ದಂಡ ಕಮಂಡಲು ಪಾದುಕಾ ಯಾತ್ರೆ!   1(227)

ಮರುಧರನ ವಿಜಯ ಯಾತ್ರೆ!
ರೆ ಕಳುಹಿನ ನಿರ್ಧರ ಯಾತ್ರೆ!
ಮಂಗಳವಿದೆಲ್ಲರ ಭಾಗ್ಯ ಯಾತ್ರೆ! (ಸ)
-ಡಗರದ ಭಕ್ತಿ, ಪೂಜೆಯ ಯಾತ್ರೆ! (ಮ)
ಹರಿ ವಿಮಲ ವಿಜಯ ಯಾತ್ರೆ!
ಪಾದುಕಾಚ್ಛಾದನಾ ಸಹಿತ ಯಾತ್ರೆ!
ದುರ್ಮದ ಮರ್ದನ ಗೈದ ಯಾತ್ರೆ!
ಕಾಷಾಯಾಂಬರ ಪ್ರಸಾದದ ಯಾತ್ರೆ! (ಆ)
-ಯಾಸವಿಲ್ಲದ ಗುರುಕೃಪಾ ಯಾತ್ರೆ! (ರಾ)
-ತ್ರೆ ನಿರಂಜನಾದಿತ್ಯ ಜಯ ಯಾತ್ರೆ!!! ೨೨೭

ದಂಡಿಸಬೇಡ ಮಂಡಿಸಬೇಡ ದೇಹವನ್ನು! (ಬಿ)   3(1124)

-ಡಿಸು ಇಂದ್ರಿಯ ಚಪಲದಿಂದೀ ದೇಹವನ್ನು!
ತತ ವಿರಿಸಾರೋಗ್ಯದಲ್ಲೀ ದೇಹವನ್ನು!
ಬೇಡಿ, ಕಾಡಿ, ಬೆಳಸಬೇಡ ಈ ದೇಹವನ್ನು! (ದ)
-ಡ ಸೇರಲಿಕಾಗಿಟ್ಟರೆ ಸಾಕೀ ದೇಹವನ್ನು!
ಮಂಗಳಾತ್ಮನಿಗಾಗಿ ಬಳಸೀ ದೇಹವನ್ನು! (ಅ)
-ಡಿಗಡಿಗಾತ್ಮಾನಂದದಲ್ಲಿಡೀ ದೇಹವನ್ನು!
ತ್ಸಂಗದಲ್ಲಿ ಸದಾ ಇರಸೀ ದೇಹವನ್ನು!
ಬೇರಾವ ಕಡೆಗೆಳೆಯ ಬೇಡೀ ದೇಹವನ್ನು! (ಸ)
-ಡಗರದೂಟಕ್ಕೆಬ್ಬಿಸದಿರೀ ದೇಹವನ್ನು!
ದೇವೀ ಪ್ರಸಾದ ತೃಪ್ತಿಯಲ್ಲಿಡೀ ದೇಹವನ್ನು!
ರಿ ಭಜನೆಗುಪಯೋಗಿಸೀ ದೇಹವನ್ನು!
ರ ಮಾರುತಿಯ ಹಾಗಿರಿಸೀ ದೇಹವನ್ನು! (ಸ)
-ನ್ನುತ ನಿರಂಜನಾದಿತ್ಯಗಾಗೀ ದೇಹವನ್ನು!!!

ದಕ್ಷಿಣಾಮೂರ್ತಿ ದಯಾಮಯ! (ರ)   2(698)

-ಕ್ಷಿಪನೆಲ್ಲರಾ ಕೃಪಾಮಯ! (ಗು)
-ಣಾತೀತನಾತ ನಿರಾಮಯ!
ಮೂಷಿಕವಾಹನಾತ್ಮಮಯ! (ಅ)
-ರ್ತಿಯವನದು ಆತಿಶಯ!
ರ್ಶನ ಸದಾ ಶಿವಮಯ!
ಯಾಗ, ಯೋಗ ಶಂಕರಮಯ!
ಹಾ ದೇವಾತ್ಮಾನಂದ ಮಯ! (ಜ)
-ಯ, ನಿರಂಜನಾದಿತ್ಯಮಯ!!!

ದಕ್ಷಿಣೇಶ್ವರ ಯಕ್ಷಿಣೀಶ್ವರಾದ್ರೇನ್ತಪ್ಪು?   6(4042)

ಕ್ಷಿಪ್ರ ಕುಬೇರ ತಾನಾಗಲಿಕ್ಕದೆಂದೊಪ್ಪು! (ಗ)
-ಣೇಶಗದ್ರಿಂದಾನಂದವೆಂದವನನ್ನಪ್ಪು! (ಈ)
-ಶ್ವರನಿಗಂಟಿದಾವ ತರದ ತಪ್ಪೊಪ್ಪು! (ನ)
-ರರೆಷ್ಟು ಬೆಳ್ಳಗಿದ್ರೂ ಅವರೆಲ್ಲಾ ಕಪ್ಪು!
ದುಪ ಕಪ್ಪಾದ್ರೂ ಆತ ದೇವರೆಂದೊಪ್ಪು! (ರ)
-ಕ್ಷಿಪ, ಶಿಕ್ಷಿಪ ಬಲವಿರ್ಪಾಗೆಲ್ಲಿ ಕಪ್ಪು? (ತೃ)
-ಣೀಕರಿಸ್ಬೇಕ್ಬಣ್ಣ, ತಿಣ್ಣವೆಂಬುದನ್ನೊಪ್ಪು! (ನ)
-ಶ್ವರವಾದಮೇಲಿದೆಲ್ಲಾ, ಆತ್ಮನನ್ನಪ್ಪು!
ರಾಮ, ಕೃಷ್ಣರು ಮಾಯೆಗೆ ಹಾಕಿದ್ರೇನ್ಸೊಪ್ಪು? (ಉ)
-ದ್ರೇಕೋದ್ವೇಗಗಳಳಿದಾಗಿಲ್ಲ ತಪ್ಪೊಪ್ಪು! (ಸ)
-ನ್ತ ಕಬೀರದಾಸ ಸಾಕ್ಷಿಯಿದಕ್ಕೆಂಬುದೊಪ್ಪು! (ಒ)
-ಪ್ಪು, ನಿರಂಜನಾದಿತ್ಯ ಸರ್ವಜ್ಞನೆಂದಪ್ಪು!!!

ದತ್ತ ಕೃಪಾದೀಪವನಜಪಾ! (ಉ)   5(2866)

-ತ್ತಮ ವಾತಾವರಣವಾ ಕೃಪಾ!
ಕೃತ್ರಿಮವಿಲ್ಲದಾತ್ಮಕ್ಕಾ ಕೃಪಾ!
ಪಾದಪೂಜೆ ನಿತ್ಯದಲ್ಲಾ ಕೃಪಾ!
ದೀಪ, ಧೂಪಾದಿಗಳಿಂದ ಕೃಪಾ!
ತಿ, ಪತ್ನಿಯರ ಸೇವಾ ಕೃಪಾ!
ರ ಭಿಕ್ಷಾನ್ನ ಪ್ರಾಶನಾ ಕೃಪಾ!
ಯ, ವಿನಯದಾತಿಥ್ಯಾ ಕೃಪಾ!
ಪ, ತಪ, ಸಾಧನೆಯಾ ಕೃಪಾ! (ಅ)
-ಪಾರಾ ತಿರಂಜನಾದಿತ್ಯ ಕೃಪಾ!!!

ದತ್ತ ಗುರು ನನ್ನವನು! (ಇ)   5(3015)

-ತ್ತತ್ತ ಹೋಗ್ಬಾರದವನು!
ಗುಲಾಮ್ನವನಿಗೆ ನಾನು! (ಕೋ)
-ರುವೆನಿದೊಂದನ್ನು ನಾನು!
ನ್ನ ಬಿಟ್ಟಿರ್ಬಾರ್ದವನು! (ತಿ)
-ನ್ನಬಾರ್ದು ನೀಚಾನ್ನವನು! (ಅ)
-ವನಿಗಾನೆನಗವನು! (ತಾ)
-ನು ನಿರಂಜನಾದಿತ್ಯಾನು!!!

ದತ್ತ ಗುರುಚಿತ್ತದಂತೆನ್ನ ನಿತ್ಯ ದಿವ್ಯಜೀವನ! (ಅ)   1(86)

-ತ್ತ ಇತ್ತ ಚಲಿಸದಂಥಾ ಮನದ ಧ್ಯಾನ ಜೀವನ!
ಗುನಾವಗುಣಗಳೆಣಿಸದ ಶುದ್ಧ ಜೀವನ!
ರುಚಿ, ಅರುಚಿಗಳರಿಯದ ತ್ಯಾಗಜೀವನ!
ಚಿಂತೆ, ಬೋತೆಗಳೇನೂ ಇರದ ಶಾಂತಿ ಜೀವನ! (ಅ)
-ತ್ತ, ಸುತ್ತ ಸುತ್ತಿ ಬೇಸರಿಸದ ತೃಪ್ತಿ ಜೀವನ!
ದಂಡವಿರದ, ಬಂಧ ಹರಿದ ಹಂಸ ಜೀವನ!
ತೆಗೆದು ವಸ್ತ್ರ ದುರವೆಸೆದ ಯೋಗಿ ಜೀವನ! (ಅ)
-ನ್ನ, ಪಾನಕನಾಸಕ್ತಿ ತೋರಿದ ತಪೋ ಜೀವನ!
ನಿತ್ಯದಲಾದಿತ್ಯನ ಬೆರೆತ ಭಕ್ತಿ ಜೀವನ!
ತ್ಯಜಿಸಿ ದೇಹ, ಮೋಹವ ಸುಟ್ಟ ಮುಕ್ತಿ ಜೀವನ!
ದಿನ, ರಾತ್ರಿ ವಿಚಾರದಲಿದ್ದ ಶಕ್ತಿ ಜೀವನ!
ವ್ಯಹಾರಗಳೆಲ್ಲವ ಬಿಟ್ಟ ಭಿಕ್ಷು ಜೀವನ!
ಜೀವಬಾವವನು ಮರೆತಿದ್ದ ನಿಜ ಜೀವನ!
ರುಣೇಂದ್ರಾದಿಗಳ ನೆನೆದ ಪ್ರೇಮ ಜೀವನ!
ಮೋ ನಿರಂಜನಾದಿತ್ಯನೆಂದ ದತ್ತ ಜೀವನ!!!

ದತ್ತ ಜಯಂತಿಗೆ ಶುಭ ಮಂಗಳ! (ಅ)   1(273)

-ತ್ತ, ಇತ್ತ, ಇತ್ತೆತ್ತ ಮಳೆ ಮಂಗಳ!
ಯಾಭ್ಯಂಜನ ಸ್ನಾನದ ಮಂಗಳ! (ಅ)
-“ಯಂ ಆತ್ಮ ಬ್ರಹ್ಮ”! ಸ್ಥಿತಿಯೀ ಮಂಗಳ!
ತಿಳಿದಂತಿರಲು ಸರ್ವ ಮಂಗಳ!
ಗೆಜ್ಜೆ, ತಾಳ, ಮೇಳದಲಿ ಮಂಗಳ!
ಶುಚಿ, ರುಚಿ, ನೆ

ವೇದ್ಯದಿ ಮಂಗಳ!
ಕ್ತಿ, ಭಾವಾವೇಶದಿಂದ ಮಂಗಳ!
ಮಂಗಳವಿದೇ ಜಗಕೆ ಮಂಗಳ!
ಗನಮಣಿ ರವಿಗೂ ಮಂಗಳ!
(ಲ){ಒ

}} -ಚೊ

{ಳಯಿ ನಿರಂಜನಾದಿತ್ಯ ಮಂಗಳ!!!
(“ಚರಿಸುವ ಜಲದಲಿ ಮತ್ಸ್ಯನಿಗೆಂಬಂತೆ”)

ದತ್ತ ತತ್ವ ಪ್ರತಿಪಾದಕ ಯಾಜ್ಞವಲ್ಕ್ಯ! (ಉ)   2(799)

-ತ್ತಮಾತ್ಮ ಸ್ಥಿತಿ ಪ್ರಬೋಧಕ ಯಾಜ್ಞವಲ್ಕ್ಯ!
ರಣಿಯನುಗ್ರಹ ಸಿದ್ಧ ಯಾಜ್ಞವಲ್ಕ್ಯ!
ತ್ವಮೇವ ಸರ್ವಾತ್ಮವೆಂದಿದ್ದ ಯಾಜ್ಞವಲ್ಕ್ಯ!
ಪ್ರತಿಭಟರಡಗಿಸಿದ್ಧ ಯಾಜ್ಞವಲ್ಕ್ಯ! (ಸ)
-ತಿ ಮೈತ್ರೇಯ್ಗನುಗ್ರಹಿಸಿದ್ದ ಯಾಜ್ಞವಲ್ಕ್ಯ!
ಪಾಪ, ಪುಣ್ಯದಂಟಿಲ್ಲದಿದ್ದ ಯಾಜ್ಞವಲ್ಕ್ಯ!
ಮೆ, ಶಮೆಯಿಂದೆಲ್ಲಾ ಗೆದ್ದ ಯಾಜ್ಞವಲ್ಕ್ಯ!
ರ್ಮನಿಷ್ಠೆಯಿಂದಾದ ಶುದ್ಧ ಯಾಜ್ಞವಲ್ಕ್ಯ!
ಯಾಗ, ಯೋಗಾತ್ಮಾನಂದೆಂದಿದ್ದ ಯಾಜ್ಞವಲ್ಕ್ಯ!
ಜ್ಞಪ್ತಿಯಿದರಲ್ಲಾತ ಮುಗ್ಧ ಯಾಜ್ಞವಲ್ಕ್ಯ!
ರ ಸ್ಮೃತಿಯಿಂದ ಪ್ರಸಿದ್ಧ ಯಾಜ್ಞವಲ್ಕ್ಯ! (ವ)
-ಲ್ಕ್ಯ, ನಿರಂಜನಾದಿತ್ಯಾನಂದ ಯಾಜ್ಞವಲ್ಕ್ಯ!!!

ದತ್ತ ತುಳಸಿ ಮಾಲಾನಂದ! [ಚಿ]   2(685)

-ತ್ತಕಾರಸಪಾನತ್ಯಾನಂದ! (ಆ)
-ತುರ ಹೃದಯಕಿದಾನಂದ! (ಬ)
-ಳಸಲು ಭಕ್ತಿಯಿಂದಾನಂದ! (ಸ)
-ಸಿ ಎಲ್ಲಾ ಮನೆ ಮುಂದಾನಂದ!
ಮಾಯವೆಲ್ಲಾ ದುರಿತಾನಂದ!
ಲಾಭ ಅನುಭವಕಾನಂದ!
ನಂಬಿದರೆ ಎಲ್ಲಾ ಆನಂದ! (ಮು)
-ದ ನಿರಂಜನಾದಿತ್ಯಾನಂದ!!!

ದತ್ತ ತುಳಸೀ ಚಿತ್ತ! [ಚಿ]   2(607)

-ತ್ತ ಗುರುದತ್ತ ಚಿತ್ತ!
ತುಳಸಿ ಲೀಲಾ ಚಿತ್ತ! (ದ)
-ಳ ಪಾದರೂಪಾ ಚಿತ್ತ!
ಸೀತಾರಾಮಾಶ್ರೀ ಚಿತ್ತ!
ಚಿರಂಜೀವಿಯಾ ಚಿತ್ತ! [ದ]
-ತ್ತ ನಿರಂಜನ ಚಿತ್ತ!!!

ದತ್ತ ಧ್ಯಾನಾರೂಢ ಗುರು ನಿರಂಜನ! (ಚಿ)   6(4070)

-ತ್ತವೃತ್ತಿ ನಿಂತಾಗ ದತ್ತ ನಿರಂಜನ!
ಧ್ಯಾನಗಮ್ಯಾತೀತ ದತ್ತ ನಿರಂಜನ!
ನಾಮ, ರೂಪಾತೀತ ದತ್ತ ನಿರಂಜನ!
ರೂಪಧಾರಿಯಾಗಿ ಅತ್ರಿಗೆ ನಂದನ! (ದೃ)
-ಢ ಭಕ್ತಿಗಿವನ ದರ್ಶನಾಲಿಂಗನ!
ಗುಣಗಾನಕ್ಕೊಲಿಯುವಾ ನಿರಂಜನ!
ರುಜುಮಾರ್ಗಿಯಾಗಿ ಮಾಡ್ಬೇಕು ಕೀರ್ತನ!
ನಿತ್ಯನೇಮದಿಂದರ್ಚಿಸಬೇಕವನ!
ರಂಗನಾಥನೂ ತಾನೇ ಆಗಿರ್ಪವನ!
ಗತ್ತಿನೇಕೈಕಾ ಪರಮೇಶ್ವರನ!
ಳಿನ ಸಖಾ ನಿರಂಜನಾದಿತ್ಯನ!!!

ದತ್ತ ನೀನೆನ್ನನೆತ್ತಿಕೋ! ಆಪತ್ತುಗಳೆಲ್ಲವ -ಕಿತ್ತು ಕೋ! (ಅ)    1(431)

-ತ್ತತ್ತು ಸಾಕಾಯ್ತೆನ್ನನೆತ್ತಿಕೋ! ದತ್ತ ನೀನೀಗೆನ್ನ ಹೊತ್ತುಕೋ!
ನೀನೆನೆನ್ನ ತಾಯ್ತಂದೆತ್ತಿಕೋ! ದತ್ತ ನೀನೆನ್ನಾಪ್ತಾ ಅಪ್ಪಿಕೋ!
ನೆರೆ ಆಯಾಸೆನ್ನನೆತ್ತಿಕೋ! ದತ್ತ ನಿನ್ನವಾನೆಂದೊಪ್ಪಿಕೋ!
(ಅ)-ನ್ನ, ವಸ್ತ್ರ ಸಾಕೀಗೆತ್ತಿಕೋ! ಬಾ ದತ್ತ ನಿನ್ನಂತೆನ್ನ ಮಾಡಿಕೋ!
ನೆಲ, ಹೊಲವೆನಗೇತಕೋ? ದತ್ತ ಈಗೆನ್ನ ನೀ ಕೂಡಿಕೋ!
(ಅ)-ತ್ತಿತ್ತೆನ್ನ ಅಟ್ಟುವುದೇತಕೋ? ದತ್ತ ನಿನ್ನಲ್ಲೆನ್ನನ್ನಿಟ್ಟುಕೋ!
ಕೋಪ ಮಾಡದೆನ್ನ ತಬ್ಬಿಕೋ! ದತ್ತ ನೀ ಹೊಣೆಲ್ಲಾ -ಕಾರ್ಯಕೋ!
ರೋಪವೆಲ್ಲಾ ಇನ್ನು ಸಾಕೋ! ದತ್ತ ಕೃಪೆ ಈಗಾಗಬೇಕೋ!
ತಿತನಾನಾಗ್ವುದೇತಕೋ? ದತ್ತನಡಿಗೆನ್ನನೊಯ್ದುಕೋ!
(ಎ)-ತ್ತು ನೀನೆನ್ನ ದಿವ್ಯಚಿತ್ತಕೋ! ದತ್ತ ನಾ ಬಿದ್ದೆನು ಪಾದಕೋ!
ತಿ ನೀನೇ ಎಲ್ಲಾ ಕಾಲಕೋ! ದತ್ತಗುರು ತ್ರಯ ಲೋಕಕೋ!
(ಗೆ)-ಳೆಯರು ಬೇರೆನಗೇತಕೋ? ದತ್ತ ನೀನೊಬ್ಬನಿದ್ದರ್ಸಾಕೋ!
(ಎ)-ಲ್ಲವನು ಹೇಳಿದೆ ಕೇಳಿಕೋ? ದತ್ತ ನಿನ್ನಲ್ಲೆನ್ನ ಸೇರ್ಸಿಕೋ!
ಚನ ನಿನ್ನಂತೆ ಇರ್ಸಿಕೋ! ದತ್ತ ಪುತ್ರನ ಉದ್ಧರ್ಸಿಕೋ!
ಕಿರುಕುಳ ಮಾಯಾ ಮೋಹಕೋ! ದತ್ತ ಬಿಡದೆನ್ನ ನೋಡಿಕೋ!
(ಸ)-ತ್ತು, ಹುಟ್ಟುವ ಜನ್ಮ ವೇತಕೋ! ದತ್ತ ಮಾತೆನ್ನದ ನೊಪ್ಪಿಕೋ!
ಕೋರಿಕೆ ಸಲಿಸಿ ಕಾಯ್ದುಕೋ! ದತ್ತ ನಿರಂಜನಾದಿತ್ಯಕೋ!

ದತ್ತ ಪದಕ ಧರಿಸಿದ್ದಾಯ್ತು! (ಭ)   4(1457)

ತ್ತ, ರಾಗಿ, ಒಳಗೆ ಭರ್ತಿಯಾಯ್ತು!
ರಮ ಭಕ್ತಿಯಾರಂಭವಾಯ್ತು!
ರಿದ್ರರಿಗನ್ನ ದಾನವಾಯ್ತು!
ರ್ಣಾಟಕಾಂಬೆಗೆ ಕೀರ್ತಿಯಾಯ್ತು!
ರ್ಮ ಕರ್ಮಕ್ಕುತ್ಸಾಹ ಹೆಚ್ಚಾಯ್ತು! (ಅ)
-ರಿಕುಲಕ್ಕೆಲ್ಲಾ ಭಯ ಉಂಟಾಯ್ತು!
ಸಿರಿತನಾಡಂಬರ ದೂರಾಯ್ತು! (ಹೆ)
-ದ್ದಾರಿ ಭಜನೆಯೆಂಬರಿವಾಯ್ತು! (ಆ)
-ಯ್ತು, ನಿರಂಜನಾದಿತ್ಯ ತಾನಾಯ್ತು!!!

ದತ್ತ ಪ್ರಸಾದಾ ಚಕ್ಕೋತ (ಮ)   4(1547)

-ತ್ತನಿಳಿಪುದಾ ಚಕ್ಕೋತ!
ಪ್ರಬೋಧಪ್ರದಾ ಚಕ್ಕೋತ!
ಸಾಕೇತನಾಥಾ ಚಕ್ಕೋತ!
ದಾರಿ ದರ್ಶಕಾ ಚಕ್ಕೋತ!
ರಿತ್ರಾರ್ಹವಾ ಚಕ್ಕೋತ! (ಮುಂ)
-ಕ್ಕೋಪ ಶಮನಾ ಚಕ್ಕೋತ! (ಸಂ)
-ತ ನಿರಂಹನಾದಿತ್ಯಾತ!!!

ದತ್ತ ಮಂತ್ರ ಜಗಕೊಂದು “ರಕ್ಷಾಬಂಧ”! (ಅ)   1(88)

ತ್ತರೆ, ಬೇಸತ್ತರೆ ಇದು ಶಾಂತಿ ಬಂಧ!
ಮಂಕು, ಶಂಕೆಗಳಿಗಿದು ಅಗ್ನಿ ಬಂಧ!
ತ್ರಯವಸ್ಥೆಗಳಲಿದು ಪ್ರಾಣ ಬಂಧ!
ಗಳಗಳಲ್ಲಿ ಇದು ಜಯ ಬಂಧ!
ತಿ, ಸ್ಥಿತಿಗೆಟ್ಟರಿದು ಮತಿ ಬಂಧ!
ಕೊಂಡಾಡಿಸಿಕೊಳ್ಳಲಿದು ಪ್ರೀತಿ ಬಂಧ!
ದುಷ್ಟ ಕಾಟಗಳಿಗಿದು ತಡೆ ಬಂಧ!
ಸ ವಿಷಹರಕಿದು ಖಗ ಬಂಧ!
ಕ್ಷಾಮ ಡಾಮರದಲಿದು ವೃಷ್ಟಿ ಬಂಧ!
ಬಂಧ ವಿಮೋಚನೆಗಿದು ಜ್ಞಾನ ಬಂಧ!
ರ್ಮ ನಿರಂಜನಗಿದು ಸರ್ವ ಬಂಧ!!!

ದತ್ತ ಮಂತ್ರ ದೀಪಿಕಾ ಶಂಕರಾನಂದ! (ಎ)   1(224)

-ತ್ತರದ ಹಿಮಾಲಯದಲಾದಾನಂದ!
ಮಂದಿರದ ಗುಹೆಯಲಾದುದಾನಂದ!
ತ್ರಯಕ್ಷರಿ ಮಹಿಮೆ ತೋರಿದಾನಂದ!
ದೀಪವಿದು ಕತ್ತಲೆಯಲೆಂದಾನಂದ!
ಪಿಡಿ ಭದ್ರವಾಗೆಂದುಸುರಿದಾನಂದ!
ಕಾಲ ಕರ್ಮದಲರಿವಾದುದಾನಂದ!
ಶಂಕೆ ಹರಿದುಟಾದುದಾ ನಿಜಾನಂದ!
ಳವಳ ಕಳೆದುಳಿದುದಾನಂದ!
ರಾರಾಜಿಸುತಿರುತಿಹುದಿದಾನಂದ!
ನಂದಿ ಹೋಗದಂಥಾ ಸಹಜದಾನಂದ! (ಸ)
ದಾ, ನಿರಂಜನಾದಿತ್ಯ ಶಂಕರಾನಂದ!!!

ದತ್ತ ಮಂದಿರ ನಿರ್ಮಾಣವಾಗಬೇಕು! (ಉ)   6(4023)

-ತ್ತಮ ದೇವ ಶಿಲ್ಪ ಅದನ್ನು ಕಟ್ಬೇಕು!
ಮಂದಿರ ಚಿರಕಾಲ ಉಳಿಯಬೇಕು!
ದಿನ, ರಾತ್ರಿ, ಭಜನೆ ನಡೆಯಬೇಕು!
ಮೇಶ, ಉಮೇಶ, ವಾಣೀಶರ್ಕಾಯ್ಬೇಕು!
ನಿರಂಜನಗದು ಸ್ಮಾರಕವಾಗ್ಬೇಕು! (ಧ)
-ರ್ಮಾಧರ್ಮ ಅಲ್ಲಿ ನಿರ್ಣಯವಾಗಬೇಕು! (ಹ)
-ಣ ಅಲ್ಲಿ ಸದಾ ಸುರಿಯುತ್ತಿರಬೇಕು!
ವಾರಿಜಮಿತ್ರನೇ ಪೂಜಾರಿಯಾಗ್ಬೇಕು! (ಜ)
-ಗತ್ಕಲ್ಯಾಣಕ್ಕಾಗಿ ಹೀಗಾಗಲೇಬೇಕು!
ಬೇಜವಾಬ್ದಾರಿಯವ್ರಾಟ ನಿಲ್ಲಬೇಕು! (ಮ)
-ಕುಟ ನಿರಂಜನಾದಿತ್ಯ ಧರಿಸ್ಬೇಕು!!!

ದತ್ತ ವಿಶ್ವನಾಥ ನಿರಂಜನಾದಿತ್ಯ! (ಅ)   2(679)

-ತ್ತ, ಇತ್ತ, ಎತ್ತೆತ್ತ ನಿರಂಜನಾದಿತ್ಯ!
ವಿಮಲ ಸಂಭೂತ ನಿರಂಜನಾದಿತ್ಯ!
ಶ್ವಪಚ ವಿಘಾತ ನಿರಂಜನಾದಿತ್ಯ!
ನಾಮ ರೂಪಾತೀತ ನಿರಂಜನಾದಿತ್ಯ! (ನಾ)
-ಥ, ಅದಿತಿ ಜಾತ ನಿರಂಜನಾದಿತ್ಯ!
ನಿತ್ಯ ಕರ್ಮ ಕರ್ತ ನಿರಂಜನಾದಿತ್ಯ! (ಸಾ)
-ರಂಗ, ರಂಗನಾಥ ನಿರಂಜನಾದಿತ್ಯ!
ಯ ಲೋಕನಾಥ ನಿರಂಜನಾದಿತ್ಯ!
ನಾಮ ರೂಪಾನಂತ ನಿರಂಜನಾದಿತ್ಯ!
ದಿವ್ಯ ತೇಜೋವಂತ ನಿರಂಜನಾದಿತ್ಯ! (ಸ)
-ತ್ಯ, ನಿತ್ಯಾತ್ಮನೀತ ನಿರಂಜನಾದಿತ್ಯ!!!

ದತ್ತಗಾಸ್ತಿ, ಪಾಸ್ತಿ, ನಾಸ್ತಿ! (ಚಿ)   4(1415)

-ತ್ತ ಶಾಂತಿಯೊಂದವನಾಸ್ತಿ!
ಗಾಳಿ, ಬೆಳಕವನಾಸ್ತಿ! [ಅ]
-ಸ್ತಿ, ನಾಸ್ತ್ಯತೀತವನಾಸ್ತಿ!
ಪಾಪ ಪುಣ್ಯ ರಹಿತಾಸ್ತಿ! [ಜಾ]
-ಸ್ತಿ, ಕಮ್ಮಿಲ್ಲದಾನಂದಾಸ್ತಿ!
ನಾಮ, ರೂಪವಿದೂರಾಸ್ತಿ! [ಸ್ವ]
-ಸ್ತಿ, ನಿರಂಜನಾದಿತ್ಯಾಸ್ತಿ!!!

ದತ್ತಗುರು ಕೃಪಾ ಕವಚ ತೊಡಿ! (ಚಿ)   6(4387)

-ತ್ತ ಶುದ್ಧಿಗಾಗಿದ ಸತತ ತೊಡಿ!
ಗುಹ್ಯಾ, ಜಿಹ್ವಾಚಾಪಲ್ಯಗಳ ಬಿಡಿ! (ತು)
-ರು, ಕರುಗಳ ಸೇವೆ ಸದಾ ಮಾಡಿ!
ಕೃತಯುಗದಾನಂದವಿಂದೂ ಪಡಿ!
ಪಾತಕ, ಸೂತಕದ ಭ್ರಾಂತಿ ಬಿಡಿ! (ತ್ರಿ)
-ಕರಣ ಶುದ್ಧಿಯಿಂದ ಸೇವೆ ಮಾಡಿ!
ರಗಳಾವುದನ್ನೂ ಕೇಳ ಬೇಡಿ!
ತುರ್ಥ ಪುರುಷಾರ್ಥ ಗುರಿ ಇಡಿ!
ತೊಡೆರೆಡರುಗಳಿಗಂಜ ಬೇಡಿ! (ಹಿ)
-ಡಿ, ನಿರಂಜನಾದಿತ್ಯಪಥ ಹಿಡಿ!!!

ದತ್ತಗುರು ಮಹಾರಾಜ ಯೋಗಿ! (ಚಿ)   2(646)

-ತ್ತ ಭಕ್ತ ಪರಿಪಾಲನಾ ಯೋಗಿ!
ಗುರು ಜಗತ್ರಯಕಿವ ಯೋಗಿ!
ರುಚಿ, ಅರುಚಿ, ಇಲ್ಲದ ಯೋಗಿ!
ಹಿಮಾಪಾರ ಶಂಕರ ಯೋಗಿ!
ಹಾಲಾಹಲ ಉಂಡ ಶಿವಯೋಗಿ!
ರಾಧಾರಮಣ ಶ್ರೀಧರ ಯೋಗಿ!
ಗದ್ಗುರು ಶ್ರೀ ಬ್ರಹ್ಮೇಂದ್ರ ಯೋಗಿ!
ಯೋಗ, ಭೋಗ ಸಮರಸ ಯೋಗಿ! [ತ್ಯಾ]
-ಗಿ, ಶ್ರೀ ನಿರಂಜನಾದಿತ್ಯ ಯೋಗಿ!!!

ದತ್ತನಾದೆ ನೀನು ತುಳಸಿ! (ಅ)   2(591)

-ತ್ತ, ಇತ್ತ ಮೂರ್ಗೆಲ್ಲು ತುಳಸಿ!
ನಾಮ ನಿನಗೀಗ ತುಳಸಿ! (ಆ)
-ದೆಮಗಾಗಿ ದತ್ತ ತುಳಸಿ!
ನೀನೆಮಗೆ ಗುರು ತುಳಸಿ!
ನುಡಿನಿನಗಿಲ್ಲ ತುಳಸಿ!
ತುರ್ಯಾತೀತಿ ನೀನು ತುಳಸಿ! (ಬ)
-ಳಸ ಬಿಡು ನಿನ್ನ ತುಳಸಿ!
ಸಿದ್ಧ ನಿರಂಜನ ತುಳಸಿ!!!

ದತ್ತನಿಗೆ ಕರ್ಪೂರ ಮಂಗಳಾರತಿ! (ಇ)   1(145)

-ತ್ತ ದರ್ಶನವೆಲ್ಲರಿಗಿತ್ತಾರತಿ!
ನಿದರ್ಶನವತ್ತ ತೋರಿದಗಾರತಿ!
ಗೆಜ್ಜೆ, ತಾಳ, ಡೋಲು, ಬಾರಿಸಿ ಆರತಿ!
ಣ್ಣಿಗಾನಂದವಿತ್ತ ಮೂರ್ತಿಗಾರತಿ! (ಇ)
-ರ್ಪೂರ ಗುಡಿಸಿಲಲಿ ಇಷ್ಟದಾರತಿ!
ಸಭಕ್ಷ್ಯ ನೆ

ವೇದ್ಯ ಸಹಿತಾರತಿ!
ಮಂಗಲ ಸುಮ ಹಾರಾಲಂಕಾರಾರತಿ!
ಗನ ತೊಬಿತಿಂದಾ ಭಜನಾರತಿ! (ಇ)
-ಳಾವಲಯಕೆಲ್ಲಾ ಶಾಂತಿಯಾರತಿ!
-ರಬೇಕೆಲ್ಲೆಲ್ಲೂ ಸತತವಿಂತಾರತಿ!
ತಿರುಕ ನಿರಂಜನಾದಿತ್ಯಗಾರತಿ!!!

ದತ್ತನಿತ್ತ ಉತ್ತಮ ಹಾರ! (ಕ)   2(781)

-ತ್ತವನದು ಹೊತ್ತಾಪ್ತ ಹಾರ!
ನಿತ್ಯ ಸುಖಪ್ರದವಾ ಹಾರ! (ಚಿ)
-ತ್ತ ಶುದ್ಧಿಗಿದುತ್ತಮ ಹಾರ!
ತ್ತಮ ಸುವಾಸನಾ ಹಾರ! (ಎ)
-ತ್ತಲೂ ಸಿಗದ ದಿವ್ಯಹಾರ!
ದ ಮತ್ಸರ ಹರಾ ಹಾರ! (ಮ)
-ಹಾ ಮಂಗಳಕರವಾ ಹಾರ! (ವ)
-ರ ನಿರಂಜನಾದಿತ್ಯ ಹಾರ!!!

ದತ್ತನೆಲ್ಲಿ ಕೂಡಿಟ್ಟಿಹನು ವಿತ್ತ? (ಎ)   3(1349)

-ತ್ತ, ನೋಡಿದರತ್ತವನದೇ ಚಿತ್ತ! (ಮ)
-ನೆ, ಮಠ, ಕಟ್ಟಿರಬೇಕೇನು ದತ್ತ? (ಅ)
-ಲ್ಲಿಲ್ಲೋಡಾಡುವವನೊಬ್ಬನುನ್ಮತ್ತ!
ಕೂಸುಗಳ ಕೂಸಾಗಿ ಶಾಂತ ಚಿತ್ತ (ಮ)
-ಡಿ ಮೈಲಿಗೆನ್ನದಾತ್ಮಾ ರಾಮ ದತ್ತ! (ಹು)
-ಟ್ಟಿ, ಸಾಯದವನಪ್ರಮೇಯ ಚಿತ್ತ!
ರಿ, ಹರ, ಬ್ರಹ್ಮೈಕ್ಯಾನಂದ ದತ್ತ! (ತ)
-ನು, ಮನ ತಾನಲ್ಲದಗೇಕೆ ವಿತ್ತ?
ವಿರಕ್ತ ಗುರುದತ್ತ ನಿತ್ಯ ತೃಪ್ತ! (ವಿ)
-ತ್ತ ನಿರಂಜನಾದಿತ್ಯಾನಂದ ದತ್ತ!!!

ದತ್ತನೇ ನೀನೆಂದು ನಾನು ಬಂದೆ! (ಚಿ)   4(1556)

-ತ್ತ ನಿನ್ನಂತೆಲ್ಲಾ ಆಗಲೆಂದಂದೆ!
ನೇಮ, ನಿಷ್ಠಾವಂತಾತ್ಮ ನಾನೆಂದೆ!
ನೀನೆಲ್ಲಾ ನೋಡಿಕೊಳ್ಳಬೇಕೆಂದೆ!
ನೆಂಟರೆನಗನ್ಯರಾರಿಲ್ಲೆಂದೆ!
ದುರ್ವಿಷಯ ಬೇಡ ನನಗೆಂದೆ!
ನಾನೇ ನೀನೆಂದು ನೀನೆನಗಂದೆ! (ತ)
-ನು ನಿನಗಾಗಿರಲೆಂದಾನಂದೆ!
ಬಂಧಿಯಾಗಿರಲಾರೆ ನಾನೆಂದೆ! (ತಂ)
-ದೆ ನಿರಂಜನಾದಿತ್ಯ ನೀನೆಂದೆ!!!

ದತ್ತಮೂರ್ತಿಯ ನಿತ್ಯಪೂಜೆ ಭಕ್ತರ ಸುಯೋಗ (ಅ) !    1(110)

-ತ್ತನುಮಾನಿಸದ ಭಕ್ತಿ ಸೇವೆಯಿಂದೀ ಸುಯೋಗ!
ಮೂರ್ತಿ ರೂಪಿನಲಿರುವುದಾತ ನಿಮ್ಮ ಸುಯೊಂಗ! (ಅ)
-ರ್ತಿಯಲಿ ತಾ ಪೂಜಿಸಿ, ನಿಮಗಿತ್ತುದು ಸುಯೋಗ!
ದುಪತಿ, ದತ್ತನೊಂದಾಗಲ್ಲಿಪ್ಪುದು ಸುಯೋಗ!
ನಿಜಭಕ್ತಿ, ನಂಬಿಗೆಯಿಂದಾಗಲಿದು ಸುಯೋಗ! (ಅ)
-ತ್ಯಮೂಲ್ಲದೀ ಸೇವೆ ಕಳಕೊಳ್ಳಬೇಡೀ ಸುಯೋಗ!
ಪೂಜಾರಿ ಭಾವಿಕ ಭಕ್ತನಾದರದು ಸುಯೋಗ!
ಜೆಗದ ಗೌರವಕಾಗಿ ಸುವ್ಯವಸ್ಥಾ ಸುಯೋಗ!
ಕ್ತರಲೇಕ ಮತವಿದ್ದರದೊಂದು ಸುಯೋಗ! (ಯು)
-ಕ್ತ ಕಾರ್ಯಕ್ರಮದಿಂದಾನಂದವಾದರೆ ಸುಯೋಗ!
ಗಳೆಗೆಡೆಗೊಡದಂತಿದ್ದರದು ಸುಯೋಗ!
ಸುಲಭದೀ ದಾರಿಯಿಂದ ಗುರಿ ಸೇರೆ ಸುಯೋಗ!
ಯೋಗವಿದು ಶ್ರದ್ಧಾ, ಭಕ್ತಿಯಿಂದಾದರೆ ಸುಯೋಗ!
ತಿ ನಿರಂಜನಾದಿತ್ಯನಲಿಹುದೀ ಸುಯೋಗ!!!

ದತ್ತರೂಪ ಅತ್ಯಪರೂಪ! (ಸು)   5(3155)

-ತ್ತಮುತ್ತೆಲ್ಲಾ ತತ್ವ ಸ್ವರೂಪ!
ರೂಪ, ನಾಮಾತೀತಾತ್ಮ ರೂಪ!
ತಿತೋದ್ಧಾರಾ ಗುರು ರೂಪ!
ವಧೂತಾತ್ಮಾನಂದ ರೂಪ! (ಭೃ)
-ತ್ಯ ನೋಡ್ಬೇಕೆಂಬಾ ಸ್ಥೂಲ ರೂಪ!
ರಿಹಾರದ್ರಿಂದೆಲ್ಲಾ ಪಾಪ! (ಊ)
-ರೂರಲೇದರೆ ಸಿಕ್ಕಾ ಭೂಪ! (ಭೂ)
-ಪ ನಿರಂಜನಾದಿತ್ಯಾಧಿಪ!!!

ದತ್ತಾತ್ರೇಯ, ಅತ್ರಿ ತನಯ! ಎತ್ತಿಕೊಳ್ಳಿವ   1(69)

!
ಭಕ್ತಿಯನಿತ್ತು, ಶಕ್ತಿಯನಿತ್ತು, ಯುಕ್ತ ಸೇವೆ ಕೊಳ್ಳೋ ಗುರುವೆ!
ವಿರಕ್ತಿಯರಿಯೆ ಆಸಕ್ತಿಯನರಿಯೆನೆಲ್ಲಾ ಕತ್ತಲೆ!
ಕರುಣೆಯಿಂದ ಬೆಳಕನಿತ್ತು ಕಾಯಬೇಕು ನಿತ್ಯ ಗುರುವೆ!
ಯೋಗವರಿಯೆ, ತ್ಯಾಗವರಿಯೆ, ಎಲ್ಲಾ ಭಾಗ್ಯ ನೀನೇ ಗುರುವೆ!
ಬೇಗವೆನಗಾ ಯೋಗಭಾಗ್ಯವಿತ್ತು ನೀ ಕಾಯೋ ದತ್ತ ಗುರುವೇ!!!

ದತ್ತಾತ್ರೇಯಾನಸೂಯಾ ತನಯಾ! [ಹ]   5(3194)

-ತ್ತಾವತಾರಿಯೂ ನೀನೇ ಆದಿಯಾ!
ತ್ರೇತ ದ್ವಾಪರಕ್ಕಿತ್ತೆ ಶಾಂತಿಯಾ!
ಯಾಗ, ಯೋಗೋಪದೇಶವಿತ್ತಿಯಾ!
ರನ ದಾರಿ ನೇರ ಗೈದಿಯಾ!
ಸೂತ್ರಧಾರಿಯೆಂದನ್ವರ್ಥಾದಿಯಾ!
ಯಾಕೀಗ ದಯೆಯಿಲ್ಲದಾದಿಯಾ?
ತ್ವಸಿದ್ಧ ನೀ ತೋರು ದಾರಿಯಾ!
ಮ್ಬಿಹೆ ನಿನ್ನಡಿದಾವರೆಯಾ! (ಜೀ)
-ಯಾ, ನಿರಂಜನಾದಿತ್ಯಾ ಹೃದಯಾ!!!

ದಯಾಸಾಗರಾ! ಕಾಯೋ ಬಂಗ್ಲಾದಾರ್ತರಾ!   4(1985)

ಯಾಕಬಲೆಯರ ಮೇಲೀ ಅತ್ಯಾಚಾರಾ?
ಸಾಯುತಿಹರನಾಥ ಮಕ್ಕಳಪಾರಾ!
ತಿ ದಾತನದಿದೇನು ಉಪಕಾರಾ?
ರಾಗ, ದ್ವೇಷ, ನಿರ್ಮೂಲ ಮಾಡೋ ದಾತಾರಾ!
ಕಾಲ ವಿಳಂಬ ಸಾಕೋ ಕೃಪಾಕರಾ! (ಕಾ)
-ಯೋದ್ವೇಗ ನಿಲ್ಲಿಸೋ ಚಂದ್ರಶೇಖರಾ!
ಬಂಧು ನೀನಲ್ಲವೇನೋಂಕಾರೇಶ್ವರಾ?
ಗ್ಲಾನಿ ಧರ್ಮಕ್ಕಾಗುತಿದೆ ಈಶ್ವರಾ!
ದಾರಿ ತೋರು, ಬಾ, ಗುರುಗುಹೇಶ್ವರಾ! (ಕ)
-ರ್ತವ್ಯಲೋಪವೇಕೋ ಪರಮೇಶ್ವರಾ? (ಹ)
-ರಾ ನಿರಂಜನಾದಿತ್ಯ ಲೋಕೇಶ್ವರಾ!!!

ದಯೆದೋರು ದಯಾಸಾಗರಾ! (ಮಾ)   4(1898)

-ಯೆಯಾಟ ಈ ಭವ ಸಾಗರಾ!
ದೋಣಿ ನೀ ದಾಟಲೀ ಸಾಗರಾ! (ನೀ)
-ರು ಬಹಳಾಳ ಈ ಸಾಗರಾ! (ವಂ)
-ದನೆಯಂಗೀಕರಿಸೀಶ್ವರಾ! (ಜ)
-ಯಾಪಜಯ ನಿನ್ನದೀಶ್ವರಾ!
ಸಾಧ್ಯಾಸಾಧ್ಯಾ ಧಾರೆ ಈಶ್ವರಾ! (ಸಂ)
-ಗ ನಿನ್ನಲ್ಲಾಗಬೇಕೀಶ್ವರಾ! (ಹ)
-ರಾ ನಿರಂಜನಾದಿತ್ಯೇಶ್ವರಾ!!!

ದಯೆದೋರು ಪೂಜ್ಯ ಗುರುವೇ! (ಮಾ)   5(2552)

-ಯೆಯಿಂದ ಬಿಡಿಸು ಪ್ರಭುವೇ!
ದೋಷವೆಣಿಸ್ಬೇಡ ಗುರುವೇ! (ತು)
-ರು, ಕರು, ನೀ, ನಾನು ಪ್ರಭುವೇ!
ಪೂಜೆ ನಾಮ ಜಪ ಗುರುವೇ! (ತ್ಯಾ)
-ಜ್ಯ ಐಹಿಕ ಸುಖ ಪ್ರಭುವೇ!
ಗುರಿ ನಿನ್ನೊಳೈಕ್ಯ ಗುರುವೇ! (ತೋ)
-ರು ದಿವ್ಯ ಸ್ವರೂಪ ಪ್ರಭುವೇ! (ಸೇ)
-ವೇ ನಿರಂಜನಾದಿತ್ಯಗೀವೇ!!!

ದಯೆಯಿನ್ನೂ ಬಂದಿಲ್ಲವೇ ಸ್ವಾಮಿ? (ಮಾ)   4(1498)

-ಯೆಯಾಟವಿನ್ನೂ ಸಾಲದೇ ಸ್ವಾಮಿ? (ಆ)
-ಯಿತಿನಿತನೇಕಜನ್ಮ ಸ್ವಾಮಿ! (ನ)
-ನ್ನೂಳಿಗದಲ್ಲೇನು ತಪ್ಪು ಸ್ವಾಮಿ?
ಬಂಧು ನಿನ್ನ ಹೊರತ್ಯಾರು ಸ್ವಾಮಿ?
ದಿನ, ರಾತ್ರಿ, ನಿನ್ನ ಧ್ಯಾನ ಸ್ವಾಮಿ! (ಎ)
-ಲ್ಲವೂ ನಿನೋಬ್ಬನೆನಗೆ ಸ್ವಾಮಿ!
ವೇಷದಾಸೆನಗೇನಿದೆ ಸ್ವಾಮಿ?
ಸ್ವಾಮಿಭಕ್ತ ನಾನಲ್ಲವೇ ಸ್ವಾಮಿ?
ಮಿತ್ರ ನಿರಂಜನಾದಿತ್ಯಾ ಸ್ವಾಮಿ!!!

ದರಿದ್ರ, ಶ್ರೀಮಂತ, ಪ್ರಕೃತಿ ಧರ್ಮ!   6(3312)

(ಪ)-ರಿ ಪೂರ್ಣವಾಗಿಲ್ಲದಾಗದೀ ಕ್ರಮ!
(ಭ)-ದ್ರ ಸರ್ಕಾರವಾದ್ರೂ ಇದೊಂದು ಭ್ರಮ!
ಶ್ರೀ ರಾಮರಾಜ್ಯದಲ್ಲೂ ಇತ್ತಸಮ!
ಮಂದಿಯಲ್ಲಿರಬೇಕನ್ಯೋನ್ಯಪ್ರೇಮ!
ರತರದಾಸೆಯಿಂದೆಲ್ಲಾ ಶ್ರಮ!
ಪ್ರಗತಿಗಾಗಿ ಮಾಡಬೇಕುದ್ಯಮ!
ಕೃತ್ರಿಮದಿಂದ ಬಾಳವನಧಮ!
(ಪ್ರೀ)-ತಿ, ವಿಶ್ವಾಸವೇ ಸಹಕಾರ ಧರ್ಮ!
(ಅಂ)-ಧ ವಿಶ್ವಾಸದಿಂದ ಕೆಡ್ದಿರ್ಲೀ ಜನ್ಮ!
(ಧ)-ರ್ಮ, ಕರ್ಮ, ನಿರಂಜನಾದಿತ್ಯ ಪ್ರೇಮ!!!

ದರ್ಬಾರ್ನಡೆಸುವವ ನೀನು! (ಇ)   6(3323)

-ರ್ಬಾರ್ದು ಹೊರ್ಗಿನ್ನೆಂಬವ ನಾನು! (ತೋ)
-ರ್ನನ್ಗೆ ದಾರಿಯೊಳಕ್ಕೆ ನೀನು! (ಮಾ)
-ಡ ನಿನಗಪಚಾರ ನೀನು!
ಸುದರ್ಶನದೊಡೆಯ ನೀನು! (ಭ)
-ವ ಪಾಶಬಂಧಿತನು ನಾನು! (ಭ)
-ವನಾಶ ಪರಮೇಶ ನೀನು!
ನೀನೇ ಗತಿಯೆನ್ನುವೆ ನಾನು! (ನೀ)
-ನು ನಿರಂಜನಾದಿತ್ಯ ತಾನು!!!

ದರ್ಶನ ಎಲ್ಲರಿಗೂ ಸಿಕ್ಕದಯ್ಯಾ! (ಸ್ಪ)   6(3563)

-ರ್ಶ ದರ್ಶನವಾದ್ರೂ ದುರ್ಲಭವಯ್ಯಾ!
ವವಿಧ ಭಕ್ತಿಯೂ ಮಾನ್ಯವಯ್ಯಾ!
ಚ್ಚರ, ಸ್ವಪ್ನದಲ್ಲೂ ಆಗ್ವುದಯ್ಯಾ! (ಸ)
-ಲ್ಲಬೇಕು ಸೇವೆಲ್ಲರಿಂದವಗಯ್ಯಾ!
ರಿಪುಗಳಾರನ್ನೂ ಜೈಸ್ಲೇಬೇಕಯ್ಯಾ!
ಗೂಢವಿದು ಪರಮಾರ್ಥದಲ್ಲಯ್ಯಾ!
ಸಿಕ್ಕಿದಾಗ ದಕ್ಕಿಸಿಕೊಳ್ಬೇಕಯ್ಯಾ! (ಅ)
-ಕ್ಕರೆಯಿಂದವನನ್ನೊಲಿಸ್ಬೇಕಯ್ಯಾ!
ತ್ತನಿಚ್ಚೆಯಂತೆಲ್ಲಾ ಆಗ್ವುದಯ್ಯಾ! (ಅ)
-ಯ್ಯಾ, ದತ್ತ, ಶ್ರೀ ನಿರಂಜನಾದಿತ್ಯಯ್ಯಾ!!!

ದರ್ಶನ ಸುಖ ಹೆಚ್ಚುತಿದೆ! (ಸ್ಪ)   4(1481)

-ರ್ಶಕ್ಕದೆಟಕೆದಂತಾಗಿದೆ!
ಯನ ನೋಡದಂತಾಗಿದೆ!
ಸುಖ, ದುಃಖಲಕ್ಷ್ಯವಾಗಿದೆ!
ತಿ ಮತಿ ಶಾಂತವಾಗಿದೆ!
ಹೆದರಿಕೆ ಕಿತ್ತೋಡುತಿದೆ! (ಹು)
-ಚ್ಚು ವ್ಯಾಮೋಹ ನುಚ್ಚಾಗುತಿದೆ!
ತಿತಿಕ್ಷೆ ಸ್ಥಿರವಾಗುತಿದೆ! (ಇ)
-ದೆ, ನಿರಂಜನಾದಿತ್ಯಾಗಿದೆ!!!

ದರ್ಶನಕೊಟ್ಟು ಪೂಜೆ ಸ್ವೀಕರಿಸಯ್ಯಾ! (ಸ್ಪ)   6(3465)

-ರ್ಶದಿಂದ ನಾಶವಾಗ್ಬೇಕು ಪಾಪವಯ್ಯಾ!
ಮಸ್ಕಾರದಿಂದ ಹಂಕಾರ ಹೋಗ್ಲಯ್ಯಾ!
ಕೊಳೆ ಕೃಪಾಕಿರಣದಿಂದಳಿಯ್ಲಯ್ಯಾ! (ಹು)
-ಟ್ಟು ಸಾವಿನ ಕಟ್ಟು ಬಿಟ್ಟು ಹೋಗಲಯ್ಯಾ!
-ಪೂರ್ಣವೊಂದೇ ವಿರಾಜಿಸುತ್ತಿರಲಯ್ಯಾ! (ಸಂ)
-ಜೆ, ಮುಂಜಾನೆಯೆಂಬುದಿಲ್ಲದಿರಲಯ್ಯಾ!
ಸ್ವೀಕರಿಸಿ ಸೇವೆ ಆಶೀರ್ವದಿಸಯ್ಯಾ!
ಳೆಯಿತೆಂತೇಳು ದಶಕಗಳಯ್ಯಾ!
ರಿಸಿಜೀವನ ನಿನ್ನನುಗ್ರಹವಯ್ಯಾ!
ಚ್ಚಿದಾನಂದ ಪರಮ ಗುರಿಯಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾಂದ ಅದಯ್ಯಾ!!!

ದರ್ಶನಲಾಭ ನಿಂದಕಗಿಲ್ಲ! (ಸ್ಪ)   4(2430)

-ರ್ಶಸುಖಕ್ಕರ್ಹತೆ ಅವಗಿಲ್ಲ!
ಡ್ತೆ ಅವನದು ಸರಿ ಇಲ್ಲ! (ಬ)
-ಲಾತ್ಕಾರದಿಂದೇನೂ ಫಲವಿಲ್ಲ!
ಕ್ತ ತಾನೆಂಬ ನಟನೆಯೆಲ್ಲ!
ನಿಂತ ಮನೋವೃತ್ತಿ ಅವಗಿಲ್ಲ!
ಯೆಯವನಲ್ಲೆಳ್ಳಷ್ಟೂ ಇಲ್ಲ!
ರ್ಮಭ್ರಷ್ಟ ಬಾಳವನದೆಲ್ಲ! (ಮು)
-ಗಿವುದೀ ಜನ್ಮ ವ್ಯರ್ಥವಾಗ್ಯೆಲ್ಲ! (ಬ)
-ಲ್ಲ, ನಿರಂಜನಾದಿತ್ಯನಿದೆಲ್ಲ!!!

ದರ್ಶನವಾಗಿ ಏನಾಯ್ತು! (ಸ್ಪ)   5(3284)

-ರ್ಶ, ಸುಖ ದೊರೆತಂತಾಯ್ತು!
ಡೆ, ನುಡಿ ನಿಂತೇಹೋಯ್ತು!
ವಾಸನೆಯ ನಾಶವಾಯ್ತು!
ಗಿರಿಜಾಶಂಕರಾನಾಯ್ತು!
ರಿಳಿತವಿಲ್ಲದಾಯ್ತು!
ನಾಮ ರೂಪಾತೀತಾತ್ಮಾಯ್ತು! (ಆ)
-ಯ್ತು, ನಿರಂಜನಾದಿತ್ಯಾಯ್ತು!!!

ದರ್ಶನವಾಗುತ್ತಲೇ ಇದೆ! (ಸ್ಪ)   4(2083)

-ರ್ಶರಿವಿಲ್ಲದಾಗುತ್ತಲಿದೆ! (ಮ)
-ಸುತ್ತಮ ಸ್ಥಿತಿಗೇರ್ತಿದೆ! (ಭ)
-ವಾಭ್ದ್ಯೋದಕ ಕಹಿಯಾಗ್ತಿದೆ!
ಗುರಿಯೇನೆಂಬರಿವಾಗ್ತಿದೆ! (ಉ)
-ತ್ತಮರ ಸಂಗ ಸಿಕ್ಕುತ್ತಿದೆ! (ತ)
-ಲೇಭಾರವಿಳಿಯುತ್ತಲಿದೆ!
ದ್ದದ್ರಲ್ಲಿ ತೃಪ್ತ್ಯುಂಟಾಗ್ತಿದೆ! (ಎ)
-ದೆ ನಿರಂಜನಾದಿತ್ಯಾಗ್ತಿದೆ!!!

ದರ್ಶನವಾದಮೇಲೆ ಸ್ಪರ್ಶನ! (ಸ್ಪ)   5(2983)

-ರ್ಶನವಾದ್ಮೇಲ್ಸಾರೂಪ್ಯ ಜೀವನ! (ಅ)
-ನವರತಾಮೇಲೈಕ್ಯ ಜೀವನ!
ವಾದ, ಭೇದವಿಲ್ಲದಾ ಜೀವನ!
ಮೆ, ಶಮೆಯ ಭದ್ರ ಜೀವನ!
ಮೇರೆಯಿಲ್ಲದೇಕಾತ್ಮ ಜೀವನ! (ಸ)
-ಲೆ ಸಾಧನೆಯ ಸಿದ್ಧ ಜೀವನ! (ಆ)
-ಸ್ಪದ ಶಂಕೆಗಿಲ್ಲದಾ ಜೀವನ! (ಸ್ಪ)
-ರ್ಶಮಣಿ ಸ್ಪರ್ಶವಾದ ಜೀವನ! (ಘ)
-ನ ನಿರಂಜನಾದಿತ್ಯ ಜೀವನ!!!

ದರ್ಶನವಾಯ್ತೀಗ ಹೋಗ್ತೇವೇ! (ಸ್ಪ)   6(3808)

-ರ್ಶಕ್ಕಾಗಿ ತಿರಿಗಿ ಬರ್ತೇವೆ!
ಮಸ್ಕಾರ ಸದಾ ಮಾಡ್ತೇವೆ!
ವಾದ, ಭೇದ, ಬಿಡ್ತಾ ಇದ್ದೇವೆ! (ಆ)
-ಯ್ತೀಶ್ವರನಿಚ್ಛೆಯೆನ್ನುತ್ತೇವೆ!
ತಿ ಅವನೆಂದೆನ್ನುತ್ತೇವೆ!
ಹೋದಲ್ಲೆಲ್ಲಾತನ ನೋಡ್ತೇವೆ! (ಆ)
-ಗ್ತೇವವನ ದಾಸರಾಗ್ತೇವೆ! (ನಾ)
-ವೇ ನಿರಂಜನಾದಿತ್ಯಾಗ್ತೇವೆ!!!

ದರ್ಶನವಿತ್ತಾಗಾತನ ಸೇವೆ! (ಸ್ಪ)   4(2393)

-ರ್ಶವಾದಾಗಾನಂದದಿಂದ ಗೈವೆ!
ನ್ನಾನಂದಾಮೇಲೆಲ್ಲರಿಗೀವೆ!
ವಿಧಿವಶಳಾಗೀಗ ನಾ ನೋವೆ! (ಹೊ)
-ತ್ತಾಯ್ತೆಂದವನಂದಾಗ ನಾ ಸಾವೆ! (ತ್ಯಾ)
-ಗಾನಂದವೀಗನುಭವಿಸುವೆ!
ಪ್ಪೊಪ್ಪನ್ನವನಿಗೊಪ್ಪಿಸುವೆ! (ಮ)
-ನಸ್ಸಿಗದನ್ನೀಗಾಜ್ಞಾಪಿಸುವೆ!
ಸೇರುವವರೆಗೆಲ್ಲಾ ಬರೆವೆ! (ಧ)
-ವೆ, ನಿರಂಜನಾದಿತ್ಯಗಾಗಿರ್ವೆ!!!

ದರ್ಶನವಿದರಿಂದೆನ್ನ ದುಃಖ ನಾಶ! (ಸ್ಪ)   5(2837)

-ರ್ಶವಾಯಿತೆನ್ನ ಮನಕ್ಕವನಾದೇಶ!
ನ್ನ ಬಾಳ್ವೆಗಿದವನ ಉಪದೇಶ!
ವಿಶ್ವಾಸಿಗಳೆಲ್ಲರಿಗಿದು ಸಂತೋಷ!
ತ್ತನಿಂದ ಪರಿಹಾರೆಲ್ಲರ ದೋಷ! (ಯಾ)
-ರಿಂದ ಸಾಧ್ಯ ಅಳೆಯುವುದಕ್ಕಾಕಾಶ? (ತಂ)
-ದೆ, ತಾಯಿ, ಬಂಧು ಬಳಗವಾ ಸರ್ವೇಶ! (ತ)
-ನ್ನ ನಂಬಿದವರ ಕೈ ಬಿಡಾ ಮಹೇಶ!
ದುಃಖನಾಶ, ಭಕ್ತ ಪೋಷ ಗಿರಿಜೇಶ!
ಳಕುಲ ವಿನಾಶಾ ಕೈಲಾಸಾಧೀಶ!
ನಾಮಸ್ಮರಣಾನಂದಾ ಗುರು ನಿರ್ದೋಷ! (ಈ)
-ಶ ನಿರಂಜನಾದಿತ್ಯನೀವಾ ಸಂದೇಶ!!!

ದರ್ಶನವಿಲ್ಲದ್ದದೆಂಥಾ ಪರಮಾರ್ಥ? (ಸ್ಪ)   6(3825)

-ರ್ಶ ಪಾದದ್ದಾಗದೇ ಸಿದ್ಧಿಸದಿಷ್ಟಾರ್ಥ!
ಶ್ವರದ ಮೋಹ ನಾಶ ಪುರುಷಾರ್ಥ!
ವಿಧಿ, ಹರಿ, ಹರಾದಿಗಳೊಪ್ಲೀ ಅರ್ಥ! (ಬ)
-ಲ್ಲವರ ಕೃಪೆಯಿಂದ ಜೀವ ಕೃತಾರ್ಥ! (ತ)
-ದ್ದರ್ಶನವೆಂಬದೇ ಕೃಪೆಯ ಪೂರ್ಣಾರ್ಥ!
ದೆಂಟಾದ ಕೃಷ್ಣನಿಂದ ಪೂವಾದ ಪಾರ್ಥ! (ವೃ)
-ಥಾಲಾಪದಿಂದಾಗುತಿದೆ ವಿಕಲ್ಪಾರ್ಥ!
ತಿತನ ಪಾವನ ಮಾಡ್ಬೇಕ್ಸಮರ್ಥ!
ತಿಪತಿಯಿಂದಾಯಿತೆಲ್ಲಾ ಅನರ್ಥ!
ಮಾರಹರ ಬೆಳಗಿದ ಪರಮಾರ್ಥ! (ತೀ)
-ರ್ಥ, ನಿರಂಜನಾದಿತ್ಯನ ಪಾದತೀರ್ಥ!!!

ದರ್ಶನಾಪೇಕ್ಷೆ ತರತರವಯ್ಯಾ! (ಸ್ಪ)   4(2292)

-ರ್ಶಕ್ಕವಕಾಶ ಕೂಟದಲ್ಲಿಲ್ಲಯ್ಯಾ! (ಅ)
-ನಾದರ ಮಾಡ ಗುರುವಾರನ್ನಯ್ಯಾ!
ಪೇಚಾಡಬೇಡ ಸಂದೇಹದಿಂದಯ್ಯಾ! (ಕ)
-ಕ್ಷೆಯಾತನದತಿ ಪವಿತ್ರವಯ್ಯಾ! (ಆ)
-ತನಾರೋಪದಿಂದವನತಿಯಯ್ಯಾ! (ಪ)
-ರಮಾರ್ಥಿಯಿದನರಿಯಬೇಕಯ್ಯಾ!
ನು, ಮನ, ಧನಾರ್ಪಣೆ ಮಾಡಯ್ಯಾ!
ಕ್ಷಿಸುವನು ನಿನ್ನನವನಯ್ಯಾ! (ಅ)
-ವರಿವರ ಮಾತು ನಿನಗೇಕಯ್ಯಾ? (ಅ)
-ಯ್ಯಾ! ನಿರಂಜನಾದಿತ್ಯನ ನಂಬಯ್ಯಾ!!!

ದರ್ಶನಾವಕಾಶ ಇಲ್ಲ! (ಸ್ಪ)   5(3139)

-ರ್ಶಕ್ಕಾಗ ಘರ್ಷಣೆ ಇಲ್ಲ!
ನಾಮಜಪಕ್ಕಡ್ಡಿ ಇಲ್ಲ!
ರ ಕೇಳ್ವ ತಂಟೆ ಇಲ್ಲ!
ಕಾದು ಸುಸ್ತಾಗ್ಬೇಕಾಗಿಲ್ಲ!
ಕ್ತಿ ಸಂಪಾದಿಸ್ರಿಂತೆಲ್ಲ!
ಷ್ಟೇ ಸಾಕು ಮುಕ್ತಿಗೆಲ್ಲಾ! (ಬ)
-ಲ್ಲ, ನಿರಂಜನಾದಿತ್ಯೆಲ್ಲಾ!!!

ದರ್ಶನಾವಕಾಶ ನಾ ಕೊಟ್ಟೆ! (ಸ್ಪ)   4(2152)

-ರ್ಶನೇಚ್ಛೆಗೀಗಿಷ್ಟ ನೀ ಪಟ್ಟೆ!
ನಾನಾ ಪ್ರಶ್ನೆಗಳ ಕೇಳ್ಬಿಟ್ಟೆ!
ರ ಪ್ರಧಾನ ಮಾಡೆಂದ್ಬಿಟ್ಟೆ!
ಕಾರ್ಯ ಗೌರವ ಮರೆತ್ಬಿಟ್ಟೆ! (ವ)
-ಶವಾಗ್ಬೇಕಾಸ್ತಿ ಪಾಸ್ತ್ಯೆಂದ್ಬಿಟ್ಟೆ!
ನಾಶವಾಗ್ವುದಕಾಶಿಸ್ಬಿಟ್ಟೆ!
ಕೊಟ್ಟದ್ದುಡೆಂದಿದ ನಾ ಕೊಟ್ಟೆ! (ಕೊ)
-ಟ್ಟೆ ನಿರಂಜನಾದಿತ್ಯ ಬಟ್ಟೆ!!!

ದರ್ಶನಾವಕಾಶಾರಿಗೇಕಿಲ್ಲ? (ದ)   5(3140)

-ರ್ಶನ ಶ್ರೀಗುರುಚಿತ್ತದಂತೆಲ್ಲಾ!
ನಾನಾಸೆಗಳಿಂದ ಸಖವಿಲ್ಲ! (ಭ)
-ವರೋಗ ಮುಕ್ತರಾಗಬೇಕೆಲ್ಲಾ!
ಕಾರ್ಯೋನ್ಮುಖರಾಗಿರಿದಕ್ಕೆಲ್ಲಾ!
ಶಾಸ್ತ್ರ, ಯಂತ್ರ, ತಂತ್ರ ಬೇಕಾಗಿಲ್ಲ!
ರಿಪುಗಳಾರನ್ನೂ ಜೈಸಿರೆಲ್ಲಾ! (ಯೋ)
-ಗೇಶ್ವರನ ಸದಾ ಸ್ಮರಿಸ್ರೆಲ್ಲಾ!
ಕಿವಿ, ಬಾಯ್ಕಣ್ಣುಗಳಾಳಿರೆಲ್ಲಾ! (ಪು)
-ಲ್ಲ ನಿರಂಜನಾದಿತ್ಯನೆಲ್ಲೆಲ್ಲಾ!!!

ದಹಿಸಿದನನಂಗನ ತಪೋಬಲದಿಂದ ಶಿವ! (ಸ)   4(1979)

-ಹಿಸಿದನು ಸತೀ ವಿರಹವಾ ಬಲದಿಂದ ಶಿವ! (ಪು)
-ಸಿ ಮಾಯೆಗೊಡೆಯನೆನಿಸಿದಾ ಬಲದಿಂದ ಶಿವ! (ಕಂ)
-ದನಿಗೆ ತಂದೆ ತಾನಾದನು ಆ ಬಲದಿಂದ ಶಿವ! (ಮ)
-ನಸಿಜನಯ್ಯನಾಪ್ತ ತಾನಾದಾ ಬಲದಿಂದ ಶಿವ!
ನಂಜುಂಡು ನಂಜುಂಡಸ್ವಾಮಿಯಾದಾ ಬಲದಿಂದ ಶಿವ! (ಯೋ)
-ಗರಾಜನಾಗಿ ತ್ಯಾಗಿ ತಾನಾದಾ ಬಲದಿಂದ ಶಿವ!
ಗಾಧಿಪ ಸುತೆಯರಸಾದಾ ಬಲದಿಂದ ಶಿವ! (ಸಂ)
-ತ ಜ್ಞಾನೇಶ್ವರನೆನಿಸಿದನಾ ಬಲದಿಂದ ಶಿವ! (ಪೈ)
-ಪೋಟಿಯಿಲ್ಲದ ನಿಷ್ಕಪಟ್ಯಾದಾ ಬಲದಿಂದ ಶಿವ!
ಗೆಬಗೆ ರೂಪಿಗೆ ಸಾಕ್ಷ್ಯಾದಾ ಬಲದಿಂದ ಶಿವ! (ಜ)
-ಲಜಭವನಿಂದಧಿಕನಾದಾ ಬಲದಿಂದ ಶಿವ! (ಒ)
-ದಿಂಗಳವಡದಾತ್ಮಾನಂದಾದಾ ಬಲದಿಂದ ಶಿವ!
ಮ, ಶಮಾ, ಯೋಗ ಸಿದ್ಧನಾದಾ ಬಲದಿಂದ ಶಿವ!
ಶಿವ ಮಹಿಮೆಯ ಮೆರೆಸಿದಾ ಬಲದಿಂದ ಶಿವ!
ರಗುರು ನಿರಂಜನಾದಿತ್ಯಾ ಬಲದಿಂದ ಶಿವ!!!

ದಾಕ್ಷಾಯಿಣೀ ಗಾಳಿ ಬೀಸ್ಬೇಕು! (ದ)   4(2412)

-ಕ್ಷಾಧ್ವರವಾಗ ಧ್ವಂಸಾಗ್ಬೇಕು! (ತಾ)
-ಯಿ ಪಾರ್ವತಿಯಾಗ್ಜನಿಸ್ಬೇಕು! (ಫ)
-ಣೀಶನೆಂಬ ಮಗನಾಗ್ಬೇಕು! (ಯೋ)
-ಗಾರೂಢನಿವನಾಗಿರ್ಬೇಕು! (ಬಾ)
-ಳಿನ ಬೆಳಕವ್ನಿಂದಾಗ್ಬೇಕು!
ಬೀಜ ಸಂಸಾರದ್ದಳಿಯ್ಬೇಕು! (ಬೀ)
-ಸೆ

ಕಾ ಗಾಳಿ ಎಲ್ಲೆಲ್ಲೆನ್ಬೇಕು! (ಟಾ)
-ಕು ನಿರಂಜನಾದಿತ್ಯಾಗ್ಬೇಕು!!!

ದಾಕ್ಷಿಣ್ಯಕ್ಕೊಳಗಾಗಿ ದಾರಿ ಬಿಡಬೇಡ! [ರ]   4(2028)

-ಕ್ಷಿಪನವನೆಂಬ ನಂಬಿಗೆ ಬಿಡಬೇಡ! (ಗ)
-ಣ್ಯನಾಗಲಿಕ್ಕವರಿವರಾಶ್ರಯ ಬೇಡ!(ಹೊ)
-ಕ್ಕೊಳಗಾತ್ಮ ಚಿಂತನೆ ಮಾಡದಿರಬೇಡ! (ಪ)
-ಳಗಿದಾನೆಯಲ್ಲಪನಂಬಿಗೆ ತೋರ್ಬೇಡ! (ಆ)
-ಗಾಗದರ ಶುಶ್ರೂಷೆ ಮಾಡದಿರಬೇಡ!
ಗಿಡ, ಮರನ್ಯಾಯವಾಗಿ ಕೀಳಿಸಬೇಡ!
ದಾರಿಗಡ್ಡವಾದದ್ದನ್ನೆಳೆಸದಿರಬೇಡ! (ಊ)
-ರಿನಿಂದೂರಿಗೆ ವೃಥಾ ಓಡಾಡಿಸಬೇಡ!
ಬಿಸಿಲ್ಬಂದಾಗ ನೀರಲ್ಲಿಳಿಸದಿರಬೇಡ! (ಒ)
-ಡನಾಟ ಅದರದ್ದೆಂದಿಗೊ ಬಿಡಬೇಡ!
ಬೇಕಿದರ ಸಹಕಾರ, ಮರೆಯಬೇಡ! (ನೋ)
-ಡ ನಿರಂಜನಾದಿತ್ಯಡ್ಡದಾರಿಯಲ್ಲೋಡ!!!

ದಾನಕ್ಕೆ ನಿಧಾನ ಮಾಡ್ಬೇಡ!   5(3059)

ಶ್ವರಕ್ಕೆ ಆಶೆ ಪಡ್ಬೇಡ! (ಧ)
-ಕ್ಕೆ ಸ್ವಧರ್ಮಕ್ಕುಂಟು ಮಾಡ್ಬೇಡ!
ನಿನ್ನ ನೀ ತಿಳಿಯದಿರ್ಬೇಡ!
ಧಾರಾಳಕ್ಕೆ ಲೋಭ ತರ್ಬೇಡ!
ಮಿಸಿ ಕೊರಳ ಕೊಯ್ಬೇಡ!
ಮಾನಿನಿಯ ಮಾತು ಕೇಳ್ಬೇಡ! (ಬಿ)
-ಡ್ಬೇಡ ಜಪ ಬಿಟ್ಟು ಕೆಡ್ಬೇಡ! (ಬಿ)
-ಡ ನಿರಂಜನಾದಿತ್ಯಾ ಪಾಡ!!!

ದಾನಿಯಾಗು, ಕಲ್ಯಾಣಿಯಾಗು! [ಮೌ]   3(1269)

-ನಿಯಾಗು, ಯೋಗೇಶ್ವರಿಯಾಗು! (ಕಾ)
-ಯಾಭಿಮಾನರಹಿತೆಯಾಗು!
ಗುರು ಶಿವ ಸ್ವರೂಪಿಯಾಗು! (ಅ)
-ಕಳಂಕಾತ್ಮ ಕಾಮಾಕ್ಷಿಯಾಗು! (ಬಾ)
-ಲ್ಯಾದ್ಯವಸ್ಥೆಗೆ ಸಾಕ್ಷಿಯಾಗು! (ಪ್ರಾ)
-ಣಿ ಕೋಟಿಗೆಲ್ಲಾಧಾರಿಯಾಗು! (ಪ್ರಿ)
-ಯಾ ಪ್ರಿಯವಿಲ್ಲದಬ್ಬೆಯಾಗು! (ಆ)
-ಗು, ನಿರಂಜನಾದಿತ್ಯಾತ್ಮಾಗು!!!

ದಾರವಿದೆ ಬಟ್ಟೆಗಾಗುವಷ್ಟು! (ಬಾ)   5(2517)

-ರದುಪಯೋಗಕ್ಕೀಗೆಲ್ಲಾ ಗಂಟು!
ವಿವೇಕ್ಬೇಕು ಬಿಚ್ಲಿಕ್ಕೆ ಸಾಕಷ್ಟು! (ಕಂ)
-ದೆರೆಯದಿದ್ರೆ ತೋರದಾ ಗಂಟು!
ಲವೇನೋ ಇದೆ ಬೇಕಾದಷ್ಟು! (ಹೊ)
-ಟ್ಟೆಗಿಷ್ಟು ಹಾಕಿಕ್ಕೊಂಡ್ಬಿಚ್ಚಾ ಗಂಟು! (ಭೋ)
-ಗಾಸಕ್ತಿಯಿರಬಾರದೊಂದಿಷ್ಟು!
ಗುರುಭಕ್ತಿಯಿಂದ್ಬಿಚ್ಚೇಕಾ ಗಂಟು! (ಅ)
-ವಕಾಶ ಬೇಕು ಸಾಕಾಗುವಷ್ಟು! (ಎ)
-ಷ್ಟು? ನಿರಂಜನಾದಿತ್ಯ ಕೊಟ್ಟಷ್ಟು!!!

ದಾರಿ ಊರಿಗೆ ತೋರಿ ವಾರಿಧಿಗಿಳಿಸಬೇಡ!   6(3669)

ರಿಸಿ, ಮುನಿಗಳುಪದೇಶ ಸುಳ್ಳು ಮಾಡಬೇಡ!
ರ್ಧ್ವರೇತನಾಗಿ ನನ್ನನ್ನು ಮಾಡದಿರಬೇಡ!
ರಿಪುಗಳಾರರ ಹಿಂಸೆಗೆನ್ನ ಗುರಿ ಮಾಡ್ಬೇಡ!
ಗೆದ್ದು ಶ್ರೀ ಪಾದಕ್ಕೆ ಕೀರ್ತಿ ಬರಿಸದಿರಬೇಡ!
ತೋಳ, ನರಿ, ನಾಯಿಗಳಂತೆನ್ನ ಇರಿಸಬೇಡ!
ರಿಕ್ತ ಹಸ್ತರಾಗಿ ನಂಬಿದವರನ್ನಟ್ಟಬೇಡ!
ವಾರ, ತಿಥಿ, ಮಾಸಗಳೆಣಿಸಿ ಅಳಿಸಬೇಡ!
ರಿದ್ಧಿ, ಸಿದ್ಧಿಗಳಾಸೆಗೆನ್ನ ಮನ ಎಳೆಯ್ಬೇಡ!
ಧಿಕ್ಕಾರ ಯಾರನ್ನೂ ನನ್ನಿಂದ ಮಾಡಿಸಲೇಬೇಡ!
ಗಿರಿಜಾಪತಿಯ ದರ್ಶನ ಕೊಡಿಸದಿರ್ಬೇಡ! (ಅ)
-ಳಿದುಹೋಗುವ ದೇಹದ ಮೇಲಾಗ್ರಹ ಪಡ್ಬೇಡ!
ರ್ವವೂ ನೀನೆನಗೆಂಬ ವಿಶ್ವಾಸ ಕೆಡಿಸ್ಬೇಡ!
ಬೇಡ, ಖಂಡಿತ ನನಗಿನ್ನಾವುದನ್ನೂ ಕೊಡ್ಬೇಡ!
ಮರುಧರ ನಿರಂಜನಾದಿತ್ಯನಾಗ್ದಿರ್ಬೇಡ!!!

ದಾರಿ ತೋರುವುದು ಕೈಕಂಬ! (ಊ)   3(1101)

-ರಿನಒಡೆಯ ಪ್ರಿಯ ಸಾಂಬ!
ತೋಳಗಳಟ್ಟುವ ಹೇರಂಬ! (ಉ)
-ರು ಭಕ್ತಿಯಿಂದ ಹೋಗಿರೆಂಬ! (ಹಾ)
ವುಗಳಿಗಂಜಬೇಡಿರೆಂಬ!
ದುಸ್ತರವಲ್ಲ ದಾರಿಯೆಂಬ!
ಕೈಲಾಸವೇ ನಮ್ಮ ಊರೆಂಬ!
ಕಂದಮ್ಮ ಬಾ ಬೇಗೆಂಬಳಂಬ (ಸಾಂ)
-ಬ ನಿರಂಜನಾದಿತ್ಯ ಬಿಂಬ!!!

ದಾರಿ ನಡೆಸಿದರಾಯ್ತೇನು? [ಊ]   5(3043)

-ರಿಗಿನ್ನೂ ಸೇರಿಸಬಾರ್ದೇನು?
ಡೆಯಲಾರೆನಿನ್ನು ನಾನು! (ಒ)
-ಡೆಯನೆಲ್ಲಕ್ಕೆ ಒಬ್ಬ ನೀನು!
ಸಿರಿತನಕ್ಕಾಶ್ಸಿಲ್ಲ ನಾನು!
ಯೆ ತೋರಿ ಕಾಪಾಡು ನೀನು!
ರಾತ್ರಿ, ದಿನ ಧ್ಯಾನಿಪೆ ನಾನು! (ಆ)
-ಯ್ತೇನು ಲಾಭ ಹೇಳೀಗ ನೀನು! (ನಾ)
-ನು ನಿರಂಜನಾದಿತ್ಯನಲ್ಲೇನು???

ದಾರಿ ಸದಾ ಸಿದ್ಧ, ಶುದ್ಧವಾದರುದ್ಧ! [ಯಾ]   2(868)

-ರಿಗಾವ ಅಡ್ಡಿಯೇನಿಲ್ಲವಾದರುದ್ದ!
ಹನೆಯಿಂದ ನಡೆವಗಾವುದುದ್ದ? (ಸ)
-ದಾ ಜಪದಿಂದಿದ್ದರೆ ಕಾಣದಾ ಉದ್ದ!
ಸಿಹಿಯೂಟಕಾಶಿಸಿದರದು ಉದ್ದ! (ಬ)
-ದ್ಧನಾಗದೆ ಸಾಗಬೇಕು ದಾರಿಯುದ್ಧ!
ಶುಕಾದಿಗಳೆಲ್ಲಾ ನಡೆದರಾ ಉದ್ದ! (ಸ)
-ದ್ಧರ್ಮಕ್ಕೆ ಶಿರ ಬಾಗದಿರದಾ ಉದ್ದ!
ವಾದ, ಭೇದವಿದ್ದವರಿಗೆಲ್ಲಾ ಉದ್ದ!
ತ್ತನಿಗೆ ಶರಣಾದರಿಲ್ಲಾ ಉದ್ದ! (ಗು)
-ರು ಶಿವಾನಂದಾತ್ಮಜನಿಗಾವುದುದ್ದ? (ಗೆ)
-ದ್ದ ನಿರಂಜನಾದಿತ್ಯ ತಾನೊಬ್ಬ ಸಿದ್ಧ!!!

ದಾರಿ ಸರಿಯಾಗಿದ್ದರೂರು ಸೇರಿಸು! (ದಾ)   6(4259)

-ರಿ ತಪ್ಪಾಗಿದ್ದರದ ಸರಿಪಡಿಸು!
ದಾನಿನ್ನಬಳಿಯಲ್ಲಿಯೇ ಇರಿಸು! (ಹ)
-ರಿ ನಿನ್ನ ಗುಣಾಗಾನ ಸದಾ ಮಾಡಿಸು!
ಯಾತ್ರೆ ಜಾತ್ರೆಗಳ ಹುಚ್ಚುನ್ನು ಬಿಡಿಸು! (ಬಿ)
-ಗಿದೆನ್ನನ್ನು ನಿನ್ನ ಪಾದಕ್ಕೆ ರಕ್ಷಿಸು! (ಅ)
-ದ್ದದೇ ದುಃಖಾಬ್ಧಿಯಲ್ಲೆನ್ನನ್ನೀಗೆಬ್ಬಿಸು!
ರೂಪಾ

ಕಾಣಿಕೆ ಹಾಕದ್ದಕ್ಕೆ ಕ್ಷಮಿಸು!
ರುಜುಮಾರ್ಗಿಯೆನ್ನ ತಪ್ಪನ್ನು ಮನ್ನಿಸು!
ಸೇವೆ ಹೇಗೆ ಮಾಡಬೇಕೆಂದು ಕಲಿಸು!
ರಿಸಿ, ಮುನಿಗಳ ಸಾಲ್ಗೆನ್ನ ಸೇರಿಸು! (ಕೂ)
-ಸು ನಿರಂಜನಾದಿತ್ಯಾನಂದಗೆನಿಸು!!!

ದಾರಿ ಸಾಗಬೇಕೂರು ಸೇರಬೇಕು! (ಊ)   1(265)

-ರಿನಲಿ ಸುಖ ಪಡೆಯಲೇಬೇಕು!
ಸಾಹಸ ಸದಾ ಕುಂದದಿರಬೇಕು!
ಮನವನ್ಯ ಇರದಿರಬೇಕು!
ಬೇಸರ ಬಾರದಂತೆ ಇರಬೇಕು!
ಕೂತು ಕಾಲ ಕಳೆಯದಿರಬೇಕು!
ರುಚಿಯೂಟಕಾಶಿಸದಿರಬೇಕು!
ಸೇವೆ ಸದ್ಗುರುವಿನದಿರಬೇಕು!
ಥಕೆ ನಿರೀಕ್ಷಿಸದಿರಬೇಕು!
ಬೇಡವ ಅಭ್ಯಾಸ ಬಿಡಲೂಬೇಕು!
ಕುಲಕೆ ನಿರಂಜನಾದಿತ್ಯ ಬೇಕು!!!

ದಾರಿ ಸಾಗುತಿದೆ ಸುಸೂತ್ರವಾಗಿ! (ಹ)   4(1932)

-ರಿಕೃಪಾಬಲದಿಂದಾನಂದವಾಗಿ!
ಸಾಕಾರ ದರ್ಶನೋತ್ಸಾಹದಿಂದಾಗಿ!
ಗುರುವಚನದರ್ಥ ನೆನಪಾಗಿ!
ತಿನ್ನುವಾಪೇಕ್ಷೆಯಿಲ್ಲದವನಾಗಿ! (ತಂ)
-ದೆ, ತಾಯ್ಯವನೆಂಬ ಭಕ್ತಿಯಿಂದಾಗಿ!
ಸುಧಾಮನ ನಾಮಸ್ಮರಣೆಯಾಗಿ!
ಸೂತ್ರಧಾರನ ಲೀಲೆಯರಿವಾಗಿ! (ಪು)
-ತ್ರ, ಮಿತ್ರರ ಸಹಕಾರದಿಂದಾಗಿ!
ವಾಸುದೇವನ ಭಜನೆಯಿಂದಾಗಿ! (ತ್ಯಾ)
-ಗಿ ನಿರಂಜನಾದಿತ್ಯನೂರಿಗಾಗಿ!!!

ದಾರಿತಪ್ಪಿದರಾಗ ಮಗ! (ಅ)   3(1170)

ರಿಗಳ ಮುರಿದಾಗ ಮಗ!
ನ್ನಪ್ಪನಂತಾದಾಗ ಮಗ! (ಒ)
-ಪ್ಪಿಗೆಯಪ್ಪಗಾದಾಗ ಮಗ!
ತ್ತಪ್ಪಪ್ಪನೆಂದಾಗ ಮಗ! (ವಿ)
-ರಾಗಿಯವನಾದಾಗ ಮಗ! (ಯೋ)
-ಗ ಸಿದ್ಧ ತಾನಾದಾಗ ಮಗ!
ಗ ಗುಹನಂತಾದಾಗ ಮಗ! (ಮ)
-ಗ ನಿರಂಜನಾದಿತ್ಯಗಾಗ!!!

ದಾಶರಥಿಗೆ ಸೀತೆಯ ಚಿಂತೆ!   6(3372)

ಬರಿಗೆ ಶ್ರೀರಾಮನ ಚಿಂತೆ!
ಜ್ಜು, ಸರ್ಪವೆಂಬ ಭ್ರಾಂತಿಯಂತೆ!
(ತಿ)-ಥಿ, ವಾರವೆಣ್ಸಿ ಕಾಣುವ ಚಿಂತೆ!
(ಹೀ)-ಗೆಲ್ಲೆಲ್ಲೇನೇನೋ ತರದ ಚಿಂತೆ!
ಸೀತಾ, ರಾಮರಿಂದ ಶಾಂತಿಯಂತೆ!
(ಚಿಂ)-ತೆ ಸೀತೆಯದು ಹತವಾಯ್ತಂತೆ!
ಮ ರಾವಣನಿಗಾದನಂತೆ!
ಚಿಂತೆ ಚಿತೆಯಿಂದಧಿಕವಂತೆ!
(ಮಾ)-ತೆ ನಿರಂಜನಾದಿತ್ಯ ತಾನಂತೆ!!!

ದಾಸ ದಾಸ ಪುರಂಧರದಾಸ!   2(614)

ರ್ವಾಂತರ್ಯಾಮಿ ವಿಠ್ಠಲದಾಸ!
ದಾಮೋದರದಾಸ ಸೂರದಾಸ!
ಜ್ಜನದಾಸ ಕಬೀರದಾಸ!
ಪುರಾಣ ಪುರುಷೆಲ್ಲರ ದಾಸ!
ರಂಗದಾಸ ಪಾಂಡುರಂಗ ದಾಸ!
ರ್ಮದಾಸ ಯಮಧರ್ಮ ದಾಸ!
ಘುರಾಮ ದಾಸ ರಾಮ ದಾಸ!
ದಾಸ ದಾಸ ದಾಸ ದತ್ತ ದಾಸ!
ದಾ ನಿರಂಜನಾದಿತ್ಯ ದಾಸ!!!

ದಾಸನಿಷ್ಟ ನೇರವೇರಿತು!   4(2368)

ರ್ವರೊಪ್ಪಿಗೆ ಲಭಿಸಿತು!
ನಿರಂಜನಾಶೀರ್ವಾದಾಯಿತು! (ದು)
-ಷ್ಟಸಂಪರ್ಕ ತಪ್ಪಿಹೋಯಿತು! (ಮ)
-ನೆಯವ್ರಲ್ಲೈಕ್ಯವುಂಟಾಯಿತು! (ಪ)
-ರಸ್ಪರ ಪ್ರೀತಿ ಬೆಳೆಯಿತು!
ವೇಷ, ಭೂಷಣ ಬೇಡಾಯಿತು! (ಗು)
-ರಿ ಸಿದ್ಧಿಗೆ ಸಂಕಲ್ಪಾಯಿತು! (ಹೇ)
-ತು ನಿರಂಜನಾದಿತ್ಯಾಯಿತು!!!

ದಾಸಯ್ಯನಾಗಬೇಕಯ್ಯಾ!   5(2549)

ದಾಜಪ ಅದಕಯ್ಯಾ!
(ಅ)ಯ್ಯ ಬೇರಾರನ್ನಿಲ್ಲವಯ್ಯಾ! (ನೀ)
-ನಾತನೆಂದು ತಿಳಿಯಯ್ಯಾ!
ರ್ವ ನಿರ್ನಾಮವಾಗ್ಲಯ್ಯಾ!
ಬೇರಾವಾಸೆಯೂ ಬೇಡಯ್ಯಾ!
ರ್ತವ್ಯವ್ನ ಸೇವೆಯಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಯ್ಯಾ!!!

ದಾಸರ ದಾಸ ನಾನೆಂದೀಗೆಲ್ಲಿ ಹೋದೆ?   6(3859)

ಕಲವೂ ನಿನ್ನಿಚ್ಛೆಯೆಂದು ನಂಬಿದೆ!
ಮೇಶ, ಉಮೇಶ ನೀನೆಂದ್ಭಜಿಸಿದೆ!
ದಾರಿ ನಡೆಸಿ ಊರು ಸೇರಿಸದಾದೆ!
ಗುಣ, ಸಾಕಾರ ರೂಪ ತೋರದಾದೆ!
ನಾಳೆ, ನಾಳೆ ಎಂದು ನಂಬಿ ಹುಂಬನಾದೆ!
ನೆಂಟನೂ, ಭಂಟನೂ ನಾನೆಂದು ತಪ್ಪಿದೆ!
ದೀರ್ಘ ಕಾಲದ ತಪದಿಂದೇನಾಗಿದೆ?
ಗೆಳೆಯ ನೀನಾಗುವೆಯೆಂದೂಹಿಸಿದೆ! (ಎ)
-ಲ್ಲಿ ನೋಡಿದರೂ ಮೋಸವೇ ನಡೆದಿದೆ!
ಹೋಗ್ಬೇಕಾದದ್ದೆಲ್ಲಾ ಹೋಗಿ ಮುಗಿದಿದೆ! (ಎ)
-ದೆ ನಿರಂಜನಾದಿತ್ಯಗಾಗುಳಿದಿದೆ!!!

ದಾಸಾ ಶ್ರೀ ಹರಿಕೃಪಾವಾಸಾ!   4(1899)

ಸಾಧು ಜನಮನ ಪ್ರಕಾಶಾ!
ಶ್ರೀನಿಧಿ, ದಯಾಂಬುಧಿ, ಶ್ರೀಶಾ!
ಗಲಿರುಳು ಗೈವಾಭ್ಯಾಸಾ!
ರಿಪುವರ್ಗವಿಲ್ಲದಾವಾಸಾ!
ಕೃಷ್ಣನಲ್ಲಿ ಸತತವಾಸಾ!
ಪಾವನ ಬೃಂದಾವನಾ ವಾಸಾ!
ವಾಸುದೇವಾನಂದನಾ ವಾಸಾ! (ದಾ)
-ಸಾ, ನಿರಂಜನಾದಿತ್ಯಾವಾಸಾ!!!

ದಾಸಾ! ನಿನ್ನಲ್ಲಿ ಶಿವನ ವಾಸ!   3(1109)

ಸಾರ್ಥಕವಾಗಲೀ ಸಹವಾಸ!
ನಿಶ್ಚಲ ಭಕ್ತಿಯೇ ಶ್ರೀನಿವಾಸ! (ಕ)
-ನ್ನ, ಕತ್ತರಿಯದೆಲ್ಲಾ ಆಯಾಸ! (ನಿ)
-ಲ್ಲಿಸೆಲ್ಲಾ ಪರ ಊರು ಪ್ರವಾಸ!
ಶಿವೆಯೊಡಗೂಡಿರ್ಪುದಾ ವಾಸ!
ಜ್ರ ವೈಢೂರ್ಯಕ್ಕೇನಲ್ಲಾ ವಾಸ!
ಶ್ವರೇಶ್ವರ ಜ್ಞಾನಕ್ಕಾ ವಾಸ!
ವಾದ, ಭೇದಗಳಿಗಲ್ಲಾ ವಾಸ!
ತ್ಯ ನಿರಂಜನಾದಿತ್ಯಾವಾಸ!!!

ದಿಂಬು ತಲೆಗೊಂದಿಂಬೆಂಬೆ! (ಅಂ)   5(2739)

-ಬುಜಕ್ಕೆಂಬರೇಶಾಪ್ತನೆಂಬೆ!
ನ್ನ ತಾ ತಿಳಿದ್ಬ್ರಹ್ಮಾಗೆಂಬೆ! (ಕೊ)
-ಲೆ, ಸುಲಿಗೆ ಮಾಡಬಾರ್ದೆಂಬೆ! (ಪ್ರ)
-ಗತಿ ಸದಾಚಾರದಿಂದೆಂಬೆ!
ದೊಂಬರಾಟವಿನ್ನು ಸಾಕೆಂಬೆ!
ದಿಂಡಾಗ್ಬೆಳೆದೇನ್ಫಲವೆಂಬೆ!
ಬೆಂಕಿಗಾಗ್ವುದಾಹುತಿಯೆಂಬೆ! (ಅಂ)
-ಬೆ ನಿರಂಜನಾದಿತ್ಯನೆಂಬೆ!!!

ದಿಂಬು ಬೇಕ್ತಲೆಗಿಂಬು ಬೇಕು!   5(2740)

ಬುದ್ಧಿಗೆ ಸದ್ವೃತ್ತಿಯಿರ್ಬೇಕು!
ಬೇಹುಶಾರಾಗಿರದಿರ್ಬೇಕು! (ಶ) (ಭ)
-ಕ್ತನಾಗಲು ಪ್ರಯತ್ನಿಸ್ಬೇಕು!
ಲೆಖ್ಖಾಚಾರ ಚೊಕ್ಕವಾಗ್ಬೇಕು! (ಆ)
-ಗಿಂದಾಗ ಪರಿಶೋಧಿಸ್ಬೇಕು! (ಜೇ)
-ಬು ದಿನದಿನ ತುಂಬ್ತಿರ್ಬೇಕು!
ಬೇಕಾದುದಕ್ಕೆ ಖರ್ಚಾಗ್ಬೇಕು! (ಟಾ)
-ಕು ನಿರಂಜನಾದಿತ್ಯಾಗ್ಬೇಕು!!!

ದಿಕ್ಕಿಲ್ಲದವನಿಗೆ ಹಕ್ಕೇನು? (ಇ)   6(3456)

-ಕ್ಕಿದ್ದನ್ನುಣ್ಣುತ್ತಿರಬೇಕವನು! (ಅ)
-ಲ್ಲಗೆಳೆಯ್ಬಾರ್ದನ್ಯರನ್ನವನು!
ಯೆಗೆ ಪಾತ್ರನಾಗ್ಬೇಕವನು!
ರ್ಣಭೇದ ಬಿಡಬೇಕವನು!
ನಿಶ್ಚಲ ಭಕ್ತನಾಗ್ಬೇಕವನು!
ಗೆಲ್ಬೇಕಿಂದ್ರಿಯಗಳನ್ನವನು!
ರಟೆ ಮಲ್ಲನಾಗ್ಬಾರ್ದವನು! (ಠ)
-ಕ್ಕೇನೂ ಮಾಡದಿರಬೇಕವನು! (ಸೂ)
-ನು, ನಿರಂಜನಾದಿತ್ಯಗವನು!!!

ದಿಗಂಬರನೆಲ್ಲರಲಿರುವಾದಿತ್ಯ!   1(341)

ಗಂಗಾ, ಕಾವೇರಿಯರಿಂದ ಸದಾತಿಥ್ಯ!
ನಗಳಲೆಲ್ಲಿವನ ಪಾರುಪತ್ಯ! (ಅ)
-ರಮನೆ, ಗುರುಮನೆಯಲಿವ ಸ್ತುತ್ಯ!
ನೆಪವದರಿಂದಾಗಿದೆಲ್ಲಾ ಸಾಹಿತ್ಯ! (ಅ)
-ಲ್ಲ, ಬುದ್ಧ, ಪೈಗಂಬರರಲ್ಲಿಹ ಪ್ರೀತ್ಯ! (ಅ)
-ರಸದಾರಿಗೂ ಅಳಾವಡನು ಸತ್ಯ! (ಆ)
-ಲಿಸಿ ಗುರುಬೋಧೆಯಂತಿಹಗೆ ಭೃತ್ಯ! (ಅ)
-ರುನೋದಯದಾರತಿ ಕೊಳ್ಳುವ ನಿತ್ಯ! (ಆ)
ವಾಗಾರ ಕಣ್ಣಿಗೂ ಕಾಣದಿರ್ಪ ಕೃತ್ಯ!
ದಿಟ! ಅವನನುಗ್ರಹವತ್ಯಗತ್ಯ!
ತ್ಯಾಗೀ ನಿರಂಜನ ದಿಗಂಬರಾದಿತ್ಯ!!!

ದಿನ, ರಾತ್ರಿ ಕಳೆಯುತಿದೆ!   2(638)

ನಗಾತಂಕವಿಲ್ಲದಿದೆ!
ರಾಮಾತ್ಮಾರಾಮವಾಗಿ ಇದೆ!
ತ್ರಿಕಾಲವೆನಗೊಂದಾಗಿದೆ!
ರ್ಮ ಮಾಡಿ, ಮಾಡದಂತಿದೆ! (ಇ)
-ಳೆಯ ವಾಸನೆ ಇಲ್ಲದಿದೆ! (ಸಾ)
-ಯುವ ಭಯವಿಲ್ಲದಾಗಿದೆ!
ತಿರಿದುಂಬ ಕಾಟ ತಪ್ಪಿದೆ! (ಎ)
-ದೆ ನಿರಂಜನಾದಿತ್ಯಾಗಿದೆ!!!

ದಿನ, ರಾತ್ರಿ ಬೀದ್ಬೀದ್ಯಲೆದಿಂತಾಯ್ತು!   5(3200)

ಯನಾದಿಂದ್ರಿಯಕ್ಕಾಳಾಗಿಂತಾಯ್ತು!
ರಾವಣನ ಸೈನ್ಯಕ್ಕೆ ಸೇರಿಂತಾಯ್ತು!
ತ್ರಿನೇತ್ರನ ವರವೂ ವ್ಯರ್ಥವಾಯ್ತು!
ಬೀದಿ ನಾಯಿಯಂತೆ ಬೊಗಳಿಂತಾಯ್ತು! (ಸ)
-ದ್ಬೀಜ ಬಿತ್ತದೇ ಉಪವಾಸವಾಯ್ತು! (ವಂ)
-ದ್ಯನ ಮಂದಮತಿ ನಿಂದಿಸಿಂತಾಯ್ತು!
(ತ)ಲೆ ಮೇಲೆ ಬಂಡೆಯುರುಳಿದಂತಾಯ್ತು! (ಅ)
-ದಿಂದಿನ ಗತಿಯರಿವಿಲ್ಲದಾಯ್ತು!
ತಾನೇ ತಾನಾಗಿರುವ ಭಾಗ್ಯ ಹೋಯ್ತು! (ಆ)
-ಯ್ತು, ನಿರಂಜನಾದಿತ್ಯಾನಂದವಾಯ್ತು!!!

ದಿನ, ರಾತ್ರಿ ಬೊಗಳುತ್ತಿರುವ ಕಾಳ!   6(3961)

ಡು ರಾತ್ರಿಯಲ್ಲಿವನಾಟ ಬಹಳ!
ರಾಮ ಭಜನೆ ಅವನಿಗೀ ಬೊಗಳ!
ತ್ರಿದೋಷ ಪೀಡೆಯಿಂದವನು ನರಳ!
ಬೊಜ್ಜು ಕರಗಿಸಿಟ್ಟಿಹನು ಕರುಳ!
ತಿಗೆಡುವನವನೆದುರ್ದುರುಳ! (ಹಾ)
-ಳು, ಹರ್ಕಿಲ್ಲದಿವನಾಹಾರ ಸರಳ! (ಹ)
-ತ್ತಿರ ಹೋದರೆ ಕಚ್ಚುವನು ಬೆರಳ!
ರುಚಿಯಾಗಿ ತಿನ್ನುವನು ರೊಟ್ಟಿಗಳ!
ರ್ಷಕ್ಕೊಂದೆರಡು ಮಾಳ್ಪ ಸ್ನಾನಗಳ!
ಕಾಮಿನಿ, ಕಾಂಚನ ಮುಟ್ಟನವುಗಳ! (ಹೇ)
-ಳದಿರ ನಿರಂಜನಾದಿತ್ಯಗವ್ನಾಳ!!!

ದಿನ, ವಾರಗಳುರುಳುತಿವೆ ಮಿಂಚಿನಂತೆ!   6(4009)

ರರಿದನರಿಯದೇ ಮಾಳ್ಪರ್ಮಾಯಾ ಸಂತೆ!
ವಾರಿಜಮಿತ್ರನ ಸ್ಮರಣೆಯೇ ಇಲ್ಲದಂತೆ!
ಣಭೇರಿ ಹೊಡೆದಾಗೆದ್ದರೇನಾಗ್ವುದಂತೆ?
ಣರಾಜ್ಯ ಹೆಣರಾಜ್ಯವಾಗದಿರದಂತೆ! (ಕಾ)
-ಳು, ಕಡ್ಡಿ, ದವಸ, ಧಾನ್ಯ ಬೂದಿಯಾಗ್ವುದಂತೆ!
ರುಧಿರ, ಮಾಂಸದ ಹೊಳೆ ಹರಿಯುವುದಂತೆ! (ಕೇ)
-ಳುವವರಾರನ್ಯಾರೂ ಇಲ್ಲದಾಗುವರಂತೆ!
ತಿರೆಯ ಪಾಡು ಹೀಗಾದ್ಮೇಲೇನು ಗತಿಯಂತೆ? (ಧ)
-ವೆ ವಿಧವೆಯಾಗಿ ಮುಂಡೆಯಾಗ್ವ ಸ್ಥಿತಿಯಂತೆ!
ಮಿಂದ್ರೆ ಪಶ್ಚಾತ್ತಾಪಾಂಬುಧಿಯಲ್ಲಿ ಮೋಕ್ಷವಂತೆ!
ಚಿರಕಾಲವಿದು ನಿಜ ಸುಖವೀವುದಂತೆ!
ನಂಬಿಗೆಯಿಲ್ಲದವಗಿದೆಲ್ಲಾ ಮೆಂತೇ ಕಂತೆ! (ಸಂ)
-ತೆಗೂ ನಿರಂಜನಾದಿತ್ಯನಡ್ಡಿಯಿಲ್ಲವಂತೆ!!!

ದಿನಚರಿಗಡ್ಡಿ ಅನಾರೋಗ್ಯ! (ತಿ)   5(2975)

-ನದಿದ್ದರೆ ಕೆಟ್ಟಾಹಾನಾರೋಗ್ಯ! (ಪ)
-ಚನವಾಗದಿದ್ದರರಾರೋಗ್ಯ! (ಕ)
-ರಿದ ತಿಂಡಿ ತಿನ್ನದಿದ್ರಾರೋಗ್ಯ!
ಗೆಡ್ಡೆ, ಗೆಣಸು ಹಸಿ ಆರೋಗ್ಯ! (ಮ)
-ಡ್ಡಿ, ಮಾಂಸಾಹಾರಗಳನಾರೋಗ್ಯ!
ತಿ ಆಹಾರದಿಂದನಾರೋಗ್ಯ!
ನಾಮಜಪದಿಂದೆಲ್ಲಾ ಸೌಭಾಗ್ಯ!
ರೋಗಮುಕ್ತನಾಗ್ವುದಕ್ಕೂ ಯೋಗ್ಯ! (ಭಾ)
-ಗ್ಯ, ನಿರಂಜನಾದಿತ್ಯಾತ್ಮಾರೋಗ್ಯ!!!

ದಿನದಿನಕ್ಕೊಂದೊಂದು ಹೊಸ ರೋಗ! [ಧ]   4(2398)

-ನದಾಸೆಯೆಂಬುದೊಂದು ಮಹಾ ರೋಗ!
ದಿವ್ಯ ಜೀವನಕ್ಕೆ ವೈರಿಯಾ ರೋಗ! (ಮಾ)
-ನವಗೆ ಬೇಕೀಗ ವಿಷಯ ಭೋಗ! (ತ)
-ಕ್ಕೊಂಬ ಸಾಲ ಹೆಚ್ಚಾಗಿ ಮನೋರೋಗ!
ದೊಂಬಿ, ದರೋಡೆಗೆ ಕಾರಣಾ ರೋಗ!
ದುರ್ಬುದ್ಧಿಯಿಂದಾಗ್ವುದು ದುಷ್ಟಯೋಗ!
ಹೊಸ ಹೊಸಾಸೆಯಿಂದಾಪ್ತ ವಿಯೋಗ!
ಚ್ಚಿದಾನಂದಕ್ಕಾಗೈಹಿಕ ತ್ಯಾಗ!
ರೋಗ ಮುಕ್ತನಾದವ ಮಹಾ ಭಾಗ! (ರೋ)
-ಗ, ನಿರಂಜನಾದಿತ್ಯನಿಲ್ಲದಾಗ!!!

ದಿಲ್ಲಿಗೇಕೋಡುವೆ ನೀನಾಗಿ? (ಇ)   4(1788)

-ಲ್ಲಿನದ್ದು ನೋಡಿಕೋ ನಾನಾಗಿ!
ಗೇಯ್ಬೇಕಹೋರಾತ್ರಿ ನಾನಾಗಿ!
ಕೋಟೆ ಭದ್ರ ಮಾಡು ನಾನಾಗಿ! (ದು)
-ಡುಕಬಾರದೀಗ ನೀನಾಗಿ! (ನೋ)
-ವೆನಗಿಲ್ಲೆನ್ನೀಗ ನಾನಾಗಿ!
ನೀಡೆಲ್ಲರಿಗನ್ನ ನಾನಾಗಿ!
ನಾಸ್ತಿಕನಲ್ಲ ನೀ ನಾನಾಗಿ! (ಯೋ)
-ಗಿ, ನಿರಂಜನಾದಿತ್ಯಾನಾಗಿ!!!

ದಿವ್ಯ ಚಿತ್ತಕ್ಕೆ ಎಲ್ಲಾ ಸಾಧ್ಯ, ವೇದ್ಯ! (ಅ)   3(1035)

-ವ್ಯವಸ್ಥೆಯಿಲ್ಲದದಕ್ಕೆಲ್ಲಾ ಸಾಧ್ಯ!
ಚಿದಾಕಾಶ ಸೂರ್ಯನಿಗೆಲ್ಲಾ ವೇದ್ಯ! (ಬೆ)
-ತ್ತಲೆ ನಿಲಿಸಲವನಿಗೇ ಸಾಧ್ಯ! (ಹ)
-ಕ್ಕೆನಗಿಹುದೆಂಬುದವಗೇ ವೇದ್ಯ
ಡರಡಗಿಪುದವಗೇ ಸಾಧ್ಯ! (ಎ)
-ಲ್ಲಾರಿರ ಬೇಕೆಂಬುದವಗೇ ವೇದ್ಯ!
ಸಾಕಾರ, ನಿರಾಕಾರವಗೇ ಸಾಧ್ಯ! (ದ)
-ಧ್ಯಲ್ಲಿಹ ನವನೀತವಗೇ ವೇದ್ಯ!
ವೇಳ ವೇಳೆಯರಿತವಗೇ ಸಾಧ್ಯ! (ಪಾ)
-ದ್ಯ, ನಿರಂಜನಾದಿತ್ಯಗೆ ನೈವೇದ್ಯ!!!

ದಿವ್ಯ ನಾಮ ಭಜನಾನಂದ! (ಸೇ)   4(1459)

ವ್ಯ ಶ್ರೀನಿವಾಸ ನಿತ್ಯಾನಂದ!
ನಾಮ, ನಾಮಿ ಅಭೇದಾನಂದ!
ಧುರಭಾವ ರಾಧಾನಂದ!
ಕ್ತ ಮಾರುತಿ ರಾಮಾನಂದ!
ನ್ಮವಿದೂರ ಬ್ರಹ್ಮಾನಂದ!
ನಾಮದೇವ ವಿಠ್ಠಲಾನಂದ!
ನಂದಕಂದ ಗೋವಿಂದಾನಂದ! (ಕಂ)
-ದ ನಿರಂಜನಾದಿತ್ಯಾನಂದ!!!

ದಿವ್ಯಜ್ಞಾನದೃಷ್ಟಿಯಿಂದ ನೋಡು!   1(225)

ವ್ಯಸನದೀ ದೃಷ್ಟಿ ಸಾಕು ಮಾಡು!
ಜ್ಞಾನಾಜ್ಞಾನ ನಾಶದಿಂದ ನೋಡು!
ಶಿಸುವಾಸೆಯ ಸಾಕು ಮಾಡು!
ದೃಷ್ಟಿಯಿದೇ ಜ್ಞಾನದೀಕ್ಷೆ ನೋಡು! (ಪು)
-ಷ್ಟಿಯಹುದೈಹಿಕ ಸಾಕು ಮಾಡು!
ಯಿಂಬಿದರಿಂದೆಲ್ಲಹುದು ನೋಡು!
ರ್ಶನ ಸ್ಥೂಲದಿ ಸಾಕು ಮಾಡು!
ನೋಡಿಯೋಡ್ವುದೇನು ಸುಖ ನೋಡು! (ಕೂ)
-ಡು! ನಿರಂಜನಾದಿತ್ಯನಂತಾಡು!!!

ದೀನ ದಾಸನೆಂದರಾಯ್ತೇನು? (ನೀ)   4(2153)

-ನವನಾಜ್ಞೆ ಪಾಲಿಸಿದ್ಯೇನು?
ದಾತ, ನಾಥಾತನಾಗಿಹನು!
ದಾ ನಿನ್ನ ಕಾಯುತಿಹನು!
ನೆಂಟ, ಭಂಟ ತಾನಾಗಿಹನು! (ಮ)
-ದದಿಂ ಜೀವ ಮರೆತಿಹನು! (ದು)
-ರಾಗ್ರಹದಿಂದ ಕೆಟ್ಟಿಹನು! (ಆ)
-ಯ್ತೇನವನರಿವೀಗಾಯ್ತೇನು? (ಭಾ)
-ನು, ನಿರಂಜನಾದಿತ್ಯವನು!!!

ದೀನರ ಮೇಲೆ ವಿಶ್ವಾಸವಿರಲಿ   1(85)

ನ್ನ ಧ್ಯಾನ ಮಿಂಚಿನಂತಿರಲಿ!
ನ್ನವಿದ ಕಾಪಾಡಿಕೊಳಲಿ!
ಮೇಲಿನ ಭಾರವನಿಗಿರಲಿ!
ಲೆಃಖಾಚಾರ ಶುದ್ಧವಾಗಿರಲಿ!
ವಿರಾಮ ನಾಮಕ್ಕಿರದಿರಲಿ!
ಶ್ವಾಸೋಚ್ಛ್ವಾಸದಲಿ ತುಂಬಿರಲಿ!
ದಾನಂದನುಭವವಾಗಲಿ!
ವಿಶ್ವಾಸ ಫಲ ಅರಿವಾಗಲಿ!
ವಿ ಕಿರಣ ತುಂಬುತಿರಲಿ!
ಲಿಪಿ ನಿರಂಜನಗಾಗಿರಲಿ!!!

ದೀಪ ಹೋಯಿತು, ಕತ್ತಲೆ ಕವಿಯಿತು!   4(2267)

ಥ ಕಾಣದೆ ಕಳವಳವಾಯಿತು!
ಹೋಗಲೆತ್ನಿಸಿದ ಊರು ದೂರಾಯಿತು! (ಬಾ)
-ಯಿಮುಚ್ಚಿ ಧ್ಯಾನಿಸಲಿಚ್ಛೆಯುಂಟಾಯಿತು!
ತುಸ ಸಮಯದಲ್ಲಿ ಬೆಳಕಾಯಿತು!
ರ್ಮಕ್ಕೆ ತಕ್ಕ ಫಲ ಪ್ರಾಪ್ತಿಯಾಯಿತು! (ಅ)
-ತ್ತ ಕಣ್ಣುಗಳ ಉರಿ ಶಾಂತವಾಯಿತು! (ತ)
-ಲೆಯ ಭಾರ ಕೆಳಗಿಳಿದಂತಾಯಿತು! (ಲೋ)
-ಕನಾಥದಲ್ಲಿ ನಂಬಿಗೆ ಹೆಚ್ಚಾಯಿತು!
ವಿರೋಧ ಭಾವ ಮಾಯವಾಗಿ ಹೋಯಿತು! (ಬಾ)
-ಯಿ ಬಡಾಯಿಗೆ ಜಾಗವಿಲ್ಲದಾಯಿತು! (ಹೇ)
-ತು ನಿರಂಜನಾದಿತ್ಯನೆಂಬರಿವಾಯ್ತು!!!

ದೀಪಾರಾಧನೆಯಾಗುತಿದೆ ಬನ್ನಿ!   4(1939)

ಪಾದಪೂಜಾ ಸಾಮಗ್ರಿಗಳ ತನ್ನಿ!
ರಾಧಾರಮಣ ಜಯಗೋವಿಂದೆನ್ನಿ!
ರ್ಮಕರ್ಮವಿದೆಂದರಿತು ಅನ್ನಿ!
ನೆರೆ ಭಕ್ತಿಯಿಂದ ಹಾಡುತ್ತ ಬನ್ನಿ!
ಯಾತ್ರೆ ಸಾರ್ಥಕವಾಗಬೇಕೆಂದನ್ನಿ!
ಗುರುವಾಯೂರಪ್ಪನೇ ಗತಿಯೆನ್ನಿ!
ತಿರಿತಿರಿಗಿ ಮೊರೆಯಿಡುತ್ತನ್ನಿ! (ತಂ)
-ದೆ, ತಾಯಿ, ಬಂಧು, ಬಳಗ ನೀನೆನ್ನಿ!
ರಡು ಮಾಡಬೇಡ ಬಾಳನ್ನೆನ್ನಿ! (ಬ)
-ನ್ನಿ, ನಿರಂಜನಾದಿತ್ಯ ಕೃಷ್ಣನೆನ್ನಿ!!!

ದುಂಡು ಮಲ್ಲಿಗೆ ಮಾಲೆ ಮಾರ್ತಾಂಡನಿಗೆ! [ಗಂ]   3(1211)

-ಡು ಹೆಣ್ಣೊಂದಾದಾ ಭೂಮಂಡಲೇಶ್ವರಗೆ!
ದನವೈರಿ ಮಹಾ ಮಾಯಾಧವಗೆ! (ಅ)
-ಲ್ಲಿಲ್ಲೆಲ್ಲೆಲ್ಲಿರುವಾ ಮಲ್ಲಿಕಾರ್ಜುನಗೆ! (ಹ)
-ಗೆ ಬಗೆ ಬಗಿವಾ ಬಸವೇಶ್ವರಗೆ! (ಉ)
-ಮಾರಮಣ ಗುರು ಪರಮೇಶ್ವರಗೆ! (ತ)
-ಲೆಯ ಮೇಲ್ಲಂಗೆಯ ಧರಿಸಿರ್ಪವಗೆ! (ನಾ)
-ಮಾಮೃತ ಪಾನಾನಂದಾ ನಂದೀಶ್ವರಗೆ! (ಆ)
-ರ್ತಾಂತರಂಗಾಪ್ತ ರಕ್ಷಕಾತ್ರೇಯನಿಗೆ! (ಮೃ)
-ಡನಾಪ್ತ ಪುತ್ರ ಕಾರ್ತಿಕೇಯಾತ್ಮನಿಗೆ!
ನಿತ್ಯ ಸತ್ಯ ಸಚ್ಚಿದಾನಂದಾತ್ಮನಿಗೆ!
ಗೆಳೆಯ ಶ್ರೀ ನಿರಂಜನಾದಿತ್ಯನಿಗೆ!!!

ದುಃಖ ನಿವಾರಣೆಯಾಗುವುದೆಂದೆಲ್ಲಿ?   5(2776)

ಗವಾಹನನಾಗಿ ಬಂದು ನಿಂದಲ್ಲಿ!
ನಿರಂಜನ ನೀನೆಂಬಾಶೀರ್ವಾದಾದಲ್ಲಿ!
ವಾಙ್ಮಾಧುರ್ಯದಿಂದ ತೃಪ್ತಿಯಿತ್ತಂದಿಲ್ಲಿ!
ವಿ ಚರಿತ್ರೆ ಸತ್ಯವೆಂದರಿತಲ್ಲಿ! (ಹೊ)
-ಣೆಗಾರ ತಾನೆಂದಾತ ಧೈರ್ಯ ಕೊಟ್ಟಲ್ಲಿ!
ಯಾರೇನೆಂದರೂ ಭಕ್ತಿ ಕೆಡದಿದ್ದಲ್ಲಿ!
ಗುರುಸೇವೆ ಮಾಡಿ ದಣಿಯದಿದ್ದಲ್ಲಿ! (ಯಾ)
-ವುದರಾಸೆಯೂ ಇಲ್ಲಿದಾದಂದೆಲ್ಲೆಲ್ಲಿ! (ಎಂ)
-ದೆಂದೂ ಹಿಂದೂ ಹಿಂದೂ ಧರ್ಮ ವಿರಾಜಿಸುವಲ್ಲಿ! (ತಂ)
-ದೆ, ತಾಯಿ ಲೋಕಕ್ಕೊಬ್ಬನೆಂದರಿತಲ್ಲಿ! (ಎ)
-ಲ್ಲಿ? ನಿರಂಜನಾದಿತ್ಯನೊಲಿದಂದಿಲ್ಲಿ!!!

ದುಃಖಮಯವಿದೆಲ್ಲಾ ಜಗತ್ತು! (ಮು)   5(2962)

-ಖ ಗೋಮುಖವ್ಯಾಘ್ರವೆಂದು ಗೊತ್ತು!
ಲಿನ ವಾಸನೆಯಿಂದಾಪತ್ತು! (ಕಾ)
-ಯಕ್ಕಿರಬೇಕಾರೋಗ್ಯ ಸಂಪತ್ತು!
ವಿಧಿಗೂ ಇಲ್ಲ ಸದಾ ತಾಕತ್ತು! (ತಂ)
-ದೆಯ ಮರೆತರೆಲ್ಲಾ ವಿಪತ್ತು! (ಎ)
-ಲ್ಲಾಕಳೂ ಗೋಪಾಲನದ್ದಾವತ್ತೂ!
ನ್ಮವಿತ್ತಮೇಲ್ಕೊಡ್ಬೇಕ್ಸವ್ಲತ್ತು!
ಣರಾಜ್ಯದಲ್ಲಿಲ್ಲಾ ಮಹತ್ತು! (ಎ)
-ತ್ತು, ನಿರಂಜನಾದಿತ್ಯಾ! ಮೇಲೆತ್ತು!!!

ದುಡಿಯುವವನು ಗೊಲ್ಲ!   6(3511)

(ದು)-ಡಿಯುವವ ಹಾಲ ಮಲ್ಲ!
ಯುಗ, ಯುಗದಿಂದಿದೆಲ್ಲಾ!
ರ್ತನೆ ದೇಶದಲ್ಲೆಲ್ಲಾ!
ರ್ಣ ಭೇದವಿದಕ್ಕಿಲ್ಲ!
(ಅ)-ನುಭವಿಸ್ಲಾನಂದವೆಲ್ಲಾ!
ಗೊಲ್ಲ, ಮಲ್ಲ, ಭೇದ ಸಲ್ಲ!
(ಬ)-ಲ್ಲ ನಿರಂಜನಾದಿತ್ಯೆಲ್ಲಾ!!!

ದುಡುಕಬೇಡಿ ತಡಕಿ ನೋಡಿ! (ಕು)   3(1056)

-ಡುಕರೊಡಗೂಡ್ಯೋಡಾಡ ಬೇಡಿ!
ಬಳಕ್ಕಾಗಿ ಸುಳ್ಳಾಡ ಬೇಡಿ!
ಬೇನೆ ಸಹಿಸಿ ಹರಿಯ ನೋಡಿ! (ಕಾ)
-ಡಿ, ಬೇಡಿ, ಕಾಲ ಕಳೆಯಬೇಡಿ!
ತ್ವಾರ್ಥ ಚಿಂತಿಸದಿರಬೇಡಿ! (ಮೃ)
-ಡ ನಡಿಯನ್ನು ನೆನೆದು ನೋಡಿ!
ಕಿವಿ, ಬಾಯ್ಕಾಣ್ಣು ತೆರೆಯಬೇಡಿ!
ನೋಡಿ ಸುಮ್ಮಗೆ ಕೂತಿರಬೇಡಿ! (ಕೂ)
-ಡಿ, ನಿರಂಜನಾದಿತ್ಯನ ನೋಡಿ!!!

ದುಡ್ಡಿದ್ದ್ರೆ ಬೇಡ್ದಿದ್ದದ್ದೂ ಬೇಕು! (ದ)   6(3782)

-ಡ್ಡಿರ್ದಿದ್ರೆ ಬೇಕಾದದ್ದೂ ಸಾಕು! (ಎ)
-ದ್ದ್ರೆ, ಬಿದ್ದ್ರೆ, ಸದ್ದಿಲ್ಲದಿರ್ಬೇಕು!
ಬೇರಾರನ್ನೂ ದೂರದಿರ್ಬೇಕು! (ಮಾ)
-ಡ್ದಿದ್ದದ್ದು ಮಾಡ್ದೆನದಿರ್ಬೇಕು! (ಇ)
-ದ್ದದ್ರಲ್ಲಿ ತೃಪ್ತನಾಗಿರ್ಬೇಕು! (ಇ)
-ದ್ದೂ ಇಲ್ಲದಂತೆ ಬದುಕ್ಬೇಕು!
ಬೇಲಿ ತೋಟಕ್ಕೆ ಬೇಕೇಬೇಕು! (ಬೇ)
-ಕು ನಿರಂಜನಾದಿತ್ಯಾಗ್ಬೇಕು!!!

ದುಡ್ಡು ಕಾಸಿಗೆ ಹೆಂಡತಿ ಮಕ್ಕಳು! (ಜ)   4(1784)

-ಡ್ಡು ಹಿಡಿದಾಗಾಸ್ಪತ್ರೆ ಜನಗಳು!
ಕಾಪಿ, ತಿಂಡಿಗೆ ಹೆಂಡತಿ ಮಕ್ಕಳು! (ಹ)
-ಸಿದು ಕಂಗೆಟ್ಟಾಗನ್ಯ ಜನಗಳು! (ಹೊ)
-ಗೆಯಡಗಿದಾಗ ಹೆಂಡ್ತಿ, ಮಕ್ಕಳು!
ಹೆಂಚು ಸಿಡಿದಾಗನ್ಯ ಜನಗಳು! (ನಾ)
-ಡಗೌಡನಾದಾಗ ಹೆಂಡ್ತಿ, ಮಕ್ಕಳು!
ತಿರುಕನಾದಾಗನ್ಯ ಜನಗಳು!
ನೆ, ಮಠಕ್ಕೆ ಹೆಂಡತಿ ಮಕ್ಕಳು! (ಹ)
-ಕ್ಕವಗಿಲ್ಲದಾಗನ್ಯ ಜನಗಳು! (ಗೋ)
-ಳು, ನಿರಂಜನಾದಿತ್ಯಗುಂಟೇ ಹೇಳು!!!

ದುಡ್ಡು ಕೊಟ್ಟು ಗೊಡ್ಡೆಮ್ಮೆ ತರುವುದೇನಯ್ಯಾ? (ಜ)   4(2121)

-ಡ್ಡು ಹಿಡಿದವ್ಗೆ ಮಗಳ ಕೊಡ್ವುದೇನಯ್ಯಾ?
ಕೊಲೆಗೆಡುಕಗಾಶ್ರಯ ನೀಡ್ವುದೇನಯ್ಯಾ? (ಹೊ)
-ಟ್ಟು ಬೆರೆಸಿದಕ್ಕಿ ಮಾರಬಹುದೇನಯ್ಯಾ?
ಗೊಬ್ಬರ ಹಾಕದೇ ಅದೆಂಥಾ ಬೇಸಾಯಯ್ಯಾ? (ಗೆ)
-ಡ್ಡೆ, ಗೆಣಸು ಗುಡ್ಡದ ಮೇಲಾದೀತೇನಯ್ಯಾ? (ಹೆ)
-ಮ್ಮೆಯಿಂದ ಕಾರ್ಯ ಸಾಧನೆಯಾದೀತೇನಯ್ಯಾ?
ಪಸ್ವಿಯ ತಾತ್ಸಾರ ಮಾಡಬಾರದಯ್ಯಾ! (ಗು)
-ರುವಚನಕ್ಕಿನ್ನಾದರೂ ಬೆಲೆ ಕೊಡಯ್ಯಾ! (ಬೇ)
-ವು ಬಿತ್ತಿ ಮಾವಿನಹಣ್ಣಿನಾಸಿ ಬೇಡಯ್ಯಾ!
ದೇವರ ಸೇವೆಗುದಾಸೀನ ಮಾಡ್ಬೇಡಯ್ಯಾ! (ಕ)
-ನಸಿನ ಗಂಟನ್ನು ನಂಬಿ ಕೆಡಬೇಡಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನ ನಂಬಿ ಬಾಳಯ್ಯಾ!!!

ದುರಭಿಮಾನವಿಟ್ಟು ಕೆಟ್ಟೆ! (ಪ)   2(874)

-ರಮಾತ್ಮ ಧ್ಯಾನಬಿಟ್ಟು ಕೆಟ್ಟೆ! [ಅ]
-ಭಿಲಾಷೆಗೆಡೆಗೊಟ್ಟು ಕೆಟ್ಟೆ!
ಮಾಯಾಂಬರವನುಟ್ಟು ಕೆಟ್ಟೆ!
ಶ್ವರಕಾಸೆಪಟ್ಟು ಕೆಟ್ಟೆ!
ವಿವೇಕ ಬದಿಗಿಟ್ಟು ಕೆಟ್ಟೆ! (ಹು)
-ಟ್ಟು ಸಾವಿನೂಟ ಅಟ್ಟು ಕೆಟ್ಟೆ!
ಕೆಚ್ಚೆದೆಯನ್ನು ಸುಟ್ಟು ಕೆಟ್ಟೆ! (ಬ)
-ಟ್ಟೆ, ನಿರಂಜನಾದಿತ್ಯ ನಿಷ್ಠೆ!!!

ದುರಭ್ಯಾಸ ಬಿಡುವುದಾದ್ಯ ಕರ್ತವ್ಯ! (ವ)   4(2487)

-ರಗುರುವಿನಾಜ್ಞಾಪಾಲನೆ ಕರ್ತವ್ಯ! (ಸ)
-ಭ್ಯಾತ್ಮನಾಗುವುದು ಮಾನವ ಕರ್ತವ್ಯ!
ದಾತ್ಮಧ್ಯಾನ ಸಾಧಕನ ಕರ್ತವ್ಯ!
ಬಿಡದಿರುವುದು ಸತ್ಸಂಗ ಕರ್ತವ್ಯ! (ಬಿ)
-ಡುವುದು ದುಸ್ಸಂಗವೆಲ್ಲರ ಕರ್ತವ್ಯ! (ಆ)
-ವುದೂ ಪ್ರಸಾದವೆನ್ನುವುದು ಕರ್ತವ್ಯ!
ದಾತ ದತ್ತನೆಂದರಿವುದು ಕರ್ತವ್ಯ! (ಗ)
-ದ್ಯ, ಪದ್ಯದಿಂದ ಪ್ರಾರ್ಥಿಸುವುದು ಕರ್ತವ್ಯ!
ಲ್ಮಷದೂರನಾಗುವುದು ಕರ್ತವ್ಯ! (ಆ)
-ರ್ತರಿಗೆ ನೆರವಾಗುವುದು ಕರ್ತವ್ಯ! (ಸು)
-ವ್ಯವಸ್ಥೆ ನಿರಂಜನಾದಿತ್ಯ ಕರ್ತವ್ಯ!!!

ದುರಭ್ಯಾಸವಿಲ್ಲದವನಾಗು! (ಪ)   5(3035)

-ರ ಸತಿಗಾಶಿಸದವನಾಗು! (ಅ)
-ಭ್ಯಾಗತರಿಷ್ಟಕ್ಕೆ ನೆರವಾಗು!
ಜ್ಜನ ಶಿರೋಮಣಿ ನೀನಾಗು!
ವಿನಾಶಿ ಸಿಗ್ರೇಟ್ವಿರೋಧಿಯಾಗು! (ಎ)
-ಲ್ಲರ ಮನ್ನಣೆಗೆ ಪಾತ್ರನಾಗು!
ಲಿತ ದೀನರಿಗಾಪ್ತನಾಗು!
ರ ಗುರುದತ್ತ ಭಕ್ತನಾಗು!
ನಾಮಸ್ಮರಣಾಸಕ್ತ ನೀನಾಗು! (ಆ)
-ಸಲ ನಿರಂಜನಾದಿತ್ಯನಂತಾಗು!!!

ದುರುದ್ದೇಶದ ತಪಕ್ಕೂ ವರವಿತ್ತೆ! (ಗು)   5(3216)

-ರು ಭಕ್ತನ ತಪಕ್ಕೇಕೆ ವ್ಯಥೆಯಿತ್ತೆ? (ಉ)
-ದ್ದೇಶ ಶುದ್ಧವಿಹುದೆಂದು ಕರೆಯಿತ್ತೆ!
ಮ ದಮಾಭ್ಯಾಸಿಯಾಗಿಹೆನೆಂದತ್ತೆ!
ಯಾನಿಧಿ ನೀನೇ ಗತಿಯೆಂದೆ ಮತ್ತೆ!
ರುಣಿ ಭೂದೇವಿಯನ್ನಂದು ನೀ ಹೊತ್ತೆ!
ರಮ ಪದವಿಯ ದ್ರವನಿಗಿತ್ತೆ!
(ಹ)ಕ್ಕೂರೂರಲ್ಲುಳುವವರ್ಗೀಗ ನೀನಿತ್ತೆ!
ರದ ನಾಮಾನ್ವರ್ಥ ನೀ ಮಾಡೀ ಹೊತ್ತೆ!
ಕ್ಕಸರಿರ್ಬಾರ್ದೆನ್ನುತಿದೆ ಜಗತ್ತೇ!
ವಿಶ್ವನಾಥ ನೀನಾಗಿರಲು ವಿಪತ್ತೇ? (ಇ)
-ತ್ತೆ, ನಿರಂಜನಾದಿತ್ಯಾನಂದವೀಗಿತ್ತೆ!!!

ದುರ್ಬುದ್ಧಿಗಳನೆಲ್ಲಾ ಬಿಡಿಸೋ! (ಪೆ)   5(2822)

-ರ್ಬುಲಿಗಳವನ್ನು ಸಂಹರಿಸೋ!
(ಶು)ದ್ಧಿಮಾಡಿ ಸದ್ದಡಗಿಸಿರಿಸೋ!
ಡಿಗೆನೈವೇದ್ಯಕ್ಕಾಗಿರಿಸೋ! (ಕ)
-ಳಕಳಿಯ ಪ್ರಾರ್ಥನೆ ಸಲಿಸೋ!
ನೆರಳನಿತ್ತು ತಂಪಾಗಿರಿಸೋ! (ಉ)
-ಲ್ಲಾಸವಿತ್ತೆನ್ನನ್ನೀಗ ಹರಸೋ!
ಬಿದಿಯ ಬರಹವನಳಿಸೋ! (ಕೂ)
-ಡಿಯಾಡುವ ಭಾಗ್ಯ ಕರುಣಿಸೋ! (ಗೈ)
-ಸೋ, ನಿರಂಜನಾದಿತ್ಯನಾಗಿರಿಸೋ!!!

ದುರ್ಬುದ್ಧಿಗಳನ್ನೆಲ್ಲಾ ಬಿಡಿಸೋ! (ಪೆ)   5(2678)

-ರ್ಬುಲಿ ಕಾಮನನ್ನು ಸಂಹರಿಸೋ! (ಸಿ)
-ದ್ಧಿ, ರಿದ್ಧಿಗಳಾಸೆ ಪೋಗೊಳಿಸೋ! (ಸಂ)
-ಗ ಸಜ್ಜನರದ್ದೇ ಒದಗಿಸೋ! (ಬಾ)
-ಳ ಸಾರ್ಥಕಗೊಳಿಸಿ ಹರಸೋ!
ನೆನಪು ಸದಾ ನಿನ್ನದಿರಿಸೋ! (ಚೆ)
-ಲ್ಲಾಟ ಮನಸ್ಸಿನದ್ದು ನಿಲ್ಲಸೋ! (ಕಂ)
-ಬಿ ಕಿತ್ತುಹೋಗ್ವ ಮುನ್ನ ಬಾರಿಸೋ! (ಹಾ)
-ಡಿ ನಿನ್ನ ಸೇರ್ವಂತನುಗ್ರಹಿಸೋ! (ಲೇ)
-ಸೋ, ನಿರಂಜನಾದಿತ್ಯಾಂಘ್ರಿ ಮೂಸೋ!!!

ದುರ್ಬುದ್ಧಿಯ ಉಚ್ಚಾಟನೆಯಾಗಬೇಕು! (ಜ)   4(1484)

-ರ್ಬುವಭ್ಯಾಸ ಹುಟ್ಟಡಗಿ ಹೋಗಬೇಕು! (ಸಿ)
-ದ್ಧಿಗಿದತ್ಯಾವಶ್ಯಕವಾಗಿರಬೇಕು! (ಭ)
-ಯ, ಭ್ರಾಂತಿಗಳೆಲ್ಲಾ ನಾಶವಾಗಬೇಕು!
ತ್ತಮ ಸಂಗ ಸತತವಿರಬೇಕು! (ಹು)
-ಚ್ಚಾಟ, ಕಚ್ಚಾಟಗಳಿಲ್ಲದಿರಬೇಕು! (ಆ)
-ಟ, ಪಾಠ, ಕ್ರಮಬದ್ಧವಾಗಿರಬೇಕು!
ನೆರವಿದಕೆ ಸದ್ಗುರುವಾಗಬೇಕು! (ಕಾ)
ಯಾ, ವಾಚಾ, ಮನಸಾ ಸೇವೆ ಸಾಗಬೇಕು!
ರ್ವ ಬಿಟ್ಟವನಾಜ್ಞೆ ಪಾಲಿಸಬೇಕು!
ಬೇಡದೇ ಸಿಕ್ಕಿದ್ದಕ್ಕಾನಂದಿಸಬೇಕು! (ಬೇ)
-ಕು, ನಿರಂಜನಾದಿತ್ಯಾನಂದಾಗಬೇಕು!!!

ದುರ್ಭಾವಾಭಾವ ಪ್ರಭಾವಯ್ಯಾ! (ನಿ)   2(696)

-ರ್ಭಾಗ್ಯ ಪರಮಾತ್ಮನಲ್ಲಯ್ಯಾ! (ಆ)
-ವಾಗಲೂ ನಿರ್ವಿಕಾರನಯ್ಯಾ!
ಭಾವನಾತೀತನವನಯ್ಯಾ!
ನವಾಸ ದುಃಖವಿಲ್ಲಯ್ಯಾ!
ಪ್ರಭಾವ ಪ್ರದರ್ಶಿಸನಯ್ಯಾ!
ಭಾನುದೇವನಾದರ್ಶವಯ್ಯಾ!
ರ ಧರ್ಮ ಕರ್ಮದಿರ್ಪಯ್ಯಾ! (ಅ)
-ಯ್ಯಾತ ನಿರಂಜನಾದಿತ್ಯನಯ್ಯಾ!!!

ದುರ್ಮದ ಮರ್ದನಕ್ಕೆ ಜಗದ್ಗುರು ಸಹಾಯ! (ಕೂ)   5(2758)

-ರ್ಮನಂತಿರುವುದಕ್ಕೆ ಜಗದ್ಗುರು ಸಹಾಯ!
ಮೆ, ಶಮಾಭ್ಯಾಸಕ್ಕೆ ಜಗದ್ಗುರು ಸಹಾಯ!
ನಶ್ಯಾಂತಿ ಲಾಭಕ್ಕೆ ಜಗದ್ಗುರು ಸಹಾಯ! (ದು)
-ರ್ದಶಾ ಪರಿಹಾರಕ್ಕೆ ಜಗದ್ಗುರು ಸಹಾಯ!
ರಜನ್ಮೋದ್ಧಾರಕ್ಕೆ ಜಗದ್ಗುರು ಸಹಾಯ! (ಬೆ)
-ಕ್ಕೆ ರೆಕ್ಕೆ ಕೀಳ್ವುದಕ್ಕೆ ಜಗದ್ಗುರು ಸಹಾಯ!
ರಾ, ಜನ್ಮ ದೂರಕ್ಕೆ ಜಗದ್ಗುರು ಸಹಾಯ!
ಗನ ಸದೃಶಕ್ಕೆ ಜಗದ್ಗುರು ಸಹಾಯ! (ಸ)
-ದ್ಗುರುಕೃಪಾ ಪಾತ್ರಕ್ಕೆ ಜಗದ್ಗುರು ಸಹಾಯ! (ದು)
-ರುದ್ದೇಶ ವಿನಾಶಕ್ಕೆ ಜಗದ್ಗುರು ಸಹಾಯ!
ಗುಣ ನಿರ್ಗುಣಕ್ಕೆ ಜಗದ್ಗುರು ಸಹಾಯ!
ಹಾಸು ಹೊಕ್ಕಾದಾತ್ಮಕ್ಕೆ ಜಗದ್ಗುರು ಸಹಾಯ! (ಜ್ಞೇ)
-ಯ ನಿರಂಜನಾದಿತ್ಯಾನಂದಾಗಲೀ ಸಹಾಯ!

ದುಶ್ಚಲಕ್ಕೆ ಫಲ ದುರ್ಬಲ! (ನಿ)   5(2879)

-ಶ್ಚಲದಚಲಕ್ಕಾತ್ಮ ಬಲ!
ಕ್ಷ್ಯ ಮರೆತು ಕೋಲಾಹಲ! (ಧ)
-ಕ್ಕೆ ಜೀವನಕ್ಕಾ ಹಾಲಾಹಲ!
ಲಾಶಾತೀತನೇ ವಿಮಲ!
ಯ ಸೂರ್ಯನಲ್ಲಾ ಕಮಲ!
ದುರಹಂಕಾರ ಘೋರ ಮಲ! (ಮಾ)
-ರ್ಬಲ, ತೋಳ್ಬಲವೆಲ್ಲಾ ಮಲ! (ಬಾ)
-ಲ ನಿರಂಜನಾದಿತ್ಯಮಲ!!!

ದುಷ್ಟ ಸಂಹಾರವಾಗಲಿ! (ಇ)   4(1444)

-ಷ್ಟ ಸೇವೆ ಸಾಗುತ್ತಿರಲಿ!
ಸಂಮೋಹವಿಲ್ಲದಾಗಲಿ! (ಸ)
-ಹಾಯ ಅನ್ಯೋನ್ಯ ಇರಲಿ! (ಪ)
-ರನಿಂದೆಯಾಗದಿರಲಿ! (ಭ)
-ವಾಬ್ಧಿಯಿಂದ ಪಾರಾಗಲಿ! (ರಂ)
-ಗನಾಥ ಕೃಪೆ ಮಾಡಲಿ! (ಶೂ)
-ಲಿ ನಿರಂಜನಾದಿತ್ಯಾಗ್ಲಿ!!!

ದುಷ್ಟ ಸಹವಾಸವಿನ್ನೂ ಪಪ್ಪಿಸಿಲ್ಲೇಕೆ ಗುರುವೇ? (ಅ)   6(4282)

-ಷ್ಟ ಮದಗಳ ಕಾಟ ಸಹಿಸದಿಹಹೆನು ಗುರುವೇ!
ತತ ನಿನ್ನ ನಾಮಸ್ಮರಣೆ ಬಿಟ್ಟಿಲ್ಲ ಗುರುವೇ!
ರಿ, ಹರ, ಬ್ರಹ್ಮಾದಿಗಳೆಲ್ಲರೂ ನೀನೇ ಗುರುವೇ!
ವಾದ, ಭೇದ ಬುದ್ಧಿಯುಳ್ಳವ ನಾನೇನಲ್ಲ ಗುರುವೇ!
ರ್ವಸ್ವವೆನಗೆ ನೀನೆಂದು ನಂಬಿಹೆನು ಗುರುವೇ!
ವಿಕಲ್ಪ, ಸಂಕಲ್ಪ ನನ್ನಲ್ಲೇನಿದೆ ಹೇಳು? ಗುರುವೇ! (ನಿ)
-ನ್ನೊಳಿಗದಲ್ಲೇ ಕಾಲ ಕಳೆಯುತ್ತಿಹೆನು ಗುರುವೇ!
ಪ್ಪುಗಳೇನಿದ್ದರೂ ಕ್ಷಮಿಸೆಲ್ಲವನು ಗುರುವೇ! (ಒ)
-ಪ್ಪಿ ಮಾತೆನ್ನದನ್ನು ಅಪ್ಪಿಕೊಳ್ಳೆನ್ನನ್ನು ಗುರುವೇ!
ಸಿಟ್ಟುಮಾಡಿದರೆ ನೀನು, ಸುಟ್ಟು ಹೋದೇನು ಗುರುವೇ! (ಕ)
-ಲ್ಲೇತಕ್ಕಾಯಿತು ನಿನ್ನ ಕೋಮಲ ಹೃದಯ ಗುರುವೇ!
ಕೆಟ್ಟುಹೋಗುವುದು ನಾನು ನಿನಗಿಷ್ಟವೇ ಗುರುವೇ!
ಗುಣಗ್ರಾಹಿಯಾಗೀಗೆ ನನ್ನುದ್ಧಾರಮಾಡು ಗುರುವೇ! (ಕ)
-ರುನಾಖರ ನೀನೆಂಬುದು ನಿಜವಾಗಲಿ ಗುರುವೇ!
ವೇದ್ಯವೆಲ್ಲಾ ನಿನಗೆ ನಿರ

ಜನಾದಿತ್ಯ ಗುರುವೇ!!!

ದುಷ್ಟದಮನಕ್ಕಧಿಕಾರ ಬಲ ಬೇಕು! (ಕ)   4(2112)

-ಷ್ಟ, ನಿಷ್ಟೂರ ಸಹಿಸುವವನಾಗಬೇಕು!
ರಿದ್ರರಿಗನುಕಂಪ ತೋರಿಸಬೇಕು!
ದ, ಮತ್ಸರಾದಿಗಳಿರದಿರಬೇಕು! (ಮ)
ಸ್ಸಿಗೆಂದೂ ಸ್ವತಂತ್ರ ಕೊಡದಿರಬೇಕು! (ತ)
-ಕ್ಕ ವಿವೇಕದಿಂದೆಲ್ಲಾ ಕಾರ್ಯ ಮಾಡಬೇಕು! (ಅ)
-ಧಿಕಾರ ದುರುಪಯೋಗಾಗದಿರಬೇಕು!
ಕಾಳಸಂತೆರಳನ್ನಡಗಿಸಲೇ ಬೇಕು! (ಸ)
-ರಕಾರ ಸತ್ಯನಿಷ್ಠೆಯುಳ್ಳದ್ದಾಗಬೇಕು!
ದಲಾವಣೆ ಆಗಾಗಾಗದಿರಬೇಕು!
ಕ್ಷ್ಯ ವಿಶ್ವಕಲ್ಯಾಣದೆಡೆಗಿರಬೇಕು!
ಬೇಸಾಯಕ್ಕೆಲ್ಲೆಲ್ಲೂ ಬೆಂಬಲವಿರಬೇಕು!
ಕುಲಗುರು ನಿರಂಜನಾದಿತ್ಯನಾಗ್ಬೇಕು!!!

ದುಸ್ಸಂಗದಿಂದ ದೂರವಾಗಿರು! (ನಿ)   4(1439)

-ಸ್ಸಂಗದಭ್ಯಾಸಿಯಾಗಿ ನೀನಿರು!
ತಿ ಸದ್ಗುರು ಪಾದವೆಂದಿರು! (ಕಾ)
-ದಿಂತತುಳಾನಂದ ಹೊಂದುತಿರು!
ತ್ತಧ್ಯಾನ ಸದಾ ಮಾಡುತಿರು!
ದೂಷಕರನ್ನೆಂದೂ ನಂಬದಿರು! (ವ)
-ರ ಮಾರುತಿಯಾದರ್ಶದಿಂದಿರು!
ವಾಸನಾತ್ರಯ ಕಳೆಯುತಿರು! (ಯೋ)
-ಗಿರಾಜನಾಗಿ ನೀನಿರುತಿರು! (ಇ)
-ರು ನಿರಂಜನಾದಿತ್ಯನಾಗಿರು!!!

ದೂರ ವಿರಸಿದರೆ ಕ್ಷೇಮ! (ಪ)   3(1034)

-ರ ದಾಸ್ಯವಿರದಿರೆ ಕ್ಷೇಮ!
ವಿಷಯಾಸೆಬಿಟ್ಟರೆ ಕ್ಷೇಮ! (ಹ)
-ರಿ ನಾಮ ಹಾಡಿದರೆ ಕ್ಷೇಮ!
ಸಿಟ್ಟು ಸುಟ್ಟು ಬಿಟ್ಟರೆ ಕ್ಷೇಮ!
ಯಾ ಬುದ್ಧಿಯಿದ್ದರೆ ಕ್ಷೇಮ! (ನೆ)
-ರೆ ಭಕ್ತರಾದರೆ ಕ್ಷೇಮ!
ಕ್ಷೇತ್ರಜ್ಞ ತಾನಾದರೆ ಕ್ಷೇಮ! (ಕ್ಷೇ)
-ಮ ನಿರಂಜನಾದಿತ್ಯ ಧಾಮ!!!

ದೂರದಲಿರುತನುಗ್ರಹಿಸುವೆನು ಸಮಿಪ ಸುಖ! ಅನುಭಾವಿಸಿ ನೋಡಿ!   1(32)

ಕ್ತ ಮಾಂಸಕಂಟಿಹ ಚರ್ಮದಂತೆ ನೀವೆನಗಂಟಿಹಿರಿ, ಹೀಗಿರಬೇಡಿ!
ತ್ತ ಗುರುವಿನುತ್ತಮ ಮಕ್ಕಳಾಗಿಹ ನೀವವನ ನಿಮ್ಮೊಳಗಿರಿಸಿಹಿರಿ ನೋಡಿ!
ಲಿಂಗದೇಹದಂದ ಚಂದವೀಂತಾಗಿಹುದೆಂದು ನೋಡೆಂದರೆ ನಗಬೇಡಿ!
ರುಜುಮಾರ್ಗಿ ”ನಿರಂಜನ ಗುರುಮೂರ್ತಿ” ನಿಮ್ಮೆಲ್ಲರ ವ್ಯಾಪಿಸಿಹ ನೋಡಿ!
ನಯರಾದ ನಿಮಗೆಲ್ಲವನಿತ್ತನೆಂಬಿಪ್ಪತ್ತೈದು ವರ್ಷದನುಭವ ಕೆಡಿಸಬೇಡಿ!
ನುಡಿಯದೆ ನಡೆಮಾತ್ರದಿಂದಿರುವುದೆಂತು ಶಾಂತಿಯಿಂದೆಂಬುದರಿತು ನೋಡಿ!
ಗ್ರಹಗಳುಗ್ರವಾದಾಗೆಲ್ಲಾ ಪೂರ್ಣ ಶಾಂತಿಯಿತ್ತ ಗುರುಮಂತ್ರ ಮರೆಯಬೇಡಿ!
ಹಿತ ಶತೃಗಳಿಗೂ ಸದಾ ಹಿತವನ್ನೇ ಕೋರುವ ಗುರುವೇ ನೀವಾಗಿರುವ ಆಶ್ಚರ್ಯ ನೋಡಿ!
ಸುರಿಯುತಿದೆ ಮಳೆ, ತಂಪಾಗುತಿದೆ ನೆಲ, ಮೋಡವೆಲ್ಲಿದ್ದರೇನೆಂಬುದನರಿತು ನೋಡಿ!
ವೆಂಕಟೇಶ ತಿರುಪತಿಯಲ್ಲಿ, ಸಂಕಟ ಪರಿಹಾರ ಮನೆಯಲ್ಲಿ, ಏ ಆದರ್ಶ ವೆನ್ನಲಿ ನೋಡಿ!
ನುಸುಳಿ ಹೊಕ್ಕನು ಹನುಮ ಲಂಕೆಯನು, ಭೀಮ ಬಲರಾಮನಗಿ ರಾಮನಿದ್ದೆಡೆ ಮರೆಯಬೇಡಿ!
ತ್ಯವಿದೆಂಬೆನ್ನಭಯ ನಂಬಿ ನನ್ನ ದಾರಿಯೇ ನಾನೆಂಬೆನ್ನ ಸಾಮೀಪ್ಯ ಸುಖ ನೋಡಿ!
ಮೀರಲಾರರಾರೀ ಮಾತ ನಿಮ್ಮ ನಾ ಬಿಡಾಲಾರೆ, ನೀವೆನ್ನ ಬಿಡಲಾರಿರಿದರ ತತ್ವ ಮರೆಯಬೇಡಿ!
ಡಾಬೇಡಿ ನಿರಾಶೆ! ನಾ ನಿಮ್ಮ ಕರೆಯ ಮನ್ನಿಸಿಹೆ! ಕಾಲ ಬರಲಿದೆ, ಬಂದೇ ಬರುವೆನು ನಿಮಗಾಗಿ ನೊಂಡಿ!
ಸುಡುತಿಹೆನು ಸರ್ವಾಂಗ, ಸರ್ವ ಕಲ್ಯಾಣಾದ ಸರ್ವ ಸಿದ್ಧಿಗಾಗೆಂಬುದ ಖಡಿತ ಮರೆತಿರಬೇಡಿ!
ಂಡವಿಲ್ಲದಖಂಡ ಬ್ರಹ್ಮಾಂಡಾವನೇ ಬೆಳಗುತಿಹನೆನ್ನಯ್ಯನೆನ್ನ ನಿಮಗಿಅ

ಯುವನೆಂಬುದ ಮುಂದೆ ನೋಡಿ!
ರಿತಿರುವಿರಂದಿನಾ ಯುಗ ಪುರಾಣ, ಅದನಿಂದು ನೀವು ನೋಡುತಿಹಿ ರೆಂಬುದೆ ಮರೆಯಬೇಡಿ!
ನುಡಿ ಸಾಕು, ನಡೆ ಬೇಕು! ಅಡಸುತಿಹೆಡರುಗಳಡಗಿಸಲಿಕಿರಬೇಕು ದೇಹ ಮೋಹ ತ್ಯಾಗ ನೋಡಿ!
ವ ಬೀಜ ಬಂದಾಯ್ತು, ಭುಂಜಿಸಲಿದ್ದಾಯ್ತು, ಅದರಿಂದ ಬಿಡಿಸಿಕೊಳದಿನ್ನಿರಬೇಡಿ!
ವಿಷವನುಂಡು ದಿವ್ಯನಾಮಾಮೃತ ಧರೆಗಿತ್ತವನ ದಿವ್ಯ ನಾಮವೇ ನಿಜ ಸಾಮೀಪ್ಯ ನೋಡಿ!
ಸಿಕ್ಕಿದಳು ದಒ

ಪದಿ ದುಶ್ಯಾಸನನ ಕೈಗೆ, ಅಕ್ಕರೆಯ ಕೃಷ್ಣನಾಮವೇ ರಕ್ಷಿಸಿಹ ರೂಪ (ಎಲ್ಲಿದ್ದರೇನೆಂಬ ಕಥೆ) ಮರೆಯಬೇಡಿ!
ನೋಡಿ, ಪಾಡಿ, ಅಡಿಗಡಿಗೆ ಜಪಮಾಡಿ! ಮುಂದೇನಾಗುವುದೆಂದಿದಿರು ನೋಡಿ!
ಡಿಂಗರಿಗವನಂಗ ಸಾಮೀಪ್ಯವ ಮರೆತು, ನಿಸ್ಸಂಗ ನಿರ್ಮೋಹದಲಿ “ನಿರಂಜನಾನಂದ’’ ನೋಡದಿರಬೇಡಿ!!!

ದೂರು ಹೇಳ್ಬೇಡ ಊರು ಬಿಡ್ಬೇಡ! (ಯಾ)   5(2572)

-ರು ಏನಂದ್ರೂ ತಲೆಗ್ಹಚ್ಕೊಳ್ಬೇಡ!
ಹೇಸಿಕೆ ಸಂಸಾರ ಬೆಳೆಸ್ಬೇಡ! (ಬಾ)
-ಳ್ಬೇಕ್ವಿರಕ್ತನಾಗಿ ; ಮರೆಯ್ಬೇಡ! (ತ)
-ಡಮಾಡಿ ಕಜ್ಜಾಯ ಬಡಿಸ್ಬೇಡ!
ಹಾಪೋಹದಿಂದ ಹುಚ್ಚಾಗ್ಬೇಡ! (ಗು)
-ರುಪಾದಕ್ಕೆ ಶರಣಾಗ್ದಿರ್ಬೇಡ!
ಬಿಟ್ಟ ಬಸವನಂತೋಡಾಡ್ಬೇಡ! (ಕೆ)
-ಡ್ಬೇಡ, ಕೈ ಬಾಯ್ಸಡಿಲ ಬಿಡ್ಬೇಡ! (ಆ)
-ಡ, ನಿರಂಜನಾದಿತ್ಯಪದ್ಧಾಡ!!!

ದೂರುವರನ್ಯರುರ್ವಿಯಲ್ಲಿ! (ಪೌ)   4(1591)

-ರುಷವದೆಂಬ ಹುಚ್ಚಿನಲ್ಲಿ! (ಭ)
-ವ ಭಯದ ಸಾಗರದಲ್ಲಿ!
ಜೋಗುಣಾವರಣದಲ್ಲಿ! (ಮಾ)
-ನ್ಯ ತಾನೆಂಬಹಂಕಾರದಲ್ಲಿ! (ಕ)
-ರುಬೆಂಬ ವಿಷ ಜ್ವಾಲೆಯಲ್ಲಿ! (ದು)
-ರ್ವಿಷಯದಂಧಕಾರದಲ್ಲಿ! (ಧ್ಯೇ)
-ಯ ಸಿದ್ಧಿಯಾಗಬೇಕೀಗಿಲ್ಲಿ! (ಎ)
-ಲ್ಲಿ? ನಿರಂಜನಾದಿತ್ಯನಲ್ಲಿ!

ದೂರ್ವ ಸಾಮೀಪ್ಯಕ್ಕಿಂತ ದೂರ್ದಸಾಲೋಕ್ಯ ಲೇಸು! (ಇ)   6(3577)

-ರ್ವಲ್ಲೆ ಇರಬೇಕಾದಂತಿದ್ದರೆ ಅದೇ ಲೇಸು!
ಸಾಧಕಗೆ ತ್ರಿಕರಣ ಶುದ್ಧಿಯಾದ್ರೆ ಲೇಸು!
ಮೀರದಿದ್ರೆ ಗುರು, ಹಿರಿಯರ ಮಾತು ಲೇಸು! (ಗೋ)
-ಪ್ಯವಿಲ್ಲದ ಗೋಪೀ ಭಕ್ತಿಭಾವವಿದ್ರೆ ಲೇಸು! (ಹ)
-ಕ್ಕಿಂದಿದ್ದದ್ದು ನಾಳೆಯಿರದೆಂದರಿತ್ರೆ ಲೇಸು!
ಪ್ಪೆಣಿಸುವುದಕ್ಕಿಂತ ಗುಣ ಗ್ರಾಹ್ಯ ಲೇಸು!
ದೂರದ ಬೆಟ್ಟಕ್ಕಿಂತ ಹತ್ರದ ತಿಟ್ಟು ಲೇಸು! (ಬಾ)
-ರ್ದವ್ನ ನಿರೀಕ್ಷೆಗಿಂತ ಇದ್ದವ್ನ ಲಕ್ಷ್ಯ ಲೇಸು!
ಸಾಧು, ಸಜ್ಜನರ ಸಂಗ ಎಲ್ಲಕ್ಕಿಂತ ಲೇಸು!
ಲೋಕೋದ್ಧಾರವಿದರಿಂದೆಂದು ನಂಬಿದ್ರೆ ಲೇಸು! (ಐ)
-ಕ್ಯದಿಂದ ಸೌಖ್ಯವೆಂದರಿತಿರುವುದು ಲೇಸು!
ಲೇಪ ವಿಷಯಾಸಕ್ತಿಯದ್ದಾಗದಿದ್ರೆ ಲೇಸು!
ಸುಖಕ್ಕೆ ನಿರಂಜನಾದಿತ್ಯಾದರ್ಶ ಲೇಸು!!!

ದೂಷಿಸಬೇಡಾರನ್ನೂ ದ್ವೇಷಿಸಬೇಡ! (ಋ)   5(3006)

-ಷಿ, ಮುನಿಗಳ ಆದರ್ಶ ಬಿಡಬೇಡ!
ರ್ವಸಂಗತ್ಯಾಗ ಮಾಡದಿರಬೇಡ!
ಬೇರೆಯವರಾಸ್ತಿಗೆ ಆಶಿಸಬೇಡ! (ಬಿ)
-ಡಾರ ದುಷ್ಟರಿರುವಲ್ಲಿ ಮಾಡಬೇಡ!
ಘುರಾಮ ಭಜನೆ ಬಿಡಲೇಬೇಡ! (ನಿ)
-ನ್ನೂರಾವುದೆಂಬರಿವಿರದಿರಬೇಡ! (ಉ)
-ದ್ವೇಗದಿಂದ ಯಾರೊಂದಿಗೂ ಆಡಬೇಡ! (ದೋ)
-ಷಿ ನಾನೆಂದು ಸದಾ ಅಳುತ್ತಿರಬೇಡ!
ದಾತ್ಮ ಚಿಂತನೆ ಮಾಡದಿರಬೇಡ!
ಬೇರೆಡೆ ಸಾಧನೆಗೆ ಹುಡುಕಬೇಡ! (ಮೃ)
-ಡ ನಿರಂಜನಾದಿತ್ಯನಡಿ ಬಿಡ್ಬೇಡ!!!

ದೂಷಿಸಲ್ಪಡಬಾರದಪ್ಪಾ! (ದೋ)   4(1502)

-ಷಿಯೆಂದಿಗೂ ಆಗದಿರಪ್ಪಾ!
ದಾ ಗುರುಧ್ಯಾನ ಮಾಡಪ್ಪಾ! (ಆ)
-ಲ್ಪರ ಸಂಗ ಮಾಡಬೇಡಪ್ಪಾ! (ಮ)
-ಡದಿ, ಮಕ್ಕಳಾಸೆ ಸಾಕಪ್ಪಾ!
ಬಾಳು ಬ್ರಹ್ಮಾನಂದಕ್ಕಾಗಪ್ಪಾ! (ತ)
-ರ ತರಾಸೆಯಿಂದಾ ದುಃಖಪ್ಪಾ!
ಮನ ಮಾಡಿಂದ್ರಿಯವಪ್ಪಾ! (ಅ)
-ಪ್ಪಾ ಶ್ರೀ ನಿರಂಜನಾದಿತ್ಯಪ್ಪಾ!!!

ದೆವ್ವಗಳಲ್ಲಿ ನಂಬಿಗೆ ಮಕ್ಕಳಿಗೆ! (ಜ)   6(3878)

-ವ್ವನದ ಮದವೀಗವರೆಲ್ಲರಿಗೆ!
ತಿ, ಸ್ಥಿತಿ ಬದ್ಲಾಗ್ಬೇಕೀಗವರಿಗೆ! (ಬ)
-ಳಸ್ಬಾದ್ದವರನ್ನು ಮುಷ್ಕರಗಳಿಗೆ! (ಸ)
-ಲ್ಲಿಸಬೇಕವರ ಸೇವೆ ದೇವರಿಗೆ!
ನಂಜುಂಡ ಕಥೆ ಹೇಳಬೇಕವರಿಗೆ!
ಬಿಸಿಯೇರ್ಬಾರ್ದು ರಕ್ತ ಬಾಲಕರಿಗೆ!
ಗೆಳೆಯ ರ್ಸಜ್ಜನರಾಗ್ಬೇಕವರಿಗೆ!
ತ್ಸರ ಬುದ್ಧಿಯಿರ್ಬಾರದವರಿಗೆ! (ಇ)
-ಕ್ಕಬಾರದೆಂಜಲನ್ನ ಹಿರಿಯರಿಗೆ! (ತಿ)
-ಳಿಸಬೇಕಾತ್ಮ ಸ್ವರೂಪ ಮಕ್ಕಳಿಗೆ! (ಹೀ)
-ಗೆ ನಿರಂಜನಾದಿತ್ಯಾನಂದರ್ತಾವಾಗೆ!!!

ದೇವ ತಾನಾಗುವುದಕ್ಕನುಕೂಲಾಯ್ತು!   2(951)

ರಗುರು ಸೇವೆ ನಿತ್ಯ ಮಾಡಿದ್ದಾಯ್ತು!
ತಾಯಿ, ತಂದೆ ಬಂಧು ಅವನೆಂದದ್ದಾಯ್ತು!
ನಾಮ, ರೂಪ ಬಿಟ್ಟು ಪೂಜೆ ಮಾಡಿದ್ದಾಯ್ತು!
ಗುಡಿ, ಗುಹೆಗಳಲ್ಲಿ ಬದುಕಿದ್ದಾಯ್ತು! (ಸಾ)
-ವು, ನೋವು ದೇವಗಿಲ್ಲೆಂದರಿತದ್ದಾಯ್ತು!
ತ್ತಗುರು ಗುರಿಯೆಂದಳವಟ್ಟಾಯ್ತು! (ಮಿ)
-ಕ್ಕ ಹವ್ಯಾಸಗಳನ್ನೆಲ್ಲಾ ಬಿಟ್ಟದ್ದಾಯ್ತು! (ಅ)
-ನುದಿನ ಧ್ಯಾನಾನುಷ್ಠಾನಲ್ಲಿದ್ದಾಯ್ತು!
ಕೂತೂ, ನಿಂತೂ, ತಪಸ್ಸಿನಲ್ಲಿದ್ದದ್ದಾಯ್ತು!
ಲಾಭಾಲಾಭಾದಿ ದ್ವಂದ್ವವರ್ಜಿಸಿದ್ದಾಯ್ತು! (ಆ)
-ಯ್ತು ನಿರಂಜನಾದಿತ್ಯಾನಂದಪ್ರಾಪ್ತಾಯ್ತು!!! ೯೫೨

ದೇವ ದೇವ ಜೀವಭಾವದಿಂದ ಭವದ ಬಂಧನಾ!   1(65)

ಭಾವ ಶುದ್ಧಿಯಿಂದ ಸಿದ್ಧಿ, ಬುದ್ಧಿಗಹುದು ರಂಜನಾ!
ಮಾತಾಪಿತರ ಪ್ರೀತಿಯಿಂದ ಬಂತು ಜಗದ ಜೀವನಾ!
ಮತ್ತೆ ಬೆಳೆಯಿತಿಂದ್ರಿಯಗಳ ಭಾವದಾ ವಾಸನಾ!
ಕಳೆಯಿತಿಂತು ಕಾಲವೆಲ್ಲ ತಳಮಳ ಯೌವನಾ!
ಗಾಳಿಗಿಟ್ಟ ದೀಪದಂಥಾ ಬಾಳು ಬಯಲ ಮೋಹನಾ!
ಸಾನುರಾಗದಿ ನಿನ್ನ ನಾಮ ಪಾನಗೈವ ಬಾಲನಾ!
ದೀನನಿವನ ನೀನು ಭಾನು ಕಾಯೋ ಶ್ರೀ ನಿರಂಜನಾ!!!

ದೇವಪ್ಪಾ! ನೀನ್ಯಾರೆನ್ನಪ್ಪಾ? (ಭ)   2(995)

-ವರೋಗ ವೈದ್ಯ ನೀನಪ್ಪಾ! (ಇ)
-ಪ್ಪಾಗಿದರಿಯಬೇಕಪ್ಪಾ!
ನೀನೆಲ್ಲರಲಿಪ್ಪೆಯಪ್ಪಾ!
ನ್ಯಾಯಮೂರ್ತಿ ಅನಂತಪ್ಪಾ! (ಮೆ)
-ರೆಯಲಿ ನಿನ್ನ ನಾಮಪ್ಪಾ! (ನಿ)
-ನ್ನ ನಾ ಮರೆಯಲೆಂತಪ್ಪಾ? (ಅ)
-ಪ್ಪಾ, ನಿರಂಜನಾದಿತ್ಯಪ್ಪಾ!!!

ದೇವರ ಕಾರ್ಯಕ್ಕೇಕೆ ಪ್ರತಿಭಟನೆ? (ಅ)   6(3802)

-ವನೇ ನೀನೆಂದಾಗಿಹುದು ಪ್ರಕಟನೆ! (ನಿ)
-ರತ ಮಾಡಬೇಕು ಇದನ್ನು ಚಿಂತನೆ!
ಕಾಮ ತುಂಬಿದ್ದರೆ ಆಗದು ಸಾಧನೆ! (ಧೈ)
ರ್ಯ, ಸ್ಥೈರ್ಯ ಸಹಿತಾಗ್ಬೇಕು ಭಾವನೆ! (ಸೊ)
-ಕ್ಕೇ ಮಾನವಗಾಗಿಹುದೀಗಾಚ್ಛಾದನೆ!
ಕೆಡುಕ ತಾನೆಸಗುವನು ವಂಚನೆ!
ಪ್ರತಿಭಟಿಸಿ ಮಾಡುವನು ನಿಂದನೆ!
ತಿಳಿದಾಗ ತನ್ನನ್ನು ತಾನು ವಂದನೆ!
ವರೋಗದಿಂದ ಆಗ ವಿಮೋಚನೆ! (ಕೂ)
-ಟಸ್ಥನಾಗಿ ಆಗೀರೇಳ್ಲೋಕ ರಂಜನೆ! (ಬೇ)
-ನೆ ನಿರಂಜನಾದಿತ್ಯನಿಂದಾಗ ಕೊನೆ!!!

ದೇವರ ದಯೆ ಬರಬೇಕು! (ಭ)   3(1259)

-ವ ಬಂಧ ಕತ್ತರಿಸಬೇಕು! (ಪ)
-ರಮಪದವ ಸೇರಬೇಕು! (ಅ)
-ದಕಾಗಿ ಸದಾ ಸೇವೆ ಬೇಕು! (ಛಾ)
-ಯೆಯಾಗುದಿಸಿ ಬರಬೇಕು!
ರಬರುತ್ತದಾಗ ಬೇಕು! (ಚಿ)
-ರಕಾಲ ಸುಖಿಯಾಗಬೇಕು!
ಬೇರೆನ್ನೇನೀ ಜನ್ಮಕ್ಕೆ ಬೇಕು? (ಬೇ)
-ಕು, ನಿರಂಜನಾದಿತ್ಯಾಗ್ಬೇಕು!!!

ದೇವರ ಧ್ಯಾನ ದೇವ ತಾನಾಗಲಿಕ್ಕೆ! (ಜೀ)   6(3504)

-ವನೆನಿಸಿ ದುಃಖಿಯಾಗದಿರಲಿಕ್ಕೆ! (ತ)
-ರ ತರ ದಾಸೆಯಿಂದ ಮುಕ್ತನಾಗ್ಲಿಕ್ಕೆ! (ಸಾ)
-ಧ್ಯಾ ಸಾಧ್ಯತೆಯ ಭಯ ತಪ್ಪಿಹೋಗ್ಲಿಕ್ಕೆ!
ಶ್ವರ ಶರೀರವೆಂದರಿವಾಗ್ಲಿಕ್ಕೆ!
ದೇಶ, ವಿದೇಶ ಭ್ರಾಂತಿಯಿಲ್ಲದಾಗ್ಲಿಕ್ಕೆ!
ಸ್ತ್ರಭರಣಾಲಂಕಾರ ಬೇಡಾಗ್ಲಿಕ್ಕೆ!
ತಾತ್ಸಾರ ಯಾರನ್ನೂ ಮಾಡದಿರಲಿಕ್ಕೆ!
ನಾಮ, ರೂಪಕ್ಕಂಟಿಕೊಳ್ಳದಿರಲಿಕ್ಕೆ!
ರಿಷ್ಟ, ಕನಿಷ್ಟ, ಭೇದ ಹೋಗಲಿಕ್ಕೆ! (ಕ)
-ಲಿತ ವಿದ್ಯೆಯೆಲ್ಲಾ ಸಾರ್ಥಕವಾಗ್ಲಿಕ್ಕೆ! (ಅ)
-ಕ್ಕೆ, ಶ್ರೀ ನಿರಂಜನಾದಿತ್ಯ ತಾನಾಗ್ಲಿಕ್ಕೆ!!!

ದೇವರ ಧ್ಯಾನಕ್ಕಾಶೀರ್ವಾದವಿರಲಿ! (ಭ)   5(3023)

-ವರೋಗವದರಿಂದ ಗುಣವಾಗಲಿ! (ಪ)
-ರರವಗುಣಗಳೆಣಿಸದಿರಲಿ! (ಸಾ)
-ಧ್ಯಾಸಾಧ್ಯತೆಗಳ ಸಂದೇಹ ಸಾಯಲಿ! (ಮ)
-ನಸ್ಸು ಸದಾ ನಾಮಸ್ಮರಣೆ ಮಾಡಲಿ! (ಮಿ)
-ಕ್ಕಾವ ವೃತ್ತಿಗಳೂ ಅದಕ್ಕಿಲ್ಲದಿರಲಿ!
ಶೀತೋಷ್ಣ ಸಹಿಸುವ ಸಾಮರ್ಥವಿರ್ಲಿ! (ಸ)
-ರ್ವಾಧಿಕಾರಿ ಸದ್ಗುರುವೆಂಬರಿವಿರ್ಲಿ!
ರ್ಶನ ಭಾಗ್ಯ ಸದಾ ಲಭಿಸುತ್ತಿರ್ಲಿ!
ವಿಕಲ್ಪವೆಂದೆಂದೂ ತಲೆಯೆತ್ತದಿರ್ಲಿ! (ಪ)
-ರಮಾರ್ಥಿಗೆಂದೆಂದೂ ಸೋಲುಂಟಾಗದಿರ್ಲಿ! (ಮಾ)
-ಲಿನ್ಯ ನಿರಂಜನಾದಿತ್ಯ ಸುಟ್ಟು ಹಾಕ್ಲಿ!!!

ದೇವರ ನೆನೆಪಿಗಾಗಿ ಹಬ್ಬ!   6(3801)

ಸ್ತ್ರಾಭರಣಾಲಂಕಾರಾ ಹಬ್ಬ!
ಸದೌತಣದೂಟವೂ ಹಬ್ಬ!
ನೆಣ್ಟರಿಷ್ಟರು ಬಂದಾಗ್ಲೂ ಹಬ್ಬ!
ವ ದಂಪತಿಗಳಾದ್ರೂ ಹಬ್ಬ!
ಪಿಶಾಚಿ ಬಾಧೆ ತಪ್ಪಿದ್ರೂ ಹಬ್ಬ!
ಗಾಯತ್ರಿಯ ಪೂಜೆ ಶ್ರೇಷ್ಠ ಹಬ್ಬ!
ಗಿರಿಧರನ ಜಯಂತಿ ಹಬ್ಬ!
ರಿದಾಸಗೆಲ್ಲಾ ದಿನ ಹಬ್ಬ! (ಕ)
-ಬ್ಬ ನಿರಂಜನಾದಿತ್ಯಗೀ ಹಬ್ಬ!!!

ದೇವರ ನೋಡಲಿ ಕ್ಯಾವಾಶ್ರಮವಾದರೇನಯ್ಯಾ?   2(470)

ರ ಸನ್ಯಾಸಾಶ್ರಮವೇ ಬೇಕೆಂದಿಲ್ಲ ತಮ್ಮಯ್ಯಾ!
ಘುವರನುರುತರ ಭಕ್ತಿ ಪ್ರಾಮುಖ್ಯವಯ್ಯಾ!
ನೋಟ, ಕೂಟ ಜಂಝೂಟವೆಲ್ಲಾ ಮನಸಿನದಯ್ಯಾ!
ಮರುಧರ ಶಿವನದಾವಾಶ್ರಮ ಹೇಳಯ್ಯಾ!
ಲಿಪ್ತನಾಗಿರದಿದ್ದರೆ ಮಾಯೆಗದೇ ಸಾಕಯ್ಯಾ! (ಯಾ)
-ಕ್ಯಾತುರವಾಗಿ ಬಟ್ಟೆ ಬದಲಾಯಿಸಬೇಕಯ್ಯಾ?
ವಾದ, ಭೇದ ಬಿಟ್ಟು ಗುರುಶಿವನ ಭಜಿಸಯ್ಯಾ!
ಶ್ರಮ ನಿವಾರಣೆ ಮನಸನ್ಯಾಸಿಯಾದರಯ್ಯಾ!
ದ, ಮತ್ಸರಾದ್ಯರಿಗಳನು ನೀನು ಗೆಲ್ಲಯ್ಯಾ (ಯಾ)
-ವಾಗಲೂ ವಿಷಯೇಂದ್ರಿಯಗಳಿಂದ ಬೇರಿರಯ್ಯಾ!
ತ್ತ ದಿಗಂಬರಗಾರು ಸನ್ಯಾಸ ವಿತ್ತರಯ್ಯಾ? (ಯಾ)
-ರೇನಿತ್ತರೂ ಶ್ರದ್ಧಾ, ಭಕ್ತಿ ನಿನಗಿರಬೇಕಯ್ಯಾ!
ರ, ನಾರಿಯರೆಲ್ಲರಿಗೂ ಇದನ್ವಯವಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಗೆಲ್ಲಾಶ್ರಮ ಪ್ರಿಯವಯ್ಯಾ!!!

ದೇವರ ನೋಡಿರೆಲ್ಲರೆಲ್ಲೆಲ್ಲೂ! (ಅ)   4(2281)

-ವಗಿಲ್ಲನ್ಯೊಂದೇ ರೂಪವಿನ್ನೆಲ್ಲೂ (ಪ)
-ರಮಾತ್ಮನಿಹನೀ ಯುಗದಲ್ಲೂ!
ನೋವು, ಸಾವಿನೆಲ್ಲಾ ದೇಹದಲ್ಲೂ! (ಕೂ)
-ಡಿಯಾಡುತಿರ್ಪ ತ್ರಿಕಾಲದಲ್ಲೂ! (ತೆ)
-ರೆ ಹರಿದೀಗ ನೋಡು ನಿನ್ನಲ್ಲೂ! (ಇ)
-ಲ್ಲವನಿಗೆ ಕೈಲಾಸ ಬೇರೆಲ್ಲೂ! (ನೆ)
-ರೆ ಭಕ್ತಿಯಿಂದ ಸಾಧಿಸೀ ಸೊಲ್ಲೂ! (ನ)
-ಲ್ಲೆ, ನಲ್ಲರಾಟದಿಂದೆಲ್ಲಾ ಗುಲ್ಲೂ! (ಎ)
-ಲ್ಲೂರ ನಿರಂಜನಾದಿತ್ಯನಿಲ್ಲೂ!!!

ದೇವರ ಮಾತು ಭಕ್ತರ ಸಂಪತ್ತು! (ಅ)   3(1122)

-ವರಿಗೇತಕ್ಕಿನ್ನಿತರ ಸಂಪತ್ತು?
ಕ್ತ ಮಾಂಸದಲ್ಲೆಲ್ಲಾ ಆ ಸಂಪತ್ತು!
ಮಾತು ಮಾತಿಗೂ “ಶ್ರೀರಾಮ” ಸಂಪತ್ತು!
ತುದಿ ಮೊದಲಿಲ್ಲದಾತ್ಮ ಸಂಪತ್ತು!
ಕ್ತಿ ಭಾವ ತುಳುಕಾಡ್ವ ಸಂಪತ್ತು! (ಮು)
-ಕ್ತರಾಗುವುದೇ ಅವರ ಸಂಪತ್ತು!
ತ್ನವೆಂದರಾತ್ಮಾ ರಾಮ ಸಂಪತ್ತು!
ಸಂಗ ಸದಾ ಸೀತಾರಾಮ ಸಂಪತ್ತು!
ತಿತ ಪಾವನ ನಾಮ ಸಂಪತ್ತು! (ತು)
-ತ್ತು ನಿರಂಜನಾದಿತ್ಯಗೀ ಸಂಪತ್ತು!!!

ದೇವರ ಲೀಲೆ ಜೀವರಿಗೆ ಶೂಲೆ! (ಭ)   6(3775)

-ವಸಾಗರದಲ್ಲಿದೆ ಭೀಕರಲೆ! (ನ)
-ರರೊದ್ದಾಡ್ವರೇಳಲಾರದೆ ಮೇಲೆ! (ತೇ)
-ಲೀಚೆ ಬರಲ್ಪ್ರಕೃತಿ ಪ್ರತಿಕೂಲೆ! (ಕೊ)
-ಲೆಗಣಿಯಾಗಿದೆ ಯಮನ ಬಲೆ!
ಜೀವರಿಗೀಗಿಲ್ಲ ಅವರ ನೆಲೆ! (ಅ)
-ವರುದ್ಧಾರಕ್ಕೆ ಸಮಯ ಈಗಲೇ! (ಹ)
-ರಿ ಚಿತ್ತಕ್ಕೂ ಬಂದಿಹುದದಾಗಲೇ!
ಗೆಳೆಯನನ್ನು ಸ್ವಾಗತಿಸೀಗಲೇ!
ಶೂಲಪಾಣಿಯಿಂದ ಶಮನ ಶೂಲೆ! (ಲೀ)
-ಲೆ ನಿರಂಜನಾದಿತ್ಯಾನಂದ ಲೋಲೆ!!!

ದೇವರ ಸಾಕ್ಷಾತ್ಕಾರವಾಗ್ಬೇಕು! (ದೇ)   6(3503)

ರೆಂತಿಹ ನೆಂಬರಿವಾಗ್ಬೇಕು! (ನ)
-ರ ಹರಿಯೆಂಬರಿವುಂಟಾಗ್ಬೇಕು!
ಸಾಧನೆಯಿಂದದು ಸಿದ್ಧಿಸ್ಬೇಕು! (ರ)
-ಕ್ಷಾ ಕವಚ ಸದ್ಗುರುವಾಗ್ಬೇಕು! (ತಾ)
-ತ್ಕಾಲಿಕ ಸುಖದಾಸೆ ಬಿಡ್ಬೇಕು!
ಕ್ತಗತ ವಾಸನೆ ಹೋಗ್ಬೇಕು!
ವಾಕ್ಯಾರ್ಥದನುಭವವಾಗ್ಬೇಕು! (ಆ)
-ಗ್ಬೆ

ಕಿದೇ ಜನ್ಮದಲ್ಲೆಲ್ಲಾಗ್ಬೇಕು! (ಪಾ)
-ಕು ನಿರಂಜನಾದಿತ್ಯಮಾಡ್ಬೇಕು!!!

ದೇವರ ಸೇವೆ ಉನ್ನತಿಗೆ! (ಜೀ)   6(4159)

-ವರ ಸೇವೆ ಅವನತಿಗೆ!
ಕ್ಕಸ್ರ ಹಿಂಸೆ ಇವರಿಗೆ!
ಸೇವೆ ನಿಷ್ಫಲ ಮೂರ್ಖರಿಗೆ! (ಸಾ)
-ವೆಂದರೆ ಭಯ ಅವರಿಗೆ!
ನ್ನತೇಚ್ಛೆಯಿಲ್ಲವರಿಗೆ! (ಅ)
-ನ್ನ, ಬಟ್ಟೆ ಚಿಂತೆ ಅವರಿಗೆ!
ತಿಖ್ಕಾಟದಕ್ಕಾಗಿವರಿಗೆ! (ಬ)
-ಗೆದು ನಿರಂಜನಾದಿತ್ಯಾಗೆ!!!

ದೇವರ ಸೇವೆ ಮಾಡಬೇಕು! (ಅ)   5(3038)

-ವನೇ ನೀನೆಂದರಿಯಬೇಕು! (ವ)
-ರ ಗುರು ಕೃಪೆಯಾಗಬೇಕು!
ಸೇರುತವನಲ್ಲೊಂದಾಗ್ಬೇಕು! (ಸ)
ವೆದು ಸಂಚಿತ ಹೋಗಬೇಕು!
ಮಾತಡಗಿ ಮುನಿಯಾಗ್ಬೇಕು! (ಮುಂ)
-ಡ ಮಾಲನದನೊಪ್ಪಬೇಕು!
ಬೇರೇನೂ ಬೇಡವೆನಬೇಕು! (ಬೇ)
-ಕು ನಿರಂಜನಾದಿತ್ಯಾಗ್ಬೇಕು!!!

ದೇವರ ಸ್ಮರಿಸಿ ನೆಮ್ಮದಿಯಿಂದಿರು! (ಅ)   6(4365)

-ವ ಚರಾಚರಾತ್ಮಕನೆಂದರಿತಿರು! (ಪ)
-ರರು, ತನ್ನವರೆಂಬ ಭೇದ ಬಿಟ್ಟಿರು!
ಸ್ಮರಿಸೀ ಗುಣಗಳ ನೀನದಾಗಿರು!
ರಿಸಿಗಳಾದರ್ಶವಿದೆಂದರಿತಿರು!
ಸಿರಿಯರಸ ನೀನಾಗಿ ಬೇಡದಿರು!
ನೆಮ್ಮದಿ ಭಂಗಾಸೆಯಿಂದೆಂದರಿತಿರು! (ಅ)
-ಮ್ಮ, ಅಪ್ಪಾದಿಗಳನ್ನು ದುಷಿಸದಿರು!
ದಿವ್ಯ ಪ್ರೇಮ ಜೀವನ ನಡೆಸುತ್ತಿರು! (ಬಾ

)
-ಯಿಂದಾಡದೇ ಕರ್ತವ್ಯ ಮಾಡುತ್ತಲಿರು!
ದಿನಕರನಾದರ್ಶ ಪಾಲಿಸುತ್ತಿರು! (ಗು)
-ರು ನಿರಂಜನಾದಿತ್ಯನೆಂದು ನಂಬಿರು!!!

ದೇವರತಾರ ಜೀವರುದ್ಧಾರಕ್ಕೆ!   6(4139)

ಸುಧೆಗೆ ಶಾಂತಿ, ಸಮೃದ್ಧೀಯಲಿಕ್ಕೆ!
ಕ್ತ, ಮಾಂಸದೊಡಲ್ಗಂಟದಿರಲಿಕ್ಕೆ!
ನವಾಸೋಪವಾಸಾನಂದಿಸಲಿಕ್ಕೆ!
ತಾನೆ

ಸಕಲವೆಂದು ತಿಳಿಯಲಿಕ್ಕೆ!
ತಿಕ್ರೀಡಾ ಲೋಲನಾಗದಿರಲಿಕ್ಕೆ!
ಜೀವರಿಗಿದೆಲ್ಲಾ ಮಾಡಿ ತೋರಲಿಕ್ಕೆ! (ಭ)
-ವ ಬಂಧನದಿಂದ ಪಾರುಮಾಡಲಿಕ್ಕೆ! (ಗು)
-ರು ಸೇವೆಯ ಮಹಿಮೆ ಮರೆಸಲಿಕ್ಕೆ! (ಶ್ರ)
-ದ್ಧಾ, ಭಕ್ತಿಯಗತ್ಯವನ್ನರುಹಲಿಕ್ಕೆ!
ವಿಗೆ ಕೃತಜ್ಞನಾಗಿರುವುದಕ್ಕೆ! (ಅ)
-ಕ್ಕೆ ನಿರಂಜನಾದಿತ್ಯಾದರ್ಶವೆಲ್ಲಕ್ಕೆ!

ದೇವರದ್ದೀ ಸೃಷ್ಟಿಯಾಡಳಿತ!   6(3421)

(ಅ)-ವನಾಗಿಹ ಜಾತಿ, ಮತಾತೀತ!
(ನ)-ರನಜ್ಞಾನದಿಂದನೇಕ ಮತ!
(ಬಿ)-ದ್ದೀಗೊದ್ದಾಡ ಬೇಕಾಯ್ತು ಸತತ!
ಸೃಷ್ಟೀಶನಿಂದುದ್ಧಾರ ಪತಿತ!
(ದೃ)-ಷ್ಟಿ ಬೀಳದಿದ್ರಾಗ್ವುದನಾಹುತ!
ಯಾಕಿಷ್ಟು ನಿರ್ದಯೆ ಅವಧೂತ?
(ತ)-ಡಮಾಡ ಬೇಡವೋ! ಮಾತಾಪಿತಾ!
(ಉ)-ಳಿಸೊಂದೇ ಮತ, ಅನವರತ!
(ಸಂ)-ತ ನಿರಂಜನಾದಿತ್ಯಗೀ ಮತ!!!

ದೇವರನ್ನನಾದರಿಸಬೇಡ! (ಅ)   6(3787)

-ವನನ್ನಿನ್ನೆಲ್ಲೂ ಹುಡುಕಬೇಡ! (ಹೊ)
-ರಗೊಳಗವನ ಕಾಣ್ದಿರ್ಬೇಡ! (ನಿ)
-ನ್ನಲ್ಲಿಹನನ್ನು ನೋಡದಿರ್ಬೇಡ!
ನಾನು, ನೀನೆಂದೊದ್ದಾಡಿ ಸಾಯ್ಬೇಡ!
ರ್ಶನವಾಗ್ದೇ ಏನೂ ಹೇಳ್ಬೇಡ!
ರಿಸ್ಯುಕ್ತ್ಯೆಂಬಂಧ ವಿಶ್ವಾಸ ಬೇಡ!
ತ್ಯಾನ್ವೇಷಣೆ ಮಾಡದಿರ್ಬೇಡ!
ಬೇಟೆ ಮೃಗ ಸಿಗ್ದೆ ಮರಳ್ಬೇಡ! (ಮೃ)
-ಡ, ನಿರಂಜನಾದಿತ್ಯ ಹಿಂದೋಡ!!!

ದೇವರಾರಿಗಡಿಯಾಳು? [ಅ]   3(1100)

-ವನಾಜ್ಞೆಯಿಂದೆಲ್ಲಾ ಬಾಳು! (ಶ್ರೀ)
-ರಾಮ ಪರಮ ದಯಾಳು! (ಹ)
-ರಿವಂಶಕ್ಕಿವ ಮುಂದಾಳು!
ರ್ವವೆಳ್ಳಷ್ಟಿಲ್ಲದಾಳು! (ಅ)
-ಡಿಗೆಡಲೆಬ್ಬಿಸುವಾಳು!
ಯಾರಿಗೂ ಆಳಗದಾಳು! (ಏ)
-ಳು, ನಿರಂಜನಾದಿತ್ಯಾಳು!!!

ದೇವರಿಗಾಗಿ ತ್ಯಾಗಿ ನೀನಾಗು!   2(958)

ರವೇನೂ ಕೇಳದವನಾಗು! (ಹ)
-ರಿನಾಮ ಜಪಿಸುವವನಾಗು! (ಯೋ)
-ಗಾನುಷ್ಠಾನ ಮಾಡುವವನಾಗು!
ಗಿರಿಜಾಪತಿಯಂತೆ ನೀನಾಗು! (ನಿ)
-ತ್ಯಾತ್ಮಾರಾಮನರಿವವನಾಗು! (ಹೋ)
-ಗಿ ನೀನವನೊಳಗೈಕ್ಯವಾಗು!
ನಿ

ನವನಾಗಿ ನಿಶ್ಚಿಂತನಾಗು!
ನಾನೆಂಬಹಂಕಾರ ದೂರನಾಗು! (ಆ)
-ಗು, ನಿರಂಜನಾದಿತ್ಯ ನೀನಾಗು!!!

ದೇವರಿಗೂ, ನನಗೂ, ಭೇಟಿ ಮಾಡಿಸೋ ಜಗದ್ಗುರು!   6(4032)

ಜ್ರ, ವೈಢೂರ್ಯದ ಕಿರಿಟಧಾರಿಯೇ ಜಗದ್ಗುರು? (ಹ)
-ರಿ, ಹರಾದಿಗಳಾವಾಸವೆಲ್ಲಿ? ತೋರೋ ಜಗದ್ಗುರು!
ಗೂಗೆ, ಕಾಗೆಗಳಂತೆ ನಾವಿರಬೇಕೇ ಜಗದ್ಗುರು?
ಯ ವಿನಯದಿಂದ ಪ್ರಾರ್ಥಿಸುವೆನೋ ಜಗದ್ಗುರು!
ಷ್ಟ, ಕಷ್ಟದಿಂದ ಭ್ರಷ್ಟರಾಗಿಹೆವೋ ಜಗದ್ಗುರು!
ಗೂಣ್ಡಾಗಳ ಕಾಟ ಹೆಚ್ಚಾಗುತ್ತಿಹುದೋ ಜಗದ್ಗುರು!
ಭೇದಭಾವಕೆಡೆ ಕೊಡಲೇ ಬೇಡವೋ ಜಗದ್ಗುರು! (ಘಾ)
-ಟಿತನಕ್ಕಾಗೀ ನರಜನ್ಮ ಬಂತೇನೋ ಜಗದ್ಗುರು!
ಮಾನ, ಪ್ರಾಣ, ಹಾನಿಯಾಗುತಿದೆ, ನೋಡೋ ಜಗದ್ಗುರು! (ನೋ)
-ಡಿದನ್ನೇಕೆ ಸುಮ್ಮಗಿರುತ್ತಿರುವೆಯೋ ಜಗದ್ಗುರು?
ಸೋಲೆನಗಾದ್ರದು ನಿನಗಲ್ಲವೇನೋ ಜಗದ್ಗುರು?
ಗತ್ಕಲ್ಯಾಣವೀಗಲಾದರೂ ಮಾಡೋ ಜಗದ್ಗುರು!
ತಿ, ಮತಿಗೆಡಿಸಿದವರು ಯಾರೋ ಜಗದ್ಗುರು? (ಮ)
-ದ್ಗುರು ಶ್ರೀ ದತ್ತಾತ್ರೇಯನಾಗಿರ್ಪವನೋ ಜಗದ್ಗುರು! (ಗು)
-ರು, ಶ್ರೀ ನಿರಂಜನಾದಿತ್ಯಾನಂದಾತ್ಮನೇ ಜಗದ್ಗುರು!!!

ದೇವರಿಗೆ ಗೊತ್ತೇನು ಕೊಡ್ಬೇಕೆಂತ! (ಅ)   4(2386)

-ವನ ನಂಬಿದವರ್ಗೆ

ಶ್ವರ್ಯನಂತ! (ವೈ)
-ರಿಗಳು ಅವನಿಗೆ ಪಾದಾಕ್ರಾಂತ! (ಮಿ)
-ಗೆ ಶಾಂತಿ ಕುಸುಮವಾಗಿ ವಸಂತ!
ಗೊಲ್ಲ ಬಾಲನ ಕತ್ತ ವೈಜಯಂತ! (ಚಿ)
-ತ್ತೇಕಾಗ್ರತೆಯಿಂದಪ ಬಲವಂತ! (ತ)
-ನು, ಮನ, ಧನಾರ್ಪಣೆಯಿಂದ ಸಂತ!
ಕೊಳೆ ಮನವ ತೊಳೆದ ಧೀಮಂತ! (ಬಿ)
-ಡ್ಬೇಕು ದುಸ್ಸಂಗವೆಂಬ ಗುಣವಂತ! (ಬೇ)
-ಕೆಂದಾವುದೂ ಬಯಸದ ಶ್ರೀಮಂತ! (ಆ)
-ತ ನಿರಂಜನಾದಿತ್ಯಾನಂದಾನಂತ!!!

ದೇವರಿಗೆ ಜಯ, ಜೀವರ್ಗಪಜಯ! (ಅ)   6(3675)

-ವರವ್ರ ಕರ್ಮಾನ್ಸಾರ ಜಯಾಪಜಯ! (ಅ)
-ರಿತಿದನ್ನು ಮಾಡ್ಬೇಕು ದೇಶಸೇವೆಯ!
ಗೆಜ್ಜಲಿನಂತೆಂದರಿತು ಬಿಡಾಸೆಯ!
ನತೆ ಸಹಿಸದೀಗ ಹಸಿವೆಯ! (ನ್ಯಾ)
-ಯ ಬೆಲೆಗೆ ಕೊಡ್ಬೇಕಾಹಾರ ದಿನ್ಸಿಯ!
ಜೀತಮುಕ್ತ ಬಾಳಲೀಗ ಸುಸಮಯ! (ಭ)
ಬಂಧ ಮುಕ್ತಿಗಾಗಿ ಮಾಡ್ಭಜನೆಯ! (ಸ್ವ)
-ರ್ಗ, ನರಕಾತೀತವಾಗಿರಿಸಿಚ್ಛೆಯ!
ರಮಾರ್ಥಕ್ಕಿದುವೇ ಪರಮ ಧ್ಯೇಯ!
ಯಿಸಬೇಕಿಂತು ನಶ್ವರ ಮಾಯೆಯ! (ಪ್ರಿ)
-ಯ ನಿರಂಜನಾದಿತ್ಯಗಿಂಥಾ ತನಯ!!!

ದೇವರಿಗೆ ಶರಣಾಗದಿನ್ಯಾರಿಗಮ್ಮಾ? [ಅ]   2(492)

-ವರಿವರ ಬಾಗಿಲ ಹಂಬಲವೇಕಮ್ಮಾ? (ಆ)
-ರಿಹರನ್ಯರು ನಿನ್ನ ಸಂತೈಸಲಿಕಮ್ಮಾ? (ಹ)
-ಗೆತನ ಸಾಧಿಸಿ ಮೋಸ ಮಾಡುವರಮ್ಮಾ!
ರಣಾರಿಗಾದರೂ ಕರುಣೆ ಇಲ್ಲಮ್ಮಾ! (ವ)
-ರ ಗುರು ಒಬ್ಬನೇ ಕಾಯುವವ ಕಾಣಮ್ಮಾ! (ತಾ)
-ಣಾ ಶ್ರೀ ಹರಿಯ ಸಾಯುಜ್ಯ ನಿಶ್ಚಿಂತೆಯಮ್ಮಾ!
ತಿ ಅವನಾಜ್ಞೆಯಂತೆ ಇರಬೇಕಮ್ಮಾ! (ಅ)
-ದಿದ್ದರೆ ಯಾವುದರ ಭಯವೂ ಇಲ್ಲಮ್ಮಾ!
ನ್ಯಾಯವೇ ಪರಮೇಶ್ವರನ ಧ್ಯೇಯವಮ್ಮಾ! (ದಾ)
-ರಿ, ಶರಣಾಗತಿ, ಸರಾಗವೆಲ್ಲಕ್ಕಮ್ಮಾ!
ರ್ವವೇನೇನೂ ಇಲ್ಲದೆ ಇರಬೇಕಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯ ಹೀಗಿಲ್ಲವೇನಮ್ಮಾ???
-ಮ್ಮಾ! ನಿರಂಜನಾದಿತ್ಯಗೆ ಶರಣಾಗಮ್ಮಾ!!!

ದೇವರಿತ್ತಮೃತವನ್ನು ದೆವ್ವಕ್ಕಿಕ್ಕಬೇಡ!   6(4110)

ರದಿಂದ ಬಂಧ ಮುಕ್ತನಾಗದಿರಬೇಡ!
ರಿಸಿಗಳು ಕುಸಿದು ಹೋದ್ರು! ಮರೆಯಬೇಡ! (ಚಿ)
-ತ್ತ ವೃತ್ತಿ ನಿರೋಧಾಭ್ಯಾಸ ಮಾಡದಿರಬೇಡ!
ಮೃತ್ಯುಂಜಯನೇ ಇಂತು ನೀನಾಗದಿರಬೇಡ!
ಪಸ್ಸಿನಿಂದ ತಂದೆಯಂತಾಗದಿರಬೇಡ!
ರ ಗುರುದತ್ತನ ಆದರ್ಶ ಬಿಡಬೇಡ! (ನಿ)
-ನ್ನುದ್ಧಾರವನ್ನಾತನೆಂದಿಗೂ ಮಾಡದೇ ಬಿಡ!
ದೆವ್ವಗಳನ್ನು ಪೂಜಿಸಿ ಕೆಟ್ಟುಹೋಗಬೇಡ! (ದೆ)
-ವ್ವಗಳ ಆಟ ದತ್ತ ಗುರು ನಡೆಯಗೊಡ! (ಠ)
ಕ್ಕಿಗರ ಮಾಟ ಮಾರಣಕ್ಕೆ ಹೆದರಬೇಡ! (ತ)
-ಕ್ಕ ಪ್ರಾಯಶ್ಚಿತ್ತ ಗುರುದೇವ ಮಾಡದೇ ಬಿಡ!
ಬೇಡ, ಗುರುವಿನಲ್ಲೆಂದಿಗೂ ಸಂದೇಹ ಬೇಡ! (ದಂ)
-ಡಧಾರಿ ಶ್ರೀ ನಿರಂಜನಾದಿತ್ಯ ಕೈಯ ಬಿಡ!!!

ದೇವರು ಕೈ ಬಿಟ್ಟರೇನು ಗತಿ? (ಭ)   5(2964)

-ವ ಬಂಧನದೊಡ್ಡಾಟವೇ ಗಿತಿ! (ಕ)
-ರುಣೆ ತೋರದಿದ್ರಾತಧೋಗತಿ!
ಕೈವಲ್ಯಪತಿ ಸಹಜ ಸ್ಥಿತಿ!
ಬಿಸಿಲಲ್ಲೊಣಗಿದರಾ ಸ್ಥಿತಿ! (ಅ)
-ಟ್ಟಹಾಸಕ್ಕಳವಡದಾ ಸ್ಥಿತಿ! (ಯಾ)
-ರೇನೆಂದರೂ ಅಲಕ್ಷ್ಯ ಆ ಸ್ಥಿತಿ! (ತ)
-ನುಭಾವವಳಿದ ಆತ್ಮ ಸ್ಥಿತಿ!
ಗನಸದೃಶವೆಂಬಾ ಸ್ಥಿತಿ! (ಗ)
-ತಿ ನಿರಂಜನಾದಿತ್ಯ ಸ್ವಸ್ಥಿತಿ!!!

ದೇವರು ಸಾಕ್ಷಿ ಸ್ವರೂಪಪ್ಪಾ! (ಅ)   1(284)

-ವನಾಗಿಹನೆಲ್ಲಾ ರೂಪಪ್ಪಾ! (ಅ)
-ರುಣ ಸಾರಥಿಯ ರೂಪಪ್ಪಾ!
ಸಾರಂಗ ಮಾಲಿಕ ರೂಪಪ್ಪಾ! (ಅ)
-ಕ್ಷಿಗಳಲಾ ದಿವ್ಯ ರೂಪಪ್ಪಾ!
ಸ್ವರೂಪ ಸಿಯ ರೂಪಪ್ಪಾ!
ರೂಪಾರೂಪ ಅವನಿಷ್ಟಪ್ಪಾ!
ರಬ್ರಹ್ಮರೂಪವದಪ್ಪಾ! (ಅ)
-ಪ್ಪಾತ, ನಿರಂಜನಾದಿತ್ಯಪ್ಪಾ!!!

ದೇವರೆನಿಸಿಕೊಳ್ಲಿಕ್ಕೂ ಲಭ್ಯ ಬೇಕು!   6(4263)

ರಪ್ರದಾನವನ್ನವ ಮಾಡಬೇಕು! (ಕ)
-ರೆಯ ಮನ್ನಿಸಿ ದರ್ಶನ ಕೊಡಬೇಕು!
ನಿಜ ದಾರಿ ತೋರಿ ಊರು ಸೇರಿಸ್ಬೇಕು!
ಸಿಕ್ಕಿದ್ದರಲ್ಲಿ ತೃಪ್ತಿ ಪಡಿಸಬೇಕು!
ಕೊಚ್ಚೆಗುಂಡಿಯಲ್ಲೂ ಸಂತೋಷವಿರ್ಬೇಕು! (ತಾ)
-ಳ್ಲಿಕ್ಕೆ ಕಷ್ಟವನ್ನು ಶಕ್ತಿ ಕೊಡಬೇಕು! (ಹ)
-ಕ್ಕೂರ್ಜಿತಗೊಳಿಸಿ ಅವನೇ ಆಗ್ಬೇಕು!
ಗಾಮು ಮನಸ್ಸಿಗೆ ಹಾಕಿಸಬೇಕು! (ಸ)
-ಭ್ಯನಾದ ಮಗ ಅವನಿಗಾಗಬೇಕು!
ಬೇಗಾ ಸಮಸ್ಯೆ ಪರಿಹಾರವಾಗ್ಬೇಕು! (ಬೇ)
-ಕು ನಿರಂಜನಾದಿತ್ಯನಾಗಲೇ ಬೇಕು!!!

ದೇವರೇ ಗತಿಯೆಂದತ್ತು ಸತ್ತರಯ್ಯಾ! (ಅ)   5(2529)

-ವರಿಗಾಯ್ತನುಗಾಲತಿ ಕಷ್ಟವಯ್ಯಾ! (ಯಾ)
-ರೇ ಸತ್ತ್ರೂ ಯದುನಾಥನೆತ್ತ ಹೋದಯ್ಯಾ! (ಹ)
-ಗಲಿರ್ಳಳುವವರಾರು ಕೇಳ್ವರಯ್ಯಾ! (ಮಿ)
ತಿಯಿಲ್ಲ ಹೇಳುವ ಕಥೆಗಳಿಗಯ್ಯಾ!
ಯೆಂದಿಗಿದನುಭವವೋ? ಕಾಣೆನಯ್ಯಾ!
ಯಾಮಯಾತನೆಂಬುದ್ಬಾಯ್ಮಾತೇನಯ್ಯಾ? (ಇ)
-ತ್ತು ದರ್ಶನ ಸಂಶಯ ನಿವಾರಿಸಯ್ಯಾ!
ತ್ಯ ನಿನ್ನ ಮಾತೆಂಬರಿವಾಗಲಯ್ಯಾ! (ಎ)
-ತ್ತಲೂ ಭಕ್ತರಿಗೇ ಜಯವಾಗಲಯ್ಯಾ! (ವ)
-ರಗುರು ನಿನ್ನನಿಂತು ಬೇಡುವೆನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯ ನೀನೆಂಬೆನಯ್ಯಾ!!!

ದೇವರೇ ಮನಸ್ಸಾಗಿ ಬೇಡುತ್ತಾನೆ! (ಅ)   5(3258)

-ವನೇ ಆಗಿ ಮನಸ್ಸು ನೀಡುತ್ತಾನೆ! (ಯಾ)
-ರೇನು ಧ್ಯಾನಿಸ್ತಾರೋ ತಾನದಾಗ್ತಾನೆ!
ನುಜನಿದನ್ನರಿಯದಿದ್ದಾನೆ!
ರ ನಾರಾಯಣಾಗ್ಬೇಕಾಗಿದ್ದಾನೆ! (ನಿ)
-ಸ್ಸಾರೇಂದ್ರಿಯ ಸುಖಕ್ಕಾಶಿಸುತ್ತಾನೆ! (ಯೋ)
-ಗಿ ನೀನಾಗೆಂದರೆ ಗ್ರಾಬಿಯಾಗ್ತಾನೆ!
ಬೇಡ್ವವ, ಕೊಡ್ವವ ತಾನಾಗಿದ್ದಾನೆ! (ನೋ)
-ಡುವುದಕ್ಕೆ ತನ್ನ ಮರೆತಿದ್ದಾನೆ! (ದ)
-ತ್ತಾತ್ರೇಯಾರ್ತ ರಕ್ಷಕನಾಗಿದ್ದಾನೆ! (ತಾ)
-ನೇ ನಿರಂಜನಾದಿತ್ಯನೆಂದಿದ್ದಾನೆ!!!

ದೇವರೊಬ್ಬನೇ ಸತ್ಯ! (ಅ)   2(708)

-ವನೆಲ್ಲೆಲ್ಲಿಹ ನಿತ್ಯ! (ತೇ)
-ರೊಳಿವನ ಸಾರಥ್ಯ! (ಕ)
-ಬ್ಬಗಳಲಿವ ಸ್ತುತ್ಯ! (ಜ್ಞಾ)
-ನೇಶ್ವರನಿವ ಭೃತ್ಯ! (ಅ)
-ಸದೃಶಾತ್ಮ ಸಾಮರ್ಥ್ಯ! (ನಿ)
-ತ್ಯ, ನಿರಂಜನಾದಿತ್ಯ!!!

ದೇವಲೋಕದಲ್ಲಿ ಕಾಮಧೇನುವಿದ್ದರಾರಿಗೇನು? (ದೇ)   6(4332)

-ವತೆಗಳುಂಡಾನಂದಿಸುವರು ಪ್ರತಿದಿನದನ್ನು! (ಈ)
-ಲೋಕದವರು ಬಾಯ್ನೀರು ಬಿಡುವರು ಕೇಳ್ಯದನ್ನು!
ರ್ತವ್ಯನಿಷ್ಠೆಯುಳ್ಳವಗೆ ಕೊಡುವರಾರದನು?
ಮೆ, ಶಮಾಭ್ಯಾಸದಿಂದ ಬೆಂಡಾದವನು ನರನು! (ಅ)
-ಲ್ಲಿನಾನಂದ ನರ ಕನಸಿನಲ್ಲೂ ಕಾಣದಿಹನು!
ಕಾಮ, ಕ್ರೋಧಾದಿಗಳಿಂದ ಪೀಡಿಸಲ್ಪಡುತ್ತಿಹನು!
ರ್ತ್ಯ ತಾನೆನಿಸಿ ಮೃತ್ಯುವಿಗೆ ತುತ್ತಾಗುತ್ತಿಹನು!
ಧೇನು ಕ್ಷೀರವೆಂದು ಬೆರಕೆ ಹಾಲ್ಕುಡಿಯುತ್ತಿಹನು! (ನಾ)
-ನು ನೀನೆಂದು ವ್ಯರ್ಥವಾಗಿ ಗುದ್ದಾಡಿ ಒದ್ದಾಡುವನು!
ವಿಕಲ್ಪ, ಸಂಕಲ್ಪದಿಂದ ಜನಿಸಿ ಸಾಯುತ್ತಿಹನು! (ಇ)
-ದ್ದದ್ದರಲ್ಲಿ ತೃಪ್ತಿಯಿಂದೆಂದೂ ನೆಮ್ಮದಿಯಿಂದಿರನು!
ರಾಮ, ಶ್ಯಾಮ, ನಾಮಭಜನೆಯನ್ನಲಕ್ಷಿಸುವನು! (ಹಿ)
-ರಿಯರು, ಗುರುಗಳೆಂದರೆ ಗೌರವಿಸದಿಹನು! (ಭೋ)
-ಗೇಚ್ಛೆ ತೊರೆದು, ಯೋಗೇಚ್ಛೆಯುಳ್ಳವನಾಗ್ಬೇಕವನು! (ಸೂ)
-ನು, ನಿರಂಜನಾದಿತ್ಯಗಾಗಿ ಮುಕ್ತನಾಗ್ಬೇಕವನು!!!

ದೇವಸ್ಥಾನಕ್ಕೇಕೆ ಹೋಗಬೇಕು?   6(4180)

ಜ್ರಾಭರಣಕ್ಕಂಗಡಿ ಸಾಕು!
ಸ್ಥಾನ, ಮಾನಕ್ಕೆ ಉದ್ಯೋಗ ಸಾಕು!
ಯನಾನಂದಕ್ಕೆ ಸೃಷ್ಟಿ ಸಾಕು! (ಹ)
-ಕ್ಕೇಕೆಲ್ಲರಿಗಿರದಿರಬೇಕು?
ಕೆಟ್ಟ ಬುದ್ಧಿ ಹುಟ್ಟಡಗಬೇಕು!
ಹೋದಮೆ

ಲಾಗಾಗ ಹೋಗಬೇಕು! (ಹೋ)
-ಗಲಿಕ್ಕಿಷ್ಟ ದೇವ್ರೇ ಕೊಡಬೇಕು!
ಬೇಕಾದೆಲ್ಲವನ್ನೊದಗಿಸ್ಬೇಕು! (ತಾ)
-ಕು ನಿರಂಜನಾದಿತ್ಯನಾಗ್ಬೇಕು!!!

ದೇವಾ ಸದ್ಗುರು ಮಹಾದೇವ!   2(564)

ವಾಚಾಮಗೋಚರನಾ ದೇವ!
ರ್ವಲೋಕನಾಯಕಾ ದೇವ! (ಸ)
-ದ್ಗುರು ಸಚ್ಚಿದಾನಂದಾ ದೇವ! (ಗು)
-ರು ಬ್ರಹ್ಮ ವಿಷ್ಣು ಶಿವಾ ದೇವ! (ರಾ)
-ಮ ಶ್ಯಾಮ ಗುಣಧಾಮಾ ದೇವ! (ಮ)
-ಹಾ ಮಹಿಮಾತ್ಮಾರಾಮಾ ದೇವ!
ದೇವ ದೇವೆಲ್ಲಾ ನಾಮಾ ದೇವ! (ದೇ)
-ವ ನಿರಂಜನಾದಿತ್ಯಾ ದೇವ!!!

ದೇವಿ ಬಂದ್ಲು, ಲಕ್ಷ್ಮಿದೇವಿ ಬಂದ್ಲು!   4(1650)

ವಿಧಿಗೆ ತಾಯಿ ತಾನಾಗಿ ಬಂದ್ಲು!
ಬಂಧ ಬಿಡಿಸಲಿಕ್ಕಾಗಿ ಬಂದ್ಲು! (ಬಂ)
-ದ್ಲು, ಸದ್ಗುರು ಸೇವೆಗಾಗಿ ಬಂದ್ಲು! (ಬಾ)
-ಲಕರ ಏಳಿಗೆಗಾಗಿ ಬಂದ್ಲು! (ಲ)
-ಕ್ಷ್ಮಿ

ಪತಿಯ ದಾಸಿಯಾಗಿ ಬಂದ್ಲು!
ದೇಹಮೋಹ ತ್ಯಾಗಿಯಾಗಿ ಬಂದ್ಲು!
ವಿರಕ್ತೆ ಏಕಾಂಗಿಯಾಗಿ ಬಂದ್ಲು!
ಬಂದ್ಲು, ಹೋದ್ಲು, ಹೋದ್ಲು ಬಂದ್ಲು! (ಹೊ)
-ದ್ಲು, ನಿರಂಜನಾದಿತ್ಯಾಗೀಗ್ಬಂದ್ಲು!!!

ದೇವಿಯುಪಾಸಕರ ಮನೆ ನೆಲಸಮವಾಯ್ತು!   6(4132)

ವಿಚಾರಕ್ಕಿದೇಕಿಂತಾಯಿತೆಂದು ಅರಿಯದಾಯ್ತು!
ಯುಕ್ತ ಪೂಜಾದಿ ಸೇವೆಗಳು ನಿತ್ಯ ಸಾಗುತ್ತಿತ್ತು!
ಪಾಪ, ಪುಣ್ಯದರಿವು ಮನೆಯವರಿಗೆ ಇತ್ತು!
ರ್ವರಿಗೂ ನಿತ್ಯ ಸತ್ಕಾಲಕ್ಷೇಪಗುತ್ತಿತ್ತು!
ರ್ತವ್ಯ ನಿಷ್ಠ ಪ್ರತಿಯೊಬ್ಬರಲ್ಲೂ ಕಣುತ್ತಿತ್ತು!
ತಿ ಸುಖಕ್ಕೂ ಸ್ತ್ರೀ, ಪುರುಷರಲ್ಲಿ ನೇಮವಿತ್ತು!
ತ್ಸರರಹಿತನ್ಯೋನ್ಯತೆ ಎಲ್ಲರಲ್ಲೂ ಇತ್ತು!
ನೆರೆ, ಹೊರೆಯವರಿಗಾಶ್ರಯವೂ ಸಿಗುತ್ತಿತ್ತು!
ನೆರೆ, ಹೊರೆಯವರ ಪೂರ್ಣ ಗೌರವಲ್ಲಿಗಿತ್ತು!
ಕ್ಷ್ಯವೆನಿಸಿದಾತ್ಮ ಜ್ಞಾನ ಕಡಿಮೆಯಾಗಿತ್ತು!
ತ್ಯ, ಸದಾಚಾರಗಳೆಲ್ಲರಿಗೂ ಬೇಕಾಗಿತ್ತು!
ನೆಯ ಹಿರಿಯನದ್ದೇ ಆಡಳಿತವಾಗಿತ್ತು!
ವಾದ, ಭೇದಗಳಿಗೆಡೆಯಿಲ್ಲದೇ ಇರುತ್ತಿತ್ತು! (ಹೋ)
-ಯ್ತು, ನಿರಂಜನಾದಿತ್ಯಗಾ ಸುಯೋಗ ತಪ್ಪಿಹೋಯ್ತು!!!

ದೇಶ, ಕಾಲ, ಕಟ್ಟು ಹರಿದಾಪ್ತ ನಿರಂಜನಾದಿತ್ಯ!   1(129)

ಕ್ತಿಯಾಸಕ್ತಿ, ಭಕ್ತಿ, ಭುಕ್ತಿ, ಮುಕ್ತಿದಾತನಾದಿತ್ಯ!
ಕಾರ್ಯ, ಕಾರಣ, ಧರ್ಮ, ಕರ್ಮ, ನೇಮ, ನಿಷ್ಠನಾದಿತ್ಯ!
ಯ, ಸ್ಥಿತಿ, ಗತಿಗಳಿವನಿಜಸ್ಥಿತಿಯಾದಿತ್ಯ!
ಥಿಣದೋರಿ, ಕರುಣೆಬೀರಿ, ಕಾಯುವನಾದಿತ್ಯ! (ಅ)
-ಟ್ಟು, ಸುಟ್ಟು, ಹೊಟ್ಟೆಲಿಟ್ಟು, ಗುಟ್ಟು ರಟ್ಟುಗೈವನಾದಿತ್ಯ!
ರಸಿ, ಮೆರೆಸಿ, ಮರಸಿ ಬೆರೆಸುವನಾದಿತ್ಯ!
ರಿಕ್ತನಾದ, ವಿರಕ್ತನಾದ, ಗುರುದೇವನಾದಿತ್ಯ!
ದಾನಶೂರ, ಪ್ರಾಣಾಧಾರ, ವರಗಂಭೀರನಾದಿತ್ಯ! (ಆ)
-ಪ್ತರಾಪ್ತಾಪದ್ಭಾಂದವನಂಬುಜಾಪ್ತ ಮಿತ್ರನಾದಿತ್ಯ! (ಆ)
ನಿಶಿ, ಹುಸಿ, ವಿಪ, ಬಿಸಿ ಘಾಸಿಗೈವವನಾದಿತ್ಯ!
ರಂಗನಂಗನಾಗಿ ಸಂಗಡಿಗನಾಗಿಹನಾದಿತ್ಯ!
ಯ, ವಿಜಯ, ವಿಮಲ ನಿಧಿಗಾಶ್ರಯನಾದಿತ್ಯ!
ನಾಗಶಯನ, ನಾರಾಯಣ ನಾಮಾನಂದನಾದಿತ್ಯ!
ದಿಗಂಬರಗಿಷ್ಟಾಂಬ ರೌದುಂಬರಾನಂದನಾದಿತ್ಯ!
ತ್ಯಜಿಸುವನೆಲ್ಲರನು ಸಂಜೆ ನಿರಂಜನಾದಿತ್ಯ!!!

ದೇಶದೇಕೀಕರಣವೆಂದೋ ಆಯ್ತು!   5(3175)

ರಣರ ಕೇಳ್ವರಿಲ್ಲದಾಯ್ತು!
ದೇವರೆಲ್ಲಿಹನೆಂಬುದೂ ಶುರ್ವಾಯ್ತು!
ಕೀಳ್ಮೇಲೆಂಬುದೊಳ್ಗೊಳ್ಗೇ ತುಂಬಿಹೋಯ್ತು!
ರಣತ್ರಯ ಶುದ್ಧಿಗಲಕ್ಷ್ಯಾಯ್ತು!
ಕ್ಕಸ ಬುದ್ಧಿ ಕಾಡತೊಡಗಿತು! (ಗ)
-ಣ ನಾಯಕನಿಷ್ಟದಂತಿರದಾಯ್ತು!
ವೆಂಕಟೇಶಗಿಟ್ಟ ಮೊರೆ ವ್ಯರ್ಥಾಯ್ತು!
ದೋಷಾರೋಪಣೆ ಮಕ್ಕಳ ಮೇಲಾಯ್ತು!
ಗ್ಬೇಕಾದದ್ದೂ ಆಗ್ಬಾರದ್ದೂ ಆಯ್ತು! (ಆ)
-ಯ್ತು ನಿರಂಜನಾದಿತ್ಯಗೊಪ್ಪಿಸ್ಯಾಯ್ತು!!!

ದೇಶೋದ್ಧಾರಕನಾರಪ್ಪಾ?   4(1839)

ಶೋಕ ವಿನಾಶಕನಪ್ಪಾ! (ಶ್ರ)
-ದ್ಧಾ, ಭಕ್ತಿಯುಳ್ಳವನಪ್ಪಾ!
ಘುಪತಿ ದಾಸನಪ್ಪಾ!
ರ್ಮನಿಷ್ಠನವನಪ್ಪಾ!
ನಾಮಜಪ ಪ್ರೇಮಿಯಪ್ಪಾ! (ಪ)
-ರ ಪೀಡೆ ಮಾಡದಾತಪ್ಪಾ! (ಅ)
-ಪ್ಪಾ ನಿರಂಜನಾದಿತ್ಯಪ್ಪಾ!!!

ದೇಹ ದೂರಾದರೂ ಸುಖವಾಗಿರು ಭಾವೈಕ್ಯದಿಂದ!   1(79)

ತ್ತಿರವಿದ್ದರೂ ಸುಖವಿಲ್ಲ ಭಾವಭೇದದಿಂದ!
ದೂರ ಸೂರ್ಯನಿಂದೆಲ್ಲಾನಂದವನ ಪ್ರತಿಭೆಯಿಂದ!
ರಾಮನಾಜ್ಞಾಪಾಲನೆ ಮಾರುತಿಯ ವಿಜಯಾನಂದ!
ತ್ತನೊಳಗಿದ್ದರೂ ತತ್ತರಿಪರಜ್ಞಾನದಿಂದ!
ರೂಪವೀವ ಭಾವದಲಿ ಭಾವ ಬೆರೆತಾಗಾನಂದ!
ಸುಖಕೆ ಭಾವ, ಭಕ್ತಿ ಪಾಲನೆ ಮುಖ್ಯವದರಿಂದ!
ಡ್ಗದುಪಯೋಗವಾಗುವುದದರಾಘಾತದಿಂದ!
ವಾಸನೆ ಮೂಗಿಗಾಗುವುದೆಲ್ಲೋ ಇರುವ ಪೂವಿಂದ!
ಗಿರಿಧರಲ್ಲಿದ್ದರೂ ಶಾಂತಿಯಿಂದ!
ರುಚಿ ನಾಲಿಗೆಗಾರ್ದಊ ಅದು ಭಾವಾದಾರದಿಂದ!
ಭಾವ ಸಂಬಂಧ ಬೆಳೆದು ಬೆಳಗಬೇಕದರಿಂದ!
ವೈದ್ಯನೆಲ್ಲಿದ್ದರೇನುಪಕಾರನೌಷಧಿ ಇಂದ! (ಐ)
-ಕ್ಯಸುಕ ದೇಹ ಬಾವ ಬೇದವಳಿದರಾನಂದ! (ಇ)
-ದಿಂಬಿಲ್ಲದಾಪ್ತ ಸದಾ ಸಮೀಪಲ್ಲಿದ್ದೇನಾನಂದ?
ತ್ತ ನಿರಂಜನಾದಿತ್ಯ ರಸಾಯನವೈಕ್ಯಾನಂದ!!!

ದೇಹ ನಾನಲ್ಲ, ಸಾವು ನನಗಿಲ್ಲ!   3(1012)

ಸ್ತ, ಪಾದಗಳಧೀನ ನಾನಿಲ್ಲ!
ನಾಮ, ರೂಪಗಳ ಶಾಶ್ವತವಲ್ಲ!
ಯನ, ನಾಸಿಕಕಾಳು ನಾನಲ್ಲ! (ಎ)
-ಲ್ಲ ವಿಚಿತ್ರವಾಗಿ ತೋರುವುದಲ್ಲ!
ಸಾಕು, ಬೇಕೆಂಬ ವೃತ್ತಿನನಗಿಲ್ಲ! (ಬೇ)
-ವು, ಬೆಲ್ಲದಲಿ ಭೇದ ಕಾಣೆನಲ್ಲ!
ರ, ನಾರಿಯರಲ್ಲಾನಿಹೆನ್ನಲ್ಲ!
ಪುಂಸಕನಲ್ಲೂ ನಾನಿದ್ದೇನಲ್ಲ!
ಗಿರಿ-ನದಿಗಳಲ್ಲೂ ಇರ್ಪೆನಲ್ಲ! (ಅ)
-ಲ್ಲ, ನಿರಂಜನಾದಿತ್ಯಾತ್ಮನೆಲ್ಲಿಲ್ಲ???

ದೇಹ ಮೋಹ ದಹಿಸು, ದೇವ ಭಾವ ಬಲಿಸು!   1(28)

ಸಿವೆ ಶಾಂತಿಗೊಳಿಸು, ಹರ್ಷ ವೃದ್ಧಿಪಡಿಸಿ!
ಮೋಸದಂಗಿ ಸುಡಿಸು, ಮೋಕ್ಷದಂಗಿ ತೊಡಿಸು!
ರೆಯ ಭ್ರಮೆಯನಳಿಸು, ಹರಿಯ ಪ್ರೇಮವಿರಿಸು!
ಣಿಯುವಾಟ ಬಿಡಿಸು, ಧಣಿಯ ಬದಿಯಲಿರಿಸು!
ಹಿಂದೆ, ಮುಂದೆ ಮರೆಸು, ಇಂದಿರಾಧವನಲಿರಿಸು!
ಸುಡುವ ಪಾಡಾ ಹರಿಸು, ಕೆಡದ ಪಾಡಿನಲಿರಿಸು!
ದೇಶ, ಕೋಶ ಬಿಡಿಸು, ಜಗದೀಶನೆಡೆಗೆ ನಡಿಸು!
ಸ್ತು ವಾಹನ ಬಿಡಿಸು, ನಿತ್ಯ ದೇವನಾಸೆಯಿರಿಸು!
ಭಾಗ್ಯ ಭೋಗವೆಲ್ಲ ತೆಗೆಸು, ಅರ್ಘ್ಯ ಪಾದ್ಯ ಪತಿಕರಿಸು!
ರ್ಣ ಭಿನ್ನ ಭೇದ ಮರೆಸು, ಸುವರ್ಣ ನಿನ್ನ ಪಾದದಲ್ಲಿರಿಸು!
ರಡು ಮಾತು ಬಿಡಿಸು, ಭವ್ಯ ಭಾವದಲಿರಿಸು!
ಲಿಂಗದಂಗ ಸುಡಿಸು, ಶಿವಲಿಂಗ ಒಡಲಲಿರಿಸು!
ಸುಜನಾರಿಷ್ಟ ಪೋಗೊಳಿಸು, ನಿರಂಜನನಿಷ್ಟ ಸಲಿಸು!!! ೨೮

ದೇಹಕ್ಕನಾರೋಗ್ಯವೇಕೆ ಕೊಟ್ಟೆ? (ಅ)   5(2885)

-ಹರ್ನಿಶಿ ನಾ ನಿನ್ನ ನಂಬಿಬಿಟ್ಟೆ! (ತ)
-ಕ್ಕ ಪರಿಹಾರಕ್ಕೆ ಮೊರೆಯಿಟ್ಟೆ!
ನಾಳೆ, ನಾಳೆಂದು ದಣಿಸಿಬಿಟ್ಟೆ!
ರೋಸಿಹೋಗೀ ಬಾಳು ಸಾಕೆಂದ್ಬಿಟ್ಟೆ! (ಭಾ)
-ಗ್ಯ ನೀನೆನಗೆಂದು ಕಣ್ಣೀರ್ಬಿಟ್ಟೆ!
ವೇಶ್ಯಾಭಕ್ತಿಯಿನ್ನೆಂದೋ ಸುಟ್ಬಿಟ್ಟೆ!
ಕೆಟ್ಟ ಸಹವಾಸ ಬಿಡಿಸ್ಬಿಟ್ಟೆ!
ಕೊಟ್ಟ ಭಾಷೆಗೆ ತಪ್ಪೆನೆಂದ್ಬಿಟ್ಟೆ! (ನಿ)
-ಟ್ಟೆ ನಿರಂಜನಾದಿತ್ಯನಲ್ಲಿಟ್ಟೆ!!!

ದೇಹಕ್ಕಾಯಾಸವೇಕಪ್ಪ?   3(1103)

ಸಿದಾಗುಂಡರಾಯ್ತಪ್ಪ! (ಸಿ)
-ಕ್ಕಾಗೆಲ್ಲಾ ತಿನ್ನಬೇಡಪ್ಪ!
ಯಾಕಿಷ್ಟು ಚಪಲವಪ್ಪ?
ತ್ಸಂಗಿಯಾಗಿಂತೇಕಪ್ಪ?
ವೇಳೆ ನಿಯಮಗತ್ಯಪ್ಪ!
ಗ್ಗನ್ಯಥಾ ಸಾಗದಪ್ಪ! (ತ)
-ಪ್ಪ, ನಿರಂಜನಾದಿತ್ಯಪ್ಪ!!!

ದೇಹಕ್ಕೆಷ್ಟು ಮಾಡಿದ್ರೂ ಸಾಲ!   5(2501)

ರಿನಾಮಕ್ಕಿಲ್ಲೆಂದೂ ಸೋಲ! (ಬೆ)
-ಕ್ಕೆಯೆಂಬುದದೇ ಮಾಯಾಜಾಲ! (ನಿ)
-ಷ್ಟುರೋಕ್ತಿ ಘೋರ ವಿಷಜ್ವಾಲ!
ಮಾಧವ ಹೃದಯ ವಿಶಾಲ! (ನೋ)
-ಡಿದವನ ಜನ್ಮ ಸಫಲ! (ತ)
-ದ್ರೂಪಿಯಾಗಿರ್ಪ ಬಹುಕಾಲ!
ಸಾಯುಜ್ಯ ಕೊನೇ ಪ್ರತಿಫಲ! (ಬಾ)
-ಲ ನಿರಂಜನಾದಿತ್ಯಾ ಫಲ!!!

ದೇಹದೊಳಹೊರಗೆಲ್ಲಾ ದೇವರು!   5(2815)

ರಕೆ ಅನ್ಯರಿಗೆ ಹೊರುವರು!
ದೊಡ್ಡವನ ದಡ್ಡನೆಂದನ್ನುವರು! (ಕ)
-ಳವಳದಿಂದ ಕಂಗಾಲಾಗುವರು!
ಹೊತ್ತು ವ್ಯರ್ಥವಾಗಿ ಕಳೆಯುವರು!
ಹಸ್ಯವರಿಯಬೇಕೀಗವರು!
ಗೆಳೆತನದಿಂದ ಬಾಳ್ಬೇಕವರು! (ಎ)
-ಲ್ಲಾ, ಗುರುಚಿತ್ತವೆಂದಿರ್ಬೇಕವರು!
ದೇವತ್ವ ಸಾಧಿಸಬೇಕೀಗವರು! (ಭ)
-ವಬಂಧ ಮುಕ್ತರಾಗಬೇಕವರು!
ರು? ನಿರಂಜನಾದಿತ್ಯನಂಶಜರು!!!

ದೇಹವಿದೆಲ್ಲಾ ದೇವರ ಗುಡಿ!   4(1684)

ರಿ, ಹರ, ಬ್ರಹ್ಮರಿಗೀ ಗುಡಿ!
ವಿಶಾಲಾಕ್ಷಿ, ಕಾಮಾಕ್ಷಿಗೀ ಗುಡಿ!
ದೆವ್ವಾದಿಗಳಿಗೂ ಇದೇ ಗುಡಿ! (ಎ)
-ಲ್ಲಾ ತೀರ್ಥಗಳ ಸಂಗಮಾ ಗುಡಿ!
ದೇಶ, ವಿದೇಶದಲ್ಲೆಲ್ಲಾ ಗುಡಿ! (ಅ)
-ವರವರಿಷ್ಟ ಸೇವೆಗೀ ಗುಡಿ! (ವ)
-ರಗುರು ಕೃಪೆಯೆಲ್ಲರ್ಗೀ ಗುಡಿ!
ಗುಟ್ಟದರಿತಗಿನ್ನಾವ ಗುಡಿ? (ನೋ)
-ಡಿಲ್ಲಿ ನಿರಂಜನಾದಿತ್ಯ ಗುಡಿ!!!

ದೇಹವೆಲ್ಲಾ ಸವೆದುಹೋಯ್ತಲ್ಲ!   5(2931)

ಗಲಿರುಳಾ ಚಿಂತೆಯೇನಿಲ್ಲ! (ಸಾ)
-ವೆನೆಂಬ ಭಯವೂ ಅದಕ್ಕಿಲ್ಲ! (ಕ)
-ಲ್ಲಾದ ಮನಕ್ಕಾವ ಅಂಟೂ ಇಲ್ಲ!
ದಾತ್ಮ ಚಿಂತನೆಯ ಬಿಟ್ಟಿಲ್ಲ!
ವೆಸನಗಳು ಲೇಶವೂ ಇಲ್ಲ!
ದುಸ್ಸಂಗವಂತೂ ಇಲ್ಲವೇ ಇಲ್ಲ!
ಹೋಮ, ಹವನದ ಹುಚ್ಚೂ ಇಲ್ಲ! (ಆ)
-ಯ್ತವಸಾನ ಆಸಗಳಿಗೆಲ್ಲ! (ಪು)
-ಲ್ಲ ನಿರಂಜನಾದಿತ್ಯ ಬೇವ್ಬೆಲ್ಲ!!!

ದೇಹಾಡಂಬರ ಬೇಡೆಂದ ಹಿಪ್ಪಿ! [ಆ]   5(2523)

-ಹಾರ ಸಿಕ್ಕಿದ್ದುಂಬೆನೆಂಬ ಹಿಪ್ಪಿ! (ಒ)
-ಡಂಬಡದೀ ಜಗವೆಂದ ಹಿಪ್ಪಿ!
ರಬೇಕು ಶಾಂತಿಯೆಂದ ಹಿಪ್ಪಿ!
(ಪ)ರಮಾತ್ಮ ಕೃಪೆ ಬೇಕೆಂದ ಹಿಪ್ಪಿ!
ಬೇರೇನೂ ಬೇಡೆನಗೆಂದ ಹಿಪ್ಪಿ! (ಬೇ)
-ಡೆಂಬುದ್ಬೇಕೆಂಬುದಿಲ್ಲೆಂದ ಹಿಪ್ಪಿ! (ಮ)
-ದ, ಮತ್ಸರೆನಗಿಲ್ಲೆಂದ ಹಿಪ್ಪಿ! (ದ)
ಹಿಸಿತಾಸೆಯಮಲೆಂದ ಹಿಪ್ಪಿ! (ಒ)
-ಪ್ಪಿ, ನಿರಂಜನಾದಿತ್ಯನನ್ನಪ್ಪಿ!!!

ದೇಹಾಯಾಸವಿಂದೇಕಯ್ಯಾ?   4(1497)

ಹಾಲ್ಬೆಣ್ಣೆ ಹೆಚ್ಚಾಯ್ತೇನಯ್ಯಾ? (ಆ)
-ಯಾಸ ಶಾಂತಿ ನಿನ್ನಿಂದಯ್ಯಾ!
ರ್ವಾಧಿಕಾರಿ ನೀನಯ್ಯಾ! (ಗೋ)
-ವಿಂದಾನಂದ ನಿನ್ನಿಂದಯ್ಯಾ!
ದೇಹ, ಬುದ್ಧಿ ನಿನ್ನದಯ್ಯಾ!
ರ್ಮ ಕಾರಣ ನೀನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಯ್ಯಾ!!!

ದೈವ ದ್ರೋಹಿಗೆ ಏನು ಶಿಕ್ಷೆ?   6(3681)

ಸನಾನ್ನ ಕಳ್ಕೊಳ್ವ ಶಿಕ್ಷೆ!
ದ್ರೋಣಾಚಾರ್ಯಗಾದಂಥಾ ಶಿಕ್ಷೆ!
ಹಿತೈಷಿ ಕೈ ಬಿಡುವ ಶಿಕ್ಷೆ! (ಹ)
-ಗೆಗಳಿಂದ ಕಾಟದ ಶಿಕ್ಷೆ!
ಕಲವ್ಯನ ಶಾಪ ಶಿಕ್ಷೆ!(ಮಾ)
-ನುಷ ಜನ್ಮ ವ್ಯರ್ಥಾಗ್ವ ಶಿಕ್ಷೆ!
ಶಿವ ಕಾಮನಿಗಿತ್ತ ಶಿಕ್ಷೆ! (ಶಿ)
-ಕ್ಷೆ ನಿರಂಜನಾದಿತ್ಯೋಪೇಕ್ಷೆ!!!

ದೈವಿಕ ವೃದ್ಧಿಯಿಂದೆಲ್ಲಾ ಸಿದ್ಧಿ!   4(1431)

ವಿಷಯಾಸೆ ಸತ್ತಾಗದು ವೃದ್ಧಿ!
ರ್ಮವಿದಕ್ಕಾದಾಗದು ಸಿದ್ಧಿ!
ವೃತ್ತಿ ವಿನಾಶದಿಂದದು ವೃದ್ಧಿ! (ಬು)
-ದ್ಧಿ, ಶುದ್ಧಿ ಹೀಗಾಗಿ ಅದು ಸಿದ್ಧಿ!
ಯಿಂಬಾಗಿ ಆಗುವುದಭಿವೃದ್ಧಿ! (ಎ)
-ದೆಗೆಡದೆ ಸಾಧಿಪುದಾ ಸಿದ್ಧಿ! (ಚೆ)
-ಲ್ಲಾಟ ಮನಕಿಲ್ಲದಾಗಾ ವೃದ್ಧಿ!
ಸಿದ್ಧಿಯಿದೇ ನಿಜಾನಂದ ಸಿದ್ಧಿ! (ಸಿ)
-ದ್ಧಿ, ನಿರಂಜನಾದಿತ್ಯಾನಂದಾಬ್ಧಿ!!!

ದೈವಿಕನಾಗಿವ ಬೆಳೆದುಳಿದ!   5(2993)

ವಿಷಯಿಯಾಗುವ ಬೆಳೆದಳಿದ!
ಷ್ಟ, ನಷ್ಟಗಳಿಗೆ ಒಳಗಾದ!
ನಾಚಿಕೆಗೇಡಿನ ಕಾರ್ಯಿ ಮಾಡಿದ!
ಗಿರಿಜಾಪತಿಗೆ ದ್ರೋಹ ಬಗೆದ!
ರದನಿವನೆಂದರಿಯದಾದ!
ಬೆಲೆ ಅಮೃತದ್ದು ತಿಳಿಯದಾದ! (ಹ)
-ಳೆಯ ಮೂಳೆಯನ್ನಗಿವವನಾದ!
ದುಸ್ಸಂಗದಲ್ಲಿ ಬಿದ್ದು ಹಾಳಾದ! (ಬಾ)
-ಳಿನಿಷ್ಟಾರ್ಥ ಸಾಧಿಸದವನಾದ! (ಕಂ)
-ದ ನಿರಂಜನಾದಿತ್ಯನಿವನಾದ!!!

ದೈವೀಕ ಸುಖಪ್ರದಾಯಕ!   6(3845)

ವೀರ್ಯನಾಶಕ ದುಃಖಕಾರಕ!
ಶ್ಮಲ ಕಳೆಯ್ಬೇಕ್ಸಾಧಕ!
ಸುತೆ, ಸುತಾದಿಗಳ್ಭಾಧಕ!
ರಾರಿಯ ಧ್ಯಾನ ತಾರಕ!
ಪ್ರಜೆಗಿರ್ಬೇಕಿದು ಜ್ಞಾಪಕ!
ದಾಶರಥಿಗಾಗ್ದತಿರೇಕ!
ಜ್ಞಕ್ಕವ ಮಾರ್ಗದರ್ಶಕ! (ಲೋ)
-ಕ ನಿರಂಜನಾದಿತ್ಯಾತ್ಮಕ!!!

ದೈವೀಗುಣ ಸಂಪನ್ನನಾಗು!   5(2773)

ವೀರ ಮಾರುತಿಯೇ ನೀನಾಗು!
ಗುರುವಿಗೆ ಗುಲಾಮನಾಗು! (ಪ್ರಾ)
-ಣನಾಥನಿಚ್ಛಾವರ್ತಿಯಾಗು!
ಸಂದೇಹ ಪಡದವನಾಗು!
ರಮಾರ್ಥಾನುಭವಿಯಾಗು! (ನಿ)
-ನ್ನನ್ನು ನೀನರಿತವನಾಗು!
ನಾಮಸ್ಮರಣಾಸಕ್ತನಾಗು! (ಆ)
-ಗು ನಿರಂಜನಾದಿತ್ಯನಾಗು!!!

ದೊಡ್ಡಯ್ಯಾ! ವಿಚಾರ ತಿಳಿಯಿತಯ್ಯಾ! (ಅ)   1(125)

-ಡ್ಡ ದಾರಿ ನೀನು ಹಿಡಿದಿಲ್ಲವಯ್ಯಾ! (ಅ)
-ಯ್ಯಾ! ನೀನು ದತ್ತನಿಗೆ ಮಗನಯ್ಯಾ!
ವಿಷಾದ ಪಡದೆ ನೀ ಭಜಿಸಯ್ಯಾ!
ಚಾಡಿ, ಗೀಡಿ ಕೇಳದಿರಬೇಕಯ್ಯಾ!
ತ್ನ ಬಚ್ಚಿಟ್ಟು ಮಣ್ಣುಣ್ಣದಿರಯ್ಯಾ!
ತಿರುಕ ನೀ ಮರೆಯದಿರಯ್ಯಾ! (ಅ)
-ಳಿದರೂ ನಿನ್ನಲಿ ಭಕ್ತಿ ಭಾವಯ್ಯಾ!
ರುವರು ಗುರು ಪ್ರಸಾದವಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಕಾಯ್ವನಯ್ಯಾ!!!

ದೊಡ್ಡವನೆನಿಸಿಕೊಂಡಿಲ್ಲ! (ಅ)   5(2747)

-ಡ್ಡದಾರಿ ಹಿಡಿಯಲೂ ಇಲ್ಲ! (ಅ)
-ವರಿವರ ಮಾತಾಡುತ್ತಿಲ್ಲ! (ಮ)
-ನೆಮನೆಗಲೆಯುವುದಿಲ್ಲ!
ನಿಶ್ಚಲ ತತ್ವ ಮರೆತಿಲ್ಲ! (ಹ)
-ಸಿವೆ ನಿವಾರಣೆಯಾಗಿಲ್ಲ!
ಕೊಂಟು ಮರವಿನ್ನೂ ಆಗಿಲ್ಲ!
(ಮ)ಡಿಯುವ ಭಯ ಮನಕಿಲ್ಲ! (ಬ)
-ಲ್ಲ, ನಿರಂಜನಾದಿತ್ಯನೆಲ್ಲ!!!

ದೊಡ್ಡವರ ದೊಡ್ಡಯ್ಯ ಮಾರ್ತಾಂಡಯ್ಯ! (ಹೆ)   1(248)

-ಡ್ಡರಹಂಕಾರದಿಂದುಬ್ಬಿಹರಯ್ಯ!
ರ ಋಷಿಗಳಿಗುಪೇಕ್ಷೆಯಯ್ಯಾ!
ಗಳೆರಾಗ ಹೆಚ್ಚಿರುವುದಯ್ಯಾ!
ದೊರೆತನವೆಲ್ಲರಿಗೆ ಬೇಕುಯ್ಯಾ! (ದ)
-ಡ್ಡರಿಗೂ ಉನ್ನತಾಧಿಕಾರವಯ್ಯಾ! (ಕೈ)
-ಯ್ಯ ಚಾಚುವರು ಅಲ್ಪಲಂಚಕಯ್ಯಾ!
ಮಾರುವರಾಹಾರತ್ಯಾಸೆಯಿಂದಯ್ಯಾ! (ಮಾ)
-ರ್ತಾಂಡ ಮಂಡಲಕೇರುವಾಸೆಯಯ್ಯಾ! (ಒ)
-ಡಲೆಷ್ಟು ದಿನವೆಂದರಿಯರಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯನೇ ದತ್ತಯ್ಯ!!!

ದೋಸೆ ಆಸೆ ಅನಾರೋಗ್ಯ ಕೂಸೇ! (ಕಿ)   3(1033)

-ಸೆಯಲ್ಲಿ ಸದಾ ಅದೇನು ಕೂಸೇ?
ಗಾಗ್ಗೇನೂ ತಿನ್ನಬೇಡ ಕೂಸೇ! (ಸೀ)
-ಸೆಯಲ್ಲಿ ಹಾಲಿದೆ ಕುಡಿ ಕೂಸೇ!
ಡೆ, ವಡೆ ಮೈಗಾಗದು ಕೂಸೇ! (ಅ)
-ನಾನಾಸು, ಕಿತ್ತಳೆ ತಿನ್ನು ಕೂಸೇ!
ರೋಗಿಯಾಗದಂತೆ ಇರು ಕೂಸೇ! (ಯೋ)
-ಗ್ಯವಿದು ಪರಮ ಭಾಗ್ಯ ಕೂಸೇ!
ಕೂಡ್ಯಾಡುತ್ತಮರೊಡನೆ ಕೂಸೇ!
ಸೇರು ನಿರಂಜನಾದಿತ್ಯ ಕೂಸೇ!

ದೋಸೆ ತಿನ್ನ ಬೇಕೆಂಬಾಸೆ ಮನಸಿಗೆ! (ಹೊ)   6(3946)

-ಸೆಯಬಾರ್ದಾರನ್ನೆಂಬುದೂ ಮನಸಿಗೆ!
ತಿನ್ನುವುದ್ರಿಂದದ ವಾಸನೆ ಹೊಟ್ಟೆಗೆ! (ತ)
-ನ್ನ ಚಪಲದಿಂದಾಗಿಂದ್ರಿಯಕ್ಕೆ ಬೇಗೆ!
ಬೇಕಿಲ್ಲದ್ದನ್ನು ದೂಡಬೇಕು ಹೊರಗೆ!
ಕೆಂಡ ಕಾರಿದ್ರೆ ಕಂಡದ್ದನ್ನಂದ್ರೆ ಹೇಗೆ?
ಬಾಯಿ, ಕೈಗಳ್ಗುಳಿಗಾಲವಿಲ್ಲ ಹೀಗೆ! (ಮೀ)
-ಸೆ ಹಣ್ಣಾದ್ರೂ ಎಲ್ಲಾ ಬೇಕು ಮನಸ್ಸಿಗೆ!
ರುಕೇಷ್ಟ ಸಿದ್ಧಿಗಾಗಿ ಮನಸಿಗೆ!
ಶ್ವರದಿಂದದನ್ನೆಳೆವುದು ಹೇಗೆ!
ಸಿರಿಯರಸನ ದಯೆಯಿಂದದಾಗೆ! (ಹೀ)
-ಗೆ ನಿರಂಜನಾದಿತ್ಯಾನಂದ ನೀನಾಗೆ!!!

ದೋಸೆ ಹಾಕಿ ಕೊಡಲೇನು? [ಆ]   3(1290)

-ಸೆ ನನಗಿರುವುದೇನು? (ಮ)
-ಹಾ ಯೋಗಿ ನಾನಲ್ಲವೇನು? (ಹಾ)
-ಕಿ ದಣಿಯ ಬೇಡ ನೀನು!
ಕೊಡು ತನು, ಮನ ನೀನು! (ಮಾ)
-ಡ ಬೇಕೆನ್ನ ಧ್ಯಾನ ನೀನು!
ಲೇಸದರಿಂದಲ್ಲವೇನು? (ಭಾ)
-ನು ನಿರಂಜನಾದಿತ್ಯಾನು!!!

ದ್ರೋಹೀನಾಮ, ರೂಪ, ನಿರ್ನಾಮ!   4(1425)

ಹೀನವೃತ್ತಿಯಾಸ್ತಿ ನಿರ್ನಾಮ!
ನಾನಾತಂತ್ರ, ಯಂತ್ರ, ನಿರ್ನಾಮ!
ದೋನ್ಮತ್ತ ಮನ ನಿರ್ನಾಮ! (ಊ)
-ರೂರಪಪ್ರಚಾರ ನಿರ್ನಾಮ!
ಟ್ಟ, ಪರಿವಾರ ನಿರ್ನಾಮ!
ನಿಬಿಡಾಂಧಕಾರ ನಿರ್ನಾಮ! (ದು)
ರ್ನಾಟಕಾಭಿನಯ ನಿರ್ನಾಮ! (ನಾ)
ನಿರಂಜನಾದಿತ್ಯಾರಾಮ!!!

ದ್ರೌಪದಿಗೆ ಜಯ, ದುಃಶಾಸನಗೆ ಭಯ!   6(3624)

ತಿತಪಾವನ ಕೃಷ್ಣನಿತ್ತನಭಯ!
ದಿಕ್ಕಿಲ್ಲದನಾಥರ್ಗವನಿಂದ ವಿಜಯ! (ಹ)
-ಗೆಗಳಾದ ಕೌರವರಿಗಾಯ್ತಪಜಯ!
ಗತ್ಪತಿಯ ಕೆಣಕಿದವರ್ಗಪಾಯ!
ಜ್ಞ ರಕ್ಷಣೆಗಾಯ್ತವನಿಂದ ಸಹಾಯ!
ದುಃಖಕಾರಕಾಸುರರ ಗೈದನು ಲಯ!
ಶಾಸ್ತ್ರ, ಪುರಾಣಾದಿಗಳಿಗಿವನೇ ಧ್ಯೇಯ!
ಜ್ಜನ ಸುದಾಮನಿವನಿಗೆ ಗೆಳೆಯ!
ರನ ಸಾರಥ್ಯ ಮಾಡಿತ್ತನು ಗೀತೆಯ!
ಗೆಲಿಸಿ ಯುದ್ಧವ ಪಾಲಿಸಿದ ಪ್ರಜೆಯ!
ಕ್ತಿ ಭಾವಕ್ಕಾಗಿ ಮೆಚ್ಚಿದನು ರಾಧೆಯ!
ದುಪ ನಿರಂಜನಾದಿತ್ಯ ದತ್ತಾತ್ರೇಯ!!!

ದ್ರೌಪದಿಯ ಭಕ್ತಿ ಕೃಷ್ಣನ ಶಕ್ತಿ!   4(1496)

ತಿ ಕೈ ಬಿಟ್ಟಾಗ ಮಾಡಿದ ಭಕ್ತಿ!
ದಿವ್ಯ ರೀತಿಯಲ್ಲಿ ತಂದಿತು ಶಕ್ತಿ! (ಕಾ)
-ಯ, ಮಾನಉಳಿಸೆಂದೊರೆದ ಭಕ್ತಿ! (ಅ)
-ಭಯ ಪ್ರದಾನ ಮಾಡಿತಂದು ಶಕ್ತಿ! (ಯು)
-ಕ್ತಿಯಿಲ್ಲದವಳ ಅನನ್ಯ ಭಕ್ತಿ!
ಕೃಷ್ಣಗವಕಾಶ ತೋರಲು ಶಕ್ತಿ! (ಕೃ)
-ಷ್ಣ ಗತಿಯೆಂದೊರಲಿತಂದು ಭಕ್ತಿ! (ಆ)
-ನತೋದ್ಧಾರ ಮಾಡಿತಾಗಂದು ಶಕ್ತಿ!
ಶಿಮುಖಿಯ ಕಾಪಾಡಿತು ಭಕ್ತಿ! (ಭ)
-ಕ್ತಿ, ನಿರಂಜನಾದಿತ್ಯಾನಂದ ಶಕ್ತಿ!!!

ದ್ವಾದಶಾದಿತ್ಯ ದರ್ನನ!   1(136)

ಶೇಂದ್ರೈಕಾದಶೀ ಮನ!
ಶಾಸ್ತ್ರಾರ್ಥಮಾಡು ಮನನ!
ದಿಟ ಮಾಡಿನ್ನು ಜೀವನ!
ತ್ಯಜಿಸು ಭ್ರಾಂತಿ ಭಾವನ!
ತ್ತ ನೀ ಅರ್ಥ ಪಾವನ! (ದ)
-ರ್ನಮ, ದ್ವಾದಶೀ ಪಾರಣ! (ಅ)
-ನರ್ಥನಲ್ಲ ನಿರಂಜನ!!!

ದ್ವಾಪರ ಯುಗದ ಮಹಾಭಾರತ!   3(1311)

ರಮ ಪುರುಷ ಕೃಷ್ಣಾ ಭಾರತ!
ಕ್ಕಸಾಂತಕನಾ ಮಹಾ ಭಾರತ!
ಯುಕ್ತ ಗೀತಾನಾಥ ಕೃಷ್ಣಾ ಭಾರತ!
ರ್ವ ರಹಿತಾತ್ಮಾ ಮಹಾಭಾರತ! (ಯಾ)
-ದವ ವಂಶರತ್ನ ಕೃಷ್ಣಾ ಭಾರತ!
ದನ ಮೋಹನಾ ಮಹಾ ಭಾರತ!
ಹಾನಿ ವೃದ್ಧಿಗೀಶ ಕೃಷ್ಣಾ ಭಾರತ! (ಭೂ)
-ಭಾರ ಹರ ಧೀರಾ ಮಹಾಭಾರತ! (ವ)
-ರ ಕರುಣಾಮೂರ್ತಿ ಕೃಷ್ಣಾ ಭಾರತ! (ಸ್ಥಿ)
-ತ ಶ್ರೀ ನಿರಂಜನಾದಿತ್ಯಾ ಭಾರತ!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ