ಮಂಕಾಗಿರುವುದಕ್ಕೇನು ಕಾರಣ?   4(2311)

ಕಾರ್ಯ ಕೈಗೂಡದಿರ್ಪುದು ಕಾರಣ! (ರೋ)
-ಗಿಯಾಗಿರುವುದಿನ್ನೊಂದು ಕಾರಣ! (ಗು)
-ರುಕೃಪೆಯಾಗದ್ದು ಮುಖ್ಯ ಕಾರಣ! (ಬೇ)
-ವು, ಬೆಲ್ಲದಸಮ ದೃಷ್ಟಿ ಕಾರಣ! (ಕಂ)
-ದರ್ಪನ ಸಂಗವದೊಂದು ಕಾರಣ! (ಹ)
-ಕ್ಕೇನೆನಗೆಂದರಿಯದ್ದೂ ಕಾರಣ! (ತ)
-ನುಭಾವ ಬಿಡಿದಿರ್ಪುದೂ ಕಾರಣ!
ಕಾಮಿನೀ ಕಾಂಚನದಾಸೆ ಕಾರಣ! (ಪ)
-ರರೇಳಿಗೆಯಸಹನೆ ಕಾರಣ! (ಗು)
-ಣ ನಿರಂಜನಾದಿತ್ಯ ಕಾರಣ!!!

ಮಂಕ್ತಿಮ್ನಿಂದ್ಮಹತ್ಕಾರ್ಯ ಮಾಡ್ಸಯ್ಯಾ! (ಭ)   4(2075)

-ಕ್ತಿಯೋಗವಾಗಬ್ಬೆಯಾಗ್ವುದಯ್ಯ! (ಕಾ)
-ಮ್ನಿಂದೆಲ್ಲಾ ಕುಲಗೆಡ್ತಿದೆಯಯ್ಯಾ! (ಪ)
-ದ್ಮನಾಭಗಾವುದಸಾಧ್ಯವಯ್ಯಾ?
ಗ್ಲಿರ್ಳುರುಳ್ಯರ್ವತ್ನಾಲ್ಕಾಯ್ತಯ್ಯಾ! (ಸ)
-ತ್ಕಾರ್ಯಕ್ಕಾನಾದ್ರ ತೋರ್ಬಾರದಯ್ಯಾ! (ಆ)
-ರ್ಯರುಕ್ತ್ಯನುಭವವಾಗ್ಬೇಕಯ್ಯಾ!
ಮಾತ್ಮಾತ್ರದಿಂದೇನೂ ಸಾಗದಯ್ಯಾ! (ಬಿ)
-ಡ್ಸದಿರ್ನಿನ್ನ ಭಜನೆಯನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯ ಶರ್ಣಯ್ಯಾ!!!

ಮಂಗಳ ಕನಾಟಕ ದೇಶಕಕ್ಕೆ! [ಸಂ]   4(2418)

-ಗ, ಸಜ್ಜನರದ್ದಾಗಿ ಸೊಗಮಕ್ಕೆ! (ಒ)
-ಳ, ಹೊರ ಶುಚಿಯಿಂದಾರೋಗ್ಯಮಕ್ಕೆ!
ನ್ನಡನುಡಿವೆಣ್ಣಿರಂಜೀವ್ಯಕ್ಕೆ! (ನಿ)
-ರ್ನಾಮನಾಚಾರತ್ಯಾಚಾರಗಳಕ್ಕೆ! (ಕಾ)
-ಟ ಕಾಳಸಂತೆಗಳದ್ದಂತ್ಯಮಕ್ಕೆ!
ರ್ತವ್ಯನಿಷ್ಠೆಯಭಿವೃದ್ಧಿಯಕ್ಕೆ!
ದೇವನೊಬ್ಬನೆಂಬ ಸುಜ್ಞಾನಮಕ್ಕೆ! (ದೇ)
-ಶ, ವಿದೇಶಗಳೈಕ್ಯ ಸ್ಥಿರಮಕ್ಕೆ! (ಅ)
-ಕರೆಯಿಂದೆಲ್ಲರಿಗಾರಾಮಮಕ್ಕೆ! (ಅ)
-ಕ್ಕೆ, ನಿರಂಜನಾದಿತ್ಯಾನಂದೆಲ್ಲಕ್ಕೆ!!!

ಮಂಗಳ ಗೀತಾಮೃತಾನಂದ! (ಅ)   1(300)

-ಗರು ಬತ್ತಿ ಸುಗಂಧಾನಂದ! (ಅ)
-ಳತೆ ಮೀರಿದ ನಾದಾನಂದ!
ಗೀತಾ ಭಾವ ಪ್ರಬೋಧಾನಂದ!
ತಾಳ, ಮೇಳ, ಲಯದಾನಂದ! (ಅ)
-ಮೃತ ಪ್ರಸಾದ ಪೂರ್ಣಾನಂದ!
ತಾರಕ ಗುರು ಸೇವಾನಂದ! (ಆ)
-ನಂದವಿದು ದತ್ತಗಾನಂದ!
ಅಥವಾ
ದತ್ತ ನಿರಂಜನಾದಿತ್ಯಾನಂದ!!!
ದತ್ತ ನಿರಂಜ್ನಾದಿತ್ಯಾನಂದ!!!

ಮಂಗಳ ದಿನಾರಾಮ ಭಿಕ್ಷಾ!   1(335)

ತಿಗುಕಾರೀ ಸುಭಿಕ್ಷಾ! (ಆ)
-ಳವಟ್ಟಿತು ತಿಂದಾಗೀ ಭಿಕ್ಷಾ!
ದಿನರಾತ್ರಿರಬೇಕೀ ಭಿಕ್ಷಾ!
ನಾಮ, ಶ್ರೀರಾಮಾಮೃತ ಭಿಕ್ಷಾ!
ರಾಗಾರಾಮವಾದಂಥಾ ಭಿಕ್ಷಾ! (ಅ)
-ಮಲಾತ್ಮಾರಾಮಾನಂದ ಭಿಕ್ಷಾ! (ಅ)
-ಭಿಷ್ಟವಾದಿದೆನೆಗೆ ಭಿಕ್ಷಾ! (ರ)
-ಕ್ಷಾ, ನಿರಂಜನಾದಿತ್ಯ ಭಿಕ್ಷಾ!

ಮಂಗಳ ಮಹಾ ಮಾಘ ಸ್ನಾನ!   2(441)

ಣಕೆ ಪಾದ ತೀರ್ಥ ಸ್ನಾನ! (ಅ)
-ಳತೆಯಿಲ್ಲದ ಪುಣ್ಯ ಸ್ನಾನ!
ಲಹರ ವಿಮಲ ಸ್ನಾನ!
ಹಾಲು, ತುಪ್ಪ ಎರೆದ ಸ್ನಾನ!
ಮಾಘದ ಪಂಚಾಮೃತ ಸ್ನಾನ!
ಮ, ಘಮ ವಾಸನಾ ಸ್ನಾನ!
ಸ್ನಾಯು ಬಲವರ್ಧನ ಸ್ನಾನ! (ಘ)
-ನ, ನಿರಂಜನಾದಿತ್ಯ ಸ್ನಾನ!!!

ಮಂಗಳ ಹಾಡಿದಳು ಆಂಡಾಳಮ್ಮ!   2(794)

ತಿ, ಲಯಬದ್ಧವಾಗಿಶ್ತಮ್ಮ! (ತಾ)
-ಳ, ಮೇಳ ಪರಿಪೂರ್ಣವಾಗಿತ್ತಮ್ಮ!
ಹಾವ, ಭಾವ ಸಹಜವಾಗಿತ್ತಮ್ಮಾ! [ಅ]
-ಡಿಗಡಿಗವನಡಿ ಧ್ಯಾನವಮ್ಮ!
ಯೆ ಶ್ರೀರಂಗನದಾಗಿಹುದಮ್ಮ! (ಅ)
-ಳುಕು, ಅಂಜಿಕೆ ನಿನಗಿಲ್ಲವಮ್ಮ!
ಆಂಜನೇಯ ಕಾವಲಾಗಿಹನಮ್ಮ! [ಓ]
-ಡಾಡ್ಯೊಡನಾಡ್ಯಾನಂದವಾಗಿರಮ್ಮ! (ಒ)
-ಳ, ಹೊರಗವನೇ ನೀನಾಗಿರಮ್ಮ! (ಅ)
-ಮ್ಮ, ನಿರಂಜನಾದಿತ್ಯಾಪ್ತಾಂಡಾಳಮ್ಮ!!!

ಮಂಗಳಂ ನಿತ್ಯ ಶುಭ ಮಂಗಳಂ!   1(274)

ಚರಾಚರಾತ್ಮಕ ಶ್ರೀ ನಿರಂಜನಗೆ!
ಪರಾತ್ಪರಾ ಗುರು ಶಿವಾನಂದನಿಗೆ!
ವರ ಮಹಾ ಸಂಕೀರ್ತನಾ ಯೋಗಿಗೆ!
ವರಪ್ರದಾಯಕ ಗುರುಮೂರುತಿಗೆ!
ಭೂಸುರ ಕುಲ ಸಂಭೂತನಿಗೆ!
ಕಾಶ್ಯಪ ಗೋತ್ರ ವರ ಸಂಜಾತನಿಗೆ!
ಪಶುಪತಿ ವರ ಪ್ರಸಾದಾತ್ಮನಿಗೆ!
ನಿಶಿ, ದಿನ ಗುರು ಗುಣಾನಂದನಿಗೆ!
ಯೋಗ, ಭೋಗ, ತ್ಯಾಗೇಂದ್ರನಿಗೆ!
ರಾಗ, ದ್ವೇಷ, ಸದಾ ವಿವರ್ಜಿತಗೆ!
ಮಾರ್ಗಶಿರೋತ್ಪನ್ನ ಗುರುಮೂರುತಿಗೆ!
ಶ್ರೀ ಗುರು ನಿರಂಜನಾದಿತ್ಯ ದತ್ತನಿಗೆ!

ಮಂಗಳಮಕ್ಕೆ ಕರ್ನಾಟಕಕ್ಕೆ!   4(2417)

ತ ವೈಭವದುದ್ಧಾರಮಕ್ಕೆ! (ಕಾ)
-ಳ ಸಂತೆಗಳ ನಿರ್ನಾಮಮಕ್ಕೆ!
ದ, ಮತ್ಸರ ವಿದೂರಮಕ್ಕೆ! (ಅ)
-ಕ್ಕೆ, ಧರ್ಮ, ಕರ್ಮದಿಂದೆಲ್ಲಮಕ್ಕೆ!
ರ್ತವ್ಯ ನಿಷ್ಠೆಗೆ ಸ್ಥಾನಮಕ್ಕೆ! (ನಿ)
-ರ್ನಾಮ ಜಾತಿ, ಮತ ಭೇದಕ್ಕಕ್ಕೆ! (ಛ)
-ಟ ಮಾದಕದ್ದವಸಾನಮಕ್ಕೆ! (ಲೋ)
-ಕಕ್ಕೇಕದೇವನೆಂಬರಿವಕ್ಕೆ! (ಅ)
-ಕ್ಕೆ, ನಿರಂಜನಾದಿತ್ಯಾನಂದಕ್ಕೆ!!!

ಮಂಗಳವಾದ್ಯ ಕೇಳುತ್ತಲಿದೆ! (ರಂ)   4(1824)

-ಗನಾಥಗೆ ಪೂಜೆಯಾಗುತ್ತಿದೆ! (ಬೆ)
-ಳಕು ಕತ್ತಲೆಯನ್ನಟ್ಟುತ್ತಿದೆ!
ವಾಸಸ್ಥಾನ ಪ್ರಶಾಂತಾಗುತ್ತಿದೆ! (ವಿ)
-ದ್ಯಮಾನ ಬದಲಾಗುತ್ತಲಿದೆ! (ಸಂ)
-ಕೇತ ಪ್ರೋತ್ಸಾಹವೀಯುತ್ತಲಿದೆ! (ಕೀ)
-ಳು, ಮೇಲೆಂಬುದಳಿಯುತ್ತಲಿದೆ! (ಚಿ)
-ತ್ತ, ನಾಥನಲ್ಲೈಕ್ಯವಾಗುತ್ತಿದೆ! (ಮಾ)
-ಲಿಕನಿಷ್ಟ ವ್ಯಕ್ತವಾಗುತ್ತಿದೆ! (ತಂ)
-ದೆ, ತಾಯಿ ನಿರಂಜನಾದಿತ್ಯಾದೆ!!!

ಮಂಗಳವಾರ ಮಹದಾನಂದ! (ಅ)   1(214)

-ಗರು ಬತ್ತಿಯ ವಾಸನಾನಂದ! (ಕ)
-ಳವಳ ನಿರ್ಮೂಲ ದಿನಾನಂದ!
ವಾಸುದೇವ ಮಾಧವನಾನಂದ!
ಮ್ಯ ಸಾರಂಗ ದರ್ಶನಾನಂದ! (ವಿ)
-ಮಲ ಶೀಲದ ಸುಮನಾನಂದ! (ಗ)
-ಹನ ಭಜನ, ಭೋಜನಾನಂದ!
ದಾರಿ, ವಿರಾಗ ಜೀವನಾನಂದ!
ನಂದ ನಂದನ ಸುಜನಾನಂದ!
ತ್ತ ನಿರಂಜನಾದಿತ್ಯನಂದ!!!

ಮಂಗಳಾ ಬೆಳದಿಂಗಳಂಗಳಾ! (ಸಂ)   4(2373)

-ಗ ಬಿಟ್ಟು ನಿಸ್ಸಂಗಿಯಾದಂಗಳಾ! (ಕ)
-ಳಾನಿಧಿ ಶಾರದೆಯೊಲ್ದಂಗಳಾ!
ಬೆನಕನೊಡನಾಡಿದಂಗಳಾ! (ಸ್ಥ)
-ಳ ಪುರಾಣದಲ್ಲಿಲ್ಲದಂಗಳಾ! (ಸ)
-ದಿಂಬಿನಿಂದಾತ್ಮಾನಂದಾದಂಗಳಾ!
ರ್ವದ ಹೆಸರಳಿದಂಗಳಾ! (ಕ)
-ಳಂಕಾತಂಕವೇನಿಲ್ಲದಂಗಳಾ! (ರಂ)
-ಗನಾಥ ಪವಡಿಸಿದಂಗಳಾ! (ಬೋ)
-ಳಾ ನಿರಂಜನಾದಿತ್ಯನಂಗಳಾ!!!

ಮಂಗಳಾಂಗನುದಯ ಮಂಗಳವಾರ! (ಸಂ)   3(1119)

-ಗವಾಯ್ತವಗಿಳೆಯ ಭೀಕರಾಕಾರ! (ಬಾ)
-ಳಾಂಗಾರ, ಸಂಗೀತಾಗಾರ, ಶ್ರೀ ಶೃಂಗಾರ!
ಣನಾತೀತವಿವನ ಉಪಕಾರ!
ನುಡಿ, ನಡೆಯೊಂದಾಗಿ ಗೈವೋಪಚಾರ!
ಯೆ ಚರಾಚರದಲ್ಲಿವಗಪಾರ!
ದುಪತಿಯ ಗೀತಾಸಾರ ಗಂಭೀರ!
ಮಂಗಳ ವೀರೇಳು ಲೋಕಕ್ಕಿದಾಧಾರ!
ರ್ವಭಂಗ ಗೈದು ಮಾಳ್ಪ ಆತ್ಮೋದ್ಧಾರ! (ಖೂ)
-ಳರಕ್ಕಸ ಸಂಹಾರ ಕುಂಜ ವಿಹಾರ!
ವಾಙ್ಮನಕ್ಕ ಗೋಚರಾ ನಂದ ಕಿಶೋರ! (ವ)
-ರ ನಿರಂಜನಾದಿತ್ಯಾನಂದಾವತಾರ!!!

ಮಂಗಳಾರತಿ ಸಾರಂಗನಿಗೆ!   2(737)

ತಿ, ಮತಿದಾತಾ ರಂಗನಿಗೆ! (ಕ)
-ಳಾತೀತ ಆತ್ಮ ಸ್ವರೂಪನಿಗೆ!
ಘುಕುಲ ದೀಪಾದಿತ್ಯನಿಗೆ!
ತಿರೆಯನು ಕಾಯ್ವಾನಂದನಿಗೆ!
ಸಾವಿರ ಕಿರಣಾ ಶೋಭನಿಗೆ!
ರಂಜಿಸುವರವಿಂದಾಪ್ತನಿಗೆ!
ಗನಾಂಗಣದಿ ರಾಜಿವಗೆ!
ನಿತ್ಯ ಸತ್ಯ ಚಿದಾನಂದನಿಗೆ! (ಯೋ)
-ಗೇಶ ನಿರಂಜನಾದಿತ್ಯನಿಗೆ!!!

ಮಂಗಳಾರತಿಯೆತ್ತು ಭಾರತೀ! (ರಂ)   4(2199)

-ಗನಾಥ ಜಿನನೆಂದು ಭಾರತೀ! (ಕ)
-ಳಾನಿಧ್ಯಾಲಾಪಿಸುತ್ತ ಭಾರತೀ! (ವ)
-ರ ನಿನಗವನೀವ ಭಾರತೀ!
ತಿಳಿದವನಂತಾಗು ಭಾರತೀ! (ಮಾ)
-ಯೆಗೊಳಗಾಗಬೇಡ ಭಾರತೀ! (ಸ)
-ತ್ತು, ಹುಟ್ಟುವ ಬಾಳ್ಸಾಕು ಭಾರತೀ!
ಭಾಗ್ಯ ಭಜನಾನಂದ ಭಾರತೀ!
ಮಿಸದರಲ್ನೀನು ಭಾರತೀ! (ಪ)
-ತೀ, ನಿರಂಜನಾದಿತ್ಯಾಧಿಪತೀ!!!

ಮಂಜಯ್ಯಾ ಪುತ್ರಶೋಕವೇಕಯ್ಯಾ?   4(1796)

ನನ ಮರಣ ದೇಹಕ್ಕಯ್ಯಾ! (ಸ)
-ಯ್ಯಾದ್ರೀಶ ಸರ್ವಂತರ್ಯಾಮಿಯಯ್ಯಾ!
ಪುಣ್ಯ, ಪಾಪವನಿಗಿಲ್ಲವಯ್ಯಾ!
ತ್ರಯಮೂರ್ತಿ ಸ್ವರೂಪವನಯ್ಯಾ!
ಶೋಕವೆಂಬುದು ಮನೋವೃತ್ತ್ಯಯ್ಯಾ!
ಲ್ಲಾಗಬೇಕೀಗ ಮನಸ್ಸಯ್ಯಾ!
ವೇದಾಂತಾತ್ಮ ನಿನ್ನ ಮಗನಯ್ಯಾ!
ರ್ಮ ಕಳೆದೀಗಾತ್ಮಾರಾಮಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾನಂದಯ್ಯಾ!!!

ಮಂಜುಗಣ್ಣಿಗೋದಲುತ್ಸಾಹವಿಲ್ಲ! (ಗಾ)   6(4366)

-ಜು, ಮಾಣಿಕ್ಯಗಳೊಂದೇ ಈಗ ಎಲ್ಲಾ!
ಗನ ಮಣಿಯ ಪ್ರಸಾದವೆಲ್ಲಾ! (ಹೆ)
-ಣ್ಣಿನಾಟವೀಗ ಫಲಿಸುವುದಿಲ್ಲ!
ಗೋಸೇವೆಗನ್ಕೂಲ ಕಾಲವಿದಲ್ಲ!
ತ್ತನಾಡಂಬರ ಪೂಜೆ ಈಗಿಲ್ಲ! (ಹಾ)
-ಲು, ಮೊಸ್ರು, ತುಪ್ಪ ಈಗ ಬೇಕೆಂದಿಲ್ಲ! (ತ)
-ತ್ಸಾಯುಜ್ಯ ಸುಖೇಚ್ಛೆ ಪೂರ್ತಿಗೊಂಡಿಲ್ಲ! (ಅ)
-ಹರ್ನಿಶಿ ಇದಕ್ಕೆ ಸಾಧನೆಯೆಲ್ಲಾ!
ವಿರಕ್ತಿಯೇನೂ ಕಡಿಮೆಯಾಗಿಲ್ಲ! (ಪು)
-ಲ್ಲ ನಿರಂಜನಾದಿತ್ಯ ಬಲ್ಲನೆಲ್ಲ!!!

ಮಂಜುನಾಥಗೇನು ಬೇಕಯ್ಯಾ? (ನಂ)   2(924)

-ಜುಂಡೇಶ್ವರನೇ ಅವನಯ್ಯಾ!
ನಾಮಜಪ ರಾಮನದಯ್ಯಾ! (ನಾ)
-ಥನವನುಮಾದೇವಿಗಯ್ಯಾ! (ನಾ)
-ಗೇಶ, ಗಣೇಶ ಪುತ್ರರಯ್ಯಾ! (ತ)
-ನುಜಾತ ವೀರಭದ್ರನಯ್ಯಾ!
ಬೇಡಿದಿಷ್ಟ ಕೊಡುವಾತಯ್ಯಾ!
ಡೆಗಾತ ಕಾಲಾಂತಕಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾತಯ್ಯಾ!!!

ಮಂಜುನಾಥನಾಗಿ ನಾನಿನ್ನೊಳಗಯ್ಯಾ!   6(3864)

ಜುಟ್ಟವನದ್ದಾರ ಕೈಗೂ ಸಿಕ್ಕದಯ್ಯಾ!
ನಾಮ ಅವನದ್ದತಿ ಪವಿತ್ರವಯ್ಯಾ! (ಪ)
-ಥ ಅವನ ಎಡೆಗೆ ಭಜನೆಯಯ್ಯಾ!
ನಾಚಿಕೆ ಬಿಟ್ಟು ಮೈ ಮರೆಯಬೇಕಯ್ಯಾ!
ಗಿರಿಜಾಮತಿ ಅವನಲ್ಲೈಕ್ಯವಯ್ಯಾ!
ನಾಗರಾಜ ಅವಳಿಗೆ ಮಗನಯ್ಯಾ!
ನಿತ್ಯ, ಶುದ್ಧ, ಸಿದ್ಧ, ಬುದ್ಧನವನಯ್ಯಾ! (ತ)
-ನ್ನೊಬ್ಬನಿಗೋಸ್ಕರ ಅವನಿಲ್ಲವಯ್ಯಾ! (ಬ)
-ಳಸಿಕೊಂಡವ ಬಹು ಭಾಗ್ಯವಂತನಯ್ಯಾ!
ರ್ವದ ಕಣ್ಣಿಗೆ ಮಣ್ಣಿಕ್ಕುವನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾನಂದವನಯ್ಯಾ!!!

ಮಂಜುಳ ಜಲ ನಾದಸ್ವರ!   1(152)

ಜುಳು ಜುಳು ಹರಿವಾ ನೀರ! (ಅ)
-ಳತೆ ಮಾಳ್ಪವರಾರೀ ನೀರ?
ಳಕಕಿದೊಳ್ಳೆಯ ನೀರ! (ಅ)
-ಲರ್ಗಿಡಗಳಿಗಿದಾಹಾರ!
ನಾರಾಯಣಾಗಿದರ್ಘಾಸಾರ! (ಅ)
-ದರಲಿನ್ನೇನಿಲ್ಲ ನಿಸ್ಸಾರ!
ಸ್ವರವಿದು ಬಹು ಗಂಭೀರ!
ನ್ನ “ನಿರಂಜನ” ಶೃಂಗಾರ!!!

ಮಂತ್ರ ಕಾರಣವೆಲ್ಲಾ ತಂತ್ರ, ಯಂತ್ರಕ್ಕೆ! (ಪು)   6(3869)

-ತ್ರರಾದ ರ್ತ್ರಿಮೂರ್ತಿಗಳಾ ಪ್ರಭಾವಕ್ಕೆ!
ಕಾಮ್ಯಾರ್ಥಿಗಾಯ್ತುಪಯೋಗರ್ಧ ಲಾಭಕ್ಕೆ! (ಪ)
-ರಮಾರ್ಥಿಗಿದಾಯ್ತು ಜನ್ಮ ಸಾರ್ಥಕಕ್ಕೆ! (ಕೋ)
-ಣ ಮಂತ್ರವೂ ನೆರವಾಯ್ತು ಮುಕ್ತನಕ್ಕೆ! (ಸೇ)
-ವೆ ನಿಷ್ಕಾಮದಿಂದಾಗ್ಬೇಕಾತ್ಮ ಸುಖಕ್ಕೆ! (ಕ)
-ಲ್ಲಾದಹಲ್ಯೋದ್ಧಾರ ನಿದರ್ಶನದಕ್ಕೆ!
ತಂತಮ್ಮೋದ್ಧಾರ ಮುಖ್ಯವೀಗ ಜನಕ್ಕೆ! (ಪು)
-ತ್ರ, ಕಳತ್ರಾದಿಗಳ್ಕಾರಣ ಬಂಧಕ್ಕೆ! (ತಾ)
-ಯಂದಿರಾಗ್ಲೇಬೇಕೆಂದಿಲ್ಲ ಸ್ತ್ರೀ ವರ್ಗಕ್ಕೆ!
ತ್ರಯಂಬಕನನ್ನೊಲಿಸ್ಬೇಕುದ್ಧಾರಕ್ಕೆ! (ಅ)
-ಕ್ಕೆ ನಿರಂಜನಾದಿತ್ಯ ಶಿವನೆಲ್ಲಕ್ಕೆ!!!

ಮಂತ್ರ ಜಪಮಾಡುವುದೇತಕ್ಕೆ?   6(3351)

(ಪಾ)-ತ್ರ ಪರಮಾರ್ಥಕ್ಕಾಗುವುದಕ್ಕೆ!
ಪ ಮೂರ್ತಿ ತಾನಾಗುವುದಕ್ಕೆ!
ತಿತಪಾವನನಾಗ್ವುದಕ್ಕೆ!
ಮಾತು ಕಡಿಮೆಯಾಗುವುದಕ್ಕೆ!
(ಕೇ)-ಡುಗಳಿಂದ ಪಾರಾಗುವುದಕ್ಕೆ!
(ಠಾ)-ವು ತನ್ನದನ್ನು ಸೇರುವುದಕ್ಕೆ!
ದೇವಗುಣ ತನ್ನದಾಗ್ವುದಕ್ಕೆ!
ತ್ತ್ವಸಿದ್ಧಾಂತ ಸಿದ್ಧಿಸಲಿಕ್ಕೆ!
(ಅ)-ಕ್ಕೆ ನಿರಂಜನಾದಿತ್ಯತಾನಕ್ಕೆ!!!

ಮಂತ್ರ ಲೇಖನ ಸಾಕಾಯ್ತೇಕೇ? (ಪು)   2(987)

-ತ್ರ, ಪುತ್ರಿಯರ್ಗಳುವೆಯೇಕೇ?
ಲೇಸೆನಿಪುದ ಮಾಡು ಜೋಕೇ! (ಸ)
-ಖ ಗುರುವೆಂದರಿಯದೇಕೇ? [ಮ]
-ನಸವನಲಿ ಲೈಸದೇಕೇ?
ಸಾಯುಜ್ಯೈಕ್ಯ ಜಯ ಪತಾಕೇ!
ಕಾರ್ಯನಿಷ್ಠೆಯೇ ಬೇಕದಕೇ! (ಆ)
-ಯ್ತೇನು ಕಷ್ಟ ನಿತ್ಯ ಜಪಕೇ! (ಸಾ)
-ಕೇ, ನಿರಂಜನಾದಿತ್ಯ ಬೇಕೇ!!!

ಮಂತ್ರ ಶಕ್ತಿಯಾನುಭವವಾಗಬೇಕು! (ಚಿ)   6(4016)

-ತ್ರ ಆ ನಾಮಿಯನ್ನೇ ಹೋಲುತ್ತಿರಬೇಕು!
ಕ್ತಿ ಮೀರಿದ್ದಕ್ಕಾಗಿ ದುಡಿಯಬೇಕು! (ಯು)
ಕ್ತಿಯ ವಿದ್ವತ್ಪ್ರದರ್ಶನ ಬಿಡಬೇಕು!
ಯಾಗಗಳು ಫಲಪ್ರದವಾಗಬೇಕು! (ಅ)
-ನುಭವಕ್ಕಿಲ್ಲದಿದ್ರದೇಕಿರಬೇಕು!
ಜನೆಗಜಾದಿಗಳೊಲಿಯಬೇಕು! (ಅ)
-ವರಿವರ ಮಾತು ನಮಗಿನ್ನು ಸಾಕು!
ವಾಚಾಳಿಗಳ ಪ್ರವಚನವೂ ಸಾಕು! (ಭ)
-ಗವಂತ ತಾನೇ ದಾರಿ ತೋರಿಸಬೇಕು!
ಬೇಕಿಲ್ಲದಾರೋಪ ಮಾಡದಿರಬೇಕು!
ಕುಲ ನಿರಂಜನಾದಿತ್ಯನದ್ದಾಗ್ಬೇಕು!!!

ಮಂತ್ರ, ತಂತ್ರ, ಯಂತ್ರಗಳೆಷ್ಟೋ ಆಯಿತು! (ಸ)   5(3068)

-ತ್ರಯಾಗ, ಯೋಗಗಳು ಎಷ್ಟೋ ಆಯಿತು!
ತಂಡ ತಂಡವಾಗಿ ಭಜನೆಯಾಯಿತು!
(ಛ)ತ್ರ, ಚಾಮರಾದಿ ಸೇವೆಯೆಷ್ಟೋ ಆಯಿತು! (ಸಾ)
-ಯಂಕಾಲ, ಬೆಳಗ್ಗನುಷ್ಠಾನವಾಯಿತು! (ಪ)
ಣಪತ್ಯುತ್ಸವಗಳೆಷ್ಟೋ ಆಯಿತು! (ಮ)
-ಳೆ, ಗಾಳಿ, ಬಿಸಿಲಲ್ಲಿ ತಪಸ್ಸಾಯಿತು! (ಅ)
-ಷ್ಟೋಪಚಾರಾವರಣ ಪೂಜೆಯಾಯಿತು!
ತ್ಮಾನಾತ್ಮ ವಿಚಾರ ಮಾಡಿದ್ದಾಯಿತು! (ಬಾ)
-ಯಿ ಮುಚ್ಚಿ ಬಹಳ ವರ್ಷವೇ ಆಯಿತು! (ಹೇ)
-ತು ನಿರಂಜನಾದಿತ್ಯನರಿಯದಾಯ್ತು!!!

ಮಂತ್ರ, ಹೇಳಿದ, ತಂತ್ರ ಹೂಡಿದ! (ಪ)   4(2162)

-ತ್ರ, ಪುಷ್ಪಾರ್ಚನೆಯನ್ನೂ ಮಾಡಿದ!
ಹೇರಂಬನನ್ನೇನೋ ಕೇಳಿದ! (ಬಾ)
-ಳಿನ ಸುಖಕ್ಕೆ ವರ ಬೇಡಿದ! (ಬಂ)
-ದವರಿಗೆ ಪ್ರಸಾದ ನೀಡಿದ!
ತಂದೆ, ತಾಯ್ನೀನೆಂದು ವಂದಿಸಿದ! (ಸ್ತೋ)
-ತ್ರ ಮಾಡಿ ಅಪ್ಪನ ಪ್ರಾರ್ಥಿಸಿದ! (ಬಾ)
-ಹೂರ್ಧ್ವಕ್ಕೆತ್ತಿಳಾಶಾಂತ್ಯಾಶಿಸಿದ! (ಕೂ)
-ಡಿ, ಆಡಿ, ಪಾಡಿ ನಲಿದಾಡಿದ! (ಕಂ)
-ದ ನಿರಂಜನಾದಿತ್ಯಾನಂದಾದ!!!

ಮಂತ್ರರೂಪದಲ್ಲನಂತ ಬಂದ! (ಪ)   4(2237)

-ತ್ರ, ಪುಷ್ಪಾಲಂಕೃತನಾಗಿ ನಿಂದ!
ರೂಢಿಯಂತೆ ಭಕ್ಷ್ಯ. ಭೋಜ್ಯ ತಿಂದ!
ರಿಹಾರಾಗಲಿ ಕಷ್ಟವೆಂದ!
ರ್ಶನಕ್ಕೆ ತಪಸ್ಸು ಮಾಡೆಂದ! (ಚಿ)
-ಲ್ಲರೆ ದೈವವ ನಂಬಬೇಡೆಂದ!
ನಂಬಿಗೆ ನಿಜದಲ್ಲಿರಲೆಂದ!
ರಣಿಯಾದರ್ಶದಂತಿರೆಂದ!
ಬಂಧ ಹರಿವುದದರಿಂದೆಂದ! (ಕಂ)
-ದ ನಿರಂಜನಾದಿತ್ಯನಂತಂದ!!!

ಮಂತ್ರಶಕ್ತಿಯರಿವಾಗ ಬೇಕು!   6(4345)

ತ್ರಯ್ಮೂರ್ತಿ ದತ್ತ ಭಕ್ತಿ ಹೆಚ್ಬೇಕು!
ನಿಕಾಟ ತಪ್ಪಿಹೋಗ ಬೇಕು! (ಮು)
-ಕ್ತಿ ಸಿದ್ಧಿಗನುಕೂಲವಾಗ್ಬೇಕು! (ಭ)
-ಯದ ಹುಟ್ಟಡಗಿ ಹೋಗಬೇಕು! (ವೈ)
-ರಿ ಭಯಂಕರನೂ ಆಗ ಬೇಕು!
ವಾದಕ್ಕೆಡೆಯಿಲ್ಲದಿರ ಬೇಕು!
ರ್ವವೆಳ್ಳಷ್ಟೂ ಇಲ್ಲದಿರ್ಬೇಕು!
ಬೇಜವಾಬ್ದಾರಿ ತಪ್ಪಿ ಹೋಗ್ಬೇಕು! (ಠಾ)
-ಕು ನಿರಂಜನಾದಿತ್ಯನಾಗ್ಬೇಕು!!!

ಮಂತ್ರಾರ್ಥ ಜ್ಞಾನ ಅನುಗ್ರಹದಿಂದ!   1(44)

ತ್ರಾಹಿಯೆಂಬುದದಕೆ ದೈನ್ಯದಿಂದ! (ಅ)
-ರ್ಥ ಜ್ಞಾನ ನಂತರ ಸುಲಭದಿಂದ!
ಜ್ಞಾನಾನಂದವೇ ಮಹದರ್ಥಾನಂದ!
ಟನೆಗಿದು ನಿಲುಕದಾನಂದ!
ಲೆಗಳಡಗಬೇಕದರಿಂದ! (ಅ)
-ನುಷ್ಠಾನ ಬೇಕದಕೆ ಶ್ರದ್ಧೆಯಿಂದ!
ಗ್ರಹಿಸಬೇಕೆಲ್ಲ ವಿಚಾರದಿಂದ!
ರಿವುದು ಆಗರ್ಥ ಧಾರೆಯಿಂದ! (ಇ)
-ದಿಂಬಾಗುವುದು ಅನುಗ್ರಹದಿಂದ!
ರ್ಶನವಿದು ನಿರಂಜನಾನಂದ!!!

ಮಂತ್ರಿ ಕುಡ್ಕನಾದ್ರೋಡದು ರಾಜ್ಯ ಯಂತ್ರ!   5(2519)

ತ್ರಿಕಾಲದಲ್ಲೂ ಮಾಡುತ್ತಿರ್ಪ ಕುತಂತ್ರ!
ಕುಲ, ಶೀಲಕ್ಕೊಪ್ಪದಂಥಾ ಯಂತ್ರ ಮಂತ್ರ! (ಕೆ)
ಡ್ಕರೊಡಗೂಡ್ಕಳ್ಳೊಳ್ಳುವನು ಸ್ವತಂತ್ರ!
ನಾಡಿಗದರಿಂದುಂಟಾಗ್ವುದ್ಪರತಂತ್ರ!
ದ್ರೊ

ಹಿ ತಾನಾಗದೇ ಆಗ್ಬೇಕು ಸತ್ಪುತ್ರ! (ಬ)
-ಡವರ ಬಂಧುವಾಗಿರಬೇಕಾ ಪುತ್ರ!
ದುಸ್ಸಹವಾಸದಿಂದ ನಾಶ ಸರ್ವತ್ರ!
ರಾಜಕಾರಣಿಯಾಗ್ಬೇಕು ಕೃಪಾ ಪಾತ್ರ! (ತ್ಯಾ)
-ಜ್ಯವಾಗ್ಬೇಕೆಲ್ಲಾ ದುರ್ವಿಷಯ ಚರಿತ್ರ! (ತ್ರ)
-ಯಂಬಕನಿಗಾಗ್ಬೇಕವ ಗುರುಪುತ್ರ!
(ಮಿ)-ತ್ರ ನಿರಂಜನಾದಿತ್ಯಾ ಸದ್ಗುರುಪುತ್ರ!!!

ಮಂತ್ರಿ ಮಂಡಲ ರಚಿಸಬೇಕೀಗ!   4(1844)

ತ್ರಿಶಂಕು ಸ್ವರ್ಗವಾಗಬಾರದೀಗ!
ಮಂದಮತಿಯ ತ್ಯಜಿಸಬೇಕೀಗ! (ಮಂ)
-ಡಲೇಶ್ವರನುತ್ತಮನಾಗ್ಬೇಕೀಗ! (ಛ)
-ಲದಿಂದೆಲ್ಲಾ ಕಾರ್ಯ ಕೆಡುವುದೀಗ! (ಪ)
-ರ ಪಕ್ಷ ನಗುವಂತಾಗ್ಬಾರದೀಗ! (ಸಂ)
-ಚಿನಿಂದ ಧಕ್ಕೆಯಾಗಬಾರದೀಗ!
ತ್ಯಸಂಧತೆ ತೋರಿಸಬೇಕೀಗ!
ಬೇರೆ ದಾರಿ ಹಿಡಿದರಾಗದೀಗ!
ಕೀಳಬೇಕಂತಃಕಲಹವನ್ನೀಗ! (ಸೊ)
-ಗ ನಿರಂಜನಾದಿತ್ಯ ಮಾಳ್ಪನಾಗ!!!

ಮಂದಮತಿಗೆ ಮೈಥುನಾನಂದ!   6(3401)

ಶೇಂದ್ರಿಯ ಸಂಗದಕ್ಕಾನಂದ!
ಲಿನಾಸೆಯಿಂದ ಭವ ಬಂಧ!
ತಿತಿಕ್ಷೆ, ವೈರಾಗ್ಯದಿಂದಾನಂದ!
ಗೆಳೆಯ ವಿದುರಗೆ ಗೋವಿಂದ!
ಮೈಥಿಲೀಪತಿ ವಿಶುದ್ಧಾನಂದ!
(ಮ)-ಥುರಾನಾಥ ಸೀತಾನಾಥಾನಂದ!
ನಾಮ ಸಂಕೀರ್ತನೆ ಬ್ರಹ್ಮಾನಂದ!
ನಂಬಿದವಗಾಗ್ವುದೀ ಆನಂದ! (ಆ)
-ದರ್ಶ ನಿರಂಜನಾದಿತ್ಯಾನಂದ!!!

ಮಂದಾರಗಂಧ ಮಂದಿರದಲ್ಲಿ!   5(2705)

ದಾನವಾಂತಕನ ಪಾದದಲ್ಲಿ!
ಮಿಸುವ ಭಕ್ತಗಾನಂದಲ್ಲಿ!
ಗಂಗಾ, ಕಾವೇರಿ ಹರಿಯುವಲ್ಲಿ!
ರ್ಮಾಧರ್ಮದರಿವಿರುವಲ್ಲಿ!
ಮಂಗಳವೆಲ್ಲಕ್ಕಾಗಲೆಂಬಲ್ಲಿ!
ದಿನ, ರಾತ್ರಿ ತಪಸ್ಸಾಗುವಲ್ಲಿ!
ವಿ ತಾನವತರಿಸಿರ್ಪಲ್ಲಿ!
ತ್ತ ಭಕ್ತಿ ವ್ಯಾಪಿಸಿರುವಲ್ಲಿ! (ಎ)
-ಲ್ಲಿ? ನಿರಂಜನಾದಿತ್ಯನಿರ್ಪಲ್ಲಿ!!!

ಮಂದಿರದಂದ ಮಾಧವನಿಂದ!   1(58)

ದಿನದಿಂದ ದಿನಕರನಿಂದ!
ಜನಿಯಂದ ಚಂದ್ರಮನಿಂದ!
ದಂಡದಂದ ದಂಡಪಾಣಿಯಿಂದ!
ರ್ಶನದಂದಾ(ಆ)ತ್ಮ ಭಾವದಿಂದ!
ಮಾತಿನಂದ ಮನ ಶುಚಿಯಿಂದ!
ರಣಿಯಂದ ಮರಗಳಿಂದ!
ನದಂದ ವನಜಗಳಿಂದ!
ನಿಂತೆಡೆಯಂದ ಶ್ರೀಧರನಿಂದ!
ತ್ತನಂದ ನಿರಂಜನನಿಂದ!!!

ಮಂದಿರವ ಮನ ಸ್ವಚ್ಛವಾಗಿರಿಸಬೇಕು!   6(3904)

ದಿವ್ಯ ನಾಮಸ್ಮರಣೆಯಿಂದದನ್ನು ಮಾಡ್ಬೇಕು!
ಕ್ತ, ಮಾಂಸದೀ ಗೊಂಬೆ ಗುಡಿಯೆಂದರಿಯ್ಬೇಕು!
ಸ್ತ್ರಾದ್ಯಲಂಕಾರಾ ಭಾವನೆಯಿಂದ ಮಾಡ್ಬೇಕು!
ನುಷ್ಯರನ್ನು ಮೆಚ್ಚಿಸ್ಲಿಕ್ಕಲ್ಲವಾಗಿರ್ಬೇಕು!
ಟರಾಜ ಒಳಗಿಹನೆಂದರಿಯ ಬೇಕು!
ಸ್ವರೂಪ ವ್ಯಕ್ತಾವ್ಯಕ್ತವೆಂದು ತಿಳಿಯಬೇಕು! (ಉ)
-ಚ್ಛ, ನೀಚ ಅವನಿಗಿಲ್ಲವೆಂದರಿಯಬೇಕು!
ವಾದ, ಭೇದಕ್ಕವ ಸಿಕ್ಕನೆಂದರಿಯಬೇಕು!
ಗಿಡ, ಬಳ್ಳಿಯಲ್ಲೂ ಇರುವನೆಂದರಿಯಬೇಕು!
ರಿಸಿಗಳನುಭವದಿದೆಂದರಿಯಬೇಕು!
ಚ್ಚಿದಾನಂದಾತ್ಮ ಅವನೆಂದರಿಯಬೇಕು!
ಬೇರಾವ ರೂಪವನ್ನೂ ಕಲ್ಪಿಸದಿರಬೇಕು!
ಕುಲಕ್ಕೆ ನಿರಂಜನಾದಿತ್ಯಾನಂದವಿರ್ಬೇಕು!!!

ಮಂದಿರವೆಷ್ಟು ಸುಂದರವಾದರೇನು?   4(1989)

ದಿನ ನಿತ್ಯ ಸ್ವಚ್ಛಮಾಡಬೇಡವೇನು? (ಪ)
-ರಮಾತ್ಮನಲ್ಲಿ ಬೆಳಗಬೇಡವೇನು?
ವೆಚ್ಚ ತನು, ಮನ, ಧನದ್ದಾಗ್ಬೇಡ್ವೇನು? (ನಿ)
-ಷ್ಟುರ ಸ್ವಭಾವವಡಗಬೇಡವೇನು?
ಸುಂದರೇಶನಿಗೆ ಶರಣಾಗ್ಬೇಡ್ವೇನು?
ರ್ಶನದಿಂದ ದಾರಿದ್ರ್ಯ ಹೊಗ್ಬೇಡ್ವೇನು? (ವ)
-ರಗುರು ಮಹಿಮೆ ಕಾಣಬೇಡವೇನು? (ಭಾ)
-ವಾತೀತನಾಗಿ ಬೆರೆಯಬೇಡವೇನು?
ರ್ಪ, ದಂಭ ದಹನವಾಗ್ಬೇಡವೇನು?
ರೇಗಾಟ, ಕೂಗಾಟ ನಿಲ್ಲಬೇಡವೇನು? (ತ)
-ನು, ನಿರಂಜನಾದಿತ್ಯ ನಿಲಯಲ್ವೇನು???

ಮಕ್ಕಳ ಖುಶಿಗಕ್ಕರೆಯ ಋಷಿ ತಕ್ಕ ಗುರು! (ಉ) !   1(76)

-ಕ್ಕಡದ ಗೌಡನಿವಗಂಜುವರು ದಾರಿಗರು! (ಉ)
-ಳಮೆಯಿವನಿಂದೆಂದಾದಿರಾಜರರಿತಿಹರು!
ಖುದಾ, ಕ್ರಿಸ್ತಾದಿಗಳೆಲ್ಲರಿವನತ್ಯಂತಾಪ್ಪರು!
ಶಿವಾನಂದರೆಂದರೆ ಇವನ ಪಂಚಪ್ರಾಣರು!
ಂಗಾ ಯಮುನೆಯರು ಇವನಿಂದ ಪಾವನರು! (ಉ)
-ಕ್ಕಬಾರದು ನದಿಗಳೆಂದಿವನ ಪ್ರಾರ್ಥಿಪರು!
ರೆಸಿಗೆಯಾಡಳುವವರಿವಗೆ ಶರಣರು!
ಮೇಂದ್ರಾದಿ ದೇವತೆಗಳಿವನಿಗೆ ವಶರು!
ಷಿ ಮುನಿಗಳೆಲ್ಲನುದಿನ ಕೊಂಡಾಡುವರು!
(ಶಿ) -ಷಿಷ್ಟಾಚಾರಗಳಿಗಿವನಾದರ್ಶವೆನ್ನುವರು!
ರಣಿ, ಧರಣಿಯ ಕಣ್ಮಣಿಯೆಂದನ್ನುವರು! (ಉ)
-ಕ್ಕದಿರೆ ನಿಜ ಸ್ಫೂರ್ತಿ, ಇವನ ಬೇಡುತಿಹರು!
ಗುಡಿ, ಗೋಪುರದಲಿವನ ಬಂಧಿಸದಿಹರು!
ರುಚ್ಯರುಚಿರದೀತ! ನಿರಂಜನಾದತ್ಯ ಗುರು!!!

ಮಕ್ಕಳ ಚೇಷ್ಟೆ ಮಾತೆಗಾನಂದ! [ಅ]   2(916)

-ಕ್ಕರೆಯವಳದು ನಿತ್ಯಾನಂದ! (ಒ)
-ಳ, ಹೊರಗವಳ ಭಾವಾನಂದ!
ಚೇತನವಳದೆಲ್ಲೆಲ್ಲಾನಂದ! (ನಿ)
-ಷ್ಟೆ, ಶಂಕರನುರು ಸೇವಾನಂದ!
ಮಾತಿಲ್ಲದೆ ಸದಾ ಮೌನಾನಂದ! (ಮಾ)
-ತೆ ತಾನೆಂಬ ಪರಮಾತ್ಮಾನಂದ! (ಆ)
-ಗಾಗೆಚ್ಚರಿಪ ಕರ್ತವ್ಯಾನಂದ!
ನಂಬಿದವರಿಷ್ಟ ಪೂರ್ತ್ಯಾನಂದ!
ತ್ತ ನಿರಂಜನಾದಿತ್ಯಾನಂದ!!!

ಮಕ್ಕಳ ಭಜನೆ ನಿಜಾನಂದ! [ಸಿ]   5(2898)

-ಕ್ಕಲಾರದೆಲ್ಲರಗೀ ಆನಂದ! (ಒ)
-ಳಗೆ, ಹೊರಗದು ಶುದ್ಧಾನಂದ!
ಕ್ತಿ, ಮುಕ್ತಿಪ್ರದಾ ನಿತ್ಯಾನಂದ!
ನ್ಮ ಸಾರ್ಥಕಕ್ಕೆ ಆತ್ಮಾನಂದ!
ನೆನಪನ್ಯಕ್ಕಿಲ್ಲದದಾನಂದ!
ನಿಶಿ, ದಿನವಿರಲೀ ಆನಂದ!
ಜಾತಿ, ಮತ ಭೇದಾತೀತಾನಂದ!
ನಂಜುಂಡೇಶ್ವರಗಿದೇ ಆನಂದ!
ತ್ತ ನಿರಂಜನಾದಿತ್ಯಾನಂದ!!!

ಮಕ್ಕಳ ಹೃದಯ ಮಾಧವಗೆ! (ಅ)   3(1337)

-ಕ್ಕರೆಯವರಲ್ಲಿ ಮಾಧವಗೆ! (ಒ)
-ಳ, ಹೊರಗೆಂದಿಲ್ಲ ಮಾಧವಗೆ!
ಹೃದಯ ನಿರ್ಮಲ ಮಧವಗೆ!
ಯೆಯಲಂಕಾರ ಮಾಧವಗೆ! (ಭ)
-ಯ, ಭಕ್ತಿ, ಸ್ವಾಗತ ಮಾಧವಗೆ!
ಮಾತು, ಕತೆ, ಬೇಡ ಮಾಧವಗೆ!
ರ್ಮ, ಕರ್ಮ, ಪ್ರೇಮ ಮಾಧವಗೆ!
ರ ಗುರುನಾಮ ಮಾಧವಗೆ! (ಬ)
-ಗೆ ನಿರಂಜನಾದಿತ್ಯನೆಮಗೆ!!!

ಮಕ್ಕಳಾಕಳುಗಳೊಡನಾಟದಾಟವೆನಗಿಂದು! (ಉ)   1(80)

-ಕ್ಕಬಾರದುದ್ವೇಗವೆಂದಿರುವೆ ಸಹಜದಲಿಂದು! (ಒ)
-ಳಾಂಗಣದೊಳಗಿಲ್ಲೇನೇನೂ ಕೊಳೆಗಳಿಲ್ಲವಿಂದು!
ರುಣೆ ಇದು ಬಹಳನುಕೂಲವೆಂದಿಹೆನಿಂದು! (ಉ)
-ಳುವಾಳುಳುತಿಹೆನೆನ್ನಲದಲಾನಂದದಿಂದು!
ಗಮಣಿ ಬರದಿರುವುದೇ ಕೊರತೆಯಿಂದು! (ಒ)
ಳೊಳಗಾಗಿತಿದೆ ಖೇದವದರಿಂದಯ್ಯ ಬಾರೆಂದು! (ಒ)
-ಡನಾಟದಾನಂದಕಾವನ ಪ್ರಾರ್ಥಿಪೆನಾನಿಂದು!
ನಾನಿದನೊರೆಯುತಿರುವಾಗ ರವಿ ಬಂದನಿಂದು! (ಓ)
-ಟವಾಗಲೇ! ಅಡಗಿದನು ಮೋಡಗಳೊಳಗಿಂದು!
ದಾರಿಕಾಣದಾದೆನು ಮತ್ತೆ ಉತ್ಸಾಹವಿಲ್ಲದಿಂದು! (ಓ)
-ಟದಾಟಡಗಾಟಗಳೆಂಬವನದೀ ಪಾಠವಿಂದು!
ವೆಚ್ಚಮಾಡೆನು ವ್ಯರ್ಥವಾಗಿದನು ನಾನು ಎಂದೆಂದೂ!
ಂಬಿಹೆನಾತ ಮಾಡುವುದೆಲ್ಲಾ ನನ್ನೊಳ್ಳೆದಕೆಂದು!
ಗಿಂಡಿ ನೀರಿಗಾಧಾರವೆಂದು ಹೇಳುವುದೇನಿದೆಂದು!
ದುರಿತದೂರ ನಿರಂಜನಾದಿತ್ಯಾ! ಕಾದಿಹೆನಿಂದು!!!

ಮಕ್ಕಳಾಟ ಮಾತೆಗಾನಂದ! (ಚೊ)   1(221)

-ಕ್ಕಟಾಟ ವಿಮಲಗಾನಂದ! (ಗೋ)
-ಲಾಟ ಗೋವಿಂದನಿಗಾನಂದ! (ನೋ)
-ಟದಾಟ ನಯನಕಾನಂದ!
ಮಾಯಾಟ ಮಾಧವಗಾನಂದ!
ತೆಗ್ಳಾಟ ನಿಂದಕಗಾನಂದ! (ನ)
-ಗಾಟ ವಿದೂಷಕಗಾನಂದ! (ಅ)
ನಂಟನಾಟ ಕಾಮಿಗಾನಂದ! (ನಾ)
-ದ ನಿರಂಜನಾದಿತ್ಯಾನಂದ!!!

ಮಕ್ಕಳಿಗೆ ಧ್ಯಾನಮಿಂಚಿಕ್ಕಬೇಕೆಂದ ಸುಬ್ಬಣ್ಣ! (ಸ)   4(2155)

-ಕ್ಕರೆ, ಹಾಲು, ಸವಿದಂತಿದೆಂದ ಗುರು ಸುಬ್ಬಣ್ಣ! (ಪೀ)
-ಳಿಗೆ ಭಾರತದ್ದುದ್ಧಾರಾಗಬೇಕೆಂದ ಸುಬ್ಬಣ್ಣ!
ಗೆಳೆತನದಾದರ್ಶದರಲ್ಲಿದೆಂದ ಸುಬ್ಬಣ್ಣ! (ಅ)
-ಧ್ಯಾಪಕರಿದಭ್ಯಾಸ ಮಾಡಬೇಕೆಂದ ಸುಬ್ಬಣ್ಣ! (ಅ)
-ನವರತಾಹಾರವಿದಮೃತವೆಂದ ಸುಬ್ಬಣ್ಣ!
ಮಿಂದರಿದರಲ್ಲಿ ಪಾಪಹರವೆಂದ ಸುಬ್ಬಣ್ಣ!
ಚಿದಾನಂದ ಸುಖವಿದರಲ್ಲಿದೆಂದ ಸುಬ್ಬಣ್ಣ (ಸಿ)
-ಕ್ಕಲಾರದಿದು ಸಂತೆಗಳಲ್ಲೆಂದಾಪ್ತ ಸುಬ್ಬಣ್ಣ!
ಬೇಕಿದಕೆ ಹಿಂದಿನ ಸುಕೃತವೆಂದ ಸುಬ್ಬಣ್ಣ (ಸಾ)
-ಕೆಂದರೂ ಸಾಕಾಗದಿರುವುದಿದೆಂದ ಸುಬ್ಬಣ್ಣ!
ಯೆಯಿದು ಸದ್ಗುರು ಶಿವನದೆಂದ ಸುಬ್ಬಣ್ಣ!
ಸುಪ್ರಭಾತ ದತ್ತಗಿದರಿಂದಾಗ್ಲೆಂದ ಸುಬ್ಬಣ್ಣ! (ಹ)
-ಬ್ಬದೂಟಕ್ಕಿಂತಧಿಕ ತನಗಿದೆಂದ ಸುಬ್ಬಣ್ಣ! (ಅ)
-ಣ್ಣ ನರಂಜನಾದಿತ್ಯಗೆ ಶರಣೆಂದ ಸುಬ್ಬಣ್ಣ!!!

ಮಕ್ಕಳು, ಮರಿಗಳೂಟಕ್ಕಭಾವ ತರಬೇಡಿ! (ಸೊ)   5(2701)

-ಕ್ಕಬೇಡಿ ದವಸ ಧ್ಯಾನಗಳ ಶೇಖರ ಮಾಡಿ! (ಕೀ)
-ಳು, ಮೇಲೆಂಬ ಭೇದ ಬಿಟ್ಟೆಲ್ಲರಿಗೆ ಧಾನ್ಯ ನೀಡಿ!
ನೆ, ಮಠಗಳ ಲೂಟಗಾಸ್ಪದ ಕೊಡಬೇಡಿ! (ಪ)
-ರಿಸ್ಥಿತಿ ಕೆಡುವತನಕ ಕುಳಿತಿರಬೇಡಿ! (ಭ)
-ಗವತ್ಸ್ವರೂಪವೆಲ್ಲರೆಂದರಿಯದಿರಬೇಡಿ! (ಕಾ)
-ಳೂರವರಿಗೆ ನ್ಯಾಯಬೆಲೆಗೆ ಕೊಡದಿರ್ಬೇಡಿ! (ಕಾ)
-ಟನ್ಯರಿಗೆ ಕೊಟ್ಟು ನೀವೂ ಕೆಟ್ಟು ಸುಟ್ಟುಹೋಗ್ಬೇಡಿ! (ಅ)
-ಕ್ಕಪಕ್ಕದೊಗ್ಗಟ್ಟಿಲ್ಲದೆ ಬಿಕ್ಕಟ್ಟಿಗೀಡಾಗ್ಬೇಡಿ!
ಭಾಷೆಕೊಟ್ಟು, ಮೋಸಮಾಡಿ ತಮಾಷೆ ನೋಡಬೇಡಿ!
ರ ಗುರುವಿನುಪದೇಶ ಪಾಲಿಸದಿರ್ಬೇಡಿ!
ನುವಿನಾಸೆಯಿಂದ ತತ್ವಕ್ಕೆ ಧಕ್ಕೆ ತರ್ಬೇಡಿ! (ಪ)
-ರದ್ರವ್ಯಾಪಹಾರಕ್ಯೆಂದೂ ಮನಸ್ಸು ಮಾಡಬೇಡಿ!
ಬೇಟೆಯಾಡಿ ಸಾಧುಪ್ರಾಣಿಗಳನ್ನು ಕೊಲ್ಲಬೇಡಿ! (ನಾ)
-ಡಿಗೊಡೆಯ ನಿರಂಜನಾದಿತ್ಯನೆಂದು ಕೂಂಡಾಡಿ!!!

ಮಗುವಿಗೆಡೆ ತಾಯಿ ತೊಡೆ! [ಹೋ]   2(936)

-ಗುತೇರುವುದಾ ಮೃದು ತೊಡೆ!
ವಿಸ್ಮಯವೇಕದೇರಿದೊಡೆ? (ಹೋ)
-ಗೆನುವಳೇ ತಾಯತ್ತಕಡೆ? (ಕೊ)
-ದೆ ಹಾಲೆಂಬಳತ್ತ ಪೋದೊಡೆ!
ತಾಯಿ ಸ್ನೇಹನುಪಮ ನೋಡೆ! (ಬಾ)
-ಯಿಲಿಡುವಳು ಸಿಹಿ ಪೇಡೆ!
ತೊದಲು ಮಾತಾಗಾಕೆ ಕೂಡೆ! (ಬಿ)
-ಡೆ, ನಿರಂಜನಾದಿತ್ಯ ಪೇಡೆ!!!

ಮಗುವಿದು ನಿನ್ನದಯ್ಯಾ!   2(714)

ಗುಣ, ದೋಷರಿಯದಯ್ಯಾ!
ವಿಷಯಾಸೆ ಕಾಟವಯ್ಯಾ!
ದುರಿತದೂರ ನೀನಯ್ಯಾ!
ನಿನ್ನಂತಿದನು ಮಾಡಯ್ಯಾ! [ಬ]
-ನ್ನಪಡಿಸಬಾರದಯ್ಯಾ!
ಯೆ ನಿನ್ನದಿರಲಯ್ಯಾ! [ಅ]
-ಯ್ಯಾ ನಿರಂಜನಾದಿತ್ಯಯ್ಯಾ!!!

ಮಚ್ಚರ, ಬಚ್ಚಲು ನೀರಯ್ಯಾ! (ಅ)   1(302)

-ಚ್ಚ ಮನವಿರೆ ಸುಖವಯ್ಯಾ!
ಗಳೆಗಳದರಿಂದಯ್ಯಾ!
ಲಗೇಡದರಿಂದಲಯ್ಯಾ! (ಅ)
-ಚ್ಚಳಿಯದ ಪ್ರೀತಿ ಬೇಕಯ್ಯಾ!
ಲುಚ್ಚತನ ಬಿಡಬೇಕಯ್ಯಾ!
ನೀಲಾಕಾಶದಂತಿದ್ದಿರಯ್ಯಾ!
ವಿ ಗುಣಾಗುತಿಪ್ಪುದಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಜೀಯ!!!

ಮಚ್ಚರದಿಂದೆಚ್ಚರ ತಪ್ಪಬೇಡಪ್ಪಾ! (ಅ)   5(2532)

-ಚ್ಚರಿಯಾಗ್ತಿದೆನಗೆ ನಿನ್ನ ನೋಡ್ಯಪ್ಪಾ! (ನ)
-ರಜನ್ಮ ಬರುವುದು ದುರ್ಲಭವಪ್ಪಾ! (ಅಂ)
-ದಿಂದಿನದ್ದಾಡಿದರೇನು ಲಾಭವಪ್ಪಾ? (ನಿಂ)
-ದೆ ಮಾಡಿ ಸಂದಿಯ ಹಂದಿಯಾಗ್ಬೇಡಪ್ಪಾ! (ಸ)
-ಚ್ಚರಿತನಾಗಿನ್ನುಮೇಲಾದ್ರೂ ಇರಪ್ಪಾ! (ವ)
-ರ ಗುರುಸೇವೆ ಮಾಡಿ ಧನ್ಯನಾಗಪ್ಪಾ!
ತ್ವಮಸಿ ಪದದರ್ಥ ಸಾಧಿಸಪ್ಪಾ! (ಮು)
-ಪ್ಪಡಸಿದ ಮೇಲಾವುದೂ ಸಾಗದಪ್ಪಾ!
ಬೇಸರಪಡದೀಗಲೇ ಮಾಡೆಲ್ಲಪ್ಪಾ! (ಮ)
-ಡದಿ ಮಕ್ಕಳಾಸೆಯೆಲ್ಲಾ ಬಿಟ್ಟಿಡಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯಾನಂದನಾಗಪ್ಪಾ!!!

ಮಡದಿ, ಮಕ್ಕಳೆಲ್ಲೀಗ ಶಿವ? (ನೋ)   4(1762)

-ಡಬಾರದವರನ್ನೀಗ ಶಿವ!
ದಿವ್ಯ ಜ್ಞಾನಾನಂದನೀಗ ಶಿವ!
ಮತಾ ರಹಿತನೀಗ ಶಿವ! (ತ)
-ಕ್ಕ ಆಚ್ಞೆಯಿತ್ತಿಹನೀಗ ಶಿವ! (ವೇ)
-ಳೆಗೊಪ್ಪುವ ಬಾಳಲ್ಲೀಗ ಶಿವ! (ತ)
-ಲ್ಲೀನನಾಗಿರುವನೀಗ ಶಿವ! (ಲಿಂ)
-ಗಪೂಜಾ ನಿರತನೀಗ ಶಿವ!
ಶಿವೆಗೊಳಗಿರೆಂದೀಗ ಶಿವ!
ರ ನಿರಂಜನಾದಿತ್ಯ ಶಿವ!!!

ಮಡಿಕೆಯ ಬಾಯಿಂದನ್ನ ಉಕ್ಕುತಿದೆ! (ಅ)   5(2977)

-ಡಿಗೆಯಾದ ಪದಾರ್ಥಾರೀತ್ಯುಕ್ಕುತಿದೆ!
ಕೆಟ್ಟ ಮಾಂಸ ಬೇಯ್ಸಿದ್ರದೇ ಉಕ್ಕುತ್ತದೆ!
ಜ್ಞದಿಂದೊಳ್ಳೇ ಹವೋತ್ಪತ್ತಿಯಾಗ್ತದೆ!
ಬಾಯಿಂದ ಯೋಗ್ಯ ಮಂತ್ರೋಚ್ಚಾರವಾಗ್ತದೆ! (ಕೈ)
-ಯಿಂದ ಮಾಡುವುದು ಬಾಯಲ್ಲೂ ಬರ್ತದೆ!
ಯಾಹೀನ ಕೈ ಪ್ರಾಣಿವಧೆ ಮಾಡ್ತದೆ! (ತ)
-ನ್ನ ಬಾಯಿಂದಪಶಬ್ದ ಹೊರಡುತ್ತದೆ!
ಕ್ಕುತ್ತದೆ, ತನ್ನಲ್ಲಿದ್ದುದುಕ್ಕುತ್ತದೆ! (ತೊ)
-ಕ್ಕು, ಮಾಂಸದ ಗೊಂಬೆ ಇಟ್ಟಂತಿರುತ್ತದೆ!
ತಿಳಿದವನಾತ್ಮ ಶಾಂತಿಯಿಂದಿರುತ್ತದೆ! (ಇ)
-ದೆ, ನಿರಂಜನಾದಿತ್ಯಗೀ ಸ್ಥಿತಿಯಿದೆ!!!

ಮಡಿಲಲ್ಲಿ ಕೆಂಡ, ಒಡಲಲ್ಲಿ ಗಂಡ! (ಮ)   5(2736)

-ಡಿವನೇನದರಿಂದಾ ಗಂಡ ಮಾರ್ತಾಂಡ?
ಲನಾ ಮನವೆಂಬುದೊಂದಗ್ನಿ ಕುಂಡ! (ಕೊ)
-ಲ್ಲಿದನು ನನ್ನಿಂದೆಂಬುದು ಯೋಗದಂಡ!
ಕೆಂಪಡರ್ದ ಕಣ್ಣಿಗೀಗಾಹುತೀ ರುಂಡ! (ಸು)
-ಡಬೇಡ, ಶರಣಾದೆಂಬುದಾಗ ಮುಂಡ!
ಒಪ್ಪಿ, ತಪ್ಪಿ ಬೆಪ್ಪಾದುದನಾಗ ಕಂಡ! (ಮ)
-ಡದಿ ನೀನೆನಗೆಂದು ಮರುಕಗೊಂಡ! (ಅ)
-ಲಕ್ಷ್ಯ ಮಾಡ್ಬೇಡೆನ್ನನಿನ್ನೆಂದಾ ನಂಜುಂಡ! (ಇ)
-ಲ್ಲಿನ್ನಾನಂದದಿಂದೆರೆಂದೊಡಗೂಡ್ಯುಂಡ!
ಗಂಗೆಯಿಂದ ಕೈ, ಬಾಯಿ, ತೊಳೆಸಿಕೊಂಡ! (ಗಂ)
-ಡ ನಿರಂಜನಾದಿತ್ಯನೆಂದುದ್ಬ್ರಹ್ಮಾಂಡ!!!

ಮಡಿಲಿಗೆ ಬಿದ್ದ ಬಡವನಿವನಯ್ಯಾ! (ಅ)   1(426)

-ಡಿಗಡಿಗಪರಿಮಿತ ಕಷ್ಟಗಳಯ್ಯಾ! (ಆ)
-ಲಿಸಿ, ಪಾಲಿಸುವವರಿನ್ಯಾರಿಲ್ಲವಯ್ಯಾ!
ಗೆಳೆಯ ನೀನು ಒಬ್ಬನೇ ಇವನಿಗಯ್ಯಾ!
ಬಿಡದಿರು ಕೈಯ್ಯ! ಹಿಡಿದು ಎಬ್ಬಿಸಯ್ಯಾ! (ಅ)
-ದ್ದಲಾಗದಿನ್ನೂ ದುಃಖಸಾಗರದಲಯ್ಯಾ!
ಳಲುತಿಹನು ಬಹುಕಾಲದಿಂದಯ್ಯಾ! (ಆ)
-ಡಲಾರನಾರಲ್ಲೂ ಈ ದುಃಸ್ಥಿತಿಯನಯ್ಯಾ!
ಸ್ತ್ರಾನ್ನ, ಪಾನಗಳಿಗೂ ಅಭಾವವಯ್ಯಾ!
ನಿರತ ಮಾಡುವನು ರಾಮ ಜಪವಯ್ಯಾ! (ಆ)
-ವ ತಪ್ಪಿದ್ದರೂ ಕ್ಷಮಿಸುತ ರಕ್ಷಿಸಯ್ಯಾ!
ಮಿಸಿಹನು ಶ್ರೀಪಾದಕಮಲಕಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾ!! ಮೌನವೇತಕಯ್ಯಾ!!!

ಮಣ್ಣಿನ ಗೊಂಬೆಯಿದನ್ನದ್ದಬೇಡ್ವೋ ನೀರಲ್ಲಿ! (ಕ)   5(3170)

-ಣ್ಣಿನಾನಂದಕ್ಕಾದರೂ ಇರಿಸೋ ನೆಲದಲ್ಲಿ!
“ನಶ್ವರವಿದು ದೇಹ” ಸಂದೇಹವಿಲ್ಲದ್ರಲ್ಲಿ!
ಗೊಂಬೆ ಗುಡಿಗಾರನಾನಂದಕ್ಕಾಗಿರ್ಪುದಿಲ್ಲಿ!
ಬೆಕ್ಕೆಗಳ ತುಂಬಬಾರದು ಅವನದ್ರಲ್ಲಿ! (ಬಾ)
-ಯಿ, ಕಣ್ಣು, ಕಿವಿ ಮಾಡಲೀಗ ಸೇವೆ ಅದ್ರಲ್ಲಿ!
ಶೇಂದ್ರಿಯಾಧಿಪನಾತನೆಂಬರಿವಾಗ್ಲಿಲ್ಲಿ! (ತ)
-ನ್ನ ರೀತಿ, ನೀತಿಯಂತಾಳಲೆಲ್ಲವನ್ನೀಗಿಲ್ಲಿ! (ಬಿ)
-ದ್ದರೂ, ಎದ್ದರೂ, ಇರ್ಬೇಕವನ ನೆನಪಿಲ್ಲಿ!
ಬೇರಿನ್ನೇನನ್ನೂ ಬೇಡುವುದಿಲ್ಲೀ ಜನ್ಮದಲ್ಲಿ! (ಬೇ)
-ಡ್ವೋ ಇಷ್ಟು ನಿರ್ದಯೆ ತನುಜನಾದವನಲ್ಲಿ!
ನೀಚರೊಡನಾಟವೆಂದಿಗೂ ಇಲ್ಲದಿರ್ಲಿಲ್ಲಿ!
ಮೇಶ, ಉಮೇಶ, ವಾಣೀಶರೊಂದಾಗಿರ್ಲಿಲ್ಲಿ! (ಇ)
-ಲ್ಲಿ, ನಿರಂಜನಾದಿತ್ಯಾನಂದ ನಿಲಯದಲ್ಲಿ!!!

ಮಣ್ಣು ಮುಕ್ಕಿಸುವ ಸೊಕ್ಕ ಮುಕ್ಕಣ್ಣ! (ಹೆ)   5(2729)

-ಣ್ಣು, ಮಣ್ಣಿನಾಸೆ ಸಾಕೆಂಬ ಮುಕ್ಕಣ್ಣಾ!
ಮುಟ್ಟು, ಮಡಿ ಸುಟ್ಹಾಕೆಂಬ ಮುಕ್ಕಣ್ಣ! (ಲೆ)
-ಕ್ಕಿಸ್ಬೇಡನ್ಯ ಛಿದ್ರವೆಂಬ ಮುಕ್ಕಣ್ಣ!
ಸುಗುಣವಾಯ್ದುಕೊಳ್ಳೆಂಬ ಮುಕ್ಕಣ್ಣ! (ಭ)
-ವರೋಗ ವೈದ್ಯ ತಾನೆಂಬ ಮುಕ್ಕಣ್ಣ!
ಸೊಗದೂರ್ಕೈಲಾಸವೆಂಬ ಮುಕ್ಕಣ್ಣ!
(ಚೊ)ಕ್ಕ ವಾತಾವರಣದೆಂಬ ಮುಕ್ಕಣ್ಣ!
ಮುನಿಜನ್ತೂಣವೆಂಬ ಮುಕ್ಕಣ್ಣ! (ಹ)
-ಕ್ಕದಕ್ಬೆಕ್ಕೆಗಿಲ್ಲವೆಂಬ ಮುಕ್ಕಣ್ಣ! (ಅ)
-ಣ್ಣ ನಿರಂಜನಾದಿತ್ಯನಾ ಮುಕ್ಕಣ್ಣ!!!

ಮಣ್ಣು ಹಾಕಿಕೊಳ್ಬೇಡ ಬಾಯಿಗೆ! (ಉ)   5(3172)

-ಣ್ಣುವುದಕ್ಕಿಕ್ಕೆನ್ನನ್ನಪೂರ್ಣೆಗೆ!
ಹಾಲ್ಕೀರ್ಬಡಿಸುವಳ್ಮಗನಿಗೆ!
ಕಿರುಕುಳ ಕೊಡ್ಬಾರ್ದವಳಿಗೆ!
ಕೊಟ್ಟದ್ದುಂಡರಾನಂದವಳಿಗೆ! (ಕೇ)
-ಳ್ಬೇಡವಳನ್ನಸುರರಡುಗೆ!
ಮರುಧರ ಸುಖನಾಕೆಗೆ
ಬಾಳ ನೇತ್ರನೆಂಬರವನಿಗೆ! (ತಾ)
-ಯಿ, ತಂದೆ, ಅವರೀರ್ವರೆಮಗೆ!
ಗೆಳೆಯ ನಿರಂಜನಾದಿತ್ಯಾಗೆ!!!

ಮಣ್ಣುಪಾಲು ಮಾಡಿದವರೆಲ್ಲಾ ಮಣ್ಣುಪಾಲು! (ಕ)   4(2429)

-ಣ್ಣು ಮುಚ್ಚಿದ ಮೇಲೆ ಹೊನ್ನು, ಹೆಣ್ಣೂ, ಮಣ್ಣುಪಾಲು!
ಪಾಲ್ಮೊಸ್ರು, ಬೆಣ್ಣೆಯುಂಡವರೆಲ್ಲಾ ಮಣ್ಣುಪಾಲು! (ಮೇ)
-ಲು, ಕೀಳೆಂದು ಜಗ್ಳಾಡಿದವರೂ ಮಣ್ಣುಪಾಲು!
ಮಾತಿನಿಂದೆಲ್ಲರ ಗೆದ್ದವರೂ ಮಣ್ಣುಪಾಲು! (ಕೂ)
-ಡಿ, ಆಡಿ, ಕುಣಿದಾಡಿದವರೂ ಮಣ್ಣು ಪಾಲು!
ರಿದ್ರ, ಶ್ರೀಮಂತಾದಿಗಳೆಲ್ಲಾ ಮಣ್ಣು ಪಾಲು!
ಸ್ತ್ರಾಭರಣ ಭೂಷಣವೆಲ್ಲಾ ಮಣ್ಣುಪಾಲು! (ಹ)
-ರೆಯದವರೂ ವೃದ್ಧರೂ ಎಲ್ಲಾ ಮಣ್ಣುಪಾಲು! (ಮ)
-ಲ್ಲಾನೆಂದೆಲ್ಲೆಲ್ಲೂ ಮೆರೆದವನೂ ಮಣ್ಣುಪಾಲು!
ಕ್ಕಳು, ಮರಿ ಮೊದ್ಲಾದವರೂ ಮಣ್ಣುಪಾಲು! (ಹ)
-ಣ್ಣು, ಹಂಪಲು ತೋಟಗಳೆಲ್ಲವೂ ಮಣ್ಣುಪಾಲು!
ಪಾಡುತ್ತ ಹರಿನಾಮ ಆಗ್ಬೇಕು ಮಣ್ಣುಪಾಲು! (ಮೇ)
-ಲು, ನಿರಂಜನಾದಿತ್ಯಾನಂದದಖಂಡ ಪಾಲು!!!

ಮತ ಭೇದನರ್ಥ ಹೇತು!   2(690)

ನಗಾಗೇಕೆಲ್ಲಾ ಮಾತು?
ಭೇಟಿ ಆಗ ಶಾಂತಿ ಹೇತು! (ಮ)
-ದವಳಿದಾಗೆಲ್ಲಾ ಮಾತು! (ಧ)
-ನದಾಸೆಲ್ಲಾ ಕಷ್ಟ ಹೇತು! (ಸ್ವಾ)
-ರ್ಥಕಾಗೆಲ್ಲಾ ಸುಳ್ಳು ಮಾತು!
ಹೇಳಿದರೆ ವೈರ ಹೇತು! (ಧಾ)
-ತು ಶ್ರೀ ನಿರಂಜನ ಮಾತು!!!

ಮತ ಸ್ವೀಕಾರಕ್ಕೆ ಪಾತ್ರನಾಗಬೇಕು!   6(3306)

ನ್ನ ಜೀವನ ಮಾದರಿಯಾಗಬೇಕು!
ಸ್ವೀಕಾರ ಬೇಡದೇ ಬಂದರಾಗಬೇಕು!
ಕಾರ್ಯನಿಷ್ಠ ಸೇವಕನಾಗಿರಬೇಕು!
ಸ, ವಿರಸವಾಗದಂತಿರಬೇಕು! (ಬೆ)
-ಕ್ಕೆಗೆ, ಪಕ್ಕವಾದ್ಯ ಬಾರಿಸದಿರ್ಬೇಕು!
ಪಾಪಭೀರುವಾಗಿ ಕರ್ತವ್ಯ ಮಾಡ್ಬೇಕು! (ಯಂ)
-ತ್ರ, ತಂತ್ರಗಳ ಹುಚ್ಚು ಇಲ್ಲದಿರ್ಬೇಕು!
ನಾಸ್ತಿಕನಾಗಿ ತಾನಿರದಿರಬೇಕು!
ರ್ವವೆಂದೆಂದಿಗೂ ಪಡದಿರಬೇಕು!
ಬೇರೆಯವರನ್ನು ದೂರದಿರಬೇಕು! (ವ್ಯಾ)
-ಕುಲ ನಿರಂಜನಾದಿತ್ಯ ಕಳೆಯ್ಬೇಕು!!!

ಮತಗಳೆಷ್ಟು ಹುಟ್ಟಿಕೊಂಡರೇನು?   5(3019)

ರಣಿಯೆಲ್ಲಕ್ಕೊಬ್ಬನಲ್ಲವೇನು?
ತಿ ಅವನಿಲ್ಲದಿದ್ದರುಂಟೇನು? (ಮ)
-ಳಗವನೇ ಕಾರಣನಲ್ಲವೇನು? (ಇ)
-ಷ್ಟು ತಿಳಿದೂ ನರಗಲಕ್ಷ್ಯವನು!
ಹುಸಿ ದೇವರನ್ನೇ ಪೂಜಿಸುವನು! (ಬಿ)
-ಟ್ಟಿ ವರಗಳನ್ನೇ ಬಯಸುವನು!
ಕೊಂಡಾಡಿ ಬೆಂಡಾದಾಗ ಖಂಡಿಸುವನು! (ಮ)
-ಡದಿ ಮಕ್ಕಳ ಮೋಹವುಳ್ಳವನು!
ರೇಗಾಡಿ ಕೂಗಾಡಿ ಹಾಳಾಗುವನು! (ತಾ)
-ನು ನಿರಂಜನಾದಿತ್ಯನಾಗ್ಬಾರ್ದೇನು???

ಮತದಾನವಾರಿಗೆ ಮಾಡ್ಬೇಕು?   6(3308)

ನ್ನಂತನ್ಯರೆಂದಿರ್ಪಗಾಗ್ಬೇಕು!
ದಾಸರದಾಸರಿಗದಾಗ್ಬೇಕು!
ಯ, ವಿನಯಾನ್ವಿತಗಾಗ್ಬೇಕು!
ವಾಙ್ಮನಶ್ಯುದ್ಧಾತ್ಮನಿಗಾಗ್ಬೇಕು!
ರಿಪುಗಳಿಲ್ಲದವಗಾಗ್ಬೇಕು!
ಗೆಲುವೊಲವುಳ್ಳವಗಾಗ್ಬೇಕು!
ಮಾತು, ಕೃತಿಯೊಂದಿರ್ಪಗಾಗ್ಬೇಕು! (ಮಾ)
-ಡ್ಬೇಕಂಥವನಾಯಕನಾಗ್ಬೇಕು! (ಟಾ)
-ಕು ನಿರಂಜನಾದಿತ್ಯನಾಗ್ಬೇಕು!!!

ಮತಾಂತರದಿಂದಂತರಂಗ ಶುದ್ಧಿಯೇನಯ್ಯಾ? (ಪೀ)   3(1319)

-ತಾಂಬರ ಧರಿಸಿದಾಕ್ಷಣ ಹರಿಯೇನಯ್ಯಾ?
ರತರದಾಶಾಪೂರ್ತಿಗೆ ಮತವೇನಯ್ಯಾ?
ಹಸ್ಯವರಿತು ರಮೇಶನಾಗಬೇಕಯ್ಯಾ! (ವಾ)
-ದಿಂಗಳವಡದೆಂದಿಗೂ ನಿಜ ಸುಖವಯ್ಯಾ!
ದಂಭ, ದರ್ಪ, ಬಿಟ್ಟು ಸಾಧನೆ ಮಾಡಬೇಕಯ್ಯಾ!
ತ್ವಾರ್ಥ ಚಿಂತನಾಸಕ್ತನಾಗಿರಬೇಕಯ್ಯಾ!
ರಂಭೆ, ಊರ್ವಶಿಯರಿಗಾಗಿ ಮತವಲ್ಲಯ್ಯಾ!
ಜ, ತುರಗ, ಭೋಗಕ್ಕಾಗಿ ಜನ್ಮವಲ್ಲಯ್ಯಾ!
ಶುದ್ಧ ಸಚ್ಚಿದಾನಂದ ಸುಖಾಪೇಕ್ಷಿಯಾಗಯ್ಯಾ (ಸಿ)
-ದ್ಧಿಸುವುದಿದು ನಿತ್ಯಾನಿತ್ಯ ಜ್ಞಾನದಿಂದಯ್ಯಾ! (ಹೇ)
-ಯೇಚ್ಛೆಯಿಂದ ಹಾಳಾಗುವುದಾವ ನ್ಯಾಯವಯ್ಯಾ! (ಮ)
-ನಸನಿರಿಸು ಸದಾ ಗುರುಪಾದದಲ್ಲಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಮತೀಯ ನೀನಾಗಯ್ಯಾ!!!

ಮತಿ ಹೊಲಸು, ಗತಿ ಹೊಲಸು, ಸ್ತಿತಿ ಹೊಲಸು!   1(7)

ತಿಲಿ ನೀನು ಸಕಲ ದುಃಖಗಳಿಗೆ ಕಾರಣವೀ ಮನಸು!
ಹೊಲಿಯುತಿದೆ, ಹೊಸೆಯುತಿದೆ, ಹೊಡೆಯುತಿದೆ ಕ್ಕೆಗಳಿಂದೀ ಮನಸು!
ಕ್ಷ, ವಿಲಕ್ಷಣ ನೋಟಗಳು ನೋಡುತಿದೆ ನೇತ್ರಗಳಿಂದೀ ಮನಸು!
ರ್ವದಲಿ ಗುರುನಿಂದೆ, ಪರನಿಂದೆಗಳು ಮಾಡುತಿದೆ ಬಾಯೆಯೆಂದೆಂ ಮನಸು!
ತಿರುಗುತಿದೆ ಊರಿಂದುರಿಗೆ ಮನೆಯಿಂದ ಮನೆಗೆ ಕಾಲ್ಗಳೆಂದೀ ಮನಸು!
ಹೊಲಸಮೇಧ್ಯವ ಹೊರಗೆ ಹೊರಡಿಸುತಿದೆ ಪಾಯುವಿನಿಂದೀ ಮನಸು!
ವಣವಿದು, ಸಕ್ಕರೆ ಇದೆಂದು ರುಚಿಸುತಿದೆ ಜೆಹ್ವೆಯೆಂದೇ ಮನಸು!
ಸುಮನೋಹರ ಸಂಗೀತ ಸಾಹಿತ್ಯಗಳನಾಲಿಸುತಿದೆ ಕಿವಿಗಳಿಂದಿ ಮನಸು!
ಸ್ಥಿತಿ, ಗತಿಗಳ ಹದಗೆಡಿಸಿ ಸಂಬೋಗ ಮಾಡುತಿದೆ ಗುಹ್ಯದಿಂದೀ!
ತಿವಿತ, ಇರಿತ, ಶೀತ, ಉರಿಗಳ ಬಾಧೆಗಳಳವಡಿಸುವುದು ಚರ್ಮದಿಂದೀ ಮನಸು!
ಹೊಲಸು ಮತಿಯೆಂದ ಗತಿ, ಸ್ಥಿತಿಗಳೆಲ್ಲಾ ಹೊಲಸೆಂದರಿತಿರಿಸು ಶುಚಿ ಮನಸು!
ಕ್ಷ್ಯನಾಗಿಹ ಗುರುಗುಹೇಶ್ವರನ ಸೇರುವುದಕೆ ಬೇಉ ಶುದ್ದ ಮನಸು!
ಸುಖ ಶಾಂತಿಯ ಮನಸು, ಪತಿತ ಪಾವನ ಮನಸು, ಇದೇ ನಿತ್ಯ ನಿರಂಜನ ಮನಸು!!!

ಮತ್ಸರ ದೇವರಿಗುಂಟೇನಪ್ಪಾ? (ಮ)   4(1422)

-ತ್ಸರ ಮನೋವೃತ್ತಿಯಲ್ವೇನಪ್ಪಾ? (ಪ)
-ರಮೇಶ್ವರ ಮನಸಲ್ಲವಪ್ಪಾ!
ದೇವರ ಸ್ವರೂಪ ನಿನ್ನದಪ್ಪಾ! (ಭ)
-ವದಾಸೆ ಬಿಟ್ಟದ ಸಾಧಿಸಪ್ಪಾ! (ಹ)
-ರಿ ಪ್ರಸಾದ ಕಷ್ಟ, ಸುಖವಪ್ಪಾ!
ಗುಂಜಾ ನರಸಿಂಹನಂತಿರಪ್ಪಾ! (ಪೇ)
-ಟೇ ವ್ಯಾಪಾರಿಯವನಲ್ಲವಪ್ಪಾ! (ಮ)
-ನಸ ಪರಿವರ್ತಿಸಬೇಕಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯಾನಂದಪ್ಪಾ!!!

ಮತ್ಸರವಿಲ್ಲದುತ್ಸಾಹಿ ಯಾರಪ್ಪಾ? (ವ)   5(2683)

-ತ್ಸ ಸದ್ಗುರುದೇವಗಾದವವಪ್ಪಾ!
ಘುಪತಿ ರಾಘವನವನಪ್ಪಾ!
ವಿಧಿಯಾಜ್ಞೆಗೆ ದುರಾಡದವ್ನಪ್ಪಾ! (ಕ)
-ಲ್ಲ ಮೆಟ್ಟಿ ಕುಲಕೆ ತಂದವನಪ್ಪಾ!
ದುಷ್ಟ ರಾಕ್ಷಸರ ಕೊಂದವನಪ್ಪಾ! (ತ)
-ತ್ಸಾಮರ್ಥಮರ್ತರಿನ್ಯಾರಿಗುಂಟಪ್ಪಾ?
ಹಿತೈಷಿ ಸಕಲರಿಗವನಪ್ಪಾ!
ಯಾಜಮಾನ್ಯವನದನುಕೂಲಪ್ಪಾ!
ತಿಪತಿಗವ ದಾಸನಲ್ಲಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯಾ ನೀನವ್ನಪ್ಪಾ!!!

ಮತ್ಸರಿಯಲ್ಲಾರ್ಧನಾರೀಶ್ವರ! (ತ)   6(3958)

-ತ್ಸಮಾನತೆಯಿತ್ತಾಕೇಗೀಶ್ವರ! (ಕ)
-ರಿವದನಗಿತ್ತ ಪ್ರಾಣೇಶ್ವರ!
ತಿಯಾಗಿ ಬೇಡಿದನೀಶ್ವರ! (ಕ)
-ಲ್ಲಾದನು ಭಕ್ತರಿಗಾಗೀಶ್ವರ! (ನಿ)
-ರ್ಧರಿಸಿ ವಿಷ ಕುಡಿದೇಶ್ವರ!
ನಾಮ ಜಪ ಮಾಡಿದನೀಶ್ವರ! (ಕಿ)
-ರೀಟಿಗಿತ್ತನಸ್ತ್ರವನ್ನೀಶ್ವರ! (ವಿ)
-ಶ್ವನಾಥನಾಗ್ಯೆಲ್ಲೆಲ್ಲಿರ್ಪೇಶ್ವರ! (ಹ)
-ರ ಶ್ರೀ ನಿರಂಜನಾದಿತ್ಯೇಶ್ವರ!!!

ಮತ್ಸ್ಯನಾಗಿ ನೀ ಕೊಂದೆ ತಮಸಾಸುರನ “ಗುರುಚಿತ್ಯವೆಂದು”!   1(78)

ಕೂರ್ಮನಾಗಿ ನೀ ಹೊತ್ತೆ ಮಂಧರನ ಗುರುಚಿತ್ತವೆಂದು!
ವರಾಹನಾಗಿ ಕೊಂದೆ ಹಿರಣ್ಯಾಕ್ಷನ ಗುರುಚಿತ್ತವೆಂದು!
ನರಹರಿ ನೀ ಕೊಂದೆ ಹಿರಣ್ಯಕನ ಗುರುಚಿತ್ತವೆಂದು!
ವಾಮನನಾಗಿ ತುಳಿದೆ ನೀ ಬಳಿಯ ಗುರುಚಿತ್ತವೆಂದು!
ಪರಶುಧರ ನೀ ಕೊಂದೆ ಕ್ಷತ್ರಿಯರ ಗುರುಚಿತ್ತವೆಂದು!
ರಾಮನಾಗಿ ಕೊಂದೆ ರಾವಣೇಶ್ವರನ ಗುರುಚಿತ್ತವೆಂದು!
ಕೃಷ್ಣನಾಗಿ ಮರ್ದಿಸಿದೆ ಕಾಳಿಂಗನ ಗುರುಚಿತ್ತವೆಂದು!
ಬೌದ್ಧನಾಗಿ ಕೊಂದೆ ತ್ರಿಪುರಾಸುರರ ಗುರುಚಿತ್ತವೆಂದು!
ಕಲ್ಕ್ಯನಾಗಿ ನೀನು ಮಾಡಿದೆ ಪ್ರಳಯ ಗುರುಚಿತ್ತವೆಂದು!
ತಾಪಸನಾಗಾದೆ “ನಿರಂಜನಾದಿತ್ಯ” ಗುರುಚಿತ್ತವೆಂದು!

ಮದಗಜವನ್ನೊದ್ದವ ನೀನೇ!   5(2890)

ಯೆ ಬಿಟ್ಟದ ಕೊಂದವ ನೀನೇ!
ಣಪತಿಯೆಂಬವನೂ ನೀನೇ!
ರಾಜನ್ಮವಿಲ್ಲದಾತ ನೀನೆ!
ರದರಾಜ ಶ್ರೀರಂಗ ನೀನೇ! (ನಿ)
-ನ್ನೊಟ್ಟಿಗ ನಾನೆಂದವ ನೀನೇ! (ಸ)
-ದ್ದಡಗಿದ ಪರಬ್ರಹ್ಮ ನೀನೇ!
ರಗುರು ದತ್ತಾತ್ರೇಯ ನೀನೇ! (ನಾ)
-ನೀನೆಂಬ ಭೇದಾತೀತಾತ್ಮ ನೀನೇ! (ನೀ)
-ನೇ ಆ ನಿರಂಜನಾದಿತ್ಯ ನಾನೇ!!!

ಮದನ ಮೋಹನನ ನೆಂಟು!   5(3106)

ಶಕೋಟಿ ಜನ್ಮದ ಗಂಟು!
ಶ್ವರವಿದಕ್ಕಂತ್ಯವುಂಟು!
ಮೋಸಮಾಡಿತು ಮದವೆಂಟು!
ರಿ, ಹರರೂ ನೊಂದದ್ದುಂಟು!
ಯನಾನಂದಕ್ಕೆಲ್ಲೆಯುಂಟು!
ಭೋಮಣಿಗಾರ ಹಂಗುಂಟು?
ನೆಂಟಾತನಿಂದ ಸುಖವುಂಟು! (ಗಂ)
-ಟು, ನಿರಂಜನಾದಿತ್ಯನಂಟಉ!!!

ಮದನನ ಸಂಗ ಮಾನಭಂಗ!   6(3806)

ತ್ತನ ಸಂಗ ನಿತ್ಯಾತ್ಮಲಿಂಗ!
ರರಿಗಿರ್ಬೇಕ್ಸದಾ ಸತ್ಸಂಗ!
ಟ, ವಿಟರಿಗಾಪ್ತ ಅನಂಗ!
ಸಂಕಲ್ಪದಿಂದ ಶುದ್ಧಾಂತರಂಗ!
ಗನ ಸದೃಶಾತ್ಮ ನಿಸ್ಸಂಗ!
ಮಾನಾಭಿಮಾನದ ಮನ ಮಂಗ!
ರ ನಾರಾಯಣಾತ್ಮ ಶ್ರೀರಂಗ! (ಶು)
-ಭಂಕರ ಸದಾ ಶ್ರೀ ಶಂಭುಲಿಂಗ! (ಖ)
-ಗ ನಿರಂಜನಾದಿತ್ಯಾನಂದಾಂಗ!!!

ಮದನಾರಿ ಮಾರುತಿ ರಾಯ!   4(1609)

ನುಜ ದಮನಾಂಜನೇಯ!
ನಾಮ ಭಜನಾನಂದಾ ರಾಯ! (ಹಾ)
-ರಿ ಲಂಕೆಗೆ ಬೆಂಕಿಟ್ಟಾ ರಾಯ!
ಮಾತೆಯಾಜ್ಞೆ ಪಡೆದಾ ರಾಯ! (ಮ)
-ರುಗಿದನಾಕೆಗಾಗೀ ರಾಯ! (ಧೃ)
-ತಿಗೆಡದೋಡಿ ಬಂದಾ ರಾಯ!
ರಾಮನಡಿ ಸೇರಿದಾ ರಾಯ! (ಜೀ)
-ಯ ನಿರಂಜನಾದಿತ್ಯಾ ರಾಯ!!!

ಮದಿಸಿದಾನೆಗಳ ಓಡಾಟ! (ವಾ)   4(2252)

-ದಿ, ಪ್ರತಿವಾದಿಗಳ ಕಾದಾಟ! (ಹು)
-ಸಿ, ದಿಟದೊಳಗಿನಾ ಕಚ್ಚಾಟ!
ದಾರಿ ಹೋಕರ್ಗಚ್ಚರಿಯ ನೋಟ! (ಮ)
-ನೆಮಂದಿಗಾಯ್ತು ಬಹಳ ಕಾಟ! (ಅಂ)
-ಗಡಿ ಬೀದಿಗಳಲ್ಲೆಲ್ಲಾ ಕೂಟ! (ಕಾ)
-ಳಸಂತೆಗಾಗಲ್ಲಿ ಕಣ್ಮುಚ್ಚಾಟ!
ದುವ ವಿದ್ಯಾರ್ಥಿಯ ಕೂಗಾ

! (ಗಂ)
-ಡಾಗುಂಡಿಯಿಂದೆಲ್ಲೆಲ್ಲೂ ಪೇಚಾಟಾ! (ದಿ)
-ಟ ನಿರಂಜನಾದಿತ್ಯಗೊಂದೂಟ!!!

ಮದುವೆ ಆಯಿತು, ಮಹಾತ್ಮವಾಯಿತು!   3(1190)

ದುರ್ವವ್ಯಹಾರವೆಲ್ಲಾ ದೂರವಾಯಿತು! (ಸೇ)
-ವೆಗವಕಾಶ ದೊರಕಿದಂತಾಯಿತು!
ದದ್ದೆಲ್ಲಾ ಒಳ್ಳೆಯದಕ್ಕೇ ಆಯಿತು! (ತಾ)
-ಯಿ, ತಂದೆಯವನೆಂಬರಿವುಂಟಾಯಿತು! (ಮಾ)
-ತುಗಳೆಲ್ಲಾ ಅವನದೊಂದೇ ಆಯಿತು!
ನೆತನಕ್ಕೆ ಭೂಷಣವದಾಯಿತು!
ಹಾದಿ ನಿಜಾನಂದಕ್ಕೆ ತೆರೆದಾಯಿತು! (ಆ)
-ತ್ಮ ಚಿಂತನೆಯೇ ನಿತ್ಯ ಕರ್ಮವಾಯಿತು!
ವಾದ ಭೇದಕ್ಕೆ ಮನಸ್ಸೋಡದಾಯಿತು! (ಬಾ)
-ಯಿ ಶ್ರೀರಾಮ ಭಜನೆಗಣಿಯಾಯಿತು! (ಹೇ)
-ತು ನಿರಂಜನಾದಿತ್ಯ ನೆಂಬಅರಿವಾಯ್ತು!!!

ಮದುವೆ ಹೇಗಾಗುವುದು ನೋಡೋಣ! (ಬ)   4(2029)

-ದುಕು, ಬಾಳಿಗಾರು ಹೊಣೆ ತಿಳ್ಯೋಣ! (ನಾ)
-ವೆಯೋಡ್ತಿದೆ, ದಡ ಸೇರಿ ಆಡೋಣ!
ಹೇರಿನೊಡೆಯನಾರೆಂದರಿಯೋಣ!
ಗಾಳಿ ನಿಲ್ಲುವ ತನಕ ಕಾಯೋಣ!
ಗುರುದೇವನ ನಾಮ ಸ್ಮರಿಸೋಣ! (ರೇ)
-ವು ದೊರೆತಾಗಾರಾಮ ಪಡೆಯೋಣ!
ದುರ್ನಾಥ ಒಣಗಿಸ್ತಿರುತ್ತಿರೋಣ!
ನೋಟ ಪ್ರಕೃತಿಯದಾನಂದಿಸೋಣ! (ಓ)
-ಡೋಡ್ತಿರುವ ಮೋಡಗಳೀಕ್ಷಿಸೋಣ (ಗ)
-ಣಪ ನಿರಂಜನಾದಿತ್ಯನೆನ್ನೋಣ!!!

ಮದುವೆಯಾಗದೆ ಹುಚ್ಚು ಬಿಡದು, ಹುಚ್ಚು ಬಿಡದೆ ಮದುವೆಯಾಗದು! (ಸ)   2(894)

-ದುಪದೇಶ ಸದ್ಗುರುವಿನದಾಗದೆ ಅಜ್ಞಾನನಾಶವಾಗಲಾರದು!
ವೆಗ್ಗಳದನನ್ಯ ಶ್ರದ್ಧಾ, ಭಕ್ತಿಯಿಲ್ಲದೆ, ಉಪದೇಶ ಸಿದ್ಧಿಯಾಗದು! [ಮಾ]
-ಯಾ ಮೋಹವಳಿಯದೆ ಮಾಧವನ ಶ್ರೀಪಾದ ದರ್ಶನವಾಗಲಾರದು!
ರುಡಗಮನನ ಅನುಗ್ರಹವಾಗದೆ ವ್ಯಾಮೋಹ ಹೋಗಲಾರದು!
ದೆವ್ವಗಳ ಕಾಟ ಕಳೆಯದೆ ದೇವರ ಜಪ, ಧ್ಯಾನ ಸಾಗಲಾರದು!
ಹುರಿದುಂಬಿದ ತಪವಿಲ್ಲದೆ ಅರಿಷ್ಟ ನಿವಾರಣೆಯಾಗಲಾರದು! (ಅ)
-ಚ್ಚುತನಲಚಲ ವಿಶ್ವಾಸವಿಲ್ಲದೆ ನಿಶ್ಚಲ ತತ್ವ ಕಾಣಲಾರದು!
ಬಿಸಜನಾಭನರಿವಾಗದಿದ್ದರಾತ್ಮಸ್ಥಿತಿ ಸ್ಥಿರವಾಗಲಾರದು! (ದ)
-ಡ ಸೇರದೆ ಅಡಸಿದ ಕಡು ಭಯದ ತಲ್ಲಣ ಅಡಗಲಾರದು!
ದುರ್ವಿಧಿಯ ಹೆದರಿಕೆ ಹರಿಯದೆ ನದಿಯ ದಂಡೆ ಕಾಣಲಾರದು!
ಹುಲಿ ಸಾಯದೆ ಬೇಟೆಯಾಟದ ಹಠ ಪರಿಸಮಾಸ್ತಿ ಯಾಗಲಾರದು! (ಹೆ)
-ಚ್ಚುತ್ಸಾಹದಿಂದ ದುಷ್ಟಮೃಗದ ಬೆನ್ನಟ್ಟದಿದ್ದರದು ಅಸುನೀಗದು!
ಬಿದ್ದವರೆದ್ದು ಕಾದದಿದ್ದರೆ ರಣ ಜಯಭೇರಿ ಮೊಳಗಲಾರದು! (ಗ)
-ಡಬಡಿಸದೆಲ್ಲರೂ ಸ್ಫೂರ್ತಿ ತುಂಬದಿದ್ದರವರಿಂದ ಯುದ್ಧವಾಗದು! (ಎ)
-ದೆ ವಿಶಾಲವಾಗದಿದ್ದರೆ ದೇವಿಯ ದಯಾನುಗ್ರಹವಾಗ ಲಾರದು!
ಮತೆಯಿಂದಾ ಮಾತೆ ಪ್ರಸನ್ನಳಾಗದೆ ಹೃದಯ ವಿಕಾಸವಾಗದು!
ದುರಿತ ಪರಿಹಾರವಾಗದೆ ಶಾಂತಿ ಸಮಾಧಾನ ದೊರೆಯಲಾರದು! [ನೋ]
-ವೆಲ್ಲಾ ಸಹಿಸಿ ಹರಿನಾಮ ಸ್ಮರಿಸದಿದ್ದರೆ ದುಃಖ ದೂರವಾಗದು! (ಛಾ)
-ಯಾಪತಿಯುದಯವಾಗದಿದ್ದರೆ ಕತ್ತಲೆ ಬೆತ್ತಲೆಯಾಗಲಾರದು!
ತಿಯಾಂಧಕಾರಕ್ಕೆ ಬೇರಿಲ್ಲವಾಗದೆ ಸೂರ್ಯೋದಯ ವಾಗಲಾರದು!
ದುರ್ಮದ ಮರ್ಧನ ನಿರಂಜನಾದಿತ್ಯ ಬಂದಲ್ಲದೆ ಬೆಳಕುಂಟಾಗದು!!!

ಮದುವೆಯಾಗಲಿ, ಮದವಿಳಿಯಲಿ!   3(1079)

ದುಸ್ಸಂಗದಿಂದ ಬಿಡುಗಡೆಯಾಗಲಿ!
ವೆಗ್ಗಳದ ನಿಜಾನಂದವುಂಟಾಗಲಿ!
ಯಾದವೇಂದ್ರನ ಸೇವೆ ಸದಾ ಸಾಗಲಿ!
ಮನಾಗಮನಾತ್ಮಾರ್ಥದಿಂದಾಗಲಿ!
ಲಿಪಿ ಬ್ರಹ್ಮವದಕ್ಕೆ ಶಿರ ಬಾಗಲಿ!
ಧುರ ರಾಮನಾಮ ಜಪವಾಗಲಿ!
ರ್ಶನಾಕಾಂಕ್ಷೆ ಬಲಗೊಳ್ಳುತ್ತಿರಲಿ!
ವಿಕಲ್ಪ, ಸಂಕಲ್ಪಗಳಿಲ್ಲದಾಗಲಿ! (ನ)
-ಳಿನನಾಭನ ಸಾಯುಜ್ಯ ಸಿದ್ಧಿಸಲಿ!
ಮಪಿತನುಪಕಾರ ಸ್ಮರಿಸಲಿ! (ಮಾ)
-ಲಿಕ, ನಿರಂಜನಾದಿತ್ಯ ತಾನಾಗಲಿ!!!

ಮದುವೆಯಾಗು ಸಧವೆಯಾಗು!   2(835)

ದುರ್ಮದನೀಗು ಅಮ್ಮನೀನಾಗು!
ವೆಸನ ನೀಗು, ದಾಸಿ ನೀನಾಗು!
ಯಾತ್ರಿಕಳಾಗು, ಪವಿತ್ರಳಾಗು!
ಗುಪಿತಳಾಗು, ಸಂತೃಪ್ತಳಾಗು!
ರ್ವಾತ್ಮಳಾಗು, ಓರ್ವಾತ್ಮಳಾಗು!
ರ್ಮಾತ್ಮಳಾಗು, ಪ್ರೇಮಾತ್ಮಳಾಗು!
ವೆಗ್ಗಳೆಯಾಗು, ಮಂಗಳೆಯಾಗು!
ಯಾಮಿನಿಯಾಗು, ಸ್ವಾಮಿನಿಯಾಗು! (ಆ)
-ಗು, ನಿರಂಜನಾದಿತ್ಯ ನೀನಾಗು!!!

ಮದುವೆಯಾಗುವಿರೇನು ನೀವು? [ಬ]   3(1181)

-ದುಕಿ ಐಕ್ಯ ಸುಖ ನೋಡಿ ನೀವು! (ಸೇ)
-ವೆ ಗುರುವಿನದು ಮಾಡಿ ನೀವು! (ಮಾ)
-ಯಾ ಮೋಹಾಂಧರಾಗಬೇಡಿ ನೀವು!
ಗುರಿಗಾಗಿ ಒಡನಾಡಿ ನೀವು!
ವಿಕಲ್ಪ ಬಾರದಂತಾಡಿ ನೀವು!
ರೇಗಾಟ ಬಿಟ್ಟು ಓಡಾಡಿ ನೀವು (ಅ)
-ನುದಿನಾತ್ಮ ಧ್ಯಾನ ಮಾಡಿ ನೀವು!
“ನೀ” ‘ನಾ’ ನೆಂದೊದ್ದಾಡಬೇಡಿ ನೀವು! (ಠಾ)
-ವು ನಿರಂಜನಾದಿತ್ಯಾತ್ಮ ರೇವು!!!

ಮದುವೆಯಾಗುವುದು ಶಾಂತಿ!   2(775)

ದುರ್ಗತಿ ತಪ್ಪುವುದು ಶಾಂತಿ! (ಜೀ)
-ವೆರಡೊಂದಾಗುವುದು ಶಾಂತಿ!
ಯಾವಾತಂಕವಿಲ್ಲದ್ದು ಶಾಂತಿ!
ಗುರುದೇವನೊಪ್ಪಿದ್ದು ಶಾಂತಿ! (ನೋ)
-ವು ಇಲ್ಲದಂತಾದದ್ದು ಶಾಂತಿ!
ದುರ್ವ್ರಯಗಳಿಲ್ಲದ್ದು ಶಾಂತಿ!
ಶಾಂತಿಗಾಗಿಮಾಡಿದ್ದು ಶಾಂತಿ! (ಪ್ರೀ)
-ತಿ ನಿರಂಜನಾದಿತ್ಯ ಶಾಂತಿ!!!

ಮದುವೆಯಾದಾಗಾನಂದ ಪಟ್ಟೆ! [ಓ]   2(893)

-ದು ಬಿಟ್ಟು ವ್ಯಾಪಾರಕ್ಕಿಷ್ಟ ಪಟ್ಟೆ!
ವೆಚ್ಚ ಹೆಚ್ಚಾಗಿ ವ್ಯಸನ ಪಟ್ಟೆ! (ಆ)
-ಯಾಸ ಶಾಂತಿಗೆ ಪ್ರಯತ್ನ ಪಟ್ಟೆ!
ದಾರಿ ಕಾಣದೆ ನಿರಾಶೆ ಪಟ್ಟೆ! (ಆ)
-ಗಾ ರಾಮಾನುಗ್ರಹಕ್ಕಾಸೆ ಪಟ್ಟೆ!
ನಂಬಿ ಪಾರಾಗಿ ಸಂತೋಷಪಟ್ಟೆ!
ರ್ಶನಕ್ಕಾಗೆಷ್ಟೋ ಪಾಡುಪಟ್ಟೆ!
ರಮಾತ್ಮನಾಗಿ ತೃಪ್ತಿ ಪಟ್ಟೆ! (ಸು)
-ಟ್ಟೆ ನಿರಂಜನಾದಿತ್ಯಾಗಿ ಬಿಟ್ಟೆ!!!

ಮದುವೆಯಾಯ್ತು, ಮಕ್ಕಳಾಯ್ತು! (ಬ)   4(2341)

-ದುಕುವ ರೀತ್ಯರಿಯದಾಯ್ತು! (ನಾ)
-ವೆಯ ವೇಗ ನಿಧಾನವಾಯ್ತು!
ಯಾತ್ರೆಯುತ್ಸಾಹ ಕಮ್ಮಿಯಾಯ್ತು! (ಆ)
-ಯ್ತು ಕತ್ತಲೆ ಕವಿದಂತಾಯ್ತು!
ನೆಯ ಯೋಚನೆ ಹೆಚ್ಚಾಯ್ತು! (ಅ)
-ಕ್ಕ ಪಕ್ಕ ತಕ್ಕುದಲ್ಲದ್ದಾಯ್ತು! (ಗೋ)
-ಳಾಡಬೇಡವೆಂಬಾಜ್ಞೆಯಾಯ್ತು! (ಆ)
-ಯ್ತು, ನಿರಂಜನಾದಿತ್ಯಾತ್ಮಾಯ್ತು!!!

ಮದ್ದು, ಗುಂಡು, ಮಾರಿ ಮಾರಣ ಮಾಡಬೇಡಿರಣ್ಣಾ! (ಇ)   4(1999)

-ದ್ದುದು ಮುಗಿದ ಮೇಲವರ ಪಾಡು ನೋಡಿರಣ್ಣಾ!
ಗುಂಡು ಹಾರಿಸಿ ಮಂಡೆಯೊಡೆಯಬಹುದೇನಣ್ಣಾ? (ಗಂ)
-ಡು, ಹೆಣ್ಣೆನ್ನದಾಗುತಿದೆ ನರಮೇಧ ನೋಡಣ್ಣಾ!
ಮಾನವತಿಯರ ಮಾನ ಕಳೆಯುವುದೇಕಣ್ಣಾ? (ಹ)
-ರಿಯುತಿದೆ ರಕ್ತದ ಕಾಲುವೆ ಊರಲ್ಲೆಲ್ಲಣ್ಣಾ!
ಮಾಲು, ಮತ್ತುಗಳೆಲ್ಲಾ ಕಿತ್ತೋಡುತ್ತಿರುವರಣ್ಣಾ! (ಮಾ)
-ರನಾಟ, ಚೋರಕೂಟ, ಭಾರೀ ಸಂಕಟ ಕಾಣಣ್ಣಾ! (ಹ)
-ಣಕಂಡರೆ ಹೆಣ ಬಾಯಿಬಿಡುವುದೆಂಬರಣ್ಣಾ!
ಮಾನಹೀನರ ವರ್ತನೆಯಿದಕ್ಕಿಂತಧಿಕಣ್ಣಾ! (ನೋ)
-ಡಲಾಗದೀ ಅತ್ಯಾಚಾರಗಳನ್ನೆಂದೆಂದಿಗಣ್ಣಾ!
ಬೇಟೆಯಾಡುತ್ತಿರುವರಬಲಾ, ಮಕ್ಕಳನ್ನಣ್ಣಾ! (ಕ)
-ಡಿದಿಕ್ಕುತ್ತಿಹರು ಗಂಡಂದಿರ ರುಂಡಗಳಣ್ಣಾ! (ಕ)
-ರಗಬಾರದೇ ಮನ ಗುರುಪರಮಾತ್ಮಗಣ್ಣಾ? (ಕ)
-ಣ್ಣಾದರೂ ನಿರಂಜನಾದಿತ್ಯ ಬಿಡಲೆನ್ನಿರಣ್ಣಾ!!!

ಮಧುರ ಗಾನ ಮನೋರಮಣ! (ಸಾ)   4(1418)

-ಧುಹೃದಯ ಸತತಾ ರಮಣ! (ಸ್ವ)
-ರ, ತಾಳ ಬದ್ಧ ಗೀತಾ ರಮಣ!
ಗಾನಲೋಲ ಶ್ರೀಲೋಲಾ ರಮಣ!
ಯ, ವಿನಯ ಶೀಲಾ, ರಮಣ!
ಲಹರ ಶಂಕರಾ ರಮಣ! (ಧ್ಯಾ)
-ನೋಪಾಸನ ನಿರತಾ ರಮಣ!
ಘುಪತಿ ರಾಘವಾ ರಮಣ!
ದನ ಮೋಹನಾ ಶ್ರೀರಮಣ! (ತಾ)
-ಣ ನಿರಂಜನಾದಿತ್ಯ ಸ್ಮರಣ!!!

ಮಧುರ ಭಾವ ಬೆಳೆಯಲಿ! (ಸಾ)   3(1084)

-ಧು, ಸಂತರ ಸಂಗವಾಗಲಿ!
ಘುನಾಥನಾಪ್ತನಾಗಲಿ!
ಭಾಗ್ಯವಿದೆಂಬರಿವಾಗಲಿ!
ಡವೆಯಾಸೆಯಳಿಯಲಿ!
ಬೆಡಗದಡಗಿ ಹೋಗಲಿ! (ಕ)
-ಳೆ ಆತ್ಮನದು ಹೆಚ್ಚಾಗಲಿ! (ಭ)
-ಯ, ಭ್ರಾಂತಿ ನಿರ್ನಾಮವಾಗಲಿ! (ಶೂ)
-ಲಿ, ನಿರಂಜನಾದಿತ್ಯಾಗಲಿ!!!

ಮಧುಸೂಧನಾ, ಮಧುರಾನನಾ! (ಸಾ)   2(611)

-ಧು ಮನ ಧ್ಯಾನಾ, ನಂದನಂದನಾ!
ಸೂರ್ಯಸಮಾನಾ ಸುಂದರಾನನಾ!
ಯಾಘನಾ, ಪರಮ ಪಾವನಾ!
ನಾಗಮರ್ದನಾ, ಗೋಸಂವರ್ಧನಾ!
ನಮೋಹನಾ, ಜಗ ಜೀವನಾ! (ಮ)
-ಧುರ ವಾಸನಾ ಮದ ನಾಶನಾ!
ರಾಧಾ ಧಾರಣಾ ಶುದ್ಧ ಭಾವನಾ!
ಮೋ, ನಮೋ ನಮೋ ನಿರಂಜನಾ!
ನಾರಾಯಣಪ್ರಾಣಾ ನಿರಂಜನಾ!!!

ಮನ ಜಲಧಿ ವೃತ್ತಿ, ಅಲೆ ರಹಿತ ಶಾಂತಿ!   6(4189)

ಯನಾದಿಂದ್ರಿಯ ಸಂಗದಿಂದದಕ್ಕಶಾಂತಿ!
ಲಧಿ ವಾಯು ಸಂಗದಿಂದಲೆಯಾಗ್ಯ ಶಾಂತಿ!
ಕ್ಷ್ಯಾತ್ಮನಲ್ಲಿ ಮನ ನಿಂತಾಗದಕ್ಕೆ ಶಾಂತಿ! (ಅ)
-ಧಿಕಾರದಾಜ್ಞೆಗಳವಡದು ಮನಶ್ಶಾಂತಿ!
ವೃತ್ತಿ ಸದ್ವೃತ್ತಿಯಾಗೈಹಿಕ ಹೋದಾಗ ಶಾಂತಿ! (ಸು)
-ತ್ತಿ ಸುಳಿಯದಿದ್ದಾಗನಿಲ ಜಲಧಿ ಶಾಂತಿ!
ನಿಲ ಮಂಡಲಕ್ಕಪಚಾರವಾದ್ರಶಾಂತಿ! (ನೆ)
-ಲೆಗೆಟ್ಟರೆ ಪ್ರಕೃತಿ, ವಿಜ್ಞಾನದಿಂದ ಶಾಂತಿ! (ನ)
-ರನತ್ಯಾಶೆಯ ಸಂಸೋಧದಿಂದಾಗದು ಶಾಂತಿ!
ಹಿಸುಕಿದಾಗಾಶಾ ಚಿಗುರ, ಮಾತ್ರ, ಪ್ರಶಾಂತಿ!
ತ್ವ ಸ್ವರೂಪ ತನ್ನದಾದಾಗ ವಿಶ್ವಶಾಂತಿ!
ಶಾಂತಿ, ಚಿರಶಾಂತಿ, ಮನಶ್ಶಾಂತಿ, ದುಃಖ ಶಾಂತಿ! (ಇ)
-ತಿ ನಿರಂಜನಾದಿತ್ಯಾನಂದ ಸರ್ವಾತ್ಮ ಶಾಂತಿ!!!

ಮನ ನೊಂದಾಗುವುದೇನು?   2(910)

ಮಶ್ಯಿವಾಯನ್ನು ನೀನು! (ನಾ)
-ನೊಂದಿಗಿರುತಿಲ್ಲವೇನು?
ದಾಸಿ ಶಿವನಿಗೆ ನೀನು!
ಗುಹನಿಗೆ ತಾಯಿ ನೀನು! [ಮಾ]
-ವು ಬಿತ್ತಿ ಬೇವಪ್ಪುದೇನು?
ದೇಹಭಾವವೇನು ನೀನು? (ನೀ)
-ನು, ನಿರಂಜನಾದಿತ್ಯಾನು!!!

ಮನ ಸತ್ತ ಮೇಲೆ ವೈಕುಂಠ!   1(135)

ಯನಡಗಲು ವೈಕುಂಠ!
ವಿ ಮರೆಯಲು ವೈಕುಂಠ! (ಅ)
-ತ್ತಲೆಯದಿರಲು ವೈಕುಂಠ!
ಮೇವುಣದಿರಲು ವೈಕುಂಠ!
ಲೆಃಖಿಸದಿರಲು ವೈಕುಂಠ!
ವೈರಳಿದಿರಲು ವೈಕುಂಠ!
ಕುಂದಿಲ್ಲದಿರಲು ವೈಕುಂಠ! (ಹ)
-ಠ ನಿರಂಜನನಾ ವೈಕುಂಠ!

ಮನಃಶ್ಯಾಂತಿಯ ಜಾಗ ಎಲ್ಲಿ? (ಪು)   5(2906)

-ನಃಪುನಃ ಪ್ರಾರ್ಥಿಪೆ ನಿನ್ನಲ್ಲಿ! (ದೇ)
-ಶಾಂತರದಲ್ಲೂ ಗಲಿಬಿಲಿ!
ತಿಳಿದು ನೀನಾರೆಂದಿರಿಲ್ಲಿ!
ಮಪಿತನಾಸ್ಥಾನದಲ್ಲಿ!
ಜಾಗ್ರತ್ಸ್ವಪ್ನ ನಿದ್ರೆ ಇಲ್ಲಲ್ಲಿ!
ಮನಾಗಮನವಿಲ್ಲಲ್ಲಿ!
ಲ್ಲರೂ ಬಂಧುಮಿತ್ರರಲ್ಲಿ! (ಎ)
-ಲ್ಲಿ? ನಿರಂಜನಾದಿತ್ಯನಲ್ಲಿ!!!

ಮನಕಾನಂದ ಮನೆಯ ಬಣ್ಣ!   3(1288)

ಯನಕ್ಕಿಷ್ಟ ಹಸುರು ಬಣ್ಣ!
ಕಾಲಾಧೀನವೆಲ್ಲಾ ವಿಧ ಬಣ್ಣ!
ನಂದಕಂದನಂಗಾಕಾಶ ಬಣ್ಣ!
ತ್ತಗುರುದೇವ ತಾಂಬ್ರ ಬಣ್ಣ!
ಲಹರ ಅರಿಶಿನ ಬಣ್ಣ!
ನೆರೆ ಪರಿಣಾಮಕಾರೀ ಬಣ್ಣ!
ಮಾಭ್ಯಾಸದಿಂದ ಶುದ್ಧ ಬಣ್ಣ!
ರಲಿ ಚಿರ ಸುಖಕ್ಕೀ ಬಣ್ಣ! (ಅ)
-ಣ್ಣ ನಿರಂಜನಾದಿತ್ಯ “ದ್ರಾಂ” ಬಣ್ಣ!!!

ಮನಕಾರಾಮವಿಲ್ಲವಲ್ಲಾ! (ದಿ)   4(1777)

-ನ, ರಾತ್ರಿ ಇದೇ ಗೋಳಾಯ್ತಲ್ಲಾ!
ಕಾಲ ವ್ಯರ್ಥವಾಗಿ ಹೋಯ್ತಲ್ಲಾ!
ರಾಮಾನುಗ್ರಹಾಗಿಲ್ಲವಲ್ಲಾ! (ರಾ)
-ಮ ರಾವಣ ಸತ್ತಿಲ್ಲವಲ್ಲಾ!
ವಿಭಿಷಣನಾಗಿದ್ದೇನಲ್ಲಾ! (ಎ)
-ಲ್ಲ ರಾಮಗೊಪ್ಪಿಸಿಹೆನಲ್ಲಾ!
ರಾಂಜನೇಯನಿದ್ದಾನಲ್ಲಾ (ಬ)
-ಲ್ಲಾ ನಿರಂಜನಾದಿತ್ಯನೆಲ್ಲಾ!!!

ಮನಕಿಂತಲೂ ಸೂಕ್ಷ್ಮ ನಾನಯ್ಯಾ!   2(522)

ಶಿಸಬೇಕೆಲ್ಲಾ ವೃತ್ತಿಯಯ್ಯಾ!
ಕಿಂಚಿತ್ತಿದ್ದರೂ ದುಃಖ ಕಾಣಯ್ಯಾ!
ತ್ವವಿದರಿತು ನಾನಾಗಯ್ಯಾ! (ಹಾ)
-ಲೂ ನೀರಿದ್ದರೆ ಅರುಚಿಯಯ್ಯಾ! (ಹಾ)
-ಸೂ, ಹೊಕ್ಕೂ ಒಂದಾಗಿ ಬಟ್ಟೆಯಯ್ಯಾ! (ಸೂ)
-ಕ್ಷ್ಮ ದಾಟಿ ಅತಿ ಸೂಕ್ಷ್ಮನಾಗಯ್ಯಾ!
ನಾಶವಿಲ್ಲದಿದುವೇ ನಾನಯ್ಯಾ! (ಅ)
-ನವರತ ಅಭ್ಯಾಸ ಮಾಡಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನೀತಯ್ಯಾ!!!

ಮನಕೆ ಸದಾ ಹರ್ಷವೇಕಿಲ್ಲ?   5(3296)

ಶಿಸಿಹುದದ್ರ ರೂಪವೆಲ್ಲಾ!
ಕೆಟ್ಟ ಸಂಗದ ದೆಸೆಯಿಂದೆಲ್ಲಾ!
ಚ್ಚಿದಾನಂದವಾಗೀಗದಿಲ್ಲ!
ದಾರಿ ನೇರವಾಗದದಾಗೋಲ್ಲ!
ಳೇ ವಾಸನೆಯಿನ್ನೂ ಹೋಗಿಲ್ಲ! (ವ)
-ರ್ಷಗಳಿಂತೆಷ್ಟಾಯ್ತೆಂಬರಿವಿಲ್ಲ!
ವೇಷ ಭೂಷಣಕ್ಕೆ ಆಸೆಯೆಲ್ಲಾ!
ಕಿತ್ತಾಟ ಅದಕ್ಕಾಗಿ ಎಲ್ಲೆಲ್ಲಾ! (ಬ)
-ಲ್ಲ ನಿರಂಜನಾದಿತ್ಯನಿದೆಲ್ಲಾ!!!

ಮನದಿಂದಾಗಬೇಕೆಲ್ಲಾ ತ್ಯಾಗ! (ವ)   6(4087)

-ನದಲ್ಲೂ ಮಾಡಿದರೆಲ್ಲಾ ಭೋಗ! (ಅಂ)
-ದಿಂದಿನದ್ದೇನಲ್ಲಾ ಭವ ರೋಗ!
ದಾಸನನ್ನೂ ಪೀಡಿಸಿತೀ ರೋಗ!
ತಿ ನೀನೆಂಬುದೇ ಶಿವಯೋಗ!
ಬೇಕಿದಕ್ಕೆ ಶುದ್ಧ ಮನೋ ಜಾಗ!
ಕೆರೆ, ಬಾವಿ, ನದಿಯಿದ್ರ ಭಾಗ! (ಅ)
-ಲ್ಲಾಡದೆ ಸಾಧಿಸಬೇಕು ಯೋಗ! (ನಿ)
-ತ್ಯಾನಿತ್ಯ ಜ್ಞಾನಾತ್ಮಾನಂದ ಯೋಗ! (ಖ)
-ಗ ನಿರಂಜನಾದಿತ್ಯಗಾ ಯೋಗ!!!

ಮನಮೋಹಿ ನೀ ಗಾನವಾಹಿ ನೀ!   2(818)

ಮ್ರಭಾವಿ ನೀ ತೀವ್ರಗಾಮಿ ನೀ!
ಮೋಕ್ಷದಾಯಿ ನೀ ಸಾಕ್ಷಾತ್ಕಾರಿ ನೀ!
ಹಿತರಕ್ಷಿ ನೀ ವ್ರತದೀಕ್ಷಿ ನೀ!
ನೀತಿಬೋಧಿ ನೀ ಪ್ರೀತಿವರ್ಧಿ ನೀ!
ಗಾಢಪ್ರೇಮಿ ನೀ ಸುಧಾಸೇವಿ ನೀ!
ತೋದ್ಧಾರಿ ನೀ ಮಿತಭಾಷಿ ನೀ!
ವಾರಿಜಾಕ್ಷಿ ನೀ ಗುರುರೂಪಿ ನೀ!
ಹಿರಿಯಾತ್ಮಿ ನೀ ಸರ್ವಸಾಕ್ಷಿ ನೀ!
ನೀ, ನಿರಂಜನಾದಿತ್ಯಾಕಾರಿ ನೀ!!!

ಮನವಿದ್ದರೆ ತನುವಿರುವುದು! (ಮ)   6(3738)

-ನವಿಲ್ಲದಿದ್ದರೆ ತನುವಿರದು!
ವಿರಕ್ತನಿಗೂ ನೋವು, ಸಾವಿಹುದು! (ಸ)
-ದ್ದಡಗಿಸಿ ಸಹಿಸಿರಬಹುದು! (ತಿ)
-ರೆಯ ಸುಖವ ಬಿಟ್ಟಿರಬಹುದು!
ತ್ವ ಸುಖವ ನೆರವಾಗುವುದು! (ತ)
-ನು, ಮನ ಅನ್ಯೋನ್ಯವಾಗಿರುವುದು!
ವಿಶ್ವರೂಪ ದರ್ಶನವಾಗುವುದು! (ಗು)
-ರು ಸಾರೂಪ್ಯ ಸಿದ್ಧಿಯುಂಟಾಗುವುದು! (ಸಾ)
-ವು, ನೋವಿನ ಮೂಲವಳಿಯುವುದು! (ಅ)
-ದು, ನಿರಂಜನಾದಿತ್ಯಾನಂದೆಂಬುದು!!!

ಮನವಿದ್ದಾಗ ಧನವಿಲ್ಲ! (ಧ)   3(1239)

-ನವಿರುವಾಗ ಮನವಿಲ್ಲ!
ವಿಷಯಾಸೆ ನಾಶವಾಗಿಲ್ಲ! (ಒ)
-ದ್ದಾಟ, ಗುದ್ದಾಟ ಮಟ್ಟಾಗಿಲ್ಲ!
ತಿಗೇಡಿನಾಟ ಬಿಟ್ಟಿಲ್ಲ!
ರ್ಮ ಕರ್ಮಾಸಕ್ತಿ ಹುಟ್ಟಿಲ್ಲ!
ರಳಾಟವೇನೂ ತಪ್ಪಿಲ್ಲ!
ವಿರಕ್ತನಾಗಲಿಷ್ಟವಿಲ್ಲ! (ಬ)
-ಲ್ಲ ನಿರಂಜನಾದಿತ್ಯನಲ್ಲ!!!

ಮನವಿರಲಿ ಮಾಧವನಲ್ಲಿ!   2(988)

ಡೆಯಿರಲಿ ಸನ್ಮಾರ್ಗದಲ್ಲಿ!
ವಿಶ್ವವಿರಲಿ ವಿಶ್ವಾಸದಲ್ಲಿ! (ವಿ)
-ರಕ್ತಿಯಿರಲಿ ವಿಷಯದಲ್ಲಿ! (ತೇ)
-ಲಿ ತಾನಿರಲಿ ಸಂಸಾರದಲ್ಲಿ!
ಮಾತಿರಲಿ ಸಂಕೀರ್ತನೆಯಲ್ಲಿ!
ನವಿರಲಿ ದಾನಿಗಳಲ್ಲಿ! (ಜೀ)
-ವನವಿರಲಿ ಸರಳದಲ್ಲಿ!
ಗುವಿರಲಿ ವದನದಲ್ಲಿ! (ಅ)
-ಲ್ಲಿ ನಿರಂಜನಾದಿತ್ಯಗಾಗಿಲ್ಲಿ!!!

ಮನಸಿಗೆ ನೆಮ್ಮದಿ ಬರಲಿ!   6(4373)

ಶ್ವರದ ಆಸೆ ನಶಿಸಲಿ!
ಸಿಟ್ಟಿನ ಹುಟ್ಟಡಗಿ ಹೋಗಲಿ!
ಗೆಳೆಯರು ಸಾಧಕರಾಗಲಿ!
ನೆಪ್ಪು ಅಪ್ಪನದ್ದಿರುತಿರಲಿ! (ಅ)
-ಮ್ಮ ಶಾರದೆ ದರ್ಶನವೀಯಲಿ!
ದಿವ್ಯನಾಮ ಜಪ ಸದಾಗಲಿ!
ಯಲಾಡಂಬರ ಅಳಿಯಲಿ!
ವಿಯಾದರ್ಶವಿರುತ್ತಿರಲಿ! (ಕೂ)
-ಲಿ ನಿರಂಜನಾದಿತ್ಯ ಕೊಡಲಿ!!!

ಮನಸಿಗೆ ಶರೀರ ಬೇಕು! (ಮ)   6(3991)

-ನಸ್ಸು ಶರೀರಕ್ಕಿರ್ಲೂ ಬೇಕು!
ಸಿಹ್ಯೂಟವೆರಡಕ್ಕೂ ಬೇಕು!
ಗೆಳೆತನನ್ಯೋನ್ಯವಿರ್ಬೇಕು!
ಕ್ತಿ ಶರೀರಕ್ಕಿರಬೇಕು!
ರೀತಿ, ನೀತಿ, ಮನಕ್ಕಿರ್ಬೇಕು! (ಪ)
-ರಮಾರ್ಥಿಗಿಂತನ್ಕೂಲಾಗ್ಬೇಕು!
ಬೇಡದ ಹವ್ಯಾಸ ಬಿಡ್ಬೇಕು! (ಬೇ)
-ಕು, ನಿರಂಜನಾದಿತ್ಯಾಗ್ಬೇಕು!!!

ಮನಸಿಗೇನಾದರೂ ಬೇಕು! (ತ)   2(842)

-ನಗದಕ್ಕಾಗಿಂದ್ರಿಯ ಬೇಕು! (ಜೈ)
-ಸಿರಲಿಕ್ಕೆ ಅಭ್ಯಾಸ ಬೇಕು! (ಯೋ)
-ಗೇಶ್ವರನುಗ್ರಹ ಬೇಕು!
ನಾಮಜಪವಿದಕ್ಕೆ ಬೇಕು! (ಅ)
-ದಕ್ಕೆ ಭಕ್ತಿ, ವಿಶ್ವಾಸ ಬೇಕು! (ಊ)
-ರೂರಲೆಯದಂತಿರ ಬೇಕು!
ಬೇರೆ ಹವ್ಯಾಸ ಬಿಡಬೇಕು! (ಬೇ)
-ಕು, ನಿರಂಜನಾದಿತ್ಯ ಬೇಕು!!!

ಮನಸಿದ್ದರೆಲ್ಲಾ ಕೆಲಸ! (ಕ)   2(866)

-ನಸಿನಲ್ಲೂ ಬಲು ಕೆಲಸ! (ಕಾ)
-ಸಿನಾಸೆಗಾಗಲ್ಲ ಕೆಲಸ! (ಸ)
-ದ್ದರ್ಶನಕ್ಕಾಗೆಲ್ಲ ಕೆಲಸ! (ಮೆ)
-ರೆಯಲಿಕ್ಕಾಗಲ್ಲ ಕೆಲಸ! (ನ)
-ಲ್ಲಾತ್ಮನಿಗಾಗೆಲ್ಲ ಕೆಲಸ! (ಬೇ)
-ಕೆನುವ ಬಾಳೆಲ್ಲ ಕೆಲಸ!
ಕ್ಷ್ಯಾತ್ಮನಿಗಿಲ್ಲ ಕೆಲಸ! [ದಾ]
-ಸ ನಿರಂಜನಾದಿತ್ಯರಸ!!!

ಮನಸಿನ ಮಾಟವೆಲ್ಲಾ ಕಾಟ!   6(3324)

ಷ್ಟ ಕಷ್ಟಗಳಾಗಿ ಕಚ್ಚಾಟ!
ಸಿರಿ, ಸಾಮ್ರಾಜ್ಯಕ್ಕೆ ಹೊಡೆದಾಟ!
ನ್ನದು, ನಿನ್ನದೆಂದು ಕಿತ್ತಾಟ!
ಮಾಯೆ ತಾನೆನಿಸಿ ಕಪಟಾಟ!
ಕ್ಕು, ಟವಳಿಮಾಡಿ ಕಳ್ಳಾಟ!
ವೆಸನಗಳ್ಗಾಳಾಗಿ ಗೋಳಾಟ! (ಅ)
-ಲ್ಲಾಡಿಲ್ಲಾಡಿ, ಕುಣ್ದಾಡಿ ಹುಚ್ಚಾಟ!
ಕಾಮಿನಿಯೊಡನಾಡಿ ಸರ್ಸಾಟ! (ನೋ)
-ಟ ನಿರಂಜನಾದಿತ್ಯಗೆ ಸ್ಫುಟ!!!

ಮನಸಿನ ಹಂಬಲ ಕುತೂಹಲ!   2(484)

ರೇಶ್ವರಗೆ ಕೀರ್ತಿ ಕುತೂಹಲ! (ಹ)
-ಸಿವೆಗನ್ನ ಕಾಣುವ ಕುತೂಹಲ!
ನ್ನನರಿಯಲೆನ್ನ ಕುತೂಹಲ!
ಹಂಗೇಕೆಂದರಿಯುವ ಕುತೂಹಲ!
ಲವದೆಂತೆಂದೆಂಬ ಕುತೂಹಲ! (ನ)
-ಲವಿಂದಪ್ಪುದೆಂತೆಂಬ ಕುತೂಹಲ!
ಕುಲಧರ್ಮವರಿವ ಕುತೂಹಲ!
ತೂರಿ, ಹರಿಯಲಿದೆ ಕುತೂಹಲ!
ರಿ, ಹರರೆಲ್ಲೆಂಬ ಕುತೂಹಲ! (ಬಾ)
-ಲ, ನಿರಂಜನಾದಿತ್ಯ ಕುತೂಹಲ!!!

ಮನಸಿನಂತೆ ಮಹಾದೇವ! (ನಿ)   3(1295)

-ನಗರಿಯಲ್ಲಾ ಗುರುದೇವ!
ಸಿದ್ಧ ನಿನ್ನುದ್ಧಾರಕ್ಕಾ ದೇವ!
ನಂಬು ನಿನ್ನವನೆಂದಾ ದೇವ! (ಮಾ)
-ತೆಯೂ, ಪಿತನೂ ಮಹಾದೇವ!
ಮಕಾರ ಸುಟ್ಟಾಗಾ ದೇವ!
ಹಾಡಿ, ಕೂಡಿ, ನೀನಾಗಾ ದೇವ!
ದೇಹ ಮೋಹ ಬಿಟ್ಟಾಗಾ ದೇವ! (ಕಾ)
-ವ ನಿರಂಜನಾದಿತ್ಯ ದೇವ!!!

ಮನಸಿನಂತೆ ಮಹಾದೇವ! (ಮ)   6(4088)

-ನಸ್ಸೇ ತಾನಲ್ಲಾ ಮಹಾದೇವ! (ಹು)
-ಸಿ ಮಾಯಾತೀತಾ ಮಹಾದೇವ!
ನಂಜುಂಡ ಮನ ಮಹಾದೇವ!
-ತೆ ಅರ್ಧನಾರೀಶ್ವರಾ ದೇವ!
ತ್ಸರಕ್ಕಗೋಚರಾ ದೇವ!
-ಹಾಭಿಮಾನ ರಹಿತಾ ದೇವ!
ದೇಶ ವಿದೇಶಕ್ಕೋರ್ವಾ ದೇವ! (ಶಿ)
-ವ ನಿರಂಜನಾದಿತ್ಯಾ ದೇವ!!!

ಮನಸಿಲ್ಲದವಗಾವ ಸಿದ್ಧಿ? [ಅ]   4(2331)

-ನವರತಗಧ್ಯಾತ್ಮ ಬುದ್ಧಿ!
ಸಿರಿತನ ಬಯಸದಾ ಬುದ್ಧಿ! (ಒ)
ಲ್ಲನವನಾ ಅಷ್ಟಸಿದ್ಧಿ, ರಿದ್ಧಿ!
ಮೆ, ಶಮೆಯಿಂದ ಪೂರ್ಣ ಶುದ್ಧಿ!
ರ ಗುರು ರೂಪವನ ಸಿದ್ಧಿ!
ಗಾಯತ್ರಿ ಸ್ವರೂಪವನ ಸಿದ್ಧಿ! (ಭ)
-ವವೈದ್ಯ ಧನ್ವಂತರಿಯ ಸಿದ್ಧಿ! (ಘಾ)
ಸಿಯಿಲ್ಲದಂತರಾತ್ಮನ ಸಿದ್ಧಿ! (ಸಿ)
-ದ್ಧಿ ನಿರಂಜನಾದಿತಾನಂದಾಬ್ಧಿ!!!

ಮನಸು ಗಟ್ಟಿ ಮಾಡಿ ನೋಡೀ ಸೃಷ್ಟಿ!   3(1071)

ಮಿಸು ಶ್ರೀಪಾದದಲ್ಲಿಟ್ಟು ದೃಷ್ಟಿ!
ಸುದರ್ಶವಾಗುವುದೆಲ್ಲಾ ಸೃಷ್ಟಿ!
ರುಡಗಮನಗಿಷ್ಟದಾ ದೃಷ್ಟಿ! (ಕ)
-ಟ್ಟಿ ಹಾಕಲಾರದಾರನ್ನೂ ಆ ಸೃಷ್ಟಿ!
ಮಾಯಾ, ಮಾಧವರಭೇದದಾ ದೃಷ್ಟಿ! (ಪ)
-ಡಿಸುವುದೆಲ್ಲರನಾನಂದಾ ಸೃಷ್ಟಿ!
ನೋವು, ಕಾವು, ಸಾವಿಲ್ಲದಾತ್ಮ ದೃಷ್ಟಿ! (ನೀ)
-ಡೀಡೇರಿಪುದೆಲ್ಲರ ಗುರೀ ಸೃಷ್ಟಿ!
ಸೃಷ್ಟಿ, ಸ್ಥಿತಿ, ಲಯವೇಕಾತ್ಮ ದೃಷ್ಟಿ! (ಇ)
-ಷ್ಟಿ, ನಿರಂಜನಾದಿತ್ಯಾನಂದಾ ಸೃಷ್ಟಿ!!!

ಮನಸು ತಾಳಿದ ರೂಪಕ್ಕೆ ಮಿತಿಯೇ ಇಲ್ಲ!   6(3518)

(ಮ)-ನಸು ಬಾಳಿ, ಆಳಿದ ರೂಪಕ್ಕೂ ಮಿತಿ ಇಲ್ಲ!
ಸುಟ್ಟು ಬೂದಿಮಾಡಿದ ರೂಪಕ್ಕೂ ಮಿತಿ ಇಲ್ಲ!
ತಾಯಿ, ತಂದೆ, ಬಂಧು, ಬಳಗಕ್ಕೂ ಮಿತಿ ಇಲ್ಲ!
(ಹೇ)-ಳಿದ, ಕೇಳಿದ, ರೂಪಕ್ಕಂತೂ ಮಿತಿಯೇ ಇಲ್ಲ!
ರ್ಶನ ಸತ್ತಮೇಲಾರೂಪ ಮತ್ತೆಕೊಟ್ಟಿಲ್ಲ!
ರೂಪ, ರೇಖೆಗಳನಂಬಿ ಕೆಡಬೇಕಾಗಿಲ್ಲ!
ರಮಾತ್ಮ ವ್ಯಾಪಿಸದ ಜಾಗವೆಲ್ಲೂ ಇಲ್ಲ!
(ಅ)-ಕ್ಕೆ ಈ ದಿವ್ಯಜ್ಞಾನ ಜಗದ ಜೀವರಿಗೆಲ್ಲಾ!
ಮಿಥ್ಯಾ ಮೋಹದಿಂದ ಬಿಡುಗಡೆಯಾಗಿರಲೆಲ್ಲಾ!
ತಿತಿಕ್ಷಾಭ್ಯಾಸದಿಂದಿದ ಸಾಧಿಸಬೇಕೆಲ್ಲಾ!
(ತಾ)-ಯೇ, ಪರಮೇಶ್ವರಿ! ಕಾಪಾಡು ಮಕ್ಕಳನ್ನೆಲ್ಲಾ!
ನ್ಯಾರೂ ಗತಿ, ಮತಿ, ದಾತರು ನಮಗಿಲ್ಲ!
(ನ)-ಲ್ಲ ನಿರಂಜನಾದಿತ್ಯ ಶಿವನೆಂಬೆ! ಸುಳ್ಳಲ್ಲ!!!

ಮನಸು ಬೆಂಕಿಯಾಗಬೇಕು!   2(754)

ಶ್ವರದಾಸೆ ಸುಡಬೇಕು!
ಸುಖ ದುಃಖ ಸಮಾಗಬೇಕು!
ಬೆಂದು ವೃತ್ತಿ ಭಸ್ಮಾಗಬೇಕು!
ಕಿರಣಾಗಿ ಬೆಳಗಬೇಕು!
ಯಾವುದೂ ಅಂಟದಿರಬೇಕು!
ತಿ, ಸ್ಥಿತಿಯೊಂದಾಗಬೇಕು!
ಬೇಕು, ಬೇಡ ಸಾಕಾಗಬೇಕು! (ಸಾ)
-ಕು, ನಿರಂಜನಾದಿತ್ಯ ಬೇಕು!!!

ಮನಸು ಮಾಧವಗೆ ಶರಣಾಗ್ಬೇಕು! (ಮ)   6(3540)

-ನಸ್ಸಿಗಾತ ಮಾರ್ಗದರ್ಶನ ನೀಡ್ಬೇಕು!
ಸುಸೂತ್ರವಾಗಿ ಸಾಧನೆ ಸಾಗಬೇಕು!
ಮಾಡಿದ ಕೆಲಸಕ್ಕೆ ಕೂಲಿ ಸಿಗ್ಬೇಕು!
ರ್ಮ ಪರಸ್ಪರರಿಗನ್ವಯಿಸ್ಬೇಕು! (ಭ)
-ವ ಸಾಗರ ನಿರ್ಭೀತಿಯಿಂದ ದಾಟ್ಬೇಕು! (ಕಾ)
-ಗೆ, ಗೂಗೆಯಂತೆ ಕಿತ್ತು ತಿನ್ನದಿರ್ಬೇಕು!
ಕ್ತಿ, ಅಶಕ್ತರುಪಕಾರಕ್ಕಿರ್ಬೇಕು!
ಕ್ತಪಾತಕ್ಕೆ ಪ್ರೋತ್ಸಾಹ ಕೊಡ್ದಿರ್ಬೇಕು! (ಗಾ)
-ಣಾಪತ್ಯ ಹೀಗಿರುತ್ತಾ ಬೆಳಗಬೇಕು! (ಆ)
-ಗ್ಬೇಕೆಲ್ಲಕ್ಕೂ ಶಾಂತಿ ಸುಖ ಉಂಟಾಗ್ಬೇಕು!
ಕುತಂತ್ರ ನಿರಂಜನಾದಿತ್ಯ ಸುಡ್ಬೇಕು!!!

ಮನಸು ಮೂರಾರಿಯಾಗಲಿ!   5(3100)

ರರಿದನ್ನು ಸಾಧಿಸಲಿ!
ಸುಬ್ರಹ್ಮಣ್ಯ ಸಹಾಯವಾಗ್ಲಿ!
ಮಾತೆ ಪಾರ್ವತಿಯೊಲವಿರ್ಲಿ!
ರಾಮನಾಮ ಸ್ಮರಣೆ ಸಾಗ್ಲಿ!
ರಿಪುಗಳದರಿಂದ ಸಾಯ್ಲಿ!
ಯಾರ ನಿಂದೆಯೂ ಆಗದಿರ್ಲಿ!
ಭಸ್ತಿಯಾದರ್ಶವಿರಲಿ! (ಶೂ)
-ಲ ನಿರಂಜನಾದಿತ್ಯನಾಗ್ಲಿ!!!

ಮನಸು ಸರಿಪಡಿಸಿಕೊಳಬೇಕು! (ಅ)   3(1299)

-ನವರತದಕಾತ್ಮ ಚಿಂತನೆ ಬೇಕು!
ಸುಮ್ಮಗಲ್ಲಿಲ್ಲಿ ಸುತ್ತಾಡದಿರಬೇಕು!
ರ್ವವೂ ಗುರುಚಿತ್ತವೆಂದಿರಬೇಕು! (ಪ)
-ರಿಪರಿಯ ಯೋಚನೆಯ ಬಿಡಬೇಕು!
-ಪರರಲ್ಲಿ ತಪ್ಪೆಣಿಸದಿರಬೇಕು! (ದು)
-ಡಿಮೆಯಾತ್ಮ ಭಾವನೆಯಿಂದಾಗಬೇಕು! (ಪು)
-ಸಿ ಮಾತಿಗೆ ಕಿವಿಕೊಡದಿರಬೇಕು!
ಕೊಡುವಾತನೆಡೆ ಬಿಡದಿರಬೇಕು! (ಒ)
-ಳ, ಹೊರಗೆಲ್ಲಾ ಚೊಕ್ಕಟವಾಗಬೇಕು!
-ಬೇರೆಲ್ಲೂ ಹೋಗದಿಲ್ಲೇ ಸಾಧಿಸಬೇಕು! (ಬೇ)
-ಕು ನಿರಂಜನಾದಿತ್ಯಾಶೀರ್ವಾದ ಬೇಕು!!!

ಮನಸ್ತಾಪಕ್ಕೆಡೆಗೊಡಬೇಡ! (ಅ)   5(2512)

-ನವಶ್ಯವಾಗ್ಯೆಲ್ಲೂ ಹೋಗಬೇಡ! (ಹ)
-ಸ್ತಾದಿಂದ್ರಿಯ ಸಡಿಲ್ಬಿಡಬೇಡ!
(ಉ)ಪಯೋಗವಿಲ್ಲದ ಮಾತಾಡ್ಬೇಡ! (ಬೆ)
-ಕ್ಕೆಗೀಡಾಗಿ ದುಃಖ ಪಡಬೇಡ! (ನ)
-ಡೆವಾಗೆಚ್ಚರ ತಪ್ಪಿರಬೇಡ!
ಗೊಡ್ಡಾಚಾರಕ್ಕೆ ಹುಚ್ಚಾಗಬೇಡ! (ಒ)
-ಡನಾಟ ಕುಡ್ಕರದ್ದೆಂದೂ ಬೇಡ!
ಬೇರೆ ಯಾರ ವಿಚಾರವೂ ಬೇಡ! (ಮೃ)
-ಡ ನಿರಂಜನಾದಿತ್ಯಪದ್ಧಾಡ!!!

ಮನಸ್ಸನ್ನು ಸಂಸ್ಕರಿಸೆಂದ ಶ್ರೀಕೃಷ್ಣ!   6(4377)

ರಜನ್ಮ ಸಾರ್ಥಕ ಹಾಗೆಂದಾ ಕೃಷ್ಣ! (ದು)
-ಸ್ಸಙ್ಗದಿಂದಧೋಗತಿಯೆಂದಾ ಶ್ರೀಕೃಷ್ಣ! (ತಿ)
-ನ್ನುವುದಕ್ಕಲ್ಲ ಈ ಜನ್ಮವೆಂದಾ ಕೃಷ್ಣ!
ಸಂಬಂಧವನದ್ದಮೌಲ್ಯವೆಂದಾ ಕೃಷ್ಣ! (ಭಾ)
-ಸ್ಕರನೂ, ತಾನೂ ಒಂದೇ ಎಂದಾ ಶ್ರೀಕೃಷ್ಣ!
ರಿಪುಕುಲಾಂತಕ ನಾನೆಂದಾ ಶ್ರೀಕೃಷ್ಣ! (ಲೇ)
-ಸೆಂಬ ಯೋಗವಿದ್ಯೋದ್ಧಾರಕ ಶ್ರೀಕೃಷ್ಣ!
ಶರಥ ಸುತ ಶ್ರೀರಾಮ ಶ್ರೀಕೃಷ್ಣ!
ಶ್ರೀಕರವರಧ್ಯಾನವೆಂದಾ ಶ್ರೀಕೃಷ್ಣ!
ಕೃಪಾಸಾಗರ ಸೀತಾರಾಮ, ಶ್ರೀಕೃಷ್ಣ! (ಪೂ)
-ಷ್ಣ ನಿರಂಜನಾದಿತ್ಯಾನಂದ ಶ್ರೀಕೃಷ್ಣ!!!

ಮನಸ್ಸಾಕಾಶಕ್ಕೆ, ವಿಧಿ ಪಾತಾಳಕ್ಕೆ!   5(3277)

ರ ತಾನಿಂತು ಗುರಿಯಾದ ದುಃಖಕ್ಕೆ! (ನಿ)
-ಸ್ಸಾರವಾದರೂ ಬಯಕೆ ಸಂಸಾರಕ್ಕೆ!
ಕಾಡುವುದು ವಿಧಿ ಇದ ತಪ್ಪಿಸ್ಲಿಕ್ಕೆ! (ಅ)
-ಶಕ್ತನಾಗಿಹ ಕಾಮನ ಜಯಿಸ್ಲಿಕ್ಕೆ! (ರೆ)
-ಕ್ಕೆ, ಪುಕ್ಕ ಕಿತ್ತಮೇಲ್ಹಾರ್ವುದೆಂತಾಗ್ಸಕ್ಕೆ?
ವಿವೇಕ ವೈರಾಗ್ಯವಿರಬೇಕದಕ್ಕೆ! (ಬಂ)
-ಧಿಸಬೇಕು ಮನವ ಶಿವಜಪಕ್ಕೆ!
ಪಾರ್ವತಿಯಂತರ್ಧನಾರೀಶ್ವರಾಗ್ಲಿಕ್ಕೆ!
ತಾಳ, ಮೇಳಗಳೇನೂ ಬೇಕ್ಕಿಲ್ಲದಕ್ಕೆ! (ಕ)
-ಳಕಳಿಯ ಪ್ರಾರ್ಥನೆಯೇ ಸಾಕದಕ್ಕೆ! (ಅ)
-ಕ್ಕೆ ನಿರಂಜನಾದಿತ್ಯಾದರ್ಶವೆಲ್ಲಕ್ಕೆ!!!

ಮನಸ್ಸಿನಲ್ಲಿ ಆಸೆ ಇದೆ!   6(3849)

ರ, ನಾಡಿ ಬಲಗುಂದಿದೆ!
ಸಿಕ್ಕಿದ್ದು ದಕ್ಕದಂತಾಗಿದೆ!
ಕಾರ ದರ್ಶನಕ್ಕಾಗಿದೆ! (ಕ)
-ಲ್ಲಿನ ಗೊಂಬೆ ಬೇಕಾದಷ್ಟಿದೆ!
ರ್ತೋದ್ಧಾರದು ಮಾಡದಿದೆ!
ಸೆರೆಗೊಡ್ಡಿ ಬೇಡಿದ್ದಾಗಿದೆ!
ದ್ರ ಜೋಳಿಗೆ ತುಂಬದಿದೆ! (ತಂ)
-ದೆ ನಿರಂಜನಾದಿತ್ಯನೆಂದೆ!!!

ಮನಸ್ಸಿನಾಟಕ್ಕೆ ಮಿತಿಉಂಟು!   6(3436)

(ತ)-ನಗೆ ಅಸಾಧ್ಯವಾದದ್ದೂ ಉಂಟು!
ಸಿಬ್ಬಂದಿಯ ಮೇಲೆ ದರ್ಪ ಉಂಟು!
ನಾನಾ ಇಂದ್ರಿಯಗತ್ಯದಕ್ಕುಂಟು!
(ಗಂ)-ಟ ಲೊಣಗಿದ್ರದರದ್ದೇನುಂಟು?
(ಬೆ)-ಕ್ಕೆ ದುರ್ಬಲಗೇನು ಸುಖವುಂಟು?
ಮಿತ್ರನನ್ನು ಕೈ ಬಿಡುವುದುಂಟು!
ತಿನ್ನುವ ಬಾಯಿ ಮುಚ್ಚುವುದುಂಟು!
ಉಂಡು, ತಿಂದು, ತೆಗಳುವುದುಂಟು!
(ಅಂ)-ಟು ನಿರಂಜನಾದಿತ್ಯಗೇನುಂಟು??

ಮನಸ್ಸೀ ದೇಹಕ್ಕೇನು ಲಭ್ಯವೋ ಅದನ್ನಾಶಿಸ್ಲಿ! (ಮ)   6(4073)

-ನಸ್ಸಿಗದ್ರರಿವಿಲ್ಲದಿದ್ದ್ರೆ ದೇವರಿಂದರಿಯ್ಲಿ! (ನಿ)
-ಸ್ಸೀಮನೆನಿಸಿರುವಾ ದೇವರು ನೆರವು ನೀಡ್ಲಿ!
ದೇಹಕ್ಕಾಯಾಸವಾಗ್ವಾಸೆಗಳನ್ನಾಶಿಸದಿರ್ಲಿ!
ರಿ ಮಂದಿರ ದೇಹವೆಂಬುದನ್ನರಿತಿರ್ಲಿ! (ಹ)
-ಕ್ಕೇತಕ್ಕೂರ್ಜಿತಗೊಳಿಸ ಬಾರದೆಂದದರಿಯ್ಲಿ!
ನುಡಿ, ನಡೆಯೊಂದು ಮಾಡಿ ಆನಂದನುಭವಿಸ್ಲಿ!
ಕ್ಷ್ಯ ವಿನಾಶದೆಡೆಗೆ ಎಳೆಯಲ್ಪಡದಿರ್ಲಿ! (ಅ)
-ಭ್ಯಥಿ ಸಚ್ಚಿದಾನಂದ ಸಾಯುಜ್ಯಾನುಭವಕ್ಕಾಗ್ಲಿ! (ಭಾ)
-ವೋದ್ರೇಕಕ್ಕೆ ಒಳಗಾಗದೆ ವಿರಾಗಿಯಾಗಿರ್ಲಿ!
ಖಂಡ ಬ್ರಹ್ಮಾನಂದದಲ್ಲಿ ಲಯವಾಗಿ ಹೋಗ್ಲಿ!
ತ್ತಾತ್ರೇಯ ಸಾಕ್ಷಾತ್ಕಾರವಿದೇ ಎಂದು ತಿಳಿಯ್ಲಿ! (ತ)
-ನ್ನಾಗು, ಹೋಗುಗಳೆಲ್ಲವೂ ಅದರಿಂದೆಂದರಿಯ್ಲಿ!
ಶಿರೋಧಾರ್ಯ ಈ ಜ್ಞಾನವೆಂಬುದ ಮರೆಯದಿರ್ಲಿ! (ಹಾ)
-ಸ್ಲಿ, ನಿರಂಜನಾದಿತ್ಯಾನಂದ ತಲ್ಪದಲ್ಮಲಗ್ಲಿ!!!

ಮನಾಕಾಶದಲಿ ನಾಮಾದಿತ್ಯ!   1(304)

ನಾಮ ಮನದಲಿರೆ ನಿರ್ಭಯ!
ಕಾರ್ಮೋಡ ಅರ್ಕನಿಗೇನು ಭಯ?
ಕ್ತಿ ನಾಮಕಿಹುದತಿಶಯ! (ಅ)
-ದರಿತ ಸದಾ ಜಪಿಸೆ ಜಯ! (ಅ)
-ಲಿಪ್ತವಹುದ

ರಿಂದ ಮಾಯೆ! (ಅ)
-ನಾಯಾಸದಿ ಸಾಯುಜ್ಯ ನಿಶ್ಚಯ!
ಮಾಧವನೋಕ್ತಿಯಿದಪ್ರಮೇಯ!
ದಿಟವಿದು! ಬೇಡ ಪರಾಶ್ರಯ! (ಅ)
-ತ್ಯಗ್ಯನೀ ನಿರಂಜನಾದಿತ್ಯ!!!

ಮನೆ ಎಲ್ಲಾ ನಿದ್ದೆ ನಾನೆದ್ದೆ! (ಬೇ)   2(574)

-ನೆ ಬೇಸರಿಲ್ಲದೆ ನಾನಿದ್ದೆ!
ನಗಾರಾತಂಕವೆಂದಿದ್ದೆ! (ಎ)
-ಲ್ಲಾ ಗುರುಕರುಣೆಯೆಂದಿದ್ದೆ!
ನಿದ್ದೆ ಬರದಿರಲೆಂದಿದ್ದೆ! (ಎ)
-ದ್ದೆ, ನಿಜಾನಂದವಿದೆಂದಿದ್ದೆ!
ನಾಮಾನಂದಾನಂದದಿಂದಿದ್ದೆ! (ಮ)
-ನೆ ಮಂದಿ ಎದ್ದಾಗ ‘ನಾ’ ನಿದ್ದೆ! (ಎ)
-ದ್ದೆ ನಿರಂಜನಾದಿತ್ಯಾಗೆದ್ದೆ!!!

ಮನೆ ಕಟ್ಟು, ಸ್ವಾರ್ಥ ಬಿಟ್ಟು ಕಟ್ಟು!   2(677)

ನೆಪ ಮಾತ್ರ ನೀನೆನುತ ಕಟ್ಟು!
ಷ್ಟ, ಸುಖಾತನದೆಂದು ಕಟ್ಟು! (ಗು)
-ಟ್ಟು ರಟ್ಟು ಮಾಡದಂದದಿ ಕಟ್ಟು!
ಸ್ವಾಮಿ ನಾಮ ನೆನೆಯುತ ಕಟ್ಟು! (ಅ)
-ರ್ಥ ವ್ಯರ್ಥವಾಗದಂತದ ಕಟ್ಟು!
ಬಿಟ್ಟು, ಲೋಭ, ಮೋಹ ಅದ ಕಟ್ಟು! (ಸು)
-ಟ್ಟು ಸಿಟ್ಟು ಶಾಂತಿಯಿಂದದ ಕಟ್ಟು!
ರ್ಮ, ಧರ್ಮ ಪಾಲಿಸುತ ಕಟ್ಟು! (ಗು)
-ಟ್ಟು, ನಿರಂಜನಾದಿತ್ಯಗಾ ಕಟ್ಟು!!!

ಮನೆ ಕೈಲಾಸವಾಗಿರಲಿ!   4(1750)

ನೆರೆ ಶಿವಗಣವಾಗಲಿ!
ಕೈ, ಬಾಯಿ ಅಂಕೆಯಲ್ಲಿರಲಿ!
ಲಾಭ, ನಷ್ಟ ವೃತ್ತಿ ಸಾಯಲಿ!
ದಾ ಶಿವಗಾನ ಸಾಗಲಿ!
ವಾಣಿಯಾಶೀರ್ವಾದವಿರಲಿ!
ಗಿರಿಜೆ ಗೃಹಿಣಿಯಾಗಲಿ!
ತಿಪತಿ ಹೊರಗಿರಲಿ! (ಶೂ)
-ಲಿ ನಿರಂಜನಾದಿತ್ಯಾಗಲಿ!!!

ಮನೆ ಮನೆಯಲೆದಾಟ ಸಾಕಪ್ಪಾ! (ಮ)   4(1487)

-ನೆ ನಿನ್ನದೇ ನಿನಗೆ ಸುಖವಪ್ಪಾ!
ಲಿನವೆಲ್ಲಾಗಾಗ ತೊಳೆಯಪ್ಪಾ!
ನೆನೆಯುತಿರು ಸ್ವಸ್ವರೂಪವಪ್ಪಾ!
ಮ, ನಿಯಮಾಭ್ಯಾಸಿ ನೀನಾಗಪ್ಪಾ! (ಕ)
-ಲೆಯದಿರು ಕಳ್ಳಕಾಕರೊಳಪ್ಪಾ!
ದಾಸ ನೀನಾಗು ಶ್ರೀ ಗುರುವಿಗಪ್ಪಾ! (ತ)
-ಟ ಸೇರಿಸುವ ಅಪ್ಪ ಅವನಪ್ಪಾ!
ಸಾಧನೆಗೆ ಶ್ರದ್ಧಾ ಭಕ್ತಿ ಬೇಕಪ್ಪಾ!
ಡೆತನಕೆದೆಗೆಡಬೇಡಪ್ಪಾ! (ಅ)
-ಪ್ಪಾ ನಿರಂಜನಾದಿತ್ಯ ಜಗಕಪ್ಪಾ!!!

ಮನೆ ಸ್ವಚ್ಛವಿರಿಸಮ್ಮ!   2(709)

ನೆಮ್ಮದಿಯಾಗುವುದಮ್ಮ!
ಸ್ವಚ್ಛದಲಚ್ಚುತನಮ್ಮ! (ಇ)
-ಚ್ಛ ನೀನವನವಳಮ್ಮ!
ವಿಷಯ ದುರ್ಗಂಧವಮ್ಮ! [ಹ]
-ರಿ ಪ್ರೇಮ ಸುಗಂಧವಮ್ಮ!
ದಾಘ್ರಾಣಿಸದನಮ್ಮ! (ಬೊ)
-ಮ್ಮ ನಿರಂಜನಾದಿತ್ಯಮ್ಮ!!!

ಮನೆಮನೆಯಲೆಯುವುದೇಕೆ?   5(2870)

ನೆರೆ ಸುಖವೀವ ಪತಿ! ಜೋಕೆ!
ನೋಹರನ ಮರವೆಯೇಕೆ?
ನೆನೆಯುತಿರವನನು! ಜೋಕೆ!
ಮನ ಭಯ ನಿನಗದೇಕೆ? (ಕಾ)
-ಲೆತ್ತಿ ಹೊರಗಿಡಬೇಡ! ಜೋಕೆ!
ಯುಕ್ತಸೇವೆಗನಾದರವೇಕೆ? (ಕಾ)
-ವುದವನಿಗೆ ಸೇರಿದ್ದು! ಜೋಕೆ!
ದೇವಿ ನಿನಗನುಮಾನವೇಕೆ? (ಹಾ)
-ಕೆ ನಿರಂಜನಾದಿತ್ಯ ಪತಾಕೆ!!!

ಮನೆಯವರಿಗೆ ಅಧಿಕಾರಿ!   5(2933)

ನೆರೆಮನೆಯವರ್ಗುಪಕಾರಿ! (ಧ್ಯೇ)
-ಯಸಿದ್ಧಿಗಿಂದ್ರಿಯ ಜಯಕಾರಿ!
ರ ಗುರುಶಿವನಿಷ್ಟಾಚಾರಿ!
ರಿಸಿ, ಮುನಿಗಳ ಯೋಗಾಧಾರಿ!
ಗೆಲಲರಿಗಳ ಜಪಾಕಾರಿ!
ನುದಿನ ಅರ್ಧನಾರೀಶ್ವರಿ!
ಧಿಕ್ಕಾರವಿಲ್ಲದಭಯೇಶ್ವರಿ!
ಕಾಮಕೋಟೀಶ್ವರಿ, ಶ್ರೀ ಶಂಕರಿ! (ಹ)
-ರಿ ನಿರಂಜನಾದಿತ್ಯನಾಕಾರಿ!!!

ಮನೆಯೊಳಗಲ್ಲಿಲ್ಲಿ ಸೋರುತ್ತಿದೆ! (ಸೋ)   4(2193)

-ನೆ ದಿನ, ರಾತ್ರಿ ಸುರಿಯುತ್ತಲಿದೆ! (ತಾ)
-ಯೊಲವು ಬಾಲನ ಮೇಲಾಗದಿದೆ! (ಥ)
-ಳಕಿನ ಬಾಳು ಬೇಸರವಾಗಿದೆ! (ಸಂ)
-ಗ ಅಪ್ಪನದ್ದು ದೊರೆಯದಾಗಿದೆ! (ಎ)
-ಲ್ಲಿ ನೋಡಿದರಲ್ಲವನಿರುವಾಗಿದೆ! (ಅ)
-ಲ್ಲಿಲ್ಲೋಡಾಡಿ ಬಹಳ ಸುಸ್ತಾಗಿದೆ!
ಸೋದರರಾದರವಿಲ್ಲದಾಗಿದೆ! (ಕ)
-ರುಣಿಸಿರೆಂಬ ಪ್ರಾರ್ಥನೆಯಾಗಿದೆ! (ಹ)
-ತ್ತಿರವಿರಬೇಕೆಂಬಿಚ್ಛೆಯಾಗಿದೆ! (ತಂ)
-ದೆ ನಿರಂಜನಾದಿತ್ಯನೆಂದಾಗಿದೆ!!!

ಮನೋಗತವ ನೀ ಬಲ್ಲೆ! (ಏ)   2(465)

-ನೋಲ್ಲೆಂದರಾನೇನು ಬಲ್ಲೆ?
(ಏನೋ, ಒಲ್ಲೆ, ಎಂದರೆ, ಆನು, ಏನು)
ತಿ, ಸ್ಥಿತಿ ನೀನು ಬಲ್ಲೆ!
ನಯ ನಾನೇನು ಬಲ್ಲೆ? (ಆ)
-ವರಿಸುತೆಲ್ಲಾ ನೀ ಬಲ್ಲೆ!
ನೀನಾಗದಾನೇನು ಬಲ್ಲೆ?
ಲವಿತ್ತರಾನೂ ಬಲ್ಲೆ! (ಎ)
-ಲ್ಲೆ ನಿರಂಜನಾದಿತ್ಯಲ್ಲೆ!!!

ಮನೋಜಯವಿಲ್ಲದವಗಾವಸುಖ?   5(3294)

ನೋವು, ಸಾವಿಗಂಜಿ ನರಳುವಾ ಸಖ!
ವಾಬ್ದಾರಿ ನಿರ್ವಹಿಸಲಾರಾ ಸಖ!
ಮ, ನಿಯಮದಭ್ಯಾಸ ಮಾಡಾ ಸಖ!
ವಿವೇಕ, ವೈರಾಗ್ಯಗಳನ್ನೊಲ್ಲಾ ಸಖ! (ಅ)
-ಲ್ಲ ಸಲ್ಲದ ವ್ಯವಹಾರ ಶೂರಾ ಸಖ!
ರ್ಪ, ದಂಭಕ್ಕಗ್ರಗಣ್ಯಾ ಸಖ!
ರ ಗುರುವಿನಾಜ್ಞೆಯಂತಿದ್ರೆ ಸುಖ!
ಗಾಳಿ ಮೂಟೆ ಕಟ್ಟುವುದು ಬಿಟ್ರೆ ಸುಖ!
ರ್ತಮಾನ ಕಾಲ ಕಾರ್ಯಾಸಕ್ತಿ ಸುಖ!
ಸುಜನರ ಸಹವಾಸ ಸದಾ ಸುಖ!
ಗ ನಿರಂಜನಾದಿತ್ಯ ಲೋಕ ಸಖ!!!

ಮನೋಜಯವಿಲ್ಲದೇನಿದ್ದರೇನು?   4(1970)

ನೋಟ, ಕೂಟೋಟಾಟಿಕ್ಕಾಗೀ ಬಾಳೇನು?
ನ್ಮ ಸಾರ್ಥಕವಿದರಿಂದಾಯ್ತೇನು?
ಜ್ಞ, ಯಾಗಗಳ ಉದ್ದೇಶವೇನು?
ವಿಕಲ್ಪ, ಸಂಕಲ್ಪ ನಾಶಕ್ಕಲ್ಲೇನು? (ಕೊ)
-ಲ್ಲಬೇಕು ವೈರಿಗಳಾರನ್ನು ನೀನು!
ದೇವದೇವನಾಗುವೆ ಆಗ ನೀನು!
ನಿತ್ಯ ನೇಮಾನುಷ್ಠಾನ ಮಾಡು ನೀನು! (ಸ)
-ದ್ದಡಗಿ ಶಾಂತನಾಗಬೇಕು ನೀನು! (ಹ)
-ರೇಚ್ಛೆಯಿದೆಂದರಿತು ಬಾಳು ನೀನು! (ಸೂ)
-ನು ನಿರಂಜನಾದಿತ್ಯಗಾಗ ನೀನು!!!

ಮನೋಬಲ ಮಹಾಬಲ! [ಜ್ಞಾ]   2(827)

-ನೋದಯ ಬಲಾಪ್ತ ಬಲ!
ಲಾಬಲ ಕರ್ಮ ಬಲ! (ಮ)
-ಲ ನಿರ್ಮೂಲಮಲ ಬಲ! (ನಾ)
-ಮ ಬಲ ಪರಮ ಬಲ!
ಹಾಲಾಹಲ ಮಾಯಾ ಬಲ!
ಡಬಲ ದೇಹ ಬಲ! (ಬ)
-ಲ, ನಿರಂಜನಾತ್ಮ ಬಲ!!!

ಮನೋಹರೀ! ನೀನೆನಗೆ ವೈರಿ!   5(3250)

ನೋಟ ಕೂಟದಿಂದಾದೆ ಭಿಕಾರಿ!
ಸ್ತ, ಪಾದದಿಂದ್ರಜಾಲ ಭಾರಿ!
ರೀತಿ, ನೀತಿ ಕೆಟ್ಟು ದ್ರೋಹಕಾರಿ!
ನೀನಾಗಬೇಕು ಸದಾಚಾರಿ!
ನೆನಪಿಟ್ಟು ಹಿಡಿ ನನ್ನ ದಾರಿ!
ರಜನ್ಮ ಸಾರ್ಥಕವೀ ಪರಿ!
ಗೆಳೆಯ ನಿನಗೊಬ್ಬಾನೆಂದರಿ!
ವೈಕುಂಠದಲ್ಲಿರ್ಬೇಕಿಬ್ರೂ ಸೇರಿ!
ರಿಸಿ ನಿರಂಜನಾದಿತ್ಯಾ ಹರಿ!!!

ಮರ ಸಿಕ್ಕಿದೆ, ಕಾರ್ಯವಾಗಲಿದೆ! (ಎ)   1(346)

ಸಿಡುಕಿಲ್ಲದಿದೆ, ಸೇವೆಯಾಗಲಿದೆ! (ಅ)
-ಕ್ಕಿಯಾರಿಸಿದೆ, ನೈವೇದ್ಯಾಗಲಿದೆ! (ಎ)
-ದೆ ಶುದ್ಧವಿದೆ, ಮುದವಾಗಲಿದೆ!
ಕಾಡು ಹೋಗಿದೆ, ಜಡ ನೋಡಲಿದೆ! (ವೀ)
-ರ್ಯ ಸೇರುತಿದೆ, ಜಯವಾಗಲಿದೆ!
ವಾದವೋಡಿದೆ, ಪಾದ ಮೂಡಲಿದೆ!
ಡಿ ಹಾಕಿದೆ, ಗಡಣ ನಿಲ್ಲಲಿದೆ! (ಕ)
-ಲಿತುದಾಗಿದೆ ಕಲೆ ಕಾಣಲಿದೆ! (ಎ)
-ದೆ, ನಿರಂಜನಾದಿತ್ಯಾಪ್ತನಲಿದೆ!!!

ಮರಳಿ ಬಾರಮ್ಮ ಮನೆಗೇ!   5(2800)

ತಿಪತಿಯಿರದಲ್ಲಿಗೇ! (ಬಾ)
-ಳಿನಿಷ್ಟ ಸಿದ್ಧಿಸುವಲ್ಲಿಗೇ!
ಬಾಲಗಣಪನಿಪ್ಪಲ್ಲಿಗೇ! (ಶ)
-ರವಣಭವಾಡುವಲ್ಲಿಗೇ! (ನ)
-ಮ್ಮಪ್ಪ ತಿಮ್ಮಪ್ಪನೆಂಬಲ್ಲಿಗೇ!
ಮಕಾರವಿಲ್ಲದಲ್ಲಿಗೇ!
ನೆಮ್ಮದಿ ಸದಾ ಇರ್ಪಲ್ಲಿಗೇ! (ಯೋ)
-ಗೇಶ ನಿರಂಜನನಲ್ಲಿಗೆ!!!

ಮರಳಿ ಯತ್ನವ ಮಾಡು ಮನುಜಾ! (ಇ)   4(2077)

-ರದಿರು ನಿರಾಶೆಯಿಂದಲನುಜಾ! (ನಾ)
-ಳಿನ ಹಣ್ಣಿಂದಿನ ಹೀಚು ತನುಜಾ! (ಕಾ)
-ಯಬೇಕೆಚ್ಚರದಿಂದದ ಮನುಜಾ! (ರ)
-ತ್ನಕ್ಕಾಗಿ ಪ್ರಯತ್ನಿಸಬೇಕನುಜಾ! (ಶಿ)
-ವನಿಚ್ಛೆಯಂತಾಗ್ಲೆಂದು ಮಾಡ್ತನುಜಾ!
ಮಾಯದ್ಹುಣ್ಣೆಣ್ಣೆಯಿಲ್ಲದೆ ಮನುಜಾ! (ಮಾ)
-ಡು ಶ್ರದ್ಧೆಯಿಂದೆಲ್ಲಾ ಕೆಲಸನುಜಾ! (ನೇ)
-ಮ, ನಿಷ್ಠೆ ಜಯಕ್ಕಗತ್ಯ ತನುಜಾ! (ಹ)
-ನುಮಂತನಾದರ್ಶ ಬೇಕು ಮನುಜಾ! (ನಿ)
-ಜಾನಂದ ನಿರಂಜನಾದಿತ್ಯನುಜಾ!!!

ಮರಳಿತು ಸ್ವಸ್ಥಾನಕ್ಕೆ ಲೇಖನಿ! [ವಿ]   4(2401)

-ರಮಿಸಿತಾಮೇಲಾ ಪ್ರಿಯ ಲೇಖನಿ! (ಹೇ)
-ಳಿತು ತನ್ನ ಕಥೆಯನ್ನಾ ಲೇಖನಿ! (ಮಾ)
-ತು ಮಿತ ತನಗೆಂದಿತಾ ಲೇಖನಿ!
ಸ್ವಸ್ಥಚಿತ್ತ ತಾನೆಂದಿತಾ ಲೇಖನಿ!
ಸ್ಥಾನ ಶ್ರೀಪಾದವೆಂದಿತಾ ಲೇಖನಿ! (ಮೌ)
-ನದಿಂದ ಸೇವೆಯೆಂದಿತಾ ಲೇಖನಿ! (ಅ)
-ಕ್ಕೆ, ಸುಖವೆಲ್ಲಕ್ಕೆಂದಿತಾ ಲೇಖನಿ!
ಲೇಶವೂ ಸುಳ್ಳಾಡೆಂದಿತಾ ಲೇಖನಿ!
ಗ ಬಲ್ಲದನ್ನೆಂದಿತಾ ಲೇಖನಿ!
ನಿಧಿ, ನಿರಂಜನಾದಿತ್ಯ ಲೇಖನಿ!!!

ಮರುಗಬೇಡೆಂದವರಾರು? (ಬ)   4(1837)

-ರುವಳ್ತುಳಸ್ಯೆಂದವರಾರು? (ಸಂ)
-ಗಡಿಗರಾಗಿರ್ಬೇಕಿಬ್ಬರೂ!
ಬೇಕೆಂದರಿರುವವರಾರು? (ಬೇ)
-ಡೆಂದರೆ ಹೋಗುವವರಾರು?
ತ್ತನ ಇಷ್ಟಕ್ಕಿದಿರಾರು?
ರ ಪೂಜೆಗೆ ಬೇಕೀರ್ವರೂ! (ವಿ)
-ರಾಜಿಸಿರಿ ವರ್ಷ ನೂರಾರು! (ಇ)
-ರು, ನಿರಂಜನಾದಿತ್ಯಾಗಿರು!!!

ಮರುಳುಗೊಳಿಸುವ ರೂಪವನ್ನು ನೋಡಬೇಡ! (ಮಾ)   6(4239)

-ರುತಿಯಂತೆ ಸೀತೆಯನ್ನೆಲ್ಲೆಲ್ಲೂ ನೋಡದಿರ್ಬೇಡ! (ಹು)
-ಳುವಿನಂತೆ ಹಣ್ಣೆಂದು ಸೊಡರನ್ನು ಮುತ್ತಬೇಡ!
ಗೊಬ್ಬರಗುಂಡಿಯ ಮೂಳೆ ಜಗಿವ ಶ್ವಾನಾಗ್ಬೇಡ! (ಅ)
-ಳಿದು ಹೋಗುವ ಒಡಲಿಗೆ ಮರುಳಾಗಬೇಡ!
ಸುನಾಮ ಸುಧಾಪಾನ ಸದಾ ಮಾಡದಿರಬೇಡ!
ಜ್ರ, ವೈಢೂರ್ಯಾಲಂಕೃತ ಗೊಂಬೆಗಡ್ಡಬೀಳ್ಬೇಡ!
ರೂಪ, ನಾಮಾತೀತಾತತ್ಮನನ್ನು ನೆನೆಯದಿರ್ಬೇಡ!
ರವಿತ್ತಾಪಹಾರವನ್ನೆಂದಿಗೂ ಮಾಡಬೇಡ!
ರ ಗುರುವಿನಾಜ್ಞೆಗೆ ಶಿರ ಬಾಗದಿರ್ಬೇಡ! (ಇ)
-ನ್ನು ಎಂದೆಂದಿಗೂ ಸಂಸಾರಿಯಾಗಿ ಸುತ್ತುತ್ತಿರ್ಬೇಡ! (ಮ)
-ನೋಜಯದಿಂದಿಂದ್ರಿಯ ನಿಗ್ರಹ ಮಾಡದಿರ್ಬೇಡ! (ಬೇ)
-ಡರ ಏಕಲವ್ಯ ಸದ್ಭಕ್ತನನ್ನು ಮರೆಯ್ಬೇಡ!
ಬೇಡಿದ ಕಾಣಿಕೆ ಕೊಟ್ಟವ ಸಾಮಾನ್ಯನೆನ್ಬೇಡ! (ಬೇ)
-ಡನೆಂದವನ ನಿರಂಜನಾದಿತ್ಯ ದೂರ ಮಾಡ!!!

ಮರೆಯದಿರೇ ಮಾಧವನಾ! (ಪೊ)   6(3509)

-ರೆವ ನಿನ್ನ ಪ್ರಿಯಕರನಾ!
ಮನಿಗೆ ತಂದೆಯಾದವನಾ!
ದಿವ್ಯ-ಜ್ಯೋತಿ ಸ್ವರೂಪಾತ್ಮನಾ!
ರೇಚಕ, ಪೂರಕಾತೀತನಾ!
ಮಾತಾ, ಪಿತ, ತಾನಾದವನಾ!
ರ್ಮ, ಕರ್ಮ, ವರಿತವನಾ!
ರ್ಣಾ, ಶ್ರಮಭೇದಾತೀತನಾ!
ನಾ, ನಿರಂಜನಾದಿತ್ಯಾತ್ಮನಾ!!!

ಮರೆಯದಿರೊ ನಿರಂಜನನಾ!   5(2781)

ರೆಪ್ಪೆ ತೆರದೆಲ್ಲಾ ತೋರ್ಪವನಾ!
ಮನಿಗೂ ತಂದೆಯಾದವನಾ!
ದಿವ್ಯಜ್ಞಾನ ಸ್ವರೂಪದವನಾ!
ರೋಗಕ್ಕಂತಕನಾಗಿರ್ಪವನಾ!
ನಿತ್ಯ ನೇಮ ನಿಷ್ಟಾಗ್ರೇಸರನಾ!
ರಂಗುರಂಗಾಗಿ ತೋರುವವನಾ!
ರನಾಗಿಳೆಯಲ್ಲಿರ್ಪವನಾ! (ತಾ)
-ನಾ ನಿರಂಜನಾದಿತ್ಯಾಗಿಹನಾ!!!

ಮರೆಯದಿರೋ ಮಾಧವನಾ! (ಧ)   4(2260)

-ರೆಯರಸ ದಾಮೋದರನಾ! (ಕಾ)
-ಯಮೋಹವಿಲ್ಲದಿರ್ಪವನಾ!
ದಿಗಂಬರನೆನಿಸಿಹನಾ!
ರೋಗಾರಿಷ್ಟ ನಿವಾರಕನಾ!
ಮಾಯಾತೀತನಾಗಿರ್ಪವನಾ!
ರ್ಮಾಧರ್ಮಾವರಿತವನಾ!
ರಗುರು ದತ್ತಾತ್ರೇಯನಾ!
ನಾಥ ನಿರಂಜನಾದಿತ್ಯನಾ!!!

ಮರೆಯಲಾರೆ ನಾ ನಿನ್ನನಯ್ಯಾ! (ಇ)   6(3510)

-ರೆ ನರೆಕ್ಷಣ ನಿನ್ನ ಬಿಟ್ಟಯ್ಯಾ!
ಜ್ಞಪಶು ನಾನು ನಿನಗಯ್ಯಾ!
ಲಾಲನೆ, ಪಾಲನೆ, ನಿನ್ನಿಂದಯ್ಯಾ! (ಕ)
-ರೆಸಿಕೊಳ್ಳೆನ್ನ ನಿನ್ನಡಿಗಯ್ಯಾ!
ನಾಮಬಲ ನಿನ್ನದೆನಗಯ್ಯಾ!
ನಿಶ್ಚಲ ಭಕ್ತಿ ಕರುಣಿಸಯ್ಯಾ! (ನಿ)
-ನ್ನಲ್ಲೆನ್ನ ಬೆರೆಸಿಕೊಂಡಿರಯ್ಯಾ!
ನಗಿನ್ನೇನೇನೂ ಬೇಡವಯ್ಯಾ!
(ಅ)-ಯ್ಯಾ, ನಿರಂಜನಾದಿತ್ಯನೆನ್ನಯ್ಯಾ!!!

ಮರೆಯೆ ನಾ ನಿನ್ನ ಮಾಯೇ, ತಾಯೇ! (ತಿ)   6(3736)

-ರೆಯಾನುಭವವಾಯ್ತೀಗ ತಾಯೇ! (ದ)
-ಯೆ ನಿನ್ನದೆನ್ನಲ್ಲಪಾರ ತಾಯೇ!
ನಾನಾರೆಂದು ಅರುಹಿದೆ ತಾಯೇ!
ನಿನ್ನ ಪರೀಕ್ಷೆ ಕಠಿಣ ತಾಯೇ! (ನ)
-ನ್ನನ್ನುತ್ತೀರ್ಣಗೊಳಿಸಿದೆ ತಾಯೇ!
ಮಾಯೇ, ಜಾಯೇ, ತನಯೇ ನೀ ತಾಯೇ! (ಕಾ)
-ಯೇ! ಕಂಗೆಟ್ಟಿಲ್ಲಾ ಮಕ್ಕಳ ತಾಯೇ!
ತಾಳೆವೀ ಭವದ ಬೇಗೆಯ ತಾಯೇ! (ಕಾ)
-ಯೇ! ಶ್ರೀ ನಿರಂಜನಾದಿತ್ಯ ಪ್ರಿಯೇ!!!

ಮಲ ಕಳೆದರೆ ಥಳಥಳ!   6(4160)

ಕ್ಷ್ಯ ಸಿದ್ಧ, ಶುದ್ಧ ಹೊರಗೊಳ!
ಲಿ ಕಲ್ಮಶ ಕೀಳ ದುರಳ! (ಕ)
-ಳೆವ ವ್ಯರ್ಥ ಆಯುಷ್ಯಾಮರುಳ!
ಶೇಂದ್ರಿಯಗಳನ್ನವನಾಳ! (ಮ)
-ರೆತು ಸ್ವರೂಪ ಮಾಳ್ಪ ಜಗಳ!
ರಗುಟ್ಟಿಪನು ಜನಗಳ! (ಕೇ)
-ಳನಿವ ಹಿತೈಷೀ ಮಾತುಗಳ! (ಪಂ)
-ಥ, ಪರಾಕ್ರಮ ಬರೀ ಬೊಗಳ! (ಹೇ)
-ಳ ನಿರಂಜನಾದಿತ್ಯ ಜೋಗುಳ!!!

ಮಲಗಗೊಡದು ಹಲ್ಲುನೋವು! (ಮೂ)   4(1612)

-ಲ ಕಾರಣರಿಯದೆಲ್ಲಾ ನೋವು!
ರ್ವಾತ್ಮಗೆಂದೆಂದೂ ಸಾವು, ನೋವು!
ಗೊಬ್ಬರದ ಹುಳಕ್ಕಾವ ನೋವು? (ಒ)
-ಡಲೇ ನಾನೆನುತ್ತ ಸಾವ ನೋವು!
ದುರ್ವಿಚಾರದಿಂದಾಗಿದೆ ನೋವು!
ಸ್ತಾದಿಂದ್ರಿಯ ವ್ಯಾಪಾರಾ ನೋವು! (ಕೊ)
-ಲ್ಲುವುದಿದೇ ಯಮರೂಪೀ ನೋವು! (ಮ)
-ನೋಜಯದಿಂದ ನಿರ್ನಾಮಾ ನೋವು! (ಸಾ)
-ವು, ನಿರಂಜನಾದಿತ್ಯಾತ್ಮಾವು???

ಮಲಗಬೇಕೆಂದು ನಾನಿದ್ದೆ! (ಕೆ)   6(3349)

-ಲಸದ ನೆನ್ಪಾದೊಡನೆದ್ದೆ! (ಹ)
-ಗಲು, ರಾತ್ರಿ, ಹೀಗಾದ್ರೇನ್ನಿದ್ದೆ?
ಬೇಡಪ್ಪಾ ಜನ್ಮವೆನ್ನುತ್ತಿದ್ದೆ!
ಕೆಂಗಣ್ಣನಾಜ್ಞೆಗೆ ಕಟ್ಟಿದ್ದೆ!
ದುಡಿದವ್ನ ಪಾದಕ್ಕೆ ಬಿದ್ದೆ!
ನಾನೇ ಅವನಾಗ್ಬೇಕೆಂದಿದ್ದೆ!
ನಿಷ್ಠೆಯಿಂದಭ್ಯಾಸ ಮಾಡ್ತಿದ್ದೆ! (ಗೆ)
-ದ್ದೆ, ನಿರಂಜನಾದಿತ್ಯಾಗ್ಯೆದ್ದೆ!!!

ಮಲಗಿ ನಿದ್ರಿಸಿರೀಗೆನ್ನ ಮಕ್ಕಳೇ! (ಫ)   5(2565)

-ಲವಿಲ್ಲಲ್ಲಿಲ್ಲೋಡಾಡಿದರೆ ಮಕ್ಕಳೇ! (ತೂ)
-ಗಿ ಪಾಡುವೆ ಜೋಗುಳದಿಂದ ಮಕ್ಕಳೇ!
ನಿಮಗದಾರೋಗ್ಯದಾಯಕ ಮಕ್ಕಳೇ! (ಇಂ)
-ದ್ರಿಯಗಳು ನೀವು ನನಗೆ ಮಕ್ಕಳೇ! (ಘಾ)
-ಸಿ ನಿಮಗಾದ್ರೆ ನೋವೆನಗೆ ಮಕ್ಕಳೇ!
ರೀತ್ಯೆನ್ನದಾದರ್ಶ ನಿಮಗೆ ಮಕ್ಕಳೇ! (ಬ)
-ಗೆಬಗೆಯಾಸೆಗಳೇ ರೋಗ ಮಕ್ಕಳೇ! (ಅ)
-ನ್ನ, ಪಾನ ಸಾತ್ವಿಕವಾಗ್ಬೇಕು ಮಕ್ಕಳೇ!
ಡ್ಡಿ, ಮಾಂಸ ತಿನ್ನಬಾರದು ಮಕ್ಕಳೇ! (ಸ)
-ಕ್ಕರೆ ಸದಾ ತಿಂದ್ರನಾರೋಗ್ಯ ಮಕ್ಕಳೇ! (ಏ)
-ಳೇಳಿ! ನಿರಂಜನಾದಿತ್ಯಾಗಿ!! ಮಕ್ಕಳೇ!!!

ಮಲಗಿದವನಿಗೂಟವಿಕ್ಕುವರೇನಯ್ಯಾ? (ಅ)   1(290)

-ಲ

ಳದಿರ್ಪಾಗದ ಕೀಳಬಾರದಯ್ಯಾ!
ಗಿಡಿವಾಗಿರುವಾಗ ಕಿತ್ತು ನೆಡಬೇಕಯ್ಯಾ! (ಆ)
-ದರವಿಲ್ಲದಮೃತಾನ್ನ ವಿಷದೂಟವಯ್ಯಾ! (ಆ)
-ವ ವೇಳೆಗೇನು ಬೇಕೋ ಅದ ಕೊಡಬೇಕಯ್ಯಾ! (ಅ)
-ನಿಮಿಷರಿಗಮೃತ ಸಿಕ್ಕಿತಲ್ಲವೇನಯಾಯ?
ಗೂರಲಿರುವಾಗ ಗುಗ್ಗರಿಯನ್ನಬೇಡಯ್ಯಾ! (ಆ)
-ಟ, ಪಾಠ, ನೋಟ, ಕೂಟಕ್ಕೊಂದೊಂದು ಕಾಲವಯ್ಯಾ! (ಅ)
-ವಿವೇಕದಿಂದಸಮಾಥಾನವಾಗುವುದಯ್ಯಾ! (ಅ)
-ಕ್ಕ, ಸರ್ವಸುಖ ಸಮನ್ವಯ ಬುದ್ಧಿಯಿಂದಯ್ಯಾ! (ಅ)
-ವರವರ ಬುತ್ತಿಯವರವರುಣಲಯ್ಯಾ!
ರೇಗಾಟ, ಕೂಗಾಟಗಳಾಗ ತಪ್ಪುವುದಯ್ಯಾ! (ಅ)
-ನವರತ ಗುರುವಚನ ಪಾಲಿಸಿರಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನುಪದೇಶವಿದಯ್ಯಾ!!!

ಮಲಗಿದವನೆಬ್ಬಿಸಿ ಪ್ರಸಾದವಿತ್ತ (ಬಾ)   4(1535)

-ಲನೆಂಬ ಪ್ರೀತಿಯಿಂದ ಅದನವನಿತ್ತ! (ಬಾ)
-ಗಿದೆನವನಡಿಗದನು ಸೇವಿಸುತ್ತ!
“ದತ್ತ ನೀನಲ್ಲದಿನ್ಯಾರು ಗತಿಯೆನುತ್ತ”!
ರ್ತಮಾನ ಪ್ರವರ್ತಕನವನೆನುತ್ತ!
ನೆನೆನೆನೆದು ಮನದ

ಪ್ರಾರ್ಥಿಸುತ್ತ! (ಉ)
-ಬ್ಬಿ ಸಂತೋಷದಲಾತನನು ಕೊಂಡಾಡುತ್ತ!
ಸಿರಿ, ಶಾರದೆಯರರಸಾತನೆನುತ್ತ!
ಪ್ರತ್ಯಕ್ಷ ಪರಮಗುರು ಅವನೆನುತ್ತ!
ಸಾರ್ಥಕವಾಯಿತೀನರಜನ್ಮವೆನುತ್ತ!
ರ್ಶನವಿತ್ತೆನ್ನ ಕರೆಸಿಕೊಳ್ಳೆನುತ್ತ!
ವಿರಮಿಪೆನಿದ ವಿಜ್ಞಾಪನೆ ಮಾಡುತ್ತ (ದ)
-ತ್ತಗುರು ಶ್ರೀ ನಿರಂಜನಾದಿತ್ಯನೆನುತ್ತ!!!

ಮಲಗಿದವರೆಬ್ಬಿಸ್ಲುದಿಸಿ ಬಂದ! (ಮ)   5(2527)

-ಲವಿಸರ್ಜನೆ ಮೊದಲಲ್ಲಾಗಲೆಂದ! (ಮು)
-ಗಿಸಿ ಮುಖ ಮಾರ್ಜನಾದಿಗ್ಳಾಮೇಲೆಂದ!
ರ್ಶನ ಗುರುವಿನದ್ದಾಮೇಲಾಗ್ಲೆಂದ! (ಭ)
-ವಬಂಧನ ಹರಿವುದವನಿಂದೆಂದ! (ನೆ)
ರೆ ಭಕ್ತಿಯನ್ನವನಲ್ಲಿಡಬೇಕೆಂದ! (ಕೊ)
-ಬ್ಬಿ ಮಾಯಾಪರವಶರಾಗ್ಬಾರದೆಂದ!
(ಮೀ)ಸ್ಲು ತಾನಾರಿಗೆಂದೆಂದಿಗೂ ಆಗಿಲ್ಲೆಂದ!
ದಿವ್ಯ ಜೀವನಕ್ಕೆ ತಾನಾದರ್ಶವೆಂದ!
ಸಿರಿಯರಸ ಸ್ವರೂಪ ತನ್ನದೆಂದ!
ಬಂಧು, ಬಾಂಧವನೆಲ್ಲರಿಗೆ ತಾನೆಂದ!
ತ್ತ ನಿರಂಜನಾದಿತ್ಯಾನಂದಾನೆಂದ!!!

ಮಲಗಿರು, ಅಲ್ಲಿಲ್ಲೋಡಾಡ ಬೇಡಮ್ಮಾ! (ಬಾ)   3(1080)

-ಲಕರಂಕೆಯಲ್ಲಿಟ್ಟು ಕೊಳ್ಳಬೇಕಮ್ಮಾ! (ಬಾ)
-ಗಿಲು ಮುಚ್ಚಿ ಬಂದು ಒಳಗೆ ಸೇರಮ್ಮಾ! (ಊ)
-ರು, ಕೇರಿಗವರು ಹೋಗಬಾರದಮ್ಮಾ!
ಮ್ಮ, ನೀನವರ ಮಾರ್ಗದರ್ಶಿಯಮ್ಮಾ! (ಅ)
-ಲ್ಲಿಲ್ಲೋಡಾಡಿದರೆ ಅಗೌರವವಮ್ಮಾ (ಎ)
-ಲ್ಲೊ

ಡಿ ಹೋದರೂ ಇಲ್ಲೇ ಬರಬೇಕಮ್ಮಾ! (ಕೂ)
-ಡಾಡುತ್ತಿಲ್ಲೇ ಸುಖವಾಗಿರಬೇಕಮ್ಮಾ! (ಮೃ)
-ಡನವರಿಗೆ ತಂದೆಯಲ್ಲವೇನಮ್ಮಾ?
ಬೇಕವರಿಗಪ್ಪನ ಸೇವೆ ಕಾಣಮ್ಮಾ! (ಗಂ)
-ಡ ನಿನಗೆ ನಂಜುಂಡನಲ್ಲವೇನಮ್ಮಾ? (ಅ)
-ಮ್ಮಾ, ನಿರಂಜನಾದಿತ್ಯನಾತ ಬಾರಮ್ಮಾ!!!

ಮಲನಾಶಕ್ಕೆ ಬೇಕುಪವಾಸ! (ಬ)   4(1568)

-ಲವಾಗಿರಬೇಕಾರೋಗ್ಯ ಧ್ಯಾಸ!
ನಾಯಕಗಾಳಾಗ್ಬೇಕು ಮನಸಾ! (ಈ)
-ಶ ನಿರಂಜನಾದಿತ್ಯಾತ್ಮ ದಾಸ! (ಇ)
-ಕ್ಕೆನಬೇಕು ಹಸಿದಾಗಾ ದಾಸ!
ಬೇಕದಿದೆಂದರಾಗ್ವುದು ಮೋಸ!
ಕುರುಕುಲಾರೀ ಕೆಟ್ಟ ಅಭ್ಯಾಸ!
ರಿತೋದ್ಧಾರಾ ದ್ವಾರಕಾ ವಾಸ!
ವಾಸುದೇನಾನಂದಾ ಉಪವಾಸ! (ವಾ)
-ಸವೇಶಾ ನಿರಂಜನಾದಿತ್ಯೇಶ!!!

ಮಲವಿಸ ರ್ಜನೆಯಾಗಬೇಕು! (ಜ)   4(1786)

-ಲರೂಪದಾಹಾರ ಕೊಡಬೇಕು!
ವಿಷೌಷಧಿಯಿಲ್ಲದಿರಬೇಕು!
ಮಯವಿದಿರು ನೋಡಬೇಕು! (ದೌ)
-ರ್ಜನ್ಯತೆ ತೋರಿಸದಿರಬೇಕು! (ಮ)
-ನೆ ಜನ ಸಹಕರಿಸಬೇಕು! (ಆ)
-ಯಾಸ ಮಾಡಿಕೊಳ್ಳದಿರಬೇಕು!
ತಿ ಶ್ರೀಪಾದದತ್ತಾಗಬೇಕು!
ಬೇಡಿ, ಕಾಡಿ ತಿನ್ನದಿರಬೇಕು! (ಟಾ)
-ಕು, ನಿರಂಜನಾದಿತ್ಯನಾಗ್ಬೇಕು!!!

ಮಲ್ಲ, ಗೊಲ್ಲನಲ್ಲ, ರುಕ್ಮಿಣಿಯನಲ್ಲ! (ಫು)   6(4127)

-ಲ್ಲನಾಭ ತಾನದೆಂತಾಗುವನು ಗೊಲ್ಲ!
ಗೊಲ್ಲರೊಡನಾಡಿದ್ರೆ ಗೊಲ್ಲನೇನಲ್ಲ! (ಬ)
-ಲ್ಲವರಿಗಿದನ್ನರುಹಬೇಕಾಗಿಲ್ಲ!
ರನ ಸಾರಥ್ಯ ಗೊಲ್ಲನಿಂದಾಗಿಲ್ಲ! (ತ)
-ಲ್ಲಣ ಶಾಂತಿ ಗೈದವ ಗೊಲ್ಲನೇನಲ್ಲ!
ರುಕ್ಮಿಯ ಗೆದ್ದವ ಯದುವೀರ ಮಲ್ಲ! (ರು)
-ಕಿಣಿ ಗೊಲ್ಲನನ್ನು ವರಿಸಿರಲಿಲ್ಲ! (ಉ)
-ಣಿಸಿದನವಳಿಗಮೃತಾ ಪ್ರಫುಲ್ಲ!
ದುನಾಥನಿಗಾಪ್ತರು ಗೊಲ್ಲರೆಲ್ಲ!
ರಜನ್ಮ ಸಾರ್ಥಕವಾಯ್ತವರದ್ದೆಲ್ಲ! (ಫು)
-ಲ್ಲ ನಿರಂಜನಾದಿತ್ಯ ಕಂಡನಿದೆಲ್ಲ!!!

ಮಲ್ಲನವ, ಗೊಲ್ಲನವ, ಎಲ್ಲವವ! (ಬ)   5(2872)

-ಲ್ಲವಾ ಪುಲ್ಲಲೋಚನ ಶ್ರೀ ಕೃಷ್ಣನವ!
ಲ್ಲನವ ಬಾಲಲೀಲಾ ಕಾಲನವ!
ರಗುರು ದತ್ತಾತ್ರೇಯನಂದನವ!
ಗೊಡ್ಡಾಕಳಿಂದ ಹಾಲು ಕರೆದವವ! (ಒ)
-ಲ್ಲ ಡಾಂಭಿಕ ಭಕ್ತಿ ಭಾವಗಳನ್ನವ!
ಯ ವಿನಯದಾತಿಥ್ಯ ಕೊಳ್ಳುವವ!
ರದರಾಜ ಶ್ರೀಧರನೆಂಬುವವ!
ಲ್ಲರ ಹೃದಯದಲ್ಲೂ ಇರುವವ! (ಕ)
-ಲ್ಲ ಮೆಟ್ಟಿ ಹೆಣ್ಣು ಮಾಡಿದ ರಾಮನವ!
ಸ್ತ್ರಾದಿಗಳಿಲ್ಲದವಧೂತನವ! (ಅ)
-ವ ನಿರಂಜನಾದಿತ್ಯಾನಂದ ಮಾಧವ!!!

ಮಲ್ಲಿಗೆ! ಬಾ ನೀನೆನ್ನಲ್ಲಿಗೆ! (ಅ)   3(1394)

-ಲ್ಲಿ ನೀನಿದ್ದರೆಲ್ಲಾ ಗಲ್ಲಿಗೆ! (ನ)
-ಗೆ ಮೊಗದಿಂದ ಬಾ ಇಲ್ಲಿಗೆ!
ಬಾಲೆ ನೀನೆರಗು ನಲ್ಲಗೆ!
ನೀಚ ಸಂಗ ಸಾಕು ಮಲ್ಲಿಗೆ!
ನೆಲೆ ಬಿಟ್ಟಡುವುದೆಲ್ಲಿಗೆ! (ಉ)
-ನ್ನತಿಗಾಗಿ ಬಾ ನೀನಿಲ್ಲಿಗೆ! (ಮ)
-ಲ್ಲಿಕಾರ್ಜುನ ತಾನಿರ್ಪಲ್ಲಿಗೆ! (ಬಾ)
-ಗೆ, ನಿರಂಜನಾದಿತ್ಯನಾಗೆ!!!

ಮಳೆ ಬಂತು, ಕೊಳೆ ಹೋಯ್ತು (ಬೆ)   4(1917)

-ಳೆಗುಪಕಾರವದಾಯ್ತು!
ಬಂಜರು ಭೂಮಿ ತಂಪಾಯ್ತು!
ತುರು, ಕರುಗೆ ಮೇವಾಯ್ತು!
ಕೊಳದ ನೀರು ಹೆಚ್ಚಾಯ್ತು! (ಹೊ)
-ಳೆ ಸ್ನಾನಕ್ಕನುಕೂಲಾಯ್ತು! (ಅ)
-ಹೋರಾತ್ರಿ ಭಜನೆಯಾಯ್ತು! (ಆ)
-ಯ್ತು ನಿರಂಜನಾದಿತ್ಯಾಯ್ತು!!!

ಮಳೆ ಬಂದಾಗ ಬೀಜ ಬಿತ್ತಿಲ್ಲ! (ಹೊ)   4(2065)

-ಳೆ ಬಂದಾಗ್ಬೆಳೆಗನ್ಕೂಲವಿಲ್ಲ!
ಬಂಜರು ಭೂಮಿ ಹೆಚ್ಚಿತೆಲ್ಲೆಲ್ಲ! (ಆ)
-ದಾಯದ ದಾರಿ ಬೇರಿನ್ನೇನಿಲ್ಲ! (ಭೋ)
-ಗಜೀವನದ ಗೋಳಳಿದಿಲ್ಲ! (ಕ)
-ಬೀರನಂತಾದರೆ ದುಃಖವಿಲ್ಲ! (ನಿ)
-ಜಧರ್ಮ ಆತ ಬಿಡಲೇ ಇಲ್ಲ! (ಬೀ)
-ಬಿಯೊಡಗೂಡಿ ಬಾಳದೇನಿಲ್ಲ! (ವೃ)
-ತ್ತಿ ಭಕ್ತಿಯಾಗಿ ಮುಕ್ತನಾದ್ನಲ್ಲ! (ಬ)
-ಲ್ಲ ನಿರಂಜನಾದಿತ್ಯದನೆಲ್ಲ!!!

ಮಳೆ ಬಂದಾಗೆತ್ತಬೇಕು ಗೋಧೀ! (ಇ)   2(832)

-ಳೆಯ ದುಃಖವಿಂಗಿಸುವಾ ಗೋಧೀ!
ಬಂಧು ಬಾಂಧವರ ಪ್ರಾಣಾ ಗೋಧೀ!
ದಾರಿಗರಿಗತ್ಯಗತ್ಯಾ ಗೋಧೀ! (ಬ)
-ಗೆಬಗೆ ರೂಪಗಾಧಾರಾ ಗೋಧೀ! (ಸ)
-ತ್ತವರುತ್ತಮಗತಿಗಾ ಗೋಧೀ!
ಬೇಸಾಯಗಾರರಿಷ್ಟಾರ್ಥಾ ಗೋಧೀ!
ಕುಲ ಗೋತ್ರವೆಣಿಸದಾ ಗೋಧೀ!
ಗೋಧೀ, ಸರ್ವಮತದೂಟಾ ಗೋಧೀ! (ಗೋ)
-ಧೀ, ಶ್ರೀ ನಿರಂಜನಾದಿತ್ಯಾ ಗೋಧೀ!!!

ಮಳೆ ಬಂದಾಯ್ತೆಲ್ಲಾ ಕೊಚ್ಚೆ! (ಬೆ)   2(598)

-ಳೆಯೆಲ್ಲಾಯ್ತು ಅಚ್ಚ ಪಚ್ಚೆ!
ಬಂಧನವದೆಲ್ಲಾ ಕೊಚ್ಚೆ! (ಸ)
-ದಾ ಜಪದಿಂದೆಲ್ಲಾ ಪಚ್ಚೆ! (ಬಾ)
-ಯ್ತೆರೆದಾಡಿದರೆ ಕೊಚ್ಚೆ! (ಬ)
-ಲ್ಲಾತನ ಬಾಳೆಲ್ಲಾ ಪಚ್ಚೆ!
ಕೊರಗಿನಿಂದೆಲ್ಲಾ ಕೊಚ್ಚೆ! (ಪ)
-ಚ್ಚೆ, ನಿರಂಜನಾದಿತ್ಯೇಚ್ಛೆ!!!

ಮಳೆ ಬರುತಿರುವುದು ಮಂಗಳ! (ಬೆ)   1(217)

-ಳೆ ಉಳಿಯುವುದರಿಂದ ಮಂಗಳ!
ಡ ಜನಕದರಿಂದ ಮಂಗಳ! (ಗು)
-ರು ಕರುಣೆಯದರಿಂದ ಮಂಗಳ!
ತಿಮಿರ ಹರಿದದ್ರಿಂದ ಮಂಗಳ! (ತು)
-ರು ಕರುಗಳದರಿಂದ ಮಂಗಳ! (ಕಾ)
-ವು ಕಮ್ಮಿಯಾದುದರಿಂದ ಮಂಗಳ! (ಸ)
-ದುಪಯೋಗವದರಿಂದ ಮಂಗಳ!
ಮಂದಮಾರುತ ಸಂಬಂಧ ಮಂಗಳ!
ಗನ ಶುಭ್ರವಾದ್ರಿಂದ ಮಂಗಳ! (ಬಾ)
-ಳ, ನಿರಂಜನಾದಿತ್ಯೆಂದ ಮಂಗಳ!!!

ಮಳೆ ಬಿಸಿಲಲ್ಲೇನನುಷ್ಠಾನ? (ಇ)   4(2354)

-ಳೆಗೆರಡೂ ಬೇಕೆಂಬ ತೀರ್ಮಾನ!
ಬಿಸಿಲೊಂದೇ ಇದ್ದರೇನು ಧ್ಯಾನ?
ಸಿರಿಯರಸಗೆಲ್ಲಾ ಸಮಾನ! (ಅ)
-ಲಕ್ಷ್ಯ ಮಾಡ್ಬಾರದೆಂದೂ ಅವನ! (ಅ)
-ಲ್ಲೇನಿಲ್ಲೇನೆನ್ನದಿರ್ಪುದೇ ಜ್ಞಾನ! (ಅ)
-ನನ್ಯ ಭಕ್ತಿಯಿಂದಾಗ್ಬೇಕ್ಭೋಜನ (ಅ)
-ನುಮಾನ ಬಿಟ್ಟಾಗ್ಬೇಕಾರಾಧನ! (ಭ್ರ)
-ಷ್ಟಾಚಾರಗಳೊಲಿಸವವನ! (ಘ)
-ನ, ನಿರಂಜನಾದಿತ್ಯಾನಂದನ!!!

ಮಳೆ ಸುರ್ಸಿ, ದೀಪಾರ್ಸಿ, ಸೇವೆ ತಕ್ಕೊಂಡ! (ವೇ)   4(2197)

ಳೆ ಹೇಳದೇ ಭಜನೆ ಮಾಡಿಸಿಕ್ಕೊಂಡ!
ಸುತ್ತುಮುತ್ತೆಲ್ಲರನ್ನು ಕೂಡ್ರಿಸಿಕ್ಕೊಂಡ! (ತ)
ರ್ಸಿ ಹಣ್ಣು, ಹಂಪಲು ಸ್ವೀಕರಿಸಿಕ್ಕೊಂಡ!
ದೀನ ರೋಗಿಗಳ ವಿಚಾರಿಸಿಕ್ಕೊಂಡ!
ಪಾದ ಕೊಟ್ಟು ನಮಸ್ಕಾರ ಮಾಡ್ಸಿಕ್ಕೊಂಡ! (ಇ)
ರ್ಸಿ ಪುರುಷಸೂಕ್ತದಿಂದ ತೊಳ್ಸಿಕ್ಕೊಂಡ!
ಸೇವೆ ಸಾರ್ಥಕವಾಯ್ತೆಂದೆನಿಸಿಕ್ಕೊಂಡ! (ಸ)
-ವೆಯಬೇಕು ಪ್ರಾರಬ್ಧ ಹೀಗೆಂದುಕ್ಕೊಂಡ!
ಪ್ಪಿಸಿ ನಡೆಯೆವೆಂದು ಭಾಷೆ ತಕ್ಕೊಂಡ! (ತ)
-ಕ್ಕೊಂಡ, ಬೀಳ್ಕೊಂಡ, ಗರುಡನೇರೀ ಗಂಡ! (ಗಂ)
-ಡ ನಿರಂಜನಾದಿತ್ಯಾನಂದಾ ಪ್ರಚಂಡ!!!

ಮಳೆ, ಬಿಸ್ಲೊಂದಾಗಿ ಬಂತೋಡೋಣಾಡೋಣಾ! (ಕೊ)   4(2047)

-ಳೆಯೆಲ್ಲಾ ಹೋಯ್ತ್ನೆಲವೆಲ್ಲೊಣಗ್ತಾಡೋಣಾ!
ಬಿಲ್ವೆಲ್ಲಾ ಮುಚ್ತ್ಹುಳ್ವೆಲ್ತಾ ಸತ್ತಿತಾಡೋಣಾ! (ಫ)
-ಸ್ಲೊಂದೆಡೆಗಾಯ್ತಸ್ಲೊಂದೆಡೆಗಾಯ್ತಾಡೋಣಾ!
ದಾರಿ ಶುಭ್ರಾಯ್ತೂರು ಹತ್ರಾಯ್ತೋಡಾಡೋಣಾ!
ಗಿಲ್ಗಿಲ್ಸದ್ದಾಯ್ತ್ಮನೆಯವ್ರೆದ್ದಾಯ್ತಾಡೋಣಾ!
ಬಂದ್ಹೋದದ್ದಾಯ್ತ್ನಿಂದು ತಿಂದದ್ದಾಯ್ತಾಡೋಣಾ!
ತೋಳು ಮೇಲಾಯ್ತ್ಕಾಲ್ಕೆಳಗಾಯ್ತೋಡಾಡೋಣಾ!
ಡೋಲ್ತಮ್ಟೆ ಬಡ್ದಾಯ್ತ್ಗೆಜ್ಜೆ ಕಟ್ಯಾಯ್ತಾಡೋಣಾ! (ಬಾ)
-ಣಾ, ಬಿಲ್ಹಿಡ್ದಾಯ್ತ್ಗುರಿಯೆದ್ರ್ನಿಂತಾಯ್ತಾಡೋಣಾ! (ಹಾ)
-ಡೋರ್ಬಂದಾಯ್ತ್ನೋಡೋ ರ್ಸೇರ್ಯಾಯ್ತ್ಕುಣ್ದಾಡ್ಯಾಡೋಣಾ! (ಗು)
-ಣಾವ್ಗುಣ್ಕೆ ನಿರಂಜನಾದಿತ್ಯೆಂದಾಡೋಣ!!!

ಮಳೆಗಾಲದಲ್ಲಿ ಗೆಳೆಯ ಬಾರ! [ಬೆ]   4(2374)

-ಳೆಗಾಗಿ ಆವನುಪಕಾರಪಾರ! (ಸಂ)
-ಗಾತಿಗಳ ಹಿಂದಿದ್ದೀಗ ಸಂಚಾರ! (ಜ)
-ಲ ಭರ್ತಿಯಾದಾಗ ತೋರ್ಪನಾಕಾರ! (ಉ)
-ದಯಾಸ್ತಗಳಲ್ಲೂ ಈಗ ನಕಾರ! (ಅ)
-ಲ್ಲಿಲ್ಲಿ, ಎಲ್ಲೆಲ್ಲೀಗ ಗಾಢಾಂಧಕಾರ! (ಬ)
-ಗೆ ಬಗೆರೀತಿಯಲ್ಲವನಾಧಾರ! (ಇ)
-ಳೆಗವ್ನಂತಾರು ಮಾಳ್ಪರುಪಕಾರ? (ಭ)
-ಯ, ಭಕ್ತಿಯಿಂದಿರ್ಪುದೇ ಸದಾಚಾರ!
ಬಾ, ಬೇಗೆಂದು ಮೊರೆಯಿಡ್ವ ನಿರ್ಧಾರ! (ಹ)
-ರ, ನಿರಂಜನಾದಿತ್ಯಾ ಮಿತ್ರಾಕಾರ!!!

ಮಸಾಲೆಗೆ ತಕ್ಕ ವಾಸನೆಯಮ್ಮಾ!   1(408)

ಸಾಧನೆಗೆ ತಕ್ಕ ಪ್ರತಿಫಲಮ್ಮಾ! (ಅ)
-ಲೆದಾಟದ ಮನಕಶಾಂತಿಯಮ್ಮಾ!
ಗೆಳೆಯನಾತ್ಮೀಕನಾಗಬೇಕಮ್ಮಾ!
ರಣಿ, ಲೋಕಮಿತ್ರನಂತಿರಮ್ಮಾ! (ಅ)
-ಕ್ಕ, ತಮ್ಮಾ ಪ್ರೇಮ ಚೊಕ್ಕವಿರಲಮ್ಮಾ!
ವಾರಿಜಾದಿತ್ಯರಂತಿರಬೇಕಮ್ಮಾ!
ರ್ವಾಂತರ್ಯಾಮಿತ್ವಳವಡಲಮ್ಮಾ!
ನೆನಪಾಗುರುವಿನದಿರಲಮ್ಮಾ!
ದುಪತಿಯಾಚಾರ ಹೀಗಿತ್ತಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯಾಚಾರ್ಯನಮ್ಮಾ!

ಮಹತ್ಕಾರ್ಯಾಕಾಂಕ್ಷೆ ಮನಸಿಗೆ!   3(1381)

ಗಲಿರುಳಿದಾ ಮನಸಿಗೆ! (ಮಿ)
-ಕ್ಕಾವ ಆಸೆಯಿಲ್ಲಾ ಮನಸಿಗೆ! (ಸೂ)
-ರ್ಯಾದರ್ಶತೆ ಸದಾ ಮನಸಿಗೆ! (ಏ)
-ಕಾಂತ ಸುಖ ಬೇಕಾ ಮನಸಿಗೆ! (ಶಿ)
-ಕ್ಷೆ, ರಕ್ಷೆ, ಬೇಕಿಂದಾ ಮನಸಿಗೆ!
ತ ಭೇದವಿಲ್ಲ ಮನಸಿಗೆ!
ಟನೆ ಬೇಕಿಲ್ಲಾ ಮನಸಿಗೆ!
ಸಿಟ್ಟು ಬೇಡವೀಗಾ ಮನಸಿಗೆ! (ಬ)
-ಗೆ ನಿರಂಜನಾದಿತ್ಯನಿಳೆಗೆ!!!

ಮಹತ್ವದ ತಂಬೂರಿ ಬುರುಡೆ!   4(1768)

ರಿ ಕೃಪೆಯಿಂದಾಯ್ತಾ ಬುರುಡೆ!
“ತ್ವಮೇವ ಸರ್ವ”ವೆಂಬಾ ಬುರುಡೆ!
ತ್ತಾತ್ರೇಯ ಸ್ವರೂಪಾ ಬುರುಡೆ!
ತಂತಿ ಪ್ರಾಣಕ್ಕಾಶ್ರಯಾ ಬುರುಡೆ! (ತಂ)
-ಬೂರಿ ಪ್ರಣವಾನಂದಾ ಬುರುಡೆ!
ರಿಪುಗಳಡಗಿಪಾ ಬುರುಡೆ!
ಬುಧ ಜನಾದಿ ಮದ್ಯಾ ಬುರುಡೆ! (ಪಾ)
-ರುಗೈವ ತಾರಕಾತ್ಮಾ ಬುರುಡೆ! (ನೋ)
-ಡೆ, ನಿರಂಜನಾದಿತ್ಯಾ ಬುರುಡೆ!!!

ಮಹಾ ಪ್ರಸಾದ ಸದಾ ದೇಹಾರೋಗ್ಯ! (ಆ)   1(351)

-ಹಾರ ಹಸಿವೆಗಾಗಿದ್ದರಾರೋಗ್ಯ!
ಪ್ರವಾಸದಲ್ಲಿಲ್ಲ್ಯಾಹಾನಾರೋಗ್ಯ!
ಸಾರ ಭರಿತ ಶಾಖಾಹಾರಾರೋಗ್ಯ! (ಅ)
-ದಲಕ್ಷಿದರಹುದನಾರೋಗ್ಯ! (ಅ)
-ಸಮಯದಾಹಾರವೆಲ್ಲನಾರೋಗ್ಯ!
ದಾಹಶಾಂತಿಗುತ್ತಮೋದಕಾರೋಗ್ಯ!
ದೇಶ, ಕಾಲಕ್ಕೊಪ್ಪುವಾಹಾರಾರೋಗ್ಯ!
ಹಾಲು, ಹಣ್ಣುಗಳೆಲ್ಲರಿಗಾರೋಗ್ಯ! (ಆ)
-ರೋಗ್ಯವಿಲ್ಲದ ಸ್ವರ್ಗವೂ ಅಯೋಗ್ಯ! (ಯೋ)
-ಗ್ಯ! ನಿರಂಜನಾದಿತ್ಯ ನಿತ್ಯಾರೊಂಗ್ಯ!!!

ಮಹಾ ಮಾಟಗಾರ ಗುರುದತ್ತ! (ಇ)   4(1574)

-ಹಾದಿ ಲೋಕಕರ್ತಾ ಗುರುದತ್ತ!
ಮಾಯಾ ಜಾಲ ಹಸ್ತಾ ಗುರುದತ್ತ! (ಕಾ)
-ಟ, ಪೇಚಾಟ ಹರ್ತಾ ಗುರುದತ್ತ!
ಗಾನಲೋಲ ಚಿತ್ತಾ ಗುರುದತ್ತ! (ಪ)
-ರ ತತ್ವ ಸಿದ್ದಾರ್ಥಾ ಗುರುದತ್ತ!
ಗುಣ, ದೋಷಾತೀತಾ ಗುರುದತ್ತ! (ಕ)
-ರುಬಿಲ್ಲದುದಾತ್ತಾ ಗುರುದತ್ತ!
ತ್ತ ಗೀತದಾತಾ ಗುರುದತ್ತ! (ದ)
-ತ್ತಗುರು ನಿರಂಜನಾದಿತ್ಯಾತ!!!

ಮಹಾ ಶಿವರಾತ್ರಿ ಹೇಗೆ ಎಲ್ಲ?   1(249)

ಹಾಕಿದ ವಿಭೂತಿ ಹಣೆಯಲ್ಲಿ!
ಶಿವಸ್ಮರಣೆ ಮನಸಿನಲ್ಲಿ!
ರ ಪ್ರಸನ್ನತೆ ಮುಖದಲ್ಲಿ!
ರಾತ್ರೆಲ್ಲಾ ಭಾವ ಭಜನೆಯಲ್ಲಿ!
ತ್ರಿಶೂಲಿ ಪೂಣ

ದಾವೇಶದಲ್ಲಿ!
ಹೇರಂಭಾದಿಗಳ್ತಾಂಡವದಲ್ಲಿ!
ಗೆಜ್ಜೆ ತಾಳಗಳ ಮೇಳದಲ್ಲಿ!
ಲ್ಲೆಲ್ಲಿ ಶಿವಸನ್ನಿಧಿಯಲ್ಲಿ! (ನಿ)
-ಲ್ಲ! ನಿರಂಜನಾದಿತ್ಯನಿರ್ಪಲ್ಲಿ!!! ೨೪೯

ಮಹಾ ಶಿವರಾತ್ರಿಯಂತೆ ನಾಳೆ!   3(1126)

ಹಾಲಾಹಲ ಜೀರ್ಣವಂತೆ ನಾಳೆ!
ಶಿವಾನಂದ ಲೀಲೆಯಂತೆ ನಾಳೆ!
ರಮೃತೋತ್ಪತ್ತಿಯಂತೆ ನಾಳೆ!
ರಾಹು, ಕೇತು, ಸೋಲ್ವರಂತೆ ನಾಳೆ!
ತ್ರಿನೇತ್ರನ ಪೂಜೆಯಂತೆ ನಾಳೆ! (ಸಾ)
-ಯಂಕಾಲಭಿಷೇಕವಂತೆ ನಾಳೆ! (ಮಾ)
-ತೆಗೆ ಮಹಾನಂದವಂತೆ ನಾಳೆ!
“ನಾ” ನರ್ಧ ನಾರೀಶನಂತೆ ನಾಳೆ! (ಗೆ)
-ಳೆಯ ನಿರಂಜನಾದಿತ್ಯೇಶಾಳೆ!!!

ಮಹಾತ್ಮನಿಗೆಲ್ಲೆಲ್ಲೂ ಮನೆ, ಮಂದಿರ!   1(260)

ಹಾಯಾಗಿದ್ದಲ್ಲಿರುವಾತ ಪ್ರಭಾಕರ! (ಆ)
-ತ್ಮ ಚಿಂತಕನಿಗಿನ್ನೇನು ಬೇಸರ?
ನಿತ್ಯ ತೃಪ್ತಿ, ನಿರಾಸೆಯವನಾಚಾರ!
ಗೆಳೆಯನ ಗೆಳೆಯನಿಗಿಲ್ಲಾತುರ! (ಅ)
-ಲ್ಲೆನ್ನಾದರಿಪವನಿಲ್ಲೂ ಕೃಪಾಕರ! (ಅ)
-ಲ್ಲೂ, ಇಲ್ಲೂ ತಾನಿರುವನವನಂತರ!
ಹಿಮಾನಂದದಲಿರ್ಪ ಬಾಹ್ಯಾಂತರ!
ನೆಗಳಿಯೆಂಬುದಾತಗವಾಂತರ!
ಮಂದಿರವಾತನದೀತನು ಸುಂದರ!
ದಿತ್ಯತ್ಯಾತ್ಮಜರೆಲ್ಲಾ ಪ್ರಿಯಕರ!
ಸ, ನಿರಂಜನಾದಿತ್ಯ ರುಚಿಕರ!!!

ಮಹಾದ್ವಾರದಲ್ಲಿ ಪ್ರಸಾದ ಚೆಲ್ಲಿತ್ತು!   6(4044)

ಹಾಯಾಗ್ಯಾರಾದ್ರೂ ತಿನ್ನಬಹುದಾಗಿತ್ತು!
ದ್ವಾದಶಿಯ ಪುಣ್ಯ ದಿನವಿಂದಾಗಿತ್ತು!
ಕ್ಕಸ ಕಾಗೆಗದಿಂದು ಕಾಣದಿತ್ತು!
ತ್ತನ ಮುದ್ದಳಿಲಿಗದು ಕಾದಿತ್ತು! (ಮ)
-ಲ್ಲಿಗೆ ಬಳ್ಳಿಯಿಂದಿಳಿದು ಬರುತ್ತಿತ್ತು!
ಪ್ರತಿ ದಿನ ಕರೆಗೋಕೊಟ್ಟಿತ್ತು!
ಸಾನಂದದಿಂದ ತಿಂದು ಮರ ಹತ್ತಿತು!
ತ್ತನಿಚ್ಛೆಗಾರೆದುರಾಡಲಾದೀತು?
ಚೆನ್ನಾಗಿದನ್ನರಿತರಿಲ್ಲ ವಿಪತ್ತು! (ಅ)
-ಲ್ಲಿ, ಇಲ್ಲಿ, ಎಲ್ಲೆಲ್ಲೂ ಪ್ರಸಾದ ಸಂಪತ್ತು! (ಹೊ)
-ತ್ತು ನಿರಂಜನಾದಿತ್ಯಾನಂದಕ್ಕಿವತ್ತು!!!

ಮಹಾಬಲಾನ್ವರ್ಥವಾಗಲಿ!   5(2770)

ಹಾನಿ, ವೃದ್ಧಿ, ಸಮವಾಗಲಿ!
ಯಲಾಡಂಬರ ಸಾಯಲಿ!
ಲಾವಣ್ಯಾತ್ಮನದ್ದು ಹೆಚ್ಚಲಿ! (ಅ)
-ನ್ವಯ ಸಮನ್ವಯವಾಗಲಿ! (ಸಾ)
-ರ್ಥಕ ನರಜನ್ಮವಾಗಲಿ!
ವಾಙ್ಮನವೆರಡೊಂದಾಗಲಿ!
ರ್ವದ ನಿಗ್ರಹವಾಗಲಿ! (ಶೂ)
-ಲಿ ನಿರಂಜನಾದಿತ್ಯಾಳಲಿ!!!

ಮಹಾಲಯ ಪಕ್ಷದಲ್ಲೆಲ್ಲಾ ಪಕ್ಷಾಂತ್ಯ!   6(3392)

ಹಾಡುತ್ತ ಹರಿನಾಮ ಸಂತರ್ಗಾಯ್ತಂತ್ಯ!
ಕ್ಷ್ಮೀಶನವತಾರಗಳಿಗಾಯ್ತಂತ್ಯ!
ಜ್ಞ, ಯಾಗ, ಮಾಡಿದವರಿಗಾಯ್ತಂತ್ಯ!
ಟ್ಟವೇರಿ ಆಳಿದವರಿಗಾಯ್ತಂತ್ಯ!
ಕ್ಷಣ ಕ್ಷಣಕ್ಕೂ ಆಗುತ್ತಿದೆಲ್ಲಾ ಅಂತ್ಯ!
ರಿದ್ರ, ಧನವಂತರಿಗೆಲ್ಲಾಯ್ತಂತ್ಯ! (ಬ)
-ಲ್ಲೆವೆಲ್ಲಾ ಅಂದ ನಾಯಕರಿಗಾಯ್ತಂತ್ಯ! (ಎ)
-ಲ್ಲಾ ಜೀವರಿದನ್ನರಿತ್ಬಾಳ್ವುದಗತ್ಯ!
ಕ್ಷಗಳ್ಕಟ್ಟಿ ಹೊಡೆದಾಡ್ಬಾರ್ದು ನಿತ್ಯ! (ದ)
-ಕ್ಷಾಂಜನೇಯನಾದರ್ಶ ಪಾಲಿಸ್ಬೇಕ್ಭೃತ್ಯ! (ಸ)
-ತ್ಯ, ನಿರಂಜನಾದಿತ್ಯಾನಂದಕ್ಕಿಲ್ಲಾಂತ್ಯ!!!

ಮಹಿಮಾ ಶೂನ್ಯ ಮರೆಯಾಗಿರಬೇಕು!   5(3230)

ಹಿತಾಹಿತಾತೀತ ಒಳಗಿರಬೇಕು!
ಮಾತುಕಥೆಯನ್ನಂತೂ ಬಿಡಲೇಬೇಕು!
ಶೂದ್ರ, ಬ್ರಾಹ್ಮಣ ಭೇದವೇಕಿರಬೇಕು? (ಜ)
-ನ ಗುಣ ವಲಯ ದಾಟಿ ಹೋಗಬೇಕು!
ನಸ್ಸಿನ ಚಂಚಲತೆ ಗೆಲಬೇಕು! (ಕೆ)
-ರೆ ನೀರಿನಂತೆ ಪ್ರಶಾಂತವಾಗಬೇಕು!
ಯಾರನ್ನೂ ನೋಯಿಸದೇ ತಾನಿರಬೇಕು!
ಗಿರೀಶ್ವರನಂತೆ ಯೋಗಿಯಾಗಬೇಕು!
ಘುಪತಿಯ ಭಜನೆ ಮಾಡಬೇಕು!
ಬೇಡರ ಶಬರಿಯಂತೆ ಇರಬೇಕು! (ಕಾ)
-ಕುಸ್ಥ ನಿರಂಜನಾದಿತ್ಯನೆನಬೇಕು!!!

ಮಹಿಮೆ ಇಲ್ಲ ಮರ್ಯಾದೆ ಇಲ್ಲ!   6(4146)

ಹಿರಿಯರದಕ್ಕೆ ಹುಟ್ಟಿಸಿಲ್ಲ!
ರೆಯಬೇಕೆಂಬಾಸೆಯೂ ಇಲ್ಲ!
ರಸಿದಂತಿರಲೇಬೇಕಲ್ಲಾ? (ತ)
-ಲ್ಲಣದಿಂದ ಪ್ರಯೋಜನವಿಲ್ಲ!
ನೋಜಯಕ್ಕೆ ಸಾಧನೆಯೆಲ್ಲಾ! (ಆ)
-ರ್ಯಾದರ್ಶವಿದೆಂದಿಗೂ ಸುಳ್ಳಲ್ಲ! (ತಂ)
-ದೆ, ತಾಯಿ, ಬಂಧು ದೇವರೇ ಎಲ್ಲಾ!
ನ್ನೇನೂ ತಿಳಿಯಬೇಕಾಗಿಲ್ಲ! (ಎ)
-ಲ್ಲ ನಿರಂಜನಾದಿತ್ಯ ಬಲ್ಲ!!!

ಮಹಿಮೆ ತಿಳಿದು ಬಳಿಗೆ ಬರಬೇಕು!   1(231)

ಹಿತವಚನವಿದನು ತಿಳಿದಿರಬೇಕು!
ಮೆಲುಕುಹಾಕದಾಕಳು ವ್ಯರ್ಥವೆನಬೇಕು!
ತಿರಿತಿರಿಗಿ ತತ್ವ ಮನನವಾಗಬೇಕು! (ಉ)
-ಳಿಯುವಾ ಸಾರದಿಂದಾಗ ತೃಪ್ತನಾಗಬೇಕು!
ದುಡುಕದೆ ಕಾದಾನಂದನುಭವಿಸಬೇಕು!
ಸವಳಿದು ನಿರಾಶೆಯಾಗದಿರಬೇಕು! (ಹು)
-ಳಿ ರಸ ಮಧುವಾಗದೆಂದರಿತಿರಬೇಕು! (ಹೊ)
-ಗೆಯಡಗುರಿ ಕಂಡಾಗಡಿಗೆ ಮಾಡಬೇಕು!
ಯಲಾಟ ಮುಗಿದ ಮೇಲೆ ಮಲಗಬೇಕು!
ತ್ನ ದೊರೆತ ನಂತರುಂಗುರ ಕಟ್ಟಬೇಕು!
ಬೇಲಿ ಹಾಕಿಸಿ ಬೆಳೆ ಬೆಳೆಸುತಿರಬೇಕು! (ಮು)
-ಕುಳಿತ ನಿರಂಜನಾದಿತ್ಯನಾಗ್ಬರಬೇಕು!!!

ಮಹಿಮೆ ತೋರಿದತ್ತ ಈ ಮನವೆಳೆದಾಗ!   6(4273)

ಹಿತ ಶತೃಗಳ ಹೆಸರಡಗುವುದಾಗ!
ಮೆರವಣಿಗೆಯ ಉತ್ಸವ ಸಾರ್ಥಕವಾಗ!
ತೋಳಿಗೆ ಶಕ್ತಿ ರಥವನ್ನೆಳೆಯಲಿಕ್ಕಾಗ! (ಉ)
-ರಿ ಬಿಸಿಲಿನ ಘ

ರ ತಾಪ ಕಾಣಿಸದಾಗ!
ಣಿವು, ಹಸಿವು, ಬಾಯಾರಿಕೆ ಕಾಣದಾಗ! (ಅ)
-ತ್ತ; ಇತ್ತೋಡುವ ಚಿತ್ತ ತಟಸ್ಥವಾಗ್ವುದಾಗ!
ರೈದಿಂದ್ರಿಯ ವಿಷಯರಹಿತವಾಗ್ವುದಾಗ!
ನಸಿಜ ತಾ ಪಾದಾಕ್ರಾಂತನಾಗುವನಾಗ!
ರ, ನಾರಿಯರು ಸಹೋದರರು ತಾನಾಗ!
ವೆಸನಗಳೆಲ್ಲಕ್ಕೂ ಸ್ಮಶಾನಯಾತ್ರೆ ಆಗ! (ಹೊ)
-ಳೆಯುವುದೆಲ್ಲೆಲ್ಲೂ ಅಧ್ಯಾತ್ಮಕಾಂತಿಯೇ ಆಗ!
ದಾರಿ ನಡೆದದ್ದೂರಿನತ್ತ ಸಾಥ

ಕಾವಾಗ! (ಭ)
-ಗವಂತ ನಿರಂಜನಾದಿತ್ಯಾನುಗ್ರಹವಾಗ!!!

ಮಹಿಮೆ ತೋರು ಗುರುದೇವಾ! (ಬ)   4(1405)

-ಹಿರಂಗಕ್ಕಾಗದದು ಜೀವಾ!
ಮೆಲ್ಲಮೆಲ್ಲೊಳಗೆ ಬಾ ಜೀವಾ!
ತೋರಿ ನಿನ್ನ ಕೊಲುವೆ ಜೀವಾ! (ಬ)
-ರುವೆ ತಾನೆನ್ನಲ್ಲಿಗೆ ಜೀವಾ?
ಗುರುವಿನಿಷ್ಟೆನ್ನಿಷ್ಟ ದೇವಾ! (ಮ)
-ರು ಮಾತನಾಡೆ ನಾನು ದೇವಾ!
ದೇವದೇವ ಶ್ರೀಗುರುದೇವಾ! (ಈ)
-ವಾ ನಿರಂಜನಾದಿತ್ಯೈಕ್ಯವಾ!!!

ಮಹಿಮೆ ಹೇಳಲರಿಯದೀ ಬಾಯಿ!   4(1455)

ಹಿಮಗಿರಿ ನಾಥನೆಲ್ಲರ ತಾಯಿ!
ಮೆರೆವುದೆಲ್ಲೆಲ್ಲೂ ಅ ಗುರು ತಾಯಿ!
ಹೇಳಿ ಕರೆಸಿತೀ ಮಗುವಾ ತಾಯಿ! (ತ)
-ಳಮಳ ನಿನೆಗೇಕೆಂದಿತಾ ತಾಯಿ!
ಕ್ಷನನ್ನಲ್ಲಿರಿಸೆಂದಿತಾ ತಾಯಿ! (ಹ)
-ರಿ ಭಜನಾನಂದ ಕೊಟ್ಟಿತಾ ತಾಯಿ! (ಕಾ)
-ಯ ಕಷ್ಟಕ್ಕಂಜಬೇಡೆಂದಿತಾ ತಾಯಿ!
ದೀನನೆನ್ನ ಕಾಪಾಡೆಂದಿತೀ ಬಾಯಿ!
ಬಾಯಿ ಮುಚ್ಚ್ಯಾನಂದಿಸೆಂದಿತಾ ತಾಯಿ! (ತಾ)
-ಯಿ ನಿರಂಜನಾದಿತ್ಯಾನಂದಾ ತಾಯಿ!!!

ಮಹಿಮೆಗೆ ಪಾತ್ರಾಪಾತ್ರವೆಂಬುದಿಲ್ಲ!   6(4261)

ಹಿತಾಹಿತಕಾರಿಯೆಂಬ ಭೇದವಿಲ್ಲ!
ರೆಯಬೇಕೆಂಬ ಸಂಕಲ್ಪವೂ ಇಲ್ಲ!
ಗೆಡ್ಡೆ, ಗೆಣಸೇ ತಿನ್ನಬೇಕೆಂದೇನಿಲ್ಲ!
ಪಾಪ, ಪುಣ್ಯದ ಲಕ್ಷ್ಯ ಇಲ್ಲವೇ ಇಲ್ಲ!
“ತ್ರಾಹಿಮಾಂ, ಪಾಹಿಮಾಂ” ಎಂದತ್ತರದಿಲ್ಲ!
ಪಾದಪೂಜೆಯಿಂದದರ ಪ್ರಾಪ್ತಿಯಲ್ಲ!
ತ್ರಯಮೂರ್ತಿ ದತ್ತ ನಿಚ್ಛೆಯಂತೆ ಎಲ್ಲಾ!
ವೆಂಕಟೇಶ ವಿಶ್ವನಾಥ ಭೇದವಿಲ್ಲ!
ಬುದ್ಧಿವಂತ ಹೆಡ್ಡನೆಂಬುದದಕ್ಕಿಲ್ಲ!
ದಿವ್ಯಾತ್ಮ ಸ್ಥಿತಿಯಿದ್ದಲ್ಲ ಮಹಿಮೆಲ್ಲಾ! (ಬ)
-ಲ್ಲ ನಿರಂಜನಾದಿತ್ಯನದ್ರ ಗುಟ್ಟೆಲ್ಲಾ???

ಮಹಿಳೆಯಿಂದೆಲ್ಲಾಗು ಹೋಗಯ್ಯಾ! (ಮ)   5(2808)

-ಹಿಷಾಸುರಮರ್ದಿನಿ ತಾನಯ್ಯಾ! (ವೇ)
-ಳೆವೇಳೆಗನ್ನವಿಕ್ಕುವಳಯ್ಯಾ!
ಯಿಂಚರಿ ಲೋಕ ಮೋಹಕಳಯ್ಯಾ!
ದೆವ್ವವಾಗಿಯೂ ಕಾಡುವಳಯ್ಯಾ! (ಕೊ)
-ಲ್ಲಾಪುರ ಭವಾನಿ ಇವಳಯ್ಯಾ!
ಗುರುದತ್ತನಿಷ್ಟಮೂರ್ತಿಯಯ್ಯಾ!
ಹೋರಾಟದಲ್ಲೆತ್ತಿದ ಕೈಯಯ್ಯಾ!
ಗ್ಗನೂ ಕವಿಯಿವಳಿಂದಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯನಮ್ಮಯ್ಯಾ!!!

ಮಾಡಬಾರದ್ದು ಮಾಡಿದ ಮಾನವ! (ಮಾ)   5(3266)

-ಡಬಹುದಾದದ್ದೂ ಮಾಡಿದನವ!
ಬಾಯ್ಕೈ ದುರುಪಯೋಗ ಗೈದನವ! (ಪ)
-ರನಿಂದೆಯಿಂದ ಪಾಪಿಯಾದನವ!
(ಕ)ದ್ದು ತಿಂದೊಡಲ ಬೆಳೆಸಿದನವ!
ಮಾಯಾ ಮೋಹದಿಂದ ಹಾಳಾದನವ! (ಮಾ)
-ಡಿದನು ಕಾಮ್ಯ ಕರ್ಮಗಳನ್ನವ!
ಣಿದೊದ್ದಾಡಿ ಬಿದ್ದುಹೋದನವ!
ಮಾರಾರಿಯ ಮರೆತೇಬಿಟ್ಟನವ!
ರಳಿ, ಹೊರಳಿ ಅಳಿದನವ! (ಶಿ)
ನಿರಂಜನಾದಿತ್ಯ ತಾನಾದವ!!!

ಮಾಡಿ ಮುಗಿಸಿದೆನನುಷ್ಠಾನವನ್ನು! [ನೋ]   4(2423)

-ಡಿದೆನವಿರಳವಾಗೀಗಪ್ಪನನ್ನು!
ಮುಗಿಲೊಳಡಗಿ ಓಡುತ್ತಿಹನನ್ನು! (ರಂ)
-ಗಿನಂಗಿಯ ಧರಿಸಿರುವವನನ್ನು!
ಸಿರಿಯರಸನಾಗಿರುವಾತನನ್ನು! (ತಂ)
-ದೆ, ತಾಯಿ ಸರ್ವರಿಗಾಗಿರ್ಪವನನ್ನು!
ಮಿಸಿ ಸ್ಮರಿಸುವೆನಾ ಪಾದವನ್ನು! (ತ)
-ನು, ಮನ, ಧನದರ್ಪಣೆಯಿಂದದನ್ನು! (ಕಾ)
-ಷ್ಠಾದ್ಯೆಲ್ಲಾ ಚರಾಚರ ವ್ಯಾಪಕನನ್ನು! (ಅ)
-ನವರತ ಧ್ಯಾನಿಸಲ್ಭಯವೇನಿನ್ನು? (ಭ)
-ವಬಂಧನದ ಭಯವೆನಗೇನಿನ್ನು? (ಅ)
-ನ್ನು, ನಿರಂಜನಾದಿತ್ಯ ಕೃಪೆಯಿದೆನ್ನು!!!

ಮಾಡಿದ ಕರ್ಮಕ್ಕೆ ಫಲವೇ ಸಾಕ್ಷಿ! (ತೋ)   4(1491)

-ಡಿದ ಬಾವಿಗೆ ಉದಕವೇ ಸಾಕ್ಷಿ! (ಉ)
-ದಯವಾದುದಕೆ ಬೆಳಕೇ ಸಾಕ್ಷಿ!
ರ್ತವ್ಯನಿಷ್ಠೆಗೆ ತೃಪ್ತಿಯೇ ಸಾಕ್ಷಿ! (ಚ)
-ರ್ಮವ್ಯಾಧಿಗದರ ಬಣ್ಣವೇ ಸಾಕ್ಷಿ! (ರೆ)
-ಕ್ಕೆ ಮುರಿದುದಕೆ ಹಾರದ್ದೇ ಸಾಕ್ಷಿ! (ಕ)
-ಫ ತುಂಬಿದಕುಸಿರಾಡದ್ದೇ ಸಾಕ್ಷಿ! (ಕು)
-ಲ, ಶೀಲಗಳಿಗಾಚಾರವೇ ಸಾಕ್ಷಿ!
ವೇದಾಂತಕ್ಕೆ ನಿಷ್ಕರ್ಮ ತಾನೇ ಸಾಕ್ಷಿ!
ಸಾಧು ಭಾವನೆಗೆ ಶಾಂತಿಯೇ ಸಾಕ್ಷಿ! (ಸಾ)
-ಕ್ಷಿ, ನಿರಂಜನಾದಿತ್ಯ ಸರ್ವ ಸಾಕ್ಷಿ!!!

ಮಾಡಿದಡಿಗೆಯ ಮೊದಲು! (ಬ)   5(3145)

-ಡಿಸಾಮೇಲೆ ತಿನ್ನುವ ಸಲು! (ಗಂ)
-ಡನಿಗಿಷ್ಟವಾಗುವ ವೊಲು! (ಅ)
-ಡಿಗಡಿಗಾತಿಥ್ಯವಾಗಲು! (ಕಾ)
-ಗೆ ಮೊದಲ್ಗೊಂಡು ಪಾಲ್ಗೊಳ್ಳಲು!
ಜ್ಞವಿದೇ ಮೇಲ್ನೂರು ಪಾಲು!
ಮೊಟ್ಟೆ, ಮಾಂಸ ವರ್ಜ್ಯಾನೆಯೊಲು!
ಯಾನಿಧಿಗಿಲ್ಲ ಕೀಳ್ಮೇಲು! (ನಿ)
-ಲು ನಿರಂಜನಾದಿತ್ಯನೊಲು!!!

ಮಾಡಿದುಪಕಾರ ಮರೆವವನ ಗತಿ ಏನು? (ಗುಂ)   6(4064)

-ಡಿ ತನಗೆ ತಾನೇ ತೋಡಿಕೊಳ್ಳುತ್ತಿರ್ಪನವನು!
ದುಸ್ಸಂಗಕ್ಕೀಡಾಗಿ ನರಳುತ್ತಲಿರುವನವನು!
ತಿತನಾಗಿ ಪಾತಾಳ ಸೇರುತ್ತಿರ್ಪನವನು!
ಕಾಗೆ, ಗೂಗೆಗೂ, ಕೀಳೆನಿಸುತ್ತಿರುವನವನು!
ತಿ ಕ್ರೀಡೆಯಲ್ಲಿ ತಲ್ಲೀನನಾಗಿರ್ಪನವನು!
ದ ಮತ್ಸರ ಭರಿತನಾಗಿರುವನವನು!
ರೆಕ್ಕೆ, ಪುಕ್ಕ, ಕಿತ್ತ ಹಕ್ಕಿಯಾಗುತ್ತಿರ್ಪನವನು!
ನವಾಸೋಪವಾಸಕ್ಲೊಳಗಾಗಿಹನವನು!
ಚನಭ್ರಷ್ಟ ಮಾನಹೀನನೆನ್ಸಿಹನವನು!
ರರೂಪಿಯಾದ ನರಿಯಾಗಿರುವನವನು!
ತಿ, ಮತಿಗೆಟ್ಟ ಪಿಶಾಚಿಯಾಗಿರ್ಪನವನು!
ತಿಪ್ಪೆಯಮೇಧ್ಯ ಮೆಲ್ವ ಶ್ವಾನನಾಗಿರ್ಪನವನು!
ನಾನಂದಕ್ಕೆ ಮಾಡಿದ ಬ್ರಹ್ಮನೀ ಸೃಷ್ಟಿಯನು?
ನುಡಿಯದಾದ ನಿರಂಜನಾದಿತ್ಯೋತ್ತರವನು!!!

ಮಾಡಿದೆ! “ನಿನ್ನಿಚ್ಛೆಯೆಂದೆಲ್ಲಾ” ಮಾಡಿದೆ! (ನು)   5(2642)

-ಡಿದಂತೆ ನಡೆಯುವಭ್ಯಾಸ ಮಾಡಿದೆ!
(ತಂ)ದೆ, ತಾಯಿ, ನೀನೆಂದು ನಾ ಸೇವೆ ಮಾಡಿದೆ!
ನಿತ್ಯ ಗುರುಮಂತ್ರ ಭಜನೆ ಮಾಡಿದೆ! (ಹೊ)
-ನ್ನಿನಾಸೆ ಬಿಟ್ಟು ಧರ್ಮ, ಕರ್ಮ, ಮಾಡಿದೆ! (ಇ)
-ಚ್ಛೆ ವಿಷಯ ಸುಖಕ್ಕಾಗ್ದಂತೆ ಮಾಡಿದೆ! (ಬಾ)
-ಯೆಂದು ನಿನ್ನ ಪ್ರಾರ್ಥಿಸಿ ಧ್ಯಾನ ಮಾಡಿದೆ! (ನಿಂ)
-ದೆಗಳಲಕ್ಷಿಸಿ ಸಾಧನೆ ಮಾಡಿದೆ! (ಎ)
-ಲ್ಲಾ ಮತ ಸಾರ ಒಂದೆಂದದ ಮಾಡಿದೆ!
ಮಾತಿನಿಂದಶಾಂತಿಯೆಂದ್ಮೌನ ಮಾಡಿದೆ! (ತಿಂ)
-ಡಿ, ತೀರ್ಥಗಳಾಸೆ ಕಡಿಮೆ ಮಾಡಿದೆ! (ತಂ)
-ದೆ, ನಿರಂಜನಾದಿತ್ಯನೆಂದು ಮಾಡಿದೆ!!!

ಮಾಡಿದ್ದುಣ್ಣೋ ಮಹಾರಾಯ! (ನೋ)   5(2730)

-ಡಿ ಮಣ್ಣ ಮಾಡೋ ಬೇಸಾಯ! (ಹ)
-ದ್ದು, ಕಾಗೆ ಬಂದ್ರೆಲ್ಲಾ ಮಾಯ! (ಹೆ)
-ಣ್ಣೋ, ಗಂಡೋ ಅಸ್ಥಿರ ಕಾಯ!
ನಶ್ಯುದ್ಧಿಯಾದ್ರಾದಾಯ!
ಹಾಲ್ಮೊಸ್ರಿಲ್ಲದಿದ್ರೆ ಸಾಯ! (ಶ್ರೀ)
-ರಾಮನಿಂದೆಲ್ಲಾ ಸಹಾಯ! (ಜೀ)
-ಯ ನಿರಂಜನಾದಿತ್ಯಾಯ!!!

ಮಾಡಿದ್ದುಣ್ಣೋ ಮಹಾರಾಯ! (ಹಿ)   2(828)

-ಡಿಯಬೇಕಾತ್ಮ ಸಹಾಯ! [ಕ]
-ದ್ದು, ಮುಚ್ಚಿದರಿಲ್ಲಾದಾಯ! (ಹೆ)
-ಣ್ಣೋ, ಗಂಡೋ, ನಾಶವೀಕಾಯ!
ಮಕಾರವೆಲ್ಲಾ ಮಾಯ!
ಹಾಡು ಹರಿನಾಮ ಜೀಯ! [ಆ]
-ರಾಮಕಾರೀ ವ್ಯವಸಾಯ! (ಆ)
-ಯ, ನಿರಂಜನಾದಿತ್ಯಾಯ!!!

ಮಾಡಿಸುವವ ನೀನಾಗಿರ್ಲೇನು ಭಯ? (ಬಿ)   4(2385)

-ಡಿಸು ನ್ನನ್ನಿಂದ ಹುಟ್ಟು ಸಾವಿನ ಭಯ! (ಮಿ)
-ಸುಕಾಡದಂತಿಟ್ಟು ಕೊಡು ನಿನ್ನಾಶ್ರಯ! (ಅ)
ರಿವರದೇಕೆನಗೆ ಪರಿಚಯ?
ರ ಗುರು ನಿನ್ನ ಸೇವೆಯತಿಶಯ!
ನೀರು ಪಾಲಾಗಲೆಲ್ಲಾ ನೀಚ ನಿಚಯ!
ನಾವೆ ನೀನಾಗಿ ಮಾಡುತ್ತಮರ್ಗಾದಾಯ! (ಯೋ)
-ಗಿರಾಜ ವಿಷ ಕುಡಿದಂತಿರ್ಲಿ ದಯ! (ತ)
-ರ್ಲೇ, ತಂಟೆ, ತಕ್ರಾರುಗಳಿಗಾಗ್ಲಿ ಕ್ಷಯ! (ತ)
-ನುಜರೆಲ್ಲಾ ನಿನ್ನಂತಾದರೆ ವಿಜಯ! (ಜಂ)
-ಭಗಾರರಿಗಾವುದುದಾಗಪಜಯ!
ಮ ಶ್ರೀ ನಿರಂಜನಾದಿತ್ಯ ತನಯ!!!

ಮಾಡು ವ್ಯಾಯಾಮ ಇಷ್ಟ ಮಂತ್ರ ಜಪಿಸುತ್ತ ನಿತ್ಯ! (ನೋ)   6(3913)

-ಡು ಅದರ ಪರಿಣಾವನ್ನೆನ್ನ ಪ್ರಿಯ ಭೃತ್ಯ!
ವ್ಯಾಧಿನಾಶಕ್ಕಿದನುಭವ ಸಿದ್ಧ ಸೂಕ್ತ ಕೃತ್ಯ!
ಯಾಕೆ ನಂಬಿಗೆಯಿಂದ ಮಾಡಬಾರದಿದ ಮರ್ತ?
ನಕ್ಕೀವುದು ಹರ್ಷ ದೇಹಕಾಂತಿಯಿತ್ತು ಸತ್ಯ!
ದು ನಿತ್ಯಾಭ್ಯಾಸವಾಗ್ಬೇಕೆಂಬುದ್ರಲಿಲ್ಲಸತ್ಯ! (ಕ)
-ಷ್ಟವಿಲ್ಲದ ಶ್ವಾಸೋಚ್ಛ್ವಾಸ ವ್ಯಾಯಾಮಗತ್ಯ!
ಮಂಜುನಾಥನ ಯೋಗ ಶರೀರ ಸೌಂದರ್ಯ ಸ್ತುತ್ಯ!
ತ್ರಯಮೂರ್ತಿ ಸ್ವರೂಪ ದತ್ತನದ್ದೇ ಪಾರುಪತ್ಯ!
ರಾ, ಜನ್ಮ, ವಿದೂರನಾದವದೇ ಕೃತಕೃತ್ಯ!
ಪಿಸುಣರಿಗೇನರಿವಾಗುವುದಿದರ ಸತ್ಯ?
ಸುದರ್ಶನಧಾರಿ ಮಲ್ಲನಿಗಿದಿರಾವ ದೈತ್ಯ! (ತ)
-ತ್ತ ಬಡಿಕರಿಗರಿವಾಗದಿವನ ಸಾಮರ್ಥ್ಯ!
ನಿತ್ಯ ಕರ್ಮಾನುಷ್ಠಾನ ಸಾರೂಪ್ಯಕ್ಕೆ ಅತ್ಯಗತ್ಯ!
ತ್ಯಜಿಸ ನಿತ್ಯ ನೇಮ, ಕರ್ಮ ನಿರಂಜನಾದಿತ್ಯ!!!

ಮಾಡುತಿರನುಷ್ಠಾನಾನಂದದಿಂದಾ! (ದು)   4(1471)

-ಡುಕಿ ಬಿಡಬಾರದಾತುರದಿಂದಾ! (ಸ್ಥಿ)
-ತಿ, ಗತಿಯ ನೋಡು ಸಹನೆಯಿಂದಾ! (ವ)
-ರ ಗುರುವಿನಲ್ಲಿ ನಂಬಿಗೆಯಿಂದಾ! (ಅ)
-ನುಪಮಮೃತಾತ್ಮ ಭಾವನೆಯಿಂದಾ! (ನಿ)
-ಷ್ಠಾವಂತ ಪರಿಶುದ್ಧ ಸೇವೆಯಿಂದಾ!
ನಾಸ್ತಿಕ ಸಂಗ ಪರಿತ್ಯಾಗಾದಿಂದಾ! (ಅ)
-ನಂಗನಂಗ ಸಂಗ ಮರವೆಯಿಂದಾ!
ತ್ತಾತ್ರೇಯನಾಜ್ಞಾ ಪಾಲನೆಯಿಂದಾ! (ಅಂ)
-ದಿಂದು, ಮುಂದೆಂಬ ನಿರ್ಯೋಚನೆಯಿಂದಾ! (ಸ)
-ದಾ ನಿರಂಜನಾದಿತ್ಯ ಧ್ಯಾನದಿಂದಾ!!!

ಮಾಡುವವರಾಡುವುದಿಲ್ಲಾ! (ಆ)   4(1694)

-ಡುವವರು ಮಾಡುವುದಿಲ್ಲಾ! (ಅ)
-ವರಿವರಂದು ಫಲವಿಲ್ಲಾ!
ರ ಗುರುಚಿತ್ತದಂತೆಲ್ಲಾ! (ಹಾ)
-ರಾಡುವರಿದರಿಯದೆಲ್ಲಾ! (ಗು)
-ಡುಗುವರು ಕ್ರೋಧದಿಂದೆಲ್ಲಾ (ನೋ)
-ವು ಹೋದೀತೇನಿದರಿಂದೆಲ್ಲಾ?
ದಿವ್ಯ ಜ್ಞಾನಿಗಳಾಗಿರೆಲ್ಲಾ! (ಬ)
-ಲ್ಲಾ ನಿರಂಜನಾದಿತ್ಯನೆಲ್ಲಾ!!!

ಮಾಡ್ಬಾರದದ್ಮಾಡಿದ್ರಾಗ್ಬಾರದದ್ದಾದೀತು! (ಬೇ)   5(2560)

-ಡ್ಬಾರದದ್ಬೇಡಿದ್ರೆ ಪಡ್ಬಾರದ್ಪಾಡಾದೀತು! (ವ)
-ರ ಗುರುವಿನ ಸೇವೆಯಿಂದ್ಸುಖವಾದೀತು!
ಮೆ, ಶಮೆಯಿಂದ ನೆಮ್ಮದಿಯುಂಟಾದೀತು! (ಪ)
-ದ್ಮಾನಂದಾದರ್ಶದಿಂದ ದರ್ಶನವಾದೀತು! (ಗಾ)
-ಡಿಯೆಚ್ಚರದಿಂದೋಡಿಸಿದ್ರೂರು ಸೇರಿತು! (ನಿ)
-ದ್ರಾಹಾರ್ಮೆ

ಥುನತಿಯಾದ್ರನಾರೋಗ್ಯಾದೀತು! (ಹೋ)
-ಗ್ಬಾರದಲ್ಲಿಗೆ ಹೋದ್ರಪಮಾನವಾದೀತು! (ನಿ)
-ರತಾತ್ಮಧ್ಯಾನದಿಂದಾರಾಮವುಂಟಾದೀತು! (ಮ)
-ದ, ಮತ್ಸರದಿಂದದ್ವೈತಾನಂದ ಕೆಟ್ಟೀತು! (ಗು)
-ದ್ದಾಟದಿಂದ್ಗುರಿ ತಪ್ಪಿ ಒದ್ದಾಟವಾದೀತು!
ದೀನನಾನ್ದಾನಿ ನೀನೆಂದರಾನಂದಾದೀತು! (ಇಂ)
-ತು ನಿರಂಜನಾದಿತ್ಯಾನಂದ ನಿತ್ಯಾದೀತು!!!

ಮಾಣಿಕ್ಯದ ಬೆಲೆ ಮಂಗನಿಗೇನ್ಗೊತ್ತು? (ಕಾ)   6(3758)

-ಣಿಕೆಯ ಮಹತ್ತು ಗಣಿಕೆಗೇನ್ಗೊತ್ತು? (ಶ)
-ಕ್ಯವಿಲ್ಲ ತಿಳಿಯಲ್ಬುದ್ಧಿಯ ಕಿಮ್ಮತ್ತು!
ಶೆಂದ್ರಿಯಗಳದ್ದೇ ಈಗ ಕಸ್ರತ್ತು!
ಬೆಕ್ಕೆಗೆಡೆಗೊಟ್ಟು ಕೊಯ್ಯುವರು ಕತ್ತು! (ಹಾ)
-ಲೆರೆದ ಕೈಗಿಕ್ಕುವರ್ವಿಷದ ತುತ್ತು!
ಮಂತ್ರ, ತಂತ್ರವೆಂದು ತಿನ್ನುವರು ಕಿತ್ತು!
ಗನ ಸದೃಶಾದರ್ಶ ಹೋಯ್ತು ಸತ್ತು!
ನಿಷ್ಠೆ, ನೇಮಾನುಷ್ಠಾನಕ್ಕೀಗ ವಿಪತ್ತು!
ಗೇಣಿದಾರನ ಪಾಲಿಗೇ ಭೂಮಿ ಬಿತ್ತು! (ಏ)
-ನ್ಗೊತ್ತು? ಮುಂದಕ್ಕೆ ಬರಲಿರುವಾಪತ್ತು? (ಎ)
-ತ್ತು, ಶ್ರೀ ನಿರಂಜನಾದಿತ್ಯನತ್ತ ಕತ್ತು!!!

ಮಾಣಿಕ್ಯದ ಬೆಲೆ ಮಂಗನಿಗೇನ್ಗೊತ್ತು? (ಫೇ)   5(2976)

-ಣಿ ಮಾಡುವ ಕಷ್ಟ ಮಾಣಿಗೇನು ಗೊತ್ತು? (ಐ)
-ಕ್ಯ ಸುಖ ಅನುಭವಿಗೆ ಮಾತ್ರ ಗೊತ್ತು!
ರಿದ್ರನ ಕಷ್ಟ ಧನಿಕನ್ಗೇನ್ಗೊತ್ತು?
ಬೆರೆತು ನೋಡಿದರಾಗ ಮಾತ್ರ ಗೊತ್ತು!
ಲೆಕ್ಕಿಸ್ಬಾರದು ಕಷ್ಟ, ನಷ್ಟವೆಂದ್ಗೊತ್ತು!
ಮಂಜು ಕವಿದ್ರೇನೂ ಕಾಣದೆಂದೂ ಗೊತ್ತು!
ತಿಗೆಟ್ಟಾಗ ಜೀವ ತಾನೊಬ್ಬ ತೊತ್ತು!
ನಿರ್ಮಲಾತ್ಮನಾದರದೊಂದೇ ಸಂಪತ್ತು!
ಗೇಣೀದಾರನಿಗೀ ತತ್ವವೇನು ಗೊತ್ತು? (ಏ)
-ನ್ಗೊತ್ತಿಲ್ಲಾದ್ರೂ, ಮಾಲಿಕ ತಾನಾದೆಂದ್ಗೊತ್ತು! (ಸೊ)
-ತ್ತು, ನಿರಂಜನಾತ್ಯಾನಂದ ಸಂಪತ್ತು!!!

ಮಾತಾ, ಪಿತರು ಪ್ರತ್ಯಕ್ಷ ದೇವರಪ್ಪಾ!   2(474)

ತಾವುಣದೇ ಮಕ್ಕಳಿಗಿಕ್ಕುವರಪ್ಪಾ! (ಪಾ)
-ಪಿಗಳಾದರೂ ಪ್ರೀತಿಸುತಿಹರಪ್ಪಾ!
ಪ್ಪಿ ನಡೆದರೂ ಕ್ಷಮಿಸುವರಪ್ಪಾ! (ಕ)
-ರುಣೆಯವರದಪಾರವಾದುದಪ್ಪಾ!
ಪ್ರತಿ ಮಾತವರಿಗಾಡ ಬಾರದಪ್ಪಾ! (ಅ)
-ತ್ಯಗತ್ಯ ಅವರ ಆಶೀರ್ವಾದವಪ್ಪಾ! (ಅ)
-ಕ್ಷರಶಾ ಪಾಲಿಸವರ ಮಾತನಪ್ಪಾ! (ಅ)
-ದೇ ಮಕ್ಕಳೇಳಿಗೆಗೆ ಆಧಾರವಪ್ಪಾ! (ಅ)
-ವರಿವರ ಮಾತಿನಂತಿರ ಬೇಡಪ್ಪಾ! (ಅ)
-ರಸನಾದರೂ ತಾಯಿಗೆ ಮಗನಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯ ಪುತ್ರರತ್ನಪ್ಪಾ!!!

ಮಾತಾಡದೇ ಇದ್ದರೆ ಬಹು ಕ್ಷೇಮ (ವಾ)    3(1128)

-ತಾವರಣ ನೋಡ್ಯಾಡಿದರೆ ಕ್ಷೇಮ! (ಒ)
-ಡನಾಡಿ ವಿರಕ್ತನಾದರೆ ಕ್ಷೇಮ!
ದೇವರ ವಿಚಾರವಿದ್ದರೆ ಕ್ಷೇಮ!
ತರ ಮಾತಿನಿಂದಾಗದು ಕ್ಷೇಮ! (ತ)
-ದ್ದರ್ಶನಕ್ಕೆ ಸಹಾಯಾದರೆ ಕ್ಷೇಮ! (ತೊ)
-ರೆದರೆಲ್ಲಾ ಸಂಪರ್ಕವನ್ನು ಕ್ಷೇಮ!
ಹಿರ್ಮುಖನಾಗದಿದ್ದರೆ ಕ್ಷೇಮ!
ಹುಸಿ ಮಾಯಾದೂರನಾದರೆ ಕ್ಷೇಮ!
ಕ್ಷೇತ್ರಜ್ಞ ತಾನಾಗಿದ್ದರೆಲ್ಲಾ ಕ್ಷೇಮ! (ಪ್ರೇ)
-ಮ ನಿರಂಜನಾದಿತ್ಯನದು ಕ್ಷೇಮ!!!

ಮಾತಿನ ಮಲ್ಲನಾಗಬೇಡಯ್ಯಾ! (ರೀ)   4(2084)

-ತಿ, ನೀತಿಯಿಂದ ಕಾರ್ಯ ಮಾಡಯ್ಯಾ! (ಧ)
-ನ, ಧಾನ್ಯ ಧರ್ಮದಿಂದಾರ್ಜಿಸಯ್ಯಾ!
ನಕಿದು ಶಾಂತಿಪ್ರದವಯ್ಯಾ! (ಅ)
-ಲ್ಲಸಲ್ಲದಾಲಾಪ ವ್ಯರ್ಥವಯ್ಯಾ!
ನಾಚಿಕೆ ಬಿಟ್ಟು ದಾಸನಾಗಯ್ಯಾ! (ರಾ)
-ಗ, ದ್ವೇಷಕ್ಕೆಡೆಗೊಡಬೇಡಯ್ಯಾ!
ಬೇಟೆ ದುಷ್ಟ ಮೃಗದ್ದಾಗಲಯ್ಯಾ! (ಮೃ)
-ಡನ ಕೃಪೆಯಿದಕೆ ಬೇಕಯ್ಯಾ! (ಅ)
-ಯ್ಯಾ ನಿರಂಜನಾದಿತ್ಯವನಯ್ಯಾ!!!

ಮಾತಿಲ್ಲ, ಕಥೆಯಿಲ್ಲ, ಏಕಪ್ಪಾ? (ಅ)   1(428)

-ತಿಶಯವಾದ ಸ್ಥಿತಿ ಇದಪ್ಪಾ! (ಅ)
-ಲ್ಲ ಸಲ್ಲದ ಮಾತನರ್ಥವಪ್ಪಾ!
ಥೆ, ವ್ಯಥೆಗೆ ಕಾರಣವಪ್ಪಾ! (ವ್ಯ)
-ಥೆ, ಗುರಿಗೆ ವಿಘ್ನಕಾರಿಯಪ್ಪಾ! (ಆ)
-ಯಿತನುಭವ ನನಗೀಗಪ್ಪಾ! (ಅ)
-ಲ್ಲಲ್ಲಲೆದೇನೂ ಫಲವಿಲ್ಲಪ್ಪಾ!
ನಿದ್ದರೂ ಎಲ್ಲಾ ನಿನ್ನಲ್ಲಪ್ಪಾ!
ಲೆತಿರಬೇಕಾತ್ಮನಲ್ಲಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯನಿಂತಿಪ್ಪಾ!!!

ಮಾತು ಉಳಿಸಬೇಕಪ್ಪಾ! (ಓ)   4(1823)

-ತು ಬದುಕಿರಬೇಕಪ್ಪಾ!
ದ್ಯೋಗ ಮಾಡಬೇಕಪ್ಪಾ! (ಬಾ)
-ಳಿಗಿದು ಬೇಕೇ ಬೇಕಪ್ಪಾ!
ತ್ಯಾತ್ಮನಾಗಬೇಕಪ್ಪಾ!
ಬೇಸರ ಬಿಡಬೇಕಪ್ಪಾ!
ಷ್ಟ ಸಹಿಸಬೇಕಪ್ಪಾ! (ಅ)
-ಪ್ಪಾ ನಿರಂಜನಾದಿತ್ಯಪ್ಪಾ!!!

ಮಾತು ಕೊಟ್ಟಂತಿದ್ದು ಬಿಡಯ್ಯಾ!   6(3990)

ತುರೀಯಾತೀತ ನೀನಾಗಯ್ಯಾ!
ಕೊಳಕು ಥಳಕು ಸಾಕಯ್ಯಾ! (ಉ)
-ಟ್ಟಂಬರ ಹರಿದು ಹಾಕಯ್ಯಾ!
ತಿತಿಕ್ಷೆ, ವೈರಾಗ್ಯವಿರ್ಲಯ್ಯಾ! (ಮು)
-ದ್ದು ಮಗು ಅಪ್ಪನಿಗಾಗಯ್ಯಾ!
ಬಿಸಿ, ಹಸಿ, ಎಲ್ಲಾ ತಿನ್ನಯ್ಯಾ!
ಮರುಧರ ನೀನಾಗಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾತಯ್ಯಾ!!!

ಮಾತು ಕೊಟ್ಟು ಕೈ ಕೊಟ್ಟವರೇ ಹೆಚ್ಚು!   5(3257)

ತುತ್ತು ಹಾಕದೇ ಸತ್ತವರೇ ಹೆಚ್ಚು!
ಕೊಟ್ಟ ಸಾಲ ತೀರಿಸದವ್ರೇ ಹೆಚ್ಚು! (ಹೊ)
-ಟ್ಟು ಬೆರೆಸಿ ದಿನ್ಸಿ ಕೊಟ್ಟವ್ರೇ ಹೆಚ್ಚು!
ಕೈಲೊಂದು ಬಾಯ್ಲೊಂದೆಂಬುವರೇ ಹೆಚ್ಚು!
ಕೊನೆಗೂ “ಶಿವಾ” ಅನ್ನದವ್ರೇ ಹೆಚ್ಚು! (ಸು)
-ಟ್ಟ ಮೇಲೆ ಯಾರಿಗೆ ಯಾರಪ್ಪಾ ಹೆಚ್ಚು?
ರ ಗುರು ಭಕ್ತರಾಗ್ಬಿಡ್ರೀ ಹುಚ್ಚು!
ರೇಗಿ ಯಂತ್ರ ನಡೆಸಿದ್ರಕ್ಕಿ ನುಚ್ಚು!
ಹೆರವರು ತನ್ನವ್ರೆಂಬುದೂ ಹುಚ್ಚು! (ಮೆ)
-ಚ್ಚು ನಿರಂಜನಾದಿತ್ಯನನ್ನು ಹೆಚ್ಚು!!!

ಮಾತು ಕೊಟ್ಟು ಮೋಸ ಮಾಡಬೇಡ (ಹೇ)   4(1779)

-ತು ಅಶಾಂತಿಗೆ ನೀನಾಗಬೇಡ!
ಕೊಡುಗೈಗೆ ತಡೆ ಮಾಡಬೇಡ! (ಮು)
-ಟ್ಟು, ಮಡಿಗೆ ಲಕ್ಷ್ಯ ಕೊಡಬೇಡ
ಮೋಕ್ಷ ಸಾಧನೆಯ ಬಿಡಬೇಡ!
ದ್ಗುರು ಧ್ಯಾನಕ್ಕಸಡ್ಡೆ ಬೇಡ!
ಮಾಯಾಜಾಲದಲೊದ್ದಾಡಬೇಡ!(ಬ)
-ಡತನಕ್ಕೆ ಭಯಪಡಬೇಡ!
ಬೇರೆಯವರಂಗಿ ತೊಡಬೇಡ! (ತೊ)
-ಡ ನಿರಂಜನಾದಿತ್ಯಾತ್ಮ ಬೇಡ!!!

ಮಾತು ಬೆಲ್ಲ, ಪ್ರೀತಿ ತನ್ನಲ್ಲೇನೂ ಇಲ್ಲ!   5(2867)

ತುರುಕರು ಸಂಗವೆಲ್ಲಾ ರಂಗಾಗಿಲ್ಲ!
ಬೆರಕೆ ಹಾಲೆಲ್ಲಾ ಮಾರಿ ಫಲವಿಲ್ಲ! (ನೆ)
-ಲ್ಲ ಬೆಳೆದು, ಹುಲ್ಲಾಕಳಿಗೇನೂ ಇಲ್ಲ!
ಪ್ರೀತಿ ಹಣ ಕಾಸಿಗಾಗಿ ಹೋಯಿತಲ್ಲ!
ತಿನ್ನುವನ್ನಕ್ಕೇ ಗತಿಯಿಲ್ಲದಾಯ್ತಲ್ಲ!
ರತರದಾಸೆ ಪ್ರಬಲವಾಯ್ತಲ್ಲ! (ಉ)
-ನ್ನತಿಯ ದಾರಿ ಮಣ್ಣುಮುಚ್ಚಿ ಹೋಯ್ತಲ್ಲ! (ಕ)
-ಲ್ಲೇ ಅದಾಗೀಗ ಕಾಣ್ಣಿಕ್ಕಿಲ್ಲದಾಯ್ತಲ್ಲ!
ನೂರ್ದಾರಿ ಹಿಡಿದೂರ್ದಾರಿ ಕಾಣದಲ್ಲ!
ನ್ನಾದ್ರೂ ಹಾಡಿ ಹರಿನಾಮವನ್ನೆಲ್ಲ! (ಪು)
-ಲ್ಲ ನಿರಂಜನಾದಿತ್ಯಗೆರಗಿರೆಲ್ಲ!!!

ಮಾತು, ಕತೆ ಸಾಕು ಮಾಡಪ್ಪಾ! (ಸೋ)   4(2231)

-ತುಹೋಗಿರ್ಪೆ ಅದರಿಂದಪ್ಪಾ! (ಸ್ವ)
-ಕರ್ಮದಲ್ಲಿ ತಲ್ಲೀನಾಗಪ್ಪಾ! (ಜೊ)
-ತೆಗಾರಾತ್ಮನೊಬ್ಬ ಕಾಣಪ್ಪಾ!
ಸಾವು, ನೋವವನಿಗಿಲ್ಲಪ್ಪಾ!
ಕುಚೋದ್ಯಗಾರವನಲ್ಲಪ್ಪಾ!
ಮಾತಾ, ಪಿತವನೇ ನೋಡಪ್ಪಾ!
ಮರುಧರನವನಪ್ಪಾ (ಅ)
-ಪ್ಪಾ ಶ್ರೀ ನಿರಂಜನಾದಿತ್ಯಪ್ಪಾ!!!

ಮಾತುಳಿಸದ ನಾಲಿಗೆ ಏಕೆ?   5(3255)

ತುಪ್ಪಾನ್ನ ಚಪ್ಪರಿಸಿದ್ರೆ ಸಾಕೇ? (ಬಾ)
-ಳಿರ್ಬಾರದನೃತವಾಡ್ವುದಕೆ?
ತ್ಯದನುಭವವಾಗ್ಲದಕೆ! (ಅ)
-ದನ್ನಾಗ ಹೇಳಲೆಲ್ಲಾ ಜನಕೆ!
ನಾಮಸಂಕೀರ್ತನೆ ಬೇಕದಕೆ! (ನಾ)
-ಲಿಗೆಗಿದು ದಾರಿ ಪಾವನಕೆ! (ಆ)
-ಗೆ ನಾರದ ಗುರು ತಾನದಕೆ!
ಳಿಗೆಯಿದರಿಂದ ಜೀವಕ್ಕೆ! (ಏ)
-ಕೆನ್ನು, ನಿರಂಜನಾದಿತ್ಯ ಠೀಕೆ!!!

ಮಾತುಳಿಸಿಕೊಳ್ಳೋ ಮಹಾದೇವಾ!   4(2415)

ತುಳಸೀಮಾಲಾಧರಾ ಮಾಧವಾ! (ಬಾ)
-ಳಿನ ಸರ್ವಸ್ವ ನೀನೇ ಭೂಧವಾ! (ದಾ)
-ಸಿ ಮೀರೋದ್ಧಾರ ನೀ ರಾಧಾಧವಾ!
ಕೊಡೆನಗೆ ಸದ್ಬುದ್ಧಿ ಯಾದವಾ! (ಕೊ)
-ಳ್ಳೋ ನೀನೆನ್ನ ಸೇವೆ ವಾಸುದೇವಾ!
ರೆಸೀಗ ನೀನೆನ್ನಾಯಾಸವಾ!
ಹಾಲ್ಮೊಸರ್ನೀಡೆನಗೂ ಕೇಶವಾ! (ಪ)
-ದೇಪದೇನ ಹೇಳ್ಲೆನ್ನ ಕಷ್ಟವಾ? (ಈ)
-ವಾ ನಿರಂಜನಾದಿತ್ಯಾಭೀಷ್ಟವಾ!!!

ಮಾತೆಯ ಸಂದೇಶಾನುಭವಾತ್ಮಾನಂದ!   4(1552)

ತೆರೆ ಹರಿದಪ್ಪ ದರ್ಶನಾತ್ಮಾನಂದ!
ಮ, ನಿಯಮಭ್ಯಾಸದಿಂದಾತ್ಮಾನಂದ!
ಸಂಧ್ಯಾವಂದನೆಯ ಗುರಿ ಆತ್ಮಾನಂದ!
ದೇವ, ದೇವಿಯರೊಂದಾದರಾತ್ಮಾನಂದ!
ಶಾಸ್ತ್ರದ ತತ್ವಾರ್ಥರಿತರಾತ್ಮಾನಂದ!
ನುಡಿ, ನಡೆಗಳೊಂದಾದರಾತ್ಮಾನಂದ!
ಕ್ತಿ, ಶ್ರದ್ಧಾ ಸಾಧನೆಯಿಂದಾತ್ಮಾನಂದ!
ವಾದ, ಭೇಧಗಳಳಿದಾಗಾತ್ಮಾನಂದ! (ಆ)
-ತ್ಮಾನಾತ್ಮ ಸದ್ವಿಚಾರದಿಂದಾತ್ಮಾನಂದ!
ನಂದ ಕಂದನ ಗೀತಾಮೃತಾತ್ಮಾನಂದ!
ತ್ತ ನಿರಂಜನಾದಿತ್ಯ ನಿತ್ಯಾನಂದ!!!

ಮಾತೆಯಾ ಬೆಂಗಾವಲು ಬಾಲಕನಿಗೆ!   1(219)

ತೆರದಿಹಳು ಕದವನವನಿಗೆ! (ಭ)
-ಯಾಪಡದಿರೆಂದಳವನಿಗೆ!
ಬೆಂಕಿ ಬಳಿ ಹೋಗ್ಬೇಡೆಂದಳವನಿಗೆ!
ಗಾಳಿಯಲಾಡದಿರೆಂದಳವನಿಗೆ
ನಧಿಗಿಳಿಯ್ಬೇಡೆಂದಳವನಿಗೆ! (ಬ)
-ಲು ಹೊಲಸು ಮಣ್ಣಾಟೆಂದಳವನಿಗೆ!
ಬಾನನೇ ನೋಡುತಿರೆಂದಳವನಿಗೆ!
ಕ್ಷ್ಯಮ್ಮನದಿರಲೆಂದಳವನಿಗೆ!
ಠಿಣವಾಯ್ತೀ ತಾಯಾಜ್ಞೆ ಅವನಿಗೆ!
ನಿರುಪಾಯನಾಗಿರ್ಪಂತಾಯ್ತವನಿಗೆ! (ಧ)
-ಗೆ! ನಿರಂಜನಾದಿತ್ಯ ಕೃಪೆಯವಗೆ!!!

ಮಾದರಿಯ ಮಾನವ ಸಮಾಜವಿಂತಿರಲಿ!   5(3209)

ಯಾಬುದ್ಧಿಯೆಲ್ಲರನ್ಯೋನ್ಯವಾಗಿರಲಿ!
ರಿಪುಗಳಾರ ಜೈಸಲು ಹೋರಾಟ ಸಾಗಲಿ!
ಮ, ನಿಯಮಾಭ್ಯಾಸ ನಿರಂತರವಿರಲಿ!
ಮಾತಿನಂತೆ ನಡೆಯುವ ಪ್ರತಿಜ್ಞೆಯಾಗಲಿ!
ಲ್ಲ, ನಲ್ಲೆಯರಲ್ಲೊಮ್ಮತವಿರುತ್ತಿರಲಿ!
ರ ಗುರು ಸೇವೆ ಈರ್ವರೂ ಮಾಡುತ್ತಿರಲಿ!
ತ್ಸಂಗಕ್ಕನಾದರವಿಲ್ಲದಿರುತ್ತಿರಲಿ!
ಮಾರ, ಚೋರರ ಪ್ರೇರಣೆಗಲಕ್ಷ್ಯವಿರಲಿ!
ಪಯಜ್ಞ ಪ್ರತಿಮನೆಯಲ್ಲೂ ನಿತ್ಯಾಗಲಿ!
ವಿಂಧ್ಯಾದ್ರಿಯಂತೆ ಚಿತ್ತಸ್ಥೈರ್ಯವಿರುತ್ತಿರಲಿ!
ತಿಳಿದಿದೆಲ್ಲರ ಅನುಷ್ಠಾನಕ್ಕೆ ಬರಲಿ!
ಣರಂಗಗಳೆಲ್ಲೆಲ್ಲೂ ಇಲ್ಲದಂತಾಗಲಿ! (ಒ)
-ಲಿದು ನಿರಂಜನಾದಿತ್ಯ ನಮ್ಮನ್ನೆಲ್ಲಾಳಲಿ!!!

ಮಾಧವಾನಂದಾತ್ಮ ಭಾವ!   2(586)

ರ್ಮ ಕರ್ಮಕಿದೇ ಭಾವ! (ಭ)
-ವಾರಿಷ್ಟ ವಿನಾಶಾ ಭಾವ!
ನಂದಕಂದಾನಂದಾ ಭಾವ!
ದಾಸ ಹನುಮನಾ ಭಾವ! (ಆ)
-ತ್ಮರಾಮಾನಂದದಾ ಭಾವ!
ಭಾಗ್ಯವಿದೆಲ್ಲಾತ್ಮ ಭಾವ! (ಭಾ)
-ವ ನಿರಂಜನಾತ್ಮ ಭಾವ!!!

ಮಾಧುರೀ ಮಾದರೀ ವಿಶ್ವ ಸಹೋದರೀ! (ಮ)   1(215)

-ಧುಮನ ಮಂದರೀ ಸುಂದರೀ ಅಂಬರಿ! (ಆ)
-ರೀ ಕೃಪಾಕರೀ ಸುಖಂಕರೀ ಶಂಕರಿ?
ಮಾನಾಧಾರೀ, ಪ್ರಾಣಾಧಾರೀ ವಸುಂಧರಿ! (ಆ)
-ದರೀಶ್ವರನರ್ಧನಾರೀ ಮನೋಹರಿ! (ಅ)
-ರೀ ನೀಲಾಂಬರೀ ಉದಾರೀ ಬಿಂಬಾದರಿ!
ವಿಷಹಾರೀ, ರಸವಾರೀ, ಮಹಿಷಾರಿ! (ಅ)
-ಶ್ವಸವಾರೀ, ಶಾಖಂಬರೀರ್ಷಾಂತಕಾರಿ!
ದಾಚಾರೀ, ದುರಿತಾರೀ, ವೀರನಾ

ರಿ! (ಸ)
-ಹೋದರೀ, ಪರಮೇಶ್ವರೇಚ್ಛಾನುಸಾರಿ! (ಮ)
-ದನಾರೀಶ್ವರ ಶರೀರಿಗಾಧಾರಿ! (ಅ)
-ರೀ! ನಿರಂಜನಾದಿತ್ಯ ಶಕ್ತಿ “ಹ್ರೀಂ”ಕಾರಿ!!!

ಮಾನ ಸಂರಕ್ಷಣಾ ಶ್ರೀ ಕೃಷ್ಣ!   5(2833)

ರಗೆ ಸಾರಥೀ ಶ್ರೀ ಕೃಷ್ಣ!
ಸಂಗ ಸಜ್ಜನರಿಗೀ ಕೃಷ್ಣ! (ಕ್ರೂ)
-ರ ಕಂಸನ ಕೊಂದವಾ ಕೃಷ್ಣ! (ಅ)
-ಕ್ಷಯ ಸೀರೆಯಿತ್ತವಾ ಕೃಷ್ಣ!
ಕಾಳಿಂಗ ಮರ್ದನನಾ ಕೃಷ್ಣ!
ಶ್ರೀಪತಿ ಭೂಪತೀ ಶ್ರೀ ಕೃಷ್ಣ!
ಕೃತಿಯಂತಾಡುವವಾ ಕೃಷ್ಣ! (ಪೂ)
-ಷ್ಣ ನಿರಂಜನಾದಿತ್ಯಾ ಕೃಷ್ಣ!!!

ಮಾನ, ಮರ್ಯಾದೆ, ತ್ರಿಲಿಂಗಕ್ಕೂ ಸಮಾನ!   6(3583)

ರರಿದರಿಯದಿದ್ದರಪಮಾನ!
ಹಿಳೆಯರಿಗೂ ಆಗ್ಬೇಕು ಸನ್ಮಾನ! (ವೀ)
-ರ್ಯಾಭಿವೃದ್ಧಿಯಿಂದ ಆರೋಗ್ಯ ಜೀವನ! (ತಂ)
-ದೆ ದೇವರಂತಾದರೆ ಜನ್ಮ ಪಾವನ! (ಅ)
-ತ್ರಿ ಪುತ್ರನಾದರ್ಶದಂತಿರ್ಬೇಕ್ಸಜ್ಜನ!
ಲಿಂಗ, ರಂಗರೊಂದೆಂಬುದೇ ನಿಜ ಜ್ಞಾನ!
ಣಪತಿಯ ಬಾಳಿನದ್ದೀ ವಿಧಾನ! (ಒ)
-ಕ್ಕೂಟದಭ್ಯಾಸವಿಲ್ಲದಿದ್ದರಧ್ವಾನ!
ಜ್ಜನರಿಗೆ ಸತ್ಸಂಗವೇ ಪ್ರಧಾನ!
ಮಾಡಬೇಕಿದ್ದಾಗ ದೀನರಿಗೆ ದಾನ! (ದಾ)
-ನ ನಿರಂಜನಾದಿತ್ಯನಿಂದನುದಿನ!!!

ಮಾನವನ ಮಾತಿಗೇನು ಬೆಲೆ?   5(2791)

ರಹರಿ ಕೃಪೆಗತೀ ಬೆಲೆ!
ಸ್ತ್ರ, ಭೂಷಣಕ್ಕೇನಲ್ಲಾ ಬೆಲೆ!
ಡೆ, ನುಡಿಯೊಂದಾದರಾ ಬೆಲೆ!
ಮಾನಾಪಮಾನ ಸಮಕ್ಕಾ ಬೆಲೆ!
ತಿತಿಕ್ಷಾಭ್ಯಾಸಕ್ಕಮಿತ ಬೆಲೆ!
ಗೇಯದವಗೊದಗದಾ ಬೆಲೆ!
ನುರಿತ ಪಾಂಡಿತ್ಯಕ್ಕಿಲ್ಲಾ ಬೆಲೆ!
ಬೆಕ್ಕೆ ಸೊಕ್ಕಡಗಲತಿ ಬೆಲೆ! (ಬೆ)
-ಲೆ ನಿರಂಜನಾದಿತ್ಯಾತ್ಮ ಲೆನೆ!!!

ಮಾನವನ ಸನ್ನಾಹದಿಂದವಮಾನ! (ದಿ)   6(4028)

-ನಕರನ ಧ್ಯಾನದಿಂದ ಆತ್ಮಜ್ಞಾನ!
ರ ಗುರುವೆಂದು ನಂಬಬೇಕವನ!
ಶ್ವರವೆಂದರಿಯಬೇಕ್ಮಾನವನ!
ತ್ಯವರಿಯದೇ ನರಳುವವನ! (ತ)
-ನ್ನಾತ್ಮವನ್ನು ತಾನೇ ವಂಚಿಸುವವನ!
ನ್ದಿ, ನರಿ ನಾಯಿಯಂತಿರುವವನ! (ಅಂ)
-ದಿಂದು, ಮುಂದೆಂದಾಡುವ ಅವಿವೇಕನ!
ಡ ಸೇರುವಾಸೆಯಿಲ್ಲದಾಧಮನ!
ರ ಗುರುವಿನಾಜ್ಞೆ ಮೀರುವವನ!
ಮಾಡೀಗಲಾದರೂ ಸಾರ್ಥಕ ಜೀವನ!
ಮೋ ಶ್ರೀ ನಿರಂಜನಾದಿತ್ಯ ಪಾವನ!!!

ಮಾನವನ ಸನ್ಮಾನದಿಂದಾಗದು ಜನ್ಮ ಸಾರ್ಥಕ!   6(4136)

ಯನಾದಿಂದ್ರಿಯ ತೃಪ್ತಿಯ ಸನ್ಮಾನ ನಿರರ್ಥಕ!
ಡವೆ ವಸ್ತುಗಳ್ಗಪೇಕ್ಷೆ ಪಡ್ಬಾರದು ಸಾಧಕ!
ಶ್ವರಕ್ಕಾಶಿಸದವ ಮಾನವ ಕುಲ ತಿಲಕ!
ತತ ಅವನು ಸದ್ಗುರುವಿನ ಆಜ್ಞಾಧಾರಕ! (ಚಿ)
-ನ್ಮಾತ್ರ ಕೇವಲನಾದವನ ಶ್ರೀಪಾದದಾರಾಧಕ!
ತದೃಷ್ಟ ಮಾನವರಿಗವನೇ ನಿಜ ಬೋಧಕ! (ಎಂ)
-ದಿಂಥಾ ಪ್ರಜೆಗಳಿಂದ ಶೋಭಿಸುವುದೀ ಮರ್ತಲೋಕ?
ದಾರಿ ತಪ್ಪಿ ನಡೆಯುತ್ತಲಿರುವನೀಗ ಯಾತ್ರಿಕ!
ತಿಗೆಟ್ಟು ಮತಿಗೆಟ್ಟು ಹೋಗಿಹನೀಗಾ ತಿರುಕ!
ದುರ್ದಶೆಯಿಂದ ನಿವಾರಿಸಬೇಕೀಗ ಗೋಪಾಲಕ!
ರಾಜನ್ಮ ಪೀಡಿತರಿಂದ ಕೆಟ್ಟಿಹುದೇಗ ಲೋಕ! (ಮ)
-ನ್ಮಥ ವಿಜಯದಿಂದಾಗಬೇಕೀಗ ಭೊಲೋಕ ನಾಕ!
ಸಾಮರ್ಥಾನುಗ್ರಹ ಮಾಡಬೇಕಿದಕ್ಕೆ ವಿನಾಯಕ! (ವ್ಯ)
-ರ್ಥವಾಗಬಾರದವನ ಪೂಜಾದಿ ಸೇವಾ ಕಾಯಕ!
ರ್ಮ ನಿಷ್ಠ ನಿರಂಜನಾದಿತ್ಯ ಸದಾ ನಿಷ್ಕಳಂಕ!!!

ಮಾನವನಾಸೆ ಅಪರಿಮಿತ!   4(1599)

ಡೆ, ನುಡಿಯೆಲ್ಲಾ ಕಲುಷಿತ!
ಸ್ತ್ರ ಭೂಷಣದಿಂದಲಂಕೃತ!
ನಾಸ್ತಿಕ ಭಾವದಿಂದ ಶೋಭಿತ! (ಹೊ)
-ಸೆದುಂಬುವಭ್ಯಾಸನವರತ!
ತ್ಯಾಚಾರನಾಚಾರ ನಿರತ! (ಉ)
-ಪನ್ಯಾಸಪಪ್ರಚಾರ ಭರಿತ! (ಮು)
-ರಿ, ಹರಿಯೆಂಬ ಗುಣ ಸಂಭೂತ!
ಮಿಥ್ಯಾಸುಖಕ್ಕಾಸಕ್ತಿ ಸತತ! (ಪಿ)
-ತ, ನಿರಂಜನಾದಿತ್ಯವಧೂತ!!!

ಮಾನವನೇನೇನೋ ಯೋಚಿಸುವ! (ದಾ)   4(2122)

-ನಗಳನೇನೇನೂ ಯಾಚಿಸುವ! (ಅ)
-ವರಿವರ ಕೈ, ಕಾಲ್ಕಟ್ಟಿಸುವ! (ಅ)
-ನೇಕ ಜನರೊಟ್ಟು ಸೇರಿಸುವ!
ನೇತೃ ನಾನಾದೆಂದು ಘೋಷಿಸುವ! (ಮ)
-ನೋಜಯವಿಲ್ಲದೆಲ್ಲಾಶಿಸುವ!
ಯೋಚಿಸಿದ್ದಾಗದೆ ದುಃಖಿಸುವ! (ವಂ)
-ಚಿತನಾದೆನೆಂದು ಚಿಂತಿಸುವ!
ಸುತ್ತಿ, ಗುರುಪಾದ ಸೇವಿಸುವ! (ಜೀ)
-ವ, ನಿರಂಜನಾದಿತ್ಯೆನಿಸುವ!!!

ಮಾನವಾ ನೀನಾಗ್ಬೇಡ ದಾನವ!   6(3687)

ತದೃಷ್ಟರಿಗೆ ಮಾಡ್ದಾನವ!
ವಾಮಾಂಗಿಗೆಂದಿಡ್ಬೇಡ ಧನವ!
ನೀನ್ಮಾಡೀಗ ನಿನ್ನ ಕರ್ತವ್ಯವ!
ನಾಳೆಯೂಟಕ್ಕಿರ್ಪ ಗುರುದೇವ! (ಆ)
-ಗ್ಬೇಡೀಗ ಪಾಪಿ, ಮಾಡಿ ಲೋಭವ!
ಮರುಧರ ಶಿವ ನಿನ್ನವ!
ದಾಕ್ಷಾಯಿಣಿಯಂತೆ ಮಾಡ್ತ್ಯಾಗವ! (ಮ)
-ನನ ಮಾಡ್ಪಾರ್ವತೀ ವಿವಾಹವ! (ಶಿ)
-ವ ನಿರಂಜನಾದಿತ್ಯನೆಂಬವ!!!

ಮಾನವಾ! ಆಗ್ಬೇಡವೋ ದಾನವಾ!   5(3221)

ರಹರಿಯೋರ್ವನೇ ನಿನ್ನವಾ!
ವಾರಿಜಾಂಬಕಿಗಚ್ಚುಮೆಚ್ಚುವಾ!
ಗವನಿಗೆ ದಾಸ ಪುಂಗವಾ! (ತೂ)
ಗ್ಬೇಡವನ ಹಾಡ್ಯನ್ಯ ನಾಮವಾ! (ಜ)
-ಡದೇಹ ತಾನಲ್ಲವೆಂದನವಾ! (ಭಾ)
-ವೋದಯದ ಸ್ವಾಮಿ ಛಾಯಾದವಾ!
ದಾರಿ ಮಾಡ್ಯಾಕಾಶದಲ್ಲೋಡುವಾ!
ಮಸ್ಕರಿಸಿಲ್ಲಿಂದ್ಲೇ ಹೇಳೆಲ್ಲವಾ! (ಈ)
-ವಾ ನಿರಂಜನಾದಿತ್ಯಾದ್ವೈತವಾ!!!

ಮಾನವಾ! ಬಯಲು ಮಾಡು ಮನವಾ! (ಅ)   4(2289)

-ನವರತ ಮಾಡಭ್ಯಾಸ ಮಾನವಾ!
ವಾಗಾಡಂಬರ ಸಾಕಿನ್ನು ಮಾನವಾ!
ಹು ಕಷ್ಟವದರಿಂದ ಮಾನವಾ!
ಮ, ನಿಯಮದಿಂದಿರು ಮಾನವಾ! (ಮೇ)
-ಲು ನಿನಗದರಿಂದಕ್ಕು ಮಾನವಾ!
ಮಾನಾಪಮಾನ ಸಹಿಸು ಮಾನವಾ! (ಕಾ)
-ಡು, ಮೇಡಿಗೋಡಬೇಕಿಲ್ಲ ಮಾನವಾ!
ನೆಯಲ್ಲಾಗದ್ದಿನ್ನೆಲ್ಲಿ? ಮಾನವಾ!
ರನೇ ನಾರಾಯಣಪ್ಪ ಮಾನವಾ! (ದೇ)
-ವಾ ನಿರಂಜನಾದಿತ್ಯಾತ್ಮ ಮಾನವಾ!!!

ಮಾನಾಪಮಾನ ಬುದ್ಧಿಗಾಗದಾತ್ಮಸಿದ್ಧಿ!   5(2922)

ನಾನೇ ನೀನಾದವನಿಗೇಕೆ ರಿದ್ಧಿ, ಸಿದ್ಧಿ?
ವಮಾನಸುತನಿಗಾತ್ಮಾರಾಮ ಸಿದ್ಧಿ!
ಮಾಯಾಮೋಹಕ್ಕೊಳಗಾಗುವುದಿಲ್ಲಾ ಬುದ್ಧಿ!
ರ ನಾರಾಯಣನಪ್ಪುದೇ ಮಹಾ ಸಿದ್ಧಿ!
ಬುದ್ಧಿ ಪರಿಶುದ್ಧವಾದರಾಗ್ವುದಾ ಸಿದ್ಧಿ! (ವೃ)
ದ್ಧಿ, ಕ್ಷಯಗಳಿಲ್ಲದಿರುವುದು ಆ ಸಿದ್ಧಿ!
ಗಾರುಡಿಗಾರ ಶ್ರೀ ಕೃಷ್ಣನಿಗದೇ ಸಿದ್ಧಿ!
ರ್ವವೆಳ್ಳಷ್ಟೂ ಇಲ್ಲದಾ ಉತ್ಕೃಷ್ಟ ಸಿದ್ಧಿ!
ದಾಸರದಾಸನಾದವನಿಗೆಲ್ಲಾ ಸಿದ್ಧಿ! (ಆ)
-ತ್ಮವೊಂದೇ ಶಾಶ್ವತವೆಂದರಿಯಬೇಕ್ಬುದ್ಧಿ!
ಸಿಹಿ, ಕಹಿ ಬೇವ್ಬೆಲ್ಲಕ್ಕಲಕ್ಷ್ಯಾ ಸದ್ಬುದ್ಧಿ! (ಸಿ)
-ದ್ಧಿ ನಿರಂಜನಾದಿತ್ಯಾತ್ಮಾನಂದಾಭಿವೃದ್ಧಿ!!!

ಮಾನಾಭಿಮಾನ ಮಾಧವನದಮ್ಮಯ್ಯಾ!   1(191)

ನಾವೇಕದಕೆ ಚಿಂತಿಸಬೇಕಮ್ಮಯ್ಯಾ!
ಭಿಕ್ಷುಕನಿಗಕ್ಷಯನ ಚಿಂತಮ್ಮಯ್ಯಾ!
ಮಾಡಿಸಿದ ಮಾಡಿ ಮುಗಿಸ್ಬೇಕಮ್ಮಯ್ಯಾ!
ಯ, ವಿನಯವೊಂದೇ ನಮ್ಮದಮ್ಮಯ್ಯಾ!
ಮಾಯೆಯಾಟ ಕಳದಿರಬೇಕಮ್ಮಯ್ಯಾ!
ನವಂತರ ಮಾಯೆ ಮುಚ್ಚಿನಮ್ಮಯ್ಯಾ! (ಅ)
-ವರವರ ಕರ್ಮವರವರ್ಗಮ್ಮಯ್ಯಾ!
ಗುವಳು ಪೆಡತಲೆ ಮೃತ್ಯಮ್ಮಯ್ಯಾ!
ತ್ತನಿಗಿದೆಲ್ಲಲಕ್ಷ್ಯ ಕಾಣಮ್ಮಯ್ಯಾ! (ಅ)
-ಮ್ಮಗಲ್ಲದಿನ್ಯಾರಿಗೊರೆಯಲಮ್ಮಯ್ಯಾ? (ಅ)
-ಯ್ಯಾ! ನಿರಂಜನಾದಿತ್ಯನೇ ನಮ್ಮಮ್ಮಯ್ಯ!!!

ಮಾನಾಭಿಮಾನಾತೀತ ದಾನ!   6(4144)

‘ನಾನು’ ‘ನೀನು’ ದುರಭಿಮಾನ!
ಭಿನ್ನವಿಲ್ಲದ್ದಾತ್ಮಾಭಿಮಾನ!
ಮಾಡಬೇಕಿದಕ್ಕಾತ್ಮ ಧ್ಯಾನ!
ನಾಮ ರೂಪಾತೀತಾತ್ಮ ಜ್ಞಾನ!
ತೀರ್ಥ ಕ್ಷೇತ್ರ ಯಾತ್ರೆ ಸುಜ್ಞಾನ!
ಪಸ್ಸಿಂದಾಗ್ವುದು ವಿಜ್ಞಾನ! (ಅ)
-ದಾದಮೇಲೆ ಸ್ವರೂಪಜ್ಞಾನ! (ಘ)
-ನ ನಿರಂಜನಾದಿತ್ಯ ಜ್ಞಾನ!!!

ಮಾನಾವಾನವಾ ನಾಮ ರೂಪಲ್ಲದವ!   5(2988)

ಯನಾದಿಂದ್ರಿಯಗಳ್ಗಾತೀತಾದವ!
ವಾಸುದೇವನಾಗಿ ಕಂಸನ ಕೊಂದವ!
ರನಿಗೆ ಗೀತೋಪದೇಶ ಕೊಟ್ಟವ!
ವಾಯ್ವಗ್ನಿ ಮೊದಲಾದವರನ್ನಾಳ್ವವ!
ನಾಸ್ತಿಕರಿಗೂ ಅನ್ನವಿತ್ತು ಸಾಕ್ವವ!
ತಗಳೆಲ್ಲಕ್ಕೂ ಕಾರಣನಾದವ!
ರೂಪಾನಂತಕ್ಕೆ ಜನ್ಮದಾತನಾದವ!
ರಮಾರ್ಥದ ಪರಬ್ರಹ್ಮನಾದವ! (ಎ)
-ಲ್ಲರಲ್ಲೂ ಅಂತರ್ಯಾಮಿಯಾಗಿರುವವ!
ತ್ತನಾಗಿ ಜಗದ್ಗುರುವಾಗಿರ್ಪವ! (ಅ)
-ವಾ ನಿರಂಜನಾದಿತ್ಯಾತ್ಮನಾಗಿರ್ಪವ!!!

ಮಾಯಾ ಕಟ್ಟಳೆ ಬಟ್ಟಲ ಬಾಳೂಟ!   2(467)

ಯಾರಟ್ಟರೇನಿದರಲ್ಲೇ ಆ ಊಟ!
ಟ್ಟಳೆ ಬಟ್ಟಲಿಗಿಕ್ಕುವಾ ಊಟ! (ಅ)
-ಟ್ಟ ಹಾಸತ್ಯಾಚಾರಗಳ ಹಾಳೂಟ! (ಹ)
-ಳೆಯ, ಹಳಸಿದ, ಮೊಸ್ರನ್ನದೂಟ!
ಳಲಾಟ ಹೊಟ್ಟೆಯುಬ್ಬರದೂಟ! (ಅ)
-ಟ್ಟ ಮಾಯೆಗಿದೊಂದು ವಿಹಾರದೂಟ!
ಕ್ಷ್ಯ ಮನ ಮರೆತುಂಬುವ ಊಟ!
ಬಾಯಿ, ಕೈಗಳ ಪ್ರದರ್ಶನದೂಟ! (ಹಾ)
-ಳೂಟ, ಗೋಳೂಟ, ಕಟ್ಟಳೆ ಬಾಳೂಟ! (ಊ)
-ಟ, ನಿರಂಜನಾದಿತ್ಯಗಿದೊಂದಾಟ!!!

ಮಾಯಾಜಾಲವೆಂತಿಹುದಪ್ಪಾ?   5(2692)

ಯಾತ್ರೆಗಳೆಷ್ಟೋ ಆದುವಪ್ಪಾ!
ಜಾಗ್ರತ್ತಿನಲ್ಲಿದು ಸ್ವಪ್ನಪ್ಪಾ!
ಕ್ಷಾಂತರ ಜನ್ಮವಾಯ್ತಪ್ಪಾ! (ಹಾ)
-ವೆಂದು ಹಗ್ಗಕ್ಕಂಜಿದ್ದಾಯ್ತಪ್ಪಾ!
ತಿಳ್ದೂ ಹಳ್ಳಕ್ಕುರುಳ್ಯಾಯ್ತಪ್ಪಾ!
ಹುಚ್ಚು ಹೆಚ್ಚಾಗಿ ಪೆಚ್ಚಾಯ್ತಪ್ಪಾ!
ಮೆ, ಶಿಮೆಯಿದ್ಕೌಷಧ್ಯಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯಾಗಪ್ಪಾ!!!

ಮಾಯೆಗಾಗುತಿದೆ ಪುರಸ್ಕಾರ!(ಛಾ)   4(1594)

-ಯೆಯಾಣ್ಮಗಾಗ್ತಿದೆ ತಿರಸ್ಕಾರ!
ಗಾಡಿಗಾಗುತಿದೆ ಪುರಸ್ಕಾರ!
ಗುಣಾಶ್ವಕಾಗ್ತಿದೆ ತಿರಸ್ಕಾರ! (ಜಾ)
-ತಿ, ಮತಕಾಗ್ತಿದೆ ಪುರಸ್ಕಾರ! (ಒಂ)
-ದೆನಲಾಗುತಿದೆ ತಿರಸ್ಕಾರ!
ಪುಟ್ಟು ಸಾವ್ಗಾಗ್ತಿದೆ ಪುರಸ್ಕಾರ! (ಪ)
-ರಮಾರ್ಥಕಾಗ್ತಿದೆ ತಿರಸ್ಕಾರ! (ಸಂ)
-ಸ್ಕಾರ ಬಲಿಸುತಾಗ್ಬೇಕೋಂಕಾರ! (ಮೀ)
-ರ ನಿರಂಜನಾದಿತ್ಯಾತ್ಮಾಕಾರ!!!

ಮಾಯೆಯಾಟ ಮಾಧವನೋಟ!   1(333)

ಯೆಲ್ಲೆಲ್ಲೂ ವಂಚನೆಯ ಆಟ!
ಯಾತ್ರೆ, ಜಾತ್ರೆಗಳಲೆದಾಟ! (ಆ)
-ಟ, ನೋಟಗಳ ಬಯಳಟ!
ಮಾಯಾ ಸುಖಕೆಕಲ್ಲಾ ಹೋರಾಟ!
ನಾಸೆಯಿಂದ ಬಡೆದಾಟ!
ರ ಧರ್ಮಕ್ಕೆಲ್ಲೆಲ್ಲೂ ಕಾಟ!
ನೋಡಲಶಾಂತೀ ಮನದಾಟ! (ಆ)
-ಟ, ನಿರಂಜನಾದಿತ್ಯಟ!!!

ಮಾಯೇ! ನಿನ್ನ ಮೇಲಾರದೇನಸೂಯೆ? (ತಾ)   5(3268)

-ಯೇ ನೀನೆಲ್ಲಾ ಜೀವರಾಶಿಗಾಶ್ರಯೆ!
ನಿನ್ನಾನಂದಕ್ಕಾರದೇನ್ಪ್ರತಿಕ್ರಿಯೆ? (ತ)
-ನ್ನ ತಾನರಿತವಗೆ ನೀನಭಯೆ!
ಮೇರೆ ಮೀರಿದಾಶಾತುರಗಪ್ರಿಯೆ!
ಲಾಭ ನಿನ್ನಿಂದಹುದಂಬಕತ್ರಯೆ!
ಜತಾದ್ರಿ ವಾಸನ ಪ್ರಿಯೆ ಜಾಯೆ!
ದೇಹ ಕೊಟ್ಟದ ಬಿಟ್ಟಾರೆಂಬೆ ತಾಯೇ!
ಡೆಸು ನಿನ್ನಿಷ್ಟದಂತೆ ನೀ ತಾಯೇ!
ಸೂನು ನಿನ್ನವನಿಳಿಸ್ಬೇಡ ತಾಯೇ! (ತಾ)
-ಯೆ! ನಿರಂಜನಾದಿತ್ಯಗಿಲ್ಲಸೂಯೆ!!!

ಮಾರಣ ಮಾಡಿದಾ ರಾವಣಪ್ಪಾ! [ದಾ]   3(1074)

-ರಣೆ ಹೂಡಿದಾ ರಘುರಾಮಪ್ಪಾ! [ಬಾ]
-ಣಗಳ ಬಿಟ್ಟನಾ ರಾವಣಪ್ಪಾ!
ಮಾಯ ಗೈದನಾ ರಘುರಾಮಪ್ಪಾ! [ಅ]
-ಡಿಯಿಡದಾದನಾ ರಾವಣಪ್ಪಾ!
ದಾರಿದೋರಿದಾ ರಘುರಾಮಪ್ಪಾ!
ರಾಗ, ದ್ವೇಷ ಬಿಟ್ಟಾ ರಾವಣಪ್ಪಾ!
ರೈಕ್ಯವಿತ್ತಾ ರಘುರಾಮಪ್ಪಾ! [ರ]
-ಣದಲಿ ಮಡಿದಾ ರಾವಣಪ್ಪಾ! [ಅ]
-ಪ್ಪಾ ನಿರಂಜನಾದಿತ್ಯನೆಂದಪ್ಪಾ!!!

ಮಾರನಾಟ ಚೋರಕೂಟ ಸಂಕಟ! [ಖಾ]   3(1339)

-ರ ದೂಟ ಅಸುರರಾಟ ಸಂಕಟ!
ನಾರಿಯಾಟ, ಮಾರಿಯೂಟ ಸಂಕಟ! (ನೋ)
-ಟದಾಟ, ಕೂಟದೊಟ್ಟೂಟ ಸಂಕಟ! (ಕು)
-ಚೋದ್ಯದಾಟಮೇಧ್ಯದೂಟ ಸಂಕಟ! (ಕ)
-ರ ಚರಣದಾಟ ನೋಟ ಸಂಕಟ!
ಕೂಗಾಟ, ರೇಗಾಟದಾಟ ಸಂಕಟ! (ನ)
-ಟ ನಟಿಯರಾಟ ಕೂಟ ಸಂಕಟ!
ಸಂಪ್ರದಾಯದೀಗಿನಾಟ ಸಂಕಟ!
ಚ್ಚಾಟ, ಗುದ್ದಾಟದಾಟ ಸಂಕಟ! (ನೆಂ)
-ಟ ನಿರಂಜನಾದಿತ್ಯಗಿದೊಂದಾಟ!!!

ಮಾರುತಿಗೀಗೆಕಿಲ್ಲಾ ಕರುಣೆ? (ಗು)   4(1984)

-ರುವ್ಯಾಸನಿಗೇನೀಗಡಚಣೆ?
ತಿರೆಗೆ ಬೇಕೀಗ ಸಂರಕ್ಷಣೆ!
ಗೀತಾಪತಿಗೇಕನಾದರಣೆ? (ಯೋ)
-ಗೆ

ಶ್ವರನಿಗೀಗೇಕೀ ಧೋರಣೆ? (ಸಾ)
-ಕಿನ್ನಯ್ಯಾ ನಿನ್ನ ಮೌನಧಾರಣೆ! (ಎ)
-ಲ್ಲಾ ಕಾರ್ಯಕ್ಕೂ ನಿನ್ನದೇ ಪ್ರೇರಣೆ!
ರುಣಿಸು ಬಂಗ್ಲಾಕ್ಕೆ ಮನ್ನಣೆ! (ಪಾ)
-ರು ಮಾಡಿ ನೀಡು ಮಾನ ರಕ್ಷಣೆ! (ಕಾ)
-ಣೆ, ನಿರಂಜನಾದಿತ್ಯಗೆಣೆ!!!

ಮಾರ್ಗದರ್ಶಿ ನೀನು ಗುರುದೇವಾ! (ಸ್ವ)   4(2493)

-ರ್ಗ, ಮರ್ತ, ಪಾತಾಳಾಧೀಶ ದೇವಾ!
ಯೆ ನಿನ್ನದೆನ್ನ ಬಲ ದೇವಾ! (ಸ್ಪ)
-ರ್ಶಿಸೀ ಪಾದ ಧನ್ಯನಾದೆ ದೇವಾ!
ನೀನೇ ನಾನಾದ್ಮೇಲೇನ್ಭಯ ದೇವಾ? (ಅ)
-ನುಮಾನ ಬರದಿರಿಸು ದೇವಾ!
ಗುಣಾವಗುಣಕ್ಕಾರ್ಹೊಣೆ ದೇವಾ?
ರುಜುಮಾರ್ಗಿ ನೀನೇ ಗುರುದೇವಾ!
ದೇವನೆನಗನ್ಯನಿಲ್ಲ ದೇವಾ! (ಶಿ)
-ವಾ, ಶ್ರೀ ನಿರಂಜನಾದಿತ್ಯ ದೇವಾ!!!

ಮಾಲಿಕಗೆಣಿಸಬೇಡ ದ್ರೋಹ! (ಒ)   3(1207)

-ಲಿಸಿಕೊಂಡರಾಗ್ವುದನುಗ್ರಹ!
ರ್ತವ್ಯ ಭ್ರಷ್ಟನಾದರೆ ದ್ರೋಹ! (ಮಿ)
-ಗೆ ಭಕ್ತಿಯಿಂದಿದ್ದರನುಗ್ರಹ! (ದ)
-ಣಿಸಿದರವನನ್ನಾಯ್ತು ದ್ರೋಹ!
ರ್ವ ಸಿದ್ಧಿಗೆ ಬೇಕನುಗ್ರಹ!
ಬೇರೆಕಡೆಗೋಡಿದರೆ ದ್ರೋಹ! (ಬ)
-ಡತನಳಿಸುವುದನುಗ್ರಹ!
ದ್ರೋಹ ಚಿಂತನೆ ತನಗೇ ದ್ರೋಹ! (ಸ್ನೇ)
-ಹ, ನಿರಂಜನಾದಿತ್ಯಾನುಗ್ರಹ!!!

ಮಾಲಿಕನನ್ನೇ ಕಚ್ಚುವದೊಂದು ನಾಯಿ! (ಆ)   6(3699)

-ಲಿಸದವನ ಮಾತನ್ನಾ ಕೆಟ್ಟ ನಾಯಿ!
ಚ್ಚಿಸಿಕೊಂಡ್ರೂ ಪ್ರೀತಿ ತಾಯಿಗಾನಾಯಿ!
ರುಳುತಿದೆ ರೋಗದಿಂದೀಗಾ ನಾಯಿ! (ಇ)
-ನ್ನೇನಾಗಲಿದೆಯೋ ಆ ಬಡ ನಾಯಿ?
ಟ್ಟಿಗೊಳಗಾಗಿ ರೋದಿಪುದಾ ನಾಯಿ! (ಬಿ)
-ಚ್ಚುವುದೇ ತಡ, ಕೊಚ್ಚೆಗೋಡ್ವುದಾ ನಾಯಿ!
ರ ಗುರು ಲೀಲೆ ಅರಿಯದಾ ನಾಯಿ! (ಒಂ)
-ದೊಂದು ಕ್ಷಣಕ್ಕೊಂದೊಂದು ಬುದ್ಧಿ ಆ ನಾಯಿ!
ದುರ್ಬುದ್ಧಿಯಿಂದೀಗ ಹೀಗಾಯಿತಾ ನಾಯಿ!
ನಾರಾಯಣನೆಲ್ಲಕ್ಕೂ ಸಾಕುವ ತಾಯಿ! (ತಾ)
-ಯಿ, ಶ್ರೀ ನಿರಂಜನಾದಿತ್ಯಾ ಪೂಜ್ಯ ತಾಯಿ!!!

ಮಾಲಿಕನಿಗೆ ಮಾಲಾರ್ಪಣೆ! (ಕ)   6(3640)

-ಲಿಮಲದ್ದಾಗ್ಲಿ ನಿವಾರಣೆ!
ಷ್ಟವಾಗಿಹುದೀ ಬವಣೆ!
ನಿನಗ್ಬೇಡೆನ್ನ ವಿವರಣೆ!
ಗೆಳೆಯನಾಗಿ ತೊರ್ಕರುಣೆ!
ಮಾಡ್ಬಾರದು ನಿರಾಕರಣೆ!
ಲಾಭ, ನಷ್ಟಕ್ಕೆ ನೀನೇ ಹೊಣೆ! (ಕಾ)
-ರ್ಪಣ್ಯ ಬಿಟ್ಟು ನೀಡು ರಕ್ಷಣೆ! (ಆ)
-ಣೆ, ನಿರಂಜನಾದಿತ್ಯಗಾಣೆ!!!

ಮಾಲಿಕನಿಗೇನು ಬೇಕು! (ಮಾ)   2(776)

-ಲಿನೊಡೆತನವೇ ಸಾಕು!
ರ್ಮವನಿಗಾಗಿ ಬೇಕು!
ನಿರ್ಮಲಮನಸೇ ಸಾಕು! (ತ್ಯಾ)
-ಗೇಶನಾಗಿ ಇರಬೇಕು! (ಅ)
-ನುಮಾನ ಸತ್ತರೆ ಸಾಕು!
ಬೇವು ಬೆಲ್ಲ ತಿನ್ನಬೇಕು! (ಬೇ)
-ಕು! ಶ್ರೀ ನಿರಂಜನ ಸಾಕು!!!

ಮಾಲಿಕನಿಚ್ಛೆಯಂತಾಯ್ತೂದಿನ ಕಡ್ಡಿ! (ಒ)   4(2040)

-ಲಿಸಿಕೊಂಡಿತು ಪ್ರೇಮಿಯ ಮನಾ ಕಡ್ಡಿ!
ರ್ಮದಿಂದಾಯ್ತದು ಸುವಾಸನಾ ಕಡ್ಡಿ!
ನಿರ್ಮಲ ಪರಿಮಳ ಸರ್ವಾಂಗಾ ಕಡ್ಡಿ! (ಇ)
-ಚ್ಛೆಯುರಿ ತಗಲ್ಲ್ಯೆಲ್ಲರ್ಗಾನಂದಾ ಕಡ್ಡಿ! (ಸ್ವ)
-ಯಂಭು ಸ್ವರೂಪ ಗಂಧ ತುಂಬಿದಾ ಕಡ್ಡಿ!
ತಾನೇ ತಾನಾಗೊಂದೆಡೆಯಿರ್ಪುದಾ ಕಡ್ಡಿ!(ಆ)
-ಯ್ತೂಪಯೋಗಗ್ನಿ ಸಂಪರ್ಕದಿಂದಾ ಕಡ್ಡಿ! (ಮಂ)
-ದಿರದ ದುರ್ನಾಥಡಗಿಪುದಾ ಕಡ್ಡಿ! (ಮ)
-ನಕುತ್ಸಾಹಾ ವಾಸನೆ ಸೂಸುವಾ ಕಡ್ಡಿ!
ರಚರಣವಿಲ್ಲದ ಲಿಂಗಾ ಕಡ್ಡಿ! (ಕ)
-ಡ್ಡಿ ನಿರಂಜನಾದಿತ್ಯಾನಂದದಾ ಬುಡ್ಡಿ!!!

ಮಾಲಿಕನಿಷ್ಟವರ್ತಿಯ ಬಲಗುಂದಬಹುದೇ? (ಒ)   6(4348)

-ಲಿದನುಗ್ರಹಿಸುತ್ತರವನ್ನಿದಕೆನ್ನ ತಂದೇ!
ಳವಳವಾಗಿಹುದಬಲನಾಗೀಗ ತಂದೇ!
ನಿಶಿ ದಿನ ನೆನೆಯುವೆನು ನಿನ್ನ ನಾಮ ತಂದೇ! (ಇ)
-ಷ್ಟ ಬಾಂಧವ ನೀನೊಬ್ಬನೇ ನನಗೀಗೆನ್ನ ತಂದೇ!
ರಗುರು ದತ್ತಾತ್ರೇಯನು ನೀನು ಪ್ರಿಯ ತಂದೇ! (ಅ)
-ರ್ತಿಯಿಂದೆನ್ನನ್ನೆತ್ತಿಕೊಂಡು ಮುದ್ದಾಡು ಪೂಜ್ಯ ತಂದೇ!
ಮ, ನಿಯಮಾಭ್ಯಾಸಿ ನಾನ್ನಲ್ಲವೇ, ಹೇಳು ತಂದೇ!
ಲಭೀಮಾಂಜನೇಯನಂತೆನ್ನ ಮಾಡೀಗ ತಂದೇ!
ಕ್ಷ್ಮಣಾಗ್ರಜನ ಪೂರ್ಣಕೃಪೆಯಿರಲಿ ತಂದೇ!
ಗುಂಡಿಗೆಯಲ್ಲಾಸ್ವರೂಪ ಬೆಳಗಲೀಗ ತಂದೇ!
ರ್ಶನವಿದಿಲ್ಲದ ನನ್ನ ಜನ್ಮ ವ್ಯರ್ಥ ತಂದೇ!
ಯಲಾಡಂಬರ ನನಗೆ ಬೇಕಾಗಿಲ್ಲ ತಂದೇ!
ಹುಸಿ ಮಾಯೆ ನನ್ನ ಬಳಿ ಸೇರದಿರಲಿ ತಂದೇ!
ದೇವದೇವ ಸದ್ಗುರು ನಿರಂಜನಾದಿತ್ಯ ತಂದೇ!!!

ಮಾಲಿಕಾ! ನಾ ನಿನ್ನ ಸಮಕಾಲಿಕಾ! (ಒ)   4(2113)

-ಲಿದು ಸ್ವೀಕರಿಸಬೇಕೀ ಮಾಲಿಕಾ!
ಕಾಮ ವೈರಿ ನೀನೆನ್ನ ಕಾಪಾಲಿಕಾ!
ನಾನಿನ್ನಚ್ಚುಮೆಚ್ಚಿನುಮಾ ಬಾಲಿಕಾ!
ನಿನ್ನ ಹೊರತೆನಗಾರು ರಕ್ಷಕಾ? (ನಿ)
-ನ್ನರಸಿಯೆಂದೆನ್ನಪ್ಪಿಕೋ ನಾಯಕಾ!
ಕ್ಕುಮಾರನೆಮಗೆ ವಿನಾಯಕ! (ರಾ)
-ಮನಾಮ ನಮ್ಮಿಬ್ಬರಿಗೂ ಹಾರ್ದಿಕಾ!
ಕಾಪಾಡೀಡೇರಿಸೆನ್ನಿಷ್ಟ ಕೋರಿಕಾ! (ನಿ)
-ಲಿಸಿಕೊಳ್ಳೆನ್ನನೊಳಗಾಂತರಿಕಾ!
ಕಾಪಾಲಿ ನಿರಂಜನಾದಿತ್ಯಾತ್ಮಿಕಾ!!

ಮಾಲಿನ ಬೆಲೆ ಮಾಲಿಕ ಬಲ್ಲ! (ಹಾ)   4(1432)

-ಲಿನ ಯೋಗ್ಯತೆ ಗೌಳಿಗ ಬಲ್ಲ!
ಲ್ಲೆಯ ರೂಪ ನಲ್ಲನೇ ಬಲ್ಲ!
ಬೆಳೇ ಗುಣ ಬೆಳೆದವ ಬಲ್ಲ! (ಕ)
-ಲೆಯಂತಸ್ತು ಕಲಾಧರ ಬಲ್ಲ!
ಮಾಯೆಯಾಟ ಮಾಧವನೇ ಬಲ್ಲ! (ಜಾ)
-ಲಿಯ ನೆಲೆ ಕೀಳುವವ ಬಲ್ಲ!
ಬ್ಬದ ಸವಿ ಕಬ್ಬಿಗ ಬಲ್ಲ!
ಲೆಯ ಬಲ ಬೆಸ್ತನೇ ಬಲ್ಲ! (ಅ)
-ಲ್ಲ ನಿರಂಜನಾದಿತ್ಯೆಲ್ಲಾ ಬಲ್ಲ!!!

ಮಾಲಿನ್ಯ ರಹಿತ ಮಾಲಿಕೆ! (ಮಾ)   5(3099)

-ಲಿನ್ಯ ಸಹಿತ ಮಾನವಿಕ! (ಶೂ)
-ನ್ಯವೇ ಪರಿಶುದ್ಧ ದೈವಿಕ! (ವ)
-ರಗುರು ಸ್ವರೂಪ ತಾರಕ!
ಹಿತೋಕ್ತ್ಯವನದಧಾತ್ಮಿಕ!
ಪಸ್ಸವನದ್ಸಹಾಯಕ!
ಮಾರಾರೀಶ್ವರ ವಿನಾಯಕ! (ಒ)
-ಲಿಸಬೇಕಿವನ ಸಾಧಕ! (ಶೋ)
-ಕ ನಿರಂಜನಾದಿತ್ಯಾಂತಕ!!!

ಮಾಲೆ ಕೊರಳಿಗೆ ಚಂದ! (ಎ)   4(2227)

-ಲೆಗಳು ಮರಕ್ಕೆ ಚಂದ!
ಕೊಳಕ್ಕೆ ತಿಳ್ನೀರು ಚಂದ!
ಮೆ ರಮೇಶಗೆ ಚಂದ! (ಬಾ)
-ಳಿಗೆ ಭಯ, ಭಕ್ತಿ ಚಂದ!
ಗೆಳೆಯನಿಳೆಗೆ ಚಂದ!
ಚಂದ್ರನಾಕಾಶಕ್ಕೆ ಚಂದ! (ಕಂ)
-ದ ನಿರಂಜನಾದಿತ್ಯಂದ!!!

ಮಾಲೆ ಹಾಕಿ ವರನ ಸ್ವೀಕರಿಸು!   1(40)

ಲೆಃಖ ಹೇಳಿ ಸಮಾಧಾನ ಬರಿಸು!
ಹಾಡು ಹಾಡಿ ಸಂಭಾವನೆ ತರಿಸು!
ಕಿರಿದಗಿ ಹಿರಿದಾಗಬಯಸು!
ಶಮಾಡಿ ಸ್ಥಿರವಾಗಿ ಇರಿಸು!
ಜವ ಧರಿಸಿ, ಭಜಿಸಿ ಲೈಸು!
ಡೆದ ಮೇಲೆ ನುಡಿಯ ಕಲಿಸು!
ಸ್ವೀಕರಿಸಿ ಮತ್ತೆ ಮಾಲೇಕೆನಿಸು!
ರವ ಮುಗಿದಾದರೆ ಪ್ರಾರ್ಥಿಸು! (ಉ)
-ರಿಸಿ ಒಲೆಯ ತಪ್ಪಲೆ ಇರಿಸು!
ಸುನೀತಿ ನಿರಂಜನನ ತಪಸು!!!

ಮಾವಿನ ಹಣ್ಣರ್ಪಣಾ!   2(596)

ವಿಶ್ವರೂಪಗರ್ಪಣಾ (ವ)
-ನಜಸಖಗರ್ಪಣಾ! (ಅ)
-ಹರ್ನಿಶಿ ಜಪಾರ್ಪಣಾ! (ಅ)
-ಣ್ಣ ಶ್ರೀರಾಮಗರ್ಪಣಾ! (ಸ)
-ರ್ಪಶಾಯಿ ಕೃಷ್ಣಾರ್ಪಣಾ! (ರಾ)
-ಣಾ ನಿರಂಜನಾರ್ಪಣಾ!!!

ಮಾವಿನ ಹಣ್ಣು ತರಿಸುವಾಸೆ!   5(2979)

ವಿಷಯ ವಿಮುಖನಿಗೇಕಾಸೆ?
ಗುವನು ತನಲ್ಲೇ ಯೋಚಿಸೆ!
ರಿದಿಕ್ಕುವನು ತಕ್ಷಣಾಸೆ! (ಮ)
-ಣ್ಣು ಆಗ್ವೀ ದೇಹಕ್ಕೇನೇನೋ ಆಸೆ!
ತ್ವಜ್ಞಾನಿಗೆ ಅಂಜುವುದಾಸೆ! (ಹ)
-ರಿಸ್ಮರಣೆಗೀ ಶರೀರ ಮೂಸೆ!
ಸುಲಭವಿದಿಂದ್ರಿಯವ ಜೈಸೆ!
ವಾರನಾರೀ ಮನಕತಿಯಾಸೆ! (ಆ)
-ಸೆ, ನಿರಂಜನಾದಿತ್ಯಗಾತ್ಮಾಸೆ!!!

ಮಾವಿನ ಹಣ್ಣು ನೇವೇದ್ಯ!   2(597)

ವಿಶ್ವರೂಪಗಾ ನೇವೇದ್ಯ! (ವ)
-ನಜ ಸಖಗಾ ನೇವೇದ್ಯ! (ಅ)
-ಹರ್ನಿಶಿ ಧ್ಯಾನಾ ನೇವೇದ್ಯ! (ಹ)
-ಣ್ಣು ಮುಕ್ಕಣ್ಣಗಾ ನೇವೇದ್ಯ! (ತಿ)
-ನೇತ್ರ ಪುತ್ರಗಾ ನೇವೇದ್ಯ!
ವೇಣುಗಾನಗಾ ನೇವೇದ್ಯ! (ವೇ)
-ದ್ಯ ನಿರಂಜನ ನೇವೇದ್ಯ!!!

ಮಾವು ಹೂ ಬಿಟ್ಟಾಗ ಮಾಲಿಕಗಾನಂದ! (ಹೂ)   4(2149)

-ವು ಹೀಚಿನಿಂದೊಡಗೂಡಲತ್ಯಾನಂದ!
ಹೂ ಬಿದ್ದು, ಹೀಚ್ಕಾಯಾದಾಗಮಿತಾನಂದ!
ಬಿಸಿಲ್ಗಾಳಿಗೆ ಬೀಳದಾಗ್ಪೂರ್ಣಾನಂದ! (ಪ)
-ಟ್ಟಾ ಶ್ರಮ ಸಾರ್ಥಕವಾದರೆಲ್ಲಾನಂದ! (ಪ್ರ)
-ಗತಿ ಕಾಣದಿದ್ದರೆಲ್ಲಿಹುದಾನಂದ?
ಮಾತಿನ ಮಲ್ಲಿಗೆಗಿಲ್ಲ ಗಂಧಾನಂದ! (ಕ)
-ಲಿತ ವಿದ್ಯೆ ಬಾಳ್ಬೆಳಕಾದಾಗಾನಂದ!
ಣ್ತೆರೆಯದಂಧನಾದರೇನಾನಂದ?
ಗಾಡಿ ಪ್ರಯಾಣಕನ್ಕೂಲಾದರಾನಂದ!
ನಂಬಿಗೆಗಿಂಬಿಲ್ಲದಿದ್ದರಿಲ್ಲಾನಂದ! (ಕಂ)
-ದ ನಿರಂಜನಾದಿತ್ಯ ಸಹಜಾನಂದ!!!

ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ!   6(4227)

ಚಿರಕಾಲ ಮಾಯೆಯಾಟವಿರುವುದೇನಲ್ಲ!
ಹೋಗುವುದು ಬರುವುದದ್ರ ಸ್ವಭಾವವೆಲ್ಲ!
ಶೇಂದ್ರಿಯಗಳ ಕುಣಿಸುವುದು ಅದೇ ಎಲ್ಲ!
ಕಾರಣಕರ್ತನಲ್ಲಿ ಲಯವಾದಾಗೇನಿಲ್ಲ! (ಸೂ)
-ರ್ಯದೇವನೊಬ್ಬನೇ ಸರ್ವಸಾಕ್ಷಿಯಿದಕ್ಕೆಲ್ಲ! (ಬೆ)
-ಕ್ಕೆ ನಿರ್ಮೂಲವಾದಾಗವನೇ ನಾವು, ನೀವೆಲ್ಲ!
ಚಿಂದಿ ಬಟ್ಟೆಯೂ ಇಲ್ಲದ ದಿಗಂಬರಾಗೆಲ್ಲ!
ತಿನ್ನುವ; ಕುಡಿಯುವ ಮುಂತಾದಾಸೆ ಆಗಿಲ್ಲ!
ಸಿಹಿ, ಕಹಿಗಳಲ್ಲಿ ಭೇದ ಕಾಣುವುದಿಲ್ಲ! (ಕ)
-ಫ, ವಾತ, ಪಿತ್ಥದ ಕಾಟ ಆಗಿರುವುದಿಲ್ಲ!
ಕ್ಷ್ಯವೊಂದೇ ವಿರಾಜಿಸುತ್ತಿರುವುದೆಲ್ಲೆಲ್ಲ!
ವಿಧಿ, ಹರಿ, ಹರರೂ ಬೇರಾಗಿರುವುದಿಲ್ಲ! (ಫು)
-ಲ್ಲ ನಿರಂಜನಾದಿತ್ಯನೊಬ್ಬನೇ ಆಗೆಲ್ಲೆಲ್ಲಾ!!!

ಮಿಂಚಿಹೋದ ಕಾರ್ಯಕ್ಕೇಕೆ ಚಿಂತೆ? (ಸಂ)   6(3328)

-ಚಿತ ಮುಗೀತೆಂದಿದ್ರೆ ನಿಶ್ಚಿಂತೆ!
ಹೋರಾಡು ವೀರ ಅರ್ಜುನನಂತೆ!
ಯಾಳು ಕೃಷ್ಣನಾಗಿರ್ಪನಂತೆ!
ಕಾರ್ಯಕ್ಕಾಗಿ ಕಾರ್ಯಮಾಡ್ಬೇಕಂತೆ! (ಸೂ)
-ರ್ಯನಿದಕ್ಕೆ ಮಾದರಿ ತಾನಂತೆ! (ಹ)
-ಕ್ಕೇನಿಹುದದಿದು ಬೇಡ್ಲಿಕ್ಕಂತೆ!
ಕೆಡ್ಸಿಲ್ಲಾತ ನಂಬಿದವ್ರನ್ನಂತೆ!
ಚಿಂತೆ ಚಿತೆಗಿಂತ ಘೋರವಂತೆ! (ಚಿಂ)
-ತೆ ನಿರಂಜನಾದಿತ್ಯಗಿಲ್ವಂತೆ!!!

ಮಿಂಚಿಹೋದ ಕಾರ್ಯಕ್ಕೇಕೆ ಚಿಂತೆ? (ಸಂ)   6(3737)

-ಚಿತ ಅನುಭವಿಸ್ಲೇ ಬೇಕಂತೆ!
ಹೋರಾಟಮನಸ್ಕಕ್ಕಾಗ್ಬೇಕಂತೆ!
ತ್ತಾತ್ರೇಯನಂತಿರಬೇಕಂತೆ!
ಕಾಯಾಭಿಮಾನ ಬಿಡಬೇಕಂತೆ! (ಆ)
-ರ್ಯ ಮಾನವ ಸಂಸ್ಕೃತಿಯಿದಂತೆ! (ಹ)
-ಕ್ಕೇನನ್ಯಕ್ಕೆ ಸಾಧಿಸ್ಬೇಡವಂತೆ!
ಕೆಚ್ಚೆದೆಯ ಧೀರನಾಗ್ಬೇಕಂತೆ!
ಚಿಂತೆ ಚಿತೆಗಿಂತ ಉರಿಯಂತೆ! (ಚಿಂ)
-ತೆ ನಿರಂಜನಾದಿತ್ಯ ಮಾಡ್ನಂತೆ!!!

ಮಿಂಚುತ್ತಿರಲಿ “ಧ್ಯಾನಮಿಂಚು” ನಿನ್ನಲ್ಲಿ!   4(1787)

ಚುನಾವಣೆಯಾಗಲಿ ವಿಜಯದಲ್ಲಿ! (ಹ)
-ತ್ತಿ ಸಿಂಹವಾಹಿನಿಯಾಗು ಅದರಲ್ಲಿ! (ಕ)
-ರ ಚರಣ ಗಳುಳಿಯಲದರಲ್ಲಿ (ಅ)
-ಲಿಪ್ತತೆಗಿರ್ಪುದಗ್ರಸ್ಥಾನದರಲ್ಲಿ!
ಧ್ಯಾನಮಗ್ನಳಾಗು ಸತತದರಲ್ಲಿ! (ದಿ)
-ನ, ರಾತ್ರಿ ತಲ್ಲೀನಳಾಗು ಅದರಲ್ಲಿ!
ಮಿಂದು, ತಿಂದು, ಸಂತೃಪ್ತಳಾಗದರಲ್ಲಿ! (ಸಂ)
-ಚು, ಹೊಂಚುಗಳಿಗೆಡೆಯಿಲ್ಲದರಲ್ಲಿ!
ನಿತ್ಯ, ನಿಜಾನಂದ ಸುಖವದರಲ್ಲಿ (ಅ)
-ನ್ನ, ವಸ್ತ್ರ ಲಾಭ ಯಥೇಚ್ಛ ಅದರಲ್ಲಿ! (ಇ)
-ಲ್ಲಿ, ನಿರಂಜನಾದಿತ್ಯಾನಂದದರಲ್ಲಿ!!!

ಮಿತ ಸಂತಾನವಿರಬೇಕು!   5(2524)

ಪ್ಪು ದಾರಿ ಬಿಟ್ಟಿರಬೇಕು!
ಸಂಭೋಗಪರೂಪಕ್ಕಾಗ್ಬೇಕು!
ತಾಮಸಾಹಾರ ಬಿಡಬೇಕು! (ವ)
-ನಸ್ಸನ್ನದುಮಿಟ್ಟಿರಬೇಕು!
ವಿಚಾರ ಸ್ವರೂಪದ್ದಾಗ್ಬೇಕು! (ವ)
-ರ ಗುರುಸೇವೆ ಮಾಡಬೇಕು!
ಬೇಜಾರಿಲ್ಲದದಾಗಬೇಕು! (ಟಾ)
-ಕು, ನಿರಂಜನಾದಿತ್ಯಾಗ್ಬೇಕು!!!

ಮಿತಿಯಿದ್ದರೆ ಹಿತ; ಅತಿಯಾದರಹಿತ!   6(4065)

ತಿನ್ನುವಾಹಾರ ಜೀರ್ಣವಾಗುವಷ್ಟಿದ್ದ್ರೆ ಹಿತ! (ಬಾ)
-ಯಿ ರುಚಿಗಾಗಿ ಸದಾ ತಿನ್ನುತ್ತಿದ್ದರಹಿತ! (ಇ)
-ದ್ದದ್ದರಲ್ಲಿ ತೃಪ್ತಿಯಿಂದ ಇರುವುದು ಹಿತ! (ನೆ)
-ರೆಯವ್ರಂತಿರಲು ಸಾಲ ಮಾಡಿದರಹಿತ!
ಹಿರಿಯರನ್ನು ಗೌರವಿಸುವುದ್ರಿಂದ ಹಿತ!
ನ್ನ ಕುದುರೆಗೇ ಮೂರು ಕಾಲೆಂದರಹಿತ!
ನಾಸಕ್ತಿ ಮಾಯೆಗಿರುವುದರಿಂದ ಹಿತ!
ತಿರಸ್ಕಾರ ಮಹೇಶ್ವರನಿಗಾದರಹಿತ!
ಯಾರನ್ನೂ ನಿಂದಿಸದಿರುವುದರಿಂದ ಹಿತ!
ಶೇಂದ್ರಿಯಗಳ ಸಡಿಲು ಬಿಟ್ಟರಹಿತ!
ಘುರಾಮನಾದರ್ಶ ಪಾಲಿಸಿದರೆ ಹಿತ!
ಹಿರಣ್ಯಕಶ್ಯಪಾದಿಗಳಂತಿದ್ದರಹಿತ! (ಹಿ)
-ತ ನಿರಂಜನಾದಿತ್ಯನಂತಿದ್ದರೆಲ್ಲಾ ಹಿತ!!!

ಮಿತ್ರ ಭೋಜನ ಮಂಗಳವಾರ!   2(650)

ತ್ರಯ ಲೋಚನಾವತಾರ ವಾರ! (ನ)
-ಭೋ ಮಂಡಲ ಪರಿಶುಭ್ರ ವಾರ! (ವಿ)
-ಜಯ, ವಿಮಲಾತ್ಮಾನಂದ ವಾರ! (ಜ)
-ನಗಣಕಾನಂದಪ್ರದ ವಾರ!
ಮಂಗಳ, ಸರ್ವ ಮಂಗಳ ವಾರ!
ತಿಪತಿ, ನಿಜಸ್ಥಿತಿ ವಾರ! (ತಾ)
-ಳ, ಮೇಳಗಳಿಗಾರಾಮ ವಾರ!
ವಾರಿಜಾಪ್ತ ನಗುತಿಹ ವಾರ!
ವಿ, ನಿರಂಜನಾದಿತ್ಯ ವಾರ!!!

ಮಿತ್ರನುಪಕಾರಕ್ಕೆ ಚಿರ ಋಣಿಯಾಗು!   4(2191)

ತ್ರಯಕ್ಷರೀ ಮಂತ್ರಾರ್ಥನೆಂದವಗೆ ಬಾಗು!
ನುಡಿ, ನಡೆಯಲ್ಲಿ ಅವನಂತೆ ನೀನಾಗು!
ಜ್ಜೆ, ಪಜ್ಜೆಗವನ ನೋಡುವವನಾಗು!
ಕಾರ್ಯದಕ್ಷತೆಯಾದರ್ಶದಲ್ಲವನಾಗು! (ಪ)
-ರಬ್ರಹ್ಮನವನ ಪ್ರೀತಿಪಾತ್ರ ನೀನಾಗು! (ಬೆ)
-ಕ್ಕೆಗೀಡಾಗಿಸ್ಬೇಡೆಂದವಗೆ ಶರಣಾಗು!
ಚಿದಾನಂದಾನುಗ್ರಹ ಮಾಡೆಂಬವನಾಗು!
ಘುಪತಿ ರಾಘವ ರಾಜಾರಾಮನಾಗು!


ಆನುಬಂಧ ಬಿಡಿಸಿಕೊಂಡವನಾಗು! (ರಾ)
-ಣಿಯೊಡಗೂಡಿ ಪಟ್ಟಾಭಿಷಿಕ್ತ ನೀನಾಗು! (ಮಾ)
-ಯಾ, ಮಾಧವರೈಕ್ಯಾನಂದಾನುಭವಿಯಾಗು! (ಆ)
-ಗು, ನಿರಂಜನಾದಿತ್ಯಾನಂದನೇ ನೀನಾಗು!!!

ಮಿತ್ರರಿಗೆಲ್ಲಾ ಸಂದೇಶ! (ಮಿ)   2(717)

-ತ್ರನಂತಾಗಲುಪದೇಶ! (ಅ)
-ರಿಗಳಾರರ ವಿನಾಶ! (ಮಿ)
-ಗೆ ಸಂತೋಷಕವಕಾಶ! ‘(ಎ)
-ಲ್ಲಾ ನಿರಂಜನ ನಿವಾಸ’!
ಸಂಘಕಿವಶ್ವಾಸೋಛ್ವಾಸ!
ದೇಶ, ಕಾಲಾತೀತ ಈಶ! (ಈ)
-ಶ, ನಿರಂಜನಾದಿತ್ಯೇಶ!!!

ಮಿತ್ರರಿಗೆಲ್ಲಾ ಸಂದೇಶ! (ಹ)   2(716)

-ತ್ರ ಬರಲಿಕೀ ಸಂದೇಶ! (ಹ)
-ರಿ ಕೃಪೆಯಿದು ಸಂದೇಶ! (ಮಿ)
-ಗೆ ಭಾಗ್ಯವಿದೀ ಸಂದೇಶ! ‘(ಎ)
-ಲ್ಲಾ ನಿರಂಜನ’ ಸಂದೇಶ!
ಸಂಘರಿಯಲೀ ಸಂದೇಶ!
‘ದೇವ ಶ್ರೀ ಗುರು’ ಸಂದೇಶ! (ಈ)
-ಶ ನಿರಂಜನಾದಿತ್ಯೇಶ!!!

ಮಿಥ್ಯಕ್ಕಾದರಣೆ, ಸತ್ಯಕ್ಕನಾದರಣೆ! (ಪ)   5(2880)

-ಥ್ಯವಾಗದಿದಾರೋಗ್ಯಕ್ಕೆ ಸಲಕರಣೆ! (ವಾ)
ಕ್ಕಾಯ, ಮನಶ್ಯುದ್ಧಿಯಿಂದಾರೋಗ್ಯ ಧಾರಣೆ!
ರಿದ್ರ, ಧನಾಢ್ಯರಿಗೆಲ್ಲಾ ಇದೇ ದೇಣೆ!
ಜಸ್ತಮೋಗುಣಾತೀತವೇ ಸುಧಾರಣೆ! (ಹೊ)
-ಣೆಯರಿವಾಗದಿದ್ದರಾಗದರಗಣೆ!
ರ್ವೇಶ್ವರನವನೊಬ್ಬನೆಲ್ಲಕ್ಕೂ ಹೊಣೆ! (ನಿ)
-ತ್ಯದಲ್ಲಿ ಸ್ಮರಿಸುತ್ತಿವನಾಗ್ಬೇಕ್ಪಾರಣೆ! (ಚೊ)
-ಕ್ಕವಾಗಿರಬೇಕು ಎಲ್ಲಾ ಸಲಕರಣೆ!
ನಾಸ್ತಿಕನಾಗಬಾರದೆಂದೀ ನಿರೂಪಣೆ! (ಉ)
-ದಯೋನ್ಮುಖ ನೀನಾಗದೆ ಬೆಳಕ ಕಾಣೆ! (ನಿ)
-ರತಾಭ್ಯಾಸವಿದ್ದವ ಹತ್ತುವನು ಗಣೆ! (ಕಾ)
-ಣೆ, ನಿರಂಜನಾದಿತ್ಯಾನಂದಕ್ಕಾವ ಎಣೆ!!!

ಮುಂಜಿ, ಸಂಜೆ ಮುಂಜಾನೆಯ ಕುಡಿತಕ್ಕಾ?   6(3829)

ಜಿಜ್ಞಾಸುಗಳು ಮಾಡಬೇಕೆಲ್ಲಾ ಪಕ್ಕಾ!
ಸಂಸ್ಕೃತಿ ಭಾರತದ್ದು ಬಹಳ ಚೊಕ್ಕಾ! (ಪ್ರ)
-ಜೆ ಸರಿಪಡಿಸ್ಬೇಕು ತಮ್ಮಕ್ಕಪಕ್ಕ!
ಮುಂಡಾಸಿರಬೇಕು ಯೋಗ್ಯತೆಗೆ ತಕ್ಕ!
ಜಾತ್ಯಾತೀತ ಸಿದ್ಧ ಸಂತೆಯಲ್ಲಿ ಸಿಕ್ಕ!
ನೆರೆಮನೆಯ ಎಂಜಲು ಆತ ನೆಕ್ಕ!
ಮ, ನಿಯಮಾದಿಯಿಂದ ಆತ ಚೊಕ್ಕ!
ಕುಲ, ಶೀಲಾದರ್ಶದಿಂದ ಸಾಧಿಸ್ಹಕ್ಕ! (ಮ)
-ಡಿ ಮಾಡುತ್ತಿರ್ಬೇಕು ಮನಸ್ಸನ್ನು ಠಕ್ಕ!
ಪಸ್ಸಿನಿಂದಲೇ ಅಕ್ಕ ಪಕ್ಕ ಚೊಕ್ಕ! (ತಿ)
-ಕ್ಕಾಟಕ್ಕೆ ನಿರಂಜನಾದಿತ್ಯಾತ್ಮ ದಕ್ಕ!!!

ಮುಂಡೆಯೆಂಬ ನಿನ್ನನ್ನಾ ಭಂಡ! (ರಂ)   4(1635)

-ಡೆ ಮುಂಡೆಯೆಂದರೇನಾ ಪುಂಡ? (ಬಾ)
-ಯೆಂದರೆ ಬರದಿರ್ಪಾ ಭಂಡ!
ಯಲಾಟಾಟಗಾರಾ ಪುಂಡ!
ನಿಜವೇನೆಂದರಿಯಾ ಭಂಡ! (ಕ)
-ನ್ನ, ಕತ್ರಿಯಿಂದಾನಂದಾ ಪುಂಡ! (ಚಿ)
-ನ್ನಾಭರಣಾಶಾತುರಾ ಭಂಡ!
ಭಂಡ, ಮುಂಡ, ಪಾಷಂಡಾ ಪುಂಡ! (ಗಂ)
-ಡ, ನಿರಂಜನಾದಿತ್ಯಜಾಂಡ!!!

ಮುಂದಾಗುವುದನಿಂದು ಹೇಳುವವನಾವನಯ್ಯಾ?   1(405)

ದಾನ, ದಕ್ಷಿಣೆ ಕೇಳುವವಗಿದರಿಯದಯ್ಯಾ! (ಆ)
-ಗು, ಹೋಗುಗಳರಿತಿರುವನಂತರ್ಯಾಮಿಯಯ್ಯಾ! (ಅ)
-ವುಗಳವನಾರಿಗೂ ಹೇಳುವುದಪರೂಪಯ್ಯಾ! (ಆ)
-ದರಿಸಿ ಹೇಳುವನು ತನಗಿಷ್ಟವಾದರಯ್ಯಾ!
ನಿಂದಾ, ಸ್ತುತಿಗಳಿಗಾತನೊಲಿಯಲಾರನಯ್ಯಾ!
ದುಡಿಮೆಯ ನೋಡಿ ನೀಡುವ ಸ್ವಾಮಿಯವನಯ್ಯಾ!
ಹೇಳದೇ ಮಾಡುವುದು ಅವನ ಸ್ವಭಾವವಯ್ಯಾ! (ಆ)
-ಳು, ಅರಸನೆಂಬ ಭೇದ ಅವನಿಲ್ಲವಯ್ಯಾ!
ರ ಶರಣಾಗತ ಪರಿಪಾಲಕಾತನಯ್ಯಾ!
ಸ್ತ್ಯಾಭರಣಾಲಂಕಾರವನಿಗೆ ಬೇಡವಯ್ಯಾ!
ನಾಮಸ್ಮರಣೆ ಮಾತ್ರದಿಂದ ಆತ ತೃಪ್ತನಯ್ಯಾ!
ರ ಋಷಿ, ಮುನಿಗಳಿಗಿದು ಗೊತ್ತಿಹುದಯ್ಯಾ! (ಅ)
-ನವರತದಭ್ಯಾಸವಿಲ್ಲದೇನೂ ಆಗದಯ್ಯಾ! (ಅ)
-ಯ್ಯಾ! ಸರ್ವಾಂತರ್ಯಾಮಿಯೇ ನಿರಂಜನಾದಿತ್ಯನಯ್ಯಾ!!!

ಮುಂದಿಟ್ಟ ಹೆಜ್ಜೆ ಹಿಂದಿಟ್ಟರೇನು ಫಲ?   6(3689)

ದಿಗ್ಭ್ರಾಂತನಾಗಿ ಕೆಳಗುರುಳ್ವ ಫಲ! (ಪ)
-ಟ್ಟ ಶ್ರಮವೆಲ್ಲಾ ವ್ಯರ್ಥವಾಗುವ ಫಲ!
ಹೆದರಿದ ಹೇಡಿ ಎನಿಸುವ ಫಲ! (ಬಿ)
-ಜ್ಜೆಗೆ ಬೆಲೆಯಿಲ್ಲದಂತಾಗುವ ಫಲ!
ಹಿಂಬಾಲಕರೆಲ್ಲಾ ಕೈಬಿಡುವ ಫಲ!
ದಿವ್ಯ ನಾಮದ ನಂಬಿಗೆ ಹೋಗ್ವ ಫಲ! (ಅ)
-ಟ್ಟಡುಗೆ. ಉಟ್ಟ ಬಟ್ಟೆ ಬೇಡಾಗ್ವ ಫಲ!
ರೇಣುಕಾತ್ಮಜಗೆ ಬಲಿಯಾಗ್ವ ಫಲ! (ಮ)
-ನುಜ ಜನ್ಮ ವ್ಯರ್ಥವಾಗುವಂಥಾ ಫಲ! (ಕ)
-ಫ, ವಾತ, ಪಿತ್ತ ಪೀಡಿತನಾಗ್ವ ಫಲ! (ಬಾ)
-ಲ ನಿರಂಜನಾದಿತ್ಯನ ಇಚ್ಛಾ ಫಲ!!!

ಮುಂದಿನ ಬದಲಾವಣೆ ಏನು?   4(1783)

ದಿನ ಲೆಃಖ ಹಾಕಿ ಸುಖವೇನು? (ಅ)
-ನನ್ಯ ಭಕ್ತಿಯಿಂದ ಇರು ನೀನು!
ಲಿಷ್ಠನಾಗಬೇಕಿಂತು ನೀನು!
ತ್ತನಿಗೆ ಶರಣಾಗು ನೀನು! (ಲೀ)
-ಲಾನಾಟಕ ನೋಡುತ್ತಿರು ನೀನು! (ಭ)
-ವರೋಗ ವಿಮುಕ್ತನಾಗು ನೀನು! (ಗ)
-ಣೆಯ ಮೇಲಿನಾಟ ಬಿಡು ನೀನು!
ರಿಳಿತವಿಲ್ಲದಾತ್ಮ ನೀನು! (ಸೂ)
-ನು ನಿರಂಜನಾದಿತ್ಯಗೆ ನೀನು!!!

ಮುಂದೆ ಬಂದರಾನಂದಾ ಮೋಹನಾ! (ತಂ)   4(1855)

-ದೆ, ತಾಯಿಗೆಲ್ಲಾ ನೀನೇ ಮೋಹನಾ!
ಬಂಧು, ಬಾಂಧವ ನೀನೇ ಮೋಹನಾ!
ಡ್ಡತನವದೇಕೋ ಮೋಹನಾ?
ರಾಮ ಭಜನೆ ಮಾಡೋ ಮೋಹನಾ!
ನಂಬಿಕೆ ಇರಬೇಕೋ ಮೋಹನಾ!
ದಾರಿಯಿದು ಸರಾಗಾ ಮೋಹನಾ!
ಮೋಸದಿಂದಧೋಗತಿ ಮೋಹನಾ!
ಸ್ತ ಶುದ್ಧವಾಗಿರ್ಲಿ ಮೋಹನಾ! (ನೀ)
-ನಾಗ್ನಿರಂಜನಾದಿತ್ಯ ಮೋಹನಾ!!!

ಮುಂದೆ ಸುದರ್ಶನ, ಮಧ್ಯ ನಿರಂಜನ, ಹಿಂದೆ ವೃಂದಾವನ! (ಎ)   2(684)

-ದೆ ವಿಶಾಲದಿಂದನವರತ ವಿರಾಜಿಪನಾನಿರಂಜನ!
ಸುರ, ನರ, ಕಿನ್ನರರಿಗೆ ಈ ದರ್ಶನ ಮನಮೋಹನ!
ಯೆ ಸರ್ವರಲಿರಲೆಂದು ಸದಾ ಪ್ರಾರ್ಥಿಸುವರವನ! (ಸ್ಪ)
-ರ್ಶ ಸುಖಕಾಗಿ ಕಣ್ಣೀರಿಡುವರನೇಕ ಸದ್ಭಕ್ತ ಜನ!
ಮಸ್ಕಾರ ಕೋಟಿಯಿಂದ ಕಾದಿರುವರಸಂಖ್ಯಾತ ಜನ!
ಹಿಮೆಯಿವನದು ಹೊಗಳುವರು ಬಹು ಬುಧ ಜನ! (ಸಾ)
-ಧ್ಯ, ಸಿದ್ಧ, ಚಾರಣಾದಿಗಳು ಮಾಡುತಿಹರು ಸದಾ ಧ್ಯಾನ!
ನಿರವಧಿ ಭಕ್ತಿ, ಪ್ರೇಮ ರಾಧೆ ಮಾಳ್ಪಳು ಸದಾ ಲಿಂಗನ!
ರಂಗ ಪಾಂಡುರಂಗನೆಂದು ಪಾಡಿ ಕುಣಿವರು ದಾಸಜನ!
ಯ, ಜಯ, ಶ್ರೀರಾಮ ಸೀತಾರಾಮೆಂಬರು ವಾನರ ಜನ!
ಗುನಗುತ ಸ್ವಾಗತವೀವರು ಗೋಕುಲ ಗೋಪೀ ಜನ!
ಹಿಂಬಾಲಿಸುತ ಬರುತಿಹರು ಜಗತ್ರಯದಾರ್ತ ಜನ!
ದೆವ್ವ, ಪಿಶಾಚಾದಿಗಳ ಭಯಕಾಗಿ ಮಾಳ್ಪರು ರೋದನ!
ವೃಂದಾವನ ತುಳಸಿ ಹಾರ ಮಾಡಿಕೊಳ್ಳೆನ್ನೆಂಬಳವನ!
ದಾಮೋದರಾಚ್ಚುತ, ಕೇಶವಾನಂತ ನೀನೆಂಬರೆಲ್ಲಾ ಜನ!
ರಗುರು ದತ್ತಾತ್ರೇಯನಿವನ ಸಂದರ್ಶನ ಪಾವನ!
ಮೋ ವಿಮಲ ವಿಜಯ ನಿರಂಜನಾದಿತ್ಯ ಛಾಯಾನನ ||!

ಮುಂದೆ, ಮುಂದೆ, ಮುಂದ್ಮುಂದೆ ನಾ ನಡೆದೆ! (ಹಿಂ)   4(2126)

-ದೆ, ಹಿಂದೆ, ಹಿಂದ್ಹಿಂದೆ, ನೀನಡಗಿದೆ!
ಮುಂದೇನೆಂದ್ಯೋಚಿಸದೇ ನಾ ನಡೆದೆ! (ತಂ)
-ದೆ ನೀನೆನ್ನಿಂದ ದೂರಾಗ್ಯಡಗಿದೆ!
ಮುಂದಾವ ದಾರಿಯನ್ನೂ ಕಾಣದಾದೆ! (ಕಾ)
-ದ್ಮುಂದೇನೆಂದು ನಾ ನಿನ್ನ ಪ್ರಾರ್ಥಿಸಿದೆ! (ತಂ)
-ದೆ ನಿನ್ನಿಂದುತ್ತರ ಪಡೆಯದಾದ!
ನಾನಿನ್ನರಸೀಗ ಬಂದವನಾದೆ! (ಕಾ)
-ನನದಲ್ಲಿ ಭಯಪಟ್ಟವನಾದೆ! (ಓ)
-ಡೆ, ನಿನ್ನ ಶ್ರೀಪಾದ ಕಂಡವನಾದೆ! (ನಿಂ)
-ದೆ, ನಿರಂಜನಾದಿತ್ಯನಲ್ಲೊಂದಾದೆ!!!

ಮುಕ್ಕಣ್ಣನೊಕ್ಕಣೆಯಿದಕ್ಕಾ! (ಸ)   4(2080)

-ಕ್ಕರೆ ಹಾಲು ಧ್ಯಾನಮಿಂಚಕ್ಕಾ! (ಉ)
-ಣ್ಣಬೇಕಿದಾನಂದದಿಂದಕ್ಕಾ!
ನೊಸಲ್ಗಣ್ಣನಿಷ್ಟವಿದಕ್ಕಾ! (ನಿ)
-ಕ್ಕದಿದು ಸಾಮಾನ್ಯರಿಗಕ್ಕಾ! (ಹೊ)
-ಣೆಗಾರನೆಲ್ಲಕ್ಕವನಕ್ಕಾ! (ಆ)
-ಯಿಬಿಟ್ಟಾಡುವವನಲ್ಲಕ್ಕಾ! (ಮ)
-ದನಾರಿಯೆಂಬರವನಕ್ಕಾ! (ಅ)
-ಕ್ಕಾ, ನಿರಂಜನಾದಿತ್ಯಾತಕ್ಕಾ!!!

ಮುಕ್ತರು ಭಕ್ತರಿಗಾಗಿರಲಿ! (ಭ)   6(4145)

-ಕ್ತರು ಮುಕ್ತರಿಗಾಗಿ ಇರಲಿ!
ರುಜುಮಾರ್ಗವೆಲ್ಲೆಲ್ಲೂ ಇರಲಿ!
ವಭಯವಂತಿಲ್ಲದಾಗಲಿ! (ವ್ಯ)
-ಕ್ತ ಅವ್ಯಕ್ತಾತ್ಮನರಿವಿರಲಿ!
ರಿಪುಗಳ್ವ್ಯಕ್ತಕ್ಕಿಲ್ಲದಾಗಲಿ!
ಗಾಳಿಗೆ ರೆಕ್ಕೆಯಿಕ್ಕದಿರಲಿ! (ಯೋ)
-ಗಿ ಯಿದೆಲ್ಲವನ್ನರಿತಿರಲಿ!
ಘುರಾಮರಾಜ್ಯವಿಂತಾಗಲಿ! (ಕ)
-ಲಿ ನಿರಂಜನಾದಿತ್ಯನಟ್ಟಲಿ!!!

ಮುಕ್ತಿ? ವೃತ್ತಿಯಿಂದ ನಿವೃತ್ತಿ! (ಭ)   5(2801)

-ಕ್ತಿಯಿಂದಾಗುವುದಾತ್ಮ ತೃಪ್ತಿ!
ವೃಥಾಲಾಪ ಗೈದಾಯ್ತಶಕ್ತಿ! (ಅ)
-ತ್ತಿತ್ತ ಸುತ್ತಾಡೀಗ ಬೇಸತ್ತಿ!
ಯಿಂದಿನದಿಂದೆನ್ನದಿರುತ್ತೀ!
ಯೆಯಿನ್ನೂ ಬಂದಿಲ್ಲೆನ್ನುತ್ತೀ!
ನಿನ್ನ ನೀನರಿಯದಿರುತ್ತಿ!
ವೃದ್ಧಾಪ್ಯ ಬಂತೆಂದೇಕಳುತ್ತಿ? (ಬು)
-ತ್ತಿ, ನಿರಂಜನಾದಿತ್ಯಾತ್ಮೋಕ್ತಿ!!!

ಮುಖ ಪೆಚ್ಚ! ಕನ್ನಡಿ ಸ್ವಚ್ಛ!   1(278)

ತಿ, ಚ್ಯುತಿ ಮನಸಿನಿಚ್ಛ!
ಪೆಸರು! ರೂಪ ಮನದಿಚ್ಛ! (ಅ)
-ಚ್ಚಳಿಯದಾತ್ಮ ಸದಾ ಸ್ವಚ್ಛ!
ರ್ಮ, ಧರ್ಮ ಮನಸಿನಿಚ್ಛ! (ಅ)
-ನ್ನ, ಪಾನಗಳೊಡಲಿನಿಚ್ಛ! (ಅ)
-ಡಿಗಡಿಗಾಡ್ವುದು ಜಿಂಹೇಚ್ಛ!
ಸ್ವರೂಪದಾ ಸ್ಥಿತಿ ನಿರಿಚ್ಛ (ಸ್ವ)
-ಚ್ಛ, ನಿರಂಜನಾದಿತ್ಯನಿಚ್ಛ!

ಮುಖಸ್ತುತಿಯಿಂದ ಹಿಗ್ಗಬೇಡ! (ಸ)   4(2309)

-ಖ ಖಗನೆಂಬುದ ಮರೆಯ್ಬೇಡ! (ವ)
-ಸ್ತು, ವಾಹನ ಸ್ಥಿರವೆನಬೇಡ!
ತಿತಿಕ್ಷೆಯಭ್ಯಾಸ ಬಿಡಬೇಡ! (ಬಾ)
-ಯಿಂದಾಡದೇ ಮಾಡದಿರಬೇಡ! (ಮ)
-ದ, ಮತ್ಸರಕ್ಕೆಡೆಗೊಡಬೇಡ!
ಹಿತೈಷಿಗೆರಡೆಣಿಸಬೇಡ! (ಅ)
-ಗ್ಗವೆಂದ್ಬಗ್ಗಡ ಕುಡಿಯಬೇಡ!
ಬೇಜಾರೆಂದಲ್ಲಿಲ್ಲೋಡಾಡಬೇಡ! (ಆ)
-ಡ ನಿರಂಜನಾದಿತ್ಯನೃತಾಡ!!!

ಮುಗಿಲಂಗಿ ಸಾರಂಗಿ ಸತ್ಸಂಗಿ!   3(1346)

ಗಿರಿತರು ಲತಾಂಗೀ ಸತ್ಸಂಗಿ! (ಆ)
-ಲಂಬವಬಂಬನಾಂಗೀ ಸತ್ಸಂಗಿ!
ಗಿರಿಧರ ಗೋಪಾಂಗೀ ಸತ್ಸಂಗಿ!
ಸಾಮಗಾನ ಲೋಲಾಂಗೀ ಸತ್ಸಂಗಿ!
ರಂಗನಾಥ ನಾಮಾಂಗೀ ಸತ್ಸಂಗಿ!(ಭ)
-ಗಿರಥೇಚ್ಛಾ ಪೂರ್ಣಾಂಗೀ ಸತ್ಸಂಗಿ!
ರ್ವ ಕಾರಣತ್ಮಾಂಗೀ ಸತ್ಸಂಗಿ! (ತ)
-ತ್ಸಂಗೀಶ್ವರನರ್ಧಾಂಗೀ ಸತ್ಸಂಗಿ! (ಯೋ)
-ಗಿ ನಿರಂಜನಾದಿತ್ಯಾಂಗೀ ಸಂಗಿ!!!

ಮುಗಿಲು ಮಾಲಾ ಕಾಲ ಲೀಲೆ!   1(269)

ಗಿರಿಯಂತಿಹುದೊಂದು ಲೀಲೆ!
ಲುಪ್ತವಾಗ್ವುದಿನ್ನೊಂದು ಲೀಲೆ!
ಮಾಸಿದಂತಿರ್ಪದೊಂದು ಲೀಲೆ!
ಲಾಭ ಮಳೆಯಾಗುವ ಲೀಲೆ!
ಕಾತುರಾತುರೋಟದ ಲೀಲೆ!
ಕ್ಷಣ ಬಣ್ಣ ತೋರ್ಪ ಲೀಲೆ!
ಲೀಲೆಯಿದೊಂದು ಮಾಯಾ ಲೀಲೆ!
ಲೆಕ್ಕಿಸನಾದಿತ್ಯನೀ ಲೀಲೆ!

ಮುಗಿಲು ಮುಸುಕಿದಂಬರ!   1(151)

ಗಿಡ, ಮರವೆಲ್ಲಾ ಸುಂದರ! (ಅ)
-ಲುಗಾಡದಿದೆ ಈ ಮಂದಿರ!
ಮುದದಿದೆ ಮನವೆಲ್ಲರ!
ಸುಳಿವಿಲ್ಲೆನ್ನಂಬರೇಶ್ವರ!
ಕಿವಿಗಾಯ್ತು ಬಂಡಿಯ ಸ್ವರ! (ಅ)
-ದಂಗದಲಿದೊಂದು ಗೋಪುರ!
ಲು ಸೋಜಿಗ್ವಿಜಯೋದರ!
ವಿ ನಿರಂಜನ ಗಂಭೀರ!!!

ಮುಚ್ಚ ಬೇಕೊಂದೊಂದಾಗೆಲ್ಲಾ ತೂತಯ್ಯಾ! (ಅ)   2(790)

-ಚ್ಚಳಿಯದಮೃತ ತುಂಬಬೇಕಯ್ಯಾ!
ಬೇರೇನೂ ಬೆರೆಸದಿರಬೇಕಯ್ಯಾ!
ಕೊಂಬಾಪ್ತರಿಗದ ಕೊಡಬೇಕಯ್ಯಾ! (ಅ)
-ದೊಂದುತ್ತಮ ಸೇವೆಯಾಗಬೇಕಯ್ಯಾ! [ಆ]
-ದಾಯದಾಸೆಯ ಬಿಡಬೇಕಯ್ಯಾ! (ಹೀ)
-ಗೆ ಶುದ್ಧ ಜೀವನವಾಗಬೇಕಯ್ಯಾ! (ಎ)
-ಲ್ಲಾ ಶಿವಾರ್ಪಣವೆಂದಿರಬೇಕಯ್ಯಾ!
ತೂಗಿ ಪಾಡುವಳಾಗವನಮ್ಮಯ್ಯಾ!
ಲ್ಲೀನ ಸುಖ ನಿದ್ರಾನಂದಾಗಯ್ಯಾ! (ಆ)
-ಯ್ಯಾ! ನಿರಂಜನಾದಿತ್ಯಾತ್ಮಾ ಕಂದಯ್ಯಾ!!!

ಮುಚ್ಚಿದ ಕದ ತೆರೆದೋಡ್ಬಾರದಮ್ಮಾ! (ಹು)   4(2159)

-ಚ್ಚಿಯೆಂದೆನಿಸಿಕೊಳಬೇಕಾದೀತಮ್ಮಾ! (ಕ)
-ದ ತೆಗೆದ್ಕೆಲ್ಸ ಮುಗ್ಸಿ ಮುಚ್ಚಬೇಕಮ್ಮಾ!
ರ್ಮ ವಿಚಾರ ಪೂರ್ವಕವಾಗ್ಬೇಕಮ್ಮಾ! (ಇ)
-ದರಿಂದ ನೆಮ್ಮದಿಯುಳಿಯುವುದಮ್ಮಾ! (ಕ)
-ತೆ, ಪುರಾಣಗಳಿನ್ನು ಸಾಕು ಮಾಡಮ್ಮಾ! (ತೆ)
-ರೆ ಬಿದ್ದ ಮೇಲೆ ನಾಟಕವುಂಟೇನಮ್ಮಾ? (ಇಂ)
-ದೋ, ನಾಳೆಯೋ, ಮೊಕ್ಕಾಂ ಮುಕ್ತಾಯಾಗ್ವುದಮ್ಮಾ! (ಪ)
-ಡ್ಬಾರದಾಮೇಲಾರೂ ಪರಿತಾಪವಮ್ಮಾ!
ಮಣಗೀಗಚ್ಚುಮೆಚ್ಚಾಗಿ ಬಾಳಮ್ಮಾ! (ಪಾ)
-ದಸೇವಾ ಭಾಗ್ಯ ವ್ಯರ್ಥವಾಗ್ಬಾರದಮ್ಮಾ! (ಅ)
-ಮ್ಮಾ ನಿರಂಜನಾದಿತ್ಯ ಯಾತ್ರಿಕನಮ್ಮಾ!!!

ಮುಚ್ಚಿದ್ದ ಬಾಗಿಲಬಿಚ್ಚಿಸೀಗ ಮುಚ್ಚಿಸಿದೆ! (ಹು)   6(3804)

-ಚ್ಚಿದರಿಂದಾರಿಗೇನು ಪರಿಣಾಮವಾಗಿದೆ? (ಸ)
-ದ್ದರ್ಶನದ ಮಹಿಮೆ ಯಾರಿಗೆ ಗೊತ್ತಾಗಿದೆ?
ಬಾಯಿ ವೇದಾಂತಕ್ಕಿದು ನಿಲುಕದಂತಾಗಿದೆ!
ಗಿರಾಕಿಯಿಂದ ಯೋಗಿಗೇನಾಗಬೇಕಾಗಿದೆ?
ಕ್ಷ್ಯವಲ್ಲದ ಲಕ್ಷ ರೂಪ್ಯಾ ಅಲಕ್ಷ್ಯಾಗಿದೆ!
ಬಿದಿ, ಹರಿ, ಹರರಿದಕ್ಕೆ ಮೆಚ್ಬೇಕಾಗಿದೆ! (ಮೆ)
-ಚ್ಚಿ ಸಾಯುಜ್ಯಾನುಗ್ರಹವೀಗ ಮಾಡ್ಬೇಕಾಗಿದೆ!
ಸೀತಾರಾಮ, ರಾಧೇಶ್ಯಾಮರೇ ಆಗ್ಬೇಕಾಗಿದೆ!
ತಿ, ಸ್ಥಿತಿ, ಒಂದಾದಾಗ ಮುಚ್ಚಿದಂತಾಗಿದೆ!
ಮುಚ್ಚಿದ್ದೀರೀತಿ ಇನ್ನು ತೆರೆಯಬಾರ್ದಾಗಿದೆ! (ಮೆ)
-ಚ್ಚಿದಮೇಲೆ ಹುಚ್ಚಿಲ್ಲ, ಕೆಚ್ಚಿಲ್ಲದಂತಾಗಿದೆ!
ಸಿರ ಬಾಗಬೇಕೆಲ್ಲರೀ ಸಹಜ ಸ್ಥಿತಿಗೆ! (ಬಂ)
-ದೆ ನಿರಂಜನಾದಿತ್ಯಾನಂದದಿಂದೀ ಸ್ಥಿತಿಗೆ!!!

ಮುತ್ತಿಹುದು ಕಾರ್ಮುಗಿಲೆಂದಂಜಬೇಡ! (ಬು)   4(1828)

-ತ್ತಿ ಕಟ್ಟಿಹೆನೆಂದು ಗರ್ವ ಪಡಬೇಡ!
ಹುಸಿ ಮಾಯೆಯಾಟ ದಿಟವೆನಬೇಡ! (ಹಿಂ)
-ದು, ಮುಂದಿನ ಗುಣಾಕಾರ ಮಾಡಬೇಡ!
ಕಾರ್ಯವೀಗಿನದು ಮಾಡದಿರಬೇಡ! (ವೈ)
-ರ್ಮುಡಿಯುತ್ಸವವ ನೋಡದೋಡಬೇಡ!
ಗಿರಿಧರನ ವಿಶ್ವಾಸ ಬಿಡಬೇಡ! (ಹಾ)
-ಲೆಂಜಲೆಂದುಪೇಕ್ಷೆ ಮಾಡಿ ಕೆಡಬೇಡ
ದಂಟು ಮುರಿದು ಹೂವಿಗಾಶಿಸಬೇಡ!
ನನ, ಮರಣದಲ್ಲೊದ್ದಾಡಬೇಡ!
ಬೇಯದನ್ನ ಉಣಬಡಿಸಲೇ ಬೇಡ! (ಉಂ)
-ಡರೆ ನಿರಂಜನಾದಿತ್ಯ ಮಾತನಾಡ!!!

ಮುತ್ತು ಕೊಟ್ಟು, ಚಿತ್ತ ಕೆಟ್ಟು, ಕತ್ತು ಕುಯ್ಯ ಬೇಡ! (ಹೊ)   5(2698)

-ತ್ತು, ಹೆತ್ತವರಿಗುತ್ತಮ ಮಗನಾಗ್ದಿರೇಬೇಡ!
ಕೊಲಬೇಡ, ಕಳಬೇಡೆಂಬ ತತ್ವ ಬಿಡ್ಬೇಡ! (ಮು)
-ಟ್ಟು, ಮಡಿಯೆಂದಟ್ಟಹಾಸದಿಂದ್ಹೊಟ್ಟೆ ಹೊರ್ಬೇಡ!
ಚಿತ್ತ ಶುದ್ಧಿ ಮಾಡಿ ಗುರಿ ಮುಟ್ಟದಿರಬೇಡ! (ನೆ)
-ತ್ತರು ಮಾಂಸದ ಗೊಂಬೆಯನ್ನು ಮೋಹಿಸಬೇಡ!
ಕೆರ ಮೆಟ್ಟಿ ಸದ್ಗುರುವಿನೆಡೆಗೋಡಬೇಡ! (ಹು)
-ಟ್ಟು, ಸಾವಿನ ಗುಟ್ಟವ್ನಿಂದರಿಯದಿರಬೇಡ!
ಪಟತನದಿಂದವನೊಡನಾಡ ಬೇಡ!
(ಹೊ)ತ್ತು, ಕಾದು ದರ್ಶನ ಮಾಡಿ ಹೋಗದಿರಬೇಡ!
ಕೊಡುವ ಕರ್ತನವ್ನೆಂಬುದ ಮರೆಯಬೇಡ! (ಅ)
-ಯ್ಯ, ಅಮ್ಮಾ ಎಂದ್ವಿನಯದಿಂದಾಡದಿರಬೇಡ!
ಬೇರೆ ದಿಕ್ಕೆನಗಿಲ್ಲೆಂದ್ಯರಣಾಗ್ದಿರಬೇಡ! (ಗಂ)
-ಡ ನಿರಂಜನಾದಿತ್ಯನೆಂದರಪಾರ್ಥ ಬೇಡ!!!

ಮುದಿನಾಯಿಗನ್ನವಿಕ್ಕುವರಾರು?   3(1147)

ದಿಟ್ಟಪರದನ್ನು ಪ್ರೀತಿಯಿಂದಾರು?
ನಾಯಿ ಬಂತೋಡಿಸೆನ್ನದವರಾರು? (ಬಾ)
-ಯಿ ಬಾರದದನ್ನು ಕೇಳುವರಾರು?
ತಿಯದಕೆ ದತ್ತನಲ್ಲದಾರು? (ಅ)
ನ್ನ, ಪಾನವೆಲ್ಲರಿಗೀವಾತಾ ಗುರು!
ವಿಧಿ ವಿಲಾಸವರಿತವರಾರು? (ಹೊ)
-ಕ್ಕು, ಹಾಸಾಗಿರ್ಪಾತ್ಮನ ಕಂಡರಾರು?
ನವಾಸಿ ಸನ್ಯಾಸಿಗಾಧಾರಾರು?
ರಾಮನಾಮವಲ್ಲದೆಮತ್ತಿನ್ಯಾರು? (ಆ)
-ರು, ನಿರಂಜನಾದಿತ್ಯನಲ್ಲದಾರು???

ಮುದ್ದಿಸಿದರ್ಗೋಪಿಯರೆಲ್ಲಾ ಕೆಂಗಲ್ಲಾ! (ಸ)   5(2520)

-ದ್ದಿಲ್ದೇ ಹಾಲ್ಮೊಸ್ರು ಕದ್ದವನಾ ಕೆಂಗಲ್ಲಾ!
ಸಿಕ್ಕನಾರ ಕೈಗೆಂಬವನಾ ಕೆಂಗಲ್ಲಾ!
ಯೆ ಗೋವ್ಗಳ್ಗೆ ತೋರ್ದವನಾ ಕೆಂಗಲ್ಲಾ! (ಊ)
-ರ್ಗೋಲ್ಹೆಳವರಿಗಾದವನಾ ಕೆಂಗಲ್ಲಾ! (ಪಾ)
-ಪಿಯ ಪಾವನಗೈವವನಾ ಕೆಂಗಲ್ಲಾ!
ಜ್ಞ ರಕ್ಷಣೆ ಮಾಳ್ಪವನಾ ಕೆಂಗಲ್ಲಾ! (ಊ)
-ರೆನಗೆ ಜಗತ್ತೆಂಬವನಾ ಕೆಂಗಲ್ಲಾ! (ಉ)
-ಲ್ಲಾಸವೆಲ್ಲರ್ಗೀವಾ ಗೊಲ್ಲನಾ ಕೆಂಗಲ್ಲಾ! (ಏ)
-ಕೆಂಬವರ್ಗೆ ಜೋಕೆಂಬವನಾ ಕೆಂಗಲ್ಲಾ! (ಮಾ)
-ಗಧಾದಿಗಳ ಕೊಂದವನಾ ಕೆಂಗಲ್ಲಾ! (ಎ)
-ಲ್ಲಾ ನಿರಂಜನಾದಿತ್ಯೆಂಬವ್ನಾ ಕೆಂಗಲ್ಲಾ!!!

ಮುದ್ದು ಮಗುವಿಗೆ ಮದ್ದಿಕ್ಕುವುದೇನಯ್ಯಾ? (ಸ)   2(725)

-ದ್ದು ಮಾಡದೆ ಇರಿಸಿದಂತಿಲ್ಲವೇನಯ್ಯಾ!
ರಣವೆಂದಾದರೂ ಬರಲೇ ಬೇಕಯ್ಯಾ!
ಗುಣಾವಗುಣವೆಣಿಸಬೇಡವೇನಯ್ಯಾ!
ವಿಷಯ ವಾಸನೆಗಾರು ಕಾರಣವಯ್ಯಾ? (ಹ)
-ಗೆತವನ ಸಾಧಿಪವ ತಂದೆಯೇನಯ್ಯಾ?
ಗುವ ತನ್ನಂತೆ ಮಾಳ್ಪವ ತಂದೆಯಯ್ಯಾ! (ಕ)
-ದ್ದಿಲ್ಲ, ಕಾಡಿಲ್ಲ, ಬೇಡಿಲ್ಲ, ನಿನ್ನ ಕಂದಯ್ಯಾ! (ಹ)
-ಕ್ಕು ಸಾಧಿಪಹಂಕಾರವಿವಗಿಲ್ಲವಯ್ಯಾ! (ನೋ)
-ವು ಮಾಡದೆ ಕಾಪಾಡೆಂದು ಬೇಡುವನಯ್ಯಾ!
ದೇಶ, ಕಾಲ, ಸಂದರ್ಭ ನಿನಗುಂಟೇನಯ್ಯಾ!
ತಜನ ಪರಿಪಾಲಕ ನಿನೊಬ್ಬಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ರೂಪ ನಿನ್ನದಯ್ಯಾ!!!

ಮುದ್ದು ಮಾಡುವರಿಗಡ್ಡಿ ಮಾಡಬೇಡ! (ಬಿ)   2(971)

-ದ್ದು ಬಂಧನದಲೊದ್ದಾಡಬೇಡ!
ಮಾನಾವಮಾನ ಲೆಕ್ಕಿಸಬೇಡ! (ಕಾ)
-ಡು, ಮೇಡುಗಳಲೆದಾಡಬೇಡ!
ರ ಗುರುಧ್ಯಾನ ಬಿಡಬೇಡ! (ಇ)
-ರಿಸಿದಂತೆ ಇರದಿರಬೇಡ! (ರಾ)
-ಗ ದ್ವೇಷಗಳಿಗಾಳಾಗಬೇಡ! (ದು)
-ಡ್ಡಿ ನಾಸೆಯಿಂದ ಹಾಳಾಗಬೇಡ!
ಬೇನೆಗಂಜಿ ಸಾಲ ಮಾಡಬೇಡ! (ಕ)
-ಡ, ನಿರಂಜನಾದಿತ್ಯಗೆ ಬೇಡ!!!

ಮುರಲೀ ಕೃಷ್ಣ ಬಂದ ಕಾಣೆ! (ಪ)   4(1488)

-ರಮ ಪುರುಷನವ ಕಾಣೆ!
ಲೀಲಾವತಾರಿಯವ ಕಾಣೆ!
ಕೃಪಾಸಾಗರನವ ಕಾಣೆ! (ಪೂ)
-ಷ್ಣ ಸ್ವರೂಪ ಶ್ರೀ ಕೃಷ್ಣ ಕಾಣೆ!
ಬಂಧು ಬಾಂಧವನವ ಕಾಣೆ!
ರ್ಶನ ಬಹ್ಮಾನಂದ ಕಾಣೆ!
ಕಾಮಕೋಟಿ ತೇಜಾತ್ಮ ಕಾಣೆ! (ಎ)
ಣೆ ನಿರಂಜನಾದಿತ್ಯ ಕಾಣೆ!!!

ಮುರಲೀ ನಾದದಲ್ಲಿ ಬ್ರಹ್ಮಾನಂದ!   5(2929)

ಮ್ಯ ಕದನಕುತೂಹಲಾನಂದ!
ಲೀಲಾಮೂರ್ತಿ ಶ್ರೀರಾಮಗಿದಾನಂದ!
ನಾರೀ ಶಿರೋಮಣಿ ಸೀತೆಗಾನಂದ!
ರ್ಶನವಾದವರಿಗೆಲ್ಲಾನಂದ!
ಯಾನಿಧಿ ರಾಘವನೆಂಬಾನಂದ! (ಕ)
-ಲಿನಲ್ಲೂ ತಾನೇ ತಾನಾಗಿಹಾನಂದ!
ಬ್ರಹ್ಮನ ರಾಣಿಗೆ ತನ್ಮಯಾನಂದ! (ಬ್ರ)
-ಹ್ಮಾ, ವಿಷ್ಣು, ಮಹೇಶ್ವರಿಗಾನಂದ!
ನಂಬಿದವರ ಬೆಂಬಿಡದಾನಂದ!
ತ್ತ ಶ್ರೀ ನಿರಂಜನಾದಿತ್ಯಾನಂದ!!!

ಮುರಲೀ ವಾದನಾನಂದಾ ಶ್ರೀನಿವಾಸ!   4(1725)

ಮಿಸಿ ರಾಗ, ರಾಗಿಣಿಯಲ್ಲಾವಾಸ!
ಲೀನನಾಗ್ಯೆಲ್ಲರಾಕರ್ಷಿಪನಾ ಶ್ರೀಶ!
ವಾಣಿಯ ಅನನ್ಯ ಭಕ್ತಾ ರುಕ್ಮಿಣೇಶ! (ಮಂ)
-ದಹಾಸ ವದನಾರವಿಂದಾ ಲಕ್ಷ್ಮೀಶ!
ನಾಮ ಸಂಕೀರ್ತನಾನಂದಾ ಯಾದವೇಶ!
ನಂದಕಂದ ಗೋವಿಂದಾ ದ್ವಾರಕಾವಾಸ!
ದಾಸದಾಸ ವಿಠ್ಠಲಾ ಪಂಡರೀವಾಸ!
ಶ್ರೀವತ್ಸ ಕೌಸ್ತುಭಾಲಂಕಾರಾ ರಾಧೇಶ!
ನಿತ್ಯ ನಿರಂಜನ ಮನೋರಂಜನೇಶ! (ದೇ)
-ವಾನುಗ್ರಹೇಂದ್ರ್ಯನಿಗ್ರಹಾ ಹೃದಯೇಶ!
ಪ್ತ ಸ್ವರೇಶಾ ನಿರಂಜನಾದಿತ್ಯೇಶ!!!

ಮುರಲೀಧರ ಕೃಷ್ಣ ಬಾರಯ್ಯಾ! [ವ]   2(661)

-ರ ವೇಣುಗಾನ ಮಧುರವಯ್ಯಾ!
ಲೀಲೆ ನಿನ್ನದು ವಿಚಿತ್ರವಯ್ಯಾ!
ರ್ಮ, ಕರ್ಮ ಸದಾ ಮಾಡಿಸಯ್ಯಾ!
ಸ, ವಿರಸ ಮಾಡಬೇಡಯ್ಯಾ!
ಕೃಪೆ ನಿನ್ನದೆನಗೆ ಬೇಕಯ್ಯಾ! (ವೈ)
-ಷ್ಣವ ನಿನ್ನಂತೆನ್ನನಿರಿಸಯ್ಯಾ!
ಬಾಲ ಗೋಪಾಲಕೃಷ್ಣ ನೀನಯ್ಯಾ! (ವ)
-ರ ರಾಸ ವಿಲಾಸ ತೋರಿಸಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಕೃಷ್ಣಯ್ಯಾ!!!

ಮುರಲೀಧರನೆಂದು ಹೆಸರು! (ಕ)   6(3973)

-ರದಲ್ಲಿ ಖಡ್ಗ ಹಿಡಿಯದಿರು!
ಲೀನ ಮುರಲಿಯಲ್ಲೇ ಆಗಿರು!
ರ್ಮ, ಕರ್ಮ ಬದ್ಧರ್ನಾವೀರ್ವರು!
ಕ್ಕಸ ನಾನೆಂದೆಣಿಸದಿರು! (ನೀ)
-ನೆಂದೆಂದೂ ನನ್ನನ್ನು ಬಿಡದಿರು!
ದುರ್ವ್ಯಾಪಾರಕ್ಕೆನ್ನ ದೂಡದಿರು!
ಹೆಮ್ಮೆ ನನಗೇಕೆ ನಿನ್ನೆದುರು?
ದಾ ನನ್ನ ಕಣ್ಣೆದುರ್ನೀನಿರು! (ಇ)
-ರು ನಿರಂಜನಾದಿತ್ಯನಾಗಿರು!!!

ಮುರ್ಕಾದ್ರೇನು, ಹರ್ಕಾದ್ರೇನು ಪ್ರಸಾದ? (ಸ)   6(3770)

-ರ್ಕಾರದಾಜ್ಞೆಯೊಳಗಿಲ್ಲ ಪ್ರಸಾದ! (ಉ)
-ದ್ರೇಕ, ಉದ್ವೇಗದ್ದೇನಲ್ಲ ಪ್ರಸಾದ! (ಅ)
-ನುಕಂಪಾನುಗ್ರಹಾತ್ಮಕ ಪ್ರಸಾದ!
ಠಕ್ಕೆ ಸಿಕ್ಕಲಾರದು ಪ್ರಸಾದ! (ಮಾ)
-ರ್ಕಾಣ್ಣೀಯನಿಗೆ ಸಿಕ್ಕಿತು ಪ್ರಸಾದ! (ಉ)
-ದ್ರೇಕಿ ಯಮನ ಸೋಲ್ಸಿತಾ ಪ್ರಸಾದ! (ಮ)
-ನುಷ್ಯನಿಗಗತ್ಯ ಇಂಥಾ ಪ್ರಸಾದ!
ಪ್ರಜಾಪ್ರಭುತ್ವಕ್ಕೆ ಬೇಕೀ ಪ್ರಸಾದ!
ಸಾಧಕಗೆ ಸಿಕ್ಕುವುದೀ ಪ್ರಸಾದ! (ಕಂ)
-ದ ನಿರಂಜನಾದಿತ್ಯಗೀ ಪ್ರಸಾದ!!!

ಮುಷ್ಕರ ಹೂಡದಿರಬೇಕು! (ನಿ)   6(3876)

-ಷ್ಕಪಟ ಸೇವೆ ಸಾಗಬೇಕು! (ಪ)
-ರಮಾರ್ಥವರಿತಿರಬೇಕು!
ಹೂ, ಹಣ್ಣು, ಭಕ್ತಿಯಾಗಬೇಕು! (ಒ)
ನಾಡಿ ಸಜ್ಜನನಾಗ್ಬೇಕು!
ದಿವ್ಯ ನಾಮ ಜಪಿಸಬೇಕು! (ಮ)
-ರಣಕ್ಕೆ ಅಂಜದಿರಬೇಕು!
ಬೇವು, ಬೆಲ್ಲ ಸವಿಯಬೇಕು! (ಬೇ)
-ಕು ನಿರಂಜನಾದಿತ್ಯಾಗ್ಬೇಕು!!!

ಮುಸುಕನು ತೆಗಿಯೋ ಮುಕ್ಕಣ್ಣಾ!   2(554)

ಸುಮುಖವನು ತೋರೋ ಸೋಮಣ್ಣಾ!
ಲಿಮಲ ಕಳೆಯೋ ಕಾಲಣ್ಣಾ! (ಅ)
-ನುಪಮ ರೂಪ ಮಾರಹರಣ್ಣಾ!
ತೆರೆಮರೆ ಹರಿಯೋ ಶಿವಣ್ಣಾ!
ಗಿರಿಜಾವರ ಗಿರೀಶ್ವರಣ್ಣಾ!
ಯೋಗಿರಾಜ ಶಿವಶಂಕರಣ್ಣಾ!
ಮುಕ್ತಿಪ್ರದಾತ ಗುರು ದತ್ತಣ್ಣಾ! (ಅ)
-ಕ್ಕರೆಯ ಬೀರೋ ಫಣೆಗಣ್ಣಣ್ಣಾ! (ಅ)
-ಣ್ಣಾ! ನಿರಂಜನಾದಿತ್ಯಾನಂದಣ್ಣಾ!!!

ಮೂಗಯ್ಯನಾಗಯ್ಯಾ!   2(630)

ತ್ಯುತ್ತಮದಯ್ಯಾ! (ಅ)
-ಯ್ಯಗಿದಾನಂದಯ್ಯಾ!
ನಾಮ ಜಪಿಸಯ್ಯಾ!
ತಿಗಾಗಿದಯ್ಯಾ! (ಅ)
-ಯ್ಯಾ! ನಿರಂಜನಯ್ಯಾ!!!

ಮೂಗು ಚುಚ್ಚುವುದೊಂದು ಹುಚ್ಚು! (ಮೂ)   3(1306)

-ಗುಬೊಟ್ಟಿಡಬೇಕೆಂಬ ಹುಚ್ಚು! (ನಾ)
-ಚುವುದದಿಲ್ಲವೆಂಬ ಹುಚ್ಚು! (ಹೆ)
-ಚ್ಚು ರೂಪದರಿಂದೆಂಬ ಹುಚ್ಚು (ನೋ)
-ವು ಆದರಾಗಲೆಂಬ ಹುಚ್ಚು! (ಒಂ)
-ದೊಂದು ಕಾಲಕ್ಕದೆಂಬ ಹುಚ್ಚು! (ಇಂ)
-ದು ಅದೆಲ್ಲಾ ಬೇಡೆಂಬ ಹುಚ್ಚು!
ಹುಚ್ಚಿಂದ್ರಿಯಾನಂದೆಂಬ ಹುಚ್ಚು! (ಮೆ)
-ಚ್ಚು, ನಿರಂಜನಾದಿತ್ಯ ಹೆಚ್ಚು!!!

ಮೂಗು, ಮುಖ, ಪಾದಕ್ಕೆ ತಿಕ್ಕಿದ!   5(2877)

ಗುರುದೇವ ದತ್ತನೇ ನೀನೆಂದ!
ಮುಟ್ಟು, ಮಡಿ ಬಿಟ್ಟವ ನೀನೆಂದ!
ರ, ದೂಷಣಾದ್ಯರಲ್ಲೊಂದಾದ!
ಪಾಪಿ ಸತಿಯೆಂದರಿಯದಾದ!
ದ್ತ ಪಾದಕ್ಕಪಚಾರ ಗೈದ! (ಬೆ)
-ಕ್ಕೆಗೀಡಾಗಿ ಏನೇನೋ ಕಕ್ಕಿದ!
ತಿರಿತಿರಿಗದನ್ನೇ ನೆಕ್ಕಿದ! (ಇ)
-ಕ್ಕಿದಮೃತಾನ್ನವನ್ನುಣದಾದ!
ತ್ತ ನಿರಂಜನಾದಿತ್ಯನಾದ!!!

ಮೂಡಿದ್ದು ಮುಳುಗಲೇ ಬೇಕು! (ಬಾ)   6(3700)

-ಡಿದ್ದು ಮತ್ತೆ ಚಿಗುರಬೇಕು! (ಬಿ)
-ದ್ದು ಹೋದದ್ದೆದ್ದು ಬರಬೇಕು!
ಮುದ್ದು ಮಗು ಮುದಿಯಾಗ್ಬೇಕು! (ಅ)
-ಳುವವರು ನಗಲೂ ಬೇಕು!
ಗ್ಗ ಬಗ್ಗನೂ ಆಗಬೇಕು!
ಲೇಖಕ ಸ್ತಬ್ದನಾಗ್ಲೂ ಬೇಕು!
ಬೇಕು ಸಾಕೈಕ್ಯದಿಂದಿರ್ಬೇಕು! (ಟಾ)
-ಕು ನಿರಂಜನಾದಿತ್ಯಾಗ್ಬೇಕು!!!

ಮೂದಲಿಸಿ ನಿನಗೇನು ಸುಖವಮ್ಮಾ?   3(1286)

ಯಾಮಯಿ ನೀನಾಗಬಾರದೇನಮ್ಮಾ? (ಕ)
-ಲಿಸ ಬೇಕೆಲ್ಲಾ ವಿದ್ಯಾ ಬುದ್ಧಿ ನೀನಮ್ಮಾ!
-ಸಿಟ್ಟು ಮಾಡಿ ಕೆಟ್ಟವಳಾಗಬೇಡಮ್ಮಾ!
ನಿನಗೆಲ್ಲಾ ಮಕ್ಕಳೊಂದೇ ಸಮವಮ್ಮಾ!
ನ್ನಲ್ಲಿಷ್ಟು ಉದಾಸೀನವದೇಕಮ್ಮಾ? (ಈ)
-ಗೇನು ಹೆಳಬೇಕೋ ಹೇಳಿ ಮಾಡಿಸಮ್ಮಾ! (ತ)
-ನು, ಮನ, ಪ್ರಾಣಗಳೆಲ್ಲಾ ನಿನ್ನದಮ್ಮಾ!
ಸುಪುತ್ರನಾಗಿ ಜನ್ಮ ಮುಗಿಯಲಮ್ಮಾ! (ದುಃ)
-ಖವೆಷ್ಟೆಂತ ಸಹಿಸಿ ಬದುಕಲಮ್ಮಾ?
ಸ್ತ್ರಾಭರಣದಾಸೆ ನನಗಿಲ್ಲಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಾನಂದ ನೀನಮ್ಮಾ!!!

ಮೂರು ಮೂರ್ತಿಯಾದೊಬ್ಬಗೆ ಮೂರು ಹಾರ! [ತೋ]   4(2387)

-ರುತಿಹನೆಲ್ಲರಿಗೆ ಕೃಪೆಯಪಾರ!
ಮೂರು ಲೋಕಗಳಲ್ಲಿವನ ಸಂಚಾರ! (ಕಾ)
-ರ್ತಿಕೇಯ ತಾನಾಗಿರುವಾ ಗುರುವೀರ!
ಯಾದವೇಂದ್ರನಾಗಿರ್ಪಾ ಕುಂಜವಿಹಾರ! (ಬಂ)
-ದೊದಗುವರಿಷ್ಟ ಹರಾ ವಿಘ್ನೇಶ್ವರ! (ಒ)
-ಬ್ಬನೇ ದೇವ ಜಗಕ್ಕೆಂಬಾ ನಿರ್ವಿಕಾರ!
ಗೆಳೆಯನೆಲ್ಲರಿಗಾಗಿ ಮಿತ್ರಾಕಾರ! (ಮಾ)
-ಮೂಲಿನಂತೆ ತಾನಿರುತ್ತ ನರಾಕಾರ! (ಮ)
-ರುತಾತ್ಮಜನಾಗೀತ ಮಾರುತ್ಯಾಕಾರ! (ಮ)
-ಹಾಬಲೇಶ್ವರನಾಗಿವ ಲಿಂಗಾಕಾರ! (ಮಾ)
-ರಹರ ಶ್ರೀ ನಿರಂಜನಾದಿತ್ಯಾಕಾರ!!!

ಮೂರು ಸೂರ್ಯರ ಕಂಡೆ ಕನಸಿನಲ್ಲಿ! (ಗು)   5(2836)

-ರುದತ್ತನವರೆಂದೆ ಮನಸ್ಸಿನಲ್ಲಿ!
ಸೂರ್ಯ ಯಾತ್ರೆ ಸಾಗುತ್ತಿತ್ತಾಕಾಶದಲ್ಲಿ! (ಕಾ)
-ರ್ಯತತ್ಪರನಾಗಿ ಕೂತಿದ್ದೆ ನಾನಿಲ್ಲಿ! (ವ)
-ರ ಯೋಗದಂಡ ಹಿಡಿದಿದ್ದು ಕೈಯ್ಯಲ್ಲಿ!
ಕಂಡದ್ದ ತೋರಿಸಿದೆ ಮಾತಾಜಿಗಲ್ಲಿ! (ತ)
-ಡೆಯಲಾಗದಾನಂದವಾಯ್ತಾಕೆಗಲ್ಲಿ!
ರೆಯಲೆತ್ನಿಸಿದಳ್ಗಂಗಮ್ಮನಲ್ಲಿ!
ನ್ನಾಪ್ತ ದೊಡ್ಡಯ್ಯ ಕಾಣಿಸ್ಕೊಂಡಾಗಲ್ಲಿ! (ಪು)
-ಸಿಯಲ್ಲೆಂದಾ ಸೂರ್ಯರ ಕಂಡು ತಾನಲ್ಲಿ! (ಕ)
-ನಸಿಂದೆಚ್ಚರಾಯ್ತು ಬ್ರಾಹ್ಮೀ ವೇಳೆಯಲ್ಲಿ! (ಇ)
-ಲ್ಲಿ, ನಿರಂಜನಾದಿತ್ಯ ಮಲಗಿದಲ್ಲಿ!!!

ಮೂರ್ಖನಿಗೌಷಧಿಯಿಲ್ಲ! (ಮೂ)   4(1944)

-ರ್ಖತನಕ್ಯಿಲ್ಲದೇನಿಲ್ಲ!
ನಿರ್ಮಾಪಕನೆಲ್ಲಾ ಬಲ್ಲ! (ಯೋ)
-ಗೌಚಿತ್ಯ ಅವನಿಗಿಲ್ಲ!
ಟ್ಕ್ರಯಾ ಶಕ್ತ್ಯವಗಿಲ್ಲ! (ವ್ಯಾ)
-ಧಿಹರ ಜಪದಿಂದೆಲ್ಲ! (ಜ)
-ಯಿಸಲರಿಷ್ಟದ್ರಿಂದೆಲ್ಲ! (ಬ)
-ಲ್ಲ ನಿರಂಜನಾದಿತ್ಯೆಲ್ಲ!!!

ಮೂರ್ತಿಪೂಜೆ ಸ್ಫೂತೀಪ್ರದಾಯಕ! (ಕೀ)   5(2965)

-ರ್ತಿಯದರದು ಪಾರಮಾರ್ಥಿಕ!
ಪೂಜೆಸ್ಬೇಕ್ಗುಣವಿಮರ್ಶಾತ್ಮಕ! (ಓ)
-ಜೆ ತನ್ನಲ್ಲಿ ಬೆಳೆಯ್ಬೇಕಾತ್ಮಿಕ!
ಸ್ಫೂರ್ತಿ ಕಾರ್ಯಸಿದ್ಧಿಯ ಸೂಚಕ! (ಕೀ)
-ರ್ತಿಗಪೇಕ್ಷಿಸ್ಬಾರದು ಸಾಧಕ!
ಪ್ರಗತಿಗಿದು ಪ್ರತಿಬಂಧಕ! (ಆ)
-ದಾಯ, ನಷ್ಟಗಳೆಲ್ಲಾ ಐಹಿಕ!
(ಭ)ಯ, ಭಕ್ತಿಯಿಂದಾಗ್ಬೇಕು ದೈವಿಕ! (ಲೋ)
-ಕ ನಿರಂಜನಾದಿತ್ಯ ಗಕ್ಷಿಣಿಕ!!!

ಮೂರ್ತಿಯುದ್ದೇಶ ಬಾಳಿನಾದರ್ಶಾ! (ಕೀ)   4(2428)

-ರ್ತಿ, ಅಪಕೀರ್ತಿಯಲಕ್ಷಾಯಾದರ್ಶ! (ಸಾ)
-ಯುಜ್ಯ ಸುಖಾನುಭವದಾದರ್ಶಾ! (ಸ)
-ದ್ದೇನಿಲ್ಲದ ಸಮರಸಾದರ್ಶ!
ಕ್ತಿ, ಸಾಮರ್ಥತೋರದಾದರ್ಶ!
ಬಾಯಿ ಮುಚ್ಚಿ ಸಹಿಸುವಾದರ್ಶ! (ಅ)
-ಳಿದ್ರೂ, ಉಳಿದ್ರೂ ಆನಂದಾದರ್ಶ!
ನಾನು, ನೀನೆಂಬುದಿಲ್ಲದಾದರ್ಶ!
ನುಜರಲ್ಲೂ ತಾನೆಂಬಾದರ್ಶ! (ದ)
-ರ್ಶನ, ನಿರಂಜನಾದಿತ್ಯಾದರ್ಶ!!!

ಮೂರ್ಮೊಗದಾರ್ಗಯ್ಯನೀಗೆಲ್ಲಿ? (ಆ)   4(1846)

-ರ್ಮೊಗನಯ್ಯ ಮುಕ್ಕಣ್ಣನಲ್ಲಿ! (ರಂ)
-ಗನಾಥನ ಸತ್ಸಂಗದಲ್ಲಿ! (ಸ)
-ದಾ ಆತ್ಮಾನುಸಂಧಾನದಲ್ಲಿ! (ಮಾ)
-ರ್ಗದರ್ಶನದಾನಂದದಲ್ಲಿ! (ಕೈ)
-ಯ್ಯಲ್ಲಿ ಅಭಯ ಮುದ್ರೆಯಲ್ಲಿ!
“ನೀ” “ನಾ” ನೆಂಬ ಅಭೇದದಲ್ಲಿ! (ನ)
-ಗೆ ಸೂಸುತ್ತ ವದನದಲ್ಲಿ! (ಇ)
-ಲ್ಲಿ ನಿರಂಜನಾದಿತ್ಯನಲ್ಲಿ!!!

ಮೂರ್ಸಾವಿರವಾದ್ರದೇನು ಮಹಾ? [ಆ]   5(2731)

-ರ್ಸಾವಿರವಾದ್ರೂ ಬರನು ಗುಹಾ!
ವಿರಕ್ತಿಯದ್ದಲ್ಲಿಗೋಡಿ ಬಹಾ! (ವ)
-ರ ಗುರುವಿದನರಿತು ಇಹಾ!
ವಾದ, ಭೇದಕ್ಕವ್ನೊಲಿಯದಿಹಾ! (ಪಾ)
-ದ್ರಸದಂತವನಿಹದಲ್ಲಿಹಾ!
ದೇಹ ದೇಗುಲ ಮಾಡಿಕೊಂಡಿಹಾ! (ತ)
-ನು, ಮನ, ಧನ ಸೇವೆಗೆಂದಿಹಾ!
ದನಾರಿ ಶಿವ ತಾನಾಗಿಹಾ! (ಮ)
-ಹಾ ನಿರಂಜನಾದಿತ್ಯಾನುಗ್ರಹಾ!!!

ಮೃತ್ಯುಂಜಯ ಪೂಜೆ ನಿತ್ಯ ಆಗಬೇಕು! (ಮೃ)    4(1564)

-ತ್ಯುಂಜಯಂತರ್ಯಾಮಿಯೆಂದರಿಯಬೇಕು!
ಗನ್ನಾಥನವನನ್ನೊಲಿಸಬೇಕು!
ಮನ ಭಯದಿಂದ ಪಾರಾಗಬೇಕು!
ಪೂಜೆ ಶ್ರದ್ಧಾ, ಭಕ್ರಿಗಳಿಂದಾಗಬೇಕು! (ಬಂ)
-ಜೆಯರೂ ಪುತ್ರವತಿಯರಾಗಬೇಕು!
ನಿರಂಜನನ ಸದಾ ಸ್ಮರಿಸಬೇಕು! (ಭೃ)
-ತ್ಯ ನಂಜುಂಡೇಶ್ವರನಿಗೆ ಆಗಬೇಕು!
ತನಾಜ್ಞಾಧಾರಕರಾಗಿರಬೇಕು!(ಭ)
-ಗವತ್ಸ್ವರೂಪ ಶಿವ ತಾನಾಗಬೇಕು!
ಬೇಕಿದಕೆ ಗುರುಕೃಪೆ ಬೇಕೇ ಬೇಕು! (ಮಂ)
-ಕು ನಿರಂಜನಾದಿತ್ಯ ಕಳೆಯಬೇಕು!!!

ಮೃದು ಮಧುರ ಕಂಠ ಶ್ರೀಕಂಠ!   4(1584)

ದುರಿತ ದೂರ ಹರ ಶ್ರೀಕಂಠ!
ದನ ವೈರ್ಯುದಾರಿ ಶ್ರೀಕಂಠ!
ಧುರ, ಧೀರ, ಗಂಭೀರ ಶ್ರೀಕಂಠ!
ಸ ಸುಧಾಸಾಗರ ಶ್ರೀಕಂಠ!
ಕಂಚಿ ಕಾಮಾಕ್ಷೀಶ್ವರ ಶ್ರೀಕಂಠ! (ವಿ)
-ಠಲ ನಾಮ ಸುಸ್ವರ ಶ್ರೀಕಂಠ!
ಶ್ರೀಕರ, ಶುಭಕರ, ಶ್ರೀಕಂಠ!
ಕಂಗಳಿಗಗೋಚರ ಶ್ರೀಕಂಠ! (ಕಂ)
-ಠ ನಿರಂಜನಾದಿತ್ಯ ಶ್ರೀಕಂಠ!!!

ಮೆಚ್ಚನಾ ಜಗದೀಶ್ವರನು! (ಮ)   5(2830)

-ಚ್ಚರ ಸ್ವಭಾವದವನನ್ನು!
ನಾಸ್ತಿಕನಾದಂಥವನನ್ನು!
ಗಳ ಮಾಡುವವನನ್ನು!
ರ್ವಿಯಾಗಿರುವವನನ್ನು!
ದೀನರನ್ನುಪೇಕ್ಷಿಪನನ್ನು! (ನ)
-ಶ್ವರಕ್ಕಾಶಿಸುವವನನ್ನು! (ಪ)
-ರ ನಿಂದೆ ಮಾಡುವವನನ್ನು! (ಸೂ)
-ನು ನಿರಂಜನಾದಿತ್ಯಗೆನ್ನು!!!

ಮೆಚ್ಚಿದವನಿಗೆ ಮಸಣ ಸುಖ! (ಸ)   3(1307)

-ಚ್ಚಿದಾನಂದಾತ್ಮಾರಾಮನಿಗಾತ್ಮ ಸುಖ! (ಮಂ)
-ದಮತಿಗೆ ವಿಷಯಾನಂದ ಸುಖ! (ನ)
-ವ ಯುವತಿಗಾನಂದ ಭೋಗ ಸುಖ!
ನಿತ್ಯಾನಂದಾಪೇಕ್ಷಿಗೆ ಯೋಗ ಸುಖ! (ಕಾ)
-ಗೆಗೆ ಹೊಲಸು ಮಾಂಸಾಹಾರ ಸುಖ!
ಡದಿ, ಮಕ್ಕಳು, ಸಂಸಾರ ಸುಖ!
ಜ್ಜನ ಸಂಗದಿಂದ ಶಾಂತಿ ಸುಖ! (ಗು)
-ಣ ಹೀನ ಮಾನವನಿಗಿಲ್ಲ ಸುಖ!
ಸುಖ ದುಃಖ ಸಮನಿಗೆಲ್ಲಾ ಸುಖ! (ಸ)
-ಖ ನಿರಂಜನಾದಿತ್ಯ ನಿತ್ಯ ಸುಖ!!!

ಮೆಚ್ಚುಗೆ ಎಂಬುದೊಂದು ಹುಚ್ಚು! (ಮು)   6(3483)

-ಚ್ಚುವುದದನ್ನು ಹೊಟ್ಟೇಕಿಚ್ಚು! (ತೆ)
-ಗೆಯಬೇಕದನ್ನು ಮೋಕ್ಷೇಚ್ಚು!
ಎಂಟು ಮದದಿಂದೆಲ್ಲಾ ನುಚ್ಚು!
ಬುದ್ಧಿ ಭ್ರಮೆಯಾದಮೇಲ್ಪೆಚ್ಚು! (ಒಂ)
-ದೊಂದಾಗಿ ಜ್ಞಾನ ಬತ್ತಿ ಹಚ್ಚು!
ದುರಾಶೆಗಳನ್ನೆಲ್ಲಾ ಕೊಚ್ಚು!
ಹುಟ್ಟು, ಸಾವಿನ ಕಟ್ಟು ಬಿಚ್ಚು! (ನೆ)
-ಚ್ಚು, ನಿರಂಜನಾದಿತ್ಯನಚ್ಚು!!!

ಮೆಚ್ಚುವವರಾರು ನಿನ್ನನ್ನು? (ಅ)   6(3561)

-ಚ್ಯುತಾನಂತ ಗೋವಿಂದನನ್ನು!
ರವಿತ್ತು ಕಾಪಾಡೆನ್ನನ್ನು!
ರ್ಷ ಬಹಳಾಯ್ತ್ನೋಡ್ದೇ ನಿನ್ನನ್ನು! (ವೈ)
-ರಾಗ್ಯವಿನ್ನೆಂತಿರಬೇಕೆನ್ನು? (ಗು)
-ರು ನೀನೆಂದೊಪ್ಪಿಹೆ ನಿನ್ನನ್ನು!
ನಿರ್ದಯದಿಂದ ನೋಡ್ಬಾರ್ದಿನ್ನು! (ನ)
-ನ್ನ, ನಿನ್ನೈಕ್ಯವಾಗ್ದಿರ್ಬಾರ್ದಿನ್ನು! (ಅ)
-ನ್ನು ನಿರಂಜನಾದಿತ್ಯಾದೆನ್ನು!!!

ಮೆರೆಯರೋ ಭಕ್ತರ್ಗುರುವ ಮರೆಯರೋ! (ತೆ)   5(2699)

-ರೆಮರೆಯ ಕಾಯಿಯಂತವರಿರುವರೋ!
ಮ, ನಿಯಮದಿಂದವರು ಸಂತೃಪ್ತರೋ!
ರೋಮ ರೋಮದಲ್ನಾಮಾಮೃತ ತುಂಬಿಹರೋ!
ಯ, ಭಕ್ತಿಯಲ್ಲವರೆಲ್ಲರ್ಗಾದರ್ಶರೋ! (ಶ)
-ಕ್ತರಾದರೂ ನಯ ವಿನಯಸಂಪನ್ನರೋ! (ದು)
-ರ್ಗುಣದೂರರಾದ ಮಹನೀಯರವರೋ! (ಮ)
-ರು ಮಾತು ಗುರುದೇವನ ಮಾತಿಗಾಡರೋ! (ಅ)
-ವರಿವರ ಮಾತಾಡಿ ಕಾಲ ಕಳೆಯರೋ!
ಡದಿ, ಮಕ್ಕಳ ಚಿಂತೆಯಿಲ್ಲದಿಹರೋ! (ಹೊ)
-ರೆ ಹೊತ್ತಿರಲು ಹರಿ ಭಯವೇನೆಂಬರೋ!
ಮನ ಭಯವಿಲ್ಲದೆ ಅವರಿಹರೋ! (ಬಾ)
-ರೋ ನಿರಂಜನಾದಿತ್ಯಾತ್ಮನನ್ನಿಂದೇ ಸೇರೋ!!!

ಮೆರೆಸಿ ಸ್ಮರಿಸಲೊಂದು ಕಾಲ!   6(3505)

(ಮ)-ರೆಸಿ ಮೋಸ ಮಾಡಲೊಂದು ಕಾಲ!
ಸಿರಿಪತಿಗಿದು ಲೀಲಾ ಜಾಲ!
(ವಿ)-ಸ್ಮಯವೆಮಗವನದೀ ಲೀಲಾ!
(ಅ)-ರಿತು ಪರಮಾರ್ಥಿಯಾಗ್ಬೇಕ್ಬಾಲ!
ತತವಿರಬೇಕು ಸುಶೀಲ!
(ಪೋ)-ಲೊಂಬತ್ತು ದ್ವಾರದಿಂದೆಲ್ಲಾ ಬಲ!
ದುರ್ವ್ರಯವಾಗ್ಬಾರ್ದು ತಪೋಬಲ!
ಕಾಮಕ್ಷಿಗೆ ಕಾಮಾರಿಯ ಬಲ! (ಬಾ)
-ಲ ನಿರಂಜನಾದಿತ್ಯಗಾ ಬಲ!!!

ಮೇಧಾವಿಗಳನ್ನು ತುಳಿಯಬೇಡಿ! (ಸು)   4(2120)

-ಧಾರಣೆಗೆ ಯೋಗ್ಯ ವ್ಯವಸ್ಥೆ ಮಾಡಿ!
ವಿದ್ಯಾರ್ಥಿಗಳನ್ನೆತ್ತಿ ಕಟ್ಟಬೇಡಿ! (ಸಂ)
-ಗವೆಂತಿರ್ಬೇಕೆಂದುಪದೇಶ ಮಾಡಿ! (ಆ)
-ಳಬಲ್ಲವರಿಗಾಡಳಿತ ನೀಡಿ! (ಹೊ)
-ನ್ನು, ಮಣ್ಣಿಗಾಗಿ ಹೊಡೆದಾಡಬೇಡಿ! (ಮಾ)
-ತು ಕಮ್ಮಿಮಾಡಿ ದೇಶಸೇವೆ ಮಾಡಿ! (ಗೂ)
-ಳಿ ಕಾಳಗದ ಬಾಳ ಗೋಳು ಬೇಡಿ! (ನ್ಯಾ)
-ಯ ಸಮ್ಮತಾಚಾರದಿಂದೊಡಗೂಡಿ!
ಬೇಜವಾಬ್ದಾರಿಯಿಂದೇನೂ ಮಾಡ್ಬೇಡಿ! (ಪಾ)
-ಡಿ ನಿರಂಜನಾದಿತ್ಯ ಪೂಜೆ ಮಾಡಿ!!!

ಮೇಲು, ಕೀಳುಮುಖ ನಿನ್ನ ಬೋಳುಮುಖ!   6(3551)

(ಹಾ)-ಲು ತಾನೇ ಮೊಸ್ರು, ಬೆಣ್ಣೆಂಬ ಬಹು ಮುಖ?
ಕೀರ್ತಿ, ಅಪಕೀರ್ತಿ ಭಾವ ಭೇದ ಮುಖ! (ಅ)
-ಳು, ನಗುಗಳೂ ಸ್ಥಿತಿ ವ್ಯತ್ಯಾಸ ಮುಖ!
ಮುದ್ದು ಮುಖ, ಸದ್ದಿಲ್ಲದ ಬುದ್ಧ ಮುಖ!
ಗೇಂದ್ರ, ನಾಗೇಂದ್ರರೆಲ್ಲಾ ಕಾರ್ಯ ಮುಖ!
ನಿತ್ಯ, ಸತ್ಯ, ಆನಂದವೇ ನಿಜ ಮುಖ! (ಅ)
-ನ್ನಪೂರ್ಣಾದಿ ಮಾತಾ ಮುಖ ಪ್ರೀತಿ ಮುಖ!
ಬೋಧನಾ, ಸಾಧನಾ ಮುಖ ಗುರು ಮುಖ! (ಆ)
-ಳು, ಅರಸಾದಿಗಳೆಲ್ಲಾ ದಾಸ ಮುಖ!
ಮುನಿ, ಋಷಿಗಳೆಲ್ಲರೂ ತಪೋ ಮುಖ! (ಸ)
-ಖ ನಿರಂಜನಾದಿತ್ಯ ವಿರಕ್ತ ಮುಖ!!!

ಮೇಲ್ಪುಂಕ್ತಿಯಕ್ಷರವೆಣ್ಸಿಕೋ! [ಶಿ]   4(2390)

-ಲ್ಪಕಾರಪ್ಪನನ್ನು ಸ್ಮರಿಸ್ಕೋ! (ಪ)
-ಕ್ತಿಲೆಕ್ಕ ಮನದಲ್ಲಿರ್ಸಿಕೋ! (ನ್ಯಾ)
-ಯವಾಗಿರ್ಪ ಪದ ಜೋಡ್ಸಿಕೋ! (ಪ)
-ಕ್ಷ ಭಾವನೆಯಿಂದ ಬಿಡ್ಸಿಕೋ! (ವ)
-ರ ಗುರುಕೃಪೆ ಸಂಪಾದ್ಸಿಕೋ! (ಸೇ)
-ವೆಗೋಸ್ಕರ ಜೀವವಿರ್ಸಿಕೋ! (ದ)
-ಣ್ಸಿ ಸಾಯ್ಸದಾಪ್ತರನ್ನಾರ್ಸಿಕೋ! (ಅ)
-ಕೋ, ನಿರಂಜನಾದಿತ್ಯೆನ್ಸಿಕೋ!!!

ಮೇಳಕ್ಕೆ ವೇಳೆ ಬರಬೇಕು! (ಕಾ)   4(2005)

-ಳ ಸಂತೆ ನಿಂತುಹೋಗಬೇಕು! (ಅ)
-ಕ್ಕೆ, ಲೋಕಶಾಂತಿಯೆನಬೇಕು!
ವೇದಾಂತಾಚಾರಕ್ಕಾಗಬೇಕು! (ನಾ)
-ಳೆಯ ವಿಚಾರ ಬಿಡಬೇಕು!
ದುಕೀಗಿನದ್ದಾಗಬೇಕು! (ವ)
-ರ ಗುರುಭಕ್ತಿಯಿರಬೇಕು!
ಬೇರೂರಿದು ಫಲಿಸಬೇಕು! (ಟಾ)
-ಕು ನಿರಂಜನಾದಿತ್ಯಾಗ್ಬೇಕು!!!

ಮೈ ಬಣ್ಣ ಬದಲಾದ್ರೇನಾಯ್ತಮ್ಮ?   6(3362)

ಣ್ಣಕ್ಕಾಶ್ಸಿಲ್ಲ ನಾನ್ತಿಳಿಯಮ್ಮಾ! (ಹು)
-ಣ್ಣನ್ನಾ ಗುರುವಿನ್ನೂ ಮಾಯ್ಸಿಲ್ಲಮ್ಮಾ!
ಯಸಿದ್ದಾವುದೂ ಸಿಕ್ಕಿಲ್ಲಮ್ಮಾ!
ಯಾಮಯನವನೆಂಬರಮ್ಮಾ!
ಲಾಭನನಗಾವ್ದೂ ಆಗಿಲ್ಲಮ್ಮಾ! (ಉ)
-ದ್ರೇಕದಿಂದ ಫಲವೇನಿಲ್ಲಮ್ಮಾ!
ನಾಮಸ್ಮರಣೆಯನ್ಬಿಟ್ಟಿಲ್ಲಮ್ಮಾ! (ತಾ)
-ಯ್ತನವನ್ನವನುಳ್ಸಿಕೊಳ್ಲಮ್ಮಾ! (ಬೊ)
-ಮ್ಮ ನಿರಂಜನಾದಿತ್ಯ ಕಾಣಮ್ಮಾ!!!

ಮೈ ಮರೆತಿಹನು ವಿಶ್ವನಾಥ!   4(1580)

ಧುರ ಗಾನಾನಂದದಲಾತ!
ರೆಪ್ಪೆ ಮುಚ್ಚಿ ಬಾರಿಸುವನಾತ!
ತಿರುಗಿ ನೋಡ ಸುತ್ತುಮುತ್ತಾತ!
ಣಕಾಸೆ ಪಡುವುದಿಲ್ಲಾತ!
ನುಡಿದಂತೆ ನಡೆವವನಾತ!
ವಿಷಯಾಸೆಯಿಲ್ಲದವನಾತ!
ಶ್ವಪಚನತನವಿಲ್ಲದವನಾತ!
ನಾದ ಬ್ರಹ್ಮಾನಂದ ವೈಣಿಕಾತ! (ನಾ)
-ಥ ನಿರಂಜನಾದಿತ್ಯ ವಿಧಾತ!!!

ಮೈ ಸಣ್ಣಗಾಗಬೇಕ್ಮಹಾ ಸ್ವಾಮಿ!   4(2042)

ಸ್ಯಾಹಾರ ಹೆಚ್ಚಾಗ್ಮಾಡು ಪ್ರೇಮಿ! (ಉ)
-ಣ್ಣಬಾರ್ದೇನೆನ್ನೆರಡ್ಸಲ ಸ್ವಾಮಿ (ಆ)
-ಗಾಗಿನ್ನೇನನ್ನೂ ತಿನ್ಬಾರ್ದು ಪ್ರೇಮಿ!
ಗೆಡ್ಡೆ ಗೆಣಸು ತಿನ್ಬೌಹ್ದೇ ಸ್ವಾಮಿ?
ಬೇಯ್ಸದೇ ತಿಂದ್ರೊಳ್ಳೆಯದು ಪ್ರೇಮಿ! (ಬೇ)
-ಕ್ಮನೆಯವ್ರ ಸಹಕಾರ ಸ್ವಾಮಿ! (ಆ)
-ಹಾರ ನೇಮೆಲ್ಲರಿಗೂ ಬೇಕ್ಪ್ರೇಮಿ!
ಸ್ವಾಮಿಯಾಶೀರ್ವಾದವಿರ್ಲಿ ಸ್ವಾಮಿ! (ಸ್ವಾ)
-ಮಿ ನಿರಂಜನಾದಿತ್ಯಾ! ನಮಾಮಿ!!!

ಮೈ, ಕೈ, ನೆಕ್ಕುತ್ತಿತ್ತಾ ಬೆಕ್ಕು!   4(1409)

ಕೈ ತಪ್ಪೀಗ ಹೋಯ್ತಾ ಬೆಕ್ಕು! (ಮ)
-ನೆ ಮಗುವಾಗಿತ್ತಾ ಬೆಕ್ಕು! (ನೆ)
-ಕ್ಕುವುದಾರನ್ನೀಗಾ ಬೆಕ್ಕು? (ಮ)
ತ್ತಿಲ್ಲಿ ಒಪ್ಪುದೇನಾ ಬೆಕ್ಕು? (ಸು)
-ತ್ತಾಡಲಾರದೀಗಾ ಬೆಕ್ಕು!
ಬೆದರುತಿದೀಗಾ ಬೆಕ್ಕು! (ಬೆ)
-ಕ್ಕು ನಿರಂಜನಾದಿತ್ಯಕ್ಕು!!!

ಮೈಗಾಗುವುದಿಲ್ಲಾ, ಬಾಯ್ಮುಚ್ಚುವುದಿಲ್ಲಾ!-(ಹೀ)   3(1234)

-ಗಾಗಿ ಅನಾರೋಗ್ಯ ತಲೆಯೆತ್ತಿತಲ್ಲಾ!
ಗುಣಾವಗುಣ ಮನಸ್ಸು ನೋಡುತ್ತಿಲ್ಲಾ! (ಸಾ)
-ವು, ನೋವಿನ ಗೋಳು ನಿತ್ಯ ತಪ್ಪಿದ್ದಲ್ಲಾ!
ದಿವ್ಯನಾಮ ಜಪದಲ್ಲಾಸಕ್ತಿಯಿಲ್ಲಾ! (ಎ)
-ಲ್ಲಾ ಬರಿ ಬಾಯಿ ಬ್ರಹ್ಮವಾಗಿಹುದಲ್ಲಾ!
ಬಾಯಿ, ಕೈಗಳಲ್ಲೈಕ್ಯ ಕಾಣುತ್ತಲಿಲ್ಲಾ! (ತಾ)
-ಯ್ಮುನಿದರಾದರಿಸುವವರಾರಿಲ್ಲಾ! (ಹು)
-ಚ್ಚು ವ್ಯಾಮೋಹವೇ ಹೆಚ್ಚಾಗಿರುವುದಲ್ಲಾ! (ಮಾ)
-ವುತನಾನೆ ನಿರ್ಲಕ್ಷಿಸಬಾರದಲ್ಲಾ!
ದಿಕ್ಕುತಪ್ಪಿದರೆ ಊರು ಸಿಕ್ಕದಲ್ಲಾ! (ಬ)
-ಲ್ಲಾ ನಿರಂಜನಾದಿತ್ಯನಾಧೀನವೆಲ್ಲಾ!!!

ಮೈಥಿಲಿಗೆ ಇಷ್ಟ ನಿರಂಜನ ಸ್ವಾಮಿ! (ರ)   1(241)

-ಥಿ ದಾಶರಥಿಯವಳ ನಿಜ ಸ್ವಾಮಿ! (ಕ)
-ಲಿ ರಾವಣಾಂತಕನವಳಿಗೆ ಸ್ವಾಮಿ!
ಗೆದ್ದನವಳ ಸ್ವಯಂವರದೀ ಸ್ವಾಮಿ!
ಳೆಯ ಭಾರವನಿಳುಹಿದಾ ಸ್ವಾಮಿ! (ಕ)
-ಷ್ಟ ಸಹಿಸಿ, ಇಷ್ಟ ಸಾಧಿಸಿದಾ ಸ್ವಾಮಿ!
ನಿತ್ಯದಲವಳಾರಾಧ್ಯ ಗುರು ಸ್ವಾಮಿ!
ರಂಜಿಪನವಳ ಮನ ಸದಾ ಸ್ವಾಮಿ!
ನಕಸುತೆಗೀತ ಶ್ರೀರಾಮ ಸ್ವಾಮಿ! (ವಾ)
-ನರಾಂಜನೇಯ ಪ್ರಿಯನಾಕೆಯ ಸ್ವಾಮಿ!
ಸ್ವಾಮಿಭಕ್ತಳಿವಳಿಗೆ ಪ್ರಾಣಾ ಸ್ವಾಮಿ!
ಮಿತ್ರ ನಿರಂಜನಾದಿತ್ಯ ಸ್ವಾಮಿ!!!

ಮೈಮೇಲೆ ಹಾರಿತೊಂದು ಕಂದುಬಣ್ಣದ ಹೆಣ್ಣು ನಾಯಿ! (ಆ)   5(2912)

ಮೇಲೆ ಪಾದುಕೆಯ ಏಟಿನಿಂದ ಸತ್ತಿತು ಆ ನಾಯಿ! (ತ)
-ಲೆ, ಮುಖಕ್ಕೆಲ್ಲಾ ಬಿದ್ದೇಟನ್ನು ಸಹಿಸದಾಯ್ತಾ ನಾಯಿ!
ಹಾದಿ ತಪ್ಪಿ ಕಕ್ಕಸ್ಗುಂಡಿಗೆ ಮುಖ ತೂರಿತಾ ನಾಯಿ!
(ಚೀ)ರಿ ಓಡಿಹೋದವು ಸಂಗಡವಿದ್ದ ಮೂರ್ನಾಲ್ಕು ನಾಯಿ!
ತೊಂದರೆಗೀಡಾಯಿತಾ ದುರ್ಬುದ್ಧಿಯ ಜೊತೆಯ ನಾಯಿ!
ದುರ್ವೃತ್ತಿಯನ್ನಡಗಿಸಿದ ಗುರು ಕರುಣಾಮಯಿ!
ಕಂಡು, ಕೇಳಿಲ್ಲದೀ ಕಥೆ ಕಣ್ತೆರೆಯಲು ಸಹಾಯಿ!
ದುಸ್ಸಂಗದೂರಳಾಗಿ ಗುರಿ ಸೇರಿದಳ್ಮೀರಾಬಾಯಿ!
ಚ್ಚಲುನೀರ ನೆಚ್ಚಿ ಹುಚ್ಚಾಗಿ ಕೊಚ್ಚಹೋಯ್ತಾ ನಾಯಿ! (ಉ)
-ಣ್ಣಬಾರದನ್ನವನ್ನುಂಡು ಹಾಳಾದಥರ್ವಣಾಧ್ಯಾಯಿ!
ತ್ತಾತ್ರೇಯನಾದರ್ಶವೆಂದೆಂದೂ ನಿಜ ಸುಖದಾಯಿ!
ಹೆತ್ತ ತಾಯಿಯಂತವನು ಸದಾ ಸರಳ ಹೃದಯಿ! (ಮ)
-ಣ್ಣುಪಾಲಾಗುವ ಈ ಶರೀರಕ್ಕೆ ಏಕಿಷ್ಟು ಬಡಾಯಿ?
ನಾಮಸ್ಮರಣಾ ಬಲದಿಂದಾದಳ್ಸೀತೆ ಮಹಾತಾಯಿ! (ಹೋ)
-ಯಿತವಳ ಭಯ, ಅದಳ್ನಿರಂಜನಾದಿತ್ಯ ಮಯಿ!!!

ಮೈಮೇಲೋಡಾಡ್ತಿರ್ವೆ ಅಜ್ಞಾನಿಯಿರ್ವೆ!   4(2055)

ಮೇಲಿಂದ್ಮೇಲೆ ಬೇಸರುಂಟುಮಾಡ್ತಿರ್ವೆ! (ಆ)
-ಲೋಚ್ಸು, ತಪ್ಪು ನನ್ನದಲ್ಲೆನುತ್ತಿರ್ವೆ! (ಓ)
-ಡಾಡುವನಾಹಾರಕ್ಕಾಗೆನುತ್ತಿರ್ವೆ! (ಹೆಂ)
-ಡ್ತಿ, ಮಕ್ಳ ಸಾಕುವುದಕ್ಕೆನುತ್ತಿರ್ವೆ! (ಇ)
-ರ್ವೆ, ನಿರ್ಭಯವಾಗಿ ನಾನೆನ್ನುತ್ತಿರ್ವೆ!
ನ್ಯಾಯ ನನಗಾಗ್ತಿದೆನ್ನುತ್ತಿರ್ವೆ!
ಜ್ಞಾನದಾನ ಮಾಡೆನಗೆನುತಿರ್ವೆ!
ನಿನಗಿರಲಿ ದಯೆಯೆನುತ್ತಿರ್ವೆ! (ಸಾ)
-ಯಿಸ್ಬೇಡ ಬಡವನನ್ನೆನುತ್ತಿರ್ವೆ! (ಇ)
-ರ್ವೆ ನಿರಂಜನಾದಿತ್ಯಯ್ಯೆನುತ್ತಿರ್ವೆ!!!

ಮೈಲುದ್ದವಿದ್ದರೇನು ಮೇಘಮಾಲೆ? (ಎ)   1(303)

-ಲುಬಿಲ್ಲದ ಗೊಂಬೆ ಆ ಮೇಘ ಬಾಲೆ! (ಎ)
“-ದ್ದರೆ ಗಿರಿ, ಬಿದ್ದರೆ ವಾರೀ”! ಲೀಲೆ!
ವಿಚಾರದಿಂದಾಗಲಿ ತಪೋ ಮಾಲೆ! (ಎ)
-ದ್ದಡಗುವಂತಲ್ಲ ಶ್ರೀ ಗುರುಲೀಲೆ!
ರೇಚಕ, ಪೂರಕದೀ ದೀರ್ಘ ಮಾಲೆ!
ನುಡಿಯಡಗಿ ಗುರು ಸಿದ್ಧಿ ಲೀಲೆ!
“ಮೇರುವೂ ನುಚ್ಚುನೂರು”! ಕಾಲ ಮಾಲೆ!
ರ್ಷಣೆ, ಪ್ರಕಟಣೆ, ಮಾಯಾ ಲೀಲೆ!
ಮಾಡುತಿರು ಸ್ವಧರ್ಮ ಕರ್ಮ ಮಾಲೆ!
ಲೆಕ್ಕಿಸ ನಿರಂಅಜನಾದಿತ್ತಾ ಲೀಲೆ!!!

ಮೋಡ ಮುಚ್ಚಿದಾಗ ನೋಡುವುದೇನಯ್ಯಾ? (ಅ)   1(291)

-ಡಸಿರುವೆಡರ ಕಳೆದು ನೋಡಯ್ಯಾ!
ಮುಸಿಕಿನಲಿ ಮೂರ್ತಿ ಕಾಣಿಸದಯ್ಯಾ! (ಅ)
-ಚ್ಚಿನಲಿಪ್ಪಾಗ ರೂಪ ತಿಳಿಯದಯ್ಯ!
ದಾರಿ ಹರಿದಾಗ ಸಂಚಾರವಿಲ್ಲಯ್ಯಾ!
ತಿಟ್ಟಾಗ ದಾನವೆಂತಹುದಯ್ಯಾ?
ನೋವಿನ ಕಾಲು ನಡೆಯುವುದೇನಯ್ಯಾ? (ಅ)
-ಡುವಾಗ ಬಡಿಸಿ ಉಣಿಪುದೆಂತಯ್ಯಾ? (ಆ)
-ವುದಕ್ಕೂ ಸಂದರ್ಭಾನುಕೂಲ ಬೇಕಯ್ಯಾ!
ದೇಹಾರೋಗ್ಯ ಕರ್ಮಕನುಕೂಲವಯ್ಯಾ! (ಅ)
-ನವರತ ನೆನೆದಿದನು ಬಾಳಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನೀಗಿಹನಯ್ಯಾ!!!

ಮೋಡ ಮುಸುಕಿದ ದಿನವಿಂದು! [ನೋ]   5(2574)

-ಡಲಾಗದಾಯ್ತು ಮಿತ್ರನನ್ನಿಂದು!
ಮುಖ ಸುತ್ತು ಕೆಲಸದಲ್ಲಿಂದು!
ಸುದಿನ ದುರ್ದಿನದ್ದರಿವಾಯ್ತಿಂದು!
ಕಿವಿಗೊಡಲಿಲ್ಲಾರ ಮಾತ್ಗಿಂದು!
ತ್ತನಿಚ್ಛೆಯಂತಾಗ್ವುದೆಂದೆಂದು!
ದಿವ್ಯನಾಮಜಪಗತ್ಯೆಂದೆಂದು!
ಮಿಸ್ಬೇಕ್ಪಾದವೇ ಗತಿಯೆಂದು! (ಹೂ)
-ವಿಂದರ್ಚಿಸಬೇಕದನ್ನೆಂದೆಂದು! (ಅ)
-ದು ನಿರಂಜನಾದಿತ್ಯನದ್ದೆಂದು!!!

ಮೋಡ ಮುಸುಕಿದರೇನಂತೆ? [ಓ]   2(872)

-ಡದದೇನು ಮಾಡುವುದಂತೆ?
ಮುಚ್ಚಿದ್ದು ತೆರೆಯುವುದಂತೆ!
ಸುಮುಖಿ ಗುರುಮೂರ್ತಿಯಂತೆ!
ಕಿರುಬ ಬೇಡನ ಪಾಲಂತೆ! (ಮ)
-ದನನ ಗತಿಯೇನಾಯ್ತಂತೆ?
ರೇಗಿದಕ್ಷಿಗೆ ತುತ್ತಾಯ್ತಂತೆ!
ನಂಬಿಗೆ ಬಿಡಬಾರದಂತೆ! (ಮಾ)
-ತೆ, ನಿರಂಜನಾದಿತ್ಯನಂತೆ!!!

ಮೋಡದಲಡಗಿದ ಶಕ್ತಿ ನಿಬಿಡ! (ಅ)   1(336)

-ಡಗಿದರೇಂತಡಗೀತಾಶಕ್ತಿ? ಗಾಢ! (ಅ)
-ದರಿಂದಹುದು ಮನಸಿಗೆ ಪವಾಡ! (ಆ)
-ಲಯದೊಳಗಿನಮ್ಮನ ಪ್ರೀತಿಗಾಢ! (ಆ)
-ಡದೇ ಮಾಡುತಿರ್ಪುದವಳ ಕೈವಾಡ!
ಗಿರಿಜಾಪತಿಗಿವಳ ಪ್ರೀತಿ ಗೂಢ! (ಅ)
-ದರಿಯದೆ ಭಿನ್ನವೆನ್ನುವನು ಮೂಢ (ಆ)
-ಶರೀರೀಶರೀರಿಯಾದುದವನಾಡ! (ಭ)
-ಕ್ತಿ ಯಿಂದದರಿತರಾಗುವನಾರೂಢ!
“ನಿನಗಾಗಿ ನಿನ್ನೊಳಗೆಂ” ಬಾಟ ಗೂಢ!
ಬಿಡಿಸಿ ನೋಡಲರಿವುದು ಪವಾಡ! (ಅ)
-ಡಾಗಿಲ್ಲ! ನಿರಂಜನಾದಿತ್ಯನಾರೂಢ!!!

ಮೋಡದಲ್ಲೂ ನನ್ನ ನೋಡಯ್ಯಾ! [ಮೋ]   2(521)

-ಡದಲ್ಲಿ ನಾನಿಲ್ಲವೇನಯ್ಯಾ! (ಅ)
-ದದರ ವೇಳೆಗದದಯ್ಯಾ! (ಅ)
-ಲ್ಲೂ, ಇಲ್ಲೂ ನಾನೆಂದರಿಯಯ್ಯಾ!
ನ್ನನ್ನು ನಿನ್ನಲ್ಲೂ ಕಾಣಯ್ಯಾ! (ನ)
-ನ್ನನ್ನುಳಿದಾವುದೂ ಇಲ್ಲಯ್ಯಾ!
ನೋವು ಸಂಕುಚಿತ ಭಾವಯ್ಯಾ! (ಪ)
-ಡಬಾರದು ಸಂಶಯವಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾನಯ್ಯಾ!!!

ಮೋಡದಿಂದ ಕಡಲಾಯ್ತು! (ಕ)   3(1236)

-ಡಲಿನಿಂದ ಮೋಡವಾಯ್ತು!
ದಿಂಬು ತಲೆಗೆ ಇಂಬಾಯ್ತು! (ಅ)
-ದಕ್ಕೆ ಹೇತು ತಲೆಯಾಯ್ತು!
ರ್ಮದಿಂದ ಒಡಲಾಯ್ತು! (ಒ)
-ಡಲಿನಿಂದ ಕರ್ಮವಾಯ್ತು! (ಫ)
-ಲಾಪೇಕ್ಷೆಯಿಲ್ಲದೆಲ್ಲಾಯ್ತು! (ಆ)
-ಯ್ತು ನಿರಂಜನಾದಿತ್ಯಾಯ್ತು!!!

ಮೋಡದಿಂದಾಯ್ತು ಕಡಲು! (ಕ)   3(1237)

-ಡಲಿನಿಂದಾಯ್ತು ಮುಗಿಲು! (ಬೆಂ)
-ದಿಂಧನದಿಂದಾಯ್ತಿಜ್ಜಲು (ಅ)
-ದಾಯ್ತೊಲೆ ಬೆಂಕಿ ಹಚ್ಚಲು! (ಆ)
-ಯ್ತು, ಹೋಯ್ತು ಬಹಳೊಡಲು!
ರ್ಮದಿಂದಾಯ್ತೀ ಒಡಲು! (ಒ)
-ಡಲಿಂದಾಯ್ತು ಕರ್ಮಗಳು! (ಬ)
-ಲು, ನಿರಂಜನಾದಿತ್ಯಾಳು!!!

ಮೋಡನೋಡಿ ಗಿಡಕ್ಕುಪವಾಸ ಬೇಡ!   6(3386)

(ದ)-ಡ ಸೇರ್ವಮುಂಚೆ ಊರಿನ ಯೋಚ್ನೆ ಬೇಡ!
ನೋಡದೇ ಮದುವೆಗೊಪ್ಪಿಕೊಳ್ಳಬೇಡ!
(ಹಾ)-ಡಿಸದೆ ಸಂಭಾವನೆ ನಿರ್ಧರಿಸ ಬೇಡ!
ಗಿಡನೋಡಿ ಹಣ್ಣಿನ ಭವಿಷ್ಯಾಡ್ಬೇಡ!
ಬ್ಬನೋಡಿ ಲಾಡುತಿನ್ನುವಾಸೆ ಬೇಡ!
(ಬೆ)-ಕ್ಕು ಇದ್ದಮಾತ್ರಕ್ಕಿಲಿಸತ್ತಿತೆನ್ಬೇಡ!
ರಮಾತ್ಮನ ಕಾಣದೇನೂ ಹೇಳ್ಬೇಡ!
ವಾಙ್ಮಯಮಾತಿಗೆ ಮರುಳಾಗ ಬೇಡ!
ತತ ಸಾಧನೆ ಮಾಡದಿರ ಬೇಡ!
ಬೇಡ, ಊಹಾಪೋಹದ ಬದುಕೇ ಬೇಡ!
(ಬೇ)-ಡ ನಿರಂಜನಾದಿತ್ಯಗಾಬಾಳೇ ಬೇಡ!!!

ಮೋಡವನು ಹರಿದು ಬಾ ಹೊರಗೆನ್ನ ಸದ್ಗುರುವೇ! (ನೋ)   2(520)

-ಡದಾನೆಂತಿರಬಹುದೆಂದೆನಗರುಹು ಗುರುವೇ!
ರ ಪ್ರಸಾದಕಾಗಿ ಕಾದಿರುವೆ ನಾ ಶ್ರೀ ಗುರುವೇ! (ಅ)
-ನುದಿನದ ಸೇವೆ ನಿನ್ನದೆನಗಾಧಾರ ಗುರುವೇ!
ರ್ಷವಿಲ್ಲದಾಗಿದೆ ನಿನ್ನ ಕಾಣದಿಂದು ಗುರುವೇ! (ಆ)
-ರಿಹರೆನಗೆ ನಿನ್ನಂಥಾಪ್ತರಿಳೆಯಲ್ಲಿ ಗುರುವೇ?
ದುರಿತಹರ ನೀನೆಂದು ನಾ ನಂಬಿಲ್ಲವೇ ಗುರುವೇ?
ಬಾ, ಬೇಗ ಬಾ, ಜಗದೋದ್ಧಾರ ಸಾರ್ವಭೌಮ ಗುರುವೇ!
ಹೊತ್ತು ಹೋಗುತಿದೆ, ಕತ್ತು ಸುಸ್ತಾಗುತಿದೆ ಗುರುವೇ!
ಗಳೆ ಮಾಡುವೆನೆಂದು ಸಿಟ್ಟಾಗಬೇಡ ಗುರುವೇ! (ತೆ)
-ಗೆದು ಮುಸುಕನು ತೋರು ಮೋರೆಯನೀಗ ಗುರುವೇ! (ನ)
-ನ್ನ ಪ್ರಾಣ ಸಂಕಟ ನಿನ್ನಾಟವಾಗಿಹುದು ಗುರುವೇ!
ರ್ವಕಾರಣಿ ನೀನೆನ್ನ ದಣಿಸಬೇಡ ಗುರುವೇ! (ಸ)
-ದ್ಗುರು ದೇವಾ! ತ್ರಿಮೂರ್ತಿ ಸ್ವರೂಪಾ!! ಬೇಗ ಬಾಗುರುವೇ! (ಗು)
-ರು ನೀ ಮುನಿದರಿನ್ಯಾರು ಕಾಯ್ವರಿಹರು ಗುರುವೇ? (ಅ)
-ವೇಳೆನ್ನದೆ ಬಾಗ ಬೇಗ ನಿರಂಜನಾದಿತ್ಯ ಗುರುವೇ!!!

ಮೋಡವೀಗೆನಗಾಗಿ ಚದರಲಯ್ಯಾ! (ಅ)   2(826)

-ಡಚಣೆಯಾಗಿರುವುದು ಸೇವೆಗಯ್ಯಾ!
ವೀತರಾಗ ಗುರುವರನು ನೀನಯ್ಯಾ! (ತೆ)
-ಗೆದೊಗೆದು ಮುಸುಕ ಬಾ ಹೊರಗಯ್ಯಾ!
ಮಸ್ಕರಿಸುವೆನು ನಿನ್ನಡಿಗಯ್ಯಾ!
ಗಾಳಿ ಬೀಸುತಿದ್ದರೂ ತಡವೇಕಯ್ಯಾ? (ತ್ಯಾ)
-ಗಿಯಾಗಿಹೆನು ನಿನಗಾಗಿ ನಾನಯ್ಯಾ!
ರಾಚರಕ್ಕೆಲ್ಲಾ ಆಧಾರ ನೀನಯ್ಯಾ!
ತ್ತ ಗುರುರೂಪಿ ನೀನಲ್ಲವೇನಯ್ಯಾ?
ಘುರಾಮಗೆ ವಿಜಯ ನಿನ್ನಿಂದಯ್ಯಾ!
ಕ್ಷ್ಯ ನೀನೆನಗೆ ಸತತ ಕಾಣಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ರೂಪಿ ನೀನಯ್ಯಾ!!!

ಮೋಡವೀಗೋಡ ಬೇಕೆಂಬೆ! (ಕ)   5(2661)

-ಡಲ ಪಾನ ಮಾಡ್ಬೇಕೆಂಬೆ!
ವೀರ್ಯವೃದ್ಧಿಗದ್ಬೇಕೆಂಬೆ!
ಗೋಪಾಲನೆಯಾಗ್ಬೇಕೆಂಬೆ! (ಬ)
-ಡವರುದ್ಧಾರಾಗ್ಬೇಕೆಂಬೆ!
ಬೆಗ್ಬೇಗೂರು ಸೇರ್ಬೇಕೆಂಬೆ!
ಕೆಂದಾವ್ರೆಯರಳ್ಬೇಕೆಂಬೆ! (ಆಂ)
-ಬೆ ನಿರಂಜನಾದಿತ್ಯಾಂಬೆ!!!

ಮೋರೆ ತೋರುವಾಗ ಬೇರೆ ನೋಡುವುದೇಕಯ್ಯಾ? (ಕ)   2(523)

-ರೆದಾಗ ಬಂದಿಲ್ಲವೆಂದು ಕೋಪವಾಯ್ತೇನಯ್ಯಾ?
ತೋರುವ ಸಮಯ ಕಾಯ್ವ ಸಹನೆ ಬೇಕಯ್ಯಾ! (ಬ)
-ರುವ ಹೋಗುವವರಿಗನಾದರವಿಲ್ಲಯ್ಯಾ! (ಆ)
-ವಾವ ವೇಳೆಗಾಗಬೇಕಾದದ್ದಾಗಬೇಕಯ್ಯಾ!
ತಿ ನಿನ್ನದೊಂದೇ ಸಮ ಸಾಗುತಿರಲಯ್ಯಾ!
ಬೇರೆ ಕಡೆ ನೋಡಿದರೆ ಮೋರೆ ಕಾಣದಯ್ಯಾ! (ಅ)
-ರೆ ಕ್ಷಣದಲ್ಲಿ ಅದಲು ಬದಲಾಗ್ವುದಯ್ಯಾ!
ನೋಡುವಾಸೆ ಸದಾ ಕುದಿಯುತಿರಬೇಕಯ್ಯಾ! (ಹು)
-ಡುಗಾಟದ ಕಣ್ಣುಮುಚ್ಚಾಟವಿದಲ್ಲವಯ್ಯಾ! (ಆ)
-ವುದು ಸರ್ವಸ್ವವೋ ಅದೇ ನೆನೆಯುತಿರಯ್ಯಾ!
ದೇಶ ಕಾಲ ಸ್ಥಿತಿಗೆ ಉದಾಸೀನನಾಗಯ್ಯಾ!
ರ್ಮ ನಿನ್ನದೆಂತಿದ್ದರೂ ನಡೆಯಬೇಕಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನ ನೆನೆದು ಬಾಳಯ್ಯಾ!!!

ಮೋಸ ಕೊಟ್ಟಿತು ನಿನ್ನಾಸೆ ನಿನಗೆ!   5(3220)

ಮಯ ನೋಡಿ ಬಂತದು ಹೊರಗೆ!
ಕೊರಳಿಗುರುಳಾಯ್ತುದು ಕೊನೆಗೆ! (ಕ)
-ಟ್ಟಿ ನೀನಿಟ್ಟಿದ್ದ ಬುತ್ತಿ ಬರಿದಾಗೆ!
ತುಚ್ಛವೀ ಸಂಸಾರವೆಂದರಿವಾಗೆ!
ನಿಶ್ಚಲ ಭಕ್ತನಾಗು ಗುರುವಿಗೆ! (ತ)
-ನ್ನಾನಂದದಲ್ಲೀವ ಪಾಲು ನಿನಗೆ!
ಸೆರೆಯಾಳಂತಿರು ನೀನವನಿಗೆ!
ನಿನ್ನುದ್ಧಾರವಕ್ಕು ಕಾಲವೊದಗೆ!
ಮಿಸು ಸದಾ ಶ್ರೀ ಪಾದಂಗಳಿಗೆ! (ಬಾ)
-ಗೆದ್ದು ನಿರಂಜನಾದಿತ್ಯನಡಿಗೆ!!!

ಮೋಸ ಮಾಡಿತಾ ಕರಿ ಮೋಡ!   6(3911)

ಸಿಯ ವಂಚಿಸಿತಾ ಮೋಡ!
ಮಾಯವಾಯ್ತೇಕಾ ಮಳೆ ಮೋಡ? (ಜ)
-ಡಿ ಮಳೆಯಾಗ್ಬೇಕಿತ್ತಾ ಮೋಡ!
ತಾನಿಟ್ಟಂತಿರ್ಬೇಕೆಂಬಾ ಮೃಡ!
ನಿಕರ ತೋರದೇ ಬಿಡ! (ದಾ)
-ರಿ ಕೈಲಾಸಕ್ಕೆ ಡೊಂಕು ಮಾಡ!
ಮೋಸಾರೋಪಣೆಗೆಡೆ ಕೊಡ! (ಮೃ)
-ಡ ನಿರಂಜನಾದಿತ್ಯಾ ಮೋಡ!!!

ಮೋಸಕ್ಕೆ ವಯೋಮಿತಿಯಿಹುದೇನಯ್ಯಾ?   6(4308)

ಣ್ಣವ, ದೊಡ್ಡವರಲ್ಲದಿಹುದಯ್ಯಾ! (ಬೆ)
-ಕ್ಕೆಗೂ, ಅದಕ್ಕೂ ಬಹಳನ್ನೋನ್ಯವಯ್ಯಾ!
ರ್ಣಾಶ್ರಮ ಭೇದ ಅದಕ್ಕಿಲ್ಲವಯ್ಯಾ!
ಯೋಗಿಗದರಿಂದ ಕಿರುಕುಳವಯ್ಯಾ!
ಮಿತ್ರರೂ ಶತೃಗಳಾಗ್ಗರದ್ರಿಂದಯ್ಯಾ!
ತಿನ್ಲಿಕ್ಕುಣ್ಲಿಕ್ಕೂ ಇಲ್ಲದಂತಾಗ್ವುದಯ್ಯಾ! (ಬಾ)
-ಯಿ, ಕೈಗಳ ಮಲಿನಗೊಳಿಪುದಯ್ಯಾ!
ಹುಚ್ಚನಾಗಿ ಕೊನೆಗೆ ಸಾಯುವನಯ್ಯಾ!
ದೇವರ ಸೇವೆಗದು ಮಣಿವುದಯ್ಯಾ!
ರನಿಗೀಗದರಿವಾಗಬೇಕಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾನಂದನಾಗಯ್ಯಾ!

ಮೋಹದಿಂದ ದೈವಿಕ ನಷ್ಟ!   1(363)

ರಿ, ಹರರಿಗೂ ಈ ಕಷ್ಟ! (ಅ)
-ದಿಂಗಿದರೆಲ್ಲಾ ಮಾತು ಸ್ಪಷ್ಟ!
ತ್ತಗುರುವಾಗೆ ಪ್ರತಿಷ್ಟ!
ದೈವಾನುಗ್ರಹ “ನಾಮ” ಶ್ರೇಷ್ಠ! (ಅ)
-ವಿವೇಕದಪಚಾರ ಕಷ್ಟ!
ರುಬಿನಿಂದತ್ಯಂತ ನಷ್ಟ!
ರರಿದ ಮರೆತು ಕಷ್ಟ! (ಇ)
-ಷ್ಟ! ನಿರಂಜನಾದಿತ್ಯ ಶ್ರೇಷ್ಠ!!!

ಮೋಹನಾ ಮಾಯಾ ಮನೋ ಭಾವನಾ!   2(511)

ರ್ಷವಿದಲ್ಪಕಾಲಾ ಭಾವನಾ!
ನಾಮ, ರೂಪೆಲ್ಲಾ ಭಿನ್ನ ಭಾವನಾ!
ಮಾತು, ಕಥೆ ಅಸತ್ಯ ಭಾವನಾ!
ಯಾತ್ರೆ, ಜಾತ್ರೆ, ಅನಿತ್ಯ ಭಾವನಾ!
ನೆ, ಮಠ ವ್ಯಾಮೋಹ ಭಾವನಾ!
ನೋಟ, ಕೂಟ, ಕಪಟ ಭಾವನಾ!
ಭಾನು, ಕೋಟಿ ತೇಜಾತ್ಮ ಭಾವನಾ!
ರ ಗುರು ಕರುಣಾ ಭಾವನಾ!
‘ನಾ’ ನಿರಂಜನಾದಿತ್ಯ ಭಾವನಾ!!!

ಮೌನ ಮನ ಜೀವ ಮಹಾದೇವ!   1(233)

ಮನ ದಮನ ದೇವ ಭಾವ!
ಲ ವಿಮಲ ಮಹಾನುಭಾವ!
ಕಾರ, ಸಾಕಾರ, ಏಕ ಭಾವ!
ಜೀವನಾಶಾರಹಿತಾತ್ಮ ಭಾವ!
ರ ಗುರು ಸರ್ವೇಶ್ವರ ಭಾವ!
ಮತಾ ದೂರ ನಿರ್ಮೋಹ ಭಾವ!
ಹಾನಿ, ವೃದ್ಧಿ, ಕ್ಷಯ ಶೂನ್ಯ ಭಾವ!
ದೇಶ, ಕಾಲ ಜಿತ ನಿತ್ಯ ಭಾವ!
ಸ್ತು ನಿರಂಜನಾದಿತ್ಯ ಭಾವ!!!

ಮೌನಾಭ್ಯಾಸದಿಂದೇನಾಯ್ತು?   3(1210)

ನಾನಾರೆಂಬರಿವುಂಟಾಯ್ತು! (ಅ)
-ಭ್ಯಾಸ ಶಿವಾಜ್ಞೆಯಿಂದಾಯ್ತು!
ದಾತ್ಮಾನಂದ ಕಂಡಾಯ್ತು! (ಅಂ)
-ದಿಂದು, ಮುಂದೆಂಬುದು ಹೋಯ್ತು!
ದೇಹ ದೇವಾಲಯವಾಯ್ತು!
ನಾಮದಿಂದದು ಭರ್ತಾಯ್ತು! (ಆ)
-ಯ್ತು, ನಿರಂಜನಾದಿತ್ಯಾಯ್ತು!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ