ಕಂಡದ್ದು ಹೇಳಿದ್ರೆ ಕೆಂಡದಂಥಾ ಕೋಪ!   6(3379)

(ದಂ)-ಡ ತೆರಬೇಕಾದಾಗೇಕೆ ವೃಥಾಲಾಪ?
(ಬಿ)-ದ್ದು ಒದ್ದಾಡುವುದು ಪ್ರಾರಬ್ಧದಶಾಪ!
ಹೇಗೆ ತೋರಲಿದ ನಿನಗೆ ದಾಸಪ್ಪಾ?
(ಬಾ)-ಳಿನ ಆಮೂಲಾಗ್ರ ತನಿಖೆಮಾಡಪ್ಪಾ!
(ಆ)-ದ್ರೆ, ಹೋದ್ರೆಂಬಿತ್ಯಾದಿ ಮಾತಿನ್ನು ಸಾಕಪ್ಪಾ!
ಕೆಂದುಟಿ ಚೆಲ್ವಯರ ಹಿಂದೋಡ್ಬೇಡಪ್ಪಾ!
(ಬೆ)-ಡಗವರದು ಮಾಯಾಜಾಲ ಕಾಣಪ್ಪಾ!
ದಂಭ, ದರ್ಪಕ್ಕವರು ಮಣಿಯರಪ್ಪಾ!
(ವೃ)-ಥಾಕಾಲಕಳೆದು ಹಾಳಾಗ ಬೇಡಪ್ಪಾ!
ಕೋಗಿಲೆಯಾಗಿ ಕಾಗೆಯಲ್ಲೆನಿಸಪ್ಪಾ!
(ಸಂ)-ಪದ ನಿರಂಜನಾದಿತ್ಯಾತ್ಮಾನಂದಪ್ಪಾ!!!

ಕಂಡು ಕೊಂಡಾಡಬೇಕಯ್ಯಾ! (ಹು)   5(2588)

-ಡುಗಾಟವೆನಬೇಡಯ್ಯಾ!
ಕೊಂಕು ಡೊಂಕೆಲ್ಲಾ ತಿದ್ದಯ್ಯಾ!
ಡಾವರಿಸೆನ್ನ ನೀನಯ್ಯಾ! (ಬಿ)
-ಡ ಬೇಡೀಗೆನ್ನ ಕೈಯ್ಯಯ್ಯಾ!
ಬೇಯುತಿದೆನ್ನೊಡಲಯ್ಯಾ!
ರುಣೆ ತೋರಿ ಬಾರಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಯ್ಯಾ!!!

ಕಂಡೆ ಕರುಣಾನಿಧಿಯ! (ಒ)   4(1940)

-ಡೆಯ ರುಕ್ಮಿಣೀ ಪತಿಯ!
ನಕಾಂಬರ ಹರಿಯ! (ಗು)
-ರುವಾಯೂರ ಶ್ರೀ ಪತಿಯ! (ಪ್ರಾ)
-ಣಾಧಾರ ಗುರು ದೊರೆಯ!
ನಿತ್ಯಾತ್ಮಾನಂದಮಯಿಯ! (ವ್ಯಾ)
-ಧಿಹರಧನ್ವಂತರಿಯ! (ಜ)
-ಯ ನಿರಂಜನಾದಿತ್ಯಾಯ!!!

ಕಂಡೆ ನಾ ನಿರಂಜನಾದಿತ್ಯ ನಾ! [ಒ]   5(2946)

-ಡೆಯನೀರೇಳ್ಲೋಕಕ್ಕಾದವನಾ!
ನಾರಾಯಣನಾಗಿರುವವನಾ!
ನಿತ್ಯ ದರ್ಶನ ಕೊಡುವವನಾ!
ರಂಗನಾಥ ತಾನೆಂಬ ದೇವನಾ!
ಗತ್ತಿನ ಕಣ್ಣಾಗಿರ್ಪವನಾ!
ನಾಮಜಪಾನಂದಾನುಭವನಾ!
ದಿವ್ಯ ಜ್ಞಾನ ದಾನ ಮಾಳ್ಪವನಾ! (ಭೃ)
-ತ್ಯರ ಭೃತ್ಯನಾಗಿರುವವನಾ!
ನಾ, ನಿರಂಜನಾದಿತ್ಯಾದವನಾ!!!

ಕಂಡೆನಾ ಗಂಡು, ಹೆಣ್ಣಾದವನ! [ಜ]   4(2271)

-ಡೆ, ಮುಡಿ, ಧರಿಸಿರುವವನ!
ನಾಮ, ರೂಪಾನಂತವಾಗಿಹನ!
ಗಂಗೆ, ಪಾರ್ವತಿಯರೊಡೆಯನ! (ಕ)
-ಡು ತ್ಯಾಗಿಯಾಗಿರುವಾ ಶಿವನ!
ಹೆತ್ತಮ್ಮ ತಾನೆಲ್ಲರ್ಗಾಗಿಹನ! (ಕ)
-ಣ್ಣಾದಿಂದ್ರಿಯ ಜಯಿಸಿರ್ಪವನ!
ತ್ತಾತ್ರೇಯ ಸ್ವರೂಪಾದವನ!
ರ ಭಕ್ತಿಗೊಲಿಯುತಿಹನ! (ಜ)
-ನಕ ಶ್ರೀ ನಿರಂಜನಾದಿತ್ಯನ!!!

ಕಂದನಾಕ್ರಂದನ ಕೇಳದೇನಮ್ಮಾ?   3(1287)

ತ್ತೋತ್ಪತ್ತಿಗಾರು ಕಾರಣರಮ್ಮಾ? (ಅ)
-ನಾದರವಳಿಗುಚಿತವೇನಮ್ಮಾ? (ಸಂ)
-ಕ್ರಂದನಾದಿಗಳೆಲ್ಲಾ ಆಪ್ತರಮ್ಮಾ! (ಆ)
-ದರದೋರಿ ಉಣಿಸು ಬಾ ಬೇಗಮ್ಮಾ! (ಕ)
-ನಸು, ನೆನಸಿನಲ್ಲೆಲ್ಲಾ ನೀನಮ್ಮಾ!
ಕೇಳುವರಾರು ನಿನ್ನ ಹೊರತಮ್ಮಾ? (ತೊ)
-ಳಲಿ, ಬಳಲಿ, ಬೆಂಡಾಗಿಹೆನಮ್ಮಾ!
ದೇವಿ ನೀನೀಗ ಪ್ರಸನ್ನಳಾಗಮ್ಮಾ! (ತ)
-ನಯನನ್ನೆತ್ತಿ ಮುದ್ದಾಡು ಬಾರಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಾನಸೂಯಮ್ಮಾ!!!

ಕಕ್ಕಸಲ್ಲಿರುವಾಗಲೂ ಬಂದ! [ಅ]   5(2950)

-ಕ್ಕರೆಯಿಟ್ಟು ಬೆಕ್ಕೆ ಬಿಟ್ಟು ಬಂದ!
ದ್ಗುಣ ಸಂಪನ್ನನಾಗಿ ಬಂದ! (ಅ)
-ಲ್ಲಿಲ್ಲೆಂಬ ಭೇದವಿಲ್ಲದೆ ಬಂದ! (ಆ)
-ರುಮೊಗದಾನಂದಾನೆಂದು ಬಂದ!
ವಾರ ವಾರ ಬರ್ವೆನೆಂದು ಬಂದ!
ರಿಷ್ಟ ನೀನೇ ನಾನೆಂದು ಬಂದ!
ಲೂಟಿಗಾರ ನಾನಲ್ಲೆಂದು ಬಂದ!
ಬಂದ, ನಿಂದ, ಹೋದಾನಂದದಿಂದ! (ಕಂ)
-ದ ನಿರಂಜನಾದಿತ್ಯಾತ್ಮಾನೆಂದ!!!

ಕಕ್ಷಿಗಾರಗೊಬ್ಬ ನ್ಯಾಯವಾದಿ ಸಾಕು! (ಕ)   6(3982)

-ಕ್ಷಿಗಾರರನೇಕ ನ್ಯಾಯವಾದಿಗ್ಬೇಕು!
ಗಾಳ್ಬೀಸಿದತ್ತ ಕಕ್ಷಿಗಾರೋಡ್ದಿರ್ಬೇಕು! (ವ)
-ರಮಾನದತ್ಯಾಸೆ ನ್ಯಾಯವಾದ್ಬಿಡ್ಬೇಕು!
ಗೊಡ್ಡಾಕಳ ಹಿಂಡಲೆತ್ನಿಸದಿರ್ಬೇಕು! (ಒ)
-ಬ್ಬನನ್ನೇ ಕಕ್ಷಿಗಾರ ನಂಬುತ್ತಿರ್ಬೇಕು!
ನ್ಯಾಯಾನ್ಯಾಯ ದೈವೇಚ್ಛೆಯಂತೆಂದಿರ್ಬೇಕು! (ಕಾ)
-ಯಕಕ್ಕೆ ತಕ್ಕ ಪ್ರತಿಫಲ ಸಿಕ್ಬೇಕು!
ವಾಸುದೇವನಾದ್ರೂ ಇದನ್ನೊಪ್ಪಬೇಕು!
ದಿವ್ಯಜೀವನಕ್ಕಾಗ ಬೆಲೆ ಬರ್ಬೇಕು!
ಸಾಯುಜ್ಯ ಸುಖಕ್ಕದು ನೆರವಾಗ್ಬೇಕು! (ಬೇ)
-ಕು ನಿರಂಜನಾದಿತ್ಯಾನಂದವಿರ್ಬೇಕು!!!

ಕಕ್ಷಿಗಾರನಿಗೆ ಬಿಡುಗಡೆಯಾಯ್ತು! (ರ)   4(1665)

ಕ್ಷಿಸಿದ ಗುರುದೇವನೆಂಬರಿವಾಯ್ತು!
ಗಾಡಿ ತನ್ನೂರಿನ ಕಡೆಗೆ ಬಿಟ್ಟಾಯ್ತು! (ವ)
-ರ ವಕೀಲಗೇನು ಸಂಭಾವನೆಯಾಯ್ತು?
ನಿಶ್ಚಲ ಭಕ್ತಿಯ ಫಲದರಿವಾಯ್ತು!
ಗೆದ್ದೆ ನಾನೆಂಬೊಂದು ಸಂತೋಷವುಂಟಾಯ್ತು!
ಬಿಸಿಯೇರಿದ್ದ ತಲೆಗೆ ತಂಪುಂಟಾಯ್ತು! (ನೋ)
-ಡುತ್ತಿದ್ದವರಿಗೆ ಆಶ್ಚರ್ಯವುಂಟಾಯ್ತು!
ಹಗಹಿಸಿ ನಕ್ಕ ಮುಖ ಪೆಚ್ಚಾಯ್ತು! (ಒ)
ಡೆಯನ ಲೀಲೆಯನ್ನರಿಯದಂತಾಯ್ತು!
ಯಾದವೇಂದ್ರನ ಭಕ್ತಿ ಹೆಚ್ಚುವಂತಾಯ್ತು! (ಆ)
-ಯ್ತು, ನಿರಂಜನಾದಿತ್ಯನಿಷ್ಟದಂತಾಯ್ತು!!!

ಕಕ್ಷಿಗಾರರಿಗಾರ ರಕ್ಷೆ! [ಸಾ]   3(1250)

-ಕ್ಷಿ ಸ್ವರೂಪೀಶ್ವರನ ರಕ್ಷೆ! (ಆ)
-ಗಾಗಾತನ ಸ್ಮರಣೆ ರಕ್ಷೆ!
ಗಳೆಯಿಂದಾಗದು ರಕ್ಷೆ! (ದಾ)
-ರಿ ನೇರಾಗಿದ್ದ ರಾಗ ರಕ್ಷೆ!
ಗಾಲಿ ಗೋಪುರಕಾವ ರಕ್ಷೆ? (ಪ)
-ರ ಪೀಡೆಗೊದಗದು ರಕ್ಷೆ! (ವ)
-ರ ವಿಭೀಷಣಗಾಯ್ತು ರಕ್ಷೆ! (ಶಿ)
-ಕ್ಷೆ, ನಿರಂಜನಾದಿತ್ಯ ರಕ್ಷೆ!!!

ಕಗ್ಗತ್ತಲೆಯನಟ್ಟಿದ ರಾಮಕೃಷ್ಣ! (ಜ)   4(1904)

-ಗ್ಗದುದನು ಬಗ್ಗಿಸಿದ ರಾಮಕೃಷ್ಣ! (ಮ)
-ತ್ತರಾದವರನ್ನೆತ್ತಿದ ರಾಮಕೃಷ್ಣ! (ಕೊ)
-ಲೆಗಾರರ ಕ್ಷಮಿಸಿದ ರಾಮಕೃಷ್ಣ! (ಭ)
-ಯ ನಿವಾರಣೆ ಮಾಡಿದ ರಾಮಕೃಷ್ಣ!
ರೇಂದ್ರರಾಧಾರನಾದ ರಾಮಕೃಷ್ಣ! (ಜ)
-ಟ್ಟಿಯ ಹುಟ್ಟಡಗಿಸಿದ ರಾಮಕೃಷ್ಣ!
ಯಾಮಯನೆನಿಸಿದ ರಾಮಕೃಷ್ಣ!
ರಾಗ, ದ್ವೇಷ, ಬಿಡಿಸಿದ ರಾಮಕೃಷ್ಣ!
ತಭೇದ ಸುಡಿಸಿದ ರಾಮಕೃಷ್ಣ!
ಕೃತಿಯಿಂದೆಲ್ಲಾ ತೋರಿದ ರಾಮಕೃಷ್ಣ! (ಪೂ)
-ಷ್ಣ ನಿರಂಜನಾದಿತ್ಯ ಶ್ರೀ ರಾಮಕೃಷ್ಣ!!!

ಕಗ್ಗೊಲೆಗಾಗಲೀಗ ಪ್ರಾಯಶ್ಚಿತ್ತ! (ಜ)   4(1945)

-ಗ್ಗೊರಗಿಸಬೇಕವರಾರ್ಯ ಚಿತ್ತ! (ಬಾ)
-ಲೆಯರಾರ್ತನಾದ ಕೇಳಲೀ ಚಿತ್ತ!
ಗಾನಲೋಲನೀನಾಗಾಗ್ಬಾರದಾ ಚಿತ್ತ!
ಮನಿಸಲಿ ಮಕ್ಕಳನ್ನಾ ಚಿತ್ತ! (ಶೂ)
-ಲೀಶ್ವರ ವರ ಗುರುವಿನಾ ಚಿತ್ತ! (ವಂ)
-ಗ ದೇಶಿಯರಂತರಂಗದಾ ಚಿತ್ತ!
ಪ್ರಾರ್ಥನೆಯಂಗೀಕರಿಸಲಾ ಚಿತ್ತ! (ನ್ಯಾ)
-ಯ ದೂರಕಿಸಲೇ ಬೇಕೀಗಾ ಚಿತ್ತ! (ಪಾ)
-ಶ್ಚಿಮಾತ್ಯರ ಕಣ್ತೆರೆಯಲಾ ಚಿತ್ತ! (ಚಿ)
-ತ್ತ, ನಿರಂಜನಾದಿತ್ಯನಾಪ್ತ ಚಿತ್ತ!!!

ಕಚ್ಚೆ ಕಟ್ಟು, ರುಚಿಕಟ್ಟು, ಸೇರೊಟ್ಟು! (ಕೆ)   3(1397)

-ಚ್ಚೆದೆಯ ಹನುಮನಾಗಿ ಸೇರೊಟ್ಟು!
ಣ್ಣು, ಕಿವಿ, ಮೂಗು ಬಿಟ್ಟು ಸೇರೊಟ್ಟು! (ಸು)
-ಟ್ಟು ವೈರಿಗಳ ಬಂದೀಗ ಸೇರೊಟ್ಟು! (ಪೌ)
-ರುಷವಿದೆಂದು ಸಾಧಿಸಿ ಸೇರೊಟ್ಟು!
ಚಿದಾನಂದ ರೂಪಿಯಾಗಿ ಸೇರೊಟ್ಟು!
ನ್ಯೆ ಮಾತಂಗಿ ನೀನಾಗಿ ಸೇರೊಟ್ಟು! (ಮು)
-ಟ್ಟು ಮಡಿಯ ಭ್ರಾಂತಿಬಿಟ್ಟು ಸೇರೊಟ್ಟು!
ಸೇನಾಪತಿ ಕಂದನಾಗಿ ಸೇರೊಟ್ಟು!
ರೊಚ್ಚಿಗೆದ್ದವರ ಕೊಚ್ಚಿ ಸೇರೊಟ್ಟು! (ಕ)
-ಟ್ಟು, ನಿರಂಜನಾದಿತ್ಯನಾಣೆಯಿಟ್ಟು!!!

ಕಚ್ಚೆ ಬಿಚ್ಚಿ ಹುಚ್ಚನಾಗಬೇಡ! (ಉ)   5(2709)

-ಚ್ಚೆ, ಹೇಲು ಗುಂಡಿಗೆ ಬೀಳಬೇಡ!
ಬಿಗಿ ತಪ್ಪಿ ಪತಿತನಾಗ್ಬೇಡ! (ನೆ)
-ಚ್ಚಿ ಮಾಯೆಯನ್ನು ಪೆಚ್ಚಾಗಬೇಡ!
ಹುಟ್ಟು, ಸಾವಿಗೆ ಕಟ್ಟು ಬೀಳ್ಬೇಡ! (ಸ)
-ಚ್ಚರಿತೆಯನ್ನೆಂದೂ ಬಿಡಬೇಡ!
ನಾಮ ಜಪ ಬಿಟ್ಟುಬಿಡಬೇಡ! (ಗ)
-ಗನ ಸದೃಶನಾಗದಿರ್ಬೇಡ!
ಬೇರೆ ದಾರಿ ಹಿಡಿದು ಕೆಡ್ಬೇಡ! (ಎ)
-ಡರು ನಿರಂಜನಾದಿತ್ಯ ಮಾಡ!!!

ಕಟ್ಟಕಡೆಗುಟ್ಟುಡುಗೆಯೂ ವಿರೋಧಧವಯ್ಯಾ! (ಅ)   6(4102)

-ಟ್ಟಡುಗೆಯನ್ನೂ ಬಿಟ್ಟು ಹೋಗ್ಬೇಕಾಗುವುದಯ್ಯಾ!
ನಿಕರವಿಲ್ಲ ಯಮನ ದೂತರಿಗಯ್ಯಾ! (ಜ)
-ಡೆ, ಮುಡಿ, ಕಟ್ಟಿ ಎಳೆದೊಯ್ಯುವರವರಯ್ಯಾ!
ಗುಣಗಳೆಣಿಸುವವರು ವಿರಳವಯ್ಯಾ! (ಹು)
-ಟ್ಟು ಸಾವಿನಗಂಟು, ಹರಿದರೆ ಸುಖವಯ್ಯಾ! (ದು)
-ಡುಕಿದರಾಗುವ ಕೆಲಸವಿದಲ್ಲವಯ್ಯಾ!
ಗೆರೆ ಗುರು ಹಾಕಿದ್ದನ್ನು ದಾಟಾಬಾರದಯ್ಯಾ! (ಸಾ)
-ಯೂಜ್ಯಾನಂದನುಭವಕ್ಕಿದತ್ಯಗತ್ಯಯ್ಯಾ!
ವಿಕಲ್ಪ ಅವನಲ್ಲೆಣಿಸಲೇ ಬಾರದಯ್ಯಾ!
ರೋಮಾಂಚವಾಗ್ಬೇಕವನ ನೆನಸಿದರಯ್ಯಾ!
ರ್ಮರಾಜ ಯಮನೂ ಆಗ ಗೆಳೆಯನಯ್ಯಾ! (ಭ)
-ವಭಯವನ್ನು ಅವನೇ ಬಿಡಸುವನಯ್ಯಾ! (ಅ)
-ಯ್ಯಾ! ಶ್ರೀ ನಿರಂಜನಾದಿತ್ಯಾತ್ಮಜನವನಯ್ಯಾ!!!

ಕಟ್ಟಕಡೆಯ ತೀರ್ಮಾನವಿಂದು! (ಪ)   5(2759)

-ಟ್ಟ ಕಷ್ಟದ ನಿವಾರಣೆಯಿಂದು!
ರೆ ಗುರುವಿನಿಂದ ಬಂತಿಂದು! (ಬಿ)
-ಡೆ ಶ್ರೀಪಾದವ ನಾನು ಎಂದೆಂದು! (ಭ)
-ಯ ನನಗೇನೆಂದು ಬಂದೆನಿಂದು!
ತೀರ್ಥರೂಪನವನೆನಗೆಂದು! (ಕೂ)
-ರ್ಮಾದ್ಯವತಾರಗಳವನೆಂದು! (ವಿ)
-ನಯದಿಂದೆರಗಿದೆ ನಾನಿಂದು! (ಗೋ)
-ವಿಂದನೆಂದ “ನಾವಿಬ್ಬರೊಂದೆಂದು”! (ಇಂ)
-ದು ನಿರಂಜನಾದಿತ್ಯನವನೆಂದು!!!

ಕಟ್ಟಕಡೆಯ ತೀರ್ಮಾನವೇನು? (ಇ)   4(2405)

-ಟ್ಟ ಹಾಗಿರಬೇಕ್ನೀನೆನ್ನುವನು!
ಳವಳ ಪಡ್ಬೇಡೆನ್ನುವನು! (ಎ)
-ಡೆಬಿಡದೆ ಜಪಿಸೆನ್ನುವನು! (ಸಾ)
-ಯದಿರದೀ ದೇಹವೆನ್ನುವನು! (ಅ)
-ತೀತನಾಗಿ ನಾನಾಗೆನ್ನುವನು! (ದು)
-ರ್ಮಾರ್ಗಿ ನೀನಾಗಬೇಡೆನ್ನುವನು!
ಮಿಸು ತ್ರೀಪಾದಕ್ಕೆನ್ನುವನು! (ನೇ)
-ವೇದ್ಯವಾದನ್ನ ತಿನ್ನೆನ್ನುವನು! (ನಾ)
-ನು, ನಿರಂಜನಾದಿತ್ಯೆನ್ನುವನು!!!

ಕಟ್ಟಿಕೊಟ್ಬುತ್ತಿ, ಹೇಳಿಕೊಟ್ಬುದ್ಧ್ಯೆಷ್ಟು ದಿನ? (ಹು)   4(2134)

ಟ್ಟಿ, ಸಾಯ್ವವರೆಗ್ಬಿಡದು ಕರ್ಮ ಜೀವನ!
ಕೊಳೆಯಾದಾಗೆಲ್ಲಾ ತೊಳೆಯಬೇಕ್ವಸನ! (ಕೆ)
ಟ್ಟುದ್ಧಿ ಹುಟ್ಟಡಗದಿದ್ರಾಗದು ಪಾವನ! (ಸು)
ತ್ತಿ, ಬೇಸತ್ತರಾಗವುದು ವ್ಯರ್ಥ ಜೀವನ! (ದೇ)
ಹೇಚ್ಛೆ ಬಿಟ್ಟರಾಗುವುದಮೃತ ಪ್ರಾಶನ! (ನ)
ಳಿನನಾಭನ ಭಜನೆ ಜನ್ಮ ಪಾವನ!
ಕೊಲಲ್ಜೀವ ಭಾವವಿದೊಳ್ಳೆಯ ಸಾಧನ! (ಜು)
ಟ್ಬುಡ ಸಹಿತ ಕೀಳದಾಗದು ಮುಂಡನ! (ವ)
ಧ್ಯೆ, ಮೋಹ, ಮಾಯೆಂದರಿತ್ಕೊಲ್ಬೇಕು ಕಾಮನ! (ನಿ)
ಷ್ಟುರ ಸ್ವಭಾವದಿಂದಾಗ್ವುದಧಃಪತನ!
ದಿನ, ರಾತ್ರಿ, ಮನನ ಮಾಡ್ಬೇಕ್ಗುರ್ವಚನ!
ನರನಾಗ ನಿರಂಜನಾದಿತ್ಯ ಚೇತನ!!!

ಕಡಲ ಹೀರುವನಮ್ಮಾ ಮಿತ್ರ! (ಮೋ)   3(1003)

-ಡವ ನೊಡೆಯುವನಮ್ಮಾ ಮಿತ್ರ! (ಜ)
-ಲವೃಷ್ಟಿ ಸೃಷ್ಟಿಪನಮ್ಮಾ ಮಿತ್ರ!
ಹೀನ ಶಕ್ತ್ಯಂತಕನಮ್ಮಾ ಮಿತ್ರ!
ರುಜುಮಾರ್ಗ ಪ್ರಿಯನಮ್ಮಾ ಮಿತ್ರ!
ರ ಯೋಗಾದರ್ಶನಮ್ಮಾ ಮಿತ್ರ!
ಯನಾನಂದಾಂಗನಮ್ಮಾ ಮಿತ್ರ! (ನ)
-ಮ್ಮಾ ತ್ರಿಪುರಾಂಬಾತ್ಮನಮ್ಮಾ ಮಿತ್ರ! (ಅ)
-ಮಿತ ತೇಜೋಬಲನಮ್ಮಾ ಮಿತ್ರ! (ಪು)
-ತ್ರ, ನಿರಂಜನಾದಿತ್ಯಮ್ಮಾ ಮಿತ್ರ!!!

ಕಡ್ಲೇಕಾಯಿ ಕಾಣಿಕೆ ತಂದಿಟ್ಟ! (ಕೂ)   4(2041)

-ಡ್ಲೇ ಹವಾಲೆಲ್ಲಾ ಒಪ್ಪಿಸಿಬಿಟ್ಟ!
ಕಾಟ ಕಮ್ಮ್ಯಾಯ್ತೆಂದಾನಂದ ಪಟ್ಟ! (ಬಾ)
-ಯಿಗನ್ನ ಸೇರುತ್ತೆಂದ್ಸಂತೋಷ್ಪಟ್ಟ!
ಕಾಯ್ಬೇಕು ನೀನೆನ್ನನೆಂದತ್ಬಿಟ್ಟ! (ಧ)
-ಣೆ ನೀನೆನಗೆಂದಡ್ಡಿ ಬಿದ್ಬಿಟ್ಟ!
ಕೆಲ್ಸಾನ್ಕೂಲಾಗ್ಬೇಕೆಂದ್ಮೊರೆಯಿಟ್ಟ!
ತಂಟೆ, ತಕ್ರಾರ್ತಪ್ಪಿಸೆಂದ್ಗೋಳಿಟ್ಟ!
ದಿವ್ಯ ಪ್ರಸಾದ ತಿಂದು ಹೋಗ್ಬಿಟ್ಟ! (ಸು)
-ಟ್ಟ ನಿರಂಜನಾದಿತ್ಯವ್ನ ಕಷ್ಟ!!!

ಕಡ್ಲೇಪುರಿ ಮಾರಿ ಸಾಹುಕಾರನ್ನಿಸ್ಲಿಕಲ್ಲ ಜನ್ಮ! (ಕೂ)   6(3812)

-ಡ್ಲೆ ಹೆಸರಿಗೆ ತಕ್ಕಂತಿರುವಂತಾಗಲೀಗ ಜನ್ಮ!
ಪುಣ್ಯ, ಪಾಪದ ಕರ್ಮದಿಂದ ವ್ಯರ್ಥವಾಗ್ದಿರ್ಲೀ ಜನ್ಮ!
ರಿಸಿ, ಮುನಿಯುಪದೇಶದ ಸತ್ಯ ಕಾಣ್ಬೇಕೀ ಜನ್ಮ!
ಮಾಡಿದ ಗುರುಸೇವೆಗೆ ಫಲ ಕೊಡಬೇಕೀ ಜನ್ಮ! (ಹ)
-ರಿ, ಹರ, ಬ್ರಹ್ಮಾದಿಗಳು ಬೆಳಗಿಸಬೇಕೀ ಜನ್ಮ!
ಸಾಧನೆ ವಿಫಲವಾಗುವುದಾದರೆ ಏಕೀ ಜನ್ಮ?
ಹುಸಿಯ ದಹಿಸಿ, ದಿಟವ ಮೆರಸಬೇಕೀ ಜನ್ಮ!
ಕಾಮ ರಾವಣನ ಕೊಂದು ರಾಮನಾಗಬೇಕೀ ಜನ್ಮ!
ಮಿಸಬೇಕು ಸೀತಾ ಮನ ಅವನಲ್ಲಿ ಈ ಜನ್ಮ! (ನ)
-ನ್ನಿಯ ಮಾತಿನಗಸನಲಕ್ಷಿಸಬಾರದೀ ಜನ್ಮ! (ಹೇ)
-ಸ್ಲಿ, ಕುಹಕು, ಕುಚೋದ್ಯಗಳ ಮಾತುಗಳನ್ನೀ ಜನ್ಮ! (ಅ)
-ಕರೆ ಸಕ್ಕರೆಗಿಂತಲೂ ಮೇಲೆಂದರಿಯಲೀ ಜನ್ಮ! (ನ)
-ಲ್ಲ, ನಲ್ಲೆಯರೈಕ್ಯ ಸ್ಥಿರವಾಗಿ ಉಳಿಸಲೀ ಜನ್ಮ!
ಯಭೇರಿ ಪರಮಾರ್ಥಕ್ಕೆ ಹೊಡೆಯಲೀ ಜನ್ಮ! (ತ)
-ನ್ಮಯವಾಗ್ಲಿ ನಿರಂಜನಾದಿತ್ಯಾನಂದದಲ್ಲೀ, ಜನ್ಮ!!! ||

ಕಣಜ ಬೇಗ ಖಾಲಿ ಮಾಡಯ್ಯಾ! (ಕ)   4(1411)

-ಣದ ಭತ್ತಕ್ಕೆ ಜಾಗ ಬೇಕಯ್ಯಾ!
ವರಾಯ ಕಾದಿರುವನಯ್ಯಾ!
ಬೇಡವನ ಸಹವಾಸವಯ್ಯಾ!
ದ್ದು ವಾಸನೆ ಹಳೇ ಕಾಳಯ್ಯಾ! (ಸು)
-ಖಾನಂದ ಬಂಗಾರುಸಣ್ಣವಯ್ಯಾ! (ಬ )
-ಲಿಸಬೇಕುತ್ತಮತಳಿಯಯ್ಯಾ!
ಮಾತಿನಿಂದ ಕಾಲ ಪೋಲಾಯ್ತಯ್ಯಾ! [ಮ]
-ಡದಿಯಿಷ್ಟಕ್ಕೀಗೆಡೆಯಿಲ್ಲಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯ ಬಂದಯ್ಯಾ!!!

ಕಣಿ ಕೇಳಿ ಕುಣಿಯಬೇಡ! (ಗು)   2(759)

-ಣಿಯಾಗದೆ ನೀನಿರಬೇಡ!
ಕೇಡನ್ಯರಿಗೆ ಮಾಡಬೇಡ! (ಗಾ)
-ಳಿ ಗೋಪುರವ ಕಟ್ಟಬೇಡ!
ಕುಚೋದ್ಯಕ್ಕೆಡೆ ಕೊಡಬೇಡ! (ದ)
-ಣಿಸುತನ್ಯರ ಬಾಳಬೇಡ!
ದುಪನಡಿ ಬಿಡಬೇಡ!
ಬೇಡಿ, ಕಾಡಿ, ದುಡುಕಬೇಡ! (ಬಿ)
-ಡ ನಿರಂಜನಂಜಿಕೆ ಬೇಡ!!!

ಕಣ್ಣ ಮುಂದಿದ್ರೂ ಕಾಲ ಬರದೆ ಕಾಣದು! (ಬ)   4(2003)

-ಣ್ಣ ಬಿಳ್ಯಾದ್ರೂ ಗುಣವಿಲ್ಲದೆ ಶೋಭಿಸದು!
ಮುಂಗೋಪದಿಂದ ಕೆಲಸ ಕೆಡದಿರದು!
ದಿವ್ಯಮಂತ್ರಜಪ ಶಾಂತಿ ನೀಡದಿರದು! (ತ)
-ದ್ರೂಪ ಸಿದ್ಧಿಗಿದು ನೆರವಾಗದಿರದು!
ಕಾಮ್ಯ ಕರ್ಮದಿಂದ ಮೋಕ್ಷಪ್ರಾಪ್ತಿಯಾಗದು! (ಕಾ)
-ಲ ಕಾಯದೆ ಗುರುಲೀಲೆಯರಿವಾಗದು!
ಟ್ಟೆ, ಬರೆಯಿಂದ ಕೆಟ್ಟ ಬುದ್ಧಿ ಸಾಯದು! (ಪ)
-ರಧನ ಪರಮಾನಂದಪ್ರದವಾಗದು! (ನಿಂ)
-ದೆಗಂಜಿದರೆ ಸಾಧನೆ ಸಾಗಲಾರದು!
ಕಾರ್ಮೋಡಾದಿತ್ಯನನ್ನೇನೂ ಮಾಡಲಾರದು! (ಹ)
-ಣದಾಸೆ ಗಣನಾಯಕಗಿರಬಾರದು!
ದುರಾಗ್ರಹ ನಿರಂಜನಾದಿತ್ಯಗಾಗದು!!!

ಕಣ್ಣಿಗಾಯ್ತು ಹೆಣ್ಣು, ಮಣ್ಣು, ಹುಣ್ಣು! (ಹು)   3(1297)

-ಣ್ಣಿಮೆಯನರಿಯದೀಗಾ ಕಣ್ಣು! (ಕೂ)
-ಗಾಡ, ರೇಗಾಟಕ್ಕಾಸ್ಪದಾ ಹುಣ್ಣು! (ಆ)
-ಯ್ತು ಕೋಧೋದ್ರಿಕ್ತಾ ಎರಡೂ ಕಣ್ಣು!
ಹೆದರಿಸುವುದಮ್ಮನಾ ಹುಣ್ಣು! (ಮ)
-ಣ್ಣು ಇನ್ನೂ ಬೇಕೆನ್ನುವುದಾ ಕಣ್ಣು!
ಕ್ಕಳೆಲ್ಲರಿಗೂ ಭಯಾ ಹುಣ್ಣು! (ಉ)
-ಣ್ಣುವುದಕ್ಕೂ ಅಭ್ಯಂತರಾ ಕಣ್ಣು!
ಹುಳು ಬಿದ್ದರೆ ಮಾಯದಾ ಹುಣ್ಣು! (ಹು)
-ಣ್ಣು ನಿರಂಜನಾದಿತ್ಯಗಿಲ್ಲೆಣ್ಣು!!!

ಕಣ್ಣಿಗೆ ಕಾಣಿಸಬೇಕಾ ಶ್ರೀ ಕೃಷ್ಣ! (ಬ)   6(3861)

-ಣ್ಣಿಸಿಕೊಂಡದ್ದಾಗ ಸಾರ್ಥಕಾ ಕೃಷ್ಣ!
ಗೆಳೆಯ ನಮಗೂ ಆಗಲಾ ಕೃಷ್ಣ!
ಕಾರಣ? ಭೇದ ರಹಿತಾ ಶ್ರೀ ಕೃಷ್ಣ! (ಉ)
-ಣಿಸಿಕೊಳ್ಳಲಿ ನಮ್ಮಿಂದಲೂ ಕೃಷ್ಣ!
ರ್ವ ಸಮನ್ವಯ ಉಳ್ಳವಾ ಕೃಷ್ಣ!
ಬೇಡ ದೀನರ ಮೇಲೆ ಹಠ ಕೃಷ್ಣಾ!
ಕಾದಿರುವುದೆಷ್ಟು ಸಮಯ ಕೃಷ್ಣಾ?
ಶ್ರೀ ಕೃಷ್ಣ, ಗೋವಿಂದ, ಮುಕುಂದ ಕೃಷ್ಣಾ!
ಕೃಪೆ ಮಾಡೆಮ್ಮಾ ಮೇಲಮ್ಮಯ್ಯ ಕೃಷ್ಣಾ! (ಪೂ)
-ಷ್ಣ, ನಿರಂಜನಾದಿತ್ಯಾನಂದ ಕೃಷ್ಣ!!!

ಕಣ್ಣಿಲ್ಲದವಗೆ ಹೆಣ್ಣೇನು ಮಣ್ಣೇನು? (ಬ)   6(3468)

-ಣ್ಣಿಪರ ಮಾತಿಂದ ಪ್ರಯೋಜನವೇನು?
(ಒ)-ಲ್ಲದಿರಬೇಕಾವುದನ್ನೂ ಅಂಥವನು!
ತ್ತನನ್ನೇ ಸ್ಮರಿಸುತ್ತಿರ್ಬೇಕವನು!
ರ ಸಾಯುಜ್ಯ ಪಡೆಯಬೇಕವನು!
ಗೆಲ್ಬೇಕದಕ್ಕಿಂದ್ರಿಯಂಗಳನ್ನವನು!
ಹೆದರಬೇಕಿಲ್ಲಾವುದಕ್ಕೂ ಅವನು! (ಕ)
-ಣ್ಣೇ ಕಾಣದ ಸೂರ್‍ದಾಸ ಬಾಳ್ಲಿಲ್ಲವೇನು?
(ಅ)-ನುಭವಿಯಾದ ಪರಮಾರ್ಥಿಯವನು!
ದ, ಮತ್ಸರವಿಲ್ಲದಿದ್ದನವನು!
(ಹ)-ಣ್ಣೇ ಬೇಕು, ಹಾಲೇ ಬೇಕು ಎಂದಿಲ್ಲವನು!
(ತ)-ನುಜ ನಿರಂಜನಾದಿತ್ಯಗಂಥವನು!!!

ಕಣ್ಣಿಲ್ಲದವನ ಬಣ್ಣನೆಗೇನು ಬೆಲೆ? (ಹ)   6(3834)

-ಣ್ಣಿನ ರುಚಿ ಸವಿದ ಮೇಲದಕ್ಕೆ ಬೆಲೆ! (ಬ)
-ಲ್ಲವರ ಮಾತನುಭವವಾದ್ಮೇಲೆ ಬೆಲೆ!
ರ್ಶನ ಕೊಡದ ದೇವರಿಗೇನು ಬೆಲೆ?
ನವಾಸೋಪವಾಸಕ್ಕೆ ಬರ್ಬೇಕು ಬೆಲೆ!
ರ, ನಾರಿಯರ್ಕಣ್ಮುಚ್ಚ್ಯೆಲ್ಲಕ್ಕೀವರ್ಬೆಲೆ!
ಡವರಿಗಾಗುತಿದೆ ಇದ್ರಿಂದ ಕೊಲೆ! (ಬ)
-ಣ್ಣ ಬಣ್ಣದ ಮಾತುಗಳಾಡಿ ಬೀಸ್ವರ್ಬಲೆ!
ನೆಲೆದಪ್ಪಿ ಉರುಳ್ವಳಿದರಿಂದಬಲೆ!
ಗೇಣಿದಾರರಿಗೀಗ ತಿರುಗಿದೆ ತಲೆ!
ನುಡಿಯಲೇನೀಗಿನಾಡಳಿತದ ಕಲೆ!!
ಬೆಟ್ಟ, ಗುಡ್ಡಗಳ ಮೇಲೆಲ್ಲೂ ಬಂಗಲೆ!!! (ಮೇ)
-ಲೆ ನಿರಂಜನಾದಿತ್ಯನ ವಿಚಿತ್ರ ಲೀಲೆ!!!

ಕಣ್ಣೀರೇಕೋ ಕೆಂಗಯ್ಯಾ! (ಹ)   2(643)

-ಣ್ಣೀ ಪ್ರಸಾದಾಗಿದಯ್ಯಾ! (ಆ)
-ರೇನೆಂದರೇನಾಯ್ತಯ್ಯಾ?
ಕೋಪ, ತಾಪ, ಬೇಡಯ್ಯಾ! (ಬೇ)
-ಕೆಂಬಾಸೆಯ ಬಿಡಯ್ಯಾ!
ತಿ ಸುಖವಿದಯ್ಯಾ! (ಅ)
-ಯ್ಯಾ! ನಿರಂಜನಮ್ಮಯ್ಯಾ!!!

ಕಣ್ಣೀರ್ಸುರ್ಸಿದ್ರೆಲ್ಲರದಕ್ಕಾಗಿ! [ತ]    4(2468)

-ಣ್ಣೀರ್ಸಹ ಕುಡಿಯ್ದೆ ಸತ್ತದ್ಕಾಗಿ! (ನೀ)
-ರ್ಸುರಿಸಿ ಹೊಸ್ತ್ಲಲ್ಲೇ ಸತ್ತದ್ಕಾಗಿ (ಇ)
-ರ್ಸಿ ಪಶ್ಚಿಮಕ್ತಲೆ ಸತ್ತದ್ಕಾಗಿ! (ನಿ)
-ದ್ರೆಯಿಂದೆಚ್ಚಂತಿದ್ದು ಸತ್ತದ್ಕಾಗಿ! (ಎ)
-ಲ್ಲರನ್ನೂ ತೊರೆದು ಸತ್ತದ್ಕಾಗಿ! (ವ)
-ರಗುರು ಸನ್ನಿಧಿ ಸಿಕ್ಕಿದ್ಕಾಗಿ!
ತ್ತ ಮಣ್ಣು ಮಾಡಿಸಿದ್ದಕ್ಕಾಗಿ! (ಮಿ)
-ಕ್ಕಾರ ಬಳಿಗೂ ಹೋಗದ್ದಕ್ಕಾಗಿ! (ತ್ಯಾ)
-ಗಿ, ನಿರಂಜನಾದಿತ್ಯನಿಗಾಗಿ!!!

ಕಣ್ಣು ಕಿತ್ತೆ, ಗುಣ ಗಾನಾನಂದವಿತ್ತೆ! (ಉ)   2(895)

-ಣ್ಣುವುದಕ್ಕೆ ಹಣ್ಣುಹಣವ ನೀನಿತ್ತೆ! (ಸಾ)
-ಕಿನ್ನು ಕಿವಿ, ಬಾಯಿಯಾನಂದವೆಂದಿತ್ತೆ! (ಮ)
-ತ್ತೆ ನಿರ್ಭಯನಾಗಿರೆಂದಭಯವಿತ್ತೆ!
ಗುಣಮಯಿ ತಾಯಿಯಾಗಿ ವರವಿತ್ತೆ! (ತಾ)
-ಣ ನಿನ್ನ ಪಾದವೆಂಬ ನಂಬಿಗೆಯಿತ್ತೆ!
ಗಾನವಾರಿ ಹರಿಸುವ ಶಕ್ತಿಯಿತ್ತೆ!
ನಾಳೆಗೇನೆಂಬ ಯೋಚನೆ ನೀನೇ ಹೊತ್ತೆ!
ನಂದಾದೀಪ ಭಕ್ತಿಯಾಗಲೆಂದೆ ಮತ್ತೆ!
ಯಾಂಬುಧಿ ನೀನೆಂಬನುಭವವಿತ್ತೆ!
ವಿಮಲ ಗುರು ನೀನೆಂಬ ಜ್ಞಾನವಿತ್ತೆ! (ಹೊ)
-ತ್ತೆ, ನಿರಂಜನಾದಿತ್ಯ ನಾನೆಂದು ಮತ್ತೆ!!!

ಕಣ್ಣು ನಿನ್ನಂತಿರಬೇಕು ಕೃಷ್ಣಪ್ಪಾ! (ಹೆ)   4(2179)

-ಣ್ಣು, ಹೊನ್ಮಣ್ಣಿಗದಲಿಪ್ತ ಕೃಷ್ಣಪ್ಪಾ!
ನಿತ್ಯಾನಂದ ನಾದಾನಂದ ಕೃಷ್ಣಪ್ಪಾ! (ನಿ)
-ನ್ನಂತರಂಗ ದೃಷ್ಟಿ ಶುದ್ಧ ಕೃಷ್ಣಪ್ಪಾ!
ತಿಳಿಗೇಡ್ಯರಿಯನಿದ ಕೃಷ್ಣಪ್ಪಾ! (ಹೊ)
-ರಗೊಳಗದು ವ್ಯಾಪಕ ಕೃಷ್ಣಪ್ಪಾ!
ಬೇಕ್ನಿನ್ನನುಗ್ರಹದಕ್ಕೆ ಕೃಷ್ಣಪ್ಪಾ! (ವ್ಯಾ)
-ಕುಲವೆಳ್ಳಷ್ಟಿಲ್ಲದಕ್ಕೆ ಕೃಷ್ಣಪ್ಪಾ!
ಕೃಪಾಮೃತದರಲ್ಲಿದೆ ಕೃಷ್ಣಪ್ಪಾ! (ಉ)
-ಷ್ಣ, ಶೀತವೆಂದನ್ನದದು ಕೃಷ್ಣಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯಾ ಕಣ್ಕೃಷ್ಣಪ್ಪಾ!!!

ಕಣ್ಣು ನಿನ್ನಿಷ್ಟ ಮೂರ್ತಿಯನೆಲ್ಲರೆಲ್ಲೆಲ್ಲೂ ನೋಡಲಿ!   1(87)

ಕಿವಿಯವನುಪದೇಶ ಗುಣ ಗಾನಗಳ ಕೇಳಿರಲಿ!
ಮೂಗವನ ಪಾದಧೂಳಿಯ ವಾಸನೆಯಾಘ್ರಾಣಿಸಲಿ!
ನಾಲಿಗೆಯವನ ಪಾದ ರ್ತಿರ್ಥದ ರುಚಿ ನೋಡತಿರಲಿ!
ದೇಹವನ ಪಾದಕ್ಕೆ ಸಾಷ್ಟಾಂಗ ಪ್ರಣಾಮ ಮಾಡುತಿರಲಿ!
ಬಾಯಿಯವನುಚ್ಚಿಷ್ಟ ಭುಂಜಿಸಿ, ನಾಮ ಭಜಿಸುತಿರಲಿ!
ಕರಗಳವನುಪಚಾರ, ಪಾದ ಸೇವೆಗಳ ಮಡಲಿ!
ಚರಣಗಳವನಾಶ್ರಮಕೆ ಪ್ರದಕ್ಷಿಣೆ ಮಾಡಿರಲಿ!
ಪಾಯು, ಗುಹ್ಯಗಳು ದೇಹದ ಮಲಿನ ಕಳೆಯುತಿರಲಿ!
ಮನವೆಲ್ಲರ ಸಹಾಯಕನಾಗಿ ನಿರಂಜನನಾಗಲಿ!!!

ಕಣ್ಣು ಮಂಜಾದರೆ ಬೇಕು ಸೂರ್ಮ! (ಹು)   3(1014)

-ಣ್ಣು ಮಾಯಲಿಕಿಕ್ಕ ಬೇಕು ಸೂರ್ಮ!
ಮಂಗನಂತಾದಾಗ ಬೇಕು ಸೂರ್ಮ!
ಜಾಗ್ರತನಾಗಲು ಬೇಕು ಸೂರ್ಮ! (ಮ)
-ದವಿಳಿಸಲಿಕ್ಕೆ ಬೇಕು ಸೂರ್ಮ! (ಬ)
-ರೆಯುವ ಚಿತ್ರಕ್ಕೆ ಬೇಕು ಸೂರ್ಮ!
ಬೇನೆ ಶಮನಕ್ಕೆ ಬೇಕು ಸೂರ್ಮ!
ಕುಲಾಂಗನೆಯಿಕ್ಕ ಬೇಕು ಸೂರ್ಮ! (ಪ್ರ)
-ಸೂತ ಸ್ತ್ರೀಯರಿಕ್ಕ ಬೇಕು ಸೂರ್ಮ! (ಧ)
-ರ್ಮ, ನಿರಂಜನಾದಿತ್ಯಗಾ ಸೂರ್ಮ!!!

ಕಣ್ಣೇ! ನಿನಗಾಸೆ ಈ ಹೆಣ್ಣೇ? (ಹ)   5(3161)

-ಣ್ಣೇನಲ್ಲ ಇದು ಬರೀ ಮಣ್ಣೇ!
ನಿನ್ನುದ್ಧಾರಕೆ ಬೇಕ್ಮುಕ್ಕಣ್ಣೇ!
ಶ್ವರಕ್ಕೇಕಿನ್ನೆಣ್ಣೆ, ಬೆಣ್ಣೇ!
ಗಾಯ ಮಾಳ್ಪುದಿದನ್ನು ಡೊಣ್ಣೇ!
ಜ್ಜೆ ಮನೆಯಲೆಲ್ಲಾ ಗೊಣ್ಣೇ!
ಗೆಚ್ಚೆತ್ಕೊಳದಿದ್ರೆ ಸೊನ್ನೇ!
ಹೆದರದೇ ಹತ್ತಿಬಾ ದಿಣ್ಣೇ! (ಕ)
-ಣ್ಣೇ ನಿರಂಜನಾದಿತ್ಯ ಹೆಣ್ಣೇ!!!

ಕತ್ತಲಾಗುತಿದೆ ನೋಡು! (ತ)   1(226)

-ತ್ತರಿಸಲಾಗದು ಓಡು! (ಆ)
-ಲಾಕ್ಕಾಗಿರಬೇಕು ನೋಡು!
ಗುಡಿ ತೆರೆದಿದೆ ಓಡು!
ತಿರುಗಾಡಬೇಡ ನೋಡು! (ಎ)
-ದೆಗೆಡದೊಡನೆ ಓಡು!
ನೋಟ ಗುರುಮೂರ್ತಿ ನೋಡು! (ಕೂ)
-ಡು ನಿರಂಜನನ ಓಡು!!!

ಕತ್ತೆಯಾದರೂ ಇರಬೇಕಿಲ್ಲಿ! [ಮ]   5(2945)

-ತ್ತೆಮತ್ತೀ ದಿವ್ಯ ಸನ್ನಿಧಿಯಲ್ಲಿ!
ಯಾರ ಕಾಟವೂ ಇಲ್ಲದಿರ್ವಲ್ಲಿ!
ರ್ಶನ ರಂಗನದ್ದಾಗುವಲ್ಲಿ!
ರೂಪ, ನಾಮ, ಏನಾದರೇನಿಲ್ಲ?
ಹಸುಖಕ್ಕಾಗಿರ್ಬಾರದಿಲ್ಲಿ! (ಪ)
-ರಮಾರ್ಥದಾತ್ಮಾರಾಮಾಗ್ಬೇಕಿಲ್ಲಿ!
ಬೇರೇನೂ ಬಯಸಬಾರದಿಲ್ಲಿ!
ಕಿವಿ, ಬಾಯ್ಕಣ್ಣು ಮುಚ್ಚಿರ್ಬೇಕಿಲ್ಲಿ! (ಇ)
-ಲ್ಲಿ ನಿರಂಜನಾದಿತ್ಯನಿರ್ಪಲ್ಲಿ!!!

ಕಥಾ ಕವಿತಾಲಾಪ ಸಾಕಪ್ಪಾ! (ಯ)   5(2812)

-ಥಾನುಶಕ್ತಿ ಸಾಧಿಸಿ ಬಾಳಪ್ಪಾ!
ಲ್ಲು ದೇವರ ಸೊಲ್ಲೀಗೇಕಪ್ಪಾ?
ವಿಚಾರದಿಂದ ಗುರಿ ಸೇರಪ್ಪಾ!
ತಾಮಸ ವೃತ್ತಿ ಸತ್ತುಹೋಗ್ಲಪ್ಪಾ!
ಲಾಭ, ನಷ್ಟ ದೇವರಿಷ್ಟವಪ್ಪಾ!
ರಮಾರ್ಥ ನಿತ್ಯ ಸುಖಕ್ಕಪ್ಪಾ!
ಸಾಯುಜ್ಯವಿಲ್ಲೀಗಾಗಬೇಕಪ್ಪಾ!
ರ್ಮವಿದಕ್ಕಾಗಿ ಮಾಡ್ಬೇಕಪ್ಪಾ! (ಇ)
-ಪ್ಪಾ ನಿರಂಜನಾದಿತ್ಯ ಹಾಗಪ್ಪಾ!!!

ಕಥಾ ನಿಪುಣನಿಗೆಲ್ಲಾ ಬೇಕು! (ವೃ)   5(2956)

-ಥಾಲಾಪವನ್ನವ ಬಿಡಬೇಕು!
ನಿತ್ಯಾನಿತ್ಯ ವಿಚಾರ ಮಾಡ್ಬೇಕು!
ಪುರಾಣಪುರುಷ ತಾನಾಗ್ಬೇಕು! (ಹ)
-ಣ, ಕಾಸಿಗಾಶಿಸದಿರಬೇಕು!
ನಿಕಟಾತ್ಮಸಂಬಂದವಿರ್ಬೇಕು!
ಗೆದ್ದಿಂದ್ರಿಯಗಳ ತಾನಿರ್ಬೇಕು! (ಉ)
-ಲ್ಲಾಸ ಸತ್ಕರ್ಮದಲ್ಲಿ ಇರ್ಬೇಕು!
ಬೇಡುವಭ್ಯಾಸ ಬಿಟ್ಟಿರಬೇಕು! (ಬೇ)
-ಕು ನಿರಂಜನಾದಿತ್ಯನೆನ್ಬೇಕು!!!

ಕಥೆ ಕೇಳಿ ಕಟ್ಟಿದ ಕವಿತೆ ಬೇಡ! (ವ್ಯ)   6(4250)

-ಥೆಗದ್ರಿಂದ ವೃಥಾ ಗುರಿ ಮಾಡಬೇಡ!
ಕೇಳಿದ್ದನ್ನನುಭವಿಸದೇ ಆಡ್ಬೇಡ! (ಹೇ)
-ಳಿದರಾಮೇಲೆ ದುಃಖಕ್ಕಾಸ್ಪದ ನೀಡ!
ರ್ಮಕ್ಕಪಚಾರವಾಗುವುದು ಬೇಡ! (ಹು)
-ಟ್ಟಿದ್ದು ಸಾರ್ಥಕವಾಗದಿದ್ದ್ರೆನೂ ಬೇಡ!
ರ್ಶನ ಕೊಡದ ದೇವ್ರ ಮಾತೇ ಬೇಡ!
ಳ್ಳಗುರುವೆನಿಸಿಕೊಂಡಿರಬೇಡ!
ವಿವೇಕ, ವೈರಾಗ್ಯಕ್ಕನಾದರ ಬೇಡ! (ಸಂ)
-ತೆ ವ್ಯಾಪಾರಕ್ಕೆ ಪರಮಾರ್ಥವಿಡ್ಬೇಡ!
ಬೇಕೆಂಬಾಸಕ್ತನಿಗೆ ಹೇಳದಿರ್ಬೇಡ! (ಧೃ)
-ಡ ವಿಶ್ವಾಸ ನಿರಂಜನಾದಿತ್ಯ ಬಿಡ!

ಕಥೆ ಕೇಳಿ ಕಾಲ ಕಳೆಯಬೇಡ! (ವ್ಯ)   3(1221)

-ಥೆ ಪಟ್ಟು ಪಥ ಬಿಟ್ಟೋಡಾಡಬೇಡ!
ಕೇಳಿ, ಹೇಳಿ, ಹಿಗ್ಗಿ ಹಾರಾಡಬೇಡಾ! (ಬಾ)
-ಳಿ ಲೀಲಾನಂದ ಕಾಣದಿರಬೇಡ!
ಕಾಟಾಚಾರದ ಕರ್ಮ ಮಾಡಬೇಡ!
ಕ್ಷ್ಯಸಿದ್ಧಿಯ ದಾರಿ ಬಿಡಬೇಡ!
ಪಿಯಂತೆ ಲಲ್ಲಿಲ್ಲಿ ನೋಡಬೇಡ! (ಹ)
-ಳೆಯ ಚಾಳಿಗಳಿಟ್ಟುಕೊಳ್ಳ ಬೇಡ! (ಭ)
-ಯದಿಂದನ್ಯ ದೈವವ ನಂಬಬೇಡ!
ಬೇಕು ದೃಢ ಭಕ್ತಿ,! ಮರೆಯಬೇಡ! (ಬಿ)
-ಡ, ನಿರಂಜನಾದಿತ್ಯ ಧ್ಯೇಯ ಬಿಡ!!!

ಕಥೆ ತಾಳ್ತಾಳೆನ್ನುತ್ತಿದೆ! (ವ್ಯ)   6(3672)

-ಥೆ ಹಾಳಾಯಿತೆನ್ನುತಿದೆ!
ತಾಳ್ತಾಳೀಗ ವೃದ್ಧನಾದೆ! (ಅ)
-ಳ್ತಾ, ಅಳ್ತಾ ದಿಕ್ಕಿಲ್ಲದಾದೆ! (ಕೊ)
-ಳೆಯಿನ್ನೇನು ಬಾಕಿ ಇದೆ? (ತಿ)
-ನ್ನುವುದು ಬಿಡ್ಬೇಕಾಗಿದೆ!
ತಿತಿಕ್ಷೆಯಿಂದೇನಾಗಿದೆ? (ಆ)
-ದೆ ನಿರಂಜನಾದಿತ್ಯಾದೆ!!!

ಕದ ತಟ್ಟಿದವನೊಬ್ಬ ಕೆಡುಕ!   4(2434)

ರ್ಶನಾಪೇಕ್ಷಿ ತಾನೆಂಬ ಬಾಯ್ಬಡ್ಕ!
ಪ್ಪಿತಸ್ಥ ನಾನಲ್ಲೆಂಬ ಘಾತಕ! (ದಿ)
-ಟ್ಟಿಯವನದು ನೀಚ ಪೈಶಾಚಿಕ! (ಮ)
-ದ, ಮತ್ಸರ ತುಂಬಿರುವ ಡಾಂಭಿಕ!
ರಭಕ್ತ ತಾನೆನ್ನುವ ಕುಹಕ! (ತಾ)
-ನೊಬ್ಬ ಸಾಧಕನೆಂಬ ಪ್ರಚಾರಕ! (ತ)
-ಬ್ಬಲಿಯ ಮೇಲ್ಕೈ ಮಾಡಿದ ಪಾತಕ!
ಕೆನೆವಾಲ ವಿಷವೆಂದ ನಿಂದಕ! (ಕೊ)
-ಡುಗೈಗೆ ಕತ್ತರಿಕ್ಕಿದ ವಂಚಕ! (ತು)
-ಕ, ನಿರಂಜನಾದಿತ್ಯಾನಂದಾತ್ಮಿಕ!!!

ಕದ ತೆರೆದಿದ್ದರೂ ಮದಕ್ಕೊಳ ಬರುವ ಮುಖವಿಲ್ಲ!   6(4184)

ಯಾನಿಧಿಯ ಹೃದಯದಾಳವನ್ನು ಕಂಡವರೇ ಇಲ್ಲ!
ತೆರೆ ಮರೆಯ ಕಾಯಿಯಂತೆ ಭಕ್ತ ತಾನಿರದಿರಲೊಲ್ಲ!
ರೆಕ್ಕೆ, ಪುಕ್ಕ ಕಾಮನದ್ದು ಅತ ಕಿತ್ತುಹಾಕದೇ ಬಿಟ್ಟಲ್ಲ!
ದಿವ್ಯ ನಾಮ ಸ್ಮರಣೆಯೇ ಅವನ ಬಾಳಿನ ಬಲವೆಲ್ಲಾ! (ಗೆ)
-ದ್ದ ಎತ್ತಿನ ಬಾಲ ಹಿಡಿಯುವಭ್ಯಾಸ ಅವನಿಗೇನಿಲ್ಲ! (ಗು)
-ರೂಪದೇಶ ಪಾಲನೆಯೇ ತ್ರಿಕಾಲದಲ್ಲೂ ಸಾಧನೆಯೆಲ್ಲ!
ದ, ಮತ್ಸರದ ಗಾಳಿ ಅವನೆಡೆ ಸುಳಿಯುವುದಿಲ್ಲ!
ರ್ಪ, ದಂಭದ ಪೊಳ್ಳು ದೊಡಸ್ತಿಕೆಯುಳ್ಳವನಾತನಲ್ಲ! (ಹ)
-ಕ್ಕೊಡೆಯನ ಪಾದಸೇವೆಗೆ ತನಗಿದೆಯಂದಾತ ಬಲ್ಲ! (ಥ)
-ಳಕು, ಕೊಳಕು, ಹುಳುಕು ಬುದ್ಧಿಯಿಂದಾತನಿರುವುದಿಲ್ಲ!
ಗೆಬಗೆಯಾಶಾರೋಗಪೀಡಿತ ಜೀವ ಅವನಲ್ಲ!
ರುಜುಮಾರ್ಗದಿಂದವನ ಸರ್ವಾಂಗವೂ ಶೋಭಿಸದೇನಿಲ್ಲ!
ಸ್ತ್ರಾಭರಣಾದಿಗಳಲಂಕಾರ ಅವನಿಗೆ ಬೇಕಿಲ್ಲ!
ಮುನಿದು ಯಾರಿಗೂ ಆತ ಕೆಡುಕನ್ನೆಂದೂ ಮಾಡುವುದಿಲ್ಲ!
ರ, ದೂಷಣರು ಕಾಮ ಕ್ರೋಧಗಳೆಂದಾ ಸಾಧಕ ಬಲ್ಲ!
ವಿಕಲ್ಪ, ಸಂಕಲ್ಪಾತೀತಾತ್ಮಾರಾಮ ಗುರಿಯೆಂದಾತ ಬಲ್ಲ! (ಬ)
-ಲ್ಲ ನಿರಂಜನಾದಿತ್ಯಾನಂದನನನ್ನಾತ ಮರೆತಿರಲೊಲ್ಲ!!!

ಕದ ದಬ್ಬಿ ನುಗ್ಗುವನು ಸಬಲ!   6(4194)

ಬ್ಬದೇ ತೆಗೆಸಿ ಹೋಗ್ವನಬಲ!
ಕ್ಕುವುದಿಬ್ಬರಿಗೂ ತಕ್ಕ ಫಲ! (ಉ)
-ಬ್ಬಿ, ಅಬ್ಬರದಿಂದಾಡುವ ಸಬಲ!
ನುಡಿಯದಿರ್ಪನೇನನ್ನೂ ದುರ್ಬಲ! (ಹಿ)
-ಗ್ಗು, ಕುಗ್ಗಿಲ್ಲದವನೇ ಮಹಾಬಲ!
ರ ಗುರು ಕರುಣೆಯಿಂದಾ ಬಲ! (ಅ)
-ನುಗಾಲವಿರ್ಬೇಕು ಭಕ್ತಿ ಅಚಲ!
ಚ್ಚಿಷ್ಯನವನ ಜನ್ಮ ಸಫಲ!
ರುವುದವಗೆ ಸಾಯುಜ್ಯ ಫಲ! (ಫ)
-ಲ ನಿರಂಜನಾದಿತ್ಯಾನಂದ ಬಲ!!!

ಕದ ಹಾಕಿ ಕಕ್ಕಸಿಗೆ ಹೋಗು!   4(2388)

ರ್ಶನಕ್ಕಾಮೇಲೆ ಸಿದ್ಧವಾಗು!
ಹಾದಿಯುದ್ದ ನೋಡಿ ಮುಂದೆ ಸಾಗು!
ಕಿರಿ, ಹಿರಿಯರಿಗೆಲ್ಲಾ ಬಾಗು!
ಷ್ಟಕ್ಕೆಲ್ಲರಿಗೂ ನೆರವಾಗು! (ತ)
-ಕ್ಕ ಪರಿಹಾರ ತೋರ್ಪವನಾಗು!
ಸಿಟ್ಟಾರಲ್ಲೂ ಮಾಡದವನಾಗು! (ಬ)
-ಗೆಬಗೆಯಾಸೆಗಳನ್ನು ನೀಗು! (ಅ)
-ಹೋರಾತ್ರಿ ಗತಿ ನೀನೆಂದು ಕೂಗು! (ಆ)
-ಗು ನಿರಂಜನಾದಿತ್ಯನಂತಾಗು!!!

ಕದಮುಚ್ಚಿದ್ರೆ ಮದ ನುಚ್ಚಾದೀತೇನಯ್ಯಾ! (ಅ)   6(3601)

-ದಕ್ಕಭ್ಯಾಸವೂ ಗುರುಕೃಪೆಯೂ ಬೇಕಯ್ಯಾ!
ಮುಖ ದರ್ಶನ ತತ್ಕಾಲಕ್ಕೆ ತಪ್ಪೀತಯ್ಯಾ! (ರೊ)
-ಚ್ಚಿಗೇಳುವ ಇಚ್ಛೆಯ ಸ್ವಚ್ಛ ಮಾಡ್ಬೇಕಯ್ಯಾ! (ನಿ)
-ದ್ರೆಯಿಂದೆದ್ದು ಜಾಗ್ರತ್ತಿಗೀಗ ಬರ್ಬೇಕಯ್ಯಾ!
ನಸ್ಸಿನ ಜಯ ಮಾರುತಿಗಿದೆಯಯ್ಯಾ!
ಶರಥಾತ್ಮಜನನುಗ್ರಹವದಯ್ಯಾ!
ನುಡಿ, ನಡೆಯೆಲ್ಲಾ ಶ್ರೀ ರಾಮಸೇವೆಗಯ್ಯಾ! (ಕ)
-ಚ್ಚಾಟಕ್ಕೆ ಶಾಂತಿ, ಸುಖ ಸಿಕ್ಕಲಾರದಯ್ಯಾ!
ದೀನನಾಗಿ ದಾನಿಗೆ ಶರಣಾಗ್ಬೇಕಯ್ಯಾ!
ತೇಜೋವಧೆ ಯಾರನ್ನೂ ಮಾಡಬಾರದಯ್ಯಾ!
ಮಿಸಬೇಕೆಲ್ಲರೊಳಗಿಹಾತ್ಮಗಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಗಿದಾನಂದವಯ್ಯಾ!!!

ಕದವನ್ನು ಸರಿಯಾಗಿ ಮುಚ್ಚು!   6(3925)

ಮೆ, ಶಮೆಯಿಂದದನ್ನು ಮುಚ್ಚು!
ರ ಗುರು ಸೇವೆಗಾಗಿ ಮುಚ್ಚು! (ಹೊ)
-ನ್ನು, ಹೆಣ್ಮಣ್ಣು ನುಗ್ಗದಂತೆ ಮುಚ್ಚು!
ದಾಶಿವನ ನೆನೆದು ಮುಚ್ಚು!
ರಿಪುಕುಲಾಂತಕಾತ್ನೆಂದು ಮುಚ್ಚು!
ಯಾಚನೆ ಮಾಡದೇನನ್ನೂ ಮುಚ್ಚು! (ಯೋ)
-ಗಿ ಅವನಂತಾಗ್ಬೇಕೆಂದು ಮುಚ್ಚು!
ಮುಕ್ತನಾಗಲು ಮನವ ಮುಚ್ಚು! (ಕಿ)
-ಚ್ಚು ನಿರಂಜನಾದಿತ್ಯಗೇನ್ಹೆಚ್ಚು???

ಕದವಿನ್ನೂ ತೆರೆದಿಲ್ಲವಯ್ಯಾ!   2(693)

ರ್ಶನ ಭಾಗ್ಯವೀಗಿಲ್ಲವಯ್ಯಾ!
ವಿಕಲ್ಪವಿರದಿರಬೇಕಯ್ಯಾ! (ನಿ)
-ನ್ನೂನಗಳ ನೀ ತಿದ್ದಿಕೊಳ್ಳಯ್ಯಾ!
ತೆರೆಯುವುದಾಗ ಬಾಗಿಲಯ್ಯಾ! (ಹ)
-ರೆಯದ ಮದಜ್ಞಾನದಿಂದಯ್ಯಾ!
ದಿನ, ರಾತ್ರ್ಯಾತ್ಮ ಧ್ಯಾನ ಮಾಡಯ್ಯಾ! (ಅ)
-ಲ್ಲಸಲ್ಲದಾಟವಾಡಬೇಡಯ್ಯಾ!
ರಗುರು ಕೃಪಾಮಯನಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾನಂದಯ್ಯಾ!!!

ಕದ್ದು ತಿನ್ನುವವನನ್ನೇಕೆ ಮುದ್ದು ಮಾಡ್ಬೇಕು? (ಇ)   6(4008)

-ದ್ದುದನ್ನೇ ತಿಂದು ಆತ ನೆಮ್ಮದಿಯಿಂದಿರ್ಬೇಕು!
ತಿನ್ನುವುದಕ್ಕಾಗೀ ಜನ್ಮವಲ್ಲೆಂದರಿಯ್ಬೇಕು! (ತ)
-ನ್ನುಳಿವಿಗಾಗಿ ಅನ್ಯರನ್ನಳಿಸದಿರ್ಬೇಕು! (ಭ)
-ವಸಾಗರದಿಂದ ಪಾರಾಗಿ ಊರು ಸೇರ್ಬೇಕು!
ರ ಗುರುವಿನ ಸಾಯುಜ್ಯಾನಂದ ಪಡ್ಬೇಕು!
ರ ಸುರೋರಗರಿಗೆ ಮಾದರಿಯಾಗ್ಬೇಕು! (ಇ)
-ನ್ನೇನನ್ನೂ, ಯಾರನ್ನೂ, ಎಂದೆಂದೂ ಕೇಳದಿರ್ಬೇಕು!
ಕೆಲಸವಿಷ್ಟಾದಮೇಲೆ ಹೊರಡುತ್ತಿರ್ಬೇಕು!
ಮುನ್ದಿನ ವ್ಯವಸ್ಥೆಯನ್ನಪ್ಪನಿಗೇ ಬಿಡ್ಬೇಕು! (ಸ)
-ದ್ದು ಮಾಡ್ದೇ ಅವನೊಡಗೂಡಿ ಇರುತ್ತಿರ್ಬೇಕು!
ಮಾರಿಯ ಬಲೆಯಿಂದಿಂತು ತಪ್ಪಿದಂತಾಗ್ಬೇಕು! (ಮಾ)
-ಡ್ಬೇಕು! ಹೀಗಾದ್ಮೇಲೇನೇ ಮುದ್ದು ಮಾಡ್ಸಿಕೊಳ್ಬೇಕು!
ಕುಲ ಶ್ರೀ ನಿರಂಜನಾದಿತ್ಯನದ್ದಿಂತಾಗ್ಬೇಕು!!!

ಕನಕ ಭಕ್ತ ಕನಕ!   2(629)

ರಕ ಮುಕ್ತ ಕನಕ!
ವಿರಾಜ ಶ್ರೀ ಕನಕ!
ಕ್ತಿ ಸಾರ ಶ್ರೀ ಕನಕ! (ಶ)
-ಕ್ತ ಕೇಶವನ ಕನಕ!
ನಕಾದ್ಯಂತ ಕನಕ!
ರ ಪುಂಗವ ಕನಕ! (ಏ)
-ಕ ನಿರಂಜನ ಕನಕ!!!

ಕನಕಮಯ ಮಹೇಶ ನಿಲಯಮ್ಮಾ! (ಧ)   2(662)

-ನ, ಕನಕ ವಸ್ಥು ವಾಹನಗಳಮ್ಮಾ!
ಡುದುಃಖಕಾರಕವಾಗಿಹುದಮ್ಮಾ!
ಚ್ಚರದೆ ಜಗವಿದರಿತಿರಮ್ಮಾ! (ಕಾ)
-ಯ ಕಷ್ಟಮಾಳ್ಪರಿಗಿಲ್ಲವೀಕಾಲಮ್ಮಾ!
ಲಿನ ಮಾನಸರ ಕಾಟ ಹೆಚ್ಚಮ್ಮಾ!
ಹೇಯವಾಗಿಹುದವರಾಚಾರವಮ್ಮಾ!
ರಣು ನೀನಾಗಿಹೆ ಶ್ರೀಪಾದಕಮ್ಮಾ!
ನಿನಗೊಂದೇ ವಜ್ರ ಕವಚವಮ್ಮಾ! (ನೀ)
-ಲಕಂಠ ಶಿವ ನಿನ್ನ ಕಾಯ್ವನಮ್ಮಾ! (ಭ)
-ಯ ಪಡದೆ ಸದಾ ಭಜನೆ ಮಾಡಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯ ನೀಲಕಂಠಮ್ಮಾ!!!

ಕನಕಾಂಬರಲರ್ಮಾಲಾನಂದ!   4(1606)

ಮಿಸುತ್ತರ್ಪಿಸಿದ್ದತ್ಯಾನಂದ! (ಶ್ರೀ)
-ಕಾಂತನಲಂಕಾರಮೃತಾನಂದ!
ಗೆ ಬಗೆ ಪುಷ್ಪಾರ್ಚನಾನಂದ! (ವ)
-ರ ಪಾದತೀರ್ಥ ನಿರ್ಮಲಾನಂದ! (ಬ)
-ಲ ವರ್ಧಕವದು ಬ್ರಹ್ಮಾನಂದ! (ಧ)
-ರ್ಮಾತ್ಮ ವಿಚಾರ ಶಂಕರಾನಂದ! (ಲೀ)
-ಲಾ ನಾಟಕಾನಂದ ಕೃಷ್ಣಾನಂದ!
ನಂದ ಕಂದಾನಂದೋದ್ಧವಾನಂದ!
ತ್ತ ನಿರಂಜನಾದಿತ್ಯಾನಂದ!!!

ಕನಸ ಕಂಡು ಬಂದೆ ನಮ್ಮಪ್ಪಾ! (ನೆ)   4(1536)

-ನಸಿದರೆ ರೋಮಾಂಚಪ್ಪುದಪ್ಪಾ!
ರ್ವರೊಳಗಿರ್ಪಾತ್ಮ ನೀನಪ್ಪಾ!
ಕಂಗಳಿಗದಗೋಚರವಪ್ಪಾ! (ಇ)
-ಡು ಕರುಣೆ ಸದಾ ನನ್ನಲ್ಲಪ್ಪಾ!
ಬಂಧನದಿಂದ ಪಾರು ಮಾಡಪ್ಪಾ! (ಎಂ)
-ದೆನಗಿನ್ನೀ ದರ್ಶನ ಸುಖಪ್ಪಾ? (ಧ)
-ನ, ಕನಕ ನನಗೆ ಬೇಡಪ್ಪಾ! (ನೆ)
-ಮ್ಮದಿಯಿಂದ ಪಾದ ಸೇರಿಸಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯ ನಮ್ಮಪ್ಪಾ!!!

ಕನಸಿನ ಕನವರಿಕೆಯಂತೀ ಸಂಸಾರ!   6(4092)

ಶ್ವರವೆಂದರಿಯದೇ ಇದೆ ಅಲಂಕಾರ!
ಸಿರಿ, ಸಂಪತ್ತಿಗಾಗಿ ಧರ್ಮಬಾಯಿರಾಚಾರ!
ಶಿಸುತಿದೆ ಇದರಿಂದ ಪ್ರಪಂಚಾಚಾರ!
ಳೆಯಬೇಕೀ ದುಃಸ್ಥಿತಿ ರಾಮ, ರಘುವೀರ!
ರರವನ ಕೃಪೆಯಿಂದಾಗಬೇಕುದ್ಧಾರ! (ಪಾ)
-ವನನಾದ ಶ್ರೀರಾಮ ಭಕ್ತಾಂಜನೇಯ ವೀರ! (ವೈ)
-ರಿ ದಶಕಂಠನನ್ನು ಮಾಡಿದನು ಸಂಹಾರ! (ಲಂ)
-ಕೆಯನ್ನು ವಿಭೀಷಣಗಿತ್ತನು ಆ ಉದಾರ! (ತ್ರ)
-ಯಂಬಕನಂತೆ ಸ್ಮರಿಸಬೇಕವನನ್ನು ನರ!
ತೀರಿಹೋಗುವುದರಿಂದ ಪಾಪ ಅಪಾರ!
ಸಂದೇಹವಿದರಲ್ಲಿಲ್ಲವೆಂದನು ಶಂಕರ!
ಸಾಯುಜ್ಯ ಸುಖಕ್ಕೆ ಇದೇ ರಾಮ ಮಂತ್ರಾಧಾರ! (ಹ)
-ರ, ನಿರಂಜನಾದಿತ್ಯ, ಶ್ರೀ ರಾಮಚಂದ್ರಾಕಾರ!!!

ಕನಸಿನ ಗಂಟು ನೆನಸದ ನೆಂಟು!   4(1935)

ಮಿಸಿದರುಂಟು ಭಾವ, ಭಕ್ತಿ ಗಂಟು! (ಹು)
-ಸಿ ಮಾಯೆಯಂಟು ಆಶಾ ಜೀವನಿಗುಂಟು!
ಯ, ವಿನಯಕ್ಕುಂಟು ನಿರ್ಭಯ ಗಂಟು!
ಗಂಗಾದೇವಿಗುಂಟು ಗಂಗಾಧರನಂಟು! (ಚೋ)
-ಟು ಬಟ್ಟೆಯಂಟು ಬೂಟಾಟಿಕೆಯ ಗಂಟು! (ಮ)
-ನೆ, ಮಠದಂಟು ಮಾಯಾಮೋಹಿತಗುಂಟು! (ಆ)
-ನತಗುಂಟು ಪತಿತ ಪಾವನ ನಂಟು!
ತ್ಯ ಸಂಧಗುಂಟು ನಿತ್ಯ ಸುಖದಂಟು!
ಯಾಶೂನ್ಯಗುಂಟು ಭವಭಯದಂಟು!
ನೆಂಟ, ಭಂಟನಂಟು ಶ್ರೀಕಂಠನಿಗುಂಟು! (ಗಂ)
-ಟು ನಿರಂಜನಾದಿತ್ಯಾತ್ಮಾನಂದದಂಟು!!!

ಕನಸಿನ ಭೋಗದಿಂದೇನುಪಯೋಗ?   4(1792)

ರಜನ್ಮದಿಂದಾಗಬೇಕುಪಯೋಗ! (ಪು)
-ಸಿಯಾಸೆಗಳಿಂದ ಆಗದುಪಯೋಗ (ಅ)
-ನವರತಾತ್ಮಧ್ಯಾನದಿಂದುಪಯೋಗ!
ಭೋಗ ತ್ಯಾಗಾತ್ಮ ಚಿಂತನೆಗುಪಯೋಗ! (ಯೋ)
-ಗದಭ್ಯಾಸದಿಂದಾಗುವುದುಪಯೋಗ! (ಅಂ)
-ದಿಂದು, ಮುಂದೆನ್ನದಾದರದುಪಯೋಗ!
ದೇಹ ದೇವಾಲಯವಾದಾಗುಪಯೋಗ! (ಅ)
-ನುದಿನ ಗುರುಸೇವೆಯಿಂದುಪಯೋಗ!
ರಬ್ರಹ್ಮನವನೆಂದಾಗುಪಯೋಗ! (ವ)
-ಯೋಮಿತಿ ಅವಗಿಲ್ಲೆಂದಾಗುಪಯೋಗ! (ತ್ಯಾ)
-ಗರಾಜ ನಿರಂಜನಾದಿತ್ಯೋಪಯೋಗ!!!

ಕನಸಿನಲ್ಲೂ ಅವಧೂತ ನಾನು!   5(3042)

ಡೆ, ನುಡಿಗೆಲ್ಲಾ ಆದರ್ಶ ನೀನು!
ಸಿದ್ಧಿ, ರಿದ್ಧಿಗಳಾಶಿಸಿಲ್ಲ ನಾನು!
ನ್ನ ನಿನ್ನಂತೆ ಮಾಡಬೇಕು ನೀನು!
(ಅ)ಲ್ಲೂ, ಇಲ್ಲೂ ನೆನೆವೆನು ನಿನ್ನ ನಾನು!
ನಾದರ ತೋರಬಾರದು ನೀನು!
ರ ಗುರುವಿನ ಗುಲಾಮ ನಾನು!
ಧೂಮದೋಪಾದಿ ವ್ಯಾಪಕನು ನೀನು!
ನುಜನಲ್ಲವೇ ನಿನಗೆ ನಾನು?
ನಾಮ, ರೂಪಾತೀತ ನಾನೆಂಬೆ ನೀನು! (ನೀ)
-ನು ನಿರಂಜನಾದಿತ್ಯನಲ್ಲವೇನು???

ಕನ್ನಡದ ಕವನವಿದಮ್ಮಾ! (ಉ)   2(704)

-ನ್ನತದಾತ್ಮ ಸಾಹಿತ್ಯವಿದಮ್ಮಾ! (ಕ)
-ಡಲಿದು ನಿಜಾನುಭವಕಮ್ಮಾ! (ಆ)
-ದರದಿಂದನುಷ್ಠಾನ ಮಾಡಮ್ಮಾ!
ಲಿಮಲ ಅಳಿಯುವುದಮ್ಮಾ! (ದೇ)
-ವ ಭಾವ ಅಳವಡುವುದಮ್ಮಾ!
ರರುದ್ಧಾರವಿದರಿಂದಮ್ಮಾ!
ವಿಶ್ವೇಶ್ವರನ ಕೃಪೆಯಿದಮ್ಮಾ!
ಯೆ ವ್ಯರ್ಥವಾಗಬಾರದಮ್ಮಾ! [ಅ]
-ಮ್ಮಾ! ರಾಮ ನಿರಂಜನಾದಿತ್ಯಮ್ಮಾ!!!

ಕನ್ನಡದರ್ಪಣೆ ವಿಮಲ ವಿಜಯ ಜಯಕ್ಕೆ! (ಎ)   1(130)

-ನ್ನನರಿಯಲಿಕಿದು ಆಧುನಿಕ ಕನ್ನಡಕೆ! (ಎ)
-ಡರು, ತೊಡರುಂಟಾಗದಂತಿಹುದೀ ಸುಮುಖಕೆ!
ರ್ಶನವಿದರಿಂದಾಗುವುದಾನಂದ ಮನಕೆ! (ಅ)
-ರ್ಪಣಾನಂದನುಭವಿಸಲಿಕೆ ಬೇಕೆಚ್ಚರಿಕೆ! (ಎ)
-ಣೆಯಿಲ್ಲದಿದಿನಧಿಕಾರಿಗೀಯಬೇಡ! ಜೋಕೆ!
ವಿಚಿತ್ರವಾಗಿಹುದಿದರ ರಚನೆ ಜಗಕೆ!
ಲಿನವಿದರಿಂದುಂಟಾಗದೆಂದಿಗೂ ರೂಪಕ್ಕೆ!
ಕ್ಷಣವಾಗಿರುವಿದು ಭೂಷಣ ಕನ್ನಡಕ್ಕೆ!
ವಿಷಯ ವಿಷವಿಲ್ಲದಿದಾರೋಗ್ಯ ಜೀವನಕೆ!
ನಿಸುವಾಗಲೇ ಹೋಯ್ತು ಮನದ ಬೇಸರಿಕೆ!
ದುನಾಥನಾರ್ಶದಿದು ವಿಜಯ ಪತಾಕೆ!
ನ್ಮಜನ್ಮಾಂತರದ ವಾಸನೆ ಸಾಕಾಯ್ತಿದಕೆ!
ಮಳಾರ್ಜುನ ಭಂಜನನೇ ಬೇಕಾಯ್ತು ಅದಕೆ! (ಅ)
-ಕ್ಕೆ! ನಿರಂಜನಾದಿತ್ಯ ಮುಖ ಶೋಭೆ ಕನ್ನಡಕೆ!!!

ಕನ್ನಡದಲ್ಲೇ ನೆನೆಯಬೇಕು! [ಕ]   5(3083)

-ನ್ನಡದಲ್ಲೇ ಮಾತನಾಡಬೇಕು! (ಮಾ)
-ಡತಕ್ಕದ್ದಕ್ಕೂ ಕನ್ನಡಾಗ್ಬೇಕು! (ಇ)
-ದಕ್ಕಚ್ಚ ಕನ್ನಡಿಗನೆನ್ಬೇಕು! (ಅ)
-ಲ್ಲೇನಿಲ್ಲೇನೆನಲ್ಕಿನ್ನೊಂದು ಬೇಕು!
ರೆಯವನ ಮಾತೇಕಾಡ್ಬೇಕು?
ನೆದಾಡಿ, ಮಾಡಿ ತೋರಿಸ್ಬೇಕು!
ಶಸ್ವೀರೀತಿಯಿಂದುಂಟಾಗ್ಬೇಕು!
ಬೇರಾರನ್ನೂ ದ್ವೇಷಿಸದಿರ್ಬೇಕು! (ಕಾ)
-ಕುಸ್ಥ ನಿರಂಜನಾದಿತ್ಯನ್ಬೇಕು!!!

ಕಪಟ ನಾಟಕ ಎಲ್ಲಿ ತನಕ?    6(3968)

ರದೆ ಹರಿಯದಿರ್ಪ ತನಕ! (ನ)
-ಟರಲ್ಲುತ್ಸಾಹವಿರುವ ತನಕ!
ನಾಟಕ ಪ್ರೇಮಿಗಳಿರ್ಪ ತನಕ! (ದಿ)
-ಟದಭಿರುಚಿ ಹುಟ್ಟುವ ತನಕ!
ಲೆ ಕಲೆಗಾಗಿರುವ ತನಕ!
ಡರಿಗೆದೆಗುಂದದ ತನಕ! (ಮ)
-ಲ್ಲಿಕಾರ್ಜುನಗಿಷ್ಟವಿರ್ಪ ತನಕ!
ತ್ವಸ್ಥಿತ ತಾನಾಗುವ ತನಕ!
ಶ್ವರದಾಸೆ ಹೋಗುವ ತನಕ! (ಲೋ)
-ಕ ನಿರಂಜನಾದಿತ್ಯಾಗ್ವ ತನಕ!!!

ಕಪ್ಪ, ಕಾಣಿಕೆಯನೊಪ್ಪಿಕೊಂಡಾ ರಾಮ! (ಅ)   2(746)

-ಪ್ಪಣೆಯಂತಿರುವವರಿಗೆಲ್ಲಾ ರಾಮ!
ಕಾಯುವನೆಲ್ಲರನಾ ಪಟ್ಟಾಭಿ ರಾಮ! (ರಾ)
-ಣಿ ಸೀತಾಮಾತಾ ಸಮೇತನಾ ಶ್ರೀರಾಮ!
ಕೆಲಸ ಕಾರ್ಯಕಾರಣ ಕರ್ತಾ ರಾಮ!
ಮನಾಗಿ ರಾವಣನ ಕೊಂದಾ ರಾಮ! (ತ)
-ನೊಳಗೈಕ್ಯ ಗೈದ ಮಾರುತಿಯಾ ರಾಮ! (ತ)
-ಪ್ಪಿಲ್ಲದ ವಿಭೀಷಣನ ಕಾಯ್ದಾ ರಾಮ!
ಕೊಂಡಾಡಿದರೆಲ್ಲ ‘ಹರೇ ರಾಮ ರಾಮ ’! (ಕೂ)
-ಡಾಡಿ ಪಾಡಿದರು ‘ಜಯ ಸೀತಾರಾಮ ’!
ರಾಮ ಪಟ್ಟಾಭಿಷೇಕ ಬಹಳಾರಾಮ! (ರಾ)
-ಮ, ನಿರಂಜನಾದಿತ್ಯಾತ್ಮ ರಾಜಾರಾಮ!!!

ಕಮಲ ನೀರನಲ್ಲಿ, ಮಿತ್ರಾಕಾಶದಲ್ಲಿ!   5(3126)

ನಸ್ಸೊಂದಾದರಾಪ್ತತೆಗಳಿವೆಲ್ಲಿ?
ವ, ಕುಶರು ಹುಟ್ಟಿದ್ದು ಕಾಡಿನಲ್ಲಿ!
ನೀಲಮೇಘಶ್ಯಾಮ ರಾಮರಾಜ್ಯದಲ್ಲಿ!
ವಿಕುಲ ರಕ್ತ ಅವರ್ಮೂವರಲ್ಲಿ! (ಅ)
-ಲ್ಲಿ, ಇಲ್ಲಿ ಎಂಬುದೆಲ್ಲಾ ಅಜ್ಞಾನದಲ್ಲಿ!
ಮಿಥ್ಯ ಮರೆತಲ್ಲಿ ಸತ್ಯ ತಾನೆಲ್ಲೆಲ್ಲಿ!
ತ್ರಾಹಿಮಾಂ, ಪಾಹಿಮಾಂ ಎಂದು ಭಜಿಪಲ್ಲಿ!
ಕಾಲ ಜಾಲವೇನೂ ಮಾಡಲಾರದಲ್ಲಿ!
ಕ್ತಿ, ಶಿವರರ್ಧನಾರೀಶ್ವರನಲ್ಲಿ!
ತ್ತಾತ್ರೇಯನಾಗಿ ತ್ರಿಮೂರ್ತಿಗಳಲ್ಲಿ! (ಅ)
-ಲ್ಲಿಲ್ಲಿ ನಿರಂಜನಾದಿತ್ಯನಾಗ್ಯೆಲ್ಲೆಲ್ಲಿ!!!

ಕಮಲನಾಭ ವಿಮಲ ಶೋಭಾ ಬಾ!   2(734)

ಹಾಬಲೇಶ್ವರ ಬಹು ಬೇಗ ಬಾ!
ಯಗೊಳಿಸಲರಿಗಳೋಡಿ ಬಾ!
ನಾನು, ನೀನೆಂಬುದನಟ್ಟಲೋಡಿ ಬಾ!
ವ ಭಯ ಬಂಧನ ಬಿಡಿಸು ಬಾ!
ವಿರಕ್ತಿ ಭಕ್ತಿಯಿತ್ತು ಸಲಹು ಬಾ!
ನಕೆ ನಿತ್ಯ ಶಾಂತಿಕೊಡಲು ಬಾ!
ಕ್ಷ್ಯ ಸಿದ್ಧಿಯನಿತ್ತುದ್ಧರಿಸು ಬಾ!
ಶೋಕ ನಾಶಾಪಾಶ ಹರಿಯ ಬಾ!
ಭಾಗ್ಯ ಭೋಗ್ಯ, ನಿನ್ನ ಪಾದ ತೋರು ಬಾ!
ಬಾ! ನಿರಂಜನಾದಿತ್ಯ ಬೇಗೋಡಿ ಬಾ!!!

ಕಮಲವಾಗಿ ಧ್ಯಾನಿಸಮ್ಮಾ (ವಿ)   2(712)

-ಮಲಮಿತ್ರ ಆದಿತ್ಯನಮ್ಮಾ!
ವಲವಿಕೆ ಇರಲಮ್ಮಾ!
ವಾಯುದೇವ ಸಹಾಯಮ್ಮಾ!
ಗಿರಿಯಂತೆ ನಿಲ್ಲಬೇಕಮ್ಮಾ!
ಧ್ಯಾನ ನಿಷ್ಠಾಮ ಸುಖವಮ್ಮಾ!
ನಿತ್ಯದಭ್ಯಾಸ ಅಗತ್ಯಮ್ಮಾ!
ರ್ವಸಿದ್ಧಿ ಪ್ರದವಿದಮ್ಮಾ! [ಅ]
ಮ್ಮಾ! ಜೈ ನಿರಂಜನಾದಿತ್ಯಮ್ಮಾ!!!

ಕಮಲಾ, ಕೋಮಲಾ, ವಿಮಲಾ! (ಶ್ಯಾ)   4(1622)

-ಮಲಾ, ಸದಮಲಾ, ವಿಮಲಾ! (ಬ)
-ಲಾ ಬಲಾತ್ಮಬಲಾ ವಿಮಲಾ!
ಕೋಲಾ, ಕೋಲಾಹಲಾ ವಿಮಲಾ!
ರಾಲಾ, ಮಾರ್ಮಲಾ ವಿಮಲಾ! (ಲೀ)
-ಲಾಜಾಲಾ, ಸುಶೀಲಾ ವಿಮಲಾ!
ವಿಪುಲಾ, ವಿಶಾಲಾ, ವಿಮಲಾ!
ಹಾಬಲಾ, ಬಾಲಾ, ವಿಮಲಾ! (ಜ್ವಾ)
-ಲಾ, ನಿರಂಜನಾದಿತ್ಯಮಲಾ!!!

ಕರಾಳ ಮೃತ್ಯು ನೀನಾದೆ ಕಾಮಾ! (ಕ)   4(2246)

-ರಾದಿಂದ್ರಿಯ ಕಳಕೊಂಡೆ ಕಾಮಾ! (ಖೂ)
-ಳತನವಿನ್ನಾದ್ರೂ ಬಿಡೋ ಕಾಮಾ! (ಅ)
-ಮೃತತ್ವಕ್ಕಡ್ಡಿ ಮಾಡ್ದಿರೋ ಕಾಮಾ! (ಅ)
-ತ್ಯುಪಕಾರಿಯಾಗೋ ಭ್ರಾತೃ ಕಾಮಾ!
ನೀಚನುತ್ತಮನಹನು ಕಾಮಾ!
ನಾರಾಯಣಾತ್ಮಜ ನೀನು ಕಾಮಾ! (ತಂ)
-ದೆಗಪಕೀರ್ತಿ ತರ್ಬೇಡ ಕಾಮಾ!
ಕಾಲ್ಗೆ ಬಿದ್ದು ಕ್ಷಮೆ ಬೇಡೋ ಕಾಮಾ! (ಕಾ)
-ಮಾ! ನಿರಂಜನಾದಿತ್ಯಾತ್ಮಾ ರಾಮಾ!!!

ಕರಿವರದನೆಲ್ಲಿಹನಯ್ಯಾ? (ಪ)   4(1597)

-ರಿಪರಿಯ ರೂಪಿನೊಳಗಯ್ಯಾ! (ಆ)
-ವರ ಗುರು ಅಂತರ್ಯಾಮಿಯಯ್ಯಾ!
ಕ್ತ, ಮಾಂಸದ ಗೊಂಬೆಯಲ್ಲಯ್ಯಾ!
ನುಜದಮನವನಯ್ಯಾ!
ನೆರೆ ನಂಬಿದವರಾಪ್ತನಯ್ಯಾ! (ಆ)
-ಲ್ಲಿಲ್ಲೆಂಬ ಭೇದವನಿಗಿಲ್ಲಯ್ಯಾ!
ನ್ನೆರಡನೇ ತತ್ವವನಯ್ಯಾ! (ಧ್ಯಾ)
-ನದಿಂದದು ಸಿದ್ಧಿಸಬೇಕಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯವನಯ್ಯಾ!!!

ಕರೀಗೊಂಬೆಯ ಹೆಸರಲ್ಲಾಳುತಿದೆ ಬಿಳೀಗೊಂಬೆ!   6(4307)

ರೀತಿ, ನೀತಿ ಕಲ್ಪಿಸಿರುವುದದಕೆ ಬಿಳೀಗೊಂಬೆ!
ಗೊಂಬೆಗಳೆರಡನ್ನೂ ಕುಣಿಸುವವಳ್ಶಾರದಾಂಬೆ!
ಬೆಟ್ತಗಳ ಮೇಲೆ ಮಂದಿರಗಳಾಲ್ಲಾ ಕರೀಗೊಂಬೆ!
ಜುಮಾನನೆನಿಸಿಹುದದಕೆ ಬಿಳೀಗೊಂಬೆ!
ಹೆತ್ತು, ಹೊತ್ತವಳಾರೆಂಬುದರಿಯದೀ ಬೀಳೀಗೊಂಬೆ! (ಪ)
ರ್ವಶಕ್ತಿಸಂಪನ್ನ ತಾನೆಂದಿಹುದೀ ಬೀಳೀಗೊಂಬೆ! (ಕ)
-ರವಿತ್ತಾಪಹಾರ ಮಾಡಲಿಚ್ಛಿಪುದೀ ಬೀಳೀಗೊಂಬೆ! (ಆ)
-ಲ್ಲಾದ ಕರೀಗೊಂಬೆಯೇ ದೇವರೆಂಬುದೀ
-ಳು, ಕಾಳು, ಹೊಲ, ಮನೆಗಧಿಪತಿ ಈ ಕರೀಗೊಂಬೆ!
ತಿಳಿಯದಜ್ಞಾನಿಗಳ್ಪಡುವ ಕಷ್ಟವನ್ನೇನೆಂಬೆ? (ತಂ)
-ದೆ ಸದ್ಗುರು ಪರಮಾತ್ಮನ ಕರುಣೆಯಾಗಲೆಂಬೆ!
ಬಿದಿ ಲಿಖಿತವೆಂಬುದನ್ನಂತ್ಯಗೊಳಿಸಲೀಗೆಂಬೆ! (ಹೋ)
-ಳೀ ಹಬ್ಬ ನರನ ನಿತ್ಯ ಜೀವನದಲ್ಲಾಗಲೆಂಬೆ!
ಗೊಂಬೆ ತನ್ನದೇ ಜಗದಂಬೆ, ಶಾರದಾಂಬೆಯಾಗ್ಲೆಂಬೆ!
ಬೆಲೆ ಆಗ ನಿರಂಜನಾದಿತ್ಯಾನಂದ ಸ್ವಾಮಿಗೆಂಬೆ!!!

ಕರುಣಿಸು ವಿಜಯಾ ಮೃತ್ಯುಂಜಯಾ! (ಗು)   4(1565)

-ರುಗುಹನಾಪ್ತ ಪಿತಾ ಮೃತ್ಯುಂಜಯಾ! (ಫ)
-ಣಿಹಾರ ಭೂಷಣಾಂಗಾ ಮ್ಯುತ್ಯುಂಜಯಾ!
ಸುರುಚಿರ ಭಾಸ್ಕರಾ ಮೃತ್ಯುಂಜಯಾ!
ವಿಷಕಂಠ ಶ್ರೀಕಂಠಾ ಮೃತ್ಯುಂಜಯಾ!
ರಾಜನ್ಮ ರಹಿತಾ ಮೃತ್ಯುಂಜಯಾ!
ಯಾಗ, ಯೋಗಾನುಭೋಗಾ ಮೃತ್ಯುಂಜಯಾ!
ಮೃಡಾಣಿಯನುಗುಣಾ ಮೃತ್ಯುಂಜಯಾ! (ಅ)
-ತ್ಯುಂಬವರಿಗೊದಗಾ ಮೃತ್ಯುಂಜಯಾ!
ಪಾಜಪ ಪ್ರದೀಪಾ ಮೃತ್ಯುಂಜಯಾ! (ಪ್ರಿ)
-ಯಾ ನಿರಂಜನಾದಿತ್ಯ ಮೃತ್ಯುಂಜಯಾ!

ಕರುಣೆ ತೋರಿದನಿಂದು ಮಿತ್ರ!   4(2348)

ರುಕ್ಮಿಣಿ ರಮಣಾ ಲೋಕ ಮಿತ್ರ! (ಎ)
-ಣೆಯಿಲ್ಲದ ಗುಣಾಢ್ಯನಾ ಮಿತ್ರಾ! (ಸಂ)
-ತೋಷಪ್ರದನೆಲ್ಲರಿಗಾ ಮಿತ್ರ! (ಸು)
-ರಿಸುವನು ಸುವೃಷ್ಟಿಯಾ ಮಿತ್ರ!
ವಸ, ಧಾನ್ಯಕ್ಕಾಧಾರಾ ಮಿತ್ರ!
ನಿಂತಲ್ಲಿಂದ ಕದಲನಾ ಮಿತ್ರ!
ದುರ್ಬುದ್ಧಿ ವಿನಾಶಕನಾ ಮಿತ್ರ! (ಅ)
-ಮಿತಾತ್ಮಾನಂದ ಸುಂದರಾ ಮಿತ್ರ! (ಮಿ)
-ತ್ರ ನಿರಂಜನಾದಿತ್ಯಾ ಮಿತ್ರ!!!

ಕರುಬರನ್ಯರೇಳಿಗೆಗೆ ಸಜ್ಜನರು! (ಗು)   5(3049)

-ರುಭಕ್ತಿ ಸಂಪನ್ನರಾಗಿರುವರವರು!
ಡವರಾದರೂ ನಿತ್ಯ ತೃಪ್ತರವರು! (ಮ)
-ರಣಕ್ಕಂಜುವುದಿಲ್ಲಾ ಸಾಧು ಸಜ್ಜನರು! (ಅ)
-ನ್ಯರೊಡವೆಗಾಶಿಸದಿರುವರವರು! (ಆ)
-ರೇನೆಂದರೂ ಆನಂದದಿಂದಿರ್ಪರವರು! (ಕಾ)
-ಳಿ, ಬೋಳಿ ನ್ಯಾಯಕ್ಕೆ ಪ್ರವೇಶಿಸರವರು!
ಗೆಳೆತನ ಉತ್ತಮರದ್ದೇ ಮಾಡುವರು! (ಕಾ)
-ಗೆ, ಗೂಗೆಗಳಂತೆ ಕಿತ್ತು ತಿನ್ನರವರು!
ತ್ಯವಂತರಾಗಿ ಬಾಳು ಮುಗಿಸುವರು! (ಮ)
-ಜ್ಜನಾದ್ಯನುಷ್ಠಾನ ತಪ್ಪದೇ ಮಾಡುವರು!
ಶ್ವರವೀ ಸಂಸಾರವೆಂದರಿತಿಹರು! (ಗು)
-ರು ನಿರಂಜನಾದಿತ್ಯನಿಗಾಪ್ತರವರು!!!

ಕರೆ ನೀಡುವ, ವರ ಬೇಡುವ! (ಬೆ)   5(2937)

-ರೆಯಲಾರೆ ಲೋಕದಲ್ಲೆನ್ನುವ!
ನೀನೇ ನಾನೀಗಾಗಬೇಕೆನ್ನುವ! (ದು)
-ಡುಕುವವ ನಾನೇನಲ್ಲೆನ್ನುವ!
ರ ಗುರುದತ್ತ ನೀನೆನ್ನುವ!
ನಮಾಲೆ ಕತ್ತಿಗೆ ಹಾಕುವ! (ತೋ)
-ರ ಬೇಡ ಅನಾದರವೆನ್ನುವ!
ಬೇರಾರೂ ದಿಕ್ಕೆನಗಿಲ್ಲೆನ್ನುವ! (ಮಾ)
-ಡು ನನ್ನನ್ನು ನಿನ್ನಂತೀಗೆನ್ನುವ! (ಜೀ)
-ವ ನಿರಂಜನಾದಿತ್ಯನಾಗುವ!!!

ಕರೆದರೂ ಕೇಳಿಸದದೇಕೆ? (ಬೇ)   4(1702)

-ರೆಲ್ಲಗೋ ಮನಸ್ಸು ಹೋದುದಕೆ!
ರ್ಶನಾಸಕ್ತಿ ಕುಂದಿದುದಕೆ! (ಬೇ)
-ರೂರ ವ್ಯಾಪಾರ ಹೆಚ್ಚಾದುದಕೆ!
ಕೇಶವ ಧ್ಯಾನ ನಿಂತದುದಕೆ! (ಗಾ)
-ಳಿ ಗೋಪುರಕ್ಕಾಸೆಯಾದುದಕೆ!
ಜ್ಜನ ಸಂಗ ಸಾಕಾದುದಕೆ!
ಕ್ಷತೆ ಕಾರ್ಯಕ್ಕಿಲ್ಲಾದುದಕೆ!
ದೇಹ ಮೋಹಧಿಕವಾದುದಕೆ! (ಏ)
-ಕೆ? ನಿರಂಜನಾದಿತ್ಯಗನ್ಬೇಕೆ???

ಕರೆದರೆ ಬಾರ, ಬಂದರೆ ಹೋಗ! (ತೆ)   4(1981)

-ರೆದಿಡು ಕದ ವಿಶ್ವಾಸದಿಂದೀಗ!
ರ್ಶನಾಸಕ್ತಿ ಬಲವಾಗಲೀಗ! (ಬೇ)
-ರೆ ಯೋಚನೆ ಮಾಡಬೇಡ ನೀನೀಗ!
ಬಾಯಿ ಮುಚ್ಚಿ ಧ್ಯಾನಿಸವನನ್ನೀಗ! (ವ)
-ರ ಗುರುಲೀಲೆಯರಿವಾಗ್ವುದಾಗ!
ಬಂಧು, ಬಾಂಧವನವನಾಗ್ವನಾಗ!
ಶಮುಖನ ವಧೆಯಾಗ್ವುದಾಗ! (ಧ)
-ರೆಗರಸ ನೀನೆಂಬರೆಲ್ಲರಾಗ! (ಅ)
-ಹೋರಾತ್ರ್ಯಾತ್ಮಾನಂದ ರಾಮ ನೀನಾಗ! (ಯೋ)
-ಗರಾಜ ನಿರಂಜನಾದಿತ್ಯನಾಗ!!!

ಕರೆದಾಗ ಬರದಿದ್ದಿಯಲ್ಲಾ!   5(2757)

ರೆಕ್ಕೆ ಹರಿದೀಗ ಬಂದೆಯಲ್ಲಾ!
ದಾಸೀ ಧರ್ಮ ಮರೆತ್ಬಿಟ್ಟಿಯಲ್ಲಾ!
ತಿ, ಮತಿ ಕೆಡಿಸ್ಕೊಂಡಿಯಲ್ಲಾ!
ದುಕು, ಬಾಳು ಕಳ್ಕೊಂಡಿಯಲ್ಲಾ!
ಸ್ತೆ ಬಿಟ್ಟೋಡಾಡಿಬಿಟ್ಟೆಯಲ್ಲಾ!
ದಿವ್ಯ ಜೀವನ ತಪ್ಪಿಹೋಯ್ತಲ್ಲಾ! (ಕ)
-ದ್ದಿತರರನ್ನವನ್ನುಂಡೆಯಲ್ಲಾ! (ಕಾ)
-ಯಕ ಸಾರ್ಥಕವಾಗಿಲ್ಲವಲ್ಲಾ! (ನ)
-ಲ್ಲಾ ನಿರಂಜನಾದಿತ್ಯ ಪ್ರಪುಲ್ಲಾ!!!

ಕರೆದ್ರೂ ಬಾರದ್ದೊರೆದ್ರೆ ಬಂದೀತೇ? (ಧ)   6(3944)

-ರೆಯರಸಸಡ್ಡೆ ಮಾಡಿದ್ರಾದೀತೆ? (ಬಂ)
-ದ್ರೂ, ಬಾರ್ದಿದ್ರೂ ಕರೆಯದಿದ್ರಾದೀತೇ?
ಬಾಣ ಬಿಡದಿದ್ರೆ ಮೃಗ ಸತ್ತೀತೇ!
ಹಸ್ಯವಿದ್ರದ್ದೊಂದು ದೊಡ್ಡ ಕತೆ! (ಇ)
-ದ್ದೊಡನಾಡಲಿಕ್ಕೆ ಬೇಕು ಮಮತೆ! (ಹ)
-ರೆಯದ ಮದದಲ್ಲಿದು ಕೊರತೆ! (ನಿ)
-ದ್ರೆ, ಆಹಾರ, ಮೈಥುನಕ್ಕಾತುರತೆ!
ಬಂದ್ರೂ ಕೊನೆಗಾಲ ಇದಿಷ್ಟೇ ಚಿಂತೆ!
ದೀಪವಾರಿದ ಮೇಲೆ ಗತಿ ಚಿತೆ! (ಮಾ)
-ತೇಕೆ ನಿರಂಜನಾದಿತ್ಯನೇ ಮಾತೆ!!!

ಕರೆದ್ರೆ ಬಾರ, ಬಂದ್ರೆ ತೋರ! (ತಿ)   6(3555)

-ರೆಯೆಲ್ಲಾ ಅವನ ಆಕಾರ! (ನಿ)
-ದ್ರೆ, ಸ್ವಪ್ನ, ಜಾಗ್ರತ್ತಲ್ಲೆಚ್ಚರ!
ಬಾನನ್ನೂ ತೂರುವಷ್ಟೆತ್ತರ! (ಸು)
-ರ, ನರಾದಿ ಲೋಕ ವಿಸ್ತಾರ!
ಬಂದ, ಹೋದೆಂಬುದುಪಚಾರ! (ಮು)
-ದ್ರೆ ಕಾಣಿಸದಂತೇ ಭಂಗಾರ! (ಹ)
ಒನೆ ಲಿನೆ ಮಿ

ಸಿ
-ರ ನಿರಂಜನಾದಿತ್ಯಾಂಗಾರ!!!

ಕರೆಯದಿರೋ ಕಾಮನಾ! (ಮ)   4(2261)

-ರೆಸಿ ಕತ್ತುಕೊಯ್ಯುವನಾ! (ಧ್ಯೇ)
-ಯಸಿದ್ಧಿಗಡ್ಡಿಗೈವನಾ!
ದಿವ್ಯ ಜ್ಞಾನವಿಲ್ಲದನಾ!
ರೋಗಿ, ಭೋಗಿಯಾದವನಾ!
ಕಾಲವಶನಾಗಿಹನಾ!
ದ, ಮತ್ಸರಾನ್ವಿತನಾ! (ವಿ)
-ನಾ ನಿರಂಜನಾದಿತ್ಯನಾ!!!

ಕರೆಯುವವರಾರೋ! ಕಳುಹುವವರಾರೋ! (ಒ)   1(174)

-ರೆಯುವವರಾರೋ! ಅರಿಯುವವರದಾರೋ!
ಯುಕ್ತಾಯುಕ್ತ ಕಾಲ ಕರ್ಮವರಿತವರಾರೋ!
ಣ ಜಂಭದಹಂಕಾರ ಬಿಟ್ಟು ಹತ್ರ ಬಾರೋ!
ರಿಸುವವರಾರೋ! ಮೆರೆಸುವವರಾರೋ!
ರಾಧಾರಮಣ ಗೋವಿಂದ ಮುಂದೆ ನೀನು ಬಾರೋ!
ರೋಚ್ಚಿಗೆದ್ದವರ ಕೆಚ್ಚಡಾಗಿಸೆನ್ನ ಸೇರೋ!
ರುಣೆದೋರಿ ಬಳಿಯಸೇರಿ ಕೀರ್ತಿ ತಾರೋ! (ಉ)
-ಳುಹಲಿಕೀ ನಿಜ ಧರ್ಮ ನೀನು ಬೇಗ ಬಾರೋ!
ಹುಸಿ ದಿಟವಲ್ಲವೆಂದರಿವ ದಾರಿ ತೋರೋ!
ನವಾಸಿ ರಾಮನೇಕಾದೆಂದರಿವರಾರೋ?
ನಜ ಸಖಾದಿತ್ಯವಂಶಜನೆದುರಾರೋ?
ರಾವಣನವಸಾನಕಿದು ನೆಪವೆಂದಿರೋ!
ರೋಷ ನಿರಂಜನಾದಿತ್ಯನದಕಿದಿರಾರೋ???

ಕರೆವ ಕಾರ್ಯವೇನು? ಬರವ ಭಾಗ್ಯವೇನು?   1(267)

ರೆಸಿಗೆಯಾಡುತಿಹ ಹುಣ್ಣೂಗಳಿವೆಯೇನು?
ಧು, ವರರ ಹರಿಸಲಿಕೆ ಬರಲೇನು?
ಕಾಲಿನ ಮೂಳೆಗೆ ಹುಳು ಹತ್ತಿರುವುದೇನು? (ಉ)
-ರ್ಯತ್ಯಧಿಕವಾದ ವಿಷ ಸೋಂಕಿರುವುದೇನು?
ವೇಷ, ಭೂಷಣಗಳಿಂದಲಂಕರಿಪಿರೇನು?
ನುತಿಸಿ ಕಾವ್ಯ, ಕವನ ಅರ್ಪಿಸುವಿರೇನು?
ರವ, ಹೋಗುವ ಕೆಲಸಗಳಿಲ್ಲವಿನ್ನು! (ಉ)
-ರುಳಿಸುವ ಮಾಯಾ ಮೋಹಿನಿಯಾಟ ಬೇಡಿನ್ನು!
ಧು, ವರರಿಗಾಶೀರ್ವಾದವಿದ್ದಲ್ಲಿಂದಿನ್ನು!
ಭಾರೀ ರೋಗಕ್ಕೆಲ್ಲಾ ಆದಿತ್ಯನೇ ಗತಿ ಇನ್ನು! (ಉ)
-ಗ್ಯಲೆತ್ನಿಸಿದುದನ್ನು ನುಂಗಲಾಗದಾನಿನ್ನು!
ವೇದ ವೇದ್ಯನ ಸ್ಮರಣೆಯೇ ಭೂಷಣವಿನ್ನು!
ನುತಿ, ಕೃತಿ, ನಿರಂಜನಾದಿತ್ಯನದು ಇನ್ನು!

ಕರ್ತವ್ಯ ನಿನ್ನದು ನೀನು ಮಾಡು! (ಆ)   5(3033)

-ರ್ತನಾಗಿ ಸತತ ಮೊರೆಯಿಡು! (ಅ)
-ವ್ಯವಸ್ಥೆಯನ್ನು ಹೊರಗೆ ದೂಡು!
ನಿತ್ಯ ಗುರುನಾಮ ಜಪ ಮಾಡು! (ಉ)
-ನ್ನತಿಯಿದರಿಂದೆಂಬುದ ನೋಡು!
ದುಸ್ಸಂಗದಿಂದಾಗುವುದು ಕೇಡು!
ನೀನುಣ್ಣುವನ್ನನ್ಯರಿಗೂ ಕೊಡು!
ನುರಿತಮೇಲುಪದೇಶ ಮಾಡು!
ಮಾಯೆಗೊಳಗಾಗದಿದ್ದು ಬಿಡು! (ಕೂ)
-ಡು ನಿರಂಜನಾದಿತ್ಯನ ಕಂಡು!!!

ಕರ್ತವ್ಯ ಭ್ರಷ್ಟ ದೂರುವನನ್ಯರನು! (ಆ)   6(3730)

-ರ್ತ ರಕ್ಷಕನೆ ಮರೆತಿರುವನು!
ವ್ಯಭಿಚಾರ ಭಕ್ತಿಯುಳ್ಳವನವನು!
ಭ್ರಮಾ ಭರಿತನಾಗಿರುವನವನು! (ಶಿ)
-ಷ್ಟರ ಸಂಗ ತ್ಯಜಿಸಿರುವನವನು!
ದೂತ ಮನ್ಮಥನಿಗಾಗಿರ್ಪನವನು! (ಗು)
-ರುಸೇವಾ ಮಹಿಮೆಯರಿಯನವನು!
ಸ್ತ್ರಾದಿ ಅಲಂಕಾರಾಸಕ್ತನವನು!
ಯನಾದಿಂದ್ರಿಯ ವಿಷಯಿಯವನು! (ಧ)
-ನ್ಯನಾಗುವನು ತನ್ನ ತಿಳಿದ್ರವನು! (ಪ)
-ರಮಾರ್ಥ ಕರ್ತವ್ಯವೆಂದರಿಯ್ಲವನು! (ತಾ)
-ನು ನಿರಂಜನಾದಿತ್ಯನೇ ಆಗುವನು!!!

ಕರ್ತವ್ಯವಿದೇನೇ ಭಾಷ್ಪಲೋಚನೇ! (ವ)   4(2203)

-ರ್ತಮಾನ ಪ್ರವರ್ತಕಳಾಗ್ಬೇಡ್ವೇನೇ?
ವ್ಯಸನ ವಿಷಯಾಸೆಯಿಂದಲ್ವೇನೇ?
ವಿಚಾರ ಮಾಡಿ ಬಿಡಲ್ಪಯೋಚನೇ! (ಸಂ)
-ದೇಹಬಿಟ್ಟು ಮಾಡು ಗುರುಭಜನೇ!
ನೇಮ ನಿಷ್ಠೆ ಬೇಕು ಮೃಗನಯನೇ!
ಭಾರತಿಗಿದಾದರ್ಶ ಮಂದಯಾನೇ! (ದು)
-ಷ್ಟರಿಣಾಮಕಾರೀ ಲೋಕವಾಸನೇ!
ಲೋಭ, ಮೋಹಕ್ಕಾಗದು ಪ್ರಚೋದನೆ!
ರಾಚರಾತ್ಮ ನೀನೆಂದ್ಮಾಡ್ಸಾಧನೇ! (ನೀ)
-ನೇ ನಿರಂಜನಾದಿತ್ಯಾಗ್ಯಾಗ್ಪಾವನೇ!!!

ಕರ್ನಾಟಕ ನಾಮಕರಣ ಗುರುವಾರದಂದು! (ನಿ)   5(2756)

-ರ್ನಾಮವಾಗಬೇಕು ಭ್ರಷ್ಟಾಚಾರವಿಲ್ಲಿನ್ನು ಮುಂದು! (ಕಾ)
-ಟ ಕಾಳಸಂತೆಗಳದ್ದಿರಬಾರದಿಲ್ಲೆಂದೆಂದು!
ಳ್ಳಕಾಕರ ಹಾವಳಿರಬಾರದಿಲ್ಲೆಂದೆಂದು!
ನಾಸ್ತಿಕರಾಸ್ತಿಕರಾಗಿ ಬಾಳಬೇಕಿಲ್ಲೆಂದೆಂದು!
ದ, ಮತ್ಸರದಿಂದಿರದಿರಬೇಕಿನ್ನು ಮುಂದು!
ರ್ತವ್ಯನಿಷ್ಠೆಯಿರಬೇಕೆಲ್ಲರಲ್ಲಿನ್ನು ಮುಂದು! (ಕ)
-ರಣತ್ರಯ ಶುದ್ಧಿಯಿಂದ ಬದುಕಬೇಕೆಂದೆಂದು! (ಬ)
-ಣಗಳ ನಿರ್ಮಿಸಿ ಹೊಡೆದಾಡಬಾರದೆಂದೆಂದು!
ಗುರು ಹಿರಿಯರಲ್ಲಿ ಭಕ್ತಿಯಿರಬೇಕೆಂದೆಂದು! (ಆ)
-ರು ವೈರಿಗಳ ಜೈಸಿ ರಾಜ್ಯವಾಳಬೇಕೆಂದೆಂದು!
ವಾದ, ವಿವಾದಕ್ಕೆಡೆಗೊಡದಿರಬೇಕೆಂದೆಂದು!
ಗಳೆ ಹೂಡಬಾರದು ವಿದ್ಯಾರ್ಥಿಗಳೆಂದೆಂದು!
ದಂಭ, ದರ್ಪ ತೋರಬಾರದಧ್ಯಾಪಕರೆಂದೆಂದು!
ದುಡಿಯಬೇಕು ನಿರಂಜನಾದಿತ್ಯನಂತೆಂದೆಂದು!!!

ಕರ್ಮನಿಷ್ಟನಿಂದ ಕಷ್ಟ ಪರಿಹಾರವಯ್ಯಾ! (ಮ)   1(421)

-ರ್ಮವಿವನರಿತಿಹನು ಸದ್ಧರ್ಮದಿಂದಯ್ಯಾ!
ನಿಶ್ಚಲ ಭಕ್ತಿಯಿಂದಿವನು ಪರಿಶುದ್ಧನಯ್ಯಾ! (ಆ)
-ಷ್ಟ ಮದಗಳಿವನಲೇನೇನೂ ಇಲ್ಲವಯ್ಯಾ!
ನಿಂದಾ, ಸ್ತುತಿಗಳಿಂದಿವ ಮತಿಗೆಡನಯ್ಯಾ! (ಆ)
-ದರಿಸುವನೆಲ್ಲರನು ವಿಶ್ವಾಸದಿಂದಯ್ಯಾ!
ನಿಕರವಿವನಲಿಹುದಪಾರವಯ್ಯಾ! (ಅ)
-ಷ್ಟ ಐಶ್ವರ್ಯಗಳಿಗಿವನು ಆಶಿಸನಯ್ಯಾ!
ರಮಾರ್ಥವಿವಗೆ ಪರಮಪ್ರಿಯವಯ್ಯಾ! (ಅ)
-ರಿ ಷಡ್ವರ್ಗದಿಂದ ಇವನು ವಿಮುಕ್ತನಯ್ಯಾ!
ಹಾರ, ತುರಾಯಿಗಳಿವನಿಗೆ ಬೇಡವಯ್ಯಾ! (ಆ)
-ರ ವ್ಯವಹಾರಗಳಿಗೂ ತಲೆ ಹಾಕನಯ್ಯಾ!
ರ ಮಾದರಿಯ ಜೀವನವಿವನದಯ್ಯಾ! (ಅ)
-ಯ್ಯಾ! ಕಾಲ, ಕರ್ಮಜ್ಞ ನಿರಂಜನಾದಿತ್ಯನಯ್ಯಾ!!!

ಕರ್ಮಫಲ ಕಾದಿದೆ ನಿನಗೆ! (ಧ)   5(2653)

-ರ್ಮದರಿವಾಗಲೀಗ ನಿನಗೆ!
ಲಪ್ರದಡಿ ಸೇವೆ ನಿನಗೆ!
ಕ್ಷ್ಯಾತ್ಮನಲ್ಲಿರಲಿ ನಿನಗೆ!
ಕಾಮ ದೂರಾಗಿರಲಿ ನಿನಗೆ!
ದಿವ್ಯಜ್ಞಾನೋದಯಾಗ್ಲಿ ನಿನಗೆ! (ತಂ)
-ದೆ, ತಾಯಿ ಗುರುವಾಗ್ಲಿ ನಿನಗೆ! (ಅ)
-ನಿತ್ಯದರ್ಥವಾಗ್ಲೀಗ ನಿನಗೆ! (ಅ)
-ನನ್ಯ ಭಕ್ತಿ ಸಿದ್ಧಿಸ್ಲಿ ನಿನಗೆ!
ಗೆಳೆಯ ನಿರಂಜನಾದಿತ್ಯಾಗೆ!!!

ಕಲಸನ್ನ ಪ್ರೇಮಿಗೆ ಕ್ಷೀರಾನ್ನ ರುಚಿಸದಯ್ಯಾ! (ಅ)   2(490)

-ಲಸಗಾರಗೆ ಕೆಲಸ ಹಿಡಿಸುವುದೇನಯ್ಯಾ!
ತತ ಸಂಸಾರ ಸುಖಕಾಗಿ ಒದ್ದಾಟವಯ್ಯಾ! (ಅ)
ನ್ನ, ಬಟ್ಟೆ, ಆಟ, ನೋಟ ಜೀವನವಾಗಿಹುದಯ್ಯಾ!
ಪ್ರೇಮವೆಲ್ಲಾ ವಿಷಯ ಸುಖಕೆ ಆಗಿಹುದಯ್ಯಾ!
ಮಿಗಿಲೆನಿಪ ಆತ್ಮಸುಖ ಮರೆತಿಹರಯ್ಯಾ!
ಗೆಜ್ಜೆ ಕಟ್ಟ ನಾಟ್ಯವಾಡುವುದೊಂದಭ್ಯಾಸವಯ್ಯಾ!
ಕ್ಷೀರಾಬ್ಧಿವಾಸನೊಲಿಮೆಗಾದರದಿರಲಯ್ಯಾ!
ರಾತ್ರಿ, ಹಗಲು ಹರಿನಾಮ ಹಾಡಿ ಕುಣಿಯಯ್ಯಾ! (ಅ)
-ನ್ನಲಾಗದಿದನು ವ್ಯರ್ಥ ಕಾಲಕ್ಷೇಪವೆಂದಯ್ಯಾ!
-ರುಚಿಯರಿತರೆ ಸಾಯುಜ್ಯ ಸಿದ್ಧಿಸುವುದಯ್ಯಾ!
ಚಿಗುರು ಗರಿಕೆ ಸವಿ ಚಿಗರೆ ಬಲ್ಲುದಯ್ಯಾ!
ಟೆಗಾರನಿಗೆ ದಿಟ ರುಚಿಸಲಾರದಯ್ಯಾ!
ರ್ಶನ ಮಹಾಪ್ರಸಾದವೆಂದಾರು ಬಲ್ಲರಯ್ಯಾ? (ಅ)
-ಯ್ಯಾ! ನಿರಂಜನಾದಿತ್ಯೆಲ್ಲವ ಬಲ್ಲನಯ್ಯಾ!!!

ಕಲಾ ಪ್ರೇಮಿ ಕಾಂಚನ ಪ್ರೇಮಿಯಲ್ಲ!   4(1801)

ಲಾಭಾತುರ ಕಲಾಪ್ರೇಮಿಯೇನಲ್ಲ!
ಪ್ರೇಮ ಲೋಭಕ್ಕೆಡೆಗೊಡುವುದಿಲ್ಲ! (ನಿ)
-ಮಿಷನಿಮಿಷ ಮೌಲ್ಯವನಿಗೆಲ್ಲ! (ಏ)
-ಕಾಂತದಾಭ್ಯಾಸಾತ ಬಿಡುವುದಿಲ್ಲ!
ಕ್ಕಂದವಾಡುತ್ತಾತಿರುವುದಿಲ್ಲ!
ಟನೆಯಾಟವನಿಗೆ ಬೇಕಿಲ್ಲ!
ಪ್ರೇಕ್ಷಕರಿಗಾಗಿ ಅವನೇನಿಲ್ಲ!
ಮಿತಾಹಾರ ಆತ ಬಿಡುವುದಿಲ್ಲ! (ಭ)
-ಯ ಕಲೋಪಾಸಕನಿಗೇನೇನಿಲ್ಲ! (ನ)
-ಲ್ಲ, ನಿರಂಜನಾದಿತ್ಯಾಂಕಿತವೆಲ್ಲ!!!

ಕಲಾಯಿ ಮತುಗಳೆಷ್ಟು ದಿನ?   5(2911)

ಲಾಭವಲ್ಲದು ಬಹಳ ದಿನ! (ಬಾ)
-ಯಿಶುದ್ಧವಿದ್ದರದೇ ಪಾವನ!
ಮಾಡನುದಿನ ವೇದಾಧ್ಯಯನ! (ತೂ)
-ತು ಪಾತ್ರಾನ್ಯ ಹೊಗೆ ವಾಸನಾನ್ನ!
ಮನವಿಟ್ಟು ನೀಡು ಪಾಯ್ಸಾನ್ನ! (ಕ)
-ಳೆಗುಂದಿದ ಮಾತೇ ಮಲಿನಾನ್ನ! (ಎ)
-ಷ್ಟಬೇಕೋ ಆಷ್ಟೇ ಇಕ್ವಿಮಲಾನ್ನ!
ದಿವ್ಯಾಮೃತವಪ್ಪುದಾಗಾ ಅನ್ನ!(ದಿ)
-ನ ನಿರಂಜನಾದಿತ್ಯನ ಮನ!!!

ಕಲಿಯಬೇಕಾದದ್ದಾರೂ ಕಲಿತಿಲ್ಲ! (ಕ)   6(3954)

-ಲಿಸುವವರದನ್ನಂತೂ ಯಾರೂ ಇಲ್ಲ! (ಕಾ)
-ಯ ನಿರ್ಮಾಣದಾದಿಯೆಂತೆಂದು ಗೊತ್ತಿಲ್ಲ!
ಬೇಕಿದ್ರರಿವೆಂದ್ರರುಹುವವರಿಲ್ಲ!
ಕಾಲ ಹೀಗೇ ಕಳೆಯುತ್ತಾ ಬಂದಿತಲ್ಲಾ! (ಉ)
-ದಯಾಸ್ತದಂಥೇರ್ಪಾಡಾರು ಮಾಡಬಲ್ಲ? (ಒ)
-ದ್ದಾಡುತ್ತಿಹರಿದಕ್ಕೆ ವಿಜ್ಞಾನಿಗಳೆಲ್ಲಾ! (ಗು)
-ರೂಪದೇಶವೆಂಬುದು ಹೊಟ್ಟೆಗಾಗ್ಯೆಲ್ಲಾ!
ಲಿಸ್ಬೇಕು ಜಗದ್ಗುರು ಇದನ್ನೆಲ್ಲಾ! (ಕೂ)
-ಲಿ ದುಡಿಮೆಗಿಲ್ಲಾದ್ರಿದ್ದು ಫಲವಿಲ್ಲ!
ತಿಳುವಳಿಕೆಯಿಲ್ಲದೇ ಕೆಟ್ಟೆವೆಲ್ಲಾ! (ಬ)
-ಲ್ಲ ನಿರಂಜನಾದಿತ್ಯ ಕಲಿಸ್ಲೀಗೆಲ್ಲಾ!!!

ಕಲಿಸಲಾರಿಗೇನು ನಾನು? (ಕ)   6(3863)

-ಲಿಯಲಾರಿಂದೇನನ್ನು ನಾನು?
ರ್ವಾಂತರ್ಯಾಮಿ ಸ್ವಾಮಿ ನಾನು!
ಲಾಭ, ನಷ್ಟ ಲಕ್ಷಿಸೆ ನಾನು!
ರಿಪುಕುಲಕೆ ಕಾಲ ನಾನು!
ಗೇಯ್ಮೆ ಮುಗಿಸಿದವ ನಾನು!
ನುಡಿಯದೇ ನಡೆವೆ ನಾನು!
ನಾಮಾನಂತವಾಗಿರ್ಪೆ ನಾನು! (ಭಾ)
-ನು ನಿರಂಜನಾದಿತ್ಯ ನಾನು!!!

ಕಲ್ಪನಾ ಸಂಕಲ್ಪ, ವಿಕಲ್ಪ ಕಲ್ಪನಾ! (ಅ)   4(2167)

-ಲ್ಪ ವಿಷಯ ಸುಖಕ್ಕಾಗ್ಯೇಕ ಕಲ್ಪನಾ?
ನಾಮ, ರೂಪ, ಕುಲ, ಗೋತ್ರವೂ ಕಲ್ಪನಾ!
ಸಂಕಲ್ಪ ಮಾಡ್ಯಳುವುದೇಕೆ ಕಲ್ಪನಾ?
ರ, ಚರಣಕ್ಕಾಳಾಗ್ದಿರು ಕಲ್ಪನಾ! (ಶಿ)
-ಲ್ಪ ಕಲೆಯೊಳಗಿನ ಮೂರ್ತಿ ಕಲ್ಪನಾ!
ವಿವೇಕಿಯಾಗ್ಜೈಸ್ನಿನ್ನ ನೀನು ಕಲ್ಪನಾ!
ಲ್ಯಾಣ ನಿನಗಾಗುವುದು ಕಲ್ಪನಾ! (ಅ)
-ಲ್ಪರ ಸಂಗ ಮಾಡಬಾರದು ಕಲ್ಪನಾ!
ಲಿಮಲ ಕಳೆಯಬೇಕು ಕಲ್ಪನಾ! (ತ)
-ಲ್ಪ ಶಯನಕ್ಕಾಶಿಸಬೇಡ ಕಲ್ಪನಾ!
“ನಾ” ನಿರಂಜನಾದಿತ್ಯಾನಂದ ಪಾವನಾ!!!

ಕಲ್ಯಾಣರಾಮಾ ಶ್ರೀ ರಾಮ! (ಮಾ)   2(652)

-ಲ್ಯಾಲಂಕಾರಾ ಸೀತಾ ರಾಮ! (ರ)
-ಣಧೀರಾ ಶ್ರೀ ರಘುರಾಮ!
ರಾಮಾ ಭ್ರಾತೃಪ್ರೇಮಾ ರಾಮ!
ಮಾರುತಿ ಪ್ರಾಣಾ ಶ್ರೀ ರಾಮ!
ಶ್ರೀರಾಮಾ ಜಯ ಶ್ರೀ ರಾಮ!
ರಾವಣಾಂತಕ ಶ್ರೀ ರಾಮ! (ರಾ)
-ಮಾ ನಿರಂಜನಾತ್ಮಾರಾಮ!!!

ಕಲ್ಲದೇವರೆನ್ಸಿದವಗಾನು ಋಣಿ! (ಎ)   6(3880)

-ಲ್ಲರಲ್ಲಿರ್ಪಾತ ಈರೇಳ್ಲೋಕಕ್ಕೆ ಧಣಿ!
ದೇವದೇವ ಅನುಪಮ ಕೃಪಾ ಗಣಿ!
ರಗಳನ್ನೇನ್ಬೇಡ್ಬೇಕಾಗಿದೆ ಪ್ರಾಣಿ?
ರೆಕ್ಕೆ, ಪುಕ್ಕ ಹಕ್ಕಿಗಿತ್ತಿರುವಾ ಗುಣಿ! (ತಿ)
-ನ್ಸಿದನ್ಹುಲ್ಲನ್ನಾಕಳಿಗಾ ಚಕ್ರಪಾಣಿ!
ಯಾನಿಧಿಯವನ ರಾಣಿ ರುಕ್ಮಿಣಿ!
ಧಿಸಿದನಸುರರಾ ವೀರಾಗ್ರಣಿ!
ಗಾಯನ ಕಲೆಯಲ್ಲಿವನೊಬ್ಬ ನಿಪುಣಿ!
ನುಡಿಯಿವನದು ವರ ಗೀತಾ ವಾಣಿ!
ಷಿ, ಮುನಿಗಳಿಗಿವ ಪಂಚಪ್ರಾಣಿ! (ಗು)
-ಣಿ ನಿರಂಜನಾದಿತ್ಯ ಕೃಷ್ಣ ಗೀರ್ವಾಣಿ!!!

ಕಲ್ಲು ಗೊಂಬೆಗಳ ನಂಬಿದ್ದೊಂದು ಕಾಲ! (ಹು)   5(3177)

-ಲ್ಲು ಸೊಪ್ಪುಗಳನ್ನು ತಿಂದದ್ದೊಂದು ಕಾಲ!
ಗೊಂಡಾರಣ್ಯದಲ್ಲೋಡಾಡಿದ್ದೊಂದು ಕಾಲ!
ಬೆಟ್ಟ, ಗುಡ್ಡ ಹತ್ತಿ ಕೂತದ್ದೊಂದು ಕಾಲ!
ಡ್ಡ, ಮೀಸೆ, ಕೂದ್ಲು ಬೋಳ್ಸಿದೊಂದು ಕಾಲ! (ಕೊ)
-ಳ, ನದಿ, ಭಾವಿ ನೀರ್ಸ್ನಾನ ಒಂದು ಕಾಲ!
“ನಂದಿವಾಹನಾ! ಬಾ” ಎಂದದ್ದೊಂದು ಕಾಲ!
ಬಿನ್ನಹ ವ್ಯರ್ಥಾಯ್ತೆಂದತ್ತದ್ದೊಂದು ಕಾಲ (ಇ)
-ದ್ದೊಂದೊಂದಭ್ಯಾಸವೂ ಮಾಡಿದ್ದೊಂದು ಕಾಲ!
ದುರ್ವಿಧಿಗಾಗಿ ಕೊರಗಿದ್ದೊಂದು ಕಾಲ!
ಕಾಲಕ್ರಮೇಣಾದಾತ್ಮಾನಂದಕ್ಕೀ ಕಾಲ! (ಕಾ)
-ಲ, ನಿರಂಜನಾದಿತ್ಯದತ್ತಗೀ ಕಾಲ!!!

ಕಲ್ಲು ಸಕ್ಕರೆಯಾದಾ ಪ್ರಸಾದ! (ಹ)   1(213)

-ಲ್ಲುಪುಡಿ ಮಾಡದದಾ ಪ್ರಸಾದ!
ಮರ್ಪಣ ತಿಲಕಾ ಪ್ರಸಾದ! (ಅ)
-ಕ್ಕರೆಯ ಉಷ್ಣ ಶಾಂತೀ ಪ್ರಸಾದ! (ಬೆ)
-ರೆತರೆ ಅರಗುವಾ ಪ್ರಸಾದ! (ಆ)
-ಯಾಸ ಆರಾಮಪ್ರದಾ ಪ್ರಸಾದ!
ದಾಹ ಶಾಂತಿಗಾನಂದಾ ಪ್ರಸಾದ!
ಪ್ರಸನ್ನತೆಗುತ್ತಮಾ ಪ್ರಸಾದ!
ಸಾಧು ಮನಕಾಲಯಾ ಪ್ರಸಾದ! (ಅ)
-ದಾ, ನಿರಂಜನಾದಿತ್ಯ ಪ್ರಸಾದ!

ಕಲ್ಲು, ಮರ, ದೇವರೆಂಬ ನೀನೇಕಲ್ಲಾ? (ಗು)   1(424)

-ಲ್ಲು ಮಾಡಿಯಡ್ಡಬೀಳುವರ್ಕಲ್ಲಗೆಲ್ಲಾ!
ನ ಮಾಡಿದ ಮೂರ್ತಿಗಳೇ ಎಲ್ಲೆಲ್ಲಾ!
ಥೋತ್ಸವಾಲೋಹಗೊಂಬೆಗೆ ಊರೆಲ್ಲಾ! (ಅ)
-ದೇಕೆ ನಿನ್ನನೀನದರೆಂತೆ ಮಾಡಿಲ್ಲಾ? (ಅ)
-ವರಿವರಂತೆ ನೀನಿರಬೇಕಾಗಿಲ್ಲಾ! (ಆ)
-ರೆಂದರೇನು? ನಿನ್ನ ದಾರಿ ನೀ ನೋಡಪ್ಪಾ!
ಡಿದಿಕ್ಕು ಮಾಯಾವೃತ್ತಿಗಳನೆಲ್ಲಾ!
ನೀನಾಗುವೆ ಪೂಜ್ಯ ದೇವನೆಂಬೆನಲ್ಲಾ!
ನೇಮ, ನಿಷ್ಠೆ ನಿತ್ಯವಿದಕೆ ಬೇಕಲ್ಲಾ!
ರ್ಮ, ಕಾಲ, ಗತಿ ಮಾಡುತಿಹುದೆಲ್ಲಾ! (ಬ)
-ಲ್ಲಾ ನಿರಂಜನಾದಿತ್ಯದೇವ ನೋಡಲ್ಲಾ!!!

ಕಳವಳವಿಲ್ಲ! ತಳಮಳವಿಲ್ಲವನೇ ಎಲ್ಲಾ! (ಅ)   1(103)

-ಳವಡುತಿಹುದೇಗೊಂದೊಂದೇ ಅನುಭವದಿಂದೆಲ್ಲಾ! (ಅ)
-ವರಿವರ ಮಾತುಗಳಿಂದಾಗುವುದೆಲ್ಲಾ ವಿಫಲಾ! (ಅ)
-ಳತೆಗೊಳಗಾಗದಿಹುದನನ್ಯ ಭಕ್ತಿಯ ಫಲಾ!
ವಿಚಾರ, ವಿಮರ್ಶೆಗಳಿಂದಾಗುವುದೆಲ್ಲಾ ಸಫಲಾ! (ಅ)
-ಲ್ಲವನಿಲ್ಲ ; ಇಲ್ಲವನಿಲ್ಲೆಂಬುದು ಬಲ್ಲವಗಿಲ್ಲ!
ಲ್ಲಣಗೊಳದೆ ಮಾಡೆಬೇಕು ಸ್ವಧರ್ಮವನೆಲ್ಲಾ (ಅ)
-ಳಬಾರದಿಳೆಗಾಗಿಯೆಂಬುದರಿವಾಯಿತೀಗೆಲ್ಲಾ!
ನಸಿಗಾಗುತಿಹ ಖೇದ ಭೇದವೆಲ್ಲಾ ಚಪಲಾ! (ಅ)
-ಳದಿರುವವರಾರಿದರಿಂದ ಈ ಜಗದಲೆಲ್ಲಾ!
ವಿವರಿಸುವುದಸಾಧ್ಯವಾಗಿಹುದವನ ಲೀಲಾ! (ಅ)
-ಲ್ಲಲ್ಲೋಡಾಡದಿರೆ ಮನ ಶಾಂತಿಯಾಗುವುದೆಲ್ಲಾ!
ಶವಾಗುವುದಿದು ಸತ್ಸಂಘದಿಂದರಿವುದೆಲ್ಲಾ!
ನೇಮ, ನಿಷ್ಠೆಯ ಸಾಧಕನಿಗಿದು ಹೊಸದೇನಲ್ಲಾ!
ಲ್ಲಾ ಬಲ್ಲ ಮನೋವಲ್ಲಭನಾಧಾರವಿದಕೆಲ್ಲಾ! (ಅ)
-ಲ್ಲಾ ಡದಂಬರವಾಸಿ ನಿರಂಜನಾದಿತ್ಯನೇ ಎಲ್ಲಾ!!!

ಕಳೆದುಳಿದ ಶಿವನಿಗೆಲ್ಲಾ ಪೂಜೆ! (ವೇ)   2(797)

-ಳೆವೇಳೆಗಾಗಲಿ ಅವಗೆಲ್ಲಾ ಪೂಜೆ!
ದುರಿತದೂರ ಹರನಿಗೆಲ್ಲಾ ಪೂಜೆ! (ಬಾ)
-ಳಿನ, ಬೆಳಕಾಗಿರುವಾಗೆಲ್ಲಾ ಪೂಜೆ!
ತ್ತ ತಾನಾಗಿರುವಾತಗೆಲ್ಲಾ ಪೂಜೆ!
ಶಿಖಿವಾಹನನಯ್ಯನಿಗೆಲ್ಲಾ ಪೂಜೆ!
ರ ಪರಬ್ರಹ್ಮರೂಪಗೆಲ್ಲಾ ಪೂಜೆ!
ನಿತ್ಯ, ನಿರಾಮಯ ದೇವಗೆಲ್ಲಾ ಪೂಜೆ! (ಬ)
-ಗೆಬಗೆರೂಪಾನಂದಾತ್ಮಗೆಲ್ಲಾ ಪೂಜೆ! (ಕ)
-ಲ್ಲಾಗಿಹ ಶಿವಲಿಂಗಾತ್ಮಗೆಲ್ಲಾ ಪೂಜೆ!
ಪೂಜೆ, ಸಾಯುಜ್ಯ ಸುಖಕ್ಕಾಗೆಲ್ಲಾ ಪೂಜೆ! (ಸಂ)
-ಜೆ ಶ್ರೀ ನಿರಂಜನಾದಿತ್ಯ ಶಿವ ಪೂಜೆ!!!

ಕಳೆಯಿಲ್ಲದ ಕಲೆ ವ್ಯರ್ಥ! (ಬೆ)   4(1834)

-ಳೆ ಬೆಳೆಯದ ನೆಲ ವ್ಯರ್ಥ! (ತಾ)
-ಯಿ ಕೈ ಬಿಟ್ಟಿಹ ಬಾಳು ವ್ಯರ್ಥ! (ಬೆ)
-ಲ್ಲವಿಲ್ಲದಮೃತಾನ್ನ ವ್ಯರ್ಥ!
ಯೆಯಿಲ್ಲದ ಮಾತು ವ್ಯರ್ಥ!
ಬ್ಬವಿಲ್ಲದ ಭಾಷೆ ವ್ಯರ್ಥ! (ತ)
-ಲೆಯಿಲ್ಲದ ಒಡಲು ವ್ಯರ್ಥ!
ವ್ಯಭಿಚಾರ ಜೀವನ ವ್ಯರ್ಥ! (ಸಾ)
-ರ್ಥಕ ನಿರಂಜನಾದಿತ್ಯಾರ್ಥ!!!

ಕಳ್ಳ ಸುಳ್ಳನಾದ್ರೂ ನಲ್ಲೆಗನ್ಯನಲ್ಲ! (ಹ)   5(3144)

-ಳ್ಳಕ್ಕೆ ತಳ್ಳದ್ರೂ ಅಗಲುವವಳಲ್ಲ!
ಸುಖ ದುಃಖವಳಿಗೆ ಸಮಾನವೆಲ್ಲ! (ಬೆ)
-ಳ್ಳಗಿರುವುದೆಲ್ಲಾ ಹಾಲೆಂಬವಳಲ್ಲ!
ನಾಮ ಅವನದು ಪವಿತ್ರವೆಲ್ಲೆಲ್ಲಾ! (ತ)
-ದ್ರೂಪ ಧ್ಯಾನವೆಂದೂ ಬಿಟ್ಟಿರುವುದಿಲ್ಲ!
ಶ್ವರಕ್ಕಾಕೆ ಆಸೆ ಪಡ್ವವಳಲ್ಲ! (ಹ)
-ಲ್ಲೆ, ಹಗರಣ ಅವಳಿಗಿಷ್ಟವಿಲ್ಲ!
ಬ್ಬುವಾಸನೆ ಅವಳಲ್ಲೇನೂ ಇಲ್ಲ! (ಧ)
-ನ್ಯಳವಳು ನಿಜಸತಿಯೂಗ್ಯೆಲ್ಲೆಲ್ಲ!
ವಯುಗದ ನಾರಿಯಂತವಳಲ್ಲ! (ಪು)
-ಲ್ಲ ನಿರಂಜನಾದಿತ್ಯನವಳಗೆಲ್ಲ!!!

ಕಳ್ಳ, ಸುಳ್ಳನೊಡನಾಟ ಕಷ್ಟ! (ಹ)   5(3051)

-ಳ್ಳಕ್ಕೆ ತಳ್ಳುವುದವನಿಗಿಷ್ಟ!
ಸುಭಿಕ್ಷೆಗಾಯ್ತವನಿಂದ ನಷ್ಟ! (ಉ)
-ಳ್ಳ ಮಾನ ಕಳೆಯುವನಾ ದುಷ್ಟ!
ನೊಣದಂತವನ ಬಾಳು ಭ್ರಷ್ಟ! (ಮಾ)
-ಡದಿರುವುದವನಿಷ್ಟ ಶ್ರೇಷ್ಟ!
ನಾಸ್ತಿಕನವನ ಬಾಳಿನಿಷ್ಟ! (ಊ)
-ಟ ಕೊಟ್ಟವನಟ್ಟುವನಾ ದುಷ್ಟ!
ಡೆಗೆ ಸುಟ್ಟುಹೋಗ್ವನಾ ಭ್ರಷ್ಟ! (ಶ್ರೇ)
-ಷ್ಟ ನಿರಂಜನಾದಿತ್ಯ ಆಪ್ತೇಷ್ಟ!!!

ಕಳ್ಳನಡಗಿಹನೊಳಗೇ! [ಸು]   4(2100)

-ಳ್ಳಲ್ಲ, ಹುಡುಕು ನಿನ್ನೊಳಗೇ! (ಮ)
-ನಸಿಜನೆಂಬ ನಾಮವಗೇ! (ಬೇ)
-ಡವನೊಡನಾಟ ನಿನಗೇ! (ಬಾ)
-ಗಿ ತೆರೆದಿಟ್ಟ ಹೊರಗೇ!
ಸ್ತ, ಪಾದಗಳಿಲ್ಲವಗೇ!
ನೊಸಲ್ಗಣ್ಣನಿಂದಾದ ಹಾಗೇ! (ಖೂ)
-ಳ ರಕ್ಕಸರ್ಮಿತ್ರರವಗೇ! (ಹಂ)
-ಗೇನು, ನಿರಂಜನಾದಿತ್ಯಂಗೇ!!!

ಕಳ್ಳನೆಂದಾರನ್ನೂ ಹಳಿಯಬೇಡಯ್ಯಾ! [ಬೆ]   5(2883)

-ಳ್ಳಗಿರುವುದೆಲ್ಲಾ ಹಾಲೆನಬೇಡಯ್ಯಾ!
ನೆಂಟರೂ, ಭಂಟರೂ ನಿನ್ನಾತ್ಮ ರೂಪಯ್ಯಾ!
ದಾಸಾಂಜನೇಯನ ಆದರ್ಶವಿದಯ್ಯಾ! (ಪ)
-ರರವಗುಣ ಹುಡುಕಬಾರದಯ್ಯಾ! (ನಿ)
-ನ್ನೂರು, ನನ್ನೂರು, ರಂಗನಾಥನೂರಯ್ಯಾ!
ತ್ತವತಾರಿ ಹೆತ್ತ ತಾಯ್ತಂದೆಯ್ಯಾ! (ಕಾ)
-ಳಿ, ಬೋಳಿ, ನ್ಯಾಯವಿನ್ನಾದರೂ ಬಿಡಯ್ಯಾ!
ದುನಾಥನ ಕೃಪೆಯಾಗುವುದಯ್ಯಾ!
ಬೇಕಾದದ್ದು ತಾನಾಗಿ ಬರುವುದಯ್ಯಾ! (ಮಾ)
-ಡಬೇಡ ನೀನಾವ ಸಂಕಲ್ಪವನ್ನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾನಂದವಿದಯ್ಯಾ!!!

ಕಳ್ಳರ ನಾಯಕತ್ವವೇಕಯ್ಯಾ? (ಸು)   2(834)

-ಳ್ಳರೊಡನಾಟವಿನ್ನು ಸಾಕಯ್ಯಾ!
ಕ್ಷಕ ನೀನಾಗಿರೆನಗಯ್ಯಾ!
ನಾ ನಿನ್ನ ಬಿಟ್ಟಿರಲಾರೆನಯ್ಯಾ! (ಭ)
-ಯವೀ ಸಂಸಾರ ಬಂಧನವಯ್ಯಾ!
ರ್ತವ್ಯ ನಿನ್ನ ಸ್ಮರಣೆಯಯ್ಯಾ!
‘ತ್ವಮೇಮ ಸರ್ವಂ ಮಮ ದೇವ’ಯ್ಯಾ!
ವೇಷ, ಭೂಷಣ ಬೇಡೆನಗಯ್ಯಾ!
ರುಣೆ ನಿನ್ನದೊಂದೇ ಸಾಕಯ್ಯಾ! [ಅ]
-ಯ್ಯಾ! ನಿತ್ಯ ನಿರಂಜನಾದಿತ್ಯಯ್ಯಾ!!!

ಕಳ್ಳಾಕಳ ಕತ್ತಿಗೊಂದು ದಡಿ! (ಉ)   4(2218)

-ಳ್ಳಾಗ ದಾನ ಮಾಡದಿರಬೇಡಿ!
ಷ್ಟವೆಂದು ಕರ್ತವ್ಯ ಬಿಡ್ಬೇಡಿ! (ಒ)
-ಳ, ಹೊರಗೆ, ಸದಾ ಶುಚಿ ಮಾಚಿ!
ಪಿಯಂತಲ್ಲಿಲ್ಲೋಡಾಡಬೇಡಿ! (ಗು)
-ತ್ತಿಗೆ ಸಂದಾಯ ಮಾಡದಿರ್ಬೇಡಿ!
ಗೊಂಬೆಯಾಟಕ್ಕೆ ಮರುಳಾಗ್ಬೇಡಿ!
ದುಸ್ಸಹವಾಸವೆಂದೂ ಮಾಡ್ಬೇಡಿ!
ತ್ತ ಭಜನೆ ತಪ್ಪದೆ ಮಾಡಿ! (ನೋ)
-ಡಿ, ನಿರಂಜನಾದಿತ್ಯನ ಕೂಡಿ!!!

ಕವಿ ಕಂಡದ್ದು ರವಿ ಕಂಡಿಲ್ಲ! (ಕ)   4(1760)

-ವಿ ವಿಕಲ್ಪ ರಹಿತನೇನಲ್ಲ!
ಕಂಡದ್ದ ಮನಸ್ಸಲ್ಲದೇನಲ್ಲ!
ವುಲು ಸ್ವಭಾವ ರವಿಗಿಲ್ಲ! (ಬಿ)
-ದ್ದು ಎದ್ದೋಡವವನಾತನಲ್ಲ!
ವಿ ನಿರ್ವಿಕಾರನೆಂಬರೆಲ್ಲ!
ವಿಧಿ, ಹರಿ, ಹರ ತಾನೇ ಎಲ್ಲ!
ಕಂಡೂ ಕಾಣದಂತಿಹಾತನೆಲ್ಲ!
ಡಿಕ್ಕಿ ಹೊಡಿಯದ ಕವಿಯಿಲ್ಲ! (ಪು)
-ಲ್ಲ ನಿರಂಜನಾದಿತ್ಯ ಹಾಗಿಲ್ಲ!!!

ಕವಿಯೇ, ಭವಿಯೇ, ಅನುಭವಿಯೇ?   4(1765)

ವಿಶ್ವ ಕವಿ ಯಾರೆಂಬರಿವಿದೆಯೇ?
ಯೇನಾದರೊರೆದರವ ಕವಿಯೇ?
ವರೋಗವಿಲ್ಲದವ ಭವಿಯೇ?
ವಿಖ್ಯಾತನಾದರವನುಭವಿಯೇ?
ಯೇನೆಂದರೂ ವರಕವಿ ರವಿಯೇ!
ನನ್ಯ ಪತಿಭಕ್ತೆ ಶಾಂಭವಿಯೇ!
ನುಡಿದಂತಿರುವವನುಭವಿಯೇ!
ಕ್ತಸೂರದಾಸಾದರ್ಶ ಕವಿಯೇ!
ವಿಶ್ವಾಮಿತ್ರನೊಬ್ಬಾದರ್ಶ ಭವಿಯೇ! (ಛಾ)
-ಯೇಶ ನಿರಂಜನಾದಿತ್ಯನುಭವ್ಯೇ!!!

ಕಷ್ಟ ನಿವಾರಣೆಗಿಷ್ಟ ಸೇವೆ ಮಾಡ್ಬೇಕು! (ದು)   5(3295)

-ಷ್ಟ ಸಹವಾಸದಿಂದ ದೂರವಿರಬೇಕು!
ನಿತ್ಯಾನಿತ್ಯ ವಿಚಾರಪರನಾಗಿರ್ಬೇಕು!
ವಾಸ ಸಜ್ಜನರಿರುವೆಡೆಯಲ್ಲಾಗ್ಬೇಕು!
ಜಸ್ತಮೋಗುಣಗಳಿಲ್ಲದಿರಬೇಕು! (ಹ)
-ಣೆ ಬರಹವೆಂದಳುತ್ತಿರದಿರಬೇಕು!
ಗಿರಿಜೆಯಂತೆ ಶಿವನಿಗಾಗಿರಬೇಕು! (ಅ)
-ಷ್ಟಮದಗಳನ್ನು ಸುಟ್ಟು ಬೂದಿ ಮಾಡ್ಬೇಕು!
ಸೇವಕರನ್ನವಲಂಬಿಸದಿರ ಬೇಕು!
ವೆಚ್ಚ ವರಮಾನಕ್ಕೆ ತಕ್ಕಂತೆ ಮಾಡ್ಬೇಕು!
ಮಾತಿಗಿಂತ ಕಾರ್ಯನಿಷ್ಠೆ ಹೆಚ್ಚಾಗಿರ್ಬೇಕು! (ಹಾ)
-ಡ್ಬೇಕು ಗುರು ಗುಣಗಾನ ಮಾಡುತ್ತಿರ್ಬೇಕು!
ಕುಲಪತಿ ನಿರಂಜನಾದಿತ್ಯನಾಗ್ಬೇಕು!!!

ಕಷ್ಟ, ನಷ್ಟ, ಭ್ರಷ್ಟ, ಉಪಸ್ಥೇಷ್ಟ! (ಪು)   6(4190)

-ಷ್ಟನಾಗನಿವನೆಂಬುದು ದಿಟ!
ರ ಪಶು ಆ ಗುಹ್ಯಾ ಲಂಪಟ! (ನ)
-ಷ್ಟ ತಂದೊದಗಿಪುದಾ ದು

ಹ್ಚಟ!
ಭ್ರಮಾ ಬಾಳವನದು ಪೇಚಾಟ! (ಇ)
-ಷ್ಟ ಮಿತ್ರರೊಡನೆಲ್ಲಾ ಕಚ್ಚಾಟ!
ಟ್ಟು, ತೊಟ್ಟು, ಮೆಟ್ಟುವ ಬೂಟಾಟ!
ರಿಣಾಮ ದಬ್ಬಿಸಿಕೊಳ್ಳಾಟ! (ಆ)
-ಸ್ಥೇಯನಾಗದೆಲ್ಲರಿಗೆ ಕಾಟ! (ಇ)
-ಷ್ಟ ಶ್ರೀ ನಿರಂಜನಾದಿತ್ಯ ಶ್ರೇಷ್ಟ!!!

ಕಷ್ಟ, ನಷ್ಟ, ಭ್ರಷ್ಟಾತುರದಿಂದ! (ಇ)   5(2603)

ಷ್ಟಸಿದ್ಧಿಗಾಗಿರು ತಾಳ್ಮೆಯಿಂದ!
ಮಿಸು ಪಾದಕ್ಕೆ ಭಕ್ತಿಯಿಂದ! (ತು)
-ಷ್ಟನಾಗಪ್ಪನ ಪ್ರಸಾದದಿಂದ!
ಭ್ರಮಾ ನಿವಾರಣೆಯದರಿಂದ! (ಶಿ)
-ಷ್ಟಾಚಾರ ತಿಳಿ ಹಿರಿಯರಿಂದ! (ಮಾ)
-ತು ಕೊಟ್ಟು ತಪ್ಪಬಾರದಾದ್ರಿಂದ! (ಪ)
-ರಧನದಾಸೆ ಬಿಡು ಆದ್ರಿಂದ! (ಅಂ)
-ದಂದಿನ ಮಾತೆಲ್ಲಾ ವ್ಯರ್ಥಾದ್ರಿಂದ! (ಅಂ)
-ದದ ನಿರಂಜನಾದಿತ್ಯಾನಂದ!!!

ಕಷ್ಟಕಾಲಕ್ಕಾರಹರಕ್ಕಾ? (ದು)   4(1602)

-ಷ್ಟ ಸಹವಾಸನುಚಿತಕ್ಕಾ!
ಕಾಮ್ಯಾರ್ಥದಿಂದೇನು ಸುಖಕ್ಕಾ?
ಕ್ಷ್ಯ ನಿಜಾನಂದಕ್ಕಾಗ್ಲಕ್ಕಾ! (ತಿ)
-ಕ್ಕಾಟದಿಂದಶಾಂತಿ ಕಾಣಕ್ಕಾ!
ಮಿಸು ನಿನ್ನಲ್ಲಿ ನೀನಕ್ಕಾ!
ರಿ, ಹರಾತ್ಮವೇ ನೀನಕ್ಕಾ! (ಈ)
ಹಸ್ಯ ಮರೆಯಬೇಡಕ್ಕಾ! (ಅ)
-ಕ್ಕಾ! ನಿರಂಜನಾದಿತ್ಯಪ್ಪಕ್ಕಾ!!!

ಕಷ್ಟಕ್ಕಂಜಿ ಕರ್ತವ್ಯ ಬಿಟ್ಟಿಲ್ಲ! (ದು)   5(2553)

-ಷ್ಟ ಸಹವಾಸ ಕಟ್ಟಿಕೊಂಡಿಲ್ಲ! (ಚ)
-ಕ್ಕಂದವಾಡುವಭ್ಯಾಸೆನಗಿಲ್ಲ!
ಜಿಪುಣತನ ನನ್ನಲ್ಲೇನಿಲ್ಲ!
ಳ್ಳತನ ಮಾಳ್ಪದ ನಾನಲ್ಪ! (ಧೂ)
-ರ್ತತನ ತನ್ನಲ್ಲಿಲ್ಲವೇ ಇಲ್ಲ!
ವ್ಯಭಿಚಾರ ಭಕ್ತಿ ನನ್ನದಲ್ಲ!
ಬಿಚ್ಚು ಮನದ ಬಾಳ್ನನ್ನದೆಲ್ಲ! (ಮೆ)
-ಟ್ಟಿ ನಿಂತಿಹೆನಪಮಾನವೆಲ್ಲ! (ಪು)
-ಲ್ಲ ನಿರಂಜನಾದಿತ್ಯನೆಲ್ಲಿಲ್ಲ???

ಕಷ್ಟಕ್ಕಂಜುವುದಿಲ್ಲ ಇಷ್ಟ! (ನ)   6(3706)

-ಷ್ಟವೆಷ್ಟಾದ್ರೂ ಬಿಡನು ಇಷ್ಟ! (ಚ)
-ಕ್ಕಂದಕ್ಕೆಡೆಗೊಡೆನು ಇಷ್ಟ!
ಜುಲುಮಿನಿಂದೇನೂ ಮಾಡೇಷ್ಟ! (ಯಾ)
-ವುದೇ ಮಾತವನದು ಸ್ಪಷ್ಟ!
ದಿಟವ ಬಿಟ್ಟು ಆಗ ಭ್ರಷ್ಟ! (ತ)
-ಲ್ಲಣಕ್ಕವಕಾಶ ಕೊಡೇಷ್ಟ!
ಷ್ಟಾನಿಷ್ಟದಲ್ಲಿ ಭಾಗಿಷ್ಟ! (ಶ್ರೇ)
-ಷ್ಟ, ನಿರಂಜನಾದಿತ್ಯಾಪ್ತೇಷ್ಟ!!!

ಕಷ್ಟದಾರ್ಜನೆ ಇಷ್ಟಮೂರ್ತಿಯ ನೇವೇದ್ಯಕ್ಕೆ! (ದು)   5(2784)

-ಷ್ಟರಿಂದವರ ರಕ್ಷಣೆ ಸದಾತನಿಂದಕ್ಕೆ!
ದಾಯಾದಿ ಮತ್ಸರಕ್ಕವಕಾಶ ಬೇಡದಕ್ಕೆ! (ಆ)
-ರ್ಜವಕ್ಕೆ ಎಂದೆಂದಿಗೂ ವಿಜಯಮಾಲೆಯಕ್ಕೆ!
ನೆಪಮಾತ್ರಕ್ಕೀ ಶರೀರವೆಂಬ ಅರಿವಕ್ಕೆ!
ದರಿಂದ ಶಾಂತಿಸಾಧನೆ ಸತತವಕ್ಕೆ! (ಇ)
-ಷ್ಟಬಾಂಧವ ಸರ್ವಾಂತರ್ಯಾಮಿ ಸದ್ಗುರುವಕ್ಕೆ!
ಮೂರು ಲೋಕದ ಸುಖಕ್ಕೂ ತಿಲಾಂಜಲಿಯಕ್ಕೆ! (ಸ್ಫೂ)
-ರ್ತಿ ನಾಮಸಂಕೀರ್ತನೆಗೆಲ್ಲಕ್ಕೂ ಪ್ರಾಪ್ತಿಯಕ್ಕೆ!
ಮ ನಿಯಮಾದ್ಯಭ್ಯಾಸಕ್ಕನುಗ್ರಹವಕ್ಕೆ!
ನೇರ ದರ್ಶನದಿಂದೆಲ್ಲರೂ ಪಾವನರಕ್ಕೆ!
ವೇಶ್ಯಾವೃತ್ತಿಗಲ್ಲೆಲ್ಲೂ ಕೊನೆಗಾಲವೀಗಕ್ಕೆ! (ಗ)
-ದ್ಯ, ಪದ್ಯಗಳಿಂದಾತ್ಮಾರಾಮನ ಸ್ತೋತ್ರವಕ್ಕೆ! (ಅ)
-ಕ್ಕೆ ನಿಅಂಜನಾದಿತ್ಯಾನಂದವೆಲ್ಲಾ ಲೋಕಕ್ಕೆ!!!

ಕಷ್ಟವೆಲ್ಲವೀ ದೇಹಕ್ಕೆ! (ದು)   4(2465)

-ಷ್ಟ ಸಂಗ ಕಟ್ಬೇಡದಕ್ಕೆ! (ಸ)
-ವೆಸಿದ ಗುರುಧ್ಯಾನಕ್ಕೆ! (ಕ್ಷು)
-ಲ್ಲರೂಪವಿಡ್ಬೇಡದಕ್ಕೆ!
ವೀತರಾಗನಾದಾತ್ಮಕ್ಕೆ! (ಪ)
-ದೇಪದೇ ನಮಿಸದಕ್ಕೆ!
ಗಲಿರುಳಿಲ್ಲದಕ್ಕೆ! (ಅ)
-ಕ್ಕೆ ನಿರಂಜನಾದಿತ್ಯಕ್ಕೆ!!!

ಕಷ್ಟಿ, ಇಷ್ಟಿ, ಈ ವಿಚಿತ್ರ ಸೃಷ್ಟಿ! (ವೃ)   5(2955)

-ಷ್ಟಿ ಅತಿಯಾದರೆ ಬಹು ಕಷ್ಟಿ!
ದು ಮಿತವಾದರೆಲ್ಲಾ ಇಷ್ಟಿ! (ಸೃ)
-ಷ್ಟಿ, ಸ್ಥಿತಿ, ಲಯಕ್ಬೇಕ್ಸಮ ದೃಷ್ಟಿ!
ರೇಳ್ಲೊಕಗಳಾಳ್ವುದೀ ದೃಷ್ಟಿ!
ವಿಷಯವಿಷ ಸೇವಕ ಕಷ್ಟಿ!
ಚಿರ ಸ್ಥಾಯಿಯಾದಾತ್ಮಾರ್ಥಿ ಇಷ್ಟಿ!
ತ್ರಯಮೂರ್ತಿ ದರ್ಶನ ಸಂತುಷ್ಟಿ!
ಸ್ಪೃಶ್ಯಾಸ್ಪೃಶ್ಯತೆಗಳೆಂಬ ದೃಷ್ಟಿ! (ಇ)
-ಷ್ಟಿ ನಿರಂಜನಾದಿತ್ಯ ಸಂತುಷ್ಟಿ!!!

ಕಾ, ಕಾ, ಯೆಂದು ಕಾಗೆ ಕೂಗುತಲಿದೆ!   4(1883)

ಕಾರ್ಗತ್ತಲೆಯದಕೆ ಸಾಕಾಗಿದೆ! (ಬಾ)
-ಯೆಂದು ತನ್ನವರ ಕರೆಯುತಿದೆ!
ದುಡಿಯುವಾಸೆ ಅದಕ್ಕುಂಟಾಗಿದೆ! (ಸ)
-ಕಾಲವಿದೆಂಬರಿವದಕಾಗಿದೆ! ಹೋ)
-ಗೆನನ್ಯರೆಡೆಗೆಂದದನ್ನುತಿದೆ!
ಕೂಗೀಗ ಸಾರ್ಥಕಾಗಬೇಕಾಗಿದೆ!
ಗುರುಚಿತ್ತಕ್ಕದೀಗ ಬಂದಂತಿದೆ! (ಆ)
-ತನಿಂದೀಗದಕಾಶೀರ್ವಾದಾಗಿದೆ! (ನ)
-ಲಿ ನಲಿದಮೃತಾನ್ನ ತಿನ್ನುತಿದೆ! (ಆ)
-ದೆ, ನಿರಂಜನಾದಿತ್ಯನೆನ್ನುತಿದೆ!!!

ಕಾಂಚಿ ಕಾಮಾಕ್ಷಿ ಪದ್ಮಾಕ್ಷಿ!   2(928)

ಚಿದಾನಂದಾಕ್ಷಿ ರುದ್ರಾಕ್ಷಿ!
ಕಾರ್ಯದಕ್ಷಾಕ್ಷಿ ಮೀನಾಕ್ಷಿ!
ಮಾರ ಹರಾಕ್ಷಿ ಘೋರಾಕ್ಷಿ!
ಕ್ಷಿತೀಕ್ಷಣಾಕ್ಷಿ ಪೂರ್ಣಾಕ್ಷಿ!
ತಿ ಪ್ರೇಮಾಕ್ಷಿ ಉಮಾಕ್ಷಿ! (ಛ)
-ದ್ಮಾಕ್ಷೀಶ್ವರಾಕ್ಷಿ ಮಾಯಾಕ್ಷಿ! (ಸಾ)
-ಕ್ಷಿ, ನಿರಂಜನಾದಿತ್ಯಾಕ್ಷಿ!!!

ಕಾಕಾ ಕಾಯೆಂಬ ಕೃಷ್ಣ ಕಾಕಾ!   4(1519)

ಕಾಲಾಧೀನ ನಾ ಕೃಷ್ಣ ಕಾಕಾ!
ಕಾಲಾತೀತ ನೀ ಕೃಷ್ಣ ಕಾಕಾ! (ಬಾ)
-ಯೆಂಬರಿಲ್ಲೆನ್ನ ಕೃಷ್ಣ ಕಾಕಾ!
ಬೆರೆಯೆನ್ನ ನೀ ಕೃಷ್ಣ ಕಾಕಾ!
ಕೃಷ್ಣಾರ್ಪಣ ನಾ ಕೃಷ್ಣ ಕಾಕಾ! (ಪೂ)
-ಷ್ಣ ಸಮಾನ ನೀ ಕೃಷ್ಣ ಕಾಕಾ!
ಕಾಯ್ದುಕೊಳ್ಳೆನ್ನ ಕೃಷ್ಣ ಕಾಕಾ!
ಕಾ ನಿರಂಜನಾದಿತ್ಯ ಕಾಕಾ!!!

ಕಾಕು ಮನುಜನಾಗಬೇಡನುಜಾ! (ಕಾ)   4(1601)

-ಕುಸ್ಥ್ಯಾತ್ಮನ ಸದಾ ನೆನೆಯನುಜಾ!
ತ್ಸರದಿಂದಧೋಗತಿಯನುಜಾ!
ನುಡಿದಂತೆ ನಡೆಯಬೇಕನುಜಾ!
ರಾ ಜನ್ಮ ದುಃಖ ದೂರಾಗನುಜಾ!
ನಾಳೆಯ ಮಾತೀಗಾಡಬೇಡನುಜಾ! (ಈ)
-ಗ ಮಾಡತಕ್ಕುದೀಗಾಗಲನುಜಾ!
ಬೇರಾರ ಮಾತೂ ಆಡದಿರನುಜಾ! (ಬ)
-ಡತನ ಸಿರಿತನಸ್ಥಿರನುಜಾ! (ಅ)
-ನುಪಮಾತ್ಮ ಮಾತ್ರ ಶಾಶ್ವತನುಜಾ! (ನಿ)
-ಜಾನಂದ ನಿರಂಜನಾದಿತ್ಯನುಜಾ!!!

ಕಾಗೆ ಬರುವುದಳಿಲ ಕೊಲ್ಲುವುದಕ್ಕಲ್ಲ! (ಹ)   6(3820)

-ಗೆತನವೆಂಬುದು ತಾನೇ ತಿನ್ನಬೇಕೆಂದಲ್ಲ!
ಹಳೆಚ್ಚರದಿಂದ ಶ್ರೀ ಹರಿ ಸಾಕ್ಬೇಕೆಲ್ಲ!
ರುದ್ರನೆಂಬವಗೆ ಸಂಹಾರ ಕೆಲಸವೆಲ್ಲಾ! (ಹಾ)
-ವುಗಳದ್ದೇ ಓಡಾಟ ಅವನ ಮೈಮೇಲೆಲ್ಲಾ!
ಯೆ, ದಾಕ್ಷಿಣ್ಯ, ಅವುಗಳದ್ದವನಿಗಿಲ್ಲ! (ಅ)
-ಳಿಗಾಲ ಬಂದರಾವುದೂ ಉಳಿಯುವುದಿಲ್ಲ!
ಒನೆ ಲಿನೆ ಮಿ

ಸಿ
ಕೊಲ್ಲ ಬಂದ ಯಮನನ್ನೇ ಹಿಂದಟ್ಟಿದನಲ್ಲಾ! (ಗೆ)
-ಲ್ಲುವುದು, ಸೋಲುವುದು, ಅವನಿಂದಲೇ ಎಲ್ಲಾ! (ಸಾ)
-ವು ಬಂದಾಗ ಹಾವಿನಿಂದಲೂ ಕಚ್ಚಿಸಬಲ್ಲ!
ರ್ಶನಾನುಗ್ರಹವಿತ್ತನಸುರರಿಗೆಲ್ಲಾ! (ಮ)
-ಕ್ಕಳು ಅವನಿಗೆ ನಾವೆಂದರೆ ತಪ್ಪೇನಿಲ್ಲ! (ಪು)
-ಲ್ಲ, ನಿರಂಜನಾದಿತ್ಯ ಅವನಿಂದನ್ಯನಲ್ಲ!!!

ಕಾಗೆಗಿನ್ನೂ ಬುದ್ಧಿ ಬಂದಿಲ್ಲ!   6(4027)

ಗೆಳೆತನದಕ್ಕೆ ಬೇಕಿಲ್ಲ! (ನುಂ)
-ಗಿಬಿಡ್ತನ್ಯರಾಹಾರವೆಲ್ಲಾ! (ತ)
-ನ್ನೂರಿನ ಚಿಂತೆ ಅದಕ್ಕಿಲ್ಲ!
ಬುದ್ಧಿ ಹೇಳ್ಬೇಕಾರಿದಕ್ಕೆಲ್ಲಾ? (ಸಿ)
-ದ್ಧಿ ವಿನಾಯಕ ಹೇಳಲೆಲ್ಲಾ!
ಬಂಧು ಬಾಂಧವವನೇ ಎಲ್ಲಾ!
ದಿಕ್ಕಿಲ್ಲದನಾಥರ್ನಾವೆಲ್ಲಾ! (ಬ)
-ಲ್ಲ ನಿರಂಜನಾದಿತ್ಯವೆಲ್ಲಾ!!!

ಕಾಗೆಗಿಲ್ಲಾದರದ ಸ್ವಾಗತ! (ಹ)   6(4051)

-ಗೆತನಕ್ಕಿಲ್ಲಿಲ್ಲ ಸುಸ್ವಾಗತ!
ಗಿಳಿಗಳರಿಗೇಕೆ ಸ್ವಾಗತ? (ಕೊ)
-ಲ್ಲಾಟ, ಕೀಳಾಟಕ್ಕಿಲ್ಲ ಸ್ವಾಗತ!
ತ್ತಾಪಹಾರಿಗಿಲ್ಲ ಸ್ವಾಗತ!
ಕ್ತಪಾತಾತ್ಮಗಿಲ್ಲ ಸ್ವಾಗತ!
ತ್ತ ಭಕ್ತಾಗ್ರಣಿಗೆ ಸ್ವಾಗತ!
ಸ್ವಾನುಭವಿಗಾತ್ಮೀಯ ಸ್ವಾಗತ! (ಖ)
-ಗನಿಗೆ ಪೂರ್ಣ ಕುಂಭ ಸ್ವಾಗತ!
ರಣಿ ನಿರಂಜನಾದಿತ್ಯಾತ!!!

ಕಾಡುತಿದೆ ಸತತ ಧನ ಪಿಶಾಚಿ! (ಮಾ)   4(1907)

-ಡುವುದು ಮಾಡಬಾರದ್ದನ್ನಾ ಪಿಶಾಚಿ!
ತಿನ್ನೇನು ಬೇಕಾದರೆಂಬುದಾ ಪಿಶಾಚಿ! (ತಂ)
-ದೆ, ತಾಯಿಯಲಕ್ಷಿಸುವುದಾ ಪಿಶಾಚಿ!
ತಿಯ ಕತ್ತು ಹಿಂಡುವುದಾ ಪಿಶಾಚಿ!
ಲೆಯೂಡೆಯಲೂ ಹೇಸದಾ ಪಿಶಾಚಿ!
ಪಸ್ಸಿಗೂ ಕಂಟಕಪ್ರಾಯಾ ಪಿಶಾಚಿ!
ರ್ಮಾಧರ್ಮವನ್ನರಿಯದಾ ಪಿಶಾಚಿ!
ಯನಾದಿಂದ್ರಿಯ ಲಂಪಟಾ ಪಿಶಾಚಿ!
ಪಿರಿಯಾತ್ಮಾನಂದ ನೀಡದಾ ಪಿಶಾಚಿ!
ಶಾಶ್ವತ ದೇಹವೆಂದಿಹುದಾ ಪಿಶಾಚಿ! (ಶು)
-ರಂಜನಾದಿತ್ಯಾನಂದ ದಧೀಚಿ!!!

ಕಾಡೋ, ನಾಡೋ, ಸುತ್ಮುತ್ನೋಡ್ಯಡ್ಡಾಡು! (ಮಾ)   5(3133)

-ಡೋದನ್ನೆಲ್ಲಾ ಶ್ರದ್ಧೆಯಿಂದ ಮಾಡು!
ನಾಮಜಪವೆಲ್ಲಿದ್ದರೂ ಮಾಡು! (ಪ)
-ಡೋ ಕಷ್ಟ ಸಹಿಸ್ಲಿಕ್ಕಾಗಿ ಮಾಡು!
ಸುಶ್ಯಾವ್ಯವಾಗಿ ಭಜನೆ ಮಾಡು! (ಹೊ)
-ತ್ಮುಳುಗಿದ್ಮೇಲೊಂದೆಡೆ ಕೂತ್ಮಾಡು! (ತಾ)
-ತ್ನ, ಅಪ್ನೋ ಗದರಿಸಿದ್ರೂ ಮಾಡು! (ಹಾ)
-ಡ್ಯವನ ಗುಣಸ್ಮರಣೆ ಮಾಡು! (ಕ)
-ಡ್ಡಾಯವಾಗಿ ಪ್ರತಿದಿನ ಮಾಡು! (ಕಂ)
-ಡು ನಿರಂಜನಾದಿತ್ಯನ ಕೂಡು!!!

ಕಾಣದ ಕೈಲಾಸದ ಕಥೆ ಯಾಕಯ್ಯಾ! (ಹೆ)   6(4304)

-ಣದ ಗುಣಗಾನವೇನು ಫಲವಯ್ಯಾ?
ಣಿದದ್ದು ಸಾರ್ಥಕವಾಗಬೇಕಯ್ಯಾ!
ಕೈ ಕೆಸರಾದ್ಮೇಲೆ ಬಾಯ್ಮೊಸ್ರಾಗಬೇಕಯ್ಯಾ!
ಲಾಭವಿಲ್ಲದ ವ್ಯಾಪಾರವೇತಕ್ಕಯ್ಯಾ!
ದಾಶಿವ ದರ್ಶನವಾಗಬೇಕಯ್ಯಾ!
ರ್ಶನ

ಓದಿಸದ ಜಪವೇಕಯ್ಯಾ?
ಟ್ಟು ಕಥೆ ಇಷ್ಟಮೂರ್ತಿಗೊಪ್ಪದಯ್ಯಾ! (ವ್ಯ)
-ಥೆ ಹತಗೊಳಿಸದ ಕಥೆ ಸಾಕಯ್ಯಾ!
ಯಾಜ್ಞ್ಯವಲ್ಕ್ಯನನುಭವ ನಮ್ಗಾಗ್ಲಯ್ಯಾ!
ಶ್ಯಪ ಬ್ರಹನ ಸಂತಾನ ನಾವಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನೃತವಾಡಯ್ಯಾ!!!

ಕಾಣುವನವ ಹಗಲಿನಲ್ಲಿ!   6(3430)

(ಕಾ)-ಣುವುದಿಲ್ಲವ ಕತ್ತಲಿನಲ್ಲಿ!
ಜ್ರಾದಿ ನವರತ್ನಗಳಲ್ಲಿ!
ರ, ಸುರಾಸುರಾದಿಗಳಲ್ಲಿ!
ರುಣಾದಿ ದಿಕ್ಪಾಲಕರಲ್ಲಿ!
ರಿ ಹರ ಬ್ರಹ್ಮಾದಿಗಳಲ್ಲಿ!
ಗನಾದ್ಯೆಲ್ಲಾ ಲೋಕಗಳಲ್ಲಿ!
ಲಿಪಿಯಾಗಿ ವೇದಾದಿಗಳಲ್ಲಿ!
ದ, ನದಿ, ಜಲಧಿಗಳಲ್ಲಿ!
(ಅ)-ಲ್ಲಿಲ್ಲಿ ನಿರಂಜನಾದಿತ್ಯನಲ್ಲಿ!!!

ಕಾದ ಕಬ್ಬಿಣಕ್ಕೆ ಕೊಟ್ಟ ನೀರು ಮತ್ತೆ ಕಾಣೆ!   5(2850)

ತ್ತಮಯವಿದಾದ ಮೇಲಿನ್ನೇನನ್ನೂ ಕಾಣೆ!
ಳೆಯಬೇಕು ಕಾಲ ಅವನೇ ನಾನೆಂದಾಣೆ! (ತ)
ಬ್ಬಿಬ್ಬಾಗದಂತಿರಿಸುವುದು ಅವನ ಹೊಣೆ! (ಗ)
-ಣ ನಾಯಕನಿಗೆ ಈ ಬಿನ್ನಹ ಸಮರ್ಪಣೆ! (“ಅ)
-ಕ್ಕೆ ಕಲ್ಯಾಣ ಲೋಕಕ್ಕೆಲ್ಲಾ” ಎಂದು ಪ್ರಕಟಣೆ!
ಕೊಟ್ಟ ಮಾತಿಗೆ ತಪ್ಪನವನೆಂಬ ಘೋಷಣೆ! (ಮ)
-ಟ್ಟ ಹಾಕುವುದಕ್ಕರಿಗಳಾರನ್ನೀ ಶೋಷಣೆ!
ನೀತಿ, ರೀತಿಗೆ ಗುರುದೇವನ ನಿರೂಪಣೆ! (ನಾ)
-ರುವೀದೇಹದ ತಪ್ಪಿಗವನ ಕ್ಷಮಾಪಣೆ!
ನಸ್ಸೇ ಮಾಧವನಾಗ್ಲಿಕ್ಕವನ ರಕ್ಷಣೆ! (ಮ)
-ತ್ತೆಮತ್ತೆ ಇದಕ್ಕಾಗಿ ತಪಸ್ಸಿನಾಚರಣೆ!
ಕಾಲ, ಕರ್ಮ, ಧರ್ಮದಿಂದ ಸ್ಥಿತಿ ಸುಧಾರಣೆ! (ಎ)
-ಣೆ ನಿರಂಜನಾದಿತ್ಯನಿಗಾರನ್ನೆಲ್ಲೂ ಕಾಣೆ!!!

ಕಾದಾಗ ಬಂದಿಲ್ಲ! ಬಂದಾಗ ಕಾದಿಲ್ಲ!   2(830)

ದಾರಿ ನೋಡಿದೆನು ಹಗಲಿರುಳೆಲ್ಲ!
ಮನವೆನ್ನೆಡೆಗೆ ಹರಿಯಲಿಲ್ಲ!
ಬಂದೇ ಬರುವನೆಂಬುದನು ಬಿಟ್ಟಿಲಲ

!
ದಿತಿ ಸವತಿ ಸುತ ಸಾಮಾನ್ಯನಲ್ಲ! (ಬ)
-ಲ್ಲವನೆನ್ನಾಳವನು, ಗೋಪ್ಯವೆಲ್ಲ!
ಬಂಡಾ

, ಬಯಲಾಟೊಪ್ಪುವವನಲ್ಲ!
ದಾರಿಯವನದೇನೂ ಕಠಿಣವಿಲ್ಲ!
ಡಿಬಿಡಿಗವಕಾಶವೀವುದಿಲ್ಲ!
ಕಾಲ ಕಾಯುವುದೇ ಮಾರ್ಗವಿದಕೆಲ್ಲ!
ದಿಟ್ಟಿಯವನ ಪಾದದಲಿಟ್ಟೆನಲ್ಲ! (ಬ)
-ಲ್ಲ ನಿರಂಜನಾದಿತ್ಯನಿದನೆಲ್ಲ!!!

ಕಾದಿದ್ದು ಕಂಡು ಬಂದೆನಮ್ಮಾ!   4(2489)

ದಿವ್ಯ ನಾಮವನದು ಬೊಮ್ಮಾ! (ಜಿ)
-ದ್ದುಗಿದ್ದವನಿಗಿಲ್ಲವಮ್ಮಾ!
ಕಂದೆರೆವ ಕರುಣಾಳ್ಬೊಮ್ಮಾ! (ಕ)
-ಡು ಪಾಪಿಯನ್ನುದ್ಧರಿಪಮ್ಮಾ!
ಬಂಧುವಾಗಿಹನೆಲ್ಲರ್ಗ್ಬೊಮ್ಮಾ! (ಸೊ)
-ದೆಯಂತವ್ನ ವಚನವಮ್ಮಾ! (ಅ)
-ನನ್ಯ, ಭಕ್ತಿಗೊಲಿವಾ ಬೊಮ್ಮಾ! (ಬೊ)
-ಮ್ಮಾ, ನಿರಂಜನಾದಿತ್ಯನಮ್ಮಾ!!!

ಕಾದಿರಬೇಕು ಮನೋಹರನಿಗಾಗಿ!   5(2584)

ದಿನ ರಾತ್ರಿಸ್ಮರಿಸ್ಬೇಕು ಕೃಪೆಗಾಗಿ!
ಹಸ್ಯವನದು ತಿಳಿಯಲಿಕ್ಕಾಗಿ!
ಬೇರೆಡೆಗೋಡದಂತಿರುವುದಕ್ಕಾಗಿ!
ಕುಕಲ್ಪನೆಗಳಡಗಿಸಲಿಕ್ಕಾಗಿ!
ಲಿನ ವಾಸನೆ ತೊಳೆಯಲಿಕ್ಕಾಗಿ!
ನೋವು, ಸಾವುಗಳ ಜಯಿಸಲಿಕ್ಕಾಗಿ!
ಸ್ತಾದಿಂದ್ರಿಯಗಳ ನಿಗ್ರಹಕ್ಕಾಗಿ!
ಮಾರಮಣವನಾಗಿರ್ಪುದಕ್ಕಾಗಿ!
ನಿಶಿ, ದಿನ ಪಾದಸೇವಾ ಲಾಭಕ್ಕಾಗಿ!
ಗಾಢಾಲಿಂಗನಾನಂದಾನುಭವಕ್ಕಾಗಿ! (ಯೋ)
-ಗಿ, ನಿರಂಜನಾದಿತ್ಯನಲ್ಲೈಕ್ಯಕ್ಕಾಗಿ!!!

ಕಾದಿರುವುದಾರಿಗಲಂಕಾರೀ?   5(2637)

ದಿಕ್ಕು ಕೆಟ್ಟೋಡ್ಬೇಡ ಮುಗ್ಧೆ ನಾರೀ! (ನಾ)
-ರು ವೀ ಶರೀರ ವಂಚನಾಕಾರೀ! (ಸಾ)
-ವು, ನೋವುಗಳ್ಗಿದು ಸಂಚುಕಾರೀ!
ದಾರಿ ತಪ್ಪಿ ಬೀಳ್ಬೇಡ ಕಾಲ್ಜಾರೀ!
ರಿಪುಗಳ್ಕಾದಿಹರ್ಮದವೇರೀ! (ಸಂ)
-ಗ ಸದ್ಗುರುವಿನದ್ಫಲಕಾರೀ!
ಲಂಗ್ಲಗಾಮಿಲ್ಲದ ಮದ ಮಾರೀ!
ಕಾವೇರೀ ಸ್ವರೂಪ ತಾಪಹಾರೀ! (ನಾ)
-ರೀ, ನಿರಂಜನಾದಿತ್ಯನಾಗ್ಸೇರೀ!!!

ಕಾದಿಹನಯ್ಯ ನಿನಗಾಗಿ ತಂಗೀ!   4(2201)

ದಿನ ಬಹಳಾಯ್ತು ಹೋಗಿ ನೀ ತಂಗೀ!
ರೆಯದಾಟವೆಷ್ಟು ದಿನ ತಂಗೀ? (ಜ)
-ನಕನ ಸೇವೆಯಿನ್ಯಾವಾಗ ತಂಗೀ? (ಕೈ)
-ಯ್ಯಲ್ಲಿದ್ದಾಗ ಮಾಡ್ಬೇಕು ದಾನ ತಂಗೀ!
ನಿನ್ನೊಬ್ಬಳ ಸ್ವಾರ್ಥಕ್ಕಿದೇನೇ ತಂಗೀ? (ದೀ)
-ನ, ದರಿದ್ರರಲ್ಲೂ ನಿನ್ನಾತ್ಮ ತಂಗೀ! (ಆ)
-ಗಾಗಾತ್ಮ ವಿಚಾರ ಮಾಡಮ್ಮ ತಂಗೀ! (ಯೋ)
-ಗಿರಾಜ, ಶಿವ ಜಗದಯ್ಯ ತಂಗೀ!
ತಂದೆಗೆ ತಕ್ಕ ಮಗಳಾಗು ತಂಗೀ (ತಂ)
-ಗೀ ನಿರಂಜನಾದಿತ್ಯಮ್ಮಯ್ಯ ತಂಗೀ!!!

ಕಾದಿಹನು ಕರುಣಾಳು ನಿಮಗಾಗಿ!   4(1605)

ದಿವ್ಯ ರೂಪಾತ್ಮರು ನೀವೆಂಬುದಕಾಗಿ!
ರಿ ನಾಮ ಸ್ಮರಣಾ ತಲ್ಲೀನನಾಗಿ!
ನುಡಿಯದೇ ಮೌನ ವ್ರತಸ್ಥ ತಾನಾಗಿ!
ಷ್ಟ ಸುಖದರಿವಿರದವನಾಗಿ!
ರುಚಿಯೂಟದಲ್ಲನಾಸಕ್ತತಾನಾಗಿ! (ಪ್ರಾ)
-ಣಾಯಾಮಾದ್ಯಷ್ಟಾಂಗ ಯೋಗೇಶ್ವರನಾಗಿ! (ಬಾ)
-ಳು ಸಾರ್ಥಕ ಗೊಳಿಸಲಿಕ್ಕಿಷ್ಟನಾಗಿ!
ನಿಮ್ಮಂತರಂಗ ಶುದ್ಧಾಗ್ಬೇಕವಗಾಗಿ!
ದನಾರಿಯ ಕೃಪೆ ಬೇಕಿದಕಾಗಿ!
ಗಾನ ಭಾವಪೂರ್ಣವಾಗ್ಬೇಕದಕಾಗಿ! (ತ್ಯಾ)
-ಗಿ ನಿರಂಜನಾದಿತ್ಯಾತ್ಮ ಸುಖಕ್ಕಾಗಿ!!!

ಕಾದಿಹನೆನಗಾಗೆಲ್ಲಪ್ಪಾ? (ಮಂ)   4(2212)

-ದಿರದೊಳಗಿಹ ನೋಡಪ್ಪಾ!
ದನ ನಿನ್ನದೀಗೇನಪ್ಪಾ? (ಮ)
-ನೆಗೆಲಸ ಬಾಕ್ಯೇನಿಲ್ಲಪ್ಪಾ!
ನ್ನ ಕೂಗು ಕೇಳ್ಸಿತೇನಪ್ಪಾ? (ಆ)
-ಗಾಗ್ಬರುತಿರ್ಬೇಕು ನೀನಪ್ಪಾ! (ಬೇ)
-ಗೆಶಾಂತಿ ನಿನ್ನಿಂದದಾಗ್ಬೇಕಪ್ಪಾ! (ಅ)
-ಲ್ಲ ಸಲ್ಲದಾಸೆನಗಿಲ್ಲಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯ ಬಾಪ್ಪಾ!!!

ಕಾದಿಹಳ್ವಧು ವರನಿಗಾಗಿ!   5(3157)

ದಿನ, ರಾತ್ರ್ಯನ್ವೇಷಣದಕ್ಕಾಗಿ!
ರಿನಾಮ ಸ್ಮರಣೆಯಿಂದಾಗಿ! (ಅ)
-ಳ್ವ ಬಾಲೆಗೋರ್ವ ದೊರಕಲಾಗಿ! (ಬಂ)
-ಧುಗಳ್ಮಾಡಿದರ್ಮದ್ವೆಯೊಂದಾಗಿ! (ಭ)
-ವ ಬಂಧನ ಕಟ್ಟು ಬಿಗಿಯಾಗಿ! (ಪ)
-ರಮಾರ್ಥ ಮರೆತಶಾಂತಿಯಾಗಿ!
ನಿತ್ಯಾನಂದ ಪಡೆಯಲಿಕ್ಕಾಗಿ! (ಯೋ)
-ಗಾಭ್ಯಾಸ ಮಾಡುತ್ತಿದ್ದರೊಂದಾಗಿ! (ತ್ಯಾ)
-ಗಿ, ನಿರಂಜನಾದಿತ್ಯನಿಂದಾಗಿ!!!

ಕಾದು ಕಪ್ಪಾಗದಿರಬೇಕು! (ಗೇ)   5(2598)

-ದು ಮುಪ್ಪಾಗದೇ ಇರಬೇಕು!
ರ್ತವ್ಯರ್ಥರಿತಿರಬೇಕು!
(ಒ)ಪ್ಪಾಗ್ಯೆಲ್ಲವನ್ನೂ ಮಾಡಬೇಕು!
ಡಿಬಿಡಿಯ ಬಿಡಬೇಕು!
ದಿನಮಣಿಯಾದರ್ಶ ಬೇಕು!
ಹಸ್ಯಾಗ ತಿಳಿಯಬೇಕು!
ಬೇರೆ ಇನ್ನೇನಾಮೇಲಾಗ್ಬೇಕು? (ಬೇ)
-ಕು, ನಿರಂಜನಾದಿತ್ಯಾಗ್ಬೇಕು!!!

ಕಾದು ಸಾಕಾಯ್ತು ನಿನಗಾಗಿ!   5(2803)

ದುಡಿಯಬೇಕು ನನಗಾಗಿ!
ಸಾರ್ಥಕ ಜನ್ಮಾಗಲಕ್ಕಾಗಿ!
ಕಾಮ, ಕ್ರೋಧ, ಬಿಡದಕ್ಕಾಗಿ! (ಆ)
-ಯ್ತು, ಹೋಯ್ತೆನಬೇಡದಕ್ಕಾಗಿ!
ನಿತ್ಯ ಸುಖಾನುಭವಕ್ಕಾಗಿ!
ಮಿಸಾ ಪಾದಕ್ಕೀಗ ಬಾಗಿ!
ಗಾಡಿ, ಕುದ್ರೆ ಬೇಡದಕ್ಕಾಗಿ! (ಯೋ)
ಗಿ ನಿರಂಜನಾದಿತ್ಯ ತ್ಯಾಗಿ!!!

ಕಾದು, ಕಾದು ಕಪ್ಪಾಗಾಯಿತಯ್ಯಾ!   5(2677)

ದುಡಿಮೆಗಿದೇ ಫಲವೇನಯ್ಯಾ?
ಕಾಯ ಹೇಗಿದ್ದರೆನಗೇನಯ್ಯಾ?
ದುರ್ವ್ಯಾಪಾರ ನನ್ನಲ್ಲಿಲ್ಲವಯ್ಯಾ!
ರುಣೆ ನನ್ನ ಮೇಲಿರಲಯ್ಯಾ! (ಅ)
-ಪ್ಪನಂತಾಗದಿರಬಾರದಯ್ಯಾ!
ಗಾದೆ ಸುಳ್ಳಾಗದಿರಬೇಕಯ್ಯಾ! (ಆ)
-ಯಿತೆಲ್ಲಾ ನಿನ್ನಿಚ್ಛೆಯಂತೀಗಯ್ಯಾ!
ಪ್ಪಿದರೆ ಕ್ಷಮಿಸಿ ಬಿಡಯ್ಯಾ! (ಅ)
-ಯ್ಯಾ ನಿರಂಜನಾದಿತ್ಯ ನೀನಯ್ಯಾ!!!

ಕಾಪಾಡುವ ದೇವ ನೀನಪ್ಪಾ!   2(770)

ಪಾಮರರು ನಾವು ನೋಡಪ್ಪಾ! (ಪ)
-ಡುತಿಹೆವು ದುಃಖ ನಾವಪ್ಪಾ!
ರ ಕಟಾಕ್ಷವ ಬೀರಪ್ಪಾ!
ದೇಗುಲ ದೇಹ ನಿನ್ನದಪ್ಪಾ!
ರ ಪಾದಸೇವೆ ನೀಡಪ್ಪಾ!
ನೀನನಾಥ ನಾಥ ಕಾಣಪ್ಪಾ!
ಮಸ್ಕಾರ ನಿನ್ನಡಿಗಪ್ಪಾ! (ಅ)
-ಪ್ಪಾ! ಶ್ರೀ ನಿರಂಜನಾದಿತ್ಯಪ್ಪಾ!!!

ಕಾಪಿ, ತಿಂಡಿ ತುಂಬಿತು ಹೊಟ್ಟೆ! (ಕಾ)   4(1742)

-ಪಿನ ಭಾರ ನಿನಗೇ ಬಿಟ್ಟೆ!
ತಿಂಗಳು, ವರ್ಷ ಏಕ ನಿಷ್ಠೆ! (ಅ)
-ಡಿಗೆರಗಿ ಪ್ರಾರ್ಥನೆ ಇಟ್ಟೆ!
ತುಂಬು ಮನಕಾಗಿಷ್ಟ ಪಟ್ಟೆ!
ಬಿಟ್ಟಿಯಾಗ್ಯೆಲ್ಲವನು ಕೊಟ್ಟೆ! (ಮಾ)
-ತು, ಕತೇಕೆಂಬ ಹಠ ತೊಟ್ಟೆ!
ಹೊಡೆತ ಬಲವಾಗಿ ಕೆಟ್ಟೆ! (ಉ)
-ಟ್ಟೆ, ನಿರಂಜನಾದಿತ್ಯ ಬಟ್ಟೆ!!!

ಕಾಪಿಗೆ ಕಾದಿಹದು ಬಚ್ಚಲು ಬಾಯಿ!   3(1046)

ಪಿಡಿದರಾ ದಾರಿ ನೀನು ಚಿರಸ್ಥಾಯಿ!
ಗೆಳೆತನಕಾದರ್ಶಾಗಿರ್ಪುದಾ ಬಾಯಿ!
ಕಾರ್ಯದಕ್ಷತೆಯಿಂದದು ಚಿರಸ್ಥಾಯಿ!
ದಿನ, ರಾತ್ರಿಯೆಲ್ಲಾ ಸೇವಾತುರಾ ಬಾಯಿ!
ಹುಳಿ, ಖಾರ ಸಮವೆಂಬ ಚಿರಸ್ಥಾಯಿ!
ದುಡಿಯುವುದು ನಿಷ್ಕಾಮದಿಂದಾ ಬಾಯಿ!
ಯಲು ಸಂಗದಿಂದದು ಚಿರಸ್ಥಾಯಿ! (ಹ)
-ಚ್ಚಗೆಲೆ, ಬಳ್ಳಿಗಳಿಗಾಧಾರಾ ಬಾಯಿ! (ಮೇ)
-ಲು, ಕೀಳೆಂಬುದಿಲ್ಲದದು ಚಿರಸ್ಥಾಯಿ!
ಬಾರೆಂಬುದು ಮಲ, ಮೂತ್ರಕ್ಕೂ ಆ ಬಾಯಿ! (ಬಾ)
-ಯಿ ನಿರಂಜನಾದಿತ್ಯ ಕಾಪಿಗಾ ಸ್ಥಾಯಿ!!!

ಕಾಪಿಗೆ ಕಾಯದೆ ನಿರ್ವಾಹವಿಲ್ಲ!   3(1183)

ಪಿರಿದಾಗಿಹುದಿದರರ್ಥವೆಲ್ಲ!
ಗೆಳೆಯನಿಗರಿವಾಗಿಹುದೆಲ್ಲ!
ಕಾಲಮೌಲ್ಯವೆಂದರಿಯಬೇಕೆಲ್ಲ!
ದುನಾಥನಿದ ಸಾರಿದನಲ್ಲ! (ಎ)
-ದೆಗುಂದದಭ್ಯಾಸದಿಂದಾಗ್ವುದೆಲ್ಲ!
ನಿರ್ಮಲವಾಗಬೇಕು ಮನವೆಲ್ಲ! (ಸ)
-ರ್ವಾತ್ಮ ಭಾವವಿರಲಿ ನಿಮಗೆಲ್ಲ!
ರಿಸ್ಮರಣೆಯಾಗಬೇಕೆಲ್ಲೆಲ್ಲ!
ವಿಮಲಾನಂದಕ್ಕನ್ಯ ದಾರಿಯಿಲ್ಲ! (ಬ)
-ಲ್ಲ ನಿರಂಜನಾದಿತ್ಯಾತ್ಮ ಪ್ರಫುಲ್ಲ!!!

ಕಾಪಿಯ ಕುಡಿಸಿದ ಕೌಶಿಕನಾಪ್ತ!   5(2624)

ಪಿತೃವಾಕ್ಯಪರಿಪಾಲಕನೀ ಆಪ್ತ!
ತ್ನಿಸುವೆ ಸಾಕ್ಷಾತ್ಕಾರಕ್ಕೆಂದಾ ಆಪ್ತ!
ಕುವಿದ್ಯೆ, ಹೊಟ್ಟೆ, ಬಟ್ಟೆಗಾಗ್ಯೆಂದಾ ಆಪ್ತ! (ಮಾ)
-ಡಿ ನನ್ನ ಮೇಲನುಗ್ರಹವೆಂದಾ ಆಪ್ತ!
ಸಿರಿತನದಾಸೆನಗಿಲ್ಲೆಂದಾ ಆಪ್ತ!
ಮೆ, ಶಮೆಯಭ್ಯಾಸಿ ತಾನೆಂದಾ ಆಪ್ತ!
ಕೌಟಿಲ್ಯ ತನ್ನಲ್ಲೆಳ್ಳಷ್ಟಿಲ್ಲೆಂದಾ ಆಪ್ತ!
ಶಿರ ಬಾಗುವೆ ಶ್ರೀಪಾದಕ್ಕೆಂದಾ ಆಪ್ತ!
ರುಣೆ ತೋರಿ ಕಾಪಾಡ್ಬೇಕೆಂದಾ ಆಪ್ತ!
ನಾಳೆ, ನಿನ್ನೆಯ ಮಾತೀಗೇಕೆಂದಾ ಆಪ್ತ! (ಲಿ)
-ಪ್ತ ನಿರಂಜನಾದಿತ್ಯನಲ್ಲೆಂದಾ ಆಪ್ತ!!!

ಕಾಪಿಯ ಕೊಟ್ಟಾ ಕೌಶಿಕ ಮಿತ್ರ!   5(2623)

ಪಿನಾಕಧರನಿಗಾಪ್ತಾ ಮಿತ್ರ! (ಜ)
-ಯ ಶ್ರೀ ಗುರುಪಾದಕ್ಕೆಂದಾ ಮಿತ್ರ!
ಕೊಡಾತ್ಮಜ್ಞಾನೆನಗೆಂದಾ ಮಿತ್ರ! (ಕೆ)
-ಟ್ಟಾಚಾರ ಸಾಕೆನಗೆಂದಾ ಮಿತ್ರ!
ಕೌಮಾರಿ ರೂಪಿ ನೀನೆಂದಾ ಮಿತ್ರ!
ಶಿಷ್ಟಚಾರವಳದೆಂದಾ ಮಿತ್ರ!
ರುಣಾನಿಧಿಯದೆಂದಾ ಮಿತ್ರ!
ಮಿಲನದ್ರಲ್ಲಾಗ್ಬೇಕೆಂದಾ ಮಿತ್ರ! (ಮಿ)
-ತ್ರ ನಿರಂಜನಾದಿತ್ಯ ಸರ್ವತ್ರ!!!

ಕಾಮ ಅಪಕಾರಿ, ರಾಮ ಉಪಕಾರಿ!   6(3634)

ದ, ಮತ್ಸರಕ್ಕೆ ಕಾಮ ಜವಾಬ್ದಾರಿ!
ವನ ತಂದೆ ಸ್ಥಿತಿ ಕರ್ತ ಶ್ರೀ ಹರಿ!
ರಮೇಶ್ವರನವನ ಅಂತ್ಯಕಾರಿ!
ಕಾಮಾಕ್ಷಿಯೆನಿಸಿ ಪಾರ್ವತಿ ಉದ್ಧಾರಿ!
ರಿಸಿ, ಮುನಿಗಳ್ಗಿವನ ಹಿಂಸೆ ಭಾರಿ!
ರಾಮ, ಕಾಮಾಂಧ ರಾವಣನ ಸಂಹಾರಿ!
ಹಾಮಹಿಮನಿವ ಅಹಲ್ಯೋದ್ಧಾರಿ!
ರಗಶಯನ ನಾರಾಯಣಾ ಹರಿ!
ವನಜಗೆ ಸಾಯುಜ್ಯವಿತ್ತೋದಾರಿ!
ಕಾದಿದ್ದನುಜನಭೀಷ್ಟಪ್ರದಕಾರಿ! (ಹ)
-ರಿ ನಿರಂಜನಾದಿತ್ಯ ರಾಮನೆಂದರಿ!!!

ಕಾಮ ಕುಲ ಸಕಲ ವ್ಯಾಕುಲ!   5(3253)

ದನಾರಿಯುಂಡಾ ಹಾಲಾಹಲ!
ಕುರುವಂಶವಾಯಿತು ನಿರ್ಮೂಲ!
ಯವಾಯ್ತು ಯದುವಂಶವಲಾ!
ದ್ಧರ್ಮ ಮರೆಯಾಗಿ ಹೋಯ್ತುಲಾ!
ಳ್ಳ, ಸುಳ್ಳರ್ಗಾಯ್ತೀ ಕಾಲವಲಾ! (ಕಾ)
-ಲ ಚಕ್ರದಿಂದ ನುಜ್ಜಾಗ್ವುದೆಲ್ಲಾ!
ವ್ಯಾಪಾರಕ್ಕೆ ಪರಮಾರ್ಥವಲ್ಲಾ!
ಕುಹಕತನ ಬಿಡಬೇಕೆಲ್ಲಾ! (ಬ)
-ಲ ನಿರಂಜನಾದಿತ್ಯಗೀ ಕಾಲ!!!

ಕಾಮ ದಹನ ಆರಿಂದೆಂದು?   6(3630)

ನ ಶಿವಮಯವಾದಂದು!
ತ್ತನಾದರ್ಶಳವಟ್ಟಂದು!
ಗಲಿರುಳ್ತಾನಿಂತಿದ್ದಂದು!
ಡೆ, ನುಡ್ಯಿವಾರ್ಪಣಾದಂತು!
ಗಿನದ್ಮತ್ತಿನದ್ದಿಲ್ದಂದು! (ಬೇ)
-ರಿಂದಹಂಕಾರ ಕಿತ್ತೊಗ್ದಂದು! (ಎಂ)
-ದೆಂದಿಗೂ ತಾನ್ಮೌನಿಯಾದಂದು! (ಅಂ)
-ದು, ನಿರಂಜನಾದಿತ್ಯನಿಂದು!!!

ಕಾಮ ದಹನ ಕಾಮಾಕ್ಷಿ ಮಿಲನ!   1(365)

ಹೇಶನಿಗಾಯ್ತು ತಪೋ ಜೀವನ!
ಕ್ಷಕನ್ಯೆಯ ಮರಣ ಕಾರಣ!
ರನ ತಪೋಜ್ವಾಲೆ ಕಠಣ!
ಗಜೆಯಾಗಿ ದಕ್ಷಜೆ ಜನನ!
ಕಾದಿದ್ದಳವಳು ಸದಾ ಶಿವನ!
ಮಾರನಾಸ್ತ್ರವೆಬ್ಬೆಸಿತು ಹರನ! (ಅ)
-ಕ್ಷಿಯಲಿ ತುಂಬಿಕೊಡಳನಂಗನ! (ಅ)
-ಮಿತಾನಂದ ಗೌರೀಶ್ವರ ಮಿಲನ!
ಕ್ಷ್ಮೀರಮಣನಿಗಾಯ್ತು ವ್ಯಸನ!
ಮೋ! ನಿರಂಜನಾದಿತ್ಯ ಪಾವನ!!!

ಕಾಮ ದಹನ, ಕುಮಾರ ಜನನ!   5(2575)

ಹಾದೇವ ಪಾರ್ವತಿಯರ್ಮಿಲನ! (ಕಂ)
-ದನೆಂದ್ಕರೆದರಾ ಸುಬ್ರಹ್ಮಣ್ಯನ!
ರ್ಷ ತುಂಬಿದನೆಲ್ಲರ್‍ಲ್‍ಕ್ಷಡಾನನ! (ತ)
-ನಯನ ಕಂಡುಬ್ಬಿತುಮಾವದನ!
ಕುಣಿಯಿತ್ಯಿವಗಣ, ನೋಡ್ಯವನ! (ರ)
-ಮಾರಮಣ ಕೊಂಡಾಡಿದನ್ಯಿವನ! (ಸು)
-ರಸಮೂಹಕ್ಕಭಯವಿತ್ತವನ!
ಗದ್ಗುರುವಾಗಿ ಮೆರೆದವನ! (ದಾ)
ವಕುಲ ನಿರ್ನಾಮಗೈದವನ! (ದಿ)
-ನಪ ನಿರಂಜನಾದಿತ್ಯಾವನ!!!

ಕಾಮ ರಾಮನಾದಾಗ ಸೀತಾಮಾತೆ! (ಕ)   6(3927)

-ಮ ರಾವಣನಾದಾಗ ಚಿತಾ ಮಾತೆ!
ರಾಮ, ರಾವಣರ, ಹಿತೈಷೀ ಮಾತೆ!
ಮತಾ ರೂಪಿ ರಾಮ, ಸೀತಾಮಾತೆ!
ನಾಮ, ರೂಪಕ್ಕನುಸರಿಸೀ ಮಾತೆ!
ದಾಶರಥಿಯ ರಾಣೀ ಮಹಾಮಾತೆ!
ರ್ವಿ ರಾವಣನಂತ್ಯಕಾರೀ ಮಾತೆ!
ಒನೆ ಲಿನೆ ಮಿ

ಸಿ
ತಾನೇ ತಾನದಾದಾಗ ಜಗನ್ಮಾತೆ!
ಮಾಯೆಯಿವಳೆಲ್ಲಾ ಲೋಕಕ್ಕೂ ಮಾತೆ! (ಮಾ)
-ತೆ, ಸೀತೆ ನಿರಂಜನಾದಿತ್ಯೈಕ್ಯತೆ!!!

ಕಾಮದಿಂದಾಗ ಎಂಜಲು ತಿಂದ!   6(4305)

ತ್ತೆ ಕ್ರೋಧದಿಂದ ಒದೆ ತಿಂದ!
ದಿಂಬು, ಹಾಸಿಗೆ ಇತ್ಯಾದಿ ತಂದ!
ದಾಸ ನೀನೆನಗೆಂದಾಗೆಸೆದ!
ತಿಗೆಟ್ರೂ ಮತಿಗೆಡ್ಬೇಡ್ಕಂದಾ!
ಎಂದೆಂದಿಗಾಪ್ತ ಗುರು ಗೋವಿಂದ!
ಗಜೀವನವೆಲ್ಲಾ ದುರ್ಗಂಧ! (ಸಿ)
-ಲುಕ್ಬಾರದಿದ್ರಲ್ಲೆಂದ ಮುಕುಂದ! (ಮಾ)
-ತಿಂದಾಡಿ ಎನೂ ಫಲವಿಲ್ಲೆಂದ!
ತ್ತ ನಿರಂಜನಾದಿತ್ಯಾನಂದ!!!

ಕಾಮನ ಒದ್ದಾನು ಯಮನ ಗೆದ್ದಾನು!   5(2690)

ಹಾದೇವ ಸುತ ಕುಮಾರಾಗಿದ್ದಾನು!
ರಹರಿ ಸ್ವರೂಪ ತಾನಾಗಿದ್ದಾನು!
ಲ್ಲೆ ಸಂಸಾರ ಬಂಧನವೆಂದಿದ್ದಾನು! (ಕ)
-ದ್ದಾರೊಡವೆಯನ್ನೂ ಜೀವಿಸದಿದ್ದಾನು!
ನುಡಿದಂತೆ ನಡೆವವನಾಗಿದ್ದಾನು!
ಮ, ನಿಯಮದಿಂದ ಶುದ್ಧಾಗಿದ್ದಾನು!
ತ ಭೇದವಿಲ್ಲದಾತ್ಮನಾಗಿದ್ದಾನು!
ರಕ, ಸ್ವರ್ಗದ ಭ್ರಾಂತಿಲ್ಲದಿದ್ದಾನು!
ಗೆಳೆಯನೀರೇಳು ಲೋಕಕ್ಕಾಗಿದ್ದಾನು! (ಹೆ)
-ದ್ದಾರಿ ನಾಮಸಂಕೀರ್ತನೆಯೆಂದಿದ್ದಾನು!
ನುತಿಪಾತ್ರ ನಿರಂಜನಾದಿತ್ಯಾತ್ಮಾನು!!!

ಕಾಮನ ಜಯಿಸಬೇಕಯ್ಯಾ! (ರಾ)   4(2268)

-ಮರಾಜ ತಾನಾಗಬೇಕಯ್ಯಾ! (ದೀ)
-ನರುದ್ಧಾರಾಗಾಗುವುದಯ್ಯಾ!
ನ್ಮ ಸಾರ್ಥಕವಾಗ್ವುದಯ್ಯಾ! (ತಾ)
-ಯಿಯಾತ್ಮಕ್ಕಾಗ ಶಾಂತಿಯಯ್ಯಾ!
ಕಲ ಸೌಭಾಗ್ಯವಿದಯ್ಯಾ!
ಬೇರಿಲ್ಲ ಎಣೆಯಿದಕಯ್ಯಾ!
ಷ್ಟ ನಷ್ಟವಗಿಲ್ಲವಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾತ್ಮಯ್ಯಾ!!!

ಕಾಮನ ಜಯಿಸಿದವ ಶಿವ!   5(3244)

ಹೇಶನ ಕೆಣಕಿದನವ! (ತ್ರಿ)
-ನಯನ ತೆರೆದನಂಬಕವ! (ಧ್ವ)
-ಜ ಸಹಿತ ಸುಟ್ಟುಹೋದನವ! (ತಾ)
-ಯಿಯಕ್ಷಿಗಳಲ್ಲುಳಿದನವ! (ಬ)
-ಸಿರ್ಕಂಡಿತು ಗುಹನುದಯವ!
ನುಜರ ದಂಡಿಸಿದನವ! (ದೇ)
-ವತೆಗಳಿಗಿತ್ತ ವಿಜಯವ!
ಶಿವ ಪಾರ್ವತಿಗಿತ್ತಾನಂದವ! (ಶಿ)
-ವ ನಿರಂಜನಾದಿತ್ಯನೆಂಬವ!!!

ಕಾಮನ ಮನ ಚಂಚಲ!   6(3345)

(ರಾ)-ಮನ ಮನ ನಿಶ್ಚಂಚಲ!
ರ ಕಾಮದಿಂದ ಬಲ!
(ರಾ)-ಮ ನಿಷ್ಕಾಮದಿಂದ್ಸಬಲ!
ಶ್ವರ ಮಾಯೆ ಚಪಲ!
ಚಂದ್ರಶೇಖರ ಅಚಲ!
ರಾಚರ ಮಾಯಾಜಾಲ! (ಕಾ)
-ಲ ನಿರಂಜನಾದಿತ್ಯಲಾ!!!

ಕಾಮನ ಹೊಡಿ, ರಾಮನ ಹಿಡಿ!   5(2673)

ನಶ್ಯಾಂತಿಗೆ ಇದು ಕೈಪಿಡಿ!
ರ ನಾರಿಯರಿದ್ಮಾಡಿ ನೋಡಿ!
ಹೊತ್ತು ಅನ್ಯಥಾ ಕಳೆಯಬೇಡಿ! (ಅ)
-ಡಿಗಡಿಗಾತ್ಮಚಿಂತನೆ ಮಾಡಿ!
ರಾಗ, ದ್ವೇಷಗಳ ಬಿಟ್ಟುಬಿಡಿ!
ರೆಯದಿದಾಚಾರದಲ್ಲಿಡಿ!
ಶ್ವರದಾಸೆಗಳೆಲ್ಲಾ ಸುಡಿ!
ಹಿಮಗಿರೀಶನನ್ನು ಕೊಂಡಾಡಿ! (ಹಾ)
-ಡಿ ನಿರಂಜನಾದಿತ್ಯನ ಕೂಡಿ!!!

ಕಾಮನನ್ಕೊಚ್ಚಿಕೊಂಡೊಯ್ವಾ ಗಾಳಿ, ಮಳೆಯಲ್ಲ!   6(4038)

ನ್ಮಥನ ಶರೀರ ಸುಟ್ಟ್ರೂ ಆತ ಸತ್ತಿಲ್ಲ!
ಶ್ವರ ಶರೀರವಲ್ಲದೆ ಆತ್ಮನೇನಲ್ಲ! (ತಾ)
-ನ್ಕೊಟ್ಟದ್ದನ್ನು ತಾನೇ ಕಿತ್ತುಕೊಂಡ್ರೆ ತಪ್ಪೇನಿಲ್ಲ! (ಹು)
-ಚ್ಚಿನ ನಾಯಿಯನ್ನೂ ಕೊಲ್ಲದಿದ್ದ್ರಾಗುವುದಿಲ್ಲ!
ಕೊಂದಾದ್ಮೇಲೆ ಹಬ್ಬ ಕಾಗೆ, ಗೂಗೆಗಳಿಗೆಲ್ಲಾ!
ಡೊನ್ಕು ಬಾಲದ ನಾಯಕರ್ಗನ್ಯ ಗತಿಯಿಲ್ಲ! (ಸಾ)
-ಯ್ವ ಹೊತ್ತಿಗಾದರೂ ಬಾಯಿ ಮುಚ್ಚುವುದಲ್ಲಾ!!
ಗಾನ, ನಾಮ ಭಜನೆ ಅದಕ್ಕೆ ಬೇಕಿಲ್ಲವಲ್ಲಾ! (ಕೋ)
-ಳಿಯ ಮೇಲ್ಹಾರುವಾಗಿನಾರ್ಭಟವೇ ಸಾಕಲ್ಲಾ!!
ದ, ಮತ್ಸರವುಳ್ಳವನ ಪಾಡು ಇದೆಲ್ಲಾ! (ಮೂ)
-ಳೆರಸದಷ್ಟು ರುಚಿ ಬೇಳೆ ಸಾರದಕ್ಕಿಲ್ಲ! (ತಾ)
-ಯ, ತಂದೆಯ ಬೀಜಗುಣಕ್ಕಾರೇನ್ಬಾಡಬಲ್ಲ? (ಪು)
-ಲ್ಲ ನಿರಂಜನಾದಿತ್ಯ ನಿಚ್ಛೆಯಂತಾಗಲೆಲ್ಲಾ!!!

ಕಾಮನಳಿಯಲಿ ರಾಮನುಳಿಯಲಿ!   5(3017)

ಹದ್ಭಾಗ್ಯವಿದೆಲ್ಲರಿಗುಂಟಾಗಲಿ!
ರಜನ್ಮವದರಿಂದ ಪಾವನಾಗ್ಲಿ! (ಬ)
-ಳಿಯಲ್ಲಿ ಸೀತಾಂಜನೇಯರೂ ಇರಲಿ!
ಮನ ಭಯವಿದರಿಂದ ತಪ್ಪಲಿ! (ದ)
-ಲಿತ, ದೀನರೆಲ್ಲಾ ಉದ್ಧಾರವಾಗಲಿ!
ರಾಕ್ಷಸರ ವಂಶ ನಿರ್ನಾಮವಾಗಲಿ!
ರ್ತಲೋಕ, ಸ್ವರ್ಗಲೋಕದಂತಾಗಲಿ! (ತ)
-ನುಜರೆಲ್ಲಾ ಲವ, ಕುಶರಂತಾಗಲಿ! (ಬಾ)
-ಳಿದರಿಂದ ಸದಾ ಬೆಳಗುತ್ತಿರಲಿ!
ದುನಾಥ, ರಘುನಾಥರೊಂದಾಗಿರ್ಲಿ! (ಕ)
-ಲಿ ನಿರಂಜನಾದಿತ್ಯಗೆ ಶರಣಾಗ್ಲಿ!!!

ಕಾಮನಿಗಾಗಿ ಮಾಡುವರು ಯಥೇಚ್ಛ ಖರ್ಚು! (ರಾ)   6(4329)

-ಮನಿಗಾಗಿ ಮಾಡುವವರಿಲ್ಲ ಸ್ವೇಚ್ಛಾ ಖರ್ಚು!
ನಿಶಿ ದಿನ ಸ್ಥಾನ ಮಾನಕ್ಕಾಗಿ ಎಲ್ಲಾ ಖರ್ಚು!
ಗಾಳಿ ಗೋಪುರ ಕಟ್ಟುತ್ತಾ ಇದ್ದ ಬುದ್ಧಿ ಖರ್ಚು!
ಗಿರಿಧಾರಿಯ ಕೊಂಡಾಡುವುದಕ್ಕಿಲ್ಲಾ ಖರ್ಚು!
ಮಾತಾ, ಪಿತರ, ಯೋಗಕ್ಷೇಮಕ್ಕಿಲ್ಲಾ ಖರ್ಚು! (ಕು)
-ಡುಕತನಾದಿ ದುರಾಚಾರಕ್ಕೀಗೆಲ್ಲಾ ಖರ್ಚು! (ಭ)
-ವಭಯ ನಿವಾರಣೆಗೆ ಮಾಡರಾರೂ ಖರ್ಚು! (ಕು)
-ರುಕುಲದಾದರ್ಶಗಳಿಗಾಗೀಗೆಲ್ಲಾ ಖರ್ಚು!
ಜ್ಞ ಯಾಗಗಳಿಗೇಕೆಂಬರು ವೃಥಾಖರ್ಚು! (ಯ)
-ಥೇಚ್ಛ ಮಾಡುತ್ತಿರುವರು ಗ್ರಹ ಯಾತ್ರಾ ಖರ್ಚು! (ಸ್ವ)
-ಚ್ಛ ಮನೋವೃತ್ತಿ ಪ್ರಾಪ್ತಿಗೆ ಆಗ್ಲಿ ಧನ ಖರ್ಚು!
ಗನಾಯುಷ್ಯವೆಲ್ಲಾ ಇದಕ್ಕಾಗಿಯೇ ಖರ್ಚು! (ಖ)
-ರ್ಚು, ನಿರಂಜನಾದಿತ್ಯಾನಂದಕ್ಕಾಗ್ಯೆಲ್ಲಾ ಖರ್ಚು!!!

ಕಾಮನಿಗೆ ಕಣ್ಣಿಲ್ಲ, ರಾಮನಿಗೆ ಹುಣ್ಣಿಲ್ಲ!   4(1916)

ಲಿನ ವಾಸನಾ ದೇಹ ರಾಮಗಿಲ್ಲವಲ್ಲಾ!
ನಿರ್ಮಲ ಸ್ವಭಾವ ಕಾಮನಿಗೇನಿಲ್ಲವಲ್ಲಾ!
ಗೆಳೆಯ ರಾಮನಿಗೆ ಸೂರ್ಯನಾಗಿಹನಲ್ಲಾ!
ಳ್ಳ, ಸುಳ್ಳರ ಪಾಲು ಕಾಮನಾಗಿಹನಲ್ಲಾ (ಹೆ)
-ಣ್ಣಿನ ಗುಲಾಮ ಶ್ರೀರಾಮಚಂದ್ರನಲ್ಲವಲ್ಲಾ! (ಕ್ಷು)
-ಲ್ಲ ಕಾಮನಿಗೆ ಮಾನ, ಮರ್ಯಾದೆಯಿಲ್ಲವಲ್ಲಾ!
ರಾಮ ಪೂಜಾರ್ಹನಾಗಿ ಮರೆಯುತಿಹನಲ್ಲಾ! (ಕಾ)
-ಮ ತೇಜೋಹೀನನಾಗಿ ಅಲೆಯುತ್ತಿಹನಲ್ಲಾ!
ನಿಜಾನಂದದಲ್ಲಿ ರಾಮನಿರುತಿಹನಲ್ಲಾ! (ಹೆಂ)
-ಗೆಳೆಯರ ಬೆನ್ನಟ್ಟಿ ಕಾಮ ಓಡುವನಲ್ಲಾ!
ಹುಸಿಯಾಡುವಭ್ಯಾಸ ರಾಮನಿಗಿಲ್ಲವಲ್ಲಾ! (ಬ)
-ಣ್ಣಿಸುತ ಮಾಯೆಯನು ಕಾಮನಿರುವನಲ್ಲಾ! (ಎ)
-ಲ್ಲಕ್ಕೂ ಸಾಕ್ಷಿ ನಿರಂಜನಾದಿತ್ಯಾಗಿಹನಲ್ಲಾ!!!

ಕಾಮನಿಗೆ ಕನಿಕರವಿಲ್ಲ!   6(3418)

ಹಿಳೆ ಹೇಗಿದ್ರೂ ಪರ್ವಾಗಿಲ್ಲ!
ನಿಶಿ, ದಿನವೆಂಬ ಭೇದವಿಲ್ಲ!
(ಗಂ)-ಗೆಯನ್ನೂ ಈಜಾಡಿ ಹೋಗಬಲ್ಲ!
ಳ್ಳತನಕ್ಕೂ ಹೇಸುವುದಿಲ್ಲ!
ನಿಶಾಪಾನಕ್ಕಭ್ಯಂತರವಿಲ್ಲ!
ತ್ತು ಕೊಯ್ಲಿಕ್ಕೂ ಹಿಂಜರಿಯೋಲ್ಲ!
ಕ್ಕಸರ ಗುಣಗಳೇ ಎಲ್ಲಾ!
ವಿಶ್ವಾಸಕ್ಕಂತೂ ಯೋಗ್ಯನೇ ಅಲ್ಲ!
(ಒ)-ಲ್ಲ, ನಿರಂಜನಾದಿತ್ಯನಿದೆಲ್ಲಾ!!!

ಕಾಮನಿಗೆ ಕಾಮಿಯಡಿಯಾಳು   4(2037)

ದನಾರಿಗೆ ಮದನಡ್ಯಾಳು!
ನಿರಂಜನಗಾಂಜನೇಯಡ್ಯಾಳು! (ಗಂ)
-ಗೆಗೆ ಭಗೀರಥ ಅಡಿಯಾಳು!
ಕಾಲ ಪುರುಷಗೆ ಲೋಕಡ್ಯಾಳು!
ಮಿತ್ರನಿಗೆ ಮೈತ್ರೇಯಿ ಅಡ್ಯಾಳು!
ದುಪನಿಗರ್ಜುನಡಿಯಾಳು! (ಚಂ)
-ಡಿಕೇಶ್ವರಗೆಲ್ಲಾ ಗಣಡ್ಯಾಳು! (ಜ)
-ಯಾಪಜಯಕ್ಕೆ ಜೀವಡಿಯಾಳು! (ಹೇ)
-ಳು, ನಿರಂಜನಾದಿತ್ಯಾರಡ್ಯಾಳು???

ಕಾಮನೊಳಗೆ ಬಿಟ್ಟೆ ಕಳ್ಕೊಂಡೆ ಬಟ್ಟೆ!   5(2627)

ನಸೇಚ್ಛೆ ಎಲ್ಲೆಲ್ಲೋ ನೀನೋಡಾಡ್ಬಿಟ್ಟೆ!
ನೊಸಲನ್ನಾಮೇಲೆ ನೀನ್ಚಚ್ಚಿಕೊಂಡ್ಬಿಟ್ಟೆ! (ಬ)
-ಳಲಿ ಬೆಂಡಾಗಿ ಸದಾ ರೋಗಿಯಾಗ್ಬಿಟ್ಟೆ!
ಗೆಳೆಯರೆನ್ಸಿದವ್ರಿಂದ ಬೇರಾಗ್ಬಿಟ್ಟೆ!
ಬಿಟ್ಟು ಹೋಗದ ಕೆಟ್ಟಾಸೆಗೀಡಾಗ್ಬಿಟ್ಟೆ! (ಹೊ)
-ಟ್ಟೆಗೂ ಹಿಟ್ಟು ಸೇರದೆ ಚಡ್ಪಡಿಸ್ಬಿಟ್ಟೆ!
ರುಣೆ ಬಾರದೇ ದೇವ್ರಿಗೆಂದತ್ಬಿಟ್ಟೆ! (ಕೇ)
-ಳ್ಕೊಂಡು ಸದ್ಗುರುಸನ್ನಿಧಿಗೆ ಬಂದ್ಬಿಟ್ಟೆ! (ಬಿ)
-ಡೆ ನಿನ್ನ ಪಾದವಿನ್ನೆಂದು ಭಾಷೆ ಕೊಟ್ಟೆ!
ದಲಿಲ್ಲದೊಲವಿನಲ್ಮುಳುಗ್ಬಿಟ್ಟೆ! (ದಿ)
-ಟ್ಟೆ, ನಿರಂಜನಾದಿತ್ಯ ನೀನಾಗ್ಬಿಟ್ಟೆ!!!

ಕಾಮಹರನೆನಿಸಿ ಶಿವನಿರುವ! (ಕಾ)   6(4359)

-ಮ ಕಾಯಕೋಟಿಯಲ್ಲಿರುತ್ತ ಮೆರೆವ!
ರಿಯಾಡಳಿತದಲ್ಲಾತನಿರುವ! (ನ)
-ರ, ಸುರಾದಿಗಳ್ಸಹಿಸರುಪದ್ರವ!
ನೆನೆಯದಿದ್ದರೂ ದರ್ಶನ ಕೊಡುವ!
ನಿಶ್ಚಲ, ಭಾವ, ಭಕ್ತಿಯ ಕೆಡಿಸುವ!
ಸಿಹಿದೋರಿ ಕಹಿಮಾಳ್ಪ ಸಂಸಾರವ!
ಶಿಕ್ಷೆಯಿತ್ತು, ರಕ್ಷಿಸೆನ್ನನೆನಿಸುವ!
ರಗುರುವನ್ನು ಮೆರೆಸಿರಿಸುವ!
ನಿಶಿ, ದಿನ ತೊಳಲಿ ಬಳಲಿಸುವ! (ಕ)
-ರುಣೆಗಾಗಿ ಕೈ ಜೋಡಿಸಿ ಬೇಡಿಸುವ! (ಶಿ)
-ವ ನಿರಂಜನಾದಿತ್ಯೇಚ್ಛೆಯೆಂದಿರುವ!!!

ಕಾಮಾ! ಶ್ರಿರಾಮಸೇವೆಯಾರಾಮಾ!   4(1956)

ಮಾತಾ ಪಿತರ ಹಾಗಿರೋ ಕಾಮಾ!
ಶ್ರಿ

ಪತಿ ಸೀತಾಪತಿಯಾರಾಮಾ!
ರಾತ್ರಿ, ದಿನೇಂದ್ರಿಯ ದಾಸಾ ಕಾಮಾ!
ದನಾರಿಯಾಪ್ತ ರಘುರಾಮಾ!
ಸೇರು ನೀನವನನ್ನೀಗ ಕಾಮಾ!
ವೆಗ್ಗಳದಾನಂದವೀವಾ ರಾಮಾ!
ಯಾಕೀ ದುರ್ಬುದ್ಧಿ ನಿನಗೆ ಕಾಮಾ?
“ರಾಮ ರಾಮ ಜಯ ರಾಜಾ ರಾಮಾ! (ರಾ)
-ಮಾ ನಿರಂಜನಾದಿತ್ಯ ನಿಷ್ಕಾಮಾ!!!

ಕಾಮಾಕ್ಷಿಯಾಗಿಹಳೀ ಹೆಣ್ಣು!   4(2360)

ಮಾತೆ ಸಕಲರಿಗೀ ಹೆಣ್ಣು! (ಸಾ)
-ಕ್ಷಿಯಲ್ಲಕ್ಕಾಗಿಹಳೀ ಹೆಣ್ಣು! (ನ್ಯಾ)
-ಯಾನ್ಯಾಯ ಬಲ್ಲವಳೀ ಹೆಣ್ಣು! (ಯೋ)
-ಗಿರಾಜನಿಗರ್ಧಾಂಗೀ ಹೆಣ್ಣು!
ರ್ಷವಾಗಿರುವಳೀ ಹೆಣ್ಣು! (ಬಾ)
-ಳೀರೀತಿಯಿಂದ ಸುಖೀ ಹೆಣ್ಣು! (ಇ)
-ಹೆನೆಲ್ಲರಲ್ಲೆಂಬಳೀ ಹೆಣ್ಣು! (ಹೆ)
-ಣ್ಣು, ನಿರಂಜನಾದಿತ್ಯಾ ಹೆಣ್ಣು!!!

ಕಾಮಿಗಿಲ್ಲ ಖರ್ಚಿನ ಹಿಡಿತ!   6(3311)

ಮಿತವ್ಯಯವಿಲ್ಲದೇ ಪತಿತ! (ರಾ)
-ಗಿ, ಭತ್ತದಲ್ಲೂ ದುರಾಡಳಿತ! (ಬ)
-ಲ್ಲವರ ಮಾತನ್ನು ಕೇಳನಾತ!
ತಿಗೊಂಡಾಗ ಕಿರಾತನಾತ! (ಬ)
-ರ್ಚಿ, ಈಟಿಗೂ ಕೈಹಾಕುವನಾತ!
ತದೃಷ್ಟನಾಗಳಿವನಾತ!
ಹಿತಾಹಿತವನ್ನರಿಯನಾತ! (ತಿಂ)
-ಡಿಪೋತನಾಗ್ನರಳುವನಾತ! (ಸಂ)
-ತ ನಿರಂಜನಾದಿತ್ಯಗಾಗ್ಲಾತ!!!

ಕಾಮಿನಿ, ಕಾಂಚನದಾಸೆ ಕಾಲನಿಗಿಂತ ಕ್ರೂರ!   6(3890)

ಮಿತಿಯಿಲ್ಲದ್ದರಿಂದವುಗಳು ಬಹಳ ಕ್ರೂರ!
ನಿತ್ಯಾನಂದ ಸುಖಕ್ಕಿದು ಕೊಡಲಿಯ ಪ್ರಹಾರ!
ಕಾಂತಿ ಕುಂದಿಸುವುದೀ ಭೀಕರಾಯುಧ ಪ್ರಹಾರ!
ರಾಚರಾತ್ಮನನ್ನು ಮರೆಸುವುದೀ ವಿಚಾರ!
ಷ್ಟ, ಕಷ್ಟಕ್ಕೆ ಗುರಿಯಾಗುವ ಈ ಆಶಾತುರ!
ದಾಸ್ಯ ಶೃಂಖಲೆಯಲ್ಲಿ ಬಂಧಿಪನವನ ಮಾರ!
ಸೆರೆಯಲ್ಲಿ ನರಳಿ ಸಾಯುವನಜ್ಞಾನೀ ನರ!
ಕಾಪಾಡಬೇಕೆಲ್ಲರನ್ನೀ ಸ್ಥಿತಿಯಲ್ಲಿ ಶ್ರೀಧರ!
ಕ್ಷ್ಮಿಗಿತ್ತಂತಾಶ್ರಯವಿತ್ತು ರಕ್ಷಿಸಲೆಲ್ಲರ!
ನಿಶಿ, ದಿನ, ಮೊರೆಯಿಡುತ್ತಿರುವೆಲ್ಲಾ ಭಕ್ತರ! (ಹಂ)
-ಗಿಂದ ಬಿಡುಗಡೆ ಮಾಡೀ ಸಂಸಾರೀ ಪಾಮರರ!
ಪಿಸುತಿರುವುದವರನ್ನೀ ಘೋರ ಸಂಸಾರ!
ಕ್ರೂರ ವೈರಿಗಳನ್ನೀಗ ಮಾಡಬೇಕು ಸಂಹಾರ! (ವ)
ಗುರು ದತ್ತಾತ್ರೇಯ ನಿರಂಜನಾದಿತ್ಯಾಕಾರ!!!

ಕಾಮ್ಯಾರ್ಥಿಗಳಿಗೆಷ್ಟು ಕೊಟ್ರೇನು? (ಭೂ)   5(2682)

-ಮ್ಯಾಕಾಶ ಸುತ್ತುವುದು ಬಿಟ್ಟ್ರೇನು? (ಆ)
-ರ್ಥಿಕ ತೃಪ್ತಿ ಎಂದಾದ್ರೂ ಪಟ್ಟ್ರೇನು? (ತ್ಯಾ)
-ಗದಿಂದ ಯಾರಾದ್ರೂ ಕೆಟ್ಟ್ರೇನು? (ಊ)
-ಳಿಗಕ್ಕವರ್ಯಾತ್ರೆ ಹೊರಟ್ರೇನು? (ಹ)
-ಗೆಗಳಿಗಾದ್ರೂ ಕಷ್ಟ ಕೊಟ್ರೇನು? (ಅ)
-ಷ್ಟು, ಇಷ್ಟು ಬೇಕೆಂದೆಂದಾದ್ರಟ್ಟ್ರೇನು?
ಕೊಟ್ಟುದ ಸಿಟ್ಟಿಂದ ಸುಟ್ಟಟ್ಟ್ರೇನು? (ಕೊ)
-ಟ್ಟ್ರೇನ್ಬಿಟ್ಟ್ರೇನಾನಂದವಾಗಿಲ್ವೇನು? (ಸೂ)
-ನು ನಿರಂಜನಾದಿತ್ಯಾಗಾಗ್ನೀನು!!!

ಕಾಮ್ಯಾರ್ಥಿಯಾಗಿ ಕಾಲವಶವಾಗ್ಬೇಡ! (ಭೂ)   6(3720)

-ಮ್ಯಾಕಾಶಾದಿ ಲೋಕಗಳಿಗಾಶಿಸ್ಬೇಡ! (ಪಾ)
-ರ್ಥಿವ ದೇಹ ಸಂಬಂಧಕ್ಕೊಳಗಾಗ್ಬೇಡ!
ಯಾರಿಂದಲೂ ಏನನ್ನೂ ಬಯಸಬೇಡ! (ಹಂ)
-ಗಿಲ್ಲದ ಲಿಂಗಕ್ಕೆ ಶರಣಾಗ್ದಿರ್ಬೇಡ!
ಕಾಲ, ದೇಶಕ್ಕೆ ಹೊಂದಿಕೊಳ್ಳದಿರ್ಬೇಡ!
ಕ್ಷ್ಯ ಪರಮಾತ್ಮನಲ್ಲಿಡದಿರ್ಬೇಡ!
ರ್ಣಾಶ್ರಮ ಧರ್ಮಕ್ಕಪಾರ್ಥ ಮಾಡ್ಬೇಡ!
ಮೆ, ದಮೆಯಭ್ಯಾಸ ಬಿಟ್ಟಿರಬೇಡ!
ವಾದ, ವಿವಾದದಲ್ಲಿ ಕಾಲ ಹಾಕ್ಬೇಡ! (ಆ)
-ಗ್ಬೇಡ, ದುರಭ್ಯಾಸಕ್ಕೆ ಬಲಿಯಾಗ್ಬೇಡ! (ಮೃ)
-ಡ ನಿರಂಜನಾದಿತ್ಯ, ಸಂದೇಹ ಬೇಡ!!!

ಕಾಯ ಕಂದನಿಗಾಗಿರಲಮ್ಮಾ! (ಬಾ)   4(1407)

-ಯ ರುಚಿಗದ ಬಿಡಬೇಡಮ್ಮಾ!
ಕಂಗೆಟ್ಟರೆ ಕಷ್ಟ ತಪ್ಪದಮ್ಮಾ! (ಉ)
-ದರ ಶಾಂತಿಗಾಗ್ಯನ್ನ ನೀಡಮ್ಮಾ!
ನಿತ್ಯ ನೇಮವಿದಕೆ ಬೇಕಮ್ಮಾ! (ಆ)
-ಗಾಗೇನನ್ನೂ ಕೊಡಬಾರದಮ್ಮಾ! (ಹೀ)
-ಗಿದ್ದರೆ ನೆಮ್ಮದಿ ನಿನಗಮ್ಮಾ! (ನೀ)
-ರತ್ಯಂತುತ್ತಮ ಪಾನೀಯವಮ್ಮಾ! (ಕ)
-ಲಹವಾದರೆ ಕಂದನಿರನಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾ ಕಂದಮ್ಮಾ!!!

ಕಾಯದಾಗದಿಷ್ಟ ಸಿದ್ಧಿಯಯ್ಯಾ! (ಕಾ)   4(1585)

-ಯಕ್ಲೇಶಕ್ಕಂಜದಿರಬೇಕಯ್ಯಾ!
ದಾಸಿ ಮೀರಾಳಾದರ್ಶವದಯ್ಯಾ!
ಜೇಂದ್ರನ ಭಕ್ತಿ ಹಾಗಿತ್ತಯ್ಯಾ!
ದಿನ, ರಾತ್ರಿ ಮೂರೆಯಿಟ್ಟನಯ್ಯಾ! (ದು)
-ಷ್ಟ ನಕ್ರನ ಕಾಟ ತಪ್ಪಿತಯ್ಯಾ! (ಘಾ)
-ಸಿಯಾಗದು ಗುರುಭಕ್ತಗಯ್ಯಾ! (ಸಿ)
-ದ್ಧಿ ವಿನಾಯಕ ರೂಪವನಯ್ಯಾ!
ದುಪತಿಯ ಬೋಧೆಯದಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಸಾಕ್ಷ್ಯಯ್ಯಾ!!!

ಕಾಯುತಿಹ ಶಿವರಾತ್ರಿ ಸ್ವಾಮಿಯಿಲ್ಲಿ!   4(1729)

ಯುಕ್ತ ಸೇವೆಯ ನಿರೀಕ್ಷಾನಂದದಲ್ಲಿ!
ತಿತಿಕ್ಷಾ ಪರಿಪೂರ್ಣ ಸ್ವಭಾವದಲ್ಲಿ!
ಗಲು, ರಾತ್ರಿಯರಿವಿರದೀಗಿಲ್ಲಿ!
“ಶಿವಾಯ ನಮಃ ಓಂ” ಮಂತ್ರ ಜಪದಲ್ಲಿ! (ಭ)
-ವರೋಗ ನಿವಾರಣಾ ವೈದ್ಯನಾಗಿಲ್ಲಿ!
ರಾರಾಜಿಸುತಿಹ ಯೋಗಾನಂದದಲ್ಲಿ!
ತ್ರಿಲೋಕೋದ್ಧಾರದ ಮಹಾ ಕಾರ್ಯದಲ್ಲಿ!
ಸ್ವಾಯಂಭು ತಾನಾಗಿ ಮೈಮರೆತಿಂದಿಲ್ಲಿ!
ಮಿತ್ರ ತಾನೆಂಬ ನಿತ್ಯ ನಿಯಮದಲ್ಲಿ! (ಬಾ)
-ಯಿ ಮೊದಲಾದಿಂದ್ರಿಯ ನಿಗ್ರಹದಲ್ಲಿ! (ಎ)
-ಲ್ಲಿ? ನೋಡಿಲ್ಲಿ ನಿರಂಜನಾದಿತ್ಯನಲ್ಲಿ!!!

ಕಾರಣ ಕಲ್ಪಿಸಿ, ಕಾರ್ಯ ಸಾಧಿಸುವ ಜಾಣ ನೀನು!   6(3923)

ಹಸ್ಯವಿದನ್ನರಿಯದೇ ದೂರುವರನ್ಯರನು! (ಗ)
-ಣಪತಿಯಿಂದ ವ್ಯಾಸಭಾರತ ಬರೆಸಿಲ್ವೇ ನೀನು?
ರ್ತವ್ಯವೆಂಬ ಹುಚ್ಚು ಹಿಡಿಸಿ ಮೌನಿಯಾದೆ ನೀನು! (ಶಿ)
-ಲ್ಪಿ ಕೆತ್ತಿರುವ ಮೂರ್ತಿಗೆ ಪೂಜಿಸಿಕೊಳ್ಳುವೆ ನೀನು!
ಸಿಕ್ಕದಂತೆ ನಿನ್ನೊಳಗುಟ್ಟ ಬಚ್ಚಿಟ್ಟಿರುವೆ ನೀನು!
ಕಾಮದಹನಕ್ಕೇನೂ ಅನ್ನದ ಕಾಮನಪ್ಪ ನೀನು! (ಕ್ರೌ)
-ರ್ಯವಿದು ನಿನ್ನದೆಂದರೆ ನಿರಾಕರಿಸುವೆ ನೀನು!
ಸಾರ್ವಭೌಮ ನೀನಾದ್ರೂ ಚರಾಚರ ವ್ಯಾಪಕ ನೀನು!
ಧಿಕ್ಕರಿಸಿದವರನ್ನು ಸತ್ಕರಿಸುವ ನೀನು!
ಸುಖಾಪೇಕ್ಷಿಯೆಂತಿರ್ಬೇಕೆಂಬಾದರ್ಶಕ್ಕಂತಿರ್ಪೆ ನೀನು!
ಸುದೇಶನಾದ್ರು ಸುಧಾಮನಾತಿಥ್ಯ ಗೈದೆ ನೀನು!
ಜಾರ, ಚೋರನೆನಿಸಿದ್ರೂ ಸರ್ವರಾರಾಧ್ಯನು ನೀನು! (ಕೋ)
-ಣ ಜಪ ಮಾಡಿಸಿ ಜಾಣನನ್ನಾಗಿಸಿದವ ನೀನು!
ನೀಚೋಚ್ಚವೆನ್ನದೆ ಅರ್ಜುನಗಾದೆ ಸಾರಥಿ ನೀನು!
ನುಡಿಯದೇ ಸೇವೆ ಗೈವ ನಿರಂಜನಾದಿತ್ಯ ನೀನು!!!

ಕಾರಣವರಿತು ಕಷ್ಟ, ನಷ್ಟದಿಂದೆದ್ದೇಳು!   6(3793)

ಸ ವಿರಸವಾಗದಂತೆಚ್ಚರದಿಂದೇಳು! (ಗ)
-ಣಪತಿಯಿಂದ ಸದಾ ಸದ್ಗುಣವನ್ನೇ ಕೇಳು!
ರಗುರುವಿನಾಜ್ಞಾಧಾರಕನಾಗಿ ಬಾಳು! (ಪ)
-ರಿ ಪರಿಯಾಸೆಗಳಿಗೊಳಗಾದರೆ ಗೋಳು!
ತುರಿಯಾತೀತಾತ್ಮನಾಗಿ ನೀನೀಗ ಅರಳು!
ಲಿಮಲ ತೊಳೆಯದಿದ್ದರೆ ನೀನ್ಮರುಳು! (ದು)
-ಷ್ಟ ಸಹವಾಸದಿಂದ ಬಲು ದೂರ ತೆರಳು!
ವ ನಾಗರಿಕತೆಯಲ್ಲೇನಿದೆ ತಿರುಳು? (ಶಿ)
-ಷ್ಟ ಸಂಪ್ರದಾಯವೆಂಬುದೀಗ ಕಾಲಿನ ಧೂಳು!
ದಿಂಡಾಗಿ ಬೆಳೆದ ಮೂತ್ರಕ್ಕಾಗನವನಾಳು! (ತಂ)
-ದೆ, ತಾಯಿ ದೇವರೆಂದು ಧೈಯದಿಂದೀಗ ಹೇಳು! (ಇ)
-ದ್ದೇನವನಿಗಾಗಿ ಎಂದು ತಿನ್ನತ್ತಿರು ಕೂಳು! (ಏ)
-ಳು ನಿರಂಜನಾದಿತ್ಯನಾಗಿ ನೀನೀಗೆದ್ದೇಳು!!!

ಕಾರಣವಿಲ್ಲದೆ ಕಾರ್ಯವಿಲ್ಲ!   5(3149)

ಮಣನಿಲ್ಲದೆ ಭಾರ್ಯೆಯಿಲ್ಲ! (ಪ್ರಾ)
-ಣವಿರದಿದ್ದರೆ ತ್ರಾಣವಿಲ್ಲ!
ವಿಶ್ವಾಸವಿಲ್ಲದೆ ಭಕ್ತಿಯಿಲ್ಲ! (ಬ)
-ಲ್ಲವರಿಲ್ಲದೆ ಸದ್ವಿದ್ಯೆಯಿಲ್ಲ! (ತಂ)
-ದೆಯಿರದಿದ್ದರೆ ಮಗನಿಲ್ಲ!
ಕಾಸಿಲ್ಲದೇನೂ ಸಿಕ್ಕವುದಿಲ್ಲ! (ಸೂ)
-ರ್ಯನಿಲ್ಲದಿದ್ರೆ ಪ್ರಪಂಚವಿಲ್ಲ!
ವಿಕಲ್ಪವೆಲ್ದೆ ವಿರೋಧವಿಲ್ಲ! (ಎ)
-ಲ್ಲ ನಿರಂಜನಾದಿತ್ಯ ತಾ ಬಲ್ಲ!!!

ಕಾರುರುಳಿದಾಗಾರು ಕಾಯ್ದರಮ್ಮಾ? [ಗು]   4(2096)

-ರುದೇವನಲ್ಲದಿನ್ಯಾರು ಮಾಲಮ್ಮಾ? (ಅ)
-ರುಹುವರಾರವನ ಲೀಲೆಯಮ್ಮಾ? (ಬ)
-ಳಿಯಿದ್ದರೂ ನಿರ್ಭಾಗ್ಯರ್ಕಾಣರಮ್ಮಾ!
ದಾರಿ ತಪ್ಪದಂತೆಚ್ಚರಿಪನಮ್ಮಾ!
ಗಾಢ ವಿಶ್ವಾಸವನಲ್ಲಿಡ್ಬೇಕಮ್ಮಾ! (ಇ)
-ರುವನವ ನಿನ್ನಂತರ್ಯಾಮ್ಯಾಗಮ್ಮಾ!
ಕಾಲಾಕಾಲವೆನ್ನದೇ ಧ್ಯಾನಿಸಮ್ಮಾ! (ಕಾ)
-ಯ್ದನಂದು ದ್ರೌಪದಿಯ ಮಾನವಮ್ಮಾ! (ಇ)
-ರಲ್ಯವನ ನೆನಪು ಸತತಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಾನಂದವ್ನಮ್ಮಾ!!!

ಕಾರ್ಯ ಶುದ್ಧಾರ್ಯ, ವೃದ್ಧಾತ್ಮಾ ಸಿದ್ಧ! (ಕಾ)   4(1465)

-ರ್ಯ, ಕಾರಣ, ತಾನಾದಾತ್ಮಾ ಸಿದ್ಧ!
ಶುದ್ಧ ಸಚ್ಚಿದಾನಂದಾತ್ಮಾ ಸಿದ್ಧ! (ಶ್ರ)
-ದ್ಧಾ, ಭಕ್ತಿಯನುಪಮಾತ್ಮಾ ಸಿದ್ಧ! (ಧೈ)
-ರ್ಯ, ಸ್ಥೈರ್ಯ ವೀರ್ಯವಂತಾತ್ಮಾ ಸಿದ್ಧ!
ವೃತ್ತಿ ರಹಿತ ಯೋಗಾತ್ಮಾ ಸಿದ್ಧ! (ಉ)
-ದ್ಧಾರ ಕರ್ತ ಶ್ರೀ ದತ್ಮಾತ್ಮಾ ಸಿದ್ಧ! (ಆ)
-ತ್ಮಾರಾಮ ಶಿವಾನಂದಾತ್ಮಾ ಸಿದ್ಧ! (ರಿ)
-ಸಿ, ಮುನಿ ಶಿರೋಮಣ್ಯಾತ್ಮಾ ಸಿದ್ಧ! (ವೃ)
-ದ್ಧ ನಿರಂಜನಾದಿತ್ಯಾತ್ಮಾ ಸಿದ್ಧ!!!

ಕಾರ್ಯ, ಕಾರಣದರಿವಿರಬೇಕು! (ಸ್ಥೈ)   6(4378)

-ರ್ಯ, ಧೈರ್ಯದಿಂದ ಸಾಧಿಸ ಬೇಕು!
ಕಾಮಾತುರತೆಯಿರದಿರ ಬೇಕು!
ಣಧೀರರಾಮ ತಾನಾಗ ಬೇಕು! (ಬಾ)
-ಣದಲ್ಲಿ ಮಂತ್ರ ಶಕ್ತಿಯಿರ ಬೇ

ಕು!
ಯೆ ಶರಣರ ಮೇಲಿರ ಬೇಕು! (ವೈ)
-ರಿ ನಿಗ್ರಹಾಗ್ರಗಣ್ಯನಾಗಬೇಕು!
ವಿಶ್ವನಾಥನ ಧ್ಯಾನವಿರಬೇಕು! (ಪ)
-ರಮಾರ್ಥಿದಗತ್ಯ ಬೇಕೇ ಬೇಕು!
ಬೇರೆಲ್ಲವನ್ನೂ ಕಡೆಗಾಣ ಬೇಕು! (ಟಾ)
-ಕು ನಿರಂಜನಾದಿತ್ಯನಾಗ ಬೇಕು!!!

ಕಾರ್ಯಕ್ರಮದೇರ್ಪಾಡಿನಿಂದಲ್ಪ ಸುಖ! (ಕಾ)   6(4218)

-ರ್ಯಕ್ರಮ ಯಶಸ್ವಿಯಗದಿದ್ದ್ರೆ ದುಃಖ!
ಕ್ರಮ, ಶಿಸ್ತು, ಪಾಲನೆಯಲ್ಲಿಲ್ಲ ಲೋಕ!
ನಸೇಚ್ಛಾ ವರ್ತಿಸುವವರೇ ಅನೇಕ!
ದೇಶದಲ್ಲೀಗಿಲ್ಲ ವಿಚಾರ ವಿವೇಕ! (ಇ)
-ರ್ಪಾಗುಪಯೋಗಿಸದಿದ್ದ್ರೇಕೆ ಕನಕ? (ಅ)
-ಡಿಗಡಿಗೆ ಯೋಚ್ಸಿದನಿದ ಜನಕ!
ನಿಂದಾ, ಸ್ತುತಿಯನ್ನಿಚ್ಛಿಸ ವಿನಾಯಕ!
ಮೆ, ಶಮೆಯಿಂದವ ಶುದ್ಧ ಸ್ಫಟಕ! (ಅ)
-ಲ್ಪ ಸುಖಕ್ಕಾಗಿ ಮಾಡನವ ಕಾಯಕ!
ಸುಬ್ರಹ್ಮಣ್ಯ ಗುರಿಯವಗೇಕೆ ನಾಕ? (ಸು)
-ಖ, ನಿರಂಜನಾದಿತ್ಯಾನಂದವೇ ಸುಖ!!!

ಕಾಲ ಕಾದಿದ್ದ ತೆಂಗಿನಕಾಯಿ! (ಕೆ)   1(218)

-ಲ ಕಾಲದ ಹಿಂದೆ ಬಿತ್ತಾ ಕಾಯಿ!
ಕಾರಣಾಂತರದಿಂದಿಲ್ಲಿತ್ತಾ ಕಾಯಿ!
ದಿನ ಕಳೆದಂತೊಣಗಿತಾ ಕಾಯಿ! (ಸ)
-ದ್ದಡಗಿ ಗಿಟಿಕಾಗುತ್ತಿತ್ತಾ ಕಾಯಿ!
ತೆಂಗಿನ ಕಾಯ್ಬಣ್ಣಾಗುಂದಿತ್ತಾ ಕಾಯಿ! (ಬ)
-ಗಿಯಲ್ಪಡಲು ಕಾಯುತ್ತಿತ್ತಾ ಕಾಯಿ!
ಮ್ರವಾಗೊಳಗಿರುತ್ತಿತ್ತಾ ಕಾಯಿ!
ಕಾಮ ಜಲ ಕಾಲಿಯಾಗಿತ್ತಾ ಕಾಯಿ!
ಯಿದೇ ನಿರಂಜನಾದಿತ್ಯನಾ ಕಾಯಿ!!!

ಕಾಲ ಕಾದಿರಿ ನೀವೆಲ್ಲಾ! (ಮ)   4(2361)

-ಲವೆತ್ತಿ ಹಾಕಬೇಕೆಲ್ಲಾ!
ಕಾರಣ ಕೇಳ್ಯಾಮೇಲೆಲ್ಲಾ!
ದಿವ್ಯ ರೂಪ ನಿಮ್ಮದೆಲ್ಲಾ! (ತ)
-ರಿಯಿರರಿಗಳನೆಲ್ಲಾ!
ನೀಡಿಹೆನೆನ್ನ ಶಕ್ತ್ಯೆಲ್ಲಾ! (ಸಾ)
-ವೆನ್ನ ನಂಬಿದವರ್ಗಿಲ್ಲಾ! (ಬ)
-ಲ್ಲಾ ನಿರಂಜನಾದಿತ್ಯೆಲ್ಲಾ!!!

ಕಾಲ ಕಾಯುವುದು ಕಷ್ಟವಯ್ಯಾ!   2(764)

ಕ್ಷ್ಯ ಸದಾ ನಿನ್ನಲೆನ್ನದಯ್ಯಾ!
ಕಾಣುವುದೆಂದಾ ಸಾಕಾರವಯ್ಯಾ!
ಯುಕ್ತಾನುಗ್ರಹವಾಗಬೇಕಯ್ಯಾ! (ಸಾ)
-ವು, ಇಂದೋ ಮುಂದೋ ಕಾದಿಹುದಯ್ಯಾ!
ದುರಾಗ್ರಹವೆನಗಿಲ್ಲವಯ್ಯಾ!
ಣ್ಣಿಂದ ಕಂಡೊಂದಾಗಬೇಕಯ್ಯಾ! (ಭ್ರ)
-ಷ್ಟನೆಂದೆನ್ನ ನೀ ದೂಡಬೇಡಯ್ಯಾ!
ರ ಗುರು ನೀನಲ್ಲವೇನಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಬಾರಯ್ಯಾ!!!

ಕಾಲ ಬಂದಾಗಾಗಲಪ್ಪಾ!   2(548)

ಕ್ಷ್ಯ ಸ್ಥಿರವಿರಲಪ್ಪಾ!
ಬಂದೇ ಬರುವನವಪ್ಪಾ!
ದಾರಿ ಸದಾ ಕಾದಿರಪ್ಪಾ!
ಗಾಳಿ ಬೀಸುತಿದೆಯಪ್ಪಾ!
ಗನ ಶುಭ್ರಾಗಲಪ್ಪಾ! (ಜ)
-ಲಧಾರೆ ಹರಿಯಲಪ್ಪಾ! (ಬ)
-ಪ್ಪಾ ನಿರಂಜನಾದಿತ್ಯಪ್ಪಾ!!!

ಕಾಲ ಬರುವ ತನಕ ಕಾಲ ಕಳೆವುದೆಂತು? (ಫ)   4(2129)

-ಲ ಕಾಣದಿದ್ದರೆ ಧರ್ಮ, ಕರ್ಮ, ಸಾಗುವುದೆಂತು?
ರಡಾಕಳ ಸಾಕಿ ತೃಪ್ತಿಯಿಂದಿರುವುದೆಂತು? (ಕ)
-ರುಣೆಯಿಲ್ಲದ ನಲ್ಲನೊಡನಿರುವುದದೆಂತು?
ರಿಸಿದ ಮೇಲೆ ಸೇವೆ ಮಾಡದಿರುವುದೆಂತು?
ತ್ವವೇತ್ತ ಕತ್ತೆಯಾದರೆ ಮುಕ್ತನಾಗ್ವುದೆಂತು?
ರ, ನಾರಾಯಣನಲಕ್ಷಿಸಿದ್ರೊಪ್ಪವುದೆಂತು?
ರ, ಚರಣವಿಲ್ಲದೆ ಕರ್ತವ್ಯ ಮಾಳ್ಪುದೆಂತು?
ಕಾಮ ಹೋಗದೆ ಶ್ರೀರಾಮ ವಿರಾಜಿಸುವುದೆಂತು?
ಕ್ಷ್ಯೈಹಿಕಕ್ಕಾದರೆ ಪರಲೋಕ ಪ್ರಾಪ್ತಿಯೆಂತು?
ಟ್ಟಿ ಹಾಕಿದರೆ ಇಷ್ಟಸಿದ್ಧಿಯಾಗುವುದೆಂತು? (ಮ)
-ಳೆ ಬೀಳದಿದ್ದರೆ ಬೆಳೆ ಬೆಳೆಸುವುದದೆಂತು? (ಕೀ)
-ವು ಹೋಗದಿದ್ದರೆ ಬಾವು ಬತ್ತುವ ಬಗೆಯೆಂತು? (ಒಂ)
-ದೆಂಬರಿವಾಗದಿದ್ದ್ರದ್ವೈತವನ್ನೊಪ್ಪವುದೆಂತು? (ಹೇ)
-ತು, ನಿರಂಜನಾದಿತ್ಯನ ಪ್ರಾರ್ಥಿಸಬೇಕು ನಿಂತು!!!

ಕಾಲ ಬರೆದೆ ಕಾಲನಾದರೂ ಕದಲಿಸಲಾರ! (ಅ)   1(401)

-ಲಕ್ಷಿಸುತನ್ಯ ವೃತ್ತಿಗಳ, ಮಾಡು ಆತ್ಮವಿಚಾರ!
ಪ್ಪದು ತಪ್ಪದೆಂದರಿತು ಸಾಕುಮಾಡು ಸಂಸಾರ! (ಆ)
-ರಯೋಗ್ಯರಾದರೇನು? ನಿನಗಿರಲಿ ಸದಾಚಾರ!
ದೆವ್ವಗಳ ಕೂಗಾಟಗಳೇನು ಮಾಡ್ಯಾವು ದೇವರ?
ಕಾಲವಶವಾಗಳಿವವೆಲ್ಲಾ ದುಷ್ಟ ಪರಿವಾರ!
ಕ್ಷ್ಯ ನಿನಗಿರಬೇಕು ಸದ್ಗುರುವಿನ ಆಕಾರ!
ನಾಮ ಜಪಿಸುತಲಿರಬೇಕು ಉಸಿರು ಸಂಚಾರ!
ಹಿಸುವುದಿದರಿಂದೆಲ್ಲಾ ಅಕ್ರಮದನಾಚಾರ! (ಆ)
-ರೂಹೆಗೂ ನಿಲುಕದ ಗುರುವಿನ ಮಹಿಮೆಯಪಾರ!
ಲಿತುದನಾಚರಣೆಗೆ ತಂದವ ಕಡುಧೀರ!
ಶರಥಾತ್ಮಜ ರಾಮನಿದಕೆ ಸದಾ ಆಧಾರ!
ಲಿಖಿತವಿದು ಯೋಗವಾಸಿಷ್ಠದಲಿರುವ ಸಾರ!
ರಸಿಜಾಸನಸುತನುಪದೇಶ ವೇದ ಸಾರ!
ಲಾಲಿಸುತನುಭವಕೆ ತಂದವನೇ ರಘವೀರ!
ಘಪತಿ ನಿರಂಜನಾದಿತ್ಯ ರಾಘವ ಗಂಭೀರ!!!

ಕಾಲ ವಿಳಂಬ ಮಾಡಬೇಡ! (ಕೆ)   4(1885)

-ಲಸಕ್ಕಾಲಸ್ಯ ತೋರಬೇಡ!
ವಿಚಾರ ಶೂನ್ಯನಾಗಬೇಡ! (ಕೀ)
-ಳಂಗಡಿ ವ್ಯಾಪಾರವಿಡ್ಬೇಡ! (ಹಂ)
-ಬಲ ಹೆಚ್ಚಿಸಿಕೊಳ್ಳಬೇಡ!
ಮಾಲಿಕನ ಮರೆಯಬೇಡ! (ಒ)
-ಡನಾಟಲ್ಪರಲ್ಲಿಡಬೇಡ!
ಬೇಡುವಭ್ಯಾಸವೆಂದೂ ಬೇಡ! (ಆ)
-ಡ ನಿರಂಜನಾದಿತ್ಯ ಬೇಡ!!!

ಕಾಲ, ಕರ್ಮ, ರೀತಿ ಫಲ!   1(242)

ಕ್ಷ್ಯದ ನಿತ್ಯ ಕರ್ಮ ಫಲ!
ಲೆತು ಕಾಲದೀ ಫಲ! (ಮ)
-ರ್ಮ ಸೂಕ್ಷ್ಮವರಿತು ಫಲ!
ರೀತಿಯ ಕರ್ಮವೇ ಫಲ!
ತಿಳಿದು ಕಾದರೆ ಫಲ! (ಸ)
-ಫಲವೀ ತ್ರಿಕೂಟ ಫಲ! (ಬಾ)
-ಲ ನಿರಂಜನಾದಿತ್ಯಲಾ!!!

ಕಾಲಿಲ್ಲದ ಬಾಳಿಗೆ ಗೋಳಿಲ್ಲದ ಕೂಳು! (ಉ)    1(127)

-ಲಿಯದ ನಾಲಿಗೆಗರಿಯದ ಸವಾಲು! (ಉ)
-ಲ್ಲಸವಿಲ್ಲದ ಮನಕೊಬ್ಬ ದೇವನಾಳು!
ರ್ಶನವಿಲ್ಲದ ದೇವಗೆಲ್ಲಾ ಕುಶಾಲು!
ಬಾಯಿಗಿಲ್ಲದ ಬೆಲ್ಲಕ್ಕೆ ಊರೇ ಕಾವಲು! (ಉ)
-ಳಿವಿಲ್ಲದ ಮೂಲಕ್ಕೆ ಮನೆಯೆಲ್ಲಾ ಗೋಳು!
ಗೆಲುವಿಲ್ಲದಾನನಕಾಪ್ತ ಬಣ್ಣಗಳು!
ಗೋಶಾಲೆಗೊಲ್ಲದಾಕಳು ಸಾಬರ ಕೂಳು! (ಉ)
-ಳಿಯಿಲ್ಲದಾಚಾರಿಗೆ ಕೂಲಿ ಮತ್ತು ಕೂಳು! (ಉ)
-ಲ್ಲಟ ಪಲ್ಲದಾಳಿಗ್ಮನೆ ಮತ್ತು ಮಾಲು!
ತ್ತಯ್ಯಮ್ಮಯ್ಯ ಎಂಬವಗೀ ಬಾಳು ಗೋಳು!
ಕೂಸಿಲ್ಲದವಳಿಗೆ ಎದೆ ತುಂಬಾ ಹಾಲು! (ಉ)
-ಳುಹುವ ನಿರಂಜನಾದಿತ್ಯನೆಲ್ಲಾ ಬಾಳು!!!

ಕಾಳಸಂತೆ ವ್ಯಾಪಾರ ಹೆಚ್ಚಾಯ್ತು! (ಕೂ)   4(1914)

-ಳನಾಥರಿಗೆ ಸಿಕ್ಕದಂತಾಯ್ತು!
ಸಂವಿಧಾನವೆಲ್ಲಾ ಸಡಿಲಾಯ್ತು!
ತೆರಿಗೆಗೆ ಮಿತಿಯಿಲ್ಲದಾಯ್ತು (ಹ)
-ವ್ಯಾಸಗಳೆಲ್ಲೆಲ್ಲೂ ಹೊಲಸಾಯ್ತು!
ಪಾರಮಾರ್ಥ ರುಚಿಸದಂತಾಯ್ತು! (ಪ)
-ರದಾಟ ಜೀವನದಲ್ಲುಂಟಾಯ್ತು!
ಹೆದ್ದಾರಿ ದರೋಡೆ ಬಹಳಾಯ್ತು! (ಕ)
-ಚ್ಚಾಟದಿಂದುಟ್ಟ ಬಟ್ಟೆಯೂ ಹೋಯ್ತು! (ಆ)
-ಯ್ತು, ನಿರಂಜನಾದಿತ್ಯ ನೋಡ್ಯಾಯ್ತು!!!

ಕಾಳಿ ಮುಂದೆ, ನೀ ಹಿಂದೆ, ರಾಮಕೃಷ್ಣ! (ಬಾ)   3(1144)

ಳಿದನವಳಿಗಾಗಿ ರಾಮಕೃಷ್ಣ!
ಮುಂದೆ ನಿಂದೊಲಿಸಿದ ರಾಮಕೃಷ್ಣ! (ಎ)
-ದೆಗೆಡದಾತ್ಮಾಭ್ಯಾಸಿ ರಾಮಕೃಷ್ಣ!
ನೀತಿ, ರೀತಿಯಾದರ್ಶಿ ರಾಮಕೃಷ್ಣ!
ಹಿಂದೂ ಧರ್ಮ ಪ್ರತೀಕ ರಾಮಕೃಷ್ಣ! (ಬಂ)
-ದೆನುದ್ಧಾರಕ್ಕೆಂದ ಶ್ರೀ ರಾಮಕೃಷ್ಣ!
ರಾತ್ರಿ, ದಿನ, ದುಡಿದ ರಾಮಕೃಷ್ಣ!
ಡದಿಯೊಡಗೂಡಿ ರಾಮಕೃಷ್ಣ!
ಕೃಪಾಭಿಕ್ಷೆ ಪಡೆದ ರಾಮಕೃಷ್ಣ! (ಪೂ)
-ಷ್ಣ ನಿರಂಜನಾದಿತ್ಯ ರಾಮಕೃಷ್ಣ!!!

ಕಾಳಿದಾಸನ ಕಡಲ ಮುತ್ತು! (ಕಾ)   4(1988)

-ಳಿಯ ಕೊರಳಲಂಕಾರ ವಸ್ತು! (ಸ)
-ದಾನಂದವೀವಮೌಲ್ಯ ಸಂಪತ್ತು!
ರ್ವಾಕ್ಷಿಯನೆಳೆವ ದೌಲತ್ತು!
ರನುನ್ನತಕ್ಕೊಯ್ವ ತಾಕತ್ತು!
ಕಿಪಿಶ್ರೇಷ್ಠನಾರಾಮದಂತಸ್ತು! (ಕ)
-ಡಲೊಡೆಯನರಸಿಗೆ ದತ್ತು! (ನೀ)
-ಲಕಂಠಗೀವುದು ಪುರುಸೊತ್ತು!
ಮುನಿವರನ ಭಕ್ತಿಯ ಬಿತ್ತು! (ಎ)
-ತ್ತು ನಿರಂಜನಾದಿತ್ಯನಿಗಿತ್ತು!!!

ಕಾಳು ಬಿತ್ತಲಿಕ್ಕೊಂದು ಜಮೀನು! [ಗೋ]   4(2371)

-ಳು ತಪ್ಪಿಸಲಿಕ್ಕೊಂದು ಕಾನೂನು!
ಬಿಡಿಸಿಕೊಳ್ಲಿಕ್ಕೊಂದು ಜಾಮಿನು! (ಹ)
-ತ್ತಲಾದ ಬಳ್ಳಿಗೊಂದು ಕಮಾನು! (ನೀ)
-ಲಿಯಾಕಾಶಕ್ಕವನೊಬ್ಬ ಭಾನು! (ತ)
-ಕ್ಕೊಂಬನೆಲ್ಲರ ಕಪ್ಪನ್ನವನು! (ಅಂ)
-ದು, ಇಂದು, ಮುಂದು, ಆಧಾರವನು!
ರಾ ಜನ್ಮ ದುಃಖಾತೀತವನು!
ಮೀಸಲಾಗಿಲ್ಲಾರಿಗೂ ಅವನು! (ತಾ)
-ನು ನಿರಂಜನಾದಿತ್ಯಾಗಿಹನು!!!

ಕಾವಲು ನಾಯಿಯಾಗಬೇಕಯ್ಯಾ!   2(817)

ರ ಗುರು ಮಂದಿರವಿದಯ್ಯಾ!
ಲುಚ್ಛರೊಳ ಸೇರದಿರಲಯ್ಯಾ!
ನಾರುವಾಹಾರ ತರದಿರಯ್ಯಾ! (ಬಾ)
-ಯಿ, ಗದ್ದಲವಾಗದಂತಿರಯ್ಯಾ!
ಯಾರ ಮನೆಗೂ ಹೋಗದಿರಯ್ಯಾ!
ಮನೊಡೆಯನದಿರಲಯ್ಯಾ!
ಬೇಕಾದುದಾತ ಕೊಡುವನಯ್ಯಾ!
ತ್ತಲಲೆಚ್ಚರವಾಗಿರಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯೊಡೆಯಯ್ಯಾ!!!

ಕಾವೇರಿ! ನೀನೆಷ್ಟು ಜನರನ್ನ ತಿಂದೆ?   4(1770)

ವೇಗಾತಿರೇಕದಿಂದನೇಕರ ತಿಂದೆ! (ಭಾ)
-ರಿ

ಪ್ರವಾಹದಲ್ಲೇನೇನೋ ತಂದೆ, ತಿಂದೆ!
ನೀಚೋಚ್ಛ ಭಾವವಿಲ್ಲದೆ ಎಲ್ಲಾ ತಿಂದೆ!
ನೆಲ, ಹೊಲವೆಂದೆನ್ನದೆ ಸಹ ತಿಂದೆ! (ಇ)
-ಷ್ಟು ತಿಂದೂ ಈ ಕ್ಷಣದಲ್ಲೂ ಅಷ್ಟೇ ತಿಂದೆ!
ಗಜ್ಜನನಿಯೆನಿಸಿದೆಲ್ಲಾ ತಿಂದೆ!
ಗ್ನೆಯಾಗಿ, ಯೋಗಿನಿಯಾಗ್ಯೆಲ್ಲಾ ತಿಂದೆ!
ಸಿಕ ಮನೋರಂಜಿನಿಯಾಗಿ ತಿಂದೆ! (ಉ)
-ನ್ನತದ ಶಿಖರದಿಂದ ಬಂದು ತಿಂದೆ!
ತಿಂಡಾಡಿ, ಉಂಡಾಡಿಯಾಗಿದೆಲ್ಲಾ ತಿಂದೆ! (ತಂ)
-ದೆ, ನಿರಂಜನಾದಿತ್ಯಾತ್ಮನಾನೆಂದು ತಿಂದೆ!!!

ಕಾಶಿ, ರಾಮೇಶ್ವರ ನಿನ್ನ ಭಾವದಲ್ಲಿ!   1(416)

ಶಿವಪೂಜೆ ಮಾಡು ದೇಹ ಕಾಶಿಯಲ್ಲಿ!
ರಾಮಸೇವೆ ಸದಾ ಭಾವಾಯೋಧ್ಯೆಯಲ್ಲಿ!
ಮೇಲೆ, ಕೆಳಗೆಲ್ಲಾ ನಿನ್ನ ಮನದಲ್ಲಿ! (ಈ)
-ಶ್ವರನಿಗಾಗಲೆಯುವುದೇಕೆಲ್ಲೆಲ್ಲಿ?
ತ್ನ ಮಂಟಪವಿದೆ ಹೃದಯದಲ್ಲಿ!
ನಿತ್ಯರ್ಚನಾಭಿಷೇಕ ಮಾಡುತಿರಲ್ಲಿ! (ಅ)
-ನ್ನ, ನೇವೇದ್ಯವಾಗಲಿ ಸತತವಲ್ಲಿ!
ಭಾವದಲಡಗದುದೇನೇನಿದೆಲ್ಲಿ?
ರ ಸಾಕ್ಷಾತ್ಕಾರವ ಮಡಿಕೊಳ್ಳಿಲ್ಲಿ!
ರ್ಶನವಿದಭ್ಯಾಸದಿಂದ ನಿನ್ನಲ್ಲಿ! (ಇ)
-ಲ್ಲಿ, ನಿರಂಜನಾದಿತ್ಯ ಸನ್ನಿಧಿಯಲ್ಲಿ!!!

ಕಾಶಿಯತ್ತ ಪಥ ಸಾಗಿಲ್ಲ!   6(3480)

ಶಿವನಚಿತ್ತವರಿತಿಲ್ಲ!
ಕ್ಷಿಣೀ ವಿದ್ಯೆಯೆ ಎಲ್ಲೆಲ್ಲಾ! (ಕ)
-ತ್ತ ಕೊ

ದ್ರೂ ಕೇಳುವವರಿಲ್ಲ!
ರಮಾರ್ಥ ಬೆಳಗಲಿಲ್ಲ!
ನ ಕೌಶಲ ಬೇಕಾಗಿಲ್ಲ!
ಸಾಧನೆಗೆ ಪ್ರೋತ್ಸಾಹವಿಲ್ಲ!
ಗಿರಿಜೆಗೂ ದಯೆ ಬರ್ಲಿಲ್ಲ! (ನ)
-ಲ್ಲ ನಿರಂಜನಾದಿತ್ಯ ಪುಲ್ಲ!!!

ಕಿಂಚಿತ್ಲಭ್ಯದ ಬಡ ಬೆಕ್ಕು!   4(1412)

ಚಿರ ಸುಖಕ್ಕೆ ಬಂತಾ ಬೆಕ್ಕು! (ಕ)
-ತ್ಲಲ್ಲೊಳಗೋಡಿ ಬಂತಾ ಬೆಕ್ಕು! (ಸ)
-ಭ್ಯವಾಗಿದ್ದುಕೊಂಡಿತಾ ಬೆಕ್ಕು! (ಸು)
-ದತಿಗೀಗ ಬೇಕಾಯ್ತಾ ಬೆಕ್ಕು!
ಲವಂತಕ್ಕೀ

ಡಾಯ್ತಾ ಬೆಕ್ಕು! [

]
-ಡವಾಗಿರುವುದೀಗಾ ಬೆಕ್ಕು!
ಬೆಣ್ಣೆಯೀಗ ತಿನ್ನದಾ ಬೆಕ್ಕು! [ಬೆ]
-ಕ್ಕು ನಿರಂಜನಾದಿತ್ಯಾತ್ಮಕ್ಕು!!!

ಕಿಂಡಿಯೊಳಗಿಂದ ಸೇವೆ ತಗೊಂಡಪ್ಪ! [ಅ]   2(937)

-ಡಿಗಡಿಗೆ ನಿನ್ನ ನೆನಪೆನಗಪ್ಪ! (ಬಾ)
-ಯೊರೆಸುತಿದ್ದಾಗ ಬಂದೆಯೊಳಗಪ್ಪ! (ಒ)
-ಳಗಿಂದಲೇ ವಂದಿಸಿದೆ ನಿನಗಪ್ಪ! (ಹೀ)
-ಗಿಂಬು ದೊರಕಿಸಿದ ಗುರುದೇವಪ್ಪ!
ಯೆ ನಿನ್ನದೆನ್ನ ಮೇಲಪಾರವಪ್ಪ!
ಸೇವೆ ಸದಾ ನಿನ್ನದೆನಗಿರಲಪ್ಪ! (ದೇ)
-ವೆನಗೆ ನಿನ್ನ ಹೊರತಾರಿಲ್ಲವಪ್ಪ!
ರಳನಿವನುದ್ಧಾರ ನಿನ್ನಿಂದಪ್ಪ!
ಗೊಂಬೆಯಿದರ ಸೂತ್ರಧಾರಿ ನೀನಪ್ಪ! (ಬಿ)
-ಡಬೇಡೆಂದೆಂದಿಗೂ ಮಗನ ಕೈಯ್ಯಪ್ಪ! [ಅ]
-ಪ್ಪ, ನಿರಂಜನಾದಿತ್ಯ ಲೋಕಕ್ಕೆಲ್ಲಪ್ಪ!!!

ಕಿತ್ತಳೆ ಸಿಪ್ಪೆ ಹೊತ್ತಳಾ ತಿಪ್ಪೆ! (ಸ)   3(1367)

-ತ್ತ ಮೇಲೆ ಬನ್ನಿರೆಂಬಳಾ ತಿಪ್ಪೆ! (ಕೊ)
-ಳೆತರೂ ಸ್ವಾಗತಿಪಳಾ ತಿಪ್ಪೆ! (ಹ)
-ಸಿ ಬಿಸಿಗಳುಣ್ಣುವಳಾ ತಿಪ್ಪೆ! (ಸ)
-ಪ್ಪೆ, ಹುಳಿ, ಖಾರ ಪ್ರಿಯಳಾ ತಿಪ್ಪೆ!
ಹೊಸದು, ಹಳೇದೆನ್ನಳಾ ತಿಪ್ಪೆ (ಉ)
-ತ್ತಮಾಧಮವೆಂದೆನ್ನಳಾ ತಿಪ್ಪೆ! (ಬಾ)
-ಳಾಟಕ್ಕೆ ಸಹಾಯಕಳಾ ತಿಪ್ಪೆ!
ತಿರುಗಾಡದಿರುವಳಾ ತಿಪ್ಪೆ! (ತಿ)
-ಪ್ಪೆ ನಿರಂಜನಾದಿತ್ಯನಂತಿಪ್ಪೆ!!!

ಕಿತ್ತು ತಿನ್ನುವುದಕ್ಕೆ ಹುಟ್ಟಿದೆ ಕಾಗೆ! (ಸ)   6(4212)

-ತ್ತು ಬಿದ್ದಿಹುದನ್ನೂ ತಿನ್ನುವುದು ಕಾಗೆ!
ತಿನ್ನುವುದರಲ್ಲಿ ಅಗ್ರಗಣ್ಯ ಕಾಗೆ! (ತ)
-ನ್ನುದರದ ಯೋಚನೆ ಮಾಳ್ಪುದು ಕಾಗೆ! (ಹಾ)
-ವು, ಹಂದಿ, ಎಲ್ಲಾ ತಿನ್ನುವುದದು ಕಾಗೆ!
ರ್ಶನ ಸಾಮರ್ಥ್ಯದಲ್ಲಿ ಸೂಕ್ಷ್ಮ ಕಾಗೆ! (ರೆ)
-ಕ್ಕೆ, ಪುಕ್ಕ, ಕೊಕ್ಕು ಎಲ್ಲವೂ ಕಪ್ಪು; ಕಾಗೆ! (ಬ)
-ಹು ಕರ್ಣಕಠೋರ ಕೂಗಿನದ್ದು ಕಾಗೆ! (ಜ)
-ಟ್ಟಿಯಂತೆ ಹೋರಾಡುವ ವತುರ ಕಾಗೆ! (ಹಿಂ)
-ದೆ, ಮುಂದೆ, ಎಡ, ಬಲ ನೋಡ್ವುದು ಕಾಗೆ!
-ಕಾಗೆಯ ಕಾಟದಿಂದ ಸದ್ಗುರು ಕಾಗೆ!
ಗೆಳೆಯಗಾಗಿ ನಿರಂಜನಾದಿತ್ಯಾ ಕಾಗೆ!!!

ಕಿತ್ತುಕೊಂಡಾನಂದಿಸುವವ ನೀನು! (ಅ)   3(1348)

-ತ್ತು, ಬೇಸತ್ತು ಸುಸ್ತಾಗುವವ ನಾನು!
ಕೊಂಡೊಯ್ವೆ ನಿನ್ನ ಬಳಿಗೆನ್ನ ನೀನು! (ಮೊಂ)
-ಡಾಟ ಭಂಡಾಟ ಮಾಡುತಿಹೆ ನಾನು!
ನಂಬಿಗೆ ಬಲವಾಗಲೆಂಬೆ ನೀನು!
ದಿಕ್ಕುಗೆಟ್ಟು ಬಳಲುತಿಹೆ ನಾನು!
ಸುರಿಸುತಿಹೆ ಬಲವರ್ಷ ನೀನು! (ಅ)
-ವರಿವರಿಗಡ್ಡ ಬೀಳುವೆ ನಾನು!
ರಗುರು ದತ್ತನಾಗಿಹೆ ನೀನು!
ನೀನೇ ನಾನೆಂಬುದನರಿಯೆ ನಾನು! (ನಾ)
-ನು, ನೀನು, ನಿರಂಜನಾದಿತ್ಯನೇನು???

ಕಿರಣ ಬರಲೆಂದು ಕದ ತೆರೆದೆ!   6(4280)

ಜಾಣುಗಳೂ ಬಂದವು ಹಿಂದೆ ಮಂದೆ! (ಗು)
-ಣ, ದೋಷ, ಬೆರೆಸಿ ಸೃಷ್ಟಿಗೈದ ತಂದೆ!
ಯಕೆ ಒಳ್ಳೆಯದಾದ್ರೂ ಸತ್ತೆ, ಬಂದೆ!
ಹಸ್ಯ ವಿದರದ್ಧರಿಯದಾಗಿದೆ! (ಹಾ)
-ಲೆಂದು ನೀರು ಬೆರೆಸಿದ್ದನ್ನೇ ಕುಡಿದೆ!
ದುಡ್ಡು ಒಂದಕ್ಕೆ ನಾಲ್ಕು ಕೊಟ್ಟು ಕುಡಿದೆ!
ರ್ಮ ವಾತಾವರಣದಂತೆ ಮಾಡಿದೆ!
ಯೆದೋರೆಂದು ಗುರುವನ್ನು ಬೇಡಿದೆ! (ಮಾ)
-ತೆಯಂತೆನ್ನನ್ನೆತ್ತಿಕೊ ಎಂದೊರಲಿದೆ! (ಮೊ)
-ರೆಗುತ್ತೆರವ ನೀನಿನ್ನೂ ನೀಡದಾದೆ! (ತಂ)
-ದೆ ನಿರಂಜನಾದಿತ್ಯ ನೀನಿಂತೇಕಾದ???

ಕಿರಿಯ ಸಾಹಿತಿಗಳಿಗೆ ವರ ಪ್ರಧಾನ!   1(25)

ರಿವಾಜಿಲ್ಲ ಭಾವ, ಭಕ್ತಿಗೆ ಕೇಳಿರೀ ವಚನ!
ಕ್ಷಿಣೀ ವಿದ್ಯೆಯಲ್ಲದು ಭಾವ ಪ್ರಚೋದನ!
ಸಾಹಿತ್ಯ, ಸಂಗೀತಕ್ಕೆಲ್ಲಾ ಭಕ್ತಿ ಪ್ರಧಾನ!
ಹಿಡಿತದಲ್ಲಿಡಬೇಕು ಮನವ ತನ್ನಧೀನ!
ತಿಳಿ! ಭಾವ ಪ್ರಚೋದನೆಗುತ್ತಮ ಭಾವ ಕಾರಣ!
ತಿ, ಸ್ಥಿತಿ, ಮತಿಗಡಿಸದಿರಬೇಕು ಲೇಖನ!
ಳಿಪಿ, ಶುದ್ಧ, ಮುದ್ದಾದರೆ ಬೆಳಗುವುದು ಕವನ!
ಗೆಳೆತನವಿರಬೇಕು ಉತ್ತಮರದು ಅನುದಿನ!
ರ್ಚಸ್ಸು ಹೆಚ್ಚುವುದು ಮಾಡು ಇಂದ್ರಿಯ ದಮನ!
ಚನೆಗಳಾಗುವುದು ಪಂಚಾಮೃತ ರಸಾಯನ!
ಪ್ರತಿ ನಿಮಿಷ ಮನಸಿನಲಿರಲಿ ಗುರುಧ್ಯಾನ!
ದಾರಿ ನೇರಾಗಿದೆ, ಬೇಡ ಅನುಮಾನ!
ಡಿಸುತಿರು ಮನ ಸಮೀಪ ನಿರಂಜನ!!!

ಕಿವಿ ಚೆನ್ನಾಗಿ ತೊಳಕ್ಕೊಂಡಿರಯ್ಯಾ!   4(1789)

ವಿಜಯ ವಾರ್ತೆ ಕೇಳುವುದಕ್ಕಯ್ಯಾ!
ಚೆಲುವಾಂಬಾ ಧರ್ಮಸ್ಥಾಪಕಳಯ್ಯಾ! (ಇ)
-ನ್ನಾರಿಗೂ ಅದು ಶಕ್ಯವಿಲ್ಲವಯ್ಯಾ! (ಯೋ)
-ಗಿರಾಜವಳ ಸಹಾಯಕನಯ್ಯಾ!
ತೊಡೆದು ಹಾಕುವಳು ಕೊಳೆಯಯ್ಯಾ! (ಒ)
-ಳ, ಹೊರಗೆಲ್ಲಾ ಶುದ್ಧವಾಗ್ವುದಯ್ಯಾ! (ತ)
-ಕ್ಕೊಂಡವಳಾಜ್ಞೆಯಂತೆ ನಡಿಯಯ್ಯಾ! (ಹೇ)
-ಡಿಯಾಗಿ ಕುಳಿತಿರಬೇಡವಯ್ಯಾ!
ಘುಪತಿಯ ಭಜನೆ ಮಾಡಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾಜ್ಞೆಯದಯ್ಯಾ!!!

ಕಿವಿ, ಬಾಯ್ಕಣ್ಮುಚ್ಚಿ ಧ್ಯಾನಿಸೆನ್ನ!   5(2985)

ವಿಚಾರದಿಂದರಿ ನೀನು ನನ್ನ!
ಬಾಲಲೀಲೆಯಿಂದೊಲಿಸು ನನ್ನ! (ತಾ)
-ಯ್ಕರೆದುಣಿಸುವಳು ನಿನ್ನನ್ನ! (ಷ)
-ಣ್ಮುಖನಂತೆ ಗಿರಿಜೆ ನಿನ್ನನ್ನ! (ಕ)
-ಚ್ಚಿದರೆದೆಯ ಚುಚ್ಚುವಳ್ನಿನ್ನ! (ಸಂ)
-ಧ್ಯಾ ಸಮಯಕ್ಮುಂಚೆ ಸೇರವ್ಳನ್ನ!
ನಿಜಸುಖವಿತ್ತೆತ್ತುವಳ್ನಿನ್ನ! (ಆ)
-ಸೆಗಳ ಬಿಡಿಸೆಂದಪ್ಪವ್ಳನ್ನ! (ನ)
-ನ್ನ ನಿರಂಜನಾದಿತ್ಯಾದವ್ಳನ್ನ!!!

ಕೀರ್ತಪಕೀರ್ತಿ ಕೃತ್ಯದಿಂದ! (ಮ)
   6(3607)

-ರ್ತರ್ಮಾಡ್ಬೇಕು ಸತ್ಕರ್ಮಾದ್ರಿಂದ!
ತಿತರು ದುಷ್ಕರ್ಮದಿಂದ!
ಕೀಚಕ ಸತ್ತನದರಿಂದ! (ಕೀ)
-ರ್ತಿ ಧರ್ಮಜಗುತ್ತಮಾದ್ರಿಂದ!
ಕೃಷ್ಣ ಮೆರೆದಾತ್ಮತ್ವದಿಂದ! (ಸ)
-ತ್ಯಭಾಮೆ ಪತಿಭಕ್ತಿಯಿಂದ! (ಅ)
-ದಿಂದೂ ಅಂಥಾ ಸತಿಗಾನಂದ! (ಕಂ)
-ದ ನಿರಂಜನಾದಿತ್ಯಾನಂದ!!!

ಕೀಲಕ ವರ್ಷವಾನಂದ!   2(537)

ಕ್ಷ್ಯ ಆತ್ಮಾರಾಮಾನಂದ!
ರ್ಮನಿಷ್ಠೆಯ ಆನಂದ!
ರ ಗುರು ಸೇವಾನಂದ! (ಹ)
-ರ್ಷವೆಲ್ಲರಿಗಿದಾನಂದ! (ಆ)
-ವಾಗಲೂ ಭಜನಾನಂದ!
ನಂಬಿಗೆಗೆ ಇಂಬಾನಂದ! (ಮು)
-ದ ನಿರಂಜನಾನಂದ!!!

ಕೀಲಕ ಸಂವತ್ಸರಾಶೀರ್ವಾದ!   2(539)

ಕ್ಷ್ಮಣಾಗ್ರಜನ ಆಶೀರ್ವಾದ!
ಶ್ಮಲ ನಾಶಕೆ ಆಶೀರ್ವಾದ!
ಸಂಕಟ ನಿವಾರಣಾಶೀರ್ವಾದ!
ರ ಧರ್ಮ ಕರ್ಮಕಾಶೀರ್ವಾದ! (ಮ)
-ತ್ಸರ ಮದ ನಾಶಕಾಶೀರ್ವಾದ!
ರಾಮನಾಮ ಜಪಕಾಶೀರ್ವಾದ!
ಶೀಲವಂತರಾಗಲಾಶೀರ್ವಾದ! (ಸ)
-ರ್ವಾತ್ಮಭಾವ ಸಿದ್ಧಿಗಾಶೀರ್ವಾದ!
ತ್ತ ನಿರಂಜನನಾಶೀರ್ವಾದ!!!

ಕೀಳು, ಗೋಳು, ಹಾಳು ಬಾಳು! [ಚೇ]   5(2903)

-ಳು ಕಚ್ಚಿದ ಕೋತೀ ಬಾಳು! (ಅ)
ಗೋ ಸುರಾಪಾನದಾ ಬಾಳು! (ಕೀ)
-ಳು ಪೈಶಾಚಿಕದಾ ಬಾಳು!
ಹಾದಿ ಬಿಟ್ಟೋಡುವಾ ಬಾಳು! (ಬೋ)
ಳು ಕೈ ಮಾಡಿಕೊಂಡಾ ಬಾಳು!
ಬಾಧೆ ಸಹಿಸದಾ ಬಾಳು! (ಏ)
-ಳು ನಿರಂಜನಾದಿತ್ಯಾಳು!!!

ಕುಂಚದಿಂದಂಚು ಸರಿಮಾಡು!   4(2240)

ಮತ್ಕಾರ ತೋರದೇ ಮಾಡು! (ತ)
-ದಿಂಬಿಗಾಗ್ಯೆಲ್ಲವನು ಮಾಡು!
ದಂಭಾಚಾರ ಕಟ್ಟಿಟ್ಟು ಮಾಡು!
‘ಚುಡಾಲೆ’ಯಂತೆ ಕಾ

ರ್ಕ ಮಾಡು!
ತೀಧರ್ಮವಿದೆಂದು ಮಾಡು!
ರಿಪುಗಳಡಗಿಸಿ ಮಾಡು!
ಮಾತನಾಡದೇ ಸೇವೆ ಮಾಡು! (ಮಾ)
-ಡು, ನಿರಂಜನಾದಿತ್ಯಗೂಡು!!!

ಕುಂಟು ನೆಪವಿನ್ನು ಸಾಕ್ಮಾಡಯ್ಯಾ! (ನಂ)   5(2632)

-ಟುತನ ಹೂಡಿ ಯೋಗ್ಯನಾಗಯ್ಯಾ!
ನೆನೆದುಕೋ ಕುಲ ಗೋತ್ರವಯ್ಯಾ!
ರಮಾತ್ಮೇಚ್ಛಾ ಮದ್ವೆಯಿದಯ್ಯಾ!
ವಿಧಿವತ್ತಾಗ್ಯೆಲಾದ್ರೂ ಆಗ್ಲಯ್ಯಾ! (ನಿ)
-ನ್ನುನ್ನತಿಗೀ ಉಪದೇಶವಯ್ಯಾ!
ಸಾಲಮಾಡಿ ಏನೂ ಮಾಡ್ಬೇಡಯ್ಯಾ! (ಯಾ)
-ಕ್ಮಾಡಿಲ್ಲವೆಂದ್ಯಾರೂ ಕೇಳರಯ್ಯಾ! (ಒ)
-ಡನಾಟ ಸಾರ್ಥಕವಾಗಲಯ್ಯಾ! (ಕೈ)
-ಯ್ಯಾ, ನಿರಂಜನಾದಿತ್ಯ ಬಿಡಯ್ಯಾ!!!

ಕುಟೀರದಲ್ಲಿ ನನ್ನ ಮದುವೆ! [ಭೆ]   2(837)

-ಟೀಗಾಗಲಾಮೇಲೆನ್ನ ಮದುವೆ! (ಭ)
-ರವಸೆಯಿದ್ದರಲ್ಲಿ ಮದುವೆ!
ತ್ತ ಭೃತ್ಯನಿಗಲ್ಲಿ ಮದುವೆ! (ಅ)
-ಲ್ಲಿ ಶಿವಾನಂದದಲ್ಲಿ ಮದುವೆ!
ಮ್ರತೆಯಿದ್ದರಲ್ಲಿ ಮದುವೆ! (ನ)
-ನ್ನ, ನಿನ್ನದಿಲ್ಲದಲ್ಲಿ ಮದುವೆ!
ಹಾ ವೈಭವದಲ್ಲಿ ಮದುವೆ! (ಮ)
-ದುವೆ ಅಮೃತಗಲ್ಲಿ ಮದುವೆ! (ಶಿ)
-ವೆ, ನಿರಂಜನಶಿವ ಮದುವೆ!!!

ಕುಟ್ಟೀರಕಾಗಿ ದತ್ತನಲ್ಲವಯ್ಯಾ!   1(306)

ಟ್ಟೀಕಿಸದಿರು ಹಾಗೆಂದಿಗೂ ಅಯ್ಯಾ! (ಅ)
-ರಸಿ ಬಹದತ್ತ ಇದ್ದೆಡೆಗಯಾ!
ಕಾಯಬೇಕು ಶುದ್ಧ ಭಕ್ತಿಯಿಂದಯ್ಯಾ!
ಗಿರಿ, ಗುಹೆಗಳಾಲಿಂತಿಹರಯ್ಯಾ!
ತ್ತನಾಟದ ಗೊಂಬೆಯಲ್ಲವಯ್ಯಾ! (ಅ)
-ತ್ತತ್ತೂ ಮನ ಕರಗಿಸಿ ಕೂಗಯ್ಯಾ! (ಅ)
-ನಗತ್ಯದ ನುಡಿಯೆಲ್ಲ ಬಿಡಯ್ಯಾ! (ಅ)
-ಲ್ಲಲ್ಲಿ ಮುಗ್ಗಿರಿಸಿ ಬೇಳಬೇಡಯ್ಯಾ!
ರ ಕರುಣಾಳು ಶ್ರೀ ಗುರುವಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನಭೇದಯ್ಯಾ!!!
{ಒ

}

ವೇದ್ಯನಯ್ಯಾ!!!

ಕುಡಿಕನಾಗಬಾರದರಸ! (ಆ)   5(2518)

-ಡಿದಂತಿರಲಾರನಂಥರಸ!
ಳ್ಳ, ಸುಳ್ಳರೊಡನೆ ಸರಸ!
ನಾಳೆಯಾಸೆ ತೋರಿ ಮಾಳ್ಪ ಮೋಸ! (ಸಂ)
-ಗಡಿಗರಲ್ಲಾಗಾಗ ವಿರಸ!
ಬಾಳಿನ ಗುರಿಯವ ಯೋಚಿಸ! (ವ)
-ರಗುರು ಉಪದೇಶ ಲಕ್ಷಿಸ! (ಅ)
-ದರಿಂದವನಿಗಾಗ್ವುದಾಯಾಸ! (ಊ)
-ರವಗೇನುಪಯೋಗಾ ಅರಸ?
ದಾ ನಿರಂಜನಾದಿತ್ಯರಸ!!!

ಕುಡಿಯಬೇಡ ಬ್ರಾಂದಿ, ವಿಸ್ಕಿ, ಬೀರು! (ಬಿ)   5(2813)

-ಡಿಸುವುದು ಸಜ್ಜನಸಂಗಾ ಮೂರು! (ಕಾ)
-ಯದಾರೋಗ್ಯವಿದರಿಂದೇರುಪೇರು!
ಬೇಡ ಕುಡ್ಕರ ಸಂಗ, ಮನೆ ಸೇರು! (ಕಂ)
-ಡವರ ಪಾಲಾದೀತು ಮನೆ ಮಾರು!
ಬ್ರಾಂಹಣ್ಯವೇನೆಂದಾಚರಿಸಿ ತೋರು!
ದಿವಾಕರನುನ್ನತ ಮಟ್ಟವೇರು!
ವಿಶ್ವಕಲ್ಯಾಣವನ್ನು ಸದಾ ಕೋರು! (ಕಾ)
-ಸ್ಕಿತ್ಕೊಂಬ ದಾರಿ ಬಿಟ್ಟು ದೂರ ಸಾರು!
ಬೀರು, ಧರ್ಮದ ಪ್ರಭೆ ನೂರು ಮಾರು! (ತೇ)
-ರು ನಿರಂಜನಾದಿತ್ಯನದು ಏರು!!!

ಕುಡಿಯಲಿಕ್ಕೀಗೇನು ಬೇಕು! (ಗಿಂ)   5(2751)

-ಡಿಯೊಳಗಿನ ತೀರ್ಥ ಬೇಕು! (ನ)
-ಯ, ವಿನಯದ ಮಾತು ಬೇಕು!
(ಮ)ಲಿನವಿಲ್ಲದ ಮನ ಬೇಕು! (ಹ)
-ಕ್ಕೀಗುಳಿಸಿ ಪಾದ ಸೇರ್ಬೇಕು!
ಗೇದದ್ದು ಸಾರ್ಥಕವಾಗ್ಬೇಕು! (ತ)
-ನುವಿನಾಸೆಯಿಲ್ಲದಿರ್ಬೇಕು!
ಬೇರು ವಿಷಯದ್ದು ಸುಡ್ಬೇಕು! (ಟಾ)
-ಕು ನಿರಂಜನಾದಿತ್ಯಾಗ್ಬೇಕು!!!

ಕುಡ್ಕ, ಹಡ್ಕ, ಬಾಯ್ಬಡ್ಕರ ಸಂಗ ಮಾಡ್ಬೇಡಕ್ಕಾ! (ಮಾ)   6(3843)

-ಡ್ಕರುಣಾನಿಧಿ ಶ್ರೀ ಕೃಷ್ಣನ ಧ್ಯಾನವನ್ನಕ್ಕಾ!
ದಿಬದೆಗೆ ತ್ರಿಮೂರ್ತಿಗಳೂ ಮಕ್ಕಳಕ್ಕಾ! (ಕೆ)
-ಡ್ಕರ ಸಹವಾಸದಿಂದ ಸರ್ವನಾಶವಕ್ಕಾ!
ಬಾಲಕೃಷ್ಣನ ಬಾಲಲೀಲೆ ವಿಚಿತ್ರವಕ್ಕಾ! (ತಾ)
-ಯ್ಬಲವಂತಕ್ಕೆ ಬಾಯಲ್ಲಿ ತೊರ್ದ ಬ್ರಹ್ಮಾಂಡಕ್ಕಾ! (ಮಾ)
-ಡ್ಕರ್ತವ್ಯವೆಂದರ್ಜುನನನ್ನೆಬ್ಬಿಸಿದನಕ್ಕಾ!
ಣರಂಗದಲ್ಲಾಯ್ತದ್ವೈತ ದರ್ಶನವಕ್ಕಾ!
ಸಂಗ ಶ್ರೀ ಕೃಷ್ಣನದ್ದಾಗ ಸಾರ್ಥಕವಾಯ್ತುಕ್ಕಾ!
ರ್ವಿಗಳೆಲ್ಲರಿಗೂ ಪ್ರಾಯಶ್ಚಿತ್ತವಾಯ್ತಕ್ಕಾ!
ಮಾಡ್ಬೇಕು ಆದುದರಿಂದ ಸತ್ಸಂಗವನ್ನಕ್ಕಾ! (ಇ)
-ಡ್ಬೇಕು ಪೂರ್ಣ ವಿಶ್ವಾಸ ಗುರುಪಾದದಲ್ಲಕ್ಕಾ!
ಮರಧರನಿಂದಧಿಕ ಗುರುವಿಲ್ಲಕ್ಕಾ! (ಅ)
-ಕ್ಕಾ ನಿರಂಜನಾದಿತ್ಯಾನಂದಾ ಸ್ವರೂಪವಕ್ಕಾ!!!

ಕುಣಿಕುಣಿದ ಮರಿ ಸೇರಿತು ಕಾಗೆಯ ಹೊಟ್ಟೆ! (ಇ)   6(4181)

-ಣಿಕಿಣಿಕಿ ನೋಡಿ ಉರಿಯಿತು ತಾಯಿಯ ಹೊಟ್ಟೆ!
ಕುಜನರದ್ದಿದೇ ಜಗತ್ತಿನಲ್ಲಿ ಕೆಟ್ಟ ಬಟ್ಟೆ! (ಗು)
-ಣಿಗುಣಿಸಿ ಹೇಳಿದ್ದೆಲ್ಲವೂ ಬರೀ ಲೊಳಲೊಟ್ಟೆ!
ಶೇಂದ್ರಿಯದ ದೇಹದಲ್ಲಿ ಮನಸ್ಸನ್ನೇಕಿಟ್ಟೆ?
ನ್ಮಥನಿಗದರಲ್ಲೇಕೆಲ್ಲಾ ಸ್ವಾತಂತ್ರ ಕೊಟ್ಟೆ!
ರಿಪುಗಳಾರರಲ್ಲವನೂ ಒಬ್ಬನೆಂದು ಬಿಟ್ಟೆ!
ಸೇರುವುದಕ್ಕೆ ಸದ್ಗರು ಪಾದ ತಂದಿಟ್ಟೆ!
ರಿಸಿ, ಮುನಿಗಳಿಗೂ ಯಮನ ಭಯವಿಟ್ಬಿಟ್ಟೆ!
ತುರಿಯಾತೀತನಾದಾಗಾಗುವುದು ಸುಟ್ಟ ಬಟ್ಟೆ!
ಕಾದಿರುವುದಾ ತನಕವೆಂತೆಂದೀಗ ಕಂಗೆಟ್ಟೆ!
ಗೆಳೆಯ ಸೂರ್ಯನಾರಾಯಣನಿಗೆ ಮೊರೆಯಿಟ್ಟೆ!
ಮ ನಿಯಮಾಭ್ಯಾಸದಲ್ಲಿ ಸದಾ ಇದ್ದು ಬಿಟ್ಟೆ!
ಹೊರಗೊಳಗಿನ ಕೊಳೆಯೆಲ್ಲಾ ತೊಳೆದು ಬಿಟ್ಟ! (ಬ)
-ಟ್ಟೆ ನಿರಂಜನಾದಿತ್ಯನದ್ದಾನಂದದಿಂದಿಂತುಟ್ಟೆ!!!

ಕುಣಿದವರು ಕೂತುಕೊಳ್ಳಲೇ ಬೇಕು! [ಮ]   5(3058)

-ಣಿದವರು ನೆಮ್ಮದಿಯಿಂದಿರ್ಲೇ ಬೇಕು!
ತ್ತನೇ ಗುರುವೆಂದು ನಂಬಿರಬೇಕು! (ಭ)
-ವರೋಗ ಅವನಿಂದ ಗುಣವಾಗ್ಬೇಕು!
ರುಜು ಮಾರ್ಗ ಅವಲಂಬಿಸಲೇ ಬೇಕು!
ಕೂತಾಗ, ನಿಂತಾಗ “ದತ್ತಾ!” ಎನ್ನಬೇಕು!
ತುರಿಯಾತೀತದ ಗುರಿಯಿರಬೇಕು!
ಕೊಳೆ ಸತತ ತೊಳೆಯುತ್ತಿರಬೇಕು! (ಕ)
-ಳ್ಳ, ಸುಳ್ಳರ ಸಹವಾಸ ಬಿಡಬೇಕು!
ಲೇಶ ಮಾತ್ರವೂ ಆಸೆಯಿಲ್ಲದಿರ್ಬೇಕು!
ಬೇರೂರಿ ಗಿಡ ಹೆಮ್ಮರವಾಗಬೇಕು!
ಕುಲ ನಿರಂಜನಾದಿತ್ಯನದ್ದಾಗ್ಬೇಕು!!!

ಕುಣಿವ ಜೀವ; ಕುಣಿಯ ದೇವ! (ದ)   6(4277)

-ಣಿದು, ಬಿದ್ದೊದ್ದಾಡುವನು ಜೀವ!
ನವಾಸದಲ್ಲೊದ್ದಾಡ ದೇವ!
ಜೀತದಾಳೆನಿಸುವನು ಜೀವ!
ರದನೆನಿಸುವನು ದೇವ!
ಕುಲ, ಗೋತ್ರವುಳ್ಳವನು ಜೀವ! (ಪ್ರಾ)
-ಣಿ, ತೃಣಾದಿಯಲ್ಲಿಹನು ದೇವ!
ಮನೆಂದರಂಜುವನು ಜೀವ!
ದೇವದೇವ ಯಮನಯ್ಯ ದೇವ! (ಅ)
-ವ ನಿರಂಜನಾದಿತ್ಯನೆಂಬವ!!!

ಕುತಂತ್ರವಿಲ್ಲದ ಮಂತ್ರಿಗಳಾರಿಲ್ಲ!   6(4186)

ತಂದೆ ದೇವರೆಂದರಿತವರೇ ಇಲ್ಲ! (ಚಿ)
-ತ್ರಕೂಟ ಶ್ರೀರಾಮನಂತಾರೂ ಸೇರಿಲ್ಲ!
ವಿಶ್ವ ಪ್ರೇಮ ಮಾತಿನಲ್ಲಿವರದೆಲ್ಲ! (ಬ)
-ಲ್ಲವರನ್ನಾದರಿಪವರಿವರಲ್ಲ!
ಡ್ಡರಾದರೂ ತಮ್ಮವರೇ ಎಲ್ಲೆಲ್ಲಾ!
ಮಂಗಳಾರತಿ ಮಾಳ್ಪರವರಿಗೆಲ್ಲಾ!
ತ್ರಿಕರಣ ಶುದ್ಧಿಯುಳ್ಳವರಾರಿಲ್ಲ! (ರಾ)
-ಗ, ದ್ವೇಷದ ಹೊಗೆ ಹೊರಗೊಳಗೆಲ್ಲ! (ಆ)
-ಳಾಗಿ ಆಳುವ ಕರುಣಾಳುಗಳಿಲ್ಲ! (ವೈ)
-ರಿ ನಿಗ್ರಹ ಶಕ್ತರಾಗುವಾಸೆಯಿಲ್ಲ! (ಬ)
-ಲ್ಲ ಶ್ರೀ ನಿರಂಜನಾದಿತ್ಯನಿದನ್ನೆಲ್ಲ!!!

ಕುಮಾರ ಗುರು ದರ್ಶನ!   2(742)

ಮಾನವೀ ರೂಪ ದರ್ಶನ!
ಮಣೀಯವೀ ದರ್ಶನ!
ಗುರುಚಿತ್ತವೀ ದರ್ಶನ! (ವ)
-ರಷೈದಾದ್ಮೇಲೀ ದರ್ಶನ!
ನ, ಜನಕೀ ದರ್ಶನ! (ಸ್ಪ)
-ರ್ಶ ಪಾವನವೀ ದರ್ಶನ!
ಮನ ಶ್ರೀ ನಿರಂಜನ!!!

ಕುಮಾರನ ಮೇಲೇಕತೃಪ್ತಿಯಮ್ಮಾ?   4(1434)

ಮಾತುಮಾತಿಗೆದುರಾಡುವನಮ್ಮಾ! (ಕ)
-ರಕರೆ ಬಹಳ ಮಾಡುವನಮ್ಮಾ!
ನ್ನೊಡನೆ ಮಲಗಬೇಕಂತಮ್ಮಾ!
ಮೇರೆ ಮೀರಿ ಚೇಷ್ಟೆಮಾಡುವನಮ್ಮಾ!
ಲೇಖನಿ, ಪುಸ್ತಕ ಹಿಡಿಯನಮ್ಮಾ!
ಷ್ಟವನಿಂದ ತಂದೆ ತಾಯಿಗಮ್ಮಾ!
ತೃಣ ಸಮಾನವರವನಿಗಮ್ಮಾ! (ಪ್ರಾ)
-ಪ್ತಿಯವನದೇನಿಹುದೋ ಹೇಳಮ್ಮಾ! (ಭ)
-ಯ, ಭಕ್ತಿ ಅವನಿಗೇನೂ ಇಲ್ಲಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಗತಿಯಮ್ಮಾ!!!

ಕುಮಾರನೋರ್ವಾದರ್ಶಾಪ್ತ ಮಿತ್ರ! [ಉ]   3(1165)

-ಮಾದೇವಿಗಿವನು ಪ್ರಿಯ ಪುತ್ರ! (ಹ)
-ರನಪಾರ ಪ್ರೇಮಕ್ಕೆ ಸತ್ಪಾತ್ರ!
ನೋಡಬಹುದಿವನ ಸರ್ವತ್ರ! (ಗೀ)
-ರ್ವಾಣಿಯ ಕೃಪೆಯಿಂದ ಪವಿತ್ರ!
ತ್ತನಾಮವಿವನಿಷ್ಟ ಮಂತ್ರ! (ಸ್ಪ)
-ರ್ಶಾಸ್ಪರ್ಶವೆಣಿಸದೆ ಸ್ವತಂತ್ರ! (ಆ)
-ಪ್ತ ಗುಹನಿರ್ಪನೆಲ್ಲರ ಹತ್ರ! (ಅ)
-ಮಿತಾನಂದ ಪ್ರದಾಸ್ಕಂದ ನೇತ್ರ! (ಮಿ)
-ತ್ರ ನಿರಂಜನಾದಿತ್ಯಾ ತ್ರಿನೇತ್ರ!!!

ಕುಮಾರಾರಾಧನೆಯೂಟ ಸವಿಯಯ್ಯಾ!   2(579)

ಮಾರಹರಗಿದತ್ಯಂತ ಹಿತವಯ್ಯಾ!
ರಾಗ, ದ್ವೇಷಗಳಿಲ್ಲದೂಟವಿದಯ್ಯಾ!
ರಾತ್ರಿ ಭಜನೆಯಿಂದಿದು ಪೂರ್ಣವಯ್ಯಾ!
ರ್ಮವಿದಕಿಂತಿನ್ನೇನುತ್ತಮವಯ್ಯಾ!
ನೆರೆ ಮನೆಯ ಹಂಗಿದಕಿಲ್ಲವಯ್ಯಾ! (ತಾ)
-ಯೂರಿನಲ್ಲಿದಾಗುವುದುತ್ತಮವಯ್ಯಾ! (ಕಾ)
-ಟವಿಲ್ಲಾರದೂ ಇಲ್ಲದಿರುವುದಯ್ಯಾ!
ಜ್ಜನರೆಲ್ಲಾ ಸಹಕರಿಪರಯ್ಯಾ!
ವಿಧಿ, ನಿಷೇಧಗಳೇನೂ ಇಲ್ಲವಯ್ಯಾ! (ಕಾ)
-ಯ, ಮನ, ಮಾತು ಶುದ್ಧವಿದ್ದರಾಯ್ತಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಗಾ ಊಟವಯ್ಯಾ!!!

ಕುರುಡ ಧೃತರಾಷ್ಟ್ರ ಆಳಿದ! (ಕು)   5(3166)

-ರುಕುಲವನ್ನೇ ಉಳಿಸದಾದ! (ಮ)
-ಡದಿಗಶಾಂತಿಯುಂಟುಮಾಡಿದ!
ಧೃತಿಗೆಟ್ಟು ರಾಷ್ಟ್ರ ಕೆಡಿಸಿದ!
ಮ್ಮನ ಮಕ್ಕಳನ್ನೋಡಿಸಿದ!
ರಾಗ, ದ್ವೇಷಕ್ಕಾದರ ತೋರಿದ! (ರಾ)
-ಷ್ಟ್ರಧ್ವಜಕ್ಕೆ ರಕ್ತಧಾರೆರೆದ!
ಳಿದ, ಬಳಲಿದ, ಅಳಿದ! (ಉ)
-ಳಿವುದಾವುದೆಂದರಿಯದಾದ! (ಇ)
-ದ, ನಿರಂಜನಾದಿತ್ಯ ನೋಡಿದ!!!

ಕುಲ ತಿಲಕಗೆ ತಿಲಕವಿಟ್ಟೆ!   4(1728)

ಕ್ಷ್ಯ ಅವನಲ್ಲಿಟ್ಟು ಅದನಿಟ್ಟೆ!
ತಿರೆಯಾಣ್ಮನವನೆಂದದನಿಟ್ಟೆ!
ಕ್ಷಣ ನೋಡುತ್ತಾನಂದದಿಂದಿಟ್ಟೆ!
ರ್ತವ್ಯವೇನೆಂದು ಕೇಳುತ್ತದಿಟ್ಟೆ!
ಗೆಳೆಯನಾಗಿ ನೀನು ಇರೆಂದಿಟ್ಟೆ!
ತಿಳಿಯದೇ ನಿನ್ನ ಕೆಟ್ಟೆನೆಂದಿಟ್ಟೆ! (ಅ)
-ಲಕ್ಷ್ಯ ಮಾಡದಿರೆನ್ನನೆಂದದಿಟ್ಟೆ!
ಳಂಕಾರೋಪಿಸಬೇಡೆಂದದಿಟ್ಟೆ!
ವಿಜಯ ಪ್ರಾಪ್ತಿಗಾಗಿ ಅದನಿಟ್ಟೆ! (ಇ)
-ಟ್ಟೆ, ನಿರಂಜನಾದಿತ್ಯ ನೀನೆಂದಿಟ್ಟೆ!!!

ಕುಲತಿಲಕಾ ಗೋಪಾಲಕಾ! (ಬ)   4(1593)

-ಲವರ್ಧಕಾ ಬಲಿ ಧ್ವಂಸಕಾ!
ತಿರುಮಲೇಶಾ ಸುಧಾರಕಾ!
ವ, ಕುಶಾ, ರಘುನಾಯಕಾ!
ಕಾಮ ಕೋಟಿ ರೂಪಾ ಕಾರ್ತಿಕಾ!
ಗೋಪಾ ಗೋವರ್ಧನೋದ್ಧಾರಕಾ!
ಪಾರ್ವತ್ಯಾತ್ಮಾ ಗಣನಾಯಕಾ!
ಯಕಾರಾಕಾ ವಿನಾಯಕಾ! (ಮೂ)
-ಕಾ ನಿರಂಜನಾದಿತ್ಯಾತ್ಮಕಾ!!!

ಕೂಗಿ ಕೂಗಿ ಸುಸ್ತಾಯ್ತಪ್ಪಾ! [ರೇ]   3(1132)

-ಗಿದರಾಗುಪುದೇನಪ್ಪಾ?
ಕೂಗಿಗುತ್ತರ ನೀಡಪ್ಪಾ! (ಬಾ)
-ಗಿ ಬೇಡುವೆ ನಿನ್ನನಪ್ಪಾ!
ಸುಪ್ರಸನ್ನ ನೀನಾಗಪ್ಪಾ! (ಪ್ರ)
-ಸ್ತಾಪನ್ಯರದಿಲ್ಲವಪ್ಪಾ! (ಆ)
-ಯ್ತದೇನಪರಾಧವಪ್ಪಾ? (ಅ)
-ಪ್ಪಾ, ನಿರಂಜನಾದಿತ್ಯಪ್ಪಾ!!!

ಕೂಗಿದ್ದೊಬ್ಬ, ಬಂದದ್ದೊಬ್ಬ, ಆಯ್ತು ಹಬ್ಬ!   6(4014)

ಗಿರಿಧರನ ಲೀಲೆ ವಿಚಿತ್ರಬ್ಬಬಾ! (ಬಿ)
ದ್ದೊದ್ದು, ಗುದ್ದಾಡಿ, ಸತ್ತ್ರವನವ್ರಬ್ಬಬ್ಬಾ! (ಕ)
-ಬ್ಬಗಾರರಿಗಿದೊಂದು ವಿಶೇಷ ಹಬ್ಬ!
ಬಂದದ್ದೇಕೆಂದರಿಯದೇ ಆಯ್ತು ಗಬ್ಬ!
ರಿದ್ರ, ಶ್ರೀಮಂತರದ್ದೇನೆನ್ಲಿ ಕೊಬ್ಬ! (ಕ)
-ದ್ದೊಡಲ ಬೆಳೆಸಿ ಹಾಕ್ವರನ್ಯ ಜುಬ್ಬ! (ಹ)
-ಬ್ಬ, ಹರಿದಿನವೆಂದ್ಹಾರಿಸುವರ್ಹುಬ್ಬ!
ರು ಹರಿಯುವರೀ ಆಜ್ಞಾನ ಮಬ್ಬ? (ಆ)
-ಯ್ತು, ಹೋಯ್ತು, ಆಯ್ತೆಂದಾಗಿಹೋಯ್ತೆಲ್ಲಾ ಹಬ್ಬ!
ರಿ ದರ್ಶನ ಪಡೆದಿಲ್ಲ ಯಾರೊಬ್ಬ! (ಹ)
-ಬ್ಬ ನಿರಂಜನಾದಿತ್ಯಾನಂದಂತ್ಯ ಹಬ್ಬ!!!

ಕೂತೂಹಲ ಅಪಕ್ವ ಸ್ಥಿತಿ!   6(3344)

ತೂರಿ, ಕೇರದ ಭತ್ತಾಸ್ಥಿತಿ!
ಗ್ಲಿರುಳಿರ್ಬೇಕಾತ್ಮ ಸ್ಥಿತಿ!
ಕ್ಷ್ಯದಲ್ನೆಟ್ಟ ಗುರೀ ಸ್ಥಿತಿ!
ನನ್ಯ ಭಕ್ತಿಗಿದೇ ಸ್ಥಿತಿ!
ರಮ ಪಾವನವೀ ಸ್ಥಿತಿ! (ಸಿ)
-ಕ್ವದತ್ಯಂತಾಪರೂಪಾ ಸ್ಥಿತಿ!
ಸ್ಥಿತಪ್ರಜ್ಞೆಯೂ ಇದೇ ಸ್ಥಿತಿ! (ಗ)
-ತಿ ನಿರಂಜನಾದಿತ್ಯ ಪತಿ!!!

ಕೂಲಿ ಸಿಗಬೇಕು, ಬಾಳು ಸಾಗಬೇಕು! (ಒ)   4(1838)

-ಲಿದ ಮನದಿಂದ ಸೇವೆಯಾಗಬೇಕು!
ಸಿಕ್ಕಿದ್ದನ್ನಾನಂದದಿಂದ ತಿನ್ನಬೇಕು!
ಮನ ಶ್ರದ್ಧಾಪೂರ್ಣವಾಗಿರಬೇಕು!
ಬೇಸರ ಕಾರ್ಯದಲ್ಲಿರದಿರಬೇಕು!
ಕುಕಲ್ಪನೆಗೆಡೆಯಿಲ್ಲದಿರಬೇಕು!
ಬಾಯಿ ಮುಚ್ಚ್ಯಾತ್ಮ ವಿಚಾರ ಮಾಡಬೇಕು! (ಆ)
-ಳು ತಾನೆಂದುತ್ಸಾಹ ಕುಗ್ಗದಿರಬೇಕು!
ಸಾರ್ಥಕವೀಜನ್ಮ ಜ್ಞಾನದಿಂದಾಗ್ಗೇಕು! (ಸಂ)
-ಗ ಸಜ್ಜನರದ್ದೇ ಸದಾ ಇರಬೇಕು!
ಬೇಕು ಗುರುಕೃಪೆಯೆಂದರಿಯಬೇಕು! (ಮ)
-ಕುಟ ನಿರಂಜನಾದಿತ್ಯಗಿರಬೇಕು!!!

ಕೃತ, ತ್ರೇತ, ದ್ವಾಪರ, ಕಳೆದ್ಕಲಿ ಬಂತು!   6(3686)

ನ್ನ ತಾನರಿತಿರ್ಪುದೇ ಕಷ್ಟಕ್ಕೆ ಬಂತು! (ಅ)
-ತ್ರೇಯ ದತ್ತಾತ್ರೇಯನೆಂಬ ಹೆಸರೂ ಬಂತು!
“ತತ್ವಮಸಿ”ಯ ಗೂಢಾರ್ಥದರಿವೂ ಬಂತು!
ದ್ವಾರಕೇಶನ ಗೀತೆಯೂ ಬೆಳಕಿಗ್ಬಂತು!
ರಮಾರ್ಥ ಸಾರವಿದೆಂದರಿವಿಗ್ಬಂತು!
ಹಸ್ಯವಿದರ್ಜುನನಿಂದ ಹೊರಗ್ಬಂತು!
ಲಿಮಲ ಹೆಚ್ಚೀಗ ಕುರುಡತ್ವ ಬಂತು! (ಕ)
-ಳೆಯ ಕಾಟದಿಂದ ಬೆಳೆ ಹಾಳಾಗ್ತಾ ಬಂತು! (ಬಂ)
-ದ್ಕಳೆಗಳ ವಿನಾಶಕ್ಕೆ ವಿಷವೂ ಬಂತು! (ಇ)
-ಲಿ, ಹೆಗ್ಗಣಗಳು ಜಾಸ್ತಿಯಾಗುತ್ತಾ ಬಂತು!
ಬಂತು, ಹೊಟ್ಟೆ, ಬಟ್ಟೆಗಿಲ್ಲದ ಕಾಲ ಬಂತು!
ತುರ್ತು ಸ್ಥಿತಿ ನಿರಂಜನಾದಿತ್ಯಗ್ಬೇಡಾಯ್ತು!!!

ಕೃತಜ್ಞತೆಯೂ ಸಂಸ್ಕಾರ ಫಲ!   6(4320)

ನ್ನುದ್ಧಾರವಿದ್ರಿಂದ ಸಫಲ! (ಯ)
-ಜ್ಞ, ಯಾಗಗಳರ್ಥ ಇದೇ ಫಲ! (ಕ)
-ತೆ, ಪುರಾಣದುದ್ದೇಶ ಈ ಫಲ! (ಸಾ)
-ಯೂಜ್ಯಾನಂದಕ್ಕೊಯ್ಯುವುದೀ ಫಲ!
ಸಂತ, ಸಾಧುಗಳುಂಡರೀ ಫಲ! (ಸಂ)
-ಸ್ಕಾರದಿಂದ ಸಾಕ್ಷಾತ್ಕಾರ ಫಲ! (ವ)
-ರ ಗುರುಕೃಪೆಯಿಂದೆಲ್ಲಾ ಫಲ!
ಲಿಸ್ಲಿಕ್ಕೆ ಕಾಯಬೇಕು ಕಾಲ! (ಕಾ)
-ಲ ಶ್ರೀ ನಿರಂಜನಾದಿತ್ಯ ಬಾಲ!!!

ಕೃತಜ್ಞರಾಗಿಹರಾರೆನಗೆ?   6(4306)

ಲೆಹರಟೆ ತುಂಬಾ ನರಗೆ! (ಯ)
-ಜ್ಞ, ಯಾಗ ಬೇಡೀಗಿನವರಿಗೆ!
ರಾತ್ರಿ, ದಿನೇಂದ್ರಿಯಾನಂದವ್ರಿಗೆ! (ಯೋ)
-ಗಿ ಯಾಗುವಾಸೆಯಿಲ್ಲವರಿಗೆ!
ರಿ, ಹರರ್ಗೊಂಬೆ ಅವರಿಗೆ!
ರಾಗ, ದ್ವೇಷ ಬಹಳವರಿಗೆ! (ಮ)
-ರೆತು ತಮ್ಮನ್ನಿರುವವರಿಗೆ!
ಶ್ವರ ಸಾಕಾಗ್ಬೇಕವರಿಗೆ!
ಗೆಳೆಯ ನಿರಂಜನಾದಿತ್ಯಾಗೆ!!!

ಕೃಪಣ ಮಾತಿನಲ್ಲಿ ನಿಪುಣ!   4(2476)

ಠಾಣನವನೊಬ್ಬ ಜಿಪುಣ! (ಹ)
-ಣವೆಂದರೆ ಹಿಂಡುವನು ಪ್ರಾಣ!
ಮಾಡನು ಉಪಕಾರ ಸ್ಮರಣ!
ತಿನ್ನನವನುತ್ತಮ ಭಕ್ಷಣ! (ದಿ)
-ನ, ರಾತ್ರಿ ಹಣಕ್ಕಾಗಿ ಭ್ರಮಣ! (ಅ)
-ಲ್ಲಿಲ್ಲಿನದ್ದಾಡಿ ಕಾಲಕ್ರಮಣ!
ನಿತ್ಯಸಾಧನೆ ಮಾಟ, ಮಾರಣ!
ಪುರುಷೋತ್ತಮಾನೆಂಬ ಭಾಷಣ! (ತೃ)
-ಣ ನಿರಂಜನಾದಿತ್ಯಗೆ ಹಣ!!!

ಕೃಪಾ ಕಿರಣಾಶಾಂತಿ ವ್ಯಾಧಿ ಹರ!   5(3134)

ಪಾಪ, ಪುಣ್ಯದಂಟು ನಿರ್ಮೂಲಕರ!
ಕಿರಿದು, ಪಿರಿದೆಂದೆನ್ನದಾದರ!
ಮೇಶೋಮೇಶರ ಭಕ್ತಾಗ್ರೇಸರ! (ಗು)
-ಣಾತೀತ ತಾನಾಗೀತ ಗುಹೇಶ್ವರ!
ಶಾಂಭವಿಗಾಗಿಹನವ ಕುಮಾರ!
ತಿತಿಕ್ಷೆ, ವೈರಾಗ್ಯದಿಂದ ಗಂಭೀರ!
ವ್ಯಾಮೋಹವಿಲ್ಲದ ವಿಶ್ವ ಸಂಸಾರ!
ಧಿಕ್ಕರಿಸಿಹನವ ವಾಮಾಚಾರ!
ರಿ ಹರರಭೇದ ದತ್ತಾಕಾರ! (ವ)
-ರಗುರು ನಿರಂಜನಾದಿತ್ಯಾಕಾರ!!!

ಕೃಪೆಯಾದರೆ ಕೃಪಣನೂ ದಾನಿ!   1(389)

ಪೆರ್ಮೆಗೆಲ್ಲಾ ವಾಸುದೇವ ಕಾರಣಿ!
ಯಾದವೇಂದ್ರನೆಲ್ಲರ ಅಭಿಮಾನಿ!
ರಿದ್ರ ಕುಚೇಲನಾಪ್ತ ಸನ್ಮಾನಿ! (ಇ)
-ರೆ ಅವನ ಕರುಣೆ, ಪೂರ್ಣಜ್ಞಾನಿ!
ಕೃತಿಯವನದದ್ಭುತಾತ್ಮ ವಾಣಿ!
ತಿತನೂ ಅವನಿಂದ ಪಾವನಿ! (ರ)
-ಣಧೀರ ಅರ್ಜುನನ ಸಂಭಾವನಿ!
ನೂರೊಂದು ತಪ್ಪಿಗೆ ಕಾದ ಸಹನಿ!
ದಾರಿಯಿವನದಾಪ್ತ ಸಂಜೀವಿನಿ!
ನಿರಂಜನಾದಿತ್ಯನಾ ಗುಣಗಾನಿ!!!

ಕೃಪೆಯಿಂದ ಕೃತಾರ್ಥನಾಗ್ಬೇಕು!   5(2778)

ಪೆರರವಗಣಾಡದಿರ್ಬೇಕು! (ಬಾ)
-ಯಿಂದ ನಾಮಾಮೃತ ಕುಡಿಯ್ಬೇಕು!
ರ್ಶನದಿಂದ ಧನ್ಯನಾಗ್ಬೇಕು!
ಕೃತಕಕ್ಕೆ ಹುಚ್ಚಾಗದಿರ್ಬೇಕು!
ತಾಯ್ತಂದೆ ಗುರುವೆಂದರಿಯ್ಬೇಕು! (ಸಾ)
-ರ್ಥಕವನ ಭಕ್ತಿಯಿಂದಾಗ್ಬೇಕು!
ನಾನಾ ಆಸೆಗಳಳಿದಿರ್ಬೇಕು! (ಆ)
-ಗ್ಬೇಕಹಂಕಾರ ಬಿಟ್ಟೊಂದಾಗ್ಬೇಕು! (ಓ)
-ಕುಳಿ ನಿರಂಜನಾದಿತ್ಯಾಡ್ಬೇಕು!!!

ಕೃಷ್ಣ ನಿತ್ಯಾನಂದನಯ್ಯಾ! (ಪೂ)   5(2855)

-ಣ ಸ್ವರೂಪವನದಯ್ಯಾ!
ನಿಷ್ಟಾವಂತನವನಯ್ಯಾ!
ತ್ಯಾಗ ಜೀವಿಯವನಯ್ಯಾ!
ನಂಟರು ಸಜ್ಜನರಯ್ಯಾ!
ಯಾಮಯನವನಯ್ಯಾ!
ರ ನಾರಾಯಣನಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಯ್ಯಾ!!!

ಕೃಷ್ಣ ಬಂದಾ ಗೋಪಾಲ ಕೃಷ್ಣ ಬಂದಾ! (ಪೂ)   4(1730)

-ಷ್ಣ ಶ್ರೀ ಕೃಷ್ಣಾತ್ಮ ಸ್ವರೂಪ ತಾನೆಂದಾ!
ಬಂದೆ ನಂದನಂದನನಾಗ್ಯಂದೆಂದಾ!
ದಾಮೋದರನೆಂದೂ ಕರೆದರೆಂದಾ!
ಗೋವರ್ಧನೋದ್ಧಾರಿ ಯಾದವಾನೆಂದಾ!
ಪಾರ್ಥಸಾರಥಿಯಾದೆ ನಾನಂದೆಂದಾ! (ಕಾ)
-ಲ ಕುರುಕುಲಕಾದವ ನಾನೆಂದಾ!
ಕೃಷ್ಣವೇಣ್ಯಕ್ಷಯಾಂಬರೆನ್ನಿಂದೆಂದಾ! (ಕೃ)
-ಷ್ಣ, ಬಲರಾಮಾನುಜ, ರಾಮಾನೆಂದಾ!
ಬಂಧ, ಭವಬಂಧ ಹರ ನಾನೆಂದಾ! (ಇಂ)
-ದಾ, ನಿರಂಜನಾದಿತ್ಯಾನೆಂದು ಬಂದಾ!!!

ಕೃಷ್ಣ ಬಾ, ರಾಮ ಬಾ, ರಾಮಕೃಷ್ಣ ಬಾ! (ಉ)   5(2587)

-ಷ್ಣ ಸಂಸಾರದ್ದು ಸಹಿಸಲಾರೆ ಬಾ!
ಬಾಲಕರ ಭಾರ ಹೊರಲಾರೆ ಬಾ! (ಶ್ರೀ)
-ರಾಗ ಹಾಡುವೆನೀಗ ಕೇಳು ಬಾ!
ಧ್ಯದಲ್ಲೆದ್ದು ಹೋಗಲಾಗದು ಬಾ!
ಬಾಣ, ಬಿಲ್ಲುಗಳೀಗನಗತ್ಯ ಬಾ!
ರಾಗಾನಂದದಲ್ಲೊಂದಾಗಲೀಗ ಬಾ!
ಲಗ್ಯೆದ್ದೆನ್ನ ನೀ ಮಲಗಿಸು ಬಾ!
ಕೃಪೆ ನಿನ್ನದೆನಗಾಗಬೇಕು ಬಾ!
(ವೈ)ಷ್ಣವಿ ನನ್ನನುಪೇಕ್ಷಿಸ ಬೇಡ!
ಬಾ! ನಿರಂಜನಾದಿತ್ಯನಾಗೀಗ ಬಾ!!!

ಕೃಷ್ಣನ ತೀರ್ಥ ಪ್ರಸಾದಾನಂದ! (ವೈ)   4(1649)

-ಷ್ಣವನವ ಸದಾ ಬ್ರಹ್ಮಾನಂದ! (ಅ)
-ನನ್ಯ ಭಕ್ತಿಯ ವಿನಯಾನಂದ!
ತೀರ್ಥರೂಪನುಪಮಾತ್ಮಾನಂದ! (ವ್ಯ)
-ರ್ಥವೆನುವನಿವ ಮಿಥ್ಯಾನಂದ!
ಪ್ರತಿಕ್ಷಣ ರಾಮನಾಮಾನಂದ!
ಸಾಮಗಾನಾನಂದ ಶಿವಾನಂದ! (ಸ)
-ದಾ ಸಚ್ಚಿದಾನಂದ ದತ್ತಾನಂದ!
ನಂಬಿಗೆಗಿಂಬಾದನಂತಾನಂದ! (ಅಂ)
-ದ ಶ್ರೀ ನಿರಂಜನಾದಿತ್ಯಾನಂದ!!!

ಕೃಷ್ಣನ ನೋಡಿ ಉದ್ಧಾರವಾಗಯ್ಯಾ! [ಪೂ]   5(2856)

-ಷ್ಣನಿಗೆ ಪರಮಾಪ್ತನವನಯ್ಯಾ!
ಗುನಗುತವನಾತಿಥ್ಯವಯ್ಯಾ!
ನೋವಿನಲ್ಲೂ ದುಡಿವನವನಯ್ಯಾ! (ಆ)
-ಡಿದಂತೆ ಕೃತಿಗಳವನದಯ್ಯಾ!
ಚ್ಚ, ನೀಚ ಅವನಿಗಿಲ್ಲವಯ್ಯಾ! (ಶ್ರ)
-ದ್ಧಾ, ಭಕ್ತಿ ಅನುಪಮವನದಯ್ಯಾ! (ಪ)
-ರನಿಂದೆ ಮಾಳ್ಪವನಲ್ಲವಯ್ಯಾ!
ರ್ವವೆಂಬುದವನಲ್ಲಿಲ್ಲವಯ್ಯಾ! (ಅ)
-ಯ್ಯಾ ನಿರಂಜನಾದಿತ್ಯನವನಯ್ಯಾ!!!

ಕೃಷ್ಣನದ್ದತಿಮಾನುಷ ಶಕ್ತಿ! (ವೈ)   5(2675)

-ಷ್ಣವನವನಲ್ಲಿರಬೇಕ್ಭಕ್ತಿ!
ರನಿಗವನಿಂದಲೇಮುಕ್ತಿ! (ಸ)
-ದ್ದಡಗಬೇಕ್ಮನಸಿನ ಯುಕ್ತಿ!
ತಿರಿಗಿ ಬರಬಾರದು ವೃತ್ತಿ!
ಮಾಯೆಯಿಂದಾಗ್ವುದಾಗ ನಿವೃತ್ತಿ! (ಅ)
-ನುಪಮಾತ್ಮಾನಂದವಾಗ ಪ್ರಾಪ್ತಿ! (ವಿ)
-ಷಯವಾಸನೆಗಾಗ ನಿಶ್ಯಕ್ತಿ!
ರಣಗಾಧಾರ ಸದ್ಗುರೂಕ್ತಿ! (ಶ)
-ಕ್ತಿ ನಿರಂಜನಾದಿತ್ಯಾತ್ಮ ಶಕ್ತಿ!!!

ಕೃಷ್ಣನನ್ನೆತ್ತಿ ಮುದ್ದಾಡಿದರ್ಗೋಪಿಯರು! (ಪೂ)   5(2941)

-ಷ್ಣನಿಗೆ ವಂದಿಪರು ದೂರದಿಂದವರು! (ಅ)
-ನವರತ ಕೃಷ್ಣನ ಕೂಡ್ಯಾಡಿದ್ರವರು! (ನಿ)
-ನ್ನೆದರ್ನಿಲ್ಲಲಾರೆವೆಂದರ್ಸೂರ್ಯಗವರು! (ಹ)
-ತ್ತಿ, ಉಣ್ಣೆ, ಬಟ್ಟೆಗಳಂತೆ ಇಬ್ಬರೆಂಬರು!
ಮುಖ ಭೇದದಿಂದ ಸುಖ, ದುಃಖವೆಂಬರು! (ಮ)
-ದ್ದಾನೇ ಮುಂದೆ ಮೊದ್ದಾಮೆಯಂತೆಂಬರವರು! (ವಾ)
-ಡಿಕೆಯ ಮಾತಿದಾದ್ರೂ ಒಂದೇ ಆ ಈರ್ವರು!
ಯಾನಿಧಿಗಳಾಗಿಹರವರೀರ್ವರು! (ಆ)
-ರ್ಗೋಸುಗ ಬೇರ್ಬೇರಾಗಿ ಕಾಣುವರವರು?
ಪಿರಿಯೋದ್ದೇಶಕ್ಕಾಗಿ ಹಾಗಿರ್ಪವರು!
ದುಪತಿ, ಛಾಯಾಪತಿ ಆತ್ಮಾರಾಮರು! (ಗು)
-ರು ನಿರಂಜನಾದಿತ್ಯನೆಂದೀಗಿರುವರು!!!

ಕೃಷ್ಣನಾಕಳು ತಿವಿಯದಯ್ಯಾ! (ಪೂ)   6(4222)

-ಷ್ಣನ ಕುದುರೆ ಕಾಣಿಸದಯ್ಯಾ! (“ನೀ”)
-“ನಾ” ನೆನ್ನದವರಿಷ್ಟ ಹಾಗಯ್ಯಾ! (ತ್ರಿ)
-ಕರಣ ಶುದ್ಧಿಯಾದರಂತಯ್ಯಾ! (ಕೀ)
-ಳು ವ್ಯಾಮೋಹ ಫಲ ಸಂಸಾರಯ್ಯಾ!
ತಿವಿವುದಿದರ ಸ್ವಭಾವಯ್ಯಾ!
ವಿಕಲ್ಪ, ಸಂಕಲ್ಪ ಸಹಿತಯ್ಯಾ! (ಭ)
-ಯವಿದರಿಂದೆಮಗಿಹುದಯ್ಯಾ!
ಶೇಂದ್ರಿಯ ಜಯಿಸಬೇಕಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನಾಗಯ್ಯಾ!!!

ಕೃಷ್ಣನಾಡಿಸಿದಳಾ ಯಶೋಧ! (ಕೃ)   4(1469)

-ಷ್ಣ ಲೀಲಾನಂದಿತಳಾ ಯಶೋಧ!
ನಾಮ ಸ್ಮರಿಸಿದಳಾ ಯಶೋಧ! (ಪಾ)
-ಡಿ ಕುಣಿದಾಡಿದಳಾ ಯಶೋಧ! (ಮೀ)
-ಸಿ ಸಿಂಗರಿಸಿದಳಾ ಯಶೋಧ!
ಧಿ, ಕ್ಷೀರ, ವಿತ್ತಳಾ ಯಶೋಧ! (ಆ)
-ಳಾಗಿ ಸೇವಿಸಿದಳಾ ಯಶೋಧ! (ತಾ)
-ಯ ಪ್ರೀತಿ ತೋರಿದಳಾ ಯಶೋಧ!
ಶೋಕವಿಲ್ಲದಿದ್ದಳಾ ಯಶೋಧ!
ರ್ಮಿ ನಿರಂಜನಾದಿತ್ಯೆಶೋಧ!!!

ಕೃಷ್ಣನಿಗಾಗಿ ಮೀರಾ ಹುಚ್ಚಿ! (ಕೃ)   6(3369)

-ಷ್ಣನಾಪ್ತನಾದಾಕೆಗೆ ಮೆಚ್ಚಿ!
ನಿಶ್ಚಲ ಭಕ್ತಳಾದಾ ಹುಚ್ಚಿ!
ಗಾನಮಾಡಿದಳವ್ನ ಮೆಚ್ಚಿ!
ಗಿರಿಧರ ಗೋಪಾಲ್ಗಾ ಹುಚ್ಚಿ!
ಮೀಸಲಾದಳವಗೆ ಮೆಚ್ಚಿ!
ರಾತ್ರಿ, ಹಗ್ಲು, ಕುಣಿದ್ಲಾ ಹುಚ್ಚಿ!
ಹುಮ್ಮಸ್ತುಂಬಿದ ಕೃಷ್ಣ ಮೆಚ್ಚಿ! (ಹು)
-ಚ್ಚಿ ನಿರಂಜನಾದಿತ್ಯಾಪ್ತೇಚ್ಛಿ!!!

ಕೃಷ್ಣನೆನಗೆ ತಕ್ಕೊಡನಾಡಿ! (ಪೂ)   6(4106)

-ಷ್ಣನಿಗಿವನ ಮನೆಯೇ ಗುಡಿ!
ನೆರೆಯವರ್ಗಾಶ್ರಯವನಡಿ!
ಗುತ್ತಿರ್ಪನೆಲ್ಲರೊಡಗೂಡಿ! (ಹ)
-ಗೆಗಳಲ್ಲಿಲ್ಲವನಿಗೆ ನುಡಿ!
ತ್ವಜ್ಞನೀತ ಮಹಾ ಗಾರುಡಿ! (ತ)
-ಕ್ಕೊಳ್ಲಾರಿಂದೇನನ್ನೂ ಮೋಸ ಮಾಡಿ! (ಬ)
-ಡವರ್ಗಿವನೊಂದು ಜೀವ ನಾಡಿ!
ನಾದನ್ಯ ಬಾಣವನಗಡಿ! (ನೋ)
-ಡಿವ್ನ ನಿರಂಜನಾದಿತ್ಯನಡಿ!!!

ಕೃಷ್ಣನೇ ಗೀತೆ, ಗೀತೆಯೇ ಕೃಷ್ಣ! (ಉ)   6(4358)

-ಷ್ಣ ಬೆಳಕುಗಳೇ ಗೀತಾ ಕೃಷ್ಣ! (ಅ)
-ನೇಕ ನಾಮ, ರೂಪಿ ಗೀತಾ ಕೃಷ್ಣ! (ಯೋ)
-ಗೀ, ತ್ಯಾಗೀ, ಭೋಗಿ ಶ್ರೀ ಗೀತಾ ಕೃಷ್ಣ! (ಸಂ)
-ತೆಯಲ್ಲಿ ಸಿಕ್ಕನು ಗೀತಾ ಕೃಷ್ಣ!
ಗೀತಾಭ್ಯಾಸಿಯಪ್ಪ ಗೀತಾ ಕೃಷ್ಣ! (ಮಾ)
-ತೆ ಈರೇಳ್ಲೋಕಕ್ಕೆ ಗೀತಾ ಕೃಷ್ಣ! (ಮಾ)
-ಯೆಚ್ಛೆಗೊಳಗಾಗ ಗೀತಾ ಕೃಷ್ಣ!
ಕೃಷ್ಣ, ಕೃಷ್ಣ, ದತ್ತ ಗೀತಾ ಕೃಷ್ಣ! (ಪೂ)
-ಷ್ಣ ನಿರಂಜನಾದಿತ್ಯಾ ಶ್ರೀ ಕೃಷ್ಣ!!!

ಕೃಷ್ಣರಾಜ ಪೇಟೆಯಲ್ಲೇನಿದೆ? (ಕೃ)   4(1906)

-ಷ್ಣನ ಗುಣಗಾನವಾಗುತಿದೆ!
ರಾತ್ರಿ, ದಿನ, ಇದು ಸಾಗುತಿದೆ!
ನ ಜಾಗೃತಿಯುಂಟಾಗುತಿದೆ!
ಪೇಯ ಹರಿನಾಮವಾಗುತಿದೆ! (ಸ)
-ಟೆಯನ್ನು ದಿಟ ಬೆನ್ನಟ್ಟುತಿದೆ! (ಜ)
-ಯ ಸದ್ಗುರು ಪಾದಕ್ಕಾಗುತಿದೆ!(ಅ)
-ಲ್ಲೇನಿಲ್ಲೇನೆಂಬ ಭ್ರಾಂತಿ ಹೋಗಿದೆ!
ನಿಶ್ಚಿಂತೆ ತಾಂಡವವಾಡುತಿದೆ! (ಸೊ)
-ದೆ ನಿರಂಜನಾದಿತ್ಯಾನಂದಾದೆ!!!

ಕೃಷ್ಣಾಪ್ಪಾ! ಸಮಶೀತೋಷ್ಣಪ್ಪಾ! (ಉ)   2(639)

-ಷ್ಣಪ್ಪಾ! ಸೂರ್ಯನಾರಾಯಣಪ್ಪಾ! (ಅ)
-ಪ್ಪಾತ್ಮಾರಾಮಪ್ಪಾ! ಶ್ರೀ ರಾಮಪ್ಪಾ!
ರಸ್ವತಿಯಪ್ಪಾ ಬ್ರಹ್ಮಪ್ಪಾ!
ನ್ಮಥ ಹರಪ್ಪಾ ಶಿವಪ್ಪಾ!
ಶೀಲ ನಿಮ್ಮಂತಿರೆ ಸುಖಪ್ಪಾ!
ತೋರಿಕೆಯಾಟ ಬೂಟಾಟಪ್ಪಾ! (ವೈ)
-ಷ್ಣವ, ಶೈವಭೇದ ದತ್ತಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯೇಕಪ್ಪಾ!!!

ಕೆಂಡೆನಾನಾಶಂಕರನಾ! (ಎ)   5(2771)

-ಡೆಬಿಡದೆಲ್ಲೆಲ್ಲಿಹನಾ!
ನಾರೀಮನವಾಳುವನಾ!
ನಾಗೇಂದ್ರಿಯ ನಿಗ್ರಹನಾ!
ಶಂಕೆ ಏನೇನಿಲ್ಲದನಾ!
ಲಿಮಲ ಸಂಹರನಾ! (ವ)
-ರಗುರು ತಾನಾದವನಾ! (ನಾ)
-ನಾ ನಿರಂಜನಾದಿತ್ಯನಾ???

ಕೆಂಪು, ಕಪ್ಪು ಸಿಪ್ಪೆಯೊಳಗಮೃತ!   2(777)

ಪುರುಷ, ಸ್ತ್ರೀಯರೆಲ್ಲರೊಳಮೃತ!
ಷ್ಟ, ನಷ್ಟವಾವುದಿಲ್ಲದಮೃತ! (ಉ)
-ಪ್ಪು, ಖಾರ, ಹುಳಿಯೇನಿಲ್ಲದಮೃತ!
ಸಿಹಿ, ಕಹಿ, ಸಮರಸದಮೃತ! (ಸ)
-ಪ್ಪೆ, ಸಂಬಾರಗಳೇನಿಲ್ಲದಮೃತ! (ಬಾ)
-ಯೊಳಗೆ ಬಿದ್ದರಪ್ಪಾನಂದಾಮೃತ! (ಹ)
-ಳಸಿ, ಹಾಳಾಗದ ವಿಮಲಾಮೃತ!
ತಿ, ಸ್ಥಿತಿ, ಚ್ಯುತಿಯಲ್ಲದಮೃತ!
ಮೃತ್ಯುಂಜಯ ರಸವೆಂಬಅಮೃತ! (ಹಿ)
-ತ ನಿರಂಜನಾದಿತ್ಯಾನಂದಾಮೃತ!!!

ಕೆಟ್ಟ ಬುದ್ಧಿಯ ಮಟ್ಟ ಹಾಕ್ವುದೆಂತಪ್ಪಾ? (ಮೊ)   5(3198)

-ಟ್ಟಮೊದಲ್ದುಷ್ಟ ಸಹವಾಸ ಬಿಡಪ್ಪಾ! (ಉಂ)
-ಬುವಾಹಾರ ಶುದ್ಧ ಸಾತ್ವಿಕವಾಗ್ಲಪ್ಪಾ! (ವೃ)
-ದ್ಧಿ, ಕ್ಷಯದಲ್ಲಿ ಸಮ ಬುದ್ಧಿಯಿರ್ಲಪ್ಪಾ!
ಶಸ್ಸು ನಾಮಸ್ಮರಣೆಯಿಂದಾಗ್ಲಪ್ಪಾ!
ದನಬಾಧೆಯಾದಾಗೆದ್ದೋಡಾಡಪ್ಪಾ! (ಮು)
-ಟ್ಟಬೇಡ ಮಾದಕ ಪಾನಗಳನ್ನಪ್ಪಾ!
ಹಾಡು ಹರಿನಾಮ ಕೀರ್ತನೆಯನ್ನಪ್ಪಾ! (ಉ)
-ಕ್ವುದಾಗ ವಿವೇಕ, ವೈರಾಗ್ಯಗಳಪ್ಪಾ!
(ಎಂ)ದೆಂದಿಗೂ ವೇಶ್ಯಾ ಸಂಬಂಧ ಮಾಡ್ಬೇಡಪ್ಪಾ!
ನು, ಮನ, ಧನ ಗುರುಸೇವೆಗಪ್ಪಾ! (ಅ)
-ಪ್ಪಾ}, ನಿರಂಜನಾದಿತ್ಯ ಹಿತೈಷಿಯಪ್ಪಾ!!! {(ಅ)

ಕೆಡುಕಿನ ಗುರು ಶನಿ! (ಕೊ)   4(1832)

-ಡುವನು ಗೌರವ ಮುನಿ!
ಕಿರುಕುಳವೀವ ಶನಿ! (ವಿ)
-ನಯದಿಂದಿರುವ ಮುನಿ!
ಗುಲ್ಲೆಬ್ಬಿಸುವವ ಶನಿ! (ಕ)
-ರುಣೆ ತೋರುವವ ಮುನಿ!
ಕ್ತಿ, ಯುಕ್ತಿವಂತ ಶನಿ! (ಮು)
-ನಿ ನಿರಂಜನಾದಿತ್ಯ ನೀ!!!

ಕೇಂದ್ರದಿಂದ ಬಂದಿದೆಯೊಂದು ತಂತಿ! [ಭ]   5(3000)

-ದ್ರವಾಗಿಹುದೀಗ ಜನರ ಕ್ರಾಂತಿ! (ಅಂ)
-ದಿಂದಿನದ್ದೆಲ್ಲವೂ ಸುಳ್ಳು ವದಂತಿ!
ರ್ಶನಾಪೇಕ್ಷಿಗಾಗ್ಬೇಕೀಗ ಶಾಂತಿ!
ಬಂಧಮುಕ್ತನಾದ ಮೇಲೆ ವಿಶ್ರಾಂತಿ!
ದಿವ್ಯನಾಮ ಜಪದಿಂದಾತ್ಮ ಶಾಂತಿ!
ದೆವ್ವ ಪಿಶಾಚಿಗಳ ಕಾಟ ಭ್ರಾಂತಿ! (ಈ)
-ಯೊಂದೇ ಮಾತಿನಲ್ಲೀಗ ಮನಃ ಶಾಂತಿ!
ದುರಿತದೂರವಾಗ್ದಾಗದು ಶಾಂತಿ!
ತಂದೆ, ತಾಯಿ, ಬಂಧು ಬಳಗಾ ಶಾಂತಿ! (ತಂ)
-ತಿ ನಿರಂಜನಾದಿತ್ಯನಂತರೋಕ್ತಿ!!!

ಕೇಳಬೇಡಿ, ಹೇಳಬೇಡಿ ಚಾಡಿ! (ಕ)   5(2672)

-ಳಕಳಿಯ ಮಾತ ತಳ್ಳಬೇಡಿ!
ಬೇಕಾತ್ಮಾನಂದಕ್ಕೆ ಶುದ್ಧನಾಡಿ! (ಕು)
-ಡಿಕರೊಡನಾಟ ಬಿಟ್ಟುಬಿಡಿ!
ಹೇತುನಾಥನ ಚಿಂತನೆಮಾಡಿ! (ಒ)
-ಳ, ಹೊರಗೆಲ್ಲಾ ಅವನೇ! ನೋಡಿ!
ಬೇರೆಲ್ಲಾ ವಾದ, ವಿವಾದ ಮೋಡಿ! (ಹಿ)
-ಡಿ, ಸದ್ಗುರುವಿನ ಪಾವನಡಿ! (ಆ)
-ಚಾರ, ವಿಚಾರವನಂತೆ ಇಡಿ! (ನೋ)
-ಡಿ, ನಿರಂಜನಾದಿತ್ಯನಂತಾಡಿ!!!

ಕೇಳಿದೆ ಪುರಾಣಕಥೆ ಶ್ರದ್ಧೆಯಿಂದ! (ಬಾ)   6(4355)

-ಳಿದೆನು ದರ್ಶನಕ್ಕಾಗಿ ಭಕ್ತಿಯಿಂದ! (ತಂ)
-ದೆ, ತಾಯಿ, ದೇವರೆಂಬ ನಂಬಿಗೆಯಿಂದ!
ಪುರುಷೋತ್ತಮನ ಕಂಡಿಲ್ಲ ಕಣ್ಣಿಂದ!
ರಾಮದರ್ಶನಾಗ್ಬೇಕ್ತುಳಸಿಗಾದಂದ! (ಗು)
-ಣ ದೋಷಕ್ಷಮಿಸ್ಬೇಕ್ದಶರಥಾನಂದ!
ಟ್ಟುಕಥೆ ಹರಿಸದು ಭವ ಬಂಧ! (ವ್ಯ)
-ಥೆಗವಕಾಶ ಕೊಡದಿರ್ಲಿ ಮುಕುಂದ!
ಶ್ರಮ ಸಾರ್ಥಕವಾಗದಾಗದಾನಂದ! (ನಿ)
-ದ್ಧೆ ಸೀತಾದೇವಿ ಬರಲೀಗೊಲವಿಂದ! (ಕೈ)
-ಯಿಂದೆತ್ತಿಸಿಕೊಳ್ಳಬೇಕವ್ಳಿಂದೀಕಂದ!
ತ್ತಗುರು ನಿರಂಜನಾದಿತ್ಯಾನಂದ!!!

ಕೇಳಿದ್ಕೊಡ್ದಿದ್ರೆ ಹೇಳಿದ್ಕೇಳ್ವವರಾರು? (ಕೋ)   6(3832)

-ಳಿಯಂತೆಲ್ಲಾ ತಮ್ಮೆಡೆಗೇ ಕೆದ್ಕುವರು! (ಇಂ)
-ದ್ಕೊಡ್ದವ್ರು ಮುಂದೆ ಕೊಡ್ತೇವಂದ್ರೆ ನಂಬರು! (ದು)
-ಡ್ದಿಹಗೆ ಹೀಗೆ ಮಾಡುವನು ದೇವರು! (ನಿ)
-ದ್ರೆ, ಆಹಾರ, ತೊರೆದಿಹರು ಭಕ್ತರು!
ಹೇಳಿದ್ಕೇಳಿ ಹೀಗಾಯ್ತೆಂದಳುತ್ತಿಹರು! (ಉ)
-ಳಿಗಾಲವಿಲ್ಲೆಂದು ತೊಳಲುತ್ತಿಹರು! (ಇ)
-ದ್ಕೇನು ಹೇಳ್ವರೀಗ ನಮ್ಮ ಬಲ್ಲವರು? (ಉ)
-ಳ್ವ ರೈತರು ದಿಕ್ಕು ತೋಚದೆ ಸುಸ್ತಾದ್ರು!
ಸನಾಶನಕ್ಕೂ ಗತಿಯಿಲ್ಲದಾದ್ರು!
ರಾಜ್ಯಭಾರ ಮಾಡುವರು ನಮ್ಮವರು! (ಯಾ)
-ರು? ನಿರಂಜನಾದಿತ್ಯನೆಂದರಿಯರು!!!

ಕೇಳುವುದೇ, ಹೇಳುವುದೇನಾ ಲೀಲಾವಿನೋದನಿಗೆ? (ಬಾ)    2(820)

-ಳುವುದೀ ಸಂಸಾರದಲಾನಂದಾ ಲೀಲಾವಿನೋದನಿಗೆ! (ಆ)
-ವುದೂ ತನ್ನಿಷ್ಟದಂತಾಗಬೇಕಾ ಲೀಲಾವಿನೋದನಿಗೆ!
ದೇವ ನೀನೇ ಗತ್ಯೆಂದಿರಬೇಕಾ ಲೀಲಾವಿನೋದನಿಗೆ! (ಅ)
-ನುದಿನದನುಷ್ಠಾನವಾನಂದಾ ಲೀಲಾವಿನೋದನಿಗೆ!
ಹೇಯವಾಗಿಹುದನ್ಯ ಹವ್ಯಾಸಾ ಲೀಲಾವಿನೋದನಿಗೆ! (ಕೀ)
-ಳು, ಮೇಲೆಂಬ ಭಾವಭೇದವಿಲ್ಲಾ ಲೀಲಾವಿನೋದನಿಗೆ! (ಸಾ)
-ವು, ನೋವಿನ ಭಯವಾವುದಿಲ್ಲಾ ಲೀಲಾವಿನೋದನಿಗೆ!
ದೇಶ, ವಿದೇಶವೆಲ್ಲಾ ಸ್ವದೇಶಾ ಲೀಲಾವಿನೋದನಿಗೆ!
ನಾಳೆಗೇನೆಂಬ ಯೋಚನೆಯಿಲ್ಲಾ ಲೀಲಾವಿನೋದನಿಗೆ!
ಲೀನವಾಗಿರುವುದೊಂದಾನಂದಾ ಲೀಲಾವಿನೋದನಿಗೆ! (ಆ)
-ಲಾಪ ಪ್ರಲಾಪ ಳೆಲ್ಲಲಕ್ಷ್ಯಾ ಲೀಲಾವಿನೋದನಿಗೆ!
ವಿಧಿವಿಲಾಸವೆನ್ನುವುದಾಟಾ ಲೀಲಾವಿನೋದನಿಗೆ! (ಮ)
-ನೋರೂಪಿಯಾಗಿರುವುದಾನಂದಾ ಲೀಲಾವಿನೋದನಿಗೆ!
ರ್ಶನಕಾಗಳುವುದೊಂದಾಟಾ ಲೀಲಾವಿನೋದನಿಗೆ!
ನಿಜರೂಪ ಮರೆಸಿರ್ಪಾನಂದಾ ಲೀಲಾವಿನೋದನಿಗೆ!
ಗೆಳೆಯ ಶ್ರೀ ನಿರಂಜನಾದಿತ್ಯಾ ಲೀಲಾವಿನೋದನಿಗೆ!!!

ಕೇಳ್ಳಿಕ್ಕೂ, ಹೇಳ್ಳಿಕ್ಕೂ, ಹುಟ್ಟಿ, ಸತ್ತು ಸಾಕಾಯ್ತು! (ಬಾ)   6(3980)

-ಳ್ಳಿಕ್ಕಾಗೀಗ ಧರೆಯಲ್ಲವತರಿಸ್ಯಾಯ್ತು! (ಹ)
-ಕ್ಕೂರ್ಜಿತಗೊಳಿಸಬೇಕೆಂಬ ಇಚ್ಛೆಯಾಯ್ತು!
ಹೇಳ್ಬೇಕಾರಿಗಾರೆಂಬ ಜ್ಞಾನೋದಯವಾಯ್ತು! (ಆ)
-ಳ್ಳಿಕ್ಕೆ ಶಕ್ತಿ, ಸಾಮರ್ಥಬೇಕೆಂಬರಿವಾಯ್ತು! (ಮಿ)
-ಕ್ಕೂಳಿಗದಿಂದಾರಿಗೂ ಸುಖವಿಲ್ಲದಾಯ್ತು!
ಹುರುಪೆಂತು ಬರಬೇಕೋ ತಿಳಿಯದಾಯ್ತು! (ಕ)
-ಟ್ಟಿಟ್ಟಿರುವ ಬುತ್ತಿ ಹೊಟ್ಟೆಗೇ ಸಾಲದಾಯ್ತು!
ರ್ವಶಕ್ತನಿಗೇ ಶರಣೆನಬೇಕಾಯ್ತು! (ಎ)
-ತ್ತುವವನೆತ್ತಿದಾಗಾಳೋಣ ವೆಂದಿದ್ದಾಯ್ತು!
ಸಾವಿಲ್ಲದ ಶರೀರವಿಲ್ಲೆಂದರಿತಾಯ್ತು!
ಕಾಲ ಕಾಯುವುದೀ ಬಾಳಿನ ಪಾಲಿಗಾಯ್ತು! (ಆ)
-ಯ್ತು, ನಿರಂಜನಾದಿತ್ಯಾನಂದ ಗುರಿಯಾಯ್ತು!!!

ಕೇಶವಗಾವೂರಯ್ಯಾ! (ವ)   2(566)

-ಶವವಗೆಲ್ಲೂರಯ್ಯಾ! (ಅ)
-ವನೆಲ್ಲರವನಯ್ಯಾ!
ಗಾಳಿಯಂತಿಹನಯ್ಯಾ! (ಆ)
-ವೂರೀವೂರೆಂದಿಲ್ಲಯ್ಯಾ! (ವ)
-ರ ನಾಮಾನಂದನಯ್ಯಾ! (ಅ)
-ಯ್ಯಾತ ನಿರಂಜನಯ್ಯಾ!!!

ಕೇಶವಾ ಲೋಕೇಶ ವಾಸವಾ! (ಅ)   3(1395)

-ಶಕ್ತೋದ್ಧಾರ ಗೈವಾ ಪಾದವಾ! (ಜೀ)
-ವಾತ್ಮಗಿತ್ತು ಕಾಯೋ ಮಾಧವಾ!
ಲೋಕವಾಸ ಸಾಕೋ ಯಾದವಾ!
ಕೇಳೆನೇನಿನ್ನು ರಾಧಾಧವಾ!
ರಣಗೀಯಾತ್ಮ ಯೋಗವಾ!
ವಾದ ಭೇದಾತೀತ ಮೋದವಾ!
ರ್ವ ನಾಮ ರೂಪಾನಂದವಾ! (ದೇ)
-ವಾ! ನಿರಂಜನಾದಿತ್ಯ ಶಿವಾ!!!

ಕೈ ಒಡ್ಡುವುದು, ಕೈ ಮುಗಿವುದಾಸೆ!   6(4296)

ಬ್ಬನಿನ್ನೊಬ್ಬನಿಂದಿಚ್ಛಿಪ ಪೈಸೆ! (ದು)
-ಡ್ಡು ತುಂಬ್ಲೆಂದ್ಬಾಯಿ ಬಿಟ್ಟಹುದು ಕಿಸೆ! (ಸಾ)
-ವು ಕಾದಿರುತ್ತಿಹುದು ದೆಸೆ ದೆಸೆ!
ದುರ್ಬುದ್ಧಿಗೆ ಲಭ್ಯ ಮುಳ್ಳಿನ ಹಸೆ!
ಕೈ, ಬಾಯಿಗಳನ್ನೀಗ ಮನ ಜೈಸೆ!
ಮುಕ್ತಳಾಗುವಳು ದುರ್ದೆ

ವೀ ಸೊಸೆ!
ಗಿರಿಧರನ ಸತ್ಸಂಗವಡಸೆ! (ಗೋ)
-ವುಗಳಂತವನ ಕೊಳಲಾಲಿಸೆ!
ದಾಸಿ ಮೀರಾಳಂತೊಡಲ ಸವೆಸೆ! (ಆ)
-ಸೆ ನಿರಂಜನಾದಿತ್ಯಗಿದೇ ಆಸೆ!!!

ಕೈ ಬಿಡಬೇಡ ಕಾಂತೆಯನ್ನು!   3(1029)

ಬಿರು ನುಡಿಯಾಡದಿರಿನ್ನು! (ದೂ)
-ಡದಿರು ಹೊರಗವಳನ್ನು!
ಬೇರಾರಿಹರವಳಿಗಿನ್ನು? (ಒ)
-ಡಗೂಡಿ ಸೇವೆ ಸಾಗಲಿನ್ನು!
ಕಾಂಚಿ ಕಾಮಾಕ್ಷಿ ತಾನಾಗಿನ್ನು!
ತೆಗಿಸು ಬೇಗ ತೆರೆಯನ್ನು! (ಕಾ)
-ಯ ಮನದಿಷ್ಟ ಸಲಿಸಿನ್ನು! (ಚೆ)
-ನ್ನು ನಿರಂಜನಾದಿತ್ಯಾಂಗಿನ್ನು!!!

ಕೈ, ಕಾಲು ಸ್ವಾಧೀನವಿಲ್ಲವಿದಕಪ್ಪಾ!   4(2118)

ಕಾಪಾಡಬೇಕು ದಯದೋರಿ ನೀನಪ್ಪಾ! (ಬ)
-ಲುಕಷ್ಟವಿದರ ನಿತ್ಯ ಜೀವನವಪ್ಪಾ!
ಸ್ವಾಮಿಯಡಿಗಿದನೊಪ್ಪಿಸಿಹೆನಪ್ಪಾ! (ಅ)
-ಧೀಶ ನೀನೀರೇಳು ಲೋಕಗಳಿಗಪ್ಪಾ!
ನಗಿನ್ನಾವ ದಾರಿಯೂ ತೋರದಪ್ಪಾ!
ವಿವೇಕಶೂನ್ಯ ನಾನಾಗಿರುವೆನಪ್ಪಾ! (ಬ)
-ಲ್ಲವ ನೀನೆಂದು ಶರಣಾಗಿಹೆನಪ್ಪಾ!
ವಿಷಯ ವಾಸನೆನ್ನಿಂದ ತೆಗೆಯಪ್ಪಾ! (ಮಂ)
-ದಭಾಗ್ಯ ನಾನಾದೆನೀ ಜಗದಲ್ಲಪ್ಪಾ!
ಲ್ಯಾಣ ನಿನ್ನಿಂದೆಲ್ಲಾ ಜೀವರಿಗಪ್ಪಾ!
-ಪ್ಪಾ! ನಿರಂಜನಾದಿತ್ಯಾನಂದ ನೀನಪ್ಪಾ!!!

ಕೈಕೆಯ ಬಯಕೆ ಆರಾಮಲೋಕಕ್ಕೆ!   1(210)

ಕೆಟ್ಟ ದಾನವ ಸಂಹಾರ ಕಾರಣಕ್ಕೆ!
ಶವಾಯ್ತು ಶ್ರೀರಾಮಾನುಜ ಭಾವಕ್ಕೆ!
ಲ ಬಂತು ರಾಘವನ ಪ್ರಭಾವಕ್ಕೆ!
ತ್ನ ಫಲಿಸಿತು ವಾನರ ಕೂಟಕ್ಕೆ!
ಕೆಚ್ಚೆದೆಯಾಂಜನೇಯಾತ್ಮ ದರ್ಶನಕ್ಕೆ!
ರಾಮನಿಂದಾಯ್ತು ಸುಖ ತ್ರಿಲೋಕಕ್ಕೆ!
ರಾವಣನಿಷ್ಟರಿವಾಯ್ತು ಜಗಕ್ಕೆ!
ನ ತೃಪ್ತಿಯಾಯ್ತು ಶಬರಿ ಜೀವಕ್ಕೆ!
ಲೋಪಾರೋಪ ಹೋಯ್ತು ಭಕ್ತಿ ಜೀವನಕ್ಕೆ!
ರ್ಮ, ಧರ್ಮದರಿವಾಯ್ತು ಭೂವನಕ್ಕೆ! (ಅ)
-ಕ್ಕೆ! ನಿರಂಜನಾದಿತ್ಯ ಕೃಪೆ ದೇಶಕ್ಕೆ!!!

ಕೈಗಾರಿಕೋದ್ಯಮಿಯಾಗಲಿ ಬ್ರಾಹ್ಮಣ!   5(3086)

ಗಾಣಾಪತ್ಯದಿಂದಾಗ್ಲಿ ಸಿದ್ಧ ಬ್ರಾಹ್ಮಣ!
ರಿಪುಗಳಾರನ್ನೂ ಜೈಸಿರ್ಲಿ ಬ್ರಾಹ್ಮಣ!
ಕೋವಿದನಾಗಿ ವಿರಾಜಿಸ್ಲಿ ಬ್ರಾಹ್ಮಣ! (ಮ)
-ದ್ಯ, ಮಾಂಸಾಹಾರಿಯಾಗದ್ಲಿರಿ ಬ್ರಾಹ್ಮಣ!
ಮಿತಭಾಷಿ ತಾನಾಗಿ ಇರ್ಲಿ ಬ್ರಾಹ್ಮಣ!
ಯಾವಪಕ್ಷಕ್ಕೂ ಸೇರದಿರ್ಲಿ ಬ್ರಾಹ್ಮಣ!
ಗನಸದೃಶನಾಗಿರ್ಲಿ ಬ್ರಾಹ್ಮಣ! (ಅ)
-ಲಿಪ್ತನಾಗಿ ಸಂಸಾರಿಯಾಗ್ಲಿ ಬ್ರಾಹ್ಮಣ!
ಬ್ರಾಹ್ಮೀ ಮುಹೂರ್ತದಲ್ಲೆದ್ದಿರ್ಲಿ ಬ್ರಾಹ್ಮಣ! (ಬ್ರ)
-ಹ್ಮಜ್ಞಾನ ಸಂಪನ್ನನಾಗಿರ್ಲಿ ಬ್ರಾಹ್ಮಣ! (ಗ)
-ಣಪತಿ ನಿರಂಜನಾದಿತ್ಯ ಬ್ರಾಹ್ಮಣ!!!

ಕೈಗೆ ಬಂದ ತುತ್ತು ಬಾಯಿಗಿಲ್ಲ!   5(2899)

ಗೆದ್ದರಿಗಳನ್ನು ಬಾಳಿರೆಲ್ಲ!
ಬಂದಮೇಲೆ ಹೋಗಲೇಬೇಕೆಲ್ಲ!
ರ್ಶನಾಕಾಂಕ್ಷಿಗಳಾಗ್ಬೇಕೆಲ್ಲ!
ತುರೀಯಾತೀತ ಸಾಮಾನ್ಯವಲ್ಲ! (ಹೊ)
-ತ್ತು ಕಾದಿದ ಸಾಧಿಸಬೇಕೆಲ್ಲ!
ಬಾಳು ಸಾರ್ಥಕವಿದರಿಂದೆಲ್ಲ! (ನಾ)
-ಯಿ, ನರಿಗಳಲ್ಲ ನರರೆಲ್ಲ!
(ತ್ಯಾ)ಗಿ ಯೋಗಿಯಪ್ಪ! ಸಂದೇಹವಿಲ್ಲ! (ಬ)
-ಲ್ಲ ನಿರಂಜನಾದಿತ್ಯನಿದೆಲ್ಲ!!!

ಕೈಮುಗಿಯುವುದೇಕೊಬ್ಬರಿಗೊಬ್ಬರು?   3(1393)

ಮುಸಲ್ಮಾನನೂ ಹಿಂದೂ ಸೋದರರು! (ತ್ಯಾ)
-ಗಿ, ಯೋಗಿಗಳಾಗ ಬೇಕವರಿಬ್ಬರು!
ಯುಕ್ತಾಯುಕ್ತತೆಯರಿಯಬೇಕಿಬ್ಬರು! (ಗೋ)
-ವುಹತ್ಯ ಮಾಡಬಾರದವರಿಬ್ಬರು!
ದೇವರೊಬ್ಬನೆಂದರಿಯಬೇಕಿಬ್ಬರು!
ಕೊಲೆ, ಸುಲಿಗೆಯ ಬಿಡಬೇಕಿಬ್ಬರು! (ಅ)
-ಬ್ಬರಾರ್ಭಟ ಬಿಡಬೇಕವರಿಬ್ಬರು! (ವೈ)
-ರಿಯೈಕ್ಯದಿಂದೆದುರಿಸಬೇಕಿಬ್ಬರು!
ಗೊಡ್ಡಾಚಾರ ಬಿಡಬೇಕವರಿಬ್ಬರು! (ಒ)
-ಬ್ಬರನೊಬ್ಬರಾದರಿಸಬೇಕಿಬ್ಬರು! (ಗು)
-ರು ನಿರಂಜನಾದಿತ್ಯಗ್ಬೇಕಿಬ್ಬರು!!!

ಕೈಲಾಸದಲ್ಲಿದ್ದುದಾಯ್ತಿಷ್ಟು ಹೊತ್ತು! (ಫಾ)   6(4221)

-ಲಾಕ್ಷನ ದರ್ಶನ ಪಡೆದದ್ದಾಯ್ತು!
ತ್ಸಂಗವಿದ ಮರೆಯದಂತಾಯ್ತು! (ಕಂ)
-ದರ್ಪನುಪಟಳ ಪಪ್ಪಿದಂತಾಯ್ತು! (ಅ)
-ಲ್ಲಿ ಗಣೇಶನ ದರ್ಶನವೂ ಆಯ್ತು! (ಇ)
-ದ್ದುದನ್ನು ನಿನ್ನೆದುರು ಅಂದದ್ದಾಯ್ತು!
ದಾಸಿ ನಾನು ನಿಮಗಾದದ್ದೂ ಆಯ್ತು! (ಆ)
-ಯ್ತಿದೇ ಜನ್ಮದಲ್ಲೆನ್ನುದ್ದಾರವಾಯ್ತು! (ಎ)
-ಷ್ಟ ಪುಣ್ಯಶಾಲಿ ನಾನೆಂದರಿವಾಯ್ತು!
ಹೊರಡಲು ಕಾಲು ನಡೆಯದಾಯ್ತು! (ಎ)
-ತ್ತು! ನಿರಂಜನಾದಿತ್ಯಾ!! ನನ್ನನ್ನೆತ್ತು!!!

ಕೈಲಾಸದಿಂದೋಡಿ ಶಿವ ಬಾ! (ಬ)   4(1739)

-ಲಾನುಗ್ರಹ ಮಾಡು ಶಿವ ಬಾ!
ಹವಾಸ ನೀಡು ಶಿವ ಬಾ! (ಬಂ)
-ದಿಂದೊಂದಾಗದಾದೆ ಶಿವ ಬಾ! (ಮುಂ)
-ದೋಡಿ ಬಾರದಾದೆ ಶಿವ ಬಾ! (ಹಾ)
-ಡಿ ಕುಣಿಯದಾದೆ ಶಿವ ಬಾ!
“ಶಿವಾಯ ನಮಃ ಓಂ” ಶಿವ ಬಾ!
ರ ಗುರುದೇವ ಶಿವ ಬಾ!
ಬಾ, ಶ್ರೀ ನಿರಂಜನಾದಿತ್ಯ ಬಾ!!!

ಕೈಲಾಸಪತಿಯಾದರೂ ಕಾಲಕಾಯಬೇಕು! [ಹಾ]   2(848)

-ಲಾಹಲವನ್ನಾದರೂ ಕಾಲಾಕಾದುಣಬೇಕು!
ತಿಗಾಗಿ ಕಪಾಲ ಧರಿಸಿ ಕಾಯಬೇಕು!
ರಶಿವನ ಕೃಪೆ ಸರ್ವರಿಗಾಗಬೇಕು!
ತಿತಿಕ್ಷೆಯಿಂದಲೇ ಕಾರ್ಯಸಿದ್ಧಿಯಾಗಬೇಕು!
ಯಾತನೆ ಸಹಿಸಿ ಧರ್ಮ, ಕರ್ಮ ಮಾಡಬೇಕು!
ಕ್ಷ ಸುತೆಯಂತೆ ಶಿವಗಾಗಿ ಕಾಯಬೇಕು!
ರೂಪ, ನಾಮ ಕಾಲಕ್ಕೆ ತಕ್ಕಂತೆ ಇರಬೇಕು!
ಕಾಮನೂ ಕಾಲ ಬಂದಾಗ ಕರಗಲೇ ಬೇಕು!
ಕ್ಷ್ಮೀಶನೂ ಶಿವನಿಗೆ ನೆರವಾಗಬೇಕು!
ಕಾಲನಾದರೂ ಕಾಲಕ್ಕೆ ಶಿರಬಾಗಬೇಕು!
ಮಪಿತನೂ ಕಾಲಾನುವರ್ತಿಯಾಗಬೇಕು!
ಬೇಸರವಿಲ್ಲದೆಬಸವನಂತಿರಬೇಕು!
ಕುಮಾರ ನಿರಂಜನಾದಿತ್ಯನಾಗಲೇ ಬೇಕು!!!

ಕೈಲಿ ಕಾಸಿಲ್ಲ ಮದ್ವೆ ಹೇಗೆ ಮಾಡ್ಬಲ್ಲ?   5(3158)

ಲಿಪಿ ವಿಧಿಯದು ಹೇಳಲಳವಲ್ಲ!
ಕಾಮೀ ವಧು, ವರರಿಗಿದು ಗೊತ್ತಿಲ್ಲ!
ಸಿನಿಮಾಕ್ಕೆ ಹೋಗದ ದಿನವೇ ಇಲ್ಲ! (ನ)
-ಲ್ಲನಾಗತಕ್ಕವ ಬಡವನೇನಲ್ಲ!
ನೆಯವರದ್ದಿದಕ್ಕಾತಂಕವಿಲ್ಲ! (ಮ)
-ದ್ವೆಯೆಂದೋ ಆಗಿದೆಂಬರಾ ನಲ್ಲೆ, ನಲ್ಲ!
ಹೇಳುವವರ್ಯಾರೀಗಿನವರಿಗೆಲ್ಲಾ?
ಗೆರೆ ಹಾಕ್ವವ್ರಿಲ್ಲ, ದಾಟ್ವ ಮಾತೇ ಇಲ್ಲ!
ಮಾಡಬೇಕಾದದ್ದು ಮಾಡ್ಲಿ ತಾಯ್ತಂದೆಲ್ಲಾ! (ಮಾ)
-ಡ್ಬಲ್ಲ ಶಕ್ತಿ ದೇವ್ರು ಕೊಡದಿದ್ರಾಗ್ದಲ್ಲಾ! (ಪು)
-ಲ್ಲ ನಿರಂಜನಾದಿತ್ಯ ಲೀಲೆಯಿದೆಲ್ಲಾ!!!

ಕೈಲಿಟ್ಟುಕೊಳ್ಳೆಂದ್ರೆ ಕೈ ಕೊಟ್ಟ! (ಹಾ)   5(2657)

-ಲಿಗ್ಬಂದವ್ನೆಮ್ಮೆ ಮೇಲ್ಕಣ್ಣಿಟ್ಟ! (ಮು)
-ಟ್ಟು, ಮಡಿಯೆಂದ್ರೆ ಮುಟ್ಟ್ಯೇಬಿಟ್ಟ!
ಕೊಳಕೆಂದ್ರೆ ಥಳಕ್ಮಾಡ್ಬಿಟ್ಟ! (ಮು)
ಳ್ಳೆಂದ್ರೆ ಕಲ್ಲು ತಂದು ದಾರ್ಗಿಟ್ಟ! (ನಿ)
-ದ್ರೆ ಮಾಡೆಂದ್ರೆಂದು ಕೂತ್ಕೊಂಡ್ಬಿಟ್ಟ!
ಕೈತುತ್ತಿಕ್ಕಿದ್ರೆ ಕೈ ಕಚ್ಬಿಟ್ಟ!
ಕೊನೆಗ್ದಿಕ್ಕಿಲ್ದೆ ಪರ್ದಾಡ್ಬಿಟ್ಟ! (ಸು)
-ಟ್ಟ ನಿರಂಜನಾದಿತ್ಯ ಜುಟ್ಟ!!!

ಕೈವಲ್ಯ ಪದವಿ ಯಾವುದು ಸ್ವಾಮಿ? (ಭ)   4(2146)

-ವಬಂಧ ಹರಿದರಾಗ್ವುದು ಕಾಮೀ! (ಬಾ)
-ಲ್ಯದಿಂದಭ್ಯಾಸವಾಗ್ಬೇಕಲ್ವೇ ಸ್ವಾಮಿ?
ರಮಾತ್ಮ ಭಕ್ತಿ ಪ್ರಾಮುಖ್ಯ ಕಾಮೀ! (ಪ)
-ದವಿಗೆ ಕಾಲಾವಧಿಯೆಷ್ಟು ಸ್ವಾಮಿ?
ವಿಧಿಗೂ ತಿಳಿಯದಾ ಕಾಲ ಕಾಮೀ! (ಮಾ)
-ಯಾತೀತನಾಗಬೇಕಲ್ಲವೇ ಸ್ವಾಮಿ! (ಯಾ)
-ವುದರಾಸೆಯೂ ಇರ್ಬಾರದು ಕಾಮೀ!
ದುಃಖ ಸಹಿಸುವುದು ಹೇಗೆ ಸ್ವಾಮಿ?
ಸ್ವಾಮಿ ಕೃಪೆಯಿಂದದು ಸಾಧ್ಯ ಕಾಮೀ! (ಸ್ವಾ)
-ಮೀ, ನಿರಂಜನಾದಿತ್ಯ ತಾನೇ ಸ್ವಾಮಿ!!!

ಕೈವಲ್ಯಧಾಮವಾಗಬೇಕೀ ಶರೀರ! (ಭ)   6(3966)

-ವಸಾಗರ ದಾಟಿಪುದಾಗಾ ಶರೀರ! (ಮೌ)
-ಲ್ಯ ತಪಸ್ಸೆಂದರಿಯಲೀಗಾ ಶರೀರ!
ಧಾತು ಕ್ಷಯ ಮಾಡಬಾರದಾ ಶರೀರ!
ನೋಜಯಕ್ಕೆ ಸಹಾಯಾಗಾ ಶರೀರ!
ವಾಸುದೇವನಿಗಾಲಯಾಗಾ ಶರೀರ! (ಯೋ)
-ಗ ಸಾಧನೆಯಿಂದದಾಗಲಾ ಶರೀರ!
ಬೇಕದಕ್ಕಿಂದ್ರಿಯ ನಿಗ್ರಹೀ ಶರೀರ!
ಕೀಚಕನಾಗದಿರಬೇಕಾ ಶರೀರ!
ಪಥ ಮಾಡ್ಬೇಕ್ಭೀಷ್ಮನಂಥಾ ಶರೀರ!
ರೀತಿಯಲ್ಲಾಗ್ಬೇಕು ಸುಧಾಮಾ ಶರೀರ! (ನ)
-ರರಾಗ ನಿರಂಜನಾದಿತ್ಯ ಶರೀರ!!!

ಕೊಂಪೆ ಹಂಪೆಯಾಗಿ ಮೆರೆಯಿತೆಂದು! (ಹಂ)   6(3934)

-ಪೆ ಕೊಂಪೆಯಾಗಿ ಮರೆಯಿತದಿಂದು! (ಅ)
-ಹಂಕಾರಿ ಯೋಚಿಸಲಿದನ್ನೆಂದೆಂದು!
ಪೆಡಂಭೂತದಿಂದಾರಿಗಾನಂದೆಂದು?
ಯಾದವೇಂದ್ರಗರಿವಾಯಿತಿ ದಂದು! (ಬಿ)
-ಗಿ ತಪ್ಪಿ ಹಾಳಾಯ್ತವನ ವಂಶಂದು!
ಮೆಟ್ಟಿತು ಶ್ರೀ ಪಾದ ಫಣಿಯನ್ನಂದು! (ಕೊ)
-ರೆಯಿತದನ್ನು ಮುಂದೆ ಬಾಣವೊಂದು! (ಆ)
-ಯಿತಿಂತಂತ್ಯ ಕೃಷ್ಣ ಶರೀರವಂದು!
ತಂದೆ, ತಾಯಿ ಎಲ್ಲಿ ಹೋದರಾಗಂದು? (ಅಂ)
-ದು, ಇಂದು ನಿರಂಜನಾದಿತ್ಯೆಂದೆಂದೂ!!!

ಕೊಚ್ಬೇಕ್ಮುಚ್ಮರೆ ಮೋಸವಮ್ಮಾ! (ಹೆ)   5(2693)

-ಚ್ಬೇಕುಚ್ಙಗುಣ ಸಂಪತ್ತಮ್ಮಾ!
(ಏ)ಕ್ಮುಗ್ದಿಲ್ಲ ಜನ್ಮ ಗೊತ್ತೇನಮ್ಮಾ? (ನಾ)
-ಚ್ಮನೆ ಹುಚ್ಚು ಬಿಟ್ಟಿಲ್ಲಮ್ಮಾ! (ಬೆ)
-ರೆಯ್ಬೇಕ್ಗುರು ಪಾದದಲ್ಲಮ್ಮಾ!
ಮೋಕ್ಷವಿದೆಂದರಿಯ್ಬೇಕಮ್ಮಾ!
ನ್ಯಾಸದಕ್ಕೆಂದರಿಯಮ್ಮಾ!
ರಗುರುಕೃಪಾಗತ್ಯವಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯಾಗಮ್ಮಾ!!!

ಕೊಟ್ಟಂಗಿಯ ತೊಟ್ಟೊಗೆದು ಬಿಡು! (ಕೆ)   4(1861)

-ಟ್ಟಂಬರದಿಷ್ಟಡಗಿಸಿ ಬಿಡು! (ತ್ಯಾ)
-ಗಿ ನಾಮ ಸಾರ್ಥಕ ಮಾಡಿಬಿಡು!
ಮಭಯವಿಲ್ಲದಿದ್ದುಬಿಡು!
ತೊಳೆದು ನಿರ್ಮಲವಾಗಿ ಬಿಡು! (ಸಿ)
-ಟ್ಟೊಳಗೆ ಬರದಂತಿದ್ದು ಬಿಡು!
ಗೆಳೆಯ ಶಿವನೆಂದಿದ್ದು ಬಿಡು!
ದುರ್ಜನರ ಸಂಗ ಬಿಟ್ಟು ಬಿಡು! (ಅಂ)
-ಬಿಕೆಗೆ ಮಗು ನೀನಾಗಿ ಬಿಡು! (ನೋ)
-ಡು ನಿರಂಜನಾದಿತ್ಯ ನಾಡು!!! ೧೮೬೧ ||

ಕೊಟ್ಟದ್ದುಂಡಾನಂದವಾಗಿರು! (ಬೆ)   5(3256)

-ಟ್ಟದಷ್ಟು ಬೇಕೆಂದನ್ನದಿರು! (ಕ)
-ದ್ದುಂಬಭ್ಯಾಸ ಬೆಳೆಸದಿರು!
ಡಾಮರು ನೆಲ ಮೆಟ್ಟದಿರು!
ನಂದೀಶನ ನೆನೆಯುತಿರು!
ರ್ಶನಕ್ಕಾಗಿ ಕಾಯುತಿರು!
ವಾದವಾರಲ್ಲೂ ಮಾಡದಿರು! (ಮಾ)
-ಗಿ ಹಣ್ಣಾದ ಮೇಲೆ ಉದುರು! (ಸೇ)
-ರು, ನಿರಂಜನಾದಿತ್ಯನೂರು!!!

ಕೊಟ್ಟದ್ದುಟ್ಟುಕೊಂಡಿರಬೇಕೆಂಬುದೊಂದು ಕಟ್ಟು! [ಪ]   3(1229)

-ಟ್ಟದರಸಿಯಾಗಬೇಕಾದರೆ ಬೇಕಾ ಕಟ್ಟು! (ಸ)
-ದ್ದು ಮಾಡಿ ಗುದ್ದಾಡಿದರೆ ಮುರಿವುದೊಗ್ಗಟ್ಟು! (ಹು)
-ಟ್ಟು, ಸಾವು, ಸುಟ್ಟುಹಾಕಲಿಕ್ಕಿರಬೇಕೊಗ್ಗಟ್ಟು!
ಕೊಂಡ ಕೋತಿಯಂತಾಡಿದರೆಲ್ಲಿಹುದೊಕ್ಕಟ್ಟು? (ಅ)
-ಡಿಗಡಿಗೊಡೆಯನಡಿಗೆರಗಲೊಕ್ಕಟ್ಟು! (ವ)
-ರ ಗುರುವಿನುಪದೇಶದಂತಿದ್ದರೊಕ್ಕಟ್ಟು!
ಬೇರಾರೂ ಬಿಡಿಸಲಾರರೀ ಭವದ ಕಟ್ಟು!
ಕೆಂಜೆಡೆಯ ನಂಜುಂಡನಿಗಾರದೇನು ಕಟ್ಟು?
ಬುದ್ಧಿವಂತೆ ಕಾಮಾಕ್ಷಿ ಸದಾತನಲ್ಲೊಗ್ಗಟ್ಟು! (ಕಾ)
-ದೊಂದಾಗ್ಯರ್ಧನಾರೀಶ್ವರನಪ್ಪುದಚ್ಚುಕಟ್ಟು!
ದುರ್ವಿಷಯ ವ್ಯಾಮೋಹವೇ ಭಯಂಕರ ಕಟ್ಟು!
ಳಚಿದರಿಂದ ಕಲ್ಯಾಣಿಗಾಯಿತೊಕ್ಕಟ್ಟು! (ಗು)
-ಟ್ಟು, ನಿರಂಜನಾದಿತ್ಯಾನಂದನಿಂದಾಯ್ತು ರಟ್ಟು!!!

ಕೊಟ್ಟಮೇಲೆ ಮುಟ್ಟಬೇಡ! (ಅ)   1(339)

-ಟ್ಟ ಮೇಲುಣದಿರಬೇಡ! (ಆ)
-ಮೇಲೀಮೇಲೆಂದೆನಬೇಡ! (ಅ)
-ಲೆದಾಟದಭ್ಯಾಸ ಬೇಡ!
ಮುದುರಿ ಕೂತಿರಬೇಡ! (ಅ)
-ಟ್ಟಹಾಸ ತೋರಿಸಬೇಡ!
ಬೇಹುಶಾರಾಗಿರಬೇಡ! (ಬೇ)
-ಡ
ನಿರಂಜನನೇನೂ ಒ

ಆದಿತ್ಯಗೇನೂ ಬೇಡ!!!

ಕೊಟ್ಟುಪದೇಶ ಬಿಟ್ಕೊಟ್ಟೆ! (ಹು)   4(1887)

-ಟ್ಟು ಸಾವಿನಲ್ಲೀಗ ಸಿಕ್ಬಿಟ್ಟೆ!
ಡ್ಬಾರದ ಕಷ್ಟ ಪಟ್ಟಿಟ್ಟೆ!
ದೇಶದೇಶವೆಲ್ಲಾ ಸುತ್ಬಿಟ್ಟೆ!
ರೀರದಲ್ಲೀಗ ಸೋತ್ಬಿಟ್ಟೆ!
ರಗುರುವ ಮರೆತ್ಬಿಟ್ಟೆ!
ಬಿಟ್ಟಿ ಬಸವನಂತಾಗ್ಬಿಟ್ಟೆ! (ತೊ)
ಟ್ಕೊಳ್ಳುವುದಕ್ಕಿಲ್ಲದಾಗ್ಬಿಟ್ಟೆ! (ಅ)
-ಟ್ಟೆ, ನಿರಂಜನಾದಿತ್ಯಾಗ್ಬಿಟ್ಟೆ!!!

ಕೊಡಿಸಿದ್ದನ್ನುಡಿಸ ಬೇಕಯ್ಯಾ! (ಬ)   3(1314)

-ಡಿಸಿದುದನುಣಿಸಬೇಕಯ್ಯಾ!
ಸಿಕ್ಕಿದಷ್ಟಕ್ಕೆ ತೃಪ್ತಿ ಬೇಕಯ್ಯಾ! (ಸ)
-ದ್ದಡಗಿಸಿ ಸಿದ್ಧಿಸಬೇಕಯ್ಯಾ! (ಸ)
-ನ್ನುತಾತ್ಮ ಧ್ಯಾನಮಾಡಬೇಕಯ್ಯಾ! (ಹಿ)
-ಡಿತ ಮನಸ್ಸಿಗಿರಬೇಕಯ್ಯಾ!
ಜ್ಜನ ಸಂಗ ಸದಾ ಬೇಕಯ್ಯಾ!
ಬೇಡರ ಕೂಟ ಬಿಡಬೇಕಯ್ಯಾ!
ರ್ಮ, ಧರ್ಮವರಿಯಬೇಕಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾನಂದಯ್ಯಾ!!!

ಕೊಡು ‘ಪಾಸು’ ಕೆ

ಲಾಸಕ್ಕಮ್ಮಾ! (ಅ)
   1(154)

-ಡ ಬೇಗೂಟ ಕಪಾಲಕ್ಕಮ್ಮಾ!
ಪಾಯ್ಸದೂಟೆನಗೆ ಬೇಕಮ್ಮಾ!
ಸುಮ್ಮನೆ ಕಾಲ ಹೋಗ್ತಿದಮ್ಮಾ!
ಕೆ

ಧಾರಾಳವಿರಿಲ್ಲ ಸುಂದ್ರಮ್ಮಾ!
ಲಾಭ ನನ್ನಿಂದೇನಿಲ್ಲವಮ್ಮಾ!
ಸುಜ್ಜನನೆಂದು ತಿಳಿಯಮ್ಮಾ! (ಅ)
-ಕ್ಕರೆಯ ತಾಯಿ ನೀನಾಗಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯ ಸಿಂಹ!!!

ಕೊಡುವವನ ಸಮಯ ಕಾಯ್ಬೇಕಯ್ಯಾ! (ದು)   6(3749)

-ಡುಕದಿರಬೇಕು ಬೇಡುವವನಯ್ಯಾ!
ಸ್ತ್ರಾಲಂಕಾರಕ್ಕವ ಮರುಳಾಗ್ನಯ್ಯಾ!
ಕ್ರಬುದ್ಧಿಯೆಂದೂ ಇರಬಾರದಯ್ಯಾ!
ಯ, ವಿನಯದಿಂದ ಇರಬೇಕಯ್ಯಾ!
ಟೆಯಾಡುವಭ್ಯಾಸವಿರಬಾರ್ದಯ್ಯಾ!
ತ ಯಾವುದಾದರೂ ಆಗಿರಲಯ್ಯಾ!
ಮ, ನಿಯಮ, ಪಾಲನೆಯಾಗ್ಬೇಕಯ್ಯಾ!
ಕಾಯಾಭಿಮಾನವಿರದಿರಬೇಕಯ್ಯಾ (ಸಾ)
-ಯ್ಬೇಕು ಸ್ವಧರ್ಮ ನಿಷ್ಠಾವಂತನಾಗಯ್ಯಾ!
ಳ್ಳ, ಸುಳ್ಳರ, ಸಂಗ ಮಾಡ್ಬಾರದಯ್ಯಾ! (ಅ)
-ಯ್ಯಾ, ನೀನಿಂತು ನಿರಂಜನಾದಿತ್ಯಾಗಯ್ಯಾ!!!

ಕೊಡ್ಲೇನಯ್ಯಾ ಕಡ್ಲೇಕಾಯಿ? (ಕಾ)   4(1598)

-ಡ್ಲೇ ಬೇಡಿನ್ನೆಂದಳಾ ತಾಯಿ!
ಶ್ವರ ಹರಿದಾ ತಾಯಿ! (ಕೈ)
-ಯ್ಯಾರೆ ಕೊಟ್ಟಳಂಬಾ ತಾಯಿ!
ರ್ಮ ಕಳೆದಿರ್ಪಾ ತಾಯಿ! (ಕೂ)
-ಡ್ಲೆತ್ತಿದಳೂರ್ಧ್ವಕ್ಕಾ ತಾಯಿ!
ಕಾಪಾಡಲೆಲ್ಲರಾ ತಾಯಿ! (ಕಾ)
-ಯಿ, ನಿರಂಜನಾದಿತ್ಯೇಯಿ!!!

ಕೊಡ್ಲೇಬೇಡೈದಾರಿಡ್ಲಿ ತಿನ್ಲೇ ಬೇಡ! [ಆ]   4(2355)

-ಡ್ಲೇ ಬೇಡನೃತವೆಂದೂ ಆಡ್ಲೇ ಬೇಡ!
ಬೇಡ್ಲೇಬೇಡಸಂತೃಪ್ತಿಪಡ್ಲೇ ಬೇಡ! (ಬೇ)
-ಡೈಶ್ವರ್ಯವದಕ್ಕಾಗಾಶಿಸ್ಲೇ ಬೇಡ!
ದಾಕ್ಷಿಣ್ಯ ಬೇಡಶಾಂತಿ ತರ್ಲೇ ಬೇಡ! (ವೈ)
-ರಿಯೇ ಬೇಡವ್ನ ಸಂಗ ಮಾಡ್ಲೇ ಬೇಡ! (ಕೊ)
-ಡ್ಲಿನೇ ಬೇಡ, ಕೊಲೆಗಡ್ಕಾಗ್ಲೇ ಬೇಡ!
ತಿಕ್ಕಾಟ ಬೇಡರೊಟ್ಟೂ ಸೇರ್ಲೇ ಬೇಡ! (ತಿ)
-ನ್ಲೇಬೇಡ, ತಿಂದು ವಾಂತಿ ಮಾಡ್ಲೇ ಬೇಡ!
ಬೇಸರ ಬೇಡಜ್ಞಾನಿಯಾಗ್ಲೇ ಬೇಡ! (ಆ)
-ಡ, ನಿರಂಜನಾದಿತ್ಯದ್ಲುಬದ್ಲಾಡ!!!

ಕೊನೆಗಾಲದ ನೆನಪಪ್ಪನದಯ್ಯಾ! (ಮ)   4(2467)

-ನೆಯ ಹೊಸ್ತಿಲ ಮೇಲ್ಪ್ರಾಣಾರ್ಪಣೆಯಯ್ಯಾ! (ತೂ)
-ಗಾಡುತ್ತಾಡುತ್ತದೊಳಗೆ ಬಂದಿತ್ತಯ್ಯಾ! (ಕಾ)
-ಲಲೀಲೆಯದಕ್ಕೆಂತರಿಯ ಬೇಕಯ್ಯಾ?
ರ್ಶನ ಸ್ವಾಮಿಯದ್ದದಕ್ಕಾಗಿಲ್ಲಯ್ಯಾ!
ನೆನೆನೆನೆದದು ಪ್ರಾಣ ಬಿಟ್ಟಿತಯ್ಯಾ!
ರನಾದ್ರೇನು, ನಾಯಿಯಾದ್ರೇನಯ್ಯಾ?
ರಮಾತ್ಮನ ನೆನೆದು ಸಾಯ್ಬೇಕಯ್ಯಾ! (ಅ)
-ಪ್ಪನಡಿಯಲ್ಲದಕ್ಕಾಗ ಜಾಗವಯ್ಯಾ! (ಜ)
-ನನ ಮತ್ತದಕ್ಕುಚ್ಚ ಜಾತಿಯಲ್ಲಯ್ಯಾ!
ತ್ತನದನ್ನೆಂದಿಗೂ ಕೈ ಬಿಡನಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾ ದತ್ತಾತ್ರೇಯಯ್ಯಾ!!!

ಕೊನೆಯಂಕ ಸ್ವಾರಸ್ಯಾಂಕ! (ಸೇ)   3(1102)

-ನೆ ವಿಸರ್ಜಿಪಮೃತಾಂಕ! (ತ್ರ)
-ಯಂಬಕನದರ್ಶನಾಂಕ!
ಲಿ ರಾವಣ ಧ್ವಂಸಾಂಕ!
ಸ್ವಾತ್ಮಾರಾಮ ವಿಜಯಾಂಕ!
ಣಧೀರಾಂಜನೇಯಾಂಕ! (ತ)
-ಸ್ಯಾಂತರ್ಗತ ವಿಮಲಾಂಕ! (ಅಂ)
-ಕ ನಿರಂಜನಾದಿತ್ಯಾಂಕ!!!

ಕೊಬ್ಬಬೇಡ ನೀನುಬ್ಬಬೇಡ! [ಅ]   4(2419)

-ಬ್ಬರಾರ್ಭಟ ಮಾಡಲೇಬೇಡ!
ಬೇರಾವ ಹವ್ಯಾಸವೂಬೇಡಾ! (ಮೃ)
-ಡನೊಡನಾಡದಿರಬೇಡ!
ನೀನೇ ನಾನಾಗದಿರಬೇಡ!
ನುಡಿದಂತಿರದಿರಬೇಡ! (ಕ)
-ಬ್ಬದಬ್ಬೆಯ ಮರೆಯಬೇಡ!
ಬೇಸತ್ತಸತ್ತಾಗಲೂ ಬೇಡ! (ಕಾ)
-ಡ, ನಿರಂಜನಾದಿತ್ಯನಾಡ!!!

ಕೊಬ್ಬರಿ ಮಿಠಾಯಿ ನೈವೇದ್ಯ! (ಅ)   2(726)

-ಬ್ಬರವಿಲ್ಲದಿಷ್ಟ ನೈವೇದ್ಯ! (ಹ)
-ರಿ ಭಕ್ತನ ಪೂಜಾ ನೈವೇದ್ಯ!
ಮಿತ್ರರು ಸವಿದ ನೈವೇದ್ಯ!
ಥಾವೆಲ್ಲಾದರಲ್ಲಿ ನೈವೇದ್ಯ! (ತಾ)
-ಯಿ, ತಂದೆ ನಿನೇಂದ ನೈವೇದ್ಯ!
ನೈಜ ಭಕ್ತಿಯುಕ್ತ ನೈವೇದ್ಯ!
ವೇದ ವೇದ್ಯಗಿಂದು ನೈವೇದ್ಯ! (ವೇ)
-ದ್ಯ ನಿರಂಜನಾದಿತ್ಯಾರಾಧ್ಯ!!!

ಕೊರಗಿ, ಸೊರಗಿದ್ರೂ ಮರುಕವೇ ಇಲ್ಲ!   6(3698)

ತಿಪತಿಯನ್ನು ಸುಟ್ರೂ ಆತ ಸತ್ತಿಲ್ಲ!
ಗಿರಿಜಾಪತಿಗವನ ಕಾಟವೇನಿಲ್ಲ!
ಸೊಕ್ಕನ್ನಡಗಿಸಲನ್ಯರಿಂದಾಗ್ವುದಿಲ್ಲ!
ಮಣಿ ಪಾರ್ವತಿ ಉಳ್ಸಿದ್ದೇಕೋ ಗೊತ್ತಿಲ್ಲ!
ಗಿರೀಶಾನುಗ್ರಹವಾದ್ರಾರ್ದೇನೂ ನಡ್ಯೋಲ್ಲ! (ತ)
-ದ್ರೂಪ ಸಿದ್ಧಿಗೆ ಅದನ್ನು ಬಿಟ್ರೆ ಆಗೋಲ್ಲ!
ನೋಜಯಕ್ಕೇ ಪ್ರಾಮುಖ್ಯತೆ! ಸುಳ್ಳೇನಲ್ಲ! (ಮಾ)
-ರುತಿ ಒಲಿದರೆ ಇದು ಕಷ್ಟವೇನಲ್ಲ!
ರೆದರೂ ಆತ ಬರುವುದಿಲ್ಲವಲ್ಲಾ!
ವೇದನೆಯಂತೂ ಸಹಿಸಲಾಗುವುದಿಲ್ಲ!
ಹ ಸುಖದಪೇಕ್ಷೆಯ ಫಲವಿದೆಲ್ಲಾ! (ಬ)
-ಲ್ಲ ನಿರಂಜನಾದಿತ್ಯ ಯೋಗೀಶ್ವರನೆಲ್ಲಾ!!!

ಕೊಳಕಿಲ್ಲ! ಥಳಕಿಲ್ಲ! (ಅ)   1(104)

-ಳತೆಯಿಲ್ಲ! ಆಳವಿಲ್ಲ!
ಕಿರಿದಲ್ಲ! ಹಿರಿದಲ್ಲ! (ಅ)
-ಲ್ಲದುದಿಲ್ಲ! ಗುಲೆನಿಲ್ಲ!
ಂಡಿಯಿಲ್ಲ! ಗಂಡಿಯಿಲ್ಲ! (ಅ)
-ಳವಡಿಲ್ಲ! ಗೂಢವೆಲ್ಲ!
ಕಿವುಡಿಲ್ಲ! ಕೇಳಿದೆಲ್ಲ! (ಅ)
-ಲ್ಲ! ನಿರಂಜನನೇ ಎಲ್ಲ!!!

ಕೊಳಲನ್ನೂದಿದನಾ ಶ್ರೀಧರ ಮುರಲೀಧರ! (ತಾ)   6(3853)

-ಳ ಲಯ ಗತಿಬದ್ಧವಾದಕಾ ಮುರಲೀಧರ!
ಕ್ಷ್ಯಮಾಡುವವನಲ್ಲ ಠೀಕೆ ಮುರಲೀಧರ! (ತ)
-ನ್ನೂರರಸಾ ಬಲರಾಮಾನುಜ ಮುರಲೀಧರ!
ದಿವ್ಯಾಧ್ಯಾತ್ಮ ಸಾಧಕ, ಬೋಧಕಾ ಮುರಲೀಧರ!
ರಿದ್ರ, ಶ್ರೀಮಂತರೆಲ್ಲಾ ಗುರು ಮುರಲೀಧರ!
ನಾಮ ರೂಪಾನಂತ ಭಗವಂತಾ ಮುರಲೀಧರ!
ಶ್ರೀಕರ, ಶುಭಕರ ಸ್ವರೂಪಾ ಮುರಲೀಧರ!
ರ್ಮ, ಕರ್ಮಗಳಿಗೆಲ್ಲಾಧಾರಾ ಮುರಲೀಧರ!
ರಾಗ ಜ್ಞಾನ ಸಾಗರಾ ಶ್ರೀಧರಾ ಮುರಲೀಧರ!
ಮುನಿಜನ ಹೃದಯ ಪ್ರದೀಪಾ ಮುರಲೀಧರ!
ಘುಪತಿ ರಾಘವನಾದವಾ ಮುರಲೀಧರ!
ಲೀಲಾಮಯ ಮಾನುಷ ವಿಗ್ರಹಾ ಮುರಲೀಧರ! (ಬಂ)
-ಧಹರ, ರಾಧಾ ವರ, ಸುಂದರಾ ಮುರಲೀಧರ! (ನ)
-ರಹರಿ ಶ್ರೀ ನಿರಂಜನಾದಿತ್ಯಾ ಮುರಲೀಧರ!!!

ಕೊಳೆತ ಹಣ್ಣು ತಿನ್ನಬಾರದು! (ಬೆ)   5(3186)

-ಳೆಸಿದ್ದು ತಾವಾದ್ರೂ ತಿನ್ಬಾರದು!
ನ್ನೆಚ್ಚರಿಕೆ ತಾ ಬಿಡ್ಬಾರದು!
ಣಕ್ಕಾಗಿ ರೋಗಿಯಾಗ್ಬಾರದು! (ಉ)
-ಣ್ಣುವನ್ನ ಹೊಲಸಾಗಿರ್ಬಾರದು!
ತಿಪ್ಪೆಗೆಸೆಯಲೂ ಹೇಸ್ಬಾರದು! (ತಿ)
-ನ್ನಲಪ್ಪ ಹಣ್ಣು ತರ್ದಿರ್ಬಾರದು!
ಬಾಯಿರುಚಿಯೊಂದೇ ನೋಡಿದ್ರಾಗ್ದು!
ಕ್ತ ಪುಷ್ಟಿಕರವಾದ್ರಾಗ್ಬಹ್ದು! (ಇ)
-ದು, ನಿರಂಜನಾದಿತ್ಯ ಹೇಳಿದ್ದು!!!

ಕೋಟಿ ಸೂರ್ಯ ಪ್ರಭಾ ಗುರು ಪರಮಾತ್ಮ! (ಸಾ)   4(2381)

-ಟಿ ತಾನೆಂತಹನವನಿಗೆ ದುರಾತ್ಮ!
ಸೂತ್ರಧಾರಿಯಾಗಿಹನು ಪರಮಾತ್ಮ! (ಆ)
-ರ್ಯರಾದರ್ಶ ಮರೆತಿಹನು ದುರಾತ್ಮ!
ಪ್ರಜಾಪತ್ಯೆನಿಸಿರ್ಪನು ಪರಮಾತ್ಮ!
ಭಾವಶುದ್ಧಿಯಿಲ್ಲದಿಹನು ದುರಾತ್ಮ!
ಗುಡಿಯಲ್ಲಿ ಮಾತ್ರವಲ್ಲ ಪರಮಾತ್ಮ! (ಇ)
-ರುವನೆಲ್ಲರರಲ್ಲೆಂದ್ರೂ ನಂಬ ದುರಾತ್ಮ!
ತಿತ ಪಾವನ ದತ್ತ ಪರಮಾತ್ಮ! (ಪ)
-ರಪೀಡಾಸಕ್ತನಾಗಿಹನು ದುರಾತ್ಮ!
ಮಾಯಾಮೋಹಿತನಾಗಿಲ್ಲ ಪರಮಾತ್ಮ! (ಆ)
-ತ್ಮ, ಶ್ರೀ ನಿರಂಜನಾದಿತ್ಯ ಸ್ವರೂಪಾತ್ಮ!!!

ಕೋಡ್ವಳೆ ಚಕ್ಲಿ, ಶ್ಯಾವಿಗೆ, ಉಂಡೆ! (ಕೊ)   4(1452)

-ಡ್ವಳೇಕಿದನೀಗೆನಗಂದ್ಕೊಂಡೆ! (ಹಾ)
-ಳೆಣ್ಣೆ ತಿಂಡಿ ತಿನ್ಬಾರದೆಂದ್ಕೊಂಡೆ!
ಪಲಕ್ಕೀಡಾಗ್ಯೆಲ್ಲಾ ತಿಂದ್ಕೊಂಡೆ!
ಕ್ಲಿಷ್ಟ ಸಮಸ್ಯೆಯಿದೆಂದ್ಕೊಂಡೆ!
ಶ್ಯಾಮನಿಷ್ಟದಂತಾಗಲಂದ್ಕೊಂಡೆ!
ವಿಧಿಲೀಲೆ ವಿಚಿತ್ರವೆಂದ್ಕೊಂಡೆ! (ಹೇ)
-ಗೆ ಬೇಕೋ ಹಾಗಿರಿಸಲೆಂದ್ಕೊಂಡೆ!
ಉಂಡವನನ್ನೇ ಸ್ಮರಿಸಿದ್ಕೊಂಡೆ! (ಉಂ)
-ಡೆ, ನಿರಂಜನಾದಿತ್ಯಾನಂದುಂಡೆ!!!

ಕೋಣನ ಮುಂದೆ ಕಿನ್ನರಿಯೇ? (ಬ)   4(2277)

-ಣಗು ವಿಷಯಿ ಸನ್ಯಾಸಿಯೇ? (ಘ)
-ನತೆಯಿಲ್ಲದವ ಸ್ವಾಮಿಯೇ?
ಮುಂಗೋಪದವ ಮುತ್ಸದ್ದಿಯೇ? (ನಿಂ)
-ದೆಗಂಜಿದವ ನಿಧಾನಿಯೇ? (ಸಾ)
-ಕಿ ಸಲಹಿದವ ವೈರಿಯೇ? (ನ)
-ನ್ನ, ನಿನ್ನೆನದವ ಭವಿಯೇ? (ಹ)
-ರಿಪಾದ ಸೇವಕ ಪಾಪಿಯೇ? (ಕಾ)
-ಯೇ ನಿರಂಜನಾದಿತ್ಯ ತಾಯೇ!!!

ಕೋತಿ ರೂಪಕ್ಕೆ ಕೋಟಿ ಬೆಲೆಯಾಭರಣಾಲಂಕಾರ!   6(4077)

ತಿಳಿತಿಳಿದೂ ಆಗುತಿದೆ ನಶ್ವರಕ್ಕಲಂಕಾರ!
ರೂಪ, ಲಾವಣ್ಯ, ಸಹಜವಾಗಿದ್ದರೇಕಲಂಕಾರ?
ರಮಾರ್ಥ ಜೀವನವೇ ದೇಹಕ್ಕಮೌಲ್ಯಾಲಂಕಾರ! (ಬೆ)
-ಕ್ಕೆಯಿಂದ ದಶಕಂಠ ಮಾಡಿದ್ದೆಲ್ಲಾ ಮಾಯಾಲಂಕಾರ!
ಕೋಣನನ್ನೂ ಜಾಣನನ್ನಾಗಿಸುವುದೇ ಅಲಂಕಾರ? (ದಾ)
-ಟಿಸಲ್ಕೆ ಭವಸಾಗರವ ಬೇಕ್ವಿವೇಕಾಲಂಕಾರ!
ಬೆತ್ತಲೆಯವಧೂತನಿಗೆ ದಿಗಂಬರಾಲಂಕಾರ! (ಲೀ)
-ಲೆ ಪರಮಾತ್ಮನದ್ದರಿಯಲಕ್ಕೆ ಬೇಡಲಂಕಾರ!
ಯಾರನ್ನೂ ಮೆಚ್ಚಿಸದು ಚಿರಕಾಲ ದೇಹಾಲಂಕಾರ!
ಕ್ತಿ ಭಾವವೊಂದೇ ಮಾನವಗೆ ಶಾಶ್ವತಾಲಂಕಾರ! (ಪ)
-ರಮೇಶ್ವರನಿಗೆ ಸದಾ ಚಿತಾ ಬೂದಿಯಲಂಕಾರ! (ಗು)
-ಣಾತೀತತೆಯೇ ಗುರು ಮಹಾರಾಜನಿಗಲಂಕಾರ!
ಲಂಕೆಯನ್ನೆಲ್ಲಾ ಉರಿಸಿತು ನೀಚ ಕಾಮಾಂಧಕಾರ!
ಕಾಪಾಡಿತು ವಿಭೀಷಣನನ್ನು ದಿವ್ಯ ರಾಮಾಕಾರ! (ಹ)
-ರ ನಿರಂಜನಾದಿತ್ಯಗಲಂಕಾರಾ ರಾಮಾವತಾರ!!!

ಕೋದಂಡ ಸ್ವಾಮಿ ಉದ್ದಂಡ ಪ್ರೇಮಿ!   4(1718)

ದಂಡಿನೊಳಗೆ ಧೀರ ಸಂಗ್ರಾಮಿ! (ಗಂ)
-ಡರ ಒಳಗೆ ಆದರ್ಶ ನಾಮಿ!
ಸ್ವಾರ್ಥವಿಲ್ಲದ ನಿಸ್ವಾರ್ಥ ಸ್ವಾಮಿ!
ಮಿತ್ರಕಾಲದ ಪವಿತ್ರ ನಾಮಿ!
ಮಾಪತಿಗೆ ಆತ್ಮೀಯ ಸ್ವಾಮಿ! (ಬಿ)
-ದ್ದಂಗನೆಯನೆಬ್ಬಿಸಿದ ನಾಮಿ! (ಮ)
-ಡದಿ ಸೀತೆಗೆ ಆರಾಧ್ಯ ಸ್ವಾಮಿ!
ಪ್ರೇಮಾಂಜನೇಯನ ರಾಮ ನಾಮಿ! (ನೇ)
-ಮಿ ಶ್ರೀ ನಿರಂಜನಾದಿತ್ಯ ಸ್ವಾಮಿ!!!

ಕೋಪಿಯಲ್ಲಾ ಯೋಗೀಶ ಶಿವ!   5(3171)

ಪಿನಾಕಿಧರ ಹರಾ ಶಿವ!
ಮನ ಗೆಲಿದವಾ ಶಿವ! (ಕ)
-ಲ್ಲಾದ ಲಿಂಗದೊಳಿರ್ಪಾ ಶಿವ!
ಯೋಗಕ್ಷೇಮ ನೋಳ್ಪವಾ ಶಿವ!
ಗೀತಾರ್ಥ ಸಾರಾ ಗುರು ಶಿವ!
ರಣರಾಭರಣಾ ಶಿವ!
ಶಿವೆಯರಸಾ ಸದಾಶಿವ! (ಅ)
-ವ ನಿರಂಜನಾದಿತ್ಯ ಶಿವ!!!

ಕೌಸಲ್ಲಾತ್ಮಜ ಶ್ರೀರಾಮಚಂದ್ರ!   1(207)

ರ್ವಗುಣಸಂಪನ್ನ ರಾಜೇಂದ್ರ! (ಎ)
-ಲ್ಲಾರಿಹರವನಂಥಾ ಧರ್ಮೇಂದ್ರ! (ಆ)
-ತ್ಮ ಜ್ಞಾನ ಪರಿಪೂರ್ಣ ಬ್ರಹ್ಮೇಂದ್ರ!
ನಕನಿಚ್ಛಾವರ್ತಿಸುತೇಂದ್ರ!
ಶ್ರೀ ಸೀತಾಪತಿಯೀ ಸುಂದರೇಂದ್ರ!
ರಾವಣನ ಗೆಲಿದ ವೀರೇಂದ್ರ! (ಅ)
-ಮರ ಮಾರುತಿಗಿವ ಪ್ರಾಣೇಂದ್ರ!
ಚಂಚಲ ಮತಿಗೀತ ಯೋಗೇಂದ್ರ! (ತ)
-ದ್ರಮಣ ನಿರಂಜನಾದಿತ್ಯೇಂದ್ರ!!!

ಕ್ರಮಬದ್ಧ ಶುದ್ಧ ಜೀವಿಯಾಗಯ್ಯಾ!   1(268)

ನೆಮನೆಯಲೆಯುವುದೇಕಯ್ಯಾ!
ರಡು ಮಾತಿಂದೇನಾಗುವುದಯ್ಯಾ! (ಸ)
-ದ್ಧರ್ಮ ಸಕಲರಿಗಿರಬೇಕಯ್ಯಾ!
ಶುಚಿಗಾಗಿ ಸ್ನಾನ, ಧ್ಯಾನ ಮಾಡಯ್ಯಾ! (ಬ)
-ದ್ಧ ಸಂಸಾರಿಯಾಗಿರಬಾರದಯ್ಯಾ!
ಜೀವಾತ್ಮೈಕ್ಯಕ್ಕೆ ಶ್ರಮಿಸಬೇಕಯ್ಯಾ!
ವಿಮಲಾನಂದ ಸ್ವಸ್ಥಿತಿಯಿದಯ್ಯಾ!
ಯಾಗ, ಯೋಗಗಳು ಇದಕಾಗಯ್ಯಾ!
ತಿಸುತಿದೆ ಕಾಲ ಮೋಹಕಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಕಾಯ್ವನಯ್ಯಾ!!!

ಕ್ರಿಸ್ತನಿಗುದಯಾಸ್ತ ಉಂಟೇನು?   3(1113)

ಸ್ತವನವಗಗತ್ಯ ಉಂಟೇನು?
ನಿರ್ಮಲನಿಗೆ ಸ್ನಾನ ಉಂಟೇನು?
ಗುಣ, ದೋಷಾತ್ಮನಿಗೆ ಉಂಟೇನು?
ಯಾಶೀಲಗೆ ಲೋಭ ಉಂಟೇನು?
ಯಾತ್ರೆಯಾಸೆ ಅವಗೆ ಉಂಟೇನು? (ಬೆ)
-ಸ್ತನಿಗೆ ಜಲ ಭಯ ಉಂಟೇನು?
ಉಂಡವಗೆ ಹಸಿವೆ ಉಂಟೇನು? (ನ)
-ಟೇಶನಿಗೆ ನಾಚಿಕೆ ಉಂಟೇನು? (ತಾ)
-ನು ನಿರಂಜನಾದಿತ್ಯನಲ್ಲೇನು???

ಕ್ರಿಸ್ತನೆನ್ನ ಪಂಚಪ್ರಾಣ! [ಹ]   2(978)

-ಸ್ತವನದು ಸಂಜೀವನ!
ನೆನಪವನದು ಜ್ಞಾನ! (ಉ)
-ನ್ನತದವನಾಜ್ಞೆ ತ್ರಾಣ!
ಪಂಥವದಮೃತ ಪಾನ!
ರಾಚರಾತ್ಮಾಭಿಮಾನ!
ಪ್ರಾರ್ಥನೆ ಪರಮ ದಾನ! (ಗು)
-ಣ, ನಿರಂಜನೇಸು ಗಾನ!!!

ಕ್ರೋಧವಿದ್ದರಾಗ್ವುದು ಬಲ ಕ್ಷಯ! (ಕ್ರೋ)   6(4328)

-ಧ ವಿಲ್ಲದಿದ್ದರಾಗ್ವುದದಕ್ಷಯ!
ವಿವೇಕ, ವಿಚಾರ ಬಲ ಅಕ್ಷಯ! (ಕ)
-ದ್ದ ಸೀತೆಯ ಕಳ್ಳನಿಗಾಯ್ತು ಕ್ಷಯ!
ರಾಮನ ಸತ್ಯ, ಧರ್ಮ, ಶಕ್ತ್ಯಕ್ಷಯ! (ಹೋ)
-ಗ್ವುದಕ್ಕತ್ತು ಫಲವಿಲ್ಲ! ನಿಶ್ಚಯ!
ದುರ್ವೃತ್ತಿಗೆ ಕೊಡಬಾರದಾಶ್ರಯ!
ಲ ಪೂರ್ಣಗೊಂಡಾಗಾನಂದಮಯ!
ಕ್ಷ್ಯವೆಲ್ಲಕ್ಕೀಗ ವಿಜ್ಞಾನಮಯ!
ಕ್ಷಯವಾಗುವ ಇದಲ್ಲ ಚಿನ್ಮಯ! (ಜ)
-ಯ ನಿರಂಜನಾದಿತ್ಯಾನಂದಮಯ!!!

ಕ್ಷಣ ಕ್ಷಣಕ್ಕೊಂದೊಂದು ಲೀಲೆ! (ತೃ)   4(1641)

-ಣ, ಪಾಷಾಣಾದಿಗಳಾ ಲೀಲೆ! (ನ)
-ಕ್ಷತ್ರ, ಗ್ರಹಾದಿಗಳಾ ಲೀಲೆ! (ಕಾ)
-ಣಲಚ್ಚರಿಯಾಗಿಹಾ ಲೀಲೆ! (ತ)
-ಕ್ಕೊಂಬ, ಮಾರುವರಾರಾ ಲಿಲೇ? (ಅ)
-ದೊಂದಾರೂ ಅರುಹದಾ ಲೀಲೆ! (ಇ)
-ದು “ಗುರುಚಿತ್ತ” ವೆಂಬಾ ಲೀಲೆ!
ಲೀಲಾತ್ಮಗೆಲ್ಲಿಹುದಾ ಲೀಲೆ? (ಲೀ)
-ಲೆ, ನಿರಂಜನಾದಿತ್ಯ ನೆಲೆ!!!

ಕ್ಷಣಕ್ಕೊಂದು ರೋಗ ಈ ದೇಹಕ್ಕೆ! (ಗು)   5(3214)

-ಣ ಕಾಣುವೌಷಧಿ ಬೇಕದಕ್ಕೆ! (ತ)
-ಕ್ಕೊಂಡದ್ದಾವುದೂ ನಾಟಿಲ್ಲದಕ್ಕೆ!
ದುರ್ವಿಯೇ ಕಾರಣ ಅದಕ್ಕೆ!
ರೋಗಾಂತಕ ನೀನಾಗೀಗದಕ್ಕೆ!
ತಿ ನೀನೇ ಅನಾಥ ಜೀವಕ್ಕೆ!
ರೈದಿಂದ್ರಿಯ ನಿಗ್ರಹವಕ್ಕೆ!
ದೇವ ನಿನ್ನಂತೆ ನಾನಾಗ್ವುದಕ್ಕೆ!
ಗ್ಲಿರುಳು ಪ್ರಾರ್ಥಿಪೆನದಕ್ಕೆ! (ಅ)
-ಕ್ಕೆ ನಿರಂಜನಾದಿತ್ಯಾನಂದಕ್ಕೆ!!!

ಕ್ಷೀರಸಾಗರ ಸತ್ಸಂಗದಲ್ಲಿ!   3(1344)

ಮೇಶ ಪವಡಿಸಿರ್ಪನಲ್ಲಿ!
ಸಾಧ್ವಿ ಶ್ರೀ ರಮಣಿ ಸಹಿತಲ್ಲಿ!
ಗನಾಂಗಣದ ಅಡಿಯಲ್ಲಿ!
ಸ ಭರಿತ ಸಂಗೀತದಲ್ಲಿ!
ರಸಿಜಾಸನನ ಪೊತ್ತಲ್ಲಿ! (ಸ)
-ತಂಪ್ರದಾಯದಾರ್ಯ ರೀತಿಯಲ್ಲಿ!
ರುಡಾದಿಗಳ ಬಳಿಯಲ್ಲಿ!
ರ್ಶನವೀಯುತೆಲ್ಲರಿಗಲ್ಲಿ! (ಎ)
-ಲ್ಲಿ? ನಿರಂಜನಾದಿತ್ಯನಿರ್ಪಲ್ಲಿ!!!

ಕ್ಷೇಮ ಸಮಾಚಾರ ತಿಳಿದಾಗ್ವುದೇನು?   5(3211)

ನದಲ್ಲಾತ್ಮಚಿಂತನೆ ಮಾಡು ನೀನು!
ದಾ ಸತ್ಕಾಲಕ್ಷೇಪದಲ್ಲಿರು ನೀನು!
ಮಾನವ ಜನ್ಮ ಸಾರ್ಥಕಮಾಡು ನೀನು!
ಚಾಪೆಯುದ್ದ ನೋಡಿ ಕಾಲು ಚಾಚು ನೀನು!
ತಿಸುಖಕ್ಕಾಶಿಸಿ ಕೆಡ್ಬೇಡ ನೀನು!
“ತಿಪ್ಪೆಗೆಸೆ ತೊಪ್ಪೆ!” ನೆನಪಿಡು ನೀನು! (ಗಾ)
-ಳಿ ಬೀಸಿದಾಗ ತೂರಿಕೊಳ್ಬೇಕು ನೀನು!
ದಾರಿ ಊರಿಗೆ ನೇರ ಮಾಡಿಕೋ ನೀನು! (ಆ)
-ಗ್ವುದ, ಹೋಗ್ವುದ ಯೋಚಿಸಬೇಡ ನೀನು!
ದೇವರನ್ನು ನಂಬಿ ಮುಂದುವರಿ ನೀನು! (ನೀ)
-ನು ನಿರಂಜನಾದಿತ್ಯನಾಗ್ಬೇಡ್ವೇನು???

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ