ಗಂಗಾ ಪ್ರಯಾಣಾನಂದ! (ಗಂ)   2(601)

-ಗಾ ಶಿವನಿಗಾನಂದ!
ಪ್ರಧಾನ ಸರ್ವಾನಂದ! (ದ)
-ಯಾ ಶ್ರೀ ಹರಿಯಾನಂದ! (ಗು)
-ಣಾತಿಶಯಾತ್ಮಾನಂದ! (ಅ)
-ನಂಗ ವಿನಾಶಾನಂದ! (ನಂ)
-ದ ನಿರಂಜನಾನಂದ!!!

ಗಂಗಾಧರಾ ಬಾಲಚಂದ್ರಧರಾ! (ಆ)   2(667)

-ಗಾರಾ ಕರುಣಾನಂದ ಸಾಗರಾ!
ರಣೀಶ್ವರಾ ವರ ಸುಂದರಾ!
ರಾಜರಾಜೇಶ್ವರೀಶ್ವರೇಶ್ವರಾ!
ಬಾಳನೇತ್ರೇಶ್ವರಾ ಸರ್ವೇಶ್ವರಾ! (ಶೂ)
-ಲಧರಾಸುರಾರಿ ಭಯಂಕರಾ!
ಚಂದ್ರಶೇಖರಾತ್ಮಾನಂದಕರಾ! (ಭ)
-ದ್ರ, ವೀರಭದ್ರ ಪಿತ ಶಂಕರಾ!
ರ್ಮರಾಜ ಗರ್ವಹರಾ ಹರಾ! (ಹ)
-ರಾ ನಿರಂಜನಾದಿತ್ಯನಾಕಾರಾ!!!

ಗಂಗಾನದಿ ನಾನಾಗಿಹೆನಯ್ಯಾ!   1(63)

ಗಾಳವಿಕ್ಕುವರು ಮೀನಿಗಯ್ಯಾ!
ರ, ನಾರೀಷ್ಟ ತೀರ್ಥ ನಾನಯ್ಯಾ!
ದಿನ, ರಾತ್ರಿ ನಾನೆಚ್ಚರವಯ್ಯಾ!
ನಾರಾಯಣನಡಿ ಜನ್ಮವಯ್ಯಾ!
ನಾಶವಹುದು ಪಾಪೆನ್ನಿಂದಯ್ಯಾ!
ಗಿರೀಶಗಭಿಷೇಕ ನಾನಯ್ಯಾ!
ಹೆಣಗಳಭಿಮಾನಿ ನಾನಯ್ಯಾ!
ರರುತ್ತರಕ್ರಿಯೆಗಾನಯ್ಯಾ! (ಅ)
-ಯ್ಯಾ, ನಿರಂಜನ ನೀ ಗಂಗೆಯಯ್ಯಾ!!!

ಗಂಗಾವತರಣಕ್ಕೆ ಕಾದ ಶಿವ! (ಆ)   4(2243)

-ಗಾಗ ಕಣ್ತೆರೆದು ನೋಡಿದ ಶಿವ! (ಅ)
-ವಳನುಗ್ರಹಿಸುವೆನೆಂದ ಶಿವ!
ಲೆಯಮೇಲಿರಿಸಿಕೊಂಡ ಶಿವ! (ಸು)
-ರ, ನರರಿಗಾನಂದವಿತ್ತ ಶಿವ! (ಗ)
-ಣಗಳಿಂದ ಪೂಜಿಸಿಕೊಂಡ ಶಿವ! (ಅ)
-ಕ್ಕೆ ಕಲ್ಯಾಣವೆಲ್ಲರಿಗೆಂದ ಶಿವ!
ಕಾಮಾಕ್ಷಿಯೊಡಗೂಡಿಂತೆಂದ ಶಿವ!
ತ್ತ ಗುರು ಲೀಲೆಯಿದೆಂದ ಶಿವ! (ನಿ)
-ಶಿ, ದಿನ ಭಜಿಸ್ಯವನೆಂದ ಶಿವ! (ಅ)
-ವ ನಿರಂಜನಾದಿತ್ಯನೆಂದ ಶಿವ!!!

ಗಂಗೆ ಹರಿಯುತ್ತಲಿರಲಿ! (ಟೊಂ)   4(1978)

-ಗೆ ತೇಲಿ ಹೋಗುತ್ತಲಿರಲಿ!
ಗಲಿರುಳಿದು ಸಾಗಲಿ! (ಹ)
-ರಿಕೃಪೆಯೆಂಬರಿವಿರಲಿ! (ಆ)
-ಯುಷ್ಯ ಅವನಿಗಾಗಿರಲಿ! (ತ)
-ತ್ತರಿಸದ ಚಿತ್ತವಿರಲಿ! (ಸ)
-ಲಿಲೇಂದ್ರನಲ್ಲೈಕ್ಯವಾಗಲಿ! (ನ)
-ರ ನಿಂತು ಅಮರನಾಗಲಿ! (ಶೂ)
-ಲಿ ನಿರಂಜನಾದಿತ್ಯಾಗಲಿ!!!

ಗಂಗೆಯರಸಗೆ ಮಂಗಳಾರತಿಯೆತ್ತು! (ಹೋ)   4(2136)

-ಗೆ ಹೊರಗಿನ್ನೆಂದು ನಮಸ್ಕರಿಸಿ ಎತ್ತು! (ಭ)
-ಯದ ಬಹಿರ್ವ್ಯಾಪಾರ ಸಾಕೆನಗೆಂದೆತ್ತು! (ನಿ)
-ರತ ನಿನ್ನ ಸೇವೆಗೆನ್ನನಿರಿಸೆಂದೆತ್ತು!
ರ್ವಾಪರಾಧ ನೀ ಕ್ಷಮಿಸೆಂದದನ್ನೆತ್ತು! (ಹಂ)
-“ಗೆನಗೇನನ್ಯರದು” ನೀನಿರಲೆಂದೆತ್ತು!
ಮಂಗಳ ಸರ್ವಮಂಗಳೆಗೆ ಮಾಡೆಂದೆತ್ತು! (ಸಂ)
-ಗ ನಿನ್ನದಾದರದೇ ಸತ್ಸಂಗವೆಂದೆತ್ತು! (ಮಾ)
-ರಹರ ಮಹೇಶ್ವರ ನೀನೆಂದದನ್ನೆತ್ತು! (ಪ)
-ತಿಯೇ ಪರದೈವವೆನಗೆಂದದನ್ನೆತ್ತು! (ಮಾ)
-ಯೆಯೆಂದಾ

ಡಿಸಬೇಡ ನೀನೆನ್ನನೆಂದೆತ್ತು! (ಚಿ)
-ತ್ತು, ನಿರಂಜನಾದಿತ್ಯ ನಿನಗಿಲ್ಲೆಂದೆತ್ತು!!!

ಗಂಟು ಕರಗದೆ ಸುಖ ನಿದ್ರೆ ಇಲ್ಲ! [ಏ]   2(865)

-ಟು ತಗಲದೆ ಮೂರ್ತಿಯಾಗುವುದಿಲ್ಲ!
ನಸಿನಲ್ಲೂ ಸಹಾಯವಾಗದಿಲ್ಲ! (ತ)
-ರತರ ಪ್ರಾರಬ್ಧ ಕಳೆಯಬೇಕಲ್ಲ!
ತಿ ಗುರಿಯತ್ತ ಸಾಗುತಿದೆಯಲ್ಲ! (ಎ)
-ದೆಗೆಡದೆ ಅನುಭವಿಸಬೇಕೆಲ್ಲ!
ಸುದರ್ಶನವಾಗದೇನಿರುವುದಿಲ್ಲ! (ಸ)
-ಖನೊಡನಾಟ ಲಕ್ಷ್ಯವಾಗಿಹುದಲ್ಲ!
ನಿಶಿ, ದಿನ ಗಾಡಿಯೋಡುತಿದೆಯಲ್ಲ! [ಮು]
-ದ್ರೆ ಪರಮೇಶ್ವರನದಾಗಿಹುದಲ್ಲ!
ನ್ಯಾರ ಹಂಗಿಗೂ ಬೀಳಬೇಕಾಗಿಲ್ಲ! (ಬ)
-ಲ್ಲ ನಿರಂಜನಾದಿತ್ಯನಾನಿದನೆಲ್ಲ!!!

ಗಂಟು ಬಿತ್ತು ಜಾಜಿ ದಾರಕ್ಕೆ! (ಗಂ)   4(2176)

-ಟು ಬಿದ್ದಾಯ್ತು ಹಾರ ಲಿಂಗಕ್ಕೆ!
ಬಿದಿ ನೇಮವಿದಾಯ್ತದಕ್ಕೆ! (ಹೊ)
-ತ್ತು ಕಾಯುತ್ತಿತ್ತದು ದಾರಕ್ಕೆ!
ಜಾಜಿ ಹೋಗದನ್ಯ ಸಂಗಕ್ಕೆ! (ಪೂ)
-ಜಿಸಿಕೊಂಬಂತಾಯ್ತೀಗದಕ್ಕೆ!
ದಾರಾನುಕೂಲವಾಯ್ತದಕ್ಕೆ! (ಸ)
-ರ ಭಂಗಾರದ್ದು ಬೇಡದಕ್ಕೆ! (ಅ)
-ಕ್ಕೆ ನಿರಂಜನಾದಿತ್ಯದಕ್ಕೆ!!!

ಗಂಟು ಮುಳುಗಿಸುವವಳು ಗಂಗಮ್ಮಾ! (ನೆಂ)   5(2681)

-ಟುತನವಿವಳಿಗೆ ಶಿವನಲ್ಲಮ್ಮಾ!
ಮುನಿ, ಋಷಿಗಳಿಗಿವಳಾಶ್ರಯಮ್ಮಾ! (ಆ)
-ಳುವಳಿವಳು ಶಿವಗಣಗಳಮ್ಮಾ!
ಗಿರಿಜೆಗಿವಳೋರ್ವ ಸವತಿಯಮ್ಮಾ!
ಸುದರ್ಶನಧಾರಿವಳ ಜನಕಮ್ಮಾ!
ರಗುರುವಿಗೆ ಸ್ನಾನವಳಲ್ಲಮ್ಮಾ!
ಸ್ತ್ರಾದಿಗಳಿವಳಿಂದ ಸ್ವಚ್ಛವಮ್ಮಾ! (ಕೀ)
-ಳು, ಮೇಲೆಂಬುದಿವಳಲ್ಲೇನೇನಿಲ್ಲಮ್ಮಾ!
ಗಂಭೀರ ಸ್ವಭಾವದವಳಿವಳಮ್ಮಾ! (ಯೋ)
-ಗ, ಭೋಗ, ತ್ಯಾಗಕ್ಕಿವಳಿರಬೇಕಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯನಿಂದುದ್ಧಾರಮ್ಮಾ!!!

ಗಂಟು, ಮೂಟೆ ಕಟ್ಟಿದವ್ರೆಲ್ಲಾ ಹೋದ್ರಾ? (ಏ)   6(3491)

-ಟು ತಿಂದವರೆಲ್ಲರೂ ಸತ್ತೇ ಹೋದ್ರಾ?
ಮೂರ್ತಿತ್ರಯರನೆಲ್ಲರೂ ನೋಡಿದ್ರಾ? (ಬೇ)
-ಟೆಯಾಡಿದವರೆಲ್ಲಾ ಹಂದಿ ತಿಂದ್ರಾ?
ಲಾವಿದರೆಲ್ಲಾ ಶ್ರೀಮಂತರಾದ್ರಾ? (ಹು)
-ಟ್ಟಿದ ಎಲ್ಲಾ ಮಕ್ಕಳೂ ಬದುಕಿದ್ರಾ?
ರ್ಪ, ದಂಭದಿಂದ ಕೆಟ್ಟ ದೇವೇಂದ್ರ! (ದೇ)
-ವ್ರೆಲ್ಲಕ್ಕೂ ಕಾರಣವೆಂದ್ಮಾಡು ನಿದ್ರಾ! (ಉ)
-ಲ್ಲಾಸದಿಂದ ಸೇರು ಕ್ಷೀರಸಮುದ್ರ!
ಹೋಗೋದೂ, ಬರೋದೂ ನಿಂತಾಗ ಭದ್ರ! (ನಿ)
-ದ್ರಾ, ನಿರಂಜನಾದಿತ್ಯನಿಗುಪದ್ರ!!!

ಗಂಡ ಚಂಡ, ಹೆಂಡತಿ ಪ್ರಚಂಡ! (ಒ)   6(4019)

-ಡನಾಡಿದರಿಬ್ಬರೂ ಅಖಂಡ!
ಚಂದದಲ್ಲಿ ಅನುಪಮಾ ಗಂಡ! (ಹೆಂ)
-ಡತಿಯ ಕೊರಳ ಮಾಲೆ ರುಂಡ!
ಹೆಂಡ್ತಿಗಾಯ್ತ್ರುಂಡ, ಗಂಡಗಾಯ್ತ್ಮುಂಡ! (ಗಂ)
-ಡನ ನೊಸಲಿನಂಬಕ ಕೆಂಡ! (ಸ)
-ತಿಯಾಕ್ರೋಶಕ್ಬಲಿ ಚಂಡ, ಮುಂಡ!
ಪ್ರಳಯದಲ್ಲೀ ಗಂಡ ಮಾರ್ತಾಂಡ!
ಚಂಡಿಕೆಂಬಾ ಹೆಂಡತಿ ಪ್ರಚಂಡ! (ಮೃ)
-ಡ ನಿರಂಜನಾದಿತ್ಯ ಅಖಂಡ!!!

ಗಂಡ ನಂಜುಂಡ ಹಾರ ಹಾಕ್ಸಿಕೊಂಡ! (ದಂ)   4(2128)

-ಡಪಾಣಿಗೆ ತಂದೆ ತಾನೆನ್ಸಿಕೊಂಡ!
ನಂದಿವಾಹನನೆಂದೆನಿಸಿಕೊಂಡ! (ನಂ)
-ಜುಂಡು ಭೂಮಂಡಲೇಶನೆನ್ಸಿಕೊಂಡ! (ಕ)
-ಡಲೊಡೆಯನಾಪ್ತನೆನಿಸಿಕೊಂಡ! (ಮ)
-ಹಾಮಾಯೆಗೀಶ್ವರನೆನಿಸಿಕೊಂಡ! (ವ)
-ರ ಗುರುದತ್ತನಲ್ಲೊಂದಾಗಿಕೊಂಡ!
ಹಾವುಗಳನ್ನೇ ಹಾರ ಮಾಡಿಕೊಂಡ! (ಹಾ)
-ಕ್ಸಿ ಭಿಕ್ಷೆಯ ಕಾಪಾಲಿಯೆನ್ಸಿಕೊಂಡ!
ಕೊಂದಸುರರಸುರಾರ್ಯೆನ್ಸಿಕೂಂಡೆ! (ಮೃ)
-ಡ ನಿರಂಜನಾದಿತ್ಯನೆನ್ಸಿಕೊಂಡ!!!

ಗಂಡ ಬಾರದಿದ್ದ್ರೆ ನೀನೆ ಗಂಡಾಗಮ್ಮಾ! (ದಂ)   6(4255)

-ಡ ತೆರಬಾರದು ವಿಷಯಾಸೆಗಮ್ಮಾ!
ಬಾಳಲಿಲ್ಲವೇ “ಅಕ್ಕ”ನಂಥವರಮ್ಮಾ?
ಮಿಸ್ಬೇಕು ನಿನ್ನಾತ್ಮನಲ್ಲಿ ನೀನಮ್ಮಾ!
ದಿವ್ಯ ಜೀವನ ಅಳವಡಿಸ್ಬೇಕಮ್ಮಾ! (ನಿ)
-ದ್ದ್ರೆ, ಆಹಾರ, ಮೈಥುನಕ್ಕೆ ಜನ್ಮವಲ್ಲಮ್ಮಾ!
ನೀನು ಬುದ್ಧಿಶಾಲಿ! ಯೋಚಿಸಿ ನೋಡಮ್ಮಾ!
ನೇರ ದಾರಿ ಗುರುಪಾದ ಸೇಚೆಯಮ್ಮಾ!
ಗಂಗೆ ಆ ಪಾದದಿಂದ ಹುಟ್ಟಿದಳಮ್ಮಾ! (ಗಂ)
-ಡಾಗಿಯೂ, ಹೆಣ್ಣಾಗಿಯೂ ಇಹನಾತಮ್ಮಾ! (ಆ)
-ಗಲಿ! ನಿನ್ನ ವಿವಾಹ ಅವನಲ್ಲಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯ ನೀನೀಗಾಗಮ್ಮಾ!!!

ಗಂಡ, ಮಕ್ಕಳ ಸುಖ ಸಾಕು ಸ್ವಾಮಿ! (ಎ)   4(1482)

-ಡರಿದೆಲ್ಲಾಧ್ಯಾತ್ಮ ಸುಖಕ್ಕೆ ಸ್ವಾಮಿ!
ನಕ್ಕೆಳ್ಳಷ್ಟೂ ಶಾಂತಿಯಿಲ್ಲ ಸ್ವಾಮಿ! (ತ)
ಕ್ಕ ಉಪಾಯವಿದಕ್ಕರುಹಿ ಸ್ವಾಮಿ! (ತ)
-ಳಮಳವಿಲ್ಲದೆ ಭಜಿಸು ಪ್ರೇಮಿ!
-ಸುಕಾಲ ಪ್ರಾಪ್ತಿಯಾಗುವುದು ಪ್ರೇಮಿ! (ಸು)
-ಖ ನಿನಗೆ ಸದಾ ಶ್ರೀ ಗುರು ಪ್ರೇಮಿ!
ಸಾರ್ಥಕವಾಗುವುದೀಜನ್ಮ ಪ್ರೇಮಿ!
ಕುಜನರ ದೂರವಿರಿಸು ಪ್ರೇಮಿ!
ಸ್ವಾಧ್ಯಾಯ ಸದಾ ಮಾಡುತಿರು ಪ್ರೇಮಿ! (ಸ್ವಾ)
-ಮೀ, ನಿರಂಜನಾದಿತ್ಯಾನಂದ ಪ್ರೇಮಿ!!!

ಗಂಡಾಂತರದಿಂದ ಪಾರಾದ ನಂಜುಂಡ! (ಗಂ)   4(2160)

-ಡಾಂತ್ರ ಉಮೆ ಕಳೆದಳೆಂದ ನಂಜುಂಡ!
ಡಾದ್ರನರ್ಥಾಗುತ್ತಿತ್ತೆಂದ ನಂಜುಂಡ! (ಸು)
-ರರ್ಗಮೃತ ಸಿಗ್ತಿರ್ಲಿಲ್ಲೆಂದ ನಂಜುಂಡ! (ಅಂ)
-ದಿಂದಾದೆ ನೀಲಕಂಠಾನೆಂದ ನಂಜುಂಡ!
ಕ್ಷಕನ್ಯಾದರ್ಶ ಸತ್ಯೆಂದ ನಂಜುಂಡ!
ಪಾಪವಿದೂರಳವಳೆಂದ ನಂಜುಂಡ!
ರಾಮನಾಮ ಪ್ರೇಮ್ಯವಳೆಂದ ನಂಜುಂಡ!
ಯಾಂಬಾ ಭವಾನ್ಯವಳೆಂದ ನಂಜುಂಡ! (ಅ)
-ನಂಗಾಕ್ಷಿ ತಾನಾಗಿಹಳೆಂದ ನಂಜುಂಡ! (ನಂ)
-ಜುಂಡನ ಪ್ರಾಣ ಅವಳೆಂದ ನಂಜುಂಡ! (ಬಿ)
-ಡವಳ ನಿರಂಜನಾದಿತ್ಯ ನಂಜುಂಡ!!!

ಗಂಧವಿದ್ದರೆ ಬಂಧವಯ್ಯಾ!   1(419)

ಗೆ ಬಿಸಿಲ ಭಯಕಯ್ಯಾ!
ವಿಷಯಾಸೆ ಮನದಿಂದಯ್ಯಾ! (ಸ)
-ದ್ದಡಗೆ ಕೇಳುವುದೇನಯ್ಯಾ?
ರೆಪ್ಪೆ ಮುಚ್ಚೆ ನೋಡ್ವುದೇನಯ್ಯಾ?
ಬಂಧು, ಬಳಗ ಭ್ರಮೆಯಯ್ಯಾ!
ರ್ಮ, ಕರ್ಮ ಮಾಡಬೇಕಯ್ಯಾ!
ರ ಗುರುಚಿತ್ತವದಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾತಯ್ಯಾ!

ಗಂಭೀರ ನೀನಾಗಿರಬೇಕು!   4(2238)

ಭೀರುವಾಗಿರದಿರಬೇಕು!
ಘುರಾಮನಂತಿರಬೇಕು!
ನೀಚ ಸ್ವಾರ್ಥ ಬಿಟ್ಟಿರಬೇಕು!
ನಾಮಸ್ಮರಣೆ ಮಾಡಬೇಕು!
ಗಿಟುಕು ಕಾಯಿಯಾಗಬೇಕು!
ಸನೆಗಾಳಾಗದಿರಬೇಕು!
ಬೇನೆ ಸಹಿಸುತ್ತಿರಬೇಕು! (ಟಾ)
-ಕು ನಿರಂಜನಾತ್ಯಾಗ್ಬೇಕು!!!

ಗಟ್ಟಿ ಮನಸು ಮಾಡಿ ಗಿಟ್ಟಿಸಿಕೋ! (ದಿ)   5(2616)

-ಟ್ಟಿಸಿ ನೋಡಿ ಗುಟ್ಟು ನೀನರಿತುಕೋ!
ರೆಯದೇ ಸ್ಥಾನ ನಿನ್ನದುಳ್ಸಿಕೋ! (ಅ)
-ನಗತ್ಯವಾದುದನೆಲ್ಲಳಿಸಿಕೋ!
ಸುವ್ಯವಸ್ಥೆಯಿಂದಾಪ್ತರಾದರ್ಸಿಕೋ!
ಮಾತುಕತೆ ಮಿತವಾಗಿರಿಸಿಕೋ! (ಅ)
-ಡಿಗಡಿಗಪ್ಪನ ಪಾದ ಸ್ಮರ್ಸಿಕೋ!
ಗಿರಿಧರನ ಗೀತಾಭ್ಯಾಸಿರ್ಸಿಕೋ! (ಜ)
-ಟ್ಟಕಾಳಗದ ಭ್ರಾಂತಿ ನಿವಾರ್ಸಿಕೋ!
ಸಿರಿಯೀಳನಾದರ್ಶವಿರಿಸಿಕೋ! (ತ)
-ಕೋ, ನಿರಂಜನಾದಿತ್ಯಾನಂದಾರ್ಸಿಕೋ!!!

ಗಟ್ಟಿ ಹಿಟ್ಟಿನ ದಟ್ಟ ರೊಟ್ಟಿ! (ಹಿ)   1(199)

-ಟ್ಟಿಹುದೊಂದಿಷ್ಟ ರೊಟ್ಟಿ ತಟ್ಟಿ!
ಹಿತವಾಗಲೆಂದದು ಗಟ್ಟಿ! (ಇ)
-ಟ್ಟಿರಬೇಕದರ ಮೇಲ್ದಿಟ್ಟಿ! (ತಿ)
-ನಬೇಕದನು ಮನಮುಟ್ಟಿ!
ತ್ತನಿದಬೇಡನು ಬಿಟ್ಟಿ! (ಅ)
-ಟ್ಟ ಕಷ್ಟಕವನೀವ ತುಷ್ಟಿ!
ರೊಟ್ಟಿ ಜೀವನಿಗಿದು ಪುಷ್ಟಿ! (ದಿ)
-ಟ್ಟಿ ನಿರಂಜನಾದಿತ್ಯ ಗಿಷ್ಟಿ!!!

ಗಟ್ಟಿಗನಿಗೆ ಪಟ್ಟ ಕಟ್ಟಬೇಕಯ್ಯಾ! (ದಿ)   5(3229)

ಟ್ಟಿಯವನದು ವಿಶಾಲವಿರ್ಬೇಕಯ್ಯಾ!
ಭಸ್ತಿಯಂತೆ ನಿಸ್ಪೃಹನಾಗ್ಬೇಕಯ್ಯಾ!
ನಿತ್ಯಾನಿತ್ಯ ವಿವೇಕಿಯಾಗಿರ್ಬೇಕಯ್ಯಾ! (ಹ)
-ಗೆಗಳಿಗೆ ಯಮರೂಪಿಯಾಗ್ಬೇಕಯ್ಯಾ!
ರರೇಳಿಗೆಗಸೂಯೆ ಪಡ್ಬಾರ್ದಯ್ಯಾ! (ಕೆ)
-ಟ್ಟ ಮಂತ್ರಿಗಳನ್ನಿಟ್ಟುಕೊಳ್ಳಬಾರ್ದಯ್ಯಾ!
ಳ್ಳ, ಸುಳ್ಳರಿಗಾಶ್ರಯ ಕೊಡ್ಬಾರ್ದಯ್ಯಾ! (ಕೊ)
-ಟ್ಟ ಭಾಷೆಗೆ ತಪ್ಪಿ ನಡೆಯಬಾರ್ದಯ್ಯಾ!
ಬೇಲಿಯೇ ಹೊಲವನ್ನು ಮೇಯ್ಬಾರ್ದಯ್ಯಾ!
ರ್ತವ್ಯ ನಿಷ್ಠಾವಂತ ತಾನಾಗ್ಬೇಕಯ್ಯಾ! (ಅ)
-ಯ್ಯಾ ನಿರಂಜನಾದಿತ್ಯ ಮಾದರಿಯಯ್ಯಾ!!!

ಗಡಿಗೆ ಇದ್ದರಡಿಗೆ! (ಅ)   5(2819)

-ಡಿಗೆಯಿದ್ದರೆ ಗಡಿಗೆ! (ಬ)
-ಗೆಬಗೆಯಾದ ಗಡಿಗೆ!
ಷ್ಟಾನಿಷ್ಟಗಳಡಿಗೆ! (ಅ)
-ದ್ದಬೇಕ್ನೀರಲ್ಲೀಗಡಿಗೆ! (ಹ)
-ರಗೊಪ್ಪಿಗೆಯಾಗಡಿಗೆ! (ಗು)
-ಡಿ ಒಡೆಯಗೀಗಡಿಗೆ! (ಹೀ)
-ಗೆ ನಿರಂಜನಾದಿತ್ಯಾಗೆ!!!

ಗಣಪತಿ ಮಂಗಳಾರತಿಯುತ್ಸವ! (ಅ)   4(2214)

-ಣಕಿಪುದಕ್ಕನ್ಯರನ್ನಲ್ಲಾ ಉತ್ಸವ!
ರಾಭಕ್ತಿಯಿಂದಾದ್ರದು ಮಹೋತ್ಸವ! (ಮ)
-ತಿಗೆಟ್ಟು ಮರೆವುದಕ್ಕೆಲ್ಲಾ ಉತ್ಸವ!
ಮಂಗಳಕರಾಚಾರ ನಿರ್ಮಲೋತ್ಸವ!
ಣಪತಿಗಿದತ್ಯಂತ ತೃಪ್ತ್ಯೋತ್ಸವ! (ಆ)
-ಳಾಗಿ ಗುರುವಿಗೆ ಮಾಡ್ಬೇಕೀ ಉತ್ಸವ! (ತ)
-ರತರದಾಟ, ನೋಟಕ್ಕಲ್ಲಾ ಉತ್ಸವ!
ತಿಳಿದಿದ ಮಾಡ್ಬೇಕು ಗಣೇಶೋತ್ಸವ! (ಕಾ)
-ಯುವುದಾಗೆಲ್ಲರನ್ನಾ ಆದರ್ಶೋತ್ಸವ! (“ತ)
-ತ್ಸರ್ವಂ” ಭಾವದಿಂದಾಗ್ಬೇಕೆಲ್ಲಾ ಉತ್ಸವ! (ಶಿ)
-ವಗೆ ನಿರಂಜನಾದಿತ್ಯಾನಂದೋತ್ಸವ!!!

ಗಣಪತಿ ಹೋಮ ಪ್ರಸಾದ! (ಗು)   2(814)

-ಣ ಗಣ ವರ್ಧಕ ಪ್ರಸಾದ!
ರಮ ಹಂಸಾತ್ಮ ಪ್ರಸಾದ!
ತಿತಿಕ್ಷಾನುಗ್ರಹ ಪ್ರಸಾದ!
ಹೋರಾಟ ಶಮನ ಪ್ರಸಾದ!
ತ್ಸರ ವಿನಾಶ ಪ್ರಸಾದ!
ಪ್ರವೃತ್ತಿ ನಿವೃತ್ತಿ ಪ್ರಸಾದ!
ಸಾದರಾರ್ಹ ಗುರು ಪ್ರಸಾದ!
ತ್ತ ನಿರಂಜನ ಪ್ರಸಾದ!!!

ಗಣಪತಿಗಾಪ್ತ ಭಾನು! (ಉ)   5(3117)

-ಣಲಿಕ್ಕುವವನವನು!
ರಮ ಭಕ್ತನವನು!
ತಿರೆಗಾಧಾರನವನು!
ಗಾನ ಪ್ರಿಯನಾಗಿಹನು! (ವ್ಯಾ)
-ಪ್ತನಾಗಿರ್ಪೆಲ್ಲೆಲ್ಲವನು!
ಭಾವಾತೀತ ದತ್ತವನು! (ಭಾ)
-ನು ನಿರಂಜನಾದಿತ್ಯಾನು??

ಗಣಪತಿಯ ನೋಡದೆಂತು ಕೊಂಡಾಡಲಿ? (ಕಾ)   6(4094)

-ಣದವರ ವರ್ಣನೆಯನ್ನೆಂತು ನಂಬಲಿ?
ಡೆಸಿ ತೃಪ್ತಿ ನನ್ನನ್ನು ಮೈಮರೆಸಲಿ! (ಅ)
-ತಿರೇಕವೀ ಮಾತೆಂದಾತನೆನ್ನದಿರಲಿ! (ಭ)
-ಯ, ಭಕ್ತಿಯನ್ನಾತ ಸ್ಥಿರವಾಗುಳಿಸಲಿ! (ಮ)
-ನೋರೋಗವನ್ನಾತ ನಿವಾರಣೆ ಮಾಡಲಿ! (ಮೃ)
-ಡನ ದಿವ್ಯ ದರ್ಶನಕ್ಕೂ ದಾರಿ ಮಾಡಲಿ! (ಎಂ)
-ದೆಂದೂ ಋಷಿವಚನ ಸುಳ್ಳಾಗದಿರಲಿ! (ಇಂ)
-ತು ದ್ವೈತಾದ್ವೈತಗಳ್ಹೊಂದಿಕೊಡುಳಿಯಲಿ!
ಕೊಂಪೆ ಹಂಪೆಯಾಗಲು ಸಹಾಯವಾಗಲಿ! (ಮೃ)
-ಡಾಣೀ ಸುತನ ಕಥೆ ಸುಳ್ಳಾಗದಿರಲಿ!
ಮರುಥರನ ಕೀರ್ತಿ ವಿರಾಜಿಸಲಿ! (ಶೂ)
-ಲಿ ನಿರಂಜನಾದಿತ್ಯಗೆ ಜಯವಾಗಲಿ!!!

ಗಣರಾಜ್ಯದಿಪ್ಪತ್ತೊಂದು ವರ್ಷ! (ಹ)   1(398)

-ಣ, ಕಾಸನ್ನ ಕಾಣದಾದ ವರ್ಷ!
ರಾಜ್ಯಾಡಳಿತದಧ್ವಾನ ವರ್ಷ! (ಆ)
-ಜ್ಯ, ಭೋಜ್ಯಗಳ ತುಟ್ಟಿಯ ವರ್ಷ!
ದಿನಸಿಗಾಗಲೆಯುವ ವರ್ಷ! (ಅ)
-ಪ್ಪಟ್ಟ ತುಪ್ಪ ಸಿಗದಾದ ವರ್ಷ! (ಅ)
-ತ್ತೊಂಬತ್ತನೂರರ್ವತ್ತೆಂಟೀ ವರ್ಷ!
ದುಡಿವವರಿಗಿಲ್ಲದ ವರ್ಷ!
ನವಾಸ ಹರಿಯಲೀ ವರ್ಷ! (ಹ)
-ರ್ಷ, ನಿರಂಜನಾದಿತ್ಯಗೀ ವರ್ಷ!

ಗಣರಾಜ್ಯಾಧಿಪ ಗಣಪ! (ಗ)   3(1019)

-ಣ ಹಿತಚಿಂತಕ ಗಣಪ!
ರಾಜಭೋಗ ತ್ಯಾಗ ಗಣಪ! (ಭೋ)
-ಜ್ಯಾನಂದ ಪ್ರದಾತ ಗಣಪ! (ವ್ಯಾ)
-ಧಿಹರ ವೈದ್ಯಶ ಗಣಪ!
ತಿತ ಪಾವನ ಗಣಪ!
ಗನ ಸಮಾನ ಗಣಪ! (ಗು)
-ಣ ದೋಷ ಬಲ್ಲವ ಗಣಪ! (ದೀ)
-ಪ ನಿರಂಜನಾದಿತ್ಯಾಧಿಪ!!!

ಗಣೇಶನಾಗಿಡ್ಲಿ, ಕಡುಬು ತಿಂದೆ! (ಪ್ರಾ)   4(1817)

-ಣೇಶಗರ್ಪಣೆ ಮಾಡಿ ನಾನು ತಿಂದೆ!
ಕ್ತಿಮಾತೆಯೊಪ್ಪಿಗೆಯಿಂದ ತಿಂದೆ!
ನಾಶವಾಗಲರಿಷ್ಟವೆಂದು ತಿಂದೆ!
ಗಿರೀಶನನುಗ್ರಹದೆಂದು ತಿಂದೆ! (ಕೊ)
-ಡ್ಲಿ ಸಂಪೂರ್ಣ ಬೆಂಬಲವೆಂದು ತಿಂದೆ!
ಷ್ಟ ಸುಟ್ಟು ಹಿಟ್ಟಾಗಲೆಂದು ತಿಂದೆ! (ನೋ)
-ಡುತ್ತ, ಕೂಡುತ್ತಾನಂದದಿಂದ ತಿಂದೆ!
ಬುದ್ಧಿ ಶುದ್ಧವಾಗಿರಲೆಂದು ತಿಂದೆ!
ತಿಂಗಳಾಯ್ತು ಬಂದು ನಾನೆಂದು ತಿಂದೆ! (ತಂ)
-ದೆ ನಿರಂಜನಾದಿತ್ಯನಾಗಿ ತಿಂದೆ!!!

ಗಣೇಶನಿಗೆ ನಾನಾ ಭಕ್ಷ್ಯ ನೇವೇದ್ಯ! (ಗ)   4(2210)

-ಣೇಶನ ಹೆಸ್ರಲ್ಲಾಯ್ತೆಲ್ಲರ್ಗಾ ನೇವೇದ್ಯ! (ದೇ)
-ಶದಲ್ಲೆಲ್ಲಾಗ್ವುದಿಂದಾ ಮಹಾ ನೇವೇದ್ಯ!
ನಿಶ್ದಿನವನ ಸ್ಮರಣೆಯಾ ನೇವೇದ್ಯ! (ಗಂ)
-ಗೆ, ಗೌರಿಯರಿಗೂ ಈ ದಿನಾ ನೇವೇದ್ಯ!
ನಾಶವಾಗ್ವುದೆಲ್ಲಾ ಮಲಾನುಭವ ವೇದ್ಯ!
ನಾಮ, ರೂಪಾತೀತ ಭವರೋಗ ವೈದ್ಯ! (ಶು)
-ಭ ಸಂದೇಶವಿದೆಲ್ಲರ್ಗಾಗ್ಲಿ ಪ್ರಚೋದ್ಯ! (ಲ)
-ಕ್ಷಸಿದ್ಧಿಗಿರ್ಬೇಕತ್ಯಗತ್ಯ ವೈರಾಗ್ಯ! (ನಾ)
-ನೇ ನೀನಾಗುವಾನಂದ ಪರಮ ಭಾಗ್ಯ!
ವೇದಾಂತಕ್ಕಿರ್ಪ ಹೆಗ್ಗುರಿ ಈ ಸೌಭಾಗ್ಯ! (ವಂ)
-ದ್ಯ, ನಿರಂಜನಾದಿತ್ಯನಿಗೆಲ್ಲಾ ವೇದ್ಯ!!!

ಗಣ್ಯನಾಗೋ ಸುಬ್ರಹ್ಮಣ್ಯನಾಗೋ! (ನಾ)   4(2166)

-ಣ್ಯಗಳಾಸೆ ಬಿಟ್ಟು ಜ್ಞಾನಿಯಾಗೋ!
ನಾಮದೊಳಗಿನ ಸ್ವಾಮಿಯಾಗೋ!
ಗೋಸೇವೆ ಮಾಡಿ ಗೋಪಾಲನಾಗೋ!
ಸುಖವಿದರನುಭವಿಯಾಗೋ!
ಬ್ರಹ್ಮಚರ್ಯದಿಂದ ಬ್ರಹ್ಮನಾಗೋ! (ಬ)
-ಹ್ಮದ್ವೇಷ ಬಿಟ್ಟು ಬ್ರಾಹ್ಮಣನಾಗೋ! (ಪು)
-ಣ್ಯ ಪಾಪದಂಟಿಲ್ಲದವನಾಗೋ!
ನಾದ, ಬಿಂದು, ಕಲಾತೀತನಾಗೋ! (ಆ)
-ಗೋ, ನಿರಂಜನಾದಿತ್ಯ ನೀನಾಗೋ!!!

ಗಣ್ಯರಾಗುವಾಸೆ ಎಲ್ಲರಿಗೆ! (ಪು)   6(4302)

-ಣ್ಯ, ಪಾಪದರಿವಿಲ್ಲವರಿಗೆ!
ರಾಗ, ದ್ವೇಷ, ತಪ್ಪಿಲ್ಲವರಿಗೆ!
ಗುಹ್ಯಾ ಚಾಪಲ್ಯ ಬಹ್ಳವರಿಗೆ!
ವಾದ, ವಿವಾದಕ್ಕಿಷ್ಟವರಿಗೆ!
ಸೆರೆಯಲ್ಲಾನಂದ ಅವರಿಗೆ!
ಡರಿಗೆದೆಯಿಲ್ಲವರಿಗೆ! (ಇ)
-ಲ್ಲವೆಂದೆಂದು ಶಾಂತಿ ಅವರಿಗೆ! (ಅ)
-ರಿತ್ರೆ ತಮ್ಮ ತಾವ್ಸುಖವರಿಗೆ!
ಗೆಳೆಯ ನಿರಂಜನಾದಿತ್ಯಾಗೆ!!!

ಗದ್ದಲವಿಲ್ಲದ ವಿಧಾನಸಭೆ! (ಮ)   4(2377)

-ದ್ದಳೆಯಿಲ್ಲದೊಂದು ಸಂಗೀತ ಸಭೆ! (ಛ)
-ಲ, ಬಲದ್ದ್ಯುದ್ಧವಿದ್ದರದು ಸಭೆ!
ವಿಷಯ ನಿರ್ಧಾರಕ್ಕಾಗಿಂಥಾ ಸಭೆ! (ಬೆ)
-ಲ್ಲದಂತಾಡ್ಯೇನೂ ಮಾಡ್ದಿದ್ರೇಕಾ ಸಭೆ?
ರ್ಪ, ದಂಭಕ್ಕಲ್ಲ ವಿಧಾನ ಸಭೆ!
ವಿವೇಕಿಗಳಿಲ್ಲದ್ದಯೋಗ್ಯ ಸಭೆ!
ಧಾರ್ಮಿಕ ವೃತ್ತಿಯದ್ದುತ್ತಮ ಸಭೆ! (ಜ)
-ನತೆಯುದ್ಧಾರಕ್ಕತ್ಯಗತ್ಯಾ ಸಭೆ!
ಮತಾವಾದಕ್ಕಿದು ತಕ್ಕ ಸಭೆ! (ಶೋ)
-ಭೆ ನಿರಂಜನಾದಿತ್ಯನಿಗಾ ಸಭೆ!!!

ಗಧಾಧರ ದಗಾಕೋರನೇನಯ್ಯಾ?   5(2521)

ಧಾರ್ಮಿಕ ಸ್ವಭಾವ ಅವನದಯ್ಯಾ!
ಕ್ಕೆ ಶಾಂತಿಗವನಿಂದಾಗದಯ್ಯಾ!
ಮಾದೇವಿಗವನೇ ಪತಿಯಯ್ಯಾ!
ರ್ಶನೇಂದ್ರಿಯ ನಿಗ್ರಹದಿಂದಯ್ಯಾ!
ಗಾಡ್ಯರ್ಜುನನದ್ದೋಡಿಸಿದನಯ್ಯಾ!
ಕೋದಂಡಧಾರಿಯೂ ಅವನೇ ಅಯ್ಯಾ!
ತಿಪತಿ ಪಿತ ಶ್ರೀಹರಿಯಯ್ಯಾ!
ನೇಮ, ನಿಷ್ಠೆಗವನಾರ್ಧನಯ್ಯಾ!
ಶ್ವರದಾಸೆ ಅವನಿಗಿಲ್ಲಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾ ಗಧಾಧರಯ್ಯಾ!!!

ಗಫರ್ಖಾನ ಹೂ, ಹಣ್ಣು ತಂದ! (ಸ)   4(2016)

-ಫಲವಾಗಲೀ ಜನ್ಮವೆಂದ! (ಕಾ)
-ರ್ಖಾನೆಯ ಬಳಿಯಿಂದ ಬಂದ!
ಮಸ್ಕರಿಸಿ ಮುಂದೆ ನಿಂದ!
ಹೂವಾಗಿ ಮಾಡ್ಬೇಕೆನ್ನನೆಂದ!
ಣ, ಕಾಸ್ಬೇಡ ನನಗೆಂದ! (ಕ)
-ಣ್ಣು ಸದಾ ನಿನ್ನ ನೋಡ್ಬೇಕೆಂದ!
ತಂದೆ, ತಾಯ್ನೀನು ನನಗೆಂದ! (ಕಂ)
-ದ, ನಿರಂಜನಾದಿತ್ಯಗೆಂದ!!!

ಗರ್ಭದೊಳಗಿನ ಪಿಂಡ ಬೆಳೆಯುವ ವಿಧಾನ ವಿಚಿತ್ರ!   2(451)

ಗ-ರ್ಭ ಧರಿಸುವುದೊಂದವನ ಸೃಷ್ಟಿಯ ಪರಮ ವಿಚಿತ್ರ!
ಅ-ದೊಳಗೆ ದಿನಕೊಂದು ರೀತಿ ಬೆಳೆವುದತ್ಯಂತ ವಿಚಿತ್ರ!
ಅ-ಳವಡುವುದಿದನು ಮನಸಿಗೆ ನಿಲುಕದ ವಿಚಿತ್ರ!
ಆ-ಗಿನಂತೆ ಈಗಿಲ್ಲ, ಈಗಿನಂತೆ ಮತ್ತಿಲ್ಲವೆಂಬ ವಿಚಿತ್ರ!
ಅ-ನವರತರಿಯದಂತೆ ಸೃಷ್ಟಿ, ಸ್ಥಿತಿ ಲಯದ ವಿಚಿತ್ರ!
ಪಿಂಡಾಂಡ, ಬ್ರಹ್ಮಾಂಡದೊಳಗಿನ ಕೆಲಸಕಾರ್ಯ ವಿಚಿತ್ರ!
ಅ-ಡಗಿ ಸರ್ವದರೊಳಗಿರುವ ಸ್ವಾಮಿಯಮೇಲೆ ವಿಚಿತ್ರ!
ಬೆಳೆಸಿ, ಬೆಳಗಿಸಿ, ಮುಳುಗಿಸುವಂಥಾ ರೀತಿ ವಿಚಿತ್ರ!
ಹ-ಳೆಯದು ಹೊಸದಾಗುವುದವ ನಿಷ್ಟವೆಂಬುದು ವಿಚಿತ್ರ!
ಯುಗ, ಯುಗದಲ್ಲೊಂದು ವಿಧವಾದ ನಾಟಕ ವಿಚಿತ್ರ!
ರವ್ಯಾಸನೆಂದಂತವನಾದ್ಯಂತ ಅರಿಯದ ವಿಚಿತ್ರ!
ವಿಮಲಗುರು ನಿರಂಜನನ ನಂತಾವತಾರ ವಿಚಿತ್ರ!
ಧಾಳಿಯಾಗುತಿದೆ ಬಾಳು ಅಜ್ಞಾನಂದಿಂದಿದೆಂಥಾ ವಿಚಿತ್ರ!
ಶಿಸುವುದೀ ಕಾಯವಿಂದೋ ನಾಳೆಯೋ? ತಿಳಿಯೆ ವಿಚಿತ್ರ!
ವಿನಯದಿಂದವಗೆ ಶರಣಾದರರಿವುದೀ ವಿಚಿತ್ರ!
ಚಿದಾನಂದ ಗುರು ಶಿವಾನಂದ ಸಂದೇಶವಿದು ವಿಚಿತ್ರ
ತ್ರಯಲೋಕನಾಥ ಸದ್ಗುರು ನಿರಂಜನಾದಿತ್ಯ ವಿಚಿತ್ರ!!!

ಗರ್ಭವಾಗಬೇಕು ಮುಟ್ಟುಹೋಗಬೇಕು! [ಅ]   2(780)

-ರ್ಭಕ ದಿನದಿನಕೂ ಬಲಿಯಬೇಕು!
ವಾದ ಹೋಗಬೇಕು ಬೋಧ ಬರಬೇಕು!
ತಿ ಸಾಗಬೇಕು, ಸ್ಥಿತಿ ನಿಲಬೇಕು!
ಬೇನೆ ಬರಬೇಕು ಪ್ರಸವಾಗಬೇಕು!
ಕುಲ, ಶೀಲ, ಸರಳವಾಗಿರಬೇಕು! (ಕಾ)
-ಮುಕನಾಗದೆ ಸಾಧನೆಯಾಗಬೇಕು! (ಕ)
-ಟ್ಟುಕಳಚಿ ಬಂಧಮುಕ್ತನಾಗಬೇಕು!
ಹೋಮ, ನೇಮ, ರಾಮನಾಮವಾಗಬೇಕು!
ಮನ ನಿಜರೂಪದತ್ತಾಗಬೇಕು!
ಬೇಕು ಬೇಡೆನ್ನದ ತೃಪ್ತಿ ಇರಬೇಕು!
ಕುಮಾರ ನಿರಂಜನಾದಿತ್ಯಾಗಬೇಕು!!!

ಗಲೀಜ್ಮಾಡ್ಬೇಡ ಮನೆಯಮ್ಮಾ! (ಮಾ)   5(2768)

-ಲೀಕನಿಚ್ಛಾವರ್ತಿಯಾಗಮ್ಮಾ! (ಮೋ)
-ಜ್ಮಾಡಿ ಕಾಲ ಕಳೆಯ್ಬೇಡಮ್ಮಾ! (ಇ)
-ಡ್ಬೇಕನನ್ಯ ಭಕ್ತಿಯನ್ನಮ್ಮಾ! (ಮಾ)
-ಡಬಾರದು ಮಿಥ್ಯಾರೋಪಮ್ಮಾ!
ನೋವಾಕ್ಕಾಯೊಂದಾಗ್ಬೇಕಮ್ಮಾ!
ನೆನೆಯ್ಬೇಕವನ ಪಾದಮ್ಮಾ! (ಮಾ)
-ಯವಾಗ್ವುದೈಹಿಕ ಮೋಹಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾತಮ್ಮಾ!!!

ಗಾಂಭೀರ್ಯ ಉಳ್ಳವನಾಗಿರು!   5(2978)

ಭೀರುವಾಗಿ ನೀನಿರದಿರು! (ವೀ)
-ರ್ಯವನ್ನು ಹಾಳುಮಾಡದಿರು!
ತ್ತಮರ ಸ್ನೇಹದಲ್ಲಿರು! (ಕ)
-ಳ್ಳ ಕಾಕರಿಂದ ದೂರವಿರು!
ರಗುರುಭಕ್ತನಾಗಿರು!
ನಾಥ ನಾರಾಯಣಿಗಾಗಿರು! (ಯೋ)
-ಗಿರಾಜ ಶಿವ ನೀನಾಗಿರು! (ಸೇ)
-ರು ನಿರಂಜನಾದಿತ್ಯನೂರು!!!

ಗಾಡಿ ಓಡುತ್ತಲಿರ್ಬೇಕು! (ಬಾ)   5(2526)

-ಡಿಗೆ ಕಮ್ಮಿಯಾಗದಿರ್ಬೇಕು!
ಡಾಟತಿಯಾಗದಿರ್ಬೇಕು! (ದುಂ)
-ಡಾವರ್ತಿಗೆ ಹೋಗದಿರ್ಬೇಕು! (ಕಾ)
-ಡುದಾರಿ ಹಿಡಿಯದಿರ್ಬೇಕು!(ಹ)
-ತ್ತರ, ದೂರವೆನದಿರ್ಬೇಕು! (ಖಾ)
-ಲಿಯಾದಾಗ ಊರು ಸೇರ್ಬೇಕು! (ಬ)
-ರ್ಬೇಕ್ಮತ್ತೆ ಹೊರಡುತ್ತಿರ್ಬೇಕು! (ಟಾ)
-ಕು, ನಿರಂಜನಾದಿತ್ಯಾಗ್ಬೇಕು!!!

ಗಾಡಿಯ ಶಕ್ತಿ, ಚಾಲಕನಾಸಕ್ತಿ, ಪ್ರಯಾಣ ತೃಪ್ತಿ! (ಅ)   4(2165)

-ಡಿಗೆಯ ಶಕ್ತಿ, ಅಡಿಗೆಯವ್ನಾಸಕ್ತಿ, ಊಟ ತೃಪ್ತಿ!
ಜ್ಞದ ಶಕ್ತಿ, ಯಾಜ್ಞಿಕನಾಸಕ್ತಿ, ಸುಜ್ಞಾನ ತೃಪ್ತಿ!
ಶಿಯ ಶಕ್ತಿ, ಶಶಿಧರನಾಸಕ್ತ್ಯನಿಶ ತೃಪ್ತಿ! (ಭ)
-ಕ್ತಿಯ ಶಕ್ತಿ, ಭಕ್ತನಚಲಾಸಕ್ತಿ, ಮುಕ್ತಿ ಸಂತೃಪ್ತಿ!
ಚಾಕರಿಯ ಶಕ್ತಿ, ಚಾಕರನಾಸಕ್ತ್ಯಾಚಾರ ತೃಪ್ತಿ!
ಕ್ಷ್ಯಿಯ ಶಕ್ತಿ, ಲಕ್ಷ್ಮೀಶನಾಸಕ್ತಿ, ಲಕ್ಷ್ಯ ಸಂತೃಪ್ತಿ!
ರದ ಶಕ್ತಿ, ಕಾರ್ಯದಾಸಕ್ತಿ, ಕರ್ತವ್ಯ ಸಂತೃಪ್ತಿ!
ನಾಮದ ಶಕ್ತಿ, ನಾಮಿಯಾಸಕ್ತಿ, ಆರಾಮ ಸಂತೃಪ್ತಿ!
ತ್ಯದ ಶಕ್ತಿ, ನಿತ್ಯನಾಸಕ್ತಿ, ಸ್ವಸ್ಥಿತಿ ಸಂತೃಪ್ತಿ! (ವ್ಯ)
ಕ್ತಿಯ ಶಕ್ತಿ, ಅವ್ಯಕ್ತನಾಸಕ್ತಿ, ವ್ಯವಸ್ಥೆ ಸಂತೃಪ್ತಿ!
ಪ್ರಭಾವ ಶಕ್ತಿ, ಪ್ರಭಾಕರನಾಸಕ್ತ್ಯಭೀಷ್ಟ ತೃಪ್ತಿ! (ಮಾ)
-ಯಾಶಕ್ತಿ, ಮಾಧವನಾಸಕ್ತಿ, ಲೀಲಾನಾಟಕ ತೃಪ್ತಿ! (ಗು)
-ಣಗುಣ ಶಕ್ತಿ, ಗಣೇಶನಾಸಕ್ತ್ಯಗಣಿತ ತೃಪ್ತಿ!
ತೃಣ, ಪರ್ಣ ಶಕ್ತ್ಯತ್ರಿತನಯನಾಸಕ್ತ್ಯಾತ್ಮ ತೃಪ್ತಿ! (ತೃ)
-ಪ್ತಿ ನಿರಂಜನಾದಿತ್ಯಾನಂದ ಶಿವಾನಂದ ಸಂತೃಪ್ತಿ!!!

ಗಾನಕಲಾ ಕೋವಿದಾ ಗೀತಾಚಾರ್ಯ! (ಅ)   4(1603)

ನ್ಯ ಗುರುಭಕ್ತಾ ವೆಂಕಟಾಚಾರ್ಯ!
ಲಿಮಲ ನಾಶಾ ಸಂಗೀತಾಚಾರ್ಯ! (ಬಾ)
-ಲಾ, ಪ್ರಸನ್ನಾನಂದಾ ವೆಂಕಟಾಚಾರ್ಯ!
ಕೋಪ, ತಾಪ, ವಿದೂರಾ ವಾದ್ಯಾಚಾರ್ಯ!
ವಿನಯಶೀಲಾತ್ಮಾ ವೆಂಕಟಾಚಾರ್ಯ!
ದಾನಿ, ಸನ್ಮಾನೀ “ವಾದ್ಯ ಕೋಣಾಚಾರ್ಯ” | (ಸಂ)
-ಗೀತ ಸಾಹಿತ್ಯಾತ್ಮ ವೆಂಕಟಾಚಾರ್ಯ!
ತಾಳ ಮೇಳ, ಲೋಲಾತ್ಮಾ ವಿದ್ಯಾಚಾರ್ಯ! (ಆ)
-ಚಾರ, ವಿಚಾರಾತ್ಮಾ ವೆಂಕಟಾಚಾರ್ಯ! (ಆ)
-ರ್ಯ, ನಿರಂಜನಾದಿತ್ಯಾನಂದಾಚಾರ್ಯ!!!

ಗಾನಮೃತ ಪಾನ ಮಾಡಯ್ಯಾ    2(763)

ನಾಮರೂಪಾತ್ಮನ ನೋಡಯ್ಯಾ!
ಮೃದು ಮಧುರ ನಾದವಯ್ಯಾ!
ತ್ವ ಸ್ಥಿತಿಗಿದುತ್ತಮವಯ್ಯಾ!
ಪಾಪ ಪುಣ್ಯವಿಲ್ಲದಕಯ್ಯಾ!
ರ, ನಾರಿ ಭೇದವಿಲ್ಲಯ್ಯಾ!
ಮಾನಾಭಿಮಾನ ಶೂನ್ಯವಯ್ಯಾ!
ಮರಿನಾ ಧ್ವನಿಯಿದಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯದಯ್ಯಾ!!!

ಗಾನಾಮೃತ ಪಾನಾನಂದ!   4(1417)

ನಾದಬ್ರಹ್ಮ ನಿತ್ಯಾನಂದ!
ಮೃತ ಸಂಜೀವಿನ್ಯಾನಂದ!
ನ್ಮಯ ಮನಾತ್ಮಾನಂದ!
ಪಾದಸೇವಾಮರಾನಂದ!
ನಾರಸಿಂಹ ಸ್ತೋತ್ರಾನಂದ!
ನಂದಕಂದ ನಾಮಾನಂದ! (ಕಂ)
-ದ ನಿರಂಜನಾದಿತ್ಯಂದ!!!

ಗಾಳಿ ಬೀಸಿತು, ಧೂಳು ಹೋಯಿತು! (ಅ)   4(1921)

-ಳಿವಿಂಡಲರಿನೆಡೆಗೋಡಿತು!
ಬೀಗುವಷ್ಟುಮೃತ ಪಾನಾಯಿತು!
ಸಿಹಿಯಮಲು ತಲೆಗೇರಿತು!
ತುರೀಯಾತೀತಾನಂದವಾಯಿತು!
ಧೂರ್ತರಾಟ ನಡೆಯದಾಯಿತು! (ಬಾ)
-ಳು ಗುರುಲೀಲೆಂಬರಿವಾಯಿತು!
ಹೋರಾಟ ವಿಜಯಪ್ರದಾಯಿತು! (ಬಾ)
-ಯಿ ಮುಚ್ಚ್ಯಾನಂದಿಸೆಂದಾಜ್ಞೆಯಾಯ್ತು! (ಮಾ)
-ತು ನಿರಂಜನಾದಿತ್ಯ ಬಿಟ್ಟಾಯ್ತು!!!

ಗಾಳಿ ಬೀಸುವಾಗ ತೂರಿಕೋ! [ಆ]   2(946)

-ಳಿದಾಗ ಹೆಸರುಳಿಸಿಕೋ!
ಬೀಜವಿದ್ದಾಗ ಬಿತ್ತಿಕೋ!
ಸುಮವರಳಿದಾಗಾಯ್ದುಕೋ!
ವಾದ್ಯವಿದ್ದಾಗ ಕಲಿತುಕೋ! (ರಾ)
-ಗತಿಳಿದಾಗಾಲಾಪಿಸಿಕೋ!
ತೂಗುವಾಗ ಮಲಗಿದ್ದುಕೋ! (ಬ)
-ರಿವಾಗೆಚ್ಚರವಾಗಿದ್ದುಕೋ! [ತ]
-ಕೋ! ನಿರಂಜನಾದಿತ್ಯನಕೋ!!!

ಗಾಳಿ ಬೀಸ್ತು, ಧೂಳೆದ್ದಿತು, ಮಳೆಬಿತ್ತು!   6(3336)

(ಆ)-ಳಿದ ಬಾಳಿಗೀಗ ಸಮಾಪ್ತಿಯಾಯಿತು!
ಬೀಸಿದ ಬಿರುಗಾಳಿ ಶಾಂತವಾಯಿತು!
(ಸು)-ಸ್ತು ಪರಿಹಾರಕ್ಕನುಕೂಲವಾಯಿತು!
ಧೂರ್ತತನ ವಿರ್ಬಾರದೆಂಬರಿವಾಯಿತು!
(ಹ)-ಳೆಯುಗ್ರಾಕಾರಕ್ಕೆ ನಾಚುವಂತಾಯಿತು!
(ತಿ)-ದ್ದಿಕೊಳ್ಳದಿದ್ರೆ ವಿಧಿಯಿಲ್ಲದಾಯಿತು!
ತುಕ್ಕಾಗ್ದಂತಾಯುಧ ಒಳಗಿಡಬೇಕಾಯ್ತು!
ಲಹರಿರಾಗ ಹಾಡಬೇಕಾಯಿತು!
(ಗೆ)-ಳೆಯರ ಕೂಟ ಕಟ್ಟಬೇಕಾಗಿ ಬಂತು!
ಬಿತ್ತಿದ ಫಸ್ಲು ಕೊಯ್ಯಲೇ ಬೇಕಾಯಿತು!
(ಹೊ)-ತ್ತು, ನಿರಂಜನಾದಿತ್ಯನಿಚ್ಛೆಯಂತಾಯ್ತು!!!

ಗಾಳಿಯೊಡಗೂಡಿ ಬಂತೀಗ ಮಳೆ! (ಕು)   4(2074)

-ಳಿತಲ್ಲಿಗೀಗ ನುಗ್ಗಿ ಬಂತಾ ಮಳೆ! (ಬಾ)
-ಯೊಣಗಿದ್ದಾಗ ಬೇಕಾಗಿತ್ತಾ ಮಳೆ! (ಮೃ)
-ಡನಿಚ್ಛಾನುಸಾರೋಡಿ ಬಂತಾ ಮಳೆ! (ಗಂ)
-ಗೂ ತಾಯಿಯ ದಿವ್ಯ ಸ್ವರೂಪಾ ಮಳೆ! (ಗ)
-ಡಿಬಿಡಿಯಾದ್ರೂ ಹಿತಕಾರೀ ಮಳೆ!
ಬಂದಂತೆ ಹೊರಟು ಹೊಯ್ತೀಗಾ ಮಳೆ!
ತೀರ್ಥಾನುಗ್ರಹಾದ್ಮೇಲಿನ್ನೇಕಾ ಮಳೆ? (ರಂ)
-ಗನಾಥನ ಶ್ರೀಪಾದ ತೀರ್ಥಾ ಮಳೆ!
ಲಿನವೆಲ್ಲಾ ತೊಳೆಯಿತಾ ಮಳೆ! (ಮ)
-ಳೆ, ನಿರಂಜನಾದಿತ್ಯಾನಂದಾ ಮಳೆ!!!

ಗಿಡ ನೆಡು, ಬಿಡಿಬಿಡಿಯಾಗಿ ನೆಡು! (ತ)   2(898)

-ಡ ಮಾಡದೆಚ್ಚರದಿಂದೆಲ್ಲೆಲ್ಲೂ ನೆಡು! (ಮ)
-ನೆ ಮಂದಿಯೆಲ್ಲಾ ಸೇರುತೊಂದಾಗಿ ನೆಡು! (ದು)
-ಡುಕದೆ ಸಮಾಧಾನದಿಂದಲೇ ನೆಡು!
ಬಿಸುಲು ಝಳ ಕಮ್ಮಿಯಾದಾಗ ನೆಡು! (ಅ)
-ಡಿಗಡಿಗಪ್ಪನ ನೆನೆಯುತ್ತ ನೆಡು!
ಬಿಗಿಯಾಗಿ ಬಿದ್ದುಹೋಗದಂತೆ ನೆಡು! (ಬಾ)
-ಡಿ ಹೋಗದಂತೆ ತ್ಯಾವವಿರಿಸಿ ನೆಡು! (ಆ)
-ಯಾಸವೇನೂ ಆಗದಂತೆ ನೋಡಿ ನೆಡು! (ಮು)
-ಗಿಸುವ ತನಕುತ್ಸಾಹದಿಂದ ನೆಡು!
ನೆರೆಯವರ ನೆರವಿನಿಂದ ನೆಡು! (ನೆ)
-ಡು ನಿರಂಜನಾದಿತ್ಯಾತ್ಮಪ್ರೇಮ ನೆಡು!!!

ಗಿಡದಲ್ಲೇ ಹಣ್ಣಾದರೆ ಬಹು ರುಚಿ! (ಕ)   4(2007)

-ಡಲಲ್ಲೇ ಇರುವ ಮೀನು ಸದಾ ಶುಚಿ!
ಯಾಸಾಗರದ ನೀರು ಬಹು ರುಚಿ! (ಎ)
-ಲ್ಲೇ ಇದ್ದರೂ ಗುರುದೇವ ಸದಾ ಶುಚಿ!
ರಿಭಕ್ತಿಸಾರಾಮೃತ ಬಹು ರುಚಿ! (ಹೆ)
-ಣ್ಣಾಗಿದ್ದರೂ ಸರಸ್ವತಿ ಸದಾ ಶುಚಿ! (ಮ)
-ದನಾರಿಯ ಮಾತುಕತೆ ಬಹು ರುಚಿ! (ಧಾ)
-ರೆಯಾಗಿ ಸುರಿವ ಮಳೆ ಸದಾ ಶುಚಿ!
ಡತನ ಭಕ್ತನಿಗೆ ಬಹು ರುಚಿ!
ಹುಸಿ, ದಿಟಾತೀತ ದತ್ತ ಸದಾ ಶುಚಿ! (ಕು)
-ರುಕುಲಾರಿಯಂತರ್ವಾಣಿ ಬಹು ರುಚಿ! (ರು)
-ಚಿ, ನಿರಂಜನಾದಿತ್ಯ ಚಿತ್ತತಿ ಶುಚಿ!!!

ಗಿರಿಜಮ್ಮ ಸಾಕಮ್ಮ ನಿನ್ನ ಮಾಯಮ್ಮ! (ಅ)   1(196)

-ರಿತೆ ನಾನಿನ್ನನೆನ್ನ ಟಾಯಿಯೆಂದಮ್ಮ!
ನ್ಮವಿತ್ತು ಬನ್ನಪಡಿಪುದೇನಮ್ಮ! (ಅ)
-ಮ್ಮಮ್ಮಾ! ನಿನ್ನ ಆಟ ವಿಚಿತ್ರ ಕಾಣಮ್ಮಾ!
ಸಾಕಿ, ಸಲಹಿ, ಹೊಳಗೆ ತಳ್ಳಬೇಡಮ್ಮಾ!
ಠನತನ ನಿನಗೇಕನ್ನಲಮ್ಮಾ? (ಅ)
-ಮ್ಮರಮನೆಯಿಂದಿಳಿದೋಡಿ ಬಾರಮ್ಮ!
ನಿನ್ನ ಬಿಟ್ಟರೆನಗಾರು ಗತಿಯಮ್ಮ? (ಅ)
-ನ್ನ, ಪಾನ, ನಿನ್ನ ಕರುಣೆಯನಗಮ್ಮಾ!
ಮಾರಬೇಡನ್ಯರಿಗೆನ್ನನು ನನ್ನಮ್ಮಾ! (ಬ)
-ಯಲಾಟ, ಹುಯಿಲಾಟ, ಸಾಕಾಯ್ತೆನ್ನಮ್ಮಾ! (ಅ)
-ಮ್ಮ! ನಿರಂಜನಾದಿತ್ಯ ಮಾಯಾಧೀಶಮ್ಮಾ!

ಗೀತೆಗೆ ಪ್ರೀತಿ ವೆಂಕಟೇಶಮ್ಮಾ! (ಜೊ)   6(3794)

-ತೆ ಬಿಟ್ಟಿರಲಾರರವರಮ್ಮಾ!
ಗೆದ್ದಾಗ, ಸೋತಾಗ ಒಟ್ಟಿಗಮ್ಮಾ!
ಪ್ರೀತಿಬ್ಬರದ್ದೂ ಪರಿಶುದ್ಧಮ್ಮಾ!
ತಿನ್ನುವುದೊಂದೇ ತಟ್ಟೆಯಲ್ಲಮ್ಮಾ! (ಸಾ)
-ವೆಂಬನೋವು ಅವರಿಗಿಲ್ಲಮ್ಮಾ!
ರುಣಾ ಹೃದಯರವರಮ್ಮಾ! (ಪೇ)
-ಟೆ ಬೀದಿ ಸುತ್ತುವುದಿಲ್ಲವ್ರಮ್ಮಾ!
ರಣರವರ್ಗುರುವಿಗಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾನಂದಮ್ಮಾ!!!

ಗೀಳಿಟ್ಟರೆ ಕೂಳು ಹುಟ್ಟುವುದೇನಯ್ಯಾ? (ಆ)   4(1986)

-ಳಿಗಾಳಾಗಿ ಸದಾ ದುಡಿಯಬೇಕಯ್ಯಾ! (ಅ)
-ಟ್ಟಹಾಸಕ್ಕೆ ಬೆಟ್ಟ ನಡುಗೀತೇನಯ್ಯಾ? (ಹಾ)
-ರೆ ಗುದ್ದಲಿಗಳಿಂದದು ಪುಡಿಯಯ್ಯಾ!
ಕೂಲಿ, ಕೆಲಸವಾಗದೆ ಸಿಗದಯ್ಯಾ! (ಕಿ)
-ಳು, ಮೇಲೆಂದರೆ ಕೆಲಸ ಸಾಗದಯ್ಯಾ!
ಹುಟ್ಟು, ಸಾವಿನ, ಕರ್ಮ ಸಾಕುಮಾಡಯ್ಯಾ! (ಜು)
-ಟ್ಟು, ಜನಿವಾರ ಕಿತ್ತೆಸೆದು ಬಿಡಯ್ಯಾ! (ಯಾ)
-ವುದೂ ಸ್ಥಿರವಲ್ಲೆಂದರಿಯಬೇಕಯ್ಯ!
ದೇಹ ದೇವಾಲಯದಲ್ಲಿಹ ದೇವಯ್ಯಾ! (ಅ)
-ನವರತಾಭ್ಯಾಸಿಗಾ ದರ್ಶನವಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾತ್ಮ ಸಾಕ್ಷಿಯಯ್ಯಾ!!!

ಗುಂಗುರು ಕೂದಲ ರಂಗನಿವನಪ್ಪಾ!   4(2137)

ಗುರುವಾದ ಗೀತೋಪದೇಶದಿಂದಪ್ಪಾ! (ಕು)
-ರುವಂಶವನ್ನು ಧ್ವಂಸ ಮಾಡಿದನಪ್ಪಾ!
ಕೂಡಾಡ್ಗೋವಳರ ಗೆಳೆಯನಾದಪ್ಪಾ!
ರಿದ್ರ ಸುಧಾಮನ ಪೊರೆದನಪ್ಪಾ! (ಬಾ)
-ಲಲೀಲೆಯಿವನದವರ್ಣನೀಯಪ್ಪಾ! (ಕೂ)
-ರಂಬಿಗೀಡಾಗಿ ಲೀಲೆ ಮುಗಿಸಿದಪ್ಪಾ! (ವಂ)
-ಗದೇಶೋದ್ಧಾರಕ್ಕಾಗೀಗ ಬರಲಪ್ಪಾ!
ನಿಶಿ, ದಿನಾಗ್ತಿದೆ ಘೋರ ಮಾರಣಪ್ಪಾ! (ಅ)
-ವರಿಗಾಗ್ವನ್ಯಾಯಕ್ಕೆ ಮಿತಿಯಿಲ್ಲಪ್ಪಾ! (ದೀ)
-ನಬಂಧುವೆಂಬ ನಾಮನ್ವರ್ಥವಾಗ್ಲಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯಾ!! ದಯೆದೋರಪ್ಪಾ!!!

ಗುಂಡಪ್ಪಾ! ಕಲ್ಲುಗುಂಡು ಲಿಂಗಪ್ಪಾ!   2(673)

ಮರುಧ್ವನಿ ಸಿಡಿ ಗುಂಡಪ್ಪಾ! (ಅ)
-ಪ್ಪಾಗಿಪ್ಪವನೇ ಗುರು ಗುಂಡಪ್ಪಾ!
ರ್ಮ, ಧರ್ಮಕಾಧಾರಾ ಗುಂಡಪ್ಪಾ! (ಅ)
-ಲ್ಲು, ಇಲ್ಲು, ಎಲ್ಲೆಲ್ಲೂ ಆ ಗುಂಡಪ್ಪಾ!
ಗುಂಡಪ್ಪಾ ಘೋರ ನಂಜಾಗುಂಡಪ್ಪಾ! (ಸು)
-ಡುಗಾಡಿನಲಿಪ್ಪಪ್ಪ ಗುಂಡಪ್ಪಾ!
ಲಿಂಗವದೆಲ್ಲಾ ಲಿಂಗ ಗುಂಡಪ್ಪಾ!
ತಿ ಮಾರ್ಕಂಡೇಯಗಾಗುಂಡಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯಾ ಗುಂಡಪ್ಪಾ!!!

ಗುಂಡಮ್ಮಗಳಿಗೆ ಕಲ್ಲುಗುಂಡೊಂದು ದೇವರು!   6(4015)

ಕ್ಕಾ, ಡಮರು, ವಾದ್ಯ ಗದ್ದಲಕ್ಕಾಶಿಪರು! (ತ)
-ಮ್ಮತಮ್ಮ ಕಪ್ಪ, ಕಾಣಿಕೆಗಳರ್ಪಿಸುವರು!
ತಿಗೆಟ್ಟೆವೆಂದಳುತ್ತಾ ಕಣ್ಣೀರಿಡುವರು! (ಬಾ)
-ಳಿಗೆ ಬೆಳಕೀಗ ತೋರೆಂದು ಪ್ರಾರ್ಥಿಸುವರು!
ಗೆಳೆಯನಾಗ್ಯೆಮಗೆ ನೆರವಾಗೆನ್ನುವರು!
ನಿಕರ ನಿನಗೇಕೆ ಬಾರದೆನ್ನುವರು! (ಗು)
-ಲ್ಲು ಮಾಡುವವರ ಗಲ್ಲಿಗೇರಿಸೆನ್ನುವರು!
ಗುಂಡಮ್ಮಗಳಾ ದೇವರೆಂದು ಮಾತಾಡುವರು?
ಡೊಂಕು ಬಾಲದ ನಾಯಕರವರಾಗಿಹರು!
ದುರುಗುಟ್ಟಿ ಎಲ್ಲರನ್ನೂ ನೋಡುತ್ತಿರುವರು!
ದೇಹಾಭಿಮಾನಕ್ಕೊಳಗಾಗಿ ಕುಣಿಯುವರು!
ರದರಾಜ ತಮ್ಮಲ್ಲಿಹನೆಂದರಿಯರು! (ಗು)
-ರು ನಿರಂಜನಾದಿತ್ಯಾತ್ಮನೇ ನಿಜ ದೇವರು!!!

ಗುಂಡಿ ಆಳವಾಗೀಗಲೇ ತೋಡು! (ಅ)   5(2878)

-ಡಿಗೆ, ಊಟಗಳಾದಮೇಲೆ ಮಾಡು!
ಅನಿಷ್ಟ ಮೊದಲ್ಮಣ್ಣು ಮಾಡು!
(ಚ)ಳವಳಿ ಹೂಡದೇ ಎಲ್ಲಾ ಮಾಡು!
ವಾಗ್ವಾದವಿಲ್ಲದೇ ಕಾರ್ಯ ಮಾಡು!
ಗೀತಾಧಾರವಿಟ್ಟುಕೊಂಡೇ ಮಾಡು!
ರ್ವವಿಲ್ಲದೇ ಕರ್ತವ್ಯ ಮಾಡು!
ಲೇಶವೂ ಭಯಪಡ್ಬೇಡ ಓಡು!
ತೋಡಿದ ಹಳ್ಳಕ್ಕದನ್ನು ದೂಡು! (ಕೂ)
-ಡು ನಿರಂಜನಾದಿತ್ಯನ ನಾಡು!!!

ಗುಂಡಿ ಸಿದ್ಧವಾದ ಮೇಲೆ ಹೂಳು! [ಅ]   5(2876)

-ಡಿ ನಾಲ್ಕು ಆಳ ತೆಗೆಯಲಾಳು! (ಪು)
-ಸಿ ಅಳತೆ ಹೇಳಬಾರದಾಳು
(ಬ)ದ್ಧನಾಗಲಾಜ್ಞಾಪಾಲನೆಗಾಳು!
ವಾಡಿಕೆಗೆ ಕಟ್ಟು ಬೀಳ್ಬಾರ್ದಾಳು!
ಯೆ, ದಾಕ್ಷಣ್ಯ ಬೇಡೆಂದು ಹೇಳು!
ಮೇಲೊಂದು ಕಲ್ಲನ್ನೂ ಹೇರ ಹೇಳು! (ತ)
-ಲೆ ಮತ್ತೆತ್ತದಂತೆ ನೀನೇ ಹೂಳು!
ಹೂತಮೇಲಿನ್ನೇಕಳುವ ಬಾಳು? (ಏ)
-ಳು ನಿರಂಜನಾದಿತ್ಯಾ! ನೀನಾಳು!!!

ಗುಟ್ಟನರಿತಟ್ಟು ತಟ್ಟೆ ಇಟ್ಟ! (ಕೆ)   5(3275)

-ಟ್ಟ ಬುದ್ಧಿ ಬಿಟ್ಟಾಮಂತ್ರಣ ಕೊಟ್ಟ!
ಗುನಗುತ ಉಣಿಸಿಬಿಟ್ಟ!
ರಿಸಿಗಳಿಂದ ಹರಸಲ್ಪಟ್ಟ!
ತ್ವಚಿಂತನೆಯ ಪಣ ತೊಟ್ಟ! (ಮು)
-ಟ್ಟು, ಮಡಿ ಭ್ರಾಂತಿ ತ್ಯಜಿಸಿಬಿಟ್ಟ!
ನ್ನವ್ರೆಲ್ಲರೆಂದಾನಂದ ಪಟ್ಟ! (ಹೊ)
-ಟ್ಟೆ ಬಟ್ಟೆಗೂ ವಿರಕ್ತನಾಗ್ಬಿಟ್ಟ!
ಹ ಬಿಟ್ಟು ಪರದಲ್ಕಾಲಿಟ್ಟ! (ಪ)
-ಟ್ಟ ನಿರಂಜನಾದಿತ್ಯನೇರ್ಬಿಟ್ಟ!!!

ಗುಟ್ಟು ಬಿಟ್ಟು ಓಟು ಕೊಟ್ಟು ಪಟ್ಟಕಟ್ಟು! (ಸು)   4(1615)

-ಟ್ಟು ಅಹಂಕಾರಟ್ಟಹಾಸ ಪಟ್ಟ ಕಟ್ಟು!
ಬಿರುದಾವಳಿಗಳ್ಬಿಟ್ಟು ಪಟ್ಟ ಕಟ್ಟು! (ಇ)
-ಟ್ಟು ಶಿಷ್ಟ ಸಂಪ್ರದಾಯವ ಪಟ್ಟ ಕಟ್ಟು!
ಜಸ್ಸು, ತೇಜಸ್ಸು ನೋಡಿ ಪಟ್ಟ ಕಟ್ಟು! (ಹ್ಯಾ)
-ಟು, ಬೂಟ್ಗಳ ತೆಗೆದಿಟ್ಟು ಪಟ್ಟ ಕಟ್ಟು!
ಕೊಟ್ಟು ಮೃಷ್ಟಾನ್ನ ಭೋಜನ ಪಟ್ಟ ಕಟ್ಟು! (ಮು)
-ಟ್ಟು, ಮೈಲಿಗೆ, ಬದಿಗಿಟ್ಟು ಪಟ್ಟಾ ಕಟ್ಟು!
ರಮಾರ್ಥದಂಗಿ ತೋಟ್ಟು ಪಟ್ಟ ಕಟ್ಟು! (ಬೆ)
-ಟ್ಟದಯ್ಯಗೆ ಮುಡಿಕೊಟ್ಟು ಪಟ್ಟ ಕಟ್ಟು!
ಟ್ಟು! ರಾಮರಾಜ್ಯ ಕಟ್ಟಿ ಪಟ್ಟ ಕಟ್ಟು! (ಕ)
-ಟ್ಟು ನಿರಂಜನಾದಿತ್ಯಾತ್ಮ ಪಟ್ಟ ಕಟ್ಟು!!!

ಗುಟ್ಟು ವ್ಯಥೆ ಎಂದು ರಟ್ಟಾದೀತು? (ಕ)   6(3654)

-ಟ್ಟುಕಥೆ ಸಟೆಯೆಂದಂದಾದೀತು!
ವ್ಯಭಿಚಾರ ಭಕ್ತಿಗೇನಾದೀತು? (ವ್ಯ)
-ಥೆ ಚಿತೆಯ ಹಾಗೆ ಉರಿಸೀತು!
ಎಂಟು ಮದಗಳಿಂದೇನಾದೀತು?
ದುಶ್ಚಾರಿತ್ರ್ಯದಿಂದಂತ್ಯವಾದೀತು!
ತಿ ಸುಖದಿಂದ ಏನಾದೀತು? (ಅ)
-ಟ್ಟಾದಡ್ಗೆ ತಿಪ್ಪೆಗಿಟ್ಟಂತಾದೀತು!
ದೀಪವಿಲ್ಲದಿದ್ದರೇನಾದೀತು? (ಹೇ)
-ತು ನಿರಂಜನಾದಿತ್ಯನೆಂದೀತು!!!

ಗುಡಿ ದೆವ್ವಗಳಿಗಲ್ಲ ಕಣೇ! (ಓ)   4(1619)

-ಡಿಸಬೇಕವುಗಳನ್ನು ಕಣೇ! (ಎ)
-ದೆ ಗಟ್ಟಿ ಮಾಡಿ ನಿಲ್ಬೇಕು ಕಣೇ! (ಅ)
-ವ್ವ ನೀನು ಜಗದಮ್ಮಯ್ಯಾ ಕಣೇ! (ಮ)
-ಗ ನಿನಗೆ ಕಾರ್ತಿಕೇಯ ಕಣೇ! (

)
-ಳಿಯಲ್ಲೇ ಅವನಿರಲಿ ಕಣೇ!
ಣಪತಿಯೂ ಬಂದಿರ್ಲಿ ಕಣೇ! (ಕ್ಷು)
-ಲ್ಲಕ ದೆವ್ವಗಳೋಡ್ವವು ಕಣೇ!
ರ, ಚರಣಕ್ಕಾಳಾಗ್ಬೇಡ್ಕಣೇ! (ಗ)
-ಣೇಶ ನಿರಂಜನಾದಿತ್ಯ ಕಣೇ!!!

ಗುಡಿ ಬಾಗಿಲೀಗ ತೆರೆಯದಯ್ಯಾ! (ಅ)   4(1424)

-ಡಿಗಡಿಗೆ ದರ್ಶನವಿಲ್ಲವಯ್ಯಾ!
ಬಾ ನೀನು ಮತ್ತೊಮ್ಮೆ ಕರೆದಾಗಯ್ಯಾ! (ಈ)
-ಗಿನ ಪೂಜೆ ಮುಗಿದಿರುವುದಯ್ಯಾ! (ಮಾ)
-ಲೀಕನೀಗೇಕಾಂತದಲ್ಲಿರ್ಪನಯ್ಯಾ!
ದ್ದಲ ಮಾಡದೆ ಹೋಗಿಬಿಡಯ್ಯಾ! (ಸಂ)
-ತೆ ವ್ಯಾಪಾರದಂತೆ ಇದಲ್ಲವಯ್ಯಾ! [ನೆ]
ರೆ ಭಕ್ತಿ ವಿಶ್ವಾಸ ಸದಾ ಬೇಕಯ್ಯಾ! (ಕಾ)
-ಯದಭಿಮಾನವಿರಬಾರದಯ್ಯಾ! (ಮ)
-ದ, ಮತ್ಸರಗಳಳಿಯಬೇಕಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾಜ್ಞೆಯಿದಯ್ಯಾ!!!

ಗುಡಿ ಬಿಟ್ಟೋಡುವಾ ಜೀವ ದೇವ! (ಗು)   4(1736)

-ಡಿಯಲ್ಲಿ ಹುಟ್ಟುವಾ ಕಲ್ಲು ದೇವ!
ಬಿಸಿ ನೇವೇದ್ಯಕ್ಕಾಗಿಲ್ಲಾ ದೇವ! (ಭ)
-ಟ್ಟೋಪಾಧ್ಯಾಯನ ಹೊಟ್ಟೆಗಾ ದೇವ! (ದು)
-ಡುಕಿದರೂ ಮಾತನಾಡಾ ದೇವ!
ವಾದಿಸನನ್ಯರೊಡನಾ ದೇವ!
ಜೀವರಿಗೆ ತೃಪ್ತಿಯದೇ ದೇವ!
ಸ್ತ್ರಾಭರಣಾಲಂಕೃತಾ ದೇವ!
ದೇಹಭಾವ ಬಿಟ್ಟರೆಲ್ಲಾ ದೇವ! (ದೇ)
-ವ ನಿರಂಜನಾದಿತ್ಯಗಾ ಭಾವ!!!

ಗುಡುಗು ಅಡುಗು ಜಡಾಗು! (ಕ)   2(636)

-ಡು ಘೋರ, ವೃತ್ತಿಯ, ಗುಡುಗು!
ಗುಡುಗಿ ಸುಸ್ತಾದರಡಗು!
ಡಗಿ ಸಾಕಾರದರ್ಜಡಾಗು!
ಮರುಗೇಶನಲೈಕ್ಯಾಗು!
ಗುಹೇಶ, ಗಣೇಶರಂತಾಗು! (ಅ)
-ಜ, ಹರಿ, ಹರರಲೊಂದಾಗು! (ನಾ)
-ಡಾಳುವ ಬಲೀಶ ನೀನಾಗು! (ಆ)
-ಗು, ನಿರಂಜನಾದಿತ್ಯನಾಗು!!!

ಗುಣ ನೋಡಿ ವರ್ಣ ಗೊತ್ತು ಮಾಡು! (ವ್ರ)   6(3550)

-ಣ ನೋಡಿ ಸೂಕ್ತ ಚಿಕಿತ್ಸೆ ಮಾಡು!
ನೋಟ, ಕೂಟದಾರ್ಭಟ ಬಿಟ್ಬಿಡು!
ಡಿಕ್ಕಿ ಹೊಡೆಯದಂತೆ ಓಡಾಡು!
ರ ಗುರುಧ್ಯಾನ ಸದಾ ಮಾಡು! (ಜೀ)
-ರ್ಣವಾಗುವಷ್ಟೇ ಭೋಜನ ಮಾಡು!
ಗೊಲ್ಲ ಬಾಲ್ನಂತೆ ಗೋ ಸೇವೆ ಮಾಡು! (ಉ)
-ತ್ತು ಹದಮಾಡಿ ಬಿತ್ತನೆ ಮಾಡು!
ಮಾತಾ, ಪಿತರಿಷ್ಟ ಪೂರ್ತಿ ಮಾಡು! (ಹಾ)
-ಡು, ನಿರಂಜನಾದಿತ್ಯನ ಕೂಡು!!!

ಗುಣ ಹೀನ ಹೆಣ ಸಮಾನ! (ತಾ)   6(3691)

-ಣ ಅವನದೊಂದು ಸ್ಮಶಾನ!
ಹೀನವೃತ್ತಿಯಿಂದವ ಶ್ವಾನ!
ರಕಯಾತನಾ ಜೀವನ!
ಹೆಣ್ಣು ಹೊನ್ನಿಗಾಗಿ ವಂಚನ! (ಗ)
-ಣರಾಜ್ಯದಲ್ಲಿಲ್ಲವ್ಗೆ ಸ್ಥಾನ!
ದ್ಗುಣಿಗೆ ಸದಾ ಸನ್ಮಾನ!
ಮಾಳ್ಪನವ ಶ್ರೀಪಾದಾರ್ಚನ! (ಘ)
-ನ, ಶ್ರೀ ನಿರಂಜನಾದಿತ್ಯನ!!!

ಗುಣ, ರೂಪ ಸಂಪನ್ನೆ ಕಮಲ! (ಉ)   2(863)

-ಣಲಿಕ್ಕುವುದಮೃತಾ ಕಮಲ! (ಊ)
-ರೂರಲೆಯುವುದಿಲ್ಲಾ ಕಮಲ!
ದ್ಮನಾಭಾಪ್ತಳಿಷ್ಟಾ ಕಮಲ!
ಸಂಕಟಗಳೌಷಧಾ ಕಮಲ!
ರಮಾತ್ಮ ಸೇವೆಗಾ ಕಮಲ! (ಚೆ)
-ನ್ನೆ, ಸರ್ವ ಮಾನ್ಯ ಸುಮಾ ಕಮಲ!
ಣ್ಮನಾನಂದಪ್ರದಾ ಕಮಲ! (ಘ)
-ಮ ಘಮ ಸುವಾಸನಾ ಕಮಲ! (ಜ)
-ಲಜಾಪ್ತ ನಿರಂಜನಾದಿತ್ಯಲಾ!!!

ಗುಣದೋಷವೆಣಿಸುವುದು ಗಣ! (ಕಾ)   5(3299)

-ಣದಾ ತಪ್ಪೊಪ್ಪುಗಳ ಶಿವಗುಣ!
ದೋಸೆಯಲ್ಲಿ ತೂತು ಅದರ ಗುಣ! (ದೋ)
-ಷವದರಲ್ಲಿ ತಿನ್ನುವವ ಕಾಣ! (ನೋ)
-ವೆನ್ನುವುದು ದೇಹದ ಹುಟ್ಟು ಗುಣ! (ಎ)
-ಣಿಸನದ ದೇಹಾತೀತ ಶರಣ!
ಸುರಜನರ ಕಾಡುವುದರಿಗಣ! (ಕಾ)
-ವುದವರ ಗುರುಕೃಪಾಕಿರಣ!
ದುರ್ಬುದ್ಧಿ ಬಿಟ್ಟು ಸೇರ್ಬೇಕಾ ಚರಣ! (ನಾ)
-ಗಜರಾಜನಿಗೂ ಸಿಕ್ಕಿತು ರಕ್ಷಣಾ! (ತೃ)
-ಣ ನಿರಂಜನಾದಿತ್ಯಗವ ಗುಣ!!!

ಗುಣಸಾಗರಾ ರಾಜಶೇಖರ! (ಕೆ)   4(2403)

-ಣಕಿದರಾತತೀ ಭಯಂಕರ!
ಸಾಮ, ದಾನ, ಭೇದ, ದಂಡಾಕಾರ!
ಗನಮಣಿಯ ಸ್ನೇಹಾಪಾರ!
ರಾಮಭಕ್ತ ಆಂಜನೇಯಾಕಾರ!
ರಾಧಾರಮಣಾ ನಂದ ಕಿಶೋರ! (ನಿ)
-ಜಭಕ್ತರ ಕಷ್ಟ ಪರಿಹಾರ!
ಶೇಷಾಚಲಾದ್ರಿ ವಾಸ ಸುಂದರ!
ರ, ದೂಷಣಾರಿ ರಘುವೀರ! (ನಿ)
-ರತ, ನಿರಂಜನಾದಿತ್ಯಾಕಾರ!!!

ಗುದ್ದಲಿ ಪೂಜೆಗೇಕೆ ಗದ್ದಲ? (ಎ)   4(1413)

-ದ್ದರೆ ಮನೆ ಆಗಲಿ ಗದ್ದಲ! [ಕ]
-ಲಿವ ವಿದ್ಯಾರ್ಥಿಗೇಕೆ ಗದ್ದಲ?
ಪೂರ್ಣವಾದಾಗಾಗಲಿ ಗದ್ದಲ! [ಸಂ]
-ಜೆಯಾರತಿಗೀಗೇಕೆ ಗದ್ದಲ? [ಯೋ]
-ಗೇಶನಿದ್ದಾಗಾಗಲಿ ಗದ್ದಲ!
ಕೆಲಸಕಾರ್ಯಾತಂಕ ಗದ್ದಲ! [ಯೋ]
-ಗ ಸವಿವಾಗಾಗಲಿ ಗದ್ದಲ! [ಗೆ]
-ದ್ದಲು ಹುಳಕ್ಕಿದೆಯೇ ಗದ್ದಲ [ಬಾ]
-ಲ ನಿರಂಜನಾದಿತ್ಯ ನಿರ್ಮಲ!!!

ಗುಪ್ತ ಸುಪ್ತ್ಯಾತ್ಮಾನಂದ ಸ್ಥಿತಿ! [ಪ್ರಾ]   5(2580)

-ಪ್ತವಾದರಿದೇಂ ಮುಕ್ತಿ ಸ್ಥಿತಿ!
ಸುಜ್ಞಾನಸೂರ್ಯನಾರ್ಯ ಸ್ಥಿತಿ! (ದೀ)
-ಪ್ತ್ಯಾತ್ಮಜ್ಞಪ್ತಿಯಾರಾಮ ಸ್ಥಿತಿ! (ಆ)
-ತ್ಮಾನಾತ್ಮ ಚಿಂತನಾಂತ್ಯ ಸ್ಥಿತಿ!
ನಂದಕಂದನಾನಂದ ಸ್ಥಿತಿ!
ತ್ತಾತ್ರೇಯನ ನಿಜ ಸ್ಥಿತಿ!
ಸ್ಥಿತಿ, ಲಯಾತೀತವೀ ಸ್ಥಿತಿ! (ಇ)
-ತಿ, ನಿರಂಜನಾದಿತ್ಯ ಸ್ಥಿತಿ!!!

ಗುಬ್ಬಚ್ಚಿಯ ಪೂರ್ವ ಸಂಬಂಧ! (ತ)   2(526)

-ಬ್ಬಲಿಯಾಗಿ ಬಂಧ ಸಂಬಂಧ! (ಅ)
-ಚ್ಚಿನಮೆಚ್ಚಿನಾತ್ಮ ಸಂಬಂಧ!
ತೀಶನ ಪಾದ ಸಂಬಂಧ!
ಪೂರ್ತಿಯಾಯ್ತು ಗುಬ್ಬಿ ಸಂಬಂಧ! (ಗ)
-ರ್ವಕಿದರಿಯದ ಸಂಬಂಧ!
ಸಂಗಡೋಡಾಡಿದ ಸಂಬಂಧ!
ಬಂದೊಡಲಬಿಟ್ಟ ಸಂಬಂಧ! (ಬಂ)
-ಧ! ನಿರಂಜನಾದಿತ್ಯಾನಂದ!!!

ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಬೇಕೆ? (ಉ)   5(2960)

-ಬ್ಬಿಸಿ ಕಿಬ್ಬಿಯೊಳಕ್ಕೆ ನೂಕ್ಬೇಕೆ? (ಭ)
-ಯ, ಭಕ್ತಿಯುಳ್ಳ ಭಕ್ತ ನೋಯ್ಬೇಕೆ?
ಮೇವಿಕ್ಕಿದ್ದೇನೆಂದು ಹೊಡೆಯ್ಬೇಕೆ? (ಕ)
-ಲೆ ನೀನ್ಮಾಡಿ ಬೆಲೆ ನಾನ್ಕೊಡ್ಬೇಕೆ?
ಬ್ರಹ್ಮಜ್ಞಾನವನ್ನಜ್ಞಾನೆನ್ಬೇಕೆ? (ಬ್ರ)
-ಹ್ಮಾದಿಗಳನಾದರ ತೋರ್ಬೇಕೆ? (ಶ)
-ಸ್ತ್ರ ಹಿಡಿದವರೆಲ್ಲಾ ಕಾದ್ಬೇಕೆ?
ಬೇಕ್ಬೇಡಗಳನ್ನಿಟ್ಟು ಚುಚ್ಬೇಕೆ? (ಏ)
-ಕೆ ನಿರಂಜನಾದಿತ್ಯಗ್ಬಯಕೆ???

ಗುರಿ ಸೇರದ ಪಾಂಡಿತ್ಯವೇತಕ್ಕೆ? (ಗು)   6(3329)

-ರಿ ಸೇರಿದಾತನೇ ಗುರು ಲೋಕಕ್ಕೆ!
ಸೇವೆ ಸಲ್ಲಿಸಬೇಕಾ ಶ್ರೀಪಾದಕ್ಕೆ! (ಪ)
-ರಮ ಪಾಪಿಯೂ ಪಾವನನಾಗ್ಲಿಕ್ಕೆ!
ರ್ಶನಾನುಗ್ರಹವೇ ಸಾಕದಕ್ಕೆ!
ಪಾಂಚಭೌತಿ ಕೊಡಲಿರ್ಪುದದಕ್ಕೆ! (ಹೆಂ)
-ಡಿರ್ಮಕ್ಕಳ ಸುಖ ಕಿಂಚಿತ್ಕಾಲಕ್ಕೆ! (ನಿ)
-ತ್ಯ ಶಾಂತಿ ಸುಖ ಸಚ್ಚಿದಾನಂದಕ್ಕೆ!
ವೇದೋಪನಿಷದ್ಗಳಿರ್ಪುದದಕ್ಕೆ!
“ತತ್ವಮಸಿ”ಯರ್ಥ ಸಾಧಿಸಲಿಕ್ಕೆ! (ಅ)
-ಕ್ಕೆ, ನಿರಂಜನಾದಿತ್ಯಾನಂದೆಲ್ಲಕ್ಕೆ!!!

ಗುರಿಯಪ್ಪಾ ಹರಿ ಗಿರಿಯಪ್ಪ! [ಆ]   2(917)

-ರಿಯಪ್ಪಾ ಶ್ರೀ ಹರಿಯೇ ತಿಮ್ಮಪ್ಪ! (ಕಾ)
-ಯಪ್ಪಾ ನಮ್ಮಪ್ಪ ಶ್ರೀಪತಿಯಪ್ಪ! (ಕ)
-ಪ್ಪಾಗಿಪ್ಪಪ್ಪಾ ತಿರುಪತಿಯಪ್ಪ!
ಯಗ್ರೀವಪ್ಪಪ್ಪಾ ವೈಕುಂಠಪ್ಪ! (ಪ)
-ರಿಪರಿ ನಾಮರೂಪಪ್ಪಾ ಅಪ್ಪ! (ಯೋ)
-ಗಿಗಳರಸಪ್ಪಪ್ಪಾ ದೇವಪ್ಪ! (ಕ)
-ರಿವರದಪ್ಪಪ್ಪಾ ಶ್ರೀಧರಪ್ಪ! (ಭ)
-ಯಹರಪ್ಪಪ್ಪಾ ಗುರುರಾಜಪ್ಪ! (ಅ)
-ಪ್ಪ ನಿರಂಜನಾದಿತ್ಯ ತಾನಪ್ಪ!!! ೯೧೮

ಗುರು ಕೃಪಾಂಜನವೀ ವಚನ!   3(1040)

ರುಚಿ, ಶುಚಿಗಾದರ್ಶ ವಚನ!
ಕೃತಾದಿ ಯುಗದಾರ್ಯ ವಚನ!
ಪಾಂಚಜನ್ಯ ವಿತ್ತ ಪ್ರವಚನ!
ಗದೋದ್ಧಾರಕ್ಕಾಪ್ತ ವಚನ!
ರ ನಾರಾಯಣಪ್ಪ ವಚನ!
ವೀತರಾಗ ವಿಜಯ ವಚನ!
ರಗುರು ಶಿವೇಚ್ಛಾ ವಚನ!
ರಾಚರಾತ್ಮಾನಂದ ವಚನ! (ಘ)
-ನ ನಿರಂಜನಾದಿತ್ಯ ವಚನ!!!

ಗುರು ಕೃಪೆಯಿಂದುಳಿಯಿತೊಂದು ಮನೆ! (ಕ)   4(2222)

-ರುಣೆಯವನದಪಾರವೆಂದು ನೆನೆ!
ಕೃಪಣರಾಟದಿಂದ ಪಾರಾಯ್ತಾ ಮನೆ!
ಪೆತ್ತ ತಾಯಿ ಗುರುವೆಂದು ಸದಾ ನೆನೆ! (ತ್ಯಾ)
-ಯಿಂದಲೇ ಉಳಿಯಬೇಕೆಲ್ಲರ ಮನೆ!
ದುರ್ಬುದ್ಧಿ ಬಿಡಿಸೆಂದಪ್ಪನನ್ನು ನೆನೆ! (ಧಾ)
-ಳಿಯಾದ ಮೇಲಿನ್ನೆಲ್ಲಿ ನಿನಗೆ ಮನೆ? (ಬಾ)
-ಯಿ ಮುಚ್ಚ್ಯೇಕ ನಿಷ್ಠೆಯಿಂದವನ ನೆನೆ!
ತೊಂದರೆಗೀಡಾಗದಾಗ ನಿನ್ನ ಮನೆ!
ದುರ್ಮದ ಮರ್ದನನವನೆಂದು ನೆನೆ!
ನ ಶುದ್ಧಿಯಾದರದುತ್ತಮ ಮನೆ! (ಮ)
-ನೆ ನಿರಂಜನಾದಿತ್ಯಗದೆಂದು ನೆನೆ!!!

ಗುರು ನಿರಂಜನಾದಿತ್ಯ ದತ್ತ! (ಅ)   1(153)

-ರುಣ ಸಾರಥ್ಯಂಬರದಿ ದತ್ತ!
ನಿಗಮಾಗಮ ಗೋಚರ ದತ್ತ!
ರಂಗಿ ಛಾಯಾ ದರ್ಶನದಿ ದತ್ತ!
ಗದಾದ್ಯಂತ ವಂದ್ಯನಾ ದತ್ತ!
ನಾರದ ಭೂಮಿಗಿಳಿಸಿದ ದತ್ತ!
ದಿಗಂಬರೌದುಂಬರಾಪ್ತ ದತ್ತ! (ಅ)
-ತ್ಯಪಾರಾಕಾಶದಂತೀತ ದತ್ತ!
ಯಾಮೂರ್ತಿ ದನುಜಾರಿ ದತ್ತ! (ಅ)
-ತ್ತ, ಇತ್ತ, ಆಕಾಶದತ್ತ ದತ್ತ!!!

ಗುರು ಶಿವನಾದರ್ಶ ಪುತ್ರ ವಾತ್ಸಲ್ಯ! (ಉ)   2(857)

-ರು ಪ್ರೀತ್ಯಿಂದಿತ್ತ ಸಂಭಾವನಾ ವಾತ್ಸಲ್ಯ!
ಶಿವನದಿವನಿಗಿತ್ತದ್ದಾ ವಾತ್ಸಲ್ಯ! (ಅ)
-ವನಿವನೆಂಬಾ ಪ್ರೇಮ ಭಾವಾ ವಾತ್ಸಲ್ಯ!
ನಾನವಗೆರಗಿದ್ದನ್ಯೋನ್ಯ ವಾತ್ಸಲ್ಯ!
ಯಾ ದೃಷ್ಟ್ಯಾನುಗ್ರಹವನಾ ವಾತ್ಸಲ್ಯ! (ಸ್ಪ)
-ರ್ಶ ಹಲಗೆಯಿಂದ ಮಾಡಿದ್ದಾ ವಾತ್ಸಲ್ಯ!
ಪುತ್ರನುದ್ಧಾರಕ್ಕೆ ಅಪ್ಪನಾ ವಾತ್ಸಲ್ಯ!
ತ್ರಯಂಬಕಪ್ಪನಿಗೆನ್ನಲ್ಲಾ ವಾತ್ಸಲ್ಯ!
ವಾದಬಿಟ್ಟು ಮೌನ್ಯಾಗಿದ್ದದ್ದಾ ವಾತ್ಸಲ್ಯ! (ಉ)
-ತ್ಸವ ಪೂರ್ತಿ ಮುಂದಕ್ಕೆಂದದ್ದಾ ವಾತ್ಸಲ್ಯ! (ಬಾ)
-ಲ್ಯ, ನಿರಂಜನಾದಿತ್ಯಗಿನ್ನೂ ವಾತ್ಸಲ್ಯ!!!

ಗುರು ಸಾನ್ನಿಧ್ಯದಿಂದುರು ಶಾಂತಿ! (ಕ)   4(2258)

-ರುಣಿಸುವನವನಾತ್ಮ ಶಾಂತಿ!
ಸಾಕಾರ ದರ್ಶನದಿಂದಾ ಶಾಂತಿ! (ತ)
-ನ್ನಿಷ್ಟಸಿದ್ಧಿಯಿಂದಾಗ್ವುದಾ ಶಾಂತಿ! (ವಿಂ)
-ಧ್ಯ, ಹಿಮಾಚಲದಷ್ಟಾತ್ಮ ಶಾಂತಿ! (ಅ)
-ದಿಂದು ಮನಕೆ ಬಹಳ ಶಾಂತಿ!
ದುರ್ವಿಷಯವಿಲ್ಲದಾತ್ಮ ಶಾಂತಿ! (ಗು)
-ರುಪಾದ ಸೇವೆಯ ಫಲಾ ಶಾಂತಿ!
ಶಾಂತಿ! ಶಾಂತಿ!! ಭ್ರಾಂತಿ ದೂರಾ ಶಾಂತಿ!
ತಿಳಿ, ನಿರಂಜನಾದಿತ್ಯಾ ಶಾಂತಿ!!!

ಗುರು ಸೊರ್ವೋತ್ತಮನಿಗೆ ನಮಸ್ಕಾರ! (ಉ)   2(445)

-ರು ಭಯ, ಭಕ್ತಿಯಿಂದ ಈ ನಮಸ್ಕಾರ!
ಚರಾಚರ ಪೂರ್ಣಗೀ ನಮಸ್ಕಾರ (ಸ)
-ರ್ವೋತ್ತಮ ಸರ್ವೇಶ್ವರಗೀ ನಮಸ್ಕಾರ! (ದ)
-ತ್ತ ಗುರು ಸಾರ್ವಭೌಮಗೀ ನಮಸ್ಕಾರ!
ನಸಿಜಾರಿ ಶಿವಗೀ ನಮಸ್ಕಾರ!
ನಿರ್ವಿಕಲ್ಪ ಸ್ಥಿತನಿಗೀ ನಮಸ್ಕಾರ! (ಬ)
-ಗೆ, ಬಗೆ ವಿಶ್ವರೂಪಗೀ ನಮಸ್ಕಾರ!
ರ, ಸುರ ವಂದ್ಯನಿಗೀ ನಮಸ್ಕಾರ! (ನಾ)
-ಮ, ರೂಪಾತೀತಾದಗೀ ನಮಸ್ಕಾರ!
ಸ್ಕಾಂದ ಪುರಾಣೇಶ್ವರಗೀ ನಮಸ್ಕಾರ! (ಹ)
-ರ, ನಿರಂಜನಾದಿತ್ಯಗೀ ನಮಸ್ಕಾರ!!!

ಗುರು ಹಿರಿಯರನುಗ್ರಹವಿರ್ಬೇಕು! (ದ)   5(3079)

-ರುಶನವರದ್ದಾಗಾಗಾಗುತ್ತಿರ್ಬೇಕು!
ಹಿತೋಕ್ತ್ಯೆಪ್ಪತ್ತಕ್ಕಿದೆಂದರಿತಿರ್ಬೇಕು!
ರಿಪುಗಳಾರನ್ನೂ ಜಯಿಸುತ್ತಿರ್ಬೇಕು!
ಮ, ನಿಯಮಾಭ್ಯಾಸ ಮಾಡುತ್ತಿರ್ಬೇಕು!
ಘುರಾಮನಾದರ್ಶವಿರುತ್ತಿರ್ಬೇಕು!
ನುಡಿದಂತೆ ನಡೆವ ಬುದ್ಧಿಯಿರ್ಬೇಕು!
ಗ್ರಹಶಾಂತಿ ಭಜನೆಯಿಂದಾಗ್ತಿರ್ಬೇಕು!
ದಿಬದೆಯರು ಸ್ತ್ರಿಯರಾಗಿರ್ಬೇಕು!
ವಿವೇಕ, ವೈರಾಗ್ಯ ಹೆಚ್ಚಾಗುತ್ತಿರ್ಬೇಕು! (ಸೇ)
-ರ್ಬೇಕು, ಸತ್ಸಂಗಿಯಾಗಿ ಸದಾ ಇರ್ಬೇಕು!
ಕುಮಾರ್ಗ ನಿರಂಜನಾದಿತ್ಯ ಮುಚ್ಚೇಕು!!!

ಗುರು, ಹಿರಿಯರೇ ದೇವರಪ್ಪಾ! (ಕ)   3(1223)

-ರುಣೆ ತೋರಿ ಕಾಪಾಡುವರಪ್ಪಾ!
ಹಿತೈಷಿಗಳವರೇ ಕಾಣಪ್ಪಾ! (ಹ)
-ರಿ ಭಜನೆ ಬಿಡಬಾರದಪ್ಪಾ! (ಭ)
-ಯ, ಭಕ್ತಿ, ಸದಾ ಇರಬೇಕಪ್ಪಾ!
ರೇಣುಕೆಯ ಮಗನಂತಿರಪ್ಪಾ!
ದೇವಿಯೇ ತಾಯಿಯೆಂದರಿಯಪ್ಪಾ!
ರ ಪಡೆದುದ್ಧಾರವಾಗಪ್ಪಾ!
ಮೇಶ, ಉಮೇಶರಂತಾಗಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯ ನಮ್ಮಪ್ಪಾ!!!

ಗುರುಕೃಪಾ ದಿನಗಳುದಯವೀಗ! (ತ)   6(4298)

-ರುಣಿಯರ ಕುಣಿತ ಕಮ್ಮಿಯಾಯ್ತೀಗ!
ಕೃತ್ರಿಮ ಭಕ್ತರ ಕಾಟವಿಲ್ಲ ಈಗ!
ಪಾರಿತೋಷಕಗಳಾಸೆ ಇಲ್ಲ ಈಗ!
ದಿವ್ಯಾತ್ಮ ಜ್ಞಾನಾನಂದಾನುಭವ ಈಗ!
ಶ್ವರ ಸುಖಕ್ಕಾಶಿಪುದಿಲ್ಲ ಈಗ!
ತಿ ಮತಿದಾತಾತ್ಮನೆಂಬರಿವೀಗ! (ಕೀ)
-ಳು ಮೇಲೆಂಬ ಅಭಿಮಾನವಿಲ್ಲ ಈಗ!
ರಿದ್ರಾವಸ್ಥೆಗಳುವುದಿಲ್ಲ ಈಗ!
ಮನ ಭಯವಿಲ್ಲವೇ ಇಲ್ಲ ಈಗ!
ವೀರ್ಯ ನಾಶದಿಂದ ಭವಭ್ಯ ರೋಗ! (ಖ)
-ಗ ನಿರಂಜನಾದಿತ್ಯನಿಗಿಲ್ಲಾ ರೋಗ!!!

ಗುರುಕೃಪಾ ಸಪ್ತಾಹ ಸಮಾಪ್ತಿ! (ಇ)   1(167)

-ರುವೆಡೆಗೇ ಬಂದಾಗಾಯ್ತು ಸ್ಫೂರ್ತಿ!
ಕೃಪೆಯಿದು ದೆ

ವಿಕ ಸಂಪತ್ತಿ!
ಪಾರಮಾರ್ಥಿಕ ದರ್ಶನ! ತೃಪ್ತಿ!
ತತವಿರಬೇಕು ಈ ಪ್ರೀತಿ! (ಆ)
-ಪ್ತಾ ತುರಳಿಗಿದು ನಿಜಾಸಕ್ತಿ!
ರ್ಷ ತುಂಬಿತು, ಹೆಚ್ಚಿತು ಭಕ್ತಿ!
ರ್ವಮಂಗಳಕಿದೇ ಸುನೀತಿ!
ಮಾಡುವುದೇನು ಜಾತಿ, ವಿಜಾತಿ? (ಆ)
-ಪ್ತಿಷ್ಟ! ನಿರಂಜನಾದಿತ್ಯ ಮೂರ್ತಿ!!!

ಗುರುಕೃಪೆ ಗಂಡಾಂತರ ತಪ್ಪಿಸಿತು! (ಊ)   3(1334)

-ರು ಸೇರಿ ಗುರುದರ್ಶನ ಮಾಡಿಸಿತು!
ಕೃತಿಗಳ ಭಾವದಿಂದ ಹಾಡಿಸಿತು!
ಪೆಚ್ಚು ಮುಖಕ್ಕೆ ಹರ್ಷವುಂಟುಮಾಡಿತು!
ಗಂಗಾಂಬೆಯಾದರಾತಿಥ್ಯ ದೊರಕಿತು!
ಡಾಂಭಿಕವಿಲ್ಲದ ಪ್ರೇಮದರಿವಾಯ್ತು!
ತ್ವ ಚಿಂತನೆಗಿದೊಂದು ಪಾಠವಾಯ್ತು!
ಘುರಾಮನ ಭಜನೆಗೆಡೆಯಾಯ್ತು!
ನು, ಮನವನಡಿಗರ್ಪಣೆಯಾಯ್ತು! (ತ)
-ಪ್ಪಿ ನಡೆಯಬಾರದೆಂಬ ಅರಿವಾಯ್ತು!
ಸಿರಿಯರಸ ಕಾಯ್ವನೆಂಬರಿವಾಯ್ತು! (ಹೇ)
-ತು ನಿರಂಜನಾದಿತ್ಯನೆಂದಂತಾಯಿತು!!!

ಗುರುಕೃಪೆ ನಿರಂಜನ ಸದನಮ್ಮಾ! (ಅ)   1(391)

-ರುಹಲೇನದರ ಮಹಿಮೆಯನಮ್ಮಾ?
ಕೃತಾಪರಾಧವೆಲ್ಲಲ್ಲಿ ಕ್ಷಯವಮ್ಮಾ!
ಪೆಣಕಾದರೂ ಜೀವ ಬರುವುದಮ್ಮಾ!
ನಿತ್ಯ ಪೂಜಾ, ಭಜನೆ ಕಾರಣವಮ್ಮಾ!
ರಂಗನಾಥನಲ್ಲಿ ವಾಸವಿರ್ಪನಮ್ಮಾ! (ಅ)
-ಜ, ಹರಿ, ಹರರಿಗಿದು ಪ್ರಿಯವಮ್ಮಾ!
ರರಿದಕಾಗಿ ದುಡಿಯಬೇಕಮ್ಮಾ!
ರಸಿಜಾಪ್ತ ತೃಪ್ತನಿದರಿಂದಮ್ಮಾ!
ತ್ತಚಿತ್ತವಿದೇ ಜನ್ಮಪಾವನಮ್ಮಾ! (ಅ)
-ನವರತ ಜಪಿಸಿ ಬದುಕಿರಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯಾನಂದವಿದಮ್ಮಾ!!!

ಗುರುಗುಹ ನೀನೇಕಾದ್ಯೋ ಗುಹ್ಯಾ? (ತೋ)   4(2045)

-ರು ನಿಜರೂಪವೆನ್ನಲ್ಲಿ ಗುಹ್ಯಾ!
ಗುಹನಯ್ಯನಂತಾಗಿ ಬಾ ಗುಹ್ಯಾ!
ದನ ಬೇಡೆನಗನ್ಯ ಗುಹ್ಯಾ! (ಅ)
-ನೀತ್ಯತ್ಯಾಚಾರ ಹೆಚ್ಚಾಯ್ತು ಗುಹ್ಯಾ!
ನೇತೃ ನೀನಾಗಬೇಕೀಗ ಗುಹ್ಯಾ!
ಕಾಮ ನಿರ್ನಾಮವಾಗ್ಬೇಕು ಗುಹ್ಯಾ! (ಉ)
-ದ್ಯೋಗವಿದೀಗತ್ಯಗತ್ಯ ಗುಹ್ಯಾ!
ಗುಣಾತೀತಕ್ಕಿದಾವಶ್ಯ ಗುಹ್ಯಾ! (ಗು)
-ಹ್ಯಾ! ನಿರಂಜನಾದಿತ್ಯಾಗೀಗ್ಬಾಹ್ಯ!!!

ಗುರುಚರಣಕ್ಕಪಚಾರವೇನು? (ಮ)   4(2108)

-ರು ಮಾತು ಶಿಷ್ಯನಾಡಬಹುದೇನು?
ಪಲಚಿತ್ತನಾಗಬೇಡ ನೀನು! (ಮಾ)
-ರ, ಚೋರರ ಮಾತು ಕೇಳ್ಬೇಡ ನೀನು! (ಹ)
-ಣ, ಕಾಸಿಗೆ ಮರುಳಾಗ್ಬೇಡ ನೀನು! (ಠ)
-ಕ್ಕರ ಸಂಬಂಧ ಬೆಳೆಸ್ಬೇಡ ನೀನು!
ರಮಾತ್ಮಗೆ ಶರಣಾಗು ನೀನು! (ಆ)
-ಚಾರವನೊಪ್ಪುವಂತಿರಿಸು ನೀನು! (ಹ)
-ರಕೆಯೊಪ್ಪಿಸಬೇಡಲ್ಲಿಲ್ಲಿ ನೀನು!
ವೇದೋಪನಿಷತ್ಸಾರರಿತಿರು ನೀನು! (ಸೂ)
-ನು ನಿರಂಜನಾದಿತ್ಯಗಾಗು ನೀನು!!!

ಗುರುಚಿತ್ತದಂತಾದದ್ದು ಶುಭ! [ಉ]   2(854)

-ರು ಪ್ರೇಮದಿಂದಾತಂದದ್ದು ಶುಭ!
ಚಿರ ಸುಖಿಯಾಗೆಂದದ್ದು ಶುಭ! (ಅ)
-ತ್ತ ಇತ್ತೋಡಬೇಡೆಂದದ್ದು ಶುಭ!
ದಂಭಹಂಕಾರೇಕೆಂದದ್ದು ಶುಭ!
ತಾಳ್ಮೆಯಿರಬೇಕೆಂದದ್ದು ಶುಭ!
ತ್ತ ಕೈ ಬಿಡನೆಂದದ್ದು ಶುಭ! [ಸ]
-ದ್ದು ಮಾಡಬೇಡವೆಂದದ್ದು ಶುಭ!
ಶುಭನಾಮ ಹಾಡೆಂದದ್ದು ಶುಭ!
ಕ್ತ ನಿರಂಜನಾಡಿದ್ದು ಶುಭ!!!

ಗುರುತಾನಾಗಿ ಬರುತ್ತಾನೆ! (ಅ)   2(950)

-ರುಣ ಸಾರಥಿನೀನು ತಾನೆ!
ತಾಮಸ ವೃತ್ತಿ ಹೋಯ್ತು ತಾನೆ!
ನಾಮ ಜಪ ಬಿಟ್ಟಿಲ್ಲ ತಾನೆ! [ಭ]
-ಗೀರಥನಂತಿರುವಿ ತಾನೆ!
ಡತನವಿರಲಿ ತಾನೆ! [ಕ]
-ರುಣೆಯಿದ್ದರೆ ಸಾಕು ತಾನೆ! [ಸು]
-ತ್ತಾಟದಿಂದ ಸುಸ್ತಾಯ್ತು ತಾನೆ! [ನಾ]
-ನೆ ನಿರಂಜನಾದಿತ್ಯ ತಾನೆ!!!

ಗುರುದತ್ತ ಜನುಮ ಇಂದು! (ಉ)   1(140)

-ರುತರದಾನಂದೆನಗಿಂದು!
ಯೆಯಾಗ್ವುದೆಲ್ಲರಿಗಿಂದು! (ಉ)
ತ್ತರಾನುಗ್ರಹಕಾಗಿರಿಂದು!
ನಿಸಲಾರೆ ತಿರಿಗೆಂದು!
ನುತಿಸಲೆಂತು ನೀನೇ ಬಂಧು!
ಗನಿಗೆ ನಾನೆಂದೆಂದು!
ಇಂಗಿತ ಹೇಳಲದೇನೆಂದು!
ದುಷ್ಟಾರಿ ನಿರಂಜನ ಸಿಂಧು!!!

ಗುರುದತ್ತ ಬಂದ ಕುಣಿಯೋಣ! [ಕ]   4(2297)

-ರುಣಾಕರವನೆಂದ್ಕುಣಿಯೋಣ!
ರ್ಶನವಾಯ್ತೆಂದು ಕುಣಿಯೋಣ! (ಅ)
-ತ್ತ, ಇತ್ತ ನೋಡದೇ ಕುಣಿಯೋಣ!
ಬಂಧು, ಮಿತ್ರವನೆಂದ್ಕುಣಿಯೋಣ!
ಣಿದೆನೆನ್ನದೇ ಕುಣಿಯೋಣ!
ಕುಕಲ್ಪನೆ ಬಿಟ್ಟು ಕುಣಿಯೋಣ! (ಫ)
-ಣಿಶಾಯಿಯಿವನೆಂದ್ಕುಣಿಯೋಣ!
ಯೋಗೀಶ್ವರವನೆಂದ್ಕುಣಿಯೋಣ! (ತ್ರಾ)
-ಣ ನಿರಂಜನಾದಿತ್ಯ! ಕುಣ್ಯೋಣ!!

ಗುರುದತ್ತ ಭಕ್ತ ನರಸಿಂಹ! (ಉ)   4(1541)

-ರು ಸೇವಾನಿರತ ನರಸಿಂಹ
ಯಾ ಗುಣಾನ್ವಿತ ನರಸಿಂಹ! (ದ)
-ತ್ತ ಭಜನಾಸಕ್ತ ನರಸಿಂಹ!
ವಬಂಧ ಮುಕ್ತ ನರಸಿಂಹ! (ಯು)
-ಕ್ತ ದಾನ, ಧರ್ಮಾತ್ಮ ನರಸಿಂಹ!
ಯ, ವಿನಯಾತ್ಮ ನರಸಿಂಹ! (ಪ)
-ರನಿಂದಾ ವಿದೂರ ನರಸಿಂಹ!
ಸಿಂಗ, ಮಂಗ, ರಂಗ, ನರಸಿಂಹ!
ರಿ ನಿರಂಜನಾದಿತ್ಯಾ ಸಿಂಹ!!!

ಗುರುದರ್ಶನ ಮಾತ್ರಕ್ಕೆ ಪವಿತ್ರ! [ಗು]   5(3081)

-ರುದ್ರೋಹದಿಂದ ಕೌರವಪವಿತ್ರ! (ಯಾ)
ಯಾದವೇಂದ್ರನ ಉಪದೇಶ ಪವಿತ್ರ! (ಸ್ಪ)
-ರ್ಶವಾಯ್ತೆಂದರೆ ಪರಮ ಪವಿತ್ರ!
ರಜನ್ಮವನಿಂದ ಪವಿತ್ರ!
ಮಾತಿನಂತೆ ನಡೆವುದು ಪವಿತ್ರ!
ತ್ರಯಮೂರ್ತಿ ದತ್ತರೂಪ ಪವಿತ್ರ! (ಬೆ)
-ಕ್ಕೆಯಿಲ್ಲದುದರಿಂದದು ಪವಿತ್ರ!
ತಿ, ಪತ್ನಿಯರಂತಿರೆ ಪವಿತ್ರ!
ವಿಠೋಬ ರಕುಮ್ಯಾ ಎಷ್ಟು ಪವಿತ್ರ! (ಚಿ)
-ತ್ರ, ನಿರಂಜನಾದಿತ್ಯಗೆ ಪವಿತ್ರ!!!

ಗುರುದರ್ಶನ ಸರ್ವಾರಿಷ್ಟಹರ! (ಗು)   5(2838)

-ರುಸೇವೆಯಿಂದ ಎಲ್ಲಾ ಪಾಪ ಹರ!
ಯಾಸಾಗರಾ ಶಿವ ಗುರುವರ! (ಸ್ಪ)
-ರ್ಶವವನದು ಸರ್ವವ್ಯಾಧಿ ಹರ!
ವವಿಧ ಭಕ್ತಿಯಿಂದಾತ್ಮೋದ್ಧಾರ!
ಜ್ಜನರಿಗವನೇ ಸರ್ವಾಧಾರ! (ಸ)
-ರ್ವಾವಯವ ಸುಂದರಾ ದತ್ತಾಕಾರ!
ರಿಪು ಸಂಹಾರ ಹರ ರೌದ್ರಾಕಾರ! (ಇ)
-ಷ್ಟಸಿದ್ಧಿಗವ ಕಲ್ಪತರುವರ!
ತ್ತಾವತಾರಾ ನಿತ್ಯ ಸತ್ಯ ಸಾರ! (ವ)
-ರ ನಿರಂಜನಾದಿತ್ಯಾನಂದಾಕಾರ!!!

ಗುರುದೇವ ಅನ್ಯಾವಲಂಬಿಯಲ್ಲ!   1(287)

ರುಚಿ ಶ್ರೀಮಂತಿಕೆಂದನ್ನುವಿರಲ್ಲ?
ದೇಶ, ಕಾಲದಂತವನಿರಬಲ್ಲ! (ಅ)
-ವನಾರೋಪಣೆಯಿಂದ ಲಾಭವಿಲ್ಲ!
ವ ದೈವಾಜ್ಞೆ ಮೀರುವ

ನಲ್ಲ!
ನ್ಯಾಯಾನ್ಯಾಯ ವಿಚಾರಶೂನ್ಯನಲ್ಲ! (ಅ)
-ವನಿಗಾಗನ್ಯ ದೂಷಣೆ ಬೇಕಿಲ್ಲ!
ಲಂಪಟತನ ಅವನಲ್ಲೇನಿಲ್ಲ!
ಬಿರುನುಡಿ ಶಿಷ್ಯಗೊಪ್ಪುವುದಿಲ್ಲ!
ದುಪತಿಯ ಗೀತೆಯೊಂದಿರೆಲ್ಲ! (ಅ)
-ಲ್ಲ, ನಿರಂಜನಾದಿತ್ಯನ್ಯರಂತಲ್ಲ!!!

ಗುರುದೇವನ ಪ್ರೀತಿಯಲ್ಲೇರು ಪೇರಿಲ್ಲ! (ಕು)   3(1294)

-ರುಡು ಅಜ್ಞಾನಿಗಳಿಗಿದರಿವಾಗಿಲ್ಲ!
ದೇಶ ಕಾಲಾನುಸಾರವನ ಕಾರ್ಯವೆಲ್ಲ! (ಅ)
-ವರಿವರ ಮಾತವ ಕೇಳುವವನಲ್ಲ!
ಶ್ವರದಾನಂದಕ್ಕೆವನಂಟಿಕೊಂಡಿಲ್ಲ!
ಪ್ರೀತಿಯವನದು ಆತ್ಮರಾಮನೆಂದೆಲ್ಲ!
ತಿರಸ್ಕಾರ ಮನೋಭಾವ ಅವನಿಗಿಲ್ಲ! (ಮಾ)
-ಯ, ಮಂತ್ರ, ಯಂತ್ರ ಮಾಡುವಾತನವನಲ್ಲ! (ಉ)
-ಲ್ಲೇಖಿಸಿದಂತೆ ನಡೆಯದಿರುವುದಿಲ್ಲ!
ರುಚಿಯರುಚಿಯವನೆಣಿಸುದಿಲ್ಲ!
ಪೇಚಾಡಿಸಿ ಯಾರನ್ನೂ ನೋಯಿಸುವುದಿಲ್ಲ! (ಅ)
-ರಿತೆಲ್ಲರ ಸೇವೆ ಮಾಡದಿರುವುದಿಲ್ಲ! (ಬ)
-ಲ್ಲ ನಿರಂಜನಾದಿತ್ಯಗನಾದರವಿಲ್ಲ!!!

ಗುರುದೇವನಡಿದಾವರೆಯಲ್ಲಿ! (ಉ)   4(1475)

-ರುತರ ಭಯ, ಭಕ್ತಿ, ಭಾವದಲ್ಲಿ!
ದೇಹ, ಬುದ್ಧಿಗಳ ಅರ್ಪಿಸುತಲ್ಲಿ! (ಯಾ)
-ವ ಹವ್ಯಾಸವೂ ಇಲ್ಲದಿರುವಲ್ಲಿ! (ಅ)
-ನವರತ ತದೇಕ ಧ್ಯಾನದಲ್ಲಿ! (ನು)
-ಡಿಯಿಲ್ಲದ ಕರ್ತವ್ಯ ನಿಷ್ಠೆಯಲ್ಲಿ!
ದಾರ್ಶನಿಕಾದಿತ್ಯನೆದುರಿನಲ್ಲಿ! (ಭು)
ನೈಕ ಪರಮಾತ್ಮನಿದಿರಲ್ಲಿ! (ತೆ)
-ರೆದ ದೃಷ್ಟಿಯಿಂದಾತ್ಮಾನಂದದಲ್ಲಿ! (ಭ)
-ಯವಿನ್ನೇನಿಹುದೀ ಪ್ರಪಂಚದಲ್ಲಿ? (ಎ)
-ಲ್ಲಿ? ನಿರಂಜನಾದಿತ್ಯನಡಿಯಲ್ಲಿ!!!

ಗುರುದೇವನಾರೆಂದು ಗೊತ್ತೇ? (ಅ)   4(1719)

-ರುಹು ತಡಮಾಡದಿವತ್ತೇ!
ದೇಹ ನಿನ್ನದೇ ಗುಡಿಯಂತೇ! (ಅ)
-ವನಿರುವದರೊಳಗಂತೆ!
ನಾಮ, ರೂಪ ಬಹಳವಂತೆ! (ಯಾ)
-ರೆಂತ ನೀನೇ ನೋಡಬೇಕಂತೆ! (ಹಿಂ)
-ದು, ಮುಂದು ಓಡಬಾರದಂತೆ! (ಕಂ)
-ಗೊಳಿಪ ನಿನ್ನಾತ್ಮ ತಾನಂತೆ! (ಗೊ)
-ತ್ತೇ? ನಿರಂಜನಾದಿತ್ಯಾತಂತೆ!!!

ಗುರುದೇವನಿಗೆ ನಮಸ್ಕಾರ! (ಅ)   1(113)

-ರುಹೆನಗೆಲ್ಲಾ ನಿಜ ವಿಚಾರ!
ದೇಶ, ಕಾಲ, ಸ್ಥಿತಿಗನುಸಾರ!
ರ ಬೇಕೇಕಾ ರಸಗಂಭೀರ!
ನಿತ್ಯವಲ್ಲದ ರಸ ನಿಸ್ಸಾರ!
ಗೆಳೆಯನೊಬ್ಬನೇ ಗುರುವೀರ! (ಅ)
-ನವರತ ಇವನೇ ಆಧಾರ!
ಗನ ಮೇಲೇಕೋ ಅನಾದರ? (ಹೊ)
-ಸ್ಕಾಲದಾಚಾರ ಭೂಮಿಗೆ ಭಾರ!
ಸ! ನಿರಂಜನಾದಿತ್ಯಾಚಾರ!!!

ಗುರುದೇವನೆನ್ನ ಪಂಚ ಪ್ರಾಣಾಮ್ಮಾ! (ಆ)   1(320)

-ರು ಸಮನಿವಗೀತನೇ ತ್ರಾಣಮ್ಮಾ!
ದೇವರು ಬೇರೆನಗಿಲ್ಲ ಕಾಣಮ್ಮಾ! (ಅ)
-ವನಂಥಾ ದಯಾಳುಯಾರಿಹರಮ್ಮಾ!
ನೆಪಮಾತ್ರಕಾಗಿಹುದೀ ಕಾಯಮ್ಮಾ! (ಅ)
-ನ್ನ, ಬಟ್ಟೆ ಕೊಟ್ಟಿಟ್ಟುಕೊಂಡಿಹನಮ್ಮಾ!
ಪಂಚಾಂಗ ಯೊಂಗ ಕಲಿಸಿಹನಮ್ಮಾ!
ರಾಚರವೆಲ್ಲಾ ತಾನಾಗಿರ್ಪಮ್ಮಾ!
ಪ್ರಾಪಂಚಿಕಾಸೆ ಇವನಿಲ್ಲಮ್ಮಾ! (ಅ)
{ಒ

}

-ಣಕಿಸಬೇಡಿವನನೆಂದಿಗಮ್ಮಾ! (ಅ)
-ಣಕಿಸಿದರೆ ಸಹಿಸೆ ನಾನಮ್ಮಾ! (ಅ)
-ಮ್ಮಾ! ನಿರಂಜನಾದಿತ್ತಾ ಗುರುವಮ್ಮಾ!!!

ಗುರುದೇವನೊಬ್ಬ ಕಲಾವಿದ! (ಕು)   2(911)

-ರುಕುಲಕೆ ಕಾಲಾ ಕಲಾವಿದ!
ದೇವಾಸುರ ವಂದ್ಯಾ ಕಲಾವಿದ!
ರ ಗೀತಾನಂದಾ ಕಲಾವಿದ! (ಬಾ)
-ನೊಡೆಯನೊಡೆಯಾ ಕಲಾವಿದ! (ತ)
-ಬ್ಬಲಿಗಳಬ್ಬೆಯಾ ಕಲಾವಿದ!
ರ್ಣಾನಂದ ವೇಣೂ ಕಲಾವಿದ!
ಲಾವಣ್ಯ ಸ್ವರೂಪಾ ಕಲಾವಿದ!
ವಿಶ್ವವ್ಯಾಪಕಾತ್ಮಾ ಕಲಾವಿದ! (ನಾ)
-ದ, ನಿರಂಜನಾದಿತ್ಯಾತ್ಮಾನಂದ!!!

ಗುರುದೇವನೊಬ್ಬ ನುರಿತ ಹಜಾಮ! (ನಾ)   5(2515)

-ರುವ ಮಂಡೆಯ ಬೋಳಿಸುವಾ ಹಜಾಮ!
ದೇವರಿಗೆ ಮುಡಿಯಿದೆಂಬಾ ಹಜಾಮ! (ನ)
-ವಯುಗಕ್ಕೂ ನಾನು ಬೇಕೆಂಬಾ ಹಜಾಮ! (ತಾ)
-ನೊಪ್ಪಿದ್ರೆಲ್ಲರೊಪ್ಪಿದಂತೆಂಬಾ ಹಜಾಮ! (ಹ)
-ಬ್ಬಗಳಲ್ಲಾದಾಯ ಹೆಚ್ಚೆಂಬಾ ಹಜಾಮ! (ಅ)
-ನುಯಾಯಿಗಳ್ತನಗ್ತುಂಬೆಂಬಾ ಹಜಾಮ!
ರಿಯಾಯ್ತಿ ತನ್ನಿಂದೆಲ್ಲರ್ಗಂಬಾ ಹಜಾಮ! (ಈ)
-ತಪಸ್ಸೇಕಾಗ್ರತೆಯಿಂದೆಂಬಾ ಹಜಾಮ!
ರಿ, ಹರರೆನಗೊಂದೆಂಬಾ ಹಜಾನು!
ಜಾತಿ, ಮತ, ಭೇದವಿಲ್ಲೆಂಬಾ ಹಜಾಮ!
ಹಾತ್ಮ ನಿರಂಜನಾದಿತ್ಯಾ ಹಜಾಮ!!!

ಗುರುಪಾದಕ್ಕೆ ಸಹಸ್ರ ನಾಮಾರ್ಚನೆ! [ಗು]   4(2424)

-ರುಪೂರ್ಣಿಮಾ ರಾತ್ರಿಯಲ್ಲಾಯ್ತಾ ಆರ್ಚನೆ!
ಪಾಮರ, ಪಂಡಿತರ್ಸೇರ್ಯಾಯ್ತೀ ಅರ್ಚನೆ!
ತ್ತಾತ್ರೇಯಗೆ ಪ್ರೀತಿಯಾಯ್ತೀ ಅರ್ಚನೆ! (ಬೆ)
-ಕ್ಕೆಯ ಗಂಧವೇನಿಲ್ಲದಾಯ್ತೀ ಅರ್ಚನೆ!
ಕಲರಿಗಾನಂದವಾಯ್ತೀ ಅರ್ಚನೆ!
ರನ ಭಜನೆಯಿಂದಾಯ್ತೀ ಅರ್ಚನೆ! (ಮೊ)
-ಸ್ರನ್ನಾದಿ ನೇವೇದ್ಯದಿಂದಾಯ್ತೀ ಅರ್ಚನೆ!
ನಾರಿಯರಿಂದೊಡಗೂಡ್ಯಾಯ್ತೀ ಅರ್ಚನೆ!
ಮಾಲೆಗಳರ್ಪಣೆಯಿಂದಾಯ್ತೀ ಅರ್ಚನೆ! (ವ)
-ರ್ಚಸ್ಸಿಗೆ ಕಳೆ ಕೊಟಆಂತಾಯ್ತೀ ಅರ್ಚನೆ! (ಮ)
-ನೆ, ನಿರಂಜನಾದಿತ್ಯ ನಿಲಯ ತಾನೇ???

ಗುರುಪಾದಕ್ಕೆರಗುವುದೇತಕ್ಕೆ? (ಕ)   4(1441)

-ರುಣೆ ಬೇಕವನದೀ ಜೀವನಕ್ಕೆ!
ಪಾಪ ಪರಿಹಾರವಾಗುವುದಕ್ಕೆ! (ಸ)
-ದಮಲ ಜ್ಞಾನ ಸಿದ್ಧಿಸುವುದಕ್ಕೆ! (ಧ)
-ಕ್ಕೆ ಮಾಯೆಯಿಂದಾಗದಿರುವುದಕ್ಕೆ! (ಪ)
-ರಮಪದದಾನಂದಾನುಭವಕ್ಕೆ!
ಗುಹ್ಯ, ಜಿಹ್ವಾ ಚಾಪಲ್ಯ ನಿಗ್ರಹಕ್ಕೆ! (ಸಾ)
-ವು, ನೋವಿನ ಭಯ ತಪ್ಪುವುದಕ್ಕೆ!
ದೇವರೊಬ್ಬನೆಂಬರಿವಾಗಲಿಕ್ಕೆ!
ತ್ವಾರ್ಥಸೌಖ್ಯಳವಡುವುದಕ್ಕೆ! (ಅ)
-ಕ್ಕೆ ನಿರಂಜನಾದಿತ್ಯಾನಂದೆಲ್ಲಕ್ಕೆ!!!

ಗುರುಪಾದಾರಾಧಕ ಯಾತ್ರಿಕ! [ತೋ]   3(1264)

-ರುವನು ವಿಶ್ವಪ್ರೇಮಾ ಯಾತ್ರಿಕ!
ಪಾಡುವನಾತ್ಮ ಗೀತಾ ಯಾತ್ರಿಕ!
ದಾತ, ನಾಥಾತ್ಮನೆಂದಾ ಯಾತ್ರಿಕ!
ರಾಗ, ದ್ವೇಷ ರಹಿತಾ ಯಾತ್ರಿಕ!
ರ್ಮ, ಕರ್ಮ, ನಿರತಾ ಯಾತ್ರಿಕಾ!
ಷ್ಟ, ಸುಖಕ್ಕಂಜನಾ ಯಾತ್ರಿಕ!
ರನ್ನೂ ನಿಂದಿಸನಾ ಯಾತ್ರಿಕ! (ಕೃ)
-ತ್ರಿಮ, ಮೋಸ ಮಾಡನಾ ಯಾತ್ರಿಕ! (ಲೋ)
-ಕ ನಿರಂಜನಾದಿತ್ಯಾತ್ಮಕ!!!

ಗುರುಭಕ್ತನಿಗೆ ಶ್ರದ್ಧಾಂಜಲಿ! (ಸೇ)   5(3206)

-ರು ಗುರುಪಾದ ಸಂತೋಷದಲಿ!
ಕ್ತಿ ಜನ್ಮಜನ್ಮಕ್ಕೂ ಇರಲಿ! (ಭ)
-ಕ್ತವತ್ಸಲ ದತ್ತಾತ್ರೇಯನಲಿ!
ನಿತ್ಯ ನಿರಂಜನಾನಂದನಲಿ! (ಬ)
-ಗೆಬಗೆ ನಾಮ, ರೂಪಗಳಲಿ!
ಶ್ರದ್ಧೆಯಿರಲಿ ಸಾಧನೆಯಲಿ! (ಶು)
-ದ್ಧಾಂತಃಕರಣ! ಸದಾ ಇರಲಿ!
ಗತ್ತಿಗಿದಾದರ್ಶವಾಗಲಿ! (ನ)
-ಲಿ ನಿರಂಜನಾದಿತ್ಯಾತ್ಮನಲಿ!!!

ಗುರುಭಕ್ತಿಯುಳ್ಳವನಾಗು! (ಅ)   5(2938)

-ರುಣೋದಯಕ್ಕೇಳ್ವವನಾಗು!
ಗವತ್ಸೇವಾ ನಿಷ್ಠನಾಗು! (ಮು)
-ಕ್ತಿಯೇ ಗುರಿಯುಳ್ಳವನಾಗು!
ಯುಕ್ತಾಯುಕ್ತಚಿಂತಕನಾಗು! (ಕ)
-ಳ್ಳರ ಕೂಟ ಬಿಟ್ಟವನಾಗು!
ನಿತಾ ಸಂಗ ದೂರನಾಗು!
ನಾಮಜಪ ನಿರತನಾಗು! (ಆ)
-ಗು, ನಿರಂಜನಾದಿತ್ಯನಾಗು!!!

ಗುರುಭಕ್ತಿಯೊಂದು ಮಹದ್ಭಾಗ್ಯ! (ಗು)   4(2088)

-ರುಕೃಪೆಯಿಂದಾಗಬೇಕಾ ಭಾಗ್ಯ!
ವಬಂಧಡಗಿಪುದಾ ಭಾಗ್ಯ! (ಯು)
-ಕ್ತಿಯಿಲ್ಲದ ವಿರಕ್ತಿಗಾ ಭಾಗ್ಯ!(ಕಾ)
-ಯೊಂದು ಗುಡಿಯಾದವಗಾ ಭಾಗ್ಯ!
ದುರ್ವಿಷಯ ದೂರನಿಗಾ ಭಾಗ್ಯ!
ನ ಮಾಧವಾಗಲಿಕ್ಕಾ ಭಾಗ್ಯ!
ಗಲಿರುಳಿರಬೇಕಾ ಭಾಗ್ಯ! (ಸ)
-ದ್ಭಾವ ವೃದ್ಧಿ ಮಾಡುವುದಾ ಭಾಗ್ಯ! (ಯೋ)
-ಗ್ಯ ನಿರಂಜನಾದಿತ್ಯಗೀ ಭಾಗ್ಯ!!!

ಗುರುರಾಜಪ್ಪಾ! ರುದ್ರಾತ್ಮಜಪ್ಪಾ ರಾಮಾನುಜಪ್ಪಾ! ಜಲಜ ಮಿತ್ರಪ್ಪಾ! !   1(77)

ರುಚಿ ನೀನಪ್ಪಾ! ಚಿರವಿರಪ್ಪಾ! ನೀನು ರಂಗಪ್ಪಾ ನನ್ನ ರವಿಯಪ್ಪಾ!
ರಾಮನಾಮಪ್ಪಾ! ಮನ ಮಾಡಪ್ಪಾ! ನಾನಿನಗಪ್ಪಾ ಮಗನಹೆನಪ್ಪಾ!
ಪ ನೀನಪ್ಪಾ! ಪಥವಿದಪ್ಪಾ! ನೀನೇ ಬೇಕಪ್ಪಾ ನಮಿಪೆ ನಾನಪ್ಪಾ!
(ಅ)-ಪ್ಪಾ! ಬಾ, ನೀನಪ್ಪಾ! ಬಾಳಲಾರಪ್ಪಾ!
ರುದ್ದದೇವಪ್ಪಾ! ದ್ರವ್ಯವೆನ್ನಪ್ಪಾ! ದೇಹ ಮಾಯಪ್ಪಾ ವಶವಿರಿಸಪ್ಪಾ!
ದ್ರಾಂ ಆಕಾರಪ್ಪಾ! ಆರ್ತ ನಾನಪ್ಪಾ ಕಾಲ ಹೋಯ್ತಪ್ಪಾ! ರಕ್ಷಿಸು ನನ್ನಪ್ಪಾ!
(ಆ)-ತ್ಮ ಜೀವವಪ್ಪಾ! ಜೀವ ಶಿವಪ್ಪಾ! ವನಜಾಪ್ತಪ್ಪಾ ವರಿಸು ಕೂಸಪ್ಪಾ!
ರಾ ದೂರಪ್ಪಾ! ರಾಜ ರಾಜಪ್ಪಾ! ದೂರ ಬೇಡಪ್ಪಾ ರಮಿಸು ಬಾಳಪ್ಪಾ!
(ಅ)-ಪ್ಪಾ! ಅತೀತಪ್ಪಾ! ಅದ್ವಿತೀಯಪ್ಪಾ ರ್ತಿರ್ಥಾಹಾರಪ್ಪಾ! ತರಣಿರಪ್ಪಾ!
ರಾಧಾರಾಮಪ್ಪಾ! ಧಾತ್ರೀನಾಥಪ್ಪಾ! ರಾಮಾನುಜಪ್ಪಾ ಮರೆಯಬೇಡಪ್ಪಾ!
ಮಾಯಗಾರಪ್ಪಾ! ಯದು ರಾಯಪ್ಪಾ! ಗಾಡಗಾರಪ್ಪಾ ರವಿಯೇ ತಾನಪ್ಪಾ!
ನುತಿಪನಪ್ಪಾ! ತಿರುಕನಪ್ಪಾ! ಪತಿತನಪ್ಪಾ ನಂದನ ನಾನಪ್ಪಾ!
ಯ ನೀನಪ್ಪಾ! ಯಶ ನೀನಪ್ಪಾ! ನೀನೇ ನನ್ನಪ್ಪಾ ನನ್ನ ನೀ ಕಾಯಪ್ಪಾ!
(ಅ)-ಪ್ಪಾ! ಕುಮಾರಪ್ಪಾ! ಕುಲವೊಂದಪ್ಪಾ ಮಾನ್ಯ ಮಾಡಪ್ಪಾ! ರಜ ಹರಸಪ್ಪಾ!
ಗಾಧಾರಪ್ಪಾ! ಯಮಧರ್ಮಪ್ಪಾ! ನೀನೇ ಸೋಮಪ್ಪಾ ನರನೇ ಶಿವಪ್ಪಾ!
ಯ ನೀನಪ್ಪಾ ಜನಿಸನಪ್ಪಾ! ನಿಜಸೂನಪ್ಪಾ! ಸರ್ವೇಶನಪ್ಪಾ! ನನಗೆ ನೀನಪ್ಪಾ!
ಮಿತ್ರ ನೀನಪ್ಪಾ! ತ್ರಯಂಬಕನಪ್ಪಾ! ನೀನೀಶ್ವರಪ್ಪಾ ನಂದಿವಾಹನಪ್ಪಾ!
ತ್ರಯ ಲೋಕಪ್ಪಾ! ಯಾದವೇಂದ್ರಪ್ಪಾ ಲೋಕನಾಥಪ್ಪಾ! ಕಂಸಾರಿ ನೀನಪ್ಪಾ!
(ಅ)-ಪ್ಪಾ! ಬಾ, ಭಾನಪ್ಪಾ! ಬಾಗುವೆನಪ್ಪಾ ಬಾಗಿ ನಾನಪ್ಪಾ (ಆ)ನು ನಿರಂಜನಪ್ಪಾ!!!

ಗುರುವಾಯೂರಲ್ಲಿ ಶ್ರೀಕೃಷ್ಣ! (ತೋ)   4(1683)

-ರುವನಾಪ್ತ ಭಕ್ತಗಾ ಕೃಷ್ಣ!
ವಾತಾವರಣಾನಂದಾ ಕೃಷ್ಣ! (ವಾ)
-ಯೂರ್ಧ್ವಗತಿಯಲ್ಲಿರ್ಪಾ ಕೃಷ್ಣ! (ಊ)
-ರದೀ ದೇಹವಲ್ಲಿರ್ಪಾ ಕೃಷ್ಣ! (ಅ)
-ಲ್ಲಿಲ್ಲೆಲ್ಲೆಲ್ಲ ಕಾದಿರ್ಪಾ ಕೃಷ್ಣ!
ಶ್ರೀಗುರು ತಾನಾಗಿರ್ಪಾ ಕೃಷ್ಣ!
ಕೃಪಾಮೂರ್ತಿಯಾಗಿರ್ಪಾ ಕೃಷ್ಣ! (ಕೃ)
-ಷ್ಣ ನಿರಂಜನಾದಿತ್ಯಾ ಕೃಷ್ಣ!!!

ಗುರುವಾರ ಗಣನಾಯಕನಾಯ್ಕೆ!   6(3334)

ರುಜುಮಾರ್ಗಿಗಾಗಬೇಕೀಗ ಆಯ್ಕೆ!
ವಾದ, ಭೇದವಿಲ್ಲದೇ ಆಗ್ಬೇಕಾಯ್ಕೆ!
ಘುರಾಮನ ಭಕ್ತಗಾಗ್ಬೇಕಾಯ್ಕೆ!
ಣರಾಜ್ಯಕ್ಕಿದೇ ಯೋಗ್ಯವಾದಾಯ್ಕೆ!
(ಹ)-ಣಕಾಸಿಗಾಶಿಸಿ ಮಾಡ್ಬಾರದಾಯ್ಕೆ!
(ಜ)-ನಾನುರಾಗಿಯಾದವಗಾಗ್ಬೇಕಾಯ್ಕೆ!
ಶಸ್ಸುಂಟಾಗ್ಬೇಕ್ಭಾರತಕ್ಕೀ ಆಯ್ಕೆ!
ರ್ತವ್ಯನಿಷ್ಠೆ ಕಲಿಸ್ಬೇಕೀ ಆಯ್ಕೆ!
(ನಾ)-ನಾ ಮತ, ಪಂಥದೈಕ್ಯದಿಂದಾಗ್ಲಾಯ್ಕೆ!
(ಆ)-ಯ್ಕೆ, ನಿರಂಜನಾದಿತ್ಯಾನಂದದಾಯ್ಕೆ!!!

ಗುರುವಿನ ಮಾತು ಕೇಳಪ್ಪಾ! [ತೋ]   3(1224)

-ರುವನವ ಸನ್ಮಾರ್ಗವಪ್ಪಾ!
ವಿನಯದಿಂದಿರು ನೀನಪ್ಪಾ!
ಮಸ್ಕಾರ ಮಾಡವಗಪ್ಪಾ!
ಮಾಡಬೇಡ ಮೊಂಡಾಟವಪ್ಪಾ!
ತುಡುಗನಾಗಬಾರದಪ್ಪಾ!
ಕೇಡಾರಿಗೂ ಮಾಡಬೇಡಪ್ಪಾ! (ಬಾ)
-ಳ ಬೆಳಕಾಗಿ ಬದುಕಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯಮ್ಮಪ್ಪಾ!!!

ಗುರುವಿನಾಜ್ಞೆಗೊಂದು ಕ್ಷಣವೂ ನಿಧಾನಿಸ್ಬೇಡ!   6(4210)

ರುಜುಮಾರ್ಗದ ಮುಖ್ಯಾಂಗವಿದರಿಯರ್ಬೇಡ!
ವಿಧಿ, ಹರಿ, ಹರೇಚ್ಛೆಯಿದೆಂದರಿಯದಿರ್ಬೇಡ!
ನಾಸ್ತಿಕನಿಗಿದನ್ನು ಹೇಳಿ ಗಂ

ಣಗಿಸ್ಬೇಡ! (ಪ್ರ)
-ಜ್ಞೆ ಸ್ವಚ್ಛವಾಗಿರುವವನಿಗೆ ಹೇಳದಿರ್ಬೇಡ!
ಗೊಂಬೆಯಾಟವಿದವನದೆಂದರಿಯದಿರ್ಬೇಡ!
ದುಡುಕಿ ಅವನ ಮುಂದೆ ಏನೊಂದೂ ಮಾತಾಡ್ಬೇಡ!
ಕ್ಷಕ್ಷಣಕ್ಕೂ ಅವನನ್ನು ನೆನೆಯದಿರ್ಬೇಡ! (“ಕೋ)
-ಣ” ಮಂತ್ರ ಜಪಿಸಿದ ಕನಕನಾಗದಿರ್ಬೇಡ! (ಹಾ)
-ವೂ ಹಗ್ಗವಾದೀತಂಥವನಿಗೆ; ಮರೆಯ್ಬೇಡ!
ನಿನ್ನ ಜನ್ಮ ಪಾದಸೇವೆಗೆಂದರಿಯದಿರ್ಬೇಡ! (ಸು)
-ಧಾಮನಾತಿಥ್ಯ ಮಾಡಿದ ಕೃಷ್ಣನ ಮರೆಯ್ಬೇಡ!
ನಿಶ್ಚಲ ತತ್ವಜ್ಞನ ರೀತಿಯಿಂದ; ಮರೆಯ್ಬೇಡ! (ಈ)
-ಸ್ಬೇಕು ಇದ್ದು ಜೈಸ್ಬೇಕೆಬುದನ್ನರಿಯದಿರ್ಬೇಡ! (ಮಾ)
-ಡ, ನಿರಂಜನಾದಿತ್ಯಾಜ್ಞೋಲ್ಲಂಘನೆಯೆಂದೂ ಮಾಡ!!!

ಗುರುವಿನಾಶ್ರಮ ನಿನ್ನ ಮನೆಯಮ್ಮಾ! (ಇ)   3(1301)

-ರುತ ಮೌನದಿಂದ ಸೇವೆ ಸಲ್ಲಿಸಮ್ಮಾ!
ವಿರಕ್ತಿ ಭಾವ ಸತತವಿರಲಮ್ಮಾ!
ನಾಮ ಜಪ ಎಡೆಬಿಡದಾಗಲಮ್ಮಾ!
ಶ್ರಮದ ಪರಿಹಾರವಿದರಿಂದಮ್ಮಾ!
ಕ್ಕಳ ಲಭ್ಯದಂತವರಿರಲ್ಲಮ್ಮಾ!
ನಿನ್ನ ಗುರಿ ನೀನು ಸಾಧಿಸಬೇಕಮ್ಮಾ! (ಅ)
-ನ್ನದಾತ ಪತಿಗೆದುರಾಡಬೇಡಮ್ಮಾ!
ಮಕಾರ ಬಿಟ್ಟೆಲ್ಲಾ ಮಾಡುತಿರಮ್ಮಾ!
ನೆಮ್ಮದಿಗೆ ಬೇರಾವ ದಾರಿಯಿಲ್ಲಮ್ಮಾ! (ಭ)
-ಯ, ಭಕ್ತಿ, ಗುರುಚರಣದಲ್ಲಿಡಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾನಂದವಿದಮ್ಮಾ!!!

ಗುಲಾಮರ ಗುಲಾಮನಿಗೇಕೇ ಜಂಭ?   4(1776)

ಲಾಭದಾಯಕವಲ್ಲವನಿಗೀ ಜಂಭ!
ನವ ಮಲಿನಗೊಳಿಪುದೀ ಜಂಭ! (ಪ)
-ರದಾರಾ, ಧನಕ್ಕಾಶಿಸುವುದೀ ಜಂಭ!
ಗುಹ್ಯಾದಿಂದ್ರಿಯೋದ್ವೇಗ ಮಾಳ್ಪುದೀ ಜಂಭ! (ಕು)
-ಲಾಚಾರಗಳ ಕೆಡಿಸುವುದೀ ಜಂಭ!
ಡದಿ ಮಕ್ಕಳ ಕಾಡುವುದೀ ಜಂಭ!
ನಿತ್ಯ ಜಗಳ ತಂದಿಡುವುದೀ ಜಂಭ!
ಗೇಯುವಭ್ಯಾಸ ತಪ್ಪಿಸುವುದೀ ಜಂಭ!
ಕೀರ್ತಿತರುವಿಗೆ ಕುಠಾರವೀ ಜಂಭ!
ಜಂಟಿ ಜೀವನಾನಂದ ವಿರೋಧೀ ಜಂಭ!
ಗ ನಿರಂಜನಾದಿತ್ಯಗಿಲ್ಲಾ ಜಂಭ!!!

ಗುಲ್ಲಿಲ್ಲದೆ ಬೆಲ್ಲವಾಗ್ವುದಿಲ್ಲ! (ಹ)   6(3646)

-ಲ್ಲಿಲ್ಲದೆ ಮೆಲ್ವುದಕ್ಕಾಗ್ವುದಿಲ್ಲ! (ತ)
-ಲ್ಲಣಿಸಿದರೇನೂ ಆಗ್ವುದಿಲ್ಲ!
ದೆವ್ವಗಳೂ ಕೂಟವಿಲ್ಲದಿಲ್ಲ!
ಬೆಲೆ ಒಳ್ಳೇತನಕ್ಕವ್ರಲ್ಲಿಲ್ಲ! (ಇ)
-ಲ್ಲಸಲ್ಲದ ವ್ಯವಹಾರವೆಲ್ಲಾ!
ವಾಸನಾ ಪರಿಣಾಮವಿದೆಲ್ಲಾ! (ಆ)
-ಗ್ವುದು ದೈವಬಿತ್ತದಂತೆ ಎಲ್ಲಾ!
ದಿವ್ಯ ನಾಮ ಜಪ ಮಾಡಿರೆಲ್ಲಾ! (ಬ)
-ಲ್ಲ ನಿರಂಜನಾದಿತ್ಯನಂತೆಲ್ಲಾ!!!

ಗುಲ್ಲು, ಜಗವೆಲ್ಲಾ ಬರೀ ಗುಲ್ಲು! (ಅ)   4(1869)

-ಲ್ಲು, ಇಲ್ಲು, ಎಲ್ಲೆಲ್ಲೂ ಆಶಾ ಸೊಲ್ಲು!
ನ, ಮನಕೆಲ್ಲಾ ಬೇಕಾ ಗುಲ್ಲು! (ಆ)
-ಗಬೇಕದಿದೆಂಬಾ ವ್ಯರ್ಥ ಸೊಲ್ಲು! (ಸ)
-ವೆಸದಿಹುದು ಪ್ರಾರಬ್ಧಾ ಗುಲ್ಲು! (ಇ)
-ಲ್ಲಾರಲ್ಲೂ ನಿಜಾನಂದದ ಸೊಲ್ಲು!
ಹಳಾಸೆಯಿಂದಾಗ್ವುದಾ ಗುಲ್ಲು!
ರೀತಿ, ನೀತಿಯೆಂದರಾತ್ಮ ಸೊಲ್ಲು!
ಗುರುಭಕ್ತ ಮಾಡನಾವ ಗುಲ್ಲು! (ಗು)
-ಲ್ಲು, ನಿರಂಜನಾದಿತ್ಯಗಿಲ್ಲೆಲ್ಲೂ!!!

ಗುಲ್ಲೇಗುಲ್ಲು ನೋಡಿದರೆಲ್ಲೆಲ್ಲು! (ಎ)   5(2639)

-ಲ್ಲೇನಾಯ್ತೆಂದರಿಯದೇ ಈ ಗುಲ್ಲು!
ಗುತ್ತಿಗೆಗಾರನಿನ್ನಿಲ್ಲೆಂದ್ಗುಲ್ಲು! (ಕ)
-ಲ್ಲು, ಮಣ್ಣು, ನೀರು ನನ್ನದೆಂದ್ಗುಲ್ಲು! (ಮ)
-ನೋ ಪಿಶಾಚಿಯಾಶಾಪಾಶದ್ಗುಲ್ಲು! (ಕ)
-ಡಿ, ಬಡಿಯೆಂಬ ಬೀಜ್ಮಂತ್ರದ್ಗುಲ್ಲು!
ರ್ಪ, ದಂಭಗಳಾದರದ್ಗುಲ್ಲು! (ನೆ)
-ರೆಮನೆ ಸೆರೆಮನೆಯೆಂದ್ಗುಲ್ಲು! (ನ)
-ಲ್ಲೆ, ನಲ್ಲರ ಭಿನ್ನಭವದ್ಗುಲ್ಲು (ನಿ)
-ಲ್ಲು, ನಿರಂಜನಾದಿತ್ಯಗಾಗ್ದ್ಗುಲ್ಲು!!!

ಗುಹಗುಣ ಗಣದೊಡನಾಟ ವಿಮಲಾಪೇಕ್ಷೆ!   1(189)

ಲವು ಕಾಲದಾಪ್ತ ಸಖ್ಯವಿರಲೆಂಬಾಕಾಂಕ್ಷೆ!
ಗುರುಚಿತ್ತವಿದಕನುಕೂಲವಾದುದು ರಕ್ಷೆ! (ಹ)
-ಣ ಕಾಸಿನ ವ್ಯಾಪಾರಕಿದು ದೊರಕಿದ ಈಕ್ಷೆ!
ರ್ವ ದೂರವಾಗಿ ದುಸ್ಸಂಘಕಿರಬೇಕುಪೇಕ್ಷೆ! (ಹೆ)
-ಣವಾದರೂ ಬಿಡಲಾಗದಾ ಒಡನಾಟಕಾಂಕ್ಷೆ!
ದೊರಕಬೇಕಾದುದಕಾಗಿರಬೇಕು ತಿತಿಕ್ಷೆ! (ಎ)
-ಡರುತೊಡರನು ಬಿಡಿಸುವುದು ಗುರು ರಕ್ಷೆ!
ನಾಚಿಕೆ ಲಜ್ಜೆಗಳ ಬಿಟ್ಟ ತಿನಬೇಕು ಭಿಕ್ಷೆ! (ಇ)
-ಟಕದೆತ್ತರದಲ್ಲಿ ಕಟ್ಟಾದಿರು ಗುರು ನಕ್ಷೆ!
ವಿಚಾರ ಮರೆತಿರಬಾರದು ಶ್ರೀಗುರು ದೀಕ್ಷೆ!
ನವೀ ಸಂಬಂಧಕಾಗಿ ಬೇಡದರೇನು ಭಿಕ್ಷೆ?
ಲಾಭಾಲಾಭಗಳನೆಣಿಸದಿರಬೇಕಾಕಾಂಕ್ಷೆ!
ಪೇಚಾಟಪಡಿಸದೆ ಕಾಯ್ವದವನ ರಕ್ಷೆ! (ಭಿ)
-ಕ್ಷೆ, ಪರೀಕ್ಷೆ! ನಿರೀಕ್ಷೆ ನಿರಂಜನಾದಿತ್ಯ ರಕ್ಷೆ!!!

ಗುಹ್ಯಾ! ಸಾಕ್ಮಾಡೀಗ ನಿನ್ನ ಕಾರ್ಯ! (ಬಾ)   5(3165)

-ಹ್ಯಾನ್ತರ ಶುದ್ಧಿಗಿರ್ಬೇಕು ವೀರ್ಯ!
ಸಾಯಜ್ಯ ಸಾಧನೆಗದೇ ಸ್ಥೈರ್ಯ! (ಏ)
-ಕ್ಮಾಡಿದ್ನೋ ನಿನ್ನನ್ನಾ ಬ್ರಹ್ಮ ಸೂರ್ಯ! (ಇ)
-ಡೀ ದೇಹಕ್ಕೇ ನಿನ್ನಾಟ ಸೌಕರ್ಯ!
ತಿಸುವ ನಿನಗೇಕೀ ಚೌರ್ಯ?
ನಿಶಿ, ದಿನ ನಿನ್ಗಾಸೆ ಸೌಂದರ್ಯ! (ಅ)
-ನ್ನ, ನೀರಿಲ್ಲದಾಗೇನಿದೆ ಶೌರ್ಯ?
ಕಾಪಾಡಿಕೋ ಸ್ಥೈರ್ಯ, ಧೈರ್ಯ, ಶೌರ್ಯ! (ಆ)
-ರ್ಯ ನಿರಂಜನಾದಿತ್ಯ ಆಚಾರ್ಯ!!!

ಗುಹ್ಯಾಂಗ ಸಂಗ ಬಿಟ್ಟವ ರಂಗ! (ಬಾ)   5(2944)

-ಹ್ಯಾಂಗಾಡಂಬರೊಲ್ಲದವಾ ರಂಗ!
ಣನಾಯಕ ನಮ್ಮವಾ ರಂಗ!
ಸಂಬಂಧ ನಮ್ಮಲ್ಲಾಗಿ ಶ್ರೀರಂಗ!
ರುಡವಾಹನನಾ ಶ್ರೀರಂಗ!
ಬಿಸಿಲು, ಮಳೆಗಂಜನಾ ರಂಗ! (ಕೆ)
-ಟ್ಟವಾಸನೆಯಿಲ್ಲದವಾ ರಂಗ!
ರಗುರು ದತ್ತಾತ್ರೇಯಾ ರಂಗ!
ರಂಜಿಪನೆಲ್ಲರಲ್ಲಾ ಶ್ರೀರಂಗ! (ರಂ)
-ಗ ನಿರಂಜನಾದಿತ್ಯಾ ಸಾರಂಗ!!!

ಗೃಹಪ್ರವೇಶವಾಗಬೇಕು! [ಗ್ರ]   3(1206)

-ಹಗತಿ ಚೆನ್ನಾಗಿರಬೇಕು!
ಪ್ರಯತ್ನ ಬಿಡದಿರಬೇಕು!
ವೇಷ ಬದಲಾಯಿಸಬೇಕು!
ಬರಿಯಂತಾಗಿರ ಬೇಕು!
ವಾಸ ಸ್ಥಿರವಾಗಿರಬೇಕು!
ತಿ ಶ್ರೀರಾಮನೆನಬೇಕು!
ಬೇರೆ ವಿಚಾರ ಬಿಡಬೇಕು! (ಕಾ)
-ಕುತ್ಸ್ಥ ನಿರಂಜನಾದಿತ್ಯಕ್ಕು!!!

ಗೆದ್ದುಬಂದವರು ಕೆಲವರು! (ಬಿ)   6(3342)

-ದ್ದು, ಎದ್ದೊದ್ದಾಡಿದವ್ರನೇಕರು!
ಬಂಧನಕ್ಕೂ ಒಳಗಾದ್ರವರು!
ಯೆದೋರೆಂದು ಹಲುಬಿದರು!
ಸುದೇವಸುತನಾತ್ಮಜರು!
ರುಜು ಮಾರ್ಗಾಸಕ್ತರಾದವರು!
ಕೆಟ್ಟಯೋಚನೆ ಕೈಬಿಟ್ಟವರು!
ಕ್ಷ್ಯಸಿದ್ಧಿಯ ಪಡೆದ್ರವರು!
ರ ಗುರುಸೇವಾ ನಿರತರು! (ಯಾ)
-ರು? ನಿರಂಜನಾದಿತ್ಯ ದಾಸರು!!!

ಗೆಳೆಯನ ಗೇಟು ದಾಟಿಸಿ ಬಂದೆ! (ಬೆ)   4(1646)

-ಳೆಯಬೇಕು ಸ್ನೇಹ ಸತತವೆಂದೆ! (ನ್ಯಾ)
-ಯವಾದ ದಾರಿ ಬಿಡಬಾರದೆಂದೆ!
ಮಗನ್ಯ ಸಹವಾಸ ಬೇಡೆಂದೆ! (ಭೋ)
-ಗೇಚ್ಛೆ ಕಡಿಮೆಯಾಗುತ್ತಿರಲೆಂದೆ! (ಚೋ)
-ಟುದ್ದದ ಬಟ್ಟೆ ನಮಗೆ ಸಾಕೆಂದೆ!
ದಾಸರ ದಾಸರ್ನಾವಾಗಾಗಲೆಂದೆ! (ಕು)
-ಟಿ ನಮ್ಮೀ ದೇಹ ದತ್ತಗಾಗಲೆಂದೆ
ಸಿರಿ ಮದ ನಮಗೆ ಬೇಡವೆಂದೆ!
ಬಂಧನದಿಂದ ಪಾರಾಗ್ವುದೆಂದೆಂದೆ! (ತಂ)
-ದೆ ನಿರಂಜನಾದಿತ್ಯಾನಂದನೆಂದೆ!!!

ಗೆಳೆಯನಿನ್ನೂ ಬಾರದಿಹನಲ್ಲಾ! (ಮ)   4(2347)

-ಳೆಯೊಂದೇ ಸಮ ಬೀಳುತಿದೆಯಲ್ಲಾ! (ಕಾ)
-ಯದಿದ್ದರೆ ಗತ್ಯಂತರವೇ ಇಲ್ಲಾ!
ನಿರ್ಜೀವವನಿಲ್ಲದೆ ಜಗವೆಲ್ಲಾ! (ತ)
-ನ್ನೂಳಿಗದವ್ರಲ್ಲೇಕೆ ದಯೆಯಿಲ್ಲಾ?
ಬಾ, ಬೇಗ ಬಾರೆಂದು ಕರೆವರೆಲ್ಲಾ! (ವ)
-ರ ಗುರು ರೂಪ ತೋರೋ ನಮಗೆಲ್ಲಾ!
ದಿಕ್ಕಿಲ್ಲದಾಗ್ಬಾರದು ಮಕ್ಕಳೆಲ್ಲಾ!
ರಿ, ಹರ, ಬ್ರಹ್ಮ ಬೇರಿನ್ಯಾರಿಲ್ಲಾ!
ಮಿಸುವೆವು ನಿನ್ನ ಪಾದಕ್ಕೆಲ್ಲಾ! (ಬ)
-ಲ್ಲಾ ನಿರಂಜನಾದಿತ್ಯ ನಮ್ಮನ್ನೆಲ್ಲಾ!!!

ಗೆಳೆಯರೊಟ್ಟಿಗಾಗಲಿಷ್ಟ ಸಿದ್ಧಿ! (ಹ)   3(1184)

-ಳೆಯದಾದರೂ ಕೆಡದಾತ್ಮ ಬುದ್ಧಿ! (ನ್ಯಾ)
-ಯ ಬದ್ಧವಾದರಾಗುವುದು ಸಿದ್ಧಿ! (ಆ)
-ರೊಟ್ಟಿಗಾರಿದ್ದರೂ ಫಲ್ಯಾ ಸದ್ಬುದ್ಧಿ! (ಒ)
-ಟ್ಟಿಗಾರೊಟ್ಟಿಗಾರಿದ್ದರಾವ ಸಿದ್ಧಿ? (ಯೋ)
-ಗಾನಂದರೊಟ್ಟಿಗಿಷ್ಟದೊಂದೇ ಬುದ್ಧಿ!
ತಿ, ಸ್ಥಿತಿಯಾದಾರೊಟ್ಯುಚ್ಛ ಸಿದ್ಧಿ!
ಲಿಪ್ತವಾಗದಾಗಾರೊಟ್ಟಿಗಾ ಬುದ್ಧಿ! (ಇ)
ಷ್ಟ, ಮಿತ್ರರೊಟ್ಟಿಗಿದೇ ಸರ್ವ ಸಿದ್ಧಿ! (ಘಾ)
-ಸಿ, ಕುಹಕರೊಟ್ಟಿಗಿದ್ದರಾ ಬುದ್ಧಿ! (ಸಿ)
-ದ್ಧಿ, ನಿರಂಜನಾದಿತ್ಯಾನಂದಾ ಸಿದ್ಧಿ!!!

ಗೇಣುದ್ದ ಬಟ್ಟೆ ಮಾರುದ್ದ ಹೊಟ್ಟೆ! [ಗು]   3(1341)

-ಣುಗುಟ್ಟಿ ನಿಟ್ಟುಸಿರು ನೀ ಬಿಟ್ಟೆ! (ಉ)
-ದ್ದಳತೆ ನೋಡದೇ ನೀನು ಕೆಟ್ಟೆ!
ದುಕಿಗೆ ಬೇಕು ತೃಪ್ತಿ ಬಟ್ಟೆ! (ಇ)
-ಟ್ಟೆ ನೀನೇಕೆ ದೊಡ್ಡದೊಂದು ತಟ್ಟೆ?
ಮಾಡಲೂಟಕ್ಕೆ ಮೂರ್ಕಾಸು ಕೊಟ್ಟೆ! (ಸಾ)
-ರು, ಹುಳಿಯೆಲ್ಲಕ್ಕೂ ಆಸೆ ಪಟ್ಟೆ! (ಗ)
-ದ್ದಲವೆಬ್ಬಿಸಿ ವೃಥಾ ಗೋಳಿಟ್ಟೆ!
ಹೊಲಸ ಕಳೆಯಿತಾತ್ಮ ನಿಷ್ಟೆ! (ಸು)
-ಟ್ಟೆ ನಿರಂಜನಾದಿತ್ಯನಾಗ್ಬಿಟ್ಟೆ!!!

ಗೊತ್ತು, ಗುರಿ, ಇಲ್ಲದ ಬಾಳಿಗಾಪತ್ತು! (ತು)   6(3960)

-ತ್ತು ಹತ್ತು ತಿಂದ್ರೊಂದು ಬೇಕಾದಾಗಾಪತ್ತು!
ಗುಡಿಸಲಾಳಿಗರಮನೆ ಆಪತ್ತು! (ಅ)
-ರಿಗಳಾರರಿಂದೆಲ್ಲರಿಗೂ ಆಪತ್ತು!
ದ್ದದ್ದ್ರಲ್ಲಿ ತೃಪ್ತಿ ಪಟ್ಟರಿಲ್ಲಾಪತ್ತು! (ಗೊ)
-ಲ್ಲ ಬಾಲೆಯರ ಬಾಳಾದರ್ಶವಾಗಿತ್ತು!
ನ, ಕರುಗಳೇ ಅವರ ಸಂಪತ್ತು!
ಬಾವಿ ನೀರು, ಹೊಲದ ಹುಲ್ಲೇ ಸಾಕಿತ್ತು! (ಅ)
-ಳಿದೇ ಹೋಯಿತಾ ಪರಂಪರೆ ಇವತ್ತು!
ಗಾನ ಅವರದ್ಭಾವ ಪೂರ್ಣವಾಗಿತ್ತು!
ರವಶತೆ ಆಗಾಗ ಬರುತ್ತಿತ್ತು! (ಇ)
-ತ್ತು ನಿರಂಜನಾದಿತ್ಯಾನಂದದಲ್ಲಿತ್ತು!!!

ಗೋಚರದಿಂದಾಗ್ಬೇಕು ಪ್ರಚಾರ!   6(3932)

ರ್ವಿತ ಚರ್ವಣವೀಗಾಚಾರ!
ಮೇಶ ದರ್ಶನಕ್ಕಾವಾಚಾರ? (ಬಂ)
-ದಿಂದೂ ತೋರಬೇಕು ತನ್ನಾಕಾರ!
ದಾರಿ ತೊರ್ಸಿ ಸೇರಿಸ್ಬೇಕ್ತನ್ನೂರ! (ಹೋ)
-ಗ್ಬೇಕಾತುರ! ಆಗ್ಬೇಕವತಾರ!
ಕುಚೇಷ್ಟೆಯೆನ್ನದಿರೀ ವಿಚಾರ!
ಪ್ರಜಾಪ್ರಭುತ್ವಕ್ಬೇಕ್ಸದಾಚಾರ!
ಚಾತಕಗಳಾಗಿ ಆಗ್ಲುದ್ಧಾರ! (ಸೇ)
-ರಲಿ ನಿರಂಜನಾದಿತ್ಯನೂರ!!!

ಗೋಡೆಯಲ್ಲಿ ಗೆಜ್ಲು ಬಂದಿದೆ! [ಒ]   4(2366)

-ಡೆಯನಿಗಲಕ್ಷ್ಯವಾಗಿದೆ! (ಕ್ಷ)
-ಯ ಕ್ಷಣಕ್ಷಣಕ್ಕಾಗುತ್ತಿದೆ! (ಹ)
-ಲ್ಲಿ ಅವುಗಳ ತಿನ್ನುತಿದೆ! (ಹೀ)
-ಗೆ ಕಾಟ ಕಡಿಮೆಯಾಗಿದೆ! (ಗೆ)
-ಜ್ಲು ಮಾರ್ಗ ಬದಲಾಯಿಸಿದೆ!
ಬಂಧನದಕ್ಕಾಗ್ಬೇಕಾಗಿದೆ!
ದಿನ ಬೇಗ ಬರ್ಬೇಕಾಗಿದೆ! (ತಂ)
-ದೆ ನಿರಂಜನಾದಿತ್ಯೆಂದಿದೆ!!!

ಗೋಪ ಬಾಲಾ ಗೋಪೀ ಲೋಲಾ!   4(1589)

ರಿ ಪರ್ಯಾನಂದ ಲೀಲಾ!
ಬಾಳ ಬೆಳಕ್ಕೆಲ್ಲಾ ನೀಲಾ!
ಲಾವಣ್ಯಾತ್ಮಾ ವನಮಾಲಾ!
ಗೋ, ಬ್ರಾಹ್ಮಣ ಪರಿಪಾಲಾ!
ಪೀತವಸನಾ ವಿಶಾಲಾ!
ಲೋಭ ವ್ಯಾಮೋಹ ನಿರ್ಮೂಲಾ! (ಮೂ)
-ಲಾ, ನಿರಂಜನಾದಿತ್ಯಲಾ!!!

ಗೋಪಾಂಗನಾ ರಂಗ ನಾ! (ಅ)   2(669)

-ಪಾಂಗನಾ ಗೋಪಾಲ ನಾ!
ತಿಹಿತಾನಂದ ನಾ!
ನಾರಾಯಣಾನಂದ ನಾ!
ರಂಗಾಂಗ ನಾ ಕಂದ ನಾ!
ರ್ವ ಹೀನನಾತ್ಮ ನಾ!
ನಾ ನಿರಂಜನಾತ್ಮ ನಾ!!!

ಗೋಪಾಂಗನಾನಂದನಾಮುಖ ಚಂದನ!   2(687)

ಪಾಂಡವಾನಂದನಿಷ್ಟಧರ್ಮ ಪಾಲನ!
ಗನಮಣಿಯಲೈಕ್ಯದಾ ಜೀವನ!
ನಾರದಾದಿವಂದ್ಯ ಶ್ರೀಪಾದ ಪಾವನ!
ನಂಬಿದವರ ಕಾಯುವಾ ಸುದರ್ಶನ!
ಯಾಮಯನಿವ ತ್ರಿಲೋಕಮೋಹನ!
ನಾದ ಮುರಲಿಯದು ಮನೋರಂಜನ!
ಮುನಿ ಋಷಿಗಳ ಅಂತರಂಗಾ ಘನ!
ತಿ, ಹತಿ, ನಿಜಮತಿ, ರಾಧಾನನ!
ಚಂದ್ರವಂಶದೀಪಾ ಚಂದ್ರಬಿಂಬಾನನ!
ತ್ತ ಚಿತ್ತದಾದರ್ಶವನಭಾವನ!
ಮೋ ನಿರಂಜನಾದಿತ್ಯಾನಂದಾನನ!!!

ಗೋಪಾಲಕೃಷ್ಣ, ರಾಧಾಕೃಷ್ಣ!   2(582)

ಪಾಪದಿ ದೂರ, ಭೂಪ, ಶ್ರೀ ಕೃಷ್ಣ! (ಬಾ)
-ಲ ಲೀಲಾ ವಿನೋದ ಶ್ರೀ ಕೃಷ್ಣ!
ಕೃಪಾಳು ಕೃಷ್ಣಾಂಗ ಶ್ರೀ ಕೃಷ್ಣ! (ಕೃ)
-ಷ್ಣ! ರುಕ್ಮೀಣೀ ಪ್ರಿಯ ಶ್ರೀ ಕೃಷ್ಣ!
ರಾಜೀವಲೋಚನ ಶ್ರೀ ಕೃಷ್ಣ! (ಸು)
-ಧಾಮ, ಪ್ರೇಮಧಾಮ ಶ್ರೀ ಕೃಷ್ಣ!
ಕೃಷ್ಣ, ಗೋವಿಂದ ಜೈ ಶ್ರೀ ಕೃಷ್ಣ! (ಕೃ)
-ಷ್ಣ, ನಿರಂಜನಾನಂದ ಕೃಷ್ಣ!!!

ಗೋಪಾಲಕೃಷ್ಣ, ರಾಧಾಕೃಷ್ಣ!   2(583)

ಪಾರ್ಥನಾಥ ಜೈ ರಾಧಾಕೃಷ್ಣ! (ಬಾ)
-ಲ, ಗೋಪೀಲೋಲ ರಾಧಾಕೃಷ್ಣ!
ಕೃಷ್ಣ ಕೇಶವ ರಾಧಾಕೃಷ್ಣ! (ಕೃ)
-ಷ್ಣ ಮಾಧವ ಜೈ ರಾಧಾಕೃಷ್ಣ!
ರಾಸ ವಿಲಾಸ ರಾಧಾಕೃಷ್ಣ! (ಸು)
-ಧಾನಂದ ದಾತ ರಾಧಾಕೃಷ್ಣ!
ಕೃಪಾವತಾರ ರಾಧಾಕೃಷ್ಣ! (ಕೃ)
-ಷ್ಣ ನಿರಂಜನ ರಾಧಾಕೃಷ್ಣ!!!

ಗೋಪಾಲಕೃಷ್ಣಾ ರಾಧಾಕೃಷ್ಣಾ!   4(1933)

ಪಾರ್ಥಸಾರಥೀ ರಾಧಾಕೃಷ್ಣಾ! (ಬ)
-ಲರಾಮಾನುಜಾ ರಾಧಾಕೃಷ್ಣಾ!
ಕೃಷ್ಣಶರೀರಾ ರಾಧಾಕೃಷ್ಣಾ! (ಕೃ)
-ಷ್ಣಾಷ್ಟಮ್ಯೋದ್ಭವಾ ರಾಧಾಕೃಷ್ಣಾ!
ರಾಕ್ಷಸಾಂತಕಾ ರಾಧಾಕೃಷ್ಣಾ! (ಆ)
-ಧಾರ ಸ್ವರೂಪಾ ರಾಧಾಕೃಷ್ಣಾ! (ಆ)
ಕೃಪಾ ಸಾಗರಾ ರಾಧಾಕೃಷ್ಣಾ! (ಪೂ)
-ಷ್ಣಾ ನಿರಂಜನಾದಿತ್ಯ ಕೃಷ್ಣಾ!!!

ಗೋಪಾಲಕೃಷ್ಣಾ! ರಾಧಾಕೃಷ್ಣಾ! (ಭೂ)   2(581)

-ಪಾಲ ಕೃಷ್ಣಾ! ಗೋಪಾಲ ಕೃಷ್ಣಾ!
ಕ್ಷ್ಮೀಶ ಕೃಷ್ಣಾ! ರಾಮ ಕೃಷ್ಣಾ!
ಕೃಪಾಳು ಕೃಷ್ಣಾ! ಬಾಲ ಕೃಷ್ಣಾ! (ಕೃ)
-ಷ್ಣಾ! ದ್ರೌಪದಿಯಾನಂದ ಕೃಷ್ಣಾ!
ರಾಜೇಂದ್ರಾ ಕೃಷ್ಣಾಂಗ ಶ್ರೀಕೃಷ್ಣಾ! (ಸು)
-ಧಾಮ ಬಂಧು ಸುಂದರ ಕೃಷ್ಣಾ!
ಕೃಷ್ಣಾ ಕೃಷ್ಣಾ! ಗೋವಿಂದ ಕೃಷ್ಣಾ! (ಕೃ)
-ಷ್ಣಾ! ನಿರಂಜನಾದಿತ್ಯಾ ಕೃಷ್ಣಾ!!!

ಗೋಪಾಲನಡಿಗೆ ದತ್ತನಡಿಗೆ!   3(1068)

ಪಾಕವಿದಾತ್ಮಾನಂದದ ಕೊಡುಗೆ! (ಬ)
-ಲ ಪ್ರದಾಯಕ ಪ್ರಸಾದದಡಿಗೆ!
ರನುದ್ವೇಗಶಾಂತಿಗಾ ಕೊಡುಗೆ! (ಅ)
-ಡಿಗೆರಗೆಂದೆಚ್ಚರಿಪಾ ಅಡಿಗೆ!
ಗೆಳೆಯನಿತ್ತ ಪ್ರೇಮದ ಕೊಡುಗೆ!
ತ್ತಾರ್ಪಣವಾದ ಗೀತೆಯಡಿಗೆ! (ಬಿ)
-ತ್ತ ಶುದ್ಧಿಯಿಂದದ್ವೈತಕ್ಕೀ ಕೊಡುಗೆ! (ಮ)
ಸ್ಸಿಗೆ ಅಗೋಚರವೀ ಅಡಿಗೆ! (ಬೇ)
-ಡಿದರೂ ನೀಡುವರಾರೀ ಕೊಡುಗೆ? (ಕಾ)
-ಗೆ, ನಿರಂಜನಾದಿತ್ಯಾಪ್ತನಡಿಗೆ!!!

ಗೋಪಾಲನಾನಂದನಾ ಗೋವಿಂದನಾ!   2(587)

ಪಾಲ್ಮೊಸರು ಬೆಣ್ಣೆ ಪ್ರೇಮಾನಂದ ನಾ!
ಕ್ಷ್ಯಾತ್ಮಾರಾಮಾನಂದ ಮುಕುಂದ ನಾ!
ನಾದ, ಬಿಂದು ಕಲಾತೀತಾನಂದ ನಾ! (ಅ)
-ನಂಗ ಪಿತನಾ ಶ್ರೀ ರಂಗನಾಥ ನಾ!
ಯಾನಂದ ನಾ ಸುಧಾಮಸಖ ನಾ!
ನಾಮ, ರೂಪಾನಂದ ನಾ ವರದ ನಾ!
ಗೋಪೀ ಮನಮೋಹನ ನಾ ಗೋಪ ನಾ! (ರ)
-ವಿಂದ್ರ, ಚಂದ್ರ ನಾ, ವಸುಂಧರೇಂದ್ರ ನಾ!
ತ್ತ ನಾ, ಶ್ರೀಧರ ನಾ, ಶ್ರೀರಾಮ ನಾ!
‘ನಾ’ ನಿರಂಜನಾದಿತ್ಯ ಸರ್ವೇಶ ‘ನಾ’!!!

ಗೋಪಾಲನಿಷ್ಟ ದಾಂಪತ್ಯ!   4(2151)

ಪಾರ್ವತೀಶ್ವರ ದಾಂಪತ್ಯ!
ಕ್ಷ್ಯಾತ್ಮಕ್ಕಿರ್ಪಾ ದಾಂಪತ್ಯ!
ನಿತ್ಯ ಸುಖದಾ ದಾಂಪತ್ಯ! (ಕ)
-ಷ್ಟ ವಿಷಯಾಶಾ ದಾಂಪತ್ಯ!
ದಾಂಭಿಕೈಹಿಕಾ ದಾಂಪತ್ಯ!
ತನಕಾರೀ ದಾಂಪತ್ಯ! (ಸ್ತು)
-ತ್ಯ ಶ್ರೀ ನಿರಂಜನಾದಿತ್ಯ!!!

ಗೋಪಾಲಾ ಬಹು ಲೀಲಾ!   2(584)

ಪಾಲನಾನಂದ ಬಾಲಾ! (ಪಾ)
-ಲಾನಂದಾನಂದ ಬಾಲಾ!
ಲಾತ್ಮಾನಂದ ಬಾಲಾ! (ಬ)
-ಹುರೂಪಾನಂದ ಬಾಲಾ! ‘(ಹೋ)
-ಲೀ’ ಮೇಳಾನಂದ ಬಾಲಾ! (ನೀ)
-ಲಾ ನಿರಂಜನ ಬಾಲಾ!!!

ಗೋಳಿಲ್ಲದ ಬಾಳಿನ ದಿನವಾವುದು? (ಹೇ)   6(3841)

-ಳಿ ಮನವ ಸರಿಪಡಿಸ್ಲಿಕ್ಕಾಗದು! (ತ)
-ಲ್ಲಣ ಹುಟ್ಟು ಗುಣವಾಗಿ ಬಂದಿಹುದು!
ರಿದ್ರ, ಶ್ರೀಮಂತರಿಗೆಲ್ಲಾ ಇಹುದು!
ಬಾಲಕ, ಬಾಲಕಿಯರಿಗೂ ಇಹುದು! (ಗಾ)
-ಳಿ ಮೂಟೆ ಕಟ್ಟಿದ್ರೇನು ಸುಖವಹುದು?
ಶ್ವರಕ್ಕೆ ಆದ್ರಿಂದ ಆಶಿಸ್ಬಾರದು!
ದಿವ್ಯ ಜೀವನದಿಂದ ಸುಖವಿಹುದು!
ರರಿದನ್ನು ಪರೀಕ್ಷಿಸಬಹುದು!
ವಾದ, ವಿವಾದದಿಂದರಿವಾಗದು! (ಸಾ)
-ವು, ಸಂಕಟ ಯಾವ ದೇಹಕ್ಕೂ ತಪ್ಪದು!
ದುಡಿದ್ರೆ ನಿರಂಜನಾದಿತ್ಯಾಗ್ಬಹುದು!!!

ಗೋವರ್ಧನ ಗಿರಿ ನಾದದಿಂದ ತುಂಬಿತು! (ಭ)   4(1843)

-ವತಾರಕ ಕೃಷ್ಣನನುಗ್ರಹವಾಯಿತು! (ನಿ)
-ರ್ಧರದದರ ಜಡತ್ವ ಮಾಯವಾಯಿತು!
ಭೋಮಂಡಲಕ್ಕೆ ಹಾರುವೇಚ್ಛೆಯಾಯಿತು!
ಗಿರಿಧರನಭಯ ಹಸ್ತ ತಡೆಯಿತು! (ವೈ)
-ರಿ ದೇವೆಂದ್ರನಿಗೆ ಭಯವಿಮ್ಮಡಿಸಿತು!
ನಾದ ಜಯಜಯವೆಂದು ಭೋರ್ಗರೆಯಿತು!
ನ, ಕರುಗಳ ಸಂರಕ್ಷಣೆಯಾಯಿತು!
ದಿಂಡಾಗಿಂದ್ರನ ಶ್ರೀಪಾದಕ್ಕೆರಗಿಸಿತು!
ಯಾಮಯನಿಂದ ಕ್ಷಮಾಪಣೆಯಾಯಿತು!
ತುಂಬುರು ನಾರದರ ಗಾನ ಕೇಳಿಸಿತು!
ಬಿರುಗಾಳಿ ಯತ್ನವಿಲ್ಲದೆ ಅಡಗಿತು! (ಓ)
-ತು ನಿರಂಜನಾದಿತ್ಯನುದಯವಾಯಿತು!!!

ಗೋವಿಂದ ನಿನ್ನರಸಿ ನಾ ಬಂದೆ!   1(142)

ವಿಂಧ್ಯಾದ್ರಿ ಹಾದೆನಗಾಗ್ನೀ ಬಂದೆ!
ತ್ತನಾಗವತರಿಸಿ ಬಂದೆ!
ನಿಜವೆನ್ನಲಿರುವುದದೊಂದೆ! (ಎ)
-ನ್ನ ನೀ ಪರಿಕಿಸದಿರು ಮುಂದೆ!
ಸ ವಿರಸ ಮಾಡಿಲ್ಲ ನಿಂದ!
ಸಿಹಿ ನೀನೊಬ್ಬನೇ ನನ್ನ ತಂದೆ!
ನಾಥನೀನಾಗಿಹೆಯೆಂದು ನಿಂದೆ!
ಬಂಡಾಟ, ಬಡೆದಾಟ ಬಿಡಿಸಿಂದೆ! (ಎ)
-ದೆಗುಂಡಿಲಿ ನಿರಂಜನನೆಂದೆ!!!

ಗೋವಿಂದಾ! ನೀನೆನಗಾನಂದಾ!! (ಓ)   2(594)

-ವಿಂದ, ಬಂದೆನ್ನ ಸೇರೋ ನಂದಾ!! (ಸ)
-ದಾ ಸಮೀಪವಿದ್ದರಾ ನಂದಾ!
ನೀನತ್ತಿತ್ತೋಡಬೇಡ ನಂದಾ!
ನೆಲ, ಹೊಲದಿಂದಿಲ್ಲಾ ನಂದಾ!
ನಗೆ ನಿನ್ನಿಂದೆಲ್ಲಾನಂದಾ!
ಗಾಳಿಗೋಪುರ ಸಾಕೋ ನಂದಾ!
ನಂದಕಂದ, ಮುಕುಂದಾನಂದಾ! (ನಂ)
-ದಾ ನಿರಂಜನಾದಿತ್ಯಾನಂದಾ!!!

ಗೋಸಾಯಿ ಘಟ್ಟವೆಲ್ಲಿಹುದಯ್ಯಾ?   4(1570)

ಸಾರಂಗ ರಂಗನಾಥನಲ್ಲಯ್ಯಾ! (ತಾ)
-ಯಿ, ತಂದೆ, ಬಂಧು, ಮಿತ್ರವನಯ್ಯಾ! (ಅ)
-ಘ, ನಾಶಿನಿಯವನೇ ಕಾಣಯ್ಯಾ! (ಅ)
-ಟ್ಟಹಾಸಕ್ಕವನೊಲಿಯನಯ್ಯಾ! (ಸ)
-ವೆದಾಗ ಕರ್ಮೇಷ್ಟ ಸಿದ್ಧಿಯಯ್ಯಾ! (ಎ)
-ಲ್ಲಿಲ್ಲದಾನಂದಾತ್ಮ ಧ್ಯಾನವಯ್ಯಾ! (ಬ)
ಹು ಮತಸ್ಥರಾಶ್ರಯವಿದಯ್ಯಾ!
ರ್ಪ, ದಂಭಕ್ಕೆಡೆಯಿಲ್ಲಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾ ಘಟ್ಟಯ್ಯಾ!!!

ಗೌರಿ ಪೂಜೆ ಮಾಡಿ ಗುರಿ ಸೇರ್ಬೇಕಮ್ಮಾ! (ಅ)   5(2679)

-ರಿಷಡ್ವರ್ಗವನ್ನು ಜಯಿಸಬೇಕಮ್ಮಾ!
ಪೂರ್ವಜರ ನೆನಸಿಕೊಳ್ಳಬೇಕಮ್ಮಾ! (ಸಂ)
-ಜೆ, ಮುಂಜಾನೆ ಸಾಧನೆ ಮಾಡಬೇಕಮ್ಮಾ!
ಮಾಯಾಜಾಲ ಹರಿದೊಗೆಯಬೇಕಮ್ಮಾ! (ಮು)
-ಡಿಯಬೇಕು ಪಾದ ಪ್ರಸಾದವನ್ನಮ್ಮಾ!
ಗುರಿವಿನಿಂದಧಿಕ ದೇವರಿಲ್ಲಮ್ಮಾ! (ಅ)
-ರಿತಿದನು ಸೇವಾ ನಿರತಳಾಗಮ್ಮಾ!
ಸೇರಬಾರದು ದುರ್ಜನ ಸಂಗಮ್ಮಾ! (ಇ)
-ರ್ಬೇಕು ತೃಪ್ತಿ ದೇವರಿತ್ತದ್ದರಲ್ಲಮ್ಮಾ!
ರಣತ್ರಯದ ಶುದ್ಧಿಯಾಗ್ಬೇಕಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಾನಂದ ಶಿವಮ್ಮಾ!!!

ಗ್ರಹಣ ಹಿಡಿದೂ ಆಯ್ತು, ಬಿಟ್ಟು ಆಯ್ತು! (ಗ್ರ)   6(4108)

-ಹ ದೋಷ ನಿವಾರಣಾ ಹೋಮವೂ ಆಯ್ತು! (ಹ)
-ಣ ತರತರದಲ್ಲಿ ವೆಚ್ಚವೂ ಆಯ್ತು!
ಹಿಡಿದ ಹುಚ್ಚು ಹಾಗೇ ಉಳಿದು ಹೋಯ್ತು! (ಬಿ)
-ಡಿಸುವುದಿದನ್ನೆಂತೆಂತೆಂದರಿಯದಾಯ್ತು!
ದೂರ್ಬಾರ್ದನ್ಯರನ್ನೆಂಬ ಜ್ಞಾನೋದಯಾಯ್ತು!
ದದ್ದೆಲ್ಲವೂ ಒಳ್ಳೆಯದಕ್ಕೆ ಆಯ್ತು! (ಆ)
-ಯ್ತು ಆಸೆಗಳೆಲ್ಲವೂ ನಿರ್ಮೂಲವಾಯ್ತು!
ಬಿದಿ ಲಿಖಿತವೀಗೇನೂ ಮಾಡದಾಯ್ತು! (ಹು)
-ಟ್ಟಿರ ಸೇರುವುದೊಂದೇ ಉಳಿದಂತಾಯ್ತು!
ಯಾತ್ರೆಗೆ ಗುರುಕೃಪೆಯೆಂದೋ ಆಯ್ತು! (ಆ)
-ಯ್ತು, ನಿರಂಜನಾದಿತ್ಯಗದು ನಿತ್ಯಾಯ್ತು!!!

ಗ್ರಹಾಧಿಪನಾತ್ಮ ಗೃಹಾಧಿಪ!   3(1226)

ಹಾಸು, ಹೊಕ್ಕಾಗಿರ್ಪಾಯೋಧ್ಯಾಧಿಪ! (ಸಾ)
-ಧಿಸಿರ್ಪವನಾ ವಾನರಾಧಿಪ! (ಜ)
-ಪ, ತಪದಿಂದಾತ ಯೋಗಾಧಿಪ!
ನಾನು ನೀನೊಂದಾಗಿ ಲೋಕಾಧಿಪ! (ಆ)
-ತ್ಮನಂತನಾಮ, ರೂಪಾತ್ಮಾಧಿಪ!
ಗೃಹಿಣಿ ಸೀತಾಂತರಂಗಾಧಿಪ!
ಹಾರಾರ್ಪಿಸಿರ್ಪಾ ಶ್ರೀರಂಗಾಧಿಪ! (ವ್ಯಾ)
-ಧಿಹರಾ ವಿಚಿತ್ರ ದುರ್ಗಾಧಿಪ! (ದೀ)
-ಪ ಶ್ರೀ ನಿರಂಜನಾದಿತ್ಯಾಧಿಪ!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ