ಡಂಗುರ ಸಾರಬೇಕು ನಿನ್ನ ಮಹಿಮೆ!   6(3977)

ಗುಡಿಗಳಲ್ಲೆಲ್ಲಾ ಕಾಣ್ಬೇಕಾ ಮಹಿಮೆ!
ಕ್ತಪಾತ ನಿಲ್ಲಿಸಬೇಕಾ ಮಹಿಮೆ!
ಸಾಧನೆ ಸಾರ್ಥಕ ಮಾಡ್ಬೇಕಾ ಮಹಿಮೆ!
ಣರಂಗಕ್ಕಿಳಿಸ್ಬಾರದಾ ಮಹಿಮೆ!
ಬೇಕು ದರ್ಶನಾನುಭವದ ಮಹಿಮೆ!
ಕುಲ, ಶೀಲ ಬೆಳಗಬೇಕಾ ಮಹಿಮೆ!
ನಿಜಗೊಳಿಸ್ಬೇಕಾರ್ಯೋಕ್ತಿಯಾ ಮಹಿಮೆ! (ನಿ)
-ನ್ನ ಸಾಯುಜ್ಯನುಗ್ರಹಿಸ್ಬೇಕಾ ಮಹಿಮೆ!
ತ ಭೇದ ಹತ ಮಾಡ್ಬೇಕಾ ಮಹಿಮೆ!
ಹಿತೈಷಿ ಸರ್ವರ, ತೊರ್ಬೇಕಾ ಮಹಿಮೆ! (ಭ್ರ)
-ಮೆಹರ ನಿರಂಜನಾದಿತ್ಯ ಮಹಿಮೆ!!!

ಡಾ|| ಜಾಕೀರ್‍ ಹುಸೇನರಾತ್ಮಕ್ಕೆ ಶಾಂತಿ!   2(758)

ಜಾತಿ ಭೇದವಿಲ್ಲದಾ ಆತ್ಮಕ್ಕೆ ಶಾಂತಿ!
ಕೀಳು ಮೇಲೆನ್ನದಿದ್ದಾ ಆತ್ಮಕ್ಕೆ ಶಾಂತಿ! (ಕ)
-ರ್‍ಕಶ ಮಾತಿಲ್ಲದಾ ಆತ್ಮಕ್ಕೆ ಶಾಂತಿ!
ಹುಟ್ಟು ಸಾವೇನೆಂದರಿತಾತ್ಮಕ್ಕೆ ಶಾಂತಿ!
ಸೇವೆಯೇ ದೈವವಾಗಿದ್ದಾತ್ಮಕ್ಕೆ ಶಾಂತಿ!
ನ್ನದೆಂಬುದಿಲ್ಲದಿದ್ದಾತ್ಮಕ್ಕೆ ಶಾಂತಿ!
ರಾಜಭೋಗ ಕಡೆಗಂಡಾತ್ಮಕ್ಕೆ ಶಾಂತಿ! (ಆ)
-ತ್ಮ, ಅಖಂಡವೆಂದರಿತಾತ್ಮಕ್ಕೆ ಶಾಂತಿ! (ಅ)
-ಕ್ಕೆ ಸರ್ವ ಕಲ್ಯಾಣವೆಂದಾತ್ಮಕ್ಕೆ ಶಾಂತಿ!
ಶಾಂತಿಪ್ರಿಯನ ಆ ದಿವ್ಯಾತ್ಮಕ್ಕೆ ಶಾಂತಿ! (ಪ್ರೀ)
-ತಿ ಶ್ರೀ ನಿರಂಜನಾದಿತ್ಯಾತ್ಮಕ್ಕೆ ಶಾಂತಿ!!!

ಡೋಲಿನ ಸದ್ದು ಕೇಳುತಿದೆ! (ಮಾ)   6(3570)

-ಲಿಕಗದು ಬೇಡವಾಗಿದೆ!
ಷ್ಟ, ಕಷ್ಟವನಿಗೇನಿದೆ?
ದ್ದಿಲ್ಲದಿರ್ಬೇಕೆಂಬುದಿದೆ! (ಸ)
-ದ್ದು ಮಾಡಿ ಡೊಲ್ಹರಿಯಲಿದೆ!
ಕೇಳಿದವ್ರು ಪೆಚ್ಚಾಗಲಿದೆ! (ಬಾ)
-ಳು ಗೋಳಾಗಿ ಹೋಳಾಗಲಿದೆ! (ಮಿ)
-ತಿ ಮೀರ್ದಿದ್ರೆ ಗೌರವವಿದೆ! (ತಂ)
-ದೆ ನಿರಂಜನಾದಿತ್ಯನೆಂದೆ!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ