ಐಕ್ಯಕ್ಕಾಗಿ ಶೃಂಗ ಸಭೆ ಬೇಕು! (ಶ)   4(2342)

-ಕ್ಯವಿರ್ಪನುಷ್ಠಾನಮಾಡಬೇಕು! (ಹ)
-ಕ್ಕಾರದೇನೆಂದರಿತಿರಬೇಕು! (ರೇ)
-ಗಿಸುವ ಸ್ವಭಾವ ಬಿಡಬೇಕು!
ಶೃಂಗಾರ ಕಡಿಮೆಯಾಗಬೇಕು! (ವಂ)
-ಗದಾರೋಗ್ಯ ಕಾಪಾಡಲೇಬೇಕು!
ರ್ವ ಸಮನ್ವಯವಿರಬೇಕು! (ಶೋ)
-ಭೆಯಿದರಿಂದೆಂದರಿಯಬೇಕು!
ಬೇಕು ಶಿಕ್ಷೆ, ರಕ್ಷೆಯಾಗ್ಲೇಬೇಕು! (ಟಾ)
-ಕು, ನಿರಂಜನಾದಿತ್ಯನಾಗ್ಬೇಕು!!!

ಐದು ಬೆರಳೊಂದೇ ಸಮವಿಲ್ಲ!   5(2753)

ದುರುದ್ದೇಶವದ್ರಲ್ಲೇನೂ ಇಲ್ಲ!
ಬೆಲೆ ಅದದ್ರದದಕ್ಕುಂಟಲ್ಲ! (ಪ)
-ರಮಾರ್ಥವರಿತ್ರೆ ತಂಟೆಯಿಲ್ಲ! (ಆ)
-ಳೊಂದಿಗಾಳಂತಿದ್ರೆ ನಷ್ಟವಿಲ್ಲ!
ದೇವ್ರ ಮಕ್ಕಳಿಗೆ ದ್ವೇಷ ಸಲ್ಲ!
ಹಕರಿಸಿ ಬಾಳಬೇಕಲ್ಲ!
ತಭೇದ ನಿಜ ತತ್ವಕ್ಕಿಲ್ಲ!
ವಿಶ್ವಪ್ರೇಮ ಬೆಳೆಸಬೇಕೆಲ್ಲ! (ಗು)
-ಲ್ಲ ನಿರಂಜನಾದಿತ್ಯ ಒಪ್ಪೋಲ್ಲ!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ