ಲಂಗೋಟಿ ಬಿಗಿಯಾಗಿ ಕಟ್ಟು!   3(1338)

ಗೋಡೆ ಹಾಕಿಸಿ ಮನೆ ಕಟ್ಟು! (ಲೂ)
-ಟಿ ಮಾಡದೆ ಸಾಮ್ರಾಜ್ಯ ಕಟ್ಟು!
ಬಿಸಿಯಾರಿಸಿ ಬುತ್ತಿ ಕಟ್ಟು! (ಬಾ)
-ಗಿಲು ಬಿಟ್ಟು ಬಚ್ಚಲು ಕಟ್ಟು!
ಯಾತ್ರೆ ಮುಗಿಸಿ ಜಾತ್ರೆ ಕಟ್ಟು! (ಮಾ)
-ಗಿದಾಗ ಮಾರಾಟಕ್ಕೆ ಕಟ್ಟು!
ಟ್ಟೆ ಕಟ್ಟಿಸಿ ತೂಬು ಕಟ್ಟು! (ಗು)
-ಟ್ಟು ನಿರಂಜನಾದಿತ್ಯ ಹುಟ್ಟು!!!

ಲಂಚ, ವಂಚನೆಯ ಮಂಚವೆಷ್ಟು ಕಾಲ?   6(3619)

ರಾಚರಗಳಿರವು ಚಿರಕಾಲ!
ವಂಶ, ಅಂಶಗಳ ನುಂಗಿದನು ಕಾಲ!
ರಿತ್ರೆಯಲ್ಲೆಂತಿಹುದು ಗತ ಕಾಲ?
ನೆಗಳ್ದಾಳಿ, ಬಾಳಿದರು ಕ್ಷಣ ಕಾಲ!
ಜ್ಞ, ಯಾಗ, ಮಾಡಿದವರೂ ನಿರ್ಮೂಲ!
ಮಂದಿರಗಳುರುಳಿ ಸೇರಿವೆ ನೆಲ!
ರಣ ಸೇವಕರಿಗಿಲ್ಲ ಬೆಂಬಲ!
ವೆಚ್ಚ ಮಾಡಿದ್ದೊಂದೂ ಆಗಿಲ್ಲ ಸಫಲ! (ನಿ)
-ಷ್ಟುರ ಬುದ್ಧಿಯಿಂದ ಕಳೆಯ್ತಾಯುಷ್ಕಾಲ!
ಕಾಮಾರಿ ಕರುಣಿಸ್ಲಿ ಸುಭಿಕ್ಷೆ ಕಾಲ! (ಕಾ)
-ಲ, ಶ್ರೀ ನಿರಂಜನಾದಿತ್ಯ ಮಹಾ ಕಾಲ!!!

ಲಂಪಟಾ! ಪಡಬೇಡ ಸಂಕಟಾ!   5(2655)

ತಿತ ಪಾವನನಾ ವೆಂಕಟಾ! (ಬೂ)
-ಟಾಟಿಕೆಯಿಂದ ಎಲ್ಲಾ ಸಂಕಟಾ!
ರಮಾರ್ಥದ ಸಾರಾ ವೆಂಕಟಾ! (ಮಾ)
-ಡಬೇಕವನ ಧ್ಯಾನಾ ಲಂಪಟಾ!
ಬೇರುಸಹಿತ ನಾಶಾ ಸಂಕಟಾ! (ಅಂ)
-ಡ, ಪಿಂಡಾಂಡದಲ್ಲೆಲ್ಲಾ ವೆಂಕಟಾ!
ಸಂದೇಹಪಡಬೇಡಾ ಲಂಪಟಾ! (ಸ್ವ)
-ಕರ್ಮ ನಿರತಗಿಲ್ಲಾ ಸಂಕಟಾ! (ದಿ)
-ಟಾ ನಿರಂಜನಾದಿತ್ಯಾ ವೆಂಕಟಾ!!!

ಲಕ್ಷ್ಮಿ ನಿನ್ನವಳು ನರಸಿಂಹ! (ಲ)   3(1115)

-ಕ್ಷ್ಮಿಗಾರೆದುರಾಳು ನರಸಿಂಹ?
ನಿನ್ನ ಶಕ್ತ್ಯವಳು ನರಸಿಂಹ! (ಅ)
-ನ್ನ ದಾನಿಯವಳು ನರಸಿಂಹ!
ರದೆಯವಳು ನರಸಿಂಹ! (ಗೋ)
-ಳು ನೋಡಳವಳು ನರಸಿಂಹ!
ತೋದ್ಧಾರಿವಳು ನರಸಿಂಹ!
ಮಾ ನಾಮಿವಳು ನರಸಿಂಹ!
ಸಿಂಗಾರಮ್ಮವಳು ನರಸಿಂಹ!
ರಿ ನಿರಂಜನಾದಿತ್ಯಾ ಸಿಂಹ!!!

ಲಕ್ಷ್ಮಿದೇವಿಯ ಪತಿ ಪ್ರೇಮ! (ಲ)   2(722)

-ಕ್ಷಿಯ ಧರ್ಮ, ಕರ್ಮ ನಿಷ್ಕಾಮ!
ದೇವಿಗವನ ಜಪಾರಾಮ!
ವಿಶ್ವವ್ಯಾಪಕಾ ದಿವ್ಯ ನಾಮ!
ದುಪನವ ರಾಧೇ ಶ್ಯಾಮ!
ರಂಧಾಮ ವೈಕುಂಠ ಧಾಮ! (ಪ)
-ತಿತ ಪಾವನ ಸೀತಾರಾಮ!
ಪ್ರೇಮಿ ಹೃದಯ ಆತ್ಮಾರಾಮ! (ಪ್ರೇ)
-ಮ, ನಿರಂಜನಾದಿತ್ಯಾರಾಮ!!!

ಲಕ್ಷ್ಮೀಬಾರೇ, ವಿಜಯಲಕ್ಷ್ಮೀ ಬಾರೇ! (ಲ)   4(1651)

-ಕ್ಷ್ಮೀರಮಣನೊಡಗೂಡಿರು ಬಾರೇ!
ಬಾರ್ಬಾರಿಗವನ ನೋಡಿರು ಬಾರೇ! (ಹ)
-ರೇರಾಮ ಮಂತ್ರ ಪ್ರಿಯಳೆಂದು ಬಾರೇ!
-ವಿವೇಕಿ, ವಿರಕ್ತೆ ನೀನೆಂದು ಬಾರೇ!
ನ ಸಂಘದ ಹಂಗೇನೆಂದು ಬಾರೇ!
ಜ್ಞವೀ ಸಂಕೀರ್ತನೆಯೆಂದು ಬಾರೇ!
ಕ್ಷಾರ್ಚನೆ ಶ್ರೀಪಾದಕ್ಕೆಂದ ಬಾರೇ! (ಲ)
-ಕ್ಷ್ಮೀಶಗಿಷ್ಟ ಸೇವೆಯಿದೆಂದು ಬಾರೇ!
ಬಾರೇ, ಬೇಗ್ಬಾರೇ, ಹೊತ್ತಾಯ್ತೆಂದು ಬಾರೇ! (ತೋ)
-ರೇ, ನಿರಂಜನಾದಿತ್ಯನನ್ನು ಸೇರೇ!!!

ಲಗ್ನ ಪತ್ರಿಕೆ ಆಗಲಿಂದು! [ಮ]   3(1145)

-ಗ್ನಳಾಗವನಲ್ಲಿ ನೀನಂದು!
ಡು ನಿಜಾನಂದವೆಂದೆಂದು!
ತ್ರಿಮೂರ್ತಿ ರೂಪನವನೆಂದು! (ಏ)
-ಕೆನಗಿನ್ನನ್ನ ಸೇವೆಯೆಂದು!
-ಆಗಲವನ ಸೇವೆ ಮುಂದು!
ರತಿಗಿದೇ ಧರ್ಮವೆಂದು!
ಲಿಂಗಪೂಜೆಯಾಗಲೆಂದೆಂದು! (ಅ)
-ದು, ನಿರಂಜನಾದಿತ್ಯನೆಂದು!!!

ಲಜ್ಜೆ, ಮಾನ ಬಿಟ್ಟ ಮೇಲೆ ಕಜ್ಜವೇನು? [ಹೆ]   5(3116)

-ಜ್ಜೆಯೊಳಗಿಡಲಾಜ್ಞೆಯಿದೆಯೇನು?
ಮಾತಿನಲ್ಲಿ ರೀತಿ, ನೀತಿ ಬೇಡವೇನು?
ರ ವಾನರನಂತಾಡಬಹುದೇನು?
ಬಿ. ಎ., ಯಂ. ಎ., ಓದಿಬಿಟ್ಟರಾಯಿತೇನು? (ಕೆ)
-ಟ್ಟ ಚಾಳಿಗಳ ಬಿಟ್ಟುಬಿಡೀಗ ನೀನು!
ಮೇಷ, ಮೀನ ಲೆಃಖಾ ಹಾಕಿ ಫಲವೇನು? (ಓ)
-ಲೆಭಾಗ್ಯಕ್ಕನಸೂಯಯಾಗ್ಬೇಕು ನೀನು!
ರ್ತವ್ಯ ಶ್ರದ್ಧಾ, ಭಕ್ತಿಯಿಂದ ಮಾಡ್ನೀನು!
(ಸ)ಜ್ಜನರ ಸಂಗದಲ್ಲಿರಬೇಕು ನೀನು!
ವೇಷ, ಭೂಷಣಕ್ಕಾಶಿಸಬೇಡ ನೀನು! (ತ)
-ನು ಭಾವ ನಿರಂಜನಾದಿತ್ಯಗುಂಟೇನು!!!

ಲಭ್ಯಕ್ಕನುಗುಣವಾಗಿ ಬುದ್ಧಿ! (ಸ)   6(3633)

-ಭ್ಯನಾಗಿರಲು ಬೇಕು ಸದ್ಭುದ್ಧಿ! (ಠ)
-ಕ್ಕರ ಸಂಪರ್ಕದಿಂದ ದುರ್ಬುದ್ಧಿ! (ತ)
-ನು, ಮನ, ಧನಾರ್ಪಣಾತ್ಮ ಬುದ್ಧಿ!
ಗುರಿ ಸಿದ್ಧಿಗಿರ್ಬೇಕಿಂಥಾ ಬುದ್ಧಿ! (ಹ)
ದಾಸೆಯೆಂಬುದಜ್ಞಾನ ಬುದ್ಧಿ!
ವಾದ, ವಿವಾದಹಂಕಾರ ಬುದ್ಧಿ! (ಯೋ)
-ಗಿಗಿರಬೇಕು ನಿರ್ಮಲ ಬುದ್ಧಿ! (ಅಂ)
-ಬುಜಮಿತ್ರನದ್ದಾದರ್ಶ ಬುದ್ಧಿ! (ಸಿ)
-ದ್ಧಿ, ನಿರಂಜನಾದಿತ್ಯಗಾ ಬುದ್ಧಿ!!!

ಲಭ್ಯದೆದುರು ವಿದ್ಯಾ, ಬುದ್ಧಿ, ರೂಪ ತೃಣ! (ಸ)   6(4078)

-ಭ್ಯನಾದರೂ ಲಭ್ಯವಿಲ್ಲದಿದ್ದರೆ ಹೆಣ!
ದೆವ್ವಗಳೂ ಲಭ್ಯವಿದ್ದರೆಲ್ಲರ ಪ್ರಾಣ!
ದುಡಿದ್ರೂ ಲಭ್ಯವಿಲ್ಲದಿದ್ದ್ರೆ ಸಿಕ್ಕದು ಹಣ!
ರುಚಿ, ಅರುಚಿಯೆನ್ನದವಗಿಲ್ಲ ಋಣ!
ದಿವೇಕಿಯಾಗಿ ಮುಗಿಸಬೇಕು ಪ್ರಯಾಣ! (ಪಾ)
-ದ್ಯಾದಿಯಿಂದ ಗುರು ಸೇವೆ ಗೈವವ ಜಾಣ!
ಬುದ್ಧಿಗೆಟ್ಟು ಗುರುನಿಂದೆ ಮಾಳ್ಪವ ಕೋಣ! (ರಿ)
-ದ್ಧಿ, ಸಿದ್ಧಿಗಾಶಿಸುವುದೆಲ್ಲಾ ಹಗರಣ!
ರೂಪ, ನಾಮಾತೀತಾತ್ಮನಿಗಿಲ್ಲ ಭ್ರಮಣ!
ರಮಾತ್ಮ ಸ್ವರೂಪಿ ಬ್ರಹ್ಮಜ್ಞ ಬ್ರಾಹ್ಮಣ!
ತೃಪ್ತ ತಾನಾಗಿ ಮಾಳ್ಪನು ಲೋಕ ಕಲ್ಯಾಣ! (ತೃ)
-ಣ, ನಿರಂಜನಾದಿತ್ಯಾನಂದಕ್ಕೆ ತ್ರಿಗುಣ!!!

ಲಭ್ಯವಿದ್ದಂತಾಗ್ಲೆಂದಾಶೆಲ್ಲದಿರು! (ಅ)   6(4230)

-ಭ್ಯರ್ಥಿಯಾಗಬೇಕಾಗಿದ್ದರೆ ಆಗಿರು!
ವಿಫಲನಾದರೆ ದುಃಖ ಪಡದಿರು! (ಇ)
-ದ್ದಂತಿಂದೂ, ನಾಳೆಯೂ ಎಂದೆಂದಿಗೂ ಇರು!
ತಾನೇ ಅವನಾಗಲು ಸಾಧಿಸುತ್ತಿರು! (ಸಾ)
-ಗ್ಲೆಂದು ಯಾತ್ರೆ ಮುಂದುವರಿಸುತ್ತಾ ಇರು!
ದಾರಿ ಕಷ್ಟವಾದಾಗೆದೆಗೆಡದಿರು!
ಶೆಟ್ಟಿಯಂಗಡಿಯೊಳಕ್ಕೆ ನುಗ್ಗದಿರು! (ಬಾ)
-ಯಿ, ಕೈ, ಕಚ್ಚೆ ಕೊಳೆ ಮಾಡಿಕೊಳ್ಳದಿರು! (ಮ)
-ಲ್ಲ ಮಾರುತಿಯನ್ನು ನೆನೆಯುತ್ತಲಿರು!
ದಿವ್ಯ ಜ್ಯೋತಿ ಸ್ವರೂಪ ನೀನೇ ಆಗಿರು! (ಗು)
-ರು ನಿರಂಜನಾದಿತ್ಯನೆಂದರಿತಿರು!!!

ಲಭ್ಯವಿಲ್ಲದ ತಬ್ಬಲಿಗಾವ ಹಬ್ಬ? (ಸ)   4(2064)

-ಭ್ಯನಾಗಿರುವುದೇ ಅವನಿಗೆ ಹಬ್ಬ!
ವಿಷಯಾಸೆ ಬಿಟ್ಟರದೇ ನಿತ್ಯ ಹಬ್ಬ! (ಗೊ)
-ಲ್ಲರಿಗೆ ಗೋಪಾಲನಾ ಸೇವೆಯೇ ಹಬ್ಬ!
ರ್ಶನವವನದವರಿಗೆ ಹಬ್ಬ!
ಪಸ್ಸು ತಾಪಸರಿಗೆ ಭಾರೀ ಹಬ್ಬ! (ಕ)
-ಬ್ಬ ಸಾಹಿತಿಗಳಿಗೊಂದು ದೊಡ್ಡ ಹಬ್ಬ! (ಮಾ)
-ಲಿಕನೊಲಿಯಲ್ವಿಮಲಾನಂದ ಹಬ್ಬ! (ಯೋ)
-ಗಾನಂದವೆಂಬುದಪೂರ್ವಮರ ಹಬ್ಬ!
ರಗುರು ಶ್ರೀಪಾದದಲ್ಲೆಲ್ಲಾ ಹಬ್ಬ!
ಗಲಿರುಳೆನ್ನದಾಗುವುದಾ ಹಬ್ಬ! (ಹ)
-ಬ್ಬ, ನಿರಂಜನಾದಿತ್ಯಗಿದೊಂದೇ ಹಬ್ಬ!!!

ಲಭ್ಯವಿಲ್ಲದಿದ್ರೆ ಬೇಡಿದ್ರೂ ನೀಡರು! (ಲ)   6(3718)

-ಭ್ಯವಿದ್ರೆ ಇದ್ದಲ್ಲಿಗೇ ತಂಡುಕೊಡ್ವರು!
ವಿಧಿ, ಹರಿ, ಹರ, ಚಿತ್ತವಿದೆಂಬರು! (ಎ)
-ಲ್ಲವೂ ಸಂಚಿತಾನುಸಾರವೆನ್ನುವರು!
ದಿಟವ ನಾನಾ ಮಾತಲ್ಲಿ ಹೇಳುವರು! (ನಿ)
-ದ್ರೆ ಮಾಡಿದ್ದ್ರೂ ಎಬ್ಬಿಸಿ ತಿನ್ನಿಸುವರು!
ಬೇಡ್ವವ್ನ ಕತ್ತು ಹಿಡಿದು ದಬ್ಬುವರು! (ಬ)
-ಡಿದು, ಹೊಡೆದು ಅವನ ಹಿಂಸಿಪರು! (ತ)
-ದ್ರೂಪ ತಾನೂ, ಅವನೂ ಎಂದರಿಯರು!
ನೀತಿ, ರೀತಿ, ಮರೆತು ಹಾಳಾಗುವರು! (ಮೃ)
-ಡನೊಲಿದರೆಲ್ಲಾ ಸಾಧ್ಯವೆನ್ನುವರು! (ಗು)
-ರು ನಿರಂಜನಾದಿತ್ಯಾತನೆನ್ನುವರು!!!

ಲಭ್ಯಾಲಭ್ಯ ಸೌಲಭ್ಯ! (ಅ)   2(633)

-ಭ್ಯಾಸಿಗೆಲ್ಲಾ ಸೌಲಭ್ಯ! (ಅ)
-ಲಭ್ಯಾದರೂ ಸೌಲಭ್ಯ! (ಲ)
-ಭ್ಯವಾದರೂ ಸೌಲಭ್ಯ!
ಸೌಹಾರ್ದತೆ ಸೌಲಭ್ಯ!
ಕ್ಷ್ಯಾತ್ಮನೇ ಸೌಲಭ್ಯ! (ಲ)
-ಭ್ಯ ನಿರಂಜನಲಭ್ಯ!!!

ಲಲಿತಾ ಮಂದಿರ ನನ್ನದಯ್ಯಾ! (ಬ)   2(536)

-ಲಿಯಲದರ ಧ್ಯೇಯಗಳಯ್ಯಾ!
ತಾಳ್ಮೆ ಕೊಡಲಿ ವಿಶ್ವೇಶ್ವರಯ್ಯಾ!
ಮಂದಿಯಂತೆ ಅವನಲ್ಲವಯ್ಯಾ!
ದಿನ ನಿಶಿ ನಿಷ್ಕಾಮಿಯಾತಯ್ಯಾ! (ವ)
-ರ ಸೇವಾಕಾರ್ಯ ನಡೆಯಲಯ್ಯಾ!
ನ್ನಾಗಮನಾಕಾಂಕ್ಷೆ ಸ್ತುತ್ಯಯ್ಯಾ! (ಅ)
-ನ್ನಲಾರೆನೆಂದು ಬಹೆನೆಂದಯ್ಯಾ!
ತ್ತ ಚಿತ್ತದಂತಿದಾಗಲಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ‘ನಾ’ನಯ್ಯಾ!!!

ಲಲಿತಾ ಮಂದಿರೇಶ್ವರ ವಿಶ್ವೇಶ್ವರ!   2(546)

ಲಿಪ್ತನಾಗಿಲ್ಲದೀಶ್ವರ ವಿಶ್ವೇಶ್ವರ!
ತಾಳ, ಮೇಳ, ಗಾನೇಶ್ವರ ವಿಶ್ವೇಶ್ವರ!
ಮಂಗಳಾಂಗ ಯೋಗೀಶ್ವರ ವಿಶ್ವೇಶ್ವರ!
ದಿನಕರ ಕಾಂತೀಶ್ವರ ವಿಶ್ವೇಶ್ವರ!
ರೇಚಕ, ಪೂರಕೇಶ್ವರ ವಿಶ್ವೇಶ್ವರ! (ವಿ)
-ಶ್ವ ಕಲ್ಯಾಣ ಕರ್ಮೇಶ್ವರ ವಿಶ್ವೇಶ್ವರ!
ಘುರಾಮ ಪ್ರಿಯೇಶ್ವರ ವಿಶ್ವೇಶ್ವರ!
ವಿಧಿ, ಹರಿ, ಹರೇಶ್ವರ ವಿಶ್ವೇಶ್ವರ!
ಶ್ವೇತ, ಪೀತಾಂಬರೇಶ್ವರ ವಿಶ್ವೇಶ್ವರ! (ಈ)
-ಶ್ವರ ಸಾರ್ವಭೌಮೇಶ್ವರ ವಿಶ್ವೇಶ್ವರ! (ವ)
-ರದ ನಿರಂಜನಾದಿತ್ಯ ವಿಶ್ವೇಶ್ವರ!!!

ಲಿಂಗ, ನಾಮ, ರೂಪಾತೀತಮ್ಮಾ! [ಆ]   2(494)

ಬೇಕೈಕ್ಯ ಇದರಲಮ್ಮಾ!
ನಾಗಾಭರಣ ಪ್ರಾಣಮ್ಮಾ!
ನಕಿದಾಮೋದ ಕಾಣಮ್ಮಾ!
ರೂಪಾ ರೂಪ ಇದರಿಂದಮ್ಮಾ! (ಅ)
-ಪಾರ್ಥ ಮಾಡಿ ಕೆಡಬೇಡಮ್ಮಾ!
ತೀರ್ಥ ಪ್ರಸಾದ ತಗೊಳ್ಳಮ್ಮಾ!
ತ್ವ ಚಿಂತನೆ ಸಾಗಲಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯದಮ್ಮಾ!!!

ಲಿಂಗದಂತೆ ಅಂಗ, ಅಂಗದಂತೆ ಲಿಂಗ!   6(4012)

ತಿ, ಸ್ಥಿತಿ ಪರಿಶುದ್ಧಕ್ಕೆ ಸತ್ಸಂಗ!
ದಂಭ, ದರ್ಪದಿಂದ ಸ್ಥಾನ, ಮಾನ, ಭಂಗ!
ತೆರೆದು ವಿಕಾಸವಾಗ್ಬೇಕಂತರಂಗ!
ಅಂಗ ಸಾಧನೆಯಿಂದ ಬಲಭೀಮಾಂಗ!
ಣಿಕಾಲೋಲ ಕ್ರೂರ ಚೋರ ಅನಂಗ!
ಅಂತರಂಗ ಬಹಿರಂಗ, ಶುದ್ಧ ರಂಗ!
ರ್ವ ರಹಿತ, ಸರ್ವಹಿತಾತ್ಮ ಲಿಂಗ!
ದಂಗೆಕೋರ, ದರೋಡೆಗಾರ ಫಟೀಂಗ!
ತೆಗಳ, ಹೊಗಳ, ಬೊಗಳ, ನಿಸ್ಸಂಗ!
ಲಿಂಗಾತ್ಮ ಲಿಂಗ, ತೇಜೋ ಲಿಂಗ ಸಾರಂಗ!
ತಿ ನಿರಂಜನಾದಿತ್ಯಾನಂದ ಲಿಂಗ!!!

ಲಿಖಿತ ಜಪಾರಾಮ ಪ್ರೇಮ! (ಅ)   1(355)

-ಖಿಳ ಬಲದಾಯಕಾರಾಮ!
ನು, ಮನೈಕ್ಯಕಿದಾರಾಮ!
ಗದ, ಜೀವರಿಗಾರಾಮ!
ಪಾವನ ನಾಮ ಜಪಾರಾಮ!
“ರಾಮ ರಾಮ ಜೈ ರಾಜಾ ರಾಮ”!
ರ್ಕಟ ವೀರಗಿದಾರಾಮ!
ಪ್ರೇಮ ಸೀತಾ ಪ್ರಾಣಾ ಶ್ರೀರಾಮ!
ಮ ನಿರಂಜನ ಶ್ರೀರಾಮ!!!

ಲಿಪ್ತ ಸನ್ಯಾಸಿಗಿಂತ ಲಿಪ್ತ ಸಂಸಾರಿ ಮೇಲು! (ಪ್ರಾ)   6(3578)

-ಪ್ತವಾದದ್ದರಲ್ಲಿ ತೃಪ್ತನಾಗುವವ ಮೇಲು!
ರೋಜದೆಲೆಯಂತಿರುವವ ಸದಾ ಮೇಲು! (ಅ)
-ನ್ಯಾಯ ಯಾರಿಗೂ ಮಡದವ ಬಹಳ ಮೇಲು!
ಸಿಹಿ, ಕಹಿ, ಸಮನಾಗೆಣಿಸುವವ ಮೇಲು! (ಈ)
-ಗಿಂದ್ಲೇ ದಿವ್ಯ ಜೀವನ ನಡೆಸುವವ ಮೇಲು!
ನ್ನ ತಪ್ಪನ್ನು ತಾನು ತಿದ್ದುವವನೇ ಮೇಲು! (ಮ)
-ಲಿನ ವಾಸನೆಯಿಲ್ಲದಿಹ ಮನಸ್ಸು ಮೇಲು! (ಕ್ಲಿ)
ಪ್ತವಾದಾಹಾರ, ವಿಹಾರವಿರುವವ ಮೇಲು!
ಸಂಭಾವನಾಪೇಕ್ಷೆಯಿಲ್ಲದ ಸೇವೆಯೇ ಮೇಲು!
ಸಾಲ ಮಾಡುವ ಶೀಲವಿಲ್ಲದವನೇ ಮೇಲು!
ರಿಸಿ, ಮುನಿಗಳ ಪವಿತ್ರ ಜೀವನ ಮೇಲು!
ಮೇಲು, ಕೀಳೆನ್ನದೆ ಬಾಳುವವ ಬಹು ಮೇಲು! (ಮೇ)
-ಲು, ನಿರಂಜನಾದಿತ್ಯ ಎಲ್ಲರಿಗಿಂತ ಮೇಲು!!!

ಲೀಲಾ ಜಾಲೆ ಮಹಿಳೆ ಚಪಲೆ!   6(3879)

ಲಾಭಪ್ರದೆಯಾದರೂ ಚಪಲೆ!
ಜಾತ್ಯಾತೀತಳಾದರೂ ಚಪಲೆ! (ಕ)
-ಲೆಗಾಧಾರಳಾದರೂ ಚಪಲೆ!
ನಸಿಜಗೆ ತಾಯೀ ಚಪಲೆ!
ಹಿತಾಹಿತ ಮಾಳ್ಪಳೀ ಚಪಲೆ! (ತೊ)
-ಳೆಯುವಳು ಶ್ರೀಪಾದ ಚಪಲೆ!
ರಾಚರಕ್ಕೆ ರಾಣೀ ಚಪಲೆ!
ತಿವ್ರತೆಯಾದರೂ ಚಪಲೆ! (ಲೀ)
-ಲೆಗಾ ನಿರಂಜನಾದಿತ್ಯ ನೆಲೆ!!!

ಲೀಲಾಮೂರ್ತಿ ನಿರಂಜನಾದಿತ್ಯ!   2(466)

ಲಾಭದಾಯಕ ನಿವನಾದಿತ್ಯ!
ಮೂಜಗದೊಡೆಯ ನೀತಾದಿತ್ಯ! (ವ)
-ರ್ತಿಪ ಸದಾನಂದದಿಂದಾದಿತ್ಯ!
ನಿತ್ಯ ಬ್ರಹ್ಮಾನಂದ ರೂಪಾದಿತ್ಯ!
ರಂಗನಾಥ, ಲೋಕನಾಥಾದಿತ್ಯ!
ಲಜಭವಾದಿ ವಂದ್ಯಾದಿತ್ಯ!
ನಾಮ, ರೂಪಕೆಲ್ಲಾಧಾರಾದಿತ್ಯ!
ದಿವ್ಯ ತೇಜೋರಾಶಿ, ಶಕ್ತಾದಿತ್ಯ! (ಆ)
-ತ್ಯಮೋಘನೀ ನಿರಂಜನಾದಿತ್ಯ!!!

ಲೆಃಖ ತನಿಖೆಯಾಗಬೇಕು!   2(966)

ರೆಯಂತೆ ಕಾಣಸಬೇಕು!
ಪ್ಪು ಸರಿಪಡಿಸಬೇಕು!
ನಿರ್ವಂಚನೆಯಿಂದಿರಬೇಕು! (ಶಾ)
-ಖೆಗಳೆಲ್ಲೆಲ್ಲೂ ಆಗಬೇಕು!
ಯಾಜ್ಞವಲ್ಕ್ಯ ತಾನಾಗಬೇಕು!
ತಿ ಸ್ವಸ್ಥಿತಿಗಿಳೀ ಬೇಕು!
ಬೇಡ ಬಾಲನ ಭಕ್ತಿ ಬೇಕು! [ಬೇ]
-ಕು, ನಿರಂಜನಾದಿತ್ಯ ಬೇಕು!!!

ಲೆಃಖಕ್ಕೆ ಸಿಕ್ಕದ ಬಾಬುಗಳು! (ದುಃ)   6(4003)

-ಖಕ್ಕೆಲ್ಲಾ ಕಾರಣ ಅವುಗಳು! (ಕು)
-ಕ್ಕೆ ಹಣ್ಣು ಮಾರುವ ಕಾಕಗಳು!
ಸಿರಿವಂತ ರಾತ್ರಿಯಂಗ್ಡಿಗಳು! (ಮು)
-ಕ್ಕಣ್ಣನೊಡಲಿನೊಡವೆಗಳು!
ರಿದ್ರರ ಮುರ್ಕು ಮನೆಗಳು!
ಬಾಯಿ ಬಡಕ ದಲ್ಲಾಳಿಗಳು!
ಬುರ್ಖೆಯೊಳಗಿನ ಮುಖಗಳು!
ಡ್ಡ, ಮೀಸೆಗಳ ಗೂಂಡಾಗಳು! (ಹೇ)
-ಳು, ನಿರಂಜನಾದಿತ್ಯಗೀ ಗೋಳು!!!

ಲೇಖಕಿಯ ಸ್ವರೂಪ ಲೇಖನದಲ್ಲಿ!   5(2895)

ಚಿತವಿದು ವಿಚಾರಿಗದರಲ್ಲಿ!
ಕಿವಿ, ಬಾಯಿಗೇ ಪ್ರಾಶಸ್ತ್ಯವದರಲ್ಲಿ!
ದುನಾಥನ ಸ್ವರೂಪ ಗೀತೆಯಲ್ಲಿ!
ಸ್ವಪ್ನ ಸದೃಶ ಜಗವೆಂಬುದದ್ರಲ್ಲಿ!
ರೂಪ, ರೇಖೆಗೆ ಜಾಗವಿಲ್ಲದರಲ್ಲಿ!
ರಮಾತ್ಮ ತಾನೇ ತಾನಾಗಿರ್ಪದ್ರಲ್ಲಿ!
ಲೇಶವೂ ಕಪ್ಪಿಲ್ಲಾ ದಿವ್ಯಜ್ಯೋತಿಯಲ್ಲಿ!
ತಿಯ ಕಣ್ಣಿಗೆಲ್ಲಾ ತಪ್ಪದರಲ್ಲಿ!
ಯ, ವಿನಯಕ್ಕಮೃತವದರಲ್ಲಿ!
ತ್ತಗೀತೆಯ ಸಾರವೇ ಅದರಲ್ಲಿ! (ಇ)
-ಲ್ಲಿ ನಿರಂಜನಾದಿತ್ಯ ಕಿರಣದಲ್ಲಿ!!!

ಲೇಖನಿ ಲಿಂಗದೆಡೆಗೋಡುತಿದೆ! (ಸ)   4(2384)

-ಖನಾಗು ನನಗೆ ನೀನೆನ್ನುತಿದೆ!
ನಿನ್ನ ಸೇವೆ ಸದಾ ಕೊಡೆನ್ನುತಿದೆ! (ಆ)
-ಲಿಂಗಿಸಿ ಧನ್ಯನಾಗಿಸೆನ್ನುತಿದೆ! (ರಂ)
-ಗನಾಥನಿಗಿದಿಷ್ಟವೆನ್ನುತಿದೆ! (ತಂ)
-ದೆ, ತಾಯಿ, ನನಗೆ ನೀನೆನ್ನುತಿದೆ! (ನೀ)
-ಡೆನಗೀಗ ಸಾಯುಜ್ಯವೆನ್ನುತಿದೆ! (ಗಂ)
-ಗೋದಕಾಭಿಷೇಕ ಮಾಡೆನ್ನುತಿದೆ! (ಕಂ)
-ಡು ಧನ್ಯನಾದೆ ನಾನಿಂದೆನ್ನುತಿದೆ!
ತಿನ್ನಿಸು ನಿನ್ನುಚ್ಚಿಷ್ಟವೆನ್ನುತಿದೆ! (ಬಂ)
-ದೆ ನಿರಂಜನಾದಿತ್ಯಾಗ್ಯೆನ್ನುತಿದೆ!!!

ಲೋಕಕ್ಕೆಲ್ಲಾ ಗುರುದೇವ ದಿಕ್ಕು!   3(1188)

ಲ್ಲೊಳಗಿನ ಕಪ್ಪೆಗಾ ದಿಕ್ಕು! (ರೆ)
-ಕ್ಕೆ ಮುರಿದ ಹಕ್ಕಿಗದೇ ದಿಕ್ಕು! (ಎ)
-ಲ್ಲಾ ಕಾಲದಲ್ಲೂ ಅದೊಂದೇ ದಿಕ್ಕು!
ಗುಲಾಮರಸರಿಗೆಲ್ಲಾ ದಿಕ್ಕು! (ತು)
-ರು ಕರುಗಳಿಗೂ ಅದೇ ದಿಕ್ಕು! (ಅ)
-ದೇ ದಶ ದಿಕ್ಕುಗಳಿಗೂ ದಿಕ್ಕು!
ನಚರಗಳಿಗದೇ ದಿಕ್ಕು!
ದಿತ್ಯದಿತಿಜರಿಗೆಲ್ಲಾ ದಿಕ್ಕು! (ದಿ)
-ಕ್ಕು ನಿರಂಜನಾದಿತ್ಯಾನಂದಕ್ಕು!!!

ಲೋಕನಾಥ ನೀನೆಂಬರಿವಾಗಬೇಕು!   6(3318)

ರ್ತವ್ಯ ನಿನ್ನಂತೆಲ್ಲರೂ ಮಾಡಬೇಕು!
ನಾಮ, ರೂಪ, ಅದಕ್ಕೆಂದರಿಯಬೇಕು!
ಳಕು ಅದರಲ್ಲಿಲ್ಲದಿರಬೇಕು!
ನೀತಿ, ನೇಮ, ನಿಷ್ಕಳಂಕವಿರಬೇಕು!
ನೆಂಟನೂ, ಭಂಟನೂ, ನೀನಾಗಿರಬೇಕು!
ಡವ, ಬಲ್ಲಿದ, ಭೇದ ಹೋಗಬೇಕು!
ರಿಪುಗಳಿಗೆ ತ್ರಿಪುರಾರಿಯಾಗ್ಬೇಕು!
ವಾಮಾಂಗಿಸಹಿತ ದರ್ಶನ ಕೊಡ್ಬೇಕು!
ಣನಾಥನೆಂದೆನ್ನನ್ನೆತ್ತಿ ಕೊಳ್ಬೇಕು!
ಬೇಕ್ನನಗೆ ನಿನ್ನ ಕೃಪೆಯ ಬೆಳಕು! (ಸಾ)
-ಕು ನಿರಂಜನಾದಿತ್ಯನಿಗೀ ಬದುಕು!!!

ಲೋಕನಾಯಕನೇಕ ಸಿದ್ಧಿ ವಿನಾಯಕ!   3(1096)

ರ್ಮಕರ್ತನಿವ ಸದ್ಬುದ್ಧಿಪ್ರದಾಯಕ!
ನಾನಾ, ದೇಶ ಮತಾತ್ಮ ಪ್ರಚೋದಕ!
ಮ, ನಿಯಮಾದ್ಯಷ್ಟಾಂಗ ಯೋಗೋದ್ಭೋದಕ!
ಷ್ಟಸಾಧ್ಯವನಿಷ್ಟಸಿದ್ಧಿಗೈವಾತ್ಮಿಕ!
ನೇತನವನಾಗೇಕೈಕ ಗಣನಾಯಕ!
ಲಿಕಲ್ಮಷವಿನಾಶ ವಿದ್ಯಾದಾಯಕ!
ಸಿರಿಯರಸನಾಪ್ತ ಕರಿ ರಾಜಾಧಿಕ! (ವೃ)
-ದ್ಧಿ, ಕ್ಷಯಾಧಿಕಾರಿ ಶಿವಾನಂದ ಬಾಲಕ!
-ವಿಜಯಾನಂದಕ್ಕಿವನಾಪ್ತ ಸಹಾಯಕ!
ನಾಗರಾಜಕುಮಾರನಗ್ರಜ ವ್ಯಾಪಕ!
ಶಸ್ಸಾಮ್ರಾಜ್ಯ ಚಕ್ರವತೀಶ ಗಾಯಕ!
ಮಲಾಪ್ತ ನಿರಂಜನಾದಿತ್ಯ ಶೈವಿಕ!!!

ಲೋಕಮಿತ್ರನೆನ್ನ ನೇತ್ರದಲ್ಲಿ!   1(258)

ಷ್ಟವೇನಿಲ್ಲ ಅವನಿಂದಲ್ಲಿ!
ಮಿಲನವಾಗಿಹನಾತ್ಮನಲ್ಲಿ!
ತ್ರಯಲೋಕ ಬೆಳಗಿಪನಲ್ಲಿ!
ನೆರವೀವನಲ್ಲಿಂದೆಲ್ಲೆಲ್ಲಿ! (ಇ)
-ನ್ನನ್ಯರಾಶ್ರಯವೇಕೆನಗಿಲ್ಲ?
ನೇಮ, ನಿಷ್ಠೆಯೊಳಿರುವೆನಲ್ಲಿ!
ತ್ರಯಕ್ಷರಿ ಮಂತ್ರ ಜಪದಲ್ಲಿ!
ತ್ತನೀ ರೂಪಿನಲಿಹನಿಲ್ಲಿ! (ಇ)
-ಲ್ಲಿ, ನಿರಂಜನಾದಿತ್ಯೈಕ್ಯದಲ್ಲಿ!!!

ಲೋಕವ ಬಿಡಿಸ್ಯೇಕದಲಿರಿಸಿದನೆನ್ನ ಶಿವ!   3(1195)

ಲಿತುದ ಕದಲಿಸಿ ಬಲಿಸಿದನೆನ್ನ ಶಿವ!
ಸ್ತ್ರವ ಬಿಚ್ಚಿಸಿಚ್ಛೆಯ ಸಲಿಸಿದನ್ನೆನ್ನ ಶಿವ!
ಬಿಡಿ ಬಿಡಿಯಾದುದನೊಂದು ಮಾಡಿದನೆನ್ನ ಶಿವ! (ಅ)
-ಡಿಗಡಿಗವನಡಿಯಾಶ್ರಯವಿತ್ತನೆನ್ನ ಶಿವ! (ದಾ)
-ಸ್ಯೇಚ್ಛೆಯನ್ನು ನುಚ್ಚು ನೂರಾಗಿ ಕೊಚ್ಚಿದನೆನ್ನ ಶಿವ!
ರ್ಮಾಕರ್ಮ ವಿಕರ್ಮ ವಿವರಿಸಿದನೆನ್ನ ಶಿವ!
ಕ್ಷಕನ್ಯೆಯಾದರ್ಶ ಭಕ್ತಿ ಬೇಕೆಂದನೆನ್ನ ಶಿವ! (ಒ)
-ಲಿಯುವನಾಗ ಪರಮೇಶ್ವರನೆಂದನೆನ್ನ ಶಿವ!
ರಿಪು ಮನ್ಮಥಾರಿ ನಾನೆಂದಾತ್ಮಾನಂದನೆನ್ನ ಶಿವ!
ಸಿರಿಯರಸ ಶ್ರೀ ರಾಮಾತ್ಮ ನಾನೆಂದನೆನ್ನ ಶಿವ!
ಡ ಸೇರಿಪುದಾ ರಾಮನಾಮವೆಂದನೆನ್ನ ಶಿವ!
ನೆರೆ ಭಕ್ತಿಯಿಂದ ಭಜಿಸದನೆಂದನೆನ್ನ ಶಿವ! (ಉ)
-ನ್ನತದ ಜೀವನ್ಮುಕ್ತಿಯಿದರಿದೆಂದನೆನ್ನ ಶಿವ!
ಶಿವನೇ ರಾಮ, ರಾಮನೇ ಶಿವನೆಂದನೆನ್ನ ಶಿವ!
ನಜಸಖ ನಿರಂಜನಾದಿತ್ಯ ಶ್ರೀರಾಮ ಶಿವ!!!

ಲೋಕವಾಸನೆ ಶೋಕಕ್ಕೆ ಕಾರಣ!   4(1595)

ರ್ಮ ಮಾಡುವುದು ಕರ ಚರಣ!
ವಾತ, ಪಿತ್ಥ ಕಾಟ ಬಹು ಕಠಿಣ!
ತ್ಸಂಗದಿಂದಳಿವುದು ದುರ್ಗುಣ!
ನೆಮ್ಮದಿಗಾಗಿರಬೇಕು ಸುಗುಣ!
ಶೋಚನೀಯನ್ಯಮಾರ್ಗಾನುಸರಣ!
ಟ್ಟಿ ಬುತ್ತಿ ಸೇರು ರಂಗ ಪಟ್ಟಣ! (ಧ)
-ಕ್ಕೆಯಾಗದಾಗುವುದಿಲ್ಲುದ್ಧರಣ!
ಕಾದಿರುವನಲ್ಲಿ ರಮಾರಮಣ! (ವ)
-ರ ಗುರು ಸ್ವರೂಪಾ ಸರ್ವ ಕಾರಣ! (ಗು)
-ಣ, ದೋಷ ನಿರಂಜನಾದಿತ್ಯಾರ್ಪಣ!!!

ಲೋಕಸಭೆ ಏರಿಸುತ್ತೆ ನಾಕಕ್ಕೆ! (ಲೋ)   6(4284)

-ಕಸಭೆ ಇಳಿಸುತ್ತೆ ನರಕಕ್ಕೆ!
ದಸ್ಯರು ಬದ್ಧರು ನಿಯಮಕ್ಕೆ! (ಸ)
-ಭೆಯಪಚಾರ ಹೇತು ಪತನಕ್ಕೆ!
ರುಪೇರಿಲ್ಲದಾಟ ಬೇಕದಕ್ಕೆ!
ರಿಪುಗಳಿರಲೇಬಾರದದಕ್ಕೆ!
ಸುಗುಣಗಳಿಂದ ಶೋಭೆ ಅದಕ್ಕೆ! (ಕ)
-ತ್ತೆಯಾದರೆ ಬೀಳ್ವುದೊದೆಯದಕ್ಕೆ!
ನಾಳೆಗೆ ಬಿಗಿಯಿರಬೇಕದಕ್ಕೆ!
ರ್ತವ್ಯ ನಿಷ್ಠೆಯಿರಬೇಕದಕ್ಕೆ! (ಅ)
-ಕ್ಕೆ, ನಿರಂಜನಾದಿತ್ಯನೆಲ್ಲರಕ್ಕೆ!!!

ಲೋಕಸಭೆಗೆ ನಿನ್ನೋಟಾರಿಗಮ್ಮಾ?   4(1614)

-ಕರ್ತವ್ಯವಲ್ಲೇನೆಂದು ಗೊತ್ತೇನಮ್ಮಾ?
ರ್ವ ಹಿತದೃಷ್ಟಿಯಿರಬೇಕಮ್ಮಾ! (ಪ್ರ)
-ಭೆ ಬೀರುವುದು ಮಾತಿನಿಂದಲ್ಲಮ್ಮಾ! (ಹ)
-ಗೆತನ ಸಾಧನೆಗಾ ಜಾಗಲ್ಲಮ್ಮಾ!
ನಿರ್ಮಲಾಂತಃಕರಣಕ್ಕಾ ಸ್ಥಾನಮ್ಮಾ! (ತ)
-ನ್ನೋನ್ನತಿಯ ಸ್ವಾರ್ಥ ಸುಖಕ್ಕಲ್ಲಮ್ಮಾ! (ಬೂ)
-ಟಾಟದಿಂದಾವುದೂ ಸಿದ್ಧಿಸದಮ್ಮಾ! (ಹಾ)
-ರಿ ಊರೂರಲೆದಾರಿಗೇನಾಯ್ತಮ್ಮಾ?
ತಿ, ಸ್ಥಿತಿ ನೋಡಿ ಮತ ನೀಡಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಾನಂದದಮ್ಮಾ!!!

ಲೋಕೈಕೇಕೈಕ್ಯ ಸ್ವರೂಪ ಸೌಖ್ಯ!   2(798)

ಕೈವಲ್ಯ ಸುಖ ಸರ್ವದಾ ಸೌಖ್ಯ!
ಕೇಡೆಳ್ಳಷ್ಟಿಲ್ಲದಾ ನಿತ್ಯ ಸೌಖ್ಯ!
ಕೈಲಾಸಪತಿಯ ಐಕ್ಯ ಸೌಖ್ಯ! (ಶ)
-ಕ್ಯವಿಲ್ಲ ಮಲಿನಾತ್ಮಗಾ ಸೌಖ್ಯ!
ಸ್ವಧರ್ಮ ಕರ್ಮಕ್ಕೆ ಲಭ್ಯಾಸೌಖ್ಯ!
ರೂಪ ನಾಮಾತೀತಾನಂದಾ ಸೌಖ್ಯ!
ರಮಗುರುಪ್ರಸಾದಾ ಸೌಖ್ಯ!
ಸೌಭಾಗ್ಯ ಸಚ್ಚಿದಾನಂದ ಸೌಖ್ಯ! (ಮು)
-ಖ್ಯ, ಶ್ರೀ ನಿರಂಜನಾದಿತ್ಯ ಸೌಖ್ಯ!!!

ಲೋಚನಾ ನಾ ಸುಲೋಚನಾ!   2(620)

ರ್ಮಾಕ್ಷಿಯಲ್ಲಾ ಲೋಚನಾ!
‘ನಾ’ ಸರ್ವಸಾಕ್ಷಿ ಲೋಚನಾ!
ನಾನೆಲ್ಲರಂತರ್ಲೋಚನಾ!
ಸುಲೋಚನಾತ್ಮ ಲೋಚನಾ!
ಲೋಕವ್ಯಾಪಕಾ ಲೋಚನಾ!
ರಾಚರವಾಲೋಚನಾ!
‘ನಾ’ ನಿರಂಜನ ಲೋಚನಾ!!!

ಲೋಪ, ದೋಷಗಳ ತಿದ್ದಲಿ ಪಂಡಿತ!   6(3837)

ರಿಣತನು ಭಾಷೆಗಳಲ್ಲಿ ಆತ!
ದೋಣಿ ಸಾಗ್ವಾಗಿಲ್ಲ ನೀರಿನ ಹಿಡಿತ! (ವೇ)
-ಷ, ಭೂಷಣಗಳ ಲಕ್ಷಿಸಬಾರ್ದಾತ!
ರ್ವದಿಂದ ಪತಿತನಾಗುವನಾತ! (ಒ)
-ಳಗಿಹಳವನಲ್ಲಿ ವಾಣೀ ದೇವತಾ!
ತಿಳಿದಿದನು ಸಾಕ್ಷಾತ್ಕರಿಸ್ಬೇಕಾತ! (ಸ)
-ದ್ದಡಗಿ ಶುದ್ಧನಾಗುವನಾಗ ಆತ!
ಲಿಪ್ತನಾಗ್ಬಾರದು ಸಂಸಾರದಲ್ಲಾತ!
ಪಂಚಕೋಶ ಹರಿದು ಬರಬೇಕಾತ! (ಮ)
-ಡಿಯುವುದಿಲ್ಲಾಗಾತ ಪರಬ್ರಹ್ಮ ತಾ!
ಪೋನಿಧಿ ನಿರಂಜನಾದಿತ್ಯನಾತ!!!

ಲೋಭ ಬುದ್ಧಿಯಿನ್ನೂ ಹೋಗಿಲ್ಲ!   3(1351)

ಕ್ತಿಯ ಸ್ವರೂಪ ಗೊತ್ತಿಲ್ಲ!
ಬುಧವಾರವಾಗ್ಲೇ ಬಂತಲ್ಲ! (ಸಿ)
-ದ್ಧಿ, ರಿದ್ಧಿಗಳಾಸೆ ಸತ್ತಿಲ್ಲ! (ಬಾ)
-ಯಿ ಬಡಾಯಿ ಕಮ್ಮಿಯಾಗಿಲ್ಲ! (ತ)
-ನ್ನೂರ ದಾರಿ ದೂರ ಸಾಗಿಲ್ಲ!
ಹೋರಾಟದಾಟ ಮುಗಿದಿಲ್ಲ! (ಯೋ)
-ಗಿರಾಜನಾರೆಂಬರಿವಿಲ್ಲ! (ಬ)
-ಲ್ಲ ನಿರಂಜನಾದಿತ್ಯನೆಲ್ಲ!!!

ಲೋಭ ಬೇಡಾ, ಲೌಕಿಕ ಲಾಭ ಬೇಡಾ!   4(1717)

ಕ್ತಿ ಭಾವ ಬಲಿಸದಿರಬೇಡಾ!
ಬೇನೆ, ಭವರೋಗ ಮರೆಯಬೇಡಾ! (ಉಂ)
-ಡಾಡಿ ನಾಡಾಡಿಯೆನಿಸಿರಬೇಡಾ! (ಸಾ)
-ಲೌಕ್ಯ, ಸಾಮಿಪ್ಯ ದಾಟದಿರಬೇಡಾ!
ಕಿಡಿಗಣ್ಣನ ಧ್ಯಾನ ಬಿಡಬೇಡಾ!
ತೆಯಲ್ಲೇ ಕಾಲ ಕಳೆಯಬೇಡಾ! (ಕ)
-ಲಾತೀತಾನಂದನಾಗದಿರಬೇಡಾ!
ಯದಿಂದಭ್ಯಾಸ ನಿಲ್ಲಿಸಬೇಡಾ!
ಬೇರೆ ಬೇರೆ ಸಾಧನೆ ಮಾಡಬೇಡಾ! (ಬಿ)
-ಡಾ, ನಿರಂಜನಾದಿತ್ಯಾನಂದೋದ್ದಂಡಾ!!!

ಲೋಭಿ ನೀನಾಗಬಾರದಮ್ಮಾ!   5(2710)

ಭಿಕ್ಷೆ ರಕ್ಷಣೆಯೀಯ್ವುದಮ್ಮಾ!
ನೀಡದ ಕೈ ಪೆಣಗೈಯ್ಯಮ್ಮಾ!
ನಾಟಕಾಲಂಕಾರವೇಕಮ್ಮಾ!
ರ್ವ ಹೆಚ್ಚುವುದಿದ್ರಿಂದಮ್ಮಾ!
ಬಾಯ್ಕೈ ಶುದ್ಧವಾಗಬೇಕಮ್ಮಾ!
ಹಸ್ಯ ಗುರೂದೇಶಮ್ಮಾ!
ಯೆ ಧನಿಕಗಿರ್ಬೇಕಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾಗಮ್ಮಾ!!!

ಲೋಭಿಯ ದಾನ ಸಂಕಲ್ಪದಲ್ಲಿ! (ಅ)   2(1000)

-ಭಿಮತಗಳೆಲ್ಲಾ ಮಾತಿನಲ್ಲಿ! (ಭ)
-ಯ ಪಿಶಾಚಿ ಸದಾ ಮನದಲ್ಲಿ! (ಆ)
-ದಾಯವೆಲ್ಲಾ ಕೂಡಿಡುವುದ್ರಲ್ಲಿ!
ಶ್ವರದರಿವಿಲ್ಲವನಲ್ಲಿ!
ಸಂಪಾದನೆಯ ಹುಚ್ಚವನಲ್ಲಿ!
ರುಣೆಗೆಡೆಯಿಲ್ಲವನಲ್ಲಿ! (ಅ)
-ಲ್ಪತನಕ್ಕೂ ಸ್ವಾಗತವನಲ್ಲಿ! (ಮ)
-ದ, ಮತ್ಸರಕಾಶ್ರಯವನಲ್ಲಿ! (ಅ)
-ಲ್ಲಿ, ನಿರಂಜನಾರ್ಕ ಮುಗಿಲಲ್ಲಿ!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ