ಯಂತ್ರ, ತಂತ್ರದಿಂದ ಸ್ವತಂತ್ರವೇನಯ್ಯಾ?   6(3314)

(ಪಾ)-ತ್ರ ತಾನಾಗುವುದಕ್ಕಭ್ಯಾಸ ಮಾಡಯ್ಯಾ!
ತಂಡಗಳು ಹೆಚ್ಚಾದರ ಶಾಂತಿಯಯ್ಯಾ!
(ಕ್ಷಾ)-ತ್ರ ತೇಜಸ್ಸು ರಾಜ್ಯವನ್ನಾಳಬೇಕಯ್ಯಾ!
(ಹಿಂ)-ದಿಂದಿನಾಡಳಿತ ಹೋಲಿಸಿ ನೋಡಯ್ಯಾ!
ರ್ಪದಿಂದ ಶಾಂತಿಸುಖ ಸಿಕ್ಕದಯ್ಯಾ!
ಸ್ವಧರ್ಮವೇನಂದರಿತಿರಬೇಕಯ್ಯಾ!
ತಂದೆ, ತಾಯಿ, ಬಂಧು, ಮಿತ್ರ, ದೇವರಯ್ಯಾ!
(ಪು)-ತ್ರ ಪೌತ್ರವ್ಯಾಮೋಹ ದುಃಖಹೇತುವಯ್ಯಾ!
ವೇದಾಂತ ಕೃತಿಯಲ್ಲಿ ಕಾಣಬೇಕಯ್ಯಾ!
ಡೆಯಿಲ್ಲದ ನುಡಿ ವ್ಯರ್ಥಕಾಣಯ್ಯಾ!
(ಅ)-ಯ್ಯಾ ನಿರಂಜನಾದಿತ್ಯಾನಂದನಾಗಯ್ಯಾ!!!

ಯಜ್ಞಕ್ಕೆ ಶ್ರೀ ರಾಮಾಶ್ರಯ! (ಯ)   5(3111)

-ಜ್ಞ ಶ್ರೀ ರಾಮನಿಗಾಶ್ರಯ!
(ಅ)ಕ್ಕೆ ಲೋಕಕ್ಕುಭಯಾಶ್ರಯ!
ಶ್ರೀ ಗುರುವೆಲ್ಲಕ್ಕಾಶ್ರಯ!
ರಾತ್ರಿ, ಹಗಲೆಲ್ಲಾಶ್ರಯ!
ಮಾರನಿಗಿಲ್ಲಾಶ್ರಯ!
ಶ್ರದ್ಧಾ, ಭಕ್ತಿಗಿದಾಶ್ರಯ! (ಜ)
-ಯ ನಿರಂಜನಾದಿತ್ಯಾಯ!!!

ಯಜ್ಞರಕ್ಷಕಾ ರಾಘವೇಂದ್ರ! (ತ)   5(3110)

-ಜ್ಞ ಗೀತಾಚಾರ್ಯ ಯಾದವೇಂದ್ರ!
ಮಾಲೋಲಾ ರಾಮಕೃಷ್ಣೇಂದ್ರ!
ಕ್ಷಮಶೀಲಾ ಯೋಗ ರಾಜೇಂದ್ರ!
ಕಾಲಾಂತಕಾ ಶ್ರೀ ರಾಮಚಂದ್ರ!
ರಾಸಲೀಲಾನಂದಾ ವ್ರಜೇಂದ್ರ! (ಅ)
-ಘ ವಿನಾಶೀ ರವಿಕುಲೇಂದ್ರ!
ವೆಂಕಟಗಿರೀಂದ್ರಾ ಹರೀಂದ್ರ! (ಭ)
-ದ್ರ ನಿರಂಜನಾದಿತ್ಯ ಬ್ರಹ್ಮೇಂದ್ರ!!!

ಯತಿಗೆ ಐದು, ಸತಿಗೆಪ್ಪತ್ತು ಐದು! (ರೀ)   5(3062)

-ತಿ, ನೀತಿ ಆಧುನಿಕ ಕಾಲಕ್ಕೆ ಇದು! (ಬ)
-ಗೆಬಗೆಯಲಂಕಾರಕ್ಕೆ ಕಾಲವಿದು!
ದೆರಡಿಂದ್ರಿಯ ತೃಪ್ತಿ ಕಾಲವಿದು!
ದುಸ್ಸಂಗಕ್ಕೆ ಮನವೀವ ಕಾಲವಿದು!
ಜ್ಜನರ ಪೀಡಿಸುವ ಕಾಲವಿದು!
ತಿರುಕರ ಬಂಧಿಸುವ ಕಾಲವಿದು!
ಗೆಜ್ಜೆಕಟ್ಟಿ ಕುಣಿಯುವ ಕಾಲವಿದು! (ಬೆ)
-ಪ್ಪನಿಗೆ ಪಟ್ಟಕಟ್ಟುವ ಕಾಲವಿದು! (ಸೊ)
-ತ್ತು ಕಿತ್ತು ಕತ್ತು ಕೊಯ್ಯುವ ಕಾಲವಿದು!
ಇಂದ್ರಜಾಲ ದೈವೀಕವೆಂಬ ಕಾಲವಿದು! (ಇ)
-ದು ನಿರಂಜನಾದಿತ್ಯಗಾಗದಿಹುದು!!!

ಯಥಾನುಶಕ್ತಿ ಗುರು ಸೇವೆ ಸಾಗಲಿ! (ವೃ)   6(4389)

-ಥಾಲಾಪದಾಚಾರಗಳಿಲ್ಲದಿರಲಿ! (ಅ)
-ನುಮಾನ ಗುರುವಿನಲ್ಲಿಲ್ಲದಿರಲಿ!
ರಣಾಗಿ ಶ್ರೀಪಾದಕ್ಕುದ್ಧಾರಾಗಲಿ! (ಭು)
-ಕ್ತಿಗಾಗಿಯೇ ಬಾಳು ಅಲ್ಲವಾಗಿರಲಿ!
ಗುಣಾತೀತತೆಯ ಸ್ಥಿತಿ ಸಿದ್ಧಿಸಲಿ! (ತ)
-ರುಣಿಯರು ಮಾತೃ ಸ್ವರೂಪರಾಗಲಿ!
ಸೇವೆ ಸರ್ವಾತ್ಮಭಾವದಿಂದ ಸಾಗಲಿ!
ವೆಸನಗಳೇನೇನೂ ಇಲ್ಲದಿರಲಿ!
ಸಾರ್ಥಕವಿಂತು ನರಜನ್ಮವಾಗಲಿ! (ಯೋ)
-ಗಭಾಗ್ಯ ಜಗತ್ತಿಗೆಲ್ಲಾ ಲಭಿಸಲಿ! (ಒ)
-ಲಿದು ನಿರಂಜನಾದಿತ್ಯನುದಿಸಲಿ!!!

ಯಮ, ನಿಯಮ, ಆಸನ, ಸತ್ಸಂಘ ಸಾಲೋಕ್ಯ!   1(186)

ದ, ಮತ್ಸರವಳಿದಿದರಿಂದಾ ಸಾಲೋಕ್ಯ!
ನಿಗ್ರಹವಾಗಿಂದ್ರಿಯ ಇರುವುದಾ ಸಾಲೋಕ್ಯ!
ಶಕಾಗಿ ಬ್ರಹ್ಮಚಾರಿಯಾಗಿ ಆ ಸಾಲೋಕ್ಯ!
ನ ನಿರ್ಮಲವಾಗಿ ಸತ್ಯದಿಂದಾ ಸಾಲೋಕ್ಯ!
ಸ್ತೇಯನಾದಾಗ ಆಗುವದದಾ ಸಾಲೋಕ್ಯ!
ತತ ಜಪ, ಶ್ರವಣಾದಿಯಿಂದಾ ಸಾಲೋಕ್ಯ!
ಶ್ವರದಾಸ್ತಿ, ಧನಾಪರಿಗ್ರಹಾ ಸಾಲೋಕ್ಯ!
ತತಾಸನಾನುಷ್ಠಾನಗಳಿಂದಾ ಸಾಲೋಕ್ಯ! (ಸ)
-ತ್ಸಂಘಾಸಕ್ತಿಯಲಿರುವುದರಿಂದಾ ಸಾಲೋಕ್ಯ! (ಅ)
-ಘ ಹರಿದು ನಿಜಗುರಿಗಿರಲಾ ಸಾಲೋಕ್ಯ!
ಸಾಧಿಸೀ ಪರಿ ನಿತ್ಯವಿರಲಾಗಾ ಸಾಲೋಕ್ಯ!
ಲೋಕವಾಸನಾ ನಾಶವಾದರಾಗಾ ಸಾಲೋಕ್ಯ! (ಐ)
-ಕ್ಯ ನಿರಂಜನಾದಿತ್ಯನಲಾದಾಗಾ ಸಾಲೋಕ್ಯ!

ಯಾಕಿಂಥಾ ಸೃಷ್ಟಿಯಾಯ್ತಪ್ಪಾ?   5(2706)

ಕಿಂಚತ್ತಾದ್ರೂ ತಿಳಿಸಪ್ಪಾ! (ವೃ)
-ಥಾ ಕಷ್ಟ ಕೊಡಬೇಡಪ್ಪಾ!
ಸೃಷ್ಟಿಯಲ್ಲಿರ್ಲನ್ಯೋನ್ಯಪ್ಪಾ! (ದೃ)
-ಷ್ಟಿದೋಷ ನಿವಾರಿಸಪ್ಪಾ!
ಯಾಕೀ ರಾಜ್ಯಭಾರವಪ್ಪಾ? (ಆ)
-ಯ್ತ ಶಾಂತಿ ದೇಶದಲ್ಲಪ್ಪಾ! (ಅ)
-ಪ್ಪಾ ನಿರಂಜನಾದಿತ್ಯಪ್ಪಾ!!!

ಯಾಕೆ ಬೇಕೆಲ್ಲ? ಎಲ್ಲಾ ನೀನಾಗಿರುವಿಯಲ್ಲಾ!   2(515)

ಕೆಟ್ಟದ್ದು, ಒಳ್ಳೆಯದೆಂಬುದೆಲ್ಲಾ ಇಲ್ಲವಲ್ಲಾ!
ಬೇಕು, ಬೇಡವೆಂದೇನೂ ಅಳುವುದಿಲ್ಲವಲ್ಲಾ!
ಕಿರಿದು, ಹಿರಿದೆಂಬ ಭೇದವೇನಿಲ್ಲವಲ್ಲಾ! (ಅ)
-ಲ್ಲ, ಹೌದೆಂದು ಜಗಳ ಮಾಡುತಲಿಲ್ಲವಲ್ಲಾ!
ಲ್ಲಿದ್ದರೇನೆಂದು ಶಾಂತಿಯಿಂದಿರುವೆಯಲ್ಲಾ! (ಎ)
-ಲ್ಲಾ ನೀನಾಗಿರಲಿನ್ನೇನು ಬೇಕೆಂದಿಹೆಯಲ್ಲಾ!
ನೀತಿ, ರೀತಿಗಳೆಲ್ಲಾ ಸರಿಯಾಗಿಹುದಲ್ಲಾ!
ನಾಮ, ರೂಪಾತೀತನಾಗಿರುತಿರುವೆಯಲ್ಲಾ!
ಗಿರಿ, ತರು, ಗುಡಿ, ಗುಡಿಸಿಲೆಂದಿಲ್ಲವಲ್ಲಾ!
ರುಚಿಯರುಚಿಯೆಂಬುದು ನಿನಗೇನಿಲ್ಲವಲ್ಲಾ!
ವಿಧಿ, ನಿಷೇಧಗಳು ನಿನಗೇನಿಲ್ಲವಲ್ಲಾ! ‘(ಅ)
-ಯಮಾತ್ಮಾ’ ಸ್ಥಿತಿ ಸದಾ ನಿನ್ನದಾಗಿಹುದಲ್ಲಾ! (ಎ)
-ಲ್ಲಾ ನಿರಂಜನಾದಿತ್ಯನಾಗಿ ತುಂಬಿಹುದಲ್ಲಾ!!!

ಯಾತ್ರಾ ಪಥದಲ್ಲಿ ಬಹುವಿಧ ತಾಣ! (ಪಿ)   6(4385)

-ತ್ರಾರ್ಜಿತದ ಹಕ್ಕುಗಳನ್ನಲ್ಲಿ ಕಾಣ!
ಡ್ಬೇಕೊದಗಿದ್ದರಲ್ಲಿ ತೃಪ್ತಿ ಜಾಣ! (ಪಂ)
-ಥ, ಪರಾಕ್ರಮಾದಿಗಳಿಗಲ್ಲ ಹಣ!
ಲಿತರ ಸೇವೆಯೆಂಬುದು ಸುಗುಣ! (ಕ)
-ಲ್ಲಿನ ಗೊಂಬೆಯ ಕೈಲಿದ್ದೇನ್ಫಲ ಬಾಣ?
ಯಸುವುದಿಲ್ಲ ಉಪಚಾರ ಹೆಣ!
ಹುಸಿ ಮಾಯೆಯಿಲ್ಲಿಹುದು ದೇಹ ಋಣ!
ವಿವೇಕವಿಲ್ಲದವನಪ್ಪನು ಕೋಣ!
ರ್ಮಬಿಟ್ಟು ಕೆಟ್ಟು ಹೋದನು ರಾವಣ!
ತಾಯಿ, ತಂದೆ, ರಾಮನೆಂದ ವಿಭೀಷಣ! (ರ)
-ಣ ನಿರಂಜನಾದಿತ್ಯರಾಮಗೆ ತೃಣ!!!

ಯಾತ್ರಾರ್ಥಿಗಳಿಗನಾಯಾಸ ದರ್ಶನ!   6(4010)

ತ್ರಾಣಗುಂದಿದ ಭಕ್ತಳಿಗೆ ದರ್ಶನ! (ಪ್ರಾ)
-ರ್ಥಿಸಿದ ರೀತಿಗೆ ಸಾರ್ಥಕಾ ದರ್ಶನ! (ಜ)
-ಗತ್ತು ಬಯಸುವುದಿಂದು ಪ್ರದರ್ಶನ! (ಬಾ)
-ಳಿಗಿದರಿಂದ ಆಗದು ಪ್ರಯೋಜನ!
ತಿಗೆಟ್ಟು, ಮತಿಗೆಟ್ಟಿರೆಲ್ಲಾ ಜನ!
ನಾನಾ ಉಪಾಧಿಗೊಳಗಾಯ್ತವ್ರ ಮನ!
ಯಾರೂ ಭಜಿಸದಿಹರು ಪ್ರತಿ ದಿನ!
ತ್ಯ ಬಿಟ್ಟು ಸುತ್ತುವರು ನಿಶಿದಿನ!
ರ್ಪ, ದಂಭಕ್ಕಾಗುತ್ತಲಿದೆ ಸನ್ಮಾನ! (ಸ್ಪ)
-ರ್ಶ ಮಾಡ್ಲಿಕ್ಕೆ ಸದ್ಗುರು ಪಾದವಮಾನ! (ನೆ)
-ನಸಿರಿ, ನಿರಂಜನಾದಿತ್ಯಾನಂದ!!!

ಯಾತ್ರೆ ಪೂರೈಸಿತು ತಾಪತ್ರಯಾರಂಭಿಸಿತು! (ಪಾ)   5(3118)

-ತ್ರೆಗಳೆಲ್ಲಾ ಒಂದೊಂದೇ ಖಾಲಿಯಾಗುತ್ತಾ ಬಂತು!
ಪೂರ್ವದ ವೃತ್ತಿಗೇ ಮನಸ್ಸೋಡುವಂತಾಯಿತು!
ರೈಲು ಸಂಚಾರಕ್ಕೀಗ ದಾರಿಯಿಲ್ಲದಾಯಿತು!
ಸಿಪ್ಪೆ ಸಮೇತ ಹಣ್ಣು ತಿನ್ನಲೇಬೇಕಾಯಿತು!
ತುಪ್ಪ, ಹಾಲು, ಮೊಸರು ಮಾಯವಾಗಿ ಹೋಯಿತು!
ತಾನೇಕೆ ಹೀಗಾದೆಂದು ಯೋಚಿಸುವಂತಾಯಿತು!
ಡಬಾರದಷ್ಟು ಕಷ್ಟ, ನಷ್ಟ ಪಟ್ಟಾಯಿತು!
ತ್ರಯೋದಶೀ ಪ್ರದೋಷವಿಂದೆಂದರಿವಾಯಿತು!
ಯಾಗ, ಯೋಗಕ್ಕಿಂತಮೋಘ ಭಜನೆಯಾಯಿತು!
ರಂಗನಾಥನಾನಂದಕ್ಕೆಣೆಯಿಲ್ಲದಾಯಿತು!
ಭಿಕ್ಷುವಿನಭೀಷ್ಟಗಳೆಲ್ಲಾ ನೆರವೇರಿತು!
ಸಿಹಿ ಪೊಂಗಲ್‍ ತಿಂದೆಲ್ಲರ ಹೊಟ್ಟೆ ತುಂಬಿತು!
ತುರಿಯಾತೀತ ನಿರಂಜನಾದಿತ್ಯಗಾಯಿತು!!!

ಯಾರ ಮೆಚ್ಚಿಸ್ಯಾರುಳಿದರಯ್ಯಾ? [ತ]   4(2059)

-ರತರ್ದಾಟ ಪರಿಪರ್ಯಾಸೆಗಯ್ಯಾ! (ಉ)
-ಮೆಯರಸನಿಗಾವಾಸೆಯಯ್ಯಾ? (ಸ)
-ಚ್ಚಿದಾನಂದ ತಾನಾಗಿಹನಯ್ಯಾ! (ಸ)
-ಸ್ಯಾದ್ಯೆಲ್ಲಕ್ಕೂ ಸ್ವಾಮಿಯವನಯ್ಯಾ! (ಇ)
-ರುವನವ ನಿರ್ಲಿಪ್ತನಾಗ್ಯಯ್ಯಾ! (ಬಾ)
-ಳಿಗದೇ ನಿಜಾದರ್ಶ ಕಾಣಯ್ಯಾ!
ಮೆ, ಶಮೆಯಿಂದವನಾಗಯ್ಯಾ! (ನ)
-ರಕ ಭಯವಾಗ ಮಾಯವಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಳಿಯಯ್ಯಾ!!!

ಯಾರ ಸ್ಮರಿಸಿ ಯಾರಿಗೀಗೇನಾಯ್ತು?   6(3897)

ಹಸ್ಯವಿದರದ್ದರಿಯದಾಯ್ತು!
ಸ್ಮರಣೆಯೇ ಕೊನೆ ತನಕವಾಯ್ತು!
ರಿಪು ಸಂಹಾರವೀಗಾಗದಂತಾಯ್ತು!
ಸಿರಿಧರನ ಪತ್ತೆಯಾಗದಾಯ್ತು!
ಯಾದವೇಂದ್ರನ ಅಭಯವೇನಾಯ್ತು!
ರಿಸ್ಯುಕ್ತಿಯನುಭವವಾಗದಾಯ್ತು!
ಗೀಳುಗಳಿಗೆ ಮಿತಿಯಿಲ್ಲದಾಯ್ತು!
ಗೇಣಿದಾರಗೊಡೆತನವೀಗಾಯ್ತು!
ನಾಥನಿಲ್ಲದ ಮಕ್ಕಳಾದಂತಾಯ್ತು! (ಆ)
-ಯ್ತು ನಿರಂಜನಾದಿತ್ಯೇಚ್ಛೆಯಂತಾಯ್ತು!!!

ಯಾರದೋ ಶ್ವಾನ, ಯಾರಿಗೋ ಜವಾನ! (ಪ್ರಾ)   6(4354)

-ರಬ್ಧದಂತೆ ಸಾಗುತಿದೆ ಜೀವನ!
ದೋಷವೆಣಿಸುತಿದೆ ಜನಮನ! (ವಿ)
-ಶ್ವಾಸವಿಲ್ಲದಿದ್ದರೆಂತು ಪಾವನ?
ಶ್ವರಕ್ಕಂಟಿರ್ಬಾರದು ಭಾವನ!
ಯಾದವೇಂದ್ರನಿಂದಾದ ಧನ್ಯರ್ಜುನ! (ಅ)
-ರಿತು ತತ್ವವ ಮಾಡಿದ ಕದನ!
-ಗೋಪಾಲ ಮಾಡಿದನು ಗೋಪಾಲನ!
ಟ್ಟಿಯಾಗಿ ಕೊಂದ ಕಂಸ ಮಾವನ!
ವಾರಿಜಾಂಬಕಿಗಿತ್ತನು ವಸನ! (ಘ)
-ನ ನಿರಂಜನಾದಿತ್ಯ ಕೃಷ್ಣ ಪ್ರಾಣ!!!

ಯಾರಮೇಲಾರಿಗೇನಧಿಕಾರ? (ಕ)   5(2696)

-ರ ಚರಣಕ್ಕೆ ಕಷ್ಟ ಅಪಾರ!
ಮೇಲ್ವಿಚಾರಿ ಮನಕ್ಕಹಂಕಾರ!
ಲಾಭದಕ್ಕಿದರಿಂದ ನಕಾರ! (ಮೈ)
-ರಿಗಳಿಂದಾಗಾಗದಕ್ಪ್ರಹಾರ! (ಯೋ)
-ಗೇಶ್ವರನಿಂದಾಗ್ಬೇಕುಪಕಾರ! (ಅ)
-ನವರತದ್ಕಿರ್ಬೇಕ್ಸದಾಚಾರ!
ಧಿಗ್ಭ್ರಾಂತಿಯಿಂದೋಡ್ಬೇಕ್ದುರಾಚಾರ!
ಕಾಲಹರನಿಗಾಗ ಜೈಕಾರ! (ಮಾ)
-ರ ನಿರಂಜನಾದಿತ್ಯಗೆ ಚಾರ!!!

ಯಾರಾಳಬಲ್ಲರೆಮ್ಮ ನಾಡ?   5(3224)

ರಾಕ್ಷಸರು ಹೆಚ್ಚಿದಾ ನಾಡ! (ಕಾ)
-ಳ ಸಂತೆಯ ಬಾಳಿನಾ ನಾಡ!
ಯಲಾಡಂಬರದಾ ನಾಡ! (ಬ)
-ಲ್ಲವರನ್ನು ಒಲ್ಲದಾ ನಾಡ! (ಸೆ)
-ರೆ ಸೇಂದಿ ಕುಡಿಯುವಾ ನಾಡ! (ಒ)
-ಮ್ಮತವಿಲ್ಲದಿರುವಾ ನಾಡ!
ನಾಸ್ತಿಕತೆ ಹೆಚ್ಚಿದಾ ನಾಡ! (ತ)
-ಡ ನಿರಂಜನಾದಿತ್ಯ ಮಾಡ!!!

ಯಾರಿಗರುಹಲೀ ಮನದ ದುಃಖ?   6(3552)

ರಿಪುಕುಲಾಂತಕ ದತ್ತನೇ ಸಖ!
ಣಿಸಬಾರದು ತಪ್ಪಾ ಪ್ರಮುಖ!
ರುಜುಮಾರ್ಗಿಯಾಗೆಂಬಾ ನಿಜ ಸಖ!
ರಿಭಜನೆ ಮಾಡೆಂಬಾ ಪ್ರಮುಖ!
ಲೀಲಾ ಮಾರುತಿ ಅವನೆಂಬಾ ಸಖ!
ರೆಯ್ಬೇಡವನನ್ನೆಂಬಾ ಪ್ರಮುಖ!
ಡೆ, ನುಡಿ, ಅವನಂತಿರ್ಲೆಂಬಾ ಸಖ!
ರ್ಶನದಿಂದಾನಂದೆಂಬಾ ಪ್ರಮುಖ!
ದುಃಖ ಶಾಂತಿಯಿಂತಪ್ಪುದೆಂಬಾ ಸಖ!
ಗ ನಿರಂಜನಾದಿತ್ಯ ಪ್ರಮುಖ!!!

ಯಾರಿಗಾಗಿ ಹೂ ಬಿಟ್ಟಿಹುದು?   6(3438)

(ಹ)-ರಿಯಾನಂದಕ್ಕಾದಿಹುದು!
ಗಾಳಿಗೆ ಕಂಪೀಯಲಿಹುದು!
ಗಿರಾಕಿಗಾಶಿಸದಿಹುದು!
ಹೂ ನೀನಾಗೆನ್ನುತ್ತಲಿಹುದು!
ಬಿಸಿಲ್ಗರಿ ಜಲೇಗೆಂದಿಹುದು!
(ಕ)-ಟ್ಟಿ ಮುಡಿಯಲಲ್ಲೆಂದಿಹುದು!
ಹುಟ್ಟು ಸಾರ್ಥಕವಾಗಿಹುದು!
(ಇ)-ದು ನಿರಂಜನಾದಿತ್ಯಹುದು!!!

ಯಾರಿಗಾಗೇನು ಬರೆಯಲಯ್ಯಾ?   5(3088)

ರಿಸಿಗಳೆಲ್ಲಾ ಹೇಳಿಹರಯ್ಯಾ!
ಗಾರುಡಿಯಾಟ ಬಿಟ್ಟುಬಿಡಯ್ಯಾ!
ಗೇರ್ಬೀಜದಂತಾತ್ಮಗಂಟಿರಯ್ಯಾ!
ನುಡಿ, ನಡೆಯೊಂದಾಗಿರಲಯ್ಯಾ!
ಸವನಾಗಿರೀಶ್ವರಗಯ್ಯಾ! (ಸೆ)
-ರೆ ಕುಡಿವಭ್ಯಾಸ ಬೇಡಯ್ಯಾ!
ದುವಂಶಾಂತ್ಯದರಿಂದಾಯ್ತಯ್ಯಾ!
ಯವಾಗ್ಬೇಕ್ಮನೋವೃತ್ತಿಯಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯ ನಮ್ಮಯ್ಯಾ!!!

ಯಾರಿಗಾವಾಗ ದರ್ಶನವೆಂದಾತ ಬಲ್ಲ!   5(3101)

ರಿಸಿ ಮುನಿಗಲಿಗೆ ಗೋಚರವೆಲ್ಲೆಲ್ಲ!
ಗಾರುಡಿಯಾಟಕ್ಕವನೊಲಿಯುವುದಿಲ್ಲ!
ವಾದ, ವಿವಾದಕ್ಕವ ದಕ್ಕುವವನಲ್ಲ!
ರುಡವಾಹನಗನ್ಯ ಯಾನ ಬೇಕಿಲ್ಲ!
ರಿದ್ರ, ಶ್ರೀಮಂತರೆಂಬ ಭೇದವಗಿಲ್ಲ! (ಸ್ಪ)
-ರ್ಶಮಣಿಯಂತವನ ಲೀಲಾಜಾಲವೆಲ್ಲ!
ಳಿನ ಬಾಂಧವನನ್ನರಿತವರಿಲ್ಲ! (ಮಾ)
-ವೆಂದು ಬೇವು ತಿನ್ನಿಸುವವನವನಲ್ಲ!
ದಾರಿಯುದ್ದಕ್ಕೂ ನಾಮಸ್ಮರಣೆಯೇ ಬೆಲ್ಲ!
ತ್ವಾರ್ಥಾನುಭವವಿಲ್ಲದವನೇನ್ಬಲ್ಲ?
ಹು ಸುಲಭದಿಂದೊದಗುವುದಿಲ್ಲ! (ಬ)
-ಲ್ಲ ನಿರಂಜನಾದಿತ್ಯಗಿದು ಕಷ್ಟವಲ್ಲ!!!

ಯಾರಿಗೂ ಏನೂ ಮಾಡುವ ಸ್ವತಂತ್ರವಿಲ್ಲ! (ಅ)   6(3810)

-ರಿತಿದನು ಹರಿನಾಮ ಸ್ಮರಿಸಿರೆಲ್ಲ!
ಗೂಬೆ ಕೂಗಿದರೆ ಹೆದರಬೇಕಾಗಿಲ್ಲ!
ನಾಗ್ಬೇಕೋ ಅದಕ್ಕದು ಕಾರಣವಲ್ಲ!
ನೂತನ, ಪುರಾತನ ಕಲ್ಪನೆಗಳೆಲ್ಲ!
ಮಾಡಿಸುವ ಮಾಲಿಕನದ್ದೇ ಚಿತ್ತವೆಲ್ಲ! (ಕಾ)
-ಡು, ನಾಡುಗಳು ಅವನಧೀನದಲ್ಲೆಲ್ಲ!
ಸನಾಶನದೇರ್ಪಾಡು ಅವನದೆಲ್ಲ!
ಸ್ವರೂಪ ಧ್ಯಾನ ಮಾಡ್ಬೇಕ್ಹಗಲಿರುಳೆಲ್ಲ!
ತಂತ್ರ, ಮಂತ್ರ, ಯಂತ್ರಗಳ್ಹೊಟ್ಟೆ ಪಾಡಿಗೆಲ್ಲ! (ಮೂ)
-ತ್ರ, ಮಲ, ತಡೆದರುದ್ಧಾರವಾಗ್ವುದಿಲ್ಲ!
ವಿವೇಕ, ವಿಚಾರ, ವೈರಾಗ್ಯ ಸಾಧಿಸ್ರೆಲ್ಲ! (ಪು)
-ಲ್ಲ ನಿರಂಜನಾದಿತ್ಯನಾದರ್ಶವಿದೆಲ್ಲಾ!!!

ಯಾರಿಗೂ ತೊಂದ್ರೆ ಕೊಡ್ದೆ ಜನ್ಮ ಮುಗಿಸು! (ಪ)   5(2974)

-ರಿಪರಿಯಾಸೆಗಳನ್ನು ಕತ್ತರಿಸು!
ಗೂರ್ಲುಬ್ಬಸಗಳನ್ನು ಗುಣಪಡಿಸು!
ತೊಂಡರ ತೊಂಡನಪ್ಪಂತನುಗ್ರಹಿಸು! (ಮು)
-ದ್ರೆ ಶ್ರೀಪಾದದ್ದು ಎದೆಯಲ್ಲಿ ಮೂಡಿಸು!
ಕೊಳಕು ವಾಸನೆಯನ್ನೆಲ್ಲಾ ಅಳಿಸು! (ಹಾ)
-ಡ್ಡೆ ಹರಿನಾಮವನ್ನಿರದಂತಿರಿಸು!
ನ ಸಂದಣಿಯಿಂದ ದೂರವಿರಿಸು! (ತ)
-ನ್ಮಯಾತ್ಮನಾಗಿರುವಂತಾಶೀರ್ವದಿಸು!
ಮುನಿ, ಋಷಿಗಳ ಗುರಿಗೆ ಏರಿಸು!
ಗಿರಿಧರನ ಸಂದರ್ಶನ ಕೊಡಿಸು! (ಅ)
-ಸು ನಿರಂಜನಾದಿತ್ಯನಲ್ಲಿ ಬೆರೆಸು!!!

ಯಾರಿಗೇನಾಗ್ಬೇಕ್ನನ್ನಿಂದೆಂಬುದ್ನಾ ಬಲ್ಲೆ!   6(3525)

ರಿಪುಗಳಿಷ್ಟಕ್ಕೆ ತಲೆದೂಗಲೊಲ್ಲೆ!
ಗೇಲೆ, ಬೇಲಿಗಳ ದಾಟಿ ನಾನಿರ್ಬಲ್ಲೆ!
ನಾನಾರೆಂಬರಿವನ್ನು ಮರೆಯಲೊಲ್ಲೆ!
(ಹೋ)-ಗ್ಬೇಕ್ಬರ್ಬೇಕೆಂಬ ಚಪಲ ಬಿಡಬಲ್ಲೆ!
(ಬೇ)-ಕ್ನನಗವನ ಸಾಕ್ಷಾತ್ಕಾರವೀಗಿಲ್ಲೇ!
(ನಿ)-ನ್ನಿಂಗಿತವೇನೆಂದು ಚೆನ್ನಾಗಿ ನಾ ಬಲ್ಲೆ!
(ಎಂ)-ದೆಂದಿಗೂ ಪರನಿಂದೆ ನಾ ಮಾಡಲೊಲ್ಲೆ!
ಬುಗುರಿಯಾಟವೆಷ್ಟುಹೊತ್ತೆಂದ್ನಾಬಲ್ಲೆ!
(ಬಂ)-ದ್ನಾ, ಹೋದ್ನಾ ಎಂಬ ಕುಚೋದ್ಯನಾ ಮಾಡ್ಲೊಲ್ಲೆ!
ರ್ವುದು, ಹೋಗ್ವುದು, ದೈವೇಚ್ಛೆಯೆಂದ್ಬಲ್ಲೆ!
(ಬ)-ಲ್ಲೆ, ನಿರಂಜನಾದಿತ್ಯ ಗತಿಯೆಂದ್ಬಲ್ಲೆ!!!

ಯಾರಿಗೇನಾನಂದವಿಹುದಯ್ಯಾ? (ಅ)   6(3338)

-ರಿಯದಾಗಿದೆ ಹೇಳು ನೀನಯ್ಯಾ!
ಗೇದು, ಗೇದು ಸುಸ್ತಾಗಿಹೆನಯ್ಯಾ!
ನಾಮಕ್ಕೆ ಬೆಲೆಯಿಲ್ಲವೇನಯ್ಯಾ!
ನಂಬಿಕೆಗನ್ಯಾಯಮಾಡ್ಬೇಡಯ್ಯಾ!
ತ್ತಾರ್ತರಕ್ಷಕನಲ್ವೇನಯ್ಯಾ!
ವಿಧಿಸೆನಗಾಜ್ಞೆಯನ್ನೀಗಯ್ಯಾ!
ಹುಸಿಯಾಗ್ಬಾರ್ದು ನಿನ್ನಮಾತಯ್ಯಾ!
ರ್ಶನಕೊಟ್ಟುದ್ಧಾರ ಮಾಡಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯ ದತ್ತಯ್ಯಾ!!!

ಯಾರಿಗೋ ಜೋಡ್ಸಿಟ್ಟ ತಿಂಡಿ ಯಾರೋ ತಿಂದ್ರು! (ಊ)   6(4265)

-ರಿಗೆ ಹೊರಟವ್ರು ಸ್ಮಶಾನಕ್ಕೆ ಹೋದ್ರು!
ಗೋಧಿ ತರ್ತೇನೆಂದು ಅಕ್ಕಿ ತಗೊಂಡ್ಬಂದ್ರು!
ಜೋಳಿಗೆಗೇನು ಬೀಳುತ್ತೆಂದಾಬಲ್ಲು? (ಮಾ)
-ದ್ಸಿದಂತೆ ಮಾಡಿ ಸುಮ್ನಗಿರಬೇಕೆಲ್ರು! (ಅ)
-ಟ್ಟಹಾಸಾರ್ಭಟಗಳಿಂದೆಲ್ಲರೂ ಕೆಟ್ರು!
ತಿಂದು ಪಂಚಭಕ್ಷ್ಯವನ್ನೊದ್ದಾಡಿ ಸತ್ತ್ರು!
ಡಿಕ್ಕಿ ಹೊಡೆದು ಜನ್ಮ ಮುಗಿಸಿಬಿಟ್ರು!
ಯಾಕೆ ಹೀಗಾಯ್ತೆಂದರಿಯದೇ ಕೆಟ್ಟು!
ರೋಗಾದಿ ಪೀಡೆಗಳಿಂದಲೂ ಕಂಗೆಟ್ಟು!
ತಿಂಬಾಗುಂಬಾಗೆಚ್ಚರ ತಪ್ಪಿ ಬಿದ್ಬಿಟ್ಟು! (ಬಂ)
-ದ್ರು ನಿರಂಜನಾದಿತ್ಯಗೆ ಮೊರೆಯಿಟ್ಟು!!!

ಯಾರಿಚ್ಛೆ ಯಾವಾಗ ಫಲಿಸಿದೆ? (ಹ)   4(2435)

-ರಿಯಿಚ್ಛೆಯಂತೆಲ್ಲಾ ಆಗುತ್ತಿದೆ! (ಸ್ವೇ)
-ಚ್ಛೆಯಹಂಕಾರಡಗಿ ಹೋಗಿದೆ!
ಯಾರಲ್ಲೂ ತಪ್ಪೆಣಿಸದಾಗಿದೆ!
ವಾಙ್ಮನಸ್ಸವನಲ್ಲೊಂದಾಗಿದೆ! (ಭ)
-ಗವದ್ರೂಪವೆಲ್ಲವೆಂದಾಗಿದೆ! (ಸ)
-ಫಲವೀ ಜನ್ಮವಾಗ್ಬೇಕಾಗಿದೆ! (ಮಾ)
-ಲಿಕನಿಷ್ಟಕ್ಕೆ ಶಿರಬಾಗಿದೆ! (ಹು)
-ಸಿಯಾಸೆಗಳ ಬಿಡಲಾಗಿದೆ! (ಎ)
-ದೆ, ನಿರಂಜನಾದಿತ್ಯಗಾಗಿದೆ!!!

ಯಾರಿಚ್ಛೆಯಂತಾವಾಗೇನಾಗಿದೆ?   6(3715)

ರಿಸಿಗಳೂ ಸೋಲೊಪ್ಪಿಯಾಗಿದೆ! (ಇ)
-ಚ್ಛೆ ವಸಿಷ್ಟನದ್ದು ಸುಳ್ಳಾಗಿದೆ! (ತಾ)
-ಯಂದಿರು ಮಕ್ಳ ಕಳ್ಕೊಂಡಾಗಿದೆ!
ತಾಪಸಿಗಳ ಜಂಭಡಗಿದೆ!
ವಾಮಾಂಗಿಯ ವಿಯೋಗ ಬಂದಿದೆ!
ಗೇಣಿ ಸಂದಾಯವಿಲ್ಲದಾಗಿದೆ!
ನಾಸ್ತಿಕರ ರಾಜ್ಯಭಾರಾಗಿದೆ! (ಯೋ)
-ಗಿಗಳೂ ಗೋಳಿಡುವಂತಾಗಿದೆ! (ತಂ)
-ದೆ ನಿರಂಜನಾದಿತ್ಯೆಂದೂ ಒಂದೇ!!!

ಯಾರಿದ್ದರೇನು, ಸತ್ತರೇನು ಸೂರ್ಯತ್ತನೇನು?   3(1173)

ರಿವಾಜಿನಂತೆ ಮೂಡಿ ಮುಳುಗುತ್ತಿಲ್ಲವೇನು? (ಇ)
-ದ್ದವರನ್ನುದ್ಧಾರ ಮಾಡದಿರುತಿಹನೇನು? (ಆ)
-ರೇನೆಂದರೂ ಪ್ರತಿ ಮಾತು ತಾನಾಡುವನೇನು? (ತ)
-ನು, ಮನ, ಕರಗಿದರೂ ಆತನಿಲ್ಲವೇನು?
ಚ್ಚಿದಾನಂದ ರೂಪನಾಗಿರುವನವನು! (ಹೆ)
-ತ್ತವನೂ, ಹೊತ್ತವನೂ, ಆತ ತಾನಲ್ಲವೇನು?
ರೇಗಾಡಿ, ಕೂಗಾಡಿ, ಹೊಡೆದಾಡುತ್ತಿಹನೇನು?
ನುಡಿಯದೇ ನಡೆದಾದರ್ಶನಾಗಿಲ್ಲವೇನು?
ಸೂರ್ರಧಾರಿಯಾಗಿ ಸರ್ವಸಾಕ್ಷಿಯಾಗಿಹನು! (ಕಾ)
-ರ್ರ್ಯದಕ್ಷತೆಯಲ್ಲಾತದ್ವಿತೀಯನಲ್ಲವೇನು? (ಇ)
-ತ್ತತ್ತೆತ್ತೆತ್ತವನಾತ್ಮ ಬೆಳಗುತಿಲ್ಲವೇನು? (ತಾ)
ನೇ ತಾನಾಗಿ ಪರಬ್ರಹ್ಮನಾಗಿರುತಿಹನು! (ಅ)
-ನುಪಮಾತ್ಮ ಶ್ರೀ ನಿರಂಜನಾದಿತ್ಯನವನು!!!

ಯಾರಿವಳೊಳಗೆ ಬಂದವಳು? (ಹ)   5(3174)

-ರಿನಾಮ ಹಾಡುತ್ತಿರುತ್ತಿಹಳು!
ಸ್ತ್ರಲಂಕಾರವಿಲ್ಲದಿಹಳು! (ಬಾ)
-ಳೊಡೆಯನಿಗೊಪ್ಪಿಸುತ್ತಿಹಳು! (ಕೊ)
-ಳಕು, ಥಳಕೇನಿಲ್ಲದಿಹಳು!
ಗೆಳೆತನಕ್ಕಪೇಕ್ಷಿಸಿಹಳು!
ಬಂಧು, ಬಳಗ ನೀನೆನ್ನುವಳು!
ಯೆ ತೋರಿರ್ಸಿಕೊಳ್ಳೆನುವಳು!
ರಾಂತರ್ಮುಖಿ ಮನಸ್ಸಿನವಳು! (ಬಾ)
-ಳು ನಿರಂಜನಾದಿತ್ಯಾತ್ಮನೊಳು!!!

ಯಾರು ಎಲ್ಲಿಗೆ ಕರೆದರೇನು? (ಗು)   5(3037)

-ರುದೇವನಾಜ್ಞೆಯಾಗಬೇಡ್ವೇನು?
ಲ್ಲಾ ಬಲ್ಲವನವನಲ್ವೇನು? (ಇ)
-ಲ್ಲಿ ಇರಿಸುವವನವನು! (ಹೋ)
-ಗೆನ್ನದಲ್ಲಾಡಲಾರನಿವನು!
ಜ್ಜ ಪೂರೈಸಬೇಡೇನವನು? (ಕೆ)
-ರೆ, ಭಾವಿಗೆಲ್ಲಾ ದೂಡುತ್ತಿಹನು!
ತ್ತನಿಗೆ ಶರಣು ಇವನು! (ಈ)
-ರೇಳು ಲೋಕಕ್ಕೊಡೆಯನವನು! (ಸೂ)
-ನು ನಿರಂಜನಾದಿತ್ಯನಿವನು!!!

ಯಾರು ಕೇಳುವರೆನ್ನ ಮೊರೆಯ? (ಗು)   5(3107)

-ರುದೇವಗಿನ್ನೂ ಬಂದಿಲ್ಲ ದಯ!
ಕೇಡು ಮಾಡುವವರ್ಗೆಲ್ಲಾ ಜಯ! (ಬಾ)
-ಳು ಬರಡಾದಮೇಲೇಕೀ ಕಾಯ?
ರದರಾಜ ತೆರೆಯ ಬಾಯ! (ದೊ)
-ರೆಯಬೇಕೀಗ ಭಕ್ತಗಾಶ್ರಯ! (ತ)
-ನ್ನ ತಾನರಿವುದಕ್ಬೇಕಭಯ!
ಮೊಗದೋರ್ಬೇಕೀಗಾ ದಯಾಮಯ! (ಧ)
-ರೆಗಾಗ್ವುದಾಗಾನಂದಾತಿಶಯ! (ಜ)
-ಯ ನಿರಂಜನಾದಿತ್ಯ ದೇವಾಲಯ!!!

ಯಾರು ಗತಿ ನಿನಗೆ ಮುದ್ದು ಕಂದಾ? (ಗು)   5(3020)

-ರುದೇವನೆಂದನ್ನು ಆನಂದದಿಂದಾ! (ಆ)
-ಗಬೇಕವನಿಂದ ನೀನೇ ಗೋವಿಂದಾ!
ತಿಳಿದರಾತನುಪದೇಶಾನಂದಾ!
ನಿತ್ಯವಲ್ಲೀ ಜಗತ್ತು ನನ್ನ ಕಂದಾ!
ರಜನ್ಮದುದ್ಧಾರ ಆತನಿಂದಾ!
ಗೆಳೆತನವನದು ಶುದ್ಧ ಕಂದಾ!
ಮುರಹರನವ ಶ್ರೀಹರಿ ಕಂದಾ! (ಸ)
-ದ್ದು ಮಾಡದೇ ಸೇರಾ ಶ್ರೀಪಾದ ಕಂದಾ!
ಕಂಡರರಿವುದು ಮಹಿಮೆ ಕಂದಾ!
ದಾತ ನಿರಂಜನಾದಿತ್ಯಾತ ಕಂದಾ!!!

ಯಾರು ದ್ರೋಹಿಯೆಂದೆನ್ನ ಕರೆದರೇನು? (ಗು)   5(3014)

-ರು ನಿನಗೆನ್ನಂತರಂಗರಿಯದೇನು?
ದ್ರೋಣಪುತ್ರ ಚಿರಾಯುವಾಗಿಲ್ಲವೇನು?
ಹಿತಾಹಿತವನ್ನರಿತವನು ನೀನು! (ಬಾ)
-ಯೆಂದು ಕೂಗಿ ಕರೆವೆ ನಿನ್ನನ್ನು ನಾನು!
ದೆವ್ವಗಳನ್ನು ಸದೆ ಬಡೀಗ ನೀನು! (ನಿ)
-ನ್ನ ನಂಬಿದವರ ಕಾಯಬೇಕು ನೀನು!
ಲಿಯಟ್ಟಹಾಸಕ್ಕೆ ಕಾರಣ ನೀನು!
ರೆಕ್ಕೆ, ಪುಕ್ಕ ಕಿತ್ತೆಸೆಯಬೇಕು ನೀನು!
ತ್ತನಿಗಿದ ಮೊರೆಯಿಡುವೆ ನಾನು!
ರೇಗಬೇಡಿದಕೆನ್ನಮೇಲೆಂಬೆ ನಾನು! (ಸೂ)
-ನು ನಿರಂಜನಾದಿತ್ಯ ದತ್ತಗೆ ನಾನು!!!

ಯಾರು ಯಾರಲ್ಲೇಕತೃಪ್ತರಾಗಬೇಕು? (ಗು)   3(1021)

-ರುವೆಲ್ಲರಲ್ಲಿಹನೆಂಬ ಜ್ಞಾನಬೇಕು!
ಯಾರಿಂದಾಯ್ತಾಯಾಸವೆಂದರಿಯಬೇಕು! (ಕಾ)
-ರಣ ತಾನೇ ಎಂದು ಮನಗಾಣಬೇಕು! (ಉ)
-ಲ್ಲೇಖಿಸದೆ ಸರಿ ಮಾಡಿಕ್ಕೊಳ ಬೇಕು!
ಷ್ಟವಾದರೂ ತಾಳ್ಮೆಯಿಂದಿರಬೇಕು!
ತೃಪ್ತಿ ತನಗದರಿಂದ ಬರಬೇಕು! (ಗು)
-ಪ್ತವಾಗಿ ಸಾಧನೆ ಸಾಗುತ್ತಿರಬೇಕು!
ರಾಮಭಕ್ತಿ ನಿಶ್ಚಲವಾಗಿರಬೇಕು!
ತಿ ಸ್ವಸ್ಥಿತಿಯಲ್ಲಿ ನೆಲಸಬೇಕು!
ಬೇಕಿದಕೆ ಗುರುಕೃಪೆಯೊಂದೇಬೇಕು!
ಕುಷ್ಠ ನಿರಂಜನಾದಿತ್ಯಳಿಸಬೇಕು!!!

ಯಾರು ಯಾರೆಂದರುಹುವುದು ಕಾಲ! (ತು)   4(2221)

-ರುಕರುಗಳಿಗಾಗಿತ್ತೊಂದು ಕಾಲ! (ನ್ಯಾ)
-ಯಾನ್ಯಾಯ ತೀರ್ಮಾನಕ್ಕದೊಂದು ಕಾಲ! (ನೂ)
-ರೆಂಟು ನಾಮ ಜಪಿಸಲ್ಕೊಂದು ಕಾಲ! (ಅ)
-ದರ ಪ್ರತಿಫಲಕ್ಕಿನ್ನೊಂದು ಕಾಲ! (ಕು)
-ರು ಭೂಪತಿಯಾರ್ಭಟಕ್ಕೊಂದು ಕಾಲ! (ಇ)
-ಹುದು ಪಾಂಡವರಿಗೂ ಒಂದು ಕಾಲ! (ಆ)
-ವುದೂ ಒಂದೇರೀತಿರಿಸದೀ ಕಾಲ!
ದುರ್ಜನನೂ ಸಜ್ಜನನೊಂದು ಕಾಲ!
ಕಾಲಾಕಾಲ್ದರಿವಿಗೂ ಒಂದು ಕಾಲ! (ಕಾ)
-ಲ ನಿರಂಜನಾದಿತ್ಯಾನಂದ ಲೀಲಾ!!!

ಯಾರು ಸತ್ತ್ರೆ ಯಾರಿಗೇನು ದುಃಖ! (ಯಾ)   6(4309)

-ರು ಬದುಕಿದ್ರಾರಿಗೇನು ಸುಖ?
ರ್ವಕ್ಕೂ ಸಾಯ್ವ, ಹುಟ್ಟುವ ದುಃಖ! (ಅ)
-ತ್ತ್ರೆ ತಪ್ಪಲಾರದೀ ಸುಖ, ದುಃಖ!
ಯಾಸವೇಂದ್ರವೆಲ್ಲರಿಗೂ ಸಖ! (ಅ)
-ರಿಗಳ ಸೀಳಿತನವ ನಖ! (ಯೋ)
-ಗಿ

ಶ್ವರನಿರ್ಪೂರಮರ ಲೋಕ! (ಅ)
-ನುಮಾನ ಪಡುವನು ಕುಹಕ!
ದುಃಸಾಧ್ಯ ತಿದ್ದಿಲಿಕ್ಕಾ ಬದುಕ! (ಸ)
-ಖ ನಿರಂಜನಾದಿತ್ಯೋದ್ಧಾರಕ!

ಯಾರೂ ಬಗೆ ಹರಿಸದಿರುವ ಪ್ರಶ್ನೆ!   6(3660)

ರೂಪ, ನಾಮ, ಚರಾಚರೋತ್ಪತ್ತಿ ಪ್ರಶ್ನೆ!
ಹಳ ಆಳವಾಗಿರುವುದೀ ಪ್ರಶ್ನೆ!
ಗೆದ್ದಮೇಲಲ್ಲವೇ ಪ್ರಶಸ್ತಿಯ ಪ್ರಶ್ನೆ!
ರಿ, ಹರರೆಲ್ಲಿಹರ್ಕೇಳಲೀ ಪ್ರಶ್ನೆ?
ರಿಸಿಗಳು ಉತ್ತರಿಸಿಲ್ಲ ಈ ಪ್ರಶ್ನೆ!
ರ್ವಜ್ಞ ಗುರು ಬಿಡಿಸಬೇಕೀ ಪ್ರಶ್ನೆ!
ದಿವ್ಯ ಜೀವನೋತ್ಪತ್ತಿ ನಂತ್ರದ ಪ್ರಶ್ನೆ!
ರುಕ್ಮಿಣೀಶನುತ್ತರಿಸಿದ್ದನೀ ಪ್ರಶ್ನೆ!
ರ ಸೃಷ್ಟಿ ಕೌತುಕದ್ದೀಗಿನ ಪ್ರಶ್ನೆ!
ಪ್ರಶನ್ನನಾಗೀಶ್ವರ ಬಿಡಿಸ್ಲೀ ಪ್ರಶ್ನೆ! (ಪ್ರ)
-ಶ್ನೆ, ನಿರಂಜನಾದಿತ್ಯಗೆಲ್ಲರಾ ಪ್ರಶ್ನೆ!!!

ಯಾರೇನಂದರೇನು ನಿನಗೆ? (ಹ)   4(2157)

-ರೇರಾಮ ಜಪಿಸುವವಗೆ! (ನೀ)
-ನೆಂದರಾರೆಂದರಿತವಗೆ! (ಮ)
-ದ, ಮತ್ಸರವಿರದವಗೆ!
ರೇಗುವಭ್ಯಾಸ ಬಿಟ್ಟವಗೆ! (ತ)
-ನು, ಮನಪ್ಪನದ್ದೆಂಬವಗೆ! (ಅ)
-ನಿತ್ಯ ಮಾಯೆಂದರಿತವಗೆ! (ಧ)
-ನದಾಸೆನಗಿಲ್ಲೆಂಬವಗೆ! (ಬಾ)
-ಗೆ ನಿರಂಜನಾದಿತ್ಯನಿಗೆ!!!

ಯಾರೇನಾಟಾಡಿದ್ರೆ ನಿನಗೇನು?   5(2707)

ರೇಗಾಟ, ಕೂಗಾಟ ನೀನ್ಬಿಟ್ಯೇನು?
ನಾರುವ ದೇಹ ಮೋಹ ಹೊಯ್ತೇನು? (ಬೂ)
-ಟಾಟಿಕೆ ಸುಟ್ಟುಹಾಕಿದಿಯೇನು? (ಹಾ)
-ಡಿ ಹರಿನಾಮ ತೃಪ್ತಿಪಟ್ಯೇನು? (ತಿಂ)
-ದ್ರೆ ಮೃಷ್ಟಾನ್ನಭೋಜನ ಆಯ್ತೇನು?
ನಿತ್ಯಾನಂದದನುಭವವಾಯ್ತೇನು?
ಟ, ವಿಟರ ಕೂಟ ಬಿಟ್ಯೇನು? (ಭೋ)
-ಗೇಚ್ಛೆ ಬಿಟ್ಟು ಯೋಗೇಚ್ಛೆಯಾಯ್ತೇನು? (ನೀ)
-ನು ನಿರಂಜನಾದಿತ್ಯನಾದ್ಯೇನು???

ಯಾರೇನಾಲೋಚಿಸಿದರೇನು? (ಹ)   4(1803)

-ರೇಚ್ಛೆಗೆ ಶೀರ ಬಾಗು ನೀನು!
ನಾಮ ಜಪಿಯಾಗಿರು ನೀನು!
ಲೋಕೇಶ್ವರನಾಗಿರು ನೀನು!
ಚಿದಾನಂದನಾಗಿರು ನೀನು! (ಪು)
-ಸಿ ಮಾತು ನಂಬದಿರು ನೀನು!
ಮೆ, ಶಮೆಯಿಂದಿರು ನೀನು!
ರೇಣುಕಾತ್ಮಜಾನೆಂಬೆ ನೀನು! (ನೀ)
-ನು ನಿರಂಜನಾದಿತ್ಯಲ್ಲೇನು???

ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ!   5(3092)

ರೋಗಿಯುಪಚಾರಕ್ಕಾಗ್ಬೇಕು ದಾದಿ ದಕ್ಷೆ!
ಮಾಡಬಾರದನಾಥ ಮಕ್ಕಳುನ್ನುಪೇಕ್ಷೆ!
ಡಿಕ್ಕಿ ಹೊಡೆದ ಮೇಲೆ ಕೈಗೊಡದಪೇಕ್ಷೆ!
ಯೆಯಿಲ್ಲದಿದ್ದರೆ ಸಾಗದು ಸಮೀಕ್ಷೆ!
ರುಣಿಯರಿಗೂ ಉಂಟು ಸನ್ಯಾಸ ದೀಕ್ಷೆ! (ಮು)
-ಪ್ಪಿನಲಾಗುವುದಾತುರ ಸನ್ಯಾಸದೀಕ್ಷೆ!
ಗೆಜ್ಗಲು ತಿಂದಮೇಲೆಸೆಯಬೇಕಾ ನಕ್ಷೆ!
ಯಾದವೇಂದ್ರನಿಗೆ ತನಗೆ ತಾನೇ ರಕ್ಷೆ!
ರಿದ್ಧಿ ಸಿದ್ಧಿಗಾಗಿರಬಾರದು. ನಿರೀಕ್ಷೆ!
ಗೋವರ್ಧನೋದ್ಯಮವೊಂದು ಭಾರೀ ಪರೀಕ್ಷೆ!
ಶಿವಸತಿ ದಾಕ್ಷಾಯಿಣಿ ಜಗದಾಧ್ಯಕ್ಷೆ! (ಭಿ)
-ಕ್ಷೆಗಿಲ್ಲ ನಿರಂಜನಾದಿತ್ಯನಿಂದುಪೇಕ್ಷೆ!!!

ಯಾರ್ಯಾರ ಸೇವೆಂದೆಂದಾಗಬೇಕೋ! (ಕಾ)   5(2711)

-ರ್ಯಾಚರಣೆಗೆಲ್ಲೆಲ್ಲೋಡಬೇಕೋ! (ವ)
-ರ ಗುರುಕೃಪೆಯೆಂತಾಗಬೇಕೋ!
ಸೇವೆ ಯಾವ ರೀತಿ ಮಾಡಬೇಕೋ!
ವೆಂಕಟೇಶನಂತೆಂತಾಗಬೇಕೋ! (ತಂ)
-ದೆಂಬವಗಿನ್ನೆಷ್ಟು ಹೇಳಬೇಕೋ!
ದಾರಿಯಿನ್ಯಾರು ತೋರಿಸಬೇಕೋ!
ರ್ವವನ್ನೆಂತು ಬಡಿಯಬೇಕೋ!
ಬೇಸರವೆಂದು ಕಳೆಯಬೇಕೋ! (ಯಾ)
-ಕೋ? ನಿರಂಜನಾದಿತ್ಯಾಡನೇಕೋ!!!

ಯಾರ್ಯಾರನ್ನು ಪೂಜಿಸಿದ್ರೂ ನನ್ನ ಪೂಜೆ!   6(3776)

(ಕಾ)-ರ್ಯಾರ್ಥಿಯಿಷ್ಟಕ್ಕೊಪ್ಪುವ ರೂಪದ ಪೂಜೆ!
ಹೀಮ್ರಾಮೇಸುಗಳಿಗೂ ಆಗ್ಲಿ ಪೂಜೆ! (ತ)
-ನ್ನುದ್ಧಾರಕ್ಕಾಗಿ ಮಾಡ್ಬೇಕು ನಿತ್ಯ ಪೂಜೆ!
ಪೂಜ್ಯ ತಾನಾಗ್ವ ವರೆಗೂ ಆಗ್ಬೇಕ್ಪೂಜೆ! (ತ್ಯ)
-ಜಿಸಿದ್ರೆ ಭೇದ ಭಾವ ಸಾರ್ಥಕ ಪೂಜೆ! (ಸಾ)
-ಸಿರನಾಮದೊಬ್ಬನಿಗೆ ಎಲ್ಲಾ ಪೂಜೆ! (ತ)
-ದ್ರೂಪ ಸಿದ್ಧಿಗೆ ಪರಿಪರಿಯ ಪೂಜೆ!
ನ್ನ ನಿನ್ನದೆಂಬ್ದು ಹೋಗ್ದಿದ್ರೇಕಾ ಪೂಜೆ! (ಅ)
-ನ್ನ, ಬಟ್ಟೆಗಾಗಿ ಮಾಡುವುದ್ಕೀಳ್ಪೂಜೆ!
ಪೂಜಿಸ್ಕೊಳ್ಬೇಕೆಂಬವಗಾಗ್ದಿರ್ಲಿ ಪೂಜೆ! (ಪೂ)
-ಜೆ, ನಿರಂಜನಾದಿತ್ಯನದ್ದಾತ್ಮ ಪೂಜೆ!!!

ಯಾರ್ಯಾರನ್ನೆಷ್ಟು ಕೊಂಡಾಡಿದರೇನು? (ಕಾ)   2(908)

-ರ್ಯಾರ್ಥಿಯ ಕೆಲಸವಿದಲ್ಲವೇನು?
ತ್ನವೆಲ್ಲಿದ್ದರೂ ಶ್ರೇಷ್ಠವಲ್ಲೇನು? (ಹ)
-ನ್ನೆರಡು ವರ್ಷ ಕಾಡಲ್ಲಿದ್ದರೇನು? (ಎ)
-ಷ್ಟು ಕಷ್ಟಾದರೂ ಕಳೆಗುಂದಿತೇನು?
ಕೊಂಡಾಡಲೆಂದು ಧರ್ಮಕರ್ಮವೇನು? [ಓ]
-ಡಾಡಿ ಬಿಟ್ಟಿರೆಲ್ಲಾ ಸಿದ್ಧಿಯಾಯ್ತೇನು? (ದು)
-ಡಿಯಬೇಕು ಶ್ರದ್ಧೆಯಿಂದಲ್ಲವೇನು?
ತ್ತನಾಗ ಪ್ರಸನ್ನನಲ್ಲವೇನು?
ರೇಗಾಟ, ಕೂಗಾಟದ ಫಲವೇನು? (ಏ)
-ನು? ನಿರಂಜನಾದಿತ್ಯೆಂತಿದ್ದರೇನು???

ಯಾರ್ಯಾರಿಗ್ಯಾವ್ಯಾವ ಟೋಪಿ ಹಾಕಿದೆ? ಹೇಳು! (ಮ)   5(2665)

-ರ್ಯಾದಸ್ಥರ ಮಾನಹಾನಿ ಮಾಡಿತೀ ಬಾಳು! (ದಾ)
-ರಿಯಲ್ಲಡ್ಡಗಟ್ಟಿ ದುಡ್ಡು ಕಿತ್ತಿತೀ ಬಾಳು! (ಯೋ)
-ಗ್ಯಾಯೋಗ್ಯ ವಿಚಾರವಿಲ್ಲದಾಡಿತೀ ಬಾಳು!
ವ್ಯಾಪಾರವೆಲ್ಲಾ ಕಪ್ಪು ಹಣಕ್ಕಾಯ್ತೀ ಬಾಳು! (ಅ)
-ವರಿವ್ರರ್ಥವನ್ನಪಹರಿಸಿತೀ ಬಾಳು! (ಮಾ)
-ಟೋಪಾಯಗಳಿಂದ ಕಾಟ ಕೊಟ್ಟತೀ ಬಾಳು! (ಪಾ)
-ಪಿಯಾಗ್ಯನ್ಯರಿಗೆ ತಾಪವಿಟ್ಟತೀ ಬಾಳು!
ಹಾಲಾಹಲವಿಕ್ಕಿ ಕೊಲೆಗೈದಿತೀ ಬಾಳು!
ಕಿಶೋರಿಯರ್ಕಸೆಗೆ ಕೈ ಹಾಕಿತೀ ಬಾಳು! (ತಂ)
-ದೆ, ತಾಯಿಯರ ನಿತ್ಯ ನಿಂದಿಸಿತೀ ಬಾಳು!
ಹೇಳತೀರದ ನೀಚತನಕ್ಕಾಯ್ತೀ ಬಾಳು! (ಹೇ)
-ಳು! ನಿರಂಜನಾದಿತ್ಯನಿಗೀಗಡ್ಡ ಬೀಳು!!!

ಯಾರ್ಯಾರ್ಬಂದಿಹರೂಟಕ್ಕೆ! (ಭಾ)   5(2554)

-ರ್ಯಾ, ಭರ್ತರೊಟ್ಟಾಗ್ಯೂಟಕ್ಕೆ! (ನಿ)
-ರ್ಬಂಧಾತೀತಾಪ್ತನೂಟಕ್ಕೆ!
ದಿವ್ಯ ಪ್ರಸಾದದೂಟಕ್ಕೆ!
ರ್ಷಪ್ರದವಾದೂಟಕ್ಕೆ! (ತಿ)
-ರೂರ್ಗೃಹಕ್ಕೊಯ್ಯುವೂಟಕ್ಕೆ! (ಮಾ)
-ಟ, ಮದ್ದೀಡಿಲ್ಲದೂಟಕ್ಕೆ! (ಇ)
-ಕ್ಕೆ ನಿರಂಜನಾದಿತ್ಯಕ್ಕೆ!!!

ಯಾರ್ಹೊಗಳಿದ್ರೇನ್ತೆಗಳಿದ್ರೇನಣ್ಣಾ? (ಊ)   5(2562)

-ರ್ಹೊರಗೆ ವಾಸವಾದ್ರೇನ್ಸುಖವಣ್ಣಾ? (ಭ)
-ಗವತ್ಕೃಪಾಪಾತ್ರನಾಗಬೇಕಣ್ಣಾ! (ನ)
-ಳಿನಾರ್ಕರಂತಾಪ್ತರಾಗಿರ್ಬೇಕಣ್ಣಾ! (ತೊಂ)
-ದ್ರೇನೇ ಬಂದ್ರೂ ಧೈರ್ಯ ಬಿಡ್ಬಾರದಣ್ಣಾ! (ತಾ)
-ನ್ತೆರೆ ಮರೆ ಕಾಯಿಯಂತಿರ್ಬೇಕಣ್ಣಾ! (ಯೋ)
-ಗಸಾಧನೆಡೆಬಿಡದಾಗ್ಬೇಕಣ್ಣಾ! (ಗೂ)
-ಳಿಯಂತೋಡಾಡಿದ್ರೇನೂ ಆಗದಣ್ಣಾ! (ಉ)
-ದ್ರೇಕತಿಯಾದ್ರದಕ್ದೊಣ್ಣೆಯೇಟಣ್ಣಾ!
ಗುನಗ್ತಾ ಗುರುಸೇವೆ ಮಾಡಣ್ಣಾ! (ಉ)
-ಣ್ಣಾ ನಿರಂಜನಾದಿತ್ಯಾನಂದ ಪಣಾ!!!

ಯಾವ ಊರಿಗೆ ಹೋಗಬೇಕಯ್ಯಾ?   1(8)

ನಜಸಖನೂರೆಮ್ಮೂರಯ್ಯಾ!
ರು ಬಿಟ್ಟು ಬಹು ದಿನಾಯ್ತಯ್ಯಾ!
ರಿಸಿ ಯಾಜ್ಞವಲ್ಕ್ಯ ಕಂಡಿದ್ದಯ್ಯಾ!
ಗೆಜ್ಜೆ, ತಾಳ ಕೈಗಳಲಿತ್ತಯ್ಯಾ!
ಹೋಗುತಿಹೆ ನಾನೀಗಲ್ಲಿಗಯ್ಯ!
ರುಡಗಮನ ಗತಿಯಯ್ಯಾ!
ಬೇರಾವ ಊರು ಬೇಡೆನಗಯ್ಯಾ!
ಜ್ಜವೆನಗೇನಿಲ್ಲಿಲ್ಲವಯ್ಯಾ! (ಅ)
-ಯ್ಯಕಾದಿಹ ನಿರಂಜನಗಯ್ಯಾ!!!

ಯಾವ ಪಕ್ಷ ಯಾವಭ್ಯರ್ಥಿಯನ್ನಾರಿಸಿದ್ರೇನು? (ಅ)   6(4169)

-ವನ ಯೋಗ್ಯತೆ ಸ್ಥಾನಕ್ಕೆ ತಕ್ಕದಾಗ್ಬೇಡ್ವೇನು?
ಕ್ಷಪಾತವಿಲ್ಲದ ದಕ್ಷನನಾರಿಸ್ನೀನು!
ಕ್ಷಮಾಶೀಲನಾದ ಶುದ್ಧಾತ್ಮನನ್ನಾರಿಸ್ನೀನು!
ಯಾಚಿಸಿ ಮತ ಘಳಿಸಿದರೆ ಫಲವೇನು? (ಅ)
-ವನಿಂದಾನ ಸೇವೆಯೂ ಆಗದೆಂದರಿ ನೀನು! (ಅ)
-ಭ್ಯರ್ಥಿಯ ಗುಣಾವಗುಣ ತಿಳಿದಿರು ನೀನು! (ಆ)
-ರ್ಥಿಕ ಲಾಭಕ್ಕಾಗಿ ದ್ರೋಹವೆಸಗ್ಬೇಡ ನೀನು! (ಭ)
-ಯ, ಭಕ್ತಿ ದೇವರಲ್ಲಿಟ್ಟು ಕಾರ್ಯ ಮಾಡು ನೀನು! (ಇ)
-ನ್ನಾದರೂ, ಯೋಚಿಸಿ ಮತದಾನ ಮಾಡು ನೀನು! (ಕು)
-ರಿಯಂತೆ ಯಜ್ಞಕ್ಕಾಹುತಿಯಾಗಬೇಡ ನೀನು!
ಸಿಕ್ಕವರ ಮಾತಿಗೆ ಮರುಳಾಗ್ಬೇಡ ನೀನು! (ಉ)
-ದ್ದ್ರೇಕೋದ್ವೇಗಗಳಿಂದೇನೂ ಮಾಡ್ಬಾರದು ನೀನು! (ಅ)
-ನುಕರಿಸು ನಿರ

ಜನಾದಿತ್ಯನನ್ನು ನೀನು!!!

ಯಾವ ಪಕ್ಷಕ್ಕೆ ನಾನು ಸೇರ್ಲಪ್ಪಾ?   6(3783)

ಸ್ತ್ರಾನ್ನ ಕೊಟ್ಟವ್ನನ್ನು ಸೇರಪ್ಪಾ!
ಡ್ಬೇಡ ಸಂದೇಹ ಅವ್ನಲ್ಲಪ್ಪಾ!
ಕ್ಷಮಿಸುವನು ನಿನ್ನ ತಪ್ಪಪ್ಪಾ! (ಬೆ)
-ಕ್ಕೆಯಿಂದ ಸ್ಥಾನ, ಮಾನ ನಾಶಪ್ಪಾ!
ನಾಮಸ್ಮರಣೆ ಸದಾ ಮಾಡಪ್ಪಾ!
ನುಡಿದಂತೆ ನಡೆಯಬೇಕಪ್ಪಾ!
ಸೇರ್ಲಿಕ್ಕವ್ನನ್ನಿದು ದಾರಿಯಪ್ಪಾ! (ಇ)
-ರ್ಲವನಲ್ಲಚಲ ಭಕ್ತಿಯಪ್ಪಾ! (ಅ)
-ಪ್ಪಾ ನಿರಂಜನಾದಿತ್ಯ ಅವ್ನಪ್ಪಾ!!!

ಯಾವ ಪಕ್ಷವಾದರೂ ದೇವರೇ ದಕ್ಷ!   6(3343)

ಸುಧಾತಳದ್ದೆಲ್ಲವೂ ಸ್ವಾರ್ಥ ಪಕ್ಷ!
ತಿತಪಾವನ ರಾಮಗಿಲ್ಲಪೇಕ್ಷ!
ಕ್ಷಯಾಭಿವೃದ್ಧಿರಹಿತ ಸ್ಥಿತಿ ಮೋಕ್ಷ!
ವಾದ, ವಿವಾದಾತೀತ ಜಗದಾಧ್ಯಕ್ಷ!
ಶಾವತಾರಿ ಶ್ರೀಹರಿ ಕಮಲಾಕ್ಷ!
ರೂಪ, ಲಾವಣ್ಯಾನುಪಮಾ ವಿಶಾಲಾಕ್ಷ!
ದೇಹಾಭಿಮಾನವಿಲ್ಲದವ ಫಾಲಾಕ್ಷ!
ರ ಗುರು ದತ್ತನೆಲ್ಲರಿಗೂ ರಕ್ಷಾ!
(ಹ)-ರೇ ರಾಮ ಭಜನೆಗೆ ಮಾಡ್ಬಾರ್ದುಪೇಕ್ಷಾ!
ಯಾಮಯಗಿಲ್ಲ ಜಾತಿ, ಮತ, ಪಕ್ಷ!
(ವೀ)-ಕ್ಷಕ ನಿರಂಜನಾದಿತ್ಯ ವಿಶ್ವಾಧ್ಯಕ್ಷ!!!

ಯಾವ ಮತ ಶ್ರೇಷ್ಠವೆಂದರುಹಪ್ಪಾ! (ಅ)   6(3898)

-ವಧೂತ ನಿನ್ನಾಜ್ಞೆಯಿದಕ್ಕೇನಪ್ಪಾ?
ತ, ಮತವೆಂದ್ಕಚ್ಚಾಡುವರಪ್ಪಾ!
ನಯರನ್ಯೋನ್ಯವಾಗಿಲ್ಲವಪ್ಪಾ!
ಶ್ರೇಯಸ್ಸಿಗಾವುದುದಾರಿ ಹೇಳಪ್ಪಾ? (ಅ)
-ಷ್ಟ ಮದಗಳಿಂದ ಪಾರುಮಾಡಪ್ಪಾ!
ವೆಂಕಟೇಶ, ಅಲ್ಲಾ, ಯೆಹೋವಾರಪ್ಪಾ?
ರ್ಶನ ಅವರದು ಮಾಡಿಸಪ್ಪಾ! (ಕ)
-ರುಣೆ ತೋರಿಸಬೇಕು ನೀನೀಗಪ್ಪಾ!
ದಿನಾಲ್ಕು ಲೋಕಕ್ಕೊಬ್ಬ ದೇವಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯ ಅವನಪ್ಪಾ!!!

ಯಾವ ಲಾಭಕ್ಕಾಗಿ ನಿನಗೀ ಜಂಭ?   5(2685)

ಸ್ತ್ರಾಲಂಕಾರವೇಕೆಂಬ ಹೇರಂಬ!
ಲಾವಣ್ಯಪೂರ್ಣ ಗುರುದತ್ತನೆಂಬ!
ಕ್ತಿಯಿಂದಾಗ್ವುದು ತದ್ರೂಪವೆಂಬ! (ಠ)
-ಕ್ಕಾಚಾರಕ್ಕಲ್ಲ ಧರ್ಮ ಕೈ ಕಂಬೆಂಬ!
(ಯೋ)ಗಿಯೇ ತಾನೆಂದರಿತಿರ ಬೇಕೆಂಬ!
ನಿತ್ಯ ತೃಪ್ತ ತಾನಾಗಿರುವನೆಂಬ!
ಗ, ನಾಣ್ಯ ಕಳ್ಳರ ಪಾಲಿಗೆಂಬ!
ಗೀಳು ಇವುಗಳ್ದಿರಬಾರದೆಂಬ!
ಜಂಗುಳಿಯಲ್ಲಿದ್ದರಶಾಂತಿಯೆಂಬ!
ಯ ನಿರಂಜನಾದಿತ್ಯಗಿಲ್ಲೆಂಬ!!!

ಯಾವ ಸರಕಾರ ಆಳಿದರೇನು? (ದೈ)   4(1785)

-ವಭಕ್ತಿಯಿಲ್ಲದಿದ್ದರಾಗ್ವುದೇನು?
ಜ್ಜನ ಪೀಡೆಯಲ್ಲದೆ ಮತ್ತೇನು? (ವ)
-ರ ಗುರೂಪದೇಶ ಕೇಳೀಗ ನೀನು!
ಕಾಮುಕನಾಗದಿರಬೇಕು ನೀನು! (ಪ)
-ರಮಾರ್ಥಕ್ಕೆ ಬೆಲೆ ಕೊಟ್ಟಾಳು ನೀನು!
ಗ ನೆಮ್ಮದಿಯ ನೋಡುವೆ ನೀನು! (ಊ)
-ಳಿಗ ನಿಸ್ವಾರ್ಥಿಯಾಗಿ ಮಾಡು ನೀನು! (ಮ)
-ದ, ಮತ್ಸರ ಬಿಟ್ಟು ಮೇಲೇಳು ನೀನು! (ಈ)
-ರೇಳು ಲೋಕಾಧಿಪನಾಗುವೆ ನೀನು! (ಏ)
-ನು? ನಿರಂಜನಾದಿತ್ಯಾನಂದ ನೀನು!!!

ಯಾವ ಸ್ಟೇಶನ್ನಿನಲ್ಲಿದೆಯೋ ಗಾಡಿ? (ಬಾ)   4(2158)

-ವ ಭಕ್ತಿಯಿಂದೀಗ ಭಜನೆ ಮಾಡಿ!
ಸ್ಟೇಶನ್‍ ವಿಚಾರ ನಮ್ಗೀಗ ಬೇಡಿ! (ಕೇ)
-ಶವನ ಕೃಪೆಯನ್ನಿದಿರು ನೋಡಿ! (ಸ)
-ನ್ನಿಧಿಯ ಸೇವೆಗೀಗ ಮನ ಮಾಡಿ! (ದೀ)
-ನನನ್ನುದ್ಧರಿಸೆಂದವ್ನನ್ನು ಬೇಡಿ! (ಅ)
-ಲ್ಲಿಲ್ಲೋಡಾಡಿದರೆ ಸಿಗದು ಗಾಡಿ! (ತಂ)
-ದೆ ಸದ್ಗುರುವಿಗೆ ವಂದನೆ ಮಾಡಿ!
ಯೋಗೇಶಾತನನ್ನೊಡಗೂಡಿ ನೋಡಿ!
ಗಾಡಿಗಾರಾತನನ್ಮರೆಯ ಬೇಡಿ! (ಕೂ)
-ಡಿ, ನಿರಂಜನಾದಿತ್ಯ ಪಾದಾ ಗಾಡಿ!!!

ಯಾವಾಗ ಮಾಡಬೇಕೀ ಕೆಲಸ? (ಈ)   4(2444)

-ವಾಗಲೇ ಆಗಿಹೋಗ್ಲಾ ಕೆಲಸ! (ಆ)
-ಗ, ಈಗೆಂದನ್ನುವುದೆಲ್ಲಲಸ!
ಮಾತು ಹೆಚ್ಚಿದರೆಲ್ಲಾ ಹೊಲಸ! (ಆ)
-ಡದೇ ಮಾಡುವುದೆಲ್ಲಾ ಸಲೀಸ!
ಬೇಡಿ, ಕಾಡುವವ ಕಾಲಕಸ!
ಕೀಲ್ಮುರಿದ್ರೆ ಮುಂದಕ್ಕೆ ಚಲಿಸ!
ಕೆಟ್ಕಲ್ಸಗಾರಾರನ್ನೂ ಒಲಿಸ!
ಕ್ಷ್ಯ ತಪ್ಪಿದವ್ನೆಲ್ಲೂ ನೆಲಸ!
ಖ ಶ್ರೀ ನಿರಂಜನಾದಿತ್ಯೇಶ!!!

ಯಾವಾಗೆದ್ದೇನು ಮಾಡಿದೆನೋ!   1(345)

ವಾರ, ಶನಿವಾರವದೇನೋ! (ಬೇ)
-ಗೆದ್ದಂಬರ ನೋಡಿದೆನೇನೋ! (ಎ)
-ದ್ದೇನಿಲ್ಲಿನ್ನೂ ಚಂದ್ರಮನೇನೋ! (ಅ)
-ನುಮಾನಾಯ್ತಕಾಲವೆಂದೇನೋ!
ಮಾಡಿದೆ ದಿನಚರಿಯೇನೋ! (ಓ)
-ಡಿ ನೋಡಿದೆ ಸುತ್ತುಮುತ್ತೇನೋ! (ಅ)
-ದೆಲ್ಲೆಲ್ಲೂ ಶಾಂತಿವಾಗಿತ್ತೇನೋ! (ಏ)
-ನೋ! ನಿರಂಜನಾದಿತ್ಯನೇನೋ!!!

ಯಾವಾಗೆಲ್ಲಿರಬೇಕೆಂದವ ಬಲ್ಲ! (ಆ)   1(314)

-ವಾವುದೆಂದೆಂದಾ ಗುರುದೇವ ಬಲ್ಲ! (ಅ)
-ಗೆದರೆಲ್ಲಿ ಜಲ? ಎಂತಾತ ಬಲ್ಲ! (ಅ)
-ಲ್ಲಿಲ್ಲರಸುವಗತ್ಯವನಿಗಿಲ್ಲ!
ಕ್ತ, ಮಾಂಸದ ಗೊಂಬೆ ಅವನಲ್ಲ!
ಬೇನೆ, ಬೇಸರಕಂಜುವವನಲ್ಲ!
ಕೆಂಜೆಡೆಯಾ ಶಿವನೆಲ್ಲವ ಬಲ್ಲ! (ಅ)
-ದರಿತವಗೆ ಶರಣಾಗಿರೆಲ್ಲ!
ಸ್ತ್ರ, ಭೂಷಣಗಳು ಬೇಕಾಗಿಲ್ಲ!
ರಬೇಕು ಶಿದ್ಧ ಭಕ್ತಿಯಿಂದೆಲ್ಲ! (ಅ)
-ಲ್ಲದಿರೆ ನಿರಂಜನಾದಿತ್ಯನೊಲ್ಲ!!!

ಯಾವಾಗೇನಿಕ್ಕ ಬೇಕೆಂತರಿತಿಹಳಮ್ಮ!   3(1285)

ವಾಸುದೇವ ಶಿಶುವಿಗೆ ಹಾಲಿತ್ತಳಮ್ಮ! (ಯೋ)
-ಗೇಶನಾದಾಗಿಷ್ಟ ಸೇವೆ ಮಾಡಿದಳಮ್ಮ!
ನಿಕಟ ಪ್ರೇಮಕ್ಕವಕಾಶ ಕೊಟ್ಟಳಮ್ಮ! (ರ)
-ಕ್ಕಸ ವಿನಾಶಕ್ಕೆ ಶಕ್ತಿ ನೀಡಿದಳಮ್ಮ!
ಬೇಡಿದವರಿಷ್ಟಾರ್ಥ ಕೊಡಿಸಿದಳಮ್ಮ!
ಕೆಂಗಣ್ಣನಲ್ಲಿ ಮೈತ್ರಿ ಕಲ್ಪಿಸಿದಳಮ್ಮ!
ತ್ವ ಗೀತೋಪದೇಶ ಮಾಡಿಸಿದಳಮ್ಮ!
ರಿಪುಗಳ ಕೆಡಹಿ ಕುಣಿಸಿದಳಮ್ಮ! (ಪ)
-ತಿ ಸತ್ಯಭಾಮಾದೇವಿಗೆನಿಸಿದಳಮ್ಮ!
ರಿಸಿದಳು ರುಕ್ಮಿಣಿಯ ಕಷ್ಟವಮ್ಮ! (ಒ)
-ಳ ಹೊರಗೆಲ್ಲಾತ್ಮಾನಂದ ತುಂಬಿದಳಮ್ಮ! (ಬೊ)
-ಮ್ಮ ನಿರಂಜನಾದಿತ್ಯಾನಂದ ನಿರತಮ್ಮ!!!

ಯಾವಾಗೇನುಬೇಕೋ ಅದು ಸಿಕ್ಕುತ್ತಿದೆ!   6(3795)

ವಾದ ವ್ಯರ್ಥವೆಂದರಿಯಬೇಕಾಗಿದೆ!
ಗೇಲಿ ಯಾರನ್ನೂ ಮಾಡದಿರ್ಬೇಕಾಗಿದೆ!
ನುರಿತ ಅನುಭವಿಯಾಗ್ಬೇಕಾಗಿದೆ!
ಬೇಡಿ ಯಾರನ್ನೂ ಕಾಡಬಾರದಾಗಿದೆ!
ಕೋಪ ತಾಪಕ್ಕೆಡೆಗೊಡ್ಬಾರದಾಗಿದೆ!
ನವರತಾತ್ಮ ಧ್ಯಾನ ಬೇಕಾಗಿದೆ!
ದುಶ್ಚಟಗಳನ್ನೆಲ್ಲಾ ಬಿಡ್ಬೇಕಾಗಿದೆ!
ಸಿದ್ಧಿ, ರಿದ್ಧಿಗಾಶಿಸಬಾರದಾಗಿದೆ! (ಠ)
-ಕ್ಕು, ಮೋಸ ಯಾರಿಗೂ ಮಾಡ್ಬಾರದಾಗಿದೆ! (ಹ)
-ತ್ತಿ ಕೈಲಾಸವಾಸಿಯಾಗಬೇಕಾಗಿದೆ! (ತಂ)
-ದೆ ನಿರಂಜನಾದಿತ್ಯ ಶಿವನಾಗಿದೆ!!!

ಯಾಹ್ಯಾನೀಗಡಗಿಸಬೇಕಲ್ಲಾ! (ಕ)   4(1994)

-ಹ್ಯಾಗಿಹನವನೆಲ್ಲರಿಗಲ್ಲಾ!
ನೀತಿ, ನೇಮವವನಿಗಿಲ್ಲಲ್ಲಾ!
ರ್ವಾಂಧನಾಗಿಹನವನಲ್ಲಾ!
ಕ್ಕಾ ಬಾಲೆಯರ್ಗೋಳು ಕೇಳಲ್ಲಾ! (ಆ)
-ಗಿಹುದತ್ಯಾಚಾರವರ್ಮೇಲಲ್ಲಾ!
ಹಿಸುವುದಿದನೆನಿತಲ್ಲಾ?
ಬೇಗ ಮುಗಿಸವನ ನೀನಲ್ಲಾ!
ಲ್ಲಾಗಬಾರದೀಗ ನಾಥಲ್ಲಾ! (ಬ)
-ಲ್ಲಾ ನಿರಂಜನಾದಿತ್ಯ ತನಲ್ಲಾ!!!

ಯುಗಾದಿಯ ಶುಭಾಶಯ!   4(1812)

ಗಾಯಿತ್ರೀ ತಾಯಿಯಾಶಯ!
ದಿವ್ಯಾತ್ಮ ಜೀವನಾಶಯ!
ದುನಾಥನಾಪ್ತಾಶಯ!
ಶುದ್ಧ ಭಕ್ತಿ ಭಾವಾಶಯ!
ಭಾನುಕುಲೇಶನಾಶಯ!
ಶಿಧರಾನಂದಾಶಯ! (ಜ)
-ಯ ನಿರಂಜನಾದಿತ್ಯಾಯ!!!

ಯೋಗಿ ನಿರೀಕ್ಷಿಸುವವನೇನಲ್ಲ! (ಭೋ)   6(3957)

-ಗಿ ನಿರೀಕ್ಷಿಸದಿರುವವನಲ್ಲ! (ಅ)
-ನಿತ್ಯವೀ ಜಗತ್ತೆಂದು ಯೋಗಿ ಬಲ್ಲ!
ರೀತಿ, ನೀತಿ, ಬೇರೆ ಭೋಗಿಯದ್ದೆಲ್ಲ! (ದ)
-ಕ್ಷಿಣಾಮೂರ್ತಿಯದ್ದು ಮೌನದಲ್ಲೆಲ್ಲ!
ಸುಗಂಧ, ವನಿತಾಸಕ್ತನಿದೊಲ್ಲ!
ರ ಯೋಗಿಗೀರೇಳ್ಲೋಕಗಳೆಲ್ಲ!
ಶವಾಗಿಹನು ಭೋಗಿವಕ್ಕೆಲ್ಲ!
ನೇಮ, ನಿಷ್ಠೆ, ಭೋಗಿಗೆ ಬೇಕಾಗಿಲ್ಲ!
ರಳುವನು ಜೀವಮಾನವೆಲ್ಲ! (ಪು)
-ಲ್ಲ ನಿರಂಜನಾದಿತ್ಯ ಲಿಪ್ತನಲ್ಲ!!!

ಯೋಗಿರಾಜ ತ್ಯಾಗರಾಜ!   2(613)

ಗಿರಿರಾಜ ಗುರುರಾಜ!
ರಾಜರಾಜ ಅಜರಾಜ!
ಯರಾಜ ಛಾಯಾರಾಜ! (ಸ)
-ತ್ಯಾತ್ಮರಾಜ ರಾಮರಾಜ!
ಣರಾಜ ವಿಘ್ನರಾಜ!
ರಾಗರಾಜ ಮೇಘರಾಜ! (ರಾ)
-ಜ ಜೈ ನಿರಂಜನರಾಜ!!!

ಯೋಗೀ! ಬೇಡುವೆ ನಾಶಿರಬಾಗಿ!   6(3411)

(ತ್ಯಾ)-ಗಿ! ಮಾಡೆನ್ನನೀಗ ನಿನ್ನದಾಗಿ!
ಬೇಗ್ಬೇಗೀಗ್ನಾಬಂದೆ ನಿನಗಾಗಿ!
(ಉಂ)-ಡು, ತಿಂದು, ಕಾಲಕಳೆದೆ ತೇಗಿ!
ವೆಸನದಿಂದ ನಾನಾದೆ ರೋಗಿ!
ನಾಚುವೆ ನಾನಾಗಲಿಕ್ಕೆ ಭೋಗಿ!
ಶಿವೆಯಾಗಿ ನಾನಾಗ್ಬೇಕರ್ಧಾಂಗಿ!
(ವ)-ರ ಗುರು, ಶಿವ ನೀನು ವಿರಾಗಿ!
ಬಾಳಬೇಕಿನ್ನು ನಾನು ನೀನಾಗಿ!
(ಯೋ)-ಗಿ ನಿರಂಜನಾದಿತ್ಯ ನಾನಾಗಿ!!!

ಯೋಗ್ಯತೆ ತಿಳಿದ ಬಳಿಕೇಕೆ ವಾದ? (ಭಾ)   6(4152)

-ಗ್ಯವದರಿಂದಿಲ್ಲೆಂಬುದು ನಿರ್ವಿವಾದ!
ತೆಗೆಯಲಿಕ್ಕಲ್ಲನ್ಯರ ಮಾನ ವಾದ!
ತಿಳಿವಳಿಕೆ ಹೆಚ್ಚಿಸಲಿಕ್ಕೆ ವಾದ! (ಉ)
-ಳಿಸಿಕೊಳ್ಳದಿರಬಾರದು ಸ್ವಭೋದ!
ಶೇಂದ್ರಿಯ ನಿಗ್ರಹದಿಂದ ಪ್ರಭೋದ!
ಹು ಲಾಭ ಪ್ರದ ದತ್ತ ಗುರು ಪಾದ! (ಘ)
-ಳಿಗೆ ಘಳಿಗೆಗೂ ಸ್ಮರಿಸಬೇಕಾ ಪಾದ!
ಕೇಶವದಾಸಕನಕಗಾಯ್ತುದ್ಭೋಧ!
ಕೆಟ್ಟರೆ ಕೆಡೆಲೆಂದಿದ್ದಾ ಭಕ್ತ ಯೋಧ!
ವಾದಿರಾಜರಿತ್ತರವಗೆ ಪ್ರಸಾದ! (ಆ)
-ದ, ಕನಕ ನಿರಂಜನಾದಿತ್ಯನಾದ!!!

ಯೋಗ್ಯತೆ ತೋರಿ ಭಾಗ್ಯವಂತನಾಗಯ್ಯಾ! (ನೀ)   4(2111)

-ಗ್ಯನುಮಾನ ಗಟ್ಟಿ ಮನದಿಂದೋದಯ್ಯಾ!
ತೆರೆವುದಾಗ ಜಯದ ಬಾಗಿಲಯ್ಯಾ!
ತೋರೀಗ ನಿನ್ನ ಧೈರ್ಯ, ಸ್ಥೈರ್ಯಗಳಯ್ಯಾ!
ರಿಪು ಭಯಂಕರನೆನಿಸಬೇಕಯ್ಯಾ!
ಭಾರತಾಂಬೆಯಾದರ್ಶ ಮಗನಾಗಯ್ಯಾ! (ಕೂ)
-ಗ್ಯವಳ ಪುಣ್ಯನಾಮ ಗಣ್ಯನಾಗಯ್ಯಾ!
“ವಂದೇ ಮಾತರಂ” ಆಚರಿಸಿ ತೋರಯ್ಯಾ!
ರಣಿಯೆಂತಿಹನೆಂದರಿತ್ಯೇನಯ್ಯಾ?
ನಾನಾ ಜಾತಿ, ಮತ ಸಮನ್ವಯನಯ್ಯಾ!
ತಿ, ಸ್ಥಿತಿಯಲ್ಲನುಪಮವನಯ್ಯಾ! (ಅ)
ಯ್ಯಾ! ನಿರಂಜನಾದಿತ್ಯ ನೀನೀಗಾಗಯ್ಯಾ!!!

ಯೋಗ್ಯಾಯೋಗ್ಯ ತೀರ್ಮಾನಕ್ಕಾತುರ ಬೇಡ! (ರೇ)   5(3243)

-ಗ್ಯಾಡಿ, ಕೂಗಾಡಿ, ಹೊಡೆದಾಡಲೂ ಬೇಡ!
ಯೋಗಾಭ್ಯಾಸ ನಿತ್ಯ ಮಾಡದಿರಬೇಡ! (ಭಾ)
-ಗ್ಯಲಕ್ಷ್ಮಿಯೊಲಿವುದ್ರಲ್ಲನುಮಾನ್ಬೇಡ!
ತೀರ್ಥ, ಪ್ರಸಾದ ಗುರುವಿನದ್ಬಿಡ್ಬೇಡ! (ದು)
-ರ್ಮಾರ್ಗಿಯಾಗ್ಯೆಂದಿಗೂ ಬದುಕಿರಬೇಡ!
ಭೋಮಣಿಯ ಆದರ್ಶ ಬಿಡಬೇಡ! (ಸಿ)
-ಕ್ಕಾಗವಕಾಶ ಕಣ್ಣು ಮುಚ್ಚಿರಬೇಡ!
ತುಕ್ಕು ಹಿಡಿಸಿ ಪಾತ್ರೆ ತೂತು ಮಾಡ್ಬೇಡ!
ಕ್ಕಸರ ಠಕ್ಕಿಗೆ ಮರುಳಾಗ್ಬೇಡ!
ಬೇಸಿಗೆಯಲ್ಲುಣ್ಣೆಯಂಗಿ ತೊಡಬೇಡ! (ಮೃ)
-ಡ ನಿರಂಜನಾದಿತ್ಯನ್ಯರಂಗಿ ತೊಡ!!!

ಯೋಚನೆ ಬೆಳೆಸಿದಷ್ಟು ಪರಾಧೀನ!   6(4303)

ಮತ್ಕಾರ ಮಾಡದುದ್ಧಾರ ನರನ!
ನೆನೆಯಬೇಕವ ಪರಮೇಶ್ವರನ!
ಬೆಟ್ಟ ಹಿಟ್ಟಹುದು ಮುಟ್ಟೆ ಪಾದವನ! (ಹ)
-ಳೆಯ ರೋಗ ಹೋಗಿ ಅರಳ್ವುದಾನನ!
ಸಿರಿ, ಸಂಪತ್ತಿಗಾಶಿಸುವುದಜ್ಞಾನ!
ತ್ತನಿಗೆ ಬೇಕೇನಶನ, ವಸನ? (ನಿ)
-ಷ್ಟೂರ ಮಾಡದಾರನ್ನೂ ಅವನ ಮನ!
ರಮ ಭಕ್ತ ಅವನಿಗೆ ಸಮಾನ!
ರಾಗ, ದ್ವೇಷರಹಿತ ಅವನ ಜೀವನ!
ಧೀರನಿವಗಾನಂದ ವೈರೀ ದಮನ!
ಮೋ ನಿರಂಜನಾದಿತ್ಯಾನಂದಾಸನಾ!!!

ಯೋಚನೆ, ಯೋಚನೆ, ಆಪಾದನೆ!   3(1156)

ಪಲಾತ್ಮನಿಗಾಸೆ ಸಂಪಾದನೆ!
ನೆನಪದಕ್ಕೆದೊಂದೇ ವಾಸನೆ!
ಯೋಚನೆ ದುರ್ವಿಷಯೋಪಾಸನೆ!
ಕ್ಕಳದ ಗೊಂಬೆಯ ಲಾಲನೆ!
ನೆಲೆಯಿಲ್ಲದಯೋಗ್ಯ ಭಾವನೆ!
ಗು ಹೋಗಿಗೆಲ್ಲಾ ಅಸಹನೆ!
ಪಾಡಿ, ಬೇಡುವನು ಸಂಭಾವನೆ!
ತ್ತಗಾಗುತ್ತಿರಲಾಧರಾನೆ! (ನೀ)
-ನೆನ್ನ ನಿರಂಜನಾದಿತ್ಯನೆನೆ!!!

ಯೋಚನೆಗೆಂದು ವಿಮೋಚನೇ?   5(2752)

ಕ್ಕಳದ ಗೊಂಬೆ ವಾಸನೇ!
ನೆಲಸಮವಾದ ಮೇಲ್ತಾನೇ? (ರಾ)
-ಗೆಂಬುದಿಲ್ಲದಾದ ಮೇಲ್ತಾನೇ?
ದುಸ್ಸಂಗ ದೂರಾದ ಮೇಲ್ತಾನೇ?
ವಿಷಯಾಸೆ ಸತ್ತ ಮೇಲ್ತಾನೇ?
ಮೋಕ್ಷದಂಗಿ ತೊಟ್ಟಮೇಲ್ತಾನೇ? (ವಾ)
-ಚಸ್ಪತಿ ತಾನಾದ ಮೇಲ್ತಾನೆ? (ತಾ)
-ನೇ ನಿರಂಜನಾದಿತ್ಯ ತಾನೇ???

ಯೋಚಿಸುವುದೊಂದು, ಆಗುವುದಿನ್ನೊಂದು!   6(4141)

ಚಿನ್ಮಯನಾಟವನ್ನರಿಯೆವೆಂದೆಂದು!
ಸುಖ ಲೇಶಕ್ಕಾಗಿ ದುಃಖಿಗಳ್ನಾವಿಂದು! (ಮಾ)
-ವುತ ಸಡಿಲ್ಬಿಟ್ಟ ಸಲಗ ನಾವಿಂದು!
ದೊಂಬರಾಟ ಮೆಚ್ಚಿ, ಹುಚ್ಚರಾದೆವಿಂದು!
ದುರಾಚಾರ ದುರ್ಗೆಯ ಹೆಸರಲ್ಲಿಂದು!
ಗು ಹೋಗಿನ ದೇವರರಿಯರಿಂದು!
ಗುರು ಪರಮಾತ್ಮ ಅಂತರಾತ್ಮವೆಂದು! (ಹಾ)
-ವು ತಾನಲ್ಲ ಹಗ್ಗನಾನಂದರಾಗಿರೆಂದೆಂದು! (ಹ)
-ನ್ನೊಂದಿಂದ್ರಿಯ ಮೀರಿ ಅದಾಗಿರೆಂದೆಂದು! (ಎಂ)
-ದು ನಿರಂಜನಾದಿತ್ಯ ಬೋಧಿಪನಿಂದು!!!

ಯೋನಿಜರೆಲ್ಲರೆಂಬುದು ಸತ್ಯ!   6(3397)

ನಿಜವಿದಾದ್ರೂ ಬೇರ್ಬೇರೆ ಕೃತ್ಯ!
ಗಕ್ಕಿಲ್ಲೇಕ ರಾಜಾಧಿಪತ್ಯ! (ನೆ)
-ರೆ ಹೊರೆಯಲ್ಲಿ ಜಗಳ ನಿತ್ಯ! (ಮ)
-ಲ್ಲನಾದವನಿಗಖಿಲ ಭೃತ್ಯ! (ಯಾ)
-ರೆಂತೇಕೆ ಮಾಡಿದ್ರಿಂಥಾ ದಾಂಪತ್ಯ?
ಬುದ್ಧಿಗರಿವಾಗದಿದ್ರೌಚಿತ್ಯ!
ದುರ್ಬುದ್ಧಿಯಲ್ಲಿ ಆಗ್ಬಾರದಂತ್ಯ!
ರ್ವರ ಉದ್ಧಾರ ಅತ್ಯಗತ್ಯ! (ಸ್ತು)
-ತ್ಯ ನಿರಂಜನಾದಿತ್ಯಾಧಿಪತ್ಯ!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ