ಒಂಟಿ ಒಂಟಿಗಳಿಂದುಂಟಾದ ನಂಟು! (ಗಂ)   5(2853)

-ಟಿನಲ್ಲವಸಾನವಾದರೇನುಂಟು?
ಒಂದೇ ಒಂದಾಗಿದ್ದರಾನಂದವುಂಟು! (ಧಾ)
-ಟಿಯಲ್ಲಿ ಮಾತ್ರ ತರತರವುಂಟು!
ಮನ ಸಾಹಿತ್ಯಕ್ಕಗತ್ಯವುಂಟು! (ಕಾ)
-ಳಿಂದ ಕಾಳ್ಬೇರಾದ್ರೂ ಕಣಜವುಂಟು!
ದುಂಬು ಹೊಡೆವಗತ್ಯವುಂಟೇ ಉಂಟು! (ಕಾ)
-ಟಾಚಾರವಾದರೆಲ್ಲಾ ಬರೀ ಗಂಟು! (ಉ)
-ದಯೋನ್ಮುಖನಾದರೆ ಬೆಳಕುಂಟು!
ನಂದಿವಾಹನನನುಗ್ರಹವುಂಟು! (ಗಂ)
-ಟು ನಿರಂಜನಾದಿತ್ಯನಿಗೇನುಂಟು???

ಒಂಟಿಯಾಗಿ ನಾನಿರಲಾರೆ!   6(3531)

(ಜಂ)-ಟಿಯಾಗ್ದೆಯೂ ಇರದಿರ್ಲಾರೆ!
ಯಾರ ತಂಟೆಗೂ ಹೋಗಲಾರೆ!
(ಯೋ)-ಗಿ ನಾನೆಂದು ಹೇಳ್ಕೊಳ್ಳಲಾರೆ!
ನಾಶವಾಗ್ವುದಕ್ಕಾಶಿಸ್ಲಾರೆ!
ನಿತ್ಯಾನಂದಕ್ಕುಪೇಕ್ಷಿಸ್ಲಾರೆ!
ಸ ವಿರಸವಾಗಿರ್ಲಾರೆ!
ಲಾವಣ್ಯಕ್ಕೆ ಸೋತು ಕೆಡ್ಲಾರೆ!
(ಹೊ)-ರೆ ನಿರಂಜನಾದಿತ್ಯಗಿರೆ!!!

ಒಂಟಿಯಾಗಿರುವುದೀಗಾ ಗುಬ್ಬಿ! (ಜಂ)   4(2376)

-ಟಿಯಾಗಿರಲಾಗದೀಗಾ ಗುಬ್ಬಿ! (ಹಾ)
-ಯಾಗಿ ಮಲಗಬೇಕೀಗಾ ಗುಬ್ಬಿ! (ಕೂ)
-ಗಿದರೂ ಮಾತಾಡದೀಗಾ ಗುಬ್ಬಿ! (ಗು)
-ರುಮನೆಯಲ್ಲಿರ್ಪುದೀಗಾ ಗುಬ್ಬಿ! (ಮೇ)
-ವು ಹಾಕಿದ್ರೂ ತಿನ್ನದೀಗಾ ಗುಬ್ಬಿ!
ದೀಪವೇಕಿನ್ನೆಂಬುದೀಗಾ ಗುಬ್ಬಿ! (ಸಂ)
-ಗಾತಿಯೊಡನೆ ಬೆಳಿಗ್ಗಾ ಗುಬ್ಬಿ!
ಗುಟುಕಾರಿಸುವುದಾಗಾ ಗುಬ್ಬಿ! ಗುಬ್ಬಿ! (ಗು)
-ಬ್ಬಿನಿರಂಜನಾದಿತ್ಯೆಂದು ತಬ್ಬಿ!!!

ಒಂದಾಗಿರಬೇಕಕ್ಕಮ್ಮಪ್ಪಣ್ಣಂದಿರೆಲ್ಲಾ! [ಆ]   2(482)

-ದಾಯ, ನಷ್ಟಕ್ಕೆ ಸಮಭಾಗಿಗಳಾಗ್ಯೆಲ್ಲಾ!
ಗಿಡುಗನಂತೆ ಕಿತ್ತು ತಿನ್ನಬೇಡಿರೆಲ್ಲಾ!
ಘುಪತಿ ರಾಘವನ ಭಜಿಸಿರೆಲ್ಲಾ!
ಬೇಸರ ಹೋಗ್ವುದಿದರಿಂದರಿಯಿರೆಲ್ಲಾ!
ಥೆ ಹೇಳಿ, ಕೇಳಿ ಹರಟದಿರಿ ಎಲ್ಲಾ! (ಕ)
-ಕ್ಕಸದ ಸಂಸಾರ ಯಾರಿಗೂ ಸುಖವಿಲ್ಲಾ! (ಒ)
-ಮ್ಮತದಿಂದ ಭಕ್ತಿ ಸೇವೆ ಮಾಡಬೇಕೆಲ್ಲಾ! (ಆ)
-ಪ್ಪನಾಸ್ತಿಗೆ ಅಧಿಕಾರಿಗಳಾಗಿರೆಲ್ಲಾ! (ಹ)
-ಣ್ಣಂಗಳಕ್ಕೆಸೆದು ಸಿಪ್ಪೇಕುಣ್ಣುವಿರೆಲ್ಲಾ?
ದಿನ, ರಾತ್ರಿ ಹೀಗಾಗಿ ಬಾಳು ಹಾಳಾಯ್ತಲ್ಲಾ! (ಕ)
-ರೆದಿಕ್ಕಿದರೂ ಉಣ್ಣದೆ ಗುದ್ದಾಟವಲ್ಲಾ! (ಬ)
-ಲ್ಲಾ, ನಿರಂಜನಾದಿತ್ಯನಲೈಕ್ಯರಾಗೆಲ್ಲಾ!!!

ಒಂದಾದವರ ಸಂದು ಮುರಿಯದಿರ್ಲಿ!   6(3524)

ದಾಶರಥಿ ತಾನಾಗಿ ಬಾಳು ಬೆಳಗ್ಲಿ!
ತ್ತ ಗುರುವಿನ ಕೃಪೆಯಿದಕ್ಕಾಗ್ಲಿ!
ನವಾಸದಲ್ಲೂ ಬೇರೆಯಾಗದಿರ್ಲಿ!
ಕ್ಕಸರ ಸೊಕ್ಕಮುರಿಯುವಂತಾಗ್ಲಿ!
ಸಂಶಯಕ್ಕವಕಾಶವಾಗದಂತಾಗ್ಲಿ!
ದುರದೃಷ್ಟವೆಂಬ ಮಾತೇ ಬರದಿರ್ಲಿ!
ಮುನಿಪೋತ್ತಮರ ಮಾತು ಸತ್ಯವಾಗ್ಲಿ!
ರಿಸಿ ಪತಂಜಲೀಯೋಗ ಸಿದ್ಧಿಯಾಗ್ಲಿ!
ದುಪನ ವಿಶ್ವರೂಪ ಕಾಣುತ್ತಿರ್ಲಿ!
ದಿವ್ಯ ಜ್ಞಾನಾನಂದಾನುಭವವುಂಟಾಗ್ಲಿ!
(ಇ)-ರ್ಲಿ ನಿರಂಜನಾದಿತ್ಯನಲ್ಲೊಂದಾಗಿರ್ಲಿ!!!

ಒಂದಿಗಿರಬೇಕು, ನಾ ನಿನ್ನಂದಚಂದ ನೋಡಬೇಕು!   6(3763)

ದಿನ, ರಾತ್ರಿಗಳುರುಳುವುದರಿಯದಿರಬೇಕು!
ಗಿರಿಜಾ, ಶಂಕರರಾಗಿ ವಿಹರಿಸುತ್ತಿರಬೇಕು!
ಜಾ ದಿನಗಳೆಂಬವುಗಳು ಇಲ್ಲದಿರಬೇಕು!
ಬೇಸರದಾಯಕ ಸಂಸಾರವದಾಗದಿರಬೇಕು!
ಕುಹಕು, ಕುಚೋದ್ಯವಾವುದೂ ನಮ್ಮಲ್ಲಿಲ್ಲದಿರ್ಬೇಕು!
ನಾಳೆಯ ಚಿಂತೆ ನಮ್ಮಿಬ್ಬರಲ್ಲೂ ಇಲ್ಲದಿರಬೇಕು!
ನಿನ್ನಲ್ಲೆಂದೂ ನಾನು ವಿಕಲ್ಪವೆಣಿಸದಿರಬೇಕು! (ನ)
-ನ್ನಂತರಂಗ, ಬಹಿರಂಗ ಸ್ವಾಮಿ ನೀನಾಗಿರಬೇಕು!
ರ್ಶನ, ಸ್ಪರ್ಶನಕ್ಕಡ್ಡಿ ನನಗಾಗದಿರಬೇಕು!
ಚಂಚಲ ಸ್ವಭಾವ ನನ್ನದನ್ನು ನೀನಳಿಸಬೇಕು!
ಯೆ ನನ್ನ ಮೇಲೆ ನಿನ್ನದು ಎಂದೆಂದೂ ಇರಬೇಕು!
ನೋವು, ಸಾವಿನ ಚಿಂತೆ ನಮ್ಮಲ್ಲಿ ಇಲ್ಲದಿರಬೇಕು! (ರುಂ)
-ಡಮಾಲೆ ನನಗೆ, ಮುಂಡಮಾಲೆ ನಿನಗಾಗಬೇಕು!
ಬೇರಿನ್ಯಾರ ಸುಖಕ್ಕೂ ನಾವಡ್ಡಿಯಾಗದಿರಬೇಕು! (ಬೇ)
-ಕು, ನಿರಂಜನಾದಿತ್ಯ ಸದಾ ಸಾಕ್ಷಿಯಾಗಿರಬೇಕು!!!

ಒಂದು ಮೂರಾಗಿ ಹುಟ್ಟಿತಯ್ಯಾ! [ಬಂ]   3(1345)

-ದುದಿದಕನೇಕ ರೂಪಯ್ಯಾ!
ಮೂಗು, ಕಿವಿಯೆಲ್ಲಾ ಬಂತಯ್ಯಾ!
ರಾಗ, ದ್ವೇಷಾವರಿಸಿತಯ್ಯಾ! (ಆ)
-ಗಿ ಹೊಯ್ತು ಬಹಳ ಕಾಲಯ್ಯಾ!
ಹುಚ್ಚು ಮೋಹ ಹೆಚ್ಚಾಯಿತಯ್ಯಾ! (ಕೆ)
-ಟ್ಟಿತೀಗೆಲ್ಲೆಲ್ಲೂ ಕರ್ಮವಯ್ಯಾ!
ತ್ವವರಿತೊಂದಾಗೀಗಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾತ್ಮಯ್ಯಾ!!!

ಒಂದೇ ರೂಪಿನಲ್ಲೆಲ್ಲವಯ್ಯಾ!   4(1763)

ದೇವ ದತ್ತಾತ್ರೇಯಾ ರೂಪಯ್ಯಾ! (ಬೇ)
-ರೂಹೆಗೆಡೆಗೊಡಬೇಡಯ್ಯಾ!
ಪಿನಾಕ ಧರ ಹರನಯ್ಯಾ! (ವ)
-ನಮಾಲಾಧರ ಹರಿಯಯ್ಯಾ! (ಎ)
-ಲ್ಲೆಲ್ಲೇನೇನೋ ಸೃಷ್ಟಿಪಜಯ್ಯಾ! (ನ)
-ಲ್ಲಗೆಲ್ಲಾ ನಾಮ ಮಾನ್ಯವಯ್ಯಾ! (ಜೀ)
-ವ, ದೇವನೀ ಜ್ಞಾನದಿಂದಯ್ಯಾ! (ಅ)
-ಯ್ಯಾ, ಶ್ರೀ ನಿರಂಜನಾದಿತ್ಯಯ್ಯಾ!!!

ಒಂದೇ ಸಮವಾಗಿ ಯಾವುದೂ ಇರವುದಿಲ್ಲ!   1(180)

ದೇಹ ಹುಟ್ಟಿದಾಗಿದ್ದಂತೆ ಮತ್ತಿರುವುದಿಲ್ಲ!
ತ್ತ ಮೇಲಾ ರೂಪಾಕಾರಗಳಿರುವುದಿಲ್ಲ!
ನೆ, ಮಾರು, ಬದ್ಕು, ಬಾಳಿಂದಿನಂತೆ ನಾಳಿಲ್ಲ!
ವಾದ, ಭೇದಗಳು ಹಿಂದಿನಂತೆ ಇಂದೂ ಇಲ್ಲ!
ಗಿರಿಯಾದರೂ ಹಿಂದಿದ್ದಂತೆಯೇ ಇಂದಿಗಿಲ್ಲ!
ಯಾಗ, ಯೋಗದ ದೇಶದಲ್ಲಿಂದವುಗಳಿಲ್ಲ!
ವುದಯದಲಿ ಕಂಡಂತೆ ಅಸ್ತಮಾನಕ್ಕಿಲ್ಲ!
ದೂರಿ ಮೆರೆದವರು ದೂಷಿಸಲ್ಪಡದಿಲ್ಲ!
ದ್ದೂರಿಂದನ್ಯರೂರಿಗೆ ಹೋಗದವರಿಲ್ಲ!
ರುಚಿ ಸವಿದವರ್ಕಹಿ ವಾಕರಿಸದಿಲ್ಲ!
ವುಂಡವರುಪವಾಸವಿರದೆ ಎಲ್ಲೂ ಇಲ್ಲ!
ದಿಟವದುದೂ ಸಟೆಯೆನ್ನಿಸದಿರಲಿಲ್ಲ! (ಅ)
-ಲ್ಲ, ನಿರಂಜನಾದಿತ್ಯ, ಏಸುಕ್ರಿಸ್ತ ಬೇರಲ್ಲ!!!

ಒಂದೊಂದಕ್ಕೆ ಒಂದೊದು ಕಾಲ!   5(3274)

ದೊಂದಣಕ್ಕೆ ಬಾಲಾಪ್ಯ ಕಾಲ!
ರ್ಪಕ್ಕೆ ಜವ್ವನದ ಕಾಲ! (ಬೆ)
-ಕ್ಕೆಗಿದು ಅತ್ಯುತ್ತಮಕಾಲ!
ಒಂಟಿತನಕ್ಕಾರೋಗ್ಯ ಕಾಲ!
ದೊಂಬಿಗೆಲ್ಲಾ ಕಾಲ ಸಕಾಲ!
ದುಡಿಮೆಗೆ ಹಗಲು ಕಾಲ!
ಕಾರಿರುಳು ಪಿಶಾಚಿ ಕಾಲ! (ಕಾ)
-ಲ ನಿರಂಜನಾದಿತ್ಯ ಲೀಲ!!!

ಒಂದೊಂದರಲ್ಲೊಂದೊಂದು ವಿಶಿಷ್ಟಗುಣ!   4(1874)

ದೊಂಬಿಗಾರನಿಗೆ ಕ್ರೌರ್ಯ ವಿಶಿಷ್ಟ ಗುಣ!
ಯೆ ಸಜ್ಜನರಿಗೆ ವಿಶಿಷ್ಟ ಗುಣ!
ತಿಪತಿಗೆ ಕಾಮ ವಿಶಿಷ್ಟ ಗುಣ! (ಎ)
-ಲ್ಲೊಂದಾದವಗಾನಂದ ವಿಶಿಷ್ಟ ಗುಣ!
ದೊಂಬರವಗೆ ಧೈರ್ಯ ವಿಶಿಷ್ಟ ಗುಣ!
ದುರ್ಬಲನಗೆ ಭಯ ವಿಶಿಷ್ಟ ಗುಣ!
ವಿರಕ್ತನಿಗೆ ಶಾಂತಿ ವಿಶಿಷ್ಟ ಗುಣ!
ಶಿವ, ಶಕ್ತಿಗನ್ಯೋನ್ಯ ವಿಶಿಷ್ಟ ಗುಣ! (ಕ)
-ಷ್ಟಜೀವಿಗೆ ಅತೃಪ್ತಿ ವಿಶಿಷ್ಟ ಗುಣ!
ಗುರುಭಕ್ತಗೆ ಸದ್ವೃತ್ತಿ ವಿಶಿಷ್ಟ ಗುಣ! (ಗ)
-ಣಪ ನಿರಂಜನಾದಿತ್ಯ ನಿರ್ಗುಣ!!!

ಒಂದೊಂದಾಗಿಂದೆಲ್ಲಾ ಆಯ್ತು!   6(3992)

ದೊಂಬರಾಟವಾಡಿದ್ದಾಯ್ತು!
ದಾಸರ ದಾಸನಾಗ್ಯಾಯ್ತು!
ಗಿಂಡಿ ಮಾಣಿಯಾದದ್ದಾಯ್ತು!
ದೆವ್ವಗಳೋಡಿಸಿದ್ದಾಯ್ತು! (ಕ)
-ಲ್ಲಾಗಿ ಕುಳಿತ್ಕೊಂಡದ್ದಾಯ್ತು!
ತ್ಮಾನಂದಾನುಭವಾಯ್ತು! (ಆ)
-ಯ್ತು ನಿರಂಜನಾದಿತ್ಯಾಯ್ತು!!!

ಒಂದೊಂದಾಗೇನೊನೋ ನಾನಿಂದು ತಿಂದೆ! (ಇ)   4(2161)

-ದೊಂದು ಸುಯೋಗವೆಂದು ನಾನು ತಿಂದೆ! (ಸಂ)
ದಾಯವಾಗಲಿ ಋಣವೆಂದು ತಿಂದೆ! (ಯೋ)
-ಗೇಶ್ವರನಿಚ್ಛೆಯಿದೆಂದು ನಾ ತಿಂದೆ!
ನೇಮಕ್ಕೆ ವಿರೋಧವಾದರೂ ತಿಂದೆ! (ಮ)
-ನೋದೌರ್ಬಲ್ಯವೆಂದರಿತರೂ ತಿಂದೆ!
ನಾಮಜಪ ಮಾಡುತ್ತೆಲ್ಲಾ ನಾ ತಿಂದೆ!
ನಿಂತು, ನಮಸ್ಕಾರವೆನ್ನುತ್ತ ತಿಂದೆ!
ದುಷ್ಪರಿಣಾಮಾಗದಿಂದೆಂದು ತಿಂದೆ!
ತಿಂದೆ, ಗುರುಪ್ರಸಾದವೆಂದು ತಿಂದೆ! (ತಂ)
-ದೆ, ನಿರಂಜನಾದಿತ್ಯಗತ್ಯೆಂದೆ!!!

ಒಕ್ಕಲಿಗ ನುತ್ತು, ಬಿತ್ತಿ, ಬೆಳೆಯಬೇಕು! (ಅ)   4(1802)

-ಕ್ಕರೆಯಿಂದಾದಮೇಲೆ ನೈವೇದ್ಯವಾಗಬೇಕು! (ಖಾ)
-ಲಿಬಿಟ್ಟ ನೆಲ ಪೋಲಾಗದೇನಾಗಬೇಕು? (ರಂ)
-ಗನಾಥನೊಲುಮೆಗೆ ಸೇವಾಭಾಗ್ಯ ಬೇಕು! (ಅ)
-ನುದಿನದಲ್ಲಿದು ಶ್ರದ್ಧೆಯಿಂದಾಗಬೇಕು! (ಹೊ)
-ತ್ತು, ಹೆತ್ತಾತನಿಗಿದು ತೃಪ್ತಿಯಾಗಬೇಕು!
ಬಿನ್ನಹವನ ಶ್ರೀ ಪಾದಕ್ಕೊಪ್ಪಿಸಬೇಕು! (ಎ)
-ತ್ತಿಯವನಿಂದ ಮುದ್ದಾಡಿಸಿಕೊಳ್ಳಬೇಕು!
ಬೆರೆತು ಅವನಲ್ಲಿ ಲಯವಾಗಬೇಕು! (ಗೆ)
-ಳೆತನ ಐಹಿಕಕ್ಕಾಗದಂತಿರಬೇಕು! (ಭ)
-ಯ, ಭಕ್ತಿ ತನ್ನಲ್ಲಿ ಮೂರ್ತೀಭವಿಸಬೇಕು!
ಬೇರೆಯವರ ಠೀಕೆ ಮಾಡದಿರಬೇಕು!
ಕುಮಾರ ನಿರಂಜನಾದಿತ್ಯಗಾಗಬೇಕು!!!

ಒಡಕೆಂದೆಸೆಯುವುದ್ರಲ್ಲಿದ್ದೆ! (ಒ)   6(3725)

-ಡನೆ ತಪ್ಪು ನನ್ನದೆಂದ್ತಿಳಿದೆ!
ಕೆಂಗಣ್ಣಿನ ಬಣ್ಣ ಇಳಿಸಿದೆ!
ದೆಸೆದೆಸೆಗ್ದಿಟ್ಟಿಸಿ ನೋಡಿದೆ!
ಸೆಕೆಯಿಂದ ಬಿಡುಗಡೆಯಾದೆ!
ಯುಗಾಂತ್ಯ ಬಂದ್ರೂ ವಿವೇಕ್ಯಾಗೆಂದೆ! (ಹಾ)
-ವು ಹಗ್ಗವೆಂದಾದೀತು? ಎಂದೆ! (ಭ)
-ದ್ರವಾಗಿರಬೇಕು ಮನಸ್ಸೆಂದೆ! (ಮ)
-ಲ್ಲಿಕಾರ್ಜುನ ಸ್ವರೂಪ “ನಾ”ನೆಂದೆ! (ಗೆ)
-ದ್ದೆ, ನಿರಂಜನಾದಿತ್ಯಾಗೀಗೆದ್ದೆ!!!

ಒಡಲಿನೊಡೆತನೊಡೆಯನದಯ್ಯಾ! (ಪ)   3(1054)

-ಡಬೇಡ ಗರ್ವ ನಿನ್ನದದೆನುತಯ್ಯಾ! (ಒ)
-ಲಿಸಿಕೊಳಬೇಕವನ ಜೀವರಯ್ಯಾ!
ನೊರೆ ಹಾಲು ಸವಿದವ ಬಲ್ಲನಯ್ಯಾ! (ನ)
-ಡೆಯಬೇಕಾರ್ಯರ ಹೆದ್ದಾರಿಯಲ್ಲಯ್ಯಾ!
ನುವಿರುವಾಗ ತನ್ನನರಿಯಯ್ಯಾ!
ನೊಗವಿರುವಾಗೆತ್ತು ಕಟ್ಟಬೇಕಯ್ಯಾ! (ಕ)
-ಡೆ ಗಂಡರದರಿಂದ ಕಷ್ಟ ಕಾಣಯ್ಯಾ
ಮನಾಳ್ಗಳು ಸದಾ ಕಾದಿಹರಯ್ಯಾ! (ಧ)
-ನ ಕನಕಕ್ಕಾಸೆ ಪಡಬೇಡವಯ್ಯಾ!
ಯಾನಿಧಿ ಸದ್ಗುರು ಮಹಾದೇವಯ್ಯಾ! (ಅ)
-ಯ್ಯಾ ನಿರಂಜನಾದಿತ್ಯ ಯಜಮಾನಯ್ಯಾ!!!

ಒಡೆಯನಡಿಗೆರಗ್ಲೇಬೇಕ್ಮಡದಿ! (ಕ)   5(2668)

-ಡೆಗಂಡರವನ ಬತ್ತುವುದುದಧಿ! (ಭ)
-ಯ, ಭಕ್ತಿಯಿಂದವಳಿರ್ಬೇಕು ನಿಜದಿ!
ಡೆ, ನುಡಿಯೊಂದಾಗ್ಜಪಿಸ್ಬೇಕ್ಮನದಿ! (ಹಾ)
-ಡಿ ಗುಣಗಾನ ಒಪ್ಪಿಸ್ಬೇಕು ವರದಿ!
ಗೆಳೆತನ ಹೆಚ್ಚಬೇಕ್ದಿನ ದಿನದಿ!
(ತ)ರ(ತ)ರದಾಸೆಗಳ್ಬಿಡಬೇಕೀ ಕತದಿ! (ಆಂ)
-ಗ್ಲೇಯರಾಚಾರದಲ್ಲಿರ್ಬಾರದ್ಕೆಳದಿ!
ಬೇಸರಿಸದೆ ಸುಧಾರಿಸ್ಬೇಕ್ಮುದದಿ! (ಬೇ)
-ಕ್ಮನೋನಿಶ್ಚಯವೆಲ್ಲಾ ಕಾರ್ಯಕ್ರಮದಿ! (ಗಂ)
-ಡ, ಹೆಂಡಿರಾಗ ಬಾಳುವರು ಸುಖದಿ! (ದಾ)
-ದಿ ನಿರಂಜನಾದಿತ್ಯಗವ್ಳಾಗಸದಿ!!!

ಒದ್ದೆ ಸೀರೆಯಲೋಡಲಾಗುವುದಿಲ್ಲ! (ಇ)   3(1036)

-ದ್ದೆಲ್ಲವನಾಗ ಕೆತ್ತುಕೊಳ್ಳುವೆನಲ್ಲ!
ಸೀರೆಯಾರುವಾಗ ಪರಾರಿ ನಾನಾಲ್ಲ! (ಬೇ)
-ರೆ ಸಹಾಯಕರಾಕೆಗಲ್ಲಿಲ್ಲವಲ್ಲ! (ಮಾ)
-ಯಗಾರನಾ ಯೋಚನೆ ಫಲಿಸಲಿಲ್ಲ!
ಲೋಕನಾಥ ತಾನೇ ಕಾಪಾಡಿದನಲ್ಲ! (ಬಿ)
-ಡನವನೆಂದಿಗೂ ಶರಣರನೆಲ್ಲ! (ಲೀ)
-ಲಾ ಮೂರ್ತಿ ರಂಗನಾಥನಾಗಿಹನಲ್ಲ!
ಗುರುದೇವನವ ಭೂಮಂಡಲಕ್ಕೆಲ್ಲ! (ಆ)
-ವುದೂ ಅವನಾಜ್ಞೆಯಿಲ್ಲದಾಗದಲ್ಲ!
ದಿನ ರಾತ್ರಿಯವನ ನೆನೆಯಿರೆಲ್ಲ! (ಅ)
-ಲ್ಲ, ನಿರಂಜನಾದಿತ್ಯ ಕಣ್ಣು ಮುಚ್ಚಿಲ್ಲ!!!

ಒಪ್ಪಂದ ಮಾಡಿ ಸಂಬಂಧ ತಪ್ಪಿಸ್ಬೇಡ! (ಇ)   5(2748)

-ಪ್ಪಂತಿದ್ದೇನೆಂದು ಕೊರಳ ಕೊಯ್ಯಬೇಡ!
ಯೆ ದಾಕ್ಷಿಣ್ಯಕ್ಕಾಗಿ ತೋರಿಸಬೇಡ!
ಮಾತಿನ ಬೆಲೆಯನ್ನು ಮಾಯಮಾಡ್ಬೇಡ! (ಮ)
-ಡಿದರೂ ಧೃಡ ವಿಶ್ವಾಸ ಕೆಡಿಸ್ಬೇಡ!
ಸಂಪೂರ್ಣ ನಿನ್ನಲ್ಲೈಕ್ಯ ಮಾಡ್ಕೊಳ್ದಿರ್ಬೇಡ!
ಬಂಗಾರದೊಡವೆಯಾಸೆ ತೋರಿಸ್ಬೇಡ!
ರ್ಮಕ್ಕೆ ಧಕ್ಕೆಯನ್ನೆಂದಿಗೂ ತರ್ಬೇಡ!
ಪ್ಪುಗಳನ್ನೆಲ್ಲಾ ಕ್ಷಮಿಸದಿರ್ಬೇಡ! (ಹಿ)
-ಪ್ಪಿಗಳಂತೆನ್ನನ್ನೆಂದೆಂದೂ ಇರಿಸ್ಬೇಡ! (ಈ)
-ಸ್ಬೇಕಿದ್ದು ಜೈಸ್ಬೇಕೆಂಬಾದರ್ಶ ಕೀಳ್ಬೇಡ! (ಮೃ)
-ಡ ನಿರಂಜನಾದಿತ್ಯನೆಂಬುದು ಧೃಡ!!!

ಒಪ್ಪಿ ತಪ್ಪಿದರದು ತಪ್ಪು! (ಒ)   4(1835)

-ಪ್ಪಿಗೆಯಾದರೀ ಮಾತನ್ನೊಪ್ಪು!
ತ್ವವರಿಯದೆಲ್ಲಾ ತಪ್ಪು! (ಮು)
-ಪ್ಪಿಗೆ ಮೊದಲೇ ಇದನ್ನೊಪ್ಪು!
ತ್ತನೊಲಿದರಿಲ್ಲಾ ತಪ್ಪು! (ವ)
-ರ ಗುರುದ್ರೋಹ ತಪ್ಪೆಂದೊಪ್ಪು!
ದುರಭ್ಯಾಸದಿಂದೆಲ್ಲಾ ತಪ್ಪು!
ನು, ಮನ ಮಲವೆಂದೊಪ್ಪು! (ಒ)
-ಪ್ಪು, ನಿರಂಜನಾದಿತ್ಯ ನೆಪ್ಪು!!!

ಒಬ್ಬ ದೇವನಡಿಗೆ ವಿವಿಧ ರೂಪಾರ್ಚನೆ! [ಹ]   2(967)

-ಬ್ಬ ಹರಿದಿನದಲ್ಲಾಗುವುದನಂತಾರ್ಚನೆ!
ದೇವ ಸರ್ವಾಂತರ್ಯಾಮಿಯೆಂದಾಗಲಿ ಚಿಂತನೆ! (ಭ)
-ವರೋಗ ನಿವಾರಣೆಗೆ ಬೇಕಿದೇ ಸಾಧನೆ!
ಶ್ವರ ರೂಪಕ್ಕಂಟಿರಬಾರದು ಯೋಚನೆ! (ದು)
-ಡಿಯಲೇಬೇಕು ಮನಸಿನ ಮಾಯಾ ವಾಸನೆ!
ಗೆಳೆಯನಿದಕೆ ನಿತ್ಯ ನಾಮ ಸಂಕೀರ್ತನೆ!
ವಿಧಿ, ಹರಿ, ಹರರ್ಬೇಡ ಬೇರೆಂಬ ಭಾವನೆ!
ವಿಕಲ್ಪ ನಾಶಕ್ಕಾಗಿಯೇ ಸದ್ಗುರು ಬೋಧನೆ!
ರ್ಮ, ಕರ್ಮದಿಂದಾಗಬೇಕು ಲೋಕ ಪಾಲನೆ!
ರೂಪಾತ್ಮಸ್ವರೂಪವಾದಾಗಲೇ ವಿಮೋಚನೆ!
ಪಾಪರಾಶಿಗಳೆಲ್ಲಾ ಆಗಲೇ ನಿರ್ಮೂಲನೆ! (ವ)
-ರ್ಚಸ್ಸಿದಕ್ಕಾಗಿರಬೇಕು ನಿತ್ಯ ಸಂಶೋಧನೆ!
ನೆನೆ, ನಿರಂಜನಾದಿತ್ಯನ ಜ್ಞಾನಿ ಜೀವನೇ!!!

ಒಬ್ಬನ ಮೇಲೊಬ್ಬ ಮಲಗಿದ್ದ! (ಹ)   6(3668)

-ಬ್ಬ ಮುಗಿದ ಬಳಿಕೊಬ್ಬನೆದ್ದ!
ಡುರಾತ್ರಿಯಲ್ಲಿನ್ನೊಬ್ಬನೆದ್ದ!
ಮೇಲಿದ್ದವನು ಕೆಳಗೆ ಬಿದ್ದ! (ಕಾ)
-ಲೊಬ್ಬನದ್ದಿನ್ನೊಬ್ಬ ಹಿಡಿದಿದ್ದ! (ಇ)
-ಬ್ಬರನ್ನೂ ಬೇರೊಬ್ಬ ನೋಡುತ್ತಿದ್ದ!
ಧಾಂಧ್ರವರಿಬ್ಬ್ರನಾತ ಒದ್ದ! (ಕಾ)
-ಲ ಬೆಳಗಾಯ್ತೆಂದಲ್ಲಿಂದಾತೆದ್ದ! (ಭೋ)
-ಗಿಗಳ್ಗತಿಯಿದೆಂದು ನಗ್ತಿದ್ದ! (ಇ)
-ದ್ದ, ನಿರಂಜನಾದಿತ್ಯ ಮೂಡ್ತಿದ್ದ!!!

ಒಬ್ಬರನೊಬ್ಬರಾಡ ಬೇಡಿರೋ! (ಅ)   4(1707)

-ಬ್ಬರಾರ್ಭಟವ ಸಾಕು ಮಾಡಿರೋ! (ವ)
-ರ ಗುರುಧ್ಯಾನ ಸದಾ ಮಾಡಿರೋ!
ನೊಸಲ್ಗಣ್ಣನೇ ಗುರು ಕಾಣಿರೋ! (ಇ)
-ಬ್ಬರಣುಗರಂತಿದ್ದುಕ್ಕೊಳ್ಳಿರೋ!
ರಾಗ, ದ್ವೇಷಗಳೆಲ್ಲಾ ಬಿಡಿರೋ! (ಒ)
-ಡಲಿದದಕಾಗ್ರಲ್ಲ ನೋಡಿರೋ!
ಬೇಗ್ಬೇಗ್ಬಂದು ಶ್ರೀಪಾದ ಸೇರಿರೋ! (ಹಾ)
-ಡಿ ಹರಿನಾಮ ಹೆಜ್ಜೆ ಹಾಕಿರೋ! (ಸೇ)
-ರೋ, ಜೈ ನಿರಂಜನಾದಿತ್ಯನ್ನಿರೋ!!!

ಒಬ್ಬರನ್ನೊಬ್ಬರಾಡಿ ದೊಡ್ಡವರಾಗರಯ್ಯಾ! (ಅ)   1(425)

-ಬ್ಬರಟ್ಟಹಾಸ ಬಂಜೆಯ ಸೌಂದರ್ಯದಂತಯ್ಯಾ! (ಅ)
-ರಳಿಸಿ ತನ್ನ ರೂಪ ತಾನಿದ್ದರೊಳ್ಳಿತಯ್ಯಾ!
ನೊರೆಹಾಲಿರಲು, ನೆರೆಮನೆ ಕಳ್ಳೇಕಯ್ಯಾ? (ಕ)
-ಬ್ಬನೊಳಗಿಟ್ಟು, ಜೊಂಡು ಹಿಂಡುವುದೇತಕಯ್ಯಾ?
ರಾಮನ ಬಿಟ್ಟು ಕಾಮನ ಹಿಡಿಯಬೇಡಯ್ಯಾ! (ಹಾ)
-ಡಿ, ಪಾಡಿ ಗುರುಭಜನೆಯಲೈಕ್ಯವಾಗಯ್ಯಾ!
ದೊಡ್ಡವರಂಥವರೆಂದು ತಿಳಿಯಬೇಕಯ್ಯಾ! (ಅ)
-ಡ್ಡದಾರಿ ಹಿಡಿದರಧೋಗತಿ ಬಹುದಯ್ಯಾ!
ರ ಸಾಧು, ಸಂತರ ಹಾದಿ ಸುಗಮವಯ್ಯಾ!
ರಾಗ, ತಾಳ, ಮೇಳವಿರಲೇಬೇಕೆಂದಿಲ್ಲಯ್ಯಾ! (ಅ)
-ಗತ್ಯವಿದಕಿರಬೇಕನನ್ಯ ಭಕ್ತಿಯಯ್ಯಾ! (ಮ)
-ರ, ಮರವೆಂದವಗೂ ರಾಮನೊಲಿದನಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಗುರು ಹಿರಿಯನಯ್ಯಾ!!!

ಒಬ್ಬರನ್ನೊಬ್ಬರು ತುಚ್ಛ ಮಾಡಬೇಡಿರೋ! (ಇ)   4(1922)

-ಬ್ಬರ ಜಗಳನ್ಯನಿಗಾದಾಯ ಕಾಣಿರೋ! (ವ)
-ರ ಗುರುವಿನಡಿ ಸೇರಿ ಶರಣೆನ್ನಿರೋ! (ಇ)
-ನ್ನೊಬ್ಬನಿಲ್ಲ ನಿಮ್ಮ ಹಿತಕೆಂದರಿಯಿರೋ! (ಅ)
-ಬ್ಬರಾರ್ಭಟದಿಂದೇನು ಲಾಭ ಪಡೆದಿರೋ? (ಕ)
-ರುಬು ಕಾಲಕೂಟ ವಿಷವೆಂದರಿಯಿರೋ!
ತುಷ್ಟಿ ಶುದ್ಧಾಂತರಂಗದಿಂದೆಂದರಿಯಿರೋ! (ಉ)
-ಚ್ಚ, ನೀಚವೆಂದು ಗುದ್ದಾಡುತ್ತಿರಬೇಡಿರೋ!
ಮಾಯೆಗೆ ಮರುಳಾಗಿ ಹಾಳಾಗಬೇಡಿರೋ! (ಬ)
-ಡವರನ್ನೆಂದಿಗೂ ಕಡೆಗಾಣಬೇಡಿರೋ!
ಬೇರೆಯವರಲ್ಲಿ ತಪ್ಪೆಣಿಸಬೇಡಿರೋ! (ಅ)
-ಡಿಗಡಿಗಾತ್ಮ ಧ್ಯಾನ ನಿರತನಾಗಿರೋ! (ಬಾ)
-ರೋ, ನಿರಂಜನಾದಿತ್ಯನಲ್ಲೈಕ್ಯವಾಗಿರೋ!!!

ಒಬ್ಬೊಬ್ಬರದೊಂದೊಂದು ದುಡಿಮೆ! (ಒ)   6(3303)

-ಬ್ಬೊಡೆಯನದ್ದಿದೊಂದು ಮಹಿಮೆ (ಕ)
-ಬ್ಬಗಳ್ಪೊಗಳುವುದಾ ಹಿರಿಮೆ!
ಜಸ್ತಮಸ್ಸಾತ್ವಿಕಾ ಪ್ರತಿಮೆ! (ಇ)
-ದ್ದೊಂಭತ್ತುದ್ವಾರಕ್ಕೊಂದೊಂದು ಭ್ರಮೆ!
ದೊಂಬರಾಟದಲ್ಲಿದೆಲ್ಲಾ ಜಮೆ!
ದುರ್ಜನ, ಸಜ್ಜನರಿರ್ಪೀ ಸೀಮೆ!
ದುಡಿಯದಿದ್ದರಿಕ್ಕಳು ಉಮೆ (ಕೂ)
-ಡಿ ಆಳ್ವಳ್ಹರಿಯೊಡನೆ ರಮೆ! (ಉ)
-ಮೆ ನಿರಂಜನಾದಿತ್ಯಾತ್ಮಾ ರಮೆ!!!

ಒಬ್ಬೊಬ್ಬರಿಗೊಂದೊಂದು ಹುಚ್ಚು! (ಒ)   5(2670)

-ಬ್ಬೊಡೆಯಗನಂತದ ಹುಚ್ಚು!
(ಅ)ಬ್ಬರಕೆ ಅರ್ಭಟದ ಹುಚ್ಚು! (ಸಿ)
-ರಿಗೆ ನರಹರಿಯ ಹುಚ್ಚು!
ಗೊಂಬೆಗಲಂಕಾರದ ಹುಚ್ಚು!
ದೊಂಬನಿಗಾದಾಯದ ಹುಚ್ಚು!
ದುರ್ಮತಿಗಕೃತ್ಯದ ಹುಚ್ಚು!
ಹುಡುಗರಿಗಾಟದ ಹುಚ್ಚು! (ಮೆ)
-ಚ್ಚು ನಿರಂಜನಾದಿತ್ಯನಚ್ಚು!!!

ಒಬ್ಬೊಬ್ರಿಗೊಂದೊಂದ್ರಲ್ಲಭಿಮಾನ! [ಒ]   5(3147)

-ಬ್ಬೊಬ್ರಿಗೆ ಹಬ್ಬ ಅಸಮಾಧಾನ!
(ಸಾ)ಬ್ರಿಗೆ ರಂಜಾನೆಂಬುದು ಪ್ರಧಾನ!
ಗೊಂಬೆಗಳಿಗೂ ದೀಪಾರಾಧನ!
ದೊಂಬಿ ಮದಾಂಧತೆಯ ವರ್ತನ!
ದ್ರವ್ಯಕ್ಕಾಗಿ ಬೆತ್ತಲೆ ನರ್ತನ! (ಗೊ)
-ಲ್ಲನಿಗೆ ಗೋಪಾಲನಾ ಜೀವನ!
ಭಿಕ್ಷುವಿಗೆ ಭಿಕ್ಷಾನ್ನ ಪಾವನ!
ಮಾರಹರಗಾನಂದ ಸ್ಮಶಾನ!
ಮೋ ನಿರಂಜನಾದಿತ್ಯಾನನಾ!!!

ಒಮ್ಮತ ಮತ ಧರ್ಮ ಸಮ್ಮತ! (ತ)   4(2131)

-ಮ್ಮ ಸ್ವಾರ್ಥಕ್ಕಾಗಿಹದು ದುರ್ಮತ!
ರಣಿ ಮತ ಲೋಕೈಕ ಮತ!
ದ, ಮತ್ಸರಕ್ಕಾಗಲ್ಲ ಮತ! (ಆ)
-ತ, ಈತೆನ್ನದಭೇದಕ್ಕೆ ಮತ!
ರ್ಮವಿದಾದರಾದರ್ಶ ಮತ! (ಕ)
-ರ್ಮವಿದಕ್ಕಾದರದೊಳ್ಳೇ ಮತ!
ಹಜಾನಂದವೀವುದೀ ಮತ! (ಅ)
-ಮ್ಮ, ಬೊಮ್ಮರೊಂದೆಂಬುದಿದೇ ಮತ! (ಮ)
-ತ, ನಿರಂಜನಾದಿತ್ಯಗೀ ಮತ!!!

ಒರಳಲ್ಲಿ ಕೂತರೆ ಒನಕೆ ಪೆಟ್ಟು ತಪ್ಪೀತೇ?   2(870)

ವಿ ಕಿರಣ ಬಿದ್ದಲ್ಲಿದ್ದರೆ ಬಿಸಿ ತಪ್ಪೀತೇ? (ಆ)
-ಳರಸನಿಗಾಳಾದವನಿಗೆ ಆಜ್ಞೆ ತಪ್ಪೀತೇ? (ಗ)
-ಲ್ಲಿಗಲ್ಲಿ ತಿರುಗುವ ನಾಯಿಗೆ ಏಟು ತಪ್ಪೀತೇ?
ಕೂಳಿಗಾಗಲೆಯುವವಗವಮಾನ ತಪ್ಪೀತೇ?
ನ್ನ ತಾನರಿಯದಜ್ಞಾನಿಗೆ ದುಃಖ ತಪ್ಪೀತೇ? (ಕೆ)
-ರೆಗೆ ಬಿದ್ದೀಜು ಬಾರದಿದ್ದರೆ ಮೃತ್ಯು ತಪ್ಪೀತೇ?
ಡನಾಡಿ ಕುಡಿಕನಾದರೆ ಕೇಡು ತಪ್ಪೀತೇ?
ಲ್ಲನ ಬಿಟ್ಟಿರುವ ಸತಿಗೆ ನಿಂದೆ ತಪ್ಪೀತೇ?
ಕೆಲಸ ಮಾಡದೆ ಸೋಮಾರಿಗಶಾಂತಿ ತಪ್ಪೀತೇ?
ಪೆಣವ ಸಿಂಗರಿಸಿದರೆ ದುರ್ಗಂಧ ತಪ್ಪೀತೇ? (ಅ)
-ಟ್ಟು ಪಟ್ಟಾಗಿ ಮಲಗಿದರೆ ಹಸಿವೆ ತಪ್ಪೀತೇ?
ಲೆ ಶೂಲೆಂದು ಛಲ ಹಿಡಿದರದು ತಪ್ಪೀತೇ? (ನೆ)
-ಪ್ಪೀಶ್ವರನದಿಲ್ಲದಿರೆ ಭವಭಯ ತಪ್ಪೀತೇ? (ಹಿ)
-ತೇಶ ನಿರಂಜನಾದಿತ್ಯನ್ನದೆ ಕಷ್ಟ ತಪ್ಪೀತೇ!!!

ಒರಳಲ್ಲಿ ಕೂತರೆ ಒನಿಕೆ ಪೆಟ್ಟು ತಪ್ಪೀತೆ? [ಮ]   3(1382)

-ರಳಲ್ಲಿ ನಿಂತರದು ಕುಸಿಯದೆ ತಾನಿದ್ದೀತೇ? (ಆ)
-ಳವರಿಯದೇ ಹಾರಿದರೆ ಮುಳುಗದಿದ್ದೀತೇ? (ಮ)
-ಲ್ಲಿಕಾರ್ಜುನ ಮುನಿದರೆ ಪ್ರಳಯಾಗದಿದ್ದೀತೇ?
ಕೂಲಿ ಕೊಡದಿದ್ದರೆ ಕೆಲಸ ನಿಲ್ಲದಿದ್ದೀತೇ?
ಲೆ ಭಾರವಾದಾಗೋಡಿದರೆ ಬೀಳದಿದ್ದೀತೇ? (ಕೆ)
-ರೆ, ಭಾವಿ, ಬತ್ತಿದರೆ ಬತ್ತದ ಫಸಲೆದ್ದೀತೇ?
ಣಗಿದ ಮರಕ್ಕೆ ನೀರೆರೆದರದೆದ್ದೀತೇ?
ನಿರಶನದಿಂದೊಡಲು ಬಡವಾಗದಿದ್ದೀತೇ?
ಕೆಡುಕು ಬಗೆದವನಿಗೆ ಕೇಡಾಗದಿದ್ದೀತೇ?
ಪೆಣಕೆ ಗೈದ ಶೃಂಗಾರ ವ್ಯರ್ಥವಾಗದಿದ್ದೀತೇ? (ಗು)
-ಟ್ಟು ರಟ್ಟು ಮಾಡಿದರೆ ತೊಟ್ಟ ಪ್ರತಿಜ್ಞೆ ಗೆದ್ದೀತೇ?
ರಣಿಯುದಿಸದಿದ್ದರೆ ಪ್ರಪಂಚವಿದ್ದೀತೇ? (ತ)
-ಪ್ಪೀಡಿಟ್ಟರೆ ದುಷ್ಟ ಮೃಗ ಕೈಕೊಟ್ಟೋಡದಿದ್ದೀತೇ?
ತೇಜಸ್ಸು ನಿರಂಜನಾದಿತ್ಯನನ್ನಗಲಿದ್ದೀತೇ?

ಒಳ ಹೊರಗಿರುವೆನ್ನ ಪ್ರಿಯ ಸ್ವಾಮಿ! (ಅ)   6(3530)

-ಳತೆಯಾಗದೇ ನನ್ನಾಳವಿನ್ನೂ ಸ್ವಾಮಿ?
ಹೊತ್ತು, ಹೆತ್ತು, ಕತ್ತುಹಿಸುಕ್ಬೇಡ ಸ್ವಾಮಿ! (ಪೆ)
-ರರಾರ್ಗತಿ ನೀನಲ್ಲದೆನಗೆ ಸ್ವಾಮಿ! (ಯೋ)
-ಗಿಯ ಸಹಭಾಗಿ ನಾನಲ್ಲವೇ ಸ್ವಾಮಿ! (ಕ)
-ರುಣಾ ಕವಚ ತೊಡಿಸೆನಗೆ ಸ್ವಾಮಿ! (ಸ)
-ವೆಸಿದೆನೀಕಾಯ ನಿನಗಾಗಿ ಸ್ವಾಮಿ! (ನಿ)
-ನ್ನದೆಂದಿದನ್ನುದ್ಧರಿಸೋ ಗುರು ಸ್ವಾಮಿ!
ಪ್ರಿಯಾಪ್ರಿಯದರಿವೆನಗಿಲ್ಲ ಸ್ವಾಮಿ!
ಜಮಾನ, ನಿನ್ನಾಧೀನವೆಲ್ಲಾ ಸ್ವಾಮಿ!
ಸ್ವಾರ್ಥವೆನ್ನಲ್ಲೇನಿಹುದು? ಹೇಳೋ ಸ್ವಾಮಿ!
ಮೀರಾ ಸ್ವಾಮಿ ನಿರಂಜನಾದಿತ್ಯ ಸ್ವಾಮಿ!!!

ಒಳಗಣ್ಣಿಂದೆನ್ನ ನೋಡು ಮುದ್ದಣ್ಣಾ! (ಕ)   4(1435)

-ಳವಳ ಪಡಬೇಡಿನ್ನು ಮುದ್ದಣ್ಣಾ! (ಮ)
-ಗನಲ್ಲವೇ ನೀನೆನಗೆ ಮುದ್ದಣ್ಣಾ? (ಕ)
-ಣ್ಣಿಂದ ಕಾಣದಿದ್ದರೇನು ಮುದ್ದಣ್ಣಾ? (ತಂ)
-ದೆಯಾಜ್ಞೆಯಂತಿರು ನೀನು ಮುದ್ದಣ್ಣಾ! (ನ)
-ನ್ನನಿನ್ನ ಸಂಬಂಧನಾದಿ ಮುದ್ದಣ್ಣಾ! (ಮ)
-ನೋಜಯದಿಂದದನರಿ ಮುದ್ದಣ್ಣಾ! (ಬೀ)
-ಡು ನನಗೆ ನಿನ್ನ ದೇಹ ಮುದ್ದಣ್ಣಾ!
ಮುದದಿಂದೆನ್ನ ಧ್ಯಾನಿಸು ಮುದ್ದಣ್ಣಾ! (ತ)
-ದ್ದರ್ಶನವಾಗುವುದಣ್ಣ ಮುದ್ದಣ್ಣಾ! (ಕ)
-ಣ್ಣಾ ನಿರಂಜನಾದಿತ್ಯಾತ್ಮ ಮುದ್ದಣ್ಣಾ!!!

ಒಳಗಿನ ಗುಟ್ಟು ಶಿವನೇ ಬಲ್ಲ! (ಬೆ)   2(779)

-ಳಗುತಿಹಳು ಮಾಯೆ ಹೊರಗೆಲ್ಲ!
ಗಿರೀಶ್ವರ ಇನ್ನೂ ಮೌನ ಬಿಟ್ಟಿಲ್ಲ!
ಟರಾಜನಿಷ್ಟ ಬಲ್ಲವರಿಲ್ಲ!
ಗುಹೇಶ್ವರನಾಗಿ ನೋಡುವನೆಲ್ಲ! (ಹು)
-ಟ್ಟು ಸಾವಿನಾಟ ಭೂಮಂಡಲವೆಲ್ಲ!
ಶಿವನಲ್ಲದಿನ್ಯಾರೂ ಕಾಯ್ವರಿಲ್ಲ!
ರ ನಾಮಕೀರ್ತನೆ ಮಾಡಿರೆಲ್ಲ!
ನೇಮ ನಿಷ್ಠೆ ವ್ಯರ್ಥವಾಗುವುದಿಲ್ಲ!
ರುವನೆಮಗಾಗಿ ಆ ಪ್ರಪುಲ್ಲ! (ಬ)
-ಲ್ಲ ನಿರಂಜನಾದಿತ್ಯನಿದನೆಲ್ಲ!!!

ಒಳಗಿರುವುದೆಲ್ಲಾ ಹೊರಗೆ ಬರ್ಲಿ! (ಗಾ)   5(3096)

-ಳಕ್ಕೆ ಮೀನು ಸಿಕ್ಕಿಬಿದ್ದಂತೀಗದಾಗ್ಲಿ!
ಗಿಳಿಯಂತೆ ರಾಮನಾಮ ಹೇಳುತ್ತಿರ್ಲಿ! (ಗು)
-ರುವಿಗಿದರಿಂದಾನಂದವಾಗುತ್ತಿರ್ಲಿ! (ಕಾ)
-ವು ನೋವುಗಳೆಲ್ಲಾ ಮಾಯವಾಗುತ್ತಿರ್ಲಿ! (ತಂ)
-ದೆ, ತಾಯಿ, ಬಂಧು, ಬಳಗಾತನಾಗಿರ್ಲಿ! (ಉ)
-ಲ್ಲಾಸ ಮನಸ್ಸಿಗವನಿಂದಾಗುತ್ತಿರ್ಲಿ!
ಹೊಟ್ಟು ತೂರುವಾಗ ಹಾರಿ ಹೋಗುತ್ತಿರ್ಲಿ!
ಫ್ತು ಆರಿಸಿದ ಕಾಳೇ ಆಗುತ್ತಿರ್ಲಿ! (ಹೀ)
-ಗೆ ಬಾಳುತ್ತಾ ಧರ್ಮಬುದ್ಧಿ ಹೆಚ್ಚುತ್ತಿರ್ಲಿ!
ರ್ಲಿ, ರಾಮರಾಜ್ಯ ಸುಖ ಕಾಣುತ್ತಿರ್ಲಿ! (ಇ)
-ರ್ಲಿ, ನಿರಂಜನಾದಿತ್ಯ ಸಾಕ್ಷಿಯಾಗಿರ್ಲಿ!!!

ಒಳಗೂ, ಹೊರಗೂ, ಬೆಳಕ್ಬೇಕು! (ಆ)   6(3380)

-ಳವಾಗಿದನ್ನಾಲೋಚಿಸ ಬೇಕು!
ಗೂಳಿಗಳೋಡಾಟ ತಪ್ಪಿಸ್ಬೇಕು!
ಹೊತ್ತು ಮುಳುಗಿದಾಗಿದಾಗ್ಬೇಕು!
ಹಸ್ಯ ಪ್ರಕೃತಿ ಕಲಿಸ್ಬೇಕು!
ಗೂಬೆಗವಕಾಶವಾಗ್ದಿರಬೇಕು!
ಬೆಚ್ಚದಂತೆ ಮುಂಜಾಗ್ರತೆ ಬೇಕು! (ಕ)
-ಳಕಳಿಯಪ್ರಾರ್ಥನೆ ಮಾಡ್ಬೇಕು!
(ಯಾ)-ಕ್ಬೇಕು? ಇಹಸುಖ, ದುಃಖಸಾಕು!
(ಬೇ)-ಕು ನಿರಂಜನಾದಿತ್ಯನಾಗ್ಬೇಕು!!!

ಒಳಗೆ ನಗ, ಹೊರಗೆ ನಿಗ! (ಬ)   3(1125)

-ಳಗ ಬಯಸಿಹುದು ವಿಭಾಗ!
ಗೆಳತನದೈಕ್ಯಕ್ಕೇಕೆ ಭಾಗ?
ಗಧರನಾಗುವುದೇ ಯೋಗ!
ತಿಗೇಡದು ಮಿಥ್ಯಾನುರಾಗ!
ಹೊಡೆದಟ್ಟಬೇಕಿದನು ಬೇಗ!
ಘುವರನಾಶ್ರಯದಿಂದೀಗ!
ಗೆಲಲರಿಗಳ ಮಹಾತ್ಯಾಗ!
ನಿತ್ಯ, ಸತ್ಯ, ಸಚ್ಚಿದಾನಂದಾಗ! (ಆ)
-ಗ, ನಿರಂಜನಾದಿತ್ಯನ ಭಾಗ!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ