಿತ್ಯಾನಂದನ ಕೂಡು!!!

ಹುಟ್ಟಡಗಿಸಬೇಕು ರೋಗಯ್ಯಾ! [ಕೊ]   4(2469)

-ಟ್ಟ ಸಲಹೆಯಂತಿರಬೇಕಯ್ಯಾ! (ನ)
-ಡತೆಯನ್ನು ತಿದ್ದಿಕೊಳ್ಬೇಕಯ್ಯಾ! (ಬಿ)
-ಗಿಯಾಗಿರಬಾರದಂಗಿಯಯ್ಯಾ!
ಲೀಸಾಗಿ ಗಾಳಿಯಾಡ್ಬೇಕಯ್ಯಾ!
ಬೇನೆಯ ಕಾರಣರಿಯ್ಬೇಕಯ್ಯಾ! (ಹಾ)
-ಕು ಅದಕ್ಕೆ ತಡೆ ಮೊದಲಯ್ಯಾ! (ಆ)
-ರೋಪಿಗಳ ಮಾತು ಕೇಳ್ಬೇಡಯ್ಯಾ! (ನಾ)
-ಗರ ಕಲ್ಲಿಗಡ್ಡ ಬೀಳ್ಬೇಡಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯನಾಗಯ್ಯಾ!!!

ಹುಟ್ಟದ ತಪ್ಪಿಗೆ ಬೆಟ್ಟು ಚೀಪಬೇಕು! (ಬಿ)   6(4114)

-ಟ್ಟಿ ಬಸವನ ಕಾಟ ಸಹಿಸಬೇಕು!
ತ್ತ ಗುರುಲೀಲೆಯನ್ನರಿಯಬೇಕು!
ತ್ವ ಸಿದ್ಧಾಂತಾಚಾರಕ್ಕೆ ಬರಬೇಕು! (ಅ)
-ಪ್ಪಿ ತಪ್ಪಿ ಬಿದ್ದರೆ ಮತ್ತೆ ಏಳಬೇಕು!
ಗೆಳೆತನ ಸಜ್ಜನರಲ್ಲಾಗಬೇಕು!
ಬೆಲ್ಲ, ಬೇವೂ, ತಿನ್ನುವರ್ಥರಿಯಬೇಕು! (ಹು)
-ಟ್ಟು, ಸಾವಿನ, ಭಯ ತಪ್ಪಿಹೋಗಬೇಕು!
ಚೀಲ ಸಂಚಿತದ್ದು ಬರಿದಾಗಬೇಕು!
ರಮಾತ್ಮ ಸಾಕ್ಷಾತ್ಕಾರವಾಗಬೇಕು!
ಬೇಕು, ಹುಟ್ಟಿದ್ದಕ್ಕಿದೆಲ್ಲಾ ಆಗಬೇಕು!
ಕುಲ, ನಿರಂಜನಾದಿತ್ಯನದ್ದಾಗ್ಬೇಕು!!!

ಹುಟ್ಟಿತು, ಬೆಳೀತು, ಸತ್ತಿತು ಮನಸು (ಕ)   6(3596)

-ಟ್ಟಿ ಮನೆ, ಮಠ ಪಟ್ಟವೇರ್ತಾ ಮನಸು!
ತುಪ್ಪ, ಹಾಲು, ಮೊಸ್ರು ತಿಂದಿತಾ ಮನಸು!
ಬೆರೆತು ಸತಿಯೊಡನಿತ್ತಾ ಮನಸು! (ಆ)
-ಳೀ, ಬಾಳೀ, ಮಲಿನವಾಯಿತಾ ಮನಸು!
ತುದಿ, ಮೊದ್ಲಿಲ್ದಾಸೆಗೀಡಾಯ್ತಾ ಮನಸು!
ಟೆಯಾಡಿ ದಿಟಕ್ಕಡ್ಡಾಯ್ತಾ ಮನಸು! (ಹ)
-ತ್ತಿ, ಇಳಿದು, ಸುತ್ತಿ, ಸುಸ್ತಾಯ್ತಾ ಮನಸು!
ತುಕ್ಕು ಹಿಡಿದ ಯಂತ್ರವಾಯ್ತಾ ಮನಸು!
ಳೆ, ಗಾಳಿಯಲ್ಲೊದ್ದಾಡಿತಾ ಮನಸು!
ರಳುರುಳಿ ಮುದುರಿತಾ ಮನಸು! (ಲೇ)
-ಸು ನಿರಂಜನಾದಿತ್ಯಾನಂದ ಮನಸು!!!

ಹುಟ್ಟಿದಾಗಿದ್ದಂತೆ ಜಟ್ಟಿಯಾದಾಗಿಲ್ಲ! [ಬು]   5(3179)

-ಟ್ಟಿಯಲ್ಲಿಟ್ಟ ಕಾಯ್ಮತ್ತೆ ಹಣ್ಣಾಗ್ವುದೆಲ್ಲಾ!
ದಾಸ್ಯದ ದುಃಖ ಸ್ವಾತಂತ್ರಬಂದಾಗಿಲ್ಲ!
ಗಿಡವಾಗಿದ್ದಾಗಿದ್ದಂತೆ ಮರವಿಲ್ಲ! (ಬಿ)
-ದ್ದಂದಿದ್ದ ನೋವೆದ್ದೋಡಾಡುವಾಗೇನಿಲ್ಲ!
ತೆರೆ ಬಿದ್ದಾಗಿದ್ದಂತದ್ದತ್ತಿದಾಗಿಲ್ಲ!
ವ್ವನದಾನಂದ ವೃದ್ಧಾಪ್ಯದಲ್ಲಿಲ್ಲ! (ಹಿ)
-ಟ್ಟಿನ ರುಚಿ, ರೂಪ ರೊಟ್ಟಿಯಾದಾಗಿಲ್ಲ!
ಯಾದವೇಂದ್ರನಂತವನ ಮಕ್ಕಳಿಲ್ಲ! (ಆ)
-ದಾಯ ಬಂದಾಗಾದಾನಂದ ನಷ್ಟಕ್ಕಿಲ್ಲ! (ಭೋ)
-ಗಿಯ ದುಃಖ ಯೋಗಿಯಾದವನಿಗಿಲ್ಲ! (ಪು)
-ಲ್ಲ ನಿರಂಜನಾದಿತ್ಯಗಾನಂದವೆಲ್ಲಾ!!!

ಹುಟ್ಟಿದಾಗೊಂದೂಟ, ಸತ್ತಾಗೊಂದೂಟ! (ಹು)   4(1740)

-ಟ್ಟಿದಾಗಾಗುವುದು ಸಂತೋಷದೂಟ! (ಹೋ)
-ದಾಗಾಗುವುದತ್ಯಂತ ದುಃಖದೂಟ! (ಹಾ)
-ಗೊಂದೂಟ, ಹೀಗೊಂದೂಟ, ನಿತ್ಯದೂಟ! (ಒಂ)
-ದೂಟವೂ ಇಲ್ಲದಾಗುಪವಾಸ್ದೂಟ! (ಆ)
-ಟ, ಪಾಠ, ನೋಟವೆಲ್ಲಾ ಮನಕ್ಕೂಟ!
ಚ್ಚಿದಾನಂದದೂಟಮೃತದೂಟ! (ವಿ)
-ತ್ತಾರ್ಜನೆಯೂಟ ಸಾವು ನೋವಿನೂಟ!
ಗೊಂಬೆಯಾಟದೂಟ ಉಂಬಲಾಗದೂಟ! (ಅಂ)
-ದೂಟ, ಇಂದೂಟ, ಎಂದೆಂದಿದೇ ಊಟ! (ದಿ)
-ಟ ನಿರಂಜನಾದಿತ್ಯಾನಂದದೂಟ!!!

ಹುಟ್ಟಿದೆನು ಶಿವನಿಷ್ಟದಂತೆ! [ಇ]   3(1242)

-ಟ್ಟಿಹನು ನನ್ನ ತನ್ನಿಷ್ಟದಂತೆ! (ಹಿಂ)
-ದೆ, ಮುಂದಿಂದೆಲ್ಲಾ ತನಿಷ್ಟದಂತೆ! (ಅ)
-ನು ಭವಿಸ್ಯಾಯ್ತಾತನಿಷ್ಟದಂತೆ!
ಶಿಕ್ಷೆ, ರಕ್ಷೆಯಾತನಿಷ್ಟದಂತೆ!
ಸನಾನ್ನವಾತನಿಷ್ಟದಂತೆ!
ನಿತ್ಯ ಸೇವೆಯಾತನಿಷ್ಟದಂತೆ! (ಕ)
-ಷ್ಟ, ಸುಖಗಳಾತನಿಷ್ಟದಂತೆ! (ತ)
-ದಂಗ ಸಂಗಕ್ಕಾತನಿಷ್ಟದಂತೆ! (ಸಂ)
-ತೆ, ನಿರಂಜನಾದಿತ್ಯಗಿಲ್ಲಂತೆ!!!

ಹುಟ್ಟಿದ್ದಕ್ಕಾಗಿದ್ದು ಸಾಯ್ಬೇಕು! (ಗ)   6(4363)

-ಟ್ಟಿ ಮುಟ್ಟಾಗಿ ಇದ್ದು ಸಾಯ್ಬೇಕು! (ತ)
-ದ್ದರ್ಶನ ಪಡೆದು ಸಾಯ್ಬೇಕು! (ತ)
-ಕ್ಕಾಚಾರದಲ್ಲಿದ್ದು ಸಾಯ್ಬೇಕು! (ಯೋ)
-ಗಿ ಶಿವನಂತಿದ್ದು ಸಾಯ್ಬೇಕು! (ಮು)
-ದ್ದು ಮಗ ತಾನಾಗಿ ಸಾಯ್ಬೇಕು!
ಸಾಧಿಸಿ ಸಾಯುಜ್ಯ ಸಾಯ್ಬೇಕು! (ಸಾ)
-ಯ್ಬೇಕು, ಹುಟ್ಟದಂತೆ ಸಾಯ್ಬೇಕು! (ಟಾ)
-ಕು ನಿರಂಜನಾದಿತ್ಯಾಗ್ಬೇಕು!!!

ಹುಟ್ಟಿಸಿದವನಿಟ್ಟಂತಿರಬೇಕು! (ಸಿ)   6(3791)

-ಟ್ಟಿಗೆದ್ದು, ಬಿದ್ದೊದ್ದಾಡದಿರಬೇಕು!
ಸಿಹಿ, ಕಹಿ ಏನ್ಕೊಟ್ರೂ ತಿನ್ನಬೇಕು!
ಡ್ದನಾದ್ರೂ, ಹೆಡ್ಡನಾದ್ರೂ ಇರ್ಬೇಕು!
ನವಾಸಕ್ಕಟ್ಟಿದ್ರೂ ಹೋಗಬೇಕು!
ನಿತ್ಯಾನಂದವಿತ್ತ್ರೂ ಆನಂದಿಸ್ಬೇಕು! (ಉ)
-ಟ್ಟಂಬರ ಬಿಚ್ಚಿಹಾಕೆಂದ್ರೆ ಬಿಚ್ಚೇಕು!
ತಿರುಪತೀಶನಾಗೆಂದ್ರೆ ಆಗ್ಬೇಕು!
ತ್ನಾಭರಣತೊಡೆಂದ್ರೆತೊಡ್ಬೇಕು!
ಬೇಡಯಾವುದೂಅಂದ್ರೆ ಬಿಸಾಡ್ಬೇಕು! (ಭ)
-ಕುತಿ ನಿರಂಜನಾದಿತ್ಯ ಕೊಡ್ಬೇಕು!!!

ಹುಟ್ಟು ಗುಣ ಸುಟ್ರೂ ಬಿಟ್ಟು ಹೋಗದಯ್ಯಾ! (ಗು)   6(3671)

-ಟ್ಟು ಇದ ತಿಳಿದು ತೃಪ್ತಿಯಿಂದಿರಯ್ಯಾ!
ಗುಡ್ಡ, ಕಾಡು ಸುತ್ತಿದ್ದೂ ನೆನಪುಂಟಯ್ಯಾ! (ಹ)
-ಣ, ಹಣ ಎಂತ ಬಡ್ಕೊಂಡದ್ದೂ ಉಂಟಯ್ಯಾ!
ಸುಖ ಜಗಜೀವನ ಬೇಡಿದ್ದುಂಟಯ್ಯಾ! (ಕೊ)
-ಟ್ಟ್ರೂ ಈಗ ಬೇಡವೆಂದು ಪ್ರಾರ್ಥಿಪೆನಯ್ಯಾ!
ಬಿಸಿಲ್ಮಳೆ ಈಗ ಸಹಿಸ್ಬಲ್ಲೇನಯ್ಯಾ! (ಕ)
-ಟ್ಟುನಿಟ್ಟಿನ ನೇಮ ಈಗೇನಿಲ್ಲವಯ್ಯಾ!
ಹೋದದ್ದಕ್ಕೀಗ ಅಳುವುದಿಲ್ಲವಯ್ಯಾ!
ಗನ ಸದೃಶಾತ್ಮಾದರ್ಶವಿದಯ್ಯಾ!
ತ್ತ ಗುರು ದೇವನ ಕೃಪೆಯಿದಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾನಂದ ಹೊಂದಯ್ಯಾ!!!

ಹುಟ್ಟು ಸಾವಿನ ಬಾಳಲ್ಲರ್ವತ್ತೇಳಾಯ್ತು! (ಜು)   5(2793)

-ಟ್ಟು, ಜನಿವಾರ ಕಿತ್ತು ಎಸೆದದ್ದಾಯ್ತು!
ಸಾಕಾರ, ನಿರಾಕಾರ ಸಾಧನೆಯಾಯ್ತು!
ವಿಕಲ್ಪ, ಸಂಕಲ್ಪ ಬೇಡೆಂಬಅರಿವಾಯ್ತು!
ಶ್ವರದಾಸೆಗೆ ಮನಸ್ಸೋಡದಾಯ್ತು!
ಬಾಲ್ಯಾದ್ಯವಸ್ಥೆ ದೇಹದಲ್ಲಿ ಕಂಡಾಯ್ತು! (ತ)
-ಳಮಳಕ್ಕೀಗವಕಾಶವಿಲ್ಲದಾಯ್ತು! (ಎ)
-ಲ್ಲವನು ಬಲ್ಲ ಗುರುಪಾದ ಸೇರ್ಯಾಯ್ತು! (ಸ)
-ರ್ವಂತರ್ಯಾಮಿ ತಾನೆಂಬುಪದೇಶಾಯ್ತು! (ಚಿ)
-ತ್ತೇಕಾಗ್ರತೆಯಿಂದಿದ ಮನಗಂಡಾಯ್ತು! (ಗೋ)
-ಳಾಡುತ್ತಿದ್ದ ಜೀವನೋದ್ಧಾರವಿಂತಾಯ್ತು! (ಆ)
-ಯ್ತು, ನಿರಂಜನಾದಿತ್ಯಾನಂದ ತಾನಾಯ್ತು!!!

ಹುಟ್ಟು, ಸಾವಿಲ್ಲದವ ಅನಂತ! (ಮು)   2(969)

-ಟ್ಟು, ಮಡಿ ನೋಡದವ ಅನಂತ!
ಸಾಕಾರದಂತರ್ಯಾಮಿ ಅನಂತ!
ವಿಮಲಾಂತರಂಗಸ್ವಾಮ್ಯನಂತ! (ಮ)
-ಲ್ಲಮರ್ದನ ಜನಾರ್ದನಾನಂತ!
ತ್ತಾತ್ರೇಯಾವಧೂತ ಅನಂತ!
ರ್ಣಾದಿ ಭೇದಾತೀತ ಅನಂತ!
ನಂತನಾಮ, ರೂಪಿ ಅನಂತ!
ನಂದ ಕಂದ ಗೋವಿಂದ ಅನಂತ! (ಪಿ)
-ತ, ನಿರಂಜನಾದಿತ್ಯ ಅನಂತ!!!

ಹುಟ್ಟು, ಸಾವಿಲ್ಲದಾತ ಅನಂತ! [ಮು]   2(968)

-ಟ್ಟು, ಮಡಿ ನೋಡದಾತ ಅನಂತ!
ಸಾಕು, ಬೇಕಿಲ್ಲದಾತ ಅನಂತ!
ವಿಮಲ ಸ್ವಸ್ಥಿತಿ ಸ್ಥಿತಾನಂತ! (ಕ್ಷು)
-ಲ್ಲ ವಿಷಯ ಪ್ರೇಮಾತೀತಾನಂತ!
ದಾತ, ನಾಥ, ಜಗನ್ನಾಥಾನಂತ!
‘ತತ್ವಮಸಿ’ ಸಿದ್ಧಾಂತಾರ್ಥಾನಂತ!
ಸದೃಶ ಗೀತಾಮೃತಾನಂತ! (ಅ)
-ನಂತ ನಾಮ, ರೂಪಿನಾತ್ಮಾನಂತ!
ನ್ನಿರಂಜನಾದಿತ್ಯಾತ್ಮಾನಂತ!!!

ಹುಟ್ಟುಗುಣ ಬೆಟ್ಟ ಹತ್ತಿದ್ರೆ ಹೋದಿತೇ? (ಜು)   4(1954)

-ಟ್ಟು ಹೋದ ಮೇಲೆ ಹೂ ಮುಡಿಯಲಾದೀತೇ?
ಗುರುಸೇವಾನಿರತಗನ್ಯಾಯಾದಿತೇ? (ಕ)
-ಣಜ ತುಂಬಿದ ಮೇಲುಪವಾಸಾದೀತೇ?
ಬೆರಳು ಹೋದ ಮೇಲ್ಬರಿಯಲಾದೀತೇ? (ಅ)
-ಟ್ಟಡಿಗೆ ಸುಟ್ಟು ಹೋದರುಣಲಾದೀತೇ?
ಠ ಮಾಡಿದರೆ ರೋಗ ಹರಿದೀತೇ? (ಬ)
-ತ್ತಿದ ಕೆರೆ ಬಿತ್ತನೆಗನ್ಕೂಲಾದೀತೇ? (ಮು)
-ದ್ರೆಯೊತ್ತದ ಎತ್ತು ಬಸವನಾದೀತೇ?
ಹೋಟೆಲೂಟ ಆರೋಗ್ಯಪ್ರದವಾದೀತೇ?
ದಿ

ರ್ಘಾಭ್ಯಾಸವಿಲ್ಲದೆ ಸಿದ್ಧಿಯಾದೀತೇ?
ತೇಜ ತಿರಂಜನಾದಿತ್ಯನ ಬಿಟ್ಟೀತೇ???

ಹುಟ್ಟುವಾಗ್ಲೇ ಬಾಳು ರೂಪಿತವಾಗಿದೆ! (ಗು)   6(4214)

-ಟ್ಟ್ವು ರಟ್ಟಾಗದೇ ಜೀವರ್ಗೆ ಕಷ್ಟಾಗದೆ! (ಆ)
-ವಾವ ಸಮತಕ್ಕದದಾಗುತ್ತಲಿದೆ! (ಆ)
-ಗ್ಲೇ ಬೇಕೆಂದದ್ದೆಲ್ಲಾ ಆಗದುಳಿದಿದೆ!
ಬಾನ್ಮಣಿಗೂ ಇದು ಅನಿವಾರ್ಯಾಗಿದೆ! (ಗೋ)
-ಳು ಮೋಡಗಳದ್ದು ಅವನಿಗೂ ಇದೆ! (ಊ)
-ರುರಲೆದಾಟಕ್ಕಿದೆಲ್ಲಾಗ್ಬೇಕಾಗಿದೆ! (ಪಾ)
-ಪಿಗಳು ನಾವೆಂದಳಲೂ ಬೇಕಾಗಿದೆ!
ತ್ವಜ್ಞ ಭಾಗ್ಯವಂತನೆನ್ಬೇಕಾಗಿದೆ!
ವಾಸನಾ ಕ್ಷದಿಂದಾನಂದವಾಗಿದೆ! (ಯೋ)
-ಗಿರಾಜ ತಾನಾಗಿ ತಾನೇ ತಾನಾಗಿದೆ! (ತಂ)
-ದೆ ಶ್ರೀ ನಿರಂಜನಾದಿತ್ಯನಂತಾಗಿದೆ!!!

ಹುಟ್ಟುವುದೇಕೆ ಸಾಯುವುದೇಕೆ? (ಸು)   5(2694)

-ಟ್ಟು ಹಾಕಿದ್ರೂ ಕಾಮ ಸಾಯದ್ದಕ್ಕೆ! (ಸಾ)
-ವು ದೇಹಕ್ಕಲ್ಲದಿನ್ಯಾವುದಕ್ಕೆ?
ದೇವರೇ ನೀನು! ಭಯವೇತಕ್ಕೆ?
ಕೆಲಸ ಕಾರ್ಯ ಕಾಯ ಸುಖಕ್ಕೆ!
ಸಾಯುಜ್ಯದಿಂದ ಮುಕ್ತಿ ಜೀವಕ್ಕೆ!
ಯುಕ್ಯಾಯುಕ್ತಜ್ಞಾನ ಬೇಕಿದಕ್ಕೆ! (ಕಿ)
-ವುಡಾಗ್ಬೇಕು ಮಾಯಾ ವಚನಕ್ಕೆ!
ದೇಹ ಮೋಹದಡ್ಡ್ಯಾತ್ಮಸುಖಕ್ಕೆ! (ನೌ)
-ಕೆ, ನಿರಂಜನಾದಿತ್ಯನೆಲ್ಲಕ್ಕೆ!!!

ಹುಡುಕುವರು ತಡಕುವರು! (ನೋ)   3(1189)

-ಡುವರಾ ಮೇಲೆ ದುಡುಕುವರು! (ಬೇ)
-ಕು ಬೇಡೆಂಬುದ ಬಿಡದಿಹರು! (ಭಾ)
-ವ ಬಂಧ ಹರಿಯದಂತಿಹರು! (ಗು)
-ರು ಪಾದಕ್ಕೆ ಎರಗದಿಹರು!
ಮಗೆ ತಾವಡ್ಡಿಯೊಡ್ಡಿಹರು! (ಬ)
-ಡವರಾಗಿ ಬಳಲುತಿಹರು!
ಕುಲ ಶೀಲ ಮರೆಯುತಿಹರು!
ರ ಸಿಕ್ಕಿಲ್ಲೆಂದಳುತಿಹರು! (ಗು)
-ರು ನಿರಂಜನಾದಿತ್ಯಗಾಳಾರು???

ಹುಡ್ಕಿದಾಗ ಸಿಗದ್ದೀಗ್ತಾನಾಗಿ ಸಿಕ್ತು!   6(3420)

(ಹು)-ಡ್ಕಿ, ತಡ್ಕಿ, ತಡ್ಕಿ, ಹುಡ್ಕಿ ಬೇಜಾರಾಗಿತ್ತು!
ದಾರಿ ಬೇರೆ ಹಿಡಿಯೋಣ ಅನ್ನಿಸಿತ್ತು!
ಡ್ಬಿಡಿ ಮಾಡ್ಬಾರ್ದೆಂತ ನಿಧಾನಿಸಿತ್ತು!
(ದಾ)-ಸಿ ಮೀರಾಬಾಯಿಯ ನೆನಪೂ ಬಂದಿತ್ತು!
ಲ್ಲಿಗಲ್ಲಿಯಲ್ಲಾಕೆ ಕುಣಿದಾಗಿತ್ತು!
(ಇ)-ದ್ದೀಗಿಂತವ್ಳೊಂದೋಣಿಯಲ್ಲಿ ಬಿದ್ದಾಗಿತ್ತು!
(ಆ)-ಗ್ತಾನೇ ಶ್ರೀ ಕೃಷ್ಣ ಬಂದೆತ್ತಿಕೊಂಡಾಗಿತ್ತು!
ನಾವೆಣ್ಸಿದಂತಾಗ್ವುದಾದ್ರೇಕಿಂತಾಗ್ತಿತ್ತು?
ಗಿಡ ಕಾಲಾಂತರದಲ್ಲಿ ಮರವಾಯ್ತು!
ಸಿಹಿಯಾದ ಹಣ್ಣನ್ನೂ ಕೊಡುವಂತಾಯ್ತು!
(ಸಿ)-ಕ್ತು, ನಿರಂಜನಾದಿತ್ಯಾನಂದ ಪ್ರಾಪ್ತ್ಯಾತು!!!

ಹುಣ್ಣು ತೊಳೆದೌಷಧಿ ಹಾಕಿ ಕಟ್ಟು! (ಮ)   4(2442)

-ಣ್ಣು ಧೂಳೊಳಗೆ ಸೇರದಂತೆ ಕಟ್ಟು!
ತೊಳೆದ ಮೇಲೊದ್ದೆಯೊರಸಿ ಕಟ್ಟು! (ಕೊ)
-ಳೆತ ಚರ್ಮ ಕಿತ್ತೊಗೆದದ ಕಟ್ಟು!
ದೌರ್ಜನ್ಯ ತೋರದೇ ನಿಧಾನ ಕಟ್ಟು! (ವಿ)
-ಷ ಹೆಚ್ಚಿಲ್ಲ ದೌಷಧಿಯಿಟ್ಟು ಕಟ್ಟು (ಅ)
ಧಿಕಾರ ದರ್ಪ ತೋರಿಸದೇ ಕಟ್ಟು! (ಆ)
-ಹಾರ ನೇಮ ಬೇಕೆಂದು ಹೇಳಿ ಕಟ್ಟು! (ಸೋ)
-ಕಿಸ್ಬಾರದು ನೀರಾಗಾಗೆಂದು ಕಟ್ಟು!
ಡೆಗಾಣ್ಬಾರ್ದುಪ್ದೇಶವೆಂದು ಕಟ್ಟು! (ಕ)
-ಟ್ಟು, ನಿರಂಜನಾದಿತ್ಯನಿಗೊಕ್ಕಟ್ಟು!!!

ಹೃದಯ ಸಂಪುಟ ಸದಾ ಸುರಕ್ಷಿತ!   2(796)

ರ್ಶನವಿಲ್ಲಾಗ್ವುದೆಲ್ಲಾ ಸುರಕ್ಷಿತ!
ಮ, ನಿಯಮದಿಂದದು ಸುರಕ್ಷಿತ!
ಸಂತತಾತ್ಮಾರಾಮನಿಲ್ಲಿ ಸುರಕ್ಷಿತ!
ಪುಣ್ಯ, ಪಾಪದಂಟಿಲ್ಲದೆ ಸುರಕ್ಷಿತ! (ಕೂ)
-ಟ, ನೋಟಗಳೊಟ್ಟಾಗಿಲ್ಲಿ ಸುರಕ್ಷಿತ!
ರ್ವನಾಮ, ರೂಪವಿಲ್ಲಿ ಸುರಕ್ಷಿತ!
ದಾಸ ಮಾರುತಿಯಂದದು ಸುರಕ್ಷಿತ!
ಸುಳ್ಳು ಪೊಳ್ಳುಗಳಿಲ್ಲದೆ ಸುರಕ್ಷಿತ!
ಹಸ್ಯ ‘ಶ್ರೀ ಗುರುಕೃಪೆ’ ಸುರಕ್ಷಿತ!
ಕ್ಷಿತಿಪತಿಯಿಷ್ಟವಿಲ್ಲಿ ಸುರಕ್ಷಿತ! (ಸ)
-ತತ ನಿರಂಜನಾದಿತ್ಯ ಸುರಕ್ಷಿತ!!!

ಹೃದಯವಾಣೀ, ರಾಣೀ, ಗೀರ್ವಾಣಿ!   4(2142)

ಯವಾಣೀ, ನಯವಾಣ್ಗೀರ್ವಾಣಿ! (ಜ)
-ಯವಾಣೀ, ವಿಜಯವಾಣ್ಗೀರ್ವಾಣಿ! (ಜೀ)
-ವಾತ್ಮವಾಣೀ, ಅಂತರ್ವಾಣ್ಗೀರ್ವಾಣಿ! (ವಾ)
-ಣೀ ವಾಣೀ, ಆಕಾಶವಾಣ್ಗೀರ್ವಾಣಿ!
ರಾಮವಾಣೀ, ಶ್ಯಾಮವಾಣ್ಗೀರ್ವಾಣಿ! (ಫ)
-ಣೀಶವಾಣೀ, ಯಶವಾಣ್ಗೀರ್ವಾಣಿ!
ಗೀತಾವಾಣೀ, ಸತ್ಯವಾಣ್ಗೀರ್ವಾಣಿ! (ಸ)
-ರ್ವಾತ್ಮವಾಣೀ, ನಿತ್ಯವಾಣ್ಗೀರ್ವಾಣಿ! (ವಾ)
-ಣಿ, ನಿರಂಜನಾದಿತ್ಯಾ ಗೀರ್ವಾಣಿ!!!

ಹೃದಯಾಂತರಾಳದಿಂದ ಚಿಮ್ಮುತಿದೆ!   5(3187)

ತ್ತಗುರುವಿನುಪದೇಶ ವಾಕ್ಸುಧೆ! (ಮಾ)
-ಯಾಂಧಕಾರ ನಾಶಕ್ಕದು ಬೇಕಾಗಿದೆ!
ನ್ನ ತಾನರಿಯಾದೇ ಕಷ್ಟವಾಗಿದೆ!
ರಾಗ, ದ್ವೇಷಗಳಿಂದೂರುರಿಯುತ್ತಿದೆ! (ತೋ)
-ಳಗಳಾರ್ಭಟ ಕೇಳಿ ಬರುತ್ತಲಿದೆ! (ಇಂ)
-ದಿಂದಿರಾಧವನೇ ಕಾಯಬೇಕಾಗಿದೆ!
ಬ್ಬಾಳಿಕೆ ಪರರಿಂಗ್ಬಾರ್ದಾಗಿದೆ!
ಚಿತ್ತಶುದ್ಧಿಯಾಭ್ಯಾಸ ಮಾಡ್ಬೇಕಾಗಿದೆ! (ನ)
-ಮ್ಮುದ್ಧಾರ ನಮ್ಮಿಂದಲೇ ಆಗ್ಬೇಕಾಗಿದೆ!
ತಿಳಿವಿನ ತೀರ್ಥಸ್ನಾನಗತ್ಯಾಗಿದೆ! (ತಂ)
-ದೆ ನಿರಂಜನಾದಿತ್ಯೇಚ್ಛೆಯಿಂದಾಗಿದೆ!!!

ಹೆಂಚು ಕಾದಾಗ ದೋಸೆ ಹಾಕು! [ಅಂ]   2(981)

-ಚು ಕಿತ್ತಾಗ ಹೊಲಿಗೆ ಹಾಕು!
ಕಾಲ ಬಂದಾಗ ಕಾಳು ಹಾಕು!
ದಾರಿ ಕಂಡಾಗ ಹೆಜ್ಜೆ ಹಾಕು!
ರ್ವ ಬಂದಾಗ ಮೌನ ಹಾಕು!
ದೋಣಿ ಬಿಟ್ಟಾಗ ಹುಟ್ಟು ಹಾಕು!
ಸೆಖೆ ಆದಾಗ ಗಾಳಿ ಹಾಕು!
ಹಾಡು ಹೇಳ್ವಾಗ ತಾಳ ಹಾಕು!
ಕುಲ ನಿರಂಜನಗಾಗ್ಬೇಕು!!!

ಹೆಂಡತಿಯಾಯ್ತು, ಮಂಡೆ ಬೋಳಾಯ್ತು! (ಕಂ)   4(2323)

-ಡವರಿಗೆ ಕೈಚಾಚುವಂತಾಯ್ತು!
ತಿನ್ನುವುದಕ್ಕನ್ನವಿಲ್ಲದಾಯ್ತು! (ಆ)
-ಯಾಸ ದಿನದಿನಕ್ಕೂ ಹೆಚ್ಚಾಯ್ತು (ಹೋ)
-ಯ್ತು ಮಾನ, ಮರ್ಯಾದೆಯೆಲ್ಲಾ ಹೋಯ್ತು!
ಮಂಕು ಮುಸುಕಿ ಮುಖ ಪೆಚ್ಚಾಯ್ತು! (ಒ)
-ಡೆಯನ ಸೇವೆಗಶ್ರದ್ಧೆಯಾಯ್ತು!
ಬೋಧನೆಗೆ ಕಿವಿಗೊಡದಾಯ್ತು! (ಹಾ)
-ಳಾಗಿ ಬಾಳು ಬರಿದಾದಂತಾಯ್ತು! (ಆ)
-ಯ್ತು, ನಿರಂಜನಾದಿತ್ಯೋದಯಾಯ್ತು!!!

ಹೆಜ್ಜೆ ಹೊರಗಿಟ್ಟು ನೀನು ಕೆಟ್ಟೆ! (ಗೆ)   5(2755)

-ಜ್ಜೆ ಕಟ್ಟಿ ಕುಣಿದ್ಕುಪ್ಪಳಿಸ್ಬಿಟ್ಟೆ!
ಹೊಲೆಗೇರಿಯಲ್ಲಿದ್ದುಕೊಂಡ್ಬಿಟ್ಟೆ!
(ಬ)ರ(ಬ)ರ್ತಾ ಹೊಲತಿ ನೀನಾಗ್ಬಿಟ್ಟೆ! (ಈ)
-ಗಿನ್ನೇನು ಗತಿಯೆಂದತ್ತುಬಿಟ್ಟೆ! (ಗು)
-ಟ್ಟು ಗುರುಕೃಪೆಯಿಂದರಿತ್ಬಿಟ್ಟೆ!
ನೀನೇ ನಾನೆಂಬಭ್ಯಾಸ ಹಚ್ಚಿಟ್ಟೆ! (ಮ)
-ನುಜ ಜನ್ಮ ಸಾರ್ಥಕಮಾಡ್ಬಿಟ್ಟೆ! (ಬೇ)
-ಕೆನಗೀ ನಿಜಸುಖವೆಂದ್ಬಿಟ್ಟೆ! (ಬ)
-ಟ್ಟೆ, ನಿರಂಜನಾದಿತ್ಯನದುಟ್ಟೆ!!!

ಹೆಣಕೆಷ್ಟು ಶೃಂಗಾರ ಮಾಡಿದರೇನು? (ಹ)   5(2749)

-ಣದ ದುರುಪಯೋಗವದಲ್ಲವೇನು? (ರೆ)
-ಕ್ಕೆ, ಪುಕ್ಕ ಕಿತ್ತ ಮೇಲಲ್ಲಿರುವುದೇನು? (ನಿ)
-ಷ್ಟುರದ ಮಾತಿದೆಂದರಿಯದಿರ್ನೀನು!
ಶೃಂಗ ಕಿತ್ತೆತ್ತಿಗೆ ಶೃಂಗಾರದಿಂದೇನು?
ಗಾಡಿಯೆಳೆಯಲದಯೋಗ್ಯವಲ್ಲೇನು?
(ಪ)ರಮಾರ್ಥವನ್ನರಿತು ಪೂಜಿಸು ನೀನು!
ಮಾಯಾತೀತಾತ್ಮನ ಸದಾ ನೆನೆ ನೀನು! (ದು)
-ಡಿದಿಂತೋಂಕಾರಾಲಂಕಾರಿಯಾಗು ನೀನು!
ತ್ತಾತ್ರೇಯ ಪರಮಾತ್ಮನಾಗು ನೀನು! (ಯಾ)
-ರೇನೆಂದರೂ ಗುರುಕೃಪೆಯೆನ್ನು ನೀನು! (ಸೂ)
-ನು, ನಿರಂಜನಾದಿತ್ಯಗಲ್ಲವೇ ನೀನು???

ಹೆಣದ ಗುಣ ಗಾನದಿಂದಾರಿಗೇನು ಸುಖ? (ಋ)   6(4340)

-ಣ ಸಂಬಂಧವಿರುವ ತನಕ ದೇಹ ಸುಖ!
ಯೆಯಿದ್ದರೆ ಆಗು ಜೀವವಿದ್ದಾಗ ಸಖ!
ಗುಣಗ್ರಾಹಿತಾನಾದವನೇ ಆದರ್ಶ ಸಖ! (ತೃ)
-ಣ ಸಮಾನ ಅವನಿಗೀರೇಳು ಲೋಕ ಸುಖ!
ಗಾಡಿಗಾರನಾಗಿ ಅರ್ಜುನಗೆ ಕೃಷ್ಣ ಸಖ!
ರನ ಜನ್ಮ ಪಾವನಗೊಳಿಸಿದಾ ಸಖ! (ಎಂ)
-ದಿಂದು ನಮಗವನ ದಿವ್ಯದರ್ಶನ ಸುಖ?
ದಾರಿ ತೋರಬೇಕು ನಮಗೀಗಾ ಆತ್ಮ ಸುಖ! (ತ)
-ರಿದಿಕ್ಕಿ ಅರಿಷ್ಟಗಳ ನೀಡ ಬೇಕು ಸುಖ! (ಯೋ)
-ಗೇಶ್ವರನಲ್ಲದೆಮಗಿನ್ಯಾರು ಆಪ್ತ ಸಖ! (ತ)
-ನು, ಮನ, ಧನಾರ್ಪಣೆಯಿಂದಾಗ್ಬೇಕಾತ್ಮ ಸುಖ!
ಸುಖವಿದನ್ನೆಮಗಿತ್ತಾತಾಗ್ಲಿ ಪೂಜ್ಯ ಸಖ!
ಗ ನಿರಂಜನಾದಿತ್ಯಾನಂದ ನಿತ್ಯ ಸುಖ!!!

ಹೆಣನ ಗಣ ಮಾಡಿತಾ ಶಿವಗುಣ! (ಗ)   3(1065)

-ಣಪತಿಯೆನಿಸಿತದೇ ಶಿವಗುಣ!
ಟರಾಜನಾಯ್ತು ಮತ್ತಾ ಶಿವಗುಣ! (ಮ)
-ಗ ಗುಹನಾಗಿ ಮೂಡಿತಾ ಶಿವಗುಣ! (ಗು)
-ಣ ಮಣ್ಯರ್ಧ ನಾರೀಶ್ವರಾ ಶಿವಗುಣ!
ಮಾರಹರ ಯೋಗೀಶ್ವರಾ ಶಿವಗುಣ! (ಬೇ)
-ಡಿದಿಷ್ಟಾರ್ಥ ನೀಡುವುದಾ ಶಿವಗುಣ!
ತಾಪಸರ ಪಾಪನಾಶಾ ಶಿವಗುಣ!
ಶಿವಶಂಕರ ಓಂಕಾರಾ ಶಿವಗುಣ!
ರ ದಕ್ಷಿಣಾಮೂರ್ತಿಯಾ ಶಿವಗುಣ!
ಗುರುದತ್ತ ಗುಣಾತೀತಾ ಶಿವಗುಣ! (ಪ್ರಾ)
-ಣ ನಿರಂಜನಾದಿತ್ಯಗಾ ಶಿವಗುಣ!!!

ಹೆಣವೆಷ್ಟು ಸುಂದರವಾದರೇನು? (ಗು)   6(4335)

-ಣವದರಿಂದಾಗುವುದಾರಿಗೇನು?
ವೆಸನವದಕ್ಕೆ ಪಡ್ಬೇಡ ನೀನು! (ನಿ)
-ಷ್ಟುರ ಮಾಡಿದ್ದರಿಂದಾಗುವುದೇನು?
ಸುಂಕ ಕೊಟ್ಟು ಸುಟ್ಟುಬಿಡದ ನೀನು!
ಹಿಸಿ ನಿಶ್ಚಿಂತೆಯಿಂದ ಬಾ ನೀನು!
ಮಿಸ್ಬೇಕಾಮೇಲೆ ನಿನ್ನಲ್ಲಿ ನೀನು!
ವಾಸುಕಿ ಶಯನನೇ ಆಗ ನೀನು!
ಶಗ್ರೀವನನ್ನು ಕೊಂದವ ನೀನು!
ರೇಣುಕಾತನಯ ಭಾರ್ಗವ ನೀನು! (ಅ)
-ನುಮಾನ ನಿರಂಜನಾದಿತ್ಯಗೇನು???

ಹೆಣ್ಣಿಗಾಗಿ ಕಾದಿದ್ದನೊಬ್ಬ! (ಬ)   6(3399)

-ಣ್ಣಿಸುತ್ತವಳ ಕಪ್ಪು ಹುಬ್ಬ!
ಗಾಳಿಗೋಪುರದಲ್ಲಿ ಹಬ್ಬ!
(ಮು)-ಗಿಸಿ ಹೋದನವಳ ತಬ್ಬ!
ಕಾಲ್ಗೇಟುಕೊಟ್ಟಿತೊಂದು ಡಬ್ಬ!
ದಿಕ್ಕೇಕಾಣದಂತಾಯ್ತಬ್ಬಬ್ಬಾ!
(ಉ)-ದ್ದ ಮೇಲ್ನೋಡಿದ ಹರ್ಕು ಜುಬ್ಬ!
ನೊಸ್ಲಲ್ಲೂ ಮೂಡಿತ್ತೊಂದು ಡುಬ್ಬ!
(ಹ)-ಬ್ಬ ನಿರಂಜನಾದಿತ್ಯ ಕಬ್ಬ!!!

ಹೆಣ್ಣಿನ ಮೇಲೆಲ್ಲರಿಗಾಶಾ ದೃಷ್ಟಿ! (ಹು)   4(1715)

-ಣ್ಣಿನ ಮೇಲವರಿಗಸಹ್ಯ ದೃಷ್ಟಿ! (ಧ)
, ಧಾನ್ಯಕ್ಕೆಲ್ಲರ್ಗಪಾರಾಶಾ ದೃಷ್ಟಿ!
ಮೇವಿಲ್ಲದ ಭೂಮಿಗಸಹ್ಯ ದೃಷ್ಟಿ! (ನಾ)
-ಲೆ ನೀರಿಗೆ ಸಕಲರಾಶಾ ದೃಷ್ಟಿ! (ಇ)
-ಲ್ಲದಾದಾಗ ಬಹಳಸಹ್ಯ ದೃಷ್ಟಿ! (ದಾ)
-ರಿ ತನ್ನೂರಿಗಾದರೆ ಆಶಾ ದೃಷ್ಟಿ!
ಗಾಡಿ ತಡವಾದರಸಹ್ಯ ದೃಷ್ಟಿ!
ಶಾಖ, ಪಾಕದಡಿಗೆಗಾಶಾ ದೃಷ್ಟಿ! (ಅ)
-ದೃಷ್ಟ ಕೆಟ್ಟರೆಲ್ಲರ್ಗಸಹ್ಯ ದೃಷ್ಟಿ! (ದೃ)
-ಷ್ಟಿ, ನಿರಂಜನಾದಿತ್ಯನದೊಂದೇ ದೃಷ್ಟಿ!!!

ಹೆಣ್ಣಿನ ಹುಚ್ಚು ಮಣ್ಣಿನ ಪಾಲಾದ್ರೂ ತಣ್ಣಗಾಗೋಲ್ಲ! (ಕ)   6(4262)

-ಣ್ಣಿನಿಂದವಳನ್ನೂ ನೋಡಿದಷ್ಟೂ ತೃಪ್ತಿಯಾಗ್ವುದಿಲ್ಲ!
ಶ್ವರ ದೇಹವೆಂಬರಿವಿದ್ದ್ರೂ ದಿಡಲಿಷ್ಟವಿಲ್ಲ!
ಹುಸಿಯನ್ನಾಡಿ ನಾರಿಯನ್ನೊಲಿಸಿದವರೇ ಎಲ್ಲಾ! (ಚು)
-ಚ್ಚು ಮಾತವಳೆಷ್ಟಾಡಿದ್ರೂ ಸಹಿಸದೇ ಗತಿಯಿಲ್ಲ!
ಕ್ಕಳಿಗಾಗಿ ಮದುವೆಯಾದವರೆಲ್ಲರೇನಲ್ಲ! (ಹ)
-ಣ್ಣಿನ ರಸಪಾನ ಮುಖ್ಯ; ಬೀಜದತ್ತ ಲಕ್ಷ್ಯವಿಲ್ಲ!
ಯನಾದಿಂದ್ರಿಯಕ್ಕಾಳಾಗಿ ನರತ್ವ ಉಳಿದಿಲ್ಲ!
-ಪಾಠವೆಷ್ಟು ಓದಿದರೂ ತಲೆಗೇ ಹತ್ತುವುದಿಲ್ಲ!
ಲಾಭವೆಷ್ಟು ಲಭಿಸಿದರೂ ಸಾಲ ಕಮ್ಮಿಯಾಗಿಲ್ಲ! (ಚಿ)
-ದ್ರೂಪ ಸಿದ್ಧಿ ಆದಾಗ ಲಾಭ ನಷ್ಟದ ಚಿಂತೆ ಇಲ್ಲ!
ತ್ವ ಚಿಂತನಾಭ್ಯಾಸ ಮಾಡದಿದ್ದರಾ ಸಿದ್ಧಿಯಿಲ್ಲ! (ಸ)
-ಣ್ಣವ ದೊಡ್ಣವನೆಂಬ ಭೇದ ಪರಮಾತ್ಮನಿಗಿಲ್ಲ!
ಗಾಳಿ ಬೆಳಕಿಲ್ಲದೆ ಯಾರೂ ಬದುಕುವಹಾಗಿಲ್ಲ!
ಗೋಚರಿಸದಿರದು ವಿಚಾರಶಿಲನಿಗಿದೆಲ್ಲ! (ಎ)
-ಲ್ಲರಲ್ಲಿಹ ನಿರಂಜನಾದಿತ್ಯ ಶಾಖ, ಬೆಳಕೆಲ್ಲಾ!!!

ಹೆಣ್ಣು ಹೆಣ್ಣೆಂದು ಕುಣಿದು ಬಾಯಿಗೆ ಮಣ್ಣು! (ಕ)   6(4090)

-ಣ್ಣು, ಕೈ, ಕಾಲ್ಕಿವಿ ಮಂಜಾಗೀಗ್ಬಾಯಿಗೆ ಮಣ್ಣು!
ಹೆಗ್ಗುರಿಯ ಮರೆತೀಗ ಬಾಯಿಗೆ ಮಣ್ಣು! (ಹ)
-ಣ್ಣೆಂದುರಿಯ ಮುತ್ತೀಗ್ಬಿತ್ತು ಬಾಯಿಗೆ ಮಣ್ಣು!
ದುಷ್ಟ ವಿಷಯಾಸೆಯಿಂದ ಬಾಯಿಗೆ ಮಣ್ಣು!
ಕುರಿ ಹಿಂಡ ಸೇರಿಹರಿ, ಬಾಯಿಗೆ ಮಣ್ಣು! (ದ)
-ಣಿದು ವೀರ್ಯನಾಶದಿಂದ ಬಾಯಿಗೆ ಮಾಣ್ಣು!
ದುರ್ಯೋಧನ ಸಂಗದಿಂದ ಬಾಯಿಗೆ ಮಣ್ಣು!
ಬಾಲಗೋಪಾಲ ತೆರೆದನೆಲ್ಲರ ಕಣ್ಣು! (ತಾ)
-ಯಿಗೆ ತೋರಿದನು ಬ್ರಹ್ಮಾಂಡ, ತಿಂದು ಮಣ್ಣು!
ಗೆಳೆಯನಿಗುಣಿಸಿದನು ಜ್ಞಾನ ಹಣ್ಣು!
ರೆಯದೇ ತಿನ್ನಬೇಕೆಲ್ಲರೆಂದೀ ಹಣ್ಣು! (ಉ)
-ಣ್ಣು, ನಿರಂಜನಾದಿತ್ಯಾನಂದಾಮೃತಾ ಹಣ್ಣು!!!

ಹೆಣ್ಣು, ಮಣ್ಣು, ಹೊನ್ನಿಗಾಗಿ ಹೊಡೆದಾಟ! (ಕ)   5(3034)

-ಣ್ಣು, ಕಿವಿ, ಬಾಯಿ ತೃಪ್ತಿಗಾಗಿ ಕಚ್ಚಾಟ!
ಲಿನವಾಯ್ತಿದರಿಂದ ಜಗದಾಟ! (ಉ)
-ಣ್ಣುವ ಅನ್ನಕ್ಕೆ ಉಂಟಾಯ್ತ ಪರದಾಟ!
ಹೊರಗೆ ತೋರುತಿಹುದು ಸುಳ್ಳು ನೋಟ! (ಇ)
-ನ್ನಿದಕಾಗಿ ಎಲ್ಲೆಲ್ಲೂ ಕಳ್ಳರ ಕಾಟ!
ಗಾಳಿ ಬೀಸಿದತ್ತಾಗುತಿದೆ ತೂರಾಟ!
ಗಿರಿ ನದಿಗಳನ್ನು ದಾಟಿ ಹೋರಾಟ!
ಹೊಡೆತ ಸಹಿಸಲಾರದೆ ಚೀರಾಟ! (ಬಿ)
-ಡೆನಲು ಬಿಡುವರಾರೀ ಹುಚ್ಚಾಟ?
ದಾರಿಯಿದಕೆಲ್ಲೆಲ್ಲೂ ಭಜನಾ ಕೂಟ! (ದಿ)
-ಟ ನಿರಂಜನಾದಿತ್ಯನಿಗಿದೇ ಊಟ!!!

ಹೆಣ್ಣು, ಮಣ್ಣು, ಹೊನ್ನು ಶಾಂತಿ ಕೆಡಿಸಿತು! (ಕ)   5(3183)

-ಣ್ಣು ಮೈಯೆಲ್ಲಾಗೀಂದ್ರಗಶಾಂತಿಯಾಯಿತು!
ಣ್ಣಿಗಾಗಿ ಕೌರವನಂತ್ಯವಾಯಿತು! (ಮ)
-ಣ್ಣುಪಾಲಾಗೀವಂಶ ಹಾಳಾಗಿ ಹೋಯಿತು!
ಹೊನ್ನು ಕೂಡಿಟ್ಟದೆಲ್ಲಾ ಸರ್ಕಾರಕ್ಕಾಯ್ತು! (ತಿ)
-ನ್ನುವುದಕ್ಕೂ ಗತಿಯಿಲ್ಲದಂತಾಯಿತು!
ಶಾಂಭವಿಯಾದರ್ಶ ಮರೆತೇಹೋಯಿತು!
ತಿಪ್ಪೆಗುಂಡಿಯ ಕಂಪು ಹಿತವಾಯಿತು!
ಕೆಟ್ಟ ಕಟ್ಟಳೆಗಳು ಜಾರಿಗೆ ಬಂತು! (ಬೀ)
-ಡಿ, ಸಿಗರೇಟ್ಟ್ರಾಂದಿಗೆ ಧನ ವ್ರಯಾಯ್ತು!
ಸಿಹಿ ವಾತಾವರಣ ಕಹಿಯಾಯಿತು!


ರಿಯಾತೀತ ನಿರಂಜನಾದಿತ್ಯಾಯ್ತು!!!

ಹೆಣ್ಣೆಂಬುದತ್ಯಂತ ಪ್ರಿಯ ವಸ್ಥು! (ಕ)   6(4380)

-ಣ್ಣೆಂಬುದಿಲ್ಲದಿದ್ದರೇಕಾ ವಸ್ಥು?
ಬುದ್ಧಿಗೂ ನಿಲಕದಾತ್ಮ ವಸ್ಥು!
ಮೆ, ಶಮೆಯಿಂದಲಭ್ಯಾ ವಸ್ಥು! (“ಸ)
-ತ್ಯಂ, ಶಿವಂ, ಸುಂದರಂ” ನಿಜ ವಸ್ಥು!
ತ್ವಜ್ಞನರಿವಾ ದಿವ್ಯ ವಸ್ಥು!
ಪ್ರಿಯಾ ಪ್ರಿಯಾತೀತಾ ಪೂಜ್ಯ ವಸ್ಥು!
ಮನ ಭಯವಿಲ್ಲದ್ದೀ ವಸ್ಥು! (ಶಿ)
-ವ, ಜೀವೈಕ್ಯವಾಗಿಹುದೀ ವಸ್ಥು! (ವ)
-ಸ್ಥು ನಿರಂಜನಾದಿತ್ಯಾತ್ಮ ವಸ್ಥು!!!

ಹೆತ್ತಮ್ಮಗೆ ಹೆಗ್ಗಣ ಮುದ್ದು! (ಚಿ)   4(1851)

-ತ್ತ ಶುದ್ಧನಿಗೆಲ್ಲವೂ ಮುದ್ದು! (ತ)
-ಮ್ಮದು ತಮಗೆ ಸದಾ ಮುದ್ದು! (ಗಂ)
-ಗೆಗೆಲ್ಲಾ ಚರಾಚರ ಮುದ್ದು!
ಹೆರವರೆನ್ನದಾತ್ಮ ಮುದ್ದು! (ಸ)
-ಗ್ಗ, ನರಕಾತನಿಗೆ ಮುದ್ದು! (ಗು)
-ಣ, ಅವಗುಣವೆಲ್ಲಾ ಮುದ್ದು!
ಮುಕುಂದನೆಲ್ಲರಿಗೂ ಮುದ್ದು! (ಮು)
-ದ್ದು, ನಿರಂಜನಾದಿತ್ಯ ಮುದ್ದು!!!

ಹೆತ್ತರೇನು ಹುಸಿ, ಸತ್ತರೇನು? (ಸ)   4(1521)

-ತ್ತವರತ್ತರೆ ಬರುವರೇನು?
ರೇಖೆ, ರೂಪಗಳು ಸ್ಥಿರವೇನು? (ತ)
-ನು, ಮನಾತೀತಾತ್ಮನಲ್ಲವೇನು? (ಇ)
-ಹುದಿವಗನಂತ ರೂಪಲ್ಲೇನು?
ಸಿರಿಯರಸಾರಾಮಲ್ಲವೇನು?
ರಸಿಜಾಸನನಯ್ಯಲ್ಲೇನು? (ದ)
-ತ್ತನಲ್ಲವನೈಕ್ಯವಲ್ಲವೇನು? (ಹ)
ರೇ ರಾಮನಾಮಾನಂದವಲ್ಲೇನು? (ತಾ)
-ನು ನಿರಂಜನಾದಿತ್ಯನಲ್ಲೇನು???

ಹೆತ್ತವಳು, ಅತ್ತವಳು, ಸತ್ತವಳು! (ಹೆ)   2(876)

-ತ್ತ ಮಗು ಸತ್ತತ್ತವಳು ಹೆತ್ತವಳು! [ಅ]
-ವಳೀಗ ಸತ್ತವಳು ಅಗತ್ತವಳು! (ಹಾ)
-ಳು ಸಂಸಾರದಲ್ಲಿ ಸದಾ ಇದೇ ಗೋಳು!
ಳುವೆಂಬುದಜ್ಞಾನದ ಅಂಧ ಬಾಳು! (ಹೆ)
-ತ್ತತ್ತು ಸತ್ತು ಸುಣ್ಣಾದುದೊಡಲ ಬಾಳು!
ರ ಗುರುಪಾದ ನಂಬದೆಲ್ಲಾ ಹಾಳು! (ಕೀ)
-ಳು, ಮೇಲೆಂದು ಗುದ್ದಾಡಿ ಮಡಿದ ಬಾಳು!
ತಿ, ಪತಿ, ಸುತ, ಸುತೆಯೆಂಬ ಬಾಳು! (ಎ)
-ತ್ತ ನೊಡಲದೆಲ್ಲೆಲ್ಲದೇ ಕೀಳು ಬಾಳು!
ನಜ ಮಿತ್ರಾತ್ಮಾನಂದಾದರ್ಶ ಬಾಳು! [ಬಾ]
-ಳು ನಿರಂಜನಾದಿತ್ಯಾನಂದದಾ ಬಾಳು!!!

ಹೆತ್ತೆ, ಹೊತ್ತೆ, ಸತ್ತೆ, ಗುಪ್ತೆ! (ಎ)   3(1051)

-ತ್ತೆತ್ತ ಸುತ್ತಿ ಬಂದೆ ಗುಪ್ತೆ!
ಹೊತ್ತು ಹೊತ್ತುಣಿಪಾ ಗುಪ್ತೆ! (ಮ)
-ತ್ತೆ ನೀರೆರೆಯುವಾ ಗುಪ್ತೆ!
ರ್ವ ಸೌಭಾಗ್ಯಾರ್ಥೆ ಗುಪ್ತೆ! (ಮ)
-ತ್ತೆ ಬರುವೆನೆಂಬಾ ಗುಪ್ತೆ!
ಗುಪ್ತಳಾದಳೀಗಾ ಗುಪ್ತೆ! (ಗು)
-ಪ್ತೆ ನಿರಂಜನಾದಿದ್ಯಾಪ್ತೆ!!!

ಹೇಗಿರಬೇಕೋ ಹಾಗಿರು ನೀನು!   5(2826)

ಗಿರಿಜಾಪತಿಯ ನೆನೆ ನೀನು! (ಮಾ)
-ರನಾಟಕ್ಕೆ ಸೋಲಬೇಡ ನೀನು!
ಬೇರೆಯವರು ಏನೇನೆಂದರೇನು?
ಕೋಪಮಾಡಿಕೊಳ್ಳಬೇಡ ನೀನು!
ಹಾಲಾಹಲ ಜೀರ್ಣವಾಗಿಲ್ಲೇನು?
ಗಿರಿಜಾತ್ಮಜ ನೀನಲ್ಲವೇನು? (ಗು)
-ರುಶಿವನಾಜ್ಞೆ ಪಾಲಿಸು ನೀನು!
ನೀಚರಿಂದ ದೂರವಿರು ನೀನು! (ಸೂ)
-ನು ನಿರಂಜನಾದಿತ್ಯಗೆ ನೀನು!!!

ಹೇಳಿ, ಕೇಳಿ, ಆದದ್ದೇನು? (ಬಾ)   5(2568)

-ಳಿನಿಷ್ಟ ಕೈಗೂಡಿತೇನು?
ಕೇಶವನ ನೊಡೀದ್ಯೇನು? (ಗಾ)
-ಳಿ ಗೋಪುರಾಯ್ತೆಲ್ಲಲ್ವೇನು?
ಡದೇ ಮಾಡ್ಸೇವೆಯನು!
ತ್ತಗೊಪ್ಪಿಸ್ಯೆಲ್ಲವನು! (ಉ)
-ದ್ದೇಶ ಪೂರ್ತಿ ಮಾಡುವನು! (ನೀ)
-ನು ನಿರಂಜನಾದಿತ್ಯಾನು!!!

ಹೇಳುವ ಕೇಳುವವರಿಹರು! (ಬಾ)   6(3824)

-ಳುವವರಂದಂತಿಲ್ಲದಿಹರು!
ಸ್ತ್ರ ಬಿಚ್ಚಿ ಕುಣಿವವ್ರಿಹರು!
ಕೇದಾರೇಶ್ವರ ತಾವಾಗ್ದಿಹರು! (ಕಾ)
-ಳು ಕಡ್ಡಿ ಕೂಡಿಹಾಕಿಟ್ಟಿಹರು!
ರ್ಣಾಶ್ರಮ ಕೇಳಿ ಕೊಡ್ತಿಹರು!
ಡವೆ, ವಸ್ತುಗಳ್ತುಂಬಿಹರು! (ಯಾ)
-ರಿಗೂ ನೆರವಾಗದಂತಿಹರು!
ರಿ ಕೀರ್ತನೆ ಮಾಡುತ್ತಿಹರು! (ಗು)
-ರು ನಿರಂಜನಾದಿತ್ಯಾಗರು!!!

ಹೇಳುವವರು ಹೇಳುತ್ತಲೇ ಇದ್ದಾರೆ!   6(3402)

(ಕೇ)-ಳುವವರೆಲ್ಲಾ ಕೇಳುತ್ತಲೇ ಇದ್ದಾರೆ!
(ದೇ)-ವರ ಹೆಸ್ರಲ್ಲೇನೇನೋ ಮಾಡುತ್ತಿದ್ದಾರೆ!
(ಭ)-ವ ಪಾಶದಲ್ಲೊದ್ದಾಡುತ್ತಲೂ ಇದ್ದಾರೆ!
(ಕ)-ರುಣೆಗಾಗಿ ಪ್ರಾರ್ಥಿಸುತ್ತಲೂ ಇದ್ದಾರೆ!
ಹೇರಂಬ ಗಣಪನ ಕಾಣದಿದ್ದಾರೆ!
(ಬಾ)-ಳುವುದಿನ್ನೆಂತೆಂದು ತಿಳಿಯದಿದ್ದಾರೆ!
(ದ)-ತ್ತ ಚಿತ್ತದಂತಾಗ್ಲೆಂದೀಗನ್ನುತ್ತಿದ್ದಾರೆ!
(ಹಾ)-ಲೇ ವಿಷವಾದ್ರುಳಿವವರಾರಿದ್ದಾರೆ?
ದ್ದು ಸತ್ತಂತಿದ್ದೀಗ ಸುಖ್ವಾಗಿದ್ದಾರೆ!
(ಒ)-ದ್ದಾಟದಿಂದ ಬಿಡುಗಡೆಯಾಗಿದ್ದಾರೆ!
(ಮೊ)-ರೆ ನಿರಂಜನಾದಿತ್ಯಗಿಡುತ್ತಿದ್ದಾರೆ!!!

ಹೇಳುವಾಗಿದ್ದಾನಂದ ಕೇಳುವಾಗಿಲ್ಲ! (ಕೇ)   6(3562)

-ಳುವಾಗ ಇದ್ದಾನಂದ ಬಾಳುವಾಗಿಲ್ಲ!
ವಾಕ್ಪಟುತ್ವ ಮರುಳು ಮಾಡಿತು ಎಲ್ಲಾ! (ಯೋ)
-ಗಿ ರಾಜನನ್ನೆಷ್ಟು ಕೂಗಿದ್ರೂ ಬರ್ಲಿಲ್ಲ! (ಇ)
-ದ್ದಾ ದಿನದ ಮೂಢ ನಂಬಿಗೆ ಈಗಿಲ್ಲ!
ನಂಜುಂಡನ ಸ್ತೋತ್ರಕ್ಕೇನೂ ಕಮ್ಮಿಯಿಲ್ಲ!
ರ್ಶನವಾಗದಿದ್ರೇನೂ ತೃಪ್ತಿಯಿಲ್ಲ!
ಕೇವಲ ಗಿಳಿ ಪಾಠದಂತಾಯಿತೆಲ್ಲ! (ಹಾ)
-ಳು ಮಾಡ್ಬಾರ್ದು ಹಿರಿಯಕ್ಕಿರಿಯರ್ನೆಲ್ಲಾ!
ವಾದಿಸುವುದಾರಲ್ಲೆಂದೀಗ ಗೊತ್ತಿಲ್ಲ!
ಗಿರಿಧಾರಿಯೇ ಬಾರದೀಗಾಗ್ವುದಿಲ್ಲ! (ಗೊ)
-ಲ್ಲನೇ ನಿರಂಜನಾದಿತ್ಯನಾದ್ರಾಯ್ತಲ್ಲ!!!

ಹೇಳುವುದೀಗ ನನಗಿಷ್ಟ! (ಬಾ)   4(1925)

-ಳುವುದದರಂತದೆನ್ನಿಸ್ಟ! (ಸಾ)
-ವು, ನೋವಿಲ್ಲದಿರ್ಪುದೆನ್ನಿಷ್ಟ!
ದೀನದಾಸನಾಗ್ವುದೆನ್ನಿಷ್ಟ! (ತ್ಯಾ)
-ಗ ಮೂರ್ತಿಯಾಗಿರ್ಪುದೆನ್ನಿಷ್ಟ!
ಲಿದು ಪಾಡುವುದೆನ್ನಿಷ್ಟ!
ಶ್ವರ ಸಾಕೆಂಬುದೆನ್ನಿಷ್ಟ! (ಯೋ)
-ಗಿ ರಾಜನಾಗಿರ್ಪುದೆನ್ನಿಷ್ಟ! (ಶ್ಲಿ)
-ಷ್ಟ, ನಿರಂಜನಾದಿತ್ಯಗಿಷ್ಟ!!!

ಹೊಗಳಿಕೆಯಿಂದಾವ ಲಾಭವೂ ಇಲ್ಲ! (ತೆ)   5(2507)

-ಗಳಿಕೆಯಿಂದ ಯಾವ ನಷ್ಟವೂ ಇಲ್ಲ! (ಬಾ)
-ಳಿನ ಸೂತ್ರಾತ್ಮಗಾರ ಅಡ್ಡಿಯೂ ಇಲ್ಲ!
ಕೆಟ್ಟ ಮನಸ್ಸಿಗವನಡಿಯಾಳಲ್ಲ! (ಬಾ)
-ಯಿಂದಾಡದೇನೇ ಮಾಡಿಬಿಡುವನೆಲ್ಲ!
ದಾಸ, ದಾಸಿಯರ ಹಂಗವನಿಗಿಲ್ಲ! (ಭ)
-ವರೋಗಕ್ಕಾತ ದಾರಿ ತೋರದೇನಿಲ್ಲ!
ಲಾಲನೆ, ಪಾಲನೆಯುದ್ಯೋಗ ಬಿಟ್ಟಿಲ್ಲ!
ಜನಾನಂದನುಭವಿಸದೇನಿಲ್ಲ! (ಆ)
-ವೂರೀವೂರಲೆಯುವವನವನಲ್ಲ!
ದ್ದಲ್ಲಿದ್ದಾಗುವುದು ಸೇವೆಗಳೆಲ್ಲ! (ಬ)
-ಲ್ಲ, ನಿರಂಜನಾದಿತ್ಯರಿತಿಹನೆಲ್ಲ!!!

ಹೊಗಳಿದರೂ ಹಿಗ್ಗನಯ್ಯಾ ಭಕ್ತ! (ತೆ)   4(1800)

-ಗಳಿದರೆಂದೂ ಕುಗ್ಗನಯ್ಯಾ ಭಕ್ತ! (ತಾ)
-ಳಿ, ಬಾಳುವಭ್ಯಾಸಿ ತಾನಯ್ಯಾ ಭಕ್ತ!
ರ್ಶನಾನಂದದಲ್ಲಿರ್ಪಯ್ಯಾ ಭಕ್ತ!
ರೂಪ, ನಾಮ ಬಿಟ್ಟವನಯ್ಯಾ ಭಕ್ತ!
ಹಿರಿಯರಭಿಮಾನಿಯಯ್ಯಾ ಭಕ್ತ! (ಕ)
-ಗ್ಗನನ್ನೂ ಕಡೆಗಾಣನಯ್ಯಾ ಭಕ್ತ!
ಯ, ವಿನಯಾನ್ವಿತನಯ್ಯಾ ಭಕ್ತ!(ಕೈ)
-ಯ್ಯಾರೆ ಸೇವಾ ತತ್ಪರನಯ್ಯಾ ಭಕ್ತ!
ಜನಾಭ್ಯಾಸ ನಿರತಯ್ಯಾ ಭಕ್ತ! (ಶ)
-ಕ್ತ, ನಿರಂಜನಾದಿತ್ಯಾನಂದ ಭಕ್ತ!!!

ಹೊಗಳಿದವ ತೆಗಳ್ಯಾನು! (ಕಂ)   4(1644)

-ಗಳಿರುವವನು ನೋಡ್ಯಾನು! (ತಾ)
-ಳಿ ಬಾಳಿದವನು ಆಳ್ಯಾನು!
ರ್ಪವಿದ್ದವನು ಬಿದ್ದಾನು!
ರ ಗುರುಭಕ್ತ ಗೆದ್ದಾನು! (ಸಂ)
-ತೆ ವ್ಯಾಪಾರಾಸಕ್ತ ಸೋತಾನು!
ದ್ದೆ ಮಾಡಿದವ ಮೆದ್ದಾನು! (ವೀ)
-ಳ್ಯಾಮೃತ ಸಿಕ್ಕಿದಾತೆದ್ದಾನು! (ತ)
-ನು, ನಿರಂಜನಾದಿತ್ಯನೇನು???

ಹೊಗಳುವವರು ತೆಗಳದಂತಿರು!   5(3007)

ಣ್ಯ ನಾನೆಂದಹಂಕಾರ ಪಡದಿರು! (ಆ)
-ಳುಗಳನ್ನೆಂದೂ ಅವಲಂಬಿಸದಿರು!
ರ ಗುರುವಿನಿಷ್ಟಾನುಸಾರವಿರು!
ರಪ್ರದಾತನವನೆಂದರಿತಿರು! (ಪೌ)
-ರುಷವನ ಮುಂದೆ ಆಡಿಕೊಳ್ಳದಿರು!
ತೆರೆಮರೆಯ ಕಾಯಿಯಂತೆ ನೀನಿರು!
ಮನವನಾಚಾರದಲ್ಲಿರಿಸಿರು! (ಕ)
-ಳಕಳಿಯಿಂದವನ ಸೇವೆಗಾಗಿರು!
ದಂಡಿಸಲ್ಪಡದಂತೆಚ್ಚರವಾಗಿರು!
ತಿರುಕನವನೆಂದಲಕ್ಷ್ಯ ಮಾಡ್ದಿರು! (ಗು)
-ರು ನಿರಂಜನಾದಿತ್ಯನವನೆಂದಿರು!!!

ಹೊಗೆಯ ಕಡೆಗೆ ಬೆನ್ನು ತೋರಯ್ಯಾ! (ಹ)   1(384)

-ಗೆಯ ಮಾತುಗಳ ಅಲಕ್ಷಿಸಯ್ಯಾ!
ತ್ನ ಶುದ್ಧ ಜೀವನಕಾಗಲಯ್ಯಾ!
ಸವಿಸಿ ಮಾಡಿಕೊಳದಿರಯ್ಯಾ! (ಹ)
-ಡೆದಮ್ಮ ವಿಷವಿಕ್ಕಿ ಕೊಲ್ಲಳಯ್ಯಾ!
ಗೆಲವು ಮನಕೆ ನಾಮ ಜಪಯ್ಯಾ!
ಬೆಳೆಗಿನ ಕಾಲ ಪ್ರಶಾಂತವಯ್ಯಾ! (ಅ)
-ನ್ನುತಾಲಿಸುತ ಕೂತಿರಬೇಡಯ್ಯಾ!
ತೋಡಿದ ಭಾವಿಗೆ ಜಲ ಸಾಕ್ಷ್ಯಯ್ಯಾ! (ಪ)
-ರಮಾರ್ಥ ಚಿಂತನೆ ಮಾಡುತಿರಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾತ್ಮೀಯನಯ್ಯಾ!!!

ಹೊಟ್ಟೆ ಕೆಟ್ಟು, ಮಕೆಟ್ಟು, ಆಗಿಲ್ಲೊಳಗುಟ್ಟು ರಟ್ಟು! (ಬ)   6(4330)

-ಟ್ಟೆ, ಬರೆ ಬಿಚ್ಚಿಟ್ಟರೂ ಅರಿಯದಿರ್ಪುದೊಳಗುಟ್ಟು!
ಕೆಟ್ಟ ವಾಸನೆ ಹುಟ್ಟಡಿಗಿದರರಿವುದು ಗುಟ್ಟು! (ಮು)
-ಟ್ಟು, ಮಡಿಯಾಚಾರದಿಂದಾಗದು ಅರಿವೊಳಗುಟ್ಟು!
ನೋವೃತ್ತಿಗಳಡಗಿದಾಗ ಎಲ್ಲಾ ಗುಟ್ಟು ರಟ್ಟು!
ರನ ಹುಟ್ಟು ಸಾವಿಗೆ ಹೇತು ಕಾಡುತಿಹಾ ಗುಟ್ಟು!
ಕೆಲಸ, ಕಾರ್ಯ ಮಾಡಬೇಕು ಫಲಾಪೇಕ್ಷೆಯ ಬಿಟ್ಟು! (ಜು)
-ಟ್ಟು, ಜನಿವಾರ ಕಿತ್ತಮೇಲೆಲ್ಲಾ ಆಸೆಗಳ ಮೆಟ್ಟು!
ಸೆಗಳಿಂದಲೇ ಆಗುತ್ತಿರುವುದೆಲ್ಲಾ ಬಿಕ್ಕಟ್ಟು! (ಯೋ)
-ಗಿಯಾಗಬೇಕಾದರಿರಬೇಕೆಂದ್ರಿಯಗಳೊಗ್ಗಟ್ಟು! (ಗು)
-ಲ್ಲೊಳಗಿನ ಗುಡಿಯೊಳಗೆಲ್ಲಿರುವುದು ಒಗ್ಗಟ್ಟು? (ಕೊ)
-ಳಕು, ಥಳಕಿನ ಬಾಳಿಗೆ ದುರ್ಬಲ ಬುಡಗಟ್ಟು!
ಗುರುಸೇವೆಯಿಂದಾಗಬೇಕು ಸುಭದ್ರ ಅಡಿಗಟ್ಟು! (ಸು)
-ಟ್ಟು ಹೋಗುವುದಾಗ, ಪಾಪ, ಪುಣ್ಯದ ಭ್ರಾಂತಿಯ ಕಟ್ಟು!
ಘುಪತಿಗುಪದೇಶಿಸಿದನು ವಶಿಷ್ಠಾ ಗುಟ್ಟು! (ಕ)
-ಟ್ಟುಪಾಡೆನಗಿಲ್ಲೆಂಬುದೇ ನಿರಂಜನಾದಿತ್ಯ ಗುಟ್ಟು!!!

ಹೊಟ್ಟೆ ಬಟ್ಟೆಗಾಗೆಷ್ಟಾಟ? (ಸಿ)   6(3903)

-ಟ್ಟೆಬ್ಬಿಸುವುದಾ ಕೆಟ್ಟಾಟ!
ದ್ಧನೂ ಸಿದ್ಧನೆಂಬಾಟ! (ಗು)
-ಟ್ಟೆನ್ನುವುದಾ ಸಟೆಯಾಟ!
ಗಾಳಿ ಮೂಟೆ ಕಟ್ಟುವಾಟ!
ಗೆಳೆಯ ಕತ್ತು ಕೊ

ವಾಟ! (ಅ)
-ಷ್ಟಾವಧಾನವೆಂಬೊಂದಾಟ! (ದಿ)
-ಟ ನಿರಂಜನಾದಿತ್ಯಾಟ!!!

ಹೊಟ್ಟೆ ಹಸಿದಾಗ ಸತ್ತವನತ್ತ, ಅತ್ತವನಿತ್ತ! (ಕೆ)   6(4313)

-ಟ್ಟೆನೆನ್ನುವನು ಹೊಟ್ಟೆಗೇನಿಲ್ಲವೆಂದಳುತ್ತಳುತ್ತ!
ಣೆಯಬರಹ ತನ್ನದು ಚೆನ್ನಾಗಿಲ್ಲವೆನ್ನುತ್ತ!
ಸಿಕ್ಕಿದೆಷ್ಟನ್ನುಣ್ಣುವನನ್ಯ ದಾರಿಯಿಲ್ಲವೆನ್ನುತ್ತ!
ದಾರಿಯುದ್ದಕ್ಕೂ ಗೊಣಗುವನು ದಾರಿಯೇನೆನ್ನುತ್ತ!
ತಿ ನೀನೆಂದೋಡುವನು ಗುರುವಿನ ಪಾದದತ್ತ!
ದುಪದೇಶವನ್ನೆನಗೀಗನುಗ್ರಹಿಸೆನ್ನುತ್ತ! (ಚಿ)
-ತ್ತಶುದ್ಧಿಗೆ ಜಪಮಾಡೆಂದಂತೆ ಸತತ ಮಾಡುತ್ತ!
ನವಾಸೋಪವಾಸಾದಿಗಳನ್ನೆಲ್ಲಾ ಸಹಿಸುತ್ತ!
ಶ್ವರ ಸುಖಾದಾಶೆಗಳನ್ನೆಲ್ಲಾ ತ್ಯಾಜ್ಯಮಾಡುತ್ತ! (ಹ)
-ತ್ತವತಾರಾತ್ಮನ ಲೀಲೆಗಳನ್ನೆಲ್ಲಾ ನೆನೆಯುತ್ತ!
ವರಂತೆ ತಾನೂ ಮೆಲ್ಲ ಮೆಲ್ಲಗೆ ಆಗುತ್ತಾಗುತ್ತ! (ದ)
-ತ್ತಗುರು ಬಾನ್ಮಣಿಯ ಆದರ್ಶಗಳ ಪಾಲಿಸುತ್ತ! (ಅ)
-ವನೇ ತಾನು, ತಾನೇ ಅವನೆಂಬರಿವಿನಿಂದಿರುತ್ತಾ!
ನಿತ್ಯ, ಸತ್ಯ, ನಿರ್ವಿಕಾರ, ನಿರಾಕಾರಾತ್ಮನಾಗುತ್ತಾ! (ದ)
-ತ್ತ ನಿರಂಜನಾದಿತ್ಯ ತಾನಾಗದಿರನು ನಗುತ್ತ!!!

ಹೊಟ್ಟೆ, ಬಟ್ಟೆ ಕೊಟ್ಟವನ ಬಿಟ್ಟು ನೀ ಕೆಟ್ಟೆ! (ದಿ)   6(3744)

-ಟ್ಟೆ ನೀನೆಂಬುದನ್ನು ನೀನೀಗ ತೋರ್ಸಿಕೊಟ್ಟೆ!
ಟ್ಟೆ ಬದ್ಲಸಿ ನರಕದಲ್ಲಿ ಬಿದ್ಬಿಟ್ಟೆ! (ತ)
-ಟ್ಟೆ ನೀನಿಟ್ಟು ಕಹಿಯೂಟ ಬಡಿಸ್ಬಿಟ್ಟೆ!
ಕೊಟ್ಟ ವಚನಕೆ ತಪ್ಪಿ ನಡೆದುಬಿಟ್ಟೆ! (ಅ)
-ಟ್ಟಹಾಸದ ಬಾಳಿಗೀಗ ಶುರು ಮಾಡ್ಬಿಟ್ಟೆ! (ಭ)
-ವ ಬಂಧನಕ್ಕೆ ಕಟ್ಟು ಬೀಳಲಣ್ಯಾಗ್ಬಿಟ್ಟೆ!
ರ ಜನ್ಮ ವ್ಯರ್ಥ ಮಾಡಲ್ದಾರಿ ಮಾಡ್ಕೊಟ್ಟೆ!
ಬಿಕ್ಕಟ್ಟು ಪರಿಹರಿಸ್ಲಾಗದಂತಿದ್ಬಿಟ್ಟೆ! (ಹೊ)
-ಟ್ಟು ತಿಂದು ಅಕ್ಕಿ ಚೆಲ್ಲುವಂತೆ ನೀನಾಗ್ಬಿಟ್ಟೆ!
ನೀತಿ ರೀತಿ ಶಿವನದ್ಗಾಳಿಗೆ ತೂರ್ಬಿಟ್ಟೆ
ಕೆಲಸ ಕೈ ಮೀರಿ ಹೋಗೀಗ ನೀನು ಕೆಟ್ಟೆ! (ಬ)
-ಟ್ಟೆ ನಿರಂಜನಾದಿತ್ಯನದ್ದೇಕೆ ನೀನ್ಬಿಟ್ಟೆ???

ಹೊಟ್ಟೆಗಾಗದ ಊಟ ಉಂಡಾಗ ವಾಂತಿ! (ತ)   6(4209)

-ಟ್ಟೆ ಚೆನ್ನಾಗಿ ತೊಳೆದಿರದಿದ್ದ್ರೂ ವಾಂತಿ!
ಗಾಳಿ, ಮಳೆ, ಬಿಸಿಲತಿ ಆದ್ರೂ ವಾಂತಿ! (ಭೋ)
-ಗಕ್ಕಳತೆಯೇ ಇಲ್ಲವಾದರೂ ವಾಂತಿ!
ರ್ಶನ ಪಿಶಾಚಿಯದ್ದಾದರೂ ವಾಂತಿ!
ರಿಂದೂರಿಗಲೆವುದಾದರೂ ವಾಂತಿ! (ಕಾ)
-ಟ ಕಳ್ಲ ಕಾಕರಿಂದಾಗುತ್ತಿದ್ದ್ರೂ ವಾಂತಿ!
ಉಂಡೊಡನೆಯೇ ಮಲಗಿಬಿಟ್ಟ್ರೂ ವಾಂತಿ! (ಉಂ)
-ಡಾಡಿಗುಂಡನಂತೆ ಕುಳಿತಿದ್ದ್ರೂ ವಾಂತಿ! (ಯೋ)
-ಗ ಸಾಧನೆಯಿಂದ ಸಾಧ್ಯ ವಾಂತಿ ಶಾಂತಿ! (ಭ)
-ವಾಂಧಕಾರದಲ್ಲೀ ಬೆಳಕಿಂದ ಶಾಂತಿ! (ಶಾಂ)
-ತಿ ನಿರಂಅಜನಾದಿತ್ಯಾನಂದ ಪ್ರಶಾಂತಿ!!!

ಹೊಟ್ಟೆಬಟ್ಟೆಯಿಷ್ಟಟ್ಟಬೇಕಯ್ಯಾ! (ಹೊ)   2(859)

-ಟ್ಟೆಗಿಷ್ಟು ದಿನ ಕೊಟ್ಟೇನಾಯ್ತಯ್ಯಾ?
ರಬರುತ್ತಾಸೆ ಹೆಚ್ಚಾಯ್ತಯ್ಯಾ! (ಬ)
-ಟ್ಟೆಷ್ಟುತರ ಉಟ್ಟರೇನಾಯ್ತಯ್ಯಾ!
ಯಿಷ್ಟವಿನ್ನಷ್ಟುಡುವಂತಾಯ್ತಯ್ಯಾ! (ಕ)
-ಷ್ಟ ದಿನದಿನಕ್ಕೂ ಜಾಸ್ತ್ಯಾಯ್ತಯ್ಯಾ! (ಬಿ)
-ಟ್ಟಲ್ಲದೇನೂ ಸುಖವಿಲ್ಲವಯ್ಯಾ!
ಬೇಕಾದಂತಿರಿಸುವಾತಪ್ಪಯ್ಯಾ!
ರ್ತವ್ಯವನ ಚಿಂತನೆಯಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನಂತಯ್ಯಾ!!!

ಹೊಟ್ಟೆಯ ಕೂಸಿಗೆ ಹೆಸರಿಡಬೇಡ! (ಕೆ)   6(3751)

-ಟ್ಟೆನೆಂದಾಮೇಲೆ ಕುಟ್ಟಿಕೊಂಡು ಅಳ್ಬೇಡ!
ತ್ನ ನಮ್ಮದೆಲ್ಲಾ ಫಲಿಸೀತೆನ್ಬೇಡ!
ಕೂತಾಗ, ನಿಂತಾಗಾತ್ಮಧ್ಯಾನ ಬಿಡ್ಬೇಡ!
ಸಿಕ್ಕಿದ್ದರಲ್ಲಿ ತೃಪ್ತಿ ಪಡದಿರ್ಬೇಡ!
ಗೆಳೆತನ ದುರ್ಜನರದ್ದು ಮಾಡ್ಬೇಡ!
ಹೆರವರಾಸ್ತಿ ಪಾಸ್ತಿಗೆ ಆಶಿಸ್ಬೇಡ!
ತ್ತು, ಹುಟ್ಟುವ ನೆಂಟತನ ಹೂಡ್ಬೇಡ!
ರಿಪುಕುಲಾಂತಕನ ಮರೆತಿರ್ಬೇಡ!
ಮರುಧರಗೆ ಶರಣಾಗ್ದಿರ್ಬೇಡ!
ಬೇಕು, ಬೇಡವೆಂದವ್ನಲ್ಲೇನೂ ಹೇಳ್ಬೇಡ! (ಬಿ)
-ಡ, ನಿರಂಜನಾದಿತ್ಯ ಶಿವ ಕೈ ಬಿಡ!!!

ಹೊಟ್ಟೆಯ ಹುಣ್ಣು ರೇಶ್ಮೆ ಬಟ್ಟೆಯುಟ್ರೆ ಮಾಯದು! (ಅ)   6(4040)

-ಟ್ಟೆಣ್ಣೆಯೌಷಧಿ, ತೈಲ ಗುಣ ಮಾಡದಿರದು! (ವ್ರ)
-ಯ ಯೋಚನೆ ಮಾಡದೆಂದಿಗೂ ಮಾಡಬಾರದು!
ಹುಣ್ಣಿಗೆ ತಕ್ಕೌಷಧಿಯನ್ನುಪೇಕ್ಷಿಸ ಬಾರದು! (ಉ)
-ಣ್ಣುವನ್ನ ಮಣ್ಣಿಂದಾದ್ರೂ ಮಣ್ಣು ಬೆರೆಸ್ಬಾರದು!
ರೇಚಕವೇ ಸದಾ ಆದ್ರೆ ಪ್ರಾಣ ಉಳಿಯದು! (ರೇ)
-ಶ್ಮೆಯ ಗುಣ, ದೋಷ ವಿಮರ್ಶಿಸದಿರ್ಬಾರದು!
ಟ್ಟೆ ಹತ್ತಿಯದ್ದೆಂದು ಅಲಕ್ಷಿಸಬಾರದು! (ಹೊ)
-ಟ್ಟೆ, ಬಟ್ಟೆಗೋಸ್ಕರವೇ ಬದುಕಿರಬಾರದು! (ಆ)
-ಯುಷ್ಯ ಮಾಯಾಮೋಹದಲ್ಲಿ ಕಳೆಯಬಾರದು! (ಸು)
-ಟ್ಟ್ರೆ ಬೂದಿಯಾಗುವ ದೇಹವ ನಂಬಬಾರದು!
ಮಾಧವನ ನಂಬಿಗೆಯನ್ನು ಬಿಡಬಾರದು!
ಮನ ಬಲೆಯಿಂದಾಗ ಪಾರಾಗಬಹುದು!
ದುರಿತ ಶ್ರೀ ನಿರಂಜನಾದಿತ್ಯನಿಗಂಟದು!!!

ಹೊಟ್ಟೆಯೊಳಗೇಕೆ ಕೆಟ್ಟ ವಾಸನೆ? (ಪ)   5(3143)

-ಟ್ಟೆ ಮಡಿಯುಟ್ತೂ ಹೋಗದಾ ವಾಸನೆ!
(ಸ್ತ್ರೀ) ಯೊಡನಾಟೇಚ್ಛೆಯನಾದಿ ವಾಸನೆ! (ಗೆ)
-ಳತಿ ರಾಧೆಯಾದ್ರದೇ ಸುವಾಸನೆ! (ಯೋ)
-ಗೇಶ ಕೃಷ್ಣನ ಸಂಗ ಸುವಾಸನೆ!
ಕೆಡುಕ ಶಕುನಿಗಿಲ್ಲಾ ವಾಸನೆ!
ಕೆಚ್ಚೆದೆಯರ್ಜುನಗಿತ್ತಾ ವಾಸನೆ! (ಸು)
-ಟ್ಟರೂ ಹೋಗದು ವಿಷಯ ವಾಸನೆ!
ವಾತರೋಗಿಯುದರ ದುರ್ವಾಸನೆ!
ತ್ಸಂಗ ಗತ ಸಂಸ್ಕಾರ ವಾಸನೆ! (ಸೋ)
-ನೆ, ನಿರಂಜನಾದಿತ್ಯಾತ್ಮವಾಸನೆ!!!

ಹೊಡೆದಾಡಿ ಬುಡ ಕಿತ್ತವರಿಲ್ಲ! (ಪ)   5(2733)

-ಡೆದಿಷ್ಟಾರ್ಧ ಸುಮ್ಮಗಿರುವರೆಲ್ಲ!
ದಾರಿ ನೇರಾಗ್ಬೇಕೆಂದಾರಿಗೂ ಇಲ್ಲ! (ಮ)
-ಡಿದವರ ಸಂಖ್ಯೆಗೆ ಮಿತಿಯಿಲ್ಲ!
ಬುದ್ಧಿಯೀಗಾದ್ರೂ ಶುದ್ಧವಾಗಿಟ್ಟಿಲ್ಲ! (ಮಾ)
-ಡದೆ ಆತ್ಮಧ್ಯಾನ ಇದಾಗೋದಿಲ್ಲ!
ಕಿತ್ತಾಟ ನಿಲ್ಲಲಿದ ಮಾಡಿರೆಲ್ಲ! (ಉ)
-ತ್ತಮ ಸಂಸ್ಕಾರ ಪಡೆವರಾಗೆಲ್ಲ!
ರ ಗುರೂಪದೇಶವಿದ್ಸುಳ್ಳಲ್ಲ! (ಅ)
-ರಿಗಳಾರರಿಂದ ಕಾಟವಲ್ಲೆಲ್ಲ! (ಬ)
-ಲ್ಲ ನಿರಂಜನಾದಿತ್ಯ ಗುರುವೆಲ್ಲ!!!

ಹೊತ್ತಳಿಯಿತು, ಸೊತ್ತುಳಿಯಿತು! (ಕು)   3(1178)

-ತ್ತ ಕಳೆಯಿತು, ದತ್ತನಾಯಿತು! (ಬೋ)
-ಳಿಯದಾಯಿತು, ಕಾಳಿಯಾಯಿತು! (ಬಾ)
-ಯಿಯಡಗಿತು, ತಾಯಿಯಾಯಿತು!
ತುರಿ ಹೋಯಿತು, ತುರೀಯಾಯಿತು!
ಸೊಕ್ಕಡಗಿತು, ದಿಕ್ಕೊದಗಿತು! (ಬಿ)
-ತ್ತುವುದಾಯಿತು, ತುತ್ತೆನಿಸಿತು! (ಗಾ)
-ಳಿ ನಿಂತಾಯಿತು, ಬಾಳ್ವಂತಾಯಿತು! (ಕಾ)
-ಯಿ, ಹಣಾಯಿತು, ಬಾಯಿಗೊಪ್ಪಿತು! (ಬಂ)
-ತು, ನಿರಂಜನಾದಿತ್ಯನಾಗಿಂತು!!!

ಹೊತ್ತಾಗ್ಯೆದ್ದರೆಲ್ಲರಿಲ್ಲಿಂದು! (ಗೊ)   4(2362)

-ತ್ತಾಯ್ತದಾಮೇಲೆಲ್ಲರಿಗಿಂದು! (ಭಾ)
-ಗ್ಯೆ ನಾನೆಲ್ಲರಿಗಿಂತ ಇಂದು! (ಇ)
-ದ್ದದ್ರಲ್ಲಿ ತೃಪ್ತಿಯೆನಗಿಂದು! (ಬೆ)
-ರೆತವರಿಗಾನಂದವಿಂದು! (ತ)
-ಲ್ಲಣವಿಲ್ಲದಾಗುವುದಿಂದು! (ಹ)
-ರಿಸ್ಮರಣೆಗನ್ಕೂಲವಿಂದು! (ಪು)
-ಲ್ಲಿಂಗ, ಸ್ತ್ರೀಲಿಂಗ ಭೇದವಿಂದು! (ಇ)
-ದು ನಿರಂಜನಾದಿತ್ಯಗಿಂದು!!!

ಹೊತ್ತಿಗೆ ಮೊದಲೇ ಬೆತ್ತಲೆಯಾದೆ! (ಸು)   5(3138)

-ತ್ತಿರುವಂಬರ ನಿರ್ಮಲವಾಗಿದೆ!
ಗೆಳೆಯರ ಬಿಟ್ಟೊಳಗೆ ನಾ ಬಂದೆ!
ಮೊದಲೊರೆದದ್ದೇನೆಂದು ನೆನೆದೆ!
ತ್ತಚಿತ್ತವೆಂದು ತೀರ್ಮಾನಿಸಿದೆ!
ಲೇಖನಿಯಿಂದದ ಮತ್ತೆ ಬರೆದೆ!
“ಬೆಳಕಿನಲ್ಲಿ ಬೆತ್ಲೆ” ಸರಿಯೆಂದೆ! (ಚಿ)
-ತ್ರದಲ್ಲಾಗನ್ಯ ವೃತ್ತಿಯಿದ್ದಿಲ್ಲೆಂದೆ!
ಲೆಕ್ಕಿಸ್ಬಾರ್ದೀ

ಕೋತಿ ಮನಸ್ಸನ್ನೆಂದೆ!
ಯಾರೇನೆಂದರೆನಗೇನಾಗ್ವುದೆಂದೆ! (ಬಂ)
-ದೆ ನಿರಂಜನಾದಿತ್ಯನಾಗೀಗೆಂದೆ!!!

ಹೊರಗಟ್ಟಿ ದಿಟ್ಟಿ ನಿನ್ನದಿಟ್ಟಿ! (ವ)   4(2382)

-ರ ಗುರುಸೇವೆಯಲ್ಲೆನ್ನನ್ನಿಟ್ಟಿ!
ರ್ವವನ್ನೆನ್ನಿಂದ ಕಿತ್ತುಬಿಟ್ಟಿ! (ರೊ)
-ಟ್ಟಿ, ಹಾಲ್ಮೊಸ್ರು ಹೊಟ್ಟೆ ತುಂಬಾ ಕೊಟ್ಟಿ!
ದಿವ್ಯ ಜೀವ್ನಕ್ಕೆ ಕಟ್ಟಿ ಹಾಕ್ಬಿಟ್ಟಿ! (ಭೆ)
-ಟ್ಟಿ ನಿನ್ನದು ಪ್ರತಿದಿನ ಕೊಟ್ಟಿ!
ನಿತ್ಯನುಷ್ಠಾನಕ್ಕೆ ಜಾಗ ಕೊಟ್ಟಿ! (ತ)
-ನ್ನ ಹಾಗೆಲ್ಲರೆಂಬ ಜ್ಞಾನ ಕೊಟ್ಟಿ!
ದಿಕ್ಕಿಲ್ಲದವಗೆ ದಿಕ್ಕಾಗ್ಬಿಟ್ಟಿ! (ಇ)
-ಟ್ಟಿ, ನಿರಂಜನಾದಿತ್ಯನಾಗ್ಬಿಟ್ಟಿ!!!

ಹೊರಗಣ್ಣ ಮುಚ್ಚಿ, ಒಳಗಣ್ಣ ತೆರೆ!   6(3857)

ಹಸ್ಯವ ಮುಚ್ಚಿಹುದು ಬಾಹ್ಯ ಪೊರೆ!
ಮನ ಹೊರಗಾದರೆ ಬೇಕು ಸೀರೆ! (ಸ)
-ಣ್ಣ, ದೊಡ್ಡವರಲ್ಲೆಲ್ಲದೇ ಪರಂಪರೆ!
ಮುಳುಗಲಿಕ್ಕಿದೆ ಬೇಕಾದಷ್ಟು ಕೆರೆ! (ಬಿ)
-ಚ್ಚಿಡದಿದ್ದರೆ ಬಟ್ಟೆಗಳ ತೊಂದರೆ!
ಳಗಿಳಿದು ತೊಳೆವಾಗಿಲ್ಲ ಧರೆ! (ತ)
-ಳಮಳ, ಕಳವಳ, ಮನಕೆ ಹೊರೆ!
ಗನ ಸದೃಶ ನೀನಾಗಿ ಮೈಮರೆ! (ಬ)
-ಣ್ಣ ಬಣ್ಣಗಳಳಿದಾಗ ನೀನೇ ಧೊರೆ!
ತೆರೆಯದಿದ್ದ್ರೆ ಕಣ್ಣಾನಂದದ ಸೂರೆ! (ಧ)
-ರೆಗೆ ನಿರಂಜನಾದಿತ್ಯಾನಂದ ಬೀರೆ!!!

ಹೊರಗಣ್ಣು ಕಂಡದ್ದಿಂದಿರದೆಂದೆಂದೂ!   6(3332)

(ಪ)-ರಬ್ರಹ್ಮಕ್ಕಳಿವಿಲ್ಲದಿರ್ಪುದೆಂದೆಂದೂ!
ರ್ವಿಮಾನವನರಿಯನಿದನಿಂದು!
(ಹೆ)-ಣ್ಣು, ಮಣ್ಣಿಗಾಗಿ ದಣಿವನವನಿಂದು!
ಕಂದನನ್ನೆತ್ತಿ ಮುದ್ದಾಡುವ ತಾನಿಂದು!
(ಒ)-ಡನಾಟ ಸಜ್ಜನರದ್ದೇಕೆಂಬನಿಂದು!
(ಜಿ)-ದ್ದಿಂದನ್ಯರನ್ನು ಪೀಡಿಸುತ್ತಿಹನಿಂದು!
ದಿವ್ಯ ಜೀವನ ನಡೆಸದಿಹನಿಂದು!
ಸನೆಯಾಡ್ವುದು ಬಂಡುಮಾತನ್ನಿಂದು!
(ತಂ)-ದೆಂದು ಕರೆಯದಿಹ ದೇವರನ್ನಿಂದು!
(ಎಂ)-ದೆಂದಿಗವನೇ ಗತಿಯೆಂದು ನಂಬಿಂದು!
(ಇಂ)-ದೂ, ಮುಂದೂ, ನಿರಂಜನಾದಿತ್ಯನೇ ಎಂದು!!!

ಹೊರಗಾದಾಗಾಗುವುದು ನೋವು! (ಇ)   4(1430)

-ರಬೇಕೊಳಗೆ, ಆಗಿಲ್ಲಾ ನೋವು!
ಗಾಳಿ, ಮಳೆಗೀಡಾದಾಗಾ ನೋವು!
ದಾಸ್ಯ ಭಕ್ತಿ ಸೇವೆಗಿಲ್ಲಾ ನೋವು! (ಭೋ)
-ಗಾಸಕ್ತಿ ಹೆಚ್ಚಿದರಾಗಾ ನೋವು!
ಗುರುನಾಮ ಪ್ರೇಮಕ್ಕಿಲ್ಲಾ ನೋವು! (ಠಾ)
-ವು ತಪ್ಪಿದಾಗಾಗುವುದಾ ನೋವು!
ದುರ್ಮೋಹ ಹರಿದರಿಲ್ಲಾ ನೋವು!
ನೋಟ, ಕೊಟೇಚ್ಛೆಯಾದಾಗಾನೋವು! (ನೋ)
-ವು ಹರಾ ನಿರಂಜನಾದಿತ್ಯಾವು!!!

ಹೊರಗೆ ಆರೋಪ, ಒಳಗೆ ಪ್ರಲಾಪ! [ತೋ]   4(2494)

-ರದಾಗಿಹುದಿದರಿಂದ ನಿಜರೂಪ! (ಹ)
-ಗೆತನಕೆ ಕಾರಣಜ್ಞಾನ ಸ್ವರೂಪ!
ನಂದ ಕೆಟ್ಟಾಗ್ವುದು ರಾಕ್ಷಸರೂಪ!
ರೋಗಾದಿಗಳಿಂದಾಗುವುದು ಕುರೂಪ!
ರಮಪಾವನ ಪರಮಾತ್ಮ ದೀಪ!
ಳ, ಹೊರಗಿನ ಬೆಳಕೀ ಪ್ರದೀಪ! (ಕಾ)
-ಳಸಂತೆಯ ನಾಶಕ್ಕೆ ಬೇಕ್ಙ್ಞಾನ ದೀಪ! (ನ)
-ಗೆಮೊಗದಿಂದಾಗ ಶೋಭಿಪುದು ರೂಪ!
ಪ್ರತಿಕ್ಷಣಾಗ್ಲಿದಕ್ಕಾಗಿ ರಾಮ ಜಪ!
ಲಾಭಪ್ರದವಿಹ ಪರಕ್ನಾಮ ಜ

ಪ! (ದೀ)
-ಪ, ನಿರಂಜನಾದಿತ್ಯಾನಂದ ಸ್ವರೂಪ!!!

ಹೊರಗೆ ಥಳಕು, ಒಳಗೆ ಕೊಳಕು!   6(4179)

ಹಸ್ಯ ಒಡನಾಡಿ ತಿಳಿಯಬೇಕು!
ಗೆಳೆಯರಿಂಥವರಾದರೆ ಕೆಡಕು! (ಪ)
-ಥ ಅಂಥವರದ್ದೆಲ್ಲಾ ಬಲು ತೊಡಕು! (ಕ)
-ಳವಳ ತಳಮಳವೆಲ್ಲಾ ಬದುಕು!
ಕುಹಕು, ಕುಚೋದ್ಯದಿಂದಾಸ್ತಿಯೊಡಕು!
ಳ, ಹೊರಗಿರ್ಬೇಕು ಸದಾ ಬೆಳಕು! (ಕಾ)
-ಳ ಸಂತೆಗಾಗ ಇರದು ಕೈ ಚಳಕು! (ಅ)
-ಗೆತಾಳವಿಲ್ಲದಡಿಗಟ್ಟೆ ಬಿರುಕು!
ಕೊಲೆಗೈದವನ ನಾಲಿಗೆ ಚುರುಕು! (ಖ)
-ಳ ರಾವಣನುದಾಹರಣೆಯೇ ಸಾಕು! (ಬೇ)
-ಕು ನಿರಂಜನಾದಿತ್ಯ ರಾಘವ ಬೇಕು!!!

ಹೊರಗೆ ದೊಂಬಿ, ಒಳಗೆ ತುಂಬಿ! (ಬ)   6(4331)

-ರಲಂತರ್ಮುಖ ಇದನ್ನು ನಂಬಿ!
ಗೆಳೆತನದ ಸುಖವನ್ನುಂಬಿ!
ದೊಂಬರಾಟ ಸಾಕೆನಗೆಂಬಿ!
ಬಿದಿಯನ್ನಿನ್ನೇಕೆ ಬೈಯ್ಯಲೆಂಬಿ!
ಡೆಯನೊಡಗೂಡಿದೆ ನೆಂಬಿ! (ತ)
-ಳಮಳಳಿದೀಗ ಹೋಯಿತೆಂಬಿ! (ಹ)
-ಗೆಗಳ ಕಾಟ ತಪ್ಪಿತೀಗೆಂಬಿ!
ತುಂಟರೊಡನಾಟ ಬಿಟ್ಟಿತೆಂಬಿ!
ಬಿದಿ ನಿರಂಜನಾದಿತ್ಯನೆಂಬಿ!!!

ಹೊರಗೆ ರಾಮ ಒಳಗೆ ಕಾಮ! [ಇ]   5(3150)

-ರಬಾರದೀ ತರ ಭಕ್ತಿ, ಪ್ರೇಮ! (ಹೇ)
-ಗೆ ಸಿಕ್ಕೀತಿಂತಿದ್ದವರಿಗಾರಾಮ?
ರಾಮನವನ ಮಾಡ್ಬೇಕ್ನಿಷ್ಕಾಮ!
ನ್ಮಥನ ಗೆದ್ದ ಶಿವಾರಾಮ!
ಲಿಯದ ರಾವಣ ನಿರ್ನಾಮ! (ನ)
-ಳ, ಹರಿಶ್ಚಂದ್ರರ್ಗಾರಾಮನಾಮ! (ಕಾ)
-ಗೆಮ್ಮನ್ನೆಲ್ಲಾ ನಾಮ ಸೀತಾರಾಮ!
ಕಾದಿದ್ದ ಶಬರಿಗಾಯ್ತಾರಾಮ! (ಪ್ರೇ)
-ಮ, ನಿರಂಜನಾದಿತ್ಯಗಾರಾಮ!!!

ಹೊರಗೆರಂಭೆ, ಒಳಗೊಂದುಚಕ್ಕಳದಗೊಂಬೆ! (ವ)   5(3080)

-ರ ಗುರುವಿನ ಲೀಲಾ ಮಹಿಮೆಯ ನಾನೇನೆಂಬೆ! (ಬ)
-ಗೆಬಗೆ ರೂಪಿನಲ್ಲವನಾಟತ್ಯದ್ಭುತವೆಂಬೆ!
ರಂಗನಾಗಿ, ಮಂನಾಗಿ, ಬ್ರಹ್ಮನಾದವನೆಂಬೆ! (ಪ್ರ)
-ಭೆಯ ನಿಧಿಯನ್ನೇ ನುಂಗಲೆತ್ನಿಸಿದವನೆಂಬೆ!
“ಒಲಿದ್ರೆ ನಾರಿ ಮುನಿದ್ರೆ ಮಾರಿ” ಯಂತಿವನೆಂಬೆ! (ನ)
-ಳ ಮೊದಲಾದ ಕಪಿವೀರರ ನಾಯಕನೆಂಬೆ!
ಗೊಂದಲವೆಬ್ಬಿಸಿ ಲಂಕೆಯನ್ನು ಸುಟ್ಟವನೆಂಬೆ!
ದುಷ್ಟರಾವಣನ ಕೊಂದ ರಾಮನಾತ್ಮೀಯನೆಂಬೆ!
ರಿತ್ರೆ ಇವನದು ವರ್ಣಿಸಲಸಾಧ್ಯವೆಂಬೆ! (ಅ)
-ಕ್ಕರೆಯಲ್ಲಿವಗೆ ಸರಿಸಮಾನರಿಲ್ಲವೆಂಬೆ! (ಹ)
-ಳಬ ಜಾಂಬವಗಚ್ಚುಮೆಚ್ಚಿನವನಿವನೆಂಬೆ!
ರ್ಶನವಿವನದು ಪಡೆದವ ಧನ್ಯನೆಂಬೆ!
ಗೊಂಬೆಯಿದು ಚಿಕ್ಕದೂ, ದೊಡ್ಡದೂ ಆಗ್ಬಲ್ಲುದೆಂಬೆ!
ಬೆದರನಿವನಿಗೆ ನಿರಂಜನಾದಿತ್ಯನೆಂಬೆ!
(ಬೆದರಲೇಕೆ? ನಿರಂಜನಾದಿತ್ಯಭೇದನೆಂಬೆ!!!)

ಹೊರಗೊಳ ಶುದ್ಧಿಗಳೆರಡೂ ಬೇಕು! (ಹೊ)   5(3105)

-ರಗಿನ ಕೊಳೆಯೊಳ ಸೇರದಿರ್ಬೇಕು!
ಗೊಲ್ಲನ ಮನೆ ಶುಚಿಯಾಗಿರಬೇಕು! (ಗೆ)
-ಳತಿಗಿದು ನೆನಪಿನಲ್ಲಿರಬೇಕು! (ಪ)
-ಶುಪತಿಗಿದಿಷ್ಟವೆಂದರಿತಿರ್ಬೇಕು! (ರಿ)
-ದ್ಧಿ, ಸಿದ್ಧಿಗಳಿಗಾಶಿಸದಿರ್ಬೇಕು!
ರ್ವ ಸಂಪೂರ್ಣವಾಗಿ ನಾಶವಾಗ್ಬೇಕು! (ಗೆ)
-ಳೆತನ ದುರ್ಜನರಲ್ಲಿರದಿರ್ಬೇಕು! (ವ)
-ರ ಗುರುಧ್ಯಾನ ನಿರತನಾಗಿರ್ಬೇಕು! (ಗ)
-ಡೂ, ಹೆಣ್ಣೂ ಘರ್ಷಣೆಯಿಲ್ಲದಿರಬೇಕು!
ಬೇರೂರಿ ಸೇವೆ ಫಲಿಸುವಂತಾಗ್ಬೇಕು! (ವ್ಯಾ)
-ಕುಲ ನಿರಂಜನಾದಿತ್ಯ ಸುಡಬೇಕು!!!

ಹೊರಗೋಡಾಡಬೇಡ ಕೃಷ್ಣಯ್ಯಾ! (ಇ)   4(1774)

-ರಬೇಕೋಡಾಡಿಕ್ಕೊಂಡೊಳಗಯ್ಯಾ!
ಗೋವಳರೆತ್ತಿಕೊಂಡೋಡ್ವರಯ್ಯಾ! (ಕೂ)
-ಡಾಡ್ಯೆನಗೆ ಸಂತೋಷ ನೀಡಯ್ಯಾ! (ಗಂ)
-ಡ, ಹೆಂಡಿರಾಟ ಸಾಕು ಮಾಡಯ್ಯಾ!
ಬೇಕೆನೆಗೆ ನಿನ್ನೊಡನಾಟಯ್ಯಾ (ಬ)
-ಡವಾದೆ ನಿನ್ನ ಬೆನ್ನಟ್ಟ್ಯಾನಯ್ಯಾ!
ಕೃಪೆದೋರಿನ್ನಾದರೂ ನನ್ನಯ್ಯಾ! (ಕೃ)
-ಷ್ಣ ನೀನೆನ್ನ ಸರ್ವಸ್ವ ಕಾಣಯ್ಯಾ (ಅ)
-ಯ್ಯಾ ನಿರಂಜನಾದಿತ್ಯ ಕೃಷ್ಣಯ್ಯಾ!!!

ಹೊರಟ ಮೇಲೆ ಹರಟಬೇಡ!   2(829)

ಸ್ತೆ ಬಿಟ್ಟು ಅಡಿಯಿಡಬೇಡ! (ಕೂ)
-ಟ ನೋಡಿ

ಕಾಲ ಕಳೆಯಬೇಡ!
ಮೇಷ, ವೃಷಭವೆಣಿಸಬೇಡ! (ಮೂ)
-ಲೆ ಮೂಲೆಗಿಣಿಕಿ ನೋಡಬೇಡ!
ರಿ ಸ್ಮರಣೆ ಬಿಟ್ಟಿರಬೇಡ! (ಪು)
-ರ, ಭವನಗಳಾಶಿಸಬೇಡ! (ಆ)
-ಟ, ನೋಟಗಳ ಚಪಲ ಬೇಡ!
ಬೇಡಿ, ಕಾಡಿ, ಹೊಟ್ಟೆತುಂಬಬೇಡ! (ಬೇ)
-ಡ, ನಿರಂಜನಾದಿತ್ಯತ್ತಿತ್ತೋಡ!!!

ಹೊಲ, ಮನೆಗೇಕೆ ಹೊಡೆದಾಟ? (ಛ)   4(1659)

-ಲದಿಂದ ಫಲವಿಲ್ಲದೋಡಾಟ!
ಡದಿ, ಮಕ್ಕಳಾಸೆ ಒದ್ದಾಟ!
ನೆನೆಯದಿದನೈಸೆ ಗುದ್ದಾಟ! (ಭೋ)
-ಗೇಚ್ಚೆಯಿಂದ ಉಂಟಾಯ್ತು ಸುತ್ತಾಟ!
ಕೆಟ್ಟ ಬುದ್ಧಿಯಿಂದಾಯ್ತು ಕಿತ್ತಾಟ!
ಹೊಟ್ಟೆಗಿಲ್ಲದಂತಾಗಿ ಪೇಚಾಟ! (ನ)
-ಡೆ, ನುಡಿ ವ್ಯತ್ಯಾಸಾಗಿ ಕಚ್ಚಾಟ!
ದಾರಿ ತಪ್ಯನು ನಿತ್ಯ ನೀಚಾಟ! (ನೆಂ)
-ಟ ನಿರಂಜನಾದಿತ್ಯಾತ್ಮೋಚ್ಚಾಟ!!!

ಹೊಲಕೊಂದು ಬೇಲಿ ಬೇಕಯ್ಯಾ! [ಬ]   2(943)

-ಲಕೊಬ್ಬ ನಾಯಕ ಬೇಕಯ್ಯಾ!
ಕೊಂಬಾಗೊಂದು ಕ್ರಮ ಬೇಕಯ್ಯಾ!
ದುರ್ಬಲಕ್ಕೌಷಧ ಬೇಕಯ್ಯಾ!
ಬೇಡನಿಗಾಯುಧ ಬೇಕಯ್ಯಾ! (ಕ)
-ಲಿಸಲಿಕೆ ವಿದ್ಯೆ ಬೇಕಯ್ಯಾ!
ಬೇಸರಕ್ಕಾರಾಮ ಬೇಕಯ್ಯಾ!
ರ್ಮಕ್ಕೊಂದು ಧರ್ಮ ಬೇಕಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಮ್ಮಯ್ಯಾ!!!

ಹೊಲವ ಮೇದ ಬೇಲಿ ಚಿತೆಗಾಹುತಿ!   6(3769)

ಕ್ಷ್ಯದಲ್ಲಿಟ್ಟಿದ ಬದುಕು ಸಂಗಾತಿ!
ರ ಗುರುವಿನ ಶ್ರೇಷ್ಠ ಪ್ರಸಾದ ವಿಭೂತಿ!
ಮೇಲಿಂದ್ಮೇಲಿದನು ಸೇವಿಸು ಸಂಗಾತಿ!
ಹಿಸುವುದೆಲ್ಲಾ ಪಾತಕ ವಿಭೂತಿ!
ಬೇಕು ಪೂರ್ಣ ವಿಶ್ವಾಸದ್ರಲ್ಲಿ ಸಂಗಾತಿ!
ಲಿಪಿ ಬ್ರಹ್ಮನದ್ದಳಿಸುವುದ್ವಿಭೂತಿ!
ಚಿರಕಾಲ ಆಗು ಶಿವನೇ ಸಂಗಾತಿ!
ತೆಗೆಯುವುದಜ್ಞಾನವನ್ನು ವಿಭೂತಿ!
ಗಾನ ಮಾಡು ಶಿವನ ಸ್ತೋತ್ರ ಸಂಗಾತಿ!
ಹುಸಿ ಮಯೆಗೆ ಬಹು ಭಯಾ ವಿಭೂತಿ! (ಯ)
-ತಿ ನಿರಂಜನಾದಿತ್ಯ ಶಿವ ಸಂಗಾತಿ!!!

ಹೊಲಸು ಹೊರಿಸಿ ಕುಲಗೆಡಿಸಬೇಡ! (ಬಾ)   3(1283)

-ಲ ನಿನ್ನವನೆಂಬಭಿಮಾನ ಬಿಡಬೇಡ!
ಸುಖದ ಸತ್ಯಾರ್ಥಕ್ಕೆ ಚ್ಯುತಿ ತರಬೇಡ!
ಹೊಣೆಗಾರ ನಿನೆಂಬುದನಲ್ಲೆನ ಬೇಡ!
ರಿಸಿ, ಮುನಿ ಮಾತನ್ನನೃತ ಮಾಡಬೇಡ! (ಘಾ)
-ಸಿಯಾದಾತ್ಮಕ್ಕೆ ನರಸುಕ್ಕನಿಕ್ಕಬೇಡ!
ಕುಕಲ್ಪನೆಗವಕಾಶವನ್ನೀಯಬೇಡ!
ಕ್ಷ್ಯ ನಿನ್ನಿಂದೆಂದಿಗೂ ತಪ್ಪಿಸಬೇಡ! (ಬ)
-ಗೆ ಬಗೆಯಾಸೆಗಳಿಂದ ಕೆಡಿಸಬೇಡ! (ನು)
-ಡಿ, ನಡೆ ಶುದ್ಧವಾಗಿರಿಸದಿರಬೇಡ!
ದಾ ನಿನ್ನ ಧ್ಯಾನ ಮಾಡಿಸದಿರಬೇಡ!
ಬೇನೆ, ಬೇಸರವಿತ್ತು ಬೆದರಿಸಬೇಡ! (ಪೊ)
-ಡಮಡುವ ನಿರಂಜನಾದಿತ್ಯಗೀ ಮೂಢ!!!

ಹೊಸೆಹೊಸೆದು ದಾಸರೂ ಮೋಸಹೋದರು!   6(4150)

ಸೆರೆಮನೆ ವಾಸ ಅನುಭವಿಸಿದರು!
ಹೊತ್ತು ಹೊತ್ತಿಗನ್ನ ನಿರಿಲ್ಲದೇ ಸತ್ತರು!
ಸೆಖೆ, ಚಳಿ, ಗಾಳಿ, ಮಳೆ ಸಹಿಸಿದರು!
ದುರ್ಮತಿಗಳ ನಿಂದೆಗೆ ಗುರಿಯಾದರು!
ದಾರಿ ನಡೆನಡೆದು ಸುಸ್ತಾಗಿ ಹೋದರು!
ತ್ಸಂಗ ದಿನ, ರಾತ್ರಿಯೆಲ್ಲಾ ಮಾಡಿದರು!
ರೂಪ ದರ್ಶನವಾಗದೇ ಪ್ರಾಣ ಬಿಟ್ಟರು!
ಮೋಸವೇತಕ್ಕಾಯಿತೆಂದರುಹದಾದರು!
ರ್ವವ್ಯಾಪಿ ದೇವರೆಂದು ತಿಳಿದಿದ್ದರು!
ಹೋರಾಟಕ್ಕೆ ತಕ್ಕ ಫಲ ಕಾಣದಾದರು!
ತ್ತ ತತ್ವಜ್ಞಾನದಿಂದ ಧನ್ಯರಾದರು! (ಗು)
-ರುದತ್ತ, ನಿರಂಜನಾದಿತ್ಯರಾದರು!!!

ಹೊಸ್ತಿಲ ಮೇಲ್ಕೂತೋದುತ್ತಲಿದ್ದ! (ಆ)   4(2352)

-ಸ್ತಿ ಪಾಸ್ತಿ ಲೆಕ್ಕ ಹಾಕುತ್ತಲಿದ್ದ! (ಕಾ)
-ಲ ಕೆಟ್ಟು ಹೋಯಿತೆನ್ನುತ್ತಲಿದ್ದ!
ಮೇಷ, ವೃಷಭವೆಣಿಸುತ್ತಿದ್ದ! (ನಾ)
-ಲ್ಕೂಟವಿನ್ನಿಲ್ಲೆನಗೆನ್ನುತ್ತಿದ್ದ! (ಹ)
-ತೋಟಿಯಲ್ಲಿರ್ಬೇಕಾಸೆನ್ನುತ್ತಿದ್ದ!
ದುಸ್ಸಂಗವಿರ್ಬಾರದೆನ್ನುತ್ತಿದ್ದ! (ಚಿ)
-ತ್ತ ಶುದ್ಧಿಯಾಗಬೇಕೆನ್ನುತ್ತಿದ್ದ! (ಶೂ)
-ಲಿಯನುಗ್ರಹಾಗ್ಬೇಕೆನ್ನುತ್ತಿದ್ದ! (ಎ)
-ದ್ದ, ನಿರಂಜನಾದಿತ್ಯ ನೋಡ್ತಿದ್ದ!!!

ಹೊಸ್ಬಟ್ಟೆದುರ್ನೋಡಿ ಹಳೇದ್ಬಿಚ್ಬೇಡ! (ಹೊ)   6(3711)

-ಸ್ಬಟ್ಟೆ ಬಂದ್ಮೇಲೆ ಹಳೇದನ್ನುಡ್ಬೇಡ! (ಬ)
-ಟ್ಟೆ ಇಲ್ದವ್ರಿಗೆ ದಾನ ಮಾಡ್ದಿರ್ಬೇಡ!
ದುರಾಸೆ ಎಂದಿಗೂ ಪಡಲೇಬೇಡ! (ಕಾ)
-ರ್ನೋಟ ನೋಡಿ ನಿನ್ನ ಗಾಡಿ ಬಿಡ್ಬೇಡ!
ಡಿಕ್ಕಿ ಹೊಡೆವಂತೆ ಗಾಡ್ಯೋಡಿಸ್ಬೇಡ!
ಳ್ಳ, ದಿಣ್ಣೆಯಲ್ಲೆಚ್ಚರ ತಪ್ಬೇಡ! (ಹೊ)
-ಳೇ ನೀರಲ್ಲಿ ನಿನ್ನ ಜಂಭ ತೋರ್ಬೇಡ! (ಬಿ)
-ದ್ಬಿಟ್ಟಾಮೇಲೆ ಮುಳುಗಿ ಸಾಯಬೇಡ! (ಮಾ)
-ಡ್ಬೇಡ, ವಿಮರ್ಶಿಸದೇನೂ ಮಾಡ್ಬೇಡ! (ಆ)
-ಡ, ಶ್ರೀ ನಿರಂಜನಾದಿತ್ಯ ಮಾತಾಡ!!!

ಹೋಗಳುವ, ತೆಗಳುವವರೇಕೆ ರಾಮರಾಜ್ಯಕ್ಕೆ?   6(3860)

ರ್ವಿಗಳ ಹೊಡೆದಾಟ ಬೇಕಿಲ್ಲಾ ರಾಮರಾಜ್ಯಕ್ಕೆ! (ಆ)
-ಳುಗಳೂ, ಆಳುವವರೂ ಸಮಾನಾ ರಾಮರಾಜ್ಯಕ್ಕೆ!
ಸನ, ಆಶನದಭಾವವಿಲ್ಲಾ ರಾಮರಾಜ್ಯಕ್ಕೆ!
ತೆರೆದ ಹೃದಯದ ಪ್ರಜೆಗಳೇ ರಾಮರಾಜ್ಯಕ್ಕೆ!
ಮನವೆಲ್ಲರದ್ದೂ ಶ್ರೀರಾಮಚಂದ್ರನ ಪಾದಕ್ಕೆ! (ಹಾ)
-ಳು ಹರಟೆ ಮಾತು ಸೊಗಸದಾ ಶ್ರೀ ರಾಮರಾಜ್ಯಕ್ಕೆ!
ಸಿಷ್ಟಾದಿಗಳ ಮಾರ್ಗದರ್ಶನ ಸೇವೆ ಅದಕ್ಕೆ!
ನಜಾಕ್ಷಿ, ಸೀತಾದೇವಿಯ ನಿತ್ಯ ಪೂಜೆ ಅದಕ್ಕೆ!
ರೇಗಾಟ, ಕೂಗಾಟಗಳೊಪ್ಪವು ಅವಳ ಮನಕ್ಕೆ!
ಕೆರೆ, ಭಾವಿಗಳಿಗೆ ಕಮ್ಮಿಯಿಲ್ಲಾ ರಾಮರಾಜ್ಯಕ್ಕೆ!
ರಾರಾಜಿಸುವ ಫಲ, ಪುಷ್ಪಗಿಡಗಳಾ ರಾಜ್ಯಕ್ಕೆ!
ಹಾತ್ಮರಿಗೆ ಸದಾ ಸುಸ್ವಾಗತಾ ರಾಮರಾಜ್ಯಕ್ಕೆ!
ರಾಕ್ಷಸಾಧಮರ ಪ್ರವೇಶವಿಲ್ಲಾ ರಾಮರಾಜ್ಯಕ್ಕೆ! (ಪೂ)
-ಜ್ಯ, ಸೀತಾರಾಮರೇ ತಂದೆ, ತಾಯಿ, ದೇವರಾ ರಾಜ್ಯಕ್ಕೆ! (ಅ)
-ಕ್ಕೆ ಶ್ರೀ ನಿರಂಜನಾದಿತ್ಯ ಗುರು ಶ್ರೀ ರಾಮರಾಜ್ಯಕ್ಕೆ!!!

ಹೋಗಿ ಬಂದೆನೀಗ ಸ್ವಾಮಿ! [ಇಂ]   4(2301)

-ಗಿತ ತಿಳಿಯಿತು ಸ್ವಾಮಿ! (ಸಂ)
-ಬಂಧ ಭದ್ರವಾಯ್ತು ಸ್ವಾಮಿ! (ಮುಂ)
-ದೆ ಉತ್ತಮ ಸ್ಥಿತಿ ಸ್ವಾಮಿ!
ನೀನೆಲ್ಲಕ್ಕಾಧಾರ ಸ್ವಾಮಿ! (ಮಂ)
-ಗಳಾರತಿ ಮಾಡ್ಲೇ ಸ್ವಾಮಿ?
ಸ್ವಾಮಿ ದಾಸ ನಾನು ಸ್ವಾಮಿ! (ನೇ)
-ಮಿ ನಿರಂಜನಾದಿತ್ಯಾತ್ಮಿ!!!

ಹೋಗಿ ಬರುವೆನೆಂದನಾತ! (ಬಾ)   4(2317)

-ಗಿದನು ಗುರುಪಾದಕ್ಕಾತ!
ಹು ವಿನಯಶಾಲಿಯಾತ!
ರುಜು ಮಾರ್ಗಾವಲಂಬಿಯಾತ! (ನೀ)
-ವೆನ್ನಾಶೀರ್ವದಿಸಿರೆಂದಾತ!
ನೆಂಟರಿನ್ನಾರೆನಗೆಂದಾತ!
ತ್ತ ಪುತ್ರರು ನೀವೆಂದಾತ!
ನಾನು ನಿಮ್ಮವನಾದೆಂದಾತ! (ಸಂ)
-ತಶ್ರೀ ನಿರಂಜನಾದಿತ್ಯಾತ!!!

ಹೋಗಿ ಬರುವೆನೆಂದೇಕಂದಿಲ್ಲ? (ಭೋ)   5(2687)

-ಗಿ ಜೀವನಿಗದೆಲ್ಲಾ ಬೇಕಿಲ್ಲ!
ಸವನಂತವ್ನಿನ್ನೂ ಆಗಿಲ್ಲ! (ಗು)
-ರು ಮಹಿಮೆಯಾತ ತಿಳಿದಿಲ್ಲ!
ವೆಸನ ಪಡ್ವಾಗರಿವನೆಲ್ಲ!
ನೆಂಟರಿಷ್ಟರಾಗ ಬರ್ವುದಿಲ್ಲ!
ದೇವರೇ ಗತಿಯೆಂಬರಾಗೆಲ್ಲ!
ಕಂಡ ಕಲ್ಲುಗಳ್ಪೂಜಿಪರೆಲ್ಲ!
ದಿವ್ಯ ನಾಮಜಪದ್ಮುಂದದಲ್ಲ! (ಬ)
-ಲ್ಲ ನಿರಂಜನಾದಿತ್ಯಜ್ಞಾನ್ಯಲ್ಲ!!!

ಹೋಗಿ ಬರ್ತೇನೆ ಮಹಾ ಸ್ವಾಮಿ! (ಯೋ)   4(1731)

-ಗಿ ಶಿವಾನಂದ ನೀನೇ ಸ್ವಾಮಿ!
ರಲೆನ್ನ ಮೇಲ್ದಯೆ ಸ್ವಾಮಿ! (ಬ)
-ರ್ತೇನೆಂದುದು ನಿನ್ನಿಷ್ಟ ಸ್ವಾಮಿ! (ಮ)
-ನೆಯಿದೆಲ್ಲಾ ನಿನ್ನದು ಸ್ವಾಮಿ!
ನಕೆ ಶಾಂತಿ ಕೊಡು ಸ್ವಾಮಿ! (ಮ)
-ಹಾ ಶಿವರಾತ್ರಿಯಿಂದು ಸ್ವಾಮಿ!
ಸ್ವಾಮಿ ಸೇವೆಯಲ್ಲಾಗ್ಲಿ ಸ್ವಾಮಿ! (ಸ್ವಾ)
-ಮಿ, ನಿರಂಜನಾದಿತ್ಯಾ ಸ್ವಾಮಿ!!!

ಹೋದದ್ದಾಯ್ತು, ಬಂದದ್ದಾಯ್ತು!   4(1946)

ರ್ಶನಾನಂದರಿವಾಯ್ತು! (ಮ)
-ದ್ದಾನೆಯ ನಡಿಗೆಯಾಯ್ತು! (ಆ)
-ಯ್ತು ಹುಣ್ಣೆಲ್ಲಾ ಮಾಯವಾಯ್ತು!
ಬಂಧನ ಹರಿದು ಹೋಯ್ತು!
ತ್ತನಾಟರಿಯದಾಯ್ತು! (ಒ)
-ದ್ದಾಟವೆಲ್ಲಾ ನಿಂತುಹೋಯ್ತು! (ಆ)
-ಯ್ತು ನಿರಂಜನಾದಿತ್ಯಾಯ್ತು!!!

ಹೋದೆ, ಬಂದೆ, ಬೆಂದೆ, ನಾ ತಂದೆ! [ಕಾ]   3(1278)

-ದೆ ನಿನಗಾಗಲ್ಲಿಲ್ಲಿ ತಂದೆ!
ಬಂಧನವೇ ಹೆಚ್ಚಾಯ್ತು ತಂದೆ! (ಎ)
-ದೆಗೆಟ್ಟಾಯ್ತು ನಿರಾಶೆ ತಂದೆ!
ಬೆಂಬಲ ನೀಡೀಗ ಬಾ ತಂದೆ! (ಬಂ)
-ದೆನ್ನಿಷ್ಟ ಸಿದ್ಧಿ ಮಾಡು ತಂದೆ!
ನಾನಿನ್ನು ತಾಳಲಾರೆ ತಂದೆ!
ತಂತಿ ಕಿತ್ತರೇನಿದೆ ತಂದೆ? (ನೊಂ)
-ದೆ ನಿರಂಜನಾದಿತ್ಯ ತಂದೆ!!!

ಹೋರಾಟಕೊಬ್ಬ, ಹಾರಾಟಕ್ಕೊಬ್ಬ! (ಕಾ)   6(4193)

-ರಾಗೃಹದಲ್ಲಿ ಬಿದ್ದವನೊಬ್ಬ! (ತುಂ)
-ಟತನದಲ್ಲಾಳುವವನೊಬ್ಬ! (ಹ)
-ಕ್ಕೊಡೆಯನದ್ಕಿತ್ಕೊಂಬವನೊಬ್ಬ! (ಹ)
-ಬ್ಬದಾಚಾರಣೆಗಾಮೇಲಿನ್ನೊಬ್ಬ!
ಹಾಸ್ಹೊಕ್ಕು, ಹೊಕ್ಹಾಸಾಗ್ವುದಬ್ಬಬ್ಬಾ!
ರಾಮ ಕಿತ್ತ ರಾವಣನ ಕೊಬ್ಬ! (ದಿ)
-ಟವಿಲ್ಲದವನ ರಾಮ ತಬ್ಬ! (ಹ)
-ಕ್ಕೊದಗಲಿ ಬರೆಯಲಾ ಕಬ್ಬ! (ಕ)
-ಬ್ಬ ನಿರಂಜನಾದಿತ್ಯಗೆ ಹಬ್ಬ!!!

ಹೋರಾಟಕ್ಕೆ ನಮ್ಮ ಕೈ ಗಟ್ಟಿಮಾಡಿ!   3(1005)

ರಾತ್ರಿ, ಹಗಲು, ಗುರು ಧ್ಯಾನ ಮಾಡಿ! (ನ)
-ಟನೆಗಾರರೊಡನೆ ಸೇರಬೇಡಿ! (ಧ)
-ಕ್ಕೆ ಸತ್ಯ, ಧರ್ಮಕ್ಕುಂಟುಮಾಡಬೇಡಿ!
ಡೆ, ನುಡಿಯೊಂದಾಗಿ ಸೇವೆ ಮಾಡಿ! (ಒ)
-ಮ್ಮತಕ್ಕಾಗಡ್ಡದಾರಿ ಹಿಡ್ಯಬೇಡಿ!
ಕೈ ಸೇರುವುದಿಷ್ಟ! ಸಂದೇಹಬೇಡಿ!
ರ್ವದಿಂದ ಪತಿತರಾಗಬೇಡಿ! (ಹು)
-ಟ್ಟಿದ್ದು ಸಾರ್ಥಕವಾಗುವಂತೆ ಮಾಡಿ!
ಮಾನಾವಮಾನ ಶಿವಾರ್ಪಣ ಮಾಡಿ! (ಕೂ)
-ಡಿ ನಿರಂಜನಾದಿತ್ಯನೊಡನಾಡಿ!!!

ಹೋಳಿ ಕಳೆದ್ರೂ ಹೋಳಿಗೆ ಮುರಿದಿಲ್ಲ! (ಆ)   6(4249)

-ಳಿದವರು ಸತ್ತ್ರೂ ಆಳಿಕೆ ಸತ್ತಿಲ್ಲ!
ರ್ಮಕ್ಕಂತ್ಯ ಆಸೆಯಂತ್ಯವಾಗದಿಲ್ಲ! (ಹ)
-ಳೆಯ ವಾಸನೆಗಳೀ ಜನ್ಮದಲ್ಲೆಲ್ಲಾ! (ಚಿ)
-ದ್ರೂಪಿಯಾದವನಿಗೆ ಆಶೆಗಳಿಲ್ಲ!
ಹೋಗಿ, ಬರುವ ಯಾತ್ರೆ ಅವನಿಗಿಲ್ಲ! (ಬಾ)
-ಳಿನಲ್ಲಿದನ್ನು ಸಾಧಿಸ್ಬೇಕ್ಮರ್ತ್ಯರೆಲ್ಲ! (ಹೊ)
-ಗೆ ಬಂಡಿಯಲ್ಲೋಡಾಡುವಾ ಯಾತ್ರೆಯಲ್ಲ!
ಮುಪ್ಪು, ಸಾವು, ಹುಟ್ಟೆಂಬ ಯಾತ್ರೆ ಬೇಕಿಲ್ಲ!
ಗಿರಿಜಾರಮಣನಂತಾದರದಿಲ್ಲ!
ದಿವ್ಯ ಜೀವನದಿಂದವನಾಗಿರೆಲ್ಲ! (ಫು)
-ಲ್ಲ ನಿರಂಜನಾದಿತ್ಯನಂತಾಗಿರೆಲ್ಲ!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ