ಧನಘಳಿಸುವುದು ಕಷ್ಟವಲ್ಲ! (ಮ)   3(1023)

-ನವೊಲಿಸುವುದು ಸುಲಭವಲ್ಲ! (ಸಂ)
-ಘ ಕಟ್ಟುವುದು ಕಠಿಣವೇನಲ್ಲ! (ಉ)
-ಳಿಸಿಕೊಳ್ಳಲಿಕಿದು ಕಾಲವಲ್ಲ! (ಹ)
-ಸು ಕೊಂಡುಕೊಳ್ಳುವುದು ಶ್ರಮವಲ್ಲ! (ಮೇ)
-ವು ಒದಗಿಸಲಸೌಕರ್ಯವೆಲ್ಲ!
ದುರ್ವಿದ್ಯೆ ಫಲಿಸಿ ಸುಖವೇನಿಲ್ಲ!
ಲಿಮಲ ಹೋದರೆ ದುಃಖವಿಲ್ಲ! (ಇ)
-ಷ್ಟ ಶ್ರೀಕೃಷ್ಣನಾದರೆ ತಂಟೆಯಿಲ್ಲ!
ರದರಾಜನವ ಲೋಕಕ್ಕೆಲ್ಲ! (ಗೊ)
-ಲ್ಲ, ನಿರಂಜನಾದಿತ್ಯ ಊರಿಗೆಲ್ಲ!!!

ಧನಾಗಮವಿಲ್ಲೇಕೆ ಕಡಿಮೆ?   5(3009)

ನಾಮಸ್ಮರಣೆಗಿಲ್ಲ ಹಿರಿಮೆ!
ಗನಮಣಿಗದೇ ದುಡಿಮೆ!
ರ್ತ್ಯರೇನರಿವರೀ ಮಹಿಮೆ?
ವಿಕಲ್ಪ, ಸಂಕಲ್ಪಗಳಡೆಮೆ! (ಇ)
-ಲ್ಲೇನಲ್ಲೇನೆಂಬುದೆಲ್ಲವೂ ಭ್ರಮೆ!
ಕೆಡ್ಬಾರದಿಲ್ಲದೆ ಶಮೆ, ದಮೆ!
ಲಿಸಿರುವಳಿದನ್ನು ಉಮೆ! (ದು)
-ಡಿಮೆಗೆ ಶಿವಾನಂದವೇ ಜಮೆ! (ಭ್ರ)
-ಮೆ ನಿರಂಜನಾದಿತ್ಯಗೇನುಮೆ???

ಧನ್ಯ ನಿನ್ನಿಂದ ನಾನಾಗಬೇಕಯ್ಯಾ (ಅ)   2(461)

-ನ್ಯಗತಿ ನನಗಿನ್ಯಾರಿಲ್ಲವಯ್ಯಾ!
ನಿನ್ನಾನಂದವೆನ್ನದಾಗಿರಲಯ್ಯಾ! (ನ)
-ನ್ನಿಂದ ನೀನು ಬೇರೆಯಾಗದಿರಯ್ಯಾ!
ತ್ತ ನಾ ನಿನ್ನ ನಂಬಿಲ್ಲವೇನಯ್ಯಾ!
ನಾಳೆ ಗೀಳೆ ಮಾತು ಸಾಕು ಮಾಡಯ್ಯಾ!
ನಾಮ ಜಪ ಬಿಟ್ಟಿರುವೆನೇನಯ್ಯಾ!
ಗನಮಣಿ ಸಾಕ್ಷಿ ಇದಕಯ್ಯಾ!
ಬೇಕಿನ್ನೇನು ಭೂಮಿಯಲೆನಗಯ್ಯಾ?
ನಿಕರ ತೋರಿ ಬರಬೇಕಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನೆಂದಿರಯ್ಯಾ!!!

ಧನ್ಯನಾಗು ಗುರು ಸನ್ನಿಧಿಯಲ್ಲಿ! (ಅ)   4(2266)

-ನವ್ಯವಹಾರ ಮಾತಾಡದಿರಲ್ಲಿ!
ನಾಮ, ಜಪ, ಧ್ಯಾನ ಮಾಡುತಿರಲ್ಲಿ!
ಗುಹ್ಯಾದಿಂದ್ರಿಯಗಳನು ಜೈಸಲ್ಲಿ!
ಗುಡಿಯಾಗಲಿ ನಿನ್ನ ದೇಹ ಅಲ್ಲಿ! (ಗು)
-ರುದೇವನೋಡಿ ಬರುವನಾಗಲ್ಲಿ! (ವಾ)
-ಸ ಮಾಡುವನು ಬಹುಕಾಲವಲ್ಲಿ! (ನಿ)
-ನ್ನಿಷ್ಟಸಿದ್ಧಿಯಾಗುವುದಾಗ ಅಲ್ಲಿ! (ಸಾ)
-ಧಿಸಿ ಸಾಯುಜ್ಯ ಸುಖಿಯಾಗಿರಲ್ಲಿ! (ಭ)
-ಯದಿಂದ ಪಾರಾಗುವಿಂತು ನೀನಲ್ಲಿ! (ಇ)
-ಲ್ಲಿ ನಿರಂಜನಾದಿತ್ಯನಡಿಯಲ್ಲಿ!!!

ಧನ್ವತರಿಯಾತ್ಮಜರ್ಗೇಕೆ ದೃಷ್ಠಿ ಮಾಂದ್ಯ? (ಧ)   6(4089)

-ನ್ವಂತರಿಯ ಮುಂದೆ ಇದೇನಲ್ಲ ಕುಚೋದ್ಯ!
ನಯ ತಪಸ್ವಿಯಲ್ಲೆನಲು ಅಸಾಶ್ಯ!
ರಿಸಿ, ಮುನಿಯಾದರ್ಶಕ್ಕೆರಚ್ಬಾರ್ದಮೇಧ್ಯ!
ಯಾವ ಯುಗವಾದರೇನೊಬ್ಬನೇ ಆರಾಧ್ಯ! (ಆ)
-ತ್ಮಜ್ಞಾನವಿಲ್ಲದಿದ್ದರದು ವ್ಯರ್ಥವಿದ್ಯಾ!
ಡ ದೇಹ ಸರಿಯಿಲ್ಲದಿದ್ದರೇನ್ಸಾಧ್ಯ? (ಭ)
-ರ್ಗೇಶ್ವರಗೆ ಪಾದವಿಲ್ಲದಿದ್ದ್ರೆಂತು ಪ್ದಾ?
ಕೆಟ್ಟದ್ದೊಳ್ಳೇದಕ್ಕೆಲ್ಲಾ ಶರೀರಾರೋಗ್ಯಾದ್ಯ! (ಅ)
-ದೃಷ್ಟ ಹೀನ ಮೂಕನೆಂತೂದಬಲ್ಲ ವಾದ್ಯ? (ಸೃ)
-ಷ್ಟಿಯೆಂತಿದ್ದ್ರೇನು? ತಪಸ್ಸಿಗಾವುದಸಾಧ್ಯ?
ಮಾಂಡೂಕ್ಯಾದ್ಯುಪನಿಷತ್ವಾಕ್ಯಾಗ್ಬೇಕ್ಪ್ರಚೋದ್ಯ! (ವಂ)
-ದ್ಯ ಶ್ರೀ ನಿರಂಜನಾದಿತ್ಯನಿಗಿದು ವೇದ್ಯ!!!

ಧರ್ಮ ಕರ್ಮದಿಂದನ್ನವಮ್ಮಾ! (ಮ)   2(508)

-ರ್ಮವಿದರಿತುಣ ಬೇಕಮ್ಮಾ!
ರ್ಮ ಮಾಡದಗ್ಯಾಕೂಟಮ್ಮಾ! (ಧ)
ರ್ಮವಿದಾರ್ಯರ ಮತವಮ್ಮಾ!
ದಿಂಡಾಗಿ ಬೆಳೆಯಲೇಕಮ್ಮಾ?
ಶೇಂದ್ರಿಯದಾಟ ಸಾಕಮ್ಮಾ! (ಅ)
-ನ್ನ ತಿಂದು, ಬಂಧನ ಬೇಡಮ್ಮಾ! (ಅ)
-ವಧೂತನಿಗಿದು ಗೊತ್ತಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯವಮ್ಮಾ!!!

ಧರ್ಮ ಕೆಟ್ಟಿತು ನಿನ್ನಿಂದಯ್ಯಾ! (ಧ)   4(1996)

-ರ್ಮ ಪ್ರೇಮಿಯ ಕೇಳ್ವರಿಲ್ಲಯ್ಯಾ!
ಕೆಟ್ಟತನಕ್ಕಾದರವಯ್ಯಾ! (ಸು)
-ಟ್ಟಿಹರು ದೇವಾಲಯವಯ್ಯಾ!
ತುಡುಗರಡಿಗ್ಸಿಲ್ಲೇಕಯ್ಯಾ?
ನಿನ್ನವರ ನೀನೆತ್ತಿಲ್ಲಯ್ಯಾ! (ನ)
-ನ್ನಿಂದೇನಪರಾಧ ಹೇಳಯ್ಯಾ!
ರ್ಶನಾನುಗ್ರಹ ಮಾಡಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾಡಯ್ಯಾ!!!

ಧರ್ಮ ವೀರನೇ ರಾಜ್ಯಪಾಲ! (ನಿ)   4(1924)

-ರ್ಮಲ ಜೀವನೇ ರಾಜ್ಯಪಾಲ!
ವೀತರಾಗನೇ ರಾಜ್ಯಪಾಲ! (ತ)
-ರಣಿಯಂಶನೇ ರಾಜ್ಯಪಾಲ!
ನೇಮ, ನಿಷ್ಠನೇ ರಾಜ್ಯಪಾಲ! (ಆ)
-ರಾಮ ದಾತನೇ ರಾಜ್ಯಪಾಲ! (ವ್ಯಾ)
-ಜ್ಯರಹಿತನೇ ರಾಜ್ಯಪಾಲ!
ಪಾಪದೂರನೇ ರಾಜ್ಯಪಾಲ! (ಬಾ)
-ಲ ನಿರಂಜನಾದಿತ್ಯಾ ಪಾಲ!!!

ಧರ್ಮ ಸಂಸ್ಥಾಪಕ ನೀನಲ್ಲವೇನಯ್ಯಾ? (ಕ)   4(1998)

-ರ್ಮ ನಿನಗೊಪ್ಪುವಂತೆ ನೀ ಮಾಡಿಸಯ್ಯಾ!
ಸಂಪೂರ್ಣಾಧಿಕಾರ ನಿನಗಿಹುದಯ್ಯಾ!
ಸ್ಥಾವರ, ಜಂಗಮಾತ್ಮ ನೀನೆಂಬರಯ್ಯಾ (ಅ)
-ಪರಾಧಿಗಳು ಮಕ್ಕಳೆನಬೇಡಯ್ಯಾ!
ನಿಕರ ತೋರಿಸಬಾರದೇನಯ್ಯಾ?
ನೀತಿ, ರೀತಿ, ನೀನೇ ಕಲಿಸಬೇಕಯ್ಯಾ!
ಮಿಸುವೆನು ನಿನ್ನಡಿಗಳಿಗಯ್ಯಾ! (ಬ)
ಲ್ಲವನಿಗೆ ನಾನು ಹೇಳಬೇಕೇನಯ್ಯಾ?
ವೇದ, ವೇದಾಂತಜ್ಞ, ನೀನಲ್ಲವೇನಯ್ಯಾ?
ನ್ನ ಸರ್ವಸ್ವ ನೀನಾಗಿರುವೆಯಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಗುರು ಬಾರಯ್ಯಾ!!!

ಧರ್ಮ ಸಂಸ್ಥಾಪನೆಗಾಗಿ ವನವಾಸ! (ಮ)   6(3895)

-ರ್ಮವಿದರುಹಿತು ರಾಮ ವನವಾಸ!
ಸಂಗಡಿಗರಾರೆಂದಿತಾ ವನವಾಸ!
ಸ್ಥಾನ, ಮಾನ, ಮರೆತಿತ್ತಾ ವನವಾಸ!
ತಿತೋದ್ಧಾರ ಮಾಡಿತಾ ವನವಾಸ! (ಇ)
-ನೆಯನಾದರ್ಶ ತೋರಿತಾ ವನವಾಸ!
ಗಾಢ ಭ್ರಾತೃಪ್ರೇಮಕ್ಕಾಗೀ ವನವಾಸ!
ಗಿರಿಜನ ಸೇವೆಗಾಗೀ ವನವಾಸ!
ರ ಶಬರಿಗಾಗ್ಯಾಯ್ತೀ ವನವಾಸ! (ವಾ)
-ನರ ವೀರನಿಗಾಗ್ಯಾಯ್ತೀ ವನವಾಸ!
ವಾಲಿ ಸುಗ್ರೀವರ್ಗಾಗ್ಯಾಯ್ತೀ ವನವಾಸ! (ಜ)
-ಸ ನಿರಂಜನಾದಿತ್ಯಗಾ ವನವಾಸ!!!

ಧರ್ಮ, ಕರ್ಮ, ತಂದೆ, ತಾಯಿಯಯ್ಯಾ! (ಮ)   4(1781)

-ರ್ಮ ಮಾನವನರಿಯಬೇಕಯ್ಯಾ!
ಣ್ಣು “ಕಣ್ಣನ” ಕಾಣಬೇಕಯ್ಯಾ! (ಚ)
-ರ್ಮ ಪರಬ್ರಹ್ಮಾಲಿಂಗನಕ್ಕಯ್ಯಾ!
ತಂದೆ ಸರ್ವ ಕಾರಣ ಕರ್ತಯ್ಯಾ! (ಹಿಂ)
-ದೆ, ಮುಂದೆ, ಇಂದಾಧಾರವನಯ್ಯಾ!
ತಾಯಿಯವನ ಸೇವಕಳಯ್ಯಾ! (ಬಾ)
-ಯಿ, ಕೈಯವಳೋಪಕರಣಯ್ಯಾ (ಭ)
-ಯ, ಭಕ್ತ್ಯವಳ ಭೂಷಣವಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾತ್ಮಮ್ಮಯ್ಯಾ!!!

ಧರ್ಮ, ಕರ್ಮ, ಸ್ವಕರ್ಮ ಧರ್ಮ! (ಮ)   2(621)

-ರ್ಮವಿದರಿಯುವುದು ಧರ್ಮ!
ರ್ಮಕಿರುವುದೊಂದು ಧರ್ಮ! (ಧ)
-ರ್ಮ ಕರ್ಮಾಚಾರೆಲ್ಲರ ಧರ್ಮ!
ಸ್ವಧರ್ಮಕ್ಕನಾದರ ಧರ್ಮ!
ರ್ಮಕ್ಕೆ ಶ್ರದ್ಧಾ, ಭಕ್ತಿ ಧರ್ಮ! (ಕ)
-ರ್ಮ ನಿಷ್ಕಾಮಾಗುವುದು ಧರ್ಮ!
ರ್ಮಾತ್ಮಾನುಸಂಧಾನ ಧರ್ಮ! (ಕ)
-ರ್ಮ ನಿರಂಜನಾದಿತ್ಯ ಧರ್ಮ!!!

ಧರ್ಮ, ಕರ್ಮವರ್ತಿ ನಿಸ್ವಾರ್ಥಿ! (ಮ)   6(3590)

-ರ್ಮವಿದರಿತವ ಮೋಕ್ಷಾರ್ಥಿ! (ತ್ರಿ)
-ಕರಣ ಶುದ್ಧ ಪರಮಾರ್ಥಿ! (ಚ)
-ರ್ಮದ ಗೊಂಬೆಗಂಟಿಹ ಸ್ವಾರ್ಥಿ!
ಸನಾಶನಕ್ಕಾತಭ್ಯರ್ಥಿ! (ಕೀ)
-ರ್ತಿಗಿರ್ಬೇಕು ಕರ್ತವ್ಯ ಸ್ಫೂರ್ತಿ! (ಅ)
-ನಿತ್ಯಕ್ಕಾಶಿಪನು ಕಾಮ್ಯಾರ್ಥಿ!
ಸ್ವಾನುಭವಿ ಶ್ರೀ ದತ್ತ ಮೂರ್ತಿ! (ಅ)
-ರ್ಥಿ, ಶ್ರೀ ನಿರಂಜನಾದಿತ್ಯಾರ್ಥಿ!!!

ಧರ್ಮ, ಕರ್ಮಿಯೇ ಹಿತೈಷಿ! [ದು]   3(1130)

-ರ್ಮದ ಬಿಟ್ಟವ ಹಿತೈಷಿ!
ರ್ತವ್ಯ ನಿಷ್ಟ ಹಿತೈಷಿ! (ಊ)
-ರ್ಮಿಳೆಯರಸ ಹಿತೈಷಿ!
ಯೇಸುಕ್ರಿಸ್ತಾತ್ಮ ಹಿತೈಷಿ!
ಹಿಮಗಿರೀಶ ಹಿತೈಷಿ! (ಮ)
-ತೈಕ್ಯಾತ್ಮ ಗಾಂಧಿ ಹಿತೈಷಿ! (ಋ)
-ಷಿ ನಿರಂಜನಾದಿತ್ಯಾರ್ಷಿ!!!

ಧರ್ಮದೆದೆಗೊದೆಯೇನಯ್ಯಾ? (ಚ)   5(2721)

-ರ್ಮದ ಗೊಂಬೆಗೇನಾದ್ರೇನಯ್ಯಾ? (ತಂ)
-ದೆ ನೀನೆನಗಲ್ಲವೇನಯ್ಯಾ? (ಕಂ)
-ದೆರೆದೆನ್ನನೊಮ್ಮೆ ನೋಡಯ್ಯಾ! (ಕಂ)
-ಗೊಳಿಸ್ಬೇಕು ನಾ ನಿನ್ನಂತಯ್ಯಾ! (ಸ್ವಾ)
-ದೆನಗೆ ನಿನ್ನುಚ್ಚಿಷ್ಟವಯ್ಯಾ!
ಯೇಕೆ ಬಿಡಲೊಲ್ಲೆ ನೀನಯ್ಯಾ?
ಡೆಸೆನ್ನ ನಿನ್ನಡಿಗಯ್ಯಾ! (ಅ)
-ಯ್ಯಾ ಶ್ರೀ ನಿರಂಜನಾದಿತ್ಯಯ್ಯಾ!!!

ಧರ್ಮವನ್ನು ನೀನು ರಕ್ಷಿಸ್ಬೇಕು! (ಧ)   5(2972)

-ರ್ಮ ನಿನ್ನನ್ನು ರಕ್ಷಿಸಲೂ ಬೇಕು! (ಭ)
-ವರೋಗ ಗುಣಪಡಿಸಬೇಕು! (ನಿ)
-ನ್ನುದ್ಯೋಗ ನೀನು ಮಾಡಲೇಬೇಕು!
ನೀಚರ ಸಂಗ ಬಿಡಲೇಬೇಕು! (ಅ)
-ನುದಿನಾತ್ಮಧ್ಯಾನ ಮಾಡಬೇಕು!
ಸಾಸ್ವಾದಿಸಿ ನೀನದಾಗ್ಬೇಕು! (ಕ)
-ಕ್ಷಿಗಾರ ನೀನಾಗದಿರಬೇಕು! (ಈ)
-ಸ್ಬೇಕು ಇದ್ದು ಎಲ್ಲಾ ಜೈಸಬೇಕು! (ಪಾ)
-ಕು ನಿರಂಜನಾದಿತ್ಯನಾಡ್ಬೇಕು!!!

ಧರ್ಮವೆಂದು ಚರ್ಮ ಸುಲಿಯಬೇಡಯ್ಯಾ! (ಕ)   4(2195)

-ರ್ಮ, ತನ್ನಾತ್ಮೋದ್ಧಾರಕ್ಕಿರಬೇಕಯ್ಯಾ!
ವೆಂಕಟೇಶನ ಸ್ವರೂಪ ನಿನ್ನದಯ್ಯಾ!
ದುರ್ವಿಷಯಿಗೆಂದೂ ದುಃಖ ತಪ್ಪದಯ್ಯಾ!
ರಾಚರಾಂತರ್ಯಾಮಿ ನಿನ್ಮಾತ್ಮನಯ್ಯಾ! (ಮ)
-ರ್ಮವಿದನರಿತಿನ್ನಾದರೂ ಬಾಳಯ್ಯಾ!
ಸುಖವಾಗಿರು ಗುರಧ್ಯಾನದಿಂದಯ್ಯಾ!
ಲಿಪ್ತನಾಗಬೇಡ ಕೆಟ್ಟಭ್ಯಾಸಕ್ಕಯ್ಯಾ! (ಭ)
-ಯ, ಭಕ್ತಿಯಿಂದ ತೃಪ್ತಜೀವಿಯಾಗಯ್ಯಾ!
ಬೇರಿನ್ಯಾವ ದಾರಿಯೂ ಸುಖವಿಲ್ಯಯ್ಯಾ! (ಮ)
-ಡದಿ, ಮಕ್ಕಳ ಹೊಣೆಗಾರನಾರಯ್ಯಾ? (ಅ)
-ಯ್ಯಾ! ನಿರಂಜನಾದಿತ್ಯನಾಗಿಹನಯ್ಯಾ!!!

ಧರ್ಮಸಂಸ್ಥಾಪಕಯಾದವೇಂದ್ರ! (ಕ)   1(420)

-ರ್ಮನಿಷ್ಠಾವತಾರಿ ಯಾದವೇಂದ್ರ!
ಸಂಕಲ್ಪ ರಹಿತ ಯಾದವೇಂದ್ರ!
ಸ್ಥಾವರ, ಜಂಗಮ ಯಾದವೇಂದ್ರ!
ರಮಾತ್ಮ ಗುರು ಯಾದವೇಂದ್ರ!
ಲಿ ಮಲ ಹರ ಯಾದವೇಂದ್ರ!
ಯಾಗ, ಯೋಗೇಶ್ವರ ಯಾದವೇಂದ್ರ! (ಆ)
-ದರ್ಶ ಆರ್ಯಪುತ್ರ ಯಾದವೇಂದ್ರ!
ವೇದಾಂತದಾಚಾರ್ಯ ಯಾದವೇಂದ್ರ! (ಸಾ)
-ನ್ದ್ರ! ನಿರಂಜನಾದಿತ್ಯ ಭೂಪೇಂದ್ರ!!!

ಧರ್ಮಸಂಸ್ಥಾಪನೆ ನಿನ್ನಲ್ಲಾಗಲೀಗ! (ನಿ)   4(2061)

-ರ್ಮಲ ಬುದ್ಧಿಯಿಂದಧರ್ಮ ಸಾಯಲೀಗ!
ಸಂಜೆಯಾಯ್ತೆಂಬಂಜಿಕೆಯಳಿಯಲೀಗ!
ಸ್ಥಾನ, ಮಾನದಾಸೆಯಿರದಿರಲೀಗ!
ರರನುಕರಣೆ ಕರಗಲೀಗ! (ಮ)
-ನೆ ಮಾಡಲಿ ಮನ ಶ್ರೀಪಾದದಲ್ಲೀಗ!
ನಿತ್ಯ ಸುಖದಲ್ಲಿ ಕಾಣುತ್ತಿರಲೀಗ! (ನಿ)
-ನ್ನವ ಶ್ರೀ ಗುರುವೆಂಬರಿವಾಗಲೀಗ! (ಉ)
-ಲ್ಲಾಸವದರಿಂದ ಹೆಚ್ಚುತ್ತಿರಲೀಗ! (ಯೋ)
-ಗವಿದುಪಕಾರಿಯಾಗುತ್ತಿರಲೀಗ!
ಲೀಲಾವತಾರಿಯವತಾರವಲ್ಲಾಗ! (ರಂ)
-ಗನಾಥ ನಿರಂಜನಾದಿತ್ಯನಲ್ಲೀಗ!!!

ಧಾರೆರೆಸುವವ ಶ್ರೀರಂಗರಾಜ! [ಎ]   3(1146)

-ರೆಸಿಕೊಂಬವನಾಗ ರಂಗರಾಜ! (ಎ)
-ರೆದೆರೆಸುವರಾಗ ರಂಗರಾಜ!
ಸುಖ, ಸೌಭಾಗ್ಯ ಯೋಗ ರಂಗರಾಜ!
ರ ವಿಜಯಾನಂದ ರಂಗರಾಜ!
ರ ನಾಗೇಂದ್ರ ಶಾಯಿ ರಂಗರಾಜ!
ಶ್ರೀಧರ ನರಹರಿ ರಂಗರಾಜ!
ರಂಗಾಂಗ ಸಾರಂಗ ಶ್ರೀ ರಂಗರಾಜ!
ತಿ ಪತಿತೋದ್ಧಾರ ರಂಗರಾಜ!
ರಾಜ ರಾಜ ಶ್ರೀರಾಮ ರಂಗರಾಜ! (ನಿ)
-ಜ, ನಿರಂಜನಾದಿತ್ಯ ರಂಗರಾಜ!!!

ಧಿ, ಸುಧಿ, ಸನ್ನಿಧಿ, ಪಯೋನಿಧಿ!   6(4202)

ಸುಗುಣಾರ್ಣವ ಆ ಪಯೋನಿಧಿ! (ವ್ಯಾ)
-ಧಿಭರಿತವಲ್ಲಾ ಪಯೋನಿಧಿ!
ಚಿ

ದಾನಂದಕ್ಕಾ ಪಯೋನಿಧಿ! (ತ)
-ನ್ನಿಮಿತ್ತೆಲ್ಲಾತ್ಮಕ್ಕು ಪಯೋನಿಧಿ! (ಅ)
-ಧಿಕಾರಾಟಕ್ಕಲ್ಲಾ ಪಯೋನಿಧಿ!
ರಿಶುದ್ಧಾತ್ಮಕ್ಕಾ ಪಯೋನಿಧಿ!
ಯೋಗೇಶವರನಿಗಾ ಪಯೋನಿಧಿ!
ನಿಜಾನಂದನಿಗಾ ಪಯೋನಿಧಿ! (ನಿ)
-ಧಿ ನಿರಂಜನಾದಿತ್ಯಾನಂದಾಬ್ಧಿ!!!

ಧೀರ, ವೀರ, ಕಿಶೋರನಾರಯ್ಯಾ?   2(932)

ಘುವೀರ ರಣಧೀರನಯ್ಯಾ!
ವೀರ್ಯವಂತ ವೀರಾಂಜನೇಯಯ್ಯಾ! (ಅ)
-ರಸಿ ರಾಧಾನಂದ ಕಿಶೋರಯ್ಯಾ!
ಕಿರುಕುಳೇಂದ್ರ್ಯ ಜಯ ಧೀರಯ್ಯಾ!
ಶೋಕ, ಸುಖ ಸಮಾನ ವೀರಯ್ಯಾ! (ಅ)
-ರಗುವರ ಧ್ರುವ ಕಿಶೋರಯ್ಯಾ!
ನಾಮ ಪ್ರೇಮಿ ಪ್ರಹ್ಲಾದ ಧೀರಯ್ಯಾ!
ತಿಪತಿ ವಿನಾಶ ವೀರಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾ ಮೂರಯ್ಯಾ!!!

ಧ್ಯಾನ ಮಾಡಮ್ಮಾ ಅಮ್ಮನ ರೂಪ,ಗುಣ ನೋಡಮ್ಮಾ (ನ)   2(459)

-ನಗೂ, ನಿನಗೂ ಭೇದವೇಕೆಂದವಳ ಕೇಳಮ್ಮಾ!
ಮಾನವಿಯಾಗಿ, ದಾನವಿಯಾಗಿರುವುದೇಕಮ್ಮಾ? (ಆ)
-ಡದೇ ನೀ ಮೌನವಾಗಿರಬಾರದಿದ ಹೇಳಮ್ಮಾ! (ಅ)
-ಮ್ಮಾ! ಭೇದಾ ಬೇದಕ್ಕೆಲ್ಲಾ ಗುಣತ್ರಯ ಕಾರಣಮ್ಮಾ!
ಮ್ಮನರೂಪ, ಗುಣಗಳ ನರಿಯ ಬೇಕಮ್ಮಾ! (ಅ)
-ಮ್ಮನಾಗಿ, ಅಪ್ಪನಾಗಿ ಸರ್ವಸ್ವವಾಗಿಹಳಮ್ಮಾ!
ಶ್ವರ ದೇಹಮೋಹ ನಿನ್ನಂತವಳಿಗಿಲ್ಲಮ್ಮಾ!
ರೂಪಗಳವಳಿಗನಂತ ಮಾಯಾಲೀಲೆಗಮ್ಮಾ! (ಆ)
-ಪತ್ತು, ವಿಪತ್ತು, ಸಂಪತ್ತುಗಳಾಕೆಗಲಕ್ಷ್ಯಮ್ಮಾ!
ಗುಣಾತೀತ ಸಹಜಸ್ಥಿತಿ ನಿತ್ಯವಳದಮ್ಮಾ! (ಬ)
-ಣಗು ವಿಷಯೇಂದ್ರಿಯ ವ್ಯಾಮೋಹವಳಿಗಿಲ್ಲಮ್ಮಾ!
ನೋವು, ಸಾವಿನ ದೇಹ ನಿಜರೂಪವಲ್ಲವಮ್ಮಾ! (ತ)
-ಡಮಾಡದಿದನಳವಡಿಸಿ ಅವಳಾಗಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯನರ್ಧನಾರೀಶ್ವರನಮ್ಮಾ!!!

ಧ್ಯಾನಮಿಂಚಿನ ಶಬ್ದವಾಲಿಸಲೀ ಕಿವಿ! (ಹೀ)   4(2178)

-ನ ವಿಚಾರಗಳ ಕೇಳದಿರಲೀ ಕಿವಿ!
ಮಿಂದಿದರಲ್ಲೀಗ ಸ್ವಚ್ಛವಾಗಲೀ ಕಿವಿ!
ಚಿದಾನಂದದಲ್ಲಿ ಲಯವಾಗಲೀ ಕಿವಿ! (ಕ)
-ನಸು, ನೆನಸಿನಲ್ಲೂ ಹೀಗಿರಲೀ ಕಿವಿ!
ಬರಶಂಕರೇಚ್ಛೆಗಾಳಾಗಲೀ ಕಿವಿ! (ಲು)
ಬ್ಧರುಲಿಗೆ ಕಿವಿಗೊಡದಿರಲೀ ಕಿವಿ!
ವಾದ, ಭೇದಕ್ಕೆ ಕಿವುಡಾಗಿರಲೀ ಕಿವಿ! (ಶೂ)
-ಲಿಯ ಗುಣಗಾನ ಕೇಳುತ್ತಿರಲೀ ಕಿವಿ!
ರ್ವಕಾಲದಲ್ಲದಕ್ಕಾಗಿರಲೀ ಕಿವಿ!
ಲೀನವಾಗಿ ತಲ್ಲೀನವಾಗಿರಲೀ ಕಿವಿ! (ಬೇ)
-ಕಿದಾತ್ಮೋದ್ಧಾರಕ್ಕೆಂದರಿತಿರಲೀ ಕಿವಿ! (ಸ)
-ವಿತೃ, ನಿರಂಜನಾದಿತ್ಯಗಾಗಿರ್ಲೀ ಕಿವಿ!!!

ಧ್ಯೇಯಸಿದ್ಧಿ ಈಗಾಗಬೇಕು! (ಬಾ)   5(3290)

-ಯನ್ನಾಮೇಲೆ ತೆರೆಯಬೇಕು!
ಸಿಹಿ ತಿಂದರಿವಾಗಬೇಕು! (ಬು)
-ದ್ಧಿ ಶುದ್ಧವಾಗಿರಲೇ ಬೇಕು!
ರ್ಷಾಸೂಯೆ ಸತ್ತಿರಬೇಕು!
ಗಾಳಿ, ಮಳೆ ಸಹಿಸಬೇಕು!
ಣಪತಿ ತಾನಾಗ ಬೇಕು!
ಬೇಯದನ್ನರ್ಪಿಸದಿರ್ಬೇಕು! (ಬೇ)
-ಕು ನಿರಂಜನಾದಿತ್ಯಾಗ್ಬೇಕು!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ