ಶಂಕರ ಕೃಪಾ ಚಿರಕಾಲವಿರಲಿ!   5(2795)

ರ್ತವ್ಯದತ್ತ ಗಮನ ಹರಿಸಲಿ!
ತಿಪತಿಯ ಸಂಬಂಧ ತಪ್ಪಿಸಲಿ!
ಕೃತಿಯಿಲ್ಲದ್ವೈತತತ್ವ ಬೆಳಗಲಿ!
ಪಾಷಂಡ ಮತಗಳಳಿದು ಹೋಗಲಿ!
ಚಿತ್ತಶುದ್ಧಿ ನಿತ್ಯಾನಂದಪ್ರದವಾಗಲಿ!
ಘುರಾಮರಾಜ್ಯಾನುಭವವಾಗಲಿ!
ಕಾಮಕೋಟ ಪೀಠದಾಸೆ ಬೇಡಾಗಲಿ!
ವಿರಕ್ತಭಾವಕ್ಕೆ ವಿಜಯವಾಗಲಿ!
ಜತಾದ್ರಿ ನಮ್ಮ ವಾಸಸ್ಥಾನವಾಗಲಿ! (ಕ)
-ಲಿಯ ನಿರಂಜನಾದಿತ್ಯನೋಡಿಸಲಿ!!!

ಶಂಕರ ಕೃಪೆಯ ಪಡೆಯಿರೆಲ್ಲಾ!   5(2796)

ಲಿಮಲ ಹರವಿದರಿಂದೆಲ್ಲಾ!
ಮೇಶ, ಉಮೇಶ, ಭೇದದಕಿಲ್ಲಾ!
ಕೃಪಣತನದ ಸೋಂಕೊಂದಿಷ್ಟಿಲ್ಲಾ!
ಪೆರರ್ತನ್ನವರೆಂಬ ಭೇದವಿಲ್ಲಾ!
ಮನ ಭಯವಂತೂ ಇಲ್ಲವೇ ಇಲ್ಲಾ!
ತಿತರೂ ಪಾವನರಪ್ಪರೆಲ್ಲಾ! (ಹೊ)
-ಡೆವ, ಬಡಿವ ಉದ್ಯೋಗದಕಿಲ್ಲಾ! (ಬಾ)
-ಯಿ ಬೊಗಳೆಯನ್ನಿದಿಚ್ಚಿಪುದಿಲ್ಲಾ! (ಮೆ)
-ರೆವ ಗಣಪತಿದರಿಂದೆಲ್ಲೆಲ್ಲಾ! (ಎ)
-ಲ್ಲಾ ನಿರಂಜನಾದಿತ್ಯನೊಬ್ಬ ಬಲ್ಲಾ!!!

ಶಂಕರ ನಾರಾಯಣಾತ್ಮಾನಂದ ಕಂದ!   6(3852)

ರ್ತವ್ಯ ನಿಷ್ಠನಾಗೆಂದರ್ಜುನಗಂದ!
ಣರಂಗದಲ್ಲಿ ಹೇಡಿಯಾಗ್ಬೇಡೆಂದ!
ನಾನಿರಲು ನಿನಗೇಕೆ ಭಯವೆಂದ!
ರಾತ್ರಿ, ದಿನ ನಿನ್ನೊಡನಿರುವೆನೆಂದ!
ಶಸ್ಸು ನನ್ನಿಂದ ನಿನಗಾಗ್ವುದೆಂದ! (ಪ್ರಾ)
-ಣಾರ್ಪಣೆ ಮಾಡುವರು ವೈರಿಗಳೆಂದ! (ಆ)
-ತ್ಮಾನುಭವದಿಂದೆಲ್ಲವನ್ನೂ ಮಾಡೆಂದ!
ನಂಬಿಗೆ ನನ್ನಲ್ಲಚಲ ಇರಲೆಂದ!
ರ್ಶನ ಮಾಡೆನ್ನ ವಿಶ್ವರೂಪವೆಂದ!
ಕಂಗಾಲಾಗದಿರು ನೋಡಿ ಅದನ್ನೆಂದ!
ತ್ತ ನಿರಂಜನಾದಿತ್ಯಾನಂದ ಕಂದ!!!

ಶಂಕರ ಭಗವತ್ಪಾದಾಚಾರ್ಯ!   2(656)

ಲಿಸಿದ ಗುರು ಭಕ್ತ್ಯಾಚಾರ್ಯ!
ಮಿಸಿದನಾತ್ಮನಲಾಚಾರ್ಯ!
‘ಭಜ ಗೋವಿಂದಂ’! ಎಂದನಾಚಾರ್ಯ!
ರ್ವಿಗಳ ಹದಗೈದಾಚಾರ್ಯ!
ರ ಭಾಷ್ಯ, ರಚಿಸಿದಾಚಾರ್ಯ! (ಉ)
-ತ್ಪಾತಗಳಡಗಿಸಿದಾಚಾರ್ಯ! (ಸ)
-ದಾಚಾರ ನಿಷ್ಠ ಶಂಕರಾಚಾರ್ಯ!
ಚಾಮುಂಡಾಂಬೆಯೋಪಾಸಕಾಚಾರ್ಯ! (ಆ)
-ರ್ಯ! ನಿರಂಜನಾದಿತ್ಯ ಆಚಾರ್ಯ!!!

ಶಂಕರ ಶಂಕರ ಶಿವ ಶಿವಶಂಭೋ! (ಶಿವ)   2(453)

ಶಂಕರ ಶಂಕರ ಶಿವ ಶಿವ ಶಂಭೋ!
ಹರಿ, ಹರ, ಬ್ರಹ್ಮಾ ಶಿವಶಂಭೋ!
ರಿಪುಕುಲ ಕಾಲಾ ಶಿವಶಂಭೋ! (ಅ)
-ಹರ್ನಿಶಿಭಜಿಸೋ ಶಿವಶಂಭೋ!
ರತಿಪತಿನಾಶಾ ಶಿವಶಂಭೋ!
ಬ್ರಹ್ಮಾನಂದಸಿದ್ಧಾ ಶಿವಶಂಭೋ! (ಬ್ರ)
-ಹ್ಮಾಇಂದ್ರಾದಿ ವಂದ್ಯ ಶಿವಶಂಭೋ!
ಶಿವಾನಂದ ನಾಮಾ ಶಿವಶಂಭೋ!
ವರಗುರುರಾಜಾ ಶವಶಂಭೋ!
ಶಂಕರ, ಶಂಕರ ಶಿವಶಂಭೋ! (ಶಂ)
-ಭೋ! “ಶ್ರೀ ನಿರಂಜನ” ಶಿವಶಂಭೋ!!!

ಶಂಕರನ ಪರಿವಾರ! [ಅ]   2(915)

-ಕಳಂಕ ಭಕ್ತಿ ಸಂಸಾರ!
ಘುಪತಿ ಕೃಪಾಪಾರ! (ತ)
-ನಯರು ಲೋಕಕ್ಕಾಧಾರ!
ರಾಶಕ್ತಿಚ್ಛಾನುಸಾರ!
ರಿಪುಕುಲದ ಸಂಹಾರ! (ಭ)
-ವಾಬ್ಧಿಭಯ ಪರಿಹಾರ! (ಹ)
-ರ ನಿರಂಜನಾದಿತ್ಯಾರ!!!

ಶಂಕರನಿಗೆ ಶಂಖ ಭಿಕ್ಷಾ ಪಾತ್ರೆ!   4(1890)

ರದಲ್ಲಿ ಧರಿಸಿಹಾ ಪಾತ್ರೆ! (ವ)
-ರೆ ಗುರುಭಕ್ತರ್ಗಾಶ್ರಯಾ ಪಾತ್ರೆ! (ಗಂ)
-ಗೆ, ಪಾರ್ವತಿಯರುಣಿಪಾ ಪಾತ್ರೆ!
“ಶಂಭೋ ಮಹಾದೇವ” ಎಂಬಾ ಪಾತ್ರೆ! (ಸು)
-ಖ, ಶಾಂತಿಪ್ರದವಾಗಿರ್ಪಾ ಪಾತ್ರೆ!
ಭಿಕ್ಷೆ ಸಮಸ್ತ ಲೋಕಕ್ಕಾ ಪಾತ್ರೆ!
ಪಾವನ ಪತಿತರಿಗಾ ಪಾತ್ರೆ! (ಪಾ)
-ತ್ರೆ ನಿರಂಜನಾದಿತ್ಯನಾ ಪಾತ್ರೆ!!!

ಶಂಕರಾ ಸುಖಂಕರಾ ಗುರುವರಾ!   4(1654)

ರಿ ಚರ್ಮಾಂಬರಧರಾ ಈಶ್ವರಾ!
ರಾಜೀವಸಖೇಶ್ವರಾ ಜೀವೇಶ್ವರಾ!
ಸುಮನೋಹರ ಹರಾ ಗಂಗಾಧರಾ!
ಖಂಡ ರಹಿತಾಕಾರಾ ಚಂಡೀಶ್ವರಾ!
ಲಿಮಲ ಹರಾ ಕಾಳಿಕಾವರಾ!
ರಾಜರಾಜೇಶ್ವರೀರಾ ನಿರ್ಜರಾ!
ಗುರುಗುಹಾತ್ಮೇಶ್ವರಾ ದಿಗಂಬರಾ!
ರುಜು ಮಾರ್ಗೇಶ್ವರಾ ನಂಜುಂಡೇಶ್ವರಾ!
ರ ಪರಮೇಶ್ವರಾ ಮಹೇಶ್ವರಾ!
ರಾಮಾತ್ಮಾ ನಿರಂಜನಾದಿತ್ಯೇಶ್ವರಾ!!!

ಶಂಭೋ ಶಂಕರ ಭಂ ಭಂ ಹರ ಹರ!   1(245)

ಭೋಳಾ ಶಂಕರ ಗಜ ಚರ್ಮಾಂಬರ!
ಶಂಕರೀ ವರ ವಿಜಯ ಶಂಕರ!
ಪಾಲಧರ ಕೈಲಾಸೀ ಈಶ್ವರ!
ಕ್ಕಸ ಸಂಹರ ರಾಗ ಶಂಕರ!
ಭಂಗನಂಗ ಮಾರ ಹರ ಠಂಕಾರ!
ಭಂ ಸ್ವರ ಭೀಕರ ಫಾಲ ಅಂಗಾರ!
ರ ಹರ ಶಂಕರ ಶಾಂತಾಕಾರ!
ಘುಪತಿ ಕಿಂಕರ ಯೋಗೀಶ್ವರ!
ರ ಗಂಗಾಧರ ಶ್ರೀ ಗುರುವರ!
ವಿ ನಿರಂಜನರಿ ಭಯಂಕರ!!!

ಶಕ್ತಿ ಮೀರಿ ವರ್ತಿಸಬೇಡ! (ಭ)   6(4271)

-ಕ್ತಿಯೆಂದು ಅನ್ಯಾಯ ಮಾಡ್ಬೇಡ!
ಮೀನ, ಮೇಷವೆಣ್ಸಿ ಕೆಡ್ಬೇಡ! (ಅ)
-ರಿಯದೇ ನಿನ್ನ ನೀನಿರ್ಬೇಡ! (ದೇ)
-ವ ಗುಣ ಬೆಳಸದಿರ್ಬೇಡ! (ಮೂ)
-ರ್ತಿಯನ್ನು ನೋಡದೆ ಆಡ್ಬೇಡ!
ಜ್ಜನನಿಂತಾಗದಿರ್ಬೇಡ!
ಬೇಸರವೇತಕ್ಕೂ ಮಾಡ್ಬೇಡ! (ಬಿ)
-ಡ ನಿರಂಜನಾದಿತ್ಯ ಧೃಡ!!!

ಶಕ್ತಿ, ಬೆಳಕಿನ ಬಿಂಬ ಜಗದಾಂಬ! (ಭ)   4(2194)

ಕ್ತಿ ವಿಚಾರದಿಂದ ಭಕ್ತನಿದ ಕಾಂಬ!
ಬೆಳಕಾಧಾರ ಸಕಲ ಕಾರ್ಯಕ್ಕೆಂಬ! (ಕ)
-ಳವಳ ಬುದ್ಧಿಗಿದರಿವಾಗದೆಂಬ! (ಬೆಂ)
-ಕಿಯಿದರೊಳಗಡಗಿರುವುದೆಂಬ! (ಅ)
-ನವರತಾಭ್ಯಾಸದಿಂದ ತಾನದೆಂಬ!
ಬಿಂಬವಾಗ ಶುದ್ಧ ಶಿವಲಿಂಗವೆಂಬ!
ಯ್ಲಾಡಂಬರಕ್ಕದಳವಡದೆಂಬ!
ರಾ, ಜನ್ಮದುಃಖ ಅದಕ್ಕಿಲ್ಲವೆಂಬ!
ತಿಯಾದರದು ನಿಜಸ್ಥಿತಿಯೆಂಬ! (ಮ)
-ದಾಂಧತೆಗದರಲ್ಲೆಡೆಯಿಲ್ಲವೆಂಬ! (ಅಂ)
-ಬ ನಿರಂಜನಾದಿತ್ಯಾನಂದನಾ ಬಿಂಬ!!!

ಶಕ್ತಿ, ಸಾಮಾರ್ಥ್ಯ ಪರಿಪೂರ್ಣವಾಗಿದೆ! (ಭು)   3(1202)

-ಕ್ತಿಗಾಗ್ಯದ ಬಳಸಬಾರದಾಗಿದೆ!
ಸಾಫಲ್ಯವಾಗುವ ಸಮಯ ಮುಂದಿದೆ!
ನವೀಗೊಳ ಮುಖ ಮಾದಿಕೊಂಡಿದೆ! (ಸ್ವಾ)
-ರ್ಥ್ಯಕ್ಕಾಗಿ ಈಗ ಬರಲಾರದಾಗಿದೆ!
ರಮ ಶಾಂತಿಗದೀಗ ಬಯಸಿದೆ! (ಹ)
-ರಿ ಸ್ಮರಣೆ ಬಿಟ್ಟು ಕದಲದಾಗಿದೆ!
ಪೂರ್ಣ ತೃಪ್ತಿ ಹೊಂದಿ ಬರುವೆನೆಂದಿದೆ! (ವ)
-ರ್ಣ, ಲಿಂಗ, ಭೇದದಕಿಲ್ಲದಂತಾಗಿದೆ!
ವಾದ, ವಿವಾದದಕೆ ಬೇಡವಾಗಿದೆ!
ಗಿರಿಜಾಪತಿಯಾಜ್ಞೆ ಕಾಯುತ್ತಲಿದೆ! (ಬಂ)
-ದೆ ನಿರಂಜನಾದಿತ್ಯನಾಗೀಗ ನಿಂದೆ!!!

ಶಕ್ತಿವಂತ ನೀನಾದುದೆಂತೋ ಭಾರ್ಗವಾ? (ಮು)   4(2233)

-ಕ್ತಿದಾತ ಪೂಜ್ಯಗುರು ನೀನು ಭಾರ್ಗವಾ!
ವಂದಿಪೆನು ನಾನಿನ್ನಡಿಗೆ ಭಾರ್ಗವಾ!
ರಳನೆಂದನ್ನಪ್ಪಿಕೋ ಭಾರ್ಗವಾ!
ನೀತಿ, ರೀತ್ಯೆನಗೆ ಕಲಿಸೋ ಭಾರ್ಗವಾ!
ನಾಮವೆನ್ನದನ್ವರ್ಥ ಮಾಡೋ ಭಾರ್ಗವಾ!
ದುರಿತ ದೂರ ನೀನಲ್ವೇನೋ ಭಾರ್ಗವಾ? (ಎಂ)
-ದೆಂದಿಗೂ ಕೈ ಬಿಡಬೇಡವೋ ಭಾರ್ಗವಾ!
ತೋರಾ ಭಾರ್ಗವ ರೂಪಾಗಾಗ ಭಾರ್ಗವಾ!
ಭಾಗಿ ನಾನು ನಿನ್ನ ಶಕ್ತಿಗೆ ಭಾರ್ಗವಾ! (ಕಾ)
-ರ್ಗತ್ತಲ್ಕವಿದಿಹುದೆಲ್ಲೆಲ್ಲೂ ಭಾರ್ಗವಾ! (ದೇ)
-ವಾ, ನಿರಂಜನಾದಿತ್ಯಾನಂದ ಭಾರ್ಗವಾ!!!

ಶತಕೋಟಿ ನಾಮ ಬರೆದರಾಯ್ತೇನು? (ಭೂ)   4(1871)

-ತ, ಭವಿಷ್ಯದ ಭ್ರಾಂತಿ ಬತ್ತಿಹೋಯ್ತೇನು?
ಕೋಪ, ತಾಪ ಪರ್ಯವಸಾನವಾಯ್ತೇನು? (ಭೇ)
-ಟಿ ರಘುಪತಿ ರಾಘವನದಾಯ್ತೇನು?
ನಾನು, ನನ್ನದೆಂಬುದು ನಿರ್ನಾಮವಾಯ್ತೇನು?
ದ, ಮತ್ಸರ ಮಣ್ಣುಪಾಲು ಆಯ್ತೇನು?
ರಡು ಕಾಲಕ್ಷೇಪ ಬರಿದಾಯ್ತೇನು? (ಮ)
-ರೆ, ಮೋಸ ಬುದ್ಧಿಯ ಮರಣವಾಯ್ತೇನು?
ರ್ಪ, ದಂಭಗಳ ದಹನವಾಯ್ತೇನು?
ರಾಗ, ದ್ವೇಷಗಳ ದಘನವಾಯ್ತೇನು? (ಆ)
-ಯ್ತೇನು? ಗುರುಪಾದ ದರ್ಶನವಾಯ್ತೇನು? (ನೀ)
-ನು, ನಿರಂಜನಾದಿತ್ಯನೆಂದರಿತ್ಯೇನು???

ಶನಿವಾರ ಹೋಗುತ್ತಲಿದೆ!   4(2223)

ನಿತ್ಯಾದಿತ್ಯೋದಯಾಗ್ತಲಿದೆ!
ವಾರಿಜವರಳುತ್ತಲಿದೆ! (ಸ)
-ರಸ್ವತ್ಯಾವಾಹ್ನೆಯಾಗ್ತಲಿದೆ! (ಅ)
-ಹೋರಾತ್ರಿಯಿದಾಗುತ್ತಲಿದೆ!
ಗುಡಿ ಸ್ವಚ್ಛವಾಗುತ್ತಲಿದೆ! (ಕ)
-ತ್ತಲೆತ್ತಲೋ ಓಡುತ್ತಲಿದೆ! (ಮಾ)
-ಲಿಕನಾಕಾರ ಕಾಣ್ತಲಿದೆ! (ಕಾ)
-ದೆ ನಿರಂಜನಾದಿತ್ಯನಾದೆ!!!

ಶರಣನಾಗಿ ಮೋಕ್ಷ ಘಳಿಸು! (ವ)   4(1769)

-ರ ಗುರುಪಾದ ಸದಾ ಸ್ಮರಿಸು! (ತೃ)
-ಣ ಸಮಾನೈಹಿಕವೆಂದೆಣಿಸು!
ನಾಮ ಜಪ ಮನದಲ್ಲಿರಿಸು!
ಗಿರಿಧರನ ಗೀತೆ ಪಠಿಸು!
ಮೋಸ ಬುದ್ಧಿಯನ್ನು ನೀ ತ್ಯಜಿಸು!
ಕ್ಷಮಾ ಸುಶೀಲ ಪರಿಗ್ರಹಿಸು!
ಮ-ಘಮಾತ್ಮ ವಾಸನೆ ಮೂಸು! (ನ)
-ಳಿನನಾಭನ ನೀನಿಂತೊಲಿಸು! (ಅ)
-ಸು ನಿರಂಜನಾದಿತ್ಯಗರ್ಪಿಸು!!!

ಶರೀರ ಉರಿದು ಹೋದ್ಮೇಲಾರ್ಬಂದ್ರೇನು? (ಖ)   6(3649)

-ರೀದಿಯಾದ್ಮೇಲ್ಪರೀಕ್ಷಿಸಿ ಫಲವೇನು?
ಹಸ್ಯವಿದರಿತು ಸೇವೆ ಮಾಡ್ನೀನು!
ಳ್ಳಾಗ ಉಟ್ಟು, ಕೊಟ್ಟು ಉಣ್ಣಬೇಕ್ನೀನು! (ಬ)
-ರಿಯ ಮಾತಿನ ಮಂಡಿಗೆ ಹಾಕ್ಬೇಡ್ನೀನು!
ದುಡಿಯಬೇಕು ಶಕ್ತಿಯಿದ್ದಾಗ ನೀನು!
ಹೋದಮೇಲೆ ದುಃಖಪಟ್ಟು ಫಲವೇನು? (ತಿಂ)
-ದ್ಮೇಲೆ ದೂರ್ಬಾರದಡುಗೆಯನ್ನು ನೀನು!
ಲಾಭಕ್ಕಾಗಿ ಮೋಸಮಾಡ್ಬಾರದು ನೀನು! (ಯಾ)
-ರ್ಬಂಧು ಯಾರ್ವೈರಿಯೆಂದರಿತಿರು ನೀನು! (ಉ)
-ದ್ರೇಕಗೊಂಡಾಗ ಮಾತು ನಿಲ್ಲಿಸು ನೀನು! (ಸೂ)
-ನು ನಿರಂಜನಾದಿತ್ಯಗಾಗ್ಬೇಕು ನೀನು!!!

ಶರೀರ ಪೋಷಣೆ ಸಾಕಾಯ್ತಯ್ಯಾ!   1(429)

ರೀತಿ, ರಿವಾಜೆನಗಿಲ್ಲವಯ್ಯಾ! (ಅ)
-ರವಿಂದ ಸಖನಿಷ್ಟವಿದಯ್ಯಾ!
ಪೋಷಾಕೆಂದೋ ತ್ಯಜಿಸಿದ್ದಾಯ್ತಯ್ಯಾ!
ಷ್ಠಿ ವರ್ಷ ಕಳೆದುಹೋಯ್ತಯ್ಯಾ! (ಆ)
-ಣೆ, ನಿನ್ನಾಣೆ! ಪ್ರಸನ್ನನಾಗಯ್ಯಾ!
ಸಾಹಸವೆನ್ನಲೇನಿಹುದಯ್ಯಾ?
ಕಾಲ, ಕರ್ಮಾತ್ಮಕನು ನೀನಯ್ಯಾ! (ಆ)
ಯ್ತವಸಾನಾಸೆಗಳೆಲ್ಲವಯ್ಯಾ! (ಅ)
-ಯ್ಯಾ! ಕಾಯೋ ನಿರಂಜನಾದಿತ್ಯಯ್ಯಾ!!!

ಶರೀರ ಸೌಂದರ್ಯಕ್ಕೆಲ್ಲರಾಸೆ!   6(3655)

ರೀತಿ, ನೀತಿಯೆಲ್ಲಾ ಹೊಲಸಾಸೆ! (ಪ)
-ರಮಾರ್ಥಕ್ಕಿಲ್ಲ ಯಾರಿಗೂ ಆಸೆ!
ಸೌಂದರ್ಯವಳಿದಾಗ ನಿರಾಸೆ!
ರಿದ್ರಗೆ ಹೊಟ್ಟೆ, ಬಟ್ಟೆಯಾಸೆ! (ಶೌ)
-ರ್ಯವಂತನಿಗೆ ಹೋರಾಡುವಾಸೆ! (ಬೆ)
-ಕ್ಕೆಗೆ ಸದಾ ರತಿಸುಖದಾಸೆ! (ಬ)
-ಲ್ಲವರಿಗೆ ಪ್ರಪುಲ್ಲರಪ್ಪಾಸೆ!
ರಾಮದಾಸಗೆ ರಾಮನಪ್ಪಾಸೆ! (ಆ)
-ಸೆ, ನಿರಂಜನಾದಿತ್ಯಾನಂದಾಸೆ!!!

ಶರೀರಾರೋಗ್ಯಕ್ಕಗ್ರ ಸ್ಥಾನ!   5(2503)

ರೀತಿ ನೀತಿಯಿದ್ದರಾ ಸ್ಥಾನ!
ರಾಜಸಾಹಾರಕ್ಕಿಲ್ಲಾ ಸ್ಥಾನ!
ರೋಗ ಬರದಂತಿದ್ರಾ ಸ್ಥಾನ! (ಯೋ)
-ಗ್ಯ ಸ್ವಾತಿಕಾಹಾರಕ್ಕಾ ಸ್ಥಾನ! (ಸಿ)
-ಕ್ಕ ಬೇಕಲ್ಲರಿಗಾತ್ಮ ಸ್ಥಾನ!
ಗ್ರಹಚಾರ ಬಿಟ್ರೆಲ್ಲಾ ಸ್ಥಾನ!
ಸ್ಥಾನ, ಮಾನಕ್ಕೆ ಮುಖ್ಯಾ ಸ್ಥಾನ! (ಜ್ಞಾ)
-ನ ನಿರಂಜನಾದಿತ್ಯ ಸ್ಥಾನ!!!

ಶಶಿ ಪ್ರೇಮಾ ಊರಲ್ಲಿಲ್ಲವಂತೆ!   4(1772)

ಶಿವನೂರಲ್ಲದಿರುವುದಂತೆ!
ಪ್ರೇಮಕ್ಕಾ ಜಾಗ ಸದಾ ಬೇಕಂತೆ!
ಮಾರಾರಿಯ ತಲೆಯ ಮೇಲಂತೆ!
ರ್ಧ್ವ ಮುಖವಾಗಿರುವುದಂತೆ!
ವಿಯಾಜ್ಞಾನುಸಾರದಂತಂತೆ! (ಅ)
-ಲ್ಲಿದ್ದಿಲ್ಲಿಗೆಲ್ಲಾ ಪ್ರಕಾಶವಂತೆ! (ನ)
-ಲ್ಲನನ್ನಗಲಿ ಅದಿರದಂತೆ!
“ವಂದೇ ಮಾತರಂ” ಹಾಡದಕಂತೆ! (ಜೊ)
-ತೆ ನಿರಂಜನಾದಿತ್ಯಾತ್ಮನಂತೆ!!!

ಶಾಂತಿ ಕೆಟ್ಟರಾರಿಗೆ ಸುಖವಯ್ಯಾ? [ಮ]   3(1025)

-ತಿಗೆಟ್ಟ ಮೇಲಿನ್ನೇನು ಸುಖವಯ್ಯಾ?
ಕೆಟ್ಟೂಟಟ್ಟರಾರಿಗೆ ಸುಖವಯ್ಯಾ? (ಹು)
-ಟ್ಟಡಗದಿದ್ದರೇನು ಸುಖವಯ್ಯಾ?
ರಾಗಿಯಾದರಾರಿಗೆ ಸುಖವಯ್ಯಾ? (ಆ)
-ರಿ ಹರಿಯಾದರೇನು ಸುಖವಯ್ಯಾ? (ಹೊ)
-ಗೆ ಸುತ್ತಿದರಾರಿಗೆ ಸುಖವಯ್ಯಾ?
ಸುಟ್ಟ ಬಟ್ಟೆಯಿಂದೇನು ಸುಖವಯ್ಯಾ?
ದ್ಯೋತಾಘಾತಾರಿಗೆ ಸುಖವಯ್ಯಾ? (ಜೀ)
-ವ ಭಾವವಿದ್ದರೇನು ಸುಖವಯ್ಯಾ? (ಅ)
-ಯ್ಯಾ ನಿರಂಜನಾದಿತ್ಯ ಸುಖವಯ್ಯಾ!!!

ಶಾಂತಿ, ಸಂತುಷ್ಟಿಯಾಗಲ್ಲೆಲ್ಲಾ! (ಅ)   1(324)

-ತಿಯಾಸೆಯಿಂದತೃಪ್ತಿಯೆಲ್ಲೆಲ್ಲಾ!
ಸಂತಸವಿಲ್ಲ ಜಗದಲ್ಲೆಲ್ಲಾ!
ತುರು, ಕರು, ಹತ್ಯ ಊರಲ್ಲೆಲ್ಲಾ! (ಅ)
-ಷ್ಟಿಷ್ಟೂ ಕರುಣೆ ಕಾಣುತಲಿಲ್ಲಾ!
ಯಾತನೆಯ ರೋಗಗಳೆಲ್ಲೆಲ್ಲಾ! (ಆ)
-ಗದಾರೋಗ್ಯ ಗತ್ಯಂತರವಿಲ್ಲಾ! (ಅ)
-ಲೆವುದಾಗಿದೆ ನೋಟಕೆಲ್ಲೆಲ್ಲಾ! (ಅ)
-ಲ್ಲೆ ಮಗಿಹುದಿಲ್ಲಿರದೇನಿಲ್ಲಾ! (ಅ)
-ಲ್ಲಾಡಿ ನಿರಂಜನಾದಿತ್ಯಲ್ಲಾ!!!

ಶಾಂತಿಗಾಗಿ ನಾನಿಲ್ಲಿಗೆ ಬಂದೆ!   6(3943)

ತಿರುತಿರುಗಿ ಸುಸ್ತಾಗಿ ಬಂದೆ!
ಗಾರುಡೀ ವಿದ್ಯೆ ಬೇಡೆಂದು ಬಂದೆ! (ಯೋ)
-ಗಿರಾಜನೇ ಗತಿಯೆಂದು ಬಂದೆ!
ನಾಯಿಗಂಜದೇ ಒಳಗೆ ಬಂದೆ!
ನಿನಗಿನ್ನೇನು ಹೇಳಲಿ ತಂದೇ? (ನಿ)
-ಲ್ಲಿಸೆನ್ನ ಮನ ನಿನ್ನಲ್ಲಿ ತಂದೇ!
ಗೆರೆ ಮೀರಿ ಹೋಗಲಾರೆ ತಂದೇ!
ಬಂಧನ ಸಾಕೆನಗಿನ್ನು ತಂದೇ! (ತಂ)
-ದೆ ನಿರಂಜನಾದಿತ್ಯ ನೀನೆಂದೆ!!!

ಶಾಂತಿಪ್ರಿಯರಿಗೆ ಜಾಗ ಇಲ್ಲಿ?   6(4312)

ತಿಳಿದು ತಮ್ಮ ತಾವಿರುವಲ್ಲಿ!
ಪ್ರಿಯಾ ಪ್ರಿಯಾದಿಗಳಳಿದಲ್ಲಿ!
ಮನ ಭಯ ತಪ್ಪಿ ಹೋದಲ್ಲಿ!
ರಿಫುಗಳಾರ ಜಯಿಸಿದಲ್ಲಿ!
ಗೆಳೆಯರು ವಿರಕ್ತರಾದಲ್ಲಿ!
ಜಾತಿ ದ್ವೇಷವಿಲ್ಲದಿರುವಲ್ಲಿ!
ದ್ದೆ, ಹೊಲದಾಸೆ ಇಲ್ಲದಲ್ಲಿ!
ಡರಿಗೆ ಎದೆಗೆಡದಲ್ಲಿ! (ಇ)
-ಲ್ಲಿ ನಿರಂಜನಾದಿತ್ಯನಿರ್ಪಲ್ಲಿ!!!

ಶಾಂತಿಯಿಂದಾಯ್ತೆಲ್ಲರಿಗೆ ಮಜಾ! (ರೀ)   4(2318)

-ತಿ, ನೀತಿಯೆಲ್ಲಾ ಬಹಳ ಮಜಾ! (ಬಾ)
-ಯಿಂದುಸುರಲಸದಳಾ ಮಜಾ! (ಮ)
ದಾರಿಯಲ್ಲವನ ಧ್ಯಾನ ಮಜಾ! (ಕಾ)
-ಯ್ತೆಲ್ಲರನ್ನವನ ಕೃಪೆ ಮಜಾ! (ಮ)
-ಲ್ಲಮರ್ದನನ ದರ್ಶನ ಮಜಾ! (ಕ)
-ರಿಯ ಗುಮ್ಮಟನ ನೋಟ ಮಜಾ! (ಬ)
-ಗೆಬಗೆ ಸೃಷ್ಟಿ ಸೌಂದರ್ಯ ಮಜಾ!
ರಳಿ ಬಂದಾತ್ಮಾನಂದ ಮಜಾ! (ನಿ)
-ಜಾ ನಿರಂಜನಾದಿತ್ಯಾನಂದಜಾ!!!

ಶಾಮಮೋಹನನಿರುವನು ಧ್ಯಾನ ಗುಂಡಿಯಲ್ಲಿ!   1(161)

ನಸೋತು ಭಕ್ತ ಮೂರಾ ಭಜಿಸುತಿಹಳಿಲ್ಲಿ!
ಮೋಹನ ಗಿರಿಧಾರಿ ಗಿರಿಯಾಗ್ನಿಂದಿಹನಲ್ಲಿ!
ದನವಿದನರಿಯದಿಹಳು ರಾಧೆಯಲ್ಲಿ!
ಗಧರನ ಪರಿ ವಿಚಿತ್ರವಾಗಿಹುದಿಲ್ಲಿ!
ನಿರುಪಾಯಲಾದಬಲೆಯಳುತಿರುವಳಲ್ಲಿ! (ಅ)
-ರುಹಬೇಕಾರಿವನಂತರಂಗವನವಳಲ್ಲಿ! (ಅ)
-ವಳೇ ಅರಿತು ತಾನವನಂತಿರುತಿಹಳಲ್ಲಿ!
ನುಡಿಯಿಲ್ಲದೇ ಪ್ರದಕ್ಷಿಣೆ ಹಾಕುತಿಹಳಲ್ಲಿ!
ಧ್ಯಾನಿ, ಶ್ಯಾಮನಿಹನಿಲ್ಲಿ ಸಹಜಾನಂದದಲ್ಲಿ!
ಯನಗಳವನದೈಕ್ಯವಂಬರದಲಲ್ಲಿ!
ಗುಂಡಿ, ಹೃದ್ಗುಂಡಿ! ಪಾವನ ಧ್ಯಾನಕಾನಂದವಿಲ್ಲಿ!
ಡಿಕ್ಕಿ ಹೊಡೆಸುವೇರುಪೇರೇನಿಲ್ಲವಿದರಲ್ಲಿ!
ಮ, ನಿಯಮಾದ್ಯಷ್ಟ ದಿಕ್ಪಾಲಕರಿಗಿಷ್ಟವಿದರಲ್ಲಿ! (ಇ)
-ಲ್ಲಿ ನಿಂದಿಹ ನಿರಂಜನಾದಿತ್ಯನ ನೋಡಿರಿಲ್ಲಿ!!!

ಶಾರದೆಗಿಷ್ಟ ಚಂದನ ಬತ್ತಿ! (ಇ)   4(1669)

-ರಬೇಕವಳ ಸೇವೆಗಾಸಕ್ತಿ! (ತಂ)
-ದೆ, ತಾಯಿಯವಳೆಂಬುದೇ ಭಕ್ತಿ! (ಯೋ)
-ಗಿನಿಯವಳೇ ಅನಂತ ಶಕ್ತಿ! (ಕ)
-ಷ್ಟ ಪರಿಹರಿಸೀವಳು ಮುಕ್ತಿ!
ಚಂಪಕಾದಿ ಹೂಗಳೆಲ್ಲಾ ತೃಪ್ತಿ!
ಯೆಯಿಂದೆಲ್ಲಾ ಸೌಭಾಗ್ಯ ಪ್ರಾಪ್ತಿ!
“ನ ಗುರೋರಧಿಕಂ” ಅವಳೋಕ್ತಿ!
ಹು ಸುಂದರ ಅವಳಾಕೃತಿ! (ಬು)
-ತ್ತಿ ನಿರಂಜನಾದಿತ್ಯಗಾ ಮೂರ್ತಿ!!!

ಶಾರೆದೇ, ವರೆದೇ, ಆನಂದ ನಿಧೇ! (ಸು)   4(1867)

-ರ, ನರ, ಕಿನ್ನರಾತ್ಮಾನಂದ ನಿಧೇ!
ದೇಶ, ವಿದೇಶಾದ್ಯಂತಾನಂದ ನಿಧೇ!
ನಜಸಂಭವನಾನಂದ ನಿಧೇ!
ರೆತಿಪತಿ ಪಿತಾತ್ಮಾನಂದ ನಿಧೇ!
ದೇವಾದಿದೇವ ಶಿವಾನಂದ ನಿಧೇ!
ಶಾಪಾಶ ವಿನಾಶಾನಂದ ನಿಧೇ!
ನಂದಕಂದ ಗೋವಿಂದಾನಂದ ನಿಧೇ!
ತ್ತ ಚಿತ್ತ ಸ್ವರೂಪಾನಂದ ನಿಧೇ!
ನಿತ್ಯ, ಸತ್ಯ ಸಚ್ಚಿದಾನಂದ ನಿಧೇ! (ನಿ)
-ಧೇ, ನಿರಂಜನಾದಿತ್ಯಾನಂದ ನಿಧೇ!!!

ಶಿಕ್ಷಕರಿಗೆ ಧ್ಯಾನಮಿಂಚಿನೂಟ! (ಅ)   3(1260)

-ಕ್ಷರಕ್ಷರಕ್ಕೂ ಕಣ್ಣೀರೆರೆದೂಟ!
ರೆದರೂ ಬೇಡಾಯ್ತಿತರ ಊಟ! (ಅ)
-ರಿತವರಿಗೆ ಬೇಕು ಜ್ಞಾನದೂಟ!
ಗೆಲುವು ನೀಡಲಿಕ್ಕೆ ಬೇಕೀ ಊಟ!
ಧ್ಯಾನಮಗ್ನೆ ರುಕ್ಮಿಣಿಯಾಸೆಯೂಟ!
ಮ್ರನಾಗಿ ಪಾಲ್ಗೊಂಡಾಚಾರ್ಯಾ ಊಟ!
ಮಿಂಚಿತಾ ಶುದ್ಧ ಮನದಲ್ಲಾ ಊಟ!
ಚಿರಕಾಲ ಚೈತನ್ಯ ಪ್ರದಾ ಊಟ!
ನೂತನ ವರ್ಷದ ಪ್ರಸಾದದೂಟ! (ಊ)
-ಟ, ನಿರಂಜನಾದಿತ್ಯನಿಕ್ಕಿದೂಟ!!!

ಶಿಖರಕ್ಕೇರಿಸಿ, ಪಾತಾಳಕ್ಕಿಳಿಸಬೇಡ!   6(4187)

ರಾರಿಯಾಪ್ತ ಭಕ್ತನೆನಿಸದಿರಬೇಡ!
ತ್ನಹಾರ ಸಂಭಾವನೆ ಮಾರುತಿಗೆ ಬೇಡ! (ಹ)
-ಕ್ಕೆನೀರಬೇಕೋ ಅದನ್ನಪಹರಿಸಬೇಡ! (ಇ)
-ರಿಸಿ ಮಾಯಾಜ್ವಾಲೆಯಲ್ಲಿ ಪರೀಕ್ಷಿಸಬೇಡ!
ಸಿಕ್ಕಬಿದ್ದು, ಒದ್ದಾಡಿ ಸದ್ದಡಗಿಸಬೇಡ!
ಪಾಪ, ಪುಣ್ಯಗಳೆರಡನ್ನೂ ಅಂಟಿಸಬೇಡ!
ತಾಯಿಯಾಗಿ ಅಮೃತ ಕುಡಿಸದಿರಬೇಡ! (ತಾ)
-ಳ, ಮೇಳವಿಲ್ಲೆಂದು ದರ್ಶನ ಕೊಡದಿರ್ಬೇಡ! (ಹೆ)
ಕ್ಕಿ ತೆಗೆಯುತ್ತಾ ದೋಷಗಳನ್ನೆಣಿಸಬೇಡ! (ಬಾ)
-ಳಿದೆನ್ನದನು ಸಾರ್ಥಕ ಮಾಡದಿರಬೇಡ!
ಚ್ಚಿದಾನಂದ ನೀನೇ ನಾನಾಗದಿರಬೇಡ!
ಬೇಡ, ಇನ್ನಾವುದೂ ಖಂಡಿತ ಬೇಡವೇ ಬೇಡ! (ಧೃ
-ಡ ಸಂಕಲ್ಪ ನಿರಂಜನಾದಿತ್ಯನೆಂದೂ ಬಿಡ!!!

ಶಿರ ಬಾಗಿದರೆಲ್ಲರು ಗುರುಪಾದಕ್ಕೆ! (ಎ)   1(348)

-ರಗಿದರನನ್ಯ ಭಕ್ತಿಯಿಂದಾ ಪಾದಕ್ಕೆ!
ಬಾಲ, ಬೃದ್ಧರೆಲ್ಲರ ಕಾಣಿಕಾ ಪಾದಕ್ಕೆ!
ಗಿರಿಜಾಪತೊಯನುಗ್ರಹದಾ ಪಾದಕ್ಕೆ!
ರ್ಶನ ಮನೋಹರದಾ ಪದ್ಮ ಪಾದಕ್ಕೆ!
ರೆಕ್ಕೆ, ಪುಕ್ಕಿಲ್ಲದಾ ಶೀಘ್ರಗಾಮಿ ಪಾದಕ್ಕೆ!
ಲ್ಲರಕ್ಷಿ ತೀರ್ಥದಿಂದಭಿಷಿಕ್ತ ಪಾದಕ್ಕೆ!
ರುಚಿಯನ್ನ ನೈವೇದ್ಯವಾದ ಶ್ರೀ ಪಾದಕ್ಕೆ!
ಗುರುಶಿವ ಭಜನೆ ತುಂಬಿದಾ ಪಾದಕ್ಕೆ!
ರುದ್ರಾಭಿಷೇಕ ಸ್ನಾನಾನಂದದಾ ಪಾದಕ್ಕೆ!
ಪಾನಾಮೃತ ಗೀತಾಪಾನಗೈದಾ ಪಾದಕ್ಕೆ!
ಯೆಯಿಂದೆಲ್ಲರ ಶಾಂತಿಗೈದಾ ಪಾದಕ್ಕೆ! (ಅ)
-ಕ್ಕೆ! ಮಂಗಳ ನಿರಂಜನಾದಿತ್ಯ ಪಾದಕ್ಕೆ!

ಶಿಲ್ಪಿಯ ಸ್ಫೂರ್ತಿ ಪ್ರೀತಿಯ ಮೂರ್ತಿ! (ಶಿ)   2(683)

-ಲ್ಪಿಯೇಟು ಸಹಿಸಿ ಆಯ್ತೀ ಮೂರ್ತಿ! (ಬ)
-ಯಲ ಕಲ್ಲಾಗಿತ್ತು ಅಂದೀ ಮೂರ್ತಿ!
ಸ್ಫೂರ್ತಿಗೆಡೆಗೊಟ್ಟ ಕಲ್ಲೀ ಮೂರ್ತಿ! (ಕೀ)
-ರ್ತಿಯಿಂದ ಮರೆವುದಿಂದೀ ಮೂರ್ತಿ!
ತಿಳಿ, ಧರ್ಮ, ಕರ್ಮ ಸ್ಫೂರ್ತೀ ಮೂರ್ತಿ!
ಯಶೋಮೂರ್ತಿ ಸಹನೆಯಾ ಮೂರ್ತಿ!
ಮೂಲದಾಕಲ್ಲಿಂದು ದತ್ತ ಮೂರ್ತಿ! (ಸ್ಫೂ)
-ರ್ತಿ, ನಿರಂಜನಾದಿತ್ಯಾ ತ್ರಿಮೂರ್ತೀ!!!

ಶಿವ ಕುಮಾರ ಕುಮಾರ ಶಿವ!   2(605)

ರ ಕುಮಾರ ಗಂಭೀರ ಶಿವ!
ಕುಮಾರ ಹರ ಕುಮಾರ ಶಿವ! (ಕು)
-ಮಾರ ಸುಂದರ ಕುಮಾರ ಶಿವ! (ಹ)
-ರ ಸುಕುಮಾರ ಗುಹೇಶ ಶಿವ!
ಕುಮಾರ ವರ ಪ್ರದಾತ ಶಿವ!
ಮಾತಾ ಪಾರ್ವತಿ ಸುಪುತ್ರ ಶಿವ! [ಹ]
-ರ ಗಂಗಾಧರ ಕುಮಾರ ಶಿವ!
ಶಿವ ಶಿವ ಶಿವಾನಂದ ಶಿವ!
ರ ನಿರಂಜನಾದಿತ್ಯ ಶಿವ!!!

ಶಿವ ಗೈವತ್ತಾರೇನಯ್ಯಾ?   2(645)

ರ ಭಕ್ತನಿವನಯ್ಯಾ!
ಗೈವುದೆಲ್ಲಾ ನಿಷ್ಕಾಮಯ್ಯಾ!
ರ್ಷವೆಷ್ಟಾದರೇನಯ್ಯಾ! (ವಿ)
-ತ್ತಾರ್ಜಿಪಾಸೆ ಸಾಕೆನ್ನಯ್ಯಾ! ‘(ಹ)
-ರೇ ರಾಮ’ ಭಜಿಸಿರಯ್ಯಾ!
ಶ್ವರ ಸಂಸಾರವಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಯ್ಯಾ!!!

ಶಿವ ತಾ ದತ್ತಾವಧೂತ!   5(3240)

ರ ಕೈಲಾಸವಾಸಾತ!
ತಾರಕ ಮಂತ್ರ ಪ್ರೇಮಿತ!
ಕ್ಷಕನ್ಯಾ ಪತಿ ಆತ! (ಹ)
-ತ್ತಾರನೇ ತತ್ವಾತೀತಾತ! (ಭ)
-ವರೋಗ ವೈದ್ಯ ರಾಜಾತ!
ಧೂರ್ತ ದಾನವಾಂತಕಾತ! (ಈ)
-ತ ನಿರಂಜನಾದಿತ್ಯಾತ!!!

ಶಿವ ದೀಪ ಉರೀತಲಿದೆ!   1(296)

ರ ಜ್ಯೋತಿ ಕಾಣುತಲಿದೆ!
ದೀಪ ಹೃದಯಾಕಾರವಾಗಿದೆ!
ರಿಸ್ಥಿತಿ ಉತ್ತಮವಿದೆ!
ತ್ತರಮುಖಿಯಾಗಿ ಇದೆ!
ರೀತಿ ವಿಚಿತ್ರವಾಗಿರುತ್ತಿದೆ!
ನ್ಮಯತೆ ಮನಕಾಗುತಿದೆ! (ಎ)
-ದೆ, ನಿರಂಜನಾದಿತ್ಯಗಾಗಿದೆ!!!

ಶಿವ ನಾಮ ಪ್ರೇಮ ಶ್ರೀರಾಮ! (ಶಿ)   3(1108)

-ವಗಾ ಪ್ರೇಮನಾಮ ಶ್ರೀ ರಾಮ!
ನಾಮವಿಬ್ಬರಿಗೂ ಆರಾಮ!
ಹಿಮಾ ನಾಮ ಶಿವ, ರಾಮ!
ಪ್ರೇಮ ಧಾಮ, ಕೈಲಾಸಾರಾಮ!
ಹಾದೇವ ನಾಮಾತ್ಮಾರಾಮ!
ಶ್ರೀ ಶಿವ ಸಾಂಬ, ಸೀತಾರಾಮ!
ರಾಮಾತ್ಮ ಶಿವಾನಂದಾ ರಾಮ! (ನಾ)
-ಮ, ನಿರಂಜನಾದಿತ್ಯಾ ರಾಮ!!!

ಶಿವ ನಿನ್ನ ಪೂಜೆಗಾವ ಫಲ?   5(2680)

ಸ್ತು ವಾಹನವೆಲ್ಲಾ ವಿಷದ ಫಲ!
ನಿತ್ಯಾತ್ಮಜ್ಞಾನ ಮಾತ್ರ ಅಮೃತ ಫಲ! (ನಿ)
-ನ್ನ ಭಕ್ತಗೆ ನೀಡಬೇಕು ನೀನೀ ಫಲ!
ನಿನಗಪಕೀರ್ತಿ ಬಚ್ಚಿಟ್ಟರೀ ಫಲ! (ಸ)
-ತ್ಯಕ್ಕಪಚಾರವಾದರೇಕಂಥಾ ಫಲ?
ಪೂಜ್ಯನಾಗಿ ವ್ಯಾಜ್ಯ ಹೂಡಿದ್ರೇನು ಫಲ? (ಪ್ರ)
-ಜೆಗಳನುಭವಿಸುವರ್ಕರ್ಮ ಫಲ!
ಗಾಳಿ ಬಡಿತದಿಂದ್ಬಿತ್ತವರ ಫಲ!
ರ ಗುರು ಸೇವೆಗಾಗ್ಬಾರದ್ವಿಫಲ!
ಲಿಸಲೆನಗೀಗಾ ಸಾಯುಜ್ಯ ಫಲ! (ಫ)
-ಲ ನಿರಂಜನಾದಿತ್ಯಾನಂದ ಫಲ!!!

ಶಿವ ನೀ ಹೇಗಾದ್ಯೋ ತಾಯಿಗಂಡ? (ದೇ)   5(2555)

-ವದೇವನೆಂಬ ನೀ ತಾಯಿಗಂಡ!
ನಿಚೋಚ್ಚೊಂದೆಂಬ ನೀ ತಾಯಿಗಂಡ! (ಮ)
-ಹೇಶ ನಾನೆಂಬ ನೀ ತಾಯಿಗಂಡ! (ಯೋ)
-ಗಾನಂದಾನೆಂಬ ನೀ ತಾಯಿಗಂಡಾ! (ಉ)
-ದ್ಯೋಗಿಯಾಗೆಂಬ ನೀ ತಾಯಿಗಂಡ!
ತಾಪಸ್ಯಾನೆಂಬ ನೀ ತಾಯಿಗಂಡ! (ಬಾ)
-ಯಿ ಮಾತೇಕೆಂಬ ನೀ ತಾಯಿಗಂಡ!
ಗಂಡ್ಹೆಣ್ಣೊಂದೆಂಬ ನೀ ತಾಯಿಗಂಡ! (ಮೃ)
-ಡ ನಿರಂಜನಾದಿತ್ಯಾ ತಾಯ್ಗಂಡ!!!

ಶಿವ ನೀನಾಗಬೇಕೆಂಬೆ! (ಶ)   6(3462)

-ವ ನೀನಾಗಬಾರದಂಬೆ!
ನೀರಜಾಕ್ಷಿಯಾದ್ರೇನಂಬೆ?
ನಾಶವಾಗುವುದದೆಂಬೆ!
ಣಪನಬ್ಬೆ ನೀನಂಬೆ!
ಬೇಕ್ನಿನ್ನಾಶೀರ್ವಾದವೆಂಬೆ!
ಕೆಂಗಣ್ಣಗಾಪ್ತಳ್ನೀನಂಬೆ!
(ಅಂ)-ಬೆ, ನಿರಂಜನಾದಿತ್ಯೆಂಬೆ!!!

ಶಿವ ನೀನಾಗಿರಲ್ಭವನೆಂತು?   6(3940)

ರ್ಣ ಭೇದಾತೀತ ಶಿವನಂತು!
ನೀಚೋಚ್ಚ ರಹಿತ ಶಿವನಂತು!
ನಾದಪ್ರಿಯನಾಗಿ ಶಿವನಂತು! (ಯೋ)
-ಗಿರಾಜ ನೀನಾಗಿ ಶಿವನಂತು!
ತಿ ಪತಿ ಹತ ಶಿವನಂತು! (ವೇ)
-ಲ್ಭ ವ್ಯಾಸ್ತ್ರನಪ್ಪಯ್ಯ ಶಿವನಂತು!
ರ ನಂದಿಶ್ವರ ಶಿವನಂತು!
ನೆಂಟ, ಭಂಟನಾಗಿ ಶಿವನಂತು! (ಇಂ)
-ತು ಶಿವ ನಿರಂಜನಾದಿತ್ಯಂತು!!!

ಶಿವ ಪಾದಾರ್ಪಣಾ ಪೂವಯ್ಯಾ!   4(1897)

ರ ಭಕ್ತಿ ಭಾವಾ ಪೂವಯ್ಯಾ!
ಪಾಪ ಪರಿಹಾರಾ ಪೂವಯ್ಯಾ!
ದಾರಿದ್ರ್ಯ ಶಮನಾ ಪೂವಯ್ಯಾ! (ದ)
-ರ್ಪ, ದಂಭ ದಮನಾ ಪೂವಯ್ಯಾ! (ಪ್ರಾ)
-ಣಾಧಾರರವಿಂದಾ ಪೂವಯ್ಯಾ!
ಪೂರ್ವ ಪುಣ್ಯೋದಯಾ ಪೂವಯ್ಯಾ!
ರ ಗುರು ಕೃಪಾ ಪೂವಯ್ಯಾ! (ಅ)
-ಯ್ಯಾ ಶ್ರೀ ನಿರಂಜನಾದಿತ್ಯಯ್ಯಾ!!!

ಶಿವ ಪಾದೈಕ್ಯ ಜಲಜ!   1(349)

ರ ಕುಸುಮ ಜಲಜ! (ಅ)
-ಪಾರ ಸಂಸ್ಕಾರಿ ಜಲಜ!
ದೈವ ಅಂಶಜೆ ಜಲಜ! (ಐ)
-ಕ್ಯ, ಭಜನೆಲಿ ಜಲಜ!
ನ್ಮ ಸಾಫಲ್ಯ ಜಲಜ! (ಅ)
-ಲರ್ಕಾಣಿಕೆಯಾ ಜಲಜ!
ಯಾದಿತ್ಯಾಪ್ತ ಜಲಜ!!!

ಶಿವ ಮುನಿದರೆ ಜವನೂ ಶವವಯ್ಯಾ (ಶಿ)   4(2104)

-ವನೊಲಿಯಲ್ಲಾರ್ಕಂಡೇಯನುಳಿದನಯ್ಯಾ!
ಮುಕ್ತಿದಾತ, ಶಕ್ತಿನಾಥ, ವಿಶ್ವನಾಥಯ್ಯಾ!
ನಿತ್ಯದಲ್ಲವನ ಸೇವೆ ಸಾರ್ಥಕವಯ್ಯಾ!
ಶಮುಖನ ಭಕ್ತಿಗೆ ಮೆಚ್ಚಿದನಯ್ಯಾ! (ಬೆ)
-ರೆತುಮೆಯರ್ಧನಾರೀಶ್ವರನಾದನಯ್ಯಾ! (ನಿ)
-ಜಭಕ್ತ ಬಸವನೆಂದೊಪ್ಪಿಕೊಂಡನಯ್ಯಾ!
ರಗುರು ದಕ್ಷಿಣಾಮೂರ್ತಿಯಾದನಯ್ಯಾ! (ನೀ)
-ನೂ, ನಾನೊಂದೆಂದು ಶಂಕರನಾಗ್ಯೆಂದನಯ್ಯಾ!
ಶಿಯ ಹೊತ್ತು ಚಂದ್ರಚೂಡನಾದನಯ್ಯಾ! (ಭಾ)
-ವ, ಭಕ್ತಿಯಕ್ಕನ ಚೊಕ್ಕು ಮಾಡಿದನಯ್ಯಾ!
ರನಸೂಯೆಗಿತ್ತು ದತ್ತನಾದನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾ ಸದ್ಗುರು ಶಿವಯ್ಯಾ!!!

ಶಿವ ರಾಮನಾಗಿ ಶವ ಕಾಮ! [ಅ]   4(2425)

-ವನನುದಿನ ಧ್ಯಾನ ನಿಷ್ಕಾಮ!
ರಾಣಿ ದಾಕ್ಷಾಯಿಣಿಯಾತ್ಮ ಪ್ರೇಮ!
ಗನಿಗೆ ಆಯ್ತು ಗುಹ ನಾಮ!
ನಾದ, ಬಿಂದು, ಕಲಾತೀತಾರಾಮ! (ಯೋ)
-ಗಿ ಜೀವನವನ ನಿತ್ಯ ನೇಮ!
ಶಿಯ ಹೊತ್ತು ತಾನಾದ ಸೋಮ! (ಭ)
-ವಪಾಶ ಬಂಧಿತರ್ಗೀತ ಯಮ!
ಕಾರುಣ್ಯಮೂತೀಯಾಗಿ ಶ್ರೀರಾಮ! (ರಾ)
-ಮ, ಶ್ರೀ ನಿರಂಜನಾದಿತ್ಯ ಶ್ಯಾಮ!!!

ಶಿವ ವಿರಕ್ತಿ ಆದಿಶಕ್ತಿಗಾಸಕ್ತಿ!   1(262)

ರಿಸಿದಳು ಭಿ







ಹಾಕಿ ಪರಾಶಕ್ತಿ!
ಲವಿಂದ ಕಲಿಸಿದನು ಗುರುಭಕ್ತಿ!
ವಿನಯದಿ ಪಾದಕರಗಿದಲಾ ಶಕ್ತಿ!
ತಿಪತಿಯಕ್ಷಿಲಡಗಿಸಿದಾ ಶಕ್ತಿ! (ಭ)
-ಕ್ತಿಯಿಂದಾದಳಾಗರ್ಧನಾರಿ ಶಿವಶಕ್ತಿ!
ಗ ಬಂತು ಅವಳಿಗೆ ಅತುಳ ಶಕ್ತಿ!
ದಿಕ್ಕುದಿಕ್ಕಿಗೂ ಹರಡಿತಾ ಶಿವ ಶಕ್ತಿ!
ಶಿಶೇಖರನಿಗಾಯಿತಮಿತ ಶಕ್ತಿ! (ಶ)
-ಕ್ತಿ, ಶಿವರಿಗಾಯಿತಾಗ ಮಂಗಳಾರತಿ!
ಗಾನ ಮಾಡಿದರಾಗೆಲ್ಲಾ ಅಮರತತಿ!
ಹವಾಸವಿದು ವರ ಸಾಯುಜ್ಯ ಗತಿ! (ಶ)
-ಕ್ತಿ, ನಿರಂಜನಾದಿತ್ಯ ರೂಪಾ ಶಿವಶಕ್ತಿ!!!

ಶಿವ ಶಿವ ಶಿವ ಓಂ ನಮಃ ಶಿವಾಯ!   5(2829)

ರ ನಂಜುಂಡೇಶ್ವರ ನಮಃ ಶಿವಾಯ!
ಶಿವೆಯರಸೇಶ್ವರ ನಮಃ ಶಿವಾಯ!
ರಾರ್ಧನಾರೀಶ್ವರ ನಮಃ ಶಿವಾಯ!
ಶಿಖಿವಾಹನ ಪಿತ ನಮಃ ಶಿವಾಯ!
ರ ಗಣೇಶ ಪ್ರಿಯ ನಮಃ ಶಿವಾಯ!
ಓಂಕಾರ ರೂಪೇಶ್ವರ ನಮಃ ಶಿವಾಯ!
ತಜನೋದ್ಧಾರ ನಮಃ ಶಿವಾಯ! (ನ)
-ಮಃ ಶಿವಾಯ ಶಂಕರ ನಮಃ ಶಿವಾಯ!
ಶಿವ ಗಂಗಾಧರ ಓಂ ನಮಃ ಶಿವಾಯ!
ವಾಸವಾದಿವಂದ್ಯ ಓಂ ನಮಃ ಶಿವಾಯ! (ಪ್ರಿ)
-ಯ ನಿರಂಜನಾದಿತ್ಯ ನಮಃ ಶಿವಾಯ!!!

ಶಿವ ಶಿವಾ ಶ್ರೀ ಶಂಕರಾ!   2(573)

ರ ಯೋಗೀಶ್ವರೇಶ್ವರಾ!
ಶಿಖಿವಾಹನಾತ್ಮೇಶ್ವರಾ!
ವಾಹನಾ ಶ್ರೀ ನಂದೀಶ್ವರಾ!
ಶ್ರೀಗುರು ಪರಮೇಶ್ವರಾ!
ಶಂಭೋ ಶಿವ ನಾಂಬೇಶ್ವರಾ!
ರಿವರ ಚರ್ಮಾಂಬರಾ! (ಹ)
-ರಾ ನಿರಂಜನಾರ್ಕೇಶ್ವರಾ!!!

ಶಿವ ಸಂಬಂಧ ತಪ್ಪಿದ್ರೆ ಭವಬಂಧ! (ಭ)   6(3679)

-ವ ಬಂಧ ತಪ್ಪಿದ್ರೆ ಶಿವನ ಸಂಬಂಧ!
ಸಂಬಂಧವಾದ್ಮೇಲಾರದೇನು ನಿರ್ಬಂಧ?
ಬಂಧು, ಬಳಗಕ್ಕಿಂತಧಿಕಾ ಸಂಬಂಧ!
ರ್ಮ, ಕರ್ಮವಿಲ್ಲದ್ದದೆಂಥಾ ಸಂಬಂಧ?
ನು, ಮನವೆಲ್ಲಾ ಹೊಲಸು ದುರ್ಗಂಧ! (ತ)
-ಪ್ಪಿ ನಡೆಯುವಾ ಜೀವ ಸದಾ ಮದಾಂಧ! (ನಿ)
-ದ್ರೆ, ಮೈಥುನಾಹಾರದಲ್ಲಾ ಜೀವ ಅಂಧ!
ಗವದ್ಭಕ್ತಿಯಿಂದಲೇ ಶಿವಾನಂದ!
ರಿಸಿದ ಮೇಲವನ ಬ್ರಹ್ಮಾನಂದ!
ಬಂದೊದಗದಾಮೇಲೆ ಅನಿತ್ಯಾನಂದ! (ಗಂ)
-ಧ ನಿರಂಜನಾದಿತ್ಯ ವಾರಿಜಬಂಧ!!!

ಶಿವ ಸೇವೆ ಸಾಗುತ್ತಿರಲಿ! (ಭ)   3(1107)

-ವ ನಾವೆ ಹೋಗುತ್ತಿರಲಿ!
ಸೇರ್ವೂರು ಕೈಲಾಸಾಗಿರಲಿ! (ಶಿ)
-ವೆ ಪೂಜ್ಯ ತಾಯಿಯಾಗಿರಲಿ!
ಸಾಯುಜ್ಯ ಶಿವನಲ್ಲಾಗಲಿ!
ಗುಹ ಸಹಾಯಕನಾಗಲಿ! (ಹ)
-ತ್ತಿರ ವಿಘ್ನೇಶ್ವರನಿರಲಿ!
ಘುರಾಮನೂ ಅಲ್ಲಿರಲಿ! (ಶೂ)
-ಲಿ ನಿರಂಜನಾದಿತ್ಯಾಗಲಿ!!!

ಶಿವ, ಕಾಮಾಕ್ಷಿ ಸನ್ನಿಧಿಯಲ್ಲಿ! (ಇ)   1(298)

-ವನು ಎಲ್ಲೆಲ್ಲಿರ್ಪ ನಿಜದಲ್ಲಿ!
ಕಾಮಾಕ್ಷಿ ಶಿವನ ಬಿಡಲೆಲ್ಲಿ?
ಮಾರಹರನರ್ಧಾಂಗದಲ್ಲಿ!
ಕ್ಷಿ, ಗತಿ ಇಬ್ಬರಿಂದೆಲ್ಲೆಲ್ಲಿ!
ರಸ, ವಿರಸ ಯೋಗದಲ್ಲಿ! (ಇ)
-ನ್ನಿದನರಿತಿರು ಧ್ಯಾನದಲ್ಲಿ!
ಧಿಕ್ಕಾರವಿರಲಿ ಮೋಹದಲ್ಲಿ!
ಜ್ಞ, ಯಾಗ ಗುರುಜಪದಲ್ಲಿ! (ಇ)
-ಲ್ಲಿ,ನಿರಂಜನಾದಿತ್ಯನಲ್ಲಿ!!!

ಶಿವಕುಮಾರ ನಗುನಗುತ ಬಂದಾ! (ಜೀ)   5(2766)

-ವನ ಸಮಸ್ಯೆ ಬಿಡಿಸಲೀಗ ಬಂದಾ!
ಕುಲಕೆ ಕೀರ್ತಿ ತರಬೇಕೆಲ್ಲರೆಂದಾ!
ಮಾಯೆಗೆ ಮಾರುಹೋಗಬಾರ್ದು ನೀವೆಂದಾ! (ಪ)
-ರಮ ಗುರು ಪರಮೇಶ್ವರ ತಾನೆಂದಾ!
ತಜನರಿಷ್ಟಮೂರ್ತಿಯವನೆಂದಾ!
ಗುಡಿಯವನಿಗೆಲ್ಲರ ಒಡಲೆಂದಾ! (ದಿ)
-ನ, ರಾತ್ರಿ ಪೂಜೆ ಅವಗಲ್ಲಾಗಲೆಂದಾ!
ಗುರಿ ಅವನೇ ನೀನಾಗುವುದು ಎಂದಾ!
ಡಕಬೇಡಿವನನಿನ್ನೆಲ್ಲೂ ಎಂದಾ!
ಬಂದೆನಿದಸಾರಲು ನಿಮ್ಮಲ್ಲಿಗೆಂದಾ! (ಕಂ)
-ದಾ ನಿರಂಜನಾದಿತ್ಯ ಕುಮಾರನೆಂದಾ!!!

ಶಿವಕೃಷ್ಣರಲ್ಲೇಕೆ ಭೇದ? (ಇ)   6(3366)

-ವರೇ ಗುರುವಾದಾಗ ಭೇದ!
ಕೃಷ್ಣರ್ಜುನಗೆ ಗುರುವಾದ! (ಪೂ)
-ಷ್ಣ ಮಾರುತಿಗೆ ಗುರುವಾದ! (ಹ)
-ರ ಪಾರ್ವತಿಗೆ ಗುರೂ ಆದ! (ಇ)
-ಲ್ಲೇ ನಮ್ಮಲ್ಲಿ ವಾದ, ವಿವಾದ!
ಕೆಲಸ, ಕಾರ್ಯವೊಂದ್ವಿನೋದ!
ಭೇದ ರಹಿತ ಆತ್ಮನಾದ!
ತ್ತ ನಿರಂಜನಾದಿತ್ಯಾದ!!!

ಶಿವಗಣ ಕುಣಿಯುವಾ ಶಿವರಾತ್ರಿ! (ಜೀ)   4(1735)

-ವಕೋಟಿಯುದ್ಧಾರ ಗೈವಾ ಶಿವರಾತ್ರಿ!
ಣಪತಿಯಾ ಕುಣಿವಾ ಶಿವರಾತ್ರಿ! (ರ)
-ಣಧೀರ ಕುಮಾರ ದೇವಾ ಶಿವರಾತ್ರಿ!
ಕುಣಿದು ಮೈಮರೆಯುವಾ ಶಿವರಾತ್ರಿ! (ರಾ)
-ಣಿ ಮೃಡಾಣಿಯೋಡಾಡುವಾ ಶಿವರಾತ್ರಿ! (ಆ)
-ಯುರಾರೋಗ್ಯ ಭಾಗ್ಯವೀವಾ ಶಿವರಾತ್ರಿ! (ಶಿ)
-ವಾನಂದಾನುಭವಾಗುವಾ ಶಿವರಾತ್ರಿ!
ಶಿವ, ಶಿವ, ಶಿವೆನ್ನುವಾ ಶಿವರಾತ್ರಿ!
ರ ಗುರು ನೀನೆನ್ನುವಾ ಶಿವರಾತ್ರಿ!
ರಾರಾಜಿಸ್ಯೆಲ್ಲೆಲ್ಲಿರುವಾ ಶಿವರಾತ್ರಿ! (ಅ)
-ತ್ರಿಜ ನಿರಂಜನಾದಿತ್ಯಾನಂದಾ ಶಿವರಾತ್ರಿ!!!

ಶಿವನ ನಂಬಿ ಶವವಾಯಿತೆಲ್ಲ!   6(4105)

ರ್ಣಭೇದ, ಲಿಂಗಭೇದ ಈಗಿಲ್ಲ!
ಶ್ವರಕ್ಕಾಸೆ ಪಡುವುದೇಗಿಲ್ಲ!
ನಂದಿಯಾಗಿಂಗಿತಹಂಕಾರವೆಲ್ಲ!
ಬಿಳಿಪಿಗೆ ಬೂದಿ ಬಳಿಯಿತೆಲ್ಲ! (ಅ)
-ಶನ, ವಸನ, ಚಪಲವೀಗಿಲ್ಲ!
ಜ್ರ, ವೈಡೂರ್ಯಾಲಂಕಾರವೀಗಿಲ್ಲ!
ವಾದಿಸುವ ಬಾಯಿ ಮುಚ್ಚಿಹೋಯ್ತೆಲ್ಲ! (ಆ)
-ಯಿತಿಂತು ನಿಗ್ರಹ ಇಂದ್ರಿಯಕ್ಕೆಲ್ಲ! (ಮಾ)
-ತೆ ಪಾರ್ವತೀ ದೇವಿ ಮನಸ್ಸೀಗೆಲ್ಲ! (ಬ)
-ಲ್ಲ ನಿರಂಜನಾದಿತ್ಯ ಶಿವನೆಲ್ಲ!!!

ಶಿವನ ವಿರಕ್ತಿಯಾಸಕ್ತಿ!   1(263)

ರಸತಿ ವಿಯೋಗವೃತ್ತಿ!
ಗಾಧಿಪ ಸುತೆಯ ಭಕ್ತಿ!
ವಿಶ್ವೇಶ್ವರ ವಿವಾಹಾಸಕ್ತಿ!
ಕ್ಕಸರ ಅನ್ಯಾಯವೃತ್ತಿ! (ಇ)
ಕ್ಕಿದೆ ಕುಮಾರಸಂಭವೋಕ್ತಿ!
ಯಾತನೆಯ ವಿಮರ್ಶಾವೃತ್ತಿ!
ತಿಗಾಯ್ತುಪದೇಶ ಭಕ್ತಿ! (ಶ)
-ಕ್ತಿ! ನಿರಂಜನಾದಿತ್ಯಾಪ್ತಿ!!!

ಶಿವನ ಹೊತ್ತು ಗಿರಿ ಹತ್ತುತಿಹೆನಯ್ಯಾ!   1(403)

ರ ಮಾಯೆಯ ಚಿಕಿತ್ಸೆಗೆ ಸಾಕ್ಷಿಯಯ್ಯಾ!
ಶ್ವರ ಕಾಂಚನ ತಿಪ್ಪೆಯಲಿಹುದಯ್ಯಾ!
ಹೊತ್ತೇರುವಾಗ ಜಗ್ಗುವ ಬಲವಾಗಯ್ಯಾ! (ಆ)
-ತ್ತು ಆಧೀರನಾಗಿ ನಾನಿರುತಿಲ್ಲವಯ್ಯಾ!
ಗಿರಿ, ಮರ ಗಿಡಗಳಿಲ್ಲದಿಹುದಯ್ಯಾ (ಆ)
-ರಿನ್ನಾರೂ ಬಳಿಯಲ್ಲಿಲ್ಲದಿರುವರಯ್ಯಾ!
ತ್ತುವಾಗ ಸೂಂಟ ಬಾಗಿರುತಿಹುದಯ್ಯಾ! (ಕ)
-ತ್ತು ಮೇಲ್ಮುಖವಾಗಿ ಬಲವಗಿಹುದಯ್ಯಾ!
ತಿಳಿಯದಂತೆ ಮಾತುಗಳಾಡುವನಯ್ಯಾ!
ಹೆಜ್ಜೆ ಹೆಜ್ಜೆಗೂ ಭಾರ ಹೆಚ್ಚಿಸುವನಯ್ಯಾ!
ಗುತ ಬೆನ್ನಿಂದಿಳಿದು ನಿಲುವನಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಪ್ರಸನ್ನ ಶಿವಯ್ಯಾ!!!

ಶಿವನಡಿದಾವರೆಯಡಿಯಲ್ಲಿ! (ಪ)   2(802)

-ವಡಿಸಿ ಪಾಡುವವನಡಿಯಲ್ಲಿ!
ಮ್ರತೆಯಿಂದಾ ಪಾದದಡಿಯಲ್ಲಿ! (ಪಾ)
-ಡಿಯೊಡಗೂಡ್ಯಾ ಪಾದದಡಿಯಲ್ಲಿ! (ಸ)
-ದಾನಂದವೀವಾ ಪಾದದಡಿಯಲ್ಲಿ!
ರ ಬ್ರಾಹ್ಮೀ ಮುಹೂರ್ತ ಕಾಲದಲ್ಲಿ! (ಇ)
-ರೆ ಬೇಕಿನ್ನೇನೀ ನರ ಜನ್ಮದಲ್ಲಿ? (ಜ)
-ಯ ಖಂಡಿತವನಡ್ಯಾಶ್ರಯದಲ್ಲಿ! [ಅ]
-ಡಿಗಡಿಗೀ ಭಾಗ್ಯ ಜೀವನದಲ್ಲಿ! (ಕಾ)
-ಯಲೆಮ್ಮನೀ ದುಃಖ ಸಂಸಾರದಲ್ಲಿ! (ಇ)
-ಲ್ಲಿ ನಿರಂಜನಾದಿತ್ಯನಡಿಯಲ್ಲಿ!!!

ಶಿವನಸೇರಿ ಧನ್ಯಳಾದಳ್ಪಾರ್ವತಿ! (ಅ)   6(3742)

-ವಳಿಗಾಗಿ ಶಿವನಾದ ಭಿಕ್ಷಾ ಯತಿ!
ಗೇಂದ್ರ ಸುತೆ ಪಾರ್ವತಿ ಸೂಕ್ಷ್ಮ ಮತಿ!
ಸೇರಿ ಸೇವಾತತ್ಪರಳಾದಳಾ ಸತಿ! (ಕ)
-ರಿವದನನೆಂದರವಳಿಗೆ ಪ್ರೀತಿ!
ರಣಿಯ ನರರಿಗವನೇ ಗತಿ! (ಮಾ)
-ನ್ಯ ಸಿದ್ಧಿ ವಿನಾಯಕ ಸುತನ ನೀತಿ! (ಆ)
-ಳಾಗಿ, ಅರಸಾಗಿ ಪಾಲಿಸುವ ರೀತಿ!
ಯಾಮಯಿ ತಾಯಿಗಿವನಿಂದ ಸ್ಫೂರ್ತಿ! (ಕೀ)
-ಳ್ಪಾಮರರ ಪಂಡಿತರ ಗೈವ ಕೀರ್ತಿ! (ಗ)
-ರ್ವರಹಿತ ಶಿವಗಣ ಚಕ್ರವರ್ತಿ! (ಪ್ರೀ)
-ತಿ ನಿರಂಜನಾದಿತ್ಯನಲ್ಲಿವಗತಿ!!!

ಶಿವನಿಗಾಗಿ ಕಾದಿರು ನೀನು! (ಭ)   5(2925)

-ವತಾರಿಣೀ ನೀನಲ್ಲವೇನು?
ನಿತ್ಯವೂ ಪಾದಸೇವೆ ಮಾಡ್ನೀನು!
ಗಾಳಿ ಬೀಸಿದತ್ತೋಡ್ಬಾರ್ದು ನೀನು!
ಗಿರಿಯಂತಚಲವಾಗ್ಬೇಕ್ನೀನು!
ಕಾರ್ಯ ನಿನಗಿರುವುದಿನ್ನೇನು?
ದಿನ, ರಾತ್ರಿ ಬೆರೆತಿರು ನೀನು!
ರುಚಿ ನೋಡು ಶಿವಾನಂದ ನೀನು!
ನೀಡನುಭವಾಮೃತಾಮೇಲ್ನೀನು! (ನೀ)
-ನು ನಿರಂಜನಾದಿತ್ಯಾತ್ಮಲ್ಲೇನು???

ಶಿವನಿಗೆ ಎಲ್ಲಾ ಗೊತ್ತು! (ಜೀ)   6(3740)

-ವನಿಗೆ ಅದೆಂತು ಗೊತ್ತು!
ನಿನ್ನವನಾತಾದ್ರೆ ಗೊತ್ತು! (ನ)
-ಗೆ ಮುಖ ತೋರಿದ್ರೆ ಗೊತ್ತು!
ಡರ್ತಪ್ಪಿದರೆ ಗೊತ್ತು! (ಚೆ)
-ಲ್ಲಾಟ ವೃತ್ತಿ ಸತ್ತ್ರೆ ಗೊತ್ತು!
ಗೊರಕೆ ಬಿಟ್ಟೆದ್ರೆ ಗೊತ್ತು! (ಗೊ)
-ತ್ತು, ನಿರಂಜನಾದಿತ್ಯಾಯ್ತು!!!

ಶಿವನೆಂತಿರುವನೀಗ? (ಆ)   4(1761)

-ವ ಹವ್ಯಾಸವಿಲ್ಲದೀಗ! (ನಾ)
-ನೆಂಬಹಂಕಾರ ಸುಟ್ಟೀಗ!
ತಿತಿಕ್ಷಾನಂದದಲ್ಲೀಗ! (ತಿ)
-ರುಗಾಟವಿಲ್ಲದಿಲ್ಲೀಗ!
ಸ್ತ್ರಾಲಂಕಾರ ಬಿಟ್ಟೀಗ!
“ನೀ”, “ನಾ” ನೊಂದೆಂದುಮೆಗೀಗ! (ಯೋ)
-ಗ ನಿರಂಜನಾದಿತ್ಯಾಗ!!!

ಶಿವನೊಲಿದರೆ ನಿತ್ಯ ಹೋಳಿ! (ಜೀ)   5(2645)

-ವರಿಗಿಲ್ಲಾಗ ಕಾಮನ ಧಾಳಿ!
ನೊಸಲ್ಗಣ್ಣ ನಾಗ ಮಹಾ ಕಾಳಿ! (ಬ)
-ಲಿಯಾಕೆಗಾಗೆಲ್ಲಾ ಕುರಿ, ಕೋಳಿ!
ಯೆ ತೋರ್ಪಳು ದುಷ್ಟರ ಸೀಳಿ!
(ಧ)ರೆಯನುದ್ಧರಿಸುವಳೆದ್ದೇಳಿ!
ನಿತ್ಯಾನಂದದಲ್ಲೆಲ್ಲರು ಬಾಳಿ! (ಕೃ)
-ತ್ಯದ್ಭುತವಳ್ದೆಂದು ಧೈರ್ಯ ತಾಳಿ! (ಅ)
-ಹೋರಾತ್ರಿ ಸಂಚರಿಪುದಾ ಗಾಳಿ! (ಕಾ)
-ಳಿ, ನಿರಂಜನಾದಿತ್ಯ ಕರಾಳಿ!!!

ಶಿವಪಾದ ಹೊತ್ತಸುತಲೆ!   2(947)

ರ ಗುರುಪುತ್ರನ ತಲೆ!
ಪಾಪರಾಶಿಯ ಸುಟ್ಟ ತಲೆ!
ತ್ತನೆ ಪರಮಾಪ್ತ ತಲೆ!
ಹೊಸೋಪದೇಶವಿತ್ತ ತಲೆ! (ಉ)
-ತ್ತಮ ಭಿಕ್ಷಾಹಾರದ ತಲೆ!
ಸುವಿಮಲ ಪಾಕೇಚ್ಛಾ ತಲೆ!
ಪೋನಿರತಾನಂದ ತಲೆ! (ಲೀ)
-ಲೆ, ನಿರಂಜನಾದಿತ್ಯ ತಲೆ!!!

ಶಿವಭಕ್ತ ಪರಮ ಪೂಜ್ಯನಯ್ಯಾ! (ಅ)   5(2613)

-ವನನ್ಯರೊಡವೆಗಾಶಿಸನಯ್ಯಾ!
ವದ ಭಯವನಿಗಿಲ್ಲವಯ್ಯಾ! (ಮು)
-ಕ್ತನವನು ಜೀವಭಾವದಿಂದಯ್ಯಾ!
ರಮಾರ್ಥ ಪರಮೋದ್ದೇಶವಯ್ಯಾ! (ಪ)
-ರಮಾಪ್ತ ಪರಮ ಗುರುವಿಗಯ್ಯಾ!
ನೋನಿಗ್ರಹಿಯಾಗಿ ಮಾನ್ಯನಯ್ಯಾ!
ಪೂರ್ಣತತ್ವದಿಂದ ಪೂರ್ಣಾನಂದನಯ್ಯಾ! (ರಾ)
-ಜ್ಯಪಟ್ಟದಟ್ಟಹಾಸವಗಿಲ್ಲಯ್ಯಾ! (ಅ)
-ನನ್ಯಭಕ್ತಿಯಲ್ಲಾತ ಲೀನನಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾನಂದಾತಯ್ಯಾ!!!

ಶಿವರಾತ್ರಿ ಒಳಗಿನ ಮಾತೇನಯ್ಯಾ?   2(473)

ರಗುರು ಶಿವನಾದರ್ಶವಿಂದಯ್ಯಾ!
ರಾಕ್ಷಸೀ ವಿಷ ಕುಡಿದನವನಯ್ಯಾ!
ತ್ರಿಶೂಲಿ ಲೋಕೋದ್ಧಾರಕಾರಕನಯ್ಯಾ!
ರಟಾಟ ಇವನಿಗೆ ಆಗದಯ್ಯಾ! (ಆ)
-ಳವಿವನದರಿಯಲಸಾಧ್ಯವಯ್ಯಾ!
ಗಿರಿಜಾರಮಣ ಸದಾಶಿವನಯ್ಯಾ!
ಲಿಸಲಿವನ ಭಜಿಸಿರಯ್ಯಾ!
ಮಾಯಾಧೀಶ, ಶಿವ, ಯೋಗಿರಾಜನಯ್ಯಾ!
ತೇಜೋಮಯ ಊರ್ಧ್ವರೇತನಿವನಯ್ಯಾ!
ಡೆ, ನುಡಿ, ಭಾವ ಭಕ್ತಿ ಪ್ರಿಯನಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾತನೆಂಬೆನಯ್ಯಾ!!!

ಶಿವಶಂಕರಾ ಪರಮೇಶ್ವರಾ!   3(1110)

ರಸುಂದರಾ ಚಂದ್ರಶೇಖರಾ!
ಶಂಕರೀ ವರಾ ಶಾಂತ ಸಾಗರಾ!
ಲಿ ಸಂಹರಾ ಲಲಿತ ವರಾ!
ರಾಜ ಶೇಖರಾ ಗಿರಿಜೇಶ್ವರಾ!
ರ್ವತೇಶ್ವರಾ ಪಾರ್ವತೀಶ್ವರಾ!
ಣ ಭೀಕರಾ ಕರುಣಾಕರಾ!
ಮೇರು ಗಂಭೀರಾರ್ಧನಾರೀಶ್ವರಾ! (ವಿ)
-ಶ್ವ ಸೋದರಾ ಶ್ರೀ ಬಸವೇಶ್ವರಾ!
ರಾಜ ನಿರಂಜನಾದಿತ್ಯೇಶ್ವರಾ!!!

ಶಿವಸ್ವಾಮಿಯಾನಂದ ವಿಜಯ! (ಭ)   2(838)

-ವಭಯ ಹರಾನಂದ ವಿಜಯ!
ಸ್ವಾಮಿಯಾತ್ಮೈಕ್ಯಾನಂದ ವಿಜಯ!
ಮಿತ್ರಗಣಕಾನಂದ ವಿಜಯ! (ಜಾ)
-ಯಾ ಜಯ ಯೋಗಾನಂದ ವಿಜಯ!
ನಂಜುಂಡ, ಭಾವಾನಂದ ವಿಜಯ!
ತ್ತಾನುಗ್ರಹಾನಂದ ವಿಜಯ!
ವಿಮಲ ಪ್ರೇಮಾನಂದ ವಿಜಯ!
ನ್ಮ ರಹಿತಾನಂದ ವಿಜಯ! (ಜ)
-ಯ, ನಿರಂಜನಾನಂದ ವಿಜಯ!!!

ಶಿವಾನಂದ ಕಾರ್ಯದರ್ಶಿ!   1(158)

ವಾಸುದೇವ ಮಾರ್ಗದರ್ಶಿ!
ನಂಜುಂಡಯ್ಯ ದೂರದರ್ಶಿ!
ತ್ತಾತ್ರೇಯ ನಿಜದರ್ಶಿ!
ಕಾರ್ತಿಕೇಯ ಗುಣದರ್ಶಿ! (ಆ)
-ರ್ಯ ಕಾಶ್ಯಪ ಜ್ಞಾನದರ್ಶಿ!
ಂಡಧರ ಧರ್ಮದರ್ಶಿ! (ಇ)
-ರ್ಶಿ! ನಿರಂಜನಾದಿತ್ಯರ್ಶಿ ಒ

ಶ್ರೀ!!!

ಶಿವಾನಂದ ಬಂದ, ಹಲ್ವ ತಿಂದ! (ಯಾ)   4(2353)

-ವಾಗಿನಂತೆ ಅವನಿಂದೂ ಬಂದ! (ಆ)
-ನಂದದಿಂದ ನಮಸ್ಕಾರವೆಂದ!
ರ್ಶನವಾದದ್ದು ಭಾಗ್ಯವೆಂದ!
ಬಂದೆನೀಗ ತಾನೇ ಊರಿಂದೆಂದ!
ಯೆಯಿರಬೇಕು ನಿಮ್ಮದೆಂದ!
ರಸ್ಬೇಕು ಪ್ರಸಾದವಿತ್ತೆಂದ! (ಹ)
-ಲ್ವ ತಿಂದು ಆನಂದವಾಯಿತೆಂದ!
ತಿಂದು, ಹೋಗಿ ಬರ್ತೇನೆ ನಾನೆಂದ!
ತ್ತ ನಿರಂಜನಾದಿತ್ಯಾನಂದ!!|

ಶಿವಾನಂದ ರೂಪ ಅಮಿತ ಪ್ರತಾಪ!   5(2534)

ವಾಮಾಂಗಿಯೊಡಗೂಡ್ಯರ್ಧನಾರಿ ರೂಪ!
ನಂದಕಂದ ರೂಪ ತನ್ನಿಷ್ಟ ಸ್ವರೂಪ!
ಯಾಮಯ ರೂಪಾ ವಿಶ್ವನಾಥ ರೂಪ!
ರೂಪರೇಖಾತೀತ ಪ್ರಣವ ಸ್ವರೂಪ!
ರತತ್ವ ಬೋಧಾನಂದಾ ಗುರುರೂಪ!
ನುಪಮ ರೂಪಾ ಸುಂದರೇಶ ರೂಪ!
ಮಿತ್ರ, ಶತ್ರು ಸಮಾ ಸ್ಥಿತಪ್ರಜ್ಞ ರೂಪ!
ನು, ಮನಾರ್ಪಣರೂಪಾ ತಾಂಡವ ರೂಪ!
ಪ್ರಮಥಗಣರೂಪ ತಾಂಡವ ರೂಪ!
ತಾಳ, ಮೇಳಾನಂದ ರೂಪಾ ವಾಣಿ ರೂಪ! (ತಾ)
-ಪಸಿ ರೂಪಾ ನಿರಂಜನಾದಿತ್ಯ ರೂಪ!!!

ಶಿವಾನಂದನಾರಯ್ಯಾ?   2(533)

ವಾದವಿಲ್ಲದವಯ್ಯಾ! (ಅ)
-ನಂಗನಂತಕನಯ್ಯಾ!
ತ್ತನಲೈಕ್ಯನಯ್ಯಾ!
ನಾಮ ಜಪ ಭಕ್ತಯ್ಯಾ!
ಘುಪತಿಯಾಪ್ತಯ್ಯಾ! (ಅ)
-ಯ್ಯಾ! ನಿರಂಜನನಯ್ಯಾ!!!

ಶಿವಾನಂದವೇ ನಿರಂಜನಾನಂದ!   1(23)

ನಿರಂಜನಾನಂದವೇ ಅಭೇದಾನಂದ!
ಅಭೇದಾನಂದವೇ ಸದಾಶಿವಾನಂದ!
ಸದಾಶಿವಾನಂದವೇ ವಿಮಲಾನಂದ!
ವಿಮಲಾನಂದವೇ ಸಹಜಾನಂದ!
ಸಹಜಾನಂದವೇ ನಿತ್ಯ ಸತ್ಯ ಸಚ್ಚಿದಾನಂದ!
ಸಚ್ಚಿದಾನಂದವೇ ನಿರಂಜನಾದಿತ್ಯಾನಂದ!!!

ಶಿವಾನಂದಾನುಗ್ರಹ ಹಲಗೆ!   2(847)

ವಾಸನಾ ದೂರಾಗಿಹ ಹಲಗೆ!
ನಂಬಿಗೆಗಿಂಬಾಗಿಹ ಹಲಗೆ!
ದಾತನವನಾಗಿಹ ಹಲಗೆ!
ನುಡಗಳಿಗಾಗಿಹ ಹಲಗೆ!
ಗ್ರಹಿಸಲಿಕಾಗಿಹ ಹಲಗೆ!
ರ್ಷಪ್ರದವಾಗಿಹ ಹಲಗೆ!
ರಿನಾಮಕಾಗಿಹ ಹಲಗೆ!
ಕ್ಷ್ಯಾತ್ಮನಿಗಾಗಿಹ ಹಲಗೆ! [ಆ]
-ಗೆ, ನಿರಂಜನಾದಿತ್ಯಾ ಹಲಗೆ!!!

ಶಿವಾಲಯಾ ಲಯಾ ಶಿವ! [ಶಿ]   2(604)

-ವಾಲಯಾ ಕಪಾಲೀ ಶಿವ!
ಯಾ ಶಿವಾ ಸದಾ ಶಿವ! (ಲ)
-ಯಾ ಶಿವಾ ವಿನಾಶೀ ಶಿವ! (ಆ)
-ಲಯಾ ಶಿವಾ ಲಿಂಗಾ ಶಿವ! (ಲ)
-ಯಾ ಜಗತ್ಪ್ರಳಯಾ ಶಿವ!
ಶಿವಾ ಶಿವಾ, ಶಿವಾ ಶಿವ! (ಶಿ)
-ವ, ನಿರಂಜನನಾ ಶಿವ!!!

ಶಿವೇಚ್ಛೆಯಲ್ಲವೇನು ನಾಗ? [ಜೀ]   3(1135)

-ವೇಶ್ವರನಲ್ಲೇನಾಗ ನಾಗ? (ಸ್ವೇ)
-ಚ್ಛೆಯಹಂಕಾರಿಯೇನು ನಾಗ? (ದಾ)
-ಯವಾದ ಮಾಳ್ಪನೇನು ನಾಗ? (ಬ)
-ಲ್ಲವನಲ್ಲೇನು ಶಿವ ನಾಗ?
ವೇದಾಂತಸಾರ ಗುಹ ನಾಗ! (ಅ)
-ನುಮಾನವೇಕಾರಾಮಾ ನಾಗ! (ಆ)
-ನಾಗ, ನೀನಾಗ ಶಿವ ನಾಗ! (ನಾ)
-ಗ ನಿರಂಜನಾದಿತ್ಯ ಯೋಗ!!!

ಶಿಷ್ಟರ ಸಂಗ ಎಂದೆಂದಿಗೂ ಇರ್ಲಿ! (ದು)   5(2612)

-ಷ್ಟರ ಸಂಗ ಎಂದೆಂದೂ ಇಲ್ಲದಿರ್ಲಿ! (ಪ)
-ರಮಾರ್ಥ ಸಿದ್ಧಿಗಗತ್ಯವಿದಿರ್ಲಿ!
ಸಂದೇಹವಿರಲ್ಲಿ ಇಲ್ಲದಿರ್ಲಿ!
ರ್ವ ಬಿಟ್ಟು ಸಾಧನೆ ಸಾಗುತ್ತಿರ್ಲಿ!
ಎಂದೆಂದೂ ಗುರುಕೃಪಾದೃಷ್ಟಿ ಇರ್ಲಿ! (ಒಂ)
-ದೆಂಬಿಬ್ಬರ ಗಂಟು ಬಿಚ್ಚದೇ ಇರ್ಲಿ!
ದಿವ್ಯ ಜ್ಯೋತ್ಯೆಲ್ಲೆಲ್ಲೂ ಬೆಳಗುತ್ತಿರ್ಲಿ!
ಗೂಡಿದಶಾಶ್ವತವೆಂಬರಿವಿರ್ಲಿ!
ದರರ್ಥ ಅಭ್ಯಾಸಿ ಅರಿತಿರ್ಲಿ! (ಇ)
-ರ್ಲಿ ನಿರಂಜನಾದಿತ್ಯನಂತಾಗಿರ್ಲಿ!!!

ಶಿಷ್ಟಾಚಾರ ನಮ್ಮಲ್ಲಿರಲಿ! (ಭ್ರ)   6(3579)

-ಷ್ಟಾಚಾರ ನಮ್ಮಿಂದ ತೊಲಗ್ಲಿ!
ಚಾರಿತ್ರ್ಯ ನಮ್ಮದು ಬೆಳಗ್ಲಿ!
ವಿ ವಂಶದವರಾಳಲಿ!
ಶ್ವರಕ್ಕಾಶಿಸದಿರಲಿ! (ಒ)
-ಮ್ಮತದ ಜನಾಂಗವಿರಲಿ! (ಬ)
-ಲ್ಲಿದ, ಬಡವ, ಭೇದ ಹೋಗ್ಲಿ! (ಪ)
-ರಮಾರ್ಥ ದುಂದುಭಿ ಮೊಳಗ್ಲಿ! (ಮಾ)
-ಲಿಕ ನಿರಂಜನಾದಿತ್ಯಾಗ್ಲಿ!!!

ಶಿಷ್ಯ ಕಂಡ ಗುರು ವಾತ್ಸಲ್ಯ   2(439)

ಗುರು ಶಿವನಾದರ್ಶ ಪುತ್ರ ವಾತ್ಸಲ್ಯ! (ಉ)
-ರು ಪ್ರ್ಯೀಂದಿತ್ತ ಸಂಭಾವನಾ ವಾತ್ಸಲ್ಯ!
ಶಿವನದಿವನಿ ಗಿತ್ತದ್ದಾ ವಾತ್ಸಲ್ಯ! (ಅ)
-ವನಿವನೆಂಬಾ ಪ್ರೇಮಭಾವಾ ವಾತ್ಸಲ್ಯ!
ನಾನವಗೆರಗಿದ್ದನ್ಯೋನ್ಯ ವಾತ್ಸಲ್ಯ!
ದಯಾದೃಷ್ಟ್ಯಾನುಗ್ರಹವನಾವಾತ್ಸಲ್ಯ! (ಸ್ಪ)
-ರ್ಶ ಹಲಗೆಯಿಂದ ಮಾಡಿದ್ದಾವಾತ್ಸಲ್ಯ!
ಪುತ್ರನುದ್ಧಾರಕ್ಕೆ ಅಪ್ಪನಾ ವಾತ್ಸಲ್ಯ!
ತ್ರಯಂಬಕಪ್ಪನಿಗೆನ್ನಲ್ಲಾ ವಾತ್ಸಲ್ಯ!
ವಾದಬಿಟ್ಟು ಮೌನ್ಯಾಗಿದ್ದದ್ದಾ ವಾತ್ಸಲ್ಯ! (ಉ)
-ತ್ಸವಪೂರ್ತಿ ಮುಂದಕ್ಕೆಂದದ್ದಾ ವಾತ್ಸಲ್ಯ! (ಬಾ)
-ಲ್ಯ, ನಿರಂಜನಾದಿತ್ಯಗಿನ್ನೂ ವಾತ್ಸಲ್ಯ!!!

ಶಿಸ್ತಿನ ಉದಯಾಸ್ತದಿಂದರ್ಕನಿಗೇನು ಲಾಭ?   6(4175)

ಸ್ತಿಮಿತ ಚಿತ್ತನಾಗಿರುವುದೊಂದೇ ದೊಡ್ಡ ಲಾಭ!
ರ, ಸುರೋರಗಾದಿಗೆ ಜೀವದಾನವೇ ಲಾಭ!
ನ್ನತ ಸ್ಥಾನ ಅಲಂಕರಿಸಿರುವುದೇ ಲಾಭ!
ಯಾಸಾಗರನೆನಿಸಿಕೊಂಡಿರುವುದೇ ಲಾಭ!
ಯಾರ ಹಂಗಿಲ್ಲದಿರುವುದು ಗುರುಕೃಪಾ ಲಭ!
ಸ್ತವನ ಕವನಕ್ಕಧಿದೇವನಾದದ್ದೇ ಲಾಭ! (ಅಂ)
-ದಿಂದು, ಮುಂದೆಂಬ ಅಜ್ಞಾನವಿಲ್ಲದಿರ್ಪುದೇ ಲಾಭ!
ರ್ಶನ ನಿಷ್ಪಕ್ಷಪಾತದಿಂದೀಯುವುದೇ ಲಾಭ! (ತ)
-ರ್ಕಕ್ಕಳವಡದ ಶಕ್ತಿವಂತನಾದದ್ದೇ ಲಾಭ!
ನಿರ್ಮಲತೆಯ ಪೂರ್ಣಸ್ವರೂಪನಾದದ್ದೇ ಲಾಭ! (ಯೋ)
-ಗೇಶ್ವರ, ತ್ಯಾಗೇಶ್ವರನೆನಿಸಿಕೊಡದ್ದೇ ಲಾಭ!
ನುಡಿಯದೇ ನಡೆಯಿಂದಾದರ್ಶನಾಡದ್ದೇ ಲಾಭ!
ಲಾಭ, ಮಹಾಲಾಭ, ಪೂರ್ಣಲಾಭಾತ್ಮಾನಂದ ಲಾಭ!
ಕ್ತಿ, ಮುಕ್ತಿದಾತ ನಿರಂಜನಾದಿತ್ಯಗಾಲಾಭ!!!

ಶಿಸ್ತಿನ ಸಿಪಾಯಿಗಿಲ್ಲ ಸ್ಥಾನ ಮಾನ! (ಆ)   6(4319)

-ಸ್ತಿ, ಪಾಸ್ತಿ ಇದ್ದವಗೆಲ್ಲಾ ಸ್ಥಾನ, ಮಾನ!
ಡತೆ ಹೇಗಿದ್ದರೂ ಸೇರ್ವರವನ!
ಸಿರಿಯಿಲ್ಲದ ಗುಣಿ ಹೆಣ ಸಮಾನ!
ಪಾಪಿಯೆಂದು ಪರಿಗಣಿಸುವರವನ! (ಬಾ)
-ಯಿ ಮುಚ್ಚಿ ಕೂತುಕೊಳ್ಳೆನ್ನುವರವನ!
ಗಿರಿಯಂತೆ ಅಚಲ ಅವನ ಮನ! (ಎ)
-ಲ್ಲವನು ಸಹಿಸುವುದವನ ಜ್ಞಾನ!
ಸ್ಥಾವರ, ಜಂಗಮಾತ್ಮ ಅವನ ಪ್ರಾಣ!
ಡೆ ನುಡಿಯಲ್ಲೆಲ್ಲಾ ಅದೊಂದೇ ಧ್ಯಾನ!
ಮಾತಿನ ಮಲ್ಲನಂತಲ್ಲವಗಜ್ಞಾನ!
ಮೋ ಶ್ರೀ ನಿರಂಜನಾದಿತ್ಯ ಪಾವನ!!!

ಶೀಲ ಬೇಕು ಸೀತಾರಾಮಗಾಗಿರ್ಬೇಕು!   5(2609)

ಕ್ಷ್ಮಿಯಂತೆ ಸೇವೆಯವನದ್ಮಾಡ್ಬೇಕು!
ಬೇರೆ ಕಡೆ ಲಕ್ಷ್ಯ ಹರಿಸದಿರ್ಬೇಕು!
ಕುಜನರ ಸಂಗವೆಂದೆಂದೂ ಬಿಡ್ಬೇಕು!
ಸೀತಾರಾಮ ತತ್ವವೇನೆಂದರಿಯ್ಬೇಕು!
ತಾಯ್ತಂದೆಗಳಿಗೆದುರಾಡದಿರ್ಬೇಕು!
ರಾತ್ರಿ, ದಿನ, ರಾಮಸ್ಮರಣೆ ಮಾಡ್ಬೇಕು!
ಕ್ಕಳೆಲ್ಲಾ ಲವ, ಕುಶರಂತಾಗ್ಬೇಕು!
ಗಾನ ಶ್ರೀಪಾದದ ಸ್ತೋತ್ರವಾಗಿರ್ಬೇಕು!
ಗಿರಿಸುತೆಯಾದರ್ಶವಿಟ್ಟುಕೊಳ್ಬೇಕು! (ಬೇ)
-ರ್ಬೇರೆ ಮೂರ್ತಿಗಳ ಪೂಜೆ ಬಿಟ್ಟಡ್ಬೇಕು!
ಕುಲ ನಿರಂಜನಾದಿತ್ಯನದ್ದಾಗ್ಬೇಕು!!!

ಶುಕ, ಪಿಕ, ಚಾತಕ, ಹಂಸಗಳಂತೆ ಇರು!   5(2966)

ಲಿತ ರಾಮಮಂತ್ರ ಶುಕದಂತನ್ನುತಿರು!
ಪಿಕದಂತೆ ದ್ರೋಹೀ ಕಾಗೆಗಳ ಸೇರದಿರು!
ಣ್ಣು ಕಿತ್ತು ತಿನ್ನುವ ಪಾತಕಿಗಳವರು!
ಚಾತಕದಂತೆ ಗುರುಕೃಪಾ ಸೋನೆಗಾಗಿರು!
ಕ್ಕುದಲ್ಲದನ್ಯವೃಷ್ಟಿಗಿಷ್ಟಪಡದಿರು!
ರ, ಚರಣಾದಿಂದ್ರಿಯಗಳ ಜಯಿಸಿರು!
ಹಂಸದಂತೆ ಸದ್ಗುಣ ಕ್ಷೀರ ಕುಡಿಯುತಿರು!
ತ್ತಸತ್ತುಗಳ ಜ್ಞಾನದಿಂದಾತ್ಮನಾಗಿರು!
ರುಡನಂತೆ ಶ್ರೀಹರಿಯ ದಾಸನಾಗಿರು! (ಕೀ)
-ಳಂಗಸಂಗದಲ್ಲಿ ಬಿದ್ದು ಸದಾ ಬೇಯದಿರು!
ತೆಗಳಿಕೆ, ಹೊಗಳಿಕೆಗಲಕ್ಷ್ಯವಾಗಿರು!
ಹಸುಖದಾಸೆ ಬಿಟ್ಟಾತ್ಮಾರಾಮನಾಗಿರು! (ಇ)
-ರು ನಿರಂಜನಾದಿತ್ಯಾನಂದಾತ್ಮ ನೀನಾಗಿರು!!!

ಶುಕ್ರವಾರ ವಡೆ ಪಾಯಸದೂಟ!   2(855)

ಕ್ರಮವಿಲ್ಲಿ ಪ್ರತಿವಾರ ಆ ಊಟ!
ವಾಙ್ಮನಶ್ಯದ್ಧಿಪೂರ್ವಕವಾದೂಟ!
ಸಭರಿತವಾದ ಸವಿಯೂಟ!
ರ ದೇವೀ ಪ್ರಸಾದಾನಂದದೂಟ! (ಎ)
-ಡೆ ಹಾಕಿ ಭಕ್ತಿಯಿಂದರ್ಪಿಸುವೂಟ!
ಪಾರ್ವತೀರಮಣಗರ್ಪಣಾ ಊಟ!
ತಿದತ್ತನಿಗಿದು ಭಿಕ್ಷೆಯೂಟ!
ರ್ವಾಭೀಷ್ಟಪ್ರದುಚ್ಛಿಷ್ಟಾನ್ನದೂಟ!
ದೂರ ಹರಿದಾರಿಗಿದೊಳ್ಳೇ ಊಟ! [ಆ]
-ಟ, ನಿರಂಜನಾದಿತ್ಯಗಿಂಥಾ ಊಟ!!!

ಶುದ್ಧ ಪ್ರೇಮ, ವಿಶ್ವಾಸಕ್ಕಿದಲ್ಲ ಕಾಲ! (ಬ)   5(3070)

-ದ್ಧ ಢಾಂಬಿಕರಿಗಿದತ್ಯುತ್ತಮ ಕಾಲ!
ಪ್ರೇತ, ಭೂತಗಳ ಪೂಜಿವುದೀ ಕಾಲ! (ಈ)
-ಮತಾಮತವೆಂಬ ಗುದ್ದಾಟಕ್ಕೀ ಕಾಲ!
ವಿಕಲ್ಪಕ್ಕೆ ಪ್ರಾಧಾನ್ಯವೀವುದೀ ಕಾಲ!
ಶಾಸೋಚ್ಛ್ವಾಸದಲ್ಲಿ ಜಪಿಸದೀ ಕಾಲ!
ತ್ಸಂಗಕ್ಕನಾದರ ತೋರ್ಪುದೀ ಕಾಲ! (ಠ)
-ಕ್ಕಿಗೆ ಮರುಳಾಗುವಾಧುನಿಕ ಕಾಲ!
ತ್ತನಿಗೆ ಶರಣಾಗ್ಬೇಕೆಲ್ಲಾ ಕಾಲ! (ಬ)
-ಲ್ಲನವನವನವತಾರಕ್ಕೆ ಕಾಲ!
ಕಾದಿದಿರು ನೋಡುತ್ತಿರಬೇಕಾ ಕಾಲ!
ಕ್ಷ್ಯ ನಿರಂಜನಾದಿತ್ಯಗದೀ ಕಾಲ!!!

ಶುದ್ಧಪ್ರೇಮವೆಂದರೇನು ಸ್ವಾಮಿ? [ಬ]   4(2216)

-ದ್ಧನಾಗದಾತ್ಮ ಪ್ರೇಮದು ಕಾಮೀ!
ಪ್ರೇಮ ಮನೋವೃತ್ತಿ ತಾನೇ ಸ್ವಾಮಿ? (ಕಾ)
-ಮವಿಲ್ಲದ ಪ್ರೇಮಾರಾಮ ಕಾಮೀ! (ಸಾ)
-ವೆಂಬುದದಕ್ಕಿಲ್ಲಲ್ಲವೇ ಸ್ವಾಮಿ?
ತ್ತ ಸ್ವರೂಪಕ್ಕದಿಲ್ಲ ಕಾಮೀ! (ಈ)
-ರೇಳ್ಲೋಕ ಸ್ವಾಮಿಯವ್ತಾನೇ ಸ್ವಾಮಿ? (ಅ)
-ನುಭವದಿಂದರಿತುಕೋ ಕಾಮೀ!
ಸಾ



ಮೀ ಧ್ಯಾನಮಾಡ್ಬೇಕಲ್ವೇ ಸ್ವಾಮಿ? (ಅ)
ನುಭವದಿಂದರಿತುಕೋ ಕಾಮೀ!
ಸ್ವಾಮಿ ಧ್ಯಾನಮಾಡ್ಬೇಕಲ್ವೇ ಸ್ವಾಮಿ? (ಕಾ)
-ಮೀ! ನಿರಂಜನಾದಿತ್ಯಾಂತರ್ಯಾಮಿ!!!

ಶುದ್ಧವಾಗಬೇಕು ಮನಸಪ್ಪಾ! [ಸಿ]   3(1324)

-ದ್ಧನಾಗಿ ಪರಮಾತ್ಮನಾಗಪ್ಪಾ!
ವಾಗಾಡಂಬರ ವ್ಯರ್ಥ ಕಾಣಪ್ಪಾ!
ಗನ ಸದೃಶನಾಗೀಗಪ್ಪಾ!
ಬೇಗುದಿ ಶಾಂತವಾಗಬೇಕಪ್ಪಾ! (ಸಾ)
-ಕು ಮಾಡಬೇಕೊಲೆಯುರಿಯಪ್ಪಾ!
ಡಿಕೆಗಂಟ ಬಾರದನ್ನಪ್ಪಾ!
ಮ್ರ ಭಾವದಿಂದದನ್ನುಣ್ಣಪ್ಪಾ!
ದಾನಂದದರಿಂದಪ್ಪುದಪ್ಪಾ! (ಇ)
-ಪ್ಪಾ ನಿರಂಜನಾದಿತ್ಯನಿಂತಪ್ಪಾ!

ಶುದ್ಧಿಯ ಪರಮಾವಧಿ ಸಿದ್ಧಿ!   6(3407)

(ಬು)-ದ್ದಿಯಲ್ಲಿದೆ ಮಾಯೆಯ ಅಶುದ್ಧಿ!
ಮ, ನಿಯಮದಿಂದದು ಶುದ್ಧಿ!
ರಿಪರಿಯಾಶಾನಾಶಾ ಶುದ್ಧಿ!
(ಪ)-ರಮಾತ್ಮತ್ವಾ ಶುದ್ಧಿಯಿಂದ ಸಿದ್ಧಿ!
ಮಾತಾಡದೇ ತಿದ್ದಿಕೋಳ್ಬೇಕ್ಬುದ್ದಿ!
ರಗುರು ಕೃಪೆಗಾಗೀ ಶುದ್ಧಿ!
(ನಿ)-ಧಿಯೆಂಬುದೀ ಪರಮಾರ್ಥ ಸಿದ್ಧಿ!
ಸಿಕ್ಕಿದರಿದು ಸ್ಥಿರ ಸಮೃದ್ಧಿ!
(ಸಿ)-ದ್ಧಿ ನಿರಂಜನಾದಿತ್ಯಾನಂದಾಬ್ಧಿ!!!

ಶುಭವಾಗುವುದೆಲ್ಲಕ್ಕೆ ಸುಬ್ಬಯ್ಯಾ!   5(2704)

ಜನೆ ನಿತ್ಯ ಮಾಡಬೇಕ್ಸುಬ್ಬಯ್ಯಾ!
ವಾಸನೆ ನಾಶವಾಗ ಬೇಕ್ಸುಬ್ಬಯ್ಯಾ!
ಗುರುಭಕ್ತಿ ಹೆಚ್ಚಾಗ್ಬೇಕ್ಸುಬ್ಬಯ್ಯಾ! (ಗೋ)
-ವುಗಳ ವಧೆ ನಿಲ್ಲಬೇಕ್ಸುಬ್ಬಯ್ಯಾ!
ದೆವ್ವಗಳ ಪೂಜೆ ಹೊಗ್ಬೇಕ್ಸುಬ್ಬಯ್ಯಾ! (ಬ)
-ಲ್ಲವರ ಮಾತು ಬೆಲ್ಲಾಗ್ಬೇಕ್ಸುಬ್ಬಯ್ಯಾ! (ಧ)
-ಕ್ಕೆ ಧರ್ಮಕ್ಕಾಗದಿರ ಬೇಕ್ಸುಬ್ಬಯ್ಯಾ!
ಜನರ ಸಂಗವಿರ್ಬೇಕ್ಸುಬ್ಬಯ್ಯಾ! (ಅ)
-ಬ್ಬರಾರ್ಭಟ ಗಬ್ಬೆನಬೇಕ್ಸುಬ್ಬಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾಗ್ಬೇಕ್ಸುಬ್ಬಯ್ಯಾ!!!

ಶುಷ್ಕ ಜೀವನವಿದಂತೆ! (ದು)   4(2226)

-ಷ್ಕರ್ಮಕ್ಕಿದು ಕಾಲವಂತೆ! (ಸಂ)
-ಜೀವ ದಯಾಮಯನಂತೆ! (ಭಾ)
-ವ, ಭಕ್ತಿಗೊಲಿವನಂತೆ! (ಮ)
-ನಸ್ಸೇ ಮಾಧವ ತಾನಂತೆ!
ವಿಷಯಾಸೆ ಅಡ್ಡಿಯಂತೆ!
ದಂಭ, ದರ್ಪ, ಬಿಡ್ಬೇಕಂತೆ! (ಮಾ)
-ತೆ ನಿರಂಜನಾದಿತ್ಯಂತೆ!!!

ಶೂಲಿ ವನಮಾಲಿಯಾಗೀಗ ಬಾ! (ಒ)   6(3381)

-ಲಿದು ನಿರಂಜನಿರಾಧೆಗೆ ಬಾ!
ರ್ಷಗಳಹಳಾಯ್ತು ಬೇಗ ಬಾ!
ಗುನಗುತ ನಲಿದಾಡಿ ಬಾ!
ಮಾಡಿಸಿಕೋ ಸೇವೆ ನನ್ನಿಂದ ಬಾ! (ನಿ)
-ಲಿಸು ಸದಾ ನಿನ್ನೊಳಗೆನ್ನ, ಬಾ!
ಯಾಕಿಷ್ಟುಪೇಕ್ಷೆ ನನ್ನಮೇಲೆ? ಬಾ!
ಗೀತಾರ್ಥ ಪ್ರಕಟಿಸೆನ್ನಲ್ಲಿ ಬಾ!
ತಿ ನೀನೇ ನನಗೆ, ಓಡಿ ಬಾ!
ಬಾ, ನಿರಂಜನಾದಿತ್ಯ ನೀನೇ, ಬಾ!!!

ಶೃಂಗಾರಾ ಶ್ರಿರಂಗ ವಿಹಾರ!   4(1625)

ಗಾನ ಸುಧಾಕರ ಮಂದಾರಾ!
ರಾಧವರಾ ಮನ್ಮಥಾಕಾರಾ!
ಶ್ರಿ

ಕರ ಶುಭಕರಾಚಾರಾ!
ರಂಗನಾಯಕಿಯಾತ್ಮಾಗಾರಾ!
ರುಡಗಮನಾ ಶ್ರೀಧರಾ!
ವಿವಿಧ ನಾಮರೂಪಾಪಾರಾ!
ಹಾಡಿ, ಪಾಡುವರಾತ್ಮೋದ್ಧಾರಾ! (ಹ)
-ರಾ, ನಿರಂಜನಾದಿತ್ಯಾಕಾರಾ!!!

ಶೃಂಗೇರಿ ನೋಡುವನು ನಿತ್ಯಾ ಸಾರಂಗ! (ಯೋ)   3(1279)

-ಗೇಶ, ತ್ಯಾಗೇಶ ಮುರುಗೇಶಾ ಸಾರಂಗ! (ಹ)
-ರಿ ಹರ ಬ್ರಹ್ಮ ಸ್ವರೂಪಾತ್ಮಾ ಸಾರಂಗ!
ನೋಟ, ಓಟ, ನಾಟಕಲೋಲಾ ಸಾರಂಗ! (ಉ)
-ಡುಗೊರೆ ಲೋಕಕ್ಕೇ ಬೆಳಕಾ ಸಾರಂಗ!
ನ ಗಿರಿ ಗುಹಾಭಿಮಾನೀ ಸಾರಂಗ! (ಅ)
-ನುದಿನನುಷ್ಟಾನುಕಾದರ್ಶಾ ಸಾರಂಗ!
ನಿತ್ಯ ನಿರ್ಮಲ, ನಿಜಾನಂದಾ ಸಾರಂಗ! (ಕಾ)
-ತ್ಯಾಯಿನಿನಯನಾಪ್ತ ಮಿತ್ರಾ ಸಾರಂಗ!
ಸಾಧು, ಸಜ್ಜನರಭಿಮಾನೀ ಸಾರಂಗ!
ರಂಗನಾಥನಿಗೆ ಸತ್ಸಂಗಾ ಸಾರಂಗ! (ಜ)
-ಗನ್ನಾಥ ನಿರಂಜನಾದಿತ್ಯಾ ಸಾರಂಗ!!!

ಶ್ಯಾಮಸುಂದರನಾಗಿಹನೊಬ್ಬ ನಂಟ!   1(105)

ನಸಾಗಿ ಅವನಾದನೀಗ ಭಂಟ!
ಸುಂದರನಾಗಿ ಕಾಲ್ಕುಂತಾಗೀಗ ನಂಟ!
ತ್ತನಾಮದೀಗೆಲ್ಲರಿಗು ಭಂಟ!
ಕ್ಷಣೆಯ ಭಾರ ಹೊತ್ತಿಹನು ನಂಟ!
ನಾಚಿಕೆಯಿಲ್ಲದ ಅವನೊಬ್ಬ ಭಂಟ!
ಗಿರಿಯಂತಿಹವನೇ ಪ್ರೀತಿಯ ನಂಟ!
ರಿ, ಹರ ಭೇದವಿಲ್ಲದವ ಭಂಟ!
ನೊಸಲಿಗಿದೆ ವಿಭೂತಿ ಸದಾ ನಂಟ! (ಅ)
-ಬ್ಬರದುಬ್ಬರವಿಲ್ಲದಾತೊಬ್ಬ ಭಂಟ!
ನಂಬಿಗೆಯಪಾರ ಹಿರಿಮೆಯ ನಂಟ! (ಅ)
-ಟಕಿಪರಾರ್ನಿರಂಜನಾದಿತ್ಯ ಭಂಟ!!!

ಶ್ಯಾಮಾ! ನಿನ್ನಿಂದೆಲ್ಲರಾರಾಮಾ!   4(1661)

ಮಾಡುತಿಹ ಸೇವೆಯಾರಾಮಾ!
ನಿತ್ಯ, ನಿರ್ಮಲ ಭಾವಾರಾಮಾ! (ನಿ)
-ನ್ನಿಂದನ್ಯರಾರೀವರಾರಾಮಾ? (ಎ)
-ದೆ ಕರಗಿಪ ಮಾತಾರಾಮಾ! (ಗೊ)
-ಲ್ಲ ನೀನೆಲ್ಲರ ನಲ್ಲಾರಾಮಾ!
ರಾಘವನಾಗೈತಂದಾ ರಾಮಾ!
ರಾತ್ರಿ, ದಿನಾತ್ಮಾನಂದಾರಾಮಾ! (ಶ್ಯಾ)
-ಮಾ ನಿರಂಜನಾದಿತ್ಯಾರಾಮಾ!!!

ಶ್ರದ್ಧಾ, ಭಕ್ತಿಯ, ವೃದ್ಧ ಶಾಸ್ತ್ರಿ! (ಉ)   4(1943)

ದ್ಧಾರಾಗಬೇಕೆಂದನಾ ಶಾಸ್ತ್ರಿ!
ಬ್ಧಿಯಿಂದೆಂದನಾ ಶಾಸ್ತಿ! (ಮು)
-ಕ್ತಿಯೇ ಗುರಿಯೆಂದನಾ ಶಾಸ್ತ್ರಿ! (ಕಾ)
-ಯಬೇಕು ನೀನೆಂದನಾ ಶಾಸ್ತ್ರಿ!
ವೃತ್ತಿ ನಿಲ್ಲಿಸೆಂದನಾ ಶಾಸ್ತ್ರಿ! (ಸ)
-ದ್ಧರ್ಮಾತ್ಮ ಧ್ಯಾನೆಂದನಾ ಶಾಸ್ತ್ರಿ!
ಶಾಸ್ತ್ರಾರ್ಥವಿದೆಂದನಾ ಶಾಸ್ತ್ರಿ! (ಶಾ)
-ಸ್ತ್ರಿ, ನಿರಂಜನಾದಿತ್ಯಾ ಶಾಸ್ತ್ರಿ!!!

ಶ್ರದ್ಧೆಯಿಲ್ಲದೆ ಭಾಕ್ತಿಯಿಲ್ಲ! (ಶ್ರ)   6(4234)

-ದೆ





, ಭಕ್ತಿಯಿಲ್ಲದಿದ್ದ್ರೆ ಇಲ್ಲ! (ತಾ)
-ಯಿ, ಮಕ್ಳ ಸಂಬಂಧದಂತೆಲ್ಲ! (ಬೆ)
-ಲ್ಲ ಮತ್ತು ಸಿಹಿಯ ಹಾಗೆಲ್ಲ! (ಹಿಂ)
-ದೆ, ಮುಂದಿನ ಬಂಧುತ್ವವೆಲ್ಲ!
ಕ್ತ ತಿಳಿಯಬೇಕಿದೆಲ್ಲಾ! (ಶ)
-ಕ್ತಿ ಮನಸ್ಸಿಗಿದರಿಂದೆಲ್ಲ! (ಬಾ)
-ಯಿ ಬೊಗಳೆಯಿಂದಾನಂದಲ್ಲ! (ಒ)
-ಲ್ಲ ನಿರಂಜನಾದಿತ್ಯ ಗುಲ್ಲ!!!

ಶ್ರಮಜೀವಿ ನೀನಾಗಿರುವೆ!   4(2138)

ಮತಾ ಬಂಧದಿಂದಿರುವೆ!
ಜೀವನ ಸರಳಾಗಿರುವೆ!
ವಿಚಾರರಿಯದಾಗಿರುವೆ!
ನೀರ್ಮೇಲ ಗುಳ್ಳೆಯಂತಿರುವೆ!
ನಾಮ ಪ್ರೇಮವಿಲ್ಲದಿರುವೆ!
ಗಿರಿಧರಾತ್ಮನಾಗಿರುವೆ! (ಅ)
-ರುಚಿ, ಅಶುಚ್ಯೆನ್ನದಿರುವೆ! (ಸೇ)
-ವೆ ನಿರಂಜನಾದಿತ್ಯಗೆನ್ವೆ!!!

ಶ್ರೀ ಕೃಷ್ಣನಾದರ್ಶಾತಿಥ್ಯ!   2(610)

ಕೃಷ್ಣನ ಕುಚೇಲಾತಿಥ್ಯ! (ವೈ)
-ಷ್ಣವಾಪ್ತ ಮಿತ್ರನಾತಿಥ್ಯ! (ಅ)
-ನಾದರವಿಲ್ಲದಾತಿಥ್ಯ!
ರಿದ್ರಗಾಯ್ತಿಂತಾತಿಥ್ಯ! (ಸ್ಪ)
-ರ್ಶಾನಂದ ಶ್ರೀ ಕೃಷ್ಣಾತಿಥ್ಯ! (ಸ್ಥಿ)
-ತಿ ಪರಿವರ್ತನಾತಿಥ್ಯ! (ಮಿ)
-ಥ್ಯಾದಿತ್ಯಗಿಲ್ಲದಾತಿಥ್ಯ!!!

ಶ್ರೀ ಕೃಷ್ಣಾರ್ಪಣರ್ವತ್ತಾರರ ಸಂದೇಶ!   5(2551)

ಕೃಪೆದೋರಿ ಬರೆಸಿದನೀ ಸಂದೇಶ! (ತೃ)
-ಷ್ಣಾದಿಗಳಿರ್ಬಾರದೆಂಬುದೀ ಸಂದೇಶ! (ದ)
-ರ್ಪ, ದಂಭ, ಬಿಡಬೇಕೆಂಬುದೀ ಸಂದೇಶ!(ಪ್ರ)
-ಣವ ಸ್ವರೂಪ ನೀನೆಂಬುದೀ ಸಂದೇಶ! (ಸ)
-ರ್ವಕಾರಣ ಕರ್ತದೆಂಬುದೀ ಸಂದೇಶ!
(ದ)ತ್ತಾತ್ರೇಯಾನಂದವಿದೆಂಬುದೀ ಸಂದೇಶ! (ಪ)
-ರತತ್ವದ ಗುರಿದೆಂಬುದೀ ಸಂದೇಶ! (ನಿ)
-ರತಾಭ್ಯಾಸ ಮಾಡದೆಂಬುದೀ ಸಂದೇಶ!
ಸಂತಸ ನೀಡ್ವುದದೆಂಬುದೀ ಸಂದೇಶ!
ದೇವದೇವ ನೀನಾಗ್ವೆಂಬುದೀ ಸಂದೇಶ! (ಈ)
-ಶ ನಿರಂಜನಾದಿತ್ಯೆಂಬುದೀ ಸಂದೇಶ!!!

ಶ್ರೀ ಗುರು ವೆಂಕಟೇಶನೆಂದರಿ ನೀನು!   5(3236)

ಗುಹ್ಯಾದಿಂದ್ರಿಯ ಚಪಲ ಬಿಡು ನೀನು! (ಇ)
-ರುವಷ್ಟ್ರಲ್ಲೇ ಮಕ್ಕಳ ಸಾಕು ನೀನು!
ವೆಂಕಟೇಶೇಚ್ಛೆಯಂತೆಲ್ಲಾಯ್ತೆನ್ನು ನೀನು!
ಪಟ ವಿಶ್ವಾಸ ತೋರ್ಬಾರದು ನೀನು! (ಪೇ)
-ಟೆ ಬೀದಿಗಳಲ್ಲೋಡಾಡಬೇಡ ನೀನು!
ಬರಿಯಂತಾಗ್ವ ಶಪಥ ಮಾಡ್ನೀನು!
ನೆಂಟರಿಷ್ಟರೆಲ್ಲಾತನೆಂದರಿ ನೀನು!
ತ್ತ ಭಜನೆ ನಿತ್ಯ ಮಾಡ್ಬೇಕು ನೀನು! (ಯಾ)
-ರಿಗೂ ಅಧೀನಳಾಗಿರ್ಬಾರ್ದು ನೀನು!
ನೀತಿ, ರೀತಿ ಶುದ್ಧವಾಗಿಟ್ಟುಕೋ ನೀನು! (ತ)
-ನುಜೆ ನಿರಂಜನಾದಿತ್ಯನಿಗೆ ನೀನು!!!

ಶ್ರೀ ಗುರು ಶಿವನಂದನಗಿದು ಷಷ್ಠಿ!   1(53)

ಗುರು ಹರಸಿದ ನಿರಂಜನ ಷಷ್ಠಿ!
ರುಚಿ ಶುಚಿಯಳಿಯದವಧೂತ ಷಷ್ಠಿ!
ಶಿವ ಶಕ್ತಿ ನಿರಂಜನಾದಿತ್ಯ ಷಷ್ಠಿ!
ರ್ಷಧಾರೆ ಸುರಿದ ಸಮೃದ್ದಿ ಷಾಷ್ಠಿ!
ನಂಬಿದವರಿಂಬು ಕಂಡಾನಂದ ಷಷ್ಠಿ!
ತ್ತ ನಿರಂಜನಾದಿತ್ಯನೆಂದ ಷಷ್ಠಿ!
“ನ ಗುರೋರಧಿಕೆಂ”ದು ಕುಣಿದಾ ಷಷ್ಠಿ!
ಗಿರಿಧರಾನಂದ ರಾಸಲೀಲಾ ಷಷ್ಠಿ!
ದುರಾತ್ಮರಳಿದ ನಿಜಾನಂದ ಷಷ್ಠಿ!
ಣ್ಮುಖ ನಿರಂಜನಾದಿತ್ಯೈಕ್ಯ ಷಷ್ಠಿ! (ಇ)
ಷ್ಟಿಯಿದು “ನಿರಂಜನ” ಕಲ್ಯಾಣ ಷಷ್ಠಿ!!!

ಶ್ರೀ ಗುರು ಶಿವಪುತ್ರನಿಗಿದು ಷಷ್ಠಿ ಕಾಲ!   1(37)

ನಿತ್ಯದಲಾದಿತ್ಯನನು ಸೇವಿಸುವ ಕಾಲ!
ರಂಗಿನಂಬರವಿರದ ದಿಗಂಬರ ಕಾಲ!
ಜನಕಾನಂದವೀವ ಜಗತ್ಕಲ್ಯಾಣ ಕಾಲ!
”ನ ಗುರೋರಧಿಕಂ” ಭಜನೆಗೆ ಯೋಗ್ಯಕಾಲ!
ಷಷ್ಠಿ ವರ್ಷವಿದು ಪತಿತಪಾವನ ಕಾಲ! (ಇ)
-ಷ್ಠಿಯಿದು ನಿರಂಜನಾದಿತ್ಯರ ಯೋಗ ಕಾಲ!!!

ಶ್ರೀ ಗುರುಪಾದ ನಂಬಿ ಯಾರೇನಾದ?   4(1467)

ಗುಡಿ, ಗೋಪುರ ಕಟ್ಟಿ ಯಾರೇನಾದ? (ತು)
-ರು, ಕರು ಸೇವೆ ಮಾಡಿ ಯಾರೇನಾದ?
ಪಾಡ್ಯಾಡಿ, ಕುಣಿದಾಡಿ ಯಾರೇನಾದ?
ರಿದ್ರರ್ಗನ್ನ ನೀಡಿ ಯಾರೇನಾದ?
ನಂದಾದೀಪ ಉರಿಸಿ ಯಾರೇನಾದ?
ಬಿಟ್ಟಶನ, ವಸನ ಯಾರೇನಾದ?
ಯಾದವೇಂದ್ರನಿಗಾಗಿ ಯಾರೇನಾದ?
ರೇಚಕಾದಿಗಳಿಂದ ಯಾರೇನಾದ?
ನಾಮ, ಭಜನೆಯಿಂದ ಯಾರೇನಾದ? (ಆ)
-ದ ನಿರಂಜನಾದಿತ್ಯ ಶಿವನಾಂದ!!!

ಶ್ರೀ ಗುರುವರ ಕರುಣಾಕರ!   2(765)

‘ಗು’ ಕಾರಜ್ಞಾನಾಂಧಕಾರ ಹರ!
‘ರು’ಕಾರ ಜ್ಞಾನಾನುಗ್ರಹಕಾರ!
ನಜಭವ, ಶ್ರೀಹರಿ, ಹರ!
ಘುಪತಿ ರಾಘುವ ಶ್ರೀಕರ!
ರಿ ಚರ್ಮಾಂಬರ ಮಾರಹರ!
ರುದ್ರಗಣನಾಯಕ ಶಂಕರ! (ಗ)
-ಣಾಧಿಪತಿ ಸರ್ವವಿಘ್ನಹರ!
ರ್ಮ, ಧರ್ಮಾವತಾರ ದಿವಾಕರ! (ಕಾ)
-ರಣಿ ನಿರಂಜನಾದಿತ್ಯ ಹರ!!!

ಶ್ರೀ ಗುರುಸೇವೆ ಮಾಡಬೇಕು!   4(1517)

ಗುಡಿ ತನ್ನೊಡಲಾಗಬೇಕು! (ಹ)
-ರುಷ ಮನಸಿಗಿರಬೇಕು!
ಸೇತು ಬಂಧ ಮುಗಿಸಬೇಕು!
ವೆಚ್ಚವಾಗುವುದಾಗಬೇಕು!
ಮಾರಾರಿಯ ಜಪಿಸಬೇಕು! (ಕ)
-ಡಲ ಜಲವ ದಾಟಬೇಕು!
ಬೇರೆಡೆ ನೋಡದಿರಬೇಕು! (ಬೇ)
-ಕು ನಿರಂಜನಾದಿತ್ಯಾಗ್ಬೇಕು!!!

ಶ್ರೀ ತ್ಯಾಗರಾಜ ವಿಶ್ವಸ್ಥ ಸಮಿತಿ! (ಸ)   6(4035)

-ತ್ಯಾ ಸತ್ಯ ಜ್ಞಾನದಾದಿರ್ಲೀ ಸಮಿತಿ! (ಗ)
-ಗನ ಸದೃಶಾತ್ಮನಿಗಾಗೀ ಸಮಿತಿ!
ರಾಗ, ಭಾವ ಸಿದ್ಧಿಗಾಗೀ ಸಮಿತಿ!
ಗತ್ಕಲ್ಯಾಣ ಕಾರ್ಯಕ್ಕೀ ಸಮಿತಿ!
ವಿಕಲ್ಪ ಸಂಕಲ್ಪಾಂತ್ಯಕ್ಕೀ ಸಮಿತಿ!
ಶ್ವಪಚತ್ವ ವಿನಾಶಕ್ಕೀ ಸಮಿತಿ! (ಸ್ವ)
ಸ್ಥ ಚಿತ್ತ ಪ್ರಾಪ್ತಿಯಾಗಲಕ್ಕೀ ಸಮಿತಿ!
ರ್ವೋದಯ ವಿಜಯಕ್ಕೀ ಸಮಿತಿ!
ಮಿತ್ರಭಾವ ಬೆಳಗ್ಲಿಕ್ಕೀ ಸಮಿತಿ! (ಪ್ರೀ)
-ತಿ ನಿರಂಜನಾದಿತ್ಯಗೀ ಸಮಿತಿ!!!

ಶ್ರೀ ಪಾದ ಪ್ರೇಮಾನಂದ ಲೀಲ!   1(240)

ಪಾದಾಶ್ರಯದಾಸಕ್ತಿ ಲೀಲ! (ಅ)
-ದಕಾಗಿ ಆಳುವುದು ಲೀಲ!
ಪ್ರೇರಣಾಂತರ್ಯಾಮಿಯ ಲೀಲ!
ಮಾತಿಲ್ಲದಾನಂದಿಪ ಲೀಲ!
ನಂಬಿಗೆ ಅಕಳಂಕ ಲೀಲ! (ಅ)
-ದವನದೊಂದು ಬಾಲ ಲೀಲ
ಲೀನ ಮನಕಾನಂದ ಲೀಲ! (ಕಾ)
-ಲ ನಿರಂಜನಾದಿತ್ಯ ಲೀಲ!!!

ಶ್ರೀ ಪಾದದಲೈಕ್ಯವಾಗ ಬೇಕಪ್ಪಾ!   3(1039)

ಪಾಪರಾಶಿ ನಾಶವಾಗಬೇಕಪ್ಪಾ!
ಯೆ ಗುರುವಿನದಿರ ಬೇಕಪ್ಪಾ!
ತ್ತ ತಾನೇ ಗುರುವಾಗ ಬೇಕಪ್ಪಾ!
ಲೈಂಗಿಕ ಭೇದ! ಅಡಗ ಬೇಕಪ್ಪಾ! (ಐ)
-ಕ್ಯಮನಸವನ ಲಾಗ ಬೇಕಪ್ಪಾ!
ವಾಸುದೇವನುಪದೇಶ ಬೇಕಪ್ಪಾ!
ತಿಗದೇ ದಾರಿಯಾಗ ಬೇಕಪ್ಪಾ!
ಬೇರೆಲ್ಲಾ ಚಪಲಳಿಯ ಬೇಕಪ್ಪಾ!
ನಸು ನೆನಸಲ್ಲೈ



ಬೇಕಪ್ಪಾ! (ಅ)
-ಪ್ಪಾ ನಿರಂಜನಾದಿತ್ಯ ಶ್ರೀಪಾದಪ್ಪಾ!!!

ಶ್ರೀ ಮುಖಕ್ಕೆ ಮಂಗಳಾರತಿಯಾಯ್ತು!   4(2008)

ಮುನಿಜನ ಮನಕ್ಕಾನಂದವಾಯ್ತು! (ಶಂ)
-ಖ, ಚಕ್ರಧಾರಿಯನುಗ್ರಹವಾಯ್ತು! (ಬೆ)
-ಕ್ಕೆ ಸಮೂಲವಾಗಿ ನಿರ್ಮೂಲವಾಯ್ತು!
ಮಂದಿರ ಬಹಳ ಪ್ರಶಾಂತವಾಯ್ತು! (ಯೋ)
-ಗಸಿದ್ಧಿಯುದಯ ಗೋಚರವಾಯ್ತು! (ಬೋ)
-ಳಾ ಶಂಕರಗಣಕ್ಕೆ ಹರ್ಷವಾಯ್ತು! (ಪ)
-ರಮಾರ್ಥ ಜೀವನಕ್ಕೆ ಜಯವಾಯ್ತು (ಜಾ)
-ತಿ, ಮತ, ಭೇದ ಸುಳ್ಳೆಂಬರಿವಾಯ್ತು! (ಕಾ)
-ಯಾಭಿಮಾನ ಹೋಗ್ಯಾತ್ಮಜ್ಞಾನವಾಯ್ತು! (ಆ)
-ಯ್ತು, ನಿರಂಜನಾದಿತ್ಯಾನಂದವಾಯ್ತು!!!

ಶ್ರೀ ಸೀತಾರಾಮರಂತರಂಗದಲ್ಲಿ! (ಆ)   3(1308)

-ಸಿ

ನರಾಗಿರುವರಾನಂದದಲ್ಲಿ!
ತಾಪಸರ ದಿವ್ಯ ಸನ್ನಿಧಿಯಲ್ಲಿ!
ರಾಮನಾಮಸ್ಮರಣಾ ವೇಳೆಯಲ್ಲಿ!
ನೋಲಯದುತ್ತಮ ಸ್ಥಿತಿಯಲ್ಲಿ! (ಸಾ)
-ರಂಗನೇರಿ ಬರುವ ಕಾಲದಲ್ಲಿ!
ತ್ವ ದರ್ಶನಾನಂದೋದ್ಯೋಗದಲ್ಲಿ!
ರಂಜಿಸುಸರು ಪೂರ್ಣ ಶೋಭೆಯಲ್ಲಿ!
ರ್ವರಹಿತ ಭಾವ ಭಂಗಿಯಲ್ಲಿ!
ರ್ಶನ ಪಾವನವಾಗಿಹುದಲ್ಲಿ! (ಅ)
-ಲ್ಲಿ, ನಿರಂಜನಾದಿತ್ಯನಡಿಯಲ್ಲಿ!!!

ಶ್ರೀ ಹರಿಗೀಶ್ವರನಾಪ್ತ ಮಿತ್ರ!   4(2307)

ರನಿಂದುರಿಪ ಹತಿ ಪುತ್ರ! (ಅ)
-ರಿಯದಾ ವಿಧಿ ಲೀಲೆ ವಿಚಿತ್ರ!
ಗೀರ್ವಾಣಿಯರಸ ತಾ ಪವಿತ್ರ! (ನ)
-ಶ್ವರದುತ್ಪತ್ತಿ ಗೈವ ಸರ್ವತ್ರ!
ಮೇಶಾರ್ಚನೆಗೆ ತುಳ್ಸೀ ಪತ್ರ!
ನಾಗೇಶ್ವರಗೆ ಕಪಾಲ ಪಾತ್ರ! (ಲಿ)
-ಪ್ತನಲ್ಲ ತಾನೆಂಬಾ ಬ್ರಹ್ಮ ಮಾತ್ರ!
ಮಿತ್ರನೊಬ್ಬ ಜಗಕೆಲ್ಲಾ ನೇತ್ರ! (ಮಿ)
-ತ್ರ ನಿರಂಜನಾದಿತ್ಯಾತ್ಮ ಕ್ಷೇತ್ರ!!!

ಶ್ರೀಕಂಠಾ! ನೀಲಕಂಠಾ!! ಬಾ ನೆಂಟಾ!!!   4(1689)

ಕಂಠಾಭರಣಗಳ ತೊಟ್ಟು ಬಾ ನೆಂಟಾ!
ಠಾವಾಗಿಹ ಕೈಲಾಸ ಬಿಟ್ಟು ಬಾ ನೆಂಟಾ!
ನೀನಿಲ್ಲದಿನ್ಯಾರೂ ದಿಕ್ಕಿಲ್ಲ ಬಾ ನೆಂಟಾ!
ಯಗೊಳಿಸೆನ್ನ ನಿನ್ನಲ್ಲಿ ಬಾ ನೆಂಟಾ!
ಕಂಪಿಸುತಿಹೆ ಭವದಲ್ಲಿ ಬಾ ನೆಂಟಾ!
ಠಾವೆನಗೆ ನಿನ್ನ ಶ್ರೀಪಾದ ಬಾ ನೆಂಟಾ!
ಬಾಲೇಂದುಧರ ಗಂಗಾಧರ ಬಾ ನೆಂಟಾ!
ನೆಂಟ, ಭಂಟ, ಶ್ರೀಶಿಥಿಕಂಠ ಬಾ ನೆಂಟಾ! (ಊ)
-ಟಾ ನಿರಂಜನಾದಿತ್ಯಾನಂದ ಬಾ ನೆಂಟಾ!!!

ಶ್ರೀಕಾಂತ ಏಕಾಂತದಲ್ಲಿ!   2(700)

ಕಾಂತಾರಂತರಂಗದಲ್ಲಿ!
ಪಕನುಕೂಲವಲ್ಲಿ!
ರುಪೇರೇನಿಲ್ಲವಲ್ಲಿ!
ಕಾಂತೆ ಸದಾ ಸೇವೆಯಲ್ಲಿ!
ರಣಿ ವಿರಾಜಿಪಲ್ಲಿ!
ರ್ಶನಾನಂದವಿದಲ್ಲಿ! (ಇ)
-ಲ್ಲಿ, ನಿರಂಜನಾದಿತ್ಯಲ್ಲಿ!!!

ಶ್ರೀಗುರು ಶಿವತನಯಗಿದು ನಿರಂಜನ ಷಷ್ಠಿ!   1(54)

ಗುರುಗುಹ ಸಹೋದರನಿಷ್ಠಿ ನಿರಂಜನ ಷಷ್ಠಿ!
ರುಚಿ ಶುಚಿಯಳಿದ ಸಂತುಷ್ಟಿ ನಿರಂಜನ ಷಷ್ಠಿ!
ಶಿವಗಿಷ್ಠಿ, ವಿಗತ ಸಂಕಷ್ಠಿ ನಿರಂಜನ ಷಷ್ಠಿ!
ರ್ಷ ವೃಷ್ಠಿ ; ಧನ ಧಾನ್ಯ ಪುಷ್ಠಿ ನಿರಂಜನ ಷಷ್ಠಿ!
ರಣಿಗಿಷ್ತಿ, ಧರಣಿಗಿಷ್ಟಿ ನಿರಂಜನ ಷಷ್ಠಿ!
ರರಿಗಿಷ್ಟಿ, ಸುರರಿಗಿಷ್ಟಿ ನಿರಂಜನ ಷಷ್ಠಿ!
ಮೇಂದ್ರಾದಿ ದಿಕ್ಪಾಲಕರಿಷ್ಟಿ ನಿರಂಜನ ಷಷ್ಠಿ!
ಗಿರಿಧರ ಗೋಪಾಲಗಿದಿಷ್ಟಿ ನಿರಂಜನ ಷಷ್ಠಿ!
ದುರಾತ್ಮರುದ್ಧಾರಾಮೃತದಿಷ್ಟಿ ನಿರಂಜನ ಷಷ್ಠಿ!
ನಿಷ್ಠೆ, ನೇಮಾನುಷ್ಟಾನಗಳಿಷ್ಟಿ ನಿರಂಜನ ಷಷ್ಠಿ!
ರಂಗ ಶ್ರೀರಂಗರಿಗಿದು ಇಷ್ಟಿ ನಿರಂಜನ ಷಷ್ಠಿ!
ಪೇಷ್ಟಿ, ತಪೇಸ್ತಿ, ಪರಮೇಷ್ಟಿ ನಿರಂಜನ ಷಷ್ಠಿ!
“ನಗುರೋರಧಿಕಂ!” ಭಜನೇಷ್ಟಿ ನಿರಂಜನ ಷಷ್ಠಿ!
ಷ್ಟಿಷ್ಟಿ, ಸರ್ಪಾಭೀಷ್ತ ಸಂತುಷ್ಟಿ ನಿರಂಜನ ಷಷ್ಠಿ! (ಇ)
-ಷ್ಠಿ ನಿರಜನಾದಿತ್ಯ ದತ್ತೇಷ್ಟಿ ನಿರಂಜನ ಷಷ್ಠಿ!

ಶ್ರೀಧರನ ಪಾದ ತಲೆ ಮೇಲೆ!   2(939)

ರ್ಮಸಂಸ್ಥಾಪನೆಯಿನ್ನು ಮೇಲೆ!
ಮೆಯೊಳಗಿರ್ಪಳಿನ್ನು ಮೇಲೆ!
ಲ್ಲನಾಜ್ಞಾಬದ್ಧಳಿನ್ನು ಮೇಲೆ!
ಪಾತ್ರದಾಕೆಯಾಗಳಿನ್ನು ಮೇಲೆ!
ಯಾನುಗ್ರಹಾಯ್ತವಳ ಮೇಲೆ!
ನು, ಮನ ಸೇವಿಗಿನ್ನು ಮೇಲೆ! (ಬೆ)
-ಲೆ ಜಾಳಕಳಾಗಳಿನ್ನು ಮೇಲೆ!
ಮೇಲೆ ಮೇಲೇರುವಳಿನ್ನು ಮೇಲೆ! (ಬಾ)
-ಲೆ, ನಿರಂಜನಾದಿತ್ಯ ಲೀಲೆ!!!

ಶ್ರೀಧರನರವತ್ತೊಂದನೆಯ ಜಯಂತ್ಯುತ್ಸವ!   2(740)

ರ್ಮ ಸಂಸ್ಕೃತಿಯ ಶ್ರೀ ಜಯಂತಿಯ ಜನ್ಮೋತ್ಸವ!
ಮಾರಮಣಗಿದಾನಂದದ ಪವಿತ್ರೋತ್ಸವ!
ರ ನಾರಿಯರ ಗುರುಭಕ್ತಿಯಮೃತೋತ್ಸವ!
ಸ ಗೀತಾತ್ರಯದತಿ ಮಧುರ ಪಾನೋತ್ಸವ!
ರ ಗುರು ಸ್ವಾಮಿಯ ಆಶೀರ್ವಾದ ಲಾಭೋತ್ಸವ! (ಸ)
-ತ್ತೊಂದೇ ಶಾಶ್ವತವೆಂದರಿತಾನಂದಿಪೋತ್ಸವ!
ತ್ತ ಗುರುದೇವನ ಸಚ್ಚಿದಾನಂದದೋತ್ಸವ!
ನೆನೆನೆನೆದು ನಲಿವ ಭಕ್ತರಾನಂದೋತ್ಸವ!
ತಿಪತಿಯ ಶ್ರೀ ಪಾದಪೂಜೆಯಾನಂದೋತ್ಸವ!
ಯ ಶ್ರೀಧರಸ್ವಾಮಿಗೆಂಬ ಹರ್ಷೋದ್ಗಾರೋತ್ಸವ!
‘ಯಂದರೋ ಮಹಾನುಭಾವುಲೆಂ’ದಾನಂದಿಪೋತ್ಸವ! (ಅ)
-ತ್ಯುತ್ತಮ ಪುಣ್ಯದಿನವಿದೆಲ್ಲರ ಭಾಗ್ಯೋತ್ಸವ! (ಸ)
-ತ್ಸಹವಾಸವಿದೆಲ್ಲರ ಜನ್ಮ ಪಾವನೋತ್ಸವ!
ರ ಗುರು ಶ್ರೀಧರ ನಿರಂಜನಾದಿತ್ಯೋತ್ಸವ!!!

ಶ್ರೀನಿಧಿ ಸಿಂಗಾರಿ ಬಸವ ಮೂಗಯ್ಯಾ!   4(1610)

ನಿರ್ಮಲ ತಾಳಗತಿಯಿವರದಯ್ಯಾ!
ಧಿಮಿ, ಧಿಮ್ಯೆಂದೆಲ್ಲರ ಕುಣಿಪುದಯ್ಯಾ!
ಸಿಂಗಾರಾದ್ಯೆಲ್ಲಾ ಭಾವರಸದಿಂದಯ್ಯಾ!
ಗಾಯಕರಿದರಿಂದುತ್ಸಾಹಿಗಳಯ್ಯಾ!
ರಿವಾಜಿನಲ್ಲೆಳ್ಳಷ್ಟೂ ತಪ್ಪಿಲ್ಲವಯ್ಯಾ!
ಹು ಸರಳ ಜೀವಿಗಳಿವರಯ್ಯಾ!
ತ್ಸಂಗ ಪ್ರೇಮಿಗಳಾಗಿರುವರಯ್ಯಾ!
ರ ಗುರು ಚರಣ ಕಿಂಕರರಯ್ಯಾ!
ಮೂರ್ತಿತ್ರಯರಿವರಿಗೆ ಪೂಜ್ಯರಯ್ಯಾ!
ರ್ವವಿವರಲ್ಲೇನೇನೂ ಇಲ್ಲವಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾರಾಮಯ್ಯಾ!!!

ಶ್ರೀನಿಧಿ ಸಿಂಗಾರಿ ಬಸವಾರಾಮಯ್ಯಾ!   4(1611)

ನಿರ್ದಿಷ್ಟ ಲೆಃಖಾಚಾರ ತಾಳದಲ್ಲಯ್ಯಾ!
ಧಿಕ್ಕಾರಾರನ್ನೂ ಮಾಡುವುದಿಲ್ಲವಯ್ಯಾ!
ಸಿಂಗಾರಾದಿ ಭಾವೈಕ್ಯಾ ಮೃದಂಗವಯ್ಯಾ!
ಗಾಯಕಗಿದು ಯುಕ್ತ ಸಹಾಯವಯ್ಯಾ!
ರಿವಾಜು ಬದ್ಧ ಸಂಚಾರದರದಯ್ಯಾ!
ಡಾಯಿ ಕೊಚ್ಚಿಕೊಳ್ಳುವುದಿಲ್ಲವಯ್ಯಾ!
ತ್ಸಂಗ ಸದಾ ಬಿಟ್ಟಿರುವುದಿಲ್ಲಯ್ಯಾ!
ವಾದ, ಭೇದಕ್ಕೆಡೆ ಕೊಡುವುದಿಲ್ಲಯ್ಯಾ!
ರಾಮ ಸೇವೆಗಾಗೀ ಜನ್ಮ ಮೀಸಲಯ್ಯಾ!
ಹಾದೇವಾತ್ಮ ಭಾವವೆಲ್ಲರಲ್ಲಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾನಂದಾ ಮೂಗಯ್ಯಾ!!!

ಶ್ರೀನಿವಾಸ ಶ್ರೀ ಗುರು ವಿಜಯಾ!   4(1767)

ನಿನಗವನೇ ಗುರು ವಿಜಯಾ!
ವಾದ್ಯ ಕೋವಿದನವ ವಿಜಯಾ!
ದ್ಗುರುಗೆ ಕೀರ್ತಿ ತಾ ವಿಜಯಾ!
ಶ್ರೀರಂಗಾಶೀರ್ವಾದದು ವಿಜಯಾ!
ಗುರುಭಕ್ತಿಗಾ ಫಲ ವಿಜಯಾ!
ರುಕ್ಮಿಣೀಶ ಶ್ರೀಕಾಂತ ವಿಜಯಾ!
ವಿಷಯಿಯಲ್ಲಾ ನಲ್ಲ ವಿಜಯಾ!
ಗದೊಡೆಯಾ ಕೃಷ್ಣ ವಿಜಯಾ! (ಜೀ)
-ಯಾ ನಿರಂಜನಾದಿತ್ಯ ವಿಜಯಾ!!!

ಶ್ರೀನಿವಾಸ, ಭಾರತಿಯಚ್ಚಮ್ಮಾ!   2(909)

ನಿಶ್ಚಲನನ್ಯ ಭಕ್ತಿಯದಮ್ಮ!
ವಾರಿಜನಾಭನಾಶೀರ್ವಾದಮ್ಮ!
ತತ ತೃಪ್ತ ಜೀವನದಮ್ಮ!
ಭಾರತಿಗಿದಾಭರಣವಮ್ಮ!
ಮಣ ಲಕ್ಷ್ಮೀರಮಣನಮ್ಮ! (ಆ)
-ತಿಥ್ಯವಿವರದಾನಂದವಮ್ಮ! [ಕಾ]
-ಯಭಿಮಾನ ಇವರಿಗಿಲ್ಲಮ್ಮ! (ಸ)
-ಚ್ಚರಿತರೇ ಸತ್ಪುರುಷರಮ್ಮ! (ಅ)
-ಮ್ಮ! ನಿರಂಜನಾದಿತ್ಯವರಮ್ಮ!!!

ಶ್ರೀನಿವಾಸನ ಸ್ವಯಂಪಾಕ! [ಅ]   2(929)

ನಿರೀಕ್ಷಿತ ಲಭ್ಯವೀ ಪಾಕ! (ಬಾ)
-ವಾವಿಷ್ಟನಾಗಿ ಗೈವ ಪಾಕ!
ರ್ವದೇವ ಸಂತೃಪ್ತೀ ಪಾಕ!
ನಂಜುಂಡ ಮಂಜುನಾಥ ಪಾಕ!
ಸ್ವಕಾರ್ಯ ಸಿದ್ಧಿಗಿದೇ ಪಾಕ! [ಸ್ವ]
-ಯಂಭುವಿಗಾನಂದವೀ ಪಾಕ!
ಪಾದಪೂಜೆಯಿಂದಾದ ಪಾಕ! (ಲೋ)
-ಕ ನಿರಂಜನಾದಿತ್ಯ ಪಾಕ!!!

ಶ್ರೀಪತಿಯೇ ಪರಮ ವೈದ್ಯ!   6(3489)

ರರಡಿಗೋಡಿ ಹಾಳಾದ್ಯಾ!
ತಿನ್ನು ಭಕ್ತಿಯಿಂದ ನೇವೇದ್ಯ! (ತಾ)
-ಯೇ ಕೂಸ ಕೊಲ್ಪುದಾವ ಚೋಧ್ಯ?
ರಮಗುರು ನಿಜಾರಾಧ್ಯ! (ಪ)
-ರರ ದುಃಖಾತನಿಗೆ ವೇದ್ಯ!
ನೋಜಪ ಸುಶ್ರಾವ್ಯ ವಾದ್ಯ!
ವೈಜ್ಞಾನಿಕನರಿಯಾ ವಿದ್ಯಾ!
(ವೇ)-ದ್ಯ ನಿರಂಜನಾದಿತ್ಯ ವೈದ್ಯ!!!

ಶ್ರೀಪಾದ ಪೂಜೆಯಿಂದಾ ಯುಗಾದಿ!   4(1853)

ಪಾಪಲೇಪವಿಲ್ಲದಾ ಯುಗಾದಿ!
ತ್ತಭಕ್ತರ್ಗಾನಂದಾ ಯುಗಾದಿ!
ಪೂರ್ಣ ಆರೋಗ್ಯಪ್ರದಾ ಯುಗಾದಿ! (ಪ್ರ)
-ಜೆಗನುಕೂಲವಾದಾ ಯುಗಾದಿ! (ಆ)
-ಯಿಂಗುತ್ಸಾಹ ನೀಡದಾ ಯುಗಾದಿ! (ಸ)
-ದಾಳ್ವಿಕೆಯುದಯದಾ ಯುಗಾದಿ!
ಯುದ್ಧ ಬುದ್ಧಿ ನಾಶದಾ ಯುಗಾದಿ! (ಯೋ)
-ಗಾನಂದಾನುಭವದಾ ಯುಗಾದಿ! (ಹಾ)
-ದಿ ನಿರಂಜನಾದಿತ್ಯ ಯುಗಾದಿ!!!

ಶ್ರೀಪಾದ ಸೇವಾನಂದ ನರಸಿಂಹಯ್ಯಾ!   4(1542)

ಪಾಪ ದೂರ ಪರಮಾತ್ಮನವನಯ್ಯಾ!
ತ್ತಾತ್ರೇಯ ಕೃಪಾವಾಸವನದಯ್ಯಾ!
ಸೇವಕರಿಷ್ಟಾರ್ಥ ಸಲಿಸುವನಯ್ಯಾ!
ವಾದ, ಭೇದಭಾವವನಿಗಾಗದಯ್ಯಾ!
ನಂದಿವಾಹನನವನ ಸಖನಯ್ಯಾ!
ರಿದ್ರರಾಶ್ರಯದಾತನವನಯ್ಯಾ! (ಅ)
-ನನ್ಯ ಭಕ್ರರ ಗುಲಾಮನವನಯ್ಯಾ!
ಮಾದೇವಿಯವನಗಲಿರಳಯ್ಯಾ!
ಸಿಂಹ ಸ್ವರೂಪ ಧೂರ್ತ ಜನರಿಗಯ್ಯಾ!
ರಿ ಭಜನಾನಂದಾತ್ಮನವನಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾನಂದವನಯ್ಯಾ!!!

ಶ್ರೀಪಾದಕೆ ವನ ಕುಸುಮಾಲಂಕಾರ!   1(126)

ಪಾದಕೊಪ್ಪುವುದೆಲ್ಲ ಪ್ರೇಮಾಲಂಕಾರ!
ಯೆಯಿಂದೊದಗಿತೊಂದು ವನಹಾರ!
ಕೆಟ್ಟಲ್ಲ, ಕಟ್ತಿಲ್ಲದೊಂದು ನೈಜಹಾರ! (ಅ)
ಸರವಸರದಿಂದ ಬಂತೀ ಹಾರ!
ಗುತೆಲ್ಲರೀಕ್ಷಿಸಿದರು ಈ ಹಾರ!
ಕುಳಿತದ ನೋಡದ ರಾಜಶೇಖರ!
ಸುತ್ತು, ಮುತ್ತು ಸುತ್ತಿ ಬಂತೀ ವನಹಾರ!
ಮಾತಾಜಿಯೇರಿಸಿದರು ಮನಸಾರ! (ಅ)
-ಲಂಕಾರ ಪಾದುಕೆಗಾಯ್ತಿದು ಸುಂದರ!
ಕಾಲವಿದು ಸಪ್ತಾಹದಾರಂಭ ವಾರ! (ಅ)
-ರವಿಂದಾಪ್ತ ನಿರಂಜನಾರಾಮ ವಾರ!!!

ಶ್ರೀಯರಸಗಿಷ್ಟ ಧ್ಯಾನಮಿಂಚು! (ಧ್ಯೇ)   3(1022)

-ಯ ಸಿದ್ಧಿಗಾಧಾರ ಧ್ಯಾನಮಿಂಚು! (ವ)
-ರ ಗುರು ವಚನ ಧ್ಯಾನಮಿಂಚು!
ರ್ವ ಸಮನ್ವಯ ಧ್ಯಾನಮಿಂಚು! (ಯೋ)
-ಗಿಗಮೃತಪಾನ ಧ್ಯಾನಮಿಂಚು! (ಕ)
-ಷ್ಟ ಜೀವರ ಮಿತ್ರ ಧ್ಯಾನಮಿಂಚು!
ಧ್ಯಾನ, ಜ್ಞಾನಸಾರ ಧ್ಯಾನಮಿಂಚು! (ಸ್ಥಾ)
-ನ, ಮಾನ, ವರ್ಧಕ ಧ್ಯಾನಮಿಂಚು! (ಪ್ರೇ)
-ಮಿಂಗಿಂಚರ ಗಾನ ಧ್ಯಾನಮಿಂಚು! (ಹಂ)
-ಚು, ನಿರಂಜನಾರ್ಕ ಧ್ಯಾನಮಿಂಚು!!!

ಶ್ರೀರಂಗ ಬರಬೇಕು ಮನೆಗೆ!   4(1698)

ರಂಗನೊಡನಾಟ ಬೇಕೆನಗೆ! (ಅಂ)
-ಗಪೂಜೆ ಮಾಡ್ಬೇಕು ನಾನವಗೆ!
ರಬಾರದೇಕವನೆಡೆಗೆ? (ವ)
-ರ ಸೇವೆ ಮಾಡು ನೀನಲ್ಲವಗೆ!
ಬೇಕು, ಬೇಡೆನ್ನದಾ ರಂಗನಿಗೆ!
ಕುಲ, ಗೋತ್ರ ಕೇಳದಾ ಸ್ವಾಮಿಗೆ!
ನಶ್ಯುದ್ಧಿಯಾಗ್ಬೇಕು ನಿನಗೆ! (ಮ)
-ನೆ ನಿನ್ನ ಮನವಾಗಲವಗೆ! (ನೆ)
-ಗೆ ನಿರಂಜನಾದಿತ್ಯನಡಿಗೆ!!!

ಶ್ರೀರಂಗಗಿಲ್ಲಾಶಾ ಭಂಗ! (ಸಾ)   4(2242)

-ರಂಗ ಸ್ವರೂಪಾ ಶ್ರೀರಂಗ! (ಗ)
-ಗನದಲ್ಲವ ನಿಸ್ಸಂಗ! (ಯೋ)
-ಗಿರಾಜನಾಗಿ ಸತ್ಸಂಗ! (ಉ)
-ಲ್ಲಾಸಿ ತಾನಾಗಿ ಶುಭಾಂಗ!
ಶಾಶ್ವತನಾಗಿ ಸ್ಥಿರಾಂಗ!
ಭಂಡಾರಿಯಾಗಿ ಧೃಡಾಂಗ! (ರಂ)
-ಗ ನಿರಂಜನಾದಿತ್ಯಾಂಗ!!!

ಶ್ರೀರಂಗನಾಥನಿಷ್ಟದಂತಿರುವೆ ನೀನಮ್ಮಾ!   2(747)

ರಂಗನಾಥನೇ ಕಾರ್ಯಕಾರಣಕರ್ತನಮ್ಮಾ!
ರ್ವಿಯಿದನರಿಯದೇ ಕೆಡುತಿಹನಮ್ಮಾ!
ನಾಮವವನದು ಪರಮ ಪಾವನವಮ್ಮಾ! (ಮ)
-ಥನ ಮಾಡಬೇಕದರಿಂತರಂಗವಮ್ಮಾ!
ನಿರವಧಿ ಸುಖವಿದರಿಂದ ಪ್ರಾಪ್ತಿಯಮ್ಮಾ! (ಕ)
-ಷ್ಟವೆಂದಳುತಿದ್ದರದು ತಪ್ಪಲಾರದಮ್ಮಾ!
ದಂಭ, ದರ್ಪದಿಂದೇನೂ ಪ್ರಯೋಜನವಿಲ್ಲಮ್ಮಾ!
ತಿಳಿದಿದನು ಶರಣಾಗಬೇಕವಗಮ್ಮಾ!
ರುಚಿಪುದಿದು ಪೂರ್ಣ ಶರಣಾದಮೇಲಮ್ಮಾ!
ವೆಗ್ಗಳದ ಭೋಗ, ಭಾಗ್ಯವೆಲ್ಲಾ ನಶ್ವರಮ್ಮಾ!
ನೀಲಮೇಘ ಶ್ಯಾಮನ ಲೀಲೆ ವಿಚಿತ್ರವಮ್ಮಾ!
ಮಸ್ಕಾರವನಾ ಪಾಕಕ್ಕೆ ಸದಾ ಮಾಡಮ್ಮಾ! (ಅ)
-ಮ್ಮಾ! ರಂಗನಾಥ, ನಿರಂಜನಾದಿತ್ಯರೊಂದಮ್ಮಾ!!!

ಶ್ರೀರಂಗನಿಂದೆಲ್ಲಾ ರೋಗ ಶಾಂತಿ!   4(1596)

ರಂಗನಾಯಕಿಯ ಸೇವಾ ಶಾಂತಿ!
ಣ್ಯನಿವನಾಶೀರ್ವಾದಾ ಶಾಂತಿ!
ನಿಂದೆ,ವಂದನೆ ಸಮತಾ ಶಾಂತಿ! (ಹಿಂ)
-ದೆ, ಮುಂದೆ ನೋಡದಿದ್ದರಾ ಶಾಂತಿ! (ಚೆ)
-ಲ್ಲಾಟ, ಮನವಳಿದರಾ ಶಾಂತಿ!
ರೋದನೆಯವಗಾದರಾ ಶಾಂತಿ!
ರ್ವರಹಿತನಾದರಾ ಶಾಂತಿ (ಆ)
-ಶಾಂತಃಕರಣ ಸತ್ತರಾ ಶಾಂತಿ!(ಸ್ಮೃ)
ತಿ ಶ್ರೀ ನಿರಂಜನಾದಿತ್ಯ ಕೃತಿ!!!

ಶ್ರೀರಂಗಪಟ್ಟಣಕೆ ಬಾರೋ!   2(750)

ರಂಗನಾಥನಡಿಯ ಸೇರೋ!
ರ್ವ, ಮೋಹ ಜಯಿಸಿ ಬಾರೋ!
ತಿತ ಪಾವನನ ಸೇರೋ! (ಅ)
-ಟ್ಟಹಾಸ, ಸಿಟ್ಟು, ಸುಟ್ಟು ಬಾರೋ! (ಜಾ)
-ಣನಾಗಿವನ ಹತ್ರ ಸೇರೋ!
ಕೆಟ್ಟ ಯೋಚನೆ ಬಿಟ್ಟು ಬಾರೋ!
ಬಾಲ ನೀನೆಂದವನ ಸೇರೋ! (ಬಾ)
-ರೋ, ನಿರಂಜನಾಪ್ತನ ಸೇರೋ!!!

ಶ್ರೀರಂಗಪಟ್ಟಣದಲ್ಲೆನ್ನ ವಾಸ!   3(1116)

ರಂಗನಾಥ ಸ್ವಾಮಿಯಾ ಶ್ರೀನಿವಾಸ! (ಸಾ)
-ಗರ ಸುತೆಯ ನಿತ್ಯ ಸಹವಾಸ!
ತಿತ ಪಾವನ ಶ್ರೀಕೃಷ್ಣ ದಾಸ! (ಪ)
-ಟ್ಟದರಸಿಯೊಡಗೂಡಿರ್ಪಾ ದಾಸ! (ಹ)
-ಣಕಾಶಿಸನಾ ನಿರಂಜನ ದಾಸ!
ತ್ತ ನಿರಂಜನಾದಿತ್ಯನಾವಾಸ! (ಎ)
-ಲ್ಲೆಲ್ಲಿಲ್ಲದನನ್ಯಾದರದಾವಾಸ! (ಅ)
-ನ್ನ ಪೂರ್ಣಾಮರಗಂಗೆಯರ್ಗಾವಾಸ! (ಶಿ)
-ವಾನಂದ, ಶಶಿ ಪ್ರೇಮಾತ್ಮ ನಿವಾಸ! (ದಾ)
-ಸ, ನಿರಂಜನಾದಿತ್ಯ ನಿಲಯೇಶ!!!

ಶ್ರೀರಂಗಪಟ್ಟಣದಲ್ಲೇನಯ್ಯಾ?   2(991)

ರಂಗನಾಥ ಸ್ವಾಮಿ ಇಹನಯ್ಯಾ!
ತಿ, ಮತಿದಾತ ಅವನಯ್ಯಾ!
ತಿತ ಪಾವನನವನಯ್ಯಾ! (ಪ)
-ಟ್ಟಣಿಗರಾಪ್ತನಾಗಿಹನಯ್ಯಾ! (ಹ)
-ಣ, ಕಾಸಿಗಾಶಿಪಾತನಲ್ಲಯ್ಯಾ!
ರ್ಶನಾನಂದ ಭಕ್ತರಿಗಯ್ಯಾ! (ಅ)
-ಲ್ಲೇ ನೆಲೆಸಲ್ಕೆ ಭಾಗ್ಯ ಬೇಕಯ್ಯಾ!
ದಿ ಕಾವೇರಿ ತೀರವದಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯ ರಂಗಯ್ಯಾ!!!

ಶ್ರೀರಾಮ ಜಯ ರಾಮ ಜಯ ಜಯ ರಾಮ!   2(833)

ರಾಗ, ದ್ವೇಷ ನಾಶದಿಂದಾಗಬೇಕಾರಾಮ!
ದ ಮತ್ಸರಂತ್ಯದಿಂದಾಗಬೇಕಾರಾಮ!
ಗಳ ನಿರ್ನಾಮದಿಂದಾಗಬೇಕಾರಾಮ!
ಮ, ನಿಯಮಗಳಿಂದಾಗಬೇಕಾರಾಮ!
ರಾಮನಾಮ ಪ್ರೇಮದಿಂದಾಗಬೇಕಾರಾಮ!
ನೋವೃತ್ತಿ ಕ್ಷಯದಿಂದಾಗಬೇಕಾರಾಮ!
ಪ, ತಪಾದಿಗಳಿಂದಾಗಬೇಕಾರಾಮ!
ಜ್ಞ, ಯಾಗಾದಿಗಳಿಂದಾಗಬೇಕಾರಾಮ!
ನ್ಮ ಗುರುಭಕ್ತಿಯಿಂದಾಗಬೇಕಾರಾಮ!
ತಿಪತಿ ದತ್ತನಿಂದಾಗಬೇಕಾರಾಮ!
ರಾತ್ರಿ, ದಿನ ಸೇವೆಯಿಂದಾಗಬೇಕಾರಾಮ!
ಹಾದೇವ ನಿರಂಜನಾದಿತ್ಯಾತ್ಮಾರಾಮ!!!

ಶ್ರೀರಾಮ ಜಯ ರಾಮ ಜಯ ಜಯ ರಾಮ!   4(1920)

ರಾಜೀವ ಸಖ ಕುಲ ತಿಲಕ ಶ್ರೀ ರಾಮ!
ರಾಮರಾ ಜಪಕ್ಕೊಲಿದ ಜಯ ರಾಮ!
ನಕಜಾತೆಗೆ ಪತಿಯಾದ ಶ್ರೀ ರಾಮ!
ಜ್ಞಸಂರಕ್ಷಣೆ ಮಾಡಿಡ ಜಯರಾಮ!
ರಾವಣಾದಿ ರಕ್ಕಸರ ಕೊಂದ ಶ್ರೀರಾಮ!
ಹಾ ಭಕ್ತ ಮಾರುತಿಯಾತ್ಮ ಜಯರಾಮ!
ನಿಸಿದನಯೋಧ್ಯೆಯಲ್ಲಂದು ಶ್ರೀರಾಮ!
ದುಪ ದ್ವಾಪರದಲ್ಲಾದ ಜಯರಾಮ!
ನನೀ ಜನಕರಾತ್ಮಾರಾಮ ಶ್ರೀರಾಮ!
ಶಸ್ಸಾಮ್ರಾಜ್ಯ ಚಕ್ರವರ್ತಿ ಜಯರಾಮ!
ರಾಮ ರಾಮ ಜಯ ಸೀತಾರಾಮ ಶ್ರೀರಾಮ!
ಹಾತ್ಮ ನಿರಂಜನಾದಿತ್ಯಾ ಜಯರಾಮ!!!

ಶ್ರೀರಾಮ ಪಟ್ಟಾಭಿಷೇಕವಂತೆ!   1(438)

ರಾಮಾಯಣ ಪಾರಾಯಣವಂತೆ!
ಕ್ಕಳು, ಮರಿ ಸೇರುವರಂತೆ!
ರಮಾತ್ಮರಾಮ ಪೂಜೆಯಂತೆ! (ಕೆ)
-ಟ್ಟಾಚಾರ ರೀತಿಗಳಿಲ್ಲವಂತೆ!
ಭಿಕ್ಷೆ ಹಾಕಿ ಗುರುಸೇವೆಯಂತೆ! (ಶೇ)
-ಷೇಷ್ಟ ಪ್ರಸಾದವಾಗುವುದಂತೆ!
ಲ್ಯಾಣವಿದು ಜಗತ್ತಿಗಂತೆ!
ವಂಚನೆಯಿಲ್ಲ ಇದರಲ್ಲಂತೆ! (ಅಂ)
-ತೆ, ನಿರಂಜನಾದಿತ್ಯನಿಷ್ಟಂತೆ!!!

ಶ್ರೀರಾಮ ಪಾದುಕಾ ಪೂಜಾ ಮಹಿಮೆ! (ಆ)   4(2255)

-ರಾಮವೆಂದುದು ವಾಲ್ಮೀಕಿ ಹಿರಿಮೆ!
ಹಾತ್ಮಾಂಜನೇಯರಿತ್ತಾ ಮಹಿಮೆ!
ಪಾಪಿ ಪಾವನೆಯಾದುದೇ ಹಿರಿಮೆ!
ದುಷ್ಟ ದಾನವ ನಿಗ್ರಹಾ ಮಹಿಮೆ!
ಕಾದ ಶಬರಿಯ ಕಾಯ್ತಾ ಹಿರಿಮೆ!
ಪೂಜ್ಯ ಭರತಾದುದದ್ರ ಮಹಿಮೆ!
ಜಾತಿ, ಮತಾತೀತದರ ಮಹಿಮೆ!
ದ, ಮತ್ಸರ ರಹಿತಾ ಮಹಿಮೆ! (ಸ)
-ಹಿಸದು ಗುರುದ್ರೋಹಾ ಮಹಿಮೆ!
ಮೆಚ್ಚಿದ ನಿರಂಜನಾದಿತ್ಯ ಮೈಮೆ!!!

ಶ್ರೀರಾಮನಾಮ ಗಾನಾಮೃತ!   4(1494)

ರಾಗ, ದ್ವೇಷ ರಹಿತಾಮೃತ!
ನೋ ಶಾಂತಿ ಪ್ರದಾತಾಮೃತ! (ಅ)
-ನಾದಿ ಸನಾತನಾತ್ಮಾಮೃತ!
ಹೇಶ ನಾಮ ಪ್ರೇಮಾಮೃತ! (ಯೋ)
-ಗಾತ್ಮ ಸರಯೂವಾಸಾಮೃತ!
ನಾಮ ಭಜನಾನಂದಾಮೃತ!
ಮೃತ್ಯುಂಜಯಾಂಜನೇಯಾಮೃತ! (ಶಾಂ)
-ತ, ನಿರಂಜನಾದಿತ್ಯಾಮೃತ!!!

ಶ್ರೀರಾಮನಾಮ ಸದಾ ಸುಖ ಶ್ರೀಕಂಠಯ್ಯಾ!   2(535)

ರಾತ್ರಿ, ಹಗಲೆಲ್ಲಾ ಜಪಿಸು ಶ್ರೀಕಂಠಯ್ಯಾ!
ಡದಿ, ಮಕ್ಕಳೂ ಮಾಡಲಿ ಶ್ರೀಕಂಠಯ್ಯಾ!
ನಾಶವಾಗುವುದೆಲ್ಲಾ ಕಷ್ಟ ಶ್ರೀಕಂಠಯ್ಯಾ!
ನಸಿಗಿದು ನಿತ್ಯ ಶಾಂತಿ ಶ್ರೀಕಂಠಯ್ಯಾ!
ದ್ಭಕ್ತ ಮಾರುತಿಯೇ ಗುರು ಶ್ರೀಕಂಠಯ್ಯಾ!
ದಾರಿ ಬೆಳಕಾಗುತಲಿದೆ ಶ್ರೀಕಂಠಯ್ಯಾ!
ಸುಖ, ದುಃಖಗಳವನಿಷ್ಟ ಶ್ರೀಕಂಠಯ್ಯಾ!
ರಹರ, ರಾಮ ಕಾಯುವ ಶ್ರೀಕಂಠಯ್ಯಾ!
ಶ್ರೀರಾಮ ಜೈರಾಮ್ಜೈ ಜೈರಾಮ ಶ್ರೀಕಂಠಯ್ಯಾ!
ಕಂಗೆಡಬೇಡರಿಷ್ಟದಿಂದ ಶ್ರೀಕಂಠಯ್ಯಾ? (ಅ)
-ಯ್ಯಾ! ನಿರಂಜನಾದಿತ್ಯ ಸಾಕ್ಷಿ ಶ್ರೀಕಂಠಯ್ಯಾ!!!

ಶ್ರೀರಾಮನೆನ್ನಾರಾಮ ಸ್ಥಾನ (ಆ)   2(513)

-ರಾಮ ಸ್ಥಾನವದು ಸ್ವಸ್ಥಾನ!
ಲರಹಿತಾಶ್ರಯ ಸ್ಥಾನ!
ನೆಲೆಯಿದು ಶಾಂತಿಯ ಸ್ಥಾನ (ಅ)
-ನ್ನಾಹಾರಕ್ಕನ್ನ ಪೂರ್ಣಾ ಸ್ಥಾನ!
ರಾತ್ರಿ, ಹಗಲೆನ್ನದ ಸ್ಥಾನ!
ಮಕಾರವಿಲ್ಲದ ಸ್ಥಾನ!
ಸ್ಥಾನ, ಸದ್ಗುರು ಸೇವಾ ಸ್ಥಾನ! (ಘ)
-ನ, ನಿರಂಜನಾದಿತ್ಯಾ ಸ್ಥಾನ!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ