ಏಕ ಸಂಸಾರದಿಂದನೇಕ ಸಂಸಾರ! (ಲೋ)   6(4267)

-ಕ ಸಂಸಾರದಲ್ಲಿ ಅನೇಕ ಸಂಸಾರ!
ಸಂಸಾರವಿದು ಹುಟ್ಟು, ಸಾವಿನಕಾರ!
ಸಾಧಿಸದಿದ್ದ್ರೆ ಪರಮಾರ್ಥ ನಿಸ್ಸಾರ!
ತಿಸುಖವೆಂಬುದು ಬಂಧನಾಕಾರ! (ಅಂ)
-ದಿಂದೆನ್ನದೆ ಹರಿದಿದೆ ಧಾರಕಾರ!
ಶೇಂದ್ರಿಯಗಳಿದಕ್ಕೆ ಸಹಕಾರ!
ನೇಮ ನಿಷ್ಠೆಯಿಲ್ಲದೇ ಆಯ್ತುಹಂಕಾರ!
ರ್ಮ ಕಳೆದಾಗ ತನ್ನ ನಿಜಾಕಾರ!
ಸಂಗ ಮಾಡದಿರಬೇಕು ದುರ್ಜನರ!
ಸಾಧು, ಸಜ್ಜನರಲ್ಲಿ ನೋಡು ದೇವರ!
ವಿ ನಿರಂಜನಾದಿತ್ಯಾತ್ಮ ಓಂಕಾರ!!!

ಏಕನಾಥ ಲೋಕನಾಥನಯ್ಯಾ!   4(1592)

ಲ್ಪನೆಯಿಂದ ಬಹು ರೂಪಯ್ಯಾ!
ನಾಮ ರೂಪವನ ಲೀಲೆಯಯ್ಯಾ! (ಪಂ)
-ಥಗಳೆಲ್ಲಾ ಸಂತೆ ವ್ಯಾಪಾರಯ್ಯಾ!
ಲೋಭ, ಮೋಹ, ಕಾರಣದಕಯ್ಯಾ!
ಲ್ಮಷಾಂತಃಕರಣಾಪತ್ತಯ್ಯಾ!
ನಾಮ, ಜಪ, ಶುದ್ಧ ಮಾಳ್ಪುದಯ್ಯಾ! (ಮ)
-ಥನ ಮಾಡ್ಯಮೃತ ಕುಡಿಯಯ್ಯಾ!
ರನಾಗ ನಾರಾಯಣನಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯವನಯ್ಯಾ!!!

ಏಕನಿಷ್ಠಾಭ್ಯಾಸದಿಂದ ವ್ಯಕ್ತಿ ನಿರ್ಮಾಣ!   5(2816)

ರ್ಮಕ್ಕೆ ತಕ್ಕ ಫಲವೆಂಬುದು ಪ್ರಮಾಣ!
ನಿರ್ನಾಮವಾಗಬೇಕನ್ಯರನುಕರಣ! (ಶಿ)
-ಷ್ಟಾಚಾರಸಂಪನ್ನಸ್ವರೂಪನೇ ಬ್ರಾಹ್ಮಣ! (ಅ)
-ಭ್ಯಾಗತಾತಿಥ್ಯವೆಂಬುದಾತ್ಮ ಸಮರ್ಪಣ!
ರ್ವೇಶ್ವರ ಭಾವಕ್ಕೆ ಜ್ಞಾನವೇ ಕಾರಣ!
ದಿಂಡೆಯರಾಡಳಿತಶಾಂತಿಗಾಮಂತ್ರಣ!
ಮೆ, ಶಮೆಯಿಲ್ಲದಿದ್ದರೇಕಾ ಭಾಷಣ?
ವ್ಯವಹಾರಶೂನ್ಯಗೇಕೆ ಪೀಠಾರೋಹಣ? (ಯು)
-ಕ್ತಿಯಿಂದಾಗದಿಂದ್ರಿಯಗಳ ನಿಗ್ರಹಣ!
ನಿತ್ಯಾನಿತ್ಯ ಜ್ಞಾನ ಬಂದಾಗೇಕೀಕರಣ! (ದು)
-ರ್ಮಾರ್ಗಕ್ಕೆ ನಾಮಸ್ಮರಣೆ ಶ್ರೀರಾಮಬಾಣ! (ತ್ರಾ)
-ಣವರ್ಧಕ ನಿರಂಜನಾದಿತ್ಯ ಕಿರಣ!!!

ಏಕಮುಖ ರುದ್ರಾಕ್ಷಿಯಿದಯ್ಯಾ!   4(1562)

ಟ್ಟಿಕೊಂಡರಿಷ್ಟ ಸಿದ್ಧಿಯಯ್ಯಾ!
ಮುಕ್ಕಣ್ಣನಿಷ್ಟ ವಸ್ತುವಿದಯ್ಯಾ! (ಸು)
-ಖ, ದುಃಖದರಿವಿದಕ್ಕಿಲ್ಲಯ್ಯಾ! (ಗು)
-ರುಪೀಠಕ್ಕಿದು ಭೂಷಣವಯ್ಯಾ!
ದ್ರಾಮಕ್ಷರವಿದರೊಳಗಯ್ಯಾ! (ಸಾ)
-ಕ್ಷಿ ಸ್ವರೂಪದಿಂದದಿಹುದಯ್ಯಾ! (ಬಾ)
-ಯಿಮುಚ್ಚಿ ಸ್ವಚ್ಛವಾಗಿಹುದಯ್ಯಾ!
ರ್ಶನ ಲಾಭದಾಯಕವಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾತ್ಮದಯ್ಯಾ!!!

ಏಕಳುವೆ ಎಲೆ ಮನಸೆ? (ಲೋ)   2(843)

ನಾಥ ನೀನೆಲೆ ಮನಸೆ! (ಕೀ)
-ಳು ಸುಖವೇಕೆಲೆ ಮನಸೆ? (ಸ)
-ವೆಸೀ ರೂಪವೆಲೆ ಮನಸೆ!
ಲ್ಲವೂ ನೀನೆಲೆ ಮನಸೇ! (ಅ)
-ಲೆದಾಟ ಸಾಕೆಲೆ ಮನಸೆ!
ನ ರಾಮನೆಲೆ ಮನಸೆ!
ಲ್ಮೆಯಿಂದಿರೆಲೆ ಮನಸೆ! (ದೆ)
-ಸೆ, ನಿರಂಜನೆಲೆ ಮನಸೆ!!!

ಏಕಾಂಗಿಯಾಗಬೇಕೇನಯ್ಯಾ? (ಏ)   2(509)

-ಕಾಂಗಿಯವನಲೊಂದಾಗ್ಯಯ್ಯಾ!
ಗಿರಿ, ಗುಹೆ ವಾಸದಲ್ಲಯ್ಯಾ! (ಮಾ)
-ಯಾ ದೂರನಾಗಿರಬೇಕಯ್ಯಾ! (ಹ)
-ಗಲಿರುಳಾತ್ಮ ಧ್ಯಾನದಯ್ಯಾ!
ಬೇಸರಕಾಸೆ ಕಾರಣಯ್ಯಾ!
ಕೇಳುತಿದ ಇದ್ದಲ್ಲಿರಯ್ಯಾ!
ಡೆ, ನುಡಿ ತಿದ್ದಿಕೊಳ್ಳಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾತಯ್ಯಾ!!!

ಏಕಾಂತದಲ್ಲಿ ಮಾತಾಡುವಾಸೆ ಮಗಳಿಗೆ!   6(4215)

ಕಾಂತಗರಿವಾಗಬಾರದೆಂಬಿಷ್ಟವಳಿಗೆ!
ಪ್ಪು ಭಾವನೆ ಅವನಲ್ಲಿಲ್ಲ ಅವಳಿಗೆ!
ರಿದ್ರಾವಸ್ಥೆಯ ಕಾಟ ಬಹಳವಳಿಗೆ! (ಅ)
-ಲ್ಲಿನ ಕಷ್ಟ ತಪ್ಪಿಸುವ ಚಿಂತೆ ಅವಳಿಗೆ!
ಮಾವ, ಅತ್ತೆಯರ ಕಾಟ ಬಹಳವಳಿಗೆ!
ತಾಯಿ, ತಂದೆ, ಬಂಧು, ಮಿತ್ರ ದೇವರವಳಿಗೆ! (ಹಾ)
-ಡುವುದೆಂದರೆ ಬಹಳ ಆಸೆ ಅವಳಿಗೆ!
ವಾಚಾಳತ್ವವೂ ತಕ್ಕಮಟ್ಟಿಗುಂಟವಳಿಗೆ! (ಹೊ)
-ಸೆಯುವುದೆಂದರಾಗದಾ ಮುದ್ದು ಮಗಳಿಗೆ!
ನಶ್ಶಾಂತಿ ಈಗ ಅತ್ಯಗತ್ಯಾ ಮಗಳಿಗೆ! (ಭ)
-ಗವಂತನೊಡನಾಟವೀಗ ಬೇಕವಳಿಗೆ! (ಬ)
-ಳಿ ಸೇರುವ ಉಪಾಯ ತೋರದೀಗವಳಿಗೆ!
ಗೆಳೆಯ ಶ್ರೀ ನಿರಂಅಜನಾದಿತ್ಯಾ ಮಗಳಿಗೆ!!!

ಏಕಾಗ್ರತೆಯೇ ಸಾರೂಪ್ಯ!   1(184)

ಕಾಮಶೂನ್ಯವಾ ಸಾರೂಪ್ಯ!
ಗ್ರಹಿಸವನಾ ಸಾರೂಪ್ಯ!
ತೆರೆ ಹರಿದಾ ಸಾರೂಪ್ಯ!
ಯೇಕ ನಾಮವಾ ಸಾರೂಪ್ಯ!
ಸಾಧುತನವಾ ಸಾರೂಪ್ಯ!
ರೂಪ ಮರೆತಾ ಸಾರೂಪ್ಯ! (ಗೋ)
-ಪ್ಯವಾ ನಿರಂಜನಾದಿತ್ಯ!!!

ಏಕಾದಶಾಧ್ಯಾಯ ಪ್ರಾರಂಭವೀಗ! (ಲೋ)   4(1829)

-ಕಾಧಿಪನ ದಿವ್ಯ ದರ್ಶನವೀಗ! (ಮಂ)
-ದಮತಿಯ ನಿರ್ನಾಮವಾಗ್ಬೇಕೀಗ!
ಶಾಮಸುಂದರನ ಹಿರಿಮೆಯೀಗ!
ಧ್ಯಾನಿಗಳಿಗೆ ಸುಸಮಯವೀಗ!
ಮಸುತನಿಗೆ ವಿಜಯವೀಗ!
ಪ್ರಾಣಪ್ರಿಯಳಿಗೆ ಆನಂದವೀಗ!
ರಂಗನ ಸುದರ್ಶನದಾಟವೀಗ!
ಕ್ತ ಜನರ ಹರ್ಷೋದ್ಗಾರವೀಗ!
ವೀಣಾ, ಮೃದಂಗ ವಾದನಗಳೀಗ! (ಈ)
-ಗ ನಿರಂಜನಾದಿತ್ಯನ ಸುಯೋಗ!!!

ಏಕಾದಶಿಗೇನೇನು ಇವತ್ತು?   3(1066)

ಕಾಪಾಡೆಂಬ ಪ್ರಾರ್ಥನೆ ಇವತ್ತು!
ತ್ತನ ಪಾದ ಧ್ಯಾನ ಇವತ್ತು!
ಶಿವನಿಷ್ಟ ಭಜನೆ ಇವತ್ತು (ಯೋ)
-ಗೇಶ್ವರನ ಸ್ಮರಣೆ ಇವತ್ತು! (ನೀ)
-ನೇ ನಾನೆಂಬ ಚಿಂತನೆ ಇವತ್ತು! (ತ)
-ನು ಮರೆತಾತ್ಮ ಸ್ಥಿತಿ ಇವತ್ತು!
ನ್ನೇನು ಬೇಕಾಗಿದೆ ಇವತ್ತು? (ಅ)
-ವಸ್ಥಾತ್ರಯವಾರಾಮ ಇವತ್ತು! (ಹೊ)
-ತ್ತು ನಿರಂಜನಾದಿತ್ಯಗಸತ್ತು!!!

ಏಕಾದಶಿಯ ಉಪವಾಸ ಜಾಗರ!   1(137)

ಕಾಮುಕ ಮನಸೇ ಏಕಾದಶಿ ಗಾರ!
ಶೇಂದ್ರಿಯ ದಮನುಪವಾಸ ಸಾರ!
ಶಿರವೆತ್ತಿದರೆ ವಿಷಯ ಜಾಗರ!
ಮ, ನಿಯಮವದಕೆ ಪಲಾಹಾರ!
ಪೇಕ್ಷಾಸೆಗಿರಲುಪವಾಸಗಾರ! (ಅ)
-ಪಚಾರವಾಗದಿರುವುದೇ ಜಾಗರ!
ವಾಸುದೇವನಿಗಿದೇ ವೈಕುಂಠಪುರ!
ತತ ಜಪ ಸಾಮೂಪ್ಯ ಸುಖ ಸಾರ!
ಜಾಗ್ರತ್ಸ್ವಪ್ನದಂತಿರೆ ಸಾರೂಪ್ಯಸಾರಾ!
ತಿ, ಸ್ಥಿತಿಯೊಂದಾಗಿ ಸಾಯುಜ್ಯ ಸಾರ! (ಅ)
-ರ ನಿರಂಜನಾದಿತ್ಯ ದ್ವಾದಶೀ ಸಾರ!!!

ಏಕಾದಶಿಯನ್ನಟ್ಟು; ದ್ವಾದಶಿಯ ಮುಟ್ಟು!   6(4291)

ಕಾಮ, ಕ್ರೋಧಾದಿಗಳ ಸುಟ್ಟದನ್ನು ಮುಟ್ಟು!
ಮೆ, ಶಮೆಯಭ್ಯಾಸದಿಂದದನ್ನು ಮುಟ್ಟು!
ಶಿವ, ಜೀವರೊಂದೆಂಬರಿವಿನಿಂದ ಮುಟ್ಟು!
ದುಪನ ಗೀತೋಪದೇಶ ಕೇಳಿ ಮೂಟ್ಟು! (ಉ)
-ನ್ನತಿಗಿದು ದಾರಿಯೆಂದರಿಯುತ್ತ ಮೂಟ್ಟು! (ಬಿ)
-ಟ್ಟು, ಮಡಿ, ಮೈಲಿಗೆಗಳನ್ನದನ್ನು ಮೂಟ್ಟು!
ದ್ವಾದಶಿ ನಿನ್ನಾತ್ಮವೆಂಬರಿವಿನಿಂದ ಮೂಟ್ಟು!
ಶಾವತಾರವಿದಕ್ಕೆಂದರಿತು ಮೂಟ್ಟು!
ಶಿರೋಧಾರ್ಯ ಶ್ರೀ ಪಾದವೆಂದದನ್ನು ಮೂಟ್ಟು!
ಜ್ಞ, ಯಾಗದಂತ್ಯದಾ ಗುರಿಯನ್ನು ಮೂಟ್ಟು!
ಮುಕ್ತಿ ಸುಖವಿದೆಂದರಿತದನ್ನು ಮೂಟ್ಟು! (ಗು)
-ಟ್ಟು ನಿರಂಜನಾದಿತ್ಯನಿಂದಾಯ್ತೀಗ ರಟ್ಟು!!!

ಏಕಾದಶೀ ಸೇವಾವಾಗಮ್ಮ? (ಸಾ)   2(885)

-ಕಾಯಿತೇನದು ನಿನಗಮ್ಮ?
ತ್ತನಾಜ್ಞೆ ಮತ್ಯಾವಾಗಮ್ಮ? (ಆ)
-ಶೀರ್ವಾದಾನುಗ್ರಹ ಮಾಡಮ್ಮ!
ಸೇವಾಭಾಗ್ಯ ಅಪೂರ್ವವಮ್ಮ!
ವಾಸನಾ ನಾಶದರಿಂದಮ್ಮ! [ಸೇ]
-ವಾನಂದ ಲಕ್ಷ್ಮಿ ಬಲ್ಲಳಮ್ಮ!
ತಿಸುತಿದೆ ಕಾಲವಮ್ಮ! (ಅ)
-ಮ್ಮ ನಿರಂಜನಾದಿತ್ಯಾತ್ಮಮ್ಮ!!!

ಏಕಾದಶೀ ಸೇವೆ ಸದಾ ಮಾಡು! (ಸಾ)   2(886)

-ಕಾಗದಂತೆ ಭಕ್ತಿಯಿಂದ ಮಾಡು!
ಶಾನುಯಾಯಿ ಸಮೇತ ಮಾಡು! (ಆ)
-ಶೀರ್ವಾದವಿನ್ನೇನು ಬೇಕು? ಮಾಡು!
ಸೇವಾನಂದ ಸವಿಯುತ್ತ ಮಾಡು! (ಸೇ)
-ವೆಯಪ್ಪನಿಗೊಪ್ಪುವಂತೆ ಮಾಡು!
ವಿಯೂಟಪೇಕ್ಷಿಸದೆ ಮಾಡು!
ದಾರಿ ನಡಿಯುವಾಗಲೂ ಮಾಡು!
ಮಾತುಗಳಾಡುವಾಗಲೂ ಮಾಡು! (ಕೂ)
-ಡು, ನಿರಂಜನಾದಿತ್ಯನಲಾಡು!!!

ಏಕಾದಶೀ ಸೇವೆಯಿಂದ ಶತ್ರು ಸಂಹಾರ! (ಏ)   4(2410)

-ಕಾಗ್ರಚಿತ್ತದಿಂದರಿಷ್ಟಗಳ್ಪರಿಹಾರ!
ತ್ತಭಕ್ತಿಯಿಂದರ್ಯತಕ್ಕ ವಿಚಾರ! (ವ)
-ಶೀಕರವನಿಗೆಲ್ಲಾ ಲೋಕ ವ್ಯವಹಾರ!
ಸೇನೆಯವನದು ಮಾನವಗಗೋಚರ! (ಸಾ)
-ವೆನಗಿಲ್ಲವೆಂಬ ಸದ್ಗುರು ಮಹಾವೀರ! (ಬಾ)
-ಯಿಂದೆನ್ನ ದರ್ಶನಕ್ಕೆಂಬಾ ಕರುಣಾಕರ! (ಕಂ)
-ದಮ್ಮಗಳು ನೀವೆನಗೆಂಬಾ ಹರಿಹರ!
ಮೆ, ದಮೆಯಭ್ಯಾಸದಿಂದತ್ಯುಪಕಾರ! (ಶ)
-ತ್ರುಗಳಬ್ಬರಾರ್ಭಟಗಳೆಲ್ಲಾ ನಿಸ್ಸಾರ!
ಸಂಯಮಶಕ್ತಿಯ ಮಹಿಮೆ ಅತ್ಯಪಾರ! (ದೇ)
-ಹಾಭಿಮಾನ ಸುಟ್ಟಾ ಶಕ್ತ್ಯೇಕಾದಶ್ಯಾಕಾರ! (ವ)
-ರಗುರು ನಿರಂಜನಾದಿತ್ಯಾನಂದಾಕಾರ!!!

ಏಕಿಂಥಾ ಜನ್ಮವೆಂದ್ನಾನಾರನ್ನು ಕೇಳ್ಲಿ?   4(2486)

ಕಿಂಚಿತಾದ್ರೂ ದಯೆದೋರೆಂದರೇನ್ಹೇಳ್ಲಿ? (ಅಂ)
-ಥಾದ್ದಿಂಥಾದ್ಬೇಕೆಂಬವರಿಗೇನು ಕೊಡ್ಲಿ?
ನ್ಮದಾತನಾರೆಂದೆಲ್ಲರರಿತಿರ್ಲಿ! (ಚಿ)
-ನ್ಮಯಾತ್ಮ ಬೇರೆ, ನಾನ್ಬೇರೆಂದನ್ನದಿರ್ಲಿ! (ಸಾ)
-ವೆಂಬುದವನಿಗಿಲ್ಲೆಂಬುದ ನಂಬಿರ್ಲಿ! (ತ)
-ದ್ನಾಮಜಪದಿಂದೆಲ್ಲಾಸೆಗಳ್ಸತ್ತಿರ್ಲಿ!
ನಾಳೆಯ ಮಾತ್ಬಿಟ್ಟು ನೆಮ್ಮದಿಯಿಂದಿರ್ಲಿ! (ಪ)
-ರಮಾತ್ಮ ತಾನೆಂದು ಸಂತೋಷದಿಂದಿರ್ಲಿ! (ಹೊ)
-ನ್ನು, ಹೆಣ್ಣಿಗಾಗ್ತಲೆ ಕೆಡಿಸ್ಕೊಳ್ದಿರ್ಲಿ!
ಕೇಕೆ ಹಾಕಿ ಕುಣಿವವನ್ಕುಣೀತಿರ್ಲಿ! (ಆ)
-ಳ್ಲಿ, ನಿರಂಜನಾದಿತ್ಯನೆಂದ್ಮೂರೆಯಿಡ್ಲಿ!!!

ಏಕಿದೆಲ್ಲಾ ಬರೆಸುವೆಯಪ್ಪಾ?   6(4002)

ಕಿರುಕುಳ ತಪ್ಪಿಸಲಿಕ್ಕಪ್ಪಾ!
ದೆವ್ವಗಳನ್ನೋಡಿಸಲಿಕ್ಕಪ್ಪಾ! (ಅ)
-ಲ್ಲಾಡದೇ ನೀನಿರುವುದಕ್ಕಪ್ಪಾ!
ಯಲಾಡಂಬರ ಹೋಗ್ಲಿಕ್ಕಪ್ಪಾ! (ಸೆ)
-ರೆಯಿಂದ ಹೊರಗೆ ಬರ್ಲಿಕ್ಕಪ್ಪಾ!
ಸುದರ್ಶನಾನಂದನಾಗ್ಲಿಕ್ಕಪ್ಪಾ! (ಧ)
-ವೆ ಸದಾಶಿವನಿಗಾಗ್ಲಿಕ್ಕಪ್ಪಾ!
ಜ್ಞದುದ್ದೇಶ ಸಾಧಿಸ್ಲಿಕಪ್ಪಾ! (ಅ)
-ಪ್ಪಾ ನಿರಂಜನಾದಿತ್ಯನಾಗಪ್ಪಾ!!!

ಏಕೆ ಹೋಗ್ಬೇಕವರ ಮನೆಗೆ!   6(3881)

ಕೆಟ್ಟಹಂಕಾರ ಬೇಡ ನಿನಗೆ!
ಹೋಗ್ದಿದ್ದ್ರೆ ನಷ್ಟವಿಲ್ಲವರಿಗೆ! (ನೀ)
-ಗ್ಬೇಕ್ವಿಕಲ್ಪ ಸಂಕಲ್ಪ ಶಾಂತಿಗೆ! (ತ್ರಿ)
-ಕರಣ ಶುದ್ಧಿ ಬೇಕ್ಭಕ್ತನಿಗೆ!
ರ ಗುರು ಕೃಪೆ ಆಗವಗೆ!
ಹಸ್ಯವರುಹಿದೆ ನಿನಗೆ!
ನನ ಮಾಡ್ಬಂಧ ಮುಕ್ತನಾಗೆ!
ನೆಟ್ಟ ಗಿಡಕ್ಕೆ ನೀರ್ಹವ ಹಾಗೆ! (ಹೀ)
-ಗೆ ನಿರಂಜನಾದಿತ್ಯ ನೀನಾಗೆ!!!

ಏಟಿನ ನೋವೇಟು ತಿಂದಾತ ಬಲ್ಲ! (ದಾ)   6(4236)

-ಟಿದಾತ ಹೊಳೆಯಾಳವನ್ನು ಬಲ್ಲ!
ಶ್ವರ ಮಾಯೆಯ ಮಾಧವ ಬಲ್ಲ! (ಮ)
-ನೋ ಜಯವ ಮಾರುತಿರಾಯ ಬಲ್ಲ!
ವೇದ, ವೇದಾಂತ ಸಾರವೆಲ್ಲಾ ಬಲ್ಲ! (ಹ್ಯಾ)
-ಟು, ಬೂಟಿನ ಸಾಹೇಬನೇನು ಬಲ್ಲ!
ತಿಂಡಾಡಿ, ಉಂಡಾಡಿ, ಗುಂಡೇನು ಬಲ್ಲ!
ದಾರಿಯುದ್ದಗಲ ಪಥಿಕ ಬಲ್ಲ!
ತ್ತಬಡಿಕಗನುಭವವಿಲ್ಲ!
ಳಸಬೇಕು ತತ್ವಗಳನೆಲ್ಲ! (ಫು)
-ಲ್ಲ ನಿರಂಜನಾದಿತ್ಯ ಬಲ

ನೆಲ್ಲ!!!

ಏತಕ್ಕಾಗಿ ಬದುಕಿರಬೇಕು?   5(2702)

ತ್ವಾನುಭವಕ್ಕಾಗಿರಬೇಕು! (ವಾ)
-ಕ್ಕಾಯ, ಮನವ ಗೆದ್ದಿರಬೇಕು! (ಯೋ)
ಗಿಪುಂಗವ ನೀನಾಗಿರಬೇಕು!
ಯಕೆಗಳಿಲ್ಲದಿರಬೇಕು!
ದುರಾಚಾರಿಯಾಗದಿರಬೇಕು!
ಕಿರುಕುಳ ಕೊಡದಿರಬೇಕು! (ನ)
-ರ ನಾರಾಯಣ

ನಾಗಿರಬೇಕು!
ಬೇಸರಿಸದೆ ಕಾದಿರಬೇಕು! (ಟಾ)
-ಕು ನಿರಂಜನಾದಿತ್ಯಾಗಿರ್ಬೇಕು!!!

ಏನ ಹೇಳಲಿ ನಾ ನಿನ್ನ ಲೀಲೆ? (ದಿ)    4(1759)

-ನ ದಿನ, ಕ್ಷಣಕ್ಷಣದಾ ಲೀಲೆ!
ಹೇಸಿಕೆಯನ್ನೂ ಹೇಸಿಲ್ಲಾ ಲೀಲೆ! (ಬೆ)
-ಳಕೆಂದಾಗ ಕತ್ತಲೆಯ ಲೀಲೆ! (ನ)
-ಲಿವಾಗ ಕಾಲ್ಮುರಿಯುವ ಲೀಲೆ!
ನಾಯಿ, ಬೆಕ್ಕುಗಳ ಸ್ನೇಹ ಲೀಲೆ!
ನಿಶ್ಚಲ, ಚಂಪಲ, ಭಾವ ಲೀಲೆ! (ನ)
-ನ್ನ, ನಿನ್ನದೆಂಬುದು ಭಾರೀ ಲೀಲೆ!
ಲೀಲಾ ನಾಟಕ ಗೋಪಾಲ ಲೀಲೆ! (ಬಾ)
-ಲೆ, ನಿರಂಜನಾದಿತ್ಯಾತ್ಮ ಲೋಲೆ!!!

ಏನಾಡಿದರೇನು ಫಲವಯ್ಯಾ?   2(485)

ನಾನಾಡಿದರದಾಗಬೇಕಯ್ಯಾ (ಆ)
-ಡಿ ವ್ಯರ್ಥವಾದರೆ ಏನಾಯ್ತಯ್ಯಾ? (ಅ)
-ದಕಾಗಿರುವೆನು ಸುಮ್ಮನಯ್ಯಾ!
ರೇಶ್ಮೆ ಬಟ್ಟೆಯುಟ್ಟರಾಯ್ತೇನಯ್ಯಾ? (ಅ)
-ನುದಿನಾತ್ಮ ಚಿಂತನೆ ಮಾಡಯ್ಯಾ!
ಲವಿದಕೆ ನಿತ್ಯಾನಂದಯ್ಯಾ! (ಮ)
-ಲ ಮನದಿಂದ ಹೋಗಬೇಕಯ್ಯಾ!
ರಗುರುಕೃಪಾಶ್ರಯವಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಸಾಕ್ಷ್ಯಯಾ!!!

ಏನಾದರೂ ಬರಿ ಅನ್ನಿಸುತ್ತಿದೆ!   1(14)

ನಾನೇನು ಬರೆದೇನಾಗಬೇಕೆನಿಸುತಿದೆ!
ತ್ತನಂತಿರಬೇಕೆನಿಸುತಿದೆ!
ರೂಪ ನಾಮಗಳಿಗಧೀನವಿರದಿರೆನಿಸುತಿದೆ!
ಯಕೆಗಳಳಿದಷ್ಟು ನಿಶ್ಚಿಂತೆ ಎನಿಸುತಿದೆ!
ರಿಪುಗಳು ನಿನ್ನಲ್ಲೆ ಇರುವರೆನಿಸುತಿದೆ!
ಲ್ಲಿಲ್ಲಿಹರೆಂದನ್ನದಿರೆನಿಸುತಿದೆ!
ನಿತ್ಯ ನೇಮದ ತಪಸು ಸಾಗಲೆನಿಸುತಿದೆ!
ಸುಖವಿದರಲಿಹುದೆಂದೆನಿಸುತಿದೆ!
ತಿಳಿದಿದನು ಬದುಕಿ ಬಾಳೆನಿಸುತಿದೆ!
ದೆ

ವ ನೀನಾಗಲಿದೇ ದಾರಿ ಅನಿಸುತಿದೆ!!!

ಏನಾದರೊಂದಡ್ಡಿ ಗುರುಚಿತ್ತ!   4(1636)

ನಾಳಿನದಿಂದು ಮಾಡದಾ ಚಿತ್ತ! (ಕ)
-ದ ಮುಚ್ಚೆನೆ ತೆರೆವುದಾ ಚಿತ್ತ (ನೂ)
-ರೊಂದೆಂದರೊಂದಾಗುವುದಾ ಚಿತ್ತ!
ಬ್ಬೆಂದರೆ ತಬ್ಬುವುದಾ ಚಿತ್ತ! (ಬ)
-ಡ್ಡಿಯೆಂದರೆಲ್ಲಸ್ಲೆಂಬುದಾ ಚಿತ್ತ!
ಗುಟ್ಟೆಂದರೆ ರಟ್ಟೆಂಬುದಾ ಚಿತ್ತ!
ರುಚ್ಯೆಂದರರುಚ್ಯೆಂಬುದಾ ಚಿತ್ತ!
ಚಿತ್ತಾಚಿತ್ತಾವಧೂತಾಪ್ತಾ ಚಿತ್ತ! (ದ)
-ತ್ತ ನಿರಂಜನಾದಿತ್ಯಾತ್ಮಾ ಚಿತ್ತ!!!

ಏನಾದ್ರೂ ತಿನ್ನುತ್ತಿರುವುದೇಕೆ? (ಅ)   4(2407)

-ನಾರೋಗ್ಯವಾದಾಗಳುವುದೇಕೆ? (ತ)
-ದ್ರೂಪ ಚಿಂತನೆ ಬೇಕಾನಂದಕ್ಕೆ! (ಸ)
-ತಿ, ಸುತರೊದಗರು ದುಃಖಕ್ಕೆ (ಹೊ)
-ನ್ನು, ಮಣ್ಣುಗಳಾಸೆ ಪತನಕ್ಕೆ! (ಬಿ)
-ತ್ತಿದುದೇ ಬರುವುದು ಫಲಕ್ಕೆ! (ನೀ)
-ರು, ಗೊಬ್ಬರದ ನೆರಬದಕ್ಕೆ! (ಕಾ)
-ವು ಹೆಚ್ಚಾದರೆ ವಿನಾಶದಕ್ಕೆ!
ದೇವ್ರ ಬೈದು ಫಲವಿಲ್ಲದಕ್ಕೆ! (ಶಂ)
-ಕೆ, ನಿರಂಜನಾದಿತ್ಯನಲ್ಲೇಕೆ???

ಏನಾದ್ರೂ ಸಿಗುತ್ತೆಂತೆ ಬಂದಿದೆ ನಾಯಿ!   5(3005)

ನಾಳೆಯ ಯೋಚ್ನೆಯಿಲ್ಲದಿಹುದೀ ನಾಯಿ! (ಬಂ)
-ದ್ರೂ ಹೊರಗೇ ಕಾದಿರ್ಪುದೀ ಬಡಪಾಯಿ!
ಸಿಕ್ಕಿದಷ್ಟುಂಡು ತೃಪ್ತಿ ಪಡ್ವುದೀ ನಾಯಿ!
ಗುರು ಕರುಣೆಯಿಂದ ಧನ್ಯವೀ ನಾಯಿ! (ಮ)
-ತ್ತೆಂದಿಗೀ ಲಭ್ಯವೆಂದರಿಯದೀ ನಾಯಿ!
ನ್ನ ತಾನರಿವುದೆಂದೀ ಪ್ರಿಯ ನಾಯಿ?
ಬಂಧು ದತ್ತನೆಂದರಿತಿಹುತಿಹುದೀ ನಾಯಿ!
ದಿನ, ರಾತ್ರಿಲ್ಲಿರಬೇಕೆಂಬುದೀ ನಾಯಿ! (ಆ)
-ದೆ ನಾ ನಿನ್ನ ದಾಸನೆನ್ನುವುದೀ ನಾಯಿ!
ನಾನಿನ್ನೆಂಜಲುಣ್ಣುವೆನೆಂಬುದೀ ನಾಯಿ! (ನಾ)
-ಯಿ ನಿರಂಜನಾದಿತ್ಯಗನೇಕ ಬಾಯಿ!!!

ಏನಾನಂದ ನಿನ್ನ ಸಂಬಂಧ?   3(1121)

‘ನಾ’ ನೋಡಿದ್ದಿಲ್ಲಂಥ ಸಂಬಂಧ!
-ನಂಬಲಾರೆನನ್ಯ ಸಂಬಂಧ!
ತ್ತ ಸೇವಾನಂದಾ ಸಂಬಂಧ!
ನಿಶಿ, ದಿನ, ಬೇಕಾ ಸಂಬಂಧ! (ಅ)
-ನ್ನ ಪಾನಕ್ಕಾಗ್ಯೇನು ಸಂಬಂಧ?
ಸಂಗವಾ ಶ್ರೀರಂಗ ಸಂಬಂಧ!
ಬಂಧವೇನಾತ್ಮಾರ್ಥ ಸಂಬಂಧ? (ಗಂ)
-ಧ, ನಿರಂಜನಾದಿತ್ಯ ಸಂಬಂಧ!!!

ಏನು ನಿನ್ನ ಲೀಲೆಯೋ ಅರಿಯೆನಯ್ಯಪ್ಪಾ!   1(415)

ನುಡಿಗಳವಡದಾಗಿಹುದದಯ್ಯಪ್ಪಾ!
ನಿಮಿಷ ನಿಮಿಷಕಾಶ್ಚರ್ಯವದಯ್ಯಪ್ಪಾ! (ಅ)
-ನ್ನದಾತನಾಗೆಲ್ಲರ ಕಾಯುವವಯ್ಯಪ್ಪಾ!
ಲೀಲಾಜಾಲದಿಂದ ಕಷ್ಟ ಕಳೆವಯ್ಯಪ್ಪಾ!
ಲೆಕ್ಕಿಸಲಾರೆ ನಿನ್ನ ಭಕ್ತರನಯ್ಯಪ್ಪಾ!
ಯೋಗಪುರುಷ ಪರಮಾನಂದನಯ್ಯಪ್ಪಾ!
ಗಣಿತ ಗುಣಗಣ ಗುರುವಯ್ಯಪ್ಪಾ!
ರಿಪುಕುಲ ಕಾಲಭೈರವನವಯ್ಯಪ್ಪಾ!
ಯೆಲ್ಲಾ ರೂಪ ತಾನಾಗಿರುತಿಹನಯ್ಯಪ್ಪಾ!
ಮಸ್ಕಾರ ನಿನಗೆ ಶರಣಮಯ್ಯಪ್ಪಾ! (ಅ)
-ಯ್ಯ, ಅಮ್ಮ, ನೀನೆಲ್ಲರವನಾಗಿರ್ಪಯ್ಯಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯ ಶಬರಿಯಯ್ಯಪ್ಪಾ!!!

ಏನು ನೋಡಿದರೇನಾಯ್ತು? (ಅ)   6(3796)

-ನುಮಾನ ಮಾತ್ರ ಹೆಚ್ಚಾಯ್ತು!
ನೋಡಿದ ಕಣ್ಣು ಮಂಜಾಯ್ತು! (ದು)
-ಡಿಮೆಯೆಲ್ಲಾ ವ್ಯರ್ಥವಾಯ್ತು!
ಕ್ಷತೆಯ ಬೆಲೆ ಹೋಯ್ತು! (ಬೇ)
-ರೇನೂ ದಾರಿ ತೋರದಾಯ್ತು! (ನಾ)
-ನಾರೆಂದರಿಯಬೇಕಾಯ್ತು! (ಆ)
-ಯ್ತು, ನಿರಂಜನಾದಿತ್ಯಾಯ್ತು!!!

ಏನು ಬರಸ್ಬೇಕೆಂದು ನಿನಗೇ ಗೊತ್ತು!   6(3797)

ನುಡಿ, ನಡೆ ನಿನ್ನಂತಿಟ್ಟೆನ್ನ ಮೇಲೆತ್ತು!
ರೆಯಬಾರ್ದೆಂದಾಗ್ಬರೆಸ್ಲಿಕ್ಕೂ ಗೊತ್ತು! (ಬ)
-ರೆಯ್ಲೇಬೇಕೆಂದಾಗ ಕಲ್ಲು ಹಾಕ್ಲೂ ಗೊತ್ತು! (ಬೀ)
-ಸ್ಬೇಡ ನಿನ್ನ ಮಾಯಾಜಾಲ! ಇದಸತ್ತು!
ಕೆಂಜೆಡೆಯ ಕೆಂಗಣ್ಣನೆನ್ನ ಸಂಪತ್ತು!
ದುರಿತದೂರನಾದಾತ ನೀನೆಂದ್ಗೊತ್ತು!
ನಿನ್ನ ಪಾದ ಸೇವೆಗೆ ಇದೊಂದು ಹೊತ್ತು!
ನ್ನಿಂದ ದೂರ ಮಾಡು ಎಲ್ಲಾ ವಿಪತ್ತು! (ತ್ಯಾ)
-ಗೇಶ ನಿನ್ನಿಂದುದ್ಧಾರವಾಗ್ಲೀ ಜಗತ್ತು!
ಗೊತ್ತಾಗಲೆಲ್ಲರಿಗೂ ನಿನ್ನ ಮಹತ್ತು! (ಹೊ)
-ತ್ತು ನಿರಂಜನಾದಿತ್ಯ ಬಂದು ಬಹ್ಳಾಯ್ತು!!!

ಏನು ಬರೆದರೇನು ನಾರಾಯಣಾ? (ನೀ)   4(1660)

-ನು ಕಣ್ಣು ಮುಚ್ಚಿರುವೆ ನಾರಾಯಣಾ!
ರುವವರನೇಕ ನಾರಾಯಣಾ! (ಬ)
-ರೆದುದನೋದ್ವರೆಲ್ಲಾ ನಾರಾಯಣಾ! (ಅ)
-ದರಂತಿರ್ಪವರಾರು ನಾರಾಯಣಾ?
ರೇಗಿ, ಕೂಗುವರೆಲ್ಲಾ ನಾರಾಯಣಾ! (ಅ)
-ನುದಿನ ಆಟ, ನೋಟ ನಾರಾಯಣಾ!
‘ನಾ’ನಾರೆಂದರಿತಿಲ್ಲಾ ನಾರಾಯಣಾ!
ರಾಮನಾಮ ಬೇಕಿಲ್ಲಾ ನಾರಾಯಣಾ! (ಮಾ)
-ಯ, ಮಂತ್ರ, ಯಂತ್ರಕ್ಕಾಸೆ ನಾರಾಯಣಾ! (ಜಾ)
-ಣಾ ನಿರಂಜನಾದಿತ್ಯ ನಾರಾಯಣಾ!!!

ಏನು ಬರೆಯಬೇಕಪ್ಪಾ? (ಆ)   1(370)

-ನು ತಿಳಿಯೆನೊಂದನಪ್ಪಾ!
ರೆವಾಸೆನಗಿಲ್ಲಪ್ಪಾ! (ಅ)
-ರಿವಿರಲಿ ನಿನ್ನದಪ್ಪಾ! (ಆ)
-ಯವ್ಯಯನು ನಿನ್ನದಪ್ಪಾ!
ಬೇಕು ನಿನ್ನನುಗ್ರಹಪ್ಪಾ!
ಳ್ಲೂ ಪೂಜ್ಯ ನಿನ್ನಿಂದಪ್ಪಾ!!!

ಏನು ಬೇಡಾ, ನನಗೇನೂ ಬೇಡ! [ನಾ]   5(2545)

-ನು, ನಿನ್ನ ಬಿಟ್ಟಿರುವುದೇ ಬೇಡ!
ಬೇರೆಕಡೆಗೆನ್ನೋಡಿಸಬೇಡ! (ಮೊಂ)
-ಡಾಟವಿದೆಂದಾರೋಪಿಸಬೇಡ!
ರಜನ್ಮ ವ್ಯರ್ಥ ಮಾಡಬೇಡ!
ನಗಿನ್ಯಾರ ಸೇವೆಯೂ ಬೇಡ! (ಯೋ)
-ಗೇಶ್ವರನಾಜ್ಞೆ ಮೀರಿಸಬೇಡ! (ನೀ)
-ನೂ, ನಾನೊದೆಂಬುದಲ್ಲೆನಬೇಡ!
ಬೇಡಿದಿಷ್ಟ ಕೊಡದಿರಬೇಡ! (ಬಿ)
-ಡ, ನಿರಂಜನಾದಿತ್ಯ ಬಾಯ್ಬಿಡ!!!

ಏನು ಯೋಚಿಸ್ತಿದ್ದೀಯಪ್ಪಾ? [ಏ]   4(2454)

-ನು ಮಾಡ್ಲೀಗ ನಾನೆಂದಪ್ಪಾ! (ವಿ)
-ಯೋಗ ದುಃಖವೆನಗಪ್ಪಾ! (ವಂ)
-ಚಿಸಬೇಡ ನನ್ನನ್ನಪ್ಪಾ! (ಆ)
-ಸ್ತಿ, ಪಾಸ್ತ್ಯೆನಗೆ ಬೇಡಪ್ಪಾ! (ಚಿ)
-ದ್ದೀಪ ಬೆಳಗು ಬೇಗಪ್ಪಾ! (ಕಾ)
-ಯಲಾರೆನಿನ್ನು ನಾನಪ್ಪಾ! (ಬಾ)
-ಪ್ಪಾ! ನಿರಂಜನಾದಿತ್ಯಪ್ಪಾ!!!

ಏನು ಸಾರ್ಥಕವಾಯ್ತು ದೇಹ ಧರಿಸಿ? (ಅ)   5(2744)

-ನುದಿನ ಸುಖ, ದುಃಖದಲ್ಲಿ ಬೆರೆಸಿ!
ಸಾಯುವ ದಿನ ಗೊತ್ತಾಗದಂತಿರಿಸಿ! (ಅ)
-ರ್ಥ ಮೊದಲಾದಷ್ಟಮದ ತುಂಬಿರಿಸಿ!
ತೆ, ಪುರಾಣ ಹೇಳಿ ಮರುಳ್ಗೂಳಿಸಿ!
ವಾಸುದೇವನ ದರ್ಶನವ ಮರೆಸಿ! (ಹೋ)
-ಯ್ತು ಭಯ, ಭಕ್ತಿ ಮಕ್ಕಳನ್ನಿಂತುರಿಸಿ!
ದೇವಾಲಯಗಳನೇಕ ಕಟ್ಟಿರಿಸಿ!
ರಿ, ಹರ, ಬ್ರಹ್ಮರ ಗೊಂಬೆಯಿರಿಸಿ!
ರ್ಮವಿದೆಂಬ ಹೆದರಿಕೆ ಬರಿಸಿ! (ಅ)
ರಿವಿನ ಗಂಧ ಆರಿಹೋಯ್ತೆಚ್ಚರಿಸಿ! (ಉ)
-ಸಿರ್ಬಂತು ನಿರಂಜನಾದಿತ್ಯಂಕುರಿಸಿ!!!

ಏನೆಂದಳಾ ವರಮಹಾಲಕ್ಷ್ಮಿ?   4(2482)

ನಂಬು ಶ್ರೀಪತಿಯನ್ನೆಂದ್ಲಾ ಲಕ್ಷ್ಮಿ!
ರ್ಶನ ನಿತ್ಯ ಮಾಡೆಂದ್ಲಾ ಲಕ್ಷ್ಮಿ! (ವೇ)
-ಳಾವೇಳೆ ನೋಡಬೇಡೆಂದ್ಲಾ ಲಕ್ಷ್ಮಿ!
ರಗುರು ಅವನೆಂದ್ಲಾ ಲಕ್ಷ್ಮಿ! (ಹೊ)
-ರಗೊಳಗೆಲ್ಲವನೆಂದ್ಲಾ ಲಕ್ಷ್ಮಿ!
ಡದಿ, ಮಕ್ಕ್ಳಾಸೇಕೆಂದ್ಲಾ ಲಕ್ಷ್ಮಿ!
ಹಾಯಾಗೊಡಗೂಡಿರೆಂದ್ಲಾ ಲಕ್ಷ್ಮಿ!
ಕ್ಷ್ಯ ಪಾದದಲ್ಲಿರ್ಲೆಂದ್ಲಾ ಲಕ್ಷ್ಮಿ! (ಲ)
-ಕ್ಷ್ಮಿ, ನಿರಂಜನಾದಿತ್ಯನ ರಶ್ಮಿ!!!

ಏನೇನೆಲ್ಲೆಲ್ಲಿರ್ಬೇಕೋ ಅದಲ್ಲಲ್ಲಿರ್ಲಿ!   5(3300)

ನೇಮವಿದು ಪ್ರಕೃತಿಗೆಂಬರಿವಿರ್ಲಿ!
ನೆಲ, ಜಲಾಕಾಶಾತ್ಮಗಳಲ್ಲಲ್ಲಿರ್ಲಿ! (ಎ)
-ಲ್ಲೆಮೀರಿದ್ರವ್ಯವಸ್ಥೆಯೆಂದರಿತಿರ್ಲಿ! (ಸ)
-ಲ್ಲಿಸುತ್ತಿರ್ಬೇಕವ್ರವ್ರ ಕರ್ತವ್ಯಲ್ಲಲ್ಲಿ! (ಹಾ)
-ರ್ಬೇಕೆಂಬ ನರ ಬೀಳ್ವ ಪಾತಾಳದಲ್ಲಿ!
ಕೋತಿ ಮನವನ್ನಿಡ್ಬೇಕ್ಹದ್ಬಸ್ತಿನಲ್ಲಿ!
ವಿಧೇಯತೆಗಧೋಗತ್ಯಂತ್ಯದಲ್ಲಿ!
ತ್ತನುಪದೇಶವಿದೆಲ್ಲರ್ಗೀಗಿಲ್ಲಿ! (ಎ)
-ಲ್ಲರ ಹಿತೈಷಿ ಅವನಲ್ಲದ್ಯಾರಿಲ್ಲಿ? (ಸ)
-ಲ್ಲಿಸ್ಬೇಕ್ನಿತ್ಯಪೂಜೆ ಅವನಿಗೆಲ್ಲೆಲ್ಲಿ! (ಇ)
-ರ್ಲಿ, ನಿರಂಜನಾದಿತ್ಯಾನಂನನಾಗಿಲ್ಲಿ!!!

ಏನೇನೋ ಕೇಳಬೇಕೆಂದಿದ್ದೆ! (ನೀ)   3(1332)

-ನೇ ಸಿಕ್ಕಲ್ಲೆಲ್ಲಾ ಮರೆತಿದ್ದೆ!
ನೋಡಿಯೇ ತೃಪ್ತಿ ಪಡುತ್ತಿದ್ದೆ!
ಕೇಳದೇನೇ ತಿಳಿಸುತಿದ್ದೆ! (ಕ)
-ಳವಳವಿಲ್ಲದಿರುತಿದ್ದೆ!
ಬೇಕಿನ್ನೇನೆನಗೆನುತಿದ್ದೆ! (ಸಾ)
-ಕೆಂದು ಹೋಗಲೆತ್ನಿಸುತಿದ್ದೆ!
ದಿವ್ಯಾನುಮತಿ ಬೇಡುತಿದ್ದೆ! (ಎ)
-ದ್ದೆ, ನಿರಂಜನಾದಿತ್ಯಗಿದ್ದೆ!!!

ಏನ್ಹೇಳ್ಯೇನ್ಕೇಳ್ಯೇನ್ಕಾಸಿನ ಪ್ರಯೋಜನ? (ನೀ)   6(3803)

-ನ್ಹೇಳಿದ್ದೆಲ್ಲವೂ ಈಗ ನಿಷ್ಪ್ರಯೋಜನ? (ಕೇ)
-ಳ್ಯೇನಾಯ್ತೀಗ ಪ್ರವಚನ ಪ್ರತಿದಿನ? (ನಾ)
-ನ್ಕೇಳಿದ್ದು ನಿನ್ನ ದಿವ್ಯಾಕಾರ ದರ್ಶನ! (ಹೇ)
-ಳ್ಯೇಕೆ ಮಾಡಬೇಕಾಗಿತ್ತಿಂಥಾ ವಂಚನ? (ಕ)
-ನ್ಕಾಭರಣಾಲಂಕಾರ ನಾನ್ಬೇಡಿದೆನಾ?
ಸಿರಿ, ಸಾಮ್ರಾಜ್ಯಾಧಿಪತ್ಯಾಶಿಸಿದೆನಾ?
ಶ್ವರವಾವುದನ್ನೂ ಬಯಸಿಲ್ಲ ನಾ!
ಪ್ರತಿಜ್ಞೆ ಪರಿಪಾಲಿಸುತ್ತಿರುವೆ ನಾ!
ಯೋಗಿಯಾಗಿ ಅರ್ಪಿಸಿದೆ ತನು ಮನ!
ಗತ್ಪತಿ ನಿನಗಿನ್ನೇಕನ್ಯ ಧನ?
ಮೋ ನಿರಂಜನಾದಿತ್ಯಾನಂದಾನನ!!!

ಏರಿಗೊಂದು, ನೀರಿಗೊಂದೆಳೆದ್ರಾಗ್ದುಳುಮೆ! (ಅ)   6(3642)

-ರಿತಿದ ಮಾಡ್ಬೇಕೊಳ್ಳೇ ಎತ್ತುಗಳ ಜಮೆ!
ಗೊಂದಲವೆಬ್ಬಿಸಿದರೆ ಸಾಗದು ಗೈಮೆ!
ದುಡಿವವರಿಗಿರಬಾರದು ಬುದ್ಧಿ ಭ್ರಮೆ!
ನೀತಿ, ರೀತಿಯಲ್ಲನಸೂಯೆ ಅನುಪಮೆ! (ಹ)
-ರಿ ಹರ, ಅಜರಿಗ್ತಾಯಿಯಾದ ಮಹಿಮೆ!
ಗೊಂಡಾರಣ್ಯದಲ್ಲಿದ್ದತ್ರಿ ಸತಿ ನಿಷ್ಕಾಮೆ! (ನಿಂ)
-ದೆ, ವಂದನೆಯನ್ನಲಕ್ಷ್ಯ ಗೈದ ನಿಸ್ಸೀಮೆ! (ಎ)
-ಳೆದ್ರೆ ನೊಗ ಹೀಗೆ ಆಗ್ವುದೊಳ್ಳೇ ಉಳುಮೆ!
ದ್ರಾಕ್ಷಾಬಳ್ಳಿಯಾಲಂಬನ ಶಿವನಲ್ಲುಮೆ! (ಆ)
-ಗ್ದು ಹೀಗಿರಲ್ಕಾಮನೊಡನೆ ರತಿ, ಕಾಮೆ! (ಧೂ)
-ಳು ಹೊನ್ನಾದ ತೆರ ಹರಿಯೊಡನೆ ರಮೆ! (ಶ)
-ಮೆ, ದಮೆ, ನಿರಂಜನಾದಿತ್ಯನ ಹಿರಿಮೆ!!!

ಏಸೊಂದು ವೇಷ ಕಾಸಿಗಾಗಿ?   5(3008)

ಸೊಂಟ ತೋರ್ಸಿ ನರ್ತನದ್ಕಾಗಿ!
ದುಡಿಮೆ ದುರ್ಮಾರ್ಗದ್ದದ್ಕಾಗಿ!
ವೇಷ, ಭೂಷಣದಾಟದ್ಕಾಗಿ!
ಡ್ವೈರಿಗಳಾಗ್ವುದದ್ಕಾಗಿ!
ಕಾಡುವುದನ್ಯರನ್ನದ್ಕಾಗಿ! (ಹು)
-ಸಿಯನ್ನಾಡುವುದೂ ಅದ್ಕಾಗಿ!
ಗಾರುಡಿಗಾರನಾಟದ್ಕಾಗಿ! (ಯೋ)
-ಗಿ ನಿರಂಜನಾದಿತ್ಯಗಾಗಿ!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ