ಔಷಧಿ ತಿಂದುಂಬಭ್ಯಾಸ ಬೇಡ! (ಉ)   3(1002)

-ಷಃ ಕಾಲದಲ್ಲೇಳದಿರಬೇಡ! (ಅ)
-ಧಿಪತಿಯ ಧ್ಯಾನ ಬಿಡಬೇಡ!
ತಿಂಡಿ, ತೀರ್ಥದಿಚ್ಛೆ ಆಗಬೇಡ! (ಔ)
-ದುಂಬರದ ಪೂಜೆ ಬಿಡಬೇಡ!
ಹುದೇನದರಿಂದೆನಬೇಡ! (ಅ)
-ಭ್ಯಾಸ ಮಾಡದೇನೂ ಹೇಳಬೇಡ!
ದಾಚಾರಕ್ಕನಾದರ ಬೇಡ!
ಬೇಡಿ, ಕಾಡಿ ಕೆಟ್ಟು ಹೋಗಬೇಡ! (ಮಾ)
-ಡ, ನಿರಂಜನಾದಿತ್ಯ ಪವಾಡ!!!

ಔಷಧಿಯನ್ನವಲಂಬಿಸಿರಬೇಡ! (ದೋ)   4(1626)

-ಷವದರ ಮೇಲೆ ಆರೋಪಿಸಬೇಡ! (ಅ)
-ಧಿಕಾರ ಶಾಶ್ವತವೆಂದರಿಯಬೇಡ!
ಮ, ನಿಯಮದಭ್ಯಾಸ ಬಿಡಬೇಡ! (ಅ)
-ನ್ನದಗತ್ಯವಿಲ್ಲದಾಗ ಉಣ್ಣಬೇಡ!
ಸ್ತ್ರ, ಭೂಷಣದತ್ಯಾಡಂಬರ ಬೇಡ!
ಲಂಚದಿಂದಲ್ಪ ಸ್ವಾರ್ಥ ಸಾಧಿಸಬೇಡ!
ಬಿಟ್ಟಿಯಾಗಿ ಯಾರನ್ನೂ ದುಡಿಸಬೇಡ!
ಸಿರಿತನಕ್ಕಹಂಕಾರ ಪಡಬೇಡ! (ಪ)
-ರ ದಾರಾ, ಧನಕ್ಕೆಂದೂ ಆಶಿಸಬೇಡ!
ಬೇಕು ಸದ್ಗುರು ಸೇವೆ! ಮರೆಯಬೇಡ! (ಆ)
-ಡ ನಿರಂಜನಾದಿತ್ಯನೃತವನ್ನಾಡ!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ