ರಂಗ, ನಾಥ, ಶ್ರೀ ರಂಗನಾಥ!   2(666)

ತಿನಾಥ ಶ್ರೀ ರಂಗನಾಥ!
ನಾಥನಾಥ ಶ್ರೀ ರಂಗನಾಥ! (ನಾ)
-ಥ ಶ್ರೀನಾಥ ಶ್ರೀ ರಂಗನಾಥ!
ಶ್ರೀರಾಮಾತ ಶ್ರೀ ರಂಗನಾಥ! (ಸಾ)
-ರಂಗಾತ್ಮಾತ ಶ್ರೀ ರಂಗನಾಥ! (ಜ)
-ಗನ್ನಾಥಾತ ಶ್ರೀ ರಂಗನಾಥ!
ನಾಮಾನಂತ ಶ್ರೀ ರಂಗನಾಥ! [ನಾ]
-ಥ ನಿರಂಜನಾದಿತ್ಯ ನಾಥ!!!

ರಂಗನಾಟ ನಿನಗೇಕೀಗ ಮಂಗಾ? (ರಂ)   3(1266)

-ಗನೊಲಿದಾಮೇಲಾಗಲಾಟ ಮಂಗಾ!
ನಾಟಕದಾಟ ಸುಖವಿಲ್ಲ ಮಂಗಾ! (ದಿ)
-ಟದ ದಾರಿಯನ್ನೀಗ ಹಿಡಿ ಮಂಗಾ!
ನಿನ್ನ ಚೇಷ್ಟೆಯ ಬಿಟ್ಟುಬಿಡು ಮಂಗಾ!
ಯ, ಭಯ, ಭಕ್ತಿ ಬಲಿಸು ಮಂಗಾ!
ಗೇಣು ಹೊಟ್ಟೆಗಾಗಿಲ್ಲ ಜನ್ಮ ಮಂಗಾ!
ಕೀಳಾಸೆಗಳನೆಲ್ಲ ಕೊಲ್ಲು ಮಂಗಾ!
ರ್ವ ಬಿಟ್ಟಾತ್ಮ ಧ್ಯಾನ ಮಾಡು ಮಂಗಾ!
ಮಂಗನಾಗ ರಂಗನಾಗುವ ಮಂಗಾ! (ರಂ)
-ಗಾ ನಿರಂಜನಾದಿತ್ಯಾತ್ಮ ಸಾರಂಗಾ!!!

ರಂಗನಾಥ ಸದಾ ಮಲಗಿಹುದೇಕಮ್ಮಾ? (ಭ)   2(925)

-ಗವದ್ಭಕ್ತರಿಷ್ಟ ಸೇವಾ ಸ್ವೀಕಾರಕ್ಕಮ್ಮಾ!
ನಾಮಸ್ಮರಣೆಗವ ವಶವಾಗಿಹಮ್ಮಾ! (ನಾ)
-ಥನಾದರೂ ಭಕ್ತಿಗೆ ಸೋತಿರುವನಮ್ಮಾ!
ರ್ವ ಕಲ್ಯಾಣವೊಂದೇ ಅವನಿಷ್ಟವಮ್ಮಾ!
ದಾಸರ ದಾಸನಾಗಿರುವನವನಮ್ಮಾ!
ರೆಯುವನೆಲ್ಲವನು ಇದಕಾಗಮ್ಮಾ!
ಕ್ಷ್ಮಿಯೂ ಅಲಕ್ಷ್ಯವಾಗಿರುತಿಹನಮ್ಮಾ! (ಯೋ)
-ಗಿಗಳವನನ್ನೇಳ ಬಿಡುವುದಿಲ್ಲಮ್ಮಾ! (ಬ)
-ಹು ಕರುಣಾಳು ರಂಗನಾಥಸ್ವಾಮಿಯಮ್ಮಾ!
ದೇವನಿವನೀರೇಳು ಲೋಕಗಳಿಗಮ್ಮಾ!
ಮಲಭವನಿಗಿವ ಜನಕನಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯಾನಂದಾ ರೂಪವಮ್ಮಾ!!!

ರಂಗನಾಥಗೆ ರಥೋತ್ಸವ ಮಾಡಯ್ಯಾ!   1(417)

ರ್ವ ಬಿಟ್ಟವನ ನೋಡು ನಿನ್ನಲ್ಲಯ್ಯಾ!
ನಾಮವನದನುದಿನ ನೆನೆಯಯ್ಯಾ!
ಳಕು, ಕೊಳಕಿನ ಭಾವ ಬಿಡಯ್ಯಾ! (ಆ)
-ಗೆಳೆಯಬೇಕು ರಥ ಬೀದಿಯಲಯ್ಯಾ!
ಥ ಪಂಚಭೂತಾತ್ಮಕ ದೇಹವಯ್ಯಾ! (ಯ)
-ಥೋಚಿತಲಂಕಾರವದಕಿರಲಯ್ಯಾ! (ಸ)
-ತ್ಸಂಘದಿಂದದಕೆ ದಿವ್ಯ ಕಾಂತಿಯಯ್ಯಾ!
ರ ಗುರು ರಂಗನಲ್ಲಿಡಬೇಕಯ್ಯಾ!
ಮಾಲೆಯಾತಗೆ ವಿಮಲ ಮನವಯ್ಯಾ!
ಕ್ಕಾ, ಬಜಂತ್ರಿಯೆಲ್ಲಾ ಭಜನೆಯಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ರಂಗನಾಥಯ್ಯಾ!!!

ರಂಗನಾಥನ ಪುಜೆ ನಿತ್ಯವಾಗುತಿದೆ! (ಮಂ)   4(1793)

-ಗನಾಟ, ನೋಟ, ಪರಮಾನಂದವಾಗಿದೆ!
ನಾಮಕರಣ ಪರಮಾತ್ಮನೆಂದಾಗಿದೆ! (ಪಂ)
-ಥ, ಪಿಶಾಚಿ ಹುಚ್ಚಿನಿಂದ ಕುಣಿಯುತಿದೆ!
“ನ ಗುರೋರಧಿಕಂ” ಬೋಧೆ ಕೇಳುತ್ತಲಿದೆ!
ಪೂಜ್ಯ ಪಾದ ಸೇವೆ ಕಾಣದಾಗುತ್ತಲಿದೆ! (ಸಂ)
-ಜೆಯಾರತಿ ಕರ್ಪೂರವಿಲ್ಲದಾಗುತಿದೆ!
ನಿತ್ಯ ನೈವೇದ್ಯದಾಸಕ್ತಿ ತಪ್ಪುತ್ತಲಿದೆ! (ಭೃ)
-ತ್ಯ ನಾನೆಂಬ ಭಾವ ಮಾಯವಾಗುತ್ತಲಿದೆ!
ವಾಸುದೇವನ್ಯನಲ್ಲವೆಂದನ್ನಿಸುತ್ತದೆ!
ಗುಣಾತೀತ ಸ್ಥಿತಿ ಪ್ರಾಪ್ತವಾಗುತ್ತಲಿದೆ!
ತಿರುಗಾಟವೀರೇಳು ಲೋಕದಲ್ಲಾಗಿದೆ! (ಎ)
-ದೆ ನಿರಂಜನಾದಿತ್ಯಾತ್ಮನಿಂದ ತುಂಬಿದೆ!!!

ರಂಗನಾಥನಾನಂದವೆಲ್ಲಾ! (ಅಂ)   4(2015)

-ಗನಾಮಣಿ ಲಕ್ಷ್ಮಿಯಿಂದೆಲ್ಲಾ!
ನಾಶವಾಗ್ವುದಧರ್ಮವೆಲ್ಲಾ! (ಮ)
-ಥನ ಮಾಳ್ಪಳ್ಭವಾಬ್ಧಿಯೆಲ್ಲಾ!
ನಾಥನ ತೋರುವಳೆಲ್ಲೆಲ್ಲಾ! (ಆ)
-ನಂದವಾಗ್ವುದು ಮಂದಿಗೆಲ್ಲಾ (ಮ)
-ದ ಮತ್ಸರಳಿವುದಾಗೆಲ್ಲಾ! (ಸ)
-ವೆಯುವುದು ಪ್ರಾರಬ್ಧವೆಲ್ಲಾ! (ಬ)
-ಲ್ಲಾ ನಿರಂಜನಾದಿತ್ಯನೆಲ್ಲಾ!!!

ರಂಗನಾಥನಿಗೊಂದು ಪುಷ್ಪವನ!   2(749)

ತಿ, ಸ್ಥಿತಿ, ಚ್ಯುತಿ ಜೀವನ ವನ!
ನಾಮ, ರೂಪ, ಕುಸುಮಗಳ ವನ!
ಳ ಕಿಲ್ಲದನಿಜಾನಂದ ವನ!
ನಿಶಿದಿನ ಭೇದವಿಲ್ಲದ ವನ!
ಗೊಂಬೆಯಾಟದ ಗುರುಲೀಲಾ ವನ!
ದುರಿತಕಂಜದಾತ್ಮ ಪ್ರೇಮ ವನ!
ಪುಣ್ಯ ಪಾಪಗಳಂಟಿಲ್ಲದ ವನ! (ನಿ)
-ಷ್ಪಕ್ಷಪಾತ ನೀತಿಯಮೋಘ ವನ!
ರಭಕ್ತರ ಹೃತ್ಕುಮುದ ವನ!
ಮೋ ನಿರಂಜನಾದಿತ್ಯಾಪ್ತ ವನ! (ವ)
ಅಥವಾ
ಜಾಪ್ತ ನಿರಂಜನಾದಿತ್ಯ ವನ!!!

ರಂಗನಾಯಕಿಗಾವ ರಂಗು? (ಅಂ)   4(1866)

-ಗನಾಮಣಿಗ ಗುಣ ರಂಗು!
ನಾರಾಯಣ ಸ್ಮರಣಾ ರಂಗು!
ಶಸ್ಸಿಗೆ ಕಾರಣಾ ರಂಗು!
ಕಿತ್ತು ಹೋಗದಾ ಶುದ್ಧ ರಂಗು!
ಗಾನದಲ್ಲಿ ತಲ್ಲೀನಾ ರಂಗು!
ರ ಶ್ರೀ ಪಾದ ಸೇವಾ ರಂಗು!
ರಂಗನಾಥ ಸಾಯುಜ್ಯ ರಂಗು! (ರಂ)
-ಗು, ನಿರಂಜನಾದಿತ್ಯಾ ರಂಗು!!!

ರಂಗನಾಯಕಿಗಿಷ್ಟ ಸದ್ಗುರು ಸೇವಾ! (ರಂ)   5(3191)

-ಗನಾಥನ ಸನ್ನಿಧಿಯಲ್ಲೇ ಆ ಸೇವಾ!
ನಾಮಸ್ಮರಣಾ ಪೂರ್ವಕವಾಗೀ ಸೇವಾ!
ದುಪತಿಯ ಗೀತಾಸಾರವಾ ಸೇವಾ!
ಕಿಡಿಕಿಡ್ಯಾಗ್ವಳ್ಕಂಡ್ರೆ ದುಃಸ್ವಭಾವವಾ! (ಯೋ)
-ಗಿರಾಜ ತಾ ಬಲ್ಲನವಳ ದುಃಖವಾ! (ಇ)
-ಷ್ಟ ಮೂರುತಿಯವಳಿಗೆ ಆ ಕೇಶವಾ!
ತ್ಸಂಗದಲ್ಲೇ ಕಳೆವಳು ಕಾಲವಾ! (ಸ)
-ದ್ಗುರು ದತ್ತನಿತ್ತ ಸ್ವಪ್ನ ದರ್ಶನವಾ! (ಇ)
-ರುತದೇ ಧ್ಯಾನದಲಿಚ್ಛಿಪಳೈಕ್ಯವಾ!
ಸೇವೆಯೇ ದಾರಿ ಸೇರಲಾ ಶ್ರೀ ಪಾದವಾ! (ದೇ)
-ವಾ, ನಿರಂಜನಾದಿತ್ಯಾನಂದ ಮಾಧವಾ!!!

ರಂಗರಾಜಾ ಸಾರಂಗ ರಾಜಾ!   4(1675)

ಡಿ ವಾದ ಬೇಡೆಂಬಾ ರಾಜಾ!
ರಾಜ್ಯಭಾರ ಕೈಕೊಂಬಾ ರಾಜಾ!
ಜಾತಿ, ಮತ ಒಂದೆಂಬಾ ರಾಜಾ!
ಸಾಮ, ದಾನ ಬೇಕೆಂಬಾ ರಾಜಾ!
ರಂಗು ಭೇದವೇಕೆಂಬಾ ರಾಜಾ!
ಣಾಧಿಪ ನಾನೆಂಬಾ ರಾಜಾ!
ರಾಗ, ದ್ವೇಷ ಸಾಕೆಂಬಾ ರಾಜಾ! (ರಾ)
-ಜಾ ನಿರಂಜನಾದಿತ್ಯ ರಾಜಾ!!!

ರಂಗುರಂಗಿನಂಗಿ ಮಾಯೆಗೆ! (ಅ)   6(4274)

-ಗುತ್ತಿದೆ ವಯಸ್ಸವಳಿಗೆ!
ರಂಗನಾಥ ಗಂಡವಳಿಗೆ! (ತ್ಯಾ)
-ಗಿಯೆಂದಾತ ಸಿಟ್ಟವಳಿಗೆ! (ಆ)
-ನಂದಿಸುವಾಸೆ ಅವಳಿಗೆ! (ರೇ)
-ಗಿಸ್ಬಾರ್ದೆಂದು ಗೊತ್ತವಳಿಗೆ!
ಮಾಡುವಳ್ಸೇವೆ ಅವನಿಗೆ! (ದ)
-ಯೆ ಅವಳಲ್ಲಿ ಅವನಿಗೆ! (ಆ)
-ಗೆ, ನಿರಂಜನಾದಿತ್ಯವ್ಳಾಗೆ!!!

ರಂಜನಾ ತುಳಸೀ ನಿರಂಜನಾ   2(606)

ಲಜಾನನಾ ಶ್ರೀ ನಿರಂಜನಾ!
ನಾರಾಯಣಾರವಿ ನಿರಂಜನಾ!
ತುರಿಯಾತೀತನಾ ನಿರಂಜನಾ! [ಬಾ]
-ಳ ನೇತ್ರನಾ ಶಿವ ನಿರಂಜನಾ!
ಸೀತಾವರಾರಾಮಾ ನಿರಂಜನಾ!
ನಿಜಾನಂದಾ ಗುರು ನಿರಂಜನಾ!
ರಂಗ ಶ್ರೀರಂಗನಾ ನಿರಂಜನಾ!
ಪ, ತಪಾಂಗನಾ ನಿರಂಜನಾ!
ನಾಮಾದಿತ್ಯಾನಂದಾ ನಿರಂಜನಾ!!!

ರಂಜನಾ! ಭವ ಭಂಜನಾ!! ಶ್ರೀನಿರಂಜನಾ || ಪ   1(143)

ಯದೇವನ ಜನ್ಮ ಪಾವನ, ಮೋಹನಾ || ಅ.ಪ. ||
ನಾಗಮರ್ದನ, ಗೋವಧನಾಪ್ತ ಪಾಲನ!
ಗವಂತನ ಧೀಮಂತನಾಪ್ತ ಶಾಂತನ! ೧
ವಾಸುದೇವನಾತ್ಮ ಜಾತನ, ಶ್ರೀಕಾಂತನ!
ಭಂಡಕಂಸನ ಕೊಂದ ದೇವನ ಕೃಷ್ಣನ! ೨
ರಾಸಂಧನಾ, ವಧಿಸಿದಾತನಿಷ್ಟನ!
ನಾಶ ನರಕನಾರ್ತನಾಥನ ಗೋಪನ! ೩
ಶ್ರೀಧರನ, ರಾಧಾನಂದನ, ಮಾಧವನ!
ನಿಧಿಗರಸನ, ಕೃಷ್ಣನಾ, ಸುದರ್ಶನಾ! ೪
ರಂಗನ, ಪಾಂಡುರಂಗನ, ನಂದಕಂದನ!
ಗನ್ನಾಥನ ಭಕ್ತಿಪ್ರೀತನ, ಶ್ಯಾಮನ!
ನಾಥನೀನೆನಗೆಂದು ನಿತ್ಯ ಪ್ರಾರ್ಥಿಪೆನಾ!!!

ರಕ್ಕಸನೂ ನೀನೇ, ಕಕ್ಕಸು ಹುಳು ನೀನೇ! [ಒ]   2(891)

-ಕ್ಕಲಿಕ್ಕುವ ಆ ಪ್ರಳಯಾಂತಕನೂ ನೀನೇ!
‘ಸರ್ವಂ ಬ್ರಹ್ಮಮಯ’ಮೆಂಬವಧೂತ ನೀನೇ!
ನೂರಾರು ಮತಸ್ಥಾಪಕನಾದವ ನೀನೇ!
ನೀನಾಡುವಾಟ ಹೊಡೆದಾಟವೆಲ್ಲಾ ನೀನೇ! (ನಾ)
-ನೇನಿದಕಂಟಿಲ್ಲೆಂದಿರ್ಪ ಸರ್ವಾತ್ಮ ನೀನೇ!
ರ್ಮ, ಧರ್ಮ ಬೇಕೆಂಬ ಧರ್ಮಕರ್ತ ನೀನೇ! (ಸಿ)
-ಕ್ಕ ಹಾಕಿ ಮಾಯೆಯಲಿ ಬಂಧಿಸಿದ್ದೂ ನೀನೇ!(ಹಾ)
-ಸು ಹೊಕ್ಕಾಗಿ ಸೃಷ್ಟಿ ಬಟ್ಟೆಯಾದವ ನೀನೇ!
ಹುಸಿ, ದಿಟವೆಂಬ ಭಾವ ನಟನೂ ನೀನೇ! (ಹಾ)
-ಳೂಟ ಸಂಸಾರದೂಟವೆಂದುಂಬುದೂ ನೀನೇ!
‘ನೀ’ ‘ನಾ’ ನೆಂಬುದನಳಿಸುವಾ ಗುರು ನೀನೇ! (ನಾ)
-ನೇ, ನಿರಂಜನಾದಿತ್ಯ ಪರಮಾತ್ಮ ನೀನೇ!!!

ರಕ್ಷಣಾಭಾರ ಗುರುದೇವನಿಗೆ! (ದ)   4(1859)

-ಕ್ಷಯಾಗ ವಿಧ್ವಂಸ ವಿಶ್ವೇಶ್ವರಗೆ! (ಗ)
-ಣಾಧಿಪನಪ್ಪ ಗಿರಿಜಾಧವಗೆ!
ಭಾಗೀರಥಿಯಾಪ್ತ ಸದಾಶಿವಗೆ! (ವ)
-ರ ಗುರುದತ್ತ ಸ್ವರೂಪಾದವಗೆ!
ಗುಣಾತೀತ ಗುರುಗುಹೇಶ್ವರಗೆ! (ವ)
-ರುಣೇಂದ್ರಾದಿ ವಂದ್ಯ ಯೋಗೀಶ್ವರಗೆ!
ದೇವಿಂದ್ರಾಣಿಯಾನಂದ ಸುಂದರಗೆ!
ಸುಧಾದ್ಯೆಲ್ಲಾ ಲೋಕ ಪಾಲಕಗೆ!
ನಿಶ್ಚಲ ಭಕ್ತೀಷ್ಟ ಪ್ರದಾತನಿಗೆ!
ಗೆಳೆಯಾ ನಿರಂಜನಾದಿತ್ಯನಿಗೆ!!!

ರಕ್ಷಾಬಂಧನವಾಗಬೇಕಮ್ಮಾ! (ಸಾ)   4(1480)

-ಕ್ಷಾತ್ಕಾರವಿದರ ಗುರಿಯಮ್ಮಾ! (ಸಂ)
-ಬಂಧಂತರ್ಯಾಮಿಯದಾಗಲಮ್ಮಾ!
ರಿಸಿ ನಿತ್ಯ ಸುಖಿಯಾಗಮ್ಮಾ!
ಶ್ವರೇಂದ್ರಿಯ ಸಂಬಂಧವಮ್ಮಾ!
-ವಾಸುದೇವಾತ್ಮ ಸ್ವರೂಪನಮ್ಮಾ! (ಯೋ)
-ಗದಿಂದದ ಸಾಧಿಸಬೇಕಮ್ಮಾ!
ಬೇಕಿದಕೆ ಶ್ರದ್ಧಾ, ಭಕ್ರಿಯಮ್ಮಾ!
ರ್ಮ, ಧರ್ಮ ಬಿಡಬಾರದಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾದರ್ಶಮ್ಮಾ!!!

ರಕ್ಷಾಬಂಧನವೆಂಬುದೊಂದು ಸಂಬಂಧ!   4(2150)

ಕ್ಷಾತ್ರ ತೇಜ ಪರಿಪೂರ್ಣವಾ ಸಂಬಂಧ!
ಬಂಧು, ಬಾಂಧವ ನೀನೆಂಬುದಾ ಸಂಬಂಧ!
ನ, ಕನಕಾಪೇಕ್ಷೆಗಲ್ಲಾ ಸಂಬಂಧ!(ಅ)
-ನವರತ ಶ್ರೀಪಾದೈಕ್ಯಕ್ಕಾ ಸಂಬಂಧ!
ವೆಂಕಟೇಶ್ನನನ್ಯ ಭಕ್ತಿಗಾ ಸಂಬಂಧ! (ಅಂ)
-ಬುಜಾಸನೆಯಂತಾಗಲಿಕ್ಕಾ ಸಂಬಂಧ (ಇ)
-ದೊಂದಾದರ್ಶದ ಗುರು ಶಿಷ್ಯ ಸಂಬಂಧ!
ದುರ್ಮದ ಮರ್ದನೆಗಾ ದಿವ್ಯ ಸಂಬಂಧ!
ಸಂಸಾರ ಸಾಗರ ದಾಟಲ್ಕಾ ಸಂಬಂಧ!
ಬಂಧನವಿಲ್ಲದಾನಂದಕ್ಕಾ ಸಂಬಂಧ!
ರ್ಮ ನಿರಂಜನಾದಿತ್ಯಾತ್ಮ ಸಂಬಂಧ!!!

ರಚನೆ ಮೂಲ, ವ್ಯಾಖ್ಯಾನ ಜಾಲ!   6(4334)

ತುರೋಪಾಯ ತೀರಿಸ್ಲಿಕ್ಸಾಲ!
ನೆನೆನೆನೆದಾಗ್ಬಾಲ ಗೋಪಾಲ!
ಮೂರ್ಲೋಕಕ್ಕಾಗ ನೀನು ಭೂಪಾಲ!
ಯವಾಗಬೇಕು ಶಿಶುಪಾಲ!
ವ್ಯಾಧಿಹರಕ್ಕಿದೀಗ ಸಕಾಲ!
ಖ್ಯಾತಿ ಮತ್ತೆ ನಿನಗೆಲ್ಲಾ ಕಾಲ!
ರನಿಗಾಗ ಸುಭದ್ರಾ ಮಾಲ!
ಜಾದುಗಾರನದ್ದಿದೆಲ್ಲಾ ಲೀಲ! (ಭಾ)
-ಲ ನಿರಂಜನಾದಿತ್ಯ ಗೋಪಾಲ!!!

ರಚಿಸಿದನು ಪತಿದೇವ ಗೃಹವೊಂದಾನಂದದಿಂದ!   1(67)

ಇಚ್ಛೆ! ನಿನ್ನಂತಿರಲಾಡಳಿತ, ನಿನ್ನಾನಂದವೆಂದ!
ಶುಚಿಯಾಗದನಿರಿಸಲಿಕೆ ಸವತಿಯನು ತಂದ!
ಮೆಚ್ಚಿದೆನು ನಿನಗೆಂದು ಪ್ರಾಣೇಶ್ವರಿಗವನಂದ!
ಸತಿಯರಿಬ್ಬರಲೆಮಗೆ ಮಕ್ಕಳು ಹತ್ತಾನಂದ!
ಪ್ರೀತಿಯಲೆಲ್ಲರೊಂದಾಗಿರಬೇಕೆಂದು ಆವನಂದ!
ಪತಿಯಾಜ್ಙೆ ನಡೆಯದಂತಾಯ್ತು ಕಾಲಗತಿಯಿಂದ!
ಸತಿಯರಿಬ್ಬರಲಿಲ್ಲವಾಯ್ತು ಒಮ್ಮತದ ಅಂದ!
ಮಕ್ಕಳಿಗೆ ಒಬ್ಬೊಬ್ಬರಿಗೆ ಆಯ್ತೊಂದೊಂದು ಆನಂದ!
ಸಕ್ಕರೆಯಂತಿರಬೇಕಾದಕ್ಕರೆ ಹೋಯ್ತಿದರಿಂದ!
ಚೊಕ್ಕಟದ ಪ್ರಾಣೇಶ್ವರಿಗಾಯ್ತು ಕಷ್ಟವದರಿಂದ!
ಅಕ್ಕನಿಗದರಿಂದಾಯ್ತು ದೂರ ಪತಿಯ ಸಂಬಂಧ!
ಯಜಮಾನನಿಗೆ ಆಯ್ತು ಅವನತಿಯಿದರಿಂದ!
ನಿಜಾನಂದ ಹೋಗಾಯ್ತವಗೆ ಜೀವನ ಭವಬಂಧ!
ಯಜಮಾನಿಯರಿಬ್ಬರೊಂದಾಗರೇಕಾಯ್ತದರಿಂದ!
ನಿಜ ಸುತರೊಪಿಗೆಯಿಂದಾಯ್ತು ನಿರಂಜನಾನಂದ!!!

ರಜಾದಲ್ಲಿ ಬಾರದವ, ಸಜಾದಲ್ಲಿ ಬಂದಾನಾ?   6(3743)

ಜಾತಿ, ನೀತಿ ಬಿಟ್ಟ ಮಾತ್ರಕ್ಕೆ ಮುಖ್ಯಸ್ಥನಾದಾನಾ? (ಉ)
-ದಯದಲ್ಲಿ ಏಳದವ ಕತ್ತಲೆಯಲ್ಲೆದ್ದಾನಾ? (ಇ)
-ಲ್ಲಿಲ್ಲದ ಪರಮಾತ್ಮ ಪರಲೋಕದಲ್ಲಿದ್ದಾನಾ!
ಬಾಯಿಗೆ ಹಾಕಿದ್ರೂ ತಿನ್ನದವ ತಾನೇ ತಿಂದಾನಾ?
ತಿಸುಖಾಸಕ್ತನಾಗಿರ್ಪವ ಯತಿಯಾದಾನಾ?
ಮೆ, ಶಮೆಗಳಿಲ್ಲದವ ವೇದಾಂತಿಯಾದಾನಾ?
ಸ್ತ್ರ ಬಿಚ್ಚಿ ಬೆತ್ಲೆ ನಿಂತವ ಅವಧೂತಾದಾನಾ?
ರ್ವ ಸಂಗ ಪರಿತ್ಯಾಗಿ ಸಂಸಾರಿ ಮತ್ತಾದಾನಾ?
ಜಾಮಾತನಾಗದವ ಮಾವನೆಂದಾದ್ರೂ ಆದಾನಾ?
ಯೆಯಿಲ್ಲದವ ಧರೆಗರಸ ತಾನಾದಾನಾ? (ಗ)
-ಲ್ಲಿಗೇರಿಸಿದ್ರೂ ಸದ್ಭಕ್ತ ಗುರುನಿಂದೆ ಮಾಡ್ಯಾನಾ?
ಬಂಧು ಬಾಂಧವರೆಂದು ಮುಕುಂದ ಅಂಟಿಕೊಂಡಾನಾ?
ದಾಶರಥಿ ರಾಮ ರಾವಣನೆಂದಾದ್ರೂ ಆದಾನಾ?
ನಾರಾಯಣ ನಿರಂಜನಾದಿತ್ಯ ತಾನಲ್ಲೆಂದಾನಾ???

ರತ್ನಗಂಬಳಿ ನೋಟಕ್ಕಾನಂದ! (ಯ)   5(2789)

-ತ್ನ ಫಲಿಸಿದಾಗ ಮೌನಾನಂದ!
ಗಂಟೆ ಬಾರ್ಸಿದಾಗ ಪೂಜಾನಂದ!
ಯಲಾಡಂಬರ ಮಿಥ್ಯಾನಂದ! (ಬಾ)
-ಳಿಗೆ ತೃಪ್ತಿಯೇ ಮಹದಾನಂದ!
ನೋವು ಬಂದಾಗ ಸಹನಾನಂದ! (ಭಂ)
-ಟ ರಾಮನಿಗಾದ್ರೆ ಬ್ರಹ್ಮಾನಂದ! (ಹೊ)
-ಕ್ಕಾಗ ಕಾಮಬಾಣೇಂದ್ರಿಯಾನಂದ!
ನಂದಕಂದನ ಗೀತಾತ್ಮಾನಂದ!
ತ್ತ ನಿರಂಜನಾದಿತ್ಯಾನಂದ!!!

ರಮಣ ಗೀತೆ ರಮಣೀಯ!   4(1549)

ಹಿಮೆ ಚಿರ ಸ್ಮರಣೀಯ! (ಗು)
-ಣವಿದರದವರ್ಣನೀಯ!
ಗೀರ್ವಾಣಿ ಸದಾ ಪೂಜನೀಯ! (ಗೀ)
-ತೆಯಿದೆಲ್ಲರಿಗೂ ಆತ್ಮೀಯ! (ಸಾ)
-ರದರದಮೃತ ಪಾನೀಯ!
ಲಿನ ದಾಹ ಶೋಚನಿಯ! (ವಾ)
-ಣೀಶ್ವರನಾಜ್ಞಾ ಪಾಲನೀಯ!
ಮ ನಿರಂಜನಾದಿತ್ಯೇಯ!!!

ರಮಣಗೆ ಕೋಪ, ರಮಣಿಗೆ ತಾಪ!   4(2188)

ದಾಂಧ ಕನ್ಯಾಪಿತನಧ್ವರಾಲಾಪ! (ಗ)
-ಣನಾಯಕ ವೀರಭದ್ರನ ಪ್ರತಾಪ! (ಗಂ)
-ಗೆ, ಭಾಗೀರಥಿಯಾತ್ಮೀಯ ಅನುಕಂಪ!
ಕೋಪಾಗ್ನಿಗಾಹುತಿಯಾದ ದಕ್ಷ ಭೂಪ!
ರ್ವತೇಶನಲ್ಲುದಿಸಿತೊಂದು ದೀಪ! (ಅ)
-ರಸಿ ಬಂದನಲ್ಲಿಗೆ ಕೈಲಾಸಾಧಿಪ!
ಗಳನಿತ್ತವನು ಹಿಮಾಚಲಾಧಿಪ! (ರಾ)
-ಣಿಯೊಡಗೂಡ್ಯಾದನು ಗಿರಿಜಾಧಿಪ! (ಕಾ)
-ಗೆ ಸರ್ವರನ್ನಾಸಚರಾಚರಾಧಿಪ!
ತಾಳ, ಮೇಳ, ಭಜನಾನಂದಾತ್ಮಾಧಿಪ!
ರಾತ್ಪರ ನಿರಂಜನಾದಿತ್ಯಾಧಿಪ!!!

ರಮಣಿಗಾಯ್ತು ಪರಿತಾಪ!   2(904)

ಲಿನಾಸೆಗಳಿಂದಾ ತಾಪ! (ತ)
-ಣಿಯದಿರುವುದೆಂತಾ ತಾಪ? (ಯೋ)
-ಗಾನಂದಿಂದ ಶಾಂತಾ ತಾಪ! [ಹೋ]
-ಯ್ತು, ಗುರುಕೃಪೆಯಿಂದಾತಾಪ!
ಲವು ಜನ್ಮದಿಂದಾ ತಾಪ! [ಪ]
-ರಿಹಾರ ಹರಿಯಿಂದಾ ತಾಪ!
ತಾರಕ ನಾಮಾತ್ಮ ಪ್ರತಾಪ! (ತಾ)
-ಪ, ನಿರಂಜನಾದಿತ್ಯ ದೀಪ!!!

ರವದೋಸೆ ತಿನ್ಬೇಕೆಂದ್ಲಮ್ಮ! (ಧ)   4(2496)

-ವ ಶ್ರೀ ಕೃಷ್ಣನಿಗೆ ಆ ಅಮ್ಮ!
ದೋಷವಾಗದಿದ್ರಿಂದೆಂದ್ಲಮ್ಮ! (ದೋ)
-ಸೆ ಕೂಡ್ಲೇ ತಂದುಬಿಟ್ಲಾ ಅಮ್ಮ!
ತಿನ್ನಿಸಿಯೆ ಬಿಟ್ಟಳದಮ್ಮ! (ಏ)
-ನ್ಬೇಕೀಗ ಕುಡೀಲಿಕ್ಕೆಂದ್ಲಮ್ಮ! (ಏ)
-ಕೆಂಬಷ್ಟ್ರಲ್ಲಿ “ಟೀ” ತಂದಳಮ್ಮಾ! (ಕ)
-ದ್ಲದೇ ಹಿಡ್ಕೊಂಡು ನಿಂತಿದ್ಲಮ್ಮ! (ಬೊ)
-ಮ್ಮಾ, ನಿರಂಜನಾದಿತ್ಯೆಂದ್ಲಮ್ಮ!!!

ರವಿಕಿರಣ ಶಶಿಗಾಭರಣ!   4(1429)

ವಿಶ್ವಕರ್ಮನಿಗೆ ಪ್ರಾಣಾಭರಣ!
ಕಿರಾತ ಬಿಲ್ಲಿಗೆ ಬಾಣಾಭರಣ!
ಣಧೀರನಿಗೆ ಧೈರ್ಯಾಭರಣ! (ಗ)
-ಣಪತಿಯಪ್ಪಗೆ ಯೋಗಾಭರಣ!
ಶಿಕಲಾಂಬೆಗೆ ಖಡ್ಗಾಭರಣ!
ಶಿಖಿವಾಹನಗೆ ಶೂಲಾಭರಣ!
ಗಾನ ಶಾರದೆಗೆ ವೀಣಾಭರಣ!
ಕ್ತ ಮಾರುತಿಗೆ ನಾಮಾಭರಣ!
ಘುಪತಿಗಾತ್ಮಾರಾಮಾಭರಣ! (ತ್ರಾ)
-ಣ ನಿರಂಜನಾದಿತ್ಯಾತ್ಮಾಭರಣ!!!

ರವಿಯುದಯಕ್ಕರುಣ ಕಿರಣವೇ ಸಾಕ್ಷಿ!   6(3821)

ವಿಧಿವಶವಾದುದಕ್ಕೆ ಶ್ವಾಸ ನಾಶಸಾಕ್ಷಿ!
ಯುಕ್ತಾ ಯುಕ್ತ ಹೀನತೆಗೆ ಬುದ್ಧಿ ಭ್ರಮೆ ಸಾಕ್ಷಿ!
ಮೆ, ಶಮೆಯಿಲ್ಲದನಾಚಾರಿಗವ್ನೇ ಸಾಕ್ಷಿ!
ಮ, ನಿಯಮ ಸಿದ್ಧಿಗವ್ರವ್ರ ಮನ ಸಾಕ್ಷಿ! (ಚೊ)
-ಕ್ಕಟವಾಗಿ ತಾನಿರ್ಪೂದಕ್ಕಪಕ್ಕವೇ ಸಾಕ್ಷಿ!
ರುಚಿಯೂಟವೆಂಬುದಕ್ಕೆ ಅತಿಥಿಯೇ ಸಾಕ್ಷಿ! (ಗು)
-ಣಹೀನನೆಂಬುದಕ್ಕೆ ಗಣಹೀನನೇ ಸಾಕ್ಷಿ!
ಕಿವಿ, ಬಾಯ್ಮುಚ್ಚಿದಕ್ಕೆ ಆತ್ಮಸ್ಥಿತಿಯೇ ಸಾಕ್ಷಿ!
ಮೇಶೋಮೇಶರೆಂಬುದಕ್ಕವ್ರ ವೃತ್ತಿ ಸಾಕ್ಷಿ! (ಜಾ)
-ಣರೆಂಬುದಕ್ಕವರವರ ಜಾಣ್ಮೆಯೇ ಸಾಕ್ಷಿ!
ವೇ .................................!
ಸಾಮೀಪ್ಯ, ಸಾರೂಪ್ಯಾದಿಗೆಲ್ಲಾ ಸಾಧನೆ ಸಾಕ್ಷಿ! (ಸಾ)
-ಕ್ಷಿ ನಿರಂಜನಾದಿತ್ಯಾನಂದ ತಾ ಸರ್ವ ಸಾಕ್ಷಿ!!!

ರಾಕ್ಷಸ ಬಂದ ಏನೇನೋ ತಿಂದ! [ಲ]   5(2928)

-ಕ್ಷಣವಾಗಿದೆ ಸನ್ನಿಧಿಯೆಂದ!
ತ್ಪುರುಷರ ಪೀಡಿಸೆನೆಂದ!
ಬಂಡಾಯವನ್ನು ದಂಡಿಪೆನೆಂದ!
ತ್ತಾತ್ರೇಯನಿಗಾಳು ತಾನೆಂದ!
ಕನಾಥ ಲೋಕಕ್ಕವನೆಂದ!
ನೇರ ದಾರೀ ಗುರುವಿನದ್ದೆಂದ!
ನೋಡಿ ಧನ್ಯನಾದೆ ನಾನೀಗೆಂದ!
ತಿಂದೆ ಪ್ರಸಾದವಾತನದ್ದೆಂದ!
ತ್ತ ನಿರಂಜನಾದಿತ್ಯಾನಂದ!!!

ರಾಕ್ಷಸ ಬರ್ತಾನೆಂದಳಬೇಡ!   5(2916)

ಕ್ಷಯವಾಗ್ವುದರಿಷ್ಟಳಬೇಡ!
ದಾ ನಾಮಜಪ ಮಾಡ್ದಿರ್ಬೇಡ!
ಲವದರಿಂದ! ಅಳಬೇಡ! (ವಾ)
-ರ್ತಾಪತ್ರವನ್ನೆಂದೂ ಓದಬೇಡ!
ನೆಂಟ ನೀಲಕಂಠ! ಮರೆಯ್ಬೇಡ!
ಕ್ಷಿಣೆ, ದಾನಕ್ಕೆ ಕೈಯೊಡ್ಬೇಡ! (ಕ)
-ಳಕಳಿಯ ಪ್ರಾರ್ಥನೆ ಬಿಡ್ಬೇಡ!
ಬೇಸರವೆಂದೂ ಪಟ್ಕೊಳ್ಳಬೇಡ! (ಬಿ)
-ಡ, ನಿರಂಜನಾದಿತ್ಯ ಕೈ ಬಿಡ!!!

ರಾಕ್ಷಸರುಪಟಳ ಹೆಚ್ಚ ಬೇಕಯ್ಯಾ!   1(381)

ಕ್ಷಯಕಾರಿ ಈಶ್ವರ ಬರಬೇಕಯ್ಯಾ!
ತ್ಯ ಪರಿಪಾಲನೆಯಾಗಬೇಕಯ್ಯಾ! (ಆ)
-ರು, ದುಃಖಿಸಬೇಕಾಗಿಲ್ಲ ; ನಂಬಿರಯ್ಯಾ!
ರಮಾತ್ಮನೆಲ್ಲವನು ಬಲ್ಲನಯ್ಯಾ! (ಆ)
-ಟವನದು ಇದೆಲ್ಲವೂ ನೋಡಿರಯ್ಯಾ! (ಆ)
-ಳವನಾದರೂ ಅರಿಯದಿಹರಯ್ಯಾ!
ಹೆದರುವಗತ್ಯ ಭಕ್ತಗಿಲ್ಲವಯ್ಯಾ! (ಅ)
-ಚ್ಚರಿಯ ತೋರಿ ರಕ್ಷಿಪನವನಯ್ಯಾ!
ಬೇಕು ಅಚ್ಚಳಿಯದ ಭಕ್ತಿಭಾವಯ್ಯಾ!
ರುಣಾಕರನಾತನಾಗಿರ್ಪನಯ್ಯಾ! (ಅ)
ಯ್ಯಾ! ನಿರಂಜನಾದಿತ್ಯ ರುದ್ರತಾನಯ್ಯಾ!!!

ರಾಗ, ದ್ವೇಷ ಜಗದೋದ್ದಾರನಿಗಿಲ್ಲ!   6(3846)

ರ್ವವೆಂಬುದವನಿಗೆಳ್ಳಷ್ಟೂ ಇಲ್ಲ! (ಉ)
-ದ್ವೇಗ, ಉದ್ರೇಕಗಳು ಅವನಿಗಿಲ್ಲ!
ಡ್ರಿಪುಗಳನ್ನಾತ ಜೈಸಿಹನೆಲ್ಲಾ!
ರಾ, ಜನ್ಮದುಃಖ ಅವನಿಗಿಲ್ಲ!
ತಿ, ಸ್ಥಿತಿಗೆ ಕಾರಣ ಅವ್ನೇ ಎಲ್ಲ!
ದೋಷಾರೋಪಣೆಗವನು ಪಾತ್ರನಲ್ಲ! (ಶ್ರ)
-ದ್ದಾ, ಭಕ್ತಿಯಿಂದ ಪೂಜಿಸ್ಬೇಕವ್ನನ್ನೆಲ್ಲಾ!
ಕ್ಕಸರನ್ನೊಕ್ಕಲಿಕ್ಕುವವಾ ಮಲ್ಲ!
ನಿತ್ಯ, ಸತ್ಯಾನಂದ ಸ್ವರೂಪಾ ಪ್ರಪುಲ್ಲ!
ಗಿರಿಯನ್ನೆತ್ತಿಂದ್ರನ ಮುರಿದಾ ಗೊಲ್ಲ! (ಬ)
-ಲ್ಲ ನಿರಂಜನಾದಿತ್ಯಾ ಲೀಲೆಯನ್ನೆಲ್ಲ!!!

ರಾಗ, ದ್ವೇಷ ರಹಿತಾ ರಘುರಾಮ! (ಸಂ)   4(1968)

-ಗ ಸೀತೆಯದವಗೆ ನಿತ್ಯರಾಮ! (ಸ)
-ದ್ವೇದ, ವೇದಾಂತ ಸಾರಾ ಸೀತಾರಾಮ!
ಡ್ರಿಪು ನಿಗ್ರಹಾಂಜನೇಯಾ ರಾಮ! (ಭ)
-ರತ ಬಂಧು, ದಯಾಸಿಂಧು ಶ್ರೀರಾಮ!
ಹಿತಕಾರೀಶ್ವರ ಪ್ರಿಯಾ ಶ್ರೀ ರಾಮ!
ತಾರಕನಾಮ ರಘುವೀರಾ ರಾಮ! (ವ)
-ರಗುರು ಸ್ವರೂಪಾನಂದಾ ಶ್ರೀರಾಮ! (ರ)
-ಘುಪತಿ ರಾಘವ ಜೈ ರಾಜಾರಾಮ!
“ರಾಮ ರಾಮ ಜಯ ಜಾನಕಿ ರಾಮ”! (ರಾ)
-ಮ ನಿರಂಜನಾದಿತ್ಯಾನಂದಾರಾಮ!!!

ರಾಗ, ದ್ವೇಷವಿಲ್ಲದ ಮನುಜಾರಾಮ! (ಯೋ)   4(2312)

-ಗ

ಮ ಭಾರವನದೆಂದವಾರಾಮ! (ಉ)
-ದ್ವೇಅ ಪವೃತ್ತಿಯಿಲ್ಲದವನಾರಾಮ!
ಪುಗಳನ್ನು ಗೆದ್ದವನಾರಾಮ!
ವಿಅಯವಾಸನೆಯಳಿದವಾರಾಮ! (ಎ)
-ಲ್ಲಅಲ್ಲೂ ತಾನೆಂದರಿತವನಾರಾಮ!
ತ್ರೇಯನದ್ವಿತೀಯ ಭಕ್ತಾರಾಮ!
ಅ, ಮತ್ಸರಗಳಿಲ್ಲದವಾರಾಮ! (ತ)
-ನುಆವ ಮರೆತು ಬಾಳಿದವಾರಾಮ!
ಜಾಇ, ಮತ ಭಿನ್ನಭಾವಾತೀರಾರಾಮ!
ರಾ

ವ ಸಖನಾದರ್ಶದವಾರಾಮ! (ರಾ)
-ಮನಿರಂಜನಾದಿತ್ಯನೆಂದವಾರಾಮ!!!

ರಾಗ-ಭೀಂ ಪಲಾಸ್‍-ರೂಪಕತಾಳ    1(297)

ಪ್ರೇಮನಾಮ ಶ್ರೀರಾಮ!
ಮನಕಾ ನಾಮಾ (ಆ) ರಾಮ!
ನಾಶಕಾಮ ಶ್ರೀರಾಮ! (ಅ)
ಸಾಧಕನಿದರಿತರಾನಂದ!
ದಾಯವಾದಕಿದಲಭ್ಯಾನಂದ!
ನಂಬಿದ ಪಾರ್ಥ ಕಂಡನಾನಂದ!
ದತ್ತ ನಿರಂಜನಾದಿತ್ಯಾನಂದ!!!

ರಾಘವಾ ನೀನೇ ಆ ಯಾದವ! (ಅ)   5(3011)

-ಘನಾಶಿನೀ ರಾಘವಾ ಯಾದವ!
ವಾದ, ಭೇದಗಳಿಲ್ಲದವ!
ನೀರಿ, ರೀತಿಗಳೊಪ್ಪಿದವ!
ನೇರ ದಾರಿ ಭಜನೆಂಬವ!
ತ್ಮಸ್ವರೂಪನಾಗಿರ್ಪವ!
ಯಾರಿಗೂ ಆಜ್ಞೆ ಮಾಡದವ!
ತ್ತಾತ್ರೇಯಗಾಪ್ತನಾದವ! (ಅ)
-ವ ನಿರಂಜನಾದಿತ್ಯಾದವ!!!

ರಾಘವೇಂದ್ರನೆನ್ನಂತರಾತ್ಮ!   5(2999)

ನ ಗುಣದಾತ ಮಹಾತ್ಮ! (ದೇ)
-ವೇಂದ್ರಾದಿಗಳೂ ಅವನಾತ್ಮ!
ದ್ರವಿಸದಿಂದ್ರಿಯ ಜಿತಾತ್ಮ!
ನೆನೆಯಬೇಕಾ ಪವಿತ್ರಾತ್ಮ! (ತ)
-ನ್ನಂತೆಲ್ಲರನ್ನೂ ಕಾಣುವಾತ್ಮ!
ತ್ವವರಿತು ಬಾಳುವಾತ್ಮ!
ರಾಮ ಸೇವಕಾಂಜನೇಯಾತ್ಮ! (ಆ)
-ತ್ಮ ತಾ ನಿರಂಜನಾದಿತ್ಯಾತ್ಮ!!!

ರಾಜಕೀಯ ನೀನಗೇಕಮ್ಮಾ?   3(1004)

ನಸೇವೆ ಇದ್ದಲ್ಲಾಗ್ಲಮ್ಮಾ!
ಕೀಳು, ಮೇಲು ನೋಡದಿರಮ್ಮಾ!
ತಿಪತಿಯಾಜ್ಞೆ ಅದಮ್ಮಾ!
ನಿನ್ನದು ಮಾತೆಯ ಸ್ಥಾನಮ್ಮಾ! (ತ)
-ನಯರು ನಿನಗೆಲ್ಲರಮ್ಮಾ! (ಯೋ)
-ಗೇಶ್ವರಿ ನೀನೆಂದರಿಯಮ್ಮಾ!
ರ್ಮ, ಧರ್ಮದಿಂದಾಲಭ್ಯಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯಾಗಮ್ಮಾ!!!

ರಾಜಕೀಯ ರಂಗ ಶಾಂತಿ ಭಂಗ!   4(1428)

ಗಳ ಕದನ ಸಂಗಾ ರಂಗಾ!
ಕೀರ್ತಿಯಾಸೆಗೊದ್ದಾಡುವಾ ರಂಗ!
ಮ, ನಿಯಮವಿಲ್ಲದಾ ರಂಗ!
ರಂಬೆಯೂರ್ವಶಿ ನೃತ್ಯದಾ ರಂಗ! (ಯೋ)
-ಗ ಜೀವನಕ್ಕನಾದರಾ ರಂಗ!
ಶಾಂತಿ ಬಾಯಿಮೂತಾಗಿರ್ಪಾ ರಂಗ!
ತಿತಿಕ್ಷೆಯನುಪೇಕ್ಷಿಪಾ ರಂಗ!
ಭಂಡಾರ ಭರ್ತಿ ಮಾಡುವಾ ರಂಗ! (ಸೊ)
-ಗ ನಿರಂಜನಾದಿತ್ಯಾತ್ಮರಂಗ!!!

ರಾಜರಾಜೇಶ್ವರಿ ನಿರಂಜನೇಶ್ವರಿ!   2(615)

ಯ ಚಾಮುಂಡೇಶ್ವರಿ ಶಿವ ಶಂಕರಿ!
ರಾಮೇಶ್ವರೀ ಶ್ರೀ ವರ ಪರಮೇಶ್ವರಿ! (ಅ)
-ಜೇಯೇಶ್ವರಿ ತ್ರಿಭುವನೇಶ್ವರೇಶ್ವರಿ! (ಈ)
-ಶ್ವರವಾಮಭಾಗೇಶ್ವರಿ ವಸುಂಧರಿ! (ಗಿ)
-ರಿರಾಜ ಕುಮಾರಿ, ಯೋಗಿರಾಜೇಶ್ವರಿ!
ನಿಜಗುಣೇಶ್ವರಿ, ವಿಜಯ ಶಂಕರಿ!
ರಂಗಸಾರಂಗೇಶ್ವರಿ, ಗಗನೇಶ್ವರಿ!
ಯ ಜಗದೀಶ್ವರಿ, ಹೃದಯೇಶ್ವರಿ! (ತ್ರಿ)
-ನೇತ್ರೇಶ್ವರಿ, ಮಾಧುರಿ, ಮಾತೃ ಶಂಕರಿ! (ಈ)
-ಶ್ವರಿ ಶಾಖಂಬರಿ, ಅರಿಭಯಂಕರಿ! (ಹ)
-ರಿ ನಿರಂಜನಾದಿತ್ಯರ್ಧ ನಾರೀಶ್ವರಿ!!!

ರಾಜರಾಜೇಶ್ವರಿ ಹೇಗಿಹಳಮ್ಮಾ?   1(427)

ಗ ಮೂರಲ್ಲೂ ವ್ಯಾಪಿಸಿಹಳಮ್ಮಾ!
ರಾರಾಜಿಪ ದಿವ್ಯ ರೂಪವದಮ್ಮಾ! (ಅ)
-ಜೇಯಾತ್ಮನೇ ಈ ರೂಪಾಗಿಹಳಮ್ಮಾ! (ನ)
-ಶ್ವರದ ಸಂಸಾರಿಯವಳಲ್ಲಮ್ಮಾ! (ಅ)
-ರಿ ಭಯಂಕರಿ ರಾಜೇಶ್ವರಿಯಮ್ಮಾ!
ಹೇರಂಬ ಗಣಪನ ಮಾತೆಯಮ್ಮಾ!
ಗಿರೀಶ ಶಿವನರ್ಧಾಂಗೀಕೆಯಮ್ಮಾ!
ಗಲಿರುಳೂ ಶಿವೈಕ್ಯವಳಮ್ಮಾ! (ಅ)
-ಳದಟ್ಟರೆ ಈ ದೇವಿಯೇ ನೀನಮ್ಮಾ! (ಅ)
-ಮ್ಮಾ! ನೀನೇ ನಿರಂಜನಾದಿತ್ಯನಮ್ಮಾ!!!

ರಾಜಶೇಖರ ದಿವಾಕರ ರಾಮಚಂದ್ರಯ್ಯ!   1(106)

ಗಳವೇತಕೊಳಗೊಳಗಿರುವುದಯ್ಯ!
ಶೇಕರಿಸಿರೊಂದಾಗುತೆಲ್ಲ ಭಜಿಸಿರಯ್ಯ!
ತಿಗೊಳಗಾಗುವ ಪರಿ ಬಾಳು ಬೇಡಯ್ಯ!
ವಿರಾಮರಾಜಶೇಖನೆಂದರೊಂದಯ್ಯ!
ದಿತಿ ಸುತರನಡಗಿಸಿದಾತೊಬ್ಬನಯ್ಯ!
ವಾಸುದೇವಾನಂದ ಶ್ಯಾಮಸುಂದರನೆಂಬಯ್ಯ!
ನಸು, ಮನಸಿನಲಿವನ ನೆನೆಯಯ್ಯ!
ಘುಪತಿಯಿತ ದತ್ತಾತ್ರೇಯ ಶಿಷ್ಯನಯ್ಯ!
ರಾಗ, ರಗಳೆಯೆಲ್ಲಾ ಮನದ ಭ್ರಾಂತಿಯಯ್ಯಾ!
ದ, ಮತ್ಸರಾದಿಗಳಾನಿವನೊಪ್ಪನಯ್ಯ!
ಚಂದ್ರನಾಗೀತ ಸದಾ ಶಾಂತಿ ನೀಡುವನಯ್ಯ!
ದ್ರವ್ಯದಾಸೆ, ಲೋಭ, ಮೋಹಗಳಿವಗಿಲ್ಲಯ್ಯ! (ಅ)
-ಯ್ಯ ನಿರಂಜನಾದಿತ್ಯ ರಾಜಶೇಖರನಯ್ಯ!!!

ರಾಜಾಧಿರಾಜ ಆಕಾಶರಾಜ!   6(3404)

ಜಾಗ್ರತ್ಸ್ವಪ್ನ, ನಿದ್ರಾತೀತ ರಾಜ!
(ಅ)-ಧಿಪತಿರೇಳು ಲೋಕಕ್ಕಾ ರಾಜ!
ರಾತ್ರಿ, ದಿನಮಾನಕ್ಕವ್ನೇ ರಾಜ!
ರಾ, ಜನ್ಮ ರಹಿತಾತ್ಮಾ ರಾಜ!
ರ್ಯರಾರಾಧ್ಯ ದೇವರಾ ರಾಜ!
ಕಾಲಾಂತಕ ಶಿವರಾಮಾ ರಾಜ!
ಕ್ತಿ, ಬೆಳಕಿನಾಗರಾ ರಾಜ!
ರಾಮ ನಾಮ ಜಪಾನಂದಾ ರಾಜ!
(ನಿ)-ಜ, ಶ್ರೀ ನಿರಂಜನಾದಿತ್ಯಾ ರಾಜ!!!

ರಾಜೇಂದ್ರಾ ಯೋಗಿ ರಾಜೇಂದ್ರಾ! (ಅ)   2(665)

-ಜೇಂದ್ರಾ ಬ್ರಹ್ಮಾನಂದಜೇಂದ್ರಾ!
‘ದ್ರಾ’ಮಿತಿ ಹಂಸಾನಂದೇಂದ್ರಾ!
ಯೋಗೇಂದ್ರಾ ರಾಜಯೋಗೇಂದ್ರಾ! (ಯೋ)
-ಗಿ ಚಂದ್ರಾ ರಜತಾದ್ರೀಂದ್ರಾ!
ರಾಜೇಂದ್ರಾ ದತ್ತ ರಾಜೇಂದ್ರಾ! [ನಿ]
-ಜೇಂದ್ರಾ ಸಹಜಾನಂದೇಂದ್ರಾ! (ಸಾಂ)
-ದ್ರಾ ನಿರಂಜನಾದಿತ್ಯೇಂದ್ರಾ!!!

ರಾಜ್ಯ ಕೋಶವೆಲ್ಲಾ ಹೋಯ್ತೇನಯ್ಯಾ! (ವ್ಯಾ)   4(1518)

-ಜ್ಯ ಹೂಡಿ ವೃಥಾ ಕೆಡಬೇಡಯ್ಯಾ!
ಕೋಪ, ತಾಪ ನಿಷ್ಛಲ ಕಾಣಯ್ಯಾ!
ಮೆ, ದಮೆಯ ಸಾಧಿಸೀಗಯ್ಯಾ! (ಸ)
-ವೆಯಬೇಕು ಪ್ರಾರಬ್ಧ ಕರ್ಮಯ್ಯಾ! (ಉ)
-ಲ್ಲಾಸದಿಂದಾತ್ಮಧ್ಯಾನ ಮಾಡಯ್ಯಾ!
ಹೋಗತಕ್ಕದ್ದೆಲ್ಲಾ ಹೋಗಲಯ್ಯಾ! (ಆ)
-ಯ್ತೇನದರಿಂದ ಸ್ವರೂಪಕ್ಕಯ್ಯಾ!
ಮಿಸು ಸದ್ಗುರು ಪಾದಕ್ಕಯ್ಯಾ! (ಅ)
-ಯ್ಯಾ ನಿರಂಜನಾದಿತ್ಯನಾಗಯ್ಯಾ!!!

ರಾಜ್ಯ ಪ್ರಶಸ್ತಿ ವಿಜೇತ ಕೌಶಿಕ! (ಭೋ)   5(3067)

-ಜ್ಯವಿವನ ಪ್ರವಚನ ಕೌತುಕ!
ಪ್ರಗತಿಯ ದೇಶಕ್ಕೀತ ಸೇವಕ!
ರಣನಿವಗೆ ರಾಮ ತಾರಕ!
ಸ್ತಿಮಿತ ಮನೋವೃತ್ತಿಯ ಸಾಧಕ!
ವಿನಯಾದೇವಿಯ ಪ್ರಿಯಾರಾಧಕ!
ಜೇಬು ಬರಿದಾದಾಗಲೂ ಬೋಧಕ!
ಪ್ಪು ದಾರಿ ಹೋಕರಿಗೆ ಮಾರಕ!
ಕೌಟಿಲ್ಯವ ಹೇಸುವ ಶುದ್ಧಾತ್ಮಿಕ!
ಶಿಹ್ಯವೃತ್ತಿಗಾಶಿಸುವಧ್ಯಾತ್ಮಿಕ! (ಲೋ)
-ಕಕ್ಕೆ ನಿರಂಜನಾದಿತ್ಯೋದ್ಧಾರಕ!!!

ರಾತ್ರಿ, ಹಗ್ಲೂ ಓದ್ಯದಿ ಹೀಗಾಯ್ತು!   5(3199)

ತ್ರಿದೋಷ ಹೆಚ್ಚಾಗ್ಲಾಗಿ ಹುಚ್ಚಾಯ್ತು!
ಗರಣದಿಂದೀ ಗತಿಯಾಯ್ತು! (ಆ)
-ಗ್ಲೂ, ಈಗ್ಲೂ ದುರ್ವ್ರಯದಿಂದಿಂತಾಯ್ತು!
ಜಸ್ಸಿನ ದಾರಿ ತಪ್ಪಿಂತಾಯ್ತು! (ಉ)
-ದ್ಯೋಗಕ್ಕರ್ಹತೆಯಿಲ್ಲದಿಂತಾಯ್ತು!
ದಿವ್ಯಾದರ್ಶ ತಪ್ಪಿದ್ದಕ್ಕಿಂತಾಯ್ತು!
ಹೀನಕೃತ್ಯವನ್ನಪ್ಪಿ ತಪ್ಪಾಯ್ತು!
ಗಾಯಕ್ಕುಪ್ನೀರೆರೆದಂತೆಲ್ಲಾಯ್ತು! (ಆ)
-ಯ್ತು ನಿರಂಜನಾದಿತ್ಯನೆದ್ದಾಯ್ತು!!!

ರಾಧಾಕೃಷ್ಣ ಬ್ರಹ್ಮಜ್ಞಾನಿ! (ನಿ)   1(192)

-ದಾನಿ ದ್ವಾರಕಾಭಿಮಾನಿ!
ಕೃತ್ಯಧ್ಭುತಸುರ ಹಾನಿ! (ಕೃ)
-ಷ್ಣವರ್ಣಿ ಮುರಲೀಗಾನಿ!
ಬ್ರಹ್ಮಾನಂದ ಶಿರೋಮಣಿ! (ಬ್ರ)
-ಹ್ಮಚಾರಿ ನಿತ್ಯಭಿದಾನಿ!
ಜ್ಞಾನಾರ್ಜುನಗಿತ್ತ ದಾನಿ!
ನಿರಂಜನಾದಿತ್ಯ ಮೌನಿ!!!

ರಾಧೆಗೆ ಶ್ರೀಕೃಷ್ಣನೇ ಬೇಕು!   6(3485)

(ರಾ)-ಧೆಯೇ ಶ್ರೀಕೃಷ್ಣನಿಗೂ ಬೇಕು!
ಗೆಳೆಯರು ಹೀಗಿರಬೇಕು!
ಶ್ರೀರಾಮನಿಗೆ ಸೀತೆ ಬೇಕು!
ಕೃಪೆ ರಾಮನದ್ದಾಕೆಗ್ಬೇಕು!
(ಪೂ)-ಷ್ಣ ಈರೇಳು ಲೋಕಕ್ಕೂ ಬೇಕು!
ನೇಮದಿಂದವನಂತಾಗ್ಬೇಕು!
ಬೇರೇ ನೀ ಜನ್ಮದಲ್ಲಾಗ್ಬೇಕು?
(ಬೇ)-ಕು, ನಿರಂಜನಾದಿತ್ಯಾಗ್ಬೇಕು!!!

ರಾಧೆಗೆ ಹುಚ್ಚು ಹಿಡಿಯಿತಂತೆ! (ಬೋ)   5(2622)

-ಧೆ ಯಾರದೂ ಬೇಡವಾಯಿತಂತೆ! (ಬ)
-ಗೆದು ಕೃಷ್ಣನ ಬೇಡಿದಳಂತೆ!
ಹುಸಿ ನಗು ಸಾಕಿನ್ನೆಂದಳಂತೆ! (ಕೊ)
-ಚ್ಚು ನನ್ನ ಮೌಢ್ಯವನ್ನೆಂದಳಂತೆ! (ಬ)
-ಹಿರ್ವ್ಯಾಪಾರ ಭ್ರಮೆಯೆಂದಳಂತೆ! (ಅ)
-ಡಿದಾವರೆ ಮುಡಿಸೆಂದಳಂತೆ! (ಬಾ)
-ಯಿಗಿಕ್ಕಧರಾಮೃತೆಂದಳಂತೆ!
ತಂದೆ ನೀನೆಲ್ಲರಿಗೆಂದಳಂತೆ! (ಪ್ರೀ)
-ತೆ, ನಿರಂಜನಾದಿತ್ಯಗವ್ಳಂತೆ!!!

ರಾಮ ಅಪ್ಪ ನಾಮ ನೆಪ್ಪ ನೀಡಪ್ಪಾ!   1(409)

ಮತಾ ಮೋಹಗಳ ಬಿಡಿಸಪ್ಪಾ!
ಡಚಣೆಯೆಲ್ಲವ ಸುಡಿಸಪ್ಪಾ! (ಅ)
-ಪ್ಪಣೆ ನಿನ್ನದು ಪಾಲಿಸುವೆನಪ್ಪಾ!
ನಾಳೆಯನಾಕವೆನಗೆ ಬೇಡಪ್ಪಾ!
ಗುವಿನ ಮೊರೆಯನು ಕೇಳಪ್ಪಾ!
ನೆರವಿತ್ತು ಕರುಣಿಸು ಇಂದಪ್ಪಾ! (ಅ)
-ಪ್ಪಟ ಸಹಜ ಸುಖವ ಕೊಡಪ್ಪಾ!
ನೀನುದಾಸೀನ ಮಾಡಬಾರದಪ್ಪಾ! (ಆ)
-ಡಲರಿಯೆನು ಇನ್ನೇನು ನಾನಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯ ಶ್ರೀ ರಾಮಪ್ಪಾ!!!

ರಾಮ ಬುದ್ಧಿ ಸೀತೆಗೆ ವಿಜಯ! (ಕಾ)   4(1852)

-ಮ ಬುದ್ಧಿ ರಾವಣಗಪಜಯ!
ಬುದ್ಧಿ ಶುದ್ಧಾಂಜನೇಯಗೆ ಜಯ! (ರಿ)
-ದ್ಧಿ, ಸಿದ್ಧಿಯಕ್ಷಯಗಪಜಯ!
ಸೀತಾರಾಮ ನಾಮ ದಿಗ್ವಿಜಯ! (ಸಂ)
-ತೆ ಕಂತೆ ವ್ಯವಹಾರಪಜಯ! (ಬಾ)
-ಗೆ ಸದ್ಗುರು ಪಾದಕ್ಕೆಲ್ಲಾ ಜಯ!
ವಿಕಲ್ಪದಿಂದಾಗ್ವುದಪಜಯ!
ಪ, ತಪಾದಿಂದಾತ್ಮ ವಿಜಯ! (ಪ್ರಿ)
-ಯ, ನಿರಂಜನಾದಿತ್ಯಾತ್ಮಜೇಯ!!!

ರಾಮ ಯಜ್ಞರಕ್ಷಕ, ಯಜ್ಞ ರಾಮ ರಕ್ಷಕ!   5(3112)

ನನ ಮಾಡಬೇಕಿದನು ಭಕ್ತಿ ಪೂರ್ವಕ!
ದುಪತಿಯಿದನರಿತಾದನುದ್ಭೋಧಕ! (ಪ್ರಾ)
-ಜ್ಞನೆನಿಸಿದರಿಂದಾಯಿತಾ ಜನ್ಮ ಸಾರ್ಥಕ!
ಕ್ಕಸರನ್ನೊಕ್ಕಲಿಕ್ಕಿದ ಶಕ್ತಿ ದೈವೀಕ! (ರ)
-ಕ್ಷಣೆ ಪಡೆದು ರಕ್ಷಿಸಿತು ಕೌಶಿಕ ಮಖ!
ರಣತ್ರಯ ಕರಗಿದಾಗದೇ ತಾರಕ!
ಮ, ನಿಯಮಾದಿಗಳಿದಕೆ ಸಹಾಯಕ! (ಯಾ)
-ಜ್ಞವಲ್ಕ್ಯನ ತಪಸ್ಸಿದ್ಧಿ ಪ್ರೋತ್ಸಾಹದಾಯಕ!
ರಾಜೀವ ಸಖ ತಾನೇಕಾಗಿಹನೀಗ ಮೂಕ?
ತಾಚಾರ್ಯರ ಮಾತಿಗೀಗ ಬರಲಿ ತೂಕ!
ತಿಪತಿ ಪಿತನಿಗೀಗಾರದೇನಾತಂಕ?
ಕ್ಷಮಿಸಬೇಕು ತನುಜನ ತಪ್ಪು ಜನಕ!
ಲಿಮಲಕ್ಕೆ ನಿರಂಜನಾದಿತ್ಯ ಮಾರಕ!!!

ರಾಮ ಶಬರಿಗಾಗಿ, ಶಬರಿ ರಾಮಗಾಗಿ!   6(3435)

ನಸ್ಸು ಎರಡೂ ಒಂದಾಗಿರುತ್ತಿರಲಾಗಿ!
ರೀರ ವ್ಯಾಮೋಹ ಮರೆತು ಹೋಗಿರಲಾಗಿ!
ನವಾಸಿಗಳೂ ಸ್ವಜನರೆಂದಿರಲಾಗಿ!
ರಿಸಿ ಜೀವನಚ್ಚು, ಮೆಚ್ಚಾಗಿರುತ್ತಿರಲಾಗಿ!
ಗಾರುಡೀ ವಿದ್ಯೆ ಬೇಡವೆಂದಿರುವುದ್ರಿಂದಾಗಿ!
ಗಿಡ, ಮರದಲ್ಲೂ ತನ್ನ ಕಂಡುದರಿಂದಾಗಿ!
ಮೆ, ದಮೆಗಳ ಸಿದ್ಧಿಪಡೆದಿರಲಾಗಿ!
ಲ ಆತ್ಮಾರಾಮ ಬಲವೆಂದು ಇರಲಾಗಿ!
ರಿಪುಗಳಿಗೆ ಅಂಜದಿರುವುದರಿಂದಾಗಿ!
ರಾಗ, ದ್ವೇಷಗಳಿಲ್ಲದಿರುವುದರಿಂದಾಗಿ!
ದ, ಮತ್ಸರವಿಲ್ಲದಿರುವುದರಿಂದಾಗಿ!
ಗಾನ ಹರಿಗುಣ ಕೀರ್ತನೆಯಾಗಿರಲಾಗಿ!
(ಯೋ)-ಗಿ ನಿರಂಜನಾದಿತ್ಯ ಆರ್ಯನಾಗಿರಲಾಗಿ!!!

ರಾಮ, ಕೃಷ್ಣರಂತೆ ನಿರಂಜನನಲ್ಲ!   6(4054)

ನಸ್ಸಿನಧೀನ ನಿರಂಜನನಿಲ್ಲ!
ಕೃತದಲ್ಲೂ ನಿರಂಜನನಿಲ್ಲದಿಲ್ಲ! (ಪೂ)
ಷ್ಣನಿರದೆಲ್ಲಾ ಯುಗದಲ್ಲಾಗ್ವುದಿಲ್ಲ!
ರಂಗುರಂಗಿನಂಗಿ ಆತ ತೊಡಬಲ್ಲ!
ತೆಗಳಿಕೆ, ಹೊಗಳಿಕೆ ಲಕ್ಷ್ಯವಿಲ್ಲ!
ನಿರಾಕಾರಗದು ಪ್ರಯೋಜನವಿಲ್ಲ!
ರಂಗನಾಥದನ್ನು ಬಿಟ್ಟಿರ್ಲಾಗ್ವುದಿಲ್ಲ!
ಗದೊಡೆತನ ಗಂಡಾಗುಂಡಿಗಲ್ಲ!
ರಹರಿ ಸರಿಯಾಗಿ ಆಳಬಲ್ಲ!
ಶ್ವರದಲ್ಲಿದ್ದೀಶ್ವರನೆನಿಸ್ಬಲ್ಲ! (ಪು)
-ಲ್ಲ ನಿರಂಜನಾದಿತ್ಯಾನಂದಾತ್ಮನೆಲ್ಲಾ!!!

ರಾಮಕೃಷ್ಣ ಸುಶೀಲಯ್ಯಾ!   2(590)

ನವೈಕ್ಯದರಿಂದಯ್ಯಾ!
ಕೃಪೆಯಿಂದ ಸಿದ್ಧಿಯಯ್ಯಾ! (ಕೃ)
-ಷ್ಣ ಗೋವಿಂದ ಗೋಪಾಲಯ್ಯಾ!
ಸುದರ್ಶನವಿರಲಯ್ಯಾ!
ಶೀತೋಷ್ಣ ಸಮಾಗಲಯ್ಯಾ!
ಕ್ಷ್ಯಾತ್ಮನಲಿರಲಯ್ಯಾ!
ರ್ತನೆ ಶುದ್ಧ ಬೇಕಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಯ್ಯಾ!!!

ರಾಮಗಾಗಿ ಕಾದಿರುವೆ ನಾನು!   4(1808)

ಹಾ ಕಲಾಕೋವಿದನವನು!
ಗಾನಲೋಲ ರಾಘವನವನು!
ಗಿರಿಜಾಪತಿಯಾಪ್ತನವನು!
ಕಾರ್ಯ, ಕಾರಣ, ಕರ್ತನವನು!
ದಿನಮಣಿ ವಂಶಜನವನು! (ಕ)
-ರುಣಾಪೂರ್ಣ ಹೃದಯನವನು! (ಶಿ)
-ವೆಯ ಆರಾಧ್ಯ ದೇವನವನು!
ನಾಮ ಭಜನಾನಂದನವನು! (ಹ)
-ನುಮ ನಿರಂಜನಾದಿತ್ಯವನು!!!

ರಾಮಣ್ಣನನುಜಾ ಕಿಟ್ಟಣ್ಣ   4(1451)

ಮತಾವತಾರಾ ಕಿಟ್ಟಣ್ಣ! (ಅ)
-ಣ್ಣನ ಪಂಚಪ್ರಾಣಾ ಕಿಟ್ಟಣ್ಣ! (ಧ)
-ನ ಧಾನ್ಯ ಸಂಪನ್ನಾ ಕಿಟ್ಟಣ್ಣ! (ಅ)
-ನುಪಮಾತ್ಮ ಪ್ರೇಮಾ ಕಿಟ್ಟಣ್ಣ!
ಜಾತಿ ಭೇದ ನೋಡಾ ಕಿಟ್ಟಣ್ಣ!
ಕಿತ್ತಾಟಟ್ಟುವವಾ ಕಿಟ್ಟಣ್ಣ! (ಅ)
-ಟ್ಟಹಾಸ ಬಿಟ್ಟವಾ ಕಿಟ್ಟಣ್ಣ! (ಅ)
-ಣ್ಣ ನಿರಂಜನಾದಿತ್ಯಮ್ಮಣ್ಣ!!!

ರಾಮನ ಕಾಣಿಕೆ ರಾಮಯ್ಯಗಯ್ಯಾ!   2(745)

ಮತಾಬಂಧನವಗಿಲ್ಲವಯ್ಯಾ!
ಮಸ್ಕಾರ ಪ್ರಿಯನು ಅದನಯ್ಯಾ!
ಕಾಲವನವಶವಾಹುದಯ್ಯಾ! (ಋ)
-ಣಿಗಳವನಿಗೆಲ್ಲಾ ಜೀವರಯ್ಯಾ!
ಕೆಲಸ ಕಾರ್ಯಕಾಧಾರವನಯ್ಯಾ!
ರಾಜರಾಜಸಾರ್ವಭೌಮಾದಿತ್ಯಯ್ಯಾ!
ನೆಮನೆಗೂ ಅವನ ದೃಷ್ಟ್ಯಯ್ಯಾ! (ಕೈ)
-ಯ್ಯ ಜೋಡಿಸಲಪ್ಪಿಕೊಳ್ಳುವನಯ್ಯಾ!
ತಿ, ಮತಿದಾತನಾಗಿಹನಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾಶೀರ್ವಾದಯ್ಯಾ!!!

ರಾಮನ ಭಂಟಾ ಹನುಮಂತ!   2(851)

ರ್ಕಟ ಶ್ರೇಷ್ಠಾ ಹನುಮಂತ! (ವಾ)
-ನರರಿಗಿಷ್ಟಾ ಹನುಮಂತ! (ಅ)
-ಭಂಗ ಸಂತುಷ್ಟಾ ಹನುಮಂತ! (ದಿ)
-ಟಾತ್ಮಾರಾಮೇಷ್ಟಾ ಹನುಮಂತ! (ದೇ)
-ಹದಲಿ ಪುಷ್ಟಾ ಹನುಮಂತ! (ಮ)
-ನುಜರಾಪ್ತೇಷ್ಟಾ ಹನುಮಂತ!
ಮಂಗಳಾಭೀಷ್ಟಾ ಹನುಮಂತ! (ಆ)
-ತ ನಿರಂಜನಾದಿತ್ಯಾನಂತ!!!

ರಾಮನಾಥನೆಲ್ಲರಿಗೆ ಸ್ವಾಮಿ!   4(2274)

ಲಿನ ವಾಸನಾ ದೂರಾ ಸ್ವಾಮಿ!
ನಾದ, ಬಿಂದು, ಕಲಾತೀತಾ ಸ್ವಾಮಿ! (ಗ್ರಂ)
-ಥ ವಾಸನೆಯಿಲ್ಲದವಾ ಸ್ವಾಮಿ!
ನೆಪ ಮಾತ್ರಕ್ಕೆ ಸಂಸಾರೀ ಸ್ವಾಮಿ! (ತ)
-ಲ್ಲಣಗೊಳ್ಳದಾತ್ಮ ನಿಷ್ಠಾ ಸ್ವಾಮಿ!
ರಿಪುಕಾಲ ಕಾಲಾ ಮಹಾ ಸ್ವಾಮಿ! (ಬ)
-ಗೆಬಗೆಯ ರೂಪಧಾರೀ ಸ್ವಾಮಿ!
ಸ್ವಾವಲಂಬವ ನಿರತಾ ಸ್ವಾಮಿ! (ಸ್ವಾ)
-ಮಿ, ನಿರಂಜನಾದಿತ್ಯಾತ್ಮ ಪ್ರೇಮಿ!!!

ರಾಮನಾಮ ಬಹು ಪ್ರೇಮ! [ಮ]   2(545)

-ಮ ಹೃದಯಾನಂದಾ ರಾಮ!
ನಾನಾ ರೂಪದಿಂದಾ ರಾಮ!
ನೆ, ಮಠದಲ್ಲಾ ರಾಮ!
ಹು ಲೀಲೆ ತೋರ್ಪಾ ರಾಮ!
ಹುಸಿ ಮಾತಿದಲ್ಲಾ ರಾಮ!
ಪ್ರೇಮಾನಂದ ಸೀತಾರಾಮ! (ಮ)
-ಮ ನಿರಂಜನ ಶ್ರೀರಾಮ!!!

ರಾಮನೂ ನೀನೇ, ಕೃಷ್ಣನೂ ನೀನೇ!   6(3922)

ಹಿಮಾದರ್ಶ ಬೇರಾದ್ರೂ ನೀನೇ!
ನೂರಾರವತಾರದಲ್ಲೂ ನೀನೇ!
ನೀಚೋಚ್ಚವಿಲ್ಲದ ಆತ್ಮ ನೀನೇ!
ನೇಮ, ನಾಮ, ರೂಪತೀತ ನೀನೇ!
ಕೃತಿ ಬೇರಾದ್ರೂ ಕರ್ತನು ನೀನೇ! (ಪೂ)
-ಷ್ಣನೆಂಬಾರ್ಕನಲ್ಲೂ ಸದಾ ನೀನೇ!
ನೂರಾರು ಮಂತ್ರದೊಳಗೂ ನೀನೇ!
ನೀನು ನಾನೆಂದೀಗೇನಿಲ್ಲ ತಾನೇ! (ನೀ)
-ನೇ, ನಿರಂಜನಾದಿತ್ಯಾತ್ಮ ನಾನೇ!!!

ರಾಮನೊಲಿದಾಗ ಕಪಿಯೂ ಕವಿ! (ಕಾ)   3(1263)

-ಮನೊಲಿದರಾಗ ಕವಿಯೂ ಕಪಿ! (ನೀ)
-ನೊಲಿದು ನಾನಾಗಾತ್ಮನುಭಾವಿ! (ಮ)
-ಲಿನ ವೃತ್ತಿಯಾದಾಗ ಕಾಮಜೀವಿ!
ದಾಸನಾದಾಂಜನೇಯತ್ಮಾನುಭಾವಿ!
ರ್ವಿ ರಾವಣೇಶ್ವರ ಕಾಮಜೀವಿ!
ರ್ಮನಿಷ್ಟ ಕೌಂತೇಯಾತ್ಮಾನುಭಾವಿ! (ಪಾ)
-ಪಿ ಧೃತರಾಷ್ಟ್ರ ತುಚ್ಛ ಕಾಮಜೀವಿ! (ಸಾ)
-ಯೂಜ್ಯ ಸಿದ್ಧ ಸುಧಾಮಾತ್ಮಾನುಭಾವಿ!
ರ್ಮಭ್ರಷ್ಟ ಕೌರವ ಕಾಮಜೀವಿ! (ಕ)
-ವಿ, ನಿರಂಜನಾದಿತ್ಯಾತ್ಮತ್ಮಾನುಭಾವಿ!!!

ರಾಮಮಂದಿರ ಭಜನೆಗಯ್ಯಾ!   5(2514)

ತ್ಯಾವ ವ್ಯವಹಾರಕ್ಕಲ್ಲಯ್ಯಾ!
ಮಂಗ ರಂಗನಾಗಲಿಕ್ಕದಯ್ಯಾ!
ದಿವ್ಯನಾಮ ಜಪಲ್ಲಾಗ್ಬೇಕಯ್ಯಾ!
(ಪ)ರನಿಂದೆಯಾರೂ ಮಾಡ್ಬಾರದಯ್ಯಾ!
ವರೋಗ ಶಾಂತಿಗಿದ್ಮುಖ್ಯಯ್ಯಾ! (ಅ)
-ಜ, ಹರಿ, ಹರರಾಜ್ಞೆಯಿದಯ್ಯಾ!
ನೆರೆ ನಂಬಿ ಧನ್ಯನಾಗ್ಬೇಕಯ್ಯಾ! (ಸಂ)
-ಗ ದುಷ್ಟರದ್ದಿರಬಾರದಯ್ಯಾ! (ಅ)
-ಯ್ಯಾ ನಿರಂಜನಾದಿತ್ಯನಾಗಯ್ಯಾ!!!

ರಾಮರಾಜ್ಯದ ಹೆಬ್ಬಾಗಿಲು ಸದಾ ತೆರೆದಿತ್ತು!   6(4043)

ದಾಂಧ ಅರಸರ ದೃಷ್ಟಿಗದು ಬೀಳದಿತ್ತು!
ರಾತ್ರಿ, ದಿನ ಜಯಭೇರಿಯೊಂದೇ ಮೊಳಗುತ್ತಿತ್ತು! (ಆ)
-ಜ್ಯ ಮೊದಲಾದ ಹವಿರ್ಧೂಮವೆಲ್ಲೆಲ್ಲೂ ಹಬ್ಬಿತ್ತು!
ರಿದ್ರ, ಶ್ರೀಮಂತರ ಸೌಹರ್ದವೆಲ್ಲೆಲ್ಲೂ ಇತ್ತು!
ಹೆತ್ತಮ್ಮನೇ ಪರದೈವವೆಂಬ ನಂಬಿಗೆಯಿತ್ತು! (ಹ)
-ಬ್ಬಾದಿಗಳು ಅವಳ ಹೆಸರಲ್ಲಿ ಆಗುತ್ತಿತ್ತು!
ಗಿರಿ, ಗುಹೆಗಳ ಋಷಿಗಳಿಗಾತಿಥ್ಯವಿತ್ತು! (ಹಾ)
-ಲು, ಹಣ್ಣು, ಹೂಗಳ ಸುರಿಮಳೆಯೇ ಆಗುತ್ತಿತ್ತು!
ತ್ಸಂಗದಿಂದ ಪ್ರಜೆಗಾನಂದವುಂಟಾಗುತ್ತಿತ್ತು!
ದಾಸ, ದಾಸಿಯರಿಗುಡುಗೊರೆಗಳಾಗುತ್ತಿತ್ತು! (ಸೀ)
-ತೆಯ ಕರಕಮಲದಿಂದದು ಲಭಿಸುತ್ತಿತ್ತು! (ನೆ)
-ರೆದೆಲ್ಲರ ಹರ್ಷಧ್ವನಿ ಅಂಬರಕ್ಕೇರುತ್ತಿತ್ತು!
ದಿವ್ಯ ಜೀವನದಾ ದಿವಸಕ್ಕಿಂದು ಕಲ್ಲು ಬಿತ್ತು! (ಎ)
-ತ್ತು, ನಿರಂಜನಾದಿತ್ಯಾ ರಾಮನಾಗೀಗೆಮ್ಮನ್ನೆತ್ತು!!!

ರಾಮಲಿಂಗವೇನಯ್ಯಾ?   2(500)

ನೋ ನಾಶಾರಾಮಯ್ಯಾ!
ಲಿಂಗವದಕಿಲ್ಲಯ್ಯಾ!
ತಿ, ಸ್ಥಿತಿಯೊಂದಯ್ಯಾ!
ವೇಷ ಅಲಕ್ಷ್ಯವಯ್ಯಾ!
ಯನೊಳಮುಖಯ್ಯಾ! (ಅ)
-ಯ್ಯಾ! ನಿರಂಜನದಯ್ಯಾ!!!

ರಾಮಶೇಖರಾರಾಮ ಸಾಗರಾ!   4(2479)

ದ, ಮತ್ಸರಾಸುರ ಸಂಹರಾ! (ವಿ)
-ಶೇಷ ಸುಂದರಾ ಸೀತಾಮಂದಿರಾ! (ಸು)
-ಖಕರಾ ಅಯೋಧ್ಯಾಪುರೇಶ್ವರಾ!
ರಾಮೇಶ್ವರಾ ಶ್ರೀರಾಘವೇಶ್ವರಾ!
ರಾಜರಾಜೇಶ್ವರಾ ಸೀತಾವರಾ!
ನೋಹರಾ ಲಕ್ಷ್ಮಣ ಸೋದರಾ!
ಸಾಮ, ದಾನ, ಭೇದ ದಂಡೇಶ್ವರಾ! (ಖ)
-ಗಕುಲ ತಿಲಕಾ ಲೋಕೇಶ್ವರಾ! (ಆ)
-ರಾಮಾ ನಿರಂಜನಾದಿತ್ಯೇಶ್ವರಾ!!!

ರಾಮಸ್ವಾಮಿಗೊಂದು ಗಂಡು ಕೂಸು!   4(1670)

ಹಾವೀರ ಮೂರುತ್ಯೆಂಬಾ ಕೂಸು!
ಸ್ವಾಮಿ ಸೇವಾ ದುರುಂಧರಾ ಕೂಸು!
ಮಿಥಿಲೇಶಾತ್ಮಜೆಯಾತ್ಮಾ ಕೂಸು!
ಗೊಂಡಾರಣ್ಯದಗ್ರಗಣ್ಯಾ ಕೂಸು!
ದುರ್ಮದ ಮರ್ದನ ಧೀರಾ ಕೂಸು!
ಗಂಗಾಜಲ ಪಾನಾನಂದಾ ಕೂಸು! (ಬಿ)
-ಡುವಿಲ್ಲದ ಧ್ಯಾನಾಸಕ್ತಾ ಕೂಸು! (ತ್ರಿ)
-ಕೂಟಾಚಲಾಚಲ ಪ್ರೇಮಾ ಕೂಸು! (ಲೇ)
-ಸು, ನಿರಂಜನಾದಿತ್ಯಾತ್ಮಾ ಕೂಸು!!!

ರಾಮಾ, ರವಿಕುಲ ಸೋಮಾ, ಶ್ರೀರಾಮಾ!   2(589)

ಮಾರಹರ, ಪ್ರೇಮಾನಾಮಾ, ಶ್ರೀ ರಾಮಾ! (ವ)
-ರ ಜಾನಕೀ ಪ್ರಿಯ ರಾಮಾ, ಶ್ರೀ ರಾಮ!
ವಿಭೀಷಣಾಶ್ರಯ ಧಾಮಾ, ಶ್ರೀ ರಾಮ!
ಕುಟಿಲಸುರಾರಿ ಭೀಮಾ, ಶ್ರೀ ರಾಮ!
ಕ್ಷ್ಮಣಾನುಜ ಸುಪ್ರೇಮಾ ಶ್ರೀ ರಾಮ!
ಸೋದರ ಭರತಾ ರಾಮಾ ಶ್ರೀ ರಾಮ!
ಮಾರೀಚಾದ್ಯರ ನಿರ್ನಾಮಾ, ಶ್ರೀ ರಾಮ!
‘ಶ್ರೀರಾಮ ಜೈ ರಾಮ ಜೈ ಜೈ ರಾಮ’!
ರಾಮನಾಮ ಪ್ರೇಮಾನಾಮಾ, ಶ್ರೀ ರಾಮ! (ರಾ)
-ಮ, ನಿರಂಜನಾದಿತ್ಯ ಸೀತಾ ರಾಮ!!!

ರಾಮಾನಂದಗಿಲ್ಲ ಮಾರಾನಂದ!   6(3400)

ಮಾರಾನಂದಗಿಲ್ಲ ರಾಮಾನಂದ!
ನಂದಿವಾಹನ ಶ್ರೀರಾಮಾನಂದ!
ಶಶಿರಾಸುರ ಮಾರಾನಂದ!
ಗಿರಿಜೆಗೆ ರಾಮನಾಮಾನಂದ!
(ಎ)-ಲ್ಲರಲ್ಲಿರುವಾತ್ಮ ನಿತ್ಯಾನಂದ!
ಮಾಯಾಮೋಹಿತಗನಿತ್ಯಾನಂದ!
ರಾಮದಾಸಾಂಜನೇಯಾತ್ಮಾನಂದ!
ನಂಬಿದವಗೀ ಪರಮಾನಂದ!
ತ್ತ, ನಿರಂಜನಾದಿತ್ಯಾನಂದ!!!

ರಾಮಾರಾಮ ನಾಮ ಗುಣಧಾಮ!   2(766)

ಮಾರುತಿ ಪ್ರೇಮಾನಂದ ಸುಧಾಮ!
ರಾಜೀವ ಸಖ ಮುಖ ಶ್ರೀ ರಾಮ!
ಧುಮರ್ದನ ಮಾಧವಾ ರಾಮ!
ನಾದಾನಂದ ನಂದಕಂದಾ ರಾಮ!
ಲಹರ, ಬಲಕರಾ ರಾಮ!
ಗುರಿಗಿದೊಂದೇ ನಾಮ ಶ್ರೀರಾಮ! (ರ)
-ಣಧೀರ, ಗಂಭೀರ, ರಾಜಾರಾಮ!
ಧಾರಿಣೀಸುತೆಯಾಪ್ತ ಶ್ರೀರಾಮ!
ಮ ನಿರಂಜನಾದಿತ್ಯಾ ರಾಮ!!!

ರಾವಣ ಸಾಯಲಿ, ರಾಮನುಳಿಯಲಿ! [ಭ]   3(1257)

-ವಬಂಧ ಹರಿದು ಸಾರೂಪ್ಯವಾಗಲಿ! (ತೃ)
-ಣ, ಕಾಷ್ಟದಲ್ಲವನೆಂಬರಿವಾಗಲಿ!
ಸಾಯುಜ್ಯ ಸಿದ್ಧಿಯಿಂದ ಮುಕ್ತಿಯಾಗಲಿ!
ಮನ ಭಯ ನಿವಾರಣೆಯಾಗಲಿ! (ಮ)
-ಲಿನ ವಾಸನೆ ಹೆಸರಿಲ್ಲದಾಗಲಿ!
ರಾರಾಜಿಸುತಾತ್ಮಾರಾಮನಾಗಿರಲಿ!
ಡದಿ ಸೀತಾ ಮನಕಾಪ್ತಾಗಿರಲಿ! (ಹ)
-ನುಮಂತ ಪ್ರಾಣ ಸ್ನೇಹಿತನಾಗಿರಲಿ! (ಉ)
-ಳಿದಾಳಿ ಸರ್ವರಿಷ್ಟ ಪೂರ್ತಿಯಾಗಲಿ! (ಜ)
-ಯ ಸೀತಾರಾಮೆಂಬ ಘೋಷ ಮೊಳಗಲಿ! (ಒ)
-ಲಿದು ನಿರಂಜನಾದಿತ್ಯ ಬಂದಿರಲಿ!!!

ರಾಸಲೀಲೆ ಒಂದುಸಲಮಾತ್ರ!   6(3434)

ದಾ ನೆನ್ಪದರದು ಸರ್ವತ್ರ!
ಲೀನವಾಗ್ಲಿಕ್ಕದು ನೆಪಮಾತ್ರ!
ಲೆಕ್ಕಿಸಬಾರದು ಯಂತ್ರ, ತಂತ್ರ!
ಒಂದೇ ದಾರಿಗೆ ಲಭ್ಯ ಸ್ವತಂತ್ರ!
ದುರ್ವ್ಯಾಪಾರದಿಂದ ಪರತಂತ್ರ!
ಜ್ಜನ ಸಂಗದಿಂದ ಪವಿತ್ರ!
ಕ್ಷ್ಮಣ ರಾಘವಗಾಪ್ತ ಮಿತ್ರ!
ಮಾರುತಿ ರಾಮನ ಕೃಪಾಪಾತ್ರ!
(ಮಂ)-ತ್ರ ನಿರಂಜನಾದಿತ್ಯಾತ್ಮ ಸ್ತೋತ್ರ!!!

ರೀತ, ನೀತಿ ನನ್ನದು ನಿನ್ನಿಷ್ಟ!   6(4310)

ತಿಳಿದಿಹೆನು ನಾನಿಂತು ಸ್ಫಷ್ಟ!
ನೀನೆನಗೇಕೆ ಕೊಡುವ ಕಷ್ಟ?
ತಿಳಿದವ ನೀನೆಲ್ಲಕ್ಕೂ ಶ್ರೇಷ್ಠ!
ನ್ನನ್ನೀಗ ಮಾಡಬೇಡ ಭ್ರಷ್ಟ! (ಉ)
-ನ್ನತಿಗೇರಿದಾಗಾನು ಸಂತುಷ್ಟ!
ದುರ್ಬುದ್ಧಿಯಿಂದಾಗ್ವುದೆಲ್ಲಾ ನಷ್ಟ!
ನಿನ್ನ ನಂಬಿದ ನಾನಲ್ಲ ದುಷ್ಟ! (ಕು)
-ನ್ನಿಯೂ ನಿನ್ನಿಂದಕ್ಕು ದಷ್ಟ, ಪುಷ್ಟ! (ಶ್ರೇ)
-ಷ್ಟ ನಿರಂಜನಾದಿತ್ಯಾತ್ಮ ಶ್ರೇಷ್ಠ!!!

ರೀತಿ, ನೀತಿ, ಎಂಬುದು ಪದ್ಧತಿ!   1(138)

ತಿಳಿಯದೆ ಗೈದರದೋಗತಿ!
ನೀತಿಗಾರತಿ ಬಾಳು ದುಸ್ಥಿತಿ!
ತಿಳಿಯದೆ ಅರ್ಥ ಮನ ಭ್ರಾಂತಿ
ಎಂದರಿದ ಹೋಗುವುದು ಪ್ರೀತಿ!
ಬುಧ ಜನಕಾಗಿದೆ ದುರ್ಮತಿ!
ದುರ್ಬುದ್ಧಿ ಎಲ್ಲೆಲ್ಲೂ ಕಾಣುತ್ತತಿ!
ಡುವುದು ದುಃಖ ಜನತತಿ! (ಶು)
-ದ್ಧವಾಗಿರಬೇಕು ಸದಾ ಮತಿ!
ತಿಳಿ! ನಿರಂಜನಾದಿತ್ಯ ಗತಿ!!!

ರುದ್ರಾಭಿಷೇಕವಾಗಲಿ? (ರೌ)   4(1608)

-ದ್ರಾಕಾರ ಶಾಂತವಾಗಲಿ! (ಅ)
-ಭಿಲಾಷೆ ನೆರವೇರಲಿ! (ಶೇ)
-ಷೇನೂ ಉಳಿಯದಿರಲಿ!
ರ್ಮ ಬಂಧ ಹರಿಯಲಿ! (ಭ)
-ವಾಬ್ಧಿಯಿಂದ ಪಾರಾಗಲಿ! (ಮಂ)
-ಗಳ ವಾದ್ಯ ಮೊಳಗಲಿ! (ಶೂ)
-ಲಿ ನಿರಂಜನಾದಿತ್ಯಾಗ್ಲಿ!!!

ರೂಪ ನಾಮಕ್ಕೆ ತಕ್ಕಂತಿರ್ಬೇಕು! (ರೂ)   6(3608)

-ಪಕ್ಕೆ ತಕ್ಕಂತೆ ನಾಮವಿರ್ಬೇಕು!
ನಾಮ, ರೂಪಕ್ಕೊಳ್ಳೇ ಗುಣ ಬೇಕು!
ರ್ತರದ್ರಿಂದುದ್ಧಾರವಾಗ್ಬೇಕು! (ಬೆ)
-ಕ್ಕೆ ನಾಶವಾಗಿ ಮುಕ್ತರಾಗ್ಬೇಕು!
ತ್ವ ಚಿಂತನೆ ಸದಾ ಮಾಡ್ಬೇಕು! (ಚ)
-ಕ್ಕಂದವಾಡ್ವುದು ಕಮ್ಮಿಯಾಗ್ಬೇಕು!
ತಿತಿಕ್ಷೆ, ವೈರಾಗ್ಯ, ಹೆಚ್ಚಾಗ್ಬೇಕು! (ಇ)
-ರ್ಬೇಕು, ಇದ್ದೂ ಇಲ್ಲದಂತಿರ್ಬೇಕು! (ಬೇ)
-ಕು, ನಿರಂಜನಾದಿತ್ಯನಾಗ್ಬೇಕು!!!

ರೂಪದರ್ಶನವಾದವಗೆ ಪಾಪ, ಪುಣ್ಯವಿಲ್ಲ!   6(4060)

ರಮಾತ್ಮ ಸ್ವರೂಪ ತಿಳಿಯಬೇಕಿದಕ್ಕೆಲ್ಲಾ!
ಶೇಂದ್ರಿಯ ಮತ್ತು ಮನಸ್ಸು ಪರಮಾತ್ಮನಲ್ಲ! (ಸ್ಪ)
-ರ್ಶಕ್ಕೆ ಸಿಕ್ಕದವನನ್ನು ನೊಡ್ಬೇಕ್ಜ್ಞಾನದಿಂದೆಲ್ಲಾ!
ಶ್ವರವಲ್ಲದಾತ್ಮ ತಾವೆಂದರಿಯಬೇಕೆಲ್ಲಾ!
ವಾಸನಾ ಕ್ಷಯವಾಗದೇ ದರ್ಶನವಾಗ್ವುದಿಲ್ಲ!
ಮೆ, ಶಮೆಯಭ್ಯಾಸ ಕಡೆಗಣಿಸುವಂತಿಲ್ಲ!
ಡವೆ, ವಸ್ತುಗಳಲಂಕಾರದಕ್ಕೆ ಬೇಕಿಲ್ಲ!
ಗೆಜ್ಜೆ ಕಟ್ಟಿ ಕುಣಿದ ಮಾತ್ರಕ್ಕೇನೂ ಆಗ್ವುದಿಲ್ಲ!
ಪಾದಪೂಜಾದಿಗಳಾಪ್ತರಭಿಮಾನದಿಂದೆಲ್ಲ!
ರಮಾತ್ಮ ಸ್ವರೂಪದನ್ನಪೇಕ್ಷಿಸುವುದಿಲ್ಲ!
ಪುರುಷೋತ್ತಮನಿವನೆಂಬುದರಲ್ಲಿ ಸುಳ್ಳಿಲ್ಲ! (ಗ)
-ಣ್ಯನಿವನಾಗಿರುವ ಸ್ಥಾವರ, ಜಂಗಮಕ್ಕೆಲ್ಲಾ!
ವಿಧಿ, ಹರಿ, ಹರರೆಂಬುದು ಗುಣ, ನಾಮವೆಲ್ಲಾ! (ಪು)
-ಲ್ಲ ನಿರಂಜನಾದಿತ್ಯನ ಪ್ರತಿಭೆ ಅಷ್ಟಿಷ್ಟಲ್ಲ!!!

ರೂಪವಾವುದಾವರೇನು? (ದೀ)   5(2991)

-ಪ ಬೆಳಗಿದ್ರಾಯ್ತಲ್ವೇನು?
ವಾಸುದೇವ ಕಪ್ಪಾದ್ರೇನು? (ಗೋ)
-ವುಗಳಾನಂದಿಸಿಲ್ವೇನು?
ದಾಸಿ ಮೀರಾಳಾಪ್ತಲ್ವೇನು?
ಯಾನಿಧಿ ಆತಲ್ವೇನು? (ಹ)
-ರೇ ಕೃಷ್ಣ ಜಪ ಮಾಡ್ನೀನು! (ತಾ)
-ನು ನಿರಂಜನಾದಿತ್ಯಾನು!!!

ರೂಪವಿಲ್ಲದ ಮಣ್ಣಿನಿಂದೆಲ್ಲಾ ರೂಪ!   5(3129)

ರಾಶಕ್ತಿ ಮನಸ್ಸಿಂದನಂತ ರೂಪ!
ವಿವಿಧೇಂದ್ರಿಯ ಮೂಲಕ ಸ್ಥೂಲ ರೂಪ! (ಕ)
-ಲ್ಲಲ್ಲೂ ಆಗುತಿದೆ ಇಂಥಾನೇಕ ರೂಪ!
ರ್ಶನ, ಭಜನೆಯಿಂದಾಯ್ತಿಷ್ಟ ರೂಪ!
ಜ್ಜನಾದಿಗಳಿಂದಾಕರ್ಷಣಾ ರೂಪ! (ಕ)
-ಣ್ಣಿಗಾನಂದ ನೀಡುವುದಾ ಮೂರ್ತಿ ರೂಪ!
ನಿಂತ, ಕೂತ, ಮಲಗಿದ ಬಹು ರೂಪ!
ದೆವ್ವ ರೂಪವೆನಿಸುತಿದೆ ಕುರೂಪ! (ಎ)
-ಲ್ಲಾ ರೂಪ ತಾನಾದರೂ ನಿತ್ಯಾತ್ಮರೂಪ! (ಊ)
-ರೂರು ಮೆರೆಸುವುದಕ್ಕೀ ಸ್ಥೂಲರೂಪ!
ರಮಾತ್ಮ ನಿರಂಜನಾದಿತ್ಯ ರೂಪ!!!

ರೇಚಕದಿಂದ ಜಗ ತುಂಬು!   4(1460)

ರಾಚರಾತ್ಮನೊಳ ತುಂಬು!
ರ್ಮಕ್ಕೆ ಬೇಕೆರಡೂ ತುಂಬು!
ದಿಂಡಾಗಿ ಕೂತಾಗಲೀ ತುಂಬು!
ಣಿದಾಗ ನಿಲ್ಲಿಸೀ ತುಂಬು!
ರಾ, ಜನ್ಮ ವಿದೂರಾ ತುಂಬು!
ಣಾಧಿಪತ್ಯಪ್ರದಾ ತುಂಬು!
ತುಂಬಿ ಪೂರ್ಣವಾಗಲೀ ತುಂಬು! (ತುಂ)
-ಬು, ನಿರಂಜನಾದಿತ್ಯನಿಂಬು!!!

ರೊಟ್ಟಿ ಇರುವಾಗ ಬುಟ್ಟಿಯಿಲ್ಲ! (ಬು)   6(4198)

-ಟ್ಟಿ ಇರುವಾಗ ರೊಟ್ಟಿಯೇ ರೊಟ್ಟಿಯೇ ಇಲ್ಲ!
ರುವುದು ಬಚ್ಚಿಡಲ್ಕಿಕಲ್ಲ! (ಇ)
-ರುವುದುಂಬುದೂಡುವುದಕ್ಕೆಲ್ಲ!
ವಾಸನೆ ಬೆಳೆಸಬಾರದಲ್ಲಾ! (ಜಾ)
-ಗ ಝಳ ಝಳ ಇರಬೇಕೆಲ್ಲ!
ಬುದ್ಧಿ ಇಂತು ಶು

ವಾಗ್ವುದೆಲ್ಲ! (ಕ)
-ಟ್ಟಿಟ್ಟೆ ಬುತ್ತಿ ಹೆಚ್ಚು ದಿನವಿಲ್ಲ! (ತಾ)
-ಯಿಯೊಲುಮೆ ಘಳಿಸಬೇಕೆಲ್ಲ! (ಫು)
-ಲ್ಲ ನಿರಂಜನಾದಿತ್ಯನ್ಯನಲ್ಲ!!!

ರೊಟ್ಟಿ ತಿಂದೆ ನಿನ್ನಿಷ್ಟದಂತದ ನಾ ತಿಂದೆ! (ಸಿ)   4(1590)

-ಟ್ಟಿನ್ನೇತಕೆ ನಿನಗೆಂದದ ನಾನು ತಿಂದೆ!
ತಿಂತ್ರಿಣಿ, ಖಾರ ಸೇರಿಸಿದ ನಾನು ತಿಂದೆ! (ತಂ)
-ದೆ ಕೊಟ್ಟಿದ್ದೆಲ್ಲಾ ಅಮೃತವೆಂದು ನಾ ತಿಂದೆ!
ನಿಶ್ಚಲ ಭಕ್ತಿಗಿದಗತ್ಯವೆಂದು ನಾ ತಿಂದೆ! (ಕು)
-ನ್ನಿ ನಿನ್ನಡಿಯಡಿಯಲ್ಲಿ ನಾನೆಂದು ತಿಂದೆ! (ಕ)
-ಷ್ಟ ಪರಿಹರಿಸುವವ ನೀನೆಂದು ತಿಂದೆ! (ಕೋ)
-ದಂಡರಾಮನ ಪ್ರಸಾದವದೆಂದು ತಿಂದೆ!
ನು, ಮನ ನಿನಗಾಗಿರಲೆಂದು ತಿಂದೆ!
ತ್ತ ರಾಮರಲ್ಲಿ ಭೇಧವಿಲ್ಲೆಂದು ತಿಂದೆ!
ನಾಮ ಜಪ ಜಪಿಸುತ್ತ ನಾನದ ತಿಂದೆ!
ತಿಂದದ್ದೆಲ್ಲಾ ನಿನಗರ್ಪಣೆಯೆಂದು ತಿಂದೆ! (ತಂ)
-ದೆ ನಿರಂಜನಾದಿತ್ಯ ನೀನೆಂದು ನಾ ತಿಂದೆ!!!

ರೊಟ್ಟಿ ಬಂದಾಗ ಗಂಜಿ ಕುಡಿದಾಗಿತ್ತು! (ಮೆ)   4(1830)

-ಟ್ಟಿ ನಿಲ್ಲಲು ಪ್ರಾರಬ್ಧ ಕಷ್ಟವಾಗಿತ್ತು!
ಬಂದ ರೊಟ್ಟಿಗಾಗ ಜಾಗವಿಲ್ಲದಾಯ್ತು! (ಇಂ)
-ದಾಗತಕ್ಕದ್ದಿಂದಾಯ್ತೆಂಬರಿವುಂಟಾಯ್ತು!
ರಿಷ್ಠನೂ ವಿಧಿಯಾಧೀನವೆಂದಾಯ್ತು!
ಗಂಗೆಯೂ ಭೂಮಿಗಿಳಿಯಲೇಬೇಕಾಯ್ತು!
ಜಿಪುಣ ದಾಸದಾಸನಾಗಬೇಕಾಯ್ತು!
ಕುಕರ್ಮಿ ರಾಮಾಯಣ ಬರೀಬೇಕಾಯ್ತು! (ಚಂ)
-ಡಿಕೇಶ್ವರಿ ಶಬರಿಯಾಗಬೇಕಾಯ್ತು!
ದಾಶರಥಿ ವನವಾಸ್ಯಾಗಬೇಕಾಯ್ತು!
ಗಿರೀಶ ಕಾಪಾಲಿಯೆನಿಸಬೇಕಾಯ್ತು! (ಹೊ)
-ತ್ತು ಕಾದು ನಿರಂಜನಾದಿತ್ಯೋದಯಾಯ್ತು!!!

ರೊಟ್ಟಿ ಸುಟ್ಟು ಹಿಟ್ಟಿಕ್ಕೆನ್ನುವುದೇನಯ್ಯಾ? [ಅ]   2(887)

-ಟ್ಟಿಟ್ಟಿದ್ದಿಷ್ಟು ಬೇಗ ಮರೆತಿಯೇನಯ್ಯಾ?
ಸುಟ್ಟಕಾವಲಿ ಇನ್ನೂ ಆರಿಲ್ಲವಯ್ಯಾ! (ಹಿ)
-ಟ್ಟು ರೊಟ್ಟಿ ತಿಂದಮೇಲೆ ಮಾಡೋಣವಯ್ಯಾ!
ಹಿತಾಹಿತೆನ್ನೆದಿದೇ ಪ್ರಸಾದೆನ್ನಯ್ಯಾ! (ಗು)
-ಟ್ಟಿದು ಸಂಚಿತ ಪ್ರಾರಬ್ಧ ಭೋಗಕ್ಕಯ್ಯಾ! (ಇ)
-ಕ್ಕೆನ್ನಲಾಗದೀಗ ನಿನ್ನಿಷ್ಟ ಹಿಟ್ಟಯ್ಯಾ! (ತಿ)
-ನ್ನುವುದು ಮಾಡಿದ್ದನ್ನೀಗುಚಿತವಯ್ಯಾ! [ಆ]
-ವುದೂ ಕರ್ಮಾನುಸಾರವಾಗಬೇಕಯ್ಯಾ!
ದೇವರಾದರೂ ಇದಕ್ಕೊಪ್ಪಬೇಕಯ್ಯಾ!
ರನೂ ನಾರಾಯಣನಪ್ಪುದಿಂತಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನಿಷ್ಟವಿದಯ್ಯಾ!!!

ರೋಗ ಬೇಗ ವಾಸಿಯಾಗಬೇಕು! (ಯೋ)   3(1008)

-ಗ, ತ್ಯಾಗ ಸಫಲವಾಗಬೇಕು!
ಬೇರೆ ವ್ಯವಹಾರ ಸಾಯಬೇಕು! (ಹ)
-ಗಲಿರುಳು ಧ್ಯಾನ ಸಾಗಬೇಕು!
ವಾಙ್ಮನಸುಗಳೊಂದಾಗಬೇಕು!
ಸಿಟ್ಟು ಹುಟ್ಟಡಗಿ ಹೋಗಬೇಕು! (ಮಾ)
-ಯಾ ಮೋಹ ನಿರ್ನಾಮವಾಗಬೇಕು! (ರಾ)
-ಗ, ದ್ವೇಷಗಳಿಲ್ಲದಾಗಬೇಕು!
ಬೇಡ ಕಣ್ಣಪ್ಪನಂತಾಗಬೇಕು! (ಬೆ)
-ಕು ನಿರಂಜನಾದಿತ್ಯ ತಾ ಬೇಕು!!!

ರೋಗ ಹೋಯ್ತಾರೋಗ್ಯವಾಯ್ತು! (ಯೋ)   4(2300)

-ಗ ಜೀವನ ಪ್ರಾಪ್ತಿಯಾಯ್ತು! (ಅ)
-ಹೀ ರಾತ್ರಿ ಭಜನೆಯಾಯ್ತು! (ತಾ)
-ಯ್ತಾನಾಗೆತ್ತಿಕೊಂಡಂತಾಯ್ತು!
ರೋದನವಿಲ್ಲದಂತಾಯ್ತು! (ಭಾ)
-ಗ್ಯವಿದೆಂಬ ಅರಿವಾಯ್ತು! (ಭ)
-ವಾಬ್ಧಿ ಬತ್ತಿ ಹೋದಂತಾಯ್ತು! (ಆ)
-ಯ್ತು ನಿರಂಜನಾದಿತ್ಯಾಯ್ತು!!!

ರೋಗಕ್ಕೆ ತಕ್ಕ ಚಿಕಿತ್ಸೆಯಾಗಬೇಕು! (ಭೋ)   4(2032)

-ಗ ಜೀವನ ಹತೋಟಿಯಲ್ಲಿಡಬೇಕು! (ಪ)
-ಕ್ಕೆ ಹಿಡಿದಾಗ ತಿಕ್ಕಿ ಸರಿ ಮಾಡ್ಬೇಕು!
ಲೆ ಭಾರಾದಾಗಾರಾಮವಿರಬೇಕು! (ಕ)
-ಕ್ಕಸು ನಿರಾಯಾಸವಾಗಿ ಹೋಗಬೇಕು!
ಚಿತ್ತ ವಿಭ್ರಮಾದಾಗಾಪ್ತ ಮಾತು ಬೇಕು!
ಕಿವುಡಾದಾಗ ಕೊಳೆ ತೆಗೆಯಬೇಕು! (ವ)
-ತ್ಸೆ ಮೂರ್ಛೆ ಹೋದಾಗುಪಚರಿಸಬೇಕು! (ಆ)
-ಯಾಸಾದಾಗ ದ್ರವಾಹಾರ ಕೊಡಬೇಕು!
ರ್ಭಾಗದಾಗ ಭರ್ಗನಾರಾಧಿಸ್ಬೇಕು!
ಬೇಸರಾದಾಗ ಗುರುಧ್ಯಾನ ಮಾಡ್ಬೇಕು! (ಬೇ)
-ಕು ನಿರಂಜನಾದಿತ್ಯನೆಲ್ಲಕ್ಕೂ ಬೇಕು!!!

ರೋಗಿಯಾಗಿ ಬಂದ ಯೋಗಿಯಾಗಿ ಹೋದ!   4(2217)

ಗಿರೀಶ್ವರನ ನಾಮದಲ್ಗೈಕ್ಯನಾದ!
ಯಾಜ್ಞವಲ್ಕ್ಯನಾರೆಂದರಿತವನಾದ!
ಗಿಡ, ಮರದಲ್ಲವ್ನ ಕಂಡವನಾದ!
ಬಂಧ ತನಗಿಲ್ಲೆಂದೊರೆದವನಾದ!
ತ್ತ ಸ್ವರೂಪ ತನ್ನದೆಂದವನಾದ!
ಯೋಗಾಭ್ಯಾಸದಲ್ಲಿ ಸಮಾಧಿಸ್ಥನಾದ! (ತ್ಯಾ)
-ಗಿಯಾಗಿ ವಾಸನಾತ್ರಯ ದೂರನಾದ! (ಮಾ)
-ಯಾಜಾಲವ ಹರಿದೊಗೆದವನಾದ!
ಗಿರಿಸುತೆ ತಾಯಿಯೆಂದಾನಂದನಾದ! (ಅ)
-ಹೋರಾತ್ರಿಯವಳಿಂದ ಪೋಷಿತನಾದ! (ಆ)
-ದ ನಿರಂಜನಾದಿತ್ಯ ದತ್ತ ತಾನಾದ!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ