ಸಂಕಟ ಬಂದಾಗ ರಾಮಾಯಣ! (ಸಂ)   5(3121)

-ಕಟ ಹರಿದಾಗ ಮಾರಾಯಣ! (ಕೂ)
-ಟ, ನೋಟ, ಆಟಕ್ಕಪಾರ ಹಣ!
ಬಂಧು, ಬಳಗಕ್ಕೆಲ್ಲಾಮಂತ್ರಣ!
ದಾಯಾದಿಗಳಲ್ಲಿ ಹಗರಣ!
ದ್ದೆ, ಹೊಲ, ವಿತ್ತಾಪಹರಣ!
ರಾಕ್ಷಸೀ ಸ್ವಭಾವದ ದುರ್ಗುಣ!
ಮಾಡ್ವುದೊಂದಾಡ್ವುದಿನ್ನೊಂದು ಗುಣ! (ಹ)
-ಣ, ನಿರಂಜನಾದಿತ್ಯಗೀ ಗುಣ!!!

ಸಂಕಲ್ಪ ಮಾಡಿ ಕೆಡಬೇಡ! (ವಿ)   4(1804)

-ಕಲ್ಪವೆಂದಿಗೂ ಮಾಡಬೇಡ! (ಸ್ವ)
-ಲ್ಪವೆಂದತೃಪ್ತಿ ಪಡಬೇಡ!
ಮಾಯಾ ಮೋಹಿತನಾಗಬೇಡ (ಆ)
-ಡಿ ಶಾಂತಿ ಕಳಕ್ಕೊಳ್ಳಬೇಡ! (ಶಂ)
-ಕೆ ಪ್ರಸಾದದಲ್ಲಿಡಬೇಡ! (ಮೃ)
-ಡನ ಭಜನೆ ಬಿಡಬೇಡ!
ಬೇರಿನ್ನೇನೂ ಯಾಚಿಸಬೇಡ! (ಬೇ)
-ಡ, ನಿರಂಜನಾದಿತ್ಯನಾಡ!!!

ಸಂಕಲ್ಪ ಸಡಿಲಾಯಿತು!   5(2792)

ರುಣೆ ತೋರಬೇಕಾಯ್ತು! (ಅ)
-ಲ್ಪತನ ಬಿಡಬೇಕಾಯ್ತು!
ಹಕಾರಗತ್ಯವಾಯ್ತು! (ಬ)
-ಡಿಸಿದ್ದನ್ನುಣ್ಣಬೇಕಾಯ್ತು!
ಲಾಭವಿದರಿಂದುಂಟಾಯ್ತು! (ತಾ)
-ಯಿ ಕರುಳು ತಣ್ಣಗಾಯ್ತು! (ಇಂ)
-ತು ನಿರಂಜನಾದಿತ್ಯಾಯ್ತು!!!

ಸಂಕಲ್ಪ ಸಿದ್ಧಿ ಸೂಕ್ತ ನಿತ್ಯಾನುಷ್ಠಾನ ಫಲ!   6(4317)

ಲ್ಪನಾತೀತಾತ್ಮ ಸಾಕ್ಷಾತ್ಕಾರಾನಂದ ಫಲ! (ಅ)
-ಲ್ಪ ಕಾಲದಲ್ಲಿ ಕೈ ಬಿಟ್ಟರೆ ಎಲ್ಲಾ ವಿಫಲ!
ಸಿದ್ಧಿ ಪೂರ್ಣ ಶ್ರದ್ಧಾ, ಭಕ್ತಿಯುಕ್ತ ಸೇವಾಫಲ! (ಬು)
-ದ್ಧಿ ಪರಿಶುದ್ಧವಾದರೆ ಎಲ್ಲವೂ ಸಫಲ!
ಸೂಳೆಯ ಪ್ರೀತಿ, ವಿಶ್ವಾಸದಿಂದೆಲ್ಲಾ ದುಷ್ಪಲ! (ಭ)
-ಕ್ತನಾದವನಿಗಿರಬೇಕು ಸ್ಥಿತಪ್ರಜ್ಞಾ ಬಲ!
ನಿತ್ಯಾನಿತ್ಯ ನಿರ್ಣಯದಿಂದ ಅಧ್ಯಾತ್ಮ ಬಲ!
ತ್ಯಾಗಿಯಾಗಿರುವಾತನುಪಮ ಮಹಾಬಲ!
ನುತಿಸುವವನನ್ನು ಲೋಕಗಳ್ಷಕಲ! (ಶ್ರೇ)
-ಷ್ಠಾದರ್ಶವಿದನ್ನು ಪಾಲಿಸ್ಬೇಕ್ಮಾನವ ಕುಲ!
ರ, ನಾರಾಯಣರನ್ನೊಂದು ಮೊಳ್ಪುದೀ ಬಲ!
ಲಾನಿಭವವಾಗುವ ತನಕ ಬೇಕ್ಫಲ!
ಕ್ಷ್ಯವಿಲ್ಲ ನಿರಂಜನಾದಿತ್ಯನಿಗೆ ಕಾಲ!!!

ಸಂಕಲ್ಪದಲ್ಲೇ ಸಂದಿತಾಯುಷ್ಯ!   6(3780)

ಳವಳದಿಂದಿಹನು ಶಿಷ್ಯ! (ಕ)
-ಲ್ಪನೆಗೆ ತಕ್ಕಂತೆ ಸೂತ್ರ ಭಾಷ್ಯ!
ರ್ಶನಾನುಗ್ರಹಕ್ಕೆ ಭವಿಷ್ಯ! (ಗು)
-ಲ್ಲೇನೆಬ್ಬಿಸಿದರೇನು ಮನುಷ್ಯ!
ಸಂಶಯ ಪಿಶಾಚಿಗವ ವಶ್ಯ!
ದಿವ್ಯ ಜೀವನಕ್ಕಾತ ಅದೃಶ್ಯ!
ತಾನೇ ತಾನಾದಾಗಿಲ್ಲ ದೃಕ್ದೃಶ್ಯ!
ಯುಗಗಳೆಲ್ಲಾ ಆಗ ಅಲಕ್ಷ್ಯ! (ಶಿ)
-ಷ್ಯಗೆ ನಿರಂಜನಾದಿತ್ಯ ಲಕ್ಷ್ಯ!!!

ಸಂಕಷ್ಟ ಹರ ಗಣೇಶ ವ್ರತ!   4(1815)

ರ್ಮನಿಷ್ಠರಿಗಿದೊಂದು ವ್ರತ! (ಇ)
-ಷ್ಟಸಿದ್ಧಿಗಾಗಿ ಮಾಳ್ಪರೀ ವ್ರತ!
ಗಲುಪವಾಸದಿಂದಾ ವ್ರತ! (ವ)
-ರ ಪ್ರಸಾದ ಲಾಭ ರಾತ್ರೀ ವ್ರತ! (ಆ)
-ಗಮಿಕ, ಮಾಡಿಸುವನೀ ವ್ರತ! (ಗ)
-ಣೇಶ ಮಹಿಮೆಯೋದುವಾ ವ್ರತ!
ಕ್ತಿ, ಭಕ್ತಿ, ಭುಕ್ತಿಪ್ರದಾ ವ್ರತ! (ತೀ)
-ವ್ರ ಫಲದಾಯಕನೆಂಬಾ ವ್ರತ! (ನು)
-ತ ನಿರಂಜನಾದಿತ್ಯಾತ್ಮ ವ್ರತ!!!

ಸಂಕೀರ್ತನೆ ಸರ್ವಸಿದ್ಧಿ ಪ್ರದವೆಂದ!   1(209)

ಕೀರ್ತಿಯದರಿಂದ ಬಹುಕಾಲ ತಂದ! (ಕ)
-ರ್ತನಾಗಿ ನಾನಾ ಸೇವೆ ಮಾಡಿಸಿ ನಿಂದ!
ನೆಪಹೂಡಿ ಅಪಕೀರ್ತಿಯನು ತಂದ!
ರ್ವಬಂಧು, ಬಳಗ, ಅವನೇ ಅಂದ! (ಗ)
-ರ್ವ ಸುಟ್ಟು ಉಣಿಸಿದ ಭಜನಾನಂದ!
ಸಿಟ್ಟಡಗಲಿಕೆ ಮೌನವಾಗಿರೆಂದ! (ಸಿ)
-ದ್ಧಿ, ನಿತ್ಯ ನೇಮಾನುಷ್ಠಾನಗಳಿಂದೆಂದ!
ಪ್ರಯಾಣವಿನ್ನೊಂದೂರಿಗೆ ಬೆಳೆಸೆಂದ! (ಪಾ)
-ದ ಸೇವೆಯಾದಿತ್ಯನಿದಿರು ಮಾಡೆಂದ! (ನೋ)
-ವೆಂಬುದಿಲ್ಲದೆ ಮನಕಾನಂದ ತಂದ!
ತ್ತಗುರು ನಿರಂಜನಾದಿತ್ಯನೆಂದ!

ಸಂಕ್ರಾಂತಿಗೆಳ್ಳು, ಕಡಲೆ, ಬೆಲ್ಲ!   2(998)

ಕ್ರಾಂತಿಗಾರರಿಗೆ ಬೇಕಿದೆಲ್ಲ!
ತಿಳಿ ನೀರಾಗಬೇಕವರೆಲ್ಲ! (ಹ)
-ಗೆತನ ಬಿಟ್ಟೊಂದಾಗಬೇಕೆಲ್ಲ! (ಸು)
-ಳ್ಳು, ಮೋಸ, ವಿಸರ್ಜಿಸಬೇಕೆಲ್ಲ!
ರುಣೆಯಿರಬೇಕವರ್ಗೆಲ್ಲ! (ಬಿ)
-ಡಬೇಕನ್ಯ ದೂಷಣೆಗಳೆಲ್ಲ!
ಲೆಕ್ಕಿಸಬಾರದೆಡೆರನೆಲ್ಲ!
ಬೆನಕನ ಭಜಿಸಬೇಕೆಲ್ಲ! (ಬೆ)
-ಲ್ಲ ನಿರಂಜನಾದಿತ್ಯಗಿದೆಲ್ಲ!!!

ಸಂಗಾತಿಯ ಕರೆದುಂಬುದಮ್ಮ ಕಾಗೆ! (ತ)   3(1030)

-ಗಾದೆ ಮಾಡಿಕ್ಕಿಸಿಕೊಂಬುದಮ್ಮ ಕಾಗೆ!
ತಿನುತ ಹಾರಿಹೋಗುವುದಮ್ಮ ಕಾಗೆ! (ನಿ)
-ಯಮಭಂಗ ಮಾಡುವುದಿಲ್ಲಮ್ಮ ಕಾಗೆ!
ರೆಗೆ ಕಾದಿರುವುದಿಲ್ಲಮ್ಮ ಕಾಗೆ!
ರೆಕ್ಕೆ ಬಡಿದೆಚ್ಚರಿಪುದಮ್ಮ ಕಾಗೆ! (ಕಾ)
-ದುಂಡಲ್ಲದೆ ಎಲ್ಲೂ ಹೋಗದಮ್ಮ ಕಾಗೆ!
ಬುದ್ಧಿ ಕಲಿಸುತಿದೆಮಗಮ್ಮ ಕಾಗೆ!
ತ್ತ ಸ್ವರೂಪವೆಂದರಿಯಮ್ಮ ಕಾಗೆ! (ತ)
-ಮ್ಮವರ ಪ್ರೇಮಕ್ಕಾದರ್ಶವಮ್ಮ ಕಾಗೆ!
“ಕಾ” ಎಂದೀ ಸಂದೇಶವೀವುದಮ್ಮ ಕಾಗೆ! (ಕಾ)
-ಗೆ ನಿರಂಜನಾದಿತ್ಯಾನಂದಮ್ಮ ಕಾಗೆ!!!

ಸಂಗೀತ ಕಛೇರಿಗೆಲ್ಲಿ ಜಾಗಪ್ಪಾ?   4(1647)

ಗೀರ್ವಾಣಿಯ ಪಾದತಲದಲ್ಲಪ್ಪಾ!
ನ್ಮಯತೆಯಿಂದ ಹಾಡು ನೀನಪ್ಪಾ!
ರ ವಿನ್ಯಾಸ ಕಮ್ಮಿಯಾಗಲಪ್ಪಾ!
ಚೇಷ್ಟೆಗಳೇನೂ ಕಾಣಬಾರದಪ್ಪಾ!
ರಿವಜಿಗೇನೂ ಕೊರತೆ ಬೇಡಪ್ಪಾ!
ಗೆಲಬೇಕೆಲ್ಲರ ಮನವನಪ್ಪಾ! (ಕ)
-ಲ್ಲಿನಲ್ಲೂ ಚೈತನ್ಯ ಮೂಡಬೇಕಪ್ಪಾ!
ಜಾತಿ, ಮತದುಚ್ಛ, ನೀಚ ಸಾಕಪ್ಪಾ!
ಗನಮಣಿಯಾದರ್ಶ ತೋರಪ್ಪ! (ಅ)
-ಪ್ಪಾ ನಿರಂಜನಾದಿತ್ಯಾತ ಕಾಣಪ್ಪಾ!!!

ಸಂಗೀತ ಕೇಳಿ ಸಭೆ ಸೇರಬೇಕು! (ಸಂ)   4(1630)

-ಗೀತ ಕೇಳ್ಲಿಕ್ಕೆ ಬನ್ಯೆನದಿರಬೇಕು!
ನಗೆ ತಾನಾಕರ್ಷಣೆಯಾಗ್ಬೇಕು!
ಕೇಶವನ ಕೊಳಲಿನಂತಾಗಬೇಕು! (ಕೇ)
-ಳಿ ರಾಸಕೇಳಿಯೇ ಅಲ್ಲಾಗಬೇಕು!
ಚ್ಚಿದಾನಂದ ಸುಖ ಕಾಣಬೇಕು! (ಪ್ರ)
-ಭೆ ಗುರುವಿನದು ಹರಡಬೇಕು!
ಸೇವೆ ನಿಷ್ಕಾಮದಿಂದ ಸಾಗಬೇಕು!
ಸಾಸ್ವಾದನೆ ಪ್ರಸಾದಾಗಬೇಕು!
ಬೇನೆಗಳೆಲ್ಲಾ ಹಾರಿ ಹೋಗಬೇಕು!
ಕುಟ ನಿರಂಜನಾದಿತ್ಯಗಾಗ್ಬೇಕು!!!

ಸಂಗೀತ ಬೇಕು ಸತತೆಲ್ಲಕ್ಕೆ! (ಸಂ)   4(2344)

-ಗೀತ ಶಾಸ್ತ್ರಾನುಕೂಲವದಕ್ಕೆ!
ತ್ವಚಿಂತನೆಯವಕಾಶಕ್ಕೆ!
ಬೇಸರ ನಿವಾರಿಸುವುದಕ್ಕೆ!
ಕುಶಿ ಮನಸ್ಸಿಗಾಗುವುದಕ್ಕೆ!
ಚಿದಾನಂದಕ್ಕೊಯ್ಯುವುದಕ್ಕೆ!
ಮೋಗುಣ ನಾಶವಾಗಲಿಕ್ಕೆ! (ಮಾ)
-ತೆ, ಶಾರದೆಯನ್ನೊಲಿಸಲಿಕ್ಕೆ! (ಪು)
-ಲ್ಲನಾಭನ ಸೇವೆ ಸಾಗಲಿಕ್ಕೆ! (ಅ)
-ಕ್ಕೆ ನಿರಂಜನಾದಿತ್ಯಾನಂದಕ್ಕೆ!!!

ಸಂಗೀತ ಸಭೆಯೂ ಸತ್ಸಂಗವಯ್ಯಾ!   4(1571)

ಗೀತಾ ಶ್ರವಣ ಅಲ್ಲಾಗುವುದಯ್ಯಾ!
ತ್ವ ಪರಿಪೂರ್ಣವಾಗಿಹುದಯ್ಯಾ!
ರ್ವಾತ್ಮಾಕರ್ಷಣೆಯಾಗ್ವುದಯ್ಯಾ! (ಶೋ)
-ಭೆಯದಕೆ ತಾಳ ಮೇಳಗಳಯ್ಯಾ! (ತಾ)
-ಯೂಡಿಸುವಳಲ್ಲಮೃತ ಪಾನಯ್ಯಾ!
ರ್ವಶಕ್ತನ ಸನ್ನಿಧಿಯದಯ್ಯಾ! (ತ)
ತ್ಸಂಬಂಧದಾಲಾಪವಲ್ಲಿಹುದಯ್ಯಾ!
ರ್ವಿಗಳ್ಗಿದರರ್ಥವಾಗದಯ್ಯಾ!
ರದಾ ಪ್ರಸಾದವಿಲ್ಲಾಗ್ವುದಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯೋಚ್ಛ ಭಾವಯ್ಯಾ!!!

ಸಂಗೀತ ಸಾರ್ಥಕ ಸನ್ನಿಧಿಯಲ್ಲಿ! (ಯೋ)   4(1534)

-ಗೀಶ್ವರನ ದಿವ್ಯ ಸನ್ನಿಧಿಯಲ್ಲಿ!
ನ್ಮಯಾನಂದಾತ್ಮ ಸನ್ನಿಧಿಯಲ್ಲಿ!
ಸಾಯುಜ್ಯನಾಥನ ಸನ್ನಿಧಿಯಲ್ಲಿ! (ಪಾ)
-ರ್ಥಸಾರಥಿಯಗ್ರ್ಯ ಸನ್ನಿಧಿಯಲ್ಲಿ!
ಬ್ಬದಂಗನೆಯ ಸನ್ನಿಧಿಯಲ್ಲಿ!
ರೋಜಾಸನನ ಸನ್ನಿಧಿಯಲ್ಲಿ! (ಚೆ)
-ನ್ನಿಗ ಶ್ರೀ ಹರಿಯ ಸನ್ನಿಧಿಯಲ್ಲಿ! (ವಿ)
-ಧಿ, ಹರಿ, ಹರನ ಸನ್ನಿಧಿಯಲ್ಲಿ!
ಜ್ಞ ಪುರುಷನ ಸನ್ನಿಧಿಯಲ್ಲಿ! (ಇ)
-ಲ್ಲಿ, ನಿರಂಜನಾದಿತ್ಯನಡಿಯಲ್ಲಿ!!!

ಸಂಗೀತ, ಸಾಹಿತ್ಯ, ಪಾಂಡಿತ್ಯ!   6(3374)

ಗೀರ್ವಾಣಿಗಿರುವುದು ಸ್ತುತ್ಯ!
ನ್ಮಯನಾಗವ್ಳಲ್ಲಿ ನಿತ್ಯ!
ಸಾಹಿತ್ಯ ಅವಳ್ದೆಲ್ಲಾ ಸತ್ಯ!
ಹಿತೈಷಿ ಅವಳೆಂದಾಗ್ಭೃತ್ಯ!
ತ್ಯಜಿಸಬೇಕೆಲ್ಲಾ ಅಕೃತ್ಯ!
ಪಾಂಚಭೌತಿಕ ದೇಹಾ ಸತ್ಯ!
ಡಿಕ್ಕಿಹೊಡೆವ್ದು ದಿನ ನಿತ್ಯ! (ಭೃ)
-ತ್ಯ ನಿರಂಜನಾದಿತ್ಯ ಸತ್ಯ!!!

ಸಂಗೀತಕ್ಕೆ ಸಾಹಿತ್ಯಾಧಾರ! (ಸಂ)   4(1900)

-ಗೀತ ಸಾಹಿತ್ಯಕ್ಕಲಂಕಾರ!
ತ್ವವರಿಯದಹಂಕಾರ! (ಇ)
-ಕ್ಕೆ ಅನ್ನ ಮಾತ್ರೇನುಪಕಾರ!
ಸಾಮರಸ್ಯ ದಾಹಾರಾಹಾರ!
ಹಿರಿಮೆಯದರದಪಾರ!
ತಾಗಯ್ಯನರಿತಾ ವಿಚಾರ! (ಸು)
-ಧಾ ಸಮಾನಾ ಸಂಗೀತ ಸಾರ! (ಸ್ವ)
-ರ ನಿರಂಜನಾದಿತ್ಯಾಗಾರ!!!

ಸಂಗೀತಪ್ರಿಯ ಸ್ವಾಮಿ ನಂಜುಂಡ!   4(2058)

ಗೀತಾಮಾತೆಯನೊಲಿಸಿಕೊಂಡ!
ನ್ನರ್ಧಾಂಗ್ಯುಮೆಯೆಂದಪ್ಪಿಕೊಂಡ!
ಪ್ರಿಯ ಕುಮಾರಗಯ್ಯನೆನ್ಸ್ಕೊಂಡ! (ಭ)
-ಯಹರ ಗುರುವರನೆನ್ಸ್ಕೊಂಡ!
ಸ್ವಾಮಿ ರಾಮನ ಪ್ರೇಮ್ಯೆನಿಸ್ಕೊಂಡ!
ಮಿತ್ರನನ್ನೇ ನೇತ್ರವಾಗಿಟ್ಕೊಂಡ! (ಅ)
-ನಂಗಾರಿ ಲೋಕೋಪಕಾರ್ಯೆನ್ಸ್ಕೊಂಡ! (ನಂ)
-ಜುಂಡು ಜಗದ್ರಕ್ಷಕನೆನ್ಸ್ಕೊಂಡ! (ಮೃ)
-ಡ ನಿರಂಜನಾದಿತ್ಯನೆನ್ಸ್ಕೊಂಡ!!!

ಸಂಘ ಸತ್ಸಂಘ! (ಅ)   2(625)

-ಘಹರಾ ಸಂಘ!
ಹಜಾ ಸಂಘ! (ತ)
-ತ್ಸಂಬಂಧಾ ಸಂಘ! (ಸಂ)
-ಘ ನಿರಂಜನಾಂಗ!!!

ಸಂಚಾರ ವಿಚಾರಕ್ಕಾಗಿ ಕೂತಿಲ್ಲವಯ್ಯಾ! [ಆ]   2(468)

-ಚಾರನುಷ್ಠಾನಕ್ಕಾಗೀಗಿಲ್ಲಿರುವುದಯ್ಯಾ! (ವ)
-ರ ಗುರುವಿಗೆ ಕಾಶೀಯಾತ್ರೆ ಬೇಕೇನಯ್ಯಾ?
ವಿವೇಕದಿಂದೀಗಿನ ಕೆಲಸ ಮಾಡಯ್ಯಾ!
ಚಾಪೆ ಹಾಸಿರುವುದಾಯಾಸ ಶಾಂತಿಗಯ್ಯಾ!
ಮಿಸಲಿ ಮನಸು ಸನ್ನಿಧಿಯಲಯ್ಯಾ! (ವಾ)
-ಕ್ಕಾಯ, ಮನಸೊಂದಾಗಿ ಧ್ಯಾನನಿಸುತ್ತಿರಯ್ಯಾ! (ಆ)
-ಗಿನ, ಮುಂದಿನದು ಯೋಚಿಸಬಾರದಯ್ಯಾ!
ಕೂಲಿ ಸಿಗದಶ್ರದ್ಧೆ ಕೆಲಸಕಯ್ಯಾ!
ತಿಳಿದಿದನು ಬುದ್ಧಿವಂತನಾಗಿರಯ್ಯಾ! (ಎ)
-ಲ್ಲರನು ಮೆಚ್ಚಿಪ ಹುಚ್ಚುತನ ಸಾಕಯ್ಯಾ!
ರಮೂಲ್ಯ ಕಾಲ ವ್ಯರ್ಥ ಮಾಡಬೇಡಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನ ನೋಡಿ ಬಾಳಯ್ಯಾ!!!

ಸಂಜೀವ ನಿರ್ವಿಷಯಾನಂದ!   6(3650)

ಜೀವ ತಾ ದುರ್ವಿಷಯಾನಂದ!
ರದರಾಜ ಸೇವಾನಂದ!
ನಿತ್ಯಾನಿತ್ಯಜ್ಞ ನಿತ್ಯಾನಂದ! (ಗ)
-ರ್ವಿ ಮಾನವ ಅಜ್ಞಾನಾನಂದ!
ಡಾನನ ಸಚ್ಚಿದಾನಂದ!
ಯಾದವೇಂದ್ರ ಸಹಜಾನಂದ!
ನಂಜುಂಡೇಶ್ವರ ಯೋಗಾನಂದ! (ಕಂ)
-ದ ನಿರಂಜನಾದಿತ್ಯಾನಂದ!!!

ಸಂಜೀವಿನಿ ತಂದಾ ಹನುಮಂತ    3(1075)

ಜೀವದಾಸೆ ಬಿಟ್ಟಾ ಹನುಮಂತ!
ವಿಷವಿಳಿಸಿದಾ ಹನುಮಂತ!
ನಿಲಿಸಿ ಪಾಡಿದಾ ಹನುಮಂತ!
ತಂದೆ, ತಾಯ್ನೀನೆಂದಾ ಹನುಮಂತ!
ದಾರಿ ತೋರಿಸೆಂದಾ ಹನುಮಂತ!
ರಿಗೆರಗುತಾ ಹನುಮಂತ! [ತ]
-ನುಭಾವ ಮರೆತಾ ಹನುಮಂತ!
ಮಂಗಳಾಗಲೆಂದಾ ಹನುಮಂತ! [ಪಿ]
-ತ ನಿರಂಜನಾದಿತ್ಯನೆನುತ್ತ!!!

ಸಂಜೆಯಾಯ್ತು, ಪ್ರಜ್ಞೆ ಹೋಯ್ತಾನಂದ ವಾಯ್ತು! (ಅ)   3(1048)

-ಜೆಯನುಗ್ರಹದಿಂದಜ್ಞಾನಸ್ತವಾಯ್ತು!
ಯಾಗಾದ್ಯನುಷ್ಠಾನದ ಸಮಾಪ್ತಿಯಾಯ್ತು! (ಆ)
-ಯ್ತು, ವಿಶ್ರಾಂತಿಯ ರಾತ್ರಿ ಬಂದು ಸೇರ್ಯಾಯ್ತು!
ಪ್ರಭುವಿನ ಸೇವೆಗೆ ವಿಳಂಬವಾಯ್ತು! (ಆ)
-ಜ್ಞೆ ಬಂದು ಬಹುಕಾಲ ಕಳೆದುಹೋಯ್ತು!
ಹೋಗಿ ಸೇರಲೇಬೇಕೆಂಬರಿವೀಗಾಯ್ತು! (ಆ)
-ಯ್ತಾತನ ಕೃಪಾದೃಷ್ಟೀಗೆನ್ನ ಮೇಲಾಯ್ತು!
ನಂದಕಂದನಭಯೋಕ್ತಿ ನಿಜವಾಯ್ತು!
ಶಾವತಾರಿಯ ಲೀಲೆ ಮಂದಟ್ಟಾಯ್ತು!
ವಾದ, ಭೇದದ ಹುಚ್ಚಳಿದು ಹೋಯ್ತು! (ಅ)
-ಯ್ತು, ನಿರಂಜನಾದಿತ್ಯ ನಾಮನ್ವರ್ಥಾಯ್ತು!!!

ಸಂತನಿಗೂ, ಸಂತೆಗೂ ಬಹು ದೂರ! (ಸಂ)   4(1983)

-ತತವನಾತ್ಮ ಚಿಂತನೆಯಪಾರ! (ಅ)
-ನಿತ್ಯೈಹಿಕ ಸುಖವಗೆ ನಿಸ್ಸಾರ!
ಗೂಢವಾಗಿದ್ದು ಮಾಳ್ಪನು ವಿಚಾರ!
ಸಂಗ ಸಜ್ಜನರದವಗಾಧಾರ! (ಕ)
-ತೆ, ಪುರಾಣ ಕೇಳ್ವುದವನಾಚಾರ!
ಗೂಳಿಯಂತೇನವಗಿಲ್ಲ ವಿಕಾರ!
ಹಳಾನಂದವನಿಗೆ ಓಂಕಾರ!
ಹುರುಡವನಿಗೇನಿಲ್ಲಾ ಸಂಸಾರ!
ದೂಷಣೆ, ಭೂಷಣೆ ಏಕ ಪ್ರಕಾರ! (ಹ)
-ರ, ನಿರಂಜನಾದಿತ್ಯನಾಕಾರ!!!

ಸಂತರ ಸಂಗ ಸಂತೆಯಲ್ಲಾಗದಮ್ಮಾ!   6(3553)

ರತರ ವ್ಯಾಪಾರವಿರ್ಪಲ್ಲಾಗ್ದಮ್ಮಾ!
ಹಸ್ಯವಿದರಿತು ಶರಣಾಗಮ್ಮಾ!
ಸಂದೇಹವೇನೇನೂ ಪಡ್ಬೇಕಾಗಿಲ್ಲಮ್ಮಾ!
ತಿ, ಮತಿ, ದಾತ, ಸದ್ಗುರು ಕಾಣಮ್ಮಾ!
ಸಂಜೆ, ಮುಂಜಾನೆ ಪ್ರಶಸ್ತ ಕಾಲವಮ್ಮಾ!
ತೆರೆಮರೆಯಲ್ಲಿದ್ದಭ್ಯಾಸ ಮಾಡಮ್ಮಾ!
ದುನಾಥನ ಗೀತಾ ಧ್ಯಾನ ಮಾಡಮ್ಮಾ! (ಚೆ)
-ಲ್ಲಾಟದ ಮನಸ್ಸಿಗಿದೌಷಧಿಯಮ್ಮಾ!
ಜಮುಖ, ಅಜಮುಖ, ಸ್ವಮುಖಮ್ಮಾ!
ತ್ತಾತ್ರೇಯ ತ್ರಿಲೋಕಕ್ಕೂ ಗುರುವಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಳಾಗಮ್ಮಾ!!!

ಸಂತೋಷಕಿರಬೇಕು ಸದ್ಭಾವ!   1(271)

ತೋರಿಕೆಯ ಭಕ್ತಿ ಭಾವಾಭಾವ!
ಷ್ಟಿಷ್ಟ ದೇವಾರ್ಪಣಾ ಸ್ವಭಾವ!
ಕಿರುಕುಳ ಮನಕಿದಭಾವ!
ಮಿಪುದವನಲಿ ಸದ್ಭಾವ!
ಬೇಡವದರಿಂದ ಭಿನ್ನ ಭಾವ!
ಕುಹಕಕೆ ಕಾರಣ ದುರ್ಭಾವ!
ಂಕೀರ್ತನೆಯಿಂದ ನಾಶಾಭಾವ! (ಸ)
-ದ್ಭಾವದಿಂದ ಮುಕ್ತನಹ ಜೀವ!
ರ ನಿರಂಜನಾದಿತ್ಯ ದೇವ!!!

ಸಂತೋಷವೇ ಯವ್ವನ, ಚಿಂತೆಯೇ ಮುಪ್ಪು!   5(2967)

ತೋಟ ಶೃಂಗಾರ್ದೊಳ್ಗಾಗ್ಬಾರ್ದು ಗೋಣೀ ಸೊಪ್ಪು!
ಡ್ವೈರಿಗಳ ಹಾವಳಿಯಿಂದ ಮುಪ್ಪು!
ವೇಷ, ಭೂಷಣಾನಂದ ಕ್ಷಣಿಕ ಒಪ್ಪು!
ಮ, ನಿಯಮವಿದ್ದರಾಗದು ತಪ್ಪು! (ಅ)
-ವ್ವನ ಪ್ರೀತಿಯಲ್ಲಿಲ್ಲಾವಾಗಲೂ ಕಪ್ಪು!
ರಹರಿಯಾದರೆ ಯವ್ವನದೊಪ್ಪು!
ಚಿಂತೆ ವಿಷಯಕ್ಕಾದ್ರೆ ದುಃಖವೆಂದೊಪ್ಪು!
ತೆರೆಯಡಗಿದ ಸಮುದ್ರಾನಂದೊಪ್ಪು! (ಜ)
-ಯೇಚ್ಛೆ ಇಂದ್ರಿಯ ಜಯಕ್ಕಾಗ್ಬೇಕೆಂದೊಪ್ಪು!
ಮುಕುಂದನ ಭಜನೆ ಬೇಕಿದಕೊಪ್ಪು! (ಒ)
-ಪ್ಪು, ನಿರಂಜನಾದಿತ್ಯಾತ್ಮಕ್ಕಿಲ್ಲ ಮುಪ್ಪು!!!

ಸಂದೇಶ ಸಂದೇಹವಿಲ್ಲದಿರ್ಲಿಕ್ಕೆ!   5(2725)

ದೇಶ, ವಿದೇಶದಲ್ಲೈಕ್ಯವಿರ್ಲಿಕ್ಕೆ!
ರಣು ಸರ್ವೇಶ್ವರಗಾಗಿರ್ಲಿಕ್ಕೆ!
ಸಂಬಂಧ ಸಜ್ಜನರದ್ದಾಗಿರ್ಲಿಕ್ಕೆ!
ದೇಹವೇ ದೇವಾಲಯವಾಗಿರ್ಲಿಕ್ಕೆ!
ಗಲಿರುಳಾತ್ಮಧ್ಯಾನವಿರ್ಲಿಕ್ಕೆ!
ವಿಷಯಗಳಾಸೆಯಿಲ್ಲದಿರ್ಲಿಕ್ಕೆ! (ಎ)
-ಲ್ಲರಂತರ್ಯಾಮಿ ದೇವರೆಂದಿರ್ಲಿಕ್ಕೆ!
ದಿವ್ಯ ಜೀವನವೆಲ್ಲರಲ್ಲಿರ್ಲಿಕ್ಕೆ! (ಇ)
-ರ್ಲಿ ಗುರುಕೃಪೆಯಿದಕ್ಕೆಂದಿರ್ಲಿಕ್ಕೆ! (ಅ)
-ಕ್ಕೆ ನಿರಂಜನಾದಿತ್ಯಾನಂದೆಲ್ಲಕ್ಕೆ!!!

ಸಂದೇಶ ಸಾಹಿತ್ಯ ಸಂಜೀವಗಾತಿಥ್ಯ!   5(2774)

ದೇವರ ಮಕ್ಕಳೆಲ್ಲರಿಗಿದಗತ್ಯ!
ರಣೆನಬೇಕಾ ಶ್ರೀಪಾದಕ್ಕೆ ನಿತ್ಯ!
ಸಾಯುಜ್ಯ ಸಾಧನೆಯಿಂದ ಕೃತಕೃತ್ಯ!
ಹಿಡಿತದಲ್ಲಿಡಬೇಕಿಂದ್ರಿಯ ಮರ್ತ್ಯ!
ತ್ಯಜಿಸಬೇಕು ದುಸ್ಸಂಗವನ ಭೃತ್ಯ!
ಸಂಕೀರ್ತನೆಯಿಂದ ಸರ್ವಸಿದ್ಧಿ! ಸತ್ಯ!
ಜೀವ, ಶಿವರಲಾಗುವುದೈಕ್ಯಮತ್ಯ!
ರ ಗೀತಾಮೃತವಿತ್ತ ಕೃಷ್ಣ ಸ್ತುತ್ಯ!
ಗಾಳಿ ಬಂದಾಗ ತೂರಿಕೊಂಬಾ ಸಾರಥ್ಯ!
ತಿಳಿಗೇಡಿ ಮಾಡುವನು ಕ್ರೂರಕೃತ್ಯ! (ಮಿ)
-ಥ್ಯದಲ್ಲೂ ನಿರಂಜನಾದಿತ್ಯಾಧಿಪತ್ಯ!!!

ಸಂದೇಶವಿನ್ನೂ ಕಾರ್ಯಕ್ಕೇಕೆ ಬಂದಿಲ್ಲ?   5(2658)

ದೇವರಲ್ಲಿ ಭಯ, ಭಕ್ತಿ ಕುದುರಿಲ್ಲ? (ದೇ)
-ಶ, ಕಾಲ, ಪರಿಸ್ಥಿತಿಗಳರಿವಿಲ್ಲ!
ವಿಷಯಸುಖದಾಸೆಯಿನ್ನೂ ಹೋಗಿಲ್ಲ! (ಮು)
-ನ್ನೂರರ್ವತ್ತೈದು ದಿನವಿದೇ ಆಯ್ತಲ್ಲ!
ಕಾಲನ ದೂತರು ಕಾಯುತಿಹರಲ್ಲ! (ಕಾ)
-ರ್ಯತತ್ಪರರಾಗ್ಬೇಕೀಗ ಜನರೆಲ್ಲ! (ಅ)
-ಕ್ಕೇಳಿಗೆಯದರಿಂದ ಅವರಿಗೆಲ್ಲ!
ಕೆಟ್ಟಮೇಲ್ಕುಟ್ಟಿಕೊಂಡತ್ತು ಫಲವಿಲ್ಲ!
ಬಂದು ಹೋದ್ರೆ ಸಾರ್ಥಕವಾಗುವುದಿಲ್ಲ!
ದಿವ್ಯಪದೇಶದ ಮನನ ಮಾಡ್ರೆಲ್ಲ! (ನ)
-ಲ್ಲ ನಿರಂಜನಾದಿತ್ಯನಂತಾಗ್ಬೇಕೆಲ್ಲ!!!

ಸಂದೇಹವೇಕಿನ್ನು ಸದಯ ಹೃದಯಾ?   4(1791)

ದೇಹ ಮನ ನಿನ್ನದಾಗಿಹುದು ಪ್ರಿಯಾ!
ಸಿದಾಗನ್ನವಿತ್ತವ ನೀನು ಪ್ರಿಯಾ!
ವೇದ, ವೇದಾಂತಕ್ಕೆ ಸಾಗರಾ ಹೃದಯಾ!
ಕಿರುಕುಳ ತಪ್ಪಿಸಿದಾರ್ಯ ನೀ ಪ್ರಿಯಾ! (ನಿ)
-ನ್ನುಪಕಾರ ಮರೆಯಲಾರೆ ನಾ ಪ್ರಿಯಾ!
ರ್ವರುದ್ಧಾರಕ್ಕಾಗಿಹುದಾ ಹೃದಯಾ!
ರ್ಶನ ಸದಾ ಕೊಡು ನನಗೆ ಪ್ರಿಯಾ!
ಜ್ಞವಾಗುತ್ತಿದೆ ನಿನಗಾಗಿ ಪ್ರಿಯಾ!
ಹೃತ್ಪೂರ್ವಕ ಸೇವೆಯಿದು ಶ್ರೀ ಹೃದಯಾ!
ಯೆಯಿಂದ ಸ್ವೇಕರಿಸಿದನು ಪ್ರಿಯಾ! (ದ)
-ಯಾಮಯಾ ನಿರಂಜನಾದಿತ್ಯಾತ್ಮ ಪ್ರಿಯಾ!!!

ಸಂಧ್ಯಾರ್ಕನಿಂದ ಸುಸ್ವಾಗತ!   2(996)

ಧ್ಯಾನಾನಂದಗಾ ಸುಸ್ವಾಗತ! (ತ)
-ರ್ಕ ರಹಿತಗಾ ಸುಸ್ವಾಗತ!
ನಿಂತನಂತಗಾ ಸುಸ್ವಾಗತ!
ತ್ತ ಗುರುಗಾ ಸುಸ್ವಾಗತ!
ಸುಖಪ್ರದಗಾ ಸುಸ್ವಾಗತ!
ಸ್ವಾಮಿ ಭಕ್ತಗಾ ಸುಸ್ವಾಗತ!
ರ್ವ ಶೂನ್ಯಗಾ ಸುಸ್ವಾಗತ! (ಪಿ)
-ತ ನಿರಂಜನಗಾ ಸುಸ್ವಾಗತ!!!

ಸಂಪಿಗೆ ಮುಡಿದಾ ಸಾಂಬಶಿವಾ!   4(1950)

ಪಿರಿಯ ಜಟೆಯಾ ಸಾಂಬಶಿವ! (ಗಂ)
-ಗೆಯ ನಿತ್ಯ ಹೊತ್ತಾ ಸಾಂಬಶಿವ!
ಮುನಿಜನ ವಂದ್ಯಾ ಸಾಂಬಶಿವ! (ಖಂ)
-ಡಿಪ ಭಂಡರನ್ನಾ ಸಾಂಬಶಿವ!
ದಾಶರಥಿಗಿಷ್ಟಾ ಸಾಂಬಶಿವ!
ಸಾಂಗ ವೇದಾನಂದಾ ಸಾಂಬಶಿವ!
ನಶಂಕರ್ಯಾಪ್ತಾ ಸಾಂಬಶಿವ!
“ಶಿವಾಯ ನಮಃ ಓಂ” ಸಾಂಬಶಿವ! (ಭ)
-ವ ನಿರಂಜನಾದಿತ್ಯಾತ್ಮ ಶಿವ!!!

ಸಂಪ್ರದಾಯ ಸಂತೋಷಪ್ರದವಾಗ್ಬೇಕು!   4(2247)

ಪ್ರದಕ್ಷಿಣೆ ದಕ್ಷಿಣೆಗಲ್ಲದಿರ್ಬೇಕು!
ದಾನ ಧರ್ಮ ಆತ್ಮಪೇಮದಿಂದಾಗ್ಬೇಕು!
ಮ, ನಿಯಮಾಭ್ಯಾಸ ಮಾಡುತ್ತಿರ್ಬೇಕು!
ಸಂತತ ಗುರುಸೇವೆ ಸಾಗುತ್ತಿರ್ಬೇಕು!
ತೋಡಿದ ಭಾವಿಯಲ್ಲಿ ನೀರು ಕಾಣ್ಬೇಕು! (ವಿ)
-ಷಯ ವಾಸನೆಯಂಟಿಲ್ಲದಂತಾಗ್ಬೇಕು!
ಪ್ರಯತ್ನ ಕೃಷ್ಣಾರ್ಪಣವೆಂದು ಮಾಡ್ಬೇಕು!
ಯಾಸ್ವಭಾವವುಳ್ಳವನಾಗಿರ್ಬೇಕು!
ವಾಸುದೇವನನ್ನು ಸ್ಮರಿಸುತ್ತಿರ್ಬೇಕು! (ಸಾ)
-ಗ್ಬೇಕವನ ಕೃಪೆಯಿಂದೆಲ್ಲಾ ಆಗ್ಬೇಕು! (ಟಾ)
-ಕು ನಿರಂಜನಾದಿತ್ಯಾತ್ಮನಾಗ್ಬೇಕು!!!

ಸಂಭಾವನೆ ಆಶೀರ್ವಾದ!   4(1454)

ಭಾಗ್ಯವಿದು ನಿರ್ವಿವಾದ!
ರ ಗುರುವಿನಾ ಪಾದ!
ನೆನೆದು ನೀಗೀಗ ಭೇದ!
ರಾಮಪ್ರದಾ ಪ್ರಸಾದ! (ಆ)
ಶೀರಾತ್ಮನೇ ದತ್ತನಾದ! (ಗೀ)
-ರ್ವಾಣಿಯನುಗ್ರಹಾ ನಾದ! (ನಾ)
-ದ ನಿರಂಜನಾದಿತ್ಯಾದ!!!

ಸಂಭ್ರಮದಿಂದಾಯ್ತು ಪಟ್ಟಾಭಿಷೇಕ!   4(1923)

ಭ್ರಮೆ ಕಳೆಯಿತಾ ಪಟ್ಟಾಭಿಷೇಕ!
ನವೊಲಿಸಿತಾ ಪಟ್ಟಾಭಿಷೇಕ! (ಸ)
-ದಿಂಬೆಲ್ಲರ್ಗಿತ್ತಿತಾ ಪಟ್ಟಾಭಿಷೇಕ!
ದಾಶರಥಿಗಾಯ್ತಾ ಪಟ್ಟಾಭಿಷೇಕ! (ಅ)
-ಯ್ತು ಉತ್ಸಾಹದಿಂದಾ ಪಟ್ಟಾಭೀಷೇಕ!
ತಿತ ಪಾವನಾ ಪಟ್ಟಾಭೀಷೇಕ! (ಕೆ)
-ಟ್ಟಾಚಾರ ಸುಟ್ಟಿತಾ ಪಟ್ಟಾಭಿಷೇಕ! (ಸು)
-ಭಿಕ್ಷೆ ದೇಶಕ್ಕೆಲ್ಲಾ ಪಟ್ಟಾಭಿಷೇಕ! (ದೋ)
-ಷೇನಿಲ್ಲದಾಯಿತಾ ಪಟಾಭಿಷೇಕ! (ಶ್ರೀ)
-ಕರ ನಿರಂಜನಾದಿತ್ಯಾಭಿಷೇಕ!!!

ಸಂವತ್ಸರವಿದು “ಸಾಧಾರಣ”! (ಭ)   3(1241)

-ವ ಪಾಶ ನಾಶ ಶಿವ ಪಾವನ! (ತ)
-ತ್ಸರ್ವಮೆಂಬಾನಂದಾತ್ಮ ಧಾರಣ! (ವ)
-ರ ಗುರುಪಾದ ಸೇವೆ ಪಾವನ!
ವಿಚಾರದಿಂದಾಗಲಿ ಧಾರಣ! (ಬ)
-ದುಕಿದರಿಂತು ಜನ್ಮ ಪಾವನ!
ಸಾಯುಜ್ಯ ಸಿದ್ಧಿಗಾಗಿ ಧಾರಣ! (ಸಾ)
-ಧಾರಣ ಜೀವನಿಂತು ಪಾವನ!
ಘುಪತಿ ರಾಮನ ಧಾರಣ! (ಪ್ರಾ)
-ಣ, ನಿರಂಜನಾದಿತ್ಯ ಪಾವನ!!!

ಸಂವಿಧಾಯಕ ಗಣನಾಯಕ!   3(1062)

ವಿದ್ಯಾವರ್ಧಕ ಗಣನಾಯಕ! (ಪ್ರ)
-ಧಾನಾಧ್ಯಾಪಕ ಗಣನಾಯಕ!
ಮ ಸಾಧಕ ಗಣನಾಯಕ!
ಲಿ ಧ್ವಂಸಕ ಪಣನಾಯಕ!
ತಿ ದರ್ಶಕ ಗಣನಾಯಕ! (ಗು)
-ಣ ಗಣಾತ್ಮಕ ಗಣನಾಯಕ!
ನಾಮ ಭಜಕ ಗಣನಾಯಕ! (ನ)
-ಯ ಸ್ವಭಾವಿಕ ಗಣನಾಯಕ! (ಮೂ)
-ಕ, ನಿರಂಜನಾರ್ಕ ವಿನಾಯಕ!!!

ಸಂಶೋಧನಾ ಕಾರ್ಯದಿಂದ ಪ್ರಕೃತಿ ವ್ಯತ್ಯಾಸ!   5(3293)

ಶೋಚನೀಯಾವಸ್ಥೆಗೆ ಕಾರಣ ಈ ದುರಾಶಾ!
ರ್ಮ, ಕರ್ಮಗಳಿಗೆ ಲೋಪವಾಗಿ ಅಭಾಸ!
ನಾಕಾರಣದಿಂದ್ರಿಯೋಲ್ಬಣವಾಗ್ಯಾಯಾಸ!
ಕಾಮಾಧಿಕ್ಯದಿಂದೊಡಲ್ಬಲಗುಂದಿ ವಿನಾಶ! (ಆ)
-ರ್ಯಸಂಸ್ಕೃತಿಗಳು ಕ್ಷೀಣವಾಗಿ ಸರ್ವನಾಶ! (ಎಂ)
-ದಿಂದಿನರಿಷ್ಟಾಂತ್ಯವೆಂದರಿಯದೇ ಹತಾಶಾ!
ಮನವಾಗ್ಬೇಕೆಲ್ಲಾ ಕ್ಷಣಿಕ ಸುಖದಾಶಾ!
ಪ್ರಗತಿ ಹೆಸರಲ್ಲಾಗುತಿದೆ ದುರ್ವಿಲಾ ಸ!
ಕೃತಿಯಲ್ಲೊಂದು ಬಾಯಲ್ಲೊಂದಾಗಿ ಎಲ್ಲಾ ಮೋಸ!
ತಿರೆಯ ಸುಖ ಹೆಚ್ಚಿಸಲ್ಕಾಕಾಶ ಪ್ರವಾಸ!
ವ್ಯತಿರಿಕ್ತವಾಗಿಲ್ಲದಾಗ್ವುದಿಲ್ಲಿ ನಿವಾಸ!
ತ್ಯಾಗ ಜೀವನದಿಂದ ಉದ್ಧಾರ ಎಲ್ಲಾ ದೇಶ!
ದ್ಗುರು ನಿರಂಜನಾದಿತ್ಯನದ್ದೀ ಸಂದೇಶ!!!

ಸಂಸಾರ ಬಹಳಾಳವಯ್ಯಾ!   6(4272)

ಸಾವಿದ್ರಲ್ಲಿ ಖಚಿತವಯ್ಯಾ!
ಸ ಹೆಪ್ಪುಗಟ್ಟುವುದಯ್ಯಾ!
ಲು ಕಷ್ಟ ಹೊರಬರ್ಲಯ್ಯಾ!
ರಿ, ಹರರ್ಗೂ ಭಯವಯ್ಯಾ! (ಆ)
-ಳಾದ್ರೂ, ಅರ್ಸಾದ್ರೂ ದುಃಖವಯ್ಯಾ! (ಕ)
-ಳವಳ ಪಟ್ಟರಾಗದಯ್ಯಾ! (ದೇ)
-ವ ನೀನಾದದರೆ ಸುಖವಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾಗಯ್ಯಾ!!!

ಸಂಸ್ಕಾರಕ್ಕೆ ತಕ್ಕಂತೆ ಬುದ್ಧಿ! (ಸಂ)   6(3981)

-ಸ್ಕಾರ ಆಚಾರದಿಂದ ಸಿದ್ಧಿ! (ಪ)
-ರಮಾರ್ಥಿಗಿರ್ಬೇಕ್ಯುದ್ಧ ಬುದ್ಧಿ! (ಬೆ)
-ಕ್ಕೆಯಿಂದಾಗುವುದು ದುರ್ಬುದ್ಧಿ!
ನಗಾಗ್ದದ್ದ್ರಿಂದಭಿವೃದ್ಧಿ! (ಚ)
-ಕ್ಕಂದದಿಂದಾಗದಾವ ಸಿದ್ಧಿ!
ತೆರೆ ನಿಲ್ಲದಾಗ್ದು ಶಾಂತಾಬ್ಧಿ!
ಬುದ್ಧಿ ಆತ್ಮನಾಗ್ವುದೇ ಸಿದ್ಧಿ! (ಸಿ)
-ದ್ಧಿ, ನಿರಂಜನಾದಿತ್ಯ ಬುದ್ಧಿ!!!

ಸಂಸ್ಕಾರದಿಂದ ಆಚಾರಪ್ಪಾ! (ಸಂ)   5(2851)

-ಸ್ಕಾರಾಚಾರದಿಂದ ಕಾಣಪ್ಪಾ!
ಮಾರಮಣಾತ್ಮಾನಂದಪ್ಪ! (ಅ)
-ದಿಂದು, ನಿನ್ನೆಯದಲ್ಲವಪ್ಪಾ! (ನಾ)
-ದ, ಬಿಂದು, ಕಲಾತೀತದಪ್ಪಾ!
ಯ, ವ್ಯಯ ಅದಕ್ಕಿಲ್ಲಪ್ಪಾ! (ವಿ)
-ಚಾರದಿಂದದರರಿವಪ್ಪಾ!
(ನಿ)ರತಾನುಸಂಧಾನ ಮಾಡಪ್ಪಾ! (ಅ)
-ಪ್ಪಾ ನಿರಂಜನಾದಿತ್ಯದಪ್ಪಾ!!!

ಸಕಲವೂ ನೀನೇ, ನಿನ್ನೊಳ್ಸಕಲವೂ ತಾನೇ? (ಸ)   6(3708)

-ಕಲದಿಂ ಬೇರೆ ಇರುವವನೂ ನೀನೇ ತಾನೇ?
ಕ್ಷ್ಯ ನಿನ್ನ ಮಕ್ಕಳಿಗೆ ಹೀಗಿರ್ಬೇಕು ತಾನೇ? (ನಾ)
-ವು, ನೀವೆಂಬ ಭಿನ್ನ ಭಾವ ಮಾಯವಾಗ್ಬೇಕ್ತಾನೇ?
ನೀಚ, ಉಚ್ಚ ಎಂಬಹಂಕಾರ ಸಾಯಬೇಕ್ತಾನೇ?
ನೇಮ, ನಿಷ್ಠೆಯಿಂದ ನಿನ್ನ ಧ್ಯಾನ ಮಾಡ್ಬೇಕ್ತಾನೇ?
ನಿತ್ಯಾನಿತ್ಯ ವಿಚಾರವೂ ಮಾಡುತ್ತಿರ್ಬೇಕ್ತಾನೇ? (ತ)
-ನ್ನೊಬ್ಬನ ಸುಖ ಮಾತ್ರ ಬಯಸ್ಬಾರದು ತಾನೇ? (ಬಾ)
-ಳ್ಸಮಸ್ತ ಜೀವರಾಶಿಯದ್ದೂ ಹೊನ್ನಾಗ್ಬೇಕ್ತಾನೇ?
ಳ್ಳತನ, ಮೋಸ, ವಂಚನೆ ಮಾಡ್ಬಾರ್ದು ತಾನೇ?
ಭ್ಯಾನ್ಸಾರ ಲಾಭ, ನಷ್ಟ; ಸುಖ, ದುಃಖ ತಾನೇ? (ಮಾ)
-ವು ಬಿತ್ತಿದವ ಬೇವನ್ನೆಂದಿಗೂ ಕೊಯ್ಯತಾನೇ?
ತಾನೇ ತಾನಾಗಿರಲಿಕ್ಕಿದೆಲ್ಲಾ ಬೇಕು ತಾನೇ?
ನೇಮ ನಿರಂಜನಾದಿತ್ಯನದ್ದಾದರ್ಶತಾನೇ???

ಸಕಲವೂ ಪೂಜನೀಯವಯ್ಯಾ! (ಅ)   4(2236)

-ಕಳಂಕಾತ್ಮನೆಲ್ಲಿಲ್ಲ ಹೇಳಯ್ಯಾ! (ಫ)
-ಲ, ಪುಷ್ಪದಲ್ಲೆಲ್ಲಾ ಅವನಯ್ಯಾ! (ಮಾ)
-ವೂ, ಬೇವೂ, ಅವಗಾನಂದವಯ್ಯಾ!
ಪೂಜೆಗಿರಬೇಕ್ಭಕ್ತಿ ಭಾವಯ್ಯಾ! (ನಿ)
-ಜರೂಪದಲ್ಲವನ ನೋಡಯ್ಯಾ!
ನೀಚೋಚ್ಛವೆಂದೆಣಿಸಬೇಡಯ್ಯಾ! (ಕಾ)
-ಯದಲ್ಲಿಹ ಕಾರಣವನಯ್ಯಾ!
ರ ಗುರುದೇವನವನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾನಂದಯ್ಯಾ!!!

ಸಕಲಾರಿಷ್ಟ ವಿನಾಶ ಗುರು ಸರ್ವೇಶ!   1(116)

ರ ಚರಣ ಕಟ್ಟಿ ಆಗವನ ವಶ!
ಲಾಭಾಲಾಭಗಳಿಗೆ ಇವನೇ ಅಧೀಶ!
ರಿಪುಗಲಾರಕೆ ಪ್ರಳಯಾಗ್ನಿ ಗಿರೀಶ! (ಅ)
-ಷ್ಟ ಮದಗಳಿವನ ನೆನೆದರೆ ನಾಶ!
ವಿಷಗಳಿಗೆಲ್ಲಾ ಕಾಲ ತ್ರಿನಯನೇಶ!
ನಾರುವ ವ್ರಣಗಳ್ಗಿವ ಗುಣ ಗಣೇಶ!
ಮೆ, ದಮೆಯ ಸಿದ್ಧಿಗಿವನೇ ಯೋಗೀಶ!
ಗುರಿಗಡಚಣೆ ಬಂದರಿಂತ ವಿಘ್ನೇಶ!
ರುಧಿರ ಶುದ್ಧಿ, ವೃದ್ಧಿಗೆ ಧನ್ವಂತರಿಂಶ!
ರ್ವ ಯಂತ್ರ, ತಂತ್ರಗಳಿಗಿವನಿಂದ ಧ್ವಂಸ! (ಸ)
-ರ್ವೇಶನೀತನರಿಕುಲಕಾಲ ಚಕ್ರೇಶ!
ಕ್ತಿ, ನಿರಂಜನಾದಿತ್ಯ ಶಿವ ಶಕ್ತೀಶ!!!

ಸಕಾಲದಲಿ ಸಂಚಿತದ ವೆಚ್ಚ!   1(309)

ಕಾರ್ಮೋಡ ಮಳೆಗಾಲದಲಿ ವೆಚ್ಚ!
ಲಕ್ಷದೀಪ ಕಾರ್ತಿಕದಲ್ಲಥೇಚ್ಛ!
ದಳಾಬಲ ಸಮರದಲಿ ವೆಚ್ಚ! (ಅ)
-ಲಿಪ್ತನಾಗುವುದು ಗುರುವಿನಿಚ್ಛ!
ಸಂಸಾರಿಗೆ ಸಂಪಾದನೆಯ ಇಚ್ಛ!
ಚಿರ ಶಾಂತಿ ತಾಪಸೋತ್ತಮರಿಚ್ಛ!
ತರಣಿಗೆ ಸದಾ ಧರ್ಮ, ಕರ್ಮೇಚ್ಛಾ!
ದಯಾಮಯತೆ ಸರ್ವೇಶ್ವರನಿಚ್ಛಾ!
ದರ್ಶನವಾಗುವ ಕಾಲವನಿಚ್ಛಾ!
ವೆಚ್ಚ, ನಿರಂಜನಾದ್ತಿನ ಯೋಗೇಚ್ಛಾ!

ಸಕ್ಕರೆ ಸವಿ ತಿಂದವ ಬಲ್ಲ! (ಅ)   5(2814)

-ಕ್ಕರೆ ಬೆಲೆ ಬೆರೆತವ ಬಲ್ಲ! (ಕೆ)
-ರೆಯ ಆಳ ಇಳಿದವ ಬಲ್ಲ!
ರ್ವೇಶ್ವರನನ್ನು ಜ್ಞಾನಿ ಬಲ್ಲ!
ವಿಷಯವಾಸನೆ ಯೋಗಿಗಿಲ್ಲ!
ತಿಂಡಾಡಿ ಯಿದನೇನು ತಾ ಬಲ್ಲ?
ತ್ತಾತ್ರೇಯ ಸಾಮಾನ್ಯನೇನಲ್ಲ!
ರ್ಣ ಭೇದ ಅವನಿಗೇನಿಲ್ಲ!
ಲಾಬಲ ಶ್ರೀರಾಮ ತಾ ಬಲ್ಲ! (ಬ)
-ಲ್ಲ ನಿರಂಜನಾದಿತ್ಯನ್ಯನಲ್ಲ!!!

ಸಕ್ಕರೆಗಾಗಕ್ಕರೆ ಬೇಡಪ್ಪಾ! (ಅ)   6(3748)

-ಕ್ಕರೆಗಾಗಿ ಸಕ್ಕರೆ ಬೇಕಪ್ಪಾ! (ಮ)
-ರೆತರಿದನು ಕಷ್ಟ ಕಾಣಪ್ಪಾ!
ಗಾನಲೋಲ ಬಾಲಗೋಪಾಲಪ್ಪಾ!
ಗನದ ಬಣ್ಣವನದಪ್ಪಾ! (ಸ)
-ಕ್ಕರೆ, ಹಾಲ್ಬೆಣ್ಣೆ ಅವನಿಗಿಷ್ಟಪ್ಪಾ! (ನೆ)
-ರೆ ಮನೆಯೂ ತನ್ನದೆಂಬನಪ್ಪಾ!
ಬೇಡಿ, ಕಾಡಿ ತಿನ್ನನವನಪ್ಪಾ! (ಉಂ)
-ಡಮನೆಗೆ ಎರಡೆಣಿಸ್ನಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯ ತಾನಪ್ಪಾ!!!

ಸಗ್ಗವೂ ಅಗ್ಗ ಸಲಿಗೆಯಿಂದ! (ಹ)   1(412)

-ಗ್ಗವೂ ಹಾವು ಪ್ರಾಣ ಭಯದಿಂದ! (ಹಾ)
-ವೂ ಹಗ್ಗ ಏಕಾಗ್ರ ಮನದಿಂದ!
ರಸನೂ ಆಳು ಕರ್ಮದಿಂದ! (ಅ)
-ಗ್ಗಳದ ಭಾಗ್ಯನುಗ್ರಹದಿಂದ!
ದಾ ಆನಂದ ಸತ್ಸಂಘದಿಂದ!
ಲಿಪ್ತನಾದರೆ ಭವದ ಬಂಧ!
ಗೆಳೆಯಾದಿತ್ಯ ದರ್ಶನಾನಂದ!
ಯಿಂಬನೀವ ಗುರು ನಿತ್ಯಾನಂದ!
ತ್ತ ನಿರಂಜನಾದಿತ್ಯಾನಂದ!!!

ಸಚ್ಚರಿತನಿಗಚ್ಚರಿ ಎಂಬುದಿಲ್ಲ! [ಎ]   2(532)

-ಚ್ಚರತಪ್ಪಿ ಆತ ಮಲಗುವುದಿಲ್ಲ! (ದಾ)
-ರಿ ಬಿಟ್ಟಿನ್ಯ ದಾರಿ ಹಿಡಿಯುವುದಿಲ್ಲ!
ರಲೆ, ತಂಟೆಗಳ ಮಾಡುವುದಿಲ್ಲ!
ನಿಶ್ಚಲದ ಭಕ್ತಿಯ ಬಿಡುವುದಿಲ್ಲ!
ರ್ವದಿಂದನ್ಯರ ಹಿಂಸಿಸುವುದಿಲ್ಲ! (ಮ)
-ಚ್ಚರ ಕಿಚ್ಚಿಗಿಂತನಿಷ್ಟೆಂದವ ಬಲ್ಲ! (ಹ)
-ರಿ ಶರಣರ ಸಂಘ ಬಿಡುವುದಿಲ್ಲ!
ಎಂದಿಗೂ ಪರನಿಂದೆ ಮಾಡುವುದಿಲ್ಲ!
ಬುದ್ಧಿ ಕೆಟ್ಟು ಮೋಹಕಾಳಾಗುವುದಿಲ್ಲ!
ದಿನ, ನಿಶಿ, ಗುರುಧ್ಯಾನ ಮಾಡದಿಲ್ಲ! (ಎ)
-ಲ್ಲ ನಿರಂಜನಾದಿತ್ಯನೆಂದವ ಬಲ್ಲ!!!

ಸಚ್ಚಿದಾನಂದ ಸ್ಥಿತಿಗೊಯ್ಯುವುದೆಲ್ಲಾ ಸತ್ಸಂಘ! (ಬ)   1(411)

-ಚ್ಚಿಟ್ಟಚ್ಚುತನಿಚ್ಛೆಯಿಂದ ಬಿಡಿಸಲು ಸತ್ಸಂಘ!
ದಾರಿಯಾವುದಾದರೂ ಕಾರ್ಯವಾದರೆ ಸತ್ಸಂಘ!
ನಂಬಿಗೆಯಿಂದ ಮಾಡಬೇಕು ಸತತ ಸತ್ಸಂಘ!
ಡ ಸೇರಿದರೂ ಬಿಡದಿರಬೇಕು ಸತ್ಸಂಘ!
ಸ್ಥಿತಿಯಿಂದಿಳಿಯದಿರುವುದಕಾಗ ಸತ್ಸಂಘ!
ತಿಳಿಯದೇ ಮಾಯೆಯುರುಳಿಸದಂತೆ ಸತ್ಸಂಘ!
ಗೊಡವೆ ಲೌಕಿಕಕೆ ಓಡದಂತಿರಲು ಸತ್ಸಂಘ! (ಸಾ)
-ಯ್ಯುಜ್ಯ, ಸಚ್ಚಿದಾನಂದ ಸ್ಥಿತಿಗೀ ನಿಜ ಸತ್ಸಂಘ! (ಆ)
-ವುದಿದಕಾತಂಕವೋ ಅದಲ್ಲಾದರ್ಶ ಸತ್ಸಂಘ!!
ದೆಸೆದೆಸೆಗೂ ದಿಟ್ಟಿಸಿ ಹೂಡಬೇಕು ಸತ್ಸಂಘ! (ಅ)
-ಲ್ಲಾಡಿದರೆ ಮನಸು ಸಿದ್ಧಿಯಾಗದು ಸತ್ಸಂಘ!
ರ್ವೇಶ್ವರನ ಪೂರ್ಣಾನುಗ್ರಹದಿಂದ ಸತ್ಸಂಘ! (ಸ)
-ತ್ಸಂಪ್ರದಾಯ ತ್ರಿಕರಣಗಳಲಿರ ಸತ್ಸಂಘ!
ನ ಮಹಿಮ ನಿರಂಜನಾದಿತ್ಯನಾ ಸತ್ಸಂಘ!!!

ಸಜ್ಜನ ಸಂಗಕ್ಕೆ ಹಾತೊರೆಯಬೇಕು! (ಅ)   4(2087)

-ಜ್ಜ ನೆಟ್ಟಾಲೋಪಕಾರಿಯಾಗಿರಬೇಕು! (ಮ)
-ನ ಬಂದಂತಲ್ಲಿಲ್ಲೋಡಾಡದಿರಬೇಕು!
ಸಂಭಾವನೆಗಾಗ್ಯೇನೂ ಮಡದಿರ್ಬೇಕು! (ಯೋ)
-ಗಕ್ಕಾಗಿ ಸದಾ ತ್ಯಾಗಿಯಾಗಿರಬೇಕು! (ಬೆ)
-ಕ್ಕೆಯ ರೆಕ್ಕೆಗಳ ಹರಿದಿಕ್ಕಬೇಕು!
ಹಾಲಿನಂಥಾ ಶುದ್ಧ ಪ್ರೇಮವಿರಬೇಕು!
ತೊಡರೆಡರುಗಳ್ಗಂಜದಿರಬೇಕು! (ಮ)
-ರೆಯದೇ ಹರಿಭಜನೆ ಮಾಡಬೇಕು!
ಮನೂ ರಾಮನಾಗೆಂದರಿಯಬೇಕು!
ಬೇಕಿದಕೆ ಗುರುಕೃಪೆಯೆನಬೇಕು!
ಕುಲ ನಿರಂಜನಾದಿತ್ಯನದ್ದಾಗ್ಬೇಕು!!!

ಸಜ್ಜನ ಸಂದರ್ಶನ ಕಾಲ ಪರ್ವ ಕಾಲ! (ಮ)   1(367)

-ಜ್ಜನಗೈದೆಲ್ಲರು ಬರುವ ಪುಣ್ಯಕಾಲ!
ಮಿಸಿ, ಸೇವೆಯೊಪ್ಪಿಸುವ ದಿವ್ಯಕಾಲ!
ಸಂಕಟ ಪರಿಹಾರಕ್ಕಿದು ರ್ತಿರ್ಥಕಾಲ!
ತ್ತ ಭೇಟಿಗಿದು ಬ್ರಾಹ್ಮೀ ಮುಹೂರ್ತಕಾಲ! (ಆ)
-ರ್ಶ ಬ್ರಹ್ಮ ಕರ್ಮಾನುಷ್ಠಾನಕ್ಕೆ ಸೂಕ್ತ ಕಾಲ! (ಅ)
-ನಘನಮಲಾತ್ಮಾರಾಮನ ಧ್ಯಾನ ಕಾಲ!
ಕಾಯಿ, ಕಡ್ಲೆಳ್ಳು ಬೆಲ್ಲ ಪ್ರಸಾದದ ಕಾಲ! (ಅ)
-ಲಕ್ಷ್ಯ ಮಾಡಲಾಗದಿಂಥಾ ಅಮೃತ ಕಾಲ!
ರನಿಂದೆ, ದ್ವೇಷಾಸೂಯೆ ಬಿಡವ ಕಾಲ! (ಸ)
-ರ್ವರಲ್ಲಿ ಮೈತ್ರಿ ಬೆಳೆಸಲಿದಿಳ್ಳೇ ಕಾಲ!
ಕಾಮನಳಿದು, ಗೌರೀಶವರರೈಕ್ಯ ಕಾಲ! (ಬಾ)
-ಲ ನಿರಂ

ನಾದಿತ್ಯ ಗುರೋದಯ ಕಾಲ!!!

ಸಜ್ಜನರಿಗೆ ಸಹಾಯವಿಲ್ಲ! (ಬ)   4(1528)

-ಜ್ಜರದಾಸೆ ಅವರಿಗೇನಿಲ್ಲ!
ಮ್ರತೆಯನವರು ಬಿಟ್ಟಿಲ್ಲ! (ಹ)
-ರಿ ಸ್ಮರಣೆಯನು ಮರೆತಿಲ್ಲ! (ಹ)
-ಗೆತನ ಸಾಧಿಸುವವರಲ್ಲ!
ದಾಶಿವಗೇಕೆ ಕೃಪೆಯಿಲ್ಲ? (ಮ)
-ಹಾದೇವನಿಗಿದುಚಿತವಲ್ಲ! (ಧ್ಯೇ)
-ಯಸಿದ್ಧಿ ಮಾಡಬೇಕವನೆಲ್ಲ!
ವಿಚಾರವಿನ್ನೇನೂ ಬಾಕಿಯಿಲ್ಲ! (ಬ)
-ಲ್ಲ ನಿರಂಜನಾದಿತ್ಯ ಹೇಳೆಲ್ಲ!!!

ಸತತ ನುತಿಸಿ ಭಜಿಪೆ ನಾ ನಿನ್ನ!   4(2014)

ನಯನೆಂದೆತ್ತಿಕೊಳ್ಳಯ್ಯಾ ನೀನೆನ್ನ!
ಪ್ಪು ಮಾಡದಂತೆ ನಡೆಸು ನೀನೆನ್ನ! (ಅ)
-ನುಮಾನದಲ್ಲಿರಿಸಬೇಡ ನೀನೆನ್ನ! (ಜಾ)
-ತಿ, ಮತವೇಕೆಂದಿರಿಸಿಹೆ ನೀನೆನ್ನ!
ಸಿರಿತನ ಬೇಡೆಂದಿಟ್ಟಿಹೆ ನೀನೆನ್ನ!
ಜನಾನಂದನಾಗಿರ್ಸಿಹೆ ನೀನಿನ್ನ!
ಜಿತೇಂದ್ರಿಯನಾಗಿ ಮಾಡಿಹೆ ನೀನೆನ್ನ!
ಪೆತ್ತವ್ವೆಯಾಗಿ ಕಾಯಬೇಕು ನೀನೆನ್ನ!
ನಾ ನಿನಗಾಗಳುವೆ ಸೇರು ನೀನೆನ್ನ!
ನಿರಂಜನನೆನ್ನವನೆಂದಪ್ಪು ನೀನೆನ್ನ! (ಅ)
-ನ್ನದಿರನ್ಯ ನಿರಂಜನಾದಿತ್ಯೆಂದೆನ್ನ!!!

ಸತತವಿದುವೇ ಆನಂದ!   5(3022)

ನ್ನ ತಾನರಿತರಾನಂದ!
ತ್ವ ಜೀವನದಿಂದಾನಂದ!
ವಿಶ್ವಾತ್ಮ ರಘುರಾಮಾನಂದ!
ದುಶ್ಚಟದುಚ್ಚಾಟನಾನಂದ!
ವೇಷ, ಭೂಷಣವಲ್ಲಾನಂದ!
ದಿ, ಮಧ್ಯಾಂತಾತೀತಾನಂದ!
ನಂದಕಂದ ಗೋವಿಂದಾನಂದ! (ನಂ)
-ದ ನಿರಂಜನಾದಿತ್ಯಾನಂದ!!!

ಸತತಾಭ್ಯಾಸವೇ ಸಿದ್ಧಿ ರೂಪ!   5(3282)

ತ್ವ ಚಿಂತನೆಯಿಂದ ಸ್ವರೂಪ!
ತಾಮಸ ವೃತ್ತಿಯಿಂದ ಕುರೂಪ! (ಲ)
-ಭ್ಯಾಲಭ್ಯ ಸಿದ್ಧಾಂತ ಆಶಾರೂಪ!
ಚ್ಚಿದಾನಂದವೇ ನಿಜರೂಪ!
ವೇಷ ಭೂಷಣ ಕೃತಕ ರೂಪ! (ರಿ)
-ಸಿ, ಮುನಿಗಳೆಲ್ಲಾ ತಪೋ ರೂಪ! (ವೃ)
-ದ್ಧಿ, ಕ್ಷಯಾದಿಗಳು ಮಾಯಾರೂಪ!
ರೂಪ ರೇಖೆಗಳ್ಸಂಕಲ್ಪ ರೂಪ! (ಶ್ರೀ)
-ಪತಿ, ನಿರಂಜನಾದಿತ್ಯ ರೂಪ!!!

ಸತಿ, ಪತಿಯರ ಐಕ್ಯ ಸೌಖ್ಯ!   1(316)

ತಿರುಪತೀಶನ ಸೇವೆ ಸೌಖ್ಯ!
ರಶಿವ, ಶಕ್ತಿ ಯೋಗ ಸೌಖ್ಯ! (ಅ)
-ತಿಥಿಯಭ್ಯಾಗತಾದರ ಸೌಖ್ಯ!
ಮ, ನಿಯಮದಿಂದಿರೆ ಸೌಖ್ಯ!
ಘಪತಿಯ ಭಜನೆ ಸೌಖ್ಯ!
ಕ್ಯ ದಾಂಪತ್ಯವಿಂತಿರೆ ಸೌಖ್ಯ! (ಶ)
-ಕ್ಯವಿದು ಅಭ್ಯಾಸದಿಂದ ಸೌಖ್ಯ!
ಸೌಭ್ಯಾವಿದೆಲ್ಲರಿಗೆ ಸೌಖ್ಯ! (ಆ)
-ಖ್ಯ! ನಿರಂಜನಾದಿತ್ಯವಲೋಕ್ಯ!!!

ಸತಿಪತಿಯರೂರಲ್ಲಿ ಕ್ಷೇಮ!   5(2674)

ತಿಕ್ಕಾಟವಿಲ್ಲದಲ್ಲೀಗಾರಾಮ!
ತಿಸೇವ ಸತಿಗೀಗ ಪ್ರೇಮ!
ತಿದ್ದಿ ನಡಿಸೆಂದಾಕೆ ಪ್ರಣಾಮ! (ನ)
-ಯ, ವಿನಯದಿಂದಾಡುವ ನೇಮ! (ಊ)
-ರೂರಲೆತಕ್ಕೀಗಿಂದ ವಿರಾಮ! (ನಿ)
-ರತ ಜಪವೀಗ ಗುರುನಾಮ! (ಅ)
-ಲ್ಲಿ, ಇಲ್ಲಿ, ಎಲ್ಲೆಲ್ಲದೇ ವಿಕ್ರಮ!
ಕ್ಷೇತ್ರ ಸದ್ಗುರುವಿರುವ ಧಾಮ! (ಮ)
-ಮ ನಿರಂಜನಾದಿತ್ಯಾತ್ಮಾರಾಮ!!!

ಸತ್ತ ಬಾಯಿಗೆ ತುತ್ತು ತುರುಕದಿರು? (ಉ)   6(4360)

-ತ್ತಮಾದರ್ಶಗಳನ್ನು ಮರೆಯದಿರು!
ಬಾನಿನೊಡೆಯನ ಧ್ಯಾನಮಾಡುತಿರು! (ತಾ)
-ಯಿ, ತಂದೆ, ಬಂಧು ಅವನೆಂದು ನಂಬಿರು! (ಬ)
-ಗೆಬಗೆಯಾಸೆಗಳ ಬಯಸದಿರು!
ತುದಿಮೊದಲಿಲ್ಲದ ಕಿರಣಾಗಿರು! (ಹ)
-ತ್ತು ಇಂದ್ರಿಯಗಳನ್ನು ನಿಗ್ರಹಿಸಿರು!
ತುರೀಯಾತೀತನಾಗಿ ಬೆಳಗುತ್ತಿರು! (ಗು)
-ರುದತ್ತರೂಪ ಅದೆಂದು ಅರಿತಿರು!
ಲಿಗಾಳಾಗಿ ಹಾಳಾಗಿ ಹೋಗದಿರು!
ದಿವ್ಯಜ್ಞಾನಾನಂದ ಸುಂದರನಾಗಿರು! (ಇ)
-ರು, ನಿರಂಜನಾದಿತ್ಯನಾನಂದನಾಗಿರು!!!

ಸತ್ತ ಮೇಲೆತ್ತಿ ಹಾಕುವೀ ದೇಹವ! (ಚಿ)   5(2905)

-ತ್ತ ಶುದ್ಧವಿಲ್ಲದಲಂಕರಿಸುವ!
ಮೇಲಿಂದ್ಮೇಲೆ ಜೋಯ್ಸರಲ್ಲಿಗೋಡುವ! (ತ)
-ಲೆ ಕೆಡಿಸಿಕೊಂಡಲ್ಲಿಲ್ಲಲೆಯುವ! (ಬು)
-ತ್ತಿ ಕೊಳೆತನ್ನದ್ದನ್ನೀಗ ಕಟ್ಟುವ!
ಹಾರುವಾಹಾರ ಸೇರದೇ ಸಾಯುವ!
ಕುಲಕ್ಕೆ ಕಳಂಕವ ತಂದೊಡ್ಡುವ!
ವೀತರಾಗನ ಶಾಪವಿದೆನ್ನುವ!
ದೇವದೇವಗಪಚಾರಾಯ್ತೆನ್ನುವ!
ಗರಣಕ್ಕಿದು ಫಲವೆನ್ನುವ! (ಜೀ)
-ವ ನಿರಂಜನಾದಿತ್ಯಗೊಪ್ಪಿಸುವ!!!

ಸತ್ತಂತಿರುವುದತ್ಯಂತ ಸುಖ! (ಹ)   5(3104)

-ತ್ತಂ ಜೈಸದ ಬಾಳಿಂದೇನು ಸುಖ?
ತಿನ್ನುವುದುಣ್ಣುವುದಲ್ಪ ಸುಖ! (ಗು)
-ರುಕೃಪೆಯಿಂದ ಸತತ ಸುಖ! (ಬೇ)
-ವು, ಬೆಲ್ಲ ತಿಂದರಾರೋಗ್ಯ ಸುಖ!
ತ್ತ ಜಪದಿಂದ ಸರ್ವ ಸುಖ! (ನಿ)
-ತ್ಯಂತರ್ಯಾಮಿಯ ಧ್ಯಾನಾತ್ಮ ಸುಖ!
ನುಭಾವವಳಿದಾಗಾ ಸುಖ!
ಸುಲಭ ಸಾಧ್ಯವೇನಲ್ಲಾ ಸುಖ! (ಸು)
-ಖ ನಿರಂಜನಾದಿತ್ಯಾತ್ಮ ಸುಖ!!!

ಸತ್ತದ್ದು ಬದುಕುವುದೇನತಿಶಯ! [ದ]   5(3181)

-ತ್ತನ ಚಿತ್ತಕ್ಕೆ ಬಂದರೆ ನಿಸ್ಸಂಶಯ! (ಸ)
-ದ್ದು ಮಾಡದೇ ಮಲಗಿದ್ದರೆ ನಿರ್ಭಯ!
ರುತ್ತವನಾಗಿ ಮಾಡುವ ಸಹಾಯ!
ದುರುದ್ದೇಶವಿದ್ದವಗಾತನೊಲಿಯ!
ಕುತರ್ಕ ಮಾಡದೇ ಕಾಯ್ಬೇಕು ಸಮಯ! (ಆ)
-ವುದೂ ನಾವ್ನೆನದಂತಾಗದು ವಿಜಯ!
ದೇವರೆ ಗತಿಯೆಂದಿದ್ದರೆಲ್ಲಾದಾಯ!
ಕ್ರನ ಸೀಳುತುಳಿಸಿತ್ತಾಗಾನೆಯ!
ತಿಳಿದಿದನು ಸ್ಮರಿಸು ಶ್ರೀ ಹರಿಯ!
ಬರಿ ಸೇರಿದಳು ರಾಮನೆಡೆಯ!
ಮಗೆ ನಿರಂಜನಾದಿತ್ಯಾಶ್ರಯ!!!

ಸತ್ತಮೇಲೆತ್ತಿ ಹಾಕುವುದೇನೋ ನಿಜ! (ಬೆ)   4(2380)

-ತ್ತಲೆಯಿದ್ದರೊಪ್ಪುವುದೇನು ಸಮಾಜ?
ಮೇಲ್ನೋಟಕ್ಕೀ ಭಾವನೆಯೇನೋ ಸಹಜ! (ಬೆ)
-ಲೆ ಮಾಯೆಗೀಯದವನು ಮಾಡ ಮಜ! (ವೃ)
-ತ್ತಿಶೂನ್ಯನಾದವನಿಗೆಲ್ಲವೂ ವಜ! (ಮ)
-ಹಾತ್ಮ ತಾನಾಗಿ ಅವನೇ ಯೋಗಿರಾಜ!
ಕುಲ, ಗೋತ್ರವೆಣಿಸದಾದರ್ಶ ಪ್ರಜ! (ಹೂ)
-ವುಗಳ ಮಧ್ಯದಲ್ಲದೊಂದು ವನಜ!
ದೇಶ, ಕಾಲಾತೀತನಾಗ್ವಿಜಯ ಧ್ವಜ! (ಮ)
-ನೋಜಯದಿಂದಿರುವುದವನಲ್ಲೋಪ!
ನಿತ್ಯವಿರುವುದವನಲ್ಲಾತ್ಮ ತೇಜ! (ನಿ)
-ಜ, ನಿರಂಜನಾದಿತ್ಯಾನಂದದಿತಿಜ!!!

ಸತ್ತಮೇಲೇನಾದರೇನು ಸುಖ? (ಅ)   1(43)

ತ್ತರೆ ಮಿಥ್ಯ ಸುಖವೇನು ಸುಖ?
ಮೇವು ಹಸಿದಾಗಿಟ್ಟರೆ ಸುಖ!
ಲೇಸು ಮಾಡಿದರೀ ಗೀತ ಸುಖ!
ನಾಳೆಗೆಂದರೆ ಏಗೇನು ಸುಖ!
ತ್ತ ತೋರೆನಗೀಗಾ ಸುಮುಖ!
ರೇಸಿ ಹೋಗಿದೆನಗೀ ಕುಮುಖ!
ನುಂಗಿ ಸಾಕಾಯ್ತೆನಗೆ ಏ ದುಃಖ!
ಸುಖ! ನೀನಿಲ್ಲದಿರೆಲ್ಲಾ ದುಃಖ!
ತಿಗೊಳದೀಗ ನಿಡಾ ಸುಖ!!!

ಸತ್ತರೂ ಸಾಯರರಿಗಳಪ್ಪಾ! (ದ)   5(3190)

-ತ್ತ ತಾನಾದ್ಮೇಲ್ಮತ್ತವರೇಳ್ರಪ್ಪಾ!
ರೂಪ ಬೇರಾದ್ರೂ ಬರ್ವರವ್ರಪ್ಪಾ!
ಸಾಕಾರ ನಿರ್ವಿಕಾರಾಗ್ಬೇಕಪ್ಪಾ!
ಜ್ಞ, ಯಾಗಗಳುಪಾಯವಪ್ಪಾ!
ತಿಯ ನಾಟ್ಯ ದುರ್ಜಯವಪ್ಪಾ!
ರಿಸಿ ಋಷ್ಯಶೃಂಗನೂ ಸೋತ್ನಪ್ಪಾ!
ಜೇಂದ್ರನಂತೆ ಮೊರೆಯಿಡಪ್ಪಾ! (ತ)
-ಳಮಳಗೊಳ್ಳದಿರಬೇಕಪ್ಪಾ! (ಅ)
-ಪ್ಪಾ! ಕಾಯೋ ನಿರಂಜನಾದಿತ್ಯಪ್ಪಾ!!!

ಸತ್ತರೆತ್ತುವೆನು ನಾನಿನ್ನ ತುಳಸಿ! (ಅ)   2(890)

-ತ್ತತ್ತು ಬಡವಾಗಿರುವೆ ನೀ ತುಳಸಿ! (ನೆ)
-ರೆಮನೆಯ ಕಾಟ ನಿನಗೆ ತುಳಸಿ! (ಕಿ)
-ತ್ತುಕೊಂಡೊಯ್ಯುವರೆಲ್ಲ ನಿನ್ನ ತುಳಸಿ! (ಸಾ)
-ವೆನೆಂಬ ಭಯ ನಿನಗೇಕೆ ತುಳಸಿ? (ಅ)
-ನುಮಾನ ಬೇಡ, ಚಿರಂಜೀವಿ ತುಳಸಿ!
ನಾರಾಯಣ ಸದಾ ನಿನ್ನಲ್ಲಿ ತುಳಸಿ!
ನಿನ್ನ ಜನ್ಮವನ ಸೇವೆಗೆ ತುಳಸಿ! (ನಿ)
-ನ್ನರ್ಪಣೆ ನಿತ್ಯವನಡಿಗೆ ತುಳಸಿ! (ಆ)
-ತುರವಾದಿತ್ಯನಿಗೇನಿಲ್ಲ ತುಳಸಿ! (ಒ)
-ಳಗಿಲ್ಲ ಬಲ ನಿನಗೀಗ ತುಳಸಿ! (ದಾ)
-ಸಿ ನಿರಂಜನಾದಿತ್ಯನಿಗೆ ತುಳಸಿ!!!

ಸತ್ತವರು ಸತ್ತ್ರು, ಅತ್ತವರು ಅತ್ತ್ರು! (ಸು)   6(4163)

-ತ್ತ ಮುತ್ತವರೊತ್ತುವರೀ ದಂಡ ತೆತ್ತ್ರು!
ರ ಗುರುಪಾದಕ್ಕಾಮೇಲ್ಕಾಣ್ಕೆ ಹೊತ್ತ್ರು!
ರುಜುಮಾರ್ಗವಿಲ್ಲದೆಲ್ಲಾ ಜನ ಕೆಟ್ಟ್ರು!
ತ್ಸಂಗಕ್ಕೆ ಉದಾಸೀನ ಮಾಡಿಬಿಟ್ಟ್ರು! (ಶ)
-ತ್ತ್ರು ಕೂಟಕ್ಕೆ ಸೇರಿ ಕಣ್ಣು ಕಣ್ಣು ಬಿಟ್ಟ್ರು!
ನ್ನ ಬಟ್ಟೆಗೂ ಗತಿಯಿಲ್ಲದಾಗ್ಬಿಟ್ಟು! (ಉ)
-ತ್ತಮರಿಗಪಚಾರ ಮಾಡಿ ಕಂಗೆಟ್ಟ್ರು!
ನವಾಸೋಪವಾಸದಿಂದುಡ್ಗಿ ಬಿಟ್ಟ್ರು! (ಕ)
-ರುಣೆ ತೋರೆಂದಂಗಲಾಚಿ ಬೇಡಿಕೊಂಡ್ರು!
ನುಗ್ರಹವಾಗುವುದೆಂದಂದುಕೊಂಡ್ರು! (ಶ)
-ತ್ತ್ರುಘ್ನನಿರಂಜನಾದಿತ್ಯನೆಂದುಕೊಂಡ್ರು!!!

ಸತ್ತು ಹುಟ್ಟುವ ಬಾಳನಿತ್ಯವಯ್ಯಾ! (ಹೊ)   2(694)

-ತ್ತು ಕಳೆಯದುತ್ತಮಾತ್ಮನಾಗಯ್ಯಾ!
ಹುಸಿಯ್ಯೆಹಿಕಸುಖದುಃಖವಯ್ಯಾ! (ಸಿ)
-ಟ್ಟು ನಿಜ ಸುಖಕೆ ಆತಂಕವಯ್ಯಾ!
ರ್ಜಿಸಬೇಕರಿಗಳನಾರಯ್ಯಾ!
ಬಾಯಿ, ಕೈ, ಶುದ್ಧವಾಗಿರಬೇಕಯ್ಯಾ! (ಒ)
-ಳ ಹೊರಗೊಂದಾದರಾನಂದವಯ್ಯಾ!
ನಿತ್ಯ ಕರ್ಮಾನುಷ್ಠಾನ ಸಾಗಲಯ್ಯಾ! (ಭೃ)
-ತ್ಯರ ಭೃತ್ಯ ಭಾವ ಉತ್ತಮವಯ್ಯಾ!
ರಾತ್ಮ ಸ್ಥಿತಿ ಚಿರಸುಖವಯ್ಯಾ! [ಅ]
-ಯ್ಯಾ ನಿರಂಜನಾದಿತ್ಯಾ ಸುಖಿಯಯ್ಯಾ!!!

ಸತ್ತು ಹೋದಂತಿರಬೇಕಯ್ಯಾ! (ಅ)   3(1247)

-ತ್ತು ಪ್ರಯೋಜನವಿಲ್ಲವಯ್ಯಾ!
ಹೋಗುವುದೀ ಶರೀರವಯ್ಯಾ!
ದಂಭ, ದರ್ಪವಿದಕೇಕಯ್ಯಾ?
ತಿಳಿದರಿದ ಸುಖವಯ್ಯಾ! (ಆ)
-ರದಾವ ಹಂಗು ಇದಕಯ್ಯಾ?
ಬೇಕು ಬೇಕೆಂದಾಯ್ತು ದುಃಖವಯ್ಯಾ!
ರ್ಮಾಕರ್ಮವೆಲ್ಲಾ ಸುಳ್ಳಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾತ್ಮಯ್ಯಾ!!!

ಸತ್ತೂ ಆಯ್ತು, ಅತ್ತೂ ಆಯ್ತು! [ಕಿ]   5(3270)

-ತ್ತೂರ್ಚೆನ್ನಮ್ಮನಂತ್ಯವಾಯ್ತು!
ಳಿದ್ದು ಸಾರ್ಥಕವಾಯ್ತು! (ಆ)
-ಯ್ತು ನವೋದಯವೀಗಾಯ್ತು!
ದದ್ಕಾಲಕ್ಕದದಾಯ್ತು! (ಹೊ)
-ತ್ತೂರೂರ್ಮೆರೆಸಿದ್ದೂ ಆಯ್ತು!
ಗೀಗಿನದ್ಬೇರ್ಬೇರಾಯ್ತು! (ಆ)
-ಯ್ತು, ನಿರಂಜನಾದಿತ್ಯಾಯ್ತು!!!

ಸತ್ತೆ, ಸತ್ತಮೇಲೆಲ್ಲಾ ಸತ್ತೆ! (ಮ)   4(1716)

-ತ್ತೆಮತ್ತೆ ಅದೇ ಪ್ರಜಾ ಸತ್ತೆ!
ತ್ಯಾಸತ್ಯಕ್ಕಾಗ್ಯೆಲ್ಲಾ ಸತ್ತೆ! (ಮ)
-ತ್ತದು ಗೊಬ್ಬರಗುಂಡಿ ಸತ್ತೆ!
ಮೇಲು, ಕೀಳೆಂಬಾ ರಾಜ್ಯ ಸತ್ತೆ! (ತ)
-ಲೆ ಕೆಳಗಾಗ್ಯಾಗ್ವುದು ಸತ್ತೆ! (ಚೆ)
-ಲ್ಲಾಟಡಗಿಸಲಾದ ಸತ್ತೆ!
ತ್ವ ಹೀನಾಗಿ ಮತ್ತೆ ಸತ್ತೆ! (ಎ)
-ತ್ತೆ ನಿರಂಜನಾದಿತ್ಯ ಮತ್ತೆ!!!

ಸತ್ಯ ಪ್ರೀತಿ, ನಿತ್ಯ, ಸ್ತುತ್ಯ, ಅಗತ್ಯ!   6(4161)

ತ್ಯಜಿಸಬೇಕಿದಕ್ಕಹಂಕಾರ ಭೃತ್ಯ!
ಪ್ರೀತಿಪಾತ್ರನಾಗುವನಾಗ ಮರ್ತ!
ತಿರುಕನಾದರೂ ಬಹು ಸಾಮರ್ಥ!
ನಿಶಿ ದಿನ ಗೈವ ನಿಸ್ವಾರ್ಥ ಕೃತ್ಯ! (ನೃ)
-ತ್ಯ, ನಾಟಕದಲ್ಲಿ ಕಾಣ ನೌಚಿತ್ಯ! (ಸು)
-ಸ್ತು ಬಾಳಲ್ಲೆಂಬ ಪಾಶ್ಚಿಮಾತ್ಯ ರಿತ್ಯಾ! (ಸ್ತು)
-ತ್ಯ ಆರ್ಯ ಹಿಂದೂ ಧರ್ಮದ ದಾಂಪತ್ಯ!
ನಾಚಾರ ನಾಶವಾಗ್ವುದಗತ್ಯ!
ಗನ ಯಾತ್ರಾ ಸುಖ ಅನಗತ್ಯ! (ನಿ)
-ತ್ಯ ನಿರಂಜನಾದಿತ್ಯಗಿದಗತ್ಯ!!!

ಸತ್ಯಕ್ಕಪಾರ್ಥ ಮಾಳ್ಪರು ಮೂರ್ಖರಯ್ಯಾ! (ಅ)   4(2291)

-ತ್ಯಮೂಲ್ಯ ಭಕ್ತಿ ಅವರಿಗಿಲ್ಲವಯ್ಯಾ! (ಮಿ)
-ಕ್ಕವರ ನಿಂದೆ ಅವರಿಗಿಷ್ಟವಯ್ಯಾ!
ಪಾಪ ಭೀತಿ ಅವರಿಗೇನಿಲ್ಲವಯ್ಯಾ! (ಸ್ವಾ)
-ರ್ಥ ಪಿಶಾಚಿಯಾರಾಧಕರವರಯ್ಯಾ!
ಮಾತನಾಟಕ್ಕವರಾಳಾಗಿಹರಯ್ಯಾ! (ಮಾ)
-ಳ್ಪತ್ಯಾಚಾರನಾಚಾರವಪಾರಯ್ಯಾ! (ಗು)
-ರುವಿಗೇ ತಿರುಮಂತ್ರ ಹೇಳುವರಯ್ಯಾ!
ಮೂರ್ಖರಿವರಿಗೆ ಅಧೋಗತಿಯಯ್ಯಾ! (ಮೂ)
-ರ್ಖ ಸಂಗದಿಂದ ದೂರವಿರಬೇಕಯ್ಯಾ!
ಘುಪತಿಯ ಧ್ಯಾನ ಸದಾ ಮಾಡಯ್ಯಾ! (ಅ)
-ಯ್ಯಾ ನಿರಂಜನಾದಿತ್ಯ ನೀನಾಗಿರಯ್ಯಾ!!!

ಸತ್ಯಕ್ಕೆ ಸಂಕೋಚವೇನಿಲ್ಲ! (ನಿ)   4(2396)

-ತ್ಯಕ್ಕೆಂದಿಗೂ ಮರಣವಿಲ್ಲ! (ಧ)
-ಕ್ಕೆ ಭಕ್ತನಿಗಾಗುವುದಿಲ್ಲ!
ಸಂದೇಹ ಬಿಟ್ಟುಬಿಡಿರೆಲ್ಲ!
ಕೋತಿ ಮನವ ಕಟ್ಟಿರೆಲ್ಲ!
ರಾಚರಾತ್ಮಾರಾಮನೆಲ್ಲ!
ವೇದ, ವೇದಾಂತಾರ್ಥವಿದೆಲ್ಲ!
ನಿತ್ಯಾನುಷ್ಠಾನ ಮಾಡಿರೆಲ್ಲ! (ಬ)
-ಲ್ಲ ನಿರಂಜನಾದಿತ್ಯನೆಲ್ಲ!!!

ಸತ್ಯಕ್ಕೆ ಸಹಾಯ ಸದ್ಗುರು ನಾಥ! (ಅ)   1(399)

-ತ್ಯಧಿಕ ಪುತ್ರವತ್ಸಲನಾ ನಾಥ! (ಅ)
-ಕ್ಕೆಲ್ಲರಿಷ್ಟ ಸಿದ್ಧಿಗಾತನೇ ನಾಥ!
ತತ ಭಜನಾಪ್ರಯನಾ ನಾಥ!
ಹಾತೊರೆವಾತ್ಮರಿಗಾತನೇ ನಾಥ!
ಶವೀಯುವಾತನನಾಥ ನಾಥ!
ಕಲನರಿವಾ ಗುರು ನಾಥ! (ಸ)
-ದ್ಗುರು ದತ್ತಾತ್ರೇಯನಾ ಗುರು ನಾಥ! (ಅ)
-ರುಹಿರ್ಪನವಧೂತ ಗೀತಾ ನಾಥ!
ನಾದಬಿಂದು ಕಲಾತೀತನಾ ನಾಥ! (ಪ)
-ಥ ನಿರಂಜನಾದಿತ್ಯ ರಾಮ ನಾಥ!!!

ಸತ್ಯಕ್ಕೊಲಿವ ದೇವರಿಲ್ಲಯ್ಯಾ! (ನಿ)   4(1751)

-ತ್ಯ, ಸತ್ಯನವನಾಗಿರ್ಪನಯ್ಯಾ! (ತ)
-ಕ್ಕೊಳ್ಳುವೀವಭ್ಯಾಸವಗಿಲ್ಲಯ್ಯಾ! (ಅ)
-ಲಿಪ್ತತೆಯವನ ಸ್ಥಿತಿಯಯ್ಯಾ!
ರ ಗುರುವಿಗೇನು ಬೇಕಯ್ಯಾ? (ಅ)
-ದೇಕಿದೇಕೆನ್ನುವವನಲ್ಲಯ್ಯಾ! (ಭ)
-ವಲೀಲೆಯೊಂದು ವಿಚಿತ್ರವಯ್ಯಾ! (ಆ)
-ರಿದೇಕೆಂದು ಹೇಳಬಲ್ಲರಯ್ಯಾ? (ಎ)
-ಲ್ಲ ವೃತ್ತಿ ರೂಪ ನಾಟಕವಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾ ಸತ್ಯಯ್ಯಾ!!!

ಸತ್ಯದರಿವಿಂದ ಸಂತೋಷ! (ನಿ)   6(4235)

-ತ್ಯ ಧ್ಯಾನದಿಂದರಿವೆ ನಿಜಾಂಶ!
ಮೆ, ಶಮೆಯ ಮಾಡು ಅಭ್ಯಾಸ! (ಅ)
-ರಿಷಡ್ವರ್ಗಕ್ಕಾಗ ಉಪವಾಸ!
ವಿಕಲ್ಪ, ಸಂಕಲ್ಪವಾಗ ನಾಶ!
ನಿಂದಾ ಸ್ತುತಿಗಳ್ತೃಣ ಸದೃಶ!
ತ್ತೋಪದೇಶವಿದು ಆದರ್ಶ!
ಸಂತೋಷಿಯಿದರಿಂದ ದಿನೇಶ!
ತೋರಿಸಿಕೊಳ್ಳದಾನ ಆಯಾಸ! (ದೋ)
-ಷನಾಶ ನಿರಂಜನಾದಿತ್ಯೇಶ!!!

ಸತ್ಯನಾರಾಯಣ ಪೂಜೆ ಸಾಗಲಿ! (ಜಾ)   4(1613)

-ತ್ಯತೀತನವನೆಂಬರಿವಿರಲಿ!
ನಾಮ ಭಜನೆಗೆ ಜಾಗವಿರಲಿ!
ರಾತ್ರಿ, ದಿನವೆಲ್ಲದಾಗುತ್ತಿರಲಿ! (ಕಾ)
-ಯದಭಿಮಾನವಿಲ್ಲದಂತಾಗಲಿ! (ಗ)
-ಣನಾಯಕಗುಚ್ಚಸ್ಥಾನವಿರಲಿ!
ಪೂರ್ಣಾನಂದಾನುಗ್ರಹ ಲಭಿಸಲಿ! (ಪೂ)
-ಜೆ ಬಹು ಭಯ, ಭಕ್ತಿಯಿಂದಾಗಲಿ!
ಸಾಧು, ಸಜ್ಜನರ ಸಂಗವಿರಲಿ!
ದಕಾವೇಶಗಳಿಲ್ಲದಿರಲಿ! (ಒ)
-ಲಿದು ನಿರಂಜನಾದಿತ್ಯನಿರಲಿ!!!

ಸತ್ಯನಾರಾಯಣ ಪ್ರಸಾದವಿಂದಯ್ಯಾ! (ಅ)   2(443)

-ತ್ಯಪಾರ ಪ್ರೇಮಿ ಸತ್ಯನಾರಾಯಣಯ್ಯಾ!
ನಾರದಾದಿಗಳೆಲ್ಲಾ ಪೂಜಿಪರಯ್ಯಾ! (ಆ)
-ರಾಮವಿದೆಲ್ಲರ ದೈವೀ ಸುಖಕಯ್ಯಾ!
ಶವಿದರಿಂದಹುದು ಲೋಕಕಯ್ಯಾ! (ಹ)
-ಣಕಾಗಿದ ಆಚರಿಸಬಾರದಯ್ಯಾ!
ಪ್ರಗತಿ ಪರಮಾರ್ಥಿಗಿದರಿಂದಯ್ಯಾ!
ಸಾಯುಜ್ಯ ಸಿದ್ಧಿಯನವ ನೀವನಯ್ಯಾ! (ಆ)
-ದರಾತಿಥ್ಯವಿವಗತಿ ಪ್ರೀತಿಯಯ್ಯಾ! (ನಾ)
-ವಿಂದಾ ಪ್ರಸಾದದಿಂದ ಪಾವನರಯ್ಯಾ!
ಯಯಿದಾ ದತ್ತಗುರು ಚಿತ್ತವಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನಾರಾಯಣಯ್ಯಾ!!!

ಸತ್ಯಪ್ರೇಮಕ್ಕಪಚಾರವಾಗದಿರ್ಲಿ! (ಭೃ)   4(2422)

-ತ್ಯರಾದವರೆಲ್ಲರಿದ ಗಮನಿಸ್ಲಿ!
ಪ್ರೇತಗಳ್ತಾವಾಗಿ ಕಷ್ಟಪಡದಿರ್ಲಿ!
ದ, ಮತ್ಸರ ಬಿಟ್ಟನ್ಯೋನ್ಯವಾಗಿರ್ಲಿ! (ಬಿ)
-ಕ್ಕಟ್ಟುಗಳನ್ನು ಜಾಣ್ಮೆಯಿಂದ ಬಿಡಿಸ್ಲಿ!
ರಮಾತ್ಮನಲ್ಲಿ ಪೂರ್ಣ ಭಕ್ತಿಯಿರ್ಲಿ! (ಆ)
-ಚಾರ, ವಿಚಾರದಲ್ಲೆಚ್ಚರವಾಗಿರ್ಲಿ!
ಕ್ಷಣೆ ಸದ್ಗುರುವಿನಿಂದಾಗುತ್ತಿರ್ಲಿ!
ವಾಸ ಶ್ರೀಪಾದದಡಿಯಲಾಗುತ್ತಿರ್ಲಿ! (ಸಂ)
-ಗ ದುಷ್ಟ ಜನರದ್ದಾಗದಿರುತ್ತಿರ್ಲಿ!
ದಿವ್ಯನಾಮ ಜಪ ಸತತಾಗುತ್ತಿರ್ಲಿ! (ಇ)
-ರ್ಲಿ ನಿರಂಜನಾದಿತ್ಯಾನಂದದಲ್ಲಿರ್ಲಿ!!!

ಸತ್ಯಭಾಮಾ ಸಮಾನ ಸತಿ (ಇ)   1(188)

-ತ್ಯರ್ಥದಿಂದೆಲ್ಲರಿಗೂ ಪ್ರೀತಿ!
ಭಾಮಾ ಭಕ್ತಿಯಿಂದಿರ್ಪಾ ಸತಿ!
ಮಾನ, ಮರ್ಯಾದೆಯೆಲ್ಲಾ ಪ್ರೀತಿ!
ರಳ ವಿಜಯಶಂಕರ ಸತಿ!
ಮಾತಿಲ್ಲದಿಹ ಕಾರ್ಯ ಪ್ರೀತಿ!
ಯ, ವಿನಯ ಪ್ರಿಯ ಸತಿ!
ರ್ವಾಪ್ತೇಷ್ಟರಿಗೆಲ್ಲಾ ಪ್ರೀತಿ!
ತಿಳಿ, ನೀ, ನಿರಂಜನ ಸತಿ!!!

ಸತ್ಯವನು ಮರೆಸಿಹುದು ಮಿಥ್ಯಾ! (ಕೃ)   5(2859)

-ತ್ಯವಿದಕ್ಕೆ ಅಜ್ಞಾನದ ಸಾರಥ್ಯ!
ಧು, ವರರೊಂದಾದಮೇಲ್ದಾಂಪತ್ಯ!
(ಅ)ನುಮಾನದಿಂದಾಗುವುದು ದುಷ್ಕೃತ್ಯ!
ನಶ್ಯುದ್ಧಿಗಿರಬೇಕು ಸತ್ಕೃತ್ಯ! (ಬೆ)
-ರೆತರೆ ಶಿವನಲ್ಲಿ ಸೌಖ್ಯ ನಿತ್ಯ!
ಸಿದ್ಧಿ, ರಿದ್ಧಿಗಳ ಸುಖ ಅನಿತ್ಯ!
ಹುಟ್ಟು ಸಾವು ಆತ್ಮಾನಂದದಿಂದಂತ್ಯ!
ದುಶ್ಚಟಗಳಿಂದಾಗ್ವುದಾತ್ಮ ಹತ್ಯ!
ಮಿತ, ಹಿತಾಹಾರಾರೋಗ್ಯಕೆ ಪಥ್ಯ! (ಮಿ)
-ಥ್ಯಾ, ನಿರಂಜನಾದಿತ್ಯಗನಗತ್ಯ!!!

ಸತ್ಯವಿದ್ದರೆತ್ತಲೂ ಭಯವಿಲ್ಲ!   4(2250)

ತ್ಯಜಿಸಿದರಾಸೆಲ್ಲಾ ಭಯವಿಲ್ಲ!
ವಿಚಾರಾತ್ಮನದ್ದಾದ್ರೆ ಭಯವಿಲ್ಲ! (ತ)
-ದ್ದರ್ಶನವಾದ್ರೇನೇನೂ ಭಯವಿಲ್ಲ! (ಬೆ)
-ರೆತಾದ ಮೇಲೆಂದೆಂದೂ ಭಯವಿಲ್ಲ! (ಉ)
-ತ್ತಮರ ಸಂಗವಾದ್ರೆ ಭಯವಿಲ್ಲ!
ಲೂಟಿಗಾರರದ್ದಾದ್ರೆ ಸುಖವಿಲ್ಲ!
ಕ್ತಿಯಿಲ್ಲದ ಭಾವ ಸುಖವಿಲ್ಲ! (ಸಂ)
-ಯಮವಿಲ್ಲದಭ್ಯಾಸ ಸುಖವಿಲ್ಲ! (ಸಂ)
-ವಿಧಾನ ಕೊಳೆಯಾದ್ರೆ ಸುಖವಿಲ್ಲ! (ಪು)
-ಲ್ಲ ನಿರಂಜನಾದಿತ್ಯಗೆಣೆಯಿಲ್ಲ!!!

ಸತ್ಯಸಂದನಾಗಿರುವೆ ನೀನಪ್ಪಾ!   5(2684)

ತ್ಯಜಿಸಿರುವೆ ವ್ಯಾಮೋಹವನ್ನಪ್ಪಾ!
ಸಂತೋಷಿಯಾಗಿರುವೆ ಸತತಪ್ಪಾ!
ರ್ಮ, ಕರ್ಮ ನಿನ್ನದಾಗಿಹುದಪ್ಪಾ!
ನಾಮಜಪ ಸದಾ ಸಾಗಿರ್ಪುದಪ್ಪಾ!
ಗಿಡ, ಬಳ್ಳಿಗೂ ನಿನ್ನ ಸೇವೆಯಪ್ಪಾ!
ರುಕ್ಮಿಣೀಶನೇ ನೀನಾಗಿಹೆಯಪ್ಪಾ!
ವೆಗ್ಗಳರ್ಗೆಲ್ಲಾ ಅಗ್ಗಳ ನೀನಪ್ಪಾ!
ನೀನಾಡುವಾಟ ನಿನಗೇ ಗೊತ್ತಪ್ಪಾ!
ಗುಮೊಗದರಸ ಲೋಕಕ್ಕಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯನೇ ನೀನಪ್ಪಾ!!!

ಸತ್ಯಸಂಧ ಗೆದ್ದ, ಜರಾಸಂಧ ಬಿದ್ದ! (ನಿ)   6(4069)

-ತ್ಯ, ನಿರಂಜನನ ಮೇಲಾಗದು ಯುದ್ಧ!
ಸಂಪೂರ್ಣ ವಿಜಯಕ್ಕವನೊಬ್ಬ ಬದ್ಧ!
ರ್ಮ ಬಾಹಿರನ ಮೇಲೆ ಅವ ಕು

ದ್ಧ!
ಗೆಳೆಯನಾಗ್ಯೆಲ್ಲರ ಸೇವೆಗೂ ಸಿದ್ಧ! (ಬಿ)
-ದ್ದ, ಎದ್ದ, ಬಿದ್ದ, ಜರಾಸಂಧ ಅಶುದ್ಧ!
ನ್ಮವಿತ್ತವನ ಮೇಲೇಕವನೆದ್ದ?
ರಾಗ ದ್ವೇಷಿಗೆ ಕೇಡು ಸತತ ಸಿದ್ಧ!
ಸಂಗಡಿಗರಿವನವರಪ್ರಬುದ್ಧ!
ರೆಯನುದ್ಧರಿಪವ ಯೋಗ ಸಿದ್ಧ!
ಬಿದಿ, ಹರಿ, ಹರರಿಂದ್ಲೂ ಈತ ಉದ್ದ! (ಒ)
-ದ್ದಸತ್ಯ ನಿರಂಜನಾದಿತ್ಯ ಕೃಷ್ಣೆದ್ದ!!!

ಸತ್ರ ಮಹಾಯಾಗ ಮಾಡಿದ್ರು! (ಹ)   4(2006)

-ತ್ರ, ದೂರದಿಂದೆಲ್ಲಾ ಬಂದಿದ್ರು!
ಠಾಧಿಪತಿಗಳೂ ಇದ್ರು!
ಹಾರುವರಿಗನ್ನ ಹಾಕಿದ್ರು!
ಯಾಗದುದ್ದೇಶ ತಿಳಿಸಿದ್ರು! (ರಾ)
-ಗ, ದ್ವೇಷಗಳೊಗಿರ್ಸಿದ್ರು!
ಮಾತಿನಲ್ಲೆಲ್ಲಾ ಮುಗಿಸಿದ್ರು! (ಮಾ)
-ಡಿಸಿದವನ ದೂರಿರ್ಸಿದ್ರು! (ತಿಂ)
-ದ್ರು, ನಿರಂಜನಾದಿತ್ಯನೆದ್ರು!!!

ಸತ್ಸಂಗ ಲಾಭ ಪರಮ ಭಾಗ್ಯ! [ತ]   4(2460)

-ತ್ಸಂಬಂಧಕ್ಕಿರಬೇಕು ವೈರಾಗ್ಯ! (ಭಾ)
-ಗವತನಾಗ್ವುದು ದೊಡ್ಡ ಭಾಗ್ಯ! (ಮಾ)
-ಲಾಧರನದ್ದಾದರ್ಶ ವೈರಾಗ್ಯ!
ಕ್ತವತ್ಸಲಾತ್ಮನಿಗಾ ಭಾಗ್ಯ!
ರಶಿವಗಾನಂದ ವೈರಾಗ್ಯ! (ಪ)
-ರಮೇಶ್ವರಗೀ ಸತ್ಸಂಗ ಭಾಗ್ಯ! (ಕಾ)
-ಮನಸುವ ಹೀರಿತಾ ವೈರಾಗ್ಯ! (ಸ)
-ಭಾಪತಿ ಹುಟ್ಟಿದ್ದೆಲ್ಲರ ಭಾಗ್ಯ! (ಭಾ)
-ಗ್ಯ, ನಿರಂಜನಾದಿತ್ಯಗ್ವೈರಾಗ್ಯ!!!

ಸತ್ಸಂಗ, ನಿಸ್ಸಂಗ, ನಿನ್ನೊಳಗೆ! (ತ)   5(3156)

-ತ್ಸಂಗೈಕ್ಯ ಅಂತರಂಗದೊಳಗೆ!
ತಿ, ಸ್ಥಿತಿ, ಲಯವೆಲ್ಲೊಳಗೆ!
-ನಿಧಿಧ್ಯಾಸಾಗ್ಬೇಕ್ಪ್ರತಿ ಘಳಿಗೆ! (ದು)
-ಸ್ಸಂಗ ದೂರಕ್ಕಿದೇ ಸುಘಳಿಗೆ! (ಗ)
-ಗನ ಸದೃಶನಾದಾಗೇಳಿಗೆ!
ನಿಶ್ಚಲ ತತ್ವಾಧಾರ ಧರೆಗೆ! (ನಿ)
-ನ್ನೊಡೆಯ ಹೊರಗಿಲ್ಲೆನ್ನಿಳೆಗೆ! (ಒ)
-ಳ, ಹೊರಗಿದ್ದೂ ಅವನೊಳಗೆ! (ಹೀ)
-ಗೆ ನಿರಂಜನಾದಿತ್ಯ ನೀನಾಗೆ!!!

ಸತ್ಸಂಗಿ ನಿರಹಂಕಾರಿ! (ಸ)   2(974)

-ತಂಪ್ರದಾಯ ಸದಾಚಾರಿ! (ಭ)
-ಗಿನೀ ಪ್ರೇಮಿ, ಭಾವಜಾರಿ!
ನಿಶ್ಚಲ ತತ್ವ ವಿಹಾರಿ!
ತ್ನ ಸಮಾನ ಕುಮಾರಿ!
‘ಹಂಸಸ್ಸೋಹಂ’ ಮಂತ್ರಾಕಾರಿ!
ಕಾಲ, ಕರ್ಮ ಧರ್ಮಾಧಾರಿ! (ಹ)
-ರಿ, ಶ್ರೀ ನಿರಂಜನೋದ್ಧಾರಿ!!!

ಸತ್ಸಂಗಿಯಾಗಿ ಸ್ವಾಮಿ! [ಸ]   3(1057)

-ತ್ಸಂಪ್ರಜ್ಞಾನಂದ ಸ್ವಾಮಿ!
ಗಿಡ, ಬಳ್ಳಿಯೂ ಸ್ವಾಮಿ!
ಯಾಕೆ ಸಂದೇಹ ಸ್ವಾಮಿ?
ಗಿರಿ, ನದಿಯೂ ಸ್ವಾಮಿ!
ಸ್ವಾರಸ್ಯವಿದೇ ಸ್ವಾಮಿ! (ಸ್ವಾ)
-ಮಿ, ನಿರಂಜನ ಸ್ವಾಮಿ!!!

ಸತ್ಸಂಘ ಸಾರಂಗ! (ತ)   2(713)

-ತ್ಸಂಘ ನಿರ್ಮಲಾಂಗ! [ಅ]
-ಘಹರ ದಿವ್ಯಾಂಗ!
ಸಾಯುಜ್ಯ ಪ್ರದಾಂಗ!
ರಂಗ ಅಂತರಂಗ! [ಜ]
-ಗ ನಿರಂಜನಾಂಗ!!!

ಸತ್ಸಂಘಾತ್ಮ ನಂಜುಂಡಸ್ವಾಮಿ! (ತ)   2(626)

-ತ್ಸಂಬಂಧದಿಂದಾನಂದ ಸ್ವಾಮಿ!
ಘಾತುಕ ವಿಷನಾಶಾ ಸ್ವಾಮಿ! (ಆ)
-ತ್ಮ ರೂಪಾ ನಿರಂಜನ ಸ್ವಾಮಿ! (ಅ)
-ನಂಗ ಭಂಗ ಸತ್ಸಂಘ ಸ್ವಾಮಿ! (ನಂ)
-ಜುಂಡಾದ ಲೋಕೋದ್ಧಾರ ಸ್ವಾಮಿ!
ಮರುಧುರ ಗುರು ಸ್ವಾಮಿ!
ಸ್ವಾರ್ಥಿ ಇವನೇನಲ್ಲ ಸ್ವಾಮಿ! (ಸ್ವಾ)
-ಮಿ ನಿರಂಜನಾದಿತ್ಯಾ ಸ್ವಾಮಿ!!!

ಸತ್ಸಂಘಾಸೆಯಲಂತ್ಯವಾದಾ ಬೆಕ್ಕು! (ಸ)   2(542)

ತ್ಸಂಘ ಹಿಂದಿನ ರಾತ್ರಿ ಗೈದಾ ಬೆಕ್ಕು!
ಘಾಸಿಯಾಗಿ ಕಾಯವಳಿದಾ ಬೆಕ್ಕು!
ಸೆರೆಯಿಂದ ಪಾರಾಯಿತಿಂದಾ ಬೆಕ್ಕು!
ತೀಶನನುಗ್ರಹವಾದಾ ಬೆಕ್ಕು!
ಲಂಕೇಶಾಂತಕನಾಪ್ತವಾದಾ ಬೆಕ್ಕು! (ಅ)
-ತ್ಯಧಿಕ ಸಂಸ್ಕಾರ ಬಲದಾ ಬೆಕ್ಕು!
ವಾಸುದೇವನಲೈಕ್ಯವಾದಾ ಬೆಕ್ಕು!
ದಾರಿ ತೋರಿಂದಂತಿರುವುದಾ ಬೆಕ್ಕು!
ಬೆರೆಯಬೇಕು ಹೀಗೆಂಬುದಾ ಬೆಕ್ಕು! (ಬೆ)
-ಕ್ಕು ನಿರಂಜನಾದಿತ್ಯಾನಂದಾ ಬೆಕ್ಕು!!!

ಸದವಕಾಶ ದುರುಪಯೋಗವಾಗುವುದೇ ಹೆಚ್ಚು!   6(4278)

ರೋಡೆ, ಕೊಲೆ, ಸುಲಿಗೆಗಳು ಹಗಲಲ್ಲೇ ಹೆಚ್ಚು!
ರ ಗುರುವಿನಲ್ಲಾರೋಪ ಮಾಡುವವರೇ ಹೆಚ್ಚು!
ಕಾಲು ಕೆದಕಿ ಹಗರಣ ಹೂಡುವವವರೇ ಹೆಚ್ಚು!
ಶಿವರನೆಯಲ್ಲಿ ಭೋಗೇಚ್ಛೆಯುಳ್ಳವರೇ ಹೆಚ್ಚು!
ದುಡಿಮೆ ಸ್ವಾರ್ಥ ಬುದ್ಧಿಯಿಂದ ಮಾಡುವವರೇ ಹೆಚ್ಚು! (ಮ)
-ರುವ ಪರರಿಗಾಗಿ ಪಡದಿರುವವರೇ ಹೆಚ್ಚು!
ರಮಾರ್ಥವ ಅರಿವಿರದಿರುವವರೇ ಹೆಚ್ಚು!
ಯೋಗದ ನಿಜವಾದರ್ಥವರಿಯದವರೇ ಹೆಚ್ಚು! (ರೋ)
-ಗ ಪೀಡೆಯಿಂದ ಸದಾ ದುಃಖ ಪಡುವವರೇ ಹೆಚ್ಚು!
ವಾದ, ಭೇದ, ಕ್ರೋಧಬುದ್ಧಿಯುಳ್ಳ ಮಾನವರೇ ಹೆಚ್ಚು! (ತಾ)
-ವು, ತಮ್ಮವರೆಂಬ ವ್ಯಾಮೋಹವುಳ್ಳ ಜೀವರೇ ಹೆಚ್ಚು!
ದೇಹಾಭಿಮಾನದಿಂದ ಜನ್ಮವೆತ್ತುವವರೇ ಹೆಚ್ಚು! (ಊ)
-ಹೆಯಿಂದ ಬುದ್ಧಿ ಕೆಡೆಸಿಕೊಳ್ಳತ್ತಿರ್ಪವರೇ ಹೆಚ್ಚು! (ಮೆ)
-ಚ್ಚು, ನಿರಂಜನಾದಿತ್ಯ ನೀನಾಗಿ ನಿನ್ನ ನೀನು ಮೆಚ್ಚು!!!

ಸದಾ ಇರಲಿ ಶಂಕರ ಕೃಪಾ!   5(2794)

ದಾರಿದೀಪವಾಗಿರಲೀ ಕೃಪಾ!
ಹ ಪರ ಸುಖಾಕಾರೀ ಕೃಪಾ!
ಜ್ಜು, ಸರ್ಪ ಭ್ರಾಂತಿಹರಾ ಕೃಪಾ!
ಲಿಪ್ತನಲಿಪ್ತ ಗೈವುದೀ ಕೃಪಾ!
ಶಂಕೆಗಂಕುಶಾ ಶಂಕರ ಕೃಪಾ!
ರಿವದನನುತ್ಪತ್ತೀ ಕೃಪಾ! (ವ)
-ರರ್ಧನಾರೀಶ್ವರವಾಯ್ತಾ ಕೃಪಾ!
ಕೃಪಾತ್ಮಕೃಪಾ ಶಂಕರ ಕೃಪಾ! (ಅ)
-ಪಾರಾ, ನಿರಂಜನಾದಿತ್ಯಕೃಪಾ!!!

ಸದಾ ನಿಂತಿರುತ್ತಾನೇಕೆ ತಿಮ್ಮಪ್ಪ?   2(926)

ದಾಸರ ಸ್ವಾಗತಕ್ಕೆಂದರಿಯಪ್ಪ!
ನಿಂತೇ ಕಾಣಿಕೆ ಸ್ವೀಕರಿಸ್ತಾನಪ್ಪ!
ತಿರುಪತಿ ಮಹಿಮೆ ಬಹಳಪ್ಪ! (ಗ)
-ರುಡನ ಕಾವಲಹರ್ನಿಶಿಯಪ್ಪ! (ವಿ)
-ತ್ತಾಪಹಾರಾರಿಗೂ ಸಾಧ್ಯವಿಲ್ಲಪ್ಪ!
ನೇಮದಿಂದೆಲ್ಲರಿಗೂ ದರ್ಶನಪ್ಪ!
ಕೆರೆಯ ನೀರು ಪವಿತ್ರ ತೀರ್ಥಪ್ಪ! (ಜಾ)
-ತಿ ಭೇದವಲ್ಲಿ ಮಾಡುವುದಿಲ್ಲಪ್ಪ! [ತಿ]
-ಮ್ಮಪ್ಪನಿಷ್ಟಾರ್ಥ ಸಿದ್ಧಿಪ್ರದನಪ್ಪ! (ಅ)
-ಪ್ಪ, ಶ್ರೀ ನಿರಂಜನಾದಿತ್ಯಾ ತಿಮ್ಮಪ್ಪ!!!

ಸದಾ ನಿನ್ನ ಧ್ಯಾನವೆನ್ನ ಭಾಗ್ಯ! (ಅ)   4(2320)

-ದಾರಿಗೂ ಸಿಗದ ಮಹಾಭಾಗ್ಯ!
ನಿನ್ನಂತಾಗದಿದ್ದರೇಕಾ ಭಾಗ್ಯ? (ನಿ)
-ನ್ನ ದರ್ಶನದಿಂದಾರೋಗ್ಯ ಭಾಗ್ಯ!
ಧ್ಯಾನ ಸಿದ್ಧಿಗೆ ವೈರಾಗ್ಯ ಭಾಗ್ಯ! (ಧ)
-ನ, ಕನಕಾದಿಗಳಲ್ಲಾ ಭಾಗ್ಯ! (ಠಾ)
-ವೆನಗೆ ಶ್ರೀಪಾದಾದುದು ಭಾಗ್ಯ! (ಉ)
-ನ್ನತದ ಸಾಯುಜ್ಯಲಾಭ ಭಾಗ್ಯ!
ಭಾಗವತ ಸಂಗವೆನ್ನ ಭಾಗ್ಯ! (ಭಾ)
-ಗ್ಯ ನಿರಂಜನಾದಿತ್ಯಾತ್ಮ ಯೋಗ್ಯ!!!

ಸದಾ ನಿನ್ನ ಸೇವೆಗವಕಾಶವಿರ್ಲಿ!   6(3497)

ದಾರಿ ನಿನ್ನಿಂದಲೇ ಕಲ್ಪಿಸಲ್ಪಡಲಿ!
ನಿನಗಹಿತವಾದದ್ದು ಆಗದಿರ್ಲಿ! (ನ)
-ನ್ನ, ನಿನ್ಲಲ್ಲಿ ಭಿನ್ನಭಾವವಿಲ್ಲದಿರ್ಲಿ!
ಸೇವಿಸುವಾಹಾರವೂ ಒಂದೇ ಆಗಿರ್ಲಿ!
ವೆಚ್ಚವೆಲ್ಲಾ ನಿನ್ನಿಚ್ಛೆಯಂತೆಯೇ ಆಗ್ಲಿ!
ಡ್ಬಿಡಿ ಎಳ್ಳಷ್ಟೂ ನನ್ನಲಿಲ್ಲದಿರ್ಲಿ!
ರಗುರು ನೀನೆಂಬ ನಂಬಿಗೆ ಇರ್ಲಿ!
ಕಾರ್ಯ ಕೈಗೂಡಿಪ ಭಾರ ನಿನಗಿರ್ಲಿ!
ಕ್ತಿ ಮೀರಿ ದುಡಿವ ಶಕ್ತಿ ನನ್ಗಿರ್ಲಿ!
ವಿಕಲ್ಪಕ್ಕೆಡೆ ನಿನ್ನಿಂದ ಆಗದಿರ್ಲಿ! (ಇ)
-ರ್ಲಿ, ನಿರಂಜನಾದಿತ್ಯಾನಂದದಿಂದಿರ್ಲಿ!!!

ಸದಾ ನಿನ್ನ ಸೇವೆಗೆ ಸಿದ್ಧ!    3(1205)

ದಾರಿ ತೋರಿತಾತ್ಮ ಸಂಬಂಧ!
ನಿನ್ನಾಚ್ಞೆಯಂತಿರಲೂ ಸಿದ್ಧ! (ಉ)
-ನ್ನತಿಯ ಸಾಧಿಸಲೀ ಬಂಧ!
ಸೇರಿಯೊಂದಾಗಿರಲೂ ಸಿದ್ಧ!
ವೆಸನ ಕಳೆಯಲೀ ಬಂಧ!
ಗೆಳೆಯನಾಗಿರಲೂ ಸಿದ್ಧ!
ಸಿಟ್ಟು ಸುಟ್ಟುಹಾಕಲೀ ಬಂಧ! (ಶು)
-ದ್ಧ ನಿರಂಜನಾದಿತ್ಯ ಸಿದ್ಧ!!!

ಸದಾ ಮಾರ್ಗದರ್ಶನದಾಸೆ!   4(2369)

ದಾರಿಗಗಿರಬೇಕಾದಾಸೆ!
ಮಾರಹರನ ದರ್ಶನಾಸೆ! (ಸ್ವ)
-ರ್ಗಸುಖಕ್ಕಿಂತುತ್ತಮದಾಸೆ! (ಪಾ)
-ದಸೇವೆಯನುದಿನದಾಸೆ! (ಸ್ಪ)
-ರ್ಶದಿಂದ ಪಾವನಾಗುವಾಸೆ!
ರ ಜನ್ಮದ ಕೊನೆಯಾಸೆ! (ಸ)
-ದಾ ಸಚ್ಚಿದಾನಂದಾಗಿರ್ಪಾಸೆ! (ಆ)
-ಸೆ ನಿರಂಜನಾದಿತ್ಯಪ್ಪಾಸೆ!!!

ಸದಾ ಮುತ್ತೈದೆ ನೀನು ಗಂಗಮ್ಮಾ!   4(1820)

ದಾಸಿ ನೀನು ದಾಮೋದರಗಮ್ಮಾ!
ಮುಕ್ಕೋಟಿ ದೇವರ್ಕಳಿಗಮ್ಮಾ! (ಇ)
-ತ್ತೈ ಭಗೀರಥನಭೀಷ್ಟವಮ್ಮಾ! (ಐ)
-ದೆ ನಿನ್ನರಸ ಮಹೇಶ್ವರಮ್ಮಾ!
ನೀಚೋಚ್ಟ ಭೇದ ನಿನಗಿಲ್ಲಮ್ಮಾ! (ಅ)
-ನುದಿನದ ಸೇವೆ ಸ್ತುತ್ಯವಮ್ಮಾ!
ಗಂಗಾಧರ ನಾಮ ನಿನ್ನಿಂದಮ್ಮಾ! (ಭ)
-ಗನಡಿಯಲ್ಲಿ ನಿನ್ನ ಊರಮ್ಮಾ! (ಅ)
-ಮ್ಮಾ ನಿರಂಜನಾದಿತ್ಯ ಗಂಗಮ್ಮಾ!!!

ಸದಾ ವಿಷಯಿ ಬೀದಿ ನಾಯಿ!   3(1212)

ದಾರಿ ಬದಲಾಯಿಸದಾ ನಾಯಿ!
ವಿಷಾನ್ನದಿಂದ ಸಾಯ್ವುದಾ ನಾಯಿ! (ರೋ)
-ಷ ಮಾತ್ರ ಬಿಡದಿಹುದಾ ನಾಯಿ! (ಬಾ)
-ಯಿ ಹಾಕುವುದಮೇಧ್ಯಕ್ಕಾ ನಾಯಿ!
ಬೀದಿ ಬೀದಲ್ಯೆಯುವುದಾ ನಾಯಿ! (ಕ)
-ದಿಯುವಭ್ಯಾಸ ಬಿಡದಾ ನಾಯಿ!
ಜಮಾನನಾ ಶ್ರೀರಂಗ ಶಾಯಿ!
ನಾಯಿಯಲ್ಲೂ ವಾಸಾ ಶೇಷಶಾಯಿ! (ನಾ)
-ಯಿಗಾ ನಿರಂಜನಾದಿತ್ಯ ತಾಯಿ!!!

ಸದಾ ಶಿವ ಜಪ ಮಾಡಪ್ಪಾ    3(1076)

ದಾಯವಾದಿಯಿದಕಿಲ್ಲಪ್ಪಾ!
ಶಿಶು ಗಣೇಶನಂತಿರಪ್ಪಾ!
ಸ್ತ್ರ ಭೂಷಣಾಗ ಬೇಡಪ್ಪಾ!
ನ ಸಂಘ ನಿನಗೇಕಪ್ಪಾ?
ಡಿಯಳೆಯುವ ಶಿವಪ್ಪಾ!
ಮಾತಾಡದೆ ತೆಪ್ಪಗಿರಪ್ಪಾ!
ಮರುಧರ ಕಾಯ್ವನಪ್ಪಾ! [ಅ]
-ಪ್ಪಾ! ಶ್ರೀ ನಿರಂಜನಾದಿತ್ಯಪ್ಪಾ!!!

ಸದಾ ಸುಖ ಇದರಲಿದೆ!   1(35)

ದಾರಿಯಿದು ಸರಾಗಾಗಿದೆ!
ಸುಖ, ದುಃಕಾಸೆಯಿಂದಾಗಿದೆ!
ಂಡಿತ ಬಿಡಬೇಕಾಗಿದೆ!
ಷ್ಟಾನಿಷ್ಟ ಪ್ರಸಾದಾಗಿದೆ!
ತ್ತನಾಮವೆನಗಾಗಿದೆ!
ಕ್ಷಣೆ ಅವನದಾಗಿದೆ!
ಲಿಪಿಗದು ನಿಲುಕದಿದೆ!
ದೆ

ವಗಿದು ತಿಳಿದೇ ಇದೆ!!! ೩೫

ಸದಾ ಹಲಗೆ ಬಳಪ ಹಿಡಿದ್ರೇನು ಗತಿ?   5(2557)

ದಾರಿಯಿದರಿಂದೆಲ್ಲರಿಗಾಗ್ವುದು ಸನ್ಮತಿ!
ರ್ಷವಾಗಿರು! ಇದೆ ನಿನಗನ್ನವಸತಿ!
ಕ್ಷ್ಯ ನನ್ನಲ್ಲಿದ್ದರೆ ನೀನೇ ಆಧರ್ಶ ಸತಿ! (ಬ)
-ಗೆಬಗೆಯಾಸೆಗಳಿಂದಾಗುವುದಧೋಗತಿ!
ರೆಸುತಿಹನೆನ್ನಿಂದಾರ್ಯನುತ್ತಮ ಕೃತಿ! (ಒ)
-ಳಗೊಳಗೇ ಆನಂದಿಸುತ್ತಿಹನುಮಾಪತಿ!
ತಿತಪಾವನನೊಲ್ಮೆಗಾಗಿರ್ಬೇಕೀ ರೀತಿ!
ಹಿತವಾಗಿರುವುದೀ ಅಭ್ಯಾಸ ದಿನಂಪತ್ರಿ! (ಹಿ)
-ಡಿದರತ್ರಿ ಸತಿಯ ದಾರಿ ಪುತ್ರ ತ್ರಿಮೂರ್ತಿ!
(ಉ)ದ್ರೇಕೋದ್ವೇಗಗಳಿಂದುಂಟಾಗುವುದಪಖ್ಯಾತಿ! (ಅ)
-ನುಮಾನದಿಂದೆನ್ನ ಬಿಟ್ಟರೆ ನಿನಗೆ ಚ್ಯುತಿ! (ಭೋ)
-ಗ ಜೀವನದಿಂದಾಗುವುದು ಅತ್ಯಲ್ಪ ತೃಪ್ತಿ!
ತಿರುಪತಿ ನಿರಂಜನಾದಿತ್ಯಾತ್ಮ ಸಂತೃಪ್ತಿ!!!

ಸದಾಚಾರ ಸಂಪನ್ನೆ ನೀನಾಗಮ್ಮಾ!   4(1437)

ದಾರಿದ್ರ್ಯಾತ್ಮರಿಗಮ್ಮ ನೀನಾಗಮ್ಮಾ!
ಚಾತುರ್ವರ್ಣೀಯರಮ್ಮ ನೀನಾಗಮ್ಮಾ! (ವ)
-ರ ಗುರುಪಾದ ದಾಸಿ ನೀನಾಗಮ್ಮಾ!
ಸಂತಾಂತರಂಗ ವಾಣಿ ನೀನಾಗಮ್ಮಾ!
ರಮಾನಂದ ಯೋಗಿ ನೀನಾಗಮ್ಮಾ! (ಚೆ)
-ನ್ನೆ ಪರಮೇಶ್ವರಿಯೇ ನೀನಾಗಮ್ಮಾ!
ನೀತಿ, ನಿಯಮವಂತೆ ನೀನಾಗಮ್ಮ!
ನಾಮ ಭಜನಾ ಪ್ರೇಮಿ ನೀನಾಗಮ್ಮಾ!
ಗನ ಸದೃಶಾತ್ಮ ನೀನಾಗಮ್ಮಾ! (ಅ)
-ಮ್ಮಾ ನಿರಂಜನಾದಿತ್ಯ ನೀನಾಗಮ್ಮಾ!!!

ಸದಾನಂದದನ ನಿತ್ಯ ಜೀವನ!   1(252)

ದಾರಿತೋರಿತು ಗುರು ಕರುಣ!
ನಂಬಬೇಕವನ ಸದ್ವಚನ!
ರ್ಶನಕೆ ಕಾಯಬೇಕವನ!
ಯೆಯಿಂದ ಜನುಮ ಪಾವನ!
ನಿರ್ಮಲವಾಗಿರೆಲೆಲ್ಲ ಮನ!
ತ್ಯಜಿಸಿರಿ ಕುಹಕ ಭಾವನ!
ಜೀವಿಸಿರಿ ಭಜಿಸುತವನ!
ರವೀವ ಗುರು ನಿರಂಜನ!
ಮಿಸುತಿರಿ ಪಾದಕವನ!!!

ಸದಾನಂದಾ ರಾಮರಸ! (ಅ)   2(903)

-ದಾತ್ಮಾನಂದ ಸೋಮರಸ!
ನಂದಕಂದಾನಂದ ರಸ!
ದಾತ ದತ್ತನಾಪ್ತರಸ!
ರಾಧಾ ಪ್ರೇಮ ಶ್ಯಾಮ ರಸ!
ಹಾದೇವನಿಷ್ಟ ರಸ! [ಮಾ]
-ರಹರ ಕುಮಾರ ರಸ! (ರ)
-ಸ, ನಿರಂಜನಾರ್ಕರಸ!!!

ಸದಾರಾಮಾ ಶ್ರೀ ಮನೋರಮಾ!   5(2583)

ದಾಸಿ ಮೀರಾ ಸ್ವರೂಪಾರಾಮಾ!
ರಾಗರಸ ಭಜನಾರಾಮಾ!
ಮಾಲಾಧರನ ಸಂಗಾರಾಮಾ!
ಶ್ರೀಕರ ಶುಭಕರಾರಾಮಾ!
ನಮಂದಿರ ರಾಜಾರಾಮಾ!
ನೋವು, ಸಾವೇನಿಲ್ಲದಾರಾಮಾ!
ತಿಪತಿಯಳಿದಾರಾಮಾ! (ರ)
-ಮಾ, ನಿರಂಜನಾದಿತ್ಯಾರಾಮಾ!!!

ಸದಾರೋಗ್ಯ ಭಾಗ್ಯವಂತರಾಗಿ ಇರಿ!   6(3477)

ದಾಸರ-ದಾಸರಾಗಿ ಧನ್ಯರಾಗಿರಿ!
ರೋಗಕಾರಕಾಹಾರ ಸೇವಿಸದಿರಿ!
(ಯೋ)-ಗ್ಯತಾನುಸಾರ ಸಂಸಾರ ಸಾಗಿಸಿರಿ!
ಭಾರ್ಯಾ, ಭರ್ತರನ್ಯೋನ್ಯವಾಗಿರುತ್ತಿರಿ!
(ವ್ಯಂ)-ಗ್ಯವಾಗಿಯೂ ಯಾರನ್ನೂ ನೋಯಿಸದಿರಿ!
ವಂಶಗೌರವವನ್ನುಳಿಸಿಕೊಂಡಿರಿ!
ತ್ವ ಚಿಂತನೆ ಸದಾ ಮಾಡುತ್ತಲಿರಿ!
ರಾಗ, ದ್ವೇಶಗಳಿಂದ ದೂರವಾಗಿರಿ!
ಗಿರಿಜಾಧವನ ಧ್ಯಾನಮಾಡುತ್ತಿರಿ!
ದು ಮುಕ್ತಿಗೆ ದಾರಿಯೆಂದರಿತಿರಿ!
(ಹ)-ರಿ ನಿರಂಜನಾದಿತ್ಯನೆಂದರಿಯಿರಿ!!!

ಸದಾಶಿವಾನಂದ ಸುಂದರಮ್ಮಾ!   2(658)

ದಾಸಿ ಇವನಿಗೆ ಸುಂದರಮ್ಮಾ!
ಶಿವ, ನಿತ್ಯ, ಸತ್ಯ ಸುಂದರಮ್ಮಾ!
ವಾರಿಜಮಿತ್ರಾತ್ಯ ಸುಂದರಮ್ಮಾ!
ನಂದೀಶ್ವರಾನಂದ ಸುಂದರಮ್ಮಾ!
ಯಾಮಯೇಶ್ವರ ಸುಂದರಮ್ಮಾ!
ಸುಂದರಾತ್ಮಾನಂದ ಸುಂದರಮ್ಮಾ!
ತ್ತ ತಾ ಸರ್ವಾತ್ಮ ಸುಂದರಮ್ಮಾ!
ಘುರಾಮಾನಂದ ಸುಂದರಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯಾನಂದಮ್ಮಾ!!!

ಸದ್ಗತಿ ಪ್ರಧಾನ ದೀಪಾವಳಿ! (ಉ)   2(721)

-ದ್ಗಮನ ದರ್ಶಕ ದೀಪಾವಳಿ! (ಪ)
-ತಿ ಹಿತ ಸತಿಯ ದೀಪಾವಳಿ!
ಪ್ರಶಾಂತಿ ಮನಕೆ ದೀಪಾವಳಿ!
ಧಾಸ್ಯ ಭಾವಭಕ್ತಿ ದೀಪಾವಳಿ!
‘ನ ಗುರೋರಧಿಕಂ’ ದೀಪಾವಳಿ!
ದೀಪ, ಧೂಪಸೇವಾ ದೀಪಾವಳಿ!
ಪಾದ ಪೂಜಾನಂದ ದೀಪಾವಳಿ!
ರ್ತಮಾನಕಿದೇ ದೀಪಾವಳಿ! (ತಿ)
-ಳಿ, ನಿರಂಜನನೇ ದೀಪಾವಳಿ!!!

ಸದ್ಗುಣಿಯಾಗಿ ಸದ್ಗುರುವ ಸೇರು! (ಮ)   5(2559)

-ದ್ಗುರು ಜಗದ್ಗುರುವೆಂದವ್ನ ಸೇರು! (ಅ)
-ಣಿಮಾದಿಸಿದ್ಧಿಗಳ್ಬಯಸ್ದೇ ಸೇರು!
ಯಾಗ, ಯಜ್ಞವ್ನ ಸೇವೆಯೆಂದು ಸೇರು! (ಬಾ)
-ಗಿ ವಿನಯದಿಂದ ಶ್ರೀಪಾದ ಸೇರು!
ದಾ ಧ್ಯಾನಿಸುತ್ತವನನ್ನು ಸೇರು! (ಅ)
-ದ್ಗುರಿಯೆಂದರಿತವನನ್ನು ಸೇರು! (ಗು)
-ರುವಿಗೆ ಗುಲಾಮನಾಗೀಗ್ಲೇ ಸೇರು! (ಅ)
-ವನಾಜ್ಞಾಧಾರಕ ನಾನೆಂದು ಸೇರು!
ಸೇವೆಗಾಗಿ ತ್ಯಾಗಿಯಾಗೀಗ ಸೇರು! (ಸೇ)
-ರು ನಿರಂಜನಾದಿತ್ಯಾತನೆಂದ್ಸೇರು!!!

ಸದ್ಗುರು ಕೃಪಾ ಪಾತ್ರಾ ಚಿತ್ರ! (ಮ)   4(2119)

-ದ್ಗುರು ಶಿವ ಪ್ರಸಾದಾ ಚಿತ್ರ! (ಗು)
-ರಚರಣಕ್ಕರ್ಪಣಾ ಚಿತ್ರ! (ಸು)
-ಕೃತಶಾಲೀ ಸುಂದರ ಚಿತ್ರ!
ಪಾದದಡಿ ಶಯನಾ ಚಿತ್ರ!
ಪಾಪದೂರಾತ್ಮಾನಂದಾ ಚಿತ್ರ! (ನೇ)
-ತ್ರಾನಂದದಾಯಕವಾ ಚಿತ್ರ!
ಚಿರಕಾಲವಿರ್ಪುದಾ ಚಿತ್ರ! (ಮಿ)
-ತ್ರ, ನಿರಂಜನಾದಿತ್ಯಾ ಚಿತ್ರ!!!

ಸದ್ಗುರು ಗಣಾಧಿಪನಾಗಯ್ಯಾ! [ಸ]   3(1024)

-ದ್ಗುರುವಿಗೆ ಕಿಂಕರನಾಗಯ್ಯಾ! (ಹ)
-ಣ, ಕಾಸು, ಬೇಡದವನಾಗಯ್ಯಾ!
ರ್ವರಹಿತ ಭಕ್ತನಾಗಯ್ಯಾ! (ಪ್ರಾ)
-ಣಾಧಾರಕ್ಕುಣುವುವನಾಗಯ್ಯಾ! (ದ)
-ಧಿಯನ್ನಾಶಿಸದವನಾಗಯ್ಯ! (ಅ)
-ಪಚಾರ ಮಾಡದವನಾಗಯ್ಯಾ! (ಜ)
-ನಾರ್ಧನನಾಜ್ಞಾಬದ್ಧನಾಗಯ್ಯಾ! (ಹ)
-ಗಲಿರುಳಾತ್ಮ ಸ್ಥಿತನಾಗಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನಾಗಯ್ಯಾ!!!

ಸದ್ಗುರುವಿಗೆ ಸಾಷ್ಟಾಂಗ ನಮಸ್ಕಾರ! (ಮ)   5(2942)

-ದ್ಗುರು ಶಿವಾನಂದನಿಗೀ ನಮಸ್ಕಾರ! (ಕ)
-ರುಣಾಸಾಗರನಿಗೆನ್ನೀ ನಮಸ್ಕಾರ!
ವಿಶ್ವನಾಥನಿಗನಂತ ನಮಸ್ಕಾರ! (ನ)
-ಗೆಮೊಗದೆನ್ನ ಸ್ವಾಮಿಗೀ ನಮಸ್ಕಾರ!
ಸಾಯುಜ್ಯಾನುಗ್ರಹಕ್ಕಾಗೀ ನಮಸ್ಕಾರ! (ಅ)
-ಷ್ಟಾಂಗಯೋಗ ಸಿದ್ಧನಿಗೀ ನಮಸ್ಕಾರ!
ಗನಸದೃಶನಿಗೀ ನಮಸ್ಕಾರ!
ತಜನೋದ್ಧಾರನಿಗೀ ನಮಸ್ಕಾರ!
ಮಕಾರಾತೀತನಿಗೀ ನಮಸ್ಕಾರ! (ಕ)
-ಸ್ಕಾಯಿಯಲ್ಲದವನಿಗೀ ನಮಸ್ಕಾರ! (ಹ)
-ರ ನಿರಂಜನಾದಿತ್ಯಗೀ ನಮಸ್ಕಾರ!!!

ಸದ್ಗುರುವಿನ ಚಿತ್ರ ಪವಿತ್ರ! (ಸ)   5(3219)

-ದ್ಗುಣಿ ಅತ್ರಿಗಾದವನ ಪುತ್ರ! (ಹ)
-ರುಷ ಅವನಿಂದಾಯ್ತು ಸರ್ವತ್ರ!
ವಿಧಿ, ಹರ ಸಮೇತಾ ತ್ರಿನೇತ್ರ! (ತ)
-ನಯನಾಗಿ ಬೆಳಗಿದಾ ಗೋತ್ರ!
ಚಿತ್ತಶುದ್ಧಗಾತ ಅತೀ ಹತ್ರ!
ತ್ರಯಮೂರ್ತಿ ಲೀಲೆ ವಿಚಿತ್ರ!
ರಮ ಪೂಜ್ಯ ಅವನ ಸೂತ್ರ!
ವಿರಕ್ತ ಅವನ ಕೃಪಾ ಪಾತ್ರ! (ಮಿ)
-ತ್ರ ನಿರಂಜನಾದಿತ್ಯಾ ಸತ್ಪುತ್ರ!!!

ಸದ್ದಿಲ್ಲದ ಮುದ್ದು ಮಗು ನಿನ್ನದಮ್ಮಾ! (ಎ)   4(1895)

-ದ್ದಿಲ್ಲದಿನ್ನೂ ಮಲಗಿಸಿದಲ್ಲಿಂದಮ್ಮಾ! (ಇ)
-ಲ್ಲ ಸಲ್ಲದ ಚಪಲದಕ್ಕೇನಿಲ್ಲಮ್ಮಾ!
ಯೆಯಿಂದುಣಿಸಿದರುಣುವುದಮ್ಮಾ!
ಮುನಿಸೆಂಬುದೇ ಅದರಲ್ಲಿಲ್ಲವಮ್ಮಾ! (ಕ)
-ದ್ದು, ಮೆದ್ದು ಅಬದ್ಧಾಡುವುದದಲ್ಲಮ್ಮಾ!
ಲಿನವೆಂದರದು ಹೇಸುವುದಮ್ಮಾ!
ಗುರುವಿಗದಚ್ಚುಮೆಚ್ಚಾಗಿದೆಯಮ್ಮಾ! (ತ)
-ನ್ನ ತಾನೇ ಮರೆತು ಕುಣಿಯುವುದಮ್ಮಾ! (ಪಾ)
-ದಕ್ಕಾಗಾಗ ನಮಸ್ಕರಿಸುವುದಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಾನಂದ ಅದಮ್ಮಾ!!!

ಸದ್ಭಾವನೆಯುಳ್ಳವನಾ ಮಹಾದೇವ! (ಸ)   6(3851)

-ದ್ಭಾರ್ಯಾಂಗನೆಗೆ ಅವನೇ ದೇವ ದೇವ!
ರಿಸಿದ ಮೇಲ್ಬಿಡಲಾರನಾ ಶಿವ!
ನೆನೆಯ ಬೇಕವನ ದಿವ್ಯ ನಾಮವ!
ಯುಗಾಂತ್ಯದಲ್ಲವನೇ ಕಾಲ ಭೈರವ! (ಬೆ)
-ಳ್ಳಗಿನ ಕೈಲಾಸದಲ್ಲವ್ನ ವೈಭವ!
ರ ಗುರು ಗುಹನಿಗೆ ತಂದೆ ಅವ!
ನಾನೂ, ನೀನೂ ಬಂದೆಂಬನಾ ಅಂಬಾಧವ!
ನನ ಮಾಡ್ಮಲ್ಲಿಕಾರ್ಜುನ ಲಿಂಗವ!
ಹಾಲಹಲವ ಜೀರ್ಣಿಸಿಕೊಂಡನವ!
ದೇಗುಲವ ಮಾಡು ನಿನ್ನ ಶರೀರದ! (ಶಿ)
-ವ ನಿರಂಜನಾದಿತ್ಯ ವಾಸ ಮಾಡುವ!!!

ಸದ್ವಿಚಾರದಿಂದ ವಿವೇಕಿ ನೀನಾಗು!   5(3087)

ದ್ವಿಜನಾಗ್ವಿಪ್ರನಾಗಿ ಬ್ರಾಹ್ಮಣನಾಗು!
ಚಾತುರ್ಯ ಪ್ರದರ್ಶಿಸದಿರ್ಪವನಾಗು!
ಘುನಾಥನಾದರ್ಶವುಳ್ಳವನಾಗು! (ಅಂ)
-ದಿಂದಿನ ಬಾಳ್ವಿಮರ್ಶಿಸುವವನಾಗು!
ತ್ತಾತ್ರೇಯಗಚ್ಚುಮೆಚ್ಚಿನವನಾಗು!
ವಿಶುದ್ಧಾತ್ಮನಾಗಿ ಅವನೇ ನೀನಾಗು!
ವೇಷ, ಭೂಷಣಕ್ಕಾಶಿಸದವನಾಗು!
ಕಿವಿ, ಬಾಯಿ, ಕಣ್ಣು ಮುಚ್ಚಿ ಮೌನಿಯಾಗು!
ನೀಚರೊಡನಾಟವಿಲ್ಲದವನಾಗು!
ನಾಕ, ನರಕದಾಸೆ ಸುಟ್ಟವನಾಗು! (ಬಾ)
-ಗು ನಿರಂಜನಾದಿತ್ಯಗೆ ಶಿರಬಾಗು!!!

ಸದ್ವೃತ್ತಿ ಸದಾ ಇರಬೇಕು! (ಸ)   4(1868)

-ದ್ವ

ದ್ಧಿಯದರಿಂದಾಗಬೇಕು! (ವೃ)
-ತ್ತಿ ನಿವೃತ್ತಿಗನ್ಕೂಲಾಗ್ಬೇಕು!
ಹನೆ ಕೆಡದಿರಬೇಕು!
ದಾರಿ ಹೆದ್ದಾರಿಯಾಗಬೇಕು!
ತ್ತತ್ತ ನೋಡದಿರಬೇಕು! (ವ)
-ರ ಗುರುಧ್ಯಾನ ಮಾಡಬೇಕು!
ಬೇಗ ಶಾಂತಿ ದೊರಕಬೇಕು! (ಟಾ)
-ಕು ನಿರಂಜನಾದಿತ್ಯಾಗ್ಬೇಕು!!!

ಸನ್ನಾಹ ಮಾಡುವನಾಶಾ ಜೀವ! (ತ)   4(2234)

-ನ್ನಾನಂದದಂತಿರಿಸುವಾ ದೇವ!
ಸೆ, ಮಣೆಯಿಟ್ಕರೆವಾ ಜೀವ!
ಮಾತಿಲ್ಲದೆ ಮಾಯವಾಗ್ವಾ ದೇವ! (ನೋ)
-ಡುವೆನಾಡುವೆನೆಂಬನಾ ಜೀವ! (ಜ)
-ವನಾಗಿ ಬಂದೆಳೆವನಾ ದೇವ!
ನಾನು, ನೀನೆಂದು ಕುಣಿವಾ ಜೀವ! (ಆ)
-ಶಾರಹಿತ ನಿರ್ವಿಕಾರಾ ದೇವ! (ರಾ)
-ಜೀವ ಸಖನ ಪೂಜಿಪಾ ಜೀವ! (ಶಿ)
-ವ ನಿರಂಜನಾದಿತ್ಯಾತ್ಮಾ ದೇವ!!!

ಸನ್ನಿಧಿಯಪಚಾರ ಕಾರಣಹಂಕಾರ (ಅ)   1(322)

-ನ್ನಿಸಿದರಧಿಕಾರಿಯಿಂದಾಯ್ತಪಕಾರ!
ಧಿಕ್ಕಾರಕ್ಕಾಗುವುದು ತಕ್ಕ ಪರಿಹಾರ!
ತಿಪತಿಯ ಸ್ಥಾನಕ್ಕಿಲ್ಲ ಪೂರ್ಣಾದರ!
ರಿಣಾಮ ನಿಧಾನ! ಈಗೇಕಾ ವಿಚಾರ? (ಅ)
-ಚಾತುರ್ಯಲ್ಲಾ ಮನದಿಂದಾದ ವಿಕಾರ!
ಗಳೆಮಾಡಿದರಾಗದು ವ್ಯವಹಾರ!
ಕಾದು ನೋಡಿ ಅಡಗಿಸಬೇಕತ್ಯಾಚಾರ!
ಕ್ತ, ಮಾಂಸದ ಗೊಂಬೆಯಿಂದ ದುರಾಚಾರ! (ಅ)
-ಣಜಿಸಿ ಉಣಿಸಿದರದೆಂಥಾ ಆಚಾರ?
ಹಂಗಿಗನಾದರಾಗುವುದು ದುಃಖಪಾರ!
ಕಾಲ ಕಳೆಯಇರು! ಕ್ಷಣಿಕ ಸಂಸಾರ! (ಅ)
-ರಸ ನಿರಂಜನಾದಿತ್ಯಗೈವ ಸಂಹಾರ!!!

ಸನ್ಮಾನಕಾಗಿ ಕಾದಿಹನೇನಾ ಸೂರ್ಯ? (ಜ)   1(337)

-ನ್ಮಾದಿ ಪರ್ಮಂತೊಂದೇ ತೆರನಾಗಿಹಾರ್ಯ! (ತ)
-ನಗಾಗಿ ತಾನಿರುವಾದರ್ಶದಾಚಾರ್ಯ!
ಕಾಲ, ಕರ್ಮ, ಧರ್ಮಕಿಹುದು ಗಾಂಭೀರ್ಯ! (ಆ)
-ಗಿ

ಗ, ಮತ್ತೆನ್ನದ ನಿಷ್ಠಾ ಗುರುವರ್ಯ!
ಕಾರಣಿ, ಸರ್ವಕಾ ತರಣಿ ಔದಾರ್ಯ! (ಆ)
-ದಿತ್ಯಾನುಗ್ರಹದಿಂದಹುದು ಆರೋಗ್ಯ!
ರಿ, ಹರರಜಾದಿ ರೂಪ ಸೌಂದರ್ಯ!
ನೇತನೀತ, ಸರ್ವಕಲ್ಲಾಣನಗಮ್ಯ!
ನಾನಾಜಾತಿ, ಮತಗಳಿಗಿವಮ್ಮಯ್ಯ! (ಅ)
-ಸೂಯೆಯೆಳ್ಳಪ್ಟಿಲ್ಲದನುಪಮ! ಸೇವ್ಯ! (ಆ)
-ರ್ಯ! ನಿರಂಜನಾದಿತ್ಯ ಜನ್ಮ ಸಾಫಲ್ಯ!!!

ಸನ್ಯಾಸಿ ಆಗಬೇಕಯ್ಯಾ!   2(762)

ನ್ಯಾಸಾಭ್ಯಾಸಾಗಬೇಕಯ್ಯಾ!
ಸಿಟ್ಟು ಭಸ್ಮಾಗಬೇಕಯ್ಯಾ!
ಶೆ ನಾಶಾಗಬೇಕಯ್ಯಾ!
ರ್ವ ಶೂನ್ಯಾಗಬೇಕಯ್ಯಾ!
ಬೇಡದಾತಾಗಬೇಕಯ್ಯಾ!
ಡು ತ್ಯಾಗ್ಯಾಗಬೇಕಯ್ಯಾ! [ಅ]
-ಯ್ಯಾ! ನಿರಂಜನಾದಿತ್ಯಯ್ಯಾ!!!

ಸನ್ಯಾಸಿಗೇಕನ್ಯ ವಿಚಾರ?   3(1148)

ನ್ಯಾಯಾನ್ಯಾಯ ಐಹಿಕಾಚಾರ! (ಘಾ)
-ಸಿಗೈವುದೆಲ್ಲಾ ಮಿಥ್ಯಾಚಾರ! (ಯೋ)
-ಗೇಶ್ವರಗಾಗಿರಲಾಚಾರ!
ಷ್ಟಾ ಚೋರ ಮಾರನಾಚಾರ! (ಮಾ)
-ನ್ಯವದು ಸದ್ಗುರು ವಿಚಾರ!
ವಿಕಲ್ಪದಿಂದಪಪ್ರಚಾರ! (ಆ)
-ಚಾರ ಆದರ್ಶಾತ್ಮ ವಿಚಾರ! (ಅ)
-ರ ನಿರಂಜನಾದಿತ್ಯಾಚಾರ!!!

ಸನ್ಯಾಸಿಯ ಸಂದರ್ಶನಾನಂದ!   1(47)

ನ್ಯಾಸ ಆಶಾ ರಹಿತಾತ್ಯಾನಂದ!
ಸಿದ್ಧಿ ಇದು ನಿತ್ಯ ನಿಜಾನಂದ!
ತಿಪತಿಗಿದೇ ಸದಾನಂದ!
ಸಂದರ್ಶನಕೈತಹರೂರಿಂದ!
ರ್ಶನದಿಂದಾಗಬೇಕಾನಂದ! (ಸ್ಪ)
-ರ್ಶ ಅಸ್ಪರ್ಶ ಅಭೇದಾನಂದ!
ನಾಮ ಜಪವಿರಲದರಿಂದ!
ನಂಬಿಕೆಗಿಂಬಿಹುದಿದರಿಂದ!
ತ್ತ ನಿರಂಜನಾದಿತ್ಯಾನಂದ!!!

ಸಮನ್ವಯಾಚಾರರಿಗೆಪ್ಪತ್ತೊಂದಾಯ್ತು!   5(3066)

ಕ್ಕಳೊಡನಾಟವಗಾನಂದಾಯ್ತು! (ಅ)
-ನ್ವರ್ಥೋಪಾಧ್ಯಾಯಾಂಕಿತವಿವಗಾಯ್ತು!
ಯಾರನ್ನೂ ನಿಂದಿಸದ ಜೀವನವಾಯ್ತು!
ಚಾತುರ್ವರ್ಣ್ಯದಾದಿಯಲ್ಲಿ ಜನ್ಮವಾಯ್ತು! (ಕಾ)
-ರತತ್ಪರತೆಗಿವರಾದರ್ಶವಾಯ್ತು!
ರಿಸಿ, ಸಪ್ತ ಋಷಿ ಧಾಮಕ್ಕೆ ತಾನಾಯ್ತು!
ಗೆಳೆತನ ಮಹಾನುಭಾವರಲ್ಲಾಯ್ತು! (ಅ)
-ಪ್ಪನಪ್ಪಣೆಗೆ ಶಿರಬಾಗುವಂತಾಯ್ತು! (ಹ)
-ತ್ತೊಂಬತ್ತೆಪ್ಪತ್ತಾರು ಸ್ಮರಣೀಯವಾಯ್ತು!
ದಾರಿ ನಿರ್ವಿಘ್ನವಾಗಿ ಸಾಗುವಂತಾಯ್ತು! (ಆ)
-ಯ್ತು ನಿರಂಜನಾದಿತ್ಯ ಚಿತ್ತದಂತಾಯ್ತು!!!

ಸಮಯ ಸವೆದು ಹೋಯ್ತು!   5(2662)

ನಸ್ಸು ಹೊಲ್ಸಾಗಿ ಹೋಯ್ತು!
ಶಸ್ಸು ಕ್ಷಯಿಸಿ ಹೋಯ್ತು!
ತ್ಯಾಂಶರಿಯದೆ ಹೋಯ್ತು!
ವೆಸನ ಹೆಚ್ಚಾಗಿ ಹೋಯ್ತು!
ದುರ್ಬುದ್ಧಿ ಬಲಿತು ಹೋಯ್ತು! (ಅ)
-ಹೋರಾತ್ರಿ ಭಜನೆಯಾಯ್ತು! (ಆ)
-ಯ್ತು ನಿರಂಜನಾದಿತ್ಯಾಯ್ತು!!!

ಸಮಯ ಸಿಕ್ಕಿದಾಗಪ್ಪನ ನೋಡ್ಕಣ್ಣೇ [ಕಾ]   4(2495)

-ಮಭಾವದಿಂದ ಕನ್ಯೆಯ ನೋಡ್ಬೇಡ್ಕಣ್ಚೇ! (ಕಾ)
-ಯಮೋಹದಾನಂದವೆಷ್ಟು ದಿವಸ್ಕಣ್ಣೇ! (ಪು)
-ಸಿಮಾಯೆಗ್ಮರುಳಾಗಿ ಹಾಳಾಗ್ಬೇಡ್ಕಣ್ಣೇ! (ಇ)
-ಕ್ಕಿ, ಸಾಕಿದ ತಾಯ್ಸ್ವರೂಪೆಲ್ಲೆಲ್ನೋಡ್ಕಣ್ಣೇ!
ದಾಶರಥಿಯ ಸದಾ ನೋಡುತ್ತಿರ್ಕಣ್ಣೇ! (ನಿ)
-ಗರ್ವಿಯಾಗ್ಯವನ ಶ್ರೀಪಾದ ನೋಡ್ಕಣ್ಣೆ! (ಕ)
-ಪ್ಪ, ಕಾಣಿಕೆಯದಕ್ಕೊಪ್ಪಿಸು ನೀನ್ಕಣ್ಣೇ! (ವಿ)
-ನಯದಿಂದ ನಮಿಸ್ಯದ್ನೊತ್ತಿಕೊಳ್ಕಣ್ಣೇ!
ನೋವೆಲ್ಲಾ ಪರಿಹಾರವಾಗ್ವುದದ್ರಿಂದ್ಕಣ್ಣೇ! (ಕು)
-ಡ್ಕನ ಕಣ್ಣುಗಳಂತಾದ್ರದು ಭೂತ್ಕಣ್ಣೇ! (ಕ)
-ಣ್ಣೇ! ನಿರಂಜನಾದಿತ್ಯಾತ್ಮನ ನೋಡ್ಕಣ್ಣೇ!!!

ಸಮಯ ಸಿಕ್ಕಿದಾಗಲೇ ಸುಮುಹೂರ್ತ!   5(2510)

ನಸ್ಸಿಗೆ ಹರ್ಷವಿದ್ದಾಗಾ ಮುಹೂರ್ತ!
ದುನಾಥನಿಗಾನಂದಾ ಸುಮುಹೂರ್ತ! (ಘಾ)
-ಸಿ ಮಾಡದೆಂದೆಂದಿಗೂ ಆ ಸುಮುಹೂರ್ತ! (ದ)
-ಕ್ಕಿಸಿಕೊಳ್ಳದಿರ್ಬಾರ್ದೆಂದಿಗಾ ಮುಹೂರ್ತ!
ದಾರಿ ತೆರೆವುದು ಶಾಂತಿಗಾ ಮುಹೂರ್ತ! (ಯೋ)
-ಗಸಾಧಕನಿಗೆ ಸದಾ ಸುಮುಹೂರ್ತ!
ಲೇಸು ಸದ್ಗುರು ಸೇವೆಗೀ ಸುಮುಹೂರ್ತ!
ಸುರಧೇನು ಸಮಾನವೀ ಸುಮುಹೂರ್ತ!
ಮೂನ್ನೂರರ್ವತ್ತೈದು ದಿನಾ ಸುಮುಹೂರ್ತ!
ಹೂ, ಹಣ್ಣುಗಳ ಕಾಯದಾ ಸುಮುಹೂರ್ತ! (ಕ)
-ರ್ತ, ನಿರಂಜನಾದಿತ್ಯಗಾವ ಮುಹೂರ್ತ???

ಸಮರಸಕ್ಕಿಲ್ಲ ಸಮರ!   4(1893)

ಲಿನಾಸೆಗೆಲ್ಲ ಸಮರ! (ಪ)
-ರ ಹಿತರಿಗಿಲ್ಲ ಸಮರ! (ಮೋ)
-ಸಗಾರರಿಗೆಲ್ಲ ಸಮರ! (ಸಾ)
-ಕಿದವರಿಗಿಲ್ಲ ಸಮರ! (ಕ್ಷು)
-ಲ್ಲ ಬಾಲರಿಗೆಲ್ಲ ಸಮರ!
ಜ್ಜನರಿಗಿಲ್ಲ ಸಮರ!
ರ್ಕಟರಿಗೆಲ್ಲ ಸಮರ! (ಹ)
-ರ ನಿರಂಜನಾದಿತ್ಯಮರ!!!

ಸಮಸ್ಯಾ ಪರಿಹಾರ ಗುರುವಿನಿಂದ!   6(4129)

ನಸ್ಸಿನ ಭ್ರಾಂತಿ, ಶಾಂತಿ ಅವನಿಂದ! (ದಾ)
-ಸ್ಯಾದ್ಯುಪಚಾರ ಸ್ವೀಕರಿಪವನಿಂದ!
ಕ್ಷಪಾತವಿಲ್ಲದ ತೀರ್ಮಾನದಿಂದ!
ರಿಪುಕುಲ ಕಾಲಾಂತಕನಾದ ಅವನಿಂದ!
ಹಾಲುಣಿಸಿ ತಣಿಸುವಾ ಪಿತನಿಂದ! (ಪ)
-ರ ಸೇವೆ ತಪ್ಪಿಸಿದಾ ಮಹಿಮನಿಂದ!
ಗುಡಿ ಈ ದೇಹ ತನಗೆಂಬವನಿಂದ!
ರುಜು ಮಾರ್ಗಾವಲಂಬಿಯಾದವನಿಂದ!
ವಿಧಿ, ಹರಿ, ಹರರೊಂದಾದವನಿಂದ!
ನಿಂದೆಯಿಂದ ಕುಂದದಾ ಕೀರ್ತಾತ್ಮನಿಂದ!
-ದತ್ತ ನಿರಂಜನಾದಿತ್ಯಾನಂದ ನಿಂದ!!!

ಸಮಾಜ ಕಲ್ಯಾಣವೆಂತಪ್ಪಾ? [ಕಾ]   3(1380)

-ಮಾದಿಗಳ ನಾಶದಿಂದಪ್ಪಾ! (ಭ)
-ಜನಾದಿ ಸತ್ಕರ್ಮದಿಂದಪ್ಪಾ!
ರ್ಮ, ಧರ್ಮ ನಿಷ್ಠೆಯಿಂದಪ್ಪಾ! (ಕ)
-ಲ್ಯಾಣಿಯನುಗ್ರಹದಿಂದಪ್ಪಾ! (ಗ)
-ಣಪತಿಯ ಸೇವೆಯಿಂದಪ್ಪಾ!
ವೆಂಕಟೇಶಾನಂದದಿಂದಪ್ಪಾ!
ರಣಿಯಾದರ್ಶದಿಂದಪ್ಪಾ! (ಅ)
-ಪ್ಪಾ ನಿರಂಜನಾದಿತ್ಯಾತ್ಮಪ್ಪಾ!!!

ಸಮಾಜ ನೀತಿಗೆ ಬಾಹಿರ ನಾನು!   6(3894)

ಮಾನಾಭಿಮಾನಕ್ಕಾಶಿಸದವ ನಾನು!
ರಾ, ಜನ್ಮಾತೀತ ಪರಮಾತ್ಮ ನಾನು!
ನೀಚೋಚ್ಚ ರಹಿತ ಯೋಗೇಶ್ವರ ನಾನು!
ತಿಥಿ, ವಾರ, ನಕ್ಷತ್ರಾತೀತಾತ್ಮ ನಾನು!
ಗೆಳೆಯ, ವೈರಿಗಳಿಲ್ಲದವ ನಾನು!
ಬಾಯಿ, ಕೈ, ಕಚ್ಚೆಗಧೀನನಲ್ಲ ನಾನು!
ಹಿಗ್ಗು, ಕುಗ್ಗುಗಳಿಲ್ಲದವನು ನಾನು!
ಜಸ್ತಮಸ್ಸತ್ವ ಗುಣಾತೀತ ನಾನು!
ನಾದ, ಬಿಂದು, ಕಲೆಗತೀತನು ನಾನು! (ಅ)
-ನುಪಮೋದಾರಿ ನಿರಂಜನಾದಿತ್ಯಾನು!!!

ಸಮಾಜ ಸುಧಾರಿಸುವುದೆಂದು?   5(2839)

ಮಾಯಾ ಮೋಹ ಕಡಿಮೆಯಾದಂದು!
ಗಳವಿಲ್ಲದಾ ದಿನದಂದು!
ಸುಗುಣದಭಿವೃದ್ಧಿಯಾದಂದು!
ಧಾರಾಕಾರ ಜಪ ಸಾಗಿದಂದು!
ರಿಪುಗಳಾರನ್ನೂ ಜೈಸಿದಂದು!
ಸುಸ್ಥಿರತೆ ಮನಸ್ಸಿಗಾದಂದು! (ಆ)
-ವುದೂ ಶಾಶ್ವತವಲ್ಲವೆಂದಂದು! (ಅ)
-ದೆಂಬಾತ್ಮ ತಾನೆಂಬರಿವಾದಂದು! (ಅ)
-ದು ನಿರಂಜನಾದಿತ್ಯನೆಂದಂದು!!!

ಸಮಾಧಿಗೊ

ದ ವೀಣಾ ವಾದನ! (ಉ)
   4(1419)

-ಮಾರಮಣ ವಿಶ್ವನಾ ವಾದನ! (ದ)
-ಧಿಯನ್ನ ಉಣಿಸಿದಾ ವಾದನ! (ಓಂ)
-ಗೊ

ಮೈ ಮರೆಸಿದಾ ವಾದನ!
ತ್ತಗಾನಂದವಾದಾ ವಾದನ! (ದೇ)
-ವೀ ಪ್ರಸಾದದಿಂದಾದಾ ವಾದನ! (ಪ್ರಾ)
ಣಾರ್ಪಣೆಗೂ ಅಂಜದಾ ವಾದನ! (ಭಾ)
-ವಾವೇಶಾತ್ಮಾನಂದದಾ ವಾದನ!
ರ್ಶನಾನುಗ್ರಹದಾ ವಾದನ! (ಘ)
-ನ ನಿರಂಜನಾದಿತ್ಯಾವಾಹನ!!!

ಸಮಾಧಿತ್ತ ವೀಣಾವಾದನ! (ಉ)   4(1420)

-ಮಾಪತಿ ವಿಶ್ವನಾಥಾರ್ಚನ! (ದ)
-ಧಿಯನ್ನ ಭಕ್ತಿ ನಿವೇದನ! (ಚಿ)
-ತ್ತ ಶುದ್ಧಿಯಿಂದಾದಾಲಾಪನ!
ವೀರ್ಯ ವೃದ್ಧಿಯಿಂದಾದಾ ತಾನ! (ಗ)
-ಣಾಧಿಪತಿಯ ಗುಣ ಗಾನ! (ಭಾ)
-ವಾವೇಶ ಪಲ್ಲವಿ ಪಾವನ!
ತ್ತಾತ್ರೇಯ ರೂಪ ದರ್ಶನ (ಘ)
-ನ ನಿರಂಜನಾದಿತ್ಯಾತ್ಮನ!!!

ಸರಳ ಜೀವನ ಪರಮ ಸುಖ! (ಒ)    4(1677)

-ರಳು ಕುಳಿಯನ್ನ ಚರಮ ಸುಖ! (ಬಾ)
-ಳ ನೇತ್ರನ ಗಾನ ಪರಮ ಸುಖ!
ಜೀನನ ವಾಗ್ದಾನ ಚರಮ ಸುಖ!
ರ ಗುರು ಧ್ಯಾನ ಪರಮ ಸುಖ!
ಶ್ವರಾಭಿಮಾನ ಚರಮ ಸುಖ!
ಯೋನಿಧಿ ಪಾನ ಪರಮ ಸುಖ!
ಕ್ತಾಂಬುಧಿ ಸ್ನಾನ ಚರಮ ಸುಖ! (ಅ)
-ಮರತ್ವ ಸಾಧನ ಪರಮ ಸುಖ! (ಆ)
-ಸುರೀ ಸಂವಿಧಾನ ಚರಮ ಸುಖ! (ಸ)
-ಖ ನಿರಂಜನಾದಿತ್ಯ ಪರಮ ಸುಖ!!!

ಸರಳ ಜೀವನವಿರಬೇಕು! (ಪ)   4(2283)

-ರರನುಕರಣೆ ಬಿಡಬೇಕು! (ಒ)
-ಳ, ಹೊರಗೆ ಶುಚಿಯಾಗಬೇಕು!
ಜೀವತ್ವದಿಂದ ಪಾರಾಗಬೇಕು!
ರ ಗುರುಸೇವೆ ಸದಾ ಬೇಕು! (ಮ)
-ನಸಿಜನಾಟ ಮಡಿಯಬೇಕು!
ವಿಚಾರ ಆತ್ಮನದ್ದಾಗಬೇಕು! (ಪ)
-ರ ದೂಷಣೆ ಮಾಡದಿರಬೇಕು!
ಬೇಲಿ ಹಾಕಿ ಬೇಸಾಯ ಮಾಡ್ಬೇಕು! (ಟಾ)
-ಕು ನಿರಂಜನಾದಿತ್ಯನಾಗ್ಬೇಕು!!

ಸರಸ್ವತೀ! ನೋಡ್ಬೇಕು ನಿನ್ನನೆಂಬನೀ ಯತಿ!   6(3935)

ಚಿಸಲಿ ನಿನ್ನ ಸ್ತೋತ್ರ ನಿನ್ನ ನೋಡೀ ಯತಿ!
ಸ್ವಧರ್ಮ ಮರ್ಮವರಿಯಲಿ ನಿನ್ನಿಂದೀ ಯತಿ!
ತೀರ್ಥ ಸೇವಿಸ್ಲಿ ನಿನ್ನ ಪಾದ ತೊಳೆದೀ ಯತಿ!
ನೋವು, ಸಾವು ಮಾಯವದರಿಂದೆಂಬನೀ ಯತಿ! (ಮಾ)
-ಡ್ಬೇಕನುಗ್ರಹವನ್ನು ನೀನೀಗೆಂಬನೀ ಯತಿ!
ಕುಮಾರನಿವನನ್ನುದ್ಧರಿಸೆಂಬನೀ ಯತಿ!
ನಿಜ ಭಕ್ತಿಯನ್ನಿತ್ತು ರಕ್ಷಿಸೆಂಬನೀ ಯತಿ! (ಉ)
-ನ್ನತಿ ನಿನ್ನಿಂದೆಂದು ನಂಬಿಹೆನೆಂಬನೀ ಯತಿ! (ಇ)
-ನ್ನೆಂತೊರೆಯಲೆನ್ನಭೀಷ್ಟವನ್ನೆಂಬನೀ ಯತಿ!
ಳಲಿ ಬೆಂಡಾದೆ ನಾ ನಿಲ್ಲೀಗೆಂಬನೀ ಯತಿ!
ನೀನೊಲಿಯದ ಬಾಳು ವ್ಯರ್ಥವೆಂಬನೀ ಯತಿ! (ಜ)
-ಯ ಬ್ರಹ್ಮನ ರಾಣಿ ಗೀರ್ವಾಣಿಗೆಂಬನೀ ಯತಿ! (ಜ್ಯೋ)
-ತಿರ್ಮಯ ಸ್ವರೂಪಿ ನಿರಂಜನಾದಿತ್ಯಾ ಯತಿ!!!

ಸರ್ವ ಕಲ್ಯಾಣ ಸರ್ವರಿಂದ! (ಸ)   6(3781)

-ರ್ವರೊಳಗವ್ನಿರುವುದ್ರಿಂದ! (ತ್ರಿ)
ರಣ ಶುದ್ಧವಾಗ್ಲಾದ್ರಿಂದ! (ಕ)
-ಲ್ಯಾಣಿಯಂತಾಗುವುದದ್ರಿಂದ! (ಗ)
-ಣರಾಜ್ಯಕ್ಕೆ ಸುಖ ಅದ್ರಿಂದ!
ರ್ವರಾನಂದ ಶಿವಾನಂದ! (ಗ)
-ರ್ವದಿಂದಹುದು ಭವಬಂಧ! (ಯಾ)
-ರಿಂದ ಯಾರಿಗೆ ಏನಾನಂದ? (ಕಂ)
-ದ ನಿರಂಜನಾದಿತ್ಯಾನಂದ!!!

ಸರ್ವ ಕಲ್ಯಾಣ ಸರ್ವೇಶ್ವರನಿಷ್ಟ! (ಓ)   1(208)

-ರ್ವನಿಂದವಹೇಳನ ಮಾಡಿ ಪಿಷ್ಟ!
ರುಣೆ ಇನ್ನೊಬ್ಬನಿಂದ ತೋರ್ಪಿಷ್ಟ! (ಕ)
-ಲ್ಯಾಣವಾಗ್ವುದು ಕೊನೆಗವನಿಷ್ಟ! (ಗ)
-ಣ ರಾಜ್ಯದಲ್ಲಿ ಸತ್ಯಾಗ್ರಹದಿಷ್ಟ!
ನ್ಯಾಸಿ ಹಠ ಮಾಡ್ವುವುದನಿಷ್ಟ! (ಸ)
-ರ್ವೇಂದ್ರಿಯನೊಡನಾಟ ಅವನಿಷ್ಟ! (ಈ)
-ಶ್ವರ ಜಿತೇಂದ್ರ್ಯನೆಂದುದವನಿಷ್ಟ!
ಕ್ಷಕವನಾದುದವನಿಷ್ಟ!
ನಿರ್ದಯ ರಾಕ್ಷಸ ರೂಪಿನಲಿಷ್ಟ! (ಇ)
-ಷ್ಟ ನಿರಂಜನಾದಿತ್ಯಗೆಲ್ಲಾ ಇಷ್ಟ!!!

ಸರ್ವ ಕಾರಣಕರ್ತ ನಾನಾಗಿರನ್ಯರನು ದೂಷಿಪುದನ್ಯಾಯವಯ್ಯಾ!   1(36)

ತರತತದಾಸೆಗಡಿಯಾಳಾಗಿ ನನ್ನ ಮರೆತಿರುವೆನಯ್ಯಾ!
ತರಣಿ ಕಿರಣಗಳ ಮೋಡಗಳಡಗಿಸಿದರಪವಾದವನಿಗೆ ಸಲ್ಲದಯ್ಯಾ!
ಧ್ಯಾನದಲಿದನರಿತು, ನನ್ನ ನಾನನವರತ ಉತ್ಸಾಹದಲಿರಿಸಿಹೆನಯ್ಯಾ!
ನನ್ನ ನಾನರಿತು, ನಿತ್ಯನಿರಂಜನಾನಂದದಲಿರುವುದೆನ್ನ ಸ್ವಧರ್ಮವಯ್ಯಾ!!!

ಸರ್ವ ದೇವತಾ ವಶ ಗುರು ಶರಣ! (ಓ)   1(115)

-ರ್ವ ದೇವನೇ ಸೃಷ್ಟಿಯೆಲ್ಲಕ್ಕೂ ಕಾರಣ!
ದೇವತಾನಂತ ನಾಮದಿಂದ ಭರಣ!
ರ ಗುರುವಿದನರಿತಿಹ ಜಾಣ!
ತಾರಕನಿವ ಸರ್ವಶಾಸ್ತ್ರ ಪ್ರಮಾಣ! (ಅ)
-ವನಿಗೆಲ್ಲಾ ದೇವತೆಗಳೂ ಆಧೀನ!
ಕ್ತನಾರ್ದಊ ಭಕ್ತಿಯಿಂದ ಜೀವನ!
ಗುಡುಗಿದರೂ ನಡುಗದಾ ಭಾವನ! (ಅ)
-ರುಹಿ ತಿಳಿಸಲಾಗುವುದಿಲ್ಲವನ!
ರಣರರಿವರಿವನ ಕರುಣ! (ಅ)
-ರಸಿದರೆ ಸಿಗುವುದೆಲ್ಲೀ ಚರಣ? (ರ)
-ಣಧೀರ ನಿರಂಜನಾದಿತ್ಯ ಶರಣ!!!

ಸರ್ವ ಪಾಪ ಹರಕ್ಕೆ ದತ್ತ ತಾಪಸಿ! (ಓ)   6(4137)

ರ್ವನೆಲ್ಲವನ್ನೂ ಸಹಿಸುವ ಸಾಹಸಿ!
ಪಾರ್ಥಿವ ದೇಹವಲ್ಲದ “ತತ್ವಮಸಿ”!
ತಿ, ಪತಿ, ಸುತ ತಾನಾದ ವಿಶ್ವಾಸಿ!
ದಿನಾಲ್ಕು ಲೋಕದೊಡೆಯ ಉದಾಸಿ!
ಮಾದೇವಿ ತಾನಾಗಿ ಶ್ರೀ ಹರಿ ದಾಸಿ! (ಬೆ)
-ಕ್ಕೆಗಧೀಶನಾಗಿ ಹರನಿಂದ ಘಾಸಿ!
-ದಯಾನಿಧೀಶ್ವರ ಹೃದಯ ನಿವಾಸಿ! (ಉ)
-ತ್ತಮೋತ್ತಮ ಪುರುಷೋತ್ತಮ ಸನ್ಯಾಸಿ!
ತಾಳ, ಮೇಳ, ಭಜನಾನಂದ ಹವ್ಯಾಸಿ!
ರ ಗುರು ಶಿವಾನಂದ ನಿರ್ದೋಷಿ!
ಸಿರಿ ನಿರಂಜನಾದಿತ್ಯಗೆ ದಾಸಿ!!!

ಸರ್ವ ಬಲಾ, ಸಕಲಾ, ವಿಮಲ! [ಓ]   5(2858)

-ರ್ವ ತಾಯಿ ಲೋಕಕ್ಕೆಲ್ಲಾ ವಿಮಲ!
ಯಕೆಯಿಲ್ಲದಾತ್ಮಾ ವಿಮಲ!
ಲಾವಣ್ಯಮಯ ದೇವೀ ವಿಮಲ!
ದಾ ಸೇವಾ ನಿರತಾ ವಿಮಲ!
ರ ಚರಣಾತೀತಾ ವಿಮಲ! (ಲೀ)
-ಲಾ ನಾಟಕ ನಟ ಈ ವಿಮಲ!
ವಿಧಿ, ಹರಿ, ಹರಾತ್ಮಾ ವಿಮಲ!
ಲಹರಿ ರೂಪಾಣೀ ವಿಮಲ! (ಬಾ)
-ಲ ನಿರಂಜನಾದಿತ್ಯಾ ವಿಮಲ!!!

ಸರ್ವ ಭಾರ ಸರ್ವೇಶ್ವರನದಪ್ಪಾ! [ಗ]   2(710)

-ರ್ವದಿಂದ ಹಾಳಾಗಬೇಡ ನಿನಪ್ಪಾ!
ಭಾರವೆಲ್ಲಾ ಹೊತ್ತಿಹನಾ ದೇವಪ್ಪಾ! [ಯಾ]
-ರನೂ ಕೈ ಬಿಡವವನಾತಲ್ಲಪ್ಪಾ!
ದಾ ಈ ವಿಶ್ವಾಸ ಇರಬೇಕಪ್ಪಾ! [ಸ]
-ರ್ವೇಶ್ವರ ನಿನ್ನಂತರ್ಯಾಮಿ ಕಾಣಪ್ಪಾ! [ವಿ]
-ಶ್ವರೂಪದಲವನ ಲೀಲೆಯಪ್ಪಾ!
ಮಾರಮಣ ಕರುಣಾಳುವಪ್ಪಾ!
ಡೆಯುವುದೆಲ್ಲವನಿಚ್ಛೆಯಂತಪ್ಪಾ! [ಅ]
-ದನಿದನು ಬೇಡದೆ ಭಜಿಸಪ್ಪಾ! [ಅ]
-ಪ್ಪಾ ಪ್ರಶಾಂತ ನಿರಂಜನಾದಿತ್ಯಪ್ಪಾ!!!

ಸರ್ವ ಮಂಗಳಾ ನೀನಮ್ಮಾ! (ಗ)   2(534)

-ರ್ವ ನಿನಗೇನಿಲ್ಲವಮ್ಮಾ!
ಮಂದಿರ ಶರೀರವಮ್ಮಾ!
ತಿ ಶಿವ ಸಾಯುಜ್ಯಮ್ಮಾ! (ಆ)
-ಳಾಗಿಹೆ ಶಿವನಿಗಮ್ಮಾ!
ನೀನೇ ಲೋಕಮಾತೆಯಮ್ಮಾ!
ಶ್ವರ ವ್ಯಾಮೋಹವಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಮ್ಮಾ!!!

ಸರ್ವ ಮತ ಸಮ್ಮತಮ್ಮಾ! (ಓ)   2(761)

-ರ್ವ ದೇವನೆಲ್ಲರಿಗಮ್ಮಾ!
ತ ಗುದ್ದಾಟಕಲ್ಲಮ್ಮಾ!
ತ್ವ ತಿಳಿಯಬೇಕಮ್ಮಾ!
ಚ್ಚಿದಾನಂದಾ ರೂಪಮ್ಮಾ! (ಒ)
-ಮ್ಮತ ನಿತ್ಯ ಶಾಂತಿಯಮ್ಮಾ!
ರಣಿಗಾವ ಭೇದಮ್ಮಾ? [ಅ]
-ಮ್ಮಾ! ನಿರಂಜನಾದಿತ್ಯಮ್ಮಾ!!!

ಸರ್ವ ಯಂತ್ರ, ತಂತ್ರ ಹರ ಗುರುವರ! (ಸ)   1(117)

-ರ್ವ ಹಿತಕರ, ತ್ರಿಮೂರ್ತಿಯವತಾರ!
ಯಂತ್ರವಿದುತ್ತಮ ಯಂತ್ರ ಗುರುಮಂತ್ರ!
ತ್ರಲೋಕವಡಗಿಸಿಹುದೀ ಮಂತ್ರ!
ತಂದೆ, ತಾಯಿ, ಬಂದು ಬಲಗಿವೀ ಮಂತ್ರ!
ತ್ರಯೋದಶೀ ಪ್ರದೋಷ ರೂಪವೀ ಮಂತ್ರ!
ರಸಿದನು ಶಂಕರನು ಈ ಮಂತ್ರ! (ಅ)
-ರಸಿಗುಪದೇಶಿಸಿದ ಸಿದ್ಧ ಮಂತ್ರ!
ಗುರುಭಕ್ತಿ ಹೀನಗೆಲ್ಲಾ ಅಬ್ಯಂತರ! (ಅ)
-ರುಹಲೆಂತಿರದ ಮಹಿಮೆಯಪಾರ!
ನವಾಸ್ಯಾಗಿಹನಿದರ ದಾತಾರ! (ಅ)
-ರಸಿ ನಿರಂಜನಾದಿತ್ಯನಿತ್ತ ಸಾರ!!!

ಸರ್ವ ಶಕ್ತಿ ಸಂಪನ್ನನಾಗಬೇಕು! (ಗ)   4(2264)

-ರ್ವರಹಿತನಾಗಿ ತಾನಿರಬೇಕು!
ರಣ ತಾನಾಗಿ ಜೀವಿಸಬೇಕು! (ಭ)
-ಕ್ತಿ ಗುರುಚರಣದಲ್ಲಿಡಬೇಕು!
ಸಂಭಾವನೆಗಳಾಸೆ ಬಿಡಬೇಕು!
ರತತ್ವದರ್ಥ ತಿಳಿಯಬೇಕು! (ತ)
-ನ್ನ ತಾನರಿತು ಮುಕ್ತನಾಗಬೇಕು!
ನಾಮಜಪ ಸತತವಿರಬೇಕು! (ರಂ)
-ಗನಾಥನ ಸಾಯುಜ್ಯ ಸೇರಬೇಕು!
ಬೇರಾವುದನ್ನೂ ಬೇಡದಿರಬೇಕು!
ಕುಶಿ ನಿರಂಜನಾದಿತ್ಯಗಾಗ್ಬೇಕು!!!

ಸರ್ವ ಸುಖ, ಸಾಧನಾ, ಸಂಪತ್ತುಳ್ಳಾಕೆ ಸೌಖ್ಯಾ! (ಸ)   6(3921)

-ರ್ವಶಕ್ತ ಶ್ರೀಹರಿಯ ಪ್ರೀತಿಯ ಸೊಸೆ ಸೌಖ್ಯಾ!
ಸುಶ್ರಾವ್ಯ ವೀಣಾವಾದನ ಕಲಾನಿಧಿ ಸೌಖ್ಯಾ!
ಗವಾಹನನೊಲಿದ ಗಾನಲೋಲೆ ಸೌಖ್ಯಾ!
ಸಾಮಾದಿ ಚತುರ್ವೇದ ಸಾರವಾರಿಧಿ ಸೌಖ್ಯಾ!
ರ್ಮ, ಕರ್ಮಾನುಭವದ ಪೂರ್ಣ ಜ್ಞಾನಿ ಸೌಖ್ಯಾ!
ನಾಮ ಸಂಕೀರ್ತನಾನಂದ ಸಮಾಧಿಸ್ಥೆ ಸೌಖ್ಯಾ!
ಸಂಸಾರದಾವರಣದಲ್ಲಿ ನಿರ್ಲಿಪ್ತೆ ಸೌಖ್ಯಾ!
ಟ್ಟದ ರಾಣಿ ಬ್ರಹ್ಮನಿಗೆ ಗೀರ್ವಾಣೀ ಸೌಖ್ಯಾ! (ಕ)
-ತ್ತು ಎತ್ತಿ ಹಾರುವ ಮಯೂರವಾಹಿನೀ ಸೌಖ್ಯಾ! (ಕ)
-ಳ್ಳಾಟ, ಸುಳ್ಳಾಟವಿಲ್ಲದ ಸತ್ಯವಂತೆ ಸೌಖ್ಯಾ!
ಕೆಟ್ಟ ಯೋಚನೆಗಳಿಗೆಡೆಕೊಡಳಾ ಸೌಖ್ಯಾ!
“ಸೌ” ಬೀಜಾಕ್ಷರದಧಿದೇವತೆ ಬಾಲಾ ಸೌಖ್ಯಾ! (ಸೌ)
-ಖ್ಯಾ ನಿರಂಜನಾದಿತ್ಯನಾಗಿರಲೆಲ್ಲಾ ಸೌಖ್ಯಾ!!!

ಸರ್ವಕಾಲನುಕೂಲ ಕಾಲ! (ಸ)   2(934)

-ರ್ವಶಕ್ತನಿಹನೆಲ್ಲಾ ಕಾಲ!
ಕಾರ್ಯಸಾಗಬೇಕೆಲ್ಲಾ ಕಾಲ! (ಬ)
-ಲ ಕೊಡುವಾತನೆಲ್ಲಾ ಕಾಲ! (ಅ)
-ನುಮಾನ ಬಿಡುಎಲ್ಲಾ ಕಾಲ!
ಕೂತಾಗ, ನಿಂತಾಗೆಲ್ಲಾ ಕಾಲ! (ಬ)
-ಲ, ರಾಮಧ್ಯಾನವೆಲ್ಲಾ ಕಾಲ!
ಕಾತುರಾತುರಕ್ಕಲ್ಲಾ ಕಾಲ! (ಬ)
-ಲ, ನಿರಂಜನಾದಿತ್ಯ ಕಾಲ!!!

ಸರ್ವಕ್ಕೂ ಕಾಲ ಅಂತಕ! (ಗ)   6(3472)

ರ್ವಕ್ಕೂ ಕಾಲ ಅಂತಕ! (ಒ)
-ಕ್ಕೂಟಕ್ಕೂ ಕಾಲ ಅಂತಕ!
ಕಾಮಕ್ಕೂ ಕಾಲ ಅಂತಕ!
ಭ್ಯಕ್ಕೂ ಕಾಲ ಅಂತಕ!
ಅಂದಕ್ಕೂ ಕಾಲ ಅಂತಕ!
ಮಕ್ಕೂ ಕಾಲ ಅಂತಕ! (ಲೋ)
-ಕ ನಿರಂಜನಾದಿತ್ಯಕ!!!

ಸರ್ವಜ್ಞ ತಾ ಬಾಯ್ಮುಚ್ಚಿರುತಿಹನು! (ಗ)   6(4369)

-ರ್ವದಿಂದಲ್ಪಜ್ಞಾರ್ಭಟಿಸುತಿಹನು! (ಯ)
-ಜ್ಞ ಮಾಡದೇ ಭೋಗಿತಾನಾಗಿಹನು!
ತಾನಾರೆಂಬ ಜ್ಞಾನವಿಲ್ಲದಿಹನು!
ಬಾಡಿದ ಕುಸುಮವಾಗುತ್ತಿಹನು! (ತಾ

)
-ಯ್ಮುನಿಸಿಗೀಡಾಗಿ ಅಳುತ್ತಿಹನು! (ನೆ)
-ಚ್ಚಿ ಸಂಸಾರವನು ಕೆಡುತ್ತಿಹನು! (ಗು)
-ರುವನ್ನಲಕ್ಷಿಸುತ್ತಿರುತಿಹನು!
ತಿಪ್ಪೆಗುಂಡಿಯ ಹುಳುವಾಗಿಹನು!
ರಿಸ್ಮರಣೆಯಿಂದ ಪಾವನನು! (ಸೂ)
-ನು ನಿರಂಜನಾದಿತ್ಯನಾಗುವನು!!!

ಸರ್ವಜ್ಞ ದೇವರೊಬ್ಬನಯ್ಯಾ! (ಗ)   4(2293)

-ರ್ವವೇಕೆ ಮಾನವನಿಗಯ್ಯಾ? (ಯ)
-ಜ

ದಿಂದಜ್ಞಾನ ಕಳೆಯಯ್ಯಾ!
ದೇವರ ಧ್ಯಾನಾ ಯಜ್ಞವಯ್ಯಾ!
ರ ಗುರುವಾ ದೇವನಯ್ಯಾ! (ಬೇ)
-ರೊಬ್ಬ ದೇವರಿನ್ನಿಲ್ಲವಯ್ಯಾ! (ಅ)
-ಬ್ಬರಾರ್ಭಟವಗಿಲ್ಲವಯ್ಯಾ! (ಅ)
-ನಸೂಯಾತ್ಮಾ ದತ್ತಾತ್ರೇಯಯ್ಯಾ! (ಅ)
-ಯ್ಯಾತ ನಿರಂಜನಾದಿತ್ಯಯ್ಯಾ!!!

ಸರ್ವಧರ್ಮ ಸಮ್ಮೇಳನ ಸುಖವಯ್ಯಾ! (ಸ)   2(783)

-ರ್ವ ಶಕ್ತಾತ್ಮ ಸರ್ವರಂತರ್ಯಾಮಿಯಯ್ಯಾ!
ರ್ಮ ಕರ್ಮದಿಂದಾ ದಿವ್ಯ ದರ್ಶನಯ್ಯಾ! (ಮ)
-ರ್ಮವಿದನರಿತು ಸಾಧಿಸಬೇಕಯ್ಯಾ!
ರ್ವನಾಮ ರೂಪಗಳವನದಯ್ಯಾ! (ಹಿ)
-ಮ್ಮೇಳದಿಂದವನ ಗಾನಾನಂದವಯ್ಯಾ! (ದ)
-ಳಪತಿಗಳೈಕ್ಯದಿಂದ ಶಾಂತಿಯಯ್ಯಾ!
‘ನಗುರೋರಧಿಕಂ’ ತತ್ವ ಜ್ಞಾನಕ್ಕಯ್ಯಾ!
ಸುರ, ಮುನಿಗಳನುಭವವಿದಯ್ಯಾ!
ಚಿತವಪ್ಪುದಿದಭ್ಯಾಸದಿಂದಯ್ಯಾ!
ನಜಾಪ್ತನೆಲ್ಲರಾಪ್ತ ಗುರುವಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯೈಕ್ಯ ಮತಕ್ಕಯ್ಯಾ!!!

ಸರ್ವನಾಮ ರೂಪೇಕಾತ್ಮ! (ಸ)   4(1499)

-ರ್ವ ಕಾರಣ ಕರ್ತೇಕಾತ್ಮ!
ನಾರಾಯಣ ರೂಪೇಕಾತ್ಮ!
ಹೇಶ ಸ್ವರೂಪೇಕಾತ್ಮ!
ರೂಪ, ರೇಖಾತೀತೇಕಾತ್ಮ! (ಜ)
-ಪೇಶ, ತಪೇಶ, ಗೋಪಾತ್ಮ!
ಕಾಮಾಕ್ಷಿ, ಮೀನಾಕ್ಷ್ಯೇಕಾತ್ಮ! (ಆ)
-ತ್ಮ ನಿರಂಜನಾದಿತ್ಯಾತ್ಮ!!!

ಸರ್ವವ್ಯಾಪಿಯಿಂದ ಸರ್ವ ಸಹಾಯ! (ಓ)   2(879)

-ರ್ವನೆಲ್ಲಾ ರೂಪದಿಂದೆಲ್ಲಾ ಸಹಾಯ!
ವ್ಯಾಪಿಸುತೆಲ್ಲೆಲ್ಲೂ ಎಲ್ಲಾ ಸಹಾಯ!
ಪಿರಿದು, ಕಿರಿದೆಂಬೆಲ್ಲಾ ಸಹಾಯ!
ಯಿಂದು, ಮುಂದು, ಎದೆಂದೆಂಲ್ಲಾ ಸಹಾಯ!
ರ್ಶನವಿಂತಾದರೆಲ್ಲಾ ಸಹಾಯ!
ದ್ಬುದ್ಧಿಗೆ ಜಗತ್ತೆಲ್ಲಾ ಸಹಾಯ! [ಗ]
-ರ್ವ ಬಿಟ್ಟಾರಿಸಿದರೆಲ್ಲಾ ಸಹಾಯ!
ದ್ಗುಣ ಗ್ರಾಹಾದರೆಲ್ಲಾ ಸಹಾಯ! [ಸ]
-ಹಾಯ, ಸಾಧಕನಿಗೆಲ್ಲಾ ಸಹಾಯ! [ಜ]
-ಯಕ್ಕೆ ನಿರಂಜನಾದಿತ್ಯ ಸಹಾಯ!!!

ಸರ್ವಶಕ್ತ ತಾನಾಗಬೇಕು! (ಗ)   6(3458)

-ರ್ವವೇನೂ ಇಲ್ಲದಿರಬೇಕು!
ರಣರ ಪೊರೆಯಬೇಕು! (ಯು)
-ಕ್ತ ಸೇವೆ ಸ್ವೀಕರಿಸಬೇಕು!
ತಾಳ್ಮೆ ಬಹಳವಿರಬೇಕು!
ನಾಮ, ರೂಪಕ್ಕಂಟದಿರ್ಬೇಕು!
ಗನ ಸದೃಶನಾಗ್ಬೇಕು!
ಬೇರೆಯವರಾಳದಿರ್ಬೇಕು! (ಬೇ)
-ಕು, ನಿರಂಜನಾದಿತ್ಯನಾಗ್ಬೇಕು!!!

ಸರ್ವಶಕ್ತಿ ಸಂಪನ್ನ ಸದ್ಗುರು ದೇವ! (ಗ)   5(2723)

-ರ್ವರಹಿತ ಸಚ್ಚಿದಾನಂದಾತ್ಮಾ ದೇವ!
ರಣರಿಗೆ ಶರಣಾ ಮಹಾದೇವ! (ಭ)
-ಕ್ತಿ, ಮುಕ್ತಿ ಸ್ವರೂಪ ಶಿವಾನಂದಾ ದೇವ! (ನಿಃ)
-ಸಂಗ, ನಿರ್ಮೋಹ, ನಿಶ್ಚಲತತ್ವಾ ದೇವ!
ರಂಜ್ಯೋತಿ, ಪರಮಹಂಸಾತ್ಮಾ ದೇವ! (ತ)
-ನ್ನ ತಾನೇ ಮಾಯ ಮಾಡಿಕೊಂಡವಾ ದೇವ!
ಕಲ ಚರಾಚರ ವ್ಯಾಪಕಾ ದೇವ! (ಮ)
-ದ್ಗುರು, ಜಗದ್ಗುರು ದತ್ತಾತ್ರೇಯಾ ದೇವ!
(ಪೌ)ರುಷದಲ್ಲನುಪಮನಾ ಗುರುದೇವ!
ದೇಶ, ವಿದೇಶಕ್ಕವನೊಬ್ಬನೇ ದೇವ! (ಅ)
-ವನೇ ನಿರಂಜನಾದಿತ್ಯಾನಂದ ದೇವ!!!

ಸರ್ವಸಂಗ ಪರಿತ್ಯಾಗಿಯಾಗು! (ಓ)   3(1070)

-ರ್ವ ಗುರುದೇವನಲ್ಲೈಕ್ಯವಾಗು!
ಸಂಸಾರ ವ್ಯಾಪಾರ ದೂರನಾಗು! (ಸಾ)
-ಗರದಲೆಗಳಿಂದ ಪಾರಾಗು!
ರಮಹಂಸ ಯೋಗಿ ನೀನಾಗು! (ಹ)
-ರಿ ಸ್ಮರಣೆ ಮಾಡುವವನಾಗು! (ನಿ)
-ತ್ಯಾನಿತ್ಯ ಚಿಂತಿಸುವವನಾಗು!
ಗಿರಿಧರನಂತಲಿಪ್ತನಾಗು! (ಆ)
-ಯಾಸವಿಲ್ಲದಾತ್ಮಾರಾಮನಾಗು! (ಆ)
-ಗು, ನಿರಂಜನಾದಿತ್ಯ ನೀನಾಗು!!!

ಸರ್ವಸಮಾನ ಭಿಕ್ಷೆ ಬಹಳ ಸುಖ! [ಓ]   4(2447)

-ರ್ವನಿಗೊಂದೋರ್ವನಿಗೊಂದಾದ್ರಲ್ಪ ಸುಖ!
ತ್ವ ಗುಣಾಭಿವೃದ್ಧಿಯಿಂದಾತ್ಮ ಸುಖ!
ಮಾಧುರ್ಯವಿದರದೇಕರಸ ಸುಖ! (ಅ)
-ನವರತಾಭ್ಯಾಸದಿಂದಾ ಯೋಗ ಸುಖ!
ಭಿನ್ನರುಚಿಯಿಂದಾಗದಮಲ ಸುಖ! (ದೀ)
-ಕ್ಷೆಯುದ್ದೇಶ ಅಭೇದಾತ್ಮಾನಂದ ಸುಖ!
ಣ್ಣ ಬದ್ಲಾಯಿಸಿದರಾಗದಾ ಸುಖ!
ಗ್ಲಿರುಳ್ದುಡಿದ್ರುದ್ದೇಶ ಸಿದ್ಧಿ ಸುಖ! (ಹ)
-ಳಬ್ನಾದ ಮಾತ್ರಕ್ಕಾಗದು ಜ್ಞಾನ ಸುಖ!
ಸುವಿಮಲಾನಂದ ಗುರುಕೃಪಾಸುಖ!
ಗ ನಿರಂಜನಾದಿತ್ಯಾನಂದ ಸುಖ!!!

ಸರ್ವಸಾಕ್ಷಿಯಾಗಿರಬೇಕು! [ಗ]   5(3002)

-ರ್ವಕ್ಕೆಡೆ ಕೊಡದಿರಬೇಕು!
ಸಾಕ್ಷಾತ್ಕಾರಕ್ಕದಿಲ್ಲಿರ್ಬೇಕು! (ಕು)
-ಕ್ಷಿ ಭಾಧೆಗೆ ಪ್ರಸಾದ ಬೇಕು!
ಯಾದವೇಂದ್ರನ ದಯೆ ಬೇಕು!
ಗಿಟ್ಟದಿದ್ದರದು ಸಾಯ್ಬೇಕು!
ಕ್ಕಸರ ಸೊಕ್ಕಡಗ್ಬೇಕು!
ಬೇಸರವಿಲ್ಲದಾತ್ಮಾಗೇಕು! (ಬೇ)
-ಕು ನಿರಂಜನಾದಿತ್ಯಾಗ್ಬೇಕು!!!

ಸರ್ವಸಿದ್ಧಿ ಗುರು ಕೃಪೆಯಿಂದ! (ಗ)   6(3496)

-ರ್ವ ವಿಲ್ಲದೇ ಸ್ಮರಿಸ್ಬೇಕಾದ್ರಿಂದ!
ಸಿಕ್ಕಿದವ್ಕಾಶ ಬಿಡ್ಬಾರ್ದಾದ್ರಿಂದ! (ವೃ)
-ದ್ಧಿಯಾಗ್ಬೇಕ್ಭಕ್ತಿ ಸತತಾದ್ರಿಂದ!
ಗುರುವಿಗಿದಿರಾಡ್ಬಾರ್ದಾದ್ರಿಂದ! (ಕ)
-ರುಣೆಗೆ ಪಾತ್ರರಾಗ್ವರದ್ರಿಂದ!
ಕೃತಿಯಂತೆ ಮಾತಿರ್ಬೇಕಾದ್ರಿಂದ!
ಪೆರತೊಂದು ಪೂಜೆಬೇಡಾದ್ರಿಂದ! (ಬಾ

)
-ಯಿಂದೆಷ್ಟಾಡಿದ್ರೇನಾಗ್ವುದದ್ರಿಂದ?
ತ್ತ ನಿರಂಜನಾದಿತ್ಯಾನಂದ!!!

ಸರ್ವಾಂಗ ಸುಂದರ ರೂಪ ನನ್ನದಯ್ಯಾ! (ಸ)   2(681)

-ರ್ವಾಂಗದಲೆನ್ನ ವಾಸವಿರುವುದಯ್ಯಾ!
ರ್ವನಾಶಕಿದರಿತಿರಬೇಕಯ್ಯಾ!
ಸುಂದರಾತ್ಮನಿಗಿಂತನ್ಯರಾರಿಲ್ಲಯ್ಯಾ!
ರ್ಶನದಾದರೆ ತಿಳಿಯುವುದಯ್ಯಾ! (ಸ್ಥಿ)
-ರ, ಚರಾದಿಗಳಲ್ಲಿದನು ನೋಡಯ್ಯಾ!
ರೂಪವಿದು ಅಮರವಾಗಿಹುದಯ್ಯಾ!
ರಿಪರಿಯ ರೋಗವಿದಕಿಲ್ಲಯ್ಯಾ!
ರ, ಸುರರೆಂಬ ಭೇದವಿಲ್ಲಯ್ಯಾ! (ನ)
-ನ್ನ ರೂಪ ಸೌಂದರ್ಯ ಹೀಗಿರುವುದಯ್ಯಾ!
ತ್ತಾವಧೂತನಿದಕೆ ಸಾಕ್ಷಿಯಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನಾ ಸುಂದರಯ್ಯಾ!!!

ಸರ್ವಾತ್ಮಾನಂದ ಪ್ರತಿಭಾ! (ಗೀ)   2(552)

-ರ್ವಾಣಿ ಪ್ರಸಾದ ಪ್ರತಿಭಾ! (ಆ)
-ತ್ಮಾನು ಸಂಧಾನ ಪ್ರತಿಭಾ! (ಅ)
-ನಂಗನುಪೇಕ್ಷೆ ಪ್ರತಿಭಾ! (ಮ)
-ದವಿಲ್ಲದುದೇ ಪ್ರತಿಭಾ!
ಪ್ರಮಾಣಿಕತೆ ಪ್ರತಿಭಾ!
ತಿತಿಕ್ಷೆಯದು ಪ್ರತಿಭಾ! (ಶೋ)
-ಭಾ ನಿರಂಜನ ಪ್ರತಿಭಾ!!!

ಸರ್ವಾಧಾರಾಗಿಹಗಾವಾಧಾರ? (ಓ)   3(1010)

-ರ್ವಾತ್ಮ ವಿಶ್ವವ್ಯಾಪಿಗಾವಾಧಾರ?
ಧಾರಾಕಾರ ವ್ಗದಾಧಾರ!
ರಾಗ, ದ್ವೇಷ ನಾಶಕ್ಕದಾಧಾರ! (ಯೋ)
-ಗಿ ಯಾಗಬೇಕಾದರದಾಧಾರ!
ರಿ, ಹರರಜರ್ಗದಾಧಾರ!
ಗಾಳಿ, ಬಿಸಿಲಿಗೆಲ್ಲದಾಧಾರ!
ವಾಸುದೇವ ವಸುಧೆಗಾಧಾರ!
ಧಾತ್ರಿ ಚರಾಚರಕ್ಕೆಲ್ಲಾಧಾರ! (ವ)
-ರ, ನಿರಂಜನಾದಿತ್ಯಾತ್ಮಾಧಾರ!!!

ಸರ್ವಾಧಿಕಾರಿಯಾಡಳಿತವೇ ಲೇಸು! (ಸ)   6(4233)

-ರ್ವಾತ್ಮ ದೃಷ್ಟಿ ಅವನಲ್ಲಿ ಉನ್ಮೀಲಿಸು! (ಅ)
-ಧಿಕಾರ ಸದುಪಯೋಗಕ್ಕೆಚ್ಚರಿಸು!
ಕಾಮಕೇಳಿಗೆಡೆಗೊಡದಂತಿರಿಸು! (ವೈ)
-ರಿನಿಗ್ರಹ ಶಕ್ತಿಯನ್ನು ಪ್ರಜ್ವಲಿಸು!
ಯಾದವೀ ಕಲಹ ನಿರ್ಮೂಲಗೊಳಿಸು! (ಬ)
-ಡವ, ಬಲ್ಲಿದರೆಂಬ ಭೇದ ಬಿಡಿಸು! (ಅ)
-ಳಿದಾದರ್ಶ ರಾಜರ ದಾರಿ ಹಿಡಿಸು!
ತ್ವಜ್ಞನಾಗಿ ಅವನನ್ನು ರೂಪಿಸು!
ವೇಷ, ಭುಷಣದಾಸೆಯನ್ನು ಮರೆಸು!
ಲೇಖಕರುತೆಪ

ಕ್ಷೆಯನ್ನು ನಿಲ್ಲಿಸು! (ಪ)
-ಸುಳೆ ನಿರಂಜನಾದಿತ್ಯನಿಗೆನಿಸು!!!

ಸರ್ವೇಂದ್ರಿಯೋಪವಾಸ ಸಮಾಧಿ! (ಗ)   6(4201)

-ರ್ವೇಂದ್ರಿಯ ಸತ್ತಾಗ ಆ ಸಮಾಧಿ! (ಉ)
ದ್ರಿಕ್ತವಾದಾಗದು ಬಹು ಕ್ರೋಧಿ!
ಯೋಗವೆಂಬುದದು ನಿರುಪಾಧಿ!
-ಪರಮಾರ್ಥದ ಪರಮಾವಧಿ!
ವಾದ, ಭೇದವಿಲ್ಲದದು ಸುಧೀ!
ಕಲ ಸಾಧನೆಗಿದವಧಿ!
ರ್ವಾತ್ಮ ಭಾವದದೊಂದು ನಿಧಿ!
ಮಾನಭಿಮಾನಕ್ಕದು ವಿರೋಧಿ! (ನಿ)
-ಧಿ ನಿರಂಜನಾದಿತ್ಯಾನಂದಾಬ್ಧಿ!!!

ಸರ್ವೋತ್ತಮನ ಸಂಗ ಸದಾ ಇರಲಿ! (ಸ)   5(2820)

-ರ್ವೋದಯಕ್ಕಿದು ಸನ್ಮಾರ್ಗವಾಗಿರಲಿ! (ಚಿ)
-ತ್ತ ಶುದ್ಧಿಗಿದು ಸಹಾಯವಾಗಿರಲಿ!
ದನಮೋಹನನುದ್ಧಾರವಾಗಲಿ!
ಶ್ವರದಾಸೆ ಕ್ಷಯವಾಗಿ ಹೋಗಲಿ!
ಸಂಕಟ ಪರಿಹಾರವಿದು ಮಾಡಲಿ!
ರ್ವವೆಂದೆಂದೂ ತಲೆಯೆತ್ತದಿರಲಿ!
ಮಭಾವನೆಯಿಂದ ಶಾಂತಿಯಾಗಲಿ!
ದಾಸದಾಸ ಕೇಶವ ತಾನೀಗಾಗಲಿ!
ಲ್ಲಿ, ಅಲ್ಲಿ ಎಲ್ಲೆಲ್ಲೂ ಆತ ಕಾಣಲಿ! (ಪ)
-ರಮಾರ್ಥದರ್ಥವಿದರರಿವಾಗಲಿ! (ನಿ)
-ಲಿಸು ಮನ ನಿರಂಜನಾದಿತ್ಯನಲಿ!!!

ಸಲಹೆ ಕೇಳಿ ಛಲ ಫಲವೇನು? (ಕ)   4(1695)

-ಲಕಿದ ಮನ ಮೌನವಾಗ್ವುದೇನು?
ಹೆಸರಿಟ್ಟಡ್ಡಹೆಸ್ರು ಕೂಗ್ವುದೇನು?
ಕೇರದಕ್ಕಿಯನ್ನ ಮಾಡುವುದೇನು? (ಗಾ)
-ಳಿ ಹೊಡೆತಕ್ಕೆದೆಯೊಡ್ದುವುದೇನು?
ತ್ರಿ ಮಳೆಯಲ್ಲಿ ಮುಚ್ಚುವುದೇನು? (ಬಾ)
-ಲಕರ ಬಲಾತ್ಕರುಸುವುದೇನು?
ಲ, ವೃಕ್ಷ ಕತ್ತರಿಸುವುದೇನು?
ಜ್ಜೆ ಲಲನೆ ಬಿಟ್ಟಿರುವುದೇನು?
ವೇದಾಭ್ಯಾಸ ವಿಪ್ರ ಬಿಡುವುದೇನು? (ಏ)
-ನು? ನಿರಂಜನಾದಿತ್ಯನೃತನೇನು???

ಸಲಿಗೆಯಾದರೆ ಸಲಗವೂ ಮಿಗ! [ನಾ]   3(1228)

-ಲಿಗೆ ಬಿಗಿ ತಪ್ಪಿದರಪ್ಪುದು ರೋಗ! (ಹ)
-ಗೆತನದಿಂದಾಗುವುದಾಸ್ತಿ ವಿಭಾಗ!
ಯಾಗದಿಂದ ಸರ್ವಸಮೃದ್ಧಿ ಭೂಭಾಗ!
ರ್ಪ, ದಂಭದಿಂದ ಕೆಡುವುದು ಯೋಗ! (ಕೆ)
-ರೆ, ತೊರೆ ಬತ್ತಿದರೆ ಏತಕ್ಕಾ ಜಾಗ?
ರ್ವೇಶ್ವರಗಾಗಿರಬೇಕೆಲ್ಲಾ ತ್ಯಾಗ! (ಬ)
-ಲ ಗುಂದಿಸುವುದೆಲ್ಲಾ ವಿಷಯ ಭೋಗ!
ರ್ವದಿಂದ ಗತಿಗೆಡುವುದುದ್ಯೋಗ! (ಆ)
-ವೂರಾದರೇನು ಸುಖ ಮಿಥ್ಯಾನುರಾಗ?
ಮಿಸುಕಾಡ ಗರುಡನ ಮುಂದೆ ನಾಗ! (ಜ)
-ಗಕೆ ನಿರಂಜನಾದಿತ್ಯ ಉಪಯೋಗ!!!

ಸಲಿಗೆಯಾದ್ರೆ ಸಲಗವೂ ಅಗ್ಗ! (ಶೂ)   4(2076)

-ಲಿಯಾದ್ರೂ ಕಾಪಾಲಿಯಾದಾಗ ಅಗ್ಗ! (ಗಂ)
-ಗೆಯಾದ್ರೂ ಅಂಗಳಕ್ಕೆ ಬಂದಾಗಗ್ಗ! (ದ)
-ಯಾನಿಧಿಯೂ ದರಿದ್ರನಾದಾಗಗ್ಗ! (ನಿ)
-ದ್ರೆಯಲ್ಲಿದ್ದಾಗ ಸುಭದ್ರೆಯೂ ಅಗ್ಗ!
ರ್ವೋತ್ತಮನೂ ಜೀವಾತ್ಮಾದಾಗಗ್ಗ!
ಕ್ಷ್ಮಿಯಾದ್ರೂ ಅಲಕ್ಷ್ಯವಾದಾಗಗ್ಗ!
ರುಡನೂ ಹರಿ ಕೈ ಬಿಟ್ಟಾಗಗ್ಗ! (ಆ)
-ವೂರಾದ್ರೂ ಮಖೆ, ಬೆಳೆ ಹೋದಾಗಗ್ಗ!
ಮೃತಾನ್ನವೂ ಹಳಸಿದಾಗಗ್ಗ! (ಜ)
-ಗ್ಗ, ನಿರಂಜನಾದಿತ್ಯನಾಗನಗ್ಗ!!!

ಸಲಿಗೆಯಿಂದಾಗ್ವುದು ಸುಲಿಗೆ! (ನಾ)   5(2615)

-ಲಿಗೆಯಿಂದಾಗುವುದು ಮೈಲಿಗೆ!
(ಬ)ಗೆ(ಬ)ಗೆಯಾಸೆಯಿಂದ ಜೈಲಿಗೆ! (ಕೈ)
-ಯಿಂದ ಹಾಕ್ಬೇಕು ನಾಟ ಸಾಲಿಗೆ!
ದಾರಿಯಾಗ್ಬೇಕುತ್ತಮ ಮಾಲಿಗೆ! (ಆ)
-ಗ್ವುದಾಗ ಭರ್ತ್ತ್ಯಾತನ ಜೋಲಿಗೆ!
ದುರ್ವ್ಯಾಪಾರ ದುಷ್ಟರ ಪಾಲಿಗೆ!
ಸುಸಂಸ್ಕೃತರ ನಿಂದೆ ಪೋಲಿಗೆ! (ಶೂ)
-ಲಿಯಾಗ್ರಹ ಕಾರಣ ಸೋಲಿಗೆ! (ನೆ)
-ಗೆ, ನಿರಂಜನಾದಿತ್ಯನಲ್ಲಿಗೆ!!!

ಸವಾರಿಯಿನ್ನೂ ಚಿತ್ತೈಸಿಲ್ಲವೇಕೆ?   6(4206)

ವಾಸನಾ ಸಂಸಾರವಿರುವುದಕೆ! (ನಾ)
-ರಿಯರ ಸಂತೈಸಲಾಗದುದಕೆ! (ಬಾ)
-ಯಿ ವೇದಾಂತ ಹೆಚ್ಚಾಗಿಹೋದುದಕೆ! (ತ)
-ನ್ನೂರಭಿಮಾನ ಕೆಟ್ಟು ಹೋದುದಕೆ!
ಚಿಕ್ಕ ಮಕ್ಕಳು ಬಿಡದಿದ್ದುಕೆ! (ಚಿ)
-ತ್ತೈಕಾಗ್ರತಾ ಧ್ಯಾನವಿಲ್ಲದುದಕೆ!
ಸಿಟ್ಟು, ವಿವೇಕ ಕೆಡಿಸಿದುದಕೆ! (ಕೊ)
-ಲ್ಲಲು ವೈರಿಗಳನ್ನಾಗದುದಕೆ!
ವೇಷ ಭುಷಣಡ್ಡಿ ಮಾಡಿದುದಕೆ! (ಏ)
-ಕೆ? ನಿರಂಜನಾದಿತ್ಯಾಗದುದಕೆ!!!

ಸಹಜ ಸ್ಥಿತಿ ಸಿದ್ಧಿಗಾಗಿ ನಾನಾನುಭವ!   6(3994)

ಠಯೋಗದಿಂದಾದಪೂರ್ಣತೆಯನುಭವ!
ಡದೇಹಕ್ಕಾರೋಗ್ಯ ದೊರೆತುದನುಭವ!
ಸ್ಥಿರ ಬುದ್ಧಿ ರಾಜಯೋಗದಿಂದಾದನುಭವ!
ತಿತಿಕ್ಷೆ, ವೈರಾಗ್ಯದಿಂದಾತ್ಮ ತತ್ವಾನುಭವ!
ಸಿಟ್ಟಿನಿಂದಪ್ಪ ದುಷ್ಪರಿಣಾಮದನುಭವ! (ಸಿ)
-ದ್ಧಿ ರಿದ್ಧಿ ಸ್ವಸ್ಥಿತಿಗಡ್ಡಿಯಾದ ಅನುಭವ!
ಗಾನ, ಭಜನೆಯಿಂದ ಭಾವಾವೇಶಾನುಭವ!
ಗಿರಿಧರನ ಗೀತೆಯಿಂದ ಜ್ಞಾನಾನುಭವ!
ನಾಮ ಜಪದಿಂದ ಮನಶ್ಯುದ್ಧಿಯನುಭವ!
ನಾನಾರೆಂಬ ವಿಚಾರದಿಂದಾನಂದಾನುಭವ!
ನುಡಿಯಡಗಿದ ಮೇಲೆ ಬಹಳಾನುಭವ!
ಕ್ತರೊಡನಾಟದಿಂದೇನೇನೋ ಅನುಭವ! (ಶಿ)
-ವ ನಿರಂಜನಾದಿತ್ಯಾನಂದ ಪೂರ್ಣಾನುಭವ!!!

ಸಹಜಾನಂದ ನಿರಂಜನಾನಂದ!   1(236)

ರಿ, ಹರರಜರೊಂದಾದಾದಾನಂದ!
ಜಾಗ್ರತ್ಸಪ್ನದಂತೆ ನೋಡಿದಾನಂದ! (ಆ)
-ನಂದ ಹೇಳುವುದಕಾಗದಾನಂದ! (ಅ)
-ದನುಭವಿಸಿದರರಿವಾನಂದ!
ನಿರವಧಿ ಸಖವೀ ನಿಜಾನಂದ! (ಸಾ)
-ರಂಗನಿನಿತು ನಿತ್ಯ ತೃಪ್ತಾನಂದ!
ಗದ ವ್ಯಾಮೋಹವಿಲ್ಲದಾನಂದ!
ನಾಕಾರ, ವಿಕಾರವಿರದಾನಂದ!
ನಂದಕಂದನೆಂದಾ ವಿಜಯಾನಂದ!
ತ್ತ ನಿರಂಜನಾದಿತ್ಯಾಂಗಾನಂದ!!!

ಸಹಜಾನಂದಾನಂದಾ ಶಿವಾನಂದ!   4(1466)

ರಿ ಭಜನಾನಂದಾ ಶಿವಾನಂದ!
ಜಾಗೃತ ಪ್ರೇಮಾನಂದಾ ಶಿವಾನಂದ!
ನಂದ ಗೋವಿಂದಾನಂದಾ ಶಿವಾನಂದ!
ದಾಸ ದಾಸಾತ್ಮಾನಂದಾ ಶಿವಾನಂದ!
ನಂದಿವಾಹನಾನಂದಾ ಶಿವಾನಂದ!
ದಾರಿದ್ರ್ಯ ಹರಾನಂದಾ ಶಿವಾನಂದ ಶಿವಾನಂದ!
ಶಿಷ್ಯ ಕೋಟಿಯಾನಂದಾ ಶಿವಾನಂದ!
ವಾದ್ಯ ವಾದನಾನಂದಾ ಶಿವನಂದ!
ನಂಜುಂಡೇಶ್ವರಾನಂದಾ ಶಿವಾನಂದ! (ಕಂ)
-ದ ನಿರಂಜನಾದಿತ್ಯಾ ಶಿವಾನಂದ!!!

ಸಹನಾಮೂರ್ತಿ ಏಸುಕ್ರಿಸ್ತ! (ಅ)   1(325)

-ಹರ್ನಿಶಿ ನಿಸ್ವಾರ್ಥ ಸೇವಾಸಕ್ತ! (ಅ)
-ನಾಚಾರ ಅಡಗಿಸಿದ ಶಕ್ತ! (ಅ)
-ಮೂಲ್ಯ ಉಪದೇಶವಿತ್ತ ಭಕ್ತ! (ಅ)
-ರ್ತಿಯಿಂದರಿಷ್ಟ ದೂರ ಗೈದಾಪ್ತ!
ನಾದರೂ ಸ್ಥಿತಪ್ರಜ್ಞಾಲಿಪ್ತ!
ಸುದರ್ಶನ ದೀಕ್ಷಾ ಸ್ನಾನಾಸಕ್ತ!
ಕ್ರಿಯಾಸಿದ್ಧಿಯಾತ ಸರ್ವಶಕ್ತ! (ಹ)
-ಸ್ತ, ನಿರಂಜನಾದಿತ್ಯನಂತಾಪ್ತ!

ಸಹವಾಸ ಸಾರ್ಥಕ ಮಾಡಿಕೋ!   2(773)

ಗಲಿರುಳವನ ನೋಡಿಕೋ!
ವಾದ ಮಾಡದವನಂತಿದ್ದುಕೋ!
ತತವನಡಿಗೆರಗಿಕೋ!
ಸಾಧನೆಯಿದ ಸದಾಮಾಡಿಕೋ! (ವ್ಯ)
-ರ್ಥ ಕಾಲಕ್ಷೇಪ ಮಾಡದಿದ್ದುಕೋ!
ಲಿ, ಮಲ ತೊಳೆಯುತಿದ್ದುಕೋ!
ಮಾತು, ಕಥೆಯವನಂತಾಡಿಕೋ! (ಹಾ)
-ಡಿ, ಪಾಡಿ ಅವನನೊಲಿಸಿಕೋ! (ಅ)
-ಕೋ, ನಿರಂಜನಾದಿತ್ಯ ಕೂಡಿಕೋ!!!

ಸಹಸ್ರ ಕುಸುಮಾರ್ಚನೆಯಾಯ್ತು ಶಿವಪಾದಕ್ಕೆ!   3(1293)

ಳದಿ ನೀಲಿ ಕೆಂಪು ಹೂಗಳಾ ಶಿವಪಾದಕ್ಕೆ!
ಸ್ರವಿಸಿದ್ದಾಯ್ತೆಲ್ಲಾ ತೀರ್ಥಗಳಾ ಶಿವಪಾದಕ್ಕೆ!
ಕುಣಿ ಕುಣಿದು ಬಿದ್ದಾಯ್ತೂ ಗುರು ಶಿವಪಾದಕ್ಕೆ!
ಸುಖ, ದುಃಖವನ್ನೊಪಿಸಿದ್ದಾಯ್ತೂ ಶಿವಪಾದಕ್ಕೆ!
ಮಾನಾಪಮಾನ ಬಿಟ್ಟು ಕೊಟ್ಟಾಯ್ತಾ ಶಿವಪಾದಕ್ಕೆ! (ಅ)
-ರ್ಚನಾದ್ಯೆಲ್ಲಾ ವಿಧ ಪೂಜೆಯಾಯ್ತಾ ಶಿವಪಾದಕ್ಕೆ! (ಮ)
-ನೆ, ಮಠವೆಲ್ಲಾ ಅರ್ಪಿಸಿದ್ದಾಯ್ತಾ ಶಿವಪಾದಕ್ಕೆ!
ಯಾವುದೂ ನಿನ್ನಿಷ್ಟವೆಂದಿದ್ದಾಯ್ತಾ ಶಿವಪಾದಕ್ಕೆ! (ಆ)
-ಯ್ತು, ಮಾಡಿಸಿದ್ದೆಲ್ಲಾ ಮಾಡಿದ್ದಾಯ್ತಾ ಶಿವಪಾದಕ್ಕೆ!
ಶಿಶುವಿದು ನಿನ್ನದೆಂದದ್ದಾಯ್ತಾ ಶಿವಪಾದಕ್ಕೆ!
ರಗುರು ನೀನೆಲ್ಲವೆಂದಾಯ್ತಾ ಶಿವಪಾದಕ್ಕೆ!
ಪಾರು ಮಾಡುವಾತ ನೀನೆಂದಾಯ್ತಾ ಶಿವಪಾದಕ್ಕೆ!
ಯೆಯಿನ್ನೂ ಬಾರದೇಕೆಂದಾಯ್ತಾ ಶಿವಪಾದಕ್ಕೆ! (ಅ)
-ಕ್ಕೆ ನಿರಂಜನಾದಿತ್ಯನಿಂದ ಕಲ್ಯಾಣ ಜಗಕ್ಕೆ!!!

ಸಹಸ್ರ ಚಂಡೀ ಹೋಮವಾಗಲಿ!   2(922)

ರ್ಷವೆಲ್ಲೆಲ್ಲೂ ತುಳುಕಾಡಲಿ!
ಸ್ರವಿಸಿ ಕೃಪಾವೃಷ್ಟಿಯಾಗಲಿ! (ಆ)
-ಚಂದ್ರಾರ್ಕ ದೈವಿಕ ಬೆಳಗಲಿ! (ನಾ)
-ಡೀಗ ಕಷ್ಟದಿಂದ ಪಾರಾಗಲಿ! (ಅ)
-ಹೋರಾತ್ರಿ, ಧ್ಯಾನ, ಜಪಸಾಗಲಿ!
ಹಾದೇವಿ ಪ್ರಸನ್ನಳಾಗಲಿ!
ವಾದ, ಭೇದ ನಿರ್ನಾಮವಾಗಲಿ!
ತಿ, ಮತಿ ಪರಿಶುದ್ಧಾಗಲಿ! (ಬ)
-ಲಿಷ್ಟ ನಿರಂಜನಾದಿತ್ಯಾಗಲಿ!!!

ಸಹಾಯ ಬೇಸಾಯಕ್ಕಿರಬೇಕು!   5(2727)

ಹಾಸ್ಯ ಕುಚೋದ್ಯಗಳ ಬಿಡ್ಬೇಕು! (ಪ್ರ)
-ಯತ್ನಕ್ಯಾಲಸ್ಯವಿಲ್ಲದಿರ್ಬೇಕು!
ಬೇಲಿ ಹೊಲಕ್ಕೆ ಹಾಕಲೇಬೇಕು!
ಸಾಹಸದಲ್ಲಿ ಶ್ರದ್ಧೆ ಸೇರ್ಬೇಕು! (ಭ)
-ಯ, ಭಕ್ತಿ ಗುರುವಿನಲ್ಲಿರ್ಬೇಕು! (ಸೊ)
-ಕ್ಕಿನ ಮಾತುಗಳಾಡದಿರ್ಬೇಕು! (ಪ)
-ರಮಾರ್ಥಕ್ಕಿದು ದಾರಿಯಾಗ್ಬೇಕು!
ಬೇರ್ಸಹಿತಹಂಕಾರ ಕೀಳ್ಬೇಕು! (ಬೇ)
-ಕು ನಿರಂಜನಾದಿತ್ಯನಾಗ್ಬೇಕು!!!

ಸಹಿಸಬೇಕು ಕಷ್ಟ, ನಷ್ಟ!   5(2798)

ಹಿಗ್ಗದ, ಕುಗ್ಗದಾತ್ಮ ಶ್ರೇಷ್ಟ!
ಹಿಸಾತ್ಮೋನ್ನತಿಯ ದುಷ್ಟ!
ಬೇರೊಬ್ಬ ದೇವರಿಲ್ಲ ಸ್ಪಷ್ಟ!
ಕುಕಲ್ಪನೆಯಿಂದಪ್ಪ ಭ್ರಷ್ಟ!
(ಅ)
-ಷ್ಟಮದದಿಂದಾಗ್ವುದರಿಷ್ಟ!
ಗುನಗುತ್ತಿರ್ಪಾತ್ಮನಿಷ್ಟ! (ಇ)
-ಷ್ಟ, ನಿರಂಜನಾದಿತ್ಯಾಪ್ತೇಷ್ಟ!!!

ಸಾಕಯ್ತೀ ಶರೀರ ನನಗೆ! [ಬೇ]   5(3004)

-ಕಾದಂತಿರಿಸಿಕೋ ನಿನಗೆ!
ಶಕ್ತಿ ತುಂಬಿಂಬಾದ್ರೆ ನಿನಗೆ! (ಆ)
-ರೀತಿರೀತಿ ಬೇಡ ನನಗೆ! (ಯಾ)
-ರದೇನಿದೆ ಹಂಗು ನಿನಗೆ? (ನಿ)
-ನಗೆ ಬೇಡಾದ್ರೇಕೆ ನನಗೆ! (ಆ)
-ನತನಾಗಿಹೆ ನಾ ನಿನಗೆ! (ಹ)
-ಗೆ ನಿರಂಜನಾದಿತ್ಯನಾರಿಗೆ???

ಸಾಕಾಯ್ತೇನೋ ಸಂದರ್ಶನ? (ಬೇ)   4(2478)

-ಕಾವಾಗ್ಲೂ ದಿವ್ಯ ಜೀವನ! (ಆ)
-ಯ್ತೇನೋ ಬಂಧ ವಿಮೋಚನ? (ಮ)
-ನೋವಿಕಾರವೇ ಬಂಧನ!
ಸಂಸಾರವೆಲ್ಲಾ ಮಲಿನ!
ತ್ತ ಪರಮ ಪಾವನ! (ಸ್ಪ)
-ರ್ಶ ಸುಖಕ್ಬೇಕು ಪ್ರಾರ್ಥನ! (ಘ)
-ನ ನಿರಂಜನಾದಿತ್ಯನ!!!

ಸಾಕಾರಕ್ಕಿಷ್ಟ ಪಟ್ಟರೆ ಕಷ್ಟ, ನಷ್ಟ! (ಆ)   6(4117)

-ಕಾರಾತೀತಾತ್ಮಧ್ಯಾನದಿಂದಂತ್ಯ ಕಷ್ಟ! (ವ)
-ರ ಗುರುದತ್ತನೆಂದಿಹನಿದ ಸ್ಪಷ್ಟ! (ಹೊ)
-ಕ್ಕಿ ನೋಡ್ಬೇಕವಧೂತ ಗೀತೆಯುತ್ಕೃಷ್ಟ! (ಭ್ರ)
-ಷ್ಟನಾಗುವನು ಯೋಗದಲ್ಲಿ ಕೋಪೀಷ್ಟ!
ತಂಜಲಿಯ ಯೋಗ ಸೂತ್ರ ಸ್ವಾದಿಷ್ಟ! (ಕೆ)
-ಟ್ಟಡುಗೆಯೂಟವನ್ನುಂಡವ ರೋಗಿಷ್ಟ! (ಮ)
-ರೆಯಲಾರನಿದನ್ನೆಂದೂ ತಪೋನಿಷ್ಟ!
ಟ್ಟು ಕಥೆ ನಂಬುವುದು ದುರದೃಷ್ಟ! (ಅ)
-ಷ್ಟ ಮದ ಜಯಿಸಿದವ ನರಶ್ರೇಷ್ಟ!
ರಜನ್ಮದ ಗುರಿಯೇನ್ಬಲ್ಲ ದುಷ್ಟ? (ಶ್ರೇ)
-ಷ್ಟ ನಿರಂಜನಾದಿತ್ಯಾನಂದತೀ ಶ್ರೇಷ್ಟ!!!

ಸಾಕು ಮಾಡೀಗ ಮೊಸರೂಟ! (ಬೇ)   4(2350)

-ಕು ನಿನಗೀಗ್ಬಿಸಿ ನೀರೂಟ! (ನೇ)
-ಮಾನುಷ್ಠಾನಕ್ಕಿದೊಳ್ಳೆಯೂಟ! (ನೋ)
-ಡೀಗಿಲ್ಲ ರೋಗಗಳ ಕಾಟ! (ಯೋ)
-ಗವೇ ನಿನಗೆ ರಸದೂಟ!
ಮೊದ್ಮೊದ್ಲು ರುಚಿಸದೀ ಊಟ!
ರಿಹೋಗ್ವುದಾಮೇಲಾ ಊಟ! (ಸಾ)
-ರೂಟವಂತೂ ಬಲು ಪೇಚಾಟ! (ಊ)
-ಟ ನಿರಂಜನಾದಿತ್ಯಗಾಟ!!!

ಸಾಕ್ಷಾತ್ಕಾರ ಆಗಬೇಕೇನಯ್ಯಾ! (ಲ)   2(530)

-ಕ್ಷಾವಧಿ ವರ್ಷ ಬೇಕಿಲ್ಲವಯ್ಯಾ! (ತ)
-ತ್ಕಾಲಿದಲಿರು ದೇವರಂತಯ್ಯಾ!
ಮಿಸೀಗವನಲಿ ನೀನಯ್ಯಾ!
ಗ ಮತ್ತಿನ ಮಾತು ಬಿಡಯ್ಯಾ!
ತ್ಯಾತ್ಮನತ್ತ ತಿರುಗಿಸಯ್ಯಾ!
ಬೇರೆ ಚಿಂತೆಗಳೀಗ ಬೇಡಯ್ಯಾ!
ಕೇಳುವುದೆಲ್ಲಾ ಹೇಳ್ಯಾಯಿತಯ್ಯಾ!
‘ನಮೋ ನಿರಂಜನ’ ಎಂದಿರಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾದ್ಯೇನಯ್ಯಾ???

ಸಾಕ್ಷಾತ್ಕಾರ ಸಾಧನಾನಂದ! (ದೀ)   6(4384)

-ಕ್ಷಾಬದ್ಧನಾಗುವುದಾನಂದ! (ತಾ)
-ತ್ಕಾಲಿಕೈಹಿಕ ಸುಖಾನಂದ! (ಪ)
-ರಮಾರ್ಥ ಸಿದ್ಧಿ ನಿತ್ಯಾನಂದ!
ಸಾಯುಜ್ಯವೆಂಬುದೀ ಆನಂದ! (ಸ್ವ)
-ಧರ್ಮವೆಂಬಿದು ಬ್ರಹ್ಮಾನಂದ!
ನಾಮ, ರೂಪತೀತಾತ್ಮಾನಂದ!
ನಂಜುಂಡವಗಿದೇ ಆನಂದ! (ಕಂ)
-ದ ನಿರಂಜನಾದಿತ್ಯಾನಂದ!!!

ಸಾಕ್ಷಾತ್ಕಾರದುದ್ದೇಶವೇನು! (ದೀ)   5(2625)

-ಕ್ಷಾಬದ್ಧನಾಗೀಗರಿ ನೀನು! (ಸ)
-ತ್ಕಾರಕ್ಕಾಶಿಸಬೇಡ ನೀನು! (ವ)
-ರ ಗುರುವಿನಂತಾಗು ನೀನು!
ದುರ್ವಿಧಿಗಾಗರಸು ನೀನು! (ಸ)
-ದ್ದೇನಿಲ್ಲದ ಮನಸ್ಸೇ ನೀನು!
ರಣಾಗು ಶಿವಗೆ ನೀನು! (ನಿ)
-ವೇದಿಸೆಲ್ಲಾ ಪಾದಕ್ಕೆ ನೀನು! (ಭಾ)
-ನು ನಿರಂಜನಾದಿತ್ಯ ನೀನು!!!

ಸಾಕ್ಷಾತ್ಕಾರವಾಗಲೇ ಬೇಕು! [ಲ]   4(2357)

-ಕ್ಷಾರ್ಚನೆ ಲಕ್ಷ್ಯಕ್ಕಾಗಬೇಕು! (ಸ)
-ತ್ಕಾರ ಸಂಸ್ಕೃತಿಗಾಗಬೇಕು! (ತ)
-ರತರದಾಸೆ ಬಿಡಬೇಕು!
ವಾದ, ಭೇದ ರದ್ದಾಗಬೇಕು!
ತಿ ಶ್ರೀ ಪಾದವೆನಬೇಕು!
ಲೇಪ ಮಾಯೆಯದ್ದೊರಸ್ಬೇಕು!
ಬೇಜವಾಬ್ದಾರಿಯಡಗ್ಬೇಕು! (ಟಾ)
-ಕು, ನಿರಂಜನಾದಿತ್ಯಾಗ್ಬೇಕು!!!

ಸಾಕ್ಷಾತ್ಕಾರವಾಗುವುದೆಂದರೇನಪ್ಪಾ? (ದೀ)   5(3160)

-ಕ್ಷಾ ಬದ್ಧನಾಗಿ ನೀನವನಾಗ್ವುದಪ್ಪಾ! (ಸ)
-ತ್ಕಾಲಕ್ಷೇಪವಿದಕ್ಕತ್ಯಗತ್ಯವಪ್ಪಾ!
ಕ್ಕಸರಾರ ಸಂಹರಿಸಬೇಕಪ್ಪಾ!
ವಾದ, ವಿವಾದಕ್ಕೆಡೆಗೊಡ್ಬಾರದಪ್ಪಾ!
ಗುರುವೇ ಪರದೈವವೆಂದು ನಂಬಪ್ಪಾ! (ಆ)
-ವುದೂ ಅವನಾಜ್ಞೆಯಿಲ್ಲದಾಗದಪ್ಪಾ! (ಎಂ)
-ದೆಂದೂ ಅವನೇ ಗತಿ ಸರ್ವರಿಗಪ್ಪಾ!
ಮೆ, ಶಮೆಯಿಂದವ ಪ್ರತ್ಯಕ್ಷವಪ್ಪಾ!
ರೇಷ್ಮೆ ಪಂಚೆಯುಟ್ರೆ ಮಡಿಯಾಗದಪ್ಪಾ!
ಯನಾದಿಂದ್ರಿಯ ಜಯ ಮಡಿಯಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯ ನಿತ್ಯ ಶುದ್ಧಪ್ಪಾ!!!

ಸಾಕ್ಷಾತ್ಕಾರವಾದ ಮೇಲಿನ್ನೇನು?   6(3901)

ಕ್ಷಾಮ, ಡಾಮರಕ್ಕಳೋಲ್ಲ ನೀನು! (ಸ)
-ತ್ಕಾರದಿಂದುಬುವುದಿಲ್ಲ ನೀನು!
ತಿಪತಿಗಾಳಾಗೋಲ್ಲ ನೀನು!
ವಾಸನೆಗಾಗೋಲ್ಲ ನೀನು!
ರ್ಪ, ದಂಭಕ್ಕೆ ಅಂತಕ ನೀನು!
ಮೇಲು ಕೀಳೆನ್ನುವುದಿಲ್ಲ ನೀನು!
ಲಿಪ್ತನಲ್ಲ ಯಾವುದಕ್ಕೂ ನೀನು! (ಹೊ)
-ನ್ನೇ ಮಣ್ಣು, ಮಣ್ಣೇ ಹೊನ್ನೆಂಬೆ ನೀನು! (ನಾ)
-ನು ನಿರಂಜನಾದಿತ್ಯೆಂಬೆ ನೀನು!!!

ಸಾಕ್ಷಾತ್ಕಾರಾನಂದ ಜೀವನ! (ಮೋ)   2(821)

-ಕ್ಷಾತ್ಮಾರಾಮಾನಂದ ಜೀವನ! (ಸ)
-ತ್ಕಾಲಕ್ಷೇಪಾನಂದ ಜೀವನ!
ರಾಗ ತ್ಯಾಗಾನಂದ ಜೀವನ! (ಆ)
-ನಂದ, ಜ್ಞಾನಾನಂದ ಜೀವನ!
ತ್ತ ಕೃಪಾನಂದ ಜೀವನ!
ಜೀವ ಶಿವಾನಂದ ಜೀವನ! (ಶಿ)
-ವ ಜೀವೈಕ್ಯಾನಂದ ಜೀವನ! (ಘ)
-ನ ನಿರಂಜನಾರ್ಕ ಜೀವನ!!!

ಸಾಕ್ಷಾತ್ಕಾರಾಪೇಕ್ಷಿ ಎಲ್ಲೂ ಹೋಗ್ಬೇಕಿಲ್ಲ!   6(3408)

(ಪ)-ಕ್ಷಾದಿಗಳಲ್ಲಿ ಪಾಲ್ಗೊಳ್ಳಬೇಕಾಗಿಲ್ಲ!
(ಸ)-ತ್ಕಾರ ಸಮಾರಂಭಕ್ಕೋಡಬೇಕಾಗಿಲ್ಲ!
ರಾಗ, ದ್ವೇಷವಿಟ್ಟುಕೊಳ್ಳಬೇಕಾಗಿಲ್ಲ!
ಪೇಚಾಟವಾವುದಕ್ಕೂ ಪಡ್ಬೇಕಾಗಿಲ್ಲ!
ಕ್ಷಿಪ್ರ ಗುರಿ ಸೇರುವಾತುರ ಬೇಕಿಲ್ಲ!
ಡರುಗಳಿಗಧೀರನಾಗ್ಬೇಕಿಲ್ಲ!
(ಅ)-ಲ್ಲೂ, ಇಲ್ಲೂ, ಎಲ್ಲೆಲ್ಲೂ ನೀನಾಗಿಹೆಯೆಲ್ಲಾ!
ಹೋಮ, ಹವನದಗತ್ಯವೇನೂ ಇಲ್ಲ!
(ಆ)-ಗ್ಬೇಕ್ಸದಾತ್ಮ ಚಿಂತನೆ; ಭಯವೇನಿಲ್ಲ!
ಕಿರ್ಕುಳ ಸಂಸಾರಕ್ಕಂಟಿಕೊಳ್ಬೇಕಿಲ್ಲ!
(ಪು)-ಲ್ಲ ನಿರಂಜನಾದಿತ್ಯನಂತಾಗ್ಬೇಕೆಲ್ಲಾ!!!

ಸಾಕ್ಷಿ ಸ್ವರೂಪ ಆದಿತ್ಯ!   5(3259)

ಕ್ಷಿತಿಗತಿ ಹಿತಾದಿತ್ಯ!
ಸ್ವಧರ್ಮ ಕರ್ಮಾತ್ಮಾದಿತ್ಯ!
ರೂಪ, ನಾಮಾನಂದಾದಿತ್ಯ!
ರಬ್ರಹ್ಮ ರೂಪಾದಿತ್ಯ!
ದಿ, ಮಧ್ಯಾಂತಾತ್ಮಾದಿತ್ಯ!
ದಿವ್ಯಜ್ಞಾನಾನಂದಾದಿತ್ಯ! (ನಿ)
-ತ್ಯ ಶ್ರೀ ನಿರಂಜನಾದಿತ್ಯ!!!

ಸಾಕ್ಷಿಯಾಗಿದ್ದು ಶಾಂತಿಯನ್ನುಳಿಸು! (ಕ)   6(4368)

-ಕ್ಷಿಗಾರನಾಗದೇ ಅದನ್ನುಳಿಸು! (ನ್ಯಾ)
-ಯಾನ್ಯಾಯವರಿತು ಅದನ್ನುಳಿಸು!
ಗಿರಿಧಾರಿಯಾದರ್ಶದಿಂದುಳಿಸು! (ಸ)
-ದ್ದು ಮಾಡದೇ ಸಾಧಿಸಿದನ್ನುಳಿಸು!
ಶಾಂತಸಾಗರದ ನೆನೆದುಳಿಸು!
ತಿಳಿದು ನಿನ್ನ ನೀನದನ್ನುಳಿಸು!
ಮ, ನಿಯಮಾಭ್ಯಾಸದಿಂದುಳಿಸು! (ಹೊ)
-ನ್ನು, ಹೆಣ್ಣು, ಮಣ್ಣಿನಾಸೆ ಬಿಟ್ಟುಳಿಸು! (ಬಾ)
-ಳಿನಲ್ಲಿದನ್ನೆಲ್ಲಾ ಬಳಸ್ಯುಳಿಸು! (ಕೂ)
-ಸು ನಿರಂಜನಾದಿತ್ಯಗಾದೆನಿಸು!!!

ಸಾದರದ ಸೇವೋಪಚಾರೆನ್ನದಯ್ಯಾ!   5(2762)

ಯೆ ನಿನ್ನದು ನನ್ನ ಮೇಲಿರಲಯ್ಯಾ!
ಕ್ಷಣಾ ಭಾರ ಹೊತ್ತ ತಂದೆ ನೀನಯ್ಯಾ!
ನ, ಕರುಗಳ ವಧೆ ನಿಲ್ಲಿಸಯ್ಯಾ!
ಸೇಡಿನ ಮನೋಭಾವ ಕಡಿದಿಕ್ಕಯ್ಯಾ! (ಭಾ)
-ವೋದ್ವೇಗವನ್ನು ಸಮಾಧಾನ ಮಾಡಯ್ಯಾ!
ರಮಾರ್ಥದಲ್ಲಿ ಪ್ರಗತಿ ತೋರಯ್ಯಾ!
ಚಾರ್ವಾಕ ಪದ್ಧತಿಯ ಕೊಚ್ಚಿಹಾಕಯ್ಯಾ! (ಕ)
-ರೆ ನಿನ್ನ ಪಾದದಡಿಗೀಗಾಗಲಯ್ಯಾ! (ಬ)
-ನ್ನ ಪಡುತಿದೆ ಜಗವೆಲ್ಲವೀಗಯ್ಯಾ!
ತ್ತಾತ್ರೇಯ ನೀನು ನಿಜ ಗುರುವಯ್ಯಾ! (ಅ)
-ಯ್ಯಾ ನಿರಂಜನಾದಿತ್ಯ ದತ್ತ ನೀನಯ್ಯಾ!!!

ಸಾಧಕಾ! ನಿನಗೆ ವ್ಯವಹಾರ ಬಾಧಕಾ!   4(1587)

ರ್ಮವೆಂದಧರ್ಮಕ್ಕೆಳೆವುದಾ ಕಾಯಕಾ!
ಕಾಮ್ಯಾರ್ಥಿಗಳ ಸಹವಾಸಪ್ರಯೋಜಕಾ!
ನಿನ್ನ ಬಿಡುಗಡೆಗದು ಪ್ರತಿಬಂಧಕಾ!
ಡೆ, ನುಡಿಗಳೆಲ್ಲಲ್ಪ ಸುಖದಾಯಕಾ!
ಗೆರೆ ದಾಟ ಬಿಡ ಸಂಪ್ರದಾಯ ನಾಯಕಾ!
ವ್ಯಸನ ಪಡಬೇಕಾಗ ಭಕ್ತ ಗಾಯಕಾ!
ರ್ಣ, ಲಿಂಗ ಭೇದ ಬಹು ದುಃಖಕಾರಕಾ!
ಹಾಯಾಗಿರಲಿಕ್ಕೆ ಸ್ವತಂತ್ರ ಸಹಾಯಕಾ!
“ರಘುಪತಿ ರಾಘವ” ಮಂತ್ರ ಪ್ರಚೋದಕಾ!
ಬಾರಿಬಾರಿಗೂ ಹಾಡಬೇಕಿದ ಬಾಲಕಾ!
ರ್ಮವಿದೊಂದೇ ಸದ್ಗುರು ಪ್ರತಿಪಾದಕಾ!
ಕಾಯಲೆಮ್ಮಾ ನಿರಂಜನಾದಿತ್ಯಾಧ್ಯಾತ್ಮಿಕಾ!!!

ಸಾಧನೆ ಮೊದಲ್ಮುಗಿಸ್ಬೇಕು! [ಬೋ]   5(2577)

-ಧನೆ ಆಮೇಲ್ಯುರು ಮಾಡ್ಬೇಕು! (ಮ)
-ನೆಮನೆಗೂ ಹೋಗ್ಯದಾಗ್ಬೇಕು!
ಮೊತ್ತವೇನೂ ಎತ್ತದಿರ್ಬೇಕು!
ತ್ತ ಗುರುವೆಂದು ಸಾರ್ಬೇಕು! (ಮೇ)
-ಲುಸುಕು ತೆಗೆದೊಗೆಯ್ಬೇಕು! (ಯೋ)
-ಗಿರಾಜನನ್ನು ತೋರಿಸ್ಬೇಕು! (ಕ)
-ಸ್ಬೇನೂ ಬೇರೆ ಹೂಡದಿರ್ಬೇಕು! (ಟಾ)
-ಕು ನಿರಂಜನಾದಿತ್ಯಾಗ್ಬೇಕು!!!

ಸಾಧನೆ ಯಾವುದೂ ಫಲಿಸಲಿಲ್ಲೇಕೆ?   6(4130)

ರೆಯಲ್ಲಿದಕ್ಕಾಗಿ ಹುಟ್ಟಬೇಕೇಕೆ?
ನೆನೆದರೆ ನಿನ್ನನ್ನು ಹೀಗಾಗಬೇಕೆ?
ಯಾದವೇಂದ್ರನೀಗ ಮೌನಿಯಾದುದೇಕೆ? (ನೋ)
-ವು ಆಗಬಾರದಭ್ಯಾಸಿಯ ಮನಕೆ! (ಹಿಂ)
-ದೂ ಧರ್ಮ ಬೋಧಕಾಚಾರ್ಯ ಸಂಕುಲಕೆ!
ಲಿಸದ ಮರ ಹೋಗ್ಲಗ್ನಿಕುಂಡಕ್ಕೆ? (ಕ)
-ಲಿಮಲ ನಿರ್ಮೂಲವಂತಾಗುವುದಕ್ಕೆ!
ರ್ವಜ್ಞಗಲ್ಪಜ್ಞನಾದೇಶವೇತಕ್ಕೆ? (ಒ)
-ಲಿದು ಬಂದ್ರೀಗ ಪರಿಹಾರವೆಲ್ಲಕ್ಕೆ! (ಹು)
-ಲ್ಲೇಕೆ ಕೃಷ್ಣ ಹೊತ್ತ ಗೋಪಿಕಾವಾಸಕ್ಕೆ!!! ಎ
-ಕೆ? ನಿರಂಜನಾದಿತ್ಯಾನಂದ ತಾನಕ್ಕೆ!!!

ಸಾಧನೆ ವ್ಯಾಧಿಹರವಯ್ಯಾ!   3(1160)

ರ್ಮವಿದಕ್ಕೊಂದಿಹುದಯ್ಯಾ!
ನೆರೆ ಶ್ರದ್ಧೆ ಪ್ರಾಮುಖ್ಯವಯ್ಯಾ!
ವ್ಯಾಕುಲವೇಕೆ ನಿನಗಯ್ಯಾ? (ಅ)
-ಧಿಕಾರದಾಸೆ ವ್ಯರ್ಥವಯ್ಯಾ!
ರಿ ಭಜನಾನಂದವಯ್ಯಾ!
ವಿಸುತಾತ್ಮಾರಾಮನಯ್ಯಾ!
ರ ಗುರುರೂಪವದಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾತ್ಮಯ್ಯಾ!!!

ಸಾಧನೆ ಸಾಗದಿರುವುದೇಕೆ? [ಬೋ]   2(864)

-ಧನೆಯರ್ಥವಾಗಿಲ್ಲದುದಕೆ!
ನೆನೆಯವನ ಸತತದಕೆ!
ಸಾಕು, ಬೇರೇನೂ ಬೇಕಿಲ್ಲದಕೆ!
ಡಿಬಿಡಿ ಮಾಡಬೇಡದಕೆ!
ದಿನಪನಂತಿರಬೇಕದಕೆ! (ಮ)
-ರುಗಿ ಫಲವೇನಿಲ್ಲವದಕೆ! [ಆ]
-ವುದೂ ‘ಶಿವೇಚ್ಛೆ’ ಯೆಂದಿರದಕೆ!
ದೇಹ ದೇವನದು! ಭಯವೇಕೆ? (ಏ)
-ಕೆ? ನಿರಂಜನಾದಿತ್ಯಾಗದಕೆ!!!

ಸಾಧನೆ ಸಾಗಲಿ ವ್ಯಕ್ತಿಯಲ್ಲಿ! (ಬೋ)   2(989)

-ಧನೆಯಾಗಲಿ ಸಮೂಹದಲ್ಲಿ!
ನೆಮ್ಮದಿಯಾಗಲಿ ಬಾಳಿನಲ್ಲಿ!
ಸಾಯುಜ್ಯವಾಗಲಿ ನಿತ್ಯದಲ್ಲಿ!
ತಿಸದಿರಲಿ ಮಿಥ್ಯದಲ್ಲಿ! (ನ)
-ಲಿಯುತಿರಲಿ ಅದ್ವೈತದಲ್ಲಿ!
ವ್ಯವಸ್ಥೆಯಿರಲಿ ಕಾರ್ಯದಲ್ಲಿ! (ಭ)
-ಕ್ತಿಯಿರಲಿ ಗುರು ಸೇವೆಯಲ್ಲಿ! (ಧ್ಯೇ)
-ಯ ಸಿದ್ಧಿಸಲಿ ಸಹನೆಯಲ್ಲಿ! (ಎ)
-ಲ್ಲಿ? ನಿರಂಜನಾದಿತ್ಯನಿರ್ಪಲ್ಲಿ!!!

ಸಾಧನೆ, ಬೋಧನೆಯಿಲ್ಲ, ಬಲ್ಲನೆಲ್ಲ!   6(4351)

ರ್ಮಾ ಧರ್ಮ ಕರ್ಮದ ಭ್ರಮೆಯೂ ಇಲ್ಲ!
ನೆರೆಯವರಾಚಾರಕ್ಕಾತಂಕವಿಲ್ಲ!
ಬೋಳನೂ ಅಲ್ಲ, ಜಟಾಧಾರಿಯೂ ಅಲ್ಲ!
ನಿಕನೂ ಅಲ್ಲ, ದರಿದ್ರನೂ ಅಲ್ಲ! (ಮ)
-ನೆ, ಮಠ, ತನದೆಂಬುದಿಲ್ಲದೆಲ್ಲೆಲ್ಲೂ! (ತಾ)
-ಯಿ, ತಂದೆ, ಬಂಧು, ಬಳಗ ತಾನೇ ಎಲ್ಲಾ! (ಕೊ)
-ಲ್ಲ ಬಲ್ಲ, ಹುಟ್ಟಿಸಬಲ್ಲ, ಕಾಯಬಲ್ಲ!
ಡಾಯಿಕೊಚ್ಚುವವನಿವನೇನಲ್ಲ! (ಎ)
-ಲ್ಲರಲ್ಲಿವನಿಲ್ಲದೇನೂ ಸಾಧ್ಯವಿಲ್ಲ! (ಕೊ)
-ನೆ, ಮೊದಲಿಲ್ಲದಾಟ ಇವನದೆಲ್ಲಾ! (ಪು)
-ಲ್ಲ, ನಿರಂಜನಾದಿತ್ಯ ಸಾಮಾನ್ಯನಲ್ಲ!!!

ಸಾಧನೆಡೆಬಿಡದೆ ಮಾಡಕ್ಕಾ (ಬೋ)   3(1041)

-ಧನೆ ಸಧ್ಯಕ್ಕೆ ಸಾಕುಮಾಡಕ್ಕಾ!
ನೆನೆಯುತಿರು ಶಿವನಾಮಕ್ಕಾ! (ಕ)
-ಡೆಗಾಲಕ್ಕದೇ ಗತಿ ಕಾಣಕ್ಕಾ!
ಬಿಗಡಾಯಿಸುತಿದೆ ಕಾಲಕ್ಕಾ! (ಒ)
-ಡ ನಾಡಿಗಳೂ ಕೈ ಬಿಡ್ವರಕ್ಕಾ! (ಮುಂ)
-ದೆಯಾಗುವುದಿಂದೇ ಆಗಲಕ್ಕಾ!
ಮಾಯಾ ಬಂಧ ಹರಿದು ಬಾರಕ್ಕಾ! (ಮೃ)
-ಡನ ಸೇರಿ ಸುಖಿಯಾಗಿರಕ್ಕಾ! (ಅ)
-ಕ್ಕಾ ನಿರಂಜನಾದಿತ್ಯ ಶಿವಕ್ಕಾ!!!

ಸಾಧನೆಯೆಂಬುದೊಂದು ಜೀವನ ಕ್ರಮ!   4(2102)

ರ್ಮಬದ್ಧವಾದರದುತ್ತಮ ಕ್ರಮ!
ನೆಟ್ಟ ಮನದಿಂದಾದ್ರೆ ಸಫಲಾ ಕ್ರಮ! (ಬಾ)
-ಯೆಂದ ಮಾತ್ರಕ್ಕೆ ಬಾರನಾ ತ್ರಿವಿಕ್ರಮ! (ಇಂ)
-ಬು ದೊರಕುವವರೆಗಾಗ್ಬೇಕಾ ಕ್ರಮ! (ಇಂ)
-ದೊಂದು, ಮತ್ತೊಂದು ತರಾಗ್ಬಾರದಾ ಕ್ರಮ!
ದುಷ್ಟರಿಣಾಮಕಾರೀ ಚಂಚಲ ಕ್ರಮ!
ಜೀವೇಶನಾಗಲ್ಕೆ ಬೇಕಾಜನ್ಮಾ ಕ್ರಮ! (ಭ)
-ವಬಂಧ ನಾಶಕ್ಕಾತ್ಮಸಂಬಂಧಾ ಕ್ರಮ!
ಡೆ, ನುಡಿಯಲ್ಲೊಂದಾಗಿರ್ಬೇಕಾ ಕ್ರಮ!
ಕ್ರಮ ತಪ್ಪಿದರೆ ವ್ಯರ್ಥಾ ಪರಾಕ್ರಮ! (ಕ್ರ)
-ಮ ನಿರಂಜನಾದಿತ್ಯನದ್ದೊಂದೇ ಕ್ರಮ!!!

ಸಾಧಿಸಿದರೆ ಸಬಳ ನುಂಗಬಹುದು! (ವಿ)   2(889)

-ಧಿಯನುಕೂಲವಾಗದಿದ್ದರಾಗಬಹುದು!
ಸಿದ್ಧವಾಗಿದ್ದರೆಲ್ಲಕ್ಕದಾಗಬಹುದು! [ಆ]
-ದರ ಪ್ರಸಾದಕ್ಕಿದ್ದರದಾಗಬಹುದು! [ಬೇ]
-ರೆ ದುಶ್ಚಟವಿಲ್ಲದಿದ್ದರಾಗಬಹುದು!
ದ್ಗುರು ಭಕ್ತನಾಗಿದ್ದರಾಗಬಹುದು!
ಯಲಾಡಂಬರ ಬಿಟ್ಟರಾಗಬಹುದು! (ಕ)
ವಳ ಪಡದಿದ್ದರದಾಗಬಹುದು!
ನುಂಗಿ ತೆಗೆಯುವಂತಿದ್ದರಾಗಬಹುದು!
ರ್ವರಹಿತನಾಗಿದ್ದರಾಗಬಹುದು!
ಗ್ಗದಿದ್ದರೆ ಮಾಯೆಗದಾಗಬಹುದು!
ಹುರುಪೊಂದೇ ಸಮವಿದ್ದರಾಗಬಹುದು! (ಅ)
-ದು ನಿರಂಜನನಾದಿತ್ಯನಿಂದಾಗಬಹುದು!!!

ಸಾಧು ಸತ್ಪುರುಷರೆಂಥವರು? (ಬಂ)   6(4174)

-ಧು ಸರ್ವರಿಗಾಗಿರುವವರು!
“ಸತ್ಯಂ ವದಾ ಧರ್ಮಂ ಚರಾ”ತ್ಮರು! (ಸ)
-ತ್ಪುತ್ರರ್ಗುರುವಿಗಾಗಿರ್ಪವರು! (ತು)
-ರು, ಕರು, ಸೇವಾ ಸದಾಸಕ್ತರು!
ಡ್ರಿಪುಗಳ ಗೆಲಿದವರು! (ಯಾ)
-ರೆಂತಿದ್ದರೇನೆಮಗೆಂಬುವರು! (ಪ)
-ಥ ಕೊನೆಗಾಣಿಸುವ ಧೀರರು!
ಸಿಷ್ಠ, ವಾಲ್ಮೀಕಿಯಂಥವರು! (ಯಾ)
-ರು? ನಿರಂಅಜನಾದಿತ್ಯಾನಂದರು!!!

ಸಾಧು, ಸಜ್ಜನರಿಗಾರು ದಿಕ್ಕು? (ಬಂ)   6(3582)

-ಧು, ಬಾಂಧವರಿಗೆಲ್ಲಾ ಬೇಡಕ್ಕು!
ಕಲೇಶ್ವರನಿಗೂ ಬೇಡಕ್ಕು! (ಕ)
-ಜ್ಜಕ್ಕೆ ತಕ್ಕ ಕೂಲಿ ಸಿಗದಕ್ಕು!
ಷ್ಟ, ಕಷ್ಟವಂತ್ಯವಾಗದಕ್ಕು!
ರಿಸಿ ಜೀವನವೂ ವ್ಯರ್ಥವಕ್ಕು!
ಗಾಲಿ ಜಾರಿದ ಗಾಡಿಯೇನಕ್ಕು?
ರುಚಿಯಿಲ್ಲದೂಟ ತಿಪ್ಪೆಗಕ್ಕು! (ಆ)
-ದಿತ್ಯ ಸೇವೆ ಮಾಡಿದರೇನಕ್ಕು? (ಅ)
-ಕ್ಕು, ನಿರಂಜನಾದಿತ್ಯಾನಂದಕ್ಕು!!!

ಸಾಧೂ ಸಜ್ಜನ ಸಮಾಗಮಾನಂದ!   1(318)

ಧೂರ್ತತನವಿಲ್ಲದ ಸೇವಾನಂದ!
ರಳವಾದೆಲ್ಲರ ಬಾಳಾನಂದ! (ಕ)
-ಜ್ಜಗಳೆಲ್ಲಾ ಸದಾ ನಿಸ್ವಾರ್ಥಾನಂದ!
“ನ ಗುರೋರಧಿಕೆಂ”ಬ ಭಾವಾನಂದ!
ರ್ವ ಸಮನ್ವಯ ಸದ್ಗುಣಾನಂದ!
ಮಾಧುರ್ಯ ಮಾತಿನಲಿರ್ಪುದಾನಂದ!
ಮನ ಗುರುಪಾದಾರ್ಪಣಾನಂದ!
ಮಾರಮಣನ ಭಜನೆಯಾನಂದ!
ನಂಬಿಗೆ ಅಚಲವಿರ್ಪುದಾನಂದ!
ತ್ತ ನಿರಂಜನಾದಿತ್ಯತ್ಯಾನಂದ!!!

ಸಾಬೂನು ನನಗೇಕಮ್ಮಾ?   2(504)

ಬೂಸ್ಟು ಇನ್ನೂ ಬಂದಿಲ್ಲಮ್ಮಾ! (ಅ)
-ನುಕೂಲಾಗಿದೆ ನೀರಮ್ಮಾ!
ಷ್ಟ, ಕಷ್ಟ, ಸಾಬೂನಮ್ಮಾ!
ನ್ನ ಮೈ ನಾಥವಿಲ್ಲಮ್ಮಾ!
ಗೇಲಿ ಸಾಕುಮಾಡಿರಮ್ಮಾ!
ರುಣೆಯೊಂದಿರಲಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯಮ್ಮಾ!!!

ಸಾಮೀಪ್ಯ ಯಾರು, ಯಾರಿಗೆ, ಯಾಕೆ ಬೇಕು?   1(52)

ಮೀನು ಬದುಕಲಿಕೆ ನೀರಿರಬೇಕು! (ಆ)
-ಪ್ಯಯನಕಾರಿಯದು ಅದಕೆಬೇಕು!
ಯಾರಿಗಾದರೂ ಸದಾ ಸುಖವೇಬೇಕು! (ಉ)
-ರು ತರದ, ಪ್ರೇಮಿ ಬಳಿ ಇರಬೇಕು!
ಯಾರಿಗೂ ಪ್ರೇಮಿ ದೂರಿಲ್ಲೆಂದರಿಬೇಕು! (ಆ)
-ರಿಗೆಂದರೀ ಮನದಾನಂದಕೆ ಬೇಕು!
ಗೆಲಬೇಕಿಂದ್ರಿಯಗಳ! ವಶಸಾಕು!
ಯಾವಾಗಲೂ ಜಪ ಮಾತ್ರವಿರಬೇಕು!
ಕೆಟ್ಟ ವಿಷಯಕೆ ದೂರವಿರಬೇಕು!
ಬೇರೆ ಇನ್ನೆಲ್ಲೂ ಹುಡುಕದಿರಬೇಕು!
ಕುಳಿತೊಳಗಿನಾಪ್ತನ ನೋಡಬೇಕು!!!

ಸಾಮ್ರಾಜ್ಯದಾಸೆ ನಿನಗೇಕಯ್ಯಾ? [ಸಾ]   5(2951)

-ಮ್ರಾಟ ಇಂದ್ರಿಯಗಳಿಗಾಗಯ್ಯ! (ರಾ)
-ಜ್ಯ, ಕೋಶವೆಲ್ಲಾ ಅಸ್ಥಿರವಯ್ಯಾ!
ದಾಸ ಕೋಟಿ ನಿನ್ನಾಪ್ತರಾಗ್ಲಯ್ಯಾ!
ಜ್ಜೆ ಮನೆ ಗಂಗಾ ತಟಾಗ್ಲಯ್ಯಾ!
ನಿತ್ಯ ಸದ್ಗುರು ಸೇವೆ ಮಾಡಯ್ಯಾ!
ಮ್ರನಾಗಿರವ್ನ ಬಳಿಯಯ್ಯಾ!
ಗೇರ್ಹಣ್ಣಿನ ಬೀಜದಂತಿರಯ್ಯಾ!
ಣ್ಣು, ಬಾಯ್ಕಿನಿ ಮುಚ್ಚಿರ್ಬೇಕಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯನಾಗಯ್ಯಾ!!!

ಸಾಯಬೇಕು, ಮನ ಸಾಯಬೇಕು!   2(655)

ತ್ನಬೇಕು, ಗುರುಕೃಪೆ ಬೇಕು!
ಬೇಕು ಗುರುಪಾದವಾಗವೇಕು!
ಕುಮತಿ ಸ್ನೇಹ ಬೇಡಾಗಬೇಕು!
ನನ ಪ್ರಿಯ ನಾಮಾಗಬೇಕು!
ಶ್ವರದಾಸೆ ಅಳಿಯಬೇಕು!
ಸಾಧು, ಸಂತರೊಡನಾಟ ಬೇಕು!
ದುಪನ ಗೀತಾಜ್ಞಾನ ಬೇಕು!
ಬೇರೆಯವರ ಮಾತ್ಬಿಡಬೇಕು! [ಬೇ]
-ಕು ನಿರಂಜನಾದಿತ್ಯಾಗಬೇಕು!!!

ಸಾಯುವ ದೇಹವನ್ನು ವೃಥಾ ನೋಯಿಸ ಬೇಡ! (ಕಾ)   6(4237)

-ಯುವ ಪರಮಾತ್ಮ ನೀನನ್ಯಾಯ ಮಾಡಬೇಡ!
ರ ಗುರುವಾಗಿ ದಾರಿ ತೋರದಿರಬೇಡ!
ದೇವ ಮಾನವರೆಂದೆಂಬ ಪಕ್ಷಪಾತ ಬೇಡ!
ರಸಿ ನಿನ್ನಂತೆಲ್ಲರ ಮಾಡದಿರಬೇಡ!
ಸನ, ಅಶನಕ್ಕಾಗಿ ಒದ್ದಾಡಿಸಬೇಡ! (ನಿ)
-ನ್ನುಡಿಯಲ್ಲೆಲ್ಲರನ್ನೂ ಹಾಕಿಕೊಳ್ಳದಿರ್ಬೇಡ!
ವೃತ್ತಿ ಯೋಗ್ಯತೆಗೆ ತಕ್ಕಂತೆ ಕೊಡದಿರ್ಬೇಡ! (ಅಂ)
-ಥಾ, ಇಂಥಾ ವೃತ್ತಿಯೆಂದು ಜಗಳಾಡಿಸಬೇಡ!
ನೋಟ, ಕೂಟಗಳಿಗಟ್ಟಿ ಚಟ್ಣಿ ಮಾಡಬೇಡ! (ಬಾ)
-ಯಿ ವೇದಾಂತಕ್ಕೆ ಸ್ಥಾನ, ಮಾನ ಕೊಡಲೇಬೇಡ!
ತತತ್ಮ ಚಿಂತನಾವಕಾಶ ತಪ್ಪಿಸ್ಬೇಡ!
ಬೇರಾವುದನ್ನೂ ಕೊಟ್ಟು ಮರುಳುಮಾಡಬೇಡ! (ಕ)
-ಡಲೊಡೆಯ ನಿರಂಜನಾದಿತ್ಯಲ್ಲೆನಬೇಡ!!!

ಸಾರಂಗ ಪಟ್ಟಕ್ಕೇಕೆ ಬಂದ? (ಶ್ರೀ)   5(2735)

-ರಂಗನಿಷ್ಟಕ್ಕಾಗಿಲ್ಲಿಗೆ ಬಂದ!
ರಾಜ್ಯಭಾರ ನೋಡ ಬಂದ!
ರಮಾರ್ಥಸಾರರುಹ ಬಂದ! (ಉ)
-ಟ್ಟ ಪೀತಾಂಬರ ಬಿಚ್ಚಿಟು ಬಂದ! (ಹ)
-ಣ, ಗುಣಗಳನ್ನಳೆಯ ಬಂದ! (ಧ)
-ಕ್ಕೇಕೆ ಧರ್ಮಕ್ಕಾಯ್ತೆಂದ್ನೋಡ ಬಂದ! (ಬೇ)
-ಕೆನಗ್ವಿಶ್ವಪ್ರೇಮವೆಂದು ಬಂದ!
ಬಂಧು ಕೃಷ್ಣ ನನಗೆಂದು ಬಂದ!
ತ್ತ ನಿರಂಜನಾದಿತ್ಯನೆಂದ!!!

ಸಾರಂಗನಿಗಾರದೇನು ಹಂಗು?   4(2438)

ರಂಗನಾಥಗವನದೇ ರಂಗು! (ಮಂ)
-ಗಳ ಮಾಳ್ಪನವ ಸರ್ವರಿಂಗು!
ನಿತ್ಯವನ ನಾಮಾಮೃತ ನುಂಗು!
ಗಾಬ್ರಿಯಿಂದಾಗಬೇಡ ಕುರಂಗು! (ವ)
-ರಗುರುವನ್ನಾಶ್ರಯಿಸಿ ತಂಗು! (ವಿ)
-ದೇಶೀ ಪದ್ಧತಿಯಿಂದಾದೆ ಪೆಂಗು! (ಅ)
-ನುಪಮಾತ್ಮನಿಗಿಲ್ಲಾವ ಡಿಂಗು! (ಸೋ)
-ಹಂ ಮಂತ್ರ ಜಪದಿಂದಾಗಾ ರಂಗು!
ಗುರು ನಿರಂಜನಾದಿತ್ಯಾ ರಂಗು!!!

ಸಾರಥಿ ಸದ್ಗುರು ಕೃಷ್ಣಪರಮಾತ್ಮ!   6(3470)

ಥ ಶರೀರವಾಗಿಹನೊಳಗಾತ್ಮ! (ರ)
-ಥಿಕ ವಿಜಯಿಯಾಗಲ್ಕಾರಣಾ ಆತ್ಮ!
ತತವನಿಚ್ಛೆಯಂತಿರ್ಬೇಕ್ಜೀವಾತ್ಮ! (ಸ)
-ದ್ಗುರು ಕೃಪೆಯಿಂದವನೂ ಪರಮಾತ್ಮ!
ರುಧಿರ, ಮಾಂಸದ ಗೊಂಬೆ ತಾನಲ್ಲಾತ್ಮ!
ಕೃಷ್ಣ ವಿಶ್ವರೂಪದರ್ಶನ ಯೋಗಾತ್ಮ!
(ಪೂ)-ಷ್ಣನಿದ ಸಮರ್ಥಿಸುವ ದರ್ಶನಾತ್ಮ!
ಡಬಾರದು ಸಂದೇಹ ಮಾನವಾತ್ಮ!
ತಿಪತಿಯ ನಿಗ್ರಹಿಯೇ ಶಿವಾತ್ಮ!
ಮಾಡಬೇಕಭ್ಯಾಸ ಸತತ ಜೀವಾತ್ಮ! (ಆ)
-ತ್ಮ, ನಿರಂಜನಾದಿತ್ಯ ಪರಮಾತ್ಮ!!!

ಸಾರಿ ಹೇಳಿದೆ ನೂರಾರು ಬಾರಿ! (ಹ)   4(1881)

-ರಿ ಭಜನೆ ಸಹಜೋಪಕಾರಿ!
ಹೇಳಿದ್ದು ಕೇಳದಾದೆ ಪರಾರಿ! (ಗಾ)
-ಳಿಗಿಟ್ಟ ದೀಪವಾದೆ ಸಂಸಾರಿ! (ಎ)
-ದೆಯ ಬೆಳಕುರಿಸು ವಿಚಾರಿ!
ನೂಪುರಾದ್ಯಲಂಕಾರಿ ಮುರಾರಿ!
ರಾಜೀವ ಸಖಾಕಾರಿ ಖರಾರಿ! (ಇ)
-ರು ನೀನವನಾಗಿ ಅಹಂಕಾರಿ!
ಬಾಲ ಲೀಲಾವತಾರಿ ಕಂಸಾರಿ! (ಹ)
-ರಿ ನಿರಂಜನಾದಿತ್ಯಾವತಾರಿ!!!

ಸಾರೂಪ್ಯವಾಗದ ಸಾಮೀಪ್ಯ ವ್ಯರ್ಥ! (ಬೇ)   4(1566)

-ರೂರು ಪ್ರವಾಸದಿಂದಲ್ಲ ಇಷ್ಟಾರ್ಥ! (ಗೋ)
-ಪ್ಯವಿದರರ್ಥರಿತವ ಕೃತಾರ್ಥ!
ವಾಕ್ಚಾತುರ್ಯದಿಂದಾಗುವುದಪಾರ್ಥ!
ರ್ವವಿದರಿಂದಾಗುವುದನರ್ಥ!
ರ್ಶನೋಪದೇಶವೀಯದಿಷ್ಟಾರ್ಥ!
ಸಾಯುಜ್ಯವೇ ಪರಮ ಪುರುಷಾರ್ಥ!
ಮೀರಾಬಾಯಿ ಸಾಧಿಸಿದಳೀ ಅರ್ಥ! (ಜಾ)
ಪ್ಯಮೂರ್ತಿ ತಾನಪ್ಪುದೇ ಪರಮಾರ್ಥ!
ವ್ಯವಹಾರಾದಿಗಳೆಲ್ಲಾ ಸ್ವಾರ್ಥಾರ್ಥ! (ಅ)
-ರ್ಥ ನಿರಂಜನಾದಿತ್ಯಾತ್ಮಾನಂದಾರ್ಥ!!!

ಸಾರ್ಥಕ ಜೀವನವರುಹಪ್ಪಾ! (ಪಾ)   4(2278)

-ರ್ಥಸಾರಥಿಯೇ ನರಸಿಂಹಪ್ಪಾ!
ರ್ತವ್ಯ ನಿಷ್ಠೆಗಾದರ್ಶಾತಪ್ಪಾ!
ಜೀವಭಾವ ಕಳೆಯಬೇಕಪ್ಪಾ!
ರ ಗುರು ಗುಲಾಮನಾಗಪ್ಪಾ! (ಅ)
-ನವರತ ಭಜನೆ ಮಾಡಪ್ಪಾ! (ಅ)
-ವರಿವರ ಮಾತು ಕೇಳ್ಬೇಡಪ್ಪಾ!
ರುಜು ಮಾರ್ಗಾವಲಂಬಿಯಾಗಪ್ಪಾ! (ಕು)
-ಹಕರೊಡನೆ ಸೇರಬೇಡಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯನೆನ್ನಪ್ಪಾ!!!

ಸಾರ್ಥಕವಿಲ್ಲದಾಯ್ತೈಹಿಕ ಸಂಬಂಧ! (ಸಾ)   4(2220)

-ರ್ಥಕ ಗೈವುದು ಪರಮಾತ್ಮ ಸಂಬಂಧ!
ಳಂಕರಹಿತಾಗಿರ್ಪುದಾ ಸಂಬಂಧ!
ವಿಷಯ ವಾಸನೆಯಿಲ್ಲದಾ ಸಂಬಂಧ! (ಎ)
-ಲ್ಲವೂ ತಾನೆಂಬರಿವಿನಾತ್ಮ ಸಂಬಂಧ!
ದಾರಿ ತೋರುವುದು ಮುಕ್ತಿಗೀ ಸಂಬಂಧ! (ಹೋ)
-ಯ್ತೈಸಿರಿಯೆಂದಳದಿರ್ಪುದೀ ಸಂಬಂಧ!
ಹಿಮಗಿರಿ ಸುತೆ ತಾಯೆಂಬಾ ಸಂಬಂಧ!
ಪರ್ದಿಯ ಕೃಪೆಯಿಂದಾಯ್ತಾ ಸಂಬಂಧ! (ಅ)
-ಸಂಬಂಧ ಹೋಗಲಾಡಿಸಿತಾ ಸಂಬಂಧ!
ಬಂಡಾಯಗಾರರನ್ನಟ್ಟಿತಾ ಸಂಬಂಧ!
ರ್ಮ ನಿರಂಜನಾದಿತ್ಯಗಾನಂದ!!!

ಸಾಲ ಸಲಿಸಿ ಮೂಲ ಬಲಿಸು! [ಬಾ]   3(1246)

-ಲ ಗೋಪಾಲನ ಲೀಲೆ ಸ್ಮರಿಸು!
ರ್ವ ಸಾಕ್ಷಿಯ ಗುರಿಯಿರಿಸು!
ಲಿಪ್ತ ನಾಗದೆಲ್ಲನುಭವಿಸು!
ಸಿಟ್ಟು ಸುಟ್ಟು ಪಟ್ಟ ಸ್ವೀಕರಿಸು!
ಮೂಕನಾಗಿ ಲೋಕೇಶನೆನಿಸು!
ಜ್ಜೆ ಬಿಟ್ಟವಧೂತನೆನಿಸು!
ಲಿಯ ತ್ಯಾಗವಳವಡಿಸು! (ಒ)
-ಲಿಸಿ ಗುರುಪುತ್ರ ನೀನೆನಿಸು! (ಕೂ)
-ಸು ನಿರಂಜನಾದಿತ್ಯಗೆನಿಸು!!!

ಸಾಲಗಾರನಾಗುವುದೊಂದು ಲೀಲೆ! (ಸಾ)   4(2431)

-ಲ ತೀರಿಸಲ್ತಡಾಗ್ವುದೊಂದು ಲೀಲೆ! (ಯೋ)
-ಗಾನಂದನಿಗೆಲ್ಲವೂ ಗುರು ಲೀಲೆ! (ಪ)
-ರರಿಗೆ ನೆರವಾಗ್ವುದೊಂದು ಲೀಲೆ!
ನಾಮ ರೂಪಿಯಾಗಿರ್ಪುದೊಂದು ಲೀಲೆ!
ಗುಡಿ, ಗೋಪುರವಾಸವೊಂದು ಲೀಲೆ! (ಸಾ)
-ವು, ನೋವೆಂದಳುವುದದೊಂದು ಲೀಲೆ!
ದೊಂಬರಾಟವಾಡುವುದೊಂದು ಲೀಲೆ! (ಅಂ)
-ದು, ಇಂದು, ಮುಂದೆಂಬುದದೊಂದು ಲೀಲೆ! (ಮಾ)
-ಲೀಶ್ಮಾಡ್ಸಿ ಕೊಳ್ಳುವುದೊಂದು ಲೀಲೆ! (ಲೀ)
-ಲೆ, ನಿರಂಜನಾದಿತ್ಯಾನಂದ ಲೀಲೆ!!!

ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ ಸಾಯುಜ್ಯ ನಾಮದಿಂದ!   1(41)

ಲೋಕ ಗ್ರಂಥವಾಸನೆಗಳಳಿವವಿದರಿಂದ! (ಐ)
-ಕ್ಯ ಸುಖ, ಶಾಂತಿ, ಸರ್ವಸ್ವ ಪ್ರಾಪ್ತಿಯಹುದಿದರಿಂದ!
ಸಾಕಾರ, ನಿರಾಕರ, ಸಿದ್ಧಿ ಜಪ ಭಜನೆಯಿಂದ!
ಮೀನಾಕ್ಷಿ, ಕಾಮಾಕ್ಷಿಯರ ಅನುಗ್ರಹವಿದರಿಂದ! (ಗೋ)
-ಪ್ಯವಾಗಿದ್ದಿದನು ಹೇಳುವೆನು ನಾನನುಭವದಿಂದ!
ಸಾರೂಪ್ಯ ತಾನಾಗುವುದು ಸದಾ ನಾಮಜಪದಿಂದ!
ರೂಪದರ್ಶನವಾಗುವುದು ಮಂತ್ರಾರ್ಥ ಜ್ಞಾನದಿಂದ! (ಆ)
-ಪ್ಯಯನಕಾರಿಯಿದೆಂದರಿವುದು ಸಾಧನೆಯಿಂದ!
ಸಾನುರಾಗದ ಸಾಯುಜ್ಯ ಸತತದಭ್ಯಾಸದಿಂದ!
ಯುಕ್ತಿ, ಭುಕ್ತಿ, ಭಾವಗಳಿಗಿದರಿವಾಗದಾನಂದ! (ಆ)
-ಜ್ಯ, ಭಜನೆ, ಜಪ, ಕರ್ಮದಿಂದ ನಿರಂಜನಾನಂದ!
ನಾಮವೃತ್ತಿ, ಬಿಡಿಸುವುದಿತರ ವೃತ್ತಿಗಳಿಂದ!
ನದೆಲ್ಲಾ ವಾಸನೆ ಅಳಿವುದೇ ಸಾಯುಜ್ಯ ಅಂದ! (ಇ)
-ದಿಂಬು ಬಾಳಿಗೆ ಬರುವುದಿದರ ಅಭ್ಯಾಸದಿಂದ!
ತ್ತ, ಗೀತೆಯ ನಿರಂಜನಾನಂದವೀನಾಮದಿಂದ!!!

ಸಾಲೋಕ್ಯದಿಂದ ಸಾಮೀಪ್ಯಕ್ಕೆ ಬಾ!   3(1262)

ಲೋಕ ವ್ಯವಹಾರ ಮರೆತು ಬಾ! (ಐ)
-ಕ್ಯಕ್ಕಿದಗತ್ಯವೆಂದರಿತು ಬಾ! (ಅಂ)
-ದಿಂದು, ಮುಂದೆನ್ನದೆ ಈಗಲೇ ಬಾ! (ಇ)
-ದರಿಂದಭ್ಯುದಯವಹುದು ಬಾ!
ಸಾಯುವ ಮುಂಚೆಲ್ಲಾ ಸಾಧಿಸು ಬಾ!
ಮೀರಾ, ಕಬೀರಾದಿಗಳಂತೆ ಬಾ! (ಗೋ)
-ಪ್ಯವಿದರಲ್ಲೇನಿಲ್ಲೆಂದೋಡಿ ಬಾ! (ಮಿ)
-ಕ್ಕೆಲ್ಲಾಸೆ ಮಿಥ್ಯವಾಗಿಹುದು ಬಾ!
-ಬಾ, ನಿರಂಜನಾದಿತ್ಯಾಪ್ತಾತ್ಮ ಬಾ!!!

ಸಾವ ಮರೆಸಿಹುದು ವಿಷಯ ಸುಖ! (ಸಾ)   6(3931)

-ವ ಜಯಿಸಿಹುದು ಸಾಕ್ಷಾತ್ಕಾರ ಸುಖ!
ನುಜ ಜನ್ಮದ ಉದ್ದೇಶ ಆ ಸುಖ! (ಧ)
-ರೆಯ ಸುಖಕ್ಕಾಶಿಸಿದರಿಲ್ಲಾ ಸುಖ!
ಸಿಟ್ಟು ಬಿಟ್ಟರೆ ಲಭ್ಯಾತ್ಮಾರಾಮ ಸುಖ!
ಹುಟ್ಟು, ಸಾವಿನ ಬಾಳಲ್ಲೇನಿದೆ ಸುಖ?
ದುರ್ಮತಿ ಬಯಸದು ಪರಮ ಸುಖ!
ವಿವೇಕ, ವಿಚಾರ, ವೈರಾಗ್ಯಕ್ಕಾ ಸುಖ!
ಡ್ರಿಪುಗಳ ನಿಗ್ರಹದಿಂದಾ ಸುಖ!
ಮ, ನಿಯಮದ ನೆರವಿಂದಾ ಸುಖ!
ಸುದರ್ಶನಧಾರೀ ಕೃಪೆಯಿಂದಾ ಸುಖ! (ಸ)
-ಖ ನಿರಂಜನಾದಿತ್ಯನಿಂದೆಲ್ಲಾ ಸುಖ!!!

ಸಾವನಾದರೂ ನೀಡಯ್ಯಾ! (ಆ)   1(388)

-ವದಕಾಗಿರಬೇಕಯ್ಯಾ? (ಅ)
-ನಾದರೆವನ್ಯಾಯವಯ್ಯಾ! (ಆ)
-ದರಿಸುವರಿನ್ಯಾರಯ್ಯಾ? (ಆ)
-ರೂರ ಸೇರಿದರೇನಯ್ಯಾ!
ನೀನಿರು ಊರ ತೋರಯ್ಯಾ! (ಆ)
-ಡಲಿನ್ನೇನೆನಗಿಲ್ಲವಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಯ್ಯಾ!!!

ಸಾವಿತ್ರಿಯಾದರ್ಶ ವಧುವಿಗಿರಲಿ!   6(3534)

ವಿಧಿಯ ಜಯಿಸುವ ಧೈರ್ಯವಿರಲಿ! (ಅ)
-ತ್ರಿ ಸತಿಯಂಥಾ ಪಾತಿವ್ರತ್ಯವಿರಲಿ!
ಯಾದವೇಂದ್ರನ ರಾಧೆಯಂತೆ ಇರಲಿ!
ಮಯಂತಿಯ ಏಕನಿಷ್ಠೆ ಇರಲಿ! (ದ)
-ರ್ಶನಕ್ಕಾಗಿ ಮೀರಾಳಂತೆ ಹುಚ್ಚಾಗಲಿ!
ರಲಕ್ಷ್ಮಿಯಾಗಿ ಪತಿ ಪಾದೊತ್ತಲಿ! (ಬಂ)
-ಧು ಬಳಗಕ್ಕೆ ಮಂದಾಕಿನಿಯಂತಿರ್ಲಿ!
ವಿವೇಕ, ವೈರಾಗ್ಯ, ಮೈತ್ರೇಯಿಯಂತಿರ್ಲಿ!
ಗಿರಿಜೆಯಂತರ್ಧನಾರೀಶ್ವರನಾಗ್ಲಿ! (ವ)
-ರ ಗುರುಭಕ್ತಿ ಬಾಳನ್ನು ಭವ್ಯಮಾಡ್ಲಿ! (ಕ)
-ಲಿಮಲ ನಿರಂಜನಾದಿತ್ಯಳಿಸಲಿ!!!

ಸಾಹಿತಿ ನಾನಲ್ಲ, ಸಾಯ್ವುರವರೆಲ್ಲಾ!   5(2634)

ಹಿಮಗಿರಿ ಸುತೆಗೆ ನಾನನ್ಯನಲ್ಲಾ!
ತಿಳಿದ್ಬಾಳಿದರೆ ನನ್ನಂತವರೆಲ್ಲಾ!
ನಾನ್ದಿಗಂಬರನಾದ್ರೂ ನಾಚ್ಕೆ ನನ್ಗಿಲ್ಲಾ!
ಲ್ಲ ನಲ್ಲೆಯರ್ನಾನೆಂದ್ರೆ ನಗ್ವರೆಲ್ಲಾ! (ಅ)
-ಲ್ಲ, ಏಸು ನಾನೆಂದ್ರೆ ಗುಲ್ಲೆಬ್ಬಿಸುವ್ರೆಲ್ಲಾ!
ಸಾಯುಜ್ಯವಾದರರಿವಾಗ್ವುದಿದೆಲ್ಲಾ!
(ಕಾ)ಯ್ವ ಕರುಣಾಳೊಬ್ಬನೇ ಜಗತ್ತಿಗೆಲ್ಲಾ! (ವ)
-ರಗುರು ದತ್ತಾತ್ರೇಯರುಹಿದ್ದನೆಲ್ಲಾ! (ಅ)
-ವನೊಬ್ಬ ಹುಚ್ಚನೆಂಬರ್ಮೂರ್ಖ ಜನ್ರೆಲ್ಲಾ! (ಹ)
-ರೆ

ದಧಿಕಾರಾದಿ ಮದವಿದೆಲ್ಲಾ! (ಬ)
-ಲ್ಲಾ, ನಿರಂಜನಾದಿತ್ಯ ತಾನಿದೆಲ್ಲಾ!!!

ಸಾಹಿತಿಗಳಾಗುತ್ತಿರಬೇಕು!   4(1857)

ಹಿತವಚನಗಳಿರಬೇಕು! (ಮ)
-ತಿ ಪ್ರಚೋದಕವಾಗಿರಬೇಕು!
ಮನ ದೈವಿಕಕ್ಕಿರಬೇಕು! (ಕೀ)
-ಳಾಲೋಚನೆಯಿಲ್ಲದಿರಬೇಕು!
ಗುರುಸೇವೆಗೆಡೆಯಿರಬೇಕು! (ವೃ)
-ತ್ತಿ ಪರಿಶುದ್ಧವಾಗಿರಬೇಕು! (ಪ)
-ರ ನಿಂದೆಯಭ್ಯಾಸ ಹೋಗಬೇಕು!
ಬೇಯುವ ತನಕ ಕಾಯಬೇಕು (ಟಾ)
-ಕು ನಿರಂಜನಾದಿತ್ಯಾಗಬೇಕು!!!

ಸಾಹಿತೀ! ನಿನಗಿದೆಯೇನು ಮಾಹಿತೀ?   6(3936)

ಹಿತೈಷಿಯನ್ನೇ ನೀನು ಮರೆತಿರುತೀ!
ತೀರಿಸದೇ ಋಣವನ್ನು ನೀನಿರುತೀ!
ನಿನ್ನನ್ನು ನೀನಾರೆಂದರಿಯದಿರುತೀ!
ಟ, ವಿಟರ ಸಂಗದಲ್ಲೇ ಇರುತೀ!
ಗಿರಿಜಾಧವನಂತೆ ಆಗದಿರುತೀ! (ತಂ)
-ದೆ, ತಾಯಿ ಅವನೆಂದರಿಯದಿರುತೀ! (ತಾ)
-ಯೇ ಪರದೈವವೆಂದರಿಯದಿರುತೀ! (ಅ)
-ನುಮಾನವೆಲ್ಲರಲ್ಲೂ ಬೆಳೆಸಿರುತೀ!
ಮಾಡೀಗಾದರೂ ವ್ಯತ್ಯಾಸ ಪರಿಸ್ಥಿತೀ!
ಹಿರಣ್ಯಗರ್ಭಗಾಗು ಶರಣಾಗತೀ! (ಯ)
-ತೀಶ ನಿರಂಜನಾದಿತ್ಯ ನೀನಾಗುತೀ!!!

ಸಾಹಿತೀ! ನೀನೂ ಒಂದು ದಿನ ಸಾಯುತೀ!   4(2488)

ಹಿತೈಷಿಯಾಗಿರೆಲ್ಲರಿಗೆ ಸಾಹಿತೀ!
ತೀರ್ಥಯಾತ್ರೇ ಮಾಡ್ಬಂದೆನೆಂದ್ರೂ ಸಾಯುತೀ!
ನೀಚವೃತ್ತಿ ಬಿಟ್ಟು ಖ್ಯಾತನಾಗ್ಸಾಹಿತೀ!
ನೂತ್ನ, ಪ್ರಾಚೀನವೆಂದ್ಗುದ್ದಾಡ್ಯೇಕ್ಸಾಯುತೀ?
ಒಂದೆರಡಾಯ್ತೆಂದರಿತಿರು ಸಾಹಿತೀ!
ದುಡಿಯದೇ ಅಪ್ಪನಿಗಾಗ್ಯೇಕ್ಸಾಯುತೀ?
ದಿಕ್ಕುಗೆಟ್ಟು ಹೋಗಿ ಮುಳುಗ್ಬೇಡ್ಸಾಹಿತೀ! (ಅ)
-ನವರತ ಧ್ಯಾನ ಮಾಡದೇಕ್ಸಾಯುತೀ?
ಸಾಕಾರದ ಹುಚ್ಚು ಸಾಕಿನ್ನು ಸಾಹಿತೀ! (ಸಾ)
-ಯುಜ್ಯಕ್ಕಾಕಾರ ಕಲ್ಪಿಸ್ಯೇಕೆ ಸಾಯುತೀ? (ಪ)
-ತೀ, ನಿರಂಜನಾದಿತ್ಯನಂತಾಗ್ಸಾಹಿತೀ!!!

ಸಾಹಿತ್ಯ ಮಾತೆಗೀ ಹರಕಲಾಂಬರ! (ಸಾ)   4(1845)

-ಹಿತಿಗಳಿಂದಾಗದಿರಲಿ ತಾತ್ಸಾರ! (ಸ)
-ತ್ಯ ವಿಚಾರಗಳ್ಗಾಗಲಿ ಪುರಸ್ಕಾರ!
ಮಾತೆಗಿದೂ ಒಂದು ಭೂಷಣಾಲಂಕಾರ!
ತೆಗೆದೊಗೆದರಾಗುವುದಪಚಾರ! (ತ್ಯಾ)
-ಗೀಶ್ವರ ಮಾಡಿಸಿಹನೀ ಉಪಚಾರ!
ರಿ, ಹರ, ಬ್ರಹ್ಮಾ ಗೆಳೆಯನಾಕಾರ! (ವ)
-ರಗುರು ಸ್ವರೂಪಾ ಯೋಗೀಶಾವತಾರ!
ರ್ಮಕರ್ತಾ ಲೋಕಭರ್ತಾ ಆರ್ತೋದ್ಧಾರ! (ಲೀ)
-ಲಾಂಗಾ ಮಾರಹರ ಶಿವಲಿಂಗಾಕಾರ!
ನಶಂಕರಿಯ ಹೃದಯ ವಿಹಾರ! (ಹ)
-ರ ನಿರಂಜನಾದಿತ್ಯತ್ಮಾನಂದಾಗಾರ!!!

ಸಿಕ್ಕಬಹುದಿದ್ದಲ್ಲೇ ನಿತ್ಯ ಪರಮಾನ್ನ! (ಸ)   6(4072)

-ಕ್ಕರೆ ವ್ಯಾಧಿಯವನಿಗಿದರಿಂದ ಬನ್ನ!
ಯಸ್ದೇ ಬಂದ್ರೂ ಯೋಚಿಸ್ಬೇಕುಣ್ಣುವ ಮುನ್ನ!
ಹುಶಾರ್ತಪ್ಪಿದ್ರೆ ಕೆಡುವುದಾರೋಗ್ಯ ಚಿನ್ನ!
ದಿವ್ಯ ಪ್ರಸಾದವೆಂದೆಲ್ಲಾ ಉಂಬುವ ಚೆನ್ನ! (ಎ)
-ದ್ದರೂ, ಬಿದ್ದರೂ, ಆಗನು ಈ ಚೆನ್ನ ಖಿನ್ನ! (ಉ)
-ಲ್ಲೇಖಿಸದಂತಿಡಲಾಗ್ವುದೇ ಮನಸ್ಸನ್ನ?
ನಿರ್ವಿಕಲ್ಪ ಸಿದ್ಧೇಶ್ವರನಾಗ್ಬೇಕ್ಪ್ರಸನ್ನ!
ತ್ಯಜಿಸ್ಬೇಕಿದಕ್ಕಾಗಿ ಎಲ್ಲಾ ಆಸೆಯನ್ನ!
ಡದೇ ಅಧೈರ್ಯ ಮಾಡ್ಬೇಕ್ಸಾಧನೆಯನ್ನ!
ಕ್ಕಸರೂ ಪಡೆದರು ಸಿದ್ಧಿಗಳನ್ನ!
ಮಾತೆಯೇ ಕಾಯಬೇಕು ದೀನ ಶಿಶುವನ್ನ! (ಉ)
-ನ್ನತದ ನಿರಂಜನಾದಿತ್ಯಾ ಮಾತೆ ನನ್ನ!

ಸಿಕ್ಕಬೇಕಾದದ್ದು ಸಿಕ್ಕೇ ಸಿಕ್ಕುವುದು! (ತ)   6(3498)

-ಕ್ಕ ವ್ಯವಸ್ಥೆ ತಾನಾಗಿಯೇ ಆಗುವುದು!
ಬೇಡಿ, ಕಾಡಿ, ಕಾಲ ವ್ಯರ್ಥವಾಗುವುದು!
ಕಾಮಹರನಿಷ್ಟದಂತೆಲ್ಲಾಗುವುದು?
ಶೇಂದ್ರಿಯ ಅವನಾಧೀನವಿಹುದು! (ಕ)
-ದ್ದು ಬಾಳಲಿಕ್ಕೆಡೆಗೊಡದಿರುವುದು!
ಸಿಟ್ಟಿಗೆದ್ದರೆ ಪ್ರಳಯವಾಗುವುದು! (ದಿ)
-ಕ್ಕೇ ತೋಚದೆ ಎಲ್ಲಾ ಭಸ್ಮವಾಗುವುದು!
ಸಿದ್ಧ, ಸಾಧ್ಯರಿಗಿದರರಿವಿಹುದು! (ಠ)
-ಕ್ಕು, ಠವಳಿಗಾಜ್ಞಾನ ಸಿದ್ಧಿಯಾಗದು! (ನಾ)
-ವು, ನೀವೆಂಬಹಂಕಾರಕ್ಕರಿವಾಗದು! (ಇ)
-ದು ನಿರಂಜನಾದಿತ್ಯಾನಂದಕ್ಕಹುದು!!!

ಸಿಟ್ಟಿನನಿಷ್ಟ ಸೃಷ್ಟಿ ದುಷ್ಟ ಜೀವ! [ಗ]   3(1172)

-ಟ್ಟಿ ಮನದಾತ್ಮನಿಷ್ಟ ಗುರುದೇವ!
ಯನ, ನಾಲಿಗೆಗಾಳಲ್ಪ ಜೀವ!
ನಿಗ್ರಹೇಂದ್ರಿಯ ಜಯ ಗುರುದೇವ! (ಕ)
-ಷ್ಟ ಪಡುತಿಹನು ವಿಷಯಿ ಜೀವ!
ಸೃಷ್ಟೀಶ ನಿರ್ವಿಷಯಿ ಗುರುದೇವ! (ದೃ)
-ಷ್ಟಿ ದೋಷದಿಂದಳುತಿಹನು ಜೀವ!
ದುರಿತ ದೂರ ವರ ಗುರುದೇವ! (ಭ್ರ)
-ಷ್ಟ ತಾನಾಗಿ ಬಳಲುವನು ಜೀವ!
ಜೀವ, ಶಿವ್ಯೆಕ್ಯಾನಂದ ಗುರುದೇವ! (ಅ)
-ವ ನಿರಂಜನಾದಿತ್ಯ ಮಹಾದೇವ!!!

ಸಿಟ್ಟು ಮಾಡುವುದು ಅವಿವೇಕ! (ಗು)   6(3629)

-ಟ್ಟು ತಿಳಿಯದೇ ಈ ಅವಿವೇಕ!
ಮಾಡಬೇಕಾರಲ್ಲೀ ಅತಿರೇಕ? (ಮಾ)
-ಡುವವ ಮಾಡ್ಸಿಕೊಳ್ವವ ಏಕ! (ನೀ)
-ವು, ನಾವೊಂದಾದ್ಮೇಲೇಕವಿವೇಕ?
ದುರಹಂಕಾರದಿಂದವಿವೇಕ!
ದರಿಂದಾಗಿ ಕೆಟ್ಟಿತೀ ಲೋಕ!
ವಿವೇಕ, ವೈರಾಗ್ಯದಿಂದ ಸುಖ!
ವೇಷಕ್ಕೆ ಮೋಸಹೋಗಿ ಈ ದುಃಖ! (ಏ)
-ಕ, ನಿರಂಜನಾದಿತ್ಯಾಯ್ತನೇಕ!!!

ಸಿಡಿಲ್ಮಿಂಡು, ಮಳೆ, ಗಾಳೀ, ಬಾಳು! (ಅ)   4(2198)

-ಡಿಗೆಟ್ಟುರುಳಿಸುವುದಾ ಬಾಳು! (ಕೋ)
-ಲ್ಲಿಂಚಿನಂತನಿತ್ಯದ್ದಾಶಾ ಬಾಳು! (ಚಾ)
-ಡುವುದು ಕೈಯ್ಯ ಧನಕ್ಕಾ ಬಾಳು!
ನ ಬಂದಂತಾಡುವುದಾ ಬಾಳು! (ಹ)
-ಳೆಯ ವಾಸನೆಗಳಾಳಾ ಬಾಳು (ರಂ)
-ಗಾಧಿಪನ ನೆನೆಯದಾ ಬಾಳು! (ಕಾ)
-ಳೀ, ಬೋಳೀಯೆಂಬಸಹ್ಯದಾ ಬಾಳು!
ಬಾಹ್ಯಾಡಂಬರದಾ ಕೀಳು ಬಾಳು! (ಬಾ)
-ಳು! ನಿರಂಜನಾದಿತ್ಯನಾಗ್ಯೇಳು!!!

ಸಿದ್ಧತೆ ಇಲ್ಲ, ಬದ್ಧತೆ ಇಲ್ಲ, ಗುರುಚಿತ್ತಕ್ಕೆ! (ಉ)   6(4118)

-ದ್ಧವನಿಗಿದರಿವಾಗುತ್ತಿತ್ತು ದಿನದಿನಕ್ಕೆ! (ಚಿಂ)
-ತೆ ಮಾಡಬೇಡಿರೆಂದನವನು ಗೋಪೀ ಜನಕ್ಕೆ!
ಳಿಸಲ್ಕಿಳೆಯ ಭಾರ ಕೃಷ್ಣ ಬಂದ ಲೋಕಕ್ಕೆ! (ಗೊ)
-ಲ್ಲರ ಮನೆಯ ಹಾಲ್ಮೊಸ್ರು ಸ್ವಲ್ಪ ಕಾಲಉಣ್ಲಿಕ್ಕೆ!
ಲರಾಮ, ಕೃಷ್ಣರು, ಹೊರಡ್ಲೀಗ ಮಥುರಾಕ್ಕೆ! (ಉ)
-ದ್ಧಟತನ ಮಾವ ಕಂಸನದ್ದು ಮುಗಿಸಲಿಕ್ಕೆ! (ಮಾ)
-ತೆ ದೇವಕಿ, ತಂದೆ ವಸುದೇವರ ಸ್ವಾತಂತ್ರಕ್ಕೆ!
ದೆಲ್ಲವೂ ವೇದ್ಯ ಆ ಸಹೋದರರ ಚಿತ್ತಕ್ಕೆ! (ತ)
-ಲ್ಲಣಗೊಳ್ಳುವವರವರಲ್ಲ ನಿರ್ಗಮನಕ್ಕೆ!
ಗುರುಸ್ವರೂಪಿಯ ಚಿತ್ತದರಿವಾಗದೆಲ್ಲಕ್ಕೆ! (ಕ)
-ರುಣೆ ಶ್ರೀ ಗುರುವಿನದ್ದಿರಲಿ ನಮಗೆಲ್ಲಕ್ಕೆ!
ಚಿತ್ತ ಚಾಂಚಲ್ಯವಿಲ್ಲದ ಭಜನೆ ಬೇಕದಕ್ಕೆ! (ತ)
-ತ್ತಬಡಿಕತನ ಬಿಟ್ಟೇಬಿಡಬೇಕಾ ಲಭ್ಯಕ್ಕೆ! (ಅ)
-ಕ್ಕೆ ನಿರಂಜನಾದಿತ್ಯಾನಂದವಿದರಿಂದೆಲ್ಲಕ್ಕೆ!!!

ಸಿದ್ಧನಾಗು! ಯುದ್ಧವನ್ನೊದ್ದು ಶುದ್ಧನಾಗು! (ಸ)   6(3855)

-ದ್ಧರ್ಮ, ಸದಾಚಾರದಿಂದ ಸಾಧಕನಾಗು!
ನಾರುವೀ ಶರೀರ ಮೋಹವಿದೂರನಾಗು!
ಗುಣಾತೀತ ನೀನಾಗಿ ಪರಬ್ರಹ್ಮನಾಗು! (ಸಾ)
-ಯುವ ಮೊದಲೇ ಸಾಧಿಸಿ ಮುಕ್ತ ನೀನಾಗು! (ಬ)
-ದ್ಧನಾಗಿ ಸಂಸಾರದಲ್ಲಿರದವನಾಗು!
ರ ಬ್ರಹ್ಮಚರ್ಯ ಪಾಲನಾಭ್ಯಾಸಿಯಾಗು! (ಇ)
-ನ್ನೊಮ್ಮೆ ಹುಟ್ಟು, ಸಾವಿಗೊಳಗಾಗದವ್ನಾಗು! (ಗೆ)
-ದ್ದು ಷಡ್ರಿಪುಗಳನ್ನು ಜಿತೇಂದ್ರಿಯ ನಾಗು!
ಶುಭಾಶುಭ, ಭಯ, ಭ್ರಾಂತಿ ಬಿಟ್ಟವನಾಗು! (ಸಿ)
-ದ್ಧರ ಸ್ಥಿತಿಯಿದೆಂದರಿತವರಂತಾಗು!
ನಾಮ ಜಪ ಸುಲಭೋಪಾಯದಿಂದದಾಗು!
ಗುರು ನಿರಂಜನಾದಿತ್ಯಗೆ ಶರಣಾಗು!!!

ಸಿಪ್ಪೆ ತೆಗೆದು ಹಣ್ಣು ತಿನ್ನಣ್ಣಾ! (ತಿ)   2(771)

-ಪ್ಪೆಗೆಸೆಯಬೇಕು ಬೀಜವಣ್ಣಾ!
ತೆರೆದಿಹುದಂಗಡಿ ನೋಡಣ್ಣಾ! (ಬ)
-ಗೆ ಬಗೆಯ ಹಣ್ಣಿನಾಶೆ ಬೇಡಣ್ಣಾ!
ದುಸ್ಸಾರವಾದುದನು ಬಿಡಣ್ಣಾ!
ಣದಾಸೆ ಇರಬಾರದಣ್ಣಾ! (ಹ)
-ಣ್ಣು ಉತ್ತಮವಾಗಿರಬೇಕಣ್ಣಾ!
ತಿಳಿದಿದನಾನಂದ ಪಡಣ್ಣಾ! (ಉ)
-ನ್ನತದ ಧ್ಯೇಯವಿರಬೇಕಣ್ಣಾ! (ಹ)
-ಣ್ಣಾ! ನಿರಂಜನಾದಿತ್ಯಾನಂದಣ್ಣಾ!!!

ಸೀತಾಲಕ್ಷ್ಮಿ ಬಣ್ಣ ನನ್ನ ಬಣ್ಣ!   4(2196)

ತಾಯಾಗಿ ಫಲಕಾರಿ ಈ ಬಣ್ಣ!
ಕ್ಷ್ಯ ಸಿದ್ಧಿಗುಪಕಾರೀ ಬಣ್ಣ! (ಲ)
-ಕ್ಷ್ಯಿಯ ಪಾವನ ಗೈದುದೀ ಬಣ್ಣ!
ಲ ಪತಿಸೇವೆಗಿದೇ ಬಣ್ಣ! (ಅ)
-ಣ್ಣ, ತಮ್ಮಕ್ಕ ತಂಗ್ಯೆಂಬುದೀ ಬಣ್ಣ!
ಯ, ವಿನಯ ಸಂಕೇತಾ ಬಣ್ಣ! (ಅ)
-ನ್ನಪೂರ್ಣೆದೇವಿಗಾನಂದಾ ಬಣ್ಣ!
ಹುದಿನದ ಸುಕೃತಾ ಬಣ್ಣ! (ಅ)
-ಣ್ಣ, ನಿರಂಜನಾದಿತ್ಯನಾ ಬಣ್ಣ!!!

ಸೀತೆಯ ಸೊತ್ತು ಮಾರುತಿಯ ಸಂಪತ್ತು!   3(1088)

ತೆರೆದಿದೆಲ್ಲರಿಗೆ ದಾರೀ ಸಂಪತ್ತು! (ಭ)
-ಯವಿದಕಿಲ್ಲದಿದು ಭಾರೀ ಸಂಪತ್ತು!
ಸೊರಗಿ, ಕರಗುವುದಿಲ್ಲಾ ಸಂಪತ್ತು! (ಇ)
-ತ್ತು, ಮೇಲೆತ್ತುವುದೆಲ್ಲರನಾ ಸಂಪತ್ತು!
ಮಾನಾವಮಾನ ಲೆಕ್ಕಿಸದಾ ಸಂಪತ್ತು! (ತು)
-ರು, ಕರುಗಳಿಗೂ ಇದಾಪ್ತ ಸಂಪತ್ತು!
ತಿನುತಿನುತ್ತಧಿಕ ಸ್ವಾದಾ ಸಂಪತ್ತು!
ಜ್ಞ ಯಾಗಕ್ಕಿದೇ ಪ್ರಾಮುಖ್ಯ ಸಂಪತ್ತು!
ಸಂತರ ನಿರಂತರಪೇಕ್ಷಾ ಸಂಪತ್ತು!
ತಿತ ಪಾವನ ಶ್ರೀರಾಮಾ ಸಂಪತ್ತು! (ಹೊ)
-ತ್ತು, ಹೆತ್ತ ನಿರಂಜನಾದಿತ್ಯ ಸಂಪತ್ತು!!!

ಸುಂದರ ಘನಶ್ಯಾಮ ಸುಂದರ! (ಮಂ)   2(455)

-ದರಾದ್ರಿ ಗಿರಿಧರ ಸುಂದರ! (ವ)
-ರ ಮುರಲೀಧರತಿ ಸುಂದರ! (ಅ)
-ಘಹರ ರಾಧಾವರ ಸುಂದರ!
ತಜನರುದ್ಧಾರ ಸುಂದರ!
ಶ್ಯಾಮ ಗೋಪ ಕುಮಾರ ಸುಂದರ!
ದ, ಮತ್ಸರದೂರ ಸುಂದರ! (ವ)
-ಸುಂಧರಾ ಪ್ರಿಯಕರ ಸುಂದರ! (ಸು)
-ದರ್ಶನ ಚಕ್ರಧರ ಸುಂದರ! (ವ)
-ರ, ನಿರಂಜನಾದಿತ್ಯ ಸುಂದರ!!!

ಸುಂದರ ಮನ ಮಂದಿರ ತನು!   3(1158)

ತ್ತಾತ್ಮಾನಂದನುದಯ ಭಾನು!
ಘುವರ ರವಿವಂತ ಸೂನು!
ದ, ಮತ್ಸರ ರಹಿತ ತಾನು!
ರೋರಗ ವಂದ್ಯ ಸುರಧೇನು!
ಮಂಗಳಾಂಗ ಶ್ರೀರಂಗನವನು!
ದಿನರಾತ್ರ್ಯಾತನ ನೆನೆ ನೀನು!
ಕ್ಷಿಸುವನವನೆಲ್ಲರನ್ನು!
“ತತ್ವಮಸ್ಯಾರ್ಥ” ರೂಪ ಶಿವನು! (ತಾ)
-ನು ನಿರಂಜನಾದಿತ್ಯನಿವನು!!!

ಸುಂದರ ಸುಕುಮಾರಾ ಶ್ರೀ ವರ!   5(2949)

ಯೆಯವನದೆಲ್ಲರ್ಗಪಾರ!
ವಿಯಾಗಿ ಲೋಕಕ್ಕುಪಕಾರ!
ಸುಪ್ತನಂತರಂಗದಲ್ಲೂ ಧೀರ!
ಕುಮತಿಯವನಿಂದತೀ ದೂರ!
ಮಾರುತಿಗೆ ಅವನೇ ಆಧಾರ!
ರಾಕ್ಷಸರಿಗವ ಕಾಲಾಕಾರ!
ಶ್ರೀ ಸೀತೆಗಾತ ಶ್ರೀ ರಾಮಾಕಾರ!
ರ್ಣಾತೀತನಾಗೀತ ಓಂಕಾರ (ಮಾ)
-ರಾರಿ ನಿರಂಜನಾದಿತ್ಯಾಕಾರ!!!

ಸುಂದರಮ್ಮನನುಭವ ಸ್ಫೂರ್ತಿದಾಯಕ!   6(4024)

ತ್ತನ ಸೇವೆ ಮಾಡಿದ್ದಕ್ಕಿದು ಸಾರ್ಥಕ! (ಚಿ)
-ರ ಕಾಲವಿರ್ಬೇಕವಳದ್ದೊಂದು ಸ್ಮಾರಕ! (ನ)
-ಮ್ಮ ಸ್ತ್ರೀ ಸಮಾಜಕ್ಕವಳು ಮಾರ್ಗದರ್ಶಕ!
ಗುನಗುತೆಲ್ಲರ ಸೇವೆ ಮಾಳ್ಪ ಮುಖ!
ನುಡಿಯದೇ ನಡೆವವನವಳ ಸಖ!
ಜನಾನಂದದ ಜಾಗ ಅವನ ಲೋಕ!
ರ ಗುರು ಸ್ವರೂಪಾತನೆಂಬವ್ರನೇಕ!
ಸ್ಫೂರ್ತಿ ಪಡವವ್ನಿಂದ ಕಾಕ, ಪಿಕ, ಶುಕ! (ಅ)
-ರ್ತಿಯಿಂದವನ ಪೂಜಸುವಳಾ ಬಾಲಿಕಾ!
ದಾಶರಥಿಯ ರಾಮಾಯಣ ಸಹಾಯಕ! (ಕಾ)
-ಯ ಬಲದಲ್ಲವಳ ಸ್ಥಿತಿ ಚಿಂತಾತ್ಮಕ! (ಸಂ)
-ಕಟ ಶ್ರೀ ನಿರಂಜನಾದಿತ್ಯ ನಿವಾರಕ!!!

ಸುಂದರವಾಗಿ ಬರೆಸಿದನಿಂದು! [ಮಂ]   4(2400)

-ದಮತಿ ನೀನಲ್ಲವೆಂದಂದನಿಂದು! (ಹ)
-ರನ ಪ್ರಿಯ ಪುತ್ರ ನೀನೆಂದನಿಂದು!
ವಾಸುದೇವ ನಿನ್ನಾಪ್ತನೆಂದನಿಂದು! (ಯೋ)
-ಗಿರಾಜ ಮುರುಗ ನೀನೆಂದನಿಂದು!
ಹುಶೇಷ್ಠವೀ ನಾಮವೆಂದನಿಂದು!
ರೆಪ್ಪೆ ತೆರ್ದಪ್ಪನ ನೋಡೆಂದನಿಂದು!
ಸಿದ್ಧಿಗಳು ನಿನಗೇಕೆಂದನಿಂದು!
ತ್ತ ಸ್ವರೂಪ ನಿನ್ನದೆಂದನಿಂದು!
ನಿಂದಾ ಸ್ತುತಿವಗಿಷ್ಟವೆಂದನಿಂದು! (ಇ)
-ದು, ನಿರಂಜನಾದಿತ್ಯನೆಂದನಿಂದು!!!

ಸುಖ ನಿದ್ರೆ ತಾಯಿ ತೊಡೆಯಲ್ಲಿ!   3(1243)

ಗವಾಹನಗಾನಂದವಲ್ಲಿ!
ನಿತ್ಯ ನಿಶ್ಚಿಂತೆಯಾ ತಲ್ಪದಲ್ಲಿ! (ನಿ)
-ದ್ರೆಯಿಂದೆಬ್ಬಿಸ್ಯುಣಿಸುವಳಲ್ಲಿ!
ತಾಪತ್ರಯವಿಲ್ಲ ಬಾಲಗಲ್ಲಿ! (ತಾ)
-ಯಿಗಿಹುದೆಲ್ಲಾ ಜವಾಬ್ದಾರ್ಯಲ್ಲಿ!
ತೊಳೆವಳಂಟಿದ್ದ ಮಲವಲ್ಲಿ! (ಬಿ)
-ಡೆನೆಂಬಳನಾರೋಗ್ಯವಾದಲ್ಲಿ! (ಭ)
-ಯ ನಿವಾರಣೆ ಮಾಡುವಳಲ್ಲಿ! (ಇ)
-ಲ್ಲಿ, ನಿರಂಜನಾದಿತ್ಯಾನಂದಲ್ಲಿ!!!

ಸುಖ, ಶಾಂತಿ, ಜೀವನವಿರಲಿ! (ಮು)   6(3592)

-ಖದಲ್ಲದು ಹೊರ ಹೊಮ್ಮುತ್ತಿರ್ಲಿ! (ಪ್ರ)
-ಶಾಂತ ವಾತಾವರಣವಿರಲಿ! (ಪ್ರ)
-ತಿ ದಿನಕ್ಕೊಂದು ನೇಮವಿರಲಿ!
ಜೀವವಿರುವವರೆಗದಿರ್ಲಿ!
ರ ಬೇಡುವಭ್ಯಾಸ ತಪ್ಪಿರ್ಲಿ!
ಶ್ವರಕ್ಕಂಟಿಕೊಳ್ಳದಿರಲಿ!
ವಿಕಲ್ಪ, ಸಂಕಲ್ಪವಿಲ್ಲದಿರ್ಲಿ! (ಪ)
-ರಮಾತ್ಮನಲ್ಲಿ ನಂಬಿಗೆಯಿರ್ಲಿ! (ಮಾ)
-ಲಿಕ ನಿರಂಜನಾದಿತ್ಯಾಗಿರ್ಲಿ!!!

ಸುಖವಾಗಿ ಜನ್ಮ ಮುಗಿಸಪ್ಪಾ! (ದುಃ)   4(1486)

-ಖಕ್ಕೆ ಕಾರಣ ಆಸೆಗಳಪ್ಪಾ!
ವಾಸನಾ ನಾಶವಾಗಬೇಕಪ್ಪಾ!
ಗಿರಿಜಾಪತಿಯ ಭಜಿಸಪ್ಪಾ!
ನ್ಮ ಪಾವನವಾಗುವುದಪ್ಪಾ! (ಮ)
ನ್ಮಥಾರಿಯ ಮರೆಯಬೇಡಪ್ಪಾ!
ಮುಕ್ತಿ ಪ್ರದಾತಾ ಗುರು ಶಿವಪ್ಪಾ! (ಬಿ)
-ಗಿ ಹಿಡಿಯಬೇಕಿಂದ್ರಿಯವಪ್ಪಾ!
ದಾಚಾರ ಸಂಪನ್ನನಾಗಪ್ಪಾ! (ಅ)
-ಪ್ಪಾ ನಿರಂಜನಾದಿತ್ಯಾನಂದಪ್ಪಾ!!!

ಸುಖವಾಗಿರಲವರಾನಂದದಿಂದ! (ದುಃ)   5(2954)

-ಖ ನಿವಾರಕನ ಅನುಗ್ರಹದಿಂದ!
ವಾಸುದೇವ ತಾನಾಗಿರುವವನಿಂದ! (ಮಾ)
-ಗಿದ ಹಣ್ಣನ್ನೇ ತಿನ್ನಿಸುವವನಿಂದ! (ಪ)
-ರಮಾರ್ಥದರ್ಥಜ್ಞಾನವಿರ್ಪವನಿಂದ!
ಕ್ಷ್ಯ ಆತ್ಮನಲ್ಲಿರಿಸೆಂಬವನಿಂದ! (ಭ)
-ವರೋಗವೈದ್ಯನಾದಾ ಗುರುವಿನಿಂದ!
ರಾವಣಾದ್ಯಸುರರ ಕೊಂದವನಿಂದ!
ನಂಜುಂಡೇಶ್ವರಗಾಪ್ತನಾದವನಿಂದ!
ತ್ತಾತ್ರೇಯ ತಾನಾಗಿರುವವನಿಂದ! (ಅಂ)
-ದಿಂದೆನ್ನದಿರುವ ಕಾಲಾತೀತನಿಂದ! (ನಂ)
-ದ, ಕಂದ ಶ್ರೀ ನಿರಂಜನಾದಿತ್ಯನಿಂದ!!!

ಸುಖವಾದ ನಿದ್ದೆಯಿಂದ ನಾನೆದ್ದೆ! (ಸು)   2(462)

-ಖವಿದೇ ಸದಾ ಇರಲೆನುತಿದ್ದೆ!
ವಾಸುದೇವನ ಲೈಕ್ಯವಾಗಿದ್ದಿದ್ಟೆ! (ಭೇ)
-ದ ವಿಲ್ಲದಾನಂದದಲಿ ನಾನಿದ್ದೆ!
ನಿಶ್ಚಲದ ನಿರ್ವಿಕಲ್ಪದಲಿದ್ದೆ! (ಎ)
-ದ್ದೆನಗೇನಾಗಬೇಕೆಂದಿರುತಿದ್ದೆ! (ಬಾ)
-ಯಿಂದಿದನಾಡಲರಿಯದಂತಿದ್ದೆ!
ಶೇಂದ್ರಿಯ ಸಂಬಂಧವಿಲ್ಲದಿದ್ದೆ!
ನಾಳೆಗೇನೆಂದಳದೆ ಸುಮ್ಮನಿದ್ದೆ!
ನೆನಪುಗಳಿಲ್ಲದವನಾಗಿದ್ದೆ! (ಇ)
-ದ್ದೆ! ನಿರಂಜನಾದಿತ್ಯನಾಗೀಗೆದ್ದೆ!!!

ಸುಖವೆಂದರೇನೆಂದರಿಯಲರಸು!   6(3887)

ರಾರಿ ಯಾರೆಂದರಿಯಲೀಗರಸು!
ವೆಂಕಟೇಶಾತನೆಂದರಿಯಲರಸು!
ರ್ಶನಾಗತ್ಯವನ್ನರಿಯಲರಸು!
ರೇಗಾಟ, ಸಲ್ಲದೆಂದರಿಯಲರಸು!
ನೆಂಟ, ಭಂಟಾತ್ಮನೆಂದಸಿರಿಯಲರಸು!
ತ್ತನೆಲ್ಲವೆಂದರಿಯಲೀಗರಸು!
ರಿಸೀಶನವನೆಂದರಿಯಲರಸು!
ದುಪನವನೆಂದರಿಯಲರಸು!
ಯೇಶನವನೆಂದರಿಯಲರಸು!
ಹಸ್ಯವಿದನ್ನೀಗರಿಯಲರಸು! (ಕೂ)
-ಸು ನಿರಂಜನಾದಿತ್ಯಗಾಗಲರಸು!!!

ಸುಖಿಗಳಾರೀ ಜಗದೊಳಗೆ? (ದುಃ)   5(3278)

-ಖಿಗಳೇ ಹೆಚ್ಚೀ ಇಳೆಯೊಳಗೆ! (ಆ)
-ಗ ಬಾರದನ್ಯಾಯ ಮಕ್ಕಳಿಗೆ! (ಗೋ)
-ಳಾಡಿಸಿ ಲಾಭವೇನಪ್ಪನಿಗೆ?
ರೀತಿ, ನೀತಿ, ಕಲಿಸಲೆಮಗೆ!
ಗಳ ತಪ್ಪಿಸಲೀ ಗಳಿಗೆ!
ಣಗಳ್ಸ್ವಧರ್ಮನಿಷ್ಠರಾಗೆ!
ದೊರಕಲಿ ನ್ಯಾಯ ಸರ್ವರಿಗೆ! (ಉ)
-ಳದವಗೂ ಹಕ್ಕಿದೆ ಭೂಮಿಗೆ!
ಗೆಳೆಯ ನಿರಂಜನಾದಿತ್ಯಾಗೆ!!!

ಸುಗ್ರೀವ ಶ್ರೀರಾಮ ಪ್ರಿಯ!   1(200)

ಗ್ರೀವ ಸುಖ ಸರ್ವ ಪ್ರಿಯ!
ನವಾಸ ಮತ್ಸ್ಯ ಪ್ರಿಯ!
ಶ್ರೀನಿವಾಸ ಲಕ್ಷ್ಮಿ ಪ್ರಿಯ!
ರಾಜೀವಾಕ್ಷ ರಾಧಾ ಪ್ರಿಯ!
ದನಾಂಗ ರತಿ ಪ್ರಿಯ!
ಪ್ರಿಯಪದ್ಮ ಸೂರ್ಯ ಪ್ರಿಯ!
ಮ ನಿರಂಜನ ಪ್ರಿಯ!

ಸುಜನನಿಂತಿರ ಬೇಕಮ್ಮಾ!   1(385)

ನ್ಮ ಸಾರ್ಥಕಕಿಹನಮ್ಮಾ!
ಮ್ರ ಭಾವದಿಂದಿಹನಮ್ಮಾ!
ನಿಂದೆ ಅವನಿಗಾಗದಮ್ಮಾ!
ತಿಕ್ಕಾಟವನಲಿಲ್ಲವಮ್ಮಾ! (ಆ)
-ರನೂ ದ್ವೇಷಿಸನವಮ್ಮಾ!
ಬೇಕಿಲ್ಲದಲ್ಲಿ ಸೇರನಮ್ಮಾ!
ಲಿಯುವನೆಲ್ಲರಿಂದಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯಾತಮ್ಮಾ!!! ೩೮೭

ಸುತೆ, ಸುತ, ಸತಿಗಾಗೀ ದೇಹ ಒಂದು ಕಾಲ! (ಚಿ)   6(4339)

-ತೆಗಾಹುತಿಯಾಗುವುದದು ಮತ್ತೊಂದು ಕಾಲ!
ಸುಖ, ದುಃಖದಲ್ಲೊದ್ದಾಡಿಸೊಯ್ಯುವನು ಕಾಲ!
ನ್ನ ತಾನರಿಯದವಗೆಲ್ಲಾ ವಿಪತ್ಕಾಲ!
ಮಯವ್ಯರ್ಥಮಾಡದಿರ್ಬೇಕು ಶಿವಬಾಲ!
ತಿತಿಕ್ಷೆ, ವೈರಾಗ್ಯದಿಂದಾಗ್ಬೇಕವನ ಬಾಲ! (ಭೋ)
-ಗಾಸಕ್ತಿ ಹೆಚ್ಚಿದರಾಗ್ವುದು ಪತಿತ ಕುಲ!
ಗೀತಾಚಾರ್ಯನಾದರ್ಶದಿಂದ ಪಾವನಕುಲ!
ದೇಹ ಭಾವಾಂತ್ಯವಾಗದೆ ತಪ್ಪದು ವ್ಯಾಕುಲ!
ರಿ, ಹರ, ಬ್ರಹ್ಮರೊಂದೆಂದಂದಿತತ್ರಿ ಬಲ!
ಒಂದಾಗಿ ಮೆರೆಯುತ್ತಿರುವುದಾ ದತ್ತ ಫಲ!
ದುಸ್ಸಂಗ ದೂರನಿಗೆ ಲಭಿಸುವುದೀ ಫಲ!
ಕಾಲ ಕಾದು ಜಯಿಸಲಿಕ್ಕಿರಬೇಕು ಛಲ! (ಛ)
-ಲ ನಿರಂಜನಾದಿತ್ಯಾತ್ಮಾನಂದಕ್ಕೆ ಅಚಲ!!!

ಸುತ್ತಿತು ನಿನಗಾಗೀ ಒಡಲು! (ಅ)   3(1222)

-ತ್ತಿತ್ತು, ಬತ್ತಿತು ಮತ್ತೀ ಒಡಲು! (ಮಾ)
-ತು, ಕಥೆ ನಿಲ್ಲಿಸಿತೀ ಒಡಲು!
ನಿತ್ಯ ಜಪ ಮಾಡಿತೀ ಒಡಲು!
ಮಸ್ಕಾರರ್ಪಿಸಿತೀ ಒಡಲು!
ಗಾನಾನಂದ ಕೊಟ್ಟಿತೀ ಒಡಲು!
ಗೀತಾಭ್ಯಾಸ ಮಾಡಿತೀ ಒಡಲು!
ಲಿಸಿತು ನಿನ್ನನೀ ಒಡಲು!
ಮರುಧರನದೀ ಒಡಲು! (ಬ)
-ಲು ನಿರಂಜನಾದಿತ್ಯನೊಡಲು!!!

ಸುತ್ತು ಮುತ್ತು ನೋಡಿ ಮಾತನಾಡು! (ಗೊ)   4(2273)

-ತ್ತು ಮಾಡಿದ ಹೊತ್ತು ಮೀರದಾಡು!
ಮುಕ್ತ ಕಂಠದಿಂದ ಮುಕ್ತಾಯ ಮಾಡು! (ಕ)
-ತ್ತು, ಮೂತಿ ಸೊಟ್ಟ ಮಾಡದೇ ಆಡು!
ನೋವು ಯಾರಿಗೂ ಆಗದಂತಾಡು! (ಆ)
-ಡಿದಂತೆ ನಡೆವುದಾದರಾಡು!
ಮಾರಹರನ ಸ್ಮರಿಸುತ್ತಾಡು!
ತ್ವವೇನೆಂದರಿತು ಕೊಂಡಾಡು!
ನಾ, ನೀನೆಂಬಹಂಕಾರ ಬಿಟ್ಟಾಡು! (ಆ)
-ಡು, ನಿರಂಜನಾದಿತ್ಯಾನೆಂದಾಡು!!!

ಸುತ್ತು, ಮುತ್ತೆಚ್ಚರವಾಗಿ ಗುಡಿಸು! (ಚಿ)   3(1335)

-ತ್ತುಗಳಲಕ್ಷ್ಯ ಮಾಡದೆ ಗುಡಿಸು!
ಮುರುಕು ಮನೆಯೆನ್ನದೆ ಗುಡಿಸು! (ಪ)
-ತ್ತೆ ಮಾಡಿ ಕಸವನ್ನೆಲ್ಲಾ ಗುಡಿಸು! (ಬ)
-ಚ್ಚಲನ್ನೂ ಅಚ್ಚುಕಟ್ಟಾಗಿ ಗುಡಿಸು! (ಪ)
-ರಮಾತ್ಮ ಪ್ರೀತ್ಯರ್ಥಕ್ಕಾಗಿ ಗುಡಿಸು!
ವಾಸನೆಯಲ್ಲಾ ತೊಳೆದು ಗುಡಿಸು! (ರೇ)
-ಗಿ ಕೂಗಾಡದೆಲ್ಲಾ ಜಾಗ ಗುಡಿಸು!
ಗುರುನಾಮ ಜಪಿಸುತ್ತ ಗುಡಿಸು! (ಗ)
ಡಿಬಿಡಿ ಮಾಡದೆ ನಿತ್ಯಗುಡಿಸು! (ಅ)
-ಸು ನಿರಂಜನಾದಿತ್ಯನಲ್ಲಿರಿಸು!!!

ಸುದರ್ಶನ ಪ್ರತಿಭಾ ಶಾಂತಿಯ ಶೋಭಾ! || ಪ ||   1(165)

ಮನಾ ಶಮನಾ ಈ ಮನ ಜಮುನಾ (ಸ್ಪ) || ಅ. ಪ. ||
ರ್ಶದ ಜೀವನ ಮೋಹನ ಪಾವನ!
ಯನ ನಳಿನ ಸುಂದರವದನಾ || ೧ ||
ಪ್ರಣವಾನಂದನ ಕಂದ ಮುಕುಂದಾ!
ತಿಮಿರವಜ್ಞಾನ ಹರಿವಾ ಕರುಣಾ || ೨ ||
ಭಾರವ ಹೊರುವ ಗುರುವೇ ಶ್ರೀವರ!
ಶಾಂತಾಕಾರ ಉದಾರ ಮಹಿಮಾಪಾರ || ೩ ||
ತಿಳಿಯುವದಳವೀ ಚಂಚಲಾ!
ದುಕುಲ ಸುಶೀಲ ಭೂ ಪರಿಪಾಲಾ || ೪ ||
ಶೋಕಾಕುಲ ಕಾಲ ಗೋಪಾಲ ಗೋವಳ!
ಭಾವಿಕ ನಿರಂಜನಾದಿತ್ಯ ನೀ ಬಾಲ || ೫ ||

ಸುದರ್ಶನ ಸದಾನಂದ ಶಿವ! (ಹೃ)   2(659)

-ದಯೇಶ್ವರ ಅಂಬಾನಂದ ಶಿವ! (ದ)
-ರ್ಶನ ನಿಜ ಗುಣಾನಂದ ಶಿವ! (ಆ)
-ನತಶಿವಗಣಾನಂದ ಶಿವ!
ರ್ವಮಂಗಳಾತ್ಮಾನಂದ ಶಿವ!
ದಾಶರಥಿನಾಮಾನಂದ ಶಿವ!
ನಂದನಕುಮಾರಾನಂದ ಶಿವ! (ವ)
-ದನ, ಗಜಾನನಾನಂದ ಶಿವ!
ಶಿವ ನಿರಂಜನಾನಂದ ಶಿವ! (ಅ)
-ವ ಶ್ರೀ ನಿರಂಜನಾದಿತ್ಯ ಶಿವ!!!

ಸುದರ್ಶನಾ! ಮೌನಾ! ಪಾವನಾ!!!   4(1474)

ತ್ತಗಿದಾನಂದ ಜೀವನಾ! (ದ)
-ರ್ಶನಾತ್ಮಾನುರಕ್ತ ಪಾವನಾ!
ನಾಮರೂಪಾತೀತ ಜೀವನಾ!
ಮೌಢ್ಯರಹಿತಾತ್ಮ ಪಾವನಾ!
ನಾಸ್ತಿಕನಿಸ್ಸಂಗ ಜೀವನಾ!
ಪಾದಸೇವಾನಂದ ಪಾವನಾ!
ರನಾಮ ಪ್ರೇಮ ಜೀವನಾ!
“ನಾ” ನಿರಂಜನಾದಿತ್ಯಾತ್ಮ “ನಾ”!!!

ಸುಧಾಮ ಆನಂದ ಧಾಮ!   2(642)

ಧಾರಾಳ ಭಾವದಾ ಧಾಮ!
ಮ ಪ್ರೇಮ ಶ್ಯಾಮ ಧಾಮ!
ನಂದಾತ್ಮಾನಂದ ಧಾಮ!
ನಂದಾನಂದನಂದ ಧಾಮ!
ಧಿ, ಕ್ಷೀರಾಮೃತ ಧಾಮ! (ಆ)
-ಧಾರಮರ ಗೀತಾ ಧಾಮ! (ಧಾ)
-ಮ ಶ್ರೀ ನಿರಂಜನ ಧಾಮ!!!

ಸುಧಾಮಾನುಗ್ರಹ ಹಿರಿಮೆಯೇನು?   6(3403)

(ಸು)-ಧಾ ಪಾನವೆಲ್ಲರಿಗೂ ಆಗ್ಬೇಡ್ವೇನು?
ಮಾನವನ ಪಾಲಿಗೆ ವಿಷವೇನು?
(ಅ)-ನುಮಾನ ಪರಿಹರಿಸ್ಬೇಕು ನೀನು!
ಗ್ರಹಣ ನಾನಪೇಕ್ಷಿಸಿದೆನೇನು?
ಗ್ಲಿರುಳ್ನಾನಿನ್ನ ಸ್ಮರಿಸಿಹೆನು!
ಹಿತೈಷಿ ಎಲ್ಲಕ್ಕೂ ನೀನಲ್ಲವೇನು?
(ಅ)-ರಿಯದವರ್ಮೇಲ್ಕೆಂಡ ಕಾರ್ಬಾರ್ದ್ನೀನು!
(ಭಾ)-ಮೆಯಾಗಿ ಪರಿವರ್ತಿಸೆಮ್ಮ ನೀನು!
(ಬಾ)-ಯೇ ಬಿಡಲಾರದಂತಾಗಿಹೆ ನಾನು!
(ಏ)-ನು ನಿರಂಜನಾದಿತ್ಯಾ! ಮೌನವೇನು?

ಸುಬ್ಬಮ್ಮನ ಹಬ್ಬದಡಿಗೆ! (ಕ)   4(1744)

-ಬ್ಬಕ್ಕಣಿ ಮಾಡಿಟ್ಟ ಕೊಡುಗೆ! (ಒ)
-ಮ್ಮತ, ಸಮ್ಮತವಿದ್ದಡಿಗೆ! (ತಿ)
-ನಲಿಕ್ಕಾದರ್ಶನ ಕೊಡುಗೆ!
ಗಲಿರುಳ್ಮಾಡಿದಡಿಗೆ! (ಇ)
-ಬ್ಬರೊಡಗೂಡಿತ್ತ ಕೊಡುಗೆ! (ನಂ)
-ದನಂದನನಿಷ್ಟದಡಿಗೆ! (ಮ)
-ಡಿಯಿಂದ ತಂದಿಟ್ಟಾ ಕೊಡುಗೆ! (ಧ)
-ಗೆ, ನಿರಂಜನಾದಿತ್ಯನಿಗೆ!!!

ಸುಬ್ರಹ್ಮಣ್ಯ ವಿಜಯ ರಾಯ!   1(234)

ಬ್ರಹ್ಮಣ್ಯ ಗುಹ ಜಯ ರಾಯ!(ಬ್ರ)
-ಹ್ಮಚರ್ಯಾಂಗಾಂಜನೇಯ ರಾಯ! (ಗ)
-ಣ್ಯ ಗಜಾನನ ಗಣ ರಾಯ!
ವಿಮಲಾಂಗ ಸಾರಂಗ ರಾಯ!
ಯ ವಿಜಯಾದಿತ್ಯ ರಾಯ!
ದಪತಿ ಶ್ರೀಕೃಷ್ಣ ರಾಯ!
ರಾಜೀವ ಮಿತ್ರ ರಾಮ ರಾಯ! (ಪ್ರಿ)
-ಯ, ನಿರಂಜನಾದಿತ್ಯ ರಾಯ!

ಸುಭಿಕ್ಷಾ ಭೋಜನ ಸಿಕ್ಕಿದಾಗಮ್ಮಾ!   2(541)

ಭಿಕ್ಷೆಗಾಗಿ ಕಾದಿರುವುದಿಲ್ಲಮ್ಮಾ!
ಕ್ಷಾಮ, ಡಾಮರವೆನಗಿಲ್ಲವಮ್ಮಾ!
ಭೋಜ್ಯಾಭೋಜ್ಯವೆನ್ನುವುದಿಲ್ಲವಮ್ಮಾ!
ಗದೀಶನಿತ್ತುದನುಂಬೆನಮ್ಮಾ!
ನ್ನ ನೀನರಿತರಾನಂದವಮ್ಮಾ!
ಸಿಕ್ಕಿದಾಗುಪೇಕ್ಷಿಸಬಾರದಮ್ಮಾ! (ಹ)
-ಕ್ಕಿದೆ ನಿನಗೆನ್ನಾನಂದದಲಮ್ಮಾ!
ದಾರಿ ತೆರೆದಿಹುದು ನಿನಗಮ್ಮಾ!
ತಿಯೇನೆಂದಳುತಿರಬೇಡಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯನ್ಯಲ್ಲಮ್ಮಾ!!!

ಸುಮ್ಮಗಿರಲು ಕಲಿಯಪ್ಪಾ! (ಅ)   2(592)

-ಮ್ಮ ತಾನಾಗುಣಿಸುವಳಪ್ಪಾ!
ಗಿಡ, ಮರ ಹತ್ತಬೇಡಪ್ಪಾ!
ಗಳೆ, ರಾಗವೆತ್ತಬೇಡಪ್ಪಾ! (ಬ)
-ಲು ಸಭ್ಯ ನೀನಾಗಬೇಕಪ್ಪಾ!
ಮಲಮಿತ್ರನ ನೋಡಪ್ಪಾ!
ಲಿಪ್ತನಾಗಿಹನೇನವಪ್ಪಾ?
ತ್ನಯಾರದೇನಿಹುದಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯಮ್ಮಪ್ಪಾ!!!

ಸುಮ್ಮನಿರಬೇಕಂತೆ ನಾನು! (ಅ)   2(881)

-ಮ್ಮಯ್ಯನಾಗಿರ್ಬೇಕಂತೆ ನಾನು!
ನಿಶ್ಚಲನಾಗ್ಬೇಕಂತೆ ನಾನು! (ಹೊ)
-ರಗಿರಬಾರದಂತೆ ನಾನು!
ಬೇರ್ಬೇರಿರಬಾರ್ದಂತೆ ನಾನು!
ಕಂಕಣ ತೊಡ್ಬಾರ್ದಂತೆ ನಾನು!
ತೆಗೆಯ್ಬೇಕಂತೊಡವೆ ನಾನು!
ನಾಮೇಕನಾಗ್ಬೇಕಂತೆ ನಾನು! (ಅ)
-ನು, ನಿರಂಜನಾದಿತ್ಯ ನಾನು!!!

ಸುರುಚಿ, ಸುನೀತಿಯರಿಂದಿಹ ಪರ!   5(3176)

ರುಚಿ, ಶುಚಿಯಾದಾಹಾರಾರೋಗ್ಯಕರ!
ಚಿರಕಾಲವಿರಲಾರದೀ ಕುಟೀರ!
ಸುಮತಿ, ಶಾಂತಿ ಸಾಮ್ರಾಜ್ಯಕ್ಕೆ ಆಧಾರ!
ನೀಚಬುದ್ಧಿಯಿಂದ ನಷ್ಟ, ಕಷ್ಟಪಾರ!
ತಿಳಿದಿದನು ಧ್ರುವ ಬಿಟ್ಟ ತನ್ನೂರ!
ಶಸ್ಸು ತಪದಿಂದಾಗ್ಲಾಳಿದನೂರ! (ಯಾ)
ರಿಂದಾಗದುನ್ನತ ಸ್ಥಾನ ಪಡೆದ!
ದಿಕ್ಸೂಚಿಯಾಗಿ ಉತ್ತರಮುಖಿಯಾದ! (ಶ್ರೀ)
-ಹರಿಯ ಕೃಪಾಶೀರ್ವಾದದಿಂದದಾದ!
ರಮಾರ್ಥದ ಹಿರಿಮೆ ತೋರಿಸಿದ! (ವ)
-ರದರಾಜ ನಿರಂಜನಾದಿತ್ಯನಾದ!!!

ಸುಳ್ಳ ಬರೆಸಬೇಡ ನೀನಪ್ಪಾ! (ಸು)   4(1504)

-ಳ್ಳನೆನಿಸಬೇಡೆನ್ನ ನೀನಪ್ಪಾ!
ಳಕೆಯಲ್ಲೆಲ್ಲಾ ಕಾಣಲಪ್ಪಾ! (ಬೇ)
ರೆನಗೇನೂ ಆಸೆಗಳಿಲ್ಲಪ್ಪಾ!
ತ್ಯ, ಧರ್ಮ, ಉಳಿಯಬೇಕಪ್ಪಾ!
ಬೇಸತ್ತಿಹೆನಿಹ ಸುಖಕ್ಕಪ್ಪಾ! (ಬ)
-ಡತನವೇ ಸದಾ ಇರಲಪ್ಪಾ!
ನೀನು ಮಾತ್ರ ಕೈ ಬಿಡಬೇಡಪ್ಪಾ!
ನ್ನುದ್ಧಾರ ನಿನ್ನಾಧೀನವಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯಾನಂದಪ್ಪಾ!!!

ಸುಳ್ಳಿನ ಡೊಳ್ಳು ಕರಗದಿರದಯ್ಯಾ! (ಒ)   6(4269)

-ಳ್ಳಿತನ್ನೇ ಹೇಳು, ಮಾಡು, ಅನ್ಯರಿಗಯ್ಯಾ! (ನಿ)
-ನಗೆ ಹೊಟ್ಟೆ ತುಂಬ್ಲಿಕ್ಕೆ ದಾರಿದಲ್ಲಯ್ಯಾ! (ಬೇ)
-ಡೊಡೆತನಾಧಿಕಾರ ಪೀಡಿಸಲ್ಕಯ್ಯಾ! (ಪೂ)
-ಳ್ಳುವೇಷ ಕ್ಷಣಿವೆಂದು ತಿಳಿಯಯ್ಯಾ!
ಟ್ಟಿಟ್ಟ ಬುತ್ತಿಯ ಬಿಚ್ಚಲೇಬೇಕಯ್ಯಾ! (ಅ)
-ರಗದೂಟ ಅಮೃತವಾದ್ರೂ ಬೇಡಯ್ಯಾ! (ಹೋ)
-ಗದಿರವುದೆಂತು ಬಂದ ನಂತರಯ್ಯಾ?
ದಿನ ಮುಗಿದಮೇಲೆ ರಾತ್ರೀ ಪಾತ್ರಯ್ಯಾ! (ಅ)
-ರಸರೆನಿಸಿದವರ್ಮರೆಯಾದರಯ್ಯಾ!
ತ್ತನೊಬ್ಬನೆಲ್ಲಾ ಕಾಲದಲ್ಲಿರ್ಪನಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾನಂದವನಯ್ಯಾ!!!

ಸುಳ್ಳು ಕಥೆ ಕಲ್ಪಿಸುವ ಕಾಮಿ! (ಮು)   6(3606)

-ಳ್ಳು ಮೇಲಿನ ಬಟ್ಟೆಯಂತಾ ಕಾಮಿ!
ಪಟ ಪ್ರೇಮ ತೋರ್ಪವಾ ಕಾಮಿ! (ವ್ಯ)
-ಥೆ ಪಡುವವರ ನೋಡಾ ಕಾಮಿ!
ನಕಾಭರಣ ಪ್ರೇಮಿ ಕಾಮಿ! (ಶಿ)
-ಲ್ಪಿಗಳಿಷ್ಟ ಕಟ್ಟುವನಾ ಕಾಮಿ!
ಸುಜನರ ದ್ವೇಷಿಪನಾ ಕಾಮಿ!
ಸ್ಥು, ವಾಹನಕ್ಕಾಶಿಪನಾ ಕಾಮಿ!
ಕಾಲನಿಗಂಜುವವನಾ ಕಾಮಿ! (ಪ್ರೇ)
-ಮಿ ಶ್ರೀ ನಿರಂಜನಾದಿತ್ಯಸ್ವಾಮಿ!!!

ಸುಳ್ಳು ಕಥೆ ಹೇಳಿ ಹೆದರಿಸುವ ಗುರುವಾಗ್ಬೇಡ! (ಉ)   6(4325)

-ಳ್ಳದನು ಹೇಳಿ, ತೋರಿಸಿ ಉದ್ಧರಿಸದಿರಬೇಡ!
ರ್ತವ್ಯಭ್ರಷ್ಟನನ್ನಾಗಿ ನನ್ನನ್ನೆಂದೂ ಮಾಡಬೇಡ! (ವ್ಯ)
-ಥೆಗವಕಾಶ ಗುರುಭಕ್ತರಿಗುಂಟುಮಾಡಬೇಡ!
ಹೇಡಿಗಳು ನಿನ್ನ ಪಾದಸೇವಕರೆನಿಸಬೇಡ! (ಅ)
-ಳಿದು ಹೋಗುವುದರಲ್ಲಿ ಮಮತೆ ಇರಿಸಬೇಡ!
ಹೆರವರಾಸ್ತಿ, ಪಾಸ್ತಿಗಾಶಿಸುವ ಬುದ್ಧಿ ಕೊಡ್ಬೇಡ!
ರ್ಶನಾಕಾಕ್ಷಿಯನ್ನೆಂದಿಗೂ ನಿರಾಸೆ ಪಡಿಸ್ಬೇಡ!
ರಿಪುಕುಲ ಕಾಲನೆಂಬ ಬಿರುದನ್ನಳಿಸಬೇಡ!
ಸುದರ್ಶನಧಾರಿಯ ಮಾತನ್ನು ಸುಳ್ಳುಮಾಡಬೇಡ!
ಸನಾಕ್ಷಯ ಮಹಿಮೆ ನಮಗೂ ತೋರದಿರ್ಬೇಡ!
ಗುರುವಿನ ಗುಲಾಮನೆಂದೆನ್ನನ್ನೊಪ್ಪದಿರಬೇಡ! (ಕ)
-ರುಣಿಸಿ ಗುರು, ಶಿಷ್ಯ ಭೇದ ಕಳೆಯದಿರಬೇಡ! (ಭ)
-ವಾಬ್ಧಿಯಲ್ಲಿ ನನ್ನನ್ನದ್ದಿ ಉಸಿರ ಕಟ್ಟಿಸಬೇಡ! (ಹೋ)
-ಗ್ಬೇಡ, ನನ್ನನ್ನಗಲಿ ಎಂದಿಗೂ ಮರೆಯಾಗಬೇಡ! (ಬೇ)
-ಡ, ಮೃಡ, ನಿರಂಜನಾದಿತ್ಯರಲ್ಲಿ ಭೇದವೇ ಬೇಡ!!!

ಸುವಾಸನಾ ಕುಂಕುಮ ಪ್ರಸಾದ!   1(169)

ವಾಸನಾ ನಾಶಕಿದೇ ಪ್ರಸಾದ!
ಹನಾ ಸ್ಥಿತಿಗಿದೇ ಪ್ರಸಾದ!
ನಾಮ ವಿಶ್ವಾಸಕಿದೇ ಪ್ರಸಾದ!
ಕುಂದಿಲ್ಲದಿರಲಿದೇ ಪ್ರಸಾದ!
ಕುಹಕಳಿಯಲಿದೇ ಪ್ರಸಾದ!
ತಿ ಬೆಳಗಲಿದೇ ಪ್ರಸಾದ!
ಪ್ರತಿಭಾ ಶಕ್ತಿಗಿದೇ ಪ್ರಸಾದ!
ಸಾಧನೆ ಸಿದ್ಧಿಗಿದೇ ಪ್ರಸಾದ!
ತ್ತ ನಿರಂಜನನ ಪ್ರಸಾದ!!!

ಸುವಾಸನಾಲರ್ಮಾಲತಿ! (ಶಿ)   4(1655)

-ವಾನಂದಾಧಾರೀ ಮಾಲತಿ!
ರ್ವಾರಿಷ್ಟಾರೀ ಮಾಲತಿ!
ನಾನಾಲಂಕಾರೀ ಮಾಲತಿ!
ಲಿತಾಕಾರೀ ಮಾಲತಿ! (ಧ)
-ರ್ಮಾತ್ಮ ಕುಮಾರೀ ಮಾಲತಿ! (ಜ್ಯೋ)
-ತಿ, ನಿರಂಜನಾದಿತ್ಯೇತಿ!!!

ಸೂರಪ್ಪ ದೇವಪ್ಪ ಮೂರ್ತಿ!   2(782)

ಮಾನಾಥನಾದ ಮೂರ್ತಿ! (ಅ)
-ಪ್ಪನೆಲ್ಲರಾಧಾರ ಮೂರ್ತಿ
ದೇವದೇವಗುರು ಮೂರ್ತಿ!
ನಜಾಪ್ತ ಮಿತ್ರ ಮೂರ್ತಿ! (ಇ)
-ಪ್ಪ ತಾ ಬೆಳಕಾಗಿ ಮೂರ್ತಿ!
ಮೂಜಗದ ಸ್ಫೂರ್ತಿ ಮೂರ್ತಿ! (ಕೀ)
-ರ್ತಿ ನಿರಂಜನಾತ್ಮ ಮೂರ್ತಿ!!!
ಅಥವಾ
-ರ್ತಿ ನಿರಂಜನಾ ತ್ರಿಮೂರ್ತಿ!!!

ಸೂರ್ಯ, ಸುವೀರ್ಯ, ಜಗಕಾರ್ಯ! (ಆ)   2(595)

-ರ್ಯ, ಗಾಂಭೀರ್ಯ, ಸ್ವಧರ್ಮಕಾರ್ಯ!
ಸುದರ್ಶನ ಸುಪ್ರಸನ್ನಾರ್ಯಾ!
ವೀತರಾಗ ಸದ್ಗುರುವರ್ಯ! (ಕಾ)
-ರ್ಯ ಕಾರಣ ಕರ್ತಾದಿತ್ಯಾರ್ಯ!
ರಾಜನ್ಮ ದೂರಾಂಬರಾರ್ಯ!
ಹನ ಚತುರ್ವೇದಾಚಾರ್ಯ!
ಕಾಲ ಚಕ್ರೇಶ್ವರಾರ್ಯ ಸೂರ್ಯ! (ಸೂ)
-ರ್ಯ! ನಿರಂಜನಾದಿತ್ಯೌದಾರ್ಯ!!!

ಸೂರ್ಯನಲ್ಲಿ ಸಕಲ ಸಂಪತ್ತು! (ಆ)   6(3547)

-ರ್ಯನಿವ ಕಾರ್ಯನಿಷ್ಠ ಯಾವತ್ತೂ!
ದಿಯಾಗಿ ಹರಿವುದಾ ಸೊತ್ತು! (ಸ)
-ಲ್ಲಿಸುವನು ಸೇವೆ ಎಲ್ಲಾ ಹೊತ್ತೂ!
ಕಲ ಲೋಕದಿಲ್ದಿದ್ರಸತ್ತು!
ರ್ಮ, ಧರ್ಮಕ್ಕಾಧಾರಾ ಸದ್ವತ್ತು!
ಕ್ಷ್ಯ ಸಿದ್ಧಿ ಮಾರ್ಗದಕ್ಕೆ ಗೊತ್ತು!
ಸಂಗವದರದ್ದಾದ್ರಿಲ್ಲಾಪತ್ತು!
ರಮಾರ್ಥ ಸಾರಾ ದಿವ್ಯ ಮುತ್ತು! (ಒ)
-ತ್ತು, ನಿರಂಜನಾದಿತ್ಯ ಪಾದೊತ್ತು!!!

ಸೂರ್ಯನಾಕಾಶದಲ್ಲಿರಬೇಕು! (ಕಾ)   2(846)

-ರ್ಯಕರ್ತನವನಾಗಿರಬೇಕು!
ನಾರಾಯಣ ತಾನಾಗಿರಬೇಕು!
ಕಾಲ ಪುರುಷನಾಗಿರಬೇಕು!
ಕ್ತಿ ಸಾಗರನಾಗಿರಬೇಕು!
ತ್ತಾಂತರ್ಯಾಮಿಯಾಗಿರಬೇಕು! (ಅ)
-ಲ್ಲಿ ಸರ್ವಸಾಕ್ಷಿಯಾಗಿರಬೇಕು! (ವ)
-ರ ಗುರುರೂಪಿಯಾಗಿರಬೇಕು!
ಬೇಸರ ಹರನಾಗಿರಬೇಕು! [ಬೇ]
-ಕು, ನಿರಂಜನನಾಗಿರಬೇಕು!!!
ಅಥವಾ
-ಕು, ನಿರಂಜನಾರ್ಕಾಗಿರಬೇಕು!!!

ಸೂರ್ಯನಾರಾಯಣನಿಗೆ ಧ್ಯಾನಮಿಂಚಿಷ್ಟ! (ಕಾ)   4(2092)

-ರ್ಯ ನಿರ್ವಹಣಾ ಶಕ್ತಿಪ್ರದವಿದೆಂದಿಷ್ಟ!
ನಾನಾರೆಂದರುಹುವಾ ವಾಣಿ ಬಹಳಿಷ್ಟ! (ಆ)
-ರಾಮವಿದರಿಂದನಿತ್ಯ ಜಿವಗೆಂದಿಷ್ಟ! (ಜ)
-ಯವೆಲ್ಲಾ ದೇಶ, ಕಾಲ, ಸ್ಥಿತಿಗಿದೆಂದಿಷ್ಟ! (ಪ್ರಾ)
-ಣ ಬಿಡುವಾಗೀ ನೆನಪಿರಬೇಕೆಂದಿಷ್ಟ!
ನಿತ್ಯಮುಕ್ತನಾಗಲಿಕ್ಕಿದಗತ್ಯೆಂದಿಷ್ಟ!
ಗೆಳೆಯನಿದೆಂದು ಸದಾಕಾಲದಲ್ಲಿಷ್ಟ! (ಸಂ)
-ಧ್ಯಾ ವಂದನಾದಿಗಳ ಸಾರವಿದೆಂದಿಷ್ಟ! (ಅ)
-ನವರತದೂಟದಂತಿದೆಂದವನಿಷ್ಟ!
ಮಿಂದರಾಗುವಾನಂದವಿದರಿಂದೆಂದಿಷ್ಟ! (ಸಂ)
-ಚಿತ ನಾಶವಿದರಿಂದಾಗುವುದೆಂದಿಷ್ಟ! (ಸ್ಪ)
-ಷ್ಟ, ನಿರಂಜನಾದಿತ್ಯೋಕ್ತಿ ಸರ್ವರಿಷ್ಟ!!!

ಸೂರ್ಯನಾರಾಯಣನೇ ಮಿತ್ರ! (ಆ)   4(2244)

-ರ್ಯ ಸದ್ಗುರುವಿಗವ ಪುತ್ರ!
ನಾಸ್ತಿಕಗೂ ಅವನೇ ನೇತ್ರ!
ರಾಮನವನ ಕೃಪಾ ಪಾತ್ರ!
ಮನವನಿಗೊಬ್ಬ ಪುತ್ರ! (ರ)
-ಣರಂಗದಲ್ಲವನ ಸ್ತ್ರೋತ್ರ!
ನೇಮ, ನಿಷ್ಠೆಯವನ ಸೂತ್ರ! (ಅ)
-ಮಿತ ತೇಜೋರಾಶಿ ಸರ್ವತ್ರ! (ಮಿ)
-ತ್ರ ನಿರಂಜನಾದಿತ್ಯಾ ಪುತ್ರ!!!

ಸೂರ್ಯನಾರಾಯಣಾಶೀರ್ವಾದ! (ಆ)   1(204)

-ರ್ರ್ಯನಿವಗರ್ಪಣಾ ಸಂವಾದ! (ಅ)
-ನಾಮಧೇಯನ ಗುಣ ಸೀದ! (ವಿ)
-ರಾಗಿಯಿವನ ಗತ್ಯ ಬೇದ!
ತಿಪತಿಗಾಯಿತಾಮೋದ! (ಗು)
-ಣಾವಗುಣವೆಲ್ಲಪವಾದ! (ಆ)
-ಶೀರ್ವಾದಕೆ ಹಿಡಿದಾ ಪಾದ! (ದು)
-ರ್ವಾಸನೆಯಿಂದಹುದು ಕ್ರೋಧ!
ತ್ತ ನಿರಂಜನಾದಿತ್ಯಂದ!!!

ಸೂರ್ಯನಾರಿಗೂ ಮೀಸಲಾಗಿಲ್ಲ! (ಸ್ಥೈ)   4(2276)

-ರ್ಯದಿಂದಾಗುವುದು ಕಾರ್ಯವೆಲ್ಲ!
ನಾನು ಹೆಚ್ಚೆಂಬಹಂಕಾರವಿಲ್ಲ! (ದ)
-ರಿದ್ರರನ್ನನಾದರಿಪುದಿಲ್ಲ!
ಗೂಢವೆಂಬುದವನಲ್ಲೇನಿಲ್ಲ!
ಮೀರಾ, ಕಬೀರರರಿತರೆಲ್ಲ!
ತ್ಸಂಗ ಮಾಡಿರವನದೆಲ್ಲ! (ವಿ)
-ಲಾಸಪ್ರಿಯನಾಗಿ ಆತನಿಲ್ಲ! (ತಾ)
-ಗಿ ಜೀವನವವನ ಬಾಳೆಲ್ಲ! (ಪು)
-ಲ್ಲನಿರಂಜನಾದಿತ್ಯನೆಲ್ಲಿಲ್ಲ???

ಸೂರ್ಯಮಂಡಲ ನಂಜುಂಡನಾಜ್ಞಾಧೀನ! (ಕಾ)   5(3036)

-ರ್ಯವವನದು ವಿಮಲಾತ್ಮನಾಧೀನ!
ಮಂದಮತಿಯ ತೊಳೆಯುವಾತ್ಮಜ್ಞಾನ! (ಗಂ)
-ಡ ತಾನಾಗಿ ಪಾರ್ವತಿಯ ಪಂಚಪ್ರಾಣ!
ಯವಾದಾಗವಳಿಗೆ ವರದಾನ! (ಆ)
-ನಂದಾ ಅರ್ಧನಾರೀಶ್ವರನಾದರ್ಶನ! (ನಂ)
-ಜುಂಡಮರ ತಾನಾದಾ ದಿಗಂಬರನ!
ಮರುಧರನಾದಾ ನಟರಾಜನ!
ನಾದಪ್ರಿಯ ಶ್ರೀರಾಮನಾಮಪ್ರಿಯನ!
ಜ್ಞಾನ ಕೈಲಾಸ ಶಿಖರದಲ್ಲಿಹನ!
ಧೀರ, ಗಂಭೀರಾತ್ಮಸ್ವರೂಪದವನ! (ಘ)
-ನ ನಿರಂಜನಾದಿತ್ಯ ತಾನಾದವನ!!!

ಸೃಜಿಸಿ, ವಿಸರ್ಜಿಸುವಾತ್ಮ ಆರಾಮ! (ತ್ಯ)   4(2229)

-ಜಿಸಿ, ಭಜಿಸಿ, ಮುಕ್ತನಾಗ್ವಾತ್ಮಾರಾಮ!
ಸಿರಿಯರಸ ಶ್ರೀರಾಮ ಸದಾರಾಮ!
ವಿಧಿ, ಹರಿ, ಹರರೊಂದಾದಾತ್ಮಾರಾಮ!
ತಿ, ಪತ್ಯೊಂದಾದರ್ಧನಾರೀಶಾರಾಮ! (ಆ)
-ರ್ಜಿಸಿದರ್ಥ ಸದ್ವ್ರಯವಾದರಾರಾಮ!
ಸುಪುತ್ರ, ಪುತ್ರಿಯರಮ್ಮಯ್ಯರ್ಗಾರಾಮ!
ವಾಸನಾ ತ್ರಯ ನಾಶವಾದರಾರಾಮ! (ಆ)
-ತ್ಮಭಾವ ವಿರಾಜಿಸಲ್ಚಗಕ್ಕಾರಾಮ!
ತ್ಮಾನಾತ್ಮವಿಚಾರ ಮನಕ್ಕಾರಾಮ!
ರಾಮನಾಮವೆಲ್ಲಾ ಕಾಲದಲ್ಲಾರಾಮ! (ನೇ)
-ಮ, ನಿಷ್ಠೆ, ನಿರಂಜನಾದಿತ್ಯಗಾರಾಮ!!!

ಸೃಷ್ಟಿಯ ಗುಟ್ಟು ರಟ್ಟಾಗಲಿಲ್ಲ! (ಅ)   6(3627)

-ಷ್ಟಿಷ್ಟೊರೆದ್ರೂ ಸ್ಪಷ್ಟವಾಗಲಿಲ್ಲ!
ಮ, ನಿಯಮದಿಂದ್ಲೂ ಆಗ್ಲಿಲ್ಲ!
ಗುರುವಿದನ್ನನುಗ್ರಹಿಸ್ಲಿಲ್ಲ! (ಮು)
-ಟ್ಟು, ಮಡಿ ಪ್ರಯೋಜನವಾಗ್ಲಿಲ್ಲ!
ಹಸ್ಯಭೇದ್ಯವಾಗಿಹುದಲ್ಲಾ!! (ಅ)
-ಟ್ಟಾದಡುಗೆಯಂಬುದೇ ಆಯ್ತಲ್ಲಾ!!
ರ್ವ ಮಾತ್ರ ಕಮ್ಮಿಯಾಗ್ಲೇ ಇಲ್ಲ! (ಒ)
-ಲಿದು ದೇವರೇ ಹೇಳಬೇಕೆಲ್ಲ! (ಬ)
-ಲ್ಲ ನಿರಂಜನಾದಿತ್ಯಾಡ್ವುದಿಲ್ಲ!!!

ಸೃಷ್ಟಿಯ ವ್ಯಾಪಾರಕ್ಕೊಬ್ಬ ಶೆಟ್ಟಿ! [ದೃ]   3(1378)

-ಷ್ಟಿಸಲಿಕ್ಕಾಗದಿರ್ಪನಾ ಶೆಟ್ಟಿ! (ಆ)
-ಯ, ವ್ಯಯ ಲೆಃಖವಿಡನಾ ಶೆಟ್ಟಿ!
ವ್ಯಾಮೋಹವಿಲ್ಲದವನಾ ಶೆಟ್ಟಿ!
ಪಾಪ, ಪುಣ್ಯ ಯೋಚಿಸನಾ ಶೆಟ್ಟಿ! (ಯಾ)
-ರನ್ನೂ ಲಕ್ಷ್ಯಕ್ಕೆ ತರನಾ ಶೆಟ್ಟಿ! (ತ)
-ಕ್ಕೊಳ್ಳುವ, ಕೊಡುವ, ಜಾಣಾ ಶೆಟ್ಟಿ! (ಒ)
-ಬ್ಬರ ಕೈಗೂ ನಿಲುಕನಾ ಶೆಟ್ಟಿ! (ಅ)
-ಶೆಯಿಂದನ್ಯಾಯ ಮಾಡನಾ ಶೆಟ್ಟಿ! (ಗ)
-ಟ್ಟಿ, ಶ್ರೀ ನಿರಂಜನಾದಿತ್ಯ ಶೆಟ್ಟಿ!!!

ಸೃಷ್ಟಿಯಲ್ಲೇನೇನಿದೆಂಬುದೂಹಾತೀತ! (ಇ)   6(3663)

-ಷ್ಟಿದ್ದರೂ ಅತೃಪ್ತನಾಗಿಹ ವಿಧಾತ!
ಮನೆಂಬವನಿಂದ ಎಲ್ಲಾ ನಿಪಾತ! (ಕ)
-ಲ್ಲೇ ದೇವರೆಂಬುದೀಗಿನ ದ್ವೈತ ಮತ!
ನೇಮ, ನಿಷ್ಠಾನುಷ್ಠಾನಕ್ಕಿಲ್ಲ ಮತ!
ನಿತ್ಯಾನಿತ್ಯ ವಿವೇಕಿಗದ್ವೈತ ಮತ! (ಒಂ)
-ದೆಂದಂದು ಬಹಲ ರೂಪಕ್ಕೀಗ ಮತ!
ಬುದ್ಧಿ ಭ್ರಮಾ ನಾಶಕ್ಕೆ ಬೇಕೇಕ ಮತ!
ದೂರಿ ಫಲವೇನ್ಪಾಶ್ಚಿಮಾತ್ಯರ ಮತ?
ಹಾದಿ ಒಂದೂರಿಗೆ ಈ ವಿವಿಧ ಮತ!
ತೀಟೆ ವ್ಯಾಜ್ಯದಿಂದುದ್ಧಾರ ಯಾವ ಮತ?
ತ್ವ ನಿರಂಜನಾದಿತ್ಯಾನಂದ ಮತ!!!

ಸೆರಗೊಡ್ಡಿ ಬೇಡಿದೆ ಬಡ್ಡಿ ದುಡ್ಡಿಗಾಗಿ! (ದು)   5(2660)

-ರವಸ್ಥೆ ದಿನದಿನಕ್ಕೂ ಹೆಚ್ಚಾಗಲಾಗಿ!
ಗೊಡವೆ ನನ್ನದಮ್ಮಗೆ ಬೇಡಾಗಲಾಗಿ! (ಅ)
-ಡ್ಡಿ ಮಾಳ್ಪವರು ನೆರಯವರಾಗಲಾಗಿ!
ಬೇಡ ಗುಲಾಮ್ಗಿರಿ ನನಗೆಂದಿರಲಾಗಿ! (ದು)
-ಡಿದರೂ ಪಕ್ಷಪಾತ ಕಂಡು ಬರಲಾಗಿ! (ತಂ)
-ದೆ, ತಾಯಿ, ಸದ್ಗುರುವೆಂದರಿವಾಗಲಾಗಿ!
ಲಿಸಿದೆನು ಭಕ್ತ್ಯವನ ಕೃಪೆಗಾಗಿ! (ದು)
-ಡ್ಡಿಗಿಂತಧಿಕವಿದೆಂದರಿತವನಾಗಿ!
ದುಡಿದುದವಗೊಪ್ಪಿಸಿದೆ ನಿಧಿಗಾಗಿ! (ಬ)
-ಡ್ಡಿ ಸಾಯುಜ್ಯವೆಂದು ಬೇಡಿದೆನದಕ್ಕಾಗಿ!
(ಕಂ)ಗಾಲಾದೆ ವಿಳಂಬವಾಗುತ್ತಿರ್ಪುದಕ್ಕಾಗಿ! (ಬಾ)
-ಗಿದೆ ನಿರಂಜನಾದಿತ್ಯನಿಗದಕ್ಕಾಗಿ!!!

ಸೇತುಬಂಧನಕಾವ ಕೂಲಿಯಪ್ಪಾ?   1(344)

ತುದಿ ಮೊದಲಿಲ್ಲದನುಗ್ರಹಪ್ಪಾ!
ಬಂಡೆಗಳೆಲ್ಲಾ ಮರಳಾದುವಪ್ಪಾ!
ನ, ದಾನವೇನೂ ಮಾಡಿಲ್ಲವಪ್ಪಾ!
ಗುನಗುತ ದಾರಿಯಾಯಿತಪ್ಪಾ! (ಆ)
-ಕಾಶ, ಭೂಮಿಯೊಂದಾದಂತೆ ಇತ್ತಪ್ಫಾ!
ನಚರರಾನಂದ ಹಾಗಿತ್ತಪ್ಪಾ!
ಕೂಲಿಗಾಗಿದು ಮಾಡುವುದೆಂತಪ್ಪಾ? (ಅ)
-ಲಿಪ್ತ ಭಕ್ತಿ, ಭಾವ ಕಾರಣವಪ್ಪಾ!
ಕ್ಷ, ರಾಕ್ಷಸರರಿದರಿಯರಪ್ಪಾ! (ಅ)
-ಪ್ಪಾ! ನಿರಾಂಜನಾದಿತ್ಯ ಲೀಲೆಯಪ್ಪಾ!!!

ಸೇತುವೆಯ ಸದುಪಯೋಗ ಮಾಡಿಕೋ!   5(2630)

ತುಕ್ಕು ಹಿಡಿಯದಂತಾಗಾಗೊರಸಿಕೋ! (ಸ)
-ವೆದಾಗಧಿಕಾರಿಗೆ ವಿಜ್ಞಾಪಿಸಿಕೋ! (ಭ)
-ಯವಿಲ್ಲದ ಸಂಚಾರಾನ್ಕೂಲ ಬೇಡಿಕೋ!
ಕಾಲದಲ್ಲೆಲ್ಲಾ ಸೌಲಭ್ಯೊದಗ್ಸಿಕೋ!
ದುರ್ವ್ಯಾಪಾರಕ್ಕೆಡೆಯಾಗದಂತಿದ್ದುಕೋ!
ವಿತ್ರ ಸ್ವದೇಶೀ ಸರಕು ಸಾಗ್ಸಿಕೋ! (ವ)
-ಯೋವೃದ್ಧರನ್ನು ಕೈ ಹಿಡಿದು ದಾಟ್ಸಿಕೋ!
ಮನಾಗಮನಕ್ಕೆ ಬೆಳಕಿಟ್ಟುಕೋ!
ಮಾದರೀ ವ್ಯವಸ್ಥೆಯೆಂದರಿತುಕೋ! (ನಾ)
-ಡಿನಭ್ಯುದಯಕ್ಕಿದನ್ನಳವಡ್ಸಿಕೋ!
ಕೋರಿಕೆ ನಿರಂಜನಾದಿತ್ಯಗೊಪ್ಸಿಕೋ!!!

ಸೇರು ಬಾ; ಊರು ಸೇರು ಬಾ ಬಾ! [ಗು]   5(2578)

-ರುವಿನ ಗುಲಾಮನಾಗ್ಬಾ ಬಾ!
ಬಾಯಲ್ಲಾಡಿದಂತೆ ಮಾಡ್ಬಾ ಬಾ!
ರೂರಲೆದದ್ದು ಸಾಕ್ಬಾ ಬಾ! (ಏ)
-ರುಪೇರ್ತೋರದಿಲ್ಲೇ ಇರ್ಬಾ ಬಾ!
ಸೇವಾನಂದನುಭವಿಸ್ಬಾ ಬಾ! (ತೋ)
-ರು ನಿನ್ನನನ್ಯಭಕ್ತೀಗ್ಬಾ ಬಾ!
ಬಾ, ಬೇಗ, ಸಕಾಲವೀಗ್ಬಾ ಬಾ!
ಬಾ, ನಿರಂಜನಾದಿತ್ಯಾಗ್ಬಾ ಬಾ!!!

ಸೇರು ಸಂತೆ, ಮಾರು ಮೆಂತೆ, ಬಿಡು ಚಿಂತೆ!   6(4244)

ರುಚಿಯೂಟಕ್ಕೆಲ್ಲರಿಗೂ ಬೇಕು ಮೆಂತೆ!
ಸಂಗಡಿಗರೊಳ್ಳೆಯವರಾಗ್ಬೇಕಂತೆ!
ತೆಲುಗು, ತಮಿಳ್ಕನ್ನಡಾಗ್ಬಹುದಂತೆ!
ಮಾತು ಏನಾಡಿದರೇಕೆ ಚಿಂತೆಯಂತೆ?
ರುಜುಮಾರ್ಗಿಗಳ್ತಾವಾಗಿರಬೇಕಂತೆ!
ಮೆಂತೆಯಂತೆಲ್ಲರಿಗಾಪ್ತನಾಗ್ಬೇಕಂತೆ!
ತೆಗಳಿಕೆ, ಹೊಗಳಿಕೆ ಬೇಡವಂತೆ!
ಬಿದಿ ಲಿಖಿತಕ್ಕಳಬೇಕಾಗಿಲ್ಲವಂತೆ!
ಡುಮ್ಕಿ ಹೊಡೆಯುವಾಟಗಳ್ಬೇಡವಂತೆ!
ಚಿಂದಿಯೂಟ್ರೂ ಆನಂದದಲ್ಲಿರ್ಬೇಕಂತೆ! (ಮಾ)
-ತೆ ನಿರಂಜನಾದಿತ್ಯ ಬೆತ್ತಲೆಯಂತೆ!!!

ಸೇವಾ ನಿರತೆ ಸುಮಪ್ರಿಯೆ!   3(1376)

ವಾಙ್ಮನಾತೀತಾತ್ಮಳಾ ಪ್ರಿಯೆ!
ನಿರ್ಮಲ ಶೀಲಾತ್ಮಳಾ ಪ್ರಿಯೆ! (ವ)
-ರಗುರು ಪ್ರೇಮಾತ್ಮಳಾ ಪ್ರಿಯೆ! (ಮಾ)
-ತೆ ಸರ್ವ ಸೌಮಂಗಳಾ ಪ್ರಿಯೆ!
ಸುಖ, ದುಃಖ ಸಮಳಾ ಪ್ರಿಯೆ!
ತ್ಸರ ರಹಿತಳಾ ಪ್ರಿಯೆ!
ಪ್ರಿಯಾಪ್ರಿಯ ವರ್ಜಳಾ ಪ್ರಿಯೆ! (ಛಾ)
-ಯೆ, ನಿರಂಜನಾದಿತ್ಯ ಪ್ರಿಯೆ!!!

ಸೇವಾನಂದೇಶ್ವರೀ ಗೌರಿ! (ಭಾ)   2(618)

-ವಾವೇಶ ಶಂಕರೀ ಗೌರಿ! (ಅ)
-ನಂಗಾಕ್ಷಿ, ಕುಮಾರೀ ಗೌರಿ!
ದೇವಿ, ಸರ್ವೇಶ್ವರೀ ಗೌರಿ! (ಈ)
-ಶ್ವರಾರ್ಧಶರೀರೀ ಗೌರಿ!
ರೀತಿ, ಹಿತಕಾರೀ ಗೌರಿ!
ಗೌರಿ, ಗಿರೀಶ್ವರೀ ಗೌರಿ! (ಅ)
-ರಿ

ನಿರಂಜನಾಂಗಾ ಗೌರಿ!!!

ಸೇವಾವಕಾಶವಿದೆಯೇನಪ್ಪಾ?   1(343)

ವಾಸುದೇವನೆಲ್ಲರವನಪ್ಪಾ! (ಅ)
-ವನೊಪ್ಪುವ ಪ್ರೇಮ ಸೇವೆಯಪ್ಪಾ!
ಕಾಡಿ, ಬೇಡಿ, ಮಾಡೆನುತಿಲ್ಲಪ್ಪಾ!
ಕ್ತಿ, ಬಕ್ತಿಯಂತೆ ಸಲಿಸಪ್ಪಾ!
ವಿಇಶ್ವಾಸ ಸಾಮೀಪ್ಯವಾಗಲಪ್ಪಾ! (ಅ)
-ದೆಲ್ಲಾ ತಾನೇ ಕಲಿಸುವುದಪ್ಪಾ!
ಯೇನು ತನಗೋ ಅದವಗಪ್ಪಾ!
ನ್ನಂತವನೆಂದು ತಿಳಿಯಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯ ನೀನಪ್ಪಾ!!!

ಸೇವಾವಕಾಶವಿದೆಯೇನು? (ಭಾ)   4(1688)

-ವಾವೇಶ ನಿನಗಿದೆಯೇನು? (ನೀ)
-ವನುಗ್ರಹಿಸಬೇಕದನ್ನು!
ಕಾಮ್ಯಾರ್ಥಿ ನೀನಾಗಿಹೆಯೇನು?
ಕ್ತಿ ಬೇಕೆಂದರೆ ತಪ್ಪೇನು?
ವಿರಾಗಿಯಾಗಬೇಕು ನೀನು! (ತಂ)
-ದೆ ನಿನಗರುಹಲಾನೇನು? (ತಾ)
-ಯೇ ಕಾಯೆನುತೆರಗು ನೀನು! (ನಾ)
-ನು ನಿರಂಜನಾದಿತ್ಯಮ್ಮಾನು!!!

ಸೇವಾಸಕ್ತಗಾಲಸ್ಯವಿಲ್ಲ!   3(1179)

ವಾದವನಿಗೆ ಬೇಕಾಗಿಲ್ಲ!
ಣ್ಣದು, ದೊಡ್ಡದೆಂಬುದಿಲ್ಲ! (ಭ)
-ಕ್ತನಿಗಾರಾಜ್ಞೆಯೂ ಬೇಕಿಲ್ಲ!
ಗಾಯಿಯಂತವನ ಬಾಳೆಲ್ಲ!
ಕ್ಷ್ಯ ಫಲಾಪೇಕ್ಷೆಯಲ್ಲಿಲ್ಲ! (ದಾ)
-ಸ್ಯಭಾವ ಅಂಗಾಂಗದಲ್ಲೆಲ್ಲ!
ವಿನಯಕ್ಕವಗೆಣೆಯಿಲ್ಲ! (ಗೊ)
-ಲ್ಲ ನಿರಂಜನಾದಿತ್ಯಾ ಫುಲ್ಲ!!!

ಸೇವೆ ತಗೊಂಡು ಸಾವನೀವವ ದೇವಯ್ಯಾ!   6(4026)

ವೆಸನದಿಂದಂತು ಪಾರು ಮಾಡುವನಯ್ಯಾ!
ನ್ನಲ್ಲಾಮೇಲೆ ಬೆರೆಸಿಕೊಳ್ಳುವನಯ್ಯಾ!
ಗೊಂದಲವೆಬ್ಬಿಸುವುದವನಾಟವಯ್ಯಾ! (ನ)
-ಡು ನೀರಿನಲ್ಲೆಂದೆಂದೂ ಕೈಯ ಬಿಡನಯ್ಯಾ!
ಸಾವಿಗೆ ಅಂಜದೆ ನಂಬಿ ಈಸಬೇಕಯ್ಯಾ!
ಸ್ತ್ರವೊಂದಾದ್ಮೆಲೊಂದುಡ್ವಂತೀ ದೇಹವಯ್ಯಾ!
ನೀನಾರೆಂದರಿತ ಮೇಲೆ ನಿಶ್ಚಿಂತೆಯಯ್ಯಾ! (ಭ)
-ವಬಂಧನವಾಗ ತಪ್ಪಿಹೋಗುವುದಯ್ಯಾ! (ಶಿ)
-ವ, ಜೀವರೈಕ್ಯಾನಂದಾಮೇಲಾಗುವುದಯ್ಯಾ!
ದೇವದೇವ ಸದ್ಗುರು ದತ್ತಾತ್ರೇಯನಯ್ಯಾ! (ಅ)
-ವನಲ್ಲದೆ ಇನ್ಯಾರು ಜಗದ್ಗುರುವಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾನಂದ ಅವನಯ್ಯಾ!!!

ಸೇವೆ ನಿನ್ನಿಷ್ಟದಂತಯ್ಯಾ! (ಆ)   1(328)

-ವೆಡೆಯಲಾದರಂತಯ್ಯಾ!
ನಿನಗಾರಡ್ಡಿ ಹೇಳಯ್ಯಾ! (ಎ)
-ನ್ನಿಷ್ಟವಾರು ಕೇಳರಯ್ಯಾ? (ಅ)
-ಷ್ಟ ಐಶ್ವರ್ಯ ಬೇಕಿಲ್ಲಯ್ಯಾ!
ದಂಡ ಹೊರಿಸಬೇಡಯ್ಯಾ!
ಕ್ಕ ಮಗನಾಗಿಸಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಯ್ಯಾ!!!

ಸೇವೆ ಮಾಡು, ಮೃತ್ಯುಂಜಯನಾಗ್ಯಾಡು! (ಸ)   5(2691)

-ವೆಯಲ್ಸಂಚಿತ ಅಚ್ಯುತನಾಗ್ಯೋಡಾಡು!
ಮಾಯೆಯ ಜೈಸ್ಯಪ್ರಮೇಯನೊಡಗೂಡು! (ಕಾ)
-ಡು, ಮೇಡಿಗೊಡದಿಲ್ಲೇ ತಪಸ್ಸು ಮಾಡು!
ಮೃದು ಮಧುರ ಮಾತನ್ನಭ್ಯಾಸ ಮಾಡು! (ಅ)
-ತ್ಯುಂಬ ಚಾಳಿಯನ್ನಿಂದೇ ತೆರವು ಮಾಡು!
ರಾಜನ್ಮವಾರಿಗೆಂದರಿತು ನೋಡು!
ಕ್ಷ, ರಾಕ್ಷಸರರಿಯರಿದ್ರ ಜಾಡು!
ನಾರದನಂತೆ ಶ್ರೀ ಹರಿಯ ಕೊಂಡಾಡು! (ಯೋ)
-ಗಾಯೋಗ್ಯ ವಿಚಾರವಿಲ್ಲದ್ರಿಂದೀ ಪಾಡು! (ಪಾ)
ಡು, ನಿರಂಜನಾದಿತ್ಯ ನೀನಾಗಿ ನೋಡು!!!

ಸೇವೆ ಮಾಡುವವನೊಬ್ಬನಯ್ಯಾ! [ಸೇ]   3(1248)

-ವೆಗಾಶಿಸುವವರನೇಕಯ್ಯಾ!
ಮಾತಿನ ಚಮತ್ಕಾರ ಸಾಕಯ್ಯಾ (ಮಾ)
-ಡುವಾತ ಆಡುವುದಿಲ್ಲವಯ್ಯಾ!
ರ ಗುರುಭಕ್ತನವನಯ್ಯಾ! (ಅ)
-ವರಿವರ ಮಾತವನಾಡಯ್ಯಾ!
ನೊರೆ ಹಾಲ ಗುಣವನದಯ್ಯಾ! (ಅ)
-ಬ್ಬರಾರ್ಭಟಗಳವಗಿಲ್ಲಯ್ಯಾ!
ಮಶ್ಯಿವಾಯವನ ಮಂತ್ರಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯವನಯ್ಯಾ!!!

ಸೇವೆ ಮಾಡೋಡಾಡದವನ! (ಶಿ)   4(2461)

-ವೆಗರಸನಾಗಿರ್ಪವನ!
ಮಾತುಕತೆಯಿಲ್ಲದವನ!
ಡೋಲು ವಾದ್ಯ ನಾದಪ್ರಿಯನ! (ದಂ)
-ಡಾದ್ಯಾಯುಧ ಧರಿಸಿಹನ! (ದಂ)
-ಡಪಾಣಿಗಪ್ಪನಾದವನ!
ತ್ತಾತ್ರೇಯ ತಾನಾದವನ! (ಭ)
-ವರೋಗ ವೈದ್ಯನಾದವನ! (ದಿ)
-ನಪ ನಿರಂಜನಾದಿತ್ಯನ!!!

ಸೇವೆ ಸ್ವೀಕರಿಸಬೇಕು ಸ್ವಾಮಿ! [ನೀ]   3(1059)

-ವೆನ್ನಿಷ್ಟಸಲಿಪುದೆಂದು ಸ್ವಾಮಿ?
ಸ್ವೀಕರಿಸಿ ದಾಸನೆಂದು ಸ್ವಾಮಿ!
ರುಣಿಸಿದೆನಗೀಗ ಸ್ವಾಮಿ! (ಅ)
-ರಿಯದ ಪಾಮರ ನಾನು ಸ್ವಾಮಿ!
ರ್ವಜ್ಜಮೂರುತಿ ನೀವು ಸ್ವಾಮಿ!
ಬೇಕೆನಗೆ ನಿಮ್ಮ ಸೇವೆ ಸ್ವಾಮಿ! (ಸಾ)
-ಕು ಸಂಸಾರ ಸುಖವೆಲ್ಲ ಸ್ವಾಮಿ!
ಸ್ವಾರ್ಥ ಮತ್ತೇನಿಲ್ಲೆನಗೆ ಸ್ವಾಮಿ! (ಸ್ವಾ)
-ಮಿ ನಿರಂಜನಾದಿತ್ಯ ನಮಾಮಿ!!!

ಸೇವೆಗಾಗಿ ಶಕ್ತಿ ಬೇಕಮ್ಮಾ! (ಸೇ)   4(2132)

-ವೆ ಶಕ್ತಿಗಾಗಿ ಮಾಡ್ಬೇಕಮ್ಮಾ!
ಗಾಢ ವಿಶ್ವಾಸವಿರ್ಬೇಕಮ್ಮಾ! (ಈ)
-ಗಿನದ್ದೀಗಲೇ ಆಗ್ಬೇಕಮ್ಮಾ!
ಶಿ, ಸೂರ್ಯರೆಂತಿರ್ಬೇಕಮ್ಮಾ! (ಶ)
-ಕ್ತಿ, ಸೇವೆಗಳಿಂತನ್ಯೋನ್ಯಮ್ಮಾ!
ಬೇಕು ಗುರುಕೃಪೆಯಿದ್ಕಮ್ಮಾ!
ರ್ಮಕ್ಕೆ ತಕ್ಕ ಫಲವಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಾಗಮ್ಮಾ!!!

ಸೇವೆಗಾದರ್ಶಳಮ್ಮ ಗಂಗಾ! [ಈ]   3(1400)

-ವೆ ಸದ್ಗತಿಯೆಂಬಳಾ ಗಂಗಾ!
ಗಾಳಿ, ಮಳೆಗಂಜಳಾ ಗಂಗಾ!
ಮ, ಶಮಾ ಶೀಲಳಾ ಗಂಗಾ! (ಸ್ಪ)
-ರ್ಶ ಸುಖ ಶೀತಲಳಾ ಗಂಗಾ! (ಒ)
-ಳ ಹೊರಗಿರುವಳಾ ಗಂಗಾ! (ಅ)
-ಮ್ಮ ತಾನೆಲ್ಲರವಳಾ ಗಂಗಾ!
ಗಂಗಾಧರ ಪ್ರಿಯಳಾ ಗಂಗಾ! (ಗಂ)
-ಗಾ ನಿರಂಜನಾದಿತ್ಯಾತ್ಮಾಂಗಾ!!!

ಸೇವೆಗಿರಬೇಕು ಸಕಲಾನುಕೂಲ! (ಶಿ)   3(1067)

-ವೆಯೇ ಪ್ರಿಯ ತಾಯಿಯಾದರನುಕೂಲ! (ಯೋ)
-ಗಿಯಾಗಿ, ತ್ಯಾಗಿಯಾದರದನುಕೂಲ! (ವ)
-ರ ಗುರು ದತ್ತ ತಾನಾದರನುಕೂಲ!
ಬೇಡ ಬಾಲನಾಸಕ್ತಿ, ಭಕ್ತ್ಯನುಕೂಲ!
ಕುಲ, ಗೋತ್ರ ಭ್ರಾಂತಿ ಹೋದರನುಕೂಲ!
ದ್ವಿದ್ಯಾ ವಿದ್ಯಾರ್ಥಿಯಾದರನುಕೂಲ!
ಷ್ಟ ಸಹಿಷ್ಣುತೆಯಿದ್ದರನುಕೂಲ!
ಲಾಭ ದಾಸೆಯಿಲ್ಲದಿದ್ದರನುಕೂಲ! (ಅ)
-ನುಮಾನ ಬುದ್ಧಿಲ್ಲದಿದ್ದರನುಕೂಲ!
ಕೂಟ, ನೋಟದಾಟಬಿಟ್ಟರನುಕೂಲ! (ಬಾ)
-ಲ, ನಿರಂಜನಾದಿತ್ಯಗೆಲ್ಲಾನುಕೂಲ!!!

ಸೇವೆಗೆ ಸಾಮೀಪ್ಯ ಬೇಕೆಂತಿಲ್ಲ!   1(283)

ವೆಗ್ಗಳದಭಿಮಾನ ಬೇಕಲ್ಲಾ!
ಗೆಲವಿಲ್ಲದೆ ಆವುದೂ ಇಲ್ಲ!
ಸಾಧನತ್ರಯ ಸೇವೆಗುಂಟಲ್ಲ!
ಮೀಯಲಿಕೆ ನೀರಿತ್ತರಾಯ್ತಲ್ಲಾ! (ಆ)
-ಪ್ಯಾಯನಕಾರಿ ಬಾಯಿ ಮಾತಲ್ಲ!
ಬೇಕು ಕಾರ್ಯಾಚರಣೆಯಿಂದೆಲ್ಲಾ!
ಕೆಂದಾವರೆಯಾಪ್ತಾರ್ಕನಂತೆಲ್ಲಾ!
ತಿಳಿದು ಸೇವೆ ಸಲ್ಲಿಸಲೆಲ್ಲಾ! (ಅ)
-ಲ್ಲದೆ ನಿರಂಜನಾದಿತ್ಯನೊಲ್ಲ!!! ||

ಸೇವೆಯ ಫಲ ಜನ್ಮ ಸಫಲ! (ನಾ)   3(1213)

-ವೆಗಾವಾಗಾರೇನಿತ್ತರು ಫಲ? (ಭ)
-ಯದಿಂದದು ಕಳೆದಿಲ್ಲ ಕಾಲ!
ಲಕಾಗಿ ಮಾಡಿಲ್ಲದು ಛಲ! (ಜ)
-ಲದಲ್ಲಿಹುದದಕೆ ಸಕಲ!
ನ್ನವೆಲ್ಲಾ ಸೇವೆಗಾ ವಿಮಲ! (ತ)
-ನ್ಮಯವಾಗಿ ಬಿಡುವುದೊಡಲ!
ತ್ಕಾರ್ಯ ನಿರತಗದೇ ಫಲ!
ಲಾತ್ಮ ತೃಪ್ತಿಯೊಂದೇ ಸುಫಲ! (ಫ)
-ಲ ನಿರಂಜನಾದಿತ್ಯಾತ್ಮ ಬಲ!!!

ಸೈರಣೆಯಿದ್ದ್ರೆ ಸಲಕರಣೆ ಭದ್ರ!   6(4053)

ಹಸ್ಯವಿದರಿಯದೇ ಎಲ್ಲಾ ಛಿದ್ರ! (ಅ)
ಣೆಕಟ್ಟು ಸೈರಣೆಯಿಂದಾಯಿತು ಭದ್ರ! (ತಾ)
-ಯಿ ಗಾಂಧಾರಿಯ ಗರ್ಭವೇಕಾಯ್ತು ಛಿದ್ರ? (ಗೆ)
-ದ್ದ್ರೆ ಮನಸ್ಸಿನಸಹನೆಯನ್ನು ಭದ್ರ!
ಹನೆಯಿಲ್ಲದೆ ಯದುವಂಶ ಛಿದ್ರ!
ಕ್ಷ್ಯಪರಮಾತ್ಮನಲ್ಲಿದ್ದ್ರೆಲ್ಲಾ ಭದ್ರ!
ರ್ತವ್ಯಭ್ರಷ್ಟತೆಯಿಂದೆಲ್ಲಾ ಉಪದ್ರ! (ವ)
-ರ ಗುರುವಿನಚಿತ್ತ ಕ್ಷೀರ ಸಮುದ್ರ! (ಗೆ)
-ಣೆಯನವನಾದರೆ ಇಲ್ಲ ಉಪದ್ರ!
ವಬಂಧನದಿಂದ ಪಾರಾದ್ರೆ ಭದ್ರ! (ಭ)
-ದ್ರ ನಿರಂಜನಾದಿತ್ಯಾಶ್ರಯ ಸುಭದ್ರ!!!

ಸೊಕ್ಕಿದ ಮಕ್ಕಳಕ್ಕರೆ ಏಕೆ? (ಕ)   3(1315)

-ಕ್ಕಿದನ್ನಕ್ಕಾಸೆ ಪಡುವುದೇಕೆ? (ಆ)
-ದರವಿಲ್ಲದಮೃತಾನ್ನವೇಕೆ?
ತಿಗೆಟ್ಟವರ ಸಂಗ ವೇಕೆ? (ಸ)
-ಕ್ಕರೆ ಹಾಕದ ಪಾನಕವೇಕೆ? (ಬ)
-ಳಕೆಗಿಲ್ಲದ ವೇದಾಂತವೇಕೆ? (ಧಿ)
-ಕ್ಕರಿಸುವವರಾಶ್ರಯವೇಕೆ? (ಬ)
-ರೆಯಲಾಗದ ಲೇಖನಿ ಯೇಕೆ?
ರು ಪೇರಿರುವ ಪ್ರೇಮವೇಕೆ? (ನೌ)
-ಕೆ ನಿರಂಜನಾದಿತ್ಯ ಮೋಕ್ಷಕ್ಕೆ!!!

ಸೊಕ್ಕಿದ ಸೊಸೆಗಿಲ್ಲ ಚೊಕ್ಕ ಪಕ್ಕ! (ಅ)   6(3755)

-ಕ್ಕಿ, ರಾಗಿ, ಗೋಧಿ ಯಜಮಾನ ತಂದಿಕ್ಕ!
ರ್ಪ, ದಂಭ ಅವಳದಕ್ಕಾತ ಸಿಕ್ಕ!
ಸೊಸೆಯ ಕೂಟಾಟ ನೋಡಿ ಮಾವ ನಕ್ಕ! (ಸೊ)
-ಸೆ ಅತ್ತೆಯರ್ಜಗಳ ಕೇಳ್ಯೊಳ ಹೊಕ್ಕ!
ಗಿರಾಕಿಗಳ್ಕೊಡುವರವಳಿಗ್ರೊಕ್ಕ! (ಎ)
-ಲ್ಲವನು ನುಂಗುವ ಆಪ್ತನೆಂಬ ಠಕ್ಕ! (ಲಂ)
-ಚೊಪ್ಪತ್ತಿನಾಟಕ್ಕವಳಿಗೊಂದು ಲಕ್ಕ! (ಸಿ)
-ಕ್ಕರೆ ಮೀನ್ತಿಂದು ಬೇಡನ ಚೀಲಕ್ಕಕ್ಕಾ!
ತಿತಳುದ್ಧಾರ ಸದ್ಗುರುವಿಂದಕ್ಕ! (ಮು)
-ಕ್ಕಣ್ಣ ನಿರಂಜನಾದಿತ್ಯಾ ಗುರು ಅಕ್ಕಾ!!!

ಸೊಕ್ಕಿದ ಸೊಸೆಗೆ ಮಿಕ್ಕಿದ ದೋಸೆ! (ಅ)   6(3759)

-ಕ್ಕಿ, ರಾಗಿ ಬೆರಕೆ ಹಿಟ್ಟಿನ ದೋಸೆ!
ರ್ಪ, ದಂಭದಾಕೆಗೆ ಹರ್ಕು ಹಸೆ!
ಸೊಡರಿಗೆ ನೀರ್ಬೆರೆತೆಣ್ಣೆ ಸೀಸೆ! (ಕಿ)
-ಸೆಯಲ್ಲಿ ಚಲಾವಣೆಯಾಗ್ದ ಪೈಸೆ!
ಗೆಳೆಯರಲ್ಲಿವಳ ಭೋಗದಾಸೆ!
ಮಿತಿ ಮೀರಿದಾಗ ಎಲ್ಲ ನಿರಾಸೆ! (ದಿ)
-ಕ್ಕಿಲ್ಲದೆ ಅಲ್ಲಲ್ಲಿ ಅಲೆವ ದೆಸೆ!
ಯೆ ದೇವರದ್ದಾದ್ರೆಲ್ಲಾ ಸೊಗಸೇ!
ದೋಷ ತಿದ್ದಿಕೊಳ್ಳಬೇಕೀಗಾ ಸೊಸೆ! (ಸೊ)
-ಸೆಗಾಗ ನಿರಂಜನಾದಿತ್ಯ ಹಿಸೆ!!!

ಸೊಗಸಾಗಿದೆ ಗುಲಾಬಿ ವಿಜಯ! [ಆ]   3(1342)

-ಗಬೇಕದರಂತೆ ನೀನು ವಿಜಯ!
ಸಾಧು ವೃತ್ತಿಗಿದಾದರ್ಶ ವಿಜಯ!
ಗಿಡದೊಡಲೆಲ್ಲಾ ಮುಳ್ಳು ವಿಜಯ! (ಅ)
-ದೆಲ್ಲಾ ದಾಟಿ ಬಂದಿತಾ ಹೂ ವಿಜಯ!
ಗುರುಪಾದಕ್ಕದು ಶೋಭೆ ವಿಜಯ!
ಲಾವಣ್ಯದಲ್ಲನುಪಮ ವಿಜಯ!
ಬಿಳಿ, ಕೆಂಪು ಮಿಶ್ರವರ್ಣ ವಿಜಯ!
ವಿವಿಧೋಪಯೋಗಿಯಿದು ವಿಜಯ!
ನ್ಮ ಸಾರ್ಥಕದರದು ವಿಜಯ! (ಧ್ಯೇ)
-ಯ ನಿರಂಜನಾದಿತ್ಯಾತ್ಮ ವಿಜಯ!!!

ಸೊಗಸಾಗಿಹುದಮ್ಮಾ ದೋಸೆ!   2(778)

ರ್ಗರ್ಯಾಗಿಹುದಮ್ಮಾ ದೋಸೆ!
ಸಾಕಾಗದಿಹುದಮ್ಮಾ ದೋಸೆ!
ಗಿರೀಶಾರ್ಪಣವಮ್ಮಾ ದೋಸೆ!
ಹುದುಗು ಸರಿಯಮ್ಮಾ ದೋಸೆ!
ತ್ತನಿಗಿಷ್ಟವಮ್ಮಾ ದೋಸೆ! (ಅ)
-ಮ್ಮಾ! ನಿನ್ನಾನಂದವಮ್ಮಾ ದೋಸೆ!
ದೋಷರಹಿತವಮ್ಮಾ ದೋಸೆ! (ದೋ)
-ಸೆ, ನಿರಂಜನಾದಿತ್ಯಾ ದೋಸೆ!!!

ಸೋದರಾ ಯಮಧರ್ಮ ಸೋದರ(ಅ)!   2(641)

-ದರಿಯದೆಲ್ಲಾ ಭಯ ಸೋದರ!
ರಾಜೀವಾಪ್ತಜ ನೆಮ್ಮ ಸೋದರ!
ಮ ದಯಾಮಯನಾ ಸೋದರ!
ದ, ಮತ್ಸರ ದೂರಾ ಸೋದರ!
ರ್ಮ ಕರ್ಮಕ್ಕಾಧಾರಾ ಸೋದರ! (ಮ)
-ರ್ಮವಿದರಿತ ‘ನಾ’ ಸೋದರ!
ಸೋಮಸುಂದರನಿವಾ ಸೋದರ!
ತ್ತಾತ್ಮನಾತನೆಮ್ಮ ಸೋದರ! [ವ]
-ರ ನಿರಂಜನಾದಿತ್ಯಾ ಸೋದರಾ!!!

ಸೋಮಾರಿ ಅಂದವರಾರು ನಿನ್ನನ್ನು?   6(4165)

ಮಾತಾಡಿದವರು ಮಾಡಿದ್ದೇನನ್ನು?
ರಿಸಿ ಜೀವನ ನಿನ್ನದಾಗಿದೆನ್ನು!
ಅಂಬರೇಶನಾದರ್ಶ ನಿನ್ನದೆನ್ನು!
ತ್ತನೂ, ನೀನೂ, ಅಭೇದಾತ್ಮರೆನ್ನು!
ಸನಶನಾಶಾತೀತರಿಬ್ಬ್ರೆನ್ನು!
ರಾಮ ಕೃಷ್ಣರೇಕ ರೂಪ ನೀನೆನ್ನು! (ಗ)
-ರುಡಗಮನ ಶ್ರೀ ಹರಿ ನೀನೆನ್ನು!
ನಿತ್ಯ, ಸತ್ಯ ನಿಜಾನಂದ ನೀನೆನ್ನು! (ನ)
-ನ್ನ, ನಿನ್ನ ಭೇದ ಅಜ್ಞಾನದಿಂದೆನ್ನು! (ಅ)
-ನ್ನು, ಶ್ರೀ ನಿರಂಜನಾದಿತ್ಯ ನೀನೆನ್ನು!!!

ಸೋಮಾರಿ ನಾನಲ್ಲ ಗುರುವೇ!   5(2724)

ಮಾಡಿಸುವಗೆಲ್ಲ ಗೊತ್ತಿಲ್ವೆ? (ಸ)
-ರಿಯಾದ ಕೂಲಿ ಕೊಡ್ಬೇಕಲ್ವೇ?
ನಾನಲ್ಲಪರಾಧಿ ಗುರುವೇ! (ನಿ)
-ನಗುದಾಸೀನತೆ ತರವೇ? (ಹು)
-ಲ್ಲ ತಿಂದು ಹಾಲ್ಲ್ಕೊಡಬೇಕಲ್ವೆ?
ಗುರು ನಿನ್ನಲೈಕ್ಯ ಗುರುವೇ! (ಕ)
-ರುಣಿಸೀಗ ವರ ಗುರುವೇ! (ನೋ)
-ವೇ? ನಿರಂಜನಾದಿತ್ಯ ಸೇವೇ???

ಸೋಮು ಕಂಡ ನಿರಂಜನ ದತ್ತ!   2(675)

ಮುದಿತ ಹೃದಯ ಗುರುದತ್ತ!
ಕಂಬನಿಗರೆದಾ ಗುರುಭಕ್ತ! (ತ)
-ಡ ಮಾಡದೆ ಗೋಡೆ ಮೇಲಾ ದತ್ತ!
ನಿರಂಜನ ಬೇರಲ್ಲಾನೆನುತ್ತ!
ರಂಜಿಸಿದಾ ರಾತ್ರಿ ಛಾಯಾ ಚಿತ್ತ!
ನ್ಮ ಸಾರ್ಥಕಾಯ್ತೆನುತಾ ಭಕ್ತ!
ಮಿಸಿ ಹೋದನಾನಂದಿಸುತ್ತ!
ಯಾಮಯಾ ಗುರುದೇವ ದತ್ತ! (ದ)
-ತ್ತ, ನಿರಂಜನಾದಿತ್ಯನಾ ದತ್ತ!!!

ಸೋಲಲ್ಲಾ ಭಕ್ತನಿಗೆ ಸೋಲೆಲ್ಲಾ!   5(2981)

ಕ್ಷ್ಯಸಿದ್ಧಿಗೈಹಿಕ ಬೇಕಿಲ್ಲಾ! (ಅ)
-ಲಾಡ್ಡಿರ್ಬೇಕು ಮರ ಗಾಳಿಗೆಲ್ಲಾ!
ಜನೆಗೆ ದೀಪ ಬೇಕೆಂದಿಲ್ಲಾ! (ಶ)
-ಕ್ತನಾಗ್ಬೇಕು ರೋಗ ವಾಸ್ಯಾಗ್ಯೆಲ್ಲಾ!
ನಿರ್ಮಲ ಮನಕ್ಕೆ ಸಿದ್ಧಿಯೆಲ್ಲಾ!
ಗೆಳಯರಗತ್ಯವಿದಕ್ಕಿಲ್ಲಾ!
“ಸೋಹಂ” ಜಪದಿಂದ ಬಲವೆಲ್ಲಾ! (ತ)
-ಲೆ ಬಿಸಿಯಾರಿ ತಂಪಾಗ್ವುದೆಲ್ಲಾ! (ಪು)
-ಲ್ಲಾ ನಿರಂಜನಾದಿತ್ಯ ಲೀಲೆಲ್ಲಾ!!!

ಸೌಂದರ್ಯಾರವಿಂದಾದಿ ಬತ್ತಿಗಳು!   4(2050)

ತ್ತನೆದ್ರುರಿಯುವಾ ಬತ್ತಿಗಳು! (ಆ)
-ರ್ಯಾತ್ಮಾನಂದದಿಂದಾದಾ ಬತ್ತಿಗಳು! (ವ)
-ರ ಸುವಾಸನಾಯುಕ್ತಾ ಬತ್ತಿಗಳು! (ಗೋ)
-ವಿಂದಾನಂದ ವಾಸನಾ ಬತ್ತಿಗಳು!
ದಾಸಿ ಮೀರಾ ಉರ್ಸಿದಾ ಬತ್ತಿಗಳು!
ದಿವ್ಯನಾಮ ಕೀರ್ತನಾ ಬತ್ತಿಗಳು!
ದುಕ ಭವ್ಯ ಗೈವಾ ಬತ್ತಿಗಳು! (ಹೊ)
-ತ್ತಿಸ್ಬೇಕೆಲ್ಲೆಲ್ಲಾ ರೋಜಾ ಬತ್ತಿಗಳು!
ಬ್ಬನ್ನಡಗಿಸುವಾ ಬತ್ತಿಗಳೂ (ಆ)
-ಳು ನಿರಂಜನಾದಿತ್ಯಗಾದವ್ಗಳು!!!

ಸೌಲಭ್ಯವೆಷ್ಟಿದ್ದರೇನಮ್ಮಾ?   4(1629)

ಭ್ಯವಿಲ್ಲದಿರೆ ವ್ಯರ್ಥಮ್ಮಾ! (ಅ)
-ಭ್ಯರ್ಥಿಯಾದರಾಯಿತೇನಮ್ಮಾ? (ಸೇ)
-ವೆಗೂ ಪ್ರಾಪ್ತಿಯಿರಬೇಕಮ್ಮಾ! (ಸೃ)
-ಷ್ಟಿ ಕರ್ತಗೂ ಕಷ್ಟ ಕಾಣಮ್ಮಾ! (ಪೆ)
-ದ್ದನೂ ಬುದ್ಧ ಲಭ್ಯದಿಂದಮ್ಮಾ!
ರೇಗಿದರೇನು ಫಲವಮ್ಮಾ?
ಶಿಸುವ ದೇಹವಿದಮ್ಮಾ! (ಅ)
-ಮ್ಮಾ ನಿರಂನಾತ್ಯನಾಗಮ್ಮಾ!

ಸ್ತುತಿಯಾಸೆಯಿಲ್ಲದವರಾರು?   3(1275)

ತಿಳಿದಾತ್ಮ ಜ್ಞಾನಿ ಮಾನವರು! (ಮಾ)
-ಯಾ ಪಾಶ ಹರಿದೊಗೆದವರು! (ಆ)
-ಸೆಗಳಿಂದ ಹೊರಗಾದವರು! (ಭಾ)
-ಯಿ, ಗುಹ್ಯಗಳ ಜೈಸಿದವರು! (ಎ)
-ಲ್ಲವೊಬ್ಬಾತ್ಮನೆಂದರಿತವರು! (ಮ)
-ದ, ಮತ್ಸರಗಳಿಲ್ಲದವರು!
ರ ಗುರುಪಾದ ಸೇವಕರು!
ರಾಮ ಧ್ಯಾನ ಸದಾ ಮಾಳ್ಪವರು! (ಗು)
-ರು ನಿರಂಜನಾದಿತ್ಯಾಪ್ತರು!!!

ಸ್ಥಾನ ಬೇಡನುಮಾನ ಬೇಡ! (ಮ)   4(2327)

-ನಶ್ಯುದ್ಧಿ ಮಾಡದಿರಬೇಡ!
ಬೇರೆ ಕಡೆ ದಿಟ್ಟಿಸಬೇಡ! (ಬ)
-ಡವ ನಾನೆಂದು ಅಳಬೇಡ! (ಅ)
-ನುದಿನ ಧ್ಯಾನ ಬಿಡಬೇಡ!
ಮಾಯೆಗೆ ಮಾರುಹೋಗಬೇಡ! (ಧ)
-ನದಾಸೆಗೆರವಾಗಬೇಡ!
ಬೇಸರವೆಂದೂ ಪಡ ಬೇಡ! (ಕೇ)
-ಡ ನಿರಂಜನಾದಿತ್ಯ ಮಾಡ!!!

ಸ್ಥಾನ ಮಾನ ಬದಲಾವಣೆಯಾಯ್ತು! (ದಿ)   5(2628)

-ನಮಣಿಯ ಬಿಂಬ ಕಣ್ಣ ಮುಂದಾಯ್ತು!
ಮಾಲೆಯ ಸ್ಥಾನ ಭದ್ರವಾದಂತಾಯ್ತು! (ಮ)
-ನಮೋಹನ ರೂಪಕ್ಕೇಕಾಂತವಾಯ್ತು!
ಗೆಬಗೆಯಾಸೆಗಳೋಡಿ ಹೋಯ್ತು!
ತ್ತಾತ್ರೇಯ ತಾನೆಂಬರಿವುಂಟಾಯ್ತು! (ಲೀ)
-ಲಾನಾಟಕ ಯಥೋಚಿತಾಡ್ವಂತಾಯ್ತು!
ಸ್ತ್ರವಿಲ್ಲದಿರಲಭ್ಯಾಸವಾಯ್ತು! (ಹ)
-ಣೆ ಬರಹದ ಭ್ರಾಂತಿ ಬಿಟ್ಟುಹೋಯ್ತು!
ಯಾವಾಗಲೂ ಸ್ವಸ್ಥಿತಿ ಪ್ರಾಪ್ತವಾಯ್ತು! (ಆ)
-ಯ್ತು, ನಿರಂಜನಾದಿತ್ಯೋದಯವಾಯ್ತು!!!

ಸ್ಥಾನ ಮಾನ ಬೇಡದವರಾರು?   5(2802)

ರ, ನಾರಿಯರಲ್ಲೀ ತಕ್ರಾರು!
ಮಾಯಾ, ಮಾಧವರಲ್ಲಿ ಮೇಲಾರು?
ಶ್ವರ ಮಾಯೆಯಿಂದ ದೂರಾರು?
ಬೇಡ, ಬೇಡೆಂದುಳಿದವರಾರು?
ಬ್ಬಿ ತುಂಬಿಟ್ಟುಣದವರಾರು?
ತ್ತ ಗುರುವೆಂದೂರೂರು ಸಾರು!
ರ್ಷವೆಲ್ಲಾ ದುಡಿದವರಾರು?
ರಾತ್ರಿ, ದಿನವೆನ್ನದವರಾರು? (ಆ)
-ರು? ನಿರಂಜನಾದಿತ್ಯಾ ಮೂರು!!!

ಸ್ಥಾನ ಮಾನಕ್ಕೆಲ್ಲೆಲ್ಲೂ ಸ್ವಾಗತ! [ಜ್ಞಾ]   3(1171)

-ನಕ್ಕಂತರಂಗದಲ್ಲಿ ಸ್ವಾಗತ!
ಮಾತು, ಕಥೆಗೆಲ್ಲರ ಸ್ವಾಗತ!
ಡೆಗೆ ಶ್ರೀರಂಗನ ಸ್ವಾಗತ! (ದಿ)
-ಕ್ಕೆಲ್ಲಕ್ಕಾನೆಂಬಗೆಲ್ಲಾ ಸ್ವಾಗತ! (ಒ)
-ಲ್ಲೆನೇನೆಂಬಗಲ್ಲನ ಸ್ವಾಗತ! (ಚೆ)
-ಲ್ಲೂರ ಗೌಡಗೆಲ್ಲರ ಸ್ವಾಗತ!
ಸ್ವಾಮಿ ಭಕ್ತಗಾತ್ಮನ ಸ್ವಾಗತ! (ಅಂ)
-ಗ ಶೃಂಗಾರಗೆಲ್ಲರ ಸ್ವಾಗತ! (ಸಂ)
-ತ ನಿರಂಜನಾದಿತ್ಯ ಸ್ವಾಗತ!!!

ಸ್ಥಾನ, ಮಾನ, ಹಾನಿ ನಿನ್ನಿಂದ ಕಾಮಿನಿ!   6(3443)

ರಹರಿಯ ದಾಸಿ ಲಕ್ಷ್ಮಿ ಕಾಮಿನಿ!
ಮಾರಹರನರಸಿ ದೇವಿ ಕಾಮಿನಿ!
ರೋತ್ತಮ ಶ್ರೀ ರಾಮಪತ್ನಿ ಕಾಮಿನಿ!
(ಮ)-ಹಾ ಕಾಳಿಯೆನಿಸಿದ ತಾಯಿ ಕಾಮಿನಿ!
ನಿತ್ಯಾನಿತ್ಯ ಜ್ಞಾನಿ ಶಾರದೆ ಕಾಮಿನಿ!
ನಿಜ ಭಕ್ತೆ ಮೀರಾಬಾಯಿಯೂ ಕಾಮಿನಿ!
(ತ)-ನ್ನಿಂದೆಲ್ಲವೆಂಬ ಮಹಾಮಾಯೆ ಕಾಮಿನಿ!
ತ್ತಾತ್ರೇಯನ ಹೆತ್ತವಳೂ ಕಾಮಿನಿ!
ಕಾಮಿಗಳ ಭೋಗವಸ್ತುವೂ ಕಾಮಿನಿ!
ಮಿತ್ರನನ್ನೊಲಿಸಿದ ಕುಂತಿ ಕಾಮಿನಿ!
ನಿತ್ಯ, ಸತ್ಯ, ನಿರಂಜನಾದಿತ್ಯ ದಾನಿ!!!

ಸ್ಥಾನ, ಮಾನಕ್ಕಾಗಿ ಮಾನವ ಪಟ್ಟ ಕಷ್ಟಷ್ಟಿಷ್ಟಲ್ಲ! (ಹೀ)   6(3893)

-ನ ಕಾಮ ಅವನನ್ನುರುಳಿಸದೆಯೂ ಬಿಡಲಿಲ್ಲ!
ಮಾತಿನಲ್ಲೇ ಸ್ವರ್ಗಸುಖವನ್ನು ತೋರಿಸಿದರೆಲ್ಲ!
ಭೋಮಂಡಲದಲ್ಲೂ ಹಾರಾಡಿ, ಸುಸ್ತಾಗಿ ಸತ್ತ್ರೆಲ್ಲ! (ತಿ)
-ಕ್ಕಾಟ, ಹೋರಾಟ, ಹೊಡೆದಾಟಕ್ಕೆ ಮಿತಿಯಿಲ್ಲ!
ಗಿರಿ ಶಿಖರಗಳೇರಿ ಕಂದಕಕ್ಕೂ ಬೀಳದಿಲ್ಲ!
ಮಾನವತಿಯರ ಪಾಡನ್ನಂತೂ ಹೇಳಲಳವಲ್ಲ!
ಡೆದ ಕಾಡು, ಮೇಡು ದಾರಿಗಳಿಗಳತೆಯಿಲ್ಲ!
ಸಿಷ್ಟಾದಿ ಗುಹೆಗಳಲ್ಲಿ ಗಡ್ಡದವರೇ ಎಲ್ಲಾ!
ತಂಜಲಿ ಯೋಗ ಸೂತ್ರ ಪಠಿಸದವರೇ ಇಲ್ಲ! (ಅ)
-ಟ್ಟಹಾಸಾರ್ಭಟದ ಮಾಂತ್ರಿಕ, ತಾಂತ್ರಿಕತೇ ಎಲ್ಲೆಲ್ಲಾ!
ನಿಕರ ಮಾತ್ರ ಪರಮಾತ್ಮನಿಗಿನ್ನೂ ಬಂದಿಲ್ಲ! (ದು)
-ಷ್ಟರ ಹಾವಳಿ ಮಾತ್ರ ದಿನ ದಿನಕ್ಕೂ ಹೆಚ್ಚದಿಲ್ಲ! (ಸೃ)
-ಷ್ಟಿಯ ಈ ವಿಚಿತ್ರವೇನೆಂದು ಹೇಳುವವರೇ ಇಲ್ಲ! (ಸ್ಫ)
-ಷ್ಟವಾಗಿದನ್ನರುಹದಿದ್ದರೆ ಗತ್ಯಂತರವಿಲ್ಲ! (ಪು)
-ಲ್ಲ ನಿರಂಜನಾದಿತ್ಯನಿಗೇ ಶರಣಾಗಬೇಕೆಲ್ಲಾ!!!

ಸ್ಥಾನ, ಮಾನಕ್ಕೆಲ್ಲಾ ಕಚ್ಚಾಟ! (ಜ)   4(1854)

-ನಹಿತಕ್ಕೇನಲ್ಲಾ ಕಾದಾಟ!
ಮಾತ್ಸರ್ಯದಿಂದೆಲ್ಲಾ ಕಚ್ಚಾಟ! (ಧ)
-ನ, ಧಾನ್ಯಕ್ಕಾಗ್ಯೆಲ್ಲಾ ಕಾದಾಟ! (ದ)
-ಕ್ಕೆ ಶಾಂತಿ, ಸುಖಕ್ಕಾ ಕಚ್ಚಾಟ! (ಚೆ)
-ಲ್ಲಾಟವಲ್ಲವೇನು ಕಾದಾಟ?
ರ್ಮನಿಷ್ಠಗುಂಟೇ ಕಚ್ಚಾಟ? (ಹು)
-ಚ್ಚಾಟ, ಒದ್ದಾಟ ಆ ಕಾದಾಟ! (ಆ)
-ಟ ನಿರಂಜನಾದಿತ್ಯಗೂಟ!!!

ಸ್ಥಾನಮಾನಕ್ಕೇಕೆ ಅಪೇಕ್ಷೆ ಅಯೋಗ್ಯಾ?   6(3377)

ರಜನ್ಮ ಬಂದಾಗ್ಲೂ ಬೇಡ್ವೇ ವೈರಾಗ್ಯ?
ಮಾರನೊಡನಾಟದಿಂದ ಬಂತೇನ್ಭಾಗ್ಯ?
ಶ್ವರವೀ ಶರೀರಸಂಬಂಧ ಭೋಗ್ಯ! (ದಿ)
-ಕ್ಕೇ ತೋಚದಂತಾಗಿ ಕೆಡುವುದಾರೋಗ್ಯ!
ಕೆಟ್ಟ ಬುದ್ಧಿ ಬಿಟ್ಟಿನ್ನಾದ್ರೂ ಆಗು ಯೋಗ್ಯ!
ನುಪಮಾತ್ಮಾ ರಾಮ ಪರಮಯೋಗ್ಯ
(ಅ)-ಪೇಕ್ಷಿಸದಿದ್ರೂ ಲಭ್ಯವಗೆ ಸೌಭಾಗ್ಯ! (ದ)
-ಕ್ಷೆ ಸೀತೆ ಸತಿಯಾದುದವನ ಭಾಗ್ಯ!
ವನೇ ನೀನಾಗು ಈಗಾದ್ರೂ ಅಯೋಗ್ಯಾ!
ಯೋಗವೆಂದರಿದೆಂದರಿಯೋ ಅಯೋಗ್ಯಾ!
(ಯೋ)-ಗ್ಯಾ, ನಿರಂಜನಾದಿತ್ಯಾನಂದ ಭಾಗ್ಯ!!!

ಸ್ಥಾಪಿಸಿದ ವ್ಯಾಪಿಸಿದ ತೆರೆಮರೆಯಾದ!   1(22)

ಪಿರಿದಾದ ಹಿಮಾಚಲದಿಂದಿಳಿದು ಬಂದ!
ಸಿರಿ ಹರಿಯಾನಂದದಲಿ ಭಜಿಸುತ ನಿಂದ!
ತ್ತ ಮೂರ್ತಿಯ ಮಂದಿರ ರಚಿಸಿ ಬನ್ನಿರೆಂದ!
ವ್ಯಾಧಿ, ವಿಷ ಪೀಡೆಗಳಿಂದ ಬಂತು ಭಕ್ತವೃಂದ!
ಪಿನಾಕಿಧರ ಗುರುಶಿವಗೆ ಶಿರ ಬಾಗಿರೆಂದ!
ಸಿಹಿ ಮಾತಿನಲುಪದೇಶಿಸುತ ಶಾಂತಿ ತಂದ!
ಯೆಯಿಂದೆಲ್ಲರ ಸೇವೆ ನಾನೇ ಮಾಡುವೆನೆಂದ!
ತೆಗೆದೊಗೆದು ಭಿನ್ನ ಭಾವಗಳ ಭಜಿಸುತಿರೆಂದ!
ರೆಪ್ಪೆ ಮುಚ್ಚದೆ ಅಖಂಡ ಸಪ್ತಾಹಗಳಾಚರಿಸಿರೆಂದ!
ನುಜ ಶರೀರವಿದೇಕೇನಿತು ಸುಖಗಳೆಂದ!
ರೆಸಿಗೆಯಾಡಿ ಹುಳ ಹತ್ತಿದ ರೋಗಕ್ಕೆಲ್ಲಾ ಗುಣ ತಂದ!
ಯಾಕೆ ನಿರ್ದಯನಾದೆ ಗುರುದೇವ ನಾನಿರಲಾರೆನೆಂದ!
ಮೆ, ಶಮೆ, ತಿತಿಕ್ಷೆಗಳ ನಿರಂಜನಾನಂದ!!!

ಸ್ಥಾವರ ಜಂಗಮಕ್ಕೆಲ್ಲಾ ಬೆಳಕವನಿಂದ!   5(2896)

ಸ್ತ್ರ ತ್ಯಜಿಸಿ ದಿಗಂಬರನಾದವನಿಂದ!
ಮೇಶ, ಉಮೇಶರೆನಿಸಿಕೊಂಡವನಿಂದ!
ಜಂಭವಿಲ್ಲದೇ ಜಗತ್ಪತಿಯಾದವನಿಂದ!
ತಿ, ಸ್ಥಿತಿಗಾಧಾರವಾಗಿರುವವನಿಂದ!
ಮಕಾರವೆಳ್ಳಷ್ಟು ಇಲ್ಲದಿರ್ಪವನಿಂದ! (ಧ)
-ಕ್ಕೆ ಧರ್ಮ, ಕರ್ಮಕ್ಕುಂಟುಮಾಡದಿರ್ಪವನಿಂದ! (ಕ)
-ಲ್ಲಾದರೂ ತಿಮ್ಮಪ್ಪನೆನಿಸಿಕೊಂಬವನಿಂದ!
ಬೆರಕೆಯಿಲ್ಲದ ಶುದ್ಧಾತ್ಮನಾದವನಿಂದ! (ಒ)
-ಳ, ಹೊರಗೆಲ್ಲಾ ತಾನೇ ತಾನಾರ್ಪವನಿಂದ!
ಲಾತೀತ, ಕಲ್ಪಾಂತಕಾರಿಯಾದವನಿಂದ!
ರಗುರು ದತ್ತಾತ್ರೇಯನೆನಿಸಿಹನಿಂದ!
ನಿಂದಾ, ಸ್ತುತಿಗಲಕ್ಷ್ಯವಾಗಿರುವವನಿಂದ!
ಯಾನಿಧಿಯೆಂಬ ನಿರಂಜನಾದಿತ್ಯನಿಂದ!

ಸ್ಥಿತಿ, ಗತಿ, ಅನ್ನಪಾನಾದಿಯಿಂದ!   3(1049)

ತಿನ್ನು ಸ್ವಾತಿಕಾಹಾರಾದುದರಿಂದ!
ಂಗೋದಕ ಶುದ್ಧವಿದ್ದರಾನಂದ! (ಮ)
-ತಿ ಬೆಳಗಬೇಕೀ ವಿಜ್ಞಾನದಿಂದ!
ನುಚಿತದೆಡೆ ಬೇಡದರಿಂದ! (ಉ)
-ನ್ನತದ ಸುಖಕೀ ವಿವೇಕಾನಂದ!
ಪಾಚಕ ನಿಂತಿದ್ದರಾರೋಗ್ಯಾನಂದ! (ಅ)
-ನಾರೋಗ್ಯನಾವಶ್ಯ ಮಸಾಲೆಯಿಂದ!
ದಿವ್ಯ ನಾಮದಿಂದಟ್ಟರತ್ಯಾನಂದ!
ಯಿಂಪಾದ ರಾಮನಾಮ ಬ್ರಹ್ಮಾನಂದ! (ಕಂ)
-ದ, ನಿರಂಜನಾದಿತ್ಯಚ್ಚುತಾನಂದ!!!

ಸ್ಥಿತಿ, ಗತಿಯ ಪೂರ್ಣರಿವು ನಿನ್ನಿಂದ!   6(3814)

ತಿಳಿಸಲಸದಳನ್ಯರಿಂದಾದ್ರಿಂದ!
ಣಪತಿ ನೀನು ಸರ್ವಜ್ಞನಾದ್ರಿಂದ!
ತಿಳಿಸೆಲ್ಲವನೆಮಗಾನಂದದಿಂದ!
ಶಸ್ಸುಂಟಾಗ್ಬೇಕೆಮಗೀಗ ನಿನ್ನಿಂದ!
ಪೂಜೆ ಸಾರ್ಥಕವಾಗ್ಲಿ ದರ್ಶನದಿಂದ (ಜೀ)
-ರ್ಣವಾಗ್ಬೇಕಾಹಾರ ಆಗ್ನಿ ಬಲದಿಂದ! (ಉ)
-ರಿಯದದು ಹನಿಯ ಕಟ್ಟಿಗೆಯಿಂದ! (ಮಾ)
-ವು, ಬೇವಾದ್ರೂ ಒಣಗಿದ್ದಾಗ್ಬೇಕಾದ್ರಿಂದ!
ನಿನ್ನ ದರ್ಶನವೇ ಬೇಕ್ನಮಗಾದ್ರಿಂದ! (ನಿ)
-ನ್ನಿಂದ ನಾವು ಬೇರೇನಲ್ಲವಾದದ್ರಿಂದ!
ತ್ತ ನೀ ಬಾ, ನಿರಂಜನಾದಿತ್ಯಾನಂದ!!!

ಸ್ಥೂಲ, ಸೂಕ್ಷ್ಮ ಕಾರಣಿವೆಲ್ಲಾ ಕಳಂಕ!   5(3217)

ಕ್ಷ್ಯ ತಾನೇ ತಾನಾಗುವಾಗ ಕಳಂಕ!
ಸೂತ್ರಕ್ಕೆ ಮಣಿ ಪೋಣಿಸಲು ಕಳಂಕ! (ಸೂ)
-ಕ್ಷ್ಮಕ್ಕೆಲ್ಲಾ ಬಹು ಬಹು ಸೂಕ್ಷ್ಮ ಕಳಂಕ!
ಕಾಮ್ಯ ಜಗತ್ತಿನೊಡನಾಟ ಕಳಂಕ!
ಜಸ್ತಮಾದಿ ಗುಣಾತೀತ ಕಳಂಕ! (ತೃ)
-ಣ, ಕಾಷ್ಠ, ಪಾಷಾಣಗಳೆಲ್ಲಾ ಕಳಂಕ!
ವೆಚ್ಚ ನೀಚೋಚ್ಚಕ್ಕೆ ಆದಾಗ ಕಳಂಕ! (ಎ)
-ಲ್ಲಾ ವಿಷಯೇಂದ್ರಿಯ ಸಂಬಂಧ ಕಳಂಕ!
ರ್ಮ ಧರ್ಮಸಂಯೋಗದಿಂದ ಕಳಂಕ! (ವಿ)
-ಳಂಬ ಮಾಡದೇ ಅಳಿಸೆಲ್ಲಾ ಕಳಂಕ! (ಲೋ)
-ಕನಾಥ ನಿರಂಜನಾದಿತ್ಯ ಕಳಂಕ!!!

ಸ್ಥೂಲ, ಸೂಕ್ಷ್ಮಗಳೆಲ್ಲಾನ್ನ, ಪಾನದಿಂದ!   6(3792)

ಯ ಮನಸ್ಸು ಮುಕ್ತ ಸಂಸಾರದಿಂದ!
ಸೂಕ್ತಾಹಾರ, ವಿಹಾರವಿರ್ಬೇಕಾದ್ದ್ರಿಂದ! (ಲ)
-ಕ್ಷಣ ಇಂದ್ರಜಿತ್ತುವನ್ನು ಹೇಗೆ ಕೊಂದ! (ಹ)
-ಗಲಿರಳು ನಿದ್ರಾಹಾರ ಬಿಟ್ಟು ಕೊಂದ! (ಇ)
-ಳೆಯ ಭಾರವಿಳುಹಬೇಕಾದ್ದರಿಂದ! (ಅ)
-ಲ್ಲಾಡದ ನಿಶ್ಚಲ ಮನಸ್ಸಿದ್ದದ್ದ್ರಿಂದ! (ತ)
-ನ್ನ ಕರ್ತವ್ಯ ನಿಷ್ಠೆ ಸದಾ ಇದ್ದದ್ದ್ರಿಂದ!
ಪಾವನ ಶ್ರೀರಾಮ ಪಾದ ಸೇವೆಯಿಂದ!
ಶ್ವರದಾಶಾಪಾಶ ನಾಶವಿದ್ರಿಂದ! (ಅಂ)
-ದಿಂದೆಂದೆಂದಿಗೂ ಇದರಿಂದಾತ್ಮಾನಂದ!
ತ್ತಾತ್ರೇಯ ನಿರಂಜನಾದಿತ್ಯಾನಂದ!!!

ಸ್ಥೂಲಗಳ್ಸದಾ ಒಂದಾಗಿರ್ಲಾಗ್ವುದಿಲ್ಲ! (ಜ)   6(3723)

-ಲ, ಮಲಕ್ಕಾದ್ರೂ ಬೇರಾಗಿರ್ಲೇ ಬೇಕಲ್ಲಾ! (ಅ)
-ಗತ್ಯವೆಂಬುದು ಇಂದ್ರಿಯ ತೃಪ್ತಿಗೆಲ್ಲಾ! (ಹ)
-ಳ್ಸಬಾರದು ವಿಶ್ವಾಸ ಕ್ಷುಲ್ಲಕಕ್ಕೆಲ್ಲಾ!
ದಾಶರಥಿ, ಸೀತೆಯರ್ಸಾಮಾನ್ಯರಲ್ಲ!
ಒಂದಾಗಿತ್ತಾತ್ಮ ಸುಖ, ದುಃಖದಲ್ಲೆಲ್ಲಾ!
ದಾನವರಾಟ ಹೀಗಾಗಿ ನಡೆಯಲಿಲ್ಲ! (ಯೋ)
-ಗಿಗಳಾಗಿ ತ್ಯಾಗಿಗಳಾಗಿದ್ದ್ರವ್ರೆಲ್ಲಾ! (ಬ)
-ರ್ಲಾರದು ಸೋಲು ಇಂಥವರಿಗೆ ಎಲ್ಲಾ! (ಆ)
-ಗ್ವುದು, ಹೋಗ್ವುದು ದೈವೇಚ್ಛೆಯಂತೆ ಎಲ್ಲಾ!
ದಿನ, ರಾತ್ರಿ, ಸ್ಮರಿಸಬೇಕವನನ್ನೆಲ್ಲಾ! (ಪು)
-ಲ್ಲ, ನಿರಂಜನಾದಿತ್ಯ ಇಂತಿದ್ದಾನಲ್ಲಾ!!!

ಸ್ಥೂಲದಲಿದ್ದಿಲ್ಲದಂತಿರುವುದೆಂತಯ್ಯಾ? (ಅ)   2(450)

-ಲಕ್ಷ್ಯ ವಿಷಯಗಳಿಗಾದರಹುದಯ್ಯಾ!
ಶೇಂದ್ರಿಯ ವ್ಯಾಪಾರ ನಿಂತರಹುದಯ್ಯಾ! (ಅ)
-ಲ್ಲಿಲ್ಲೆಲ್ಲೆಲ್ಲೇನಿಹುದೆಂದಿದ್ದರಹುದಯ್ಯಾ! (ಸ)
-ದ್ದಿಲ್ಲದೆ ಎಲ್ಲೆಂದರಲ್ಲಿದ್ದರಹುದಯ್ಯಾ! (ಅ)
-ಲ್ಲದೊಲ್ಲದಾಸೆ ಇಲ್ಲದಿದ್ದರಹುದಯ್ಯಾ!
ದಂಭ, ದರ್ಪಗಳಿರದಿದ್ದರಹುದಯ್ಯಾ!
ತಿಥಿ, ವಾರ, ಎಣಿಸದಿದ್ದರಹುದಯ್ಯಾ!
ರುಚಿ, ಅರುಚಿ ಇರದಾದರಹುದಯ್ಯಾ! (ಆ)
ವುದಕೂ ಮನಸಂಟದಿದ್ದರಹುದಯ್ಯಾ! (ಅ)
-ದೆಂದಿದೆಂದೆಂಬುದಿಲ್ಲದಿದ್ದರಹುದಯ್ಯಾ!
ನ್ನ ತಾನರಿತು ಅಂತಿದ್ದರಹುದಯ್ಯಾ! (ಅ)
-ಯ್ಯಾ, ನೋಡಿದ ನಿರಂಜನಾದಿತ್ಯನಲಯ್ಯಾ!!!

ಸ್ನಾನಕೊಂದು ಮರೆ! ಧ್ಯಾನಕೊಂದು ತೆರೆ!   1(358)

ಯನವನ್ಯೆಡೆಗೊಡದಂತೀ ತೆರೆ!
ಕೊಂಚಕಾಲ ಮಾತ್ರವಿರುವುದೀ ಮರೆ! (ಎ)
-ದುರಿದ್ದರೂ ತಿಳಿಯದಮನ ತೆರೆ!
ನಸಳಿದ ತೆರೆಯೇ ಮಹಾ ಮರೆ! (ಎ)
-ರೆದುಕೊಳ್ಳಲಿದೇ ಅತ್ಯುತ್ತಮ ತೆರೆ!
ಧ್ಯಾನೈಕ್ಯವಾಗಲಿರಬೇಕೊಂದು ಮರೆ!
ಡೆ, ನುಡಿಯಡಗಲಿದೊಂದು ತೆರೆ!
ಕೊಂಡಾಡಿಸಿಕೊಳಲಿಕಲ್ಲ ಈ ಮರೆ!
ದುರ್ಮನ ದಮನಕಾಗೀ ಬಟ್ಟೆ ತೆರೆ!
ತೆಗೆಯಬೇಕಿದ ಮನ ಚಿರ ಮರೆ! (ಎ)
-ರೆ! ನಿರಂಜನಾದಿತ್ಯನಲ್ಲಿ ನಿಂತಿರೆ

ಸ್ನೇಹಿತನವನೆಲ್ಲರಿಗಯ್ಯಾ! (ಅ)   4(2336)

-ಹಿತವನ್ನಾರಿಗೂ ಮಾಡನಯ್ಯಾ!
ಪ್ಪವನಲ್ಲೆಳ್ಳಷ್ಟಿಲ್ಲವಯ್ಯಾ! (ಧ)
-ನ, ಧಾನ್ಯವನಲ್ಲಪಾರವಯ್ಯಾ!
ರ ಗುರು ಸ್ವರೂಪದಯ್ಯಾ!
ನೆಲೆಯವಗಾಕಾಶದಲ್ಲಯ್ಯಾ! (ಕ)
-ಲನ್ನಾದರೂ ಕರಗಿಪನಯ್ಯಾ! (ವೈ)
-ರಿಗಳಿಗಾತ ನರಸಿಂಹಯ್ಯಾ! (ಮ)
-ಗನವನಿಗೆ ವೃಕೋದರಯ್ಯಾ! (ಆ)
-ಯ್ಯಾ, ಶ್ರೀ ನಿರಂಜನಾದಿತ್ಯಾತಯ್ಯಾ!!!

ಸ್ಪೂರ್ತಿ ಕೊಟ್ಟು ಬರೆಸಬೇಕಪ್ಪ! (ಕೀ)   5(2782)

-ರ್ತಿ, ಅಪಕೀರ್ತಿ ಶ್ರೀಪಾದಕ್ಕಪ್ಪ!
ಕೊಳೆ ತೊಳೆದುಳಿಯಬೇಕಪ್ಪ! (ಕ)
-ಟ್ಟುಪಾಡುಗಳ ಕಟ್ಟಿಟ್ಟೆನಪ್ಪ!
ರೆದಂತೆ ನಡೆಯಬೇಕಪ್ಪ!
ರೆಕ್ಕೆ ಪುಕ್ಕ ಕೀಳಬಾರದಪ್ಪ!
ಟೆ ಗುಣ ಬಡಿಸಬೇಕಪ್ಪ!
ಬೇಡದೇ ಪ್ರಸಾದ ಬರಲಪ್ಪ!
ಥೆಯಾದಿಮಧ್ಯಾಂತಕ್ಕೊಬ್ಬಪ್ಪ! (ಅ)
-ಪ್ಪ ನಿರಂಜನಾದಿತ್ಯ ನೀನಪ್ಪ!!!

ಸ್ಫೂರ್ತಿ ಆದರ್ಶಪಾಲನೆಗೆ ಮೂರ್ತಿ! (ಕೀ)   5(3291)

-ರ್ತಿ ಅದರನುಷ್ಠಾನಕ್ಕಾಸಕ್ತಿ!
ಚಾರ ವಿಚಾರದ್ರಂತಿದ್ದ್ರೆ ಮುಕ್ತಿ!
ಶೇಂದ್ರಿಯದಲ್ಲೂ ಕಾಣ್ಬೇಕು ಭಕ್ತಿ! (ಸ್ಪ)
-ರ್ಶವಾಗ್ಲೇಬಾರದು ಮಾಯೆಯ ಯುಕ್ತಿ!
ಪಾರ್ಥಿವ ಸುಖಕ್ಕಿರ ಬೇಕ್ವಿರಕ್ತಿ!
ಕ್ಷ್ಯದಲ್ಲಿಡಬೇಕ್ಹಿರಿಯರುಕ್ತಿ!
ನೇಗಳ್ದಾಳಿ, ಬಾಳಿತ್ತು ಆತ್ಮಶಕ್ತಿ!
ಗೆಡ್ಡೆ, ಗೆಣಸು ತಿಂದ್ರೂ ಇತ್ತು ತೃಪ್ತಿ!
ಮಾರ್ತಿತ್ರಯರನ್ನೂ ಗೆದ್ದಿತಾ ಶಕ್ತಿ! (ಸ್ಥೂ)
-ರ್ತಿ ನಿರಂಜನಾದಿತ್ಯಾನಂದ ಮೂರ್ತಿ!!!

ಸ್ಮರಿಸಿದವನ ಉದ್ಧಾರ! (ಉ)   6(4083)

-ರಿಸಿದಸುರನ ಸಂಹಾರ!
-ರಿಸಿದಸುರನ ಸಂಹಾರ!
ಸಿರಿಯರಸಗಿದಾಚಾರ!
ಶಾವತಾರದ್ದಿದೇ ಸಾರ!
ಸುಧೇಶಗಿದಲಂಕಾರ! (ಆ)
-ನತರಿಗೆಲ್ಲಾ ಪುರಸ್ಕಾರ!
ದ್ಧಟತನಕ್ಕ ಧಿಕ್ಕಾರ! (ಶ್ರ)
-ದ್ಧಾ, ಭಕ್ತಿಗೊಲಿವ ಶಂಕರ! (ಹ)
-ರ, ನಿರಂಜನಾದಿತ್ಯೇಶ್ವರ!!!

ಸ್ಮರಿಸುವಾ, ಬರಿಸುವಾನಂದಿಸುವಾ!   5(2869)

ರಿಪುಕುಲಾಂತಕನ ಸಂದರ್ಶಿಸುವಾ!
ಸುರಧೇನು ಸಮಾನಗೆ ನಮಿಸುವಾ!
ವಾಸವಾದಿವಂದ್ಯನನ್ನಾಶ್ರಯಿಸುವಾ!
ಲಹೀನರಿಗೆ ಬಲ ನೀಡೆನ್ನುವಾ!
ರಿಕ್ತಹಸ್ತರಾಗಿಹೆವು ನಾವೆನ್ನುವಾ!
ಸುಧಾರಿಸು ಪರಿಸ್ಥಿತಿಯನೆನ್ನುವಾ!
ವಾದ, ವಿವಾದ ನಮ್ಮಲ್ಲಿಲ್ಲವೆನ್ನುವಾ!
ನಂಬಿರುವೆವು ನಾವು ನಿನ್ನನ್ನೆನ್ನುವಾ!
ದಿನ, ರಾತ್ರಿಯೆಲ್ಲಾ ಭಜನೆ ಮಾಡುವಾ!
ಸುಮ ಮಾಲೆಯನ್ನವನಿಗರ್ವಿಸುವಾ!
ವಾಸುದೇವ ನಿರಂಜನಾದಿತ್ಯನವಾ!!!

ಸ್ಮಶಾನ ಗುಡಿ ನನ್ನದಯ್ಯಾ!   1(255)

ಶಾರೀರಿಕ ಬಂಧ ಸಾಕಯ್ಯಾ!
ನ್ನ ನೀನಿರ್ಪಲ್ಲಿ ಕಾಣಯ್ಯಾ!
ಗುರು ಭಕ್ತಿ ಶಿವ ತಾನಯ್ಯಾ! (ಅ)
-ಡಿಗಡಿಗೆನ್ನ ನೆನೆಯಯ್ಯಾ!
ಶ್ವರದ ಮೋಹ ಬಿಡಯ್ಯಾ! (ಅ)
-ನ್ನ ಪಾನಕಾಸೆ ಬೇಡವಯ್ಯಾ!
ತ್ತನಾದರ್ಶವೆನದಯ್ಯಾ! (ಅ)
-ಯ್ಯಾ! ತಿಳಿಯೆನ್ನ ಚಿಕ್ಕಣ್ಣಯ್ಯಾ!!!

ಸ್ಲೇಟು ಬೇಗ ಖಾಲಿ ಮಾಡಕ್ಕಾ! (ದಾ)   4(1734)

-ಟು ನೀನೆನ್ನೆಣಿಕೆಯನ್ನಕ್ಕಾ!
ಬೇಜಾರು ನಿನಗಾಯ್ತೇನಕ್ಕಾ?
ತಿಸಿತು ಕಾಲ ನೋಡಕ್ಕಾ! (ಸ)
-ಖಾತ್ಮ ನಾ ನಿನಗೆ ಕಾಣಕ್ಕಾ! (ಒ)
-ಲಿಸು ಶಿವನ ನೀನೀಗಕ್ಕಾ!
ಮಾಯಾವಿ ಕಳ್ಳ ಅವನಕ್ಕಾ! (ಬಿ)
-ಡಬಾರದವನ ನೀನಕ್ಕಾ! (ಅ)
-ಕ್ಕಾ ನಿರಂಜನಾದಿತ್ಯಾತ್ಮಕ್ಕಾ!!!

ಸ್ವ ಸಾಮರ್ಥ್ಯವಿಲ್ಲದವ ಜೀವ!   6(3741)

ಸಾಮರ್ಥತುಂಬಿರುವವ ದೇವ!
ನಗಂಡಿದ ಮಾಡು ಧ್ಯಾನವ! (ಅ)
-ರ್ಥನಾಥರಿಗೆ ಮಾಡ್ಬೇಕ್ದಾನವ!
ವಿಶ್ವನಾಥನೆಲ್ಲೆಲ್ಲೂ ಇರುವ! (ಬ)
-ಲ್ಲ ಜ್ಞಾನಿಗಳ್ಗೆ ಗೋಚರಿಸುವ!
ರಿದ್ರ, ಶ್ರೀಮಂತಾದಿ ಕೇಶವ!
ರ ಗುರು ರೂಪನಾಗಿರುವ!
ಜೀವನ್ಮುಕ್ತಿ ಸುಖವನ್ನೀಯುವ! (ಅ)
-ವ ನಿರಂಜನಾದಿತ್ಯನೆಂಬವ!!!

ಸ್ವಜನ ಪಕ್ಷತವಿಲ್ಲದಾಳುವವರಾರು?   6(4287)

ನಕನಳಿಯ ಸೀತಾರಾಮಚಂದ್ರ ದೇವರು!
ಮ್ಮವರು ನಿಮ್ಮವರೆಂಬವರೇ ಮಿಕ್ಕವರು!
ವನಸುತನಂಥವರೇ ಶ್ರೀರಾಮ ಭಕ್ತರು! (ಅ)
-ಕ್ಷಯಾದಿ ರಾಕ್ಷಸರ ಕೊಂದ ವಾನರೋತ್ತಮರು!
ಪಾವನರಾದರು ಶಬರಿ ಮೊದಲಾದವರು!
ಪಸ್ವೀ ವಿಶ್ವಾಮಿತ್ರಾದಿಗಳು ಧನ್ಯರಾದರು!
ವಿಕಲ್ಪ ನಾಶಕ್ಕೆ ಅಗ್ನಿಪರೀಕ್ಷೆ ಮಾಡಿದರು! (ಕ್ಷು)
-ಲ್ಲ ಅಗಸನ ಮಾತಿಗಾಗಿ ಸೀತೆಯಟ್ಟಿದರು!
ದಾಸಿ ಮಂಧರೆಯ ಮೇಲೆ ಸಿಟ್ಟುಮಾಡದಿದ್ದರು! (ಅ)
-ಳುತ್ತಲಿದ್ದ ಪೂಜ್ಯ ತಾಯಿಯನ್ನು ಸಂತೈಸಿದರು!
ಸಿಷ್ಠರಿಂದಾತ್ಮಜ್ಞಾನೋಪದೇಶ ಪಡೆದರು!
ನವಾಸ ಹದಿನಾಲ್ಕುವರ್ಷನುಭವಿಸಿದರು!
ರಾಮರಾಜ್ಯವೆಂಬ ಕೀರ್ತಿ ಆಮೇಲುಳಿಸಿದರು! (ಪಾ)
-ರು ಆಮೇಲೆ ನಿರಂಜನಾದಿತ್ಯನಿಂದಾಗಿ ಹೋದ್ರು!!!

ಸ್ವಜನರಾರೂ ನಿನಗಿಲ್ಲವೇನಯ್ಯಾ! (ಸ್ವ)   5(2738)

-ಜನರೆನಗಾತ್ಮಧ್ಯಾನ ನಿಷ್ಟರಯ್ಯಾ!
ಶ್ವರದ ಸೋಂಕವರಿಗಿಲ್ಲವಯ್ಯಾ!
ರಾತ್ರಿ, ದಿನವೆಲ್ಲಾತ್ಮ ಚಿಂತನೆಯಯ್ಯಾ!
ರೂಪ, ನಾಮದಿಂದವರು ಹೊರಗಯ್ಯಾ!
ನಿಮಿತ್ತ ಮಾತ್ರ ದೇಹಧಾರಿಗಳಯ್ಯಾ!
ಡೆ, ನುಡಿಯವರದಾದರ್ಶವಯ್ಯಾ!
ಗಿಡ, ಮರದಲ್ಲೂ ತಾವೆಂದಿಹರಯ್ಯಾ! (ಬ)
-ಲ್ಲವರೆಂಬಹಂಕಾರವರಿಗಿಲ್ಲಯ್ಯಾ!
ವೇದಾಂತಸಾರ ಸ್ವರೂಪರವರಯ್ಯಾ!
ಗುನಗುತ ಸದಾ ಇರುವರಯ್ಯಾ! (ಆ)
-ಯ್ಯಾ, ನಿರಂಜನಾದಿತ್ಯಾನಂದವರಯ್ಯಾ!!!

ಸ್ವತಂತ್ರವಿದೆ ಎಂದು ಹಾರಾಡ್ಬೇಡ!   5(3128)

ತಂದೆ ಯಾರೆಂಬುದನ್ನು ಮರೆಯ್ಬೇಡ!
ತ್ರಯಂಬಕನ ಸ್ಮರಣೆ ಬಿಡ್ಬೇಡ!
ವಿಷಯಸುಖಕ್ಕೆ ಮರುಳಾಗ್ಬೇಡ!
ದೆಸೆಗೆಡಿಪಾ ವಾಸನೆ ಮೂಸ್ಬೇಡ!
ಎಂಟು ಮದಗಳ ಭಂಟನಾಗ್ಬೇಡ!
ದುಶ್ಯಾಸನಗೆ ಸ್ವಾಗತ ನೀಡ್ಬೇಡ!
ಹಾವೆಂದು ಹಗ್ಗಕ್ಕೆ ಭಯಪಡ್ಬೇಡ!
ರಾಯಭಾರಕ್ಕಪಕೀರ್ತಿ ತರ್ಬೇಡ! (ಆ)
-ಡ್ಬೇಡನ್ಯಧರ್ಮಾವಲಂಬಿಯಾಗ್ಬೇಡ! (ತೊ)
-ಡ ನಿರಂಜನಾದಿತ್ಯಾಂಬರ ಬಿಡ!!!

ಸ್ವತಂತ್ರವಿಲ್ಲದಿಹುದಾ ನಾಲಿಗೆ!   4(2190)

ತಂತ್ರಗಾರ ನೀನೆಂಬುದಾ ನಾಲಿಗೆ! (ಮಿ)
-ತ್ರದ್ರೋಹ ಮಾಡ್ಬೇಡೆಂಬುದಾ ನಾಲಿಗೆ!
ವಿವಿಧ ರುಚ್ಯೇಕೆಂಬುದಾ ನಾಲಿಗೆ! (ಪು)
-ಲ್ಲನಾಭನ ಹಾಡೆಂಬುದಾ ನಾಲಿಗೆ! (ಆ)
-ದಿತ್ಯನೆನ್ನಯ್ಯನೆಂಬುದಾ ನಾಲಿಗೆ!
ಹುಸಿಯಾಡೆ ನಾನೆಂಬುದಾ ನಾಲಿಗೆ!
ದಾಸದಾಸ ನಾನೆಂಬುದಾ ನಾಲಿಗೆ!
ನಾನೇಕೆ ನೀಚನೆಂಬುದಾ ನಾಲಿಗೆ! (ಪಾ)
-ಲಿಸು ಪತಿತನೆಂಬುದಾ ನಾಲಿಗೆ! (ಹ)
-ಗೆ ನಿರಂಜನಾದಿತ್ಯನಾರಿಗೆ???

ಸ್ವಧರ್ಮ ನಿರ್ಭಯಾನಂದ!   1(390)

ರ್ಮರಾಜಗಿದಾನಂದ! (ಕ)
-ರ್ಮನಿಷ್ಠೆ ವಿಮಲಾನಂದ!
ನಿಶಿ, ದಿನ ಜಪಾನಂದ! (ಅ)
-ರ್ಭಕಗೆ ಕರುಣಾನಂದ!
ಯಾತ್ರೆ ಭಕ್ತರಿಗಾನಂದ!
ನಂಬಿಗೆಗಿಂಬತ್ಯಾನಂದ!
ಯೆ, ನಿರಂಜನಾನಂದ!!!

ಸ್ವಪ್ರತಿಷ್ಟೆ ಸಾಕು ಮಾಡಯ್ಯಾ!   4(1648)

ಪ್ರವಾಸದಭ್ಯಾಸ ಬೇಡಯ್ಯಾ!
ತಿಳಿ ನಿನ್ನ ನೀನಾರೆಂದಯ್ಯಾ! (ನಿ)
-ಷ್ಠೆಯಿಂದಿದನು ಸಾಧಿಸಯ್ಯಾ!
ಸಾವಿಗಂಜಿರಬಾರದಯ್ಯಾ!
ಕುತ್ಸಿತ ಸ್ವಭಾವ ಬಿಡಯ್ಯಾ!
ಮಾತತಿಕಡಿಮೆ ಮಾಡಯ್ಯಾ! (ಮೃ)
-ಡನೊಡೆಯನೆಂದು ನಂಬಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾತಯ್ಯಾ!!!

ಸ್ವರೂಪ ದರ್ಶನಾನುಗ್ರಹ ಪ್ರಸಾದ!   1(50)

ರೂಪ ದರ್ಶನಾಗದಾಗುತಿದೆ ಖೇದ!
ರಿಪರಿಯ ಮಾತಿಂದಾಯ್ತು ಪ್ರಮಾದ!
ಯೆಯೆಲ್ಲರಿಗಿದ್ದೇ ಇದೆ ಅಗಾಧ! (ದ)
-ರ್ಶನವಾಗದಿರುದೊಂದು ವಿನೋದ!
ನಾರಾಯಣನೆಲ್ಲರಲಿರುವ ಸದಾ!
ನುಡಿಯಿದು ಪೂರ್ಣ ಸತ್ಯ ನಿರ್ವಿವಾದ!
ಗ್ರಹಿಸೀ ಸ್ಥಿತಿಗೇಕೆ ನರನೀಡಾದ?
ತ್ತಿಂದ್ರಿಯದಾಟಕವನೊಳಗಾದ!
ಪ್ರತಿ ನಿಮಿಷವೂ ಆಶಾಬದ್ದನಾದ!
ಸಾಗುವುದು ಗುರುಲೀಲೆಯವನೆಂದ!
ರ್ಶನವಿದುವೇ ನಿರಂಜನಾನಂದ!!!

ಸ್ವರೂಪ ಸಿದ್ಧಿಗೆ ಭಾವಾತೀತ ಧ್ಯಾನ! [ಸ್ವ]   3(1270)

-ರೂಪ ಸ್ಥಿತನಿಗಿಲ್ಲ ಮಾನಾವಮಾನ!
ರ ಪೀಡೆ ತಪ್ಪಿ ಆಗ ಸಮಾಧಾನ!
ಸಿರಿ ಮದಾದ್ಯಷ್ಟಾ ಮದದಂತರ್ಧಾನ! (ವೃ)
-ದ್ಧಿ, ಕ್ಷಯ, ಭಯವೆಲ್ಲಾಗ ನಿರ್ಮೂಲನ! (ಬ)
-ಗೆ ಬಗೆಯ ಭೋಗಕ್ಕಿಲ್ಲಾಗಭಿಮಾನ!
ಭಾರ್ಯಾ, ಭರ್ತೃಗಳೆಲ್ಲಾ ದೇವ ಸಮಾನ!
ವಾದ, ಭೇದಾದಿಗಳಾಗ ಪಲಾಯನ! (ಜಾ)
-ತೀಯ ಕಲಹಕ್ಕಾಗ ಉಪಶಮನ!
ನ್ನದೀ ವಿಶ್ವವೆಂಬಾನಂದ ಜೀವನ!
ಧ್ಯಾನವಿದರಿಂದ ಬಂಧ ವಿಮೋಚನ! [ಪಾ]
-ನ, ನಿರಂಜನಾದಿತ್ಯಾನಂದ ಪಾವನ!!!

ಸ್ವರೂಪ ಸ್ಥಿತನಾಗೀಗಯ್ಯಾ! (ಕು)   5(2569)

-ರೂಪಜ್ಞಾನದಿಂದುಂಟಾಯ್ತಯ್ಯಾ!
ರಿವರ್ತನೆಯಾಗ್ಬೇಕಯ್ಯಾ!
ಸ್ಥಿರವಾಗುಳಿವುದಿದಯ್ಯಾ!
“ತತ್ವಮಸಿ” ಸುಳ್ಳಲ್ಲವಯ್ಯಾ!
ನಾಮಜಪ ಬಿಡಬೇಡಯ್ಯಾ!
ಗೀತಾಭ್ಯಾಸ ನಿತ್ಯ ಮಾಡಯ್ಯಾ! (ಯೋ)
-ಗದಿಂದ ನಿತ್ಯ ಸುಖವಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾಗಯ್ಯಾ!!!

ಸ್ವರೂಪಸ್ಥಿತಿಯಲ್ಲಿ ಬರೆಯುವುದೇನು?   5(2995)

ರೂಪ, ನಾಮಾತೀತನಾಗಿರ್ಪಾಗ ಅವನು!
ರಮ ಪದವಿಯಲ್ಲಿರುವಾಗವನು!
ಸ್ಥಿತಿಗತಿಗತಿದೂರವಿರ್ಪಾಗವನು!
ತಿಳಿದಿದ ಸದಾ ಹಾಗಿರಬೇಕು ನೀನು!
ದುನಾಥನ ಕೃಪಾಪಾತ್ರನಾಗು ನೀನು! (ಅ)
-ಲ್ಲಿ, ಇಲ್ಲಿ ವೃಥಾ ಓಡಾಡುವುದೇಕೆ ನೀನು?
ಳಿಯಲ್ಲೇ ಸತತವಿರುವಾಗವನು! (ಮ)
-ರೆತಿದ ಬೆರೆಯ್ಬೇಡಿಂದ್ರಿಯದಲ್ಲಿ ನೀನು!
ಯುಗಯುಗದಲ್ಲೂ ಗೋಚರಿಪನವನು! (ಹಾ)
-ವು, ಹಗ್ಗದ ಭ್ರಾಂತಿ ಕಳೆಯುವನವನು!
ದೇವರ ಸ್ವರೂಪ ತೋರಿಸುವನವನು! (ಅ)
-ನುಮಾನವೇಕೆ? ನಿರಂಜನಾದಿತ್ಯ ತಾನು!!!

ಸ್ವರೂಪಸ್ಥಿತಿಯಿಂದ ಏನಾಗುತ್ತದೆ? (ಕು)   5(2958)

-ರೂಪದ ಹೆಸರೇ ಇಲ್ಲದಾಗುತ್ತದೆ!
ರಮಾರ್ಥ ತತ್ವಾರ್ಥ ಬೆಳಗುತ್ತದೆ!
ಸ್ಥಿರಶಾಂತಿ ಸೂರ್ಯೋದಯವಾಗುತ್ತದೆ!
ತಿಕ್ಕಾಟಗಳ್ಮಣ್ಣು ಮುಕ್ಕಿಹೋಗುತ್ತದೆ! (ಬಾ)
-ಯಿಂದಾಡಿದ್ದು ಕಣ್ಣಿಗೂ ಕಾಣಿಸುತ್ತದೆ!
ತ್ತ ಗುರುದರ್ಶನವಾಗಾಗುತ್ತದೆ!
ಳಿಗೆ ಜಗತ್ತಿಗೆ ಉಂಟಾಗುತ್ತದೆ!
ನಾಶ ಅರಿ ಸಮುದಾಯಕ್ಕಾಗುತ್ತದೆ!
ಗುರು ಲೀಲಾನಾಟಕ ಮುಗಿಯುತ್ತದೆ! (ಕ)
-ತ್ತಲೆ ಸತ್ತು ಸುತ್ತೂ ಬೆಳಕಾಗುತ್ತದೆ! (ಬೆ)
-ದೆ ನಿರಂಜನಾದಿತ್ಯನದ್ದಿರುತ್ತದೆ!!!

ಸ್ವಸ್ಥಚಿತ್ತನಾಗ್ಯಸ್ವಸ್ಥ ದೂರನಾಗು!   5(2649)

ಸ್ಥಳದ ಮಹಿಮೆ ತೋರುವವನಾಗು!
ಚಿರಕಾಲ ಹೆಸ್ರುಳಿಸುವವನಾಗು! (ಅ)
-ತ್ತ, ಇತ್ತ, ಸುತ್ತಾಡದಿರುವವನಾಗು!
ನಾನಾ ದೇವರ ಪೂಜಿಸದದನಾಗು! (ಭಾ)
-ಗ್ಯನಿಧಿ ನಿನ್ನಾತ್ಮನೆಂದರಿವವ್ನಾಗು!
ಸ್ವಪ್ನವೀ ಸಂಸಾರ! ನಂಬದವನಾಗು!
ಸ್ಥಳ ನಿನ್ನದು ಗುರುಸನ್ನಿಧಿ! ಹೋಗು!
ದೂರವಾದ್ರೂ ಶಾಂತಿ ಸ್ಥಾನವದು! ಸಾಗು! (ಮಾ)
-ರನಾಟಕ್ಕೆ ಮರುಳಾಗದವನಾಗು!
ನಾಮ ಸದಾ ಜಪಿಸುವವ ನೀನಾಗು!
ಗುರು ನಿರಂಜನಾದಿತ್ಯನೇ ನೀನಾಗು!!!

ಸ್ವಸ್ಥಿತಿಯೇ ದತ್ತ ಸ್ವರೂಪ! [ದುಃ]   4(2313)

-ಸ್ಥಿಇಯೂ ಆತನದ್ದೇ ರೂಪ!
ತಿಇ ನೀನೆಲ್ಲಾತನ ರೂಪ! (ಕಾ)
-ಯೇಯಿಂದೆಲ್ಲಾ ಪುಣ್ಯ ಪಾಪ! (ಅ)
-ದಇಂದಹುದು ಕೋಪ, ತಾಪ! (ಸ)
-ತ್ತಮನಸ್ಸಿಗೆಲ್ಲಾ ನಿರ್ಲೇಪ!
ಸ್ವತಂತ್ರವಾ ಜ್ಞಾನ ಪ್ರದೀಪ! (ಊ)
-ರೂರು ಸ್ವಾಧೀನ ಮಿಥ್ಯಾಲಾಪ! (ದೀ)
-ಪ ನಿರಂಜನಾದಿತ್ಯ ಭೂಪ!!!

ಸ್ವಾರ್ಥ, ಪರಾರ್ಥವಿಲ್ಲದ್ದಾದರ್ಶ ಬಾಳು!(ಸಾ)   6(4275)

-ರ್ಥಕವೆಂದೆನಿಸುವುದು ಇಂತಹ ಬಾಳು!
ರಮಾರ್ಥವಿದರಿಯದೇ ಗೋಳ್ಬಾಳು!
ರಾಗ, ದ್ವೇಷವಿಲ್ಲದಿರಬೇಕು ಬಾಳು! (ವ್ಯ)
-ರ್ಥವಾಗಬಾರದು ಮಾತವನ ಬಾಳು!
ವಿಕಲ್ಪ, ಸಂಕಲ್ಪಾತೀತಾದರ್ಶ ಬಾಳು! (ಎ)
-ಲ್ಲರಲ್ಲಿರ್ಪಾತ್ಮ ತಾನೆಂಬರಿವೇ ಬಾಳು! (ಒ)
-ದ್ದಾಟ, ಗುದ್ದಾಟವಿದರಿಯದ ಬಾಳು!
ರಿದ್ರಾವಸ್ಥೆಯಿಂದಲ್ಲ ಕೀಳು ಬಾಳು! (ದ)
-ರ್ಶನ ಸ್ವರೂಪದ್ದಾಗ್ದಿದ್ದ್ರೆ ಹಾಳು ಬಾಳು!
ಬಾನ್ಮಣಿಯದ್ದನುಕರಣೀಯ ಬಾಳು! (ಬಾ)
-ಳು ನಿರಂಜನಾದಿತ್ಯ ನೀನಾಗಿ ಬಾಳು!!!

ಸ್ವಾರ್ಥದಾಸೆ ನನಗಿಲ್ಲಪ್ಪಾ! (ವ್ಯ)   2(955)

-ರ್ಥವಾಗದಿರಲಿ ಜನ್ಮಪ್ಪಾ!
ದಾರಿ ಸಾಗಲಿಷ್ಟದತ್ತಪ್ಪಾ!
ಸೆರೆಗೊಡ್ಡಿ ಬೇಡುವೆನಪ್ಪಾ!
ಶ್ವರ ಮೋಹ ಬಿಡಿಸಪ್ಪಾ!
ಡಿಸುವ ದೇವ ನೀನಪ್ಪಾ!
ಗಿರಿಧರ ಗೋಪಾಲೆನ್ನಪ್ಪಾ! (ಎ)
-ಲ್ಲವನು ನೀ ಬಲ್ಲೆ ನನ್ನಪ್ಪಾ! (ಅ)
-ಪ್ಪಾ! ಶ್ರೀ ನಿರಂಜನಾದಿತ್ಯಪ್ಪಾ!!!

ಸ್ವಾರ್ಥರಹಿತನಾಗೆಂಬುದು ಸುಲಭ! (ಸ್ವಾ)   6(3661)

-ರ್ಥವಿಲ್ಲದವ ಸಿಕ್ಕುವುದು ದುರ್ಲಭ!
ಕ್ತ, ಮಾಂಸದಲ್ಲಂಟಿರುವುದೀ ಜಂಭ!
ಹಿತೈಷಿಯೆಂಬುವನಿಗೂ ಇದೇ ಜಂಭ!
ಪಸ್ವಿಗಳಲ್ಲೂ ಇತ್ತು ಈ ಪ್ರಲೋಭ!
ನಾಶವಾದಾಗ ಮನಸ್ಸು ಇಲ್ಲ ಜಂಭ! (ಹೀ)
-ಗೆಂದಮೇಲಮನಸ್ಕವೇ ನಿಸ್ವಾರ್ಥ ಬಿಂಬ!
ಬುದ್ಧಿ, ಅಹಂಕಾರ, ಚಿತ್ತವೆಲ್ಲಾ ಬಿಂಬ!
ದುಃಖ, ಸುಖ, ದ್ವಂದಾತೀತಾ ಪೂರ್ಣ ಬಿಂಬ!
ಸುದರ್ಶನಧಾರಿಗೂ ಮೀರಿದ್ದಾ ಬಿಂಬ!
ಕ್ಷ್ಯವಿದೇ ನಿರ್ವಿಕಾರ ಗುರು ಸಾಂಬ!
ಗವಾನ್‍ ನಿರಂಜನಾದಿತ್ಯಾ ಬಿಂಬ!!!

ಸ್ವಾರ್ಥವೇನಿಹುದು ಗಣಪತಿಗೆ? (ಅ)   5(2786)

-ರ್ಥ, ಕಾಮಗಳು ಬೇಕಿಲ್ಲವನಿಗೆ!
ವೇಷ, ಭೂಷಣ ನಮ್ಮಿಂದವನಿಗೆ!
ನಿಸ್ವಾರ್ಥ ಸೇವೆಯೇ ಸಾಕವನಿಗೆ!
ಹುಸಿ ಮಾಯೆ ಲಕ್ಷ್ಯವಿಲ್ಲವನಿಗೆ!
ದುರಿತ ದೂರದ ಕಾರ್ಯ ಅವನಿಗೆ!
ಗನ ಸದೃಶ ಭಾವವನಿಗೆ! (ತೃ)
-ಣಸಮಾನ ಶತ್ರುಗಳವನಿಗೆ!
ತಿತಪಾವನ ನಾಮವನಿಗೆ!
ತಿಳಿದಿದ ಶರಣಾಗವನಿಗೆ!
ಗೆಳೆಯ ನಿರಂಜನಾದಿತ್ಯನಿಗೆ!!!

ಸ್ವಾರ್ಥಿ ಮಾನವ ವಿಕಲ್ಪೋನ್ಮತ್ತ! (ಪ್ರಾ)   6(3549)

-ರ್ಥಿಸಿ ಜಯಘಳಿಸಲಶಕ್ತ!
ಮಾಟ, ಮಾರಣಗಳಲ್ಲಾಸಕ್ತ!
ಯನಾದಿಂದ್ರ್ಯಾನಂದಾನುರಕ್ತ!
ರ ಗುರು ಸೇವಾಸಕ್ತ ಭಕ್ತ!
ವಿವೇಕ, ವಿಚಾರದಿಂದ ತೃಪ್ತ!
ಡು ಲೋಭಿ ಆಗಲಾರ ಮುಕ್ತ! (ಪಾ)
-ಲ್ಪೋಳ್ಯುಂಡು ಕೀಳುಪೋಲಿಯಾಗ್ವೋನ್ಮತ್ತ! (ತ)
-ನ್ಮಯತಾಸಕ್ತ ಸದಾ ವಿರಕ್ತ! (ಚಿ)
-ತ್ತ ನಿರಂಜನಾದಿತ್ಯಗೀಯುತ್ತ!!!

ಸ್ವಾವಲಂಬಿ ಸನ್ಯಾಸಿಯಯ್ಯಾ!   5(3026)

ಜ್ರಮುಷ್ಟಿ ಅವನದಯ್ಯಾ!
ಲಂಪಟನವನಲ್ಲವಯ್ಯಾ!
ಬಿಟ್ಟಿಹನವ ಜಂಭವಯ್ಯಾ!
ರ್ವಾತ್ಮಭಾವವನದಯ್ಯಾ!
ನ್ಯಾಯಾನ್ಯಾಯಾತೀತನಾತಯ್ಯಾ!
ಸಿರೆಯಾಸೆ ಅವನಿಗಿಲ್ಲಯ್ಯಾ!
ಮ ನಿಯಮಿಯವನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾತಯ್ಯಾ!!!

ಸ್ವಾವಲಂಬಿಗೆಲ್ಲೆಲ್ಲೂ ಸ್ಥಾನ! (ಅ)   3(1018)

-ವನಿಗನುಚಿತಾವ ಸ್ಥಾನ?
ಲಂಚ ಬಿಟ್ಟರೆಲ್ಲಾ ಸ್ವಸ್ಥಾನ!
ಬಿಸಿಯೂಟವೀವುದಾ ಸ್ಥಾನ! (ಬ)
-ಗೆಬಗೆಯಾಸೆಗಾವ ಸ್ಥಾನ? (ಹು)
-ಲ್ಲೆಗೆಲ್ಲಿರುವುದೊಂದೇ ಸ್ಥಾನ? (ಹು)
-ಲ್ಲೂ, ನೀರೂ ಇದ್ದರದೇ ಸ್ಥಾನ!
ಸ್ಥಾನದೇ ಗೋಪಾಲನ ಸ್ಥಾನ! (ಜ್ಞಾ)
-ನ ನಿರಂಜನಾದಿತ್ಯ ಸ್ಥಾನ!!!

ಸ್ವಿಚ್ಚು ಕೆಟ್ಟ ಮೇಲೆಲ್ಲಾ ಕತ್ತಲೆ! (ಅ)   4(1645)

-ಚ್ಚುಕಟ್ಟಿನ ಮನೆಯೂ ಕತ್ತಲೆ!
ಕೆಲಸ ಕಾರ್ಯಕ್ಕಡ್ಡೀ ಕತ್ತಲೆ! (ಪ)
-ಟ್ಟಣಗಳಲಾಗಾಗಾ ಕತ್ತಲೆ!
ಮೆಲ್ವಿಚಾರಿಲ್ಲದ್ರಿಂದಾ ಕತ್ತಲೆ (ತ)
-ಲೆಹರಟೆಯಿಂದೆಲ್ಲಾ ಕತ್ತಲೆ! (ಉ)
-ಲ್ಲಾಸೋತ್ಸಾಹಕ್ಕಾತಂಕಾ ಕತ್ತಲೆ!
ರುಣೆಯಿಂದ ಅಂತ್ಯಾ ಕತ್ತಲೆ! (ಚಿ)
-ತ್ತ ಶುದ್ಧಿಯಾದರಿಲ್ಲಾ ಕತ್ತಲೆ! (ಲೀ)
-ಲೆ ನಿರಂಜನಾದಿತ್ಯಾತ್ಮ ಜ್ವಾಲೆ!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ