ಚಂದ, ಗೋವಿಂದ, ಮುಕುಂದ, ನಿಜಾನಂದ!   5(2585)

ರ್ಶನ ಮನೋಹರ ಯಶೋದಾನಂದ!
ಗೋವರ್ಧನ ಗಿರಿಧಾರಿ ಗೋಪಾನಂದ!
ವಿಂಧ್ಯ ಹಿಮಾಚಲ ರೂಪಾ ಆತ್ಮಾನಂದ!
ತ್ತ ಸ್ವರೂಪಿ ತಾನಾಗ್ಯಭೇದಾನಂದ!
ಮುಕ್ತಿ, ಭುಕ್ತಿದಾತ ಮಾತಾಪಿತಾನಂದ!
ಕುಂತೀ ಕುಮಾರರಾಪ್ತಾ ದ್ವಾರಕಾನಂದ!
ನುಜ ದಮನ ದಾಮೋದರಾನಂದ!
ನಿತ್ಯ, ಸತ್ಯ, ಸದ್ಗುರು ಶ್ರೀ ಶಿವಾನಂದ!
ಜಾಗ್ರತ್ಯಾದ್ಯವಸ್ಥಾತೀತಾ ಬ್ರಹ್ಮಾನಂದ! (ಅ)
-ನಂಗಪಿತ ಹರಿ ಜಿತ ಕಾಮಾನಂದ! (ನಂ)
-ದಕಂದ ಶ್ರೀ ನಿರಂಜನಾದಿತ್ಯಾನಂದ!!!

ಚಂದನ ಶಿಲಾನನಕ್ಕೇಕೆ ಲೇಪನ? (ಸುಂ)   6(3589)

-ದರ ಬಾಲಾನನಕ್ಕಾಗಲಾ ಲೇಪನ!
ಶ್ವರ ದೇಹಕ್ಕೆ ಸಂಸಾರ ಲೇಪನ!
ಶಿವಲಿಂಗಕ್ಕೆ ಸದಾ ಭಸ್ಮ ಲೇಪನ!
ಲಾಭದಾಯಕವಿದು ಜನ್ಮ ಪಾವನ!
ಮಿಸಬೇಕು ಅದಕ್ಕೆ ಪ್ರತಿ ದಿನ!
ರ ಹರನಾಗಲು ಬೇಕು ಸಾಧನ! (ಬೆ)
-ಕ್ಕೇಕೆ ಬೇಕು? ಅದು ಪತನ ಕಾರಣ!
ಕೆಟ್ಟ ಮೇಲ್ಬುದ್ಧಿ ಬಂದ್ರೇನು ಪ್ರಯೋಜನ?
ಲೇಸಕ್ಕು! ಸತತ ಮಾಡಾತ್ಮ ಚಿಂತನ!
ರಮಾರ್ಥ ಸಾಗರ ಗೀತಾ ಬೋಧನ!
ರ, ಹರಿ, ನಿರಂಜನಾದಿತ್ಯಾನನ!!!

ಚಂದ್ರನನ್ನು ತುಳಿದು ಬಂದಾಯ್ತು! [ಭ]   2(945)

-ದ್ರಲೋಕ ಶಾಂತಿಗೇನು ಮಾಡ್ಯಾಯ್ತು?
ನ್ನ, ನಿನ್ನದೆಂಬುದು ಹೆಚ್ಚಾಯ್ತು! (ಹೊ)
-ನ್ನು, ಮಣ್ಣಿನಾಸೆ ಅಧಿಕವಾಯ್ತು!
ತುದಿ, ಮೊದಲಾಸೆಗಿಲ್ಲದಾಯ್ತು! (ಬಾ)
-ಳಿನಲ್ಲೆಲ್ಲೂ ನೆಮ್ಮದಿ ಹಾಳಾಯ್ತು!
ದುರ್ವಿಷಯದಿಂದ ದುರಿತಾಯ್ತು!
ಬಂಧು ಭಾವಕ್ಕೆಡೆಯಿಲ್ಲದಾಯ್ತು!
ದಾಶರಥಿಯ ಧ್ಯಾನ ಬೇಡಾಯ್ತು! (ಆ)
-ಯ್ತು, ನಿರಂಜನಾದಿತ್ಯ ಚಿತ್ತಾಯ್ತು!!!

ಚಂದ್ರಮಂಡಲ ಸುತ್ತಿ ಬಂದರಯ್ಯಾ!   2(800)

ದ್ರವ್ಯವೇನೂ ಸಿಗಲಿಲ್ಲವಯ್ಯಾ!
ಮಂಜಿನೊಳಗೂ ತೂರಿಹೋದರಯ್ಯಾ! (ಒ)
-ಡಲಿನಾಸೆ ತೊರೆದು ಹೋದರಯ್ಯಾ!
ಭ್ಯವಾದದ್ದು ಚರ್ಮವ್ಯಾಧಿಯಯ್ಯಾ!
ಸುರಕ್ಷಿತವಾಗಿ ಬಂದಿಹರಯ್ಯಾ! (ಮ)
-ತ್ತಿನ್ಯಾವಾಗ ಪ್ರಯಾಣ ಗೊತ್ತಿಲ್ಲಯ್ಯಾ!
ಬಂದವರಿಗೆಲ್ಲೆಲ್ಲೂ ಸ್ವಾಗತವಯ್ಯಾ!
ಯಾಮಯ ಪರಮೇಶ್ವರನಯ್ಯಾ!
ಕ್ತ ಮಾಂಸದ ಗೊಂಬೆಂತಿರ್ಪುದಯ್ಯಾ? (ಅ)
-ಯ್ಯಾ! ನಿರಂಜನಾದಿತ್ಯನೇ ಬಲ್ಲಯ್ಯಾ!!!

ಚಂದ್ರಯಾತ್ರೆಯದೊಂದದ್ಭುತ ಸಾಹಸ! (ಭ)   4(2143)

-ದ್ರವದರಿಂದಾಗದಿಳೆಯ ನಿವಾಸ! (ಮಾ)
-ಯಾ ಜೀವನುದ್ಧಾರ ಕರ್ತ ಶ್ರೀನಿವಾಸ! (ಪಾ)
-ತ್ರೆಯಶುದ್ಧಗೊಳಿಸುವುದೀ ಪ್ರವಾಸ! (ಕಾ)
-ಯದಭಿಮಾನ ಬಿಟ್ಟಾಗಬೇಕು ದಾಸ!
ದೊಂಬಿ, ದರೋಡೆಯಿಂದ ಬಹಳಾಯಾಸ!
ತ್ತ ಕೃಪೆಯಿಂದಾಗ್ವುದು ನಿರಾಯಾಸ! (ಅ)
-ದ್ಭುತದಾತ್ಮಾನುಭವಕ್ಕಾಗ್ಬೇಕಭ್ಯಾಸ!
ತ್ತಬಡಿಕನಾದರದೊಂದಾಭಾಸ!
ಸಾಧು, ಸಜ್ಜನರದ್ದಾಗ್ಬೇಕ್ಸಹವಾಸ!
ಗಲಿರುಳಪ್ಪನ ಧ್ಯಾನ ಶ್ರೇಯಸ!
ದ್ಗುರು ನಿರಂಜನಾದಿತ್ಯ ಸರ್ವೇಶ!!!

ಚಕ್ರ ತಿರುಗಿತು! ವಕ್ರ ಹರಿಯಿತು!   1(157)

ಕ್ರಮ ಜರುಗಿತು! ಭ್ರಮೆ ಕಳೆಯಿತು!!
ತಿಥಿ ಮುಗಿಯಿತು! ಮತಿ ಬೆಳಗಿತು!!
ರುಚಿ ಅಳಿಯಿತು! ಶುಚಿ ಉಳಿಯಿತು!!
ಗಿರಿ ನಡುಗಿತು! ಧೆ

ರ್ಯ ಪಡಿಸಿತು!!
ತುಟಿ ಅದುರಿತು! ದಿಟ ಬದುಕಿತು!!
ನ ಉರಿಯಿತು! ಘನ ಉದಿಸಿತು!!
ಕ್ರತು ನಡೆಯಿತು! ವ್ರತ ಫಲಿಸಿತು!!
ಸ್ತ ಸ್ವಸ್ಥವಾಯ್ತು! ಸ್ಥಿತಿ ಸ್ಥಿರವಾಯ್ತು!!
ರಿಪು ಅಡಗಿತು! ಪುರಿ ಅಡಸಿತು!!
ಯಿಂಪು ಕೇಳಿಸಿತು! ತಂಪು ಸುಳಿಯಿತು!!
ತುಷ್ಟಿ ನಿರಂಜನಾದಿತ್ಯಗುಂಟಾಯಿತು!!!

ಚಕ್ರ ತಿರುಗುತಿದೆ! (ವ)   2(602)

-ಕ್ರ ತತ್ತರಿಸುತಿದೆ! (ಸ್ಥಿ)
-ತಿ ಉತ್ತಮಾಗುತಿದೆ! (ಅ)
-ರುಚಿ ಅಡಗುತಿದೆ!
ಗುಣ ಕಾಣಿಸುತಿದೆ! (ಮ)
-ತಿ ಪ್ರಕಾಶಿಸುತಿದೆ! (ಎ)
-ದೆ ನಿರಂಜನಾಗಿದೆ!!!

ಚಕ್ರ ತಿರುಗುತಿದೆ, ಗಾಳಿ ಬೀಸುತಿದೆ! (ಆ)   2(768)

-ಕ್ರಮಿಸಿದುರಿ ಬಿಸಿಲು ತಂಪಾಗುತಿದೆ!
ತಿತಿ, ಸೂರ್ಯಾಸ್ತಮಾನಕ್ಕೊಳಗಾಗುತಿದೆ!
ರುಧಿರ ವರ್ಣಾಕಾಶದಲಿ ಕಾಣುತಿದೆ!
ಗುಡಿ ಗೋಪುರದ ಗಂಟೆ ಸದ್ದಾಗುತಿದೆ!
ತಿರುಮಲೇಶನ ಭಜನೆ ಕೇಳುತಿದೆ! (ಎ)
-ದೆಯೊಳಗೆ ಮಧುರ ನಾದವಾಗುತಿದೆ!
ಗಾನ, ತಾಳ, ಮೇಳಗಳಿಂದಿಂಪಾಗುತಿದೆ! (ನ)
-ಳಿನನಾಭನಿಗಲಂಕಾರವಾಗುತಿದೆ!
ಬೀದಿಗಳೆಲ್ಲೆಲ್ಲೂ ಚೊಕ್ಕಟವಾಗುತಿದೆ!
ಸುಮನೋಹರ ಸುವಾಸನೆ ಬರುತಿದೆ!
ತಿಮ್ಮಪ್ಪನ ಉತ್ಸವ ಸಾಗಿ ಬರುತಿದೆ! (ಇ)
-ದೆ, ನಿರಂಜನನಿಗಾನಂದವಾಗುತಿದೆ!!!

ಚಕ್ರ ತಿರುಗ್ಲಿ, ಗಾಳಿ ಬರ್ಲಿ!   2(880)

ಕ್ರಮ ಸುವ್ಯವಸ್ಥೆಯಿಂದಿರ್ಲಿ! (ಗ)
-ತಿ ಹಿತಕರವಾದುದಿರ್ಲಿ! (ಗು)
-ರು ಧ್ಯಾನಕ್ಕಡ್ಡಿಯಾಗದಿರ್ಲಿ! (ಸಾ)
-ಗ್ಲಿ ಸೇವಾತ್ಮ ಭಾವದಿಂದಿರ್ಲಿ!
ಗಾನ ಭಕ್ತಿಭಾವದಿಂದಿರ್ಲಿ! (ಬಾ)
-ಳಿದರಿಂದ ಸುಖದಿಂದಿರ್ಲಿ!
ಲ, ರಾಮಬಲವೊಂದಿರ್ಲಿ! (ಬ)
-ರ್ಲಿ, ನಿರಂಜನಾದಿತ್ಯನಿರ್ಲಿ!!!

ಚಕ್ಲಿ ತಿನ್ನೋಣವೆಂದ್ಕೊಂಡ್ಬಿಟ್ಟೆ!   5(2548)

ಕ್ಲಿಷ್ಟ ಹಲ್ಲಿಗದೆಂದ್ಬಿಟ್ಟಿಟ್ಟೆ!
ತಿನ್ಬೇಕ್ಹಸಿದ್ರೆ ಮಾತ್ರೆಂದ್ಬಿಟ್ಟೆ! (ತಿ)
-ನ್ನೋದ್ಕುಡ್ಯೋದೆಷ್ಟ್ಕಾಲವೆಂದ್ಬಿಟ್ಟೆ! (ಕ್ಷ)
-ಣಕ್ಕೊಂದ್ಬುದ್ಧಿಯಿರ್ಬಾರ್ದೆಂದ್ಬಿಟ್ಟೆ! (ಸೇ)
-ವೆಂಬುದಿರಲೆಂದೆಂದೆದ್ಬಿಟ್ಟೆ! (ನೊಂ)
-ದ್ಕೊಂಡು ಮಾಡ್ಬಾರದದೆಂದ್ಬಿಟ್ಟೆ! (ಗ)
ಡ್ಬಿಡಿಯಿಂದಡ್ದಿಯದ್ಕೆಂದ್ಬಿಟ್ಟೆ! (ಬ)
-ಟ್ಟೆ, ನಿರಂಜನಾದಿತ್ಯನ್ದುಟ್ಟೆ!!!

ಚದುರಂಗ ಬಲದೊಳಗರಸ!   4(2117)

ದುಷ್ಟ ವೈರಿಗಳಿಂದ ದೂರರಸ!
ರಂಜಿಸ್ಬೇಕ್ತನ್ನವರನ್ನೀಗರಸ!
ಡಿಬೆಡಿಗೈದರಾಗ್ದೀಗರಸ!
ಹ್ಳೆಚ್ಚರವಾಗಿರ್ಬೇಕೀಗರಸ! (ಅ)
-ಲಕ್ಷ್ಯದಿಂದ ಪದಚ್ಯುತನರಸ!
ದೊಡ್ಡಸ್ತಿಕೆ ಬಿಡಬೇಕೀಗರಸ! (ಒ)
-ಳ, ಹೊರ ನೋಡ್ಯಾಳಬೇಕೀಗರಸ! (ರಂ)
-ಗನಾಥಗೀಗಾಳಾಗಬೇಕೆರಸ! (ವ)
-ರಗುರು ಅವನೆನಬೇಕರಸ! (ದಾ)
-ಸ ನಿರಂಜನಾದಿತ್ಯನಿಗರಸ!!!

ಚಪಲ ವಿಫಲ ಕಾಪಾಲಿಯಿಂದ!   3(1037)

ರಮ ವೈರಾಗ್ಯ ಯೋಗೀಶ ನಿಂದ! (ಕಾ)
-ಲ ಭೈರವ ಪರಮೇಶ್ವರನಿಂದ!
ವಿಶ್ವ ವ್ಯಾಪಕ ವಿರಾಡ್ರೂಪನಿಂದ! (ಸ)
-ಫಲವಾಗಲಿ ತಪ ಕೃಪೆಯಿಂದ! (ಬಾ)
-ಲಕನುದ್ಧಾರ ಪೂಜ್ಯ ಪಿತನಿಂದ!
ಕಾಲಿಗೆರಗಿ ಪ್ರಾರ್ಥಿಪುದರಿಂದ!
ಪಾಮರನ ಪಾಪ ನಾಶವನಿಂದ! (ಅ)
-ಲಿಪ್ತನಾಗಬೇಕಾಶೀರ್ವಾದದಿಂದ!
ಯಿಂಬು ದೊರಕಲಿ ಶಂಭುವಿನಿಂದ!
ತ್ತ ಶ್ರೀ ನಿರಂಜನಾದಿತ್ಯ ನಿಂದ!!!

ಚಪಲವಿಲ್ಲ ನಿನಗೇ!   4(1662)

ರಮಾತ್ಮನಾದವಗೇ!
ಕ್ಷ್ಯ ತಾನಾಗಿರ್ಪವಗೇ!
ವಿಶ್ವಬಂಧು ಶ್ರೀನಿಧಿಗೆ! (ನ)
-ಲ್ಲ ಲಕ್ಷ್ಮಿಗಾಗಿರ್ಪವಗೇ!
ನಿಗಮಾಗಮಾತ್ಮನಿಗೇ!
ತ ಜನೋದ್ಧಾರನಿಗೇ! (ಹಂ)
-ಗೇ ನಿರಂಜನಾದಿತ್ಯಂಗೇ???

ಚಪಲಾ! ನೀನಾವಾಗಲಬಲ!   5(2530)

ರಮಾರ್ಥಿಯಾಗ್ಯಾಗ್ಮಹಾಬಲ! (ಹಾ)
-ಲಾಹಲ ಪಾನಕ್ಕೆ ಬೇಕಾ ಬಲ!
ನೀಲಮೇಘ ಶ್ಯಾಮಗದೇ ಬಲ!
ನಾದ, ಬಿಂದು, ಕಲಾತೀತಾ ಬಲ!
ವಾತ, ಪಿತ್ಥ, ಕಫ ದೇಹಬಲ!
ಣಪತ್ಯಾಗಲ್ಬೇಕಾತ್ಮ ಬಲ!
ಯವಾಗಬೇಕಿಂದ್ರಿಯ ಬಲ!
ಹು ಸುಖಾ ಗುರುಕೃಪಾ ಬಲ! (ಬಾ)
-ಲ ನಿರಂಜನಾದಿತ್ಯಗೀ ಬಲ!!!

ಚಪಾತಿ ಭಿಕ್ಷಾ ಬೋಜನ!   1(112)

ಪಾವನ ಪಾಪ ಭಾಂಜನ!
ತಿನುವನಿತ್ತಾ ಭಕ್ಷಣ!
ಭಿಕ್ಷುಕನಿಚ್ಛಾ ಜೀವನ!
ಕ್ಷಾಮ ಪೀಡಾ ಸಂಜೀವನ!
ಬೋಗ ತ್ಯಾಗಾನಂದ ಘನ!
ಯ ರಾಧಾ! ಭಿಕ್ಷಾಶನ!
ಮೋ “ಭಿಕ್ಷು” ನಿರಂಜನ!!!

ಚರಮ ಗೀತೆಗೆ ತಾಳ ಮೇಳವೇನು? [ನ]   5(3030)

-ರನಿಗಾಗ ಪರವೆಯಿರುವುದೇನು?
ನ ಬಂದಂತೊದುರುವನಾಗವನು!
ಗೀತ ಶಾಸ್ತ್ರದಿಂದ ಹೊರಗಾಗವನು!
ತೆಪ್ಪಗಾಗುವನಳುತ್ತಳುತ್ತವನು! (ಹೀ)
-ಗೆನ್ನನ್ನೇಕಿಲ್ಲಿಟ್ಟಿರುವೆ ಎನ್ನುವನು!
ತಾರಸ್ಥಾಯಿಯಲ್ಲೇನನ್ನೋ ಹಾಡುವನು! (ಹೇ)
-ಳಲಾರ ಸ್ಪಷ್ಟವಾಗಿ ಅದನ್ನವನು!
ಮೇಲುಬ್ಬಸದಿಂದಿರುವಾಗಾ ನರನು! (ಬಾ)
-ಳನೇತ್ರನೇ ಕಳೆಯ್ಬೇಕೀ ದುಃಖವನು!
ವೇದಾಂತ ಸಾರ ತಾನಾಗಿರುವವನು! (ತಾ)
-ನು ನಿರಂಜನಾದಿತ್ಯನೆಂದನ್ನುವನು!!!

ಚರ್ವಿತ ಚರ್ವಣ ಮಾಡಿ ಕುಣಿದವರೇ ಎಲ್ಲಾ! (ಉ)   6(3972)

-ರ್ವಿಯೊಡೆಯನ ಸಾಕಾರಾಕಾರ ಕಂಡವರಿಲ್ಲ!
ತ್ವೋಪದೇಶ ಮಾಡಿ ಜಾರಿಕೊಂಡವರೇ ಎಲ್ಲಾ!
ತುರ್ಮುಖಾದಿಗಳ ಠಾವು, ಠಿಕಾಣಿ ಗೊತ್ತಿಲ್ಲ! (ಗ)
-ರ್ವದಿಂದ ಮತಗಳನೇಕ ಹುಟ್ಟಿಕೊಂಡವೆಲ್ಲ! (ಗ)
-ಣಪತಿ ಸಜೀವ, ಸಾಕಾರದಿಂದೆಲ್ಲೂ ಬಂದಿಲ್ಲ!
ಮಾತು ವ್ಯಾಸನದ್ದು ನಂಬುವಂಥಾಸ್ಥಿತಿ ಈಗಿಲ್ಲ! (ಬಿ)
-ಡಿಸಬೇಕೀ ಸಂಶಯವೃತ್ತಿಯನ್ನವರೇ ಎಲ್ಲಾ!
ಕುಲ, ಗೋತ್ರಾದಿಗಳು ಅವರದೇ ನಮ್ಮದೆಲ್ಲಾ! (ತ)
-ಣಿಸದಿದ್ದರೀ ದಾಹ ಕಂಗಾಲಾಗ್ವೆವು ನಾವೆಲ್ಲಾ!
ರ್ಶನವಿತ್ತು ಧರ್ಮ ಸಂಸ್ಥಾಪನೆ ಮಾಡ್ಲವ್ರೆಲ್ಲಾ! (ಶಿ)
-ವ, ಜೀವರೈಕ್ಯ ಸುಖಾಮೇಲ್‍ ಬರ್ಲಿ ನಮಗೆಲ್ಲಾ!
ರೇಣುಕಾತ್ಮಜಗಾದನುಭವ ನಮ್ಗಾಗ್ಲೀಗೆಲ್ಲ!
ಚ್ಚರದಿಂದಿರ್ಬೇಕಾದ್ರೆ ನಿದ್ರೆ ಬಾರ್ದಿರ್ಬೇಕಲ್ಲಾ? (ಬ)
-ಲ್ಲಾ ನಿರಂಜನಾದಿತ್ಯ ತೊರಿಸ್ಲಿ ನಿಜವನ್ನೆಲ್ಲಾ!!!

ಚಲಾಚಲ ಗೊಂಬೆಗಳೆಲ್ಲಾ ಪೂಜಾರ್ಹ!   5(3085)

ಲಾಭದಾಯಕವೀಭಾವ! ಮನನಾರ್ಹ!
ರಾಚರ ವ್ಯಾಪಕಾತ್ಮ ಸ್ಮರಣಾರ್ಹ!
ಕ್ಷ್ಯಸಿದ್ಧಿಯೂ ಮಾನವ ಸ್ತೋತ್ರಾರ್ಹ!
ಗೊಂಬೆಗಲಕ್ಷ್ಯ ಮಾಡದವ ಸೇವಾರ್ಹ!
ಬೇನಕ ಗಣಾಧಿಪತಿಯಾಗಲರ್ಹ!
ಗನ ಸದೃಶ ಗುರು ಗೌರವಾರ್ಹ!(ಗೆ)
-ಳೆಯನಿಳೆಗಾದ ರವಿ ವಂದನಾರ್ಹ! (ಉ)
-ಲ್ಲಾಸದಾಯಕನ ಮಾತು ಶ್ರವಣಾರ್ಹ!
ಪೂರ್ಣಚಂದ್ರ ಸಮಾನಾತ್ಮ ದರ್ಶನಾರ್ಹ!
ಜಾದು ಮಾಡದವ ಯೋಗಿಯಾಗಲರ್ಹ! (ಅ)
-ರ್ಹ ಜಗದ್ಗುರು ನಿರಂಜನಾದಿತ್ಯಾರ್ಹ!!!

ಚಳಿ ಎನಲೇಕೆ? ಸ್ನಾನಗೈಯಲೇಕೆ? (ಎ)   1(107)

-ಳಿಯಲಾಗದ ಭಾರ ಹೇರುವುದೇಕೆ?
ತ್ತಿನ ಕತ್ತನು ಮುರಿಯುವುದೇಕೆ?
ಮಿಸುವುದೇಕೆ? ನಿಂದಿಸುವುದೇಕೆ?
ಲೇಪಿಸುವುದೇಕೆ? ಒರೆಸುವುದೇಕೆ?
ಕೆಡುವುದೇಕೆ? ಒಡನಾಡುವುದೇಕೆ?
ಸ್ನಾನದಾಸೇಕೆ? ಮಾಡದಿರುವುದೇಕೆ?
ಗುವುದೇಕೆ? ಮತ್ತೆ ಅಳುವುದೇಕೆ?
ಗೈಯುವುದೇಕೆ? ಗೊನಗುವುರೇಕೆ?
ಯಲೇಜುರ್ಶಾಖೆಂಬೇಕೆ? ನಿಷ್ಠೆಯಿಲ್ಲವೇಕೆ?
ಕೆಟ್ಟರೂ ನಿರಂಜನಾದಿತ್ಯ ಬೆಳಕೇ!!!

ಚಳಿ ಚಳಿಯೆಂದಳುತಳುತ ಸತ್ತ! (ಅ)   6(4204)

-ಳಿವುದು ದೇಹವೆಂದರಿಯದೇ ಸತ್ತ!
ರಾ ಚರಾತ್ಮಾನೆಂದರಿಯದೇ ಸತ್ತ! (ಚ)
-ಳಿ, ಗಾಳಿದಕ್ಕಿಲ್ಲೆಂದರಿಯದೇ ಸತ್ತ! (ಹಾ)
-ಯೆಂದು, ಗೊಲೋಯೆಂದು ಅತ್ತತ್ತೀಗ ಸತ್ತ!
ಶೇಂದ್ರಿಯಕ್ಕೆ ಗುಲಾಮನಾಗಿ ಸತ್ತ! (ಕಾ)
-ಳು ಕಡ್ಡಿ ನಾಳೆಗೆಂದು ಕೂಡಿಟ್ಟು ಸತ್ತ! (ಸು)
-ತ, ಸುತ್ಯೆ ರಾಪ್ತರೆಂದು ನಂಬಿ ಸತ್ತ! (ಕೀ)
-ಳು, ಮೇಲೆಂದು ಬಿದ್ದು ಹುಳುಹತ್ತಿ ಸತ್ತ!
ಪ್ಪು ತಿಳಿವಳಿಕೆಯಿಂದಿಂತು ಸತ್ತ!
ತತ ಸದ್ಗುರು ಪಾದ ಸ್ಮರಿಸುತ್ತ! (ದ)
-ತ್ತ ನಿರಂಅಜನಾದಿತ್ಯ ಭಕುತ ಮುಕ್ತ!!!

ಚಳಿ, ಮಳೆ, ಗಾಳಿಗಂಜ ಮಂಜುನಾಥ! (ಕಾ)   2(912)

-ಳಿಯೊಡೆಯ ಶಿವಯೋಗಿ ಮಂಜುನಾಥ!
ದನವೈರಿ ವಿರಾಗಿ ಮಂಜುನಾಥ! (ಹೊ)
-ಳೆವ ಶರೀರ ಸುಂದರ ಮಂಜುನಾಥ!
ಗಾನ ರುದ್ರ ವೀಣಾಪ್ರಿಯ ಮಂಜುನಾಥ! (ಮೌ)
-ಳಿಯಲರ್ಧ ಚಂದ್ರಧರ ಮಂಜುನಾಥ!
ಗಂಭೀರವ ಗಂಗಾಧರ ಮಂಜುನಾಥ!
ಟಾಧರನಿವ ತ್ಯಾಗಿ ಮಂಜುನಾಥ!
ಮಂಗಳಾಂಬೆಗೀತ ಪತಿ ಮಂಜುನಾಥ! (ರು)
-ಜು ಮಾರ್ಗಾವಲಂಬಿ ಗುರು ಮಂಜುನಾಥ!
ನಾದ, ಬಿಂದು, ಕಲಾತೀತ ಮಂಜುನಾಥ!(ನಾ)
-ಥ, ಶ್ರೀ ನಿರಂಜನಾದಿತ್ಯ ಮಂಜುನಾಥ!!!

ಚಾಕರಿಗೆ ಬಿಕರೀ ಶರೀರ! (ಹಾ)   6(4321)

-ಕಬೇಕಿದಕ್ಕೆ ಒಳ್ಳೆಯ ಹಾರ! (ಇ)
-ರಿಸ್ಬೇಕಿದ ದುಃಸಂಗಕ್ಕೆ ದೂರ!
ಗೆಳೆತನಕ್ಕಡ್ಡಿ ವ್ಯವಹಾರ!
ಬಿಡಬೇಡ, ಸತ್ಯ, ಸದಾಚಾರ!
ರ್ತವ್ಯವಲ್ಲ ಮರನಚಾರ!
ರೀತಿಗಾದರ್ಶಾರ್ಧನಾರೀಶ್ವರ!
ರಣರಿವನದೇ ಆಕಾರ! (ಕಿ)
-ರೀಟಕ್ಕಲ್ಲ ಆದರೋಪಚಾರ! (ಹ)
-ರ ನಿರಂಜನಾದಿತ್ಯನಾಕಾರ!!!

ಚಾಮುಂಡಿಬೆಟ್ಟದ ಮೇಲೆ!   2(701)

ಮುಂದಿನದವಳ ಲೀಲೆ! (ಅ)
ಡಿಗಡಿಗೆ ಶಿವ ಲೋಲೆ!
ಬೆಟ್ಟದಧಿದೇವೀಬಾಲೆ! (ಪ)
-ಟ್ಟಣದಲ್ಲಿ ಗೋಪ್ಯಾ ಬಾಲೆ!
ಯಾದೃಷ್ಟ್ಯೆಲ್ಲರ ಮೇಲೆ! (ಉ)
-ಮೇಶನಲರ್ಧಾಂಗ ಲೀಲೆ! (ಬಾ)
-ಲೆ, ನಿರಂಜನಾತ್ಮ ಲೀಲೆ!!!

ಚಿಂತ್ಯಾಕ್ಮಾಡ್ತಿದ್ಯೋ? ಚಿನ್ಮಯ್ನಿದ್ದಾನೆ!   5(2737)

ತ್ಯಾಗಿಯಾಗ್ಯವನೆಲ್ಲೆಲ್ಲಿದ್ದಾನೆ! (ಸಾ)
-ಕ್ಮಾತೆಂದವ ಮೌನಿಯಾಗಿದ್ದಾನೆ! (ನೋ)
-ಡ್ತಿದ್ದ್ರವ ಮುಕ್ತಿಮ್ಮನಂತಿದ್ದಾನೆ! (ಸ)
-ದ್ಯೋಜಾತ ಸ್ವರೂಪನಾಗಿದ್ದಾನೆ!
ಚಿತಾಭಸ್ಮಧಾರಿಯಾಗಿದ್ದಾನೆ! (ಉ)
-ನ್ಮತ್ತ ಪಿಶಾಚ್ಯಂತೋಡಾಡ್ತಿದ್ದಾನೆ! (“ಜೈ)
-ಯ್ನಿರಂಜನ” ಎಂದ್ಕುಣಿಯ್ತಿದ್ದಾನೆ! (ಎ)
-ದ್ದಾಗ, ಕೂತಾಗ್ಮೈ ಮರೆಯ್ತಿದ್ದಾನೆ! (ತಾ)
-ನೇ ನಿರಂಜನಾದಿತ್ಯಾಗಿದ್ದಾನೆ!!!

ಚಿಕ್ಕ ಮಕ್ಕಳಕ್ಕರೆಯ ಕುಣಿತ!(ಅ)   4(1679)

-ಕ್ಕಪಕ್ಕವ ಲೆಕ್ಕಿಸದ ಕುಣಿತ!
ನಶ್ಯುದ್ಧಿಯ ಭಕ್ತಿಯ ಕುಣಿತ! (ಚೊ)
-ಕ್ಕಮಾತು, ತಕ್ಕ ಹಾಡಿನ ಕುಣಿತ! (ತ)
-ಳಮಳವಿಲ್ಲದಮಲ ಕುಣಿತ! (ಅ)
-ಕ್ಕತಂಗಿಯರು ನಾವೆಂಬ ಕುಣಿತ! (ಬೆ)
-ರೆತೊಮ್ಮತದಿ ಕುಣಿದ ಕುಣಿತ! (ನ)
-ಯ ವಿನಯ ಭಾವಮಯ ಕುಣಿತ!
ಕುತಂತ್ರಲ್ಲದ ಸ್ವತಂತ್ರ ಕುಣಿತ! (ಕು)
-ಣಿ ಕುಣಿದಾವೇಶ ತಂದ ಕುಣಿತ! (ಪಿ)
-ತ ನಿರಂಜನಾದಿತ್ಯಗರ್ಪಿತ!!!

ಚಿಕ್ಕ ಮಕ್ಕಳಕ್ಕರೆಯಕ್ಕರ ಶಾಲೆ! (ಅ)   2(748)

-ಕ್ಕ ಪಕ್ಕದೂರಿನವರ ಭಾಗ್ಯ ಶಾಲೆ!
ತ ಭೇದಗಳಿಲ್ಲದೇಕೈಕ್ಯ ಶಾಲೆ! (ಅ)
-ಕ್ಕ ರುಕ್ಮಿಣಿಯಮ್ಮನಾತ್ಮ ಪ್ರೇಮ ಶಾಲೆ! (ಥ)
-ಳಕು, ಹುಳುಕೇನಿಲ್ಲದ ಪಾಠ ಶಾಲೆ! (ಚೊ)
-ಕ್ಕಟವಾಗಿಟ್ಟಿಹುದು ಮಕ್ಕಳನೀ ಶಾಲೆ! (ಕ)
-ರೆಸಿ ಮಕ್ಕಳನಾದರಿಸುವ ಶಾಲೆ! (ನ)
-ಯ, ವಿನಯಾನಂದ ಬಾಲಪಾಠ ಶಾಲೆ! (ಮಿ)
-ಕ್ಕ, ಹಾಳು ಹವ್ಯಾಸಗಳಿಲ್ಲದ ಶಾಲೆ!
‘ರಘುಪತಿ ರಾಘವ’ ಹಾಡುವ ಶಾಲೆ! (ವಿ)
-ಶಾಲ ಮೈಸೂರಿಗೊಂದಾದರ್ಶ ಶಾಲೆ! (ಲೀ)
-ಲೆ, ನಿರಂಜನಾದಿತ್ಯ ರಂಗನ ಶಾಲೆ!!!

ಚಿಕ್ಕಣ್ಣಗೇನಿಕ್ಕಬೇಕಣ್ಣಾ? (ಅ)   3(1149)

-ಕ್ಕ ಪಕ್ಕದಲ್ಲೇನಿಹುದಣ್ಣಾ? (ಬ)
-ಣ್ಣ ಬಣ್ಣದಂಬೆ ಗೊಂಬೆಯಣ್ಣಾ! (ಬೇ)
-ಗೇಳೀ ಜಾಗದಿಂದ ನೀನಣ್ಣಾ!
ನಿನಗೀವೆ ನಾ ಸಿಹಿಹಣ್ಣಾ! (ಸ)
-ಕ್ಕರೆ ಬೆರೆಸುತುಣ್ಣದಣ್ಣಾ!
ಬೇರೆಲ್ಲಾ ಮಲಬದ್ಧವಣ್ಣಾ!
ಷ್ಟ, ನಷ್ಟವುಗಳಿಂದಣ್ಣಾ! (ಹ)
-ಣ್ಣಾ, ನಿರಂಜನಾದಿತ್ಯಾತ್ಮಣ್ಣಾ!!!

ಚಿಕ್ಕಣ್ಣಾ ದಾನಿ ನೀನಾಗಣ್ಣಾ! (ಅ)   3(1151)

-ಕ್ಕರೆಯಪ್ಪನಲ್ಲಿರಲಣ್ಣಾ! (ಹೆ)
-ಣ್ಣಾಸೆ, ಮಣ್ಣಾಸೆಗಳೇಕಣ್ಣಾ?
ದಾತ, ನಾಥಪ್ಪ ತ್ಯಾಗೀಶಣ್ಣಾ!
ನಿನಗೆಲ್ಲೆಲ್ಲೂ ಬಳಗಣ್ಣಾ!
ನೀನೆಲ್ಲರವನಲ್ಲೇನಣ್ಣಾ?
ನಾನು ನೀನೆಂಬವನಲ್ಲಣ್ಣಾ!
ಣೇಶಣ್ಣನಲ್ಲವೇನಣಾ? (ಅ)
-ಣ್ಣಾ, ನಿರಂಜನಾದಿತ್ಯಾತ್ಮಣ್ಣಾ!!!

ಚಿಕ್ಕಣ್ಣಾ! ಅಪ್ಪಣ್ಣಾ! ಮುಕ್ಕಣ್ಣ! (ಅ)   2(648)

-ಕ್ಕರೆಯ ಶ್ರೀ ಗುರು ಮುಕ್ಕಣ್ಣ! (ಕ)
-ಣ್ಣಾಗೆಲ್ಲರ ಕಾಯ್ವಾ ಮುಕ್ಕಣ್ಣ!
ವನೇ ಶರಣ ಮುಕ್ಕಣ್ಣ! (ಇ)
-ಪ್ಪವನೊಳಗಾ ಮುಕ್ಕಣ್ಣ! (ಮ)
-ಣ್ಣಾಗುವೊಡಲಲ್ಲಾ ಮುಕ್ಕಣ್ಣ!
ಮುನಿಮಾನಸಾತ್ಮಾ ಮುಕ್ಕಣ್ಣ! (ದ)
-ಕ್ಕಲಾರೆಲ್ಲರಿಗಾಮುಕ್ಕಣ್ಣ! (ಅ)
-ಣ್ಣ ನಿರಂಜನಾದಿತ್ಯಾ ಕಣ್ಣ!!!

ಚಿಕ್ಕಣ್ಣಾ! ಜಗವೆಲ್ಲಾ ದೊಡ್ಡಣ್ಣ! (ಅ)   1(144)

-ಕ್ಕರೆಯಿಲ್ಲದಿಹುದು ಚಿಕ್ಕಣ್ಣ! (ಅ)
-ಣ್ಣಾ! ಬೊಮ್ಮಣ್ಣಾ, ರಾಮಣ್ಣ, ಕೆಂಗಣ್ಣ!
ನಿಸದಿರಲಿ ಕಲಹಣ್ಣ!
ಮನಿಸದಿರಲೆಲ್ಲಾ ಪಾಳಣ್ಣ! (ಅ)
-ವೆಲ್ಲಾ ಬಿಟ್ತು ಭಜಿಸಬೇಕಣ್ಣ! (ಅ)
-ಲ್ಲಾಡದಿರಬೇಕು ಮನಸಣ್ಣ! (ಅ)
-ದೊಡಲಾಮೇಲೆಲ್ಲಾ ಬೂದಿಯಣ್ಣಾ! (ಅ)
-ಡ್ಡಡಚಣೆಯ ಜನ್ಮ ಸಾಕಣ್ಣ! (ಅ)
-ಣ್ಣಪ್ಪ ನಿರಂಜನಾದಿತ್ಯಪ್ಪಣ್ಣ!!!

ಚಿಕ್ಕಪ್ಪನೊಪ್ಪಿದ ದತ್ತಪ್ಪ! (ಸ)   1(435)

-ಕ್ಕರೆ, ತುಪ್ಪಾಗಿಪ್ಪ ದತ್ತಪ್ಪ! (ಅ)
-ಪ್ಪಪ್ಪಾತ, ದೇವಪ್ಪ, ದತ್ತಪ್ಪ! (ಅ)
-ನೊಪ್ಪಿದರೊಪ್ಪುವ ದತ್ತಪ್ಪ! (ಅ)
-ಪ್ಪಿ, ಒಪ್ಪಿ, ಬಪ್ಪವ ದತ್ತಪ್ಪ! (ಅ)
ರಪ್ಪ, ಅಜಪ್ಪ ದತ್ತಪ್ಪ! (ಆ)
-ದರಿಪ್ಪ, ರಕ್ಷಿಪ್ಪ, ದತ್ತಪ್ಪ! (ಹ)
-ತ್ತರಿಪ್ಪ, ದೂರಿಪ್ಪ, ದತ್ತಪ್ಪ! (ತ)
-ಪ್ಪ, ನಿರಂಜನಾದಿತ್ಯ ನೊಪ್ಪ!!!

ಚಿಕ್ಕಮ್ಮ, ದೊಡ್ಡಮ್ಮಮ್ಮ ಗಂಗಮ್ಮ! (ಅ)   3(1085)

-ಕ್ಕರೆ ತೋರುವಳಮ್ಮ ಗಂಗಮ್ಮ (ಅ)
-ಮ್ಮಗುಣಿಸುವಳಮ್ಮ ಗಂಗಮ್ಮ! (ಬಂ)
-ದೊಡನಾಡುವಳಮ್ಮ ಗಂಗಮ್ಮ! (ಗು)
-ಡ್ಡ ಡಾಟಿ ಬಂದಳಮ್ಮ ಗಂಗಮ್ಮ (ತಿ)
-ಮ್ಮಪ್ಪನ ಮಗಳಮ್ಮ ಗಂಗಮ್ಮ! (ಬೊ)
-ಮ್ಮನನುಜಾತಳಮ್ಮ ಗಂಗಮ್ಮ!
ಗಂಗಾಧರಗಾಳಮ್ಮ ಗಂಗಮ್ಮ!
ತಿ ತೋರುವಳಮ್ಮ ಗಂಗಮ್ಮ! (ಅ)
-ಮ್ಮ, ನಿರಂಜನಾದಿತ್ಯವಳಮ್ಮ!!!

ಚಿಕ್ಕವರಿಗಕ್ಕರೆಯ ಪಾಠ! (ಸ)   4(2056)

-ಕ್ಕರೆಗಿಂತ ಸವಿಯಾದ ಪಾಠ!
ರ ಜ್ಞಾನೋದಯ ಗೈವ ಪಾಠ! (ಹ)
-ರಿ ಮಹಿಮೆಯರುಹುವ ಪಾಠ! (ಸಂ)
-ಗ ಸತ್ಸಂಗವಾಗ್ಬೇಕೆಂಬ ಪಾಠ! (ಅ)
-ಕ್ಕ ಪಕ್ಕ ಚೊಕ್ಟಾಗ್ಬೇಕೆಂಬ ಪಾಠ! (ಮ)
-ರೆತರಿದ ಕಷ್ಟವೆಂಬ ಪಾಠ! (ಜ)
-ಯ ಗುರುಕೃಪೆಯಿಂದೆಂಬ ಪಾಠ!
ಪಾಲುಮಾರಿಕೆ ಹಾಳೆಂಬ ಪಾಠ! (ಪಾ)
-ಠ ನಿರಂಜನಾದಿತ್ಯನೊಂದಾಟ!!!

ಚಿಗುರೊಂದು ಬಾಡಿದುದ ನೋಡಿದೆ! (ಉ)   4(1995)

-ಗುರಿಂದದ ಕೀಳ್ವ ಮನ ಮಾಡಿದೆ! (ಬೇ)
-ರೊಂದು ಯೋಚನೆ ನಂತರ ಮೂಡಿದೆ! (ಕಾ)
-ದು ನೋಡಬೇಕೆಂದಾಗ ನಿಶ್ಚೈಸಿದೆ!
ಬಾಡಿದ್ದು ಮರುದಿನ ಮೇಲೆದ್ದಿದೆ! (ಮಾ)
-ಡಿದ ನಿರ್ಧರದಿಂದೊಳ್ಳೇದಾಗಿದೆ!
ದುಡುಕು ಹಾನಿಯೆಂಬರಿವಾಗಿದೆ!
ತ್ತನಿಗಾವುದಸಾಧ್ಯವೆನ್ಸಿದೆ! (ಮ)
-ನೋಬಲವಿಲ್ಲದೆಲ್ಲಾ ಹಾಳಾಗಿದೆ! (ಹಾ)
-ಡಿ ಅವನ ಮಹಿಮೆ ಕೊಂಡಾಡಿದೆ! (ತಂ)
-ದೆ, ನಿರಂಜನಾದಿತ್ಯನಂತಾನಾದೆ!!!

ಚಿತೆಯೊಂದುನೊಡ್ಡುತಿರ್ಪಾ!   3(1155)

ತೆರೆ ಮರೆಯಲ್ಲೊಡ್ಡುತಿರ್ಪಾ! (ಕಾ)
-ಯೊಂದನ್ನೊಳಗೆ ತಾನಿಟ್ಟಿರ್ಪಾ! (ಅ)
-ದುರಿಂದವನೇ ಹಾಳಾಗಿರ್ಪಾ! (ಬಾ)
-ನೊಡೆಯನಿದನ್ನರಿತಿರ್ಪಾ! (ದು)
-ಡ್ಡು, ಕಾಸು, ಕೀಳಬೇಕೆಂದಿರ್ಪಾ! (ಮ)
-ತಿಗೆಟ್ಟು ನಾಶವಾಗುತ್ತಿರ್ಪಾ! (ಇ)
-ರ್ಪಾ! ನಿರಂಜನಾದಿತ್ಯೇರ್ಪಾ!!!

ಚಿತ್ತ ವೃತ್ತಿ ನಿರೋಧವೇ ಚಿರ ಶಾಂತಿ! (ಸ)   6(3632)

-ತ್ತ ಮೇಲೆ ಈ ಶರೀರ ಅದೆಂಥಾ ಶಾಂತಿ?
ವೃಥಾ ಕಾಲಕ್ಷೇಪದಿಂದಾಗದು ಶಾಂತಿ! (ಅ)
-ತ್ತಿತ್ತ ಚಿತ್ತ ಚಲಿಸದಿದ್ದರೆ ಶಾಂತಿ!
ನಿತ್ಯಾನಿತ್ಯ ವಿಚಾರದಿಂದಕ್ಕು ಶಾಂತಿ!
ರೋಗ ಶರೀರಕ್ಕಾಗದು ಚಿರ ಶಾಂತಿ!
ರ್ಮ, ಕರ್ಮವೂ ಇಲ್ಲದಾತ್ಮಕ್ಕಾ ಶಾಂತಿ!
ವೇದಾಂತ ಕಾರ್ಯಗತವಾದಾಗ ಶಾಂತಿ!
ಚಿರಂಜೀವಿತ್ವವೆಂಬುದಕ್ಕರ್ಹಾ ಶಾಂತಿ!
ಹಸ್ಯವಿದನರಿತಾಗಾತ್ಮ ಶಾಂತಿ!
ಶಾಂಭವಿಯನುಭವಿಸುವಳೀ ಶಾಂತಿ! (ತಿ)
-ತಿಕ್ಷಾತ್ಮ ನಿರಂಜನಾದಿತ್ಯಗಾ ಶಾಂತಿ!!!

ಚಿತ್ತಜನಯ್ಯ ಸಲಹೆನ್ನಯ್ಯಾ! (ಹ)   4(2011)

-ತ್ತವತಾರೆತ್ತಿದ ನೀನೆನ್ನಯ್ಯಾ!
ರಾಜನ್ಮ ದೂರ ನಿನೆನ್ನಯ್ಯಾ!
ಮಿಪೆ ನಾ ನಿನ್ನಡಿಗೆನ್ನಯ್ಯಾ! (ಕೈ)
-ಯ್ಯ ಪಿಡಿದು ನೀ ನಡೆಸೆನ್ನಯ್ಯಾ!
ರ್ವ ಕಾರ್ಯಕರ್ತ ನೀನೆನ್ನಯ್ಯಾ!
ಕ್ಷ್ಮೀನರಸಿಂಹ ನೀನೆನ್ನಯ್ಯಾ!
ಹೆರವ ನಾನಲ್ಲ, ನೀನೆನ್ನಯ್ಯಾ! (ಅ)
-ನ್ನ, ವಸನವೀವ ನೀನೆನ್ನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯನೆನ್ನಯ್ಯಾ!!!

ಚಿತ್ತಶಾಂತಿಯಿದ್ದರೊತ್ತೆಯಾಳಾದ್ರೇನು? (ಮ)   5(2745)

-ತ್ತನಲ್ಲದುತ್ತಮ ಸೇಮಕನವನು! (ಆ)
-ಶಾಂಕುರಿಸದಂತೆಚ್ಚರದಿಂದಿಹನು!
ತಿನ್ನುವುದಕ್ಕಲ್ಲ ಜನ್ಮವೆನ್ನುವನು! (ಬಾ)
-ಯಿ, ಕೈ ಶುದ್ಧವಾಗಿರಿಸಿಕೊಂಡಿಹನು! (ಬಿ)
-ದ್ದರೂ ಎದ್ದು ಚೇತರಿಸಿಕೊಳ್ಳುವನು! (ಯಾ)
-ರೊಡನೆಯೂ ಜಗಳವಾಡನವನು! (ಗು)
-ತ್ತೆದಾರಾತಚ್ಚುಮೆಚ್ಚಾಗಿರುತಿಹನು! (ದ)
-ಯಾಮಯ ಸದ್ಗುರುದೇವನೆನ್ನುವನು!
(ಆ)ಳಾದ್ರೇನರ್ಸಾದ್ರೇನ್ದೇಹಸ್ಥಿರೆನ್ನುವನು! (ಉ)
-ದ್ರೇಕದಿಂದ್ರಿಯ ನಿಗ್ರಹಮಾಡಿಹನು! (ಅ)
-ನುಪಮ ನಿರಂಜನಾದಿತ್ಯನವನು!!!

ಚಿತ್ತೈಸಬೇಕು ಗುರುದೇವ ದತ್ತಾ! (ಎ)   4(1819)

-ತ್ತೈದಲಿ ನಿನ್ನ ಬಿಟ್ಟು ನಾನು ದತ್ತಾ?
ಚ್ಚಿದಾನಂದ ಸುಖ ತೋರು ದತ್ತಾ!
ಬೇಡೆನಗಿಹ ಲೋಕ ಸುಖ ದತ್ತಾ! (ಟಾ)
-ಕು ನೀನಾಗಿ ಕಾಪಾಡಬೇಕು ದತ್ತಾ!
ಗುರುವಿಂದಧಿಕರಾರಿಲ್ಲ ದತ್ತಾ! (ಕ)
-ರುಣಾನಿಧಿ ನೀನಲ್ಲವೇನು ದತ್ತಾ?
ದೇಹಮೋಹ ದಹಿಸಬೇಕು ದತ್ತಾ!
ಸನಾಶನ ನಿನ್ನ ಧ್ಯಾನ ದತ್ತಾ!
ರ್ಶನಾನಂದವಿತ್ತು ಎತ್ತು ದತ್ತಾ! (ದ)
-ತ್ತಾ! ನಿರಂಜನಾದಿತ್ಯ ಗುರುದತ್ತಾ!!!

ಚಿತ್ರ ಕಥಾ ನಿರೂಪಣೆ ನಿನ್ನದಮ್ಮಾ!   4(1403)

ತ್ರಯಮೂರ್ತಿ ಸ್ವರೂಪಾಧಾರ ನಾನಮ್ಮಾ!
ವಿತಾಶಕ್ತ್ಯನುಪಮನಿನ್ನದಮ್ಮಾ! (ಕ)
-ಥಾಸಂವಿಧಾನಕ್ಕಧಿನಾಥ ನಾನಮ್ಮಾ!
ನಿರ್ದೇಶನಾಚಾತುರ್ಯವೂ ನಿನ್ನದಮ್ಮಾ! (ಆ)
-ರೂಪ, ನಾಮಗಳ ಚೈತನ್ಯ ನಾನಮ್ಮಾ!
-ಪವಾಡ ಅತಿವಿಚಿತ್ರ ನಿನ್ನದಮ್ಮಾ (ಹೊ)
-ಣೆಗಾರ ವರಗುರುಸ್ವಾಮಿ ನಾನಮ್ಮಾ!
ನಿರತೆನ್ನ ಸೇವಾಭಾರ ನಿನ್ನದಮ್ಮಾ! (ನಿ)
-ನ್ನನೆನ್ನೊಳಗೈಕ್ಯಗೈವಾತ್ಮ ನಾನಮ್ಮಾ!
ತ್ತಗುರು ಸ್ವರೂಪವೇ ನಿನ್ನದಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಾನಂದ ನಾನಮ್ಮಾ!!!

ಚಿತ್ರ ವಿಚಿತ್ರ ಮಾಯಾ ಚಿತ್ರ! (ಸೂ)   4(1402)

-ತ್ರ ಧಾರಾತ್ಮನಿರ್ಪ ಸರ್ವತ್ರ!
ವಿಶ್ವವವನ ಕಲಾ ಕ್ಷೇತ್ರ!
ಚಿತ್ರೀಕರಣ ದಿನ, ರಾತ್ರ! (ಚಿ)
ತ್ರದಲ್ಲಿದೆ ವಿವಿಧ ಪಾತ್ರ!
ಮಾತಾ, ಪಿತರು ನೆಪ ಮಾತ್ರ! (ಆ)
-ಯಾಸಕಾರಕಾ ಚಲ ಚಿತ್ರ!
ಚಿದಾಕಾಶದಲ್ಲಂತ್ಯಾ ಚಿತ್ರ! (ಚಿ)
-ತ್ರ ನಿರಂಜನಾದಿತ್ಯ ತಂತ್ರ!!!

ಚಿತ್ರಕ ಬರೆವನೆಲ್ಲಾ ಚಿತ್ರ!   6(4154)

ತ್ರಯಮೂರ್ತಿಯದ್ದೂ ಒಂದು ಚಿತ್ರ!
ಥೆಯಾಧಾರದ ಮೇಲಾ ಚಿತ್ರ!
ರೆವೂರೆವ ಮನ ವಿಚಿತ್ರ! (ನೆ)
-ರೆ ಧ್ಯಾನದಿಂದಾ ಮನ ಪವಿತ್ರ! (ಅ)
-ವನೇ ಅದೆನ್ನುವುದೆಲ್ಲಾ ಸ್ತೋತ್ರ! (ಮ)
-ನೆ ಮನೆಗಲೆವಾಗಪವಿತ್ರ! (ಅ)
-ಲ್ಲಾಡದಿದ್ದಾಗ ದೇವರ ಪಾತ್ರ!
ಚಿನ್ಮಾತ್ರ ಸ್ವರೂಪ ಅತ್ರಿ ಪುತ್ರ! (ಪು)
-ತ್ರ, ನಿರಂಜನಾದಿತ್ಯಾ ಸಪ್ಪುತ್ರ!!!

ಚಿತ್ರಕರ್ತನ ಚಿತ್ರ ಗುಪ್ತ! [ಪು]   3(1154)

-ತ್ರ, ಮಿತ್ರ, ಕಳತ್ರಾತ್ಮ ಗುಪ್ತ!
ರ, ಚರಣಾಂಗಾತ್ಮ ಗುಪ್ತ! (ವ)
-ರ್ತಮಾನ ವ್ಯಾಪಾರಾತ್ಮ ಗುಪ್ತ!
ರ ನಾರಾಯಣಾತ್ಮ ಗುಪ್ತ!
ಚಿರಂಜೀವಿಯಾದಾತ್ಮ ಗುಪ್ತ!
ತ್ರಯಮೂರ್ತಿ ರೂಪಾತ್ಮ ಗುಪ್ತ!
ಗುರು ಶಿವಾನಂದಾತ್ಮ ಗುಪ್ತ! (ತೃ)
-ಪ್ತ ನಿರಂಜನಾದಿತ್ಯ ಗುಪ್ತ!!!

ಚಿತ್ರಕೂಟದಲ್ಲಿ ವಿಚಿತ್ರ ನೋಟ! (ಪ)   6(3644)

-ತ್ರ, ಫಲ, ಪುಷ್ಪದಿಂದ ಪೂಜ ಕೂಟ!
ಕೂಡಿ ಭರತ ರಾಮನೊಡನಾಟ! (ದಿ)
-ಟವರಿತು ಲಕ್ಷ್ಮಣ ಕುಣಿದಾಟ!
ಶರಥನಂತ್ಯಕ್ಕಾಗಿ ಗೋಳಾಟ! (ಅ)
-ಲ್ಲಿ ಪಾದುಕಾಡಳಿತಾರಾಮ ಪಾಠ!
ವಿನಯೀ ಭರತೂರಿಗೆ ಹೊರಟ!
ಚಿತೆಗೆ ಬೀಳ್ವುದ್ಬಾರದಿದ್ರೆ ದಿಟ! (ಮಂ)
-ತ್ರ ಮುಗ್ಧವಾಯ್ತಿದು ಕೇಳಿದಾ ಕೂಟ!
ನೋಡಿ ಚಕಿತರಾದ್ರು ವಿಧಿಯಾಟ! (ನೋ)
-ಟ ನಿರಂಜನಾದಿತ್ಯಗಿಂಥಾಟ!!!

ಚಿತ್ರಗಾರನೇಕಿನ್ನೂ ಬಂದಿಲ್ಲ? (ಪ)   4(2497)

-ತ್ರದಂತೆಲ್ಲಾ ಕೆಲಸವಾಗಿಲ್ಲ! (ತ)
-ಗಾದೆ ಮಾಡಿದ್ರೆ ಫಲವೇನಿಲ್ಲ! (ಪ)
-ರಮಾತ್ಮನಿಷ್ಟದಂತಾಗ್ಬೇಕೆಲ್ಲ!
ನೇಮವನದು ತಪ್ಪಿಪರಿಲ್ಲ!
ಕಿವಿ ಮಾತಿದೆಂದನ್ನಬೇಕಿಲ್ಲ! (ನಿ)
-ನ್ನೂರವರೆಲ್ಲಾ ತಿಳೀಲಿದೆಲ್ಲ!
ಬಂಧನವನಿಗಾರೆದೇನಿಲ್ಲ!
ದಿನ, ರಾತ್ರಿ ಸೇವೆ ಮಾಡದಿಲ್ಲ! (ಘ)
-ಲ್ಲ, ನಿರಂಜನಾದಿತ್ಯಜ್ಞಾನ್ಯಲ್ಲ!!!

ಚಿತ್ರೀಕರಣ ಪ್ರದರ್ಶನವೆಲ್ಲಾ ಸಾಕಯ್ಯಾ! (ಧಾ)   4(1490)

-ತ್ರೀ ಸಂಬಂಧದಿಂದೇನೇನೂ ಸುಖವಿಲ್ಲಯ್ಯಾ!
ಣ್ಣಿಂದ್ರಿಯಾನಂದ ನಿಜಾನಂದವಲ್ಲಯ್ಯಾ!
ಕ್ತ ಮಾಂಸದ ಗೊಂಬೆಯಾಟೆಷ್ಟು ದಿನವಯ್ಯಾ? (ಹ)
-ಣ ಕಾಸನ್ನವಲಂಬಿಸುವುದೀ ಆಟವಯ್ಯಾ!
ಪ್ರಗತಿಗಿದೆಂದಿಗೂ ಸಹಾಯವಾಗದಯ್ಯಾ!
ರಿದ್ರಾವಸ್ಥೆಯಿದರಿಂದ ಹೆಚ್ಚುವುದಯ್ಯಾ! (ದ)
-ರ್ಶನ ಪರಮಾತ್ಮನದಾದರೆ ಸುಖವಯ್ಯಾ!
ರಜನ್ಮವಿದರಿಂದಲೇ ಸಾರ್ಥಕವಯ್ಯಾ!
ವೆಗ್ಗಳದಾ ಲಾಭಕ್ಕಾಗಿ ದುಡಿಯಬೇಕಯ್ಯಾ! (ಚೆ)
-ಲ್ಲಾಟ ಮನೋವೃತ್ತಿಗಳೆಲ್ಲಾ ನಿಲ್ಲಬೇಕಯ್ಯಾ!
ಸಾಧು, ಸಜ್ಜನ, ಸಂಗವಿದಕಗತ್ಯವಯ್ಯಾ!
ರ್ಮ ಫಲಾಪೇಕ್ಷೆಯಿಲ್ಲದೆ ಮಾಡಬೇಕಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾತ್ಮಾನಂದ ಗುರಿಯಯ್ಯಾ!!!

ಚಿನ್ನದ ಗಣಿ ನೀನಯ್ಯಾ! (ಮ)   2(751)

-ನ್ನಣೆಯಾ ಚಿನ್ನಕಾಗಯ್ಯಾ!
ಡ್ಡನದರಿಯನಯ್ಯಾ!
ಣಿ ಮಣ್ಣು ಮಿಶ್ರವಯ್ಯಾ! (ದ)
-ಣಿಯದೇ ನೀ ಶೋಧಿಸಯ್ಯಾ!
ನೀನಾಗ ಶುದ್ಧ ಚಿನ್ನಯ್ಯಾ!
ಗ, ನಾಣ್ಯಗಳಾಗಯ್ಯಾ! (ಅ)
-ಯ್ಯಾ! ನಿರಂಜನಾ ಚಿನ್ನಯ್ಯಾ!!!

ಚಿನ್ಮಯ ನೀನಾಗಿರಲೇಕೆ ಚಿಂತೆ? (ತ)   6(3909)

-ನ್ಮಯ ನೀನಾದಾಗ ಚಿಂದೆ ನಿಶ್ಚಿಂತೆ!
ದುಪನ ಉಪದೇಶ ಅದಂತೆ!
ನೀಚ ವಾಸನೆಗಳಿಂದಾಯ್ತು ಚಿಂತೆ!
ನಾನಾರೆಂದು ತಿಳಿದಾಗ ನಿಶ್ಚಿಂತೆ! (ಯೋ)
-ಗಿಯಾಗೆಂದಾ ಗೀತೋಪದೇಶವಂತೆ! (ಧೀ)
-ರನಾಗಿ ಸ್ವಧರ್ಮ ಪಾಲಿಸ್ಬೇಕಂತೆ!
ಲೇಶವೂ ಎದೆಗುಂದಬಾರದಂತೆ!
ಕೆಡುಕನ್ಯರಿಗೆಸಗ್ಬಾರದಂತೆ!
ಚಿಂತೆ ಚಿತೆಗಿಂತಲೂ ಕ್ರೂರವಂತೆ! (ಚಿಂ)
-ತೆ ನಿರಂಜನಾದಿತ್ಯಗಿಲ್ಲಿವಂತೆ!!!

ಚಿರಋಣಿ ನಿನಗೆ ಗುರುದೇವ! (ವ)   3(1169)

-ರ ದೈವಿಕವನುಳಿಸಿದೆ ಜೀವ!
ಜು ಮಾರ್ಗಾವಲಂಬಿ ಗುರುದೇವ! (ದ)
-ಣಿಯದೇ ಸೇವೆ ಗೈವೆ ನೀನು ಜೀವ!
ನಿನಗೊಲಿದಿಹನು ಗುರುದೇವ!
ರಳಬೇಡ ನೀನು ಪ್ರಿಯ ಜೀವ!
ಗೆಳೆಯ ನಿನ್ನವನು ಗುರುದೇವ!
ಗುರುಭಕ್ತ ನೀನಹುದಲೆ ಜೀವ! (ಕ)
-ರುಣಿಸಿರ್ಪಾತ್ಮಾನಂದ ಗುರುದೇವ!
ದೇವದೇವಾನಂದ ನಿನ್ನಿಂದ ಜೀವ! (ದೇ)
-ವ ನಿರಂಜನಾದಿತ್ಯ ಗುರುದೇವ!!!

ಚಿರಕಾಲವಿರಲೀ ಮಾಂಗಲ್ಯ! (ವ)   3(1196)

-ರ ಸೇವೆಗಾಗಿರಲೀ ಮಾಂಗಲ್ಯ!
-ಕಾಮ, ಕ್ರೋಧಳಿಸಲೀ ಮಾಂಗಲ್ಯ!
ಕ್ಷ್ಯ ಸಿದ್ಧಿಗಾಗಲೀ ಮಾಂಗಲ್ಯ!
ವಿವೇಕಕ್ಕಾಗಿರಲೀ ಮಾಂಗಲ್ಯ! (ವ)
-ರ ಸಂತಾನವೀಯಲೀ ಮಾಂಗಲ್ಯ! (ಬ)
-ಲೀಸಲಿ ಭಕ್ತಿ ಭಾವಾ ಮಾಂಗಲ್ಯ!
ಮಾಂಗಲ್ಯೆ ಉಳಿಸಲೀ ಮಾಂಗಲ್ಯ! (ರಾ)
-ಗ ದ್ವೇಷ ಬಿಡಿಸಲೀ ಮಾಂಗಲ್ಯ! (ಮೌ)
-ಲ್ಯ ನಿರಂಜನಾದಿತ್ಯ ಮಾಂಗಲ್ಯ!!!

ಚಿರಸುಖಿಯಾಗಿ ನೀನಿರು! (ಪ)   4(1880)

-ರರಿಗಾಮೇಲೆ ದಾರಿ ತೋರು!
ಸುರಲೋಕವಾಗ ನಿನ್ನೂರು! (ದುಃ)
-ಖಿಗಳಾಗ ಬಿಡರಾ ಊರು!
ಯಾತ್ರಾಸ್ಥಳ ಆಗ ಆ ಊರು!
ಗಿರಿಧರನಾವಾಸಾ ಊರು!
ನೀತಿ, ರೀತಿಗಾದರ್ಶಾ ಊರು!
ನಿಶ್ಚಲ ಭಕ್ತಿಯಿರ್ಪಾ ಊರು! (ಗು)
-ರು ನಿರಂಜನಾದಿತ್ಯನೂರು!!!

ಚಿರಾಯುರಾರೋಗ್ಯ ಭಾಗ್ಯಗಳ್ಸಂಪದ!   6(3850)

ರಾಜಾಧಿರಾಜರಿಗೂ ಬೇಕೀ ಸಂಪದ!
ಯುಕ್ತಾಹಾರ, ವಿಹಾರದಿಂದಾ ಸಂಪದ!
ರಾಗ, ದ್ವೇಷಕ್ಕೆ ಲಭಿಸದಾ ಸಂಪದ!
ರೋಗ, ಹರ ಸದ್ಗುರು ಕೃಪಾ ಸಂಪದ! (ಭಾ)
-ಗ್ಯವಿದೇ ಸ್ಥಿರ ಪರಮಾರ್ಥ ಸಂಪದ!
ಭಾವಾತೀತವೇ ಸ್ವರೂಪಾತ್ಮ ಸಂಪದ! (ಯೋ)
-ಗ್ಯತಾನುಸಾರ ಅನುಗ್ರಹಾ ಸಂಪದ!
ಗನಮಣಿಗಿದೇ ಸರ್ವ ಸಂಪದ! (ಬಾ)
-ಳ್ಸಂಜೀವಿನಿಯಾಗಲಗತ್ಯಾ ಸಂಪದ!
ರಮಾರ್ಥಿಗೆ ಬೇಕಿನ್ಯಾವ ಸಂಪದ? (ಕಂ)
-ದ ನಿರಂಜನಾದಿತ್ಯನಿಗಾ ಸಂಪದ!!!

ಚಿಲಿಪಿಲಿ ಗುಟ್ಟುತಿದೆ ಗುಬ್ಬಚ್ಚಿ! (ಕ)   4(1884)

-ಲಿಯೋ ನನ್ನಿಂದೆನ್ನುತಿದೆ ಗುಬ್ಬಚ್ಚಿ!
ಪಿತ ನಾನಾದೆನ್ನುತಿದೆ ಗುಬ್ಬಚ್ಚಿ! (ಮಾ)
-ಲಿಕನಿಚ್ಛೆಯೆನ್ನುತಿದೆ ಗುಬ್ಬಚ್ಚಿ!
ಗುಟುಕು ಬೇಕೆನ್ನುತಿದೆ ಗುಬ್ಬಚ್ಚಿ!(ಕ)
-ಟ್ಟು ಭವಕ್ಕಾಯ್ತೆನ್ನುತಿದೆ ಗುಬ್ಬಚ್ಚಿ! (ಸ)
-ತಿಯೊಡಗೂಡ್ಯೆನ್ನುತಿದೆ ಗುಬ್ಬಚ್ಚಿ! (ತಂ)
-ದೆ, ತಾಯ್ದೇವರೆನ್ನುತಿದೆ ಗುಬ್ಬಚ್ಚಿ!
ಗುರು ಅವನೆನ್ನುತಿದೆ ಗುಬ್ಬಚ್ಚಿ! (ತ)
-ಬ್ಬಲಿ ನಾನಾದೆನ್ನುತಿದೆ ಗುಬ್ಬಚ್ಚಿ! (ನೆ)
-ಚ್ಚಿ, ನಿರಂಜನಾದಿತ್ಯಾಯ್ತೂ ಗುಬ್ಬಚ್ಚಿ!!!

ಚುನಾವಣೆಗೆ ಸ್ಪರ್ಧಿಸಬೇಕು!   6(3947)

ನಾಸ್ತಿಕತನ ಬಿಟ್ಟುಬಿಡ್ಬೇಕು!
ನವಾಸಕ್ಕೂ ಸಿದ್ಧವಿರ್ಬೇಕು! (ಗೆ)
-ಣೆಯರು ಸಜ್ಜನರಾಗಿರ್ಬೇಕು!
ಗೆದ್ದರಹಂಕಾರ ಪಡ್ದಿರ್ಬೇಕು! (ಆ)
-ಸ್ಪದ ಲಂಚಕ್ಕೆ ಇಲ್ಲದಿರ್ಬೇಕು! (ಮ)
-ರ್ಧಿಸಿ ಮತ ಘಳಿಸದಿರ್ಬೇಕು!
ತ್ಯಕ್ಕೆ ಚ್ಯುತಿ ಇಲ್ಲದಿರ್ಬೇಕು!
ಬೇಸಾಯ ಬಿಟ್ಟು ಬಿಡದಿರ್ಬೇಕು! (ಹಾ)
-ಕು, ನಿರಂಜನಾದಿತ್ಯ ಪೋಷಾಕು!!!

ಚೆನ್ನಾಗಿದೆ ರುಕ್ಮಿಣಿಯುಪ್ಪಿಟ್ಟು! (ತ)   3(1261)

-ನ್ನಾತ್ಮನೊಪ್ಪಿ ಮಾಡಿದಾ ಉಪ್ಪಿಟ್ಟು!
ಗಿರಿಧರಾರ್ಪಣವಾದುಪ್ಪಿಟ್ಟು! (ಬೆಂ)
-ದೆಲ್ಲಾ ಸಮರಸವಾದುಪ್ಪಿಟ್ಟು!
ರುಚಿಯಾದ ಕಂದಬದುಪ್ಪಿಟ್ಟು! (ರು)
-ಕ್ಮಿಯನುಜೆಯ ಪ್ರೇಮದುಪ್ಪಿಟ್ಟು! (ಉ)
-ಣಿಸಿದಳು ಕೃಷ್ಣಗಾ ಉಪ್ಪಿಟ್ಟು! (ಆ)
-ಯುರಾರೋಗ್ಯ ಯೋಗದಾ ಉಪ್ಪಿಟ್ಟು! (ಒ)
-ಪ್ಪಿಸಿತವಳವಗಾ ಉಪ್ಪಿಟ್ಟು! (ಕೊ)
-ಟ್ಟು, ನಿರಂಜನಾದಿತ್ಯಗುಪ್ಪಿಟ್ಟು!!!

ಚೆನ್ನಾಗಿದ್ದೀಯೇನೋ ಅಣ್ಣಾ? (ನಿ)   3(1398)

-ನ್ನಾನಂದವೆಲ್ಲಾ ಮುಕ್ಕಣ್ಣಾ!
ಗಿರಿಜೆಗೇನನ್ನಲಣ್ಣಾ? (ತ)
-ದ್ದಿವ್ಯ ಭೇಟಿ ಬೇಕ್ಮುಕ್ಕಣ್ಣಾ! (ಪ್ರಿ)
ಯೇಶ್ವರಿಯಿಷ್ಟವದಣ್ಣಾ! (ಮ)
-ನೋಜಯ ಕೊಡು ಮುಕ್ಕಣ್ಣಾ!
ವಳನ್ನೇಧ್ಯಾನಿಸಣ್ಣಾ! (ಅ)
-ಣ್ಣಾ, ನಿರಂಜನಾದಿತ್ಯಣ್ಣಾ!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ