ಭಕ್ತ ಭಗವಂತರಿಗೆಪ್ಪತ್ತು! (ಯು)   5(3069)

-ಕ್ತ ಪೂಜೆಯಿಂದಾನಂದ ಜಗತ್ತು!
ಜನಾನಂದ ಪಡ್ಬೇಕೀ ಹೊತ್ತು!
ತಿಸಿಹೋಯಿತರ್ವತ್ತೊಂಬತ್ತು!
ವಂಶಜರ್ನಾವ್ಭಾರ್ಗವಾಗಾಗ್ಬೇಕು!
ವಂಚಕರಿಗೇಕೆ ಸವಲತ್ತು!
ಪಸ್ಸು ವಿರಾಜಿಸಬೇಕಿತ್ತು!
ರಿಪುಗಳಾರೂ ಸಾಯಲಿವತ್ತು!
ಗೆಳೆಯಾರ್ಕನಿಳೆಗೆಂದು ಗೊತ್ತು! (ಅ)
-ಪ್ಪಣೆಯಂತಿರದಿದ್ದರಾ ಪತ್ತು! (ಹೊ)
-ತ್ತು ನಿರಂಜನಾದಿತ್ಯ ಸಂಪತ್ತು!!!

ಭಕ್ತ ಭಗವಂತರುದ್ದೇಶ ಅಭಿನ್ನ! (ಮು)   6(3872)

-ಕ್ತನೆನಿಸುವನು ಅರಿತರೆ ತನ್ನ!
ಗವಂತನಿರುವನರಿತಿದನ್ನ!
ರ್ವಾತೀತ ಸ್ಥಿತಿಯಿದು ಬಲು ಚೆನ್ನ!
ವಂದನೆ ನಿಂದನೆ ತನಗೆ ಬೇಕೆನ್ನ!
“ತತ್ವಮಸಿ”ಯ ಸಾರ ರೂಪ ಸಂಪನ್ನ! (ಗು)
-ರುದತ್ತ ಬಣ್ಣಿಸಿಹನಿಂತು ತಾ ತನ್ನ! (ಇ)
-ದ್ದೇನೆಲ್ಲರೊಳಗೆನ್ನುತ್ತಿಹನಾ ರನ್ನ!
ರಣನಾಗಿ ಬಿಡಹಂಕಾರವನ್ನ!
ವನು ಉದ್ಧಾರ ಮಾಡುವನು ನಿನ್ನ!
ಭಿಕ್ಷುವೆಂದರಿಯಬಾರದವನನ್ನ! (ನಿ)
-ನ್ನನ್ನವ್ನೆಂದರಿ ನಿರಂಜನಾದಿತ್ಯನನ್ನ!!!

ಭಕ್ತನ ಮೇಲೆ ಸೋಲಿನ ಸುರಿಮಳೆ! (ವ್ಯ)   4(1966)

-ಕ್ತವಾಗದಿಹುದು ಗುರುಲೀಲಾ ಮಳೆ! (ಅ)
-ನನ್ಯ ಭಕ್ತಿಗಮಿತಾಘಾತದಾ ಮಳೆ!
ಮೇಲಿಂದ ಮೇಲೆ ಗೋಳಿನ ಗಾಳಿ ಮಳೆ! (ತ)
-ಲೆಯೆತ್ತ್ಯೋಡಾಡಗೊಡದಾ ಜಡಿ ಮಳೆ!
ಸೋತವನ ಪ್ರಾಣ ಹಿಂಡುವುದಾ ಮಳೆ! (ಒ)
-ಲಿದು ಪಾಲಿಸೆಂದರೂ ನಿಲ್ಲದಾ ಮಳೆ! (ಅ)
-ನವರತದಭ್ಯಾಸಕ್ಕಡ್ಡಿ ಆ ಮಳೆ!
ಸುಮುಹೂರ್ತೋದಯಕ್ಕಡಚಣ್ಯಾ ಮಳೆ!
ರಿಪುಕುಲಕ್ಕನುಕೂಲಾ ಕೆಟ್ಟ ಮಳೆ!
ಹಾದೇವನೇ ತಡೆಯಬೇಕಾ ಮಳೆ! (ಕೊ)
-ಳೆಸದು ನಿರಂಜನಾದಿತ್ಯನಾ ಮಳೆ!!!

ಭಕ್ತನಿಂದ ಭಗವಂತನಾದ! [ಭ]   5(2875)

-ಕ್ತ ಭಗವಂತನಿಂದ ಉಂಟಾದ!
ನಿಂದಕಗೆ ದತ್ತ ಕತ್ತೆಯಾದ!
ತ್ತನಿಂದಾತ ಕುತ್ತಿಗೀಡಾದ!
ವಭಯದಿಂದಾತ ಹುಚ್ಚಾದ!
ತಿಗೆಟ್ಟಲೆದಾಡುವಂತಾದ!
ವಂಚಕರ ಜಾಲಕ್ಕೊಳಗಾದ!
ಲೆ ಮರಸ್ಯೋಡಾಡುವಂತಾದ!
ನಾಮಜಪ ಬಿಟ್ಟು ನಾಯಿಯಾದ!
ತ್ತ ನಿರಂಜನಾದಿತ್ಯನಾದ!!!

ಭಕ್ತರ ದಾಸ ನಾನಿಂದು! (ಯು)   4(2090)

-ಕ್ತವಕಾಶ ಸಿಕ್ಕಿತಿಂದು! (ನ)
-ರ, ನಾರಿಯರಿಗದಿಂದು! (ಉ)
-ದಾರಿ ಶ್ರೀ ಗುರುವೆಂದೆಂದು!
ರ್ವರಾಪ್ತವನೆಂದೆಂದು!
ನಾ, ನೀ ಭೇದವಿಲ್ಲೆಂದೆಂದು!
ನಿಂದ್ಯಾಸ್ತುತ್ಯಾತೀತೆಂದೆಂದು! (ಇ)
-ದು, ನಿರಂಜನಾದಿತ್ಯಂದು!!!

ಭಕ್ತರ ಭಕ್ತ ಭಗವಂತ! (ಶ)   2(993)

-ಕ್ತ ಸದ್ಗುರುವಾ ಭಗವಂತ!
ಮೇಶನಾಪ್ತಾ ಭಗವಂತ!
ವದೂರನಾ ಭಗವಂತ! (ಯು)
-ಕ್ತ ತತ್ವ ಸ್ಥಿತಾ ಭಗವಂತ!
ಕ್ತಿ ಮುಕ್ತೀಶಾ ಭಗವಂತ!
ಗನದಂತಾ ಭಗವಂತ!
ವಂದನಾರ್ಹನಾ ಭಗವಂತ! (ಆ)
-ತ ನಿರಂಜನಾ ಭಗವಂತ!!!

ಭಕ್ತರ ಭಕ್ತಾ ಭಗವಂತ! (ಶ)   2(992)

-ಕ್ತ ಗುರುದತ್ತಾ ಭಗವಂತ! (ನ)
-ರ, ಹರಿರೂಪಾ ಭಗವಂತ!
ಕ್ತ ಪ್ರಾಣೇಶಾ ಭಗವಂತ! (ವ್ಯ)
-ಕ್ತಾವ್ಯಕ್ತವೆಲ್ಲಾ ಭಗವಂತ!
ಕ್ತಿ, ಮುಕ್ತೀಶಾ ಭಗವಂತ!
ಗನದಂತಾ ಭಗವಂತ!
ವಂದನಾನಂದಾ ಭಗವಂತ! (ಆ)
-ತ ನಿರಂಜನಾದಿತ್ಯಾನಂತ!!!

ಭಕ್ತರಭೀಷ್ಟ ಸಲ್ಲಿಸಿ ಭಕ್ತಿ ಬಲಿಸಪ್ಪಾ! (ಶ)   4(1798)

-ಕ್ತ ನೀನೆಂಬುದರರಿವೆಲ್ಲರಿಗಾಗಲಪ್ಪಾ! (ಶ)
-ರಣಾಗತರ ನಿರಾಶೆಗೊಳಿಸಬೇಡಪ್ಪಾ!
ಭೀರುಗಳವರೆಂದೆನಿಸಬಹುದೇನಪ್ಪಾ? (ಭ್ರ)
-ಷ್ಟರಾಗಿ ಅವರು ಕೆಟ್ಟುಹೋಗಬಾರದಪ್ಪಾ!
ರ್ವ ಕಾರಣಕರ್ತ, ಸರ್ವ ಶಕ್ತ ನೀನಪ್ಪಾ! (ಬ)
-ಲ್ಲಿದ ಬಡವನೆಂಬ ಭೇದ ನಿನಗಿಲ್ಲಪ್ಪಾ!
ಸಿರಿದೇವಿಗೊಲಿದಂತೆಲ್ಲರಿಗೊಲಿಯಪ್ಪಾ!
ವಭಯವೆಡೆಬಿಡದೆ ಕಾಡುವುದಪ್ಪಾ! (ಶ)
-ಕ್ತಿ ನೀನಿತ್ತು ತರಳರ ಕಾಪಾಡಬೇಕಪ್ಪಾ!
“ಬಸಿರ್ಗುಂಟು ಬಾಯ್ಗಿಲ್ಲ” ವೆಂದಾಗಬಾರದಪ್ಪಾ! (ನ)
-ಲಿನಲಿದು ಭಜನೆ ನಿನ್ನದು ಮಾಡಿಸಪ್ಪಾ!
ಖನಾಗಿ ಬಂದು ನಿನ್ನೊಡನಾಟ ನೀಡಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯಾನಂದನುಗ್ರಹಿಸಪ್ಪಾ!!!

ಭಕ್ತರಾಗಲಿಲ್ಲ, ಮುಕ್ತರಾಗಲಿಲ್ಲ! (ಯು)   5(2907)

-ಕ್ತ ವಿಚಾರದಿಲ್ಲದೇನೂ ಆಗ್ವುದಿಲ್ಲ!
ರಾಗ, ದ್ವೇಷವೇ ಕಾರಣ ದುಃಖಕ್ಕೆಲ್ಲ!
ದ್ದೆ, ಹೊಲಗಳ ವ್ಯಾಜ್ಯವೇ ಈಗೆಲ್ಲ! (ಮ)
-ಲಿನ ವಾಸನೆಯ ದೃಶ್ಯವೇ ಎಲ್ಲೆಲ್ಲ! (ನ)
-ಲ್ಲ, ನಲ್ಲೆಯರಲ್ಲಿ ಏಕಮತವಿಲ್ಲ!
ಮುನಿಜನರ ಶುಶ್ರೂಷೆ ಬೇಕಾಗಿಲ್ಲ! (ವ್ಯ)
-ಕ್ತದಲ್ಲಿ ಅವ್ಯಕ್ತವನ್ನು ಕಾಣುತ್ತಿಲ್ಲ!
ರಾಮನಾಮ ಬರೆದಾನಂದಿಸುತ್ತಿಲ್ಲ!
ರ್ವದಿಂದ ಬೀಗಿ ಬಿರಿಯುವರೆಲ್ಲ! (ಕ)
-ಲಿತದ್ದನ್ನು ಕಾರ್ಯಕ್ಕಿಳಿಸುವುದಿಲ್ಲ! (ಪು)
-ಲ್ಲ ನಿರಂಜನಾದಿತ್ಯಾತ್ಮ ತಾವಾಗಿಲ್ಲ!!!

ಭಕ್ತರಾಗಿ ಕುಣಿದರೆಲ್ಲಾ! (ಶ)   4(1663)

-ಕ್ತ ಗುರುವಿನಡಿಯಲೆಲ್ಲಾ!
ರಾತ್ರಿ, ತಾಳ, ಮೇಳದಿಂದೆಲ್ಲಾ!
ಗಿರಿಧರ ಗೋಪಾಲೆಂದೆಲ್ಲಾ!
ಕುಡಿದೆವಮೃತವೆಂದೆಲ್ಲಾ! (ತ)
-ಣಿಯದುತ್ಸಾಹದಿಂದಂದೆಲ್ಲಾ!
ತ್ತನಾನಂದವಿದೆಂದೆಲ್ಲಾ! (ಮ)
-ರೆತು ದೇಹಭಾವವನೆಲ್ಲಾ! (ಬ)
-ಲ್ಲಾ ನಿರಂಜನಾದಿತ್ಯನೆಲ್ಲಾ!!!

ಭಕ್ತರಿಗನ್ಯಾಯವಾಗಬಾರದಮ್ಮಾ! (ಯು)   5(2654)

-ಕ್ತ ಸಹಾಯವರಿಗೆ ಸದಾ ಮಾಡಮ್ಮಾ! (ಕಿ)
-ರಿಯರ್ಗೆ ನಿನ್ನ ಹೊರತಾರು ದಿಕ್ಕಮ್ಮಾ?
ದರಿಸಿ ಬುದ್ಧಿ ಕಲಿಸು ನೀನಮ್ಮಾ!
ನ್ಯಾಯಾನ್ಯಾಯದರಿವವರಿಗಿಲ್ಲಮ್ಮಾ! (ಹೇ)
-ಯವಾಗಿಹ ಕಳ್ಳತನ ಮಾಳ್ಪರಮ್ಮಾ! (ಯಾ)
-ವಾಗಲೂ ಕುಹಕ ಬುದ್ಧಿ ತೋರ್ಪರಮ್ಮಾ!
ದ್ದೆ, ಹೊಲ ಮಾರಿ ಜೂಜಾಡುವರಮ್ಮಾ!
ಬಾಯಾರಿದೆಂದು ಹೆಂಡ ಕುಡಿವರಮ್ಮಾ! (ಪ)
-ರಧನ, ಪರಸ್ತ್ರೀ ಹುಚ್ಚವರಿಗಮ್ಮಾ!
ಯೆ ಅವರಮೇಲೀಗುಂಟಾಗಲಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯ ನೀನೇ ಕಾಣಮ್ಮಾ!!!

ಭಕ್ತವತ್ಸಲಾ ನೀಡೋ ಸತ್ಫಲಾ! (ಯು)   5(2505)

-ಕ್ತ ಸೇವೆ ತಗೊಳ್ಳೋ ಶೇಷಾಚಲ!
ತ್ಸ ನಾನಲ್ಲೇನೋ ಆದಿ ಮೂಲಾ? (ಸ)
-ತ್ಸಹವಾಸ್ಯಾನಲ್ವೇನೋ ನಿರ್ಮಲಾ? (ಮಾ)
-ಲಾ, ಕಮಂಡಲುಧರಿತ್ರಿ ಬಾಲಾ!
ನೀನೇ ಗತಿಯೆನಗೆ ಮಾಲೋಲಾ! (ಕೊ)
-ಡೋ ದರ್ಶನವೀಗ ವನಮಾಲಾ!
ಕಲ ಕಲಾ ಮೂರ್ತಿ ಗೋಪಾಲಾ! (ಚಿ)
-ತ್ಫಲವಿತ್ತುದ್ಧರಿಸೋ ನೃಪಾಲಾ! (ಕಾ)
-ಲಾ ನಿರಂಜನಾದಿತ್ಯಾತ್ಮ ಜ್ವಾಲಾ!!!

ಭಕ್ತಾಗ್ರಗಣ್ಯ ಬಸವಣ್ಣಾ! (ಮು)   4(1961)

-ಕ್ತಾತ್ಮ ವಿಚಾರಿಯವನಣ್ಣಾ! (ಉ)
-ಗ್ರತಪೋನಿಷ್ಠಾತ ಕಾಣಣ್ಣಾ! (ಸಂ)
-ಗ ಶಿವನದವನಿಗಣ್ಣಾ! (ಗ)
-ಣ್ಯನವ ಶಿವಗಣಕ್ಕಣ್ಣಾ!
ರಡಾಸೆ ಅವನಿಗಿಲ್ಲಣ್ಣಾ!
ರ್ವ ಹಿತೈಷಿಯವನಣ್ಣಾ!
ರ್ಣಭೇದ ರಹಿತಾತಣ್ಣಾ (ಅ)
-ಣ್ಣಾ ನಿರಂಜನಾದಿತ್ಯಾತಣ್ಣಾ!!!

ಭಕ್ತಾನುಗ್ರಹ ದಾತ ದತ್ತ! (ಯು)   2(543)

-ಕ್ತಾಯುಕ್ತ ಸುವಿಚಾರಿ ದತ್ತ! (ಅ)
-ನುಪಮ ಪ್ರೇಮಮೂರ್ತಿ ದತ್ತ!
ಗ್ರಹ ದೋಷ ವಿನಾಶಿ ದತ್ತ!
‘ಹರೇ ರಾಮ’ ಶ್ರೀ ಗುರು ದತ್ತ!
ದಾತ, ನಾಥ, ತ್ರಿಮೂರ್ತಿ ದತ್ತ!
ಪೋ ನಿಷ್ಠಾವಧೂತ ದತ್ತ!
ತ್ತ, ದತ್ತ, ಭಜಿಸೋ ದತ್ತ! (ದ)
-ತ್ತ, ನಿರಂಜನಾದಿತ್ಯ ದತ್ತ!!!

ಭಕ್ತಿ ತೆಗೆಸಲಿ ಬಾಗಿಲನ್ನು! (ಶ)   6(3382)

-ಕ್ತಿ ಮುಚ್ಚಿಸಲೆಲ್ಲಾಕಾಲದನ್ನು!
ತೆರೆದ್ಬಂದೊಳಗೆ ಮುಚ್ಚದನ್ನು!
ಗೆಳತಿಯೆಂದರಿ ಶಕ್ತಿಯನ್ನು!
ಚ್ಚಿದಾನಂದಕ್ಬೇಡವಳನ್ನು! (ಒ)
-ಲಿದವರವಳಿವಳೆಲ್ಲವನ್ನು!
ಬಾಲಕನವಳಿಗೆ ನೀನೆನ್ನು!
ಗಿರಿಧರ ಗೋಪಿಗಾದಂತೆನ್ನು!
ಯಮಾಳ್ಪಳವಳ್ಕಷ್ಟವನ್ನು! (ತಿ)
-ನ್ನು ನಿರಂಜನಾದಿತ್ಯಾನ್ನವನ್ನು!!!

ಭಕ್ತಿ ಪೂಜೆಯಲ್ಲಿ ಭಗವಂತ! [ಭ]   2(635)

-ಕ್ತಿಲ್ಲದಲ್ಲದೃಶ್ಯ ಭಗವಂತ!
ಪೂರ್ಣ, ಗುಣಾತೀತ ಭಗವಂತ! (ಅ)
-ಜೆ

ಆನಂದಾತ್ಮ ಶ್ರೀ ಭಗವಂತ! (ಜಾ)
-ಯರಾಮಾತ್ಮ ರೂಪ ಭಗವಂತ! (ಅ)
-ಲ್ಲಿಲ್ಲಿ, ಎಲ್ಲರಲಿ ಭಗವಂತ!
ಕ್ತನಾದರಿಂತು ಭಗವಂತ!
ಗನ ವಿರಾಜ ಭಗವಂತ! (ಅ)
-ವಂತರ್ಯಾಮ್ಯಾಗಿಹ ಭಗವಂತ! (ಆ)
-ತ ನಿರಂಜನಾದಿತ್ಯ ಶ್ರೀಕಾಂತ!!!

ಭಕ್ತಿ, ಭಾವ ಭಜನೆ ಬೇಕು! (ಯು)   4(1445)

-ಕ್ತಿ, ಶಕ್ತಿ, ಸಾಮಥ್ಯೋ

ಕ್ತಿ ಸಾಕು!
ಭಾಗವತೋತ್ತಮಾಗ ಬೇಕು! (ಭ)
-ವದ ಬಂಧನವಿನ್ನು ಸಾಕು!
ಕ್ತಿ ನಿಶ್ಚಲವಾಗಬೇಕು!
ಗತ್ತಿನೊಡನಾಟ ಸಾಕು!
ನೆಮ್ಮದಿಯ ಬಾಳಿರಬೇಕು!
ಬೇನೆಯೀವ ವಿಷಯ ಸಾಕು! (ಬೇ)
-ಕು ನಿರಂಜನಾದಿತ್ಯಾಗ್ಬೇಕು!!!

ಭಕ್ತಿಯ ಹೊನಲ್ಹರಿಯಬೇಕು! (ಮು)   5(2563)

ಕ್ತಿಯಿದ್ರಲ್ಮುಳುಗಿಯಾಗಬೇಕು! (ಭ)
-ಯವೆಳ್ಳಷ್ಟೂ ಪಡದಿರಬೇಕು!
ಹೊತ್ತು, ಗಿತ್ತು ನೋಡದಿರಬೇಕು! (ಜ)
-ನರ ಮಾತಿಗಂಜದಿರಬೇಕು! (ಹಾ)
-ಲ್ಹಣ್ನುಗಳಾಹಾರವಿರಬೇಕು! (ಕ)
-ರಿದ ತಿಂಡಿ ತಿನ್ನದಿರಬೇಕು!
ಮ, ನಿಯಮದಿಂದಿರಬೇಕು!
ಬೇರಾರ್ಮಾತೂ ಆಡದಿರಬೇಕು! (ಬೇ)
-ಕು ನಿರಂಜನಾದಿತ್ಯನೆನ್ಬೇಕು!!!

ಭಕ್ತಿಯಿಂದ ನರಸಿಂಹ ಶಾಂತಿ! [ಮು]   2(789)

-ಕ್ತಿದಾಯಕ ನರಸಿಂಹ ಶಾಂತಿ! (ಶ್ರೀ)
-ಯಿಂದಾಯಿತು ನರಸಿಂಹ ಶಾಂತಿ!
ಯಾಭಯ ನರಸಿಂಹ ಶಾಂತಿ! (ಜ)
-ನಕಾನಂದ ನರಸಿಂಹ ಶಾಂತಿ!
ಮಾನಂದ ನರಸಿಂಹ ಶಾಂತಿ!
ಸಿಂಹಮಾಯೆ ನರಸಿಂಹ ಶಾಂತಿ!
ರ್ಷಪ್ರದ ನರಸಿಂಹ ಶಾಂತಿ!
ಶಾಂತರೂಪ ನರಸಿಂಹ ಶಾಂತಿ! (ಗ)
-ತಿ, ಶ್ರೀ ನಿರಂಜನಾದಿತ್ಯ ಶಾಂತಿ!!!

ಭಕ್ತಿಯೋಗ್ದಿಂದ ರೋಗ ಹೋಗ್ದಿದ್ರದೂ ರೋಗ್ವೇ! (ತ)   5(3271)

-ಕ್ತಿಗನುಸರಿಸಿದ ಭಕ್ತಿ ಸಾಕಲ್ಲವೇ?
ಯೋಗಕ್ಕಂತೆ, ಅಳತೆಗಳೇನಿಲ್ಲಲ್ಲವೆ? (ಆ)
-ಗ್ದಿಂದೂ, ಮುಂದೂ ಯಾವಾತನಿಗೂ ಕೇಡಲ್ಲವೇ?
ತ್ತನನಿದೆಲ್ಲಾ ನಿತ್ಯ ಕೇಳುತ್ತಿರುವೆ!
ರೋಗಕ್ಕವನ ಜಪ ಸಾಕೆನ್ನುತ್ತಿರುವೆ!
ತಿಸಿತ್ಕಾಲ ದುಃಖದಲ್ಲೆನ್ನುತ್ತಿರುವೆ!
ಹೋರಾಟವಿನ್ನು ಸಾಕ್ಮಾಡೆನ್ನುತ್ತಲಿರುವೆ! (ದಿ)
-ಗ್ದಿಗಂತಕ್ಕೂ ದೈವೀಕ ಹರಡ್ಲೆನ್ನುತ್ತಿರ್ವೆ! (ಭ)
-ದ್ರ ಸರ್ಕಾರಕ್ಕಿದೇ ದಾರಿಯೆನ್ನುತ್ತಿರುವೆ!
ದೂರುತ್ತನ್ಯರ ಹಾಳಾಗಿ ಹೋಗುತ್ತಿರುವೆ! (ವಿ)
-ರೋಧ ಪಕ್ಷ ತನ್ನಲ್ಲೇ ತುಂಬಿದೆನ್ನುತ್ತಿರ್ವೆ! (ಬಾ)
-ಗ್ವೇ, ನಿರಂಜನಾದಿತ್ಯನಿಗೆ ಮೊರೆಯಿಡ್ವೆ!!!

ಭಗವಂತನಾನಂದಕ್ಕಾರಡ್ಡಿ? (ಯೋ)   6(4030)

-ಗದಿಂದವನೇ ತಾನಾಗ್ಲಾರಡ್ಡಿ?
ವಂದನೆ ನಿಂದನೆಯಾಗದಡ್ಡಿ!
ತ್ವ ತಿಳಿಯದಿದ್ರೆಲ್ಲಾ ಅಡ್ಡಿ!
ನಾಮ ರೂಪಕ್ಕಂಟಿಕೊಂಡ್ರೂ ಅಡ್ಡಿ!
ನಂಬಿಕೆಯಿಲ್ಲದಿದ್ರೂ ಅಡ್ಡಿ!
ಮೆ, ಶಮೆಯಿಲ್ಲದಿದ್ರದಡ್ಡಿ! (ಹ)
-ಕ್ಕಾಗಿರ್ಪಾಗಿದೆಲ್ಲರಿಗೇ ಕಡ್ಡಿ?
ಮಿಸಿದಾಗವನಲ್ಲಿಲ್ಲಡ್ಡಿ! (ಅ)
-ಡ್ಡಿ, ನಿರಂಜನಾದಿತ್ಯಗೊಡ್ಲಡ್ಡಿ!!!

ಭಗವಂತನಿಂದ ಯೋಗಪ್ರದರ್ಶನ! (ಯೋ)   5(3012)

-ಗದಿಂದ ಹನುಮಂತಗಾತ್ಮ ದರ್ಶನ!
ವಂಶಕ್ಕೆ ಕೀರ್ತಿ ತಂದಿತು ರಾಮಾಯಣ!
ನ್ಮಯವಾಯ್ತದರಲ್ಲಿ ಋಷಿಮನ!
ನಿಂದಕನಿಂದಾಯ್ತು ರಾಮಗೆ ವ್ಯಸನ!
ಯೆಯಿಂದ ಸೀತೆಯ ದುಃಖ ಶಮನ!
ಯೋಗ್ಯವಾಯಿತು ಲವ, ಕುಶ ಜನನ!
ತಿ, ಸ್ಥಿತಿಗಾದರ್ಶ ಮುನಿ ಪಾವನ!
ಪ್ರಭು ರಾಮನಲ್ಲಾಯ್ತು ಮತ್ತೆ ಕದನ!
ಶರಥಾತ್ಮಗಾಯ್ತು ನಿರ್ಮಲ ಮನ! (ಸ್ಪ)
-ರ್ಶ ಮಕ್ಕಳದ್ದಾದಾಗಾಯ್ತು ವಿಮೋಚನ!
ಮೋ ನಿರಂಜನಾದಿತ್ಯ ನಾರಾಯಣ!!!

ಭಗವತ್ಪ್ರಸಾದ ಒಮ್ಮತದಿಂದ ಹಂಚಿಕೊಳ್ಳಿ!   6(3678)

ರ್ವ ಬಿಟ್ಟನ್ಯೋನ್ಯವಾಗಿ ಒಗಟು ಬಿಡಿಸಿಕೊಳ್ಳಿ!
ರುಣಾನಾಲೆಯೂ ನಿಮ್ಮವರಿಗೆಂದರಿತ್ಕೊಳ್ಳಿ! (ಸ)
-ತ್ಪ್ರಜೆಗಳಾಗಲುದಾರ ಬುದ್ಧಿ ಬೆಳೆಸಿಕೊಳ್ಳಿ!
ಸಾಹಸ ರಚನಾ ಕಾರ್ಯದಲ್ಲಿ ತೋರಿಸಿಕೊಳ್ಳಿ!
ರ್ಪ, ದಂಭದಿಂದ ಅಶಾಂತಿಯೆಂದರಿತುಕೊಳ್ಳಿ!
ಗ್ಗಟ್ಟಿನಿಂದ ಕಳ್ಳನನ್ನು ಹೊರಗಟ್ಟಿಕೊಳ್ಳಿ! (ನಿ)
-ಮ್ಮ, ನಮ್ಮ ಹೋರಾಟ ವಿವೇಕದಿಂದ ಮುಗ್ಸಿಕೊಳ್ಳಿ!
ಜ್ಞರ ಸಲಹೆಗಳನ್ನೂ ಪರಾಂಬರ್ಸಿಕೊಳ್ಳಿ! (ಅಂ)
-ದಿಂದಿನ ಸ್ಥಿತಿ, ಗತಿಗೆ ತಕ್ಕಂತೆ ನಡೆದ್ಕೊಳ್ಳಿ!
ಒನೆ ಲಿನೆ ಮಿ

ಸಿ
ಹಂಗಿಗರನ್ಯರಿಗಾಗ್ದೆ ಸ್ವತಂತ್ರರಾಗಿದ್ಕೊಳ್ಳಿ!
ಚಿರಾಯುರಾರೋಗ್ಯ ಭಾಗ್ಯವಂತರಾಗಿದ್ದುಕೊಳ್ಳಿ!
ಕೊಟ್ಟವ ಕಿತ್ತುಕೊಳ್ಳದಂತೆ ಭಕ್ತಿಯಿಂದಿದ್ಕೊಳ್ಳಿ! (ಕೊ)
-ಳ್ಳಿ, ನಿರಂಜನಾದಿತ್ಯಾನಂದ ಸಂಪಾದಿಸಿಕೊಳ್ಳಿ!!!

ಭಗವದ್ಭಕ್ತ ಹೇಗಿರಬೇಕು?   5(3113)

ಗನಮಣಿಯಂತಿರಬೇಕು!
ರಗಳ ಬೇಡದಿರಬೇಕು! (ತ)
-ದ್ಭಜನಾನಂದದಲ್ಲಿರಬೇಕು! (ಮು)
-ಕ್ತನಾಗಲಿಕ್ಕಿದು ಬೇಕೇಬೇಕು!
ಹೇಳಿದಂತೆ ಮಾಡುತ್ತಿರಬೇಕು!
ಗಿಡವಾಗಿ ಮರವಾಗಬೇಕು!
ಸಪುರಿ ಹಣ್ಣನಾಗುಣ್ಬೇಕು!
ಬೇಲಿಯೊಳಗಾ ಮರವಿರ್ಬೇಕು! (ಬೇ)
-ಕು ನಿರಂಜನಾದಿತ್ಯನೆಲ್ಲಕ್ಕೂ!!!

ಭಗವದ್ಭಕ್ತರೆಂದರಭಿಮಾನ!   5(3167)

ರ್ವಿಗಳಿಗಿದೆ ದುರಭಿಮಾನ!
ಸ್ತ್ರಾಭರಗಳಿಂದಲ್ಲ ಮಾನ! (ತ)
-ದ್ಭಜನಾನಂದರಿಗಾತ್ಮಾಭಿಮಾನ! (ಮು)
-ಕ್ತ ಜೀವನ ಆವರಿಗೆ ಸನ್ಮಾನ! (ಯಾ)
-ರೆಂದನ್ನದೇ ಮಾಡುವರು ಜೀವನ!
ತ್ತನವರಿಗೀವ ಸಂಭಾವನಾ! (ವಿ)
-ರಕ್ತಿ ಅವರಿಗೆ ಸರ್ವಾಭರಣ!
ಭಿಕ್ಷಾನ್ನ ಪಾವನವೆಂಬ ಚಿಂತನಾ!
ಮಾರಾರಿಯೇ ಗುರುವೆಂಬ ಭಾವನಾ!
ಮೋ! ನಿರಂಜನಾದಿತ್ಯಾತ್ಮಾನನಾ!!!

ಭಜನವಾಹಿನೀ ಸ್ನಾನ ಪಾನಾರೋಗ್ಯ!   2(487)

ನ್ಮಾಂತರದ ಪಾಪ ಹರಿದಾರೋಗ್ಯ!
ರಳುವ ಘೋರ ಭವರೋಗಾರೋಗ್ಯ!
ವಾಸುದೇವ ಪಾದತೀರ್ಥವಿದಾರೋಗ್ಯ!
ಹಿತವಿದೆಲ್ಲಾ ಬಾಲ, ವೃದ್ಧಾರೋಗ್ಯ!
ನೀಚ, ಉಚ್ಚ ಭೇದವಿಲ್ಲದೆಲ್ಲಾರೋಗ್ಯ!
ಸ್ನಾನ, ಪಾನವಿದೆಲ್ಲಾಕಾಲಕ್ಕಾರೋಗ್ಯ!
ರಹರಿ ಪ್ರಿಯ ಪ್ರಹ್ಲಾದನಾರೋಗ್ಯ!
ಪಾನಗೈದ ಧ್ರುವ ಚಿರಾಯುರಾರೋಗ್ಯ!
ನಾರದ ಸದಾ ಮುಳುಗಿದ್ದು ಆರೋಗ್ಯ!
ರೋಗಹರ, ಯೋಗಕರ ವಿದಾರೋಗ್ಯ (ಭಾ)
-ಗ್ಯ ನಿರಂಜನಾದಿತ್ಯಗಿದೇ ಆರೋಗ್ಯ!!!

ಭತ್ತ ಕುಟ್ಟಿ, ಕೇರಿದ ಮೇಲಕ್ಕಿ! [ಉ]   4(2337)

-ತ್ತಮ ಸಂಸ್ಕಾರದ ಮನವಕ್ಕಿ!
ಕುಶಲತೆಯಿಂದನ್ನ ಮಾಡಿಕ್ಕಿ! (ಒ)
-ಟ್ಟಗೆ ಕೂತ ಮೇಲೆಲ್ಲರಿಗಿಕ್ಕಿ!
ಕೇಳಿದವರಿಗೆ ಮತ್ತೊಮ್ಮಿಕ್ಕಿ! (ಮಾ)
-ರಿಕೊಳ್ಳಬಾರದಿಂಥಾ ಸಣ್ಣಕ್ಕಿ!
ಯಾವೃಷ್ಟಿಯಿಂದ ಬಳಸಕ್ಕಿ! (ಉ)
-ಮೇಶಗರ್ಪಣೆಯಾಗ್ಬೇಕಾ ಅಕ್ಕಿ! (ಅ)
-ಲಕ್ಷ್ಯದಿಂದ ಪೋಲಾಗುವುದಕ್ಕಿ! (ಮು)
-ಕ್ಕಿ, ನಿರಂಜನಾದಿತ್ಯಗದಿಕ್ಕಿ!!!

ಭಯವಿರುವಲ್ಲಿ ಪ್ರೀತಿ ಇಲ್ಲ! (ಭ)   6(4242)

-ಯ ಪ್ರೀತಿಯಿರುವೆಡೆಯಲ್ಲಿಲ್ಲ!
ವಿಕಲ್ಪ ಪ್ರೀತಿ ಮಾಡುವುದಿಲ್ಲ! (ಕ)
-ರುಣಾಮೃತ ಧಾರೆಯೇ ಎಲ್ಲೆಲ್ಲಾ! (ನ)
-ವವಿಧ ಭಕ್ತಿ ಬೇಕಿದಕ್ಕೆಲ್ಲಾ! (ಕ)
-ಲ್ಲಿಗೂ ಕಳೆ ತರುತ್ತಿದೆಯಲ್ಲಾ!!
ಪ್ರೀತಿಯಿಲ್ಲದೆ ಪ್ರಕೃತಿಯಿಲ್ಲ! (ಪ್ರೀ)
-ತಿಯೇ ಶೃತಿ, ಸ್ಮೃತಿ, ಪುರಾಣೆಲ್ಲಾ!
ದನ್ನರಿತು ಬಿಡು ಸಿಟ್ಟೆಲ್ಲಾ! (ಫು)
-ಲ್ಲ ನಿರಂಜನಾದಿತ್ಯಗದಿಲ್ಲ!!!

ಭಯವಿಲ್ಲದವರು ಯಾರು! (ಕಾ)   5(2923)

-ಯದಭಿಮಾನ ಬಿಟ್ಟವರು!
ವಿಷಯವಾಸನಾತೀತರು! (ಎ)
-ಲ್ಲವೂ ಕೃಪೆಯೆನ್ನುವವರು!
ಮೆ, ಶಮೆಯಿರುವವರು!
ರ ಗುರುವಿನ ದಾಸರು! (ಆ)
-ರು ವೈರಿಗಳ ಗೆದ್ದವರು!
ಯಾರ ಮಾತೂ ಆಡದವರು! (ಯಾ)
-ರು? ನಿರಂಜನಾದಿತ್ಯಾತ್ಮರು!!!

ಭರತ, ಇಳಿತ ಸಮುದ್ರಕ್ಕಂತೆ!   2(440)

ಸ, ವಿರಸಗಳ್ಮನಸ್ಸಿಗಂತೆ!
ಮಸ್ಸು, ಬೆಳಕು ದಿವಸಕ್ಕಂತೆ!
ನಯ, ತನಯ, ಸಂಸಾರಕ್ಕಂತೆ! (ಒ)
-ಳಿತು, ಕೆಟ್ಟುದು ಬದ್ಕು, ಬಾಳಿಗಂತೆ!
ರಣಿ, ಚಂದ್ರ ಮರ್ಗಗನಕ್ಕಂತೆ!
ಮಯಾ ಸಮಯ ದರ್ಶನಕ್ಕಂತೆ!
ಮುನಿ ಋಷಿಗಳು ತಪಸ್ಸಿಗಂತೆ!
ದ್ರವ, ಘನ ಮಾಯಾ ಪ್ರಕೃತಿಗಂತೆ!
ಕಂತೆ, ಬೊಂತೆಗಳೆಲ್ಲಾ ಸಂತೆಗಂತೆ! (ಅಂ)
-ತೆ, ನಿರಂಜನಾದಿತ್ಯ ಸರ್ವಕ್ಕಂತೆ!!!

ಭರತನಾದರ್ಶ ವಿಶ್ವ ಭಾರತಕಿರಬೇಕಿಂದು!   1(211)

ಸವಿರಸಾವಾಗಿ ಕಾಣುತಿದೆ ಕಲಹದಿಂದು!
ನ್ನವರಲ್ಲರೆಂಬುದಿಲ್ಲವಾಗಿದೆಲ್ಲೆಲ್ಲೂ ಇಂದು!
ನಾನಾಮತಗಳಲಿ ಐಕ್ಯವಿಲ್ಲದಾಗಿದೆ ಇಂದು!
ಶರಥಸುತ ಭರತನ ಭ್ರಾತೃಪ್ರೇಮವೆಂದು? (ದ)
-ರ್ಶನಗಳೆಲ್ಲಾ ಬಾಯಿಮಾತಾಗಿರುತಿಹುದು ಇಂದು!
ವಿದೇಶದನುಕರಣೆ ಪ್ರಬಲವಾಗಿಹುದಿಂದು! (ವಿ)
-ಶ್ವದಲೆಲ್ಲಾ ಕಪಟ ವಿಶ್ವಾಸ ಹೆಚ್ಚಾಗಿದೆ ಇಂದು!
ಭಾವನೆ ಎಲ್ಲಾ ವಿಷಯಾನಂದಕಾಗಿರುವುದಿಂದು
ಚನೆ, ಯೋಚನೆಗಳಿಗೆ ಮಿತಿ ತೋರದಿಲ್ಲಿಂದು!
ರತರದ ಯಂತ್ರ, ತಂತ್ರಗಳುಬ್ಬರ ಬಂತಿಂದು!
ಕಿರುಕುಳವೇನೂ ಕಡಿಮೆಯಾಗಿಲ್ಲದರಿಂದಿಂದು!
ತಿಪತಿಯ ದರ್ಶನ ಸುಲಭವಾಗಿದೆ ಇಂದು!
ಬೇಡವಾರ್ದಊ ಹಾಡುಗಳ ಸಮಾರಾಧನೆ ಇಂದು!
ಕಿಂಕರರೆಂದರೆ ಬರುವುದು ಸಿಟ್ಟೆಲ್ಲರಿಗಿಂದು!
ದುರಾಗ್ರಹವಿಲ್ಲ ನಿರಂಜನಾದಿತ್ಯಗೆಂದೆಂದೂ!!!

ಭರವಸೆ ಪಡೆದವಳಾಕೆ! [ಹ]   4(2338)

-ರಸಿಕೊಂಡಜನರಸಿಯಾಕೆ! (ಭ)
-ವರೋಗದಂಟಿಲ್ಲದವಳಾಕೆ! (ಸೊ)
-ಸೆ ಸರಸಿಜನಾಭಾಗಾದಾಕೆ!
ರಮಾನಂದಭರಿತಳಾಕೆ! (ಒ)
-ಡೆಯಗಚ್ಚು ಮೆಚ್ಚಿನವಳಾಕೆ!
ಯಾಮಯಿಲೋಕಮಾತೆಯಾಕೆ!
ರ ಗುರುದತ್ತ ಪುತ್ರಿಯಾಕೆ! (ಕ)
-ಳಾನಿಧಿಯಾಗಿ ದೇವತೆಯಾಕೆ! (ಏ)
-ಕೆ, ನಿರಂಜನಾದಿತ್ಯಾನಂದಾಕೆ!!!

ಭರವಸೆ ಬರಡಾಯ್ತು! (ಪ)   4(1529)

-ರ ದಾಸ್ಯ ಬೇಸರವಾಯ್ತು! (ಭ)
-ವದ ಬಂಧನ ಬಲವಾಯ್ತು! (ದೆ)
-ಸೆಗೆಟ್ಟಲೆಯುವಂತಾಯ್ತು!
ಳಲಿ ಕಳವಳವಾಯ್ತು!
ಸ್ತೆ ಗೋಚರಿಪಂತಾಯ್ತು! (ಓ)
-ಡಾಟ ಸಾಕೆಂಬರಿವಾಯ್ತು! (ಆ)
-ಯ್ತು ನಿರಂಜನಾದಿತ್ಯಾಯ್ತು!!!

ಭರವಸೆಯ ಮಾತುಗಳಿಗೆ ಕಾದಿಹೆನು!   1(183)

ವಿಯುದಯಾಸ್ತ ನಿತ್ಯ ಸೇವಿಸುತಿಹೆನು!
ರ್ಷವೆರಡವನಿಗಾಗಿ ಕಳೆದಿಹೆನು!
ಸೆಖೆ, ಚಳಿ, ಮಳೆ, ಗಾಳಿಯಲಿ ನಿಂದಿಹೆನು!
ಶಕಾಗವನ ಸದಾ ಪ್ರಾರ್ಥಿಸುತಿಹೆನು!
ಮಾನಾವಮಾನ ಅವನಡಿಗರ್ಪಿಸಿಹೆನು!
ತುಚ್ಛಾತುಚ್ಛವೆನ್ನದೆ ಬಾಳುತಿರುತಿಹೆನು!
ರ್ವಕೆಡೆಗೊಡದಂತೆಚ್ಚರವಾಗಿಹೆನು! (ಉ)
-ಳಿಸಳಿವ ಭಾರವನದೆಂದಿಹೆನು! (ಹ)
-ಗೆತನವಿರಬಾರದೆಂದು ಬೇಡುತಿಹೆನು!
ಕಾಯಬೇಕು ಸನ್ನಿಧಿಯನೆಂದು ಪ್ರಾರ್ಥಿಪೆನು!
ದಿನ, ರಾತ್ರಿ ಧ್ಯಾನಮಗ್ನನಾಗಿರುತಿಹೆನು!
ಹೆದ್ದಾರಿ ಭಾಜನೆಯಾಗಬೇಕೆನುತಿಹೆನು! (ಅ)
-ನುದಿನ ನಿರಂಜನಾದಿತ್ಯ ನಾನಾಗಿಹೆನು!!!

ಭರ್ತಿಮಾಡಿ ಬಾಯಿ ಮುಚ್ಚು! (ಮೂ)   6(3507)

-ರ್ತಿ ನೋಡಿ ಸೇವೆಗೆ ಹಚ್ಚು!
ಮಾಡಿ, ನೋಡಿ, ಮನ ಮೆಚ್ಚು! (ಕೂ)
-ಡಿ, ಆಡಿ, ಬಿಡ್ಹೊಟ್ಟೆಕಿಚ್ಚು!
ಬಾಳಿ, ಆಳಿ, ಬಿಡು ಹುಚ್ಚು! (ತಾ)
-ಯಿ ಋಣ ಎಲ್ಲಕ್ಕೂ ಹೆಚ್ಚು!
ಮುಕ್ತಿ ಸುಖಕ್ಕಾಸೆ ಕೊಚ್ಚು! (ಮೆ)
-ಚ್ಚು, ನಿರಂಜನಾದಿತ್ಯಚ್ಚು!!!

ಭವ ಭಯಕ್ಕೆ ರಾಮನಾಮ ರಕ್ಷೆ!   2(873)

ರ ಮಾರುತಿಗದೇ ಸದಾ ರಕ್ಷೆ!
ರತನಿಗನವರತಾ ರಕ್ಷೆ! [ತಾ]
-ಯವನಿಜಾತೆಗನುದಿನಾ ರಕ್ಷೆ! [ದಿ]
-ಕ್ಕೆನಗೇನೆಂದಹಲ್ಯೆಗದೇ ರಕ್ಷೆ!
ರಾಮದಾಸ, ಕಬೀರರಿಗಾ ರಕ್ಷೆ!
ಹಾಭಕ್ತ ಕಮಾಲನಿಗಾ ರಕ್ಷೆ!
ನಾಮ ಪ್ರೇಮಿ ಪುರಂದರಗಾ ರಕ್ಷೆ!
ಹಾತ್ಮಾ ತ್ಯಾಗರಾಜನಿಗಾ ರಕ್ಷೆ!
ಘುವಂಶೋದ್ಧಾರೆಲ್ಲರಿಗೂ ರಕ್ಷೆ! [ರ]
-ಕ್ಷೆ ನಿರಂಜನಾದಿತ್ಯಾಪ್ತಾತ್ಮ ರಕ್ಷೆ!!!

ಭವ, ಭಯಹರ, ಹರ ಮಹ ಗುರುದೇವ!   2(496)

ರ ಭವಾನೀಪ್ರಿಯ ಶಂಕರ ಗುರುದೇವ!
ಕ್ತಿ ಮುಕ್ತಿಪ್ರದಾಯಕ ಶಿವ ಗುರುದೇವ!
ತಿಪತಿ, ಉಮಾಪತಿ, ಗತಿ ಗುರುದೇವ!
ರ ದಕ್ಷಾಧ್ವರ ಸಂಹರ ಶ್ರೀ ಗುರುದೇವ!
ತಿಪತಿಹರ, ಗಿರಿನಾಥ ಗುರುದೇವ!
ರ, ಶಿವಶಂಕರ, ಈಶ್ವರ ಗುರುದೇವ!
ಘುವರ, ಗುರು ಪ್ರಿಯಕರ ಗುರುದೇವ!
ನ ನಿರ್ಮಲ ಮಹಾಬಲ ಶ್ರೀ ಗುರುದೇವ!
ಹಾರ ಮುಂಡಮಾಲಾಧರ ಹರ ಗುರುದೇವ!
ಗುರುಗುಹಗತಿಹಿತಪಿತ ಗುರುದೇವ! (ವ)
-ರುಣೇಂದ್ರಾದಿ ವಂದ್ಯ ನಟರಾಜ ಗುರುದೇವ!
ದೇವ, ಜೀವ ಭಾವೈಕ್ಯ ಬೋಧಕ ಗುರುದೇವ!
ರ ನಿರಂಜನಾದಿತ್ಯನಾಪ್ತ ಗುರುದೇವ!!!

ಭವಬಂಧವಿಲ್ಲೆಂದ ಶಿವಾನಂದ! (ಶಿ)   3(1092)

-ವನಾನಂದ ತಾನೆಂದ ಶಿವಾನಂದ! (ಸಂ)
-ಬಂಧ “ನಾ” “ನೀ” ನೊಂದೆಂದ ಶಿವಾನಂದ!
ರ್ಮಬಂಧವಿದೆಂದ ಶಿವಾನಂದ!
ವಿಧಿಯೆಂದ, ಹರ್ಯೆಂದ ಶಿವಾನಂದ! (ನಿ)
-ಲ್ಲೆಂದ, ನಿನ್ನವನೆಂದ ಶಿವಾನಂದ!
ತ್ತಾನಂದನಾಗೆಂದ ಶಿವಾನಂದ!
ಶಿವಾನಂದನವನೆಂದ ಶಿವಾನಂದ
ವಾದಾನಂದ ಸಾಕೆಂದ ಶಿವಾನಂದ!
ನಂದನಂದನಾನಂದ ಶಿವಾನಂದ! (ಕಂ)
-ದ, ನಿರಂಜನಾದಿತ್ಯ ಶಿವಾನಂದ!!!

ಭವಸಾಗರ, ಭಯದಾಗರ!   6(4061)

ಸನಾಶನಕ್ಕೆಳುವ ನರ!
ಸಾಕದಿಹ ಪುತ್ರ ಪುತ್ರಿಯರ!
ರಿಗೇಡಿಂದಾಗಿಹ ಕಿಂಕರ!
ತಿ ಕ್ರೀಡೆ ಮಾತ್ರ ನಿರಂತರ!
ಜನೆಗಾಗಿದೆ ಅಭ್ಯಂತರ!
ಮನಿಗೇನಿಲ್ಲ ಕನಿಕರ!
ದಾರಿ ತೋರಬೇಕೀಗ ಈಶ್ವರ!
ಣವಾದರೆಲ್ಲಾ ಸುಖಕರ! (ಹ)
-ರ ನಿರಂಜನಾದಿತ್ಯಾ ಶಂಕರ!!!

ಭವಿಷ್ಯ ಕೇಳಿ ಭಕ್ಷಿಸುವರೇನಯ್ಯಾ?   2(444)

ವಿಚಾರ ಮಾಡಿ ವಿಷಾದಿಪರೇನಯ್ಯಾ? (ಭಾ)
ಷ್ಯ ಓದಿ ಹಾದಿ ತಪ್ಪಿದರಾಗದಯ್ಯಾ!
ಕೇಳಿ, ಹೇಳಿ ಕೆಲಸಗಳಲ್ಲವಯ್ಯಾ! (ಗಾ)
-ಳಿಯಂತೆ ಸ್ವಕರ್ಮ ಸಾಗುತಿರಲಯ್ಯಾ!
ವಭಯ ಕಳೆಯಲೀ ದಾರಿ ಅಯ್ಯಾ! (ಸಾ)
-ಕ್ಷಿಯಾಗಿ ಗುರು ಇರುತಿರುವನಯ್ಯಾ! (ಹ)
-ಸು ಹಾಲುಣಿಸುವುದು ಕರುವಿಗಯ್ಯಾ!
ರ ವಿಶ್ವಾಸ, ಪೂರ್ಣವಿರಬೇಕಯ್ಯಾ! “(ಹ)
-ರೇ ರಾಮ” ಮಂತ್ರವ ಜಪಿಸುತಿರಯ್ಯಾ!
ಡೆ, ನುಡಿಗಳೆಲ್ಲಾತನಿಗಾಗಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ರೀತಿ ಇದಯ್ಯಾ!!!

ಭವಿಷ್ಯ ಕೇಳಿ ಭಯಗ್ರಸ್ತನಾಗಬೇಡ!   4(1864)

ವಿಷಯಾಸಕ್ತನಾಗಿ ಕೆಟ್ಟುಹೋಗಬೇಡ! (ದೂ)
-ಷ್ಯವಾದುದಾವುದನ್ನೂ ಸ್ವಾಗತಿಸಬೇಡ! (ಸಂ)
-ಕೇತಾರ್ಥವರಿಯದೆ ಮುಂದರಿಯಬೇಡ! (ಹೂ)
-ಳಿಟ್ಟರ್ಥ ಶೋಧನಾಸಕ್ತನಾಗಿರಬೇಡ!
ಗವದ್ಭಕ್ತಿಯನ್ನೆಂದಿಗೂ ಬಿಡಬೇಡ!
ಮ, ನಿಯಮಾಭ್ಯಾಸಕ್ಕನಾದರ ಬೇಡ!
ಗ್ರಹಶಾಂತಿಯನ್ಯರಿಂದ ಮಾಡಿಸಬೇಡ! (ಹ)
-ಸ್ತ, ಪಾದಾದಿಂದ್ರ್ಯೋಲ್ಬಣಕ್ಕೆಡೆಗೊಡಬೇಡ!
ನಾಮ, ಜಪ ಸಾಮಾನ್ಯವೆಂದರಿಯಬೇಡ! (ಹ)
-ಗಲಿರುಳೀ ಅಭ್ಯಾಸ ಮಾಡದಿರಬೇಡ!
ಬೇರಿನ್ಯಾವ ದಾರಿಗೂ ಮರಳಾಗಬೇಡ! (ಬೇ)
-ಡ ನಿರಂಜನಾದಿತ್ಯಾಗಲಿನ್ನೇನೂ ಬೇಡ!!!

ಭವಿಷ್ಯ ಕೇಳಿ ಭಯಪಡಬೇಡ!   5(2779)

ವಿಷಯವಾಸನೆ ಬೆಳೆಸಬೇಡ! (ಶಿ)
-ಷ್ಯವೃತ್ತಿಯಲ್ಲಿ ಉದಾಸೀನ ಬೇಡ!
ಕೇಡು ಯಾರಿಗೂ ಎಂದೂ ಮಾಡಬೇಡ! (ತಾ)
-ಳಿದವ ಬಾಳ್ಯಾನು! ಮರೆಯಬೇಡ!
ಗವದ್ಭಕ್ತಿ ಬಿಟ್ಟು ಕೆಡಬೇಡ!
ಕ್ಷಿಣೀಗಾರರನ್ನು ನಂಬಬೇಡ!
ರಮಾರ್ಥದಲ್ಲವಿಶ್ವಾಸ ಬೇಡ! (ಒ)
-ಡವೆವಸ್ತುಗಳಿಗಾಶಿಸಬೇಡ!
ಬೇಜಾರೆಂದು ಕರ್ತವ್ಯ ಬಿಡಬೇಡ! (ಕಾ)
-ಡ, ನಿರಂಜನಾದಿತ್ಯನ್ಯಾಯ ಮಾಡ!!!

ಭವಿಷ್ಯ ತಿಳಿವ ಚಪಲ ಜನಕ್ಕೆ!   5(3119)

ವಿಶ್ವದಾದ್ಯಂತ ನಿತ್ಯ ಹೋರಾಟದಕ್ಕೆ! (ರ)
-ಷ್ಯ, ಅಮೇರಿಕದಲ್ಲಿ ಪೈಪೋಟಿದಕ್ಕೆ!
ತಿಳಿಯಲಸಾಧ್ಯವಿದು ವಿಜ್ಞಾನಕ್ಕೆ! (ಬಾ)
-ಳಿನ ನೆಮ್ಮದಿ ಕೆಟ್ಟು ಹಾನಿ ಲೋಕಕ್ಕೆ!
ರಗುರು ಧ್ಯಾನದಿಂದಾನಂದೆಲ್ಲಕ್ಕೆ!
ರಾಚರಾತ್ಮನಿಷ್ಠೆ ದಾರಿ ಸುಖಕ್ಕೆ!
ಕ್ಷ, ಪಂಗಡದಿಂದ ಹಾನಿ ದೇಶಕ್ಕೆ! (ಜ)
-ಲ, ಮಲಾದಿ ಬಂಧನಾರೋಗ್ಯ ದೇಹಕ್ಕೆ!
ಪ, ತಪಾಭ್ಯಾಸವೇ ಶಾಂತಿ ಮನಕ್ಕೆ!
ರ, ನಾರಾಯಣ ತಾನಪ್ಪ ಮುಂದಕ್ಕೆ! (ಅ)
-ಕ್ಕೆ, ನಿರಂಜನಾದಿತ್ಯಾನಂದವೆಲ್ಲಕ್ಕೆ!!!

ಭವಿಷ್ಯ ಹೇಳುವವ ನಾನಲ್ಲ!   6(3622)

ವಿಧಿ, ಹರಿ, ಹರರೂ ಹೇಳಿಲ್ಲ! (ಭಾ)
-ಷ್ಯಕಾರರಂತೂ ಹೇಳಲೇ ಇಲ್ಲ!
ಹೇಳಿ, ಕೇಳಿದ್ರಿಂದ ಫಲವಿಲ್ಲ! (ಗೋ)
-ಳು ತಪ್ಲಿಕ್ಕದು ದಾರಿಯೇ ಅಲ್ಲ! (ಅ)
-ವಧೂತ ಗೀತಾಭ್ಯಾಸ ಮಾಡ್ರೆಲ್ಲಾ!
ರ ಗುರುವಿನಾ ಮಾತ್ಸುಳ್ಳಲ್ಲ!
ನಾಶವಾಗುವುದರಾಸೆ ಸಲ್ಲ!
ವ್ಯ ಭಕ್ತಿಯ ಗುರಿ ಅದಲ್ಲ! (ಒ)
-ಲ್ಲ, ನಿರಂಜನಾದಿತ್ಯನಿದೆಲ್ಲಾ!!!

ಭಾಗ್ಯ ಪರಮ ವೈರಾಗ್ಯವಯ್ಯಾ! [ಯೋ]   2(657)

-ಗ್ಯ ನಿರಂತರಾತ್ಮ ಧ್ಯಾನವಯ್ಯಾ!
ರಮೇಶ್ವರ ಹೀಗಿಹನಯ್ಯಾ!
ತಿಪತಿ ಹತ ಶಂಕರಯ್ಯಾ!
ಹಾದೇವ ಶಿವ ವಿರಕ್ತಯ್ಯಾ! (ಶಿ)
-ವೈಕ್ಯಕ್ಕೆ ವೈರಾಗ್ಯ ಮುಖ್ಯವಯ್ಯಾ!
ರಾಮನಾಮ ಜಪ ಸುಖವಯ್ಯಾ! (ಭೋ)
-ಗ್ಯವಿದು ಶಾಶ್ವತ ಭಾಗ್ಯವಯ್ಯಾ!
ರ್ಜ್ಯ ಮಾಯಾ ಮೋಹಾನಂದವಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯೇಶ್ವರಯ್ಯಾ!!!

ಭಾನು ಬಾನಿನಲ್ಲಿ, ನಾನು ಭೂಮಿಯಲ್ಲಿ!   6(3416)

(ಅ)-ನುದಿನ ನಮ್ಮ ಭೇಟಿ ಹಗಲಿನಲ್ಲಿ!
ಬಾರದಿರುವನವನು ನಾನಿದ್ದಲ್ಲಿ!
ನಿತ್ಯ ನಿಮಂತ್ರಣವವನಿಗೆನ್ನಲ್ಲಿ!
ನಗಿಲ್ಲ ಶಕ್ತಿ ಹೋಗುವುದಕ್ಕಲ್ಲಿ!
(ಅ)-ಲ್ಲಿ, ಇಲ್ಲಿನ ನಮ್ಮಿಬ್ಬರಾತ್ಮನೆಲ್ಲೆಲ್ಲಿ!
ನಾಮ, ರೂಪಾತೀತನಿಗೆ ಭೇದವೆಲ್ಲಿ!
(ತ)-ನು, ಮನ ತನ್ನ ಲೀಲಾನಂದಕ್ಕಲ್ಲೀಲ್ಲಿ!
ಭೂಮ್ಯಾಕಾಶ ಸಂಬಂಧ ಪ್ರಕೃತಿಯಲ್ಲಿ!
ಮಿತ್ರ ಪಾಲಿಸುತ್ತಿಹನು ನಿತ್ಯದಲ್ಲಿ!
ಮನಾಗುವನು ಋಣ ತೀರಿದಲ್ಲಿ!
(ಅ)-ಲ್ಲಿ, ಇಲ್ಲಿ ನಿರಂಜನಾದಿತ್ಯನೆಲ್ಲೆಲ್ಲಿ!!!

ಭಾನುದೇವ ವಿಜಯ ರಾಮ! [ಅ]   2(549)

-ನುದಿನ ವಿರಾಜಿಪಾ ರಾಮ!
ದೇವದೇವನಿವ ಶ್ರೀ ರಾಮ!
ರ ಗುರುದತ್ತ ಶ್ರೀ ರಾಮ!
ವಿಮಲ ಸೀತಾ ಪ್ರೇಮಾ ರಾಮ!
ಗದಾನಂದ ಜಯ ರಾಮ!
ದುನಾಥ ಗೋವಿಂದಾ ರಾಮ!
ರಾಮ ರಾಮ ಜೈ ರಾಜಾ ರಾಮ! (ಮ)
-ಮ ನಿರಂಜನಾದಿತ್ಯಾ ರಾಮ!!!

ಭಾನುವಾರ ದರ್ಶನಾನುಗ್ರಹ! (ಸಾ)   2(755)

-ನುರಾಗದಲವನಾನುಗ್ರಹ!
ವಾರಿಜಮಿತ್ರನಿಷ್ಟಾನುಗ್ರಹ!
ವಿಕುಲಾತ್ಮಾರಾಮಾನುಗ್ರಹ!
ಯೆಯಿಂದವ ಕಾಯ್ವಾನುಗ್ರಹ! (ದ)
-ರ್ಶನಿಷ್ಟ ಸಿದ್ಧಿಪ್ರದಾನುಗ್ರಹ!
ನಾಮಸ್ಮರಣೆಯಿಂದಾನುಗ್ರಹ!
ನುಡಿಯಂತೆ ನಡೆಗಾನುಗ್ರಹ!
ಗ್ರಹಶಾಂತಿಗಿದೊಂದನುಗ್ರಹ! (ಗ್ರ)
-ಹ, ನಿರಂಜನಾದಿತ್ಯಾನುಗ್ರಹ!!!

ಭಾನುವಾರ ಬಂತು, ನೋಡುವೆ ನಿಂತು! [ತ]   4(2224)

-ನುಜ ನಾನೆಂಬ ನಿನ್ನಡಿಯೊಳ್ನಿಂತು! (ಆ)
-ವಾಗೇನಾಗಬೇಕೋ ಮಾಡೆಂಬೆ ನಿಂತು! (ವ)
-ರಗುರು ನಿನ್ನ ಸ್ತುತಿಪೆ ನಾ ನಿಂತು! (ಸಂ)
-ಬಂಧ ಸಾರ್ಥಕವಾಗಲೆಂಬೆ ನಿಂತು!
ತುರೀಯಾತೀತಾತ್ಮ ನೀನೆಂಬೆ ನಿಂತು!
ನೋಡುವುದದೆಂತೀ ಕಣ್ಣೆಂಬೆ ನಿಂತು! (ಕೊ)
-ಡು ದಿವ್ಯ ಶಕ್ತಿ ನನಗೆಂಬೆ ನಿಂತು! (ಸೇ)
-ವೆ ಸದಾ ಮಾಡಿಸಿಕೊಳ್ಳೆಂಬೆ ನಿಂತು! (ನೀ)
-ನಿಂತುಪೇಕ್ಷೆ ಮಾಡ್ಬಾರದೆಂಬೆ ನಿಂತು! (ಇಂ)
-ತು ನಿರಂಜನಾದಿತ್ಯಗೆಂಬೆ ನಿಂತು!!!

ಭಾನುವಿಗೂ ಅಡ್ಡಿ ಆತಂಕವೇನೇ?   4(2202)

ನುಡಿದಂತೆ ನೀನಿರಬಾರದೇನೇ?
ವಿಧಿಲೀಲೆ ವಿಚಿತ್ರವಲ್ಲವೇನೇ?
ಗೂಗೆ, ಕಾಗೆಗೂ ಇದನ್ವಯ ತಾನೇ?
ವನಾಟವನಿಗೇ ಚಂದ ತಾನೇ! (ಒ)
-ಡ್ಡಿ ಜಾಲವನದರಲ್ಲಿರ್ಪ ತಾನೇ!
ಗ್ಬೇಕಾ ಶೀಪಾದಕ್ಕೆ ದಾಸಿ ನೀನೇ!
ತಂದೆಯ ಮುಂದೆ ನಿನ್ನ ಜಂಭವೇನೇ?
ರುಣೆಯವನದಮೃತ ಸೋನೇ!
ವೇದನೆಯದರಿಂದ ನಾಶ ದೀನೇ! (ನೀ)
-ನೇ ನಿರಂಜನಾದಿತ್ಯನಾಗ್ಬಾರದೇನೇ???

ಭಾನುವಿನಾ ಸುದರ್ಶನ ವಿಶ್ವ ಪ್ರೀತಿ! (ಅ)   1(166)

-ನುಭವಿಸಿದರೆ ಬರುವುದು ಕೀರ್ತಿ!
ವಿಜಯ ಜಯ ಸಾಧಿಸಬೇಕೀ ಖ್ಯಾತಿ!
ನಾರಾಯಣನಡಿಗಿರಬೇಕು ಭಕ್ತಿ!
ಸುಮನೋಹರವಾಗಿದೆ ಗೀತಾಸಕ್ತಿ!
ತ್ತನಿದಕಿತ್ತಿಹನು ಎಲ್ಲಾ ಸ್ಫೂರ್ತಿ! (ದ)
-ರ್ಶನ ಭಾಗ್ಯಾನಂದ ಸದಾ ಮನ ತೃಪ್ತಿ!
ನಗಿದೊಂದೆ

ಅತುಳ ಬಲ ಶಕ್ತಿ!
ವಿಷಯ ವಿಚಾರ ದೂರ ಪರಮಾರ್ಥಿ! (ವಿ)
-ಶ್ವನಾಥ ಗೋಪೀನಾಥ ನೀ ಗುರುಮೂರ್ತಿ!
ಪ್ರೀತಿಯಿವನದಕಾಗಿ ನಾನು ಸ್ವಾರ್ಥಿ!
ತಿರುಪತಿ ನಿರಂಜನಾದಿತ್ಯ ನೀತಿ!!!

ಭಾಮಾರಮಣ ಬಾರಯ್ಯ!   2(460)

ಮಾರಮಣ ಮೈದೋರಯ್ಯಾ!
ಜಾನುಗ್ರಹ ಮಾಡಯ್ಯಾ!
ನಕೆ ಶಾಂತಿ ಬೇಕಯ್ಯಾ! (ಹ)
-ಣ ಕಾಸೆನಗೆ ಬೇಡಯ್ಯ!
ಬಾಳು ಗೋಳಾಗಿಹುದಯ್ಯಾ! (ವ)
-ರ ಗುರುದೇವ ನೀನಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಯ್ಯಾ!!!

ಭಾರತ ಭಾರತಿಯ ಮೂರ್ತಿ! (ಪ)   5(2886)

-ರಮಾತ್ಮಾಂತರ್ಯಾಮಿಯೀ ಮೂರ್ತಿ!
ತ್ವಾರ್ಥವರುಹುವಾ ಮೂರ್ತಿ!
ಭಾವಾತೀತ ಸ್ಥಿತಿಯಾ ಮೂರ್ತಿ! (ವ)
-ರಗುರು ದತ್ತಾತ್ರೇಯಾ ಮೂರ್ತಿ!
ತಿಥಿ, ವಾರ ನೋಡದಾ ಮೂರ್ತಿ!
ಮಾದ್ಯಷ್ಟಾಂಗಯೋಗೀ ಮೂರ್ತಿ!
ಮೂರು ಲೋಕಕ್ಕಾಧಾರಾ ಮೂರ್ತಿ! (ಮೂ)
-ರ್ತಿ ನಿರಂಜನಾದಿತ್ಯಾ ಮೂರ್ತಿ!!!

ಭಾರತ ಭಾರತೀಯ ಕೈಲಿಂದು!   4(1470)

ಸಭರಿತಮಾತಿನಲಿಂದು!
ಳಮಳವಿಲ್ಲದಿಹುದಿಂದು!
ಭಾವಿಕರಾದರಿಸಬೇಕೆಂದು!
ಸಿಕರಾನಂದಿಸಲಿಂದೆಂದು!
ತಿರಿದುಂಬಳ ಕಾಣಿಕೆಯೆಂದು!
ತೀಶನೊಪ್ಪಿಸಿರುವನಿಂದು!
ಕೈತುತ್ತಾಗಲಿದೆಲ್ಲರಿಗೆಂದು!
ಲಿಂಗ ಪ್ರಸಾದವೆಂದಿತ್ತನಿಂದು! (ಯ)
-ದುಪ ನಿರಂಜನಾದಿತ್ಯನೆಂದು!!!

ಭಾರತೀ! ನಿನಗೆ ಶ್ರೀ ಕೃಷ್ಣ ಸಾರಥಿ! (ವ)   4(2204)

-ರ ಗೀತಾಮೃತನಾ ರಥದ ಸಾರಥಿ!
ತೀರ್ಥ, ಕ್ಷೇತ್ರದರ್ಥ ಬೋಧಕಾ ಸಾರಥಿ!
ನಿಶ್ಚಲ ತತ್ವ ಮುಕ್ತ್ಯೆಂಬಾ ಸಾರಥಿ!
ನ್ನಲ್ಲೀರೇಳು ಲೋಕವೆಂಬಾ ಸಾರಥಿ!
ಗೆಲುವು, ಸೋಲು, ನನ್ನಿಂದೆಂಬಾ ಸಾರಥಿ!
ಶ್ರೀಗುರು ದತ್ತಾತ್ರೇಯನೆಂಬಾ ಸಾರಥಿ!
ಕೃಷ್ಣ, ರಾಧಾಕೃಷ್ಣ ನಾನೆಂಬಾ ಸಾರಥಿ! (ಉ)
-ಷ್ಣ, ಶೀತ ಸಮ ನನಗೆಂಬಾ ಸಾರಥಿ!
ಸಾಮವೇದಾನಂದ ನಾನೆಂಬಾ ಸಾರಥಿ!
ವಿ ಸ್ವರೂಪ ನನ್ನದೆಂಬಾ ಸಾರಥಿ! (ರ)
-ಥಿ ನಿರಂಜನಾದಿತ್ಯಗಾತ ಸಾರಥಿ!!!

ಭಾವ ಗಾನ, ಭಜನಾನಂದಾರಾಮ!   1(323)

ರ ಕವಿತೆಯನಾಲಿಸಲಾರಾಮ!
ಗಾಡಿಗುತ್ತಮಾಶ್ವವಿಡಲಾರಾಮ!
ಯನ ರವಿಯಂತಿದ್ದರಾರಾಮ!
ಕ್ತಿ, ಭಾವ ಶುದ್ಧಿಮಾಡಲಾರಾಮ!
ನ್ಮ, ಧರ್ಮ, ಕರ್ಮಕಾದರಾರಾಮ!
ನಾಮಸಂಕೀರ್ತನೆಯಿಂದಲಾರಾಮ!
ನಂಬಿಗೆಗಿಂಬು ದೊರೆತರಾರಾಮ!
ದಾತ, ನಾಥನಾತನನಾದರಾರಾಮ!
“ರಾಮ ರಾಮ ಶ್ರೀರಾಮ ಸೀತಾರಾಮ”!
ಮ ನಿರಂಜನಾದಿತ್ಯನಾರಾಮ!!!

ಭಾವ ಬಲವಂತಕಾಗಿ ಬಹಿರಂಗವಾಗದಿರಲಿ!   1(15)

ರ್ತಕನಂಗಡಿ ವ್ಯಾಪಾರದಂತಿದಲ್ಲೆಂದು ನೆನಪಿರಲಿ!
ರಬೇಕುತ್ತಮ ಭಾವ ಬಂದಾ ಭಾವ ಬಾಳಿಗೆ ಬರುತಿರಲಿ!
ಕ್ಷ್ಯವಾಗಿಹ ಸಾಯುಜ್ಯದಲಾ ಬಾಳು ಐಕ್ಯವಾಗಿರಲಿ!
ವಂಚನೆಯ ಲೋಕವ್ಯಾಪಾರಕಾಗಿ ಭಾವ ಬಯಲಾಗದಿರಲಿ!
ನ್ನನಾರೆಂದರಿವುದಕಾಗಿ ಭಾವ ಸದಾ ಸ್ಫುರಿಸುತಿರಲಿ!
ಕಾಮಭಾವ ನಿರ್ನಾಮವಾಗಿ, ರಾಮಭಾವ ಸದಾ ಇರುತಿರಲಿ!
ಗಿರಿಜೆ ರಾಮಭಾವ ಬಲಿಸಿ, ಶಿವನ ಸೇರಿದ್ದು ಮರೆಯದಿರಲಿ!
ಕನ ಕಾಮಭಾವ ಪ್ರಕಟವಾಗಿ ಸಾವಿಗೀಡಾದುದರಿವಿರಲಿ!
ಹಿರಣ್ಯಕನ ಸುತನ ಶ್ರೀ ಹರಿ ಭಾವವನನುದ್ಧರಿಸಿದಂತಿರಲಿ!
ರಂಗ ಶ್ರೀರಂಗದಲ್ಲಿ ಮಲಗಿರುವಂತೆ ಭಾವ ಸಮಯ ಸಾಧಿಸಲಿ!
ರ್ವದಲಿ ಭವ ಬಯಲಾದ ಶಿಶುಪಾಲನ ಗತಿ ಮನಸಿನಲಿರಲಿ!
ವಾಸವನ ಕಾಮಭಾವ ಹೊರಬರಲೇನಾಯ್ತೆಂಬ ಜ್ಞಾಪಕವಿರಲಿ!
ಜಪತಿಯ ಭಾವ ಬಯಲಾಗಿ ಹರಿಕರುಣೆ ಪಡೆದಂತಿರಲಿ!
ದಿಗಂಬರನಾಗಿ ಭಾವಶೂನ್ಯನಾಗಿ ಪರಬ್ರಹ್ಮ ತಾನಾದ ಗುರುವಿನ ಗುರಿ ಇರಲಿ!
ವಿಯಂತೆ ಸದಾ ಭಾವ ಕಾರ್ಯಗತವಾಗಿ ಬೆಳಗುತಿರಲಿ!
ಲಿಪಿಗಾರನಾಗಿ ಧನಾರ್ಜಿಸುವ ಭಾವವೆಂದೆಂದೂ ಬರದಿರಲಿ!
ಅಥವಾ
ನಿರಂಜನಗಿರದಿರಲಿ!!!

ಭಾವ ಭರಿತನಾದವ ಜೀವ! (ಭಾ)   6(3597)

-ವ ರಹಿತನಾಗಿರ್ಪವ ದೇವ!
ವ ಭಯವಿಲ್ಲದವ ಶಿವ!
ರಿಪು ಕುಲಕಾಲಾ ಮಹಾದೇವ!
ಪೋನಿಧಿ ಈತ ಅಂಬಾಧವ!
ನಾಮ ಜಪಾನಂದ ಸ್ವಾನುಭವ!
ಕ್ಷ ಯಜ್ಞಧ್ವಂಸಕಾ ಭೈರವ!
ರ ಗುರು ದತ್ತ ಸದಾಶಿವ!
ಜೀವನ್ಮುಕ್ತ ಭಾವಾತೀತಾದವ! (ಇ)
-ವ ನಿರಂಜನಾದಿತ್ಯನೆಂಬವ!!!

ಭಾವ ಶೂನ್ಯನಾದವ ಬರೆಯುವುದೇನಯ್ಯಾ? (ಅ)   1(364)

-ವನಿಗಾಗ ಯಾವುದರಲ್ಲೂ ಇಷ್ಟಲ್ಲಯ್ಯಾ!
ಶೂನ್ಯವೇ ಹೊರಗೊಳಗೆ ತೋರುತಿಹುದಯ್ಯಾ! (ಅ)
-ನ್ಯರು, ತನ್ನವರೆಂಬುದರಿಯದಿಹನಯ್ಯಾ!
ನಾಮ, ರೂಪದಲನಾಸಕ್ತಿ ಕಾಣುವುದಯ್ಯಾ!
ಯೆಗಾಗಿ ಆತನಾಗ ಪ್ರಾರ್ಥಿಪುದಿಲ್ಲಯ್ಯಾ! (ಅ)
-ವನಿಗೇನು ಬೇಕೆಂಬುದವನರಿಯನಯ್ಯಾ!
ಲವಂತ ಮಾಡಿದರೂ ಮನವಾರಾಮಯ್ಯಾ! (ಅ)
-ರೆಷ್ಟು ಕೂಗಿದರೂ ಕಿವುಡನಂತಿರ್ಪನಯ್ಯಾ!
ಯುಕ್ತಾಯುಕ್ತ ವಿಚಾರವನಾಗ ಕೇಳನಯ್ಯಾ (ಆ)
-ವುದಾ ಸ್ಥಿತಿಯೋ ಹೇಳಲು ಅಸದಳವಯ್ಯಾ!
ದೇಹ ಮಾತ್ರ ಜೀವ ಸಹಿತವಿರುವುದಯ್ಯಾ! (ಅ)
-ನವಧಿಕಾಲವಿದ್ದರಿದು ಸ್ವಸ್ಥಿತಿಯಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನಿದರಿತಿಹನಯ್ಯಾ!!!

ಭಾವಗಾನ ಪ್ರಿಯಾ ಶಶಿಧರ! (ದೇ)   4(2200)

-ವ ಗುಣ ಸಂಪನ್ನಾ ಶಶಿಧರ! (ರಂ)
-ಗಾಧಿಪನಾಪ್ತಾತ್ಮಾ ಶಶಿಧರ! (ದಾ)
-ನವಕುಲ ಕಾಲಾ ಶಶಿಧರ!
ಪ್ರಿಯಾಪ್ರಿಯ ವರ್ಜ್ಯಾ ಶಶಿಧರ!
ಯಾಗ, ಯೋಗಾಧಾರಾ ಶಶಿಧರ!
ಕ್ತಿ, ಮುಕ್ತಿ, ದಾತಾ ಶಶಿಧರ!
ಶಿವ, ಶಕ್ತ್ಯೇಕಾತ್ಮಾ ಶಶಿಧರ!
ರ್ಮ, ಕರ್ಮಾಕಾರಾ ಶಶಿಧರ! (ವ)
-ರ ನಿರಂಜನಾದಿತ್ಯಾತ್ಮಾಕಾರ!!!

ಭಾವದಲಿ ಭಗವಂತನಯ್ಯಾ!   1(374)

ರಗುರುವಚನವಿದಯ್ಯಾ! (ಅ)
-ದರಂತೆ ನಡೆಯಲೇಬೇಕಯ್ಯಾ! (ಆ)
-ಲಿಸಬಾರದನ್ಯರ ಮಾತಯ್ಯಾ!
ಜಿಸಿ ಭಾವಿಕ ನೀನಾಗಯ್ಯಾ! (ಆ)
-ಗ, ಈಗ, ಮತ್ತೆನಬಾರದಯ್ಯಾ!
ವಂದಿಸಿ ಧನ್ಯನಾಗಬೇಕಯ್ಯಾ!
ನು, ಮನ, ಧನವನದಯ್ಯಾ!
ರಜನ್ಮವಿದಲಭ್ಯವಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯದೇವಯ್ಯಾ!

ಭಾವಪೂರ್ಣಾನಂದೈಸಿರೀ ಚಿತ್ರಾ!   4(1756)

ರ ಗುರು ಕೃಪಾಕಾರೀ ಚಿತ್ರಾ!
ಪೂಜಾ ಮಂದಿರಾಲಂಕಾರೀ ಚಿತ್ರಾ! (ವ)
-ರ್ಣಾನಂದ ಸುರ ಸುಂದರೀ ಚಿತ್ರಾ! (ಅ)
-ನಂಗಯ್ಯನೂರ ಕುಮಾರೀ ಚಿತ್ರಾ!
ದೈವ ಬ್ರಾಹ್ಮಣರಾಧಾರೀ ಚಿತ್ರಾ! (ಪು)
-ಸಿಮಾಯಾ ನಾಟಕಕ್ಕರೀ ಚಿತ್ರಾ! (ಶ)
-ರೀರೀ ತ್ರಿಭುವನೇಶ್ವರೀ ಚಿತ್ರಾ!
ಚಿರ ಸುಮಂಗಲಿ ಗೌರೀ ಚಿತ್ರಾ! (ಚಿ)
-ತ್ರಾ, ನಿರಂಜನಾದಿತ್ಯೋಭಯತ್ರಾ!!!

ಭಾವಶೂನ್ಯನೇನು ಬರೆಯಲಿಕೆ ಪೇನಾ ಬೇಕಯ್ಯಾ?   1(2)

ವರ್ತಮಾನ ಪ್ರವರ್ತನಿಗೇಕೆ ಗಂಟೆ ಗಡೆಯಾರವಯ್ಯಾ?
ಮೂಲ ತತ್ವವನರಿತು ಬಾಳುವ ಕಾಪಾಲಿಗೆ ಮಾಲೆ ಏಕಯ್ಯಾ?
ಲಕ್ಷ್ಯದಲಿ ಮನನೆಟ್ತು ಸನ್ಯಾಸಿಗೆ ನಗನಾ

ಅಲಕ್ಶ್ಯವಲ್ಲವೇನಯ್ಯಾ?
ಶ್ರೀಗುರು ಚಿತ್ತಕಾಗಿ ಶಿರ ಬಾಗಿ ನಿಶ್ಚಿಂತನಾಗಬೇಕಯ್ಯಾ!!!

ಭಾವಾತೀತನಾಗಿ ನಾನಾಗಬೇಕು! (ಭ)   4(2319)

-ವಾಬ್ಧಿಯಿಂದಾಗ ಪಾರೆನಿಸಬೇಕು!
ತೀರ್ಥ, ಕ್ಷೇತ್ರ ನಿನ್ನಲ್ಲೇ ನೋಡಬೇಕು! (ಮ)
-ತ, ಜಾತಿಗಳ ಭ್ರಾಂತಿ ಹೋಗಬೇಕು!
ನಾಮಸ್ಮರಣೆ ಸದಾ ಮಾಡಬೇಕು! (ತ್ಯಾ)
-ಗಿಯಾಗಿ ಯೋಗಿ ನೀನಾಗಿರಬೇಕು!
ನಾಕ, ನರಕ ಭಯ ತಪ್ಪಬೇಕು!
ನಾರದಾದಿಗಳಂತೆ ಬಾಳಬೇಕು! (ನಾ)
-ಗರಾಜನಂತೆ ಜ್ಞಾನಿಯಾಗಬೇಕು!
ಬೇಗೆಗಂಜದೆ ತಪ ಸಾಗಬೇಕು! (ವ್ಯಾ)
-ಕುಲ ನಿರಂಜನಾದಿತ್ಯಳಿಸ್ಬೇಕು!!!

ಭಾವಾತೀತನುಳಿದವನು! (ಭಾ)   6(3603)

-ವಾನ್ವಿತನು ಅಳಿದವನು!
ತೀರ್ಥ, ಕ್ಷೇತ್ರದಲ್ಲವ್ನಿಹನು!
ಲೆ, ಕೈ, ಕಾಲಿಲ್ಲದಿಹನು!
ನುಡಿ, ನಡೆ, ಯಿಲ್ಲದಿಹನು! (ಗಾ)
-ಳಿ, ಮಳೆಯ ಸಹಿಸಿಹನು!
ತ್ತಾತ್ರೇಯ ತಾನೆಂದಿಹನು!
ರ ಗುರು ತಾನಾಗಿಹನು! (ತಾ)
-ನು, ನಿರಂಜನಾದಿತ್ಯ ಭಾನು!!!

ಭಾವಾತೀತನೆಲ್ಲಾ ಭಾರವ ಹೊರುವ!   5(3044)

ವಾನರ ವೀರ ಹನುಮಗಿಲ್ಲ ಗರ್ವ!
ತೀರ್ಥ ಪ್ರಸಾದಕ್ಕೆ ಸದಾ ಹಾತೊರೆವ!
ನ್ನ ಶ್ರೀರಾಮ ಸೇವೆಗರ್ಪಿಸಿರುವ!
ನೆನಪಿನ್ಯಾತರದೂ ಇಲ್ಲದಿರುವ! (ಎ)
-ಲ್ಲಾ ಸಿದ್ಧಿಗಳನ್ನಾತ ಪಡೆದಿರುವ!
ಭಾಗ್ಯವಿದನ್ನು ಪ್ರದರ್ಶಿಸದಿರುವ!
ಘುಪತಿ ಗತಿ ತನಗೆಂದಿರುವ!
ರ ಸತಿ ಸೀತೆ ತಾಯಿಯೆಂದಿರುವ!
ಹೊರಗೊಳಗೆ ತಾನೇ ತಾನಾಗಿರುವ! (ಮೂ)
-ರು ಲೋಕಕ್ಕೂ ಸದ್ಗುರು ತಾನಾಗಿರುವ! (ಅ)
-ವ ನಿರಂಜನಾದಿತ್ಯನೂ ಆಗಿರುವ!!!

ಭಾವಾವೇಶ ಕುದಿದುಕ್ಕುವ ಹಾಲಿನಂತೆ! (ಭಾ)   6(3975)

-ವಾತೀತ ಕುದಿಸಿಳಿಸಿಟ್ಟ ಹಾಲಿನಂತೆ!
ವೇದಾಂತಿ ಆ ಒಳಗಿಳಿಸಿಟ್ಟ ಹಾಲಂತೆ!
ಮೆ, ದಮೆಯಿಂದದು ಸಿದ್ಧಿಸುವುದಂತೆ!
ಕುಹಕು, ಕುಚೋದ್ಯಕ್ಕಾಸ್ಥಿತಿ ಬಾರದಂತೆ!
ದಿನ, ರಾತ್ರಿಯೆನ್ನದೇ ದುಡಿಯಬೇಕಂತೆ!
ದುರ್ವವಹಾರಕ್ಕೆ ಮನಸ್ಸೋಡ್ಬಾರದಂತೆ! (ಹ)
-ಕ್ಕು ಇದರಭ್ಯಾಸಕ್ಕೆಲ್ಲರಿಗೂ ಉಂಟಂತೆ! (ಭ)
-ವರೋಗವನ್ನಿದು ಗುಣ ಮಾಡುವುದಂತೆ!
ಹಾಲಿದರಿಂದಜೀರ್ಣವಾಗ್ವುದಿಲ್ಲವಂತೆ! (ಮಾ)
-ಲಿಕನ ರಕ್ಷಾ ಕವಚ ಇದಕ್ಕುಂಟಂತೆ!
ನಂಜುಂಡಗಿದ್ರಿಂದ ವಿಷ ಜೀರ್ಣವಾಯ್ತಂತೆ! (ಕ)
-ತೆ ಪುರಾಣಾತೀತ ನಿರಂಜನಾದಿತ್ಯಂತೆ!!!

ಭಾವಿಕ ಬಾಲೆಯರಿವರಯ್ಯಾ!   1(393)

ವಿಕಲ್ಪವಿಲ್ಲದಿದ್ದಿದ್ದರಮ್ಮಾ!
ಣ್ಣೀರು ಸುರಿಸುತಿದ್ದರಮ್ಮಾ!
ಬಾಯ್ಬಿಡದೆ ಕುಳಿತಿದ್ದರಮ್ಮಾ! (ತ)
-ಲೆಬಾಗಿ ಜಪಿಸುತಿದ್ದರಮ್ಮಾ! (ತಾ)
-ಯ ಪ್ರೇಮವವರದಾಗಿತ್ತಮ್ಮಾ! (ಆ)
-ರಿವರು?

ನ್ಯ ಜೀವಿಗಳಮ್ಮಾ!
ರ ಕುಸುಮಾರ್ಚನೆಯಾಯ್ತಮ್ಮಾ! (ಕ)
-ರ ಮುಗಿದಾಜ್ಞೆ ಬೇಡಿದರಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯಾನಂದಮ್ಮಾ!!!

ಭಾವಿಕ ಭಕ್ತನವನೊಬ್ಬ ವೃದ್ಧ! (ಆ)   4(1401)

-ವಿರ್ಭವಿಸಿತವನಲ್ಲಾತ್ಮ ಶುದ್ಧ!
ಳೆಯಿತಿಂದಿಗವನ ಪ್ರಾರಬ್ಧ! (ಅ)
-ಭಯ ಪ್ರಧಾನ ಮಾಡಿದನು ಸಿದ್ಧ! (ಯು)
-ಕ್ತ ಸೇವೆ ಕೈಕೊಂಡನಾ ವಯೋವೃದ್ಧ!
ಡೆಸಿ ಕೊಂಡೊ

ದನವನಾ ಸಿದ್ಧ! (ಪಾ)
-ವನ ಪಾದಕ್ಕೆರಗಿದನಾ ವೃದ್ಧ!
ನೊಸಲಿಂದಿಟ್ಟನು ಪ್ರಸಾದಾ ಸಿದ್ಧ! (ತ)
-ಬ್ಬಲಿಗಾಯ್ತು ಹಬ್ಬವೆಂದನಾ ವೃದ್ಧ! (ನಿ)
-ವೃತ್ತ ನೀನಾಗು ಬೇಗೆಂದನಾ ಸಿದ್ಧ! (ಸಿ)
-ದ್ಧ, ನಿರಂಜನಾದಿತ್ಯಾನಂದ ಶುದ್ಧ!!!

ಭಾಷಾ ಬದಲಾದರೂ, ಭಾವ, ಗುಣ ಬೇರಾಗದಮ್ಮಾ !    1(90)

-ಷಾಢ ಭಾಷಾ ಭೇದದಿಂದ ಕಾರ್ತಿಕವಾಗದಮ್ಮಾ!
ದಲಾಸೆ ನಿಜ ಧ್ಯಾನಕಡ್ಡಿ ಮಾಡುವುದಮ್ಮಾ!
ತ್ತನಿತ್ತ ಭಾಷೆಯಲಿ ನಿನ್ನ ಭಾವ ತೋರಮ್ಮಾ!
ಲಾಭವಿದರಿ

ದಾಗಿ ಗುರಿಯ ಸೇರುವಿಯಮ್ಮಾ!
ರಿದ್ರನಿಗಾದರೂ ದಾರಿಯೊಂದಲ್ಲವೇನಮ್ಮಾ? (ಆ)
-ರೂ ವಿವಿಧ ವೇಶದಿಂದ ವ್ಯಕ್ತಿ ಬೇರಾಗಿಲ್ಲಮ್ಮಾ!
ಭಾಷಾ ಭೇದದಿಂದ ಭಾನು ಬೆಂರಾಗಿಹನೇನಮ್ಮಾ!
ರ್ತಮಾನ ಕರ್ಮ ನಿಜಗುರಿಗಾಗಿರಲಮ್ಮಾ!
ಗುರುದೇವನುಪದೇಶದಂತೆ ಸದಾ ಇರಮ್ಮಾ! (ಅ)
-ಣಕಿಸಿ ಯಾರೇನಾಉ ಲಾಭ ಪಡೆಯಲಾರರಮ್ಮಾ!
ಬೇಕಾದುದನೆಲ್ಲಾ ಬೇಕಾದಾಗೀವನವನಮ್ಮಾ!
ರಾತ್ರಿ, ಹಗಲೆನ್ನದೆ ಸದ್ಗುರು ಕಾಯುವನಮ್ಮಾ!
ರ್ವದ ಭಾಷಾ ಪಾಂಡಿತ್ಯ ಪ್ರಯೋಜನವಿಲ್ಲಮ್ಮಾ!
ಯೆಯವನದಾಗಲಿಕೆ ಭಾವ ಮುಖ್ಯವಮ್ಮಾ! (ಅ)
-ಮ್ಮಾ! ಭಾಷಾ ಭ್ರಾಂತಿ ನಿರಂಜನಾದಿತ್ಯಗಿಲ್ಲಮ್ಮಾ!

ಭಾಷೆಗಳೆಲ್ಲಾ ಬ್ರಹ್ಮನ ವಾಣಿ! (ದ್ವೇ)   4(2272)

-ಷೆಣಿಸಳಾರಲ್ಲವನಾ ರಾಣಿ!
ರ್ವಿಯಿದರಿಯದಲ್ಪ ಪ್ರಾಣಿ! (ಬೆ)
-ಳೆಸಬೇಕು ಪ್ರೇಮ ಭಾವ ಜಾಣಿ! (ಚೆ)
-ಲ್ಲಾಟಗಳಿಂದಪ್ಪ ತಾ ನಿತ್ರಾಣಿ!
ಬ್ರಹ್ಮಜ್ಞಾನಾತ್ಮನೇ ಪರಿತ್ರಾಣಿ! (ಬ್ರ)
-ಹ್ಮ ತಾನಾಗ್ಬೇಕು ಮಾನವ ಪ್ರಾಣಿ! (ದಿ)
-ನಪನೆಲ್ಲರಿಗೂ ಹಿರೇ ಮಾಣಿ! (ಭ)
-ವಾಬ್ಧಿ ತಾರಕಾ ಸತ್ಯ ಪ್ರಮಾಣಿ! (ರಾ)
-ಣಿ ನಿರಂಜನಾದಿತ್ಯಗಾ ವಾಣಿ!!!

ಭಿಕ್ಷೆ ತರುತ್ತೇನೆಂದನೊಬ್ಬ! (ಭಿ)   6(4098)

-ಕ್ಷೆ ತಂದಿದ್ದೇನೆಂದನಿನ್ನೊಬ್ಬ!
ಪಸ್ವಿಗಂತೂ ಆಯ್ತು ಹಬ್ಬ! (ಕ)
-ರುಣಾಕರನಾರನ್ನೂ ದಬ್ಬ! (ಉ)
-ತ್ತೇಜನಕಾರಿವನ ಕಬ್ಬ! (ಎ)
-ನೆಂದರೂ ಆತನೆಂದೂ ಕೊಬ್ಬ!
ತ್ತ ದಿಗಂಬರೊಲ್ಲ ಜುಬ್ಬ! (ತಾ)
-ನೊಬ್ಬ ಮೂರೆಂದಳ್ಸಿದ ಮಬ್ಬ! (ಹ)
-ಬ್ಬ ನಿರಂಜನಾದಿತ್ಯ ಕಬ್ಬ!!!

ಭಿಕ್ಷೆ ನೀಡಮ್ಮನ್ನಪೂರ್ಣಮ್ಮಾ! (ರ)   4(1891)

-ಕ್ಷೆ ಸರ್ವರಿಗೂ ನಿನ್ನದಮ್ಮಾ!
ನೀನೆಲ್ಲಾ ಲೋಕಗಳಮ್ಮಮ್ಮಾ! (ಮೃ)
-ಡನರಸಿ ನೀನು ಕಾಣಮ್ಮಾ! (ನೆ)
-ಮ್ಮದಿ ನಿನ್ನಿಂದಾಗಬೇಕಮ್ಮಾ! (ನಿ)
-ನ್ನ ಪ್ರಸಾದ ಪರಮಾನ್ನಮ್ಮಾ!
ಪೂಣಾನುಗ್ರಹದಿಂದಿಕ್ಕಮ್ಮಾ! (ವ)
-ರ್ಣ ಭೇದದಕ್ಕಿಹುದೇನಮ್ಮಾ? (ಅ)
-ಮ್ಮಾ, ನಿರಂಜದಾದಿತ್ಯಯ್ಯಮ್ಮಾ!!!

ಭಿಕ್ಷೆ ಹಾಕಿದ ಕೈಗಾಗ್ಬಾರದು ಶಿಕ್ಷೆ! (ರ)   6(4020)

-ಕ್ಷೆ ಅದಕ್ಕೀಗಾಗುತ್ತಿರುವ ಪರೀಕ್ಷೆ!
ಹಾಲಾದರೂ ವಿಷ ಬೆರೆತರುಪೇಕ್ಷೆ!
ಕಿತ್ತಾಟವೇ ಪರಸ್ಪರವಾದ್ರೆ ಶಿಕ್ಷೆ!
ಡ ಸೇರ್ಲಿಕ್ಕಿರಬೇಕು ಅಪೇಕ್ಷೆ!
ಕೈ, ಬಾ

, ಕಚ್ಚೆ ಶುದ್ಧವಿದ್ದರೆಲ್ಲಾ ರಕ್ಷೆ!
ಗಾರ್ಧಭಕ್ಕೆ ದೊಣ್ಣೆ ಏಟಿನ ಶಿಕ್ಷೆ! (ಆ)
-ಗ್ಬಾರದ್ದಾಗ್ಬಾರದೆಂದೇ ಸದಾ ನಿರೀಕ್ಷೆ!
ವಿಸುತನದ್ದಾಗಿತುತ್ತಮ ನಕ್ಷೆ!
ದುರ್ಬುದ್ಧಿಗಳಿಗೆಲ್ಲಾ ಅದು ಉಪೇಕ್ಷೆ!
ಶಿವಾನಂದನಿತ್ತನೆಲ್ಲರಿಗೂ ದೀಕ್ಷೆ! (ದ)
-ಕ್ಷೆ ನಿರಂಜನಾದಿತ್ಯ ಮಾತೆ ಫಾಲಾಕ್ಷೆ!!!

ಭಿನ್ನಾಭಿಪ್ರಾಯದಿಂದಾಳಬಲ್ಲಿರೇನಯ್ಯಾ? (ಚೆ)   4(1909)

-ನ್ನಾಗಿ ಆಲೋಚಿಸಿ ನಿರ್ಧಾರ ಮಾಡಿರಯ್ಯಾ! (ಅ)
-ಭಿಮಾನ ನಿಷ್ಕಾಮ ಸೇವೆಗಿರಬೇಕಯ್ಯಾ!
ಪ್ರಾಮಾಣಿಕತೆ ಎಲ್ಲರಲ್ಲಿರಬೇಕಯ್ಯಾ! (ಜ)
-ಯಮಾಲೆ ಕಂಠದಲ್ಲಾಗ ಶೋಭಿಪುದಯ್ಯಾ!
ದಿಂಡೊಳಗಿಲ್ಲದ ಬಾಳೆ ಬೀಳುವುದಯ್ಯಾ!
-ದಾರಿ ನೇರಾಗಿಲ್ಲದ ಯಾತ್ರೆ ಕಷ್ಟವಯ್ಯಾ! (ಬ)
-ಳಸಬೇಕು ಬಲ್ಲವರನುಭವವಯ್ಯಾ!
ರೀ ಗುಲ್ಲು ನಿದ್ದೆಗೇಡಾಗಬಾರದಯ್ಯಾ! (ಮ)
-ಲ್ಲಿಕಾರ್ಜುನನಲ್ಲಿ ಭಕ್ತಿಯಿರಬೇಕಯ್ಯಾ!
ರೇಗಾಟ, ಕೂಗಾಟದಿಂದ ಫಲವಿಲ್ಲಯ್ಯಾ!
ಮಸ್ಕಾರ ಸದ್ಗುರು ಪಾದಕ್ಕೆ ಮಾಡಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯೋಪದೇಶವಿದಯ್ಯಾ!!!

ಭೀತಿಹರ ಶ್ರೀರಾಮ ಜಯ ಮಂತ್ರ!   1(383)

ತಿಳಿದಿದ ನಿತ್ಯ ಬರೆಯಾ ಮಂತ್ರ!
ರನ ವಿಷವಿಳಿಸಿತೀ ಮಂತ್ರ!
ಕ್ಕಸರ ಸೂಕ್ಕಿಳಿಸಿತೀ ಮಂತ್ರ!
ಶ್ರೀ ಸೀತಾಮಾತೆಗಿದು ಪ್ರಿಯ ಮಂತ್ರ!
ರಾತ್ರಿ, ಹಗಲೆಲ್ಲಾ ಜಪಿಸೀ ಮಂತ್ರ!
ರ್ಕಟರ್ಗೆ ಮೋಕ್ಷವಿತ್ತಿತೀ ಮಂತ್ರ!
ನ್ಮ ಪಾವನಕಿದುತ್ತಮ ಮಂತ್ರ!
ಮಪಾಶ ಕತ್ತರಿಪುದೀ ಮಂತ್ರ!
ಮಂಗೇಶಗೆ ಬ್ರಹ್ಮತ್ವವಿತ್ತೀ ಮಂತ್ರ!
ತ್ರಯೋದಶಾಕ್ಷರೀ ಶ್ರೀರಾಮ ಮಂತ್ರ!
ನಿರಂಜನಾದಿತ್ಯನಾ ಪ್ರಾಣ ಮಂತ್ರ!!!

ಭುಕ್ತಿಗಾಗಿರುವವನು ನಾನು! [ಮು]   5(3003)

-ಕ್ತಿ ಸ್ವರೂಪವಾದವನು ನೀನು!
ಗಾಳಿಬೀಸಿದತ್ತೋಡ್ವವ ನಾನು!
ಗಿರಿಯಂತೆ ಅಚಲಾತ್ಮ ನೀನು!
ರುಜುಮಾರ್ಗ ತೊರೆದವ ನಾನು!
ರ ಗುರು ದತ್ತಾತ್ರೇಯ ನೀನು!
ಸ್ತ್ರಾಲಂಕಾರವುಳ್ಳವ ನಾನು! (ತ)
-ನು, ಮನಾತೀತವಧೂತ ನೀನು!
ನಾಮ ರೂಪಕ್ಕಂಟರ್ಪವ ನಾನು! (ಹ)
-ನುಮ ನಿರಂಜನಾದಿತ್ಯ ನೀನು!!!

ಭುವನಾನಂದಾ ನಂದಾನಂದ!   4(1821)

ರದಾನಂದಾ ನಂದಾನಂದ!
ನಾರದಾನಂದಾ ನಂದಾನಂದ!
ನಂದನಾನಂದಾ ನಂದಾನಂದ!
ದಾಸರಾನಂದಾ ನಂದಾನಂದ! (ಅ)
-ನಂಗನಾನಂದಾ ನಂದಾನಂದ! (ಬೃಂ)
-ದಾವನಾನಂದಾ ನಂದಾನಂದ!
ನಂಬಲಾನಂದಾ ನಂದಾನಂದ! (ಅಂ)
-ದ ನಿರಂಜನಾದಿತ್ಯಾನಂದ!!!

ಭೂ ಸುಧಾರಣೆಯಾಗಬೇಕು!   4(1421)

ಸುವ್ಯವಸ್ಥೆಯಿಂದಾಗಬೇಕು!
ಧಾರಾಳಿ ಶ್ರೀಮಂತನಾಗ್ಬೇಕು! (ಪ)
-ರಮಾರ್ಥಿ ತಾನಾಗಿರಬೇಕು! (ಹೊ)
-ಣೆ ಭಗವಂತನಾಗಬೇಕು!
ಯಾರೂ ನೋಯದಂತಿರಬೇಕು!
ಲಾಟೆ ಮಾಡದಿರಬೇಕು!
ಬೇಸಾಯ ವೃದ್ಧಿಯಾಗಬೇಕು! (ಬೇ)
-ಕು ನಿರಂಜನಾದಿತ್ಯಾಗ್ಬೇಕು!!!

ಭೂಮಂಡಲೇಶ್ವರ ಗುರು ಶಿವಾನಂದ! (ಧೀ)   1(223)

-ಮಂತ, ಶ್ರೀಮಂತ, ಸರ್ವನ ಹಿತಾನಂದ! (ಬ)
-ಡ ರೋಗಪೀಡಿತರಾಪ್ತ ಭಾವಾನಂದ!
ಲೇಶವೊ ಲೋಭವಿಲ್ಲದದಾರಾನಂದ! (ನ)
-ಶ್ವರವೀ ದೇಹವೆಂದು ಸಾರಿದಾನಂದ!
ಸದೂಟ ಭಜನೆಯಲೆಂದಾನಂದ!
ಗುಟ್ಟೂ ರಟ್ಟು ಮಾಡಿ ಜ್ಞಾನವಿತ್ತನಂದ!
ರುಚಿ ಪರಮಾರ್ಥದಲಿದೆಂದಾನಂದ!
ಶಿರೋಮಣಿ ಯತಿಗಣ ಫ್ರಾಣಾನಂದ!
ವಾದ, ಬೇದಗಳಳಿದ ನಿಜಾನಂದ!
ನಂದಕಂದನಿತ್ತ ಗೀತಾಮೃತಾನಂದ!
ತ್ತ ನಿರಂಜನಾದಿತ್ಯ ಶಿವಾನಂದ!!!

ಭೂಷಣ ಪ್ರದರ್ಶನಕ್ಕಲ್ಲ ಭಾಷಣ! [ದೋ]   4(2448)

-ಷನ್ಯರದ್ದೆಣಿಸಲಿಕ್ಕಲ್ಲ ಭಾಷಣ! (ಹ)
-ಣ ಸಂಪಾದನೆ ಮಾಡ್ಲಿಕ್ಕಲ್ಲ ಭಾಷಣ!
ಪ್ರತಿಷ್ಠೆ ಬೆಳೆಸಲಿಕ್ಕಲ್ಲ ಭಾಷಣ!
ಯಾಶೂನ್ಯನಾಗಲಿಕ್ಕಲ್ಲ ಭಾಷಣ! (ಸ್ಪ)
-ರ್ಶಸ್ಪರ್ಶ ಭೇದ ತೋರ್ಲಿಕ್ಕಾಲ್ಲ ಭಾಷಣ!
ಶ್ವರದಾಶಾಪೂರ್ತಿಗಲ್ಲ ಭಾಷಣ! (ಅ)
-ಕ್ಕಪಕ್ಕದ ವಿರೋಧಕ್ಕಲ್ಲ ಭಾಷಣ! (ಚಿ)
-ಲ್ಲರೆ ದೈವಕ್ಕಾಳಾಗ್ಲಿಕ್ಕಲ್ಲ ಭಾಷಣ!
ಭಾನುವಿನೊಲ್ಮೆಗಾಗ್ಯಾಗ್ಲೆಲ್ಲ ಭಾಷಣ (ದೋ)
-ಷದೂರನಾಗ್ಲಿಕ್ಕಾಗ್ಯಾಗ್ಲೆಲ್ಲ ಭಾಷಣ! (ಕಾ)
-ಣ, ನಿರಂಜನಾದಿತ್ಯನಿಂಥಾ ಭಾಷಣ!!!

ಭೋಗ ತ್ಯಾಗದಿಂದಾಗು ಯೋಗಿ!   6(3512)

ಣಪತಿಯಾಗು ಹಾಗಾಗಿ!
(ನಿ)-ತ್ಯಾನಂದಾನುಭವಿ ವಿರಾಗಿ!
(ಗ)-ಗನ ಸದೃಶಮನ ಮಾಗಿ!
ದಿಂಡೆಯರೊಡಗೂಡಿ ರೋಗಿ!
ದಾಸರ ದಾಸರು ನೀವಾಗಿ!
ಗುರುಕೃಪೆಗೆ ಪಾತ್ರರಾಗಿ!
ಯೋನಿಜನೇಕಾಗ್ಬೇಕು ಭೋಗಿ?
(ಆ)-ಗಿ, ಶ್ರೀ ನಿರಂಜನಾದಿತ್ಯಾಗಿ!!!

ಭೋಗ ಭಾಗ್ಯಕ್ಕಲ್ಲ ಭಜನೆ! (ರಂ)   4(1805)

-ಗನಾಥ ತಾನಕ್ಕೆ ಭಜನೆ!
ಭಾವಾತೀತನಕ್ಕೆ ಭಜನೆ! (ಯೋ)
-ಗ್ಯ ವಿರಾಗಿಯಕ್ಕೆ ಭಜನೆ! (ರ)
-ಕ್ಕೆಸಾರಿ ತಾನಕ್ಕೆ ಭಜನೆ! (ಎ)
-ಲ್ಲರೂ ರಾಮನಕ್ಕೆ ಭಜನೆ!
ವ ನಿರ್ನಾಮಕ್ಕೆ ಭಜನೆ!
ನ್ಮ ಪಾವನಕ್ಕೆ ಭಜನೆ! (ನೆ)
-ನೆ, ನಿರಂಜನಾದಿತ್ಯ ನೀನೇ!!!

ಭೋಗ ಶರೀರ, ರೋಗ ಶರೀರ! (ಯೋ)   4(1934)

-ಗ ಶರೀರ, ನಿರೋಗ ಶರೀರ!
ಕ್ತಿ ಶರೀರ, ಭಕ್ತಿ ಶರೀರ!
ರೀತಿ ಶರೀರ, ಖ್ಯಾತಿ ಶರೀರ!
ಮ್ಯ ಶರೀರ, ಸೌಮ್ಯ ಶರೀರ!
ರೋಷ ಶರೀರ, ದೋಷ ಶರೀರ!
ಟ್ಟಿ ಶರೀರ, ಜಟ್ಟಿ ಶರೀರ!
ಶಿ ಶರೀರ, ಕುಶಿ ಶರೀರ! (ಧು)
-ರೀಣ ಶರೀರ, ಗೌಣ ಶರೀರ! (ಹ)
-ರ ನಿರಂಜನಾದಿತ್ಯ ಶರೀರ!!!

ಭ್ರಮರಾಂಬೆ ನನ್ನಮ್ಮ ಕಾಣಮ್ಮಾ!   3(1357)

ಹಾದೇವನೆನ್ನ ಪಿತನಮ್ಮಾ! (ಸು)
-ರಾಂಗನೆಯರು ದಾಸಿಯರಮ್ಮಾ!
ಬೆನಕನೆನ್ನನು ಜಾತನಮ್ಮಾ!
ವಿಲೆನಗೆ ವಾಹನವಮ್ಮಾ! (ನ)
-ನ್ನ ನಿಲಯವೆಲ್ಲಾ ಕಡೆಯಮ್ಮಾ! (ಅ)
-ಮ್ಮನಿಗೆ ಪ್ರಿಯಪುತ್ರ ನಾನಮ್ಮಾ!
ಕಾಲನ ಭಯ ನನಗಿಲ್ಲಮ್ಮಾ! (ಹ)
-ಣ ಕಾಸಿಗಾಶಿಪವನಲ್ಲಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾಗುಹಮ್ಮಾ!!!

ಭ್ರಾತೃ, ಭಗಿನೀ ಪ್ರೇಮಸಿದ್ಧಿ ಹೀಗಮ್ಮಾ!   1(407)

ತೃಣ ಸಮ ವಿಷಯಾಸೆಯಾಗಲಮ್ಮಾ!
ರತನಾದರ್ಶದಂತಿರಬೇಕಮ್ಮಾ!
ಗಿರಿ, ತಟಾಕ ವಿಹಾರದಿಂದಲ್ಲಮ್ಮಾ!
ನೀತಿ, ರೀತಿಗಿರಬೇಕು ಗಮನಮ್ಮಾ!
ಪ್ರೇಮ ಸೇವಾತ್ಮ ಭಾವದಿಂದಾಗಲಮ್ಮಾ!
ನ ಮರ್ಕಟನಂತಿರಬಾರದಮ್ಮಾ!
ಸಿನಿಮಾಕ್ಕೊಡಗೂಡಿ ಹೋದರಲ್ಲಮ್ಮಾ! (ಸಿ)
-ದ್ಧಿ ನೀರಲೊಟ್ಟಿಗೆ ಮಿಂದರಲ್ಲದಮ್ಮಾ!
ಹೀನ ವ್ಯಾಪಾರಕ್ಕೆಡೆಯಿದರಿಂದಮ್ಮಾ! (ಅ)
-ಗತ್ಯದ ನಿವಾರ್ಯಕ್ಕೆ ನೆರವಾಗಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯ ಬೋಧೆಯಿದಮ್ಮಾ!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ