ನಂಜುಂಡನಲೈಕ್ಯ ಕಾಮಾಕ್ಷಮ್ಮಾ! (ನಂ)   1(378)

-ಜುಂಡಾ ಭಾವೈಕ್ಯ ಆತ್ಮನಲಮ್ಮಾ! (ಆ)
-ಡಲೇನಾ ಕಾಮಾಕ್ಷಿ ಸ್ಥಿತಿಯಮ್ಮಾ! (ಅ)
-ನನ್ಯ ಭಕ್ಟಿ ನಲ್ಲನಲದಮ್ಮಾ! (ಆ)
-ಲೈಸೋಲೈಸಿದಳವನಲಮ್ಮಾ! (ಶ)
-ಕ್ಯವಿಲ್ಲವಿದನ್ಯ ಭಾವಕಮ್ಮಾ!
ಕಾಯ ಅಶಾಶ್ವತ ತಿಳಿಯಮ್ಮಾ!
ಮಾತೆ ಕಾಮಾಕ್ಷಿಯಾಗಬೇಕಮ್ಮಾ! (ಅ)
-ಕ್ಷಯ ಸುಖವದರಿಂದಲಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯದಮ್ಮಾ!

ನಂಜುಂಡವನಂಜುವನೇ ಜವಗೆ? (ಗಾ)   5(3241)

-ಜುಂಬ ನರನಂಜಲೇಬೇಕವಗೆ! (ಜ)
-ಡ ದೇಹದ ಹಂಗೇನಿಲ್ಲಾ ಶಿವಗೆ!
ರ ವಿನಾಯಕ ಪುತ್ರಾ ಶಿವಗೆ!
ನಂದೀಶ್ವರನೇ ವಾಹನಾ ಶಿವಗೆ!
ಜುಟ್ಟಿನಲ್ಲಿಹಳು ಗಂಗಾ ಶಿವಗೆ!
ರದೆ ಪಾರ್ವತಿ ಸತೀ ಶಿವಗೆ!
ನೇತ್ರಗಳ್ಮೂರಿರುವುದೀ ಶಿವಗೆ!
ರಾ, ಜನ್ಮ ದುಃಖವಿಲ್ಲಾ ಶಿವಗೆ!
ಸನ ಗಜ ಚರ್ಮವಾ ಶಿವಗೆ!
ಗೆಳೆಯ ನಿರಂಜನಾದಿತ್ಯವಗೆ!!!

ನಂದ ಕಂದ ಮುಕುಂದ ಗೋವಿಂದ! (ಸ)   2(801)

-ದಯ ಹೃದಯಾನಂದ ಗೋವಿಂದ!
ಕಂಸ ಮಾವನ ಕೊಂದ ಗೋವಿಂದ! (ಮ)
-ದನ ಮೋಹನಾನಂದ ಗೋವಿಂದ!
ಮುರಲೀ ನಾದಾನಂದ ಗೋವಿಂದ!
ಕುಂಜ ವಿಹಾರಾನಂದ ಗೋವಿಂದ! (ಯಾ)
-ದವ ಮಧವಾನಂದ ಗೋವಿಂದ!
ಗೋಕುಲ ಲೀಲಾನಂದ ಗೋವಿಂದ! (ಗೋ)
-ವಿಂದ, ಗೋಸೇವಾನಂದ ಗೋವಿಂದ! (ಕಂ)
-ದ, ನಿರಂಜನಾದಿತ್ಯ ಗೋವಿಂದ!!!

ನಂದನಂದನ, ನಂದನಂದನ, ನಂದನಂದನಾ! (ಜೈ)   2(442)

ನಂದನಂದನ, ನಂದನಂದನ, ನಂದನಂದನ ನಂದನಂದನಾ!
ಮನದ ಮಲ ತೊಳೆಯ ಬಾರೋ, ನಂದನಂದನ!”
ನರನಂತೆ ಮಾಡಲೆನ್ನ ಬಾರೋ, ನಂದನಂದನ!”
ದರಿದ್ರ ಕುಚೇಲಾಗಿಹೆ ಬಾರೋ, ನಂದನಂದನ!”
ಮದ ಮತ್ಸರ ಮರ್ದಿಸೆ ಬಾರೋ, ನಂದನಂದನ!”
ಲಕ್ಷ್ಯ ನೀನೊಬ್ಬನಾಗಿಹೆ ಬಾರೋ, ನಂದನಂದನ!”
ತೊರೆಯಲಾರೆ ನಾನಿನ್ನ ಬಾರೋ, ನಂದನಂದನ! (ಹ)”
-ಳೆಯ ಬಂಧ ನೆನೆದು ಬಾರೋ, ನಂದನಂದನ! (ಬ)”
-ಯಕೆ ಮಾಯೆಗಿಲ್ಲದಿಹೆ ಬಾರೋ, ನಂದನಂದನ!”
ಬಾರದಿರೆ ರಾಧೆಯಾಣೆ! ಬಾರೋ, ನಂದನಂದನ! (ಬಾ)”
-ರೋ, ನಿರಂಜನಾದಿತ್ಯ ನೀ ಬಾರೋ ನಂದನಂದನ!”

ನಂದಾ! ಆನಂದಾ! ನಂದಕಂದಾ! (ನಂ)   2(608)

-ದಾದಿತ್ಯಾನಂದ ಶ್ರೀ ಗೋವಿಂದ!
ನಂದಾತ್ಮಾನಂದ ಮುಕುಂದ!
ನಂದನಂದನ ರಾಧಾನಂದ! (ಸ)
-ದಾನಂದ ನಿಜಾನಂದಾನಂದ!
ನಂದ ಗೋಪಾನಂದನಾನಂದ!
ಯಾನಂದ ಮಾಧವಾನಂದ!
ಕಂದಾ, ಯೊಶೋದಾನಂದಾನಂದ! (ನಂ)
-ದ, ನಿರಂಜನಾದಿತ್ಯಾನಂದ!!!

ನಂಬದಿರು ಮಾಯೆಯಾಟವನ್ನು!   6(4103)

ಟ್ಟೆ ಬಿಚ್ಚೆಸೆವ ನಾಟ್ಯವನ್ನು!
ದಿಟ್ಟಿಯಾಕರ್ಷಕ ನೋಟವನ್ನು!
ರುಧಿರ, ಮಾಂಸದ ಗೊಂಬೆಯನ್ನು!
ಮಾತಿನ ಮಂಡಿಗೆಯೂಟವನ್ನು! (ದ)
-ಯೆ, ದಾಕ್ಷಿಣ್ಯಾತಿರೇಕಗಳನ್ನು!
ಯಾಚನಾ ಚಮತ್ಕಾರಗಳನ್ನು! (ಊ)
-ಟ, ತಿಂಡಿಗಳಟಾಟೋಪವನ್ನು! (ದೇ)
-ವತೋಪಾಸನಾ ನಟನೆಯನ್ನು! (ಇ)
-ನ್ನು ನಿರಂಜನಾದಿತ್ಯನ್ಲೇನನ್ನು!!!

ನಂಬಿಗೆ ಬೇಕಿಂಬಿಗೆಂಬಂಬಿಗಯ್ಯಾ!   4(2186)

ಬಿಗಿದಪ್ಪಪ್ಪನಡ್ಯೆಂಬಂಬಿಗಯ್ಯಾ! (ಬ)
-ಗೆಯ್ಬೇಡ್ಕೇಡನ್ಯರಿಗೆಂಬಂಬಿಗಯ್ಯಾ!
ಬೇಗ ಸಾಗ್ಲೀ ಯಾತ್ರೆಯೆಂಬಂಬಿಗಯ್ಯಾ!
ಕಿಂಕರನಾ ನಿನಗೆಂಬಂಬಿಗಯ್ಯಾ!
ಬಿಡ್ಬೇಡೆನ್ನ ಕೈ ನೀನೆಂಬಂಬಿಗಯ್ಯಾ! (ಹೋ)
-ಗೆಂದಿಗೂ ನಿನ್ನ ಬಿಟ್ಟೆಂಬಂಬಿಗಯ್ಯಾ!
ಬಂಧು, ಬಾಂಧವ ನೀನೆಂಬಂಬಿಗಯ್ಯಾ! (ಹೊಂ)
-ಬಿಸಿಲ್ನಿನ್ನ, ಕೃಪೆಯೆಂಬಂಬಿಗಯ್ಯಾ! (ಭೋ)
-ಗ, ತ್ಯಾಗ, ಯೋಗೆವಿದೆಂಬಂಬಿಗಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯನಿಂದಿಂಬಯ್ಯಾ!!!

ನಂಬಿದವ ಹುಂಬನಾಗನಯ್ಯಾ!   4(2408)

ಬಿಡ್ಬೇಕೆಲ್ಲಾ ಭಾರವನಿಗಯ್ಯಾ! (ಕುಂ)
-ದನ್ನವನಲ್ಲೆಣಿಸಬಾರ್ದಯ್ಯಾ! (ಅ)
-ವನ ಸ್ವರೂಪವೇನೆಂದರ್ಯಯ್ಯಾ!
ಹುಂಬ್ತನದರಿಂದ ನಾಶವಯ್ಯಾ! (ಬೆಂ)
-ಬಲವನದಿದ್ದೇ ಇದೆಯಯ್ಯಾ!
ನಾಶವಿಲ್ಲದಾತ್ಮ ನೀನಾಗಯ್ಯಾ! (ಜಂ)
-ಗಮ, ಸ್ಥಾವರಾತ್ಮನವನಯ್ಯಾ!
ಶ್ವರವೀ ಸ್ಥೂಲ ರೂಪವಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಮೃತಯ್ಯಾ!!!

ನಂಬಿದೆತ್ತಿನ ಕೊಂಬ ಕೊಯ್ಬೇಡ!   6(4208)

ಬಿಟ್ಟ ಬಸವ ಅದೆಂದೆನ್ಬೇಡ! (ಬೆ)
-ದೆ ಹಾಕ್ಲುತ್ತವನ ನೋಯಿಸ್ಬೇಡ! (ಎ)
-ತ್ತಿದು ಸರ್ವ ಸಂಪತ್ತು, ಕೊಲ್ಬೇಡ!
ಶ್ವರ ನೀವಿಬ್ಬ್ರೂ ಮರೆಯ್ಬೇಡ!
ಕೊಂದು, ತಿಂದು, ನಾಯ್ನರಿಯಾಗ್ಬೇಡ!
ಳಸಿ, ಬೆಳಸ್ದೇ ಹಾಳಾಗ್ಬೇಡ!
ಕೊಟ್ಟವ್ನ ಋಣ ತೀರಿಸ್ದಿರ್ಬೇಡ! (ಸಾ)
-ಯ್ಬೇಡ, ಅನ್ಯಾಯ ಮಾಡಿ ಕೆಡ್ಬೇಡ! (ಮಾ)
-ಡ, ನಿರಂಅಜನಾದಿತ್ಯ ಹಾಗ್ಮಾಡ!!!

ನಂಬಿದೆನು ನಾ ನಿನ್ನ ಮಾತ!   5(3265)

ಬಿಸಿಲೆನ್ನದೇ ಮಾಡಿದೆ ಜೀತ! (ತಂ)
-ದೆ ನೀನೀಗಾದೆ ಅಪಖ್ಯಾತ!
ನುಡಿಯಲೇನಾ ಪಕ್ಷಪಾತ?
ನಾಯಿಯಂತಾದೆ ನಾನನಾಥ!
ನಿತ್ಯ ನೀನಾದೆ ಲೋಕನಾಥ! (ನ)
-ನ್ನ ನಿನ್ನಲ್ಲೇಕೀ ಭಿನ್ನ ಕಥಾ?
ಮಾಯೆಯಿಂದ ನಾನವನತ! (ಖ್ಯಾ)
-ತ ನಿರಂಜನಾದಿತ್ಯ ಶಾಂತ!!!

ನಂಬಿದ್ದಿನ್ನೂ ಸಾಲದೇ ಗುರುದೇವಾ?   6(3978)

ಬಿದ್ದೊದ್ದಾಡ್ವುದ್ಕಾಣದೇ ಗುರುದೇವಾ? (ಮ)
-ದ್ದಿದಕ್ಕೇನೂ ಇಲ್ಲವೇ ಗುರುದೇವಾ? (ನಿ)
-ನ್ನೂಳಿಗಕ್ಕಿದೇ ಫಲ? ಗುರುದೇವಾ?
ಸಾವೇಕೆ ಬಾರ್ದಿದಕ್ಕೆ ಗುರುದೇವಾ? (ಅ)
-ಲಕ್ಷ್ಯ ನೀನ್ಮಾಡ್ಬಹುದೇ ಗುರುದೇವಾ?
ಒನೆ ಲಿನೆ ಮಿ

ಸಿ
ಗುಣ ದೋಷ ಕ್ಷಮಿಸು ಗುರುದೇವಾ? (ದ)
-ರುಶನವಿತ್ಮೇಲೆತ್ತು ಗುರುದೇವಾ!
ದೇಶಕ್ಕಾಗ್ಲಿ ಸುಭಿಕ್ಷೆ ಗುರುದೇವಾ! (ದೇ)
-ವಾ! ನಿರಂಜನಾದಿತ್ಯ ಗುರುದೇವಾ!!!

ನಂಬಿಸಿ ಕತ್ತು ಹಿಸುಕಬೇಡಿ!   5(2651)

ಬಿಟ್ಟ ಮಾಲುಪಯೋಗಿಸಬೇಡಿ! (ಪು)
-ಸಿಯಾಡಿ ಗಂಟು ಮುಳುಗಿಸ್ಬೇಡಿ!
ಳ್ಳರಿಂದೇನೂ ಕೊಂಡುಕೊಳ್ಬೇಡಿ! (ಸೊ)
-ತ್ತು ಅಸ್ಥಿರ, ಅನ್ಯಾಯ ಮಾಡ್ಬೇಡಿ!
ಹಿಡಿದು ಶ್ರೀಪಾದ ಸುಳ್ಳಾಡ್ಬೇಡಿ!
ಸುದ್ದಿ ಬಂದಿದೆಂದ್ಗುಲ್ಲೆಬ್ಬಿಸ್ಬೇಡಿ!
ಂಡ್ರೂ ಪರಾಂಬರಿಸದಿರ್ಬೇಡಿ!
ಬೇಳೆ ಬೇಯದೆ ಹುಳಿ ಹಾಕ್ಬೇಡಿ! (ಅ)
-ಡಿ ನಿರಂಜನಾದಿತ್ಯನದ್ಹಿಡಿ!!!

ನಂಬುಗೆಯೇ ಕರ್ಮಕ್ಕೆ ಕಾರಣ!   6(3527)

ಬುಧ ಜನರಿಂದ ನಿರೂಪಣ!
(ಬ)-ಗೆ ಬಗೆಯಿಂದದು ಪ್ರಕಟಣ!
(ತಾ)-ಯೇ ಪರದೈವವೆಂಬ ಘೋಷಣ!
ರ್ತವ್ಯವಳ ನಾಮಸ್ಮರಣ!
(ಚ)-ರ್ಮದ ಗೊಂಬೆ ಅವ್ಳಲ್ಲೆಂಬಂಬೋಣ!
(ಅ)-ಕ್ಕೆ ಅವಳಿಂದೆಲ್ಲರ ಕಲ್ಯಾಣ!
ಕಾಮಾಕ್ಷಿಯೆಂಬುದವ್ಳೊಂದು ಗುಣ!
(ಸು)-ರ ನರಾದಿಗ್ಳವ್ಳ ಭಕ್ತ ಗಣ!
(ಋ)-ಣ, ನಿರಂಜನಾದಿತ್ಯ ಕಿರಣ!!!

ನಗದಳದಧಿಕಾರಿಯಾಗಬೇಕು!   6(4295)

ಡಿ ಬಿಡಿ ಮಾಡದಾತನಾಗಬೇಕು!
ರ್ಶನವನೆಲ್ಲರಿಗೂ ಕೊಡಬೇಕು! (ಒ)
-ಳ, ಹೊರಗಾತ ಶುದ್ಧವಾಗಿರಬೇಕು!
ಯಾಸಾಗರನಾತನಾಗಿರಬೇಕು!
ದಿಕ್ಕಾರ ಯಾರನ್ನೂ ಮಾಡದಿರಬೇಕು!
ಕಾಮುಕನವನಾಗದಿರಲೇಬೇಕು! (ಅ)
-ರಿಭಯಂಕರನವನಾಗಿರಬೇಕು!
ಯಾರ ಚಾಡಿಯನ್ನೂ ಕೇಳದಿರಬೇಕು!
ರಡನ ಹಾಗೆ ಸೇವೆ ಮಾಡಬೇಕು!
ಬೇಲಿಯಾಗಿ ಹೊಲವ ರಕ್ಷಿಬೇಕು!
ಕುಮಾರ ನಿರಂಜನಾದಿತ್ಯಗಾಗ್ಬೇಕು!!!

ನಗರ ಭಜನೆ ಮಾಡಿ!   2(719)

ರ್ವ ಬಿಟ್ಟೆಲ್ಲೊಡಗೂಡಿ!
ಮಾರಮಣನ ಪಾಡಿ!
ಕ್ತಿಭಾವ ಬಿಡಬೇಡಿ!
ಗಕಿದು ಸುಖ ನೋಡಿ! (ಮ)
-ನೆ ಮಾತುಗಳಾಡಬೇಡಿ!
ಮಾನಾವಮಾನೆನಬೇಡಿ! (ಗು)
-ಡಿ ನಿರಂಜನಗೆ ಮಾಡಿ!!!

ನಟರಾಜ ಬಂದ ನೋಡಯ್ಯಾ! (ಆ)   4(1483)

-ಟವನದು ನೋಡಬೇಕಯ್ಯಾ!
-ರಾಗ, ತಾಳಾನಂದವನಯ್ಯಾ!
ಗದೀಶ್ವರನವನಯ್ಯಾ!
ಬಂಧು ಬಾಂಧವನವನಯ್ಯಾ!
ತ್ತನಲ್ಲಿವನೈಕ್ಯವಯ್ಯಾ!
ನೋಡುವರಿಗೆ ಹುಚ್ಚನಯ್ಯಾ! (ಒ)
-ಡಲೆಲ್ಲಾ ಹೆಣ ಬೂದಿಯಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾತಯ್ಯಾ!!!

ನಟರಾಜನೆಣಿಸಿದನೇಳು! (ದಿ)   4(1732)

-ಟವನರಿಯೆನೆಂದಳವಳು!
ರಾತ್ರಿಯಾಗಲೆಂದಳೀಗವಳು!
ನ್ಮ ಪಾವನವೆಂದಳವಳು!
ನೆನಪದಿರಲೆಂದಳವಳು! (ಋ)
-ಣಿ ಶಿವಪಾದಕ್ಕೆಂದಳವಳು!
ಸಿಕ್ಕಿತುಚ್ಚಿಷ್ಟವೆಂದಳವಳು! (ಇ)
-ದಕಾಗಿ ಬಂದೆನೆಂದಳವಳು! (ಅ)
-ನೇಕ ಜನ್ಮದ್ದಿದೆಂದಳವಳು! (ಆ)
-ಳು, ನಿರಂಜನಾದಿತ್ಯಗವಳು!!!

ನಡೆ, ನುಡಿಗನ್ನಡಿ ನೋಡಿ! (ಒ)   3(1069)

-ಡೆಯನಂದದರಲ್ಲಿ ನೋಡಿ! (ಅ)
-ನುದಿನ ಶುಚಿಮಾಡಿ ನೋಡಿ! (ಅ)
-ಡಿಗಡಿಗೆಚ್ಚರದಿ ನೋಡಿ!
ತಿ, ಸ್ಥಿತಿದರಲ್ಲಿ ನೋಡಿ! (ತ)
-ನ್ನರಿವಿಗಿದಗತ್ಯ ನೋಡಿ! (ಪಾ)
-ಡಿ, ಹರಿನಾಮಾನಂದ ನೋಡಿ! (ನಾ)
-ನೋ? ಅವನೋ? ಯಾರೆಂದು ನೋಡಿ! (ಕೂ)
-ಡಿ, ನಿರಂಜನಾದಿತ್ಯ ನೋಡಿ!!!

ನಡೆಸಿದಂತೆ ನಡೆದೂರು ಸೇರು! (ಒ)   6(4285)

-ಡೆಯನ ಆಜ್ಞಾಧಾರಕನಾಗಿರು!
ಸಿಕ್ಕಿದ್ದನ್ನುಂಡು ತೃಪ್ತ ನೀನಾಗಿರು!
ದಂಗೆಕೋರರ ಸಂಗ ಮಾಡದಿರು!
ತೆರೆಮರೆಯ ಗಾಯಕನಂತಿರು!
ಶ್ವರ ಮಾಯೆಯಾಟ ನಂಬದಿರು! (ಹೊ)
-ಡೆದಾಟ ಕಡು ಬಡವಾಗದಿರು!
ದೂಷಣೆ ಪರರನ್ನು ಮಾಡದಿರು! (ಗು)
-ರುಪಾದಕ್ಕೆ ನಮಸ್ಕರಿಸುತ್ತಿರು!
ಸೇವೆ ನಿಷ್ಕಾಮ್ಯವಾಗಿ ಮಾಡುತ್ತಿರು! (ಇ)
-ರು ನಿರಂಜನಾದಿತ್ಯ ನೀನಾಗಿರು!!!

ನಡೆಸಿದಂತೆ ನಡೆಯುತಿಹೆ! (ಎ)   1(83)

-ಡೆಬಿಡದೆನ್ನ ನಾ ನೋಡುತಿಹೆ!
ಸಿರಿತನವ ಬಯಸದಿಹೆ!
ದಂಡನೆಗೆಡೆಗೊಡದಂತಿಹೆ!
ತೆರೆಮರೆಯಾಗಿ ಬಾಳಿತಿಹೆ!
ನ್ನವ ಗುರುವೆಂದು ನಂಬಿಹೆ! (ಎ)
ಡೆ ದೊರೆತರೆ ಜಪಿಸುತಿಹೆ!
ಯುಕ್ತಿಯಿಲ್ಲದ ಭಕ್ತಿಯಲಿಹೆ!
ತಿಳಿಯೆನು ನಾನೇನನೆಂದಿಹೆ!
ಹೆತ್ತವ ನಿರಂಜನೆಂದಿಹೆ!!

ನತದೃಷ್ಟ ತನ್ನತಾ ನರಿಯದವ!   6(4390)

ಪಸ್ಸಿದಕ್ಕಾಗಿ ಮಾಡ್ಬೇಕು ಮಾನವ!
ದೃಕ್ದೃಶ್ಯ ವಿವೇಕಿಯಾಗಿರ ಬೇಕವ! (ಅ)
-ಷ್ಟ ಮದಗಳ ಜಯಿಸಿರ ಬೇಕವ!
ರುಣಿಯರ ಸಂಗ ಬಿಡ ಬೇಕವ! (ಚಿ)
-ನ್ನ, ಬೆಳ್ಳಿಗಳ್ಗಾಶಿಸದಿರ ಬೇಕವ!
ತಾತ್ಸಾರ ಯಾರನ್ನೂ ಮಾಡಬಾರದವ!
ಯನಾನಂದಕ್ಕಾಶಿಸಬಾರದವ! (ಹ)
-ರಿನಾಮ ಸ್ಮರಣೆಯಲ್ಲಿರಬೇಕವ!
ಮ, ನಿಯಮಾಭ್ಯಾಸಿಯಾಗಬೇಕವ!
ತ್ತಗೀತಾನುಷ್ಠಾನ ಮಾಡಬೇಕವ! (ಅ)
-ವ ನಿರಂಜನಾದಿತ್ಯದತ್ತನಾಗುವ!!!

ನತದೃಷ್ಟನೆಂದಳಬೇಡಯ್ಯಾ! (ಸೋ)   4(1873)

-ತರೂ ಸಾಧನೆ ಬಿಡಬೇಡಯ್ಯಾ! (ಅ)
-ದೃಷ್ಟ ಬದಲಾಗದಿರದಯ್ಯಾ! (ಕ)
-ಷ್ಟ, ಸುಖ ಸದ್ಗುರು ಚಿತ್ತವಯ್ಯಾ!
ನೆಂಟ, ಶ್ರೀಕಂಠನ ನಂಬಿರಯ್ಯಾ!
ಯಾನಿಧಿಯವನು ಕಾಣಯ್ಯಾ!(ತ)
-ಳಮಳ ಬಿಟ್ಟುತ್ಸಾಹಿಯಾಗಯ್ಯಾ!
ಬೇರಾರಿಗೂ ಶಿರ ಬಾಗ್ಬೇಡಯ್ಯಾ! (ದ)
-ಡ ಸೇರಿಸುವವ ಮೃಡನಯ್ಯಾ! (ಅ)
ಯ್ಯಾ, ನಿರಂಜನಾದಿತ್ಯತ್ಮಾತಯ್ಯಾ!!!

ನನಗಂಟಿಕೊಂಡಿಹುದೆಲ್ಲ! (ನಾ)   3(1150)

-ನದಾವುದಕ್ಕಂಟಿಕೊಂಡಿಲ್ಲ!
ಗಂಭೀರ ಸ್ಥಿತಿ ನನ್ನದೆಲ್ಲ! (ಭೇ)
-ಟಿ ಭಕ್ತರಿಗಾಗದೇನಿಲ್ಲ!
ಕೊಂಡುಕೊಂಬವರೆನ್ನನಿಲ್ಲ! (ಕೂ)
-ಡಿ ಕೊಳ್ಳಲಭ್ಯಂತರವಿಲ್ಲ!
ಹುಚ್ಚು ಬಿಡದದಾಗುವುದಿಲ್ಲ! (ಇ)
-ದೆಲ್ಲರ ಸಂಪತ್ತಲ್ಲದಿಲ್ಲ! (ನ)
-ಲ್ಲ ನಿರಂಜನಾದಿತ್ಯ ಗೊಲ್ಲ!!!

ನನಗನುಗ್ರಹವಾಗುವುದು! (ನಿ)   5(2843)

-ನಗೆ ನಿಗ್ರಹ ಬೇಗಾಗುವುದು!
ತಿ ನನಗೂರ್ಧ್ವವಾಗುವುದು! (ನೀ)
-ನು ಅಧೋಗತಿಗಿಳಿಯುವುದು!
ಗ್ರಹಾಧಿಪತಿ ನಾನಾಗುವುದು! (ಗ್ರ)
-ಹಚಾರಾಧೀನ ನೀನಾಗುವುದು!
ವಾಸುದೇವನೇ ನಾನಾಗುವುದು!
ಗುಹ್ಯಾದಿಂದ್ರಿಯ ನೀನಾಗುವುದು! (ಸಾ)
-ವು ಕೀವಿನ ಗೊಂಬೆಗಾಗುವುದು! (ಇ)
-ದು, ನಿರಂಜನಾದಿತ್ಯಾಗುವುದು!!!

ನನಗಾಗಿ ನೀನಿಲ್ಲ, ನಿನಗಾಗಿ ನಾನಿಲ್ಲ! [ದಿ]   5(2862)

-ನ, ರಾತ್ರಿ ಕಳೆಯುತಿದೆ ಸ್ವಾರ್ಥದಿಂದೆಲ್ಲೆಲ್ಲಾ!
ಗಾಡಿ ಮುರಿದಾಗ ನಾನೂ ಇಲ್ಲ, ನೀನೂ ಇಲ್ಲ!
ಗಿರಿಜಾಪತಿಯ ತಾಂಡವ ಮಾತ್ರವೆಲ್ಲೆಲ್ಲಾ!
ನೀನಿದನರಿತು ನೀನಾರೆಂದರಿತಿರೆಲ್ಲೆಲ್ಲಾ!
ನಿತ್ಯ, ಸತ್ಯ ಸಚ್ಚಿದಾನಂದದಲ್ಲಿ ಎಲ್ಲೆಲ್ಲಾ! (ಕೊ)
-ಲ್ಲ ಬೇಕರಿಷ್ಟಕಾರಕರಿಗಳಾರನ್ನೆಲ್ಲಾ!
ನಿನಗಾಗಾವ ಭಯಕ್ಕೂ ಅವಕಾಶವಿಲ್ಲ!
ನ್ನದು, ನಿನ್ನದೆಂಬ ಭೇದವೂ ಆಗ ಇಲ್ಲ!
ಗಾಡಿಯೂ ನಿನಗಾಗ ಬೇಕೆನಿಸುವುದಿಲ್ಲ! (ಯೋ)
-ಗಿರಾಜ ಪರಮೇಶ್ವರನೇ ನೀನು ಎಲ್ಲೆಲ್ಲಾ!
ನಾನೂ, ನೀನೂ, ಅದೊಂದೇ ಆದಮೇಲಿನ್ನೇನಿಲ್ಲ!
ನಿತ್ಯಾನಂದದಲ್ಲಿರೋಣ ದಿನರಾತ್ರಿಯೆಲ್ಲಾ! (ಪು)
-ಲ್ಲ ನಿರಂಜನಾದಿತ್ಯನ ಮಾತಿದು ಸುಳ್ಳಲ್ಲಾ!!!

ನನಗಾಗೆಲ್ಲಾ ಬರಿಸಯ್ಯಾ!   1(330)

ನಗೇನೂ ತಿಳಿಯದಯ್ಯಾ!
ಗಾಳಿಗಿಟ್ಟ ದೀಪ ನಾನಯ್ಯಾ!
ಗೆಳೆಯ ನೀನು ಮಾತ್ರವಯ್ಯಾ! (ಅ)
-ಲ್ಲಾಡುತಲಿದೆ ಪ್ರಾಣವಯ್ಯಾ!
ರಡೀ ಬಾಳನ್ಯರಿಂದಯ್ಯಾ! (ಆ)
-ರಿದ್ದರೇನು ಸುಖವಯ್ಯಾ?
ಕಲವೂ ನೀನೊಬ್ಬನಯ್ಯಾ! (ಅ)
-ಯ್ಯಾ! ನಿರಂಜನಾದಿತ್ತಾತ್ರೇಯ!!!

ನನಗಿಂತ ನೀನು ಪ್ರಬುದ್ಧ! (ನಿ)   6(4107)

-ನಗಿಂತ ನಾನು ಅಪ್ರಬುದ್ಧ! (ತಾ

)
-ಗಿಂತಾರೂ ಇಲ್ಲ ಪರಿಶುದ್ಧ!
ರಳನಾದ ನಾನಶುದ್ಧ!
ನೀತ್ರೀತ್ನಿನ್ನದು ಕ್ರಮಬದ್ಧ! (ನಾ)
-ನು ಸದಾ ಕಾಮ, ಕ್ರೋಧ, ಬದ್ಧ!
ಪ್ರಕಾಶ ನಿನ್ನದು ವಿಶುದ್ಧ!
ಬುದ್ಧಿ ನನ್ನದು ತದ್ವಿರುದ್ಧ! (ಬು)
-ದ್ಧ ನಿರಂಜನಾದಿತ್ಯ ಸಿದ್ಧ!!!

ನನಗಿಟ್ಟ ಹಣ್ಣು ನಿನಗಿಟ್ಟೆ!   5(2963)

ನ್ನ ನಿನ್ನ ವಿಶ್ವಾಸಕ್ಕಾಗಿಟ್ಟೆ!
ಗಿರಿಧಾರಿಗಿಷ್ಟವಿದೆಂದಿಟ್ಟೆ! (ಬೆ)
-ಟ್ಟವೇರಲ್ಬಲ ಬರಲೆಂದಿಟ್ಟೆ!
ಗಲಿರುಳ್ದುಡಿ ನೀನೆಂದಿಟ್ಟೆ! (ಹೆ)
-ಣ್ಣು, ಮಣ್ಣಿನಾಸೆ ಬಿಡ್ಬೇಕೆಂದಿಟ್ಟೆ!
ನಿತ್ಯಾನಿತ್ಯ ಜ್ಞಾನಿಯಾಗೆಂದಿಟ್ಟೆ!
ಗುನಗುತ ಹೋಗೀಗೆಂದಿಟ್ಟೆ!
ಗಿಟ್ಟಿಸು ಸ್ವರೂಪವನ್ನೆಂದಿಟ್ಟೆ! (ಇ)
-ಟ್ಟೆ, ನಿರಂಜನಾದಿತ್ಯನಾಗ್ಬಿಟ್ಟೆ!!!

ನನಗಿನ್ನೇಕೆ ತಳಮಳ?   6(3676)

ನಗರಿವಾಯ್ತವನಾಳ!
ಗಿರೀಶನಿಗೆ ನಾನು ಬಾಳ! (ಇ)
-ನ್ನೇನನ್ನೂ ನನ್ನಿಂದವ ಕೇಳ!
ಕೆಟ್ಟರೆ ಕೇಳನೆನ್ನ ಗೋಳ!
ತ್ಸ್ವರೂಪಿಯಾಗ್ಬೇಕ್ತರಳ! (ಥ)
-ಳಕ್ನಿಂದ ಕೆಡುವ ದುರುಳ!
ಹಾದೇವ ಬಹು ಸರಳ! (ಬಾ)
-ಳ ನಿರಂಜನಾದಿತ್ಯ ಬೋಳ!!!

ನನಗಿನ್ಯಾರು ಗತಿ ತಂದೆ?   5(2807)

ರಕದಿಂದೆತ್ತೆನ್ನ ತಂದೆ!
ಗಿರಿಜಾಧವ ನೀನೇ ತಂದೆ!
ನ್ಯಾಸ ನಿನ್ನದೆನಗೆ ತಂದೆ!
ರುಚಿಸದಿನ್ನೇನೀಗ ತಂದೆ!
ಗನಮಣಿ ಸಾಕ್ಷಿ ತಂದೆ!
ತಿರಸ್ಕರಿಸಬೇಡ ತಂದೆ!
ತಂದುದೇಕಿಲ್ಲಿಗೆನ್ನ ತಂದೆ! (ಬಂ)
-ದೆ, ನಿರಂಜನಾದಿತ್ಯಾಗ್ಯೆಂದೆ!!!

ನನಗಿಲ್ಲ ಮಾನಾಪಮಾನ!   5(2930)

ನಗಿರುವುದೊಂದೇ ಜ್ಞಾನ!
ಗಿರೀಶನ ಯೋಗ ವಿಧಾನ! (ಪು)
-ಲ್ಲ ಕೃಷ್ಣನ ಗೀತಾ ಸಾಧನ!
ಮಾರುತಿಯ ಭಕ್ತಿ ಭಾವನ!
ನಾರದನಾದರ್ಶ ಪಾಲನ!
ರಮಾರ್ಥಕ್ಕಿದೇ ಚೇತನ!
ಮಾರೀಚಾದ್ಯರ ವಿನಾಶನ! (ಜ್ಞಾ)
-ನ ನಿರಂಜನಾದಿತ್ಯಾಶನ!!!

ನನಗೆ ಕಹಿಯಾದೂಟ ನಿನಗಿಕ್ಕಲಾರೆ! (ನಿ)   6(3892)

-ನಗಿಷ್ಟವಾದೂಟ ನೀನುಣ್ಬೇಡವೆನ್ನಲಾರೆ!
ಗೆಳೆಯನಾಗಿ ಹಿತೋಕ್ತಿಯಾಡದಿರಲಾರೆ!
ಷ್ಟಕ್ಕೆ ನೀನು ಗುರಿಯಾದ್ರೆ ನಾನ್ಸಹಿಸ್ಲಾರೆ!
ಹಿರಿಯರನ್ನು ಗೌರವಿಸೆನ್ನದಿರಲಾರೆ!
ಯಾರ ತಂಟೆಗೂ ಹೊಗ್ಬೇಡವೆನ್ನದಿರಲಾರೆ!
ದೂರ್ಬಾರ್ದನ್ನವಿಕ್ಕಿದವನನ್ನೆನ್ನದಿರ್ಲಾರೆ! (ದಿ)
-ಟವಾದ ದೇವರನ್ನೇ ನಂಬೆನ್ನದಿರಲಾರೆ!
ನಿತ್ಯ, ನಿರಾಮಯ ದೇವರೆನ್ನದಿರಲಾರೆ!
ಮಿಸಾ ಪರಮಾತ್ಮನಿಗೆನ್ನದಿರಲಾರೆ!
ಗಿರಿಧಾರಿಯ ಮಾತು ಸುಳ್ಳಲ್ಲೆನ್ನದಿರಲಾರೆ! (ತ)
-ಕ್ಕ ಶಿಷ್ಯ ನೀನವನಿಗೆನ್ನದಿರಲಾರೆ!
ಲಾಭವದರಿಂದಾಗ್ವುದೆಂದೆನ್ನದಿರಲಾರೆ! (ಖ)
-ರೆ ನಿರಂಜನಾದಿತ್ಯ ಕೃಷ್ಣನೆನ್ನದಿರ್ಲಾರೆ!!!

ನನಗೆ ನಾನೇ ಮೋಸಮಾಡಿಕ್ಕೊಂಡೆ!   5(3055)

ನ್ನ ನೋವವನ ನೋವೆಂದಂದ್ಕೊಂಡೆ!
ಗೆಲುವಾಗಿ ಸದಾ ಇರೆಂದಂದ್ಕೊಂಡೆ!
ನಾನಾ ಹೆಸರು ನನಗೆಂದಂದ್ಕೊಂಡೆ!
ನೇಮದಿಂದದನ್ನರಿಯೆಂದಂದ್ಕೊಂಡೆ!
ಮೋಹ ಮಿಥ್ಯಕ್ಕೆ ಬೇಡವೆಂದಂದ್ಕೊಂಡೆ!
ತ್ಯಕ್ಕೆಂದೂ ಸೋಲಿಲ್ಲವೆಂದಂದ್ಕೊಂಡೆ!
ಮಾರಾಮಾರಿ ಫಲವಿಲ್ಲೆಂದಂದ್ಕೊಂಡೆ! (ಆ)
-ಡಿದಂತೆ ನಡೆಯಬೇಕೆಂದಂದ್ಕೊಂಡೆ! (ತ)
-ಕ್ಕೊಂಡವ ಕೊಡಲೇಬೇಕೆಂದಂದ್ಕೊಂಡೆ! (ಕಂ)
-ಡೆ, ನಿರಂಜನಾದಿತ್ಯನಾಗಿ ಉಂಡೆ!!!

ನನಗೆ ನಿನ್ನ ನೋಡುವಾಸೇ! (ನಿ)   6(3487)

-ನಗೆ ನನ್ನನ್ನು ನೋಡುವಾಸೆ! (ಹೇ)
-ಗೆ ಪೂರ್ತಿಯಾದೀತು ನಮ್ಮಾಸೆ?
ನಿನಗೆ ಇಲ್ಲ ಲಂಚದಾಸೆ!
(ನ)-ನ್ನಲ್ಲಿಲ್ಲ ಬೇಕೆಂದರೂ ಪೈಸೆ!
ನೋಡು! ಹಣ್ಣಾಯ್ತು ಗಡ್ಡ, ಮೀಸೆ!
(ಮಾ)-ಡು ಖಾಲಿ ನಿನ್ನೌಷಧಿ ಶೀಸೆ!
ವಾಸಿಯಾಗ್ಲೆಲ್ಲಾ ಭೋಗದಾಸೆ!
(ಆ)-ಸೆ ನಿರಂಜನಾದಿತ್ಯ ಜೈಸೆ!!!

ನನಗೆ ನೀನಂಟಿಕೊಂಡಿರತಕ್ಕದ್ದು!   6(3620)

ನ್ನಿಂದ ನೀನೆಂದು ತಿಳಿಯತಕ್ಕದ್ದು!
ಗೆಳೆತನನ್ಯೋನ್ಯವಾಗಿರತಕ್ಕದ್ದು!
ನೀಚರ ಸಂಗವಿಲ್ಲದಿರತಕ್ಕದ್ದು!
ನಂಬಿಗೆ ಅಚಲವಾಗಿರತಕ್ಕದ್ದು!
ಟಿಪ್ಪಣಿಯಂತೆ ಕಥೆ ಸಾಗತಕ್ಕದ್ದು!
ಕೊಂಚವೂ ವ್ಯತ್ಯಾಸವಾಗ್ದಿರತಕ್ಕದ್ದು!
ಡಿಕ್ಕಿ ಹೊಡೆಯ್ದಂತೆಚ್ಚರವಿರ್ತಕ್ಕದ್ದು!
ಮೆ, ಉಮೆಯರಾದರ್ಶವಿರ್ತಕ್ಕದ್ದು!
ಪ್ಪನ್ನು ತಿದ್ದಿಕೊಳ್ಳುತ್ತಿರತಕ್ಕದ್ದು! (ಅ)
-ಕ್ಕ, ಪಕ್ಕ, ಚೊಕ್ಕವಾಗಿಟ್ಟಿರತಕ್ಕದ್ದು! (ಮು)
-ದ್ದು, ನಿರಂಜನಾದಿತ್ಯನ ಮಾಡ್ತಕ್ಕದ್ದು!!!

ನನಗೆ ನೀನನುವಾಗಬೇಕು! (ನಿ)   6(4007)

-ನಗೆ ತಕ್ಕ ಮಗ ನಾನಾಗ್ಬೇಕು! (ಹೀ)
-ಗೆ ಅಲಕ್ಷಿಸಿದ್ರವ್ನೇನಾಗ್ಬೇಕು?
ನೀತಿ, ರೀತಿ ಬಿಟ್ಕೆಟ್ಟು ಹೋಗ್ಬೇಕು!
ರಹರಿಗಿದರಿವಾಗ್ಬೇಕು!
ನುಡಿ, ನಡೆಯನ್ನವ್ನೇ ತಿದ್ಬೇಕು!
ವಾದಕ್ಕಾಸ್ಪದವಿಲ್ಲದಿರ್ಬೇಕು!
ತಿ, ಸ್ಥಿತಿ, ವ್ಯವಸ್ಥೆಯಾಗ್ಬೇಕು!
ಬೇಡಾದ್ರಿದು ಪ್ರಳಯವಾಗ್ಬೇಕು!!!

ನನಗೆ ನೀನಿಲ್ಲದಾರು ಗತಿ? (ನಿ)   4(1790)

-ನಗೊಪ್ಪುವಂತಿರಲೀಯೋ ಮತಿ! (ಬೇ)
-ಗೆ ತಪ್ಪಿಸೀಗ ಕೊಡೂರ್ಧಗತಿ!
ನೀಡಬೇಡೆನಗೆ ದುಷ್ಟ ಮತಿ! (ಅ)
-ನಸೂಯಾತ್ಮಜ ದತ್ತ ನೀ ಗತಿ! (ಪ)
-ಲ್ಲವಿಸಲಿ ನಿನ್ನಿಂದೆನ್ನ ಮತಿ! (ಸ)
-ದಾ ನಿನ್ನಾಶೀರ್ವಾದೆನಗೆ ಗತಿ! (ಕ)
-ರುಣಿಸೀಗೆನಗೆ ಸೇವಾ ಮತಿ! (ಸಂ)
-ಗ ನಿನ್ನದೊಂದೇ ನನಗೆ ಗತಿ! (ಗ)
-ತಿ ನಿರಂಜನಾದಿತ್ಯಾತ್ಮ ಮತಿ!!!

ನನಗೆ ಸ್ನಾನಾನ್ನ ಪಾನ ಬೇಕಿಲ್ಲ! (ನೀ)   4(1567)

-ನದಕೇನೂ ಚಿಂತಿಸಬೇಕಾಗಿಲ್ಲ! (ಬ)
-ಗೆ ಬಗೆಯ ಭೋಗ ಶಾಶ್ವತವಲ್ಲ!
ಸ್ನಾನೊಂದು ನೇಮವಲ್ಲದಿನ್ನೇನಿಲ್ಲ!
ನಾರದಿರಲು ಕಲಿಯಬೇಕೆಲ್ಲ! (ನ)
-ನ್ನ ನಿನ್ನದೆಂಬುದು ನಿರ್ಮಲವಲ್ಲ!
ಪಾಠ ಪ್ರವಚನವೇ ಗುರಿಯಲ್ಲ! (ಅ)
-ನಧ್ಯಯನ ಸುಖ ಕಾಣಬೇಕೆಲ್ಲ!
ಬೇಡಿ, ಕಾಡುವುದಕೀ ಜನ್ಮವಲ್ಲ!
ಕಿವಿ, ಬಾಯ್ಮುಚ್ಚ್ಯಾನಂದಿಸಬೇಕಲ್ಲ! (ಬ)
-ಲ್ಲ ನಿರಂಜನಾದಿತ್ಯಾತ್ಮನಂತೆಲ್ಲ!!!

ನನಗೆ ಹಕ್ಕಿಲ್ಲ, ನಿನಗೆ ದಿಕ್ಕಿಲ್ಲ!   6(3647)

ನಗೆ ತಲೆ ಹರಟೆ ಬೇಕಾಗಿಲ್ಲ!
ಗೆಳೆಯನಿಗೆ ಅದು ವಿಹಿತವಲ್ಲ!
ರಿ ಸ್ಮರಣೆ ಮಾಡದೇ ಗತಿಯಿಲ್ಲ! (ಹ)
-ಕ್ಕಿ ಪಕ್ಕಿಗಳಿಗೂ ಬೇರೆ ನಾಥರಿಲ್ಲ! (ಅ)
-ಲ್ಲಗಳೆದರೆ ಈ ಮಾತು ಸುಖವಿಲ್ಲ!
ನಿತ್ಯ ಕರ್ಮ ನಿಷ್ಕಾಮದಿಂದ ಮಾಡೆಲ್ಲಾ!
ಶ್ವರ ದೇಹಕ್ಕಲಂಕಾರ ಬೇಕಿಲ್ಲ! (ಕಾ)
-ಗೆ, ಗೂಗೆಗಳಂಥಾ ಬಾಳ್ವೆ ನಿನಗಲ್ಲ!
ದಿವ್ಯ ಜೀವನದ ರೀತಿ ಪಾಲಿಸೆಲ್ಲಾ! (ಸಿ)
-ಕ್ಕಿದಾಗ ನೆಕ್ಕಿಕೊಳ್ಳದಾಗುವುದಿಲ್ಲ! (ಪು)
-ಲ್ಲ ನಿರಂಜನಾದಿತ್ಯನಂತಿನ್ನೊಂದಿಲ್ಲ!!!

ನನಗೇನಾಶೀರ್ವಾದ ಸ್ವಾಮಿ? (ಅ)   4(1464)

-ನವರತೆನ್ನ ನೆನೆ ಪ್ರೇಮಿ! (ಯೋ)
-ಗೇಚ್ಛೆ ಈಡೇರಬೇಕು ಸ್ವಾಮಿ!
ನಾಮ ಭಜನೆ ಮಾಡು ಪ್ರೇಮಿ!
ಶೀಲವೆಂತಿರಬೇಕು ಸ್ವಾಮಿ? (ಗೀ)
-ರ್ವಾಣಿಯಂತಿರಬೇಕು ಪ್ರೇಮಿ!
ಯಾನುಗ್ರಹ ಮಾಡಿ ಸ್ವಾಮಿ!
ಸಾಮೀ ಸೇವೆ ಸಾಗಲಿ ಪ್ರೇಮಿ! (ಪ್ರೇ)
-ಮೀ! ನಿರಂಜನಾದಿತ್ಯಾ ಸ್ವಾಮಿ!!!

ನನಗೇನೂ ಬೇಕಾಗಿಲ್ಲವೇಕೆ?   6(3406)

ನ್ನ ಸ್ವರೂಪ ಬೇರಾದುದಕೆ!
ಗೇಯ್ಮೆ ತಟಸ್ಥವಾಗಿರ್ಪುದಕೆ!
ನೂತನ ರೀತಿ ಸಾಕಾದುದಕೆ!
ಬೇಕಾದದ್ದೆಲ್ಲಾ ಸಿಕ್ಕಿದುದಕೆ!
ಕಾಮನ ಕಾಟ ತಪ್ಪಿದುದಕೆ!
ಗಿರಿಜಾಪತಿ ತಾನಾದುದಕೆ!
(ಎ)-ಲ್ಲರಲ್ಲವನ ನೋಡಿದುದಕೆ!
ವೇದಾಂತಾನುಭವವಾದುದಕೆ!
(ಏ)-ಕೆ? ನಿರಂಜನಾದಿತ್ಯಾದುದಕೆ!!!

ನನ್ಗಾಗಿರಲವಕಾಶ ನಿನಗಿದೆ! (ನಿ)   6(3478)

-ನ್ಗಾಗಿ ಮಂದಿರದ ಕದ ತೆರೆದಿದೆ!
ಗಿರಿಜೆ ನೀನೆಂದರಿಯಬೇಕಾಗಿದೆ!
ಘು ರಾಮನಾಮ ಜಪಿಸ್ಬೇಕಾಗಿದೆ! (ನೀ)
-ಲ ಕಂಠನಿಗಿದು ಸಮ್ಮತವಾಗಿದೆ! (ಭ)
-ವ ಬಂಧನ ಬಿಡುಗಡೆಯಾಗಲಿದೆ!
ಕಾಲ ಹಾಳುಮಾಡದಿರಬೇಕಾಗಿದೆ!
ಕ್ತಿ ಶಿವನಿಂದಲೇ ಬರುತ್ತಲಿದೆ!
ನಿಶ್ಚಲ ಭಕ್ತಿಗೆ ಪೂರ್ಣ ಫಲವಿದೆ!
ಟನೆಯಿಂದ ಕಾಟ ಹೆಚ್ಚಾಗಲಿದೆ!
(ಯೋ)-ಗಿ ರಾಜನ ಉಪದೇಶವಿದಾಗಿದೆ!
(ಇ)-ದೆ, ನಿರಂಜನಾದಿತ್ಯನ ದಯೆ ಇದೆ!!!

ನನ್ನ ಕರೆಗೆ ನೀನೋಗೊಟ್ಟು ಬಾರೋ! (ನಿ)   4(2046)

-ನ್ನವನೆಂಬಭಿಮಾನವಿಟ್ಟು ಬಾರೋ!
-ಕರ್ತವ್ಯವಿದೆಂದರಿತೊಟ್ಟು ಸೇರೊ! (ಬೇ)
-ರೆಲ್ಲಾ ಕೆಲಸ ಕಾರ್ಯ, ಬಿಟ್ಟು ಬಾರೋ!
ಗೆಳೆಯ ನಾನೆಂದು ಪ್ರೀತ್ಯಿಟ್ಟು ಬಾರೋ!
ನೀನೇ ನಾನೆಂಬಭಯ ಕೊಟ್ಟು ಸೇರೋ!
ನೋಡದೆನ್ನ ಮೈಲಿಗೇ ಕಟ್ಟು ಬಾರೋ! (ಕಂ)
-ಗೊಳಿಪ ಪೀತಾಂಬರ ಉಟ್ಟು ಬಾರೊ! (ತೊ)
-ಟ್ಟುತ್ತಮೂಲಂಕಾರದಿಂದೊಟ್ಟು ಸೇರೊ!
ಬಾರೋ, ಮುರಲೀಧರ ಕೃಷ್ಣ ಬಾರೋ! (ಬಾ)
-ರೋ, ನಿರಂಜನಾದಿತ್ಯನನ್ನು ಸೇರೋ!!!

ನನ್ನ ಕಷ್ಟ ನಿನಗೇನು ಗೊತ್ತು? (ನಿ)   6(3732)

-ನ್ನನ್ನು ದೂರವಿರಿಸ್ಬಾರದಿತ್ತು!
ಳವು, ಸುಲಿಗೆ ಸುತ್ತುಮುತ್ತೂ! (ದು)
-ಷ್ಟರನ್ನು ಶಿಕ್ಷಿಸಬೇಕಾಗಿತ್ತು!
ನಿನ್ನಂತೆನ್ನನ್ನೇಕೆ ಮಾಡ್ಬಾರ್ದಿತ್ತು?
ನಗೆ ನೀನೇ ಸರ್ವ ಸಂಪತ್ತು!
ಗೇಯ್ಮೆ ನಿನ್ನ ಸೇವೆಯಾಗ್ಬೇಕಿತ್ತು!
ನುಡಿದೇನು ಫಲ? ನಾನಸತ್ತು!
ಗೊಲ್ಲ ಬಾಲಕೃಷ್ಣಾ! ಕೊಡೊಂದ್ಮುತ್ತು! (ಗೊ)
-ತ್ತು, ನಿರಂಜನಾದಿತ್ಯ ನೀನ್ಗೊತ್ತು!!!

ನನ್ನ ಕೆಲಸ ನಾ ಮಾಡ್ಬೇಕೆಂಬ ನಾಯಣ್ಣ! (ನಿ)   4(1686)

-ನ್ನ ಕೃಪೆ ನನ್ನ ಮೇಲಿರಲೆಂಬ ನಾಯಣ್ಣ!
ಕೆಟ್ಟವನೆಂದೆನ್ನಟ್ಟದಿರೆಂಬ ನಾಯಣ್ಣ!
ಜ್ಜೆ ನನಗೇನು ನಿನ್ನಲ್ಲೆಂಬ ನಾಯಣ್ಣ!
ದಾ ನಿನ್ನಡಿಯಲ್ಲಿ ನಾನೆಂಬ ನಾಯಣ್ಣ!
ನಾಯಿ ರೂಪದಲ್ಲಿಹೆ ನಾನೆಂಬ ನಾಯಣ್ಣ!
ಮಾತುಕತೆ ಬಾರದೆನಗೆಂಬ ನಾಯಣ್ಣ! (ಓ)
-ಡ್ಬೇಕು ನಿನ್ನಾಜ್ಞೆಯಾದಾಗಾನೆಂಬ ನಾಯಣ್ಣ!
ಕೆಂಗಣ್ಣನ ದಾಸದಾಸಾನೆಂಬ ನಾಯಣ್ಣ!
ನಶಂಕರಿ ನನ್ನಮ್ಮನೆಂಬ ನಾಯಣ್ಣ!
ನಾನು, ನೀನೆಂಬವರಲ್ಲಾನೆಂಬ ನಾಯಣ್ಣ!
ಮಪಿತನೇ ನನ್ನಯ್ಯನೆಂಬ ನಾಯಣ್ಣ! (ಅ)
-ಣ್ಣ ನಿರಂಜನಾದಿತ್ಯಾನಂದೆಂಬ ನಾಯಣ್ಣ!!!

ನನ್ನ ಕೈಗಿಂತ ನಿನ್ನದೇ ಮೇಲು! (ನಿ)   3(1001)

-ನ್ನ ಆಡಿಯಲ್ಲಿ ನನ್ನ ಹವಾಲು!
ಕೈಗೀಯದೆ ಹೋಗದೆನ್ನ ಕಾಲು!
ಗಿಂಡಿ ನೀರಿಂದಿಂಗದೆನ್ನ ಸೋಲು!
ತ್ತರಿಪೆ, ರಕ್ಷಿಸು, ಕೃಪಾಳು!
ನಿನಗಿಂತಧಿಕರಾರು ಹೇಳು! (ನಿ)
-ನ್ನಪ್ಪಣೆಯಂತಿರಲೆನ್ನ ಬಾಳು!
ದೇವ, ನೀನಾಗಬೇಕೆನ್ನ ಪಾಲು!
ಮೇಲು, ಕೀಳುಂಟೆಂಬುದೇ ಸವಾಲು! (ಮೇ)
-ಲು, ಕೀಳು ನಿರಂಜನಾದಿತ್ಯಾಳು!!!
ಅಥವಾ
-ಲು, ನಿರಂಜನಾದಿತ್ಯ ದಯಾಳು!

ನನ್ನ ಕೈಬಿಟ್ಟು ನೀನು ಕೆಟ್ಟೆ! (ಅ)   6(3558)

-ನ್ನ, ಬಟ್ಟೆ, ನಾನೆಷ್ಟೆಷ್ಟೋ ಕೊಟ್ಟೆ!
ಕೈ, ಬಾಯ್ತೊಳೆದುಣಿಸಿ ಬಿಟ್ಟೆ!
ಬಿಡ್ಬೇಡೆನ್ನನ್ನೆಂದಾಜ್ಞೆಯಿಟ್ಟೆ! (ಹು)
-ಟ್ಟು ಗುಣ ನೀನು ತೋರ್ಸಿಬಿಟ್ಟೆ!
ನೀತಿ, ರೀತಿ, ಬದ್ಲಾಯಿಸ್ಬಿಟ್ಟೆ! (ಜ)
-ನುಮ ವ್ಯರ್ಥಮಾಡಿ ಕೊಂಡ್ಬಿಟ್ಟೆ!
ಕೆಟ್ಟ ಮೇಲ್ಬುದ್ಧಿ ಬಂತೆಂದ್ಬಿಟ್ಟೆ! (ಉ)
-ಟ್ಟೆ, ನಿರಂಜನಾದಿತ್ಯ ಬಟ್ಟೆ!!!

ನನ್ನ ಕೋರಿಕೆ ಸಲಿಸಬೇಕು! (ನಿ)   4(1992)

-ನ್ನ ಪಾದಕ್ಕೆ ಕೀರ್ತಿ ತರಬೇಕು!
ಕೋದಂಡ ಪಿಡಿದು ಬರಬೇಕು! (ಅ)
-ರಿಕುಲವನಪ್ಪಳಿಸಬೇಕು!
ಕೆಲಸ, ಕಾರ್ಯ, ಮಾಡಿಸಬೇಕು!
ರ್ವ ಸಮನ್ವಯೂಡಿಸಬೇಕು! (ಮಾ)
-ಲಿಕ ನೀನೆಂದು ಹಾಡಿಸಬೇಕು!
ರ್ವರ ಪಾರುಗಾಣಿಸಬೇಕು!
ಬೇರೆ ಬೇಡದಂತಿರಿಸಬೇಕು! (ಟಾ)
-ಕು ಶ್ರೀನಿರಂಜನಾದಿತ್ಯಾಗ್ಬೇಕು!!!

ನನ್ನ ಜಾಗವಾವುದಪ್ಪಾ? (ನಿ)   2(954)

-ನ್ನ ಪಾದದಡಿಯಲ್ಲಪ್ಪಾ!
ಜಾಗ್ರತ್ಸ್ವಪ್ನಾದಿಯಲ್ಲಪ್ಪಾ!
ತಿಸುತಿದೆ ಕಾಲಪ್ಪಾ!
ವಾಸನಾತ್ರಯ ಸಾಕಪ್ಪಾ! (ಸಾ)
-ವು ಬೆನ್ನಟ್ಟುತಿದೆಯಪ್ಪಾ!
ಯೆದೋರಿ ರಕ್ಷಿಸಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯಪ್ಪಾ!!!

ನನ್ನ ತಟ್ಟೆಯೂಟ ತಿನ್ಲಿಕ್ಕೂ ಬೇಕು ನನಗಾಜ್ಞೆ! (ನಿ)   6(4220)

-ನ್ನನ್ನು ದೂರಲಾರದು ಮಾನವನಾದೆನ್ನ ಪ್ರಜ್ಞೆ!
ಳಮಳಗೊಂಡರೆ ಕೆಡುವುದು ನನ್ನ ಪ್ರಜ್ಞೆ! (ಹೊ)
-ಟ್ಟೆ ಹಸಿದವರನ್ನು ಸಾಯ್ಸುವವ್ಳೆಂಥಾ ಸರ್ವಜ್ಞೆ? (ತಾ)
-

ಡದಿದ್ದರೆ ದಯೆದೊರುವುದಿನ್ನಾವ ಪ್ರಜ್ಞೆ? (ಭಂ)
-ಟನನ್ನು ಸಂರಕ್ಷಿಸದಿದ್ದರೆ ಅದೆಂಥಾ ಪ್ರಜ್ಞೆ?
ಯಿಳಿದೂ ತಪ್ಪುಮಾಡಿದೇಕೆ ಪ್ರತಿಬಂಧಕಾಜ್ಞೆ? (ಅ)
-ನ್ಲಿಕ್ಕೀ ಮಾತನ್ನು ಮಾನವನಿಗಿದೆಯೇನನನಾಜ್ಞೆ? (ತ)
-ಖ್ಕೂಳಿಗ ಸಿಕ್ಕುವುದಕ್ಕೂ ಬೇಕು ಸರ್ವಜ್ಞನಾಜ್ಞೆ!
ಬೇಡಿದ ಮಾತ್ರಕ್ಕೆ ದೊರಕುವುದಿಲ್ಲವನಾಜ್ಞೆ! (ನೂ)
-ಕು ನುಗ್ಗಲಿನ ಮನೋವೃತ್ತಿಗಿಲ್ಲ ದೇವರಾಜ್ಞೆ!
ಡೆ, ನುಡಿಯೊಂದಾದ ಭಕ್ತನಿಗೆ ಅವನಾಜ್ಞೆ!
ನ್ನದು, ನಿನ್ನನೆಂಬುದಿಲ್ಲದವಗವನಾಜ್ಞೆ!
ಗಾಡಿಯೋಡಬೇಕಾದ್ರೆ ಇರಬೇಕು ಸ್ಥಿತಪ್ರಜ್ಞೆ! (ಪ್ರ)
-ಜ್ಞೆ ಶುದ್ಧವಿರಲೆಂದು ನಿರಂಜನಾದಿತ್ಯನಾಜ್ಞೆ!!!

ನನ್ನ ದೇವರ ದಾಸರ ದಾಸಿ ನಾನು! (ಅ)   6(3818)

-ನ್ನ ಬಟ್ಟೆಗಾಶಿಸೆನವರಿಂದ ನಾನು!
ದೇಹಾಭಿಮಾನ ತೊರೆದಿಹೆನು ನಾನು!
ಡವೆ ವಸ್ಥುವಿಗಾಶಿಸೆನು ನಾನು!
ಹಸ್ಯವಿದೀ ಬಾಳಿನದ್ದೆಂಬೆ ನಾನು?
ದಾಸರ ದಾಸಿಯಾಗಿ ಧನ್ಯಳು ನಾನು!
ರ್ವ ಸೌಭಾಗ್ಯವಿದೆನಗೆಂಬೆ ನಾನು!
ತಿ ಪತಿಯೆಂಬವಗೆ ತಾಯಿ ನಾನು!
ದಾರಿದ್ರ್ಯವೆಳ್ಳಟ್ಟಿಲ್ಲೆನಗೆಂಬೆ ನಾನು!
ಸಿರಿದೇವಿಯೆಂದನ್ನಿಸಿಹೆನು ನಾನು!
ನಾರದನ ವಿಕಾಮಹನಾಪ್ತೆ ನಾನು! (ನಾ)
-ನು, ನಿರಂಜನಾದಿತ್ಯಾನಂದಾತ್ಮಳ್ನಾನು!!!

ನನ್ನ ಧ್ಯಾನ ನಿನಗೆ ಇರಲಿ! (ನಿ)   3(1317)

-ನ್ನ ಯೋಗಕ್ಷೇಮ ನನಗಿರಲಿ!
ಧ್ಯಾನದಿಂದ ನನ್ನರಿವಾಗಲಿ! (ದಿ)
-ನ, ರಾತ್ರಿ, ಇದು ಸಾಗುತ್ತಿರಲಿ! (ಅ)
-ನಿತ್ಯ ಸುಖಾಸೆ ಸತ್ತು ಹೋಗಲಿ!
ಮಸ್ಕಾರ ಶ್ರೀಪಾದಕ್ಕಾಗಲಿ! (ಹ)
-ಗೆಗಳೆಲ್ಲಾ ನಿರ್ನಾಮವಾಗಲಿ!
ಡಾ, ಪಿಂಗಳ ಶುದ್ಧವಾಗಲಿ! (ವ)
-ರ ಸುಷುಮ್ನಾ ತೆರೆಯಲ್ಪಡಲಿ! (ಅ)
-ಲಿಪ್ತ ನಿರಂಜನಾದಿತ್ಯಾಗಲಿ!!!

ನನ್ನ ನಂಬಿದ ಗಿಡಕ್ಕೆ ನಾ ನೀರೆರೆದೆ! (ನ)   5(2799)

-ನ್ನ ಆತ್ಮದರಾತ್ಮವೆಂದರಿತದ ಗೈದೆ! (ಆ)
-ನಂದವಾಯಿತದಕ್ಕೆಂದಾಗ ನಾ ಕುಣಿದೆ!
ಬಿಸಿಲ ತಾಪದಿಂದದನ್ನುದ್ಧರಿಸಿದೆ!
ತ್ತ ಚಿತ್ತವಿದೆಂದಾಗ ನಾನು ತಿಳಿದೆ!
ಗಿರಿಜಾಮತಿಯಾದಾಗ ಬ್ರಹ್ಮಾನಂದವೆಂದೇ!
ಮರುಧರಗೆ ತಕ್ಕ ಮಡದಿಯೆಂದೆ! (ಅ)
-ಕ್ಕೆ ಲೋಕ ಕಲ್ಯಾಣ ಈ ಭಾವನೆಯಿಂದೆಂದೆ!
ನಾನು, ನೀನೆಂಬುದು ಅಹಂಕಾರವೆಂದಂದೆ!
ನೀಚೋಚ್ಚ ಭಾವನೆಗಳಿರಬಾರದೆಂದೆ! (ತೊ)
-ರೆಯಬೇಕು ವಿಷಯ ವ್ಯಾಮೋಹವನ್ನೆಂದೆ! (ಪೊ)
-ರೆವ ತಾಯ್ತಂದೆ ಗುರುದೇವನೊಬ್ಬನೆಂದೆ! (ಬಂ)
-ದೆ ನಿರಂಜನಾದಿತ್ಯ ಗುರುವಾಗೀಗೆಂದೆ!!!

ನನ್ನ ನಾ ನೋಡುವೆನು ಬಹು ಭಂಗಿಯಲ್ಲಿ! (ಉ)   5(2606)

-ನ್ನತದ ಗಿರಿಶಿಖರ ನಿವಾಸದಲ್ಲಿ!
ನಾಮ ನನ್ನದು ಶಿವನೆಂಬರೆಲ್ಲರಲ್ಲಿ! (ಮ)
-ನೋನಿಗ್ರಹದಿಂದ ಸೇರಬೇಕವನಲ್ಲಿ! (ಕ)
-ಡುಬಡವನಿಗೂ ಜಾಗ ಸಿಗುವುದಲ್ಲಿ! (ಸೇ)
-ವೆ ಗೈವಳು ದಿನ ರಾತ್ರಿ ಭವಾನಿ ಅಲ್ಲಿ! (ತ)
-ನು, ಮನ, ಧನಾರ್ಪಣೆಯಿಂದಾ ಪಾದದಲ್ಲಿ!
ಯಲಾಡಂಬರಕ್ಕವಕಾಶವಿಲ್ಲಲ್ಲಿ!
ಹುಟ್ಟು, ಸಾವುಗಳ ಭಯವೆಂಬುದಿಲ್ಲಲ್ಲಿ!
ಭಂ, ಭಂ, ಭಂ, ಭಂ ಮಹಾದೇವ ಭಜನೆ ಅಲ್ಲಿ!
ಗಿರಿರಾಜಸುತೆಯ ಆಡಳಿತದಲ್ಲಿ!
ಮಾದ್ಯಷ್ಟ ದಿಕ್ಪಾಲಕರು ಕಾವಲಲ್ಲಿ! (ಇ)
-ಲ್ಲಿ, ನಿರಂಜನಾದಿತ್ಯನಾಗಿ ತಪದಲ್ಲಿ!

ನನ್ನ ನಾ ನೋಡುವೆನು ಬಹು ಭಂಗಿಯಲ್ಲಿ! (ಚೆ)   5(2605)

-ನ್ನಕೇಶವನಾಗಿಹೆನೊಂದು ರೂಪಿನಲ್ಲಿ!
ನಾಮ, ರೂಪಾತೀತಾತ್ಮ ನಾನು ನಿಜದಲ್ಲಿ! (ಮ)
-ನೋವಿಕಾರಗಳಿಲ್ಲ ಈ ಸ್ವಸ್ಥಿತಿಯಲ್ಲಿ! (ಮಾ)
-ಡುತ್ತಿರಬೇಕಭ್ಯಾಸ ಗುರುಭಕ್ತಿಯಲ್ಲಿ!
ವೆಚ್ಚವಾಗಬಾರದು ಶಕ್ತಿಂದ್ರಿಯದಲ್ಲಿ! (ತ)
-ನುಭಾವವಳಿಯಬೇಕವಸಾನದಲ್ಲಿ!
ಲಿ ಕೊಡಬೇಕು ಬಯಕೆ ನಿತ್ಯದಲ್ಲಿ!
ಹುಸಿ ಮಾಯೆ ಕಾಣಿಸಳಾಗಾ ಜಾಗದಲ್ಲಿ!
ಭಂಡಾರ ಭರ್ತಿಯಾಗ ನಿಮಿಷಾರ್ಧದಲ್ಲಿ!
ಗಿರಿಧರ ಗೋಪಾಲಸ್ವಾಮಿಯಾಗೆಲ್ಲೆಲ್ಲಿ!
ದುನಾಥನ ವೇಣುನಾದ ಕಿವಿಯಲ್ಲಿ! (ಇ)
-ಲ್ಲಿ ನಿರಂಜನಾದಿತ್ಯನ ಸನಿಧಿಯಲ್ಲಿ!!!

ನನ್ನ ನಿನ್ನ ವಿಚಿತ್ರ ಚಿತ್ರ! (ನಿ)   4(1757)

-ನ್ನ ಚಿತ್ರ ನನಗೆ ಪವಿತ್ರ!
ನಿತ್ಯ ನಿರ್ವಿಷಯದಾ ಚಿತ್ರ! (ನ)
-ನ್ನ ಚಿತ್ರ ನಿನಗಪವಿತ್ರ!
ವಿಷಯ ವಾಸನೆಯಾ ಚಿತ್ರ!
ಚಿದಾನಂದ ಚಿತ್ರ ಪವಿತ್ರ! (ಪು)
-ತ್ರ, ಕಳತ್ರಪವಿತ್ರ ಚಿತ್ರ! (ಸಂ)
-ಚಿತ ಸುಟ್ಟ ಚಿತ್ರ ಪವಿತ್ರ! (ಮಿ)
-ತ್ರ, ನಿರಂಜನಾದಿತ್ಯ ಚಿತ್ರ!!!

ನನ್ನ ನಿನ್ನಲ್ಲಿ ಯಾರು ಮೇಲು? (ಉ)   6(3544)

-ನ್ನತದಲ್ಲಿರ್ಪವನೇ ಮೇಲು!
ನಿತ್ಯಾನಿತ್ಯಕ್ಕಿಂತಲೂ ಮೇಲು! (ಭಿ)
-ನ್ನ, ಭೇದವಿಲ್ಲದವ ಮೇಲು! (ಅ)
-ಲ್ಲಿಲ್ಲಿ, ಎಲ್ಲೆಲ್ಲಿರ್ಪವ ಮೇಲು!
ಯಾತ್ರೆ ನಿತ್ಯ ಮಾಳ್ಪವ ಮೇಲು! (ಗು)
-ರು ಎಲ್ಲರಿಗಿಂತಲೂ ಮೇಲು!
ಮೇಲು, ಕೀಳಿಲ್ಲದವ ಮೇಲು! (ಮೇ)
-ಲು, ನಿರಂಜನಾದಿತ್ಯ ಮೇಲು!!!

ನನ್ನ ನೀ ನೋಡು ನಿನ್ನ ಹೃದಯದಲ್ಲಿ!   6(3500)

(ನಿ)-ನ್ನವನು ನಾನೆಂದರಿವಾಗುವುದಲ್ಲಿ!
ನೀಚತನಕ್ಕವಕಾಶವಿಲ್ಲ ಅಲ್ಲಿ!
ನೋಡಿ, ಕೂಡಿ, ಧನ್ಯನಾಗ್ಬೇಕು ನೀನಲ್ಲಿ!
(ಗು)-ಡುಗು, ಮಿಂಚಿಗೆ ಅಂಜಬೇಕಾಗಿಲ್ಲಲ್ಲಿ!
ನಿತ್ಯಾನಂದ ರಾಮರಾಜ್ಯ ಸುಖವಲ್ಲಿ!
(ಉ)-ನ್ನತದಾತ್ಮ ಸಾಕ್ಷಾತ್ಕಾರವಾಗ್ವುದಲ್ಲಿ!
ಹೃತ್ಪೂರ್ವಕ ಸೇವೆಗವಕಾಶವಲ್ಲಿ!
ತ್ತ ನಾನೆಂಬರಿವಾಗುವುದಾಗಲ್ಲಿ!
ಮನು ದಾಸ್ಯಮಾಡುತ್ತಿರುವನಲ್ಲಿ!
ರ್ಪ, ದಂಭವೆಲ್ಲಾ ನೆಲಸಮವಲ್ಲಿ!
(ಇ)-ಲ್ಲಿ ನಿರಂಜನಾದಿತ್ಯ ನಿಲಯದಲ್ಲಿ!!!

ನನ್ನ ನೀ ಹೊರೆಗಟ್ಟಬೇಡ! (ನಿ)   4(2485)

-ನ್ನಬಳಿಯಿರ್ಸಿಕೊಳ್ದಿರ್ಬೇಡ!
ನೀನೇನಾನೆಂದನ್ಯಾಯ್ಮಾಡ್ಬೇಡ!
ಹೊರ್ಗಿನ್ಬೆಕ್ಕಿಗೆನ್ನ ಕೊಡ್ಬೇಡ! (ಮ)
-ರಣಕ್ಕಂಜಿಹೆನೆಂದೆನ್ಬೇಡ! (ಖ)
-ಗನಂಶನಾವ್ಗಳ್ಮರೆಯ್ಬೇಡ! (ದಿ)
-ಟ್ಟತನದಿಂದ್ಕೆಟ್ಟು ಹೊಗ್ಬೇಡ!
ಬೇಸರದಿಂದ್ಕದ ಮುಚ್ಚೇಡ! (ಕಾ)
-ಡ, ನಿರಂಜನಾದಿತ್ಯದೂಡ!!!

ನನ್ನ ನೀನು ಹಿಮಾಲಯ ಸೇರಿಸಿದೆ! (ನಿ)   6(3502)

-ನ್ನನ್ನು, ನನು ಶಿವಪಾದ ಸೇರಿಸಿದೆ!
ನೀತಿ, ರೀತಿ, ನಿನ್ನದನ್ನು ನಾಮೆಚ್ಚಿದೆ! (ತ)
-ನು, ಮನ, ಧನ, ನಾನಿನಗೊಪ್ಪಿಸಿದೆ!
ಹಿರಿಮೆ ನನ್ನದನ್ನು ನೀ ಬಣ್ಣಿಸಿದೆ!
ಮಾನವ ಜನ್ಮ ಸಾರ್ಥಕಗೊಳಿಸಿದೆ!
ಕ್ಷ್ಯವರಿತು ಪಟ್ಟಾಭಿಷೇಕಗೈದೆ!
ಜಮಾನನಾಗಿ ಸೇವಕ ನೀನಾದೆ!
ಸೇರಿ ಸದ್ಗುರು ಪಾದ ನೀ ಧನ್ಯನಾದೆ! (ಹ)
-ರಿ, ಹರ, ವಿಧಿ ರೂಪಿಯನ್ನು ನೋಡಿದೆ!
ಸಿರ ಬಾಗಿ ಅವನಿಗೆ ವಂದಿಸಿದೆ! (ತಂ)
-ದೆ ಶ್ರೀ ನಿರಂಜನಾದಿತ್ಯನೆನಗೆಂದೆ!!!

ನನ್ನ ನೀನೆಂತು ಬಿಟ್ಟಿರಬಲ್ಲೆ?   6(3482)

(ನಿ)-ನ್ನ ಸರ್ವಸ್ವ ನಾನೆಂದು ನೀ ಬಲ್ಲೆ?
ನೀನೆನ್ನ ಬಿಟ್ಟರುಳಿಯಲೊಲ್ಲೆ!
ನೆಂಟರೆಂಬವರ್ಮಾಳ್ಪರು ಹಲ್ಲೆ!
ತುಡುಗರಿರುವರ್ಪಕ್ಕದಲ್ಲೇ!
ಬಿಡದೇ ಜಪಿಸು ಮನದಲ್ಲೇ!
(ಹು)-ಟ್ಟಿದ್ದು ಸಾರ್ಥಕವಾಗ್ಲೀ ಜನ್ಮದಲ್ಲೇ!
ಮಿಸಿ ಒಂದಾಗು ಈಗ ಇಲ್ಲೇ!
ಹು ಜನ್ಮದಾತಾ ಪೂರ್ತಿಗಿಲ್ಲೇ!
(ಬ)-ಲ್ಲೆ, ನಿರಂಜನಾದಿತ್ಯನಾಗ್ಬಲ್ಲೇ!!!

ನನ್ನ ಪೂಜೆ ನನ್ನಂತಿನ್ಯಾರು ಮಾಡುವರು? (ಉ)   6(4367)

-ನ್ನತಿ ಅನ್ಯರದ್ದನ್ನು ಯಾರೂ ಸಹಿಸರು!
ಪೂರ್ವಜರೆನಿಸಿದವರು ಹೀಗಿದ್ದರು! (ಸಂ)
-ಜೆ, ಮುಂಜಾನೆ ಸಂಧ್ಯಾವಂದನೆ ಮಾಡಿದರು!
ಮಸ್ಕಾರಾರ್ಘ್ಯ ಸೂರ್ಯನಿಗೆ ಹಾಕಿದರು! (ನಿ)
-ನ್ನಂತೆಮ್ಮನ್ನು ಮಾಡಿಕೊಂಡು ಕಾಪಾಡೆಂದರು!
ತಿತಿಕ್ಷೆ, ವೈರಾಗ್ಯಾಭ್ಯಾಸಿಗಳಾಗಿದ್ದರು!
ನ್ಯಾಯಾನ್ಯಾಯವರಿತವರೂ ಆಗಿದ್ದರು!
ರುಜು ಮಾರ್ಗಾವಲಂಬಿಗಳಾಗಿ ಇದ್ದರು!
ಮಾತಿನಂತೆ ಕಾರ್ಯದಲ್ಲೂ ಇರುತ್ತಿದ್ದರು! (ಕೊ)
-ಡುಗೈಯ ಉದಾರಿಗಳು ತಾವಾಗಿದ್ದರು! (ಅ)
-ವರೂ ತತ್ವಜ್ಞರಾಗದೇ ಬಾಳ್ಯಳಿದರು! (ಗು)
-ರು ನಿರಂಜನಾದಿತ್ಯನ ಸೇರದಾದರು!!!

ನನ್ನ ಪೂಜೆ ಸಾಕಾಯ್ತು, ನಿನ್ನ ಪೂಜೆ ಬೇಕಾಯ್ತು! (ನ)   6(3976)

-ನ್ನ ನಾನರಿತು ನಿನ್ನಲ್ಲೈಕ್ಯವಾಗಬೇಕಾಯ್ತು!
ಪೂಜೋಪಚಾರದ ಗುರಿಯಿದೆಂಬರಿವಾಯ್ತು! (ಪ್ರ)
-ಜೆಗಳ ಕಲ್ಯಾಣವಿದರಿಂದೆಂದು ಗೊತ್ತಾಯ್ತು!
ಸಾರಿ, ಹೋರಾಡುವ ಶ್ರಮ ಪರಿಹಾರವಾಯ್ತು!
ಕಾಲಕ್ಕೆ ತಕ್ಕ ಲೀಲೆಯೆಂಬುದು ನಿಜವಾಯ್ತು! (ಆ)
-ಯ್ತು, ನಿನ್ನಿಷ್ಟದಂತೆಲ್ಲಾಗುತಿದೆಂಬರಿವಾಯ್ತು!
ನಿನ್ನನ್ನೇನೇನೋ ಅಜ್ಞಾನದಿಂದಂದದ್ದು ಆಯ್ತು! (ಇ)
-ನ್ನದು ನನ್ನಿಂದಾಗದೆಂದು ಕ್ಷಮೆ ಬೇಡಿದ್ದಾಯ್ತು!
ಪೂರ್ಣಾಶೀರ್ವಾದ ನನಗೀಗ ದೊರೆತಂತಾಯ್ತು! (ಅಂ)
-ಜೆ ನಾನಿನ್ಯಾವುದಕ್ಕೂ ಎಂಬ ಧೈರ್ಯವುಂಟಾಯ್ತು!
ಬೇಡುವವನೂ, ನೀಡುವವನೂ ನೀನೇ ಆಯ್ತು!
ಕಾಲ ನಿಶ್ಚಿಂತೆಯಿಂದಿಂತು ಕಳೆಯುವಂತಾಯ್ತು! (ಆ)
-ಯ್ತು, ನಿರಂಜನಾದಿತ್ಯಾನಂದದಲ್ಲಿರ್ಪಂತಾಯ್ತು!!!

ನನ್ನ ಪೂಜೆಗನನ್ಯ ಭಕ್ತಿಯೇ ಸಾಕು! (ಚಿ)   2(795)

-ನ್ನ, ಬೆಳ್ಳಿಮೂರ್ತಿಗಳೇತಕ್ಕಿರಬೇಕು?
ಪೂರ್ಣ ಭಾವದ ಜಪವಿದ್ದರೆ ಸಾಕು! (ಪೂ)
-ಜೆ, ಅಂತರ್ಮುಖವಾಗಿ ನಡೆಯಬೇಕು!
ಡಿಬಿಡಿಯಾಡಂಬರ ಬಿಡಬೇಕು!
ಡೆ, ನುಡಿ, ಶುದ್ಧವಾಗಿ ಇಡಬೇಕು! (ಅ)
-ನ್ಯರವಗುಣವೆಣಿಸದಿರಬೇಕು!
ಕ್ತಿ ಕಥಾಮೃತ ಪಾನ ಮಾಡಬೇಕು! (ಮು)
-ಕ್ತಿಯೊಂದೇ ಸದಾ ಗುರಿಯಾಗಿರಬೇಕು! (ಛಾ)
-ಯೇಶ್ವರನ ಸೇವೆ ನಿತ್ಯ ಮಾಡಬೇಕು!
ಸಾಯುಜ್ಯಕಿದು ಸಹಾಯವಾಗಬೇಕು! (ಸಾ)
-ಕು, ನಿರಂಜನಾದಿತ್ಯಾನುಗ್ರಹ ಬೇಕು!!!

ನನ್ನ ಬೆಳಕೆಲ್ಲರಿಗಾಗಿ! (ಅ)   3(1138)

-ನ್ನ, ಪಾನಗಳದರಿಂದಾಗಿ!
ಬೆಲೆ ಬಹಳದರಿವಾಗಿ! (ಒ)
-ಳ, ಹೊರಗೆಲ್ಲಾತ್ಮ ನಾನಾಗಿ!
ಕೆರೆ, ಭಾವಿ, ನೀರೆಲ್ಲಾನಾಗಿ! (ಬ)
-ಲ್ಲವರ ಬುದ್ಧಿ ರೂಪಿಯಾಗಿ!
ರಿಪು ಕುಲ ಸಂಹಾರನಾಗಿ!
ಗಾಳಿ ಬೆಂಕಿಯಾಕಾರವಾಗಿ! (ಯೋ)
-ಗಿ ನಿರಂಜನಾದಿತ್ಯ ತ್ಯಾಗಿ!!!

ನನ್ನ ಭಜನೆಗಾಜಾಗ ಈ ಜಾಗವೆಂದಿಲ್ಲ! [ಮ]   2(867)

-ನ್ನಣೆಗಾಗಿ ನಾನೆಲ್ಲಿಗೂ ಹೋಗಬೇಕಾಗಿಲ್ಲ!
ಕ್ತಿ ಭಾವವೆನ್ನಲ್ಲೇನೂ ಕಡಿಮೆಯಾಗಿಲ್ಲ!
ನ್ಮ ತಳೆದುದ್ದೇಶ ಮರೆತೇನೂ ಹೋಗಿಲ್ಲ!
ನೆಪ್ಪಪ್ಪನ ಪಾದದ್ದೆಂಬುದನವನೇ ಬಲ್ಲ!
ಗಾಳಿ ಬೀಸಿದತ್ತ ಹೋಗದೆ ನಿರ್ವಾಹವಿಲ್ಲ!
ಜಾನಕೀರಾಮನಿದ ಮಾಡಿ ತೋರಿದನಲ್ಲ!
ರ್ವದಿಂದಾವ ಪುರುಷಾರ್ಥವೂ ಸಾಧ್ಯವಿಲ್ಲ!
ಶ್ವರೇಚ್ಛೆಯಂತೆಲ್ಲವೂ ಆಗಲೇಬೇಕಲ್ಲ!
ಮನವನದಾದರಾರಿಗೂ ಭಯವಿಲ್ಲ!
ವೆಂಕಟೇಶಾನುಗ್ರಹವೆಲ್ಲೆಲ್ಲೂ ಆಗ್ವುದಲ್ಲ!
ದಿನ, ರಾತ್ರಿ, ಅವನ ಸ್ಮರಿಸಿದರಾಯ್ತಲ್ಲ! (ಎ)
-ಲ್ಲ, ನಿರಂಜನಾದಿತ್ಯ ನಿಲಯಾಗಿಹುದಲ್ಲ!!!

ನನ್ನ ಮನ ನಿನ್ನ ಮನೆಯಾಗಲಿ! (ನಿ)    4(1513)

-ನ್ನ ಮನ ನನಗೆ ಮನೆಯಾಗಲಿ!
ದ, ಮತ್ಸರಗಳಿಲ್ಲದಾಗಲಿ!
ಗುನಗುತ ಭಜನೆ ಸಾಗಲಿ!
ನಿಶ್ಚಲ ಭಕ್ತಿ ಬೆಳಗುತ್ತಿರಲಿ! (ಉ)
-ನ್ನತದ ಸಾಯುಜ್ಯ ಸಿದ್ಧಿಯಾಗಲಿ!
ರಣದ ಭಯ ತಪ್ಪಿ ಹೋಗಲಿ!
ನೆರವು ಸದಾ ನಿನ್ನಿಂದೊದಗಲಿ!
ಯಾಗ, ಯೋಗ ನಿನ್ನ ಸಂಗವಾಗಲಿ!
ಮನ ಬೇರೆಡೆಗಾಗದಿರಲಿ! (ಮಾ)
-ಲಿಕ ಶ್ರೀ ನಿರಂಜನಾದಿತ್ಯಾಗಲಿ!!!

ನನ್ನ ಮನೆಯಲಾತಿಥ್ಯ! (ಉ)   2(994)

-ನ್ನತದಾದರ್ಶದಾತಿಥ್ಯ! (ರಾ)
-ಮನಾಮ ಸಹಿತಾತಿಥ್ಯ! (ಮ)
-ನೆ ಮಂದಿಯೊಂದಾಗಾತಿಥ್ಯ! (ನ)
-ಯ, ಭಯ, ಭಕ್ತಿಯಾತಿಥ್ಯ!
ಲಾಭೇಚ್ಛೆಯಿಲ್ಲದಾತಿಥ್ಯ! (ಮಿ)
-ತಿಮೀರಿದಾನಂದಾತಿಥ್ಯ! (ಮಿ)
-ಥ್ಯಲ್ಲ ನಿರಂಜನಾದಿತ್ಯ!!!

ನನ್ನ ಮೇಲೆ ನಿನಗದೆಷ್ಟು ಪ್ರೀತಿ! [ನಿ]   3(1106)

-ನ್ನ ರೂಪಕ್ಕೆರಕ ಹೊಯ್ಯುವಾ ಪ್ರೀತಿ!
ಮೇಲ್ಮೇಲೆ ಕಷ್ಟ ಕೊಟ್ಟು ಕಾಯ್ವಾ ಪ್ರೀತಿ! (ಶೂ)
-ಲೆ ಬರಿಸಿ ವಾಸಿ ಮಾಡುವಾ ಪ್ರೀತಿ!
ನಿಶಿ, ದಿನ, ಧ್ಯಾನಾನುಗ್ರಹಾ ಪ್ರೀತಿ!
ಶ್ವರದಾಸೆ ಬಿಡಿಸುವಾ ಪ್ರೀತಿ!
ಗನಾಧಿಪನುರು ಸೇವಾ ಪ್ರೀತಿ! (ಇ)
-ದೆನಗಿತ್ತ ಶಿವಾನಂದವಾ ಪ್ರೀತಿ! (ಎ)
-ಷ್ಟುಣಿಸಿದರೂ ಸಾಲದೆಂಬಾ ಪ್ರೀತಿ!
ಪ್ರೀತಿ, ರೀತಿ, ಸಚ್ಚಿದಾನಂದಾ ಪ್ರೀತಿ! (ಇ)
-ತಿ, ನಿರಂಜನಾದಿತ್ಯಾನಂದಾ ಪ್ರೀತಿ!!!

ನನ್ನ ಯೋಗ ನಿನ್ನ ಭೋಗ!   6(3515)

(ಉ)-ನ್ನತಿಗೀಮಾರ್ಗ ಸರಾಗ!
ಯೋಚನೆ ತಟಸ್ಥ ಈಗ! (ರಂ)
-ಗ, ಸಾರಂಗರೀಗೇಕಾಂಗ!
ನಿನಗಿಷ್ಟ ಹೀಗೀಗಾಗ! (ನ)
-ನ್ನ ಅಂತರಂಗ್ಬಹಿರಂಗ! (ಶಂ)
-ಭೋ ಮಹಾದೇವ ಸತ್ಸಂಗ!
(ಲಿಂ)-ಗ ನಿರಂಜನಾದಿತ್ಯಾಂಗ!!!

ನನ್ನ ಯೋಗ್ಯತೆ ನೀನೇನು ಬಲ್ಲೆ? (ನ)   5(2743)

-ನ್ನನ್ನು ಹೊಗಳಿ ನೀನೇಗಾಗ್ಬಲ್ಲೇ?
ಯೋಗಿಯಾಗಿರ್ಬೇಕ್ನನ್ನೊಳಗಿಲ್ಲೇ! (ಭಾ)
-ಗ್ಯವಿನ್ನೇನು ನಾನು ಕೊಡಬಲ್ಲೇ? (ಕ)
-ತೆ, ಪುರಾಣಗಳ ಕಟ್ಟಿಡಲ್ಲೇ!
ನೀತಿ ಬಾಹಿರಾಚಾರವಿರ್ಲಲ್ಲೇ!
ನೇಮದಿಂದಾತ್ಮಧ್ಯಾನ ಮಾಡಿಲ್ಲೇ! (ತ)
-ನು, ಮನ, ನೀನಲ್ಲೆಂದರಿ ಇಲ್ಲೇ!
ಲ್ಲವನಾಗ್ಯೆಲ್ಲಾ ನೀನಾಗಿಲ್ಲೇ! (ಇ)
-ಲ್ಲೇ ನಿರಂಜನಾದಿತ್ಯನಿರ್ಪಲ್ಲೇ!!!

ನನ್ನ ಯೋಗ್ಯತೆ ನೀನೇನು ಬಲ್ಲೆ? (ನ)   5(2746)

-ನ್ನವ ನೀನಾದ್ರೂ ನಾನೇನ್ಮಾಡಬಲ್ಲೆ?
ಯೋಚಿಸದೆ ಮಾಡಿದ್ದೆಲ್ಲಾ ಗುಲ್ಲೇ! (ಭಾ)
-ಗ್ಯ ನನ್ನ ನೋಡ್ಲಿಕ್ಕೆ ನಿನಗಿಲ್ಲೇ!
ತೆಪ್ಪಗಿರ್ಧ್ಯಾನಿಸುತೊಳಗಿಲ್ಲೇ! (ಅ)
-ನೀತ್ಯತ್ಯಾಚಾರದೀ ಯುಗದಲ್ಲೇ!
ನೇಮದಿಂದಿರ್ಬೇಕ್ಸ್ವರೂಪದಲ್ಲೇ! (ಮ)
-ನುಜನಜನಾಗುವುದಿದ್ರಿಂದ್ಲೇ!
ದಲಾವಣೆ ನೋಡುತಿರಿಲ್ಲೇ! (ಇ)
-ಲ್ಲೇ ನಿರಂಜನಾದಿತ್ಯನಿರ್ಪಲ್ಲೇ!!!

ನನ್ನ ಸೇವೆ ಯಾರೆಷ್ಟು ಮಾಡಿದರೇನು? (ನಿ)   5(2629)

-ನ್ನ ಭಕ್ತಿ ಭಿಕ್ಷೆ ನೀನುಣಿಸ್ಬಾರ್ದೇನು?
ಸೇಡಿನ ಮನೋಭಾವ ಬಿಟ್ಟಿಡು ನೀನು! (ಧ)
-ವೆ ನೀನು ಯೋಗೇಶ್ವರನಿಗಲ್ಲವೇನು?
ಯಾವಾಗೇನಾಗ್ವುದೆಂದ್ನಿನಗೆ ಗೊತ್ತೇನು?
ರೆಪ್ಪೆ ಮುಚ್ಚಿ ತೆರೆಯುವಷ್ಟ್ರಲ್ಲೆಲ್ಲೋ ನಾನು! (ಇ)
-ಷ್ಟು ತಿಳಿದೀಗ ಸುಧಾರಿಸಿಕೋ ನೀನು!
ಮಾತುಗಳ ಹಿಡಿತದಲ್ಲಿಟ್ಕೋ ನೀನು! (ಸ)
-ಡಿಲು ಬಿಟ್ರೆ ಡಿಕ್ಕಿ ಹೊಡೆಯುವೆ ನೀನು!
ತ್ತ ಜಪದಿಂದ ಧನ್ಯನಾಗು ನೀನು!
ರೇಗಾಡಿ, ಕೂಗಾಡಿ, ಹಾಳಾಗ್ಬೇಡ ನೀನು! (ನಾ)
-ನು ನಿರಂಜನಾದಿತ್ಯೆಂದರಿ ನೀನು!!!

ನನ್ನ ಸೊತ್ತು ನೀನಣ್ಣಯ್ಯಾ! [ನಿ]   4(2099)

-ನ್ನ ಸೊತ್ತು ನಾನು ತಮ್ಮಯ್ಯಾ!
ಸೊಗಸೀ ಸಂಬಂಧವಯ್ಯಾ!
-ತ್ತು, ಹುಟ್ಟುವರಾವಲ್ಲಯ್ಯಾ!
ನೀಲಮೇಘ ಶ್ಯಾಮಪ್ಪಯ್ಯಾ! (ಧ)
-ನಲಕ್ಷ್ಮಿಯೇ ನಮ್ಮಮ್ಮಯ್ಯಾ! (ಬ)
-ಣ್ಣ ಬೇರಾದರೇನಾಯ್ತಯ್ಯಾ? (ಅ)
-ಯ್ಯಾ! ನಿರಂಜನಾದಿತ್ಯಯ್ಯಾ!!!

ನನ್ನ ಸ್ವರೂಪ ನನಗಾನಂದ! [ಭಿ]   3(1385)

-ನ್ನ ರೂಪ ಲಾವಣ್ಯಸಹ್ಯಾನಂದ!
ಸ್ವದೇಶವಾಸ ಪವಿತ್ರಾನಂದ! (ಊ)
-ರೂರಲೆದಾಟ ಮಲಿನಾನಂದ!
ದ್ಮ ಪಾದ ಸೇವೆ ನಿತ್ಯಾನಂದ!
ಲ್ಲನಗಲಲನಿತ್ಯಾನಂದ!
“ನಮಶ್ಯಿವಾಯ” ಮಂತ್ರತ್ಯಾನಂದ!
ಗಾಢ ಭಕ್ತಿ ಭಾವಭಯಾನಂದ! (ಅ)
-ನಂಗನಂಗ ಭಂಗ ಶಿವಾನಂದ!
ತ್ತ ನಿರಂಜನಾದಿತ್ಯಾನಂದ!!!

ನನ್ನ ಹಠ ನಿನ್ನಮುಂದೇನು? (ನಿ)   5(3024)

-ನ್ನ ಇಷ್ಟದಂತಿರ್ಪವ ನೀನು!
ಳಿಯಲಾರೆ ನಿನ್ನ ನಾನು!
ಕ್ಕೇನ್ಕಂಡೆ ನನ್ನಲ್ಲಿ ನೀನು?
ನಿನ್ನ ಪ್ರಾರ್ಥಿಸಿದ್ದು ತಪ್ಪೇನು? (ಉ)
-ನ್ನತಾಧಿಕಾರಿ ನೀನಲ್ವೇನು?
ಮುಂದೆನಗೇನ್ಗತಿ? ಹೇಳ್ನೀನು!
ದೇಹ ಬೆಳೆಸಿಕೊಂಡಿರ್ಲೇನು? (ಸೂ)
-ನು ನಿರಂಜನಾದಿತ್ಯಗಾನು!

ನನ್ನ ಹುಟ್ಟಿದ ಹಬ್ಬವಿಂದು! [ನಿ]   5(2579)

-ನ್ನ ನೋಡುವೆನು ನಾನಿಲ್ಲಿಂದು!
ಹುಟ್ಟಡಗ್ಲೆಲ್ಲಾಸೆಗಳಿಂದು! (ಜ)
-ಟ್ಟಿಯಾಗ್ಬೇಕಧ್ಯಾತ್ಮದಲ್ಲಿಂದು!
ರ್ಶನಾನಂದ ಪಡ್ಬೇಕಿಂದು!
ರ್ಷದಿಂದ ಕುಣೀಬೇಕಿಂದು! (ಹ)
-ಬ್ಬದೂಟ ಉಂಡು ತೇಗ್ಬೇಕಿಂದು! (ಸಾ)
-ವಿಂದ ಪಾರಾಗಿದರಿಂದ್ಮುಂದು! (ಇ)
-ದು ನಿರಂಜನಾದಿತ್ಯೇಚ್ಛೆಂದು!!!

ನನ್ನ ಹೊತ್ತ ನಿನ್ನ ಕಷ್ಟ ಪರಿಹಾರ! (ಅ)   1(404)

-ನ್ನ ಹಾಕಿ ಹೊರಿಸಿದೆನು ಬಹು ಭಾರ!
ಹೊರಲಾರದೆ ಬಳಲಿದೆ ಕುಮಾರ! (ಅ)
-ತ್ತ, ಇತ್ತ, ಎತ್ತೆತ್ತ ಬೆಂಗಾಡು ಭೀಕರ!
ನಿಲ್ಲದೆ ಬೆಟ್ಟ ಹತ್ತಿದ ನೀನೇ ಧೀರ! (ಅ)
-ನ್ನಬೇಡ ಅನಧಿಕಾರಿಗೀ ವಿಚಾರ!
ಥೆಯಿದಲ್ಲ! ಮುಂದಿನ ಸಮಾಚಾರ!! (ಅ)
-ಷ್ಟ ದಿಕ್ಪಾಲಕರಿಗಿಷ್ಟವೀ ಆಚಾರ!
ತಿತಪಾವನ ನಾ ಪರಮೇಶ್ವರ!
ರಿಪುಕುಲ ಕಾಲನರ್ಧನಾರೀಶ್ವರ!
ಹಾಡಿ, ಭಜಿಸುತಿರು ಇಷ್ಟಾನುಸಾರ!
ಥಿ ನಿರಂಜನಾದಿತ್ಯನಲಂಕಾರ!!!

ನನ್ನದು ಹೆಂಗರುಳಾಗಿ ಹೀಗಾಯ್ತು (ನ)   6(3599)

-ನ್ನ ಮೇಲಿನಾರೋಪ ಸಹಿಸ್ಬೇಕಾಯ್ತು!
ದುಷ್ಪುತ್ರರಿಂದ ದೂರವಿರ್ಬೇಕಾಯ್ತು!
ಹೆಂಗ್ಸೂ, ಗಂಡ್ಸೂ ನಾನಾಗಿರಬೇಕಾಯ್ತು!
ತಿಗೆಟ್ರೂ ಮತಿಗೆಡ್ದಿರ್ಬೇಕಾಯ್ತು!
ರುಜು ಮಾರ್ಗ ಬಿಡದಿರಬೇಕಾಯ್ತು! (ವೇ)
-ಳಾ ವೇಳೆಯಲ್ಲೂ ಹೊರ ಬರ್ಬೇಕಾಯ್ತು! (ಯೋ)
-ಗಿ ರಾಜನಿಚ್ಛಾವರ್ತಿಯಾಗ್ಬೇಕಾಯ್ತು!
ಹೀಚ್ಕ, ಹಣ್ಣೆನ್ನದೆಲ್ಲಾ ತಿನ್ಬೇಕಾಯ್ತು!
ಗಾಳಿ, ಮಳೆಗುಸ್ರೆತ್ತದಿರ್ಬೇಕಾಯ್ತು! (ಆ)
-ಯ್ತು, ನಿರಂಜನಾದಿತ್ಯೇಚ್ಛೆಯಂತಾಯ್ತು!!!

ನನ್ನದೆಂಬುದು ನನ್ನಲ್ಲೇನೂ ಇಲ್ಲ! (ಅ)   6(3969)

-ನ್ನ, ಬಟ್ಟೆಯೆಲ್ಲವೂ ದಾತನದ್ದೆಲ್ಲಾ! (ಮುಂ)
-ದೆಂತಾದೀತೋ ಹೇಳಲಾಗುವುದಿಲ್ಲ!
ಬುದ್ಧಿಗಾಗಿ ಶಕ್ತಿ ಆತ ಕರುಣ್ಸಿಲ್ಲ!
ದುಡಿಯುವುದಾತನಿಷ್ಟದಂತೆಲ್ಲ!
ನಗದಕ್ಕೆ ಮಜೂರಿ ಸಿಕ್ಕಿಲ್ಲ! (ನ)
-ನ್ನ, ಆಗು, ಹೋಗು, ಅವನಿಗೆಲ್ಲ! (ಎ)
-ಲ್ಲೇನು ಮಾಡಿಸುತ್ತಾನೆಂದು ಗೊತ್ತಿಲ್ಲ!
ನೂತನ ಸನಾತನವನೇ ಬಲ್ಲ!
ಟ್ಟಂತಿರದಿದ್ದರೇಂ ಗತಿಯಿಲ್ಲ! (ಬ)
-ಲ್ಲ ನಿರಂಜನಾದಿತ್ಯಗರ್ಪಣೆಲ್ಲಾ!!!

ನನ್ನನಿಷ್ಟು ದೂರವಿಟ್ಟವನು ನೀನೇ! (ನಿ)   5(2597)

-ನ್ನವನು ನಾನೆಂದಾಪ್ತ ಪ್ರೇಮಿಯೂ ನೀನೇ! (ನಿ)
-ನ್ನಿಷ್ಟದೀ ಜಗನ್ನಿಯಾಮಕನೂ ನೀನೇ! (ಎ)
-ಷ್ಟುರಿದರಾರದ ನಂದಾದೀಪ ನೀನೇ!
ದೂರ, ಹತ್ತಿರ, ಎಲ್ಲೆಲ್ಲೂ ಒಬ್ಬ ನೀನೇ! (ಮ)
-ರ, ಗಿಡ, ಗಿರಿ, ಗುಹೆಗಳಲ್ಲೂ ನೀನೇ!
ವಿಧಿ, ಹರಿ, ಹರ ದತ್ತಾತ್ರೇಯ ನೀನೇ! (ಕೆ)
-ಟ್ಟರಿಗಳ ಮಟ್ಟಹಾಕಿದವ ನೀನೇ!
ರದರಾಜ, ರಂಗನಾಥನೂ ನೀನೇ! (ಅ)
-ನುಪಮಾನಂದ ಶಿವಾನಂದನೂ ನೀನೇ!
ನೀಲಮೇಘಶ್ಯಾಮ ಶ್ರೀರಾಮನೂ ನೀನೇ! (ನೀ)
-ನೇ, ಶ್ರೀ ನಿರಂಜನಾದಿತ್ಯಾನಂದ ತಾನೇ???

ನನ್ನನ್ನಲ್ಲ ದಿನ್ಯಾರನ್ನೂ ಯಾರೂ ಪೂಜಿಸ್ಬಾರದು! (ನ)   6(4347)

-ನ್ನನ್ನೀ ಚಕ್ಕಳದ ಗೊಂಬೆಯೆಂದರಿಯ ಬಾರದು! (ನ)
-ನ್ನನ್ನು ಸಚ್ಚಿದಾನಂದನೆಂದರಿಯದಿರ್ಬಾರದು! (ಎ)
-ಲ್ಲರಲ್ಲೂ ನಾ ನಿಹೆನೆಂಬುದ ಮರೆಯಬಾರದು!
ದಿವ್ಯನಾಮ ನನ್ನದನು ಸ್ಮರಿಸದಿರ್ಬಾದು! (ಸ)
-ನ್ಯಾಸಾದ್ಯಾಶ್ರಮ ನನಗುಂಟೆಂದರಿಯಬಾರದು!
ಹಸ್ಯವಿದರಿತಿರ್ಪವಗೆ ದುಃಖವಿರದು! (ತ)
-ನ್ನೂಳಿಗ ತಾನು ಮಾಡದೆ ಶರೀರವಿರ್ಬಾರದು!
ಯಾವುದರಲ್ಲೂ ಮಮತಾಧಿಕ್ಯವಿರಬಾರದು!
ರೂಪ, ನಾಮಗಳಿಗೆ ಮರುಳಾಗಿ ಕೆಡ್ಬಾರದು!
ಪೂಜ್ಯತಾ ರಕ್ಷಣೆಗೆ ಪೂಜಿಸದಿರಬಾರದು!
ಜಿಪುಣತನವೆಂದೆಂದಿಗೂ ಇರಲೇಬಾರದು! (ತಾ)
-ಸ್ಬಾರಿಸುವಾಗವತಾರ ವಿಳಿಸದಿದ್ದ್ರಾಗದು!
ಮೇಶ, ಉಮೇಶಾದಿಗಳಿಗೂ ಇದು ತಪ್ಪದು! (ಕುಂ)
-ದು, ಕೊರತೆ ನಿರಂಜನಾದಿತ್ಯಗಿಲ್ಲದಿಹುದು!!!

ನನ್ನನ್ನು ಏನೂ ಕೇಳಬಾರದು! (ನಿ)   6(3721)

-ನ್ನ ಕಷ್ಟ ಸುಖವೆಲ್ಲಾ ನನ್ನದು! (ಹೊ)
-ನ್ನು, ಮಣ್ಣಿನಾಶೆ ಇರಬಾರದು!
ನೇ ಆದ್ರೂ ಜಪ ಬಿಡ್ಬಾರದು!
ನೂರಾರ್ಮಂತ್ರದ ಹುಚ್ಚಿರ್ಬಾರದು!
ಕೇಶವನ ಪ್ರಸಾದೆಸೆಯ್ಬಾರ್ದು! (ತಾ)
-ಳ, ಮೇಳಾವಲಂಬಿಯಾಗಿರ್ಬಾರ್ದು!
ಬಾಯಿ ಹರಟೆ ಮಾತಾಡ್ಬಾರದು!
ವಿಯಾದರ್ಶ ಬಿಡಬಾರದು! (ಇ)
-ದು ನಿರಂಜನಾದಿತ್ಯನೆಂದುದು!!!

ನನ್ನನ್ನು ತಿದ್ದಿಕೊಳ್ಳುವ ಶಕ್ತಿ ನನಗಿಲ್ಲ! (ನಿ)   6(3594)

-ನ್ನನ್ನು ನಂಬಿದ್ದೇಕೆಂದು ನಾನು ಹೇಳಬೇಕಿಲ್ಲ! (ನಿ)
-ನ್ನುಡಿಯಲ್ಲಿ ಬಿದ್ದ ಕೂಸನ್ನರದ್ದಾಗ್ವುದಿಲ್ಲ!
ತಿಳಿದಿಹ ನಿನ್ನ ಮಗ ನಿನ್ನ ಶಕ್ತಿಯೆಲ್ಲಾ! (ಅ)
-ದ್ದಿ ಪಾತಾಳದಲ್ಲಿವನನ್ನು ಫಲವೇನಿಲ್ಲ!
ಕೊಚ್ಚೆಯುಚ್ಚೆ ಗುಂಡಿಯ ವಾಸನೆ ಬೇಕಾಗಿಲ್ಲ! (ತ)
-ಳ್ಳುವುದಿವನನ್ನದರಲ್ಲಿ ವಿಹಿತವಲ್ಲ!
ರ ಗುರು ನೀನಾಗಿರುವುದು ಅದಕ್ಕಲ್ಲ!
ರಣು, ಶರಣೆಂದೊಪ್ಪಿಸಿಹೆನು ನಾನೆಲ್ಲಾ! (ಭ)
-ಕ್ತಿ, ಭಾವ ಬೆಳೆಸುವ ಭಾರ ನಿನ್ನದೇ ಎಲ್ಲಾ!
ಯ, ವಿನಯದಿಂದೊರೆವೆ ನಾನಿದನ್ನೆಲ್ಲಾ!
ಗು ನಗುತ ಬಂದೆನ್ನ ಉದ್ಧರಿಸೋ ಪುಲ್ಲ!
ಗಿರಿಧರ ಗೋಪಾಲ ನೀನಾಗಿರುವೆಯಲ್ಲಾ! (ಬ)
-ಲ್ಲ ನಿರಂಜನಾದಿತ್ಯ ನಿನ್ನ ಲೀಲೆಯನ್ನೆಲ್ಲಾ!!!

ನನ್ನನ್ನು ದೇವರೆನಿಸಿದ ಶಕ್ತಿ ನಿಮ್ಮದಮ್ಮಯ್ಯಾ! [ಅ]   2(469)

-ನ್ನವಿಕ್ಕಿ, ಪೂಜಿಸಿ ದೇವತ್ವವಿತ್ತವರ್ನೀವಮ್ಮಯ್ಯಾ! (ಸ)
-ನ್ನುತಾಂಗ ಶ್ರೀರಂಗನೆಂದು ಭಜಿಪವರ್ನೀವಮ್ಮಯ್ಯಾ!
ದೇವನಾಗಿ ಶೋಭಿಪುದು ನಿಮ್ಮ ಭಕ್ತಿಯಿಂದಮ್ಮಯ್ಯಾ!
ರ ಮಹಾಮಹಿಮೆ ನಿಮ್ಮ ಜಪದಿಂದಲಮ್ಮಯ್ಯಾ! (ಆ)
-ರೆನಗಾಪ್ತರಿಹರು ನಿಮ್ಮಿಂದಧಿಕ ಹೇಳಮ್ಮಯ್ಯಾ!
ನಿಶಿದಿನ ನಿಮಗಾಗಿಹುದೆನ್ನ ಚಿಂತೆಯಮ್ಮಯ್ಯಾ!
ಸಿರಿತನದಾಸೆ ನಿಮ್ಮಲ್ಲಿಲ್ಲದಾಗಿಹುದಮ್ಮಯ್ಯಾ!
ತ್ತನೆಂದರೆ ನಿಮ್ಮ ಪಂಚಪ್ರಾಣನೆಂಬಿರಮ್ಮಯ್ಯ!
ರಣ ಭಾವ ನಿಮ್ಮದತಿಶ್ಲಾಘನೀಯವಮ್ಮಯ್ಯಾ! (ಭ)
-ಕ್ತಿಯಲಿ ಕುಯುಕ್ತಿ ಬೆರೆಸುವವರ್ನೀವಲ್ಲಮ್ಮಯ್ಯಾ!
ನಿಮ್ಮ ಗುರುಭಕ್ತಿಯಿಂದ ನೀವೆಲ್ಲಾ ಪೂಜ್ಯರಮ್ಮಯ್ಯಾ! (ಅ)
-ಮ್ಮಯ್ಯಾ! ನಿಮ್ಮ ನರಜನ್ಮ ಪಾವನವಾಯಿತಮ್ಮಯ್ಯಾ!
ರ್ಶನ ಮಾತ್ರದಿಂದೆಲ್ಲಾ ಕಷ್ಟ ಪರಿಹಾರಮ್ಮಯ್ಯಾ! (ಅ)
-ಮ್ಮಯಾ! ಎಲ್ಲೆಲ್ಲೂ ನಿಮ್ಮಂಥವರಿರಲಮ್ಮಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಕೃಪೆಯ ಪಾರವಮ್ಮಯ್ಯಾ!!!

ನನ್ನನ್ನು ನೀನೆಂದೋ ಮರೆತೆ!   6(3395)

(ನಿ)-ನ್ನದು ನನಗೇಕಿನ್ನು ಚಿಂತೆ?
(ಮು)-ನ್ನುಡಿ ಬರೆದಾದ್ಮೇಲೆ ಕತೆ!
ನೀನೀಗದರಲ್ಲಿ ನಿರತೆ!
ನೆಂಟರಿಗೇನಿಲ್ಲ ಕೊರತೆ!
ದೋಷಿ ನೀನಾದಾಗ ಪತಿತೆ!
ನೆ, ಮಾರ್ಕಳ್ಕೊಂಡಾಗ ಭೀತೆ!
(ತೆ)-ರೆ ನಿನ್ನ ಕಣ್ಣನ್ನಪಖ್ಯಾತೆ!
(ದಾ)-ತೆ, ನಿರಂಜನಾದಿತ್ಯ ಮಾತೆ!!!

ನನ್ನನ್ನು ನೀನ್ಸೋಲಿಸಿದೆ! (ನಿ)   6(3680)

-ನ್ನನ್ನು ನಾನು ಜಯಿಸಿದೆ! (ಅ)
-ನ್ನುವುದ್ಬೆಡೆಂದ್ಸುಮ್ಮನಾದೆ!
ನೀತಿ, ರೀತಿ ಹೀಗಾಗಿದೆ! (ನಾ)
-ನೊ

ತ್ರೂ ನಿನ್ನವ ನಾನಾದೆ! (ಕ)
-ಲಿಸಿದ ಗುರು ನೀನಾದೆ! (ಹು)
-ಸಿ ಮಾಯಾತೀತ ನಾನಾದೆ! (ಆ)
-ದೆ, ನಿರಂಜನಾದಿತ್ಯಾದೆ!!!

ನನ್ನನ್ನು ನೋಡಿ ಏನಾಗ್ಬೇಕು! (ಚಿ)   6(3310)

-ನ್ನ, ಬೆಳ್ಳಿ, ಎಲ್ಲರಿಗೂ ಬೇಕು! (ನ)
-ನ್ನುಡಿಯಲ್ಲದೆಂತಿರ ಬೇಕು!
ನೋಟಿನರಾಶಿ ಸುರಿಸ್ಬೇಕು! (ದು)
-ಡಿಯದೆನ್ನಿಂದದೆಂತಾಗ್ಬೇಕು?
ನಾದ್ರೂ ಪವಾಡ ಮಾಡ್ಬೇಕು!
ನಾನರಿಯೆನೆಂದ್ರೇಕ್ನಗ್ಬೇಕು? (ಆ)
-ಗ್ಬೇಕು, ಗುರುಸೇವೆ ಸಾಗ್ಬೇಕು! (ಬೇ)
-ಕು ನಿರಂಜನಾದಿತ್ಯಾಗ್ಬೇಕು!!!

ನನ್ನನ್ನು ಶಾಂತಿಯಲ್ಲಿ ನಿನ್ನಂತಾರೂ ಇರಿಸಲೊಲ್ಲ! (ನ)   6(4119)

-ನ್ನ, ನಿನ್ನ, ಋಣ ಸಂಬಂಧವನ್ನರಿತವರೇ ಇಲ್ಲ! (ನಿ)
-ನ್ನುಪಕಾರವನ್ನನುಗಾಲ ಸ್ಮರಿಸದೇ ನಾನಿಲ್ಲ!
ಶಾಂತಿಪ್ರದ ನಿನ್ನ ಗೀತಾಮಹಿಮೆ ಸಾಮಾನ್ಯವಲ್ಲ!
ತಿಳಿದಿದರ ಸಾರ ಬಾಳಿದರೆ ದುಃಖವೇ ಇಲ್ಲ!
ದುಕುಲತಿಲಕ ಕ

ಷ್ಣ ನೀನೊಬ್ಬ ಮಹಾಮಲ್ಲ! (ಸ)
-ಲ್ಲಿಸುತ್ತಿರುವರು ಸೇವೆ ನಿತ್ಯ ನಿನ್ನ ಭಕ್ತರೆಲ್ಲ!
ನಿನಗದರಿಂದಹಂಕಾರವೆಳ್ಳಷ್ಟೂ ಉಂಟಾಗಿಲ್ಲ! (ನಿ)
-ನ್ನಂತರಂಗವನ್ನು ನಿನ್ನೀ ಪರಮಾತ್ಮನೆಂದೋ ಬಲ್ಲ!
ತಾತ್ಸಾರ ಬುದ್ಧಿ ನಿನಗಾರ ಮೇಲೂ ಇಲ್ಲವೇ ಇಲ್ಲ!
ರೂಢಿಯಿಲ್ಲಹ ನಿತ್ಯ ಕರ್ಮದಲ್ಲೇನೂ ಲೋಪವಿಲ್ಲ!
ಹಸುಖದ ಹುಚ್ಚು ವ್ಯಾಮೋಹ ನಿನ್ನಲ್ಲೆ

ನೂ ಇಲ್ಲ! (ಅ)
-ರಿವಾಗುತಿದೆ ಇದು ನಿನ್ನ ದಿನಚರಿಯಿಂದೆಲ್ಲ!
ರಳ ರೀತಿಯಲ್ಲಿದೆ ನಿನ್ನಾದರ್ಶದ ಬಾಳೆಲ್ಲ! (ಹಾ)
-ಲೊಳಗಿರುವ ಕೆನೆಯಂತೆ ನಿನ್ನ ವಿವೇಕವೆಲ್ಲ! (ಫೂ)
-ಲ್ಲ ನಿರಂಜನಾದಿತ್ಯನಿಗೆ ನಿನ್ನಂಥಾ ಆಪ್ತರಿಲ್ಲ!!!

ನನ್ನನ್ನು ಸದಾ ನೆನೆಯುತಿರು!   6(3446)

(ನ)-ನ್ನನ್ನು ನಿನ್ನವನೆಂದು ನಂಬಿರು!
(ತಿ)-ನ್ನುವುದ್ಪ್ರಸಾದವೆಂದರಿತಿರು!
ಮೀಪವಿಲ್ಲೆಂದು ಅಳದಿರು!
ದಾಸಿ ಮೀರಾಬಾಯಿಯಂತೆ ಇರು!
ನೆನಪನ್ಯರದು ಮಾಡದಿರು!
ನೆಲ, ಹೊಲಗಳಾಶಿಸದಿರು!
(ಸಾ)-ಯುಜ್ಯ ಗುರಿಯೆಂದು ತಿಳಿದಿರು!
ತಿತಿಕ್ಷೆ ಅಭ್ಯಾಸ ಮಾಡುತ್ತಿರು!
(ಇ)-ರು ನಿರಂಜನಾದಿತ್ಯನಾಗಿರು!!!

ನನ್ನನ್ನು ಹೊರಗಿಟ್ಟವ ನೀನೇ! (ನಿ)   5(2596)

-ನ್ನ ನಂಬಿದ್ದಕ್ಕಿದೇ ಫಲ ತಾನೇ? (ನ)
-ನ್ನುತ್ಸಾಹ ಕೆಡಿಸಿದವ ನೀನೇ!
ಹೊರಗೊಳಗೆಲ್ಲಾ ನೀನು ತಾನೇ? (ಪ)
-ರಮಾರ್ಥವಿದೆಂದವನು ನೀನೇ!
(ಯೋ)ಗಿ ರಾಜನೆಂಬವ ನೀನು ತಾನೇ? (ಕ)
-ಟ್ಟಕಡೆಗೆಲ್ಲಕ್ಕೂ ಗತಿ ನೀನೇ! (ಭ)
-ವರೋಗಕ್ಕೆ ವೈದ್ಯ ನೀನು ತಾನೇ?
ನೀನೂ ನಾನೂ ಒಂದೆಂದವ ನೀನೇ! (ನೀ)
-ನೇ, ಆ ನಿರಂಜನಾದಿತ್ಯ ತಾನೇ???

ನನ್ನಲ್ಲಿ ನೀನೇಕೆ ಬೆರೆತಿರಬೇಕು? (ನಿ)   5(2621)

-ನ್ನ ನಿತ್ಯ ಸುಖಕ್ಕಾಗಿ ಹಾಗಿರಬೇಕು!
(ಗ)ಲ್ಲಿ(ಗ)ಲ್ಲಿಯೋಡಾಟ ತಪ್ಲಿಕ್ಕದು ಬೇಕು!
ನೀಚರ ಸಂಗದಿಂದ ಪಾರಾಗ್ಲದು ಬೇಕು!
ನೇಮ, ನಿಷ್ಠೆಯಿಂದಿರ್ಲೆನ್ನ ಸಂಗ ಬೇಕು!
ಕೆಡುಕಾರಿಗೂ ಆಗದಿರ್ಲದು ಬೇಕು!
ಬೆಡಗಿನ ಬಾಳು ಬಿಡ್ಲಿಕ್ಕದು ಬೇಕು! (ಧ)
-ರೆಗೆ ಮಾದರಿಯಾಗಿರ್ಲಿಕ್ಕದು ಬೇಕು!
ತಿಳಿದು ನೀನಿದ ಒಳಗಿರಬೇಕು!
ಮಿಸಿ ಮೈಮರೆತಾನಂದಿಸಬೇಕು!
ಬೇಕಿದಕೆ ಕೃಪೆಯೆಂದರಿಯ ಬೇಕು! (ಟಾ)
-ಕು, ನಿರಂಜನಾದಿತ್ಯನೇ ನೀನಾಗ್ಬೇಕು!!!

ನನ್ನಲ್ಲಿರುವುದು ಬರೀ ಎರಡಾಣೆ! (ನಿ)   4(1674)

-ನ್ನ ಮರೆಯದಿರಲ್ಕೆ ನನಗೊಂದಾಣೆ! (ನಿ)
-ಲ್ಲಿಸಲು ನಿನ್ನ ಭಕ್ತಿ ನಿನಗೊಂದಾಣೆ! (ಮಾ)
-ರು ಹೋಗದಿರ್ಲನ್ಯಕ್ಕೆ ನನಗೊಂದಾಣೆ! (ಸಾ)
-ವು, ನೋವ್ತಪ್ಪಿಸಲಿಕ್ಕೆ ನಿನಗೊಂದಾಣೆ!
ದುರ್ಬುದ್ಧ್ಯಾಗದಿರಲ್ಕೆ ನನಗೊಂದಾಣೆ!
ಲಾನುಗ್ರಹಿಸಲಿಕ್ಕೆ ನಿನಗೊಂದಾಣೆ!
ರೀತ್ಯುತ್ತಮಾಗಿರಲ್ಕೆ ನನಗೊಂದಾಣೆ!
ಲ್ಲೆಲ್ಲೂ ಕಾಪಾಡಲ್ಕೆ ನಿನಗೊಂದಾಣೆ! (ವ)
-ರಗುರು ದಾಸಾಗಲ್ಕೆ ನನಗೊಂದಾಣೆ! (ಓ)
-ಡಾಟಗಳೋಡಿಸಲ್ಕೆ ನಿನಗೊಂದಾಣೆ! (ಹೊ)
-ಣೆ, ನಿರಂಜನಾದಿತ್ಯನೆನಲ್ಕೊಂದಾಣೆ!!!

ನನ್ನವ ನೀನೆಂದು ನಂಬಿ ಮೋಸಹೋದೆ! (ನಿ)   6(3615)

-ನ್ನನ್ನೆಷ್ಟು ಕೂಗಿದ್ರೂ ನೀನು ಬಾರದಾದೆ!
ರ ಗುರು ನಿನ್ನ ನಿತ್ಯ ಪೂಜಿಸಿದೆ!
ನೀಚರ ನಿಂದೆಗೆ ವೃಥಾ ಗುರಿಯಾದೆ!
ನೆಂಟ, ಭಂಟನೆಂದ ನೀನೀಗೆಲ್ಲಿಹೋದೆ?
ದುಡಿಮೆಗೆ ತಕ್ಕ ಕೂಲಿ ಪಡೆಯ್ದಾದೆ!
ನಂದಿವಾಹನ ತಂದೆಯೆಂದು ಬೆಪ್ಪಾದೆ!
ಬಿದಿಲಿಖಿತವೆಂಬುದ ನಂಬದಾದೆ!
ಮೋಡ ಮುಚ್ಚಿದ ಸೂರ್ಯನಂತೆ ನಾನಾದೆ!
ಮಯ ಕಾದು, ಕಾದು, ನಾನು ಸುಸ್ತಾದೆ!
ಹೋಗುವುದಿನ್ನೆಲ್ಲಿಗೆಂದರಿಯದಾದೆ! (ಬಂ)
-ದೆ, ನಿರಂಜನಾದಿತ್ಯನೇ ಶಿವನೆಂದೆ!!!

ನನ್ನಾಕೆಗೆ ಭೋಗೇಚ್ಛೆ ಇಲ್ಲ!   6(3405)

(ನ)-ನ್ನಾದರೋಪಚಾರ ಬಿಟ್ಟಿಲ್ಲ!
ಕೆಲ್ಸದಲ್ಲಿ ಶ್ರದ್ಧೆಯೇನಿಲ್ಲ!
ಗೆಳೆಯರನ್ಯರಾರೂ ಇಲ್ಲ!
ಭೋದದಲ್ಲಿ ವ್ಯತ್ಯಾಸವಿಲ್ಲ!
(ಯೋ)-ಗೇಶ್ವರನಲ್ಲಿನ್ನೂ ಬೆರ್ತಿಲ್ಲ!
(ಸ್ವ)-ಚ್ಛೆಯಾದಾಗೊಂದಾಗದಿರೋಲ್ಲ!
ಹಸುಖದಾಸೆ ಈಗಿಲ್ಲ!
(ಬ)-ಲ್ಲ ನಿರಂಜನಾದಿತ್ಯನೆಲ್ಲಾ!!!

ನನ್ನಿಂದ ಚತುರ್ವೇದಗಳಪ್ಪಾ! (ನ)   2(553)

-ನ್ನಿಂದೆಲ್ಲಾ ಕಾರ್ಯ ಕಲಾಪವಪ್ಪಾ!
ಶೇಂದ್ರಿಯದಲ್ಲೂ ಇಹೆನಪ್ಪಾ!
ರಾಚರ ಲೀಲಾ ನಾಟಕಪ್ಪಾ!
ತುದಿ ಮೊದಲಿಲ್ಲ ಇದಕಪ್ಪಾ! (ಸ)
-ರ್ವೇಶ್ವರ ನಾಗಾಗಿರುವೆನಪ್ಪಾ!
ತ್ತ ಜೀವಾತ್ಮೇಕ ರೂಪನಪ್ಪಾ!
ಗನಮಣಿ ಹೀಗಿಹನಪ್ಪಾ! (ಕ)
-ಳವಳ ಪಡದೆ ನಾನಾಗಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯನಾನಪ್ಪಾ!!!

ನನ್ನಿರುವು ನಿನ್ನರಿವಿಗಡ್ಡಿ! (ಚೆ)   5(2626)

-ನ್ನಿಗನ ದರ್ಶನಕ್ಕಿರ್ಬಾರ್ದಡ್ಡಿ! (ಕಿ)
-ರುಕುಳಾಧಿಕಾರಿಯೆಲ್ಲಕ್ಕಡ್ಡಿ! (ನಾ)
-ವು, ನಮ್ಮವರೆಂಬವನಿಂದಡ್ಡಿ!
ನಿನ್ನನರಿಯದ್ದರಿಂದೀ ಅಡ್ಡಿ! (ನಿ)
-ನ್ನವ್ರೆಲ್ಲರೆಂದರಿತರಿಲ್ಲಡ್ಡಿ! (ಹ)
-ರಿಶರಣರಿಗಾರದೇನಡ್ಡಿ?
ವಿಕಲ್ಪವಿರುವಾಗೆಲ್ಲಾ ಅಡ್ಡಿ!
ರ್ವವೆಂಬ ನಾನೆಲ್ಲಕ್ಕೂ ಅಡ್ಡಿ! (ದ)
-ಡ್ಡಿ, ನಿರಂಜನಾದಿತ್ಯಾದ್ರಾರ್ದಡ್ಡಿ???

ನನ್ನಿಷ್ಟ ನಿನಗೆ ಕಷ್ಟ,! (ನಿ)   6(3454)

-ನ್ನಿಷ್ಟ ನನಗತಿ ಕಷ್ಟ! (ಭ್ರ)
-ಷ್ಟನಿಗೆಲ್ಲಾ ಬಹುಕಷ್ಟ!
ನಿಜರೂಪ ಸರ್ವಶ್ರೇಷ್ಠ!
ಶ್ವರ ರೂಪ ಕನಿಷ್ಟ!
ಗೆಲಬೇಕೆಲ್ಲಾ ಅರಿಷ್ಟ! (ಸ್ವ)
-ಕರ್ಮ, ಧರ್ಮ ಸರ್ವೊತ್ಕೃಷ್ಟ! (ಶ್ರೇ)
-ಷ್ಟ, ನಿರಂಜನಾದಿತ್ಯೇಷ್ಟ!!!

ನನ್ನಿಷ್ಟ ಮೊದಲೀಡೇರಲಿ! (ನಿ)   5(3285)

-ನ್ನಿಷ್ಟಾ ಮೇಲೆ ನೆರವೇರಲಿ! (ಕ)
-ಷ್ಟ ಪಟ್ಟದ್ದು ಸಾರ್ಥಕವಾಗಲಿ!
ಮೊರೆಯಿಡು ನೀನವನಲಿ!
ತ್ತನಾಜ್ಞೆ ನನಗಾಗಲಿ!
ಲೀಲೆ ಬೇಗ ಪ್ರಕಟಾಗಲಿ! (ನೋ)
-ಡೇ ನೊಡ್ವೆನ್ನ ನಿನ್ನೂರಿನಲಿ! (ಅ)
-ರವಿಂದಾರ್ಕರಾದರ್ಶಾಳಲಿ! (ಶೂ)
-ಲಿ ನಿರಂಜನಾದಿತ್ಯಾಗಲಿ!!!

ನನ್ನಿಷ್ಟದಂತೆ ನೀನಿರೆಂದನ್ನಲಾರೆ! (ನಿ)   6(3746)

-ನ್ನಿಷ್ಟದಂತೆ ನಾನಿರಲಾರೆನ್ನಲಾರೆ! (ಕ)
-ಷ್ಟ ಸಹಿಸಿಕೊಂಡು ಬದುಕಿರಲಾರೆ!
ದಂಡ ತೆರಲು ನಾನೆಂದೂ ಒಪ್ಪಲಾರೆ!
ತೆರೆದ ಬಾಯಿಂದೇನೂ ಹೇಳಲಾರೆ!
ನೀತಿ, ರೀತಿಗಪಚಾರ ಮಾಡಲಾರೆ!
ನಿನ್ನನ್ನಲ್ಲದಿನ್ಯಾರನ್ನೂ ನಂಬಲಾರೆ! (ಯಾ)
-ರೆಂದರೂ ಅದಕ್ಕೆ ಕಿವಿಗೊಡಲಾರೆ!
ರ್ಶನವನ್ನು ಬಯಸದಿರಲಾರೆ! (ನಿ)
-ನ್ನನ್ನೇನೂ ಕೇಳಿ ಹಿಂಸೆ ಪಡಿಸಲಾರೆ!
ಲಾವಣ್ಯಕ್ಕೆ ಮನ ಸೋಲದಿರಲಾರೆ! (ಬೆ)
-ರೆತ್ರೆ ನಿರಂಜನಾದಿತ್ಯನ ಬಿಡ್ಲಾರೆ!!!

ನನ್ನಿಷ್ಟದಂತೆ ನೀನೇಕಿಲ್ಲೆಂದ್ನಾಬಲ್ಲೆ (ನ)   6(3595)

-ನ್ನಿಷ್ಟ ಅಶಾಶ್ವತವೆಂದು ನೀನು ಬಲ್ಲೆ! (ಅ)
-ಷ್ಟ ಮದಾಸಕ್ತಳ್ನಾನೆಂದು ನೀನು ಬಲ್ಲೆ!
ದಂಭ, ಧರ್ಪ ನೀನೊಪ್ಪೆಯೆಂದು ನಾ ಬಲ್ಲೆ!
ತೆಕ್ಕೆ ಬಿಚ್ಚಿದ ಸರ್ಪ ನಾನೆಂದ್ನೀ ಬಲ್ಲೆ!
ನೀನೆಂತಿರ್ಪೆಯೆಂದ್ನಾನಿನ್ನೂ ಹೇಳಲೊಲ್ಲೆ!
ನೇತ ನೀನೆಂದು ಖಚಿತವಾಗ್ನಾ ಬಲ್ಲೆ!
ಕೆಚ್ಚಿಕ್ಕಿದ್ರೆನ್ನ ಬಾಳಿಗಾನುಳಿಯ್ಲೊಲ್ಲೆ! (ಕ)
-ಲ್ಲೆಂದಹಲ್ಯೆಗೆ ಜೀವ ನೀ ಬರಿಸ್ಬಲ್ಲೆ? (ಇಂ)
-ದ್ನಾನೇಕೆ ಅನುಗ್ರಹಿಸಲ್ಪಡಲೊಲ್ಲೆ?
ಲಾಬಲ ನೋಡ್ದೆ ಕೃಪೆ ಮಾಡೀಗಿಲ್ಲೇ! (ಬ)
-ಲ್ಲೆ, ನಿರಂಜನಾದಿತ್ಯನಾನ್ಬಿಟ್ಟಿರ್ಲೊಲ್ಲೆ!!!

ನನ್ನಿಷ್ಟವೆಂಬುದಳಿಯಲಿ! (ನಿ)   4(1538)

-ನ್ನಿಷ್ಟವೆಂಬುದೊಂದುಳಿಯಲಿ! (ದು)
-ಷ್ಟ ಬುದ್ಧಿ ನಿರ್ನಾಮವಾಗಲಿ!
ವೆಂಕಟೇಶ ಧ್ಯಾನವಿರಲಿ!
ಬುಡಬುಡ್ಕೆಯಾಟ ಸಾಯಲಿ!
ತ್ತಜಪವಾಗುತ್ತಿರಲಿ! (ಗೂ)
-ಳಿ ಕಾಳಗ ಅಂತ್ಯವಾಗಲಿ!
ಮಾದಿಯಭ್ಯಾಸ ಸಾಗಲಿ! (ಕೂ)
-ಲಿ ನಿರಂಜನಾದಿತ್ಯಾಗಲಿ!!!

ನಮಸ್ಕಾರವೆಂಬುದೊಂದು ಸಂಪ್ರದಾಯ!   5(2504)

ನಸ್ಸು ಶುದ್ಧವಿದ್ದ್ರರಿಂದಾದಾಯ! (ಮಿ)
-ಸ್ಕಾಡ್ಬಾರದದ್ಗುರಿಯಿಂದೆಂಬುದೇ ಧ್ಯೇಯ! (ವ)
-ರ ಗುರುವಿನಾಜ್ಞೆಯಂತಾಗ್ಬೇಕ್ಸ್ವಾಧ್ಯಾಯ!
ವೆಂಕಟೇಶನಿದಕ್ಕೆ ಸದಾ ಸಹಾಯ!
ಬುತ್ತಿಯಿದುತ್ತಮಾರೋಗ್ಯಕ್ಕೆ ಆಶ್ರಯ! (ಹಿಂ)
-ದೊಂದು, ಮುಂದೊಂದೆಂದರಾಗುವುದು ಕ್ಷಯ!
ದುಸ್ಸಂಗದಿಂದುಂಟಾಗ್ವುದು ಸದಾಪಾಯ!
ಸಂತ ಸಮಾಗಮಾವಾಗ್ಲಮೃತ ಪ್ರಾಯ!
ಪ್ರಗತಿಯಿದ್ರಿಂದೆಂಬುದಾರ್ಯಾಭಿಪ್ರಾಯ!
ದಾತ, ನಾಥ, ದಯಾಮಯ ದತ್ತಾತ್ರೇಯ! (ಪ್ರಿ)
-ಯ, ನಿರಂಜನಾದಿತ್ಯಾತ್ಮಾನಂದೋದಯ!!!

ನಮಿಸಬೇಕೀಸುಕೊಳ್ಳಬೇಕು!   4(1711)

ಮಿತವಾಗಿ ಮಾತನಾಡಬೇಕು!
ಮಯೋಚಿತವಾಗಿರಬೇಕು!
ಬೇರೇನೂ ಬಯಸದಿರಬೇಕು!
ಕೀಳು, ಮೇಲೆಂಬುದ ಬಿಡಬೇಕು!
ಸುಧಾಮನ ಭಕ್ತಿಯಿರಬೇಕು!
ಕೊಟ್ಟದ್ದನ್ನು ಸ್ವೀಕರಿಸಬೇಕು! (ಕ)
-ಳ್ಳತನವನ್ನುಪೇಕ್ಷಿಸಬೇಕು!
ಬೇಲಿ ಮನಸ್ಸಿಗೆ ಹಾಕಬೇಕು! (ಹಾ)
-ಕು ನಿರಂಜನಾದಿತ್ಯನಾಗ್ಬೇಕು!!!

ನಮ್ಮ ಮನೆಗೆ ಬರಬೇಕಪ್ಪಾ! (ನಿ)   2(753)

-ಮ್ಮಲ್ಲೇ ಸದಾ ಇದ್ದೇನೆ ನೋಡಪ್ಪಾ!
ನೆಯವರಲೈಕ್ಯ ಬೇಕಪ್ಪಾ!
ನೆನೆಯುತೆನ್ನ ನಿತ್ಯ ನೋಡಪ್ಪಾ!
ಗೆಳೆತನನ್ಯರಲಿ ಬೇಡಪ್ಪಾ!
ಲು ಮೋಸವೆಲ್ಲೆಲ್ಲೂ ನೋಡಪ್ಪಾ!
ಘುರಾಮನಗಲ ಬೇಡಪ್ಪಾ!
ಬೇಕು ಅನನ್ಯ ಭಕ್ತಿ ನೋಡಪ್ಪಾ!
ಥೆ ಕಲಾಪಗಳು ಬೇಡಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯ ನೋಡಪ್ಪಾ!!!

ನಮ್ಮ ಮನೆಗೆ ಬರುವುದು ಯಾವಾಗ? (ನಿ)   4(1982)

-ಮ್ಮ ಸರ್ವಸ್ವವೂ ನಿರಂಜನನಾದಾಗ!
ನೆಯವನದೇ ಮಂದಿರವಾದಾಗ!
ನೆನಸು, ಕನಸಲ್ಲೂ ಅವನಾದಾಗ!
ಗೆಳೆತನನ್ಯರದು ಬೇಡವಾದಾಗ!
ಸಿರಲ್ಲೊಂದು ಬಾಯಲ್ಲೊಂದಿಲ್ಲದಾಗ!
ರುದ್ರಭೂಮಿಯ ಹೆದರಿಕೆ ಹೋದಾಗ! (ನಾ)
-ವು, ನೀವೆಂಬ ಭೇದಭಾವವಳಿದಾಗ!
ದುರ್ವಿಷಯದಾಸೆ ನಿರ್ನಾಮವಾದಾಗ!
ಯಾರೇನೆಂದರು ಲಕ್ಷ್ಯವಿಲ್ಲದಾದಾಗ!
ವಾದವಿಲ್ಲದ ಪೂಜ್ಯಬುದ್ಧಿ ಬಂದಾಗ! (ಖ)
-ಗ ನಿರಂಜನಾದಿತ್ಯನಲ್ಲೊಂದಾದಾಗ!!!

ನಮ್ಮ ಮನೆಗೆ ಬರುವುದ್ಯಾವಾಗ?   1(326)

-ಮ್ಮನ ಅನುಮತಿಯು ದೊರೆತಾಗ!
ನೆ, ಮನೆಯಲೆಯಬಾರದೇಗ!
ನೆರೆ ತಪವಾಚರಿಸಬೇಕೀಗ!
ಗೆಳೆಯರೊಡನಾಟ ಬೇಕಿಲ್ಲೀಗ!
ರಡು ಬಯಲಾಗಿರುವುದೇಗ! (ಅ)
-ರುಹುವೆನು ಮಳೆ ಹನಿ ಬಿದ್ದಾಗ! (ಅ)
-ವುಗಳಿವುಗಳ ಚಿಂತೆ ಬೇಡೀಗ! (ಅ)
-ದ್ಯಾಕಿಷ್ಟಾತುರ ಮಾಡುತಿಹಿರೀಗ?
ವಾದಿಸದೆ ಹಿಂದಿರುಗಬೇಕೀಗ! (ಅ)
-ಗತ್ಯ ನಿರಂಜನಾದಿತ್ಯಲ್ಲೀಗ!!!

ನಮ್ಮ ಶಾಂತಿಗೆ ಬೇಕಾದ ಯೋಚ್ನೆ ಇದ್ರೆ ಮಾತ್ರ ಸಾಕು! ಭೂತ   1(1)

ಬೂದಿ ಆಯ್ತು! ಅದ್ರ ಯೋಚ್ನೆಯಿಂದ ನಮ್ಮ ಉರಿ ನಿಲ್ಲೋಲ್ಲ!
ವರ್ತಮಾನ ನರ್ತಿಸುತ್ತಿದೆ. ನರ್ತನಕ್ಕೆ ತಕ್ಕ ತಾಳ ಮೇಳಗಳನ್ನು ಜೋಡಿಸಿ
ಕೊಂಡು, ವರ್ತಮಾನ ನರ್ತನವನ್ನು ಶಿವತಾಂಡವವಾಗಿ ಮಾಡಿದ್ದೆ ಭೂತದ
ಬೂದಿಯೂ ಹೆಸರಿಲ್ಲದಂತೆ ದಿಕ್ಕಾಪಾಲಾಗಿ ಹೋಗುತ್ತೆ! ಭವಿಷ್ಯವಂತು
ತಾಂಡವ ನೃತ್ಯದ ಸವಿ ನೆನಪಿಂದ ಭವಯವಾಗ್ಲಿಕ್ಕೇ ಬೇಕು!!!

ನಮ್ಮದು ಅವಿಭಕ್ತ ಕುಟುಂಬ! (ಬೊ)   5(3248)

-ಮ್ಮನಾಸ್ತಿಗೆ ಹಕ್ಕು ನಮ್ಮದೆಂಬ!
ದುಡಿವವಗದು ಸಿಗ್ವುದೆಂಬ!
ನಧಿಕಾರಿಗೆ ದಕ್ಕದೆಂಬ!
ವಿಷಯಿಗೇನೂ ಲಭಿಸದೆಂಬ!
ಕ್ತನಿಗೆ ಬಹು ಭಾಗವೆಂಬ! (ಮು)
-ಕ್ತನಿಗಾಸ್ತಿಯ ಪೂರ್ಣಹಕ್ಕೆಂಬ!
ಕುಪುತ್ರರ್ನೀವಾಗಬೇಡಿರೆಂಬ! (ಗಂ)
-ಟುಂಡಷ್ಟೂ ವೃದ್ಧಿಯಾಗುವುದೆಂಬ! (ಸಾಂ)
-ಬ, ನಿರಂಜನಾದಿತ್ಯ ತಾನೆಂಬ!!!

ನಮ್ಮಿಬ್ಬ್ರ ಋಣಾನುಬಂಧವೆಂದಿನಿಂದ? (ಸ)   6(3665)

-ಮ್ಮಿಲನವೀಗ ಯಾವ ಉದ್ದೇಶದಿಂದ? (ಸೊ)
-ಬ್ಬ್ರ ಹಾಕ್ವುದೊಳ್ಳೇ ಫಸಲಿನಾಸೆಯಿಂದ!
ಷಿ ಜೀವನ ಇಬ್ಬರಿಗೂ ಆನಂದ! (ಪ್ರಾ)
-ಣಾಪಾಯ ಭಯ ನಮ್ಮಿಬ್ಬರಿಗಿಲ್ಲೆಂದ! (ಅ)
-ನುಭವಿಸಬೇಕು ಸದಾ ಬ್ರಹ್ಮಾನಂದ!
ಬಂಧು, ಬಳಗದ್ದು ನಮಗಿಲ್ಲ ಬಂಧ!
ರ್ಮಾಧರ್ಮದ ಚಿಂತೆ ತಪ್ಪಿಹೋಯ್ತೆಂದ! (ನಾ)
-ವೆಂದಿಗೂ ಬೇರ್ಬೇರಿರಲಾಗ್ವುದಿಲ್ಲೆಂದ!
ದಿವ್ಯ ಜೀವನ ಮತ್ತಾವುದಕ್ಕಲ್ಲೆಂದ!
ನಿಂದಕರಿಗ್ನಾವಂಜಬೇಕಾಗಿಲ್ಲೆಂದ!
ತ್ತ, ನಿರಂಜನಾದಿತ್ಯ ಒಂದೇ ಎಂದ!!!

ನರ ಜನ್ಮದಲ್ಲೇ ಮುಕ್ತಿಯಯ್ಯಾ!   2(813)

ಘುಪತಿ ಧ್ಯಾನ ಸಾಗಲಯ್ಯಾ!
ನ್ಮಜನ್ಮದ ಮಾತು ಬೇಡಯ್ಯಾ! (ಉ)
-ನ್ಮತ್ತನಾಗು ಭಜನೆಯಲಯ್ಯಾ!
ತ್ತನಾಜ್ಞೆಯಿದ ಪಾಲಿಸಯ್ಯಾ! (ಎ)
-ಲ್ಲೇನಿಹುದಿಂಥಾ ಆನಂದವಯ್ಯಾ?
ಮುಕ್ತಿಯಿದೇ ಜೀವಿಗಳಿಗಯ್ಯಾ! (ಶ)
-ಕ್ತಿ, ಯುಕ್ತಿಯೆಲ್ಲಾ ಭುಕ್ತಿಗಾಗಯ್ಯಾ!
ಮಪಿತನಾದರ್ಶ ಬೇಕಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾರಾಮಯ್ಯಾ!!!

ನರ ಹರನಾಗುವುದೆಂದು? (ಮಾ)   5(3233)

-ರನಿಗೆ ಮರಣವು ಆದಂದು!
ಸ್ತ, ಪಾದ, ಸ್ವಸ್ಥವಾದಂದು! (ರಾಂ)
-ರಸ ರಸನೆ ಸವಿದಂದು!
ನಾಟಕ ಸಂಘ ಬಿಟ್ಟಂದಂದು!
ಗುರುಕೃಪಾ ಪಾತ್ರನಾದಂದು! (ಹಾ)
-ವು, ಹಗ್ಗ, ಭ್ರಾಂತಿ ಹರಿದಂದು! (ಒಂ)
-ದೆಂಬ ನಿಜದರಿವಾದಂದು! (ಅ)
-ದು, ನಿರಂಜನಾದಿತ್ಯಂದಂದು!!!

ನರ ಹೊರಳಿದಾಗಾರಾಮ ಬೇಕು!   2(772)

ಘುಪತಿಯ ಜಪ ಮಾಡಬೇಕು!
ಹೊರಗೊಳಗೆ ದೀರ್ಘಶ್ವಾಸ ಬೇಕು!
ಗಳೆ ಮಾತು ಕಮ್ಮಿಯಾಗಬೇಕು! (ಹು)
-ಳಿ ಪದಾರ್ಥವ ತಿನ್ನದಿರಬೇಕು!
ದಾರಿ ನಡೆವಾಗೋಡದಿರಬೇಕು!
ಗಾಳಿ ಸಂಚಾರ ಶುದ್ಧವಿರಬೇಕು!
ರಾತ್ರಿಯಾಹಾರ ಲಘುವಾಗಬೇಕು!
ಲ ಶೋಧನೆ ಸಲೀಸಾಗಬೇಕು!
ಬೇಳೆ ಪದಾರ್ಥಗಳ ಬಿಡಬೇಕು! (ಬೇ)
-ಕು, ನಿರಂಜನಾದಿತ್ಯ ಕೃಪೆ ಬೇಕು!!!

ನರಕಪ್ರಾಪ್ತಿಯಾಗದಿರಬೇಕು! (ವ)   4(2379)

-ರಗುರು ಧ್ಯಾನ ಮಾಡುತ್ತಿರಬೇಕು!
ಥಾಶ್ರವಣವಾಗುತ್ತಿರಬೇಕು!
ಪ್ರಾಮಾಣಿಕನಾಗಿ ತಾನಿರಬೇಕು! (ತೃ)
-ಪ್ತಿ ಜೀವನದಭ್ಯಾಸ ಮಾಡಬೇಕು! (ಕಾ)
-ಯಾಭಿಮಾನ ಕತ್ತರಿಸಿಡಬೇಕು! (ರಾ)
-ಗ, ದ್ವೇಷ, ಧ್ವಂಸವಾಗುತ್ತಿರಬೇಕು!
ದಿಗಂಬರದಾಸ ತಾನಾಗಬೇಕು! (ಪ)
-ರಮಪದವಿಗರ್ಹನಾಗಬೇಕು! (ಕು)
-ಬೇರಾದಿಗಳನ್ನೆಲ್ಲಾ ಮೀರಬೇಕು! (ಮು)
-ಕುತಿ ನಿರಂಜನಾದಿತ್ಯ ಕೊಡ್ಬೇಕು!!!

ನರಸಪ್ಪಾ! ನೀನರಸಪ್ಪಾ! (ವ)   4(2279)

-ರ ಗುರುಕೃಪೆಗೆ ಪಾತ್ರಪ್ಪಾ!
ತ್ಸಂಗಿಯಾಗಿರಬೇಕಪ್ಪಾ! (ಇ)
-ಪ್ಪಾಗ ದಾನ, ಧರ್ಮ ಮಾಡಪ್ಪಾ!
ನೀತಿ, ರೀತಿಯರಿತಿರಪ್ಪಾ!
ರಸಿಂಹ ದಾಸ ನೀನಪ್ಪಾ! (ನಿ)
-ರತವನ ಧ್ಯಾನಿಸಿರಪ್ಪಾ!
ರ್ವ ಕಲ್ಯಾಣವಪ್ಪುದಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯಪ್ಪಾ!!!

ನರಸಯ್ಯಾ ನೀನರಸಯ್ಯಾ!   2(627)

ಮಿಸಯ್ಯಾ ನೀ ನಿನ್ನಲಯ್ಯಾ!
ಕಲಯ್ಯಾ ನೀನೆಲ್ಲವಯ್ಯಾ! (ಅ)
-ಯ್ಯಾ! ರಾಮಯ್ಯಾ! ನೀನವನಯ್ಯಾ!
‘ನೀ’ ನಾನಯ್ಯಾ, ನಾನು ನೀನಯ್ಯಾ!
ರೇಶಯ್ಯಾ ವಿಶ್ವೇಶ್ವರಯ್ಯಾ!
ಮೇಶಯ್ಯಾ ವಿಮಲೇಶಯ್ಯಾ!
ತ್ಯಾತ್ಮಯ್ಯಾ ನಿತ್ಯಾರಾಮಯ್ಯಾ! (ಅ)
-ಯ್ಯಾ! ಶ್ರೀ ನಿರಂಜನಾದಿತ್ಯಯ್ಯಾ!!!

ನರಸಿಂಹ ಭಕ್ತವತ್ಸಲಯ್ಯಾ! (ವ)   2(688)

-ರ ಭಕ್ತಿ ಪ್ರಹಲ್ಲಾದನದಯ್ಯಾ!
ಸಿಂಹ ರೂಪಾಯ್ತು ಕಲ್ಲು ಕಂಬಯ್ಯಾ! (ಸಂ)
-ಹರಿಸಿದನಸುರನನಯ್ಯಾ!
ಕ್ತಿ ಭಾವ ಹಾಗಿರಬೇಕಯ್ಯಾ! [ಶ]
-ಕ್ತ ಗುರುವಿನ ಕೃಪೆ ಬೇಕಯ್ಯಾ!
ರ ಧರ್ಮ ಕರ್ಮವಿದಕಯ್ಯಾ! (ಸ)
-ತ್ಸಹವಾಸ ಸದಾ ಯುಕ್ತವಯ್ಯಾ! (ಅ)
-ಲಕ್ಷ್ಯ ದುರ್ಜನರ ಕಡೆಗಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಭಕ್ತಯ್ಯಾ!!!

ನರಹರಿ ಬಗೆದ ದುರಹಂಕಾರಿಯ ಕರುಳ!(ತ)   6(4283)

-ರಳ ಪ್ರಹ್ಲಾದನನ್ನು ಕಾಡುತ್ತಿದ್ದಾತ ದುರುಳ!
ರಿನಾಮಸ್ಮರಣೆ ಸದಾ ಮಾಡುತ್ತಿದ್ದಾ ತರಳ! (ವೈ)
-ರಿ ಮಗನಿಗಾದಾ ಶಿವಭಕ್ತಿ ರಾಕ್ಸಸ ಮರುಳ!
ಗೆಬಗೆಯ ಹಿಂಸೆಗಳಿಗೀಡಾದನಾ ತರಳ!
ಗೆದ್ದನೆಲ್ಲವನ್ನೂ ಹರಿನಾಮ ಬಲದಿಂದಾ ಬಾಳ!
ನುಜ ತಾಳಿದನು ಕ್ರೋಧದಿಂದ ರೂಪ ಕರಾಳ!
ದುರಿತದೂರಮಾಡೆಂದು ಗೋಳಿಟ್ಟ ಬಾಲ ಬಹಳ! (ನ)
-ರಹರಿ ಕಂಭದಿಂದೊಡೆದು ಬಂದು ಕೇಳಿದಾ ಗೋಳ! (ಅ)
-ಹಂಕಾರಿ ಹಿರಣ್ಯಕಶ್ಯಪನಂತ್ಯ ಕಂಡನಾ ಬಾಳ!
ಕಾಮ, ಕ್ರೊ

ಧಾದಿಗಳಿಂದಾಗತಿದೆಲ್ಲೆಲ್ಲೂ ಜಗಳ! (ಅ)
-ರಿತವರೆಂಬವರು ಕಾಡುತ್ತಿರ್ಪರು ಜನಗಳ!
ಮರಾಯ ನಗುತ್ತಿಹನು ನೋಡಿ ಇವರುಗಳು!
ನಿಕರದಿಂದವರ ದೂರಗಳನ್ನಾತ ಕೇಳ! (ಗು)
-ರುದತ್ತನಾಜ್ಞೆಗಾತ ಪ್ರತಿ ಮಾತನ್ನೆಂದಿಗೂ ಹೇಳ! (ಬಾ)
-ಳ, ನಿರಂಜನಾದಿತ್ಯಗಾದವ್ನಲ್ಲಿ ಪ್ರೀತಿ ಬಹಳ!!!

ನಲ್ವತ್ವರ್ಷದ ಮೌನ ಸಾರ್ಥಕಾಗ್ಬೇಕು! (ಬಿ)   6(4025)

-ಲ್ವದಳಾರ್ಚನೆ ನಿರಂತರವಾಗ್ಬೇಕು! (ತ)
-ತ್ವಮಸಿಯರ್ಥಸಾರದೆಂದರಿಯ್ಬೇಕು! (ಹ)
-ರ್ಷವೆಲ್ಲೆಲ್ಲೂ ಎಲ್ಲರಲ್ಲೂ ತುಳುಕ್ಬೇಕು!
ತ್ತಾತ್ರೇಯನವತಾರವದಾಗ್ಬೇಕು!
ಮೌಢ್ಯವೆಲ್ಲರದ್ದೂ ನಿರ್ನಾಮವಾಗ್ಬೇಕು!
ರರುದ್ಧಾರ ತಡವಿಲ್ಲದಾಗ್ಬೇಕು!
ಸಾವಕಾಶದಿಂದೇಕೆಲ್ಲರೂ ಕೆಡ್ಬೇಕು?? (ಪ್ರಾ)
-ರ್ಥನೆಯಿದು ವ್ಯರ್ಥವಾಗದೇ ಇರ್ಬೇಕು!
ಕಾಲ ಕಾದದ್ದು ಫಲಪ್ರದವಾಗ್ಬೇಕು! (ಆ)
-ಗ್ಬೇಕು, ಚಿರ ಶಾಂತಿ ತಾಂಡವವಾಡ್ಬೇಕು!
ಕುಲ ನಿರಂಜನಾದಿತ್ಯನದ್ದಾಗ್ಬೇಕು!!!

ನವಚೈತನ್ಯೋದಯವಾಯ್ತಯ್ಯಾ! (ಪಾ)   2(940)

-ವನ ಶ್ರೀಪಾದ ಸ್ಪರ್ಶದಿಂದಯ್ಯಾ!
ಚೈತನ್ನಾನಂದಾತ್ಮಾನಂದವಯ್ಯಾ!
ನು, ಮನಕಾಯ್ತು ಹರ್ಷವಯ್ಯಾ! (ಅ)
-ನ್ಯೋನ್ಯ ಭಾವಾನಂದಪೂರ್ವವಯ್ಯಾ!
ಯೆ ಸದಾ ಹೀಗೇ ಇರಲಯ್ಯಾ! (ಭ)
-ಯವೆಲ್ಲಾ ಪರಿಹಾರವಾಯ್ತಯ್ಯಾ! (ಭ)
-ವಾರಣ್ಯದಲ್ಲಿ ಬೆಳಕಾಯ್ತಯ್ಯಾ! (ತಾ)
-ಯ್ತನ್ನಿಷ್ಟ ಪುತ್ರನ ಪ್ರಾಣವಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಶಕ್ತ್ಯಯ್ಯಾ!!!

ನಸೆ ಕೊಟ್ಟ ನಾಯಿ ನೊಸಲು ನೆಕ್ಕೀತು! (ಆ)   4(1886)

-ಸೆಪಟ್ಟ ಮನಸು ಅಶಾಂತಿ ಪಟ್ಟೀತು!
ಕೊಳ್ಳೆಯೈಸಿರಿ ಕಳ್ಳರ ಪಾಲಾದೀತು (ಕೆ)
-ಟ್ಟ ಜನರ ಇಷ್ಟ ಕಷ್ಟ ತಂದಿಟ್ಟೀತು!
ನಾಳೆ, ನಾಳೆಯಿಂದ ಬಾಳು ಗೋಳಾದೀತು! (ತಾ)
-ಯಿ, ತಂದೆ, ನೊಂದಬಂಧ ಅಂದಗೆಟ್ಟೀತು!
ನೊರೆವಾಲ್ನೀರ್ಸೇರಲ್ನಿಸ್ಸಾರವಾದೀತು!
ತಿ, ಪತಿ ನೀತಿ ಬಿಟ್ರನರ್ಥಾದೀತು! (ಪಾ)
-ಲು ಮಾರಿಕೆ ಸೋಲಿಗಾಲಯವಾದೀತು! (ಸೋ)
-ನೆ ಸುರಿದರೊಲೆಯುರಿಯದಾದೀತು! (ದ)
-ಕ್ಕೀತೆಂದು ಕಿತ್ತನ್ಯರಾಸ್ತಿ ಕೈಬಿಟ್ಟೀತು! (ಮಾ)
-ತು ನಿರಂಜನಾದಿತ್ಯನೆಂದಂತಾದೀತು!!!

ನಾ ಕಂಡ ಸೂರ್ಯನಿಗಿಲ್ಲೇಳು ಕುದುರೆ!   5(2546)

ಕಂಡವರಿದ್ದರೆ ತೋರಲಾ ಕುದುರೆ! (ಚಂ)
-ಡ, ಪ್ರಚಂಡ, ಮಾರ್ತಾಂಡನಿಗದೆದುರೇ?
ಸೂತ್ರಧಾರಿಯಾದಾತ್ಮನಿಗಾರಾಸರೆ? (ಕಾ)
-ರ್ಯ, ಕಾರಣಕ್ಕೆಲ್ಲವನೊಬ್ಬನೇ ದೊರೆ!
ನಿಧಿ ಸರ್ವ ಶಕ್ತಿಗವ್ನೆಂಬುದು ಖರೆ! (ತ್ಯಾ)
ಗಿಯಾಗಿ ಬೆಳಗುವನವನೀ ಧರೆ! (ಎ)
-ಲ್ಲೇನಿದ್ದರೂ ಆಗದವನಿಂದ ಮರೆ (ಕೀ)
-ಳು, ಮೇಲೆನ್ನದಿಳ್ದಿದೆ ಕಿರಣಧಾರೆ! (ಬೇ)
-ಕು ಬೇರೆ ವರವೆಂದರಾನೊಪ್ಪಲಾರೆ!
ದುಡಿಯದಿದ್ರವ್ನಂತೆ ಪಾರಾಗಲಾರೆ! (ಬೆ)
-ರೆತು ನಿರಂಜನಾದಿತ್ಯನಲ್ಲಾಗ್ಧೊರೆ!!!

ನಾ ನಿನಗೆ ಹೊಸಬನಲ್ಲ!   3(1118)

ನಿನಗೆನ್ನ ಜ್ಞಾಪಕವಿಲ್ಲ!
ನ್ನ ನೀನು ಬಿಡುವಂತಿಲ್ಲ! (ತೆ)
-ಗೆ ನಿನ್ನ ದೃಷ್ಟಿ ದೋಷವೆಲ್ಲ!
ಹೊಳೆವುದೆನ್ನಾಕಾರವೆಲ್ಲ!
ಹನೆಯಿಂದಾಗಲಿದೆಲ್ಲ!
ರಡಾಸೆಗಾಗುಳಿವಿಲ್ಲ!
ನ್ನ ಹೊರತಾಗೇನೂ ಇಲ್ಲ! (ಗೊ)
-ಲ್ಲ ನಿರಂಜನಾದಿತ್ಯನೆಲ್ಲ!!!

ನಾ ನಿನಗೇನೂ ಹೇಳುವುದಿಲ್ಲ!   6(3481)

ನಿನಗರಿಯದ್ದಾವುದೂ ಇಲ್ಲ!
ನ್ನ ವಿಶ್ವಾಸ ಕೆಟ್ಟುಹೋಗಿಲ್ಲ!
ಗೇಣೀದಾರನಂತೆ ನಾನೇನಲ್ಲ! (ನಾ)
-ನೂ, ನೀನೂ ಇಂದಿನವರೇನಲ್ಲ!
ಹೇಳಿದರೆ ನಂಬುವವರಿಲ್ಲ! (ಬಾ)
-ಳು ತರತರವಾಗಿಂತಾಯ್ತೆಲ್ಲ! (ನೋ)
-ವು ಸಹಿಸಲಿಕ್ಕಾಗುವುದಿಲ್ಲ!
ದಿವ್ಯ ನಾಮಜಪ ಬಿಟ್ಟೇ ಇಲ್ಲ! (ಪು)
-ಲ್ಲ ನಿರಂಜನಾದಿತ್ಯನ್ಯನಲ್ಲ!!!

ನಾ ನಿನ್ನ ನೆನಪು ಬಿಟ್ಟಿಲ್ಲ!   4(2097)

ನಿನಗದು ತಿಳಿಯದಿಲ್ಲ! (ನಿ)
-ನ್ನ ದರ್ಶನ ನೀ ಮಾಡಿಸಿಲ್ಲ! (ಮ)
-ನೆ, ಮನೆ ನಾನಲೆಯುತ್ತಿಲ್ಲ! (ಜ)
-ನಕೂಟ ನನಗೆ ಬೇಕಿಲ್ಲ!
ಪುರುಷೋತ್ತಮನೆಲ್ಲಾ ಬಲ್ಲ!
ಬಿನ್ನಹವಿನ್ನೇನೂ ಮಾಡೋಲ್ಲ! (ಬಿ)
-ಟ್ಟಿರುವುದೆಂತೆಂದರುಹೆಲ್ಲ! (ನ)
-ಲ್ಲ ನಿರಂಜನಾದಿತ್ಯನೆಲ್ಲ!!!

ನಾ ನಿನ್ನ ನೆನೆಯುತಿರುವಾಗ!   5(2835)

ನಿಮಿತ್ತ ಮಾತ್ರ ಶರೀರವಾಗ! (ಅ)
-ನ್ನ, ವಸ್ತ್ರವಿದ್ದಲ್ಲೇ ಕೊಡುತ್ತಿರುವಾಗ! (ಮ)
-ನೆ, ಮನೆಯಲೆಯುವುದೇಕಾಗ?
ನೆಮ್ಮದಿ ಬೇಕೆನ್ನುತಿರುವಾಗ! (ಆ)
-ಯುಧಕ್ಕೆ ಕೈಹಾಕುವುದೇಕಾಗ?
ತಿರುಗಾಟವೇಕೆಂದನ್ನುವಾಗ! (ಗು)
-ರತಾ ಬರಬೇಕಿದ್ದಲ್ಲಿಗಾಗ!
ವಾದ, ಭೇದಗಳಳಿದಿರ್ಪಾಗ!
ತಿ ನಿರಂಜನಾದಿತ್ಯನಾಗ!!!

ನಾ ನಿನ್ನ ನೆನೆವೆ ನಿತ್ಯಾ! (ಅ)   5(2640)

-ನಿತ್ಯ ಮಾಯೆಯಿಂದಕೃತ್ಯಾ! (ಉ)
-ನ್ನತಿ ನಿನ್ನಿಂದೆಂಬ ಭೃತ್ಯಾ! (ನೀ)
-ನೆರವಾದ್ರೆನ್ನ ದಾಂಪತ್ಯಾ!
ನೆರೆ ಸುಖಪ್ರದ ಸತ್ಯಾ! (ಸೇ)
-ವೆ ನಿನ್ನದೆನಗಗತ್ಯಾ!
ನಿನ್ನ ದಾಸಿ ಆಡ್ಳಸತ್ಯಾ! (ಸ)
-ತ್ಯಾ, ಶ್ರೀ ನಿರಂಜನಾದಿತ್ಯಾ!!!

ನಾ ನಿನ್ನ ಬಿಡನಯ್ಯಾ! (ಅ)   1(329)

-ನಿಶವೀ ಕಣ್ಣೀರಯ್ಯಾ! (ಎ)
-ನ್ನ ನೀ ಸ್ವೀಕರಿಸಯ್ಯಾ!
ಬಿಟ್ಟಿರಬಾರದಯ್ಯಾ! (ನ)
-ಡೆ, ನುಡಿ ನಿನ್ನದಯ್ಯಾ!
ಮಿಪೆ ಪಾದಕಯ್ಯಾ! (ಅ)
-ಯ್ಯಾರ್ಕ ನಿರಂಜನಯ್ಯಾ!!!

ನಾ ನಿನ್ನ ಬಿಡಲಾರೆನಮ್ಮಾ!   5(2809)

ನಿತ್ಯ ನಿನ್ನ ನೆನೆವೆನಮ್ಮಾ! (ಉ)
-ನ್ನತಿ ನಿನ್ನಿಂದಾಗಬೇಕಮ್ಮಾ!
ಬಿರುಸಾಗಿ ಇರ ಬೇಡಮ್ಮಾ! (ಒ)
-ಡನಾಟ ನಿನ್ನದಿರಲಮ್ಮಾ!
ಲಾಭವಾಗಲಿದೆನಗಮ್ಮಾ! (ಕ)
-ರೆವೆ ಕೈ ಮುಗಿದು ನಿನ್ನಮ್ಮಾ!
ಶ್ವರವಿಂದ್ರಿಯ ಸುಖಮ್ಮಾ! (ಅ)
-ಮ್ಮಾ ನಿರಂಜನಾದಿತ್ಯನಮ್ಮಾ!!!

ನಾ ನಿನ್ನ ಮರೆಯಲಾರೆ! (ನೀ)   6(3727)

-ನಿನ್ನೂ ಭೇಟಿಯೇಕಾಗ್ಲಾರೆ! (ನಿ)
-ನ್ನಧರ್ಮ ನಾ ಸಹಿಸ್ಲಾರೆ!
ಹಿಳೆಗಾಗ್ಬಾರ್ದು ಸೆರೆ! (ಹ)
-ರೆಯದಂದ ಮುಂದ್ನೋಡ್ಲಾರೆ!
ಮನೂರ ಸೇರ್ದಿರ್ಲಾರೆ! (ಬಾ)
-ಲಾದಿತ್ಯನನ್ನಾಗ್ನೋಡ್ಲಾರೆ! (ಇ)
-ರೆ, ನಿರಂಜನಾದಿತ್ಯಾರೆ!!!

ನಾ ಬಿದ್ದೆ ಪಾದಕ್ಕೆ, ನೀನೆದ್ದೆ ಮೇಲಕ್ಕೆ!   5(2775)

ಬಿಸಿಲಲ್ಲೆನ್ನ ನಿಲ್ಲಿಸಿದುದೇತಕ್ಕೆ?
(ಒ)ದ್ದೆಯಾಯಿತು ಭೂಮಿ ಬೆವರು ಜಲಕ್ಕೆ!
ಪಾತ್ರ ನಿನ್ನದೆ ಮುಖ್ಯ ಈ ನಾಟಕಕ್ಕೆ!
ತ್ತಾ! ನೀನಾಡದಿರುವುದೇತಕ್ಕೆ? (ಅ)
-ಕ್ಕೆ ಮಂಗಳವೆಲ್ಲಾ ಮಾನವ ಕುಲಕ್ಕೆ!
ನೀಡು ಮಾರ್ಗದರ್ಶನವೀಗ ಲೋಕಕ್ಕೆ!
ನೆತ್ತಿಗೆ ಹತ್ತಿದೆ ಪಿತ್ಥ ಸಮಾಜಕ್ಕೆ! (ಬಿ)
-ದ್ದೆನ್ನನ್ನೆಬ್ಬಿಸು ಮದ್ದಿತ್ತೆಲ್ಲಾ ರೋಗಕ್ಕೆ!
ಮೇಲೇಳದಿದ್ದರಪಕೀರ್ತಿ ಪಾದಕ್ಕೆ!
ಕ್ಷ್ಮೀಶ ನಿನೇ ಗತಿ ಲಕ್ಷ ಜೀವಕ್ಕೆ! (ಅ)
-ಕ್ಕೆ, ನಿರಂಜನಾದಿತ್ಯನಂದವೆಲ್ಲಕ್ಕೆ!!!

ನಾ ಬಿದ್ದೆ, ನೀ ಬಿದ್ದೆ, ಎಲ್ಲಾ ಒದ್ದೆ ಮುದ್ದೆ!   3(1366)

ಬಿಸಿ ಬಾರದಂತೆ ಮೋಡದೊಳಗಿದ್ದೆ! (ನಿ)
-ದ್ದೆಗೆಡೆ ಕಾಣದೆ ನಡುಗುತ್ತಲಿದ್ದೆ!
ನೀರಾಗಿ ಎಲ್ಲೆಲ್ಲೂ ಹರಿದಾಡುತ್ತಿದ್ದೆ!
ಬಿರುಗಾಳಿಯಾಗ್ಯೆಲ್ಲೆಲ್ಲೂ ಬೀಸುತ್ತಿದ್ದೆ! (ಗ)
-ದ್ದೆ, ಹೊಲ, ಮನೆಯಲ್ಲಾ ಆವರಿಸಿದ್ದೆ!
ಲ್ಲೇನು ಮಾಡಬೇಕೆಂದರಿಯದಿದ್ದೆ! (ಚೆ)
-ಲ್ಲಾಟ, ಒದ್ದಾಟಗಳಾನಂದಿಸುತಿದ್ದೆ!
ಳಗಿನ ಗುಟ್ಟು ಗುಪ್ತವಾಗಿಟ್ಟಿದ್ದೆ! (ಸ)
-ದ್ದೆನಗೇಕೆಂದು ಮೌನಮುದ್ರೆಯಿಂದದ್ದೆ!
-ಮುಗಿಸಬೇಕೀ ಭ್ರಮೆಯನೆನುತಿದ್ದೆ! (ಎ)
-ದ್ದೆ, ನಿರಂಜನಾದಿತ್ಯ ನಾ, ನೀನೆಂದೆದ್ದೆ!!!

ನಾಕೊಟ್ಟೆ, ನೀ ತೊಟ್ಟೆ, ಬಟ್ಟೆಗೆಟ್ಟೆ!   3(1354)

ಕೊರಗದೀಗ ತೋರಾತ್ಮ ನಿಷ್ಟೆ! (ಬ)
-ಟ್ಟೆ ಬರೆಗಳೊಳಗೇ ಬಚ್ಚಿಟ್ಟೆ!
ನೀಚರೊಡನಾಡಿಯಾಗಿಬಿಟ್ಟೆ!
ತೊಡಕುಗಳಲಕ್ಷಿಸಿ ಕೆಟ್ಟೆ! (ಪ)
-ಟ್ಟೆ ಪೀತಾಂಬರಗಳಿಷ್ಟ ಪಟ್ಟೆ!
ಡಬಗ್ಗರಿಗಷ್ಟಿಷ್ಟು ಕೊಟ್ಟೆ! (ತ)
-ಟ್ಟೆ, ಲೋಟಗಳ ಹೆಚ್ಚಿಸಿ ಬಿಟ್ಟೆ! (ಹ)
-ಗೆಗಳಾಟಕ್ಕವಕಾಶ ಕೊಟ್ಟೆ! (ಸು)
-ಟ್ಟೆ ನಿರಂಜನಾದಿತ್ಯನಾಗ್ಬಿಟ್ಟೆ!!!

ನಾಗ ಪ್ರತಿಷ್ಠೆ ಮಾಡಲೇನಪ್ಪಾ? [ಆ]   3(1131)

ಬಹುದದಕಾರಡ್ಡಿಯಪ್ಪಾ?
ಪ್ರತಿಷ್ಠೆ ಮಾಡು ನಿನ್ನೊಳಗಪ್ಪಾ!
ತಿಥಿ, ವಾರ ನಿರ್ಬಂಧವಿಲ್ಲಪ್ಪಾ! (ನಿ)
-ಷ್ಠೆಯೊಂದೇ ಸಮವಿರಬೇಕಪ್ಪಾ!
ಮಾಡು ಸದಾ ಶಿವ ಜಪವಪ್ಪಾ! (ಬ)
-ಡವರಿಗನ್ನದಾನ ಮಾಡಪ್ಪಾ!
ಲೇಸಿದಕ್ಕಿಂತ ಬೇರೇನಿಲ್ಲಪ್ಪಾ!
ಮಶ್ಯಿವಾಯ ಮಂತ್ರಾರಾಮಪ್ಪಾ! (ಅ)
-ಪ್ಪಾ ನಿರಂಜನಾದಿತ್ಯ ಶಿವಪ್ಪಾ!!!

ನಾಗರತ್ನ ತಿಲಕದ ಚಲಚಿತ್ರ!   1(198)

ಮನ ಬೆಳೆಯಿತು ಅದರ ಹತ್ರ!
ಥ ಸಾಗಿತತ್ತ ಕಡೆಗೆ ಉತ್ತರ! (ಯ)
-ತ್ನ ಫಲಿಸದಾಯ್ತು ಕೂಸಿನ ಹತ್ತಿರ!
ತಿರಿಗಿ ಬರಮಾಡಿದರು ತಾಯ್ಹತ್ರ! (ಅ)
-ಲಕ್ಕಾಗಿ ಬಂದಳು ಭಿಕ್ಷು ತಾನು ಮಾತ್ರ!
ಥೆ ಸ್ವಾರಸ್ಯ ಹೇಳಿದಳು ಗುರ್ಹತ್ರ! (ಅ)
-ದರಲಿತ್ತೊಂದು ಸಾರ ನಿಮಿಷ ಮಾತ್ರ!
ಪಲತೆ ಕಥೆಗೆ ಕಾರಣ ಯಂತ್ರ! (ಅ)
-ಲಕ್ಷ್ಯ ವ್ಯಸನ ನಿವಾರಣ ಸ್ವತಂತ್ರ!
ಚಿತ್ತ ಶುದ್ಧಿಗಿರಬೇಕು ದೇಶಾಂತರ! (ಚಿ)
-ತ್ರ, ನಿರಂಜನಾದಿತ್ಯ ಅತಿ ವಿಚಿತ್ರ!!!

ನಾಗರಾಜ ಬರುವಾ, ಭಾರ ಹೊರುವಾ!   5(2860)

ತಿಗೆಡಿಸಿಹಸುರರ ಬಡಿವಾ!
ರಾತ್ರಿ ಕಾಮದಹನವಾದದ್ದರಿವಾ!
ಗತ್ಕಲ್ಯಾಣಕ್ಕಾಗಿ ಫಣ ತೊಡುವಾ!
ಹು ಬಗೆಯಾಸೆಗೆ ಕಿಚ್ಚನಿಡುವಾ! (ಗು)
-ರುಭಕ್ತಿ ದೀಪದ ಕಾಂತಿ ಹೆಚ್ಚಿಸುವಾ!
ವಾದ, ಭೇದಗಳನ್ನು ಅಡಗಿಸುವಾ!
ಭಾವಾವೇಶದಿಂದ ಕಂಬನಿಗರೆವಾ! (ಪ)
-ರಶಿವೆಯ ಪಾದಕ್ಕೆರಗಿ ನಿಲುವಾ!
ಹೊತ್ತು ಕಳೆಯದೆ ಕಾರ್ಯ ಕೈಗೊಳ್ಳುವಾ! (ಗು)
-ರುಶಿವನ ನಾಮಸ್ಮರಣೆ ಮಾಡುವಾ! (ಸೇ)
-ವಾ ನಿರಂಜನಾದಿತ್ಯಗೊಪ್ಪಿಸುವಾ!!!

ನಾಗರಾಜ ವಿಜಯಾನಂದಾತ್ರೇಯ! (ಅಂ)   3(1208)

-ಗ ಜಾರಿ ಪ್ರಿಯ ಗುರು ದತ್ತಾತ್ರೇಯ!
ರಾಜರಾಜಾಧೀಶ ಗುಹೇಶಾತ್ರೇಯ!
ವಿಧಿ, ಹರಿ, ಹರೈಕ್ಯ ರೂಪಾತ್ರೇಯ!
ಪ ತಪೋಪಾಸಕಾ ದತ್ತಾತ್ರೇಯ!
ಯಾಗ, ಯೋಗ ಸರ್ವ ಸಾಭಾಗ್ಯಾತ್ರೇಯ!
ನಂದ, ಕಂದ, ಮುಕುಂದಾ ದತ್ತಾತ್ರೇಯ!
ದಾತ, ನಾಥ, ಜಗನ್ನಾಥಾ ಅತ್ರೇಯ! (ಅ)
-ತ್ರೇಯಾ ಅತ್ರಿತನಯಾ ದತ್ತಾತ್ರೇಯ! (ಜ)
-ಯ ನಿರಂಜನಾದಿತ್ಯಾನಂದಾತ್ರೇಯ!!!

ನಾಗರಾಜನ ಮೇಲೆಂತು ಮಲಗಿಹೆಯಯ್ಯಾ?   2(852)

ರುಡ ಕಾವಲಿಹನೆಂದು ಧೈರ್ಯವೇನಯ್ಯಾ?
ರಾತ್ರಿ, ದಿನ ಲಕ್ಷ್ಮಿ ಬಳಿ ಇಹಳೆಂದೇನಯ್ಯಾ?
ನನ, ಮರಣ ಭಯ ನಿನಗಿಲ್ಲವಯ್ಯಾ!
ರ, ಸುರೋರಗರೆಲ್ಲಾ ನಿನ್ನಧೀನವಯ್ಯಾ!
ಮೇದಿನೀಪತಿ ನೀನು ಶಕ್ತಿ ಸಂಪನ್ನನಯ್ಯಾ! (ಲೀ)
-ಲೆಂಬ ಮಾತಿನ ಮರ್ಮವಾರರಿತಿಹರಯ್ಯಾ!
ತುದಿ ಮೊದಲಿಲ್ಲ ನಿನ್ನ ಮಾಯಾ ಜಾಲಕಯ್ಯಾ!
ನಸಾಗಿ ಮಾಡ್ಯಮನಸ್ಕನಾಗಿರ್ಪೆಯಯ್ಯಾ!
ಕ್ಷ್ಯಸಿದ್ಧಿಯಿದಕೆ ನಿನ್ನ ಕೃಪೆ ಬೇಕಯ್ಯಾ!
ಗಿರಿಧರ ಗೋಪಾಲನಿಂತು ಹೇಳುವನಯ್ಯಾ!
ಹೆಳವನೂ ಗಿರಿಯೇರುವನು ನಿನ್ನಿಂದಯ್ಯಾ! (ಭ)
-ಯಕೃದ್ಭಯನಾಶನನು ನೀನಾಗಿಹೆಯಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾನಂದ ನಿರ್ಭಯನಯ್ಯಾ!!!

ನಾಗರಾಜನಿಗೆ ಹಾಲೂಟ! [ಇಂ]   2(970)

-ಗಲಿ ಸಕಲ ಕಾಮ ಕೂಟ!
ರಾತ್ರಿ, ದಿನ ಏಕೆ ಓಡಾಟ?
ಯ ಗುರುವಿನೊಡನಾಟ!
ನಿತ್ಯ ಕೇಳವನಾಪ್ತ ಪಾಠ! (ಹ)
-ಗೆತನವಿಲ್ಲದಾಡು ಆಟ! (ಮ)
-ಹಾ ಮಾತೆ ಮಾಯೆಯೆಂಬ ನೋಟ!
ಲೂಟಿ ಮಾಡದಿರನ್ಯರೂಟ! (ದಿ)
-ಟ ನಿರಂಜನಾದಿತ್ಯಗೂಟ!!!

ನಾಗಲಿಂಗ ಪುಷ್ಪ ರತ್ನಾರ್ಚನೆ! (ಲಿಂ)   4(1485)

-ಗಕ್ಕಿದೊಂದಮೌಲ್ಯ ಪುಷ್ಪಾರ್ಚನೆ! (ಮೇ)
-ಲಿಂದ ಮೇಲಾಗಬೇಕೀ ಅರ್ಚನೆ! (ಯೋ)
-ಗ ಜೀವನಕ್ಕಿದಾದರ್ಶಾರ್ಚನೆ!
ಪುನರ್ಜನ್ಮನಾಶಕ್ಕೀ ಅರ್ಚನೆ (ಪು)
ಷ್ಪದಂತ ಮಾಡಿದ್ದನೀ ಅರ್ಚನೆ! (ಹ)
-ರನಿಷ್ಟದಂತಾಯಿತಾ ಅರ್ಚನೆ (ರ)
-ತ್ನಾಭರಣಕ್ಕಧಿಕಾ ಅರ್ಚನೆ! (ಅ)
ರ್ಚಕನುದ್ಧಾರಗೈವಾ ಅರ್ಚನೆ! (ದಿ)
-ನೆ

ಶ ನಿರಂಜನಾದಿತ್ಯಾರ್ಚನೆ!!!

ನಾಗಲಿಂಗ ಪೂಜೆಯಾಗಬೇಕು!   4(1447)

ರ್ವವೆಲ್ಲಾ ನಾಶವಾಗಬೇಕು! (ಆ)
-ಲಿಂಗನ ಭಕ್ತಿಯಿಂದಾಗಬೇಕು!
ಮನ ನಾಗನಂತಿರಬೇಕು!
ಪೂ, ಪತ್ರೆಗಳಿಂದರ್ಚಿಸಬೇಕು! (ಪ್ರ)
-ಜೆಗೀ, ಶಿವಾಚಾರವಿರಬೇಕು!
ಯಾವುದನ್ನೂ ಬೇಡದಿರಬೇಕು! (ಲಿಂ)
-ಗದಲ್ಲೈಕ್ಯ ಸುಖ ಕಾಣಬೇಕು!
ಬೇಕಿನ್ನೇನೀ ಜನ್ಮಕ್ಕೆನಬೇಕು! (ಬೇ)
-ಕು ನಿರಂಜನಾದಿತ್ಯಾಗಬೇಕು!!!

ನಾಟಕದ ನನ್ನ ಈ ಹುಚ್ಚು! (ನ)   4(1696)

-ಟಕೂಟಕ್ಕನಿವಾರ್ಯ ಕಿಚ್ಚು!
ಲ್ಪನಾತೀತವೆನ್ನಾ ಹುಚ್ಚು!
ಹಿಸುವುದೆಲ್ಲವಾ ಕಿಚ್ಚು!
ಗಿಸುವುದೆನ್ನನಾ ಹುಚ್ಚು! (ಮು)
-ನ್ನ ಮಾಡಿದ ಕರ್ಮಕ್ಕಾ ಕಿಚ್ಚು!
ರೇಳು ಲೋಕದಾಟಾ ಹುಚ್ಚು!
ಹುಟ್ಟು, ಸಾವುಗಳೂಟಾ ಕಿಚ್ಚು! (ಕಿ)
-ಚ್ಚು, ನಿರಂಜನಾದಿತ್ಯಗಚ್ಚು!!!

ನಾಟಕದ ಪಾತ್ರಗಳು ಹಂಚ್ಯಾಗಿದೆ! [ಆ]   5(3182)

-ಟ ಶುರುವಾಗಿ ಬಹಳ ಹೊತ್ತಾಗಿದೆ!
ರುಣಾದ್ಯೊಂಬತ್ತು ರಸ ಅದ್ರಲ್ಲಿದೆ!
ರಿದ್ರ, ಶ್ರೀಮಂತರಭಿನಯವಿದೆ!
ಪಾತ್ರಕ್ಕೆ ತಕ್ಕ ವೇಷ ಹಾಕ್ಬೇಕಾಗಿದೆ! (ಹ)
-ತ್ರ ದೂರದೂರುಗಳ ದೃಶ್ಯದ್ರಲ್ಲಿದೆ!
ಗನವೆಲ್ಲಕ್ಕೂ ಛತ್ರಿಯಂತೆ ಇದೆ! (ಅ)
-ಳುವುದೂ, ಆಳುವುದೆಲ್ಲಾ ಅದ್ರಲ್ಲಿದೆ!
ಹಂದಿ, ನಾಯ್ನರಿಗಳೋಡಾಟವೂ ಇದೆ! (ಪಾ)
-ಚ್ಯಾದಿ ಕೊಳೆಯುಳ್ಳ ಕೊಳಗಳೂ ಇದೆ!
ಗಿಡ, ಮರ, ಬಳ್ಳಿ ಮುಂತಾದದ್ದೂ ಇದೆ! (ತಂ)
-ದೆ ನಿರಂಜನಾದಿತ್ಯನಲ್ಲೆಲ್ಲಾ ಇದೆ!!!

ನಾಟ್ಯಕಲಾ ಪ್ರವೀಣೆ ಚಂದ್ರಮ್ಮಾ! (ಭೇ)   4(1515)

-ಟ್ಯನುಕೂಲವಾಯ್ತಿಂದು ಚಂದ್ರಮ್ಮಾ!
ಣ್ಣಿಗೀಗಿಷ್ಟೇ ಪ್ರಾಪ್ತಿ ಚಂದ್ರಮ್ಮಾ!
ಲಾಭ ಮುಂದಾಗುವುದು ಚಂದ್ರಮ್ಮಾ!
ಪ್ರಭು ಅಗಸ್ತ್ಯೇಶ್ವರ ಚಂದ್ರಮ್ಮಾ!
ವೀತರಾಗಾ ಯೋಗೀಶ ಚಂದ್ರಮ್ಮಾ! (ಜಾ)
-ಣೆ ನೀನವನ ದಾಸಿ ಚಂದ್ರಮ್ಮಾ!
ಚಂದ್ರಚೂಡ ನಿನ್ನಾತ್ಮ ಚಂದ್ರಮ್ಮಾ!
ದ್ರವ್ಯಾಸೆ ಅವಗಿಲ್ಲ ಚಂದ್ರಮ್ಮಾ! (ಅ)
-ಮ್ಮಾ ನಿರಂಜನಾದಿತ್ಯ ಚಂದ್ರಮ್ಮಾ!!!

ನಾಟ್ಯವಾಡಿ ನಟಿಸಬೇಡ ಭಜನೆಯಲಯ್ಯಾ! (ನಾ)   2(448)

ಟ್ಯಮಾಡಿ ನಟರಾಜೇಶ್ವರ ನೀನಾಗಬೇಕಯ್ಯಾ!
ವಾರಿಜಾಕ್ಷಿ, ಕಾಮಾಕ್ಷಿ ಆಗ ಒಲಿಯುವಳಯ್ಯಾ! (ಆ)
-ಡಿ, ಹಾಡಿ ಕುಣಿದಾಡಿ ಒಡಲ ಬಿಡಬೇಕಯ್ಯಾ!
ಶ್ವರದ ಇಂದ್ರಿಯ ಸುಖಕೆ ನಾಟ್ಯವಲ್ಲಯ್ಯಾ! (ಧಾ)
-ಟಿ, ರಾಗ, ತಾಳ ಭಾವಭರಿತವಿರಬೇಕಯ್ಯಾ!
ರ್ವೇಶ್ವರನ ಸಾರೂಪ್ಯಾನಂದ ವಿದರಿಂದಯ್ಯಾ!
ಬೇಕಿನ್ನೇನು ಇದಕಿಂತುತ್ತಮ ಪ್ರಸಾದವಯ್ಯಾ! (ಆ)
-ಡಲೇನೀ ಆನಂದವನನುಭವಿಸಬೇಕಯ್ಯಾ!
‘ಭಜಗೋವಿಂದಂ, ಭಜಗೋವಿಂದೆ’ಂದು ಭಜಿಸಯ್ಯಾ!
ರಾ, ಜನ್ಮ, ದುಃಖಗಳೆಲ್ಲಾ ನಿವಾರಣೆಯಯ್ಯಾ!
ನೆಲ, ಹೊಲ, ಮನೆ ಮಠವೆಲ್ಲಾ ಬಂಧನವಯ್ಯಾ! ‘(ಅ)
-ಯಮಾತ್ಮಾ ಬ್ರಹ್ಮ’ ಸ್ಥಿತಿಗಿದುತ್ತಮದಾರಿಯಯ್ಯಾ!
ಕ್ಷ್ಯವಿದೊಂದೇ ಗುರು ದತ್ತಾತ್ರೇಯಗಿಷ್ಟವಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಗುರು ದತ್ತಾತ್ರೇಯ ನಯ್ಯಾ!!!

ನಾಟ್ಯವೀಗ ಹೊರಾಂಗಣದಲ್ಲಿ!   6(3317)

(ಭೇ)-ಟ್ಯದೃಷ್ಟವಿಲ್ಲ ನಿನಗಿನ್ನಲ್ಲಿ!
ವೀತ-ರಾಗಿ ಬರಲಾರನಲ್ಲಿ!
(ಆ)-ಗ ಬೇಕನುಭವ ನಿನಗಲ್ಲಿ!
ಹೊಲಸು ವ್ಯವಹಾರ ಬೇಡಲ್ಲಿ!
(ಶ್ರೀ)-“ರಾಂ”, “ಶ್ರೀರಾಂ” ಎಂದು ಜಪಮಾಡಲ್ಲಿ!
ಡ್ಬಿಡಿ ಮಾಡಿ ಕೆಡದಿರಲ್ಲಿ!
(ಹ)-ಣಕ್ಕಾಗಿ ಹೆಣವಾಗ ಬೇಡಲ್ಲಿ!
ರ್ಶನವಾಗ್ಲಂತರಂಗದಲ್ಲಿ! (ಎ)
-ಲ್ಲಿ ನಿರಂಜನಾದಿತ್ಯಾತ್ಮನಲ್ಲಿ!!!

ನಾಥ ನಿಚ್ಛಾವರ್ತಿಯಾಗು! (ರ)   6(3593)

-ಥ ನೀನೀಗವನಿಗಾಗು!
ನಿತ್ಯ ಸೇವಾಸಕ್ತನಾಗು! (ಸ್ವೇ)
-ಚ್ಚಾಚಾರ ವಿದೂರನಾಗು!
ಕ್ರ ದಾರಿ ಬಿಟ್ಟು ಸಾಗು! (ಕೀ)
-ರ್ತಿ ಶ್ರೀ ಪಾದಕ್ಕೆಂದು ಬಾಗು!
ಯಾದವನ ರಾಧೆಯಾಗು! (ಆ)
-ಗು, ನಿರಂಜನಾದಿತ್ಯಾಗು!!!

ನಾದಪ್ರಿಯ ವಿಶ್ವೇಶ್ವರಯ್ಯಾ!   2(815)

ತ್ತನಲಿವನೈಕ್ಯವಯ್ಯಾ!
ಪ್ರಿಯ ಭಕ್ತರಿಷ್ಟದೇವಯ್ಯಾ!
ಕ್ಷ, ರಾಕ್ಷಸರ್ವಶರಯ್ಯಾ!
ವಿಧಿತನ್ನಿಂದನ್ಯವಿಲ್ಲಯ್ಯಾ! (ವಿ)
-ಶ್ವೇಶ್ವರ ತಾ ತ್ಯಾಗರಾಜಯ್ಯಾ! (ವಿ)
-ಶ್ವಮಾತೆ ಲಲಿತಗಾಪ್ತಯ್ಯಾ!
ತ್ನ ವಿಲಾಸೇಚ್ಛೆಯಿಲ್ಲಯ್ಯಾ! (ಅ)
-ಯ್ಯಾ! ಜೈ ನಿರಂಜನಾದಿತ್ಯಯ್ಯಾ!!!

ನಾದವಾಗುತಲಿದೆ ಬಂಧ ಹರಿಯದಿದೆ!   1(206)

ಯೆ ಕಾಣುತಲಿದೆ, ಮಾಯೆಯಳಿಯದಿದೆ!
ವಾಕ್ನಿಲ್ಲುತಲಿದೆ, ಸಾಕು, ಬೇಕು, ನಿಲ್ಲದಿದೆ!
ಗುರಿ ತೋರುತಿದೆ, ದುರಿತ ದೂರಾಗದಿದೆ!
ಳ ಕಾಣುತಲಿದೆ, ಆಳ ತಿಳಿಯದಿದೆ! (ಕ)
-ಲಿತದ್ದು ನೆನಪಿದೆ, ಬಲಿತು ಬಾರದಿದೆ! (ಎ)
-ದೆ ವಿಮಲವಾಗಿಎ, ಹಾದಿ ತೆರೆಯದಿದೆ!
ಬಂಧು ಬಂದಾಗಿದೆ, ನಿಂದಾನಂದಿಸದಾಗಿದೆ!
ರಣಿ ಬೇಡಾಗಿದೆ, ತರಣಿ ಗಡ್ಡಾಗಿದೆ!
ಸಿವೆ ಹೆಚ್ಚಾಗಿದೆ, ಕಪಾಲ ಖಾಲಿಯಿದೆ! (ಅ)
-ರಿವೆ ತುಂಬಾ ಇದೆ, ಧರಿಸುವುದ್ಬೇಡಾಗಿದೆ!
ತ್ನ ಸಾಗುತಲಿದೆ, ರತ್ನ ದೊರೆಯದಿದೆ!
ದಿಟ ಬೆಳಗುತಿದೆ, ಸಟೆ ಸಾಯದೆ ಇದೆ! (ಇ)
-ದೆಲ್ಲಾ ನಿರಂಜನಾದಿತ್ಯನಿಗರಿತೇ ಇದೆ!!!

ನಾನಂದಂತೆಂತಾಗಿದೆ ಹೇಳು! (ನೀ)   6(3965)

-ನಂದಂತೇ ಸಾಗುತಿದೆ ಬಾಳು!
ದಂಭ ದರ್ಪದಿಂದ ನಾ ಕೀಳು!
ತೆಂಗು, ಮಾವೇ ನನ್ನಿಂದ ಮೇಲು!
ದಾನ ಶೀಲವುಗಳ ಬಾಳು! (ಯೋ)
-ಗಿರಾಜನಿನಗಿಲ್ಲ ಗೋಳು! (ತಂ)
-ದೆ ನೀನು ಮಾಡ್ಬೇಡೆನ್ನ ಹಾಳು!
ಹೇರಂಬ ಗಣಪಗಾಗಾಳು! (ಬಾ)
-ಳು ನಿರಂಜನಾದಿತ್ಯನೊಲು!!!

ನಾನಗಸರ ಕಲ್ಲಾಗಿಹೆನಯ್ಯಾ!   1(62)

ನಗೆ ಕೊಳೆ, ಮಳೆ ಇಲ್ಲವಯ್ಯಾ!
ಗನವನೀಕ್ಷಿಸುತಿಹೆನಯ್ಯಾ!
ರ್ವರಂಬರ ಶುಭ್ರ ನನ್ನಿಂದಯ್ಯಾ!
ಕ್ಷಣೆಯೆನಗೆ ಬೇಕಿಲ್ಲವಯ್ಯಾ!
(ಅ) -ಲ್ಲಾಡದೊಂದೆಡೆ ಬಿದ್ದಿರುವೆನಯ್ಯಾ!
ಗಿರಿಧರನಿಗಾಸನ ನಾನಯ್ಯಾ!
ಹೆಣ್ಣು, ಗಂಡೆಂಬ ಭೇದವಿಲ್ಲಯ್ಯಾ!
ನಗೆ ಫಲಾಪೇಕ್ಷೆಯಿಲ್ಲವಯ್ಯಾ!
(ಅ) -ಯ್ಯಾ, ನಿರಂಜನ ನಾನಾಗಿಹೆನಯ್ಯಾ!! %

ರೊ

ಲೆ


ನಾನಬಲಯ್ಯಾ, ನೀ ಸಬಲಯ್ಯಾ! (ನೀ)   4(1754)

-ನಮಲಿನಯ್ಯಾ, ನಾ ಮಲಿನಯ್ಯಾ!
ಡವಾಯ್ತಯ್ಯಾ, ಜಡವಿದಯ್ಯಾ!
ಯ ಮಾಡಯ್ಯಾ, ಜಯ ನೀಡಯ್ಯಾ! (ಅ)
-ಯ್ಯಾ ಶಂಕರಯ್ಯಾ, ಸುಖಂಕರಯ್ಯಾ!
ನೀ ಖೇಚರಯ್ಯಾ, ನಾ ಭೂಚರಯ್ಯಾ!
ದಾನಂದಯ್ಯಾ, ಚಿದಾನಂದಯ್ಯಾ!
ಟ್ಟೆದೋರಯ್ಯಾ, ಹೊಟ್ಟೆ ಭಾರಯ್ಯಾ!
ಕ್ಷ್ಯ ನೀನಯ್ಯಾ, ಅಲಕ್ಷ್ಯಾನಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯ ನಮ್ಮಯ್ಯಾ!!!

ನಾನಾಗಿತ್ತುದನು ಸ್ವೀಕರಿಸು! (ನೀ)   5(2650)

-ನಾಗ್ಕಿತ್ತುವುದ ನಿರಾಕರಿಸು!
ಗಿರ್ವಿ ಪದ್ಧತಿಯ ಸುಧಾರಿಸು! (ಹೆ)
-ತ್ತು, ಹೊತ್ತವರ ಪತಿಕರಿಸು!
ತ್ತಾತ್ರೇಯಗೆ ನಮಸ್ಕರಿಸು!
ನುಡಿದಂತೆ ನಡೆದ್ಸಂಚರಿಸು! (ಹೇ)
-ಸ್ವೀ ದುರಾಶೆಗಳ ಸೀಳಿರಿಸು!
ಟ್ಟುಕಥೆಗಳ್ಬದಿಗಿರಿಸು!
ರಿಪುಗಳಾರನ್ನು ಸಂಹರಿಸು! (ವಾ)
-ಸುಕಿ ನಿರಂಜನಾದಿತ್ಯನಸು!!!

ನಾನಾಗಿರುವೆ ಸಂಗೀತರತ್ನ! (ನೀ)   4(2020)

-ನಾಗಿರುವೆ ಸೀತಾರಾಮ ರತ್ನ! (ರೋ)
-ಗಿ ನಾನಾಗಿರುವೆ ಕಾಮ ರತ್ನ! (ಇ)
-ರುವೆ ನೀನಾರಾಮ ರಾಮರತ್ನ! (ನೋ)
-ವೆನಗಿರಲಾಗಿ ಕಾಮರತ್ನ!
ಸಂಜೀವ ನೀನಾಗಿ ರಾಮರತ್ನ! (ಭೋ)
-ಗೀಶನೆನಿಸಿ ನಾ ಕಾಮರತ್ನ! (ವೀ)
-ತರಾಗೆನಿಸಿ ನೀ ರಾಮರತ್ನ! (ಮ)
-ರಣಕ್ಕೀಡಾಗಿದು ಕಾಮರತ್ನ! (ರ)
-ತ್ನ ನಿರಂಜನಾದಿತ್ಯಾತ್ಮ ರತ್ನ!!!

ನಾನಾಡುವುದೆಲ್ಲಾ ನಿಜ!   6(3409)

ನಾ, ನೀ ನೊಂದೆಂಬುದೂ ನಿಜ!
(ಹಾ)-ಡುವುದ್ನಿನ್ನ ನಾಮ ನಿಜ!
(ಸಾ)-ವು, ನೋವು, ದೇಹಕ್ಕೆ ನಿಜ!
(ತಂ)-ದೆ, ತಾ

ಯೆಲ್ಲಾ ನೀನೇ ನಿಜ!
(ಚೆ)-ಲ್ಲಾಟ ಮನಸ್ಸಿಗೆ ನಿಜ!
“ನಿತ್ಯವಲ್ಲ ಅದು” ನಿಜ!
(ನಿ)-ಜ, ನಿರಂಜನಾದಿತ್ಯಜ!!!

ನಾನಾದೆ ನಿನಗಾಗಿ ತೆಂಗಿನಕಾಯಿ! (ನೀ)   4(1527)

-ನಾದೆ ನನಗಾಗಿ ದತ್ತ ಗುರು ತಾಯಿ! (ಬಂ)
-ದೆನ್ನನೆತ್ತಿಕೋ ತ್ರಿಮೂರ್ತಿ ರೂಪಿ ತಾಯಿ!
ನಿತ್ಯ ನೈವೇದ್ಯವಾಗಲಿದು ಹೇ ತಾಯಿ!
ನ್ನನುಪೇಕ್ಷಿಸಬಾರದಮ್ಮಾ ತಾಯಿ!
ಗಾನಾಮೃತ ತುಂಬಬೇಕೊಳಗೆ ತಾಯಿ! (ತ್ಯಾ)
-ಗಿ ನಾನಾಗಿಹೆನು ನಿನಗಾಗಿ ತಾಯಿ!
ತೆಂಗಿನಕಾಯಿಯಿಂಗಿತವಿದು ತಾಯಿ! (ಯೋ)
-ಗಿಯಾಗಿ ವಿರಾಗಿಯಾಗಬೇಕು ತಾಯಿ!
ಶ್ವರದ ರೂಪ ಸಾಕು ಮಾಡು ತಾಯಿ!
ಕಾದಿಹೆನು ನಿನ್ನಾಜ್ಞೆಗೆ ನಾನು ತಾಯಿ! (ತಾ)
-ಯಿಗರ್ಪಣೆ ನಿರಂಜನಾದಿತ್ಯ ಕಾಯಿ!!!

ನಾನಾರೆಂದಮ್ಮನ ಗಂಡ ನಂಜುಂಡ!   3(1111)

ನಾಮ, ರೂಪಾತೀತ ಗಂಡ ನಂಜುಂಡ! (ಆ)
-ರೆಂದು ತೋರುವನು ಗಂಡ ನಂಜುಂಡ!
ತ್ತನೇನಾನೆಂಬ ಗಂಡ ನಂಜುಂಡ! (ಅ)
-ಮ್ಮಯ್ಯಣ್ಣಯ್ಯಾನೆಂಬ ಗಂಡ ನಂಜುಂಡ!
ಟರಾಜಾನೆಂಬ ಗಂಡ ನಂಜುಂಡ!
ಗಂಗಾಧರಾನೆಂಬ ಗಂಡ ನಂಜುಂಡ! (ಮೃ)
-ಡನೆಂಬವಾನೆಂಬ ಗಂಡ ನಂಜುಂಡ! (ಅ)
-ನಂಗಾರಿ ನಾನೆಂಬ ಗಂಡ ನಂಜುಂಡ! (ನಂ)
-ಜುಂಡ, ಮಾರ್ತಾಂಡೆಂಬ ಗಂಡ ನಂಜುಂಡ! (ಬೇ)
-ಡ ಶ್ರೀ ನಿರಂಜನಾದಿತ್ಯ ನಂಜುಂಡ!!!

ನಾನಾರೆಂದರಿಯದವರಾರಾದರೇನು?   3(1017)

ನಾಮ, ರೂಪಕ್ಕಂಟಿಕೊಂಡಿರ್ಪವರಿಂದೇನು? (ಯಾ)
-ರೆಂದರಿಯದ ಜ್ಞಾನಿಗಳೇನೆಂದರೇನು?
ನ, ಜನ, ಧನವಂತರಾದರಾಯ್ತೇನು? (ಪ)
-ರಿಪರಿಯಲಿಹಸುಖ ಪಟ್ಟರಾಯ್ತೇನು?
ಜ್ಞ, ಯಾಗಗಳಾಟ ಹೂಡಿದರಾಯ್ತೇನು?
ಯಾಶೂನ್ಯರಾದವರಿಗೇನಿದ್ದರೇನು?
ರ ಗುರುಸೇವಗೀ ಜನ್ಮವಲ್ಲವೇನು?
ರಾಮಾಯಣ ಬರೆದವ ಸಾಮಾನ್ಯನೇನು?
ರಾಮಭಕ್ತ ಮಾರುತಿಗುಪಮಾನವೇನು?
ತ್ತಾತ್ರೇಯನಿಷ್ಟದಂತಿರಬಾರದೇನು?
ರೇಣುಕಾತ್ಮಜನಾದರ್ಶನುಚಿತವೇನು? (ಏ)
-ನು, ನಿರಂಜನಾದಿತ್ಯನರಿವಾಗದೇನು???

ನಾನಾರೆಂಬುದೆನಗರುಹೆದ ನಿರಂಜನ!   1(4)

ನುಡಿಬೇಡಿದನೆಲ್ಲರಿಗೆಂದ ನಿರಂಜನ!
ಗೇವರ ಸಂಗೇವನೇ ನಾನೆಂದ ನಿರಂಜನ!
ವಸು ರುದ್ರಾದಿ ಗಣ ನಾನೆಂದ ನಿರಂಜನ!
ನೇಮಾನುಷ್ಟಾನ ಸಿದ್ದ ನಾನೆಂದ ನಿರಂಜನ
ನಿರಂಜನನೇ ಭವ ಭಂಜನ! ನಿರಂಜನ
ರಂಗಿಪನು ವಿರಾಗಿಪನು ಶ್ರೀ ನಿರಂಜನ
ಜಪಿಸುವನು ಭಜಿಸುವನು ನಿರಂಜನ
ನನ್ನಂತಿರಲು ನೀನೆಂದನು ಗುರು! ನಿರಂಜನ

ನಾನಿಂದರ್ಧ ದೋಸೆ ತಿಂದೆ!   4(2440)

ನಿಂಬೆ ಚಟ್ನಿ ಸೇರ್ಸಿ ತಿಂದೆ!
ತ್ತನಿಷ್ಟವೆಂದು ತಿಂದೆ! (ನಿ)
-ರ್ಧರಿಸಿ, ಪ್ರಾರ್ಥಿಸಿ ತಿಂದೆ!
ದೋಷಿ ನಾನಲ್ಲೆಂದು ತಿಂದೆ! (ಆ)
-ಸೆ ನನಗಿಲ್ಲೆಂದು ತಿಂದೆ!
ತಿಂಡಿ ಪ್ರಸಾದ್ವೆಂದು ತಿಂದೆ? (ತಿಂ)
-ದೆ, ನಿರಂಜನಾದಿತ್ಯಾದೆ!!!

ನಾನಿದ್ದಲ್ಲಿ ನೀನಿದ್ರೆ ನಿತ್ಯ ಸುಖ! (ನೀ)   6(3457)

-ನಿದ್ದಲ್ಲಿ ನಾನಿದ್ರೆ ಅನಿತ್ಯ ಸುಖ! (ಇ)
-ದ್ದದ್ದಂದ್ರೆ ತಿರುಗಿಸಬೇಡ ಮುಖ! (ಮ)
-ಲ್ಲಿಕಾರ್ಜುನ ಲಿಂಗವೇ ನಿನ್ನ ಸಖ!
ನೀನದ್ರಲ್ಲೈಕ್ಯವಾದ್ರೆ ಮುಕ್ತಿ ಸುಖ!
ನಿತ್ಯವಿರ್ಲಿ ಗುರುಮಂತ್ರದುಲ್ಲೇಖ! (ತೊಂ)
-ದ್ರೆಗಳಿಗೆ ಪಡ್ಬೇಡ ನೀನು ದುಃಖ!
ನಿನಗೆ ಬೇಕಿಲ್ಲ ಜಪದ ಲೆಃಖ! (ಭೃ)
-ತ್ಯ ನೀನವಗಾದ್ರೆ ಪರಮ ಸುಖ!
ಸುರ, ನರಾದ್ಯರಾ ಗುರು ತಿರುಕ!
ಗ ಶ್ರೀ ನಿರಂಜನಾದಿತ್ಯ ಸಖ!!!

ನಾನಿದ್ದಲ್ಲಿಗೆ ನೀನೇ ಬಾ!   6(3346)

ನಿನ್ನವರ್ಗಿಲ್ಗಾ ಲಾಭ; ಬಾ!
(ಇ)-ದ್ದಲ್ಲಿಂದ್ಲೇ ಮಾಳ್ಪೆಶುಭ, ಬಾ!
(ಇ)-ಲ್ಲಿ ನನ್ನೊಳೈಕ್ಯವಾಗು ಬಾ!
ಗೆದ್ದಾಸೆಗಳ ನೀನು ಬಾ!
ನೀನು ನಾನಾಗಬೇಕು ಬಾ!
ನೇತ ನಾನೆಂದು ನಂಬಿ ಬಾ!
ಬಾ, ನಿರಂಜನಾದಿತ್ಯಾಗ್ಬಾ!!!

ನಾನಿನಗೇನು ಮಾಡಬೇಕತ್ತೆ?   3(1227)

ನೀನೆಲ್ಲಾ ಹೇಳಿ ಮಾಡಿಸತ್ತೆ! (ಬೇ)
-ಗೇಳೆಂದರೇಳುವೆ ನಾನಾತ್ತೆ! (ಅ)
-ನುದಿನದಾಚಾರವೇನತ್ತೆ?
ಮಾಡೆಲೇನಡಿಗೆ ನಿತ್ಯತ್ತೆ? (ನಾ)
-ಡರೂಢಿ ನಾನರಿಯೆನತ್ತೆ!
ಬೇಕು ಪತಿಸೇವೆನಗತ್ತೆ!
ಷ್ಟ ನನಗಾವುದಿಲ್ಲತ್ತೆ! (ಅ)
-ತ್ತೆ ನಿರಂಜನಾದಿತ್ಯಾತ್ಮತ್ತೆ!!!

ನಾನಿನ್ನ ರೂಪ, ಸರ್ವನಾಮ ರೂಪ!   2(572)

ನಿನ್ನ ಸ್ಮರಣೆ ನನ್ನ ಸುಸ್ವರೂಪ! (ಚ)
-ನ್ನಕೇಶವನೆಂಬುದದೊಂದು ರೂಪ!
ರೂಪವಿದು ಶ್ರೀದೇವಿಯಾತ್ಮರೂಪ!
ರಮಾನಂದ ಕನಕನಾ ರೂಪ!
ದಾ ಜಪಕಿದು ಸಾಯುಜ್ಯರೂಪ! (ಸ)
-ರ್ವಧರ್ಮ ಕರ್ಮಾಧಾರಮರ ರೂಪ!
ನಾಮ ನಿರಂಜನನಾನಂದ ರೂಪ!
ರಣ ದುಃಖ ಶಾಂತಿಗಿದೇ ರೂಪ!
ರೂಪಾರೂಪವಿಲ್ಲದಿದೇ ಸ್ವರೂಪ! (ರೂ)
-ಪ, ನಿರಂಜನಾದಿತ್ಯ ನಿತ್ಯರೂಪ!!!

ನಾನಿನ್ನು ತಿಂಡಿ ಕೇಳುವುದಿಲ್ಲಮ್ಮಾ! (ನಾ)   4(1576)

-ನಿನ್ನವನೆಂಬಭಿಮಾನವಿಲ್ಲಮ್ಮಾ! (ತಿ)
-ನ್ನುತ್ತಿದ್ದೆ ಪ್ರಸಾದವೆಂದೆಲ್ಲವಮ್ಮಾ!
ತಿಂದು ತೇಗುವಾಸೆ ನನಗಿಲ್ಲಮ್ಮಾ! (ಬಂ)
-ಡಿಯನ್ನ ಉಂಡವನಂತಾನೇನಮ್ಮಾ? (ಏ)
-ಕೇನಿದೆಂದೆಂದೂ ಕೇಳಿಹೆನೇನಮ್ಮಾ? (ಕೂ)
-ಳು ಗೊಂಬೆಯಾಟವೆನಗೆ ಬೇಡಮ್ಮಾ! (ಸಾ)
-ವು ಈಗಲೇ ಬಂದರೆ ಸುಖವಮ್ಮಾ!
ದಿಕ್ಕಿಲ್ಲದಂತೆನ್ನ ಮಾಡಬೇಡಮ್ಮಾ! (ಪು)
-ಲ್ಲನಾಭರಸಿ ನೀನು ಕಾಣಮ್ಮಾ! (ಅ)
ಮ್ಮಾ, ನಿರಂಜನಾದಿತ್ಯಾತ್ಮೀಯನಮ್ಮಾ!!!

ನಾನಿನ್ನು ಬದುಕಿರಬಾರದಯ್ಯಾ!   2(538)

ನಿನಗೆ ಮರಣವಿದೆಯೇನಯ್ಯಾ? (ಅ)
-ನ್ನುತಿಹೆ ನಿನ್ನ ನೀನರಿಯದಯ್ಯಾ!
ದುಕು ಬಾಳು ಜೀವಭಾವಕಯ್ಯಾ!
ದುರ್ಬಲ ಲಕ್ಷ್ಮೀನಾರಾಯಣಲ್ಲಯ್ಯಾ!
ಕಿರುಕುಳವಾಗ್ವುದು ಮನಕಯ್ಯಾ! (ವ)
-ರ ನಾರಾಯಣ ಮನಸಲ್ಲವಯ್ಯಾ!
ಬಾರಿಬಾರಿಗೂ ಧ್ಯಾನಿಸಿದನಯ್ಯಾ!
ಮಾರಮಣ ನಿರ್ವಿಕಾರನಯ್ಯಾ!
ಮನ ಮಾಡಿಂದ್ರಿಯಗಳನಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ‘ನಾ’ ‘ನೀ’ನಯ್ಯಾ!!!

ನಾನಿರಬಾರದೆಂದಳ್ಚಿನ್ನಮ್ಮ!   5(2506)

ನಿನಗಿಲ್ಲ ಸಾವೆಂದನಾ ಬೊಮ್ಮ! (ತೋ)
-ರಬೇಕದೆನಗೆಂದಳ್ಚಿನ್ನಮ್ಮ!
ಬಾ

ಕಾಲ್ನೀನಲ್ಲೆಂದನಾ ಬೊಮ್ಮ! (ಪ)
-ರಮಾರ್ಥಾನರಿಯೆಂದಳ್ಚಿನ್ನಮ್ಮ! (ಅ)
-ದೆಂಬಾತ್ಮನೇ ನೀನೆಂದನಾ ಬೊಮ್ಮ! (ಆ)
-ದನುಗ್ರಹ ಮಾಡೆಂದಳ್ಚಿನ್ನಮ್ಮ! (ಕ)
-ಳ್ಚಿಹೋಗ್ಲೆಲ್ಲಾ ಬಂಧವೆಂದಾ ಬೊಮ್ಮ! (ನ)
-ನ್ನ ಜ್ಞಾನ ಹೋಯ್ತಿಗೆಂದಳ್ಚಿನ್ನಮ್ಮ! (ಅ)
-ಮ್ಮ ನಿರಂಜನಾದಿತ್ಯನೆಂದ್ಬೊಮ್ಮ!!!

ನಾನಿರುವಂತೆ ನೀನೂ ಇರು!   3(1015)

ನಿರ್ವಿಕಲ್ಪ ಭಾವದಿಂದಿರು!
ರುಚಿಯೂಟ ಆಶಿಸದಿರು!
ವಂಚಿಸುವಭ್ಯಾಸ ಬಿಟ್ಟಿರು!
ತೆರೆಮರೆಯ ಕಾಯಂತಿರು!
ನೀಚರ ಸಂಗ ಮಾಡದಿರು!
ನೂರಾರು ಸಂಕಲ್ಪ ಸುಟ್ಟಿರು!
ರಿಸಿದಂತಿದ್ದುಕೊಂಡಿರು! (ಗು)
-ರು ನಿರಂಜನಾರ್ಕನಂತಿರು!!!

ನಾನಿರುವೆಡೆ ನಿನಗೆ ಗೊತ್ತು!   6(3598)

ನಿನಗದರ ಮಹತ್ತೂ ಗೊತ್ತು! (ದ)
-ರುಶನ ಆಪ್ತರಿಗೆಂದೂ ಗೊತ್ತು!
ವೆಸನ ನಿಷ್ಫಲವೆಂದೂ ಗೊತ್ತು! (ಕೂ)
-ಡೆ ಒಡನಾಡಿ ನಿನ್ಗೆಲ್ಲಾ ಗೊತ್ತು!
ನಿನ್ನ, ನನ್ನ ಸಂಬಂಧವೂ ಗೊತ್ತು!
ಶ್ವರ ನಾನಲ್ಲೆಂಬುದೂ ಗೊತ್ತು!
ಗೆಳೆಯಾಗ್ರೇಸರಾನೆಂದೂ ಗೊತ್ತು!
ಗೊತ್ತಿದ್ರೂ ಸೇರಲ್ಬಂದಿಲ್ಲ ಹೊತ್ತು! (ಹೊ)
-ತ್ತು ನಿರಂಜನಾದಿತ್ಯಗಾವತ್ತು!!!

ನಾನಿರ್ಬೇಕಾ? ಸಾಯ್ಬೇಕಾ?? ಜನಕಾ???   6(3565)

ನಿನಗೇಕೆ ಬಂತೀ ಅವಿವೇಕಾ? (ಇ)
ರ್ಬೇಕಾದದ್ದಿಲ್ಲದಿದ್ರುಂಟೇ ಲೋಕಾ?
ಕಾರಣಕರ್ತನಾಜ್ಞೆ ತನಕಾ!
ಸಾಧನೆ ಸಾಗದಿದ್ರೇನು ಸುಖಾ? (ಕಾ)
-ಯ್ಬೆ

ಕವನ ಕೃಪೆಗೆ ಬಾಲಕಾ!
ಕಾಮ ಜೀವನ ಚಿಂತಾಜನಕಾ!
ರಾ, ಜನ್ಮಕ್ಕೆ ಗುರು ತಾರಕಾ!
ಶ್ವರಕ್ಕಾಶಿಪಳು ಗಣಿಕಾ! (ಸಾ)
-ಕಾ, ಶ್ರೀ ನಿರಂಜನಾದಿತ್ಯ ಬೇಕಾ???

ನಾನಿರ್ವ ತನ್ಕ ಏನೂ ಯೋಚಿಸ್ಬೇಡೆಂದಾ ಭಕ್ತ!   5(3237)

ನಿನ್ನ, ನನ್ನ ಸಖ್ಯ ಸದಾ ಇರಲೆಂದಾ ಮುಕ್ತ! (ಈ)
-ರ್ವರೊಂದಾಗಿರುವುದೆಂದೆಂದಿಗೂ ಉಪಯುಕ್ತ!
ಪ್ಪಿ ನಡೆಯಬಾರದಿಬ್ಬರೂ ಈ ಪ್ರಯುಕ್ತ! (ಏ)
-ನ್ಕನಸು ಕಂಡ್ರೂ ಹಿಗ್ಗ, ಕುಗ್ಗ ನಿಜ ವಿರಕ್ತ!
ರ್ಪೇರೆಲ್ಲಾ ಮಟ್ಟವಾದ್ಮೇಲೆ ಎತ್ಬೇಕು ಕತ್ತ!
ನೂರಾರ್ಮಾತ್ಗಿಂತೋರೊಂದು ಕಾರ್ಯಗೈವುದೇ ಸೂಕ್ತ!
ಯೋಗಶಕ್ತಿಯಿಂದ ಜೈಸಬೇಕು ಈ ಜಗತ್ತ!
ಚಿತ್ತ ಶುದ್ಧಿಯಿಂದಾಗುವ ಸಾಧಕ ಶಕ್ತ! (“ಈ)
-ಸ್ಬೇಕಿದ್ದು ಜೈಸ್ಬೇಕು!” ಈಗಿಹ ವಿಪತ್ತ ! (ನೀ)
-ಡೆಂದರೆ ಕೊಡದಿರುವವನಾವ ಉದಾತ್ತ?
ದಾಹ ಶಾಂತಿಯಾಗದು ಹೋದ್ರೆ ಕಡಲಿನತ್ತ!
ಯ, ಭಕ್ತಿಯ ಸಜ್ಜನನೆಡೆಗೆ ಪೋಗತ್ತ! (ಭ)
-ಕ್ತವತ್ಸಲ ನಿರಂಜನಾದಿತ್ಯಮುಕ್ತ ಭಕ್ತ!!!

ನಾನು ಅಂಬಾ, ನೀನು ಸಾಂಬಾ! (ಸೂ)   6(3618)

-ನು ಈರ್ವರಿಗೂ ಹೇರಂಬಾ!
ಅಂಬಾ, ಲೋಕಾಂಬಾ, ಮೂಕಾಂಬಾ! (ಸಾಂ)
-ಬಾರ್ಧನಾರೀಶ್ವರ ಬಿಂಬಾ!
ನೀತಿ, ರೀತ್ಯಭೇದಾ ಬಿಂಬಾ (ಅ)
-ನುಪಮ ಸುಂದರಾ ಬಿಂಬಾ!
ಸಾಂಖ್ಯಯೋಗಾನಂದಾ ಬಿಂಬಾ! (ಸಾಂ)
-ಬಾ, ನಿರಂಜನಾದಿತ್ಯಾಂಬಾ!!!

ನಾನು ಕಟ್ಟಿಲ್ಲ, ನೀನು ಬಿಚ್ಚಿಲ್ಲ! (ಅ)   6(4315)

-ನುಕೂಲ ಯಾರಿಗೂ ಎನೂ ಇಲ್ಲ!
“ಕರ್ತವ್ಯ, ನಿನ್ನ ಸೇವೆ!” ಬಿಟ್ಟಿಲ್ಲ! (ಪೆ)
-ಟ್ಟಿಗೆ ಬೀಗದ ಕೈ ನೀನಿತ್ತಿಲ್ಲ! (ಚಿ)
-ಲ್ಲರೆ ಕಾಸಿನಿಂದ ಸುಖವಿಲ್ಲ!
ನೀನೇ ನಾನೆನ್ನುವುದು ಸುಳ್ಳಲ್ಲ! (ತ)
-ನುಭಾವದಿಂದ ಭಿನ್ನತೆಯೆಲ್ಲಾ!
ಬಿಡಿಸು ಅದ್ರಿಂದ ನಮ್ಮನ್ನೆಲ್ಲಾ! (ಹ)
-ಚ್ಚಿಕೊಂಡಾರನ್ನೂ ನಾನಳುತ್ತಿಲ್ಲ! (ಬ)
-ಲ್ಲ ಶ್ರೀ ನಿರಂಜನಾದಿತ್ಯನೆಲ್ಲ!!!

ನಾನು ಕಣ್ಮರೆಯಾಗುವುದಿಲ್ಲ! (ತ)   3(1359)

-ನು ನಾನೆಂದರದಾಗುವುದಿಲ್ಲ!
ಣ್ಣು ಕಂಡದ್ದೊಂದೂ ಸ್ಥಿರವಲ್ಲ! (ಆ)
-ಣ್ಮನಲ್ಲೊಂದಾದರೆ ದುಃಖವಿಲ್ಲ! (ಹ)
-ರೆಯದ ಕಳೆಗುಂದುವುದಿಲ್ಲ!
ಯಾರ ಭಯವೂ ಇರುವುದಿಲ್ಲ!
ಗುರು ಕರುಣೆ ಬೇರಿನ್ನೇನಿಲ್ಲ! (ಸಾ)
-ವು, ನೋವಿನ ಅಂಜಿಕೆಯೇ ಇಲ್ಲ!
ದಿನ, ರಾತ್ರಿ ನಿಜಾನಂದವೆಲ್ಲ! (ನ)
-ಲ್ಲ ನಿರಂಜನಾದಿತ್ಯ ನಿರ್ಮಲ!!!

ನಾನು ಕಿಲಾಡಿ ಕಾಣಮ್ಮಾ! [ಅ]   2(811)

-ನುಮಾನ ಬೇಡ ಕಾಣಮ್ಮಾ!
ಕಿವಿ, ಬಾಯಿಲ್ಲ ಕಾಣಮ್ಮಾ!
ಲಾಭೇಚ್ಛೆಯಿಲ್ಲ ಕಾಣಮ್ಮಾ! (ಮ)
-ಡಿ ಮೈಲಿಗೆಯಿಲ್ಲ ಕಾಣಮ್ಮಾ!
ಕಾರ್ಯ, ಕಾರಣ ಕಾಣಮ್ಮಾ! [ಗು]
-ಣ ದೋಷವಿಲ್ಲ ಕಾಣಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯಮ್ಮಾ!!!

ನಾನು ಕಿಲಾಡಿನಿಜವಯ್ಯಾ! (ಅ)   2(812)

-ನುಪಮ ರಾಮ ನಿಜವಯ್ಯಾ!
ಕಿವಿ, ಬಾಯಿಲ್ಲ ನಿಜವಯ್ಯಾ!
ಲಾಭೇಚ್ಛೆಯಿಲ್ಲ ನಿಜವಯ್ಯಾ! (ಮ)
-ಡಿ ಮೈಲಿಗೆಯಿಲ್ಲ ನಿಜವಯ್ಯಾ!
ನಿತ್ಯ ನಿರ್ಮಲ ನಿಜವಯ್ಯಾ!
ಗಕಂಟಿಲ್ಲ ನಿಜವಯ್ಯಾ!
ನಜಮಿತ, ನಿಜವಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಮ್ಮಯ್ಯಾ!!!

ನಾನು ಗುರುದೇವದತ್ತ ನಿಜ!   5(2854)

ನುಡಿಯೆನ್ನದಕ್ಷರಶಃ ನಿಜ!
ಗುಣಾತೀತ ನಾನೆಂಬುದು ನಿಜ! (ಗು)
-ರುದ್ರೋಹಿಗರಿವಾಗದೀ ನಿಜ!
ದೇಹ ದೇಗುಲವೆಂಬುದು ನಿಜ!
ಸನಷ್ಟದಿಕ್ಕೆಂಬುದು ನಿಜ!
ರ್ಶನನನ್ಯಭಕ್ತಿಗೆ ನಿಜ! (ಹ)
-ತ್ತಾವತಾರ ನಾನೆಂಬುದೂ ನಿಜ!
ನಿತ್ಯ, ಸತ್ಯ, ಶಿವಾನಂದ ನಿಜ! (ನಿ)
-ಜ ನಿರಂಜನಾದಿತ್ಮಾತ್ಮ ನಿಜ!!!

ನಾನು ದಾಸಿ, ನೀನು ಉದಾಸಿ!   6(3639)

ನುತಿಪೆ ನಾ ನಿನ್ನ ಉಪಾಸಿ!
ದಾರಿ ಕಾಣದಾಗಿದೆ ಘಾಸಿ!
ಸಿಟ್ಟೇಕೆ? ಬಾ, ಕೈಲಾಸವಾಸಿ!
ನೀ ನೆನ್ನವ್ನೆಂಬುದಲ್ಲ ಹುಸಿ!
ನುಡಿಯಬೇಡನೃತ ಹೇಸಿ!
ಪೇಕ್ಷಿಸಿದ್ರೆ ಮುಖಕ್ಮಸಿ!
ದಾಸಿಯೆಂತಹಳು ರಾಕ್ಷಸಿ? (ದಾ)
-ಸಿ, ನಿರಂಜನಾದಿತ್ಯೋದಾಸಿ!!!

ನಾನು ದೇಹವಲ್ಲಾ, ದೇಹ ನಾನಲ್ಲಾ! (ಅ)   5(3281)

-ನುಮಾನ ವಿದರಲ್ಲೇನೂ ಇಲ್ಲಾ!
ದೇಹಕ್ಕೆ ಸಾವು, ನೋವುಗಳೆಲ್ಲಾ!
ಸಿವೆ, ತೃಷೆಗಳದಕ್ಕೆಲ್ಲಾ!
-ಲ್ಲಾ ಉಸಿರಿರುವಾಗ ಬೇಕಲ್ಲಾ!
ದೇವರಿಲ್ಲದ ಜಾಗವೇ ಇಲ್ಲಾ!
ಗಲಿರುಳು ಅವನಿಗಿಲ್ಲಾ!
ನಾನವನಿಂದ ಆನ್ಯನೇನಲ್ಲಾ!
ರ ನಾರಾಯಣರೊಂದೇ ಎಲ್ಲಾ! (ಎ)
-ಲ್ಲಾ ನಿರಂಜನಾದಿತ್ಯ ಪ್ರಫುಲ್ಲಾ!!!

ನಾನು ನನ್ನ ತಪ್ಪು ತಿದ್ದಿಕೊಳ್ಳಬೇಕು! (ನೀ)   6(3683)

-ನು ನನಗೆ ಅನುಗ್ರಹ ಮಾಡಬೇಕು!
ಮ್ಮಿಬ್ಬರ ಕರ್ತವ್ಯ ನಾವ್ನಾವ್ಮಾಡ್ಬೇಕು! (ಉ)
-ನ್ನತದ ಗುರಿ ಇಬ್ಬರಿಗೂ ಇರ್ಬೇಕು!
ರಲೆ, ತಂಟೆ, ನಮ್ಮಲ್ಲಿಲ್ಲದಿರ್ಬೇಕು! (ಉ)
-ಪ್ಪು ತಿಂದವ ನೀರು ಕುಡಿಯಲೇಬೇಕು!
ತಿರುಮಂತ್ರ ಗುರುವಿಗೆ ಹೇಳ್ದಿರ್ಬೇಕು! (ಗ)
-ದ್ದಿಗೆ, ಸಿಂಹಾಸನದಾಸೆ ಬಿಡಬೇಕು!
ಕೊಳಲು ನಾದ ಕೃಷ್ಣನದ್ದು ಕೇಳ್ಬೇಕು! (ಕ)
-ಳ್ಳ, ಸುಳ್ಳರ, ಸಹವಾಸ ಸಾಕೇ ಸಾಕು!
ಬೇಡರೇಕಲವ್ಯನ ಸತ್ಸಂಗ ಬೇಕು!
ಕುಲ ನಿರಂಜನಾದಿತ್ಯನದ್ದಾಗ್ಬೇಕು!!!

ನಾನು ನಾನಾಗಿರುತಿಹೆನೆನ್ನ ಕಿಟೀರದಲ್ಲಿ!   1(98)

ನುಡಿಗಳವಡದಾಗಿದೆನ್ನ ಸ್ಥಿತಿ ಅದ್ರಲ್ಲಿ!
ನಾನಾ ನಾಮದಲಿರುವೆನು ನಾನು ನಿಜದಲ್ಲಿ!
ನಾನಿದನೇನೆಂದಾರಿಗೆಂತು ಬಿಚ್ಚಿ ತೋರಿಸಲಿ?
ಗಿರಿಜಾಧವನ ಆಪ್ತ ಭಕ್ತರೇ ಅರಿಯಲಿ! (ಇ)
-ರುವೆಡೆಯೇ ನನಗೆ ಕುಟೀರವಾಗಿದೆಲ್ಲೆಲ್ಲಿ!
ತಿಳಿದಿದನೆಲ್ಲರೆನ್ನ ನೋಡಬೇಕು ಎಲ್ಲೆಲ್ಲಿ!
ಹೆಗ್ಗಳಿಕೆ ನನಗೇನಿಲ್ಲೆನುವೆನೆಲ್ಲರಲಿ!
ನೆರೆ ಭಾಜಿಸಿದರರಿವಾಗುವುದಿದಲ್ಲಲ್ಲಿ! (ಇ)
-ನ್ನದಕೇನೂ ಅನ್ಯ ದಾರಿಯಿಲ್ಲೆಂಬೆನೆಲ್ಲರಲ್ಲಿ!
ಕಿಹಕು, ಕುಚೋದ್ಯ ಮಾಡಲಾಗದು ಇದರಲ್ಲಿ!
ಟೀಕೆ, ಠಿಕಾಣಿಗಳಿಗೆ ಆದಿ, ಮಧ್ಯಾಂತವೆಲ್ಲಿ?
ಮಿಸಿರಬೇಕಾಗಿರುವುದೊಂದೇ ನಿಜದಲ್ಲಿ!
ರ್ಶನವಿದಾಗಬೇಕು ದತ್ತನ ಭಕ್ತರಲ್ಲಿ! (ಇ)
-ಲ್ಲಿ, ಅಲ್ಲಿಹ, ನಿರಂಜನಾದಿತ್ಯನಿಹ ನಿಮ್ಮಲ್ಲಿ!!!

ನಾನು ನಿನಗೇನು ಹೇಳಲಪ್ಪ? (ನೀ)   2(882)

-ನು ಎಲ್ಲವನು ಬಲ್ಲವನಪ್ಪ!
ನಿನಗಾಗಿ ನಾನಿರುವೆನಪ್ಪ!
ನಗೆ ನೀನಂಟಿರಬೇಕಪ್ಪ!
ಗೇರುಹಣ್ಣಿನ ಬೀಜದಂತಪ್ಪ! (ಅ)
-ನುಮಾನಗಳ ಬಿಡಬೇಕಪ್ಪ!
ಹೇಳಿದಂತೆ ನಡೆಯುತಿರಪ್ಪ! (ಒ)
-ಳಮುಖಿಯಾಗಿ ನನ್ನ ನೋಡಪ್ಪ!
ಕ್ಷ್ಮೀನರಸಿಂಹರ ಹಾಗಪ್ಪ! (ಅ)
-ಪ್ಪ! ನಿರಂಜನಾದಿತ್ಯಪ್ಪ!!!

ನಾನು ನಿನ್ನ ಹಕ್ಕುದಾರ! (ನೀ)   6(3495)

-ನು ನನ್ನ ಜೀವನಾಧಾರ!
ನಿನ್ನದು ಸುಂದರಾಕಾರ! (ನ)
-ನ್ನದು ಕುರೂಪದಾಕಾರ!
ರಿ, ಹರರ್ನಿನ್ನಾಕಾರ! (ಠ)
-ಕ್ಕು ಮಾನವ ನನ್ನಾಕಾರ!
ದಾರಿ ನಿನ್ನಲ್ಲಿಗೆ ದೂರ! (ದೂ)
-ರ, ನಿರಂಜನಾದಿತ್ಯಾರ!!!

ನಾನು ನಿನ್ನನ್ನೊಳಗೆ ಕರೆದೆ! (ನೀ)   6(3370)

-ನು ಅಲಕ್ಷಿಸಿ ಹೊರಗೆ ಹೋದೆ!
ನಿನ್ನವನಾನೆಂದರಿಯದಾದೆ! (ನಿ)
-ನ್ನ ಕರ್ಮಫಲ ನೀನುಣ್ಣಲಿದೆ! (ನ)
-ನ್ನೊಡನಾಟಕ್ಕಪೇಕ್ಷಿಸಲಿದೆ! (ತೋ)
ಗಳ ಕಾಟಕ್ಕೆ ಅಂಜಲಿದೆ!
ಗೆಳೆಯರ್ವೈರಿಗಳಾಗಲಿದೆ!
ತ್ತಲೆ ಸುತ್ತೂ ಕವಿಯಲಿದೆ! (ಧ)
-ರೆಯಲ್ಲಿನ್ನಿರಲಾರೆನ್ನಲಿದೆ! (ತಂ)
-ದೆ ನಿರಂಜನಾದಿತ್ಯೆತ್ತಲಿದೆ!!!

ನಾನು ಮತ್ತೆ ಹುಟ್ಟಿದರೆ? [ಮ]   2(964)

-ನುಜನಾಗಬೇಕಾ ಸಾರೆ!
ನೋಜಯವಿರಲುರೆ! (ಮ)
-ತ್ತೆತ್ತಲಗಲಿರಲಾರೆ!
ಹುಸಿ ಮಾಯೆ ನಂಬಲಾರೆ! (ಸಿ)
-ಟ್ಟಿಗಾನೆಡೆ ಕೊಡಲಾರೆ!
ತ್ತನ ಬಿಟ್ಟಿರಲಾರೆ! (ಮೀ)
-ರೆ, ನಿರಂಜನನ ಗೆರೆ!!!

ನಾನು ಮನಸಾಗಿ ಮಾಡಿಸಿದ್ದು ಮಾಡು!   2(841)

ನುಡಿ, ನಡೆಗಳೆನಗೊಪ್ಪಿಸಿ ಮಾಡು!
ಗು ನೀನೆಂಬ ಭಾವನೆಯಿಂದ ಮಾಡು!
ಗುನಗುತಪ್ಪನಿಷ್ಟವೆಂದು ಮಾಡು!
ಸಾವು ನೋವಿಗಳದೆ ಕರ್ತವ್ಯ ಮಾಡು!
ಗಿರಿಯಂತಚಲನಾಗಿ ಧ್ಯಾನ ಮಾಡು!
ಮಾಯೆತಾಯಿಯೆಂದವಳ ಸೇವೆ ಮಾಡು! [ಅ]
-ಡಿಗಡಿಗಪ್ಪನ ನಾಮ ಜಪ ಮಾಡು! [ಹ]
-ಸಿವೆ, ತೃಷೆಯಡಗಿಸ್ಯಭ್ಯಾಸ ಮಾಡು! [ಸ]
-ದ್ದು ಮಾಡದೆ ಮೌನದಿಂದ ಎಲ್ಲಾ ಮಾಡು!
ಮಾತುಗಾರರ ದುಸ್ಸಂಗ ದೂರ ಮಾಡು! [ಮಾ]
-ಡು, ನಿರಂಜನಾದಿತ್ಯನನ್ನೊಡಗೂಡು!!!

ನಾನು ಸೇವಕ, ನೀನು ನಾವಿಕ!   6(3657)

ನುಡಿಯಲೆಂತು ನಿನ್ನ ಕೌತುಕ?
ಸೇರ್ದಾದೆ ನಿನ್ನ ಮಾಡಿ ಪಾತಕ! (ಭ)
-ವ ಜಲಧಿಯಿದಪಘಾತಕ!
ರುಣಾಕರ ನೀನುದ್ಧಾರಕ!
ನೀನೇ ನನ್ನ ರೇಚಕ, ಪೂರಕ! (ಮ)
-ನುಜ ಜನ್ಮವಾಗಲಿ ಸಾರ್ಥಕ!
ನಾನೇನೂ ತಿಳಿಯದ ಬಾಲಕ!
ವಿವೇಕಿ ನೀನು ನೌಕಾ ಚಾಲಕ! (ಸಂ)
-ಕಟ ನಿರಂಜನಾದಿತ್ಯಾಂತಕ!!!

ನಾನು, ದೊಡ್ಡವನೂ ಅಲ್ಲ, ಸಣ್ಣವನೂ ಅಲ್ಲ!   6(3862)

ನುಡಿ ನನ್ನದಿದರಲ್ಲಿ ಸುಳ್ಳೆಳ್ಳಷ್ಟೂ ಇಲ್ಲ!
ದೊಡ್ಡದೆಂಬುದು ನನ್ನಿಂದ ಬೇರೆ ಇನ್ನೊಂದಿಲ್ಲ! (ಹೆ)
-ಡ್ಡರಲ್ಲಿ ಕೊನೇಯವನು ನಾನೆಂದ್ರೆ ತಪ್ಪಿಲ್ಲ!
ರ ಗುರು ದ್ವಂದ್ವಾತೀತನೆಂದು ಜ್ಞಾನಿ ಬಲ್ಲ!
ನೂರಾರು ಕೋಟಿ ವರ್ಷದನುಭವ ಸುಳ್ಳಲ್ಲ!
ಮರನಾದಾತ್ಮನಿಗೆ ಜರಾ, ಜನ್ಮವಿಲ್ಲ! (ನ)
-ಲ್ಲ, ನಲ್ಲೆಯರಾಗಿ ಸಂಸಾರಿಯಾಗದೇನಿಲ್ಲ!
ತ್ಯದ ಮುಂದೆ ಮಿಥ್ಯಕ್ಕೆ ಸ್ಥಾನ, ಮಾನ, ಸಲ್ಲ! (ಹೆ)
-ಣ್ಣನ್ನು ಕಂಡು ಮರುಳಾದವಗುದ್ಧಾರವಿಲ್ಲ!
ಯೋವೃದ್ಧನಿಗೂ ಕಾಮ ಬಾಧೆ ತಪ್ಪಿದ್ದಲ್ಲ!
ನೂತನ, ಪುರಾತನಾನುಭವ ಮಾತಿದೆಲ್ಲಾ!
ನುಗ್ರಹ ಗುರುವಿನದ್ದಾದ್ರೆ ಭಯವಿಲ್ಲ! (ಬ)
-ಲ್ಲ ನಿರಂಜನಾದಿತ್ಯನ ಮಾತೇನೂ ಸುಳ್ಳಲ್ಲ!!!

ನಾನು, ನೀನವನೊಬ್ಬನು! (ಅ)   6(3667)

-ನುಮಾನವೇನಿಲ್ಲೆಂಬೆನು!
ನೀನಿದ ನಂಬಿರೆಂಬೆನು!
ಶ್ವರ ನಾವಲ್ಲೆಂಬೆನು!
ರ ಗುರು ಅದೆಂಬೆನು! (ನೀ)
-ನೊಬ್ಬಾನೊಬ್ಬನಿಲ್ಲೆಂಬೆನು! (ಒ)
-ಬ್ಬನೇ ಎಲ್ಲವೂ ಎಂಬೆನು! (ನೀ)
-ನು ನಿರಂಜನಾದಿತ್ಯಾನು!!!

ನಾನು, ನೀನೆಂದೊಬ್ಬಂಟಿಗನಾಗಿ ಹೋಗುವ ಜೀವ! (ನೀ)   6(4033)

-ನು ನಾನೊಂದೆಂದಾನಂದದಲ್ಲಿರ್ಪವ ಮಹಾದೇವ!
ನೀಚೋಚ್ಚವೆಂದು ಹೊಡೆದಾಡಿ ಸಾಯುವವ ಜೀವ!
ನೆಂಟರಿಷ್ಟರು ಬಂಧಗಳೆನಗಾನೆಂಬಾ ದೇವ!
ದೊರಕಬೇಕೆನಗದಿದೆಂದೊದ್ದಾಡ್ವವ ಜೀವ! (ಕ)
-ಬ್ಬಂಗಳೆನ್ನ ಮೇಲೆಷ್ಟು ಬರೆದರೇನೆಂಬಾ ದೇವ!
ಟಿಪ್ಪಣಿ, ಠೀಕೆಗಳ ಬರೆದು ಹಿಗ್ಗುವಾ ಜೀವ!
ತಿ, ಸ್ಥಿತಿ, ಲಯವಿಲ್ಲದವ ನಾನೆಂಬಾ ದೇವ!
ನಾಳೆಗೇನು ಗತಿ ನನಗೆಂದಳುವವ ಜೀವ! (ತ್ಯಾ)
-ಗಿಯಾಗಿ, ಯೋಗಿಯಾಗಿ, ತೃಪ್ತನಾಗಿರ್ಪವ ದೇವ!
ಹೋರಾಡಿ, ತಾರಾಡಿ, ತೂರಾಡಿ, ಬೀಳುವವ ಜೀವ!
ಗುಣಾತೀತ, ಗುರು ದತ್ತಾತ್ರೇಯ ಏಕೈಕ ದೇವ!
ಸನ, ಅಶನ, ವಸತಿಗಾಗಿರ್ಪವ ಜೀವ!
ಜೀವನ್ಮುಕ್ತ, ಸರ್ವಶಕ್ತ, ನಿರ್ಲಿಪ್ತಾ ನಿಜ ದೇವ!
ರದರಾಜ ನಿರಂಜನಾದಿತ್ಯಾ ದೇವ ದೇವ!!!

ನಾನುದ್ರೇಕಿ, ನೀನು ವಿವೇಕಿ! (ನೀ)   6(3542)

-ನು ವಿಚಾರಿಯಾಗಿ ಏಕಾಕಿ! (ಬಂ)
-ದ್ರೇನು, ಹೋದ್ರೇನೆಂಬ ಪಿನಾಕಿ!
ಕಿರಿಯಳು ನಾ ನಿನ್ನ ಸಖಿ!
ನೀನೆನ್ನ ಬೆಳೆಸಿದ ಸಾಕಿ! (ನಾ)
-ನು ಬಂದೆ ಈಗ್ನಿನ್ನ ಹುಡುಕಿ!
ವಿರೋಧಿಸಬೇಡ ದುಡುಕಿ!
ವೇಶ್ಯೆ ನಾನಲ್ಲ ನೋಡಿಣಿಕಿ! (ಏ)
-ಕಿ, ನಿರಂಜನಾದಿತ್ಯಾನೇಕಿ!!!

ನಾನೂ, ನೀನು, ಅವನಯ್ಯಾ!   3(1363)

ನೂರಾರು ರೂಪನವನಯ್ಯಾ!
ನೀನೇಕೆ ದುಃಖಿಪುದಯ್ಯಾ!
ನೂರೆಂಟು ನಾಮವಗಯ್ಯಾ!
ಲ್ಲೂ, ಇಲ್ಲೂ, ಇಹನಯ್ಯಾ!
ರ ಗುರು ಶ್ರೀ ರಾಮಯ್ಯಾ! (ಅ)
-ನವರತ ಜಪಿಸಯ್ಯಾ! (ಅ)
-ಯ್ಯಾ,! ನಿರಂಜನಾದಿತ್ಯಯ್ಯಾ!!!

ನಾನೂ, ನೀನೂ, ಒಂದೇ ಕಾಣಮ್ಮಾ!   4(2098)

ನೂರಾರು ನಾಮ ದೇವಗಮ್ಮಾ!
ನೀನಿದರಿತರಾನಂದಮ್ಮಾ!
ನೂಕು, ನುಗ್ಗಲೈಹಿಕವಮ್ಮಾ!
ಒಂದಾಗಿರ್ಪುದೇ ದೈವಿಕಮ್ಮಾ!
ದೇಹ ಭಾವ ಮರೆತಿರಮ್ಮಾ!
ಕಾಲಗಾಗಂಜಬೇಕಿಲ್ಲಮ್ಮಾ! (ಪ್ರಾ)
-ಣ, ಮನವನಿಗರ್ಪಿಸಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಾತಮ್ಮಾ!!!

ನಾನೆಂತು ಕಾಲ ಕಳೆಯಲಪ್ಪಾ?   2(963)

ನೆಂಟರಿಷ್ಟರ ತಂಟೆ ಬೇಡಪ್ಪಾ! (ಸೋ)
-ತು ಹೋದೆನೆಲ್ಲಾ ವಿಧದಿಂದಪ್ಪಾ!
ಕಾರ್ಯವೆನಗೇನಿರುವುದಪ್ಪಾ?
ಕ್ಷ್ಯ ನೀನೊಬ್ಬನೇ ನನಗಪ್ಪಾ!
ಠಿಣವೀ ಸ್ಥಿತ್ಯೆಲ್ಲಾ ಕಾಲಪ್ಪಾ! (ಹ)
-ಳೆಯ ವೃತ್ತಿ ನೆನಪಾಗ್ವುದಪ್ಪಾ! (ಕಾ)
-ಯ ಮೋಹ ಕಾಡುತಿದೆ ಕಾಣಪ್ಪಾ! (ಕಾ)
-ಲದರಿವಿಲ್ಲದಂತೆ ಮಾಡಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯಾನಂದಪ್ಪಾ!!!

ನಾನೆಂತು ನಿನ್ನನುಪಚರಿಸಲಿ?   5(2610)

ನೆಂಟತನವಿಬ್ಬರದ್ದೇನೆನಲಿ?
ತುಷ್ಟನಾದೆ ನಿನ್ನ ನೋಡಿಳೆಯಲಿ! (ನಾ)
-ನಿನ್ನವನೆಂಬಭಿಮಾನವಿರಲಿ! (ನ)
-ನ್ನಭೀಷ್ಟಗಳೆಲ್ಲವೂ ಸಿದ್ಧಿಸಲಿ! (ಅ)
-ನುಮಾನಗಳಿನ್ನೇನಿಲ್ಲದಿರಲಿ!
ರಮಾತ್ಮ ನೀನೆಂಬರಿವಾಗಲಿ!
ತುರ್ವೇದಾರ್ಥ ನಿನ್ನಿಂದುಂಟಾಗಲಿ!
ರಿಸಿ ಕುಲದ ಕೀರ್ತಿ ಬೆಳಗಲಿ!
ಹಜ ಸಮಾಧಿ ಸದಾ ಇರಲಿ! (ಮಾ)
-ಲಿಕ ನಿರಂಜನಾದಿತ್ಯನೆನಲಿ!!!

ನಾನೆಲ್ಲರ ಅಡಿಗೆಯವನಮ್ಮಾ!   2(483)

ನೆನೆದಲ್ಲಿ ಸದಾ ಇರುವೆನಮ್ಮಾ! (ಒ)
-ಲ್ಲದರುಚಿಯೂಟವಿಕ್ಕೆ ನಾನಮ್ಮಾ! (ಆ)
-ರ ಸಂಭಾವನೆಯೂ ಬೇಡೆನಗಮ್ಮಾ!
ಹಂಕಾರಕಾಳು ನಾನಾಗಿಲ್ಲಮ್ಮಾ (ಅ)
-ಡಿಗಡಿಗಾರೂ ಹೇಳಬೇಕಿಲ್ಲಮ್ಮಾ (ಬ)
-ಗೆ ಬಗೆ ಭಕ್ಷ್ಯದೇಕರಸಾನ್ನಮ್ಮಾ! (ಬಾ)
-ಯ ಮುಚ್ಚಿ ತಿಂದರತಿಹಿತವಮ್ಮಾ!
ರ ಗುರುದತ್ತನೆನ್ನೊಳಗಮ್ಮಾ! (ಅ)
-ನವರತೆಲ್ಲರಿಗೆನ್ನೂಟವಮ್ಮಾ! (ಅ)
-ಮ್ಮಾ! ಪಾಚಕ ನಿರಂಜನಾದಿತ್ಯಮ್ಮಾ!!!

ನಾನೆಲ್ಲೆಂಬುದನ್ನುರಿಯಿರಿಲ್ಲಿ!   4(2069)

ನೆಲಾನಿಲಾನಲಾದ್ಯಲ್ಲೆಲ್ಲೆಲ್ಲಿ! (ಇ)
-ಲ್ಲೆಂಬ ಜಾಗವೆನಗಿಲ್ಲೆಲ್ಲೆಲ್ಲಿ!
ಬುಧಾದಿ ಗ್ರಹದಲ್ಲಾನೆಲ್ಲೆಲ್ಲಿ!
ಶಾವತಾರದಲ್ಲಾನೆಲ್ಲಿಲ್ಲಿ! (ಉ)
-ನ್ನತಾಕಾಶ ಲೋಕದಲ್ಲೆಲ್ಲಿ! (ಕ)
-ರಿ, ಕುರಿ, ಹರಿಗಳೆಲ್ಲೆಲ್ಲೆಲ್ಲಿ! (ತಾ)
-ಯಿ, ತಂದೆ, ಬಂಧುಗಳೆಲ್ಲೆಲ್ಲೆಲ್ಲಿ! (ಸ)
-ರಿ, ಗ, ಮ, ಪ, ದ, ನಿ ಯಲ್ಲೆಲ್ಲೆಲ್ಲಿ! (ಇ)
-ಲ್ಲಿ, ನಿರಂಜನಾದಿತ್ಯಾತ್ಮನಲ್ಲಿ!!!

ನಾನೆಷ್ಟು ಶ್ರೇಷ್ಠನಾದರೇನು! (ನೀ)   6(3566)

-ನೆನ್ನ ಉಪೇಕ್ಷಿಸಿಲ್ಲವೇನು? (ನಿ)
-ಷ್ಟುರ ಸ್ವಭಾವಿಯಲ್ಲ ನಾನು!
ಶ್ರೇಯಸ್ಸನ್ನೇ ಬಯಸುವೆನು! (ದು)
-ಷ್ಟ ಸಹವಾಸದಲ್ಲಿರೆನು!
ನಾಮ ಜಪವೆಂದೂ ಬಿಡೆನು!
ಯೆಯುಳ್ಳವನಾಗು ನೀನು!
ರೇಗಿ, ಕೂಗಾಡಿ ಫಲವೇನು? (ತಾ)
-ನು ನಿರಂಜನಾದಿತ್ಯ ಭಾನು!!!

ನಾನೇ ಉಪವಾಸ, ನಿನಗೇನಿಕ್ಲಪ್ಪಾ? (ಅ)   4(2230)

-ನೇಕ ಮನೆ ಸುತ್ತಿದ್ರೂ ವ್ಯರ್ಥವಾಯ್ತಪ್ಪಾ!
ದಾರಿ ಅಪ್ಪನೆಂಬುದೆಂತು ನಂಬ್ಲಪ್ಪಾ?
ರಿಪರಿಯ ಪ್ರಾರ್ಥನೆಗಳಾಯ್ತಪ್ಪಾ!
ವಾದಿಸಲಿನ್ನೇಕನ್ಯರಲ್ಲಿ ನಾನಪ್ಪಾ?
ದಾ ಸ್ಮರಿಸಿ ಸಾಯ್ವುದೇ ದಾರಿಯಪ್ಪಾ!
ನಿನಗಿದೊಪ್ಪಿದರೆ ನೀನೂ ಮಾಡಪ್ಪಾ!
ಶ್ವರದ ದೇಹ ಸಾಯಲೇಬೇಕಪ್ಪಾ!
ಗೇಣಿ ಆದಷ್ಟು ಬೇಗ ಸಂದಾಯಾಗ್ಲಪ್ಪಾ!
ನಿಜ ವಿಚಾರ ತಿಳಿಸಿರುತ್ತೇನಪ್ಪಾ! (ಶು)
-ಕ್ಲ ಭಾದ್ರಪದ ದ್ವಾದಶಿಂದು ನೋಡಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯಾ ದಯೆದೋರಪ್ಪಾ!!!

ನಾನೇ ನಾನಾಗಿಹೆ ನಾನಿಂದು!   4(2125)

ನೇತ್ರ ನೋಟಕ್ಕಾಶಿಸದಿಂದು!
ನಾಲಿಗೆ ರುಚಿ ಕೇಳದಿಂದು!
ನಾಸಿಕ ಮೂಸಿ ನೋಡದಿಂದು! (ಅಂ)
-ಗಿ ಬೇಡಾಗಿಹುದಂಗಕಿಂದು! (ಇ)
-ಹೆನು ಕಿವಿ ಕುವುಡಾಗಿಂದು!
ನಾನಾ ಮಾತ ಬಾಯಾಡದಿಂದು!
ನಿಂತೆದ್ದು ಕಾಲ್ಕೈ ಮಾಡದಿಂದು! (ಇಂ)
-ದು ನಿರಂಜನಾದಿತ್ಯಾನೆಂದು!!!

ನಾನೇ ನೀನಾಗಲಿಕಾಗಿಲ್ಲಿ ಬಂದೆನಪ್ಪಾ!   2(516)

ನೇಮ, ನಿಷ್ಠೆ ನನಗೇನೂ ತಿಳಿಯದಪ್ಪಾ!
ನೀನಿರುವುದ ನೋಡಿ ಕಲಿಯುವೆನಪ್ಪಾ!
ನಾನೇನಾಡಿದರೂ ಬೇಸರ ಬೇಡವಪ್ಪಾ!
ಗನದಲಿ ನೀನು ನಾನುರ್ವಿಯಲಪ್ಪಾ!
ಲಿಪ್ತ ನಾನು, ನೀನಲಿಪ್ತನಾಗಿಹೆಯಪ್ಪಾ!
ಕಾರಣ ನೀನಾಗಿ ನೆಪ ಮಾತ್ರ ನಾನಪ್ಪಾ!
ಗಿಡ ನೀನು, ನಾನದಕಂಟಿದ ಹಂಬಪ್ಪಾ! (ಬ)
-ಲ್ಲಿದ ನೀನೆನ್ನ ನಿನ್ನಂತೆ ಮಾಡಬೇಕಪ್ಪಾ!
ಬಂಧು ಬಾಂಧವರೆಲ್ಲಾ ಗುರುದೇವನಪ್ಪಾ! (ಅ)
-ದೆನ್ನ ಭಾವದಿಂದ ಅಳಿಸದುಳಿಸಪ್ಪಾ!
ಮಸ್ಕಾರ ಶ್ರೀಪಾದಕ್ಕೆ ಅರ್ಪಿಪೆನಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯ ನೀನಲ್ಲವೇನಪ್ಪಾ???

ನಾನೇ ನೀನು ನಿಜ ತಾನೇ! [ನೀ]   2(977)

-ನೇ ಆ ದತ್ತ ಗುರು ತಾನೇ!
ನೀನೆಲ್ಲರಲಿರ್ಪೆ ತಾನೇ! (ತ)
-ನು, ಮನ ನಿನ್ನಿಂದ ತಾನೇ!
ನಿನ್ನಾಟಕ್ಕಿದೆಲ್ಲಾ ತಾನೇ!
ಗದೀಶ್ವರೇಸು ತಾನೇ!
ತಾಪಸರಿಷ್ಟ ನೀ ತಾನೇ! (ನೀ)
-ನೇ ನಿರಂಜನಾದಿತ್ಯಾನೇ!!!

ನಾನೇ ನೀನೆಂಬುದನರಿತುಕೋ! (ನೀ)   3(1233)

-ನೇಕೆ ಬೇರಾದೆಯೆಂದರಿತುಕೋ!
ನೀನಿದ ನಿತ್ಯ ವಿಚಾರಿಸಿಕೋ! (ನೀ)
-ನೆಂಬಹಂಕಾರ ಬಿಟ್ಟೊಂದಾಗಿಕೋ!
ಬುದ್ಧಿ ಸದಾ ಶುದ್ಧವಾಗಿಟ್ಟುಕೋ!
ತ್ತನಿಗೆಲ್ಲಾ ಒಪ್ಪಿಸಿದ್ದುಕೋ!
ಯನಾದಿಂದ್ರಿಯ ಜಯಿಸಿಕೋ! (ಪ)
-ರಿ, ಪರಿಯಾಸೆ ನಾಶ ಮಾಡಿಕೋ!
ತುರಿಯಾತೀತನ ಸ್ಮರಿಸಿಕೋ (ಅ)
-ಕೋ, ನಿರಂಜನಾದಿತ್ಯದೆಂದುಕೋ!!!

ನಾನೇ ರಾಜಾಧಿರಾಜ! ನಾನಿರುವ ಮನೆ ನಾಯಿಗಳೆಲ್ಲಕೂ ಮನೆ !   1(89)

ನೇತ್ರಮ್ಮ, ಮೂಗಮ್ಮ, ಬಾಯಮ್ಮ, ಕಾಲಮ್ಮ ಕೆಳಮ್ಮರಿಗೆಲ್ಲ ಏ ಮನೆ!
ರಾಜಭವನದೆಲ್ಲಾ ಕೆಲಸಮಾಡುವ ಕರಾಂಬುಜಮ್ಮಗೀ ಮನೆ!
ಜಾತಿಭೇದವಿಲ್ಲದೆಲ್ಲರ ರುಚಿಯೂಟಕ್ಕಿದು ಪ್ರೇಮ ಜಿಹ್ವಾ ಮನೆ!
ಧಿ

ರನೆನಗೆ ಸ್ಪರ್ಶಾನಂದವೀವ ಚರ್ಮರಂಗಿಗಾಧಾರವೀಮನೆ!
ರಾತ್ರಿ ಹಗಲೆನ್ನದೆಲ್ಲಾ ಕೊಳೆ ತೆಗೆವ ಪ್ರಿಯ ಗುಹ್ಯ ಮೂಲಾಮನೆ!
ಗಳಗಳೇಳದಂತಾಳುವ ಮನೋರಂಜನಿಗಿದು ಅರಮನೆ!
ನಾಯಿ, ಬೆಕ್ಕುಗಳಿಗೆಲ್ಲಾ ಸದಾ ಕದ ತೆರೆದಿರುವಿದೆನ್ನ ಮನೆ!
ನಿಶಿ, ದಿನವೆನ್ನದಾಗಂತು ಕರಿಗಾದರವೀಯುವುದೆನ್ನ ಮನೆ!
ರುಧಿರ, ಮಾಂಸದ ಮುದ್ದೆ ಸದಾ ಅಲ್ಲಲ್ಲಿ ಬಿದ್ದಿರುವಿದೆನ್ನ ಮನೆ!
ಡವೆ ವಸ್ತುಗಳೆಲ್ಲಾ ಸದಾ ಕೊಳ್ಳೆಯಾಗಲಿದು ಒಳ್ಳೆಯ ಮನೆ!
ನೋ ಮಥನಮಾಡಿ, ಶಾಂತಿ ಪಡೆಯಲಿದೆನ್ನ ತಪಸಿನ ಮನೆ!
ನೆರೆಹೊರೆಯವರ ಭಜನೆಗವಕಾಶವೀಯುವುದೆನ್ನ ಮನೆ!
ನಾಗಶಯನ, ನಾರಾಯಣ, ಸತತಯೊಂಗಕ್ಷೇಮ ನೋಡುವ ಮನೆ!
ಯಿದು ಗಾಳಿ, ಮಳೆ, ಬಿಸಿಲಿಗೆ ಸದಾ ಸುಸ್ವಾಗತವೆಂಬೆನ್ನ ಮನೆ!
ತಿ, ಸ್ಥಿತಿ, ಭೇದ ಗಂಡು, ಹೆಣ್ಣುಗಳಿಗಿರದಂತಿರುವುದೀ ಮನೆ! (ಎ)
-ಳೆದಾಟ, ಬಡಿದಾತಗಳಿಗೆಡೆಯಿಲ್ಲದಿರುವುದು ನನ್ನ ಮನೆ! (ಎ)
-ಲ್ಲರ ಚಿರಕಲ್ಲಾಣಕಾಗಿಯೇ ಭದ್ರವಾಗಿ ನಿಂತಿರುವುದೀ ಮನೆ!
ಕೂಗಾಟ ರೇಗಾಟಗಳಿಲ್ಲದೆ ಮೌನವಾಗಿರುವುದು ನನ್ನ ಮನೆ!
ಕ್ಕಳೆಲ್ಲಾ ಅಕ್ಕರೆಯಿಂದ ಸಕ್ಕರೆ ಹಂಚುವ ಇದು ನನ್ನ ಮನೆ!
ನೆಗಡಿ, ಜ್ವರಗಳಿರದೇ“ನಿರಂಜನಾದಿತ್ಯ” ನಿರುವ ಮನೆ!!!

ನಾನೇ ರಾಧೆ! ನೀನೇ ಕೃಷಣ! ನಿನ್ನ ಬಿಡೆನಾ   1(66)

!
ಎನ್ನಲೇನೂ ತಪ್ಪ ಕಾಣೆ, ನಿನ್ನಲೆಲ್ಲಾ ಒಪ್ಪಿಸಿಹೆನೋ!
ಬನ್ನಬಟ್ಟೆ ಬಹಳ ಜನ್ಮ, ನಿನ್ನಲೆನ್ನ ಬೆರೆಸೋರನ್ನಾ (ಕಣ್ಣಾ)!
ಅನ್ಯರೆನ್ನ ಕಾಯ್ವರಾರೋ? ಸನ್ನುತಾಂಗ ನಿರಂಜನಾಂಗ!
ಶ್ಯಾಮಲಾಂಗ ಕೋಮಲಾಂಗ, ಭಾಮಾರಂಗ, ಮೋಹನಾಂಗ!
ಪ್ರೇಮ ಸಂಘಾರಾಮ, ರಾಧಾಂಗ, ನಿರ್ಮಲಾಂಗ, ನಿರಂಜನಾಂಗ!!!

ನಾನೇ ಹಾಡುವವ, ನೀನಲ್ಲಾ! (ನೀ)   4(1714)

-ನೇನೂ ಯೋಚಿಸಬೇಕಾಗಿಲ್ಲಾ!
ಹಾಡಿದ ಕೀರ್ತಿ ನಿನಗೆಲ್ಲಾ! (ಬಿ)
-ಡು, ನಾನು, ನೀನೆಂಬುದನೆಲ್ಲಾ!
ರ ದಾನ ಸುಳಾಗ್ವುದಿಲ್ಲಾ!
ರ ಗುರು ಸಾಮಾನ್ಯನಲ್ಲಾ!
ನೀಲ ಮೇಘ ಶ್ಯಾಮ ಬೇರಲ್ಲಾ!
ತಜನೋದ್ಧಾರೆಂಬರೆಲ್ಲಾ! (ಬ)
-ಲ್ಲಾ ನಿರಂಜನಾದಿತ್ಯನೆಲ್ಲಾ!!!

ನಾನೇಕಿಲ್ಲಿಗೀಗ ಬಂದೆ?   5(2825)

ನೇರ ದಾರಿಯಲ್ಲೇ ಬಂದೆ!
ಕಿಸೆ ಬರಿದಾಗಿ ಬಂದೆ! (ಸ)
-ಲ್ಲಿಸು ಕೋರಿಕೆಯನ್ನಿಂದೇ!
ಗೀತೆಗಾಗ್ಬಾರದು ನಿಂದೆ!
ಗನಕ್ಕೇರ್ಬೇಕು ಮುಂದೆ!
ಬಂಡವಾಳ “ನಾಮ” ಒಂದೇ! (ತಂ)
-ದೆ ನಿರಂಜನಾದಿತ್ಯೆಂದೆ!!!

ನಾನೇಕೆ ಉಂಡೆನಪ್ಪಾ?   1(375)

ನೇಮವಾ ಊಟವಪ್ಪಾ!
ಕೆನೆ ಮೊಸ್ರೂಟವಪ್ಪಾ!
ಉಂಡಮೇಲಾಲಸ್ಯಪ್ಪಾ! (ಎ)
-ಡೆಯೊಳಗೇನಿಲ್ಲಪ್ಪಾ!
ಡೆಬೇಕು ಕೊಂಚಪ್ಪಾ! (ಅ)
-ಪ್ಪಾದಿತ್ಯಾ! ಕೈಕೊಡಪ್ಪಾ!!!

ನಾನೇಕೆ ಕಾಣಿಸಿಕೊಳ್ಳಬೇಕು?   6(3394)

ನೇಮ, ನಿಷ್ಠೆಯಲ್ಲಿ ನಾನಿರ್ಬೇಕು!
ಕೆಲ್ಸವಿದ್ರೆ ಹೊರಗೆ ಬರ್ಬೇಕು!
ಕಾರಣಕರ್ತನಾಜ್ಞೆಯಾಗ್ಬೇಕು!
(ಕು)-ಣಿಸಿದಂತೆ ಕುಣಿಯಲೇಬೇಕು!
ಸಿಟ್ಟುಮಾಡಿಕೊಳ್ಳದಿರಬೇಕು!
ಕೊಟ್ಟದ್ದು ತಿಂದುಕೊಂಡಿರಬೇಕು!
(ಉ)-ಳ್ಳದ್ರಲ್ಲಷ್ಟಿಷ್ಟು ದಾನಮಾಡ್ಬೇಕು!
ಬೇಸರಪಡದೇ ಇದಾಗ್ಬೇಕು!
(ಕಾ)-ಕುಸ್ಥ ನಿರಂಜನಾದಿತ್ಯಾಗ್ಬೇಕು!!!

ನಾನೇಕೆ ದುಃಖ ಪಡಬೇಕು? (ನೀ)   4(1550)

-ನೇ ಕರುಣಿಸಿ ಕಾಯಬೇಕು!
ಕೆಲಸ ನಿನ್ನದಾಗಬೇಕು!
ದುಃಖ, ಸುಖ, ಸಹಿಸಬೇಕು! (ಸು)
-ಖ ನಿನ್ನಾನಂದವಾಗಬೇಕು!
ರಮಾರ್ಥಿ ಹೀಗಾಗಬೇಕು! (ಖಂ)
-ಡದಿಂದಖಂಡನಾಗಬೇಕು!
ಬೇಗ ನೀನೇ ನಾನಾಗಬೇಕು! (ಬೇ)
-ಕು, ನಿರಂಜನಾದಿತ್ಯಾಗ್ಬೇಕು!!!

ನಾನೇಕೆ ನಿನ್ನನ್ನಾಶ್ರಯಿಸಿದೆ? (ನೀ)   5(2823)

-ನೇ ನಾನಾಗಬೇಕೆಂದೆಣಿಸಿದೆ!
ಕೆರೆ ನೀರ ಕೆರೆಗೇ ಚೆಲ್ಲಿದೆ!
ನಿತ್ಯ ನೇಮದಾದರ್ಶ ಪಡೆದೆ! (ನ)
-ನ್ನವ ನೀನೊಬ್ಬನೆಂದೇ ತಿಳಿದೆ! (ನಿ)
-ನ್ನಾಣತಿಯನ್ನು ನಿರೀಕ್ಷಿಸಿದೆ!
ಶ್ರಮವೆಷ್ಟಾದರೂ ಸಹಿಸಿದೆ! (ಕಾ)
-ಯಿ ಹಣ್ಣಾಗುವುದೆಂದು ನಂಬಿದೆ!
ಸಿಹಿಯೂಟಕ್ಕಾಗಿ ಹಾತೊರೆದೆ! (ಆ)
-ದೆ, ನಿರಂಜನಾದಿತ್ಯ ನಾನಾದೆ!!!

ನಾನೇಕೆ ಪಡಲಿನ್ನು ದುಃಖ?   6(4049)

ನೇರ ದಾರಿಯಲ್ಲೂ ಆತಂಕ!
ಕೆಡಿಸಿದನೆನ್ನಾಪ್ತ ಸಖ!
ರಮಾರ್ಥಿಗಿಲ್ಲಿಲ್ಲ ಸುಖ!
ಮರುಧರಗಿಲ್ಲ ಮುಖ!
ಲಿಪಿ ಬ್ರಹ್ಮನದ್ದಾವ್ತನಕ? (ತಿ)
-ನ್ನುವುದಕ್ಬಂತೇನೀ ಶುನಕ!
ದುಃಖದಿಂದ್ಲೇ ಸತ್ತಾ ಕನಕ! (ಸು)
-ಖ ನಿರಂಜನಾದಿತ್ಯಾತ್ಮಕ!!!

ನಾನೇಕೆ ಬಂದಿಹೆನಿಲ್ಲಿಗೆ? (ನೀ)   5(3297)

-ನೇ ಕರೆತಂದವನಿಲ್ಲಿಗೆ! (ಯಾ)
-ಕೆ ಕರೆಸಿಲ್ಲ ನಿನ್ನಲ್ಲಿಗೆ?
ಬಂದ ಕೆಲ್ಸಾದ್ಮೇಲೆನ್ನಲ್ಲಿಗೆ! (ಆ)
-ದಿತ್ಯಾ! ನೀನೂ ಬಾ ಬೇಗಿಲ್ಲಿಗೆ!
ಹೆತ್ತ ತಾಯ್ತಂದೆ ನೀನೆನಗೆ!
ನಿನ್ನಿಂದ ವಿಜಯ ನನಗೆ! (ಇ)
-ಲ್ಲಿಬ್ರೊಂದಾಗಿದ್ರಾನಂದೆನಗೆ! (ಹೀ)
-ಗೆ ನಿರಂಜನಾದಿತ್ಯನಾಗೆ!!!

ನಾನೇಕೆ ಬಂದೆನಿಂದ್ರಿಯ ಲೋಕಕ್ಕೆ? (ನಾ)   6(4333)

-ನೇ ಎಲ್ಲೆಲ್ಲೂ ಎಂದು ತಿಳಿಯಲಿಕ್ಕೆ!
ಕೆಟ್ಟ ಯೋಚನೆ ಮಾಡದಿರಲಿಕ್ಕೆ!
ಬಂಧಿಸಿಕೊಳ್ಳದೇ ಮಾಯೆಗಿರ್ಲಿಕ್ಕೆ!
ದೆವ್ವಗಳ ಪೂಜಿಸದಿರಲಿಕ್ಕೆ!
ನಿಂದೆ, ವಂದನೆಗಳಲಕ್ಷಿಸ್ಲಿಕ್ಕೆ! (ಉ)
-ದ್ರಿಕ್ತ ಬುದ್ಧಿಯಿಂದಿರದಿರಲಿಕ್ಕೆ!
ಮನಯ್ಯನಾದರ್ಶದಂತಿರ್ಲಿಕ್ಕೆ!
ಲೋಭ, ಮೋಹಾದಿಗಳಿಲ್ಲದಿರ್ಲಿಕ್ಕೆ!
ರ್ತವ್ಯವಿದೆಂದರಿತಿರಲಿಕ್ಕೆ! (ಅ)
-ಕ್ಕೆ ನಿರಂಜನಾದಿತ್ಯಾನಂದೆಲ್ಲಕ್ಕೆ!!!

ನಾನೇಕೆ, ನೀನೇಕೆ, ಅವನೇಕೆಂಬೇಕೆ?   6(3391)

ನೇಮನಿಷ್ಠಾತೀತೊಬ್ಬೆನ ಬಾರ್ದೇಕೆ?
ಕೆಲ್ಸಕ್ಕೊಂದು ಗುಣನಾಮವಿರ್ಬಾರ್ದೇಕೆ?
ನೀಚಕರ್ಮಿ ಹೊಲೆಯಅಂದ್ರೆ ಸಿಟ್ಟೇಕೆ?
ನೇರದಾರಿಯವ ಬ್ರಾಹ್ಮಣ ತಾನಕ್ಕೆ!
ಕೆಟ್ಟದ್ಮಟ್ಟಹಾಕ್ವವ ಕ್ಷತ್ರಿಯನಕ್ಕೆ!
ದಿದರ ವ್ಯಾಪಾರಿ ವೈಶ್ಯತಾನಕ್ಕೆ!
ರಗುರುಗುಣಾತೀತ ದೇವರಕ್ಕೆ!
ನೇಮಿಸಿದಂತಿರ್ಪಬುದ್ಧಿ ಯೆಲ್ಲಕ್ಕಕ್ಕೆ!
ಕೆಂದಾವರೆಯಾಪ್ತತೆ ಆದರ್ಶವಕ್ಕೆ!
ಬೇಕೆಂದು ಧ್ಯೇಯ ನಿಶ್ಚಿಂತೆಯಿಂದಿರ್ಲಿಕ್ಕೆ!
ಕೆಲಸ ನಿರಂಜನಾದಿತ್ಯನಾಗ್ಲಿಕ್ಕೆ!!!

ನಾನೇಕೇಳೋಲ್ಲೆಂದೀಗ ಹೇಳೋಲ್ಲ! (ನೀ)   4(1573)

-ನೇನೀ ಜನ್ಮ ಸಾರ್ಥಕ ಮಾಡಿಲ್ಲ!
ಕೇಡಿಗತನ ನನ್ನಲ್ಲೇನಿಲ್ಲ! (ಗೋ)
-ಳೋ ಎಂದತ್ತರೂ ಕೇಳ್ವವರಿಲ್ಲ! (ಕೊ)
-ಲ್ಲೆಂದರೂ, ಅಹಂಕಾರ ಸತ್ತಿಲ್ಲ!
ದೀನನಿಗನ್ಯಾಯ ನ್ಯಾಯವಲ್ಲ!
ರ್ವಿ ನಾನೆಂದರೆ ನಿಜವಲ್ಲ!
ಹೇಳಿ ಪ್ರಯೋಜನವೇನಿನ್ನಿಲ್ಲಿ! (ಬಾ)
-ಳೋದೀ ರೀತಿ ಸಮಂಜಸವಲ್ಲ! (ಬ)
-ಲ್ಲ, ನಿರಂಜನಾದಿತ್ಯಾತ್ಮನೆಲ್ಲ!!!

ನಾನೇನ ನೀಡಲಿ ನಿನಗಮ್ಮಾ?   5(2608)

ನೇಮದಿಂ ಭಜಿಪೆ ನಿನ್ನನಮ್ಮಾ!
ನ್ನ ಮೇಲಿರಲಿ ದಯೆಯಮ್ಮಾ!
ನೀನೊಲಿದರೆ ಧನ್ಯ ನಾನಮ್ಮಾ!
ಮರುಧರನಾಣ್ಮೆ ನೀನಮ್ಮಾ! (ಲ)
-ಲಿತಾಂಬೆಯೆಂಬರು ನಿನ್ನನಮ್ಮಾ!
ನಿತ್ಯ ನಿರ್ಮಲ ರೂಪವದಮ್ಮಾ!
ಮಿಪೆ ನಾನಾ ಶ್ರೀಪಾದಕ್ಕಮ್ಮಾ! (ಯೋ)
-ಗಭಾಗ್ಯವೀಗ ನೀಡಬೇಕಮ್ಮಾ! (ನ)
-ಮ್ಮಾ, ನಿರಂಜನಾದಿತ್ಯ ನೀನಮ್ಮಾ!

ನಾನೇನ ಬೇಡಲಿ ನಿನ್ನನೆನ್ನಯ್ಯ?   1(160)

ನೇಮಿಸಿದಂತೆ ಇರುವೆ ನಾನಯ್ಯ!
ನ್ನದೆಂಬುದು ನನಗಿಲ್ಲವಯ್ಯ!
ಬೇಸರ ನಾನೇಕೆ ಪಡಬೇಕಯ್ಯ? (ಅ)
-ಡಗಿರುವ ನೀನೆನ್ನೂಳೊಳಗಯ್ಯ! (ಆ)
-ಲಿಪಿ, ಪಾಲಿಪ ಕರ್ತ ನೀನೇ ಅಯ್ಯಾ!
ನಿಶಿ, ದಿನವಿಂತು ನಂಬಿಹೆನಯ್ಯಾ! (ಅ)
-ನ್ನ, ಪಾನಗಳಿತ್ತಿರಿಸಿಹೆ ಅಯ್ಯಾ!
ನೆನಪು ನಿನ್ನದು ಸದಾಗುತ್ತಯ್ಯ! (ಅ)
-ನ್ನಲೇನಿದೆಲ್ಲಾ ನೀನೇ ಬಲ್ಲೆಯಯ್ಯಾ! (ಅ)
-ಯ್ಯ! ನಿರಂಜನಾದಿತ್ಯನಿಷ್ಟವಯ್ಯಾ!!!

ನಾನೇನು ತರಬೇಕು ನಿಮಗೆ? (ನೀ)   2(985)

-ನೇನೂ ಯೋಚಿಸಬೇಡಾ ಬಗೆಗೆ! (ತ)
-ನು, ಮನವನೊಪ್ಪಿಸು ನನಗೆ! (ಪಿ)
-ತ ದತ್ತನಾಗಿಹನು ನಿನಗೆ! (ಪ)
-ರದೇಶದಾಸೆ ಬೇಡ ನಿನಗೆ!
ಬೇಕಾದುದಿದೆ ಇಲ್ಲಿ ನಿನಗೆ! (ಬೇ)
-ಕು ತೃಪ್ತಿದ್ದುದರಲ್ಲಿ ನಿನಗೆ!
ನಿನ್ನೀ ಜೀವನಾನಂದ ನನಗೆ! (ಮ)
-ಮತೆ ಬೇಡನಿತ್ಯಕ್ಕೆ ನಿನಗೆ!
ಗೆಳೆಯ ನಿರಂಜನಾದಿತ್ಯಾಗೆ!!!

ನಾನೇನು ಮಾಡಲೆಲ್ಲಿ ಹೋಗಲಾರೆ ಕೇಳಲಿ?   6(3628)

ನೇರ ದಾರಿ ತೋರಿ ನಡೆಸಬೇಕದರಲ್ಲಿ!
ನುಚ್ಚಾದೆ ನಾನೀ ಕಾಲಚಕ್ರದ ವೇಗದಲ್ಲಿ!
ಮಾತಾ, ಪಿತರೆಷ್ಟೋ ಆದರ್ಬಹು ಜನ್ಮದಲ್ಲಿ! (ಆ)
-ಡಲಸದಳಾಗ ಪಟ್ಟ ಕಷ್ಟಗಳೀಗಿಲ್ಲ! (ಅ)
-ಲೆದಲೆದು ಸಾಕಾಯ್ತನೇಕ ಲೋಕಗಳಲ್ಲಿ! (ಅ)
-ಲ್ಲಿ, ಇಲ್ಲಿ, ಕೇಳಿದ್ದು ಸುಳ್ಳಾದ್ಮೇಲೇನಿಹುದಿಲ್ಲಿ?
ಹೋಗಿ, ಬರುವ, ವ್ಯವಹಾರ ಸಾಕ್ಮಾಡ್ಬೇಕಿಲ್ಲಿ!
ಣಗಳಾನಂದದಿಂದಿರ್ಪ ಕೈಲಾಸವೆಲ್ಲಿ? (ಲೀ)
-ಲಾ ಜಾಲವಾಗಿ ಕರೆದೊಯ್ಯಬೇಕ್ನನ್ನನ್ನಲ್ಲಿ! (ವ)
-ರ ಗುರು ಶಿವಸನ್ನಿಧಿಯಲ್ಲಿರ್ಬೇಕ್ನಾನಲ್ಲಿ!
ಕೇಳ್ವುದೂ, ಹೇಳ್ವುದೂ, ಮುಕ್ತಾಯವಾಗುವುದಲ್ಲಿ!
(ಬಾ)-ಳನಾಗಿ ಫಾಲನೇತ್ರನಿಗೆ ನಾನಿರ್ಬೇಕಲ್ಲಿ! (ಕೈ)
-ಲಿ ಕೈಯಿಟ್ಟು ನಿರಂಜನಾದಿತ್ಯ ಸೇರ್ಸ್ಬೇಕಲ್ಲಿ!!!

ನಾನೇನು ಮಾಡುತಿಹೆನೆಂದರಿಯದಿಹೆ!   4(1690)

ನೇಮದಂತೇಕಿಂದಿಲ್ಲಾನೆಂದರಿಯದಿಹೆ! (ತ)
-ನು ಸ್ಥಿತಿಯೆಂತಿಹುದೆಂದಾನರಿಯದಿಹೆ!
ಮಾಡಿಸಿದಂತೆ ಮಾಡೋಣವೆಂದಿರುತಿಹೆ! (ನೋ)
-ಡುವುದೇನಾಡುವುದೇನೆಂದಾನಿರುತಿಹೆ!
ತಿಳಿದದ್ದಾಚರಿಸುತ್ತಾನಂದದಿಂದಿಹೆ!
ಹೆಚ್ಚುನಾನೆಂಬಹಂಕಾರವಿರದಂತಿಹೆ!
ನೆಂಟ, ಭಂಟ, ಯಾದವನಾಗಿಹನೆಂದಿಹೆ!
ಯಾಮಯ ದತ್ತನೆಂದಾನಂದವಾಗಿಹೆ! (ಪ)
-ರಿಪರಿಯೂಟವನುಂಡುನ್ಮತ್ತನಾಗಿಹೆ!
ಮನಯ್ಯ ನಾನೆಂಬಾನಂದದಿಂದಾನಿಹೆ!
ದಿಟವಿದೆಲ್ಲರಿಗರಿವಾಗ್ಬೇಕೆಂದಿಹೆ! (ಇ)
-ಹೆ ನಿರಂಜನಾದಿತ್ಯಾತ್ಮ ಶಿವಾನೆಂದಿಹೆ!!!

ನಾನೇನೋ ಕೆಟ್ಟೆ, ನೀನೇಕೆ ಕೈ ಬಿಟ್ಟೆ?   4(1930)

ನೇತೃ ನೀನಾಗಿ ಮೈ ಮರೆತು ಬಿಟ್ಟೆ!
ನೋವು ನೋಡಿ ನಗುತ್ತ ಕೂತು ಬಿಟ್ಟೆ!
ಕೆಲಸಕ್ಕುತ್ಸಾಹ ತಪ್ಪಿಸಿ ಬಿಟ್ಟೆ! (ಹೊ)
-ಟೆ, ಬಟ್ಟೆಗೇ ಕಷ್ಟ ತಂದಿಟ್ಟುಬಿಟ್ಟೆ!
ನೀಚರಾಟಕ್ಕೆ ದಾರಿ ತೆರೆದಿಟ್ಟೆ!
ನೇರ್ಪಡಿಸದೇ ಸುಮ್ಮಗಿದ್ದುಬಿಟ್ಟೆ!
ಕೆಸರು ಮೈಗೆಲ್ಲಾ ಬಳಿದು ಬಿಟ್ಟೆ!
ಕೈಗಳೆರಡನ್ನೂ ಬಂಧಿಸಿಬಿಟ್ಟೆ!
ಬಿಡಿಸೆಂದರೂ ಕಿವುಡಾಗಿ ಬಿಟ್ಟೆ! (ಸು)
-ಟ್ಟೆ ನಿರಂಜನಾದಿತ್ಯಗಾಗೀ ಹೊಟ್ಟೆ!!!

ನಾನೊಂದು ಸಂತೆ, ನೀನೊಂದು ಮೆಂತೆಕಂತೆ!   4(2049)

ನೊಂದ್ಕೊಳ್ದೆ ಮಾರಾಟವಾಗ್ಯೋಗ್ಯತೆಯಂತೆ!
ದುರಾಗ್ರಹಬೇಡ ಕೋಸುಗೆಡ್ಡೆಯಂತೆ!
ಸಂತೆ ನಿನ್ಗೊಂದು ಜಾಗ ಕೊಟ್ಟಿರ್ವುದಂತೆ!
ತೆರೆದಿಡ್ನಿನ್ನ ಬಿದಿರ್ಬುಟ್ಯೇಕೆ ಚಿಂತೆ?
ನೀನಾಗ್ವೆ ರುಚಿ ಪಲ್ಯ ಆರೋಗ್ಯಕ್ಕಂತೆ!
ನೊಂದ್ಕೊಳ್ವುದೇನಿಲ್ಲ ನೀನ್ಬಂದ್ಯೆಂದು ಸಂತೆ!
ದುಡ್ಗಿಡ್ಡು ನಿನ್ನಿಂದ ಸಂತೆಗ ಬೇಡ್ವಂತೆ!
ಮೆಂತೆ ನೀನೆಲ್ಲರಿಗೂ ಬೇಕೇಬೇಕಂತೆ!
ತೆರೆದ್ಮನದಿಂದ ನಿನ್ಗೆ ಸ್ವಾಗತಂತೆ!
ಕಂತೆ ಹುಳುಗಳಿಲ್ಲದಿರಬೇಕಂತೆ! (ಸಂ)
-ತೆ ನಿರಂಜನಾದಿತ್ಮಾನಂದವಾ ಮೆಂತೆ!!!

ನಾನೊಬ್ಬ ವಾದ್ಯ ಸಂಗೀತಗಾರ! (ನೀ)   4(2019)

-ನೊಬ್ಬ ಸರ್ವಾಂತರಂಗ ಭಂಗಾರ! (ತ)
-ಬ್ಬಲಿಗೀಗಾಗಬೇಕುಪಕಾರ!
ವಾಸುದೇವ ರೂಪ ನಿನ್ನಾಕಾರ! (ವಾ)
-ದ್ಯವಾದನವೆನ್ನಾಚಾರಾಕಾರ!
ಸಂಪೂಜ್ಯ ನಿನ್ನದಾ ನಾದಾಕಾರ!
ಗೀರ್ವಾಣಿಯಿಂದಾ ಸುಸ್ವರಾಕಾರ!
ಪ್ಪು ಕ್ಷಮಿಸಿ ಮಾಡು ಸ್ವೀಕಾರ!
ಗಾನಪಾನದಿಂದಾಗಲೋಂಕಾರ! (ಹ)
-ರ ಶ್ರೀ ನಿರಂಜನಾದಿತ್ಯಾಕಾರ!!!

ನಾನ್ಬಂದ್ರೂ ಬರ್ಬಾರದ್ಬಾರದುಳಿದೀತೇ? (ನೀ)   6(3999)

-ನ್ಬಂದು ಕರೆದ್ರೀಗ ನನಗದೊಪ್ಪೀತೇ? (ಬಂ)
-ದ್ರೂ, ಬಾರ್ದಿದ್ರೂ, ಕೆಲಸ, ಕಾರ್ಯ ನಿಂತೀತೇ?
ಯಸಿದಾಗೆಲ್ಲಾ ನಾನ್ಬರ್ಲಿಕ್ಕಾದೀತೇ? (ಇ)
-ರ್ಬಾರ್ದು ಸಂಕಲ್ಪವೆನ್ನದಿದ್ದರಾದೀತೇ?
ಹಸ್ಯವಿದನ್ನರಿತು ಬಿಡು ಚಿಂತೆ! (ಮ)
-ದ್ಬಾಲಕನನ್ನು ನಾನ್ಮರೆತರಾದೀತೇ?
ಕ್ಷಣೆಗಾಗಿರ್ಪೆ ನಾನವನ ಜೊತೆ!
ದುಸ್ಸಂಗಿಯಾದರೆ ಮುಗಿದಂತೆ ಕತೆ! (ತಿ)
-ಳಿಸಿರ್ಪಳಿದನ್ನಾತಗೆ ಸೀತಾ ಮಾತೆ!
ದೀಪ! ನಂದಾದೀಪವಾಗ್ಲೆಂಬಳಾ ಪ್ರೀತೆ! (ಸೀ)
-ತೇ! ನೀನೇ ಆ ನಿರಂಜನಾದಿತ್ಯ ಮಾತೆ!!!

ನಾನ್ಯಾರಿಗೂ ಗುರುವಾಗುವುದು ಬೇಡ! (ನೀ)   6(3493)

-ನ್ಯಾವಾಗ್ಲೂ ನನಗೆ ಗುರುವಾಗ್ದಿರ್ಬೇಡ!
(ವೈ)-ರಿಗಳನ್ನು ತಲೆಯೆತ್ತಲೂ ಬಿಡ್ಬೇಡ!
ಗೂಗೆ, ಕಾಗೆಗಳಂತೆನ್ನ ಇರಿಸ್ಬೇಡ!
ಗುಡಿ ದೇಹವೆಂಬುದ ಪುಸಿ ಮಾಡ್ಬೇಡ!
(ಇ)-ರುತ್ತದ್ರಲ್ಲಿ ಮಹಿಮೆ ತೋರದಿರ್ಬೇಡ!
ವಾಮಾಚಾರದ ಹುಚ್ಚು ಹಿಡಿಸಬೇಡ!
ಗುರಿ ಸಿದ್ಧಿಯನುಗ್ರಹ ಮಾಡ್ದಿರ್ಬೇಡ!
(ಸಾ)-ವು, ನೋವಿನ ಬಾಳೆಂದೆಂದಿಗೂಕೊಡ್ಬೇಡ!
ದುರ್ಜನರನ್ನು ಹತ್ತಿರ ಸೇರಿಸ್ಬೇಡ!
ಬೇರ್ಸಹಿತಹಂಕಾರ ಕೀಳದಿರ್ಬೇಡ!
(ಮೃ)-ಡ ನಿರಂಜನಾದಿತ್ಯನೆಂಬುದು ಧೃಡ!!!

ನಾನ್ಯಾರಿಗೂ ನಮಸ್ಕರಿಸುವುದಿಲ್ಲ! (ನೀ)   4(1581)

-ನ್ಯಾರೆಂದರಿತರದ್ರಲ್ಲೇನೂ ತಪ್ಪಿಲ್ಲ! (ಹ)
-ರಿ ಸ್ಮರಣೆ ಮಾಡದಿದ್ರೆ ಸುಖವಿಲ್ಲ!
ಗೂಳಿಯಂತೋಡಾಡಲಿಕ್ಕೆ ಜನ್ಮವಲ್ಲ!
ಳಿನನಾಭನೇ ದೇವ ಜಗಕೆಲ್ಲ!
ನನ ಮಾಡಬೇಕಹೋ ರಾತ್ರಿಯೆಲ್ಲ! (ಭಾ)
-ಸ್ಕರ ರೂಪನವನೆಂಬುದು ಸುಳ್ಳಲ್ಲ!
ರಿಪು ಕುಲಾಂತಕಾತ ಸಾಮಾನ್ಯನಲ್ಲ!
ಸುಧಾವೃಷ್ಟಿಯಾಗ್ವುದವನಿಂದೆಲ್ಲೆಲ್ಲ! (ನಾ)
-ವು, ನಮ್ಮವರೆಂಬ ಸ್ವಾರ್ಥವನಿಗಿಲ್ಲ!
ದಿವ್ಯಾತ್ಮ ಭಾವವನ ಹೃದಯವೆಲ್ಲ! (ತ)
-ಲ್ಲಣ ನಿರಂಜನಾದಿತ್ಯಾನಂದಗಿಲ್ಲ!!!

ನಾಮ ರೂಪಗಳವಾಂತರ ಸಾಕಪ್ಪಾ!   5(3120)

ದ, ಮತ್ಸರದಿಂದ ತುಂಬಿಹುದಪ್ಪಾ!
ರೂಪ, ಲಾವಣ್ಯಕ್ಕೀಗ ಮರ್ಯಾದೆಯಪ್ಪಾ!
ತಿತನೂ ಸ್ಥಾನ, ಮಾನಕ್ಕರ್ಹನಪ್ಪಾ!
ತಿವಿಹೀನರಿಗಾರು ಗತಿಯಪ್ಪಾ? (ನ)
-ಳ, ಹರಿಶ್ಚಂದ್ರರನ್ನಾರು ಕಾಯ್ದರಪ್ಪಾ?
ವಾಂಭಿತಾರ್ಥವನ್ನೀನ ವಾಸುದೇವಪ್ಪಾ?
ತ್ವಾರ್ಥ ಜೀವನ ನಡೆಸಬೇಕಪ್ಪಾ!
ಕ್ತ ಮಾಂಸದ ಗೊಂಬೆ ಅದಲ್ಲವಪ್ಪಾ!
ಸಾವು, ಸಂಕಟವೆಲ್ಲಾ ಶರೀರಕ್ಕಪ್ಪಾ!
ರ್ಮಕ್ಕೆ ತಕ್ಕ ಫಲ ಸಿಕುವುದಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯಾನಂದನಾಗಪ್ಪಾ!!!

ನಾಮ, ರೂಪ, ಬೇರಾದ್ರೂ ರಾಮ, ಶ್ಯಾಮಾರಾಮ!   6(3367)

ನಸ್ಸೆರಡರ ಗುರಿ ನಿತ್ಯಾತ್ಮಾರಾಮ!
ರೂಢಿಯಲ್ಲಿ ಬಂದಿತ್ತು ಮಾನವ ಜನುಮ!
ರಮಾರ್ಥ ಸಮರ್ಥನೆಗಾಗಿತ್ತು ನೇಮ!
ಬೇಕಿಂಥಾ ಪಾತ್ರಗಳೆಂಬುದು ಸೃಷ್ಟಿಕ್ರಮ!
ರಾಜಸ, ತಾಮಸವೆಂಬುದನರಿಯನಾತ್ಮ!
(ತ)-ದ್ರೂಪದರ್ಶನವಾದಮೇಲೆಲ್ಲೊಂದೇ ಸಮ!
ರಾಗ, ದ್ವೇಷವಿಲ್ಲದಾಪ್ತ ಭಕ್ತ ಸುಧಾಮ!
ಡದಿ, ಮಕ್ಕಳ, ಪ್ರೇಮಮಾಯಾ ಮಹಿಮಾ!
(ವೇ)-ಶ್ಯಾವೃತ್ತಿಯುಳ್ಳವರಲ್ಲೂ ಇದೆ ಈ ಪ್ರೇಮ!
ಮಾನಾಪಮಾನವೆಲ್ಲಾ ಮನಸ್ಸಿನ ಭ್ರಮಾ!
ರಾತ್ರಿ, ಹಗ್ಲೊಂದೇಸಮ ಕಾಡುವನು ಕಾಮ!
ಹಿಮ ನಿರಂಜನಾದಿತ್ಯಾನಂದಾರಾಮ!!!

ನಾಮ, ರೂಪ, ಸುಟ್ಟಮೇಲ್ವಿಭೂತಿ!   5(3246)

ನಸ್ಸಿಗೆ ಶಾಂತಿ ಆ ವಿಭೂತಿ!
ರೂಢಿಯಂತಿರ್ಪಂತಲ್ಲಾ ವಿಭೂತಿ!
ರಮಾರ್ಥ ಸಿದ್ಧಿಗೀ ವಿಭೂತಿ!
ಸುಟ್ಟ ಮೇಲೆ ತ್ರಿಲೋಕ ವಿಖ್ಯಾತಿ! (ದಿ)
-ಟ್ಟ ಹೆಜ್ಜೆಗೆ ಗಿಟ್ಟುವುದಾ ಖ್ಯಾತಿ!
ಮೇನಕಾ ಸಂಗದಿಂದಧೋಗತಿ! (ಬಿ)
-ಲ್ವಿದ್ಯಾ ಪ್ರವೀಣನದ್ದೂ ದುಃಸ್ಥಿತಿ!
ಭೂಮಾನಂದ ಪರಬ್ರಹ್ಮ ಸ್ಥಿತಿ! (ಯ)
-ತಿ ನಿರಂಜನಾದಿತ್ಯಾಗಾ ಸ್ಥಿತಿ!!!

ನಾಮ, ರೂಪಕ್ಕವಸಾನವೆಂದು?   6(3902)

ನ್ಮಥನ ಆಟ ಮುಗಿದಂದು! (ಆ)
-ರೂ ವೈರಿಗಳೂ ಸತ್ತುಹೋದಂದು!
ರಮಾತ್ಮನಾರೆಂದರಿತಂದು! (ಚೊ)
-ಕ್ಕಟ ಮನಸ್ಸನ್ನೂ ಹೊಂದಿದಂದು! (ಅ)
-ವಧೂತ ಗೀತಾದರ್ಶ ಬಂದಂದು!
ಸಾಯುಜ್ಯಾನುಭವಿ ನೀನಾದಂದು!
ಶ್ವರ ಜಗತ್ತೆಂದರಿತಂದು!
ವೆಂಕಟಾಚಲ ಮನಸ್ಸಾದಂದು! (ಅ)
-ದು ನಿರಂಜನಾದಿತ್ಯನೆಂದಂದು!!!

ನಾಮಕ್ಕೆ ತಕ್ಕ ನೇಮವಯ್ಯಾ!   1(301)

ನೆಗೆ ತಕ್ಕ ಮಾಲಿಕಯ್ಯಾ! (ಅ)
-ಕ್ಕೆ, ಸದಾ ಸುಖವಕ್ಕುದಯ್ಯಾ!
ರಣಿಯಾದರ್ಶ ಬೇಕಯ್ಯಾ! (ಅ)
-ಕ್ಕರೆ ಕಾಟಕ್ಕಾಗಲ್ಲವಯ್ಯಾ!
ನೇಗಿಲ ಕೈ ಬರೆಯದಯ್ಯಾ!
ನದಂತೆ ಮಾಧವನಯ್ಯಾ!
ರ ಗುರು ಸರ್ವಜ್ಞನಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಜ್ಞೇಯ!!!

ನಾಮಧಾರಿ ಆಂಜನೇಯ ಭಕ್ತ!   1(295)

ನ ಗುರು ರಾಮನಲಿಡುತ್ತ!
ಧಾವಿಸಿದನು ಶ್ರೀಪಾದದತ್ತ!
ರಿಸಿ, ಮುನಿ ಮಾತು ನೆನಸುತ್ತ!
ಆಂಜನೇಯ ನಾದವಾಲಿಸುತ್ತ!
ಪದಲಿದ್ದ ಮೈಮರೆಯುತ್ತ!
ನೇತ್ರದಲಿ ನೀರು ಸುರಿಸುತ್ತ!
ತೀಶನ ಸ್ಮರಣೆ ಮಾಡುತ್ತ!
ಕ್ತಿ ಭಾವಾವೇಶದಿಂದಿರುತ್ತ! (ವ್ಯ)
-ಕ್ತ ನಿರಂಜನಾದಿತ್ಯ ಭಕ್ತ!!!

ನಾಮಾವಳಿಗೊಂದು ಮುನ್ನುಡಿ!   5(2538)

ಮಾಯೆ ನೀಡಿದಳಾ ಮುನ್ನುಡಿ!
ರಪ್ರಸಾದದಾ ಮುನ್ನುಡಿ! (ನ)
-ಳಿನಾಕ್ಷಗಾನಂದಾ ಮುನ್ನುಡಿ!
ಗೊಂದಲವಿಲ್ಲದಾ ಮುನ್ನುಡಿ!
ದುರ್ವಿಷಯ ದೂರಾ ಮುನ್ನುಡಿ!
ಮುಮುಕ್ಷುಗಾಧಾರಾ ಮುನ್ನುಡಿ!
(ತ)ನ್ನುನ್ನತಿಗಗತ್ಯಾ ಮುನ್ನುಡಿ! (ಹಿ)
-ಡಿ, ನಿರಂಜನಾದಿತ್ಯನಡಿ!!!

ನಾಯಕಾ ಲೋಕ ನಾಯಕಾ! (ದಾ)   2(644)

-ಯಕಾ ಸುಖ ಪ್ರದಾಯಕಾ!
ಕಾರಣ, ಕರ್ತ ವಿನಾಯಕಾ!
ಲೋಭ, ಮೋಹ, ವಿದಾರಕಾ!
ರ್ಮ ಧರ್ಮ ಸುಧಾರಕಾ!
ನಾಮ, ರೂಪ, ವಿರಾಜಕಾ! (ಸಂ)
-ಯಮೇಂದ್ರಿಯಾತ್ಮ ಸಾಧಕಾ! (ಲೋ)
-ಕಾ, ಶ್ರೀ ನಿರಂಜನಾತ್ಮಕಾ!!!

ನಾಯಿ ದೇವರಾದಾಗ ಕಚ್ಚುವುದಿಲ್ಲ! (ನಾ)   6(4316)

-ಯಿಯಾದಾಗ ದೇವರು ಕಚ್ಚದೇನಿಲ್ಲ!
ದೇಹ ಯಾವುದಕ್ಕೂ ಹೊಣೆಯಾಗ್ಗುದಿಲ್ಲ!
ರ್ತನೆ ಮನಸ್ಸಿಲ್ಲದಾಗುವುದಿಲ್ಲ!
ರಾಮಧ್ಯಾನ ಮನದಿಂದನ್ಯಾಯವಿಲ್ಲಾ!
ದಾನವ ಧ್ಯನ ಮನಕ್ಕನ್ಯಾಯವೆಲ್ಲಾ!
ತಿ ಸ್ಥಿತಿಗೆ ಮತಿಯೇ ಹೇತುವೆಲ್ಲಾ!
ರ್ತವ್ಯ ಸತ್ಸಂಗವೆಂದರಿಯಿರೆಲ್ಲಾ! (ಕ)
-ಚ್ಚುವುದಕ್ಕಾಗ ಬಾಯ್ತಿರೆಯುವುದಿಲ್ಲ! (ಸಾ)
-ವು, ಸಂಕಟಕ್ಕಾಗ ಹೆದರುವುದಿಲ್ಲ!
ದಿನ, ರಾತ್ರಿ ಸ್ಮರಿಸಿ ಗುರುವನ್ನೆಲ್ಲಾ! (ಫು)
-ಲ್ಲ ನಿರಂಜನಾದಿತ್ಯನಂತಾಗಿರೆಲ್ಲಾ!!!

ನಾಯಿ ಬಂದಿದೆ ಹಾಲಿಗಾಗಿ ತಾಯಿ! (ಕಾ)   4(1586)

-ಯಿಸುವುದದದನ್ನ್ಯಾವ ನ್ಯಾಯ ತಾಯಿ?
ಬಂದಾಗ ಹೊಡೆದಟ್ಟಬೇಡ ತಾಯಿ!
ದಿಕ್ಕಿಲ್ಲದನಾಥ ನಾಯಿಗೀ ತಾಯಿ! (ನಿಂ)
-ದೆ ನಾಯಿಗರಿವಾಗುವುದೇ ತಾಯಿ?
ಹಾಯಾಗಿರಲಿ ನಿನ್ನಡಿಲಿ ತಾಯಿ! (ಮಾ)
-ಲಿಕನಲ್ಲದಕತಿ ಪ್ರೀತಿ ತಾಯಿ! (ತ)
-ಗಾದೆಯಿನ್ನೆಲ್ಲಿ ಮಾಡ್ಬೇಕದು ತಾಯಿ? (ಕೂ)
-ಗಿ ಕದ ಕೆರೆಯುವುದು ತಾಯಿ!
ತಾಳೆಂದರೆ ಕಾಯದದಿನ್ನು ತಾಯಿ! (ನಾ)
-ಯಿಗಿಕ್ಕೋ ನಿರಂಜನಾದಿತ್ಯ ತಾಯಿ!!!

ನಾಯಿ ಬೊಗಳಬಾರದೆಂದರಾದೀತಾ? (ತಾ)   6(4029)

-ಯಿ ಮುದ್ದು ಮಾಡಬಾರದೆಂದರಾದೀತಾ?
ಬೊಕ್ಕೆ ಕೀವ್ಸುರಿಸಬಾರದೆಂದ್ರಾದೀತಾ?
ದ್ದೆಯಲ್ಲಿ ಕೆಸ್ರಿರಬಾರದೆಂದ್ರಾದೀತಾ? (ತೋ)
-ಳ ಕುರಿಯ ಮೇಲ್ಬೀಳಬಾರದೆಂದ್ರಾದೀತಾ?
ಬಾನಿನೊಡೆಯ ತಣ್ಣಗಾದರಾದೀತಾ?
ಣಾಂಗಣ ನಿಶ್ಯಬ್ಧವಿರಲಾದೀತಾ?
ದೆಂಟಿಗೆಲೆ ಅಂಟಿಕೊಳ್ಳದಿದ್ರಾದೀತಾ?
ಯೆ ದೇವರಿಗಿಲ್ಲದಿದ್ದರಾದೀತಾ?
ರಾತ್ರಿ ಕತ್ತಲೆಯಿರಬಾರ್ದೆಂದ್ರಾದೀತಾ?
ದೀನ ದಾನಿಯಾಗಬೇಕೆಂದರಾದೀತಾ?
ತಾರೆ ಶ್ರೀ ನಿರಂಜನಾದಿತ್ಯನಾದೀತಾ???

ನಾಯ್ಕೊಡೆ, ಈ ವಾಯ್ಪಡೆ ಮಳೆಯಿದ್ದೆಡೆ! (ಕೈ)   5(2646)

-ಯ್ಕೊಳ್ಬೇಕು ಮುಂಜಾಗ್ರತೆಯನ್ನಾ ವಾಯ್ಪಡೆ! (ಒ)
ಡೆಯನಾರೆಂದರಿತಿರಬೇಕಾ ಪಡೆ!
ರ್ಷಾಸೂಯೆಗಳ ಬಿಟ್ಟಿರ್ಬೇಕಾ ಪಡೆ!
ವಾಗ್ಜಾಲ ವ್ಯರ್ಥವೆಂದರಿಯ್ಬೇಕಾ ಪಡೆ! (ಸಾ)
-ಯ್ಪರಮಾರ್ಥಕ್ಕಾಗಿ ಎಂದಿರ್ಬೇಕಾ ಪಡೆ! (ಕೊ)
-ಡೆ ಸುಳಿವರಿಗಳ್ಗೆಂದಿರ್ಬೇಕಾ ಪಡೆ!
ನನ ಮಾಡ್ತಿರ್ಬೇಕ್ಸ್ವರೂಪಾ ಪಡೆ! (ಕ)
-ಳೆಯ್ಬೇಕು ಕಾಲವೀರೀತಿಯಲ್ಲಾ ಪಡೆ! (ಬಾ)
-ಯಿ, ಕೈ, ಕಚ್ಚೆ ಭದ್ರಪಡಿಸ್ಬೇಕಾ ಪಡೆ! (ನಿ)
-ದ್ದೆಯಲ್ಲೂ ಎಚ್ಚರವಾಗಿರ್ಬೇಕಾ ಪಡೆ! (ಒ)
-ಡೆಯ ನಿರಂಜನಾದಿತ್ಯಗಿಷ್ಟಾ ಪಡೆ!!!

ನಾರದಾ! ದಾರಿ ತೋರಬಾರದಾ? (ನ)   3(1251)

-ರನಜ್ಞಾನ ಕಳೆಯ ಬಾರದಾ? (ಸ)
-ದಾನಂದ ನಿನ್ನಂತಿರ ಬಾರದಾ? (ಉ)
-ದಾರಿಯಾಗೀಗ ಬರ ಬಾರದಾ? (ಹ)
-ರಿ ಮಹಿಮೆ ತಿಳಿಸ ಬಾರದಾ?
ತೋರಿ ಸಂತೋಷ ನೀಡ ಬಾರದಾ? (ಧ)
-ರಣಿಯಶಾಂತಿ ನೀಗ ಬಾರದಾ?
ಬಾರದಿರಪ ಕೀರ್ತಿ ಬಾರದಾ? (ಸು)
-ರ ಋಷಿ ನಿನ್ನ ನಂಬ ಬಾರದಾ? (ಸ)
-ದಾ ನಿರಂಜನಾದಿತ್ಯಾ ನಾರದ!!!

ನಾರಾಯಣಾ ಸೌ“ಮಿತ್ತಾ”ತ್ಮ ನಾರಾಯಣಾ!   4(1743)

ರಾಜರಾಜ ರಾಮಾ “ರವಿ” ನಾರಾಯಣಾ!
ಜ್ಞ ಸಂರಕ್ಷಣಾ “ಸೂರ್ಯ” ನಾರಾಯಣಾ! (ರ)
-ಣಾಗ್ರಗಣ್ಯ ಕರ್ಣಾ “ಭಾನು” ನಾರಾಯಣಾ!
ಸೌಖ್ಯಾಹಸನ್ಮುಖಿ “ಖಗ” ನಾರಾಯಣಾ! (ಅ)
-ಮಿತ ಗುಣ ತ್ರಾಣಾ “ಪೂಷ್ಣ” ನಾರಾಯಣಾ! (ಸ್ತೋ)
-ತ್ರಾನಂದಾ “ಹಿರಣ್ಯಗರ್ಭ” ನಾರಾಯಣಾ! (ಆ)
-ತ್ಮಜ್ಞಾನಾಸಕ್ತಾ ಮರೀಚಿ ನಾರಾಯಣಾ!
ನಾಮ, ರೂಪಾತೀ “ತಾದಿತ್ಯ” ನಾರಾಯಣಾ!
ರಾಜೀವ ಸಖಾ “ಸವಿತೃ” ನಾರಾಯಣಾ!
ಮಧರ್ಮಾತ್ಮಯ್ಯಾ “ಅರ್ಕ” ನಾರಾಯಣಾ! (ಕ)
-ಣಾ ನಿರಂಜನಾದಿತ್ಯಾ “ಭಾಸ್ಕರ” ನಾರಾಯಣಾ!!!

ನಾರಿಯಂಗ ರಂಗು ರಂಗ!   4(1691)

ರಿಪು ಸಂಘ ಭಂಗ ರಂಗ! (ಸ್ವ)
-ಯಂಭು ಅಂಗನಂಗ ರಂಗ! (ಲಿಂ)
-ಗದಂಗ ಸಂಗಮ ರಂಗ!
ರಂಗನಂಗ ಪ್ರೇಮ ರಂಗ!
ಗುರು ದತ್ತೋತ್ಪತ್ತೀ ರಂಗ! (ಸಾ)
-ರಂಗಾಂಗ ಛಾಯಾಂತರಂಗ! (ರಂ)
-ಗ, ನಿರಂಜನಾದಿತ್ಯಾಂಗ!!!

ನಾಲ್ಕು ಗಂಟೆಗೇಕೆ ಬರಲಿಲ್ಲ? (ನಾ)   4(1553)

-ಲ್ಕು ಮುಖದವನೊಬ್ಬನೇ ಬಲ್ಲ!
ಗಂಟೆಯ ಲೆಃಖ ಬಿಡುವುದಿಲ್ಲ! (ಮೂ)
-ಟೆ ಹೇರಲಿಕ್ಕೆ ಹೇಸುವುದಿಲ್ಲ!
ಗೇಣಿ ಬಾಕಿ ಬೇಡೆನ್ನುವುದಿಲ್ಲ!
ಕೆರೆಗೆ ನೀರು ಕೊಡುವುದಿಲ್ಲ!
ಲಾ

ಲ ತಿಳಿಯುವುದಿಲ್ಲ!
ಜಾದಲ್ಲೂ ದುಡಿಸದೇನಿಲ್ಲ! (ಕೂ)
-ಲಿ ಕೇಳಿದರದಕೆ ಮಾತಿಲ್ಲ! (ನ)
-ಲ್ಲ, ನಿರಂಜನಾದಿತ್ಯಶ್ಲೀಲಲ್ಲ!!!

ನಾಲ್ಕು ದಿನದ ಸತ್ಸಂಗವಾಯ್ತು! (ಹಾ)   4(2472)

-ಲ್ಕುಡಿದಂತಾಗಿ ಶಾಂತಿಯುಂಟಾಯ್ತು!
ದಿವ್ಯನಾಮ ಜಪದರ್ಥವಾಯ್ತು!
ಶ್ವರ ಸುಖದಾಸಕ್ತಿ ಹೋಯ್ತು!
ರ್ಶನ ನಿರಾತಂಕವಾಗ್ಯಾಯ್ತು!
ಮಯವೇಗದಿಂದೋಡಿಹೋಯ್ತು! (ಸ)
-ತ್ಸಂಪ್ರದಾಯದುಪದೇಶವಾಯ್ತು!
ತಿ ಗುರುಚರಣದತ್ತಾಯ್ತು!
ವಾದಿಸ್ಲಿಕ್ಕಿಷ್ಟವಿಲ್ಲದಂತಾಯ್ತು! (ಆ)
-ಯ್ತು, ನಿರಂಜನಾದಿತ್ಯಾನಂದಾಯ್ತು!!!

ನಾಳೆ ಬರುವನೆಂದವನಿಂದೇ ಬಂದ [ವೇ]   5(3046)

-ಳೆ ಬಂದಾಗ ಬರುವೆನೆಂಬುದೇ ಚಂದ!
ರುವುದು, ಹೋಗುವುದಾತನಾನಂದ!
ರುಚಿಸದು ಮಾನವನಿಗೀ ಆನಂದ!
ವೆಸನ ಪಡಬೇಕಾಯಿತಿದರಿಂದ!
ನೆಂಟರಿಷ್ಟರೆಂಬುದು ಭವದ ಬಂಧ!
ತ್ತನೇ ಗತಿಯೆಂದರೆ ಸದಾನಂದ!
ರ ಗುರುವಿಗೆ ಶರಣಾಗು ಕಂದ!
ನಿಂದಕಗೆ ಸಿಕ್ಕದಾ ಪಾದಾರವಿಂದ!
ದೇಹಭಾವವಿಲ್ಲದವನಾತ್ಮಾನಂದ!
ಬಂಧು ಸರ್ವರಿಗಾ ನಿರಂಜನಾನಂದ!
ತ್ತ ತಾನಾ ನಿರಂಜನಾದಿತ್ಯಾನಂದ!!!

ನಾಳೆಗಾಗಿಂದರೆಹೊಟ್ಟೆಯಿಂದಿರ್ಬೇಡ! (ನಾ)   6(4248)

-ಳೆಗುಳಿಸುವವ ಉಪಾವಾಸವಿಡ! (ಆ)
-ಗಾಗಿನ ಕೆಲ್ಸಾಗಾಗ ಮಾಡದಿರ್ಬೇಡ! (ತೇ)
-ಗಿಂದುಂಡು ಗೊರಕೆ ಹೊಡೆಯಲೂ ಬೇಡ!
ತ್ತ ದರ್ಶನ ಪಡೆಯದಿರಬೇಡ! (ಮ)
-ರೆತಿದನ್ನು ಮೃತ್ಯುವಶವಾಗಬೇಡ!
ಹೊತ್ತು, ಹೆತ್ತವಗಚಾರ ಮಾಡ್ಬೇಡ! (ಬ)
-ಟ್ಟೆ, ಅನ್ನ ಕೊಟ್ಟವನ ನಿಂದಿಸಬೇಡ!
ಯಿಂತು ಸತ್ಪುತ್ರ ನೀನಾಗದಿರಬೇಡ!
ದಿಟ್ತ ಸೂರ್ಯನಲ್ಲಿ ಇಡದಿರಬೇಡ! (ಬೇ)
-ರ್ಬೇರೆ ದೇವರಿದ್ದಾನೆಂದು ನಂಬಬೇಡ! (ಮೃ)
-ಡ ನಿರಂಜನಾದಿತ್ಯ ಸಂದೇಹ ಬೇಡ!!!

ನಾಳೆಯಿಂದಭ್ಯಾಸ ಮಾಡ್ತೇನೆ ಗುರುಜಿ!   6(3384)

(ಕ)-ಳೆಯಿತಿಷ್ಟಾಯುಷ್ಯ ಹೀಗಂದು ಸುರುಚಿ!
(ಕೈ)-ಯಿಂದಿಷ್ಟುದಿನ ಆಗದಿತ್ತು ಗುರುಜಿ!
(ಆ)-ದಷ್ಟಾದ್ರೂ ನಿತ್ಯಮಾಡ್ತಿದ್ರಾಗ್ತಿತ್ಸುರುಚಿ!
(ಅ)-ಭ್ಯಾಸಕ್ಕೆ ಆರೋಗ್ಯ ಬೇಡ್ವೇನು ಗುರುಜಿ?
ರ್ವಾನ್ಕೂಲ ನಾಳೆಗಿದೆಯೇ ಸುರುಚಿ?
ಮಾಡುತ್ತೇನೆ ನಾನಿನ್ನುಮುಂದೆ ಗುರುಜಿ!
(ಮಾ)-ಡ್ತೇನೆ, ಬಿಡ್ತೇನೆನ್ಲಿಕ್ಕೆ ನೀನ್ಯಾರ್ಸುರುಚಿ?
ನೆನಪಾಯ್ತು ನೀವಂದದ್ಹಿಂದೆ ಗುರುಜಿ!
ಗುರುಕೃಪೆ ಬೇಕೆಲ್ಲಕ್ಕಲ್ವೇನ್ಸುರುಚಿ?
(ಅ)-ರುಹಿರಿದಕೆ ದಾರಿ ನೀವೇ ಗುರುಜಿ! (ಭ)
-ಜಿಸು ನಿರಂಜನಾದಿತ್ಯನ ಸುರುಚಿ!!!

ನಾವಿಬ್ಬರೊಂದೆಂಬುದನ್ವರ್ಥವಾಗಲಯ್ಯಾ!   1(310)

ವಿಶ್ವರೂಪ ದರ್ಶನಿ ಅರ್ಜುನನಂತಯ್ಯಾ! (ಅ)
-ಬ್ಬರಾರ್ಭಟದಿಂದ ಫಲವೇನಿಲ್ಲವಯ್ಯಾ! (ಆ)
-ರೊಂದಿಗೂ ಹೇಳಿದರಿದು ಸಿದ್ಧಿಸದಯ್ಯಾ! (ಅ)
-ದೆಂತಿರಿಸಿರುವನೋ ಅಂತಿರುತಿರಯ್ಯಾ!
ಬುದ್ಧಿ ಶುದ್ಧಿಗಾಗಿ ಅನುಗ್ರಹ ಬೇಕಯ್ಯಾ! (ಅ)
-ದಕಾಗನವರತ ಗುರುಜಪವಯ್ಯಾ! (ಅ)
ನ್ವರ್ಥವಾದರೆ ಈ ಜನ್ಮ ಸಾರ್ಥಕವಯ್ಯಾ! (ಅ)
-ರ್ಥಕಪಾರ್ಥ ಕಲ್ಪನೆ ಅಜ್ಞಾನದಿಂದಯ್ಯಾ! (ಆ)
-ವಾಗಲೂ ಸತ್ಸಹವಾಸವಿರಬೇಕಯ್ಯಾ!
ಡಿಬಿಡಿ ಸ್ವಭಾವ ಇರಬಾರದಯ್ಯಾ!
ಕ್ಷ್ಯ ಲಾಭಕ್ಕಾಗಿ ಇದೆಲ್ಲಾ ಪಾಲಿಸಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಅನುಭವಿಯಯ್ಯಾ!!!

ನಾವೆಣಿಸಿದಂತಾವುದಾಗಿದೆ? (ಎ)   6(3348)

-ವೆಯಿಕ್ಕುವಷ್ಟ್ರಲ್ಲೇ ಬೇರಾಗಿದೆ! (ಉ)
-ಣಿಸ್ಬೇಕಾದನ್ನ ಚೆಲ್ಲಿಹೋಗಿದೆ!
ಸಿಪ್ಪೆ ಕೀಳ್ವಾಗ್ಹಣ್ಣೇ ಕೊ

ದ್ಹೋಗಿದೆ!
ದಂಟಿನ್ಜೊತೆ ಬೆರ್ಳೂ ತುಂಡಾಗಿದೆ!
ತಾಳ್ಮೆಯಿಂದಿದ್ರೆ ಬಾಳ್ಗೋಳಾಗಿದೆ! (ಮೇ)
-ವು ತಿನ್ತಿದ್ದಾಕ್ಳಿಗೆ ಹಾವ್ಕಚ್ಚಿದೆ!
ದಾಸನಿಗೆ ಮೋಸವೇ ಆಗಿದೆ!
ಗಿಡಕ್ಕಿಟ್ಟ ಗೊಬ್ಬ್ರದ್ನೇ ತಿಂದಿದೆ!
(ಇ)-ದೆ, ನಿರಂಜನಾದಿತ್ಯಗೇನಿದೆ???

ನಿಂತುಕೊಳ್ಳಿರೆಲ್ಲರಲ್ಲಿ! (ಮಾ)   4(1938)

-ತುಗೀತಾಡಬೇಡಿರಲ್ಲಿ!
ಕೊಳಲನಾಲಿಸಿರಲ್ಲಿ! (ಒ)
-ಳ್ಳಿತಾಗಲಿದರಿಂದಲ್ಲಿ! (ಕೆ)
-ರೆಯ ಸ್ನಾನ ಮಾಡಿರಲ್ಲಿ! (ಎ)
-ಲ್ಲ ತೀರ್ಥವಿರ್ಪುದದ್ರಲ್ಲಿ! (ವ)
-ರಗುರುವಾಯೂರಿನಲ್ಲಿ! (ಇ)
ಲ್ಲಿ ನಿರಂಜನಾದಿತ್ಯಲ್ಲಿ!!!

ನಿಂದಕರುದ್ಧಾರವವನಿಂದ!   5(2834)

ತ್ತಲೀಲೆ ಬಹಳ ಆನಂದ!
ತ್ತಲೆಯಾಗ್ವುದವನಾನಂದ! (ಮ)
-ರುಕ್ಷಣ ಬೆಳಕವನಾನಂದ! (ಶ್ರ)
-ದ್ಧಾ, ಭಕ್ತಿ ಅವನ ಕೃಪಾನಂದ!
ಹಸ್ಯವಿದು ಪರಮಾನಂದ! (ಭ)
-ವ ಬಂಧನವೂ ಅವನಾನಂದ! (ಶಿ)
-ವ, ಜೀವೈಕ್ಯವೂ ಶಿವನಾನಂದ!
ನಿಂತಾಗ, ಕೂತಾಗ ನಿತ್ಯಾನಂದ! (ಆ)
-ದರ್ಶ ನಿರಂಜನಾದಿತ್ಯಾನಂದ!!!

ನಿಂದಕಾ! ನೀನೊಂದು ಶುನಕ!   5(2900)

ರೋಡೆಗೆ ನೀ ಪ್ರತಿಬಂಧಕ!
ಕಾವಲುಗಾರನಾಗಿ ರಕ್ಷಕ!
ನೀಚ ಮಲವ ನೆಕ್ಕಿ ಸ್ವಚ್ಛಕ!
ನೊಂದಾಗ ಮಾಲಿಕನೇ ಸೇವಕ!
ದುಡಿವಾಗ ನೀನೊಬ್ಬ ಸಾಧಕ!
ಶುಷ್ಕವಾದೆಲುಬಿನಾರಾಧಕ!
ಶ್ವರಕ್ಕಾಶಿಸುವ ಅಂಧಕ!
ಲಿ ನಿರಂಜನಾದಿತ್ಯಾಂತಕ!!!

ನಿಂದಾ, ಸ್ತುತಿಗಳಾರಿಗೇನು? (ಸ)   3(1174)

-ದಾತ್ಮ ಚಿಂತನೆ ಮಾಡು ನೀನು! (ಸು)
-ಸ್ತು ಮಾಡಿಕೊಳ್ಳಬೇಡ ನೀನು!
ತಿಳಿ, ಶರೀರವಲ್ಲ ನೀನು! (ತ್ಯಾ)
-ಗದಿಂದಾಗು ನಿಶ್ಚಲ ನೀನು! (ಹೇ)
-ಳಾ ಗುರುಮಂತ್ರ ಸದಾ ನೀನು! (ಅ)
-ರಿವಾಗ್ವುದಾಗಾರೆಂದು ನೀನು! (ಯೋ)
-ಗೇಶನಾಗುವೆ ಆಗ ನೀನು! (ನೀ)
-ನು, ನಿರಂಜನಾದಿತ್ಯ ನಾನು!!!

ನಿಂದೆಗಳ ಸಹಿಸುವುದೆಂತಪ್ಪಾ? (ಬಂ)   3(1064)

-ದೆವು ನಿನ್ನಡಿಗೆ ದುಃಖದಿಂದಪ್ಪಾ!
ತಿ ನಮಗೆ ನೀನಲ್ಲವೇನಪ್ಪಾ? (ಕೇ)
-ಳಲಾರೆವು ಚುಚ್ಚು ಮಾತುಗಳಪ್ಪಾ!
ರ್ವಶಕ್ತ ನೀನಾಗಿರುವಿಯಪ್ಪಾ! (ಬ)
-ಹಿರಾಡಂಬರ ನಮಗೆ ಬೇಡಪ್ಪಾ!
ಸುಪುತ್ರರಾಗಿರಿಸೆಮ್ಮ ನಮ್ಮಪ್ಪಾ! (ಠಾ)
-ವು, ಠಿಕಾಣಿಹೆಯಿಲ್ಲದಾಗಿವಪ್ಪಾ! (ಅ)
-ದೆಂತು ನಾವ್ನಿನ್ನ ಮರೆಯುವುದಪ್ಪಾ?
ಪ್ಪೊಪ್ಪುಗಳು ನಿನಗರ್ಪಿತಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯಪ್ಪ ತಿಮ್ಮಪ್ಪಾ!!!

ನಿಗ್ರಹಾನುಗ್ರಹ ಶಕ್ತನಾರು?   6(3461)

ಗ್ರಹಿಸ್ಲಿಕ್ಕಶಕ್ಯ ಅವ್ನಊರು!
ಹಾದಿ ಅಲ್ಲಿಗೆ ತೋರ್ವವನಾರು?
(ಮ)-ನುಜರು ಅಶಕ್ತರಾಗಿಹರು!
(ಉ)-ಗ್ರ ತಪಸ್ಸಿಗೂ ಕಾಣದಿಹರು!
ರಿಸುವವ್ರಾರವ್ರ ಬೇಜಾರು?
ರಣಾಗತ ರಕ್ಷಕಾ ಗುರು!
(ಮು)-ಕ್ತರು ಅವನಿಂದ ಮಾನವರು!
ನಾಸ್ತಿಕರಿದ ನೇನರಿವರು? (ಗು)
-ರು ನಿರಂಜನಾದಿತ್ಯ ದೇವರು!!!

ನಿಗ್ರಹಾನುಗ್ರಹ ಶಕ್ತಿಯ ಬಯಕೆ! (ಅ)   6(3762)

-ಗ್ರಸ್ಥಾನ, ಮಾನಕ್ಕೆ ಮಾನವ ಕುಲಕ್ಕೆ! (ದೇ)
-ಹಾನಂದದ ಹೆಬ್ಬಯಕೆಲ್ಲಾ ಜನಕೆ!
ನುಡಿದಂತೆ ನಡೆವ ಬಾಳ್ಬೇಕದಕೆ! (ಉ)
-ಗ್ರ ತಾಪಸೇಶ್ವರನಾಗಬೇಕದಕೆ!
ತ್ತಿಂದ್ರಿಯ ಜಯವಿರಬೇಕದಕೆ! (ಅ)
-ಶನ, ಪಾನ ಶುದ್ಧವಿರಬೇಕದಕೆ! (ಭ)
-ಕ್ತಿ, ಮುಕ್ತಿಯಾಕಾರವಾಗಬೇಕದಕೆ!
ಮನ ಜೈಸುವ ಸ್ಥಿತಿ ಬೇಕದಕೆ!
ಯಲಾಡಂಬರ ಬರೀ ಬೂಟಾಟಿಕೆ! (ಕಾ)
-ಯ ಕಲ್ಪದಿಂದ್ಲೂ ಈಡೇರದೀ ಬಯಕೆ! (ಏ)
-ಕೆ? ನಿರಂಜನಾದಿತ್ಯ ಬಾಯ್ಬಿಡನೇಕೆ???

ನಿಗ್ರಹಾನುಗ್ರಹ ಶಕ್ತಿಯಿಂದೈಹಿಕಾನಂದ! (ನಿ)   6(3836)

-ಗ್ರಹಿಸಲ್ಪಟ್ಟಿ ಮನಸ್ಸಿನಿಂದ ಬ್ರಹ್ಮಾನಂದ!
ಹಾಲು, ಮೊಸರು, ತುಪ್ಪದಿಂದ ಶರೀರಾನಂದ!
ನುಡಿ, ನಡೆಗಳೊಂದಾದಾಗ ನಿರ್ಭಯಾನಂದ!
ಗ್ರಹ ಶಾಂತ್ಯಾದಿ ಕರ್ಮದಿಂದ ಕ್ಷಣಿಕಾನಂದ!
ಸ್ತ, ಪಾದಾದಿಂದ್ರಿಯ ಸಂಬಂಧ ಭವಬಂಧ!
ರಣರಿಗೆಲ್ಲಾ ಪರಮಾತ್ಮನ ಸಂಬಂಧ! (ಭ)
-ಕ್ತಿ ಭಾವವೆಂಬುದು ಸುವಾಸನೆಯ ಶ್ರೀಗಂಧ! (ಬಾ)
-ಯಿಂದ ಬರುವ ಹರಿ ಕೀರ್ತನೆ ಸದಾನಂದ!
ದೈವೀ ಸಂಪತ್ತಿನಿಂದಲೇ ನಿತ್ಯ ನಿಜಾನಂದ!
ಹಿರಿಯರಾಡಿದರಿದನನುಭವದಿಂದ!
ಕಾತುರಾತುರಗಾರಗೊದಗದೀ ಆನಂದ!
ನಂದ ಕಂದನ ಮುರಲೀವಾದನಾತ್ಮಾನಂದ!
ತ್ತ ಗುರು ನಿತ್ಯ ನಿರಂಜನಾದಿತ್ಯಾನಂದ!!!

ನಿಗ್ರಹಾನುಗ್ರಹ ಶಕ್ತಿಯೇ ಪೂರ್ಣ ಪಾಂಡಿತ್ಯ!   6(4322)

ಗ್ರ ಬಲಾಬಲ ಹೇಳ್ವುದೆಂಥಾ ಪಾಂಡಿತ್ಯ?
ಹಾಲಿಗಿಂತ ನೀರೇ ಹೆಚ್ಚಿನದ್ದಾ ಪಾಂಡಿತ್ಯ?
ನುಡಿ ನಡೆಯೊದಿಲ್ಲದ್ದದೆಂಥಾ ಪಾಂಡಿತ್ಯ?
ಗ್ರಹಣ ಹಿಡಿದ ಚಂದ್ರನಂಥಾ ಪಾಂಡಿತ್ಯ?
ರಿ ಹರಾದಿಗಳಲ್ಲದೆ ಪಾಂಡಿತ್ಯ?
ಕ್ತರಾಗಿ ಮಾಡಿಲ್ಲೆಮ್ಮನ್ನಾ ಪಾಂಡಿತ್ಯ? (ಭೆ)
-ಕ್ತಿ ಮಾತ್ರ ಬಿಡಬೇಡೆನ್ನುವುದಾ ಪಾಂಡಿತ್ಯ? (ದ)
-ಯೇಶ್ವರಿ ಕರುಣಿಸಲೆಮಗಾ ಪಾಂಡಿತ್ಯ?
ಪೂಜೋಪಚಾರ ಮಾಡ್ಸಿಕೊಂಡ್ರಾಯ್ತೇ ಪಾಂಡಿತ್ಯ? (ವ)
-ರ್ಣಭೇದ ಮಾಡಿದೆ ಮಾತ್ರಕ್ಕಾಯ್ತೇ ಪಾಂಡಿತ್ಯ?
ಪಾಂಡವರಾಪ್ತ ಕೃಷ್ಣನಿಗಿತ್ತು ಪಾಂಡಿತ್ಯ ! (ಬೇ)
-ಡಿದವರನ್ನೆಲ್ಲಾ ಹರಸಿತ್ತಾ ಪಾಂಡಿತ್ಯ! (ಸ್ತು)
-ತ್ಯ, ಶ್ರೀ ಕೃಷ್ಣ ಗೋವಿಂದ ನಿರಂಜನಾದಿತ್ಯ

ನಿಗ್ರಹಾನುಗ್ರಹಾನುಗ್ರಹಾ ನಿಗ್ರಹ   2(901)

ಗ್ರಹಚಾರ ಕಳೆದರದನುಗ್ರಹ!
ಹಾಯಾಗಿದ್ದರದೇ ವೈರಿಯ ನಿಗ್ರಹ! (ಅ)
-ನುಮಾನವಿಲ್ಲದಿದ್ದರದನುಗ್ರಹ! (ಅ)
-ಗ್ರಪೂಜೆಯೇ ದುರಾಗ್ರಹದ ನಿಗ್ರಹ!
ಹಾರಾಟ ಹರಿದರದೇ ಅನುಗ್ರಹ! (ಹ)
-ನುಮ ಹಾರಿದುದದಿಂದ್ರಿಯ ನಿಗ್ರಹ! (ಉ)
-ಗ್ರ ರಕ್ಕಸರ ಬಡಿದದ್ದನುಗ್ರಹ!
ಹಾಡಿ ಕುಣಿದಾಡಿದ್ದೇ ಕೋಪ ನಿಗ್ರಹ!
ನಿಶಾಚರರಡಗಿದ್ದೇ ಅನುಗ್ರಹ! (ಜಾ)
-ಗ್ರದವಸ್ಥೆಯದೇ ನಿದ್ರೆಯ ನಿಗ್ರಹ! (ಸ್ನೇ)
-ಹ ನಿರಂಜನಾದಿತ್ಯಾನಂದಾನುಗ್ರಹ!!!

ನಿಜ ಗುರುಭಕ್ತ ಏಕಲವ್ಯ!   1(109)

ಗಕಾದರ್ಶನಾಗಿಹ ಯೋಗ್ಯ!
ಗುರುಮೂರ್ತಿ ಪೂಜೆಯಿಂದ ಸಿದ್ಧ!
ರುಕ್ಮಿಣೀಶನಿಷ್ಟ ಪ್ರಿಯ ಭಕ್ತ!
ಕ್ತಿಗೆ ಯುಕ್ತಿ ಬೆರೆಸದಾಪ್ತ! (ರ)
-ಕ್ತ ಕಾಣಿಕೆಯಿತ್ತ ಗುರುಭಕ್ತ!
ಕಿಂತಾಯ್ತೆನ್ನದನನ್ಯ ಗುರುಭಕ್ತ!
ಷ್ಟವಿತ್ತ ಗುರುಗಿಷ್ಟ ಭಕ್ತ!
ಕ್ಷ್ಯವಿಂತಿರಲವನೇ ಶಿಷ್ಯ!
ವ್ಯಕ್ತ, ನಿರಂಜನಾದಿತ್ಯನಾಪ್ತ!!!

ನಿಜ ಪೂಜೆ ಪಾದಪದ್ಮ ಪೂಜೆ! (ಅ)   2(632)

-ಜ, ಹರಿ, ಹರ, ಶ್ರೀಪಾದ ಪೂಜೆ!
ಪೂಜೆಯದೇ ಪರಿಪೂರ್ಣ ಪೂಜೆ! (ಅ)
-ಜೆ ಶ್ರೀ ಗಿರಿಜೆಯರಿಷ್ಟ ಪೂಜೆ!
ಪಾದ ಪೂಜೆ ಸದಾನಂದ ಪೂಜೆ!
ತ್ತ ತುಳಸಿಯರ್ಚನಾ ಪೂಜೆ!
ರಮಾತ್ಮಾರಾಮ ಪಾದ ಪೂಜೆ! (ಪ)
-ದ್ಮ ಪಾದ ಶ್ರೀ ಗುರುಪಾದ ಪೂಜೆ!
ಪೂಜೆ, ಶಿವಾನಂದ ಪಾದ ಪೂಜೆ! (ಪೂ)
-ಜೆ, ನಿರಂಜನಾದಿತ್ಯಾತ್ಮ ಪೂಜೆ!!!

ನಿಜಧರ್ಮದಲಿರುವುದೇ ಸುಶೀಲ!   1(121)

ಗದೀಶನನರಿವುದೇ ಸುಶೀಲ!
ರ್ಮವೊಬ್ಬೊಬ್ಬರಿಗೊಂದೊಂದು ಸುಶೀಲ! (ಕ)
-ರ್ಮ ತ್ರಿಕರಣಾತ್ಮಕವಿರೆ ಸುಶೀಲ! (ಅ)
-ದರಿಂದದನರಿಯಬೇಕು ಸುಶೀಲ!
ಲಿಪ್ತನಾಗಬಾರದನ್ಯಕೆ ಸುಶೀಲ!
ರುದ್ರನಾದರ್ಧನಾರೀಶ್ವರ ಸುಶೀಲ! (ಅ)
ವುಗಳಿವುಗಳಾಟಕಿಲ್ಲ ಸುಶೀಲ!
ದೇಶ, ಕಾಲಕೊಪ್ಪಿರಲಿದು ಸುಶೀಲ!
ಸುತ, ಪಿತಾದಿಗೊಂದೊಂದಿದೆ ಸುಶೀಲ!
ಶೀತಲದ ಭೂತಲ ಧರ್ಮ ಸುಶೀಲ! (ಅ)
-ಲಖ್ನಿರಂಜನಾದಿತ್ಯ ಧರ್ಮ ಸುಶೀಲ!!!

ನಿಜಭಕ್ತಗಾವ ಭಯವೂ ಇಲ್ಲ!   2(691)

ಗದಲಿವ ಬೆರೆಯುವುದಿಲ್ಲ!
ಕ್ತಿಯಲನುಮಾನಿಸುವುದಿಲ್ಲ! (ಶ)
-ಕ್ತರೆಂಬವರಿಗೆ ಅಂಜುವುದಿಲ್ಲ!
ಗಾಳಿಯ ಗೋಪುರ ಕಟ್ಟುವುದಿಲ್ಲ!
ರ ಗುರುಜಪ ಬಿಡುವುದಿಲ್ಲ!
ಯದಿಂದ ದಾರಿತಪ್ಪುವುದಿಲ್ಲ! (ಜ)
-ಯ ಅಪಜಯಕಾಗಳುವುದಿಲ್ಲ! (ಆ)
-ವೂರಿಗೂ ಅಂಟಿಕೊಂಡಿರುವುದಿಲ್ಲ!
‘ಇಷ್ಟಾರಿಷ್ಟವನಿಷ್ಟ ’! ವೆನ್ನದಿಲ್ಲ! (ಬ)
-ಲ್ಲ ನಿರಂಜನಾದಿತ್ಯಗೇನೂಇಲ್ಲ!!!

ನಿಜವಾದ ತಿಳಿವಳಿಕೆಯಿಂದಿರು!   6(4093)

ಗತ್ತಿನಾಚಾರಕ್ಕೆ ಹುಚ್ಚಾಗದಿರು!
ವಾರಿಜಮಿತ್ರನ ದಾರಿ ಬಿಡದಿರು!
ತ್ತಾತ್ರೇಯನಿಚ್ಛೆ ಅದೆಂದರಿತಿರು!
ತಿತಿಕ್ಷೆ ವೈರಾಗ್ಯಾಭ್ಯಾಸ ಮಾಡುತಿರು! (ಕೀ)
-ಳು ವ್ಯಾಮೋಹಕ್ಕೆ ಒಳಗಾಗದೇ ಇರು!
ಸ್ಹು, ವಾಹಾನಗಳಿಗಾಶಿಸದಿರು! (ಬಾ)
-ಳಿನಿತಿದ್ದರಾನಂದವೆಂದರಿತಿರು!
ಕೆದಕಿ ವಿಷಯಗಳ ಕೆಡದಿರು! (ನಾ)
-ಯಿಂದನಂತೊಲ್ಲಾಸೆಗಳ ಬೋಳಿಸಿರು!
ದಿವ್ಯ ಜ್ಞಾನಾನಂದಾನುಭವದಿಂದಿರು! (ಗು)
-ರು ನಿರಂಜನಾದಿತ್ಯನೆಂದರಿತಿರು!!!

ನಿಜಾನಂದದಲ್ಲೇರು ಪೇರಿಲ್ಲ!   2(849)

ಜಾಗ್ರತ್ತಾದ್ಯವಸ್ಥೆಯದಕಿಲ್ಲ!
ನಂದಾದೀಪವದಾರುವುದಿಲ್ಲ! (ಉ)
-ದಯಾಸ್ತಗಳದಕೇನೂ ಇಲ್ಲ!
ಧಿ, ಕ್ಷೀರಾನ್ನಗಳಂತದಲ್ಲ! (ಎ)
-ಲ್ಲೇನಾದರೂ ಹಳಸುವುದಿಲ್ಲ!
ರುಚಿ ವ್ಯತ್ಯಾಸಗಳದಕಿಲ್ಲ!
ಪೇಡಾಂಬೋಡೆಗಳಂತದೇನಲ್ಲ! (ಹ)
-ರಿ, ಹರ ಭೇದವದಕೇನಿಲ್ಲ! (ಬ)
-ಲ್ಲ ನಿರಂಜನಾದಿತ್ಯದನೆಲ್ಲ!!!

ನಿತ್ಯ ನಿನ್ನನ್ನು ನಾ ನೋಡಬೇಕು! (ಭೃ)   3(1370)

-ತ್ಯನೆಂದನ್ನ ಸ್ವೀಕರಿಸಬೇಕು!
ನಿಶಿ, ದಿನ ಸೇವೆ ಕೊಡಬೇಕು! (ಅ)
-ನ್ನ ಬಟ್ಟೆಯಾಸೆ ಯೋಡಿಸಬೇಕು! (ನಿ)
-ನ್ನು ಚ್ಛಿಷ್ಟ ದಯಪಾಲಿಸಬೇಕು!
ನಾಚಿಕೆ, ಲಜ್ಜೆ, ಬಿಡಿಸಬೇಕು!
ನೋಟ, ಕೂಟ ಸಾಕುಮಾಡಬೇಕು! (ಒ)
-ಡನಾಟ ನಿನ್ನದೇ ಆಗಬೇಕು!
ಬೇರೆ ಕಡೆಗೋಡದಿರಬೇಕು! (ಬೇ)
-ಕು, ನಿರಂಜನಾದಿತ್ಯ ನೀ ಬೇಕು!!!

ನಿತ್ಯ ನಿಯಮಾನುಷ್ಟಾನ ಬಿಟ್ಟಿಲ್ಲ! [ಅ]   3(1176)

-ತ್ಯ ಗತ್ಯವಿದೆಂಬುದ ಮರೆತಿಲ್ಲ!
ನಿರ್ಮಲಾನಂದ ನಿಶ್ಚಲವಾಗಿಲ್ಲ!
ದುಪನಾಜ್ಞೆ ಪಾಲಿಸದೇನಿಲ್ಲ!
ಮಾಯೆಯ ಬಂಧನಕ್ಕೊಳಗಾಗಿಲ್ಲ! (ಅ)
-ನುಭವಾಮೃತ ಪಾನ ತೃಪ್ತ್ಯಾಗಿಲ್ಲ! (ಭ್ರ)
-ಷ್ಟಾಚಾರಕ್ಕೇನೂ ಆಸ್ಪದ ಕೊಟ್ಟಿಲ್ಲ!
ಡೆ, ನುಡಿಯಲ್ಲಿ ವ್ಯತ್ಯಾಸವಿಲ್ಲ!
ಬಿಟ್ಟಿ ಬಸವನಂತೋಡಾಡುತ್ತಿಲ್ಲ! (ಶೆ)
-ಟ್ಟಿ ವ್ಯಾಪಾರದಂತೇನಭ್ಯಾಸವಿಲ್ಲ! (ಅ)
-ಲ್ಲ ನಿರಂಜನಾದಿತ್ಯ ಬಲ್ಲನೆಲ್ಲ!!!

ನಿತ್ಯ ನೇಮ, ನಿಷ್ಠಗನಗತ್ಯ ಹಬ್ಬ!   6(4183)

ತ್ಯಜಿಸಿರುವನವ ಅಜ್ಞಾನ ಮಬ್ಬ! (ತಾ)
-ನೇ ತಾನಾಗಿರದವಗಿರ್ಲೆಲ್ಲಾ ಹಬ್ಬ!
ನಸ್ಸಿಗಷ್ಟಾದರೂ ಆನಂದ ಹಬ್ಬ!
ನಿತ್ಯಾ ನಿತ್ಯ ಜ್ಞಾನಾನಂದ ದೊಡ್ಡ ಹಬ್ಬ! (ಶ್ರೇ)
-ಷ್ಠನಿವ ದೇವರೇ ತಾನಾದವನೊಬ್ಬ!
ಗನಮಣಿ ಇಂಥವರಲ್ಲಿ ಒಬ್ಬ!
ರನಿನ್ನೂ ಕರಗಿಸದಿಹ ಕೊಬ್ಬ! (ಯೋ)
-ಗವಧುವನ್ನಾದರದಿಂದಿನ್ನೂ ತಬ್ಬ! (ಸ)
-ತ್ಯ, ಶಿವ, ಸುಂದರ ಯೋಗೇಶ್ವರನೊಬ್ಬ!
ದಿ ಬದೆ ಅವನರ್ಧಾಂಗಿ ಅಬ್ಬಬ್ಬಾ! (ಇ)
-ಬ್ಬರ್ಗೂ ನಿರಂಜನಾದಿತ್ಯಾನಂದ ಹಬ್ಬ!!!

ನಿತ್ಯ ಪ್ರತ್ಯಕ್ಷ ಸತ್ಯನಾರಾಯಣ! (ಭೃ)   5(3227)

-ತ್ಯ ನೋಡುವನವನ ಪ್ರತಿಕ್ಷಣ!
ಪ್ರಸಾದದಿಂದ ಸದಾ ಸಂರಕ್ಷಣ! (ಅ)
-ತ್ಯಮೂಲ್ಯವದೊದಗದು ತಕ್ಷಣ!
ಕ್ಷಮಾಶೀಲ ಅವನ ದೊಡ್ಡ ಗುಣ!
ಕಲರಿಗೂ ಆತ ಪಂಚಪ್ರಾಣ! (ಸ್ತು)
-ತ್ಯ ಅವನ ಸೇವೆ! ಲೋಕ ಕಲ್ಯಾಣ!
ನಾಕ, ನರಕದಲ್ಲಿ ಭೇದ ಕಾಣ!
ರಾಮಾವತಾರಕ್ಕಿವನೇ ಕಾರಣ!
ಜುಸ್ಸಾಮಾದಿ ವೇದಕ್ಕೆ ಪ್ರಮಾಣ! (ಹ)
-ಣ ನಿರಂಜನಾದಿತ್ಯಗೆ ತೃಣ!!!

ನಿತ್ಯ ಶಾಂತ್ಯಾತ್ಮ ಜ್ಞಾನದಿಂದ! (ಸ)   2(728)

-ತ್ಯ ಅನುಭವದಿಂದಾನಂದ!
ಶಾಂತಿ ನಿವೃತ್ತಿ ಮಾರ್ಗಾನಂದ!
ತ್ಯಾಗೈಹಿಕಾನಂದತ್ಯಾನಂದ! (ಆ)
-ತ್ಮ ಜ್ಯೋತ್ಯಾಗುದಿಸುವಾನಂದ!
ಜ್ಞಾನ ಸಿದ್ಧಿಯಿದಾತ್ಮಾನಂದ!
ಶ್ವರಳಿದಮರಾನಂದ! (ಇ)
-ದಿಂಗಿರವರಿತರಾನಂದ! (ಸ)
-ದಾ, ನಿರಂಜನಾದಿತ್ಯಾನಂದ!!!

ನಿತ್ಯ ಸುಖದ ನಿರಂಜನನಿಷ್ಟ ಜೀವನ!   1(70)

ತ್ಯಜಿಸಬೇಕು ಮನದ ಸಂಕಲ್ಪ ಭಾವನ!
ಸುಖ ದುಃಖಗಳಿಗೆಲ್ಲಾ ಗುರುವೇ ಕಾರಣ!
ತಿಗೊಳಡಿರಲಿದರಿಂದ ನಿನ್ನ ಮನ!
ಯೆಯಿಂದೆಲ್ಲಾ ಸಾಗುತುದೆಂದು ನಂಬವನ!
ನಿಜವೆಂದಿದನನುಭವಿಸಾನಂದವನ!
ರಂಜನೆಯ ವಿಷಯದಾಸೆ ದುರ್ವಾಸನ!
ಯಿಸಬೇಕಿದನು! ನಂಬು ಗುರುವಚನ!
ಡೆವಾಗ ನುಡಿವಾಗಿರಬೇಕು ಮನನ!
ನಿತ್ಯ ನಿನಗೀಯುವನಾತ ಬೇಕಾದುದನ!
(ಅ) -ಷ್ಟರಲಿರಬೇಕು ತೃಪ್ತಿ ; ಇರಲಿ ಸಹನ!
ಜೀವ ಭಾವವಳಿಯಲಿಕಿರಲಿ ಭಜನ!
ರ್ತಮಾನ ಕರ್ತವ್ಯ ಮಾಡು ಪರಿಪಾಲನ!
ಮಿಸುತಿರು ಸದಾ ನಿರಂಜನಾದಿತ್ಯನ!!!

ನಿತ್ಯ ಸೇವಾದಿತ್ಯ ಸಂಪ್ರದಾಯ! (ಸ)   2(518)

-ತ್ಯವಂತಗುತ್ತಮ ಸಂಪ್ರದಾಯ!
ಸೇತು ಬಂಧನದ ಸಂಪ್ರದಾಯ!
ವಾಸುದೇವಾನಂದ ಸಂಪ್ರದಾಯ!
ದಿನ ದಿನ ಕೂಲಿ ಸಂಪ್ರದಾಯ! (ಅ)
-ತ್ಯಗತ್ಯ ಶಾಂತಿಗೀ ಸಂಪ್ರದಾಯ!
ಸಂಘಶಕ್ತಿಗೊಳ್ಳೇ ಸಂಪ್ರದಾಯ!
ಪ್ರಯತ್ನೋತ್ಸಾಹಕೀ ಸಂಪ್ರದಾಯ!
ದಾನಿ, ದೀನ, ಸ್ನೇಹ ಸಂಪ್ರದಾಯ! (ಜ)
-ಯ! ನಮೋ ನಿರಂಜನಾದಿತ್ಯಾಯ!!!

ನಿತ್ಯ, ಸತ್ಯ, ದತ್ತ ದೇವೋತ್ತಮ! [ಭೃ]   2(577)

-ತ್ಯನಿವಗಾದವ ಜೀವೋತ್ತಮ!
ದಾ ಭಜಿಪವ ಭಕ್ತೋತ್ತಮ! (ಸ)
-ತ್ಯದಭ್ಯಾಸದವ ಸರ್ವೋತ್ತಮ!
ರ್ಶನವಾದವ ದಾಸೋತ್ತಮ! (ಚಿ)
-ತ್ತ ಶುದ್ಧಿಯಾದವ ಮುಕ್ತೋತ್ತಮ!
ದೇವ ಭಾವದವ ಆತ್ಮೋತ್ತಮ! (ಸಾ)
-ವೋವರಿಯದವ ಸ್ಥಿತೋತ್ತಮ! (ಅ)
-ತ್ತ ಇತ್ತೆತ್ತೆತ್ತಾತ ದತ್ತೋತ್ತಮ!
ಮ, ನಿರಂಜನಾದಿತ್ಯೋತ್ತಮ!!!

ನಿತ್ಯದೈದೈದು ಮುಂದಿನ ನಿಧಿಯಪ್ಪಾ! (ಸ)   5(2852)

-ತ್ಯವಿದರರಿವಿಗೆ ತಾಳ್ಮೆ ಬೇಕಪ್ಪಾ!
ದೈವೀಗುಣ ಸಂಪನ್ನನಾಗಬೇಕಪ್ಪಾ!
ದೈವಾನುಗ್ರಹ ನಿತ್ಯ ಸೇವೆಯಿಂದಪ್ಪಾ!
ದುಡಿಯಬೇಕು ಶ್ರದ್ಧಾ, ಭಕ್ತಿಯಿಂದಪ್ಪಾ!
ಮುಂದಿನ ಮಾತಿಂದಾಡಿ ಫಲವಿಲ್ಲಪ್ಪಾ! (ಇಂ)
-ದಿನದ್ದಿಂದೇ ಮಾಡುವಭ್ಯಾಸ ಮಾಡಪ್ಪಾ! (ಮ)
-ನಸ್ಸನ್ನಿದು ಸ್ಥಿರಗೊಳಿಸುವುದಪ್ಪಾ!
ನಿಮಿತ್ತ ಮಾತ್ರ ಈ ಶರೀರ ಕಾಣಪ್ಪಾ! (ವಿ)
-ಧಿ, ಹರಿ, ಹರರೇಕ ರೂಪಿ ನೀನಪ್ಪಾ!
ದುಪತಿಯ ಗೀತಾವಾಕ್ಯವಿದಪ್ಪಾ! (ಇ)
-ಪ್ಪಾ ನಿರಂಜನಾದಿತ್ಯ ಅದಾಗೀಗಪ್ಪಾ!!!

ನಿತ್ಯಪೂಜೆ ನಿರಂಜನಾದಿತ್ಯನಿಗೆ! (ಭೃ)   5(2996)

-ತ್ಯರ ಪ್ರೀತಿಗೆ ಪಾತ್ರನಾದವನಿಗೆ!
ಪೂರ್ಣ ಪರಬ್ರಹ್ಮ ಸ್ವರೂಪಾತ್ಮನಿಗೆ! (ಸಂ)
-ಜೆಯಸ್ತಮಿಸಿ ಮುಂಜಾನೇಳ್ವವನಿಗೆ!
ನಿಶಿ, ದಿನ, ಲೋಕ ಕಲ್ಯಾಣಾತ್ಮನಿಗೆ!
ರಂಗ, ಪಾಂಡುರಂಗನಾಗಿರ್ಪವನಿಗೆ!
ಗದ ಕತ್ತಲೆ ಕಳೆಯುವವನಿಗೆ!
ನಾಸ್ತಿಕರ ಕಣ್ತೆರೆಯುವವನಿಗೆ!
ದಿವ್ಯ ಸಹಸ್ರ ಕಿರಣಾದಿತ್ಯನಿಗೆ!
ತ್ಯಜಿಸಿ ಸ್ವಾರ್ಥವನ್ನಿರುವವನಿಗೆ!
ನಿಗಮಾಗಮ ಸಾರನಾದವನಿಗೆ!
ಗೆಳೆಯ ಶ್ರೀ ನಿರಂಜನಾದಿತ್ಯನಿಗೆ!!!

ನಿತ್ಯಪೂಜೆಯಿದೆಂಥಾ ಭಾಗ್ಯ! (ಅ)   4(2043)

-ತಮೌಲ್ಯದಪರೂಪ ಭಾಗ್ಯ!
ಪೂಜೆ ಮಾಡುವುದೊಂದು ಭಾಗ್ಯ! (ಪೂ)
-ಜೆ ಮಾಡ್ಸಿಕೊಂಬುದ್ಬಹು ಭಾಗ್ಯ! (ಆ)
-ಯಿತಿಬ್ಬರುನ್ನತಿಗಾ ಭಾಗ್ಯ! (ಹಿಂ)
-ದೆಂದಾರಿಗೂ ಸಿಕ್ಕಿಲ್ಲಾ ಭಾಗ್ಯ! (ವೃ)
-ಥಾಲಾಪಕ್ಕೆ ಸಿಕ್ಕದಾ ಭಾಗ್ಯ!
ಭಾನುದೇವಾನುಗ್ರಹಾ ಭಾಗ್ಯ! (ಯೋ)
-ಗ್ಯ ನಿರಂಜನಾದಿತ್ಯನ್ಭಾಗ್ಯ!!!

ನಿತ್ಯಾದಿತ್ಯ ಸೇವಾ ವಿಜಯ!   2(519)

ತ್ಯಾಗಿಯಾಗುತಾದಾ ವಿಜಯ!
ದಿನಕರನಾದಾ ವಿಜಯ! (ಅ)
-ತ್ಯಮೂಲ್ಯಮೋಘದಾ ವಿಜಯ!
ಸೇರುತಲೊಂದಾದಾ ವಿಜಯ!
ವಾಙ್ಮನೈಕ್ಯವಾದಾ ವಿಜಯ!
ವಿಮಲ ಪದದಾ ವಿಜಯ!
ನ್ಮ ಸಾಫಲ್ಯದಾ ವಿಜಯ! (ಜ)
-ಯ! ನಿರಂಜನಾದಿತ್ಯ ಜಯ!!!

ನಿತ್ಯಾನಂದವಾರಿಗೂ ಬೇಡೀಗಯ್ಯಾ! (ನೃ)   4(1575)

-ತ್ಯಾನಂದಕ್ಕೇ ಮರುಳಾಗುವರಯ್ಯಾ!
ನಂಬಿಗೆಗೀಗಲ್ಪಾಯುಷ್ಯ ಕಾಣಯ್ಯಾ!
ಕ್ಷ ಸೇವೆಗನುಕೂಲವಿಲ್ಲಯ್ಯಾ!
ವಾದ, ಭೇದಾನಂದಕ್ಕೀಗ ಕಾಲಯ್ಯಾ! (ಹ)
-ರಿ ಭಜನೆ ಇಹ ಸುಖಕ್ಕಲ್ಲಯ್ಯಾ!
ಗೂಬೆಯಾತ್ಮ ಧ್ಯಾನಿಯೆಂಬರೇನಯ್ಯಾ!
ಬೇಕು ಆತ್ಮಾನಾತ್ಮಾ ವಿಚಾರವಯ್ಯಾ! (ಇ)
-ಡೀ ವಿಶ್ವ ನಿನ್ನಿಂದ ತುಂಬಿಹುದಯ್ಯಾ! (ರಂ)
-ಗನಾಥನೀ ಮಾತನ್ನೊಪ್ಪಿಹನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾತ್ಮಾನಂದಯ್ಯಾ!!!

ನಿತ್ಯಾನಂದಾನುಗ್ರಹವಗುತ್ತಲಿದೆ! (ಸ)   6(3516)

-ತಾಸತ್ಯದರಿವೆನಗಾಗುತ್ತಲಿದೆ!
ನಂಬಿಗೆ ದಿನೇ ದಿನೇ ಹೆಚ್ಚುತ್ತಲಿದೆ!
ದಾರಿ ಸರಿಯೆಂಬ ಧೈರ್ಯ ಬರುತ್ತಿದೆ!
(ತ)-ನು, ಮನ, ಧನ, ಸಮರ್ಪಣೆಯಾಗಿದೆ!
ಗ್ರಹಚಾರದ ಭ್ರಾಂತಿ ತಪ್ಪಿಹೋಗಿದೆ!
ಗಲಿರುಳಾತ್ಮ ಚಿಂತನೆ ಸಾಗಿದೆ!
ವಾದ, ವಿವಾದಕ್ಕಿಸ್ಟವಿಲ್ಲದಾಗಿದೆ!
ಗುಡಿ ಈ ಶರೀರವೆಂಬರಿವಾಗಿದೆ!
(ಎ)-ತ್ತನೋಡಿದರೂ ತತ್ವ ತುಂಬಿದಂತಿದೆ!
(ಬ)-ಲಿತು, ಹಣ್ಣಾಗಿ ನೈವೇದ್ಯವಾಗಲಿದೆ!
(ಎ)-ದೆ ವಿಶಾಲ ನಿರಂಜನಾದಿತ್ಯಗಿದೆ!!!

ನಿತ್ಯಾನ್ನ ದಾನಿ ಶ್ರೀ ಕೃಷ್ಣ!   5(2994)

ತ್ಯಾಗರಾಜನಾ ಶ್ರೀ ಕೃಷ್ಣ! (ನಿ)
ನ್ನ, ನನ್ನದೆನ್ನಾ ಶ್ರೀ ಕೃಷ್ಣ!
ದಾನವಾಂತಕಾ ಶ್ರೀ ಕೃಷ್ಣ!
ನಿರಂಜನಾತ್ಮಾ ಶ್ರೀ ಕೃಷ್ಣ!
ಶ್ರೀಯರಸನಾ ಶ್ರೀ ಕೃಷ್ಣ!
ಕೃಪಣನಲ್ಲಾ ಶ್ರೀ ಕೃಷ್ಣ! (ಕೃ)
-ಷ್ಣ ನಿರಂಜನಾದಿತ್ಯೋಷ್ಣ!!!

ನಿತ್ಯೋಪಚಾರ ಸಂತೃಪ್ತಾ ಕಾಗೆ! (ಪ್ರೀ)   4(1745)

-ತ್ಯೋದ್ಗಾರ ಕೇಳಿ ಬರಲಾ ಕಾಗೆ!
ತಿತಪಾವನನೆಂಬಾ ಕಾಗೆ! (ಪಂ)
-ಚಾಮೃತಾದ್ಯನ್ನವನ್ನುಂಡಾ ಕಾಗೆ!
ವೆಯುಂಡೆ, ವಡೆ ತಿಂದಾ ಕಾಗೆ!
ಸಂತೋಷದಿಂದಾಗ, ಬಂದಾ ಕಾಗೆ!
ತೃಪ್ತಿಯಿಂದ ಹೋಯಿತೀಗಾ ಕಾಗೆ! (ಪ್ರಾ)
-ಪ್ತಾಪ್ರಾಪ್ತಕ್ಕಳದಾ ಕಪ್ಪು ಕಾಗೆ!
ಕಾಗೆ ಹೋದಮೇಲಿನ್ನೆಲ್ಲಾ ಕಾಗೆ? (ಕಾ)
-ಗೆ ನಿರಂಜನಾದಿತ್ಯಾತ್ಮಾ ಕಾಗೆ!!!

ನಿದರ್ಶನ, ಪ್ರದರ್ಶನನಿತ್ಯವಯ್ಯಾ!   2(839)

ರ್ಶನದಿಂದಕ್ಕು ನಿತ್ಯಸುಖವಯ್ಯಾ! (ಸ್ಪ)
-ರ್ಶದಿಂದಪ್ಪ ಸುಖ ಕ್ಷಣಕಾಲವಯ್ಯಾ! (ಅ)
-ನವರತದಭ್ಯಾಸ ದರ್ಶನಕ್ಕಯ್ಯಾ!
ಪ್ರತಿಕ್ಷಣ ಪವಿತ್ರವಾಗಿಹುದಯ್ಯಾ!
ತ್ತ ವರ್ತಮಾನ ಪ್ರವರ್ತಕನಯ್ಯಾ! (ದ)
-ರ್ಶನವೀಯುವನವನಂತಿದ್ದರಯ್ಯಾ! (ಧ)
-ನ, ಕನಕವೆಲ್ಲಾ ಕಳ್ಳರ ಪಾಲಯ್ಯಾ!
ನಿರ್ಮಲನಾಗಿ ಅವನ ಭಜಿಸಯ್ಯಾ!
ತ್ಯಜಿಸಬೇಕವಗಾಗೈಹಿಕವಯ್ಯಾ!
ರಗುರು ಪರಮ ಕರುಣಾಳಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನುಭವಿಯಯ್ಯಾ!!!

ನಿದ್ದೆ ಮುಗಿದೆದ್ದು ನಾನು ಬಂದೆ! (ಎ)   1(179)

-ದ್ದೆನಜ್ಞಾನ ಗಾಢ ನಿದ್ರೆಯಿಂದೆ!
ಮುಗಿಯಿತಿಂದಿಗೆಲ್ಲಾ ಆ ನಿಂದೆ!
ಗಿಡುಗ ಹಾರಿತಿಲಿಯ ಹಿಂದೆ!
ದೆವ್ವ ಬಡಿಯಿತಿದನು ಮುಂದೆ! (ಎ)
-ದ್ದು ಕಂಡೆನಿದನಾನಂದದಿಂದೆ!
ನಾನಾಗಿ ನೋಡಿದೆನಿದನಿಂದೆ! (ಏ)
-ನು ಕನಿಕರನಿನಗೆಂದೆ!
ಬಂಧು, ಬಳಗವೆಲ್ಲಾ ನೀನೆಂದೆ! (ಎಂ)
-ದೆ ನಿರಂಜನಾದಿತ್ಯನದೆಂದೆ!!!

ನಿದ್ದೆಯ ಬಾಯಿಗೆ ಮುದ್ದೆ ತುರುಕ್ಬೇಡ! (ಒ)   6(4293)

-ದ್ದೆ ಮುದ್ದೆಯಾಗಿರುವ ಬಟ್ಟೆ ಉಡ್ಬೇಡ!
ತ್ನವಿಲ್ಲೆಂದು ಮಾಡ್ಬಾರದ್ದು ಮಾಡ್ಬೇಡ!
ಬಾಳು ದುರ್ನೀತಿಯಿಂದಳಿಸಿಕೊಳ್ಬೇಡ! (ನಾ)
-ಯಿ, ನರಿಗಳ ಹಾಗೆಂದೂ ನೀನಾಗ್ಬೇಡ! (ಬ)
-ಗೆಬಗೆಯಾಸೆಯಿಂದ ದುಃಖಿಯಾಗ್ಬೇಡ!
ಮುಕ್ತಿ ಮನೋಜಯದಿಂದ ಮರೆಯ್ಬೇಡ! (ತಿ)
-ದ್ದೆಲ್ಲಾ ತಪ್ಪುಗಳೀಗ! ಧೃತಿಗೆಡ್ಬೇಡ!
ಯುಪ್ಪ, ಹಾಲಿಲ್ಲ ಯೋಗಾಭ್ಯಾಸಕ್ಕೆನ್ಬೇಡ! (ನೀ)
-ರು ಅನ್ನ ಸಾಕುದಕ್ಕೆ; ಧ್ಯಾನ ಬಿಡ್ಬೇಡ! (ಬೇ)
-ಕ್ಬೇಕಾದದ್ದೀವ ಗುರು; ನಂಬದಿರ್ಬೇಡ! (ತ)
-ಡ ಶ್ರೀ ನಿರಂಜನಾದಿತ್ಯ ಗುರು ಮಾಡ!!!

ನಿದ್ದೆಯಲ್ಲಿದ್ದವಗೆದ್ದ ಮೇಲುದ್ಯೋಗ! (ಬಿ)   5(3251)

-ದ್ದೆ ಪಾದಕ್ಕೆಂದ್ರೂ ಮಾಡನವನುದ್ಯೋಗ! (ಭ)
-ಯ ತೋರಿದ್ರೂ ಆಗದವನಿಂದುದ್ಯೋಗ! (ನಿ)
-ಲ್ಲಿಸಿದ್ರೂ ಒಲ್ಲೆನೆನ್ನುವನಾ ಉದ್ಯೋಗ! (ಎ)
-ದ್ದಮೇಲೆಲ್ಲರಲ್ಲೂ ಬೇಡುವನುದ್ಯೋಗ! (ಅ)
-ವನ ದುರ್ವಿಧಿಗೀಗಾರ್ಕೊಡ್ವರುದ್ಯೋಗ?
ಗೆಳೆಯರಿಗೂ ಬೇಡವಾಗುವನಾಗ! (ಬಿ)
-ದ್ದವನ ಮೇಲ್ಕಲ್ಲೆತ್ತಿ ಹಾಕ್ವರೆಲ್ಲರಾಗ!
ಮೇಷ, ಮೀನವೆಣಿಪರವ್ನ ಕಂಡಾಗ! (ಹಾ)
-ಲು, ರೊಟ್ಟಿ ಕೊಟ್ಟವರಾರೂ ಬಾರರಾಗ! (ಉ)
-ದ್ಯೋಗ ನರ ನಾರಾಯಣನಪ್ಪಾ ಯೋಗ! (ಜ)
-ಗತ್ತಿಗೆ ನಿರಂಜನಾದಿತ್ಯೋದಯೋಗ!!!

ನಿದ್ದೆಯಿಂದ ಎದ್ದಮೇಲೆ ಊಟ!   6(3432)

(ಸ)-ದ್ದೆಳ್ಳೆಷ್ಟಾದರೂ ಬಲು ಪೇಚಾಟ!
(ಬಾ

)-ಯಿಂದ ಹೇಳಲಾಗದಷ್ಟೂ ಕಾಟ!
(ಕಂ)-ದ ತಾನೆದ್ದ ಮೇಲೆಲ್ಲಾ ಆಟ!
ದುರಿಸದೇ ನೋಡ್ಬೇಕಾ ನೋಟ!
(ಬಿ)-ದ್ದರೂ ಬಿಡ್ಬಾರ್ದವನೊಡನಾಟ!
ಮೇಲ್ಮಟ್ಟದ್ವಾಗ್ವುದಾಗಿನಾ ಕೂಟ!
ಲೆಕ್ಕಿಸಬಾರ್ದು ಸಮಯದೋಟ!
ರ್ಧ್ವಗತಿಗೊಯ್ಯುವುದಿಂಥಾಟ!
(ಊ)-ಟ ನಿರಂಜನಾದಿತ್ಯಗಿಂಥಾಟ!!!

ನಿದ್ರಿಸಿದಾಗ ಎಬ್ಬಿಸಬೇಡ! [ಇಂ]   3(1289)

-ದ್ರಿಯಗಳಿಗೆ ಆಗೇನೂ ಬೇಡ! (ಉ)
ಸಿರಾಟಕ್ಕೆ ಅಡ್ಡಿ ತರಬೇಡ! (ಸ)
-ದಾಶಿವನಂತಿರದಿರಬೇಡ!
ಡಿ ಬಿಡಿ ಮಾಡಿ ಕೆಡಬೇಡ!
ದ್ದರೂ ಗದ್ದಲ ಮಾಡಬೇಡ! (ಕೊ)
-ಬ್ಬಿ ಮಿಥ್ಯ ಸುಖಕ್ಕಾಶಿಸಬೇಡ!
ತ್ಸಂಗಾತ್ಮಧ್ಯಾನ ಬಿಡಬೇಡ!
ಬೇರೆ ಯಾವುದನ್ನೂ ನಂಬಬೇಡ! (ಬಿ)
-ಡ, ನಿರಂಜನಾದಿತ್ಯ ಧೃಢ!!!

ನಿದ್ರಿಸುವವಗನ್ನವಾದ್ರೇನು, ಮುದ್ದೆಯಾದ್ರೇನು? (ತಿಂ)   6(3899)

-ದ್ರಿ, ಬಿಟ್ರಿ ಎಂದಾರೋಪಿಸಿದರಾತಗರಿವೇನು?
ಸುಜ್ಞಾನಿ ಮಾನವನಿಗೆ ಸಮಾಜದ ಹಂಗೇನು?
ಸ್ತ್ರ ರೇಷ್ಮೆಯದ್ದಾದರೇನು, ಹತ್ತಿಯದ್ದಾದ್ರೇನು?
ರ ಗುರುಕೃಪೆಯಿಂದಾತ ಭೇದ ಬಿಟ್ಟಿಹನು!
ರ್ವರಹಿತನಾಗಿ ಕಾಲ ಕಳೆಯುತ್ತಿಹನು! (ನ)
-ನ್ನದು, ನಿನ್ನದೆಂದೀರ್ಷಾಸುಯೆಯಿಲ್ಲದಂತಿಹನು!
ವಾದ, ವಿವಾದಕ್ಕೆ ಬಹು ದೂರವಿರುತ್ತಿಹನು! (ಉ)
-ದ್ರೇಕೋದ್ವೇಗಗಳಿಗೆಡೆ ಕೊಡದಿರುತ್ತಿಹನು!
ನುಡಿಯದೇ ಕೆಲಸವನ್ನೆಲ್ಲಾ ಮಾಡುತ್ತಿಹನು!
ಮುರುಕು ಗುಡಿಸಲಿನಲ್ಲೂ ತೃಪ್ತಿಯಿಂದಿಹನು! (ಇ)
-ದ್ದೆಡೆಯಲ್ಲೇ ದಿವ್ಯದರ್ಶನ ಪಡೆಯುತ್ತಿಹನು!
ಯಾರೇನೆಂದರೂ ಮುನಿಸಿಕೊಳ್ಳದಿರುತ್ತಿಹನು! (ಹೋ)
-ದ್ರೇಕೆ ಹೋದೆ, ಬಂದ್ರೇಕೆ ಬಂದೆನ್ನದಿರುತ್ತಿಹನು! (ಭಾ)
-ನು ನಿರಂಜನಾದಿತ್ಯಾನಂದ ದತ್ತನಾಗಿಹನು!!!

ನಿದ್ರೆ ಬಾರದೆನಗಿಂದೇಕೋ! [ಬಂ]   5(3152)

-ದ್ರೆದ್ದಿರಲಾರೆ ನೀ ನೋಡಿಕೋ!
ಬಾಯಿ ಮಾತ್ರ ಮುಚ್ಚಿಸಿದ್ದೇಕೋ! (ವ)
-ರ ಗುರುಕೃಪೆಯೆಂದೆಣ್ಸಿಕೋ! (ತಂ)
-ದೆ, ತಾಯಿ ಅವನೆಂದಂದುಕೋ!
ಯನಾದಿಂದ್ರಿಯ ಜೈಸಿಕೋ! (ಈ)
-ಗಿಂದಲೇ ಅಭ್ಯಾಸ ಮಾಡಿಕೋ!
ದೇವರಾ ಸ್ವರೂಪರಿತುಕೋ! (ಅ)
-ಕೋ, ನಿರಂಜನಾದಿತ್ಯನಿಕೋ!!!

ನಿದ್ರೆಗೆ ದಯೆಯಿಲ್ಲ ಭಯವಿಲ್ಲ! (ಮು)   4(2035)

-ದ್ರೆಯೊತ್ತಿದಮೇಲಭದ್ರತೆಯಿಲ್ಲ!
ಗೆಜ್ಜೆ ಕಟ್ಟಿದ ಮೇಲೆ ಲಜ್ಜೆಯಿಲ್ಲ! (ಮಂ)
-ದಮತಿಗೆ ಮಾನ, ಮರ್ಯಾದೆಯಿಲ್ಲ! (ಛಾ)
-ಯೆಗರ್ಕನಲ್ಲದನ್ಯ ಗತಿಯಿಲ್ಲ! (ಬಾ)
-ಯಿ ಮುಚ್ಚಿದರೆ ಜಗಳವೇ ಇಲ್ಲ! (ನ)
-ಲ್ಲನೆಡೆಯಿದ್ದರಪವಾದವಿಲ್ಲ!
ಭಾವಾಬ್ಧಿಯಲ್ಲಿ ಶಾಂತಿ ಸುಖವಿಲ್ಲ!
ಮನಿಗೆ ದಾಕ್ಷಿಣ್ಯವೆಂಬುದಿಲ್ಲ!
ವಿರಕ್ತನಿಗೆ ಯಾರ ಹಂಗೂ ಇಲ್ಲ! (ನ)
-ಲ್ಲ ನಿರಂಜನಾದಿತ್ಯನೆನ್ನಿರೆಲ್ಲ!!!

ನಿದ್ರೆಯಿಂದೆಚ್ಚರವಾಯಿತೇನೇ? (ಭ)   4(1607)

-ದ್ರೆ ಸಾವಿತ್ರಿ ನೀನೆಂದರಿತ್ಯೇನೇ? (ಬಾ)
-ಯಿಂದ ಆಡಿ ಪ್ರಯೋಜನವೇನೇ? (ನಿಂ)
ದೆಗೆ ಕಿವಿಗೊಡಬಹುದೇನೇ! (ಮ)
-ಚ್ಚರ ಬಚ್ಚಲು ನೀರಲ್ಲವೇನೇ!
ಮಣನಾರೆಂದು ತಿಳಿದ್ಯೇನೇ?
ವಾಸುದೇವನೆನಬಾರದೇನೇ? (ಬಾ)
-ಯಿ ಮುಚ್ಚಿ ಅವನಾಗಿರು ನೀನೇ! (ಮಾ)
-ತೇ ಮೃತ್ಯು, ಮಾತೇ ಮುತ್ತಲ್ಲವೇನೇ? (ನಾ)
-ನೇ ನಿರಂಜನಾದಿತ್ಯಾತ್ಮ ನೀನೇ!!!

ನಿನಗನ್ಯ ವಿಚಾರ ಬೇಡ! (ಮ)   4(2001)

-ನವ ಸಡಿಲು ಬಿಡಬೇಡ! (ಯೋ)
-ಗಸಾಧನೆಗಸಡ್ಡೆ ಬೇಡ! (ಮಾ)
-ನ್ಯ ನಾನೆಂಬಹಂಕಾರ ಬೇಡ!
ವಿಮಲನಾಗದಿರಬೇಡ!
ಚಾಡಿ ಮಾತನ್ನು ಕೇಳಬೇಡ! (ವ)
-ರ ಗುರುವ ನಿಂದಿಸಬೇಡ! (ಕು)
-ಬೇರನಾಗಲಾಶಿಸಬೇಡ! (ಕಾ)
-ಡ, ನಿರಂಜನಾದಿತ್ಯನಾದ!!!

ನಿನಗಸಾಧ್ಯವಾದುದಾವುದಯ್ಯಾ?   5(3013)

ನ್ನನ್ನೇಕಿಂತು ಪರಿಕಿಪುದಯ್ಯಾ!
ತಿ ನೀನೆಂದರೇಕೀ ದುಃಖವಯ್ಯಾ?
ಸಾಗಿಸೆನ್ನನೀಗ ನಿನ್ನಡಿಗಯ್ಯಾ! (ಮ)
-ಧ್ಯಸ್ಥರಾರಿದಕೆ ಬೇಕಿಲ್ಲವಯ್ಯಾ!
ವಾಙ್ಮಾನೋಕಾಯವೆಲ್ಲಾ ನಿನ್ನದಯ್ಯಾ!
ದುರ್ಗುಣಗಳನ್ನೆಲ್ಲಾ ಬಿಡಿಸಯ್ಯಾ!
ದಾನವರಿವರನ್ನೆಲ್ಲಾ ಕೊಲ್ಲಯ್ಯಾ! (ನೋ)
-ವು ಸಹಿಸುವುದಿನ್ನೆಷ್ಟು? ಹೇಳಯ್ಯಾ!
ಹಿಸುತಿದೆನ್ನೊಡಲು, ನೋಡಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯ ನೀ ಕಾಯಯ್ಯಾ!!!

ನಿನಗಸಾಧ್ಯವಾವುದಪ್ಪಾ? (ಮ)   4(1722)

-ನಸ್ಸು ಕೊಡಬೇಕು ನೀನಪ್ಪಾ! (ಈ)
-ಗ ಬರೆಸಿದವರಾರಪ್ಪಾ?
ಸಾಧ್ಯವಾಗಲಿಲ್ಲಾಗೇಕಪ್ಪಾ? (ದ)
-ಧ್ಯನ್ನ ಉಂಡಂತಾಯಿತೀಗಪ್ಪಾ! (ಯಾ)
-ವಾಗಲೂ ದಯೆಯಿರಲಪ್ಪಾ! (ಸಾ)
-ವು, ನೋವಿನ ಭಯ ಸಾಕಪ್ಪಾ!
ರ್ಶನ ಭಾಗ್ಯವ ನೀಡಪ್ಪಾ! (ಅ)
-ಪ್ಪಾ ಶ್ರೀ ನಿರಂಜನಾದಿತ್ಯಪ್ಪಾ!!!

ನಿನಗಾಗಿ ಜನ್ಮ ಮುಗಿಸಲೆನ್ನ ಸಂಕಲ್ಪ!   6(3486)

ನಗೆಲ್ಲಾ ಲೋಕದ ಸುಖಸಂಪತ್ತು ಅಲ್ಪ!
ಗಾಯತ್ರೀರೂಪದ ನಿನ್ನ ಧ್ಯಾನ ಕಾಯಕಲ್ಪ!
ಗಿರಿಧರ ಗೋಪಾಲನಿಗಿದೇ ಮೃದುತಲ್ಪ!
ಗತ್ತವನನ್ನರಿಯದೇ ಆಯ್ತು ವಿಕಲ್ಪ!
(ತ)-ನ್ಮಯನಾದಾಗವನಲ್ಲಿ ಹೋಗ್ವುದಾ ವಿಕಲ್ಪ!
ಮುನಿಜನರೆಂಬವರೂ ಅರಿತದ್ದು ಸ್ವಲ್ಪ!
ಗಿರಿಜಾಪತಿಯದ್ದೆಂದೆಂದಿಗೂ ಸತ್ಸಂಕಲ್ಪ!
ತಿ ಪಾರ್ವತೀದೇವ್ಗಿಲ್ಲವನಲ್ಲಿ ವಿಕಲ್ಪ!
(ತ)-ಲೆಮೇಲಿದ್ದರೂ ಗಂಗಾದೇವಿಗಿಲ್ಲ ಕುಕಲ್ಪ!
(ಮ)-ನ್ನಣೆಗೆ ಯೋಗ್ಯ ಇಂಥಾ ಪರಿಶುದ್ಧ ಸಂಕಲ್ಪ!
ಸಂದೇಹಪಡ್ದೇ ಸಾಧಿಸ್ಬೇಕೀ ವಾಕ್ಕಾಯಕಲ್ಪ!
ನಕ ಸಭಾಪತಿಯಾಗನುಗ್ರಹಮಾಳ್ಪ!
(ಕ)-ಲ್ಪನಾತೀತ ನಿರಂಜನಾದಿತ್ಯ ಸಂಕಲ್ಪ!!!

ನಿನಗಾಗಿ ನನ್ನದೇ ತಪಸು ರಾಘವೇಂದ್ರಾ!   1(396)

ನಗಾಗಿ ನಿನ್ನ ಲೋಕಸೇವೆ ರಾಘವೇಂದ್ರಾ!
ಗಾಳಿ ಬೀಸಿದರುರಿ ವ್ಯಾಪಕ ರಾಘವೇಂದ್ರಾ!
ಗಿರಿ ತರುಗಳಿಗೆ ಆಧಾರ ರಾಘವೇಂದ್ರಾ!
ಡೆ, ನುಡಿಗೆ ಪ್ರಾಣಾಧಾರ ಶ್ರೀ ರಾಘವೇಂದ್ರಾ! (ಅ)
-ನ್ನ ಔಷದ್ಯೋಪಚಾರ ನಿನ್ನದು ರಾಘವೇಂದ್ರಾ!
ದೀರ್ಘ ಕಾಲದ ದುಡಿಮೆ ಧನ್ಯ ರಾಘವೇಂದ್ರಾ!
ಪಸಿನಿಂದಸುರ ಸಂಹಾರ ರಾಘವೇಂದ್ರಾ!
ವಮಾನಸುತಗಿದಾನಂದ ರಾಘವೇಂದ್ರಾ!
ಸುಜನ ಶಿರೋಮಣಿ ಹನುಮ ರಾಘವೇಂದ್ರಾ!
“ರಾಮ, ರಾಮ ಜಯ ಸೀತಾರಾಮ” ರಾಘವೇಂದ್ರಾ!
ಮ, ಘಮಿಸುತಿದೆ ಸುಗಂಧ ರಾಘವೇಂದ್ರಾ!
ವೇದವೇದ್ಯಗಿದು ಸಮರ್ಪಣೆ ರಾಘವೇಂದ್ರಾ! (ಸಾ)
-ನ್ದ್ರಾ! ನಿರಂಜನಾದಿತ್ಯ (ಗುರುಶ್ರೀ) ರಾಘವೇಂದ್ರಾ!!!
ಅಥವಾ
ಮಾರುತಿ

ನಿನಗಾಗಿ ಬರ್ತಾರಾರು, ಇರ್ತಾರಾರು?   6(4097)

ರ ನಾರಿಯರಿಗೆ ಬೇಕ್ತಂತಮ್ಮೂರು!
ಗಾಬರಿಯಿಂದ ದೂರ ದೂರೋಡುವರು! (ಜೋ)
-ಗಿ ಮಾಯಾ, ಮಂತ್ರ ಮಾಳ್ಪವನೆನ್ನುವರು!
ಯಲ ಭ್ರಾಂತಿಯಿಂದ ಬಳಲುವರು! (ಧು)
-ರ್ತಾಚರದಲ್ಲಿ ನಿರತರಾಗಿಹರು!
ರಾತ್ರಿ, ದಿನ, ಹರಟೆ ಹೊಡೆಯುವರು!
ರುಚಿ, ರುಚಿ ತಿಂಡಿ, ತೀರ್ಥಕ್ಕಾಶಿಪರು!
ದ್ದದ್ದರಲ್ಲೇ ತೃಪ್ತಿ ಪಡದಿಹರು! (ವಾ)
-ರ್ತಾ ಪತ್ರದ ಜಾಹೀರಾತು ನಂಬುವರು!
ರಾತ್ರಿ, ದಿನ, ಚಲಚಿತ್ರ ನೋಡುವರು! (ಯಾ)
-ರು ನಿರಂಜನಾದಿತ್ಯನಂತಾಗಿಹರು???

ನಿನಗಾಗಿ ಮಾನ, ಪ್ರಾಣ ಹೋಗಲಿ!   4(2036)

ನಗೆ ಸದಾ ದರ್ಶನವಾಗಲಿ! (ಆ)
-ಗಾಗ ಪಾದಸೇವೆ ಪ್ರಾಪ್ತವಾಗಲಿ!
ಗಿರೀಶ ನೀನೆಂಬುದೊಳಗಿರಲಿ!
ಮಾತನ್ಯರದೆನಗೆ ಬೇಡಾಗಲಿ!
ಗುನಗುತ ನಿನ್ನಲ್ಲೈಕ್ಯಾಗಲಿ!
ಪ್ರಾರ್ಥನೆಯಿದು ವಿಜಯಕ್ಕಾಗಲಿ! (ಗು)
-ಣಗಣ ನಿನ್ನದು ನನ್ನದಾಗಲಿ!
ಹೋದದ್ದಕ್ಕೆ ದುಃಖವಾಗದಿರಲಿ!
ರ್ವವೆನ್ನಿಂದ ದೂರವಾಗಿರಲಿ! (ಶೂ)
-ಲಿ ನಿರಂಜನಾದಿತ್ಯ ನಾನಾಗಲಿ!!!

ನಿನಗಾಗಿರುವವರಾರು ನಿರಂಜನಾದಿತ್ಯ ದೇವಾ?   1(280)

ಶ್ವರದ ಸಂಸಾರದಲ್ಲೇ ಇರುತಿಹನು ಜೀವಾ!
ಗಾಳಿಗೋಪುರ ಕಟ್ಟುತಿರುವುದೆಲ್ಲರ ಮನೋಭಾವಾ! (ಆ)
-“ಗಿನದು ಈಗಿಲ್ಲ, ಈಗಿನದು ಮುಂದಿಲ್ಲ!” ಮಾಯಾಪ್ರಭಾವಾ! (ಆ)
-ರು ಕಾರಣವೆಂದರಿಯದಳುತಿಹನು ನಿತ್ಯ ಜೀವಾ! (ಆ)
-ವ ಕಾರ್ಯಕಾಗೀ ಲೀಲೆಯೆಂದು ಅರಿಯದಾಗಿದೆ ದೇವಾ!
ರ ಋಷಿ, ಮುನಿಗಳೆಷ್ಟ ಆಗಿಹೋದರು, ಹೇ ದೇವಾ!
ರಾಮಾಯಣ, ಭಾರತಗಳೆಲ್ಲವರು ಬಿಚ್ಚಿದ ಭಾವಾ! (ಅ)
-ರುಹಿದರೂ, ಅರಿತಿರದಂತಿದೆಯಲ್ಲಾ ಗುರುದೇವಾ! (ಅ)
-ನಿಶವೂ ನೀನೆಲ್ಲರಿಗಾಗಿರುವುದನರಿವ ಜೀವಾ!
ರಂಜನೆಯ ಈ ಮಾಯೆಗೇ ಪ್ರಿಯವಾಗಿಹುದೇಕೆ?
ರಾ, ಜನ್ಮ ದುಃಖವಾದರೂ ದೇಹಮೋಹವೇಕೆ ದೇವಾ? (ಅ)
-ನಾಚಾರದನ್ನಾಯದ ಜೀವನ ಬಿಡಿಸು ಗುರುದೇವಾ!
ದಿಕ್ಕು ತೋರದನಾಥರನು ನಿನಗಾಗಿರಿಸು ದೇವಾ! (ಅ)
-ತ್ಯಧಿಕ ನೀನೊಬ್ಬನಲ್ಲದೆ ಬೇರ್ಯಾರಿಲ್ಲ ಗುರುದೇವಾ!
ದೇವಾ! “ನೀನೆನಗಾಗಿ, ನಾನಿನಗಾಗಿ”ರಬೇಕು ದೇವಾ!
ವಾಸವಾದಿ ವಂದ್ಯ ನಿರಂಜನಾದಿತ್ಯ ಮಹಾನುಭಾವಾ!!!

ನಿನಗಾಗುವುದೆಲ್ಲಾ ನನಗಾಗುತಿದಯ್ಯಾ! (ಅ)   1(350)

-ನವರತದ ಪೂಜೆ ನನಗಾಗುತಿದೆಯ್ಯಾ! (ಆ)
-ಗಾಗಾಪ್ತರ ದರ್ಶನ ನನಗಾಗುತಿದಯ್ಯಾ!
ಗುಣ ಗಾನ ಸತತ ನನಗಾಗುತಿದಯ್ಯಾ! (ಆ)
-ವುದರೆಲ್ಲೂ ಭೇದಾಭೇದ ನೀ ಮಾಡಿಲ್ಲವಯ್ಯಾ! (ಅ)
-ದೆಲ್ಲಾದರೂ ನನಗೇಕೆ ಹರ್ಷವಿಲ್ಲವಯ್ಯಾ? (ಅ)
-ಲ್ಲಾಡದ ನಂಬಿಗೆ ನನ್ನಲ್ಲಿ ಇರುವುದಯ್ಯಾ!
ಮಸ್ಕಾರ ಸದಾ ನಿನಗೆ ಮಾಡುವೆನಯ್ಯಾ! (ಅ)
-ನಗತ್ಯದ ಯೊಂಚನೆ ನನಗೇನಿಲ್ಲವಯ್ಯಾ!
ಗಾಡಿಗಾರ ನೀನು ಬಹು ಚಮತ್ಕಾರಿಯಯ್ಯಾ!
ಗುರುಪೀಠದಲೆನ್ನ ಕೂರಿಸಿರುವೆಯಯ್ಯಾ! (ಅ)
-ತಿ ವಿಚಿತ್ರ ಲೀಲಾನಾಟಕವು ಅಯ್ಯಾ!
ಯೆ ನಿನ್ನದೆನ್ನ ಮೇಲೆ ಸದಾ ಇರಲಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ನೀನಾಗಿರುವೆ ಅಯ್ಯಾ!!!

ನಿನಗಾಯ್ತು ಭುಕ್ತಿ, ನನಗಾಯ್ತು ಮುಕ್ತಿ!   6(3521)

ಶ್ವರೈಹಿಕಸುಖ ನಿನಗಾಸಕ್ತಿ!
ಗಾಡಿ ಓಡಿಸಲಿಕ್ಕಾಗ್ಯೇನೇನೋಯುಕ್ತಿ!
(ಬಾ)-ಯ್ತುಟಿಯಾಟವೆಲ್ಲಾ ಇರುವಾಗ ಶಕ್ತಿ!
ಭುಜ ಬಲಶಾಲಿಗೊಪ್ಪದು ವಿರಕ್ತಿ!
(ಭ)-ಕ್ತಿ, ಮುಕ್ತಿದಾಯಕರಾಮನೆಂದಾರ್ಯೋಕ್ತಿ!
ರ, ನಾಡಿಗಾನಾಮಾಮೃತಾತ್ಮ ಶಕ್ತಿ!
ಡೆ, ನುಡಿಯಲ್ಲಿ ಕಾಣಬೇಕು ಭಕ್ತಿ!
ಗಾಳಹಾಕಿ, ಶಾಸ್ತ್ರ ಹೇಳ್ವುದಲ್ಲ ಭಕ್ತಿ!
(ಆ)-ಯ್ತು ಪತನವಿದರಿಂದೆಂಬಳು ಶಕ್ತಿ!
ಮುನಿಜನರಿಗಾಪ್ತಳಾ ಪರಾಶಕ್ತಿ!
(ಶ)-ಕ್ತಿ ನಿರಂಜನಾದಿತ್ಯಗಾ ಶಿವಶಕ್ತಿ!!!

ನಿನಗಾವ ಕರ್ತವ್ಯವಯ್ಯಾ?   4(2315)

ನ್ನ ನಿನ್ನಂತಿರಿಸಪ್ಪಯ್ಯಾ! (ತ)
-ಗಾದೆ ಹೂಡಿ ದಣಿದೆನಯ್ಯಾ! (ಭಾ)
-ವಶುದ್ಧಿಯ ನೀನೇ ಮಾಡಯ್ಯಾ!
ರ್ತವ್ಯ ತಂದೆಯದಿದಯ್ಯಾ! (ಆ)
-ರ್ತನಾಗಿ ಬೇಡಿಕೊಂಬೆನಯ್ಯಾ!
ವ್ಯವಹಾರ ನನಗೇಕಯ್ಯಾ? (ಜೀ)
-ವ, ಶಿವೈಕ್ಯವಾಗ್ಬೇಡ್ವೇನಯ್ಯಾ? (ಅ)
-ಯ್ಯಾ, ನಿರಂಜನಾದಿತ್ಯಾನಯ್ಯಾ!!!

ನಿನಗಾವ ಜಾಗ ಹಿತವಪ್ಪಾ?   4(1706)

ನಗಾ ಜಾಗೀ ಜಾಗೆಂದಿಲ್ಲಪ್ಪಾ!
ಗಾಳಿಯಿಲ್ಲದ ಜಾಗವಾವುದಪ್ಪಾ? (ಪ)
-ವನನಿಗಿಂತ ಸೂಕ್ಷ್ಮನಾನಪ್ಪಾ!
ಜಾಗೃತ್ತಾದ್ಯವಸ್ಥಾತೀತಾನಪ್ಪಾ!
ಮನಾಗಮನ ರಹಿತಪ್ಪಾ!
ಹಿತಾಹಿತ ನನಗೇನಿಲ್ಲಪ್ಪಾ!
ನುವಿನಾಟಶಾಶ್ವತವಪ್ಪಾ! (ಜೀ)
-ವನೆನಿಸಿಹೆನಿದರಿಂದಪ್ಪಾ! (ಅ)
-ಪ್ಪಾ ನಿರಂಜನಾದಿತ್ಯನಾದ್ಯಪ್ಪಾ!!!

ನಿನಗಿದೆ ಸರ್ವಾಧಿಕಾರ! (ನ)   4(1849)

-ನಗುಂಟಾಗಿದೆ ಹಾಹಾಕಾರ!
ಗಿರಿಶಿಖರ ನಿನ್ನಾಗಾರ! (ಇ)
-ದೆ ನನಗೂರೂರು ಸಂಚಾರ!
ನ್ನಿಧಿ ನಿನ್ನದಲಂಕಾರ! (ದು)
-ರ್ವಾಸನೆ ನನ್ನದಹಂಕಾರ! (ವಿ)
-ಧಿ, ಹರಿ, ಹರರಾ ಓಂಕಾರ!
ಲಾಧೀನ ಜೀವ ವಿಕಾರ! (ಹ)
-ರ ನಿರಂಜನಾದಿತ್ಯಾಕಾರ!!!

ನಿನಗಿರಬೇಕು ನನ್ನ ಸಂಗ!   3(1280)

ನಗಿರಬೇಕೆಲ್ಲರ ಸಂಗ!
ಗಿರಿಜೆಗೆ ಗಿರೀಶನ ಸಂಗ! (ಪ)
-ರಮೇಶ್ವರನಿಗೆ ಸರ್ವ ಸಂಗ!
ಬೇಕೆಲ್ಲರಿಗೆ ಸದಾ ಸತ್ಸಂಗ! (ವ್ಯಾ)
-ಕುಲಕ್ಕೆಲ್ಲಾ ಕಾರಣ ದುಸ್ಸಂಗ! (ಮ)
-ನಸಿಗಶಾಂತಿಂದ್ರಿಯದ ಸಂಗ! (ಉ)
-ನ್ನತದಾನಂದಕ್ಕಾತ್ಮನ ಸಂಗ!
ಸಂಶಯಪಡದೆಮಾಡೀ ಸಂಗ! (ಸಂ)
-ಗ, ನಿರಂಜನಾದಿತ್ಯಾತ್ಮ ಲಿಂಗ!!!

ನಿನಗಿರಲಿ ನಿನ್ನೆಲೆ ಲಕ್ಷ್ಯ!   1(270)

ನಗಾಗಿ ಬರುತಿದೆ ಭಕ್ಷ್ಯ!
ಗಿರಿಯಂತಿರದಗಿಲ್ಲಪೇಕ್ಷ್ಯ!
ಗಳೆ ಮಾಡಿದರಾಗುಪೇಕ್ಷ್ಯ!
ಲಿಖಿತ ಜಪಕೇಕೆ ಅಲಕ್ಷ್ಯ?
ನಿನ್ನ ಧರ್ಮಕೆ ಇದು ಅಪಥ್ಯ! (ಅ)
-ನ್ನೆ ನಾನಿನಗೆಂದಿಗೂ ಅಸತ್ಯ!
ಲೆಕ್ಕಿಸಬೇಡವಗುಣ ಮಿಥ್ಯ!
ಯಗೊಳಿಸು ಮನಸ ನಿತ್ಯ! (ಲ)
-ಕ್ಷ್ಯ, ನಿರಂಜನಾದಿತ್ಯಗಪೇಕ್ಷ್ಯ!!!

ನಿನಗಿಷ್ಟವಾಗ್ಲಿಲ್ಲ, ಬರ್ಲಿಲ್ಲ!   6(3484)

ನ್ನಿಷ್ಟ ಪೂರ್ತಿಸಲನ್ಯರಿಲ್ಲ! (ತ್ಯಾ)
-ಗಿ, ಯೋಗಿಯಾದ್ರೂ ಗುರಿಸೇರ್ಲಿಲ್ಲ!
(ಸ್ಪ)-ಷ್ಟವಾಗಿ ನೀನೇನೂ ತಿಳಿಸ್ಲಿಲ್ಲ!
ವಾದ, ಭೇದ, ನನ್ನಲ್ಲೇನೂ ಇಲ್ಲ!
(ಆ)-ಗ್ಲಿ ನಿನ್ನಾನಂದದಂತೆಯೇ ಎಲ್ಲಾ!
(ಅ)-ಲ್ಲಗಳೆಯಬೇಡಪ್ತನ ಸೊಲ್ಲ!
ಯಲಾಡಂಬರ ನನ್ನಲ್ಲಿಲ್ಲ!
(ಇ)-ರ್ಲಿ ಜ್ಞಾಪಕದಲ್ಲಿ ಈ ಮಾತೆಲ್ಲಾ!
(ಪು)-ಲ್ಲ ನಿರಂಜನಾದಿತ್ಯನೇ ಎಲ್ಲಾ!!!

ನಿನಗೀಗೇನಾಗಬೇಕಮ್ಮಾ?   3(1362)

-ನನಗರುಹಾರೆಂದು ಬೊಮ್ಮಾ! (ಯೋ)
-ಗೀಶ್ವರನೆಂಬರವನಮ್ಮಾ! (ಭೋ)
-ಗೇಚ್ಛೆನಗೇಕಿತ್ತನಾ ಬೊಮ್ಮಾ? (ತಾ)
-ನಾರೆಂದು ತಿಳಿಸಲಿಕ್ಕಮ್ಮಾ! (ಈ)
-ಗ ನಾನೆಂತಾಗುವುದಾ ಬೊಮ್ಮಾ?
ಬೇಕದಕೆ ನಿರ್ಮೋಹವಮ್ಮಾ!
ರುಣಿಸಲದನಾ ಬೊಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾಗಮ್ಮಾ!!!

ನಿನಗೂಟ ಕೊಟ್ಟಾಗ ನಾನೇಕೆ ನೀರು ತಂದಿಟ್ಟೆ?   4(1701)

ನಗೆ ಬೇಕಾದದ್ದು ನಿನಗೂ ಬೇಕೆಂದದಿಟ್ಟೆ!
ಗೂಢವಿದರಿತು ಸೇವೆ ಸಾಗಬೇಕೆಂದದಿಟ್ಟೆ! (ಆ)
-ಟ, ನೋಟವೆಲ್ಲಾ ಪಾಠವಾಗಬೇಕೆಂದದನಿಟ್ಟೆ!
ಕೊರತೆ ಗೌರವಕ್ಕದೆಂಬುದು ಹೋಗಲೆಂದಿಟ್ಟೆ! (ಕೆ)
ಟ್ಟಾಚಾರ, ವಿಚಾರವಿರಬಾರದೆಂದು ತಂದಿಟ್ಟೆ!
ಮನಾರ್ಹವಾಗಬೇಕು ನಡೆ, ನುಡಿಯೆಂದಿಟ್ಟೆ!
ನಾರಾಯಣ ಸ್ವರೂಪ ಸಕಲವೆಂದು ತಂದಿಟ್ಟೆ!
ನೇಮ, ನಿಷ್ಠೆಗಳಲ್ಲಿದೂ ಸೇರಿದೆಂದು ತಂದಿಟ್ಟೆ!
ಕೆಟ್ಟ ದಾರಿ ಬಿಟ್ಟೆಲ್ಲರೂ ಶಿಷಾರಾಗಲೆಂದಿಟ್ಟೆ!
ನೀಚೋಚ್ಛ ಭಾವವಿಲ್ಲದಾತ್ಮೀಯರಾಗಲೆಂದಿಟ್ಟೆ!
ರುದ್ರಾಭಿಷೇಕಕ್ಕಿದೆಂಬ ಭಕ್ತಿಯಿಂದ ತಂದಿಟ್ಟೆ!
ತಂದೆ, ತಾಯಿ ಸೇವೆಯೆಂಬಾನಂದದಿಂದ ತಂದಿಟ್ಟೆ!
ದಿವ್ಯ ಜೀವನಾದರ್ಶವಿದೆಂದರಿತು ತಂದಿಟ್ಟೆ! (ಬ)
-ಟ್ಟೆ, ನಿರಂಜನಾದಿತ್ಯಾತ್ಮನದಿದೆಂದು ತಂದಿಟ್ಟೆ!!!

ನಿನಗೆ ಕಿರೀಟ, ನನಗೆ ಲಪೇಟ!   6(3989)

ನಗಾಗುತಿದೆ ದಿನ ರಾತ್ರಿ ಕಾಟ!
ಗೆಳೆಯ ನೀನೆನಗೆಂಬುದೇನೋ ದಿಟ!
ಕಿರಿಯನಾದೆನಗೆ ಸಿಕ್ಕದೊಂದೂಟ!
ರೀತಿ, ನೀತಿಯಲ್ಲಿ ನಿನ್ನದೇ ಮುಂದೋಟ! (ಆ)
-ಟ, ಪಾಠದಲ್ಲೆಲ್ಲಾ ನನ್ನದು ಹಿಂದೋಟ!
ನಗಿರುವುದು ತರ್ತರದ ಛಟ!
ನ್ಗೀಗ ತೋರು ನಿನ್ನ ರೂಪ ವಿರಾಟ!
ಗೆರೆ ದಾಟದಂತಿಟ್ಟು ಕೊಡೊಡನಾಟ!
ಕ್ಷ್ಯದಲ್ಲಿರಿಸು ಸದಾ ನನ್ನ ನೋಟ!
ಪೇಟೆ ಬೀದಿಯಲ್ಲಿಲ್ಲೆನಗೆ ಸುತ್ತಾಟ! (ದಿ)
-ಟ, ನಿರಂಜನಾದಿತ್ಯಾನಂದಾನು ದಿಟ!!!

ನಿನಗೆ ನನ್ನಿಂದಿನ್ನೇನಾಗ್ಬೇಕು?   6(3449)

ನ್ನನ್ನು ನೀನು ದೂರದಿರ್ಬೇಕು!
ಗೆಳೆಯನೆಂದೆನ್ನ ಭಾವಿಸ್ಬೇಕು!
ನ್ನ ಗುಣಗಳ್ನಿನ್ನಲ್ಲಿರ್ಬೇಕು!
(ನಿ)-ನ್ನಿಂದ ಸದಾ ಸಾಧನೆಯಾಗ್ಬೇಕು!
ದಿವ್ಯ ನಾಮಾಮೃತ ಕುಡಿಯ್ಬೇಕು!
(ಹೊ)-ನ್ನೇಕೆ, ಮಣ್ಣೇಕೆನಗೆಂದಿರ್ಬೇಕು!
ನಾಶವಿಲ್ಲದ “ನಾ” ನೀನಾಗ್ಬೇಕು!
(ಸಾ)-ಗ್ಬೇಕಿದಕ್ಕಾಗಿ ತಪಸ್ಸಾಗ್ಬೇಕು!
(ಬೇ)-ಕು, ನಿರಂಜನಾದಿತ್ಯಾತ್ಮಾಗ್ಬೇಕು!!!

ನಿನಗೆ ನಾನಂಟಿಕೊಂಡಿಲ್ಲ!   6(3499)

ನಗೆ ನೀನಂಟಿಕೊಂಡಿಲ್ಲ! (ಬ)
-ಗೆ ಬಗೆ ರೂಪಾದ್ರೂ ಇಬ್ರಿಲ್ಲ!
ನಾ, ನೀನೊಂದೆಂದವ ನಾನಲ್ಲ!
ನಂಬಿಸಿ ವಂಚಿಪುದು ಸಲ್ಲ! (ಭೇ)
-ಟಿ ನೀನು ಕೊಡುತ್ತಲೇ ಇಲ್ಲ!
ಕೊಂಗ, ಮಂಗ ನಾನಾದೆನಲ್ಲಾ! (ಬಿ)
-ಡಿಸೆನ್ನ ಹುಚ್ಚು ನೀನೀಗೆಲ್ಲಾ! (ಬ)
-ಲ್ಲ, ನಿರಂಜನಾದಿತ್ಯನೆಲ್ಲಾ!!!

ನಿನಗೆ ನಾನು, ನನಗೆ ನೀನು ದೇವರು!   6(3826)

ಮ್ಮಿಬ್ರಲ್ಲಿ ಭೇದವಿಲ್ಲದ್ದ್ರಿಂದಿಬ್ಬ್ರೂ ದೇವ್ರು!
ಗೆಳೆಯನಾಗಿ ಇಳೆಗೆ ಭಾನು ದೇವರು!
ನಾರಾಯಣ ನೀನಾಗವನಿಗೆ ದೇವರು!
ನುಡಿ, ನಡೆಯಲ್ಲಿಬ್ಬರೂ ಪರಮಾತ್ಮರು!
ಶ್ವರವಲ್ಲ ನಾವೆಂದಿರ್ಪ ನಾವ್ದೇವರು!
ರ ನಾರಾಯಣರೆಂದು ನಮ್ಮ ಹೆಸರು!
ಗೆಲುವು, ಸೋಲುಗಳೆಂಬುದಿಲ್ಲದವರು!
ನೀನೂ, ನಾನೂ, ಲೀಲಾನಾಟಕದ ನಟರು!
ನುರಿತಗ್ರಗಣ್ಯರಾದ ಕಲಾವಿದರು!
ದೇಶ, ವೇಷ, ಭಾಷೆಗಳೊಂದಾಗಿರ್ಪವರು!
ರಗುರು ದತ್ತಾತ್ರೇಯ ಸಾರ್ವಭೌಮರು!
ರುಜು ಮಾರ್ಗಿ ನಿರಂಜನಾದಿತ್ಯಾ ದೇವರು!!!

ನಿನಗೆ ನಾನೇನು ಹೇಳಲಿ?   4(1973)

ರಜನ್ಮ ಸಾರ್ಥಕಾಗಲಿ!
ಗೆಳೆಯರುತ್ತಮರಾಗಲಿ!
ನಾಮ ಜಪ ಸಾಗುತ್ತಿರಲಿ!
ನೇತೃ ಸದ್ಗುರುವಾಗಿರಲಿ!
ನುಡಿಯಂತೆ ನಡೆಯಿರಲಿ!
ಹೇಸಿಕೆ ತೊಳೆಯಲ್ಪಡಲಿ! (ಖ)
-ಳಕುಲ ನಿರ್ನಾಮವಾಗಲಿ! (ಶೂ)
-ಲಿ ನಿರಂಜನಾದಿತ್ಯಾಗಲಿ!!!

ನಿನಗೆ ನೀನು ಗುರುವಾಗಮ್ಮಾ!   2(529)

ಶ್ವರ ಸಂಸಾರ ಕನಸಮ್ಮಾ! (ಬ)
-ಗೆದರಿದು ಬರಡೆಮ್ಮೆಯಮ್ಮಾ!
ನೀನಿದ ನಿನಗೆ ಕಲಿಸಮ್ಮಾ! (ಅ)
-ನುದಿನರಿತಭ್ಯಾಸ ಮಾಡಮ್ಮಾ!
ಗುರು ಶಿಷ್ಯ ಭಾವ ನಿನ್ನದಮ್ಮಾ! (ಆ)
-ರು ಹಿತ ನಿನಗೆ ನಿನ್ನಂತಮ್ಮಾ? (ಭ)
-ವಾಬ್ದಿಯಿಂದ ಬಿಡಿಸಿಕೊಳ್ಳಮ್ಮಾ!
ಗನಮಣಿ ಆದರ್ಶನಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯನಾಗಮ್ಮಾ!!!

ನಿನಗೆ ಪೂರ್ಣ ಶರಣಾದೆಂದೆ ನಾನು!   6(3444)

ನಗಭಯವಿತ್ತೆ ಮನಸಾ ನೀನು!
ಗೆರೆ ನಿನ್ನದನ್ನು ದಾಟಿ ಹೋಗೆ ನಾನು!
ಪೂರ್ವಾಪರವೆಲ್ಲಾ ಬಲ್ಲವನು ನೀನು!
(ವ)-ರ್ಣನಾತೀತ ಕರುಣಾಳು ಗುರು ನೀನು!
ಕ್ತನಲ್ಲ ನಿನ್ನನರಿಯಲು ನಾನು!
ಕ್ಷಕನು ನನಗೆ ನೀನೆಂಬೆ ನಾನು!
(ತೃ)-ಣಾದ್ಯೆಲ್ಲವನು ಪೊರೆವವನು ನೀನು!
ದೆಂಟಾಗ್ಯೆಲೆಗಂಟಿಕೊಂಡವನು ನೀನು!
(ಬಂ)-ದೆ ನಿನ್ನಡಿದಾವರೆಯೆಡೆಗೆ ನಾನು!
ನಾನೇ ನೀನು, ನೀನೆ ನಾನಾಗ್ಲೆಂಬೆ ನಾನು!
(ಜ)-ನುಮದಾತ ನಿರಂಜನಾದಿತ್ಯ ನೀನು!!!

ನಿನಗೆ ಬೇಕಾಗಿರುವುದೊಂದು ಇಲ್ಲ!   6(3423)

ನಗೆ ಬೇಕಾಗ್ದಿರುವುದೊಂದೂ ಇಲ್ಲ!
ಗೆಳೆಯರು, ವೈರಿಗಳು ನಿನಗಿಲ್ಲ!
ಬೇಡೆಂದ್ರೂ ದ್ವಂದ್ವ ನನ್ನ ಬಿಡುವುದಿಲ್ಲ!
ಕಾಮಾರಿಯೆಂದು ನೀನು ಮೆರೆವೆಯಲ್ಲಾ!
ಗಿರಿಜೆ ಕಾಮಾಕ್ಷಿಯೆನಿಸುವಳಲ್ಲಾ!
(ಕ)-ರುಣಾಕರ ನೀನಮರ ನಾದೆಯೆಲ್ಲಾ!
(ಸಾ)-ವು, ನೋವಿನ ಮಾನವ ನಾನಾದೆನಲ್ಲಾ!
(ಒಂ)-ದೊಂದೂ ವಿಚಿತ್ರ ನಿನ್ನ ಲೀಲೆಗಳೆಲ್ಲಾ!
(ಒಂ)-ದೂ ಅರಿಯದಜ್ಞಾನಿ ನಾನಾದೆನಲ್ಲಾ!
ನ್ನೂ ಎಷ್ಟುದಿನ ಈ ಭೇದಗಳೆಲ್ಲಾ?
(ಬ)-ಲ್ಲ ನಿರಂಜನಾದಿತ್ಯಗೆನ್ನಾಜ್ಞೆ ಇಲ್ಲ!!!

ನಿನಗೆ ಬೇಕಾದದ್ದೀಗ ನನ್ನಲ್ಲಿಲ್ಲ! (ನ)   6(4311)

-ನಗೆ ಬೇಕಾದದ್ದೀಗ ನಿನ್ನಲ್ಲೂ ಇಲ್ಲ!
ಗೆಳೆಯರು ನಾವೆಂಬುದು ಸುಳ್ಳೇನಲ್ಲ!
ಬೇಕಾದದ್ದು ಕೊಡದಿರ್ಪವ ನೀನಲ್ಲ!
ಕಾಯದೇ ನಾನಿರಲು ನಿರ್ವಾಹವಿಲ್ಲ!
ಯಾಸಾಗರ ಬತ್ತುವುದ ಕಂಡಿಲ್ಲ! (ಗು)
-ದ್ದೀಗುಕ್ಕಿಸಿದರೆ ಪೋಲಾಗುವುದೆಲ್ಲಾ!
ಗನ ಸದೃಶತ್ವ ಸಾಮಾನ್ಯವಲ್ಲ!
ನ್ನ, ನಿನ್ನೈಕ್ಯಕಂತಾಗಲೇ ಬೇಕಲ್ಲಾ! (ನ)
-ನ್ನ ಪರೀಕ್ಷೆ ನನಗಿನ್ನೂ ಸಾಕಾಗಿಲ್ಲ! (ನಿ)
-ಲ್ಲಿಸಲು ನಾ ನಿನ್ನ ಬೇಡುವುದೇ ಇಲ್ಲ! (ಫು)
-ಲ್ಲ ನಿರಂಜನಾದಿತ್ಯನೆಂದಂತಾಯ್ತಲ್ಲಾ!!!

ನಿನಗೆ ಬೇಕಾದದ್ದು ನಿನ್ನಲ್ಲೇ ಇದೆ! [ಅ]   4(2413)

-ನಗತ್ಯವಾದದ್ದು ಬಿಡಬೇಕಾಗಿದೆ! (ಹೊ)
-ಗೆ ಕಣ್ಣೀರಿಗೆ ಕಾರಣವೆನಿಸಿದೆ!
ಬೇಗ ಬೆಂಕಿಯನ್ನುರಿಸಬೇಕಾಗಿದೆ!
ಕಾರ್ಯತತ್ಪರನಾಗ್ಧೆ ಕಷ್ಟವಾಗಿದೆ! (ಸೌಂ)
-ದರ್ಯಕ್ಕೆ ಮನಸೋತು ಸೋಲುಂಟಾಗಿದೆ! (ಸ)
-ದ್ದು ಮಾಡದೆ ಮೆದ್ದು ಮದ್ದಾನೆಯಾಗಿದೆ!
ನಿನ್ನ ನೀನರಿಯದನ್ಯಾಯವಾಗಿದೆ! (ಉ)
-ನ್ನತಶಿಖರದಿಂದ್ಬಿದ್ದು ನೋವಾಗಿದೆ! (ಇ)
-ಲ್ಲೇ ನನ್ನ ಸ್ಥಾನವೆಂಬಜ್ಞಾನ ಮುಚ್ಚಿದೆ!
ಲ್ಲಿಂದೆದ್ದು ಮೇಲಕ್ಕೇರಬೇಕಾಗಿದೆ! (ತಂ)
-ದೆನಿರಂಜನಾದಿತ್ಯನಾಗ್ಬೇಕಾಗಿದೆ!!!

ನಿನಗೆ ಬೇಕಾದುದು ನಿತ್ಯ ಶಾಂತಿ!   1(11)

ನ್ನಲ್ಲಿಟ್ಟಿಹೆ ಅದಕಾಗನನ್ಯ ಭಕ್ತಿ!
ಗೆಲುವಾಗಿರು ತುಂಬುವೆನು ಸ್ಫೂರ್ತಿ!
ಬೇರೇನು ಬೇಕು ನೀನು ಪರಮಾರ್ಥಿ!
ಕಾಲ ಕರ್ಮದಿ ನೋಡೆನ್ನ ನಿಜಸ್ಥಿತಿ!
ದುಡುಕಿದರೆ ಬರುವುದು ಅಶಾಂತಿ!
ದುಃಖ ನಾಶಕವನ ನಾಮವೇ ಗತಿ!
ನಿನಗಿರದಿರಲಂಗ ಸಂಗ ಭ್ರಾಂತಿ!
ತ್ಯಗಿಸೆಲ್ಲ ಭೀತಿ ಇರುತೆನ್ನ ರೀತಿ!
ಶಾಂಭವಿ ನಿನಗಿಲ್ಲ ಭವದ ಭೀತಿ!
ತಿರುಕ “ನಿರಂಜನ” ಗೈವನಿಷ್ಟಪೂರ್ತಿ!!!

ನಿನಗೆ ಬೇಕೆಂದೆನಿಸಿಲ್ಲ! (ನ)   6(3648)

-ನಗೆ ಸಾಕು ಎಂದೆನಿಸಿಲ್ಲ! (ಹೀ)
-ಗೆ ನನ್ನ, ನಿನ್ನ ಭೇದವೆಲ್ಲಾ!
ಬೇಕೆನ್ನದೇ ನಿನ್ನಂತಾಗ್ಲೆಲ್ಲಾ! (ಏ)
-ಕೆಂದ್ರೆ ಕೀರ್ತಿ ನಿನಗೇ ಎಲ್ಲಾ! (ನಿಂ)
-ದೆ ನನ್ನ ಪಾಲಿಗಿತ್ತೆಯಲ್ಲಾ?
ನಿನ್ನಾಟ ನಿನಗೆ ಗೊತ್ತಿಲ್ಲಾ!
ಸಿಕ್ಕಿ ಬಿದ್ದೊದ್ದಾಟ ನನ್ಗಲ್ಲಾ? (ಬ)
-ಲ್ಲ, ನಿರಂಜನಾದಿತ್ಯನೆಲ್ಲಾ!!!

ನಿನಗೆ ಮುಗಿಲಾಚ್ಛಾದನೆಯಡ್ಡಿ!   4(2463)

ನಗನಾರೋಗ್ಯ ದೇಹದಿಂದಡ್ಡಿ! (ಹೀ )
-ಗೆ ನಮ್ಮಿಬ್ಬರಿಗೂ ಏನೇನೋ ಅಡ್ಡಿ!
ಮುಪ್ಪು ಕೆಲವರಿಗಾಗಿರುವಡ್ಡಿ!
ಗಿರಿಜಾಪತಿಗೇತರದ್ದೇನಡ್ಡಿ? (ಕ)
-ಲಾತೀತ ಕಳೆಯಬೇಕೆಲ್ಲರಡ್ಡಿ! (ಸ್ವ)
-ಚ್ಛಾತ್ಮಾನಂದ ಬೇಡಿರೆಲ್ಲ ಸೆರ್ಗೊಡ್ಡಿ!
ಮೆ, ಶಮೆಯಭ್ಯಾಸಿಗೇಕೆ ಚಡ್ಡಿ?
ನೆರೆ ಸುವಾಸನಾ ಹಾಲ್ಮಡ್ಡೀ ಕಡ್ಡಿ!
ತಿಪತಿ ದತ್ತಾತ್ರೇಯನಾ ಕಡ್ಡಿ! (ಕ)
-ಡ್ಡಿಯಾದ್ನಿರಂಜನಾದಿತ್ಯಗಾರಡ್ಡಿ???

ನಿನಗೆನ್ನ ತಳಮಳದರಿವಿದೆ!   6(3535)

ಯ, ವಿನಯದ ಬಿನ್ನಹವಾಗಿದೆ!
ಗೆಳೆಯ ನಿನೊಬ್ಬನೆನಗೆಂದಾಗಿದೆ! (ನಿ)
-ನ್ನ ಸಾಯುಜ್ಯವೊಂದೇ ನನ್ನಾಶೆಯಾಗಿದೆ!
ಪಸ್ಸು ದೀರ್ಘಕಾಲದಿಂದಾಗುತಿದೆ! (ಕೊ)
-ಳಕುವಾಸನೆ ನಿರ್ಮೂಲವಾಗುತಿದೆ!
ನೋಭೀಷ್ಟವಿನ್ನೂ ನೆರವೇರದಿದೆ! (ಬಾ)
-ಳಲ್ಲಿ ಬಹು ಭಾಗ ಮುಗಿದೇ ಹೋಗಿದೆ!
ಯೆ ನಿನಗೇಕೋ ಇನ್ನೂ ಬಾರದಿದೆ!
ರಿಸಿಗಳ ಫಲಶೃತಿ ಮಂಕಾಗಿದೆ!
ವಿಚಾರಕ್ಕೆ ವಿರಾಮವಿಲ್ಲದಾಗಿದೆ! (ತಂ)
-ದೆ ನಿರಂಜನಾದಿತ್ಯಗೊಪ್ಪಿಸ್ಯಾಗಿದೆ!!!

ನಿನ್ನ ಕರ್ತವ್ಯ ನೀನು ಮಾಡದಿದ್ದರೆ! (ನ)   5(3185)

-ನ್ನನ್ನು ದೂರಿ ನೀನು ಸುಖ ಪಡಲಾರೆ!
ನ್ಸು ನೆನ್ಸಲ್ಲೂ ನಾನು ದ್ರೋಹಿಯಾಗ್ಲಾರೆ! (ವ)
-ರ್ತಮಾನಕಾಲ ಬಿಟ್ಟೇನೂ ಯೋಚಿಸ್ಲಾರೆ! (ದಿ)
-ವ್ಯಜೀವನಕ್ಕಪಕೀರ್ತಿ ತರಲಾರೆ!
ನೀಚರನ್ನೆಂದಿಗೂ ಹತ್ರ ಸೇರಿಸ್ಲಾರೆ! (ತ)
-ನುವಿನಲ್ಲಾಸೆ ನಾನಿಟ್ಟುಕೊಳ್ಳಲಾರೆ!
ಮಾಯೆಯನ್ನು ನಂಬಿ ಮೋಸಹೋಗಲಾರೆ!
ಮರುಧರನಾದರ್ಶ ಬಿಡಲಾರೆ!
ದಿಕ್ಕುಗೆಟ್ಟು ನಾನವನ ಬಿಟ್ಟಿರ್ಲಾರೆ!
(ಸ)ದ್ದಡಗದಿದ್ದರೆ ನೀನು ನಾನಾಗ್ಲಾರೆ! (ಹೊ)
-ರೆ ನಿರಂಜನಾದಿತ್ಯಗೀ ವಸುಂಧರೆ!!!

ನಿನ್ನ ಕರ್ತವ್ಯ ನೀನು ಮಾಡು! (ಉ)   4(1856)

-ನ್ನತಿ ನಿನಗಿಹುದು ನೋಡು!
ನಸು ನೆನಸಲ್ಲೂ ಮಾಡು! (ಆ)
-ರ್ತರುದ್ಧಾರವಾಗ್ವುದು ನೋಡು!
ವ್ಯಭಿಚಾರ ಭಕ್ತಿ ಬಿಟ್ಟ್ಮಾಡು!
ನೀನೊಬ್ಬನೇ ತಿನ್ಬೇಡ ನೋಡು!
ನುಡಿಯದೆಲ್ಲವನು ಮಾಡು!
ಮಾಯೆಯಾಗೋಡುವಳು ನೋಡು! (ನೋ)
-ಡು, ನಿರಂಜನಾದಿತ್ಯ ನಾಡು!!!

ನಿನ್ನ ಕರ್ಮ ನಿನ್ನ ರೂಪ! (ನಿ)   2(703)

-ನ್ನ ನಿಜರೂಪಾತ್ಮ ರೂಪ!
ಶ್ಮಲವೀ ಜೀವ ರೂಪ! (ಮ)
-ರ್ಮವಿದರಿಯದೀ ರೂಪ!
ನಿತ್ಯ ಪರಮಾತ್ಮ ರೂಪ! (ನಿ)
-ನ್ನ ನೀನರಿತರಾ ರೂಪ! (ಸ್ವ)
-ರೂಪವಿದಾನಂದ ರೂಪ! (ರೂ)
-ಪ ಶ್ರೀ ನಿರಂಜನ ರೂಪ!!!

ನಿನ್ನ ಕರ್ಮಫಲಕ್ಕೆ ನೀನೇ ಭಾಗಿ! (ನ)   6(3682)

-ನ್ನ ನಿಷ್ಕರ್ಮದಿಂದ ನಾನಾದೆ ಯೋಗಿ!
ಪ್ಪು ಹಣಕ್ಕಾಶಿಸುವವ ಭೋಗಿ! (ಕ)
-ರ್ಮ ಶರೀರ ಸುಖಕ್ಕಾಶಿಪ ತ್ಯಾಗಿ! (ಸ)
-ಫಲ ಮಾಡುವನೀ ಜನ್ಮ ವಿರಾಗಿ!
ಕ್ಷ್ಯಾತ್ಮನಲ್ಲಿಡುವಾತ ನಿಸ್ಸಂಗಿ! (ಧ)
-ಕ್ಕೆ ಧರ್ಮಕ್ಕಾಗಿ ಕೆಡುವ ದುಸ್ಸಂಗಿ!
ನೀತಿ, ರೀತಿಯಿಲ್ಲದಿರ್ಪ ಕೋಡಂಗಿ!
ನೇಮ, ನಿಷ್ಠಾ ಸತಿ ರಾಮನರ್ಧಾಂಗಿ!
ಭಾವ, ಭೇದ ರಹಿತಾತ್ಮಾ ಸಾರಂಗಿ! (ಯೋ)
-ಗಿ ನಿರಂಜನಾದಿತ್ಯ ಅನಲಾಂಗಿ!!!

ನಿನ್ನ ಕೃಪೆ ಅಪಾರವಯ್ಯಾ! [ನ]   2(871)

-ನ್ನ ನಿನ್ನಂತಿರಿಸಿರ್ಪೆಯಯ್ಯಾ!
ಕೃಷಿ ಚೆನ್ನಾಗಿರುವುದಯ್ಯಾ!
ಪೆಸರು ಅನುಪಮವಯ್ಯಾ!
ಮರ ಆತ್ಮಾನಂದವಯ್ಯಾ!
ಪಾಪವಿದಕೇನಿಲ್ಲವಯ್ಯಾ!
ವಿವಂಶವಿದರದಯ್ಯಾ!
ರಗುರುಪೀಠವಿದಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯದಯ್ಯಾ!!!

ನಿನ್ನ ಕೆಲಸ ನೀನು ಮಾಡು! (ಉ)   1(382)

-ನ್ನತಿ ನಿನಗಿಹುದು ನೋಡು!
ಕೆಡಿಸ ಗುರು ನಿನ್ನ ಬೀಡು!
ಕ್ಷಿಸಬೇಡನ್ಯರ ಪಾಡು!
ಜ್ಜನರಲ್ಲಿ ಒಡನಾಡು!
ನೀತಿ, ಸತ್ಯವಿದ್ದೆಡೆಗೋಡು!
ನುಡಿ ನಡೆಯಲೊಂದು ಗೂಡು!
ಮಾಡದಿರನ್ಯರಿಗೆ ಕೇಡು! (ಉ)
-ಡುಪಾದಿತ್ಯನು ನೀ ಬೇಡು!!!

ನಿನ್ನ ಕೊಂಡಾಡಿದವರು ಬಹಳ! (ನಿ)   4(2349)

-ನ್ನ ಕಂಡಾನಂದಿಸಿದವರ್ವಿರಳ!
ಕೊಂಡುಕೊಳ್ಬೇಕೆಂಬವರು ಬಹಳ! (ಗಂ)
-ಡಾಗುಂಡಿಯಿಲ್ಲದಿರ್ಪವರ್ವಿರಳ! (ಅ)
-ಡಿಗೆಯುದ್ಯೋಗದವರು ಬಹಳ! (ಆ)
-ದರಾರೋಗ್ಯದೃಷ್ಟಿಯವರಿರ್ವಿರಳ!
ರ ಗುರು ಸೇವಕರು ಬಹಳ! (ಗು)
-ರುವಿನಿಷ್ಟದಂತಿರ್ಪವರ್ವಿರಳ!
ಹು ಧನವುಳ್ಳವರು ಬಹಳ!
ಸಿದವರ್ಗಿಕ್ಕುವವರ್ವಿರಳ! (ಬೋ)
-ಳ ಶ್ರೀ ನಿರಂಜನಾದಿತ್ಯ ಧಾರಾಳ!!!

ನಿನ್ನ ಕೊಳೆ ನೀನೇ ತೊಳೆದುಕೊಳ್ಳಯ್ಯಾ! [ನಿ]   5(3027)

-ನ್ನ ಕೈ, ಕಾಲು ಬಲವಾಗಿರುವಾಗಯ್ಯಾ!
ಕೊಡ್ಡಿರ್ಬೇಡಗಸನ ಸಂಬಳವಯ್ಯಾ! (ಮ)
-ಳೆ ನೀರ ಹೊಳೆ ಅಲಕ್ಷಿಸಬಾರ್ದಯ್ಯಾ!
ನೀತಿ ಬಿಟ್ಟರಧೋಗತಿ ನದಿಗಯ್ಯಾ!
ನೇರ ದಾರಿಯಿದು ಸಾಧಕನಿಗಯ್ಯಾ!
ತೊಡರನ್ಯರಿಗುಂಟು ಮಾಡಬಾರ್ದಯ್ಯಾ! (ಬೆ)
-ಳೆಸುತ್ತಿರಬೇಕು ದೈವೀ ಸಂಪತ್ತಯ್ಯಾ!
ದುಡಿಯಬೇಕು ಶ್ರದ್ಧಾ, ಭಕ್ತಿಯಿಂದಯ್ಯಾ!
ಕೊರಳಿಗುರುಳು ಈ ಸಂಸಾರವಯ್ಯಾ! (ಬೆ)
-ಳ್ಳಗಿರುವುದಿಲ್ಲಾ ಹಾಲಾದೀತೇನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯ ವಾಣಿಯಿದಯ್ಯಾ!!!

ನಿನ್ನ ಗುಂಡಿ ನೀನೇ ತೋಡಿಕೊಂಡೆ! (ನ)   6(3712)

-ನ್ನ ಕೃಪೆಯಾಗಿ ಹರಿದುಕೊಂಡೆ!
ಗುಂಪುಗಾರಿಕೆ ಬೆಳೆಸಿಕೊಂಡೆ!
ಡಿಕ್ಕಿಯಿಂದೊಡೆಯಲಿದೆ ಮಂಡೆ!
ನೀತಿ, ರೀತಿಯನ್ನು ಕೆಡ್ಸಿಕೊಂಡೆ!
ನೇತನಾಜ್ಞೆ ಮೀರಿ ನಡೆದ್ಕೊಂಡೆ!
ತೋಳಗ್ಳಿಂದ ಸುತ್ತುವರಿಸ್ಕೊಂಡೆ! (ಬಿ)
-ಡಿಸಿಕೊಳ್ವ ದಾರಿ ಕಳಕ್ಕೊಂಡೆ!
ಕೊಂಡೆ, ಮುಂಡೆಯ ಬಾಳು ಕೊಡ್ಕೆಂಡೆ! (ಬಿ)
-ಡೆ, ನಿರಂಜನಾದಿತ್ಯನೆಂದ್ಕೊಂಡೆ!!!

ನಿನ್ನ ಚಿತ್ತಕ್ಕೆ ವ್ಯತಿರಿಕ್ತವಾದರಾಪತ್ತು! (ನ)   6(3891)

-ನ್ನ ಪ್ರತಿದಿವಸದನುಭವಕ್ಕಿದು ಗೊತ್ತು!
ಚಿತಾಭಸ್ಮವೂ ನೀನಿಚ್ಛಿಸಿದರೆ ಸಂಪತ್ತು! (ಉ)
-ತ್ತಮವೆಂದು ನಾನೆಣಿಸಿದ್ದರಿಂದ ವಿಪತ್ತು! (ಬೆ)
-ಕ್ಕೆಗಾರ್ತಿಯೂ ನಿನ್ನಿಚ್ಛೆಯಿಂದೇರಿದಳಂತಸ್ತು!
ವ್ಯಕ್ತಾವ್ಯಕ್ತನಾದ ನಿನ್ನದೇ ಎಲ್ಲಾ ಮಹತ್ತು!
ತಿಳಿದವನೆನ್ನುವ ಈ ಮಾನವ ಅಸತ್ತು! (ಹ)
-ರಿ ನರಹರಿಯಾಗಿ ಮೆರೆದೆ ನೀನಾವತ್ತು! (ಭ)
-ಕ್ತ ರಾಮದಾಸನಿಗೆ ಚಾವಟಿ ಏಟು ಬಿತ್ತು!
ವಾಲಿ ಶ್ರೀರಾಮಚಂದ್ರನ ಬಾಣಕ್ಕಾದ ತುತ್ತು!
ಶರಥ ಪುತ್ರಶೋಕದಿಂದ ಬಿದ್ದ ಸತ್ತು!
ರಾವಣನಂಥಾ ಭಕ್ತನಿಗೂ ಬಂತೊಂದು ಕುತ್ತು!
ತಿತನೂ, ಪಾವನನೂ ಆಗ್ಬಲ್ಲಾ ಸಚ್ಚಿತ್ತು! (ಇ)
-ತ್ತು ನಿರಂಜನಾದಿತ್ಯಾನಂದ ರಕ್ಷಿಸ್ಲೀವತ್ತು!!!

ನಿನ್ನ ದರ್ಶನ ಸುಖವಯ್ಯಾ! [ನ]   3(1215)

-ನ್ನ ಮಾಲಿನ್ಯ ಹೋಗ ಬೇಕಯ್ಯಾ!
ಯೆ ನಿನ್ನದಿರಬೇಕಯ್ಯಾ! (ಸ್ಪ)
ರ್ಶವಾಗಬೇಕು ಪಾದವಯ್ಯಾ!
ಶಿಸುವುದಾಗಘವಯ್ಯಾ!
ಸುಪುತ್ರನಾಗುವೆ ನಾಗಯ್ಯಾ! (ದುಃ)
-ಖವಾಗ ಪರಿಹಾರವಯ್ಯಾ!
ರ ಗುರುದೇವ ನೀನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾತ್ಮಯ್ಯಾ!!!

ನಿನ್ನ ದಾರಿ ನಿನಗೆ ಸರಿ! (ನ)   4(2171)

-ನ್ನ ದಾರಿಯೇ ನನಗೆ ಸರಿ!
ದಾರಿಯ ಗುರಿಯೊಂದೇ ಸರಿ! (ಪ)
-ರಿಪರಿ ಕ್ರಮದಕ್ಕೆ ಸರಿ!
ನಿಷ್ಠೆಯದಕ್ಕಿದ್ದರೆ ಸರಿ!
ಷ್ಟವಾಗದಿದ್ದರೆ ಸರಿ!
ಗೆದ್ದು ಬಂದರಿಬ್ಬರೂ ಸರಿ!
ಚ್ಚಿದಾನಂದಾದರೆ ಸರಿ! (ಅ)
-ರಿ, ನಿರಂಜನಾದಿತ್ಯಾ ಹರಿ!!!

ನಿನ್ನ ದಾರಿ ಹೆದ್ದಾರಿಯಯ್ಯಾ! (ಅ)   4(2335)

-ನ್ನದಾತ ದತ್ತ ಗುರುವಯ್ಯಾ! (ಸ)
-ದಾ ನೀನವನ ನೆನೆಯಯ್ಯಾ! (ಪ)
-ರಿಹರಿಪ ಕಷ್ಟಗಳಯ್ಯಾ!
ಹೆದರಲೇಬೇಡ ನೀನಯ್ಯಾ! (ಗು)
-ದ್ದಾಡ್ವವನೊದ್ದಾಡುವನಯ್ಯಾ! (ಅ)
-ರಿತಿದ ನಿಶ್ಚಿಂತನಾಗಯ್ಯಾ! (ಕಾ)
-ಯಬೇಕವನ ಕೃಪೆಗಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಪ್ಪಯ್ಯಾ!!!

ನಿನ್ನ ದುಃಖಕ್ಕೆ ನೀನೇ ಕಾರಣ! (ಉ)   2(707)

-ನ್ನತದಿಂದಿಳಿದುದೇ ಕಾರಣ!
ದುಃಖಕ್ಕೆಲ್ಲಾ ಮನಸೇ ಕಾರಣ! (ಸು)
-ಖಕಾತ್ಮಾರಾಮ ಧ್ಯಾನ ಕಾರಣ! (ಮಿ)
-ಕ್ಕೆಲ್ಲಾ ರೀತ್ಯಶಾಂತಿಗೆ ಕಾರಣ!
ನೀನವನಾಗಬೇಕೀ ಕಾರಣ!
ನೇಮಾನುಷ್ಠಾನ ಮಾಡೀ ಕಾರಣ!
ಕಾಯಾಭಿಮಾನ ಬಿಡೀ ಕಾರಣ! (ವ)
-ರ ಪಾದಾಶ್ರಯಿಸೀ ಕಾರಣ! (ಗು)
-ಣ ಶ್ರೀನಿರಂಜನಾದಿತ್ಯ ಕಾರಣ!!!

ನಿನ್ನ ದೇವರ ಗುಡಿಯಿದಮ್ಮಾ! (ಅ)   3(1117)

-ನ್ನ, ವಸನ ದಾತನವನಮ್ಮಾ! (ತ)
-ದೇಕ ಧ್ಯಾನ ನಿನಗಿರಲಮ್ಮ! (ಅ)
-ವನ ಸೇವೆ ನಿನ್ನ ಭಾಗ್ಯವಮ್ಮಾ! (ಹೊ)
-ರಗಿನ ಹವ್ಯಾಸವಿನ್ನೇಕಮ್ಮಾ?
ಗುಣಾವಗುಣ ಗುರು ಚಿತ್ತಮ್ಮಾ! (ಗು)
-ಡಿಸಿ, ಯೊರಸಿ ಶುಚಿ ಮಾಡಮ್ಮಾ! (ಬಾ)
-ಯಿ, ಕೈ, ನಿರ್ಮಲವಿರಬೇಕಮ್ಮಾ!
ತ್ತನಾಗ ಒಲಿಯುವನಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯವನಮ್ಮಾ!!!

ನಿನ್ನ ಧರ್ಮದಲ್ಲಿ ನೀನಿರೆಂದಿರಿಸಿಹ ದತ್ತ!(ನ)   6(4082)

-ನ್ನ ಧ್ಯಾನವೇ ನಿನ್ನ ಧರ್ಮವೆನ್ನುತ್ತಿರುವ ದತ್ತ!
ಮ, ಕರ್ಮನಿಷ್ಠ ಸಾಯುಜ್ಯಕ್ಕರ್ಹನೆಂಬ ದತ್ತ! (ಮ)
-ರ್ಮವಿದನ್ನರಿತು ಮಾಡು ಸಾಧನೆಯೆಂಬ ದತ್ತ!
ಶೇಂದ್ರಿಯ ವಿಷಯಾಸಕ್ತಿ ದಹಿಸೆಂಬ ದತ್ತ! (ಅ)
-ಲ್ಲಿ, ಇಲ್ಲಿ, ಇಲ್ಲರಲ್ಲೂ ನೋಡು ನನ್ನನ್ನೆಂಬ ದತ್ತ!
ನೀನಿಚ್ಛಿಪ ರೂಪ ದರ್ಶನದಿಂದೇನೆಂಬ ದತ್ತ!
ನಿಜರೂಪವನ್ನರಿತದೇ ನೀನಾಗೆಂಬ ದತ್ತ! (ಬಾ)
-ರೆಂದರೆ ಬರುವ ರೂಪಿ ಅಸ್ಥಿರವೆಂಬ ದತ್ತ! (ಆ)
-ದಿ, ಮಧ್ಯಾಂತವಿಲ್ಲದ್ದೇ ಸ್ಥಿರ ರೂಪವೆಂಬ ದತ್ತ!
ರಿಸಿ, ಮುನಿಗಳಿಗಿದು ಗೋಚರವೆಂಬ ದತ್ತ!
ಸಿರಿಯರಸ, ಉಮೆಯರಸರಿದೆಂಬ ದತ್ತ!
ದಿನಾಲ್ಕು ಲೋಕದಲ್ಲೂ ವ್ಯಾಪಕವೆಂಬ ದತ್ತ! (ಈ)
-ದರ್ಶನ ನಿಶ್ಚಲತತ್ವ ಸ್ಥಿತನಿಗೆಂಬ ದತ್ತ! (ಇ)
-ತ್ತತ್ತೆತ್ತೆತ್ತ ನಿರಂಜನಾದಿತ್ಯಾತ್ಮಾನೆಂಬ ದತ್ತ!!!

ನಿನ್ನ ನಾ ಗುರುವಾಯೂರಲ್ಲಿ ಕಾಣಬೇಕಪ್ಪಾ! (ನಿ)   4(1927)

-ನ್ನಲ್ಲಿನ ಭಕ್ತಿಗದು ಸಾಧ್ಯವಾಗಬೇಕಪ್ಪಾ!
ನಾನು ಅಲ್ಲಿರದಿದ್ದರಿನ್ನೆಲ್ಲಿರಬೇಕಪ್ಪಾ?
ಗುರುವಿನಂಶ ನಾವೆಂಬರಿವಾಗಬೇಕಪ್ಪಾ! (ಗು)
-ರು ಕೃಪೆಯಿಂದ ಅದು ಸಿದ್ಧಿಯಾಗಬೇಕಪ್ಪಾ!
ವಾಸುದೇವನ ಮಾತು ಸತ್ಯವಾಗಬೇಕಪ್ಪಾ! (ವಾ)
-ಯೂರಾಗಿರುವುದವಗೆಂದರಿಯ ಬೇಕಪ್ಪಾ! (ಪ)
-ರಮಾರ್ಥದರ್ಥನ್ವರ್ಥ ನೀನು ಮಾಡಬೇಕಪ್ಪಾ! (ಬ)
-ಲ್ಲಿದನೆಂಬಹಂ ಬಿಟ್ಟರ್ಜುನನಾಗಬೇಕಪ್ಪಾ!
ಕಾಮಧೇನು ನೀನೆಂಬ ಅರಿವಾಗಬೇಕಪ್ಪಾ! (ಗು)
-ಣ, ದೋಷವೆಣಿಸದೆ ಶರಣಾಗಬೇಕಪ್ಪಾ!
ಬೇಡಿಕೆಯ ನೀನೀಡೇರಿಸಿ ಕೊಡಬೇಕಪ್ಪಾ!
ರ್ತವ್ಯನಿಷ್ಠನಾಗಿ ಕರ್ಮ ಮಾಡಬೇಕಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯ ಕೃಷ್ಣನಲ್ಲಿ ನೋಡಪ್ಪಾ!!!

ನಿನ್ನ ನಾ ಬಳಸುವೆನು! (ನ)   2(831)

-ನ್ನ ನೀನೆಂದುಳಿಸು ನೀನು!
ನಾಮ, ರೂಪಿನವ ನಾನು!
ಯಲಾಗಿರ್ಪವ ನೀನು! (ತ)
-ಳಮಳಿಸುವವ ನಾನು!
ಸುವಿಮಲಾತ್ಮನು ನೀನು! (ಸಾ)
-ವೆನುವಾತ ನೀನೇ ನಾನು! (ನೀ)
-ನು, ನಿರಂಜನಾದಿತ್ಯಾನು!!!

ನಿನ್ನ ನಾನೇಕೆ ಸೇರಿಕೊಂಡೆ? (ನ)   5(2734)

-ನ್ನವ ನೀನೆಂದರಿತುಕೊಂಡೆ!
ನಾನೂ; ನೀನೂ ಒಂದೆಂದಂದ್ಕೊಂಡೆ!
ನೇತಾಡಿ, ಜೋತಾಡಿ ಸುಟ್ಕೊಂಡೆ!
ಕೆಲಸ ಕೆಟ್ಟತೀಗಂದ್ಕೊಂಡೆ!
ಸೇವೆ ಮಾಡ್ಬೇಕಿನ್ನದಂದ್ಕೊಂಡೆ! (ಅ)
-ರಿ ಜಾಲದಿಂದ ಬಿಡಿಸ್ಕೊಂಡೆ!
ಕೊಂಚ ನಿಧಾನ್ಸೀಗ ಕೂಡ್ಕೊಂಡೆ! (ಕೊ)
-ಡೆ ನಿರಂಜನಾದಿತ್ಯಂದ್ಕೊಂಡೆ!!!

ನಿನ್ನ ನಾನೇನೆಂದು ಕರೆಯ್ಲಪ್ಪಾ? (ನ)   4(2383)

-ನ್ನ ಜನ್ಮದಾತ ನೀನಲ್ವೇನಪ್ಪಾ?
ನಾನೂ, ನೀನೂ, ಒಂದಲ್ಲವೇನಪ್ಪಾ?
ನೇರಾಗಿ ನಿಂತುತ್ತರ ಹೇಳಪ್ಪಾ! (ನಾ)
-ನೆಂಥಾ ಪೇಚಿನಲ್ಲಿಹೆ? ನೋಡಪ್ಪಾ! (ಇ)
-ದು ದಯೆಯ ಲಕ್ಷಣವೇನಪ್ಪಾ?
ನಿಕರವಿನ್ನಾದ್ರೂ ಬರ್ಲಪ್ಪಾ! (ಕ)
-ರೆದು ಹತ್ರ ಕೂರಿಸಿಕೊಳ್ಳಪ್ಪಾ! (ಬಾ)
-ಯ್ಲನ್ನುವ ವಿಚಾರವಿದಲ್ಲಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯ ನೀನಪ್ಪಾ!!!

ನಿನ್ನ ನಾಮಧೇಯವೇನಮ್ಮಾ? [ಅ]   2(983)

-ನ್ನಪೂರ್ಣೆ ಕಾಮಾಕ್ಷಿಯೆಂದಮ್ಮಾ!
ನಾಮವೆನಗೆ ಬಹಳಮ್ಮಾ!
ಹೇಶ್ವರಗೆ ದಾಸಿಯಮ್ಮಾ!
ಧೇನುಪಾಲ ಪರಮಾಪ್ತಮ್ಮಾ!
ಮನ ಸೋಲು ನನ್ನಿಂದಮ್ಮಾ!
ವೇದಾಂತದ ಗುರಿ ನಾನಮ್ಮಾ!
ನೂಗೆಲ್ಲೆಲ್ಲೂ ಮಕ್ಕಳಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯನಮ್ಮಾ!!!

ನಿನ್ನ ನೀ ನೋಡಿ ಆನಂದಪಡು! (ನ)   6(4155)

-ನ್ನ ಕಂಡಿಲ್ಲವೆಂಬ ದುಃಖ ಬಿಡು!
“ನೀ’’, “ನಾ” ನೊಂದೆಂದು ಖಚಿತ ಮಾಡು!
ನೊವ್ಸಾವಿನ ದೇಹದಾಸೆ ಬಿಡು! (ಅ)
-ಡಿಗಡಿಗಾತ್ಮ ಚಿಂತನೆ ಮಾಡು!
ಸ್ವರೂಪದಲ್ಲಿ ನಿನ್ನನ್ನಿಡು!
ನಂಬಿದೇ ನಾನೆಂದಾನಂದ ಪಡು!
ರ್ಶನ ಮಾಡಿ ನನ್ನೊಡಗೂಡು!
ರಮಾರ್ಥಕ್ಕೆ ಪ್ರಯಾಸ ಪಡು! (ನೋ)
-ಡು ನಿರಂಜನಾದಿತ್ಯಗೀ ಪಾಡು!!!

ನಿನ್ನ ನೀನರಿತು ಬೆರೆತುಕೋ! (ಅ)   3(1042)

-ನ್ನಪೂರ್ಣಾದೇವಿ ನಾನಾಗಿದ್ದುಕೋ!
ನೀಚ ಸಹವಾಸ ಬಿಡಿಸಿಕೋ!
ಮಶ್ಯಿವಾಯೆಂದು ಜಪಿಸಿಕೋ! (ಊ)
-ರಿನ ಹೆಸರು ನೆನಪಿಟ್ಟುಕೋ!
ತುಷಾರಾದ್ರಿಯದೆಂದರಿತುಕೋ!
ಬೆನಕನಾಡಿಸುತಲ್ಲಿದ್ದುಕೋ! (ಬೇ)
-ರೆ ವ್ಯಾಪಾರವಿರದಂತಿದ್ದುಕೋ! (ಮಾ)
-ತು ನಿಲ್ಲಿಸಿ ಮೌನವಾಗಿದ್ದುಕೋ! (ಅ)
-ಕೋ! ನಿರಂಜನಾದಿತ್ಯೇಶಪ್ಪಿಕೋ!!!

ನಿನ್ನ ನೀನೇ ದೇವರೆನಿಸಿಕೊಂಡಿಹೆ! (ನ)   5(2754)

-ನ್ನನ್ನಿನ್ನೂ ನಿನ್ನಂತೇಕೆ ಮಾಡಿಕೊಳ್ಳದಿಹೆ?
ನೀಚೋಚ್ಚವೆನ್ನದೆಲ್ಲೆಲ್ಲೂ ನೀ ತುಂಬಿಹೆ!
ನೇಮ, ನಿಷ್ಠೆಯ ಸೇವೆಗೆಡೆ ನೀಡಿಹೆ!
ದೇಹವೇ ದೇವಾಲಯವೆಂದು ಸಾರಿಹೆ!
ರ ಪ್ರಸಾದವನ್ನಿನ್ನೂ ಕೊಡದಿಹೆ! (ಧ)
-ರೆಯಾಡಳಿತ ಮಾಯೆಗೆ ವಹಿಸಿಹೆ!
ನಿಮ್ನ ವರ್ಗವೆಂದು ಕೂಗಾಡಿಸುತಿಹೆ!
ಸಿಟ್ಟಿಗೇಳಬಾರದೆಂದುಸುರುತಿಹೆ!
ಕೊಂಚವೂ ಸ್ಥಿತಿ ಬದಲಾಯಿಸದಿಹೆ! (ಆ)
-ಡಿ ಫಲವೇನಿಲ್ಲೆಂದು ಮೌನವಾಗಿಹೆ! (ಅ)
-ಹೆ ನಿರಂಜನಾದಿತ್ಯನಾಗೀಗೆಂದಿಹೆ!!!

ನಿನ್ನ ನೆನೆ-ನೆನೆದು ನಾ ಹಣ್ಣಾದೆ! (ಅ)   6(3508)

-ನ್ನ ಪಾನ, ಬಿಟ್ಟೀಗ ನಾ ಸಣ್ಣಗಾದೆ!
ನೆಪಮಾತ್ರಕ್ಕೆ ಜೀವ ಉಳಿದಿದೆ!
ನೆರೆ ದುಃಖದಿಂದ ಕಾಲ ಸಾಗ್ತಿದೆ!
ನೆಲ, ಹೊಲವೆಲ್ಲಾ ತೊರೆದಾಗಿದೆ! (ಮ)
-ನೆ, ಮಠವೆಲ್ಲೆಡೆಯಲ್ಲೂ ಆಗಿದೆ!
ದುಸ್ಸಂಗದಿಂದ ದೂರವಿದ್ದಾಗಿದೆ!
ನಾಮಸ್ಮರಣೆ ಸಾಧನೆಯಾಗಿದೆ!
ಠಯೋಗವನ್ನೆಂದೋ ಬಿಟ್ಟಾಗಿದೆ!
(ಹೆ)-ಣ್ಣಾಗಿ, ಗಂಡಾಗಿ, ನಾ ನಿನ್ನ ನೋಡಿದೆ!
(ಬಂ)-ದೆ ನಿರಂಜನಾದಿತ್ಯನಾಗೀಗೆಂದೆ!!!

ನಿನ್ನ ನೆನೆದು ನಾ ಕಾಲ ಕಳೆವೆ! (ನ)   5(3238)

-ನ್ನ ನೀನಿಂತಿಸಿದದಕ್ಕಳುವೆ!
ನೆತ್ತರೆಲ್ಲಾ ಬತ್ತಿಹೋಯ್ತೆಂದೊರೆವೆ!
ನೆಮ್ಮದಿ ನೀಡೆಂದು ಮೊರೆಯಿಡುವೆ!
ದುರ್ಬುದ್ಧಿ ಬಿಡಿಸೆಂದು ಪ್ರಾರ್ಥಿಸುವೆ!
ನಾಮ ಜಪ ಸಾದಾ ಮಾಡುತ್ತಿರುವೆ!
ಕಾಮನಾಟಕ್ಕೊಳಗಾಗದಿರುವೆ!
ಭಿಸ್ಬೇಕ್ದರ್ಶನವೆಂದಾಶಿಸುವೆ! (ತ್ರಿ)
-ಕರಣ ಶುದ್ಧವಾಗಿ ಇಟ್ಟಿರುವೆ! (ಹ)
-ಳೆಯ ವಾಸನೆಯ ತೊಳೆದಿರುವೆ! (ಧ)
-ವೆ, ನಿರಂಜನಾದಿತ್ಯಗಾಗಿರುವೆ!!!

ನಿನ್ನ ನೆನೆಯದ ಮನ ನಾಯಿ ಸಮಾನ! (ಅ)   6(3760)

-ನ್ನ ನಿನ್ನದು ತಿಂದನ್ಯರ ಮನೇ ಜವಾನ!
ನೆಕ್ಕುವುದೆಲ್ಲರ ಚಪ್ಪಲಿ ಪ್ರತಿ ದಿನ! (ಮ)
-ನೆ ಮನೆ ಸುತ್ತುತ್ತಿರುವುದಾ ಸ್ವಾರ್ಥ ಶ್ವಾನ!
ಜಮಾನನ ಮರೆತದಕ್ಕೆಲ್ಲಿ ಸ್ಥಾನ! (ಕಂ)
-ದಕದ ಮಲ, ಮೂತ್ರದಲ್ಲದಕ್ಕೆ ಸ್ನಾನ!
ಲಗುವುದು ತಿಪ್ಪೆಯಲ್ಲಿ ರಾತ್ರಿ, ದಿನ! (ತ)
-ನಗದೇ ಆನಂದಪ್ರದಾಯಕ ಜೀವನ!
ನಾರುವ ಮಾಂಸವೇ ಅದಕ್ಕೆ ರಸಾಯನ! (ಬಾ)
-ಯಿ ಬಿಟ್ಟು ಬೊಗಳಿದರೆಲ್ಲಾ ಪಲಾಯನ!
ಹವಾಸ ಅದರದ್ದು ಬಲು ಕಠಿಣ!
ಮಾಡ್ಬೇಕದರುದ್ಧಾರಕ್ಕಾಗೀಗ ಬಂಧನ! (ಜ್ಞಾ)
-ನ ನಿರಂಜನಾದಿತ್ಯನಿಂದ ಆಗ ದಾನ!!!

ನಿನ್ನ ಪಾಡಿಗೆ ನೀನಿರಬೇಕು![ನ]   3(1379)

-ನ್ನ ಪಾಡೇನೆಂದು ತಿಳಿಸಬೇಕು!
ಪಾಪಿ ನೀನಲ್ಲೆಂದರಿಯಬೇಕು! (ಅ)
-ಡಿಗಡಿಗಾತ್ಮ ಧ್ಯಾನ ಮಾಡ್ಬೇಕು! (ಬ)
-ಗೆಬಗೆಯ ಆಸೆ ಬಿಡಬೇಕು!
ನೀನೇ ನಾನೆಂಬರಿವಾಗಬೇಕು!
ನಿಶ್ಚಲ ಭಕ್ತಿಯಿಂದಿರಬೇಕು! (ಹೊ)
-ರಗಿನ ಸಂಪರ್ಕ ನಿಲ್ಲಬೇಕು!
ಬೇಲಿಯೊಳಗೇ ಬೆಳೆಸಬೇಕು! (ಬೇ)
-ಕು, ನಿರಂಜನಾದಿತ್ಯಾಗ್ಬೇಕು!!!

ನಿನ್ನ ಪಾಲು ನಿನಗೆ ಮೀಸಲು! (ಅ)   4(1724)

-ನ್ನ, ವಸ್ತ್ರವೆಲ್ಲಿದ್ದರೂ ಮೀಸಲು!
ಪಾಪಿ, ಪರದೇಶಿಗೂ ಮೀಸಲು!
ಲುಬ್ಧನಾದರೂ ಇದು ಮೀಸಲು!
ನಿನ್ನಾನಂದ ನಿನಗೆ ಮೀಸಲು! (ದೀ)
-ನ ಬಾಂಧವಾರ್ತನಿಗೆ ಮಿ

ಸಲು!
ಗೆಳತಿ ಗೆಳೆಯಗೆ ಮೀಸಲು!
ಮೀನಾಕ್ಷಿ ಫಾಲಾಕ್ಷಗೆ ಮೀಸಲು!
ತ್ಸಂಗ ಸದ್ಭಾವಕ್ಕೆ ಮೀಸಲು! (ಮಾ)
-ಲು ನಿರಂಜನಾದಿತ್ಯಗೆಲ್ಲೆಲ್ಲೂ!!!

ನಿನ್ನ ಪುರಾಣ ಮುಗಿವುದಾವಾಗ? (ನಿ)   4(1652)

-ನ್ನ ಪೂರ್ಣಾನುಗ್ರಹವೆನಗಾದಾಗ!
ಪುಣ್ಯ, ಪಾಪ ಕೂಪ ಮುಚ್ಚಿಬಿಟಾಗ!
ರಾಗ, ದ್ವೇಷಾದಿಗಳಿಲ್ಲದಾದಾಗ! (ಗು)
-ಣತ್ರಯದಾವರಣ ದಾಟಿದಾಗ!
ಮುಟ್ಟು, ಮಡಿ ಹುಟ್ಟಡಗಿ ಹೋದಾಗ! (ತ್ಯಾ)
-ಗಿ, ಯೋಗಿಯೆಂಬಹಂಕಾರ ಸತ್ತಾಗ! (ನಾ)
-ವು, ನಮ್ಮವರೆಂಬ ಭೇದ ಸುಟ್ಟಾಗ!
ದಾರಿದ್ರೈಶ್ವರ್ಯ ದ್ವಂದ್ವವಳಿದಾಗ!
ವಾಙ್ಮನಾದಿಂದ್ರಿಯ ಜಯವಾದಾಗ! (ಸಂ)
-ಗ ನಿರಂಜನಾದಿತ್ಯನಲ್ಲಾದಾಗ!!!

ನಿನ್ನ ಪ್ರಶ್ನೆಗೆ ನೀನೇ ಉತ್ತರಿಸಬಲ್ಲೆ! (ನ)   6(3571)

-ನ್ನ ಮಾತಿನಂತೆ ನೀನೀಗ ನಡೆಯಲೊಲ್ಲೆ!
ಪ್ರಯತ್ನಪಟ್ಟು ಕಾರಣ ಹುಡ್ಕು ನಿನ್ನಲ್ಲೇ! (ಪ್ರ)
-ಶ್ನೆಯುತ್ತರ ಕಾರ್ಯಗತ ಮಾಡು ಇದ್ದಲ್ಲೇ!
ಗೆಳೆಯರೆಲ್ಲರೂ ಇರಲಿ ದೂರದಲ್ಲೇ!
ನೀತಿ, ರೀತಿ, ನಿರ್ಧರಿಸು ಮನಸ್ಸಿನಲ್ಲೇ!
ನೇಮದಿಂದದನ್ನಾಚರಿಸು ಮನೆಯಲ್ಲೇ!
ದಾಸೀನ ತೋರಿದರೆ ಪಾರಾಗಲೊಲ್ಲೆ! (ಸು)
-ತ್ತಮುತ್ತುತ್ತಮ ವಾತಾವರಣ ಮಾಡಲ್ಲೇ! (ವೈ)
-ರಿ ನಿಗ್ರಹ ಮಾಡಭ್ಯಾಸಬಲದಿಂದಲ್ಲೇ!
ದಾ ನಾಮಜಪದಿಂದೆಲ್ಲಾ ಗೆಲ್ಲಬಲ್ಲೆ!
ಯಲಾಡಂಬರದ ಮೇಲ್ನಡೆಸು ಹಲ್ಲೆ! (ಬ)
-ಲ್ಲೆ, ನಿರಂಜನಾದಿತ್ಯಾಶೀರ್ವಾದಿದಿಂದಿಲ್ಲೇ!!!

ನಿನ್ನ ಬಳಿ ಸದಾ ಇರಲೇನುಪಾಯ! (ನಿ)   5(2516)

-ನ್ನನ್ನು ತಿಳಿಯುವುದು ಪ್ರಥಮೋಪಾಯ!
ಬಿಳಿಕಿಷ್ಟಸಿದ್ಧಿಗೆ ದುಡಿವೋಪಾಯ! (ಹೇ)
-ಳಿ ದಂತಿರುವಾಭ್ಯಾಸಾಮೇಲಿನೋಪಾಯ!
ಮೀಪ ಸೇರಲಿಕ್ಕಿದೊಳ್ಳೆಯೋಪಾಯ!
ದಾರಿಯುತ್ಸಾಹದಿಂದ ನಡೆವೋಪಾಯ!
ಳೆಯಸುಖದಾಸೆ ಬಿಡುವೋಪಾಯ! (ಪ)
-ರತತ್ತ್ವ ಸ್ವರೂಪೇಚ್ಛೆ ಸತತೋಪಾಯ!
ಲೇಶವೂ ಎದೆಗುಂದದಿರುವೋಪಾಯ! (ತ)
-ನುಭಾವದಿಂದ ಹೊರಗಾಗುವೋಪಾಯ! (ಕೃ)
-ಪಾಫಲದಾ ಸಾಮೀಪ್ಯಕ್ಕಿದೆಲ್ಲೋಪಾಯ! (ಪ್ರಿ)
-ಯ ನಿರಂಜನಾದಿತ್ಯನಿಂದ ಸಹಾಯ!!!

ನಿನ್ನ ಬೆನ್ನ ಹೊರೆ ನನ್ನ ಬೆನ್ನಿಗೇನು? (ನ)   2(899)

-ನ್ನ ಮೇಲೆ ನಿನಗಷ್ಟು ವಿಶ್ವಾಸವೇನು?
ಬೆಟ್ಟವೇ ಬೇಕಾದರೂ ಹೊರಿಸು ನೀನು! (ನ)
-ನ್ನದೇನಿಹುದೆಲ್ಲಾ ಬಲಾ ಬಲ ನೀನು!
ಹೊರಿಸಿ ಹೊರುವ ಪರಮಾತ್ಮ ನೀನು! (ಧ)
-ರೆಯ ಹೊತ್ತ ವರಹಾವತಾರಿ ನೀನು!
ರನ ಸಾರಥ್ಯ ಮಾಡಿದವ ನೀನು! [ಉ]
-ನ್ನತದ ಗಿರಿಯನೆತ್ತಿದವನು ನೀನು!
ಬೆನ್ನು ಡೊಂಕು ತಿದ್ದಿದ ಗೋವಿಂದ ನೀನು! [ನಿ]
-ನ್ನಿಷ್ಟದಂತೇನನ್ನಾದರೂ ಮಾಳ್ಪೆ ನೀನು! [ಯೋ]
-ಗೇಶ್ವರ, ವಿಶ್ವರೂಪಾತ್ಮಾನಂದ ನೀನು! (ನಾ)
-ನು, ನಿರಂಜನಾದಿತ್ಯಾತ್ಮಾನಂದ ನೀನು!!!

ನಿನ್ನ ಭಕ್ತಿ ಪೂಜೆಯಿಂದ ನಾನು ದತ್ತ! (ಅ)   6(3920)

-ನನ್ನ, ಪಾನಾದಿ ನೈವೇದ್ಯದಿಂದಾಗಿ ದತ್ತ!
ವ್ಯ ನಿಲಯದಲ್ಲಿರಿಸಿದ್ದ್ರಿಂದ ದತ್ತ! (ಶ)
-ಕ್ತಿ ಪ್ರದರ್ಶನವಾಗದಿದ್ದರೂ ದತ್ತ!
ಪೂರ್ಣ ವಿಶ್ವಾಸಕ್ಕೆ ಪ್ರತಿಫಲ ದತ್ತ! (ಗಾ)
-ಜೆನಿಸಿಕೊಂಡ್ರೂ ಮಾಣಕ್ಯ ಗುರು ದತ್ತ! (ಬಾ

)
-ಯಿಂದ ವೇದಾಂತಾಡುವವನಲ್ಲ ದತ್ತ!
ಮೆ, ಶಮೆಗಳಲ್ಲಗ್ರಗಣ್ಯಾ ದತ್ತ!
ನಾನು ನೀನೆಂಬ ಭೇದರಹಿತಾ ದತ್ತ! (ತ)
-ನುಜಾನುಜಾದಿ ಬಾಂಧವರೆಲ್ಲಾ ದತ್ತ!
ಶೇಂದ್ರಿಯಾತೀತ ಗುರುದೇವ ದತ್ತ! (ಇ)
-ತ್ತತ್ತೆತ್ತೆತ್ತ ನಿರಂಜನಾದಿತ್ಯ ದತ್ತ!!!

ನಿನ್ನ ಮಕ್ಕಳ ಖಾಪಾಡುವಾತ ನೀನೇ! (ಎ)   1(176)

-ನ್ನವರೆಂಬಭಿಮಾನಿ ನೀನೊಬ್ಬ ಟಾನೇ?
ಮತೆ ನಿನ್ನಂತಾರಿಗೂ ಇಲ್ಲ ತಾನೇ? (ಅ)
-ಕ್ಕರೆಯಿಂದಾಲಿಸುವ ತಾಯಿ ನೀ ತಾನೇ? (ಹೆ)
-ಳವನೂ ಗಿರಿಯನೇರುವನು ತಾನೇ?
ಕಾಡಿಬೇಡುವಗತ್ಯವೇನಿಲ್ಲ ತಾನೇ?
ಪಾಡುತಿರಬೇಕು ನಿನ್ನ ನಾನು ತಾನೇ? (ಆ)
-ಡುವಾಟವೆಲ್ಲ ನಿನಗೆ ಪ್ರೀತಿ ತಾನೇ?
ವಾದ ಭೇದವೇನಿಲ್ಲ ನಿನಗೆ ತಾನೇ?
ರಳನ ಉದ್ಧಾರ ನಿನ್ನಿಂದ ತಾನೇ?
ನೀನೇ ನಾನೇನಾದರೂ ಕಾರಣ ತಾನೇ?
ನೇತ್ರ ನಿರಂಜನಾದಿತ್ಯ ನೀನೇ ತಾನೇ???

ನಿನ್ನ ಮಗು ನಿನಗೆ ಚಂದ! (ನಿ)   5(3280)

-ನ್ನ ಹಾಗೆಲ್ಲರಂದಾರೇನ್ಕಂದಾ?
ನನೊಂದ್ಕೊಳ್ಪಾರದದ್ರಿಂದ!
ಗುಟ್ಟಾಗಿಟ್ಟುಕೋ ನಿನ್ನಾನಂದ!
ನಿನಗಿರ್ಲಭೇದ ಸಂಬಂಧ!
ರಹರಿ ಪ್ರಹ್ಲಾದರಂದ! (ಹೇ)
-ಗೆ ಸಹಿಸ್ಯಾನಿದ ಕಾಮಾಂಧ?
ಚಂಚಲತೆಯೇ ಭವಬಂಧ! (ಚಂ)
-ದ ನಿರಂಜನಾದಿತ್ಯಾನಂದ!!!

ನಿನ್ನ ಮನೆಗೆನ್ನ ನೀನೀಗ ಕರೆದಿಲ್ಲ! (ನ)   6(4350)

-ನ್ನ ಮನೆಗೆ ಕರೆದ್ರೂ ನೀನು ಬರುತ್ತಿಲ್ಲ!
ನಸ್ಸೊಂದಾಗದಿದ್ದರನ್ನೋನ್ಯತೆಯಿಲ್ಲ!
ನೆನಪಿಬ್ಬರಿಗೂ ಪರಸ್ಪರ ಬೇಕಲ್ಲಾ!
ಗೆಳೆಯರೆಂದಮಾತ್ರಕ್ಕೇನೂ ಲಾಭವಿಲ್ಲ! (ನ)
-ನ್ನ ನಿನ್ನಲ್ಲೆಂದೆಂದಿಗೂ ಭಿನ್ನ, ಭೇದ ಸಲ್ಲ!
ನೀನೇ ಇದನ್ನೆಂದೋ ಹೇಳಿಬಿಟ್ಟಿದ್ದೀಯಲ್ಲಾ! (ನಾ)
-ನೀಗಿರುವ ಸ್ಥಿತಿ ಮಾತ್ರ ವಿರುದ್ಧವೆಲ್ಲಾ!
ರ್ವನನ್ನಲ್ಲಿದ್ದರೆ ಸುಡ್ಬೇಕು ನೀನೆಲ್ಲಾ!
ರಮುಗಿದು ಬೇಡುವೆನು ಗೋಪೀನಲ್ಲ! (ಪೊ)
-ರೆಯುವ ಭಾರ ಸತತ ನಿನಗೇ ಎಲ್ಲ!
ದಿವ್ಯನಾಮಜಪ ಫಲಿಸಲೇ ಬೇಕಲ್ಲ! (ಗೊ)
-ಲ್ಲ ಗೋಪಾಲ ನಿರಂಜನಾದಿತ್ಯ ಪ್ರಪುಲ್ಲ!!!

ನಿನ್ನ ಮಾಂಗಲ್ಯದಲೆನ್ನನಿರಿಸಿಕೊಂಡೆ! (ಭಿ)   3(1198)

-ನ್ನ ಭಾವವೆಲ್ಲಾ ಹೋಗಲೆಂದು ಬೇಡಿಕೊಂಡೆ!
ಮಾಂಗಲ್ಯೆ ನೀನೆಂದು ನನ್ನಿಂದೆನಿಸಿಕೊಂಡೆ! (ಅ)
-ಗಲುವುದೆಂತೆಂದು ಪರಿತಪಿಸಿಕೊಂಡೆ! (ಮೌ)
-ಲ್ಯ ಶುದ್ಧಾಂತರಂಗಕ್ಕೆಷ್ಟೆಂದರಿತುಕೊಂಡೆ!
ಕ್ಷಪುತ್ರಿ ನೀನೆಂದು ನೀ ತಿಳಿದುಕೊಂಡೆ! (ಲೀ)
-ಲೆ ವಿಚಿತ್ರವೆಂದು ಕಣ್ಣೀರೊರಸಿಕೊಂಡೆ! (ಉ)
-ನ್ನತಿ ನಿನಗಾಗಲೆಂದು ನಾನಂದುಕೊಂಡೆ!
ನಿನ್ನೊಡನೆ ನಾನಿದ್ದೇನೆಂದೆನಿಸಿಕೊಂಡೆ! (ಇ)
-ರಿಸಿಕೊಂಡಿದ್ದೇನೆಂದಾಗ ನೀನೊಪ್ಪಿಕೊಂಡೆ!
ಸಿಟ್ಟನ್ನು ಬಾರದೆಂದಾಶೀರ್ವದಿಸಿಕೊಂಡೆ!
ಕೊಂಚವೂ ಸಂದೇಶವಿಲ್ಲದಂತಿದ್ದುಕೊಂಡೆ! (ಒ)
-ಡೆಯ ನಿರಂಜನಾದಿತ್ಯನೊಲಿಸಿಕೊಂಡೆ!!!

ನಿನ್ನ ಮಾಂಗಲ್ಯದಲೆನ್ನನಿರಿಸಿಕೊಂಡೆ! [ಅ]   3(1197)

-ನ್ನ ಪೂರ್ಣಾದೇವಿಯೇ ನೀನೆಂದರಿತುಕೊಂಡೆ!
ಮಾಂಗಲ್ಯೆಯಲ್ಲದಿನ್ಯಾರಿವಳೆಂದು ಕೊಂಡೆ! (ಯೋ)
-ಗ ಮಾತೆ ಪಾರ್ವತಿಯೆಂದು ತಿಳಿದುಕೊಂಡೆ! (ಬಾ)
-ಲ್ಯ, ಕೌಮಾರ್ಯಾದ್ಯವಸ್ಥಾ ದೂರಳೆಂದು ಕೊಂಡೆ!
ಯಾಮಯಿಯಿವಳೆಂದು ಸ್ಮರಿಸಿ ಕೊಂಡೆ! (ಬಾ)
-ಲೆ ಕಾಮಾಕ್ಷಿಯೆಂದತ್ಯಾನಂದ ತಂದುಕೊಂಡೆ! (ಉ)
ನ್ನತದಾದರ್ಶವಿವಳದೆಂದಂದು ಕೊಂಡೆ!
ನಿರ್ಮಲ ಚರಿತಾತ್ಮಳಿವಳೆಂದು ಕೊಂಡೆ! (ನಾ)
-ರಿ ಶಿರೋಮಣಿ ದಾಕ್ಷಾಯಣಿಯೆಂದು ಕೊಂಡೆ!
ಸಿಟ್ಟಿವಳದು ಸುಟ್ಟು ಹೋಯ್ತೆಂದಂದುಕೊಂಡೆ!
ಕೊಂಚವೂ ಅನುಮಾನಿಸದಂತಂದುಕೊಂಡೆ! (ಒ)
-ಡೆಯ ನಿರಂಜನಾದಿತ್ಯಾನಂದಂದುಕೊಂಡೆ!!!

ನಿನ್ನ ಮಾತಿಗೆದುರಾಡುವವರಾರು? (ಅ)   4(2498)

-ನ್ನ, ಪಾನಾದಿಗಳ ಕೊಡ್ವವರಿನ್ಯಾರು?
ಮಾತಾ, ಪಿತನಾಗಿರ್ಪವನಾ ಸದ್ಗುರು!
ತಿಳಿಯಬೇಕಿದ ಭಕ್ತರಾದವರು!
ಗೆಳೆಯನಾಗಿಯೂ ಇರುವನಾ ಗುರು!
ದುಷ್ಟರವನಿಂದ ದೂರವಾಗಿಹರು!
ರಾಗ, ದ್ವೇಷದಿಂದ ಮದಾಂಧರವರು! (ಕ)
-ಡುಪಾಪಿಗಳೆಂದೆನೆಸಿದಂಥವರು!
ರಗುರು ದ್ರೋಹಿಗಳಾದಾ ನೀಚರು! (ಅ)
-ವರವರ ಕರ್ಮಕ್ಕವ್ರವರ್ಪಾತ್ರರು! (ಆ)
-ರಾಮವನಿಂದೆಲ್ಲಾ ಸಾಧು ಸಜ್ಜನರು! (ಗು)
-ರು ಶ್ರೀ ನಿರಂಜನಾದಿತ್ಯನೆಂಬುವರು!!!

ನಿನ್ನ ಮಾನ ನೀನೇ ಕಳ್ಕೊಂಡ್ಬಿಟ್ಟೆ! (ಅ)   5(2888)

-ನ್ನ ಕೊಟ್ಟವಗೆರಡು ಬಗೆದ್ಬಿಟ್ಟೆ!
ಮಾಯಜಾಲದಲ್ಲಿ ಸಿಕ್ಕಿಬಿದ್ಬಿಟ್ಟೆ!
ರರೂಪಿನ ಹಂದಿ ನೀನಾಗ್ಬಿಟ್ಟೆ!
ನೀಚರ ಸಂಗದಲ್ಲೊಬ್ಬನಾಗ್ಬಿಟ್ಟೆ!
ನೇರ ದಾರಿಗೆ ಬಹು ದೂರಾಗ್ಬಿಟ್ಟೆ!
ರಣತ್ರಯ ಕೊಳೆ ಮಾಡ್ಕೊಂಡ್ಬಿಟ್ಟೆ! (ತ)
-ಳಮಳಕ್ಕೆ ಆಮಂತ್ರಣ ಕೊಟ್ಬಿಟ್ಟೆ!
ಕೊಂಚವೂ ವಿವೇಕವಿಲ್ಲದಾಗ್ಬಿಟ್ಟೆ! (ಆ)
-ಡ್ಬಿಟ್ಟೆ, ಮಾಡ್ಬಾರದ್ಮಾಡಿ ಅಡಗ್ಬಿಟ್ಟೆ! (ಕೆ)
-ಟ್ಟೆ, ನಿರಂಜನಾದಿತ್ಯ ಮುನಿದ್ಕೆಟ್ಟೆ!!!

ನಿನ್ನ ಮೇಲೆ ಎಲ್ಲರ ಪುಕಾರು! (ನ)   6(3828)

-ನ್ನ ಆಸೆ ಪೂರೈಸದ್ದ್ರಿಂದಾ ದೂರು!
ಮೇರೆ ಮೀರಿದ್ರಾರೂ ಉಳಿಯರು!
ಲೆಖ್ಖಾಚಾರಕ್ಕೆ ಸಿಕ್ಕ ದೇವರು!
ಲ್ಲಾ ಕಾಲದಲ್ಲಿತ್ತೀ ತಕ್ರಾರು! (ಪು)
-ಲ್ಲ ಲೋಚನನಿಗಾವುದೆದುರು?
ಟ್ಟೆ ಮುರಿಸ್ಕೊಂಡರಸುರರು!
ಪುನೀತರಾದರು ಸಜ್ಜನರು!
ಕಾದು ತಾಳ್ಮೆಯಿಂದ ನೋಡುತ್ತಿರು! (ಸೇ)
-ರು ನಿರಂಜನಾದಿತ್ಯನ ಊರು!!!

ನಿನ್ನ ಯೋಗ್ಯತೆ ನೀನಿರಿಸಿಕೋ! (ಮ)   2(997)

-ನ್ನಣೆಗಶಿಸದೆ ನೀನಿದ್ದುಕೋ!
ಯೋಗೀಶ್ವರ ಶಿವನಂತಿದ್ದುಕೋ! (ಭಾ)
-ಗ್ಯವಿದಮೂಲ್ಯವೆಂದರಿತುಕೋ!
ತೆಗಳಿಕೆಯಲಕ್ಷಿಸಿದ್ದುಕೋ!
ನೀನಾರೆಂಬ ವಿಚಾರವಿಟ್ಟುಕೋ!
ನಿನ್ನಾನಂದಕ್ಕಿದೆಂದು ನಂಬಿಕೋ! (ಗಿ)
-ರಿಧರನ ನೆನಪು ಮಾಡಿಕೋ! (ಘಾ)
-ಸಿಯಾಗದು ಜನ್ಮ ತಿಳಿದುಕೋ! (ಅ)
-ಕೋ! ನಿರಂಜನಾದಿತ್ಯನಪ್ಪಿಕೋ!!!

ನಿನ್ನ ರೂಪವೇನೆಂದು ವಿಚಾರ ಮಾಡು! (ಕ)   6(3928)

-ನ್ನ ಕತ್ತರಿಗಳನ್ನು ದೂರ ಬಿಸಾಡು! (ಸ್ವ)
-ರೂಪಕ್ಕೆ ಬೇಡವಾದದ್ದನ್ನೆಲ್ಲಾ ಬಿಡು!
ರಮಾರ್ಥದಾನಂದವನ್ನಾಗ ಪಡು!
ವೇಷ, ಭೂಷಣದಾಸೆ ಕಡಿಮೆ ಮಾಡು!
ನೆಂಟರಿಷ್ಟರಂಬಿಲ್ಲದೇ ಒಡನಾಡು!
ದುಷ್ಟ ಕೂಟಗಳ ಬಿಟ್ಟು ದೂರ ಓಡು!
ವಿಜ್ಞಾನಕ್ಕೂ ಮೀರಿದ್ದರಲ್ಲೊಡಗೂಡು!
ಚಾತುರ್ವರ್ಣಾಶ್ರಮದುದ್ದೇಶರಿತಾಡು!
ಹಸ್ಯ ಅಸೂಯೆಯಿಂದಲ್ಲೆಂದು ಹಾಡು!
ಮಾನವನೇಳಿಗೆಗಾಗಿದೆಲ್ಲಾ ಪಾಡು! (ಹಾ)
-ಡು, ನಿರಂಜನಾದಿತ್ಯನನ್ನು ಕೊಂಡಾಡು!!!

ನಿನ್ನ ವ್ರಣವನ್ನು ಕಣ್ಣಿಟ್ಟು ನೀ ನೋಡು! [ನ]   5(2904)

-ನ್ನ ಚಿಕಿತ್ಸಾ ಗುಣವನ್ನಾಮೇಲೆ ನೋಡು!
ವ್ರಜನಾರಿಯರಂತೆಲ್ಲಾ ಸೇವೆ ಮಾಡು! (ಅ)
-ಣಕಿಸದಾರನ್ನೂ ಕೃಷ್ಣ ಭಕ್ತಿ ಮಾಡು!
ರ ಗುರು ಅವನೆಂದು ಧ್ಯಾನ ಮಾಡು! (ನಿ)
-ನ್ನುದ್ಧಾರಕನುದಿನ ಸಾಧನೆ ಮಾಡು!
ಣ್ಣು, ಕಿವಿ, ಬಾಯಿ ಮುಚ್ಚಿದನ್ನು ಮಾಡು! (ಹೆ)
-ಣ್ಣಿನಾಸೆ, ಮಣ್ಣಿನಾಸೆ ಬಿಟ್ಟದ ಮಾಡು! (ಸು)
-ಟ್ಟು ಅರಿಗಳಾರನ್ನೆಲ್ಲವನ್ನೂ ಮಾಡು!
ನೀನೇ ದತ್ತನೆಂಬುದನ್ನಾಗ ನೀ ನೋಡು!
ನೋಡಿ ಧನ್ಯ ನಾನಾದೆನೆಂದಾಗ ಹಾಡು! (ಓ)
-ಡು ನಿರಂಜನಾದಿತ್ಯ ದತ್ತನ ಕೂಡು!!!

ನಿನ್ನ ಸಂಗ ನಾನು ಬಿಡಲಾರೆ! (ನ)   6(3585)

-ನ್ನ ಸಂಗ ನೀನು ಇಚ್ಛಿಸಲಾರೆ!
ಸಂಗ ಮುಕ್ತ ನೀನೆಂಬುದು ಖರೆ!
ತಿ ನನಗೆ ಇನ್ಯಾರು ಬೇರೆ?
ನಾ, ನೀನೊಂದಾಗ್ಬೇಕೆಂದೆನ್ನ ಮೊರೆ! (ನೀ)
-ನುಪೇಕ್ಷಿಸಿದ್ರೆನಗಿದು ಸೆರೆ!
ಬಿಡ್ಬೇಡೆನ್ನ ಕೈಯನ್ನೆನ್ನ ಧೊರೆ! (ಭಂ)
-ಡತನ ನಾನೆಂದೂ ಮಾಡಲಾರೆ! (ಕ)
-ಲಾತೀತ ನಿನ್ನಂತೆನ್ನ ಗೈದ್ವೊರೆ! (ಇ)
-ರೆ, ನಿರಂಜನಾದಿತ್ಯನಗ್ಲಿರೆ!!!

ನಿನ್ನ ಸ್ಮರಿಸುತ್ತ ಹುಚ್ಚಾದರಾಗಲಿ! (ಅ)   6(4164)

ನ್ನ, ನೀರು, ಇಲ್ಲದೇ ಸತ್ತರೂ ಸಾಯಲಿ! (ವಿ)
-ಸ್ಮಯವಿದಕ್ಕಾರೂ ಪಡದಂತಾಗಲಿ! (ಹ)
-ರಿ ಚರಣ ಶರಣರ್ಗರಿವಾಗಲಿ!
ಸುಲಭ ದಾರಿಯಿದೆಲ್ಲರಿಗಾಗಲಿ! (ಹ)
-ತ್ತವತಾರವಿದಕ್ಕೆಂದರಿವಾಗಲಿ!
ಹುಸಿ, ದಿಟಗಳ ನಿರ್ಣಯವಾಗಲಿ! (ಕ)
-ಚ್ಚಾಟವೆಲ್ಲಾ ಮತಗಳಲ್ಲೂ ತಪ್ಪಲಿ!
ತ್ತ ತತ್ವವನ್ನು ಎಲ್ಲರೂ ಒಪ್ಪಲಿ!
ರಾಗ, ದ್ವೇಷ ಬಿಟ್ಟೊಬ್ಬರನ್ನೊಬ್ಬ್ರಪ್ಪಲಿ!
ಗನ ಹೂ ಮಳೆಗರೆಯುತ್ತಿರಲಿ! (ಅ)
-ಲಿಪ್ತ ನಿರಂಜನಾದಿತ್ಯ ತಾನಿರಲಿ!!!

ನಿನ್ನ ಹಂಬಲ ನನಗೆನ್ನಬಹುದು? (ನ)   6(3612)

-ನ್ನ ಹಂಬಲ ನಿನಗೆನ್ನಲೆಂತಹುದು?
ಹಂಗಿಗ ನಾನಾಗಿರಬೇಕಾಗಿಹುದು! (ಬೆಂ)
-ಬಲಿಗ ನೀನಾಗಿರಬೇಕಾಗಿಹುದು!
ಕ್ಷ್ಯ ನನ್ನದು ಸದಾ ನಿನ್ನಲ್ಲಿಹುದು! (ದಿ)
-ನ, ರಾತ್ರಿ, ನಿನ್ನದೇ ಧ್ಯಾನವಾಗಿಹುದು! (ನಿ)
-ನಗೇಕೆನ್ನ ಮೇಲುಪೇಕ್ಷೆಯಾಗಿಹುದು?
ಗೆಳೆತನವೆನಗಿನ್ನಾರಲ್ಲಿಹುದು? (ನಿ)
-ನ್ನಲ್ಲೀಗ ಕರ್ತವ್ಯಲೋಪವಾಗಿಹುದು!
ದುಕಿರುವುದು ನಿನಗಾಗಿಹುದು!
ಹುಸಿಯಾಡ್ಯೆನಗೇನಾಗ್ಬೇಕಾಗಿಹುದು? (ಬಂ)
-ದು ನಿರಂಜನಾದಿತ್ಯನಾಗಿಹುದು!!!

ನಿನ್ನ ಹಾಗಿನ್ಯಾರಿಹರಯ್ಯಾ? (ಅ)   4(1495)

-ನ್ನ, ವಸ್ತ್ರ ಬೇಡ ನಿನಗಯ್ಯಾ! (ಮ)
-ಹಾ ಶಕ್ತಿಸಂಪನ್ನ ನೀನಯ್ಯಾ! (ಯೋ)
-ಗಿ ರಾಜಾತ್ಮಾನಂದ ನೀನಯ್ಯಾ! (ಸ)
-ನ್ಯಾಸ ಧರ್ಮಾದರ್ಶ ನೀನಯ್ಯಾ!
ರಿಪು ಕುಲಾಂತಕ ನೀನಯ್ಯಾ!
ರಿ, ಹರ, ಬ್ರಹ್ಮ ನೀನಯ್ಯಾ?
ಘುರಾಮಗಾರ್ಯ ನೀನಯ್ಯಾ (ಅ)
-ಯ್ಯಾ, ಶ್ರೀ ನಿರಂಜನಾದಿತ್ಯಯ್ಯಾ!!!

ನಿನ್ನ ಹುಚ್ಚಿನಿಂದ ನಾನು ಕೊಚ್ಚಿಹೋಗ್ತಿದ್ದೇನೆ!   6(3450)

(ನ)-ನ್ನನ್ನು ನೀನು ಕಡೆಗಂಡ್ರೆ ನಾನಿರ್ಬಾರ್ದುತಾನೇ?
ಹುಸಿಮಾಯೆಯಾಟವೆಂದವನೂ ನೀನೇತಾನೆ?
(ಮೆ)-ಚ್ಚಿ ನಿನ್ನನ್ನು ನಾನೀಗ ಸೇರಬಯಸಿದ್ದೇನೆ!
ನಿಂದಾ, ಸ್ತುತಿಗಳ, ಸಮವಾಗೆಣಿಸಿದ್ದೇನೆ!
ತ್ತ ಗುರುವೇ ನೀನೆಂದು ನಾನು ನಂಬಿದ್ದೇನೆ!
ನಾಮ ನಿನ್ನದನ್ನು ಸದಾ ಸ್ಮರಿಸುತ್ತಿದ್ದೇನೆ!
ನುಡಿದಂತೆ ನಡೆಯುತ್ತಲೂ ಇರುತ್ತಿದ್ದೇನೆ!
ಕೊಳಕನ್ನು ಒಂದೊಂದಾಗಿ ತೊಳೆಯುತ್ತಿದ್ದೇನೆ!
(ಸ)-ಚ್ಚಿದಾನಂದವೇ ಗುರಿಯೆಂದರಿತಿರುತ್ತೇನೆ!
ಹೋರಾಟವಿದಕ್ಕಾಗಿ ನಡೆಸುತ್ತಲಿದ್ದೇನೆ!
(ಸಂ)-ಗ್ತಿಗಳನ್ನೆಲ್ಲಾ ನಿವೇದಿಸಿಕೊಂಡಿರುತ್ತೇನೆ!
(ಉ)-ದ್ದೇಶ ಮತ್ತು ದಾರಿ ನನ್ನದು ಒಪ್ಪಿಗೆತಾನೆ?
(ನೀ)-ನೆನ್ನ ಪಂಚಪ್ರಾಣ ನಿರಂಜನಾದಿತ್ಯ ನೀನೇ!!!

ನಿನ್ನ ಹುಚ್ಚು ನನಗೆ ಹೆಚ್ಚಾಯ್ತು! (ನ)   6(3709)

-ನ್ನ ಕಿಚ್ಚು ನೀನಾರಿಸದಂತಾಯ್ತು!
ಹುಚ್ಚು ನಿನಗೀಗ ಹಿಡಿದಾಯ್ತು! (ಅ)
-ಚ್ಚುಮೆಚ್ಚಿನೆನ್ಗೆ ನಿರಾಸೆಯಾಯ್ತು!
ನ್ಗಾಗಳ್ವ ಗತಿ ನಿನ್ಗೀಗಾಯ್ತು!
ನ್ನ ಬಾಳು ಬಾಡಿ ಬರಡಾಯ್ತು!
ಗೆಳೆತನಕ್ಕಪಚಾರವಾಯ್ತು!
ಹೆಜ್ಜೆ ಹಾಕಿ ನಡೆಯದಂತಾಯ್ತು! (ಕ)
-ಚ್ಚಾಡಬಾರದೆಂಬರಿವೀಗಾಯ್ತು! (ಆ)
-ಯ್ತು, ನಿರಂಜನಾದಿತ್ಯಾನಂದಾಯ್ತು!!!

ನಿನ್ನ ಹುಚ್ಚು ಹತ್ತಿದವಗಿನ್ನೇನಿಚ್ಛೆ? (ಚಿ)   2(900)

-ನ್ನ ವಸ್ತ್ರಾಲಂಕಾರಗಳಿಗಾಗದಿಚ್ಛೆ! (ಬ)
-ಹುವಿಧ ವಿಷಯಾನಂದಕ್ಕಾಗದಿಚ್ಛೆ! (ಅ)
-ಚ್ಚುತಾನಂತ ಗೋವಿಂದನೆಂಬೋದೇ ಇಚ್ಛೆ!
ಲವಾರು ಗ್ರಂಥಾಭ್ಯಾಸಕ್ಕಿರದಿಚ್ಛೆ! (ಸು)
-ತ್ತಿ ನಾನಾದೇಶ ಬೇಸತ್ತಿರುವುದಿಚ್ಛೆ!
ತ್ತ ದರ್ಶನವೊಂದೇ ಸಾಕೆಂಬುದಿಚ್ಛೆ!
ನವಾಸ ಪುರವಾಸಕ್ಕಾಗಿಲ್ಲೇಚ್ಛೆ! (ತ್ಯಾ)
-ಗಿಯಾದವನಿಗೆ ಸದಾ ನಿರ್ಮಲೇಚ್ಛೆ! (ಇ)
-ನ್ನೇನೂ ವ್ಯವಹಾರಕ್ಕೋಡದವನೇಚ್ಛೆ!
ನಿಶಿ ದಿನಾತ್ಮಾನಂದದಲ್ಲಿರ್ಪುದಿಚ್ಛೆ! (ಇ)
-ಚ್ಛೆ, ನಿರಂಜನಾದಿತ್ಯನಲ್ಲಿ ಐಕ್ಯೇಚ್ಛೆ!!!

ನಿನ್ನ ಹೊರತೆನಗೇನೂ ಬೇಡ! (ನ)   4(2452)

-ನ್ನನ್ನು ವೃಥಾ ಮೇಲೆ ದೂರಬೇಡ!
ಹೊರಗಿರಿಸಿ ಮರೆಸಬೇಡ! (ತ)
-ರತರದಾಸೆ ತೋರಿಸಬೇಡ! (ಕ)
-ತೆ, ಪುರಾಣಗಳೆನಗೆ ಬೇಡ! (ಅ)
-ನನ್ಯ ಭಕ್ತಿ ಕೊಡದಿರಬೇಡ! (ಭೋ)
-ಗೇಚ್ಛೆಯಿತ್ತು ಹುಚ್ಚು ಮಾಡಬೇಡ! (ನಾ)
-ನೂ, ನೀನೂ ಬೇರಾಗುವುದೇ ಬೇಡ!
ಬೇಡಿದ್ದೀಡೇರಿಸದಿರಬೇಡ! (ಗಂ)
-ಡ ನಿರಂಜನಾದಿತ್ಯನೇಕ್ಬೇಡ???

ನಿನ್ನಂತಾಗದವನೆಂತು ದೇವಯ್ಯಾ? [ಅ]   2(571)

-ನ್ನಂಬರದಾಸೆ ಸುಟ್ಟವ ದೇವಯ್ಯಾ!
ತಾಸಿಗೊಂದಾಸೆಯಾದರೆಂತು ದೇವಯ್ಯಾ? (ಜ)
-ಗವೆಲ್ಲಾ ತಾನಾಗಿಪ್ಪಾವ ದೇವಯ್ಯಾ! (ಅ)
-ದನಿದನಾಶಿಪುದೆಂತು ದೇವಯ್ಯಾ?
ರ ಪರಿಪೂರ್ಣನವ ದೇವಯ್ಯಾ!
ನೆಂಟರಿಷ್ಟರೆಲ್ಲರಿಗೆ ದೇವಯ್ಯಾ! (ಮಾ)
-ತು ಬೇರೆ ಬೇಕೇತಕಿನ್ನು ದೇವಯ್ಯಾ!
ದೇವ ನಿನ್ನಂತಾದವನೇ ದೇವಯ್ಯಾ!
ರವಿದನುಗ್ರಹಿಸು ದೇವಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ‘ನೀ’ ದೇವಯ್ಯಾ!!!

ನಿನ್ನಂತಾಗುವುದಾರಿಗೆ ಸಾಧ್ಯ? (ತ)   4(2213)

-ನ್ನಂಗ ತಾನಲ್ಲೆಂಬವಗೆ ಸಾಧ್ಯ! (ಸಂ)
-ತಾನಕ್ಕಾಶಿಸದವಗೆ ಸಾಧ್ಯ!
ಗುರುವಿನ ಗುಲಾಮಗೆ ಸಾಧ್ಯ! (ಸಾ)
-ವು, ನೋವಿಗಳದವಗೆ ಸಾಧ್ಯ! (ಸ)
-ದಾತ್ಮ ಧ್ಯಾನ ನಿಷ್ಠನಿಗೆ ಸಾಧ್ಯ! (ಅ)
-ರಿಗಳ ಜೈಸಿದವಗೆ ಸಾಧ್ಯ! (ಆ)
-ಗೆ ಸರ್ವೋದಯೆಂಬವಗೆ ಸಾಧ್ಯ! (ಸಂ)
-ಸಾರ ನಿಸ್ಸಾರಾದವಗೆ ಸಾಧ್ಯ! (ಸಾ)
-ಧ್ಯ ನಿರಂಜನಾದಿತ್ಯಗೆ ಸಾಧ್ಯ!!!

ನಿನ್ನಂತೆ ಒಪ್ಪುವವರಾರ್ನನ್ನ? (ನ)   6(3609)

-ನ್ನಂತೆ ಅಪ್ಪುವವರಾರ್ನಿನ್ನ?
ತೆರೆಮರೆಯಾಟ ನಿನ್ನ, ನನ್ನ!
ಲಿದ ಮೇಲ್ಬಿಡಲಾರೆ ನಿನ್ನ! (ತ)
-ಪ್ಪುಗಳೇನಿದ್ದರೂ ಕ್ಷಮಿಸ್ನನ್ನ!
ನವಾಸದಲ್ಲೂ ಬಿಟ್ನೇ ನಿನ್ನ? (ಭ)
-ವ ಬಂಧನದಿಂದ ಬಿಡಿಸ್ನನ್ನ!
ರಾಮಾಯಣ ಲೀಲೆ ನನ್ನ, ನಿನ್ನ! (ತೋ)
-ರ್ನನಗಿಬ್ಬರೂ ಒಂದೆಂಬುದನ್ನ! (ನಿ)
-ನ್ನ, ನನ್ನ, ನಿರಂಜನಾದಿತ್ಯೆನ್ನ!!!

ನಿನ್ನಂತೆ ನನ್ನ ನೀ ಮಾಡಬಲ್ಲೆ!   6(3390)

(ನ)-ನ್ನಂಬೋಣವನ್ನೇಕ್ನಿಜ ಮಾಡ್ಲೊಲ್ಲೆ?
ತೆಪ್ಪತೇಲುತ್ತಲಿದೆ ನೀರಲ್ಲೇ!
ಡೆಸಲೇಕ್ತಡ ದಡದಲ್ಲೇ?
(ಬ)-ನ್ನ ಪಡಲಾರೆ ಸಮುದ್ರದಲ್ಲೇ!
ನೀರೊಳಗಿನಹಿಂಸೆ ನೀ ಬಲ್ಲೆ
ಮಾಡಿದ್ರಿಂದಪಾರು ಶೀಘ್ರದಲ್ಲೇ!
(ಒ)-ಡಗೂಡಿ ಐಕ್ಯವಾಗಿರೆನ್ನಲ್ಲೇ!
ಳಲಲಾರೆ ಬೇರ್ಬೇರಾಗಿಲ್ಲೇ!
(ನ)-ಲ್ಲೆ ನಿರಂಜನಾದಿತ್ಯಗಾನ್ಬಲ್ಲೇ!!!

ನಿನ್ನಂಥಾ ಮಕ್ಕಳಿರಬೇಕಮ್ಮಾ! (ನ)   4(1617)

-ನ್ನಂಥಾ ತಾಯಿಗದೇ ಸೌಭಾಗ್ಯಮ್ಮಾ! (ವೃ)
-ಥಾಲಾಪದಿಂದಾವ ಸುಖವಮ್ಮಾ?
ಕ್ಕಳ್ಗೆ ಮಾತೃಭಕ್ತಿ ಮುಖ್ಯಮ್ಮಾ! (ಮಿ)
-ಕ್ಕದ್ದೆಲ್ಲಾ ಲೆಃಖಕ್ಕೆ ಹೊರಗಮ್ಮಾ! (ಬಾ)
-ಳಿ ಸುಖವಾಗಿರಿ ನೀವೆಲ್ಲಮ್ಮಾ! (ವ)
-ರ ಗುರು ಶಿವ ನಿಮಗಪ್ಪಮ್ಮಾ!
ಬೇಕಿನ್ನೇನು ಭಾಗ್ಯ ನಿಮಗಮ್ಮಾ?
ರ ಮುಗಿದು ಪ್ರಾರ್ಥಿಸಿರಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾತ್ಮಪ್ಪಮ್ಮಾ!!!

ನಿನ್ನಂಥಾ ಸುಕೃತಶಾಲಿಯಾರು ವೀಣಾ? [ನ]   3(1372)

-ನ್ನಂತರಂಗ ಸೂರೆಗೊಂಡೆ ನೀನು ವೀಣಾ! (ವೃ)
-ಥಾಲಾಪ ಮಾಡುವುದಿಲ್ಲ ನೀನು ವೀಣಾ!
ಸುಮಧುರ ಸಂಗೀತ ನಿನ್ನದು ವೀಣಾ!
ಕೃತಿಗಳ ಸುರಿಮಳೆ ಗೈವೆ ವೀಣಾ!
ರತರ ರಾಗಲಾಪ ಮಾಳ್ಪೆ ವೀಣಾ!
ಶಾಸ್ತ್ರೋಕ್ತ ರೂಪ ಲಾವಣ್ಯೆ ನೀನು ವೀಣಾ! (ಒ)
-ಲಿವೆ ಭಕ್ತರಿಗೆ ಸದಾ ನೀನು ವೀಣಾ!
ಯಾವ ಮತಭೇದ ನಿನಗಿಲ್ಲ ವೀಣಾ! (ಪೌ)
-ರುಷ ಕೊಚ್ಚಿಕೊಳ್ಳುವವಳಲ್ಲ ವೀಣಾ! (ಕ)

ನಿನ್ನದಿಲ್ಲದ ವಾರ್ತೆ ನನಗೇತಕ್ಕೆ? (ನಿ)   6(3885)

-ನ್ನವನಲ್ಲಿರಬಾರದು ಕೀಳು ಬೆಕ್ಕೆ!
ದಿಕ್ಕು ಕೆಟ್ಟ ಓಟ ನರಕ ಕೂಪಕ್ಕೆ! (ಅ)
-ಲ್ಲಸಲ್ಲದೆಲ್ಲಾ ಹರಟೆ ಪತನಕ್ಕೆ!
ಒನೆ ಲಿನೆ ಮಿ

ಸಿ

ದತ ಮಿ

ಸಿ
.............................!
ವಾದವಿವಾದ ವೃತ್ತಿ ಶಾಂತಿಗೆ ಧಕ್ಕೆ! (ಆ)
-ರ್ತೆಗಿರಬಾರದು ಸಂಶಯ ಮನಕ್ಕೆ!
ಮೋ ಎಂದೆತ್ತು ಎರಡೂ ಕೈ ಮೇಲಕ್ಕೆ!
ಡ್ಕೆ ನುಡಿಯೊಂದಾಗಬೇಕು ಅದಕ್ಕೆ! (ಯೋ)
-ಗೇಶ್ವರನ ಕೃಪೆಯಿರಬೇಕದಕ್ಕೆ!
ತ್ವ ಚಿಂತನೆ ಸದಾ ಮಾಡ್ಬೇಕಿದಕ್ಕೆ! (ಅ)
-ಕ್ಕೆ, ನಿರಂಜನಾದಿತ್ಯಾನಂದ ಎಲ್ಲಕ್ಕೆ!!!

ನಿನ್ನನೆಂತೆಲ್ಲಿರಿಸಬೇಕೆಂದು ನನಗೆ ಗೊತ್ತು! (ಖಿ)   1(250)

-ನ್ನನಾಗದಿರು ನಾನಾ ಯೋಚನೆಯಿಂದ ಬೇಸತ್ತು!
ನೆಂಟನಾಗಿಹೆ, ಭಂಟನಾಗಿಹೆ ನಾನು ಎಲ್ಲಾ ಹೊತ್ತು!
ತೆರೆಗಳಡಗಿ ಲಯವಾಗ್ವುದೆನ್ನ ಸುತ್ತು! (ಎ)
-ಲ್ಲಿ, ಹೇಗೆಂಬುದದೇಕೆ ನಿನಗೆ ಚಿಂತೆ ಇವತ್ತು? (ಆ)
-ರಿತೆಲ್ಲರ ಯೋಗಕ್ಷೇಮ ನೋಡುವೆನು ಮುಫತ್ತು!
ತ್ಯವಿದನುಭವಿಸು ಕರ್ಮಾಸಕ್ತಿ ಇತ್ತು!
ಬೇರೆ ಮಾತುಗಳಿಗಡಿಯಾಲಾಗದಿರು ಸೋತು!
ಕೆಂಗಣ್ಣಿಂದಿಲ್ಲದೆ ಶುಭ್ರವಾಗಿದೆ ವಿಷ ಸತ್ತು!
ದುರಿತಹರ ನಾನಿರಲು ಭಯವೇಕೆನಿತು?
ಗುನಗುತಲಿರು, ಜವಾಬ್ದಾರಿ ನನಗಿತ್ತು!
ನ್ನ ಕರ್ತವ್ಯ ನಾ ಮಾಡಬೇಕೆಂದೆನಗೆ ಗೊತ್ತು!
ಗೆರೆ ದಾಟಿದರೆ ಆಗುವುದು ಎಲ್ಲಾ ವಿಪತ್ತು!
ಗೊತ್ತಾಯಿತು ಸೀತೆಗಾ ಲಕ್ಷ್ಮಣನ ಮಾತಾವತ್ತು? (ಹೊ)
-ತ್ತು, ನಿರಂಜನಾದಿತ್ಯನೊಬ್ಬನಿಗೆ ಮಾತ್ರ ಗೊತ್ತು!!!

ನಿನ್ನನ್ನಾಶ್ರಯಿಸುವುದೇತಕ್ಕೆ? (ನ)   4(1991)

-ನ್ನ ಕಷ್ಟ ಪರಿಹಾರಾಗಲಿಕ್ಕೆ! (ಮ)
-ನ್ನಾಥ ಜಗನ್ನಾಥಾಗಿರ್ಪುದಕ್ಕೆ! (ಆ)
-ಶ್ರಮ ಭೇದವಿಲ್ಲವೆಂದುದಕ್ಕೆ! (ತಾ)
-ಯಿ, ತಂದೆ, ಬಂಧು ನೀನಾದುದಕ್ಕೆ! (ಪ)
-ಸುಳೆ ನಾನು ನಿನಗಾದುದಕ್ಕೆ! (ಠಾ)
-ವು ನನಗೆ ಬೇರಿಲ್ಲದುದಕ್ಕೆ!
ದೇವದೇವೇಶ ನೀನಾದುದಕ್ಕೆ!
ತ್ವಮಸ್ಯರ್ಥದನುಭವಕ್ಕೆ! (ಅ)
-ಕ್ಕೆ, ನಿರಂಜನಾದಿತ್ಯಾನಂದಕ್ಕೆ!!!

ನಿನ್ನನ್ನು ನಾನು ನೋಡಬೇಕೆಲ್ಲಿ? (ಉ)   5(2618)

-ನ್ನತದ ಗಿರಿ ನಿವಾಸದಲ್ಲಿ! (ನಿ)
-ನ್ನುರಿವ ಹೃದಯಮಧ್ಯದಲ್ಲಿ!
ನಾಮ, ರೂಪವಾದನಂತದಲ್ಲಿ! (ಮಿ)
-ನುಗುವ ತಾರಾ ಸಮೂಹದಲ್ಲಿ!
ನೋಡಲಾಶಿಪಾತ್ಮೀಯರಿರ್ಪಲ್ಲಿ! (ಖಂ)
-ಡವಿಲ್ಲದಖಂಡ ಬ್ರಹ್ಮನಲ್ಲಿ!
ಬೇಸರ ಕಳೆವ ಗಾನದಲ್ಲಿ!
ಕೆಚ್ಚೆದೆಯ ರಾಮ, ಕೃಷ್ಣರಲ್ಲಿ! (ಇ)
-ಲ್ಲಿ, ಶ್ರೀ ನಿರಂಜನಾದಿತ್ಯನಲ್ಲಿ!!!

ನಿನ್ನನ್ನು ನಿರೀಕ್ಷಿಸಿ ಫಲವಿಲ್ಲ! (ನ)   6(3572)

-ನ್ನನ್ನು ಪರೀಕ್ಷಿಸಿಯೂ ಫಲವಿಲ್ಲ! (ಅ)
-ನ್ನುವುದು, ಆಡುವುದು, ಏಕಿದೆಲ್ಲಾ?
ನಿನ್ನ ಲೀಲಾಜಾಲವೇ ಊರಲ್ಲೆಲ್ಲಾ!
ರೀತಿ, ನೀತಿ, ತಿದ್ದದೆ ಗತಿಯಿಲ್ಲ!
ಕ್ಷಿತಿಪತಿಯಾಗಲು ಬೇಕಿದೆಲ್ಲಾ!
ಸಿಹಿ, ಕಹಿ, ಪ್ರಕೃತಿ ರುಚಿ ಎಲ್ಲ!
ಲ ಕರ್ಮದಂತೆಂಬುದು ಸುಳ್ಳಲ್ಲ!
ಕ್ಷ್ಯ ಶ್ರೀಪಾದದಲ್ಲಿಡಬೇಕೆಲ್ಲಾ!
ವಿಕಲ್ಪ, ಸಂಕಲ್ಪ , ಬಿಡಬೇಕೆಲ್ಲಾ! (ಬ)
-ಲ್ಲ, ನಿರಂಜನಾದಿತ್ಯ ಅದನ್ನೆಲ್ಲಾ!!!

ನಿನ್ನನ್ನು ನೀನು ನೋಡಿಕೊಳ್ಳಪ್ಪಾ! (ಚಿ)   6(3939)

-ನ್ನ, ಬೆಳ್ಳಿಗಳೆಷ್ಟು ದಿನವಪ್ಪಾ? (ತಿ)
-ನ್ನುವುದಕ್ಕಾಗೀ ಜನ್ಮವಲ್ಲಪ್ಪಾ!
ನೀರ ಮೇಲಿನ ಗುಳ್ಳೆ ದೇಹಪ್ಪಾ! (ಅ)
-ನುಮಾನವಿದರಲ್ಲೇನಿಲ್ಲಪ್ಪಾ!
ನೋವು, ಸಾವಿದಕ್ಕೆ ತಪ್ಪದಪ್ಪಾ! (ಬ)
-ಡಿವಾರದ ಮಾತಿನ್ನು ಸಾಕಪ್ಪಾ!
ಕೊಟ್ಟವನ ಋಣ ತೀರಿಸಪ್ಪಾ! (ಕ)
-ಳ್ಳರೆಲ್ಲಾ ದೋಚಿಕೊಳ್ಳುವರಪ್ಪಾ! (ತ)
-ಪ್ಪಾಡ ಶ್ರೀ ನಿರಂಜನಾದಿತ್ಯಪ್ಪಾ!!!

ನಿನ್ನನ್ನು ನೀನೇ ದೇವರು ಮಾಡಿಕೊಳ್ಳಬೇಕು! (ಅ)   5(2697)

-ನ್ನ ಹಾಕಿದವಗನ್ಯಾಯ ಮಾಡಿದಿರಬೇಕು! (ಹೊ)
-ನ್ನು, ಹೆಣ್ಣು, ಮಣ್ಣಿನ ಆಸೆ ಬಿಟ್ಟುಬಿಡಬೇಕು!
ನೀತಿಬಾಹಿರನಾಗಿ ಜೀವಿಸದಿರಬೇಕು!
ನೇಮ, ನಿಷ್ಠೆಯಿಂದಾಸ್ತಿಕನಾಗಿ ಬಾಳಬೇಕು!
ದೇವ್ರಹೆಸ್ರಲ್ಲಿ ಮಂಕ್ಬೂದ್ಯೆರಚದಿರಬೇಕು!
ರ ಗುರುವೇ ಸರ್ವಸ್ವವೆಂದರಿಯಬೇಕು!
ರುಜುಮಾರ್ಗದಲ್ಲೇ ಸದಾ ಲಕ್ಷ್ಯವಿರಬೇಕು!
ಮಾಳ್ಪಾಚಾರದಲ್ಲಿ ಶ್ರದ್ಧಾ, ಭಕ್ತಿಯಿರಬೇಕು! (ಬ)
-ಡಿವಾರದ ಮಾತುಗಳನ್ನಾಡದಿರಬೇಕು!
ಕೊಳೆ, ಒಳ ಹೊರಗಿನದ್ದು ತೊಳೆಯಬೇಕು! (ಕ)
-ಳ್ಳ, ಸುಳ್ಳರ ಸಹವಾಸ ಮಾಡಿದಿರಬೇಕು!
ಬೇಸರಪಡದೇ ಪ್ರಾರಬ್ಧ ಭೋಗಿಸಬೇಕು! (ಬೇ)
-ಕು, ನಿರಂಜನಾದಿತ್ಯಾನಂದಕ್ಕಿದೆಲ್ಲಾ ಬೇಕು!!!

ನಿನ್ನನ್ನೇ ನೆನೆನೆನೆದು ನಾನತ್ತೆ! (ನ)   6(3492)

-ನ್ನನ್ನೀ ನೆನೆನೆನೆದು ನೀನು ಹೆತ್ತೆ! (ಇ)
-ನ್ನೇನಾದರಿದ್ದರಾಗಲಿ ಇವತ್ತೇ!
ನೆಪ ಮಾತ್ರಕ್ಕಾಗಿ ಶರೀರ ಹೊತ್ತೇ!
ನೆಗಳ್ದಾಳಿ ಬಾಳಿದವರ್ಗೇನಿತ್ತೆ?
ನೆಟ್ಟ ಗಿಡದಿಂದ್ಲೂ ಆಯ್ತು ವಿಪತ್ತೇ!
ನೆನಸಲ್ಲೀಯದ್ದು ಕನಸಲ್ಲಿತ್ತೇ?
ದುಡಿದವನಿಗೆ ಊಟ ಒಪ್ಪತ್ತೇ!
ನಾಮಸ್ಮರಣೆಯಿಂದಾದದ್ದಾಪತ್ತೇ?
ರ, ನಾರಾಯಣರೊಂದೆಂದೆನ್ನುತ್ತೆ! (ಇ)
-ತ್ತೆ ನಿರಂಜನಾದಿತ್ಯಾನಂದ ಮತ್ತೆ!!!

ನಿನ್ನಭಿಷೇಕದೆಣ್ಣೆಯಿದು ಕೃಷ್ಣಾ! (ನಿ)   4(2013)

-ನ್ನ ಕೃಪೆಯಿಂದ ಸಿಕ್ಕಿತಿದು ಕೃಷ್ಣಾ! (ಅ)
-ಭಿಲಾಷೆಯೀಡೇರಿಸಬೇಕು ಕೃಷ್ಣಾ! (ದೋ)
-ಷೇನೂ ಉಳಿಯಬಾರದಿನ್ನು ಕೃಷ್ಣಾ!
ರಮುಗಿದು ಪ್ರಾರ್ಥಿಪೆನು ಕೃಷ್ಣಾ! (ಕಂ)
-ದೆರೆದೆನ್ನನುದ್ಧರಿಸೀಗ ಕೃಷ್ಣಾ! (ಎ)
-ಣ್ಣೆಯಿದರ ಮಹಿಮೆ ತೋರು ಕೃಷ್ಣಾ! (ಬಾ)
-ಯಿಮಾತು ಪ್ರಯೋಜನವಿಲ್ಲ ಕೃಷ್ಣಾ! (ಬಂ)
-ದು ಸಂದೇಹ ಪರಿಹರಿಸು ಕೃಷ್ಣಾ!
ಕೃಷ್ಣಾರ್ಪಣವಾಗಿಹೆ ನಾನು ಕೃಷ್ಣಾ! (ಕೃ)
-ಷ್ಣಾ, ನಿರಂಜನಾದಿತ್ಯಾನಂದ ಕೃಷ್ಣಾ!!!

ನಿನ್ನಭೀಷ್ಟ ತಿರಸ್ಕೃತವಾಗ್ವುದಿಲ್ಲ!   6(3373)

(ನ)-ನ್ನ, ನಿನ್ನಲ್ಲಿ ಭೇದವೆಂದೆಂದಿಗೂ ಇಲ್ಲ!
ಭೀತಿಗೆ ಕಾರಣವೇ ಕಾಣುವುದಿಲ್ಲ!
(ದು)-ಷ್ಟರನ್ನು ಹತ್ತಿರ ಸೇರಿಸಬೇಕಿಲ್ಲ!
ತಿನ್ನುವುದುಣ್ಣುವುದಕ್ಕೆ ಕಮ್ಮಿಯಿಲ್ಲ!
(ವ)-ರ ಗುರು ಕರುಣೆ ನಿನಗಿದೆಯಲ್ಲ!
(ಸಂ)-ಸ್ಕೃತಿ ನಿನ್ನದು ಕಲುಷಿತವಾಗಿಲ್ಲ!
ನ್ನವರೆಂಬವರು ದೇವರೇ ಎಲ್ಲ!
ವಾತಾವರಣಾನುಕೂಲವಿದೆಯಲ್ಲ!
(ನ)-ಗ್ವುದು, ಅಳುವುದು ನಿಲ್ಲಿಸಬೇಕೆಲ್ಲ!
ದಿವ್ಯ ಜೀವನಕ್ಕನಾಸಕ್ತಿ ಬೇಕಿಲ್ಲ! (ಪು)
-ಲ್ಲ ನಿರಂಜನಾದಿತ್ಯ ನೀನೇಕಾಗಿಲ್ಲ??

ನಿನ್ನಲ್ಲೆಲ್ಲಾವಾಹನೆಯಾಗಲಿ! (ನಿ)   5(2708)

-ನ್ನ ನೀನರಿತಮೇಲಿದಾಗಲಿ! (ಎ)
-ಲ್ಲೆಲ್ಲೂ ನೀನೆಂಬರಿವುಂಟಾಗಲಿ! (ಚೆ)
-ಲ್ಲಾಟ ಮನಸ್ಸಿನದ್ದು ನಿಲ್ಲಲ್ಲಿ!
ವಾಸುದೇವ ಸದ್ಗುರುವಾಗಲಿ!
ಗಲಿರುಳು ಸೇವೆ ಸಾಗಲಿ!
ನೆಮ್ಮದಿಯಿದರಿಂದ ಬರಲಿ! (ಆ)
-ಯಾಸದ ಮಾತೇ ಕೇಳದಿರಲಿ!
ರ್ವ ಹೆಡೆಯನ್ನೆತ್ತದಿರಲಿ! (ಮೂ)
-ಲಿಕೆ ನಿರಂಜನಾದಿತ್ಯಾಗಲಿ!!!

ನಿನ್ನಳುವೆನ್ನ ಕರುಳ ಕೊಯ್ಯುತಿದೆ! (ನ)   5(3286)

-ನ್ನಳುವಿನ್ನೂ ಆತನಿಗೆ ಕೇಳದಿದೆ! (ಬಾ)
-ಳು ಗಾಳಿಯಗೋಪುರ ವಾಯ್ತೆನ್ನಿಸಿದೆ!
ವೆಚ್ಚ ಮಾಲಧನದಿಂದಾಗುತ್ತಲಿದೆ! (ಉ)
-ನ್ನತಿಯ ದಾರಿಗೆ ಕತ್ತಲೆ ಮುಚ್ಚಿದೆ!
ನಿಕರ ತೋರ್ಪವರ ಕಾಣದಾದೆ!
ರುಕ್ಷ್ಮಿಣೀ ರಮಣನಿಗೆ ಶರಣಾದೆ! (ಕೊ)
-ಳಲ ನಾದ ಸ್ವಲ್ಪ ಸ್ವಲ್ಪ ಕೇಳುತಿದೆ!
ಕೊರಗಬೇಡೆಂಬ ಧೈರ್ಯ ತುಂಬುತಿದೆ! (ಹೊ)
-ಯ್ಯುವೆನಮೃತ ಬಾಯಿಗೆನ್ನುತಲಿದೆ! (ಪ್ರೀ)
-ತಿ, ವಿಶ್ವಾಸ, ಸದಾ ಇರಲೆನ್ನುತಿದೆ! (ತಂ)
-ದೆ, ನಿರಂಜನಾದಿತ್ಯ ತಾನೆನ್ನುತಿದೆ!!!

ನಿನ್ನಾಚಾರ, ವಿಚಾರ ನಾನರಿತಿಲ್ಲ! (ನಿ)   6(3813)

-ನ್ನಾಕಾರ, ವಿಕಾರ ನಾನೇನೂ ನೋಡಿಲ್ಲ! (ಆ)
-ಚಾರ್ಯರುಗಳ ಮಾತನುವಭವಾಗಿಲ್ಲ!
ಟ್ಟಾಗದಿದ್ದ್ರೆ ಗುಟ್ಟು ಆನಂದವಿಲ್ಲ!
ವಿದಿ, ಹರಿ, ಹರರ್ಬಗೆ ಹರಿಸ್ಲೆಲ್ಲ!
ಚಾತಕದಂತೆ ನಿರೀಕ್ಷಿಸುವೆನೆಲ್ಲ!
ಮಾರಮಣಗೇಕೆ ಕರುಣೆಯಿಲ್ಲ?
ನಾರದಗೇಕೀಗ ಕಲ್ಯಾಣೇಚ್ಛೆಯಿಲ್ಲ?
ಶಿಸುತಿದೆ ಆರ್ಯ ಸಂಸ್ಕೃತಿಯೆಲ್ಲ! (ಹ)
-ರಿ ದರ್ಶನದಿಂದ ಗುರಿ ಸೇರ್ಬೇಕಲ್ಲ!
ತಿರೆಯಾಗು, ಹೋಗು ಅವನಿಗೇ ಎಲ್ಲ! (ಬ)
-ಲ್ಲ ನಿರಂಜನಾದಿತ್ಯ ಪರಿಸ್ಥಿತ್ಯೆಲ್ಲಾ!!!

ನಿನ್ನಾಜ್ಞೆಯಂತೆ ನೀನೇ ನಡೆಸು!   6(3447)

(ನ)-ನ್ನಾಸೆಯನ್ನೆಲ್ಲಾ ಪೂರ್ತಿಗೊಳಿಸು!
(ಪ್ರ)-ಜ್ಞೆ ಸದಾ ಶ್ರೀಪಾದದಲ್ಲಿರಿಸು!
(ಭ)-ಯಂಗಳನ್ನೆಲ್ಲಾ ಪರಿಹರಿಸು!
ತೆರೆಹೊಡೆತದಿಂದ ತಪ್ಪಿಸು!
ನೀಚರಿಂದತಿ ದೂರವಿರಿಸು!
ನೇಮ, ನಿಷ್ಠೆ, ಹೇಗೆಂದು ತಿಳಿಸು!
ಮಸ್ಕಾರ ಸದಾ ಸ್ವೀಕರಿಸು!
(ಮ)-ಡೆವಾಳನ ಕೆಲಸ ಮಾಡಿಸು!
(ಕೂ)-ಸು ನಿರಂಜನಾದಿತ್ಯಗೆನಿಸು!!!

ನಿನ್ನಾಜ್ಞೆಯಾಗದೇನನ್ನೂ ತಿನ್ನಲಾರೆ! (ನ)   5(3021)

-ನ್ನಾಜ್ಞಾತದಲ್ಲಿದ ಮರೆತಿರಲಾರೆ! (ಪ್ರ)
-ಜ್ಞೆ ತಪ್ಪಿದರೆ ನಾ ನಿನ್ನ ನೋಡಲಾರೆ!
ಯಾಕೆ ನಿರ್ದಯೆಯೀಗೆಂದರಿಯಲಾರೆ!
ತಿಗೇಡಲ್ಲೇನೂ ನಿರ್ಧರಿಸಲಾರೆ!
ದೇವಾಧಿದೇವನೇಕೀಗ ಬರಲಾರೆ?
ನ್ನನ್ನೇಕೆ ಸಂತೋಷ ಪಡಿಸಲಾರೆ? (ನಿ)
-ನ್ನೂರನ್ನು ನಾನು ಸೇರದೇ ಇರಲಾರೆ!
ತಿಳಿದವನಿಗೆ ಹೆಚ್ಚು ಹೇಳಲಾರೆ! (ನ)
-ನ್ನವ ನೀನೆಂಬುದಲ್ಲಗೆಳೆಯಲಾರೆ!
ಲಾಭ ನಷ್ಟದಲ್ಲಿಧೀರನಾಗಲಾರೆ! (ಕ)
-ರೆ ನಿರಂಜನಾದಿತ್ಯಗೀಯದಿರ್ಲಾರೆ!!!

ನಿನ್ನಾನಂದ ನಿನ್ನ ಮನೆಯಲ್ಲಿ! [ಅ]   3(1276)

-ನ್ನಾಹಾರಕ್ಕೆ ಕಡಿಮೆಯಿಲ್ಲಲ್ಲಿ!
ನಂದ ಕಂದ ವಾಸವಾಗಿರ್ಪಲ್ಲಿ!
ರ್ಶನ ಸುಖನುಭವಿಸಲ್ಲಿ!
ನಿಶ್ಚಲ ಭಕ್ತಿ ಸೇವೆ ಮಾಡಲ್ಲಿ! (ಬ)
-ನ್ನ ಪಡಬೇಡ ಓಡಿ ಎಲ್ಲೆಲ್ಲಿ!
ಹಿಮನಾಗು ಇದ್ದೆಡೆಯಲ್ಲಿ! (ಮ)
-ನೆಯಾಗ ಮಂದಿರವಾಗ್ವುದಲ್ಲಿ! (ಜ)
-ಯ ಘೋಷ ಮಾಳಗುವುದಾಗಲ್ಲಿ! (ಎ)
-ಲ್ಲಿ? ನಿರಂಜನಾದಿತ್ಯನಿರ್ಪಲ್ಲಿ!!!

ನಿನ್ನಾನಂದದಲ್ಲಿ ನೀನಿರಮ್ಮಾ! (ಇ)   4(2443)

-ನ್ನಾರಿಗೂ ಹೇಳಬಾರದದಮ್ಮಾ!
ನಂಬದವರಿಗಿಂಬಿಲ್ಲವಮ್ಮಾ! (ಮ)
-ದ, ಮತ್ಸರದ ಜಗತ್ತಿದಮ್ಮಾ! (ಮಂ)
-ದಮತಿಗೆಷ್ಟು ಹೇಳಿದ್ರೇನಮ್ಮಾ? (ನಿ)
-ಲ್ಲಿಸು ಬುದ್ಧಿ ಶ್ರೀಪಾದದಲ್ಲಮ್ಮಾ!
ನೀನಾಗ ಪರಮಪಾವ್ನೆಯಮ್ಮಾ!
ನಿನ್ನ ಸ್ವರೂಪ ನಿತ್ಯಾನಂದಮ್ಮಾ! (ಹ)
-ರ, ಹರಿ, ಬ್ರಹ್ಮಾದಿಗಳದಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯೆನೆಲ್ಲಮ್ಮಾ!!!

ನಿನ್ನಾಸೆಯಲಿ ನೀನಿದ್ದೆ! (ನ)   3(1199)

-ನ್ನಾನಂದದಲಿ ನಾನಿದ್ದೆ! (ಆ)
-ಸೆ ನಿರಾಶೆಯಾಯ್ತೆಂದಿದ್ದೆ!
ತ್ನವಿಲ್ಲದೆ ನಾನಿದ್ದೆ! (ಚ)
-ಲಿಸಲಾರದೆ ನೀನಿದ್ದೆ!
ನೀನೇ ನಾನಾಗಿ ನಾನಿದ್ದೆ!
ನಿದ್ರೆಯಿಲ್ಲದೆ ನೀನಿದ್ದೆ! (ಎ)
-ದ್ದೆ, ನಿರಂಜನಾದಿತ್ಯಾದೆ!!!

ನಿನ್ನಿಂದ ನಾನು ದೂರಟ್ಟಲ್ಪಟ್ಟೆ! [ನ]   5(3225)

-ನ್ನಿಂದ ನೀನೂ ದೂರ ಅಟಲ್ಪಟ್ಟೆ! (ಭೇ)
-ದವಳಿದಾಗ ನಾವೀರ್ವರೊಟ್ಟೆ!
ನಾಮ, ರೂಪ ನಾ ನಿನಗೆ ಕೊಟ್ಟೆ! (ನೀ)
-ನು ನನ್ನನ್ನಲಕ್ಷ್ಯ ಮಾಡಿಬಿಟ್ಟೆ!
ದೂರವಿಂತಾಗಿ ನಾನೀಗ ಕೆಟ್ಟೆ! (ಇ)
-ರಬಾರದಿಂತೆಂದು ಮೊರೆ ಇಟ್ಟೆ! (ಕೆ)
-ಟ್ಟ ಮೇಲೆ ಬುದ್ಧಿ ಬಂತೆಂದತ್ಬಿಟ್ಟೆ! (ಕ)
-ಲ್ಪನಾತೀತ ನೀನಾಗಿ ನಿಂತ್ಬಿಟ್ಟೆ! (ತೊ)
-ಟ್ಟೆ ನಾ ನಿರಂಜನಾದಿತ್ಯ ಬಟ್ಟೆ!!!

ನಿನ್ನಿಂದೆನಗನ್ಯಾಯವಾಯ್ತಂದ್ಕೊಂಡಿದ್ದೆ! (ನ)   6(3963)

-ನ್ನಿಂದದಾಗ್ಬಾರ್ದಿನ್ನೆಂದು ನಿದ್ದೆಯಿಂದೆದ್ದೆ! (ತಂ)
-ದೆ ನಿನ್ನ ಸೇವೆಯೇ ನನಗಾಗ್ಲಿ ಹುದ್ದೆ!
ನ್ನಜ್ಞಾನದಿಂದೇನೇನೋ ಬಯಸಿದ್ದೆ! (ಈ)
-ಗದು ತಪ್ಪೆಂದರಿತು ಪಾದಕ್ಕೆ ಬಿದ್ದೆ!
ನ್ಯಾಯಮೂರ್ತಿ ಹೌದು ನೀನೆಂದೀಗ ಗೆದ್ದೆ!
ಜ್ಞ, ಯಾಗಕ್ಕಿಲ್ಲದ ಪ್ರಸಾದ ಮೆದ್ದೆ!
ವಾಯುಸುತನಂತಾಗಬೇಕೆನ್ನುತ್ತೆದ್ದೆ! (ತಾ)
-ಯ್ತಂದೆ ಕೊಟ್ಟ ಬಟ್ಟೆಯಾಗ್ದಿನ್ನೊದ್ದೆ ಮುದ್ದೆ! (ತಿಂ)
-ದ್ಕೊಂಡು ಬಿದ್ದಿರುವೆನು ನೀನಿತ್ತ ಮುದ್ದೆ! (ಅ)
-ಡಿದಾವರೆಯ ಸೇವೆ ಮಾಡುತ್ತಲಿದ್ದೆ! (ಗೆ)
-ದ್ದೆ, ಶ್ರೀ ನಿರಂಜನಾದಿತ್ಯನಾಗೀಗೆದ್ದೆ!!!

ನಿನ್ನಿದಷ್ಟಂತೆ ನೀನಿಕ್ಕುವೆ! (ನ)   4(1446)

-ನ್ನಿಷ್ಟನಾನಾರಿಗೇನೊರೆವೆ! (ಕ)
-ಷ್ಟ, ಸುಖವ, ಸಹಿಸೆನುವೆ! (ಕ)
-ದಂಬವನವಾಸ್ಯಾಗೆನುವೆ! (ಸಂ)
-ತೆ, ಪುರಾಣ ಸಾಕಿನ್ನುವೆ!
ನೀಲಾಕಾಶದಂತಿರೆನುವೆ!
ನಿಶ್ಚಲ ಭಕ್ತಿ ಬೇಕೆನುವೆ! (ತ)
-ಕ್ಕುದನೇ ನಾ ಮಾಳ್ಪೆನೆನುವೆ! (ಈ)
-ವೆ, ನಿರಂಜನಾದಿತ್ಯ ಸೇವೆ!!!

ನಿನ್ನಿಷ್ಟ ಸಿದ್ಧಿ ನೀನ್ಮಾಡಿಕೊಂಡಿ! (ನ)   6(3574)

-ನ್ನಿಷ್ಟ ಸಿದ್ಧಿಗೇನು ದಾರಿ ಕಂಡಿ? (ಕ)
-ಷ್ಟ ನನ್ನದನ್ನು ನೀನರಿತ್ಕೊಂಡಿ!
ಸಿರ ಬಾಗ್ಸಿ ಸೇವೆ ಮಾಡಿಸ್ಕೊಂಡಿ! (ಶು)
-ದ್ಧಿ ಇದೇ ತ್ರಿಕರಣೆಂದೊಪ್ಕೊಂಡಿ!
ನೀನೇಕಿನ್ನೂ ದೂರದಲ್ಲಿದ್ಕೊಂಡಿ? (ಉ)
-ನ್ಮಾದ ಹಿಡ್ಸಿ ನನ್ನ ಕುಣಿಸ್ಕೊಂಡಿ!
ಡಿಕ್ಕಿ ಹೊಡೆಯ್ದಂತೆನ್ನ ನೋಡ್ಕೊಂಡಿ!
ಕೊಂಡಾಡುವೆನು, ಬಾರೇ ಚಾಮುಂಡಿ! (ಕೂ)
-ಡಿ ನಿರಂಜನಾದಿತ್ಯನಾಗ್ಚಂಡಿ!!!

ನಿನ್ನಿಷ್ಟಕ್ಕೆ ನಾನು ಸದಾ ಬದ್ಧ! (ಚೆ)   6(4205)

-ನ್ನಿಗನಾಗಿ ನೀನು ಯೋಗಸಿದ್ಧ! (ಕ)
-ಷ್ಟ, ಕಾರ್ಪಣ್ಯಕ್ಕಂಜಿ ನಾನಶುದ್ಧ! (ಬೆ)
-ಕ್ಕೆಯಿಲ್ಲದ ನೀನು ಪರಿಶುದ್ಧ!
ನಾನು ನೀನೊಂದಾಗದಿದ್ದ್ರೆ ಯುದ್ಧ! (ನೀ)
-ನು ಇನ್ನೂ ನನ್ನ ಮೇಲೇಕೆ ಕು

ದ್ಧ?
ತ್ತು ಹುಟ್ಟುವೀ ಜನ್ಮ ನಿಷಿದ್ಧ! (ಸ)
-ದಾನಂದ ನೀನೆಂಬುದು ಪ್ರಸಿದ್ಧ!
ಲ ನೀನಿತ್ತರೆ ನಾನೇ ಬುದ್ಧ! (ಬು)
-ದ್ಧ ಶ್ರೀ ನಿರಂಜನಾದಿತ್ಯ ಸಿದ್ಧ!!!

ನಿನ್ನಿಷ್ಟಕ್ಕೆ ಬಂದಾಗ ಸೇವೆ! (ನ)   4(1831)

-ನ್ನಿಷ್ಟದಿಂದಾಗುವುದು ನೋವೇ! (ದು)
-ಷ್ಟತನ ಸಾಯಲಿಕ್ಕೆ ಸೇವೆ! (ಮಿ)
-ಕ್ಕೆಲ್ಲಾ ವ್ಯವಹಾರವೂ ನೋವೇ!
ಬಂಧ ವಿಮೋಚನೆಗೆ ಸೇವೆ!
ದಾರಿ ತಪ್ಪಿದಾಗೆಲ್ಲಾ ನೋವೇ!
ತಿ, ಮತಿ, ಶುದ್ಧಿಗೆ ಸೇವೆ!
ಸೇರಲಯೋಗ್ಯ ಸಂಘ ನೋವೇ! (ನಾ)
-ವೆ ನಿರಂಜನಾದಿತ್ಯ ಸೇವೆ!!!

ನಿನ್ನಿಷ್ಟದಂತೆ ನಾನಿರಬೇಕು! [ಸ]   4(2359)

-ನ್ನಿಧಿ ಸೇವೆಯೊದಗಿಸಬೇಕು! (ಕ)
-ಷ್ಟವೆಲ್ಲವನ್ನೂ ತಪ್ಪಿಸಬೇಕು!
ದಂಡ ನೀತಿ ಬಿಟ್ಟು ಬಿಡಬೇಕು! (ಸಂ)
-ತೆಗೆನ್ನನ್ನೋಡಿಸದಿರಬೇಕು!
ನಾವಿಬ್ಬರೂ ಒಂದಾಗಿರಬೇಕು!
ನಿತ್ಯಾನಂದನುಭವಿಸಬೇಕು! (ನ)
-ರಜನ್ಮದಾಸೆಯಿದಾಗಬೇಕು!
ಬೇಗಬೇಗಿದು ಕೈಗೂಡಬೇಕು! (ಬೇ)
-ಕು, ನಿರಂಜನಾದಿತ್ಯನಾಗ್ಬೇಕು!!!

ನಿನ್ನಿಷ್ಟದಂತೆ ನಾನೊಳಗಿದ್ದೆ! (ಬ)   4(2324)

ನ್ನಿರೆಂದಾಗ ಬರಬೇಕೆಂದಿದ್ದೆ! (ಕ)
-ಷ್ಟ ನನ್ನಿಂದಾಗಬಾರದೆಂದಿದ್ದೆ!
ದಂಭ, ದರ್ಪ ನನಗೇಕೆಂದಿದ್ದೆ! (ಸಂ)
-ತೆ ವ್ಯಾಪಾರ ಸುಖವಿಲ್ಲೆಂದಿದ್ದೆ!
ನಾಶಪ್ಪುದಕ್ಕೇಕೆ ಚಿಂತೆಂದಿದ್ದೆ!
ನೊಸಲ್ಗಣ್ಣಾನಲ್ಲದಾರೆಂದಿದ್ದೆ! (ತ)
-ಳಮಳಕ್ಕಾಸ್ಪದವಿಲ್ಲೆಂದಿದ್ದೆ! (ಯೋ)
-ಗಿಯಾದೆನೆಂಬಾನಂದದಿಂದಿದ್ದೆ! (ಇ)
-ದ್ದೆ, ನಿರಂಜನಾದಿತ್ಯಾನೆಂದಿದ್ದೆ!!!

ನಿನ್ನಿಷ್ಟದಂತೆಲ್ಲಾ ಏಕಾಗ್ಬೇಕು? (ನ)   5(2968)

-ನ್ನಿಷ್ಟವನ್ನೂ ನಡೆಸಿಕೊಡ್ಬೇಕು! (ಜೇ)
-ಷ್ಟ ಕನಿಷ್ಟನನ್ನಾದರಿಸ್ಬೇಕು!
ದಂಭವನ್ನು ಕನಿಷ್ಟ ಬಿಡ್ಬೇಕು! (ಕ)
-ತೆ ನನ್ನದು ನಿನ್ನದಾಗಬೇಕು! (ಇ)
-ಲ್ಲಾದ್ರೆ ನಾವಿಬ್ರೊಂದೆಂದೇಕನ್ಬೇಕು?
ನಾದ್ರೂ ಮಾಡಿ ಭೇದ ಬಿಡ್ಬೇಕು!
ಕಾಠಿಣ್ಯಮೂರ್ತಿ ನೀನಾಗ್ದಿರ್ಬೇಕು! (ಆ)
-ಗ್ಬೇಕಿಬ್ಬರ ಇಷ್ಟವೊಂದಾಗ್ಬೇಕು! (ಬೇ)
-ಕು ನಿರಂಜನಾದಿತ್ಯನಾಗ್ಬೇಕು!!!

ನಿನ್ನಿಷ್ಟವೆಂದಿಹೆನಿಲ್ಲಿ ನಾನು! (ನ)   5(2780)

-ನ್ನಿಯನಾಡುವವನಲ್ಲ ನಾನು! (ಅ)
-ಷ್ಟಮದಗಳ ಸುಟ್ಟವ ನಾನು!
ವೆಂಕಟೇಶಂಬರೇಶೆಂಬೆ ನಾನು!
ದಿವ್ಯನಾಮಕ್ಕೆ ಶರಣು ನಾನು!
ಹೆಬ್ಬಯಕೆ ಸಲಿಸೆಂಬೆ ನಾನು!
ನಿತ್ಯ ನಿಯಮ ಬಿಟ್ಟಲ್ಲ ನಾನು! (ಚೆ)
-ಲ್ಲಿಹೆನು ಬಿಸಿ ಬೆವರ ನಾನು!
ನಾನೂ, ನೀನೂ ಒಂದೆಂದಿಹೆ ನಾನೂ! (ನೀ)
-ನು ನಿರಂಜನಾದಿತ್ಯಾತ್ಮ ನಾನು!!!

ನಿನ್ನಿಷ್ಟವೇ ನೆರವೇರಲಿ! (ಚೆ)   4(1525)

-ನ್ನಿಗ ನಾಮ ನಿನಗಿರಲಿ! (ದು)
-ಷ್ಟ ಸಂಹಾರವಾಗುತ್ತಿರಲಿ!
ವೇದೋಕ್ತಿ ಸುಳ್ಳಾಗದಿರಲಿ!
ನೆಮ್ಮದಿ ಮನಸ್ಸಿಗಿರಲಿ! (ಪ)
-ರಮಾರ್ಥ ಜೀವನಕ್ಕಿರಲಿ!
ವೇಷಾಡಂಬರ ಹೋಗಿರಲಿ! (ನ)
-ರ, ನಾರಾಯಣನಾಗಿರಲಿ! (ಶೂ)
-ಲಿ ನಿರಂಜನಾದಿತ್ಯಾಗಲಿ!!!

ನಿನ್ನುದಾಸೀನದಿಂದ ನಿನಗೇ ಕಷ್ಟ! (ತಿ)   4(2066)

-ನ್ನು ಎಂದಿತ್ತನ್ನ ಚೆಲ್ಲಲಾರಿಗೆ ಕಷ್ಟ?
ದಾರಿ ಕಾಡ್ದಾರಿಯಾದರಾರಿಗೆ ಕಷ್ಟ?
ಸೀತೆ, ಸೌಮಿತ್ರಿ ಮಾತು ಮೀರ್ಯಾಯ್ತು ಕಷ್ಟ! (ಮ)
-ನಸಿಜವಿವೇಕಿಯಾದ್ರಿಂದಾಯ್ತು ಕಷ್ಟ!
ದಿಂಡೆ ಶೂರ್ಪನಖಿಗಾಯ್ತು ಬಹು ಕಷ್ಟ!
ಶೇಂದ್ರಿಯಗಳ್ಗಾಳಾದರೆಲ್ಲಾ ಕಷ್ಟ!
ನಿಜ ಗುರಿ ಬಿಡದಿದ್ದರಿಲ್ಲ ಕಷ್ಟ!
ರಹರಿಯ ಭಕ್ತನಿಗಿಲ್ಲ ಕಷ್ಟ! (ಯೋ)
-ಗೇಶ್ವರನೊಲಿದರ್ಜುನಗಾವ ಕಷ್ಟ?
ರ್ತವ್ಯಲೋಪವಾದ್ರಾಗುವುದು ಕಷ್ಟ! (ಇ)
-ಷ್ಟ, ನಿರಂಜನಾದಿತ್ಯಾತ್ಮಗಿಲ್ಲ ಕಷ್ಟ!!!

ನಿನ್ನುದ್ಯೋಗ ನೀನು ಮಾಡುತ್ತಿರು! (ನ)   5(2663)

-ನ್ನುಪದೇಶ ಪಾಲಿಸುತ್ತಲಿರು! (ಪಾ)
-ದ್ಯೋಪಚಾರಗಳ ಬಿಡದಿರು!
ಮನ ಗುರಿಯೆಡೆಗಿಟ್ಟಿರು!
ನೀಚರ ಸಂಗವನ್ನು ಬಿಟ್ಟಿರು! (ಅ)
-ನುಗಾಲಾತ್ಮ ಚಿಂತನೆಯಲ್ಲಿರು!
ಮಾಯಾ ಮೋಹಕ್ಕೊಳಗಾಗದಿರು! (ದು)
-ಡುಕುವಭ್ಯಾಸ ದೂರ ಮಾಡಿರು! (ಕ)
-ತ್ತಿ ಯಾರ ಮೇಲೂ ಮಸೆಯದಿರು! (ಗು)
-ರು ನಿರಂಜನಾದಿತ್ಯನೆಂದಿರು!!!

ನಿನ್ನುಪದೇಶಕ್ಕೆ ನಾನು ಋಣಿ! [ಬೆ]   4(2414)

-ನ್ನು ಬಿಡದೆ ಕಾಯ್ವ ನೀನು ಧಣಿ!
ರಮಾರ್ಥ ಸಂಪತ್ತಿನ ಗಣಿ!
ದೇಹ ನಾನೆಂಬ ನಾನೊಂದು ಗಿಣಿ!
ಕ್ತಿ ಪಾದಕ್ಕೆ ಭಕ್ತಿ ಸಾಂಬ್ರಾಣಿ! (ಇ)
-ಕ್ಕೆ, ಉಕ್ಕಿ ಹರಿದುದಂತರ್ವಾಣಿ!
ನಾನಾದೆ ಆಸ್ತಿಕ ಶಿರೋಮಣಿ! (ಅ)
-ನುಪಮಾತ್ಮ ಶಕ್ತಿ ನಾರಾಯಣಿ!
ಕ್ಸಾಮಾದಿ ವೇದ ಸಾರಾ ವಾಣಿ! (ರಾ)
-ಣಿ, ನಿರಂಜನಾದಿತ್ಯ ಗೀರ್ವಾಣಿ!!!

ನಿನ್ನೂರು ಕಡೆ ನೀನು ನಡೆ! (ಬೆ)   4(2114)

-ನ್ನೂರು ಕಡೆ ನೋಡದೇ ನಡೆ! (ಗು)
-ರುಮಂತ್ರ ಜಪಿಸುತ್ತ ನಡೆ!
ಲ್ಲು, ಮುಳ್ಳಿಗಂಜದೇ ನಡೇ! (ಒ)
-ಡೆಯ ರಕ್ಷಿಪನೆಂದು ನಡೆ!
ನೀರ್ಗುಳ್ಳೆಯೀ ಬಾಳೆಂದು ನಡೆ! (ಅ)
-ನುಭವಿಯಾಗಿ ಮುಂದೆ ನಡೆ! (ಮ)
-ನಕತಿಶಯಾನಂದಾ ನಡೆ! (ನ)
-ಡೆ, ನಿರಂಜನಾದಿತ್ಯನೆಡೆ!!!

ನಿನ್ನೆ ನೀ ಕಾದೆ, ಇಂದು ನಾ ಕಾದೆ! (ಸ)   3(1072)

-ನ್ನೆ ನಿನ್ನದು ನಾನರಿಯದಾದೆ!
ನೀನಾಡುವಾಟವೆಲ್ಲಾ ಮರ್ಯಾದೆ!
ಕಾಲ ಕಾಲಕ್ಕೂ ನನ್ನ ತಗಾದೆ! (ಇ)
-ದೆನ್ನ ಲಭ್ಯವೆಂದು ತಣ್ಣಗಾದೆ!
ಇಂದಂದೆಂದೆಂದೂ ನಿನ್ನವನಾದೆ!
ದುರಿತ ದೂರ ಶಿವ ನೀನಾದೆ!
ನಾಮ ಜಪಿ ಸತತ ನಾನಾದೆ!
ಕಾದು ನಿನ್ನಲ್ಲಿ ನಾನೈಕ್ಯನಾದೆ! (ಕಾ)
-ದೆ, ನಿರಂಜನಾದಿತ್ಯ ನಾನಾದೆ!!!

ನಿನ್ನೆ ಮಳೆ, ಇವತ್ತು ಕೊಳೆ, ನಾಳೆ ಹೊಳೆ!(ಇ)   6(4219)

-ನ್ನೆರಡು ದಿನ ಕಳೆದ್ದ್ರೆ ಸಮುದ್ರಾ ಹೊಳೆ!
ತ್ತೆರಡು ದಿನ ಕಳೆದ್ರೆ ಮೋಡಾ ಅಲೆ! (ಹ)
-ಳೆಯದಕ್ಕೆ ಇವತ್ತಿಲ್ಲ ಅಂದಿನ ಬೆಲೆ!
ವತ್ತಿದ್ದಂತೆ ನಾಳೆ ಇಲ್ಲದಿರ್ಪ ಲೀಲೆ!
ರ ಗುರುಕೃಪೆಯಿಂದಾ ಲೀಲೆ, ಸುಶೀಲೆ! (ಸ)
-ತ್ತು ಹುಟ್ಟುವ ಪಾಡಿಲ್ಲದಾದಾಗ ಕಪಾಲೆ!
ಕೊರಳಿನಲ್ಲಾಗವಳಿಗೆ ರುಂಡ ಮಾಲೆ! (ಕ)
-ಳೆವಳೆಲ್ಲರ ಕಷ್ಟವನ್ನಾಗಾ ತ್ರಿಶೂಲೆ!
ನಾಮ ಜಪ ತೆಗೆಯುವುದು ತಲೆಶೂಲೆ! (ವೇ)
-ಳೆಅವೇಳೆಯೆಂಬುದಿಲ್ಲವೆಂಬಳಾ ಬಾಲೆ!
ಹೊರ, ಗೊಳಗಿನ ಮಲ ಹೋದ್ರೆ ಸಬಲೆ! (ಇ)
-ಳೆಗೆ ನಿರಂಜನಾದಿತ್ಯಾನಂದ ಪ್ರಜ್ವಾಲೆ!!!

ನಿನ್ನೊಳಗಿನ ವೈಕುಂಠದಲ್ಲಿ ನೀನು! (ನ)   4(1563)

-ನ್ನೊಡನೆ ಸುಖದಿಂದಿರಬಾರದೇನು? (ಒ)
-ಳ, ಹೊರಗೋಡಾಡಿಪುದೇಕೆನ್ನ ನೀನು? (ಅಂ)
-ಗಿ, ಲುಂಗಿಯಾಸೆ ಕೊಡುವುದೇಕೆ ನೀನು?
ಗ್ನನನ್ನನಾದರಿಪುದೇಕೆ ನೀನು?
ವೈಖರಿ ಮಾತುಗಳಿಂದಾಗುವುದೇನು?
ಕುಂದಿಲ್ಲದಾನಂದ ಕೊಡಬೇಕು ನೀನು! (ಹ)
-ಠ ಮಾಡುವೆನೆಂದರಿಯಬೇಡ ನೀನು!
ಯಾಭಿಕ್ಷೆ ಕರುಣಿಸಬೇಕು ನೀನು! (ಕ)
-ಲ್ಲಿನಂತೆ ಕಠಿಣನಾದರಾಗ್ವುದೇನು!
ನೀನೇ ನಾನಾಗಿ ಶೋಭಿಸಬೇಕು ನೀನು! (ನೀ)
-ನು ನಿರಂಜನಾದಿತ್ಯನಲ್ಲದಿನ್ನೇನು??

ನಿನ್ನೊಳಗೆಲ್ಲಾ ಯಂತ್ರ ಮಂತ್ರಗಳಮ್ಮಾ! (ನಿ)   3(1391)

-ನ್ನೊಡೆಯ ಗುರುದತ್ತನಾಗಿಹನಮ್ಮಾ! (ಒ)
-ಳಗೂ, ಹೊರಗೂ ವ್ಯಾಪಕನವನಮ್ಮಾ! (ಬ)
-ಗೆ ಬಗೆಯ ನಾಮ, ರೂಪವನಿಗಮ್ಮಾ! (ಉ)
-ಲ್ಲಾಸದಿಂದ ಇಷ್ಟಮಂತ್ರ ಜಪಿಸಮ್ಮಾ!
ಯಂತ್ರ, ತಂತ್ರ ನಿನ್ನನ್ನೇನೂ ಮಾಡದಮ್ಮಾ!
ತ್ರಯಮೂರ್ತಿ ದತ್ತ ಮುರುಗ ತಾನಮ್ಮಾ!
ಮಂಗಳವಾಗುವುದೆಂದು ನಂಬಿರಮ್ಮಾ! (ಪು)
-ತ್ರ, ಪುತ್ರಿಯರ ಚಿಂತೆ ನಿನಗೇಕಮ್ಮಾ?
ರ್ವಕ್ಕುಳಿಗಾಲವಿಲ್ಲೆಂದರಿಯಮ್ಮಾ! (ಕ)
-ಳವಳ ಬಿಟ್ಟು ನೆಮ್ಮದಿಯಿಂದಿರಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯಾನಂದ ದತ್ತಮ್ಮಾ!!!

ನಿನ್ನೋದಿಗೆ ನೆರವಾಯ್ತೀಗೆನ್ನ ತೊಡೆ! (ಮು)   5(2617)

-ನ್ನೋದುವರ ಲಭ್ಯವರಿಯದಾ ತೊಡೆ!
ದಿವ್ಯರಕ್ತ ತುಂಬಿಹಂಥಾ ಗುರು ತೊಡೆ!
ಗೆಳೆತನಕ್ಕಾಶ್ರಯವೀವಂಥಾ ತೊಡೆ!
ನೆನೆದರೆ ಮೇಲೇರಿಸುವಂಥಾ ತೊಡೆ!
ಸಾಸ್ವಾದಿಗಾಧಾರವಾದಂಥಾ ತೊಡೆ!
ವಾರಿಜಭವಾದಿಗಳಾಡಿದಾ ತೊಡೆ! (ಕಾ)
-ಯ್ತೀಗ, ಸಂಗೀತ, ಸಾಹಿತಿಗಳಾ ತೊಡೆ! (ಹ)
-ಗೆಗಳಿಗೆಲ್ಲಾ ಸಿಂಹಸ್ವಪ್ನವೀ ತೊಡೆ! (ಬ)
-ನ್ನಪಡುವವರರಿಷ್ಟಹರಾ ತೊಡೆ!
ತೊಣೆ ನಂಬಿದ ಭಕ್ತಗಾಗಿಹಾ ತೊಡೆ! (ಬಿ)
-ಡೆ, ನಿರಂಜನಾದಿತ್ಯನಾ ನನ್ನ ತೊಡೆ!!!

ನಿಮ್ಮ ಮನೆಗಾವ ಬಣ್ಣ ಸ್ವಾಮಿ? [ನ]   3(1292)

-ಮ್ಮವಳಿಷ್ಟ ರಾಮ ಬಣ್ಣ ಸ್ವಾಮಿ!
ಕ್ಕಳಿಗೂ ಇಷ್ಟಾ ಬಣ್ಣ ಸ್ವಾಮಿ!
ನೆರೆ ಶಾಂತಿಪ್ರದಾ ಬಣ್ಣ ಸ್ವಾಮಿ!
ಗಾಲಿ ಮಳೆಗೊಳ್ಳೇ ಬಣ್ಣ ಸ್ವಾಮಿ!
ರ ಗುರುಕೃಪಾ ಬಣ್ಣ ಸ್ವಾಮಿ!
ಹು ಆಕರ್ಷಣಾ ಬಣ್ಣ ಸ್ವಾಮಿ! (ಮ)
-ಣ್ಣದಕ್ಕಂಟದಿರ್ಪಾ ಬಣ್ಣ ಸ್ವಾಮಿ!
-ಸ್ವಾಮಿನಾಮ ಪ್ರೇಮಾ ಬಣ್ಣ ಸ್ವಾಮಿ! (ಪ್ರೇ)
-ಮಿ ನಿರಂಜನಾದಿತ್ಯದೇ ಸ್ವಾಮಿ!!!

ನಿಮ್ಮಿಂದಾದೆ ತಪಸ್ವಿ ನಾನು! (ಒ)   5(2868)

-ಮ್ಮಿಂದೊಮ್ಮೆ ಗಾಡಿ ಬಿಟ್ಟೆ ನಾನು!
ದಾರಿಯುದಕ್ಕೂ ಜಪಿ ನಾನು! (ಕಂ)
-ದೆರೆದಾಗ ಬಂದಿದ್ದ ಭಾನು!
ನ್ಮಯನಾದೆ ನೋಡಿ ನಾನು!
ರಿಗ್ರಹಿಸೆನ್ನೆಂದೆ ನಾನು! (ಇ)
-ಸ್ವಿ ಅರ್ವತ್ನಾಲ್ಕರಲ್ಲಿ ನಾನು!
ನಾನು ನೀನಾಗ್ಬೇಕೆಂದೆ ನಾನು! (ಭಾ)
-ನು ನಿರಂಜನಾದಿತ್ಯ ನಾನು!!!

ನಿಮ್ಮುದ್ಧಾರಕ್ಕಾಗವನು ಬಂದ! (ಚಿ)   4(2303)

-ಮ್ಮುತಿದೆ ಅವನಲ್ಲತ್ಯಾನಂದ! (ಶ್ರ)
ದ್ಧಾ, ಭಕ್ತಿಯಿಂದವ ಪೂರ್ಣಾನಂದ! (ವ)
-ರ ಗುರುಕೃಪಾ ಪಾತ್ರಾತ್ಮಾನಂದ! (ವಾ)
-ಕ್ಕಾಯ ಮನಶ್ಯುದ್ಧಾ ನಿತ್ಯಾನಂದ! (ಮ)
-ಗನಾಗಿ ಶಿವಕುಮಾರಾನಂದ!
ಸ್ತ್ರ ಭೂಷಣ ರಹಿತಾನಂದ! (ಅ)
-ನುದಿನಾನುಷ್ಠಾನಚಲಾನಂದ!
ಬಂಧ ಮುಕ್ತನಾ ಸಹಜಾನಂದ!
ತ್ತ ನಿರಂಜನಾದಿತ್ಯಾನಂದ!!!

ನಿಯಮವಿಲ್ಲದ ಬಾಳು ನಿತ್ಯ ಗೋಳು!   4(2436)

ಮಾಭ್ಯಾಸ ಬಿಟ್ಟವ ಯಮನ ಪಾಲು!
ನೋಜಯದಿಂದಾನಂದದಿಂದ ಬಾಳು!
ವಿಶ್ವನಾಥಗೊಪ್ಪಿಸು ನಿನ್ನ ಹವಾಲು! (ತ)
-ಲ್ಲಣವ ಕಳೆವಾ ಗುರು ಕರುಣಾಳು!
ರ್ಶನವಾವಾಗೆಂದು ಹಾಕು ಸವಾಲು?
ಬಾಲನಾಗಿ ಕುಡಿಯುವನೆದೆ ಹಾಲು! (ಅ)
-ಳುತಳುತಲ್ಲಾಡಿಸಬೇಡ ಕೈ ಕಾಲು!
ನಿನಗಾಗದಾಗ ನರನಾಡಿ ಸೋಲು! (ಸ)
-ತ್ಯವಿದ ಪಾಲಿಸಿದವಗಿಲ್ಲ ಜೈಲು!
ಗೋಪಾಲನೊಬ್ಬನೆಲ್ಲರಿಗೆ ಕಾವಲು! (ಬೀ)
-ಳು ನಿರಂಜನಾದಿತ್ಯನಡಿಗಾವಾಗ್ಲೂ!!!

ನಿರಂಜನ ಕಣ್ಣಾಗಬೇಕಣ್ಣಾ!   1(237)

ರಂಗನಾಗಿ ಬದುಕಬೇಕಣ್ಣಾ!
ವನಯ್ಯನಾಗಿರಬೇಕಣ್ಣಾ!
ಡೆ, ನುಡಿಯೊಂದಿರಬೇಕಣ್ಣಾ!
ಚ್ಚೆ ಬಿಗಿಯಾಗಿರಬೇಕಣ್ಣಾ! (ಕ)
-ಣ್ಣಾ ತನಿಷ್ಟದಂತಿರಬೇಕಣ್ಣಾ!
ತಿ ಸರಳವಿರಬೇಕಣ್ಣಾ!
ಬೇಕು ಅವನ ಸ್ಮರಣೆಯಣ್ಣಾ!
ನಸು, ಮನಸಿರಬೇಕಣ್ಣಾ! (ಕ)
-ಣ್ಣಾ! ನಿರಂಜನಾದಿತ್ಯ ಮುಕ್ಕಣ್ಣಾ!!!

ನಿರಂಜನ ದರ್ಶನ ಯೋಗ! (ಸಾ)   4(1505)

-ರಂಗಾನುಗ್ರಹದಿಂದಯ್ತೀಗ!
ನನ, ಮರಣದ ರೋಗ!
ಶಿಸಿ ಹೋದಂತಾಯಿತೀಗ!
ಶೇಂದ್ರಿಯಗಳಾಶಾ ಭೋಗ! (ಸ್ಪ)
-ರ್ಶ ಮಾಡದಂತಿರುವುದೀಗ!
ಶ್ವರದಾಸ್ತಿಯನುರಾಗ!
ಯೋಚಿಸಿದಂತಾಗಿಹುದೀಗ! (ತ್ಯಾ)
-ಗ ನಿರಂಜನಾದಿತ್ಯ ಯೋಗ!!!

ನಿರಂಜನ ನರಸಿಂಹನಯ್ಯಾ!   1(347)

ರಂಗ ಲಕ್ಷ್ಮೀನಾರಾಯಣನಯ್ಯಾ!
ನಕಜೆಯರಸ ರಾಮಯ್ಯಾ!
ರನಾಪ್ತ ಸಖ ಶ್ರೀ ಕೃಷಣಯ್ಯಾ!
ಗೇಶ, ಯೋಗೀಶ ಶಿವನಯ್ಯಾ!
ಮೇಶ ಪಂಢರಿವಿಠಲಯ್ಯಾ!
ಸಿಂಹಾದ್ರಿಪ್ರಿಯ ದತ್ತಾತ್ರೇಯಯ್ಯಾ! (ಅ)
-ಹರ್ನಿಶಿಯಿವನ ಭಜಸಯ್ಯಾ! (ಆ)
-ನತರುದ್ಧಾರಕನೀತನಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಪೂವಯ್ಯಾ!!!

ನಿರಂಜನ ನಾಮಕೆಲ್ಲರಿಗೂ ಹಕ್ಕು!   1(418)

ರಂಗನಿಂದ ವಿರಾಜಿಸಲಲ್ಲೀ ಹಕ್ಕು!
ರಾಜನ್ಮವಿಲ್ಲದಾತ್ಮಾರಾಮ ಹಕ್ಕು!
ಯನ ಮನೋಹರಕೊಲ್ಲದೀ ಹಕ್ಕು!
ನಾದ, ಬಿಂದು, ಕಲಾತೀತವಾದ ಹಕ್ಕು!
ನೋನಾಶದಿಂದ ಬೆಳಗುವ ಹಕ್ಕು!
ಕೆಲಸ, ಕಾರ್ಯಗಳರಿಯದ ಹಕ್ಕು! (ಉ)
-ಲ್ಲಸ, ಜಿಗುಪ್ಸೆಗಳೇನಿಲ್ಲದ ಹಕ್ಕು! (ಉ)
-ರಿ, ಶೀತ, ವಾತಗಳಿಲ್ಲದಂಥಾ ಹಕ್ಕು!
ಗೂಡವರಿತರೆ ಸಾರ್ಥಕವೀ ಹಕ್ಕು!
ರಿ, ಹರ, ಅಜರೊಂದಾದುದೀ ಹಕ್ಕು! (ಉ)
-ಕ್ಕುತಿದೆ ನಿರಂಜನಾದಿತ್ಯನೀ ಹಕ್ಕು!

ನಿರಂಜನ ನಿತ್ಯ ಬ್ರಹ್ಮಚಾರಿ!   1(150)

ರಂಜನಿ ಅಂದಳು ವ್ಯಭಿಚಾರಿ!
ಪ, ತಪದಿವ ಸದಾಚಾರಿ!
ರನೇನರಿತಿಹಾ ಕಂಸಾರಿ?
ನಿಜವೇನರಿವಳಾ ಹಾದರಿ?
ತ್ಯಜಿಸಿಹನಾತಿಂದ್ರಿಯ ವೈರಿ! (ಇ)
-ಬ್ರರಸಿಯರಾತ ಬ್ರಹ್ಮಚಾರಿ! (ಬ್ರ)
-ಹ್ಮಕುಲಕೆಲ್ಲಾ ಏತ ಮಾದರಿ!
ಚಾಣಾಕ್ಷನಿವ ಲೊಕೋಪಕಾರಿ! (ಇ)
-ರಿ, ನಿರಂಜನಾದಿತ್ಯಗಾಗಿರಿ!!!

ನಿರಂಜನ ನಿರಂಜನ ನಿರಂಜನ!   2(733)

ರಂಗುರಗಾಂರ್ಪ ಮೂರ್ತಿ ನಿರಂಜನ!
ಗದೆಲ್ಲಾ ಮಾತಾಧಾರ ನಿರಂಜನ!
ರ, ಸುರಾದಿಗಳೆಲ್ಲಾ ನಿರಂಜನ!
ನಿರ್ವಿಶೇಷ, ಸರ್ವಪೋಷ ನಿರಂಜನ!
ರಂಗನಾಥ, ಗಂಗಾನಾಥ ನಿರಂಜನ!
ನ್ಮದಾತ, ಮುಕ್ತಿದಾತ ನಿರಂಜನ!
ರನಾಥ, ಗುರುನಾಥ ನಿರಂಜನ!
ನಿಜಭಕ್ತಿ, ಸರ್ವಶಕ್ತಿ ನಿರಂಜನ!
ರಂಗನಂತರಂಗ ಲಿಂಗ ನಿರಂಜನ!
ರಾಮರಣ ವಿದೂರ ನಿರಂಜನ!
ಮೋ ನಿರಂಜನಾದಿತ್ಯ ನಿರಂಜನ!!!

ನಿರಂಜನ ಬಂದ ಮನಸಾಗಿ!   1(51)

ಕುಟೀರ ಕಟ್ಟಿದ ಮನಸಾಗಿ!
ಕೃಷಣನ ಮಾಡಿದ ಮನಸಾಗಿ!
ಭಜನೆ ಹೇಳಿದ ಮನಸಾಗಿ!
ಪೂಜಾರಿ ತಾನಾದ ಮನಸಾಗಿ!
ಪ್ರಸಾದ ಹಂಚಿದ ಮನಸಾಗಿ!
ಕಸ ಗುಡಿಸಿದ ಮನಸಾಗಿ!
ಆಸನ ಹಾಕಿದ ಮನಸಾಗಿ!
ವೈದ್ಯನೆನಿಸಿದ ಮನಸಾಗಿ!
ಮಾಂತ್ರಿಕನೆನಿಸಿದ ಮನಸಾಗಿ!
ಪೀಡೆ ಹರಿಸಿದ ಮನಸಾಗಿ!
ವಿಷ ಇಳಿಸಿದ ಮನಸಾಗಿ!
ಕುಷ್ಟ ಹರಿಸಿದ ಮನಸಾಗಿ!
ಅಂಗಿ ತೊಡಿಸಿದ ಮನಸಾಗಿ!
ಅಲ್ಲಿಲ್ಲೋಡಾಡಿದ ಮನಸಾಗಿ!
ರಂಗನೇ ತಾನಾದ ಮನಸಾಗಿ!
ಮಂಗನೂ ತಾನಾದ ಮನಸಾಗಿ!
ಆಳಿಗೆ ಆಲಾದ ಮನಸಾಗಿ!
ಹಸುಗಳಾ ತಂದ ಮನಸಾಗಿ!
ಮೇಕೆಗಳ ತಂದ ಮನಸಾಗಿ!
ಜಾಗ ಬೆಳೆಸಿದ ಮನಸಾಗಿ!
ಅಡಿಗೆ ಮಾಡಿದ ಮನಸಾಗಿ!
ಕಾಫಿ ಟೀ ಹಾಕಿದ ಮನಸಾಗಿ!
ಊಟ ಬಡಿಸಿದ ಮನಸಾಗಿ!
ತಟ್ಟೆತಾ ತೊಳೆದ ಮನಸಾಗಿ!
ಉಂಡೆಲೆ ತೆಗೆದ ಮನಸಾಗಿ!
ಗೋಮಯ ಮಾಡಿದ ಮನಸಾಗಿ!
ಹಸು ತಾ ತೊಳೆದ ಮನಸಾಗಿ!
ಹಾಲನು ಕರೆದ ಮನಸಾಗಿ!
ಮೋಸರು ಕಡೆದ ಮನಸಾಗಿ!
ಕೊಟ್ಟಿಗೆ ತೊಳೆದ ಮನಸಾಗಿ!
ಬೆರಣಿ ತಟ್ಟಿದ ಮನಸಾಗಿ!
ಕಕ್ಕಸು ತೊಳೆದ ಮನಸಾಗಿ!
ಉತ್ಸವ ಮಾಡಿದ ಮನಸಾಗಿ!
ಉತ್ಸಾಹ ತೋರಿದ ಮನಸಾಗಿ!
ಉಳುಕು ತಿಕ್ಕಿದ ಮನಸಾಗಿ!
ಬೇನೆಗೆ ನೀವಿದ ಮನಸಾಗಿ!
ಬಾವು ಬತ್ತಿದ ಮನಸಾಗಿ!
ರಸಿಗೆ ತೊಳೆದ ಮನಸಾಗಿ!
ಗಾಯ ಮಾಯಿಸಿದ ಮನಸಾಗಿ!
ವ್ಯಾಯಾಮ ಮಾಡಿದ ಮನಸಾಗಿ!
ಆಸನ ತೋರಿದ ಮನಸಾಗಿ!
ಮೂರ್ಛೆ ಬಿಡಿಸಿದ ಮನಸಾಗಿ!
ಭ್ರಮೆ ಹರಿಸಿದ ಮನಸಾಗಿ!
ತತ್ವ ಕಲಿಸಿದ ಮನಸಾಗಿ!
ಎಲ್ಲವ ಮಾಡಿದ ಮನಸಾಗಿ!
ಎಲ್ಲಾ ಸಹಿಸಿದ ಮನಸಾಗಿ!
ಎಲ್ಲಾ ಕ್ಷಮಿಸಿದ ಮನಸಗಿ!
ಎಲ್ಲಾ ತ್ಯಜಿಸಿದ ಮನಸಾಗಿ!
ತಾಪಸಿ ತಾನಾದ ಮನಸಾಗಿ!

ನಿರಂಜನ ಭಾವ, ನಿರಂಜನಾದಿತ್ಯ ದೇವ!   1(286)

ರಂಗಿ ಛಾಯಾಧವ, ವಿರಾಗಿ ಗಿರಿಜಾಧವ!
ನನ, ಮರಣ ಭಾವ, ಪರಬ್ರಹ್ಮ ದೇವ!
ರನಾಗೀ ಜೀವ, ಗುರುವರನಾಗಿ ದೇವ!
ಭಾವಿಕ ಮಹಾನುಭಾವ ಆ ಶ್ರೀ ಗುಹದೇವ!
ಸನಶನಕನಾಸಕ್ತಾವಧೂತ ದೇವ!
ನಿರ್ವಿಕಾರ, ನಿರಾಮಯ ಗುಣಾತೀತ ದೇವ!
ರಂಗ, ನಿರಂಜನ ಭಜನಾನಂದನುಭಾವ! (ಅ)
-ಜ, ಹರಿ, ಹರ ಭೇದ ಹರಿದಭೇದ ಭವ!
ನಾನಾ ಜಾತಿ, ಮತ ಸಮನ್ವಯಕೀತ ದೇವ!
ದಿನ, ರಾತ್ರಿ, ಸರ್ವಹಿತಕಾಗಿರ್ಪಾತ್ಮ ಭಾವ! (ಅ)
-ತ್ಯಪಾರ ಕರುಣಾಮೂರ್ತಿ ಶ್ರೀ ಗುರು ಸಂಜಿವ!
ದೇವದೇವ ಗುರುದೇವ ಮಹಿಮಾನುಭಾವ!
ರ ಪ್ರಸನ್ನಾತ್ಮ ನಿರಂಜನಾದಿತ್ಯ ದೇವ!!!

ನಿರಂಜನ ಮನ ನಿರಂಜನ!   4(1511)

ರಂಜಿಸುತಿಹ ತಾ ನಿಶಿದಿನ!
ನಾರ್ದನಾ ಜನುಮ ಪಾವನ!
ರ ನಾರಾಯಣಾ ಸನಾತನ!
ನಮೋಹನಾ ಮಧುಸೂದನ!
“ನ ಗುರೋರಧಿಕಂ” ಸಂಜೀವನ!
ನಿರುಪಮಾತ್ಮಾ ಸುಂದರಾನನ!
ರಂಗ ಸಾರಂಗಾ ಕಮಲಾಸನ!
ಪ, ತಪ ಸಾಧನಾ ಮೋಚನ!
ಮೋ ನಿರಂಜನಾದಿತ್ಯಾನನ!!!

ನಿರಂಜನ ರೂಪ ನಿರ್ಮಲ!   2(973)

ರಂಗನಾಥಾಕಾರ ನಿರ್ಮಲ!
ಗದೇಕ ಗುರು ನಿರ್ಮಲ!
ತಜನೋದ್ಧಾರ ನಿರ್ಮಲ!
ರೂಪ ನಾಮಾತೀತ ನಿರ್ಮಲ!
ರಮ ದಯಾಳು ನಿರ್ಮಲ!
ನಿತ್ಯ, ಸತ್ಯಮೂರ್ತಿ ನಿರ್ಮಲ! (ಧ)
-ರ್ಮ, ಕರ್ಮನಿರತ ನಿರ್ಮಲ! (ಕಾ)
-ಲ, ನಿರಂಜನಾದಿತ್ಯ ಬಾಲ!!!

ನಿರಂಜನ ಶಿವ ಲಿಂಗ!   1(146)

ರಂಜಿಸುವೊಡಲಾ ಲಿಂಗ!
ಯ! ವಿಜಯಗಾ ಲಿಂಗ!
ಯನಾನಂದಕಾ ಲಿಂಗ!
ಶಿವ ಸನ್ನಿಧಿಯಾ ಲಿಂಗ!
ರ ತೇಜಸ್ವಿಯಾ ಲಿಂಗ!
ಲಿಂಪಿಸಿದೆ ಭಸ್ಮಾ ಲಿಂಗ!
ತಿ “ನಿರಂಜನ” ಲಿಂಗ!

ನಿರಂಜನ ಶಿವನಯ್ಯಾ!   4(1507)

ರಂಗನಾಥ ಪ್ರಿಯನಯ್ಯಾ!
ಗದ್ಗುರು ಅವನಯ್ಯಾ!
ರಹರಿ ಸದೃಶಯ್ಯಾ!
ಶಿಖಿವಾಹನವನಯ್ಯಾ?
ರ ಗಣನಾಯಕಯ್ಯಾ!
ರ ನಾರಾಯಣಾತಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಯ್ಯಾ!!!

ನಿರಂಜನ ಷಷ್ಟಿ ವಿಜಯೇಷ್ಟಿ!   1(59)

ರಂಗ ಸಾರಂಗೇಷ್ತಿ ಸಂಘ ಪುಷ್ಟಿ!
ಜಗತ್ಕಲ್ಯಾಣೇಷ್ಟಿ ಭಾಗ್ಯ ವೃಷ್ತಿ!
ನತಜನರೇಷ್ಟಿ ಭೂತ ತುಸ್ಟಿ!
ಷಡ್ಭುಜನಾಪ್ತೇಷ್ಟಿ ಜಯ ದಿಷ್ಟಿ!
(ಇ) -ಷ್ಟಿ ವಿಮಲೇಷ್ಟಿ ನಿರಂಜನೇಷ್ಟಿ!!!

ನಿರಂಜನ ಸದಾಶಿವನಾಗಿಹನು   1(6)

ರಂಗಾಂಗ ಸಾರಂಗ ಪ್ರಿಯನಾಗಿಹನು!
ಗದಲಿದ್ದು ತಾ ಇಲ್ಲದಂತಿಹನು!
ನ್ನದೆಂಬುದು ಇಲ್ಲದಿರುತಿಹನು!
ಹಜದಲಿ ಸದಾ ತಾನಿದ್ದಿಹನು!
ದಾತನನಾಥರಿಗೆ ನಾಥ ತಾನಾಗಿಹನು!
ಶಿವನಾದರು ಭವಿಯಂತೆ ತಾನಿಹನು!
ರ ಗುರುಭಕ್ತನಾಗಿರುತಿಹನು!
ನಾನಾರೆಂಬುದರಿತವನಾಗಿಹನು!
ಗಿರಿಜಾರಮಣ ಪ್ರಿಯನಾಗಿಹನು!
ರಿ ಹರ ಅಜರೊಂದೆನುತಿಹನು!
ನುಡಿ ಏಕೆ? ನಿರಂಜನನಾಗಿಹನು!!!

ನಿರಂಜನಗಿದು ಶ್ಯಾವಿಗೆ ಪಾಯಸ!   1(102)

ರಂಗ ಸಾರಂಗನೀವ ಕಿರಣರಸ!
ನನ, ಮರಣ ದೂರಮರ ರಸ!
ರ, ನಾಡಿಗಳಿಗಿದು ಶಕ್ಕಿ ರಸ!
ಗಿರಿಜೆ ಸವಿದ ದಿವ್ಯ ರಾಮ ರಸ!
ದುರ್ಮದ ಮರ್ದನ ಧರ್ನ, ಕರ್ಮ ರಸ!
ಶ್ಯಾಮಮೋಹನನ ವೇಣುಗಾನ ರಸ!
ವಿಷಹರ ಪಂಚಾಕ್ಷರಿ ಮಂತ್ರ ರಸ!
ಗೆಳೆತನದ ಆದಿತ್ಯಾಂಬುಜ ರಸ!
ಪಾರ್ಥಸಾರಥಿಯ ಗೀತಾಮೃತ ರಸ!
ದುವೀರನ ಸುದರ್ಶನಾಪ್ತ ರಸ!
ವೇಶ ನಿರಂಜನಾದಿತ್ಯೇಕ ರಸ!!!

ನಿರಂಜನಗೀಗ ನಿತ್ಯ ಕರ್ಪೂರಾರತಿ!   1(48)

ರಂಗಿಲ್ಲದಂಗಿಗಾಗುತಿದೆ ಈಗಾರತಿ!
ರಾಂಗಿಗಾಗುತಿದೆ ನಾಗರತ್ನಾರತಿ!
ಶ್ವರವಿದಕೇಕಿದೆಂದರೀ ಆರತಿ!
ಗೀತೆ, ಭಜನೆಗಳಿಲ್ಲದಿದಕಾರತಿ!
ಜ, ತುರಗಗಳಿಲ್ಲದಿದ್ದಾರತಿ!
ನಿಜ ಗುಣ ತೋರದ ಇದಕೆ ಆರತಿ!
ತ್ಯಜಿಸಿದನೆಂದರೆ ಕರ್ಪೂರಾರತಿ!
ಷ್ಟ ಕಳೆಯಲಿದರಿಂದೆಂದಾರತಿ (ಇ)
-ರ್ಪೂರ ಗೃಹಿಣಿಗಿದಾನಂದದ ಆರತಿ
ರಾತ್ರಿ ನಿತ್ಯದಲಾಗುತಿದೆ ಈ ಆರತಿ!
ತ್ನದಾರತಿ ನಿತ್ಯ ನಿರಂಜನಾರತಿ!
ತಿರುಕನಿಗಿದೊಂದು ನಿರಂಜನಾರತಿ!

ನಿರಂಜನನ ಕಂಡಿರೇನಪ್ಪಾ?   1(123)

ರಂಜಿಪನಾ ಮಂಟಪದಲಿಪ್ಪಾ!
ಗಳ ಮಾಡದಿರಬೇಕಪ್ಪಾ!
“ನ ಗುರೋರಧಿಕಂ” ನಂಬಿರಪ್ಪಾ!
ಗುನಗುತ ಭಜಿಸಿರಪ್ಪಾ!
ಕಂಗೆಡದಿರಿ ನಾನಿಲ್ಲೆಂದಪ್ಪಾ! (ಅ)
-ಡಿಯಡಿ ಸದಾನಿದ್ದಿಹೆನಪ್ಪಾ!
ರೇಚಕ ಪೂರಕಾಂತರ್ಗತಪ್ಪಾ! (ಅ)
-ನವರತ ಪಾಡಿ ಕುಣೀರಪ್ಪಾ! (ಅ)
ಪ್ಪಾ! ನಿರಂಜನಾದಿತ್ಯ ದತ್ತಪ್ಪಾ!!!

ನಿರಂಜನನ ಗ್ರಹ ಗುಣ ಚಕ್ರ   1(34)

ನ್ನಪೂರ್ಣೋಪಾಸಕ ಬ್ರಹ್ಮ ಕುಲೋದ್ಧವ ಶ್ರೀ ನಿರಂಜನ!
ದಿತ್ಯಾಂಶ ಸಂಭೊತನಾದೀತ ಕಾಶ್ಯಪೇಯ ನಿರಂಜನ!
ವ ಸರಸ್ವತಿಗೆ ಸೋಮ ಪ್ರದೋಷ ಫಲ ನಿರಂಜನ!
ತ ಪರಮೇಶ್ವರ ಶರ್ಮನ ತನುಜಾತ ನಿರಂಜನ!
ದ್ಯೋಗ ಬೇಡಾಯ್ತಿವನುತ್ತಮ ವಿದ್ಯಾವಂತ ನಿರಂಜನ!
ರೂರಲೆಯುತಲೇರಿದನು ಹಿಮಗಿರಿ ನಿರಂಜನ!
ಗಾದಿ ವೇದವೇದಾಂತಿ ಶಿವಗುರು ಪುತ್ರ ನಿರಂಜನ!
ಆಕ್ಷ ಮೊದಲಾದ ಮತದವರೆಲ್ಲರಾಪ್ತ ನಿರಂಜನ!
ಲ್ಲರ ಬೆರೆಯದೆ ಎಲ್ಲವನರಿತವ ನಿರಂಜನ!
ಕಿಲ್ಲಿನ್ನಿರಲೆನ್ನುತ ಬಂದನು ಮಂಡ್ಯಕೆ ನಿರಂಜನ!
ಹಿಕ ಖಂಡನ ದೈನಿಕ ಮಂಡನ ಗುರು ನಿರಂಜನ!
ಲಿದಉ ವಿಮಲಗೆ ತೊಳೆದೀ ಮಲವನು ನಿರಂಜನ!
ಜಸ್ಸುಳ್ಳವ, ತೇಜಸ್ಸುಳ್ಳೆಲ್ಲವ ಬಲ್ಲವ ನಿರಂಜನ!
ದುಂಬರ ತಲವಸಿ, ರೋಗಕ್ಕೆಲ್ಲಾ ವಿನಾಶಿ ನಿರಂಜನ!
ಅಂಬರವಿಲ್ಲದ ದಿಗಂಬರ ತಾನೇ ತಾ ಶ್ರೀ ನಿರಂಜನ!
ಅಃಸ್ವರಕಂತ್ಯಾಕ್ಷರ ಇವ ಲೋಕಾಂತೇಶ್ವರ ನಿರಂಜನ!
ಕ್ಕಸವೆನ್ನುವ ಮತಿಗಾ ಕಕ್ಕಸ ಕರ್ಮಿ ನಿರಂಜನ!
ಂಡಾವಿಲ್ಲದಖಂಡ ರೂಪನು ಶ್ರೀಗುರು ನಿರಂಜನ!
ತಿ, ಚ್ಯುತಿಗಳುಕದ ನಿಜ ಮತಿದಾತ ನಿರಂಜನ!
ರ್ಘರ ಮುದ್ರೆಯ ತೆಗೆದಮೃತವಿತ್ತನು ನಿರಂಜನ!
ಕಾರಕಗೋಚರ ಅನಂತ ರೂಪನಿವ ನಿರಂಜನ!
ರ್ಪಟರನ್ನು ಛಿದ್ರಗೈದ ಸಹನಾಮೂರ್ತಿ ನಿರಂಜನ!
ಛುದೋಲಯದಿಂದ ಬರೆಯಲು ಕಲಿಸಿದ ನಿರಂಜನ!
ನಗಣ ಮಂಗಳದಾಯಕ ಮಂಗಳಾಂಗ ನಿರಂಜನ!
ಣಝಣ ತಾಳದಿ ಭಜನೆಯ ಬೋಧಿಪ ನಿರಂಜನ!
ಕಾರವಲ್ಲದ ತಾ ಪರಬ್ರಹ್ಮನಂತಿಹ ನಿರಂಜನ!
ಕ್ಟಕ್ಕೆಂದೆಬ್ಬಿಸಿ ನಿತ್ಯ ನೇಮದೊಳಿಟ್ತವ ನಿರಂಜನ!
ಕ್ಕರ ಠಉಳರ ಚೊಕ್ಕಟ ಮಾಡುವ ಗುರು ನಿರಂಜನ!
ಂಕಾನಂದಾ ಡಮರುಗ ಹಸ್ತಾ ಕಾಪಾಲಿಕಾ ನಿರಂಜನ!
ಣಢಣ ಡೋಲಿಗೆ ಭಕ್ತರ ಕುಣಿಸಿದ ನಿರಂಜನ!
, ನಕಾರದ ಭೇದವನಳಿದ ನಿರ್ವಿಕಾರ ನಿರಂಜನ!
ರಣಿಯ ತಾಪದಿ ತಪವನು ಗೈದವ ನಿರಂಜನ!
ಳಥಳ ಹೊಳೆದಾ ದೇಹಭ್ರಾಂತಿಯ ಸುಟ್ತವ ನಿರಂಜನ!
ರ್ಪ ದಂಭ ರಹಿತುದಾತ್ತ ಸೇವಾನಿರತ ನಿರಂಜನ!
ನಔಷದನ್ನ, ವದನ ದೀನರಿಗಿತ್ತನು ನಿರಂಜನ!
”ನ ಚಲತಿ ತೃಣ ತೇನವಿನಾ” ನಂಬಿಕೆಯ ನಿರಂಜನ!
ಶುಪಾಲನಾದರ್ಶ ರೀತಿಯ ಕಲಿಸಿದ ನಿರಂಜನ!
ಲಕಾರಿ ಸಂಕಿರ್ತನೆಯ ದಾರಿಯೆಂದನು ನಿರಂಜನ!
ರದಿರೆ ಗುರುಶಿವ ಭಾವಾತೀತಾದವ ನಿರಂಜನ
ಜಿಸುತ ಬಾಳುವೆ ಬಾ ಬೇಗ ಬಾರೆಂದನು ನಿರಂಜನ!
ದುವೆ ಮುಂಜಿ ಭಜನೆಲಿ ಮಾಡಿರೆಂದವ ನಿರಂಜನ!
ತಿಗಣ ಪ್ರಾಸ ಗುರು ಪ್ರಸಾದದಿಂದೆಂದ ನಿರಂಜನ!
”ರಕ್ಷಮಾಂ ನಿರಂಜನ!’’ ತನ್ನ ತಾನೇ ಪ್ರಾರ್ಥಿಪ ನಿರಂಜನ!
ಯಗೊಳಲೀ ಮನ ಶಿರ

ಪಾದದಲೆನ್ನುವ ನಿರಂಜನ!
ಸ್ತು, ವಾಹನ, ಸಂಘ ಶಾಂತಿಭಂಗವೆಂದನು ನಿರಂಜನ!
ರಣಾಗತನಾನು, ಪೊರೆವಾತ ನೀನೆಂದ ನಿರಂಜನ!
ಡಂಗ ಯೋಗ ಸಿದ್ಧ, ನೀನುದ್ಧಾರ ಮಾಡೆಂದ ನಿರಂಜನ!
ರ್ವನಾಮ ರೂಪಗಳಿಗಾಧಾರ ನೀನೆಂದ ನಿರಂಜನ!
ರಡಿದನು ಸರ್ವ ನಾಮ ಸಂಕೀರ್ತನೆ ನಿರಂಜನ!
, ಲ ಅಭೇದವದರಿಂ ಳಯ ಸ್ಥಿತಾನೆಂದ ನಿರಂಜನ!
ಕ್ಷಣಾ ಯುಗವಾಗುವುದು ಆಸೆಗಳಿಂದೆಂದ ನಿರಂಜನ!
ಜ್ಞಪ್ತಿ ಚಿತ್ತಾಗನ್ವರ್ಥ ವಿಮಲ ನೀನಾಗೆಂದ ನಿರಂಜನ!
”ಣ” ಆದ್ಯಕ್ಷರದ ನಾಮವೊಂದೆನಗಿಲ್ಲೆಂದ ನಿರಂಜನ!

ನಿರಂಜನನ ಪೂಜಾರಿ ಕೃಷ್ಣನಮ್ಮಾ!   2(454)

ರಂಗನ ಭಕ್ತಿ, ವಿಶ್ವಾಸಚಲಮ್ಮಾ!
ಗದ್ವಂದ್ಯ ಕೃಷ್ಣನದರಿಂದಲಮ್ಮಾ
ಯ, ವಿನಯದಲಿ ಆದರ್ಶನಮ್ಮಾ!
ಗು, ನಗುತ ಮಾಡುವ ಕರ್ಮವಮ್ಮಾ!
ಪೂಜೆ ಕುಚೇಲನಿಗಾಸಕ್ತಿಯಿಂದಮ್ಮಾ!
ಜಾದುಗಾರನಿವನೆಂದನ್ನಲೇಕಮ್ಮಾ? (ಅ)
-ರಿತರಿವನಂತರಂಗ ಧನ್ಯರಮ್ಮಾ!
ಕೃಷ್ಣಾ! ಕೃಪೆ ಮಾಡೆನುತಿರ ಬೇಕಮ್ಮಾ! (ಉ)
-ಷ್ಣ ಶೀತಗಳಿವನಿಗಲಕ್ಷ್ಯವಮ್ಮಾ! (ಅ)
-ನವರತ ನಿರಂಜನ ಜಪವಮ್ಮಾ! (ಅ)
-ಮ್ಮಾ! ಸಾರೂಪ್ಯ ನಿರಂಜನಾದಿತ್ಯನಮ್ಮಾ!!!

ನಿರಂಜನನರ್ವತ್ತೆರಡು!   2(810)

ರಂಗನಾಥನಡಿಯೇ ಬೀಡು!
ನ್ಮ ಸಾಪಲ್ಯದ ಮಾರ್ಪಾಡು!
‘ನ ಗುರೋರಧಿಕೆಂ ಬ’ ಪಾಡು!
-ನಕರ ಸಾಕ್ಷಿದಕೆ ನೋಡು! (ಗ)
-ರ್ವ ಬಿಟ್ಟವನ ಒಡನಾಡು! (ಎ)
-ತ್ತೆತ್ತವನ ಭಜನೆ ಮಾಡು!
‘ರಘುಪತಿ ರಾಘವ’ ಹಾಡು! (ಹಾ)
-ಡು ನಿರಂಜನಾದಿತ್ಯೆಂದಾಡು!!!

ನಿರಂಜನನಾ ಸಂಜೀವನಾ!   4(1664)

ರಂಗನಾಥಾನಂಗಪಿತನಾ!
ರಾ, ಜನ್ಮ ದುಃಖಾತೀತನಾ!
ರನಾರಾಯಣರೂಪನಾ!
ನಾದ ಬ್ರಹ್ಮಾನಂದಾಧಿಪನಾ!
ಸಂಧ್ಯಾವಂದನಾನಂದಾತ್ಮನಾ!
ಜೀವ, ದೇವ ಭಾವೈಕ್ಯಾತ್ಮನಾ! (ಭ)
-ವರೋಗವೈದ್ಯನೆಂಬೆನು ನಾ! (ನೀ)
-ನಾದ ನಿರಂಜನಾದಿತ್ಯನಾ!!!

ನಿರಂಜನನಾರೆಂದರಿತ ರಾಮಯ್ಯ ತಾತ!   1(17)

ರಂಗು ವಸ್ತ್ರದ ಕಾವಿಯಂಗಿಯವನಿವನಲ್ಲೆಂದ ತಾತ!
ಗದುದ್ಧಾರಕಾಗಿ ಬಂದಿರುವ ಜಗತ್ಪತಿಯೆಂದ ತಾತ!
ಮಿಸಿದರೆ ನಮಿಸಿ, ಪೂಜಿಸಿರಿವನನೆಂದ, ತಾತ!
ನಾನಿವನ ಆಳವನಲೆಯಲಸಮರ್ಥನೆಂದ, ತಾತ!
ರೆಂಬೆ ಕೊಂಬೆ ಚಿಗುರೆಲೆಗಳಲೂ ವ್ಯಾಪಿಸಿಹನೆಂದ, ತಾತ!
ತ್ತ ಗುರು ಪರಮ ಪೂಜ್ಯ ಅವಧೂತನಿವನೆಂದ, ತಾತ!
ರಿಪುಗಳಾರಿವಗೆದುರು? ಈತನ ರೀತಿ ವಿಚಿತ್ರವೆಂದ, ತಾತ!
ಬ್ಬಲಿಗಳನಬ್ಬೆಯ ತೆರದಿ ತಬ್ಬಿಕೊಳ್ಳುವ ಕರುಣಾಳುವೆಂದ, ತಾತ!
ರಾ

ಯ್ಯ
ತಾನು, ತನ್ನದೆಂಬಹಂಕಾರವಿವನಲೆಳ್ಳಷ್ಟಿಲ್ಲೆಂದ, ತಾತ!
ನ್ನಿಷ್ಟದೇವನಿವನೆಂದಿವನ ಘಟ ಸಹಿತ ಮುಕ್ತನಾದ ತಾತ!!!
ಅಥವಾ
ಶಿವೈಕ್ಯನಾದ

ನಿರಂಜನನೆಲ್ಲರಲಿರುವ ಗುರುದೇವ!   1(3)

ರಂಗನಾಗನಂಗನಾಗನಂತ ರೂಪಿಯಾಗಿಹನು!
ಜಯಂತ್ಯುತ್ತವಗಳುವನಿಗೆ ನಿತ್ಯ ನಿಜಾನಂದ!
ನಡೆಯುತಿದೆ ಅವನ ಲೀಲಾನಾಟಕ ಬಹು ಮುಖದಿ!
ನಾಯಕನಾಗಿ ನಾಯಕಿಯಾಗಿ ನಾನಾ ಪಾತ್ರನಾಗಿಹನು!
ರುಚಿಸುವುದೀ ನಾಟಕ ಸರ್ವಂ ಬ್ರಹ್ಮವಾದವಗೆ!
ದರ್ಶನವಿದಕಿಅಂತಿನ್ಯಾವ ದರ್ಶನವೂ ಬೇರಿಲ್ಲ!
ಶುಭೋ ಶಂಕರ ಗುರೀಶಾ ಶಿವ ನಿರಂಜನೇಶ್ವರ ಮಂಗಳಂ!

ನಿರಂಜನಾಂದ ವನಮಾಲಾ!   1(68)

ರಂಜಿಪನಿದರಿಂದ ಗೋಪಾಲಾ!
ಲಜಭವಗೆ ಜಾಜಿಮಾಲಾ!
ನಾರದನಿಗಿದು ನಾಮಮಾಲಾ!
ನಂಜುಂಡನಿಗಿದು ಬಿಲ್ವಮಾಲಾ!
ತ್ತನಿಗಿದು ತುಳಸಿ ಮಾಲಾ!
ನಜೆಗಿದು ಕಮಲ ಮಾಲಾ!
ಗಜೆಗಿದು ಚಂಪಕ ಮಾಲಾ!
ಮಾತಂಗಿಗಿದು ಮಲ್ಲಿಕಾಮಾಲೆ!
ಲಾಭವಿದೆಲ್ಲರ ಪ್ರೇಮ ಮಾಲಾ!!!

ನಿರಂಜನಾತ್ಯಾನಂದ ವಿಜಯ!   1(5)

ರಂಗುರಂಗಾಗೆ ಶೋಬಿಪ ವಿಜಯ!
ನ್ಮ ಸಫಲಾಯ್ತೆನ್ನುವ ವಿಜಯ!
ನಾಲ್ದೆಸೆಗು ಹರಡಿದ ವಿಜಯ!
ದಿನಮಣಿ ಶಾಂತಿ ತಂದ ವಿಜಯ!
ತ್ಯಾಗೀಶಗಾನಂದ ವಿತ್ತ ವಿಜಯ!
ನಂಬುಗೆಗಿಂಬು ದುರೆತ ವಿಜಯ!
ತ್ತ ನಿರಂಜನನೆಂದ ವಿಜಯ!
ವಿದಿ ವಿಲಾಸವರಿತ ವಿಜಯ!
ಯ ಗುರುಪದಕ್ಕೆಂದ ವಿಜಯ!
ಂಮ ನಿರಂಜನಾದಿತ್ತ ವಿಜಯ!

ನಿರಂಜನಾದಿತ್ಯ ಕಿರಣ ನಾಮಕರಣ!   5(2785)

ರಂಗನಾಥನಿಗಿದು ಪಂಡಿತರಾಭರಣ!
ನಜೀವನಕ್ಕಿದರಗತ್ಯಸಾಧಾರಣ!
ನಾನಾ ಪಂಥಗಳಿಗಿದೊಳ್ಳೇ ವಾತಾವರಣ!
ದಿಕ್ಕುದಿಕ್ಕುಗಳಲ್ಲೂ ಆಗಬೇಕೀ ಧಾರಣ!
ತ್ಯಜಿಸದಿದ್ದರೆ ದ್ವೇಷ ಮೆಚ್ಚ ಮಾರಮಣ!
ಕಿನ್ನರಿಜೋಗಿಯಿಂದಾಯ್ತಿಲಿಗಳ ಮರಣ!
ಕ್ಕಸರ ನಾಶಕ್ಕವರ ಗುಣ ಕಾರಣ! (ಗ)
-ಣರಾಜ್ಯದಲ್ಲಾಗಬೇಕೀಗ ಶುದ್ಧೀಕರಣ!
ನಾಳೆಗೆಂದರಾಗುವುದಿಂದು ಪ್ರಾಣಹರಣ!
ಡದಿ, ಮಕ್ಕಳಾಸೆಯಿಂದಾಗಿದೆ ನಿತ್ರಾಣ!
ರ್ಮ ಶುದ್ಧನಿಗೆ ತಗಲದು ರಾಮಬಾಣ! (ವ)
-ರ ವಿಭೀಷಣನ ದಾರಿ ಹಿಡಿದವ ಜಾಣ! (ಗ)
-ಣಪ ನಿರಂಜನಾದಿತ್ಯನರಿವ ಶರಣ!!!

ನಿರಂಜನಾದಿತ್ಯ ಕಿರಣಕ್ಕೆ ಮೈಯ್ಯೊಡ್ಡು!   5(2783)

ರಂಗನಾಥಗದರಿಂದ ಹೋಯ್ತು ಮೈ ಜಡ್ಡು!
ರಾಜನ್ಮಕ್ಕೊಳಗಾಗಿಹ ನರ ಗೊಡ್ಡು!
ನಾಮಸ್ಮರಣಾನುಗ್ರಹಕ್ಕೆ ಸೆರಗೊಡ್ಡು!
ದಿವ್ಯಾತ್ಮಾನಂದ ಸುಖಕ್ಕೆ ಬೇಕಿಲ್ಲ ದುಡ್ಡು!
ತ್ಯಜಿಸಬೇಕಿರ್ಷಾಸೂಯೆ ಮಾನವ ಹೆಡ್ಡು!
ಕಿರುಕುಳವಿತ್ತರೆ ನಾಶ ಕಣ್ಣು ಗುಡ್ಡು!
ಮಣನಿಂದಾಗ ಸಿಗದು ಸಿಹಿ ಲಡ್ಡು! (ಗ)
-ಣಪತಿಯ ಪ್ರಸಾದಕ್ಕೆ ಸದಾ ಕೈಯೊಡ್ಡು! (ಬೆ)
-ಕ್ಕೆಯೆಂಬುದದೊಂದು ಜನ್ಮಜನ್ಮದ ಜಡ್ಡು!
ಮೈ, ಕೈ ತೊಳೆದ ಮಾತ್ರಕ್ಕೆ ಹೋಗದಾ ಜಿಡ್ಡು! (ಹೊ)
-ಯ್ಯೊಳಗೆ ಜ್ಞಾನಾಮೃತಾ ಮೇಲೆ ಪಣವೊಡ್ಡು! (ಒ)
-ಡ್ಡು! ನಿರಂಜನಾದಿತ್ಯಾನಂದಕ್ಕೆದೆಯೊಡ್ಡು!!!

ನಿರಂಜನಾದಿತ್ಯ ಕಿರಣವೆಲ್ಲಕ್ಕೂ ಬೇಕು!   6(4063)

ರಂಗುರಂಗಿನ ಹೂಗಳಿಗದಿರಬೇಕು!
ಲವ ಬತ್ತಿಸಿ ಮೋಡ ಮಾಡಲದು ಬೇಕು!
ನಾಮ, ರೂಪಾದಿಗಳ ನಿರ್ಮಾಣಕ್ಕದು ಬೇಕು!
ದಿವ್ಯ ಜ್ಞನೋದಯವಾಗಲಿಕ್ಕದಿರಬೇಕು!
ತ್ಯಜಿಸಲು ಸ್ವಾರ್ಥವನ್ನದರಾದರ್ಶ ಬೇಕು!
ಕಿವಿ, ಬಾ

ಮುಚ್ಚಿಚ್ಛೆಯಿಲ್ಲದಿರ್ಲಿಕ್ಕದಿರ್ಬೇಕು!
ಕ್ಕಸರ ಸೊಕ್ಕಡಗಿಸಲಿಕ್ಕದು ಬೇಕು! (ತೃ)
-ಣ ಸಮಾನ ಹಣವೆಂದರಿಯಲದಿರ್ಬೇಕು!
ವೆಸನಗಳ ನಾಶಕ್ಕದರ ಸ್ಪರ್ಶ ಬೇಕು! (ಎ)
-ಲ್ಲರನ್ನೂ ಮಲ್ಲರನ್ನಾಗಿಸಲದಿರ ಬೇಕು! (ಹ)
-ಕ್ಕೂರ್ಜಿತಗೊಳಿಸ್ಯದೇ ತಾನಾಗ್ಲಿಕ್ಕದು ಬೇಕು!
ಬೇಕಾದದ್ದಾದ ಮೇಲಿನ್ನೇನು ಬೇಕೆನ ಬೇಕು!
ಕುಲ ತಿಲಕ ನಿರಂಜನಾದಿತ್ಯನೆನಬೇಕು!!!

ನಿರಂಜನಾದಿತ್ಯ ಕಿರಣಾಮೃತ!   5(2921)

ರಂಗುರಂಗಿನಂಗಿಗಳ್ಗೀ ಅಮೃತ!
ಪ, ತಪ ಸಾಧನೆಗೀ ಅಮೃತ!
ನಾರಾಯಣನಾಗಲಿಕ್ಕೀ ಅಮೃತ!
ದಿನ, ರಾತ್ರಿ ಕುಡಿಯ್ಬೇಕೀ ಅಮೃತ!
ತ್ಯಜಿಸಲ್ಕಾಮ, ಕ್ರೋಧವೀ ಅಮೃತ!
ಕಿವಿ, ಬಾಯ್ಕಣ್ಣು ಶುದ್ಧಕ್ಕೀ ಅಮೃತ!
ಘುರಾಮ ಚೈತನ್ಯವೀ ಅಮೃತ! (ಗ)
-ಣಾಧಿಪತಿಗಚ್ಚುಮೆಚ್ಚೀ ಅಮೃತ!
ಮೃತ್ಯುಂಜಯನಾನಂದವೀ ಅಮೃತ! (ಸಂ)
-ತಸಕ್ಕೆ ಶ್ರೀ ನಿರಂಜನಾದಿತ್ಯಾ ಅಮೃತ!!!

ನಿರಂಜನಾದಿತ್ಯ ಗುರುದತ್ತ ನಾನೇ!   1(119)

ರಂಗುರಂಗಾಗಿರುವುದೆಲ್ಲಾ ನಾ ತಾನೇ!
ಡ ದೇಹಕ್ಕಾಗಾನಿಲ್ಲ ನಿಜ ತಾನೇ!
ನಾನಿರುವುದಕಾಗಿ ಅದಿದೆ ತಾನೇ
ದಿಟವಿದ ಮರೆಯಬಾರದು ತಾನೇ!
ತ್ಯಜಿಸಿದರಿದ ದುಃಖವಿಲ್ಲ ತಾನೇ!
ಗುರಿಯಲಿರುವುದು ಪ್ರಾಮುಕ್ಯ ತಾನೇ!
ರುಚಿ, ವಿಷಯದಿಂದಟ್ಟಬೇಕು ತಾನೇ!
ಯಾನುಗ್ರಹವಿದಾಗಬೇಕು ತಾನೇ! (ಎ)
-ತ್ತ, ನಾನತ್ತಿತ್ತೊಡಾಡಬೇಕಿಲ್ಲ ತಾನೇ!
ನಾನೇಮ, ನಿಷ್ಠ ನಿರಂಜನಾದಿತ್ಯ ತಾನೇ!!!

ನಿರಂಜನಾದಿತ್ಯ ಛಂದೋ ವಚನ!   4(1980)

ರಂಜಿಪುದಿದು ವಿಚಾರಿಯ ಮನ!
ರಾ, ಜನ್ಮ, ದುಃಖ ಶೀಘ್ರ ಶಮನ!
ನಾರಾಯಣಾನುಗ್ರಹಾ ಸಂಜೀವನ!
ದಿನ, ರಾತ್ರಿ, ಮಾಡಬೇಕು ಮನನ! (ಸ)
-ತ್ಯಜ್ಞಾನಾನಂದ ಪರಮ ಪಾವನ!
ಛಂದಸ್ಸಿನಲ್ಲಿದಪೂರ್ವ ಸಾಧನ!
ದೋಷವೆಣಿಸದಾಗಲಿ ಸೇವನ!
ರಗುರುಕೃಪಾಶೀರ್ವಾದಾಂಜನ!
ರಾಚರಾತ್ಮ ತಾನೆಂಬಾಶ್ವಾಸನ!
ಮೋ ಶ್ರೀ ನಿರಂಜನಾದಿತ್ಯಾನನ!!!

ನಿರಂಜನಾದಿತ್ಯ ತತ್ವ ಮತ!   2(760)

ರಂಜನಾ ವಿಷಯ ತ್ಯಾಗಾರಾಮ!
ಗಕಗತ್ಯವೀ ಶಾಂತಿ ತತ್ವ!
ನಾನು, ನೀನೆಂಬುದಿಲ್ಲದ ಮತ!
ದಿವ್ಯ ನಾಮಜಪದಕಗತ್ಯ! (ಸ)
-ತ್ಯ, ನಿತ್ಯ, ಮುಕ್ತಿಯಮರ ನದಿ!
ನು, ಮನ, ತಾನಲ್ಲೆಂಬ ಜ್ಞಾನಾ!
ತ್ವಮೇವ ಸರ್ವಮೆಂಬುದು ನಿಜ!
ಹಿಮಾನುಭವಾನಂದ ಕರಂ!
‘ತತ್ತ್ವಂ’ ನಿರಂಜನಾದಿತ್ಯ ಮೌನಿ!!!

ನಿರಂಜನಾದಿತ್ಯ ತತ್ವ ಮತ!   2(769)

ರಂಜನಾ ವಿಷಯ ತ್ಯಾಗಮತ!
ಗಕಗತ್ಯವೀ ಶಾಂತಿ ಮತ!
ನಾನು, ನೀನೆಂಬುದಿಲ್ಲದ ಮತ!
ದಿವ್ಯನಾಮ ನೆನಪಿನ ಮತ! (ಸ)
-ತ್ಯ, ನಿತ್ಯ ಮುಕ್ತಿಯಮೃತ ಮತ!
ನು, ಮನ ತಾನಲ್ಲೆಂಬ ಮತ!
ತ್ವಮೇವ ಸರ್ವಮೆಂಬಾಪ್ತ ಮತ!
ಹಿಮಾನುಭವಕಪ್ಪ ಮತ!
‘ತತ್ವಂ’ ನಿರಂಜನಾದಿತ್ಯ ಮತ!!!

ನಿರಂಜನಾದಿತ್ಯ ನಿಲಯ!   2(715)

ರಂಗನಾಥನಿಷ್ಟ ನಿಲಯ!
ಗಳವಿಲ್ಲದ ನಿಲಯ!
ನಾಮ ಸ್ಮರಣೆಯ ನಿಲಯ!
ದಿವ್ಯ ಜೀವನದ ನಿಲಯ! [ಸ]
-ತ್ಯ, ಧರ್ಮ, ಕರ್ಮದ ನಿಲಯ!
ನಿಸ್ಸಂಘ, ನಿರ್ಮೋಹ ನಿಲಯ!
ಕ್ಷ್ಯಾತ್ಮ ಶಾಂತಿಯ ನಿಲಯ! [ಪ್ರಿ]
-ಯ, ನಿರಂಜನಾದಿತ್ಯಾಲಯ!!!

ನಿರಂಜನಾದಿತ್ಯ ನಿಲಯದಲೇನು ವಿಶೇಷ?   1(392)

ರಂಗಿನ ನಿರಂಜನನ ಚಿತ್ರವೊಂದು ವಿಶೆಷ!
ನರಿಗಾತಿಥ್ಯವಿನ್ನೊಂದು ಸತತ ವಿಶೆಷ!
ನಾಮಸಂಕೀರ್ತನೆ ಆಗಾಗ್ಯೆ ಮತ್ತೊಂದು ವಿಶೆಷ!
ದಿನ ನೊತ್ಯೆಲ್ಲಾ ಬೆಳಿಗ್ಗೆ ಬೇಗೇಳ್ವುದು ವಿಶೆಷ! (ಅ)
-ತ್ಯಪಾರ ಭಕ್ತಿಪೂಜೆ ನಿತ್ಯಾನುಷ್ಠಾನ ವಿಶೆಷ!
ನಿರತ ನಿರ್ಮಲಾದರ್ಶ ಗುರುಸೇವೆ ವಿಶೆಷ!
ಕ್ಷದೀಪ ಹಚ್ಚುವ ಸಂಕಲ್ಪ ಬಹು ವಿಶೆಷ! (ಆ)
-ಯ, ವ್ಯಯ ಶಿವಾನಂದವೆಂಬ ಭಾವ ವಿಶೆಷ!
ತ್ತನ ಮಂತ್ರ ಸದಾ ಹೇಳುವಭ್ಯಾಸ ವಿಶೆಷ!
ಲೇಶವೂ ಬೂಟಾಟವಿಲ್ಲದಿರುವುದು ವಿಶೆಷ!
ನುಡಿಯಂತೆ ನಡೆಯುವ ದಿವ್ಯ ಗುಣ ವಿಶೆಷ!
ವಿಕಲ್ಪವೆಳ್ಳಷ್ಟಿಲ್ಲದ ಪರಮಾರ್ಥ ವಿಶೆಷ!
ಶೇಷವಿಲ್ಲದ ಪೂರ್ಣಾದರೋಪಚಾರ ವಿಶೆಷ!
ಷ್ಠಿ ನಿರಂಜನಾದಿತ್ಯಗಾದುದತಿ ವಿಶೆಷ!!!

ನಿರಂಜನಾದಿತ್ಯ ಪಂಚಾಂಗಯೋಗ   1(93)

ಆದಿತ್ಯ ಬಂದ ನಡ್ಯೋ ಕಾಲಪ್ಪ!
ಎದಿರು ನಿಂದು ನಮ್ಸೋ ಕರಪ್ಪ!
ತೆರೆದು ನೇತ್ರ ನೋಡೋ ಕಣ್ನಪ್ಪ!
ಉಸಿರು ಕಟ್ಟಿ ಜಪ್ಸೋ ಮೂಗಪ್ಪ!
ನಿನಾದ ಕೇಳಿ ಲಯ್ಸೋ ಕರ್ಣಪ್ಪ!
ನಿಮ್ಮಪ್ಪ, ನಿರಂಜನಾದಿತ್ಯಪ್ಪ!!!

ನಿರಂಜನಾದಿತ್ಯ ಮಹಾನುಭಾವ! (ಸಾ)   1(193)

-ರಂಗೆನ್ನಂಗ ಸರ್ವಾಂಗ ಪ್ರಾದುರ್ಭಾವ!
ಗಕಿವನೊಬ್ಬನೇ ಗುರುದೇವ! (ಅ)
-ನಾದಿಮಧ್ಯಾಂತ ಹರಿ ವಾಸುದೇವ! (ಆ)
-ದಿತ್ಯನಾದಿವ್ಯಭಾವ ಸರ್ವಜೀವ! (ಅ)
-ತ್ಯಗತ್ಯ ಸೃಷ್ಟಿಗೆಲ್ಲಾಪ್ತ ಸಂಜೀವ!
ರೆಯಾದರಿವ ನಿರ್ಜೀವ ಜೀವ!
ಹಾಲಿನಂತಿಹುದು ಶಕ್ತಿಪ್ರಭಾವ! (ಅ)
-ನುಗ್ರಹದಿಂದಳಿಯ್ವುದ್ಭೇದ ಪ್ರಭಾವ!
ಭಾವ, ವಿಶ್ವಸೇವಾ ಪ್ರೇಮ ಸ್ವಭಾವ! (ಅ)
-ವನೇ, ನಿರಂಜನಾದಿತ್ಯ ಮಾಧವ!!!

ನಿರಂಜನಾದಿತ್ಯ ರಾಮದರ್ಶನವಿಂದಮ್ಮಾ!   2(544)

ರಂಜಿಸುತಿದ್ದನವ ದಿಗಂಬರನಾಗಮ್ಮಾ!
ಟಾಧಾರಿಯಾಗಿ ಕುಳಿತಿರುತಿದ್ದನಮ್ಮಾ!
ನಾನಾ ಪತ್ರ ಪುಷ್ಪಗಳಿಂದ ಪೂಜೆಯಾಯ್ತುಮ್ಮಾ!
ದಿವ್ಯ ಫಲಗಳ ಸಮರ್ಪಣೆ ಆಯಿತಮ್ಮಾ!
ತ್ಯಜಿಸಬೇಕು ಮಾಯೆಯನೆಂದನವನಮ್ಮಾ!
ರಾಮ ಭಜನೆ ಭಾವಾವೇಶದಿಂದಾಯಿತಮ್ಮಾ!
ಕ್ಕಳೆಲ್ಲರೂ ಕುಣಿದಾಡಿ ಪಾಡಿದರಮ್ಮಾ!
ಯೆಯವನದೆಲ್ಲರ ಮೇಲಪಾರವಮ್ಮಾ! (ದ)
-ರ್ಶನವಿದನನ್ಯ ಭಕ್ತಿ ಸೇವಾ ಫಲವಮ್ಮಾ!
ರಜನ್ಮ ಸಾರ್ಥಕಕ್ಕಿನ್ನೇನು ಬೇಕೆನ್ನಮ್ಮಾ! (ಗೋ)
-ವಿಂದನಿವನ ಲೀಲೆ ಬಹು ರೂಪ ಕಾಣಮ್ಮಾ!
ತ್ತನವ ಭಕ್ತವತ್ಸಲ ಗುರುದೇವಮ್ಮಾ! (ಅ)
-ಮ್ಮಾ ನಿರಂಜನಾದಿತ್ಯ ಪಟ್ಟಾಭಿರಾಮನಮ್ಮಾ!!!

ನಿರಂಜನಾದಿತ್ಯ ವಂಶೀ ರಘುವೀರ!   1(434)

ರಂಗ ಮುರಲೀಧರನೀ ರಘುವೀರ
ನಗಣ ಮನಾಧಾರ ರಘುವೀರ
ನಾಮವಿದು ವರಗುರು ರಘುವೀರ!
ದಿನ, ರಾತ್ರಿ ಜಪಾನಂದ ರಘುವೀರ! (ಅ)
-ತ್ಯಮೂಲ್ಯ ಮಾರುತಿ ಪ್ರೇಮ ರಘುವೀರ!
ವಂಶ ಪಾವನ ನಾಮವೀ ರಘುವೀರ!
ಶೀಲ, ಬಹುಲೀಲಾರಾಮ ರಘುವೀರ!
ಶಿಪತಿಪಿತ ಹರಿ ರಘುವೀರ! (“ರ)
-ಘುಪತಿ ರಾಘವ” ಮಂತ್ರ ರಘುವೀರ!
ವೀರ, ಧೀರ, ಗಂಭೀರನೀ ರಘುವೀರ
ಥಿ ನಿರಂಜನಾದಿತ್ಯ ರಘುವೀರ!!!

ನಿರಂಜನಾದಿತ್ಯ ಸಂಘ ಮನೆಮನೆಯಲ್ಲಿ!   5(2918)

ರಂಗನಾಥನವನೆಂಬ ನಂಬಿಕೆಯಿಂದಿರ್ಲಿ!
ನಸಂಘದಿಂದ ಬಹಳ ದೂರವಾಗಿರ್ಲಿ!
ನಾನಾಪಂಥಗಳಲ್ಲಿ ಆಸಕ್ತಿಯಿಲ್ಲದಿರ್ಲಿ!
ದಿವ್ಯನಾಮ ಸಂಕೀರ್ತನೆ ನಿತ್ಯ ಆಗುತ್ತಿರ್ಲಿ!
ತ್ಯಜಿಸಿ ದುಶ್ಚಟಗಳನ್ನು ಸುಖವಾಗಿರ್ಲಿ!
ಸಂದೇಹ ಗುರುವಿನಲ್ಲೆಂದೆಂದೂ ಇಲ್ಲದಿರ್ಲಿ!
ರ್ಷಣೆಗೇನೇನೂ ಅವಕಾಶವಿಲ್ಲದಿರ್ಲಿ!
ದಿರಾಸೇನೆಯನ್ನು ಯಾರೂ ಮಾಡದಿರ್ಲಿ!
ನೆರೆ ಸುಖ, ಶಾಂತಿಗಾಗಿ ಸಸ್ಯಾಹಾರವಿರ್ಲಿ!
ದ್ವೆ ಮುಂತಾದವ್ಗಳ್ನಿರಾಡಂಬರದಲ್ಲಾಗ್ಲಿ!
ನೆನಪು ಸದಾ ಸದ್ಗುರು ಚರಣದಲ್ಲಿರ್ಲಿ!
ಕ್ಷ, ರಾಕ್ಷಸ, ಪಿಶಾಚಿ ಭಯ ತಪ್ಪಿಹೋಗ್ಲಿ! (ನಿ)
-ಲ್ಲಿ ನಿರಂಜನಾದಿತ್ಯನ ನಿಮ್ಮ ಮನೆಯಲ್ಲಿ!!!

ನಿರಂಜನಾದಿತ್ಯಗರ್ವತ್ತಾರು!   5(2535)

ರಂಗನಾಥನ ಊರವನೂರು!
ಗತ್ತಿನಿಂದತಿದೂರಾ ಊರು!
ನಾನು, ನೀನೆಂಬುದಿಲ್ಲದಾ ಊರು!
ದಿವ್ಯ ಜೀವನಕ್ಕಾದರ್ಶಾ ಊರು!
ತ್ಯಜಿಸಲ್ಕೈಹಿಕ ಸುಖಾ ಊರು!
ಗನಮಣಿಗಾನಂದಾ ಊರು! (ಓ)
-ರ್ವನೇ ದೇವ ಲೋಕಕ್ಕೆಂಬುದಾ ಊರು! (ಹ)
-ತ್ತಾವತಾರಗಳೆತ್ತಿದಾ ಊರು! (ಸೇ)
-ರು ನಿರಂಜನಾದಿತ್ಯನಾ ಊರು!!!

ನಿರಂಜನಾದಿತ್ಯನ ಪೂಜೆ ನಿತ್ಯಾನಂದ!   1(285)

ರಂಗನಾಥನಲ್ಲವನಿರ್ಪ ಸದಾನಂದ!
ಗಕಾಗುದವನಿಂದ ಮಹಾನಂದ!
ನಾಗದಂಡಧರನವ ಶಂಕರಾನಂದ! (ಆ)
-ದಿತ್ಯನವನಕ್ಷಿಯಾಗಿಹ ಯೊಂಗಾನಂದ! (ಅ)
-ತ್ಯಮೂಲನಾದವನಕ್ಷಯ ಸುಖಾನಂದ!
ಭೋ ಮಂಡಲದವನ ಸ್ಥಾನಾತ್ಮಾನಂದ!
ಪೂರ್ಣನವ ಕಾಶ್ಯಪ ಕುಲ ದೀಪಾನಂದ! (ಅ)
-ಜೆ

ಯನಾದವನು ಸದಾ ವಿಜಯಾನಂದ!
ನಿಜಮತಿಯನೀವ ವಿಶ್ವ ವಂದ್ಯಾನಂದ!
ತ್ಯಾಗೀಶ, ಯೋಗೀಶ, ಶ್ರೀ ಗುರು ಶಿವಾನಂದ!
ನಂಬಿದವರಿಗಿಂಬನೀವ ಹೃದಯಾನಂದ!
ತ್ತ, ನಿರಂಜನಾದಿತ್ಯನಾಗಿರ್ಪಾನಂದ!!!

ನಿರಂಜನಾದಿತ್ಯನಲ್ಲಿಲ್ಲಿ ಅಲೆವವನಲ್ಲ!   1(257)

ರಂಗನಾಥನ ತಾನಿದ್ದಲ್ಲಿಂದ ನೋಡದೇನಿಲ್ಲ!
ನ ಮೆಚ್ಚಲಿಕಾಗಿ ಧರ್ಮ ಬಿಡುವವನಲ್ಲ!
ನಾನು ದೊಡ್ಡವನೆಂಬಹಂಕಾರವಿವನಿಗಿಲ್ಲ!
ದಿನ, ರಾತ್ರಿ ಕರ್ತವ್ಯ ಮಾಡದೆ ತಾನುಳಿದಿಲ್ಲ! (ಅ)
-ತ್ಯಗತ್ಯವೀ ಆದರ್ಶ ಸುಖಕೆಂದರೆ ತಪ್ಪಿಲ್ಲ!
ಭೋಮಮಂಡಲವೀಕ್ಷಿಸುತಿಹನು ದಿನವೆಲ್ಲ! (ಅ)
-ಲ್ಲಿರುವನೊಮ್ಮೊಮ್ಮೆ ಮೋಡ ಮುಸುಕಿನೊಳಗೆಲ್ಲ! (ಅ)
-ಲ್ಲಿಲ್ಲಿಣಿಕಿ ಉತ್ಸಾಹ ಕೊಡುವನು ಜಗಕೆಲ್ಲ!
ವನ ಕಾಣದಿದ್ದರೆ ನಿರ್ಜೀವಾಗುವರೆಲ್ಲ! (ಅ)
-ಲೆದಾಡದಿರಿ! ನಿಮಗಾಗಿಹೆನೆಂದನ್ನದಿಲ್ಲ!
ಳಗಿರುತ ಮಳೆ ಗತಿಸದೇನವನಿಲ್ಲ!
ರ ಋಷಿ ಮುನಿ ಮಾತು ಸುಳ್ಳುನುತವನಿಲ್ಲ!
ಲವಿಂದೆಲ್ಲರ ಯೋಗಕ್ಷೇಮ ನೋಡದೇನಿಲ್ಲ! (ಅ)
-ಲ್ಲಗಳೆದರವನಿಗೇನೂ ಲಾಭ ನಷ್ಟವಿಲ್ಲ!!!

ನಿರಂಜನಾದಿತ್ಯನಾಪದ್ಬಂದು!   2(477)

ರಂಗನಾಥ ಸಾಕ್ಷಿ ಇದಕಿಂದು!
ನ ಭರ್ತಿ ಗಾಡಿ ಬಂತಿದೊಂದು!
ನಾಮ ಸ್ಮರಿಸುತ್ತಿದ್ದೊಬ್ಬನೊಂದು!
ದಿಟ್ಟಿಸೆ ಚಕ್ರ ಉರುಳಿತ್ತೊಂದು! (ಅ)
-ತ್ಯತಿಶಯ ಕಂಡರೆಲ್ಲರಿಂದು!
ನಾಶವಾಗುವುದು ತಪ್ಪಿತೆಂದು!
ರವಶನಾಗಿ ಬಂದನಿಂದು! (ಸ)
-ದ್ಬಂಧ ಸದಾ ಇರಲೆಂದಾ ಬಂಧು! (ಸಾ/ಬಂ)
-ದು, ನಿರಂಜನಾದಿತ್ಯಾಪದ್ಬಂಧು!!!

ನಿರಂಜನಾದಿತ್ಯನೆಂಬವನಾರಮ್ಮಾ? (ನಿ)   3(1356)

-ರಂಜನಾನಂದ ಸರಸ್ವತಿ ಕಾಣಮ್ಮಾ!
ಗದ್ಗುರು ಶಿವಾನಂದನ ಕಂದಮ್ಮಾ!
ನಾಮ ಸಂಕೀರ್ತನಾನಂದನವನಮ್ಮಾ!
ದಿನ, ರಾತ್ರ್ಯಖಂಡ ಭಜನಾನಂದಮ್ಮಾ!
ತ್ಯಜಿಸಿದನೆಲ್ಲಾ ದತ್ತಾಜ್ಞೆಯಂತಮ್ಮಾ!
ನೆಂಟನೂ, ಭಂಟನೂ ತಾನಾಗಿಹನಮ್ಮಾ!
ಯಲಾಡಂಬರವಿಲ್ಲದವನಮ್ಮಾ!
ರ ಕರುಣಾಮೂರ್ತಿಯಾಗಿಹನಮ್ಮಾ!
ನಾಮ ರೂಪಾತೀತವನ ಸ್ಥಿತಿಯಮ್ಮಾ!
ಘುವಂಶದಾದಿ ಪುರುಷ ತಾನಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಂತರ್ಯಾಮಿಯಮ್ಮಾ!!!

ನಿರಂಜನಾದಿತ್ಯನೇ ಸರ್ವ ಮತೀಯರಿಗೂ ಪ್ರತ್ಯಕ್ಷ ದೇವರೆಂದರೆ ತಪ್ಪಾಗದು!   1(13)

ರಂಗುರಂಗಾಗಿ ಕಂಗೊಳಿಸುವ ಅವನ ಕಿರಣಗಳು ಸರ್ವ ಶಕ್ತಿ ಸಂಪದ್ಭರಿತವಾಗಿವೆ!
ಜಗದೀಶ್ವರನಿಗಿರಬೇಕಾದ ಸರ್ವಗುಣ ಲಕ್ಷಣಗಳನ್ನು ಅವನಲ್ಲಿ ಕಾಣಬಹುದು!
ನಭೋಮಂಡಲದಲ್ಲಿನ ಅವನ ದಿನಚರಿ, ಆದರ್ಶ, ಜಗದ್ಗುರುವಿನಂತಿರುವುದು!
ನಾನಾ ನಾಮರೂಪಗಳೆಲ್ಲವೂ ಆವನಿಂದೆಂಬರಿವು ಋಷಿಮುನಿಗಳಿಗಾಗಿರುವುದು!
ರುಚಿಯಾದವನಿಂದ ಪ್ರಾಪ್ತವಾದ “ರವಿ ರಸಾಯನ” ಬಾಳ ಬೆಳಕಾಗಿರುವುದು!
ದರ್ಶನವವನದಿಲ್ಲದ ದಿನ ನಿಸ್ಸಾರವಾಗಿರುವುದು ಉತ್ಸಾಹ ಶೂನ್ಯವಾಗಿರುವುದು!
ಶಕ್ತಿ-ಬೆಳಕುಗಳ ಅಗಾಧ ನಿಧಿಯಾದಿವನು ಸೃಷ್ಟಿ, ಸ್ಥಿತಿ ಲಯಕರ್ತನಾಗಿ
ಸರ್ವೇಶ್ವರನಾಗಿಹನು!!!

ನಿರಂಜನಾದಿತ್ಯಾ ಪರಮಾತ್ಮ!   3(1331)

ರಂಗನಾಥನಾಗಿಹನೀ ಆತ್ಮ!
ಗದ್ವ್ಯಾಪಿಯಾಗೀತಮರಾತ್ಮ!
ನಾಲ್ಕು ವೇದದ ಸಾರವೀ ಆತ್ಮ!
ದಿವ್ಯ ಜೀವನಾತ್ಮ ವಿಮಲಾತ್ಮ!
ತ್ಯಾಗರಾಜ ಶ್ರೀ ಶಿವಾನಂದಾತ್ಮ!
ರಿಪರಿ ಲೀಲಾವತಾರಾತ್ಮ!
ಘುರಾಮನಾಮದಲ್ಲೈಕ್ಯಾತ್ಮ!
ಮಾತಿಲ್ಲದ ಕಾರಣಕರ್ತಾತ್ಮ! (ಆ)
-ತ್ಮ ನಿರಂಜನಾದಿತ್ಯಾನಂದಾತ್ಮ!!!

ನಿರಂಜನಾದಿತ್ಯಾ! ಜನನ ಮರಣ ರಾಹಿತ್ಯ!   2(738)

ರಂಗು ರಂಗಾಗಿ ರಾರಾಜಿಸುತಿಹೆ ಪ್ರತಿನಿತ್ಯ!
ಗದ ಜೀವನಯಾತ್ರೆಗೆ ನೀನಿರ್ಪುದಗತ್ಯ!
ನಾರಾಯಣನೆಂಬ ವರ ನಾಮ ನಿನ್ನದು ಸ್ತುತ್ಯ!
ದಿಗಂಬರ ಗುರುಮೂರ್ತಿ ನಿನ್ನ ಕೃಪೆ ಅಗತ್ಯ!
ತ್ಯಾಗರಾಜ ನಿನ್ನನು ವರ್ಣಿಸುವನಾವ ಮರ್ತ್ಯ?
ರಾದಿವ್ಯಾಧಿ ನಿನಗಿಲ್ಲವೆಂಬುದು ಸತ್ಯ!
ರ, ನಾರಿಯರಿಂದಾಗುತಿದೆ ನಿನಗಾತಿಥ್ಯ!
ಮಿಸಿ ನಿನಗನವರತ ಮಾಳ್ಪರು ಕೃತ್ಯ!
ಮತೆದೋರಿ ಪೊರೆಯುತಿರುವೆ ನೀನು ಪ್ರೀತ್ಯ!
ಮಿಸಿರುವನು ನಿನ್ನಲಿ ಸದಾ ರಾಮ ಭೃತ್ಯ! (ತೃ)
-ಣ ಸಮಾನವಾಯಿತವನಿಗೆ ರಾವಣ ಹತ್ಯ!
ರಾಜೀವಸಖನಿನ್ನನುರಾಗಕೆಲ್ಲಕೂ ಪಥ್ಯ!
ಹಿತಕರ ಸುಖಕರ ನಿನ್ನಾದರ್ಶ ಸಾರಥ್ಯ! (ಸ)
-ತ್ಯ, ಶಿವ ಸುಂದರ ಶ್ರೀ ಗುರು ನಿರಂಜನಾದಿತ್ಯ!!!

ನಿರಂಜನಾದಿತ್ಯಾದರ್ಶಾ ಶೀಲ!   5(2919)

ರಂಜಿಪುದೆಲ್ಲಾಮತಕ್ಕಾ ಶೀಲ!
ಗದೀಶತ್ವಕ್ಕೆ ಬೇಕಾ ಶೀಲ!
ನಾನು, ನೀನೆಂಬುದಿಲ್ಲದಾ ಶೀಲ!
ದಿವ್ಯ ಜ್ಞಾನಾಗ್ನಿಸ್ವರೂಪಾ ಶೀಲ!
ತ್ಯಾಗ, ಲೋಕ ಕಲ್ಯಾಣಕ್ಕಾ ಶೀಲ!
ತ್ತಸ್ವರೂಪದ ಸಾರಾ ಶೀಲ! (ಸ್ಪ)
-ರ್ಶಾಸ್ಪರ್ಶಗಳರಿಯದಾ ಶೀಲ! (ಅಂ)
-ಶೀಯರಾಗಲಿಕ್ಕೆ ಬೇಕಾ ಶೀಲ! (ಬಾ)
-ಲ ನಿರಂಜನಾದಿತ್ಯಾ ಗೋಪಾಲ!!!

ನಿರಂಜನಾದಿತ್ಯಾನಂದಾ ಬಾಬಾ!   4(2295)

ರಂಗನಾಥಸ್ವಾಮಿರೂಪಾ ಬಾಬಾ!
ಗದಾದಿ ಗುರುದೇವಾ ಬಾಬಾ!
ನಾಮ, ರೂಪ, ಗುಣಾತೀತಾ ಬಾಬಾ!
ದಿವ್ಯ ಜ್ಞಾನಾನಂದಮಯಾ ಬಾಬಾ!
ತ್ಯಾಗಮೂರ್ತಿ, ಯೋಗಮೂರ್ತಿ ಬಾಬಾ!
ನಂಜುಂಡ ಧೀರ ಮಾರ್ತಾಂಡಾ ಬಾಬಾ!
ದಾನವ ಧ್ವಂಸ ಶ್ರೀಧರಾ ಬಾಬಾ!
ಬಾಲಲೀಲಾನಂದಲೋಲಾ ಬಾಬಾ!
ಬಾಬಾ ನಿರಂಜನಾದಿತ್ಯ ಬಾಬಾ!!!

ನಿರಂಜನಾನಂದ ಸರಸ್ವತಿ!   2(923)

ರಂಜಿಸೆನ್ನ ಮನ ಸರಸ್ವತಿ! (ಅ)
-ಜನರಗಿಣಿ ಬಾ ಸರಸ್ವತಿ!
ನಾಮ ನಿನ್ನದಿತ್ತೆ ಸರಸ್ವತಿ! (ಆ)
-ನಂದ ನೀನೆನಗೆ ಸರಸ್ವತಿ!
ರ್ಶನ ಕೊಡೀಗ ಸರಸ್ವತಿ!
ರ್ವಾಭೀಷ್ಟಪ್ರದೆ ಸರಸ್ವತಿ! (ವ)
-ರ ವೀಣಾಕೋವಿದೆ ಸರಸ್ವತಿ!
ಸ್ವರೂಪಾತ್ಮಾನಂದೆ ಸರಸ್ವತಿ! [ಪ]
-ತಿ, ನಿರಂಜನಾದಿತ್ಯಾಧಿಪತಿ!!!

ನಿರಂಜನಾನಂದಾ ರಾಮದಾಸ!   4(1512)

ರಂಗನಾಥಾನಂದಾ ರಾಮದಾಸ!
ನದೀಶಾನಂದಾ ರಾಮದಾಸ!
ನಾಗರಾಜಾನಂದಾ ರಾಮದಾಸ!
ನಂದ ಕಂದಾನಂದಾ ರಾಮದಾಸ!
ದಾಸ ದಾಸಾನಂದಾ ರಾಮದಾಸ!
ರಾಮನಾಮಾನಂದಾ ರಾಮದಾಸ!
ರ್ಕಟೇಶಾನಂದಾ ರಾಮದಾಸ!
ದಾಸಿ ಮೀರಾನಂದ ರಾಮದಾಸ!
ಖ ನಿರಂಜನಾದಿತ್ಯಾ ದಾಸ!!!

ನಿರಂಜನಾರೆಂದಾತ್ರಿನಂದನ?   4(1414)

ರಂಗನಾಥನೆಂದಾತ್ರಿನಂದನ!
ಗತ್ಪತಿಯೆಂದಾತ್ರಿನಂದನ!
ನಾದಾನಂದನೆಂದಾತ್ರಿನಂದನ! [ಮೂ]
-ರೆಂ

ವನಲ್ಲೆಂದಾತ್ರಿನಂದನ!
ದಾಶರಥಿಯೆಂದಾತ್ರಿನಂದನ!
ತ್ರಿಲೋಕಾತ್ಮನೆಂದಾತ್ರಿನಂದನ! [ಅ]
-ನಂಗಾಧಿಪನೆಂದಾತ್ರಿನಂದನ!
ತ್ತನವನೆಂದಾತ್ರಿನಂದನ! [ಘ]
-ನ ನಿರಂಜನಾದಿತ್ಯಾ ಪಾವನ!!!

ನಿರಂಜನಾಶೀರ್ವಾದ ನಿಮ್ಮೆಲ್ಲರಿಗೆ!   6(4018)

ರಂಗನಾಥನೆಲ್ಲಾ ಪ್ರಿಯ ಮಕ್ಕಳಿಗೆ!
ನನ, ಮರಣ, ಸಾಕೆಂಬವರಿಗೆ!
ನಾನಾ ತರದ ವ್ಯಾಧಿ ಪೀಡಿತರಿಗೆ!
ಶೀಘ್ರ ಗುರಿ ಸೇರಬೇಕೆಂಬವರಿಗೆ! (ಸ)
-ರ್ವಾತ್ಮ ಭಾವ ಬರಲೆಂಬೆನವರಿಗೆ!
ತ್ತ ಕೃಪೆಯಾಗಲೆಂಬೆನವರಿಗೆ!
ನಿಶ್ಚಲ ಭಕ್ತಿಯಿರ್ಲೆಂಬೆನವರಿಗೆ! (ಹಿ)
-ಮ್ಮೆಟ್ಬಾರ್ದಭ್ಯಾಸದಲ್ಲೆಂಬೆನವರಿಗೆ! (ಅ)
-ಲ್ಲ ಸಲ್ಲದಾಟ ಸಾಕೆಂಬೆನವರಿಗೆ! (ಅ)
-ರಿಗಳಾರ ಜೈಸಿರೆಂಬೆನವರಿಗೆ!
ಗೆಳೆಯ ನಿರಂಜನಾದಿತ್ಯವರಿಗೆ!!!

ನಿರಪರಾಧಿಗೆ ಸೇವೆ ದೊರಕಲಿ!   5(3207)

ಘುವೀರನಿಗೆ ದಯೆಯುಂಟಾಗಲಿ!
ತಿ, ಪತ್ನಿ ಸೀತಾ, ರಾಮರಂತಿರಲಿ!
ರಾತ್ರಿ, ಹಗಲು ಸನ್ನಿಧಿಯಲ್ಲಿರಲಿ!
ಧಿಕ್ಕಾರ ಮಾಡದೆ ಅಕ್ಕರೆ ತೋರಲಿ!
ಗೆಜ್ಲುಗೂಡಿಗೆ ಸರ್ಪ ಸೇರದಿರಲಿ!
ಸೇವೆ ನಿಶ್ಚಿಂತೆಯಿಂದ ಸಾಗುತ್ತಿರಲಿ!
ವೆಚ್ಚಾದಾಯದ ಹುಚ್ಚು ಕೊಚ್ಚಿ ಹೋಗಲಿ!
ದೊರೆತದ್ದಷ್ಟಕ್ಕೇ ತೃಪ್ತಿಯುಂಟಾಗಲಿ!
ಹಸ್ಯ ಶಾಂತಿಗಿದೆಂಬರಿವಾಗಲಿ!
ರಣತ್ರಯ ಸದಾ ಶುದ್ಧವಿರಲಿ! (ಒ)
-ಲಿದೀಗ ನಿರಂಜನಾದಿತ್ಯ ಬರಲಿ!!!

ನಿರಹಂಕಾರ ಗುರು ಸರ್ಕಾರ!   5(3103)

ಘುಪತಿಯ ಕೃಪೆ ಅಪಾರ!
ಹಂದಿ, ನಾಯಿಗೂ ಯಥೇಚ್ಛಾಹಾರ!
ಕಾಮ ರಾವಣ ವಂಶ ಸಂಹಾರ!
ಸ ವಿರಸವಾಗದಾಚಾರ!
ಗುರಿ ಸೇರಿಸುವಾತ್ಮ ವಿಚಾರ!
ರುಧಿರ ಮಾಂಸ ಶರೀರಾಸ್ಥಿರ!
ತ್ಸಂಗಕ್ಕೆ ಸದಾ ಸಹಕಾರ! (ಅ)
-ರ್ಕಾತ್ಮ ರೂಪ ಸದಾ ನಿರ್ವಿಕಾರ!
ವಿ ನಿರಂಜನಾದಿತ್ಯೋಂಕಾರ!!!

ನಿರಹಂಕಾರ ನಿರಾಕಾರ! (ನ)   3(1209)

-ರಹರಿ ರೂಪಾದ್ಭುತಾಕಾರ!
ಹಂಸಾಕಾರ ನಿರ್ಮಲಾಕಾರ! (ವಿ)
-ಕಾರ ನಾಮ ರೂಪಾದ್ಯಾಕಾರ! (ವ)
-ರ ಗುರು ದತ್ತ ನಿರ್ವಿಕಾರ! (ಅ)
-ನಿತ್ಯವಾ ಚರಾಚರಾಕಾರ! (ಸ್ಥಿ)
-ರಾಕಾರಾ ಅಂತರಾತ್ಮಾಕಾರ! (ಆ)
-ಕಾರ, ವಿಕಾರಾತ್ಮಾಪಚಾರ! (ವ)
-ರ ನಿರಂಜನಾದಿತ್ಯೋಂಕಾರ!!!

ನಿರಾಯಾಸ ದರ್ಶನಕ್ಕಲಕ್ಷ್ಯ!   5(3065)

ರಾತ್ರಿ, ಹಗಲು ಎಲ್ಲೆಲ್ಲೋ ಲಕ್ಷ್ಯ!
ಯಾಗ, ಯೋಗಾದಿಗಳಿಗಲಕ್ಷ್ಯ!
ತ್ತುಹೋಗುವ ದೇಹಕ್ಕೆ ಲಕ್ಷ್ಯ!
ಮೆ, ಶಮಾದ್ಯಭ್ಯಾಸಕ್ಕಲಕ್ಷ್ಯ! (ಸ್ಪ)
-ರ್ಶಸುಖ ಸ್ತ್ರೀ ಪುರುಷರ ಲಕ್ಷ್ಯ!
ರಹರಿಯಾಗೆಂದರಲಕ್ಷ್ಯ! (ಠ)
-ಕ್ಕರ ಜೊತೆಗೋಡಾಡುವುದು ಲಕ್ಷ್ಯ!
ಕ್ಷ್ಯಾಲಕ್ಷ್ಯ ಚಿಂತನೆಗಲಕ್ಷ್ಯ! (ಲ)
-ಕ್ಷ್ಯ, ನಿರಂಜನಾದಿತ್ಯಾತ್ಮ ಲಕ್ಷ್ಯ!!!

ನಿರಾಯಾಸದ ತಪವಿಂದು! (ವಿ)   4(1780)

-ರಾಜಿಸುತಿಹ ರವಿಯಿಂದು! (ಕಾ)
-ಯಾಭಿಮಾನ ಕಾಣೆ ನಾನಿಂದು! (ರ)
-ಸದೂಟ ಪ್ರಾಪ್ತವಾಯಿತಿಂದು!
ತ್ತನಿಗಾನಂದವದಿಂದು! (ಮ)
-ತವಿತ್ತ ಮರುದಿನವಿಂದು!
ತಿತೋದ್ಧಾರಪ್ಪುದು ಮುಂದು! (ಗೋ)
-ವಿಂದನ ಕೃಪೆಯಿಂದೆಂದೆಂದು! (ಎಂ)
-ದು? ನಿರಂಜನಾದಿತ್ಯಂದಂದು!!!

ನಿರೀಕ್ಷಾ, ಪರೀಕ್ಷಾ ಮನೋಭಾವ ಬೇಡ!   5(3073)

ರೀತೆ, ನೀತಿ, ನೇಮಗಳ ಬಿಡಬೇಡ! (ಸಾ)
-ಕ್ಷಾತ್ಕಾರ ಸಾಧಿಸಿಕೊಳ್ಳದಿರಬೇಡ!
ರನಿಂದೆಯನ್ನೆಂದಿಗೂ ಮಾಡಬೇಡ! (ತು)
-ರೀಯಾತೀತದ ಗುರಿ ಸೇರದಿರ್ಬೇಡ!
ಕ್ಷಾಮ, ಡಾಮರಕ್ಕೆ ಬೆರಗಾಗಬೇಡ!
ನಸಿಜನಾಟಕ್ಕೆ ಕಟ್ಟು ಬೀಳ್ಬೇಡ!
ನೋಟ, ಕೂಟದಾಟಕ್ಕೊಳಗಾಗ್ಬೇಡ!
ಭಾಗ್ಯ, ಭೋಗಗಳಿಗಾಶಿಸಿ ಕೆಡ್ಬೇಡ!
ರಗುರು ಸೇವೆಯನ್ನೆಂದೂ ಬಿಡ್ಬೇಡ!
ಬೇರೊಬ್ಬ ದೇವರಿದ್ದಾನೆನಲೇ ಬೇಡ! (ಬೇ)
-ಡ, ನಿರಂಜನಾದಿತ್ಯನಿಗೇನೂ ಬೇಡ!!!

ನಿರೀಕ್ಷಾ, ಪರೀಕ್ಷಾತೀತ ನಿತ್ಯಾನಂದ!   6(3918)

ರೀತಿ, ನೀತಿ, ರಹಿತಾ ವಿಮಲಾನಂದ! (ರ)
-ಕ್ಷಾ, ಶಿಕ್ಷಾ, ನಿರ್ಲಕ್ಷ್ಯಾ ಸದಾ ಶಿವಾನಂದ!
ರಮ ಪಾವನಾ ಪರಬ್ರಹ್ಮಾನಂದ! (ನಾ)
-ರೀ ಶಿರೋಮಣಿ ಸೀತಾ ಶ್ರೀರಾಮಾನಂದ!
ಕ್ಷಾತ್ರ ತೇಜೋ ರಾಶಿ ಬಲಭೀಮಾನಂದ!
ತೀರ್ಥೋದ್ಧಾರ ಗುರು ಗಂಗಾಧರಾನಂದ!
ತ್ವಮಸಿಯರ್ಥ ಸಿದ್ಧ ಶಿವಾನಂದ!
ನಿಶ್ಚಲ ತತ್ವಜ್ಞಿ ಹರಿಹರಾನಂದ!
ತ್ಯಾಗಾಗ್ರಣಿ ಗುರು ದತ್ತಾತ್ರೇಯಾನಂದ!
ನಂದಕಂದ, ಗೋವಿಂದ ಪರಮಾನಂದ!
ಯಾನಿಧಿ ನಿರಂಜನಾದಿತ್ಯಾನಂದ!!!

ನಿರೀಕ್ಷಿಸದಿರಲಿ! ನಿತ್ಯ ಸುಖಯಾಗಿರಲಿ!   1(101)

ರೀತಿ ರಿವಾಜೆನ್ನದೆ ಭಜನೆ ಸಾಗುತಿರಲಿ!
ಕ್ಷಿತಿಪತಿಗೆಲ್ಲಾ ಸಮರ್ಪಣೆಯಾಗುತಿರಲಿ!
ಮಯಾಸಮಯವೆಂಬ ಭ್ರಮೆಯ ಬಿಟ್ಟಿರಲಿ!
ದಿನಕರನಂತೆ ಕರ್ಮನಿಷ್ಠೆ ಸದಾ ಇರಲಿ!
ಚನೆ, ರಂಜನೆಗಳ ಯೊ

ಚಿಸಿರದಿರಲಿ!
ಲಿಪಿ ಅದೃಷ್ಟವೆಂದ ಮನ ಮರುಗದಿರಲಿ!
ನಿಜ ಧರ್ಮ ನಿಶ್ಚಿಂತೆಯಿಂದ ಪಾಲಿಸುತಿರಲಿ!
ತ್ಯಜಿಸಿ ದುಸ್ಸಂಘದಿಂದ ದೂರವಿರುತಿರಲಿ!
ಸುಜನರಲಿ ಬಳಕೆ ಸದಾ ಬೆಳೆಸಿರಲಿ!
ಖಿನ್ನನಾಗದನವರತ ಜಪಿಸುತಿರಲಿ!
ಯಾಗವಿದರಿಂದ ನಿಜಯೊಂಗ ಪ್ರಾಪ್ತಿಯಾಗಲಿ!
ಗಿರಿಧರನಿದರ್ಜುನಗಂದ ನೆನಪಿರಲಿ! (ಇ)
-ರಬೇಕು ಗಮನ, ಗುರಿಯತ್ತ ಮನಸಿನಲಿ! (ಈ)
-ಲಿಖಿತ ನಿರಂಜನಾದಿತ್ಯ ಪ್ರಸಾದದಾಗಲಿ!!!

ನಿರುತ್ಸಾಹಕ್ಕೆ ಅನಾದರ ಕಾರಣ! (ಅ)   1(430)

-ರುಚಿಗೆ ಅಜೀರ್ಣವೇ ಮೂಲ ಕಾರಣ! (ತಾ)
-ತ್ಸಾರಕ್ಕೆ ಕಡು ಬಡತನ ಕಾರಣ!
ರ್ಷಕ್ಕೆ ಸತತ ಸಂತೃಪಿ ಕಾರಣ! (ಅ)
-ಕ್ಕೆ, ಸುಖವೆಲ್ಲಕ್ಕನುಗ್ರಹ ಕಾರಣ!
ನುಮಾನವೇ ಅಶಾಂತಿಗೆ ಕಾರಣ!
ನಾಳೆ ಚಿಂತೆ ಕಳವಳಕೆ ಕಾರಣ!
ರ್ಪಕ್ಕೆ ದುರಂಹಕಾರವೇ ಕಾರಣ! (ಅ)
-ರಸಿಕತೆಗೆ ಅವಿದ್ಯೆಯೇ ಕಾರಣ!
ಕಾಮಾತುರತೆಗೆ ಮಾಯೆಯೇ ಕಾರಣ!
ಗಳೆಗೆಲ್ಲಾ ದ್ವೇಷಾಸೂಯೆ ಕಾರಣ! (ತೃ)
-ಣ ನಿರಂಜನಾದಿತ್ಯಗೆಲ್ಲಾ ಕಾರಣ!!!

ನಿರೋಗೀ! ನೀನೇ ಶಿವಯೋಗಿ!   4(2372)

ರೋಮರೋಮವೂ ಅವನಾಗಿ!
ಗೀತಾಮೃತಾಭಿಷಿಕ್ತನಾಗಿ!
ನಿಚೋಚ್ಛವಿಲ್ಲದವನಾಗಿ!
ನೇತ್ರ ಹಣೇಲಿರ್ಪವನಾಗಿ!
ಶಿರದಲ್ಲಿಂದುಧರನಾಗಿ!
ರಗುರುದತ್ತ ತಾನಾಗಿ!
ಯೋಚನಾತೀತ ಚಿತ್ತನಾಗಿ! (ಯೋ)
-ಗಿ ನಿರಂಜನಾದಿತ್ಯನಾಗಿ!!!

ನಿರ್ಗಂಧ ಕುಸುಮವೆಷ್ಟಿದ್ದರೇನು? (ದು)   3(1388)

-ರ್ಗಂಧಕ್ಕದರಿಂದ ಸಹಾಯವೇನು? (ಅ)
-ಧರ್ಮಿಗಳಾದ ಮಕ್ಕಳೆಷ್ಟಿದ್ದೇನು?
ಕುರುಕುಲವ ನೋಡಬಾರದೇನು?
ಸುಪುತ್ರ ಭೀಷ್ಮ ಧನ್ಯನಲ್ಲವೇನು?
ದ ಮತ್ಸರ ಬಿಡಬಾರದೇನು? (ನಾ)
-ವೆ ಮೋಕ್ಷಕ್ಕೆ ಶ್ರೀ ಕೃಷ್ಣನಲ್ಲವೇನು? (ಸೃ)
-ಷ್ಟಿಗೊಡೆಯ ಆತ ತಾನಲ್ಲವೇನು? (ತ)
-ದ್ದರ್ಶನಕೆ ದುಡಿಯ ಬಾರದೇನು?
ರೇತೋರ್ಧ್ವಗಾಮ್ಯವನದಲ್ಲವೇನು? (ತಾ)
-ನು, ನಿರಂಜನಾದಿತ್ಯನಲ್ಲವೇನು???

ನಿರ್ದಯ ನೀನಾದುದೇಕೆ ದೇವಾ? (ಮ)   4(2154)

-ರ್ದನವಾಗುತಿದೆ ವಾಸುದೇವಾ! (ನ್ಯಾ)
-ಯ ದೊರಕಿಸೀಗ ಗುರುದೇವಾ!
ನೀಚರಡಗಿಸು ಮಹಾದೇವಾ! (ಅ)
-ನಾಚಾರತ್ಯಾಚಾರತ್ಯಾಯ್ತು ದೇವಾ!
ದುರಿತದೂರಲ್ಲವೇ ನೀ ದೇವಾ?
ದೇಶವೆಲ್ಲಾಯ್ತು ನಾಶ ಹೇ ದೇವಾ! (ಏ)
-ಕೆ ಬಂಗ್ಲಾ ಬಂಧುಗೀ ಗತಿ ದೇವಾ? (ಇಂ)
-ದೇ ಬಂದುದ್ದರಿಸವರ ದೇವಾ! (ದೇ)
-ವಾ, ನಿರಂಜನಾದಿತ್ಯ ಕೇಶವಾ!!!

ನಿರ್ದಯನಾಗಬೇಡವೋ ನೀರಜಾಕ್ಷಾ! (ಕ)   4(1910)

-ರ್ದಮದಲ್ಲದ್ದ ಬೇಡವೋ ಕಮಲಾಕ್ಷಾ! (ಪ್ರ)
-ಯತ್ನ ಸಫಲ ಮಾಡೋ ಸರಸಿಜಾಕ್ಷಾ!
ನಾನು ನಿನಗನ್ಯನೇನೋ ವನಜಾಕ್ಷಾ? (ಯೋ)
-ಗ ಭಾಗ್ಯ ನೀಡಬಾರದೇನೋ ಫಾಲಾಕ್ಷಾ?
ಬೇಯುತಿದೆ ದೇಹ, ನೋಡೋ ಸಹಸ್ರಾಕ್ಷಾ! (ತ)
-ಡ ಮಾಡದೀಗ ಬೀರೋ ಕೃಪಾಕಟಾಕ್ಷಾ! (ಜೀ)
-ವೋತ್ಪತ್ತಿ, ಲಯ, ನಿನ್ನಿಂದ ಬಿಸಜಾಕ್ಷಾ!
ನೀನೊಲಿಯದ ಬಾಳೇಕೋ ಜಲಜಾಕ್ಷಾ! (ವ)
-ರಗುರು ನೀನಲ್ಲವೇನೋ ಸಾರಸಾಕ್ಷಾ? (ನಿ)
-ಜಾನಂದ ಸುಖ ಪ್ರದಾತರವಿಂದಾಕ್ಷಾ! (ಸಾ)
-ಕ್ಷಾತ್ಪರಬ್ರಹ್ಮ ನಿರಂಜನಾದಿತ್ಯಾಕ್ಷಾ!!!

ನಿರ್ಧಾರ ಮಾಡುವುದೊಳ್ಳೆಯದು! (ನಿ)   4(2441)

-ರ್ಧಾರದಂತಿದ್ದರಿನ್ನೂ ಒಳ್ಳೇದು! (ವ)
-ರಗುರುಧ್ಯಾನ ಮಾಳ್ಪುದೊಳ್ಳೇದು!
ಮಾತವ್ನದ್ಕೇಳಿದ್ರಿನ್ನೂ ಒಳ್ಳೇದು! (ಕಾ)
-ಡು, ಮೇಡ್ಗಳಿಗೋಡದಿದ್ರೊಳ್ಳೇದು! (ಆ)
-ವುದೂ ಇದ್ದಲ್ಲಾದ್ರಿನ್ನೂ ಒಳ್ಳೇದು!
ದೊಡ್ಡವನೆನಿಸಿದ್ರೊಳ್ಳೆಯದು! (ಸು)
-ಳ್ಳೆಳ್ಳೆಷ್ಟಿಲ್ಲದಿದ್ರಿನ್ನೂ ಒಳ್ಳೇದು!
ದುಪನ ಗೀತಾಭ್ಯಾಸೊಳ್ಳೇದು! (ಇ)
-ದು ನಿರಂಜನಾದಿತ್ಯಾಗ್ಲೊಳ್ಳೇದು!!!

ನಿರ್ಭಯ ಭೋಗ ಜೀವನಕ್ಕೆ ವಿವಾಹ! (ಗ)   6(3949)

-ರ್ಭಧಾರಣಾ ನಿಶ್ಚಿಂತೋಪಾಯ ವಿವಾಹ! (ನ್ಯಾ)
-ಯ ಸಮ್ಮತದ ಹಕ್ಕಿಗಾಗಿ ವಿವಾಹ!
ಭೋಜನಾನುಕೂಲಕ್ಕೋಸ್ಕರ ವಿವಾಹ!
ಣಿಕಾ ಜೀವನ ತಡೆಗೆ ವಿವಾಹ!
ಜೀವನ ಸುವ್ಯವಸ್ಥೆಗಾಗಿ ವಿವಾಹ!
ರ್ಣಾಶ್ರಮ ಧರ್ಮದ್ದೊಂದಂಗ ವಿವಾಹ!
ರ, ನಾರಿಯರನ್ಯೋನ್ಯಕ್ಕೆ ವಿವಾಹ! (ಧ)
-ಕ್ಕೆ ಪ್ರಕೃತಿ ಧರ್ಮಕ್ಕಾಗ್ದಂತೆ ವಿವಾಹ!
ವಿಧಿ, ಹರಿ, ಹರರಂತಿರ್ಲು ವಿವಾಹ!
ವಾಸುದೇವ, ರಾಧೆಯ್ರಂತಿರ್ಲು ವಿವಾಹ! (ದೇ)
-ಹ ನಿರಂಜನಾದಿತ್ಯಾನುಗ್ರಹ!!!

ನಿರ್ಭೀತಿಯಿಂದ ನೀನಿಲ್ಲಿ ಮಲಗಮ್ಮಾ! (ದು)   6(3717)

-ರ್ಭೀತಿಗೆ ಇಲ್ಲಿ ಕಾರಣವೇನಿಲ್ಲಮ್ಮಾ!
ತಿಳಿಯದವರಿಗೆ ಲಿಂಗ ಭೇದಮ್ಮಾ! (ಬಾ

)
-ಯಿಂದಾಡಿದ ಮತ್ರಕ್ಕಾ ಭೇದ ಹೋಗ್ದಮ್ಮಾ!
ಮೆ, ಶಮೆಯಭ್ಯಾಸದಕ್ಕೆ ಬೇಕಮ್ಮಾ!
ನೀತಿಗೆಟ್ಟ ಅಜ್ಞಾನಿಗಳಿಲ್ಲಿಲ್ಲಮ್ಮಾ!
ನಿಶ್ಚಲ ಭಕ್ತಿಗೆ ದ್ರೌಪದಿ ಸಾಕ್ಷ್ಯಮ್ಮಾ! (ಎ)
-ಲ್ಲಿದ್ದರೂ ನಿನ್ನನ್ನು ಸ್ವಾಮಿ ಕಾಯ್ವನಮ್ಮಾ!
ಲಗ್ವಾಗೇಳ್ವಾಗವನ ಸ್ಮರಿಸಮ್ಮಾ!
ಕ್ಷ್ಮೀದೇವಿಯ ನಿತ್ಯಾಭ್ಯಾಸವಿದಮ್ಮಾ!
ರುಡೋರಗರವ್ವ ಸೇವಕರಮ್ಮಾ! (ಅ)
-ಮ್ಮಾ! ಶ್ರೀ ನಿರಂಜನಾದಿತ್ಯ ಸಾಕ್ಷಿಯಮ್ಮಾ!!!

ನಿರ್ಮಲನಾಗುತಿರು ಮಲ ಮರೆಯುತಿರು!   1(9)

ರಂಗನಾಗಿರುವೆ ಮಂಗನಂತೇ ಕಾಡುತಿಹೆ!
ಜಗದಿಂದ ನೀನಲ್ಲ ನಿನ್ನಿಂದ ಜಗವೆಲ್ಲ!
ನಮಸ್ಕರಿಸು ಗುರು ಪಾದಕ್ಕೆ ಇಡು ಹೆಜ್ಜೆ ಮುಂದಕ್ಕೆ!
ನಾಳೆ ನಿನ್ನೆಗಳಿಗಳಬೇಡ ಇಂದಿನದ ಬಿಡಬೇಡ!
ರುಚಿ, ಶುಚಿ ನೋಡದಿರು ಗುರುಸೇವೆ ಮಾಡುತಿರು!
ದನ, ಧನ, ಧಾನ್ಯಗಳ ದೃಶ್ಯ, ಗುರುಕರುಣೆ ಸಾದೃಶ್ಯ!
ಶಂಭೋ ಶಂಕರ ಕಾಯೆನ್ನು! ಅವನಾಗುವೆ ನೀನಿನ್ನು!!!

ನಿರ್ಮಲೀಕರಣ ಏಕೀ ಕರಣ! (ಧ)   4(1443)

-ರ್ಮ, ಕರ್ಮೋಪಕರಣಾಶಾ ಕಿರಣ!
ಲೀಲಾ ನಾಟಕದಾಧಾರಾ ಕಿರಣ! (ಗೋ)
-ಕರ್ಣ, ರಾಮೇಶ್ವರ ಸಾರಾ ಕಿರಣ! (ವ)
-ರ ಮಹಾಬಲೇಶ್ವರಾತ್ಮಾ ಕಿರಣ! (ತೃ)
-ಣ, ಕಾಷ್ಟದಲ್ಲೂ ಪ್ರವೇಶಾ ಕಿರಣ!
-ಏಕೈಕಲೋಕ ವಿಖ್ಯಾತಾ ಕಿರಣ!
-ಕೀಚಕ ಕುಲ ವಿನಾಶಾ ಕಿರಣ!
ಪಿಲಾದಿ ಮುನಿಕುಲಾ ಕಿರಣ!
ಣಧೀರ ರಾಘವೇಂದ್ರಾ ಕಿರಣ! (ಗ)
-ಣಪ ನಿರಂಜನಾದಿತ್ಯಾ ಕಿರಣ!!!

ನಿರ್ಮಾಪಕ ನಿರ್ದೇಶಕನೆಲ್ಲರಾಪ್ತ! (ಕ)   2(825)

-ರ್ಮಾನುಸಾರ ಪ್ರತಿಫಲವೀಯುವಾಪ್ತ!
ಟ್ಟಭದ್ರನಿಗಾತ ಪರಮ ಆಪ್ತ!
ಳ್ಳ ಪಾತ್ರಧಾರಿಗುತ್ಸಾಹವೀವಾಪ್ತ!
ನಿಲಯದ ಕಲಾವಿದರಿಗಾತಾಪ! (ನಿ)
-ರ್ದೇಶಕನಾಗಿ ಪ್ರೇಕ್ಷಕ ಜನಕಾಪ್ತ!
ಶಿ, ಸೂರ್ಯ, ತಾರೆಯರ ಕೀರ್ತಿಗಾಪ್ತ!
ರುಣಾಕರನೀತೆಲ್ಲಾ ಮತಕಾಪ್ತ!
ನೆಲ, ಜಲ, ಮನೆ, ಮಠಕಿವನಾಪ್ತ! (ಬ)
-ಲ್ಲವರಲ್ಲಿ ತಾನೇ ತಾನಾಗಿರುವಾಪ್ತ!
ರಾತ್ರಿ, ದಿನ, ಲೀಲಾನಾಟಕ ಪ್ರಿಯಾಪ್ತ! (ಆ)
-ಪ್ತ, ನಿರಂಜನಾದಿತ್ಯ ಸರ್ವರಿಗಾಪ್ತ!!!

ನಿರ್ಯೋಚನೆ ಸಹಜ ಸ್ಥಿತಿ!   6(3517)

(ಕಾ)-ರ್ಯೋತ್ಸಾಹ ಅಸಹಜ ಸ್ಥಿತಿ!
(ಕಾಂ)-ಚನ ಕ್ಕಾಶಿಸುವುದೀ ಸ್ಥಿತಿ!
(ಮ)-ನೆ, ಮಠ, ಕಟ್ಟುವುದೀ ಸ್ಥಿತಿ!
ತ್ಯವನ್ನರಿಯದೀ ಸ್ಥಿತಿ!
ಗರಣದಲ್ಲಂತ್ಯಾ ಸ್ಥಿತಿ!
ನನ, ಮರಣಕ್ಕೀ ಸ್ಥಿತಿ!
ಸ್ಥಿತ ಪ್ರಜ್ಞೆಯೇ ಆತ್ಮ ಸ್ಥಿತಿ!
(ಇ)-ತಿ ನಿರಂಜನಾದಿತ್ಯ ಸ್ಥಿತಿ!!!

ನಿರ್ಯೋಚನೆಯಿಂದಿರ್ಪುದಕ್ಕಾಗೀ ಜನ್ಮ! (ಕಾ)   6(4288)

-ರ್ಯೋನ್ಮುಖವಾಗಿತ್ತು ಹಿಂದನೇಕ ಜನ್ಮ!
ಪಲ ಚಿತ್ತಕ್ಕೆ ಮತ್ತೆ ಮತ್ತೆ ಜನ್ಮ! (ಮ)
-ನೆ, ಮಠ ಕಟ್ಟಿ ಬಿಟ್ಟೋಡಲಿಕ್ಕಾ ಜನ್ಮ! (ಕೈ)
-ಯಿಂದ ಮಾಡ್ದೆ ಬಾಯಿಂದಾಡಿಹೋಯ್ತಾ ಜನ್ಮ!
ದಿನ, ರಾತ್ರಿಂದ್ರಿಯಾಧೀನಾಗಿತ್ತಾ ಜನ್ಮ! (ತೀ)
-ರ್ಪುಗಳ್ಸುಳ್ಳಿನ ಪರವಾಗಿತ್ತಾ ಜನ್ಮ!
ರಿದ್ರ ಶ್ರೀಮಂತೆಂದೊದ್ದಾಡಿತಾ ಜನ್ಮ! (ತಿ)
-ಕ್ಕಾಟದಿಂದ ಹಕ್ಕು ಕಳ್ಕೊಂಡಿತಾ ಜನ್ಮ!
ಗೀತಾಭ್ಯಾಸದಿಂದಾರಂಭವಾಯ್ತಾ ಜನ್ಮ!
ಗತ್ತಿಗೀಗತಿ ದೂರವಾಯ್ತೀ ಜನ

! (ಚಿ)
-ನ್ಮಯ ನಿರಂಜನಾದಿತ್ಯನಾಯ್ತೀ ಜನ್ಮ!!!

ನಿರ್ಲಜ್ಜಾ ನರ್ತನ ನಿನ್ನದು ಸಂಪದಾ! (ತೋ)   6(3466)

-ರ್ಲರಿಯರಾಭಾವ ಅನ್ಯರು ಸಂಪದಾ! (ಕ)
-ಜ್ಜಾಯ ನೇವೇದ್ಯಕ್ಕೂ ಮೇಲದು ಸಂಪದಾ!
ಗುಮೊಗ ನಿನ್ನದು ಚೆಂದ ಸಂಪದಾ! (ಕ)
-ರ್ತನ ಕಲಾ ಕೌಶಲವದು ಸಂಪದಾ!
ಟರಾಜ ಗುರು ನಿನಗೆ ಸಂಪದಾ!
ನಿನಗೊಲಿದಿಹನವನು ಸಂಪದಾ! (ನಿ)
-ನ್ನ ತನ್ನಂತೆ ಮಾಡುವನವ ಸಂಪದಾ!
ದುರಾಗ್ರಹ ನಿನಗೇನಿಲ್ಲ ಸಂಪದಾ!
ಸಂತಸದಿಂದಿರು ಸರ್ವದಾ ಸಂಪದಾ!
ರಮಾರ್ಥಸಾರವೇ ನೀನು ಸಂಪದಾ!
ದಾತ ಶ್ರೀ ನಿರಂಜನಾದಿತ್ಯ ಸಂಪದಾ!!!

ನಿರ್ಲಿಪ್ತ ಪರಮಾತ್ಮ ನಟರಾಜ! (ಜಾ)   6(3354)

-ರ್ಲಿ, ಬೀಳ್ಲಿ, ಆಡ್ಲಿ, ಹಾಡ್ಲಿ, ನಟರಾಜ! (ಆ)
-ಪ್ತನಾಗಿಹನೆಲ್ಲಕ್ಕಾ ನಟರಾಜ!
ರಾಪರಗಳಲ್ಲೂ ನಟರಾಜ!
ಸ, ವಿರಸದಲ್ಲೂ ನಟರಾಜ!
ಮಾನಾಪಮಾನದಲ್ಲೂ ನಟರಾಜ! (ಆ)
-ತ್ಮ, ಅನಾತ್ಮಗಳಲ್ಲೂ ನಟರಾಜ!
ಟನಾಧಾರಾ ಪರಬ್ರಹ್ಮ ನಿಜ! (ದಿ)
-ಟವಿದೊಂದೇ ನಿಜಾನಂದ ಸಹಜ! (ವಿ)
-ರಾಜಿಪುದಿದರ ವಿಜಯ ಧ್ವಜ! (ನಿ)
-ಜ ನಿರಂಜನಾದಿತ್ಯಾನಂದ ಧ್ವಜ!!!

ನಿರ್ವಿಕಲ್ಪ ಶಿವ ಲಿಂಗಯ್ಯಾ! (ಉ)   2(493)

-ರ್ವಿಯೆಲ್ಲಾವರಿಸಿಹುದಯ್ಯಾ!
ರ, ಚರಣವಿಲ್ಲವಯ್ಯಾ! (ಕ)
-ಲ್ಪನಾ ಮನ ನಿರ್ನಾಮವಯ್ಯಾ!
ಶಿವ ನಿತ್ಯ ನಿರ್ಮಲನಯ್ಯಾ!
ರ ಗೌರಿದರೊಳಗಯ್ಯಾ! (ಆ)
-ಲಿಂಗನಕಿದಾನಂದವಯ್ಯಾ!
ತಿ, ಸ್ಥಿತಿ, ಚ್ಯುತಿ ಇಲ್ಲಯ್ಯಾ! (ಅ)
-ಯ್ಯಾ ನಿರಂಜನಾದಿತ್ಯದಯ್ಯಾ!!!

ನಿರ್ವಿಘ್ನವಾಗಿ ಸಾಗಲಿ ಯಾತ್ರೆ! (ಉ)   5(2790)

-ರ್ವಿಯಲ್ಲೇ ನಾಕ, ನರಕ ಯಾತ್ರೆ! (ವಿ)
-ಘ್ನರಾಜಗಾನಂದವಾಗ್ಲೀ ಯಾತ್ರೆ!
ವಾಗ್ವಾದವಿಲ್ಲದೇ ಆಗ್ಲೀ ಯಾತ್ರೆ!
ಗಿರಿಧರನಿಗಾಗ್ಯಾಗ್ಲೀ ಯಾತ್ರೆ!
ಸಾಯುಜ್ಯ ಸಂಪಾದನೆಗೀ ಯಾತ್ರೆ! (ನ)
-ಗ ನಾಣ್ಯದಾಸೆಯಿದ್ದ್ರಾಗ್ದೀ ಯಾತ್ರೆ! (ಅ)
-ಲಿಪ್ತ ಜೀವಿಗಿದಾದರ್ಶಯಾತ್ರೆ!
ಯಾತ್ರೆ! ಜೀವನ ವಿಜಯ ಯಾತ್ರೆ! (ನಿಂ)
-ತ್ರೆ ನಿರಂಜನಾದಿತ್ಯಗೆ ಜಾತ್ರೆ!!!

ನಿಲುಗಡೆಯೇ ಬಿಡುಗಡೆ! (ಹ)   3(1187)

-ಲುಬಿನಳಿವೇ ಬಿಡುಗಡೆ!
ರ್ವನಾಶವೇ ಬಿಡುಗಡೆ! (ಒ)
-ಡೆಯನೈಕ್ಯವೇ ಬಿಡುಗಡೆ! (ಕಾ)
-ಯೇಚ್ಛಾ ತ್ಯಾಗವೇ ಬಿಡುಗಡೆ!
ಬಿಚ್ಚು ಮನವೇ ಬಿಡುಗಡೆ! (ಕೆ)
-ಡುಕಡಗ್ವುದೇ ಬಿಡುಗಡೆ!
ತ್ಯಾತ್ಮನದೇ ಬಿಡುಗಡೆ! (ಬಿ)
-ಡೆ ನಿರಂಜನಾದಿತ್ಯನೆಡೆ!!!

ನಿವೃತ್ತನಾದೆನಗೇನು ಗತಿ?   3(1300)

ವೃಥಾಲಾಪ ಬಿಟ್ಟರೆ ಸದ್ಗತಿ! (ಅ)
-ತ್ತ, ಇತ್ತ ಸುತ್ತಿದರಧೋಗತಿ!
ನಾಮ ಜಪದಿಂದುತ್ತಮ ಗತಿ! (ನಿಂ)
-ದೆ ಮಾಡಿದರನ್ಯರಧೋ ಗತಿ! (ಧ)
-ನ ದಾಸೆ ಸತ್ತರುತ್ತಮ ಗತಿ! (ಭೋ)
-ಗೇಚ್ಛೆಯಿಂದಾಗುವುದಧೋ ಗತಿ! (ಹ)
-ನುಮನಂತಾದರುತ್ತಮ ಗತಿ! (ಸಂ)
-ಗನಂಗನದಾದರಧೋ ಗತಿ! (ಗ)
-ತಿ, ನಿರಂಜನಾದಿತ್ಯಾತ್ಮ ಜ್ಯೋತಿ!!!

ನಿವೃತ್ತಾಧಿಕಾರಿಯಾಜ್ಞೆಗೇನು ಬೆಲೆ?   6(3883)

ವೃಥಾ ಕೆಡಿಸಿಕೊಳ್ಬಾರದಾತ ತಲೆ! (ಕಿ)
-ತ್ತಾಟಕ್ಕೆ ಹೋದರೆ ತಪ್ಪುವುದು ನೆಲೆ! (ವಿ)
-ಧಿಲಿಖಿತವೆಂಬುದೊಂದು ಮಹಾ ಜ್ವಾಲೆ!
ಕಾಣದೇ ಮಾಡುವುದು ಅದು ತರಲೆ!
ರಿಸಿ, ಮುನಿಗಳಿಗೂ ಆ ತಲೆ ಶೂಲೆ!
ಯಾದವನನ್ನೂ ಅಪ್ಪಳಿಸಿತ್ತಾ ಅಲೆ! (ಪ್ರ)
-ಜ್ಞೆತಪ್ಪಿ ಬಿದ್ದು ಕಲ್ಲಾದ್ಳಹಲ್ಯಾ ಬಾಲೆ! (ಯೋ)
-ಗೇಶ ಭಾರ್ಗವ ಗೈದ ತಾಯಿಯ ಕೊಲೆ! (ಅ)
-ನುಭವಿಸಿದಳ್ಬಾಯ್ಮುಚ್ಚಿದನ್ನಬಲೆ!
ಬೆಚ್ಚಿ ಪೂತನಿ ಸತ್ತಳುಣಿಸಿ ಮೊಲೆ! (ಬೆ)
-ಲೆ ನಿರಂಜನಾದಿತ್ಯಗಿತ್ತಾಗ ನೆಲೆ!!!

ನಿಶ್ಚಲ ತತ್ವ ಸಮಾಧಿ ಸಾಯುಜ್ಯ! (ಉ)   1(185)

-ಶ್ಚಲದ ನಿಜ ಸ್ಥಿತಿಯಾ ಸಾಯುಜ್ಯ!
ಯದ ಸಮಾಧಿಯದಾ ಸಾಯುಜ್ಯ!
ನ್ನಿಷ್ಟಮೂರ್ತಿ ತಾನಾಗಾ ಸಾಯುಜ್ಯ! (ತ)
-ತ್ವದರ್ಥವೆಲ್ಲಾ ಅದೊಂದಾ ಸಾಯುಜ್ಯ!
ತತಭ್ಯಾಸದಿಂದಾ ಸಾಯುಜ್ಯ!
ಮಾತಿಗಿದು ನಿಲುಕದಾ ಸಾಯುಜ್ಯ! (ಅ)
-ಧಿಕಾರಿ ಭಕ್ತಗಹುದಾ ಸಾಯುಜ್ಯ!
ಸಾಕಾರ, ನಿರಾಕಾರದಾ ಸಾಯುಜ್ಯ!
ಯುಕ್ತಿಯಲ್ಲದ ನಿಜದಾ ಸಾಯುಜ್ಯ! (ಆ)
-ಜ್ಯ ನಿರಂಜನಾದಿತ್ಯಗಿದಾ ಭೋಜ್ಯ!!!

ನಿಶ್ಚಲ ಭಕ್ತಿಯ ಫಲ ಮಂಗಳ! (ನಿ)   6(4223)

-ಶ್ಚಯವಿದೆಂದರಿತಾಗ್ಬೇಕ್ಮಂಗಳ!
ಕ್ಷ್ಯಾದಾತ್ಮ ಸದಾ ಸರ್ವಮಂಗಳ!
ಜನೆಯಿಂದೆಲ್ಲರಿಗೂ ಮಂಗಳ! (ಭ)
-ಕ್ತಿ, ಮುಕ್ತಿ, ಶಕ್ತಿ ಸ್ವರೂಪಾ ಮಂಗಳ!
ಮ, ನಿಯಮದಿಂದೆಲ್ಲಾ ಮಂಗಳ! (ಸ)
-ಫಲ ಸಾರ್ಥಕಾತ್ಮ ರೂಪಾ ಮಂಗಳ!
ಜ್ಜೆ ಬಿಟ್ಟ ದಿಗಂಬರಾ ಮಂಗಳ!
ಮಂದಮತಿ ನಿಂದಿಪನಾ ಮಂಗಳ! (ಗ)
-ಗನ ಸದೃಶಕ್ಕಾವುದ ಮಂಗಳ? (ಬಾ)
-ಳ, ಶ್ರೀ ನಿರಂಜನಾದಿತ್ಯಾ ಮಂಗಳ!!!

ನಿಶ್ಚಲ ಭಕ್ತಿಯವ ಮುದ್ದಣ್ಣ! (ನಿ)   4(1896)

-ಶ್ಚಯ ಬುದ್ಧಿಯುಳ್ಳವ ಮುದ್ದಣ್ಣ!
ಕ್ಷ್ಯಾರ್ಥಾನು ಸಂಧಾನಿ ಮುದ್ದಣ್ಣ!
ಗವದ್ಗೀತಾಪ್ರೇಮಿ ಮುದ್ದಣ್ಣ! (ಮು)
-ಕ್ತಿ ಸಾಮ್ರಾಜ್ಯಾಧಿಕಾರಿ ಮುದ್ದಣ್ಣ!
ರ ಗುರುವಿಗಾಪ್ತ ಮುದ್ದಣ್ಣ!
ಮುಚ್ಚು ಮರೆಯನ್ನೊಲ್ಲ ಮುದ್ದಣ್ಣ! (ಸ)
-ದ್ದಡಗಿಪ ಪ್ರಬುದ್ಧ ಮುದ್ದಣ್ಣ! (ಅ)
-ಣ್ಣ, ನಿರಂಜನಾದಿತ್ಯಾ ಮುದ್ದಣ್ಣ!!!

ನಿಶ್ಚಲತೆಯೇ ಗಾಂಭೀರ್ಯ! (ದು)   6(3393)

-ಶ್ಚಟವಿಲ್ಲದವನಾರ್ಯ!
ಕ್ಷ್ಮೀನರಸಿಂಹಾಚಾರ್ಯ!
ತೆರೆ ಮರೆಯಲ್ಲೇ ಕಾರ್ಯ!
ಯೇಕಾಂತದಲ್ಲಿ ಸೌಕರ್ಯ!
ಗಾಂಗೇಯನಲ್ಲಿತ್ತು ಶೌರ್ಯ!
ಭೀಮನದ್ದಸಾಧ್ಯ ಧೈರ್ಯ! (ಸೂ)
-ರ್ಯ, ನಿರಂಜನಾದಿತ್ಯಾರ್ಯ!!!

ನಿಶ್ಚಲಾತ್ಮನಿಗೆ ಕುತೂಹಲವಿಲ್ಲ! (ಆ)   2(902)

-ಶ್ಚರ್ಯಚಕಿತನವನಾಗುವುದಿಲ್ಲ! (ಕಾ)
-ಲಾಕಾಲವೆಣಿಸುವವನವನಲ್ಲ! (ಆ)
-ತ್ಮ ಸ್ಥಿತಿಯೇ ಅವನ ಜೀವನವೆಲ್ಲ! (ಅ)
-ನಿತ್ಯ ಮಾಯೆಯ ಪರವೆಯವಗಿಲ್ಲ! (ಹ)
-ಗೆತನ ಸಾಧಿಸುವಭ್ಯಾಸವಗಿಲ್ಲ!
ಕುಚೋದ್ಯದ ಜೀವ ಭಾವವನಿಗಿಲ್ಲ!
ತೂತುಗಳೆಣಿಸಿ ನಗುವವನಲ್ಲ!
ರಿ, ಹರ ಭೇದವನಿಗೇನಿಲ್ಲ!
ಕ್ಷ್ಯಗುರುಪಾದ ಬಿಟ್ಟಿರುವುದಿಲ್ಲ!
ವಿಶ್ವಾತ್ಮನೆಂಬುದ ಮರೆಯುವುದಿಲ್ಲ! (ಅ)
-ಲ್ಲ! ನಿರಂಜನಾದಿತ್ಯನೊಬ್ಬನೆಲ್ಲೆಲ್ಲ!!!

ನಿಷ್ಕಾಮ ಕರ್ಮಿ ವಿಮಲಮತಿ! (ದು)   4(1449)

-ಷ್ಕಾಮಿಯಾಗಿರ್ಪುದಾ ದುಷ್ಟಮತಿ!
ದ, ಮತ್ಸರ, ಶೂನ್ಯಾ ಸುಮತಿ!
ದ್ದು ಒದ್ದಾಡುವುದಾ ಕುಮತಿ! (ಧ)
-ರ್ಮಿಯೆಲ್ಲಾ ಕಾಲದಲ್ಲಾ ಸುಮತಿ!
ವಿಕರ್ಮಾಸಕ್ತಿಯೆಲ್ಲಾ ಕುಮತಿ!
ಧುರ ಭಾವಾಗಾರಾ ಸುಮತಿ! (ಹೊ)
-ಲಸು ವಿಚಾರಾಚಾರಾ ಕುಮತಿ!
ಹಾತ್ಮಾತ್ಮನಿಷ್ಠಾತ್ಮಾ ಸುಮತಿ! (ಇ)
-ತಿ ನಿರಂಜನಾದಿತ್ಯಾತ್ರಿಮತಿ!!!

ನಿಷ್ಕಾಮಿಗೆ ನಿರ್ದಾಕ್ಷಿಣ್ಯ ತಂಗೀ! (ದು)   6(3800)

-ಷ್ಕಾಲವೆಂಬುದವಗಿಲ್ಲ ತಂಗೀ!
ಮಿತಿಯಿಲ್ಲವ್ನಾನಂದಕ್ಕೆ ತಂಗೀ!
ಗೆಳೆಯನವನಿಳೆಗೆ ತಂಗೀ!
ನಿಲುವವನಚಲ ತಂಗೀ! (ಸ)
-ರ್ದಾರರಿಗವ ಸರ್ದಾರ ತಂಗೀ! (ಅ)
-ಕ್ಷಿ ಅವನದತಿ ಸೂಕ್ಷ್ಮ ತಂಗೀ! (ಪು)
-ಣ್ಯ, ಪಾಪ, ಅವನಿಗಿಲ್ಲ ತಂಗೀ!
ತಂದೆ, ತಾಯಿ ಲೋಕಕ್ಕವ ತಂಗೀ! (ಈ)
-ಗೀತ ನಿರಂಜನಾದಿತ್ಯ ತಂಗೀ!!!

ನಿಷ್ಠ, ಭಕ್ತ ಭಗವಂತಗಿಷ್ಟ! (ಶ್ರೇ)   6(4143)

-ಷ್ಠ ಆತನ ನರ ಜನ್ಮ ಸ್ಪಷ್ಟ!
ವ ಬಂಧನದಲ್ಲಸಂತುಸ್ಟ! (ಮು)
-ಕ್ತನಾಗಬೇಕೆಂಬುದವನಿಷ್ಟ!
ಜನೆ ತಂದಿಲ್ಲವಗೆ ಕಷ್ಟ!
ರ್ವವಿಲ್ಲದಾತ ದಾಸ ಶ್ರೇಷ್ಟ!
ವಂಚಿಸುವನಿವನನ್ನು ದುಷ್ಟ!
ತ್ವ ಸಿದ್ಧನೆಂದೂ ಆಗ ಭ್ರಷ್ಟ! (ತ್ಯಾ)
-ಗಿ ಸದ್ಗುರುವಿನಿಂದುಪದಿಷ್ಟ! (ಇ)
-ಷ್ಟ ನಿರಂಜನಾದಿತ್ಯನುಚ್ಚಿಷ್ಟ!!!

ನಿಷ್ಠೆಯಿಂದಾಗುವುದು ಪ್ರತಿಷ್ಠೆ! [ನಿ]   5(2901)

-ಷ್ಠೆಯನ್ನುಳಿಸಬೇಕಾ ಪ್ರತಿಷ್ಠೆ! (ಕೈ)
-ಯಿಂದ ತೋರದಾಗೇಕಾ ಪ್ರತಿಷ್ಠೆ?
ದಾಸದಾಸನಾಗಲಾ ಪ್ರತಿಷ್ಠೆ!
ಗುರಿ ಸೇರಿಸಬೇಕಾ ಪ್ರತಿಷ್ಠೆ! (ಸಾ)
-ವು ನೋವನ್ನಳಿಸ್ಬೇಕಾ ಪ್ರತಿಷ್ಠೆ!
ದುರ್ಮದ ಮರ್ದಿಸ್ಬೇಕಾ ಪ್ರತಿಷ್ಠೆ!
ಪ್ರಗತಿಗಾಗಿರ್ಬೇಕಾ ಪ್ರತಿಷ್ಠೆ!
ತಿಪ್ಪೆಗೆಸೆಯ್ಬಾರದಾ ಪ್ರತಿಷ್ಠೆ! (ನಿ)
-ಷ್ಠೆ ನಿರಂಜನಾದಿತ್ಯ ಪ್ರತಿಷ್ಠೆ!!!

ನಿಷ್ಪಕ್ಷಪಾತಾಧಿಕಾರಿ ಯಾರು? (ದು)   6(3307)

-ಷ್ಪರಿಣಾಮಕ್ಕೆಡೆಕೊಡ್ಡವರು!
ಕ್ಷಮಾಶೀಲರಾದ ಸಜ್ಜನರು!
ಪಾಪ-ಪುಣ್ಯ ವಿಚಾರ ಪರರು!
ತಾಳ್ಮೆಯಿಂದ ದೂರುಕೇಳ್ವವರು!
ಧಿಕ್ಕಾರ ಬುದ್ಧಿಯಿಲ್ಲದವರು!
ಕಾಮಾತುರರಲ್ಲದಿರ್ಪವರು!
ರಿಸಿ, ಮುನಿಗಳ ಸೇವಕರು!
ಯಾತನೆ ನಿವಾರಿಸುವವರು! (ಗು)
-ರು ನಿರಂಜನಾದಿತ್ಯ ದಾಸರು!!!

ನಿಸ್ವಾರ್ಥ ಸೇವೆಯಿಂದಾನಂದ!   6(3754)

ಸ್ವಾಮಿಗಿದು ಪರಮಾನಂದ! (ಅ)
-ರ್ಥಕ್ಕಾಗ್ಯಾದ್ರೆ ಕ್ಷಣಿಕಾನಂದ!
ಸೇತು ಬಂಧನ ರಾಮಾನಂದ! (ಧ)
-ವೆ ಸೀತೆಗಿದು ನಿತ್ಯಾನಂದ! (ನಾ)
-ಯಿಂದನ ಸೇವೆ ಧನಾನಂದ!
ದಾಮೋದರಗುದ್ಧಾರಾನಂದ!
ನಂಜುಂಡನದ್ದಖಂಡಾನಂದ! (ಕಂ)
-ದ ನಿರಂಜನಾದಿತ್ಯಾನಂದ!!!

ನೀ ನಡೆವ ದಾರಿ ನಿನ್ನೂರ್ಸೇರಿಸದು!   6(3729)

ನ್ನೂರು, ನಿನ್ನೂರು, ಒಂದೇ ಆಗಿಹುದು! (ಕಂ)
-ಡೆನಗಾ ದಾರಿ ಬೇಜಾರಾಗಿರುವುದು! (ದೇ)
-ವರ ಲೀಲೆ ವಿಚಿತ್ರವಾಗಿರುವುದು!
ದಾರಿ ತಪ್ಪಿ ಹಳ್ಳಕ್ಕೆ ಬೀಳ್ಬೇಕಾಗ್ವುದು! (ಅ)
-ರಿತಿದ ನೇರ ದಾರಿ ಹಿಡಿದ್ಕೊಳ್ವುದು!
ನಿನ್ನ ಸುಖ, ದುಃಖ, ನನ್ನದಾಗಿಹುದು! (ನ)
-ನ್ನೂರು ನೀ ಸೇರಿ ಸುಖವಾಗಿರುವುದು! (ಊ)
-ರ್ಸೇರಿದ್ಮೇಲೆ ಮತ್ತೆಲ್ಲಿಗೂ ಹೋಗ್ಬಾರದು! (ವೈ)
-ರಿಗಳಿಂದಿಂತು ಪಾರಾಗ್ಬೇಕಾಗಿಹುದು!
ದ್ಧರ್ಮ ಪಾಲನೆ ಮಾಡ್ಬೇಕಾಗಿಹುದು! (ಬಂ)
-ದು, ನಿರಂಜನಾದಿತ್ಯನಾಗಿರುವುದು!!!

ನೀ ನಡೆಸಿದಂತೆ ನಾನಪ್ಪಾ!   6(3410)

ನಗಿಲ್ಲ ಸ್ವಶಕ್ತಿಯಪ್ಪಾ!
(ಬಿ)-ಡೆ ನಿನ್ನ ಸೇವೆಯನ್ನಾನಪ್ಪಾ!
ಸಿಟ್ಟು ನನ್ಮೇಲೆ ಮಾಡ್ಬೇಡಪ್ಪಾ!
ದಂಡಿಸಬೇಡ ಕೂಸನ್ನಪ್ಪಾ!
ತೆಗೆ ಅಜ್ಞಾನ ಮುಸುಕಪ್ಪಾ!
ನಾಶವಾಗ್ವ ದೇಹವಿದಪ್ಪಾ!
ಮಸ್ಕಾರ ನಿನ್ನಡಿಗಪ್ಪಾ! (ಅ)
-ಪ್ಪಾ, ಶ್ರೀ ನಿರಂಜನಾದಿತ್ಯಪ್ಪಾ!!!

ನೀಡುವ ಕೈಗಡ್ಡಿ ಮಾಡಬೇಡ! (ಅ)   1(177)

-ಡುವಡಿಗೆಗೆ ಆತಂಕ ಬೇಡ! (ಅ)
-ವರಿವರ ಮಾತು ಕೇಳಬೇಡ!
ಕೈಗೆ ಬಂದ ತುತ್ತು ತಳ್ಳಬೇಡ!
ಡಸಾಗಿ ಬಾಲ ಬಿಚ್ಚಬೇಡ! (ಅ)
-ಡ್ಡಿಯಡಚಣೆಗೆ ಅಂಜಬೇಡ!
ಮಾಡುವ ಕೆಲಸ ಬಿಡಬೇಡ! (ಅ)
-ಡಗಿಸಿ ಕೊಡುವಭ್ಯಾಸ ಬೇಡ!
ಬೇಡಿ, ಕಾಡಿ, ಪೀಡಿಸಿರಬೇಡ! (ಅ)
-ಡಗಿ ನಿರಂಜನನಾಡಬೇಡ!!!

ನೀತಿ, ರೀತಿಗಳರುಹಿದೆಯಂದು!   5(2604)

ತಿಳಿದದ ಬಾಳುವರಿಲ್ಲ ಇಂದು! (ಬ)
-ರೀಬಾಯಿ ವೇದಾಂತ ಹೆಚ್ಚಾಯಿತಿಂದು!
ತಿನ್ನುವಾಹಾರ ಹೊಲಸಾಯಿತಿಂದು!
(ಸಂ)ಗ ಸಜ್ಜನರದ್ದು ಬೇಡವಾಯ್ತಿಂದು! (ಥ)
ಕು ಜೀವನಕ್ಕೆ ಮರ್ಯಾದೆಯಿಂದು!
ರುಜುಮಾರ್ಗಿಗಳಪರೂಪವಿಂದು!
ಹಿತಶತೃಗಳಾಡಳಿತವಿಂದು! (ಕಂ)
-ದೆರೆವಂತೆ ಮಾಡೆಲ್ಲರ ನೀನಿಂದು! (ಸ್ವ)
-ಯಂಪ್ರಭೆ ಬೆಳಗಬೇಕೆಲ್ಲೆಲ್ಲಿಂದು! (ಬಂ)
-ದು ನಿರಂಜನಾದಿತ್ಯನೇ ನೀನೆಂದು!!!

ನೀತಿ, ರೀತಿಯಿಂದ ಖ್ಯಾತಿಯಯ್ಯಾ (ಜಾ)   6(3350)

-ತಿ ಯಾವುದಾದರೇನಾಯಿತಯ್ಯಾ?
ರೀತಿಗೆಟ್ಟವ ಬ್ರಾಹ್ಮಣ್ನೇನಯ್ಯಾ? (ಪ)
-ತಿತ ನಂದನಾರ್ಪಾವನನಯ್ಯಾ! (ಬಾ

)
-ಯಿಂದ ಬಹಳ ಹೇಳ್ಬಹುದಯ್ಯಾ!
ತ್ತನಂತಾರ್ದಿಗಂಬರರಯ್ಯಾ? (ವ್ಯಾ)
-ಖ್ಯಾನ ಕೇಸರಿಗ್ಳಾದ್ರಾಯ್ತೇನಯ್ಯಾ?
ತಿಳಿದದ್ದು ಬಾಳಲ್ಲಿರ್ಬೇಕಯ್ಯಾ! (ಜ)
-ಯಭೇರಿ ಆಗ ಮೊಳಗ್ಬೇಕಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯನಾಗಯ್ಯಾ!!!

ನೀನಂದೆ, ನಾ ಬಂದೇನು ಮುಂದೆ?   3(1360)

ನಂಬಿದೆನು ನಾ ನಿನ್ನ ತಂದೆ! (ತಿಂ)
-ದೆ ನೀನುಣಿಸಿದ್ದೆಲ್ಲ ತಂದೆ!
ನಾಳೆಗೇನೂ ಇಟ್ಟಿಲ್ಲ ತಂದೆ!
ಬಂತು ತೃಪ್ತಿ ನಿನ್ನಿಂದ ತಂದೆ!
ದೇವರ ದೇವ ನೀನು ತಂದೆ! (ತ)
-ನುಜನುದ್ಧಾರ ಮಾಡು ತಂದೆ!
ಮುಂದೆ, ಹಿಂದೆ, ಅರಿಯೆ ತಂದೆ! (ತಂ)
-ದೆ ನಿರಂಜನಾದಿತ್ಯನೆಂದೆ!!!

ನೀನಡಗಡಗಿ ಕೂತಿರುವೆ! (ನಾ)   6(4068)

-ನಡಿಗಡಿಗೆ ನೋಡುತ್ತಿರುವೆ!
ಮರುಧರ ನೀನಾಗಿರುವೆ!
ಭಸ್ತಿಯೆನಿಸಿ ನಾನಿರುವೆ! (ಒ)
-ಡಲಗಾಶಿಸದೆ ನೀನಿರುವೆ! (ತ್ಯಾ)
-ಗಿಯಾಗಿ ಖಗ ನಾನಾಗಿರುವೆ!
ಕೂಳೆಲ್ಲಕ್ಕೂ ನೀನಿಕ್ಕುತ್ತಿರುವೆ!
ತಿರುಕನೆನಿಸಿ ನಾನಿರುವೆ! (ಗು)
-ರು ಜಗತ್ತಿಗೇ ನೀನಾಗಿರುವೆ! (ಶಿ)
-ವೆ ನಿರಂಜನಾದಿತ್ಯನೆನ್ನುವೆ!!!

ನೀನರಿ ಹರಿಯು ದಾರಿ!   5(2550)

ಮಿಸಾ ಪಾದವೇ ಗುರಿ!
ರಿಪುಕುಲುಕಾಲಾ ಹರಿ!
ದಿನಾಲ್ಕ್ಲೋಕೇಶಾ ಹರಿ!
ರಿಸಿ, ಮುನಿ ದಾಸಾ ಹರಿ!
ಯುಕ್ತಾಯುಕ್ತಾತ್ಮಾ ಶ್ರೀಹರಿ!
ದಾತ, ನಾಥ ದತ್ತಾ ಹರಿ! (ಹ)
-ರಿ, ನಿರಂಜನಾದಿತ್ಯರಿ!!!

ನೀನಲ್ಲಿಲ್ಲೋಡಾಡಿದರೆ ನನಗೇನು?   6(3415)

(ನಿ)-ನಗೆ ಅದರಿಂದುಂಟಾದ ಲಾಭವೇನು?
(ಇ)-ಲ್ಲಿ ಕೈಗೂಡದ್ದು ಅಲ್ಲಿ ಕೈಗೂಡೀತೇನು?
(ಅ)-ಲ್ಲೋಲ ಕಲ್ಲೋಲ ವೃತ್ತಿಗಲಭ್ಯ ನಾನು!
(ಕೊಂ)-ಡಾಡು ಗುರುಮಹಿಮೆ ಇದ್ದಲ್ಲಿ ನೀನು!
(ಗು)-ಡಿಯಾಗುವುದದರಿಂದ ನಿನ್ನ ತನು!
ಮೆ, ಶಮೆಯುಳ್ಳ ಭಕ್ತನುತ್ತಮನು!
(ತೆ)-ರೆ ಮರೆಯ ತಾಯಿಯಂತಿರ್ಪನವನು!
ಯವಿನಯದಿಂದಿರುವನವನು!
ಶ್ವರ ಸುಖಕ್ಕೆ ಆಶಿಸನವನು!
(ಯೋ)-ಗೇಶ್ವರಗಚ್ಚುಮೆಚ್ಚಾಗಿಹನವನು!
(ತಾ)-ನು ನಿರಂಜನಾದಿತ್ಯಾನಂದನವನು!!!

ನೀನಾಗಿ ಕೊಡುವ ರಜಾ ಕೆಲವು! (ನಾ)   4(2187)

-ನಾಗಿ ತಗೊಳ್ಳುವ ರಜಾ ಕೆಲವು! (ಮು)
-ಗಿಯುತಿದೆಯಿಂತುದ್ಯೋಗದಿರುವು!
ಕೊಡುವ ಕೂಲಿ ಸಾಕಾಗ್ದೇ ಹಸಿವು! (ದು)
-ಡುಕಿದರಾಗ್ದಧಿಕಾರಿಯೊಲವು! (ಭಾ)
-ವ, ಭಕ್ತಿಗೀಗ ಬಾರದು ದಯವು! (ಊ)
-ರ ಬಿಟ್ಟರೂ ಬಿಡದು ಪ್ರಾರಬ್ಧವು!
ಜಾತಿ ದ್ವೇಷದಿಂದಾಗ್ವುದನ್ಯಾಯವು!
ಕೆಟ್ಟಿಹುದಜ್ಞಾನದಿಂದೀ ಜಗವು!
ಕ್ಷ್ಯ ಸಿದ್ಧಿಯಿಂದ ನಿತ್ಯ ಸುಖವು! (ಈ)
-ವುದದ ನಿರಂಜನಾದಿತ್ಯಾತ್ಮವು!!!

ನೀನಾತುರನಾಗಿ ಬಂದಿದ್ದೆ!   1(321)

ನಾನೆನ್ನ ತಪದಲಿದ್ದಿದ್ದೆ!
ತುಸ ವೇಳೆ ನೀನು ಕಾದಿದ್ದೆ!
ಮ್ಯ ಮೋಡದಲವಿತಿದ್ದೆ!
ನಾನು ಭೇಟಿಗಾಗಿ ಬೇಗೆದ್ದೆ!
ಗಿರಿಯಂತಚಲನಾಗಿದ್ದೆ!
ಬಂದಾಗ ಬರಲಿ ಎಂದೆದ್ದೆ!
ದಿಟ್ಟ, ಆಗ ಬಂದೇಬಿಟ್ಟಿದ್ದೆ! (ಎ)
-ದ್ದೆ! ನಿರಂಜನಾದಿತ್ಯನೆದ್ದೆ!!!

ನೀನಾದ್ರೂ ಬರ್ಬಾರದೇ ಗೌರೀ?   4(2209)

ನಾನು ನಿನಗನ್ಯನೇ ಗೌರೀ? (ಆ)
-ದ್ರೂ ನಿನಗೆಷ್ಟನಾದ್ರ ಗೌರೀ? (ಅ)
-ಬಲನ ಮೇಲ್ಕೋಪೇಕೆ ಗೌರೀ? (ಇ)
-ರ್ಬಾರ್ದು ಹೀಗಾದ್ರಾನಿನ್ನು ಗೌರೀ! (ಹ)
-ರನರಸಿ! ಬಾ ಬೇಗ ಗೌರೀ!
ದೇಶ, ಕಾಲಾನ್ಕೂಲ್ವಿದೆ ಗೌರೀ!
ಗೌಪ್ಯ ನನ್ನಲ್ಲೇನಿಲ್ಲ ಗೌರೀ! (ಹ)
-ರೀ ನಿರಂಜನಾದಿತ್ಯ ಗೌರಿ!!!

ನೀನಾರೆಂದು ಸರಿಯಾಗಿ ಹೇಳಪ್ಪಾ!   3(1358)

ನಾನು ನೀನೇ ಅಲ್ಲವೇನೋ ಸೂರಪ್ಪಾ? (ನೂ)
-ರೆಂಟು ಬಾರಿ ಜಪಿಸೀ ತತ್ವವಪ್ಪಾ!
ದುರಿತ ದೂರಪ್ಪುದಿದರಿಂದಪ್ಪಾ!
ರಸ್ವತ್ಯಾಧಾರ ಸರ್ವರಿಗಪ್ಪಾ! (ಹ)
-ರಿ, ಹರ, ಬ್ರಹ್ಮ ಜ್ಞಾನದರಿಂದಪ್ಪಾ!
-ಯಾವ ಮತವಾದರೇನಾಯಿತಪ್ಪಾ? (ಯೋ)
-ಗಿ ರಾಜನ ಪ್ರಾಣಲಿಂಗವದಪ್ಪಾ!
ಹೇಳುವೆನಿದ ಶರಣರಿಗಪ್ಪಾ! (ಒ)
-ಳ, ಹೊರಗೀ ಸತ್ಯ ಸದಾ ನೋಡಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯ ಸರ್ವಾತ್ಮಪ್ಪಾ!!!

ನೀನಿರಬೇಕಾದಂತೆ ನೀನಿದ್ದರಾರದೇನು ಭಯ? (ಮು)   6(4112)

-ನಿರಾಯಯನೀವ ನಿನಗೆ ಸದಾ ಬೆಂಬಲದಭಯ! (ಹೊ)
-ರಗೊಳಗೆ ಶುದ್ಧ ಮಾಡುವುದಕ್ಕಿದೇ ಸಮಯ!
ಬೇರೆ ಮತ ಸ್ವೀಕಾರದಿಂದ ಬಾಳು ಅಶಾಂತಿಮಯ!
ಕಾಮ್ಯರ್ಥಿಗಾಗದಾವುದರಿಂದಲೂ ಇಚ್ಛಿಪಾದಾಯ!
ದಂಭ, ದರ್ಪ, ರಹಿತ ಕರ್ತವ್ಯ ನಿಷ್ಠೆಗೆಲ್ಲಾದಾಯ!
ತೆಘಳಿಕೆ, ಹೊಗಳಿಕೆಗೆ ಕಿವುಡಾದರಾದಾಯ!
ನೀತಿ ಬಾಹಿರರೊಡನಾಟ ಬಿಟ್ಟರೆ ನಿತ್ಯಾದಾಯ!
ನಿಶಿ, ದಿನ ಸ್ವರೂಪ ಧ್ಯಾನದಿಂದ ಸಾಯುಜ್ಯಾದಾಯ! (ಗ)
-ದ್ದಲದ ಪೂಜೆ, ಪುರಸ್ಕಾರಗಳಿಂದ ಅಲ್ಪಾದಾಯ!
ರಾಗ, ದ್ವೇಷ, ರಹಿತಾತ್ಮನಿಗೆ ನಿಜಾನಂದಾದಾಯ! (ಪ)
-ರನಿಂದಾಸಕ್ತರಿಗೆಲ್ಲಾ ಹಂದಿಯ ಜನ್ಮದಾದಾಯ!
ದೇವ ದೇವ ಸದ್ಗುರು ಶರಣನಿಗೆ ಮೋಕ್ಷಾದಾಯ! (ತ)
-ನು, ಮನ, ಧನಾರ್ಪಣಾ ಸೇವೆಯಿಂದ ಸಕಲಾದಾಯ!
ಗವದ್ಭಕ್ತ ಹೀಗಿದ್ದರಾತನಿಗಿನ್ನೇನು ಭಯ?
ಮಪಿತ ನಿರಂಜನಾದಿತ್ಯನಿಂದ ಸರ್ವೋದಯ!!!

ನೀನಿರಬೇಕು ಸ್ವಧರ್ಮದಲೇ ಸದಾ!   1(253)

ನಿಲಿಸಲಾರೆವು ಅನ್ಯರಾಡುವುದಾ!
ತಿಪತಿಯ ಆಟ ಸಂಸಾರ ಬಂಧಾ!
ಬೇಕು ರತಿಪತಿ ಪಿತನ ಸಂಬಂಧಾ!
ಕುಹಕ ನಾಶವಹುದು ಅದರಿಂದಾ!
ಸ್ವಸ್ಥಿತಿಯಲಿರಬೇಕು ನಿಜದಿಂದಾ!
ರ್ಮವಿದು ಜೀವರಿಗೆ ಸುಖಪ್ರದಾ! (ಕ)
-ರ್ಮ ಕಾಲದಿ ಕಲೆತಾಗುವುದಾಮೋದಾ!
ತ್ತನಾಡಿ ಮಾಡುವುದೆಲ್ಲವೂ ಸೀದಾ!
ಲೇವಡಿಗಾರನಿದನರಿಯದಾದಾ!
ರಳತನಕಹುದು ಬಹು ಬಾಧಾ!
ದಾರಿ ನಿರಂಜನಾದಿತ್ಯನ ಪ್ರಸಾದಾ!!!

ನೀನಿಲ್ಲಿಗೇಕೆ ಬಂದೆ ಕಂದಾ?   5(2633)

ನಿನಗಾಗ್ಬಂದೆ ಶಿವಾನಂದಾ! (ಅ)
-ಲ್ಲಿಲ್ಲೆಲ್ಲೆಲ್ಲೂ ನಾನಿಲ್ವೇ ಕಂದಾ? (ನಾ)
-ಗೇಶ ನಾ ಧನ್ಯ ಶಿವಾನಂದಾ! (ಬೇ)
-ಕೆನಿಸಿದಾಗೆಲ್ಲಾ ಬಾ ಕಂದಾ!
ಬಂದು ಹೋಗ್ವೆ ನಾ ಶಿವಾನಂದಾ! (ಇಂ)
-ದೆನಗಾನಂದವಾಯ್ತು ಕಂದಾ!
ಕಂಡು ನಾನಾದೆ ಶಿವಾನಂದಾ! (ಕಂ)
-ದಾ, ನಿರಂಜನಾದಿತ್ಯ ಕಂದಾ!!!

ನೀನು ಕರೆಯಬೇಕೆನ್ನ ದತ್ತಾ! (ನಾ)   4(2262)

-ನು ಬರುವೆನಾಗಲ್ಲಿಗೆ ದತ್ತಾ!
ನಿಕರ ಬರಲೀಗ ದತ್ತಾ! (ಬೆ)
-ರೆವೆ ನಾನಾಗ ನಿನ್ನಲ್ಲಿ ದತ್ತಾ! (ಜ)
-ಯ ಶ್ರೀಪಾದಕ್ಕಾಗಬೇಕು ದತ್ತಾ!
ಬೇಗೆ ಶಾಂತವಾಗಲೀಗ ದತ್ತಾ!
ಕೆಡುಕಾಗದು ನಿನ್ನಿಂದ ದತ್ತಾ! (ಉ)
-ನ್ನತಿಗೊಯ್ಯವವ ನೀನು ದತ್ತಾ!
ರ್ಶನಾನುಗ್ರಹ ಮಾಡು ದತ್ತಾ (ದ)
-ತ್ತಾ ನಿರಂಜನಾದಿತ್ಯಾತ್ಮ ದತ್ತಾ!!!

ನೀನು ನಾನಾರೆಂದರಿಯದೇ ದುಃಖ! [ಅ]   5(2926)

-ನುಮಾನದಿಂದಾಗಿನಿನಗೀ ದುಃಖ!
-ನಾನೀ ದೇಹವೆಂಬರಿವಿಂದೀ ದುಃಖ!
ನಾ ಶಿವನೆಂದರಿತರಿಲ್ಲಾ ದುಃಖ! (ಸೇ)
-ರೆಂದಾಗ ಸೇರದಿರ್ವುದ್ರಿಂದಾ ದುಃಖ!
ತ್ತ ಜಪದಿಂದಳಿವುದಾ ದುಃಖ! (ಗು)
-ರಿಯ ಮರೆತಿರುವುದ್ರಿಂದಾ ದುಃಖ! (ಪ್ರ)
-ಯತ್ನಿಸದಿದ್ದರೆ ಹೋಗದಾ ದುಃಖ!
ದೇಹ ದೇಗುಲವಾದರಿಲ್ಲಾ ದುಃಖ!
ದುಃಸ್ಥಿತಿ ತಪ್ಪದಿದ್ದರೆಲ್ಲಾ ದುಃಖ! (ಸು)
-ಖಾ ಶ್ರೀ ನಿರಂಜನಾದಿತ್ಯಾತ್ಮ ಸುಖ!!!

ನೀನು ನಾನು ನಾನು ನೀನು! [ಅ]   2(528)

-ನು ದಿನ ಧ್ಯಾನಿಸು ನೀನು!
ನಾಳೆ ಮಾತು ಬಿಡು ನೀನು! (ಅ)
-ನುಸರಿಸು ನನ್ನ ನೀನು!
ನಾಮಜಪ ಮಾಡು ನೀನು! (ಅ)
-ನುಮಾನಪಡದೆ ನೀನು!
‘ನೀ’ ‘ನಾ’ ನೊಂದೆಂದರಿ ನೀನು! (ನೀ)
-ನು ನಿರಂಜನಾದಿತ್ಯಾನು!!!

ನೀನು ನಿರಂಜನ, ನಾನಂಜನ!   4(1931)

ನುಡಿವೆಣ್ಪ್ರೇಮಾತ್ಮ ನಿರಂಜನ!
ನಿಶಾಶಾಪಾಶಾತ್ಮ ನಾನಂಜನ!
ರಂಗನಾಥಸ್ವಾಮಿ ನಿರಂಜನ!
ರಾಜನ್ಮ ಕ್ರಿಮಿ ನಾನಂಜನ!
ತಜನೋದ್ಧಾರಿ ನಿರಂಜನ!
ನಾದಾರಿ, ಭಿಕಾರಿ ನಾನಂಜನ!
ನಂದಕಂದಾನಂದ ನಿರಂಜನ!
ಗತ್ಸುಖಾನಂದ ನಾನಂಜನ!


ನಿರಂಜನಾದಿತ್ಯಾನನ!!!

ನೀನು ನೀನಾಗಬೇಕು! ಜಯ ವಿಜಯ ವಿಮಲ ಕಂದನಾಗಬೇಕು!    1(247)

ನುಡಿಯುವಾಮಾತು ನಿಜವರಿತಾಡುತಿರುವಭ್ಯಾಸವಿರಬೇಕು!
ನೀತಿ, ರೀತಿಗಳು ಸದಾ ಗುರಿಗಾಗಿ ನಿನ್ನೊಳಗೆ ಸ್ಫುರಿಸಬೇಕು!
ನಾಮ, ಜಪ, ಭಜನೆ, ಧ್ಯಾನ ಮಾತ್ರದಿಂದ ಸಂತುಷ್ಟನಾಗಿರಬೇಕು!
ಗನದಲಾದಿತ್ಯನಿರುವಂತೆ ನಿಶ್ಚಿಂತೆಯಿಂದಿರುತಿರಬೇಕು!
ಬೇರಾವ ಚಪಲಕಿನ್ನು ವಿಚಾರವನು ದಿನವಿರದಿರಬೇಕು!
ಕುದಿಯುತಿರಬೇಕು ಧ್ಯೇಯಸಿದ್ಧಿಗಾಗಿ, ಆಜ್ಞೆಯ ಪಾಲಿಸಬೇಕು!
ಗಕಾಗಿ ನಿನ್ನ ಜನ್ಮವಾಗಿಲ್ಲವೆಂಬುದನು ತಿಳಿದಿರಬೇಕು!
ದುನಾಥನಂದಾಡಿದುದಿಂದು ಕಾರ್ಯಗತವಾಗುತಿರಲೇಬೇಕು!
ವಿಜಯ, ದ್ರೌಪದಿಯರಂತೆ ಪೂರ್ಣ ಶರಣಾಗತನಾಗಿರಬೇಕು!
ನ್ಮಸಾರ್ಥಕವನ್ಯಬಗೆಯಿಂದ ಬಗೆಹರಿಯದರಿಯಬೇಕು!
ತ್ನವೆಂದಿಗೂ ವಿಫಲವಾಗದೆಂಬ ಧೈರ್ಯ ಬಲವಾಗಿರಬೇಕು!
ವಿಶುದ್ಧದಲಿ ಮನ ನಿಂತು ಸತತ ಕಾರ್ಯಸಾಧನೆಯಾಗಬೇಕು!
ತಿ ಹೊಲಸಾಗುವುದು ವಾದ, ವಿವಾದದಿಂದ; ಗಮನಿಸಬೇಕು!
ಗುಬಗೆಯಿಂದ ನೀನು ವಿಚಾರ ನಡೆಸಿ ಬಾಳುತಿರಬೇಕು!
ಕಂದ ಕುಂದಳಿಯುತಿದೆ ದೇಹವಿದರಿಯದಂತೆಂದರಿಯಬೇಕು!
ಯೆಯಿಂದ

ಭಿಸಿದೀ ಉಪದೇಶವಾಚರಿಸ್ಯಾನಂದಿಸಬೇಕು!
ನಾಳೆ ಸಾಧಿಸುವೆನೆಂದಿಂದು ನೀನು ನಿರುತ್ಸಾಹಿಯಾಗದಿರಬೇಕು!
ತಿಸುತಿದೆ ಕಾಲ ಮಾಯಾಜಾಲದಿಂದೆಚ್ಚರವಾಗಿರಬೇಕು!
ಬೇಗ ಬರಲಿದೆ ನಿನ್ನಭೀಷ್ಟಸಿದ್ಧಿಯದಿನ ಕಾಯುತಿರಬೇಕು!
“ಕುಪಿತ ನಿರಂಜನಾದಿತ್ಯನಾಗುವವನಲ್ಲ, ಅಪ್ಪಾ! ಎನಬೇಕು!!!

ನೀನು ಪಾಲುಗಾರನೆಂದ ಶಿವಾನಂದ!   6(3463)

(ನಾ)-ನು ನಿನ್ನವನೆಂದವನ ಪ್ರಿಯ ಕಂದ!
ಪಾರಮಾರ್ಥಿಯಾದ ಸದ್ಗುರು ಬಾ ಎಂದ!
(ಹಾ)-ಲು, ಮೊಸ್ರು, ತುಪ್ಪದೂಟವಲ್ಲಾತ್ಮಾನಂದ!
ಗಾಡಿಯೋಡದಾಯ್ತುಪವಾಸದಿಂದ!
ಸದೂಟ ಪ್ರತಿ ದಿನ ತಾನು ತಿಂದ!
ನೆಂಟ, ಭಂಟ ನಾದವನಿಗಿದಾನಂದ!
ಯೆ ನಿನಗೇಕಿಲ್ಲೆಂದನಾಗ ಕಂದ!
ಶಿವನಾನಂದ ನಿನ್ನಾನಂದವಾಗ್ಲೆಂದ!
ವಾದ, ಭೇದವನ್ನೀಗ ಸಾಕುಮಾಡೆಂದ!
ನಂಬಿ ಸುಖಿಯಾಗಿರೆಂದ ಶಿವಾನಂದ!
ತ್ತ ನಿರಂಜನಾದಿತ್ಯ ಶಿವಾನಂದ!!!

ನೀನು ಮಲಗಿಸಿದಲ್ಲಿ ಮಗು ಅಳುತ್ತಲಿದೆ! (ತಾ)   6(3765)

-ನು ಎದ್ದು ಬರಲೀಗ ಅಸಹಾಯಕವಾಗಿದೆ! (ಮ)
-ಮತೆಯಿಂದ ನೀನೇ ಎತ್ತಿ ಹಾಲೂಡಬೇಕಾಗಿದೆ! (ಕಾ)
-ಲ ವಿಳಂಬಮಾಡಿದರದು ಸತ್ತೇ ಹೋಗುತ್ತದೆ!
ಗಿರಿರಾಜ ಸುತೆಯಾದ ನಿನಗದು ಗೊತ್ತಿದೆ!
ಸಿಟ್ಟಿದರ ಮೇಲೆ ಮಾಡಲಿಕ್ಕದೇನು ಮಾಡಿದೆ!
ಶೇಂದ್ರಿಯದ ಗೂಡಲ್ಲಿ ಅದನ್ನೇಕಿರಿಸಿದೆ? (ಅ)
-ಲ್ಲಿ ಅದರ ಸ್ವತಂತ್ರವನ್ನು ಅಪಹರಿಸಿದೆ!
ತಿವಂತೆ ನಿನಗದು ಹೇಗೆ ಸರಿಹೋಗಿದೆ?
ಗುರು ಶಿವನೇ ನಿನ್ಗೆ ಸದ್ಬುದ್ಧಿ ಕೊಡ್ಬೇಕಾಗಿದೆ!
ವನಿಗೆ ನಾನೇನು ದೂರು ಹೇಳಬೇಕಾಗಿದೆ? (ಅ)
-ಳುವ ಧ್ವನಿ ಆತನಿಗೂ ಕೇಳುವ ಹಾಗೇ ಇದೆ! (ಚಿ)
-ತ್ತಕ್ಕೆ ತಕ್ಕೊಂಡು ನೀನೇ ಬಂದೆತ್ತಿಕೊಳ್ಬೇಕಾಗಿದೆ! (ಒ)
-ಲಿದು ಹಾಲಿನ ಸ್ಥನ ಚೀಪಿಸಲೇಬೇಕಾಗಿದೆ! (ತಂ)
-ದೆ ನಿರಂಜನಾದಿತ್ಯ ಪರಮೇಶ್ವರೇಚ್ಛೆ ಇದೇ!!!

ನೀನು ಸಿಕ್ಕದೆನಗಾಯ್ತು ಕಷ್ಟ! (ಅ)   4(2101)

-ನುದಿನ ತಲೆ ಬಿಸ್ಯಾಗೀ ಕಷ್ಟ! (ಹೇ)
-ಸಿಕೆಯ ಸಂಸಾರದಿಂದಾ ಕಷ್ಟ! (ತ)
-ಕ್ಕ ಪರಿಹಾರ ಕಾಣದೇ ಕಷ್ಟ! (ತಂ)
-ದೆ ನೀನಾಗಿರುವಾಗೇಕೀ ಕಷ್ಟ? (ಧ)
-ನಹೀನನಾದೆನೆಂದೆಲ್ಲಾ ಕಷ್ಟ! (ಸಂ)
-ಗಾತಿ ತಿನಾಗದಾಯ್ತೆಲ್ಲಾ ಕಷ್ಟ! (ಹೋ)
-ಯ್ತು ಶಾಂತಿಯಿದರಿಂದಾಗೀ ಕಷ್ಟ!
ರುಣೆದೋರಿ ಕಳೆಯೀ ಕಷ್ಟ! (ಶ್ರೇ)
-ಷ್ಟ ನಿರಂಜನಾದಿತ್ಯ ನೀನಿಷ್ಟ!!!

ನೀನು ಸಿದ್ಧ ಜೀವನ್ಮುಕ್ತನೇನು? (ಅ)   3(1353)

-ನುಮಾನವಿನ್ನೂ ಹೋಗಿಲ್ಲವೇನು?
ಸಿರಿಯಾಸೆ ನನಗಿಹುದೇನು? (ಶು)
-ದ್ಧ ಜೀವನ ನನ್ನದಲ್ಲವೇನು?
ಜೀನನಾಗಿ ನಾನಿರುವೆನೇನು? (ಅ)
-ವರಿವರ ಮಾತಾಡುವೆನೇನು? (ತ)
-ನ್ಮುದಿತನಾಗಿ ನಾನಿಲ್ಲವೇನು? (ಭ)
-ಕ್ತರೊಳಗೆ ಬೆರೆತಿಲ್ಲವೇನು?
ನೇತ್ರದಲ್ಲಿ ಬೆಳಕಿಲ್ಲವೇನು? (ನಾ)
-ನು ನಿರಂಜನಾದಿತ್ಯಾತ್ಮ ಭಾನು!!!

ನೀನು ಹೇಳಬೇಕು, ನಾನು ಕೇಳಬೇಕು!   6(3433)

ನುಡಿ ನಡೆಯೊಂದಾಗ್ದವ್ನ ಮಾತೇಕ್ಬೇಕು?
ಹೇಳಿತೀರದು ಅಲ್ಲಿಲ್ಲಿನ ತೊಡಕು!
(ಬ)-ಳಸುವರು ಧರ್ಮ, ಮಾಡ್ಲಿಕ್ಕೆ ಕೆಡಕು!
ಬೇಕಾಗಿಹುದೆಲ್ಲರಿಗೀಗ ಥಳಕು!
ಕುಚೇಲನಂಥವ್ರೀಕಾಲಕ್ಕೆ ಕೊಳಕು!
ನಾಟಕದ ವೇಷದಂತಾಯ್ತೀಗ್ಬದುಕು!
(ತ)-ನು, ಮನ, ಧನ ಗುರುಸೇವೆಗಾಗ್ಬೇಕು!
ಕೇದಾರೇಶ್ವರ ಅವ್ನೆಂದರಿಯಬೇಕು!
(ತಾ)-ಳ, ಮೇಳದಿಂದವನ ಭಜಿಸಬೇಕು!
ಬೇರೆ

ವರ ದೂಷಣೆ ಮಾಡ್ದಿರ್ಬೇಕು! (ಸಾ)
-ಕು, ನಿರಂಜನಾದಿತ್ಯನಾಗ್ಲಿಕ್ಕಿಷ್ಟ್ಸಾಕು!!!

ನೀನು ಹೇಳಿದೆ, ನಾನು ಬರೆದೆ!   3(1361)

ನುಡಿದಂತಿರಬೇಕೆಂದೊರೆದೆ!
ಹೇಳಿದ್ದು ಕೇಳಬೇಕೆಂದೊರೆದೆ! (ಬಾ)
-ಳಿಗಿದು ಅಗತ್ಯವೆಂದೊರೆದೆ! (ಎ)
-ದೆ ಶುದ್ಧವಾಗಿರಿಸೆಂದೊರೆದೆ!
ನಾಮ ಭಜನೆ ಮಾಡೆಂದೊರೆದೆ! (ಅ)
-ನುಮಾನ ಮಾಡಬೇಡೆಂದೊರೆದೆ!
ಯಲಾಡಂಬರೇಕೆಂದೊರೆದೆ! (ಮ)
-ರೆಯಬಾರದಪ್ಪನೆಂದೊರೆದೆ! (ತಂ)
-ದೆ, ನಿರಂಜನಾದಿತ್ಯಾತ್ಮನೆಂದೆ!!!

ನೀನು ಹೊಯ್ಸಳ, ನಾನು ನಿಶ್ಚಲ! [ತ]   3(1073)

-ನುಭಾವದಿಂದ ನೀನು ಹೊಯ್ಸಳ!
ಹೊಣೆಗಾರಾತ್ಮ ನಾನು ನಿಶ್ಚಲ! (ಪಾ)
-ಯ್ಸದಾಸೆಯಿಂದ ನೀನು ಹೊಯ್ಸಳ! (ಕೀ)
-ಳದೆಂದುಳಿವ ನಾನು ನಿಶ್ಚಲ!
ನಾನು, ನೀನೆಂಬ ನೀನು ಹೊಯ್ಸಳ! (ನಾ)
-ನು ನೀನೊಂದೆಂಬ ನಾನು ನಿಶ್ಚಲ! [ಅ]
-ನಿತ್ಯಕ್ಕಂಟಿಹ ನೀನು ಹೊಯ್ಸಳ! [ನಿ]
-ಶ್ಚಲಾತ್ಮನೆಂಬ ನಾನು ನಿಶ್ಚಲ! [ಬಾ]
-ಲ ನಿರಂಜನಾದಿತ್ಯಾತ್ಮ ಬಲ!!!

ನೀನೂ ಅಪ್ಪ, ನಾನೂ ಅಪ್ಪಾ ಶಿವಪ್ಪ! (ಏ)   3(1365)

-ನೂ ಸಂಶಯವಿದರಲ್ಲಿಲ್ಲವಪ್ಪ!
ವನಿಗೊಂದಾಟವಿದೆಲ್ಲವಪ್ಪ! (ಚ)
-ಪ್ಪರ ವಿಶಾಲಾಕಾಶವಿದಕಪ್ಪ!
ನಾಟಕ ಸ್ವಾರಸ್ಯವಾಗಿದೆಯಪ್ಪ!
ನೂಕು, ನುಗ್ಗಲು ಹೇಳಿತೀರದಪ್ಪ!
ನುದಿನವಿದಾಗುತಿದೆಯಪ್ಪ! (ತ)
-ಪ್ಪಾಡಿದರಾಗುವುದು ಶಿಕ್ಷೆಯಪ್ಪ!
ಶಿವಪ್ಪನಿದಕೆಲ್ಲಾ ನಾಯಕಪ್ಪ!
ರ ರಂಗನಾಯಕಿ ಗೌರಿಯಪ್ಪ! (ಅ)
-ಪ್ಪಾ ನಿರಂಜನಾದಿತ್ಯಾದಿ ಮೂಲಪ್ಪ!!!

ನೀನೂ, ನಾನೂ, ಒಂದೆಂದಂದ ಶಿವಾನಂದ!   6(4337)

“ನೂತನ, ಪುರಾತನ” ಶರೀರಕ್ಕೆಂದ!
ನಾಮ, ರೂಪಗಳ್ಬೇರ್ಬೇರೆ ದೇಹಕ್ಕೆಂದ! (ಕಾ)
-ನೂನು, ಕಟ್ಟಳೆಗಳೆಲ್ಲಾ ಅದಕ್ಕೆಂದ!
ಒಂಭತ್ತು ದ್ವಾರಗಳೀ ಶರೀರಕ್ಕೆಂದ! (ಎಂ)
-ದೆಂದಿಗೂನಂಬಿರ್ಬೇಡವುಗಳನ್ನೆಂದ! (ಬಂ)
-ದಂದಿನಿಂದ ಹೋಗ್ವತನಕ ನಿರ್ಬಂಧ!
ರಿದ್ರ, ಶ್ರೀಮಂತರ್ಗೆಲ್ಲಾ ಭವ ಬಂಧ!
ಶಿವಾನಂದ ನೀನೆಂಬುದೇ ಬ್ರಹ್ಮಾನಂದ!
ವಾಸನಾದಿ ಸುರರ್ಗಿಲ್ಲ ಆ ಆನಂದ!
ನಂದಕಂದ ಗೋವಿಂದಗಿತ್ತಾ ಆನಂದ!
ತ್ತ ನಿರಂಜನಾದಿತ್ಯ ಶಿವಾನಂದ!!!

ನೀನೆಂದೆಂದೂ ಸರ್ವಜ್ಞ ದೇವಯ್ಯಾ! (ನಾ)   4(1755)

-ನೆಂದೆಂದಿಗೂ ಅಲ್ಪಜ್ಞ ಜೀವಯ್ಯಾ! (ಎಂ)
-ದೆಂದೂ ನಿನ್ನಾಜ್ಞೆಯಂತೆಲ್ಲವಯ್ಯಾ!
ದೂರಿ ನನ್ನನ್ನು ಫಲವೇನಯ್ಯ?
ರಿಪಡಿಸಬೇಕು ನೀನಯ್ಯಾ! (ಗ)
-ರ್ವಕ್ಕೆ ಅಜ್ಞಾನ ಕಾರಣವಯ್ಯಾ!
ಜ್ಞಪ್ತಿ ನಿನ್ನದೆನಗಿರಲಯ್ಯಾ! (ಏ)
-ದೇದಿ ಎದೆ ಬತ್ತಿ ಹೋಯಿತಯ್ಯಾ! (ಅ)
-ವರಿವರೆಂಜಲೆಷ್ಟು ದಿನಯ್ಯಾ? (ಅ)
-ಯ್ಯಾ, ನಿರಂಜನಾದಿತ್ಯ ಕಾಯಯ್ಯಾ!!!

ನೀನೆನಗೆಲ್ಲಾ ಕಲಿಸಿದವನು!   5(3287)

ನೆನೆಯದಿರಲಾರೆ ನಿನ್ನ ನಾನು!
ಶ್ವರವೀಜಗತ್ತೆಂದಿಹೆ ನೀನು!
ಗೆಳೆಯ ನೀನೆನಗೆಂದಿಹೆ ನಾನು! (ಉ)
-ಲ್ಲಾಸ ತುಂಬಬೇಕು ನನ್ನಲ್ಲಿ ನೀನು!
ಣ್ಣಿಂದ ಸಾಕಾರ ಕಾಣ್ಬೇಕು ನಾನು! (ಒ)
-ಲಿದು ಬೇಗ ಬರಬೇಕೀಗ ನೀನು!
ಸಿರ ಬಾಗಿ ಬೇಡುತ್ತಿರುವೆ ನಾನು!
ತ್ತನಾಗಿ ದರ್ಶನ ನೀಡು ನೀನು!
ರವಿನ್ನಾವುದನ್ನೂ ಬೇಡೆ ನಾನು! (ನಾ)
-ನು ನಿರಂಜನಾದಿತ್ಯ ದತ್ತ ನೀನು!!!

ನೀನೆನ್ನ ಅತುಳ ಬಲ ದೇವ! (ನಾ)   2(905)

-ನೆನ್ನಿಷ್ಟದಂತೇನ ಮಾಳ್ಪೆ ದೇವ? (ನಿ)
-ನ್ನ ಕೃಪೆಯಿಂದೆಲ್ಲಾ ಸಾಧ್ಯ ದೇವ!
ಪಜಯ ನಿನ್ನುಪೇಕ್ಷೆ ದೇವ! (ಸಂ)
-ತುಷ್ಟ ನೀನಾದರೆ ಜಯ ದೇವ! [ಕ]
-ಳವಳ ನಿನ್ನನಾದರ ದೇವ!
ಲವಿತ್ತರಾನೇ ನೀನು ದೇವ! (ಬ)
-ಲ ಕಿತ್ತರಿದೊಂದು ಹೆಣ ದೇವ! [ಅ]
-ದೇಕೆನ್ನಲ್ಲಿಷ್ಟುದಾಸೀನ ದೇವ! (ದೇ)
-ವ, ನಿರಂಜನಾದಿತ್ಯಾತ್ಮ ದೇವ!!!

ನೀನೆನ್ನ ಕುಠೀರ ಕಾಣಪ್ಪಾ [ನಾ]   2(965)

-ನೆಲ್ಲಿ ನಿನ್ನ ಬಿಟ್ಟಿಹೆನಪ್ಪಾ? (ನ)
-ನ್ನಲ್ಲೇಕಾರೋಪ ನಿನಗಪ್ಪಾ?
ಕುಶಲ ಕೇಳ್ಬೇಕು ನೀನಪ್ಪಾ!
ಠೀವಿ ನನಗೇನೂ ಬೇಡಪ್ಪಾ! (ಬ)
-ರ ಮಾಡಿಕೋ ನಿನ್ನೊಳಗಪ್ಪಾ!
ಕಾರ್ಯವೆಲ್ಲಾ ನಿನಗಾಗಪ್ಪಾ! (ಗ)
-ಣಪತಿ ನೀನಲ್ಲವೇನಪ್ಪಾ? (ಅ)
-ಪ್ಪಾ, ನಿರಂಜನಾದಿತ್ಯಾಗಪ್ಪಾ!!!

ನೀನೆನ್ನ ತುಂಬಿ, ನಾ ನಿನ್ನ ನಂಬಿ!   5(3114)

ನೆನೆವಾಗಾನೇಕನ್ಯಾವಲಂಬಿ? (ನ)
-ನ್ನ ನಿನ್ನಂತೆ ಮಾಡು ಸ್ವಾವಲಂಬಿ!
ತುಂಬುರು, ನಾರದರಂತಿರೆಂಬಿ!
ಬಿರಡೆ ತಿರುಗ್ವಾಗ್ತುಂಡು ಕಂಬಿ!
ನಾದವೀಗೆಂತು ಬರುವುದೆಂಬಿ?
ನಿನ್ನ ನೀನರಿತಿರ ಬೇಕೆಂಬಿ! (ಉ)
-ನ್ನತಿಗೇರಿಸುವವರಾರೆಂಬಿ?
ನಂದಕಂದ ಗೋವಿಂದ ತಾನೆಂಬಿ! (ನಂ)
-ಬಿ, ನಿರಂಜನಾದಿತ್ಯನಾಗೆಂಬಿ!!!

ನೀನೆನ್ನ ಬಿಟ್ಟಿರುವುದೆಂತು? (ನಾ)   2(875)

-ನೆಲ್ಲಕ್ಕಾಧಾರಲ್ಲೆಂಬುದೆಂತು? (ನಿ)
-ನ್ನ ನಾ ಕೂಡದಿರ್ಪುದದೆಂತು?
ಬಿಸಿ, ಬೆಂಕಿ ಬೇರಿರ್ಪುದೆಂತು? (ಹು)
-ಟ್ಟಿದ್ದು ಸಾವಿಲ್ಲದಿರ್ಪುದೆಂತು? (ವ)
-ರುಷ, ನಿಮಿಷನ್ಯೆಂಬುದೆಂತು? [ನೋ]
-ವು, ಗಾಯ ಬೇರ್ಬೇರೆಂಬುದೆಂತು?
ದೆಂಟಿಲ್ಲದೆಲೆಯಿರ್ಪುದೆಂತು? (ತಂ)
-ತು, ನಿರಂಜನಾದಿತ್ಯ ಜಂತು!!!

ನೀನೆನ್ನ ಮರೆಯ ಬಲ್ಲೆ! (ನಾ)   6(3514)

-ನೆನಿತ್ತು ಮರೆಯಬಲ್ಲೆ! (ನ)
-ನ್ನ ಕರ್ತವ್ಯ ಬಿಡಲೊಲ್ಲೆ!
ದಾಂಧಳಾಗ್ನೀನಿರಲ್ಲೇ! (ಕ)
-ರೆದು ಸುಸ್ತಾಗ್ವೆನಾನಿಲ್ಲೇ! (ಕಾ)
-ಯವಸ್ಥಿರವೆಂದ್ನಾ ಬಲ್ಲೆ!
ಲ್ಲೆ! ನೀನಲ್ಲೇ, ನಾನಿಲ್ಲೇ! (ಇ)
-ಲ್ಲೆ

ನಿರಂಜನಾದಿತ್ಯೆಲ್ಲೆ!!!

ನೀನೆಲ್ಲವಾಗಿಹೆ! ಎಲ್ಲಾ ನೀನಾಗ್ವುದೆಂದಿಗಪ್ಪಾ?   1(277)

ನೆರವಿತ್ತು ಸರ್ವರನು ಕಾಯುವವ ನೀನಪ್ಪಾ! (ಅ)
-ಲ್ಲದಿರೆ ಬಾಳುವುದು ಜಗಕೆ ಅಸಾಧ್ಯವಪ್ಪಾ!
ವಾದ, ಭೇದಗಳಿಂದೆಲ್ಲರೂ ನೀನಾಗಿಲ್ಲವಪ್ಪಾ!
ಗಿರಿ, ಗುಹೆಯಲಾಗುತಿದೆ ತಪಸಿದಕಪ್ಪಾ!
ಹೆರೆವರು, ತನ್ನವರೆಂಬುದನು ಅಳಿಸಪ್ಪಾ!
ಲ್ಲರೂ ನಿನ್ನಂತಾದರೆ ಆ ಕೀರ್ತಿ ನಿನಗಪ್ಪಾ! (ಅ)
-ಲ್ಲಾಡುತಿದೆ ಜೀವರಾಶಿ ಅಹಂಕಾರದಿಂದಪ್ಪಾ!
ನೀತಿ, ರೀತಿಗಳ ಕಲಿಸಿ ನಿನ್ನಂತಿರಿಸಪ್ಪಾ!
ನಾಮ ಭಜನೆ ನಿತ್ಯ ಮಾಡುವುದು ತಪ್ಪಿಲ್ಲಪ್ಪಾ! (ಆ)
-ಗ್ವುದಾಗದೇನೂ ಉಳಿದಿದೆಯೇ? ನೀನೇ ಹೇಳಪ್ಪಾ! (ಅ)
-ದೆಂದಿಗಾಗುವುದೋ ನಿನ್ನ ಕರುಣೆ ಕಾಣೆನಪ್ಪಾ!
ದಿನ, ರಾತ್ರಿ ಇದೇ ಚಿಂತೆ ನನಗಾಗಿಹುದಪ್ಪಾ!
ತಿ ನೀನಲ್ಲದೆ ಅನ್ಯಥಾ ಬೇರೊಂದಿಲ್ಲವಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯಾನುಗ್ರಹ ಬೇಗಾಗಲಪ್ಪಾ!!!

ನೀನೇ ನನಗೆ ಗತಿಯೆಂದರಿತೆನೀಗ! (ಅ)   6(4381)

-ನೇಕಜನ್ಮಗಳ ಕಳೆಗೆ ಮೆಚ್ಚಿ ಭೋಗ!
ರಜನ್ಮದುದ್ದೇಶವರಿಯದಾಯ್ತಾಗ!
ರಳಿಸಿತೆನ್ನ ತರತರದ ರೋಗ! (ಹೊ)
-ಗೆ ಸುತ್ತಿದಂತಾಗಿತ್ತೆನಗೆ ಆಗ ಜಗ! (ಮೊ)
-ಗ ಕಳೆದ್ಕೊಂಡಿತ್ತದರ ಸುಂದರರಂಗ!
ತಿರುತಿರುಗಿ ಆಯಿತೆಲ್ಲಾ ಕಾರ್ಯ ಭಂಗ! (ಬಾ)
-ಯೆಂಬವರನ್ನೇ ನಾನು ಕಾಣದಾದೆನಾಗ!
ರ್ಪ, ದಂಭದಿಂದ ಹೊಡೆದಾಟ ಆಗಾಗ! (ಪ)
-ರಿ ಪರಿಯ ರೀತಿಯಲ್ಲಾಯ್ತು ದೇಹತ್ಯಾಗ! (ಸು)
-ತೆ, ಸುತ, ಸತಿಯರು ಹಿಂದುಳಿದರಾಗ!
ನೀನನುಗ್ರಹಮಾಡಿದೆ ಯೋಗವನ್ನೀಗ!
ಭಸ್ತಿ ನಿರಂಜನಾದಿತ್ಯನಾದೆನೀಗ!!!

ನೀನೇ ನಾನಾಗುವುದಕ್ಕೆ ನಿನ್ನ ಕೃಪೆ ಬಹಳ!   6(4326)

ನೇರ ದಾರಿಯಲ್ಲಿ ನಡೆಸುವ ರೀತಿ ಬಹಳ!
ನಾನದನ್ನರಿಯದೇ ಆಗಿರುವೆನು ಮರುಳ!
ನಾಸ್ತಿಕ ನಾನೆನಿಸದಿರಬೇಕು ನಿನ್ನ ತರಳ!
ಗುಹ್ಯಾ ಚಾಪಲ್ಯವೆಂಬುದು ಘೋರತರ ಗರಳ! (ಯಾ)
-ವುದಿದಕುತ್ತಮೌಷಧಿಯೆಂದರುಹು ದಯಾಳ!
ರ್ಶನಾನುಗ್ರಹವುಂಟಾದರೆ ಎಲ್ಲಾ ನಿರಾಳ! (ಹ)
-ಕ್ಕೆನಗಿದಕ್ಕಿಲ್ಲೆಂದರೆ ನಿನ್ನ ತರಳ ಕೇಳ!
ನಿನ್ನ ಅಂತರಂಗವನ್ನರಿತವರು ವಿರಳ! (ನ)
-ನ್ನ ಕುಣಿತಕ್ಕಿರಬೇಕು ನಿನ್ನ ಡಮರು ತಾಳ!
ಕೃತಕೃತ್ಯ ನಾನಾಗಿ ಆಗುವೆನು ನಿನ್ನ ಬಾಳ!
ಪೆರರವಗುಣವನ್ನೆಂದೂ ನಿನ್ನ ಮಗ ಹೇಳ!
ರಿದೇ ನಿಂದಿಪನಿವನನ್ನಜ್ಞಾನೀ ದುರುಳ!
ಸಿದು ಹಾರುವುದು ಕುರಿಯಮೇಲೆ ಆ ತೋಳ! (ಒ)
-ಳ, ಹೊರಗೆ ನಿರ್ಮಲ ನಿರಂಜನಾದಿತ್ಯ ಬಾಳ!!!

ನೀನೇ ನಾನಾಗುವುದೆಂದಿಗೆ! (ನೀ)   5(2863)

-ನೇ ಹೇಳಬೇಕದನೆನಗೆ!
ನಾನ್ಯಾರೆಂದರಿ ಮೊದಲಿಗೆ!
ನಾನಲ್ಲದ್ದನ್ನು ಬಿಡಾಮೇಗೆ!
ಗುಹ್ಯಾದಿಂದ್ರಿಯ ಜಯವಾಗೆ! (ಆ)
-ವುದೂ ಆಸೆಗಳಿಲ್ಲದಾಗೆ! (ಅ)
-ದೆಂಬಾತ್ಮ ನಾನೆಂಬರಿವಾಗೆ!
ದಿನ, ರಾತ್ರಿ ಚಿಂತನೆಯಾಗೆ! (ಹೀ)
-ಗೆ ನಿರಂಜನಾದಿತ್ಯನಾಗೆ!!!

ನೀನೇ ಸರ್ವಸ್ವವೆಂದರಿತವಗಿನ್ನೇನ್ಬೇಕು? (ತಾ)   6(3652)

-ನೇ ನೀನಾಗಿ ನಿತ್ಯಾನಂದನಾದರದೇ ಸಾಕು!
ಮಾಜ ನಿರ್ಬಂಧಕ್ಕೆ ಜೀವ ಕಟ್ಟು ಬೀಳ್ಬೇಕು! (ಗ)
-ರ್ವ ತಲೆಗೇರಿದವನಿಗೆ ಎಲ್ಲವೂ ಬೇಕು!
ಸ್ವರೂಪ ಸಿದ್ಧಿ ಅವನಿಗೆ ಹೇಗಾಗಬೇಕು?
ವೆಂಕ್ಟೇಶನ ಹುಂಡಿ ತುಂಬುವುದವನಿಗ್ಬೇಕು!
ಯೆ ಬಂದಿಲ್ಲೆಂದು ಸದಾ ಅಳುತ್ತಿರಬೇಕು! (ಅ)
-ರಿಷಡ್ವರ್ಗಕ್ಕವ ಗುಲಾಮನಾಗಿರಬೇಕು!
ರಲೆ, ತಂಟೆಗಾರಗೆಂತು ಶಾಂತಿ ಸಿಗ್ಬೇಕು?
ರ ಗುರುವಿಗವನು ಶರಣಾಗಬೇಕು!
ಗಿರಿಜಾಪತಿಯೇ ಗುರುವೆಂದರಿಯಬೇಕು! (ಇ)
-ನ್ನೇನೇ ಮಾಡಿದ್ರೂ ವ್ಯರ್ಥವೆಂದು ತಿಳಿಯಬೇಕು! (ತಿ)
-ನ್ಬೇಕು ಗುರುಪ್ರಸಾದ! ಬಿಡ್ಬೇಕ್ಥಳಕು!
ಕುಲಕೆ ಬೇಕು ನಿರಂಜನಾದಿತ್ಯ ಬೆಳಕು!!!

ನೀನೇಕಾದೆ ಹೀಗೆ ಮನವೇ?   5(3269)

ನೇರ ದಾರಿ ತೊರೆದಿರುವೆ!
ಕಾಡು ದಾರಿ ಹಿಡಿದಿರುವೆ!
ದೆವ್ವದ ಸಂಗ ಕಟ್ಟಿರುವೆ!
ಹೀನ ಕೃತ್ಯ ಮಾಡುತ್ತಿರುವೆ!
ಗೆಳೆಯನ ಮರೆತಿರುವೆ!
ದನನ ವರಿಸಿರುವೆ!
ಲ್ಲನನ್ನೇಕೆ ಬಿಟ್ಟಿರುವೆ! (ಧ)
-ವೇ! ನಿರಂಜನಾದಿತ್ಯಾಧವೇ!!!

ನೀನೇಕಿಂದು ಬಹು ಬೇಗೆದ್ದೆ?   4(1642)

ನೇಮದಂತೆದ್ದೆಂದು ನಾನಿದ್ದೆ!
ಕಿಂಡಿಯಿಂದ ನಿನ್ನ ಕಂಡಿದ್ದೆ!
ದುಡಿಮೆ ನಿನ್ನಿಷ್ಟವೆಂದೆದ್ದೆ!
ಡಿಸಿದ್ದುಣಬೇಕೆಂದೆದ್ದೆ!
ಹುಟ್ಟ ಸಾವ ಗುಟ್ಟೇನೆಂದೆದ್ದೆ!
ಬೇಕು ಧ್ಯಾನವಿದಕ್ಕೆಂದೆದ್ದೆ!
ಗೆಳತಿ ತಾರೆ ನೀನೆಂದೆದ್ದೆ! (ಗೆ)
-ದ್ದೆ ನಿರಂಜನಾದಿತ್ಯಾಗ್ಯೆದ್ದೆ!!!

ನೀನೇಕಿಷ್ಟು ಪ್ರೀತಿ ನನ್ನಲ್ಲಿಟ್ಟಿ?   6(3526)

(ನಾ)-ನೇ ನೀನೆಂದು ಭರವಸೆ ಕೊಟ್ಟಿ!
ಕಿರಿಯ ನೀನಾದರೇನೆಂದ್ಬಿಟ್ಟಿ!
(ಇ)-ಷ್ಟು ವಿಶಾಲ ನನ್ನ ಗುರುದೃಷ್ಟಿ!
(ಸು)-ಪ್ರೀತ ನಿನ್ನ ಸೇವೆಯಿಂದಂದ್ಬಿಟ್ಟಿ!
ತಿಪ್ಪೆಯಿಂದೆನ್ನ ಮೇಲೆತ್ತಿಬಿಟ್ಟಿ!
ಶ್ವರವಿದೆಂಬ ಜ್ಞಾನಕೊಟ್ಟಿ!
(ಅ)-ನ್ನ, ಬಟ್ಟೆ, ಕೂತಲ್ಲಿಗೇ ತಂದಿಟ್ಟಿ!
(ಅ)-ಲ್ಲಿಲ್ಲಿ ಸುತ್ತುವುದು ತಪ್ಪಿಸ್ಬಿಟ್ಟಿ!
(ಇ)-ಟ್ಟಿ ನಿರಂಜನಾದಿತ್ಯನಾಗಿಟ್ಟಿ!!!

ನೀನೇಕೆ ಮರೆಯಾದೆ ದೇವ?   2(942)

ನೇಹವೆನ್ನದನ್ಯಾಯ್ತು ದೇವ!
ಕೆಟ್ಟವಳುನಾನಾದೆ ದೇವ!
ನೆಗನ್ಯಾಯಗೈದೆ ದೇವ! (ನೆ)
-ರೆಯ ನಗೆಗೀಡಾದೆ ದೇವ!
ಯಾಕೆ ನಿರ್ದಯನಾದೆ ದೇವ? (ಎ)
-ದೆಯಾಣ್ಮೆನ್ನ ಕ್ಷಮಿಸು ದೇವ!
ದೇವಿಯ ಸ್ವೀಕರಿಸು ದೇವ! (ಧ)
-ವ, ನಿರಂಜನಾದಿತ್ಯ ದೇವ!!!

ನೀನೇಕೆ ಹೀಗಾದ್ಯೋ? ನಾ ಕಾಣೆ!   5(2700)

ನೇರದಾರಿ ನಿನ್ನಲ್ಲಿ ಕಾಣೆ!
ಕೆಟ್ಟಡಿಗಡ್ವುದೇಕೋ ಕಾಣೆ!
ಹೀನವೃತ್ತಿಯದೇಕೋ ಕಾಣೆ!
ಗಾಟಿತನ ನಿನ್ಗೇಕೋ ಕಾಣೆ! (ಉ)
-ದ್ಯೋಗ ಸದ್ಗುರುಸೇವೆ ಕಾಣೆ!
ನಾಮ ಜಪ ಬಿಡ್ಗಾರ್ದು ಕಾಣೆ!
ಕಾಮನನ್ನು ಜೈಸ್ಬೇಕು ಕಾಣೆ! (ಎ)
-ಣೆ ನಿರಂಜನಾದಿತ್ಯ ಕಾಣೆ!!!

ನೀನೇನನಗೆ ಕೊಡಬಲ್ಲೆ? (ನಾ)   5(3122)

-ನೇ ನೀನೆಂಬುದನು ನಾ ಬಲ್ಲೆ! (ಮ)
-ನೆ ಮಠಾಧಿಪತ್ಯ ನಾನೊಲ್ಲೆ!
ಶ್ವರವದೆಂದು ನಾ ಬಲ್ಲೆ!
ಗೆಡೆ, ಗೆಣ್ಸೇ ತಿಂದಿರಬಲ್ಲೆ!
ಕೊಟ್ಟಷ್ಟಕ್ಕೇ ತೃಪ್ತಿ ಪಡಬಲ್ಲೆ! (ಬ)
-ಡತನಕ್ಕೆ ನಾನಳಲೊಲ್ಲೆ!
ರಡು ಜೀವನ ನಾನೊಲ್ಲೆ! (ಬ)
-ಲ್ಲೆ, ನಿರಂಜನಾದಿತ್ಯನೆಲ್ಲೆ!!!

ನೀನೊಪ್ಪಿದವ ಮುಪ್ಪ ಕಳೆದ! (ನೀ)   6(4314)

-ನೊಪ್ಪದಿರ್ದವ ಮುಪ್ಪು ತಳೆದ! (ಅ)
-ಪ್ಪಿ ಶ್ರೀಪಾದ ಪ್ರಹ್ಲಾದ ಉಳಿದ!
ರ್ಪದಿಂದವನಪ್ಪನಳಿದ!
ನವಾಸ ಶ್ರೀರಾಮ ಕಳೆದ!
ಮುಖ ಮುಚ್ಚಿ ರಾವಣನಳಿದ! (ಅ)
-ಪ್ಪಣೆ ಆಂಜನೇಯ ಪಾಲಿಸಿದ!
ನಕಮಾಲೆ ಉಪೇಕ್ಷಿಸಿದ! (ಕ)
-ಳೆದು ಕಪಿತ್ವ ಬ್ರಹ್ಮ ತಾನಾದ!
ತ್ತ ನಿರಂಜನಾದಿತ್ಯನಾದ!!!

ನೀನೊಬ್ಬ ಪರಮ ಸಾಹಸಿಯಾಗಿರುವೆ!   4(2139)

ನೊಣಗಳನ್ನೂ ಆಹುತಿ ತಗೊಳ್ತಿರುವೆ! (ದಿ)
-ಬ್ಬಣದ ಮೆರವಣ್ಗಿಯಂತೆ ಹೋಗ್ತಿರುವೆ!
ಡ್ಬಾರದ ಕಷ್ಟಕ್ಕಾದ್ರೂ ಅಂಜದಿರುವೆ! (ವ)
-ರ ಗಿರಿ ಶಿಖರವಾದ್ರೂ ಹತ್ತುತಿರುವೆ!
ನೆಮನೆಯಲ್ಲೂ ಕಾಣ್ಸಿಕೊಳ್ಳುತ್ತಿರುವೆ!
ಸಾವು, ನೋವುಗಳ ಭಯವಿಲ್ಲದಿರುವೆ!
ಸಿ, ಒಣಗಿದ್ದೆನ್ನದೆ ತಿನ್ನುತ್ತಿರುವೆ!
ಸಿರಿವಂತರು, ಬಡವರೆನ್ನದಿರುವೆ!
ಯಾವಾಗಲೂ ಕರ್ತವ್ಯ ಮಾಡುತ್ತಲಿರುವೆ!
ಗಿಡ, ಮರಗಳಲ್ಲೂ ಓಡಾಡುತ್ತಿರುವೆ! (ಹು)
-ರುಪು ನಿನ್ನದು ಅನುಪಮವಾಗಿರುವೆ! (ಸೇ)
-ವೆ, ನಿರಂಜನಾದಿತ್ಯಗಾಗಿ ಮಾಡ್ತಿರುವೆ!!!

ನೀನೊಬ್ಬಾದರ್ಶಾಧ್ಯಾಪಕನಯ್ಯಾ!   5(2703)

ನೊಸಲ್ಗಣ್ಣನಿಗಾಪ್ತ ನೀನಯ್ಯಾ! (ದ)
-ಬ್ಬಾಳಿಕೆಗೆ ವಿರೋಧಿ ನೀನಯ್ಯಾ!
ಯೆ ನಿನ್ನ ಹುಟ್ಟು ಗುಣವಯ್ಯಾ! (ಸ್ಪ)
-ರ್ಶಾಸ್ಪರ್ಶ ಭ್ರಾಂತಿ ನಿನಗಿಲ್ಲಯ್ಯಾ!
ಧ್ಯಾನ ನಿನಗೆ ರಾಮನದಯ್ಯಾ!
ರಮ ಭಕ್ತಾಂಜನೇಯಾಪ್ತಯ್ಯಾ!
ರ್ತವ್ಯನಿಷ್ಠನಾಗಿಹೆಯಯ್ಯಾ!
ಯ, ವಿನಯಾನ್ವಿತ ನೀನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯನೆನ್ನಯ್ಯಾ!!!

ನೀನೊರೆದದ್ದು ನಾ ಬರೆದೆ! (ನಾ)   4(1903)

-ನೊರೆವುದು ಬಾಕಿನ್ನೇನಿದೆ? (ಇ)
-ರೆ ನೆರವು ಭಯವೇನಿದೆ? (ಉ)
-ದಯ ನಿನ್ನದೆನ್ನಲ್ಲಾಗಿದೆ! (ಮು)
-ದ್ದು ಮಗು ನಿನಗಿದಾಗಿದೆ!
ನಾನು, ನೀನೆಂಬುದಿನ್ನೆಲ್ಲಿದೆ?
ದುಕಿನೊಡಕು ಹೋಗಿದೆ! (ಪೊ)
-ರೆ ಹರಿದು ನೇತ್ರ ಶುಭ್ರಾಗಿದೆ! (ಎ)
-ದೆ ನಿರಂಜನಾದಿತ್ಯಗಾಗಿದೆ!!!

ನೀನೊರ್ವ ಅನುಭವಿ ಕವಿ!   5(3098)

ನೋಡಿದರೆ ನೀನೊಬ್ಬ ಭವಿ! (ಗ)
-ರ್ವರಹಿತೋಕ್ತ ನಿನ್ನದ್ಸವಿ!
ನುಗ್ರಹದಾತೆ ಶಾಂಭವಿ! (ಜ)
-ನುಮಾಂತರದ್ನೀನ್ಪುಣ್ಯಜೀವಿ!
ಯ ನಿನಗಿಲ್ಲೆಂಬಳ್ಭುವಿ!
ವಿಶ್ವಾಸಿ ವಿಶ್ವಕವಿ ರವಿ!
ರ್ಮಯೋಗಿಗೇತಕ್ಕೆ ಗವಿ? (ಭ)
-ವಿ, ನಿರಂಜನಾದಿತ್ಯ ರವಿ!!!

ನೀನ್ಕೇಳಿದ್ದನ್ನಿತ್ತೆ ನಾನೀಗ! (ನಾ)   6(3833)

-ನ್ಕೇಳಿದ್ದ ಕೊಡ್ಬೇಕು ನೀನೀಗ! (ಉ)
-ಳಿಯಬಾರದು ಋಣ ಭೋಗ! (ಗ)
-ದ್ದಲ ಮಾಡ್ಯೇನು ಫಲವೀಗ? (ನಿ)
-ನ್ನಿಷ್ಟದಂತಿರ್ಬೇಕ್ನಿನ್ನ ಮಗ! (ಕಿ)
-ತ್ತೆಸೆ ನಿನ್ನುದಾಸೀನವೀಗ!
ನಾನೂ, ನೀನೂ ಒಂದಾಗ್ಬೇಕೀಗ! (ಪು)
-ನೀತವಾಗ್ಲಿದರಿಂದ ಜಗ! (ಮ)
-ಗ ನಿರಂಜನಾದಿತ್ಯ ಖಗ!!!

ನೀರ್ಕಲ್ಲೂ ಮಳೆ ಮಂಗಳ! (ಆ)   2(651)

-ರ್ಕನಡಿ ಜಡ ಮಂಗಳ! (ಕ)
-ಲ್ಲೂ ಮಳೆ ಶುಭ ಮಂಗಳ!
ಧುರ ಜಲ ಮಂಗಳ! (ಬೆ)
-ಳೆಗಿದಾರಾಮ ಮಂಗಳ!
ಂಗಳವಾರ ಮಂಗಳ! (ಮಂ)
-ಗಳ ಪ್ರಸಾದ ಮಂಗಳ! [ಜ]
-ಳ, ನಿರಂಜನ ಮಂಗಳ!!!

ನೀಲಕಂಠ ಜಗಳಕಂಥಾರಿ! (ಪ್ರ)   6(4203)

-ಲ್ಯ ಕಾಲ ಸಕಲ ಸಂಹಾರಿ!
ಕಂದನಾಗಬಾರದು ಸಂಸಾರಿ! (ಮ)
-ಠ, ಮನೆ, ನೆಲ, ಹೊಲವೆಲ್ಲಾರಿ!
ರಾ ಜನ್ಮ ರಹಿತ ಮಾರಾರಿ!
ರ್ವದಿಂದ ಪತಿತಹಂಕಾರಿ! (ಆ)
-ಳ ಬಲ್ಲವನೊಬ್ಬನೇ ಮುರಾರಿ!
ಕಂದೆರೆಯ್ಬೇಕೀಗ ನರ, ನಾರಿ!
ಠಾಕೂರ ಶ್ರೀ ಕೃಷ್ಣ ಆರೆಂದರಿ? (ಹ)
-ರಿ ನಿರಂಜನಾದಿತ್ಯನೆಂದರಿ!!!

ನೀಲಕಂಠನಿಗೆ ಕರ್ಪೂರಾರತಿ ಬೆಳಗಯ್ಯಾ! (ಬಾ)   3(1127)

-ಲಕರಿಬ್ಬರನ್ನೂ ಕೂರಿಸ್ಯಾರತಿ ಬೆಳಗಯ್ಯಾ!
ಕಂಡವರಿಗಿದೊಪ್ಪಿಸದೆ ನೀನೇ ಬೆಳಗಯ್ಯಾ! (ಕಂ)
-ಠದಲ್ಲಿ ರುದ್ರಾಕ್ಷಿ ಧಾರಣೆ ಮಾಡಿ ಬೆಳಗಯ್ಯಾ!
ನಿಶ್ಚಲಭಕ್ತಿ, ಭವದಿಂದಾರತಿ ಬೆಳಗಯ್ಯಾ! (ಬ)
-ಗೆಬಗೆ ಪತ್ರ ಪುಷ್ಪಗಳರ್ಚಿಸಿ ಬೆಳಗಯ್ಯಾ!
ದಳ್ಯಾದಿ ಫಲ ನೈವೇದ್ಯ ಮಾಡಿ ಬೆಳಗಯ್ಯಾ! (ಚ)
-ರ್ಪೂಟಗಳಟಾಟೋಪ ಬಿಟ್ಟಾರತಿ ಬೆಳಗಯ್ಯಾ!
ರಾತ್ರಿಯೆಲ್ಲಾ ಭಜನೆ ಮಾಡ್ಯಾರತಿ ಬೆಳಗಯ್ಯಾ! (ವ)
-ರ ಶಿವಾನಂದವನ್ನನುಭವಿಸಿ ಬೆಳಗಯ್ಯಾ! (ಸ)
-ತಿ ಪಾರ್ವತಿಯ ಸ್ಮರಿಸುತ್ತಾರತಿ ಬೆಳಗಯ್ಯಾ!
ಬೆಳ್ಳಿ ಬೆಟ್ಟವೇ ಇದೆನುತಾರತಿ ಬೆಳಗಯ್ಯಾ! (ಬಾ)
-ಳ ನೇತ್ರನನ್ನಲಂಕರಿಸ್ಯಾರತಿ ಬೆಳಗಯ್ಯಾ!
ಡಿ ಬಿಡಿ ಬಿಟ್ಟು ಮಂಗಳಾರತಿ ಬೆಳಗಯ್ಯಾ! (ಅ)
-ಯ್ಯಾ ನಿರಂಜನಾದಿತ್ಯ ಶಿವನೆಂದು ಬೆಳಗಯ್ಯಾ!!!

ನೀವಲ್ಪಮಾನವರಲ್ಲ!   3(1043)

ರ ಗುರು ರೂಪವೆಲ್ಲ! (ಕ)
-ಲ್ಪನೆಯಿಂದ ಭಿನ್ನವೆಲ್ಲ!
ಮಾಡಿ ವಿಚಾರ ನೀವೆಲ್ಲ!
ನ್ನನರಿಯಬೇಕೆಲ್ಲ!
ರೈಕ್ಯ ಸಾಧಿಸಿರೆಲ್ಲ! (ನ)
-ರ ಜನ್ಮ ಸಾಮಾನ್ಯವಲ್ಲ! (ಎ)
-ಲ್ಲ ನಿರಂಜನಾದಿತ್ಯಲ್ಲ!!!

ನೀವೇಕವನಿಗೊಂದು ಪತ್ರ ಬರೆಯಬಾರದು?   4(2256)

ವೇಳೆ ಬಂದಾಗದಾಗ್ವುದೆಂದೇಕರಿಯಬಾರದು?
ಷ್ಟವನ್ಯರ ಮಾತೆಂಬುದ ಮರೆಯಬಾರದು! (ದೇ)
-ವದೇವನ ಮುಂದೆ ನಿನ್ನ ಬಾಲ ಬಿಚ್ಚಬಾರದು!
ನಿನ್ನೋನ್ನತಿಯ ಸಾಧನೆ ನೀನು ಬಿಡಬಾರದು!
ಗೊಂಬೆಯಾಟಕ್ಕೆಂದೆಂದಿಗೂ ಮರುಳಾಗಬಾರದು!
ದುಸ್ಸಂಗದಿಂದ ನಿನಗೆ ದುಃಖ ತಪ್ಪಲಾರದು!
ರೋಪಕಾರಿಗಹಂಕಾರವಿರಲೇಬಾರದು! (ಪು)
-ತ್ರ, ಪೌತ್ರರಿಗೆಂದು ಹಣ ಕೂಡಿಡಲೇಬಾರದು!
ಡಬಗ್ಗರಿಗೆ ನೆರವಾಗದಿರಬಾರದು! (ಮ)
-ರೆತು ನಿಜ ಗುರಿಯ ಕಾಲ ಕಳೆಯಬಾರದು!
ಜಮಾನನಿಗೆ ಕೇಡು ಬಗೆಯಲೇಬಾರದು!
ಬಾಯಿ ಬ್ರಹ್ಮದಿಂದ ಶಾಂತಿ ಪ್ರಾಪ್ತವಾಗಲಾರದು! (ವ)
-ರ ಗುರುಸೇವೆಗಾವುದೂ ಸಮವಾಗಲಾರದು! (ಇ)
-ದು ನಿರಂಜನಾದಿತ್ಯೋಪದೇಶ ವಾಗಿರುವುದು!!!

ನೀವೇಕೆ ಎಲ್ಲೂ ಹೋಗುವುದಿಲ್ಲ? (ನೇ)   5(2861)

-ವೇದ್ಯವಿಲ್ಲೆ ಆಗುತ್ತಿದೆಯಲ್ಲಾ!
ಕೆಲಸವೆಲ್ಲರೂ ಮಾಡ್ತಾರಲ್ಲಾ!
ಲ್ಲರಲ್ಲೂ ನಾನೇ ಇದ್ದೇನಲ್ಲಾ! (ಅ)
-ಲ್ಲೂ, ಇಲ್ಲೂ ಒಬ್ಬನೇ ನಾನೆಲ್ಲೆಲ್ಲಾ!
ಹೋಗ್ಬೇಕಾದವರು ಹೋಗ್ತಾರಲ್ಲಾ!
ಗುರುಸೇವೆಯಿಲ್ಲೂ ಆಗ್ತದಲ್ಲಾ! (ಆ)
-ವುದೆಲ್ಲಿರಬೇಕೆಂದವ ಬಲ್ಲಾ!
ದಿವ್ಯನಾಮಾಮೃತ ಕುಡೀರೆಲ್ಲಾ! (ಪು)
-ಲ್ಲ ನಿರಂಜನಾದಿತ್ಯನೆಲ್ಲೆಲ್ಲಾ!

ನುಣ್ಣಗಿರುವುದೆಲ್ಲಾ ಬೆಣ್ಣೆಯೇನಯ್ಯಾ? [ತ]   2(853)

-ಣ್ಣಗಿರುವುದದೆಲ್ಲಾ ತಣ್ಣೀರೇನಯ್ಯಾ?
ಗಿಡ್ಪಾಗಿರ್ಪವರೆಲ್ಲ ಗಸ್ತ್ಯರೇನಯ್ಯಾ?
ರುಚಿಯಾಗಿರ್ಪುದೆಲ್ಲ ಮೃತವೇನಯ್ಯಾ? (ಹಾ)
-ವುಗಳೆಲ್ಲವೂ ನಾಗರಾಜನೇನಯ್ಯಾ?
ದೆವ್ವಗಳೆಲ್ಲಾ ನಿಜದೇವನೇನಯ್ಯಾ? (ಬ)
-ಲ್ಲಾಳರಸರೆಲ್ಲಾ ಬಲೀಂದ್ರನೇನಯ್ಯಾ?
ಬೆಟ್ಟಗಳೆಲ್ಲಾ ಹಿಮಾಚಲವೇನಯ್ಯಾ? (ದೊ)
-ಣ್ಣೆಗಳೆಲ್ಲವೂ ಯೋಗದಂಡವೇನಯ್ಯಾ? (ನ್ಯಾ)
-ಯೇಶ್ವರರೆಲ್ಲಾ ಯಮಧರ್ಮನೇನಯ್ಯಾ?
ಯನಿಗಳೆಲ್ಲಾ ತ್ರಿನೇತ್ರನೇನಯ್ಯಾ? (ಅ)
-ಯ್ಯಾ! ನಿರಂಜನಾದಿತ್ಯನುಪಮನಯ್ಯಾ!!!

ನುತಿಪೆ, ನಮಿಪೆ ನಿನ್ನಡಿಗಳಯ್ಯಾ! (ಮ)   5(2564)

-ತಿಗೆ ಬೆಳಕ ನೀನೇ ನೀಡಬೇಕಯ್ಯಾ!
ಪೆರತೇನೂ ನನಗೆ ಕೊಡಬೇಡಯ್ಯಾ!
ಶ್ವರವೀ ಜಗವೆಂಬರಿವಾಯ್ತಯ್ಯಾ!
ಮಿತ್ರ ನೀನೊಬ್ಬನೇ ಚರಾಚರಕ್ಕಯ್ಯಾ!
ಪೆಣ್ಣು, ಗಂಡೆಂಬ ಭೇದ ನಿನಗಿಲ್ಲಯ್ಯಾ!
ನಿನ್ನ ನಂಬಿದವರ್ಗನ್ಯಾಯಾಗದಯ್ಯಾ! (ನಿ)
-ನ್ನ ಮಕ್ಕಳ ಯೋಗಕ್ಷೇಮ ನಿನ್ನದಯ್ಯಾ! (ಕೂ)
-ಡಿಯಾಡಬೇಕು ನಾನು ನಿನ್ನೊಡನಯ್ಯಾ! (ಸಂ)
-ಗ ಬೇರಾರದೂ ನನಗೆ ಬೇಕಿಲ್ಲಯ್ಯಾ!
(ಬ)ಳಲಿ ಬೆಂಡಾಗಿಹೆನಲ್ಲಿಲ್ಲೋಡಾಡ್ಯಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾ! ನೀನೇಗತ್ಯಯ್ಯಾ!!!

ನೂಕುನುಗ್ಗಲಿನ ಭಾಷಣ ಕೇಳ್ಯಾದುದೇನು?   6(3831)

ಕುಹಕು, ಕುಚೋದ್ಯ, ಕುಚೇಷ್ಟೆ ನಿಂತುಹೋಯ್ತೇನು?
ನುಡಿದಂತೆ ನಡೆಯುವಭ್ಯಾಸ ಮಾಡು ನೀನು! (ಬ)
-ಗ್ಗನಂತೆ ಘರ್ಜಿಸಿ ಗಗ್ಗನಂತಾಗ್ಬೇಡ ನೀನು! (ಅ)
-ಲಿಪ್ತ ಭಾವದಿಂದ ಸೇವೆ ಮಾಡಬೇಕು ನೀನು!
ಶ್ವರಾನಂದಕ್ಕಾಗ್ಯೇನೂ ಮಾಡ್ಬಾರದು ನೀನು!
ಭಾರತ, ರಾಮಾಯಣದಿಂದ ಕಲಿತದ್ದೇನು?
ಡ್ರಿಪುಗಳನ್ನು ಇನ್ನೂ ಜಯಿಸಿಲ್ಲ ನೀನು! (ಒ)
-ಣ ಜಂಭಕ್ಕೆ ಮರುಳಾಗಿ ಕೆಟ್ಟಿರುವೆ ನೀನು!
ಕೇಡನ್ನೆಂದಿಗೂ ಬಗೆಯಬೇಡಾರಿಗೂ ನೀನು! (ಬೋ)
-ಳ್ಯಾಗಿ, ಕಾಳ್ಯಾಗಿ, ದಂಭ, ದರ್ಪ ತೋರ್ಬೇಡ ನೀನು!
ದುಷ್ಟಕೂಟದಿಂದ ದೂರವಿರಬೇಕು ನೀನು!
ದೇವರಲ್ಲಿ ಭಯ, ಭಕ್ತಿ ಬೆಳೆಸ್ಬೇಕು ನೀನು! (ತ)
-ನು, ಮನ, ನಿರಂಜನಾದಿತ್ಯಗರ್ಪಿಸು ನೀನು!!!

ನೂರಾರು ಯಾತ್ರಿಕರ ಜಲ ಸಮಾಧಿ!   4(1442)

ರಾಮನಾಮ ಘೋಷದಿಂದಾಯ್ತಾ ಸಮಾಧಿ! (ತು)
-ರು,ಕರು, ವಸ್ತು ವಾಹನಕ್ಕೂ ಸಮಾಧಿ! (ಮಾ)
-ಯಾಲಕನಂದಾ ಜಲದಲ್ಲಾ ಸಮಾಧಿ!
ತ್ರಿಮತಸ್ಥ ನರ ನಾರಿಗಾ ಸಮಾಧಿ!
ರುಣಾಮಯಿಗೇನಾನಂದಾ ಸಮಾಧಿ? (ಯಾ)
-ರದೇನಪಚಾರದಿಂದಾಯ್ತಾ ಸಮಾಧಿ?
-ಜಗದ್ಗುರು ಚಿತ್ತದಂತಾಯ್ತಾ ಸಮಾಧಿ (ಬಾ)
-ಲಕರಿಗೀಯಲಿ ಸದ್ಗತೀ ಸಮಾಧಿ!
ಮಯಾಸಮಯ ನೋಡದೀ ಸಮಾಧಿ!
ಮಾಧವ ಧ್ಯಾನದಿಂದಾಗಲೀ ಸಮಾಧಿ! (ವಿ)
-ಧಿ ನಿರಂಜನಾದಿತ್ಯ ಸದಾ ಸಮಾಧಿ!!!

ನೂರಾರ್ಕಾಯ್ಗಳ ಗೊನೆಗಳ್ನಾವು! [ವಿ]   5(2893)

-ರಾಜಿಪೆವಂತರಿಕ್ಷದಲ್ನಾವು! (ದ)
-ರ್ಕಾಸ್ತು ಜಮೀನಿನಲ್ನಾವಿಹೆವು! (ಕಾ)
-ಯ್ಗಳ್ನಮ್ಮವೆಲ್ಲಾ ಬಹು ದೊಡ್ಡವು! (ಹು)
-ಳ ಹತ್ತಿದೆ ಮರಕ್ಕೆಂದರ್ಯವು!
ಗೊಬ್ಬರ, ನೀರ್ಬೇರುಗಳ್ಕಾಣವು!
ನೆನೆಯವು ಪರಿಸ್ಥಿತಿಯವು!
ಡ್ಡೆಯೊಣಗಿ ಬಾಡಿ ಹೋದವು! (ಸೀ)
-ಳ್ನಾಲೆಗೆ ಕಾಯ್ಗಳುದುರಿದವು! (ಅ)
-ವು ಶ್ರೀ ನಿರಂಜನಾದಿತ್ಯಾಗವು!!!

ನೆಗಡಿ, ಕೆಮ್ಮು ಮಾಮೂಲು ರೋಗ!   6(3713)

ಗ್ಗ, ಬಗ್ಗರಿಗೆಲ್ಲಾ ಆ ರೋಗ! (ತಿಂ)
-ಡಿ, ತೀರ್ಥ ವ್ಯತ್ಯಾಸದಿಂದಾ ರೋಗ!
ಕೆಟ್ಟ ಹವಾದಿಂದಲೂ ಆ ರೋಗ! (ದ)
-ಮ್ಮು, ಉಬ್ಬಸಕ್ಕೂ ಆ ರೋಗ!
ಮಾಡಿದ್ರೆ ಚಿಕಿತ್ಸೆ ಶಾಂತಾ ರೋಗ!
ಮೂಲೋಚ್ಛಾಟನೆಗೆ ಬೇಕು ಯೋಗ! (ಕಾ)
-ಲು, ಕೈ, ನೋವು ನಿವಾರಕ ಯೋಗ!
ರೋಗ ತಡೆಗಟ್ಟುವುದು ಯೋಗ! (ಖ)
-ಗ ನಿರಂಜನಾದಿತ್ಯೋಪಯೋಗ!!!

ನೆಟ್ಟದ್ದೆಲ್ಲಾ ಫಲಿಸೀತೆಂಬುದೆಂತಯ್ಯಾ? (ಪ)   5(3272)

-ಟ್ಟ ಕಷ್ಟಕ್ಕಿಷ್ಟ ದೊರೆಯದಿದ್ರಾಗ್ದಯ್ಯಾ! (ಗ)
-ದ್ದೆ ಉಳುವಾಗೆಷ್ಟು ಬೆವರ್ಸುರಿಯ್ತಯ್ಯಾ! (ಕ)
-ಲ್ಲಾದ್ರೂ ಕರಗ್ದಿರಲಾರ್ದೆನ್ನ ಕಂಡಯ್ಯಾ!
ಸ್ಲಾಗ್ದಿದ್ರೆ ಉಳಿಗಾಲ ಉಂಟೇನಯ್ಯಾ! (ಆ)
-ಲಿಸಬೇಕೆನ್ನ ಮೊರೆಯ ನೀನೀಗಯ್ಯಾ!
ಸೀತಾಪತಿಗಸಾಧ್ಯವಾದುದಾವ್ದಯ್ಯಾ?
ತೆಂಗು ಬಾಳೆಗಳೊಳಗೂ ಅವನಯ್ಯಾ!
ಬುದ್ಧಿ ಜೀವಿಗಳಲ್ಲಿ ಸಿದ್ಧಿ ಅವ್ನಯ್ಯಾ! (ಎಂ)
-ದೆಂದಿಗೂ ಅವನೇ ಗತಿ ನಮಗಯ್ಯಾ!
ಪ್ಪಿ ನಡೆದ್ರೆ ರಾವಣನ ಗತ್ಯಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾನಂದವಯ್ಯಾ!!!

ನೆಟ್ಟಲ್ಲಿ ಬೇರೂರಿಕೊಳ್ಳಬೇಕು! [ಸೊ]   3(1027)

-ಟ್ಟವಾಗಿ ಬೆಳೆಯದಿರಬೇಕು! (ಎ)
-ಲ್ಲಿದ್ದರೂ ಪೂಜಾರ್ಹವಾಗಬೇಕು!
ಬೇನೆಗಳು ಗುಣವಾಗಬೇಕು! (ಆ)
-ರೂಢನಾಗಿ ಸಿದ್ಧನಾಗಬೇಕು!
ರಿಪುಗಳಡಗಿ ಹೋಗಬೇಕು!
ಕೊಡುಗೈ ಸುತ್ತಲೂ ಕಾಣಬೇಕು! (ಕ)
-ಳ್ಳಕಾಕರು ಸುಧಾರಿಸಬೇಕು!
ಬೇಡುವ ಕೈ ಮಾಯವಾಗಬೇಕು! (ಬೇ)
-ಕು, ನಿರಂಜನಾದಿತ್ಯಾತ್ಮವಾಕು!!!

ನೆನೆನೆನೆದು ಕಾಮಿನಿಯ ಕಾಮನಾದ!   6(4022)

ನೆನೆನೆನೆದು ರಾಮನನು ರಾಮನಾದ!
ನೆಲ ಮಗಳ ಕದ್ದೊಯ್ದವ ಕಾಮನಾದ!
ನೆರೆ ರಾಮಧ್ಯಾನ ಗೈದವ ರಾಮನಾದ!
ದುರಾಗ್ರಹದಾ ದುರ್ಯೋಧನ ಕಾಮನಾದ!
ಕಾಳಿಂಗನ ತುಳಿದ ಬಾಲಾ ರಾಮನಾದ!
ಮಿತಿಮೀರಿದಾಸೆಯಿಂದ ನರ ಹಾಳಾದ!
ನಿತ್ಯಾನಿತ್ಯವರಿತವ ಉದ್ಧಾರವಾದ!
ದುಪನ ಕೆಣಕಿ ಕಂಸ ಮೃತನಾದ!
ಕಾರ್ಯ, ಕಾರಣಜ್ಞ ವಿದುರ ಉದ್ಧಾರಾದ!
ಹೇಶ್ವರ ಮುನಿದು ಕಾಮ ಬೂದಿಯಾದ!
ನಾಮ ಜಪಿಸಿ ಮಾರ್ಕಂಡೇಯ ಉದ್ಧಾರಾದ!
ತ್ತ ಶ್ರೀ ನಿರಂಜನಾದಿತ್ಯಾನಂದನಾದ!!!

ನೆನೆನೆನೆದು ಮನಸಿಜನ, ಮನೆ ಹಾಲಾಯ್ತು!   6(4258)

ನೆಗಳ್ದಾಳಿದ ಬಾಳಿದವರ ಕಥೆ ಹೀಗಾಯ್ತು!
ನೆಕ್ಕುವುದನ್ಯರೆಂಜಲನ್ನವರ ಗತಿಯಾಯ್ತು!
ನೆಲೆಗೆಟ್ಟೂ, ತಲೆಗೆಟ್ಟು ಊರೂರಲೆವಂತಾಯ್ತು!
ದುಡಿಮೆಯೆಲ್ಲಾ ಕಳ್ಳ ಸುಳ್ಳರ ಪಾಲಿಗೆ ಹೋಯ್ತು!
ಡದಿ ಮಕ್ಕಳಿಗೆಲ್ಲಾ ಗತಿಯಿಲ್ಲದಂತಾಯ್ತು!
ರರ, ಪಾಡಿದರಿಂದ ನಾಯಿಯಂತಾದಂತಾಯ್ತು!
ಸಿಟ್ಟೆಂಬುದುಲ್ಬಣಾವಸ್ಥೆಗೇರಿ ಮರ್ಯಾದೆ ಹೋಯ್ತು!
ಗಳ ಪ್ರತಿದಿನ ಮನೆಯಲ್ಲಿ ಶುರುವಾಯ್ತು!
ಲ್ಲ ನಲ್ಲೆಯರು ಗಲ್ಲಿಗೇರುವಂತೆಯೂ ಆಯ್ತು!
ನುಜರಿಗಿಷ್ಟಾದರೂ ಬುದ್ಧಿ ಬರದಂತಾಯ್ತು! (ನಾ)
-ನೆನ್ನುವಹಂಕಾರಾಬಾಲ ವೃದ್ಧರಲ್ಲೂ ಹೆಚ್ಚಾಯ್ತು!
ಹಾಡಿ ಹರಿನಾಮವನ್ನಾನಂದಿಪುದಿಲ್ಲದಾಯ್ತು! (ಹಾ)
-ಳಾಯ್ತು ಮಾನವಕುಲಕ್ಕೇ ಗ್ರಹಣ ಹಿಡ್ದಿಂತಾಯ್ತು! ಹೋ
-ಯ್ತು ದೂರ ನಿರಂಜನಾದಿತ್ಯ ಪಾದಾರ್ಪಣಾಯ್ತು!!!

ನೆನೆಯದಿರುವುದೇ ನೆಮ್ಮದಿ!   6(3490)

ನೆನಪು ಅಸ್ಥಿರದ್ದು ದುರ್ವಿಧಿ!
ಮನೆನ್ನುವುದು ಕಾಲಾವಧಿ!
ದಿಗಂಬರಗಿಲ್ಲಾವ ಉಪಾಧಿ!
ರುಚಿ ಅರುಚ್ಯಾತೀತ ಸಮಾಧಿ! (ಸಾ)
-ವು, ಸಂಕಟವಿಲ್ಲದ ಅನಾದಿ!
ದೇಶ, ಕಾಲತೀತ ಜ್ಞಾನನಿಧಿ!
ನೆರೆ ಪವಿತ್ರವಂಥಾಸನ್ನಿಧಿ! (ಬೊ)
-ಮ್ಮ, ವಿಷ್ಣು, ಶಿವರ ಪ್ರತಿನಿಧಿ! (ಆ)
-ದಿ, ನಿರಂಜನಾದಿತ್ಯ ಅನಾದಿ!!!

ನೆನೆಯಬೇಡಾ ಮಾಯೆಗೊಳಗಾಗಬೇಡ! (ಮ)   6(3967)

-ನೆ ಮನೆಗಲೆದಾಡಿ ಮರುಳಾಗಬೇಡ!
ಮನ ಬಲೆಯಲ್ಲಿ ಸಿಕ್ಕಿ ಬೀಳಬೇಡ!
ಬೇಟೆಯಾಡುತ್ತಿರುವನವ ಮರೆಯಬೇಡ! (ಓ)
-ಡಾಡುವಾಗ ದಾರಿ ತಪ್ಪಿ ನಡೆಯಬೇಡ!
ಮಾತಿನ ಭರದಲ್ಲಾರ ಮೇಲೂ ಬೀಳ್ಬೇಡ! (ದ)
-ಯೆಗಾಗಿ ಕೃಷ್ಣನ ಪ್ರಾರ್ಥಿಸದಿರಬೇಡ!
ಗೊಡ್ಡಾಕಳು ನಾನೆಂದಳುತ್ತಿರ ಬೇಡ! (ತ)
-ಳಮಳಗೊಂಡು ಕರ್ತವ್ಯ ಭ್ರಷ್ಟನಾಗಬೇಡ!
ಗಾಡಿಗಾರನೆಂದವನ ಕಡೆಗಾಣ್ಬೇಡ!
ದಾಯುದ್ಧದಲ್ಲವನಾಟ ಮರೆಯ್ಬೇಡ!
ಬೇರಾರಿಗೂ ಅವನನ್ನು ಹೋಲಿಸಬೇಡ! (ಆ)
-ಡ ನಿರಂಜನಾದಿತ್ಯಗವನೆರಡಾಡ!!!

ನೆನೆಯುತಿರಬೇಕವನ! (ವ)   4(2022)

-ನೆಮಂದಿಗಾಧಾರಾದವನ! (ಸಾ)
-ಯುವ ಭಯ ತಪ್ಪಿಸುವನ!
ತಿರಿಗಿ ಹುಟ್ಟಿಸದವನ! (ಪ)
-ರಮಾತ್ಮನೆನಿಸಿದವನ!
ಬೇಸರ ಕಳೆಯುವವನ!
ರುಣಾಮೂರ್ತಿಯಾದವನ!
ರ ಗುರು ದತ್ತಾತ್ರೇಯನ! (ಘ)
-ನ ನಿರಂಜನಾದಿತ್ಯಾತ್ಮನ!!!

ನೆನೆಯುತಿಹರಾರೋ ನನ್ನ! [ಮ]   5(2953)

-ನೆ ಮಠವಿಲ್ಲದವನನ್ನ!
ಯುವಕನಾಗಿಲ್ಲದವ್ನನ್ನ!
ತಿರುಕನಾಗಿರ್ಪವನನ್ನ!
ರಿ, ಹರರೊಂದಾದವ್ನನ್ನ!
ರಾತ್ರಿ, ದಿನಾತ್ಮಾನಂದನನ್ನ!
ರೋಗ ನಿವಾರಿಸುವವ್ನನ್ನ!
ತಜನೋದ್ಧಾರಕ ನನ್ನ! (ನ)
-ನ್ನ, ನಿರಂಜನಾದಿತ್ಯನನ್ನ!!!

ನೆನೆಸುವುದೊಂದು ಬರೆಸುವುದಿನ್ನೊಂದು!   4(1461)

ನೆಪಮಾತ್ರವೀ ಗೊಂಬೆ ನಿನ್ನಡಿಯಲ್ಲಿಂದು!
-ಸುಖ, ದುಃಖಕ್ಕೀಡಾಗಿ ನೋಯುತಿದೆ ಇಂದು! (ಆ)
-ವುದರ ಸ್ವತಂತ್ರವಿದಕಿದೆ ಹೇಳಿಂದು!
ದೊಂಬರಾಟವಾಡಿಸುತಿರುವೆ ನೀನಿಂದು! (ಬ)
-ದುಕಿ ಬರುವ ಭಾರ ನಿನ್ನಾಧೀನವಿಂದು!
ಳಲಿದರೂ ಬಿಡೆ ನಿನ್ನಾಟ ನೀನಿಂದು! (ಕ)
-ರೆದರೂ ಕೆಳದವನಂತಿರ್ಪೆ ನೀನಿಂದು!
ಸುಖವಾಗಿಹುದು ನಿನ್ನಾಟ ನಿನಗಿಂದು! (ಠಾ)
-ವು ನಿನಗೆಲ್ಲಾದರೇನೆಂದಿರ್ಪೆ ನೀನಿಂದು! (ಆ)
ದಿ, ಮಧ್ಯಾಂತ ರಹಿತನಾಗಿರ್ಪೆ ನೀನಿಂದು! (ಇ)
-ನ್ನೊಂದು, ಮತ್ತೊಂದಾಟದಾನಂದ ನಿನಗಿಂದು! (ಹಿಂ)
-ದು, ಮುಂದು ನಿರಂಜನಾದಿತ್ಯಾನಂದೆಂದೆಂದೂ!!!

ನೆನ್ಸಲ್ಲಾಗದ್ದು ಕನ್ಸಲ್ಲಾಯ್ತು! (ತಾ)   6(3473)

-ನ್ಸರಿಯಿಲ್ಲೆಂಬ ಅರಿವಾಯ್ತು! (ಕ)
-ಲ್ಲಾಗಿರ್ಬೇಕೆಂದು ಆಜ್ಞೆಯಾಯ್ತು! (ರಂ)
-ಗನಾಥ ತಾನೆಂದು ಗೊತ್ತಾಯ್ತು! (ಮು)
-ದ್ದು ಮುಖ ಮುದ್ದಾಡೆಂದಂತ್ತಾಯ್ತು!
ಳ್ಕೊಳ್ಬೇಡವ್ನನ್ನೆಂದಂತಾಯ್ತು! (ತಾ)
-ನ್ಸರ್ವಾಂತರ್ಯಾಮಿಯೆಂದಂತಾಯ್ತು! (ಉ)
-ಲ್ಲಾಸ ತುಂಬಿ ತಬ್ಬಿಕೊಂಡಾಯ್ತು! (ಆ)
-ಯ್ತು, ನಿರಂಜನಾದಿತ್ಯಾನಾಯ್ತು!!!

ನೆಪಕ್ಕೆ ತೀರ್ಥ ಕ್ಷೇತ್ರ, ಯಾತ್ರೆ!   6(4231)

ತನೇಂದ್ರಿಯ ದಿನ, ರಾತ್ರೆ! (ಬೆ)
-ಕ್ಕೆಯಕ್ಕನಿಗೇನ್ಲಾಭಾ ಯಾತ್ರೆ?
ತೀಟೆಗಧೀನಾ ಮೃಗನೇತ್ರೆ! (ವ್ಯ)
-ರ್ಥವಳರ್ಚನೆ, ಬಿಲ್ವಪತ್ರ!
ಕ್ಷೇಮವಾಗದಾಕೆಗಾ ಯಾತ್ರೆ! (ಮಿ)
-ತ್ರ ನೋರ್ವನದ್ದನ್ವರ್ಥ ಯಾತ್ರೆ!
ಯಾವಾಸೆಯೂ ಇಲ್ಲದಾ ಯಾತ್ರೆ! (ಜಾ)
-ತ್ರೆ, ನಿರಂಜನಾದಿತ್ಯ ಯಾತ್ರೆ!!!

ನೆಪಕ್ಕೆ ದೇವರು, ಪಾಪಕ್ಕೆ ಜೀವರು!   6(4361)

ರಿಪರಿಯಾಸೆಗಳನ್ನಿಚ್ಛಿಪರು! (ಹ)
-ಕ್ಕೆಮ್ಮದನ್ನು ಸಾಧಿಸದಿರುತಿಹರು!
ದೇವರೇ ತಾವಾಗದಿರುತಿರುವರು! (ಭ)
-ವ ಜಲಧಿಯಲ್ಲಿ ಬಿದ್ದೊದ್ದಾಡುವರು!
ರುಜು ಮಾರ್ಗವನ್ನು ಬಿಟ್ಟಿರುತ್ತಿಹರು!
ಪಾಶ್ಚಿಮಾತ್ಯತೆಗೆ ಮರುಳಾಗಿಹರು!
ತಿತರಾದೆವೆಂಬುದ ಮರೆತಿಹರು! (ಬಿ)
-ಕ್ಕೆ ಬೇಡುವ ಗತಿಗಿಳಿದಿರುವರು!
ಜೀವಮಾನ ಹಾಳುಮಾಡಿಕೊಂಡಿಹರು! (ಶಿ)
-ವನಿಂದುದ್ಧಾರವಾಗ ಬೇಕೀಗವರು! (ಗು)
-ರು ನಿರಂಜನಾದಿತ್ಯಗೆರಗ್ಲವರು!!!

ನೆಮ್ಮದಿಯ ಬಾಳಿಗಿರ್ಬೇಕ್ಪರಮಾರ್ಥ! (ಒ)   6(3811)

-ಮ್ಮತದ ಮನಸ್ಸಿರಬೇಕೆಂಬುದರ್ಥ!
ದಿಟವಾದಾತ್ಮ ನೀನೆಂಬುದದರರ್ಥ!
ದ್ವಾತದ್ವಾಡದಿರಬೇಕೆಂಬುದರ್ಥ!
ಬಾಡುವ ಮುಂಚೆ ವಾಸನೆ ನೋಡೆದಂರ್ಥ! (ಅ)
-ಳಿವಿಂಡಿನಂತೆ ಕಾರ್ಯೋನ್ಮುಖಾಗೆಂದರ್ಥ!
ಗಿಡ, ಬಳ್ಳಿಯಲ್ಲೂ ದೇವ್ರಿದ್ದಾನೆಂದರ್ಥ! (ಬೇ)
-ರ್ಬೇರೇ ರೂಪದಲ್ಲೊಬ್ಬ ನಿರ್ಪನೆಂದರ್ಥ! (ವಾ)
-ಕ್ಪಟುತ್ವಕ್ಕವನೊಲಿಯನೆಂದು ಅರ್ಥ! (ನಿ)
-ರತ ಅವನ ನೆನೆಯಬೇಕೆಂದರ್ಥ!
ಮಾಯೆಗೆ ಮರುಳಾಗಬಾರದೆಂದರ್ಥ! (ಅ)
-ರ್ಥ, ನಿರಂಜನಾದಿತ್ಯ ನಾಗ್ಬೇಕೆಂದರ್ಥ!!!

ನೆಮ್ಮದಿಯಿಂದಿರಬೇಕೇನಯ್ಯಾ? (ಅ)   4(2141)

-ಮ್ಮನಿಷ್ಟಾನುಸಾರ ವರ್ತಿಸಯ್ಯಾ! (ಕಾ)
-ದಿರವಳಾಜ್ಞೆಗನುದಿನಯ್ಯಾ! (ತಾ)
-ಯಿಂದಧಿಕ ದೈವ ಬೇರಿಲ್ಲಯ್ಯಾ!
ದಿವ್ಯ ಭಾವ ಬಲಿಸು ನೀನಯ್ಯಾ! (ಪ)
-ರಮಾನಂದಾನುಭವ ವಾಗ್ವುದಯ್ಯಾ!
ಬೇಸರವಿಲ್ಲದಭ್ಯಾಸ ಮಾಡಯ್ಯಾ!
ಕೇನೋಪನಿಷತ್ಸಾರವಿದಯ್ಯಾ!
ರಜನ್ಮೇಂದ್ರ್ಯ ಸುಖಕ್ಕಲ್ಲಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನಮ್ಮಯ್ಯಾ!!!

ನೆರೆವಾಗಬೇಕೆಲ್ಲರೆನ್ನ ತಪಕ್ಕೆ! (ಎ)   1(327)

-ರಡಾಡದಿರಬೇಕೆನ್ನನುಷ್ಠಾನಕ್ಕೆ!
ವಾಸುದೇವನ ದಯೆ, ಶಾಂತಿ ಜೀವಕ್ಕೆ!
ಮನಿಸಿ ಪ್ರಾರ್ಥಿಸಿರೆಲ್ಲರದಕ್ಕೆ!
ಬೇರೆ ದಾರಿಯಿನ್ನೇನಿಲ್ಲವದಕ್ಕೆ!
ಕೆಲಸ, ಕಾರ್ಯಗಳಡ್ಡಿಯಿಲ್ಲದಕ್ಕೆ! (ಎ)
-ಲ್ಲವನ ಸೇವೆಯಿಂದಿರಬೇಕದಕ್ಕೆ!
ರೆಕ್ಕೆ ಬಿಚ್ಚಿ ಹಾರಬೇಕು ಗಗನಕ್ಕೆ! (ಎ)
-ನ್ನಲ್ಲಿ ಸದಾ ವಿಶ್ವಾದ ಕಲ್ಲಾಣಕ್ಕೆ!
ರಮಾನುಗ್ರಹವಹುದು ಲೋಕಕ್ಕೆ! (ಅ)
-ಕ್ಕೆ! ನಿರಂಜನಾದಿತ್ಯ ಗುರು ಸರ್ವಕ್ಕೆ!!!

ನೇತ್ರೋನ್ಮೀಲನವಾದಾಗೆನ್ನ ದರ್ಶನ! (ಮಂ)   3(1298)

-ತ್ರೋಚ್ಣರಣೆಯೆಂಬುದೊಂದು ಸದ್ಭಾವನ! (ಉ)
-ನ್ಮೀಲನಕ್ಕಾಗಿರಬೇಕು ಜ್ಞಾನಾರ್ಜನ!
ಕ್ಷ್ಯ ಸಚ್ಚಿದಾನಂದಾರಾಮ ಪಾವನ!
ಶಿಸಬೇಕೆಲ್ಲಾ ಲೌಕಿಕ ವಾಸನ! (ನಿ)
-ವಾಸವಾಗಬೇಕಾರಾಮನಿಗೀ ಮನ! (ಸ)
-ದಾ ನಾಮಸ್ಮರಣೆಯಿದಕೆ ಸಾಧನ! (ಹೊ)
-ಗೆ ಹೋಗಲಿಕ್ಕಾಗಬೇಕಗ್ನಿಜ್ವಲನ! (ಉ)
-ನ್ನತಾದರ್ಶವಿದೇ ಸಾರ್ಥಕ ಜೀವನ!
ತ್ತ ಗುರುದೇವನದಿದೇ ಬೋಧನ! (ದ)
-ರ್ಶನಕ್ಕೆ ಪ್ರಾಮುಖ್ಯವನಾಜ್ಞಾ ಪಾಲನ!
ಮೋ ನಿರಂಜನಾದಿತ್ಯಾತ್ಮ ಚೇತನ!!!

ನೇಮ ಭಂಗ, ದುಸ್ಸಂಗ, ಶಾಂತಿ ಭಂಗ!   6(4247)

ನಸಿಜನಿಂದಕ್ಕು ಮಾನಭಂಗ!
ಭಂಡನೆನಿಸಿರುವನಾ ಅನಂಗ! (ಆ)
-ಗದಿರ್ಬೇಕವನಿಂದ ತಪೋಭಂಗ! (ಇಂ)
-ದು ಶೇಖರನದ್ದಿರಬೇಕು ಸಂಗ! (ದು)
-ಸ್ಸಂಗಕ್ಕೆ ಬಲಿ ಬೀಳದಾಯೋಗಾಂಗ!
ರ್ವದಿಂದ ನಾಶವಕ್ಕು ಭೋಗಾಂಗ!
ಶಾಂಭವಿಯಂತಾಗ್ಬೇಕಂಗನೆಯಂಗ! (ನೀ)
-ತಿ ರೀತಿಯಲ್ಲಿದು ಬ್ರಹ್ಮಚರ್ಯಾಂಗ! (“ಭಂ)
-ಭಂ, ಮಹಾದೇವ” ಎಂದಿರ್ಪುದಾ ಅಂಗ! (ಖ)
-ಗ ನಿರಂಜನಾದಿತ್ಯಗಾ ಸತ್ಸಂಗ!

ನೇಮ, ನಿಷ್ಠ ಬಾಳಿನ ತಾಳ, ಮೇಳ!   6(4085)

ನಸ್ಸಿದರಿಂದ ಸದಾ ನಿರಾಳ!
ನಿರಂಜನ ಬಲ್ಲನಿದರ ಆಳ! (ನಿ)
-ಷ್ಠೆಯಿಲ್ಲದರಸು ಚೆನ್ನಾಗಿ ಆಳ!
ಬಾಲ ಹಿಡಿಕರಿಗಿಕ್ಕುವ ಕೂಳ! (ನ)
-ಳಿನನಾಭವ ಸ್ಸರಿಸಾ ದುರುಳ!
ರಹರಿ ದಾಸಾ ಪ್ರಹ್ಲಾದ ಬಾಳ!
ತಾಪಸೂ

ತ್ತಮನಂತಿದ್ದಾ ತರಳ! (ಒ)
-ಳ, ಹೊರ, ಶುದ್ಧವನಂತೆ ವಿರಳ!
ಮೇದಿನೀಪತಿಯಾದರೂ ಸರಳ! (ಬಾ)
-ಳ ನಿರಂಜನಾದಿತ್ಯಗಾ ತರಳ!!!

ನೇಮಕ್ಕೆ ತಕ್ಕ ನಾಮದಂತೆ ದೇವರನೇಕ ರೂಪ!   6(4134)

ರ್ತರಿದರಿಂದಾಗಿ ಪೂಜಿಸರಿಷ್ಟದಂತೆ ರೂಪ! (ಬೆ)
-ಕ್ಕೆಗಳರದ್ದನ್ನೀಡೇರಿಸಲಿಕ್ಕೊಂದೊಂದು ರೂಪ!
ತ್ವಜ್ಞರಿದಕ್ಕಾಗಿ ಬೇದಿಯ ಕೈ ಕಂಬದ ದೇಪ! (ತ)
-ಕ್ಕ ರೀತಿಯ ವ್ಯಾಸಂಗಕ್ಕುಪಯುಕ್ತಾ ವಿವೇಕ ದೇಪ!
ನಾಸ್ತಿಕರಾವಾಸ ಅಜ್ಞಾನದ ಆಳವಾದ ಕೂಪ!
ಲಿನ ಮನಸ್ಸಿನಲ್ಲಿ ಬಿಂಬಿಸದು ಜ್ಞಾನ ದೇಪ!
ದಂಭ, ದರ್ಪದಿಂದ ಮಾಡುವುದದು ಸತತ ಪಾಪ!
ತೆಗೆಯಲ್ಕಿದನ್ನು ಬೇಕು ಪರಶುರಾಮ ಪ್ರತಾಪ!
ದೇಶ, ಕಾಲಕ್ಕೆ ತಕ್ಕಂತೆ ಇಂಥಾ ಅವತಾರ ರೂಪ!
ಸ್ತ್ರಾಪಹಾರದಲ್ಲಿ ತೋರಿದನದ್ಭುತ ಯದುಪ!
ಘುರಾಮನು ಗೈದನು ವಿಮೋಚನೆ ಅಹಲ್ಲಾ ಶಾಪ!
ನೇಮ, ನಿಷ್ಠೆ ರಾಮನದ್ದನ್ನು ಮೆಚ್ಚಿದನು ದಿನಪ!
ಮಲನಾಭನಂಶಜನಿವ ಆದರ್ಶ ಜನಪ!
ರೂಪ, ನಾಮಾತೀತ ದತ್ತನ ಸಚ್ಚಿದಾನಂದ ರೂಪ!
ರಿಶುದ್ಧಾತ್ಮ ನಿರಂಜನಾದಿತ್ಯದ್ಧಿದೇ ರೂಪ!!!

ನೈವೇದ್ಯವನ್ನಿಂದುಂಡಾಯ್ತು!   5(2592)

ವೇದವಾಗ್ಯಮೃತವಾಯ್ತು! (ಆ)
-ದ್ಯವಸಾನವಿಲ್ಲದಾಯ್ತು!
ರ ಗುರುವೇ ತಾನಾಯ್ತು! (ತ)
-ನ್ನಿಂದ ಬೇರೊಂದಿಲ್ಲದಾಯ್ತು! (ಔ)
-ದುಂಬರಂಬರದಲ್ಲಾಯ್ತು! (ಓ)
-ಡಾಟವೆಲ್ಲಾ ನಿಂತು ಹೋಯ್ತು! (ಆ)
-ಯ್ತು, ನಿರಂಜನಾದಿತ್ಯಾಯ್ತು!!!

ನೊಂದ ಮನಕೆಂದಿಗಾನಂದವಯ್ಯಾ!   2(756)

ಯೆ ಗುರುವಿನದಾದಂದಿಗಯ್ಯಾ!
ನಸಿನಾಶೆ ನಾಶಾದಂದಿಗಯ್ಯಾ!
ಶ್ವರಾನಂದ ನಂದಿದಂದಿಗಯ್ಯಾ!
ಕೆಂದಾವರೆಯಾಪ್ತಾಪ್ತಾದಂದಿಗಯ್ಯಾ!
ದಿನ, ರಾತ್ರ್ಯಾತ್ಮಾನಂದಾದಂದಿಗಯ್ಯಾ!
ಗಾಢವಾದಜ್ಞಾನ ಹೋದಂದಿಗಯ್ಯಾ!
ನಂಬಿಗೆಗಿಂಬು ದೊರೆತಂದಿಗಯ್ಯಾ!
ತ್ತನಿಷ್ಟವೆಲ್ಲವೆಂದೆಂದಿಗಯ್ಯಾ!
ರ ಪ್ರಸಾದವೆಲ್ಲಾದಂದಿಗಯ್ಯಾ! (ಅ)
-ಯ್ಯಾ! ನಿರಂಜನಾನಂದಾದಂದಿಗಯ್ಯಾ!!!

ನೊಂದೆ ನಿಂದೆಯಲಿ ಬೆಂದೆ! (ಎ)   5(3032)

-ದೆಗೆಡಿಸಬೇಡ ತಂದೇ!
ನಿಂನ್ನಾನಂದವೆಲ್ಲವೆಂದೆ! (ಆ)
-ದೆ ನಿನಗೆ ಮಗನೆಂದೆ! (ಭ)
-ಯ ಪಡಿಸಬೇಡ ಮುಂದೆ! (ಒ)
-ಲಿದು ಬಾರಯ್ಯಾ ನೀನಿಂದೇ!
ಬೆಂಗಾವಲು ನೀನೇ ತಂದೇ! (ತಂ)
-ದೆ ನಿರಂಜನಾದಿತ್ಯೆಂದೆ!!!

ನೋಡ ಬಾರೆಲೋ ಗುರುದೇವನಾ! (ಓ)   4(1720)

-ಡಬೇಡಲೋ ನೋಡದೇ ಅವನಾ!
ಬಾಳವನಿಂದಾಗ್ವುದು ಪಾವನಾ! (ಮ)
-ರೆಯದೇ ಮಾಡವನ ಕೀರ್ತನಾ!
ಲೋಕ ವ್ಯವಹಾರ ದುರ್ವಾಸನಾ!
ಗುಣದಾಯಕ ದಿವ್ಯ ಜೀವನಾ! (ಗು)
-ರುಸೇವೆ ಮಾಡು ನೀನನುದಿನಾ!
ದೇವ, ಜೀವರೈಕ್ಯಕ್ಕೆ ಸಾಧನಾ! (ಭ)
-ವರೋಗ ವೈದ್ಯಾತ್ಮನ ಚಿಂತನಾ! (ಜ್ಞಾ)
-ನಾನಂದ ನಿರಂಜನಾದಿತ್ಯನಾ!!!

ನೋಡಬೇಕೆನಿಸಿದಾಗೊಡನೆ ನೋಡು! (ಹಾ)   4(2225)

-ಡಬೇಕೆನಿಸಿದಾಗೊಡನೆ ಹಾಡು!
ಬೇಜಾರಾದಾಗ ಗುರುಸ್ಮರಣೆ ಮಾಡು!
ಕೆರ ಹರಿದಾಗ್ಚಮ್ಮಾರನೆಡೆಗೋಡು!
ನಿದ್ರೆಯವೇಳೆಯಲ್ಲಿ ಬಂದಾಗಡ್ಡಾಡು! (ಹ)
-ಸಿವು ಕಂಡಾಗಾಹಾರ ಸ್ವೀಕಾರ ಮಾಡು!
ದಾಹಾದಾಗ ಶುದ್ಧೋದಕ ಪಾನ ಮಾಡು!
ಗೊಡ್ಡಾಗಿಲ್ಲದಾಕಳನ್ನು ದಾನ ಮಾಡು! (ಹೆಂ)
-ಡ ಕುಡಿವ ದುರಭ್ಯಾಸ ದೂರ ಮಾಡು!
ನೆರೆಯವರ ಸ್ನೇಹ ಯೋಚಿಸಿ ಮಾಡು! (ಮ)
-ನೋ ನಿಗ್ರಹಕ್ಕೆ ಸದಾ ಪ್ರಯತ್ನ ಮಾಡು! (ಹಾ)
-ಡು, ನಿರಂಜನಾದಿತ್ಯನ ಸೇವೆ ಮಾಡು!!!

ನೋಡಲಾರೆ ನನ್ನ ನೀನಿನ್ನು! (ಮೊಂ)   5(2664)

-ಡುತನ ಬಿಟ್ಟು ಸೇರ್ನನ್ನನ್ನು! (ಲೀ)
-ಲಾನಾಟಾಕದರ್ಥವಾಗ್ಲಿನ್ನು! (ಮ)
-ರೆಯ್ಬೇಡಹಂಕಾರ್ಯಾಗ್ಯೆನ್ನನ್ನು!
ಶ್ವರ ಸಂಸಾರ ಸಾಕಿನ್ನು! (ಅ)
-ನ್ನ, ಬಟ್ಟೆಗಾಗಿ ಹುಚ್ಚಿಲ್ಲೆನ್ನು!
ನೀಲಾಕಾಶ ಸದೃಶಾನೆನ್ನು!
ನಿಶ್ಚಲ ತತ್ವದಲ್ಲಿರಿನ್ನು! (ಅ)
-ನ್ನು, ನಿರಂಜನಾದಿತ್ಯಾನೆನ್ನು!!!

ನೋಡಲಾರೆ ನಿನ್ನ ಸುಟ್ಟು ಮುಖ ಕಾಮಾ! (ಮೃ)   5(3264)

-ಡನ ಕೆಣಕಿ ಸುಟ್ಟು ಬೂದ್ಯಾದೆ ಕಾಮಾ!
ಲಾಭ ನಿನ್ನ ದರ್ಶನದಿಂದಿಲ್ಲ ಕಾಮಾ! (ತೆ)
-ರೆಯಲಾರೆ ನಿನಗೆನ್ನ ಕದ ಕಾಮಾ!
ನಿರ್ಧರವಿದೆ ನೀ ತಪ್ಪಿಸ್ಲಾರೆ ಕಾಮಾ!
(ನಿ)ನ್ನಪ್ಪ ಶ್ರೀಹರಿಯಾದರೇನಾಯ್ತು ಕಾಮಾ?
ಸುರೇಶನೊಡಲ್ಯೋನಿಮಯಾಯ್ತು ಕಾಮಾ! (ಕ)
-ಟ್ಟಿ ಕೀಚಕ ನಿನ್ನ ಸಂಗದಿಂದ ಕಾಮಾ!
ಮುಕ್ತಿಗೆ ನಿನ್ನಿಂದ ಅಡಚಣೆ ಕಾಮಾ!
ರ, ದೂಷಣರರಸ ನೀನು ಕಾಮಾ!
ಕಾಡಬೇಡ ನೀನಿನ್ಮೇಲಾರನ್ನೂ ಕಾಮಾ!
ಮಾತ್ಕೊಡು ನಿರಂಜನಾದಿತ್ಯಗೆ ಕಾಮಾ!!!

ನೋಡಿ, ನೋಡಿ, ಬಾಡಿಹೋಯಿತಾ ವನಜ! [ಅ]   5(2531)

ಡಿಗಡಿಗಡಿಗೆರಗಿತ್ತಾ ವನಜ!
ನೋವು, ಸಾವಿಗಂಜದಿರ್ತಿತ್ತಾ ವನಜ!
(ತಿಂ)ಡಿ, ತೀರ್ಥ ದರ್ಶನವೆಂದಿತ್ತಾ ವನಜ!
-ಬಾ, ಬಾ ಭಾನುದೇವೆನುತಿತ್ತಾ ವನಜ! (ಕಾ)
-ಡಿ, ಬೇಡೆ ನಾನಿನ್ನನೆಂದಿತ್ತಾ ವನಜ!
ಹೋಮ, ನೇಮೆನಗೇಕೆಂದಿತ್ತಾ ವನಜ! (ತಾ)
-ಯಿ, ತಂದೆ ನೀನೆನಗೆಂದಿತ್ತಾ ವನಜ!
ತಾಪಸ್ಯಾದೆ ನಿನ್ಗಾಗ್ಯೆಂದಿತ್ತಾ ವನಜ!
ರದರಾಜ ನೀನೆಂದಿತ್ತಾ ವನಜ!
“ನಗುರೋರಧಿಕಂ” ಎಂದಿತ್ತಾ ವನಜ! (ನಿ)
-ಜ, ನಿರಂಜನಾದಿತ್ಯಾನಂದಾ ವನಜ!!!

ನೋಡಿದಮೇಲೆ ಸಮಾಧಾನ! (ಆ)   6(4173)

-ಡಿದ್ದು ಕೇಳಿ ಅಸಮಾಧಾನ!
ಯೆಯುಂಟಾಗಲಿ ನಿಧಾನ!
ಮೇಲಿಂದ್ಮೇಲ್ದರ್ಶನ ಪ್ರಧಾನ!
ಲೆಖ್ಖಾಚಾರದಂತೆ ಜೀವನ!
ದ್ಗುರು ಶಿವನ ಸಮಾನ!
ಮಾಡಿ ಸೇವೆ ಒಲಿಸವನ! (ವಿ)
-ಧಾನದಕ್ಕೆ ನಾಮ ಭಜನ! (ಘ)
-ನ ನಿರಂಜನಾದಿತ್ಯಾತ್ಮನ!!!

ನೋಡಿದಮೇಲೇನಾಗುವುದೋ? ನಾ ಕಾಣೆ! (ನು)   5(2644)

-ಡಿಸಿ ಮೈ ಮರೆಸೆಂಬುದೀ ನನ್ನ ವೀಣೆ!
ತ್ತಗುರುವೇ ಸರಸ್ವತಿಯಾಗ್ಯೆಣೆ!
ಮೇರೆ ಮೀರಿದಾತ್ಮಾನಂದಾತ್ಮಾ ಪ್ರವೀಣೆ!
ಲೇಶವೂ ಸಂಶಯವಿಲ್ಲೆಂಬೆ ನನ್ನಾಣೆ!
ನಾನೆಂತಿರಬೇಕೆಂಬುದವಳ ಹೊಣೆ!
ಗುರಿ ಸೇರ್ಲಿಕ್ಕಿರಬೇಕವಳ ರಕ್ಷಣೆ! (ಯಾ)
-ವುದಕ್ಕೂ ಬೇಕಾ ಶ್ರೀ ಪಾದದ ಕರುಣೆ!
ದೋಷಿಗೂ ಅವಳೆಡೆಯಲ್ಲಿ ಮನ್ನಣೆ!
ನಾಚ್ಕೆ ಬಿಟ್ಟಾಗ್ಬೇಕವಳಿಗ್ಸಮರ್ಪಣೆ!
ಕಾಯಾ, ವಾಚಾ, ಮನ್ನಾ ಕಾರ್ಯನಿರ್ವಹಣೆ! (ವೀ)
-ಣೆಗೀಗ ನಿರಂಜನಾದಿತ್ಯಾವಾಹನೆ!!!

ನೋಡಿದರಿರುವುದೊಂದು ರೂಪ! (ಕೂ)   4(1468)

-ಡಿದಾಗಾಗುವುದು ಸ್ವ ಸ್ವರೂಪ! (ಆ)
-ದರನಾದರಕ್ಕೀ ಸ್ಥೂಲ ರೂಪ! (ಅ)
-ರಿವಿನಲಿದ್ದಾಗಾನಂದ ರೂಪ! (ತ)
-ರು, ಲತೆಯೆಂಬ ವಿವಿಧ ರೂಪ!(ಅ)
-ವುಗಳಿಗೆ ಕಾರಣಾತ್ಮ ರೂಪ!
ದೊಂಬಿ, ದರೋಡೆಗೀ ಜಡ ರೂಪ! (ಅ)
-ದು ಅಡಗಿದಾಗ ಮೃಡ ರೂಪ!
ರೂಪ ರೇಖೆಯೆಲ್ಲಾ ನಾಶ ರೂಪ! (ನೃ)
-ಪ, ನಿರಂಜನಾದಿತ್ಯ ಪ್ರದೀಪ!!!

ನೋಡಿದೆ, ನಾನಿನ್ನೊಡನಾಡಿದೆ! (ನೀ)   5(3184)

-ಡಿಷ್ಟಸಿದ್ಧಿಯನೆಂದು ಬೇಡಿದೆ! (ತಂ)
-ದೆ ನಿನ್ನಂತೆನ್ನ ಮಾಡೆಂದ್ಹಾಡಿದೆ!
ನಾಮ ಸಂಕೀರ್ತನೆಯ ಮಾಡಿದೆ!
ನಿಶಿ, ದಿನಾಖಂಡ ಸೇವೆ ಗೈದೆ! (ನ)
-ನ್ನೊಡಲೇ ನಿನ್ನ ಗುಡಿಯಾಗ್ಲೆಂದೆ! (ತ)
-ಡಮಾಡದೇ ದರ್ಶನ ಕೊಡೆಂದೆ!
ನಾಳೇನಾದೀತೆಂದರಿಯೆನೆಂದೆ! (ಬ)
-ಡಿಸು ಹಸಿದವನಿಗೀಗೆಂದೆ! (ತಂ)
-ದೆ, ನಿರಂಜನಾದಿತ್ಯಗಿಂತೆಂದೆ!!!

ನೋಡಿಯಾಗುವುದೇನು ನನ್ನನ್ನು? [ನೀ]   3(1093)

-ಡಿ ಕಾಪಾಡೆನ್ನುವೆನು ನಿನ್ನನ್ನು!
ಯಾವುದಕ್ಕಾಗಿಟ್ಟಿಹೆ ನನ್ನನ್ನು?
ಗುರುವೆಂದು ನಂಬಿಹೆ ನಿನ್ನನ್ನು! (ಸಾ)
-ವು, ನೋವಿನಲೇಕಿಟ್ಟೆ ನನ್ನನ್ನು? (ಸ್ವ)
-ದೇಶ ಬಿಟ್ಟರಸುವೆ ನಿನ್ನನ್ನು! (ಅ)
-ನುಕೂಲವಾಗಿರಿಸು ನನ್ನನ್ನು!
ಯನ ನೋಡಿರಲಿ ನಿನ್ನನ್ನು (ಇ)
-ನ್ನನಾದರಿಸಬೇಡ ನನ್ನನ್ನು! (ಅ)
-ನ್ನು, ನಿರಂಜನಾದಿತ್ಯ ನೀನನ್ನು!!!

ನೋಡುವ ಕಣ್ಣು ಮಂಜಾಯಿತು!   6(3532)

(ಹಾ)-ಡುವ ಗಂಟ್ಲು ಮುಚ್ಚಿಹೋಯಿತು!
ರ್ಣಿಪ ಬುದ್ಧಿ ಮಂಕಾಯಿತು!
ಷ್ಟಕ್ಕಂತ್ಯವಿಲ್ಲದಾಯಿತು!
(ಉ)-ಣ್ಣುವನ್ನದ ರುಚಿ ಕೆಟ್ಟಿತು!
(ಹೋಯಿತು)
ಮಂಡೆಯೆಲ್ಲಾ ಬಿಳುಪಾಯಿತು!
ಜಾಗರಣೋಪವಾಸಾಯಿತು!
(ಆ)-ಯಿತು, ನಿರಾಶೆಯುಂಟಾಯಿತು!
(ಅಂ)-ತು ನಿರಂಜನಾದಿತ್ಯಾಯಿತು!!!

ನೋಡ್ಯಾನಂದಿಸುವವನೊಬ್ಬ! (ಹಾ)   6(3309)

-ಡ್ಯಾನಂದ ಪಡುವವನೊಬ್ಬ (ಆ)
-ನಂದ ನೋಡದೇಪಡ್ವವ್ನೊಬ್ಬ!
ದಿಕ್ಕುತೋರ್ಬೇಕೊಬ್ನಿಗಿನ್ನೊಬ್ಬ!
ಸುಜನರೆಲ್ಲರ್ಗೆ ದೇವ್ರೊಬ್ಬ!
ನಧಿಗಿಲ್ಲ ಹಳ್ಳ, ದಿಬ್ಬ!
ರ ಗುರು ದತ್ತ ತಾನೊಬ್ಬ!
ನೊಗಹೊತ್ತರೈತಗೀಗ್ಹಬ್ಬ! (ಹ)
-ಬ್ಬ, ನಿರಂಜನಾದಿತ್ಯನುಬ್ಬ!!!

ನೋಡ್ಲೇಬೇಕೆಂಬವರು ನೋಡ್ತಾನೇ ಇದ್ದಾರೆ! (ಮಾ)   5(2715)

-ಡ್ಲೇಬೇಕೆಂಬವರೆಲ್ಲಾ ಮಾಡ್ತಾನೇ ಇದ್ದಾರೆ!
ಬೇರೆಲ್ಲೋಡ್ಬಾರ್ದೆಂಬವ್ರಿದ್ದಲ್ಲೀನೇ ಇದ್ದಾರೆ! (ಬೇ)
-ಕಂಬ್ದಿಲ್ಲದವರ್ಬೇಕೆನ್ನದೇನೇ ಇದ್ದಾರೆ!
ರೆಯ್ಬೇಕೆಂಬದರ್ಬರೀತ್ತಾನೇ ಇದ್ದಾರೆ! (ಪ್ರ)
-ವಚನಕಾರರ್ಮಾತನಾಡ್ತಾನೇ ಇದ್ದಾರೆ! (ಗು)
-ರುಭಕ್ತರೆಲ್ಲಾ ಸೇವೆ ಮಾಡ್ತಾನೇ ಇದ್ದಾರೆ!
ನೋವು ಮಾಡುವವರ್ನೋಯಿಸ್ತಾನೇ ಇದ್ದಾರೆ! (ಕೊ)
-ಡ್ತಾ ಇರುವವರೆಲ್ಲಾ ಕೊಡ್ತಾನೇ ಇದ್ದಾರೆ!
ನೇಮನಿಷ್ಟರ್ಸಾಧನೆ ಮಾಡ್ತಾನೇ ಇದ್ದಾರೆ! (ಒ)
-ದ್ದಾಡುವವರೆಲ್ಲಾ ಒದ್ದಾಡ್ತಾನೇ ಇದ್ದಾರೆ! (ಬೆ)
-ರೆತು ನಿರಂಜನಾದಿತ್ಯನಲ್ಲಾರಿದ್ದಾರೆ???

ನೋಯಿಸಬೇಡ ನಿನ್ನ ಪತಿಯನ್ನು! (ತಾ)   3(1028)

-ಯಿ, ತಂದೆ, ಬಂಧುವೆಂದರ್ಯವನನ್ನು!
ದಾ ಸ್ಮರಿಸವನ ಪಾದವನ್ನು!
ಬೇರೇನೂ ಯೋಚಿಸಬೇಡ ನೀನಿನ್ನು! (ಒ)
-ಡಗೂಡ್ಯಾನಂದ ಪಡಿಸವನನ್ನು!
ನಿನಗವನಲ್ಲದೆ ಗತ್ಯಾರಿನ್ನು? (ಉ)
-ನ್ನತಿಗೆ ಪಾಲಿಸವನಾಜ್ಞೆಯನ್ನು!
ರಿಹರಿಪನೆಲ್ಲಾ ಕಷ್ಟವನ್ನು!
ತಿಳಿ, ಅವನಿಷ್ಟವೇನೆಂಬುದನ್ನು! (ಧ್ಯೇ)
-ಯ ಸಿದ್ಧಿಗಾಗಿ ನಂಬು ಅವನನ್ನು! (ಇ)
-ನ್ನು ನಿರಂಜನಾದಿತ್ಯ ಗತಿಯೆನ್ನು!!!

ನೋಯಿಸಲೂ, ಪ್ರೀತಿಸಲೂ, ನೀನುಬಲ್ಲೆ! (ಬಾ)   5(3076)

-ಯಿಮುಚ್ಚಿಸಿ ಮೂಲೆಗೆ ತಳ್ಳಲೂ ಬಲ್ಲೆ!
ರ್ವೇಶ್ವರನಿವನೆನಿಸಲೂ ಬಲ್ಲೆ! (ಹಾ)
-ಲೂಟ ನಿತ್ಯವಿತ್ತು ಮುತ್ತಿಕ್ಕಲೂ ಬಲ್ಲೆ! (ಅ)
-ಪ್ರೀತನಾದ್ರೆ ಕತ್ತು ಹಿಸುಕಲೂ ಬಲ್ಲೆ!
ತಿರುಕನಂತೂರೂರ್ಸುತ್ತಿಸಲೂ ಬಲ್ಲೆ!
ರ್ವಜ್ಞನೆನೆಪಿಸಿಮರೆಸಲೂ ಬಲ್ಲೆ! (ಕಾ)
-ಲೂ, ಕೈ ಕತ್ತರಿಸುತ್ತೆಸೆಯಲೂ ಬಲ್ಲೆ!
ನೀಲಾಕಾಶದಲ್ಲಿ ಹಾರಿಸಲೂ ಬಲ್ಲೆ!
(ಅ)ನುಪಮಾತ್ಮ ನೀನೆಂಬುದ ನಾನು ಬಲ್ಲೆ!
ಲದಲ್ಲಿ ಮಹಾಬಲನೆಂದೂ ಬಲ್ಲೆ! (ಎ)
-ಲ್ಲೆ ನಿರಂಜನಾದಿತ್ಯಗೆ ಹಾಕಲೊಲ್ಲೆ!!!

ನೋವು ಬೇಗ ಹೋಗಲಮ್ಮಾ! (ಬಾ)   2(634)

-ವು ತಕ್ಷಣ ಬತ್ತಲಮ್ಮಾ!
ಬೇಸರ ಅಳಿಯಲಮ್ಮಾ! (ಮ)
-ಗಳಿಗಿದಭಯವಮ್ಮಾ!
ಹೋಗಲೀ ಜೀವ ಭಾವಮ್ಮಾ! (ಹ)
-ಗಲಿರುಳು ಧ್ಯಾನವಮ್ಮಾ!
ಕ್ಷ್ಯ ಗುರು ಪಾದವಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯಮ್ಮಾ!!!

ನ್ಯಾಯಾನ್ಯಾಯವೆಲ್ಲಾ ನಿನಗೊಂದೇ!   2(727)

ಯಾಕೆ ನಾ ನಿನ್ನಂತಾಗಿಲ್ಲ ತಂದೇ?
ನ್ಯಾಯಾನ್ಯಾಯ ಮನಸಿನದೆಂದೇ!
ತ್ನಿಪೆನದನರಿಯಲು ತಂದೇ!
ವೆಗ್ಗಳದನುಗ್ರಹ ಮಾಡಿಂದೇ! (ಕ)
-ಲ್ಲಾಗಬೇಕಲ್ಲವೇ ಮನ ತಂದೇ?
ನಿತ್ಯ ನಿರ್ಮಲ ನೀನೆನ್ನ ತಂದೇ!
ಮಿಪೆ ನಿನ್ನ ಪಾದಕ್ಕೆ ತಂದೇ!
ಗೊಂದಲದ ಬಾಳು ಸಾಕು ತಂದೇ!
ದೇವ! ನಿರಂಜನಾದಿತ್ಯಾ ತಂದೇ!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ