ಓಂ ನಮೋ ಶ್ರೀ ಗುರು ನಿರಂಜನಾದಿತ್ಯಾಯ!   5(2913)

ಮಿಸಿದರೆ ನಿತ್ಯಾ ಶ್ರೀ ಪಾದಕ್ಕಾದಾಯ!
ಮೋಕ್ಷಾಪೇಕ್ಷಿಗಿದುತ್ತಮ ಸತ್ಸಂಪ್ರದಾಯ!
ಶ್ರೀಗುರು ನಿರಂಜನಾದಿತ್ಯಾ ದತ್ತಾತ್ರೇಯ!
ಗುಡ್ಡಗಾಡ್ನಾಡಿಗೆಲ್ಲಾ ಅವನೇ ಒಡೆಯ!
ರುಚಿಗೆ ಗುಲಾಮನಲ್ಲಾ ರಾಮಾಂಜನೇಯ!
ನಿಯಮ ನಿಷ್ಠೆಯವನದ್ದವರ್ಣನೀಯ! (ಶ್ರೀ)
-ರಂಗನ ಭಕ್ತಿವನದ್ದನುಕರಣೀಯ!
ಗತ್ತಿನ ಜಂಝಾಟದಿಂದ ದೂರಾ ಸೂರ್ಯ!
ನಾರಾಯಣನಿವನೇ ನಮ್ಮಲ್ಲರಿಗಾರ್ಯ!
ದಿವ್ಯ ಜೀವನಾಸಕ್ತರಿಗಿವನೌದಾರ್ಯ!
ತ್ಯಾಗೀಶ್ವರನಿವನ ಕಾರ್ಯೋದ್ಧಾರಕಾರ್ಯ!
ದುನಾಥ ಶ್ರೀ ನಿರಂಜನಾದಿತ್ಯ ವರ್ಯ!!!

ಓಡಲಾರದ ಗಾಡಿಗಾರು ಹೊಣೆ? (ಬ)   4(1637)

-ಡವಾಗಿಹದರೆಲ್ಲಾ ಬೆಣೆ ಹೊಣೆ! (ಕಾ)
-ಲಾಧಿಕ್ಯದದರ ವಯಸ್ಸು ಹೊಣೆ! (ಪ)
-ರರಲ್ಲದರ ದುಸ್ಥಿತಿಗೆ ಹೊಣೆ! (ಇ)
ದು ಕಾರಣೆಂಬೂಹೆಗಾರು ಹೊಣೆ!
ಗಾರುಗೆಟ್ಟು ಕೆಟ್ಟಾ ಮನಸ್ಸೇ ಹೊಣೆ! (ಗಾ)
-ಡಿ ಬೇರೆತರುವುದದರ ಹೊಣೆ!
ಗಾಡಿ ಬೇಡಾದರೆ ಬಿಡುವ ಹೊಣೆ! (ಗು)
-ರುಪಾದ ಸೇರಿದರಿನ್ನಾವ ಹೊಣೆ?
ಹೊಣೆ, ಭವಬಂಧ ಹರಿವ ಹೊಣೆ! (ಹೊ)
-ಣೆ ನಿರಂಜನಾದಿತ್ಯಗೇನೂ ಕಾಣೆ!!!

ಓಡಿ ಬಂದು ಚಾಡಿಯಾಡಿ ಕೇಡಿಯಾದ! (ಆ)   4(2219)

-ಡಿದರನ್ಯರ ಮಾತಾಗ್ವುದು ಪ್ರಮಾದ!
ಬಂಧಮುಕ್ತನಾಗಲ್ಕಿರ್ಬೇಕಾತ್ಮ ವಾದ!
ದುರ್ಬಲಗೊಳಿಸುವುದು ಮಿಥ್ಯಾ ವಾದ! (ವಿ)
-ಚಾರಿಯ ಮಾತಿಗಾಗ್ವುದು ಧನ್ಯವಾದ! (ಆ)
-ಡಿದಂತಿರದಿದ್ದರದು ವ್ಯರ್ಥ ವಾದ!
ಯಾತ್ರೆ ಹರಟೆಗಾದ್ರಾಗದು ಪ್ರಸಾದ! (ಹಾ)
-ಡಿದರೆ ಹರಿನಾಮ ಮನಕಾಹ್ಲಾದ!
ಕೇಳಿ, ಕೇಳದಂತಿರ್ಬಾರದಾರ್ತ ನಾದ! (ಮಾ)
-ಡಿದರನಾಚಾರ ತಪ್ಪದಪವಾದ! (ಮಾ)
-ಯಾಜಾಲ ಹರಿವುದು ಗೀತಾನುವಾದ!
ತ್ತ ನಿರಂಜನಾದಿತ್ಯಾನಂದನಾದ!!!

ಓಡಿಬಂದೆನಗಾಜ್ಞೆಯೇನೆಂದ! (ಗ)   4(1863)

-ಡಿಬಿಡಿ ಮಾಡುವವಾನಲ್ಲೆಂದ!
ಬಂದೆನುತ್ಸಾಹದಿಂದಿಲ್ಲಿಗೆಂದ! (ಮುಂ)
-ದೆ ನಾನೇನು ಮಾಡಬೇಕೆಂದ!
ನ್ನಲ್ಲಿ ಸ್ವಾರ್ಥಾಪೇಕ್ಷೆಯಿಲ್ಲೆಂದ! (ಕಂ)
-ಗಾಲಾಗಿರುವರೂರವರೆಂದ! (ಪ್ರ)
-ಜ್ಞೆ ಸ್ಥಿರವಾಗ್ಲಾಶೀರ್ವದಿಸೆಂದ! (ತಾ)
-ಯೇ! ನೀನಲ್ಲದಾರು ಕಾಯ್ವರೆಂದ! (ನಾ)
-ನೆಂಬುದನೆನ್ನಿಂದ ತೆಗೆಯೆಂದ! (ಬಂ)
-ದ, ನಿರಂಜನಾದಿತ್ಯಮ್ಮಾ ಎಂದ!!!

ಓದಬೇಕೇನಿನ್ನೂ ನಾನು? (ವಾ)   5(2846)

-ದವಾರಲ್ಲಿ ಮಾಡ್ಬೇಕ್ನಾನು?
ಬೇಕಾದಡ್ಪಡೆದೆ ನಾನು!
ಕೇರಿದೆ ಹೊಟ್ಟನ್ನು ನಾನು!
ನಿತ್ಯ ಸ್ವಚ್ಛಾನ್ನುಂಬೆ ನಾನು! (ನ)
-ನ್ನೂರು ಸೇರ್ಬೇಕೀಗ ನಾನು!
ನಾನೇ ನೀನು, ನೀನೇ ನಾನು! (ಭಾ)
-ನು, ನಿರಂಜನಾದಿತ್ಯಾನು!!!

ಓರ್ವ ತಂದೆಯ ಮಕ್ಕಳೀ ಜೀವರೆಲ್ಲಾ! (ಓ)   5(3213)

-ರ್ವನಿಗಿನ್ನೊರ್ವ ನೆರವಾಗಿರ್ಬೇಕೆಲ್ಲಾ!
ತಂದೆ ಕಣ್ಮುಚ್ಚಿ ಕೂತ್ರೆ ಹಾಳಾಗ್ವರೆಲ್ಲಾ! (ನಿಂ)
-ದೆ ವಂದನೆಯ ಭ್ರಾಂತಿ ಬಿಡಬೇಕೆಲ್ಲಾ! (ಭ)
-ಯಪಡದೇ ಸ್ವಧರ್ಮ ಕರ್ಮ ಮಾಡ್ರೆಲ್ಲಾ!
ದನಾರಿಯಾದರ್ಶ ಸ್ವಾಗತಿಸ್ರೆಲ್ಲಾ! (ಉ)
-ಕ್ಕ ಬಾರ್ದುದ್ವೇಗ ಸೋಲ್ಗೆಲವಿನಲ್ಲೆಲ್ಲಾ! (ಬಾ)
-ಳೀ ಜನ್ಮದಲ್ಲೇ ಹೊನ್ನಾಗ್ಲೆಂದ್ಬೇಡಿರೆಲ್ಲಾ!
ಜೀವ ಶಿವೈಕ್ಯವೇ ಗುರಿ! ಸುಳ್ಳಲ್ಲಾ!
ರಗುರು ದತ್ತಾತ್ರೇಯನಾಜ್ಞೆಯೆಲ್ಲಾ! (ಮ)
-ರೆಯ್ಬಾರ್ದಿದ ಸುರಾಸುರ, ನರರೆಲ್ಲಾ! (ಚೆ)
-ಲ್ಲಾಟ ನಿರಂಜನಾದಿತ್ಯಾನಂದಗಿಲ್ಲಾ!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ