ಪಂಚ ಕನ್ಯಾ ಗುರುಸೇವೆ   1(92)

ಅಶನ, ಪಾನ ಬೇಡ ಬಾಯಮ್ಮ!
ಪುರಾಣ ಸಾಕು ಈಗ ನಾಲ್ಗಮ್ಮ!
ಮೇಲಿನ ಬಟ್ಟೆ ತೆಗೆ ತೊಗ್ಲಮ್ಮ!
ಲಂಗೋಟಿ ಕಟ್ಟು ಗಟ್ಟಿ ಗುದಮ್ಮ!
ಸಡಿಲು ಮಾಡಾಬೇಡ ಲಿಂಗಮ್ಮ!
ನಿರಂಜನಾದಿತ್ಯ ನಿಮ್ಮವಮ್ಮಾ!!!

ಪಂಚಭಕ್ಷದೂಟ ದೊರಕದೊಟ್ಟಿಗೆಲ್ಲರಿಗೆ! (ಪಾಂ)   6(4352)

-ಚ ಭೌತಿಕ ಶರೀರ ಧರಿಸಿರುವವರಿಗೆ!
ಗವದ್ಭಕ್ತಿ, ವಿಶ್ವಾಸವಿಲ್ಲದಂಥವರಿಗೆ!
ಕ್ಷಮಾಗುಣ, ಶೀಲ ಸಂಪನ್ನರಲ್ಲದವರಿಗೆ!
ದೂರಿ ಉಂಡಮನೆಗೆರಡು ಬಗೆವವರಿಗೆ!
ಕ್ಕು, ಠವಳಿಯಿಂದ ಹೊಟ್ಟೆ ಹೊರುವವರಿಗೆ!
ದೊಡ್ಡವ, ಚಿಕ್ಕವರೆಂಬ ಭೇದಮಾಳ್ಪವರಿಗೆ! (ಪ)
-ರರು, ತನ್ನವರೆಂದ್ಪಕ್ಷಪಾತ ತೋರ್ಪವರಿಗೆ!
ಳ್ಳ, ಸುಳ್ಳ, ವಂಚಕೀ ಮೊದಲಾದವರಿಗೆ!
ದೊರಕಿದ್ದರಲ್ಲಿ ತೃಪ್ತಿಯಿಲ್ಲದಂಥವರಿಗೆ! (ಕೆ)
-ಟ್ಟಿಹ ಮನಸ್ಸಿಂದನ್ಯದೂಷಣೆ ಮಾಳ್ಪವರಿಗೆ!
ಗೆಳೆಯರೆನಿಸಿ ಕೊರಳು ಕೊಯ್ಯುವವರಿಗೆ! (ಅ)
-ಲ್ಲ ಸಲ್ಲದಾಟದಿಂದ ಗುಲ್ಲೆಬ್ಬಿಸುವವರಿಗೆ! (ಪ)
-ರಿ ಪರಿಯಾಸೆಯಿಂದ ತಪ್ತರಾದಂಥವರಿಗೆ!
ಗೆಳೆಯ ನಿರಂಜನಾದಿತ್ಯನ ಮರೆತವ್ರಿಗೆ!!!

ಪಂಡಿತರಿಗಿದೆನ್ನ ಮಂಡಿಗೆಯೂಟ! (ಉಂ)   6(4245)

-ಡಿದನ್ನರಗಿಸಲಿಕ್ಕೆ ಬೇಕು ಆಟ!
ಲೆಗೆ ಸುತ್ತಿದರೆ ಸಾಲದು ಪೇಟ! (ಅ)
-ರಿಯದಾ ಬರೀ ತಲೆಗೇಕೆ ಬೂಟಾಟ?
ಗಿರಿಧಾರಿಯಿಂದ ಕಲಿಯಬೇಕ್ಪಾಠ! (ಎ)
-ದೆ ವಿಶಾಲವಾದಾಗ ತೆರೆಯಲಿ ಕಂಠ! (ತಿ)
-ನ್ನಲಿಲ್ಲವೇ ಅಂದು ಶಿವ ಕಾಲಕೂಟ?
ಮಂಗಳಕರ ಶಂಕರನಾಟ, ನೋಟ! (ಕೂ)
-ಡಿಕೊಂಡವ ಅವನಲ್ಲಿ ನಿಜ ಭಂಟ! (ತೆ)
-ಗೆದೊಗೆವನವ ವೈರಿಗಳ ಕಾಟ! (ಸಾ)
-ಯುಜ್ಯ ಸುಖವುಂಟಾಗುವುದಾಗ ದಿಟ! (ದಿ)
-ಟ ನಿರಂಜನಾದಿತ್ಯಗಿಲ್ಲ ಕಪಟ!!!

ಪಕ್ಷವಾವುದಾಳಿದರೇನು? (ಲ)   6(3304)

-ಕ್ಷಣವಾಗಿಡ್ಬೇಕ್ರಾಷ್ಟ್ರವನ್ನು! (ನಿ)
-ವಾರಿಸ್ಬೇಕೆಲ್ಲಾ ಕಷ್ಟವನ್ನು! (ಗೋ)
-ವು ಹತ್ಯೆಯಾಗಬಾರದಿನ್ನು!
ದಾನವ ಬುದ್ಧಿ ಹೋಗ್ಬೇಕಿನ್ನು! (ಬಾ)
-ಳಿಧನ್ಯರಾಗ್ಬೇಕೆಲ್ಲರಿನ್ನು!
ಮೆ, ಶಮಾಭ್ಯಾಸಾಗ್ಬೇಕಿನ್ನು! (ಹ)
-ರೇ ರಾಮ ಭಜನೆ ಮಾಡ್ಬೇಕಿನ್ನು! (ಸೂ)
-ನು ನಿರಂಜನಾದಿತ್ಯಗೆನ್ನು!!!

ಪಕ್ಷವೆಷ್ಟಿದ್ದರೂ ನಿಷ್ಟಕ್ಷಪಾತಿ ಗುರುದೇವ!   6(4213)

ಕ್ಷಮಾಗುಣ ಪರಿಪೂರ್ನಸದ್ಗುರು ಮಹಾದೇವ!
ವೆಗ್ಗಳದ ಸಾಯುಜ್ಯಾನಂದದಾತ ಗುರುದೇವ! (ಸೃ)
-ಷ್ಟಿ, ಸ್ಥಿತಿ, ಲಯ ಕರ್ತಾ ಪರಬ್ರಹ್ಮ ಗುರುದೇವ! (ಸ)
-ದ್ದಡಗಿಸಿದನು ಕಾಳಿಂಗನನ್ನಾ ಗುರುದೇವ!
ರೂಪ, ನಾಮಾತೀತ, ವಿಶ್ವನಾಥ ಶ್ರೀ ಗುರುದೇವ!
ನಿತ್ಯ, ಸತ್ಯ, ಸಚ್ಚಿದಾನಂದ ರೂಪ ಗುರುದೇವ! (ಪು)
-ಷ್ಪ ಮಾಲಾಧರ ಸತ್ಯನಾರಾಯಣಾ ಗುರುದೇವ! (ರಾ)
-ಕ್ಷಸಕುಕಕಾಲ, ವೀರ ರಾಘವಾ ಗುರುದೇವ!
ಪಾತಕ ಸೂತಕಾತೀತ ಯಾದವಾ ಗುರುದೇವ!
ತಿತಿಕ್ಷಾದ್ಯಾದಿಶಕ್ತಿ, ಸರ್ವ ಶಕ್ತೀ ಗುರುದೇವ!
ಗುಹ್ಯಾ, ಜಿಹ್ವಾದಿಂದ್ರಿಯ ನಿಗ್ರಹೀ ಶ್ರೀ ಗುರುದೇವ! (ಪಾ)
-ರು ಮಾಳ್ಪವ ಭವಬಂಧನದಿಂದಾ ಗುರುದೇವ!
ದೇವ ದೇವ ಸದ್ಗುರುದೇವ ಶಿವಾನಂದ ದೇವ! (ಅ)
-ವ, ನಿರಂಜನಾದಿತ್ಯಾತ್ಮಾನಂದದಲ್ಲಿರುವವ!!!

ಪಟ್ಟವಾರಿಗಾದರೂ ಬರಲಿ! (ಕೆ)   4(1987)

-ಟ್ಟಬುದ್ಧಿಯವಗಿಲ್ಲದಿರಲಿ!
ವಾಸುದೇವನ ಧ್ಯಾನವಿರಲಿ! (ದಾ)
-ರಿ ವೈಕುಂಠಕ್ಕೆ ಸಾಗುತ್ತಿರಲಿ!
ಗಾಳಿ, ಮಳೆಯಂಜಿಕೆ ಹೋಗಲಿ!
ರ್ಶನೇಚ್ಛೆ ಸ್ವಚ್ಛವಾಗಿರಲಿ!
ರೂಪ, ನಾಮಾತೀತದಾಗಿರಲಿ!
ಸವನಂತೆ ಭಕ್ತಿಯಿರಲಿ! (ವ)
-ರ ಗುರುಕೃಪೆ ಸದಾ ಇರಲಿ! (ಕೂ)
-ಲಿ ನಿರಂಜನಾದಿತ್ಯ ಕೊಡಲಿ!!!

ಪಟ್ಟವೇರೊಮ್ಮತದಿಂದ! (ಕೆ)   4(2010)

-ಟ್ಟಹಂಕಾರ ವರ್ಜದಿಂದ!
ವೇದಾಂತ ಜೀವನದಿಂದ!
ರೊಟ್ಟಿಯಾಶಾಭಾವದಿಂದ! (ನ)
-ಮ್ಮ, ನಿಮ್ಮೆಂಬಭೇದದಿಂದ!
ರಣಿಯಾದರ್ಶದಿಂದ! (ತ)
ದಿಂಗಿತಾನುಭವದಿಂದ! (ಇ)
-ದ ನಿರಂಜನಾದಿತ್ಯಂದ!!!

ಪತಿ ಶ್ರೀರಾಮನಾದರೇನಾಯ್ತು? [ಸ]   3(1271)

-ತಿ ಪ್ರಾರಬ್ಧ ಭೋಗಿಸಬೇಕಾಯ್ತು!
ಶ್ರೀರಾಮ ಪ್ರೇಮ ಸುಸ್ಥಿರವಾಯ್ತು!
ರಾವಣನಿಗೂ ಭಯವುಂಟಾಯ್ತು!
ರ್ಕಟೇಶನ ದರ್ಶನವಾಯ್ತು!
ನಾಮ ಮಹಿಮೆಯ ಅರಿವಾಯ್ತು!
ಯೆ ರಾಮನದವಳಿಗಾಯ್ತು! (ಈ)
-ರೇಳು ಲೋಕಕ್ಕುಪಕಾರವಾಯ್ತು!
ನಾಸ್ತಿಕ ಭಾವದ ನಾಶವಾಯ್ತು! (ಆ)
-ಯ್ತು, ನಿರಂಜನಾದಿತ್ಯ ತಾನಾಯ್ತು!!!

ಪತಿ, ಶ್ರೀಪತಿ ಜಗತ್ಪತಿ!   2(616)

ತಿರುಪತಿ ವೈಕುಂಠ ಪತಿ!
ಶ್ರೀಮತಿಗಾತ್ಮಾರಾಮ ಪತಿ!
ತಿತ ಪತಿ, ಸೀತಾಪತಿ!
ತಿರುಕ ಪತಿ, ದತ್ತಪತಿ!
ನಪತಿ ಜೈ ಗಣಪತಿ!
ತಿಪತಿ ಶ್ರೀ ಗುರುಪತಿ! (ಸ)
-ತ್ಪಥಿ ಪತಿ ಅದಿತ್ಯ ಪತಿ! (ಪ)
-ತಿ ನಿರಂಜನಾದಿತ್ಯ ಪತಿ!!!

ಪತಿತ ಪಾವನ ನಾನೇ! (ಅ)   2(785)

-ತಿ ಹಿತ ಮತಿಯೂನಾನೇ!
ತ್ವ ಮೂರ್ತಿ ದತ್ತ ನಾನೇ!
ಪಾಮರ, ಪಂಡಿತ ನಾನೇ!
ರ ಯೋಗಿರಾಜ ನಾನೇ!
ರ, ನಾರಿ ರೂಪ ನಾನೇ!
ನಾದ, ಬಿಂದು, ಕಲಾ ನಾನೇ! (ನಾ)
-ನೇ ನಿರಂಜನಾದಿತ್ಯಾನೇ!!!

ಪತಿತ ಪಾವನ ನಾಮ ರಾಮ! (ಸ)   2(576)

-ತಿ ಸೀತಾ ಸಮೇತಾನಂದ ರಾಮ!
ರಣಿಕುಲ ಲಲಾಮ ರಾಮ!
ಪಾದಸೇವಾ ಭ್ರಾತೃ ಪ್ರೇಮ ರಾಮ!
ರಾಂಜನೇಯ ಸೇವ್ಯ ಶ್ರೀರಾಮ!
ತಹಲ್ಯೋದ್ಧಾರ ರಘುರಾಮ!
ನಾಮ ಶಿವಗಾನಂದ ಶ್ರೀರಾಮ!
ಹಾಮಹಿಮಾ ನಾಮ ಶ್ರೀರಾಮ!
ರಾಕ್ಷಸಾಂತಕ ವೀರ ಶ್ರೀರಾಮ!
ಮ ನಿರಂಜನಾದಿತ್ಯಾ ರಾಮ!!!

ಪತಿತ ಪಾವನನುಪಮ ಧಾಮ!   2(575)

ತಿರುಪತಿ ದೇವನ ಪುಣ್ಯ ಧಾಮ!
ಪಸಿಗಾರಾಮಾ ವೈಕುಂಠ ಧಾಮ!
ಪಾಪ ನಿರ್ಲೇಪಕರ ಪರಂಧಾಮ!
ರ ಪ್ರಸಾದಕದಾದರ್ಶ ಧಾಮ!
ರ, ಸುರರೆಲ್ಲರಾನಂದ ಧಾಮ! (ಅ)
-ನುದಿನ ಕನಕ ಕಾಣಿಕಾ ಧಾಮ!
ರ್ವತಾಗ್ರದಲಾ ಗೋವಿಂದ ಧಾಮ!
ರ್ತ್ಯ ಲೋಕಕಿದದ್ಭುತ ಧಾಮ!
ಧಾಮಾ ನಿರಂಜನ ಸಾಯುಜ್ಯ ಧಾಮ!
ಮ ನಿರಂಜನಾದಿತ್ಯನಾ ಧಾಮ!!!

ಪತಿತೋದ್ಧಾರ ದೈತ್ಯ ಸಂಹಾರ! (ಸ)   3(1253)

-ತಿ ಸೀತೆಯತ್ಯಮೌಲ್ಯಾಲಂಕಾರ! (ಜಾ)
-ತೋತ್ತಮ ಸೂರ್ಯವಂಶ ಮಂದಾರ! (ಶ್ರ)
-ದ್ಧಾ ಭಕ್ತಿಗನವರತಾಧಾರ!
ರೆಮೇಶ, ಉಮೇಶರೇಕಾಕಾರ!
ದೈವೀಸಂಪದ್ಗುಣಗಳಾಗಾರ! (ಸ)
-ತ್ಯ ಧರ್ಮ ರಾಮರಾಜನುದಾರ!
ಸಂಪೂರ್ಣಾತ್ಮಾನಂದ ರಘುವೀರ!
ಹಾಡಿ ಹಣ್ಣಾದ ಭಕ್ತರಪಾರ! (ವ)
-ರ ನಿರಂಜನಾದಿತ್ಯನಾಕಾರ!!!

ಪತಿಯ ಬೆರೆತು ಮೈಮರೆತೆ!   3(1386)

ತಿರುಪತೀಶನಾರೆಂದರಿತೆ!
ಜ್ಞೇಶ್ವರನವನೆಂದರಿತೆ!
ಬೆಡಗ ಸುಟ್ಟವನನ್ನರಿತೆ! (ಮ)
-ರೆತಿಲ್ಲವನೆನ್ನನೆಂದರಿತೆ!
ತುರಿಯಾತೀತವನೆಂದರಿತೆ!
ಮೈ ಭಾವವನಿಗಿಲ್ಲೆಂದರಿತೆ!
ಮಕಾರ ಶೂನ್ಯನೆಂದರಿತೆ! (ಕ)
-ರೆ ಸಿಹ ನೀಗೆನ್ನನೆಂದರಿತೆ! (ಸೋ)
-ತೆ, ನಿರಂಜನಾದಿತ್ಯಸುಪ್ರೀತೆ!!!

ಪತಿಯೇ ಪರದೈವವಮೃತಾ!   4(2280)

ತಿಳಿದಿದ ಸೇವೆ ಮಾಡಮೃತಾ! (ಕಾ)
-ಯೇಚ್ಛೆ ಕಡಿಮೆಯಾಗಲಮೃತಾ!
ರಮಾರ್ಥವರಿತಿರಮೃತಾ! (ವ)
-ರಗುರುವಂತರ್ಯಾಮಿಯಮೃತಾ!
ದೈನ್ಯ ಭಾವಕ್ಕೊಲಿವನಮೃತಾ! (ಅ)
-ವನಿಚ್ಛೆಯಂತಾಗ್ವುದೆಲ್ಲಮೃತಾ! (ಭ)
-ವರೋಗ ವೈದ್ಯನವನಮೃತಾ!
ಮೃಗಜಲ ಸಂಸಾರವಮೃತಾ!
ತಾ, ನಿರಂಜನಾದಿತ್ಯನಮೃತಾ!!!

ಪತ್ರ, ಮೇಲೊಂದು ಚಿತ್ರ, ವಿಚಿತ್ರ! (ಪು)   4(1827)

-ತ್ರ, ಕಳತ್ರಗಳೆಂಬಾ ವಿಚಿತ್ರ!
ಮೇರೆಯಿಲ್ಲದ ಮೋಹಾ ವಿಚಿತ್ರ! (ಮಾ)
-ಲೊಂದರಲ್ಲಿರುವುದಾ ವಿಚಿತ್ರ!
ದುಡಿಯದಿದ್ದರಿಲ್ಲಾ ವಿಚಿತ್ರ!
ಚಿತೆಯ ಮೇಲೆ ಮಾಯಾ ವಿಚಿತ್ರ!
ತ್ರಯಲೋಕದಲ್ಲೆಲ್ಲಾ ವಿಚಿತ್ರ!
ವಿಕಲ್ಪ, ಸಂಕಲ್ಪದಾ ವಿಚಿತ್ರ!
ಚಿದಾಕಾಶದಲ್ಲಿಲ್ಲಾ ವಿಚಿತ್ರ! (ಮಿ)
-ತ್ರ ನಿರಂಜನಾದಿತ್ಯಾತ್ಮಾ ಪತ್ರ!!!

ಪಥಿಪತಿ, ಪತಿಪತಿ, ಪಶುಪತಿ! (ರ)   4(2170)

-ಥಿ, ಸಾರಥಿ, ಶ್ರೀಪತಿ, ವೈಕುಂಠಪತಿ!
ದ್ಮಪತಿ, ಸಿದ್ಧಪತಿ, ಶುದ್ಧಪತಿ! (ದಿ)
-ತಿಪತಿ, ಅದಿತಿಪತಿ, ಅಧಿಪತಿ!
ರಪತಿ, ಸ್ಥಿರಪತಿ, ಗೌರೀಪತಿ!
ತಿರುಪತಿ, ಪುರಪತಿ, ಸುರಪತಿ!
ತಿತಪತಿ, ಭೂಪತಿ, ರಘುಪತಿ!
ತಿರುಕಪತಿ, ಚಿತ್ಪತಿ, ದತ್ತಪತಿ! (ರೂ)
-ಪಪತಿ, ಆರೂಪಪತಿ, ಆತ್ಮಪತಿ!
ಶುಚಿಪತಿ, ರುಚಿಪತಿ, ಛಾಯಾಪತಿ! (ಕೋ)
-ಪಪತಿ, ತಾಪಪತಿ, ಪಾರ್ವತೀಪತಿ! (ಪ)
-ತಿ ನಿರಂಜನಾದಿತ್ಯಾ ತ್ರಿಲೋಕಪತಿ!!!

ಪದವೀಧರನಾಗಬೇಕಪ್ಪಾ! (ಕಂ)   4(2145)

-ದಮ್ಮಯ್ಯರೈಕ್ಯವಾಗಬೇಕಪ್ಪಾ!
ವೀತರಾಗನಾಗಿರಬೇಕಪ್ಪ! (ಸ್ವ)
-ಧರ್ಮನಿಷ್ಠೆಯಿಂದಿರಬೇಕಪ್ಪಾ! (ವ)
-ರಗುರು ಸೇವೆ ಮಾಡಬೇಕಪ್ಪಾ!
ನಾಮಜಪಿಯಾಗಿರಬೇಕಪ್ಪಾ! (ಸಂ)
-ಗ ಸಜ್ಜನರಿದ್ದಿರಬೇಕಪ್ಪಾ!
ಬೇರೆ ಹವ್ಯಾಸ ಬಿಡಬೇಕಪ್ಪಾ!
ರಗತವಾಗ ಕೈವಲ್ಯಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯನದಪ್ಪಾ!!!

ಪದವೀಧರಾ! ಇರು ನೀನೀ ತರಾ!   4(2322)

ತ್ತಾವತಾರ ತತ್ವ ಬಾಹ್ಯಾಂತರಾ!
ವೀತರಾಗ, ಭಯ, ಕ್ರೋಧಾ ಶಂಕರಾ!
ರ್ಮ, ಕರ್ಮ ಕಿಂಕರಾ ಸುಖಂಕರಾ!
ರಾವಣಾಸು ಹರಾ ರಾಘವೇಶ್ವರಾ!
ಹಪರಕ್ಕಾಧಾರಾ ವಿಶ್ವೇಶ್ವರಾ! (ಗು)
-ರುಸ್ವರೂಪನಾಗೀತಾ ಗುಹೇಶ್ವರಾ!
ನೀಚೋಚ್ಛವಿಲ್ಲದತೀತಾ ಭಾಸ್ಕರಾ!
ನೀಲಮೇಘಶ್ಯಾಮವರ್ಣಾ ಶ್ರೀಧರಾ!
ತ್ವಾರ್ಥಸಾರ ತಾನಾಗಿ ಓಂಕಾರಾ! (ಆ)
-ರಾಮ ಶ್ರೀ ನಿರಂಜನಾದಿತ್ಯಾಕಾರಾ!!!

ಪದಾರ್ಥ ಕೆಟ್ಟರಡಿಗೆ ಕೆಟ್ಟೀತಯ್ಯಾ! [ಆ]   5(3029)

-ದಾಯಡಿಗೇಭಟ್ಟನಿಗೂ ಆಗದಯ್ಯಾ! (ಅ)
-ರ್ಥ ಕೆಟ್ಟರೆ ಅನರ್ಥವುಂಟಾದೀತಯ್ಯಾ!
ಕೆಲ್ಸಗಾರಗೀಜ್ಞಾನವಿರಬೇಕಯ್ಯಾ! (ಅ)
-ಟ್ಟಹಾಸಾಡಂಬರವೆಷ್ಟು ದಿನವಯ್ಯಾ? (ಪ)
-ರಮಾರ್ಥಿಗಿರಬೇಕು ವಿನಯವಯ್ಯಾ! (ಅ)
-ಡಿಗಡಿಗೆ ಶೋಧಿಸ್ಬೇಕ್ಪದಾರ್ಥವಯ್ಯಾ! (ಹೀ)
-ಗೆ ಮಾಡಿದ ಅಡಿಗೆ ಆರೋಗ್ಯವಯ್ಯಾ!
ಕೆಲ್ಸಕ್ಕಾಗ ಪ್ರೋತ್ಸಾಹ ಸಿಕ್ಕುವುದಯ್ಯಾ!
(ತು)ಟ್ಟೀ ಕಾಲದಲ್ಲಿ ರೊಟ್ಟಿ ಬೇಕೆನ್ಬೇಡಯ್ಯಾ!
ತ್ವವರಿತು ಸುಖದಿಂದ ಬಾಳಯ್ಯಾ! (ಅ)
-ಯ್ಯಾ ನಿರಂಜನಾದಿತ್ಯ ತತ್ವಜ್ಞನಯ್ಯಾ!!!

ಪದ್ಮಾದಿತ್ಯರ ಮೌನಾನಂದ! (ಪ)   2(933)

-ದ್ಮಾನಂದಾರ್ಕ ದರ್ಶನಾನಂದ! (ಆ)
-ದಿತ್ಯನಿಗಿದು ನಿತ್ಯಾನಂದ! (ಸ)
-ತ್ಯ, ಧರ್ಮವಿಬ್ಬರಿಗಾನಂದ! (ವ)
-ರ ಮೈತ್ರ್ಯದನುಪಮಾನಂದ!
ಮೌನವೀರ್ವರ ಯೋಗಾನಂದ!
ನಾದಪ್ರೇಮ ಭ್ರಮರಾನಂದ!
ನಂಜುಂಡಗಿದು ಆತ್ಮಾನಂದ! [ವೇ]
-ದ ನಿರಂಜನಾದಿತ್ಯಾನಂದ!!!

ಪರದೇಶ ಪ್ರವಾಸ ಆಯ್ತೇನೇ? (ತ)   3(1166)

-ರತರದ ನೋಟ ಸಾಕಾಯ್ತೇನೇ? (ಸ್ವ)
-ದೇಶದ ನೆನಪೀಗ ಬಂತೇನೇ?
ಕ್ತಿ, ಸಾಮರ್ಥ್ಯ ಉಡುಗಿತೇನೇ?
ಪ್ರಭು ಸಾಮೀಪ್ಯವೀಗ ಬೇಕೇನೇ?
ವಾದಿಸುವುದಿನ್ನೂ ಬಿಟ್ಟಿಲ್ಲೇನೇ?
ರ್ವಸ್ವವೂ ನಲ್ಲನಲ್ಲವೇನೇ?
ಜ್ಞೆ ಪಾಲಿಸಬೇಕಲ್ಲವೇನೇ? (ಆ)
-ಯ್ತೇನೇ? ಚಪಲ ಮುಗಿಯಿತೇನೇ? (ನಾ)
-ನೇ ಶ್ರೀ ನಿರಂಜನಾದಿತ್ಯ ನೀನೇ???

ಪರನಿಂದೆ ಮಾಡದಿದ್ದರೆ ಸುಮತಿ!   1(379)

ಸ, ವಿರಸವಾಗದಿರೆ ಸುಮತಿ!
ನಿಂತರೆ ಮನ ಸ್ವಧರ್ಮದಿ ಸುಮತಿ! (ಇ)
-ದೆನ್ನುದ್ಧಾರಕೆಂದರಿತರೆ ಸುಮತಿ!
ಮಾತಿನಲಿ ದೈವಿಕವಿರೆ ಸುಮತಿ!
-ಡಲಿಷ್ಟದೇವನಲಕ್ಕರೆ ಸುಮತಿ!
ದಿನ, ರಾತ್ರಿ ಜಪದಲಿರೆ ಸುಮತಿ! (ಇ)
-ದ್ದದರಲಿ ತೃಪ್ತಿಯಿಂದಿರೆ ಸುಮತಿ! (ಇ)
-ರೆ, ಸಜ್ಜನರೊಡಗೂಡಿರೆ ಸುಮತಿ!
ಸುಖ, ದುಃಖ ಸಮವಾಗಿರೆ ಸುಮತಿ!
ದ, ಮತ್ಸರವಿಲ್ಲದಿರೆ ಸುಮತಿ!
-ತಿ, ನಿರಂಜನಾದಿತ್ಯ ಗತಿ ಸುಮತಿ!!!

ಪರಬ್ರಹ್ಮ ಪರಂಪರೆ ಚರಾಚರವೆಲ್ಲಾ!   5(3212)

ಹಸ್ಯ ವೀ ಸೃಷ್ಟಿಯದ್ದರಿತವರಾರಿಲ್ಲಾ!
ಬ್ರಹ್ಮ, ಕ್ಷತ್ರಿಯಾದಿಗಳ್ಗುಣ, ಕರ್ಮದಿಂದೆಲ್ಲಾ! (ಬ್ರಾ)
-ಹ್ಮಣ ಸಾಕಾರ ಬ್ರಹ್ಮನೆಂದರೆ ತಪ್ಪೇನಿಲ್ಲಾ!
ತಿತರಾದರ್ದುರಾಚಾರದಿಂದವರೆಲ್ಲಾ!
ರಂಭೆ, ಊರ್ವಶಿಯರ ಪಾತ್ರದಲ್ಲಿಲದಿಲ್ಲಾ!
ರಂಪರೆಗೀಗತಿಯಾಯ್ತು ಸೃಷ್ಟಿಯಲ್ಲೆಲ್ಲಾ! (ಬೆ)
-ರೆತೊಂದ್ರಲ್ಲಿನ್ನೊಂದುಂಟಾಯ್ತು ಮಿಶ್ರರೂಪವೆಲ್ಲಾ!
ಪಲ ಚಿತ್ತವೇ ಕಾರಣವಾಯ್ತಿದಕ್ಕೆಲ್ಲಾ!
ರಾಮ, ಕೃಷ್ಣರೂ ಇದಕ್ಕೆ ಹೊರತಾಗಿರ್ಲಿಲ್ಲಾ!
ರಾಚರರುದ್ಧಾರಕ್ಕಿಂತಿರಬೇಕಾಯ್ತುಲ್ಲಾ!
ಸಾತಲದಿಂದೆದ್ದಾಕಾಶಕ್ಕೇರಬೇಕೆಲ್ಲಾ!
ವೆಸನದಿಂದಳುವುದಕ್ಕಿದು ಕಾಲವಲ್ಲಾ! (ಕ)
-ಲ್ಲಾದಹಲ್ಯೆ ನಿರಂಜನಾದಿತ್ಯನಿಂದೆದ್ಲಲ್ಲಾ!!!

ಪರಮ ಗುರಿಗೆ ನಿರಂಜನಾದಿತ್ಯಾದರ್ಶ!   1(45)

ವಿಯುದಯಾಸ್ತ ಗತಿ ಜೀವನಕಾದರ್ಶ!
ಮತೆ ನಿರ್ಮೋಹದಲಿದೆಂಬ ನಿಜಾದರ್ಶ!
ಗುಡಿ, ಮಠ, ಗುರಿಯಲ್ಲೆನ್ನುವುದೀ ಆದರ್ಶ!
ರಿಪುಗಳೆನಗಿಲ್ಲೆಂಬಖಂಡ ಪ್ರೇಮಾದರ್ಶ!
ಗೆಳೆತನಕರವಿಂದಾದಿತ್ಯರ ಆದರ್ಶ!
ನಿಶ್ಚಲತತ್ವ ಸ್ಥಿತಿಗಿದತ್ಯುತ್ತಮಾದರ್ಶ!
ರಂಗನಾಗಿ ನಿಸ್ಸಂಗಿಯಾಗಲಿದೇ ಆದರ್ಶ!
ಗತ್ಪತಿಯಿಆತ ನಿಸ್ಪೃಹತೆಗೆ ಆದರ್ಶ!
ನಾಳೆ, ನಿನ್ನೆ ಇರದನ್ವರ್ಥಾವಧೂತಾದರ್ಶ!
ದಿನಕರತ್ಯುಗ್ರ ನಿರಹಂಕಾರಕಾದರ್ಶ!
ತ್ಯಾಗರಾಜನಿವ ಭೂಮಂಡಲೇಶ್ವರಾದರ್ಶ!
ರ್ಶನ ನಿತ್ಯವಾದರಾರರಿಯದಾದರ್ಶ! (ದ)
ರ್ಶನಾನಂದವದು ನಿರಂಜನಾದಿತ್ಯಾದರ್ಶ!!!

ಪರಮ ದಯಾಳು ಪರಮಾತ್ಮ ದತ್ತ! (ಧ)   4(2351)

-ರಣಿಯಾಳ್ವನು ಸದಾ ಸಂಚರಿಸುತ್ತ!
ತಾತೀತನಾಗ್ಯೆಲ್ಲರ ಕಾಪಾಡುತ್ತ!
ಮೆ, ಶಮೆಯ ಕವಚ ಧರಿಸುತ್ತ! (ಮಾ)
-ಯಾ, ಮಂತ್ರ, ತಂತ್ರಗಳ ಕತ್ತರಿಸುತ್ತ! (ಉ)
-ಳುವವನ ಯೋಗಕ್ಷೇಮ ವಹಿಸುತ್ತ!
ತಿತರಾದವರುದ್ಧಾರ ಮಾಡುತ್ತ! (ನಿ)
-ರಹಂಕಾರಿಯಾಗಿ ಸದಾ ತಾನಿರುತ್ತ!
ಮಾನಾಪಮಾನಗಳೆಲ್ಲಾ ಸಹಿಸುತ್ತ! (ಆ)
-ತ್ಮಸ್ಥಿತಿಯಲ್ಲೇ ತಲ್ಲೀನನಾಗಿರುತ್ತ! (ಉ)
ಯಾಸ್ತದಲ್ಲಿ ಸಮದೃಷ್ಟಿ ತೋರುತ್ತ! (ದ)
-ತ್ತ ನಿರಂಜನಾದಿತ್ಯ ತಾನಾಗಿರುತ್ತ!!!

ಪರಮ ಭಕ್ತನಿಗೆ ದೇವರೆಲ್ಲೆಲ್ಲೂ!   5(3063)

ಮಾರಮಣನಿರುವನವನಲ್ಲೂ!
ನಶುದ್ಧಿಯಿರ್ಬೇಕೆಲ್ಲಾ ಕಾಲದಲ್ಲೂ!
ವಪಾಶಬದ್ಧನಾದ ವೇಳೆಯಲ್ಲೂ! (ಶ)
-ಕ್ತನಾಗಿ ಪೂಜ್ಯನಾದ ಸಮಯದಲ್ಲೂ!
ನಿದ್ರೆ, ಜಾಗ್ರತ್ಸ್ವಪ್ನಾದ್ಯವಸ್ಥೆಗಳಲ್ಲೂ!
ಗೆಲುವು, ಸೋಲುಂಟಾದ ಸಂದರ್ಭದಲ್ಲೂ!
ದೇಹ ಬಲ ಕುಂದಿದ ವೃದ್ಧಾಪ್ಯದಲ್ಲೂ!
ರ ಗುರುದರ್ಶನವಿವಗೆಲ್ಲೆಲ್ಲೂ! (ತೆ)
-ರೆ ಮರೆಯ ಹಣ್ಣಾಗಿರುವನೆಲ್ಲೆಲ್ಲೂ! (ಕ)
-ಲ್ಲೆಸೆವವರಿಗದೃಶ್ಯನಾಗ್ಯೆಲ್ಲೆಲ್ಲೂ! (ಇ)
-ಲ್ಲೂ ನಿರಂಜನಾದಿತ್ಯನೊಬ್ಬನೆಲ್ಲೆಲ್ಲೂ!!!

ಪರಮ ವೈರಾಗ್ಯ ವರ ಗುರು ಕೃಪಾ! (ಕ)   2(503)

-ರ ಚರಣೇಂದ್ರಿಯ ಅಂತರ್ಮುಖ ಕೃಪಾ!
ನಸು ಸದಾ ಜಪದಲಿಪ್ಪ ಕೃಪಾ!
ವೈರಾಗ್ಯ ವಿಷಯ ಸುಖಕಿಪ್ಪ ಕೃಪಾ!
ರಾಗ, ದ್ವೇಷರಹಿತ ಸ್ವಭಾವ ಕೃಪಾ! (ಭಾ)
-ಗ್ಯವಧೀನದಲ್ಲಿ ಬಾಳಾವ ಕೃಪಾ!
ಚನವನ ನಾಮ ಭಜನೆ ಕೃಪಾ!
-ರಣ ಕರ್ತನ ಧ್ಯಾನ ಸತತ ಕೃಪಾ!
ಗುಪ್ತ ನಿರ್ಲಿಪ್ತ ಜೀವನವನ ಕೃಪಾ!
ರುಚಿ ಭಕ್ಷ್ಯವನೀವ ಭಿಕ್ಷಾನ್ನ ಕೃಪಾ!
ಕೃಪಣನಲ್ಲದುದಾರ ಜನ್ಮ ಕೃಪಾ!
ಪಾದ ನಿರಂಜನಾದಿತ್ಯನಿತ್ತ ಕೃಪಾ!!!

ಪರಮಗುರು ವಿಮಲ! (ಭಾ)   3(1302)

-ರತ ಕಥನಾನುಕೂಲ!
ಧುರ ಭಾಷಾ ವಿಶಾಲ!
ಗುರು ಗೀತಾನಂದ ಲೋಲ! (ಗು)
-ರು ಕುಲ ನಿರ್ಮೂಲಾ ಕಾಲ!
ವಿರಾಡ್ರೂಪಾ ವನಮಾಲ!
ನಮೋಹನಾ ಗೋಪಾಲ! (ನೀ)
-ಲ ನಿರಂಜನಾದಿತ್ಯಲ್ಲ!!!

ಪರಮಪುರುಷನಿಗೆ ಪುರಸ್ಕಾರ!   1(114)

ಮಾನಾಥನಿಗೆ ಆದರೋಪಚಾರ!
ದನಾರಿಗೆ ವಂದನಾದ್ಯುಪಚಾರ!
ಪುದ್ಭವನಿಗೆ ಜಾಜಿ ಹಾರ!
ರುಚಿ ಗಾನವಾಹಿನಿಗೆ ಜಯ ಹ

ದ್ಗಾರ!
ಡಾನನನಿಗೆ ಪ್ರಣವದುಚ್ಚಾರ!
ನಿರ್ಗುಣ ನಿರ್ವಿಕಾರ ನಿಜಾಲಂಕಾರ!
ಗೆಜ್ಜೆ, ತಾಳ ನಾರದಗೆ ನಮಸ್ಕಾರ!
ಪುನರ್ಜನ್ಮವಿಲ್ಲದ ಮುಕ್ತಿ ಸ್ವೀಕಾರ!
ಗಳೆ ರೋಗದ ದೇಹಕ್ಕೆ ಧಿಕ್ಕಾರ! (ಕ)
-ಸ್ಕಾದ ಮೋಹದ ಸಿಹಿಗೆ ತಿರಸ್ಕಾರ!
ವಿ ನಿರಂಜನಾದಿತ್ಯನೆನ್ನಾಕಾರ!!!

ಪರಮಾತ್ಮ ಧ್ಯಾನ ಮಾಡ್ಬೇಕು! (ಕ)   4(2404)

-ರಣತ್ರಯ ಶುದ್ಧವಾಗ್ಬೇಕು!
ಮಾತು ಕತೆ ಕಮ್ಮಿಯಾಗ್ಬೇಕು! (ಆ)
-ತ್ಮ ತತ್ವಾರ್ಥ ತಿಳಿದಿರ್ಬೇಕು! (ಸಂ)
-ಧ್ಯಾವಂದನೆಯದಕ್ಕಾಗ್ಬೇಕು! (ಜ)
-ನಸಂಘದಿಂದ ದೂರಾಗ್ಬೇಕು!
ಮಾಲಿಕನಿಷ್ಟದಂತಿರ್ಬೇಕು! (ಮಾ)
-ಡ್ಬೇಕ್ಸತ್ಸಂಗವೆಂದರಿಯ್ಬೇಕು! (ಬೇ)
-ಕು, ನಿರಂಜನಾದಿತ್ಯಾಸ್ತಾಕ್ಕೂ!!!

ಪರಮಾತ್ಮಗಿಲ್ಲ ಪತ್ರ ವ್ಯವಹಾರ!   4(1577)

-ರಮಾತ್ಮಗಾಗಿರಬೇಕು ಸದಾಚಾರ!
ಮಾತು, ಕತೆಗಳಿಗವ ಬಹು ದೂರ! (ಆ)
-ತ್ಮಧ್ಯಾನ ನಿರತನಿಗೆಲ್ಲಾ ನಿಸ್ಸಾರ! (ತ್ಯಾ)
-ಗಿಯಾಗಿರುವುದವನಿಗಿಷ್ಟಾಕಾರ! (ಬ)
-ಲ್ಲವರಿಗೆಲ್ಲಾ ಬಲ್ಲವಾ ನಿರ್ವಿಕಾರ!
ರತತ್ವಾಕಾಶದಲ್ಲವನೋಂಕಾರ!
ತ್ರಯಮೂರ್ತಿ ರೂಪದಿಂದ ದತ್ತಾಕಾರ! (ಭ)
-ವ್ಯ ಮಂದಿರದಲ್ಲಿ ಶಿವಲಿಂಗಾಕಾರ!
ಸ್ತ್ರಹೀನ ತಾನಾಗಿ ಬೌದ್ಧಾವತಾರ!
ಹಾಡಿ, ನಲಿದಾಡಿದಲ್ಲಿ ಸಾಕ್ಷಾತ್ಕಾರ! (ವ)
-ರ ನಿರಂಜನಾದಿತ್ಯಾತ್ಮ ಮೌನಾಕಾರ!!!

ಪರಮಾತ್ಮನ ಪ್ರೀತಿಯನ್ನರಿಯದೇ ಕೆಟ್ಟಿರೆಲ್ಲಾ!   6(3984)

ಘುಪತಿಯ ಪ್ರೀತಿಯನ್ನಾಂಜನೇಯ ಪೂರ್ಣ ಬಲ್ಲ!
ಮಾಯೆಗಾತ ಮರುಳಾಗಿ ಎಂದೂ ಸೋತವನೇ ಅಲ್ಲ! (ಆ)
-ತ್ಮ ವಿಶ್ವಾಸದಲ್ಲಿ ಆತನಿಗೆ ಸಮಾನರೇ ಇಲ್ಲ! (ವಾ)
-ನರನೆಂದಾತನನ್ನು ಕಡೆಗಂಡವರಾರೂ ಇಲ್ಲ!
ಪ್ರೀತಿಪಾತ್ರನಾಗಿ ಸೀತಾನ್ವೇಷಣ ಮಾಡಿದನಲ್ಲಾ!!
ತಿತಿಕ್ಷೆ, ವೈರಾಗ್ಯ ಅವನದು ಸಾಮಾನ್ಯವೇನಲ್ಲ! (ಭ)
-ಯಪಟ್ಟು ಎಂದೂ ವೈರಿಗೆ ಬೆನ್ನು ತೋರಿಸಲೇ ಇಲ್ಲ! (ತ)
-ನ್ನನ್ನು ನಂಬಿದವರನ್ನು ಆತ ಕೈ ಬಿಟ್ಟವನಲ್ಲ! (ವೈ)
-ರಿ ರಾವಣ ಕಂಡನವನ ಪರಾಕ್ರಮವನ್ನೆಲ್ಲಾ! (ಕಾ)
-ಯ ಬಲದಿಂದ ಬೆಟ್ಟವನ್ನೇ ಹೊತ್ತು ತಂದನಾ ಮಲ್ಲ!
ದೇವಾದಿ ದೇವತೆಗಳೂ ಕೊಂಡಾಡದೇ ಇರಲಿಲ್ಲ! (ಏ)
-ಕೆ ಈಗವನ ದರ್ಶನವಾಗುತ್ತಿಲ್ಲವೋ? ಗೊತ್ತಿಲ್ಲ! (ಗು)
-ಟ್ಟ ರಟ್ಟು ಮಾಡದೆ ಈಗ ಗತ್ಯಂತರ ಕಾಣುತ್ತಿಲ್ಲ! (ಮೊ)
-ರೆಯಿಡೋಣ ಅವನಿಗೇ ದಿನ, ರಾತ್ರಿ, ಭಕ್ತರೆಲ್ಲಾ! (ಎ)
-ಲ್ಲಾ ಬಲ್ಲ ನಿರಂಜನಾದಿತ್ಯನಿಗೆ ಕಷ್ಟವಿದಲ್ಲ!!!

ಪರಮಾತ್ಮನಲ್ಲಿ ತಪ್ಪೆಣಿಸಬೇಡ! [ಕ]   4(2370)

-ರ ಚರಣಾದಿಂದ್ರಿಯಕ್ಕಾಳಾಗಬೇಡ!
ಮಾಯಾಜಾಲದಲ್ಲಿ ಬಿದ್ದೊದ್ದಾಡಬೇಡ! (ಆ)
-ತ್ಮಚಿಂತನೆಯನ್ನೆಂದಿಗೂ ಬಿಡಬೇಡ! (ಜ)
-ನನ, ಮರಣಕ್ಕೆ ಭಯಪಡಬೇಡ! (ಹ)
-ಲ್ಲಿ, ಹಾವುಗಳ ಕೊಲ್ಲಲೆತ್ನಿಸಬೇಡ!
ನ್ನಂತೆಲ್ಲರೆಂಬುದ ಮರೆಯಬೇಡ! (ಸ)
-ಪ್ಪೆ ಮುಖ ಹಾಕಿಕೊಂಡಳುತಿರಬೇಡ! (ಋ)
-ಣಿ ಗುರುಚರಣಕ್ಕಾಗದಿರಬೇಡ!
ಚ್ಚಿದಾನಂದಕ್ಕಾಶಿಸದಿರಬೇಡ!
ಬೇರಾವುದೂ ಬಯಸಿ ಬೆಂಡಾಗಬೇಡ! (ಮೃ)
-ಡ ನಿರಂಜನಾದಿತ್ಯನಾರೋಪ ಬೇಡ!!!

ಪರಮಾತ್ಮನಿಗಸಾಧ್ಯವಾದುದಿಲ್ಲ! (ನ)   5(3267)

-ರನವನಿಗನ್ಯನೆಂದೆಂದಿಗೂ ಅಲ್ಲ!
ಮಾಯೆಯಾಗಿ ಮಾಳ್ಪನದ್ಬುತಗಳೆಲ್ಲ! (ಆ)
-ತ್ಮನಾಗಿ ವ್ಯಾಪಿಸಿಹನಾದ್ಯಂತವೆಲ್ಲ!
ನಿರ್ಮಾಣ, ನಿರ್ಯಾಣಗಳಂಟಿವಗಿಲ್ಲ!
ತಿ, ಸ್ಥಿತಿಯುಳ್ಳವ ಅಚ್ಯುತನಲ್ಲ!
ಸಾಕಾರ ವಾದದಲ್ಲಿ ಹುರುಳೇನಿಲ್ಲ! (ಮ)
-ಧ ಸ್ಥರಾಗ್ಯಾರೂ ತೋರಿಸುವವರಿಲ್ಲ!
ವಾರಿಜಮಿತ್ರದಲ್ಲಿ ವಂಚನೆಯಿಲ್ಲ!
ದುಡಿಮೆಯೊಂದೇ ಅವನ ಬಾಳಲ್ಲೆಲ್ಲ!
ದಿವ್ಯ ಜೀನಕ್ಕದು ಹೊರತಾಗಿಲ್ಲ! (ಪು)
-ಲ್ಲ ನಿರಂಜನಾದಿತ್ಯನಂತಿದ್ರಾಯ್ತೆಲ್ಲ!!!

ಪರಮಾತ್ಮನಿಗೇನೇನೋ ಸಮರ್ಪಣೆ! (ತ)   4(2449)

-ರತರದ ತಿಂಡಿ, ತೀರ್ಥ ಸಮರ್ಪಣೆ!
ಮಾರುಹೋಗುವ ಸುಗಂಧ ಸಮರ್ಪಣೆ! (ಸೋ)
-ತ್ಮನಸ್ಸು ಮಾಡುವುದೆಲ್ಲಾ ಸಮರ್ಪಣೆ!
ನಿತ್ಯಾರ್ಚನೆಗೆ ಕುಂಕುಮ ಸಮರ್ಪಣೆ! (ಸೀ)
-ಗೇಕಾಯಿ, ಸಾಬೂನುಗಳ ಸಮರ್ಪಣೆ! (ಏ)
-ನೇನ್ತನ್ಗಿಷ್ಟವೋ ಅದವ್ಗೂ ಸಮರ್ಪಣೆ! (ಮ)
-ನೋನೈರ್ಮಲ್ಯದಮೌಲ್ಯಾತ್ಮ ಸಮರ್ಪಣೆ!
ದ್ಭಕ್ತನ ಸರ್ವಸ್ವವೂ ಸಮರ್ಪಣೆ!
ಹದಾನಂದಕ್ಕಾಗ್ಬೇಕೀ ಸಮರ್ಪಣೆ! (ಚ)
-ರ್ಪಟ ಮಾಡುವನೇನಿಂಥಾ ಸಮರ್ಪಣೆ? (ಗೆ)
-ಣೆಯ ನಿರಂಜನಾದಿತ್ಯಗಾಗ್ಲರ್ಪಣೆ!!!

ಪರಮಾನ್ನವನ್ನಲಕ್ಷಿಸುವುದೇಕೆ?   6(4140)

ಸಾಸ್ವಾದನಾನುಭವವಿಲ್ಲದ್ದಕ್ಕೆ!
ಮಾಡಿ, ನೋಡುವಾನುಕೂಲವಿಲ್ಲದ್ದಕ್ಕೆ! (ತಿ)
-ನ್ನ ಬಡಿಸುವ ಪ್ರೇಮಿಗಳಿಲ್ಲದ್ದಕ್ಕೆ!
ನವಾಸಾನುಗ್ರಹವಾಗಿರ್ಪುದಕ್ಕೆ! (ತ)
-ನ್ನ ತಾನರಿಯ ವಿರಕ್ತನಾದುದಕ್ಕೆ!
ಕ್ಷ್ಯದಲ್ಲೇ ತನ್ನಯನಾಗಿಪುರ್ದದಕ್ಕೆ! (ದ)
-ಕ್ಷಿಣಾಮೂರ್ತಿಯಾದರ್ಶ ಪಾಲಿಪುದಕ್ಕೆ!
ಸುಖ ದುಃಖ ಸಮನಾಗೆಣಿಸುವುದಕ್ಕೆ! (ಸಾ)
-ವು, ನೋವುಗಳ ಭಯವಿರುವುದಕ್ಕೆ!
ದೇವರ ಸಾಕಾರ ರೂಪ ಕಾಣದ್ದಕ್ಕೆ! (ಏ)
-ಕೆ? ನಿರಂಜನಾದಿತ್ಯ ತಾನಾಗದ್ದಕ್ಕೆ!!!

ಪರಮಾಪ್ತತೆ ನಿನಗಿಲ್ಲವೇ ಇಲ್ಲ! (ಕ)   6(3722)

-ರ, ಚರಣಾದಿಯಿದ್ರೆ ತಾನೇ ಅದೆಲ್ಲಾ?
ಮಾಯಾ ಪ್ರಭಾವ ನಿನ್ನ ಮೇಲೇನೂ ಇಲ್ಲ! (ಆ)
-ಪ್ತ ನೀನೆನಗೆನ್ನುವುದಾಶೆಯಿಂದೆಲ್ಲಾ!
ತೆಗಳ್ವುದು, ಹೊಗಳ್ವುದದಕ್ಕಾಗ್ಯೆಲ್ಲಾ!
ನಿನ್ನಂತಾಗ್ವತನ್ಕ ನನ್ಗೆಲ್ಲಾ ಬೇಕಲ್ಲಾ!
ನ್ನಿಷ್ಟದಂತಾವುದೂ ಆಗುವುದಿಲ್ಲ!
ಗಿರಿಜೆಯಂತೆನ್ನ ನೀ ಸ್ವೀಕರಿಸಿಲ್ಲ! (ಎ)
-ಲ್ಲ ತಪ್ಪೂ ನನ್ಮೇಲ್ಹೆರಿಸುವೆಯಲ್ಲ?
ವೇದಾಂತ ಸ್ವರೂಪಿಗಿದು ಸರಿಯಲ್ಲ!
ಬ್ರೂ ಸದಾ ಒಂದಾಗಿದ್ರಾಕ್ಷೇಪಣೆಯಿಲ್ಲ! (ಪು)
-ಲ್ಲ ನಿರಂಜನಾದಿತ್ಯ ಅನ್ಯನಲ್ವಲ್ಲಾ!!!

ಪರಮಾರ್ಥ ಮೌನ ಕಾಣಮ್ಮಾ! (ನ)   5(2712)

-ರ ನಾರಾಯಣನೆಂದರ್ಯಮ್ಮಾ!
ಮಾತು ಬೆಳೆಸಬಾರದಮ್ಮಾ! (ಸಾ)
-ರ್ಥಕವಾಗ್ಲಿ ನಿನ್ನ ಜನ್ಮಮ್ಮಾ!
ಮೌಢ್ಯವೆಲ್ಲಾ ಓಡಿ ಹೋಗ್ಲಮ್ಮಾ!
ಶ್ವರಕ್ಕಾಶಿಸ ಬೇಡಮ್ಮಾ!
ಕಾಲ ಕಳೆಯುತ್ತಿದೆ ಅಮ್ಮಾ! (ಗ)
-ಣಪತಿಯನ್ನು ನೀನಾಗಮ್ಮಾ! (ಬೊ)
-ಮ್ಮಾ ನಿರಂಜನಾದಿತ್ಯಾತ್ಮಮ್ಮಾ!!!

ಪರಮಾರ್ಥ ಯಾವ ಬಾಯಿ ಹೇಳಿದ್ರೂ ಹಿತ! (ನ)   6(3924)

-ರ, ನಾರಿಯರಲ್ಲಿ ಯಾರು ಹೇಳಿದ್ರೂ ಹಿತ!
ಮಾತಿನಂತೆ ನಡೆವವರಂದ್ರತೆ ಹಿತ! (ಅ)
-ರ್ಥ ಅನ್ವರ್ಥವಾಯ್ತೆಂದಾಗ ಪರಮ ಹಿತ! (ಅ)
ಯಾರಿಂತಿರುವನೋ ಅವನೇ ಪುರೋಹಿತ!
ಸಿಷ್ಠಾದಿಗಳಿಂತಿದ್ದು ಮಾಡಿದರ್ಹಿತ!
ಬಾಯಿ ಬಡಾಯಿಯಿಂದಾಗುವುದು ಅಹಿತ! (ಕಾ)
-ಯಿ ಹಣ್ಣಾದ ಮೇಲೆ ತಿನ್ನುವುದೇವಿಹಿತ!
ಹೇಳಿದ್ದನುಭವಕ್ಕೆ ಬಾರದಿದ್ದ್ರೇನ್ಹಿತ? (ಕೂ)
-ಳಿಗಿಲ್ಲದವನಾಗ್ಬಾರದು ವಿವಾಹಿತ! (ಆ)
-ದ್ರೂ ಆ ದಾಂಪತ್ಯವಿರದು ಶಾಂತಿ ಸಹಿತ!
ಹಿರಣ್ಯಕಶ್ಯಪಗೆಷ್ಟಿದ್ದಾರಿಗೇನ್ಹಿತ? (ಹಿ)
-ತ, ನಿರಂಜನಾದಿತ್ಯಾನಂದತ್ಯಂತ ಹಿತ!!!

ಪರಮಾರ್ಥತಿಗೆ ದಾಕ್ಷಿಣ್ಯ ಅಡ್ದ!   1(75)

ಗಳೆಗಾಗಿ ಕದ ತೆಗೆಯಬೇಡ!
ಮಾತಿಗಂಜಿ ನಿನ್ನ ಕರ್ಮ ಬಿಡಬೇಡ! (ಅ)
-ರ್ಥಕಾಗಿ ಇಷ್ಟ ದಾರಿಯ ತೊರೆಯಬೇಡ!
ತಿರುಕನಾದರೂ ಅನಾದರ ಬೇಡ!
ಗೆಲುವುದಕಾಗಿ ಹೊಲಸಾಗಬೇಡ!
ದಾನ ಪ್ರಶಂಸೆಗೋಸುಗ ಮಾಡಬೇಡ!
ಕ್ಷಿತಿಪತಿ ಬಂದರೂ ಉದ್ವೇಗ ಬೇಡ! (ಅ)
(ನ್ಯ) -ಣ್ಯರೌತಣಕ್ಕೆ ನಿತ್ಯಾನ್ನ ಬಿಡಬೇಡ!
ವರಿವರಿಗಾಗಳುತಿರಬೇ

ಡ! (ಅ)
-ಡ್ಡ ದಾಕ್ಷಿಣ್ಯ! ನಿರಂಜನಗಿದು ಬೇಡ!!!

ಪರಮಾರ್ಥಾಭ್ಯಾಸ ಮಾಡ್ಬೇಕೇಕೆ? (ನಿ)   6(3586)

-ರರ್ಥ ಜೀವನ ತಪ್ಪಿಸಲಿಕ್ಕೆ!
ಮಾಯಾ, ಮೋಹ, ವಿಮುಕ್ತನಾಗ್ಲಿಕ್ಕೆ! (ಸ್ವಾ)
-ರ್ಥಾತಿರೇಕವಿಲ್ಲದಾಗಲಿಕ್ಕೆ! (ಸ)
-ಭ್ಯಾತ್ಮನಾಗ್ನಿತ್ಯಾನಂದನಾಗ್ಲಿಕ್ಕೆ!
ರ್ವಾತ್ಮ ಭಾವ ವಿರಾಜಿಸ್ಲಿಕ್ಕೆ!
ಮಾನವ ಜನ್ಮ ಸಾರ್ಥಕಾಗ್ಲಿಕ್ಕೆ! (ನೋ)
-ಡ್ಬೇಕ್ದೇವ್ರನ್ನೆಂಬಿಷ್ಟ ಸಿದ್ಧಿಸ್ಲಿಕ್ಕೆ!
-ಕೇಳಿದ್ದೂ, ಹೇಳಿದ್ದೂ ನಿಜಾಗ್ಲಿಕ್ಕೆ! (ಏ)
-ಕೆ? ನಿರಂಜನಾದಿತ್ಯಾಗ್ಲಿಕ್ಕೆ!!!

ಪರಮಾರ್ಥಾಭ್ಯಾಸವೇತಕ್ಕ? (ಪ)   4(1671)

-ರಮಾತ್ಮಾನುಗ್ರಹಾಗಲಿಕ್ಕೆ!
ಮಾಯಾ ಬಂಧನ ತಪ್ಪಲಿಕ್ಕೆ! (ಅ)
-ರ್ಥಾಪೇಕ್ಷೆಯಿಂದಡ್ಡಿ ಇದಕ್ಕೆ! (ಲ)
-ಭ್ಯಾಲಭ್ಯವೆಲ್ಲಾ ಐಹಿಕಕ್ಕೆ!
ಚ್ಚಿದಾನಂದಮರತ್ವಕ್ಕೆ!
ವೇದ, ವೇದಾಂತೋತ್ಪತ್ತ್ಯದಕ್ಕೆ!
ತ್ವಾರ್ಥದರಿವಾಗಲಿಕ್ಕೆ! (ಅ)
-ಕ್ಕೆ, ನಿರಂಜನಾದಿತ್ಯಾನಕ್ಕೆ!!!

ಪರಮಾರ್ಥಿ ಪರನಿಂದಕನಲ್ಲ! (ಪ)   4(1727)

-ರ ನಿಂದಕ ಪರಮಾರ್ಥಿಯೇನಲ್ಲ!
ಮಾಯಾ ಬಂಧನ ಪರಮಾರ್ಥಿಗಿಲ್ಲ! (ಸ್ವಾ)
-ರ್ಥಿ ಅನ್ಯ ದೂಷಣೆ ಬಿಡುವುದಿಲ್ಲ!
ವಾಡ ಪರಮಾರ್ಥಿಗೆ ಬೇಕಿಲ್ಲ!
ಗಳೆ, ರಂಪ ನಿಂದಕನದೆಲ್ಲ!
ನಿಂತ ಮೇಲೆ ಭಕ್ತ ಓಡುವುದಿಲ್ಲ!
ರಿದ್ರನಾದರೂ ದುರ್ಮಾಗ್ಯಾಗೋಲ್ಲ!
ಷ್ಟ ಪರಂಪರೆಗಂಜುವುದಿಲ್ಲ!
ಯ, ವಿನಯ, ಬಿಟ್ಟರುವುದಿಲ್ಲ! (ಪು)
-ಲ್ಲ, ನಿರಂಜನಾದಿತ್ಯಲ್ಪಾತ್ಮನಲ್ಲ!!!

ಪರರಿಗುಪಕಾರವಾಗ್ಬೇಕು ಸ್ವಾಮಿ! (ಕ)   4(1657)

-ರ, ಚರಣ ನೆರವಾಗಬೇಕು ಪ್ರೇಮಿ! (ಅ)
-ರಿಗಳಾರ್ಭಟಧಿಕವಾಗಿದೆ ಸ್ವಾಮಿ!
ಗುರು ಕೃಪೆಯಿಂದದ ಗೆಲ್ಬೇಕು ಪ್ರೇಮಿ!
ದ್ಮಪಾದಕ್ಕೆಂದೋ ಶರಣಾದೆ ಸ್ವಾಮಿ!
ಕಾಮ್ಯಾರ್ಥಿ ನೀನಾಗದಿರಬೇಕು ಪ್ರೇಮಿ! (ವಿ)
-ರಕ್ತಿ ಬರಲಿಕ್ಕುಪಾಯವೇನು ಸ್ವಾಮಿ? (ಶಿ)
-ವಾನಂದಾಸಕ್ತಿ ಹೆಚ್ಚಾಗಬೇಕು ಪ್ರೇಮಿ! (ಹೇ)
-ಗ್ಬೇಕೋ ಹಾಗಿರಿಸಬೇಕು ನೀವು ಸ್ವಾಮಿ!
ಕುಹಕರ ಸಂಗ ಬಿಡಬೇಕು ಪ್ರೇಮಿ!
ಸ್ವಾಗತ ನಿಮ್ಮಾಜ್ಞೆಗೆ ನಾನಿವೇ ಸ್ವಾಮಿ! (ಸ್ವಾ)
-ಮೀ, ನಿರಂಜನಾದಿತ್ಯಾನಂದಾತ್ಮ ಪ್ರೇಮಿ!!!

ಪರಲೋಕದಲಿರುವ ನಮ್ಮ ತಂದೆ (ಏ)   1(122)

-ರಗಬೇಕಡಿಗೆಂದಾನು ಬಂದು ನಿಂದೆ!
ಲೋಕ ಅವನದೆಂತಿಹುದೆಂಬೆ ಮುಂದೆ!
ರ, ಚರಣ, ದೇಹವಾ ಲೋಕವೆಂಬೆ!
ಮನೇಂದ್ರಿಯದಿಂದಾಗುವುದದೆಂಬೆ!
ಲಿಪ್ತ ವಿಷಯಗಿದಿಹ ಲೊ

ಕವೆಂಬೆ!
ರುದ್ರನಿಗದಾನಂದ ಕೈಲಾಸವೆಂಬೆ!
ರ ಗುರು ಪಿತಗಾಗಿರಲಿದಂಬೆ!
ನ್ನಯ್ಯನಿನ್ನೆಲ್ಲಿಲ್ಲೆಂದರಿ ನೀನೆಂಬೆ! (ಎ)
-ಮ್ಮಯ್ಯನಿಹುದೇ ಪರಲೋಕವೆಂದೆಂಬೆ!
ತಂದೆಯೊಪ್ಪಿನಿದನನುಭವಿಸೆಂಬೆ! (ಎ)
-ದೆಗಾರ ನಿರಂಜನಾದಿತ್ಯ ತಂದೆಂಬೆ!!!

ಪರಸ್ಪರ ವಿಶ್ವಾಸ ಎಷ್ಟಿದ್ದರೇನು? (ಪ್ರಾ)   6(3702)

-ರಬ್ಧವನ್ನು ಭೋಗಿಸ್ಲೇ ಬೇಕ್ನಾನು, ನೀನು!
ಸ್ಪರ್ಶ ಶ್ರೀಪಾದದ್ದಾದ್ರೂ ದುಃಖಿ ನೀನು! (ವ)
-ರ ಗುರುವಿನ ಚಿತ್ತವೆಂದರಿ ನೀನು!
ವಿಶ್ವಾಸಘಾತಕನಾಗಬಾರ್ದು ನೀನು!
ಶ್ವಾನಕ್ಕಿಂತ್ಲೂ ಆಗ ಕೀಳಾಗುವೆ ನೀನು!
ಒನೆ ಲಿನೆ ಮಿ

ಸಿ
ಡರ್ಗಂಜಿ ಬಿಡ್ಬೇಡವನನ್ನು ನೀನು! (ದೃ)
-ಷ್ಟಿ ಬೇರೆಡೆಗೆ ಹೊರಳಿಸ್ಬಾರ್ದು ನೀನು! (ಮೆ)
-ದ್ದರೆ ಅವನುಚ್ಛಿಷ್ಟ ಪಾವನ ನೀನು!
ರೇಗಿ ಕೂಗಾಡ್ಬಾರ್ದವನ ಮುಂದೆ ನೀನು! (ನೀ)
-ನು ನಿರಂಜನಾದಿತ್ಯನಾಗ್ಬೇಡವೇನು!!!

ಪರಸ್ಪರ ಹೊಡೆದಾಡಿ ಸಾಯಬೇಡಿ! (ವ)   5(2750)

-ರ ಗುರೂಪದೇಶಲಕ್ಷ್ಯ ಮಾಡಬೇಡಿ! (ಅ)
-ಸ್ಪರ್ಶರೆಂದಾರನ್ನೂ ದೂರವಿಡಬೇಡಿ! (ಪ)
-ರಮಾರ್ಥವೇನೆಂದರಿತು ಮಾತನಾಡಿ!
ಹೊಣೆಗಾರಾತ್ಮನ ಧ್ಯಾನ ಸದಾ ಮಾಡಿ! (ಮಾ)
-ಡೆನುವವರ್ಮಾಡಿ ತೋರದಿರಬೇಡಿ!
ದಾರಿ ಶಾಂತಿಗಿದೆಂಬುದಲ್ಲೆನ ಬೇಡಿ! (ಕ)
-ಡಿದು, ಬಡಿದಾರನ್ನೂ ನೋಯಿಸಬೇಡಿ!
ಸಾವಾರನ್ನೂ ಬಿಡದು; ಮರೆಯಬೇಡಿ! (ನ)
-ಯ ವಿನಯದಿಂದೆಲ್ಲರೂ ಒಡನಾಡಿ!
ಬೇಕದಿದೆನ್ನುವುದ ಕಡಿಮೆ ಮಾಡಿ! (ನೋ)
-ಡಿ ನಿರಂಜನಾದಿತ್ಯನಂದಂತೆ ಮಾಡಿ!!!

ಪರಹಿಂಸೆ ಪೈಶಾಚಕ ವೃತ್ತಿ! (ತ)   3(1219)

-ರತರ ಕಾರಣದಿಂದಾ ವೃತ್ತಿ! (ಅ)
-ಹಿಂಸೆಯಿಂದಾಗುವುದು ನಿವೃತ್ತಿ! (ಆ)
-ಸೆಯಿಂದಾಗುವುದು ಹಿಂಸಾವೃತ್ತಿ!
ಪೈಪೋಟಿಯೆಂಬುದಜ್ಞಾನ ವೃತ್ತಿ!
ಶಾಖಾಹಾರದಿಂದ ಸಾಧು ವೃತ್ತಿ!
ರಾಚರಕ್ಕಾಧಾರ ಈ ವೃತ್ತಿ!
ಷ್ಟದಾಯಕವಾ ದುಷ್ಟ ವೃತ್ತಿ!
ವೃತ್ತಿನಾಶದಿಂದಾತ್ಮ ಸಂತೃಪ್ತಿ! (ವೃ)
-ತ್ತಿ, ನಿರಂಜನಾದಿತ್ಯಾತ್ಮ ಭಕ್ತಿ!!!

ಪರಹಿತವನ್ನೆಣಿಸ ಸ್ವಾರ್ಥಿ ಮಾನವ!   5(3273)

ಮೇಶನೆಲ್ಲರಲ್ಲಿಹನೆಂದರ್ಯನವ!
ಹಿರಿಯರ ಹಿತವಚನ ಕೇಳನವ!
ಪ್ಪನ್ನೇ ಎಲ್ಲರಲ್ಲೂ ಹುಡುಕನವ!
ಶವಾಗಿರ್ಬೇಕೆಲ್ಲರ್ತನಗೆಂಬನವ! (ತ)
-ನ್ನೆಲ್ಲಾ ಕಾರ್ಯಕ್ಕಾಳ್ಗಳನ್ನವಲಂಬಿಸುವ! (ದ)
-ಣಿಸಿ ಅವರಿಗೆ ಬಹುಕಷ್ಟ ಕೊಡುವ!
ರಿಯಾಗಿ ಸಂಬಳವೂ ಕೊಡದಿರುವ!
ಸ್ವಾಗತ ಸಜ್ಜನರಿಗೆ ನೀಡದಿರುವ!
(ಆ)ರ್ಥಿಕಾನುಕೂಲ ಯಾರಿಗೂ ಮಾಡದಿರುವ!
ಮಾತಿನಲ್ಲೇ ಮಂಡಿಗೆಯೂಟ ಉಣ್ಣಿಸುವ!
ಮಸ್ಕಾರ ಗುರುವಿಗೆ ಮಾಡದಿರುವ! (ಇ)
-ವಗೂ ನಿರಂಜನಾದಿತ್ಯಾಶೀರ್ವದಿಸುವ!!!

ಪರಾಶರ, ವ್ಯಾಸ, ಶುಕಾತ್ಮಾ! [ವಿ]   3(1310)

-ರಾಜಿಸಲೆಲ್ಲರಲೀ ಆತ್ಮಾ!
ಮ ದಮಾತ್ಮಾ ಗೋವಿಂದಾತ್ಮಾ! (ವ)
-ರ ಗುರುದತ್ತಾ ಪರಮಾತ್ಮಾ!
ವ್ಯಾಪಿಸಿಹನೆಲ್ಲೆಲ್ಲೀ ಆತ್ಮಾ!
ರ್ವ ಕಾರಣ ಕರ್ತಾ ಆತ್ಮಾ!
ಶುದ್ಧ ಸಚ್ಚಿದಾನಂದಾ ಆತ್ಮಾ! (ಓಂ)
-ಕಾರ ಸ್ವರೂಪಾ ಶಂಕರಾತ್ಮಾ! (ಆ)
-ತ್ಮಾ, ನಿರಂಜನಾದಿತ್ಯೇಂದ್ರಾತ್ಮಾ!!!

ಪರಾಶ್ರಯಿ ಎಲ್ಲಿದ್ದರೇನಯ್ಯಾ?   1(317)

ರಾಮನಿಚ್ಛೆ ಮೀರುವುದೆಂತಯ್ಯಾ?
ಶ್ರಮ ಶಬರಿಗಾದರೇನಯ್ಯಾ? (ಆ)
-ಯಿತವಳಿಗನುಗ್ರಹವಯ್ಯಾ!
ಲ್ಲಾ ಸದ್ಗುರು ಚಿತ್ತದಂತಯ್ಯಾ! (ಅ)
-ಲ್ಲಿಲ್ಲಿ ನಿಜ ಭಕ್ತಿಯಿಂದಿರಯ್ಯಾ! (ಆ)
-ದ್ದರಿಂದಾವನುಮಾನ ಬೇಡಯ್ಯಾ! (ಆ)
-ರೇನಂದರೂ ರೇಗಬಾರದಯ್ಯಾ!
ಯ, ವಿನಯದಿಂದ ಬಾಳಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾಶ್ರಯಯ್ಯಾ!!!

ಪರಿತಾಪ ಪಡುವುದೇಕಮ್ಮಾ? (ಹ)   4(1544)

-ರಿ ನಿನ್ನವನಾಗಿರುವನಮ್ಮಾ!
ತಾಳ್ಮೆಯಿಂದವನ ಭಜಿಸಮ್ಮಾ!
ರಂಜ್ಯೋತಿ ರೂಪನವನಮ್ಮಾ!
ತಿತ ಪಾವನನಾತನಮ್ಮಾ! (ದು)
-ಡುಕಬಾರದವನ ಮುಂದಮ್ಮಾ! (ಕಾ)
-ವುದವನ ಕರ್ತವ್ಯ ಕಾಣಮ್ಮಾ!
ದೇಗುಲ ನಿನ್ನ ದೇಹವಗಮ್ಮಾ!
ಶ್ಮಲವಲ್ಲಿರಬಾರದಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಾನಂದಮ್ಮಾ!!!

ಪರಿವರ್ತನೆಯಾದ ಮೇಲೆ ಬಾ! [ಅ]   3(1375)

-ರಿಕುಲ ನಿರ್ಮೂಲವಾದಾಗ ಬಾ! (ಅ)
-ವರಿವರ ಮಾತು ಬಿಟ್ಟಾಗ ಬಾ! (ಕ)
-ರ್ತನಲ್ಲಿ ನಂಬಿಗೆ ಬಂದಾಗ ಬಾ! (ಮ)
-ನೆ, ಹೊಲದಾಸೆಯಳಿದಾಗ ಬಾ! (ಮಾ)
-ಯಾ, ಜಾಲ ಪೂರ್ಣ ಹರಿದಾಗ ಬಾ!
ತ್ತನಪ್ಪಣೆ ಸಿಕ್ಕಿದಾಗ ಬಾ!
ಮೇಲ್ಮುಸುಕು ಕಿತ್ತೊಗೆದಾಗ ಬಾ! (ತ)
-ಲೆ ಹರಟೆ ಬರಿದಾದಾಗ ಬಾ!
ಬಾ, ನಿರಂಜನಾದಿತ್ಯಂದಾಗ ಬಾ!!!

ಪರಿಶುದ್ಧತೆಯೇ ಸಕಲ ಸಂಪತ್ತು!   6(4382)

ರಿಪುಕರಗತವಾಗದೀ ಸಂಪತ್ತು!
ಶುಕಮಹಾಮುನಿಗಿದೊಂದೇ ಸಂಪತ್ತು! (ಶು)
-ದ್ಧ ಅದ್ವೈತವೆನ್ನುವುದಿದೇ ಸಂಪತ್ತು! (ಮಾ)
-ತೆ ಸರಸ್ವತಿ ದೇವಿಗಿದೇ ಸಂಪತ್ತು! (ಮಾ)
-ಯೇಶ್ವರನಾಗಲಿಕ್ಕೆ ಬೇಕೀ ಸಂಪತ್ತು!
ತ್ಸಂಗದ ಮಹದುದ್ದೇಶಾ ಸಂಪತ್ತು!
ಲಿಮಲ ಧ್ವಂಸೀ ವಿಮಲ ಸಂಪತ್ತು!
ಕ್ಷ್ಮೀನಾರಾಯಣ ತತ್ವ ಈ ಸಂಪತ್ತು!
ಸಂಜೆ, ಮುಂಜಾನೆಧ್ಯಾನದಿಂದಾ ಸಂಪತ್ತು!
ರಮಪದಪ್ರದಾ ದೈವೀ ಸಂಪತ್ತು! (ಇ)
-ತ್ತು ಕಾಯ್ಲಿ ನಿರಂಜನಾದಿತ್ಯಾ ಸಂಪತ್ತು!!!

ಪರಿಶುದ್ಧನು ದೇವರು ಧ್ಯಾನಿಸಿರಿ!   2(816)

ರಿಪುಗಳಾರನು ಜೈಸಿ ಧ್ಯಾನಿಸಿರಿ!
ಶುಚಿ ಹೊರಗೊಳಗಾಗಿ ಧ್ಯಾನಿಸಿರಿ! (ಬ)
-ದ್ಧನವನಲ್ಲೆಂದವನ ಧ್ಯಾನಿಸಿರಿ! (ತ)
-ನು, ಮನ, ಧನಾಸೆಯಟ್ಟಿ ಧ್ಯಾನಿಸಿರಿ!
ದೇಶ, ಕಾಲ, ಭ್ರಾಂತಿ ಬಿಟ್ಟು ಧ್ಯಾನಿಸಿರಿ!
ರ ಗುರುವ ಸ್ಮರಿಸಿ ಧ್ಯಾನಿಸಿರಿ! (ಗು)
-ರುವೇ ಪರಬ್ರಹ್ಮನೆಂದು ಧ್ಯಾನಿಸಿರಿ!
ಧ್ಯಾನ ಸಾಕ್ಷಾತ್ಕಾರಕ್ಕೆಂದು ಧ್ಯಾನಿಸಿರಿ!
ನಿತ್ಯ ಸತ್ಸಂಗಿಗಳಾಗಿ ಧ್ಯಾನಿಸಿರಿ!
ಸಿರಿತನವಿದೆನುತ ಧ್ಯಾನಿಸಿರಿ! (ಹ)
-ರಿ ನಿರಂಜನಾದಿತ್ಯೆಂದು ಧ್ಯಾನಿಸಿರಿ!!!

ಪರಿಸ್ಥಿತಿ ಸುಧಾರಿಸಿದೆ! (ಪ)   6(3316)

-ರಿಣಾಮ ನೋಡಬೇಕಾಗಿದೆ! (ಸ್ವ)
-ಸ್ಥಿತಿ ನಿಜಗುರಿಯಾಗಿದೆ! (ಪ್ರ)
-ತಿ ದಿನ ಸಾಧನೆ ಸಾಗಿದೆ!
ಸುತ್ತುಮುತ್ತ ಬೆಳಕಾಗಿದೆ! (ಕ್ಷು)
-ಧಾ ಬಾಧೆ ಕಡಿಮೆಯಾಗಿದೆ!
ರಿಪುಗಳಾರ್ಭಟ ನಿಂತಿದೆ!
ಸಿಗ್ಬೇಕಾದದ್ಸಿಗ್ಬೇಕಾಗಿದೆ! (ಆ)
-ದೆ ನಿರಂಜನಾದಿತ್ಯನಾದೆ!!!

ಪರಿಹಾರ ನೀಡಿ ಪರಿಣಾಮ ನೋಡಿ!   6(3429)

ರಿವಾಜೆಂದು ಯಾರನ್ನೂ ತುಳಿಯಬೇಡಿ!
ಹಾಸಿಗೆ ಹಾಸದೆ ಮಲಗೆನ್ನಬೇಡಿ!
ಫ್ತು, ಆಮದು, ವ್ಯವಸ್ಥೆ ಸರಿಮಾಡಿ!
ನೀನು, ನಾನು, ಎಂದು ಜಗಳಾಡಬೇಡಿ!
(ದು)-ಡಿಮೆ ದೇವರ ಸೇವೆಯೆನ್ನುತ್ತ ಮಾಡಿ!
ರವಿತ್ತಾಪಹಾರ ಮಾಡಲೇಬೇಡಿ!
ರಿಪುಗಳೊಳಗಿಂದ ತಳ್ಳದಿರ್ಬೇಡಿ!
(ಗ)-ಣಾಧಿಪನಾಗಿವರ ಜೈಸದಿರ್ಬೇಡಿ!
ದನಾರಿಯಾದರ್ಶದಂತೆಲ್ಲಾ ಮಾಡಿ!
ನೋಡಿದ್ರೂ ಪರಾಂಬರಿಸದಿರಬೇಡಿ!
(ಹಾ)-ಡಿ ನಿರಂಜನಾದಿತ್ಯ ಭಜನೆ ಮಾಡಿ!!!

ಪರಿಹಾರವಿದಕ್ಕೆಲ್ಲಾ ಏನಪ್ಪಾ? (ಹ)   4(1915)

-ರಿಗೆ ಸದಾ ಮೊರೆಯಿಡಬೇಕಪ್ಪಾ! (ಅ)
-ಹಾರ, ವಿಹಾರ ಸಾತ್ವಿಕಾಗ್ಬೇಕಪ್ಪಾ! (ಪ)
-ರರನುಕರಣೆ ಬಿಡಬೇಕಪ್ಪಾ!
ವಿದ್ಯೆ, ಬುದ್ಧಿ, ಶುದ್ಧಿಗಾಗಬೇಕಪ್ಪಾ! (ಪಾ)
-ದ ಸೇವೆ ಗುರುವಿನದ್ದಾಗ್ಬೇಕಪ್ಪಾ! (ಮಿ)
-ಕ್ಕೆಲ್ಲಾ ಕೆಲಸಕ್ಕಿದು ಬಲವಪ್ಪಾ! (ಚೆ)
-ಲ್ಲಾಟ, ಕೊಲ್ಲಾಟದಿಂದೇನಾಗ್ವುದಪ್ಪಾ?
ಕೈಕಾತ್ಮ ನಿಷ್ಠೆಯಿರಬೇಕಪ್ಪಾ!
ಶ್ವರದಾಸೆ ತ್ಯಜಿಸಬೇಕಪ್ಪಾ! (ಅ)
-ಪಾ, ನಿರಂಜನಾದಿತ್ಯನಂತಿರಪ್ಪಾ!!!

ಪರೀಕ್ಷಾ ಫಲಿತಾಂಶವಾವಾಗ? (ಶ)   3(1336)

-ರೀರ ಶ್ರಮ ಸಾರ್ಥಕವಾದಾಗ! (ರ)
-ಕ್ಷಾಕವಚನುಗ್ರಹವಾದಾಗ!
ಲಾಪೇಕ್ಷೆ ನಿರ್ಮೂಲವಾದಾಗ (ಮ)
-ಲಿನ ವಾಸನೆ ಕ್ಷಯವಾದಾಗ!
ತಾಂಡವೇಶ್ವರನರಿವಾದಾಗ!
ಕ್ತಿ ಸಂಚಾರ ಸ್ಥಿರವಾದಾಗ!
ವಾಙ್ಮನಸ್ಸುಗಳೈಕ್ಯವಾದಾಗ!
ವಾದ, ಭೇದಗಳಂತ್ಯವಾದಾಗ! (ಮ)
-ಗ ನಿರಂಜನಾದಿತ್ಯಗಾದಾಗ!!!

ಪರೀಕ್ಷೆ ಫಲತಾಂಶ ತಿಳ್ಸಿಲ್ಲ! (ನಿ)   4(2073)

-ರೀಕ್ಷಿಸಿದಂತೆ ಅದಾಗಲಿಲ್ಲ! (ದೀ)
-ಕ್ಷೆಯುಪಯೋಗ ಮಾಡಿಕೊಂಡಿಲ್ಲ! (ವಿ)
-ಫಲರಾದೆವೆಂದೀಗಳ್ಬೇಕಿಲ್ಲ! (ಪಾ)
-ಲಿಸ್ಬೇಕು ಹಿರಿಯರಾಜ್ಞೆಯೆಲ್ಲ! (ಚಿಂ)
-ತಾಂಬುಧಿಯಿಂದೆದ್ದು ಬನ್ನಿರೆಲ್ಲ!
ಕ್ತಿವಂತರಾಗ್ಬೇಕ್ಮಕ್ಕಳೆಲ್ಲ!
ತಿರುಗಾಟ ಸುಖಪ್ರದವಲ್ಲ! (ಉ)
-ಳಿಸ್ಕೊಳ್ಬೇಕು ಸ್ಥಾನ, ಮಾನವೆಲ್ಲ! (ಪು)
-ಲ್ಲ ನಿರಂಜನಾದಿತ್ಯಗಾಗ್ಯೆಲ್ಲ!!!

ಪರೋಪಕಾರದ ಮಾತಾಡುವರೆಲ್ಲ! (ಸಾ)   4(2439)

-ರೋದ್ಧಾರ ಕೆಲಸ ಮಾಡುವವರೆಲ್ಲ!
ರಿಪರಿ ಕಾರಣ ಕೊಡುವರೆಲ್ಲ! (ಸ್ವ)
-ಕಾರ್ಯಾರ್ಥಿಯಿನ್ನೇನುತಾನೇ ಮಾಡಬಲ್ಲ? (ಪ)
-ರಹಿತೈಷಿ ಬಾಯಿಯಿಂದಾಡುವುದಿಲ್ಲ! (ಆ)
-ದಷ್ಟು ಮಾಡಿ ತೋರಿಸುತ್ತಿರುವನೆಲ್ಲ!
ಮಾಧವನಾದರ್ಶವನಲ್ಲಿಲ್ಲದಿಲ್ಲ!
ತಾಮಸವೃತ್ತಿಗಳ ಸೋಂಕವಗಿಲ್ಲ! (ದು)
-ಡುಕಿ ಯಾವುದನ್ನೂ ಮಾಡುವುದೇ ಇಲ್ಲ!
ರ ಗುರುಭಕ್ತಿ ಜೀವಾಳವ್ನದೆಲ್ಲ! (ಕ)
-ರೆದ್ರೂ ಯಾರೊಡನೆಯೂ ಸೇರುವುದಿಲ್ಲ! (ಘು)
-ಲ್ಲ, ನಿರಂಜನಾದಿತ್ಯಗಿಷ್ಟವಿದೆಲ್ಲ!!!

ಪಲ, ಪತ್ರ, ಪುಷ್ಪ ಸಮರ್ಪಣಾ!   1(111)

ಕ್ಷ್ಯ ಸೂರ್ಯನಿಗೆ ಸಮರ್ಪಣಾ!
ತ್ರ ಶಿವನಿಗೆ ಸಮರ್ಪಣಾ!
ತ್ರಯಲೋಕದಾಸೆ ಕೃಷ್ಣಾರ್ಪಣಾ!
ಪುಣ್ಯ, ಪಾಪ ಭಾಂತಿ ದತ್ತಾರ್ಪಣಾ! (ಪು)
-ಷ್ಪಗಳೆಲ್ಲಾ ಗುರು ಪಾದಾರ್ಪಣಾ!
ತ್ಯ, ಮಿಥ್ಯ ಆತ್ಮ ರಾಮಾರ್ಪಣಾ!
ನ ಮಾಧವಗೆ ಸಮರ್ಪಣಾ! (ಅ)
-ರ್ಪಣಾ! ಭಜನೆಗೆ ಜನ್ಮಾರ್ಪಣಾ! (ಗು)
-ಣಾವಗುಣ ನಿರಂಜನಾರ್ಪಣಾ!!!

ಪವನಸುತಗಾಹುತಿ!   2(686)

ರ ರಾಮ ಫಲಾದಾಹುತಿ!
ಮಾಯಾ ವ್ಯಾಮೋಹತ್ಯಾಜ್ಯಾಹುತಿ! (ವಾ)
-ನರ ವೀರಗೆ ಪೂರ್ಣಾಹುತಿ!
ಸುರೇಂದ್ರ ವಂದ್ಯಗಾಶಾಹುತಿ!
ತ್ವಚಿತ್ತಗೆ ಸರ್ವಾಹುತಿ!
ಗಾನ, ಭಜನಾನಂದಾಹುತಿ!
ಹುಟು, ಸಾವಿನ ಗುಟ್ಟಾಹುತಿ! (ಪ್ರೀ)
-ತಿ, ನಿರಂಜನ ಭಕ್ತ್ಯಾಹುತಿ!!!

ಪವಿತ್ರ ಪಾದಪೂಜೆ ಮಾಡಬೇಕು!   6(4172)

ವಿಷಯ ವಾಸನೆ ನಾಶವಾಗ್ಬೇಕು!
ತ್ರಯಂಬಕನ ದರ್ಶನವಾಗ್ಬೇಕು!
ಪಾಪ, ಪುಣ್ಯದ ಹುಚ್ಚು ನುಚ್ಚಾಗ್ಬೇಕು!
ಪ್ಪ, ಸಣ್ಣೆಂಬಭಿಮಾನ ಬಿಡ್ಬೇಕು!
ಪೂತನಿಯ ಮನಸ್ಸಿಲ್ಲದಿರ್ಬೇಕು! (ಬಂ)
-ಜೆ ನಾನಾದೆನೆಂದಳದಿರಬೇಕು!
ಮಾಡ್ಬೇಕವನ ಸೇವೆಯೆಂದ್ಮಾಡ್ಬೇಕು! (ಬ)
-ಡನಾಡಲು ಸಜ್ಜನರಿರಬೇಕು!
ಬೇಡಿ ಕೈಗೆ ತೊಡ್ಸಿಕೊಳ್ಳದಿರ್ಬೇಕು!
ಕುಲ ನಿರಂಜನಾದಿತ್ಯ ಕಾಯ್ಬೇಕು!!!

ಪಶು, ಪಶುಪತಿಯಾಗಬೇಕು!   4(1572)

ಶುಕ್ಲ, ಶೋಣಿತಾನಲ್ಲೆನಬೇಕು!
ರ ಧರ್ಮಾಸಕ್ತಿ ಬಿಡಬೇಕು!
ಶುಚ್ಯಾದಂತರಂಗವಿರಬೇಕು!
ರಮಾತ್ಮಾರ್ಥ ತಿಳಿಯಬೇಕು!
ತಿಳಿದದರಂತಿರಲೂ ಬೇಕು!
ಯಾತ್ರಾಸ್ಥಳ ತನ್ನೊಳಗಾಗ್ಬೇಕು!
ಯಾ, ಗಂಗಾ ಸ್ನಾನವಿಲ್ಲಾಗ್ಬೇಕು!
ಬೇರಿನ್ನೇನಿದಕೆ ಆಗಬೇಕು? (ಬೇ)
-ಕು ನಿರಂಜನಾದಿತ್ಯನಿಗೆ ಸಾಕು!!!

ಪಾಂಚಭೌತಿಕ ದೇಹಕ್ಕೆ ಪಂಚಾರತಿ!   5(3016)

ರಾಚರ ವ್ಯಾಪಕನಿಗೀ ಆರತಿ!
ಭೌದ್ಧಾದಿ ಮತ ಹೇತುವಿಗೀ ಆರತಿ!
ತಿಳಿದಿದ, ಸದಾ ಮಾಡಬೇಕಾರತಿ!
ಲ್ಲಿನ ಗೊಂಬೆಯಲ್ಲಿರ್ಪಾತ್ಮ ಗಾರತಿ!
ದೇವರೆಲ್ಲೆಲ್ಲಿಹನೆಂದರಿತಾರತಿ!
ಸ್ತ, ಪಾದನಂತವುಳ್ಳವಗಾರತಿ! (ಅ)
-ಕ್ಕೆ ಕಲ್ಯಾಣವೆಲ್ಲಾ ಲೋಕಕ್ಕೆಂದಾರತಿ!
ಪಂಥ ಪರಾಕ್ರಮಾತ್ಮಾರಾಮಗಾರತಿ!
ಚಾತುರ್ವರ್ಣಾಶ್ರಮಧರ್ಮಕ್ಕೇಕಾರತಿ! (ಪ)
-ರಸ್ಪರ ಪ್ರೀತಿ ವಿಶ್ವಾಸಾತ್ಮಗಾರತಿ! (ಇ)
-ತಿ ನಿರಂಜನಾದಿತ್ಯಾನಂದಕ್ಕಾರತಿ!!!

ಪಾಂಡವರರಿಯಣ್ಣ ಕರ್ಣ! [ಒ]   3(1313)

-ಡನಾಡಿ ಕೌರವಗೆ ಕರ್ಣ!
ರಪುತ್ರ ಕುಂತಿಗೆ ಕರ್ಣ! (ವೀ)
-ರ ಶಿಷ್ಯ ಭಾರ್ಗವಗೆ ಕರ್ಣ!
ರಿ ಪುಕುಲಕಂತಕ ಕರ್ಣ!
ದುತನಯಾಪ್ತ ಕರ್ಣ! (ಉ)
-ಣ್ಣರ್ಕಗರ್ಘ್ಯ ಕೊಡದೆ ಕರ್ಣ! (ಅ)
-ಕಳಂಕ ತೇಜೋರಾಶಿ ಕರ್ಣ! (ಕ)
-ರ್ಣ ನಿರಂಜನಾದಿತ್ಯ ವರ್ಣ!!!

ಪಾಂಡಿತ್ಯಕ್ಕಾಗಿ ಮಾಡ್ಬೇಕಭ್ಯಾಸ ನಿತ್ಯ! (ನು)   6(3874)

-ಡಿಯಬಾರದು ಎಂದೆಂದಿಗೂ ಅಸತ್ಯ!
ತ್ಯಜಿಸುವುದು ದುಸ್ಸಂಗ ಅತ್ಯಗತ್ಯ! (ತಿ)
-ಕ್ಕಾಟಕ್ಕೆಡೆಗೊಡ್ದಿರ್ಬೇಕು ದಾಂಪತ್ಯ!
ಗಿರಿಜಾಶಂಕರರ ಆದರ್ಶ ಸ್ತುತ್ಯ!
ಮಾರನಾಟವನ್ನು ಮಾಡಿದನು ಅಂತ್ಯ! (ಇ)
-ಡ್ಬೇಕವನಲ್ಲಿ ಭಕ್ತಿ, ವಿಶ್ವಾಸ ಮರ್ತ್ಯ!
ಲ್ಮಷನಾಶ ಶಿವ ತಾಂಡವ ನೃತ್ಯ! (ಅ)
-ಭ್ಯಾಗತರಾದರೋಪಚಾರ ಅಗತ್ಯ!
ದ್ಗುರು ಕೃಪೆಗಾಗಿ ಆಗ್ಬೇಕು ಭೃತ್ಯ!
ನಿಷ್ಕಪಟವಾಗಿರಬೇಕು ಸಾಹಿತ್ಯ! (ನಿ)
-ತ್ಯ ನಿರಂಜನಾದಿತ್ಯ ಕಿರಣ ಸತ್ಯ!!!

ಪಾಡಿ ಸುಬ್ರಹ್ಮಣ್ಯೇಶ್ವರನ! (ನೋ)   3(1245)

-ಡಿ ಶ್ರೀ ಗುರು ಗುಹೇಶ್ವರನ!
ಸುಖ, ದುಃಖವೇಕ ಸಮನೆ!
ಬ್ರಹ್ಮ, ವಿಷ್ಣು, ಶಿವ ಪ್ರಿಯನ! (ಬ್ರ)
-ಹ್ಮ ವಿದ್ಯಾ ಪೂರ್ಣಾನುಭವನ! (ಗ)
-ಣ್ಯೇಶ್ವರ ಗಣನಾಯಕನ! (ವಿ)
-ಶ್ವವ್ಯಾಪಿ ಪುರುಷೋತ್ತಮನ! (ವಿ)
-ರಕ್ತ ಪಳನಿಯಾಂಡವನ! (ಘ)
-ನ, ಶ್ರೀ ನಿರಂಜನಾದಿತ್ಯನ!!!

ಪಾಡಿದರು ತಾಯಂದಿರು! (ಉ)   1(163)

-ಡಿಸಿ ರಾಗ ಪೀತಾಬರ! (ಅ)
-ದನಾಲಿಸೆ ಮನೋಹರ!
ರುಜು ಸಾರ ನಿಜಾಪಾರ!
ತಾಪಹರ ಪಾಪದೂರ!
ಯಂಬುಗಾರ ಬಿಂಬಮಾರ!
ದಿಟ ಮೀರ ಸಟೆದೂರ!
ರುಚಿ ನಿರಂಜನಾಕಾರ!!!

ಪಾಡು ಪಟ್ಟೆ, ನಾಡು, ಬೀಡು ಬಿಟ್ಟೆ! [ಕಾ]   2(640)

-ಡು, ಮೇಡು ಹತ್ತಿ ಓಡಾಡಿಬಿಟ್ಟೆ!
ರಿಪರಿ ಕಷ್ಟ ಪಟ್ಟು ಬಿಟ್ಟೆ! (ಬ)
-ಟ್ಟೆ ಬರೆಯಟ್ಟು ಕುಣಿದುಬಿಟ್ಟೆ!
ನಾಮಕಾಗಿ ಹೊಡೆದಾಡಿಬಿಟ್ಟೆ! (ಉ)
-ಡುಗೊರೆಯೂಟವ ಕೊಟ್ಟು ಬಿಟ್ಟೆ!
ಬೀಡು, ಗುಡಿಗಳ ಕಟ್ಟಿಬಿಟ್ಟೆ! (ಹಾ)
-ಡು, ಹಬ್ಬಗಳ ಮಾಡಿಸಿಬಿಟ್ಟೆ!
ಬಿಟ್ಟೆ, ಕೊಟ್ಟೆ ದಿಟ ನೋಡಿಬಿಟ್ಟೆ! (ಬ)
-ಟ್ಟೆ, ನಿರಂಜನಾದಿತ್ಯಾಂಬರುಟ್ಟೆ!!!

ಪಾತಕ ಮಲ ಬಿಡಿ, ಪಾದ ಕಮಲ ಪಿಡಿ!   1(155)

ರಲೆ ತಂಟೆ ಬಿಡಿ, ತಂದೆಯಡಿಗೆ ಓಡಿ!
ಪಟದ ಆಟ ಬಿಡಿ, ಅಪ್ಪನಾಟ ನೋಡಿ!
ನೆ ಮಠ ಬಿಡಿ, ಮಠಾಧೀಶನನು ಕೂಡಿ!
ಜ್ಜೆ, ಗೆಜ್ಜೆ ಬೇಡಿ, ಅಜ್ಜ ಬೊಮ್ಮನನು ಬೇಡಿ!
ಬಿಳಿ. ಕಪ್ಪೆನಬೇಡಿ, ಅಪ್ಪನ ಬಿಡಬೇಡಿ! (ಇ)
-ಡಿಯಡಿ ಮುಂದಿಡಿ, ಕಾಲು ಜಾರಿ ಬೀಳಿಬೇಡಿ!
ಪಾಡ್ಯಾಡಿ, ಕುಣಿದಾಡಿ, ದಣಿದೆನೆನಬೇಡಿ! (ಇ)
-ದಕದಕೆಂದಿರಬೇಡಿ, ನಿಜ ಬಿಡಬೇಡಿ!
ಷ್ಟಕೋಟಲೆಗಂಜಬೇಡಿ, ಭಜನೆ ಮಾಡಿ!
ದ್ವೆ, ಮುಂಜಿಗಳ ಬೇಡಿ, ಗುರುನಾಮ ಪಾಡಿ!
ಕ್ಕ ಲೆಃಖ ಬೇಡಿ, ಇಕ್ಕಿದನು ತಳ್ಳಬೇಡಿ!
ಪಿರಿ,ಕಿರಿದೆನಬೇಡಿ, ವಿರೋಧಿಸಬೇಡಿ! (ಇ)
-ಡಿ! ನಿರಂಜನಾದಿತ್ಯನಲ್ಲಿ ವಿಶ್ವಾಸವಿಡಿ! ೧೫೫

ಪಾತ್ರಾ ಪಾತ್ರವರಿತು ಮಾಡ್ಬೇಕ್ಸಕಾಲದಲ್ಲಿ ಸೇವೆ!   6(3970)

ತ್ರಾಣಹೀನನಿಗೆ ಸೂಕ್ತಾನ್ನ, ಪಾನವೀವುದು ಸೇವೆ!
ಪಾಲುಮಾರಿಕೆಯವಗೆಷ್ಟುಮಾಡಿದ್ರೂ ವ್ಯರ್ಥಾಸೇವೆ!
ತ್ರಯಮೂರ್ತಿ ಸ್ವರೂಪಿ ದತ್ತನ ಧ್ಯಾನ ಶ್ರೇಷ್ಠ ಸೇವೆ!
ರ್ಣಾಶ್ರಮ ಭೇದವಿಲ್ಲಿದೆ ಮಾಳ್ಪುದಾದರ್ಶ ಸೇವೆ!
ರಿಸಿ, ಮುನಿಗಳಂದು ಮಾಡಿದರಿಂಥಾ ಯೋಗ್ಯ ಸೇವೆ!
ತುರೀಯಾತೀತ ತ್ರಿಪುಟಿ ನಾಶವಾದ್ಮೇಲೇನು ಸೇವೆ!
ಮಾಡಬೇಕು ಮನೋನಾಶಕ್ಕಿಂತ ಮುಂಚೆ ಎಲ್ಲಾ ಸೇವೆ! (ಬಿ)
-ಡ್ಬೇಕು ಫಲಾಪೇಕ್ಷೆ ಮಾಡುವಾಗ ಪ್ರತಿಯೊಂದು ಸೇವೆ! (ವಾ)
-ಕ್ಸಮರ್ಥನೆಂದ ಮಾತ್ರಕ್ಕವನಿಂದಾಗದಾವ ಸೇವೆ!
ಕಾಮಿನಿ, ಕಾಂಚನದಾಸೆ ತುಂಬಿರುವಾಗೆಂಥಾ ಸೇವೆ?
ಕ್ಷ್ಯ ಸಿದ್ಧಿಗಿರಬೇಕು ಶುದ್ಧ ಮನಸ್ಸಿನ ಸೇವೆ!
ಶೇಂದ್ರಿಯ ವಿಷಯಾಸಕ್ತಿ ಬಿಡದಾಗದು ಸೇವೆ! (ಮ)
-ಲ್ಲಿಕಾರ್ಜನ ಒಪ್ಪಿದ ಅಕ್ಕಮಹಾದೇವಿಯ ಸೇವೆ!
ಸೇತು ಬಂಧನದಲ್ಲಿ ಮರೆಯ್ಬಾರದಳಿಲು ಸೇವೆ! (ಸೇ)
-ವೆ ನಿರಂಜನಾದಿತ್ಯನದ್ದೀರೇಳು ಲೋಕದ ಸೇವೆ!!!

ಪಾತ್ರಾಪಾತ್ರ ನೋಡಿ ದಾನ ಮಾಡು! (ಪಿ)   4(1912)

-ತ್ರಾರ್ಜಿತವಿದಕ್ಕೆಂದೀಗ ಮಾಡು!
ಪಾಲುಮಾರಿಕೆಯಿಲ್ಲದೇ ಮಾಡು! (ಪು)
-ತ್ರ, ಮಿತ್ರ, ಕಳತ್ರರಿಗೂ ಮಾಡು!
ನೋವೆಳ್ಳಷ್ಟೂ ಆಗದಂತೆ ಮಾಡು! (ಅ)
-ಡಿಗಡಿಗಾತ್ಮ ಚಿಂತನೆ ಮಾಡು!
ದಾನಶೂರ ಕರ್ಣನಂತೆ ಮಾಡು!
ಮೋ ನಾರಾಯಣಾಯೆಂದು ಮೂಡು!
ಮಾಯೆಗೆ ಮರುಳಾಗದೇ ಮಾಡು! (ಮಾ)
-ಡು ನಿರಂಜನಾದಿತ್ಯನ ಕೂಡು!!!

ಪಾದ ಪೂಜಿಸುವಾಗದನ್ನೇ ನೋಡಯ್ಯಾ!   2(524)

ರ್ಶನ ವದಲಕ್ಷಿಸಬಾರದಯ್ಯಾ!
ಪೂಜೆ ಫಲಿಸಲಿಕಿದಗತ್ಯವಯ್ಯಾ! (ಭ)
-ಜಿಸುತಾ ಪಾದದಲೊಂದಾಗಬೇಕಯ್ಯಾ!
ಸುತ್ತು, ಮುತ್ತು ನೋಡಲಿಕೆ ಬಂದಿಲ್ಲಯ್ಯಾ!
ವಾಡಿಕೆಯ ಕಾಟಾಚಾರ ವ್ಯರ್ಥವಯ್ಯಾ!
ತಿ, ಗುರಿಯ ಮರೆಯಬಾರದಯ್ಯಾ!
ಯೆ, ದಾಕ್ಷಿಣ್ಯಕ್ಕೆ ಬರಲಾರದಯ್ಯಾ! (ಇ)
-ನ್ನೇಕೆನ್ನದೆ ಶ್ರದ್ಧಾ ಭಕ್ತಿ ಹೆಚ್ಚಲಯ್ಯಾ!
ನೋವು, ಸಾವಿನಿಂದ ಕುಗ್ಗಬಾರದಯ್ಯಾ! (ಬ)
-ಡವರ ಬಂಧು ಪರಮಾತ್ಮ ತಾನಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಪಾದಗತ್ಯಯ್ಯಾ!!!

ಪಾದತೀರ್ಥ ಭಾಗೀರಥ್ಯಮ್ಮಾ!   2(920)

ರ್ಶನ ಬಹು ಪುಣ್ಯವಮ್ಮಾ!
ತಿ

ರ್ಥ ಸ್ಪರ್ಶ ಪಾಪನಾಶಮ್ಮಾ! (ಸಾ)
-ರ್ಥಕ ಜನ್ಮ ಸ್ನಾನದಿಂದಮ್ಮಾ!
ಭಾವೈಕ್ಯ ಸೇವನೆಯಿಂದಮ್ಮಾ![ಭ]
-ಗೀರಥ ಪ್ರಯತ್ನದಕಮ್ಮಾ! (ನ)
-ರ, ನಾರಿಯರಿಗಗತ್ಯಮ್ಮಾ! (ಮಿ)
-ಥ್ಯ, ನಿರ್ನಾಮವದರಿಂದಮ್ಮಾ! (ಅ)
-ಮ್ಮಾ ಶ್ರೀ ನಿರಂಜನಾದಿತ್ಯಮ್ಮಾ!!!

ಪಾದಪೂಜೆಯಾಯ್ತೀ ದಿವಸ! [ಬಂ]   4(2285)

-ದವರ್ಗುಕ್ಕಿತು ಭಕ್ತಿ ರಸ!
ಪೂಜೆಯಲ್ಲಿತ್ತಾತ್ಮ ವಿಶ್ವಾಸ! (ಪೂ)
-ಜೆಗೊಂಡವಾ ಕೈಲಾಸವಾಸ!
ಯಾಗ, ಯೋಗಕ್ಕವನರಸ! (ಆ)
-ಯ್ತೀಗ ಪಾವನಾ ನವಾವಾಸ! (ಇ)
-ದಿಲ್ಲದಿದ್ದರಾಗ್ತಿತ್ತಾಭಾಸ! (ಅ)
-ವರಿವರ ಮಾತೆಲ್ಲಾ ಮೋಸ! (ವ್ಯಾ)
-ಸ, ನಿರಂಜನಾದಿತ್ಯ ದಾಸ!!!

ಪಾದುಕೆಯಿತ್ತಾದತ್ತ, ಭಾರವ ಹೊತ್ತು! (ಪಾ)   4(2211)

-ದುಕೆ ಹೊತ್ತಾ ಭಕ್ತ ಕುಣಿದ ಹಾಡುತ್ತ! (ಶಂ)
-ಕೆಯಾಯಿತಿತರರಿಗಿದೇನೆನುತ್ತ! (ನಾ)
-ಯಿಯಾ ಬಂದು ಮಲಗಿತಿದ ನೋಡುತ್ತ! (ಹೊ)
-ತ್ತಾದರೂ ಭಾವ ಸಾಗಿತು ಪಾದದತ್ತ!
ತ್ತಲೀಲೆಯರಿವಾಗದಾಯಿತಿತ್ತ! (ಕ)
-ತ್ತಲೆ ಕವಿದಾವರಿಸಿತು ಸುತ್ಮುತ್ತ!
ಭಾವಾವೇಶಕ್ಕೇರಿತಾಗೆಲ್ಲರ ಚಿತ್ತ! (ಪ)
-ರಮಾನಂದ ಪರವಶನಾದ ದತ್ತ!
ರ ಗುರು ಸ್ವರೂಪವಿದೆಂದೆನುತ್ತ!
ಹೊರಗೊಳಗೆ ಬೆಳಕಾಯ್ತಾಗ ಸುತ್ತ! (ದ)
-ತ್ತು ನಿರಂಜನಾದಿತ್ಯಾನಂದನೆನುತ್ತ!!!

ಪಾಪ, ಪುಣ್ಯಕ್ಕಾಶೆಯೇ ಕಾರಣ! (ಪಾ)   6(3587)

-ಪ, ಪುಣ್ಯದಿಂದ ಪತನೋತ್ಥಾನ!
ಪುರುಷಾರ್ಥ ಬಾಳಿನ ದರ್ಪಣ! (ಗ)
-ಣ್ಯ, ಅಗಣ್ಯತೆಗಿದು ಪ್ರಮಾಣ! (ವಾ)
-ಕ್ಕಾಯ, ಮನಶುದ್ಧಿಯವ ಜಾಣ!
ಶೆಟ್ಟಿಯ ಗುಟ್ಟರಿವಾ ನಿಪುಣ!
ಯೇಸುವಿನಲ್ಲೂ ಗುಣ ಗ್ರಹಣ!
ಕಾಮನದ್ದು ಕೆಟ್ಟ ಪ್ರಕರಣ!
ತಿಗಿದ್ರಿಂದ ಬುದ್ಧಿ ಭ್ರಮಣ! (ಬಾ)
-ಣ, ನಿರಂಜನಾದಿತ್ಯ ಕಿರಣ!!!

ಪಾಮರನ ಮೇಲೆ ಕರುಣೆಯಿರಲಿ!   5(3210)

ನೆಮನೆಗಲೆಯುವುದು ತಪ್ಪಲಿ!
ವಾನೆ ಗುರುಪಾದದೆಡೆಗಾಗಲಿ!
ಶ್ವರವಿದರ ವ್ಯಾಮೋಹ ಹೋಗಲಿ!
ಮೇಲ್ವಿಚಾರ ಪರಮೇಶ್ವರ ಮಾಡಲಿ!
ಲೆಃಖಾಚಾರ ಜೀವ ಸರಿಯಾಗಿಡಲಿ!
ಳ್ಳತನಕ್ಕೆಡೆಗೊಡಿದಿರಿಸಲಿ!
ರುಜುಮಾರ್ಗಿಯಾಗುವ ಭಾಗ್ಯ ಕೊಡಲಿ! (ಹೊ)
-ಣೆಯೆಲ್ಲಾ ಕಾಲಕ್ಕವನೇ ಆಗಿರಲಿ! (ಬಾ)
-ಯಿಮುಚ್ಚಿ ಕೂತದ್ದು ಸಾರ್ಥಕವಾಗಲಿ!
ಹಸ್ಯ ಸೃಷ್ಟಿಯದು ಅರವಾಗಲಿ! (ಮಾ)
-ಲಿನ, ನಿರಂಜನಾದಿತ್ಯ ಕಳೆಯಲಿ!!!

ಪಾರಿತೋಷಕ ಬೇಕೇನಯ್ಯಾ? (ಹ)   4(1709)

-ರಿ ಸ್ಮರಣೆ ಮಾಡುತ್ತಿರಯ್ಯಾ! (ನಿಂ)
-ತೋ, ಕೂತೋ ಸದಾ ಜಪಿಸಯ್ಯಾ! (ವಿ)
-ಷಯಾಸಕ್ತಿ ಬಿಟ್ಟು ಬಿಡಯ್ಯಾ!
ರ್ತವ್ಯಾತ್ಮ ಚಿಂತನೆಯಯ್ಯಾ!
ಬೇಕು ಸದ್ಗುರು ಕೃಪೆಯಯ್ಯಾ!
ಕೇಡೆಣಿಸಬೇಡನ್ಯರ್ಗಯ್ಯಾ!
ಶ್ವರ ಈ ಶರೀರವಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾಗಯ್ಯಾ!!!

ಪಾರಿತೋಷಕವಾವುದಯ್ಯಾ? (ಹ)   4(1710)

-ರಿ ಚರಣ ಸೇವಾ ಭಾಗ್ಯಯ್ಯಾ! (ಸಂ)
-ತೋಷವಿದೇ ಶಾಶ್ವತವಯ್ಯಾ! (ವಿ)
-ಷಯ ಸುಖ ಕ್ಷಣಿಕವಯ್ಯಾ!
ರಗಬೇಕಂತರಂಗಯ್ಯಾ! (ಭ)
-ವಾಬ್ಧಿಯಾಗ ದಾಟಬೇಕಯ್ಯಾ! (ರೇ)
-ವು ಸದ್ಗುರು ಸನ್ನಿಧಿಯಯ್ಯಾ! (ಇ)
ಲಭ್ಯ ದುರಾಚಾರಿಗಯ್ಯಾ! (ಅ)
ಯ್ಯಾ, ನಿರಂಜನಾದಿತ್ಯಮ್ಮಯ್ಯಾ!!!

ಪಾರ್ವತಿ ಕಂಡಳು ಪರಮೇಶ್ವರನ! [ಸ]   4(2183)

-ರ್ವರೊಳಗಿಹ ಗುರು ಮಹೇಶ್ವರನ! (ಗ)
-ತಿ ಶಿವಗಣಕಾಗಿರುತಿರ್ಪವನ!
ಕಂಠದಲಿ ವಿಷವಿರಿಸಿರ್ಪವನ!
ಮರುಧರ ನಟರಾಜೇಶ್ವರನ! (ತು)
-ಳುಕಿಳೆಗಿಳಿಯುವ ಗಂಗಾಧರನ!
ತಿತರ ಪಾಪನಾಶ ಗೈವವನ! (ವ)
-ರ ರಾಮನಾಮ ಸದಾ ಜಪಿಸುವನ! (ಉ)
-ಮೇಶನನೆನಿಸಿದರ್ಧನಾರೀಶ್ವರನ! (ವಿ)
-ಶ್ವನಾಥನಾಥ ನಾಥ ತಾನಾಗಿಹನ!
ಕ್ಕಸಾಂತಕ ಕಲಿಮಲಾಂತಕನ! (ಜ)
-ನಕ ನಿರಂಜನಾದಿತ್ಯನಾದವನ!!!

ಪಾರ್ವತಿ ಪರಮೇಶ್ವರರಿವರಪ್ಪಾ! (ಈ)   2(907)

-ರ್ವರೈಕ್ಯ ದರ್ಶನ ನಿಜಾನಂದವಪ್ಪಾ! [ಸ]
-ತಿಪತಿಯಾದರ್ಶ ಹೀಗಿರಬೇಕಪ್ಪಾ!
ರಮಾರ್ಥ ಜೀವನ ಗುರಿಯಿದಪ್ಪಾ! (ಮಾ)
-ರನಾಟಕ್ಕಿವರು ಬಾಗರಪ್ಪಾ! [ಕಾ]
-ಮೇಶ್ವರಿ ಪತಿಸೇವಾ ನಿರತಳಪ್ಪಾ! (ಈ)
-ಶ್ವರನವಳಿಗೆ ಗುರು ಸ್ವರೂಪಪ್ಪಾ! (ಹ)
-ರನವಳ ಭಕ್ತಿಗೆ ಮೆಚ್ಚಿಹನಪ್ಪಾ!
ರಿಪುಗಳಿವರನ್ನೇನೂ ಮಾಡರಪ್ಪಾ!
ರದ ಹಸ್ತ ಸದಾ ಇವರದಪ್ಪಾ! (ಸು)
-ರ, ನರೋರಗರೆಲ್ಲಾ ಕಿಂಕರರಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯ ರೂಪವರಪ್ಪಾ!!!

ಪಾರ್ವತಿಗೀ ಫಲ ಸಮರ್ಪಣೆ! [ಸ]   3(1343)

-ರ್ವ ಕಾರ್ಯ ಸಿದ್ಧಿಗಾಗೀ ಅರ್ಪಣೆ! (ಸ)
-ತಿ, ಪತಿಯರೈಕ್ಯಕ್ಕೀ ಅರ್ಪಣೆ! (ಯೋ)
-ಗೀಶ್ವರಾನುಗ್ರಹಕ್ಕೀ ಅರ್ಪಣೆ!
ಲ, ಪುಷ್ಪ, ಸಹಿತಾ ಅರ್ಪಣೆ!
ಲಿತಾ ಸುತಗಿಷ್ಟಾ ಅರ್ಪಣೆ! (ವಾ)
-ಸವಾಂಬೆಯಾನಂದಕ್ಕೀ ಅರ್ಪಣೆ!
ನಶ್ಯಾಂತಿ ಲಾಭಕ್ಕೀ ಅರ್ಪಣೆ! (ಸ)
-ರ್ಪದೋಷ ವಿನಾಶಕ್ಕೀ ಅರ್ಪಣೆ! (ಹೊ)
-ಣೆ ನಿರಂಜನಾದಿತ್ಯಗಾರೆಣೆ???

ಪಾಲಕಾ ಗೋಪ ಬಾಲಕಾ! (ಬ)   2(565)

-ಲರಾಮಾತ್ಮಿಕಾ ಬಾಲಕಾ!
ಕಾಳಿಂಗಾಂತಕಾ ಬಾಲಕಾ!
ಗೋಪೀ ಮೋಹಕಾ ಬಾಲಕಾ!
ರಮಾಸ್ತಿಕಾ ಬಾಲಕಾ!
ಬಾಲ ಭಾವಿಕಾ ಬಾಲಕಾ!
ಯಕಾರಕಾ ಬಾಲಕಾ!
ಕಾಯ್ವಾ ನಿರಂಜನಾಂಬಕಾ!!!

ಪಾಲ್ಕೇಳ್ಲಿಕ್ಕೆ ಮಕ್ಳು, ಹೇಲ್ಬಾಚ್ಲಿಕ್ಕಾಳ್ಗಳು! (ನಾ)   5(3173)

-ಲ್ಕೇ ನಾಲ್ಕು ದಶರಥನಿಗೊಳ್ಳೇ ಮಕ್ಕು! (ಆ)
-ಳ್ಲಿಕ್ಕಯೋಗ್ಯರು ಧೃತರಾಷ್ಟ್ರನ ಮಕ್ಳು! (ಬೆ)
-ಕ್ಕೆಗೀಡಾದಿವರಿಗನೇಕಾಳುಗಳು!
ನೆಯಿಲ್ಲದಾದ್ರು ಪಾಂಡುವಿನ ಮಕ್ಲು! (ಆ)
-ಕ್ಳು, ರಾಜ್ಯ, ಕೋಶವೆಲ್ಲಾ ಕಳಕೊಂಡ್ರಾ ಮಕ್ಳು!
ಹೇಳ್ವವ್ರು, ಕೇಳ್ವವ್ರು, ಆಳ್ವರೆಲ್ಲಾಳ್ಗಳು! (ಕೀ)
-ಲ್ಬಾಗಿಲಿಗಿಕ್ಕಿದರು ತಮ್ಮನ ಮಕ್ಳು! (ಹಂ)
-ಚ್ಲಿಕ್ಕಾಸ್ತಿ, ಪಾಸ್ತಿ ಶುರು ಮಾಡಿದ್ರಾ ಮಕ್ಳು! (ಕ)
-ಕ್ಕಾಬಿಕ್ಕಿಯಾಗಿ ನೋಡ್ತಿದ್ದರಾಳುಗಳು! (ಆ)
-ಳ್ಗಳುಂಡ ಮನೆಗೆರ್ಡೆಣಿಸದಾಳ್ಗಳು! (ಆ)
-ಳುವರು ನಿರಂಜನಾದಿತ್ಯನ ಮಕ್ಳು!!!

ಪಾವನಾ ಪರಮ ಪಾವನಾ!   2(558)

ರ ರಾಮನಾಮ ಪಾವನಾ!
ನಾಶಕಾಮ ನಾಮ ಪಾವನಾ!
ರಮಾತ್ಮ ನಾಮ ಪಾವನಾ!
ಮಾರಾಮ ನಾಮ ಪಾವನಾ!
ಮ ಪ್ರೇಮನಾಮ ಪಾವನಾ!
ಪಾಪ ಹರ ನಾಮ ಪಾವನಾ!
‘ನಾಮ’ ನಿರಂಜನ ಪಾವನಾ!!!

ಪಾವನಾ ಸದಾ ಜಪ ಜೀವನ ಪಾವನ!   2(559)

ರಗುರು ದರ್ಶನ ಜೀವನ ಪಾವನ!
ನಾನಾರೆಂಬರಿವಿನ ಜೀವನ ಪಾವನ!
ಕಾಲಿವೀಕಾಲೆಂಬ ಜೀವನ ಪಾವನ!
ದಾಸದಾಸ ನಾನೆಂಬ ಜೀವನ ಪಾವನ!
ಗದಾಸೆಯಳಿದ ಜೀವನ ಪಾವನ!
ರನಿಂದೆ ಮಾಡದ ಜೀವನ ಪಾವನ!
ಜೀವ, ದೇವ, ಭಾವೈಕ್ಯ ಜೀವನ ಪಾವನ!
ರಾಂಜನೇಯನಂಥ ಜೀವನ ಪಾವನ!
ಡೆ, ನುಡಿಯೊಂದಾದ ಜೀವನ ಪಾವನ!
ಪಾಶ ಹರಿದಿರುವ ಜೀವನ ಪಾವನ!
ರ ನಾಮಭಜನಾ ಜೀವನ ಪಾವನ!
‘ನಾ’ ನಿರಂಜನಾದಿತ್ಯ ಜೀವನ ಪಾವನ!!!

ಪಾವನಾ ಸದ್ಗುರು ಚಿಂತನಾ! (ಅ)   2(510)

-ವನೆನ್ನಾತ್ಮನೆಂಬ ಚಿಂತನಾ!
ನಾನು, ನೀನೊಂದೆಂಬ ಚಿಂತನಾ!
ರ್ವಾಂತರ್ಯಾಮ್ಯೆಂಬ ಚಿಂತನಾ! (ಸ)
-ದ್ಗುರುವೇ ಸತ್ಯೆಂಬ ಚಿಂತನಾ! (ಕ)
-ರುಣಾಕರನೆಂಬ ಚಿಂತನಾ!
ಚಿಂತಾದೂರನೆಂಬ ಚಿಂತನಾ!
ತ್ವವಿದೇ ಎಂಬ ಚಿಂತನಾ!
‘ನಾ’ ನಿರಂಜನಾದಿತ್ಯಾಂಗ ‘ನಾ’!!!

ಪಿಶಾಚಿಯನ್ನಟ್ಟುವ ಶಕ್ತಿ ಯಾರಿಗೆ?   6(3604)

ಶಾಕ್ತೇಯನಾದಾ ಶಾಪಾಶಾತೀತನಿಗೆ!
ಚಿದಂಬರನಾದ ದಿಗಂಬರನಿಗೆ!
ದುಪತಿಯ ದಾಸ ಸುಧಾಮನಿಗೆ! (ಮ)
-ನ್ನಣೆ ಸಜ್ಜನರಿಗೀಯುವವನಿಗೆ! (ಹು)
-ಟ್ಟು, ಸಾವಿನ, ಗುಟ್ಟು ತಿಳಿದವನಿಗೆ!
ರ ಗುರುವಿನ ದೀನ ದಾಸನಿಗೆ!
ಮೆ, ದಮೆಯ, ವೈರಾಗ್ಯಶೀಲನಿಗೆ! (ಯು)
-ಕ್ತಿಯಿಲ್ಲದ ಶುದ್ಧ ಭಕ್ತಿಯುಳ್ಳವಗೆ!
ಯಾರ ನಿಂದೆಯನ್ನೂ ಮಾಡದವನಿಗೆ! (ಹ)
-ರಿನಾಮ ಸಂಕೀರ್ತನಾ ಆನಂದನಿಗೆ!
ಗೆಳೆಯ ಶ್ರೀ ನಿರಂಜನಾದಿತ್ಯನಿಗೆ!!!

ಪೀಠಾಧಿಪತಿ ನೀನಾಗಬೇಕು! (ಕ)   4(1976)

-ಠಾರಿಯನ್ನೆಸೆದು ಬಿಡಬೇಕು! (ಅ)
-ಧಿಕಾರಾಹಂಕಾರ ಸುಡಬೇಕು!
ರಹಿಂಸೆ ಮಾಡದಿರಬೇಕು!
ತಿತಿಕ್ಷೆ ಬಲವಾಗಿರಬೇಕು!
ನೀಚವೃತ್ತಿಗಳಡಗಬೇಕು!
ನಾಮ ಜಪ ಸದಾ ಮಾಡಬೇಕು! (ಸಂ)
-ಗ ಸಾಧು ಸಂತರದಾಗಬೇಕು!
ಬೇಕಾದವನೆಲ್ಲರ್ಗಾಗಬೇಕು! (ಟಾ)
-ಕು ನಿರಂಜನಾದಿತ್ಯಾಗಬೇಕು!!!

ಪುಗ್ಸಾಟೆ ಸಿಕ್ಕಿದ್ರೆ ಪುನ್ಗೂಮಲ! (ವಾ)   6(3459)

-ಗ್ಸಾಮರ್ಥ್ಯವಿದ್ರೀಗ ಮಹಾಬಲ! (ವಾ)
-ಟೆ ಚೀಪುವ ಆಧುನಿಕ ಕಾಲ!
ಸಿರಿವಂತನ ಪೂಜಿಪಕಾಲ! (ದ)
-ಕ್ಕಿಸ್ಕೊಳ್ವರ್ಪರ ಧನವೀ ಕಾಲ! (ಮು)
-ದ್ರೆ ಬಸವನಿಗೊತ್ತದ ಕಾಲ!
ಪುಸಿಗೆ ಮೋಸ ಹೋಗುವ ಕಾಲ! (ಬಿ)
-ನ್ಗೂ ವಿಷಯ ಸುಖದಾ ಕಾಲ!
ಹಾಲಿಂಗವನ್ನೊಲ್ಲದ ಕಾಲ! (ಕಾ)
-ಲ ಶ್ರೀ ನಿರಂಜನಾದಿತ್ಯ ಲೀಲಾ!!!

ಪುರಾಣಿಕ ಪುರುಷೋತ್ತಮನಾಗ್ಬೇಕಯ್ಯಾ!   6(3986)

ರಾಮದಾಸ ಮಾರುತಿ ತಾನಾಗಬೇಕಯ್ಯಾ! (ಕ)
-ಣಿ ಹೇಳುವಭ್ಯಾಸ ಬಿಟ್ಟುಬಿಡಬೇಕಯ್ಯಾ!
ಡು ಲೋಭಿಯಾ ತಾನಿರಬಾರದಯ್ಯಾ!
ಪುತ್ರ, ಕಳತ್ರಾದಿ ವ್ಯಾಮೋಹ ಬಿಡ್ಬೇಕಯ್ಯಾ!
ರುಕ್ಮಿಣೀಶನ ಗೀತಾತ್ಮನಾಗಬೇಕಯ್ಯಾ!
ಷೋಡಶೋಪಚಾರದ ಗುರಿ ಸೇರ್ಬೇಕಯ್ಯಾ! (ತ)
-ತ್ತ ಬಡಿಕನಾದರಾವಿದ್ಯೆ ವ್ಯರ್ಥವಯ್ಯಾ!
ದ, ಮತ್ಸರವಂತೂ ಇರ್ಲೇ ಬಾರದಯ್ಯಾ!
ನಾದ, ಬಿಂದು, ಕಲಾತೀತ ನಾಗಬೇಕಯ್ಯಾ! (ಆ)
-ಗ್ಬೇಕಿದೇ ಜನ್ಮದಲ್ಲಿ ಸಾಕ್ಷಾತ್ಕಾರವಯ್ಯಾ!
ಲಿಯುಗವಿದಾದ್ರೂ ಧೈರ್ಯಗೆಡ್ಬೇಡಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾನಂದ ನೀನಾಗಯ್ಯಾ!!!

ಪುಲ್ಲಿಂಗ, ಸ್ತ್ರಿಲಿಂಗ, ನಪುಂಸಕಾ ಲಿಂಗ! (ಕ)   4(2206)

-ಲ್ಲಿಂದಲೂ ಮಾಡಿ ಪೂಜಿಸುವರಾ ಲಿಂಗ!
ತಿಗೇಡಿಂದ ಪಾರಾದರಾತ್ಮ ಲಿಂಗ!
ಸ್ತ್ರಿ

ರೂಪಿನಿಂದದು ದಾಕ್ಷಾಯಿಣೀ ಲಿಂಗ!
ಲಿಂಗಾಕಾಶ ಭೇದಿಸಿದಾಗ್ಮಹಾ ಲಿಂಗ! (ಸಂ)
-ಗಮ್ನದ್ದಾದಾಗರ್ಧನಾರಿಶ್ವರ ಲಿಂಗ!
ರ್ತನ ಗೈದಾಗ ನಟರಾಜ ಲಿಂಗ!
ಪುಂಡರನ್ನಡಗಿಸಿದಾಗಗ್ನಿ ಲಿಂಗ!
ಚ್ಚಿದಾನಂದನಾದಾಗ ಜ್ಞಾನ ಲಿಂಗ!
ಕಾಮನಳಿದಾಗ ಕಾಮೇಶ್ವರ ಲಿಂಗ!
ಲಿಂಗಪೂಜೆಯಿಂದ ಸದಾ ರಾಮ ಲಿಂಗ! (ಖ)
-ಗನಿರಂಜನಾದಿತ್ಯಾ ಲೋಕೈಕ ಲಿಂಗ!!!

ಪುಷ್ಪಾರ್ಪಣೆ ಪದ್ಮ ಪಾದಕ್ಕೆ! [ಬಾ]   3(1327)

-ಷ್ಪಾರ್ಘಸಮೇತಾ ಶ್ರೀ ಪಾದಕ್ಕೆ! (ದ)
-ರ್ಪ ದಂಭವಿಲ್ಲದಾ ಪಾದಕ್ಕೆ! (ಹೊ)
-ಣೆಯೆಲ್ಲಕ್ಕಾಗಿರ್ಪಾ ಪಾದಕ್ಕೆ!
ತಿತೋದ್ಧಾರದಾ ಪಾದಕ್ಕೆ! (ಪ)
-ದ್ಮನಾಭನಾ ದಿವ್ಯ ಪಾದಕ್ಕೆ!
ಪಾರ್ಥಿವ ರೂಪಿನಾ ಪಾದಕ್ಕೆ!
ತ್ತಾತ್ಮನಾ ಗುರು ಪಾದಕ್ಕೆ! (ಹೊ)
-ಕ್ಕೆ, ನಿರಂಜನಾದಿತ್ಯನಕ್ಕೆ!!!

ಪುಸ್ತಕದೊಳಗಿನ ಬದನೇಕಾಯಿ! [ಅ]   4(2184)

-ಸ್ತಮಾನವಾದ್ಮೇಲಿನ ಮರೀಚಿಪ್ರಾಯಿ!
ಲಿತದ್ದುಪಯೋಗಾಗ್ದಿದ್ರದೇಕ್ತಾಯಿ?
ದೊಡ್ಡಸ್ತಿಕೆಯ ಮಾತು ಸಾಕ್ಮಾಡು ತಾಯಿ! (ಒ)
-ಳಗನ್ನವಿದೆಂದರೂಟಾಯ್ತೇನು ತಾಯಿ?
ಗಿಡದಲ್ಲಿ ಹಣ್ಣಿದ್ದರೇನಾಯ್ತು ತಾಯಿ? (ಮ)
-ನಸಿಗಾನಂದ ತಿಂದಾಗಲ್ಲವೇ ತಾಯಿ?
ಣ್ಣದ ಮಾತ್ಕಣ್ಣಿಗೆ ಕಾಣದು ತಾಯಿ!
ರ್ಶನವೀಯದ ದೇವರೇಕೆ ತಾಯಿ?
ನೇದಾದಮೇಲ್ದರದ ನಿರ್ಧರ ತಾಯಿ!
ಕಾದು ಕಾರ್ಯಸಿದ್ಧಿಯಾದ್ಮೇಲ್ಮಾತು ತಾಯಿ! (ತಾ)
-ಯಿ, ನಿರಂಜನಾದಿತ್ಯ ಕೈಗ್ಬಂದ ಕಾಯಿ!!!

ಪೂಜಾ ಪ್ರಭಾವದಿಂದಾದೆ ದೇವ!   2(906)

ಜಾತಿ, ಮತೈಕ್ಯದಿಂದಾದೆ ದೇವ!
ಪ್ರತಿಮಾರ್ಚನೆಯಿಂದಾದೆ ದೇವ!
ಭಾಗ್ಯವಿದು ನಿನ್ನಾನಂದ ದೇವ!
ರ ಭಕ್ತಿ ಭಾವ ಗುರುದೇವ! (ಅ)
-ದಿಂತಾದುದು ನಿನ್ನ ಚಿತ್ತ ದೇವ!
ದಾತ, ನಾಥ, ಗುರುದತ್ತ ದೇವ! (ಎ)
-ದೆಯೊಳಗಿದ್ದಾದೆ ಗುಹ ದೇವ!
ದೇಶ, ಕಾಲಾತೀತ ಮಹಾದೇವ! (ದೇ)
-ವ, ನಿರಂಜನಾದಿತ್ಯಾತ್ಮ ದೇವ!!!

ಪೂಜಾಫಲ ತೇಜೋಬಲವಯ್ಯಾ!   2(935)

ಜಾನಕೀ ಪೂಜಾ ಫಲಾ ರಾಮಯ್ಯಾ!
ಲಿಸಿದ ಕೀರ್ತ್ಯವನಿಗಯ್ಯಾ!
ವ, ಕುಶರ ಬಲಾರದಯ್ಯಾ!
ತೇಜೋರಾಶಿ ಮೈಥಿಲಿಯದಯ್ಯಾ! (ರಾ)
-ಜೋತ್ತಮ ರಾಮಾನುಗ್ರಹವಯ್ಯಾ!
ಸಿರೊಳಾಯ್ತುಪದೇಶವಯ್ಯಾ! (ಬಾ)
-ಲಕರ ಗುರು ವಾಲ್ಮೀಕಿಯಯ್ಯಾ! (ಅ)
-ವರ ತಪ ಫಲಿಸಿಲ್ಲೇನಯ್ಯಾ? [ಅ]
-ಯ್ಯಾ! ನಿರಂಜನಾದಿತ್ಯಾ ಫಲಯ್ಯಾ!!!

ಪೂಜಿಸಿಕೊಂಡಾ ಸತ್ಯನಾರಾಯಣ!   2(948)

ಜಿತೇಂದ್ರಿಯನಾ ಗುರು ನಾರಾಯಣ!
ಸಿಟ್ಟು ಬಿಟ್ಟಿರುವವಾ ನಾರಾಯಣ!
ಕೊಂದಿಹನಹಂಕಾರಾ ನಾರಾಯಣ!
ಡಾಳಿಯಲನುಪಮಾ ನಾರಾಯಣ!
ರ್ವಾಂತರ್ಯಾಮಿ ಲಕ್ಷ್ಮೀನಾರಾಯಣ!
ತ್ಯಜಿಸನಾತನಾಪ್ತ ನಾರಾಯಣ!
ನಾಮ, ರೂಪ ಅನಂತಾನಾರಾಯಣ!
ರಾಜಶೇಖರನಿಷ್ಟಾ ನಾರಾಯಣ!
ಮಾದಿ ಯೋಗ ಸಿದ್ಧಾ ನಾರಾಯಣ! (ಪ್ರಾ)
-ಣ ನಿರಂಜನಾದಿತ್ಯ ನಾರಾಯಣ!!!

ಪೂಜಿಸಿಕೊಳ್ಳಬೇಕೆಂಬಹಂಕಾರಿ ದೇವರಲ್ಲ! (ಪೂ)   5(3159)

-ಜಿಸಿ ಕೃತಾರ್ಥರಾಗಬೇಕೆಂಬಾಸೆ ಭಕ್ತರಿಗೆಲ್ಲಾ!
ಸಿಕ್ಕಿದತಿ ದೀರ್ಘ ಸೇವಾಯೋಗ ಸಾಮಾನ್ಯರಿಗೆಲ್ಲ!
ಕೊಟ್ಟದ್ದುಂಡು, ಇಟ್ಟಿಲ್ಲಿರುವ ಸ್ವಾಮಿ ಸಾಮಾನ್ಯನಲ್ಲ! (ಕ)
-ಳ್ಳ, ಸುಳ್ಳರಿಗಿದು ಹಾಸ್ಯಾಸ್ಪದವಾದ್ರೆ ಚಿಂತೆಯಿಲ್ಲ!
ಬೇಕಿಲ್ಲ ಭಕ್ತರಿಗನ್ಯರ ನಿಂದೆ, ಸ್ತುತಿಗಳೆಲ್ಲಾ!
ಕೆಂಡವಾಗಿರವನವನಾರು ವೈರಿಗಳಿಗೆಲ್ಲಾ!
ಯಲಾಡಂಬರದ ಹರಟೆಮಲ್ಲನವನಲ್ಲ!
ಹಂಗು ಯಾರದೂ ಅತನಿಗೆಂದೆಂದೂ ಇಲ್ಲವೇ ಇಲ್ಲ!
ಕಾಮನಾಟ ಅವನ ಮುಂದೆ ಆಡಗೊಡುವುದಿಲ್ಲ!
ರಿಕ್ತ ಹಸ್ತರನ್ನವ ಬರಿಗೈಲಿ ಅಟ್ಟುವುದಿಲ್ಲ!
ದೇಹ ಬೆಳೆಸಿಕೊಳ್ಳುವಭ್ಯಾಸಾತ ಇಟ್ಟುಕೊಂಡಿಲ್ಲ!
ರದರಾಜನ ಸೇವೆಗಾಗ್ಯವನಾಯುಷ್ಯವೆಲ್ಲಾ! (ವ)
-ರ ಬೇಡುವ ಹುಚ್ಚು ಆತ ಹಿಡಿಸಿಕೊಂಡವನಲ್ಲ! (ಪು)
-ಲ್ಲ ನಿರಂಜನಾದಿತ್ಯನಾರಪೂಜೆಗೂ ಬಯಸಿಲ್ಲ!!!

ಪೂಜೆ ಬೇಕು, ನಾನೊಂದಾಗಬೇಕು! (ಅ)   2(678)

-ಜೆ, ಗಿರಿಜೆಯರಂತಾಗ ಬೇಕು!
ಬೇರೆ ಆಸೆ ಇರದಿರಬೇಕು!
ಕುಲ, ಶೀಲ ಕೇಳದಿರಬೇಕು!
ನಾಮ ಮಂತ್ರ ಬಿಡದಿರಬೇಕು!
ನೊಂದೆನೆಂದು ಕುಗ್ಗದಿರಬೇಕು!
ದಾಸರ ದಾಸನಾಗಿರಬೇಕು!
ತಿ ನಿಶ್ಚಲವಾಗಿರಬೇಕು!
ಬೇಸರ ಬಾರದಂತಿರಬೇಕು! (ಬೇ)
-ಕು ನಿರಂಜನಾದಿತ್ಯೈಕ್ಯ ಬೇಕು!!!

ಪೂಜೆ ಶ್ರದ್ಧಾ ಭಕ್ತಿಯಿಂದ ಮಾಡಮ್ಮಾ! (ಬಂ)   4(1840)

-ಜೆ ನಾನೆಂಬ ದುಃಖ ಬಿಟ್ಟು ಬಿಡಮ್ಮಾ!
ಶ್ರಮವೆಂದುದ್ಯೋಗ ಬಿಡಬೇಡಮ್ಮಾ! (ಉ)
-ದ್ಧಾರವಾಗುವುದು ಮುಂದೆ ನೋಡಮ್ಮಾ!
ಕ್ತಿ ಗೀತೆಗಳ ನಿತ್ಯ ಹಾಡಮ್ಮಾ! (ಮು)
-ಕ್ತಿಗಿದು ದಾರಿ ಸಂದೇಹ ಬೇಡಮ್ಮಾ! (ಕೈ)
-ಯಿಂದ ಗುರುಪಾದ ಸೇವೆ ಮಾಡಮ್ಮಾ! (ಆ)
-ದರದಿಂದವಗೆ ಭಿಕ್ಷೆ ನೀಡಮ್ಮಾ!
ಮಾತೆ ನೀನೆಂದು ಆನಂದ ಪಡಮ್ಮಾ!
ಮರುಧರನನ್ನೊಡಗೂಡಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಾನಂದದಮ್ಮಾ!!!

ಪೂಜೆ, ಪುರಸ್ಕಾರಾರಿಗಾಗ್ಬೇಕು? (ಸಂ)   5(2742)

-ಜೆ, ಮುಂಜಾನೆನ್ನದಾತ್ಮಗಾಗ್ಬೇಕು!
ಪುಣ್ಯ ಪಾಪಾತೀತಾತ್ಮಗಾಗ್ಬೇಕು! (ಪ)
-ರಮಾರ್ಥ ಪ್ರವರ್ತಕಗಾಗ್ಬೇಕು! (ಕ)
-ಸ್ಕಾಯಿಯಲ್ಲದ ಹಣ್ಣಿಗಾಗ್ಬೇಕು!
ರಾಗ, ದ್ವೇಷರಹಿತಗಾಗ್ಬೇಕು! (ಅ)
-ರಿಗಳಾರ ಗೆದ್ದವಗಾಗ್ಬೇಕು!
ಗಾನಲೋಲ ಗೋಪಾಲಗಾಗ್ಬೇಕು! (ಆ)
-ಗ್ಬೇಕ್ಮನಶ್ಯಾಂತ್ಯೆಂಬವಗಾಗ್ಬೇಕು! (ಟಾ)
-ಕು ನಿರಂಜನಾದಿತ್ಯಗಾಗ್ಬೇಕು!!!

ಪೂಜೆಗೆ ಕಾದಿರುವವ ದೇವರಲ್ಲ! (ಸಂ)   6(4376)

-ಜೆ, ಮುಂಜಾನೆಯೆಂಬುದವನಿಗೇನಿಲ್ಲ!
ಗೆಳೆಯ ತಾನವ ಚರಾಚರಕ್ಕೆಲ್ಲಾ!
ಕಾಲಕ್ಕೆ ತಕ್ಕ ಲೀಲೆ ಅವನದೆಲ್ಲಾ!
ದಿವ್ಯಜ್ಞಾನಕ್ಕೆ ಗೋಚರವಪ್ಪುದೆಲ್ಲಾ! (ಗು)
-ರು ಅವನೊಬ್ಬನೀರೇಳುಲೋಕಕ್ಕೆಲ್ಲಾ!
ಸನಾಶನದ ಹಂಗವನಿಗಿಲ್ಲ!
ರ್ಣಾಶ್ರಮ ಧರ್ಮ ಭೇದ ಅವಗಿಲ್ಲ!
ದೇವಿಯೂ, ದೇವನೂ, ಅವನೇ ತಾನೆಲ್ಲಾ!
ಜ್ರವೈಢೂರ್ಯ ಅವನಿಗೆ ಬೇಕಿಲ್ಲ! (ನ)
-ರರಿದನ್ನಿನ್ನೂ ತಿಳಿದುಕೊಂಡೇ ಇಲ್ಲ! (ಪು)
-ಲ್ಲ ನಿರಂಜನಾದಿತ್ಯಗೇನೂ ಬೇಕಿಲ್ಲ!!!

ಪೂಜೆಯಿಲ್ಲದೆ ಅನುಗ್ರಹವಾಗದು! (ಪೂ)   4(1558)

-ಜೆ ಅನುಗ್ರಹವಿಲ್ಲದೆ ಆಗದು! (ಬಾ)
-ಯಿ ಬಡಾಯಿಯಿಂದ ಕಾರ್ಯವಾಗದು! (ಅ)
-ಲ್ಲ, ಶಿವ, ಬೇರೆಂದರಾನಂದಾಗದು! (ಹಿಂ)
-ದೆ, ಮುಂದೇನೆಂದರಭ್ಯಾಸ ಸಾಗದು!
ನ್ಯ ಧರ್ಮದಿಂದ ಭಯ ತಪ್ಪದು! (ಅ)
-ನುಮಾನಪಟ್ಟರಭೀಷ್ಟ ಸಿಕ್ಕದು!
ಗ್ರಹಗತಿಗತ್ತರದು ಹೋಗದು!
ಹಾಡದೆ ಹರಿನಾಮ ಶಾಂತ್ಯಾಗದು! (ರಂ)
-ಗನಾಥಗೆರಗದೇನೂ ಆಗದು! (ಕುಂ)
-ದು ನಿರಂಜನಾದಿತ್ಯನಿಂದಾಗದು!!!

ಪೂಜ್ಯ ಭಕ್ತಿ ಪೂಜೆಯಿಂದಾಗ್ಲಿ! (ಪೂ)   5(3127)

-ಜ್ಯನಿಂದ ನಿತ್ಯ ಪೂಜೆಯಾಗ್ಲಿ!
ವಭಯವೇನಿಲ್ಲದಾಗ್ಲಿ! (ಮು)
-ಕ್ತಿ ಸುಖವಾಗನುಭವಿಸ್ಲಿ!
ಪೂರ್ವಜರೋಕ್ತಿ ನಿಜವಾಗ್ಲಿ! (ಸಂ)
-ಜೆ, ಮುಂಜಾನೆ ಭಜನೆಯಾಗ್ಲಿ! (ಬಾ)
-ಯಿಂದನ್ಯ ಮಾತು ಬರದಿರ್ಲಿ!
ದಾಸರ ದಾಸ ತಾನಿಂತಾಗ್ಲಿ! (ಆ)
-ಗ್ಲಿ ನಿರಂಜನಾದಿತ್ಯನಾಗ್ಲಿ!!!

ಪೂರಿ, ಪಲ್ಯಾ ಶ್ರದ್ಧಾ, ಭಕ್ತ್ಯಮೌಲ್ಯ! (ಅ)   4(1848)

-ರಿತಿದ ತಿಂದ ಜನ್ಮ ಸಾಫಲ್ಯ!
ರಿಪರಿಯಾಸೆಗಿಲ್ಲಾ ಮೌಲ್ಯ!(ಬಾ)
ಲ್ಯಾದ್ಯವಸ್ಥಾ ರಾಹಿತ್ಯಾ ಸಾಫಲ್ಯ! (ಆ)
-ಶ್ರಯ ಸದ್ಗುರುವಿನದ್ದಮೌಲ್ಯ! (ಶು)
-ದ್ಧಾಚಾರದಿಂದಾಗ್ವುದಾ ಸಾಫಲ್ಯ!
ಕ್ತಿ ಸಂಕೀರ್ತನಾಭ್ಯಾಸಮೌಲ್ಯ! (ಶ)
-ಕ್ತ್ಯನುಭವವಾಗ್ಯೆಲ್ಲಾ ಸಾಫಲ್ಯ!
ಮೌನದಿಂದಾಗುವ ಲಾಭಮೌಲ್ಯ! (ಮೌ)
-ಲ್ಯ ನಿರಂಜನಾದಿತ್ಯಾ ಸಾಫಲ್ಯ!!!

ಪೂರ್ಣಾಹುತಿಯಲೆನ್ನ ನೋಡಯ್ಯಾ! (ವ)   2(682)

-ರ್ಣಾಶ್ರಮನಗತ್ಯವಿದಕಯ್ಯಾ! (ಆ)
-ಹುತಿಂದ್ರಿಯ ವಿಷಯಗಳಯ್ಯಾ!
ತಿಳಿದಿದನು ಹೋಮ ಮಾಡಯ್ಯಾ!
ಮಾದ್ಯಷ್ಟಾಂಗ ಯೋಗನ್ಕೂಲಯ್ಯಾ!
ಲೆಕ್ಕಿಸದಿರೆಡರುಗಳಯ್ಯಾ! (ಚಿ)
-ನ್ನ, ವಸ್ತ್ರಾಲಂಕಾರ ಬೇಕಿಲ್ಲಯ್ಯಾ!
ನೋಡೆನ್ನನಿಂತಾಹುತಿಯಿಂದಯ್ಯಾ! (ಆ)
-ಡಲಸದಳವೀ ಆನಂದಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾನಂದಯ್ಯಾ!!!

ಪೂರ್ಣಿಮೋತ್ಸವಷ್ಟಮಿಯಂದೆಂತಾದೀತು? (ಕ)   4(2068)

-ರ್ಣಿಕಾರ ಸರೋವರದಲ್ಲೆಂತಿದ್ದೀತು?
ಮೋಡಿ ವಿದ್ಯೆಯಲ್ಲಿ ನಿಜವೆಂತಿದ್ದೀತು? (ತ)
-ತ್ಸರ್ವಮೆಂಬುದಜ್ಞಾನಿಗೆಂತರ್ವಾದೀತು?
ನವಾಸಿಗೆ ಪಟ್ಣವೆಂತು ರುಚ್ಸೀತು? (ಶಿ)
-ಷ್ಟರಿಗೆ ದುಷ್ಟರಿಷ್ಟ ಹೇಗೆ ಹಿಡ್ಸೀತು? (ಅ)
-ಮಿತಾಹಾರಿಗಾರೋಗ್ಯ ಹೇಗುಂಟಾದೀತು? (ಸಾ)
-ಯಂಕಾಲ ಪ್ರಾತಃಕಾಲವದೆಂತಾದೀತು?
ದೆಂಟಿಗೆ ಹಣ್ಣಿನ ಗುಣ ಹೇಗ್ಬಂದೀತು?
ತಾಯಿಯಂತಃಕರಣಯ್ಯಗೆಂತಿದ್ದೀತು?
ದೀಪದಾನಂದ ಕುರುಡಗೆಂತಾದೀತು? (ಮಾ)
-ತು ನಿರಂಜನಾದಿತ್ಯಗೆಂತೊಪ್ಪೀತು!!!

ಪೂರ್ವ ರೂಪಕ್ಕೆ ಬರಬೇಕಪ್ಪಾ! (ಸ)   2(547)

-ರ್ವರೂ ಅದ ಬಯಸುತ್ತಾರಪ್ಪಾ!
ರೂಪವಿದ ನೋಡಲಾರೆನಪ್ಪಾ!
ರಮಾತ್ಮನಿಗೆಲ್ಲಾ ಸಾಧ್ಯಪ್ಪಾ! (ಅ)
-ಕ್ಕೆ ಸಕಲರಿಗೆ ಸುಖವಪ್ಪಾ!
ರಬೇಕಾ ಹಿಂದಿನ ರೂಪಪ್ಪಾ!
ವಿಯಂತೆ ವಿರಾಜಿಸಿರಪ್ಪಾ!
ಬೇಡ ಉದಾಸೀನ ನಿನಗಪ್ಪಾ!
ರ ಮುಗಿದು ಬೇಡುವೆನಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯಾನಂದಪ್ಪಾ!!!

ಪೂರ್ವದ ತಪಸ್ಪಶ್ಚಿಮದಲ್ಲಂತ್ಯ! [ಸ]   4(2457)

-ರ್ವರಾತ್ಮನಾದವನಿಗುಂಟೇನಂತ್ಯ? (ಬಂ)
-ದ ಉದ್ದೇಶ ಪೂರ್ತಾದಾಗಾಗ್ವುದಂತ್ಯ!
ನ್ನ ತಾನರಿತಿದಾದ್ಮೇಲಿಲ್ಲಂತ್ಯ!
ತಿತ ಪಾವನನಾಗದಿದ್ರಂತ್ಯ! (ಆ)
-ಸ್ಪದ ಮಾಯೆಗಾದರೆ ಬಂಧನಾಂತ್ಯ! (ವೃ)
-ಶ್ಚಿಕ, ಪೂರ್ಣಿಮೆಯವತಾರ ನಿತ್ಯ!
ನುಜರಿಗರಿವಾಗ್ಬೇಕೀ ಸತ್ಯ!
ತ್ತ ತಾನಾಗಿರ್ಪೆನೆಂಬುದಾನಿತ್ಯ! (ಎ)
-ಲ್ಲಂತರಂಗದಲ್ಲದೆಂಬುದಾ ಸತ್ಯ! (ಸ)
-ತ್ಯ, ನಿರಂಜನಾದಿತ್ಯಾನಂದ ನಿತ್ಯ!!!

ಪೂರ್ವಿಕ ನಿರಂಜನಗಾನು ಶರಣು!   6(3347)

(ಉ)-ರ್ವಿಗೆ ತಕ್ತಿ, ಬೆಳಕೀವಗೆ ಶರಣು!
ರ್ಮಾಕರ್ಮ ಮರ್ಮಜ್ಞನಿಗೆ ಶರಣು!
ನಿತ್ಯ ನಿಯಮನಿಷ್ಠನಿಗೆ ಶರಣು!
ರಂಗ ಸಾರಂಗಾಭೇದನಿಗೆ ಶರಣು!
ನತಾ ಜನಾರ್ದನನಿಗೆ ಶರಣು!
ಯನ ಮನೋಹರನಿಗೆ ಶರಣು!
ಗಾಣಾಪತ್ಯದಧ್ಯಕ್ಷನಿಗೆ ಶರಣು!
(ಅ)-ನುಪಮ ಸಹನಾಮೂರ್ತಿಗೆ ಶರಣು!
ಮೆ, ದಮೆಯರಸನಿಗೆ ಶರಣು!
(ವ)-ರ ಗುರು ದತ್ತಾವತಾರಿಗೆ ಶರಣು!
(ಉ)-ಣು ನಿರಂಜನಾದಿತ್ಯ ಪ್ರಸಾದವುಣು!!!

ಪೊಂಗಲ್ಲಿರಂಜನನಕ್ಕರೆ ಪೊಂಗಲ್‍!   1(228)

ತಿ,ಸ್ಥಿ, ಮತಿ ಸಕ್ಕರ ಪೊಂಗಲ್‍! (ಬ)
-ಲ್ಲಿಜದಲಿದನರಿತರೆ ಪೊಂಗಲ್‍!
ರಂಗ, ಸಾರಂಗ ಬೆರೆತರೆ ಪೊಂಗಲ್‍!
ಗದಾನಂದವಿದಾದರೆ ಪೊಂಗಲ್‍!
ರನಾಯರೊಂದಾದರೆ ಪೊಂಗಲ್‍!
ಯ ವಿನಯ ಕೂಡಿದರೆ ಪೊಂಗಲ್‍! (ಸ)
-ಕ್ಕರೆ ಸರ್ವಕ್ಕರೆಯಾಗಿರೆ ಪೊಂಗಲ್‍! (ಕ)
-ರೆದೆಲ್ಲರಿಗಿದ ಕೊಟ್ಟರೆ ಪೊಂಗಲ್‍!
ಪೊಂದಿದರಿದ ಸುಗಾಸರೆ ಪೊಂಗಲ್‍!
ಹನವಿದ ಸವಿದರೆ ಪೊಂಗಲ್‍! (ಮೆ)
-ಲ್‍! ನಿರಂಜನಾದಿತ್ಯಕ್ಕರೆ ಪೊಂಗಲ್‍!!!

ಪೋಷಣೆ ಮಾಳ್ಪುದೆಲ್ಲರನ್ನನ್ನ! (ದೋ)   4(1746)

-ಷವಪ್ಪುದಮಿತಾಹಾರದನ್ನ! (ಕಾ)
-ಣೆ ಹಸಿದಾಗುಣ್ಣುವವರನ್ನ!
ಮಾಡಿಕ್ಕುವರು ಪಂಚ ಭಕ್ಷ್ಯಾನ್ನ! (ಮಾ)
-ಳ್ಪುದನಾರೋಗ್ಯ ದೇಹಕ್ಕಾ ಅನ್ನ! (ಇ)
-ದೆಲ್ಲರರಿತು ತಿನ್ನಬೇಕನ್ನ! (ಪು)
-ಲ್ಲನಾಭವ ಪ್ರಸಾದ ಈ ಅನ್ನ! (ಪ)
-ರಮಾರ್ಥಭ್ಯಾಸಕ್ಕೆ ಬೇಕೀ ಅನ್ನ! (ನ)
-ನ್ನ, ನಿನ್ನದೆಲ್ಲಾ ಗುರುಕೃಪಾನ್ನ! (ಅ)
-ನ್ನವಿದು ನಿರಂಜನಾದಿತ್ಯಾನ್ನ!!!

ಪೋಷಣೆ ಸಾಲದು ಸ್ವಾಮಿ!   4(1520)

ಡ್ರಿಪು ಸಾಯಲಿ ಪ್ರೇಮಿ! (ಕಾ)
-ಣೆ ನಿಮ್ಮಲ್ಲದನು ಸ್ವಾಮಿ!
ಸಾಗಲಿ ಸ್ಮರಣೆ ಪ್ರೇಮಿ! (ಬ)
-ಲ ಅನುಗ್ರಹಿಸಿ ಸ್ವಾಮಿ!
ದುರಭ್ಯಾಸ ಬೇಡ ಪ್ರೇಮಿ!
ಸ್ವಾಮೀ ಚಿತ್ತವೆಲ್ಲಾ ಸ್ವಾಮಿ! (ಪ್ರೇ)
-ಮೀ, ನಿರಂಜನಾದಿತ್ಯೋಸ್ಮಿ!!!

ಪೌರುಷವೆಷ್ಟು ಕೊಚ್ಚಿಕೊಂಡ್ರೇನು? (ಗು)   6(3331)

-ರು ಕೃಪೆಗೆ ಪಾತ್ರನಾಗು ನೀನು!
ಡ್ವೈರಿಗಳ ಜಯಿಸು ನೀನು! (ನಾ)
-ವೆ ಗುರುವೆಂದು ನಂಬಿರು ನೀನು! (ನಿ)
-ಷ್ಟುರವಾರಲ್ಲೂ ಮಾಡ್ಬೇಡ ನೀನು!
ಕೊಳೆಯೊಳಗಿರಿಸ್ಬೇಡ ನೀನು! (ಸ)
-ಚ್ಚಿದಾನಂದರೂಪಿಯಾಗು ನೀನು!
ಕೊಂಡಾಡು ಗುರುಮಹಿಮೆ ನೀನು! (ಕಂ)
-ಡ್ರೇನೂ ಮಾತನಾಡಬೇಡ ನೀನು! (ತಾ)
-ನು ನಿರಂಜನಾದಿತ್ಯನವನು!!!

ಪ್ರಕಟನಾ ಕಾಲ ಸಮೀಪಿಸಿತಮ್ಮಾ!   1(400)

ಪಟ ನಾಟಕದ ಅಂತ್ಯ ಬಂತಮ್ಮಾ! (ಅ)
-ಟಕಿಪನಪಮಾನದ್ಭುತದಿಂದಮ್ಮಾ!
ನಾಮಜಪದ ಬಲನುಪಮವಮ್ಮಾ!
ಕಾಯುವನು ಆರ್ತರ ಖಡಿತವಮ್ಮಾ! (ಆ)
-ಲಯ ಗುರುವಿನದು ಪಾವನವಮ್ಮಾ!
ರ್ವಾಂತರ್ಯಾಮಿಯ ಲೀಲೆ ವಿಚಿತ್ರಮ್ಮಾ!
ಮೀರಲಸಾಧ್ಯ ಅವನಾಜ್ಞೆಯಮ್ಮಾ!
ಪಿಸುಣರೆಲ್ಲಾ ಪರಿವರ್ತನೆಯನಮ್ಮಾ! (ಆ)
-ಸಿಸಿದ್ದೆಲ್ಲವೂ ಸಿ

ಯಾಗುವುದಮ್ಮಾ!
ರಳ ಪ್ರಹ್ಲಾದನ ನೆನೆಯಿರಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯಗೆ ಜಯಮ್ಮಾ!!!

ಪ್ರಕಟವಾಗೆನ್ನಲ್ಲಿಂತು ಶ್ರೀ ಗುರುವೇ! [ತ್ರಿ]   5(3180)

ರಣದಲ್ಲಿ ಸದಾ ಇರು ಗುರುವೇ! (ಊ)
-ಟ, ಉಪ್ಚಾರ ನಿನ್ನಿಂದೆನಗೆ ಗುರುವೇ!
ವಾಸವಾಗಿರ್ಮೂರವಸ್ಥೆಯಲ್ಲೂ ಗುರುವೇ!
ಗೆರೆ ಹಾಕ್ಯೆನ್ನನ್ನೊಳಗಿರಿಸು ಗುರುವೇ
(ನಿ)ನ್ನದೀ ಸ್ಥೂಲ, ಸೂಕ್ಷ್ಮ ಕಾರಣ ಗುರುವೇ! (ಎ)
-ಲ್ಲಿಂದ ಬಂತೋ ಅಲ್ಲೇ ನೆಲಸ್ಲಿ ಗುರುವೇ!
ತುರಿಯಾತೀತವೇ ಆ ಗುರಿ ಗುರುವೇ!
ಶ್ರೀ ಗುರು ಶಿವ ಸಾನ್ನಿಧ್ಯದು ಗುರುವೇ!
ಗುರು ದತ್ತಾತ್ರೇಯಾವಾಸದು ಗುರುವೇ! (ಇ)
-ರುವಂತಾಗ್ಲಂತು ಚಿರಕಾಲ ಗುರುವೇ!
ವೇದಾಂತ ನಿರಂಜನಾದಿತ್ಯ ಗುರುವೇ!!!

ಪ್ರಕರಣದ ಪತ್ತೆಯಾಯ್ತು!   5(2652)

ತ್ತಿನಲ್ಲದು ಗೋಚರಾಯ್ತು! (ವ)
-ರ ಗುರುವಿಗೊಪ್ಪಿಸಿದ್ದಾಯ್ತು! (ಗ)
-ಣಪತಿಗಿದ ಹೇಳಿದ್ದಾಯ್ತು!
ತ್ತಲೀಲೆಯಿದೆಂದಂತಾಯ್ತು!
ದ್ಮ ಪಾದಕ್ಕೆರಗಿದ್ದಾಯ್ತು! (ಮ)
-ತ್ತೆ ಸಾಧನೆ ಭರದಿಂದಾಯ್ತು! (ಮಾ)
-ಯಾ ಮೋಹವೆಲ್ಲೋ ಹಾರಿಹೋಯ್ತು (ಆ)
-ಯ್ತು, ನಿರಂಜನಾದಿತ್ಯನಾಯ್ತು!!!

ಪ್ರಕೃತಿ ಚಿಕಿತ್ಸಾತ್ಮಾನಂದ!   4(1937)

ಕೃತ್ರಿಮ ದೂರಾರಾಮಾನಂದ!
ತಿಳಿ ನೀರು ಪಾನೀಯಾನಂದ!
ಚಿತ್ತ ಶುದ್ಧಿಯಮೃತಾನಂದ!
ಕಿಚ್ಚಡಿಯನ್ನಾಹಾರಾನಂದ! (ಉ)
-ತ್ಸಾಹವೀವ ಸಹಜಾನಂದ! (ಆ)
-ತ್ಮಾರಾಮ ಸೀತಾರಾಮಾನಂದ!
ನಂದಕಂದ ಮುಕುಂದಾನಂದ! (ಆಂ)
-ದ ನಿರಂಜನಾದಿತ್ಯಾನಂದ!!!

ಪ್ರಕೃತಿ ಪ್ರಗತಿಯತ್ತೊಯ್ಯುತಿದೆ! (ವಿ)   5(2764)

-ಕೃತಿ ವಿನಾಶದತ್ತೆಳೆಯುತಿದೆ!
ತಿಳಿಯದೇ ಎಲ್ಲಾ ಹಾಳಾಗುತಿದೆ!
ಪ್ರಯತ್ನ ಪ್ರಯಳಕ್ಕೀಗಾಗುತಿದೆ!
ರ್ವವೆಲ್ಲೆಲ್ಲೂ ತಾಂಡವಾಡುತಿದೆ!
ತಿತಿಕ್ಷಾ ಮಹತ್ವವಳಿಯುತಿದೆ!
ಮ, ನಿಯಮ ಮಾಯವಾಗುತಿದೆ! (ಇ)
-ತ್ತೊಡೆಯನಲ್ಲಿ ಕುತ್ತೆಣಿಸುತಿದೆ! (ಮೈ)
-ಯ್ಯುಡಿಗೆಯೆಲ್ಲಾ ಹೊಲಸಾಗುತಿದೆ! (ಮ)
-ತಿಗೆಟ್ಟಡಿಗೆ ಇಷ್ಟವಾಗುತಿದೆ! (ತಂ)
-ದೆ, ತಾಯಿ ನಿರಂಜನಾದಿತ್ಯಾಗಿದೆ!!!

ಪ್ರಕೃತಿ ವಿಕೃತಿಯಾಗಿ ಕಲಾಕೃತಿ!   6(3693)

ಕೃಪೆಯಿಂದ ವಿಕೃತಿ ಮೂಲ ಪ್ರಕೃತಿ!
ತಿರುಪತಿಯ ಮೂರ್ತಿ ದಿವ್ಯ ಆಕೃತಿ!
ವಿಕಲ್ಪ, ಸಂಕಲ್ಪಾತೀತ ಪೂರ್ಣಾಕೃತಿ!
ಕೃತ್ರಿಮ ಭಕ್ತಿಗೆ ದೊರಕದಾ ಸ್ಥಿತಿ!
ತಿತಿಕ್ಷೆ, ವೈರಾಗ್ಯದಿಂದ ಊರ್ಧ್ವ ಗತಿ!
ಯಾವ ಯುಗದಲ್ಲಾದರೂ ಇದೇ ರೀತಿ!
ಗಿರಿಜಾರಮಣಾದರ್ಶ ಊರ್ಧ್ವ ರೇತಿ!
ರಣತ್ರಯ ಶುದ್ಧಳ್ಸರ್ತಿ ಪಾರ್ವತಿ!
ಲಾಭ ಅವಳ ಕೃಪೆಯಿಂದ ಮುಕುತಿ!
ಕೃಪಣತನವರಿಯದಾ ದಂಪತಿ! (ಇ)
-ತಿ ನಿರಂಜನಾದಿತ್ಯರ್ಧನಾರ್ಯಾಕೃತಿ!!!

ಪ್ರಕೃತಿಗುಂಟು ಕರ್ತವ್ಯ ನಿಷ್ಠೆ!   6(3734)

ಕೃತ, ತ್ರೇತದ್ದೇ ಇಂದಿಗೂ ನಿಷ್ಠೆ!
ತಿಳಿ ನೀರ್ಗಾಳಿಗಚಲ ನಿಷ್ಠೆ! (ಆ)
-ಗುಂಡಕ್ಕಿ, ಗೋಧಿಗೀಗಲೂ ನಿಷ್ಠೆ! (ಉಂ)
-ಟು ಅವೆಲ್ಲಕ್ಕೊಂದು ಕಾಲ ನಿಷ್ಠೆ!
ಲಿತವರಲ್ಲೀಗಿಲ್ಲ ನಿಷ್ಠೆ! (ಧೂ)
-ರ್ತನಲ್ಲದವಗೆ ನೇಮ, ನಿಷ್ಠೆ!
ವ್ಯವಹಾರ ಜಯಕ್ಬೇಕು ನಿಷ್ಠೆ!
ನಿತ್ಯವಿರ್ಬೇಕಾತ್ಮ ಧ್ಯಾನ ನಿಷ್ಠೆ! (ನಿ)
-ಷ್ಠೆ, ನಿರಂಜನಾದಿತ್ಯಾತ್ಮ ನಿಷ್ಠೆ!!!

ಪ್ರಕೃತಿಯ ಗುಣಗಾನ ಮಾಡದವರಾರು?   6(3916)

ಕೃತ, ತ್ರೇತೆಯಲ್ಲೂ ಅದನ್ನು ಬಣ್ಣಿಸಿಹರು!
ತಿಳಿಯಲದರಾಳಸಮರ್ಥರಾಗಿಹರು!
ಜ್ಞ, ಯಾಗಗಳಿಂದಲೂ ಅರಿಯದಿಹರು!
ಗುಣಾತೀತರ್ತಾವಾಗಿ ಗುರುರಾಜರಿಹರು! (ತೃ)
-ಣ ಸಮಾನವಿದು ನಿಜರೂಪಕ್ಕೆಂದಿಹರು!
ಗಾನ ಲೋಲರಿಗೂ ಪ್ರೋತ್ಸಾಹ ನೀಡುತ್ತಿಹರು!
ರ, ನಾರಿಯರಿದ್ರಲ್ಲೇ ಮಗ್ನರಾಗಿಹರು!
ಮಾಯೆಯನ್ನೇ ನಂಬಿ ಮೋಸಹೋಗುತ್ತಲಿಹರು!
ಮರುಧರೆನೆಲ್ಲಿಹನು ಎಂದರಿಯರು!
ರ್ಶನಕ್ಕಾಗಿ ಅಲ್ಲಿಲ್ಲಿ ಓಡಾಡುತ್ತಿಹರು! (ಅ)
-ವನೆಲ್ಲರೊಳಗಿಹನೆಂದರಿಯದಿಹರು!
ರಾಗ, ದ್ವೇಷ ಬಿಟ್ಟಾಗವನನ್ನು ಕಾಣುವರು! (ಗು)
-ರು ನಿರಂಜನಾದಿತ್ಯನೆಂದರಿಯುವರು!!!

ಪ್ರಕೃತಿಯನ್ನನುಸರಿಸಿ ಸೇವೆ ಮಾಡು!   5(3301)

ಕೃತ್ರಿಮ ಮನೋಭಾವವಿಲ್ಲದೆಲ್ಲಾ ಮಾಡು!
ತಿಳಿದವರ ನೆರವಿನಿಂದದ ಮಾಡು!
ತ್ನ ಫಲಿಸಲಿಕ್ಕೆ ದೇವರನ್ನು ಬೇಡು! (ತ)
-ನ್ನ ವರೆಲ್ಲರೆಂಬಭಿಮಾನದಿಂದ ಮಾಡು!
ನುತಿ, ಸ್ತುತಿಗಾಶಿಸದೇ ಕರ್ತವ್ಯ ಮಾಡು!
ರೋಜನಂತೆ ಸನ್ಮಿತ್ರನ ಸೇವೆ ಮಾಡು!
ರಿಪುಗಳ ಜಯಿಸುವ ಪ್ರತಿಜ್ಞೆ ಮಾಡು!
ಸಿಕ್ಕದೇ ಆ ಬಲೆಗೆಚ್ಚರದಿಂದ ಮಾಡು!
ಸೇರ್ಬೇಕಿದೇ ಜನ್ಮದಲ್ಲ್ಗುರಿಯೆಂದು ಮಾಡು!
ವೆಗ್ಗಳದ ಭ್ಯಾಗವದೊಂದೇ ಸಾಕೆಂದ್ಮಾಡು!
ಮಾರಹರ ಶ್ರೀ ಗುರುವೆಂದು ನಂಬಿ ಮಾಡು! (ಕೂ)
-ಡು ನಿರಂಜನಾದಿತ್ಯಾತ್ಮನನ್ನೊಡಗೂಡು!!!

ಪ್ರಚಂಡ ಚಂಡಮಾರುತನಯ್ಯಾ!   5(2884)

ಚಂಪಾದ್ಯೆಲ್ಲಾ ಗಿಡ ನಾಶವಯ್ಯಾ! (ರುಂ)
-ಡಮಾಲಿನಿಯಾಕ್ರೋಶವಿದಯ್ಯಾ!
ಚಂದ್ರ, ಸೂರ್ಯರೆಲ್ಲಾ ಸಾಕ್ಷಿಯಯ್ಯಾ!
ಮರುಧರ ಯೋಗದಲ್ಲಯ್ಯಾ!
ಮಾನವನಿಗಿದು ಪಾಠವಯ್ಯಾ! (ಗು)
-ರುಭಕ್ತಿ ಸಾಮಾನ್ಯವಲ್ಲಯ್ಯಾ!
ನ್ನಾಪ್ತರ ಕೈ ಬಿಡನಾತಯ್ಯಾ!
ಲವಿಂದವನ ಕೊಂಡಾಡಯ್ಯಾ! (ಅ)
-ಯ್ಯಾ ನಿರಂಜನಾದಿತ್ಯನಾತಯ್ಯಾ!!!

ಪ್ರಚಾರಪಪ್ರಚಾರ ಸೂರ್ಯನಿಗನಗತ್ಯ!   6(4338)

ಚಾರಿತ್ರ್ಯದಿಂದ ಆತ ಬೆಂಕಿ, ಬೆಳಕು, ಸತ್ಯ!
ವಿಯುದಯಿಸದಿದ್ದರಾಗದೇನೂ ನಿತ್ಯ!
ರಮಾರ್ಥಜ್ಞಾನಕ್ಕೆ ಆಗ್ಬೇಕವನ ಭೃತ್ಯ!
ಪ್ರತಿದಿನದ ಸೇವೆಯಿಂದಂತ್ಯ ಮಾಯಾ ನೃತ್ಯ! (ವಿ)
-ಚಾರ, ವಿವೇಕ ಶಿರೋಮಣಿಯಾದಾತ ಸ್ತುತ್ಯ!
ಹಸ್ಯವಿಲ್ಲದಿರುವುದವನೆಲ್ಲಾ ಕೃತ್ಯ!
ಸೂನು ಯಮನಿಂದಾಗುವುದೆಲ್ಲಾ ಜೀವರಂತ್ಯ! (ಧೈ)
-ರ್ಯ, ಶೌರ್ಯ, ಸ್ಥೈರ್ಯಾದಿಗಳಿವನೊಲವಗತ್ಯ!
ನಿರ್ಮಲ ರವಿ ಕಶ್ಯಪ ಬ್ರಹ್ಮಸುತ ಸತ್ಯ!
ಗನಮಣಿಯ ಗುಣಗಣಗಳಚಿಂತ್ಯ!
ಮಸ್ಕಾರಾಘ್ಯ, ಸ್ತೋತ್ರಾನಂದ ಸವಿತಾದಿತ್ಯ! (ಜ)
-ಗತ್ತಿನ ನಿತ್ಯ ಸೇವೆಯಿಂದಾತ ಕೃತಕೃತ್ಯ! (ಅ)
-ತ್ಯಮೋಘಮಹಿಮಾವಂತ ನಿರಂಜನಾದಿತ್ಯ!!!

ಪ್ರಚಾರವೇ ಪ್ರಾಮುಖ್ಯವೀಗಾಯ್ತು!   4(2038)

ಚಾತುರ್ವರ್ಣಕ್ಕೆ ಬೆಲೆಯಿಲ್ಲಾಯ್ತು! (ಪ)
-ರಮಾರ್ಥಿಗೆ ದಿಕ್ಕು ತೋಚದಾಯ್ತು!
ವೇದಾಂತ ಬರೀ ಬಾಯಿ ಮಾತಾಯ್ತು!
ಪ್ರಾರ್ಥನೆ ಫಲ ಬಿಡದೇ ಹೋಯ್ತು!
ಮುನಿಜನಕ್ಕೆಡೆಯಿಲ್ಲದಾಯ್ತು! (ಸಾಂ)
-ಖ್ಯಯೋಗ ಸಿದ್ಧಿ ಕಾಣದಂತಾಯ್ತು!
ವೀರಾವೇಶ ಪರಿಪೀಡೆಗಾಯ್ತು!
ಗಾಢ ವಿಶ್ವಾಸ ಗೋಚರವಾಯ್ತು! (ಆ)
-ಯ್ತು ನಿರಂಜನಾದಿತ್ಯೋದಯೂಯ್ತು!!!

ಪ್ರಜಾಹಿತೈಷಿಗಾರೇನು ಹೇಳಬೇಕು?   6(3896)

ಜಾತಿ, ಮತ ಭೇದ ಅವನಿಗೇಕ್ಬೇಕು?
ಹಿತವನ್ನೇ ಸರ್ವರಿಗೂ ಮಾಡಬೇಕು!
ತೈಲಧಾರೆಯಂಥಾ ಕರ್ತವ್ಯ ಬೇಕು! (ಋ)
-ಷಿ ಚಕ್ರವರ್ತಿ ಅತ್ರಿಯಂತಿರಬೇಕು!
ಗಾಯತ್ರೀ ದೇವತೆಯಂತೆ ಇರಬೇಕು!
ರೇಣುಕಾ ತನಯನಂತೆ ಇರಬೇಕು! (ಅ)
-ನುಪಮ ಗುಣಿ ಶ್ರೀರಾಮನಂತಿರ್ಬೇಕು!
ಹೇರಂಬ ಗಣಪತಿಯಂತಿರಬೇಕು! (ಖ)
-ಳ ರಾವಣಾಸುರನಂತಿರದಿರ್ಬೇಕು!
ಬೇರಾರ ಶಿಫಾರಸೂ ಕೇಳದಿರ್ಬೇಕು!
ಕುಲ ನಿರಂಜನಾದಿತ್ಯನದ್ದಾಗ್ಬೇಕು!!!

ಪ್ರಜೆಗಳೆಚ್ಚತ್ತಾಗಾಡಳಿತ ಸುಸೂತ್ರ! (ಬಂ)   6(3844)

-ಜೆಯಾದವಳು ಹೆಂಡತಿ ಹೆಸ್ರಿಗೆ ಮಾತ್ರ!
ರ್ವಿಯಾದವಳಿಗೆ ಜನಿಸನು ಪುತ್ರ! (ಇ)
ಳೆಯ ಜೀವನದಲ್ಲಿ ಇದು ಒಂದು ಚಿತ್ರ! (ಸ)
-ಚ್ಚೆರಿತೆಯಿಲ್ಲದಿರುವ ಬಾಳಪವಿತ್ರ! (ದ)
-ತ್ತಾವತಾರದಿಂದುದ್ಧಾರ ಅತ್ರಿ ಗೋತ್ರ!
ಗಾಡಿಗಾರ ಕೃಷ್ಣನಿರುವನು ಸರ್ವತ್ರ! (ಒ)
-ಡನಾಡಿ ಅರ್ಜುನನಿಗಾದನವ ಮಿತ್ರ! (ಆ)
-ಳಿ, ಬಾಳಿ, ಕಂಗೊಳಿಸಿತವನಾಪ್ತ ಚಿತ್ರ!
ತ್ವೋಪದೇಶೀ ಗೀತೆಯದು ಮಹತ್ಪಾತ್ರ!
ಸುಡುಗಾಡಾಯ್ತು ರಣರಂಗ ಕುರುಕ್ಷೇತ್ರ!
ಸೂಕ್ತಾಡಳಿತ ನಡೆಸಿದಾ ಪಾಂಡುಪುತ್ರ! (ಮಿ)
-ತ್ರನೆನಿಸಿ ನಿರಂಜನಾದಿತ್ಯ ಸರ್ವತ್ರ!!!

ಪ್ರಣಯ ಸಂಬಂಧ ಮೂರು ದಿನ! (ಗ)   6(3697)

-ಣಪತಿಯ ಸಂಬಂಧ ನೂರು ದಿನ!
ದುಪತಿಯದ್ದನೇಕ ದಿನ!
ಸಂಬಂಧ ದತ್ತನದ್ದೆಲ್ಲಾ ದಿನ!
ಬಂಧು, ಬಾಂಧವರೊಂದೇ ದಿನ!
ರ್ಮ, ಕರ್ಮ ಮಾಡ್ಬೇಕನುದಿನ!
ಮೂರ್ಲೋಕ ಸುಖದಾಸೆ ಆಜ್ಞಾನ!
ರುಜು ಮಾರ್ಗದಿಂದಲೇ ಸುಜ್ಞಾನ!
ದಿವ್ಯ ಜೀವನದಿಂದಾತ್ಮ ಜ್ಞಾನ!
ಮೋ ನಿರಂಜನಾದಿತ್ಯಾನನಾ!!!

ಪ್ರತಿ ದಿನ ಪೊರಕೆಯಾಡ್ಲೇ ಬೇಕು! (ಅ)   5(2558)

-ತಿ, ಶ್ರದ್ಧೆಯಿಂದಭ್ಯಾಸ ಮಾಡ್ಲೇ ಬೇಕು! (ಸಂ)
-ದಿ, ಸಂದಿಗಳಲ್ಲೂ ಗುಡಿಸ್ಲೇ ಬೇಕು! (ಅ)
-ನಗತ್ಯದ ಹೊಲಸು ಹೋಗ್ಲೇ ಬೇಕು!
ಪೊರಕೆಗೊಂದು ಜಾಗವಿರ್ಲೇ ಬೇಕು! (ಹ)
-ರನ ಸೇವೇಕಾಂತದಲ್ಲಾಗ್ಲೇ ಬೇಕು!
ಕೆಟ್ಟ ಮಾಯಾಜಾಲ ಹರಿಯ್ಲೇ ಬೇಕು! (ಪ್ರ)
-ಯಾಸವಿಲ್ಲದೆ ಪ್ರಯಾಣಾಗ್ಲೇ ಬೇಕು! (ನೋ)
-ಡ್ಲೇಬೇಕು, ಶ್ರೀಪಾದ ಹಿಡಿಯ್ಲೇ ಬೇಕು!
ಬೇರೇನು ಕೊಟ್ರೂ ಬೇಡವೆನ್ಲೇ ಬೇಕು! (ಟಾ)
-ಕು, ನಿರಂಜನಾದಿತ್ಯನಾಗ್ಲೇ ಬೇಕು!!!

ಪ್ರತಿದಿನ ಹುಟ್ಟು ಸಾವಿನ ಹಬ್ಬ! (ಅ)   2(730)

-ತಿಶಯವಿಲ್ಲೊಂದು ದಿನದ ಹಬ್ಬ!
ದಿನ ನಿತ್ಯೆಲ್ಲೆಲ್ಲೂ ಆಗ್ವುದೀ ಹಬ್ಬ!
ನ್ನ, ನಿನ್ನಹಂಕಾರಜ್ಞಾನ ಹಬ್ಬ!
ಹುಸಿಯ ದಿಟವೆಂಬುದೆಂಥಾ ಹಬ್ಬ! [ಗು]
-ಟ್ಟು ತಿಳಿದವಗಾತ್ಮಾನಂದ ಹಬ್ಬ!
ಸಾವು, ನೋವಿನ ದೇಹಕೇಕೆ ಹಬ್ಬ!
ವಿಧಿ ವಿಲಾಸದಿದು ವ್ಯರ್ಥ ಹಬ್ಬ!
ನ್ನ ನೀನರಿವುದೇ ನಿಜ ಹಬ್ಬ! [ಅ]
-ಹರ್ನಿಶಿ ಮಾಡುತಿರಬೇಕೀ ಹಬ್ಬ! [ಹ]
-ಬ್ಬ ನಿರಂಜನಾದಿತ್ಯಗಿದೇ ಹಬ್ಬ!!!

ಪ್ರತಿದಿನಾಭ್ಯಾಸ ಮಾಡೇ ವೀಣಾ! (ಪ)   4(1766)

-ತಿತ ಪಾವನ ಸ್ವರೂಪಾ ವೀಣಾ!
ದಿವ್ಯ ಜೀವನೋಪಯೋಗಾ ವೀಣಾ!
ನಾಶಗೈವುದೆಲ್ಲಾ ದುಃಖಾ ವೀಣಾ! (ಅ)
-ಭ್ಯಾಸಿಗಾನಂದವೀವುದಾ ವೀಣಾ!
ತ್ಸಂಗ ಸಾಕಾರಾಕಾರಾ ವೀಣಾ!
ಮಾತುಕತೆಗತಿದೂರಾ ವೀಣಾ! (ಬೀ)
-ಡೇ ಬ್ರಹ್ಮಾಂಡವೆನಿಪುದಾ ವೀಣಾ! (ಭಾ)
-ವೀ ನಿಜಸುಖಕ್ಕಾಧಾರಾ ವೀಣಾ! (ವೀ)
-ಣಾ ನಿರಂಜನಾದಿತ್ಯಾತ್ಮಾ ವೀಣಾ!!!

ಪ್ರತಿದಿವಸ ಪ್ರಾತಃಕಾಲದಲ್ಲೇಳು!   5(2973)

ತಿರು ಪಾದಕ್ಕೆ ನಮಸ್ಕರಿಸುತ್ತೇಳು!
ದಿವ್ಯನಾಮಗಳನ್ನು ಹೇಳುತ್ತಾ ಏಳು!
ರ ಗುರುವನ್ನು ಸ್ಮರಿಸುತ್ತಾ ಏಳು!
ನ್ಮಾರ್ಗದಲ್ಲೇ ನಡಿಸೆನನ್ನಂದು ಏಳು!
ಪ್ರಾಪಂಚಿಕದಾಸೆ ತಪ್ಪಿಸೆಂದು ಏಳು! (ಸ್ಥಿ)
-ತಃಪ್ರಜ್ಞೆ ಯಾವಾಗಲೂ ಇರಿಸೆಂದೇಳು!
ಕಾಮವಾಸನೆ ನಿರ್ಮೂಲ ಮಾಡೆಂದೇಳು!
ಕ್ಷ್ಯಸಿದ್ಧಿ ಈ ಜನ್ಮದಲ್ಲಾಗ್ಲೆಂದೇಳು!
ತ್ತ ಭಕ್ತಿ ಸ್ಥಿರವಾಗಿರಲೆಂದೇಳು! (ಅ)
-ಲ್ಲೇನಿಲ್ಲೇನೆಂಬ ಭ್ರಾಂತಿ ಬಿಡಿಸೆಂದೇಳು! (ಏ)
-ಳು ನಿರಂಜನಾದಿತ್ಯ ದತ್ತನೆಂದೇಳು!!!

ಪ್ರತಿಭಾ ಶಾಂತಿಯರ್ಹಾಡಿದರಿಂದು! (ಪ್ರೀ)   4(2474)

-ತಿಯಿಂದಾಲಿಸುತ್ತಿದಾ ದೇವನಿಂದು!
ಭಾವ ಪರಿಪೂರ್ಣವಾಗಿತ್ತದಿಂದು!
ಶಾಂತ ಸನ್ನಿವೇಶದಲ್ಲಾಯ್ತದಿಂದು! (ಅ)
-ತಿಶಯಾತ್ಮಾನಂದವದಿತ್ತಿತಿಂದು! (ಭ)
-ಯ, ಭಕ್ತಿ ತುಂಬಿ ತುಳುಕುತ್ತಿತ್ತಿಂದು! (ಯಾ)
-ರ್ಹಾಡಿದ್ರೂ ಗುರುವ ಮರೆತ್ರೆ ಕುಂದು! (ಅ)
-ಡಿಗಡಿಗವ್ನ ನೆನೆದ್ರೆಲ್ಲಾ ಒಂದು!
ತ್ತ ಭಕ್ತಿಗೆ ಫಲವಿದೆಂದೆಂದು! (ಆ)
-ರಿಂದಾರಿಗೆ ಸುಖ ಜಗದೊಳಿಂದು? (ಕಾ)
-ದು, ನಿರಂಜನಾದಿತ್ಯಾನಂದಾಗಿಂದು!!!

ಪ್ರತ್ಯಕ್ಷಗುರು ಸಾರಂಗನಿರಲನ್ಯಾಯ ಕೆಡುವಿರೇತಕಯ್ಯಾ?   1(19)

ತ್ಯಜಿಸುತೆಲ್ಲ ಸಂದೇಹವನನವನನವರತವನೆದುರಿಷ್ಟದೇವನ ಜಪಿಸಿರಯ್ಯಾ!
ಕ್ಷಮಿಸುವನೆಲ್ಲ ತಪ್ಪುಗಳ ಶರಣಾಗತ ರಕ್ಷಕನವನೆಂದರಿಯಿರಯ್ಯಾ!
ಗುರುಗಳಿಗಲ್ಲ ಪರಮ ಗುರು, ಗುರುಸಾರ್ವಭೌಮನಿವನೆಂದು ನಂಬಿರಯ್ಯಾ!
ರುಚಿಯರುಚಿಯೆಂಬುದ ಮರೆತವನಿತ್ತುದನುಂಡು ಭಜಿಸಿ ಬಾಳಿರಯ್ಯಾ!
ಸಾರಂಗನೀತನಾದಿ, ಮಧ್ಯಾಂತರಹಿತ ಸರ್ವ ಸಾಕ್ಷಿಯೆಂದು ಸಾರುವೆನಯ್ಯಾ!
ರಂಗುರಂಗಿನನಂತ ಕಿರಣಗಳಿಂದೀ ಸೃಷ್ಟಿಯೆಲ್ಲವ ಪಾಲಿಸುತಿಹನಯ್ಯಾ!
ಗನಮಣಿಯಮೂಲ್ಯ ಗುಣಮಣಿಯೆಂಬುದನನುಭವಿಸಿರಯ್ಯಾ!
ನಿತ್ಯ ನೇಮದ ಸೇವೆಯೊಂದೇ ಇವನ ಅನುಗ್ರಹಕೆ ದಾರಿಯಯ್ಯಾ!
ಮಣನೀತ, ಪಾರ್ವತೀರಮಣ ಶಿವ, ಶಕ್ತಿ ಸ್ವರೂಪನಾಗಿರುವನಯ್ಯಾ!
ಯಗೊಳಿಸುವನೀತನೆಲ್ಲಾ ಮಲಗಳ, ಕಾರ್ಗತ್ತಲೆಗೆ ಕಾಲನಯ್ಯಾ!
ನ್ಯಾಯಾನ್ಯಾಯ ಶೋಧಿಸಿ, ಸಾಧುಜನರನುದ್ಧಾರ ಮಾಡುವನಿವನಯ್ಯಾ!
ಮ, ನಿಯಮಾದಿ ಯೋಗ ಸೂತ್ರಗಳಿಗೆಲ್ಲಾ ಆಧಾರನಿವನಯ್ಯಾ!
ಕೆಡುವುದೆಲ್ಲಾ ಬಾಳು ಇವನ ಮರೆತರೆಂಬುದದು ಸಿದ್ಧಾಂತ ಮಾತಯ್ಯಾ!
ಡುಮುಡುಮ್ಮೆಂದಂಬರವೆಲ್ಲಾ ಗುಡುಗಿದರೂ ಸ್ವಸ್ಥಿತಿ ಬಿಡಿದವನಯ್ಯಾ!
ವಿಷಪಾನವನನವರತ ಮಾಡಿ ಅಮೃತಧಾರೆಯ ಸುರಿಸುವವನೀತನಯ್ಯಾ!
ರೇತನಿವ, ಸುವರ್ಣ ರೇತನೆನಿಸಿ, ದಿವ್ಯಕಾಂತಿಯ ಕರುಣಿಸುವನಯ್ಯಾ!
ರತರದ ವ್ಯಾಧಿ, ಪೀಡೆಗಳಿಗೆಲ್ಲಾ ಧನ್ವಂತರಿ ತಾನಾಗಿರುತಿಹನಯ್ಯಾ!
ರ ಮುಗಿದು ನಿಂತು, ಭಾವಭಕ್ತಿಯಲಿವನ ಸದಾ ಪ್ರಾರ್ಥಿಸಿರಯ್ಯಾ!
ಯ್ಯಜು ಮೊದಲಾದೆಲ್ಲಾ ವೇದಗಳು ಪಾಡುವ ‘ನಿರಂಜನ’ನಿವನಯ್ಯಾ!

ಪ್ರದರ್ಶನ ಭಾವ ಅಜ್ಞಾನದ ಪ್ರಾದುರ್ಭಾವ!   1(312)

-ದರಿಯದೆಲ್ಲರ ಸ್ತುತಿಗಾಶಿಪುದೀ ಭಾವ! (ದ)
-ರ್ಶನದುದ್ದೇಶವರಿಯದರಿಂದಾಯ್ತೀ ಭಾವ! (ಅ)
-ನವರ್ತ ಸ್ವಧರ್ಮದಲಿರಬೇಕು ಭಾವ!
ಭಾವಭೇದದಿಂದಾಗುತಿದೆಲ್ಲೆಲ್ಲೂ ದುರ್ಭಾವ! (ಅ)
-ವರಿವರ ಪ್ರಶಂಸೆಯಿಂದಲ್ಲ ಸುಸ್ವಭಾವ!
ತಿಶಯದ ಕರ್ತವ್ಯ ನಿಷ್ಠೆಯಿಂದೀ ಭಾವ!
ಜ್ಞಾನ ಲಾಭಕಿರಬೇಕು ಸತತ ಸದ್ಭಾವ!
ರನೂ ನಾರಾಯಣನಾಗುವ ನಿಜಭಾವ!
ರ್ಶನಾಪೇಕ್ಷೆಗಿರಬೇಕಾದ ಮೌಲ್ಲ ಭಾವ!
ಪ್ರಾದುಭಾವವಿಂತಾದರೆ ಉದ್ಧಾರನೀ ಜೀವ! (ಅ)
-ದುದಿಸುವುದು ವರ ಗುರುಕೃಪಾ ಪ್ರಭಾವ! (ದು)
-ರ್ಭಾವದಿಂದೊದಗದೀ ವರ ಪ್ರಸಾದ ಭಾವ!
ರ ನಿರಂಜನಾದಿತ್ಯನೀ ವಿಮಲ ಭಾವ!

ಪ್ರಪಂಚದಲ್ಲಿ ಸಾಧಕನಿರಬೇಕು! (ಪ್ರ)   6(4075)

-ಪಂಚತೆ ಅವನಲ್ಲಿಲ್ಲದಿರಬೇಕು!
ನ್ಚಲ ಚಿತ್ತ ತಾನಾಗದಿರಬೇಕು!
ರ್ಶನ ಪಡೆದು ಧನ್ಯನಾಗಬೇಕು! (ಅ)
-ಲ್ಲಿಲ್ಲಿ ಸುತ್ತಾಡದಿರುತ್ತಲೂ ಬೇಕು!
ಸಾಯುಜ್ಯ ಪರಮಗುರಿಯಾಗಬೇಕು!
ರ್ಮ ಸೂಕ್ಷ್ಮತೆಯನ್ನು ತಿಳಿಯಬೇಕು!
ಷ್ಟ, ನಷ್ಟಗಳಿಗಳದಿರಬೇಕು!
ನಿತ್ಯ ನೇಮಾನುಷ್ಠಾನದಲ್ಲಿರಬೇಕು! (ಪ)
-ರ ನಿಂದೆಯನ್ನು ಮಾಡದೇ ಇರಬೇಕು!
ಬೇಕು, ಏಕಾಂತವೇ ಸಾಧನೆಗೆ ಬೇಕು!
ಕುಲ ನಿರಂಜನಾದಿತ್ಯನದ್ದಾಗ್ಬೇಕು!!!

ಪ್ರಪಂಚೋದ್ಧಾರವಾಗಬೇಕಪ್ಪಾ!   2(540)

ಪಂಚಭೂತ ಶರೀರವಿದಪ್ಪಾ!
ಚೋರರಂತಿಹವಿಂದ್ರ್ಯಗಳಪ್ಪಾ! (ಉ)
-ದ್ಧಾರಂತರಂಗ ಶುದ್ಧಿಯಿಂದಪ್ಪಾ!
ಮಿಸಬೇಕು ಆತ್ಮನಲಪ್ಪಾ!
ವಾಸನೆಗಳಳಿಯಬೇಕಪ್ಪಾ!
ತಿ ನಾಮಸ್ಮರಣೆಯಿಂದಪ್ಪಾ!
ಬೇರೆ ವೃತ್ತಿ ಇರಬಾರದಪ್ಪಾ!
ರ್ತವ್ಯ ಸದ್ಗುರು ಸೇವೆಯಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯ ನಮ್ಮಪ್ಪಾ!!!

ಪ್ರಪುಲ್ಲ ಕಮಲ ವಿಜಯಾನಂದ!   5(2576)

ಪುಲ್ಲನಾಭನ ಸೇವೆ ಬ್ರಹ್ಮಾನಂದ! (ಕ್ಷು)
-ಲ್ಲ ವಿಷಯವಾಸನೆ ತ್ಯಾಗಾನಂದ!
ರಣತ್ರಯ ಶುದ್ಧ ಯೋಗಾನಂದ!
ದ, ಮತ್ಸರ ನಾಶ ಆತ್ಮಾನಂದ!
ಕ್ಷ್ಯ ಸಿದ್ಧಿಯ ಗುರಿ ನಿಜಾನಂದ!
ವಿಕಾರಾತೀತ ನಿರಾಕಾರಾನಂದ!
ಗದ್ಗುರು ಶ್ರೀಗುರು ಶಿವಾನಂದ!
ಯಾಗಯೋಗಾರಾಮ ಶ್ರೀ ರಾಮಾನಂದ!
ನಂದಕಂದ ಗೋವಿಂದಾಚ್ಚುತಾನಂದ!
ತ್ತ ಶ್ರೀ ನಿರಂಜನಾದಿತ್ಯಾನಂದ!!!

ಪ್ರಪುಲ್ಲ ನಾನಾಗುವುದೆಂದು?   4(1463)

ಪುಲ್ಲನಾಭಗಿಷ್ಟನಾದಂದು! (ನ)
-ಲ್ಲನವನೆಂಬರಿವಾದಂದು!
ನಾಮ ಜಪ ಬಲವಾದಂದು!
ನಾಮ, ನಾಮಿ, ಭೇದ ಹೋದಂದು!
ಗುರುವೇ ಸರ್ವಸ್ವವೆಂದಂದು! (ಈ)
-ವುದನಾನಂದದಿಂದುಂಡಂದು! (ಒಂ)
-ದೆಂಬದ್ವೈತ ಸಿದ್ಧಿಯಾದಂದು! (ಬಂ)
-ದು, ನಿರಂಜನಾದಿತ್ಯಾಗಿಂದು!!!

ಪ್ರಭುವಿಗೆ ನಿನ್ನಾಜ್ಞೆಯೇನೇ?   4(1539)

ಕ್ತಿ, ಮುಕ್ತಿದಾತಾತಲ್ಲೇನೇ?
ವಿಕಲ್ಪಾತನಿಗಿದೆಯೇನೇ?
ಗೆಳೆತನಲ್ಪರಲ್ಲಿದ್ಯೇನೇ?
ನಿನ್ನ ಹಿತೈಷ್ಯವನಲ್ಲೇನೇ? (ತ)
-ನ್ನಾನಂದದಲ್ಲವನಿಲ್ಲೇನೇ? (ಪ್ರ)
-ಜ್ಞೆ ಸ್ಥಿತಪ್ರಜ್ಞೆಯಲ್ಲವೇನೇ? (ಕಾ)
-ಯೇಚ್ಛೆಯವನಿಗಿಹುದೇನೇ? (ನಾ)
-ನೇ ನಿರಂಜನಾದಿತ್ಯ? ನೀನೇ??

ಪ್ರಮಾಣಮಾಡ್ಯಪ್ರಮಾಣಿಕನಾಗ್ಬೇಡ!   5(3222)

ಮಾಟ ಮಾರಣ ಮಾಡಿ ಮಡಿಯಬೇಡ!
(ಉ)ಣಲಿಕ್ಕುವನ್ನಕ್ಕೆ ವಿಷವಿಕ್ಕ ಬೇಡ!
ಮಾದಕ ಪದಾರ್ಥ ಸೇವಿಸಲೇ ಬೇಡ! (ಕಾ)
-ಡ್ಯನ್ಯರಿಂದೇನನ್ನೂ ಪಡೆಯಲೇ ಬೇಡ!
ಪ್ರಜಾಪ್ರಭುತ್ವವೆಂದನ್ಯಾಯ ಮಾಡ್ಬೇಡ!
ಮಾಡಿದುಪಕಾರ ಮರೆಯಲೇ ಬೇಡ! (ಕ)
-ಣಿ ಕೇಳುವಭ್ಯಾಸವೆಂದೆಂದಿಗೂ ಬೇಡ!
ರ್ತವ್ಯ ಪಾಲನೆಯಲ್ಲಶ್ರದ್ಧೆ ಬೇಡ!
ನಾಮಸ್ಮರಣೆ ಸದಾ ಮಾಡದಿರ್ಬೇಡ! (ಆ)
-ಗ್ಬೇಡ, ಗುರುದ್ರೋಹಿಯಾಗಿ ಬದುಕ್ಬೇಡ! (ಮೃ)
-ಡ ನಿರಂಜನಾದಿತ್ಯವ್ನ ಸುಡ್ದೆ ಬಿಡ!!!

ಪ್ರಯೋಗದಿಂದ ಸುಯೋಗ ಪ್ರಾಪ್ತಿ!   5(2920)

ಯೋಗದಿಂದಾತ್ಮಾನಂದ ಪ್ರಾಪ್ತಿ!
ತಿ ಡೊಂಕಾದರೆ ರೋಗ ಪ್ರಾಪ್ತಿ!
ದಿಂಬಿನಿಂದ ಸುಖ ನಿದ್ರಾ ಪ್ರಾಪ್ತಿ!
ಪ್ಪ ಹೆಚ್ಚಾದರೆ ನೋವು ಪ್ರಾಪ್ತಿ!
ಸುಖ, ದುಃಖ, ಕರ್ಮದಿಂದ ಪ್ರಾಪ್ತಿ!
ಯೋಗೇಶ್ವರನಿಂದ ಎಲ್ಲಾ ಪ್ರಾಪ್ತಿ!
ರ್ವಕ್ಕೆ ಭವಬಂಧನ ಪ್ರಾಪ್ತಿ!
ಪ್ರಾರ್ಥನೆಯಿಂದ ಸ್ವಸ್ಥಿತಿ ಪ್ರಾಪ್ತಿ! (ತೃ)
-ಪ್ತಿ ಶ್ರೀ ನಿರಂಜನಾದಿತ್ಯ ಜ್ಞಪ್ತಿ!!!

ಪ್ರಳಯಾಂತಕಗೂ ಅನುಕಂಪ ಉಂಟು! (ಬ)   5(3242)

-ಳಲಿದ್ದು ಹಾಲಾಹಲದಿಂದೆಲ್ಲರುಂಟು! (ಮಾ)
-ಯಾಂಧಕಾರ ಜಗತ್ತ ಮುಸುಕಿದ್ದುಂಟು!
ಳಮಳಗೊಂಡು ಮೂರ್ಛೆ ಬಂದದ್ದುಂಟು!
ಣ್ಣೀರು ಸುರಿಸುತ್ತಿದ್ದವರೂ ಉಂಟು!
ಗೂಡ್ರಿಸಿ ತಲೆ ಮೇಲ್ಕೈಯಿಟ್ಕೂತವ್ರುಂಟು!
“ಅನಾಥರ ಕಾಯಪ್ಪಾ ”! ಎಂದವ್ರೂ ಉಂಟು!
ನುಡಿ ನಿಂತು ಕಲ್ಗೊಂಬ್ಯಂತಾದವ್ರುಂಟು!
ಕಂಡಿದ ಶಿವನೆದ್ದು ನಿಂತದ್ದೂ ಉಂಟು!
ರಮೇಶ್ವರನ ತಡೆದವ್ರಾರುಂಟು?
ಉಂಡದ್ದು ವಿಷವನ್ನೊಂದೇ ಗುಟ್ಕಗಂಟು! (ಉಂ)
-ಟು ನಿರಂಜನಾದಿತ್ಯಗಾ ನೆನಪುಂಟು!!!

ಪ್ರವಚನಾನಂದ ಪ್ರದೀಪ!   2(938)

ರ ಗುರುಕೃಪಾ ಪ್ರದೀಪ! (ಅ)
-ಚಲ ಭಕ್ತಿ ಭಾವಾ ಪ್ರದೀಪ!
‘ನಾ’ ‘ನೀ’ನಿಲ್ಲದಾತ್ಮ ಪ್ರದೀಪ!
ನಂಜುಂಡನಿಗಿಷ್ಟಾ ಪ್ರದೀಪ!
ರ್ಶವಪ್ರದದಾ ಪ್ರದೀಪ!
ಪ್ರತಿವಾರುರಿವಾ ಪ್ರದೀಪ!
ದೀಪ, ನಂದಾದೀಪಾ ಪ್ರದೀಪ! (ಭೂ)
-ಪ, ನಿರಂಜನಾದಿತ್ಯಾ ದೀಪ!!!

ಪ್ರವೃತ್ತಿ ಸಾಕಾದಾಗ ನಿವೃತ್ತಿ! (ನಿ)   6(4344)

-ವೃತ್ತಿ ಸಾಕೆನ್ಸಿದಾಗ ಪ್ರವೃತ್ತಿ! (ಹ)
-ತ್ತಿಳಿಯುತ್ತಲಿದೆ ಚಿತ್ತ ವೃತ್ತಿ!
ಸಾಧನೆಯಲ್ಲಿ ಇದೊಂದು ತೃಪ್ತಿ!
ಕಾಮಿತಾರ್ಥ ಸಿದ್ಧಿಸಲ್ಸಂತೃಪ್ತಿ!
ದಾರಿಯುದ್ಧಕ್ಕುರಿವುದು ನೆತ್ತಿ! (ಆ)
-ಗ ಬರಿದಾಗ ಬಾರದು ಬುತ್ತಿ!
ನಿಶ್ಚಲ ಭಕ್ತಿಯಿದಕ್ಕೆ ಶಕ್ತಿ!
ವೃಥಾ ಅಟಾಟೋಪದಿಂದ ಭುಕ್ತಿ! (ಮು)
-ತ್ತಿಟ್ಟು, ನಿರಂಜನಾದಿತ್ಯನೆತ್ತಿ!!!

ಪ್ರವೃತ್ತಿಪ್ರಿಯೆ ನೀನಾದೆ! (ನಿ)   6(3568)

-ವೃತ್ತಿ ಪ್ರಿಯನು ನಾನಾದೆ! (ಮು)
-ತ್ತಿನ ಮಾಲೆ ನೀ ಧರ್ಸಿದೆ!
ಪ್ರಿಯ ತುಳ್ಸಿ ನಾ ಧರ್ಸಿದೆ! (ಬಾ)
-ಯೆನ್ನುವೇಚ್ಛೆ ನನಗಿದೆ!
ನೀನದರಿಯದಂತಿದೆ!
ನಾವಿಬ್ರೋಂದಾಗ್ಬೇಕಾಗಿದೆ! (ಕಾ)
-ದೆ, ನಿರಂಜನಾದಿತ್ಯಾದೆ!!!

ಪ್ರಶಸ್ತ ಹಸ್ತ ಗುರುದತ್ತ ಹಸ್ತ!   3(1249)

ಕ್ತಿ ಸಂಪ್ರದಾತಾ ಶ್ರೀ ದತ್ತಹಸ್ತ!
ಸ್ತವನಾನಂದಭಯಾ ದತ್ತಹಸ್ತ!
ಹರಿ, ಹರ, ಬ್ರಹ್ಮೈಕ್ಯಾ ದತ್ತ ಹಸ್ತ! (ಅ)
-ಸ್ತ ಉದಯ ಕಾರಣಾ ದತ್ತಹಸ್ತ!
ಗುರುಭಕ್ತಿ ಭರಿತಾ ದತ್ತಹಸ್ತ! (ಕ)
-ರುಣಾಭರಣಾನಂದಾ ದತ್ತ ಹಸ್ತ!
ತ್ತಾತ್ರೇಯಾವತಾರಾ ದತ್ತಹಸ್ತ! (ಅ)
-ತ್ತ, ಇತ್ತೆತ್ತೆತ್ತ ವ್ಯಾಪ್ತಾ ದತ್ತಹಸ್ತ!
“ಹರೇ ರಾಮ” ಮಂತ್ರಾತ್ಮಾ ದತ್ತಹಸ್ತ! (ಹ)
-ಸ್ತ ನಿರಂಜನಾದಿತ್ಯಾ ದತ್ತಹಸ್ತ!!!

ಪ್ರಶಾಂತಾಂತರಂಗಾ ಶ್ರೀರಂಗ!   3(1140)

ಶಾಂತ ತರಂಗಾಂಗಾ ಶ್ರೀರಂಗ! (ಸಂ)
-ತಾಂಗ ಸಂಗಾ ರಂಗಾ ಶ್ರೀರಂಗ! (ವೀ)
-ತರಾಗಾಂಗಾರಾಂಗಾ ಶ್ರೀರಂಗ!
ರಂಗಾ ಪಾಂಡುರಂಗಾ ಶ್ರೀರಂಗ! (ಗಂ)
-ಗಾ ಕಾವೇರೀ ಸಂಗಾ ಶ್ರೀರಂಗ!
ಶ್ರೀರಂಗಾರಾಮಾಂಗಾ ಶ್ರೀರಂಗ!
ರಂಗಾಂಗ ಸಾರಂಗಾ ಶ್ರೀರಂಗ! (ರಂ)
-ಗ ನಿರಂಜನಾದಿತ್ಯ ಸಂಗ!!!

ಪ್ರಶ್ನೆ ಕೇಳುವುದೊಂದು ಹುಚ್ಚು! [ಪ್ರ]   4(2330)

-ಶ್ನೆಗುತ್ತರವೀವ್ದೊಂದು ಹುಚ್ಚು!
ಕೇಡಿಗತನ ದೊಡ್ಡ ಹುಚ್ಚು! (ಕೀ)
-ಳು, ಮೇಲೆಂಬುದದೊಂದು ಹುಚ್ಚು! (ಸಾ)
-ವು, ನೋವು ಭಯವೊಂದು ಹುಚ್ಚು! (ಹಿಂ)
-ದೊಂದು, ಮುಂದೊಂದೆಂಬೊಂದು ಹುಚ್ಚು!
ದುರ್ವ್ಯಾಜ್ಯವೆಂಬುದೊಂದು ಹುಚ್ಚು! (ಬ)
-ಹು ಭಾಗ್ಯವಂತೆಂಬೊಂದು ಹುಚ್ಚು! (ಹ)
-ಚ್ಚು, ನಿರಂಜನಾದಿತ್ಯನಚ್ಚು!!!

ಪ್ರಸನ್ನ ಸೀತಾರಾಮ ಸೇವೆ ಚಿರಕಾಲ ಸಾಗಲಿ!   5(3041)

ಚ್ಚಿದಾನಂದಾತ್ಮ ಸಾಕ್ಷಾತ್ಕಾರ ಸರ್ವರಿಗಾಗಲಿ! (ನ)
-ನ್ನದು, ನಿನ್ನದೆಂಬ ಭೇದಭಾವದ ಹುಟ್ಟಡಗಲಿ!
ಸೀತಾಮಾತೆಯಾದರ್ಶ ಮಹಿಳೆಯರು ಪಾಲಿಸಲಿ!
ತಾಮಸ, ರಾಜಸ, ಭಕ್ತಿ ಕಡಿಮೆಯಾಗುತ್ತಿರಲಿ!
ರಾಮನಾಮ ಜಪದಿಂದಾಶಾಪಾಶ ನಾಶವಾಗಲಿ!
ದನಾರಿಗಿದು ಪ್ರಿಯಮಂತ್ರವೆಂಬರಿವಿರಲಿ!
ಸೇವಾಗ್ರೇಸರಾಂಜನೇಯನಿಗೆ ವಂದನೆ ಸಲಲಿ! (ಸ)
-ವೆದುಹೋಗಲೀದೇಹ ಅವನ ಪಾದ ಸೇವೆಯಲಿ!
ಚಿರಂಜೀವಿತ್ವಕ್ಕೆ ನಿಷ್ಕಾಮ ಭಕ್ತ ಅರ್ಹನಾಗಲಿ!
ಕ್ಕಸಾಂತಕ ರಾಮನ ಸಾಯುಜ್ಯ ಸುಖ ಸಿಗಲಿ!
ಕಾಮಿನೀ ಕಾಂಚನದ ಹುಚ್ಚು ಹೆಸರಿಲ್ಲದಾಗಲಿ!
ಕ್ಷ್ಯ ಸದಾ ಪ್ರಸನ್ನ ಸೀತಾರಾಮಾತ್ಮನಲ್ಲಿರಲಿ!
ಸಾಧು, ಸಜ್ಜನರ ಸೇವೆಯಿಂದಾತ ತೃಪ್ತನಾಗಲಿ!
ರುಡಗಮನನಾಗಿ ಬಂದು ದರ್ಶನ ಕೊಡಲಿ! (ಒ)
-ಲಿದು ನಿರಂಜನಾದಿತ್ಯನೂ, ತಾನೂ ಒಂದೆಂದೆನಲಿ!!!

ಪ್ರಸಾದ ಕಾದಿಹುದು ನಿನಗೆ!   3(1078)

ಸಾಮರ್ಥಸಾಲದೀಗ ನಿನಗೆ!
ತ್ತ ಭಕ್ತಿಯೇ ದಾರಿ ನಿನಗೆ!
ಕಾರ್ಯಸಿದ್ಧಿಯಾಗ್ವುದು ನಿನಗೆ!
ದಿವ್ಯ ನಾಮವಾಧಾರ ನಿನಗೆ!
ಹುರುಪಿರಬೇಕೀಗ ನಿನಗೆ!
ದುರಿತದಂಜಿಕೇಕೆ ನಿನಗೆ?
ನಿರುಪಮಾತ್ಮಾಶ್ರಯ ನಿನಗೆ!
ಂಬಿಗೆ ಸದಾ ಬೇಕು ನಿನಗೆ! (ನೆ)
-ಗೆ, ನಿರಂಜನಾದಿತ್ಯನೆಡೆಗೆ!!!

ಪ್ರಸಾದ ಲಾಭದ ದಿನ ಸುದಿನ!   2(489)

ಸಾದರ ಪೂರ್ಣವಾದಿದಾಸುದಿನ!
ಯಾಮಯನಾನಂದದಾ ಸುದಿನ! (ಬ)
-ಲಾ ಬಲ, ತಾರಾಬಲದಾ ಸುದಿನ!
ಜನೆ ಭಾವಾವೇಶದಾ ಸುದಿನ! (ಅ)
-ದನಿರೀಕ್ಷಿತವಾದುದಾ ಸುದಿನ!
ದಿನ ರಾತ್ರಿ ಬೇಕೆಂಬುದಾ ಸುದಿನ! (ಜ)
-ನ ಗಣಕ ಮಂಗಳದಾ ಸುದಿನ!
ಸುದಿನ ಆದಿನ ಸದಾ ಸುದಿನ! (ನ)
-ದಿಯಾಗಿ ಹರಿಯಲಿದಾ ಸುದಿನ! (ಘ)
-ನ ನಿರಂಜನಾದಿತ್ಯೆಂದಾ ಸುದಿನ!!!

ಪ್ರಸಾದ ಸರ್ವಾನುಕೂಲಕರ!   5(3151)

ಸಾರುವರಿದ ಶಾಸ್ತ್ರಾನುಸಾರ!
ರ್ಶನವಿತ್ತಿಲ್ಲಾರ್ತರ್ಗಾ ಹರ!
ಜ್ಜನರಿಗೀಗ ಯಾರಾಧಾರ? (ಸ)
ರ್ವಾಧಿಕಾರದ್ದೀಗಿನ ಸರ್ಕಾರ!
ನುರಿತವರಿಗಿಲ್ಲಾಧಿಕಾರ!
ಕೂಟ, ನೋಟಾಟಕ್ಕೆ ಸಹಕಾರ!
ಕ್ಷ್ಯಾತ್ಮನಲ್ಲಿಟ್ಟಾಗ ಉದ್ಧಾರ!
ರಾದಿಂದ್ರಿಯಾತೀತ ಓಂಕಾರ! (ಹ)
-ರ, ನಿರಂಜನಾದಿತ್ಯನಾಕಾರ!!!

ಪ್ರಸಾದಕ್ಕಳುವುದಕ್ಕಾ ಬೆಕ್ಕು!   3(1031)

ಸಾಮಾನ್ಯವೆನ ಬೇಡಕ್ಕಾ ಬೆಕ್ಕು!
ತ್ತನದೊಂದು ರೂಪಕ್ಕಾ ಬೆಕ್ಕು! (ಮ)
-ಕ್ಕಳಿಗಿಂತಕ್ಕರೆಯಕ್ಕಾ ಬೆಕ್ಕು! (ಹಾ)
-ಲು ಹಳಸ್ಲುತಿನ್ನದಕ್ಕಾ ಬೆಕ್ಕು! (ಹಾ)
-ವು ಹಲ್ಲಿಗಳಂತಕಕ್ಕಾ ಬೆಕ್ಕು! (ಅ)
-ದರ ಸ್ಪರ್ಶಕ್ಕೊಪ್ಪದಕ್ಕಾ ಬೆಕ್ಕು! (ಲೆ)
-ಕ್ಕಾಚಾರದಂತಿರ್ಪುದಕ್ಕಾ ಬೆಕ್ಕು!
ಬೆರೆಯದಾರೊಂದಿಗಕ್ಕಾ ಬೆಕ್ಕು! (ಇ)
-ಕ್ಕು, ನಿರಂಜನಾದಿತ್ಯಾ ತ್ಮಾ ಬೆಕ್ಕು!!!

ಪ್ರಸಾದದಲ್ಲತೃಪ್ತಿ ಬೇಡಮ್ಮಾ!   6(3772)

ಸಾರೂಪ್ಯಕ್ಕಿದು ಬೇಕೇ ಬೇಕಮ್ಮಾ!
ರ್ಶನ ಮಾತ್ರವೇ ಸಾಲದಮ್ಮಾ!
ತ್ತನಿತ್ತ ತುತ್ತನ್ನುಣ್ಬೇಕಮ್ಮಾ! (ಚೆ)
-ಲ್ಲಬಾರದಿದನ್ನು ತಿಪ್ಪೆಗಮ್ಮಾ! (ಮಾ)
-ತೃ ಸ್ವರೂಪಿ ಗುರು ದತ್ತನಮ್ಮಾ! (ಜ್ಞ)
-ಪ್ತಿಯಲ್ಲಿಟ್ಟುಕೊಂಡಿರಿದನ್ನಮ್ಮಾ!
ಬೇಕಿವನ ಸ್ಮರಣೆ ನಿತ್ಯಮ್ಮಾ! (ಪುಂ)
-ಡರಿಗಿವ ಮಾರ್ತಾಂಡ ಕಾಣಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯವನಮ್ಮಾ!!!

ಪ್ರಾಣ ಹೋದ್ರೂ ಬಿಡದಂತಿದ್ಬಿಡಿ! (ಹ)   6(3621)

-ಣದಾಸೆಯನ್ನೀಗಿಂದ ಬಿಟ್ಟಿಡಿ!
ಹೋರಾಡ್ಯಾರು ನೀವೆಂದರಿತ್ಬಿಡಿ! (ತ)
-ದ್ರೂಪ ಸಿದ್ಧಿಯ ಮಾಡಿಕೊಂಡ್ಬಿಡಿ!
ಬಿದಿ ಲಿಖಿತವ ಮರೆತ್ಬಿಡಿ! (ದಂ)
-ಡ, ಕಮಂಡ್ಲು ಧಾರಿಯ ಸೇರ್ಬಿಡಿ!
ದಂಭ, ದರ್ಪಗಳನ್ನು ಬಿಟ್ಟಿಡಿ!
ತಿತಿಕ್ಷೆ, ವೈರಾಗ್ಯ, ಹೆಚ್ಚಿಸ್ಬಿಡಿ! (ಸ)
-ದ್ಬಿಜ್ಜೆಯಲ್ಲಿ ಶ್ರದ್ಧೆ ಇರಿಸ್ಬಿಡಿ! (ಕೂ)
-ಡಿ ನಿರಂಜನಾದಿತ್ಯನಾಗ್ಬಿಡಿ!!!

ಪ್ರಾಣಾಯಾಮ, ಪ್ರತ್ಯಾಹಾರ, ನಿಸ್ಸಂಘಾ ಸಾಮೀಪ್ಯ!    1(187)

-ಣಾವ ಗುಣ ಚಿಂತಿಸಿ ನಿಸ್ಸಂಘದಾ ಸಾಮೀಪ್ಯ!
ಯಾವ ವಿಷಯಕ್ಕೂ ಮನವೋಡದಾ ಸಾಮೀಪ್ಯ!
ನ ಪ್ರಾಣಗಳ ಅನ್ಯೋನ್ಯದಿಂದಾ ಸಾಮೀಪ್ಯ!
ಪ್ರತ್ಯಾಹಾರ, ಪ್ರಾಣಾಯಾಮಾನುಬಂಧಾ ಸಾಮೀಪ್ಯ!
ತ್ಯಾಗ ಮಾಯೆಯಾಗಿ ಸತ್ಸಂಘದಿಂದಾ ಸಾಮೀಪ್ಯ!
ಹಾದಿ ಸುಗಮವಿದೆಲ್ಲಕಾ “ನಾಮಾ” ಸಾಮೀಪ್ಯ!
ಮಿಸಿದರಿದ್ರಲ್ಲಿ ಮನ ಸದಾ ಸಾಮೀಪ್ಯ!
ನಿಸ್ಸಂಘವೆಂದರಿಂದ್ರಜಯದಿಂದಾ ಸಾಮೀಪ್ಯ!
ಸ್ಸಂ!
ಸಿಯಿಲ್ಲದನುಸಂಧಾನದಿಂದಾ ಸಾಮೀಪ್ಯ!
ಸಾಧನೆ ಶ್ರದ್ಧಾ, ಭಕ್ತಿಯಿಂದಾದಾಗ ಸಾಮೀಪ್ಯ!
ಮೀರಾ, ಕಬೀರರನುಭವಿಸಿಹಾ ಸಾಮೀಪ್ಯ! (ಪ್ರಾ)
-ಪ್ಯ ನಿರಂಜನಾದಿತ್ಯಾಗ್ರಹದಾ ಸಾಮೀಪ್ಯ!!!

ಪ್ರಾಯಶ್ಚಿತ್ತವಾಯ್ತಂತೆ! ಆನಂದವಂತೇ!   1(171)

ಶ ದೊರಕುವುದು ಖಂಡಿತವಂತೆ! (ನಿ)
-ಶ್ಚಿತನಾಗಿ ನಿಶ್ಚಿಂತೆಯಿಂದಿರುವಂತೆ! (ಎ)
-ತ್ತಲೂ ಭಯಪಡದೆ ಇರಬೇಕಂತೆ!
ವಾಸ್ತವವಿದನುಭವಿಸುವನಂತೆ! (ತಾ)
-ಯ್ತಂದೆಯಾಗಿ ಕಾಯುವವನವನಂತೆ!
ತೆರೆ ಮರೆ ಹರಿದು ಬರುವನಂತೆ!
ತುರಪಡದೆ ನಂಬಿರಬೇಕಂತೆ!
ನಂಬಿಗೆ ವ್ಯರ್ಥವೆಂದಿಗೂ ಆಗದಂತೆ!
ತ್ತನಿಗಿದು ಕೀರ್ತಿ ತರುವುದಂತೆ!
ವಂಚಕನವನಲ್ಲಿದು ನಿಜವಂತೆ!
ತೇರು ನಿರಂಜನಾದಿತ್ಯುತ್ಸವವಂತೆ!!!

ಪ್ರಾರಬ್ಧ ದೇಹದ ಬೆನ್ನನ್ನು ಬಿಡದು! (ನ)   6(4138)

-ರರಿದನ್ನು ಮರೆತಿರಲೇಬಾರದು! (ಶ)
-ಬ್ಧ, ಸ್ಪರ್ಶಾದಿ ವಿಷಯಕ್ಕಂಟರ್ಬಾರದು!
ದೇಹ ದೇವರೆಂದು ಭ್ರಮಿಸಬಾರದು!
ರಿ, ಹರರ ಹೊರಗರಸ್ಬಾರದು!
ತ್ತ ದರ್ಶನ ಪಡೆಯದಿರ್ಬಾರದು!
ಬೆಕ್ಕೆಯಿಂದಿದಕ್ಕಡ್ಡಿಯಾಗಬಾರದು! (ತ)
-ನ್ನ ಸ್ವರೂಪ ಜ್ಞಾನವಿರದಿರ್ಬಾರದು! (ಹೊ)
-ನ್ನು, ಹೆಣ್ಣು, ಮಣ್ಣಿನಾಶೆಯಿರಬಾರದು!
ಬಿಡದಿದ್ದರೀ ಮೋಹ ಶಾಂತಿ ಬಾರದು! (ಮೃ)
-ಡನಂತೆ ವಿರಕ್ತನಾಗದಿರ್ಬಾರದು! (ಇ)
-ದು ನಿರಂಜನಾದಿತ್ಯಾನುಭವವಿದು!!!

ಪ್ರಾರಬ್ಧ ನಾಶಕ್ಕೆ ಕನಸೂ ಸಹಾಯ!   5(2959)

ಘುವೀರನ ಕೃಪೆಯಿದು ಆದಾಯ! (ಶ)
-ಬ್ದ, ಸ್ಪರ್ಶಾದಿ ವಿಷಯವಾಸನಾ ಕ್ಷಯ!
ನಾಮಜಪಿಗಿದು ಪಿರಿದಾದಾದಾಯ!
ಕ್ತಿ ಹೆಚ್ಚಲು ಮನಕ್ಕಿದೊಂದಾದಾಯ! (ಬೆ)
-ಕ್ಕೆಯ ಸೊಕ್ಕಡಗಲಿದೂ ಒಂದಾದಾಯ!
ನಸು, ನನಸು, ಪರಮಾತ್ಮಾಶ್ರಯ!
ಮಿಸಿದರಾ ಶ್ರೀಪಾದಕ್ಕೆ ಅಭಯ!
ಸೂತ್ರಧಾರಿ ಈತ ಸದಾ ಶಿವಮಯ!
ಕಲಾರಿಷ್ಟ ವಿದೂರಾ ದತ್ತಾತ್ರೇಯ!
ಹಾಡುವುದವನ ಗುಣಗಾನಾದಾಯ! (ಜ)
-ಯ ನಿರಂಜನಾದಿತ್ಯ ಗುರುರೂಪಾಯ!!!

ಪ್ರಾರಬ್ಧ ಮುಗಿಯದೆ ಪ್ರಾಣ ಹೋಗದು!   4(1667)

ಜ ಕಳೆಯದೆ ಕದ ತೆರೆಯದು! (ಲು)
-ಬ್ಧತನ ಹೋಗದೆ ನಿಮ್ಮಡಿ ಸಿಗದು!
ಮುದ್ರೆಯೊತ್ತದೆ ಬಟವಾಡೆಯಾಗದು!
ಗಿರಿಜೆಯಿಲ್ಲದೆ ಗಿರೀಶಗಾಗದು!
ಮ, ನಿಯಮವಿಲ್ಲದೆ ಯೋಗಾಗದು!
ದೆವ್ವ ಹೋಗದೆ ಪಾಣಿಗ್ರಹಣಾಗದು!
ಪ್ರಾರ್ಥನೆಯಿಲ್ಲದೆ ಸಾಧನೆ ಸಾಗದು! (ವ್ರ)
-ಣ ಗುಣವಾಗದೆ ತ್ರಾಣ ಬರ್ಲಾರದು!
ಹೋಮ ನಡೆಯದೆ ಆರಾಮವಾಗದು! (ತ್ಯಾ)
-ಗವಿಲ್ಲದೆ ಯಾಗ ನಡೆಯಲಾರದು!
ದುಡುಕು ನಿರಂಜನಾದಿತ್ಯಗಾಗದು!

ಪ್ರಾರ್ಥನೆ ಎಷ್ಟು ಮಾಡಿದರೇನು? [ಸಾ]   5(3148)

-ರ್ಥಕವಾಗದಿದ್ರೆ ಫಲವೇನು?
ನೆಪಕ್ಕೀ ತನುವೆಂದರಿ ನೀನು!
ಲ್ಲಕ್ಕೂ ಕಾರಣ ಆರ್ಯ ಭಾನು! (ನಿ)
-ಷ್ಟುರ ಮಾಡಿಕೊಂಡರಾಗ್ವುದೇನು?
ಮಾರಹರಗೊಪ್ಪಿಸೆಲ್ಲವನು! (ಮಾ)
-ಡಿದಂತಾಗಲೆಂದು ಬಾಳು ನೀನು!
ಯಾಮಯ ತಾನಾಗಲವನು!
ರೇಗ್ಬಾರದನಾಥನಾದವನು! (ಸೂ)
-ನು ನಿರಂಜನಾದಿತ್ಯನಿಗೆ ನೀನು!!!

ಪ್ರಾರ್ಥನೆ ಫಲಿಸದಿರದಮ್ಮಾ! (ಸಾ)   6(3398)

-ರ್ಥಕವಾಗುವುದು ಜನ್ಮವಮ್ಮಾ!
ನೆನಪಿನ್ಯಾರ್ದೂ ಮಾಡ್ಬಾರ್ದಮ್ಮಾ!
(ವಿ)-ಫಲವಾಗದು ಭಜನೆಯಮ್ಮಾ!
(ಅ)-ಲಿಪ್ತಳಾಗಿ ಸಂಸಾರ ಮಾಡಮ್ಮ!
ರ್ವಸ್ವವೂ ದತ್ತ ನಿನಗಮ್ಮಾ!
ದಿವ್ಯ ಜೀವನವಿಂತು ಸಾಗ್ಲಮ್ಮಾ!
ಕ್ತ, ಮಾಂಸದ ದೇಹಾನಿತ್ಯಮ್ಮಾ!
ಹಿಸುವುದಿದನ್ನಗ್ನಿಯಮ್ಮಾ!
(ಅ)-ಮ್ಮಾ ನಿರಂಜನಾದಿತ್ಯ ನಿತ್ಯಮ್ಮಾ!!!

ಪ್ರಾರ್ಥನೆ ಫಲಿಸಲಪ್ಪಾ! (ಸಾ)   2(972)

-ರ್ಥಕವಾಗಲಿ ಬಾಳಪ್ಪಾ! (ಮ)
-ನೆತನ ಉಳಿಯಲಪ್ಪಾ! (ಸ)
-ಫಲಾಗಲರ್ಚನೆಯಪ್ಪಾ! (ಮ)
-ಲಿನ ವಾಸನೆ ಹೋಗ್ಲಪ್ಪಾ!
ದಾ ನಿನ್ನವನಾಗ್ಲಪ್ಪಾ! (ಬಾ)
-ಲನಲಾಕ್ರೋಶ ಬೇಡಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯಪ್ಪಾ!!!

ಪ್ರಾರ್ಥನೆ ಫಲಿಸುವುದು ನಿನ್ನದು! (ಸಾ)   5(2581)

-ರ್ಥಕ ಜನ್ಮವಿದರಿಂದ ನಿನ್ನದು!
ನೆನೆಸುವುದೆನ್ನ ಭಾರ ನಿನ್ನದು!
ಲವ ಕೊಡುವಾನಂದ ನಿನ್ನದು! (ಬ)
-ಲಿಯಬೇಕ್ಭಕ್ತಿ ನಿನ್ನಲ್ಲಿ ನನ್ನದು!
ಸುರಿಯುವುದಾಗಮೃತ ನನ್ನದು! (ಸಾ)
-ವು, ನೋವಿಲ್ಲದಾನಂದಾಗ ನಿನ್ನದು!
ದುರ್ದೈವದೂರ ಬಾಳಾಗ ನಿನ್ನದು!
ನಿನ್ನ, ನನ್ನೈಕ್ಯಾನಂದಾಗ ನಿನ್ನದು! (ಉ)
-ನ್ನತದ ಕೈಲಾಸಾವಾಸ ನನ್ನದು! (ಇ)
-ದು ನಿರಂಜನಾದಿತ್ಯಾತ್ಮ ನಿನ್ನದು!!!

ಪ್ರಾರ್ಥನೆಗಾರದೇನಡ್ಡಿಯಿಲ್ಲ! (ವ್ಯ)   5(3141)

-ರ್ಥವಾಯ್ತೆಂದೀಗನ್ನಬೇಕಾಗಿಲ್ಲ!
ನೆನೆನೆನೆದವನಾಗ್ಬೇಕೆಲ್ಲಾ!
ಗಾಡಿಗಾರ ನಿರ್ದಯನೇನಲ್ಲ!
ಗಳೆಗವ ದಕ್ಕುವವ್ನಲ್ಲ!
“ದೇಹೀ” ಯೆಂದೊಲಿಸ್ಬೇಕವ್ನನ್ನೆಲ್ಲಾ!
“ನ ಗುರೂ

ರಧಿಕಂ” ಸುಳ್ಳಿದಲ್ಲ! (ಬ)
-ಡ್ಡಿ ಸೇರ್ಸಿ ಅಸ್ಲು ಕೊಡದೇನಿಲ್ಲ! (ಬಾ)
-ಯಿ ಮುಚ್ಚಿ ದಯಾಭಿಕ್ಷೆ ಬೇಡ್ರೆಲ್ಲಾ! (ನ)
-ಲ್ಲ ನಿರಂಜನಾದಿತ್ಯನ್ಯನಲ್ಲ!!!

ಪ್ರಿಯದರ್ಶಿನೀ, ಹಸು, ಕರು, ರೂಪಿಣೀ! (ಜ)   4(1842)

-ಯ ಜವಹರಲಾಲನಾ ಕುಮಾರಿಣೀ!
ಯಾ ಸ್ವಭಾವಿನೀ, ಮಧುರ ಭಾಷಿಣೀ! (ಸ್ಪ)
-ರ್ಶಿನೀ ಭೂಮಂಡಲ ಪ್ರದಕ್ಷಿಣಾಗ್ರಣೀ! (ದಾ)
-ನೀ ಆನಂದಭವನದಾಶಾ ತ್ಯಾಗಿಣೀ!
ರ್ಷವರ್ಧಿನೀ ದೀನಜನೋದ್ಧಾರಿಣೀ!
ಸುವರ್ಣಾಂಗಿನೀ, ಸರ್ವೋದಯಕಾರಿಣೀ!
ಷ್ಟ ಸಹಿಷ್ಣು ನೀ, ಶ್ರೇಷ್ಟೇಂದಿರಾ ಮಣೀ!
ರುಚಿ, ಶುಚ್ಯಾತ್ಮನೀ, ಪೇಚು ನಿವಾರಿಣೀ!
ರೂಢಮೂಲ ಹಕ್ಕು ಸ್ಥಾಪಿನೀ ತಾರಿಣೀ!
ಪಿರಿಯಾಭಿಮಾನೀ, ಪ್ರಿಯ ಮಂತ್ರೀಮಣೀ! (ರಾ)
-ಣೀ, ನಿರಂಜನಾದಿತ್ಯಾನಂದಾಕಾರಿಣೀ!!!

ಪ್ರಿಯಾಪ್ರಿಯಾತ್ಮಾರ್ಪಣೆ ಮಾಡಿ ಸ್ವೀಕರಿಸು!   6(3868)

ಯಾವುದೇ ಆದರೂ ಯೋಚಿಸಿ ನಿರ್ಧರಿಸು!
ಪ್ರಿಯತಮೆಯನ್ನು ನೋವಾಗದಂತಿರಿಸು!
ಯಾದವ, ರಾಧೆಯರಂತೆ ವ್ಯವಹರಿಸು! (ಆ)
-ತ್ಮಾನಂದದಲ್ಲಿ ಅವಳನ್ನು ಮೈಮರೆಸು! (ಸ)
-ರ್ಪಶಾಯಿಯಂತಾಕೆಯ ಸೇವೆ ಸ್ವೀಕರಿಸು! (ಹೊ)
-ಣೆ ಹೊತ್ತು, ಋಣತೆತ್ತು ಆನಂದಪಡಿಸು!
ಮಾನಾಭಿಮಾನವೆಂಬ ಭ್ರಾಂತಿ ಕರಗಿಸು! (ಅ)
-ಡಿಗಡಿಗಾದರ್ಶದ ನೆನಪು ಹುಟ್ಟಿಸು!
ಸ್ವೀಕರಿಸಿದ ಮೇಲಗಲದಂತಿರಿಸು!
ರ್ತವ್ಯವೆನೇಂದು ಪದೇ ಪದೇ ಯೋಚಿಸು!
ರಿಪುಕುಲವನ್ನೆಲ್ಲಾ ಸಂಪೂರ್ಣ ಜಯಿಸು! (ಲೇ)
-ಸು ನಿರಂಜನಾದಿತ್ಯನಿಂದಾಯ್ತೆಂದೆನಿಸು!!!

ಪ್ರೀತಿ, ವಿಶ್ವಾಸವಿಲ್ಲದಿದ್ರೇನಿದ್ರೇನು?   6(3548)

ತಿಪ್ಪೆ ಗುಂಡಿಯ ಮಾಣಿಕ್ಯವಲ್ಲವೇನು?
ವಿಶ್ವಾಸಿ ಹೇಗಿರ್ಬೇಕೆಂದರಿತಿರ್ನೀನು!
ಶ್ವಾಸೋಚ್ಚ್ವಾಸದಂತಿರ್ಬೇಕ್ನನ್ನಲ್ಲಿ ನೀನು!
ತಿ ಶಿರೋಮಣಿ ಸೀತೆಯಾಗ್ಬೇಕ್ನೀನು!
ವಿಧಿ ಲಿಖಿತ ಸಾವಿತ್ರಿಯಾಗ್ಮೀರ್ನೀನು! (ಗೊ)
-ಲ್ಲ ಕೃಷ್ಣನ ರಾಧೆಯಂತಾಗ್ಬೇಕು ನೀನು!
ದಿನ, ರಾತ್ರಿ ಮೀರಾಳಂತೆ ಇರು ನೀನು! (ಉ)
-ದ್ರೇಕದಿಂದ ಹಾಳಾಗಬಾರದು ನೀನು!
ನಿನ್ನಾಪ್ತನಿಗೆರಡೆಣಿಸ್ಬೇಡ ನೀನು! (ಇ)
-ದ್ರೇಕನಿಷ್ಠೆಯಿಂದ ಇರಬೇಕು ನೀನು! (ತ)
-ನು ನಿರಂಜನಾದಿತ್ಯಗೊಪ್ಪಿಸು ನೀನು!!!

ಪ್ರೀತಿಇರಲಂತರಂಗದಲ್ಲಿ!   3(1097)

ತಿಳಿದಿದ ತೋರು ಕಾರ್ಯದಲ್ಲಿ
ರದಿರು ಫಲಾಪೇಕ್ಷೆಯಲ್ಲಿ
ಮಿಸುತ್ತಿರಾತ್ಮಾನಂದದಲ್ಲಿ!
ಲಂಬೋದರ ಗಣೇಶಾತ್ಮನಲ್ಲಿ!
ಳೆದಿರು ತೃಪ್ತಿ ಮನದಲ್ಲಿ!
ರಂಗನಾಥನಡಿಯಡಿಯಲ್ಲಿ!
ರ್ವ ರಹಿತ ಭಾವನೆ

ಲ್ಲಿ!
ರ್ಶನಾಕಾಂಕ್ಷೆ ಸತತದಲ್ಲಿ! (ಇ)
-ಲ್ಲಿ ನಿರಂಜನಾದಿತ್ಯನಿರ್ಪಲ್ಲಿ!!!

ಪ್ರೀತಿಗಾವ ರೀತಿ, ನೀತಿ, ಜಾತಿ?   6(4241)

ತಿಳಿದಿದ ಮಾಡು ವಿಶ್ವ ಪ್ರೀತಿ! (ಭೋ)
-ಗಾಶೆಯಿ ಪ್ರೀತಿ ಕಪಟ ಪ್ರೀತಿ!
ರ ಗುರುಭಕ್ತಿ ಶುದ್ಧ ಪ್ರೀತಿ! (ತು)
-ರೀಯಾಶ್ರಮಿಯದ್ದು ಆತ್ಮ ಪ್ರೀತಿ! (ಪ)
-ತಿವ್ರತಾ ಸ್ತ್ರಿಯದ್ದು ಶುದ್ಧ ಪ್ರೀತಿ!
ನೀತಿಬಾಹಿರ ವೇಶ್ಯೆಯ ಪ್ರೀತಿ! (ಪ)
-ತಿತನಾಗಲು ಕಾರಣಾ ಪ್ರೀತಿ!
ಜಾತಿ, ನೀತಿಯಿಂದೆಂದು ಪ್ರಖ್ಯಾತಿ! (ಶಾಂ)
-ತಿ ನಿರಂಜನಾದಿತ್ಯಾತ್ಮ ಪ್ರೀತಿ!!!

ಪ್ರೀತಿಯ ಸಿಹಿ ಸೇಬು!   2(743)

ತಿನಬೇಕೆಲ್ಲಾ ಸೇಬು!
ಶದಾಯಕಾ ಸೇಬು!
ಸಿದ್ಧಿ, ಮನಕಾ ಸೇಬು!
ಹಿತಾತ್ಮ ಪ್ರೇಮಾ ಸೇಬು!
ಸೇವೆಗುತ್ತಮಾ ಸೇಬು! (ಸೇ)
-ಬು ನಿರಂಜನಾ ಸೇಬು!!!

ಪ್ರೀತಿಸಲ್ಪಡಬೇಕಾದಂತಿರಬೇಕು!   6(4327)

ತಿರುಕನಲ್ಲಾದ್ರೂ ಆ ಗುಣವಿರಬೇಕು!
ದಾಚಾರ ಸಂಪನ್ನನಾಗಿರಬೇಕು! (ಅ)
-ಲ್ಪರ ಸಂಘವೆಂದೂ ಮಾಡದಿರಬೇಕು!
ಮರುಧರನಾದರ್ಶದಂತಿರಬೇಕು!
ಬೇರಾರನುಕರಣೆ ಮಾಡದಿರ್ಬೇಕು!
ಕಾತುರ, ಆತುರವಿಲ್ಲದಿರಬೇಕು!
ದಂಗೆ, ದರೋಡೆಗಿಚ್ಛಿಸದಿರಬೇಕು!
ತಿಪ್ಪೆಯಲ್ಲಿದ್ದರೂ ತೃಪ್ತಿಯಿರಬೇಕು!
ಜ ಗುರುಪಾದದ್ದು ಹಣೆಗಿಡ್ಬೇಕು!
ಬೇಡಿ, ಕಾಡಿ ಹೊಟ್ಟೆತುಂಬಿಸದಿರ್ಬೇಕು!
ಕುಲ ನಿರಂಜನಾದಿತ್ಯನದ್ದಾಗ್ಬೇಕು!!!

ಪ್ರೇಮಧಾಮ ನಿರಂಜನಾದಿತ್ಯನಿಲಯ! (ಸೋ)   4(1822)

-ಮಶೇಖರನ ನಿತ್ಯ ಪೂಜೆಗದಾಲಯ! (ವಿ)
-ಧಾನ ಪ್ರತಿಪಾದನೆಗದಾದರ್ಶಾಲಯ!
ಧುರ ವೀಣಾ ರವ ಕೇಳುವಾಲಯ!
ನಿತ್ಯಾತಿಥಿ ಸೇವೆ ನಡೆಯುವ ನಿಲಯ!
ರಂಗನಾಥನ ಪೂರ್ಣಾನುಗ್ರಹದಾಲಯ!
ಗಜ್ಜನನಿ ಗಾಯಿತ್ರೀ ದೇವಿಯಾಲಯ!
ನಾದ ಕಲೋಪಾಸಕರಿಗಾಶ್ರಯಾಲಯಾ!
ದಿಗಂಬರಾನಂದನ ಪರಿಶುದ್ಧಾಲಯ! (ಜಾ)
-ತ್ಯತೀತವಾದ ಪರಬ್ರಹ್ಮಾನಂದಾಲಯ!
ನಿತ್ಯ ಗುರುಪಾದ ಪೂಜೋಪಚಾರಾಲಯ!
ಕ್ಷ್ಮಿಯಾನಂದ ನಿಲಯಾ ಸುಭಿಕ್ಷಾಲಯ!
ದುಪ ನಿರಂಜನಾದಿತ್ಯಾತ್ಮ ನಿಲಯ!!!

ಪ್ರೇಮಪೂರ್ಣಭಾವದಲ್ಲಿ ಹೇಳೋ ರಾಮ, ರಾಮ, ರಾಮ!(ಅ)   1(433)

ಮತಾ ಬಂಧಹರಿಯೆ ಹೇಳೋ, ರಾಮ, ರಾಮ, ರಾಮ!
ಪೂಜ್ಯ ಹರಿನಾಮ ರಾಮ ಹೇಳೋ ರಾಮ, ರಾಮ, ರಾಮ!
(ವ)-ರ್ಣಭೇದ, ಲಿಂಗಭೇದೊಲ್ಲ ಹೇಳೋ ರಾಮ, ರಾಮ, ರಾಮ!
ಭಾಗ್ಯ ಭೋಗ್ಯವೆಲ್ಲಾ ಇದೇ ಹೇಳೋ ರಾಮ, ರಾಮ, ರಾಮ!
ರ ಮಾರುತಿಯಾಗುವೆ ಹೇಳೋ ರಾಮ, ರಾಮ, ರಾಮ!
ತ್ತಗಿದೇ ಗುರುಮಂತ್ರ ಹೇಳೋ ರಾಮ, ರಾಮ, ರಾಮ!
(ಅ)-ಲ್ಲಿಲ್ಲಿ, ಎಲ್ಲೆಲ್ಲಿಹನವ ಹೇಳೋ ರಾಮ, ರಾಮ, ರಾಮ!
ಹೇಳಲರಿಯೆ ಮಹಿಮೆ ಹೇಳೋ ರಾಮ, ರಾಮ, ರಾಮ!
(ಅ)-ಳೋ! ನಿರಂಜನಾದಿತ್ಯಗೆ! ಹೇಳೋ ರಾಮ, ರಾಮ, ರಾಮ!

ಪ್ರೇಮಾ ಸುಪ್ರೇಮಾ ಆತ್ಮ ಪ್ರೇಮ!   2(619)

ಮಾಯಾನಂದ ಪ್ರೇಮ ಕುಪ್ರೇಮ!
ಸುವಿಮಲ ಪ್ರೇಮ, ಸುಪ್ರೇಮ!
ಪ್ರೇಮ ನಾಮಾತ್ಮಾರಾಮ ಪ್ರೇಮ!
ಮಾಧವಾ, ಕೇಶವಾತ್ಮ ಪ್ರೇಮ!
ನಂದ ರಾಧಾತ್ಮಗಾಪ್ರೇಮ! (ಆ)
-ತ್ಮ ರಾಮಾ ಸರ್ವನಾಮ ಪ್ರೇಮ!
ಪ್ರೇಮ ಮೀರಾತ್ಮಾನಂದ ಪ್ರೇಮ! (ನಾ)
-ಮ ನಿರಂಜನಾದಿತ್ಯಾ ಪ್ರೇಮ!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ