ಬಂತು ದೇವರ ನಾಮಕ್ಕಾಹ್ವಾನೆ! (ನಿಂ)   4(1704)

-ತು ಹೋಯಿತನಾರೋಗ್ಯ ಸೂಚನೆ!
ದೇಹಕ್ಕಾಯ್ತು ವಿಮಾನ ಚಲನೆ!
ರವಿತ್ತಳು ಬಾಲಾ ಲಲನೆ! (ನ)
-ರ ಗಾಯಕಗಾಯ್ತು ಸಂಭಾವನೆ!
ನಾಮ ಸಂಗೀತ ಕಲೋಪಾಸನೆ!
ಹಿಮೆಯಿಂದ ಪರಿವರ್ತನೆ! (ವಾ)
-ಕ್ಕಾಯ, ಮನಕ್ಕೆಲ್ಲಾ ವಿಮೋಚನೆ! (ಆ)
-ಹ್ವಾನೆ, ಗುರುವಿನಾಜ್ಞಾ ಪಾಲನೆ! (ಎ)
-ನೆ, ನಿರಂಜನಾದಿತ್ಯನ ನೆನೆ!!!

ಬಂದಂತೆ ಹೋಗ್ಲಿಕ್ಕಭ್ಯಾಸ ಮಾಡು!   5(3146)

ದಂಭ, ದರ್ಪ ಬಿಟ್ಟು ಅದು ಮಾಡು!
ತೆರೆಮರೆಯ ಕಾಯಂತಿದ್ದು ಮಾಡು!
ಹೋಮ, ನೇಮ ಬೇಡದಕ್ಕೆ! ಮಾಡು! (ಆ)
-ಗ್ಲಿ ಹೋಗ್ಲಿ, ನಿನ್ನ ಕರ್ತವ್ಯ ಮಾಡು! (ಚ)
-ಕ್ಕಳದ ಗೊಂಬೆಯಾಟ ಸಾಕ್ಮಾಡು! (ಸ)
-ಭ್ಯಾತ್ಮ ನೀನಾಗಿ ಜೀವನ ಮಾಡು!
ದಾಶಿವನ ಸ್ಮರಿಸಿ ಮಾಡು!
ಮಾಯಾ, ಮೋಹಕ್ಕಾಳಾಗದೇ ಮಾಡು! (ಮಾ)
-ಡು ನಿರಂಜನಾದಿತ್ಯನ ಕೂಡು!!!

ಬಂದದ್ದೆಲ್ಲಾ ಬರ್ಲಿ ಗೋವಿಂದನ ದಯೆ ಇರ್ಲಿ!   5(2997)

ಯಾಸಾಗರನವನೆಂಬ ನಂಬಿಗೆ ಇರ್ಲಿ! (ಬಿ)
-ದ್ದೆ ನಾನೆಂಬ ದುಃಖವೆಳ್ಳಷ್ಟೂ ಇಲ್ಲದಿರಲಿ! (ಉ)
-ಲ್ಲಾಸದಿಂದ ಸದಾ ಕರ್ತವ್ಯ ಸಾಗುತ್ತಿರಲಿ!
ರುವುದೆಲ್ಲಾ ಒಳ್ಳೇದಕ್ಕೆಂಬಾನಂದವಿರ್ಲಿ! (ಇ)
-ರ್ಲಿ, ಸಾಯ್ಲಿ, ಅವರಿಗಾಗೀ ಬಾಳು ಸದಾ ಇರ್ಲಿ!
ಗೋಕ್ಷೀರಾತ್ಮಾನಂದ ನಿತ್ಯ ಪಾನವಾಗುತ್ತಿರ್ಲಿ!
ವಿಂಧ್ಯಾದ್ರಿಯಂತೆ ಮನಸ್ಸೆಂದೆಂದೂ ಸ್ಥಿರವಿರ್ಲಿ!
ರಿದ್ರ, ಧನಿಕ ಭೇದವಿಲ್ಲದಂತಿರಲಿ!
(ಅ)ನವರತ ಅವನ ಸೇವೆ ಮುಂದರಿಯಲಿ!
ತ್ತನೇ ಸರ್ವ ನಾಮ, ರೂಪವೆಂಬರಿವಿರ್ಲಿ! (ಮಾ)
-ಯೆಯಾಟಕ್ಕೆಂದೆಂದೂ ಮನಸ್ಸು ಸೋಲದಿರಲಿ!
ಹ ಸುಖ ಅಸ್ಥಿರವೆಂಬ ಜ್ಞಾನವಿರಲಿ! (ಇ)
-ರ್ಲಿ, ನಿರಂಜನಾದಿತ್ಯನಲ್ಲಿ ಭಕ್ತಿ ಸ್ಫುರಿಸ್ಲಿ!!!

ಬಂದನೊಬ್ಬ ಸಂಗೀತಗಾರ!   4(2018)

ಯೆದೋರೆಂದಾ ಸುಕುಮಾರ! (ನೀ)
-ನೊಲಿದು ಸೇರ್ಸೆಂದ ತನ್ನೂರ! (ತ)
-ಬ್ಬಲಿ ನಾನೆಂದಿಂತೆಂದಾ ಧೀರ!
“ಸಂಪೂಜ್ಯ” ಗುರು ನೀನುದಾರ! (ಅಂ)
-ಗೀಕರಿಸೆನ್ನ ನಮಸ್ಕಾರ!
ಪ್ಪಾಯ್ತು ಪ್ರಾರಬ್ಧಾನುಸಾರ! (ಆ)
-ಗಾಗ ಬಹೆನಾಜ್ಞಾನುಸಾರ! (ಹ)
-ರ ನಿರಂಜನಾದಿತ್ಯಾಧಾರ!!!

ಬಂದರು, ಹೋದರು, ಬಹಳ ಮಂದಿ ನಾರಾಯಣಾ!   4(2156)

ರ್ಶನ ನಿನ್ನದವರಿಗಾನಂದ ನಾರಾಯಣಾ! (ಗು)
-ರುಭಕ್ತಿಯವರದ್ನಿನಗೆ ತೃಪ್ತಿ ನಾರಾಯಣಾ!
ಹೋಗಲಾರರು ನಿನ್ನ ಬಿಟ್ಟವರು ನಾರಾಯಣಾ!
ಯೆ ನಿನ್ನದಪಾರವರ ಮೇಲೆ ನಾರಾಯಣಾ!
ರುಚಿ ನಿನ್ನ ಪಾದ ತೀರ್ಥವರಿಗೆ ನಾರಾಯಣಾ!
ಳಲಿಕೆ ನಿನ್ನಡ್ಯಲ್ಲಿಲ್ಲವರ್ಗೆ ನಾರಾಯಣಾ!
ಸಿದವರಲ್ಲವರ್ನಿನ್ನಡ್ಯಲ್ಲಿ ನಾರಾಯಣಾ! (ಒ)
-ಳ, ಹೊರಗೆಲ್ಲಾ ನೀನೇ ಅವರಿಗೆ ನಾರಾಯಣಾ!
ಮಂದಿರ ನಿನಗವರ ಹೃದಯ ನಾರಾಯಣಾ!
ದಿನ, ರಾತ್ರಿ ನೀನಲ್ಲಿರುತ್ತಿಹಾರ್ಯ ನಾರಾಯಣಾ!
ನಾದ, ಬಿಂದು, ಕಲಾತೀತ ಶ್ರೀಕಾಂತ ನಾರಾಯಣಾ!
ರಾಮಭಕ್ತಾಂಜನೇಯನಂತರಾತ್ಮ ನಾರಾಯಣಾ!
ಮಸ್ವರೂಪ ನೀನು ರಾವಣಗೆ ನಾರಾಯಣಾ! (ಗ)
-ಣಾಧಿಪ ನಿರಂಜನಾದಿತ್ಯನಪ್ಪ ನಾರಾಯಣಾ!!!

ಬಂದರೆ ಮಳೆ, ಕಾದರೆ ಬಿಸಿಲು!   2(930)

ಯೆಯಿಂದಾಯಿತೀ ಬಡ ಒಡಲು! (ನೆ)
-ರೆ ಆಯಾಸವಿದು ಹಗಲಿರುಳು!
ನಸಿನ ಆಟ ಬಲು ಮರುಳು! (ವೇ)
-ಳೆಯವೇಳೆನ್ನದಾಡ್ವುದು ಕೈ ಕಾಲು!
ಕಾರಣಕರ್ತನರಿಯದೀ ಬಾಳು! (ಮ)
-ದ, ಮತ್ಸರದಿಂದಾಗುತಿದೆ ಗೋಳು! (ಕೆ)
-ರೆ ನೀರು ಬತ್ತಿದರೇನು ಫಸಲು?
ಬಿತ್ತನೆಗೆ ಬೇಕು ಜಲ ಮಾಮೂಲು! (ಹು)
-ಸಿಯಾಟಾದಿಂದಾಗದೆಂದಿಗೂ ಮೇಲು! (ಮೇ)
-ಲು, ನಿರಂಜನಾದಿತ್ಯಾತ್ಮ ಬಿಸಿಲು!!!

ಬಂದವರ ನೋಡಿ ಎಲೆ ಹಾಕು!   6(4268)

ಣಿವಾರಿದಾಗ ಕೇಳಿ ಹಾಕು!
ರ್ಣಭೇದವೆಣಿಸದೆ ಹಾಕು! (ಪ)
-ರ ಊರವರಿಗೆ ಮೊದ್ಲು ಹಾಕು!
ನೋಡಿ ಎಚ್ಚರದಿಂದೂಟ ಹಾಕು! (ಬ)
-ಡಿಸಿದ್ದುಂಡಾದ್ಮೇಲ್ಬೇಕೆಂದ್ರೆ ಹಾಕು!
ಲೆ ನೀನೇ ಎತ್ತಿ ಹೊರಗ್ಹಾಕು! (ತ)
-ಲೆಹರಟೆ ಆಡದೆತ್ತಿ ಹಾಕು!
ಹಾಗಿಲ್ಲದಿದ್ರೆ ಸತ್ಕಾರ ಸಾಕು! (ಹಾ)
-ಕು, ನಿರಂಜನಾದಿತ್ಯಗದ್ಬೇಕು!!!

ಬಂದವ್ಗಿಕ್ಕದೇ ಬರ್ತೇನೆಂದವ್ಗಾಗಿ ಬಚ್ಚಿಡ್ಬೇಡ!   6(3979)

ತ್ತನಾವಾಗೆಂದು ಬರ್ತಾನೋ? ಮೈಮರೆತಿರ್ಬೇಡ! (ಇ)
-ವ್ಗಿಕ್ಕಬಾರ್ದು, ಅವಗಿಕ್ಬೇಕೆಂಬ ಅಜ್ಞಾನ ಬೇಡ! (ದ)
-ಕ್ಕಲಾರ್ದಯೋಗ್ಯರಿಗೆ ಭಿಕ್ಷೆ; ತಿಳಿಯದಿರ್ಬೇಡ!
ದೇವರೆಲ್ಲರಲ್ಲಿಹನೆಂಬುದರಿಯದಿರ್ಬೇಡ!
ಡವ, ಬಲ್ಲಿದರಲ್ಲಿ ಭೇದ ಕಲ್ಪಿಸಬೇಡ! (ತೋ)
-ರ್ತೇನೆ ಚಮತ್ಕಾರವೆಂಬವನನ್ನು ನಂಬಬೇಡ!
ನೆಂಟರಿಷ್ಟರಿಗೊಂದನ್ಯರಿಗಿನ್ನೊಂದು ಮಾಡ್ಬೇಡ!
ಯಾದೃಷ್ಟಿಯಿಂದೆಲ್ಲರನ್ನು ನೋಡದಿರಬೇಡ! (ನೋ)
-ವ್ಗಾಗಿ, ಸಾವ್ಗಾಗಿ ಚಿಂತಿಸುತ್ತಾ ಕುಳಿತಿರಬೇಡ! (ಯೋ)
-ಗಿಯಾಗಿ ನಿಜಾನಂದಾನುಭವಿಯಾಗದಿರ್ಬೇಡ!
ಹು ಜನ್ಮದ ಸುಕೃತ ಈ ಜನ್ಮ! ಹಾಳಾಗ್ಬೇಡ! (ನೆ)
-ಚ್ಚಿ ಧನ, ಧ್ಯಾನ; ಸತಿ, ಸುತರ ಕೆಟ್ಟುಹೋಗ್ಬೇಡ! (ಮಾ)
-ಡ್ಬೇಡ ದುರ್ಜನ ಸಹವಾಸವೆಂದೆಂದೂ ಮಾಡ್ಬೇಡ! (ಎ)
-ಡರ್ಗಂಜಿ ನಿರಂಜನಾದಿತ್ಯ ನಿಜ ಧರ್ಮ ಬಿಡ!!!

ಬಂದಾಗ ಒಂದಾಗಿರಬೇಕೆಂಬೆ!   6(3522)

(ಒಂ)-ದಾಗಿರುವಾಗ ಬರಬೇಕೆಂಬೆ!
(ಯೋ)-ಗ ಗಮನಾಗಮನಾತೀತೆಂಬೆ!
ಒಂದಾಗ್ದಿದ್ದರೆ ಜಗಳವೆಂಬೆ!
ದಾರಿ ಬೇರಾದ್ರೂ ಗುರಿ ಒಂದೆಂಬೆ!
ಗಿರಿಧಾರಿ ಯೋಗೇಶ್ವರನೆಂಬೆ!
ಘುರಾಮ ಧರ್ಮ ಕರ್ಮಿಯೆಂಬೆ!
ಬೇಕೆಲ್ಲಕ್ಕೂ ಗುರುಕೃಪೆಯೆಂಬೆ!
(ಏ)-ಕೆಂಬ ಗಿಹ, ಪರವಿಲ್ಲವೆಂಬೆ!
(ಅಂ)-ಬೆ, ನಿರಂಜನಾದಿತ್ಯ ಮೂಕಾಂಬೆ!!!

ಬಂದಿರದಾಗೇಕೆ ಬಂದಿಲ್ಲೆಂಬೆ? [ಬಂ]   3(1268)

-ದಿರುವಾಗದೇಕೆ ಹೋಗಿಲ್ಲೆಂಬೆ? (ತ)
-ರತರದೂಟ ಕೊಟ್ಟಾಗೇಕೆಂಬೆ! (ಸ)
-ದಾ ಒಂದೇ ಇಟ್ಟಾಗ ಸಾಕಾಯ್ತೆಂಬೆ!
ಗೇಣು ಹೊಟ್ಟೆಗಾಗೀ ಕಷ್ಟವೆಂಬೆ! (ಯಾ)
-ಕೆ ದೇವರ ದಯೆ ಬಂದಿಲ್ಲೆಂಬೆ!
ಬಂಧು, ಬಾಂಧವರು ದೇವರೆಂಬೆ!
ದಿನ, ರಾತ್ರಿ ಸಾಕೀ ಕಾಟಾವೆಂಬೆ! (ನಿ)
-ಲ್ಲೆಂದರೋಡೋಡೆಂದರೆ ನಿಲ್ಲೆಂಬೆ! (ಗೊಂ)
-ಬೆ, ನಿರಂಜನಾದಿತ್ಯನಲ್ಲೆಂಬೆ!!!

ಬಂದೆ ಪಾದ ದರ್ಶನಕೆಂದ! (ಇ)   4(2189)

-ದೆಯೇ ಅವಕಾಶವೀಗೆಂದ!
ಪಾಪಿ ನಾನಾಗಿರುವೆನೆಂದ!
ರ್ಶನಕೆ ಕಾಯ್ಲಾರೆನೆಂದ! (ಬಂ)
-ದ ಹಾಗೇ ಹೋಗಲೇ ನಾನೆಂದ! (ದ)
-ರ್ಶನವಾಗ್ವುದೆಂದಿಂದು ಅಂದ! (ಹೀ)
-ನ ಭಾಗ್ಯಗಾಗದಾತ್ಮಾನಂದ! (ಬೇ)
-ಕೆಂಬ ಭಕ್ತಗಾಳು ಗೋವಿಂದ! (ಬಂ)
-ದ ನಿರಂಜನಾದಿತ್ಯಾನಂದ!!!

ಬಂದ್ಯೇನೆ ಪ್ರಸಾದ ತಿಂದ್ಯೇನೇ? (ವೈ)   4(2492)

-ದ್ಯೇಶ್ವರಾರೋಗ್ಯದಾತಲ್ವೇನೇ? (ದಿ)
-ನೇದಿನೇ ಗುಣ ಕಾಣ್ಬೇಕ್ತಾನೇ?
ಪ್ರಯತ್ನ ಮಾಡ್ದಿರ್ಬಹುದೇನೇ?
ಸಾಯುಜ್ಯ ಸುಮ್ಮಗಾಗ್ತದೇನೇ? (ಉ)
-ದಯವಾದ್ರೂ ಏಳ್ಬಾರ್ದೇನೇ?
ತಿಂದ್ಮಜಾ ಮಾಡ್ಲಿಕ್ಜನ್ಮವೇನೇ? (ಆ)
-ದ್ಯೇನೇ, ಶಬರಿಯಂತಾದ್ಯೇನೇ? (ಏ)
-ನೇ, ನಿರಂಜನಾದಿತ್ಯಾದ್ಯೇನೇ???

ಬಂದ್ರೆ-ಹೋಗ್ಲಿಕ್ಕೆ ಮನಸ್ಸಿಲ್ಲ! (ಹೋ)   6(3305)

-ದ್ರೆ ಬರ್ಲಿಕಮ್ಮ ಬಿಡೋದಿಲ್ಲ!
ಹೋಗಿ, ಬರ್ತಿದ್ರಾನಂದವಿಲ್ಲ! (ಆ)
-ಗ್ಲಿ ಗುರುವಿನಿಚ್ಛೆಯಂತೆಲ್ಲ! (ಸಿ)
-ಕ್ಕೆ ನನ್ನರಿಗೆಂದಿಹೆನಲ್ಲಾ!
ಗುವಿನೀ ಮಾತು ಸುಳ್ಳಲ್ಲ! (ತ)
-ನಯನೇಳಿಗೆ ತಂದೆಗೆಲ್ಲಾ!
ಸಿರಬಾಗಿ ಹೇಳಿದೆನೆಲ್ಲಾ! (ಎ)
-ಲ್ಲಾ ನಿರಂಜನಾದಿತ್ಯ ಬಲ್ಲ!!!

ಬಂದ್ರೇನು, ಇದ್ದೇನು, ಹೋದ್ರೇನು? (ಉ)   6(4122)

-ದ್ರೇಕಕ್ಕೀಡಾಗಬೇಡ ನೀನು!
ನುಡಿ, ನಡೆಯ, ನೋಡು ನೀನು!
ದದ್ದುದ ಹಂಚಿ ತಿನ್ನು ನೀನು! (ಬಿ)
-ದ್ದ್ರೇನೂ ಚಿಂತಿಸದಿರು ನೀನು! (ಭಾ)
-ನು ದೇವ ನಿರ್ಪಂತಿರು ನೀನು!
ಹೋಗುವಾಗಳಬೇಡ ನೀನು! (ಹೋ)
ದ್ರೇಕೆ ಹೊಗ್ಬೇಕೆನ್ಬೇಡ ನೀನು! (ತ)
-ನು ನಿರಂಜನಾದಿತ್ಯನೇನು???

ಬಂಧ ಹರಿವ ದಿನ ಬಂದಂತಿದೆ!   4(2480)

ರೆಯ ವಾಸ ಸಾಕಾಗಿಬಿಟ್ಟಿದೆ!
ರಿ, ಹರರಾನೆಂಬರಿವಾಗಿದೆ!
ರಿಪುಕುಲವೆಲ್ಲಡಗಿಹೋಗಿದೆ!
ರ ಗುರುಸೇವೆ ಸಾಗುತ್ತಲಿದೆ!
ದಿನ, ರಾತ್ರಿಯೆನ್ನದಿದಾಗುತ್ತಿದೆ!
ಡೆ, ನುಡಿಯೆರಡೂ ಒಂದಾಗಿದೆ!
ಬಂದಿಲ್ಲಿಗೆ ಬಹಳ ಕಾಲಾಗಿದೆ!
ದಂಡನೆ ದೇಹಕ್ಕೆ ಸಾಕಷ್ಟಾಗಿದೆ!
ತಿರಿಗೂರು ಸೇರುವಾಸೆಯಾಗಿದೆ!
ದೆವ್ವವೂ ನಿರಂಜನಾದಿತ್ಯಾಗಿದೆ!!!

ಬಂಧನವಿದು ಬಾಹ್ಯ ಮುಖ!   2(531)

ನ ಧಾನ್ಯವೆಲ್ಲಾ ಈ ಮುಖ!
ಯನಾದಿಂದ್ರಿಯವೀ ಮುಖ!
ವಿಚಾರಿಗಿದು ದುಃಖ ಮುಖ!
ದುರ್ಗತಿಕಾರಕವೀ ಮುಖ!
ಬಾಲ್ಯಾವಸ್ಥೆಗಳೀ ಮುಖ! (ಸ)
-ಹ್ಯವಲ್ಲದಿದಶಾಂತಿ ಮುಖ!
ಮುಕ್ತಿ ಪ್ರದವದೊಳಮುಖ! (ಸ)
-ಖ ನಿರಂಜನಾದಿತ್ಯ ಮುಖ!!!

ಬಂಧನಾ ಭವ ಬಂಧನಾ!   2(557)

ನ, ಕನಕ ಬಂಧನಾ!
‘ನಾ’ ‘ನೀ’ ನೆಂಬುದು ಬಂಧನಾ!
ವನ, ಭಾರ್ಯಾ ಬಂಧನಾ!
ಸ್ತು ವಾಹನ ಬಂಧನಾ!
ಬಂಧು, ಬಳಗ ಬಂಧನಾ! (ಸಾ)
-ಧಕಗಿದೆಲ್ಲಾ ಬಂಧನಾ!
ನಾನಾದಿತ್ಯ ನಿರಂಜನಾ!!!

ಬಂಧವಿಮೋಚನೆಯಿಂದ ನೀ ಗೋವಿಂದ!   1(46)

ಗಧಗಿಪರ್ಜೀವರ್ವಿಷಯದಿಂದ!
ವಿಷಯದ ವಾಸನೆಯೆ ಭವ ಬಂಧ!
ಮೋಹ ಜೀವನಿಗೊಂದು ಪ್ರಾರಬ್ಧ ಬಂಧ!
ರಣಾದಿಂದ್ರಿಯ ಸಂಬಂಧವೇ ಬಂಧ!
ನೆಪ ಮಾತ್ರ ಕಾಯ! ಎಲ್ಲಾ ಮನದಿಂದ!
ಯಿಂಬಿಗಾಗಿರಬೇಕು ನಾಮ ಸಂಬಂಧ!
ರ್ಶನದಿಂದಾಗುವ ಜೀವ ಗೋವಿಂದ!
ನೀನು ಆಗ ನಿತ್ಯ ನಿರಂಜನಾನಂದ!
ಗೋಪಾಲನಿದನಂದು ಅರ್ಜುನಗಂದ! (ರ)
-ವಿಂದ ಸಖ ನಾನೇ ನೋಡು ಗೋವಿಂದ!
ತ್ತ ನಿರಂಜನಾನಂದ ನೀ ಗೋವಿಂದ!!!

ಬಂಧವೋ, ಮೋಕ್ಷವೋ ನಾ ಕಾಣೆ!   3(1277)

ರ್ಮವೋ, ಕರ್ಮವೋ ನಾ ಕಾಣೆ! (ನೋ)
-ವೋ, ಸಾವೋ ಯಾವುದೂ ನಾ ಕಾಣೆ!
ಮೋಹವೋ, ಸ್ನೇಹವೋ ನಾ ಕಾಣೆ!
ಕ್ಷಯವೋ, ಜಯವೋ ನಾ ಕಾಣೆ! (ಮಾ)
-ವೋ, ಬೇವೋ ಆವುದೂ ನಾ ಕಾಣೆ!
ನಾದವೋ, ಬಿಂದುವೋ ನಾ ಕಾಣೆ!
ಕಾಮನೋ, ರಾಮನೋ ನಾ ಕಾಣೆ! (ಹೊ)
-ಣೆ ನಿರಂಜನಾದಿತ್ಯ ಕಾಣೆ!!!

ಬಂಬು ಒದಗಿದಾಗಿಂಬಿಲ್ಲ!   4(2462)

ಬುರುಡೆ ಇದ್ದಾಗೆಡರಿಲ್ಲ!
ಪ್ಪಲೇಂತೀ ಕತೆಗಳೆಲ್ಲ? (ಮ)
-ದ ಮತ್ಸರ ಕಮ್ಮಿಯೇನಿಲ್ಲ! (ಅಂ)
-ಗಿ, ಲುಂಗಿಗಳಬ್ಬರವೆಲ್ಲ!
ದಾರಿಯೇನೂ ನೇರವಾಗಿಲ್ಲ! (ಈ)
-ಗಿಂದಾಲೋಚಿಸಬೇಕಿದೆಲ್ಲ!
ಬಿಡುವಾಮೇಲೆ ಸಿಕ್ಲಿಕ್ಕಿಲ್ಲ! (ಎ)
-ಲ್ಲ ನಿರಂಜನಾದಿತ್ಯ ಬಲ್ಲ!!!

ಬಗೆ ಹರಿದಾಗಾರಾಮಪ್ಪಾ! (ಬ)   3(1281)

-ಗೆದಿದದಭ್ಯಾಸ ಮಾಡಪ್ಪಾ!
ಡುಹಾಸೆಗಳ ಬಿಡಪ್ಪಾ! (ಹ)
-ರಿ ನಾಮ ಸದಾ ಜಪಿಸಪ್ಪಾ!
ದಾರಿಯಿದು ಸುಲಭವಪ್ಪಾ! (ಯೋ)
-ಗಾನಂದ ಸಿದ್ಧಿಸುವುದಪ್ಪಾ!
ರಾಮನಾಮ ತಾರಕವಪ್ಪಾ!
ರ್ಕಟನೂ ಮಹಾತ್ಮಾದಪ್ಪಾ! (ಅ)
-ಪ್ಪಾ ನಿರಂಜನಾದಿತ್ಯಾತ್ಮಪ್ಪಾ!!!

ಬಗ್ಗ ಸಗ್ಗದಲ್ಲೂ ಜಗ್ಗದಯ್ಯಾ! (ಅ)   6(3567)

-ಗ್ಗವಾಗಿ ಸಿಕ್ಕಿದ್ರೂ ಒಗ್ಗದಯ್ಯಾ!
ತ್ಸಂಗವದ್ರದ್ದು ಮಾಂಸಕ್ಕಯ್ಯಾ! (ಮು)
-ಗ್ಗರಿಸುವುದದ್ರ ಸ್ವಭಾವವಯ್ಯಾ!
ನದ ಕತ್ತಲ್ಲದ್ರ ಕಣ್ಣಯ್ಯಾ! (ಅ)
-ಲ್ಲೂ, ಇಲ್ಲೂ, ಅದಕ್ಕಿದೇ ಪಾಡಯ್ಯಾ!
ನ್ಮವಜಕ್ಕಜ ಅಂತಿತ್ತಯ್ಯಾ! (ಹ)
-ಗ್ಗ ಹಾವೂ, ಹಾವ್ಹಗ್ಗವೂ ಆಗ್ದಯ್ಯಾ!
ರ್ಶನ ಸಾಧು, ಸಜ್ಜನರ್ಗಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಅದಯ್ಯಾ!!!

ಬಚ್ಚಲು ನೀರಿಗುಳಿಗಾಲವಿನ್ನಿಲ್ಲ! [ಮು]   4(2445)

-ಚ್ಚಲಾರದಿನ್ಮೇಲೆ ತೂಬಿನ ಬಾಯೆಲ್ಲ! (ಕಾ)
-ಲು, ಕೈ ತೊಳೆಯಲೀಗಡಚಣೆಯಿಲ್ಲ!
ನೀರೀಗ ಸರಾಗ ಹರಿಯದೇನಿಲ್ಲ! (ಹ)
-ರಿವ ದಾರಿಯಲ್ಲೀಗ ಹಳ್ಳ, ತಿಟ್ಟಿಲ್ಲ!
ಗುರುಚಿತ್ತಕ್ಕೆ ಯಾವುದೂ ಎದುರಿಲ್ಲ! (ಅ)
-ಳಿವುದುಳಿವುದವನಾಜ್ಞೆಯಿಂದೆಲ್ಲ!
ಗಾಳಿಗೋಪುರ ಕಟ್ಟುವಾತವನಲ್ಲ!
ಕ್ಷ್ಯಬಿಟ್ಟು ದೃಷ್ಟಿಚಲಿಸುವುದಿಲ್ಲ!
ವಿಶ್ವೇಶನಲ್ಲಿ ವಿಶ್ವಾಸವಿಡಿರೆಲ್ಲ! (ಸ)
-ನ್ನಿಧಾನದಲ್ಲಿ ಕಳಂಕವೇನೇನಿಲ್ಲ! (ಘು)
-ಲ್ಲ, ನಿರಂಜನಾದಿತ್ಯನ ನೋಡಿರೆಲ್ಲ!!!

ಬಟಾಣಿ ಕಾಳೇನು ಮಾಡಬೇಕು? (ಊ)   4(1771)

-ಟಾನಂದಕ್ಕುಪಯೋಗಿಸಬೇಕು!! (ಧ)
-ಣಿಗೊಪ್ಪುವಡಿಗೆ ಮಾಡಬೇಕು!
ಕಾಳು ಚೆನ್ನಾಗಿ ಬೆಂದಿರಬೇಕು! (ಹ)
-ಳೇ ಮಸಾಲೆ ಹಾಕದಿರಬೇಕು! (ತಿ)
-ನುವಾಗ ಆನಂದ ಉಕ್ಕಬೇಕು!
ಮಾಧವನ ನೆನಪಾಗಬೇಕು! (ನೋ)
-ಡಬೇಕೆಂಬ ಆಸೆ ಹುಟ್ಟಬೇಕು!
ಬೇರೆ ಭಾವ ಬಾರದಿರಬೇಕು! (ಬೇ)
-ಕು ನಿರಂಜನಾದಿತ್ಯಾನ್ನವಿಕ್ಕು!!!

ಬಟ್ಟೆ ತರ್ತೇನೆಂದವ ಬಟ್ಟೆ ಬಿಟ್ಟ! (ಹೊ)   6(4039)

-ಟ್ಟೆಗಿಲ್ಲೆಂದಮೇಧ್ಯ ತಿಂದು ಬಿಟ್ಟ!
ನ್ದೆ, ತಾಯಿಯನ್ನೇ ವಂಚಿಸಿಬಿಟ್ಟ! (ಬ)
-ರ್ತೇನೆಂದವನೆಲ್ಲಿಗೋ ಹೋಗಿಬಿಟ್ಟ!
ನೆಂಟರಿಂದವ ದೂರವಾಗಿಬಿಟ್ಟ!
ರಿದ್ರಾಂಗನೆಯನ್ನೂ ಅಪ್ಪಿ ಬಿಟ್ಟ!
ರ್ಚಸ್ಸೆಲ್ಲಾ ಕಳೆದುಕೊಂಡು ಬಿಟ್ಟ!
ಳಲಿ, ತೊಳಲಿ ಕುಳಿತೇ ಬಿಟ್ಟ! (ಕೆ)
-ಟ್ಟೆನೆಂದು ತಲೆ ಚಚ್ಚಿಕೊಂಡು ಬಿಟ್ಟ!
ಬಿಸಿಯಾರಿದ ತಂಗ್ಳು ತಿಂದುಬಿಟ್ಟ! (ಪ)
-ಟ್ಟ ನಿರಂಜನಾದಿತ್ಯ ನೇರಿಬಿಟ್ಟ!!!

ಬಟ್ಟೆ ತೊಳೆವಭ್ಯಾಸ ಬಿಟ್ಟಿಡ್ಬೇಡ! (ಹೊ)   5(2582)

-ಟ್ಟೆ ಕೆಟ್ಟುಹೋಗ್ವಷ್ಟಾಹಾರ ತಿನ್ಬೇಡ!
ತೊಟ್ಟಿ ತುಂಬಿಸಿಟ್ಟುಕೊಳ್ಳದಿರ್ಬೇಡ! (ಕೊ)
-ಳೆ ಹೊಳೆ ನೀರು ತಂದಿಟ್ಟುಕೊಳ್ಬೇಡ!
ರ ಗುರುಸೇವೆಯೆಂದೂ ಬಿಡ್ಬೇಡ! (ಅ)
-ಭ್ಯಾಗತರನ್ನನಾದರ ಮಾಡ್ಬೇಡ!
ತಿಗೆ ಸ್ವತಂತ್ರವೆಂದೂ ಕೊಡ್ಬೇಡ!
ಭಿನ್ನಹದ ಬಾಯ್ಗೆ ಮಣ್ಣು ಹಾಕ್ಬೇಡ! (ಕ)
-ಟ್ಟಿದ್ದು ದಾಕ್ಷಿಣಕ್ಕೆ ಕೆಟ್ಟು ಹೋಗ್ಬೇಡ! (ಬೇ)
-ಡ್ಬೇಡಿ ಕೂಡಿಟ್ಟು ಜನ್ಮ ಮುಗಿಸ್ಬೇಡ! (ಇ)
-ಡ, ನಿರಂಜನಾದಿತ್ಯೇನೂ ಮುಚ್ಚಿಡ!!!

ಬಟ್ಟೆ, ಬರೆ ಬಿಚ್ಚಿಟ್ಟು ನನ್ನ ಸೇರ್ಬಿಟ್ಟೆ! (ಹೊ)   6(3560)

-ಟ್ಟೆ ಪಾಡಿನಾಟ ನನಗಗಿ ಬಿಟ್ಟಿಟ್ಟೆ!
ರದಿರಲಾರೆ ನಿನ್ನಡಿಗೆಂದ್ಬಿಟ್ಟೆ! (ಕ)
-ರೆಸಿಕೋ ನಿನ್ನಡಿಗೆಂದು ಮೊರೆಯಿಟ್ಟೆ!
(ವಿಶ್ವಾಸ)-ಬಿಚ್ಭ್ವಾಸ ನಿನ್ನದನ್ನು ನಾನು ಮೆಚ್ಬಿಟ್ಟೆ! (ಮೆ)
-ಚ್ಚಿದ್ಮೇಲ್ನಾನು ಬಹಳ ಹಚ್ಚಿಕೊಂಡ್ಬಿಟ್ಟೆ! (ಬಿ)
-ಟ್ಟು ಲೋಭವನ್ನು ಧಾರಾಳಿ ನಾನಗ್ಬಿಟ್ಟೆ!
ನ್ನ, ನಿನ್ನ ಮೈತ್ರಿ ಆದರ್ಶವೆಂದ್ಬಿಟ್ಟೆ!(ನಿ)
-ನ್ನ ಸುಕೃತಕ್ಕೆಣೆಯೇ ಇಲ್ಲವೆಂದ್ಬಿಟ್ಟೆ!
ಸೇವೆ ನಿನ್ನದಕ್ಕಾಗಿ ನಾ ಪಣ ತೊಟ್ಟೆ! (ದು)
-ರ್ಬಿಧಿಯಿಂದಾಗೀಗ ಕೆಳಗಿಳಿದ್ಬಿಟ್ಟೆ! (ಹೊ)
-ಟ್ಟೆ ನಿರಂಜನಾದಿತ್ಯನದ್ದುರಿಸ್ಬಿಟ್ಟೆ!!!

ಬಟ್ಟೆ, ಬರೆ ಶುಚಿಯಾಗಿರಬೇಕು! [ಕ]   3(1323)

-ಟ್ಟೆಯಲ್ಲಿ ನೀರು ಸದಾ ಇರಬೇಕು!
ದಿ, ಬಗ್ಗಡವಿಲ್ಲದಿರಬೇಕು!
-ರೆಗೊಂದುತ್ತಮ ತೂಬೂ ಇರಬೇಕು!
ಶುದ್ಧ ನೀರು ಸೇರುತ್ತಾ ಇರಬೇಕು! (ಪಾ)
-ಚಿ ಹಬ್ಬದಂತೆಚ್ಚರವಿರಬೇಕು! (ಬಾ)
-ಯಾರಿದರೆ ಕುಡಿವಂತಿರಬೇಕು!
ಗಿಡ ಮರ ದೂರದಲ್ಲಿರಬೇಕು!
ಸ್ತೆಯೋಡಾಟವಿರದಿರಬೇಕು!
ಬೇಸಾಯಕ್ಕೂ ನೆರವಾಗಿರಬೇಕು! (ಬೇ)
-ಕು ನಿರಂಜನಾದಿತ್ಯ ಕೃಪೆ ಬೇಕು!!!

ಬಟ್ಟೆಯುಡಿಸಿತೆನ್ನ ಬೇನೆ ಬೆನ್ನು! (ಉ)   1(261)

-ಟ್ಟೆನಾದರೂ ಬಿಚ್ಚದುಳಿಯದೆನ್ನು!
ಯುಕ್ತಿಯಿದೆಲ್ಲ ಮನಸಿನದೆನ್ನು! (ಉ)
-ಡಿಸುಣಿಸುವಾಟ ಅದರದೆನ್ನು!
ಸಿಕ್ಕಿಕೊಂಡು ಮತ್ತಳಬಾರದೆನ್ನು!
ತೆರೆಮರೆಯಾಟ ಸಾಕುಮಾಡೆನ್ನು! (ಉ)
-ನ್ನತಿಗಾಗಿ ದುಡಿಯುವುದೇ ಚೆನ್ನು!
ಬೇಗ ಬಾರೆಂದು ಕರೆವ ನನ್ನನ್ನು!
ನೆರವು ನೀಡದಿರಲಾರನಿನ್ನು!
ಬೆಳಕಾಯ್ತು! ಹೋಗಿ ನೋಡವನನ್ನು! (ಅ)
-ನ್ನು, ನಿರಂಜನಾದಿತ್ಯ ಬಂದನೆನ್ನು!!!

ಬಟ್ಟೆಯೆಲ್ಲಾ ಬಣ್ಣ ಬಣ್ಣ! [ಹೊ]   2(931)

-ಟ್ಟೆಗೆಲ್ಲಾ ತರ ತರಾನ್ನ! (ತಾ)
-ಯೆನುವವಳೊಬ್ಬಳಣ್ಣ! (ಎ)
-ಲ್ಲಾನುಭವವಾಗಲಣ್ಣ!
ಹು ವಿಧೊಂದರಿಂದಣ್ಣ! (ಕ)
-ಣ್ಣನೊಳಮುಖ ಮಾಡಣ್ಣ!
ಯಲಾಗ್ವುದು ಗುಟ್ಟಣ್ಣ!(ಬ)
-ಣ್ಣ, ನಿರಂಜನಾದಿತ್ಯಣ್ಣ!!!

ಬಡಕುರಿಯ ತಲೆ ಕಡಿವರಯ್ಯಾ! (ಮಾ)   5(3189)

-ಡಲಾರದದೇನೂ ಪ್ರತಿಕ್ರಿಯೆಯಯ್ಯಾ!
ಕುರುಬನಧಿಕಾರದರ ಮೇಲಯ್ಯಾ! (ಅ)
-ರಿತವರು ಕನಿಕರ ಪಡ್ಬೇಕಯ್ಯಾ!
ಮಧರ್ಮನಿದನ್ನೆಂತೊಪ್ಪುವನಯ್ಯಾ?
ನ್ನ ಸುಖಕ್ಕನರ್ಬಲಿಯಾಗ್ಬಾರ್ದಯ್ಯಾ! (ಒ)
-ಲೆಯುರಿಯದಿದ್ರಕ್ಕಿಯ ತಪ್ಪೇನಯ್ಯಾ?
ಷ್ಟಕ್ಕವ್ರಿವ್ರು, ಸುಖವಿದ್ರೆಮ್ಮವ್ರಯ್ಯಾ! (ಸ)
-ಡಿಲ್ಬಿಡ್ಬಾರದು ಕಡಿವಾಣವನ್ನಯ್ಯಾ!
ರ ಗುರುಕೃಪೆಯಲ್ಲಕ್ಕೂ ಬೇಕಯ್ಯಾ!
ಕ್ಕಸರ ಸೊಕ್ಕನ್ನವ್ನೇ ಮುರಿಯ್ಲಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾತ್ಮ ಸಾಕ್ಷಿಯಯ್ಯಾ!!!

ಬಡವ ನಾನು ಒಡೆಯ ನೀನು! (ಬಿ)   3(1185)

-ಡ ಬೇಡ ನನ್ನ ಕೈಯನ್ನು ನೀನು! (ಭಾ)
-ವ ಶುದ್ಧನಾಗಿ ಮಾಡೆನ್ನ ನೀನು!
ನಾಮ, ರೂಪಾತೀತ ಗುರು ನೀನು! (ತ)
-ನುವಿನುಪಾಧಿ ಬಿಡಿಸು ನೀನು!
ಳಗೆ ಹೊರಗೆಲ್ಲವೂ ನೀನು! (ಕ)
-ಡೆಗಾಣಿಸೆಲ್ಲಾ ದುರಿತ ನೀನು! (ಜ)
-ಯ ಪ್ರದ ಮಾಡೆನ್ನ ಜನ್ಮ ನೀನು!
-ನೀಡು ಲೋಕಕ್ಕೆಲ್ಲಾ ಶಾಂತಿ ನೀನು! (ಮ)
-ನುಜ ನಿರಂಜನಾದಿತ್ಯಾತ್ಮ ನೀನು!!!

ಬಡವನ ಗೊಡವೆ ಒಡೆಯನದಪ್ಪಾ! (ಆ)   2(486)

-ಡದೇ ಅವನ ರಕ್ಷಣೆ ಮಾಡುವನಪ್ಪಾ!
ಸುಧೇಶನ ರೀತಿ ವಿಚಿತ್ರ ಕಾಣಪ್ಪಾ!
ಡೆವುದೆಲ್ಲಾವನಿಷ್ಟದಂತೆ ನೋಡಪ್ಪಾ!
ಗೊಡ್ಡಾಕಳಾದರೂ ಹಾಲು ಕೊಡುವುದಪ್ಪಾ! (ಮ)
-ಡದಿ, ಮಕ್ಕಳ ವ್ಯಾಮೋಹವನಿಗಿಲ್ಲಪ್ಪಾ!
ವೆಗ್ಗಳದ ಭೋಗ, ಭಾಗ್ಯ ಬೇಡೆಂಬನಪ್ಪಾ!
ದ್ದಾಡಬೇಡಿದರಲೆಂಬನವನಪ್ಪಾ! (ನ)
-ಡೆಯ ಬೇಡಿ ಮುಳ್ಳುದಾರಿಯಲೆಂಬನಪ್ಪಾ! (ಸಾ)
-ಯದಾತ್ಮ ಸ್ಥಿತಿಗೇರಬೇಕೆನ್ನುವನಪ್ಪಾ!
ರಹರಿಯ ಭಜನೆ ಮಾಡಿರೆಂಬನಪ್ಪಾ!
ತ್ತನಿದರಿಂದ ತೃಪ್ತನಾಗುವನಪ್ಪಾ! (ಅ)
-ಪ್ಪಾ ನಿರಂಜನಾದಿತ್ಯನೇ ಒಡೆಯನಪ್ಪಾ!!!

ಬಡವರ ತ್ಯಾಗಕ್ಕಾರಿತ್ತರು ಬೆಲೆ?   6(3995)

ಬ್ಬ ತಲೆ ಮೇಲೆ ಹೊರಿಸಿದ್ದೇ ಬೆಲೆ!
ಸನಾಶನವಿಲ್ಲದೇ ಸತ್ತದ್ಬೆಲೆ!
ಕ್ತದಾನ ಮಾಡ್ಯಶಕ್ತರಾದದ್ಬೆಲೆ! (ಸ)
-ತ್ಯಾಗ್ರಹ ಕಾಲದಲ್ಲೇಕಿದಕ್ಕೆ ಶಾಲೆ?
ಣರಾಜ್ಯದಲ್ಲೀಗ ತಪ್ಪಿತು ನೆಲೆ! (ಹ)
-ಕ್ಕಾರಾರ್ಗೇನೇನೆಂದರಿಯದಿದ್ರೇನ್ಬೆಲೆ? (ಕ)
-ರಿ ತಿಮ್ಮನ ಪಾದಕ್ಕೆ ಕಾಣಿಕೆ ಬೆಲೆ! (ಹೆ)
-ತ್ತವರಿಗಾಯ್ತಿದರಿಂದ ತಲೆ ಶೂಲೆ!
ರುಕ್ಮಿಣೀಶನ ಗೀತೆಗ್ಬಾಯಲ್ಲೇ ಬೆಲೆ!
ಬೆಕ್ಕೆ ತೃಪ್ತಿಗೊಳಿಸಲ್ಕಿದೊಂದು ಕಲೆ! (ಸ)
-ಲೆ ನಿರಂಜನಾದಿತ್ಯ ಧ್ಯಾನಕ್ಕೇನ್ಬೆಲೆ???

ಬಡಿಸದೆಡೆಯಲ್ಲೇಕೆ ತಡಕಾಟ? (ಅ)   6(4228)

-ಡಿಗೆಯವನ ಮೇಲ್ಬೇಡ ಸಿಡುಕಾಟ!
ಮಯ ಕಾದಿದ್ದು ಮಾಡಬೇಕು ಊಟ! (ತಂ)
-ದೆಯೆಂಬವನಲ್ಲೆಂದೂ ಬೇಡ ಕಾದಾಟ! (ಒ)
-ಡೆಯನವನೀರೇಳು ಲೋಕಕ್ಕೆ ದಿಟ! (ಬ)
-ಯಪಡದೇ ಮಾಡುತ್ತಿರು ಒಡನಾಟ! (ಎ)
-ಲ್ಲೇ ಇರಿಸಿದರೂ ದುಡುಕಾಟ!
ಕೆಡಕನ್ನುಂಟುಮಾಡುವುದು ದುಶ್ಚಟ!
ತ್ವಸಿದ್ದಿಗಾಗಿರ್ಲಿ ಹೃದಯ ಸ್ಫುಟ! (ಮ)
-ಡದಿ ಮಕ್ಕಳಾಸೆಯೆಲ್ಲಾ ಮಾಯೆಯಾಟ!
ಕಾಮ ಸತ್ತ್ರೆ ಪರಿಹಾರವೆಲ್ಲಾ ಕಾಟ! (ನೆಂ)
-ಟ, ಭಂಟ ಶ್ರೀ ನಿರಂಜನಾದಿತ್ಯ ದಿಟ!!!

ಬಡಿಸಿದಷ್ಟುಂಬವಗೆ ಹಿಡಿಸದಷ್ಟಾನಂದ! (ಕಾ)   6(4393)

-ಡಿ, ಬೇಡಿ, ತಿನ್ನುವಗೆ ಸಿಕ್ಕಲಾರದಂಥಾನಂದ!
ಸಿಕ್ಕಿ ಬೀಳುವನಾಪತ್ತಿನಲ್ಲಿ ನೀಚಮದಾಂಧ!
ಡ್ಡನಿಂದಾಗುವುದು ವಾತಾವರಣ ದುರ್ಗಂಧ! (ಇ)
-ಷ್ಟುಂಡು ತೇಗಿದರೂ ಹರಿಯದವನಾಶಾಬಂಧ!
ಹಿರಾಡಂಬರದಲ್ಲವನಿಗೆ ನಿತ್ಯಾನಂದ! (ಭ)
-ವಸಾಗರದಲ್ಲೊದ್ದಾಡುವುದವನಿಗಾನಂದ!
ಗೆ
ಹಿ
ಡಿ


ಷ್ಟಾ
ನಂ

ಬಡಿಸಿದ್ದುಂಡರೆ ಆರಾಮಣ್ಣಾ | (ಹಾ)   4(1516)

-ಡಿದರೆ ಹರಿನಾಮಾರಾಮಣ್ಣಾ!
ಸಿಟ್ಟು ಬಿಟ್ಟುಬಿಟ್ಟರಾರಾಮಣ್ಣಾ! (ಮ)
-ದ್ದುಂಡರೆ ರೋಗಕ್ಕೆ ಆರಾಮಣ್ಣ! (ಹೆಂ)
-ಡದಭ್ಯಾಸ ಬಿಟ್ಟರಾರಾಮಣ್ಣಾ! (ನೆ)
-ರೆ ಸಭ್ಯರದಾದರಾರಾಮಣ್ಣಾ!
ಸೆಯಿಲ್ಲದಿದ್ದರಾರಾಮಣ್ಣಾ!
ರಾಮನಾಮ ಪರಮಾರಾಮಣ್ಣಾ!
ತ್ಸರ ಸತ್ತರೆ ಆರಾಮಣ್ಣಾ! (ಅ)
-ಣ್ಣಾ ನಿರಂಜನಾದಿತ್ಯಾರಾಮಣ್ಣಾ!!!

ಬಡಿಸಿದ್ದುಣ ಬೇಕಯ್ಯಾ [ಬೇ]   3(1077)

-ಡಿದ್ದು ಕೊಡುವರಾರಯ್ಯಾ? (ಕ)
-ಸಿವಿಸಿ ಕಷ್ಟಕಾಣಯ್ಯಾ! (ಇ)
-ದ್ದುದನುಂಡು ಹೊರಡಯ್ಯಾ! [ಹ]
-ಣ, ಕಾಸೇಕೆ ನಿನಗಯ್ಯಾ?
ಬೇಡುವ ಪಾಡು ಬೇಡಯ್ಯಾ!
ರ್ಮ, ಧರ್ಮಾಶ್ರಮಕ್ಕಯ್ಯಾ! [ಅ]
-ಯ್ಯಾ ನಿರಂಜನಾದಿತ್ಯಯ್ಯಾ!!!

ಬಣ್ಣ ಕಟ್ಟಿ ಗಿಟ್ಟಿಸಿದ್ದೇನು? (ಬ)   4(1753)

-ಣ್ಣ ಸುಟ್ಟು ನಷ್ಟವಾದದ್ದೇನು?
ಟ್ಟಡುವಭ್ಯಾಸಾಗಿತ್ತೇನು? (ಕ)
-ಟ್ಟಿಡಬೇಕೆನಿಪುದೀಗೇನು? (ಯೋ)
-ಗಿ ಆಗ ಆಗಿದ್ದಿಲ್ಲವೇನು? (ದಿ)
-ಟ್ಟಿ ಈಗ ಕೆಟ್ಟಿರುವುದೇನು? (ದಾ)
-ಸಿಯರು ಆಗ ಮಾಡಿದ್ದೇನು? (ಎ)
-ದ್ದೇನಾದರೀಗ ಹೋದರೇನು? (ಭಾ)
-ನು ನಿರಂಜನಾದಿತ್ಯ ನಾನು!!!

ಬಣ್ಣ ಬಳಿದವ ಕೃಷ್ಣನೇನು? (ಕ)   5(3108)

-ಣ್ಣಸನ್ನೆಗಾರವ ನಾದಾನೇನು?
ಯಲಾಡಂಬರಿಯಲ್ಲವನು! (ತು)
-ಳಿದನು ಕಾಳಿಂಗನನ್ನವನು!
ನ, ಕರುಗಳಾಪ್ತನವನು!
ಸ್ತ್ರವಕ್ಷಯ ಗೈದನವನು!
ಕೃತಿಯಂತಾಡುವವನವನು! (ಪೊ)
-ಷ್ಣ ಸಮಾನ ತೇಜಸ್ವಿಯವನು! (ನಿ)
-ನೇ ನಾನೆಂದ ವೇದಾಂತಿಯವನು! (ಭಾ)
-ನು ನಿರಂಜನಾದಿತ್ಯನವನು!!!

ಬಣ್ಣದ ಬದುಕು ಸಾಕು ಮಾಡಮ್ಮಾ! (ಸ)   3(1011)

-ಣ್ಣವಳು ನೀನೆನ್ನ ಮಾತು ಕೇಳಮ್ಮಾ!
ಯಾನಿಧಿ ಗುರುರಾಜ ಕಾಣಮ್ಮಾ!
ಳಲಿಹೆ ಬಹುಕಾಲದಿಂದಮ್ಮಾ!
ದುರ್ವಿಷಯದಿಂದ ಸುಖವಿಲ್ಲಮ್ಮಾ!
ಕುಪಿತಳಾಗದಿರೆನ್ನ ಮೇಲಮ್ಮಾ!
ಸಾಧಿಸಿ ನನ್ನಂತೆ ಸುಖಿಯಾಗಮ್ಮಾ!
ಕುಲಶೀಲ ನಿರ್ಮಲವಾಗಲಮ್ಮಾ!
ಮಾಯಾಜಾಲಕ್ಕೆ ಬೀಳಬಾರದಮ್ಮಾ! (ತ)
-ಡ ಮಾಡದೆರಗು ಶ್ರೀಪಾದಕ್ಕಮ್ಮಾ! (ಅ)
-ಮ್ಮಾ ಸದ್ಗುರು ನಿರಂಜನಾದಿತ್ಯಮ್ಮಾ!!!

ಬಣ್ಣಿಸಲಸದಳ ನಿನ್ನ ಹಿರಿಮೆ! (ಕ)   4(2304)

-ಣ್ಣಿಗೆ ಕಾಣಿಸದಿರ್ಪುದೊಂದು ಹಿರಿಮೆ!
ಚ್ಚಿದಾನಂದನೆಂಬುದೊಂದು ಹಿರಿಮೆ! (ಅ)
-ಲಕ್ಷ್ಯ ಮಾಯೆಗಿರುವುದೊಂದು ಹಿರಿಮೆ!
ರ್ವಾಂತರ್ಯಾಮಿಯೆಂಬುದೊಂದು ಹಿರಿಮೆ!
ಯಾಸಾಗರನೆಂಬುದೊಂದು ಹಿರಿಮೆ! (ಒ)
-ಳ, ಹೊರಗೆ ನೀನೆಂಬುದೊಂದು ಹಿರಿಮೆ!
ನಿರ್ವಿಕಾರನಾಗಿರ್ಪುದೊಂದು ಹಿರಿಮೆ! (ನಿ)
-ನ್ನ ನೀನೇ ಬಂಧಿಸಿರ್ಪುದೊಂದು ಹಿರಿಮೆ!
ಹಿತೈಷಿ ನೀನಾಗಿರ್ಪುದೊಂದು ಹಿರಿಮೆ! (ಪ)
-ರಿ ಪರಿಯವತಾರದೊಂದು ಹಿರಿಮೆ! (ಶ)
-ಮೆ, ದಮೆ ನಿರಂಜನಾದಿತ್ಯ ಹಿರಿಮೆ!!!

ಬಣ್ಣಿಸಲೆಂತು ನಾ ನಿನ್ನ ನಂಬುಜಾ! (ಕ)   5(2573)

-ಣ್ಣಿಗೌಷಧಿ ಮಧು ನಿನ್ನದಂಬುಜಾ!
ರ್ವರಿಗಾಧಾರ ನಿನ್ನಾಪ್ತಂಬುಜಾ! (ಸೋ)
-ಲೆಂಬುದಿಲ್ಲದವನೀಶಾತಂಬುಜಾ!
ತುರಿಯಾತೀತಾರ್ಯ ಸೂರ್ಯಾತಂಬುಜಾ!
ನಾರಾಯಣ ಸ್ವರೂಪವನಂಬುಜಾ!
ನಿನ್ನವನ ಸ್ನೇಹನುಪಮಾಂಬುಜಾ! (ಉ)
-ನ್ನತಾದರ್ಶವಿದೆಲ್ಲರಿಗಂಬುಜಾ! (ನಿ)
-ನ್ನಂತರಾತ್ಮನಾಗಿಹನಾತಂಬುಜಾ! (ತುಂ)
-ಬು ಸಹ ಜೀವನ ನಿಮ್ಮದಂಬುಜಾ! (ನಿ)
-ಜಾತ ತಾ ನಿರಂಜನಾದಿತ್ಯಂಬುಜಾ!!!

ಬತ್ತಿದ ಬಾಯ್ಗೊಂದು ಬಿಂದು ನೀರಮೃತ! (ಹ)   6(4391)

-ತ್ತಿಳಿದು, ಸುತ್ತಿ, ಸುಳಿದದ್ದಕ್ಕಮೃತ!
ರ್ಶನ, ಸ್ಪರ್ಶನದಭಯಾ ಅಮೃತ!
ಬಾಡಿದ ಗಿಡಕ್ಕೆ ತುಂತುರು ಅಮೃತ! (ಕೈ)
-ಯ್ಗೊಂಬೆಗೇನುಮಾಡಿದ್ರೂ ಸತತ ಮೃತ!
ದುರಾಚಾರಗಳಳಿದಾಗ ಅಮೃತ!
ಬಿಂದು ಮಾಧವನಡಿಯಲ್ಲೀ ಅಮೃತ!
ದುರ್ಯೋಧನನಿದನರಿಯದೇ ಮೃತ!
ನೀಲಮೇಘ ಶ್ಯಾಮನ ರಾಧೆ ಅಮೃತ!
ವಿಕುಲೋದ್ಭವನರಸಿ ಅಮೃತ!
ಮೃಕಂಡು ಸುತಗೆ ಶಿವನಾಮಾಮೃತ! (ಋ)
-ತ ನಿರಂಜನಾದಿತ್ಯಕಿರಣಾಮೃತ!!!

ಬದುಕಿದ್ದುಪಯೋಗವೇನಿನ್ನು?   3(1044)

ದುಡಿಯುವಗತ್ಯ ಕಾಣದಿನ್ನು! (ಹಾ)
-ಕೆದ್ದೆಲ್ಲ ಅರಗಿಪಾಸೇಕಿನ್ನು? (ಬಿ)
-ದ್ದು, ಇದ್ದೆದ್ದೋಡುವುದು ಸಾಕಿನ್ನು!
ರಮಾತ್ಮನಾಗಿದ್ದರಾಯ್ತಿನ್ನು!
ಯೋಗವದಕ್ಕೆಲ್ಲದೇತಕಿನ್ನು?
ರ್ವದಿಂದಿರ್ಪ ಕಾಲವಲ್ಲಿನ್ನು!
ವೇಷ, ಭೂಷಣ ಬೇಕಿಲ್ಲವಿನ್ನು!
ನಿಶಿ, ದಿನ ನಿಜಾನಂದವಿನ್ನು! (ಅ)
-ನ್ನು, ನಿರಂಜನಾದಿತ್ಯಗೇನಿನ್ನು???

ಬನಶಂಕರಿ ಶಂಕರನಲೈಕ್ಯ!   2(609)

ರಳಿ ಬಹುಕಾಲ ಆದಳೈಕ್ಯ!
ಶಂಕರಗಾನಂದವಾಯ್ತವಳೈಕ್ಯ!
ಣ್ಣೀರಾರಿಗೇಕೆ? ಆಕೆಗಾಯ್ತೈಕ್ಯ! (ಅ)
-ರಿತಿದ ಶಾಂತಿಯಿಂದಿರಲಾಕೈಕ್ಯ!
ಶಂಕರನ ಕೃಪೆಯಿಂದಾಯ್ತಿ ಐಕ್ಯ!
ಪಾಲ ಭಿಕ್ಷೆ ನೀಡಿ ಆದಳೈಕ್ಯ! (ವ)
-ರ ಧರ್ಮ ಕಾರ್ಯಕಿರಲೆಲ್ಲರೈಕ್ಯ!
ಶ್ವರ ಬಿಟ್ಟಾಗ ಬೇಕೀಶ್ವರೈಕ್ಯ! (ಆ)
-ಲೈಸಿ ಗುರು ಪಾದದಲಾಗಿರೈಕ್ಯ! (ಐ)
-ಕ್ಯ ನಿರಂಜನಾದಿತ್ಯ ಯೋಗವೈಕ್ಯ!!!

ಬನ್ನಿರೆ! ತನ್ನಿರೇ!! ತಿನ್ನಿರೇ!!! (ಸ)   4(1813)

-ನ್ನಿಧಿಯ ಸೇವೆ ಬೇಕೆನ್ನಿರೇ!
ರೇಖೆ, ರೂಪವಿನ್ನೇಕೆನ್ನಿರೇ!
ತ್ವಾರ್ಥದಲ್ಲಿರಿಸೆನ್ನಿರೇ! (ನ)
-ನ್ನಿ, ಲೋಕಸುಖವಲ್ಲೆನ್ನಿರೇ!
ರೇಗದಿರೆನ್ನ ಮೇಲೆನ್ನಿರೇ!
ತಿನ್ನಿಸಮೃತವನೆನ್ನಿರೇ! (ಮ)
-ನ್ನಿಸಪರಾಧಗಳೆನ್ನಿರೇ! (ತೋ)
-ರೇ ನಿರಂಜನಾದಿತ್ಯನಾರೇ???

ಬಯಕೆ ಬಹಳ, ಈಡೇರಿಕೆ ವಿರಳ!   5(3142)

ಮನಯ್ಯನ ಸಾಮ್ರಾಜ್ಯ ಬಹು ವಿಶಾಲ!
ಕೆಟ್ಟದೊಳ್ಳೆಯದು ಮಿಶ್ರವಾಗಿರ್ಪ ಲೀಲಾ!
ಡವರಮೇಲೆ ಬಲ್ಲವರಿಂದ್ರಜಾಲ!
ರಕು ಮುರುಕು ಮನೆಮಂದಿಗೆ ಸಾಲ! (ಹೇ)
-ಳಬೇಕಾರಿಗೀ ಬಾಳು ಬದುಕಿನ ಸೋಲ?
ಶ್ವರೇಚ್ಛೆಯೆಂಬವರಿಗೇನನುಕೂಲ?
ಡೇರೆಯೊಳಗಿರಲಿಕ್ಕೂ ಅನಾನುಕೂಲ!
ರಿಸಿ, ಮುನಿಗಳ ಮಾತು ಕೇಳರೀ ಕಾಲ!
“ಕೆಡಿಸ್ಬೇಡ್ವೋ ತಂದೆ” ಯೆಂದ್ರೆ ದೇವರೇ ಕೇಳ!
ವಿಧಿವಿಲಾಸವಿದನ್ನೇನೆನ್ನಲೀ ಬಾಲ!
ಮೇಶೋಮೇಶ, ವಾಣೀಶರೇ ಅತ್ರಿಬಾಲ! (ಆ)
-ಳಲೆಮ್ಮ ನಿರಂಜನಾದಿತ್ಯ ದತ್ತ ಬಾಳ!!!

ಬಯಕೆ ಬೇಡ, ಬರಡು ಮಾಡ! (ಕಾ)   5(3102)

-ಯಕಲ್ಪಕ್ಕಾಗಿ ಸಂಕಲ್ಪ ಬೇಡ!
ಕೆಟ್ಟವರಿಷ್ಟ ಕಟ್ಟಲೇ ಬೇಡ!
ಬೇಳೆ ಬೇಯದೆ ಹುಳಿ ಹಿಂಡ್ಬೇಡ! (ಮ)
-ಡದಿ, ಮಕ್ಕಳ ವ್ಯಾಮೋಹ ಬೇಡ!
ಟ್ಟೆ, ಬರೆಯಟ್ಟಹಾಸ ಬೇಡ! (ವ)
-ರ ಗುರುಪಾದ ಸೇವೆ ಬಿಡ್ಬೇಡ! (ನ)
-ಡು ನೀರಲ್ಲಾತ ಮುಳುಗ ಬಿಡ!
ಮಾರಾರಿಯಿಲ್ಲವಿಶ್ವಾಸ ಬೇಡ! (ಮೃ)
-ಡ ನಿರಂಜನಾದಿತ್ಯ ಕೈ ಬಿಡ!!!

ಬಯಕೆಯ ಭಂಗ ಕಲಿಕೆಯ ರಂಗ!   6(3617)

ಮ ನಿಯಮಗಳೆಂಬುದು ಯೋಗಾಂಗ!
ಕೆಟ್ಟದ್ದೊಳ್ಳೆಯದೆಂಬಾಟ ಜೀವನಾಂಗ!
ಶಸ್ಸುಪಯಶಸ್ಸೆಲ್ಲಾ ಶಾಂತಿ ಭಂಗ!
ಭಂಡತನಕ್ಕಗತ್ಯ ಪುಂಡರ ಸಂಗ!
ಗನ ಸದೃಶಾತ್ಮ ರಂಗ ಸಾರಂಗ!
ಲಿಮಲನಾಶಕ್ಕಿರ್ಬೇಕು ಸತ್ಸಂಗ!
ಲಿಪ್ತನಿಗಾನಂದೈಹಿಕ ಜನ ಸಂಗ!
ಕೆಡಲಿಕ್ಕೆ ಕಾರಣ ಅಧಿಕಪ್ರಸಂಗ!
ಜ್ಞರಕ್ಷಕ ಶ್ರೀರಾಮ ಸುಂದರಾಂಗ!
ರಂಗ, ಶ್ರೀರಂಗ, ಪಾಂಡುರಂಗ, ಸರ್ವಾಂಗ!
ಭಸ್ತಿ ನಿರಂಜನಾದಿತ್ಯಾನಂದಾಂಗ!!!

ಬಯಲಿಗೆ ಬಂದೆ, ಮೈಲಿಗೆಯಾಯ್ತಂದೆ!   5(2635)

ಮ, ನಿಯಮದಿಂದ ಶುದ್ಧನಾಗೆಂದೆ! (ಬ)
-ಲಿಸಬೇಕು ಸದ್ಗುರುಭಕ್ತಿಯನ್ನೆಂದೆ!
ಗೆಳೆಯನೀರೇಳು ಲೋಕಕ್ಕವನೆಂದೆ!
ಬಂಧ ಮುಕ್ತನವನ ಕೃಪೆಯಿಂದೆಂದೆ! (ಸ)
-ದೆಬಡಿಯಬೇಕಾರರಿಗಳನ್ನೆಂದೆ!
ಮೈಮರೆಯಬಾರದು ಮಾಯೆಯಲ್ಲೆಂದೆ! (ಸ)
-ಲಿಗೆಯಿಂದ ಸಲಗವೂ ಅಗ್ಗವೆಂದೆ! (ಹೋ)
-ಗೆ ನಾನಿನ್ನೆಲ್ಲೂ ಎಂದು ಪಣ ತೊಡೆಂದೆ!
ಯಾದವೇಂದ್ರನ ಗೀತಾಭ್ಯಾಸ ಮಾಡೆಂದೆ! (ತಾ)
-ಯ್ತಂದೆಯಂತದು ನಿನ್ನ ಕಾಯುವುದೆಂದೆ! (ತಂ)
-ದೆ ನಿರಂಜನಾದಿತ್ಯನೇ ನೀನಾಗೆಂದೆ!!!

ಬಯಸದಿದ್ದ್ರೂ ಆಗ್ಬೇಕಾದದ್ದಾಗುತ್ತೆ!   6(3437)

(ಬ)-ಯಸಿದ್ರೂ ಆಗ್ಬಾರದ್ದು ಆಗ್ದೇ ಹೋಗತ್ತೆ!
ದ್ಗುರು ಚಿತ್ತದಂತೆ ಎಲ್ಲಾ ಆಗುತ್ತೆ!
ದಿವ್ಯ ಜೀವನವೇ ಕರ್ತವ್ಯವಾಗುತ್ತೆ!
(ತ)-ದ್ದ್ರೂಪ ಸಿದ್ಧಿ ನಮ್ಮ ಗುರಿಯಾಗಿರುತ್ತೆ!
ತ್ಮಚಿಂತನೆಯಿಂದದು ಸಿದ್ಧಿಸುತ್ತೆ!
(ಸಾ)-ಗ್ಬೇಕಿದು ಸತತವೆಂಬಾಜ್ಞೆಯಾಗುತ್ತೆ!
ಕಾಮ್ಯ ಕರ್ಮವಿದಲ್ಲವೆಂದೆನಿಸುತ್ತೆ!
ರ್ಪ, ದಂಭಕ್ಕಿದೆಡೆಗೊಡದಿರುತ್ತೆ!
(ಒ)-ದ್ದಾಟ, ಗುದ್ದಾಟವನ್ನಿದು ತಪ್ಪಿಸುತ್ತೆ!
ಗುಹ್ಯಾ, ಜಿಹ್ವಾದಿ ಚಾಪಲ್ಯ ಬಿಡಿಸುತ್ತೆ!
(ಮ)-ತ್ತೆ ನಿರಂಜನಾದಿತ್ಯಾನಂದವೀಯುತ್ತೆ!!!

ಬಯಸದೇ ಬಂದದ್ದು ಭಗವತ್ಪ್ರಸಾದ! [ಜ]   3(1192)

-ಯ ಅಪಜಯವೆಲ್ಲಾ ಅವನ ಪ್ರಸಾದ!
ತತವನ ಸೇವೆ ಅವನ ಪ್ರಸಾದ!
ದೇಶಾಂತರದ ಪ್ರವಾಸವನ ಪ್ರಸಾದ!
ಬಂದೂರು ಸೇರುವುದು ಅವನ ಪ್ರಸಾದ!
ರಿದ್ರನಾಗಿರುವುದುದವನ ಪ್ರಸಾದ! (ಎ)
-ದ್ದುದ್ದಾಮನಾಗುವುದೂ ಅವನ ಪ್ರಸಾದ!
ಕ್ತನಾಗಿರುವುದು ಅವನ ಪ್ರಸಾದ!
ರ್ವಿಯಾಗಿರುವುದೂ ಅವನ ಪ್ರಸಾದ! (ಭ)
-ವಭಯಬಂಧನವೂ ಅವನ ಪ್ರಸಾದ! (ಸ)
-ತ್ಪ್ರವರ್ತಕನಾಗುವುದವನ ಪ್ರಸಾದ!
ಸಾಧ್ಯಾಸಾಧ್ಯಗಳೆಲ್ಲಾ ಶ್ರೀ ಗುರು ಪ್ರಸಾದ!
ತ್ತ ನಿರಂಜನಾದಿತ್ಯಗೆಲ್ಲಾ ಪ್ರಸಾದ!!!

ಬಯಸಿ ತರಿಸಿದ್ದು ಬಳಸಲಾಗಿಲ್ಲ! (ಬ)   6(3666)

-ಯಸದೇ ಬಂದದ್ದು ಬಳಸದುಳಿದಿಲ್ಲ!
ಸಿರಿಯೊಡೆಯನಾಡಳಿತಾನಂದವೆಲ್ಲ!
ಪಸ್ವಿಗೂ ಬೇಡಿದ್ದೆಲ್ಲಾ ಸಿಕ್ಕಲೇ ಇಲ್ಲ! (ವೈ)
-ರಿಗಳಿರ್ಬಾದ್ದೆಂದ್ರೂ ಅವರೂರು ಬಿಟ್ಟಿಲ್ಲ!
ಸಿಹಿ, ಕಹಿ ಸಮಾನಾಗ್ಲೆಂದ್ರೆ ಅದಾಗ್ಲಿಲ್ಲ! (ಬಿ)
-ದ್ದು, ಎದ್ದು, ಬಿದ್ದು ಕಳೆಯಿತು ಕಾಲವೆಲ್ಲ!
ಯಲಾಡಂಬರಕ್ಕೇ ಬೆಲೆ ಊರಲ್ಲೆಲ್ಲಾ! (ಒ)
-ಳ, ಹೊರಗಿನ ಜಗಳದಿಂದಶಾಂತ್ಯೆಲ್ಲಾ!
ರ್ವೋದಯ ಕಿರಣವಿನ್ನೂ ಕಾಣುತ್ತಿಲ್ಲ!
ಲಾಭ ಬಡಕರ ಕಾಟವೇನೂ ತಪ್ಪಿಲ್ಲ!
ಗಿರಿಜನ, ಹರಿಜನಕ್ಕೆ ಶಾಂತಿಯಿಲ್ಲ! (ಬ)
-ಲ್ಲ ನಿರಂಜನಾದಿತ್ಯರಿಯದ್ದೇನೂ ಇಲ್ಲ!!!

ಬಯಸಿ ಬರಡಾಗದಿರಬೇಕು! (ಬ)   3(1267)

-ಯಸದೇ ಬಂದುದಕ್ಕೆ ತೃಪ್ತಿ ಬೇಕು! (ಹು)
-ಸಿಯಿಂದ್ರಿಯಾನಂದ ಸಾಕೆನ್ನಬೇಕು!
ಲ್ಲವರೊಡನಾಟವಿರಬೇಕು! (ಪ)
-ರರೊಡವೆಗಾಶಿಸದಿರಬೇಕು! (ಕೂ)
-ಡಾಟ ಗುರಿಗೆ ನೆರವಾಗಬೇಕು! (ಅ)
-ಗತ್ಯದಾತ್ಮ ಚಿಂತನೆ ಸದಾ ಬೇಕು!
ದಿನಕರನಂತೇಕನಿಷ್ಠೆ ಬೇಕು! (ವ)
-ರ ಗುರುಗೆ ಗುಲಾಮನಾಗಬೇಕು!
ಬೇಜಾರಾರಿಗೂ ಆಗದಿರಬೇಕು!
ಕುಲೇಶ ನಿರಂಜನಾದಿತ್ಯಾಗ್ಬೇಕು!!!

ಬಯಸಿ ಬಳಲಬೇಡ   1(338)

ತ್ನ ಮಾಡದಿರಬೇಡ!
ಸಿಗದಿದ್ದರಳಬೇಡ!
ರುವಾಗ ನಗಬೇಡ! (ಆ)
-ಳನವಲಂಬಿಸಬೇಡ! (ಆ)
-ಲಯದಿ ಜಗಳ ಬೇಡಾ!
ಬೇರಾವ ಮಾತಾಡಬೇಡ! (ಆ)
-ಡ, ನಿರಂಜನಾದಿತ್ಯಾಡ!!!

ಬಯಸಿದಾಗ ಬಂದವರಿಲ್ಲ!   6(3431)

(ಬ)-ಯಸದಾಗ್ಬಂದರೂರವರೆಲ್ಲಾ!
ಸಿಗುವುದು ನಮ್ಮಿಚ್ಛೆಯಂತಲ್ಲ!
ದಾಶರಥಿಗಳಾಗಬೇಕೆಲ್ಲ!
ರ್ವದಿಂದ ಪ್ರಯೋಜನವಿಲ್ಲ!
ಬಂದ್ರೂ, ಬಾರ್ದಿದ್ರೂ ತಾನೇ ತಾನೆಲ್ಲಾ!
ತ್ತನೆಂದನಿದ ನಮಗೆಲ್ಲಾ!
ರಗುರು ಆತ ಲೋಕಕ್ಕೆಲ್ಲಾ!
(ಗು)-ರಿ ಸೇರಿಸ್ಬೇಕವ್ನೆ ನಮ್ಮನ್ನೆಲ್ಲ!
(ಪು)-ಲ್ಲ ನಿರಂಜನಾದಿತ್ಯ ತಾನೆಲ್ಲ!!!

ಬಯಸಿದ್ದು ಬಹಳ, ಸಿಕ್ಕಿದ್ದು ವಿರಳ!   6(3636)

ಜಮಾನ ಶೇಖರಿಸಿಹನು ಹೇರಳ!
ಸಿರಿದೇವಿಯ ಪ್ರೀತಿಪನವ ಬಹಳ! (ಕ)
-ದ್ದು ತಿನ್ನುವವರದ್ದೇ ಈಗ ಉಪಟಳ!
ಗೆಹರಿಸುವವರಾರ್ಭಕ್ತರ ಗೋಳ?
ರಕು ಬಟ್ಟೆ, ಮುರುಕು ಗುಡಿಸಲು ಬಾಳ! (ಹೇ)
-ಳಲೆಂತೀ ಬಡವ್ರ ಬಾಳ ಮಳೆಯಿರುಳ?
ಸಿಪಾ

ಗಳಧಿಕಾರವರ ಮೇಲತುಳ! (ದಿ)
-ಕ್ಕಿಲ್ಲದ ಅನಾಥರಿಗೆ ಗತಿ ಪಾತಾಳ! (ಬಿ)
-ದ್ದು ಒದ್ದಾಡುವಾಗೆಂಬರ “ವನು ಮರುಳ”!
ವಿಧಾತನಾಟವಿಂತಿದ್ರೂ ಆತ ಮಂಜುಳ! (ಪ)
ಮಾರ್ಥಿ ಯಾವುದಕ್ಕೂ ಪಡ ತಳಮಳ! (ಬಾ)
-ಳ ನಿರಂಜನಾದಿತ್ಯ ನಿರಾಳ, ಸರಳ!!!

ಬಯಸಿದ್ದೊಂದಾದದ್ದಿನ್ನೊಂದು! (ಧ್ಯೇ)   4(2321)

-ಯಸಿದ್ಧಿಯಾಗುವುದಿನ್ನೆಂದು? (ಪು)
-ಸಿಯಾಟಕ್ಕೇ ವಿಜಯವಿಂದು! (ಮ)
-ದ್ದೊಂದು, ರೋಗ ಮತ್ತೊಂದಾಯ್ತಿಂದು!
ದಾರಿ ರೋಗಿಗಳಿಗೇನ್ಮುಂದು?
ತ್ತ ಭಕ್ತಿಯೇ ಗತಿಯಿಂದು! (ಸ)
-ದ್ದಿಲ್ಲದಿರ್ಪ ಕಾಲವದೆಂದು? (ಹ)
-ನ್ನೊಂದಿಂದ್ರಿಯ ನಿಗ್ರಹಾದಂದು! (ಅ)
-ದು, ನಿರಂಜನಾದಿತ್ಯಗಿಂದು!!!

ಬರಡಾಗಿ ಬಯಸಬೇಡ! (ನೆ)   4(1693)

-ರವಿದ ಕಳಕ್ಕೊಳ್ಳಬೇಡ! (ಓ)
-ಡಾಡಿ ದುರ್ಬಲವಾಗಬೇಡ!
ಗಿರೀಶನ ಮರೆಯಬೇಡ!
ಸವನ ತಾತ್ಸಾರಬೇಡ! (ಜ)
-ಯವಹುದು ಸಂದೇಹಬೇಡ!
ತಿ, ಪತಿ ಬೇರೆನಬೇಡ!
ಬೇಕೀ ಐಕ್ಯ! ಅಸಡ್ಡೆ ಬೇಡ! (ಗಂ)
-ಡ, ನಿರಂಜನಾದಿತ್ಯನಾಡ!!!

ಬರಬೇಕಮ್ಮಾ ಬರಬೇಕು! (ವ)   4(1578)

-ರದಾ ಪ್ರಸಾದ ತಿನ್ನಬೇಕು!
ಬೇರೆಲ್ಲೂ ಹೋಗದಿರಬೇಕು!
ರ ಜೋಡಿಸಿ ನಿಲ್ಲಬೇಕು! (ಅ)
-ಮ್ಮಾರಿಗೂ ಅಂಜದಿರಬೇಕು!
ಟ್ಟೆ ಗಟ್ಟಿ ಕಟ್ಟಿರಬೇಕು!
ವಕೆ ಬಿಚ್ಚದಿರಬೇಕು!
ಬೇಸರದೆ ಕುಣಿಯಬೇಕು! (ಬೇ)
-ಕು ನಿರಂಜನಾದಿತ್ಯಾಗ್ಬೇಕು!!!

ಬರಬೇಕಾದಂದು ನಾನೇ ಬಂದೇನು! (ಯಾ)   5(3071)

-ರ ಮಾತಿಗೂ ಒಡಂಬಡೆ ನೀಗಾನು!
ಬೇಸರ ಕಳೆದಾನಂದ ತಂದೇನು!
ಕಾಯಲಾರದವ ನೋಡುವುದೇನು?
ದಂಭ ಕೊಚ್ಚಿಕೊಂಡರೆ ಫಲವೇನು?
ದುರ್ಯೋಧನನಿಗಾದ ಗತಿಯೇನು?
ನಾರಾಯಣನಾಜ್ಞೆ ಕಾದಿಹೆ ನಾನು!
ನೇತಾಜಿ ಮೂರು ಲೋಕಕ್ಕೆ ಅವನು!
ಬಂಜೆಗೆ ಮಕ್ಕಳನ್ನಿತ್ತನವನು!
ದೇವಾಲಯವವನಿಗೆ ಈ ತನು! (ಅ)
-ನುದಿನಾ ನಿರಂಜನಾದಿತ್ಯ ತಾನು!!!

ಬರಬೇಕಾದವರು ಬರಲಿಲ್ಲವೇಕೆ? (ಇ)   3(1082)

-ರಬೇಕಾದವರೆಲ್ಲ ಇರಲಿಲ್ಲವೇಕೆ?
ಬೇಕು, ಬೇಡೆಂಬಹಂಕಾರವಿರುವುದೇಕೆ?
ಕಾರಣ, ಕಾರ್ಯ ಕರ್ತನರಿವಾಗದೇಕೆ?
ಶರಥಾತ್ಮಜನ ದಯೆ ಬೇಕದಕೆ!
ರ ಗುರು ರಾಮನ ಧ್ಯಾನ ಮುಖ್ಯದಕೆ! (ಪಾ)
-ರು ಮಾಡುವನವ, ಸಂದೇಹವಿಲ್ಲದಕೆ!
ಯಲಾಡಂಬರವ ಬಿಡಬೇಕಿದಕೆ!
ಮಿಸಬೇಕು ಮನ ತತ್ವ ಚಿಂತನಕೆ!
ಲಿಂಗ ಭೇದವಿಲ್ಲ ದಿವ್ಯಾತ್ಮ ಚೇತನಕೆ! (ಬ)
-ಲ್ಲ ಮಾರುತಿ ಇಹನು ಮಾರ್ಗದರ್ಶನಕೆ!
ವೇದಾಂತಾರ್ಥ ಸಿದ್ಧನಿವನೆಲ್ಲಾ ಲೋಕಕ್ಕೆ! (ಏ)
-ಕೆ? ನಿರಂಜನಾದಿತ್ಯನವನಾದುದಕೆ!!!

ಬರಬೇಕಾದಾಗ ಬರುವೆನೆಂದ ನಿರಂಜನ!   1(27)

ಗಳೆಗಳಿಂದೇನಾಗುವುದೆಂದ ನಿರಂಜನ!
ಬೇಡ ಬೇಕಾದಗತ್ಯವೇನಿಲ್ಲೆಂದ ನಿರಂಜನ!
ಕಾಡದೆ, ಬೇಡದೆ, ನೀಡುವೆನೆಂದ ನಿರಂಜನ!
ದಾರಿ ತೋರಿದಂತೆ ನಡೆಯಿರೆಂದ ನಿರಂಜನ!
ಮನಾಗಮನವನಾಧೀನೆಂದ ನಿರಂಜನ!
ರಗಾಲ, ಸಿರಿಗಾಲವನಿಷ್ಟೆಂದ ನಿರಂಜನ!
ರುಚಿಯೂಟಕಾಗಿಲ್ಲಿ ಬಂದಿಲ್ಲೆಂದ ನಿರಂಜನ!
ವೆಗ್ಗಳದ ಗುರಿಗಾಗಿಹೆನೆಂದ ನಿರಂಜನ!
ನೆಂಟನೂ, ಭಂಟನೂ ಆದಿತ್ಯನೆಂದ ನಿರಂಜನ!
ಯೆಯವನದೆನಗಪಾರೆಂದ ನಿರಂಜನ!
ನಿತ್ಯದ ನಿಷ್ಠೆ ನೆಡೆಯುತಿದೆಂದ ನಿರಂಜನ!
ರಂಜಿಸಿಹನಾತೆನ್ನಂಗದಲೆಂದ ನಿರಂಜನ!
ಯ ಸರ್ವ ನಾಮರೂಪಗಳ್ಗೆಂದ ನಿರಂಜನ!
ಡಿಸೆನ್ನ ನಿನ್ನಡಿಯೆಡೆಗೆಂದ ನಿರಂಜನ!

ಬರಬೇಕು, ಕಾಲ ಕಾದಿರಬೇಕು! (ವ)   2(680)

-ರ ಗುರು ಜಪ ಸಾಗುತಿರಬೇಕು!
ಬೇರೆ ಹರಟೆ ಮಾತು ಬಿಡಬೇಕು!
ಕುಳಿತ ಜಾಗ ಬಿಡದಿರಬೇಕು!
ಕಾತುರಾತುರವಿರದಿರಬೇಕು! (ಛ)
-ಲ ಹಿಡಿಯದ ನಡೆ, ನುಡಿ ಬೇಕು!
ಕಾಟ ಅನ್ಯರಿಗಾಗದಿರಬೇಕು!
ದಿವ್ಯ ಭಾವಮಗ್ನನಾಗಿರಬೇಕು!
ಹಸ್ಯ, ಭಕ್ತನಿದರಿಯಬೇಕು!
ಬೇಗ ಕಾರ್ಯಸಿದ್ಧಿಗಿದೆಲ್ಲಾ ಬೇಕು! (ಬೇ)
-ಕು, ನಿರಂಜನಾದಿತ್ಯ ಕೃಪೆ ಬೇಕು!!!

ಬರಬೇಕೆಂದವನಿಗಾ

ಸೆ! (ವ)
   4(1631)

-ರ ಗುರುಭಕ್ತನವನೈಸೆ?
ಬೇರಾವುದಕ್ಕಿಲ್ಲವಗಾಸೆ! (ಬೇ)
-ಕೆಂದಿಹನು ಸತ್ಸಂಗದಾಸೆ! (ಭೇ)
-ದವಲ್ಲಿರಬಾರದೆಂಬಾಸೆ!
ಸ್ತ್ರಾಲಂಕಾರಕ್ಕೊಲ್ಲದಾಸೆ!
ನಿಶಿ, ದಿನಧ್ಯಾತ್ಮಿಕದಾಸೆ!
ಗಾನ, ಶಾಂತಿಗಾಗ್ಯವಗಾಸೆ! (ಆ)
-ನೆ ನಿರಂಜನಾದಿತ್ಯಾತ್ಮಾಸೆ!!!

ಬರಲಿ ಮಳೆ, ಗಾಳಿ, ಚಳಿ, ಬಿಸಿಲು! (ಇ)   1(222)

-ರಲಿ ಹಗಲಿರುಳು ಅವನೊರಲು! (ಚ)
-ಲಿಸದಂತಿರಲಿ ಮನ ಜಪದಲು!
ನೆ, ಮಠ ಹಾರಿಹೋಗುತ್ತಿದ್ದಾಗಲು! (ಮ)
-ಳೆಗೆ ಉರುಳಿ ಬೀಳುತ್ತಿರುವಾಗಲು! (ಧ)
-ಗಾಯಾಸಗಳನುಭವಿಸುವಾಗಲು! (ಚ)
-ಳಿಯಿಂದತಿ ನಡುಗುತ್ತಿರುವಾಗಲು!
ರಾಚರವೆಲ್ಲಾ ಅವನಾಗಿರಲು! (ಉ)
-ಳಿಯಬೇಕವಗಾಗಿ ಹಗಲಿರುಳು!
ಬಿಗಿಯಿರಲಿ ಭಾವ ಭಜನೆಯಲು! (ಹು)
-ಸಿಯಳಿದುಳಿಯಲಸಿ ನಿಜದಲು! (ನಿ)
-ಲು, ನಿರಂಜನಾದಿತ್ಯಾಚಲ ಬಿಸಿಲು!!!

ಬರಲಿರುವ ಧ್ರುವ ಧರೆಗೆ! (ವ)   5(2566)

-ರದರಾಜನ ಪಾದದೆಡೆಗೆ! (ಕ)
-ಲಿಮಲ ತೊಳೆವವನ್ಬಳಿಗೆ! (ಗು)
-ರುವಿನಾಜ್ಞೆಯಾಗಿಹುದವಗೆ! (ನ)
-ವ ವಿಧ ಭಾವ ಭಕ್ತಿಯವಗೆ!
ಧ್ರುವಾನಂದದರಿವುಳ್ಳವಗೆ!
ರವನೀವ ಗುರು ಅವಗೆ!
ರ್ಮಕರ್ಮಿಯಾಗಿರೆಂದವಗೆ! (ಮ)
-ರೆಯದಿರ್ಗುರುವನೆಂದವಗೆ! (ನ)
-ಗೆ ನಿರಂಜನಾದಿತ್ಯಾದವಗೆ!!!

ಬರುವ, ಹೋಗುವವರಿಂದ ದೂರವಿರುವ! (ಗು)   6(4000)

-ರು ಹದಿನಾಲ್ಕು ಲೋಕಕ್ಕೆನಿಸಿಕೊಂಡಿರ್ಪವ!
ರ ಗುರು ದತ್ತಾತ್ರೇಯನೆಂಬ ಹೆಸರವ!
ಹೋದೆ, ಬಂದೆ, ಎಂದು ಎಂದೆಂದೂ ಹೇಳದವ!
ಗುಣ, ದೋಷಗಳಲ್ಲಿ ಭೇದ ಕಾಣದಿರ್ಪವ!
ನಿತಾ, ವಸ್ಥು, ವಾಹನಾದಿಗಳಿಲ್ಲದವ!
ಸನ, ಅಶನಕ್ಕಾಗಿ ಬದುಕಿರದವ! (ಯಾ)
-ರಿಂದಲೂ ಏನನ್ನೂ ಯಾಚಿಸದೇ ಇರುವವ!
ಮೆ, ಶಮೆಯ ಸಾಕಾರ ರೂಪವಾಗಿರ್ಪವ!
ದೂಷಣೆ ಯಾರನ್ನೂ, ಎಂದೂ ಮಾಡದಿರುವವ!
ಘುರಾಮನಿಗೂ ಹಿರಿಯನಾಗಿರುವವ!
ವಿಷವನ್ನು ಹಾಲಿನಂತೆ ಜೀರ್ಣಿಸಿಕೊಂಡವ! (ಕು)
-ರುವಂಶ ನಾಶಕ್ಕೆ ಕಾರಣಭೂತನಾದವ! (ಅ)
-ವನೇ ನಿರಂಜನಾದಿತ್ಯನಾಗಿ ಹೊಳೆವವ!!!

ಬರುವವರಲ್ಲಿರುವವರಾರಿಲ್ಲ! (ಕ)   6(3460)

-ರುಬಿದರದಕ್ಕೆ ಪ್ರಯೋಜನವಿಲ್ಲ!
ರಗುರು ಚಿತ್ತ ಪ್ರಶ್ನಿಸುವರಿಲ್ಲ! (ಅ)
-ವರವರ ಪ್ರಾರಬ್ಧ ಭೋಗಿಸ್ಬೇಕೆಲ್ಲಾ!
ಹಸ್ಯ ವಿದನರಿತಿರಬೇಕೆಲ್ಲಾ! (ಸ)
-ಲ್ಲಿಸಬೇಕ್ಭಕ್ತಿಯಿಂದ ಸೇವೆಯನ್ನೆಲ್ಲಾ!
ರುಜುಮಾರ್ಗಕ್ಕೆ ಸಮಯಾವುದೂ ಇಲ್ಲ!
ನವಾಸಿಯೇ ಆಗಬೇಕೆಂದೇ ನಿಲ್ಲ!
ಸನಾಶನಕ್ಕಾಗಿ ಬದುಕ್ಬೇಕಿಲ್ಲ!
ರಾತ್ರಿ, ಹಗಲೆನ್ನದೇ ಭಜಿಸ್ಬೇಕೆಲ್ಲಾ!
ರಿಪುಗಳಿದ್ರಿಂದ ನಾಶವಾಗ್ವರೆಲ್ಲಾ! (ಪು)
-ಲ್ಲ ನಿರಂಜನಾದಿತ್ಯಾನುಭವವೆಲ್ಲಾ!!!

ಬರುವಾ! ಇರುವಾ! ಅರಿವಾ ಹೊರಡುವಾ! !    1(315)

-ರು ಹೀಗಿರುವನೋ ಅವ ಮಹಾನುಭಾವ!
ವಾದಾನುವಾದಗಳಿಲ್ಲದ ಮನೋಭಾವ!
ರುತಿರುವುದವನಲ್ಲಿ ಪೂಜ್ಯಭಾವ!
ರುಚಿಸದವನಿಗೆ ಕುಚೋದ್ಯ ಸ್ವಭಾವ!
“ವಾಸುದೇವನೇ ಗತಿ ” ಯೆಂಬ ದೀನ ಭಾವ!
ನ್ಯ ದೂಷಣೆ ಅವನಿಗಾಗದ ಭಾವ! (ಅ)
-ರಿತವನಾದರೂ ಗರ್ವವಿಲ್ಲದ ಭಾವ!
ವಾಚಾಳತನವಿಲ್ಲದ ಮೌನ ಸ್ವಭಾವ!
ಹೊತ್ತಿದದೆಂಬುದಿಲ್ಲದ ಸಹಜ ಭಾವ!
ವಿಯಾದರ್ಶದನುಷ್ಠಾನಾಸಕ್ತ ಭಾವ! (ಹಾ)
-ಡುತ್ತ ಗುರುನಾಮದಲೈಕ್ಯವಹ ಭಾವ!
ವಾರಿಜಮಿತ್ರ, ನಿರಂಜನಾದಿತ್ಯ ದೇವ!!!

ಬರುವಾಪ್ತರಿಗನಾದರವಿಲ್ಲ! (ಕಿ)   4(1506)

-ರುಕುಳಿಗಳಿಗವಕಾಶವಿಲ್ಲ!
ವಾಸುದೇವ ಭಜನೆಗಡ್ಡಿಯಿಲ್ಲ! (ಲಿ)
-ಪ್ರ ವ್ಯವಹಾರಕ್ಕೆ ಪ್ರೋತ್ಸಾಹವಿಲ್ಲ! (ಹ)
-ರಿ, ಹರ, ಬ್ರಹ್ಮರಲ್ಲಿ ಭೇದವಿಲ್ಲ!
ದ್ದಲಕ್ಕಿನಲ್ಲಿ ಅನುಮತಿಯಿಲ್ಲ!
ನಾಳೆಯ ಮಾತು ಹೇಳುವ ಹಾಗಿಲ್ಲ!
ರ್ಶನ ವಿನಹ ಈಗೇನೂ ಇಲ್ಲ! (ವ)
-ರ ಗುರುಕೃಪೆಗೆ ಲೋಪವೇನಿಲ್ಲ!
ವಿಶ್ವಾಸಿಗಳರಿಯಬೇಕಿದೆಲ್ಲ! (ಪು)
-ಲ್ಲ, ನಿರಂಜನಾದಿತ್ಯನ್ಯನೇನಲ್ಲ!!!

ಬರುವಾಸೆ, ಇರುವಾಸೆ, ಬೆರೆವಾಸೆ! (ಊ)   4(2024)

-ರು ಬಿಟ್ಟು ಕಷ್ಟಪಟ್ಟೀಗ ಬರುವಾಸೆ! (ಭ)
-ವಾಬ್ಧಿಯಿಂದೆದ್ದೀಗ ಊರಲ್ಲಿರುವಾಸೆ! (ಆ)
-ಸೆ ಸುಟ್ಟು ಈಶನೊಟ್ಟೀಗ ಬೆರೆವಾಸೆ!
ಹ ಸುಖ ತ್ಯಜಿಸೀಗ ಬರುವಾಸೆ! (ಗು)
-ರುಮನೆಯಲ್ಲೀಗ ನಿತ್ಯವಿರುವಾಸೆ! (ಶೀ)
-ವಾನಂದದಲ್ಲೀಗ ಸದಾ ಬೆರೆವಾಸೆ!
ಸೆರೆಮನೆಯ ಬಿಟ್ಟೀಗ ಬರುವಾಸೆ!
ಬೆನಕನೊಡನಾಟದಲ್ಲಿರುವಾಸೆ! (ತೆ)
-ರೆ, ಹರಿದು ಹರನಲ್ಲಿ ಬೆರೆವಾಸೆ! (ದೇ)
-ವಾದಿ ದೇವನನ್ನು ನೋಡಬರುವಾಸೆ! (ಆ)
-ಸೆ ನಿರಂಜನಾದಿತ್ಯನೊಟ್ಟಿರುವಾಸೆ!!!

ಬರುವುದುಂಟೇ ಮೈಮೇಲೆ ದೇವರು?   5(2787)

ರುಜುಮಾರ್ಗಕ್ಕೊಲಿವ ದೇವರು! (ಬೇ)
-ವು ಬೆಳೆಗೆ ಮಾವು ಕೊಡ ದೇವರು!
ದುಂಡಾವರ್ತನೆಗೆ ದಕ್ಕ ದೇವರು!
ಟೇಕಕ್ಕೆ ತಕ್ಕಂತೆ ಹೊಲಿವ ದೇವರು!
ಮೈಮನ ಶುಚಿಯಾದವ ದೇವರು!
ಮೇಷ, ಮೀನಕ್ಕಗೋಚರ ದೇವರು!
ಲೆಗ್ಗೆಹತ್ತಿ ಕುಣಿದ್ರೆಂಥಾ ದೇವರು?
ದೇವತ್ವಕ್ಕೆ ಧಕ್ಕೆ ಅಂಥಾ ದೇವರು!
ರ ಗುರುದತ್ತ ನಿಜ ದೇವರು! (ಗು)
-ರುಶ್ರೀನಿರಂಜನಾದಿತ್ಯ ದೇವರು!!!

ಬರುವುದೇ ಬಹಳಪರೂಪ! (ಇ)   4(1681)

-ರುವುದಾಮೇಲೆ ಬಿಟ್ಟನುತಾಪ! (ಅ)
-ವುದರಿಂದಾಗುವುದೀ ಸಂತಾಪ?
ದೇಶ ವಿದೇಶ ಸುತ್ತ್ಯಾಯ್ತು ತಾಪ!
ಯಲಾಯಿತಿಲ್ಲಾ ಪರಿತಾಪ!
ತ್ತಿಕೊಂಡಿತಾ ಹೃದಯ ದೀಪ! (ಬೆ)
-ಳಗುತಿಹನಾ ಶ್ರೀರಂಗಾಧಿಪ!
ಲಾಯನ ಮಾಡುತಿದೆ ಪಾಪ!
ರೂಪ ನೋಡಿ ಓಡಿತೆಲ್ಲಾ ಕೋಪ!
ತಿ ನಿರಂಜನಾದಿತ್ಯಾ ದೀಪ!!!

ಬರುವೆನೆಂದವರಿಂದು ಬಂದಿಲ್ಲ! (ಬ)   6(3371)

-ರುವೆವೆನ್ನದವ್ರಿಂದು ಬಂದರೆಲ್ಲ! (ತಾ)
-ವೆಷ್ಟು ಹೇಳಿದ್ರೂ ಎಲ್ಲಾ ಆಗ್ವುದಿಲ್ಲ! (ನಾ)
-ನೆಂಬಹಂಕಾರವಿನ್ನೂ ಸಾಯಲಿಲ್ಲ!
ತ್ತನಿಗಿನ್ನೂ ಕರುಣೆ ಬಂದಿಲ್ಲ!
ರ ಗುರು ಅವನೇ ಲೋಕಕ್ಕೆಲ್ಲ! (ಊ)
-ರಿಂದೂರಿಗೆ ಸುತ್ತಿದ್ರಾತ ಸಿಕ್ಕೋಲ್ಲ!
ದುರ್ಬುದ್ಧಿಗಳನ್ನೆಲ್ಲಾ ಬಿಡ್ಬೇಕೆಲ್ಲ!
ಬಂಜೆಯ ಸೌಂದರ್ಯ ಸಾರ್ಥಕವಿಲ್ಲ!
ದಿವ್ಯ ನಾಮಭಜನೆ ಸುಖಕ್ಕೆಲ್ಲ! (ಬ)
ಲ್ಲ ನಿರಂಜನಾದಿತ್ಯನಿದನ್ನೆಲ್ಲ!!!

ಬರೆದುಕೊಡರೆ ಸಾಲದು, ನಾನಾಗಬೇಕು! (ಉ)   1(366)

-ರೆ ಮನನದಿಂದಾಚಾರ ಶುದ್ಧವಾಗಬೇಕು!
ದುಡಿಮೆ ಸದಾ ಗುರಿಗಾಗಿರುತಿರಬೇಕು!
ಕೊಂಡಾ ಕೋತಿ ಮನವನು ಅಡಗಿಸಬೇಕು!
ಮರುಧರನ ಜಪ ಸದಾ ಇರಬೇಕು!
ರೆಪ್ಪೆ ಮುಚ್ಚದೆ ಇಷ್ಟಮೂರ್ತಿಯ ನೋಡಬೇಕು!
ಸಾಧು ಸಜ್ಜನರ ಸಹವಾಸವಿರಬೇಕು!
ಕ್ಷ್ಯವಿಟ್ಟಾವರ ನಡೆ, ನುಡಿ ನೋಡಬೇಕು!
ದುಷ್ಟ ಜನರ ಸಂಘ ಮಾಡದಂತಿರಬೇಕು!
ನಾಳೆ ಹೇಗೆಂಬ ಭಯಪಡದೆ ಇರಬೇಕು!
ನಾಡಾ ವಾರ್ತೆಗಳಿಗೆ ಕಿವುಡಾರಬೇಕು!
ತಿ ಸದಾ ವರ್ತಮಾನ ಕಾಲದ್ದಿರಬೇಕು!
ಬೇಸರ ಕರ್ತವ್ಯದಲ್ಲಿ ಇರದಿರಬೇಕು!
ಕುಲ ನಿರಂಜನಾದಿತ್ಯನದ್ದಾಗಲೂ ಬೇಕು!!!

ಬರೆದೊರೆದು ಮೆರೆದ್ರಾಯ್ತೇನು? (ಬೆ)   4(2051)

-ರೆತನುದಿನಾನಂದಿಸ್ಬೇಡ್ವೆನು?
ದೊರೆತನಾಧಿಕಾರ್ಬಂದ್ರಾಯ್ತೇನು? (ಕೆ)
-ರೆ, ಬಾವಿಗಳ ತೋಡಿಸ್ಬೇಡ್ವೇನು?
ದುರ್ಜನರಡಗಿಸಬೇಡ್ವೇನು? (ಶ)
-ಮೆ, ದಮೆ, ದೊರೆಗಿರಬೇಡ್ವೇನು? (ಜ)
-ರೆದನ್ಯ ದೂಷಣೆ ಮಾಡ್ಬೌಹ್ದೇನು? (ನಿ)
-ದ್ರಾಹಾರ ಮಿತವಾಗಿರ್ಬೇಡ್ವೇನು? (ಆ)
-ಯ್ತೇನೀ ಜನ್ಮ ಸಾರ್ಥಕವಾಯ್ತೇನು? (ನೀ)
-ನು ನಿರಂಜನಾದಿತ್ಯಾಗ್ಬೇಡ್ವೇನು???

ಬರೆಬರೆದು ಬರಿದಾದೆ! (ಒ)   4(2409)

-ರೆದೊರೆದು ತೆರೆ ಹರಿದೆ!
ರೆದೊರೆದಂತಿದ್ದದಾದೆ! (ಹೊ)
-ರೆಯ ಹೊರಲು ಶಕ್ತನಾದೆ!
ದುಡುಕದಿರುವವನಾದೆ!
ಟ್ಟೆ, ಹೊಟೆ

ಷ್ಟ ಬಿಟ್ಟವ್ನಾದೆ! (ಕು)
-ರಿ ನರಿಗೂ ಬೇಕಾದವ್ನಾದೆ! (ಸ)
-ದಾನಂದ ನಂದಕಂದನಾದೆ! (ತಂ)
-ದೆ, ನಿರಂಜನಾದಿತ್ಯಾನಾದೆ!!!

ಬರೆಯದಿರುವುದು ಬಹಳಾರಾಮ! (ಬ)   6(3339)

-ರೆದುದನ್ನೋದಿಸದಿರ್ಪುದತೀಕ್ಷೇಮ!
ದ್ವಾತದ್ವಾಡ್ಪವಗಿಲ್ಲ ತತ್ವಪ್ರೇಮ!
ದಿನರಾತ್ರಿ ವಿಷಯಕ್ಕವ ಗುಲಾಮ!
ರುಕ್ಮಿಣೀಶನಾತನ ಕಣ್ಣಿಗಧಮ! (ಯಾ)
-ವುದೂ ತನ್ನಂತಾಗ್ಬೇಕೆಂಬುದವ್ನ ಕಾಮ!
ದುರ್ವ್ಯಾಜ್ಯಹೂಡುವುದ್ರಲ್ಲವ ನಿಸ್ಸೀಮ!
ಡವನಾದ್ರೂ ವರಭಕ್ತ ಸುಧಾಮ! (ದೇ)
-ಹ ಭಾವನಾಶಕ್ಕೆ ರಾಧಾಕೃಷ್ಣ ನಾಮ! (ವೇ)
-ಳಾವೇಳೆಯೆನ್ನದೇ ಹಾಡಬೇಕಾ ನಾಮ!
ರಾಮ, ಶ್ಯಾಮರಿಗೆ ಸಾಷ್ಟಾಂಗ ಪ್ರಣಾಮ!
(ನೇ)-ಮ ನಿರಂಜನಾದಿತ್ಯನಿಗೆ ಸಂಭ್ರಮ!
(ಧಾ)-ಮ ನಿರಂಜನಾದಿತ್ಯಗಾಕಾಶ ಧಾಮ!!!

ಬರೆಯಲಿರಬೇಕುತ್ತಮ ಲೇಖನಿ! (ಒ)   3(1182)

-ರೆಯಲಿಕಿರಬೇಕು ಮಧುರ ವಾಣಿ! (ನ)
-ಯ ವಿನಯದೆರಕವೇ ಆ ಭವಾನಿ! (ಒ)
-ಲಿಯದಾಗದಾವುದೀ ಮನಮೋಹಿನಿ!
ಘುಪತಿಗೂ ಬೇಕಾಯ್ತಾ ಸಂಜೀವಿನಿ!
ಬೇಸಾಯಕ್ಕಿರಬೇಕಾ ಜಲವಾಹಿನಿ!
ಕುಲ ಸ್ತ್ರೀಯೇ ಸರ್ವ ಸೌಭಾಗ್ಯದಾಯಿನಿ! (ದ)
-ತ್ತ ಭಕ್ತಿಯಲ್ಲಿವಳೇ ಆ ಶಿರೋಮಣಿ!
ಹಾಮಾತೆ ಮಾತಂಗಿಷ್ಟಪ್ರದಾಯಿನಿ!
ಲೇಸು ಮಾಳ್ಪವಳೀ ಪತಿತ ಪಾವನಿ! (ಸು)
-ಖ, ದುಃಖವೇಕರಸಳಾ ಕುಂಡಲಿನಿ!
ನಿತ್ಯ ಶ್ರೀ ನಿರಂಜನಾದಿತ್ಯಾಭಿಧಾನಿ!!!

ಬರೆಯುವ ಕರ ಭಾವ ನಿನ್ನದಯ್ಯಾ! (ಅ)   1(175)

-ರೆಘಳಿಗೆ ನಾನಿನ್ನ ಬಿಟ್ಟಿಲ್ಲವಯ್ಯಾ!
ಯುಕ್ತಿ ದುರಾಸೆಗಳೆನಗಿಲ್ಲವಯ್ಯಾ!
ರ್ತಮಾನ ವರ್ತನೆಯೇ ನನ್ನದಯ್ಯ!
ಳೆದುದಕೆ ಚಿಂತಿಸುತಿಲ್ಲವಯ್ಯಾ!
ವಿ ನೀನೆನಗೆ ಮಾರ್ಗ ಬಂಧುವಯ್ಯಾ!
ಭಾಗವತನಾಗಿ ನಾನಿರುವೆನಯ್ಯಾ!
ಳಗೂ ಹೊರಗೂ ನೀ ತುಂಬಿಹೆಯಯ್ಯಾ!
ನಿನ್ನ ಬಿಟ್ಟರೆನಗಿಲ್ಲ ಗತಿಯಯ್ಯಾ! (ಅ)
-ನ್ನ, ವಸ್ತ್ರದ ಹಂಗು ಬೇಕಾಗಿಲ್ಲವಯ್ಯಾ!
ತ್ತಾತ್ರೇಯ ನೀನೆನ್ನನೆತ್ತು ಹೆತ್ತಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಕರುಣಾಳಯ್ಯಾ!!!

ಬರೆಯುವ ವಿಷಯ “ಸತ್ಯ”! [ಒ]   5(3254)

-ರೆಯುವುದು ಸದಾ ಅಸತ್ಯ!
ಯುವಜನಕ್ಯಾಳ್ವಾಸೆ ನಿತ್ಯ!
ರ್ತನೆಗಳೆಲ್ಲಾ ದುಷ್ಕೃತ್ಯ!
ವಿವೇಕ, ವೈರಾಗ್ಯತ್ಯಗತ್ಯ!
ಡ್ರಿಪುಗಳ ರಾಜ್ಯನಿತ್ಯ! (ದ್ಯೇ)
-ಯಸಿದ್ಧಿಗವ್ರ ಸಾವಗತ್ಯ!
ತ್ಸಂಗಿಯಾಗಿರನು ನಿತ್ಯ! (ಸ)
-ತ್ಯ ನಿರಂಜನಾದಿತ್ಯ ಸ್ತುತ್ಯ!!!

ಬರೆಯುವುದು ನಿನನಾಗಿ! (ತೆ)   4(1974)

-ರೆದಕ್ಷಿಯಿಂದೋದಲಿಕ್ಕಾಗಿ!
ಯುದ್ಧ ಬುದ್ಧ್ಯಡಗಲಿಕ್ಕಾಗಿ! (ಸಾ)
-ವು ಭಯ ತಪ್ಪಿಸಲಿಕ್ಕಾಗಿ!
ದುರ್ವ್ಯಾಪಾರ ಬಿಡಲಿಕ್ಕಾಗಿ!
ನಿತ್ಯ ಸುಖಾನುಭವಕ್ಕಾಗಿ!
ಡೆ, ನುಡಿ, ತಿದ್ದಲಿಕ್ಕಾಗಿ! (ಆ)
-ಗಾಗ ಗುರುದರ್ಶನಕ್ಕಾಗಿ! (ಯೋ)
-ಗಿ ನಿರಂಜನಾದಿತ್ಯನಾಗಿ!!!

ಬರೆಯುವೆನು ಕೈಯಿಂದ ನಿನ್ನಿಷ್ಟವೆಂದೆ!   1(251)

ರೆಪ್ಪೆ ಕೆರೆದು ನವೆ ಹೋದುದಿಷ್ಟವೆಂದೆ!
ಯುಕ್ತವೀಗೇನೆಂದು ಯೋಚಿಪುದಿಷ್ಟವೆಂದೆ! (ನ)
-ವೆ ಮೂಗಿಗಾಯ್ತೆಂದರಿತು ನಿನ್ನಿಷ್ಟವೆಂದೆ!
ನುಡಿಗಳ ಲೆಃಖ ಹಾಕಿದ್ನಿನ್ನಿಷ್ಟವೆಂದೆ!
ಕೈ ತಡವರಿಸಿದುದು ನಿನ್ನಿಷ್ಟವೆಂದೆ! (ಕೈ)
-ಯಿಂದ ತಲೆ ಕೆರೆದುದು ನಿನ್ನಿಷ್ಟವೆಂದೆ (ಪ)
-ದಗಳ ಬದಲಾಯಿಸಿದುದಿಷ್ಟವೆಂದೆ!
ನಿಧಾನಿಸಿ ಯೋಚಿಸಿದ್ದು ನಿನ್ನಿಷ್ಟವೆಂದೆ! (ತಿ)
-ನ್ನಿಸಿದ್ದು ತಿಂದು ತೇಗಿದ್ದು ನಿನ್ನಿಷ್ಟವೆಂದೆ! (ಕ)
-ಷ್ಟವಾಗಾಗ್ಯೆ ಬರವುದು ನಿನ್ನಿಷ್ಟವೆಂದೆ! (ನೋ)
-ವೆಂಬುದದು ಮಲಹರ ನಿನ್ನಿಷ್ಟವೆಂದೆ! (ಮುಂ)
-ದೆ, ನಾ ನಿರಂಜನಾದಿತ್ಯ ನಿನ್ನಿಷ್ಟವೆಂದೆ!!!

ಬರೆವ ಕೈಗಾಧಾರನಾದವನಾರು? (ಮ)   5(2989)

-ರೆಯಬೇಡ, ಅವನೇ ನಿನ್ನಾಪ್ತ ಗುರು!
ಜ್ರ, ವೈಢೂರ್ಯಕ್ಕಾಶಿಸನಾ ಸದ್ಗುರು!
ಕೈಗೆ ಬಂದ ತುತ್ತು ಬಾಯ್ಗಿಡುವಾ ಗುರು!
ಗಾರ್ಗಿ ಮೊದಲಾದವರ ಪಿತಾ ಗುರು!
ಧಾರಾಳ ಬುದ್ಧಿಯುಳ್ಳವಾ ಸಿದ್ಧ ಗುರು!
ತಿಪತಿಯ ಮರ್ದಿಸಿದವಾ ಗುರು!
ನಾಮ ಭಜನೆಯಿಂದ ತೃಪ್ತನಾ ಗುರು!
ಮೆ, ಶಮೆಯ, ಮೂರ್ತಿ ಸ್ವರೂಪಾ ಗುರು!
ಸನಾಶನಕ್ಕಾಶಿಸನಾ ಸದ್ಗುರು!
ನಾದ! ಬಿಂದು, ಕಲಾತೀತಾ ಜಗದ್ಗುರು! (ಗು)
-ರು ನಿರಂಜನಾದಿತ್ಯನೇ ದತ್ತ ಗುರು!!!

ಬರೆವೆ ನಿನ್ನಾನಂದವೆಂದೆಲ್ಲಾ! (ಕ)   5(2986)

-ರೆದರೂ ನೀನೇಕಿನ್ನೂ ಬಂದಿಲ್ಲಾ!
(ಹೂ)ವೆನ್ನೀ ರಚನೆ ನಿನ್ನಡಿಗೆಲ್ಲಾ!
ನಿತ್ಯಾರ್ಚನೆ ಆನಂದದಿಂದೆಲ್ಲಾ! (ನಿ)
-ನ್ನಾಜ್ಞೆಗಾಗಿರುವುದೀ ಬಾಳೆಲ್ಲಾ!
ನಂಬಿಹೆನು ತಾಯ್ತಂದೆ ನೀನೆಲ್ಲಾ!
ಯೆ ನಿನಗೇಕಿನ್ನೂ ಬಂದಿಲ್ಲಾ? (ಕಾ)
-ವೆಂದುಪೇಕ್ಷಿಸಿ ಸೇವೆ ಬಿಟ್ಟಿಲ್ಲಾ! (ತಂ)
-ದೆಯಂತೆ ಮಗ! ತೋರಿಳೆಗೆಲ್ಲಾ! (ಎ)
-ಲ್ಲಾ ನಿರಂಜನಾದಿತ್ಯನೆಲ್ಲೆಲ್ಲಾ!!!

ಬರೆಸುವವ ನನ್ನಿಂದ ನಾಗರಾಜು! (ಬೆ)   2(984)

-ರೆತಿಹನು ನನ್ನೊಳಗೆ ನಾಗರಾಜ!
ಸುತ್ತುತಿಹ ನನ್ನ ಹೊತ್ತು ನಾಗರಾಜ!
ರವೀವ ಭಕ್ತರಿಗೆ ನಾಗರಾಜ!
ರ ಗುರು ದತ್ತಾತ್ರೇಯ ನಾಗರಾಜ!
ಗುನಗುತಾದರಿಪ ನಾಗರಾಜ! (ತ)
-ನ್ನಿಂದೆಲ್ಲರುದ್ಧಾರವೆಂಬ ನಾಗರಾಜ!
ಯಾಮಯನಾಗಿರುವ ನಾಗರಾಜ!
ನಾಕಾದಿ ಲೋಕ ನಾಯಕ ನಾಗರಾಜ!
ಮನಾಗಮನ ಹೇತು ನಾಗರಾಜ!
ರಾರಾಜಿದನೆಲ್ಲರಲಿ ನಾಗರಾಜ! (ನಿ)
-ಜ, ನಿರಂಜನಾದಿತ್ಯಾತ್ಮ ನಾಗರಾಜ!!!

ಬರೆಸುವವ ನಾಗರಾಜ! (ಬ)   6(3854)

-ರೆಯುವವನಾ ಯೋಗಿರಾಜ!
ಸುಪುತ್ರನಿವನು ಸಾಂಬಜ!
ರ ಗುರುವೆಂಬುದು ನಿಜ!
ರ್ಣಾತೀತ ಸ್ಥಿತಿ ಸಹಜ!
ನಾಮಸ್ಮರಣೆ ದತ್ತ ಬೀಜ!
ಣರಾಜ್ಯದಲ್ಲೊಬ್ಬ ಪ್ರಜ!
ರಾಮನೂ ಮಾಡಿದನು ಪೂಜ!
ಯ ನಿರಂಜನಾದಿತ್ಯಜ!!!

ಬರ್ತೇನೆಂದು ಬರಲಿಲ್ಲೇಕಮ್ಮಾ? (ಇ)   4(1957)

-ರ್ತೇನೆಂದೋಡಿ ಹೋದೆ ನೀನೇಕಮ್ಮಾ?
ನೆಂಟವನ ಹೊರತಿನ್ಯಾರಮ್ಮಾ?
ದುಷ್ಟರ ಸಂಗ ಮಾಳ್ಪರೇನಮ್ಮಾ?
ಲು ಕಷ್ಟ ಈ ಮಾಯಾ ಮೋಹಮ್ಮಾ! (ವ)
-ರ ಗುರುವಿನಾಜ್ಞೆಯಂತಿರಮ್ಮಾ! (ಅ)
-ಲಿಪ್ತನಾಗ್ಯವನಾತ್ಯಾರಾಮಮ್ಮಾ! (ಸೊ)
-ಲ್ಲೇನಿಲ್ಲದೆ ಅವನಿರ್ಪನಮ್ಮಾ!
ಳಂಕವಿಲ್ಲದೈಕ್ಯಳಾಗಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಾತ್ಮೀಯಮ್ಮಾ!!!

ಬರ್ಬೇಕು, ಇರ್ಬೇಕು, ಗುರು ಪರಮಾತ್ಮ! (ಸೇ)   6(3538)

-ರ್ಬೇಕು ಅವನಲ್ಲಿ ಈ ಪಾಪಿ ಜೀವಾತ್ಮ!
ಕುಲ, ಗೋತ್ರ ನೋಡ್ವವ್ನಲ್ಲಾ ಪರಮಾತ್ಮ!
ಹ ಸುಖಕ್ಕಾಶಿಸುವನು ಜೀವಾತ್ಮ! (ಬೇ)
-ರ್ಬೇರೆ ರೂಪದಿಂದಿಹನು ಪರಮಾತ್ಮ!
ಕುಕಲ್ಪನೆ ಮಾಡುತಿಹನು ಜೀವಾತ್ಮ!
ಗುಣಾತೀತ ಜಗದ್ಗುರು ಪರಮಾತ್ಮ! (ಕಿ)
-ರುಕುಳ ಪರರಿಗೀವನು ಜೀವಾತ್ಮ!
ತಿತ ಪಾವನ ದತ್ತ ಪರಮಾತ್ಮ! (ಪೆ)
-ರರವಗುಣವೆಣಿಪನು ಜೀವಾತ್ಮ!
ಮಾನಾಪಮಾನವೆಣಿಸ ಪರಮಾತ್ಮ! (ಆ)
-ತ್ಮ, ನಿರಂಜನಾದಿತ್ಯ ಗುರು ಸರ್ವಾತ್ಮ!!!

ಬರ್ಬೇಕ್ಬರ್ಬೇಕನ್ನುತ್ತೆ ಬಾರದಾಗ! (ಇ)   6(3360)

-ರ್ಬೇಕಿರ್ಬೇಕನ್ನುತ್ತೆ ಬಂದುಕೂತಾಗ! (ಏ)
-ಕ್ಬರ್ಬೇಕನ್ನುತ್ತೆ ಕೊಂಚಹೊತ್ತಾದಾಗ! (ಇ)
-ರ್ಬೇಕದಕ್ಕಾಗಿ ತೆಪ್ಪಗೊಳಗೀಗ!
ಷ್ಟವಾಗಿದಂತಿರಲ್ಮನಕ್ಕೀಗ! (ತಿ)
-ನ್ನುವುದುಣ್ಣುವುದೂ ಏಕೆಂಬುದೀಗ?
(ಎ)-ತ್ತೆತ್ತಲೂ ಕತ್ತಲೆ ಸುತ್ತಿಹುದೀಗ!
ಬಾಯ್ಬಡ್ಕೊಂಡ್ರೆ ಬರುವವರಾರೀಗ?
(ಪ)-ರಮೇಶ್ವರನೊಬ್ಬನೇ ಗತಿ ಈಗ!
ದಾತ, ನಾಥ, ನೀನೇಕಾಯೋ ಬಂದೀಗ!
(ಖ)-ಗ ನಿರಂಜನಾದಿತ್ಯಾ ತೋರ್ದಾರೀಗ!!!

ಬರ್ಲಿಕ್ಕೊಂದು ಯೋಗ, ಹೋಗ್ಲಿಕ್ಕೊಂದು ರೋಗ! (ಇ)   5(2765)

-ರ್ಲಿಕ್ಕಾಗಿ ಒಬ್ಬೊಬ್ಬರಿಗೊಂದೊಂದುದ್ಯೋಗ! (ಹ)
-ಕ್ಕೊಂದಕ್ಕೂ ಯಾರಿಗೂ ಇಲ್ಲದಿಹುದೀಗ!
ದುರ್ವಿಷಯಕ್ಕೆ ಆಸಕ್ತಿ ಹೆಚ್ಚಿತೀಗ!
ಯೋಜನೆಗಳ ಹಿನ್ನೆಲೆ ಸ್ವಾರ್ಥವೀಗ! (ಮಾ)
-ಗದ ಹಣ್ಣು, ಕಾಯಿಗೆ ಗಿರಾಕಿಯೀಗ!
ಹೋರಾಟ ಹೊಲ, ಗದ್ದೆ ಮಾಲಿಕಗೀಗ! (ಬಾ)
-ಗ್ಲಿನಿಂದಾಚೆ ಹೋದ್ರೆ ಕಳ್ಳತನವೀಗ! (ತ)
-ಕ್ಕೊಂಬವರ್ಕಳ್ಳ ಮಾಲನ್ನಧಿಕವೀಗ!
(ಸಂ)ದುದಾಯುಷ್ಯವೆಲ್ಲಾ ದುರ್ಮಾರ್ಗದಲ್ಲೀಗ!
ರೋಗಿಗಳ ಸಂಖ್ಯೆ ಹೆಚ್ಚಾಯ್ತೆಲ್ಲೆಲ್ಲೀಗ! (ಯೋ)
-ಗಭಾಗ್ಯ ನಿರಂಜನಾದಿತ್ಯನಿಗೀಗ!!!

ಬರ್ವುದೂ ಗೊತ್ತಿಲ್ಲ, ಹೋಗ್ವುದೂ ಗೊತಿತ್ಲ! (ಇ)   5(3205)

-ರ್ವುದೆಷ್ಟು ಸಮಯವೆಂಬುದೂ ಗೊತ್ತಿಲ್ಲ!
ದೂರುವುದನ್ನರನ್ನು ಮಾತ್ರ ಬಿಟ್ಟಿಲ್ಲ!
ಗೊಣ್ಣೆ ಸುರಿಯುತ್ತಿರುವುದು ನಿಂತಿಲ್ಲ! (ನೆ)
-ತ್ತಿಗೌಷಧಿ ತಿಕ್ಕಂದರೆ ಲಕ್ಷ್ಯವಿಲ್ಲ! (ಒ)
-ಲ್ಲದ ಗಂಡನಿಗೆ ಮೊಸ್ರಲ್ಲಿ ಕಲ್ಲೆಲ್ಲಾ!
ಹೋರಾಡಿ ಐಹಿಕಕ್ಕೆ ಫಲವೇನಿಲ್ಲ! (ಆ)
-ಗ್ವುದನ್ನು ತಪ್ಪಿಸುವರಾರೂ ಇಲ್ಲ!
ದೂತ ಅವಧೂತಗಾದ್ರೆ ತಪ್ಪೇನಿಲ್ಲ!
ಗೊಡ್ಡಾಕಳನ್ನೂ ಆತ ಕರಿಯಬಲ್ಲ! (ಸು)
-ತ್ತಿ ಸುಣ್ಣವಾಗುವುದರಲ್ಲರ್ಥವಿಲ್ಲ! (ಪು)
-ಲ್ಲ ನಿರಂಜನಾದಿತ್ಯ ಆತ್ಮನ ಕೊಲ್ಲ!!!

ಬಲವಿಲ್ಲದ ಫಲ ವಿಫಲ! (ಛ)   6(4300)

-ಲವಿಲ್ಲದಿಹ ಬಲ ನಿಷ್ಫಲ!
ವಿವೇಕಿಯ ಮನಸ್ಸು ನಿಶ್ಚಲ! (ತ)
-ಲ್ಲಣಗೊಳ್ಳುವ ಮನ ಚಂಚಲ!
ತ್ತನಲ್ಲಿರ್ಬೇಕ್ಭಕ್ತಿ ಅಚಲ!
ಲಾಗ್ರಣಿ ಪ್ರಹಲ್ಲಾದ ಬಾಲ! (ಛ)
-ಲದಿಂದ ಲಕ್ಷಣ ಮಹಾಬಲ!
ವಿಧಿಗಿಂತ ಬಲ ತಪೋಬಲ!
ಲಿಸಿತು ಸಾವಿತ್ರಿಯ ಛಲ! (ಛ)
-ಲ ನಿರಂಜನಾದಿತ್ಯಗೆ ಬಲ!!!

ಬಲಷ್ಠನ ಬಾಯಿಗೂ ಮಣ್ಣು ಬೀಳದೇನಿಲ್ಲ!   6(4279)

ಲಿಪಿಬ್ರಹನದ್ದನ್ನಾರು ಅರಿತವರಿಲ್ಲ! (ಶ್ರೇ)
-ಷ್ಠ ಸಾಧಕನಿದನ್ನು ಲಕ್ಷ್ಯ ಮಾಡುವುದಿಲ್ಲ!
ರರಹಂಕಾರಕ್ಕೇಟು ಬೀಳದುಳಿದಿಲ್ಲ!
ಬಾಲಲೀಲೆ ಕೃಷ್ಣನದ್ದು ಸಾಮಾನ್ಯವೇನಲ್ಲ! (ಸಾ)
-ಯಿಸದೆ ಆ ದೇಹವನ್ನೊಂದು ಬಾಣ ಬಿಡ್ಲಿಲ್ಲ!
ಗೂನು ಬೆನ್ನು ಸರಿಮಾಡಿ ಮೋಹಿಸಿದನಾ ಮಲ್ಲ!
ಕ್ಕಳ ಮರಿಮಕ್ಕಳ ತಿದ್ದಲಿಲ್ಲಲ್ಲಾ! (ಹೆ)
-ಣ್ಣು, ಮಣ್ನಿಗಾಗಿ ಹೊಡೆದಾಡಿ ಸತ್ತರವ್ರೆಲ್ಲಾ!
ಬೀಳುವುದು, ಏಳುವುದು, ಯಾರನ್ನೂ ಬಿಟ್ಟಲ್ಲ! (ಕ)
-ಳಾವಳ, ತಳಮಳದಿಂದ ಫಲವೇನಿಲ್ಲ!
ದೇಹಾಭಿಮಾನವಳಿಯದೆ ನೆಮ್ಮದಿಯಿಲ್ಲ!
ನಿಶಿ, ದಿನ, ಆತ್ಮಧ್ಯಾನ ಮಾಡ್ಬೇಕಿದಕ್ಕೆಲ್ಲಾ! (ಫು)
-ಲ್ಲ ನಿರಂಜನಾದಿತ್ಯನೇ ತಾವಾಗಬೇಕೆಲ್ಲ!!!

ಬಲಹೀನನ ಮೇಲಬಲೆಯೂ ಸಬಲೆ!   6(3385)

ಕ್ಷ್ಯದಲ್ಲಿಟ್ಟಿದ ಕೂಗಾಡ್ಬೇಡಿನ್ನು ಮೇಲೆ!
ಹೀನೈಸಿ ರೇಗಿಸ್ಬೇಡವಳನ್ನಿನ್ನು ಮೇಲೆ!
ಷ್ಟ ಕಷ್ಟದ ವ್ಯವಹಾರ ಸಾಕಿನ್ಮೇಲೆ!
ಯ, ವಿನಯದಿಂದ ಬಾಳ್ಬೇಕಿನ್ನು ಮೇಲೆ!
ಮೇರೆ ಮೀರಿ, ಜಾರಿ, ಉರುಳ್ಬೇಡಿನ್ನು ಮೇಲೆ!
ಗ್ಗೆಹತ್ತಿ ಕುಣಿಯಬಾರದಿನ್ನು ಮೇಲೆ!
ಲಗುಂದಿದಾಗ ಸಾಗದು ಕಾಮಲೀಲೆ!
(ತ)-ಲೆ ಬಿಸಿಮಾಡಿಕೊಳ್ಬೇಡದಕಿನ್ನು ಮೇಲೆ!
(ಸಾ)-ಯುಜ್ಯಕ್ಕಾಗಭ್ಯಾಸಮಾಡ್ದಿರ್ಬೇಡಿನ್ನು ಮೇಲೆ!
ದಾ ಸದ್ಗುರು ಧ್ಯಾನಮಾಡುತ್ತಿರಿನ್ಮೇಲೆ!
ಳಲಿಸಲಾರಳಾಗ ನಿನ್ನನ್ನಬಲೆ! (ಕ)
-ಲೆತಿರು ನಿರಂಜನಾದಿತ್ಯನಲ್ಲಿನ್ಮೇಲೆ!!!

ಬಲಿಯ ತುಳಿದ ವಾಮನನುಳಿದ! (ಬ)   6(4031)

-ಲಿಷ್ಟರಿಗೇ ಕಾಲನಾದಿ ಕಾಲದಿಂದ!
ದುಪ ಶಕ್ತಿ, ಯುಕ್ತಿಗಳಿಂದಾಳಿದ!
ತುಳಿದು ನರಕನನ್ನಪ್ಪಳಿಸಿದ! (ಕಾ)
-ಳಿನ್ಗ ಸರ್ಪವ ತುಳಿದದುಮಿದ!
ಶಗ್ರೀವಾಸುರನನ್ನು ರಾಮ ಕೊಂದ!
ವಾರಿಜಾಂಬಿಕೆಯನ್ನಾತ ರಕ್ಷಿಸಿದ!
ನ್ಮಥನನ್ನು ಪರಮೇಶ್ವರ ಕೊಂದ!
ಯನ ಕಾಮಾಕ್ಷಿಯಲ್ಲವನು ನಿಂದ! (ಮ)
-ನುಜರಿಗಿದೆಲ್ಲಾ ಒಂದು ಆನಂದ! (ಬಾ)
-ಳಿಗಿದ್ರಿಂದೆಂದಿಗೂ ಇಲ್ಲ ನಿಜಾನಂದ!
ತ್ತ ನಿರಂಜನಾದಿತ್ಯ ಬ್ರಹ್ಮಾನಂದ!!!

ಬಲೆ ಬೀಸಿದ್ದೇನೆಂಬ ಗರ್ವ ಬೇಡಯ್ಯಾ! (ಕ)   5(2984)

-ಲೆಗಿಂತ ಕಲಿಯ ಪ್ರಭಾವ ಹೆಚ್ಚಯ್ಯಾ!
ಬೀಸಿದಾಕ್ಷಣ ಮೀನು ಸಿಗ್ಲಾರದಯ್ಯಾ!
ಸಿಕ್ಕಿದ್ರೂ ಯೋಗ್ಯತಾನ್ಸಾರ ಬೆಲೆಯಯ್ಯಾ! (ಸ)
-ದ್ದೇನ್ಮಾಡ್ದೆ ದೇವರ ನಂಬಿ ದುಡಿಯಯ್ಯಾ! (ನಾ)
-ನೆಂಬ ದುರಹಂಕಾರ ಬಿಟ್ಟುಬಿಡಯ್ಯಾ!
ರ್ವುದೂ, ಹೋಗ್ವುದೂ, ಗುರುಚಿತ್ತವಯ್ಯಾ!
ಣಿಕೆಯ ಲೆಃಖ ತಪಾಗ್ಬಹುದಯ್ಯಾ! (ಸ)
-ರ್ವ ಕಾರಣ ಕರ್ತನಿಚ್ಛೆ ನಿಜವಯ್ಯಾ!
ಬೇಟೆಯ ಮೃಗಕ್ಕೂ ರಕ್ಷಣೆಯುಂಟಯ್ಯಾ! (ತ)
-ಡ ಮಾಡ್ದೆ ನಿತ್ಯ ಸುಖ್ದ ದಾರಿ ಹಿಡಿಯಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯನೆಂದು ನಂಬಯ್ಯಾ!!!

ಬಲ್ಲವನೆಲ್ಲವನೆಲ್ಲೆಲ್ಲಿಹನಲ್ಲವಾ? (ಅ)   3(1162)

-ಲ್ಲ, ಗೊಲ್ಲರೆಲ್ಲಾ ಫುಲ್ಲ ಗೋವಿಂದನಲ್ಲವಾ?
ರಗುರು ಶಿವಾನಂದನವನಲ್ಲವಾ?
ನೆನೆವ ಮನಕೆ ಗೋಚರಿಪನಲ್ಲವಾ? (ಎ)
-ಲ್ಲ ಜಾತಿ, ಮತಕ್ಕಿವನೊಬ್ಬನೇ ಅಲ್ಲವಾ?
ನ, ಗಿರಿ ಗುಹೆಗಳಲ್ಲಿವನಿಲ್ಲವಾ?
ನೆಲ ಜಲಾಕಾಶದಲ್ಲಿ ವ್ಯಾಪಿಸಿಲ್ಲವಾ? (ಹು)
-ಲ್ಲೆ, ನರಿ, ನಾಯಿಗಳಲ್ಲೂ ಇಹನಲ್ಲವಾ? (ಮ)
-ಲ್ಲಿಕಾರ್ಜುನ ಲಿಂಗದಲ್ಲಿವ ತುಂಬಿಲ್ಲವಾ?
ರಿ, ಹರ, ಬ್ರಹ್ಮಾದಿಗಳಿವನಲ್ಲವಾ?
ರ, ಸುರಾಸುರರಿವನೇ ತಾನಲ್ಲವಾ? (ಎ)
-ಲ್ಲರಲ್ಲೆಲ್ಲಿಹನೆಂದು ನಾವೆಲ್ಲಾ ನಂಬುವಾ! (ದೇ)
-ವಾ ನಿರಂಜನಾದಿತ್ಯನೆಂದು ಭಜಿಸುವಾ!!!

ಬಲ್ಲವರ್ಕಲ್ಲಾದರುಲ್ಲಾಸವೆಂತಿಹುದಯ್ಯಾ? (ಹು)   5(3091)

-ಲ್ಲಮೇಲಮೇಧ್ಯವಿದ್ದರಾಕಳು ಮೇಯದಯ್ಯಾ!
ರದರಾಜ ಪರದೆಯೊಳಗಿರ್ಬಾರ್ದಯ್ಯಾ! (ತ)
-ರ್ಕ, ವ್ಯಾಕರಣಾಭಿಜ್ಞ ಹಿರಣ್ಯಗರ್ಭನಯ್ಯಾ (ಚೆ)
-ಲ್ಲಾಪಿಲ್ಲಿಯಾದ ಮೇಲೆ ಸಮರ ಸಾಗದಯ್ಯಾ!
ರ್ಶನವಾಗದಿದ್ದರಾ ತಪ ವ್ಯರ್ಥವಯ್ಯಾ!
ರುಜುಮಾರ್ಗವಿಲ್ಲದವನೆಂಥಾ ಸಂತನಯ್ಯಾ! (ಬೆ)
ಲ್ಲಾದರೂ ಪಾಕವೇರಾದರದು ಕಹಿಯಯ್ಯಾ!
ಜ್ಜನರ್ನೊಂದರುಳಿಯದು ಸ್ವಾತಂತ್ರ್ಯವಯ್ಯಾ!
ವೆಂಕಟೇಶ ಸಂಕಟ ಪರಿಹರಿಸ್ಬೇಕಯ್ಯಾ!
ತಿರುಪತಿಯೆಂಬ ಹೆಸರನ್ವರ್ಥವಾಗ್ಲಯ್ಯಾ!
ಹುಳುಗಳೋಡಾಡಿದರದು ತೀರ್ಥವೇನಯ್ಯಾ?
ರ್ಪ, ದಂಭವಿರ್ಬಾರದು ಭಗವಂತಗಯ್ಯಾ! (ಅ)
-ಯ್ಯಾ, “ನಿರಂಜನಾದಿತ್ಯ” ನಾಮ ಸಾರ್ಥಕಾಗ್ಲಯ್ಯಾ!!!

ಬಲ್ಲಿದೇ! ಧನ ನಿನ್ನದನ್ನೇನು ಮಾಡಿದೆ? (ಮ)   5(2643)

-ಲ್ಲಿಕಾರ್ಜುನನಿಗೇನೇನು ದಾನ ಮಾಡಿದೆ?
ದೇಶ, ವಿದೇಶ ಸುತ್ತಿ ಎಲ್ಲಾ ಹಾಳ್ಮಾಡಿದೆ!
ರ್ಮಾಧರ್ಮವರಿಯದೇನೇನೋ ಮಾಡಿದೆ! (ಜ)
-ನಸಂದಣಿಯ ಮುಂದೆ ಭಾಷಣ ಮಾಡಿದೆ!
ನಿನ್ನವರೆಂಬವರಿಗೂ ದ್ರೋಹ ಮಾಡಿದೆ! (ಅ)
-ನ್ನ, ಬಟ್ಟೆಗೂ ಗತಿಯಿಲ್ಲದಂತೆ ಮಾಡಿದೆ!
ಯೆ ನಿನ್ನಗಿನ್ಯಾದರೂ ಬರಬಾರದೇ? (ಇ)
-ನ್ನೇನೇನ್ಮಾಡ್ಬೇಕೆಂದಿರುವೆ ಹೇಳಬಾರದೇ? (ಮ)
-ನುಜ ಶರೀರ ಸಾರ್ಥಕಗೊಳಿಸ್ಬಾರದೇ?
ಮಾತು ಮಾತಿಗೂ ಶ್ರೀ ಹರಿಯೆನಬಾರದೇ?
(ಮಾ)ಡಿ ಸದ್ಗುರು ಸೇವೆ ಧನ್ಯಳಾಗಬಾರದೇ? (ತಂ)
-ದೆ ನಿರಂಜನಾದಿತ್ಯನೆಂದರಿಯ್ಬಾರದೇ???

ಬಳಕೆಗೆ ಬಾರದೋದೇಕೆ? [ಆ]   3(1094)

-ಳಲರಿಯದ ದೊರೆಯೇಕೆ?
ಕೆಲಸಕ್ಕಿಲ್ಲದ ಆಳೇಕೆ? (ಹ)
-ಗೆತನದ ಬಂಧುಗಳೇಕೆ?
ಬಾಣಗಳಿಲ್ಲದ ಬಿಲ್ಲೇಕೆ?
ಚನೆಯಿಲ್ಲದೆ ಸೇನೇಕೆ?
ದೋಣಿಯಿಲ್ಲದ ಚುಕ್ಕಾಣ್ಯೇಕೆ?
ದೇವಗಲ್ಲದ ಧ್ಯೇಯವೇಕೆ? (ಈ)
-ಕೆ ನಿರಂಜನಾದಿತ್ಯನಾಕೆ!!!

ಬಳಪ ಹೊಸತಾದರೇನಾಯ್ತಯ್ಯಾ? (ಬ)   2(706)

ಸುವಕೈ ಪಳಗಿರಬೇಕಯ್ಯಾ!
ರಮಾತ್ಮ ಲೀಲೆ ವಿಚಿತ್ರವಯ್ಯಾ!
ಹೊಸ ಹೊಸ ದೇಹಗಳಲಿದಯ್ಯಾ!
ವೆದವೆಷ್ಟೋ ಶರೀರಗಳಯ್ಯಾ!
ತಾಳಿದವು ಬಹು ಭವಗಳಯ್ಯಾ!
ಡ ಸೇರಿದ್ದೆಷ್ಟೆಂದರಿಯದಯ್ಯಾ!
ರೇವು ದೂರವಿರುವುದೆಂಬರಯ್ಯಾ!
ನಾವಿಕನಿಷ್ಟ ಬಲ್ಲವರಾರಯ್ಯಾ! (ಆ)
-ಯ್ತವಗೊಪ್ಪಿಸಿ ಪಯಣವನಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾಧಾರನಯ್ಯಾ!!!

ಬಳಲಿಕೆ ನಿವಾರಣೆ ನೆರಳಲ್ಲಿ! (ತ)   6(3610)

-ಳಮಳ ಶಾಂತಿ ಗುರು ಸನ್ನಿಧಿಯಲ್ಲಿ!
ಲಿನ್ಗ ಭೇದಾಂತ್ಯ ಜ್ಞಾನಸಿದ್ಧಿಯಾದಲ್ಲಿ!
ಕೆಲಸದ ಬೆಲೆ ಫಲ ಸಿಕ್ಕಿದಲ್ಲಿ!
ನಿಶಿ, ದಿನ, ಸೂರ್ಯೋದಯಾಸ್ತವಿದಲ್ಲಿ!
ವಾದ, ಭೇದ ಮನಸು ಬದುಕಿದ್ದಲ್ಲಿ!
ತಿ ಸುಖ ಕಾಮನೆಂಬವನಿದ್ದಲ್ಲಿ! (ಹ)
-ಣೆಬರಹವೆಂಬುದಾಸೆಗಳಿದ್ದಲ್ಲಿ!
ನೆರೆಮನೆ ತನ್ನದೆಂಬುದೊಂದಿದ್ದಲ್ಲಿ!
ಮೇಶ, ಉಮೇಶರೈಕ್ಯ ಬ್ರಹ್ಮದಲ್ಲಿ! (ಒ)
-ಳ, ಹೊರ, ಗೋಡೆ, ಬಾಗಿಲುಗಳಿದ್ದಲ್ಲಿ! (ಅ)
-ಲ್ಲಿ, ಇಲ್ಲಿ, ನಿರಂಜನಾದಿತ್ಯನೆಲ್ಲೆಲ್ಲಿ!!!

ಬಳಲಿಸಿದೆ ನಾ ನಿನ್ನ ಬಹುಕಾಲದಿಂದ! (ಅ)   1(39)

-ಳವಡಿಸಿತೆಲ್ಲ ವಿವರ ವಿಚಾರದಿಂದ!
ಲಿಖಿತವೆಲ್ಲವ ನೋಡಿದೆನಾನಂದದಿಂದ!
ಸಿದ್ಧಿ ನಿನಗಾಗುವುದು ಶೀಘ್ರ ಗತಿಯಿಂದ!
ದೆಸೆಗೆಟ್ಟಿಹ ದಾರಿ ತೆರೆವುದು ನಿನ್ನಿಂದ!
ನಾ
ನಿನಗಭಯವಿತ್ತಿಹೆನೀ ರಾತ್ರಿಯಿಂದ!
ನಿನ್ನ ಜನ್ಮ

ಅ ಗುರಿ ಸಾಧಿಪುದಿಂದಿನಿಂದ! (ಅ)
-ನ್ನ ದಾನಾದಿ ಸೇವೆಗಳಾಗಲಿವೆ ನಿನ್ನಿಂದ!
ರಡು ಭರವಸೆಗಳು ಬಾರವೆನ್ನಿಂದ!
ಹುಸಿಯ ಮಾತಲ್ಲ ಹಿಡಿ ಭಾಷೆ ನನ್ನಿಂದ!
ಕಾಮನನು ಕೊಂದು ರಾಮ ನೀನಾದೆ ನನ್ನಿಂದ!
ಕ್ಷ್ಯದಲಿ ನಿಂತನುಭವಿಸು ಸದಾನಂದ! (ಇ)
-ದಿಂಬಿನಧಿಕಾರಿಗಳಿಗಿತ್ತು ಪಡಾನಂದ!
ತ್ತನಿತ್ತೀ ವರವ ನೀಡು ಗೋಪ್ಯದಲೆಂದ!!!

ಬಳಸಿಕೊಂಡಂತೆ ಭಗವಂತ! (ಕೆ)   6(3778)

-ಳಗೆ, ಮೇಲೆ, ಹೊರಗೊಳಗಾತ!
ಸಿಕ್ಕಲಾರ ಯಾರ ಕೈಗೂ ಆತ!
ಕೊಂಬು, ಕಹಳೆ ಕೇಳಿ ಬಾರಾತ!
ಡಂಗು ಬಡಿಪಾಟದಲ್ಲಿಲ್ಲಾತ!
ತೆಗಳಿದ್ರೂ ಕುಪಿತನಾಗಾತ!
ಕ್ತಿ ಭಾವಕ್ಕೆ ಅಧೀನ ಆತ!
ರ್ವೀ ಕಣ್ಣುಗಳಿಗೆ ಕಾಣಾತ!
ವಂದನೆ, ನಿಂದನೆಗಲಕ್ಷ್ಯಾತ! (ಆ)
-ತ ನಿರಂಜನಾದಿತ್ಯ ಅನಂತ!!!

ಬಳಸುತ್ತಿರುವಂತೆ ಭವನ! (ಒ)   6(3888)

-ಳ, ಹೊರ, ನಿರ್ಮಲ ದೇವಸ್ಥಾನ!
ಸುತ್ತು, ಮುತ್ತು ಹೊಲಸು ಸ್ಮಶಾನ! (ಕ)
-ತ್ತಿ, ಗುರಾಣಿ ತಾಣ ತಾಲೀಮ್ಖಾನ! (ತು)
-ರು, ಕರುಗಳ ಸ್ಥಾನ ಗೋಸ್ಥಾನ!
ವಂದಿ ಮಾಗಧರ ಸ್ಥಾನಾಸ್ಥಾನ! (ಚಿಂ)
-ತೆ, ದುಃಖಗಳದ್ದು ಬಂದೀಖಾನೆ!
ವಭಯ ನಾಶಕ್ಕಾತ್ಮ ಜ್ಞಾನ!
ರ ಗುರು ಚರಣ ಪಾವನ!
ಮೋ ನಿರಂಜನಾದಿತ್ಯಾನನ!!!

ಬಸವನಂತಿರಬೇಕು ಸೇವಕರು!   5(3124)

ರ್ವೇಶ್ವರಗತಿಹಿತರಂಥವರು!
ರಗಳಪೇಕ್ಷಿಸುವುದಿಲ್ಲವರು!
ನಂಬಿಸಿ ಕೊರಳ ಕೊಯ್ವುದಿಲ್ಲವರು!
ತಿಗಣೆಯಂತೆ ರಕ್ತ ಹೀರರವರು!
ತಿಪತಿಗೆ ದಾಸರಾಗರವರು!
ಬೇರೆಯವರ ಮಾತೇ ಆಡರವರು!
ಕುಲಕೆ ಭೂಷಣಪ್ರಾಯರಂಥವರು!
ಸೇವೆಯನ್ನು ಮೈಮರೆತು ಮಾಡುವರು!
ಸನಾನ್ನಕ್ಕೂ ಲಕ್ಷ್ಯ ಕೊಡರವರು!
ಣ್ಣು, ಬಾಯ್ಕಿವಿ ಮುಚ್ಚಿ ಬಾಳ್ವರವರು! (ಗು)
-ರು ನಿರಂಜನಾದಿತ್ಯಗಾಪ್ತರವರು!!!

ಬಹಳ ತಡವಾಯ್ತಿಂದು ಸ್ವಾಮಿ!   5(2511)

ಗ್ಲೆಲ್ಲಾ ದುಡ್ದಾಯಾಸಲ್ವೇ ಪ್ರೇಮಿ? (ಬೆ)
-ಳಕಾದ್ಮೇಲೆ ನಾನಿಂದೆದ್ದೆ ಸ್ವಾಮಿ!
ಪ್ಪೇನಾಗಿಲ್ಲದರಿಂದ ಪ್ರೇಮಿ! (ಬಿ)
-ಡಬಾರದಲ್ಲವೇ ನೇಮ ಸ್ವಾಮಿ? (ಜ)
-ವಾಬ್ದಾರಿ ಪರಮಾತ್ಮಗೆ ಪ್ರೇಮಿ! (ಆ)
-ಯ್ತಿಂದಿವನಿಷ್ಟದಂತಲ್ವೇ ಸ್ವಾಮಿ? (ಅಂ)
-ದು, ಇಂದು, ಮುಂದವನಿಂದ್ಲೇ ಪ್ರೇಮಿ!
ಸ್ವಾಮಿಯಾಜ್ಞೆ ನನಗೇನು ಸ್ವಾಮಿ? (ಸ್ವಾ)
-ಮೀ, ನಿರಂಜನಾದಿತ್ಯಾತ್ಮ ಪ್ರೇಮಿ!!!

ಬಹು ಜನ್ಮದ ಇಹ ಸಂಬಂಧ ನನಗೆ!   6(3815)

ಹುಸಿ ಮಾಯೆಗೆನ್ನ ಮೇಲಧಿಕಾರ ಹೀಗೆ!
ನಿಸಿದಾಗಿಂದಾಡ್ಸಿದಾಟ ಬಗೆ ಬಗೆ! (ಉ)
-ನ್ಮತ್ತನಂತಾದೆ ಇದರರ್ಥರಿಯದಾಗೆ!
ರ್ಶನದಿಂದೆಲ್ಲಾ ಜ್ಞಾನವೆಂಬ ನಂಬಿಗೆ!
ದು ಎಂದಾಗುವುದೆಂದರಿಯದೆನಗೆ!
ಗಲಿರುಳೆಲ್ಲಾ ಅದೇ ಜಪವೆನಗೆ!
ಸಂಪರ್ಕ ಜಗತ್ತಿನದ್ದೀಗ ಬಂತೆನಗೆ!
ಬಂಧು ಬಾಂಧವ ಗುರುದತ್ತನೇ ನನಗೆ!
ರ್ಮ ಕರ್ಮವಾವುದೂ ಅರಿಯದೆನಗೆ!
ಡೆ, ನುಡಿಗಳರ್ಪಿಸಿಹೆನವನಿಗೆ!
ಲವೊಲವಿಂದ ಪ್ರಾಪ್ತವಾಗ್ಬೇಕೆನಗೆ! (ಹೀ)
-ಗೆ, ನಿರಂಜನಾದಿತ್ಯನಾಗಿಹೆ ಧರೆಗೆ!!!

ಬಹು ತರದ ಚಿಕಿತ್ಸೆಯಾಯ್ತು!   6(4062)

ಹುರುಪು ಮನಸ್ಸಿಗಿಲ್ಲದಾಯ್ತು!
ತ್ವ ಚಿಂತನೆಗೆ ಶುರುವಾಯ್ತು!
ಕ್ತದ ಗೊಂಬೆಗಲಕ್ಷ್ಯವಾಯ್ತು!
ತ್ತನಿಗಿದು ಆನಂದವಾಯ್ತು!
ಚಿತ್ತ ಚಾಂಚಲ್ಯ ಕಡಿಮೆಯಾಯ್ತು!
ಕಿವಿಗಾರ ಮಾತೂ ಬೇಡವಾಯ್ತು! (ವ)
-ತ್ಸೆ, ವತ್ಸಲೆಗಾದದ್ದೊಳ್ಳೇದಾಯ್ತು!
ಯಾರಿಗೆ, ಯಾರಿಲ್ಲೆಂಬರಿವಾಯ್ತು! (ಆ)
-ಯ್ತು ನಿರಂಜನಾದಿತ್ಯಾನಂದಾಯ್ತು!!!

ಬಹು ದಿನದ ಮಸ್ತಕ ವಿಚಾರ ಪುಸ್ತಕ!   6(3692)

ಹುಸಿ ಮಾತುಗಳ್ತುಂಬಿರಬಾರದು ಪುಸ್ತಕ!
ದಿವ್ಯ ಜೀವನಕ್ಕುಪಯೋಗವಾಗ್ಬೇಕ್ಪುಸ್ತಕ!
ರ ಜನ್ಮ ಸಾರ್ಥಕ ಮಾಡಬೇಕು ಪುಸ್ತಕ!
ರ್ಪ, ದಂಭಗಳನ್ನಡಗಿಸ್ಬೇಕು ಪುಸ್ತಕ!
ನ್ಮಥನ ಜೈಸುವಂತಿರಬೇಕು ಪುಸ್ತಕ!
ಸ್ತವನಕ್ಕನುಕೂಲವಾಗಿರ್ಬೇಕು ಪುಸ್ತಕ!
ರ್ಮ, ಧರ್ಮ, ಕಲಿಸುತ್ತಿರಬೇಕು ಪುಸ್ತಕ!
ವಿಕಲ್ಪ, ಸಂಕಲ್ಪಕ್ಕೆಡೆ ಕೊಡ್ಬಾರ್ದು ಪುಸ್ತಕ!
ಚಾರಿತ್ರ್ಯದ ವಧೆ ತೋರಿಸ್ಬೇಕು ಪುಸ್ತಕ!
ಹಸ್ಯ ದೇವರದ್ದು ತೋರಿಸ್ಬೇಕು ಪುಸ್ತಕ!
ಪುಣ್ಯ, ಪಾಪದ ಅರ್ಥ ತಿಳಿಸ್ಬೇಕು ಪುಸ್ತಕ! (ಬೆ)
-ಸ್ತ ಗುಹನ ಭಕ್ತಿಯ ಕೊಂಡಾಡ್ಬೇಕು ಪುಸ್ತಕ!
ಲಿ ಹರ ನಿರಂಜನಾದಿತ್ಯನ ಪುಸ್ತಕ!!!

ಬಹು ದಿನವಾಯ್ತು ನೋಡ್ಯೆಂದು ಬಂದೆ! [ಅ]   4(2215)

-ಹುದಾರೋಗ್ಯ ದರ್ಶನದಿಂದೆಂದ್ಬಂದೆ!
ದಿವ್ಯ ಜೀವನಾಶೀರ್ವದಿಸೆಂದ್ಬಂದೆ!
ರಜನ್ಮ ಸಾರ್ಥಕವಾಗ್ಲೆಂದ್ಬಂದೆ! (ಭ)
-ವಾಬ್ಧಿಯಿಂದ ಪಾರಾಗಬೇಕೆಂದ್ಬಂದೆ! (ಆ)
-ಯ್ತು ವ್ಯರ್ಥ ಕಾಲಕ್ಷೇಪಲ್ಲಿಲ್ಲೆಂದ್ಬಂದೆ! (ಮ)
-ನೋಶಾಂತಿ ಕಳಕ್ಕೊಂಡಿಲ್ಲಿಗೀಗ್ಬಂದೆ! (ನೀ)
-ಡ್ಯೆಂಡು ಶಾಂತಿಭಿಕ್ಷೆ ಬೇಡಲೀಗ್ಬಂದೆ!
ದುರಿತದೂರ ಗುರು ನೀನೆಂದ್ಬಂದೆ!
ಬಂಧು, ಬಾಂಧವರ್ಬೇರಿಲ್ಲೆಂದ್ನಾ ಬಂದೆ! (ತಂ)
-ದೆ ಶ್ರೀ ನಿರಂಜನಾದಿತ್ಯನೆಂದ್ಬಂದೆ!!!

ಬಹು ದೂರವಿರುವುದೊಂದೂರು! (ಇ)   4(1860)

-ಹುದಾಧಾರವಾಗ್ಯೆಲ್ಲರ್ಗಾ ಊರು!
ದೂರ ಗಾಢಾಂಧಕಾರಕ್ಕಾ ಊರು! (ವ)
-ರಗರು ವಾಸವಾಗಿರ್ಪಾ ಊರು!
ವಿಶ್ವಾಸಿಗಳ್ಗೆ ಹತ್ತಿರಾ ಊರು! (ತು)
-ರು, ಕರುಗಳಿಗೂ ಬೇಕಾ ಊರು! (ಆ)
-ವುದಕ್ಕೂ ಕಮ್ಮಿಯಿಲ್ಲದಾ ಊರು!
ದೊಂಬಿ, ದರೋಡೆ ಕಾಣದಾ ಊರು! (ಹಿಂ)
-ದೂ, ಮುಸಲ್ಲಾನ, ಕ್ರೈಸ್ತರಾ ಊರು! (ಸೇ)
-ರು ನಿರಂಜನಾದಿತ್ಯನಾ ಊರು!!!

ಬಹು ಪಾತ್ರಧಾರಿ ನಾನು!   4(1545)

ಹುಸ್ಯಾಟದ ದಿಟ ನಾನು!
ಪಾಪ, ಪುಣ್ಯಾನಂದ ನಾನು!
ತ್ರಯ ಲೋಕಾಧಿಪ ನಾನು!
ಧಾಮ ರಹಿತಾತ್ಮ ನಾನು!
ರಿಪುಕುಲ ಕಾಲ ನಾನು!
ನಾಮ ರೂಪಾತೀತ ನಾನು! (ಭಾ)
-ನು ನಿರಂಜನಾದಿತ್ಯಾನು!!!

ಬಹು ಬಯಕೆ ಬಸರಿಗೆ ಧಕ್ಕೆ!   3(1013)

ಹುರಿದ ಪದಾರ್ಥಾರೋಗ್ಯಕ್ಕೆ ಧಕ್ಕೆ!
ರಗಾಲದಿಂದ ಶಾಂತಿಗೆ ಧಕ್ಕೆ!
ಮವಿರದಿರೆ ಕಾರ್ಯಕ್ಕೆ ಧಕ್ಕೆ!
ಕೆಸರಾಧಿಕ್ಯ ಮೊಳಕೆಗೆ ಧಕ್ಕೆ!
ಲಹೀನತೆ ವಿಜಯಕ್ಕೆ ಧಕ್ಕೆ!
ಸಿಡುಕಿಂದ ಬಡವನಿಗೆ ಧಕ್ಕೆ!
ರಿಪುಗಳಿಂದ ಸ್ವರೂಪಕ್ಕೆ ಧಕ್ಕೆ! (ಕಾ)
-ಗೆಗಳ ಸಂಗ ಕೋಗಿಲೆಗೆ ಧಕ್ಕೆ!
ನದಾಸೆ ನಿತ್ಯ ಸುಖಕ್ಕೆ ಧಕ್ಕೆ! (ಧ)
-ಕ್ಕೆ ನಿರಂಜನಾದಿತ್ಯಂಧಕಾರಕ್ಕೆ!!!

ಬಹು ಬಯಕೆಯಿಂದ ನೀ ಕೆಟ್ಟೆ!   4(1929)

ಹುಸಿ, ದಿಟವೆಂದರಿತು ಕೆಟ್ಟೆ!
ಲಾತ್ಮಬಲವೆನ್ನೆದೇ ಕೆಟ್ಟೆ!
ಮ, ನಿಯಮವಿಲ್ಲದೇ ಕೆಟ್ಟೆ!
ಕೆಟ್ಟ ಸಹವಾಸ ಮಾಡಿ ಕೆಟ್ಟೆ! (ತಾ)
-ಯಿಂಬಿಗೆ ಬೆಲೆ ಕೊಡದೇ ಕೆಟ್ಟೆ!
ತ್ತ ಭಜನೆ ಬಿಟ್ಬಿಟ್ಟು ಕೆಟ್ಟೆ!
ನೀತಿ, ರೀತಿಯರಿಯದೇ ಕೆಟ್ಟೆ!
ಕೆಲಸಾಲಸ್ಯದಿಂದಾಗಿ ಕೆಟ್ಟೆ! (ಬ)
-ಟ್ಟೆ ನಿರಂಜನಾದಿತ್ಯಾತ್ಮ ನಿಷ್ಠೆ!!!

ಬಹು ಬೆಲೆಯ ಲೇಖನಿ ಬರೆಯದಿತ್ತು!   6(4131)

ಹುಮ್ಮಸ್ಸು ಮನಸ್ಸಿನಿಂದ ಮಾಯವಾಗಿತ್ತು!
ಬೆಲೆ ನೆನಪಾದಾಗಾಕಡೆಗೋಡುತ್ತಿತ್ತು! (ತ)
-ಲೆ ಕಾರಣವರಿಯದೆ ಬರಿದಾಗಿತ್ತು!
ಮ ನಿಯಮದಲ್ಲಿ ಲೋಪ ಬಂದಂತಿತ್ತು! (ತ)
-ಲೇ ಮೇಲೊಂದು ಬಂಡೆಯುರುಳಿ ಬಿದ್ದಂತಿತ್ತು! (ಲೇ)
-ಖನಿಯೊಳ, ಹೊರಗೆಲ್ಲಾ ತೊಳೆಯಲಾಯ್ತು!
ನಿರ್ಮಲತೆ ಆ ಮೂಲಾಗ್ರದಲ್ಲಿ ಉಂಟಾಯ್ತು!
ರೆದು ನೋಡೋಣವೆಂಬ ಕುತೂಹಲಾಯ್ತು! (ತೆ)
-ರೆದು ಬಾಯಿಯಮೃತ ಮಸಿ ತುಂಬಲಾಯ್ತು! (ಮಾ)
-ಯವಾಯಿತೀಗ ಲೋಪವೆಂಬರಿವುಂಟಾಯ್ತು!
ದಿವ್ಯ ಸಂದೇಶ ಬರೆಯಲಾರಂಭವಾಯ್ತು! (ಕು)
-ತ್ತು ನಿರಂಅಜನಾದಿತ್ಯ ಲೇಖನಿಗಿಲ್ಲಾಯ್ತು!!!

ಬಹುಕಾಲ ಪೂಜಿಸಿದ್ದನ್ನು ತೊಲಗೆನ್ನುವುದೆಂತು?   6(4084)

ಹುಸಿಯಾದರೂ ಅದಕ್ಕೆ ಮಸಿ ಬಳಿಯುವುದೆಂತು?
ಕಾದಿಲ್ಲವೇ ಕೃಪೆಗೋಸ್ಕರ ಬರಿಗಾಲಲ್ಲಿ ನಿಂತು?
ಕ್ಷ್ಯ ಸಿದ್ಧಿಗೀಸ್ಕರ ದುಡಿಯುವ ಕ್ರಮವಿನ್ನೆಂತು?
ಪೂರ್ವಾರ್ಧ ಬಾಳಿನದೆಲ್ಲಾ ಹೀಗೆ ಕಳೆಯುತ್ತಾ ಬಂತು!
ಜಿಹ್ವಾದಿಂದ್ರಿಯ ಚಾಪಲ್ಯ ಕಡಿಮೆಯಾಗುತ್ತಾ ಬಂತು!
ಸಿರಿಯರಸನನ್ನು ಒಲಿಸಿಕೊಳ್ಳುವುದೆನ್ನೆಂತು? (ತ)
-ದ್ದರ್ಶನದುದ್ದೇಶಕ್ಕಾಗಿ ಕಾಯ ಕರಗುತ್ತಾ ಬಂತು! (ತಿ)
-ನ್ನುವುದುಣ್ಣುವುದಕ್ಕೂ ಮನಸ್ಸಿಲ್ಲದಾಗುತ್ತಾ ಬಂತು!
ತೊಗಲಿನ ಗೊಂಬೆಯಾಟದಿಂದಾರಿಗಾನಂದ ಬಂತು? (ಮ)
-ಲ ಮೂತ್ರದ ಗುಂಡಿಯಲ್ಲಿ ನರಳಬೇಕಾಗಿ ಬಂತು!
ಗೆದ್ದು ಮೇಲೆದ್ದು ಬಂದರೂ ದುರ್ವಾಸನೆ ಹೊಗ್ದಿದ್ದ್ರೆಂತು? ಒ

ಕಾಣುಬಂತು? (ನಿ)
-ನ್ನುಪೇಕ್ಷೆ ನನ್ನುತ್ಸಾಹವನ್ನೆಲ್ಲಾ ದಹಿಸುತ್ತಾ ಬಂತು! (ಕಾ)
-ವು ಸಹಿಸುವುದಕ್ಕೂ ಆಗದ ದುಸ್ಥಿತಿಯೀಗ ಬಂತು! (ಇ)
-ದೆಂತು ಪರಿಹಾರವೋ? ತಿಳಿಯದೇಗ ಭ್ರಮೆ ಬಂತು!
ತುರಿಯಾತೀತ ನಿರಂಜನಾದಿತ್ಯಗರ್ಪಣೆಯಿಂತು!!!

ಬಹುಭಾಗ ದೈವಿಕವಿದ್ದರವತಾರಿ!   5(3283)

ಹುಟ್ಟು, ಸಾವು ಶರೀರಕ್ಕೆಂಬುದ ನೀನರಿ!
ಭಾಗ್ಯ, ಭೋಗ್ಯವೆಲ್ಲಾ ಅವನಿಗೆ ಶ್ರೀಹರಿ!
ರ್ವವಿಲ್ಲದಿರುವುದೇ ಅವನ ಪರಿ!
ದೈವೇಚ್ಛೆಯಿದ್ದಂತಾಗಲೆಂಬುದವನ ದಾರಿ!
ವಿಕಲ್ಪ, ಸಂಕಲ್ಪವಿಲ್ಲದಿರ್ಪಾ ಉದಾರಿ!
ರ್ತವ್ಯಪಾಲನಾದರ್ಶಕ್ಕಾತ ಸಾಕಾರಿ!
ವಿಶ್ವನಾಥನಾದ ತಾನು ವಿಶ್ವ ಸಂಸಾರಿ! (ಸ)
-ದ್ದಡಗಿ ತಾನೇ ತಾನಾದಾಗ ನಿರಾಕಾರಿ!
ಮಾ, ಉಮಾ, ಸರಸ್ವತಿಯರಿಗಾಧಾರಿ!
ರಗುರು ದತ್ತಾತ್ರೇಯಾವಧೂತಾಕಾರಿ!
ತಾನಾರ್ತರಕ್ಷಕನಾಗಿ ಧೂರ್ತ ಸಂಹಾರಿ! (ಅ)
-ರಿಕುಲಕಾಲ ನಿರಂಜನಾದಿತ್ಯಾಕಾರಿ!!!

ಬಹುಭಾವಾನಂದಾನಂದ ಗುರು ಬಾಬಾ!   2(672)

ಅಥವಾ
ಬಹು ಭಾವಾನಂದಾದಿತ್ಯ ಬಾಬಾ!
ಹುಸಿ ರೂಪಾನಂದಾದಿತ್ಯ ಬಾಬಾ!
ಭಾವಾ ಭಾವಾನಂದಾದಿತ್ಯ ಬಾಬಾ!
ವಾದ, ಭೇದಾನಂದಾದಿತ್ಯ ಬಾಬಾ!
ನಂಬಿದಂತಾನಂದಾದಿತ್ಯ ಬಾಬಾ!
ತ್ತ ಚಿತ್ತಾನಂದಾದಿತ್ಯ ಬಾಬಾ!
ಗುಣ, ದೋಷಾನಂದಾದಿತ್ಯ ಬಾಬಾ!
ರುಜು ಮಾರ್ಗಾನಂದಾದಿತ್ಯ ಬಾಬಾ!
ಬಾಲ ಲೀಲಾನಂದಾದಿತ್ಯ ಬಾಬಾ!
ಬಾ, ಬಾ, ನಿರಂಜನಾದಿತ್ಯ ಬಾಬಾ!!!

ಬಹುವಿಧ ಸಾಧನೆ, ಬೋಧನೆ!   5(2842)

ಹುಸಿ ದಿಟದ ಮೇಲಾಪದನೆ!
ವಿಷಯಗಳ ಕೆಟ್ಟ ವಾಸನೆ!
ರ್ಮ, ಕರ್ಮಗಳಿಗುಚ್ಚಾಟನೆ!
ಸಾಮರ್ಥಮೆರೆಸುವ ಯೋಚನೆ!
ಕ್ಕೆ ನಿತ್ಯ ಶಾಂತಿಗೀಭಾವನೆ!
ನೆಮ್ಮದಿಗಿರ್ಬೇಕು ಸುವಾಸನೆ!
ಬೋಳಿ ಕಾಳಿ, ನ್ಯಾಯಕ್ಕಾಶ್ವಾಸನೆ!
ರೆಯ ನಾಶಕ್ಕಿದು ಸೂಚನೆ! (ನೆ)
-ನೆ ನಿರಂಜನಾದಿತ್ಯನ ನೆನೆ!!!

ಬಹುವೇಷಧಾರಿಯಾದ್ರೂ ನಾನು ನಾನೇ!   5(3298)

ಹುರುಳೇನಿದರಲ್ಲಿಲ್ಲೆಂಬವ ನಾನೇ!
ವೇದಾಂತ ಸಾರವಾಗಿರುವಾತ್ಮ ನಾನೇ!
ಡ್ಭುಜ ಮೂರ್ತಿ ದತ್ತಾತ್ರೇಯನೂ ನಾನೇ!
ಧಾತುವರ್ಗಕ್ಕಾಧಾರವಾದವ ನಾನೇ!
ರಿದ್ಧಿ, ಸಿದ್ಧಿಗತೀತನಾದವ ನಾನೇ!
ಯಾದವಕುಲತಿಲಕ ಕೃಷ್ಣ ನಾನೇ! (ಇ)
-ದ್ರೂ, ಸತ್ರೂ ಸದಾ ಸರ್ವವ್ಯಾಪಕ ನಾನೇ!
ನಾನೇ ಮತ, ಪಂಥಕ್ಕೆ ಕಾರಣ ನಾನೇ!
ನುಡಿ, ನಡೆಯೊಂದಾಗಿದ್ದಾರಾಮ ನಾನೇ!
ನಾದ ಯೋಗಾನಂದ ತ್ಯಾಗರಾಜ ನಾನೇ!
ನೇಮ, ನಿಷ್ಠ ನಿರಂಜನಾದಿತ್ಯ ನಾನೇ!!!

ಬಾ ಕೇಶವಾ, ತೆಗೆ ವೇಷವಾ! (ಸಾ)   4(2239)

-ಕೇತಾಧಿಪ ರೂಪದಿಂದ ಬಾ! (ವಂ)
-ಶಜನ ಮೇಲಿಷ್ಟು ದ್ವೇಷವಾ?
ವಾದ ಮಾಡದೇ ನೀನೀಗ ಬಾ! (ಮಾ)
-ತೆ ಮಾಡುವಳೇನು ಮೋಸವಾ? (ನ)
-ಗೆಮೊಗದಿಂದ ಬೇಗೋಡಿ ಬಾ!
ವೇದಾಂತ ಸಾರಾರಾಮ ಶಿವಾ!
ಷ್ಠಿ ಕಳೆದೈದಕ್ಕೋಡಿ ಬಾ! (ದೇ)
-ವಾ, ನಿರಂಜನಾದಿತ್ಯಾ ಶಿವಾ!!!

ಬಾ ಬೇಗ ಗುರುಪುತ್ರಪ್ಪನಡಿಗೇ!   4(1876)

ಬೇಸರ ಕಳೆಯುವಯ್ಯನಡಿಗೇ!
ಗನಮಣಿ ಬೆಳಗುವಡಿಗೇ!
ಗುಣಾವಗುಣವೆಣಿಸದಡಿಗೇ!
ರುಚಿ, ಶುಚಿ ಚಿತ್ರಾನ್ನವೀವಡಿಗೇ!
ಪುತ್ರ, ಪುತ್ರಿಯರಾಶ್ರಯದಡಿಗೇ!
ತ್ರಯಲೋಕ ವಿಖ್ಯಾತವಾದಡಿಗೇ! (ಕ)
-ಪ್ಪ ಕಾಣಿಕೆಯನ್ನಾಶಿಸದಡಿಗೇ!
ಲ್ಲ ಶ್ರೀದೇವಿಗಾದವನಡಿಗೇ! (ಪಾ)
-ಡಿದರೊಲಿದೊಡಗೂಡುವಡಿಗೇ! (ತ್ಯಾ)
-ಗೇಶ ನಿರಂಜನಾದಿತ್ಯನಡಿಗೇ!!!

ಬಾ ಬೇಗ ಮುರಲೀಧರಾ!   4(1773)

ಬೇಗ ಬಾರೋ ದಾಮೋದರಾ! (ರಂ)
-ಗ ಶ್ರಿರಂಗ ರಮಾವರಾ!
ಮುರಾರಿ ಕರುಣಾಕರಾ!
ತ್ನ ಕಿರೀಟಾಲಂಕಾರಾ!
ಲೀಲಾ ಶರೀರಾವತಾರಾ!
ರ್ಮ ಸಂಸ್ಥಾಪನಾಕಾರಾ! (ಧೀ)
-ರಾ ನಿರಂಜನಾದಿತ್ಯಾರಾ!!!

ಬಾ ರಾಮಾ ರಘುರಾಮ ಬಾ!   4(1875)

ರಾಣಿ ಸೀತಾ ಸಮೇತ ಬಾ!
ಮಾರುತಿಯೊಡಗೂಡಿ ಬಾ!
ತ್ನ ಕಿರೀಟವಿಟ್ಟು ಬಾ! (ಲ)
-ಘುಬಗೆಯಿಂದೊಳಗೆ ಬಾ! (ಆ)
-ರಾಮಾನುಗ್ರಹ ಮಾಡು ಬಾ!
ತ್ತೇನೂ ಬೇಡೆನಗೆ ಬಾ!
ಬಾ! ನಿರಂಜನಾದಿತ್ಯ ಬಾ!!!

ಬಾ! ಬಾ!! ಬಾನ್ಮಣಿ ಬಾ ಬಾ!   2(628)

ಬಾ! ಬಾ!! ಸನ್ಮಣಿ ಬಾ ಬಾ!
ಬಾ! ಬಾ!! ಚಿನ್ಮಣಿ ಬಾ ಬಾ! (ತ)
-ನ್ಮಯಾತ್ಮಮಣಿ ಬಾ! ಬಾ! (ಮ)
ಣಿ, ಶಿರೋಮಣಿ ಬಾ ಬಾ!
ಬಾ! ಗುಣಮಣಿ ಬಾ ಬಾ!
ಬಾ! ನಿರಂಜನಿ ಬಾ ಬಾ!!!

ಬಾ, ಬಾ, ಮುದ್ದು ಕಂದ ಬಾ, ಬಾ!   6(4048)

ಬಾ ಬೇಗ ಕಾದಿಹಳಂಬಾ!
ಮುನಿವಳಾಮೇಲ್ಬಂದ್ರಂಬಾ! (ತಿ)
-ದ್ದುವಳ್ನಿನ್ನ ಬುದ್ಧಿ ಅಂಬಾ!
ಕಂಗಾಲಾಗಿಹಳೀಗಂಬಾ!
ತ್ತ ನೀನೆಂಬಳ್ಮೂಕಾಂಬಾ!
ಬಾ, ಹಾಲುಣಿಸುವಳಂಬಾ! (ಅಂ)
-ಬಾ ನಿರಂಜನಾದಿತ್ಯಾಂಬಾ!!!

ಬಾಂಧವಾ ಲೋಕ ಬಾಂಧವಾ!   2(622)

ವಾ ತ್ರಿಲೋಕ ಬಾಂಧವಾ!
ವಾಸುದೇವಾತ್ಮ ಬಾಂಧವಾ! (ತ್ರಿ)
-ಲೋಚನಾದಿತ್ಯ ಬಾಂಧವಾ!
ಶ್ಯಪದಿತಿ ಬಾಂಧವಾ!
ಬಾಂಧವಾನಂದ ಬಾಂಧವಾ! (ಮಾ)
-ಧವ ಕೇಶವ ಬಾಂಧವಾ! (ಅ)
-ವಾ ನಿರಂಜನ ಬಾಂಧವಾ!!!

ಬಾಗಿಲನು ತೆರೆದು ದರ್ಶನವ ಕೊಡು ಗುರುವೇ! ||   4(1479)

ಗಿರಿಜಾಪತಿ ನೀನೆಂದು ನಂಬಿ ಬಂದೆನು ಗುರುವೇ ||ಅಪ||
ಜ್ಞೆ ನನಗೇನಿಹುದು ನಿನ್ನಡಿಯಲ್ಲಿ ಗುರುವೇ!
ನುಡಿ ನಡೆಗಳೆಲ್ಲಾ ನಿನ್ನಂಕಿತದಲ್ಲಿ ಗುರುವೇ!
ತೆಗೆ ನನ್ನಜ್ಞಾನ ಮುಸುಕನ್ನೀಗ ಪೂಜ್ಯ ಗುರುವೇ! (ಆ)
-ರೆನ್ನನಾದರಿಸುವರು ನಿನ್ನ ಹೊರತು ಗುರುವೇ?
ದುಡಿದು ಬೆಂಡಾಗಿಹೆ ನಾನೀ ಭವದಲ್ಲಿ ಗುರುವೇ!
ಯೆದೋರಿ ಕಾಪಾಡೆಂದು ಬೇಡುವೆನು ಶ್ರೀ ಗುರುವೇ! (ದ
-ರ್ಶನ ನಿನ್ನ ಪಾದಪದ್ಮದ್ದಾಗಲಿ ಸದಾ ಗುರುವೇ!
ನ್ನ ನಿನ್ನಂತೆ ಮಾಡುವ ಭಾರ ನಿನ್ನದು ಗುರುವೇ!
ಸ್ತು, ವಾಹನಾದಿಗಳೆನಗೆ ಬೇಕಿಲ್ಲ ಗುರುವೇ!
ಕೊಡು ಸತತ ನಿಶ್ಚಲ ಭಕ್ತಿ ನನಗೆ ಗುರುವೇ! (ಬೀ)
-ಡು, ಬಿಡಾರವೆಲ್ಲಾ ನಿನ್ನಡಿ ನನಗೆ ಶ್ರೀ ಗುರುವೇ!
ಗುಡಿ ನಿನಗೀ ಶರೀರವಾಗಲಿ ದತ್ತ ಗುರುವೇ! (ಅ)
-ರುಹಲೇನಾನಿನ್ನು ಸರ್ವಶಕ್ತಾಂತರ್ಯಾಮಿ ಗುರುವೇ?
ವೇದವೇದಾಂತ ಸಾರ ನಿರಂಜನಾದಿತ್ಯ ಗುರುವೇ!!!

ಬಾಗಿಲಿಗೆ ಬಂದ ರಂಗನಾಥ! [ಕೂ]   3(1060)

-ಗಿದರೂ ಬಾರದ ರಂಗನಾಥ! (ಒ)
-ಲಿದರುರು ಭಾಗ್ಯ ರಂಗನಾಥ! (ಬೇ)
-ಗೆದ್ದು ಸ್ವಾಗತಿಸು ರಂಗನಾಥ!
ಬಂಧ ಬಿಡಿಸುವ ರಂಗನಾಥ!
ತ್ತ ರೂಪನವ ರಂಗನಾಥ! (ಶ್ರೀ)
-ರಂಗ ಪುರವಾಸ ರಂಗನಾಥ!
ರುಡ ಗಮನ ರಂಗನಾಥ! (ಅ)
-ನಾದಿ ಮಧ್ಯಾಂತ ಶ್ರೀರಂಗನಾಥ! (ನಾ)
-ಥ, ನಿರಂಜನಾದಿತ್ಯ ಶ್ರೀನಾಥ!!!

ಬಾಗಿಲು ಕಾಯುತಿದೆ ಕರಿ ನಾಯಿ! (ರೇ)   3(1032)

-ಗಿದರೂ ಪ್ರೀತಿ ತೋರವುದಾ ನಾಯಿ! (ಕಾ)
-ಲು ಕೈ, ನೆಕ್ಕಿ ಕುಣಿಯುವುದಾ ನಾಯಿ!
ಕಾಡಿ ಕದ್ದು, ತಿನ್ನುವುದಿಲ್ಲಾ ನಾಯಿ!
ಯುಕ್ತ ವೇಳೆಗೆ ಬರುವುದಾ ನಾಯಿ!
ತಿನಿಸಿದ್ದು ತಿಂದಿರುವುದಾ ನಾಯಿ! (ಇ)
-ದೆಲ್ಲರ ಪ್ರೀತಿ ಪಾತ್ರವಾದಾ ನಾಯಿ!
ಷ್ಟಕ್ಕಂಜಿ ಕರ್ಮ ಬಿಡದಾ ನಾಯಿ! (ವೈ)
-ರಿಯನ್ನೊಳಗೆ ಸೇರಿಸದಾ ನಾಯಿ!
ನಾಗರಾಜ ಸ್ವಾಮಿ ಪ್ರೇಮಿಯಾ ನಾಯಿ! (ನಾ)
-ಯಿ, ನಿರಂಜನಾದಿತ್ಯನುಯಾಯಿ!!!

ಬಾಗಿಲು ತೆಗೆದೊಳಗೆ ಬಾ! [ಭಾ]   3(1387)

-ಗಿ ಯಾಗೆನ್ನಾನಂದದಲ್ಲಿ ಬಾ! (ಕಾ)
-ಲು, ಕೈಗಳನ್ನುತೊಳೆದು ಬಾ!
ತೆಗೆದಿಟ್ಟೊಡವೆಗಳ ಬಾ!
ಗೆಳೆಯರನ್ನೆಲ್ಲಾ ಬಿಟ್ಟು ಬಾ! (ಬಂ)
-ದೊಮ್ಮೆ ಒಡಗೂಡಿ ನೋಡು ಬಾ! (ಕಾ)
-ಳಗದ ಭಯವಿಲ್ಲಿಲ್ಲ ಬಾ! (ಹ)
-ಗೆಗಳಿಗೆಡೆಯಿಲ್ಲಿಲ್ಲ ಬಾ!
ಬಾ, ನಿರಂಜನಾದಿತ್ಯಾಗು ಬಾ!!!

ಬಾಗಿಲು ಹಾಕಿರುವರಲ್ಲಾ! (ತೆ)   4(1623)

-ಗಿಸುವುಪಾಯ ಕಾಣೆನಲ್ಲಾ! (ಕು)
-ಲುಕುಲು ನಕ್ಕರಾಗ್ವುದಿಲ್ಲಾ!
ಹಾಡಿದರೆ ಪರವಾಯಿಲ್ಲಾ!
ಕಿರಿಕಿರಿ ಮಾಡದಿರ್ಯೆಲ್ಲಾ! (ಗು)
-ರು ಭಜನೆ ಮಾಡೋಣ ಎಲ್ಲಾ! (ಅ)
-ವರಿವರ ಮಾತು ಬೇಕಿಲ್ಲಾ!
ಜಾ ದಿನ ಹರಟೆಗಲ್ಲಾ! (ಗು)
-ಲ್ಲಾ ನಿರಂಜನಾದಿತ್ಯನೊಲ್ಲಾ!!!

ಬಾಗಿಲ್ತೆರೆದು ಭಾರ್ಗವ ಬಂದ! (ಯೋ)   4(2232)

-ಗಿರಾಜ ನೀನಾಗಿರುವೆಯೆಂದೆ! (ಕಾ)
-ಲ್ತೆಗೆಯಬೇಡಿರ್ಸಿದಲ್ಲಿಂದೆಂದ! (ಧ)
-ರೆಗಾನಂದ ನಿನ್ನಿಂದಾಗ್ವುದೆಂದ!
ದುಮ್ಮಾನ ಪಡಬಾರದೀಗೆಂದ!
ಭಾರ್ಗವನ ಮಾತ್ಸುಳ್ಳಾಗದೆಂದ! (ಸ್ವ)
ರ್ಗ, ಮರ್ತ, ಪಾತಾಳಾಧಿಪಾನೆಂದ!
ರ ಗುರುರೂಪ ನಿನ್ನದೆಂದ!
ಬಂದೆನೀಗ ನಿನ್ನ ನೋಡಲ್ಕೆಂದ!
ತ್ತ ನಿರಂಜನಾದಿತ್ಯಾನಂದ!!!

ಬಾಗುವೆನು ಬಾಗಿಲು ತೆಗೆದವನಡಿಗಳಿಗೆ ಭಾವ ಭಕ್ತಿಯಿಂದ!   1(21)

ಗಿರಿಧಾರಿ ಒಳಗೆ ಕುಳಿತಿಹನು ಗಂಭೀರ ಮ

ನ ಮುದ್ರೆಯಿಂದ!
ಲುಬ್ಧತನವೇನಿವಗೆ ಅನುಗ್ರಹ ಮಾಡಲಿಕೆ, ನಾ ಬಯಸುವಾನಂದ!
ತೆಗೆದಿರಿಸಿ ನಿನ್ನ ಬಟ್ಟೆ, ಬರೆಗಳನೆಲ್ಲ ಬಳಿಗೆ ಬಾ ಹೇಳುವುದ ಕೇಳೆಂದ!
ಗೆಜ್ಜೆ ಕಟ್ಟುವೆನು ಕಾಲ್ಗಳಿಗೆ ನಾಚಿಕೆ, ಸಂಕೋಚಗಳೆಲ್ಲ ಬಿಡಬೇಕೆಂದ!
ದಿಮಿದಿಮಿದಿಮಿಕೆಂದು ಕುಣಿದು ಭಜಿಸು ನೋಡುವೆನು ನಾನೆಂದ!
ದೆಸೆದೆಸೆಯಲೂ ತುಂಬಬೇಕೀ ನಾದಾನಂದ ಕೇಳುವೆನು ನಾನೆಂದ!
ಬಯಲಾಡಂಬರದ ಬೂಟಾಟಿಕೆಯ ಭಜನೆ ನಾಟ್ಯ ನಾನೊಲ್ಲೆನೆಂದ!
ರೆಪ್ಪೆಯಲುಗದೆನ್ನನೇ ನೋಡಿ, ಪಾಡಿ ಕುಣಿದರಾಗುವುದು ಪರಮಾನಂದ!
ಯಿನಿತಿರಲನವನ ಅವನೆನ್ನ ನೋದುತಿರಲಾಗಾದಾನಂದ ನಿತ್ಯನಿಜಾನಂದ!
ರಿವಾಜು, ರೀತಿ, ನೀತಿ ನಿನಗಿಲ್ಲೆಂದು ಕೂತಿದ್ದ ತಿರಿಗಿ ಮೌನ
ಮುದ್ರೆಯಿಂದ!!!

ಬಾಗ್ಲು ಹಾಕಿಕೊಳ್ತೀಯೇನಮ್ಮಾ? [ಹ]   4(2455)

-ಗ್ಲು ದರೋಡೆ ಹೆಚ್ಚಿಹೋಯ್ತಮ್ಮಾ!
ಹಾದಿ ಬೀದಿಯಲ್ಲೀ ಗೋಳಮ್ಮಾ!
ಕಿತ್ತಾಟ ನಮ್ಮಲ್ಲಿ ಬೇಡಮ್ಮಾ!
ಕೊಚ್ಚೆಗುಂಡಿಯಾಗ್ಬಾರ್ದೂರಮ್ಮಾ! (ಕೇ)
-ಳ್ತೀಯಾದ್ರೆ ಕೇಳೆನ್ನ ಮಾತಮ್ಮಾ! (ಛಾ)
-ಯೇಶ್ವರಗಿಂತಾಪ್ತರಾರಮ್ಮಾ? (ಮ)
-ನ ಮಾಡವನ ಸೇವೆಗಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯವ್ನಮ್ಮಾ!!!

ಬಾಡದಂತೆ ಗಿಡವ ನೋಡಿಕೋ! (ತೊ)   4(1879)

-ಡರುಗಳಾಗಾಗ ಬಿಡಿಸಿಕೋ!
ದಂಟಿಗಾಧಾರ ಕೋಲು ಕೊಟ್ಟುಕೋ! (ಮಾ)
-ತೆ ನೀನೆಂಬುದ ನೆನಪಿಟ್ಟುಕೋ!
ಗಿಡ, ಹೂ ಬಿಟ್ಟಾಗದ ಕಿತ್ತುಕೋ! (ಕಂ)
-ಡವರ ಪಾಲಾಗದಂತಿರ್ಸಿಕೋ!
ರ ಗುರುಪಾದಕ್ಕರ್ಪಿಸಿಕೋ!
ನೋಡಿ ನಿಜಾನಂದದಲ್ಲಿದ್ದು ಕೋ! (ಅ)
-ಡಿಗಡಿಗಾ ದೃಶ್ಯ ಸ್ಮರಿಸಿಕೋ! (ಅ)
-ಕೋ, ನಿರಂಜನಾದಿತ್ಯನಾಗಿಕೋ!!!

ಬಾಡಿಗೆ ಗಾಡಿ ಓಡದಿದ್ರೇನು ಗತಿ? (ತಿಂ)   6(3645)

-ಡಿ, ತೀರ್ಥಕ್ಕೆ ಗತಿಯಿಲ್ಲದಾಗ್ವ ಸ್ಥಿತಿ! (ಕಂ)
-ಗೆಡದೆದೆ ಕೊಡಬೇಕಾದಾಪತ್ಸ್ಥಿತಿ!
ಗಾಡಿ ದುರಸ್ತಿ ಮಾಡ್ದೆ ಇಲ್ಲನ್ಯ ಗತಿ! (ಪಂ)
-ಡಿತಾಚಾರಿಯ ಸೇವೆಯೇ ಈಗ ಗತಿ!
ಡಾಟ ಶುರುವಾದಾಗಿಲ್ಲ ದುಃಸ್ಥಿತಿ! (ಮೊಂ)
ತನ ಮಾಡಿದ್ರೆ ಕೆಡ್ವುದಾತ್ಮ ಸ್ಥಿತಿ!
ದಿವ್ಯ ಜ್ಞಾನದಿಂದುತ್ತಮ ಪರಿಸ್ಥಿತಿ! (ಉ)
-ದ್ರೇಕ ಮನಸ್ಸಿನಿಂದಕ್ಕು ಅಧೋಗತಿ! (ಅ)
-ನುಪಮ ಫಲಪ್ರದಾ ಶ್ರೀಪಾದ ಸ್ಥುತಿ!
ಗನ ಸದೃಶಾತ್ಮಾ ಶ್ರೀಪಾದ ಯತಿ! (ಗ)
-ತಿ ನಿರಂಜನಾದಿತ್ಯಾತ್ರಿ ಪುತ್ರ ಯತಿ!!!

ಬಾದಾಮಿ ಗೋಧಿ ಹಲ್ವ ನೈವೇದ್ಯ!   1(170)

ದಾಶರಥಿಗಾ ರುಚಿ ನೈವೇದ್ಯ!
ಮಿಶ್ರೇಕರಸಾ ಪ್ರಿಯ ನೈವೇದ್ಯ!
ಗೋವಿಂದನಿಷ್ಟಾ ಸಿಹಿ ನೈವೇದ್ಯ! (ಅ)
-ಧಿಕಾರಿಗಿದಾ ಸಿದ್ಧ ನೈವೇದ್ಯ!
ರಿ ಭಜನಾ ನಿಜ ನೈವೇದ್ಯ! (ಹ)
-ಲ್ವ, ಶಿವನಾಮಾ ತೃಪ್ತಿ ನೈವೇದ್ಯ!
ನೈಜಾನಂದದಾ ಸ್ಥಿತಿ ನೈವೇದ್ಯ!
ವೇದಾಂತಾನಂದಾ ಜ್ಞಾನ ನೈವೇದ್ಯ! (ಆ)
-ದ್ಯಂತ ನಿರ

ಜನಾದಿತ್ಯ ನೈವೇದ್ಯ!!!

ಬಾಬು ಇನ್ನೂ ಬಂದಿಲ್ಲವೇಕೆ?   3(1200)

ಬುದ್ಧಿವಂತಳಾ ಮನೆಯಾಕೆ!
ದ್ದದ್ದಿದ್ದಂತಾಡುವಳಾಕೆ! (ತ)
-ನ್ನೂರಿಗೆ ಹೋಗಲಿರ್ಪಳಾಕೆ!
ಬಂದಳೀಗವನೊಡನಾಕೆ! (ಹಾ)
-ದಿಯಲ್ಲಡ್ಡಿಯಾಯ್ತೆಂದಳಾಕೆ! (ನ)
-ಲ್ಲನ ನೆರಳಾನೆಂದಳಾಕೆ!
ವೇಷಾಡಂಬರವಿಲ್ಲದಾಕೆ! (ಆ)
ಕೆ ನಿರಂಜನಾದಿತ್ಯಾತ್ಮಾಕೆ!!!

ಬಾಯಿ ಇದ್ದ ಮಗ ಬದುಕ್ಯಾನು! (ತಾ)   4(1958)

-ಯಿ ಇಕ್ಕಿದ್ದುಂಡರಾರಾಮಾದಾನು!
ದದರಾಸೆಯಿಂದ ಬಿದ್ದಾನು! (ಇ)
-ದ್ದದ್ರಲ್ಲಿ ತೃಪ್ತಿಯಿದ್ದರೆದ್ದಾನು!
ದ, ಮತ್ಸರದಿಂದ ಬಿದ್ದಾನು!
ರ್ವರಹಿತನಾದರೆದ್ದಾನು!
ಲಹೀನನಾದರೆ ಬಿದ್ದಾನು!
ದುಸ್ಸಂಗ ದೂರನಾದರೆದ್ದಾನು! (ಐ)
-ಕ್ಯಾನಂದ ತಪ್ಪಿದರೆ ಬಿದ್ದಾನು! (ಭಾ)
-ನು ನಿರಂಜನಾದಿತ್ಯಾಗ್ಯೆದ್ದಾನು!!!

ಬಾಯಿ ಕೃಷ್ಣಾಬಾಯಿ!   2(624)

ಯಿದಾಪ್ತೇಷ್ಟ ಬಾಯಿ!
ಕೃಪಾ ತಾಯೀ ಬಾಯಿ! (ಕೃ)
-ಷ್ಣಾತ್ಮಾರಾಮಾ ಬಾಯಿ!
ಬಾಯಿ ರಾಧಾ ಬಾಯಿ!
ಯಿದಾನಂದಾ ಬಾಯಿ!
ನಿರಂಜನ ಬಾಯಿ!!!

ಬಾಯಿ ಬಡಾಯಿ ಮೃತ ಪ್ರಾಯಿ! [ತಾ]   3(1153)

-ಯಿ ಗೀತಾ ಅಷ್ಟಾದಶಾಧ್ಯಾಯಿ!
ಹು ಸುಖ ಸಂಪತ್ಪ್ರದಾಯಿ! (ಆಂ)
-ಡಾಳಮ್ಮಾ ಸತ್ಯಭಾಮಾ ತಾಯಿ!
ಯಿವಳ ನಾಮ ಚಿರಸ್ಥಾಯಿ!
ಮೃತ್ಯುಂಜಯಾತ್ಮಾ ಮೈತ್ರೇಯಿ (ದಾ)
-ತ, ನಾಥ, ಶ್ರೀ ನಾಗೇಂದ್ರ ಶಾಯಿ!
ಪ್ರಾಣಿಕೋಟಿ ಹೃದಯಾಶ್ರಯಿ! (ತಾ)
-ಯಿ ನಿರಂಜನಾದಿತ್ಯಾತ್ರೇಯಿ!!!

ಬಾಯಿ ಮುಚ್ಚಿ ನಾಯಿಯ ಹಾಗಿರು! (ತಾ)   6(3705)

-ಯಿ ಹಾಕಿದ್ದು ತಿಂದು ಮಲಗಿರು!
ಮುದಿಯಾಗ್ವ ವರೆಗೂ ಹಾಗಿರು! (ಕ)
-ಚ್ಚಿ ಯಾರಿಗೂ ನೋವು ಮಾಡದಿರು!
ನಾರುವ ಮೂಳೆ ಜಗಿಯದಿರು! (ಬಾ)
-ಯಿ ಬಿಟ್ಟು ಕಳ್ಳರನ್ನಟ್ಟುತ್ತಿರು!
ಜಮಾನಗಚ್ಚುಮೆಚ್ಚಾಗಿರು!
ಹಾರಿ ಗಾಯ ಮಾಡಿಕೊಳ್ಳದಿರು!
ಗಿಳಿ, ಕೋಳಿಗಳ ತಿನ್ನದಿರು! (ಗು)
-ರು ನಿರಂಜನಾದಿತ್ಯನೆಂದಿರು!!!

ಬಾಯಿ ಮುಚ್ಚು! ಹೃದಯ ಮೆಚ್ಚು! (ಕ್ಷ)   2(823)

-ಯಿಪುದದಲ್ಲ ; ಸ್ವಚ್ಛ! ಮೆಚ್ಚು!
ಮುಕ್ತಿಸ್ಥಾನ ಸರ್ಮೋಚ್ಛ! ಮೆಚ್ಚು! (ಹು)
-ಚ್ಚು ಮಾಯೆಯಲ್ಲಿ ತುಚ್ಛ! ಮೆಚ್ಚು!
ಹೃದಯಸ್ವಾಮಿಗಚ್ಚು! ಮೆಚ್ಚು!
ತ್ತನಿಚ್ಛೆಗದುಚ್ಚ ಮೆಚ್ಚು! (ಭ)
-ಯ, ಮಚ್ಛರಕೆ ಕಿಚ್ಚು! ಮೆಚ್ಚು!
ಮೆಚ್ಚು! ‘ಸಚ್ಚಿದಾನಂದ’ ಮೆಚ್ಚು! (ಹೆ)
-ಚ್ಚು ನಿರಂಜನಾದಿತ್ಯ! ಮೆಚ್ಚು!!!

ಬಾಯಿ ಮುಚ್ಚು, ಹೃದಯ ಮೆಚ್ಚು! (ತಾ)   2(822)

-ಯಿ! ತಂದೆಯಾದವನ ಮೆಚ್ಚು!
ಮುಕ್ತಿದಾತನವನ ಮೆಚ್ಚು! (ಪೆ)
-ಚ್ಚು! ನೀನವನಿಗಚ್ಚುಮೆಚ್ಚು!
ಹೃದಯೇಶ್ವರನಚ್ಚುಮೆಚ್ಚು!
ತ್ತನೆಂದವನನ್ನು ಮೆಚ್ಚು! (ಕಾ)
-ಯ ಮೋಹ ಬಿಟ್ಟವನ ಮೆಚ್ಚು!
ಮೆಚ್ಚು! ಸಚ್ಚಿದಾನಂದ ಮೆಚ್ಚು! (ಹೆ)
-ಚ್ಚು! ನಿರಂಜನಾದಿತ್ಯ ಮೆಚ್ಚು!!!

ಬಾಯಿಯಲ್ಲಿ ಮಗ, ಮಗ; ಹೊಟ್ಟೆಯಲ್ಲಿ ಧಗ, ಧಗ (ತಾ)   6(3805)

-ಯಿಯ ಸ್ವಭಾವ ಹೀಗಿದ್ದರೆ ಉಳಿವನೇನಾ ಮಗ!
ಮನಾದರೂ ಇಂಥಾ ಕಾರ್ಯವನ್ನೆಂದಿಗೂ ಎಸಗ! (ಬ)
-ಲ್ಲಿದರ್ಬೆಲ್ಲದಂತಾಡಿ ಕೊರಳ ಕೊಯ್ಯುವರೀ ಯುಗ!
ರೆಸಿ ಕೊಲುವವರಿಗೆ ತೋರಬಾರದು ಮೊಗ!
ಣರಾಜ್ಯದಲ್ಲಿರಬಾರದೆಂದೆಂದಿಗೂ ಈ ರೋಗ!
ಹಾದೇವನೇ ಕರುಣಿಸಬೇಕೆಲ್ಲರಿಗೂ ಯೋಗ!
ಗನ ಸದೃಶನಾದಾ ಗುರುವಿಗಿದೇ ಸುಯೋಗ!
ಹೊತ್ತು, ಹೆತ್ತು, ಸತ್ತುಹೋಗುವುದೆಂಬುದು ಕರ್ಮಭೋಗ! (ಕೆ)
-ಟ್ಟೆವಿದರಿಂದ ನಿನ್ನ ಮಕ್ಕಳಾದ ನಾವು ಶ್ರೀರಂಗ!
ಜ್ಞ, ಯಾಗಾದಿಗಳ ಮಾಡಲೀಗೆಲ್ಲಾ ಅಂಗ, ಭಂಗ! (ನಿ)
-ಲ್ಲಿಸಲೆಮ್ಮ ಮನ ತನ್ನಡಿಯಲ್ಲಿ ಗುರು ಸಾರಂಗ!
ರೆಯ ಉದ್ಧಾರವಾಗಬೇಕು ಅವನಿಂದ ಈಗ!
ತಿ ನೀನೇಯೆಂದು ಮೊರೆಯಿಡುವೆವು ಬಾ ನೀನ್ಬೇಗ!
ರ್ಮರಕ್ಷಣಾ ಸಾಮರ್ಥನಿನಗಿರುವುದೌ ಖಗ! (ಖ)
-ಗ ನಿರಂಜನಾದಿತ್ಯ ನೆಂಬುದರಿಯಲೀಗ ಜಗ!!!

ಬಾಯ್ಕೈ, ಕಣ್ಣು ಕಟ್ಟಿಕೊಂಡು ನಾನು ಬಂದೆ! (ತಾ)   5(2847)

-ಯ್ಕೈಯಿಂದ ಹಾಲನ್ನು ಕೆಲ ಕಾಲ ತಿಂದೆ!
ಳೆದನೇಕ ವರ್ಷ ಪ್ರಾಯಕ್ಕೆ ಬಂದೆ! (ಹ)
-ಣ್ಣು, ಹಂಪಲು ಆಹಾರವಾಗಲಿನ್ನೆಂದೆ!
ರುಣೆ ನಿನಗಿನ್ನೂ ಬಾರದೇಕೆಂದೆ! (ತೊ)
-ಟ್ಟಿದ್ದ ಬಟ್ಟೆಬರೆಯೂ ಬೇಡೆನಗೆಂದೆ!
ಕೊಂದು ಹಾಕಿದ್ದಾಯ್ತಾಸೆಗಳನ್ನೆಂದೆ! (ಕಾ)
-ಡು, ಗುಡ್ಡಗಳ ಸುತ್ತಾಡಿದ್ದು ಸಾಕೆಂದೆ!
ನಾಮಸ್ಮರಣೆಯೇ ಗತಿ ನನಗೆಂದೆ! (ತ)
-ನುಭಾವ ಮರೆತಾತ್ಮಾನಂದವಾಯ್ತೆಂದೆ!
ಬಂದಾಗ ತಂದದ್ದು ಹೋಗುವಾಗೇಕೆಂದೆ? (ಅಂ)
-ದೆ ನಿರಂಜನಾದಿತ್ಯ ನಾನಾದೆನೆಂದೆ!!!

ಬಾಯ್ಗಿಟ್ಟನ್ನ ತಾಯ್ಮುಖಕ್ಕುಗುಳಿತ್ಮಗು! (ತಾ)   6(3768)

-ಯ್ಗಿದ್ರಿಂದದ್ರಮೇಲೆ ಸಿಟ್ಟೇಕೆ ಬಂದೀತು? (ಕ)
-ಟ್ಟ ಕಡೆಗದು ತಿನ್ನಲೇಬೇಕಾದೀತು! (ತ)
-ನ್ನ ಹೊಟ್ಟೆ ತಾಯಿಗಾಗ ತಣ್ಣಗಾದೀತು!
ತಾಯಿಯ ದುಃಖ ಮಗುವೆಂತರಿತೀತು? (ತಾ)
-ಯ್ಮುನಿದ್ರೆ ಮಗುವೆಂತು ಬದುಕಿದ್ದೀತು!
ಗವಾಹ್ನನ ಕೃಪೆಯಿಂದೆಲ್ಲಾದೀತು! (ದಿ)
-ಕ್ಕು ಅವನೇ ಎಂಬನುಭವವಾದೀತು!
ಗುಣ ಸಾಗರಾತನೆಂದರಿವಾದೀತು! (ಬಾ)
-ಳಿನ ಸಾರ್ಥಕತೆಗೆ ದಾರಿಯಾದೀತು! (ಆ)
-ತ್ಮ ಚಿಂತನೆಗಾಗ ಪ್ರಾರಂಭವಾದೀತು!
ಗುರು ನಿರಂಜನಾದಿತ್ಯ ತಾನಾದೀತು!!!

ಬಾಯ್ಗಿಟ್ರುಣ್ಣುವ ಭಾಗ್ಯ ಬೇಕಲ್ಲಾ! (ನಾ)   6(3315)

-ಯ್ಗಿರುವ ಬುದ್ಧಿ ಕಚ್ಚುವುದಲ್ಲಾ! (ಉ)
-ಟ್ರುಡಿಗೆ ಬಿಚ್ಚ್ಲೇಬೇಕೊಮ್ಮೆ ಎಲ್ಲಾ! (ಹೆ)
-ಣ್ಣು ಚೆನ್ನಾಗಿದ್ರೂ ಕಣ್ಣಿಲ್ಲವಲ್ಲಾ!
ಧ್ವೊಪ್ಪಿದ್ರೂ ವರನೊಪ್ಬೇಕಲ್ಲಾ!
ಭಾಗ್ಯವೆಂದ್ರೆ ಗುರುಚಿತ್ತವೆಲ್ಲಾ! (ಯೋ)
-ಗ್ಯ ಮಗನಿಗವನಾಸ್ತಿಯೆಲ್ಲಾ!
ಬೇಜಾರಿಲ್ಲದೇ ಸೇವೆ ಮಾಡೆಲ್ಲಾ!
ರಣಾಳುವೆಂಬರವ್ನನ್ನೆಲ್ಲಾ (ಎ)
-ಲ್ಲಾ ನಿರಂಜನಾದಿತ್ಯ ತಾನೆಲ್ಲಾ!!!

ಬಾಯ್ನೀರು ಸುರಿಸಿದ್ರೆ ಹಾಲ್ಬ ಸಿಕ್ಕೀತೆ? (ತಾ)   6(4021)

-ಯ್ನೀನನುಗ್ರಹಿಸಿದರೆಲ್ಲಾ ಸಿಕ್ಕೀತು! (ಕ)
-ರುಣೆ ನಿನ್ನದಿಲ್ಲದಿದ್ದರೇನಾದೀತು?
ಸುಡುಗಾಡನ್ನೀಗ್ಲೇ ಸೇರಬೇಕಾದೀತು! (ಉ)
-ರಿದು ಬರೀ ಬೂದಿಯಾಗಬೇಕಾದೀತು!
ಸಿಕ್ಕಿದೆಡೆಗೆ ಹಾರಿಹೊಗ್ಬೇಕಾದೀತು! (ಭ)
-ದ್ರೆ ಸಾವಿತ್ರಿಯೊಲಿದ್ರಾನಂದವಾದೀತು!
ಹಾಹಾಕಾರವೆಲ್ಲಾ ಅಡಗಿಹೋದೀತು! (ಹಾ)
-ಲ್ಬ ಇದ್ದಲ್ಲಿಗೇ ಬಂದು ಬಾಯ್ಗೆ ಬಿದ್ದೀತು!
ಸಿಹಿ ಸವಿದು ಬ್ರಹ್ಮಾನಂದವಾದೀತು! (ಉ)
-ಕ್ಕಿತದಂಕ್ಕಿಳಿದ ಕೆನೆ ಹಾಲಾದೀತು! (ಮಾ)
-ತೇ! ನಿರಂಜನಾದಿತ್ಯ ನೀನೆಂದ್ರಾದೀತು!!!

ಬಾರೋ ರಾಜಾ, ನಾಗರಾಜಾ! (ತೋ)   5(2805)

-ರೋನಿನ್ನಾಟ ಸುಖ ರಾಜಾ!
ರಾಮ, ಕೃಷ್ಣ ರೂಪ ರಾಜಾ!
ಜಾತ್ಯಾತೀತ ದತ್ತ ರಾಜಾ!
ನಾದಾನಂದ ನೀಡೋ ರಾಜಾ!
ಜಾನನನುಜ ರಾಜಾ!
ರಾಜಯೋಗಿ ಗುರುರಾಜಾ! (ರಾ)
ಜಾ ನಿರಂಜನಾದಿತ್ಯಜಾ!!!

ಬಾಲ ಗಣಪತಿಯೆಂಬ ಭಟ್ಟ! (ನಿ)   5(2714)

-ಲಯಲದಲ್ಲಿಂದು ದರ್ಶನ ಕೊಟ್ಟ!
ರ್ವ ಬಿಟ್ಟು ರಚನೆ ಮುಂದಿಟ್ಟ!
(ಹ)ಣದಾಸೆ ನನಗೇನಿಲ್ಲೆಂದ್ಬಿಟ್ಟ!
ದ್ಮಪಾದಕ್ಕೆಲ್ಲಾ ಒಪ್ಪಿಸ್ಬಿಟ್ಟ! (ಯ)
-ತಿರಾಜ ನೀನೆಂದಾನಂದ ಪಟ್ಟ! (ಕಾ)
-ಯೆಂದಾಂತರಿಕವಾಗಿ ಹೇಳ್ಬಿಟ್ಟ!
ರುವೆನು ಕರೆದಾಗೆಂದ್ಬಿಟ್ಟ!
ಯ ಭಕ್ತಿ ಕರುಣಿಸೆಂದ್ಬಿಟ್ಟ! (ಸು)
-ಟ್ಟ ನಿರಂಜನಾದಿತ್ಯ ಬಿಕ್ಕಟ್ಟ!!!

ಬಾಲ ಬಂದಾ ಗೋಪಾಲ ಬಂದಾ!   4(1588)

ಕ್ಷ್ಮೀರಮಣಾನೆಂದು ಬಂದಾ!
ಬಂಧಿಪರಾರೆನ್ನೆಂದು ಬಂದಾ!
ದಾಸರ ದಾಸಾನೆಂದು ಬಂದಾ!
ಗೋಪಿಕಾನಂದಾನೆಂದು ಬಂದಾ!
ಪಾಪ ವಿದೂರಾನೆಂದು ಬಂದಾ!
ಕ್ಷ್ಯವೆಲ್ಲಕ್ಕಾನೆಂದು ಬಂದಾ!
ಬಂಧು, ಭಾಂಧವಾನೆಂದು ಬಂದಾ!
ದಾತ, ನಿರಂಜನಾದಿತ್ಯೆಂದಾ!!!

ಬಾಲಕಾ! ಭೂಮಾಲಿಕಾ ವ್ಯಾಪಕ! (ಹೊ)   3(1061)

-ಲ, ಮನೆ, ಮಠಕ್ಕೆಲ್ಲಾ ಮಾಲಿಕ!
ಕಾಯಕಾ, ಸಹಾಯಕಾ, ವ್ಯಾಪಕ!
ಭೂತ, ಭವಿಷ್ಯಕ್ಕೆಲ್ಲಾ ಮಾಲಿಕ!
ಮಾಡುವನೇನನ್ಯಾಯಾ ವ್ಯಾಪಕ? (ಬ)
-ಲಿಯ ತುಳಿದಾಳಿದಾ ಮಾಲಿಕ!
ಕಾಪಾಡುವವನಾತಾ ವ್ಯಾಪಕ!
ವ್ಯಾಮೋಹ ದೂರದರ್ಶಾ ಮಾಲಿಕ!
ರಹಿತ ಚಿಂತಕಾ ವ್ಯಾಪಕ! (ಏ)
-ಕ, ನಿರಂಜನಾದಿತ್ಯಾ ಮಾಲಿಕ!!!

ಬಾಲಕೃಷ್ಣ ಬಂದಂತಿದೆ! (ಕಾ)   4(1726)

-ಲಲ್ಲಂದುಗೆ ಗೆಜ್ಗೆಯಿದೆ!
ಕೃಷ್ಣವರ್ಣ ಕಾಣುತಿದೆ! (ಪೂ)
-ಷ್ಣಸಮಾನ ತೇಜಸ್ಸಿದೆ!
ಬಂಗಾರದುಡ್ಗೆಜ್ಜೆಯಿದೆ! (ಹಿಂ)
-ದಂಗೆನೆಯರ ಗುಂಪಿದೆ! (ಪ್ರೀ)
-ತಿಯಿಂದಪ್ಪಿಕೊಂಡಂತಿದೆ! (ಆ)
-ದೆ ನಿರಂಜನಾದಿತ್ಯಂದೆ!!!

ಬಾಲಗಣಪತಿ ಶಿವಗಚ್ಚುಮೆಚ್ಚು! (ಅ)   4(2263)

-ಲಕ್ಷ್ಯ ಮಾಡಿದವರಿಗವ ಕಾಳ್ಗಿಚ್ಚು!
ಣಗಳಿಗವನಲ್ಲಿ ಪ್ರೀತಿ ಹೆಚ್ಚು! (ತೃ)
-ಣಸಮಾನವನಿಗೈಹಿಕದ ಹುಚ್ಚು!
ರಮಾರ್ಥಿಗಿರಬೇಕಾ ರೂಪದಚ್ಚು!
ತಿಳಿದು ನೀನವನಹಂಕಾರ ಕೊಚ್ಚು!
ಶಿವ ಸಾಯುಜ್ಯವವನಂತೆ ನೀ ನೆಚ್ಚು! (ಶಿ)
-ವ ಸನ್ನಿಧಿಯಲ್ಲತರಂಗವ ಬಿಚ್ಚು!
ರ್ವವನ್ನವನ ಶೂಲದಿಂದ ಚುಚ್ಚು! (ಮು)
-ಚ್ಚು, ಮರೆ ಬಿಟ್ಟು ಸೇವೆಗೆ ನಿನ್ನ ಹಚ್ಚು! (ಉ)
-ಮೆಯರಸನಿಂದ ಪಾಪವೆಲ್ಲಾ ನುಚ್ಚು! (ಮೆ)
-ಚ್ಚು ನಿರಂಜನಾದಿತ್ಯವನೆಂದು ಹೆಚ್ಚು!!!

ಬಾಲಾ ಸರಸ್ವತಿ ಸದಾ ಸೌಖ್ಯಾ!   6(3919)

ಲಾಭಾಲಾಭ ಸಂತುಷ್ಟೆ ಆ ಸೌಖ್ಯಾ!
ಚ್ಚಿದಾನಂದ ಸ್ವರೂಪೀ ಸೌಖ್ಯಾ!
ಮ್ಯ, ಮನೋಹರ ಮೂರ್ತೀ ಸೌಖ್ಯಾ!
ಸ್ವಯಂ ಪ್ರಕಾಶ ಸುಂದರೀ ಸೌಖ್ಯಾ! (ಶೃ)
-ತಿ, ಸ್ಮೃತಿಗಳಿಗಾಧರಾ ಸೌಖ್ಯಾ!
ರಸ ಸಂಗೀತ ಸಾರಾ ಸೌಖ್ಯಾ!
ದಾಸರ ದಾಸೀ ಗಿರ್ವಾಣೀ ಸೌಖ್ಯಾ!
“ಸೌ” ಬೀಜಾಕ್ಷರಾರ್ಥಾಕಾರೀ ಸೌಖ್ಯಾ! (ಸೌ)
-ಖ್ಯಾ, ನಿರಂಜನಾದಿತ್ಯಾತ್ಮ ಸಖ್ಯಾ!!!

ಬಾಲಾದಿತ್ಯನಿಂದ ಪ್ರಥಮ ಸ್ವಾಗತ!   1(74)

ಲಾಘವ, ಲಾಂಛನ ಹಚ್ಚಿದನು ದತ್ತ!
ದಿಗ್ಭ್ರಮೆಯಾಯಿತು ಮನಸು ಅತ್ತಿತ್ತ!
ತ್ಯಜಿಸು ಕುಟೀರವೆಂದಾಜ್ಙೆಯನಿತ್ತ!
ನಿಂತಂತೆ ಹೊರಡಲನುಖೂಲವಿತ್ತ!
ಶದಿಯಿಂದ ಮಳೆ ಸುರಿಸುತ್ತ!
ಪ್ರಯಾಣ ಬೆಳೆಯಿತು ಬೆಂಗಳೂರತ್ತ!
ರಥರಿಸಿತು ವಾಹನ ಜಾರುತ್ತ!
ತ್ತೆ ಗಾಡಿ ತಿರುಗಿತು ಮದ್ಸಾಸತ್ತ!
ಸ್ವಾಗತವಿತ್ತ ರವಿ ತಕ್ಕೋಲದತ್ತ!
ಭಸಿಯ ದರ್ಶನವಂದು ಪ್ರಶಸ್ಥ!
ನಯ ನಿರಂಜನನಿಲ್ಲಿರೆನುತ್ತ!!!

ಬಾಳ ಬಲ್ಲವಗೆ ಮಗಳ ಕೊಡು! (ಆ)   3(1191)

-ಳ ಬಲ್ಲರಸನಿಗೆ ಕಪ್ಪ ಕೊಡು!
ಡಬಗ್ಗರಿಗನ್ನ, ವಸ್ತ್ರ ಕೊಡು! (ಬ)
-ಲ್ಲ ಆತ್ಮ ಜ್ಞಾನಿಗೆ ಗೌರವ ಕೊಡು!
ರ ಗುರುವಿಗೆಲ್ಲವನ್ನೂ ಕೊಡು!
ಗೆಳೆಯನಿಗಾಶ್ರಯವನ್ನು ಕೊಡು!
ಡದಿಗಾತ್ಮ ಶಾಂತಿಯನ್ನು ಕೊಡು!
ರ್ವಕ್ಕೆ ತಿಲೋದಕವನ್ನು ಕೊಡು! (ಕ)
-ಳವಳಕ್ಕಾತ್ಮ ಸ್ಪೂರ್ತಿಯನ್ನು ಕೊಡು!
ಕೊಡುಗೈಯ್ಯಯ್ಯನಿಗೆ ಹೊನ್ನು ಕೊಡು (ಕೊ)
-ಡು ನಿರಂಜನಾದಿತ್ಯಗರ್ಘಕೊಡು!!!

ಬಾಳಿ ಬಡವಾಗುವುದದೆಂತು? (ಆ)   3(1123)

-ಳಿದೂರಲ್ಲಾಳಾಗುವುದದೆಂತು?
ಲ್ಲವ ಸೊಲ್ಲಿಲ್ಲದಿರ್ಪುದೆಂತು? (ನಾ)
-ಡ ಗೌಡ ಮೂಢ ತಾನಾದರೆಂತು?
ವಾರಿಜಾರ್ಕನಗಲಿರ್ಪುದೆಂತು?
ಗುರುದ್ರೋಹಿಯಾದರಿರ್ಪುದೆಂತು? (ಮಾ)
-ವು ಬೇವನಿತ್ತರುಣ್ಣುವುದೆಂತು?
ತ್ತ ಚಿತ್ತಕ್ಕಿದಿರಾಡ್ವುದೆಂತು?
ದೆಂಟಿಲ್ಲದೆಲೆಯಿರುವುದೆಂತು? (ಕಂ)
-ತು ನಿರಂಜನಾದಿತ್ಯಾತ್ಮನೆಂತು???

ಬಾಳಿಗಿರಬೇಕೊಂದು ಶಿಸ್ತು! (ಆ)   6(3830)

-ಳಿಗದ್ರಂತಿರ್ಬೇಕೊಂದು ದುಸ್ತು! (ಹೀ)
-ಗಿರದಿದ್ದ್ರಿರದ್ಬಂದೋಬಸ್ತು! (ಈ)
-ರಹಸ್ಯ ತಿಳಿಯದೆ ಸುಸ್ತು!
ಬೇಕುಗಳ್ಹೆಚ್ಚಾಗಿ ಅಶಿಸ್ತು!
ಕೊಂಡ್ಕೊಂಬರೆಲ್ಲರೂ ಹೊಸ್ಹೊಸ್ತು!
ದುಡ್ಡಿಲ್ಲದಿರ್ಪ ರೋಗ ಕಸ್ತು!
ಶಿರ ತರಿವವ್ರದ್ದೇ ಗಸ್ತು! (ಅ)
-ಸ್ತು, ನಿರಂಜನಾದಿತ್ಯ ಶಿಸ್ತು!!!

ಬಾಳಿನಗೊತ್ತು, ಗುರಿಯಿಲ್ಲದವ ನಿರುದ್ಯೋಗಿ!   6(3340)

(ಅ)-ಳಿದು ಹೋಗುವುದವನ ಶರೀರ ವ್ಯರ್ಥವಾಗಿ!
ಯನಾದಿಂದ್ರಿಯಗಳನ್ನಾಳಬಲ್ಲವ ಯೋಗಿ!
ಗೊಡ್ಡೆಮ್ಮೆಗೆಷ್ಟು ಮೇವಿಟ್ರೂ ಆಗದದುಪಯೋಗಿ!
(ಅ)-ತ್ತು ಕರೆದೇನುಮಾಡಿದ್ರೂ ಅದು ನಿರುಪಯೋಗಿ!
ಗುರುಚಿತ್ತಕ್ಕೆ ಬಂದರೆ ಅದು ನಿತ್ಯೋಪಯೋಗಿ!
(ಅ)-ರಿತಿದನು ಮಾಡ್ಬೇಕವನ ಸೇವೆ ನಿರುದ್ಯೊಗಿ!
(ತಾ)-ಯಿಯಂತೆತ್ತಿಕೊಂಬನಾಮಗನ ಸುಪ್ರೀತನಾಗಿ!
(ತ)-ಲ್ಲಣಗೊಳ್ಳದೇ ಇಟ್ಟಲ್ಲಿರ್ಬೇಕ್ಬೆಕ್ಕಿನ ಕೂಸಾಗಿ!
ಯೆಯವನಮೇಲೆ ಬೀರುವನಪಾರವಾಗಿ!
ರದರಾಜ ವರವೀವ ತನ್ನಿಚ್ಛೆಯಂತಾಗಿ!
ನಿಶ್ಚಲ ಭಕ್ತಿಯಿರ್ಬೇಕ್ನಿನ್ನಲ್ಲಿ ಅವನಿಗಾಗಿ!
(ಗು)-ರು ರೂಪದಿಂದವನಿರುವ ದತ್ತಾತ್ರೇಯನಾಗಿ!
(ಉ)-ದ್ಯೋಗ ಅವನ ಸೇವೆಯಂದರಿತು ಮಾಡಲಾಗಿ!
(ತ್ಯಾ)-ಗಿ ನಿರಂಜನಾದಿತ್ಯಾನುಗ್ರಹವಕ್ಕು ತಾನಾಗಿ!!!

ಬಾಳು ಘಟನಾವಳಿಯದೊಂದು ಮಾಲೆ! (ಹೇ)   6(4392)

-ಳುವುದ ಕೇಳಿ ಕೆಡಿಸ್ಬಾರದು ತಲೆ!
ನವಾಗಿರಬೇಕು ಬುದ್ಧಿಯ ನೆಲೆ! (ನ)
-ಟ, ವಿಟರ ಸಂಗದಿಂದತ್ಯಲ್ಪ ಬೆಲೆ!
ನಾನು, ನೀನೆನ್ನುತ್ತಲಾಗುತಿದೆ ಕೊಲೆ!
ಶೀಕರಣವೆನ್ನುವುದೊಂದು ಕಲೆ! (ತು)
-ಳಿಯಲೆತ್ನಿಸುವರಿದರಿಂದ ಜ್ವಾಲೆ!
ಮ, ನಿಯಮದೆದುರಿದು ಬೆತ್ತಲೆ!
ದೊಂಬರಾಟವಾಡುವಳನೀತಿ ಬಾಲೆ!
ದುಡಿಮೆಯಿಂತಾದರೆಂತವಳನ್ಕೂಲೆ?
ಮಾಧವನಿಗಾಗ್ಬೇಕ್ನಾವು ವನಮಾಲೆ! (ಮಾ)
-ಲೆ ನಿರಂಜನಾದಿತ್ಯನ ಭವ ಲೀಲೆ!!!

ಬಾಳು ಭಗವಂತನದೊಂದು ಲೀಲೆ! (ಆ)   6(4388)

-ಳುವುದೇಕೆ ಹಾಕಿದ ಮೇಲೆ ಮಾಲೆ?
ಜನಾನಂದದಲ್ಲಿರಬೇಕ್ತಲೆ!
ಣಿಕೆಯಾಗ್ಲಿಕ್ಕಲ್ಲ ನಾಟ್ಯಕಲೆ!
ವಂಚನೆಯಿಲ್ಲದವಳೇ ನಿರ್ಮಲೆ!
ನು, ಮನಕ್ಕಾವಾಸಾ ತಿರುಮಲೆ!
ಶ್ವರಕ್ಕಾಶಿಪವಳು ದುರ್ಬಲೆ!
ದೊಂಬಿ, ದರೋಡೆಗೆ ಹೇತು ಚಂಚಲೆ!
ದುಶ್ಯಾಸನನಿಗೆ ಮೃತ್ಯು ಪಾಂಚಾಲೆ!
ಲೀಲಾಕೃಷ್ಣನಿಂದವಳು ಸಬಲೆ! (ಬೆ)
-ಲೆ ನಿರಂಜನಾದಿತ್ಯಾನಂದಾದ್ಮೇಲೆ!!!

ಬಾಳುವವ ಹೇಳುತಲೆಯನಯ್ಯಾ! (ಹಾ)   1(422)

-ಳು ಹವ್ಯಾಸ ಅವನಿಗಾಗದಯ್ಯಾ!
ನಚರ ಮರುತಿಯಾದಂತಯ್ಯಾ!
ನವನ ಹಾರುತಲೀಗಿಲ್ಲಯ್ಯಾ!
ಹೇಳಿಯಾಗ ಬೇಕಾದುದೇನಿದಯ್ಯಾ! (ಅ)
-ಳುತನ್ಯ ವಿಚಾರದಿಂದಿರನಯ್ಯಾ!
ತ್ವ ಚಿಂತನೆಯೇ ಅವನಿಗಯ್ಯಾ! (ಅ)
-ಲೆದಾಟಕಿಂದ್ರಿಯಗಳೋಡವಯ್ಯಾ! (ಆ)
-ಯ ವ್ಯಯವನಿಗೆಲ್ಲಾ ರಾಮನಯ್ಯಾ!
ರ ನಾಡಿಯಾರಾಮಮಯವಯ್ಯಾ! (ಅ)
ಯ್ಯಾ! ಮಾರುತಿ ನಿರಂಜನಾದಿತ್ಯಯ್ಯಾ!!!

ಬಾಳೇ ಬರಹವಾಗಿರಬೇಕು! (ಕೂ)   6(3426)

-ಳೇ ದೇಹವೆಂದರಿತಿರಬೇಕು!
ಚ್ಚಲು ಕೊಚ್ಚೆ ತಿಂದ್ರೇನಾಗ್ಬೇಕು!
(ಊ)-ರ ಕೇರಿಯ ಹಂದಿ ತಾನಾಗ್ಬೇಕು!
ರಿ ನಾಮಾಮೃತ ಕುಡಿಯ್ಬೇಕು! (ಭ)
-ವಾಬ್ಧಿಯಲ್ಲಿ ಮುಳುಗದಿರ್ಬೇಕು! (ತ್ಯಾ)
-ಗಿಯಾಗಿ ಯೋಗೀಶ್ವರನಾಗ್ಬೇಕು!

ಬೇಕಿಲ್ಲದೂಟ ತಿನ್ನದಿರ್ಬೇಕು!
(ಬೇ)-ಕು ನಿರಂಜನಾದಿತ್ಯನೆನ್ಬೇಕು!!!

ಬಾಳೇಕಾಯ್ಬಾಳಕ ಬಹು ರುಚಿ! (ಹ)   4(2140)

-ಳೇ ವಾಸನೆಯ ಫಲವೀ ರುಚಿ!
ಕಾಲ, ಲೀಲೆಯಿಂದಾಯ್ತೆಲ್ಲಾ ರುಚಿ! (ಬಾ)
-ಯ್ಬಾಯ್ಬಿಡುತಿರುವುದೀಗಾ ರುಚಿ! (ಒ)
-ಳ, ಹೊರಗೆಲ್ಲಾ ವಿಷಯ ರುಚಿ!
ಷ್ಟಕ್ಕೀಡು ಮಾಡಿಹುದಾ ರುಚಿ!
ಹು ಜನ್ಮಕ್ಕೆ ಕಾರಣಾ ರುಚಿ!
ಹುಸಿಯ ನಿಜವೆಂಬುದಾ ರುಚಿ! (ಗು)
-ರು ಸ್ಮರಣೆ ಮರೆಸ್ವುದಾ ರುಚಿ! (ರು)
-ಚಿ, ನಿರಂಜನಾದಿತ್ಯತೀ ರುಚಿ!!!

ಬಾಹ್ಯಾಕಾಶದಲ್ಲಿ ಹಾರುತಿದೆ ವಿಮಾನ! (ಯಾ)   4(1993)

-ಹ್ಯಾಖಾನನಿಗಾಗ್ವುದಿದರಿಂದ ಪತನ!
ಕಾಲ ಪ್ರತಿಕೂಲಾದ್ರಿಂದಾಗದು ಸಂಧಾನ!
ತೃಭಾವದಿಂದುಳಿಯದು ಸಂವಿಧಾನ!
ಶಗ್ರೀವನ ಗತಿ ಯೋಚಿಸು ನಿಧಾನ! (ಎ)
-ಲ್ಲಿ ನೋಡಿದರಲ್ಲಿ ರಾಮಸೇನಾ ಪ್ರಧಾನ!
ಹಾಡುವವರೆಲ್ಲೆಲ್ಲೂ ರಾಮಕೃಷ್ಣ ಭಜನ! (ಕ)
-ರುಣೆ ತೋರದಿರನೆಂದಿಗೂ ನಿರಂಜನ! (ಪ)
-ತಿತ ಪಾವನನಾ ಭವಭಯ ಭಂಜನ! (ತಂ)
-ದೆ, ತಾಯಿ, ಬಂಧು, ಬಳಗಾ ರಘುನಂದನ!
ವಿಶ್ವ ಶಾಂತಿಗಾಗ್ಯಾಯಿತವನ ಜನನ!
ಮಾರಹರನಿಂದಾಯ್ತವನ ಗುಣಗಾನ!
ಮೋ ನಿರಂಜನಾದಿತ್ಯನಸೂಯಾನನ!!!

ಬಾಹ್ಯೇಚ್ಛೆಗಾಗುವುದಪಜಯ! (ಗು)   4(1436)

-ಹ್ಯೇಂದ್ರ್ಯ ಚಪಲ ಸದಾಪಜಯ! (ಇ)
-ಚ್ಛೆಯಚ್ಯುತಗಾದರೆ ವಿಜಯ! (ಗಂ)
-ಗಾಧರನನುಗ್ರಹಾ ವಿಜಯ!
ಗುರುಪಾದ ಸೇವೆಗಾ ವಿಜಯ! (ಸಾ)
-ವು, ನೋವು, ಭಯ ತಪ್ಪೀ ವಿಜಯ!
ತ್ತ ಭಜನೆ ನಿತ್ಯ ವಿಜಯ!
ರಮಾನಂದ ಪ್ರಾಪ್ತೀ ವಿಜಯ!
ಗನ್ಮಾತೆಗೆ ತೃಪ್ತೀ ವಿಜಯ! (ಪ್ರಿ)
-ಯ ನಿರಂಜನಾದಿತ್ಯ ವಿಜಯ!!!

ಬಿಟ್ಟರೂ ಬಿಡನಾ ಕೆಟ್ಟ ಕಾಮ! (ಸು)   4(2023)

-ಟ್ಟರೂ ಹುಟ್ಟಿಹನೆಲ್ಲೆಲ್ಲಾ ಕಾಮ!
ರೂಪ, ನಾಮಕ್ಕಂಟಿರುವಾ ಕಾಮ!
ಬಿಸಜಾಕ್ಷನಿಗಣುಗಾ ಕಾಮ! (ಮೃ)
-ಡನಿಂದಂದು ಸುಡಲ್ಪಟ್ಟಾ ಕಾಮ!
‘ನಾ’, ‘ನೀ’ ನಾಟಕದ ನಟಾ ಕಾಮ!
ಕೆರೆ, ಬಾವಿಗೂ ತಳ್ಳುವಾ ಕಾಮ! (ಹು)
-ಟ್ಟಡಗಿಸುವಾರಾಮ ನಿಷ್ಕಾಮ! (ಓಂ)
-ಕಾರಾತ್ಮಾರಾಮ ಪಾವನ ನಾಮ!
ಮ ನಿರಂಜನಾದಿತ್ಯಾ ರಾಮ!!!

ಬಿಟ್ಟರೂ ಬಿಡೆ ನಾ ನಿನ್ನ ಸಂಗ! (ಕೊ)   3(1232)

-ಟ್ಟವರಾರೆನಗೆ ನಿನ್ನ ಸಂಗ?
ರೂಪ ಮರೆಸಿ ನೀನಿತ್ತೆ ಸಂಗ!
ಬಿಸಿಯಾನಂದ ವಿತ್ತುದಾ ಸಂಗ! (ತ)
-ಡೆಯಿತನೇಕ ರೋಗವಾ ಸಂಗ!
‘ನಾ’, ‘ನೀ’ ನೆಂಬುದನಟ್ಟಿತಾ ಸಂಗ!
ನಿತ್ಯ ಸಾಗುತ್ತಿರುವುದಾ ಸಂಗ! (ಅ)
-ನ್ನ, ಪಾನ ಬೇಡೆನಿಪುದಾ ಸಂಗ!
ಸಂಬಂಧ ಬಲಿಸಿಹುದಾ ಸಂಗ! (ರಂ)
-ಗ ನಿರಂಜನಾದಿತ್ಯನಾ ಸಂಗ!!!

ಬಿಟ್ಟಿರುವುದು ನಿನ್ನನ್ನು ಕಷ್ಟ! (ಒ)   6(3638)

-ಟ್ಟಿಗಿರುವುದು ಮತ್ತಷ್ಟೂ ಕಷ್ಟ! (ಬ)
-ರುವುದು, ಹೋಗ್ವುದದೆಂಥಾ ಇಷ್ಟ? (ನಾ)
-ವು ತಪ್ಪಿಸ್ಲಾರೆವೀ ದುರದೃಷ್ಟ!
ದುಡಿಯಬೇಕೆಂಬುದೇನೋ ಸ್ಫಷ್ಟ!
ನಿನ್ನನ್ನು ದೂಡಿದ್ರೆ ನಾನು ಭ್ರಷ್ಟ! (ನ)
-ನ್ನನ್ನು ಕಾಡಿದರೆ ನೀನು ದುಷ್ಟ! (ಇ)
-ನ್ನು ಮೇಲಾದರೀಡೇರಲಭೀಷ್ಟ!
ರ ಮುಗಿದು ಬೇಡ್ವೆನಾಪ್ತೇಷ್ಟ! (ಸ್ಪ)
-ಷ್ಟ,ಶ್ರೀ ನಿರಂಜನಾದಿತ್ಯಾಪ್ತೇಷ್ಟ!!!

ಬಿಟ್ಟು ಹೋಗಿ ಕೆಟ್ಟು ಹೋದೆಯಲ್ಲಾ! (ನಿ)   4(1782)

-ಟ್ಟುಸಿರು ಬಿಡುವಂತಾಯಿತಲ್ಲಾ! (ಅ)
-ಹೋರಾತ್ರ್ಯಳುವ ಹಾಗಾಯಿತಲ್ಲಾ (ರಾ)
-ಗಿಯಾಗಿ ವೈರಾಗ್ಯ ತಪ್ಪಿತಲ್ಲಾ!
ಕೆಲಸ ವ್ಯಾಪಾರವಾಯಿತಲ್ಲಾ! (ಹು)
-ಟ್ಟು, ಸಾವಿನ ಮೂಟೆ ಹೊತ್ತೆಯಲ್ಲಾ!
ಹೋಟೆಲೂಟ ಹಿತವಾಯಿತಲ್ಲಾ! (ತಂ)
-ದೆ, ತಾಯಿಗನ್ಯಾಯವಾಯಿತಲ್ಲಾ! (ಕಾ)
-ಯವಳಿಯುವ ಕಾಲ ಬಂತಲ್ಲಾ! (ನ)
-ಲ್ಲಾ, ನಿರಂಜನಾದಿತ್ಯ ಸಾಯೋಲ್ಲಾ!!!

ಬಿಡಬೇಕೆರಡು ಕಣ್ಣ ನೀನು! [ಬಿ]   3(1091)

-ಡ ಬಾರದೆನ್ನ ಕರವ ನೀನು!
ಬೇರಾರಿಹರೆನಗೆಲ್ಲಾ ನೀನು!
ಕೆಸರಲದ್ದಬೇಡೆನ್ನ ನೀನು
ಕ್ಕಸಾಂತಕ ಶ್ರೀರಾಮ ನೀನು! (ಕೊ)
-ಡು ಅಭಯವೆನನೀಗ ನೀನು!
ಡೆಗಾಣಿಸೆನ್ನ ಕಷ್ಟ ನೀನು! (ಕ)
-ಣ್ಣ ತೆರೆದುದ್ಧರಿಸೆನ್ನ ನೀನು!
ನೀನೇ ನಾನಾಗಿ ಮಾಡೆನ್ನ ನೀನು! (ಹ)
-ನುಮ ನಿರಂಜನಾದಿತ್ಯ ನೀನು!!!

ಬಿಡು ಬಿಡಾ ಬಡವೆಯ ಗೊಡವೆ!   6(3419)

(ಕ)-ಡು ದುಃಖಿಯಾದಳೀಗವಳ್ವಿಧವೆ!
ಬಿಸಿಯಾದ ತಲೆಗೆಲ್ಲಾ ಮರವೆ!
(ಓ)-ಡಾಡ್ಲಿಕ್ಕೂ ಬಿಡರವಳಾ ಜನವೇ!
ದ್ಕುವುದೇ ಕಷ್ಟ ಅವರ್ನಡುವೆ!
(ಗಂ)-ಡ ಹೋದ ಮೇಲೇಕೆ ಚಿನ್ನದೊಡವೆ?
(ಸೇ)-ವೆ ಮೂರ್ಮಕ್ಕಳದ್ದು ಸಾಗ್ಬೇಕಲ್ಲವೇ?
(ಸಾ)-ಯದೇ ಉಳಿವವರಾರಿಲ್ಲಲ್ಲವೇ?
(ಈ)-ಗೊಪ್ಪತ್ತಿಗಾಗುವಷ್ಟಿದೆಯಲ್ಲವೇ?
ಮರು ಧರಗತಿ ನಿನ್ಗೆನ್ನುವೆ! (ಈ)
-ವೆ, ನಿರಂಜನಾದಿತ್ಯಾನಂದ ಶಿವೆ!!!

ಬಿಡುಗಡೆ ಯಾವಾಗಪ್ಪ? [ಕೆ]   2(786)

-ಡುಕು ಮೋಹ ಬಿಟ್ಟಾಗಪ್ಪ!
ರ್ವ ನಾಶವಾದಾಗಪ್ಪ! (ಬೀ)
-ಡೆನ್ನ ಗುಡಿಯಾದಾಗಪ್ಪ! (ಕಾ)
-ಯಾಭಿಮಾನ ಹೋದಾಗಪ್ಪ!
ವಾದ ಭೇದ ನಿಂತಾಗಪ್ಪ!
ತಿ ನೀನೆಂದತ್ತಾಗಪ್ಪ (ಅ)
-ಪ್ಪ ನಿರಂಜನಾದಿತ್ಯಪ್ಪ!!!

ಬಿಡುಗಡೆಗಾಗಿ ಈ ಜನ್ಮ! (ಪ)   6(4379)

-ಡುವುದೇಕನ್ಯಾಸೆ ಈ ಜನ್ಮ! (ಭೋ)
-ಗಕ್ಕಾಯ್ತು ಹಿಂದಿನೆಲ್ಲಾ ಜನ್ಮ! (ಕ)
-ಡೆಗಣಿಸಲದನ್ನೀ ಜನ್ಮ! (ಯೋ)
-ಗಾನಂದದಲ್ಲಿರಲೀ ಜನ್ಮ!
ಗಿರೀಶ ಪ್ರಸಾದ ಈ ಜನ್ಮ!
ಡೇರ್ಸಿಲ್ಲವನಿಷ್ಟಾ ಜನ್ಮ!
ಯ ಶ್ರೀಪಾದಕ್ಕೆನ್ಲೀ ಜನ್ಮ! (ಜ)
-ನ್ಮ ನಿರಂಜನಾದಿತ್ಯ ಜನ್ಮ!!!

ಬಿತ್ತಿದ್ದೆಲ್ಲಾ ಗಿಡಗಳಾಗಿಲ್ಲ! (ಕೆ)   4(1872)

-ತ್ತಿದ್ದೆಲ್ಲಾ ಪೂಜಾಮೂರ್ತಿಯಾಗಿಲ್ಲ! (ನಿ)
-ದ್ದೆಗೆಟ್ಟವ್ರೆಲ್ಲಾ ಸಿದ್ಧರಾಗಿಲ್ಲ! (ಉ)
-ಲ್ಲಾಸಿಗಳೆಲ್ಲಾ ಬಲ್ಲವ್ರಾಗಿಲ್ಲ!
ಗಿರಿಗೆಳೆಲ್ಲಾ ಕೈಲಾಸಾಗಿಲ್ಲ! (ಮೃ)
-ಡನ ಲೀಲೆ ತಿಳಿದವರಿಲ್ಲ! (ಯೋ)
-ಗವಿಲ್ಲದೇನೂ ಆಗುವುದಿಲ್ಲ! (ಗೋ)
-ಳಾಡಿ ಪ್ರಯೋಜನವೇನೂ ಇಲ್ಲ! (ಯೋ)
-ಗಿರಾಜನಿಷ್ಟದಂತಾಗುವುದೆಲ್ಲ! (ಬ)
-ಲ್ಲ ನಿರಂಜನಾದಿತ್ಯನ್ಯ ಸೊಲ್ಲ!!!

ಬಿತ್ತು ಬಿತ್ತಾದಾಗ ಹೆತ್ತವರ್ಸತ್ತರಯ್ಯಾ! (ಹೊ)   6(4196)

-ತ್ತು ಹೆತ್ತವರು ಶಿಶು ಬೆಳದಾಗಿಲ್ಲಯ್ಯಾ!
ಬಿತ್ತದ ಬೀಜಕ್ಕೆ ತಕ್ಕಂತೆ ಫಲವಯ್ಯಾ! (ಚಿ)
-ತ್ತಾಕರ್ಷಕ ಜೀವನಾಧಾರ ಬೀಜನಯ್ಯಾ! (ಉ)
-ದಾಸೀನ ಬೇಸಾಯದಲ್ಲಾದರೆ ಜೊಳ್ಳಯ್ಯಾ!
ದ್ದೆಯೂ ಸಾರ ಭರಿತವಾಗಿರ್ಬೇಕಯ್ಯಾ!
ಹೆಮ್ಮೆಯಿಂದಾವ ಸಾಧನೆಯೂ ಆಗದಯ್ಯಾ! (ಚಿ)
-ತ್ತ ಶುದ್ಧಿಯಿದ್ದರೆ ಕಾರ್ಯಸಿದ್ಧಿಪುದಯ್ಯಾ!
ರ್ಣ, ಲಿಂಗ ಭೇದ ಇದಕ್ಕೇನಿಲ್ಲವಯ್ಯಾ! (ಸೇ)
-ರ್ಸ ಬಾರದಯೋಗ್ಯರನ್ನು ಹತ್ತಿರಕ್ಕಯ್ಯಾ! (ಉ)
-ತ್ತಮ ಬಿತ್ತನೆಯಿಂದುತ್ತಮ ಫಸಲಯ್ಯಾ! (ಬೆ)
-ರಕೆ ಬೀಜದಿಂದ ಕಷ್ಟ, ನಷ್ಟ, ಭ್ರಷ್ತಯ್ಯಾ! (ಅ)
-ಯ್ಯಾ! ನಿರಂಅ

ನಾದಿತ್ಯನಂತಿರಬೇಕಯ್ಯಾ!!!

ಬಿತ್ತೊಂದು ಮಾಲೆ ಕತ್ತಿಗಿಂದು! (ಹ)   4(2079)

-ತ್ತೊಂಭತ್ತೆಪ್ಪತ್ತೊಂದಿಸ್ವಿಯಂದು! (ಇಂ)
-ದು ಆಷಾಢ ದ್ವಾದಶಿಯಂದು!
ಮಾಯಾನಂದಾತ್ಮಾನಂದಾದಂದು! (ಲೀ)
-ಲೆಯವನದದ್ಭುತವಂದು!
ರಾದಿಂದ್ರ್ಯಕ್ಕೆ ಸಾಕ್ಷ್ಯಾದಂದು! (ಹ)
-ತ್ತಿರ, ದೂರಗಳೊಂದಾದಂದು! (ಆ)
-ಗಿಂದಾಗಂತರ್ಮುಖವಾದಂದು! (ಇಂ)
-ದು, ನಿರಂಜನಾದಿತ್ಯಾದಂದು!!!

ಬಿದ್ದಾಗ ಎತ್ತು ಎನ್ನುವರು! (ಎ)   6(3807)

-ದ್ದಾಗ ಕತ್ತು ಹಿಸುಕುವರು! (ಜ)
-ಗತ್ತನ್ನಿಂತು ಕೆಡಿಸಿಹರು!
ಲ್ಲಕ್ಕೂ ಸಾಕ್ಷಿ ಆ ದೇವರು! (ಹೊ)
-ತ್ತು, ಹೆತ್ತು, ಸಲಹಿದವರು!
ಷ್ಟು ಕಷ್ಟ ಪಡುತಿಹರು? (ಅ)
-ನ್ನುವುದು ಯಾರಲ್ಲಿ ಈ ದೂರು?
ರ ಗುರುವೇ ಮಾಡ್ಬೇಕ್ಪಾರು! (ಸೇ)
-ರು, ನಿರಂಜನಾದಿತ್ಯಾ ಗುರು!!!

ಬಿದ್ದಿ, ಎದ್ದಿ, ಬಿದ್ದಿ, ಸದ್ಬುದ್ಧಿಯಾಗಿದ್ದೀ!   6(3554)

(ಮು)-ದ್ದಿನ ಮಗು ನೀನು ಈಗ ಆಗುತ್ತಿದ್ದೀ!
ಡವಿದರೂ ಎದೆಗೆಡದೆ ಎದ್ದೀ! (ಸ)
-ದ್ದಿಲ್ಲದೇ ನಿನ್ನ ದಾರಿ ನೀನು ಹಿಡ್ದಿದ್ದೀ!
ಬಿಕ್ಕಿ, ಬಿಕ್ಕಿ ಅಳ್ವುದನ್ನು ನಿಲ್ಲಿಸಿದ್ದೀ! (ಕ)
-ದ್ದಿಟ್ಟು ತಿನ್ನುವಭ್ಯಾಸ ಇಲ್ಲದೇ ಇದ್ದೀ!
ಜ್ಜನರ ಸಂಗದಲ್ಲೇ ಸದಾ ಇದ್ದೀ! (ಬು)
-ದ್ಬುದದಂತೀ ಸಂಸಾರವೆಂದರಿತಿದ್ದೀ! (ಸಿ)
-ದ್ಧಿ, ರಿದ್ಧಿಗಳಿಗಾಶಿಸದೆ ನೀನಿದ್ದೀ!
ಯಾವಾಗಲೂ ಆತ್ಮಧ್ಯಾನ ಮಡುತ್ತಿದ್ದೀ!
ಗಿರಿಜಾಧವನೇ ನೀನೆಂದು ನಂಬಿದ್ದೀ! (ಇ)
-ದ್ದೀ, ನಿರಂಜನಾದಿತ್ಯನಾಗಿದ್ದೀ!!!

ಬಿನ್ನಹ ಬರಲಿ! ಉನ್ನತಿಯಾಗಲಿ! (ಇ)   1(275)

-ನ್ನಸೂಯೆ ಸಾಯಲಿ! ಸನ್ನುತರಾಗಲಿ!
ರಣ ಹೋಗಲಿ! ಹರನ ಕಾಣಲಿ!
ರಡು ಬತ್ತಲಿ! ಹಸುರು ತೋರಲಿ!
ಜನಿಯೋಡಲಿ! ರವಿಯುದಯಿಸಲಿ! (ಇ)
-ಲಿಗಳಡಗಲಿ! ಬಿಲಗಳ್ಮುಚ್ಚಲಿ!
ದ್ರೇಕ ನಿಲ್ಲಲಿ! ಚಿದ್ರೂಪ ತಾಳಲಿ! (ಇ)
-ನ್ನಪವಾದಿಂಗಲಿ! ಶ್ರೀ ಪಾದ ತಂಗಲಿ!
ತಿಮಿರಳಿಯಲಿ! ತಿಳಿವುಂಟಾಗಲಿ!
ಯಾತ್ರೆಗಳ್ಲಿಲ್ಲಲಿ! ಜಾತ್ರೆಗಳಾಗಲಿ!
ರ್ವ ಹರಿಯಲಿ! ಗುರು ಕಾಣಿಸಲಿ!
ಲಿಪ್ತನಲ್ಲ ನಿರಂಜನಾದಿತ್ಯನಲಿ!!!

ಬಿರುಸಿನ ಬಾಣಗಳನ್ನು ನೀ ಬಿಟ್ಟೆ! (ಕ)   6(3707)

-ರುಣೆ ನಿನ್ನದೆಂದು ನಾನದ ತೊಟ್ಟೆ!
ಸಿಹಿ, ಕಹಿಯನುಭವ ನೀನು ಕೊಟ್ಟೆ!
ಶ್ವರದ ದೇಹಕ್ಕೆ ನಿನ್ನಿಷ್ಟ ಅಷ್ಟೇ?
ಬಾರಿಬಾರಿಗೂ ನಾನು ಮೊರೆಯನ್ನಿಟ್ಟೆ! (ತೃ)
-ಣ ಸಮಾನವೆಂದೆನ್ನ ನೀ ತಳ್ಳಿಬಿಟ್ಟೆ!
ಟ್ಟಿಯಾಗ್ನಿನ್ನ ಪಾದ ನಾನ್ಹಿಡಿದ್ಬಿಟ್ಟೆ! (ತ)
-ಳಮಳ ನನ್ನದರಿವು ಮಾಡಿಕೊಟ್ಟೆ! (ನ)
-ನ್ನುಬ್ಬಸ ಹೆಚ್ಚಾಗೀಗ ಸಾಯ್ಲಾಗಿಬಿಟ್ಟೆ!
ನೀನೇನ್ಮಾಡ್ತಿಯೋ ಮಾಡೆಂದ್ಕೊನೆಗಂದ್ಬಿಟ್ಟೆ!
ಬಿಸಿಯುಸಿರ ಕೊಂಚ ನೀನಿಳಿಸ್ಬಿಟ್ಟೆ! (ಬ)
-ಟ್ಟೆ ನಿರಂಜನಾದಿತ್ಯನದ್ದುಟ್ಟುಬಿಟ್ಟೆ!!!

ಬಿಲ್ವಫಲಪ್ರಸಾದದಿಂದಿಷ್ಟ ಸಿದ್ಧಿ! (ಹ)   4(1604)

-ಲ್ವ ವಿದರದೀವುದಾರೋಗ್ಯ ಸಿದ್ಧಿ!
ಲಕಾರೀ ಸೇವನೆಂಬುದು ಪ್ರಸಿದ್ಧಿ! (ಫಾ)
-ಲ ನೇತ್ರನ ಕೃಪೆಯಿಂದ ನಾನಾ ಸಿದ್ಧಿ!
ಪ್ರಮಥಗಣ ಸ್ಥಾನವಿದೀವ ಸಿದ್ಧಿ!
ಸಾಧನೆ ಶ್ರದ್ಧೆಯಿಂದಾದರೆಲ್ಲಾ ಸಿದ್ಧಿ!
ರ್ಪ, ದಂಭಗಳಿಂದ ವಿರೋಧ ಸಿದ್ಧಿ! (ಸ)
-ದಿಂಬೊದಗಲಿಕೆ ಬೇಕು ಜಪ ಸಿದ್ಧಿ!
ದಿಗಂಬರಾನುಗ್ರಹದಿಂದಾತ್ಮ ಸಿದ್ಧಿ! (ದು)
-ಷ್ಟ ನಿಗ್ರಹ ಕಾರ್ಯಕ್ಕೆ ಪ್ರಾಮುಖ್ಯಾ ಸಿದ್ಧಿ! (ನಿ)
-ಸಿ, ದಿನವನ ನೆನೆದರಾಗಾ ಸಿದ್ಧಿ! (ಸಿ)
-ದ್ಧಿ, ನಿರಂಜನಾದಿತ್ಯ ಸಾಯುಜ್ಯ ಸಿದ್ಧಿ!!!

ಬಿಸಿ ತಾಗದೆ ತುಪ್ಪಾಗದಪ್ಪಾ!   2(784)

ಸಿಲುಬಿ ಸಿಕ್ಕಿದೆ ಬೆಣ್ಣೆಯಪ್ಪಾ!
ತಾಸರ್ಧ ತಾಳ್ಮೆಯಿರಬೇಕಪ್ಪಾ!
ಗನಮಣಿ ಮೂಡಬೇಕಪ್ಪಾ! (ಅ)
-ದೆನಗೆ ಬೇಕಾದ ಶಾಖವಪ್ಪಾ!
ತುಪ್ಪವಾಗಿ ಉಣಿಸುವೆನಪ್ಪಾ! (ತ)
-ಪ್ಪಾಗಿದನು ತಿಳಿಯಬೇಡಪ್ಪಾ!
ತಿಯಿದು ಇಷ್ಟ ಸಿದ್ಧಿಗಪ್ಪಾ!
ತ್ತತುಪ್ಪ ಅಮೃತ ಕಾಣಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯಾತುಪ್ಪಪ್ಪಾ!!!

ಬಿಸಿ ಬೇಳೆ ಹುಳಿಯನ್ನ ದಾನ! (ಹ)   4(1678)

-ಸಿದವರಿಗುತ್ತಮಾನ್ನ ದಾನ!
ಬೇಸರವಿಲ್ಲದಾಗಲೀ ದಾನ! (ನಾ)
-ಳೆಯೆನ್ನದೆ ಆಗಲೀಗಾ ದಾನ!
ಹುಚ್ಚಾಟ, ಕಚ್ಚಾಟಕ್ಕಲ್ಲಾ ದಾನ! (ಬಾ)
-ಳಿನ ಜೀವಾಳವಿದೊಂದೇ ದಾನ!
ಜ್ಞಪುರುಷಗೆ ತೃಪ್ತೀ ದಾನ! (ಉ)
-ನ್ನತಾತ್ಮ ಸ್ಥಿತಿಗೆ ಬೇಕೀ ದಾನ!
ದಾರಿ ಗುರು ಸನ್ನಿಧಿಗೀ ದಾನ! (ದಾ)
-ನ ನಿರಂಜನಾದಿತ್ಯಾಮೃತಾನ್ನ!!!

ಬಿಸಿ ಮಜ್ಜಿಗೆ ರೊಟ್ಟಿಯೂಟ! (ಹ)   4(2395)

-ಸಿದ ಹೊಟ್ಟೆಗಿದೊಳ್ಳೆಯೂಟ!
ಲಬದ್ಧ ಮಾಡದೀ ಊಟ! (ಬೊ)
-ಜ್ಜಿಳಿಸಲಿಕ್ಕಿದುತ್ತಮೂಟ! (ಬ)
-ಗೆಬಗೆಯೂಟ ಬಹು ಕಾಟ!
ರೊಟ್ಟಿ ಜಿಡ್ಡಲ್ಲಿ ಬೆಂದ್ರೆ ಕಾಟ! (ಗ)
-ಟ್ಟಿ ಕೆಂಡದ ರೊಟ್ಯುತ್ತಮಮೂಟ! (ಸಾ)
-ಯೂಜ್ಯಕ್ಕೆ ಬೇಕು ಯೋಗದೂಟ! (ಊ)
-ಟ ನಿರಂಜನಾದಿತ್ಯ ನೋಟ!!!

ಬಿಸಿ ಹೆಚ್ಚಿದಾಗ ಬೇಕೊಂದು ತೈಲಾ ತಲೆಗೆ! (ಹ)   4(1697)

-ಸಿಯಾಮಲಾದಿಯಿಂದಾದಚ್ಚ ತೈಲಾ ತಲೆಗೆ!
ಹೆಚ್ಚು ಬಿಸಿ ಹೆಚ್ಚಿಸುವುದು ಹುಚ್ಚಾ ತಲೆಗೆ! (ಕಿ)
-ಚ್ಚಿಗಿಂತಲೂ ಹೆಚ್ಚು ಅಪಾಯಾ ಹುಚ್ಚಾ ತಲೆಗೆ!
ದಾಶರಥಿಯ ನಾಮಾಮಲ ತೈಲಾ ತಲೆಗೆ! (ಹ)
-ಗಲಿರುಳೆನ್ನದೆ ತಿಕ್ಕಬೇಕಿದಾ ತಲೆಗೆ!
ಬೇರಿನ್ನೇನಿದಕ್ಕಿಂತುತ್ತಮವಿಲ್ಲಾ ತಲೆಗೆ!
ಕೊಂಚವೂ ತೊಂದರೆ ಮಾಡದಿದು ಆ ತಲೆಗೆ!
ದುರ್ಬುದ್ಧಿ ಮತ್ತೆಂದೆಂದಿಗೂ ಬಾರದಾ ತಲೆಗೆ!
ತೈಲಾಭ್ಯಂಜನದು ಶಾಸ್ತ್ರ ಸಮ್ಮತಾ ತಲೆಗೆ! (ಕೈ)
-ಲಾಸಪತಿಯುಪಯೋಗಿಪನಿದಾ ತಲೆಗೆ!
ನ್ನ ಸತಿಗೂ ಬೇಕಿದನುದಿತಾ ತಲೆಗೆ! (ಕ)
-ಲೆತೊಂದಾಗಿರಲು ಸದಾ ಬೇಕಿದಾ ತಲೆಗೆ! (ಬೇ)
-ಗೆ ಶಾಂತಿ ನಿರಂಜನಾದಿತ್ಯಾನಂದಾ ತಲೆಗೆ!!!

ಬಿಸಿಬಿಸಿ ನೀರೆರೆದ್ಕೊಂಡೆ! [ಕಾ]   4(2453)

-ಸಿದ್ದು ಸಾರ್ಥಕವಾಯ್ತೆಂದ್ಕೊಂಡೆ!
ಬಿಡ್ಬಾರ್ದನುಷ್ಠಾನವೆಂದ್ಕೊಂಡೆ! (ಬಿ)
-ಸಿಲಿನುಪಕಾರರಿತ್ಕೊಂಡೆ!
ನೀಚ, ರೋಗ ಹೋಯ್ತೆಂದಂದ್ಕೊಂಡೆ! (ಬೇ)
-ರೆ ಔಷಧ್ಯೇಕೆನಗಂದ್ಕೊಂಡೆ! (ಮ)
-ರೆತಿರಬಾರದಿದಂದ್ಕೊಂಡೆ! (ಅಂ)
-ದ್ಕೊಂಡೇ ತಪಸ್ಸು ಮುಗಿಸ್ಕೊಂಡೆ! (ಉಂ)
-ಡೆ ನಿರಂಜನಾದಿತ್ಯನ್ಕಂಡೆ!!!

ಬಿಸಿಬಿಸಿ ಮುದ್ದೆ ಚೂರುಚೂರಾಗುಣ್ಣು! (ಹ)   2(897)

-ಸಿದರೂ ಆತುರವಿಲ್ಲದಂತೆ ಉಣ್ಣು!
ಬಿಸಿಯಿಂದಪಾಯವಾಗದಂತೆ ಉಣ್ಣು!
ಸಿಟ್ಟುಮಾಡದೆ ಮಗುವಿನಂತೆ ಉಣ್ಣು!
ಮುದ್ದೆ ಗಂಟಲಿಗೆ ಅಂಟದಂತೆ ಉಣ್ಣು! (ನಿ)
-ದ್ದೆಗೇನೂ ಆತಂಕವಾಗದಂತೆ ಉಣ್ಣು!
ಚೂರೂ ವ್ಯರ್ಥಮಾಡದಪ್ಪನಂತೆ ಉಣ್ಣು!
ರುಚಿ ಸವಿದು ಹನುಮನಂತೆ ಉಣ್ಣು!
ಚೂಡಾಮಣಿಯಿತ್ತ ಸೀತೆಯಂತೆ ಉಣ್ಣು!
ರಾಮಜಪಕ್ಕಡ್ಡಿಯಾಗದಂತೆ ಉಣ್ಣು!
ಗುರುಕೃಪಾ ಪಾತ್ರನಾಗುವಂತೆ ಉಣ್ಣು! (ಉ)
-ಣ್ಣು ನಿರಂಜನಾದಿತ್ಯಾನಂದನಂತುಣ್ಣು!!!

ಬಿಸಿಲಲ್ಲಿ ಕೂತೆಚ್ಚರ ತಪ್ಪಬೇಡ! (ಹು)   6(4156)

-ಸಿ ಮಾಯೆಯ ನಂಬಿ ಮಳೇ ಪಾಲಾಗ್ಬೇಡ!
ಕ್ಷ್ಯದಲ್ಲಿ ಲಯವಾದಾಗಲುಗಾಡ! (ಕ)
-ಲ್ಲಿನಂತಾಗುವುದಾಗ ಈ ದೇಹ, ಜಡ!
ಕೂತವರೆಲ್ಲಾ ಹಾಗಿರ್ತಾರೆನ್ನಬೇಡ!
ತೆಗೆಯದಿದ್ದ್ರೆ ಕಶ್ಮಲ ವ್ಯರ್ಥಾ ಕೊಡ! (ಅ)
-ಚ್ಚ ಹಾಲನ್ನದ್ರಲ್ಲಿ ಸುರಿದರೂ ದಂಡ! (ವ)
-ರ ಗುರುವಿನಲ್ಲಿರಬೇಕ್ಭಕ್ತಿ ಧೃಡ!
ನ್ನಂತೆ ನಿನ್ನನ್ನೆಂದೂ ಮಾಡದೆ ಬಿಡ! (ಅ)
-ಪ್ಪ, ಅಮ್ಮ, ತಮ್ಮ ಈತ ಮರೆಯಬೇಡ!
ಬೇಗ್ಮನೆ ಸೇರಿಕೋ! ಮುತ್ತುತಿದೆ ಮೋಡ! (ಮೋ)
-ಡಕ್ಕಂಜಿ ನಿರಂಜನಾದಿತ್ಯನೋಡ!!!

ಬಿಸಿಲು ಬಲವಾಗಿದೆ! (ಹೇ)   2(603)

-ಸಿಗೆ ಒಣಗಿಹೋಗಿದೆ! (ನಿ)
-ಲುವು ನಿಶ್ಚಲವಾಗಿದೆ!
ಯಲು ಲೀಲೆಯಾಗಿದೆ!
ಕ್ಷ್ಯ ಅಕ್ಷಯವಾಗಿದೆ! (ಜ)
-ವಾಬೇನೂ ಬರದಾಗಿದೆ! [ತ್ಯಾ]
-ಗಿಗಿದೂ ಆನಂದವಾಗಿದೆ! [ಎ]
-ದೆ, ನಿರಂಜನಗಾಗಿದೆ!!!

ಬಿಸಿಲ್ಬಂದಾಗ ಬಟ್ಟೆಯೊಣಗ ಹಾಕು! (ಬ)   4(2365)

-ಸಿರಿದ್ದಾಗೆಚ್ಚರದಿಂದ ಹೆಜ್ಜೆ ಹಾಕು! (ಹಾ)
-ಲ್ಬಂದಾಗ ಹಿಂಡಿ ಪಾತ್ರೆಯೊಳಗೆ ಹಾಕು! (ಆ)
-ದಾಯವಿಲ್ಲದಾಗ ಖರ್ಚು ಕಮ್ಮಿ ಹಾಕು!
ಲಾಟೆ ನಿಂತ ಮೇಲ್ಕೆಲ್ಸಕ್ಕೆ ಕೈ ಹಾಕು!
ರೀ ಗುಲ್ಲು ಸಮಾರಂಭ ವಜಾ ಹಾಕು! (ಪ)
-ಟ್ಟೆ ಪೀತಾಂಬರದ ಹುಚ್ಚು ಸುಟ್ಟು ಹಾಕು! (ಬಾ)
-ಯೊಣಗಿದಾಗ್ತುಸತುಸ ನೀರು ಹಾಕು! (ಗು)
-ಣ ದೋಷ ವಿಮರ್ಶೆ ಮಾಡಿ ಮತ ಹಾಕು! (ಭ)
-ಗವತ್ಧ್ಯಾನದಲ್ಲಿ ಸದಾ ಕಾಲ ಹಾಕು! (ಆ)
-ಹಾರ, ವಿಹಾರಕ್ಕೆಲ್ಲಾ ಅಳತೆ ಹಾಕು! (ಹಾ)
-ಕು ನಿರಂಜನಾದಿತ್ಯಾಂಘ್ರಿಗೆ ಹೂ ಹಾಕು!!!

ಬೀಡಿ ಸಿಗ್ರೇಟು ಬಿಡಿ ನೀವೆಲ್ಲಾ! (ನಾ)   2(999)

-ಡಿ, ನರದಶಕ್ತ್ಯದರಿಂದೆಲ್ಲಾ! (ಪು)
-ಸಿ, ಮಾತೆಂದನ್ನದಿರಿದನೆಲ್ಲಾ! (ಅ)
-ಗ್ರೇಸರ ವೈದ್ಯಾನುಭವವೆಲ್ಲಾ! (ಏ)
-ಟು ತಪ್ಪಿ ಸುಖಿಗಳಾಗ್ಬೇಕೆಲ್ಲಾ!
ಬಿಸದೂಟವಾಶಿಪರಾರಿಲ್ಲಾ! (ನೋ)
-ಡಿ, ವಿಚಾರಿಗಳಾದವರೆಲ್ಲಾ!
ನೀತಿಗಾನತರಾಗಬೇಕೆಲ್ಲಾ!
ವೆಗ್ಗಳದಭ್ಯಾಸ ಮಾಡಿರೆಲ್ಲಾ! (ಬ)
-ಲ್ಲಾ, ನಿರಂಜನಾದಿತ್ಯಗಾಗ್ಯೆಲ್ಲಾ!!!

ಬೀಸುವ ಗಾಳಿಗೆ ಕಾಳ್ಯಾದ್ರೇನು ಬೋಳ್ಯಾದ್ರೇನು!   6(3842)

ಸುಳಿ ಗಾಳಿ ಪ್ರಕೃತಿಯ ಅಕ್ರಮವಲ್ವೇನು?
ನಗಳನ್ನೂ ನಿರ್ನಾಮ ಮಾಡಿಲ್ಲವೇ ತಾನು?
ಗಾಮ, ಭೀಮಾದಿಗಳೆಲ್ಲಾ ಉರುಳಿಲ್ಲವೇನು? (ಹೇ)
-ಳಿದವರೂ ಕೇಳಿದವರೂ ಅಳಿದ್ರಲ್ವೇನು?
ಗೆಳೆಯರೂ, ವೈರಿಗಳೂ ಸತ್ತುಹೋದ್ರಲ್ವೇನು?
ಕಾರಣಕರ್ತಗಿದೊಂದಾಟವೆಂದರಿ ನೀನು! (ಗೂ)
-ಳ್ಯಾ ಪರಶಿವನ ಹೊತ್ತು ತಿರುಗುತ್ತದೇನು? (ಉ)
-ದ್ರೇಕೋದ್ವೇಗದಿಂದ ತಪ್ಪೆಣಿಸಬೇಡ ನೀನು! (ಅ)
-ನುಮಾನ ಬಿಟ್ಟು ಆತ್ಮಾನಂದನಾಗ್ಬೇಕು ನೀನು!
ಬೋಧಿಸಿದವರೆಲ್ಲಾತ್ಮನನ್ನು ತೋರಿದ್ರೇನು? (ಚ)
-ಳ್ಯಾದ್ರೂ, ಸೆಖೆಯಾದ್ರೂ ಸದಾ ಸಹಿಸ್ಯಾದದ್ದೇನು? (ಭ)
-ದ್ರೇಶ್ವರ, ಶರೀರವಲ್ಲವೆಂದು ನಂಬು ನೀನು! (ತ)
-ನು ಭಾವ ಬಿಟ್ಟು ನಿರಂಜನಾದಿತ್ಯಾಗು ನೀನು!!!

ಬುಗುರಿ ತಿರುಗುತಿದೆ ನೋಡು!   6(3513)

ತಿಗೆಡದಂತೆ ಒಡನಾಡು!
(ಅ)-ರಿಯದಿಹುದದು ತನ್ನ ಪಾಡು!
ತಿದ್ದು ನೀನು ದಾರಿ ನೇರಮಾಡು!
(ಕ)-ರುಣೆಯಿಂದ ತೋರದರ ಬೀಡು!
ಗುರಿಯಲ್ಲತಾನೆ ಸುಡುಗಾಡು?
ತಿಳಿವ ನಿನ್ನಂತದಕ್ಕೂ ನೀನು!
(ನಿಂ)-ದೆಗೀಡಾಗದಾಟವನ್ನೇ ಹೂಡು!
ನೋಡಿದ್ರದರಾಟ ನಗೆಗೇಡು!
(ಮಾ)-ಡು, ನಿರಂಜನಾದಿತ್ಯನಂತಾಡು!!!

ಬುಡಸಹಿತಕಿತ್ತುಹಾಕಬೇಕಪ್ಪಾ! (ತ)   5(2669)

-ಡವಾದರೂ ನಿಶ್ಚಿಂತೆಯಿಂದೆರ್ಬೇಕಪ್ಪಾ!
ಲಸಲಕ್ಕೂ ಅಳದಂತಾಗ್ಬೇಕಪ್ಪಾ!
ಹಿತಶತ್ರುಗಳ ಕಾಟ ಬಹಳಪ್ಪಾ!
ಪ್ಪನ್ನವರೊಪ್ಪಿಕೊಳ್ಳುವುದಿಲ್ಲಪ್ಪಾ!
ಕಿವಿ ಮಾತಿಂದ ಮರುಳು ಮಾಳ್ಪರಪ್ಪಾ! (ಇ)
-ತ್ತು ಭರವಸೆ ಕತ್ತು ಕೊಯ್ವರವ್ರಪ್ಪಾ!
ಹಾಲೆಂದು ಹಾಲಾಹಲ ಕುಡಿಸುವ್ರಪ್ಪಾ!
ಥೆ ಹೇಳಿ ವ್ಯಥೆ ತಂದಿಡುವರಪ್ಪಾ!
ಬೇರಿನ್ಯಾವೋದ್ಯೊಗವೂ ಅವ್ರಿಗಿಲ್ಲಪ್ಪಾ!
ರ್ತವ್ಯವೇನೆಂದವರರಿಯರಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯ ನೀನಾಗಿರಪ್ಪಾ!!!

ಬುದ್ಧಿ ಓಡದಂತಾಯಿತು! (ಸಿ)   4(1877)

-ದ್ಧಿ ಕಾರ್ಯಕ್ಕಿಲ್ಲದಾಯಿತು!
ಡಿದ್ದು ವ್ಯರ್ಥವಾಯಿತು! (ಆ)
-ಡಳಿತ ತಪ್ಪಿಹೋಯಿತು!
ದಂಭ ನೀತಿ ಹೆಚ್ಚಾಯಿತು!
ತಾಳ್ಮೆ ತಾನಿಲ್ಲದಾಯಿತು! (ಬಾ)
-ಯಿ ಬೊಗಳೆ ಜೋರಾಯಿತು! (ನಿಂ)
-ತು ನಿರಂಜನಾದಿತ್ಯಾಯ್ತು!!!

ಬುದ್ಧಿ ಕೆಟ್ಟಾಯ್ತು ಗಲೀಜು ಸೀಸೆ! (ಶು)   4(2345)

-ದ್ಧಿಯಾದಾಗದಕೆ ತುಂಬುವಾಸೆ!
ಕೆಲವರಿಗದ ಮಾರುವಾಸೆ! (ಕೊ)
-ಟ್ಟಾದ ಮೇಲದಕಾಗಿ ದುರಾಸೆ! (ಆ)
-ಯ್ತು ಸರ್ವನಾಶವೆಂಬ ನಿರಾಸೆ! (ಅಂ)
-ಗಡಿಯಿಡಬೇಕೆಂಬಿನ್ನೊಂದಾಸೆ! (ಗ)
-ಲೀಜು ಸೀಸೆಗಾಗ್ಯಲೆಯುವಾಸೆ! (ಮೇ)
-ಜು ಕುರ್ಚಿಗಳ ಕೊಂಡುಕೊಂಬಾಸೆ!
ಸೀಸೆಯೊಡೆದಾಗಾಯ್ತು ಹತಾಸೆ! (ಆ)
-ಸೆ, ನಿರಂಜನಾದಿತ್ಯಗಿಲ್ಲೈಸೆ!!!

ಬುದ್ಧಿ ಜೀವಿಗಳನ್ನಲಕ್ಷಿಸಬೇಡಿ! (ವೃ)   6(3877)

-ದ್ಧಿಗಾಗಿವರಿಗೇ ಅಧಿಕಾರ ನೀಡಿ!
ಜೀವರುದ್ದಾರಕ್ಕಂತು ಸಹಾಯ ಮಾಡಿ!
ವಿಕಲ್ಪ ಮಾಡಿ ವಿನಾಶ ಹೊಂದಬೇಡಿ!
ಣರಾಜ್ಯಕ್ಕೆ ಗಣ್ಯರೇ ನರ, ನಾಡಿ! (ಒ)
-ಳ ಜಗಳಕ್ಕಾಗಿವರ ತಳ್ಳಬೇಡಿ! (ಉ)
-ನ್ನತಿಗೋಸ್ಕರ ಅವರನ್ನೊಡಗೂಡಿ!
ಲ}ಕ್ಷ್ಯವರಿಯದವರ ಸ್ನೇಹ ಬೇಡಿ {

ಬಿಡಿ! (ರ)
-ಕ್ಷಿಸುವ ದೇವರನ್ನು ಮರೆಯಬೇಡಿ!
ರ್ವ ಸಹಕಾರದಿಂದ ಸೇವೆ ಮಾಡಿ!
ಬೇಡನ ಕೈಗೆ ಲೇಖನಿ ಕೊಡಬೇಡಿ! (ಮಾ)
-ಡಿ, ನಿರಂಜನಾದಿತ್ಯಾಜ್ಞೆಯಂತೆ ಮಾಡಿ!!!

ಬುದ್ಧಿವಂತಾ! ನೀನೇ ಬಹುಭಾಗ್ಯವಂತಾ!   6(3396)

(ವೃ)-ದ್ಧಿ, ಕ್ಷಯಾತೀತ ನೀನು ವಿಚಾರವಂತಾ!
ವಂಶ ನಿನ್ನದು ರಹಿತಾದಿಮಧ್ಯಾಂತಾ!
ತಾನೇ ತಾನಾಗಿಲ್ಲದಾಗ ಜ್ಞಾನವಂತಾ!
ನೀನಿದನರಿತೀಗಾಗಬೇಕನಂತಾ!
ನೇಮ, ನಿಷ್ಠೆಯಿಂದ ಮಾಡ್ಸ್ವರೂಪ ಚಿಂತಾ!
ಯಕೆಗಳಿಗೀಗಾಗ ಬೇಕು ಅಂತ!
ಹುಸಿಮಾಯೆಯಂದರಿತೀಗಾಗು ಸಂತ!
ಭಾರತದಕೀರ್ತಿ ಹಬ್ಬ್ಲಿ ದಿಗ್ದಿಗಂತಾ!
(ಯೋ)-ಗ್ಯನಾದವಗಾರದೇನು ಬಲವಂತಾ?
ವಂದಿಸು ದತ್ತಾತ್ರೇಯಗೆ ಗುರುವೆಂತ!
ತಾನೇ ನಿರಂಜನಾದಿತ್ಯನವನೆಂತ!!!

ಬುಧಾನಂದಾ ವಿಮಲಾನಂದ!   3(1194)

ಧಾರಾನಂದಾ ಶ್ರೀಧರಾನಂದ!
ನಂದಾನಂದಾ ಮುಕುಂದಾನಂದ!
ದಾತಾನಂದಾ ಸೀತಾತ್ಮಾನಂದ!
ವಿಶ್ವಾನಂದಾ ಶ್ರೀಶಿವಾನಂದ!
ಹಾನಂದಾ ಮಹೇಶಾನಂದ!
ಲಾಭಾನಂದಾ ಗೋಪಾಲಾನಂದ!
ನಂಜಾನಂದಾ ಸಹಜಾನಂದ! (ಕಂ)
-ದ ನಿರಂಜನಾದಿತ್ಯಾ ನಂದ!!!

ಬುರುಡೆಯಡಿಗೊಂದು ರಕ್ಷೆ! (ಗು)   4(2093)

-ರುದೇವನ ಪಾದುಕಾ ರಕ್ಷೆ! (ಎ)
-ಡೆಬಿಡದೆ ಕಾಯ್ವುದಾ ರಕ್ಷೆ! (ಜ)
-ಯಪ್ರದವಾಗಿಹುದಾ ರಕ್ಷೆ! (ಗು)
-ಡಿಯಾಗಿಹ ದೇಹಕ್ಕಾ ರಕ್ಷೆ! (ಈ)
-ಗೊಂದು ಮಹತ್ಕಾರ್ಯಕ್ಕಾ ರಕ್ಷೆ!
ದುಷ್ಟ ದಮನಕ್ಕಾಗೀ ರಕ್ಷೆ (ಸು)
-ರ, ನರರೆಲ್ಲರಿಗಾ ರಕ್ಷೆ! (ರ)
-ಕ್ಷೆ ನಿರಂಜನಾದಿತ್ಯನೀಕ್ಷೆ!!!

ಬೂಟಾಟ ಜೀವನವೆಷ್ಟು ದಿನ? [ಕಾ]   2(869)

-ಟಾಚಾರದಾಚಾರವೆಷ್ಟು ದಿನ? (ದಿ)
-ಟದಿಂದ ಬದುಕು ಪ್ರತಿದಿನ!
ಜೀವ ಭಾವ ಬಿಟ್ಟಿರನುದಿನ! (ದೇ)
-ವ ಭಾವ ಬಲಿಸು ದಿನ ದಿನ! (ಧ)
-ನಕ್ಕಾಗಿ ಕಳೆಯಬೇಡ ದಿನ! (ಸೇ)
-ವೆ ಶ್ರೀಪಾದಕ್ಕಾಗಲೆಲ್ಲಾ ದಿನ! (ಎ)
-ಷ್ಟು ಕಷ್ಟವದನ್ಯ ಸೇವಾ ದಿನ?
ದಿನಕೆರನಂತಿರೆಲ್ಲಾ ದಿನ! (ಘ)
-ನ ನಿರಂಜನಾದಿತ್ಯನು ದಿನ!!!

ಬೆಂಗಾವಲಾಗಿಹನಾ ತ್ರಿಪುರಾರಿ!   4(1514)

ಗಾಬರಿಯೇಕೆಂಬನಾ ತ್ರಿಪುರಾರಿ!
ರದಾಪ್ರಿಯಾತ್ಮನಾ ತ್ರಿಪುರಾರಿ!
ಲಾವಣ್ಯಸ್ವರೂಪನಾ ತ್ರಿಪುರಾರಿ!
ಗಿರಿಜಾರಮಣನಾ ತ್ರಿಪುರಾರಿ!
ರಸಿ ಪೊರೆವನಾ ತ್ರಿಪುರಾರಿ!
ನಾದಪ್ರಿಯ ಶಿವನಾ ತ್ರಿಪುರಾರಿ!
ತ್ರಿಭುವನಾಧಿಪನಾ ತ್ರಿಪುರಾರಿ!
ಪುಣ್ಯ, ಪಾಪ, ಶೂನ್ಯನಾ ತ್ರಿಪುರಾರಿ!
ರಾಮನಾಮ ಪ್ರಿಯನಾ ತ್ರಿಪುರಾರಿ! (ಅ)
-ರಿ ನಿರಂಜನಾದಿತ್ಯಾ ತ್ರಿಪುರಾರಿ!!!

ಬೆಂಬಲ ನಿನ್ನದಗತ್ಯ!   5(3031)

ಳಲಿಹನೀಗ ಮರ್ತ್ಯ!
ಯ ಮನದ್ದತ್ಯಗತ್ಯ!
ನಿತ್ಯಾತ್ಮನೆಂಬುದು ಸತ್ಯ!
(ಉ)ನ್ನತಿಗಾಗಬೇಕು ಕೃತ್ಯ!
ತ್ತಗಾಗಬೇಕು ಭೃತ್ಯ!
ಮನಿಸಬಾರ್ದನಿತ್ಯ! (ಸ)
-ತ್ಯ, ಶ್ರೀ ನಿರಂಜನಾದಿತ್ಯ!!!

ಬೆಂಬಲವಿಲ್ಲದ ಹಂಬಲವೇತಕ್ಕೆ?   6(4375)

ಹಳ ದುಃಖ ಅದರಿಂದ ಮನಕ್ಕೆ!
ಕ್ಷ್ಯಸಿದ್ಧಿಗೆ ಅದರಿಂದಕ್ಕು ಧಕ್ಕೆ!
ವಿಕಲ್ಪ, ಸಂಕಲ್ಪ, ಹೇತು ಹಂಬಲಕ್ಕೆ! (ಬ)
-ಲ್ಲವರರಿತಿದ ತರಲಾಚಾರಕ್ಕೆ!
ತ್ತಾತ್ರೇಯನುಪದೇಶವಿದೆಲ್ಲಕ್ಕೆ!
“ಹಂಸಃ ಸೋಹಂ” ಮಂತ್ರಾರ್ಥರಿವಾಗ್ಲೆಲ್ಲಕ್ಕೆ!
ಹಳಾನುಕೂಲವೀಜನ್ಮವದಕ್ಕೆ!
ಯವಾಗ್ಬೇಕು ಮನೋವೃತ್ತಿ ಮೋಕ್ಷಕ್ಕೆ!
ವೇದೋಪನಿಷತ್ತುಗಳಿರ್ಪುದಿದಕ್ಕೆ!
ತ್ವ ಜೀವನ ಸಾಧನೋಪಯೋಗಕ್ಕೆ! (ಅ)
-ಕ್ಕೆ, ನಿರಂಜನಾದಿತ್ಯ ಕೃಪೆಯೆಲ್ಲಕ್ಕೆ!!!

ಬೆಕ್ಕಾಗಬೇಡ ಬೆಕ್ಕೆಗೀಡಾಗಬೇಡ! [ವಾ]   3(1186)

-ಕ್ಕಾಯ, ಮನ, ಮಲಿನಗೊಳಿಸಬೇಡ!
ರ್ವದಿಂದ ಗೂಳಿಯಂತೋಡಾಡಬೇಡ!
ಬೇರೆಯವರಾಸ್ತ್ಯಪಹರಿಸಬೇಡ! (ಒ)
-ಡನಾಟ ದುರ್ಜನರಲ್ಲಿ ಮಾಡಾಬೇಡ!
ಬೆಡಗಿಗಾಗಿ ಬಡವನಾಗಬೇಡ! (ಧ)
-ಕ್ಕೆ ನಿಜರೂಪಕ್ಕೆ ತಂದುಕೊಳ್ಳಬೇಡ!
-ಗೀತೋಪದೇಶವನ್ನು ಮರೆಯಬೇಡ! (ಓ)
-ಡಾಡಿ ವ್ಯರ್ಥಾಲಾಪ ಮಾಡುತ್ತಿರಬೇಡ!
ದ್ದೆ ಹಸನಾಗದೇನೂ ಬಿತ್ತಬೇಡ!
ಬೇಜಾರೆಂದು ಉದಾಸೀನನಾಗಬೇಡ! (ಬ)
-ಡಕ ನಿರಂಜನಾದಿತ್ಯನೆನ ಬೇಡ!!!

ಬೆಕ್ಕಿನ ಭಯ ಅಳಿಲು ಮಕ್ಕಳಿಗೆ! (ಹ)   6(4167)

-ಕ್ಕಿಲ್ಲವೇ ಜೀವಿಸಲಿಕ್ಕವುಗಳಿಗೆ?
ಯನಾದಿಂದ್ರಿಯಉಂಟವುಗಳಿಗೆ!
ಯನಿವಾರಕನಾರವುಗಳಿಗೆ?
ಜಮಾನ ದೇವರು ನಮ್ಮೆಲ್ಲರಿಗೆ!
ನಾದರಿಸಿದರಾರ್ಗತಿ ನಮಗೆ! (ಉ)
-ಳಿಯದು ಭಕ್ತಿ ಅವನ ಮಕ್ಕಳಿಗೆ! (ಹಾ)
-ಲುಣಿಸಿ ಹಾಲಾಹಲವಿಕ್ಬಾರ್ದೆಮಗೆ!
ನಸು ಕರಗದೇ ಪ್ರಿಯ ತಾಯಿಗೆ? (ಚೊ)
-ಕ್ಕ ಬುದ್ಧಿಯ ಕಲಿಸದೇಕೆಲ್ಲರಿಗೆ! (ಬಾ)
-ಳಿನಲ್ಪ ಕಾಲಾನಂದವಿರ್ಲವರಿಗೆ! (ಹೀ)
-ಗೆ ಪ್ರಾರ್ಥನೆ ನಿರಂಅಜನಾದಿತ್ಯನಿಗೆ!!!

ಬೆಕ್ಕಿನ ಮರಿ ಬೇಕೇನು ಸ್ವಾಮಿ? (ದಿ)   4(2333)

-ಕ್ಕಿಲ್ಲದ ಬಿಕ್ಕುಗದೇಕೆ ಪ್ರೇಮಿ? (ಅ)
-ನಘ ಖಗ ಬಿಕ್ಕುವೇನು ಸ್ವಾಮಿ?
ರೆಯ್ಬೇಡದು ಬಂಧನ ಪ್ರೇಮಿ! (ಸ)
-ರಿ! ಈ ಮಾತಿಗೆನ್ನೊಪ್ಪಿಗೆ ಸ್ವಾಮಿ!
ಬೇಕೆಂಬವ ವಿರಕ್ತನೇ ಪ್ರೇಮಿ? (ಸಾ)
-ಕೇಕಾ ಮಾತೂಟಕ್ಕೆ ಬನ್ನಿ ಸ್ವಾಮಿ! (ಅ)
-ನುದಿನ ಉಂಡಾದದ್ದೇನು ಪ್ರೇಮಿ?
ಸ್ವಾಮಿಯ ಪ್ರಸಾದ ಲಾಭ ಸ್ವಾಮಿ! (ಪ್ರೇ)
-ಮೀ! ನಿರಂಜನಾದಿತ್ಯಾತ್ಮ ಪ್ರೇಮಿ!!!

ಬೆಕ್ಕು ನಾನಲ್ಲ, ಬೆಕ್ಕೆ ನನಗಿಲ್ಲ! (ಹ)   6(4170)

-ಕ್ಕು ನನ್ನದನ್ನು ಕೇಳಬೇಕಾಗಿಲ್ಲ!
ನಾಮ, ರೂಪದಿಂದಿರ್ಪೆ ಜಗತ್ತೆಲ್ಲ!
ನಗೆ, ಕೀಳು, ಮೇಲೆಂಬುದೇನಿಲ್ಲ! (ಬ)
-ಲ್ಲನಿದನೆನ್ನ ನಿಜ ಭಕ್ತನೆಲ್ಲ!
ಬೆರಗಾಗಬೇಡ ಕೇಳಿದನೆಲ್ಲ! (ಹ)
-ಕ್ಕೆಲ್ಲಕ್ಕುಂಟು ನನ್ನಾನಂದದಲ್ಲೆಲ್ಲ!
ನಗಾರದೇನೇನೂ ಬೇಕಾಗಿಲ್ಲ!
ಲಿನಲಿದು ನನ್ನಂತಾಗ್ಬೇಕೆಲ್ಲ!
ಗಿರಿಧಾರಿ ಮತ್ತು ನಾನೂ ಬೇರಲ್ಲ! (ಫು)
-ಲ್ಲ ನಿರಂಅಜನಾದಿತ್ಯನೇ ಎಲ್ಲೆಲ್ಲಾ!!!

ಬೆಕ್ಕು ಮಲಗಿಹುದು ಬೆಚ್ಚಗಿದೆಂದು! (ಉ)   1(124)

-ಕ್ಕವ ಭಾವ ಭಕ್ತಿ ಗೊತ್ತಿಲ್ಲವೇನೆಂದು!
ನಸು ಇಂದ್ರಿಯದ ಮೇಲಿರುತಿಹುದು
ಕ್ಷ್ಯವಿದು ಕಚ್ಛವೆಂದರಿಯುವುದು! (ಉ)
-ಗಿದರೆ ಮತ್ತೆ ಕಹಿಯೆಂದರಾಗದು!
ಹುಸಿಗಾಗಿ ಮನ ಸಡಿಲಾಗಿಹುದು!
ದುರ್ವಿಷಯ ಮರಳು ಮಾಡುತಿಹುದು!
ಬೆದರದದನಡಗಿಸಿಟ್ಟಿಹುದು! (ಉ)
-ಚ್ಚ ಸ್ಥಿತಿಯಲಿ ಅದ ಬಚ್ಚಿಟ್ಟಿಹುದು!
ಗಿರಿಧರನ ಶಿರೋಮಣ್ಯಾಗಿಹುದು! (ಅ)
-ದೆಂತೆಂದು ಸದಾ ಧ್ಯಾನ ಮಾಡುತಿಹುದು! (ಅ)
-ದು ನಿರಂಜನಾದಿತ್ಯಗರಿತಿಹುದು!!!

ಬೆಕ್ಕೇ! ನೀನು ಹುಟ್ಟಿದ್ದೇತಕ್ಕೆ! (ಹ)   6(3358)

-ಕ್ಕೇನಿದೆ ಜೀವರ ಕಾಡ್ಲಿಕ್ಕೆ?
ನೀತಿ ಇಲ್ಲದಾಯ್ತು ಲೋಕಕ್ಕೆ! (ಅ)
-ನುದಿನ ಅತ್ಯಾಸೆ ಭೋಗಕ್ಕೆ!
ಹುಚ್ಚು ಹಿಡಿಸಿದೆ ಮನಕ್ಕೆ! (ಕ)
-ಟ್ಟಿದೆ ಕಾಮಿನಿಯಪಾಶಕ್ಕೆ! (ಇ)
-ದ್ದೇನು ಮಾಡಿದ್ದಾಯ್ತೀ ಜನ್ಮಕ್ಕೆ! (ಸಂ)
-ತನಾಗಿ ಹೋಗು ಸಾಯುಜ್ಯಕ್ಕೆ! (ಅ)
-ಕ್ಕೆ, ನಿರಂಜನಾದಿತ್ಯನಕ್ಕೆ!!!

ಬೆಚ್ಚಿಬೀಳ್ಬೇಡಚ್ಚುತನ ಮರೆಯ್ಬೇಡ! (ಹು)   5(2570)

-ಚ್ಚಿಯ ಹಾಗೆ ಬಾಯಿಗೆ ಬಂದಂತಾಡ್ಬೇಡ!
ಬೀದಿಯಲ್ಲಿ ವ್ಯರ್ಥವಾಗಿ ಓಡಾಡ್ಬೇಡ! (ಕೇ)
-ಳ್ಬೇಡಾರೊಗೀ ಮೂರ್ಕಾಸಿಗೂ ಕೈಯ್ಯೊಡ್ಬೇಡ! (ಗಂ)
-ಡನಾಜ್ಞೆಯನ್ನೆಂದೂ ಪಾಲಿಸದಿರ್ಬೇಡ! (ಪೆ)
-ಚ್ಚು ಮುಖ ಹಾಕಿಕೊಂಡಿನ್ನು ಕೂತಿರ್ಬೇಡ!
ರ್ತರದಾಸೆಯಿಂದಬಲೆಯಾಗ್ಬೇಡ!
ಗ್ನಗುತ್ತ ಮನೆಗೆಲ್ಸ ಮಾಡ್ದಿರಬೇಡ!
ನಸ್ಮಾಧವನಲ್ಲಿರಿಸದಿರ್ಬೇಡ! (ನೆ)
-ರೆಮನೆಗೆ ಹೋಗಿ ಹರಟುತ್ತಿರ್ಬೇಡ! (ಬೈ)
-ಯ್ಬೇಡ, ಮಕ್ಕಳಿಗೆ ಬುದ್ಧಿ ಹೇಳ್ದಿರ್ಬೇಡ! (ಗಂ)
-ಡ ನಿರಂಜನಾದಿತ್ಯನೆಂದೂ ಕೈಯ್ಬಿಡ!!!

ಬೆಟ್ಟದಂಥಾ ಮುಗಿಲು ಹಿಟ್ಟಿನಂತರೆ ಕ್ಷಣದಲ್ಲಿ!    1(156)

-ಟ್ಟಂತಿರುವಾಗ ಕಾಲಾಕಾಲ ಚಿಂತೇಕೆ ಮನದಲ್ಲಿ?
ದಂಗುಡಿದಂತಿಹುದು ಈ ದೃಶ್ಯ ಗಗನದಲ್ಲಿ! (ಇಂ)
-ಥಾ ಲೀಲೆಯನು ಕಂಡರೂ ತಾಳ್ಮೆಗೆಡುವುದಲ್ಲಿಲ್ಲಿ!
ಮುದಗೆಡದಡಿಗಡಿಗೆ ನಿಲಿಸೊಂದೆಡೆಯಲ್ಲಿ!
ಗಿರಿಗಂಜಿ ಗುರಿ ಕಡೆಗೋಡದಿರಲರ್ಥವೆಲ್ಲಿ?
ಲುಬ್ದತನ ಬಿಟ್ಟಿರು ಧಾರಾಳದಲ್ಲೆಲ್ಲಿ!
ಹಿತಕಾರಿ ತಪಕಿರಿಸಿರಲೇನು ಸಂದೇಹೆಲ್ಲಿ? (ಇ)
-ಟ್ಟಿಹನೊಂದು ಗುಟ್ಟನು ಭವಿಷ್ಯಕಾಗೆನ್ನಂಗದಲ್ಲಿ!
ನಂಬಿ ಕಾದಿರಬೇಕು ಕಾಲ ಬರುವ ತನಕಿಲ್ಲಿ!
ಡವಾಗುತಿದೆಂದಾತುರಿಸದಿರು ಮನದಲ್ಲಿ!
ರೆಸಿಗೆ ತುಂಬದೆ ಚುಚ್ಚದಿರಬೇಕು ಗಾಯದಲ್ಲಿ!
ಕ್ಷಣದಸಹನೆ ಗತಿಗೇಡು ಪರಿಣಾಮದಲ್ಲಿ! (ಅ)
-ಣಕಿಸಲಿ, ನಿಂದಿಸಲಿ, ಕರ್ಮಿರಲಿ ನಿಜದಲ್ಲಿ!
ತ್ತನೀವಮೃತ ತುತ್ತಿಗಾಗಿರಲಿ ಜನ್ಮವಿಲ್ಲಿ! (ಇ)
ಲ್ಲಿ ನಿರಂಜನಾದಿತ್ಯನಿರುವ ಭರವಸದಲ್ಲಿ!!!

ಬೆತ್ತಲೆಯಾಗಿ ಬಂದೆನ್ನ ಸೇರೇ! (ಅ)   3(1007)

-ತ್ತ ಇತ್ತೆತ್ತೆತ್ತೋಡಬೇಡ ಬಾರೇ! (ತ)
-ಲೆಯಾರಿಸಿಕೊಂಡು ಬೇಗ ಬಾರೇ!
ಯಾವಲಂಕಾರವೂ ಬೇಡ ಬಾರೇ (ಕೂ)
-ಗಿ ಗಂಟಲೊಣಗಿತೋಡಿ ಬಾರೇ!
ಬಂದೆ ಬಂದೆಂದೆಲ್ಲೋ ಹೋದೆ, ಬಾರೇ! (ಕಾ)
-ದೆನಗೆ ಸಾಕಾಯ್ತಿನ್ನಾದ್ರೂ ಬಾರೇ! (ನಿ)
-ನ್ನವಿವೇಕ ಸುಟ್ಟುಬಿಟ್ಟು ಬಾರೇ!
ಸೇರಿದರಾಮೇಲೆ ಹೋಗಲಾರೇ! (ಬಾ)
-ರೇ, ನಿರಂಜನಾದಿತ್ಯನ ಸೇರೇ!!!

ಬೆದರಿಕೆಗಂಜದು ಪ್ರಸಾದಾಕಾಂಕ್ಷೆ!   6(3915)

ಯಾಶೂನ್ಯನಲ್ಲಾತ ಮಾಡ್ಲಿಕ್ಕುಪೇಕ್ಷೆ!
ರಿಪುಗಳಡಗಿಸ್ಯಾಯ್ತು ಯಜ್ಞ ರಕ್ಷೆ!
ಕೆಟ್ಟ ಹಿರಣ್ಯಕಶ್ಯಪಗಾಯ್ತು ಶಿಕ್ಷೆ!
ಗಂಡನನ್ನುಳಿಸಿದಾ ಸಾವಿತ್ರಿ ದಕ್ಷೆ!
ವನನ್ನೂ ಒಲಿಸಿಕೊಂಡಿತಾಕಾಂಕ್ಷೆ!
ದುರುಳ ದುಶ್ಯಾಸನಿಗಾಯ್ತು ಶಿಕ್ಷೆ!
ಪ್ರಭು ಕೃಷ್ಣ ದ್ರೌಪದಿಗಿತ್ತನು ರಕ್ಷೆ!
ಸಾವಿಗೂ ಹೆದರದು ಮಹತ್ವಾಕಾಂಕ್ಷೆ!
ದಾರಿ ಸಾಗಲಿಕ್ಕಾಗಿರಬೇಕು ದೀಕ್ಷೆ! (ಪ್ರ)
-ಕಾಂಡ ಪಂಡಿತನೂ ಮಾಡ್ಬಾರದುತ್ಪ್ರೇಕ್ಷೆ! (ಶಿ)
-ಕ್ಷೆ ಶ್ರೀ ನಿರಂಜನಾದಿತ್ಯನಿಂದ ರಕ್ಷೆ!!!

ಬೆಪ್ಪಾದರೇನು ಬೆಗಡಾದರೇನು? (ಕ)   4(1752)

-ಪ್ಪಾದ ಕರಿಕಲ್ಲು ಅದಾದರೇನು? (ಅ)
-ದರೊಳಗೆಲ್ಲಾ ಅಪ್ಪನಿಲ್ಲವೇನು? (ಆ)
-ರೇನೆಂದರೂ ಕಾರಣವನಲ್ಲೇನು? (ಅ)
-ನುಮಾನ ಬಿಟ್ಟಾತ್ಮಜ್ಞಾನಿಯಾಗ್ನೀನು!
ಬೆಚ್ಚಿ ಬೆದರಬೇಡ ಇನ್ನು ನೀನು! (ಯೋ)
-ಗಸಿದ್ಧಿಯಿದರಿಂದೆಂದರಿ ನೀನು! (ಉ)
-ಡಾಯಿಸಹಂಕಾರದಕಾಗಿ ನೀನು!
ತ್ತನಿಗಾಗಿ ತ್ಯಾಗಿಯಾಗು ನೀನು! (ಈ)
-ರೇಳು ಲೋಕಾಧೀಶನಾಗುವೆ ನೀನು! (ನಾ)
-ನು ನಿರಂಜನಾದಿತ್ಯೆನೆಂಬೆ ನೀನು!!!

ಬೆರಳಿಗೊಂದು ಕರ, ಹೆರಳಿಗೊಂದು ಶಿರ!   2(862)

ತ್ನಕ್ಕೊಂದು ಹಾರ, ಕತ್ತಿಗದೊಂದಲಂಕಾರ! (ಗಾ)
-ಳಿಗೊಂದು ಸಂಚಾರ, ಲೋಕಕ್ಕದೊಂದುಪಕಾರ!
ಗೊಂಬೆಗೊಂದಾಚಾರ, ಅಂಬೆಗದೊಂದುಪಚಾರ!
ದುರ್ಗಕ್ಕೊಬ್ಬ ಸರ್ದಾರ, ದುರ್ಗಿಗೊಬ್ಬ ಪೂಜಾರ!
ರ್ಮಕ್ಕೊಂದಾಕಾರ, ಧರ್ಮವಿದಕ್ಕೊಂದಾಧಾರ!
ಕ್ಕಸರ ಸಂಹಾರ, ಹರಿಗದು ವಿಹಾರ!
ಹೆಣ್ಣಿಗೊಂದು ಭಂಗಾರ, ಕಣ್ಣಿಗದು ಶೃಂಗಾರ!
ಮಣಗೆ ಸಂಸಾರ, ರಮಣಿ ಸಹಕಾರ! (ಅ)
-ಳಿಗಳ ಝೇಂಕಾರ, ಕಮಲ ಮಧು ಆಹಾರ!
ಗೊಂಡಾರಣ್ಯ ಭೀಕರ, ಕರಿ, ಹರಿಗಾಗಾರ!
ದುರಿತ ದೂರ ಗಂಭೀರ, ಹರ ಗಂಗಾಧರ!
ಶಿವಯೋಗಾನುಸಾರ, ಭವ ಭಯ ನಿಸ್ಸಾರ! (ಹ)
-ರ, ನಿರಂಜನಾದಿತ್ಯನುಪಕಾರ ಅಪಾರ!!!

ಬೆಲ್ಲದೆಲ್ಲಾಭಾಗ ಸಿಹಿಯಲ್ಲವೇನು?   6(3412)

(ಅ)-ಲ್ಲ ಯೆಂದರದು ಬೆಲ್ಲವಾಗುವುದೇನು?
(ಹಿಂ)-ದೆ, ಮುಂದೆ ಯೋಚಿಸಿ ಆಡಬೇಕು ನೀನು!
(ಕ)-ಲ್ಲಾದ್ರದನ್ನು ಕಲ್ಲೆಂದೇ ಅನ್ಬೇಕು ನೀನು!
ಭಾರ್ಯಾ, ಭರ್ತರಲ್ಲಿ ಭೇದ ಕಾಣ್ಬೇಡ ನೀನು!
(ಯೋ)-ಗವೆಂದರಿದೆಂದರಿಯಬೇಕು ನೀನು!
ಸಿಹಿಯೊಂದೇ ಕಂಡಾಗ್ಸಾಯುಜ್ಯೆನ್ನು ನೀನು!
ಹಿತಾ, ಹಿತಗಳನ್ನಾಗ ಕಾಣೆ ನೀನು!
ದುಪತಿಯ ರಾಧೆಯಾಗ್ಬೇಕು ನೀನು!
(ಗ)-ಲ್ಲಕ್ಕೆ ಮುದ್ದಿಕ್ಕಿದ್ರೆ ರಾಧೆಯಾಗೆ ನೀನು!
ವೇದಾಂತ ಸಾರವೇ ಆಗ್ಬೇಕೀಗ ನೀನು! (ಏ)
-ನು? ನಿರಂಜನಾದಿತ್ಯಾನಂದನಾಗ್ನೀನು!!!

ಬೆಳಕಾಗುತಿದೆದ್ದು ನೋಡು! (ಒ)   2(475)

-ಳಗಿನ ಮುಸ್ರೆ ಶುದ್ಧ ಮಾಡು!
ಕಾಲು, ಕೈ, ತೊಳೆದು ಬಂದಾಡು!
ಗುರು ಗುಣಗಾನವ ಹಾಡು!
ತಿಥಿ, ವಾರವೇಕೀಗ ಕೂಡು!
ದೆವ್ವ ಓಡುತಲಿದೆ ನೋಡು! (ಉ)
-ದ್ದುರುಟು ಮಾತು ಸಾಕು ಮಾಡು!
ನೋಡಿ, ಕೂಡಿ, ಸಂತೋಷಪಡು! (ಇ)
-ಡು, ನಿರಂಜನಾದಿತ್ಯಗೀಡು!!!

ಬೆಳಕಾಯಿತೇಳು ಗಂಗಾಧರಯ್ಯಾ! (ಕಾ)   4(2259)

-ಳರಾತ್ರಿಯ ಭಯವಿನ್ನಿಲ್ಲವಯ್ಯಾ!
ಕಾಗೆ ‘ಕಾ ಕಾ’ಯೆನ್ನುತಿದೆ ಕೇಳಯ್ಯಾ! (ತಾ)
-ಯಿ ಕಲ್ಯಾಣಿಯೊಡಗೂಡಿ ಬಾರಯ್ಯಾ! (ಮಾ)
-ತೇನಿಲ್ಲೈಹಿಕದ್ದೆನ್ನಲ್ಲೀಶ್ವರಯ್ಯಾ! (ಬಾ)
-ಳು ನಿನ್ನಲ್ಲೈಕ್ಯಗೊಳಿಸು ಕಾಲಯ್ಯೂ!
ಗಂಗೆ ಪಾರ್ವತಿಯಂತೆನ್ನ ಮಾಡಯ್ಯಾ!
ಗಾನ ಮಾಡಿಸು ನಿನ್ನ ನಾಮವಯ್ಯಾ!
ರ್ಮವೇನೆಂದು ನೀನೇ ಕಲಿಸಯ್ಯಾ! (ಬ)
-ರಲಿ ಶ್ರೀ ರಾಮರಾಜ್ಯ ಧರೆಗಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾತ್ಮ ನೀನಯ್ಯಾ!!!

ಬೆಳಕಿನಲ್ಲಿ ಬೆತ್ತಲೆ ನಿಲ್ಲು! (ಥ)   6(3631)

-ಳಕು, ಕೊಳಕೇನಿಲ್ಲದೇ ನಿಲ್ಲು!
ಕಿರುಕುಳವಿಲ್ಲದಲ್ಲಿ ನಿಲ್ಲು!
ರನಾದ್ರೂ, ನಾರಿಯಾದ್ರೂ ನಿಲ್ಲು! (ಕ)
-ಲ್ಲಿನ ಗೊಂಬೆಯೋ ಎಂಬಂತೆ ನಿಲ್ಲು!
ಬೆಕ್ಕೆಗೆಡೆಗೊಡದಂತೆ ನಿಲ್ಲು! (ಹೆ)
-ತ್ತವರೆಲ್ಲರೆಂದರಿತು ನಿಲ್ಲು! (ಲೀ)
-ಲೆ ಈ ಸೃಷ್ಟಿಯೆಂದರಿತು ನಿಲ್ಲು!
ನಿರಾಲಂಬನು ನೀನೆಂದು ನಿಲ್ಲು! (ನಿ)
-ಲ್ಲು ನಿರಂಜನಾದಿತ್ಯನಾಗ್ನಿಲ್ಲು!!!

ಬೆಳಿಗ್ಗೆ ಬರುವೆನೆಂದನಾಗ! (ಊ)   4(1816)

-ಳಿಗ ಮಾಡುವೆ ನಾನೆಂದನಾಗ! (ಆ)
-ಗ್ಗೆನ್ನ ಹರಸಬೇಕೆಂದನಾಗ!
ಲ ನಿನ್ನದೆನಗೆಂದನಾಗ! (ಅ)
-ರುಹೆಲ್ಲವಾಗೆನಗೆಂದನಾಗ! (ಈ)
-ವೆ ಕಾಣಿಕೆ ನಿನಗೆಂದನಾಗ!
ನೆಂಟ ನೀನು ನನಗೆಂದನಾಗ!
ತ್ತಾತ್ರೇಯನೇ ನೀನೆಂದನಾಗ!
ನಾಮಜಪ ಬಿಟ್ಟಿಲ್ಲೆಂದನಾಗ! (ನಾ)
-ಗ ನಿರಂಜನಾದಿತ್ಯಾನಂದಾಗ!!!

ಬೆಳೆಯುತಿದೆ ಚೆನ್ನಾಗಿ ಪಚ್ಚೆತೆನೆ! (ಮ)   4(2044)

-ಳೆಗರೆದನದಕಾಗಿ ಅಚ್ಚುತನ! (ಸಾ)
-ಯುವರ್ಗನ್ನ ನೀರ್ಕೊಡ್ವವನವನೆ!
ತಿಳಿದಿರು ನೀನಿದನು ಬಾಲಕನೆ! (ತಂ)
-ದೆ, ತಾಯಿ, ಬಂಧು, ಬಳಗೆಲ್ಲರ್ಗವನೆ! (ಆ)
-ಚೆ, ಯೀಚೆಯೋಡಬೇಡ ಪ್ರಿಯ ಸುತನೆ! (ನಿ)
-ನ್ನಾಟ, ನೋಟಗಳಿಂದಾಗ ನೀನವನೆ!
ಗಿರಿಧರ ಗೋಪಾಲ ಬಾಲನವನೆ!
ರಧರ್ಮ ಭಯವೆಂದವನವನೆ, (ಕೆ)
-ಚ್ಚೆದೆಯರ್ಜುನ ನೀನಾಗ್ಬೇಕು ಮಗನೆ! (ಜೊ)
-ತೆಗಾರನಾಗಿ ಕಾಯ್ವ ನಿನ್ನನವನೆ! (ನೆ)
-ನೆ ನಿರಂಜನಾದಿತ್ಯಾತೆಂದು ಮಗನೆ!!!

ಬೆವರು ಸುರಿಯುತಿದೆ ದೇಹದಿಂದ!   4(1919)

ರುಷವಾರುರುಳಿದವೀ ರೀತಿಯಿಂದ! (ಗು)
-ರುಕೃಪಾ ಬಲದಿಂದ ನಿಶ್ಚಿಂತೆಯಿಂದ!
ಸುಭದ್ರಾಗ್ರಜನಾತ್ಮೀಯ ಪ್ರೇಮದಿಂದ!
ರಿಪುಕುಲವಡಗಿ ಹೋಯ್ತದರಿಂದ! (ಸ್ನಾ)
-ಯುಬಲ ಸಮೃದ್ಧಿಯಾಯಿತದರಿಂದ!
ತಿನ್ನುವಾಸೆ ನಾಶವಾಯಿತದರಿಂದ! (ನಿಂ)
-ದೆ, ವಂದನೆಗಳೊಂದಾದುವದರಿಂದ!
ದೇವತ್ವದುದಯವಾಯಿತದರಿಂದ!
ಗಲಿರುಳಾತ್ಮ ಧ್ಯಾನ ಬಲದಿಂದ! (ಹೋ)
-ದಿಂಬು ಮತ್ತೆ ಕತ್ತೆತ್ತಿತೀಗದರಿಂದ!
ತ್ತ ನಿರಂಜನಾದಿತ್ಯಾದದರಿಂದ!!!

ಬೆವರು ಸುರಿಸಿ ಬಿತ್ತಿದ ಬೀಜ! (ಬೆ)   6(3929)

-ವರು ಸುರಿಸೇ ಬೆಳೆಸ್ಬೇಕು ನಿಜ! (ಕ)
-ರುಣೆ ಪ್ರಕೃತಿಗಿರ್ಬೇಕು ಸಹಜ!
ಸುವ್ಯವಸ್ಥೆ ತುಂಬಿಸೀತು ಕಣಜ! (ವೈ)
-ರಿ ನಿಗ್ರಹಕ್ಕೆ ಬೇಕು ಗಟ್ಟಿ ಭುಜ!
ಸಿಹಿ, ಕಹಿಯೂಟ ಉಣ್ಬೇಕ್ಮನುಜ!
ಬಿಡನು ಹೀಗಿರದಿದ್ದರೆ ಅಜ! (ಬಿ)
-ತ್ತಿದ್ದನ್ನುಂಡು ಹಾರಿಸಬೇಕು ಧ್ವಜ!
ರಿದ್ರನೂ ಆಗಬಹುದು ರಾಜ!
ಬೀದಿಯ ಬಸವನದ್ಬರೀ ಮಜ!
ಜಯ ನಿರಂಜನಾದಿತ್ಯಗೇ ನಿಜ!!!

ಬೇಕಾಗಿದ್ರೆ ದೂರ ಮನೆ ನೆರೆಮನೆ! (ಬೇ)   6(3716)

-ಕಾಗಿದ್ರೆ ನೆರೆಮನೆಯೂ ದೂರ ಮನೆ!
ಗಿರಿ ತಿರುಪತಿಯದ್ದು ದೂರ ತಾನೇ? (ನಿ)
-ದ್ರೆ, ಊಟ ಬಿಟ್ಟು ಯಾತ್ರೆ ಹೋಗ್ತಾರೆ ತಾನೇ?
ದೂರ, ಹತ್ತಿರ, ಮನಸ್ಸಿನ ಭಾವನೆ! (ಪ)
-ರಸ್ಪರವಿರ್ಬೇಕ್ಪರಮಾರ್ಥ ಚಿಂತನೆ!
ನುಜ ಅತ್ರಿಜನಾಗ್ಲಿಕ್ಕೆ ಸಾಧನೆ!
ನೆನೆದಾಚರಿಸ್ಬೇಕವನ ಬೋಧನೆ!
ನೆಟ್ಟ ಗಿಡಕ್ಕೆ ನೀರೆರೆಯಬೇಕ್ತಾನೇ? (ಮ)
-ರೆತರೆ ಒಣಗಿ ಹೋಗುವುದು ತಾನೇ!
ರವಾದಮೇಲೆ ಹಂಗೇನಿಲ್ಲ ತಾನೇ!
ನೆನೆದು ನಿರಂಜನಾದಿತ್ಯನಾಗ್ನೀನೇ!!!

ಬೇಕಾದದ್ದು ಎಲ್ಲಿದ್ದ್ರೂ, ಹೇಗಿದ್ದ್ರೂ ಬೇಕು!   6(3658)

ಕಾಲ, ಅಕಾಲವೆನ್ನದೇ ಅದು ಬೇಕು!
ಡ್ಡನಾದ್ರೂ, ಹೆಡ್ಡನಾದ್ರೂ ಅದು ಬೇಕು! (ಕ)
-ದ್ದು ತಂದು, ಗುದ್ದು ತಿಂದಾದ್ರೂ ಅದು ಬೇಕು!
ಡರುಗಳೆಷ್ಟೇ ಬಂದ್ರೂ ಅದು ಬೇಕು! (ಮ)
-ಲ್ಲಿಕಾರ್ಜುನ ಕಾವಲಿದ್ದ್ರೂ ಅದು ಬೇಕು! (ತ)
-ದ್ದ್ರೂಪ ಸಿದ್ಧಿಸುವಲ್ಲಿ ಈ ಹಠ ಬೇಕು!
ಹೇಡಿಯಾಗಿ ಅರ್ಧದಲ್ಲಿ ಬಿಡ್ದಿರ್ಬೇಕು!
ಗಿರಿಧಾರಿಯಂತೆ ವಿಜಯಿಯಾಗ್ಬೇಕು! (ಚಿ)
-ದ್ದ್ರೂಪವೇ ತದ್ದ್ರೂಪವೆಂದರಿಯಬೇಕು!
ಬೇಡಾದದ್ದಾಶಿಸಿ ಕೆಡದಿರಬೇಕು! (ಬೇ)
-ಕು ನಿರಂಜನಾದಿತ್ಯಾನಂದವೇ ಬೇಕು!!!

ಬೇಕಾದದ್ದು ಪ್ರಾಣವಿದ್ದ್ರೂ, ಹೋದ್ರೂ ಬೇಕು!   6(3739)

ಕಾರಣಕರ್ತ ಅದೆಂದರಿಯಬೇಕು!
ರಿದ್ರ, ಶ್ರೀಮಂತರಿಗೆಲ್ಲಾ ಅದ್ಬೇಕು! (ಸ)
-ದ್ದು ಮಾಡದೇ ಅದು ಸಿದ್ಧಿಯಾಗಬೇಕು!
ಪ್ರಾರ್ಥನೆ, ಭಜನೆ ಮಾಡುತ್ತಿರಬೇಕು! (ಹ)
-ಣ, ಕಾಸಿನಾಶೆ ತ್ಯಜಿಸಿಬಿಡಬೇಕು!
ವಿಶ್ವಾಸಘಾತಕನಾಗದಿರಬೇಕು! (ಬಿ)
-ದ್ದ್ರೂ, ಎದ್ದ್ರೂ ಎದೆಗೆಡದೆ ಇರಬೇಕು!
ಹೋದದ್ದಕ್ಕಾಗಿ ಚಿಂತಿಸದಿರಬೇಕು! (ತ)
-ದ್ರೂಪ ಚಿದ್ರೂಪವೆಂದರಿತಿರಬೇಕು!
ಬೇಸರವೀವ ಸಂಸಾರ ಬೇಡಾಗ್ಬೇಕು! (ಬೇ)
-ಕು ನಿರಂಜನಾದಿತ್ಯ ಎಂದೆಂದೂ ಬೇಕು!!!

ಬೇಕಾದರೆ ಮನೆಯಾಕೆಯೇ ಮೇನಕೆ!   6(3333)

(ಸಾ)-ಕಾದರೆ ಮೇನಕೆಯಾದ್ರೂ ಮನೆಯಾಕೆ!
ಶೇಂದ್ರಿಯಗಳು ಸಹಾಯ ಮನೆಕೆ!
(ಕ)-ರೆದರೂ ಬಾರದದು ಸನ್ನಿಧಾನಕ್ಕೆ!
ದ, ಮತ್ಸರವೆಂದರಿಷ್ಟವದಕ್ಕೆ!
(ಮ)-ನೆ ಮನೆಗಲೆವ ಸ್ವಭಾವವದಕ್ಕೆ!
ಯಾರ ಮಾತೂ ರುಚಿಸದಿರ್ಪುದದಕ್ಕೆ!
ಕೆಟ್ಟ ಚಾಳೆಯಿಂದಂಟಿಹುದು ಜಗಕ್ಕೆ!
(ಬಾ)-ಯೇ ಬಿಡದೆ ಮಾಡುವಭ್ಯಾಸ ಅದಕ್ಕೆ!
ಮೇರೆಯಿಲ್ಲ ಅದರ ಆಡಳಿತಕ್ಕೆ!
ಲ್ಲನೆಮ್ಮ ಬಾಲಗೋಪಾಲನದಕ್ಕೆ!
(ಸಾ)-ಕೆ ನಿರಂಜನಾದಿತ್ಯಕೃಷ್ಣನದಕ್ಕೆ??

ಬೇಕಾದಾಗ ಕುಡ್ಕೊಳ್ಳೆಳೆನೀರು!   4(2456)

ಕಾಯಿಸಿದ್ದು ಕುಡೀಬೇಡ ನೀರು!
ದಾರಿನಡೆದು ನಿನ್ನೂರು ಸೇರು! (ಗ)
-ಗನಮಣ್ಯಸ್ತಮಾನ್ಕ್ಮುಂಚೆ ಸೇರು!
ಕುಣ್ಕುಣಿದಾನಂದದಿಂದ ಸೇರು! (ತ)
-ಡ್ಕೊಳ್ಳದಿದ್ರೆ ಕಷ್ಟ ಸಿಗದೂರು! (ಸು)
-ಳ್ಳೆನಬೇಡಿರೆನ್ನ ಮಾತನ್ನಾರು! (ಇ)
-ಳೆಗೆ ನನ್ನಥಾ ಮಿತ್ರರಿನ್ಯಾರು?
ನೀತಿವಂತರಾಗಿರೆಲ್ಲವರು! (ಆ)
-ರು, ನಿರಂಜನಾದಿತ್ಯಗೆದುರು???

ಬೇಕಾದಾಗೇಕೆ ಬೇಕೆಂದಾಲೋಚಿಸಕ್ಕಾ!   2(578)

ಕಾಮವ ನೀನಿಂತಡಗಿಸಬೇಕಕ್ಕಾ!
ದಾರಿಯಿದಾರಾಮ ನಿಜರೂಪಕಕ್ಕಾ! (ಆ)
-ಗೇಟು, ಕಾಟ, ಪೇಚಾಟ ತಪ್ಪುವುದಕ್ಕಾ!
ಕೆನೆಮೊಸರ ಕಡೆದು ಬೆಣ್ಣೆಯಕ್ಕಾ!
ಕೆಂಜೆಡೊಡೆಯನ ಮಡದಿ ಹೀಗಕ್ಕಾ!
ದಾಯಾದಿಗಳಾಗ ಬಿಟ್ಟೋಡುವರಕ್ಕಾ!
ಲೋಭ ಮೋಹದಿಂದೆಲ್ಲಾ ಕಷ್ಟಗಳಕ್ಕಾ!
ಚಿರ ಸುಖಕಾಗಿದ ಬಿಡಬೇಕಕ್ಕಾ!
ದ್ಗುರು ಸೇವೆ ಇದಕೆ ದಾರಿಯಕ್ಕಾ! (ಅ)
-ಕ್ಕಾ! ನಿರಂಜನಾದಿತ್ಯ ಗುರುದತ್ತಕ್ಕಾ!!!

ಬೇಕಾದುದು ಬೇಕಾದಾಗ ಬರುವುದು!   1(49)

ಕಾಮವದು ದುಃಖಕೀಡುಮಾಡುವುದು!
ದುಡುಕಿದರೆ ಕೆಡಕು ಆಗುವುದು!
ದುಮ್ಮಾನ ಮನಸಿಗೆ ಉಂತಾಗುವುದು!
ಬೇಡಿ ನೀಡದಿರೆ ವಿರೋಧವಾಗುವುದು!
ಕಾಡಿ ಕೈಗೂಡದಿರೆ ಕ್ರೋಧ ಅಹುದು!
ದಾನವದು ದಾಸ್ಯಕೆಡೆಯಾಗುವುದು!
ತಿ, ನಿಜಸ್ಥಿತಿಗನ್ಯಾಯವಾಗುವುದು!
ಯಸಿದರೆ ಬಾಳು ಹಾಳಾಗುವುದು!
ರುಚಿಯಾದಮೃತಪಾನ ತಪ್ಪುವುದು!
(ಉ)-ವುಪೇಕ್ಷಿಸನು ಶ್ರೀ ಗುರು, ನಂಬುವುದು!
ದುಃಖ ದೂರ ನಿರಂಜನಾನಂದವಿದು!!!

ಬೇಕಿರದ ಸುಖಿ ನಾನು ; ಬೇಕೆನುವ ದುಃಖಿ ನೀನು!   1(56)

ಕಿರುಕುಳಕೊಳಗಾಗಿರುವಿ, ಬೇಕಿರುವ ನೀನು!
ಗಳೆಗಳಿರದೇನೂ ಬೇಕಿರದ ಸುಖಿ ನಾನು!
ಯೆಯಿಲ್ಲ ಗುರುದೇವನಿಗೆಂದಳುತಿಹೆ ನೀನು!
ಸುರಿಯುತಿದೆ ಸದಾ ದಯಾಸುಧೆಂದೆನ್ನುವೆ ನಾನು!
ಖಿನ್ನನಾಗಿರುವಿ ಬಹಳ ಬೇಕುಗಳಿಂದ ನೀನು!
ನಾನೇಕೆ ಬೇಡಲಿ? ನೀನಿತ್ತುದೆ ಸಾಕೆನುವೆ ನಾನು!
ನುಡಿಯಂತೆ ನಡೆಯದುದಕಾಗಿಹೆ ದುಃಖಿ ನೀನು!
ಬೇಕಾದಾಗ ಬೇಕಾದುದನೀವನೆಂಬ ಸುಖಿ ನಾನು!
ಕೆಟ್ಟೆ ನಾನೆಂಬಳುವಿನಲಿ ಮುಳುಗಿ, ದುಃಖಿ ನೀನು!
ನುಡಿ ಬೇಡೆಲ್ಲವನ ಪ್ರಸಾದವೆ

ಬ ಸುಖಿ ನಾನು!
ನವಾಸ, ಉಪವಾಸಗಳೇಕೆಂಬ ದುಃಖಿ ನೀನು!
ದುಃಖ, ಸುಖಗಲನಿಷ್ಟೆಂದಿರುವ ಸುಖಿ ನಾನು!
ಖಿಲವಾಗಿಹ ದುರ್ಬಲ ಮನದಿಂದ ದುಂಖಿ ನೀನು!
ನೀನೊಳಗಿರುತಿರಲೆನಗೇನೆಂಬ ಸುಖಿ ನಾನು!
ನುಡಿಯಂತೆ ನಡೆಯುತೊಂದಾಗಬೇಕು ನಾನು, ನೀನು!
ಅಥವಾ
ನುಡಿ, ನಡೆ ನಿರಂಜನಾದಿತ್ಯನಂತಿರಿಸು ನೀನು!!!

ಬೇಕಿರುವಲ್ಲಿ ನೂಕು ನುಗ್ಗುಲು!   3(1230)

ಕಿರಿಯರಾದಿಯಾಗೀ ನುಗ್ಗುಲು!
ರುಚಿ ಜಗಕ್ಕೀ ನೂಕು ನುಗ್ಗಲು! (ಆ)
-ವ ಸುಖ ಸೌಭಾಗ್ಯಕ್ಕೀ ನುಗ್ಗುಲು? (ವ)
-ಲ್ಲಿನಾಥನೊಲ್ಲಾ ನೂಕು ನುಗ್ಗಲು!
ನೂತನ ವರ್ಷದಲ್ಲೀ ನುಗ್ಗುಲು!
ಕುಗ್ಗಿ ಹೋಗಲೀ ನೂಕು ನುಗ್ಗುಲು! (ತ)
-ನು, ಮನಾಧೀನವಾಗೀ ನುಗ್ಗುಲು! (ಹೆ)
-ಗ್ಗುರಿಯಲ್ಲಿಲ್ಲಾ ನೂಕು ನುಗ್ಗುಲು! (ಬ)
-ಲು ನಿರಂಜನಾದಿತ್ಯಾವಾಗಲೂ!!!

ಬೇಕಿಲ್ಲದ ಬಾಳು ಬೇಗ ಮುಗಿಸಪ್ಪಾ (ಬೆ)   2(506)

-ಬೇಕಿದ್ದಿರಬೇಕಾಗಿದ್ದಿದ್ದರಿಂತೇಕಪ್ಪಾ? (ಎ)
-ಲ್ಲ ಬೇಕುಗಳ ಗಲ್ಲಿಗೇರಸ್ಯಾಯ್ತುಪ್ಪಾ!
ಯೆದೋರಿನ್ನಾದರೂ ಕರೆದ್ಕೊಳ್ಳಪ್ಪಾ!
ಬಾಳಲಾಗದಿಂತು ಬಹು ದಿನವಪ್ಪಾ! (ಬಾ)
-ಳು ಬೆಳಕಾಗಿ ಬದುಕಿದ್ದೂ ಆಯ್ತಪ್ಪಾ!
ಬೇರಿನ್ಯಾವನುಭವ ಬೇಕೆನಗಪ್ಪಾ?
ತಿ, ಸ್ಥಿತಿ, ಚ್ಯುತಿ ನನಗಿನ್ನಿಲಪ್ಪಾ!
ಮುಕ್ತಳಾದೆ ನಿನ್ನನುಗ್ರಹದಿಂದಪ್ಪಾ!
ಗಿರಿಜಾ ಕಲ್ಯಾಣವಾದಮೇಲೇನಪ್ಪಾ?
ತ್ಯ ಸಾಯುಜ್ಯ ಸುಖದಲಿರಿಸಪ್ಪಾ (ಅ)
-ಪ್ಪಾ! ನಿರಂಜನಾದಿತ್ಯನೈಕ್ಯ ಸುಖಪ್ಪಾ!!!

ಬೇಕು ಬಿಟ್ಟವಗಾವ ಕಷ್ಟ?   3(1399)

ಕುಲ, ಶೀಲ, ಸುಟ್ಟಾತ್ಮ ಶ್ರೇಷ್ಠ!
ಬಿಸಿ, ಶೀತವೆಂದರೆ ಕಷ್ಟ! (ಸಿ)
-ಟ್ಟಡಗಿಸಿಕೊಂಡಾತ್ಮ ಶ್ರೇಷ್ಠ! (ಭ)
ರೋಗ ಪೀಡೆ ಬಹು ಕಷ್ಟ!
ಗಾಢಾತ್ಮ ವಿಶ್ವಾಸಾತ್ಮ ಶ್ರೇಷ್ಠ! (ಭಾ)
-ವ ಭಕ್ತಿಯಿಲ್ಲದಿರೆ ಕಷ್ಟ!
ರ್ಮಬಂಧ ಹೋದಾತ್ಮ ಶ್ರೇಷ್ಠ! (ಇ)
-ಷ್ಟ ನಿರಂಜನಾದಿತ್ಯಾತ್ಮೇಷ್ಟ!!!

ಬೇಕು, ಬೇಡ, ಸಾಕುಮಾಡಿ ನೀನೇ ನಾನಾಗಾಡಯ್ಯ!   1(239)

ಕುಮನದ ಕುಹಕು ಕುಚೋದ್ಯ ಸಾಕುಮಾಡಯ್ಯ!
ಬೇನೆ ಬೇಸರದಿಂದ ಬೇಗ ದೂರವಿರಿಸಯ್ಯ! (ತ)
-ಡಬಡಿಸದಡಿಗಡಿಗೆ ನೀನೇ ಕಾಣಲಯ್ಯ!
ಸಾಮ, ದಾನ, ಭೇದ, ದಂಡೋಪಾಯವಿನ್ನು ಸಾಕಯ್ಯ!
ಕುಲ, ಶೀಲವರಿಯದ ಬಾಲನಂತೆ ಮಾಡಯ್ಯ!
ಮಾರನಾಟ, ಚೋರಕೂಟ ಭಾರೀ ಸಂಕಟವಯ್ಯ! (ಬ)
-ಡಿವಾರದ ಸಂಸಾರದ ಮಾತೆಲ್ಲಾ ಮಾಯೆಯಯ್ಯ!
ನೀಚ, ಉಚ್ಚ, ತುಚ್ಛಭಾವ ಭ್ರಾಂತಿ ಅಂತ್ಯ ಮಾಡಯ್ಯ!
ನೇಮ, ನಿಷ್ಠೆ, ನೀನಾಗಿರಲಿಕಾಗಿದ್ದಿರಲಯ್ಯ!
ನಾನಾ ಜಾತಿ, ಮತವೆಲ್ಲಕಾಧಾರ ಒಬ್ಬನಯ್ಯ!
ನಾಮಾನಂತದಿಂದ ಪೂಜಿಸಲ್ಪಡುವೆ ನೀನಯ್ಯ!
ಗಾಳಿ ಗೋಪುರದ ಬಾಳೆಲ್ಲಾ ಸುಳ್ಳು ಕನಸಯ್ಯ! (ತ)
-ಡಮಾಡದಭೀಷ್ಟ ಸಿದ್ಧಿ ಬೇಗ ಕರುಣಿಸಯ್ಯ! (ಅ)
-ಯ್ಯ! ನಿಂಜನಾದಿತ್ಯಯ್ಯ!! ಆನಂದದಿಂದಾಡಯ್ಯ!!!

ಬೇಕು, ಬೇಡಗಳಿಲ್ಲದವಗೆ ಶಾಂತಿ!   6(4299)

ಕುಹಕು, ಕುಚೋದ್ಯ ಬಿಟ್ಟವಗೆ ಶಾಂತಿ!
ಬೇಗೆ, ಚಳಿಯೆನ್ನದವನಿಗೆ ಶಾಂತಿ!
ಮರು, ಮುರಲಿ ತತ್ವಜ್ಞಗೆ ಶಾಂತಿ!
ದಾ, ತ್ರಿಶೂಲಧಾರಿಯರ್ಗಿಷ್ಟ ಶಾಂತಿ!
-ಳಿಗೋಪುರ ಕಟ್ಟುವವರಿಗಶಾಂತಿ (ಗೊ)
-ಲ್ಲ ಕೃಷ್ನನ ದ್ವೇಷಿಸಿದರೆ ಅಶಾಂತಿ!
ತ್ತಗುರು ದಾಸನಿಗೆ ನಿತ್ಯ ಶಾಂತಿ!
-ವನಿಂದೆಲ್ಲಾ ಲೋಕಗಳಿಗೂ ಪ್ರಶಾಂತಿ! (ಬ)
-ಗೆಬಗೆ ರೂಪದ ಪೂಜೆ ಬರೀ ಭ್ರಾಂತಿ!
ಶಾಂತಿಃ; ಶಾಂತಿ; ಶಾಂತಿಃ; ಆಗೆ ಚಿರ ಶಾಂತಿ!
ತಿಮಿರಾರಿ ನಿರಂಜನಾದಿತ್ಯಾ ಶಾಂತಿ!!!

ಬೇಕು, ಬೇಡವೆನ್ನದ ಸ್ಥಿತಿ ಯಾರಿಗೆ?   5(3064)

ಕುಲ ಗೋತ್ರಗಳಿಲ್ಲಿದಾ ದೇವರಿಗೆ!
ಬೆರ್ಬೇರೆ ನಾನೂ, ನೀನೆನ್ನದವನಿಗೆ!
ಮರುಧರ ಪರಮೇಶ್ವರನಿಗೆ!
ವೆಸನವೇತಕ್ಕೂ ಪಡದವನಿಗೆ! (ತ)
-ನ್ನ ತಾನು ತಿಳಿದಿರುವಂಥವನಿಗೆ!
ತ್ತನೇ ಗತಿಯೆಂದಿರುವವನಿಗೆ!
ಸ್ಥಿರಾಸ್ಥಿರವಾವುದೆಂದರಿತವಗೆ!
ತಿಲಾಂಜಲಿ ತ್ರಿಲೋಕಕ್ಕಿತ್ತವನಿಗೆ!
ಯಾಗ, ಯೋಗಕ್ಕೆಲ್ಲಾ ಸಾಕ್ಷಿಯಾದವಗೆ!
ರಿಪುಗಳಾರನ್ನು ಜೈಸಿದವನಿಗೆ! (ನ)
-ಗೆಮೊಗದಾ ನಿರಂಜನಾದಿತ್ಯನಿಗೆ!!!

ಬೇಕು, ಬೇಡೆನ್ನುವವ ನಾನಲ್ಲ! (ವ್ಯಾ)   3(1050)

-ಕುಲವೇಕೆಂದು ಯೋಚಿಸಿರೆಲ್ಲ!
ಬೇಕು ಬೇಡೆಂದಾಯ್ತು ದುಃಖವೆಲ್ಲ! (ಕೊ)
-ಡನೆಂದಿದ್ದರೂ ಕಾಡುವಿರಲ್ಲ! (ಹೊ)
-ನ್ನು, ಹೆಣ್ಣು, ಮಣ್ಣು ಶಾಶ್ವತವಲ್ಲ! (ಭ)
-ವ ಬಂಧದಿಂದ ಪಾರಾಗಿರೆಲ್ಲ!
ರ ಗುರುಧ್ಯಾನ ಮಾಡಿರೆಲ್ಲ!
ನಾಮ, ರೂಪಾತೀತರಾಗಿರೆಲ್ಲ! (ಜ)
-ನಕ ರಾಜನಂತಾಗಿ ನೀವೆಲ್ಲ! (ಬ)
-ಲ್ಲ ನಿರಂಜನಾದಿತ್ಯ ಆ ಗೊಲ್ಲ!!!

ಬೇಕುಗಳನೊಕ್ಕಲಿಕ್ಕಿದಾ ಭಾವಕ್ಕೆ ಶರಣು!   2(501)

ಕುಲ ಶೀಲಗಳೆಣಿಸದಾ ಭಾವಕ್ಕೆ ಶರಣು!
ಮನಾಗಮನರಿಯದಾ ಭಾವಕ್ಕೆ ಶರಣು! (ಒ)
-ಳಗೆ, ಹೊರಗೆಂಬುದಿರದಾ ಭಾವಕ್ಕೆ ಶರಣು!
ನೊಸಲ ಲಿಪಿಯೆಂದಳದಾ ಭಾವಕ್ಕೆ ಶರಣು! (ಉ)
-ಕ್ಕದ, ಸೊಕ್ಕದ ಸಹಜದಾ ಭಾವಕ್ಕೆ ಶರಣು! (ಉ)
-ಲಿಯದಳಿಯದಾನಂದದಾ ಭಾವಕ್ಕೆ ಶರಣು! (ಮು)
-ಕ್ಕಿ ಕಕ್ಕಿ ಬಿಕ್ಕೆಳಿಕೆ ಹೋದಾ ಭಾವಕ್ಕೆ ಶರಣು!
ದಾನಿ, ದೀನ, ‘ನೀ’ ‘ನಾ’ ಎನದಾ ಭಾವಕ್ಕೆ ಶರಣು!
ಭಾಗ್ಯ, ಭೋಗ್ಯ ಬೇಕೆಂದೆನದಾ ಭಾವಕ್ಕೆ ಶರಣು!
ರ ಗುರುಪಾದೈಕ್ಯವಾದಾ ಭಾವಕ್ಕೆ ಶರಣು! (ಅ)
-ಕ್ಕೆ ಜಗಕೆ ಕಲ್ಯಾಣವೆಂದಾ ಭಾವಕ್ಕೆ ಶರಣು!
ಕ್ತಿಯಿದೇ ಸರ್ವೇಶನೆಂದಾ ಭವಕ್ಕೆ ಶರಣು!
ಮೇಶ, ಉಮೇಶರಿದೆಂದಾ ಭಾವಕ್ಕೆ ಶರಣು! (ಕಾ)
-ಣು! ನಿರಂಜನಾದಿತ್ಯನದಾ ಭಾವಕ್ಕೆ ಶರಣು!!!

ಬೇಕೆಂದರೂ ಕೆಟ್ಟೆ, ಬೇಡೆಂದರೂ ಕೆಟ್ಟೆ! (ಏ)   4(1450)

-ಕೆಂದರೆರಡೂ ಅಹಂಕಾರೆಂದು ಬಿಟ್ಟೆ! (ಅ)
-ದಕಾಗಿ ನಾನೀಗ ಮೌನವಾಗಿ ಬಿಟ್ಟೆ!
ರೂಪ, ನಾಮಕ್ಕೆಲ್ಲಾ ತಿಲಾಂಜಲಿ ಬಿಟ್ಟೆ!
ಕೆಲ್ಲಸ ಕಾರ್ಯದಾಸಕ್ತಿಯನ್ನೂ ಬಿಟ್ಟೆ! (ಹೊ)
-ಟ್ಟೆ, ಬಟ್ಟೆಗಳ ಚಿಂತೆಯನ್ನೆಲ್ಲಾ ಬಿಟ್ಟೆ!
ಬೇಡುವಭ್ಯಾಸವನ್ನಂತೂ ಬಿಟ್ಟೇ ಬಟ್ಟೆ! (ನೋ)
-ಡೆಂದರೂ ಅಂದ ಚಂದ ಮರತೇ ಬಿಟ್ಟೆ!
ತ್ತ ಸ್ವರೂಪ ನನ್ನದೆಂದಿದ್ದು ಬಿಟ್ಟೆ! (ಊ)
-ರೂರಲೆಯುವುದದೇಕೆಂದಿದ್ದು ಬಿಟ್ಟೆ!
ಕೆರೆ, ಭಾವಿ, ನದಿಯೊಂದೆಂದಿದ್ದು ಬಿಟ್ಟೆ! (ಬ)
-ಟ್ಟೆ ನಿರಂಜನಾದಿತ್ಯನದ್ದೆತ್ತಿ ಬಿಟ್ಟೆ!!!

ಬೇಕೆಂದವರು ಸಾಕೆಂದಾರು! (ಸಾ)   5(2817)

-ಕೆಂದವರೆಲ್ಲಾ ಬೇಕೆಂದಾರು!
ತ್ತನಿಷ್ಟ ಬಲ್ಲವರಾರು? (ಆ)
-ವನಿಂದುತ್ತಮ ಗುರುವಾರು?
ರುಜುಮಾರ್ಗದಿಂದಡಿ ಸೇರು! (ಸಂ)
-ಸಾರಾಬ್ಧಿ ದಾಟಿ ದಡ ಸೇರು!
ಕೆಂಗಣ್ಣ ಶಿವನಂತಾಗಿರು!
ದಾರಿದೀಪವಾಗಿ ನೀನಿರು! (ಸೇ)
-ರು ನಿರಂಜನಾದಿತ್ಯನೂರು!!!

ಬೇಕೆಂದಾಗ ಇಕ್ಕುವವರ ನಾ ಕಾಣೆ! (ಸಾ)   6(4243)

-ಕೆಂದಾಗ ಇಕ್ಕದವರನ್ನೂ ನಾ ಕಾಣೆ!
ದಾರಿದ್ರ್ಯವನ್ನಲಕ್ಷಿಸುವ ತಾಯ್ಜಾಣೆ!
ಗನಸದೃಶಗಿಲ್ಲ ಆ ಭವಣೆ!
ಹ ಸುಖಾಕಾಂಕ್ಷಿಗೆಲ್ಲೆಲ್ಲೂ ಶೋಷಣೆ! (ಸಿ)
-ಕ್ಕುವುದವನಿಗೆ ರೂಪಾ

ಗೆ ನಾಲ್ಕಾಣೆ!
ರಿಸಿದವಳಲ್ಲ ಇವಕ್ಕೆ ಹೊಣೆ!
ರ ಗುರುಪಾದದಲ್ಲಿಡ್ಬೇಕು ಹಣೆ! (ಕ)
-ರಗಿ ಹೋಗುವುದು ಎಲ್ಲಾ ಅಡಚಣೆ!
ನಾನು, ನೀನೆಂಬುದಹಂಕಾರ ಧೋರಣೆ!
ಕಾಮಾರಿಯಿಂದಾಗ್ಬೇಕಿದು ನಿವಾರಣೆ! (ಹೊ)
-ಣೆ ನಿರಂಜನಾದಿತ್ಯೇಂದು ಕಲಾ ಹಣೆ!!!

ಬೇಗ ಬಾ ರಾಜರಾಜ ನಾಗರಾಜ!   4(1889)

ತಿಸುತಿದೆ ಕಾಲ ನಾಗರಾಜ!
ಬಾಯೊಣಗಿತು ಕೂಗಿ ನಾಗರಾಜ!
ರಾಮ, ಕೃಷ್ಣ ಸ್ವರೂಪಾ ನಾಗರಾಜ!
ರಾ, ಜನ್ಮ ವಿದೂರಾ ನಾಗರಾಜ!
ರಾಜೀವ ಸಖಾನಂದಾ ನಾಗರಾಜ!
ಗದೋದ್ಧಾರಾಧಾರಾ ನಾಗರಾಜ!
ನಾದ, ಬಿಂದು ಕಲಾತ್ಮಾ ನಾಗರಾಜ!
ರ್ವರಹಿತೋಂಕಾರಾ ನಾಗರಾಜ!
ರಾರಾಜಿಪನೆಲ್ಲೆಲ್ಲಾ ನಾಗರಾಜ! (ರಾ)
-ಜ ನಿರಂಜನಾದಿತ್ಯಾ ನಾಗರಾಜ!!!

ಬೇಗಾಗಲಿ ಬಾಕಿ ಸಂದಾಯ!   2(986)

ಗಾನ ಹರಿನಾಮವಾದಾಯ!
ತಿಗೇಡನ್ಯ ಸಂಪ್ರದಾಯ! [ಲ]
-ಲಿತಾ ತಾಯಿ ಸದಾ ಸಹಾಯ!
ಬಾಯ್ಗಿಡುವಳಮೃತ ಪೇಯ!
ಕಿರುಕುಳ ಸಂಸಾರಪಾಯ!
ಸಂತಸವೀವುದಾತ್ಮೋದಯ! (ಸ)
-ದಾನಂದವಿದೇ ಸರ್ವೋದಯ! [ಪ್ರಿ]
-ಯ ನಿರಂಜನಾದಿತ್ಯೋದಯ!!!

ಬೇಡವಾದದ್ದೇಕ ಬರಬೇಕು? (ಒ)   4(1493)

-ಡನಾಟ ಸಭ್ಯರದಾಗಬೇಕು!
ವಾದಕ್ಕೆಡೆಯಿಲ್ಲದಿರಬೇಕು!
ರ್ಪ, ದಂಭವಿರದಿರಬೇಕು! (ಉ)
-ದ್ದೇಶಾತ್ಮಾನಂದವಾಗಿರಬೇಕು!
ಕೆಟ್ಟಯೋಚನೆ ಬಿಟ್ಟಿರಬೇಕು!
ಲವೃದ್ಧಿ ಮನಕಾಗಬೇಕು! (ವ)
-ರಗುರು ಭಜನೆ ಮಾಡಬೇಕು!
ಬೇಲಿಯಿದು ಮನೆಗಾಗಬೇಕು! (ಬೇ)
-ಕು, ನಿರಂಜನಾದಿತ್ಯ ತಾ ಬೇಕು!!!

ಬೇಡವಾದುದ ಬಿಟ್ಟಿಲ್ಲ, ಬೇಕಾಗಿಹುದು ಸಿಕ್ಕಿಲ್ಲ! (ಆ)   1(432)

-ಡದೇ ನೀಡುವ ಉತ್ತಮ ಸ್ವಭಾವವಿನ್ನೂ ಹುಟ್ಟಿಲ್ಲ!
ವಾದ, ವಿವಾದದ ಹುಚ್ಚೇನೇನೂ ಕಡಿಮೆಯಾಗಿಲ್ಲ!
ದುಷ್ಟತನದ ಹಿಂಸಾಕೃತ್ಯಗಳಿನ್ನೂ ಅಡಗಿಲ್ಲ!
ಮನ ಇಂದ್ರಿಯಗಳದು ಜನ ಮನಕಾಗಿಲ್ಲ!
ಬಿತ್ತಿದ ಬೀಜಕ್ಕೆ ತಕ್ಕ ಫಲವೆಂದರಿವಾಗಿಲ್ಲ! (ಅ)
-ಟ್ಟಿ, ಅಟ್ಟಿ ಬೇಸತ್ತರೂ ಬೇಲಿಯಿನ್ನೂ ಹಾಕಿಸಲಿಲ್ಲ! (ಅ)
ಲ್ಲಲ್ಲಿನ ಹಳ್ಳ, ದಿಣ್ಣೆಗಳು ನೆಲಸಮವಾಗಿಲ್ಲ!
ಬೇಲಿಯಿಲ್ಲದ ಹೊಲದ ಕಾಳೂ ಕೈಗೆ ಬರೋದಿಲ್ಲ!
ಕಾಡು, ಕಳೆಗಳ ಕೀಳದಿದ್ದರೆ ಗಿಡ ಏಳೋಲ್ಲ!
ಗಿಳಿಗಳ ಅಟ್ಟಿದ ಮಾತ್ರಕ್ಕೆ ಲಾಭ ಹೆಚ್ಚೋದಿಲ್ಲ!
ಹುಸಿಯಾಡಿ ಮೋಸಮಾಡುವುದೇ ಆಗಿದೆಯೆಲ್ಲ!
ದುಡಿಮೆಯಲಿ ಶ್ರದ್ಧಾ, ಭಕ್ತಿ ಲೋಪವಾಗಿಹುದಲ್ಲ!
ಸಿರಿತನದಾಡಂಬರವೇ ಹೆಚ್ಚಾಗುತಿದೆಯಲ್ಲ! (ಅ)
-ಕ್ಕಿ ರೂಪಾಯಿಗೆ ಮೂರು ಪಾವೂ ಸಿಗುತಲಿಲ್ಲವಲ್ಲ! (ಅ)
-ಲ್ಲನನು ನಿರಂಜನಾದಿತ್ಯನೆಂದು ಭಜಿಸಿರೆಲ್ಲ!

ಬೇಡವಾಯ್ತೆನಗಿಂದು ತಿಂಡಿ! (ಬ)   5(2957)

-ಡವನಲ್ಲೇಕೆ ಕೋಪಗೊಂಡಿ? (ಜೀ)
-ವಾತ್ಮ ಪರಮಾತ್ಮೊಂದೆಂದ್ಕೊಂಡಿ! (ಬಾ)
-ಯ್ತೆರೆಯದಂತಿರಿಸಿಕೊಂಡಿ!
ನ್ನಲ್ಲೇನೀಗ ತಪ್ಪು ಕಂಡಿ? (ಆ)
-ಗಿಂದಾಗೆನ್ನನ್ನದುಮಿಕೊಂಡಿ!
ದುಷ್ಟರನ್ನೇ ಪ್ರೋತ್ಸಾಹಿಸ್ಕೊಂಡಿ!
ತಿಂದ ಅನ್ನ ವ್ಯರ್ಥ ಮಾಡ್ಕೊಂಡಿ! (ನೋ)
-ಡಿ ನಿರಂಜನಾದಿತ್ಯಾನ್ಜೋಡಿ!!!

ಬೇಡಿದ್ದನೀವ ದೆವ್ವವ ನಂಬುವರು! (ಬೇ)   6(4353)

-ಡಿದ್ದನ್ನೀಯದ ದೇವರನ್ನು ನಂಬರು! (ಇ)
-ದ್ದದ್ದರಲ್ಲಿ ತೃಪ್ತಿ ಪಡೆಂಬ ದೇವರು! (ತ)
-ನ್ನೀ ಉಪದೇಶವನ್ನಾರೂ ಪಾಲಿಸರು! (ಭ)
-ವಸಾಗರದಲ್ಲಾದ್ದ್ರಿಂದೊಡ್ಡಾಡುವರು! (ತಂ)
-ದೆ, ತಾಯಿಯರಾರೆಂದರಿಯದಿಹರು! (ದೆ)
-ವ್ವಗಳು ತಾವೇ ಆಗಿ ಪೀಡಿಸುವರು!
ರ ಗುರು ಸೇವೆಗೆ ಇಷ್ಟಪಡರು!
ನಂಬಬಾರದ್ದನ್ನು ನಂಬಿ ಕೆಡುವರು!
ಬುದ್ಧಿಗೆಟ್ಟು ನರಕಕ್ಕುರುಳುವರು! (ಶಿ)
-ವ ಭಕ್ತರು ಕೈಲಾಸವನ್ನೇರುವರು! (ಗು)
-ರು ನಿರಂಜನಾದಿತ್ಯ ತಾವಾಗುವರು!!!

ಬೇಡಿದ್ದುಕೊಟ್ಟು ಬೇಡಾದದ್ದಾಗ್ವುದೇಕೆ?   6(3337)

(ಹಾ)-ಡಿದರೆ ಹರಿನಾಮ ಶಾಂತಿ ಜೀವಕ್ಕೆ!
(ಬಿ)-ದ್ದುಹೋಗುವ ದೇಹಕ್ಕೆ ಮೋಹವೇತಕ್ಕೆ?
ಕೊಡಬೇಕಾದದ್ಕೊಡ್ವಾಗ ಚಿಂತೆಯೇತಕ್ಕೆ?
(ಹು)-ಟ್ಟು ಸಾವಿಗೆ ಕಟ್ಟುಬೀಳುವುದೇತಕ್ಕೆ?
ಬೇಕಾಗಿಲ್ಲ ಭಯಪಡುವುದಿದಕ್ಕೆ!
(ನೀ)-ಡಾಡಬೇಕು ದುರ್ಜನ ಸಂಗ ಅದಕ್ಕೆ!
ತ್ತ ಭಕ್ತಿ ಹೆಚ್ಚಲಿ ದಿನದಿನಕ್ಕೆ!
(ಒ)-ದ್ದಾಡಬೆಡ ಸಿಕ್ಕಿ ಸಂಸಾರಪಾಶಕ್ಕೆ!
(ಆ)-ಗ್ವುದುದ್ಧಾರ ಬಿದ್ದ್ರೆ ಸದ್ಗುರುಪಾದಕ್ಕೆ!
ದೇವ ದೇವ ಪರಬ್ರಹ್ಮನಾಗ್ವುದಕ್ಕೆ!
(ಏ)-ಕೆ ತಡ ನಿರಂಜನಾದಿತ್ಯನಾಗ್ಲಿಕ್ಕೆ!!!

ಬೇಡುವವರು ಬೇಡುತ್ತಲೇ ಇದ್ದಾರೆ! (ನೀ)   6(3576)

-ಡುವವರು ಕಣ್ಮುಚ್ಚಿ ಕೂತೇ ಇದ್ದಾರೆ! (ದೇ)
-ವರೆಂಬವರೂ ಹೀಗೇ ಸುಮ್ಮಗಿದ್ದಾರೆ! (ಯಾ)
-ವ ನೆರವೂ ಇಲ್ಲದನೇಕರಿದ್ದಾರೆ! (ಯಾ)
-ರು ಅವರನ್ನು ಕೇಳುವವರಿದ್ದಾರೆ?
ಬೇಲಿ ಹೊಲ ಮೇದ್ರೆ ಪೈರಿಗಾರಿದ್ದಾರೆ? (ನ)
-ಡು ಬೀದಿಯಲ್ಲೇ ಕೊಲೆ ಮಾಡುತ್ತಿದ್ದಾರೆ! (ಸು)
-ತ್ತಮುತ್ಲವ್ರು ಅಸಹಾಯಕ್ರಾಗಿದ್ದಾರೆ!
ಲೇಖಕನ ಬಾಯಿಗ್ಮಣ್ಣು ಹಾಕಿದ್ದಾರೆ!
ಹ, ಪರ, ಜೀವರ್ಕಂಗಾಲಾಗಿದ್ದಾರೆ! (ಒ)
-ದ್ದಾಟ ಸಾಕ್ಮಾಡೆಂದು ಪ್ರಾರ್ಥಿಸುತ್ತಿದ್ದಾರೆ! (ಮೊ)
-ರೆ ನಿರಂಜನಾದಿತ್ಯನಿಗಿಡ್ತಿದ್ದಾರೆ!!!

ಬೇಡೆಂದಾಗ ಬಡಿಸಬೇಡಯ್ಯಾ! (ನೀ)   2(767)

-ಡೆಂದಾಗ ಗಡಿಬಿಡಿ ಬೇಡಯ್ಯಾ!
ದಾರಿಬಿಟ್ಟು ನಡಿಯಬೇಡಯ್ಯಾ!
ತಿಗೆಟ್ಟು ನಡುಗಬೇಡಯ್ಯಾ!
ರಡು ಮಾತು ಆಡಬೇಡಯ್ಯಾ! (ಕೇ)
-ಡಿಗರಲ್ಲೊಡನಾಡಬೇಡಯ್ಯಾ!
ದಾತ್ಮ ಧ್ಯಾನ ಬಿಡಬೇಡಯ್ಯಾ!
ಬೇಸರಾತುರ ಮಾಡಬೇಡಯ್ಯಾ! (ಒ)
-ಡಕು ತೊಡಕಿಗಂಜಬೇಡಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನಾಗಯ್ಯಾ!!!

ಬೇಡ್ದಿದ್ಗಂಡಗ್ಮೊಸ್ರಲ್ಲಿ ಕಲ್ಲು! (ಹಾ)   6(3704)

-ಡ್ದಿದ್ದ ಹೆಣ್ಣಿಗ್ಬಾಯ್ಲಿಲ್ಲ ಹಲ್ಲು! (ಬಂ)
-ದ್ಗಂಡ್ನಟ್ಟಿ ಹೋದ್ಮಿಂಡ್ನೊಟ್ಟಿದ್ಗ್ರುಲ್ಲು! (ಮ)
-ಡದಿ, ಮಕ್ಳ ಸಾಯ್ಸೀಗೇನ್ಸೊಲ್ಲು? (ಆ)
-ಗ್ಮೊಟ್ಟೆ ತಿಂದೀಗ್ಕೆಟ್ಟೆಂದ್ಬಜೊಲ್ಲು! (ದ)
-ಸ್ರ ಕಳ್ದು ದೀಪವ್ಳೀಗೆಲ್ಲೆಲ್ಲು! (ಮ)
-ಲ್ಲಿಗೆಯ ವಾಸನೆ ನಮ್ಮಲ್ಲೂ!
ರ್ಮ ಮಾಡಿ ಮನವ ಗೆಲ್ಲು! (ನಿ)
-ಲ್ಲು, ನಿರಂಜನಾದಿತ್ಯಾಗ್ನಿಲ್ಲು!!!

ಬೇಳೆಹುಳಿ ಈಗೆನಗೆ ಕೊಟ್ಟೆ! (ನಾ)   4(1723)

-ಳೆಗೇನೆಂಬ ಯೋಚನೆಯೇಕಿಟ್ಟೆ?
ಹುಟ್ಟಿಸಿ ಎಷ್ಟೆಷ್ಟೋ ಕಷ್ಟ ಕೊಟ್ಟೆ! (ಬಾ)
-ಳಿನಲ್ಲಿನ್ನೂ ಆಶೆಯನ್ನೇಕಿಟ್ಟೆ?
ಪಾತ್ರಾಭಿನಯವೇನೋ ಕೊಟ್ಟೆ!
ಗೆಳೆಯನಿಂದೆನ್ನ ದೂರೇಕಿಟ್ಟೆ?
ನಗಾಗ ಭರವಸೆ ಕೊಟ್ಟೆ! (ಬೇ)
-ಗೆಯೆಲ್ಲೆನ್ನ ಬೇಯಲಿಕ್ಕೇಕಿಟ್ಟೆ?
ಕೊಡೀಗೆನಗೆ ಸಾರಂಗ ಬಟ್ಟೆ! (ಕೊ)
-ಟ್ಟೆ, ನಿರಂಜನಾದಿತ್ಯನೆಂದುಟ್ಟೆ!!!

ಬೇವು, ಬೆಲ್ಲ ತಿನ್ನುವುದಾದರ್ಶ! (ಸಾ)   5(2914)

-ವು, ನೋವಿಗಂಜದಿರ್ಪುದಾದರ್ಶ!
ಬೆಕ್ಕೆಗೀಡಾಗದಿರ್ಪುದಾದರ್ಶ! (ಬ)
-ಲವರ ಬೆಲ್ಲವಾಗ್ವುದಾದರ್ಶ!
ತಿತಿಕ್ಷೆಯೆಂಬುದು ದೊಡ್ಡಾದರ್ಶ! (ಹೊ)
-ನ್ನು, ಮಣ್ಣಿನಾಶೆ ಬಿಡ್ವುದಾದರ್ಶ! (ಪಾ)
-ವು ಹಾಲಾದರೂ ತೃಪ್ತಿಯಾದರ್ಶ!
ದಾನಿಯಾಗುವುದು ದಿವ್ಯಾದರ್ಶ!
ತ್ತಭಕ್ತಿ ಅತ್ಯುತ್ತಮಾದರ್ಶ! (ಸ್ಪ)
-ರ್ಶ ನಿರಂಜನಾದಿತ್ಯನದ್ಹರ್ಷ!!!

ಬೇಸರವಿಲ್ಲದಖಂಡ ಸೇವಾ!   2(697)

ರಳ ಭಾವದ ಪಾದ ಸೇವಾ!
ತ್ನ, ತಿಲಕಾದಿಗಳ ಸೇವಾ!
ವಿಕಲ್ಪವಿಲ್ಲದ ಭಕ್ತಿ ಸೇವಾ! (ಬೆ)
-ಲ್ಲದಂಥಾ ಸಿಹಿ ಮಾತಿನ ಸೇವಾ!
ತ್ತಗೆ ನಿತ್ಯ ನೈವೇದ್ಯ ಸೇವಾ! (ಅ)
-ಖಂಡ ಮೂರುವರುಷಗಳ ಸೇವಾ! (ಸ)
-ಡಗರವಿಲ್ಲದಮಲ ಸೇವಾ!
ಸೇವಾ, ನಿತ್ಯಭಜನೆಯ ಸೇವಾ! (ದೇ)
-ವಾ ನಿರಂಜನಾದಿತ್ಯನ ಸೇವಾ!!!

ಬೊಗಳುವುದು, ಕಚ್ಚುವುದು ನಾಯಿ!   6(3537)

ಣಿಸಬಾರದದನ್ನು ಸಿಪಾಯಿ! (ಕೂ)
-ಳು ಸಿಕ್ಕದಾದಾಗದು ಬಡಾಪಾಯಿ! (ಸಾ)
-ವು, ನೋವು, ಬಂದಾಗದು ನಿರುಪಾಯಿ!
ದುರ್ಜನಗೆ ಹದವಿಲ್ಲ ಕೈ ಬಾಯಿ!
ಷ್ಟ ಕೊಡ್ವನನ್ಯರ್ಗಾ ದುರುಪಾಯಿ! (ಮೆ)
-ಚ್ಚುವಳೇನವನ ಚಾಮುಂಡಿ ತಾಯಿ? (ಬೇ)
ವು ಬಿತ್ತಿದವ ಕೊ

ಯ್ಯ ಮಾವಿನ್ಕಾಯಿ!
ದುರ್ವ್ಯಾಪಾರಿಯಾಗನು ಸದಾಶ್ರಯಿ!
ನಾಮಸ್ಮರಣೆಯಿಂದವ ವಿಜಯಿ! (ಬಾ)
-ಯಿ ಮುಚ್ಚಿ ನಿರಂಜನಾದಿತ್ಯಾದಾಯಿ!!!

ಬೋಳಿಯಾಗು, ಮಹಾ ಕಾಳಿಯಾಗು! (ಗಾ)   3(1141)

-ಳಿ ಗೋಪುರ ಬಿಟ್ಟು ಕಾಳಿಯಾಗು!
ಯಾಕನ್ಯರೂಪ? ಬಾ! ಕಾಳಿಯಾಗು!
ಗುರುಶಿವನಿಷ್ಟ! ಕಾಳಿಯಾಗು!
ದನಾಕ್ಷಿ ತಾಯಿ ಕಾಳಿಯಾಗು!
ಹಾಸಿಗೆ ಹೇಸಿಗೆ! ಕಾಳಿಯಾಗು!
ಕಾಪಾಲಿಯಿರ್ಪಲ್ಲಿ ಕಾಳಿಯಾಗು! (ಆ)
-ಳಿ, ಬಾಳಿ, ಅಳಿದು ಕಾಳಿಯಾಗು!
ಯಾಕಿನ್ನೂ ನಿಧಾನ? ಕಾಳಿಯಾಗು! (ಆ)
-ಗು ನಿರಂಜನಾದಿತ್ಯಾತ್ಮಳಾಗು!!!

ಬೋಳಿಯಾಗೂಳಿಗದಾಳಾಗು! (ಕಾ)   3(1142)

-ಳಿ ಮಹಾಮಾಯೆ ನೀನಾಳಾಗು!
ಯಾಕಿನ್ನೂ ನಿಧಾನ? ಆಳಾಗು!
ಗೂಳಿಯಾಳುವವಗಾಳಾಗು! (ಅ)
-ಳಿದುಳಿದ ಶಿವಗಾಳಾಗು!
ಣಪತಿಯಯ್ಯಗಾಳಾಗು!
ದಾತ ಶಿವ ದತ್ತಗಾಳಾಗು! (ಕೀ)
-ಳಾಗು, ಮೇಲಾಗು, ನೀನಾಳಾಗು! (ಆ)
-ಗು, ನಿರಂಜನಾದಿತ್ಯಾತ್ಮಾಗು!!!

ಬ್ರಹ್ಮಜ್ಞಾನಿ ಬ್ರಾಹ್ಮಣನಯ್ಯಾ! (ಬ್ರಾ)   5(2513)

-ಹ್ಮಣಾರನ್ನೂ ದ್ವೇಷಿಸನಯ್ಯಾ!
ಜ್ಞಾನವನದು ಪಕ್ವವಯ್ಯಾ!
ನಿಶ್ಚಲ ತತ್ತ್ವ ಸ್ಥಿತಾತಯ್ಯಾ! (ಸಾಂ)
-ಬ್ರಾಣಿಧೂಪಾತ್ಮಧ್ಯಾನವಯ್ಯಾ! (ಬ್ರ)
-ಹ್ಮಕರ್ಮ ಪರಿಶುದ್ಧವಯ್ಯಾ! (ತೃ)
-ಣ ಕಾಷ್ಠ ವ್ಯಾಪಿಯವನಯ್ಯಾ! (ಅ)
-ನನ್ಯಭಕ್ತಿಗಾದರ್ಶನಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾತಯ್ಯಾ!!!

ಬ್ರಹ್ಮಾನಂದ ವಿಶ್ವೇಶ್ವರಯ್ಯಾ! (ಬ್ರ)   2(446)

-ಹ್ಮಾ, ವಿಷ್ಣು, ಶಿವ, ಏಕವಯ್ಯಾ!
ನಂಬಿಗೆ ವ್ಯರ್ಥವಾಗದಯ್ಯಾ!
ತ್ತ ನಿನ್ನೊಳಗಿಹನಯ್ಯಾ!
ವಿಚಾರವಿನ್ನೂ ಸಾಗಲಯ್ಯಾ!
ಶ್ವೇತ, ಪೀತಾಂಬರಲ್ಲವಯ್ಯಾ! (ಅ)
-ಶ್ವ, ರಥಾದಿಗಳಿಲ್ಲವಯ್ಯಾ! (ಅ)
-ರಸರರಸನಿವನಯ್ಯಾ (ಅ)
-ಯ್ಯಾ ನಿರಂಜನಾದಿತ್ಯನಯ್ಯಾ!!!

ಬ್ರಾಹ್ಮಣರೆಲ್ಲರನಾಳಿದರು! (ಬ್ರ)   4(2033)

-ಹ್ಮಜ್ಞಾನ ಭರಿತರಾದವರು! (ಗು)
-ಣ, ದೋಷ ನಿರ್ಣಯ ಸಮರ್ಥರು! (ಧ)
-ರೆಗಾಧಾರರೆನಿಸಿದವರು! (ಬ)
-ಲ್ಲವರೆಂಬಹಂಕಾರ ಶೂನ್ಯರು! (ಪ)
-ರ ಪೀಡೆಗೇಡೆಗೊಡದವರು! (ಅ)
-ನಾದರಾರಿಗೂ ತೋರದವರು! (ಆ)
-ಳಿಗಾಳಾಗಿ ಸೇವೆ ಗೈದವರು!
ರ್ಪ ದಂಭಗಳಿಲ್ಲದವರು! (ಗು)
-ರು ನಿರಂಜನಾದಿತ್ಯಂದವರು!!!

ಬ್ರಾಹ್ಮಣ್ಯದಲ್ಲಿ ಪುರೋಹಿತನ ಪಾತ್ರ! (ಬ್ರ)   6(3945)

-ಹ್ಮ ತೇಜಸ್ಸಿನಿಂದ ಕೂಡಿತ್ತಂದಾ ಪಾತ್ರ! (ಗ)
-ಣ್ಯತೆಗೆ ಹೆಸರಾಗಿತ್ತಾ ಪೂಜ್ಯ ಪಾತ್ರ! (ಉ)
-ದಯಾಸ್ತದಾಹ್ನೀಕಕ್ಕಾ ದರ್ಶನ ಪಾತ್ರ! (ಕ)
-ಲ್ಲಿನ ಗೊಂಬೆಯಂತೇಕಾಗ್ರತೆಯ ಪಾತ್ರ!
ಪುಸಿಯಾಡದೇ ಇರುತ್ತಿತ್ತಾ ಸತ್ಪಾತ್ರ!
ರೋಗಪೀಡಿತವಾಗಿರ್ತಿದ್ದಿಲ್ಲಾ ಪಾತ್ರ!
ಹಿತಕಾರಿಯಾಗಿತ್ತೆಲ್ಲರಿಗಾ ಪಾತ್ರ!
ಪದಿಂದಾಗಿತ್ತು ಪರಿಶುದ್ಧಾ ಪಾತ್ರ!
ರರುದ್ಧಾರಕ್ಕೆ ಇದೇ ತಕ್ಕ ಪಾತ್ರ!
ಪಾರಮಾರ್ಥದಿಂದಲೇ ಎಲ್ಲಾ ಪವಿತ್ರ! (ಮಂ)
-ತ್ರಮೂರ್ತಿ ನಿರಂಜನಾದಿತ್ಯ ಸ್ವತಂತ್ರ!!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ