ವಂಶವಾವುದಾದರೇನು? (ಕೇ)   4(2464)

-ಶವಾಂಶೆಂದರಿಯ್ಬೇಡ್ವೇನು? (ನಿ)
-ವಾಸರಮನೆಯಾದ್ರೇನು? (ಕೀ)
-ವು, ರಕ್ತದ ದೇಹಾನೇನು? (ಸ)
-ದಾತ್ಮ ಚಿಂತನೆ ಮಾಡ್ನೀನು! (ಬಂ)
-ದ ದಾರ್ಹಿಡಿದಾಗ್ನೀ ನಾನು! (ಯಾ)
-ರೇನೆಂದರೆ ನಿನಗೇನು? (ನೀ)
-ನು ನಿರಂಜನಾದಿತ್ಯಾನು!!!

ವಡೆಗಾಸೆ ಪಡೆನಯ್ಯಾ! (ಬ)   5(2713)

-ಡೆಯನಾಸೆ ಬಿಡೆನಯ್ಯಾ!
ಗಾಡಿಗಾರನವನಯ್ಯಾ! (ಕಾ)
-ಸೆನಗೆ ಬೇಡೆಂಬನಯ್ಯಾ!
ಯಣ ಸಾಗ್ಲೆಂಬನಯ್ಯಾ! (ಕಾ)
-ಡೆ ನಿನ್ನ ನಾನೆಂಬನಯ್ಯಾ! (ಧ್ಯಾ)
-ನ ಮಾಡೆನ್ನನೆಂಬನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಯ್ಯಾ!!!

ವಣಾಶ್ರಮ ಧರ್ಮಿಯಲ್ಲನಾನು! (ಸ್ವ)   6(3533)

ರ್ಣಾಕ್ಷರದಲ್ಲಿ ಬರೆದಿಡ್ನೀನು! (ಆ)
-ಶ್ರಮವೆಲ್ಲಾದ್ರಲ್ಲಿರುವೆ ನಾನು!
ನನ ಮಾಡೀ ಮಾತನ್ನು ನೀನು!
ರ್ಮ ಕರ್ಮಕ್ಕೆಲ್ಲಾಧಾರ ನಾನು!
(ಕ)-ರ್ಮಿಯಾಗ್ನಿಷ್ಕರ್ಮ ಸಿದ್ಧನಾಗ್ನೀನು!
ದುಪತಿಯ ಗೀತಾತ್ಮ ನಾನು! (ಇ)
-ಲ್ಲದಸಲ್ಲದ ವ್ಯವಹಾರಿ ನೀನು!
ನಾಶರಹಿತೇಕನಾಥ ನಾನು! (ನೀ)
-ನು ನಿರಂಜನಾದಿತ್ಯ ಸೂನು!!!

ವತ್ಸಲಾ! ಬಾ ಭಕ್ತವತ್ಸಲಾ! (ತ)   5(2607)

-ತ್ಸಮಾನವಿಲ್ಲದ್ದಾ ವತ್ಸಲಾ!
ಲಾಭದಾಯಕವಾ ವತ್ಸಲಾ!
ಬಾಲಲೀಲಾನಂದಾ ವತ್ಸಲಾ!
ಯಹರಾ ಗುರು ವತ್ಸಲಾ! (ಯು)
-ಕ್ತಸೇವಾನಿರತಾ ವತ್ಸಲಾ!
ರ ರಾಗ ಸುಧಾ ವತ್ಸಲಾ!
(ಉ)ತ್ಸವಮೂರ್ತಿ ಸದಾ ವತ್ಸಲಾ! (ಕಾ)
-ಲಾ, ನಿರಂಜನಾದಿತ್ಯ ಬಾಲಾ!!!

ವಧು, ವರರ, ತಂದೆ, ತಾಯಿ ಒಬ್ಬ! (ಬಂ)   2(824)

-ಧು, ಬಳಗಾಪ್ತೇಷ್ಟ ಮಿತ್ರರೆಲ್ಲೊಬ್ಬ!
ರ ಗುರು ಸರ್ವಾಂತರ್ಯಾಮಿಯೊಬ್ಬ!
ಕ್ಷೆ, ಶಿಕ್ಷೆಗಳಧಿಕಾರಿಯೊಬ್ಬ!
ಮೆ, ಉಮೆಯರಸರಾತ್ಮನೊಬ್ಬ!
ತಂಪು, ಬಿಸಿ, ಚಂದ್ರ, ಸೂರ್ಯಾತ್ಮನೊಬ್ಬ! (ಹಿಂ)
-ದೆ, ಮುಂದೆಂಬೆಲ್ಲಕ್ಕಾಧಾರಾತ್ಮನೊಬ್ಬ! (ಮ)
-ತಾನೇಕಕ್ಕೆಲ್ಲಾ ಕಾರಣಾತ್ಮನೊಬ್ಬ!
ಯಿದನರಿತಾ ಪರಮಾತ್ಮನೊಬ್ಬ!
ಡೆಯನಿವನೆಲ್ಲಾ ಲೋಕಕ್ಕೊಬ್ಬ! (ಒ)
-ಬ್ಬ, ನಿರಂಜನಾದಿತ್ಯ ಜಗಕೊಬ್ಬ!!!

ವನಮಾಲಾ ಗೋಪಾಲಾ!   2(664)

ಯ, ನೀಲಾ ಭೂಪಾಲಾ!
ಮಾಲೋಲಾ ಬಹುಲೀಲಾ! [ಲೀ]
-ಲಾ, ಶೀಲಾನಂದ ಲೀಲಾ!
ಗೋಪಿಲೋಲ ಸುಶೀಲಾ!
ಪಾಪಾಳಿಗರಿ ಕಾಲಾ! (ಲೀ)
-ಲಾ ನಿರಂಜನ ಬಾಲಾ!!!

ವನಿತಾ! ನಿನ್ನಲ್ಲಿ ರತ ನರನನವರತಾ!   6(4056)

ನಿನ್ನಲ್ಲೇನಿರುವುದು ಅಂಥಾ ಅತಿ ಮಾನವತಾ?
ತಾತ್ಸಾರ ಮಾಡಿದರೂ ಆತ ನಿನ್ನ ಅಧೀನ ತಾ!
ನಿನ್ನಿಂದ ಸೋಲಿಸಲ್ಪಡದವನು ಯಾವನಾತ? (ಅ)
-ನ್ನ, ಬಟ್ಟೆ, ಕೊಡುವವನ ಮೇಲೂ ನಿನ್ನಾಡಳಿತ! (ಕ)
-ಲ್ಲಿನ ಗೊಂಬೆಯಂತಾಗುವನು ನಿನ್ನೆದುರು ಆತ!
ತಿ ಸುಖಕ್ಕಾಗಿ ಮರುಳಾಗಿರುವನು ಆತ!
ನ್ನಲ್ಲಿ ಶಕ್ತಿ ಕುಂದಿದಾಗ ಆತ ತಿರಸ್ಕೃತ!
ರ, ನಾರಿಯರು ಹೀಗೆ ಪರಸ್ಪರ ವಂಚಿತ!
ಮೇಶ, ಉಮೇಶರೂ ವ್ಯಾಮೋಹದಲ್ಲಿ ಬಂಧಿತ!
ರ ನಾರಿಗರುಹಬೇಕು ತನ್ನ ದುರ್ಬಲತಾ!
ತದೃಷ್ಟನೆನಿಸಿದನಿದರಿಂದ ನರ ತಾ!
ರ ಗುರು ದತ್ತನುದ್ಧರಿಸಬೇಕೆಲ್ಲರ ತಾ! (ಪ)
-ರಮಾರ್ಥ ಸಾಗರದಲ್ಲದ್ದಬೇಕೆಲ್ಲರನ್ನೂ ತಾ!
ತಾ, ನಿರಂಜನಾದಿತ್ಯನಾಗೀಗ ಕಾಪಾಡಲಾತ!!!

ವರ ಕೊಡುವ ದೇವರು ದೇವರಲ್ಲ! [ವ]   5(3115)

-ರವ ಬೇಡುವ ಭಕ್ತ ಭಕ್ತನೂ ಅಲ್ಲ!
ಕೊಡ್ವ, ಬೇಡ್ವ, ವೃತ್ತಿ ಇಬ್ಬರಿಗೂ ಇಲ್ಲ! (ಆ)
-ಡುವ, ಮಾಡುವೇಂದ್ರಿಯಗಳ್ದೇವರಲ್ಲ!
ರಗುರು ಭಕ್ತಗೆ ಗುರುವೇ ಎಲ್ಲ!
ದೇಹಾತೀತನ ವಿಚಿತ್ರ ಲೀಲೆಲ್ಲೆಲ್ಲ!
ಸ್ತ್ರಾಭರಣದಾಸೆ ಭಕ್ತನಿಗಿಲ್ಲಾ! (ದ)
-ರುಶನಾತ್ಮನದಾದಾಗ ಚಿಂತೆಯಿಲ್ಲ! (ತ)
-ದೇಕ ಧ್ಯಾನದಿಂದರಿವ ಭಕ್ತನೆಲ್ಲ!
ನವಾಸವಿದಕ್ಕೇನೂ ಬೇಕಾಗಿಲ್ಲ!
ತಿಸುಖದಾಸೆಯಿಂದ ಸುಖವಿಲ್ಲ! (ಬ)
-ಲ್ಲ ನಿರಂಜನಾದಿತ್ಯನೊಬ್ಬನಿದೆಲ್ಲಾ!!!

ವರ ಪಾದಪೂಜೆಗೀಗ ಕಾಲ ತಂಗೀ! (ಚಿ)   3(1143)

-ರಕಾಲವಿದು ನಡೆಯಬೇಕು ತಂಗೀ!
ಪಾಶ್ಚಿಮಾತ್ಯರ ಹಾಗಲ್ಲ ನಾವು ತಂಗೀ! (ಪಾ)
-ದ ಪತಿಯದು ಸದಾ ಪೂಜಾರ್ಹ ತಂಗೀ!
ಪೂರ್ಣಭಕ್ತಿಯಿಂದಾಗಬೇಕಿದು ತಂಗೀ! (ಪೂ)
-ಜೆ ಮಾಡಿ ತೀರ್ಥ ಸೇವಿಸಬೇಕು ತಂಗೀ!
ಗೀತೆಯವನದು ಹಾಡಬೇಕು ತಂಗೀ!
ತಿಯಿದು ಸದ್ಗತಿಗೆ ದಾರಿ ತಂಗೀ!
ಕಾಲಕ್ಕೆ ತಕ್ಕುಪಚಾರ ಮಾಡು ತಂಗೀ! (ಅ)
-ಲಕ್ಷ್ಯವೆಂದೂ ಮಾಡಬೇಡವನ ತಂಗೀ!
ತಂದೆ, ತಾಯಿ, ಬಂಧು, ಬಳಗಾತ ತಂಗೀ! (ತ್ಯಾ)
-ಗೀಶ ಶ್ರೀ ನಿರಂಜನಾದಿತ್ಯ ಮಾತಂಗೀ!!!

ವರ ಮಹಾಲಕ್ಷ್ಮೀ ನೀ ಬಾರಮ್ಮಾ!   4(1477)

ಕ್ಷಣೆಯಿತ್ತೆನ್ನ ಕಾಪಾಡಮ್ಮಾ!
ಹಾ ಕಷ್ಟದಲ್ಲಿಹೆ ನಾನಮ್ಮಾ!
ಹಾನಿ, ವೃದ್ಧಿ ನಿನ್ನಾಧೀನವಮ್ಮಾ! (ಅ)
-ಲಕ್ಷಿಸಬಾರದೆನ್ನ ನೀನಮ್ಮಾ! (ಲ)
-ಕ್ಷ್ಮಿ, ಧನಲಕ್ಷ್ಮಿ ಓಡಿ ಬಾರಮ್ಮಾ!
ನೀನಿಲ್ಲದಿನ್ಯಾರು ಗತಿಯಮ್ಮಾ?
ಬಾಳು ನಿನ್ನ ವಿನಾ ವ್ಯರ್ಥವಮ್ಮಾ!
ವಿ ಕಿರಣ ನಿನ್ನಾನಂದಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯ ನೀನಮ್ಮಾ!!!

ವರದ ಹಸ್ತ ಮಸ್ತಕದ ಮೇಲಿರಲಿ! (ಕ್ರೂ)   4(1462)

-ರ ಸಂಸಾರ ಸಾಗರದಿಂದ ಪಾರಾಗಲಿ!
ಯೆಯಿದಕಾಗಿ ಸದಾ ಇರುತಿರಲಿ!
ಸ್ತ ಪಾದಾದಿಗಳವಳಿಗಾಗಿರಲಿ! (ಅ)
-ಸ್ತವ್ಯಸ್ತವಾಗದ ಮನಸ್ಸಿರುತಿರಲಿ!
ಧುರ ಭಾವದರಲ್ಲಿ ನೆಲಸಿರಲಿ! (ಪು)
-ಸ್ತಕ ವೀಣಾಪಾಣಿಯ ದರ್ಶನವಾಗಲಿ!
ನಿಕರದಿಂದ ಅವಳು ಕಾಪಾಡಲಿ! (ಮಂ)
-ದಮತಿಯ ದರ್ಶನ ಮತ್ತಾಗದಿರಲಿ!
ಮೇಲು, ಕೀಳೆಂಬಹಂಕಾರ ಬಾರದಿರಲಿ! (ನ)
-ಲಿನಲಿದವಳ ಸಂಕೀರ್ತನೆ ಸಾಗಲಿ! (ವ)
-ರ ಗುರುದೇವನವಳೆಂಬರಿವಾಗಲಿ! (ನ)
-ಲಿಯಲಿ ನಿರಂಜನಾದಿತ್ಯಾನಂದಲ್ಲಿ!!!

ವರದಕ್ಷಿಣೆ ಬೇಡದಿರೋ! (ಪ)   4(1632)

-ರಧನಕ್ಕಿಷ್ಟ ಪಡದಿರೋ! (ಪ)
-ದವಿ ಅಧರ್ಮಕ್ಕಲ್ಲೆಂದಿರೋ! (ರ)
-ಕ್ಷಿಸುವ ಸದ್ಗುರುವೆಂದಿರೋ! (ಹೊ)
-ಣೆ ನಿನ್ನದೇನೆಂದರಿತಿರೋ!
ಬೇಡ ಅಲ್ಪಸುಖವೆಂದಿರೋ! (ಒ)
-ಡಗೂಡಿ ಸಜ್ಜನರಲ್ಲಿರೋ! (ಮ)
-ದಿರಾಸೇವನೆ ಮಾಡದಿರೋ! (ಬಾ)
-ರೋ, ನಿರಂಜನಾದಿತ್ಯಾಗಿರೋ!!!

ವರದಾಯಕಾ ವಿನಾಯಕಾ! (ಹ)   2(585)

-ರ ಪ್ರಿಯಾತ್ಮಿಕಾ ವಿನಾಯಕಾ! (ಸ)
-ದಾನಂದಾತ್ಮಿಕಾ ವಿನಾಯಕಾ! (ಭ)
-ಯ ವಿದಾರಕಾ ವಿನಾಯಕಾ!
ಕಾರ್ಯಕಾರಕಾ ವಿನಾಯಕಾ!
ವಿಮಲಾತ್ಮಿಕಾ ವಿನಾಯಕಾ!
ನಾದಾಧಾರಕಾ ವಿನಾಯಕಾ! (ಜ)
-ಯ ಪ್ರದಾಯಕಾ ವಿನಾಯಕಾ! (ಏ)
-ಕಾ ನಿರಂಜನ ವಿನಾಯಕಾ!!!

ವರದಿ ಒಪ್ಪಿಸಿದ ನಂಜುಂಡಯ್ಯ! (ಪ)   6(4076)

-ರ ನಿಂದೆ ಪಾಪವೆಂದ ನಂಜುಂಡಯ್ಯ!
ದಿನ್ರಾತ್ರಿ ಧ್ಯಾನಿಸೆಂದ ನಂಜುಂಡಯ್ಯ!
ನ್ಟಿಯಾಗಿರ್ಬೇಕೆಂದ ನಂಜುಂಡಯ್ಯ! (ತ)
-ಪ್ಪಿಲ್ಲದವರಿಲ್ಲೆಂದ ನಂಜುಂಡಯ್ಯ!
ಸಿರಿಗಾಶಿಸ್ಬಾರ್ದೆಂದ ನಂಜುಂಡಯ್ಯ!
ರ್ಶನ ಜ್ಞಾನಕ್ಕೆಂದ ನಂಜುಂಡಯ್ಯ!
ನಂಬು ನೀನವನೆಂದ ನಂಜುಂಡಯ್ಯ! (ನಂ)
-ಜುಂಡ ಶಕ್ತಿ ಅದೆಂದ ನಂಜುಂಡಯ್ಯ! (ಒ)
-ಡಲು ಅದಲ್ಲವೆಂದ ನಂಜುಂಡಯ್ಯ! (ಅ)
-ಯ್ಯ ನಿರಂಜನಾದಿತ್ಯಾ ನಂಜುಂಡಯ್ಯಾ!!!

ವರದಿಯೊಪ್ಪಿಸಬೇಕೆಂದಿದ್ದೆ! (ಹೊ)   4(1666)

-ರಗಿನವರು ಹೋಗಲೆಂದಿದ್ದೆ!
ದಿವ್ಯ ಸಂದೇಶವನ್ನರುಹಿದ್ದೆ! (ತಾ)
-ಯೊಡಗೂಡಿ ಮಾತು ಮುಗಿಸಿದ್ದೆ! (ತ)
-ಪ್ಪಿದ್ದರೆ ಕ್ಷಮಿಸು ನೀನೆಂದಿದ್ದೆ!
ಮಯ ಸಾಧಿಸಲು ಕಾದಿದ್ದೆ!
“ಬೇಕು ಕಾಲ” ವೆನೆ ಸುಮ್ಮನಿದ್ದೆ! (ಏ)
-ಕೆಂಬ ಪ್ರಶ್ನೆ ನನಗೇಕೆಂದಿದ್ದೆ!
ದಿವ್ಯ ಚಿತ್ತದಂತಾಗಲೆಂದಿದ್ದೆ! (ಇ)
-ದ್ದೆ ನಿರಂಜನಾದಿತ್ಯಾನೆಂದೆದ್ದೆ!!!

ವರನರಸಿ ಬರುವನಮ್ಮ! [ಹ]   2(913)

-ರ ಗಿರಿಜೆಗಾಗಲೆದಂತಮ್ಮ!
ಡತೆಯವಳಂತಿರಲಮ್ಮ! (ಸ)
-ರಳ ಸ್ವಭಾವವಿರಬೇಕಮ್ಮ!
ಸಿರಿತನ ಪ್ರಾಮುಖ್ಯವಲ್ಲಮ್ಮ!
ಯಲಾಡಂಬರ ವ್ಯರ್ಥವಮ್ಮ! (ಗು)
-ರು, ಹಿರಿಯರ ಭಕ್ತೆಯಾಗಮ್ಮ!
ರ, ಹರನಂತಿರಬೇಕಮ್ಮ! [ಅ]
-ನವರತದೇ ಧ್ಯಾನ ಮಾಡಮ್ಮ! (ಅ)
-ಮ್ಮ, ನಿರಂಜನಾದಿತ್ಯನಂತಮ್ಮ!!!

ವರವನಿತ್ತ ದತ್ತ ಗುರುರಾಯಾ! [ಪ]   4(1963)

-ರಮಾತ್ಮ ನೀನೆನುತ್ತಾ ಗುರುರಾಯಾ! (ಭ)
-ವರೋಗ ಹೋಯ್ತೆನುತ್ತಾ ಗುರುರಾಯಾ!
ನಿಶ್ಚಿಂತನಾಗೆನುತ್ತಾ ಗುರುರಾಯಾ! (ದ)
-ತ್ತಚಿತ್ತವಿದೆನುತ್ತಾ ಗುರುರಾಯಾ! (ಮ)
-ದನಾರಿ ನೀನೆನುತ್ತಾ ಗುರುರಾಯಾ! (ಹೆ)
-ತ್ತವ್ವೆ ಧನ್ಯಳೆನುತ್ತಾ ಗುರುರಾಯಾ!
ಗುಪ್ತವಾಗಿರೆನ್ನುತ್ತಾ ಗುರುರಾಯಾ! (ತೋ)
-ರು ಲೀಲೆಯನೆನ್ನುತಾ ಗುರುರಾಯಾ! (ವಿ)
-ರಾಗಿಯಾಗಿರೆನ್ನುತಾ ಗುರುರಾಯಾ! (ಜೀ)
-ಯಾ ನಿರಂಜನಾದಿತ್ಯದತ್ತಾತ್ರೇಯ!!!

ವರ್ಷ ಹನ್ನೊಂದು ತುಂಬುತ್ತಾ ಬಂತಲ್ಲ! (ಹ)   5(2987)

-ರ್ಷ ಬಾಳಲ್ಲೇನೂ ಕಾಣುತ್ತಿಲ್ಲವಲ್ಲಾ!
ಗಲಿರುಳೆಲ್ಲಾ ಧ್ಯಾನವಾಯ್ತಲ್ಲಾ! (ಇ)
-ನ್ನೊಂದು ವರ್ಷವಾದ್ರೆ ಹನ್ನೆರ್ಡಾಯ್ತಲ್ಲಾ! (ಇ)
-ದು ತಪಸ್ಸಿಗೊಂದು ಸವಾಲಾಯ್ತಲ್ಲಾ!
ತುಂಟತನವೆಲ್ಲೆಲ್ಲೂ ಹೆಚ್ಚಾಯ್ತಲ್ಲಾ!
ಬುದ್ಧಿಜೀವಿಗಳ್ಕಣ್ಮರೆಯಾದ್ರಲ್ಲಾ! (ಹ)
-ತ್ತಾವತಾರೀಗವ್ತಾರವೆತ್ಬೇಕಲ್ಲಾ!
ಬಂಧು, ಬಾಂಧನ ನೀನೇ ಆಗ್ಬೇಕಲ್ಲಾ!
ತ್ವ ಜೀವನಾನುಗ್ರಹಾಗ್ಬೇಕಲ್ಲಾ! (ಪು)
-ಲ್ಲಾ ನಿರಂಜನಾದಿತ್ಯನಿಚ್ಛೆಯೆಲ್ಲಾ!!!

ವಾಕ್ಯಾರ್ಥದಲ್ಲಿದೆ ಪರಮಾರ್ಥ! (ಐ)   6(3906)

-ಕ್ಯಾನಂದವನ್ನೀಯುವುದಾ ಅರ್ಥ! (ಸಾ)
-ರ್ಥಕವದ್ರಿಂದ ಜನ್ಮವೆಂದರ್ಥ!
ಶೇಂದ್ರಿಯಗಳ್ನಾನಲ್ಲೆಂದರ್ಥ! (ನಿ)
-ಲ್ಲಿಸಿ ಮನಸ್ಸನ್ನಾವಾಗೆಂದರ್ಥ!
ದೆವ್ವಗಳ ನಂಬಬೇಡೆಂದರ್ಥ!
ತಿತೋದ್ಧಾರೀ ದಾರಿಯೆಂದರ್ಥ! (ಹ)
-ರ ಹರಿ, ಬ್ರಹ್ಮರೈಕ್ಯವೆಂದರ್ಥ!
ಮಾಯಾತೀತ ಬ್ರಹ್ಮ ಅದೆಂದರ್ಥ! (ಅ)
-ರ್ಥ, ನಿರಂಜನಾದಿತ್ಯದೆಂದರ್ಥ!!!

ವಾತಾವರಣ ವಾಸುದೇವನಿಗೂ ಬೇಕು!   2(944)

ತಾ, ತನ್ನ ಲೀಲೆಗೀ ಸೃಷ್ಟಿಗೈದಿರಬೇಕು!
ರ್ತನೆ, ದೇಶ ಕಲಕ್ಕೊಪ್ಪಿದ್ದಿರಬೇಕು!
ಮೇಶ ತಾನಾಗಿ ಪಾಲನೆಯಾಗಬೇಕು! (ಗು)
-ಣಗಾನದಿಂದ ಸ್ಥಾನ ಶುದ್ಧವಾಗಬೇಕು!
ವಾರಿಜೋಧ್ಭವನಾಗ ಜನ್ಮ ತಾಳಬೇಕು!
ಸುರಾಸುರರಾಗವನ ಕೊಂಡಾಡಬೇಕು!
ದೇವಿಯಾಗ ಶ್ರೀಪಾದ ಸೇವೆ ಮಾಡಬೇಕು!
ರಋಷಿಮುನಿಗಳಾಗ ನೋಡಬೇಕು!
ನಿರ್ಮಲ ಸ್ಥಿತಿಯಾಗ ಬಯಲಾಗಬೇಕು!
ಗೂಢವಿದನರಿಯಲಿಕ್ಕಾಸಕ್ತಿ ಬೇಕು!
ಬೇರೆ ಯಾವ ಆಸೆಯೂ ಇಲ್ಲದಿರಬೇಕು! (ಬೇ)
-ಕು, ನಿರಂಜನಾದಿತ್ಯ ಕೃಪೆ ಸದಾ ಬೇಕು!!!

ವಾರಗಳುರುಳುತಿವೆ ವಿದ್ಯುದ್ವೇಗದಲ್ಲಿ!   5(3197)

ಸ, ಕಸದೂಟ ನಿತ್ಯ ಹೋಟೆಲುಗಳಲ್ಲಿ!
ಗನ ಯಾತ್ರೆಯಿಂದ ಜೀವನಷ್ಟವೆಲ್ಲೆಲ್ಲಿ!
(ಕೂ)ಳು ಸಿಕ್ಕುವುದೇ ದುರ್ಲಭವೀಗ ದೇಶದಲ್ಲಿ!
ರುಧಿರ ದಾನ ಹೆಚ್ಚಿಹುದೀಗಾಸ್ಪತ್ರೆಯಲ್ಲಿ! (ಕೀ)
-ಳು, ಮೇಲಿಲ್ಲದಂತಾಗ್ಬೇಕೆಂಬ ಹಂಬಲದಲ್ಲಿ!
ತಿಳಿಯಬೇಕಿದರ ಗುಣಾನುಭವದಲ್ಲಿ!
ವೆಸನ ನಾಶದ ಶಕ್ತಿ ಶುದ್ಧ ರಕ್ತದಲ್ಲಿ!
ವಿಜ್ಞಾನವರಿಯದು “ಶುದ್ಧ”ದರ್ಥವನ್ನಿಲ್ಲಿ! (ಪ್ರ)
-ದ್ಯುಮ್ನನ ಬಾಳು ವಿಮರ್ಶೆಯಾಗಬೇಕೀಗಿಲ್ಲಿ! (ಉ)
-ದ್ವೇಗಾದಿ ವಿಕಾರಕ್ಕೆ ರಕ್ತ ಕಾರಣಾಯ್ತಲ್ಲಿ!
ರ್ವ ನಾಶಕ್ಕಿರ್ಬೇಕು ಸಾತ್ವಿಕಾಹಾರದಲ್ಲಿ!
ತ್ತನಾದರ್ಶದವಗೆ ಕಾಲ ಭಯವೆಲ್ಲಿ? (ಸ)
-ಲ್ಲಿಸುತ್ತಿಹ ಸೇವೆ ನಿರಂಜನಾದಿತ್ಯನಿಲ್ಲಿ!!!

ವಾರಾಂಗನೆಗೆ ಮಾರನೇ ಮಿತ್ರ! (ಮಾ)   5(2980)

-ರಾಂತಕನಿಗೆ ರಾಮನೇ ಮಿತ್ರ!
ತಿ, ಸ್ಥಿತಿಗೆ ತಕ್ಕಂತೆ ಮಿತ್ರ!
ನೆಮ್ಮದಿ ಭಂಗಗೈವ ಕುಮಿತ್ರ!
ಗೆಳೆಯನ ಕತ್ತೇ ಕೊ

ವಾ ಮಿತ್ರ!
ಮಾಳ್ಪ ಲೋಕೋದ್ಧಾರ ಲೋಕಮಿತ್ರ!
ಘುರಾಮನಿಗೆ ಪ್ರಿಯಾ ಮಿತ್ರ!
ನೇಮ, ನಿಷ್ಠೆಗೆ ಆದರ್ಶಾ ಮಿತ್ರ!
ಮಿಸ್ಕಾಡ ಸ್ವಸ್ಥಾನದಿಂದಾ ಮಿತ್ರ! (ಮಿ)
-ತ್ರ, ನಿರಂಜನಾದಿತ್ಯಾ ಸನ್ಮಿತ್ರ!!!

ವಾರಿಜಮಿತ್ರನ ಪ್ರೀತಿಪಾತ್ರ ಸರೋಜ! (ಅ)   6(3651)

-ರಿತವರಾರ್ನಿನ್ನ, ನನ್ನ ಪ್ರೀತಿ ಸರೋಜಾ?
ನ್ಮಕೋಟಿಯಿಂದ ಬಂದದ್ದಿದು ಸರೋಜ!
ಮಿತ್ರ ವಾರಿಜ ಸಹಿತ ಶೋಭೆ ಸರೋಜ! (ಮಿ)
-ತ್ರ ಸಹಿತ ವಾರಿಜ ಭೂಷಣ ಸರೋಜ!
ನ್ನ ಕೀರ್ತಿ, ನಿನ್ನ ಪ್ರೀತ್ಯಾದರ್ಶ ಸರೋಜ!
ಪ್ರೀತಿ ವಿಶ್ವಾಸದಿಂದಲೇ ಶಾಂತಿ ಸರೋಜ!
ತಿತಿಕ್ಷೆ ನಿನ್ನದು ಅನುಪಮ ಸರೋಜ!
ಪಾಮರರಿದನ್ನೇನರಿವರು ಸರೋಜ?
ತ್ರಯಮೂರ್ತಿಗಳಿಗೂ ನೀನ್ಬೇಕು ಸರೋಜ!
ದಾಸೀನಳ್ನಿನ್ನ ಮೇಲೆ ಲಕ್ಷ್ಮಿಸರೋಜ!
ರೋಗ ಶಾಂತಿ ನಿನ್ನ ಗಂಧದಿಂದ ಸರೋಜ! (ನಿ)
-ಜ, ನಿರಂಜನಾದಿತ್ಯಾಪ್ತನಾಪ್ತೆ ಸರೋಜ!!!

ವಾರಿಜಾಂಬಕಿ ರಾಧಾರಮಣ ಗೋವಿಂದ! (ಗಿ)   2(458)

-ರಿಧರ ಗೋಪಾಲವನಮಾಲಾ ಗೋವಿಂದ!
ಜಾಂಬವತೀ ಕಲ್ಯಾಣ ಆನಂದ ಗೋವಿಂದ!
ಲರಾಮಾನುಜಾನಂದ ಕಂದ ಗೋವಿಂದ!
ಕಿರುಕುಳ ಕಂಸನನು ಕೊಂದ ಗೋವಿಂದ!
ರಾಸಲೀಲಾ ಆನಂದ ಮುಕುಂದ ಗೋವಿಂದ!
ಧಾರಣ, ಧ್ಯಾನ ಭಜನಾಂದ ಗೋವಿಂದ! (ಸಾ)
-ರಥಿಯರ್ಜುನ ವೀರನಾನಂದ ಗೋವಿಂದ!
ಲ ನಿರ್ಮೂಲದಾ ಗೀತಾನಂದ ಗೋವಿಂದ! (ಗು)
-ಣ, ಗಣ, ಪರಿಪೂರ್ಣತ್ಯಾನಂದ ಗೋವಿಂದ!
ಗೋ, ಬ್ರಾಹ್ಮಣ, ಧರ್ಮ ಹಿತಾನಂದ ಗೋವಿಂದ! (ಗೋ)
-ವಿಂದ, ಗೋವಿಂದ, ಗೋಕುಲಕಂದ ಗೋವಿಂದ!
ಯಾನಂದ ನಿರಂಜನಾದಿತ್ಯ ಗೋವಿಂದ!!!

ವಾಸನಾ, ಹೊಲಸು ವಿಷಯಾ ವಾಸನಾ!   4(2135)

ದಾ ಮನಕೇನಾದರೊಂದು ಯೋಚನಾ!
ನಾನೀ ಶರೀರವೆಂಬ ತಪ್ಪು ಭಾವನಾ!
ಹೊಲ, ಮನೆ ಸಂಪಾದಿಸುವ ಕಾಮನಾ! (ಛ)
-ಲದಿಂದನ್ಯರ ಪೀಡಿಸುವ ಜೀವನಾ!
ಸುಖವಿಲ್ಲೆಂದಳುವನು ಪ್ರತಿದಿನಾ!
ವಿಚಾರವಿಲ್ಲದಾಗುತಿದೆ ಪತನಾ!
ಡ್ರಿಪುಗಳ ಕಾಟದಿಂದೀ ಬಂಧನಾ! (ಕಾ)
-ಯಾಭಿಮಾನ ಬಿಟ್ಟು ಮಾಡನುಪಾಸನಾ!
ವಾಸುದೇವನಲ್ಲದಾರ್ಕಾಯ್ಬೇಕಾತನಾ?
ತ್ಯವಿದೆಂದು ನಂಬಿ ಮಾಡ್ಬೇಕ್ಭಜನಾ! (ಜ)
-ನಾರ್ಧನಾ, ನಿರಂಜನಾದಿತ್ಯ ದೇವನಾ!!!

ವಾಸನಾನಾಶವಾದಲರಿದಯ್ಯಾ!   5(2561)

ಮಯ ಕಾದಿದೆ ಕಣ್ಮರೆಗಯ್ಯಾ!
ನಾಸ್ತಿಪಾಪ, ಪುಣ್ಯದಂಟದಕ್ಕಯ್ಯಾ!
ನಾಸಿಕ ಯಾತ್ರೆಯ ಹುಚ್ಚೀಗಿಲ್ಲಯ್ಯಾ!
ಶಿಮುಖಿ ಬಳಿಗೀಗ್ಬಾರಳಯ್ಯಾ!
ವಾಸುದೇವಾರ್ಪಣವಾಯ್ತದೀಗಯ್ಯಾ!
ತ್ತನಾಶೀರ್ವದಿಸಿಹನದಯ್ಯಾ!
ಕ್ಷ್ಯದಲ್ಲದು ಲಯವಾಗಿರ್ಪುದಯ್ಯಾ!
ರಿಪುಕುಲಕ್ಕದೀಗಭೇದ್ಯವಯ್ಯಾ!
ರ್ಶನದರದ್ದೀಗಸಾಧ್ಯವಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾ ಅಲರಯ್ಯಾ!!!

ವಾಸವಿಲ್ಲದ ದೇಶ, ಮನವಿಲ್ಲದ ದೇಹ ವ್ಯರ್ಥ!   1(212)

ತ್ಯವಿಲ್ಲದ ನೀತಿ, ಪ್ರೀತಿಯಿಲ್ಲದ ರೀತಿ ವ್ಯರ್ಥ!
ವಿದ್ಯೆಯಿಲ್ಲದ ಬುದ್ಧಿ, ಸಿದ್ಧಿಯಿಲ್ಲದ ಶುದ್ಧಿ ವ್ಯರ್ಥ! (ನ)
-ಲ್ಲನಿಗಿಲ್ಲದ ನಾರಿ, ಮೆಲ್ಲಲಾಗದ ಪೂರಿ ವ್ಯರ್ಥ!
ಯೆಯಿಲ್ಲದ ತಾಯಿ, ನ್ಯಾಯವಿಲ್ಲದ ನೇಹಿ ವ್ಯರ್ಥ!
ದೇವನಿಲ್ಲದ ಗುಡಿ, ಭಾವವಿಲ್ಲದ ನುಡಿ ವ್ಯರ್ಥ!
ಕ್ತಿಯಿಲ್ಲದ ಯುಕ್ತಿ, ಮುಕ್ತಿಯಿಲ್ಲದ ಭಕ್ತಿ ವ್ಯರ್ಥ!
ರವಿಲ್ಲದ ಧರೆ, ಅರಿವಿಲ್ಲದ ನೆರೆ ವ್ಯರ್ಥ!
ಗುವಿಲ್ಲದ ಒಗು, ಆಗು ಇಲ್ಲದ ಹೋಗು ವ್ಯರ್ಥ!
ವಿಧಿಯಿಲ್ಲದ ದಧಿ, ನದಿಯಿಲ್ಲದ ಬದಿ ವ್ಯರ್ಥ! (ಅ)
-ಲ್ಲನರಿಯದ ಗುರು, ಪಲ್ಲವಿಸದ ತರು ವ್ಯರ್ಥ!
ಮೆಯಿಲ್ಲದ ಶಮೆ, ಗೈಮೆಯಿಲ್ಲದುಳುಮೆ ವ್ಯರ್ಥ!
ದೇಹವಿಲ್ಲದ ಫ್ರಾಣ, ತ್ರಾಣವಿಲ್ಲದ ಬಾಣ ವ್ಯರ್ಥ!
ಸಿದಿಲ್ಲದ ಊಟ, ಹುಮ್ಮಸ್ಸಿಲ್ಲದ ಆಟ ವ್ಯರ್ಥ!
ವ್ಯವಸ್ಥೆ ಇಲ್ಲದಾಸ್ತಿ, ಸ್ವಸ್ಥವಿಲ್ಲದಾಸಕ್ತಿ ವ್ಯರ್ಥ! (ಅ)
-ರ್ಥ, ನಿರಂಜನಾದಿತ್ಯನಿರದಿರೆಲ್ಲಾ ವ್ಯರ್ಥ!

ವಾಸುದೇವನಿಗೆ ಲಕ್ಷ್ಮಿ ಒಡನಾಡಿ! (ವಾ)   6(4383)

-ಸುದೇವ ಲಕ್ಷ್ಮಿದೇವಿಗೆ ಒಡನಾಡಿ!
ದೇವ, ದೇವಿಯರಿಗೂ ಬೇಕೊಡನಾಡಿ! (ಅ)
-ವರಿವರನುಕರಿಸ್ಬಾರದೀ ಜೋಡಿ!
ನಿತ್ಯ ಪಾದಪೂಜೆ ಮಾಡುವರೇ ಜೋಡಿ!
ಗೆಳೆತನ ಇಂಥಾ ಜೀವರಲ್ಲಿ ಮಾಡಿ!
ಕ್ಷ್ಯಸಿದ್ಧಿಗೆ ದಾರಿ ನಿರ್ಮಲ ಮಾಡಿ! (ಲ)
ಕ್ಷ್ಮಿಯೇ ಸೀತೆಯೆಂಬುದ ಮರೆಯಬೇಡಿ!
ಡನಾಡಿ, ಒಡಗೂಡಿ, ಸುಖಪಡಿ!
ಮ್ಭಾಚಾರಕ್ಕವಕಾಶ ಕೊಡ ಬೇಡಿ!
ನಾಮಸ್ಮರಣೆ ಹಗಲಿರುಳು ಮಾಡಿ! (ಇ)
-ಡಿ, ನಿರಂಜನಾದಿತ್ಯನ ನೆನಪಿಡಿ!!!

ವಾಸುದೇವೇಸುದೇವೇಕ ದೇವ!   4(2180)

ಸುವಿಚಾರಿಗಿರ್ಪುದೊಬ್ಬ ದೇವ!
ದೇಶ, ಕಾಲಕ್ಕಪ್ಪಾ ರೂಪಾ ದೇವ!
ವೇದ, ಬೈಬಲ್ಕುರಾನ್ದೇವಾ ದೇವ!
ಸುವಾರ್ತೆ ಗೀತೋಪದೇಶೀ ದೇವ!
ದೇಹ ಮೋಹ, ಬೇಡೆಂಬನಾ ದೇವ!
ವೇಶ, ಭೂಷಣಾಶಾಶೂನ್ಯಾ ದೇವ!
ರ್ಮ, ಧರ್ಮೋದ್ಧಾರಕರ್ತಾ ದೇವ! (ತ)
-ದೇಕನಿಷ್ಠ ಸರ್ವೋತ್ಕೃಷ್ಟಾ ದೇವ! (ದೇ)
-ವ ನಿರಂಜನಾದಿತ್ಯೇಸು ಶಿವ!!!

ವಿಕಲ್ಪ ಹೋದಾಗ, ವಿರಕ್ತಿ ಬಂದಾಗ!   5(2591)

ಲ್ಯಾಣಮಕ್ಕು ನಿನ್ನಿಂದ ಲೋಕಕ್ಕಾಗ! (ತ)
-ಲ್ಪ ಸುಖಾದಿಗಳಾಸೆಗಳಳಿದಾಗ!
ಹೋರಾಟವೇನಿಲ್ಲ ಸಂಸಾರದಲ್ಲಾಗ!
ದಾರಿ ಗುರುಪಾದದತ್ತ ನಡೆದಾಗ!
ತಿಗೇಡಿನ ಭಯ ನಿನಗೇಕಾಗ?
ವಿಧಿ, ಹರಿ, ಹರರೊಂದೆಂದರಿತಾಗ! (ಪ)
-ರಮಾರ್ಥಿ ನೀನೆಂಬೆ ನಾನು ನಿನ್ನನ್ನಾಗ! (ಭು)
-ಕ್ತಿಗಾಗಿ ಭಕ್ತಿಯಲ್ಲೆಂಬರಿವಾದಾಗ!
ಬಂಧನ ಹರಿಯುವುದು ನಿನ್ನದಾಗ!
ದಾತ, ನಾಥ ಶ್ರೀ ಗುರುದತ್ತನೆಂದಾಗ!
ಭಸ್ತಿ ನಿರಂಜನಾದಿತ್ಯ ನೀನಾಗ!!!

ವಿಕಲ್ಪಕ್ಕೆ ವಿನಾಶ ಪ್ರತಿಫಲ!   6(3882)

ಲ್ಪನಾತೀತಾತ್ಮ ಚಿಂತನಾ ಫಲ! (ಕ)
ಲ್ಪ, ಕಾಯಕ್ಕಾದರೆ ಸಿಕ್ಕದೀ ಫಲ! (ಬೆ)
-ಕ್ಕೆ ನಾಶವಾದಾಗ ಜನ್ಮ ಸಫಲ!
ವಿವೇಕ, ವಿಚಾರಕ್ಕಕ್ಕು ಈ ಫಲ!
ನಾನಾರೆಂದರಿತಿರುವುದಾ ಫಲ!
ರಣುರುಣ್ಣುವರು ನಿತ್ಯಾ ಫಲ!
ಪ್ರಪಂಚದಾಶಾತ್ಮನಿಗಿಲ್ಲಾ ಫಲ!
ತಿತಿಕ್ಷೆ, ವೈರಾಗ್ಯಕ್ಕೆ ಇದೇ ಫಲ!
ಲಿಸಿದಾಗಳಿವುದು ಚಪಲ! (ಬಾ)
-ಲ ನಿರಂಜನಾದಿತ್ಯಾನಂದಚಲ!!!

ವಿಕಲ್ಪವಿಲ್ಲದಲ್ಲಿರುವ ಗುರುದೇವ!   2(463)

ಲ್ಪನೆಯ ಪ್ರೀತಿ ಬೇಡಂಬ ಗುರುದೇವ! (ಅ)
-ಲ್ಪ ವೆಂಬುದಿಲ್ಲ ಭಕ್ತಿಗೆಂಬ ಗುರುದೇವ!
ವಿಶ್ವಾಸ ಅಚಲಬೇಕೆಂಬ ಗುರುದೇವ! (ಅ)
-ಲ್ಲ ಸಲ್ಲದಾಚಾರವೇಕೆಂಬ ಗುರುದೇವ!
ರ್ಶನ ಪ್ರದರ್ಶನಲ್ಲೆಂಬ ಗುರುದೇವ (ಅ)
-ಲ್ಲಿಲ್ಲೆಲ್ಲೆಲ್ಲಿರುವೆ ನಾನೆಂಬ ಗುರುದೇವ! (ಕ)
-ರುವ ತಾಯಿ ಮರೆಯದೆಂಬ ಗುರುದೇವ!
ರಿಸಿ ವಂಚಿಸದಿರೆಂಬ ಗುರುದೇವ!
ಗುರು ಪರಮೇಶ್ವರನೆಂಬ ಗುರುದೇವ! (ಅ)
ರುಹಿದನು ಶಿವನಿಂತೆಂಬ ಗುರುದೇವ!
ದೇಶ, ಕಾಲಾತೀತವನೆಂಬ ಗುರುದೇವ! (ಅ)
-ವ ನಿರಂಜನಾದಿತ್ಯನೆಂಬ ಗುರುದೇವ!!!

ವಿಗ್ರಹ ಎಷ್ಟು ಸುಂದರವಾದರೇನು? [ಅ]   5(3082)

-ಗ್ರಸ್ಥಾನ ನಿತ್ಯ ಪೂಜೆಯಿಂದಲ್ಲವೇನು?
ರಕೆ ಸ್ವೀಕಾರಕ್ಕಿದು ಬೇಕಲ್ವೇನು?
ಲ್ಲಾ ಶ್ರದ್ಧಾ, ಭಕ್ತಿಯಿಂದೆಂದರಿ ನೀನು! (ಎ)
-ಷ್ಟು ಪುರಾಣ ಶ್ರವಣ ಮಾಡಿದರೇನು?
ಸುಂದರ ರೂಪವನ್ನುಳಿಸಬೇಕ್ನೀನು!
ತ್ತನಿಗಾದರ್ಶ ಸೇವಕ ನೀನು!
ಹಸ್ಯವಿದನ್ನರಿತಿರಬೇಕ್ನೀನು!
ವಾದ, ವಿವಾದಗಳಿಂದಾಗುವುದೇನು?
ರ್ಶನ ಪಡೆದು ಧನ್ಯನಾಗು ನೀನು!
ರೇಚಕ, ಪೂರಕದಲ್ಲಿ ಜಪಿಸ್ನೀನು! (ಸೂ)
-ನು ನಿರಂಜನಾದಿತ್ಯಗೆ ನೀನಲ್ವೇನು???

ವಿಚಾರ ತಿಳಿಸಿದ್ದಾಯಿತು!   4(1472)

ಚಾಕರಿಗನುಕೂಲಾಯಿತು! (ವಿ)
-ರಸಕ್ಕೆಡೆಯಿಲ್ಲದಾಯಿತು!
ತಿರುಗಾಟ ಕಮ್ಮಿಯಾಯಿತು! (ಹ)
-ಳಿದಾತ್ಮಕ್ಕೆ ಶಾಂತಿಯಾಯಿತು!
ಸಿಕ್ಕಿದ್ದಕ್ಕೆ ತೃಪ್ತಿಯಾಯಿತು! (ಒ)
-ದ್ದಾಟ ಮನಕಿಲ್ಲದಾಯಿತು! (ತಾ)
-ಯಿಯ ಆಸೆ ಪೂರ್ತಿಯಾಯಿತು! (ಇಂ)
-ತು ನಿರಂಜನಾದಿತ್ಯಾನಂದಾಯ್ತು!!!

ವಿಚಾರ ಮಾಡುತ್ತಿರಬೇಕು! (ಆ)   4(1741)

-ಚಾರದಲ್ಲಿರುತ್ತಿರಬೇಕು! (ವ)
-ರ ಗುರು ಕೃಪೆ ತೋರಬೇಕು!
ಮಾರಾರಿ ಬೇಗ ಬರಬೇಕು! (ಬೀ)
-ಡು ನಿರ್ಮಲವಾಗಿರಬೇಕು! (ಬ)
-ತ್ತಿ ಉರಿಯುತ್ತಲಿರಬೇಕು! (ಆ)
-ರದಂತೆಚ್ಚರಾಗಿರಬೇಕು!
ಬೇಗಾ ಶ್ರೀಪಾದ ಸೇರಬೇಕು! (ಬೇ)
-ಕು ನಿರಂಜನಾದಿತ್ಯಾಗ್ಬೇಕು!!!

ವಿಚಾರ ಸಾಗರ ಬತ್ತುವುದೆಂದು? (ವಾ)   4(1438)

-ಚಾಮಗೋಚರ ರೂಪ ನೀನಾದಂದು! (ವ)
-ರ ಗುರುವಿನಿಷ್ಟ ಪೂರ್ತಿಯಾದಂದು!
ಸಾಧು, ಸಜ್ಜನರುದ್ಧಾರವಾದಂದು! (ಸಂ)
-ಗ ಸರ್ವಾತ್ಮನದು ಸದಾ ಆದಂದು! (ಚೋ)
-ರ ಮಾರನಾಟ ನಡೆಯದಾದಂದು!
ಯಲಾಡಂಬರ ಹಾರಿ ಹೋದಂದು! (ಚಿ)
-ತ್ತುಗಳೆಲ್ಲವೂ ಅಳಿಸಿ ಹೋದಂದು! (ಪಾ)
-ವು, ಸೇರುಗಳ ಪೈಪೋಟಿ ನಿಂದಂದು! (ಒಂ)
-ದೆಂಬಾತ್ಮ ವಿಶ್ವಾಸ ನೆಲಸಿದಂದು! (ಇಂ)
-ದು ನಿರಂಜನಾದಿತ್ಯಾನಂದದಂದು!!!

ವಿಚಾರಧಾರೆ ಹರಿಯುತ್ತಿರಲಿ!   1(402)

ಚಾರು ಚರಿತೆ ಧರೆಗಾಗಿರಲಿ!
-ರಗಳೆಯಿಂದ ಮನಹಾರಿರಲಿ!
ಧಾಮ, ಸಾಯುಜ್ಯಧಾಮವಾಗಿರಲಿ! (ಇ)
-ರೆ ಅಲ್ಲಿ ನಿಜಾನಂದವೆಂದಿರಲಿ!
ರಿ, ಹರರಜರೆಲ್ಲಲ್ಲಿರಲಿ! (ಇ)
-ರಿತ ಮಾಯೆಯದಲ್ಲಿಲ್ಲದಿರಲಿ!
ಯುಗವಿದುತ್ತಮ ಗತಿಗಿರಲಿ! (ಇ)
-ತ್ತಿರುವ ಜನ್ಮ ಗುರುಗಾಗಿರಲಿ!
ಸಾಸ್ವಾದನೆ ನಾಮದಲಿರಲಿ!
ಲಿಪ್ತ ನಿರಂಜನಾದಿತ್ಯಲ್ಲೆನಲಿ!!!

ವಿಚಾರವಿಲ್ಲ ಪ್ರಚಾರವೆಲ್ಲ!   6(3856)

ಚಾರಿತ್ರಿಕಾಲಂಕಾರದಕ್ಕೆಲ್ಲಾ!
ಹಸ್ಯ ಭಗವಂತನೇ ಬಲ್ಲ!
ವಿಶೇಷೋತ್ಸವಕ್ಕೆ ಬೆಲೆಯೆಲ್ಲಾ! (ಬ)
-ಲ್ಲ ಜ್ಞಾನಿಯನ್ನಲಕ್ಷಿಪರೆಲ್ಲಾ!
ಪ್ರಜಾಪ್ರಭುತ್ವಕ್ಕೀ ಕಾಲವೆಲ್ಲ!
ಚಾಕಚಕ್ಯತೆಯಾಳ್ವಿಕೆಯಿಲ್ಲ! (ಪ)
-ರಮಾರ್ಥ ಬಾಯ್ಮಾತಿನಲ್ಲೇ ಎಲ್ಲಾ!
ವೆಸನಗಳಿಗೆ ಮಿತಿಯಿಲ್ಲ! (ಪು)
-ಲ್ಲ ನಿರಂಜನಾದಿತ್ಯಳಿಸ್ಲೆಲ್ಲಾ!!!

ವಿಚಾರಶೀಲರೊಮ್ಮತದಭಿಪ್ರಾಯ ವೇದ, ಶಾಸ್ತ್ರ!   6(3867)

ಚಾತುರ್ವಣಾಶ್ರಮ ಧರ್ಮದೂ ಅದರಲ್ಲೊಂದು ಪಾತ್ರ!
ಹಸ್ಯ ಸಂಶೋಧನೆಯಿಂದರಿಯ ಬೇಕು ಸತ್ಪುತ್ರ!
ಶೀಲ ಉತ್ತಮಗೊಂಡು ಆಗಬೇಕು ವಿಶಾಲ ನೇತ್ರ!
ಕ್ಷಣವರಿತಾತ್ಮ ದರ್ಶನವಾಗ್ಬೇಕು ಸರ್ವತ್ರ!
ರೊಟ್ಟಿ ಮಾಡಬಲ್ಲವನಿಗೆ ರೊಟ್ಟಿಯೂಟ ಸುಸೂತ್ರ! (ಅ)
-ಮ್ಮ ಕಲಿಸುವಳದನು ಸಮಯ ಕಾದರೆ ಮಾತ್ರ!
ಪ್ಪೆಣಿಸಲಾರನವಳಲ್ಲಿ ರಾಮನಂಥಾ ಪುತ್ರ!
ಶರಥಾತ್ಮಜನ ರವಿವಂಶ ಗೋತ್ರ ಪವಿತ್ರ!
ಭಿನ್ನ, ಭೇದವಿಲ್ಲದ್ದವನ ರಾಜ್ಯಭಾರ ಚರಿತ್ರ!
ಪ್ರಾಚೀನರ್ವಾಚೀನದ ಹೊಡೆದಾಟ ಅಜ್ಞಾನ ಚಿತ್ರ!
ದುವಂಶ ನಿರ್ನಾಮವಾಯ್ತು ಮರೆತು ಕುಲ, ಗೋತ್ರ!
ವೇದೋಪನಿಷತ್ಸಾರದರಿವಿನ ಬಾಳೇ ಸ್ವತಂತ್ರ!
ಶೇಂದ್ರಿಯದಾನಂದಕ್ಕಾಶಿಸಿ ಆಯ್ತು ಪರ ತಂತ್ರ!
ಶಾಸಕರಾಗಬೇಕವುಗಳ ಮೇಲೆ ದಿನ, ರಾತ್ರ! (ಅ)
-ಸ್ತ್ರ, ನಿರಂಜನಾದಿತ್ಯನಿಂದ ಪಡೆವ ಕೃಪಾ ಪಾತ್ರ!!!

ವಿಚಾರಸಾಗರದ ವಿಸ್ತಾರ ಅತಿ ವಿಶಾಲ!   1(24)

ಚಾಣಾಕ್ಷರಾದ ಕವಿಗಳಿಗೂ ನಿಲುಕದಿದರಾಳ!
ಕ್ಷಣೆ, ರಚನೆ, ಯೋಜನೆ ಇದರಲಿವೆ ಅತುಳ!
ಸಾಗರಗಳೇಳು ಸೇರಿದರೂ ತುಂಬದಿದರಾಳ!
ಗನವೆಲ್ಲಾ ಒಳಗಿರಿಸಿದರೂ ಇದೇ ವಿಶಾಲ!
ವಿಯಾದರೂ ಇದನಾರಿಸದಷ್ಟು ಜಲಜಾಲ!
ತ್ತಗುರು ಪರಮಾತ್ಮನನೇ ಮರೆಸಿಹಿಂದ್ರಜಾಲ!
ವಿಷಭರಿತತಿ ಘೋರ ಫಣಿಗಳದರಲಿ ನಿರ್ಮೂಲ!
ಸ್ತಾನ, ಮಾನಗಳೆಲ್ಲಾ ಇದರಲಡಗಿರುವಂತರಾಳ!
ಸ, ರಸದೂಟಗಳಡಿಗೆಗಿದರಲಿದೆ ಜಲ ಸುಶೀಲ!
ಮೃತವನನಾದರೂ ವಿಷಗೊಳಿಸುವುದಿದೇಕರಾಳ!
ತಿರುಕನಾದರೂ ತಿರುಮಲೇಶನೆನಿಸಲಿದೇ ಮಂತ್ರಜಾಲ!
ವಿಶಾಲ ವಿಸ್ತಾರವಿದರಿಂದಾಗುತಿದೆ ಭವ್ಯ ಭವ್ಯ ಲೀಲ!
ಶಾಪಾನುಗ್ರಹದಾ ಸರ್ವಶಕ್ತಿಗೆಲ್ಲಾ ಇದೇ ಜೀವಾಳ!
ಕ್ಷ್ಯವಾಗಿ ಎಲ್ಲರಲಿರುವ “ನಿರಂಜನ”ನಿದರ ಮೂಲ!!!

ವಿಚಿತ್ರ ದಿನ ಮಾನ!   1(334)

ಚಿರವಿರಲೀ ಜ್ಞಾನ!
ತ್ರಯ ಮೂರುತಿ ಧ್ಯಾನ!
ದಿಟ ಸುಖದ ಸ್ಥಾನ!
ದಿ ನೀರಿನ ಸ್ನಾನ!
ಮಾಘ ಮಾಸಾನುಷ್ಠಾನ! (ಅ)
-ನಘೊರ್ಕ ನಿರಂಜನ!!!

ವಿಚಿತ್ರ ವಿಶ್ವರೂಪ ದತ್ತಪ್ಪ!   1(436)

ಚಿರತೆ, ಹುಲಿ, ಸಿಂಹ ದತ್ತಪ್ಪ!
ತ್ರಯ ಲೋಕವ್ಯಾಪಕ ದತ್ತಪ್ಪ!
ವಿಷಸರ್ಪ ನಾಗಪ್ಪ ದತ್ತಪ್ಪ! (ಅ)
-ಶ್ವ, ಆನೆ, ನರಿ, ನಾಯಿ ದತ್ತಪ್ಪ!
ರೂಪಾರೂಪ, ಕುರೂಪ ದತ್ತಪ್ಪ!
ಶು, ಪಕ್ಷಿ, ಪತಂಗ ದತ್ತಪ್ಪ!
ರ್ಶನವಿಂತಾದರೆ ದತ್ತಪ್ಪ!
-ತ್ತ, ಇತ್ತ, ಎತ್ತೆತ್ತಲೂ ದತ್ತಪ್ಪ!
-ಪ್ಪ, ನಿರಂಜನಾದಿತ್ಯ ದತ್ತಪ್ಪ!

ವಿಜಯ ಧ್ವಜವೆತ್ತೋ ತ್ಯಾಗರಾಜ!   4(1705)

ಯ ತಾರಾನಾಥನ್ನೋ ತ್ಯಾಗರಾಜ! (ಜ)
-ಯ ಗುರುಪಾದಕ್ಕನ್ನೋ ತ್ಯಾಗರಾಜ! (ಮ)
-ಧ್ವ, ಶಂಕರರೊಂದನ್ನೋ ತ್ಯಾಗರಾಜ!
ಗನ್ನಾಥನೊಬ್ಬನ್ನೋ ತ್ಯಾಗರಾಜ! (ನಾ)
-ವೆ ಶ್ರೀರಾಮನಾಮನ್ನೋ ತ್ಯಾಗರಾಜ! (ಹ)
-ತ್ತೋ! ರಜತಾದ್ರಿಯನ್ನೋ ತ್ಯಾಗರಾಜ!
ತ್ಯಾಗೀಶನ ನೋಡನ್ನೋ ತ್ಯಾಗರಾಜ!
ತಿದಾತನಾನ್ನೋ ತ್ಯಾಗರಾಜ!
ರಾ

, ದಿನ, ಹಾಡನ್ನೋ ತ್ಯಾಗರಾಜ! (ನಿ)
-ಜ ನಿರಂಜನಾದಿತ್ಯಾ ತ್ಯಾಗರಾಜ!!!

ವಿಜಯ ಶಾಂತಿ, ವಿಶ್ವೇಶ್ವರ ಪ್ರೀತಿ!   1(149)

ಗಳ ಭ್ರಾಂತಿ, ಸಮರಸ ಶಾಂತಿ!
ದುನಾಥ ಪ್ರೀತ್ಯರ್ಜುನ್ನ ಕ್ಯಾತಿ!
ಶಾಂಭವಿ ಪ್ರೀತಿ, ಶಂಕರನ ಶಾಂತಿ!
ತಿತಿಕ್ಷಾ ರೀತಿ, ಮನಕೀ ಸ್ವಸ್ಥಿತಿ!
ವಿಕಲ್ಟದಾ ಮತ್ಯಾಜನ್ಮಾಪಖ್ಯಾತಿ!
ಶ್ವೇತಾಂಬರಿಯಾರಾಧ್ಯ ಸರಸ್ವತಿ! (ವಿ)
-ಶ್ವನಾಥ ಭಕ್ತಿ ಶಿವಾನಂದಾಸಕ್ತಿ!
ಘುವರನಾಸ್ತಿ, ಮಾರುತಿ ಕೀರ್ತಿ!
ಪ್ರೀತಿ ನಾಮಾಸಕ್ತಿ ಸೀತೆಯ ಶಾ

ತಿ!
ತಿಳಿ! ನಿರಂಜನಾದಿತ್ಯ ನೀ ಶಾಂತಿ!!!

ವಿಜಯ ಶಾಂತಿಗೆ ಹಿತವಚನ   2(464)

ರಾಜನ್ಮ ನಾಶಕ್ಕಾಗೀ ವಚನ! (ಭ)
-ಯ ಹರವಿದನುಭವ ವಚನ! (ಅ)
-ಶಾಂತಿಹರ ಗೀತಾಮೃತ ವಚನ! (ಅ)
-ತಿ ವಿಶಾಲಾಮೂಲ್ಯ ಪ್ರಿಯ ವಚನ! (ಬ)
-ಗೆವಗೆ ವಿಚಾರಾಗರ ವಚನ!
ಹಿರಿಯರನುಭವದ ವಚನ!
ರಣಿ ಕಿರಣಾನಂದ ವಚನ!
ರ ಬ್ರಹ್ಮಾನಂದಕಿದು ವಚನ!
ರಾಚರಾತ್ಮ ಶ್ರೀರಾಮ ವಚನ! (ಘ)
-ನ ನಿರಂಜನಾದಿತ್ಯನ ವಚನ!!!

ವಿಜಯ ಸ್ವದೇಶದಲ್ಲಿ!   1(172)

ಯ ನಿಜಸ್ಥಿಯಿಯಲ್ಲಿ!
ಮ ಧರ್ಮ ಕರ್ಮದಲ್ಲಿ! (ಅ)
-ಸ್ವಸ್ಥ ಅನ್ಯ ದಾರಿಯಲ್ಲಿ!
ದೇಶ ತನ್ನ ಮನದಲ್ಲಿ!
ಕ್ತಿ ನಿತ್ಯ ನಿಷ್ಠೆಯಲ್ಲಿ!
ಯೆ ವಿಧೇಯತೆಯಲ್ಲಿ! (ಅ)
-ಲ್ಲಿ! ನಿರಂಜನಾದಿತ್ಯೆಲ್ಲಿ!!!

ವಿಜಯ, ನಾಮಗಿರಿ, ಗುರು ಗುಹೇಶ! (ಅ)   1(162)

-ಜ ಹರಿ, ಹರನಿವ ದತ್ತ ಸರ್ವೇಶ!
ದುಪತಿಗತಿ ಹಿತ ಬಾನಿನೀಶ!
ನಾಶಗೈವಾಶಾಪಶ ತ್ರಿಭುವನೇಶ! (ಅ)
-ಮರ ಪದವನೀವ ಕಾಲ ಚಕ್ರೇಶ!
ಗಿರಿಜಾಶಂಕರ ತಿರಕೂಟಾಚಲೇಶ! (ಅ)
-ರಿಕುಲ ಕಾಲ ಧೀರ ವೀರಭದ್ರೇಶ!
ಗುಣ ಗಣ ಕಾರಣ ಪರಬ್ರಹ್ಮೇಶ! (ಅ)
-ರುಣ ಸಾರಥಿ, ಗುರು ಮಾರುತಿಗೀಶ!
ಗುಣಮಣಿ, ಘನ ಫಣಿ ಭೂಷಣೇಶ!
ಹೇಯ ದೇಹ ಭಯದೂರ ಭಾರತೀಶ! (ಅ)
-ಶನ ನಿರಂಜನಾದಿತ್ಯ ಮಾಯಾಧೀಶ!!!

ವಿಜಯದಶಮಿಗಿದು ಅಮೃತ ಪಾನ!   1(26)

ಗದ ಕತ್ತಲೆ ಕಳೆಯಲಿಕೆ ಜ್ಞಾನ ಪಾನ!
ದುಕುಲೇಶನ ಲೀಲೆಗಿದು ಸ್ತನ್ಯಪಾನ!
ಣಿದ ಧಾರ್ಮಿಕರಿಗಿದು ನವೋದಯ ಪಾನ!
ರಣರಿಗಿದಭಯವನೀವ ಶಕ್ತಿವರ್ಧಕ ಪಾನ!
ಮಿತ್ರಭಾವದುತ್ತಮದ ಭಕ್ತಿಗಿದು ಧೇನುಕ್ಷೀರ ಪಾನ!
ಗಿರಿ, ಗುಹೆಗಳ ಘೋರ ತಪಸಿಗಿದು ಸೋಮ ಪಾನ!
ದುಃಖಿಗಳ ದುಃಖ ಶಾಂತಿಗಿದು ಅಭಯ ಪಾನ!
ರ್ಕನತ್ಯುಗ್ರ ಬಿಸಿಲ ತಾಪಕಿದು ಎಳನೀರು ಪಾನ!
ಮೃತ್ಯು ಶಯ್ಯೆಗೆ ತುತ್ತಾದವನಗಿದು ಸಂಜೀವಿನೀ ಪಾನ!
ಲೆ ಬಿಸಿಯೇರಿ ನಿದ್ರೆ ಬಾರದಿರದು ಅಮಲು ಪಾನ!
ಪಾಪಿ, ಪರದೇಶಿಗಳಸರೆಗಿದು ಗಂಗಾಪಾನ!
“ನ ಚಲತಿ ತೃಣ ತೇನವಿನಾ”! ಭಕ್ತಿಗಿದು ನಿರಂಜನಾಮೃತ ಪಾನ!!!

ವಿಜಯಾ! ನೀ ನಿರಂಜನ ಮಯಾ!   2(649)

ನ್ಮದಾತನಲಿ ನೀ ತನ್ಮಯಾ!
ಯಾದವೇಂದ್ರಾನಂದನ ತನ್ಮಯಾ!
ನೀತಿ, ರೀತಿ, ಸತತ ತನ್ಮಯಾ!
ನಿಶಿ, ದಿನಾ ಶ್ರೀಪಾದ ತನ್ಮಯಾ! (ಸಾ)
-ರಂಗಾತ್ಮಾನಂದನಲಿ ತನ್ಮಯಾ!
ಗತ್ಪತಿಯವನ ತನ್ಮಯಾ!
ನ್ನದವನೆದೆಂದು ತನ್ಮಯಾ!
ನ ದರ್ಶನಾನಂದ ತನ್ಮಯಾ! (ಜೀ)
-ಯಾ ನಿರಂಜನಾದಿತ್ಯ ತನ್ಮಯಾ!!!

ವಿಜಯಾ, ದಿಗ್ವಿಜಯಾ, ಮನೋಜಯಾ!   4(1621)

ಗನ್ಮಯಾ, ಚಿನ್ನಯಾ ಮನೋಜಯಾ! (ಭ)
-ಯಾಭಯಾ, ದಯಾಮಯಾ ಮನೋಜಯಾ! (ಅ)
-ದಿತೇಯಾ, ದತ್ತಾತ್ರೇಯಾ ಮನೋಜಯಾ! (ವಾ)
-ಗ್ವಿಲಾಸಾಪ್ರಿಯಾಶ್ರಯಾ ಮನೋಜಯಾ!
ಯಾಪಜಯ ಪ್ರಿಯಾ ಮನೋಜಯಾ! (ಮಾ)
-ಯಾಮಯಾ ಲೀಲಾಮಯಾ, ಮನೋಜಯಾ!
ನೋಮಯಾ ವಾಙ್ಮಯಾ ಮನೋಜಯಾ! (ಧ್ಯಾ)
-ನೋದಯಾ ಜ್ಞಾನೋದಯಾ ಮನೋಜಯಾ!
ಪೇಯಾ ಅಜಪೇಯಾ ಮನೋಜಯಾ! (ಛಾ)
-ಯಾ ನಿರಂಜನಾದಿತ್ಯಾನಂದಾ ಜಯ!!!

ವಿಜಯಾನಂದ ಗೀತೆ ಮಂಜುಳ!   6(3546)

ರಾ ಜನ್ಮಾತೀತಾತ್ಮ ಮಂಜುಳ!
ಯಾದವನ ಮುರಳಿ ಮಂಜುಳ!
ನಂದ ಕಂದ ಗೋವಿಂದ ಮಂಜುಳ!
ಶರಥಾತ್ಮಾರಾಮ ಮಂಜುಳ!
ಗೀರ್ವಾಣೀ ವೀಣಾ ನಾ ಮಂಜುಳ! (ಮಾ)
-ತೆ, ಜಗನ್ಮಾತೆ, ಸೀತೆ ಮಂಜುಳ!
ಮಂತ್ರ, ಯಂತ್ರ, ತಂತ್ರಾಂಗಿ ಮಂಜುಳ! (ಮಂ)
-ಜುನಾಥನ ಗಿರಿಜೆ ಮಂಜುಳ! (ಬಾ)
-ಳ ನಿರಂಜನಾದಿತ್ಯ ಮಂಜುಳ!!!

ವಿಜಯಾನಂದಾ ಶಿವಾಯ ನಮಃ!   3(1175)

ಮುನಾನಂದಾ ಶಿವಾಯ ನಮಃ!
ಯಾದವಾನಂದಾ ಶಿವಾಯ ನಮಃ!
ನಂದ ಗೋವಿಂದಾ ಶಿವಾಯ ನಮಃ!
ದಾತ ಮುಕುಂದಾ ಶಿವಾಯ ನಮಃ!
ಶಿವೆಯಾನಂದಾ ಶಿವಾಯ ನಮಃ!
ವಾಸ್ತವಾನಂದಾ ಶಿವಾಯ ನಮಃ!
ತೀಶಾನಂದಾ ಶಿವಾಯ ನಮಃ!
ಟೇಶಾನಂದಾ ಶಿವಾಯ ನಮಃ! (ನ)
-ಮಃ ನಿರಂಜನಾದಿತ್ಯಾಯ ನಮಃ!!!

ವಿಜಯಿಯಾಗಿ ಕುಮಾರ ಬಂದ!   4(2123)

ಯಿಸಲನ್ಯಾಯವನ್ನು ಬಂದ! (ತಾ)
-ಯಿಯಾಜ್ಞಾ ಪಾಲನೆಗಾಗಿ ಬಂದ!
ಯಾದವೇಂದ್ರನಾಪ್ತನಾಗಿ ಬಂದ! (ಭೋ)
-ಗಿಸಲು ಪ್ರಾರಬ್ಧವನ್ನು ಬಂದ!
ಕುರುವಂಶ ನಾಶಕ್ಕಾಗಿ ಬಂದ! (ಉ)
-ಮಾಪತಿಯ ವರಕ್ಕಾಗಿ ಬಂದ! (ಸು)
-ರಪತಿಯ ಮಗನಾಗಿ ಬಂದ! (ಸಂ)
-ಬಂಧಿ ಶ್ರೀ ಕೃಷ್ಣನಿಗಾಗಿ ಬಂದ! (ನಂ)
-ದ ನಿರಂಜನಾದಿತ್ಯೆಂದು ಬಂದ!!!

ವಿಜಯಿಯಾದಾ ತ್ಯಾಗರಾಜ! (ನಿ)   4(2375)

-ಜ, ಭಕ್ತೋತ್ತಮಾ ತ್ಯಾಗರಾಜ! (ಬಾ)
-ಯಿ, ಕೈ, ವಿಶುದ್ಧಾ ತ್ಯಾಗರಾಜ!
ಯಾದವಪ್ರಿಯಾ ತ್ಯಾಗರಾಜ!
ದಾನ, ಧರ್ಮಾತ್ಮಾ ತ್ಯಾಗರಾಜ! (ನಿ)
-ತಾನಂದ ಕಂದಾ ತ್ಯಾಗರಾಜ!
ರ್ವರಹಿತಾ ತ್ಯಾಗರಾಜ!
ರಾಮ, ಸೀತಾತ್ಮಾ ತ್ಯಾಗರಾಜ! (ನಿ)
-ಜ ನಿರಂಜನಾದಿತ್ಯಾ ರಾಜ!!!

ವಿಠ್ಠಲನೆಲ್ಲವೂ ಆದ! (ವಿ)   4(2192)

-ಠ್ಠಲ ರುಕ್ಮಿಣಿಯೂ ಆದ!
ಯಕಾರಕನೂ ಆದ! (ಮ)
-ನೆಗೆಲಸದಾಳೂ ಆದ! (ಬ)
-ಲ್ಲವನಾಗಿ ಗುರೂ ಆದ! (ಆ)
-ವೂರೀವೂರರಸೂ ಆದ!
ಲಯದ್ಗೊಂಬೆಯೂ ಆದ! (ಆ)
-ದ ನಿರಂಜನಾದಿತ್ಯಾದ!!!

ವಿದ್ಯಾರ್ಥಿಗೆ ವಿದ್ಯೆಯಲಂಕಾರ! (ಅ)   4(2089)

-ದ್ಯಾತಕ್ಕವನಿಗೆ ದೇಹಾಲಂಕಾರ? (ಪಾ)
-ರ್ಥಿವಶರೀರ ಸ್ಥಿರಾಲಂಕಾರ! (ತೆ)
-ಗೆದಿದ ಪಡೆಯಾತ್ಮಾಲಂಕಾರ!
ವಿಷಯಾನಂದವಲ್ಲಾಲಂಕಾರ! (ವಿ)
-ದ್ಯೆ ನಿತ್ಯಾನಂದಕ್ಕಾದ್ರಲಂಕಾರ? (ಭ)
-ಯ ತಪ್ಪಿಸುವುದೀ ಅಲಂಕಾರ!
ಲಂಕೇಶಗಾಯ್ತೇನೀ ಅಲಂಕಾರ?
ಕಾಮಿಯಾಗಿ ಹಾಳಾಯ್ತಲಂಕಾರ! (ಹ)
-ರ ನಿರಂಜನಾದಿತ್ಯಾಲಂಕಾರ!!!

ವಿದ್ಯುತ್ತುತ್ಪಾದನಾ ಯಂತ್ರವಿದಯ್ಯಾ!   4(1600)

ದ್ಯುಮಣಿಯಿದು ಅಸಾಮಾನ್ಯವಯ್ಯಾ! (ಹೊ)
-ತ್ತು ಹೊತ್ತಿಗಿದರ ದ್ಯುತ್ಯಗತ್ಯಯ್ಯಾ! (ಸ)
-ತ್ಪಾತ್ರದಲ್ಲಿದು ಜ್ವಲಿಸುವುದಯ್ಯಾ! (ಉ)
-ದಯಾಸ್ತ ಬಹು ರಮಣೀಯವಯ್ಯಾ!
ನಾಮ, ರೂಪಗಳೆಲ್ಲದರಿಂದಯ್ಯಾ! (ಭ)
-ಯಂಕರವಿದರ ಸಾಮೀಪ್ಯವಯ್ಯಾ!
ತ್ರಯ ಮೂರ್ತಾತ್ಮ ಸ್ವರೂಪವಿದಯ್ಯಾ!
ವಿಮಲಾತ್ಮ ಶಿವಾನಂದವಿದಯ್ಯಾ!
ರ್ಶನದಿಂದಶಾಂತಿ ನಾಶವಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾ ರೂಪವಯ್ಯಾ!!!

ವಿದ್ವತ್ವಿದ್ಯುತ್ತುತ್ಪಾದಿಸದಯ್ಯಾ! (ಅ)   5(2667)

-ದ್ವರ್ತನೆಯಿಂದುಂಟಾಗಬೇಕಯ್ಯಾ! (ಸಾ)
-ತ್ವಿಕತೆಯಿಂದ ಸದ್ಗತಿಯಯ್ಯಾ! (ಅ)
-ದ್ಯುಕ್ತಾಯುಕ್ತ ವಿಚಾರದಿಂದಯ್ಯಾ! (ಉ)
-ತ್ತು, ಬಿತ್ತುವೋದ್ದೇಶದಂತದಯ್ಯಾ! (ಸ)
-ತ್ಪಾತ್ರದ ದಾನ ಸಾರ್ಥಕವಯ್ಯಾ!
ದಿವ್ಯ ಜೀವನದಿಂದುದ್ಧಾರಯ್ಯಾ!
ಹನೆಯಿಂದೆಲ್ಲಾ ಸಿದ್ಧಿಯಯ್ಯಾ! (ಮ)
-ದ, ಮತ್ಸರವಿರಬಾರದಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯತೀತಯ್ಯಾ!!!

ವಿಧವೆಯರೆಂದಳುವಿರೇಕಮ್ಮಾ? (ಮಾ)   5(2763)

-ಧವ ಧವನಾಗಿಹನೊಳಗಮ್ಮಾ!
ವೆಸನವಿದನರಿತರಿಲ್ಲಮ್ಮಾ!
ಮನವನನ್ನೇನೂ ಮಾಡನಮ್ಮಾ! (ನೂ)
-ರೆಂಟ್ದತ್ತನಾಮ ನಿತ್ಯ ಬರಿಯಮ್ಮಾ!
ಯೆ ನಿನ್ನ ಮೇಲುಂಟಾಗುವುದಮ್ಮಾ! (ಹಾ)
-ಳು ವ್ಯಾಮೋಹ ನಾಶವಾಗುವುದಮ್ಮಾ!
ವಿಧಿ ಲಿಖಿತವಾಗ ದುರ್ಬಲಮ್ಮಾ!
ರೇಚಕ, ಪೂರಕದಲ್ಲದಿರ್ಲಮ್ಮಾ!
ರ್ತವ್ಯವಿದೊಂದೇ ನಿಮಗೀಗಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಾ ಮಾಧವಮ್ಮಾ!!!

ವಿಧಿವಶ ಮಾನವ ಬಲ! (ಅ)   6(3905)

-ಧಿಕಾರದಹಂಕಾರಾ ಬಲ!
ರ ಗುರುವಿಗಾತ್ಮ ಬಲ!
ರಣನಿಗೆ ಕೃಪಾ ಬಲ!
ಮಾಯಾ ಮೋಹಿತಗಿಲ್ಲಾ ಬಲ!
ರ ನಾಡಿಗಳೆಲ್ಲ ಬಲ!
ರ ಮಾರುತಿಗಾವ ಬಲ?
ಲ, ಮಹಾಬಲಾತ್ಮ ಬಲ! (ಬಾ)
-ಲ ನಿರಂಜನಾದಿತ್ಯಾ ಬಲ!!!

ವಿನಯಶಿಲಾ ವಿಶ್ವೇಶ್ವರಯ್ಯ!   4(1955)

“ನ ಗುರೋರಧಿಕಂ” ಎಂಬಾತಯ್ಯಾ!
ಜ್ಞ, ಯೋಗಾನಂದನವನಯ್ಯಾ!
ಶಿ

ತೇಂದುಧರ ಶಿವಾನಂದಯ್ಯಾ! (ಕೈ)
-ಲಾಸ ವಾಸಾನಂದನವನಯ್ಯಾ!
ವಿಷಪಾನೋನ್ಮತ್ತ ಶ್ರೀಕಂಠಯ್ಯಾ!
ಶ್ವೇತ ವೃಷಭಾರೂಢವನಯ್ಯಾ! (ಈ)
-ಶ್ವರನೀರೇಳು ಲೋಕೇಶ್ವರಯ್ಯಾ!
ಮಣ ಪಾರ್ವತೀ ದೇವಿಗಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾನಂದಯ್ಯಾ!!!

ವಿನಾಶ ಕಾಲಕ್ಕೆ ವಿಪರೀತ ಬುದ್ಧಿ!   3(1105)

ನಾನೀ ಶರೀರವೆಂಬಹಂಕಾರ ಬುದ್ಧಿ!
ರಣ ವಚನಕ್ಕನಾದರ ಬುದ್ಧಿ!
ಕಾರಣ ಕರ್ತನರಿಯದಲ್ಪ ಬುದ್ಧಿ!
ಕ್ಷ್ಯ ವಿಷಯ ಸುಖಕ್ಕಿರುವ ಬುದ್ಧಿ! (ಇ)
ಕ್ಕೆನನ್ಯರಿಗೇನನ್ನೆಂಬ ಲೋಭ ಬುದ್ಧಿ
ವಿಕಲ್ಪದಿಂದಿರುವ ಕುಹಕ ಬುದ್ಧಿ!
ರನಿಂದೆ ಮಾಡುವತಿನೀಚಬುದ್ಧಿ!
ರೀತಿ, ನೀತಿಗಪಾರ್ಥ ಮಾಡುವ ಬುದ್ಧಿ!
ನ್ನ ಪ್ರಶಂಸೆ ತಾನೇ ಹೇಳುವ ಬುದ್ಧಿ!
ಬುದ್ಧ, ಸಿದ, ತಾನೆಂದೆಂಬ ಮೋಸ ಬುದ್ಧಿ! (ವೃ)
-ದ್ಧಿ, ನಿರಂಜನಾದಿತ್ಯಾನಂದ ಸಿದ್ಧಿ,!!!

ವಿನಾಶ ಕಾಲಕ್ಕೆ ವಿಪರೀತ ಬುದ್ಧಿ!   5(3090)

ನಾಯಕನಾಗಲಿಕ್ಕಿರಬೇಕ್ಸದ್ಬುದ್ಧಿ!
ಮೆ, ದಮೆಯಿಂದಂತರಂಗ ಶುದ್ಧಿ!
ಕಾಲ್ಕೆದರಿ ಜಗಳಾಡ್ವುದಲ್ಪ ಬುದ್ಧಿ!
ವ, ಕುಶರಂತಿದ್ದರೆಲ್ಲಾ ಸಮೃದ್ಧಿ! (ಇ)
-ಕ್ಕೆನನ್ಯರಿಗೆನ್ನುವುದು ಲೋಭ ಬುದ್ಧಿ!
ವಿಕಲ್ಪ ನಾಶದಿಂದಾತ್ಮಾನಂದ ಸಿದ್ಧಿ!
ಶ್ಚಾತ್ತಾಪದಿಂದ ಪವಿತ್ರತಾ ಸಿದ್ಧಿ! (ತು)
-ರೀಯಾತೀತವೇ ಸಚ್ಚಿದಾನಂದ ಸಿದ್ಧಿ!
ನ್ನ ತಾನರಿತು ಬಾಳಿದಾಗಾ ಸಿದ್ಧಿ!
ಬುಟ್ಟಿ ನೀರಲ್ಲದ್ದಿದ್ರಲ್ಲಾ ಫಲಶುದ್ಧಿ! (ಸಿ)
-ದ್ಧಿ ನಿರಂಜನಾದಿತ್ಯಗಧ್ಯಾತ್ಮ ಸಿದ್ಧಿ!

ವಿಪುಲಾನಂದದಲ್ಲಿ ಗೋಪಾಲ ಆ ನಂದ!   6(3987)

ಪುರಾಣ ಪುರುಷ ಪುರುಷೋತ್ತಮಾ ಆ ನಂದ!
ಲಾವಣ್ಯ ಮೂರುತಿ ಬಾಲಕೃಷ್ಣ ಆ ನಂದ!
ನಂದ ಕಂದ, ಮುಕುಂದ ಗೋವಿಂದ ಆ ನಂದ!
ಧಿ, ಕ್ಷೀರ, ನವನೀತ ಚೋರ ಆ ನಂದ!
ರಿದ್ರ ಕುಚೇಲನಾಪ್ತಮಿತ್ರ ಆ ನಂದ! (ಕ)
-ಲ್ಲಿನ ಮೂರ್ತಿಯಾಗಿರ್ಪನೆಲ್ಲೆಲ್ಲೂ ಆ ನಂದ!
ಗೋಪಿಕಾ ಜನ ಮನಮೋಹನ ಆ ನಂದ!
ಪಾರ್ಥಸಾರಥಿ ಶ್ರೀ ಗೀತಾನಾಥ ಆ ನಂದ! (ಜ)
-ಲಕ್ರೀಡೆಯಾಡಿದ ಲೀಲಾ ಜಾಲ ಆ ನಂದ!
ಪದ್ಭಾಂಧವ ರಾಧಾ ಮಾಧವ ಆ ನಂದ!
ನಂಬಿದ ಉದ್ಧವನೋದ್ಧಾರಕ ಆ ನಂದ!
ತ್ತ ನಿರಂಜನಾದಿತ್ಯಾನಂದ ಆ ನಂದ!!!

ವಿಫಲ ಮನೋರಥ ದುಃಖಿ ದಶರಥ!   6(4066)

ಲಿಸದಾಗ ಪಟ್ಟಾಭಿಷೇಕದಿಷ್ಟಾರ್ಥ!
ಕ್ಷ್ಮಣನೂ ಹಿಡಿದಾಗ ರಾಮನ ಪಥ!
ಡದಿ ಮೈಥಿಲಿಯೂ ಹತ್ತಿದಾಗ ರಥ!
ನೋಡದಾದನೀ ದೃಶ್ಯವನು ದಶರಥ! (ಭ)
-ರತನದ್ದಾಯ್ತಾಮೇಲೆ ಕಠಿಣ ಶಪಥ!
ರಗುಟ್ಟಿದನು ಧೀರರಸ ದಶರಥ!
ದುಃಖಾಗ್ನಿಗಾಹುತಿಯಾಯ್ತವನಂಗ ರಥ!
ಖಿನ್ನನಾದನದ ಕಂಡು ಸುತ ಭರತ!
ಶರಥ ರಾಮ ಅಧಿಕಾರಿಯೆನುತ!
ರಣಣ್ಣಗೆನುತ ಹೊರಟ ಭರತ! (ವ)
-ರ ಚಿತ್ರಕೂಟದಲ್ಲಾಯ್ತವಗೆ ಸ್ವಾಗತ! (ಪ)
-ಥ ನಿರಂಜನಾದಿತ್ಯ ಬೆಳಗಲೆನುತ!!!

ವಿಭೂತಿ ವಿಮೋಚನ!   2(699)

ಭೂತನಾಥ ಲೇಪನ! (ಅ)
-ತಿಹಿತಾಪ್ತ ಸೇವನ!
ವಿಷಹರ ಅಂಜನ!
ಮೋಕ್ಷಕೆ ಸಂಜೀವನ!
ಪಲ ನಿರ್ಮೂಲನ!
ಮೋ ಶ್ರೀ ನಿರಂಜನ!!!

ವಿಭೂತಿ ಶೋಭಾ ಲಲಾಟ!   2(452)

ಭೂಕೈಲಾಸ ಪತಿಗಾಟ! (ಅ)
-ತಿ, ಆನಂದವಿದು ನೋಟ!
ಶೋಕದೂರ, ನೀಲಕಂಠ (ಅಥವಾ ಹರಕಾಟ)!
ಭಾಗ್ಯವೆಲ್ಲರಿಗೀ ಪಾಠ!
ಯ ಶಿವನಿಗೊಂದಾಟ! (ಹಾ)
-ಲಾಹಲ ವಿಷಪಾನಾಟ! (ಆ)
-ಟ, ನಿರಂಜನಾದಿತ್ಯಾಟ!!!

ವಿಮಲ ಅಶ್ವಗಂಧಿ ರಸಾಯನ! (ಶ್ಯಾ)   4(1540)

-ಮನ ಮಧುರ ಮುರಲೀ ವಾದನ! (ಬ)
-ಲವರ್ಧನ ಸತತವೀ ಪ್ರಾಶನ!
ನುಪಮಾತ್ಮಾನಂದದ ಸಾಧನ! (ವಿ)
-ಶ್ವನಾಥನನುಗ್ರಹಾ ಸಂಜೀವನ!
ಗಂಭೀರ ಮುಖಮುದ್ರೆಯ ಚೇತನ! (ದ)
-ಧಿ, ಕ್ಷೀರಾನಂದಾ ದೇವಕೀ ನಂದನ! (ವ)
-ರ ಗೀತಾಚಾರ್ಯಾ ಪರಮ ಪಾವನ!
ಸಾರ್ಥಕ ಜನ್ಮಾ ಗೋಸಂವರ್ಧನ!
ದುಕುಲಂ ದೀಪಾ ಮನಮೋಹನ!
ಮೋ ನಿರಂಜನಾದಿತ್ಯ ವದನ!!!

ವಿಮಲ ನಾಮ ವಿಜಯ ರಾಮ! (ಕ)   2(593)

-ಮಲ ಮಿತ್ರ ಕುಲ ಜಾತ ರಾಮ! (ಜ)
-ಲಜನಾಭ ಜಯ ರಾಜ ರಾಮ!
ನಾಶ ಕಾಮ ಪ್ರೇಮ ಧಾಮ ರಾಮ!
ಹಿಮಾ ಸರ್ವ ನಾಮಾ ಶ್ರೀರಾಮ!
ವಿಷಹರ, ನಿರ್ದೋಷ ಶ್ರೀರಾಮ!
ನನ, ಮರಣ ದೂರಾ ಶ್ರೀರಾಮ! (ಭ)
-ಯಹರ, ಸುಖಕರ ಶ್ರೀರಾಮ! (ಆ)
-ರಾಮ, ಶ್ರೀರಾಮ, ವಿಜಯ ರಾಮ! (ರಾ)
-ಮ, ಜೈ ನಿರಂಜನಾದಿತ್ಯ ರಾಮ!!!

ವಿಮಲ ನಾಮಮಲಪ್ರೇಮ ಶ್ರೀರಾಮ!   2(731)

ನಕೆ ಶಾಂತಿ, ವಿಶ್ವಪ್ರೀತಿ ರಘುರಾಮ!
ಕ್ಷಣ ಸೇವಾ ಲಕ್ಷ್ಮಣ ಲಕ್ಷ್ಯಾರಾಮ!
ನಾರದವನಿಷ್ಟ ಭಜನಾ ‘ಹರೇ ರಾಮ’!
ರ್ಕಟ ಭಂಟನಿಷ್ಟ ಮಂತ್ರಾ ಶ್ರೀರಾಮ!
ದನ ವೈರಿಯಾನಂದಾತ್ಮ ಶ್ರೀರಾಮ!
ಕ್ಷ್ಯ ಮುನಿಜನಕೀಸುಂದರ ರಾಮ!
ಪ್ರೇಮನಾಮ ಸರ್ವರಿಗೆ ಸೀತಾರಾಮ!
ದನಮೋಹನ ದಿವ್ಯ ರೂಪಾ ರಾಮ!
ಶ್ರೀರಾಮ ಪಾವನ ನಾಮ ರಾಜಾರಾಮ!
ರಾಮ ಕೃಷ್ಣ ಏಕರೂಪ ಆತ್ಮಾರಾಮ!
ಹಿಮಾ ನಿರಂಜನಾದಿತ್ಯ ಶ್ರೀರಾಮ!!!

ವಿಮಲ ನಿರಂಜನಾದಿತ್ಯರ್ಧನಾರೀಶ್ವರನಯ್ಯ!   1(159)

ಲವಿರದ ಇಚ್ಛಾಶಕ್ತಿ ಸ್ವರೂಪ ಜಯವಯ್ಯ!
ಯಕಾರಿ ಕ್ರಿಯಾಶಕ್ತಿ ಸ್ವರೂಪ ವಿಜಯವಯ್ಯ!
ನಿರ್ಮಲ ಶೀತ ಶಿವ ಶಿರ ಗಂಗಾ ಸುಶೀಲವಯ್ಯ!
ರಂಗುರಂಗಾಗಿ ಶೋಭಿಪಾದಿತ್ಯೆಲ್ಲಕೂ ಮೂಲನಯ್ಯ!
ಗಕೆಲ್ಲಾ ಬೇರ್ಬೇರಾದರೂ ಅವರೆಲ್ಲರೊಂದಯ್ಯ!
ನಾತದ ಸಂಸಾರದಂಟಿಂದಿದ ಮರೆತಿಹರಯ್ಯ!
ದಿಟವಿದರಿಯಲಿಕೆ ಗುರುಕರುಣೆ ಬೇಕಯ್ಯ! (ಅ)
-ತ್ಯಗತ್ಯ ಶ್ರದ್ಧಾ, ಭಕ್ತಾಸಕ್ತಿ, ವಿರಕ್ತಿ ಇದಕಯ್ಯ! (ಅ)
-ರ್ಧನಾರೀಶ್ವರ ಪರಮೇಶ್ವರ ನಿಂತಿರುವನಯ್ಯ!
ನಾಮ ಶ್ರೀರಾಮದಿವಗೆ ಪರಮ ಪ್ರಿಯವಯ್ಯ! (ಆ)
-ರೀತಗೆ ಸಮಾನರಾಗಿಹರು ತ್ರಿಲೋಕದಲಯ್ಯ! (ಅ)
-ಶ್ವಮೇಧಾದಿ ಯಾಗಗಳಿವಗೇನೂ ಬೇಕಿಲ್ಲವಯ್ಯ!
ಸವಾದ ಭಕ್ತಿ, ಭಜನೆಯಿಂದಿದು ಸಿದ್ಧಿ ಅಯ್ಯ!
ರರಿದನಾದರಿಸಿ ವೃಥಾ ದುಃಖಿಸುವರಯ್ಯ! (ಅ)
-ಯ್ಯ! ನಿರಂಜನಾದಿತ್ಯನಿದ ನಿತ್ಯ ತೋರುವನಯ್ಯ!!!

ವಿಮಲ ಪ್ರದಕ್ಷಿಣಾ ಸಾರಂಗ!   1(147)

ನ ಸಂರಕ್ಷಣೆಗಾ ಸಾರಂಗ!
ಕ್ಷ್ಯ ಸಿದ್ಧಿಸಲಿಕಾ ಸಾರಂಗ!
ಪ್ರತ್ಯಕ್ಷ ಪರಮಾತ್ಮ ಸಾರಂಗ!
ಕ್ಷಾಧ್ವರ ಧ್ವಂಸನಾ ಸಾರಂಗ!
ಕಿತಿಪತಿ ವಿಖ್ಯಾತ ಸಾರಂಗ!
-ಣಾಧಿಪ ಗುಣಗಣ ಸಾರಂಗ!
ಸಾಕ್ಷಿಭೂತರೂಪನಾ ಸಾರಂಗ!
ರಂಗ ಪಾಂಡೂರಂಗನಾ ಸಾರಂಗ! (ಅ)
-ಗಮ್ಯನೀ “ನಿರಂಜನ” ಸಾರಂಗ!

ವಿಮಲ ಭಕ್ತಿ ನಿತ್ಯ ಸುಖಕಯ್ಯಾ!   2(525)

ಲವದೆಲ್ಲಾ ಕಾಮ್ಯ ಭಕ್ತಿಯಯ್ಯಾ!
ಕ್ಷ್ಯಸಾಯುಜ್ಯವಾಗಿರಬೇಕಯ್ಯಾ!
ವಭಯ ನಾಶವಿದರಿಂದಯ್ಯಾ! (ಶ)
-ಕ್ತಿಯಾಟಗಳೆಲ್ಲಾ ಅಲ್ಪಕಾಲಯ್ಯಾ!
ನಿನಗೀ ಚಪಲಬೇಡ ಕಂದಯ್ಯಾ!
ತ್ಯಜಿಸಬೇಕು ವ್ಯಾಮೋಹವನಯ್ಯಾ!
ಸುಗುಣಗಳ ಹೆಚ್ಚಿಸು ನೀನಯ್ಯಾ!
ರದೂಷಣ, ಕಾಮ ಕ್ರೋಧವಯ್ಯಾ!
ಲಿ ಮಲ ದೂರ ಶ್ರೀರಾಮನಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾ ವಿಮಲನಯ್ಯಾ!!!

ವಿಮಲ ಭಾರತ ಸರ್ವಮಾನ್ಯಮಕ್ಕೆ!   3(1329)

ಲ ನಿರ್ಮೂಲಕ್ಕಿದು ಸಾಧನಮಕ್ಕೆ!
ಕ್ಷ್ಯ ಸಿದ್ಧಗಿದರುಪಯೋಗಮಕ್ಕೆ!
ಭಾಗೀರಥಿಯಂತಿದು ವ್ಯಾಪಕಮಕ್ಕೆ!
ಸಾಸ್ವಾದಕರಿಗಿದಾನಂದಮಕ್ಕೆ!
ತ್ವಶೋಧಕರಿಗಿದರರ್ಥಮಕ್ಕೆ!
ತ್ಸಂಗಿಗಳಿಗಿದೊಂದು ಪಾಠಮಕ್ಕೆ! (ಗ)
-ರ್ವ ಮೊದಲಾದ ರೋಗಕ್ಕೌಷಧಮಕ್ಕೆ
ಮಾಯಾ ಮೋಹಕ್ಕಿದು ರಾಮಬಾಣಮಕ್ಕೆ! (ಮಾ)
-ನ್ಯವಾಗಿ ಜನ್ಮ ಶ್ರೀ ಕೃಷ್ಣಾರ್ಪಣಮಕ್ಕೆ!
ತ ಭಾರತರದ್ದಜರಾಮರಮಕ್ಕೆ! (ಅ)
-ಕ್ಕೆ ನಿರಂಜನಾದಿತ್ಯ ದರ್ಶನಮಕ್ಕೆ!!!

ವಿಮಲ ಭಾಸ್ಕರಾ ಚಂದ್ರಶೇಖರ!   2(787)

ನ್ಮಥ ವಿಜಯಾ ಚಂದ್ರಶೇಖರ!
ಯ ಯೋಗೀ ಗುರು ಚಂದ್ರಶೇಖರ!
ಭಾಳ ನೇತ್ರಾನಂದಾ ಚಂದ್ರಶೇಖರ! (ಭಾ)
-ಸ್ಕರ, ಶ್ರೇಯಸ್ಕರಾ ಚಂದ್ರಶೇಖರ!
ರಾಮನಾಮಾನಂದಾ ಚಂದ್ರಶೇಖರ!
ಚಂದ್ರ ಚೂಡಾಶಿವಾ ಚಂದ್ರಶೇಖರ! (ಭ)
-ದ್ರ, ಕಾಳಿಯೊಡೆಯಾ ಚಂದ್ರಶೇಖರ!
ಶೇಷ ಹಾರಾ ಹರಾ ಚಂದ್ರಶೇಖರ! (ಸು)
-ಖಕರ, ಶಂಕರಾ ಚಂದ್ರಶೇಖರ! (ಹ)
-ರ, ನಿರಂಜನಾರ್ಕಾ ಚಂದ್ರಶೇಖರ!!!

ವಿಮಲ ಮನೋ ಸಂಕಲ್ಪ ನಿಶ್ಚಯ ಜಯ!   1(181)

ಮಕಾರ ರಹಿತ ಪ್ರಯತ್ನಕ್ಕೆ ಜಯ!
ಯ ಗುರುದೇವನಲಾದರಾಗ ಜಯ!
ನಸನ್ಯರೂನವೆಣಿಸದಿರೆ ಜಯ!
ನೋವಿನಲಿ ಕನಿಕರ ತೋರಲು ಜಯ!
ಸಂಗಾತಿ ನಿಸ್ಸಂಗಿಯಾಗಿರಲಾಗ ಜಯ!
ನಸು ನೆನಸುತಳದಿರಲು ಜಯ! (ಅ)
ಲ್ಪರ ಸಹವಾಸ ತೊರೆದರಾಗ ಜಯ!
ನಿಜಗತಿಯಲ್ಲಿದ್ದರಾಗ ಜಯ! (ಆ)
ಶ್ಚರ್ಯವೇನಿಲ್ಲ! ಇರುವಂತಿದ್ದರೆ ಜಯ!
ಜ್ಞ, ಯಾಗಗಳಿಗಿರುವೀ ಗುರಿ ಜಯ!
ನನ, ಮರಣ ಹರಿಯುವುದೇ ಜಯ!
ತಿ ನಿರಂಜನಾದಿತ್ಯ ಸಾಯುಜ್ಯ ಜಯ!!!

ವಿಮಲ ಮಾತಾ ಕರ್ಮ ಯೋಗಿ!   2(647)

ನ ಪರಿಶುದ್ಧದಾ ಯೋಗಿ!
ಕ್ಷ್ಯ ಶ್ರೀಪಾದಸೇವಾ ಯೋಗಿ!
ಮಾತಿಲ್ಲದ ಸತ್ಕರ್ಮ ಯೋಗಿ!
ತಾಯೀಕೆಲ್ಲಾ ಮಕ್ಕಳ್ಗಾ ಯೋಗಿ!
ನಿಕರ ಸ್ವಭಾವಾ ಯೋಗಿ! (ಧ)
-ರ್ಮ, ಕರ್ಮ ನಿರತಳಾ ಯೋಗಿ!
ಯೋಗಿ, ಸದಾ, ಸಹಜಾ ಯೋಗಿ! (ಯೋ)
-ಗಿ, ನಿರಂಜನ ಪುತ್ರೀ ಯೋಗಿ!!!

ವಿಮಲ ಮಾಲಾಧರ ದತ್ತ!   4(1530)

ತಿ ವಿಕಾಸಕರ ದತ್ತ!
ಕ್ಷ ಜೀವರಾಧಾರ ದತ್ತ!
ಮಾರಹರ ಶಂಕರ ದತ್ತ! (ಕ)
-ಲಾತೀತ ಗುರುವರ ದತ್ತ!
ರ್ಮ, ಕರ್ಮದಾಗರ ದತ್ತ!
ಕ್ಷಿಸುವನಾರ್ತರ ದತ್ತ!
ಯಾ, ಪ್ರೇಮ, ಸಾಗರ ದತ್ತ! (ದ)
-ತ್ತ ನಿರಂಜನಾದಿತ್ಯ ದತ್ತ!!!

ವಿಮಲ ವಚನ ಭಾರತ!   3(1303)

ನಕತ್ಯಾನಂದಾ ಭಾರತ! (ಮೂ)
-ಲದಲ್ಲೊಂದಾಗಿರ್ಪಾ ಭಾರತ!
ರ ಗುರು ಕೃಪಾ ಭಾರತ!
ರಾಚರಾತ್ಮಾರ್ಥಾ ಭಾರತ!
ರನಿಷ್ಟಪ್ರದಾ ಭಾರತ!
ಭಾರತದಾದರ್ಶಾ ಭಾರತ! (ಅ)
-ರವನರುಹುವುದಾ ಭಾರತ! (ಕ)
-ತ ನಿರಂಜನಾದಿತ್ಯ ಪಿತ!!!

ವಿಮಲ ಸಲಿಲಾಯುರ್ಬಲ!   4(1806)

ಳೆಯ ಜಲಾತ್ಮ ನಿರ್ಮಲ! (ಮ)
-ಲಯಮಾರುತಾಪ್ತಾತ್ಮ ಬಲ!
ರ್ವಾಂತರ್ಯಾಮಿ ಸರ್ವ ಬಲ! (ಮ)
-ಲಿನ ಜನ ನಿರ್ಜೀವ ಬಲ! (ಬ)
-ಲಾಬಲಾ ವಿಚಾರಾತ್ಮ ಬಲ!
ಯುದ್ಧ ಬುದ್ಧ್ಯಹಂಕಾರ ಬಲ! (ದು)
-ರ್ಬಲ ವಿಷಯೇಂದ್ರಿಯ ಬಲ! (ಬ)
-ಲ, ನಿರಂಜನಾದಿತ್ಯ ಬಲ!!!

ವಿಮಲ, ವಿಜಯ ಜಯಭೇರಿ ಬಾರಿಸುತಿದೇ!   1(20)

ಲಿನ ಮನಸುಗಳಳಿದು, ಮಹಾಬಲೇಶನ ಮಹಿಮೆ ಬೆಳಗಲಿದೇ!
ಕ್ಷ್ಯವಾಗಿಹ ಗುರುಮೂರ್ತಿ ಎಲ್ಲೆಲ್ಲೂ ವಿರಾಜಿಪ ಶುಭೋದಯವಾಗುತಿದೇ!
ವಿಚಾರಿಗಳ ವಿಚಾರಗಳಿಗಳವಡದ ವಿಶ್ವಾಸದ ಫಲ ಕಂಡಾನಂದಿಸಲಿದೇ!
ರಾಜನ್ಮ ದುಃಖಪೀಡಿತರೆಲ್ಲ ಶಾಂತಿ ಪಡೆವ ಮಹಾದ್ವಾರ ತೆರೆಯಲಿದೇ!
ತಿಪತಿ ಗುರು ನಿರಂಜನನ ಖ್ಯಾತಿ ದೇಶದಾದ್ಯಂತ ಹರಡಲಿದೇ!


ಭೇದಾಭೇದಗಳಳಿದೆಲ್ಲರೊಂದಾಗಿ ಆತನ ಭಜಿಸಿ ಕೊಂಡಾಡಲಿದೇ!
ರಿವಾಜುಗಳರ್ಕನಿಗರ್ಘ್ಯವಿತ್ತವಧೂತನಿಗೆ “ಜೈ ನಿರಂಜನ” ಅನ್ನಲಿದೇ!
ಬಾ, ಬೇಗ ಬಾರೆಂಬ ಕೂಗು ಗುರುದತ್ತನ ದಿವ್ಯ ಚಿತ್ತಕೆ ಬಂದಂತಿದೇ!
ರಿಸಿ, ಮುನಿಗಳೆಲ್ಲರ ಜಯಘೋಷದ ಧ್ವನಿ ಕೇಳಿಬರುತಲಿದೇ!
ಸುರಿಯುತಿಹ ಹೂ ಮಳೆಯ ಸುವಾಸನೆ ನಾಸಿಕನೇರುತಿದೇ!
ತಿರುಗುತಿಹ ಕಾಲಚಕ್ರದ ಗತಿ, ಅಚ್ಚರಿಯನುಂಟುಮಾಡುತಿದೇ!
ದೇವದೇವ ಗುರುದೇವ ನಿರಂಜನಾದಿತ್ಯನಾಗಮನದ ಜೈಕಾರ ಕೇಳುತಿದೇ!!!

ವಿಮಲನೆನ್ನುವರು ನಿನ್ನ!   5(3288)

ಲ ತುಂಬಿದೆ ಮನ ನಿನ್ನ!
ಯವಾಗ್ನಲ್ಲನಲಿ ನಿನ್ನ!
ನೆನೆಯಬೇಡ ಅನ್ಯರನ್ನ! (ತಿ)
-ನ್ನು ಅವನಿಗಾಗನ್ನವನ್ನ! (ಅ)
-ವಗರ್ಪಿಸೆಲ್ಲಾ ಕಾರ್ಯವನ್ನ! (ಗು)
-ರುದತ್ತ ನೆತ್ತುವನು ನಿನ್ನ!
ನಿಶಿ, ದಿನ, ಧ್ಯಾನಿಸವ್ನನ್ನ! (ನಿ)
-ನ್ನ ನಿರಂಜನಾದಿತ್ಯನನ್ನ!!!

ವಿಮಲಮ್ಮ, ಗೌರಮ್ಮ, ಪ್ರಭಾ! (ಅ)   4(1747)

-ಮರಜ್ಯೋತಿ ಸ್ವರೂಪಾ ಪ್ರಭಾ! (ಫಾ)
-ಲನೇತ್ರನ ಸೇವೆಗಾ ಪ್ರಭಾ! (ಅ)
-ಮ್ಮ, ನಮ್ಮಮ್ಮ, ಗೌರಮ್ಮಾ ಪ್ರಭಾ!
ಗೌರವಾಂಗಿ ವಿಮಲಾ ಪ್ರಭಾ! (ಹ)
-ರನರಸಿ ಪಾರ್ವತೀ ಪ್ರಭಾ! (ಒ)
-ಮ್ಮತದ ತ್ರೀಕರಣಾ ಪ್ರಭಾ!
ಪ್ರಭುವಿನಾತ್ಮಾನಂದಾ ಪ್ರಭಾ! (ಪ್ರ)
-ಭಾ, ನಿರಂಜನಾದಿತ್ಯಾ ಪ್ರಭಾ!!!

ವಿಮಲಾ, ಕಮಲಾ, ಮಂಜುಳಾ!   6(3539)

ನಸ್ಸಿಗಾಯ್ತಾನಂದತುಳಾ! (ವಿ)
-ಲಾಸಾತೀತಾನಂದ ಮಂಗಳಾ! (ತ್ರಿ)
-ಕರಣ ಶುದ್ಧಿಗಿದೇ ಫಲ!
ನೋ ಮಾಲಿನ್ಯಕ್ಕೆ ವಿಫಲ!
ಲಾಭಾಲಾಭಕ್ಕೆ ಕರ್ಮ ಫಲ!
ಮಂದಾಕಿನಿ ಸುಕೃತ ಫಲ! (ಮಂ)
-ಜುನಾಥನ ತಪದ ಫಲ! (ಬಾ)
-ಳಾ ನಿರಂಜನಾದಿತ್ಯ ಫಲ!!!

ವಿಮಲಾಕ್ಷಿಯರಿವು ನಿಜರೂಪ! [ಕ]   3(1026)

-ಮಲಾಕ್ಷಿಗದಾಗ್ವುದು ಹರಿರೂಪ! (ಫಾ)
-ಲಾಕ್ಷೀಕ್ಷಿಸುವುದು ಪ್ರಳಯರೂಪ! (ಸಾ)
-ಕ್ಷಿ ಸದಾ ಸಚ್ಚಿದಾನಂದ ಸ್ವರೂಪ! (ಭ)
-ಯಹರವಿದಮರ ವಿಶ್ವರೂಪ! (ಹ)
-ರಿ, ಹರ, ಅಜರೆಲ್ಲಾ ಇದೇ ರೂಪ! (ನೋ)
-ವು, ಸಾವಿಲ್ಲದಾಕಾರೋಂಕಾರ ರೂಪ!
ನಿತ್ಯ ಸುಖಪ್ರದವೀ ಗುರು ರೂಪ!
ರಾ, ಜನ್ಮ ರಹಿತ ಸ್ಥಿರರೂಪ!
ರೂಪ, ನಾಮಾತೀತಾತ್ಮಾ ರಾಮರೂಪ! (ರೂ)
-ಪರಾ ನಿರಂಜನಾದಿತ್ಯ ರೂಪ!!!

ವಿರಕ್ತ ಅನುರಕ್ತನೆಂತಹನು? (ಪ)   6(3914)

-ರಮಾರ್ಥದಲ್ಲಾತ ಮುಳುಗಿಹನು! (ಶ)
-ಕ್ತನೂ, ಅಶಕ್ತನೂ ತಾನಾಗಿಹನು!
ಜರಾಮರ ತಾನೆನಿಸಿಹನು! (ಮ)
-ನುಜ, ದನುಜಾಭೇದನಾಗಿಹನು! (ಸು)
-ರ, ನರಲೋಕಕ್ಕಾಶಿಸದಿಹನು! (ರ)
-ಕ್ತ, ಮಾಂಸ ನಾನಲ್ಲೆಂದರಿತಿಹನು! (ನಾ)
-ನೆಂಬವ ನಿರಂಜನನೆಂದಿಹನು!
ಮಾದಿ ಗುಣಾತೀತನಾಗಿಹನು!
ರಿ ಹರಾದ್ಯರನ್ನೂ ಮೀರಿಹನು! (ತಾ)
-ನು ನಿರಂಜನಾದಿತ್ಯನಾಗಿಹನು!!!

ವಿರಕ್ತ ನಿಜಸುಖ ಶಾಂತಿದಾತ!   1(281)

ಸ, ವಿರಸ ವಿವರ್ಜಿನಾತ! (ಶ)
-ಕ್ತನಿವಶಕ್ತರ ಶಕ್ತಿದಾತ! (ಅ)
-ನಿತ್ಯ ವಿಷಯಾದಿಗಳ ವಿಘಾತ! (ಅ)
-ಜ, ಹರಿ, ಹರರೇಕ ರೂಪವೀತ!
ಸುರಾಸುರರೆಲ್ಲರ ಗುರುನಾಥಾ!
ಗವಾಹನನಾದ ಶ್ರೀಪತೀತ
ಶಾಂಭವಿಯರಸ ಶಂಕರನೀತ!
ತಿಳಿ, ಸೃಷ್ಟೀಶ ಬ್ರಹ್ಮರೂಪನೀತ!
ದಾರಿ ತೊಂರಿ ಪಾರುಮಾಡುವನಾಶ!
{ಒ

}

ಪಸಿ ನಿರಂಜನಾದಿತ್ಯನಾತ
ದ್ರೂಪಿ ನಿರಂಜನಾದಿತ್ಯ ದಾತ!!!

ವಿರಕ್ತ ನಿರಂಜನಾದಿತ್ಯ ದತ್ತ! (ವ)   1(216)

-ರ, ಕಪಾಲ ಭಿಖ್ಷಾಹಾರೀ ದತ್ತ! (ಶ)
-ಕ್ತನಾದರೂ ಸದಾ ಗುಪಿತಾ ದತ್ತ! (ಮೌ)
-ನಿ, ಯಮ, ನಿಯಮದ ಸತ್ಯಾ ದತ್ತ! (ಆ)
-ರಂಭ, ಸಮಾರಂಭನಾಸಕ್ತಾ ದತ್ತ! (ಅ)
-ಜ, ಹರಿ, ಹರರೇಕ ರೂಪಾ ದತ್ತ! (ಅ)
-ನಾಮಧೇಯನೆಲ್ಲೆಲ್ಲಿರುವಾ ದತ್ತ!
ದಿಕ್ಕಿಲ್ಲದ ದೀನರಿಗೆಲ್ಲಾ ದತ್ತ! (ಸ)
-ತ್ಯತೋರುವನು ನಂಬಿದರಾ ದತ್ತ!
ಯಾಸಾಗರನಾಗಿಹನಾ ದತ್ತ! (ಇ)
-ತ್ತ ನಿರಂಜನಾದಿತ್ಯನಾದಾ ದತ್ತ!

ವಿರಕ್ತನ ಬಳಿಯಲ್ಲೇನಿದೆ? (ಪ)   4(2334)

-ರಮಾರ್ಥವಾರಿಗಿಷ್ಟವಾಗಿದೆ? (ಭ)
-ಕ್ತರಿಗೈಶ್ವರ್ಯದಾಸೆಯಾಗಿದೆ! (ಅ)
-ನವರತಾಭ್ಯಾಸ ಬೇಡಾಗಿದೆ!
ಗೆಬಗೆಯಾಸೆ ಹೆಚ್ಚಾಗಿದೆ! (ಬಾ)
-ಳಿನ ಗುರಿ ಮರೆತೇ ಹೋಗಿದೆ! (ಮಾ)
-ಯ, ಮಂತ್ರಗಳ ಹುಚ್ಚು ಹತ್ತಿದೆ! (ಎ)
-ಲ್ಲೇನೇನಾಶ್ಚರ್ಯವೆಂಬಂತಾಗಿದೆ!
ನಿಜ ಭಕ್ತಿ ಕಣ್ಮರೆಯಾಗಿದೆ! (ತಂ)
-ದೆ, ನಿರಂಜನಾದಿತ್ಯೆಂದಾಗಿದೆ!!!

ವಿರಕ್ತನುಪಕಾರ ಅಗೋಚರ!   6(3519)

ಮಾರಮಣನಾಗಿ ಲೋಕೋದ್ಧಾರ!
(ಭ)-ಕ್ತವತ್ಸಲನೆನಿಸಿ ದೀನೋದ್ಧಾರ!
ನುಡಿ, ನಡೆಗಾದರ್ಶ ರಘುವೀರ!
ರಶುರಾಮ ವೀರ ತಪೋವರ!
ಕಾಮಹರಶಂಕರ ಸರ್ವೇಶ್ವರ!
ಜಕನ ಕೊಂದ ಯಾದವೇಶ್ವರ!
ನುಪಮ ಭಕ್ತ ವಾಯುಕುಮಾರ!
ಗೋಸೇವಾಗ್ರೇಸರ ನಂದಕುಮಾರ!
ರಾಚರ ವ್ಯಾಪಕ ಗುರುವರ!
(ವ)-ರದ ನಿರಂಜನಾದಿತ್ಯ ಶ್ರೀಧರ!!!

ವಿರಕ್ತಾ! ನೀನೇಕಾದೆ ಅನುರಕ್ತ?   3(1204)

ಕ್ತ ಮಾಂಸದೊಡಲು ರೋಗಗ್ರಸ್ತ! (ಯು)
-ಕ್ತಾಯುಕ್ತವರಿಯದೆ ಕಾಮಗ್ರಸ್ತ!
‘ನೀ’ ‘ನಾ’ ನೆಂಬುದರಿಂದ ಕ್ರೋಧಗ್ರಸ್ತ!
ನೇಮ, ನಿಷ್ಠೆಯಿಲ್ಲದೆ ಲೋಭಗ್ರಸ್ತ!
ಕಾಮ್ಯ ಕರ್ಮಗಳಿಂದ ಮೋಹಗ್ರಸ್ತ! (ಆ)
-ದೆ ನೀನನವರತ ಮದಗ್ರಸ್ತ!
ಲ್ಪ ಜೀವನಾದೆ ಮತ್ಸರಗ್ರಸ್ತ! (ಅ)
-ನುಪಮನಾದ ನೀನು ಸರ್ವಶಕ್ತ! (ವ)
-ರ ಗುರು ದತ್ತನಾಗಿ ಶೋಭಿಸಿತ್ತ! (ಶ)
-ಕ್ತ, ನಿರಂಜನಾದಿತ್ಯನೆನಿಸುತ್ತ!!!

ವಿರಕ್ತಿಯುತ ವಿಮಲಾನಂದ!   4(1936)

ಕ್ತಿ ರಹಿತ ರಮಣಾನಂದ! (ಭ)
-ಕ್ತಿ, ಮುಕ್ತಿ, ದಾತ ನಿಶ್ಚಲಾನಂದ!
ಯುಕ್ತ ಸದ್ಬಕ್ತಾಂಜನೇಯಾನಂದ!
ರಣಿ ವಂಶಾತ್ಮ ರಾಮಾನಂದ!
ವಿಶ್ವವಂದ್ಯ ರಾಮಕೃಷ್ಣಾನಂದ!
ಹಾಮಹಿಮ ಮಾಧವಾನಂದ!
ಲಾವಣ್ಯಮೂರ್ತಿ ಲಕ್ಷೀಶಾನಂದ!
ನಂದಾನಂದ ಶಿವಾನಂದಾನಂದ!
ತ್ತ ನಿರಂಜನಾದಿತ್ಯಾನಂದ!!!

ವಿವಿಧ ನಾಮ ಭಜನಾನಂದ!   5(2924)

ವಿಶ್ವ ಕುಟುಂಬಕ್ಕಿದೇ ಆನಂದ!
ರ್ಮ, ಕರ್ಮಗಳರಿವಿದ್ರಿಂದ!
ನಾಸ್ತಿಕಾಸ್ತಿಕನಪ್ಪನಿದ್ರಿಂದ!
ನಶ್ಯುದ್ಧಿಯಾಗುವುದಿದ್ರಿಂದ!
ವಪಾಶ ಹರಿವುದಿದ್ರಿಂದ!
ಗದೀಶ ತಾನಾಗ್ವುದಿದ್ರಿಂದ!
ನಾ, ನೀ, ನೆಂಬುದಳಿವುದಿದ್ರಿಂದ!
ನಂಬಿಗೆಯಿದ್ದರೆಲ್ಲಾ ಆನಂದ!
ತ್ತ ನಿರಂಜನಾದಿತ್ಯಾನಂದ!!!

ವಿವೇಕ ಚೂಡಾಮಣಿ ಗೀರ್ವಾಣಿ!   3(1377)

ವೇದಸಾರನ ಹೃದಯ ರಾಣಿ!
ರ್ಮಯೋಗದ ನಿಸ್ವಾರ್ಥ ವಾಣಿ!
ಚೂಡಾಲಾತ್ಮರೂಪಿ ಪೂರ್ಣ ಜ್ಞಾನಿ! (ಮೃ)
-ಡಾದಿ ವಂದ್ಯೆ ಶ್ರೀ ವಿದ್ಯಾಭಿಮಾನಿ!
ದಾಲಸಾಭಿದಾನೀ ಮೋಹಿನಿ! (ಮ)
-ಣಿ ಮಕುಟಾಲಂಕಾರ ಶೋಭಿನಿ!
ಗೀತ ಗೋವಿಂದಾನಂದ ವರ್ಷಿಣಿ! (ಸ)
-ರ್ವಾಭೀಷ್ಟಾನುಗ್ರಹ ಪ್ರದಾಯಿನಿ! (ಧ)
-ಣಿ, ಶ್ರೀ ನಿರಂಜನಾದಿತ್ಯ ಮೌನಿ!!!

ವಿವೇಕ ವಿಚಾರಾಚಾರದಿಂದಾರೂಪ್ಯ!   6(3785)

ವೇಷ, ಭೂಷಣ ತಕ್ಕಂತಿದ್ದರಾರೂಪ್ಯ!
ರಣತ್ರಯ ಶುದ್ಧವಾದಾಗಾರೂಪ್ಯ!
ವಿಶ್ವಾಸ ತನ್ನಲ್ಲಿ ತನಗಿದ್ದ್ರಾರೂಪ್ಯ!
ಚಾಪಲ್ಯಾತೀತ ಮನಸ್ಸಿನಿಂದಾರೂಪ್ಯ!
ರಾಗ, ದ್ವೇಷ, ವರ್ಜಿತವಾದಾಗಾರೂಪ್ಯ!
ಚಾತುರ್ವರ್ಣಾಶ್ರಮಕ್ಕೆ ಆಧಾರಾರೂಪ್ಯ!
ಹಸ್ಯವಿದಭ್ಯಾಸವಾದಾಗಾರೂಪ್ಯ! (ಅಂ)
-ದಿಂದೆಂದೆಂದಿಗೂ ಅಚ್ಚಳಿಯದ್ದಾರೂಪ್ಯ!
ದಾಶರಥಿ, ಪಾರ್ಥಸಾರಥಿ ಸಾರೂಪ್ಯ!
ರೂಪ, ನಾಮ, ಗುಣ, ಭೇದಕ್ಕಾಗ್ದಾರೂಪ್ಯ! (ಗೋ)
-ಪ್ಯ, ನಿರಂಜನಾದಿತ್ಯ ದತ್ತ ಸಾರೂಪ್ಯ!!!

ವಿವೇಕ, ವಿಚಾರಗಳಾಪ್ತರೆನಗೆ!   6(4256)

ವೇದಾಂತ ಹಿತವಾಗಿರುವುದೆನಗೆ!
ರ್ತವ್ಯವೀ ಬಾಳೆಂಬರಿವು ನನಗೆ!
ವಿಕಲ್ಪ, ಸಂಕಲ್ಪಗಳಿಲ್ಲ ನನಗೆ!
ಚಾತುರ್ವರ್ಣಾಶ್ರಮಗಳಿಲ್ಲ ನನಗೆ!
ತಿಕ್ರೀಡೆಯಲ್ಲಾಸಕ್ತಿಯಿಲ್ಲೆನಗೆ!
ಗನಸದೃಶಾಗಿರ್ಪಾನಂದೆನಗೆ! (ಇ)
-ಳಾವಲಯದಲ್ಲೆಲ್ಲೂ ಜಾಗವೆನಗೆ! (ಸ)
-ಪ್ತ ಭುಮಿಕಾ ತುತ್ತ ತುದಿಯಾಸೆನಗೆ!
ರೆಕ್ಕೆಯಿಲ್ಲದ ಹಕ್ಕಿ ನಾನೆಂದು ನಗೆ!
ನಗೆ, ಶಿವಾನಂದ ನಂದನಿಗೆ!
ಗೆಳೆಯ ನಿರಂಜನಾದಿತ್ಯಾದೆನಗೆ!!!

ವಿಶಾಲಾಕಾಶದಲ್ಲಿ ವಿಶ್ವಾತ್ಮ!   3(1136)

ಶಾಶ್ವತನಾಗಿವನು ಸತ್ಯಾತ್ಮ! (ವೇ)
-ಲಾಯುಧಸ್ವಾಮಿ ಗುರುಗುಹಾತ್ಮ!
ಕಾಮ ಹರ, ಹರ ಶ್ರೀರಾಮಾತ್ಮ!
ಕ್ತಿ ಸ್ವರೂಪ ಸದಾಶಿವಾತ್ಮ!
ತ್ತಾವಧೂತ ನಿತ್ಯಾನಂದಾತ್ಮ! (ಮ)
-ಲ್ಲಿಕಾರ್ಜುನ ಲಿಂಗ ವಿಮಲಾತ್ಮ!
ವಿಚಾರ ಸಾಗರ ಚಿನ್ಮಯಾತ್ಮ! (ವಿ)
-ಶ್ವಾಧಾರೋಂಕಾರ ಶ್ರೀ ಶಂಕರಾತ್ಮ! (ಆ)
-ತ್ಮ, ನಿರಂಜನಾದಿತ್ಯ ಸರ್ವಾತ್ಮ!!!

ವಿಶಾಲಾಕಾಶದಲ್ಲಿ ವಿಶ್ವಾತ್ಮ!   3(1137)

ಶಾಶ್ವತನವನಾಗ್ಯಚಲಾತ್ಮ! (ನಿ)
-ಲಾಕಾಶದಲ್ಲಿ ಛಾಯಾಪತ್ಯಾತ್ಮ!
ಕಾಮಹರನಾತಾಗಿ ರಾಮಾತ್ಮ!
ಕ್ತಿರೂಪವದಾಗಿ ಮುಕ್ತಾತ್ಮ!
ತ್ತ ತಾನಾಗಿ ಅವಧೂತಾತ್ಮ! (ಮ)
-ಲ್ಲಿಕಾರ್ಜುನವನಾಗಿ ಲಿಂಗಾತ್ಮ!
ವಿರಾಡ್ರೂಪ ಆ ನಂದಕಂದಾತ್ಮ! (ವಿ)
-ಶ್ವಾಕಾರನಾಗಿ ಚರಾಚರಾತ್ಮ! (ಆ)
-ತ್ಮ, ನಿರಂಜನಾದಿತ್ಯ ನಿತ್ಯಾತ್ಮ!!!

ವಿಶ್ರಮಿಸಂದ, ಸೇವೆ ಬೇಕೆಂದ!   1(359)

ಶ್ರಮವಿಲ್ಲದಾಯ್ತು ಸೇವಾನಂದ! (ಅ)
-ಮಿತುತ್ಸಾಹವಿತ್ತುದತ್ಯಾನಂದ!
ಸಂಘದಿಂದಾಯ್ತು ಅಪಾರಾನಂದ!
ರ್ಶನ ಮನೋಹರದಾನಂದ!
ಸೇರುತೊಂದಾದುದಮಲಾನಂದ! (ಅ)
-ವೆರಡು ನಿಮಿಷ ಯೊಂಗಾನಂದ!
ಬೇಕಾದುದೆನಗಾ ಸದಾನಂದ!
ಕಂದನಿಷ್ಟಪೂರ್ತವನಾನಂದ!
ಯೆ, ನಿರಂಜನಾದಿತ್ಯಾನಂದ!

ವಿಶ್ರಮಿಸಬೇಕೆನ್ನುವರಯ್ಯಾ! (ಆ)   1(357)

-ಶಯದಾತನ ಇಷ್ಟವಿದಯ್ಯಾ!
ಮಿತ್ರನಿಗಿದೇನಾನಂದವಯ್ಯಾ?
ರ್ವಜ್ಞನವನೇ ಬಲ್ಲನಯ್ಯಾ!
ಬೇಡನಲಾರು ಸಮರ್ಥರಯ್ಯಾ?
ಕೆಲಸಗಳ್ಳ ನಾನಲ್ಲವಯ್ಯಾ! (ಅ)
-ನ್ನುವುದೆಲ್ಲವನಿಚ್ಛೆಯಿಂದಯ್ಯಾ!
ರ್ತನೆಯವನಾಜ್ಞೆಯಂತಯ್ಯಾ! (ಅ)
-ರಸನವ ಲೋಕತ್ರಯಕಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯವನಯ್ಯಾ!!!

ವಿಶ್ರಾಂತಿ ಬೇಕೀಗೇನಪ್ಪಾ? (ವಿ)   4(1473)

-ಶ್ರಾಂತ್ಯಾವುದು ಗೊತ್ತೇನಪ್ಪಾ?
ತಿಳಿಸಬೇಕು ನೀನಪ್ಪಾ!
ಬೇಕಾತ್ಮಾರಾಮಾನಂದಪ್ಪಾ!
ಕೀಳಾಲೋಚನೆ ದುಃಖಪ್ಪಾ! (ಯೋ)
-ಗೇಚ್ಛೆಯಿಂದಿರಬೇಕಪ್ಪಾ! (ಅ)
-ನಶ್ವರವಿಹ ಸುಖಪ್ಪಾ! (ಅ)
-ಪ್ಪಾ ನಿರಂಜನಾದಿತ್ಯಪ್ಪಾ!!! ೧೪೭೩

ವಿಶ್ವ ಬಂದಾ ಸಪ್ತಾಶ್ವಾರೂಢ ಬಂದಾ! (ನ)   4(1628)

-ಶ್ವರದಾಸೆ ಬಿಟ್ಟುಬಿಡಬೇಕೆಂದಾ!
ಬಂಧು ಬಳಗವೆಲ್ಲವು ನಾನೆಂದಾ!
ದಾಮೋದರ ನಾನೆಂದರಿ ನೀನೆಂದಾ!
ಕಲ ನಿಗಮಾಗಮಾತ್ಮಾನೆಂದಾ! (ಲಿ)
-ಪ್ತಾಲಿಪ್ತಾವಧೂತ ದತ್ತ ನಾನೆಂದಾ!
ಶ್ವಾಸೋಚ್ಛ್ವಾಸ ಸಂಪೂರ್ಣಾತ್ಮ ನಾನೆಂದಾ!
ರೂಪ, ನಾಮಾತೀತ ಗುರು ನಾನೆಂದಾ!
ಮರುಧರ ಈಶ್ವರ ನಾನೆಂದಾ!
ಬಂದಾ, ನಿಂದಾ, ಶಿವಾನಂದ ನಾನೆಂದಾ! (ಸ)
-ದಾ, ನಿರಂಜನಾದಿತ್ಯಾನಂದಾನೆಂದಾ!!!

ವಿಶ್ವ ಸಮ್ಮೇಳನವಾಗುತಿದೆ ನಿತ್ಯ! (ನ)   2(718)

-ಶ್ವರದಿಂದ ಬೇರಾಗಬೇಕತ್ಯಗತ್ಯ!
ತ್ಯದಲಿ ನೆಲಸಬೇಕನುನಿತ್ಯ! (ಹಿ)
-ಮ್ಮೇಳಗಳಿಲ್ಲದಾ ಬಾಳು ಸದಾ ಸ್ತುತ್ಯ! (ಒ)
-ಳ, ಹೊರಗೆಲ್ಲೆಲ್ಲೂ ಅದರದೇ ನೃತ್ಯ!
ರಜನ್ಮ ಸಾರ್ಥಕಗೈವುದು ಸತ್ಯ!
ವಾದ, ಭೇದಗಳೆಂಬುದು ಎಲ್ಲಾ ಮಿಥ್ಯ!
ಗುರಿಗಾಗಿ ಸದಾ ಇರಬೇಕು ಕೃತ್ಯ!
ತಿಳಿದುಳಿವುದರಿಂತಮರ ಮರ್ತ್ಯ! (ಸ)
-ದೆ ಬಡಿಯುತಿರಬೇಕಾಸೆಯ ನಿತ್ಯ!
ನಿಶ್ಚಲ ಸ್ಥಿತಿಗೆ ನಾಮ ಜಪ ಪಥ್ಯ! (ಸ)
-ತ್ಯ, ನಿತ್ಯ ಶ್ರೀ ನಿರಂಜನಾದಿತ್ಯ ಸ್ತುತ್ಯ!!!

ವಿಶ್ವಪ್ರಿಯನ ತಾಯಿ ಅದಿತಿ! (ವಿ)   6(4240)

-ಶ್ವಕ್ಕಾಧಾ ಅವನ ಆಕೃತಿ!
ಪ್ರಿಯರ ಅಂಬುಜಕ್ಕಾ ತೆ

ಜಾಕೃತಿ! (ಕಾ)
-ಯ ಮೋಹವಳಿದಂಥಾ ಆಕೃತಿ!
ಮನಕ್ಕರ್ಹತೆಯುಳ್ಳಾಕೃತಿ!
ತಾಸು, ಘಳಿಗೆಯೊಡೆಯಾಕೃತಿ! (ಬಾ)
-ಯಿ ಮುಚ್ಚಿ ನೋಡುತ್ತಿರುವಾಕೃತಿ!
ವಳ್ಗೆ ಕಶ್ಯಪ ಬ್ರಹ್ಮ ಪತಿ! (ಅ)
-ದಿತಿ ಅವನ ಆದರ್ಶ ಸತಿ! (ಗ)
-ತಿ ನಿರಂಜನಾದಿತ್ಯಾಧಿಪತಿ!!!

ವಿಶ್ವರೂಪ ಶಿವಪ್ಪ! (ಶಾ)    1(410)

-ಶ್ವತ ರೂಪ ಶಿವಪ್ಪ!
ರೂಪಾನಂತ ಶಿವಪ್ಪ!
ರಮಾತ್ಮ ಶಿವಪ್ಪ!
ಶಿವಗುರು ಶಿವಪ್ಪ!
ರದಾತ ಶಿವಪ್ಪ! (ಅ)
-ಪ್ಪ, ಜೈ ನಿರಂಜನಪ್ಪ!!!

ವಿಶ್ವಶಾಂತಿ ವಿಶುದ್ದಾತ್ಮ ಭಾವದಿಂದ! (ನ)   2(858)

-ಶ್ವರ ವಿಷಯಾನಂದೆಂಬರಿವಿನಿಂದ! (ಅ)
-ಶಾಂತಿ ಆಶೆಗಳಿಂದೆಂಬ ಜ್ಞಾನದಿಂದ! (ಅ)
-ತಿಹಿತ ತೃಪ್ತಿಯಿಂದೆಂಬ ಬಾಳಿನಿಂದ!
ವಿಜ್ಞಾನಧ್ಯಾತ್ಮ ಸಿದ್ಧಿಗೆಂಬುದರಿಂದ!
ಶುದ್ಧ ಸಹೋದರ ಪ್ರೇಮ ಬುದ್ಧಿಯಿಂದ! [ಉ]
-ದ್ಧಾರ ಆತ್ಮಾನಂದದಿಂದೆಂಬುದರಿಂದ! (ಆ)
-ತ್ಮ ಸರ್ವಾಂತರ್ಯಾಮ್ಯೆಂಬ ವಿವೇಕದಿಂದ!
ಭಾಗ್ಯವಿದೆಂಬ ದೃಢವಿಶ್ವಾಸದಿಂದ!
ರ ಗುರುದೇವನಾಶೀರ್ವಾದದದಿಂದ! (ಹಾ)
-ದಿಂತಿರಲಿರ್ಪರೆಲ್ಲಾ ನೆಮ್ಮದಿಯಿಂದ!
ತ್ತ ನಿರಂಜನಾದಿತ್ಯಾದರ್ಶದಿಂದ!!!

ವಿಶ್ವಾಮಿತ್ರ ನಾನಾದಾಗ ನೀನು ರಾಮ! [ವಿ]   3(1309)

-ಶ್ವಾಮಿತ್ರ ನೀನಾದಾಗ ನಾನು ಶ್ರೀ ರಾಮ!
ಮಿತ್ರ ಪ್ರೇಮದಿಂದೆಲ್ಲರಿಗೂ ಆರಾಮ!
ತ್ರಯಮೂರ್ತಿ ರೂಪ ದತ್ತಾತ್ರೇಯಾರಾಮ!
ನಾಮ ರೂಪಾತೀತ ಸ್ಥಿತಿ ಸದಾರಾಮ!
ನಾದ, ಬಿಂದು, ಕಲಾತೀತ ಆತ್ಮಾರಾಮ! (ಪಾ)
-ದಾಶ್ರಯ ಸದ್ಗುರು ದೇವನದಾರಾಮ! (ಸಂ)
-ಗ ಸಜ್ಜನರದು ಜೀವರಿಗಾರಾಮ!
ನೀಲಮೇಘಶ್ಯಾಮ ಸುಧಾಮಗಾರಾಮ! (ಅ)
-ನುದಿನವನ ಭಜನಾನಂದಾರಾಮ!
ರಾಮ, ಸೀತಾ, ಕೃಷ್ಣ, ರಾಧಾ ನಾಮಾರಾಮ!
ಹಿಮ ನಿರಂಜನಾದಿತ್ಯಾ ಶ್ರೀರಾಮ!!!

ವಿಶ್ವಾಮಿತ್ರನಾಗಿರುತಿಹೆನು!   1(16)

ಶ್ವಾಸೋಚ್ಛ್ವಾಸದೀಶ್ವರನ ತುಂಬಿಹೆನು!
ಮಿತ್ರನೆನಿಸಿ ಸರ್ವರ ಸರ್ವಸ್ವವಾಗಿಹೆನು!
ತ್ರಾಹಿಮಾಂ ನಿರಂಜನ ಪಾಹಿ! ಎನುತಿಹೆನು!
ನಾಳೆ ನಿನ್ನೆಗಳ ಚಿಂತೆಗೆದೆಗೊಡದಿಹೆನು!
ಗಿರಿಸುತೇಶ್ವರನ ನೆಚ್ಚಿನ ಮಗನಾಗಿಹೆನು!
ರುಧಿರ ಮಾಂಸದ ಗೊಂಬೆ ನಾನಲ್ಲೆಂದರಿತಿಹೆನು!
ತಿಥಿ, ವಾರ, ಮಾಸಗಳೆನಗಿಲ್ಲೆಂದಿರುತಿಹೆನು!
ಹೆರವರಾರೆನ್ನವರಾರೆಂದರಿಯದವನಾಗಿಹೆನು!
ನುಡಿಯಂತೆ ನಡೆವಾ ನಿರಂಜನ ನಾನಾಗಿಹೆನು!!!

ವಿಶ್ವಾಮಿತ್ರನಿಗೆ ತಪಸು ಕರ್ತವ್ಯ! (ಆ)   1(380)

-ಶ್ವಾಸವೀವುದು ಶ್ರೀರಾಮನ ಕರ್ತವ್ಯ!
ಮಿಥಿಲೇಶಿಗೆ ರಾಮ ಜಪ ಕರ್ತವ್ಯ!
ತ್ರಯಂಬಕಗಜ್ಞಾನ ನಾಶ ಕರ್ತವ್ಯ! (ಅ)
-ನಿಮಿಷರಿಗೆ ಹರಿಭಕ್ತಿ ಕರ್ತವ್ಯ!
ಗೆಳೆಯಾದಿತ್ಯಗೆ ಕಲ್ಯಾಣ ಕರ್ತವ್ಯ!
ನಯಗೆ ತಾಯ್ತಂದೆ ಸೇವೆ ಕರ್ತವ್ಯ!
ತಿಗೆ ಏಕಪತ್ನೀವ್ರತ ಕರ್ತವ್ಯ!
ಸುಶಿಷ್ಯಗೆ ಗುರುಸ್ಮರಣೆ ಕರ್ತವ್ಯ!
ಡು ಪಾಪಿಗೆ ಪಶ್ಚಾತ್ತಾಪ ಕರ್ತವ್ಯ! (ಆ)
-ರ್ತ ರಕ್ಷಣೆ ಜಗತ್ಕರ್ತನ ಕರ್ತವ್ಯ! (ಭ)
-ವ್ಯ ನಿರಂಜನಾದಿತ್ಯಗೆಲ್ಲಾ ಕರ್ತವ್ಯ!!!

ವಿಶ್ವಾಸ ಕೆಡಿಸಬೇಡಪ್ಪಾ!   3(1282)

ಶ್ವಾನದ ಬದುಕು ಸಾಕಪ್ಪಾ!
ತ್ಯದ ನೆಲೆಯ ತೋರಪ್ಪಾ!
ಕೆಡುಕು ಬುದ್ಧಿಯ ಕೊಲ್ಲಪ್ಪಾ! (ಅ)
-ಡಿಗೆರಗುವೆನು ನಾನಪ್ಪಾ!
ರ್ವ ಸಾಕ್ಷಿ ಗುರು ನೀನಪ್ಪಾ!
ಬೇರೆ ಗತಿಯೆನಗಿಲ್ಲಪ್ಪಾ! (ತ)
-ಡಬಡಿಸುತಿದೆ ಜೀವಪ್ಪಾ! (ಅ)
-ಪ್ಪಾ ನಿರಂಜನಾದಿತ್ಯಾತ್ಮಪ್ಪಾ!!!

ವಿಶ್ವಾಸ ಘಾತಕನಾಗಬೇಡ!   5(3045)

ಶ್ವಾನ ಸೂಕರರಂತಿರಬೇಡ!
ದಾಶಿವನ ಮರೆಯಬೇಡ!
ಘಾಸಿಯಕ್ಕು! ಮೋಸಮಾಡಬೇಡ!
ಪೋನಿಧಿಯಾಗದಿರಬೇಡ!
ಟ್ಟು ಕತೆಗಳ ನಂಬಬೇಡ!
ನಾಟಕದ ರಾಜನಾಗಬೇಡ!
ಡಿಬಿಡಿ ಮಾಡಿ ಕೆಡಬೇಡ!
ಬೇರು ಸತ್ತ ಗಿಡವಾಗಬೇಡ! (ಸು)
-ಡದೆ ನಿರಂಜನಾದಿತ್ಯ ಬಿಡ!!!

ವಿಶ್ವಾಸ ಘಾತಕಿ ಮಾಯ! (ವೈ)   6(3479)

-ಶ್ವಾನರನಂತೆ ನಿರ್ದಯ!
ತ್ಯವಲ್ಲ ಮಿಥ್ಯಾಕಾಯ! (ಮೇ)
-ಘಾವೃತ ಸೂರ್ಯನ ಛಾಯ!
ಮದಿಂದಾಗಿದೆ ಭಯ!
ಕಿತ್ತಾಟಕ್ಕಿದೇ ಸಮಯ!
ಮಾಧವನೀಯಲಾಶ್ರಯ! (ಜ)
-ಯ ನಿರಂಜನಾದಿತ್ಯಾಯ!!!

ವಿಶ್ವಾಸ ಘಾತುಕ ಪ್ರಪಂಚವಿದು! (ವಿ)   6(3653)

-ಶ್ವಾಮಿತ್ರನನ್ನೂ ಹೊತ್ತು ಹೆತ್ತಿತಿದು!
ತ್ಯ ಹರಿಶ್ಚಂದ್ರನ ಕಾಡಿತದು! (ಸಂ)
ಘಾನೇಕ ಸ್ಥಾಪಿಸಿ ವಿಫಲವಾಯ್ತದು!
ರುಣಿಯರ ಮಾನ ಕಳೆಯ್ತದು!
ಪಿ ವೀರ ವಾಲಿಯ ಕೊಂದಿತದು!
ಪ್ರಸಿದ್ಧ ಕ್ಷೇತ್ರಗಳಳಸಿತದು!
ಪಂಚಾಂಗ ಪಠಿಸಿ ವಂಚಿಸಿತದು!
ತುರೋಪಾಯದಿಂದ ಆಳಿತದು!
ವಿಶ್ವರೂಪ ತೋರ್ಯುದ್ಧರಿಸಿತದು! (ಇ)
-ದು ನಿರಂಜನಾದಿತ್ಯಾನಂದಹುದು!!!

ವಿಶ್ವಾಸ ಫಲದಾಯಕಕ್ಕಾ!   2(600)

ಶ್ವಾಸ ಸುವ್ಯವಸ್ಥೆ ಸುಖಕ್ಕಾ!
ರಳ, ಸಹಜ ಸುಖಕ್ಕಾ!
ಲ ಪರಮಾತ್ಮ ಸುಖಕ್ಕಾ!
ಕ್ಷ್ಯ ಸದಾ ಗುರು ಪಾದಕ್ಕಾ!
ದಾರಿ ಸದಾ ಜಪ ಸುಖಕ್ಕಾ!
ಮಪಿತಿನತಿ ಸುಖಕ್ಕಾ!
ರ್ಮ ಧರ್ಮ ನೇಮ ಸುಖಕ್ಕಾ! (ಅ)
-ಕ್ಕಾ ನಿರಂಜನಾದಿತ್ಯಾ ಸುಖ!!!

ವಿಶ್ವಾಸಘಾತುಕನಾಗಬೇಡ!   5(2595)

ಶ್ವಾನ ಸೂಕರರಂತಿರಬೇಡ!
ತ್ಯಕ್ಕೆಂದೂ ಚ್ಯುತಿ ತರಬೇಡ!
ಘಾಯಕ್ಕಿನ್ನೂ ಹುಳಿ ಹಿಂಡಬೇಡ!
ತುದಿ ಮೊದಲಿಲ್ಲದಾಸೆ ಬೇಡ!
ದ್ದು ಒಡಲ ಪೋಷಿಸಬೇಡ!
ನಾಮಸ್ಮರಣೆ ಬಿಡಲೇ ಬೇಡ!
ಣಿಕೆಯರ ಹಿಂದೋಡಬೇಡ!
ಬೇಜಾರನ್ಯರಿಗೆ ಮಾಡಬೇಡ! (ಆ)
-ಡ ನಿರಂಜನಾದಿತ್ಯದ ಮಾಡ!!!

ವಿಶ್ವೇಶ್ವರನ ಸಂಗೀತ ಪಾಠ!   4(2057)

ಶ್ವೇತಾಶ್ವ ರಥಾರೂಢನಾ ಪಾಠ! (ವಿ)
-ಶ್ವಮಾನ್ಯ ಭಗವದ್ಗೀತಾ ಪಾಠ! (ಪ)
-ರ ಧರ್ಮಅಧರ್ಮವೆಂದಾ ಪಾಠ!
ರನಜ್ಞಾನ ಕಳೆದಾ ಪಾಠ!
ಸಂಪೂರ್ಣ ಶರಣಾಗೆಂದಾ ಪಾಠ! (ತ್ಯಾ)
-ಗೀಶ್ಖರ, ಯೋಗೇಶ್ವರನಾ ಪಾಠ! (ಸು)
-ತ ದೇವಕಿಗಾದವನಾ ಪಾಠ! (ಗೋ)
-ಪಾಲಕರಾಪ್ತ ಮಿತ್ರನಾ ಪಾಠ! (ಪಾ)
-ಠ ನಿರಂಜನಾದಿತ್ಯಗೊಂದೂಟ!!!

ವಿಷಯ ವಾಸನೆ ಅಳಿವುದೆಂದು?   5(2806)

ಣ್ಮುಖ ತಾನೊಲಿದೋಡಿ ಬಂದಂದು!
ಮನವನರಿಗಳಿಗೆಂದೆಂದು!
ವಾಙ್ಮನೋಕಾಯದಿಂದ ಪೂಜಿಸಿಂದು!
ರ್ವಾಂತರ್ಯಾಮಿ ನಿನ್ನಾತ್ಮವನೆಂದು!
, ಜಲಾಕಾಶ ವ್ಯಾಪಕನೆಂದು!
ನನ್ಯ ಭಕ್ತಿಯಿಂದ ಭಜಿಸಿಂದು!
(ಮಾ)ಳಿಗೆ ಮನೆ ಮಠದಾಸೆ ಸಾಕೆಂದು! (ಕಾ)
-ವುದವನ ಭಾರವೆಂದು ನಂಬಿಂದು! (ಎಂ)
-ದೆಂದೂ ಬಂಧು, ಬಾಂಧವನವನೆಂದು!
ದುಡಿ, ನಿರಂಜನಾದಿತ್ಯನಂತಿಂದು!!!

ವಿಷಯ ವಿಚಾರ ವಿಷಾಹಾರ!   3(1322)

ಡ್ರಿಪುಗಳಾರ್ಭಟಾಧಿಕಾರ! (ಭ)
-ಯ, ಭ್ರಾಂತಿ, ಅಶಾಂತಿ ಸಂಚಾರ!
ವಿವೇಕರಹಿತವಾದಾಚಾರ!
ಚಾಡಿ, ಚೌರ್ಯಗಳಿಗೆಲ್ಲಾಗಾರ! (ಪ)
-ರ ಪೀಡೆಯಲ್ಲಾಸಕ್ತಿ ಅಪಾರ!
ವಿಟರಂತೆ ಶರೀರ ಶೃಂಗಾರ! (ರೋ)
-ಷಾತಿರೇಕದಿಂದ ಅಪಚಾರ! (ಮ)
-ಹಾತ್ಮ ತಾನಾದಾಗ ಪರಿಹಾರ! (ವಿ)
-ರಕ್ತ ನಿರಂಜನಾದಿತ್ಯಾಕಾರ!!!

ವಿಷಯಕ್ಕಾಗಿ ತ್ಯಾಗಿಯಾಗ್ಬೇಡ! (ವಿ)   6(3635)

-ಷಯ ತ್ಯಾಗಿಯಾಗದೇ ಇರ್ಬೇಡ!
ಶಸ್ಸಿಗಾಗ್ದೀರ್ಘಾಯುಷ್ಯ ಬೇಡ! (ಹ)
-ಕ್ಕಾದಾತ್ಮಾರ್ಥಕ್ಕಾಗಿರದಿರ್ಬೇಡ!
ಗಿರಿಯಂತಿರ್ಬೇಕ್ಮನಸ್ಸು ಧೃಡ! (ನಿ)
-ತ್ಯಾನಂದನುಭವಿಸದಿರ್ಬೇಡ!
ಗಿಳಿ ಪಾಠಕ್ಕೆ ಪ್ರಾಧಾನ್ಯ ಬೇಡ!
ಯಾಜ್ಞವಲ್ಕ್ಯನಾದರ್ಶ ಬಿಡ್ಬೇಡ! (ಆ)
-ಗ್ಬೇಡ, ತ್ರಿಶಂಕುವಿನಂತಾಗ್ಬೇಡ! (ಮಾ)
-ಡ, ನಿರಂಜನಾದಿತ್ಯ ಹಾಗ್ಮಾಡ!!!

ವಿಷ್ಯ ಸುಖದಾಶಾ ರೋಗ ಮನಕ್ಕೆ!   6(4104)

ಡ್ರಿಪುಗಳ ಹಿಂಸೆ ಸದಾ ಅದಕ್ಕೆ!
ಮ, ನಿಯಮ, ಔಷಧಿ ಆ ರೋಗಕ್ಕೆ!
ಸುವ್ಯವಸ್ಥೆಯಿಂದ ಗುಣ ದಿನ್ದಿನಕ್ಕೆ!
ಗನ ದಿನಚರಿ ಆದರ್ಶದಕ್ಕೆ!
ದಾಶರಥಿಯಂತಿರಬೇಕು ಜಯಕ್ಕೆ!
ಶಾಶ್ವತಾನಂದ ಗುರಿ ನರ ಜನ್ಮಕ್ಕೆ! (ಸ)
-ರೋಜ ಸಖನ ಧ್ಯಾನಿಸಬೇಕದಕ್ಕೆ!
ಗನ ಸದೃಶಾತ್ಮನಾಗುವುದಕ್ಕೆ!
ತ್ತೆ, ಮತ್ತೆ, ಸುತ್ತು ಹುಟ್ಟದಿರ್ಪುದಕ್ಕೆ! (ಮ)
-ನಸ್ಸಿನಾ ರೋಗ ತೊಲಗಬೇಕದಕ್ಕೆ! (ಅ)
-ಕ್ಕೆ ನಿರಂಜನಾದಿತ್ಯ ಕೃಪೆಯಿದಕ್ಕೆ!!!

ವಿಸರ್ಜನಾವಾಹನಾ ಗೊಂದಲ ಸಾಕು!   4(1913)

ರ್ವರುನ್ನತಿಗೆ ಸ್ಥಿತಿಪ್ರಜ್ಞೆ, ಬೇಕು! (ಆ)
-ರ್ಜವವೆಲ್ಲರಲ್ಲೂ ಮನೆ ಮಾಡಬೇಕು! (ವಿ)
-ನಾಶಕಾರಕ ವಿಚಾರ ಬಿಡಬೇಕು!
ವಾದವಿಲ್ಲದೊಗ್ಗಟ್ಟಂಕುರಿಸಬೇಕು!
ರ್ಷ, ತತ್ವಚಿಂತನೆಯಿಂದಾಗಬೇಕು!
ನಾಮಜಪವೆಡೆಬಿಡದಾಗಬೇಕು!
ಗೊಂಬೆಯಾಟಕ್ಕೆ ಹುಚ್ಚಾಗದಿರಬೇಕು!
ಯಾಹೃದಯ ವಿಸ್ತಾರವಾಗಬೇಕು!
ಕ್ಷ್ಯ ಸದ್ಗುರುಪಾದದಲ್ಲಿರಬೇಕು!
ಸಾಯುಜ್ಯವಿದೇ ಜನ್ಮದಲ್ಲಾಗಬೇಕು!
ಕುಲ ನಿರಂಜನಾದಿತ್ಯನದ್ದಾಗ್ಬೇಕು!!!

ವೀಣಾಪಾಣಿ ವಾಣಿ ರಾಣಿ! (ಗು)   6(3591)

-ಣಾತೀತಳವಳ್ಗೀರ್ವಾಣಿ!
ಪಾಮರರ್ಗೆ ಸ್ಪರ್ಶಮಣಿ! (ದ)
-ಣಿದವರ್ಗೆ ಸಂಜೀವಿನಿ!
ವಾಸುದೇವನ್ಕೊಳಲ್ಧ್ವನಿ! (ಗ)
-ಣಿ, ಸರ್ವ ವಿದ್ಯಾವರ್ಧಿನಿ!
ರಾಣಿ, ಬ್ರಹ್ಮನ ಅರ್ಧಾಂಗಿಣಿ! (ವಾ)
-ಣಿ, ನಿರಂಜನಾದಿತ್ಯಾಣಿ!!!

ವೀಣಾರಾಣಿಗೆ ನೀನೇನೇನು ಕೊಟ್ಟೆ? (ಋ)   3(1373)

-ಣಾನುಬಂಧ ದೊಡ್ಡದೆಂದಂದು ಬಿಟ್ಟೆ!
ರಾಗ ರಸಾಸ್ವಾದಕ್ಕೆ ಕಿವಿ ಕೊಟ್ಟೆ! (ದ)
-ಣಿಯದೇ ಸೇವೆ ಸಾಗಲೆಂದು ಬಿಟ್ಟೆ! (ನ)
-ಗೆಮೊಗದಿಂದ ಸುಸ್ವಾಗತ ಕೊಟ್ಟೆ!
ನೀನು ಮಹಾಮಹಿಮಳೆಂದು ಬಿಟ್ಟೆ!
ನೇರಾಗಿ ಕುಳಿತು ದರ್ಶನ ಕೊಟ್ಟೆ!
ನೇತ್ರಗಳೆರಡನ್ನೂ ಮುಚ್ಚಿಬಿಟ್ಟೆ! (ತ)
-ನು ಮನಗಳನ್ನವಳಿಗೆ ಕೊಟ್ಟೆ!
ಕೊನೆ ತನಕ ಮೌನಿಯಾಗಿ ಬಿಟ್ಟೆ! (ಕೊ)
-ಟ್ಟೆ, ನಿರಂಜನಾದಿತ್ಯನನ್ನೇ ಕೊಟ್ಟೆ!!!

ವೀಣೆಗಾರು ಮಾಲೆ ಹಾಕಿದರಮ್ಮಾ? (ಎ)   3(1374)

-ಣೆಯವಳಿಗಾರೂ ಸರಿಯಿಲ್ಲಮ್ಮಾ!
ಗಾಯನ ಶಿರೋಮಣಿಯವಳಮ್ಮಾ!
ರುಜುಮಾರ್ಗಿ ತಾನಾಗಿರುವಳಮ್ಮಾ!
ಮಾತು, ಗೀತವಳಿಗೆ ಬೇಕಿಲ್ಲಮ್ಮಾ! (ಲೋ)
-ಲೆ ಸತತ ನಾದಬ್ರಹ್ಮದಲ್ಲಮ್ಮಾ!
ಹಾವ, ಭಾವ, ಬಹು ಗಂಭೀರವಮ್ಮಾ!
ಕಿರುನಗೆ ಸದಾ ಮುಖದಲ್ಲಮ್ಮಾ!
ರ್ಶನ ಮನೋಹರವಳದಮ್ಮಾ! (ಅ)
-ರಸಿ ಬಂದಳು ವರನೆಡೆಗಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯ ಮಾಲಿಕಮ್ಮಾ!!!

ವೀರ ಪುತ್ರ ಪರಶುರಾಮ!   1(372)

ಘುವೀರನಲೈಕ್ಯಾರಾಮ!
ಪುನೀತ ಪಿತೃಭಕ್ತಾರಾಮ!
ತ್ರಯಲೋಕವಂದ್ಯನಾರಾಮ!
ರಾಕ್ರಮಿ ಬ್ರಾಹ್ಮಣಾರಾಮ! (ಅ)
-ರಸರ ಗರ್ವಧ್ವಂಸಾರಾಮ!
ಶುದ್ಧ ಧರ್ಮ, ಕರ್ಮಿಯಾರಾಮ!
ರಾಮ, ಮಾತೃಪ್ರೇಮಿಯಾರಾಮ!
ಮ ನಿರಂಜನಾರ್ಕಾರಾಮ!

ವೀರ ರಾವಣನಂತ್ಯ ಕಾಲವೀಗ!   4(1826)

ಘುಪತಿಗೆ ಪೂರ್ಣ ಬಲವೀಗ!
ರಾಮದಾಸಗೆ ನಾಯಕತ್ವವೀಗ!
ನವಾಸಿ ಸೀತೆಗಾನಂದವೀಗ! (ರ)
-ಣ ದುಂದುಭಿಯ ಕೇಳಿರೆಲ್ಲರೀಗ! (ಆ)
-ನಂದೋತ್ಸಾಹ ವಾನರ ಸೈನ್ಯಕ್ಕೀಗ! (ಸ)
-ತ್ಯಕ್ಕೆ ವಿಜಯವಾಗುವುದು ಈಗ!
ಕಾಮಾಸುರನೇದುತ್ತಿರುವನೀಗ!
ಕ್ಷ್ಮಣನುಗ್ರಾವತಾರ ನೋಡೀಗ!
ವೀರ ರಾಘವ ಬಾಣ ಬಿಟ್ಟನೀಗ!
ಣೇಶ ನಿರಂಜನಾದಿತ್ಯನೀಗ!!!

ವೀರ್ಯ ಸಾಗರ ಗಂಗಾಧರ! (ಕಾ)   6(3733)

-ರ್ಯತತ್ಪರ ಪರಮೇಶ್ವರ!
ಸಾಕಾರ, ನಿರಾಕಾರೇಶ್ವರ!
ಣಪತಿ ಕೈಲಾಸೇಶ್ವರ! (ಮಾ)
-ರಹರ ತ್ರಿಪುರ ಸಂಹಾರ!
ಗಂಭೀರ ಅರ್ಧನಾರೀಶ್ವರ!
ಗಾನಲೋಲ ತಾಂಡವೇಶ್ವರ! (ಸ್ವ)
-ಧರ್ಮನಿಷ್ಟ ಭುವನೇಶ್ವರ! (ಹ)
-ರ ನಿರಂಜನಾದಿತ್ಯೇಶ್ವರ!!!

ವೀರ್ಯದಾನಿ, ಕಲ್ಯಾಣಿ ಭವಾನಿ! (ಆ)   1(195)

-ರ್ಯ ಋಷಿ ಮುನಿ ವಂದ್ಯ ಗೀರ್ವಾಣಿ!
ದಾನಿ, ನಿಧಾನಿಯಂಬಿಕಾ ಭವಾನಿ!
ನಿಜಮತಿಯನೀವಾ ಗೀರ್ವಾಣಿ!
ಣ್ಣಲಿ ಕಾಮನಿಹಾ ಭವಾನಿ! (ಇ)
-ಲ್ಯಾವುದೆನಗೀವಾಳಾ ಗೀರ್ವಾಣಿ? (ಉ)
-ಣಿಸಮೃತವೆನಗಾ ಭವಾನಿ!
ಕ್ತಿ ಕುಸುಮಾರ್ಪಣಾ ಗೀರ್ವಾಣಿ!
ವಾಕ್ಕಿನಲೇನೇನಿಲ್ಲ ಭವಾನಿ!
ನಿರಂಜನಾದಿತ್ಯನಾ ಗೀರ್ವಾಣಿ!!!

ವೃತ್ತಿ ನಿನಗಿಲ್ಲದಿರಬೇಕು! (ಹ)   4(2245)

-ತ್ತಿರಾರೂ ಸೇರದಂತಿರಬೇಕು!
ನಿವೃತ್ತಿ ಸುಖ ಸುಖಿಸಬೇಕು! (ಅ)
-ನವರತಾಭ್ಯಾಸ ಮಾಡಬೇಕು! (ತ್ಯಾ)
-ಗಿಯಾಗಿ ಯೋಗಿ ನೀನಾಗಬೇಕು! (ಬ)
-ಲ್ಲವನಾದ್ರೂ ಕಲ್ಲಾಗಿರಬೇಕು!
ದಿವ್ಯ ಜೀವನವಿಂತಾಗಬೇಕು! (ವ)
-ರ ಗುರುನಾಮ ಸ್ಮರಿಸಬೇಕು!
ಬೇರೆಯವ್ರಿಗಿಂತಾದರ್ಶಾಗ್ಬೇಕು! (ವಾ)
-ಕು, ನಿರಂಜನಾದಿತ್ಯಗೇಕ್ಬೇಕು???

ವೃತ್ತಿ ನೀನು, ನಿವೃತ್ತಿ ನಾನು! (ಸು)   4(1814)

-ತ್ತಿ ಬೇಸತ್ತಸತ್ತಾಗ್ವೆ ನೀನು!
ನೀತಿ, ರೀತ್ಯತೀತಾಗಿಹೆ ನಾನು!
ನುಡಿ, ನಡೆಯಿಂದೋಡಾಡ್ವೆ ನೀನು!
ನಿಶ್ಚಲ ಸ್ಥಿತಿಯಲ್ಲಿಹೆ ನಾನು!
ವೃದ್ಧಿ ಕ್ಷಯಗಳಾಧೀನ ನೀನು! (ಬು)
-ತ್ತಿ ಖಾಲಿಯಾದವಧೂತ ನಾನು!
ನಾಮ, ರೂಪಾವರಣಾತ್ಮ ನೀನು! (ನಾ)
-ನು, ನಿರಂಜನಾದಿತ್ಯನಲ್ಲೇನು???

ವೃತ್ತಿ ಶೂನ್ಯನೇ ನಿವೃತ್ತ! (ಹ)   5(3056)

-ತ್ತಿಳಿದು ಹತ್ತುವ ಭಕ್ತ!
ಶೂಲಪಾಣಿಯ ನೋಡುತ್ತ! (ಧ)
-ನ್ಯನಪ್ಪನೈಕ್ಯವಾಗುತ್ತ!
ನೇರ ದಾರಿಯಿದೇ ಸೂಕ್ತ!
ನಿಜರೂಪ ಸ್ಥಿತ ಮುಕ್ತ!
ವೃದ್ಧಾಪ್ಯಕ್ಕಂಜನಾ ಶಕ್ತ! (ಇ)
-ತ್ತ ನಿರಂಜನಾದಿತ್ಯತ್ತ!!!

ವೃತ್ತಿಗಳೇಳದ ಮನ, ಮನವಲ್ಲ! (ಸ)   6(4336)

-ತ್ತಿಲ್ಲದಿದ್ದರೂ ಜೀವದಿಂದ ಅದಿಲ್ಲ!
ಗನಸದೃಶ ಒಳ ಹೊರಗೆಲ್ಲ! (ಹ)
-ಳೇ ವಾಸನೆಗಳಾವುದೂ ಅದಕ್ಕಿಲ್ಲ! (ಕೇ)
-ಳತಕ್ಕದ್ದು, ಹೇಳತಕ್ಕದ್ದದಕ್ಕಿಲ್ಲ!
ಯೆ, ನಿರ್ದಯೆಗಳೆಂಬುದೇನೂ ಇಲ್ಲ!
ಡಿ, ಮೈಲಿಗೆಗಳ ಸಂಶಯವಿಲ್ಲ!
ರ, ನಾರಿಯರನ ಭೇದವೇ ಇಲ್ಲ!
ದ, ಮತ್ಸರಗಳ ಸುಳಿವೂ ಇಲ್ಲ!
ನ್ನದು, ನಿನ್ನದೆಂಬ ವಿವಾದವಿಲ್ಲ!
ರಗುರು ಸ್ವರೂಪವೇ ತಾನೆಲ್ಲೆಲ್ಲಾ! (ಪು)
-ಲ್ಲ ನಿರಂಜನಾದಿತ್ಯನದೆಂಬೆನಲ್ಲಾ!!!

ವೃದ್ಧಾಪ್ಯವಡಸಿತೇನೇ ತುಳಸಿ? (ಶ್ರ)   4(1582)

-ದ್ಧಾ, ಭಕ್ತಿಯಲ್ಲನುಪಮಾ ತುಳಸೀ! (ಆ)
-ಪ್ಯಯನಕಾರಿ ಹರಿಗಾ ತುಳಸೀ!
ನಮಾಲೆಗೆ ಪ್ರಧಾನಾ ತುಳಸೀ! (ಒ)
-ಡಲಾರೋಗ್ಯಕ್ಕತ್ಯಗತ್ಯಾ ತುಳಸೀ!
ಸಿರಿಯರಸಿ ಸ್ವರೂಪಾ ತುಳಸೀ!
ತೇಜಸ್ಸೋಜಸ್ಸಿಗಾಧಾರಾ ತುಳಸೀ!
ನೇಮ, ನಿಷ್ಠಾಮಣಿಮಾಲಾ ತುಳಸೀ!
ತುರೀಯಾಶ್ರಮಿಗಾದರ್ಶಾ ತುಳಸೀ! (ಬ)
-ಳಸಿದಂತೆ ಬೆಳೆವಳಾ ತುಳಸೀ! (ದಾ)
-ಸಿ

ನಿರಂಜನಾದಿತ್ಯಗಾ ತುಳಸೀ!!!

ವೆಂಕಟೇಶಾನುಗ್ರಹವಾಯ್ತಯ್ಯಾ!   2(819)

ರೆಸಿಕೊಂಡಿತ್ತ ದರ್ಶನಯ್ಯಾ! (ಕೂ)
-ಟೇನೂ ಕಾಟ ಕೊಟ್ಟಿದ್ದಿಲ್ಲವಯ್ಯಾ!
ಶಾರೀರಿಕ ಶ್ರಮವಾಗಿಲ್ಲಯ್ಯಾ! (ತ)
-ನು, ಮನಕೆ ಶಾಂತಿಯುಂಟಾಯ್ತಯ್ಯಾ!
ಗ್ರಹಚಾರ ಮುಗಿದಂತಾಯ್ತಯ್ಯಾ!
ರಕೆ ಒಪ್ಪಿಸಿ ತೃಪ್ತ್ಯಾಯ್ತಯ್ಯಾ!
ವಾರ, ಮಂಗಳವಾರ ಶುಭಯ್ಯಾ! (ಆ)
-ಯ್ತವನಿಷ್ಟದಂತೆ ಸೇವೆಯಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಚಿತ್ತಯ್ಯಾ!!!

ವೇದ, ಪುರಾಣ, ಬರೆದಾ ಚಿರಂಜೀವಿ ವ್ಯಾಸ! (ಅ)   4(2048)

-ದರನುಭವ ಮಾಡಿಕೊಡಬೇಕೀಗಾ ವ್ಯಾಸ!
ಪುಸಿಯಾಡಿದನೆಂಬಪಖ್ಯಾತಿಗಂಜಾ ವ್ಯಾಸ!
ರಾಜ ಮರ್ಯಾದೆಯಿಂದ ಮೆರೆದಾ ವೇದ ವ್ಯಾಸ! (ರ)
-ಣರಂಗದ ಗೀತೋಪದೇಶ ಬರೆದಾ ವ್ಯಾಸ!
ಲರಾಮ, ಕೃಷ್ಣಾದಿಗಳಾಪ್ತ ಭಕ್ತಾ ವ್ಯಾಸ! (ನೆ)
-ರೆ ಜ್ಞಾನ ಸಿದ್ಧನೆನ್ಸಿದ ಶುಕನಯ್ಯಾ ವ್ಯಾಸ!
ದಾನವಿತ್ತಜ್ಞಾನಿ ಜೀವರಿಗೆ ಜ್ಞಾನಾ ವ್ಯಾಸ!
ಚಿರ ಸ್ಮರಣೀಯ ಪರಾಶರ ಪುತ್ರಾ ವ್ಯಾಸ! (ಶ್ರೀ)
-ರಂಗನಾಥ ಭಾಗವತ ಬರೆದಾತಾ ವ್ಯಾಸ!
ಜೀವ ಶೀವೈಕ್ಯ ಬ್ರಹ್ಮಸೂತ್ರ ಬರೆದಾ ವ್ಯಾಸ!
ವಿಧವಿಧ ವೈದಿಕಾಚಾರರುಹಿದಾ ವ್ಯಾಸ! (ಯಾ)
-ವ್ಯಾವುದು, ಹೇಗ್ಹೇಗೆ ಮಾಡ್ಬೇಕೆನ್ನಲೀಗಾ ವ್ಯಾಸ! (ವ್ಯಾ)
-ಸ ನಿರಂಜನಾದಿತ್ಯ ಸರ್ವಜ್ಞಾ ವೇದಭ್ಯಾಸ!!!

ವೇದನಾ, ನಿವೇದನಾ, ಪ್ರಾಥನಾ!   5(2881)

ತ್ತ ನಾನೆಂದು ಸದಾ ಚಿಂತನಾ!
ನಾಕಾದಿ ಲೋಕವಿನ್ನೇಕೆಂಬೆ ನಾ!
ನಿತ್ಯಾನಿತ್ಯ ವಿವೇಕದಿಂದ ನಾ!
ವೇಷ, ಭೂಷಣವಲ್ಲ ಪ್ರಧಾನಾ!
ರ್ಶನದಿಂದಾಗ್ಬೇಕು ಧನ್ಯ ನಾ!
ನಾಶವದರಿಂದೆಲ್ಲಾ ವಾಸನಾ!
ಪ್ರಾಶನಾ ಭಿಕ್ಷಾನ್ನವನುದಿನಾ! (ಸಾ)
-ರ್ಥಕವೀ ಜನ್ಮವೆಂದಾನಂದ ನಾ!
ನಾ, ನಿರಂಜನಾದಿತ್ಯಾನಂದ ನಾ!!!

ವೇದಾಂತ ಹೇಳ್ಲಿಕ್ಕಲ್ಲ, ಬಾಳ್ಲಿಕೆ!   5(2848)

ದಾಂಪತ್ಯದಲ್ಲೂ ಸಾಧ್ಯ ಬಾಳ್ಲಿಕೆ!
ತ್ವಜ್ಞಾನಿಯಾಗ್ವುದದಾಗ್ಲಿಕ್ಕೆ!
ಹೇಸಿಕೆ ತೊಳೆದು ಶುದ್ಧಾಗ್ಲಿಕ್ಕೆ! (ಹೇ)
-ಳ್ಲಿಕ್ಕಸಾಧ್ಯವಾದ ಅದಾಗ್ಲಿಕ್ಕೆ! (ಸೊ)
-ಕ್ಕಡಗಿಸಿ ಮುಕ್ತ ತಾನಾಗ್ಲಿಕ್ಕೆ! (ತ)
-ಲ್ಲಣವಿಲ್ಲದೆ ಶಾಂತನಾಗ್ಲಿಕ್ಕೆ!
ಬಾಯ್ಕೈ, ಕಚ್ಚೆ ಬಿಗಿಯಾಗಿಡ್ಲಿಕ್ಕೆ! (ಬಾ)
-ಳ್ಲಿಕ್ಕಿಂದ್ರಿಯ ಜಯದಿಂದಾಳ್ಲಿಕ್ಕೆ! (ಅ)
-ಕ್ಕೆ ನಿರಂಜನಾದಿತ್ಯನಾಗ್ಲಿಕ್ಕೆ!!!

ವೇದೋಪನಿಷತ್ಪುರಾಣವೆನ್ನ ಸಂದೇಶ!   5(2533)

ದೋಷರಹಿತಾತ್ಮ ನೀನೆಂಬುದಾ ಸಂದೇಶ!
ರಮಾತ್ಮೆಲ್ಲೆಲ್ಲಿಹನೆಂಬುದಾ ಸಂದೇಶ!
ನಿತ್ಯ, ನಿರಾಮಯಾತನೆಂಬುದಾ ಸಂದೇಶ!
ಣ್ಮುಖಾದಿ ರೂಪವನೆಂಬುದಾ ಸಂದೇಶ! (ತ)
-ತ್ಪುಣ್ಯನಾಮಗಳ್ಸ್ಮರಿಸೆಂಬುದಾ ಸಂದೇಶ!
ರಾಗ, ದ್ವೇಷಗಳ ಬಿಡೆಂಬುದಾ ಸಂದೇಶ!
ಣ, ಕಾಸು ಅಶಾಶ್ವತವೆಂಬುದಾ ಸಂದೇಶ! (ನಾ)
-ವೆ ಭವಾಬ್ಧಿಗೆ ನಾಮವೆಂಬುದಾ ಸಂದೇಶ! (ತಿ)
-ನ್ನಬಾರದು ಪಾಪಾನ್ನವೆಂಬುದಾ ಸಂದೇಶ!
ಸಂಗಸಜ್ಜನರದ್ದೇಕೆಂಬುದಾ ಸಂದೇಶ!
ದೇವದೇವನಾಜ್ಞೆಯಿದೆಂಬುದಾ ಸಂದೇಶ! (ಈ)
-ಶ ನಿರಂಜನಾದಿತ್ಯನೆಂಬುದಾ ಸಂದೇಶ!!!

ವೇಷ ಸಾಕು, ಶ್ರೀನಿವಾಸನಾಗಬೇಕು! [ಭಾ]   4(2328)

-ಷಣದಿಂದದಲ್ಲೆಂದರಿತಿರಬೇಕು!
ಸಾಧನೆಯಿಂದದು ಸಿದ್ಧಿಯಾಗಬೇಕು!
ಕುಕಲ್ಪನೆಯೆಂದೂ ಮಾಡದಿರಬೇಕು!
ಶ್ರೀದೇವಿಯಂತೆ ಸೇವೆ ಸಲ್ಲಿಸಬೇಕು!
ನಿತ್ಯನೇಮಕ್ಕಡ್ಡಿಯಾಗದಿರಬೇಕು!
ವಾಸುದೇವನಾಜ್ಞಾನುಸಾರಾಗಬೇಕು!
ಚ್ಚಿದಾನಂದವಿದರಿಂದಾಗಬೇಕು!
ನಾಡಿನೊಡೆತನಕ್ಕರ್ಹನಾಗಬೇಕು!
ರ್ವವೆಳ್ಳಷ್ಟೂ ಇಲ್ಲದಂತಿರಬೇಕು!
ಬೇಟೆಯಾಟದ ಕೂಟ ಬಿಟ್ಟಿರಬೇಕು! (ಬೇ)
-ಕು ನಿರಂಜನಾದಿತ್ಯಾನುಗ್ರಹ ಬೇಕು!!!

ವೇಷ ಸುಡು, ಆಸೆ ಬಿಡು, ಸುಖ ಪಡು!   6(3786)

ಡ್ವೈರಿಗಳನ್ನೆಲ್ಲಾ ನಿಗ್ರಹ ಮಾಡು!
ಸುಗುಣಾವಳಿಯಳಿಗಾಶ್ರಯ ಕೊಡು! (ತು)
-ಡುಗ ತುಂಟಾದಿಗಳೊಡನಾಟ ಬಿಡು!
ತ್ಮ ಧ್ಯಾನ ಎಲ್ಲಾ ವೇಳೆಯಲ್ಲೂ ಮಾಡು!
ಸೆರೆ, ಸೇಂದಿ ಕುಡಿಯುವಭ್ಯಾಸ ಬಿಡು!
ಬಿಡುಗಡೆ ಸಂಸಾರದಿಂದಾಗಿಬಿಡು! (ಮಾ)
-ಡು, ಹರಿಭಜನೆ ಪ್ರತಿದಿನ ಮಾಡು!
ಸುಧಾಮ ಪ್ರಿಯನ ಗೀತಾಭ್ಯಾಸ ಮಾಡು!
ರ, ದೂಷಣಾರಿಯ ಸ್ಮರಣೆ ಮಾಡು!
ರಮಾತ್ಮನನ್ನು ನಿನ್ನಲ್ಲಿಯೇ ನೋಡು! (ನೋ)
-ಡು, ನಿರಂಜನಾದಿತ್ಯನನ್ನೊಡಗೂಡು!!!

ವೇಷಕ್ಕೆ ವಶವಾಗುವವರೇ ಎಲ್ಲಾ!   6(4058)

ಡ್ರಿಪುಗಳ್ಮರೆಯಾಗಿರ್ಪರಾಗೆಲ್ಲಾ! (ಬೆ)
-ಕ್ಕೆಯೇ ಕಾರಣ ವೇಷಾದಿಗಳಿಗೆಲ್ಲಾ!
ಸ್ತ್ರವಿಲ್ಲದ ದಿಗಂಬರರೆಲ್ಲೆಲ್ಲಾ!
ಮೆ, ದಮೆಯ ಗಂಧ ಅವರಿಗಿಲ್ಲ!
ವಾಸನಾ ಕ್ಷಯವಂತೂ ಇಲ್ಲವೇ ಇಲ್ಲ!
ಗುಲಾಮರಾಗ್ವರೀ ಗುರುಗಳಿಗೆಲ್ಲಾ!
ರ ಗುರು ಘೋಷಿಸಿಕೊಳ್ಳುವುದಿಲ್ಲ!
ರ್ಣಾಶ್ರಮದ ಕಟ್ಟು ಅವನಿಗಿಲ್ಲ! (ಯಾ)
-ರೇನೆಂದರೂ ಅವನಿಗೆ ಲಕ್ಷ್ಯವಿಲ್ಲ!
ಲ್ಲರುನ್ನತಿಗವನ ತಪಸ್ಸೆಲ್ಲಾ! (ಅ)
-ಲ್ಲಾ ನಿರಂಜನಾದಿತ್ಯ ವೇಷಧಾರ್ಯಲ್ಲಾ!!!

ವೈಕುಂಠ ತೋರಯ್ಯ! ಏಕಾದಶಿ ಇಂದಯ್ಯ!   1(133)

ಕುಂಟರೂ, ಭಂಟರೂ ಅಂದಿರಬೇಕಯ್ಯ! (ಹ)
-ಠ ಮಾಡಿದರದ ತೋರುವವರಾರಯ್ಯ?
ಮಾರಮಣನಲ್ಲಿರುವನೆಂಬರಯ್ಯ!
ಯ್ಯಜುಸ್ಸಾಮ ಗಾನವಾಗುತಿದೆಂಬರಯ್ಯ!
ಕಾದಶಿಗಿಂದಲ್ಲಿರಬೇಕೆಂಬರಯ್ಯ!
ಕಾಲಿಲ್ಲದವನ ಎತ್ತಿಕೊಂಡು ಹೋಗಯ್ಯ!
ರ್ಶನದ ಕಥೆ ಕೇಳಿ ಸಾಕಾಗಿದಯ್ಯ!
ಶಿಶುವ ಹೊರಟಟ್ಟಿ ಸುಖ ತಾಯ್ಗೇನಯ್ಯ!
ಇಂದಾದರೂ ನೀ ಕನಿಕರ ತೋರಿಸಯ್ಯ! (ಆ)
-ದರಿಸದಿರಲಪಕೀರ್ತಿ ನಿನಗಯ್ಯ! (ಅ)
-ಯ್ಯ! ನಿರಂಜನಾದಿತ್ಯ ಕಾದಿರುವನಯ್ಯಾ!!!

ವೈದ್ಯನಿಗೆ ಬಿರುದುಗಳೆಷ್ಟಿದ್ರೇನು? (ಉ)   5(3228)

-ದ್ಯಮಾಭಿವೃದ್ಧಿಗೆ ಕೈಗುಣ ಬೇಡ್ವೇನು?
ನಿರ್ವಂಚನೆಯಿಂದ ಸೇವೆ ಮಾಡ್ಬೇಡ್ವೇನು?
ಗೆಳೆಯನಂತೆ ಕಾಣ್ಲಿ ರೋಗಿಯನ್ನವ್ನು!
ಬಿಗಡೈಸದಂತೆಚ್ಚರವಾಗಿರ್ಲವ್ನು!
ರುಜುಮಾರ್ಗಾವಲಂಬಿಯಾಗ್ಬೇಕವನು!
ದುರಭ್ಯಾಸಗಳಿಲ್ಲದಿರ್ಬೇಕವನು!
ಟ್ಟಿ ಮನಸ್ಸುಳ್ಳವನಾಗ್ಬೇಕವನು! (ವೇ)
-ಳೆ, ಅವೇಳೆಯೆನ್ನದಿರಬೇಕವನು! (ಅ)
-ಷ್ಟಿಷ್ಟೆನ್ನದೇ ಕಷ್ಟಕ್ಕೊದಗ್ಬೇಕವನು! (ಉ)
-ದ್ರೇಕವೆಳ್ಳಷ್ಟೂ ಇಲ್ಲದಿರ್ಬೇಕವನು! (ತ)
-ನುಜ ನಿರಂಜನಾದಿತ್ಯನಿಗವನು!!!

ವೈರಿಗಳಾರಾವ ಲೆಃಖ ನಿನಗೆ? [ಹಿ]   5(2982)

-ರಿದ ಖಡ್ಗದೆದುರ್ಧೈರ್ಯವಾರಿಗೆ!
ಡಚಿಕ್ಕುವುದ್ಕಿವಿ ಘರ್ಜನೆಗೆ! (ಗೋ)
-ಳಾಡಿದರ್ಚಂಡ, ಮುಂಡರ್ನಿನ್ನೇಟಿಗೆ!
ರಾಮನಿಗೆ ಶಕ್ತಿ ನಿನ್ನ ಕೊಡುಗೆ!
ರ ಗುರುಕೃಪೆ ಪೂರ್ಣ ನಿನಗೆ!
ಲೆಃಅಃವಿಲ್ಲದಷ್ಟು ಕೈ, ಕಾಲ್ನಿನಗೆ!
ಗಾರೂಢನ ಬೆಂಬಲ ನಿನಗೆ!
ನಿನ್ನಲ್ಲಿರಬೇಕು ಪೂರ್ಣ ನಂಬಿಗೆ!
ಮಸ್ಕಾರ ನಿನ್ನ ಪಾದಗಳಿಗೆ! (ಹಂ)
-ಗೆಲ್ಲಿ ನಿರಂಜನಾದಿತ್ಯ ನೀನಾಗೆ???

ವ್ಯಕಾವ್ಯಕ್ತನೆಂಬರ್ನಿನ್ನನಯ್ಯ! (ವ್ಯ)   5(3077)

-ಕಾನಂದ ಶಕ್ತಿ, ಜ್ಯೋತಿಯಿಂದಯ್ಯಾ! (ಅ)
-ವ್ಯಕ್ತವಾಗಿದೆ ಸ್ವರೂಪವಯ್ಯಾ! (ಭಾ)
-ಕ್ತರಿಗೆ ದರ್ಶನವೆಂತಾಯ್ತುಯ್ಯಾ? (ನಾ)
-ನೆಂಬಹಂಕಾರಿ ನೀನಲ್ಲವಯ್ಯಾ!
ಹಳಾಸೆ ನಿನ್ನ ನೋಡಲಯ್ಯಾ! (ತೋ)
-ರ್ನಿನ್ನ ಸುಂದರರೂಪವೀಗಯ್ಯಾ! (ನಿ)
-ನ್ನವನೆಂದೆನ್ನನೆತ್ತಿಕೊಳ್ಳಯ್ಯಾ! (ತ)
-ನಯನ ವಿಜ್ಞಾಪನೆಯಿದಯ್ಯಾ! (ಅ)
-ಯ್ಯಾ ನಿರಂಜನಾದಿತ್ಯ ನೀನಯ್ಯಾ!!!

ವ್ಯಕ್ತಿ ಸಮಾಜ ಧರ್ಮಕ್ಕೆ ಬದ್ಧ! (ವ್ಯ)   6(4217)

-ಕ್ತಿ ಧರ್ಮಕ್ಕಾಗ್ದು ಸಮಾಜ ಬದ್ಧ!
ಮಾಜ ಧರ್ಮಗಳ್ಕ್ರಮಬದ್ಧ!
ಮಾಡಿದವರಿದ ಸಿದ್ಧ, ಬುದ್ಧ!
ಗವಿದರಿಯದಿದ್ದ್ರೆ ದಗ್ಧ!
ರ್ಮ ಕರ್ಮತ್ತ್ರಿಕರಣ ಶುದ್ಧ! (ಕ)
-ರ್ಮ ಫಲಿಸಿದಾ ಸಿದ್ಧ ಪ್ರಸಿದ್ಧ! (ಬೆ)
-ಕ್ಕೆಯಿದ್ದರೆ ಫಲ ತದ್ವಿರುದ್ಧ!
ಲ್ಲವ್ರ ಮಾತನುಭವ ಸಿದ್ಧ! (ಸಿ)
-ದ್ಧ ನಿರಂಜನಾದಿತ್ಯ ಶುದ್ಧ!!!

ವ್ಯಥೆಯಿಲ್ಲದ ಕಥೆಗಾರನಾರು?   6(3375)

(ಕ)-ಥೆಗಾಧಾರವಾಗಿರುವ ದೇವರು!
(ತಾ)-ಯಿ, ತಂದೆ, ಎಲ್ಲರಿಗಾರ್ಗಿಪವರು!
(ಹು)-ಲ್ಲ ತಂದು ಹಾಕಿ ಹೂಪಡೆದವರು!
ತ್ತಾತ್ರೇಯಾಂಕಿತ ನಿತ್ಯಾನಂದರು!
ರ, ಚರಣಾದಿಂದ್ರಿಯಾತೀತರು!
(ಸು)-ತೆ, ಸುತಾದಿಗಳಾಸೆ ಬಿಟ್ಟವರು!
ಗಾಡಿಯಸ್ಥಿರತೆಯರಿತವರು!
ತಿ ಪತಿಯ ಹತಗೈದವರು!
ನಾಮಜಪ ಸದ ಮಾಡುವವರು!
(ಯಾ)-ರು? ನಿರಂಜನಾದಿತ್ಯಾವಧೂತರು!!!

ವ್ಯರ್ಥವೆಲ್ಲಾ, ಸಂಸಾರದಲ್ಲರ್ಥವಿಲ್ಲಾ! (ಸ್ವಾ)   4(2082)

-ರ್ಥ ವಿಷಯಾಸೆಯಿಂದಾಯ್ತನರ್ಥವೆಲ್ಲಾ! (ಸೇ)
-ವೆ ಪರಮಾರ್ಥವರಿತಾಗುತ್ತಲಿಲ್ಲಾ! (ಸ)
-ಲ್ಲಾಪನ್ಯರ ಮೇಲಧಿಕಾರಕ್ಕೆಲ್ಲೆಲ್ಲಾ!
ಸಂಪಾದನೆಯಧರ್ಮದಿಂದಲೆಲ್ಲೆಲ್ಲಾ!
ಸಾಧನೆ ಬೋಧನೆಗಾಗುತಿದೆಲ್ಲೆಲ್ಲಾ! (ಹ)
-ರಗಾಗಿ ಮಾರನ ಮರೆತಿರುತ್ತಿಲ್ಲಾ! (ಮಂ)
-ದಮತಿಗಳಿಗಿನ್ನೂ ಬುದ್ಧಿ ಬಂದಿಲ್ಲಾ! (ಬ)
-ಲ್ಲವರ್ಮಾತಿನಲ್ಲೇ ಮುಗಿಸುತ್ತಾರೆಲ್ಲಾ! (ಪಾ)
-ರ್ಥಸಾರಥ್ಯುಪದೇಶದಾಚಾರವಿಲ್ಲಾ!
ವಿಧಿಲಿಪಿಯೆಂದಳುವುದು ಬಿಟ್ಟಿಲ್ಲಾ! (ನ)
-ಲ್ಲಾ ನಿರಂಜನಾದಿತ್ಯನಂತೇಕಾಗಿಲ್ಲಾ???

ವ್ಯವಸ್ಥಾಪಕ ಸರ್ವ ವ್ಯಾಪಕ! (ಅ)   6(3417)

-ವಗೆಲ್ಲಾ, ಕರತಲಾ ಮಲಕ!
ಸ್ಥಾನ, ಮಾನಕ್ಕವ ವಿನಾಯಕ!
ರತತ್ವಾರ್ಥ ಪ್ರತಿ ಪಾದಕ!
ಷ್ಟ, ಸುಖಃಕ್ಕಂಜದ ಸಾಧಕ!
ರ್ವ ಸಮನ್ವಯದಾ ಸಾಧಕ!
ರ್ವ ಸಮನ್ವಯದಾ ದರ್ಶಕ!
(ಗ)-ರ್ವ ರಹಿತ ಶುದ್ಧ ಆಧ್ಯಾತ್ಮಿಕ!
ವ್ಯಾಮೋಹಾತೀತ ಮಾಯಾಜನಕ!
ವನ ಸುತ ಹನುಮಾನಿಕ! (ಸಂ)
-ಕಟ ನಿರಂಜನಾದಿತ್ಯಾಂತಕ!!!

ವ್ಯವಸ್ಥೆ ನಿನ್ನದಸ್ತವ್ಯಸ್ತವಾದರವ್ಯವಸ್ಥೆ!   6(3964)

ನಜವರಳದ, ಮುದುರದ ದುರವಸ್ಥೆ! (ಸಂ)
-ಸ್ಥೆಗಳೆಲ್ಲಾ ತಲೆಕೆಳಗಾಗುರುಳುವವಸ್ಥೆ!
ನಿಲ್ಲಲಾರದೆ ಗಿಡ, ಮರಗಳ್ಮರಣಾವಸ್ಥೆ! (ಅ)
-ನ್ನ, ವಸ್ತ್ರ ಕಾಣದೆ ಪ್ರಾಣಿಗಳಳಿಯುವವಸ್ಥೆ!
ಯೆ ನಿನ್ನದಿದ್ದರೆ ಮಾತ್ರ ಚಿರಂಜೀವಾವಸ್ಥೆ! (ಪು)
-ಸ್ತಕಗಳೆಷ್ಟೋದಿ, ಬರೆದ್ರೂ ಬಾರದೀ ಅವಸ್ಥೆ!
ವ್ಯವಹಾರ ಜಗತ್ತಿದ್ದೆಲ್ಲಾ ಕ್ಷಣಿಕಾವಸ್ಥೆ! (ಅ)
-ಸ್ತಮಾನೋದಯದಂಥಾದ್ದಿನ್ನೊಂದೇನಿದೆ ವ್ಯವಸ್ಥೆ?
ವಾದಿ, ಪ್ರತಿವಾದಿಗಳ್ಕಟ್ಟಿದರನೇಕ ಸಂಸ್ಥೆ!
ಡ ಸೇರದಂತಾಗೀಗೆಲ್ಲಾ ಶೋಚನೀಯಾವಸ್ಥೆ!
ಹಸ್ಯವರಿತಾಗಾಗುವುದು ಸಹಜಾವಸ್ಥೆ!
ವ್ಯಭಿಚಾರ ಭಕ್ತಿಗಳವಡದು ಈ ಅವಸ್ಥೆ! (ಭ)
-ವಪಾಶ ಹರಿದೊಗೆಯಲಿಕ್ಕೆ ಬೇಕೀ ಅವಸ್ಥೆ! (ಸ್ವ)
-ಸ್ಥೆ ನಿರಂಜನಾದಿತ್ಯ ಮಾತೆಯದ್ದಿದೇ ಅವಸ್ಥೆ!!!

ವ್ಯವಸ್ಥೆಯಿದ್ದರವಸ್ಥೆ! (ಅ)   6(3827)

-ವಸ್ಥೆಯಿದ್ದರೆ ವ್ಯವಸ್ಥೆ! (ಸ್ವ)
-ಸ್ಥೆ ಇದಿದ್ದ್ರೆ ಸಂಸಾರಸ್ಥೆ! (ನಾ)
-ಯಿಯ ಬಾಳು ದುರವಸ್ಥೆ! (ಸ)
-ದ್ದಡಗದಿದ್ದ್ರವ್ಯವಸ್ಥೆ! (ಅ)
-ರಸ ಮಾಡ್ಬೇಕ್ಸುವ್ಯವಸ್ಥೆ!
ರ್ಣಾಶ್ರಮ ಸುವ್ಯವಸ್ಥೆ! (ಸ್ವ)
-ಸ್ಥೆ, ನಿರಂಜನಾದಿತ್ಯಸ್ಥೆ!!!

ವ್ಯಾಪ್ತಿಗೆ ತಕ್ಕ ಪ್ರಾಪ್ತಿಗೆ ತೃಪ್ತಿ! (ಉ)   6(3637)

-ಪ್ತಿನ್ನುವವಗೆ ನೀರಿನ ಜ್ಞಪ್ತಿ!
ಗೆಳೆಯರಿಗೊಡನಾಟ ತೃಪ್ತಿ!
ರುಣರ್ಗ್ತರುಣಿಯರ ಜ್ಞಪ್ತಿ! (ಚಿ)
-ಕ್ಕ ಮಕ್ಕಳಿಗಾಟದಲ್ಲಿ ತೃಪ್ತಿ!
ಪ್ರಾಣಿವರ್ಗಕ್ಕಾಹಾರದ ಜ್ಞಪ್ತಿ! (ಪ್ರಾ)
-ಪ್ತಿಯಾದಾಗಾಪ್ತ ವಸ್ಥು ಸಂತೃಪ್ತಿ! (ಹ)
-ಗೆಗಳಿಗೆ ಪೀಡಿಸುವ ಜ್ಞಪ್ತಿ!
ತೃಣ, ಕಾಷ್ಠವಾಸಾತ್ಮಗೆ ತೃಪ್ತಿ! (ತೃ)
-ಪ್ತಿ ಶ್ರೀ ನಿರಂಜನಾದಿತ್ಯ ಪ್ರಾಪ್ತಿ!!!

ವ್ಯಾಯಾಮ ಪ್ರತಿದಿನ ಮಾಡು! (ಆ)   4(2332)

ಯಾಸವಿದ್ದಾಗ ಸ್ವಲ್ಪ ಮಾಡು!
ದನಾನಂದ ಬಿಟ್ಟು ಮಾಡು!
ಪ್ರಸನ್ನವಕ್ಕು ಮನ ಮಾಡು! (ಭೀ)
-ತಿ ಬಿಟ್ಟುತ್ಸಾಹದಿಂದ ಮಾಡು!
ದಿನದಾರಂಭದಲ್ಲೇ ಮಾಡು! (ಏ)
-ನನ್ನೂ ತಿನ್ನುವ ಮೊದ್ಲೇ ಮಾಡು!
ಮಾತು ಕತೆಯಿಲ್ಲದೇ ಮಾಡು! (ನೋ)
-ಡು, ನಿರಂಜನಾದಿತ್ಯ ನಾಡು!!!

ವ್ಯಾಸನಿಂದು ಬಂದೇ ತೀರಬೇಕು! (ವ್ಯ)   4(2067)

-ಸನಗಳೆಲ್ಲಾ ನಿರ್ಮಾಲಾಗ್ಬೇಕು!
ನಿಂದಾ, ಸ್ತುತಿಗಾನಂದಿಸಬೇಕು!
ದುರ್ಮದ ಮರ್ದನವೀಗಾಗ್ಬೇಕು!
ಬಂಧ ವಿಮೋಚನಾಮೇಲಾಗ್ಬೇಕು!
ದೇಶ, ವಿದೇಶೈಕ್ಯದಿಂದಿರ್ಬೇಕು!
ತೀರ್ಥ, ಕ್ಷೇತ್ರೋದ್ಧಾರವಾಗಬೇಕು! (ಪ)
-ರಮಾರ್ಥ ಜ್ಯೋತಿ ಬೆಳಗಬೇಕು!
ಬೇನೆಯ ಹುಟ್ಟಡಗಿ ಹೋಗ್ಬೇಕು! (ಟಾ)
-ಕು ನಿರಂಜನಾದಿತ್ಯನಾಗ್ಬೇಕು!!!

ವ್ಯಾಸನೊರೆದ, ಗಣೇಶ ಬರೆದ!   5(2797)

ರ್ವರ ಬಾಯಿಯನ್ನು ಬಿಡಿಸಿದ!
ನೊರೆವಾಲೆಲ್ಲರಿಗೆ ಕುಡಿಸಿದ!
ರೆಸಿಗೆ, ಹೇಸಿಗೆಗಳ ತೊಳೆದ!
ತ್ತ ದರ್ಶನಕೆ ಕದ ತೆರೆದ!
ರ್ವಿಗಳ ತಲೆಗೇಟು ಹೊಡೆದ! (ಹ)
-ಣೇಬರಹದ ಭ್ರಾಂತಿ ಹರಿಸಿದ!
ಬರಿಯಾದರ್ಶವೆತ್ತಿ ಹಿಡಿದ!
ಟ್ಟೆ, ಹೊಟ್ಟೆಯಾಸೆಗಳಳಿಸಿದ!
ರೆಕ್ಕೆ, ಪುಕ್ಕಾತ್ಮನಲ್ಲೆಂದರುಹಿದ!
ತ್ತ ನಿರಂಜನಾದಿತ್ಯ ತಾನೆಂದ!!!

ವ್ಯೆದ್ಯ ನಾರಾಯಣ ವಿರಾಜಿಸಲಿ! (ಮೇ)   1(197)

-ದ್ಯವಾಗಿಹುದೆಲ್ಲಾ ಒರಲಿನಲಿ! (ಅ)
-ನಾಯಾಸ ಧ್ಯಾನಕರಿವಾಯ್ತಾ ಉಲಿ!
ರಾಮಚಂದ್ರ ಕರುಣಿಸಿದಂತಾಗ್ಲಿ!
ತಿರಾಜನ ನುಡಿ ನಿಜವಾಗ್ಲಿ! (ಹ)
-ಣ, ಕಾಸಿನಭಾವ ಹೋಗುವಂತಾಗ್ಲಿ!
ವಿಜಯಗುರು ಚರಣಕ್ಕಾಗಲಿ! (ಆ)
-ರಾಮ ದೀನ ಭಕ್ತನಿಗುಟಾಗಲಿ!
ಜಿತ ಮನದಲಿನ್ನು ಮುಂದಿರಲಿ!
ತ್ಯ ಜೀವನ ಸಾರ್ಥಕವಾಗಲಿ! (ಬ)
-ಲಿ ನಿರಂಜನಾದಿತ್ಯ ಬೆಳಾಗಲಿ!!!

ವ್ರತೋಪವಾಸೋಪಾಸನೆಗಳೆಷ್ಟ ಆದವು!   6(4188)

ತೋರದೇ ಪ್ರತಿಫಲ ಎಲ್ಲಾ ವ್ಯರ್ಥವಾದವು!
ರಮಾರ್ಥ ಸಿದ್ಧಿಯೊಂದೇ ತತ್ಪರಿಣಾಮವು!
ವಾಸನಾ ಕ್ಷಯದಿಂದ ನಿತ್ಯ ನಿಜಾನಂದವು!
“ಸೋಹಂ”! ಸಾಧನೆಯಿಂದಕ್ಕು ವಾಸನಾ ಕ್ಷಯವು!
ಪಾಲುಮಾರಿಕೆಯಿಂದಾಗ್ವುದು ನಿತ್ಯ ದುಃಖವು!
ರ್ವಸಂಗಪರಿತ್ಯಾಗದಿಂದಾತ್ಮ ಸುಖವು!
ನೆಲ, ಹೊಲ, ಮನೆಯಿಂದ ಸದಾ ಜಗಳವು!
ತಿಗೆಡಿಸಲ್ಲಾನವನೇ ಕಾರಣವು! (ಕ)
-ಳೆದುಹೋಗುವುದಿಂತು ವ್ಯರ್ಥ ಆಯುಷ್ಕಾಲವು! (ಸ್ಪ)
-ಷ್ಟೋಕ್ತಿಗಳಿವು ಯಾರ ಮನಕ್ಕೂ ರುಚಿಸವು!
ಗಬೇಕಾದದ್ದಾಗುವುದೆಂಬುದೇ ಅರಿವು!
ಮೆ, ಶಮೆ, ಸಹಿತಾತ್ಮ ಚಿಂತನೆ ಯುಕ್ತವು! (ಸಾ)
-ವು, ನೋವು, ನಿರಂಜನಾದಿತ್ಯಾನಂದಕ್ಕಿಲ್ಲವು!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ