ಫಲ ಪುಷ್ಪವಿಟ್ಟಾ ಬೆಳ್ಳಿಯ ತಟ್ಟೆ! (ಕು)   4(1627)

-ಲದೈವದ ಮುಂದಾನಂದದಿಂದಿಟ್ಟೆ!
ಪುನರ್ಜನ್ಮ ಬೇಡೆನಗೆಂದು ಬಿಟ್ಟೆ! (ಭಾ)
-ಷ್ಪಲೋಚನೆಯಾಗಿ ಸಂಕಟ ಪಟ್ಟೆ!
ವಿಧಿಯಾಜ್ಞೆ ಮೀರಲಾರದೇ ಕೆಟ್ಟೆ! (ಕೊ)
-ಟ್ಟಾತವನಲ್ಲವೇ ನನಗೀ ಬಟ್ಟೆ?
ಬೆಸಸೀಗೇನಾಜ್ಞೆನಗೆಂದು ಉಟ್ಟೆ! (ತ)
-ಳ್ಳಿದರಾಗದೀಗೆನ್ನನೆಂದೆ ದಿಟ್ಟೆ! (ಭ)
-ಯ ಪಡಬೇಡೆಂದಭಯಂದು ಕೊಟ್ಟೆ!
ಡವೇಕೆಂಬೀ ಬಿನ್ನಹವೀಗಿಟ್ಟೆ! (ಸು)
-ಟ್ಟೆ ನಿರಂಜನಾದಿತ್ಯನಾಗ್ಯಾ ಬಟ್ಟೆ!!!

ಫಲ, ಪ್ರಾರ್ಥನೆಗಳರ್ಪಿಸಿದ ಶೇಷಪ್ಪ!   2(961)

ಯವಾಗಿತ್ತವನ ಮನಪ್ಪನಲಪ್ಪ!
ಪ್ರಾತರ್ತಪ ಮುಗಿದಿತ್ತಾತ ಬಂದಾಗಪ್ಪ! (ಸಾ)
-ರ್ಥಕ ನರಜನ್ಮ ಗುರುಸೇವೆಯಿಂದಪ್ಪ! (ಮ)
-ನೆಯೊಡೆಯನಿಂದಾಯಿತೂಟೋಪಚಾರಪ್ಪ!
ಮನ ಬೆಳೆಯಿತು ಮುಂದಿನೂರಿಗಪ್ಪ! (ಒ)
-ಳಗೆ ವಾಹನದಲ್ಲಿದ್ದಿದ್ದ ಶ್ರೀಧರಪ್ಪ! (ಅ)
-ರ್ಪಿತವಾಯ್ತಪ್ಪನ ಪ್ರಸಾದವನಿಗಪ್ಪ!
ಸಿರಿಯನುಕೂಲೆಯಾಗಲಿ ಸೇವೆಗಪ್ಪ!
ತ್ತನಿಷ್ಟದಂತೆಲ್ಲಾ ಮಂಗಳಾಗಲಪ್ಪ!
ಶೇಷಶಯನ ಸರ್ವೇಶ ಗುರುದೇವಪ್ಪ!
ಷ್ಠಿ ಕಳೆದೆರಡರಾನಂದವಗಪ್ಪ! (ಅ)
-ಪ್ಪ, ಶ್ರೀಧರ ನಿರಂಜನಾದಿತ್ಯ ತಾನಪ್ಪ!!!

ಫಲಶ್ರುತಿಗಳೆಷ್ಟು ಹೇಳಿದರೇನು? (ಫ)   5(3075)

-ಲವಿಲ್ಲದ್ದು ಕಲ್ಪವೃಕ್ಷವಾದರೇನು?
ಶ್ರುತಿ ವಚನ ಸುಳ್ಳಾಗಬಹುದೇನು?
ತಿನ್ನಲಾಗದೂಟವೆಷ್ಟಿದ್ದರೇನು?
ಣೇಶನಿದನ್ನರಿಯಬಾರದೇನು? (ಇ)
-ಳೆಗೆ ಮಾಗದರ್ಶಕನಾಗ್ಬೇಕವನು! (ಇ)
-ಷ್ಟು ಕೂಗಿದ್ರೂ ಮುಖ ತೋರಬಾರದೇನು?
ಹೇರ್ಬಾರದು ತಪ್ಪು ನಮ್ಮ ಮೇಲವನು! (ತಿ)
-ಳಿದವನಿಗಜ್ಞಾನಿ ಹೇಳಬೇಕೇನು?
ರ್ಶನವಿತ್ತಾಶೀರ್ವದಿಸಲವನು!
ರೇಗಬಾರದು ಮಕ್ಕಳ ಮೇಲವನು! (ಸೂ)
-ನು ನಿರಂಜನಾದಿತ್ಯವಗಲ್ಲವೇನು???

ಫಲಿಸದಾಶೀರ್ವಾದವೇಕೆ? (ಜ್ವ)   4(2009)

-ಲಿಸದಿರುವಗ್ನಿಯದೇಕೆ?
ತ್ವವಿಲ್ಲದಾಹಾರವೇಕೆ?
ದಾನ ನೀಡದೆ ಧನವೇಕೆ? (ಸು)
-ಶೀಲೆಯಲ್ಲದ ಸತಿಯೇಕೆ? (ಸ)
-ರ್ವಾತ್ಮಾಭಾವದ ಭಕ್ತಿಯೇಕೆ?
ಯೆಯಿಲ್ಲದ ದೈವವೇಕೆ?
ವೇತನ ಶೂನ್ಯೋದ್ಯೋಗವೇಕೆ? (ಈ)
-ಕೆ ನಿರಂಜನಾದಿತ್ಯನಾಕೆ!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ