ಎಂಜಲು ತಿಂದಂಜಿಕೆ ಕಳೆವಾಪ್ತ ನಾಯಿ!   6(4290)

ಗಲಿಯ ಮೇಲೆ ಮಲಗುವುದಾ ನಾಯಿ! (ಎ)
-ಲುಬಿನ ಚೂರಗಿಯುತ್ತಿರುವುದಾ ನಾಯಿ!
ತಿಂಡಿ ಹಾಕಿದ್ರೆ ಬಾಲಲ್ಲಾಡಿಪುದಾ ನಾಯಿ!
ಂಡ ತೋರಿದರೆ ಓಡುವುದು ಆ ನಾಯಿ!
ಜಿಹ್ವಾ ಚಾಪಲ್ಯದಲ್ಲಿ ಅಗ್ರಗಣ್ಯಾ ನಾಯಿ!
ಕೆಟ್ಟದೊಳ್ಳೆಯದೆಲ್ಲಾ ತಿನ್ನುವುದಾ ನಾಯಿ!
ಚ್ಚುವುದು ಕೀಟ್ಲೆಮಾಡಿದರೆ ಆ ನಾಯಿ! (ವೇ)
-ಳೆ ಅವೇಳೆಯೆಂಬುದನ್ನರಿಯದಾ ನಾಯಿ!
ವಾಸನಾಶಕ್ತಿಯಿಂದರಿಯುವುದಾ ನಾಯಿ! (ಆ)
-ಪ್ತರನ್ನೆಂದಿಗೂ ವಂಚಿಸದು ಆ ನಾಯಿ!
ನಾಯಿಯ ಸ್ವಾಮಿಭಕ್ತಿಗೆ ಮೆಚ್ಚುವಳ್ತಾಯಿ! (ತಾ)
-ಯಿ ನಿರಂಜನಾದಿತ್ಯಾನಂದಮಯಿ ತಾಯಿ!!!

ಎಂಟು ಮಂದಿ ಕುರುಡರಾನೆ ದೇವರಾ? (ಎಂ)   5(3131)

-ಟು ಜನರಿಗೂ ನೋಡುವಾಸೆ ಕುಂಜರಾ!
ಮಂದಭಾಗ್ಯರೆಂತರಿವರ್ಪೂರ್ಣಾಕಾರಾ?
ದಿವ್ಯ ದರ್ಶನವ್ರವ್ರ ಶಕ್ತ್ಯಾನುಸಾರಾ!
ಕುಚೇಷ್ಟೆ ಮಾಡ್ಬಾರ್ದರಿತವರವರಾ! (ಅ)
-ರುಹಬೇಕ್ಬಲ್ಲವರದ್ರ ಪೂರ್ಣಾಕಾರಾ! (ನೋ)
-ಡ ಬಯಸುವವರ ಕಷ್ಟ ಅಪಾರಾ!
ರಾತ್ರಿ, ದಿನ ಸುರಿಯುವುದಶ್ರುಧಾರಾ!
ನೆಗಳ್ದಾವತಾರಿಗಳ್ತೋರ್ಬೇಕಾದರಾ!
ದೇಶದಲ್ಲೆಲ್ಲೆಲ್ಲೂ ಇದೆ ಹಾಹಾಕಾರಾ!
ರದನೇ ಕಾಪಾಡಲೆಲ್ಲಾ ಸಂಸಾರಾ!
ರಾಮ ನಿರಂಜನಾದಿತ್ಯರೇಕಾಕಾರಾ!!!

ಎಂತು ಕಳೆಯಲಿ ಕಾಲವೆನಬೇಡ! (ಕಂ)   5(3039)

-ತುಪಿತನನ್ನು ಸ್ಮರಿಸದಿರಬೇಡ!
ಟ್ಟಳೆಗಳನ್ನು ಸೊಟ್ಟ ಮಾಡಬೇಡ!
(ಮ)ಳೆ ಬಂದಾಗುಳುವಭ್ಯಾಸ ಬಿಡಬೇಡ! (ಕಾ)
-ಯಕಲ್ಪಕ್ಕಾಗಿ ವೇಳೆ ಕಳೆಯಬೇಡ! (ಮ)
-ಲಿನ ವಾಸನೆಗೆ ಜಾಗ ಕೊಡಬೇಡ!
ಕಾಮಿನಿ, ಕಾಂಚನಕ್ಕೆ ಆಶಿಸಬೇಡ!
ಕ್ಷ್ಯ ಆತ್ಮನಲ್ಲಿರಿಸದಿರಬೇಡ!
ವೆಚ್ಚ, ತುಚ್ಛಕಾರ್ಯಕ್ಕಾಗಿ ಮಾಡಬೇಡ!
ನ್ನದು ನಿನ್ನದೆಂದು ಗುದ್ದಾಡಬೇಡ!
ಬೇಕಿದಕೆ ಜ್ಞಾನ! ಮರೆತಿರಬೇಡ! (ಅಂ)
-ಡಲೆಯುತ್ತ ನಿರಂಜನಾದಿತ್ಯ ಬಾಡ!!!

ಎಂದೂ ಕಾಣದ ಬಣ್ಣವಿಂದೇಕೆ ಸ್ವಾಮಿ?   5(2522)

ದೂರದೃಷ್ಟಿಯುಳ್ಳವ ನಾನಲ್ಲ ಸ್ವಾಮಿ!
ಕಾಣುತಿದೆ ಕೃಷ್ಣವರ್ಣವೀಗ ಸ್ವಾಮಿ! (ತೃ)
ಸಮಾನವಿದೆಲ್ಲಾ ನಿಮಗೆ ಸ್ವಾಮಿ!
ಯಾವಿಟ್ಟದೇಕಾಯ್ತೆಂದು ಹೇಳಿ ಸ್ವಾಮಿ!
ಲು ಸೋಜಿಗಾಗಿಹುದೆನಗೆ ಸ್ವಾಮಿ! (ಸ)
-ಣ್ಣವನೆನ್ನಪೇಕ್ಷಿಸಬೇಡಿ ಸ್ವಾಮಿ! (ಗೋ)
-ವಿಂದನಾನಂದವಿದೆಂದು ತಿಳಿ ಪ್ರೇಮಿ!
ದೇವಕೀಸುತನನುಗ್ರಹದು ಪ್ರೇಮಿ!
ಕೆಟ್ಟಬುದ್ಧಿಗಿದರ್ಥವಾಗದು ಪ್ರೇಮಿ!
ಸ್ವಾಮಿಭಕ್ತನಿಗಿದು ಗೋಚರ ಪ್ರೇಮಿ! (ಪ್ರೇ)
-ಮೀ, ನಿರಂಜನಾದಿತ್ಯಾ ಗೋಪಾಲಸ್ವಾಮಿ!!!

ಎಂದೇನಾಗುವುದೆಂದರಿತವರಾರು?   1(30)

ದೇಹವಸ್ಥಿರವೆಂದು ಹೇಳದವರಾರು?
ನಾಳೆಯ ಕಥೆಯೇನೆಂದರುಹುವರಾರು?
ಗುರುಚಿತ್ತವೆಂದರಿತು ಬಾಳುವವರಾರು?
ವುದ್ಯೋಗಬಿಟ್ಟು ಕುಳಿತುಳಿದವರಾರು?
ದೆಂಟಿಲ್ಲದೆಲೆಯಲುಂಡವರಾರು?
ಯೆಯಿಲ್ಲದೆ ಶಾಂತರಾಗಿರುವವರಾರು?
ರಿಸಿ, ಮುನಿ, ಮನೋಗತ ತಿಳಿದವರಾರು?
ರಣಿ ಧರಣಿಯ ಕಣ್ಣೆಂದುಸುರದವರಾರು?
ರ್ಣ, ಧರ್ಮ ಬೇಕೆಂದು ಬರೆಸಿದವರಾರು?
ರಾಗ ದ್ವೇಷಗಳ ಬಿಟ್ಟಿರುತಿರುವವರಾರು?
ರುಚಿಯರಿಯದ ನಾಲಿಗೆಯವವರಾರು???

ಎಂದೇನಾಗುವುದೆಂದರಿತವರಾರು? ಮನವೇನಾಗುವುದೆಂದರಿತವನಾರು?   1(29)

ದೇಶ ಬಿಟ್ಟಿಹಿರಿ! ಮತ್ತೆ ಬರಬೇಕೆನ್ನುವರು, ಈಶ್ವರನಿಚ್ಛೆ ತಿಳಿದವರಾರು? ಬರುವುದಿಲ್ಲೆಂದವರಾರು?
ನಾವು ಮಾಡುವೆವು ಸೇವೆಯೆನ್ನುವರು, ಆವ ಠಾವಿನಲಾರಿಗಾವ ಸೇವೆಯೆಂದರುಹುವರಾರು?
ಗುರುದರ್ಶನ ಭಾಗ್ಯ ಕಳೆದುಕೊಂಡೆವೆನ್ನುವರು, ತೋರಿದ ದಾರಿಯೇ ದರ್ಶನವೆಂದರರಿತವರಾರು?
ವುಪೇಕ್ಷಿಸುತಲಗಲಿದರೆಲ್ಲರನೆನ್ನುವರು; ಅಪೇಕ್ಷೆಯುಪೇಕ್ಷೆ ಗುರುಗಿಲ್ಲೆಂದರೆ ತಿಳಿದವರಾರು?
ದೆಂಟಿಲ್ಲದ ಗಂಟೆಗಳು ನಾವಾದೆವೆನ್ನುವರು, ಅಂದಿಗದಾನಂದ, ಇಂದಿಗಿ ದೆಂದರಿಯುವರಾರು?
ತ್ತನೇ ನೀವಾಗಿರುವಿರೆಂದುಸುರುವರು, ಮತ್ತಾ ಭಕ್ತಿಯಲಿ ಯುಕ್ತಿ ಬೆರಸದಿರುವವರಾರು?
ರಿಕ್ತಹಸ್ತರಾಗಿ ತೆರಳಿದ ಮಹಾತ್ಯಾಗಿ ಅನ್ನುವರು, ಭಕ್ತರೇಕೆ ಮತ್ತೆವಗೆ ಕಾಟದ ಕೂಟ ಕತ್ತುವರು?
ಡೆಯಲಾರೆವು ನಾವೀ ವಿಯೋಗವೆನ್ನುವರು, ನೋಡು ಯೋಗ, ವಿಯೋಗದಲೆಂದರೀಕ್ಷಿಪರಾರು?
ನವಾಸವಿದೇಕೆ ನಿಮಗೆನ್ನುವರು, ನಾನರಿಯೆನದನೆಂದರದ ನಂಬುವವರಾರು?
ರಾರಾಜಿಸಿ ವಿರಾಜಿಸಿ ಕುಟೀರದಲೆನ್ನುವರು, ಗುರುಕರುಣೆ ಬಂದಾಗಾಗಲೆಂದರದನೊಪ್ಪುವರಾರು?
ರುಜನೆ ವಿಷ ದೋಷಗಳ ಹರಿಸಿ ಹರಸುವವರಾರು? ಭಜಿಸಿರೆಲ್ಲರೊಂದಾ ಗೆಂದರದರಂತೆ ನಡೆವವರಾರು?
ಳೆ ಬೆಳೆಗಳಿಲ್ಲದೆ ಬಡವಾಗಿಹೆವೆನ್ನುವರು, ಮಳೆ ಬೆಳೆಯಾಗುವುದು ಪ್ರಾರ್ಥಿಸೆಂದರೆ ಕೇಳುವರಾರು?
ಮ್ಮಿಂದೇನಪರಾಧವಾಯಿತೆನ್ನುವರು, ನಿಮ್ಮಿಂದಿಲ್ಲೆಲ್ಲಾ ದತ್ತನಿಂದದೆಂದರವನಿಂಬು ಬೇಡುವವರಾರು ?
ವೇದ್ಯವಾಯಿತೀಗೆಲ್ಲ ನಮಗನ್ನುವರು, “ಜೈ ನಿರಂಜನ” ನಿನಗಿದಿರಾಡುವ ಸಮರ್ಥರವರಾರ?

ಎಂದೋ ಆಗ್ವ ನೇವೇದ್ಯಕ್ಕೇಕೀಗ ದೀಪ?   6(4294)

ದೋಣಿ ಬಂದ ಮೇಲೆ ಮಜೂರಿಯಾಲಾಪ!
ಗಿನದ್ದಾಗೀಗಿನದ್ದೀಗ ಕಲಾಪ! (ಹೋ)
-ಗ್ವ, ಬರ್ವವರ ಮುಂದೆ ಬೇಡ ಪ್ರತಾಪ!
ನೇರ ದಾರಿ ನಡೆಸಲಿಕ್ಕೆ ಪ್ರದೀಪ!
ವೇದಾಂತಾಚಾರಕ್ಕೆ ಬಾರದಿದ್ರೆ ಪಾಪ! (ವಾಂ)
-ದ್ಯನಾದಾಚಾರಶೀಲ ಜನಕ ನೃಪ! (ಸೊ)
-ಕ್ಕೇ ಪ್ರಧಾನವಾದವಗೆ ಪಾಪ ಕೂಪ!
ಕೀಟ್ಲೆಗೊಳಗಾಗ್ವುದವನಿಗೆ ಶಾಪ!
ಗನಸದೃಶಾನಂದಾತ್ಮ ದಿನಪ!
ದೀಪ ಜಗತ್ತಿನಾತ್ಮ ಶಕ್ತಿ ಸ್ವರೂಪ!
ರಮಾತ್ಮ ನಿರಂಜನಾದಿತ್ಯಾಧಿಪ!!!

ಎಂದೋ ಮಾಡಿದ್ದಕ್ಕೆಂದೋ ಫಲ!   4(2095)

ದೋಷಕಾರೀ ಮನಸ್ಚಂಚಲ!
ಮಾಧವನೆಂದೆಂದೂ ನಿಶ್ಚಲ! (ಕಾ)
-ಕಾಡಿ, ಬೇಡಿದರೆಲ್ಲಾ ದುಷ್ಛಲ! (ಮು)
-ದ್ದಣ್ಣನಾದರೆಲ್ಲಾ ಸತ್ಫಲ! (ಇ)
-ಕ್ಕೆಂದು ಮಾಡಬೇಡೀಗ ಛಲ!
ದೋಸೆ ತಿಂದು ಬಂದಾಯ್ತು ಮಲ! (ಕ)
-ಫ ಹೆಚ್ಚಾಗ್ಯಾಗಿಹೆ ದುರ್ಬಲ! (ಬಾ)
-ಲ ನಿರಂಜನಾದಿತ್ಯಮಲ!!!

ಎಂದೋ ಸಾಯುವುದಕ್ಕೇಕೀಗಳುವೆ?   5(2897)

ದೋಣಿ ದಡ ಸೇರಲೇಬೇಕಲ್ಲವೆ?
ಸಾಧನೆ ನಿನ್ನ ಕರ್ತವ್ಯವಲ್ಲವೆ?
ಯುದ್ಧಭೂಮಿಯರ್ಜುನನಾಗ್ಬೇಡವೆ! (ಬೇ)
-ವು ಬೆಲ್ಲಾನಂದದಿಂದುಣಬೇಡವೆ?
ತ್ತನಲ್ಲನನ್ಯ ಭಕ್ತಿ ಬೇಡವೆ? (ಸೊ)
-ಕ್ಕೇಕಿನ್ನೂ ಹುಟ್ಟಡಗಿಸದಿರುವೆ?
ಕೀಳ್ಮೇಲ ಬಿಡದೇಕೆ ಹಾಳಾಗುವೆ?
ರ್ವದಿಂದೇಕನ್ಯರನ್ನು ಚುಚ್ಚುವೆ?
(ಬಾ)ಳುದ್ಧವನಂತೆ! ಕೃಷ್ಣ ನೀನಾಗುವೆ! (ಸೇ)
-ವೆ ಸಾಗ್ಲಿ! ನಿರಂಜನಾದಿತ್ಯಾಗುವೆ!!!

ಎಚ್ಚರ ಕೊಟ್ಟಳು ಎಲ್ಲಮ್ಮಾ! [ಮ]   4(2270)

-ಚ್ಚರ ಬೇಡೆಂದಳಾ ಮಲ್ಲಮ್ಮಾ! (ವ)
-ರಗುರು ಭಕ್ತಳಾ ನಾಗಮ್ಮಾ!
ಕೊಲೆ, ಸುಲಿಗೆಯೊಲ್ಲಳಮ್ಮಾ! (ಕೆ)
-ಟ್ಟ ವಿಚಾರಟ್ವೆಂದಳಾ ಅಮ್ಮಾ! (ಬಾ)
-ಳು ಬಂಗಾರಕ್ಕಿದೆಂದಳಮ್ಮಾ!
ಲ್ಲರೈಕ್ಯ ಬೇಕೆಂದಳಮ್ಮಾ! (ಎ)
-ಲ್ಲ ಗುರುಸ್ವರೂಪೆಂದಳಮ್ಮಾ! (ಅ)
-ಮ್ಮಾ ನಿರಂಜನಾದಿತ್ಯ ಬ್ರಹ್ಮಾ!!!

ಎಚ್ಚರ ತಪ್ಪಿದಾಗ ಮಚ್ಚರವಿಲ್ಲ! (ಮ)   6(4349)

-ಚ್ಚರತಪ್ಪಿದಾಗ ಎಚ್ಚರವೇ ಇಲ್ಲ! (ಪ)
-ರಮಾರ್ಥಸಿದ್ಧಿಗಿದ ಸಾಧಿಸಿರೆಲ್ಲ!
ನುಭಾವವಿದ್ದರದು ಸಾಧ್ಯವಿಲ್ಲ! (ತ)
-ಪ್ಪಿನಡೆವರ್ಹಿಪ್ಪಿಗಳೆಂಬವರೆಲ್ಲ!
ದಾರಿ ಅದು ಆತ್ಮ ಸಾಕ್ಷಾತ್ಕಾರಕ್ಕಲ್ಲ!
ಟ್ಟಿಮನದಿಂದ ಜೈಸ್ಬೇಕಾಶೆಯೆಲ್ಲ!
ದಿರಾಪಾನದಿಂದ ಮನೋನಾಶವಲ್ಲ! (ಬ)
-ಚ್ಚಲಕೊಚ್ಚೆಯ ಹಂದಿ ಅವಧೂತವಲ್ಲ! (ಕ)
-ರ, ಚರಣೇಂದ್ರಿಯ ಜಯ ಅದಕ್ಕಿಲ್ಲ!
ವಿವೇಕ, ವೈರಾಗ್ಯದ ಗಂಧದಕ್ಕಿಲ್ಲ! (ಪು)
-ಲ್ಲ ನಿರಂಜನಾದಿತ್ಯನಂತಾಗ್ಬೇಕೆಲ್ಲಾ!!!

ಎಚ್ಚರದಲ್ಲಾಳದವ ಕನಸಲ್ಲಾಳಿದವ! [ಅ]   5(3153)

-ಚ್ಚರಿಯಿದಕ್ಕೇನೆನ್ನುವನು ವಿಜ್ಞಾನಿ ಮಾನವ?
ಹಸ್ಯವಿದರದ್ದರಿತರೂ ಕಾಣ ಸುಖವ! (ಉ)
-ದಯಾಸ್ತದ ಮಧ್ಯದಲ್ಲನೇಕನಿತ್ಯಾನುಭವ!
(ಎ)ಲಾವಸ್ಥೆಗಳ ದಾಟಿದಾಗಾತ್ಮಾನಂದಾನುಭವ! (ಆ)
-ಳಾದವ, ಆಳಿದವ ಭವಬಂಧದಲ್ಲಿದ್ದವ!
ತ್ತನಾದರ್ಶ ಪಾಲಿಸಿದವ ಮುಕ್ತ ಮಾನವ!
ರ ಗುರಿವೀತ ಮಾಳ್ಪ ಸೃಷ್ಟಿ, ಸ್ಥಿತಿ, ಲಯವ!
ರ್ಮಕ್ಕೆ ತಕ್ಕಂತೆ ನಾಮ, ರೂಪಗಳ ತಾಳುವ!
ಶ್ವರವಿದೆಲ್ಲಾ ಎಂದರಿತು ಮಾಡ್ಬೇಕ್ತಪವ!
ವೆಸುತ್ತಿರಬೇಕಿದರಿಂದ ಕಾಲ ತ್ರಯವ! (ಅ)
-ಲ್ಲಾಡದೇ ಅನುಭವಿಸಬೇಕ್ಸಮಾಧಿ ಸುಖವ! (ತು)
-ಳಿದು ಪಾತಾಳಕ್ಕಿಳಿಸ್ಬೇಕಿಂದ್ರಿಯ ಚಪಲವ!
ರ್ಶನಾನಂದದಿಂದ ಭಾವಾತೀತಾತ್ಮಾನುಭವ!
ರಗುರು ನಿರಂಜನಾದಿತ್ಯಗೀ ಸ್ವಾನುಭವ!!!

ಎಚ್ಚರದಲ್ಲೆಚ್ಚರಾಚ್ಚುತ! (ನಿ)   4(1658)

-ಚ್ಚ, ನಿರ್ಮಲ, ನಿಚ್ಚಟಾಚ್ಚುತ!
ಜತಾದ್ರ್ಯೋಚ್ಚವಾಸಾಚ್ಚುತ!
ತ್ತ ನಿಶ್ಚಲ ತತ್ವಾಚ್ಚುತ! (ಎ)
-ಲ್ಲೆಲ್ಲಚ್ಚಳಿಯದಚ್ಚಾಚ್ಚುತ! (ನಿ)
-ಚ್ಚಲೋಚ್ಚನೀಚಾತೀತಾಚ್ಚುತ! (ನಿ)
-ರಾಮಯ, ನಿಚ್ಚಿಂತಾತ್ಮಾಚ್ಚುತ! (ಮು)
-ಚ್ಚು, ಮರೆಯಿಲ್ಲದಿಚ್ಛಾಚ್ಚುತ! (ಪಿ)
-ತ ನಿರಂಜನಾದಿತ್ಯಾಚ್ಚುತ!!!

ಎಚ್ಚರವಿತ್ತಳಂಬಾ ತಾಯಿ! (ಮ)   4(2269)

-ಚ್ಚರವಿಲ್ಲದಾ ಮಹಾ ತಾಯಿ (ಪ)
-ರಮೇಶ್ವರನರ್ಧಾಂಗೀ ತಾಯಿ!
ವಿರಕ್ತಿ ಸದಾನಂದದಾಯಿ! (ಸು)
-ತ್ತಮುತ್ತೆಲ್ಲೆಲ್ಲೂ ಹುಚ್ಚು ನಾಯಿ! (ಕ)
-ಳಂಕ ಹಚ್ಚುವುದಾ ಅನ್ಯಾಯಿ!
ಬಾಯ್ಜೊಲ್ಲಿಂದದು ಮೃತಪ್ರಾಯಿ!
ತಾಳೆಂದರೆ ಕೇಳದಾ ಬಾಯಿ! (ತಾ)
-ಯಿ, ನಿರಂಜನಾದಿತ್ಯಾ ತಾಯಿ!!!

ಎಡ, ಬಲ ನೋಡಬೇಡ! ಎಡರಿಗಂಜಬೇಡ!   1(55)

(ಅ) -ಡಸುವುದೆಡರೊಳ್ಳೆದಕೆ ; ಅನುಮಾನ ಬೇಡ!
ರುತಿಹ ಮೋಡಗಳಿಗಾದಿತ್ಯ ಅಡ್ಡಿಮಾಡ!
ಕ್ಷಸ್ವಧರ್ಮದಲಿರಬೇಕವನಂತೆ ಗಾಢ!
ನೋಡುವವರ ಮೆಚ್ಚಿಸಲಿಕವನಲ್ಲ ಮೂಢ!
(ಅ) -ಡಗಿದರವ ಮೋಡಗಳೊಳಗೆ ಕರ್ಮ ಬಿಡ!
ಬೇಕು ಇವನಂತೆ ಕರ್ಮನಿಷ್ಠೆ ಕಂಗೆಡಬೇಡ!
(ಒ) -ಡಲ ಮೋಹಕಾಗಿ ಕರ್ಮವ ಬಿಟ್ಟು ಕೆಡಬೇಡ!
ಷ್ಟು ದಿನ ಕಷ್ಟಪಡಲೆಂಬಧೀರತೆ ಬೇಡ!
(ಅ) -ಡಚಣೆ ಬರಲಿ, ಸೇವೆ ಸಾಗಲಿ! ಮಾಡು ದೃಢ!
(ಅ) -ರಿಗಳಿಂದೇನಾಗುವುದಾದಿತ್ಯನ ಬಿಡಬೇಡ!
ಗಂಭೀರನಾಗವನ ಮಗನಾಗದಿರಬೇಡ!
ಗತ್ಪತಿಯಿವನೆಂಬರಿವಾಗದಿರಬೇಡ!
ಬೇಡಾದೇ ನೀಡುವವನಿವ ಸಂದೇಹವೇ ಬೇಡ!
ಮರುಧರ ನಿರಂಜನೇಶ್ವರನಿವ ಮೃಡ!!!

ಎಡಬಿಡದೆನ್ನ ನೀ ನೋಡಿಕೋ! (ಬಿ)   3(1168)

-ಡನು ನಾ ನಿನ್ನನೆಂದರಿತುಕೋ!
ಬಿಸಿಲೆನ್ನದೆನ್ನ ನೀ ನೋಡಿಕೋ! (ಕೇ)
-ಡ ಮಾಡ ಗುರುವೆಂದರಿತುಕೋ! (ಇ)
-ದೆನ್ನ ಧನವೆಂದು ನೀ ನೋಡಿಕೋ! (ಉ)
-ನ್ನತಿಗೀ ದಾರಿಯೆಂದರಿತುಕೋ!
ನೀನೇ ನಾನೆಂಬಂತೆನ್ನ ನೋಡಿಕೋ!
ನೋಡ್ಯನುಭವದಿಂದರಿತುಕೋ! (ಕೂ)
ಡಿ, ಪಾಡ್ಯಾನಂದದಿಂದ ನೋಡಿಕೋ! (ಅ)
-ಕೋ! ನಿರಂಜನಾದಿತ್ಯರಿತುಕೋ!!!

ಎಡರಿಗಂಜುವನೇ ಪ್ರೇಮಿ? (ಕಂ)   6(3745)

-ಡ ರಾಮನ ಗೋಸ್ವಾಮಿ ಪ್ರೇಮಿ! (ಹ)
-ರಿ ಶರಣ ಪ್ರಹ್ಲಾದ ಪ್ರೇಮಿ!
ಗಂಗಾಧರಾರ್ತೋದ್ಧಾರ ಪ್ರೇಮಿ! (ಅಂ)
-ಜುವನೇ ವಿಷಕ್ಕೆ ಆ ಪ್ರೇಮಿ!
ರ ಪಾರ್ವತಿಗೆ ಆ ಪ್ರೇಮಿ! (ಅ)
-ನೇಕೆಡರ್ಗೆದೆಗೊಟ್ಟಾ ಪ್ರೇಮಿ!
ಪ್ರೇತ ವಿಭೂತಿ ಪ್ರಿಯಾ ಪ್ರೇಮಿ! (ಸ್ವಾ)
-ಮಿ ನಿರಂಜನಾದಿತ್ಯಾ ಪ್ರೇಮಿ!!!

ಎಡರಿಲ್ಲ, ತೊಡರಿಲ್ಲ, ಸೊಡರೆಲ್ಲ! (ತ)   5(2909)

-ಡಮಾಡದೇ ಹೋಗಿ ನೋಡ್ಸುತ್ತುಮುತ್ತೆಲ್ಲ!
ರಿಸಿ, ಮುನಿ, ದೇವತೆಗಳೇ ಎಲ್ಲೆಲ್ಲ! (ಗೊ)
-ಲ್ಲ ಬಾಲಕೃಷ್ಣನೇ ದೇವರವರ್ಗೆಲ್ಲ!
ತೊಪ್ಪೆಯೆತ್ತಲಿಕ್ಕೂ ಸಿದ್ಧರವರೆಲ್ಲ! (ಜ)
-ಡಜಭವನೂ ದರ್ಪ ತೋರುವುದಿಲ್ಲ! (ಹ)
-ರಿನಾಮ ಕೀರ್ತನಾನಂದವೇ ಎಲ್ಲೆಲ್ಲ! (ಸೊ)
-ಲ್ಲಲ್ಲಿ ತಮ್ಮಲ್ಲಿ ವಾದ, ಭೇದವೆ ಇಲ್ಲ!
ಸೊಗಸುಗಾರ್ತಿಯರೋಡಾಟವಲ್ಲಿಲ್ಲ!
ವರುಧರನೆದುರು ಮೌನವೆಲ್ಲ! (ಮ)
-ರೆವರ್ತಮ್ಮನ್ನವನ ಕೃಪೆಯಿಂದೆಲ್ಲ! (ಪು)
-ಲ್ಲ ನಿರಂಜನಾದಿತ್ಯ ಸಾಕ್ಷಿದಕೆಲ್ಲ!!!

ಎಡೆತೊಡೆಯೆಡೆಯ ನರ ಹಿಡಿದಿತ್ತು! (ಮಾ)   4(2025)

-ಡಲು ಸೂರ್ಯನಮಸ್ಕಾರ ಕಷ್ಟವಾಗಿತ್ತು!
ತೊಡರುಗಳನುಭವ ಎಷ್ಟೋ ಆಗಿತ್ತು! (ತ)
-ಡೆದುಕೊಂಡೇ ಸಾಧನೆಗಳಾಗುತ್ತಿತ್ತು! (ದ)
ಯೆಯಯ್ಯನದಿರ್ಪಾಗೇನೂ ಗೊತ್ತಾಗದಿತ್ತು!(ಬಿ)
-ಡೆ ಕೈಯ್ಯನೆಂಬಭಯ ನೆನಪಾಗುತ್ತಿತ್ತು! (ಕಾ)
-ಯದತ್ತ ವ್ಯಾಮೋಹ ಮಾಯವಾಗುತ್ತಲಿತ್ತು! (ಅ)
-ನವರತಮರಾನೆಂದರಿವಿರುತ್ತಿತ್ತು! (ಯಾ)
-ರ ಸಹವಾಸವೂ ಬೇಕಾಗದಿರುತ್ತಿತ್ತು!
ಹಿತೈಷಿ ಗುರುವೆಂದು ಖಚಿತವಾಗಿತ್ತು! (ಅ)
-ಡಿಗಡಿಗವನ ಪರೀಕ್ಷೆ ನಡೆದಿತ್ತು! (ಈ)
-ದಿನ ನರನಾಡಿಯೆಲ್ಲಾ ಶುದ್ಧವಾಗಿತ್ತು! (ಚಿ)
-ತ್ತು ನಿರಂಜನಾದಿತ್ಯಗಿಲ್ಲೆಂಬರಿವಾಯ್ತು!!!

ಎಣಿಕೆ, ಗುಣಿಕೆ, ಕತ್ತಿಗೆ ಕುಣಿಕೆ! (ದ)   6(4116)

-ಣಿದು ಮಣ್ಣಾದಳಿಂತು ಬಡಗಣಿಕೆ!
ಕೆಟ್ಟಮೇಲ್ಬುದ್ಧಿ ; ಅಟ್ಟಮೇಲುರಿ ಏಕೆ?
ಗುಹ್ಯಾದಿಂದ್ರಿಯ ನಿಗ್ರಹಿಸ್ಬೇಕ್ಸುಖಕ್ಕೆ! (ಮ)
-ಣಿಯದಿರಬೇಕದರ ಚಪಲಕೆ!
ಕೆಸರಿನಂತಿರುವುದದು ಮನಕೆ!
ಳಂಕ ತರುವುದದು ಜೀವನಕೆ! (ಬ)
-ತ್ತಿಸಲ್ಕಿದೆ ಶಕ್ತಿ ಯಮ, ನಿಯಮಕೆ! (ಗಂ)
-ಗೆಯಂತೆ ಮನ ಪಾವನವಾಗಲಿಕೆ!
ಕುಡಿಸಬೇಕದನ್ನಾ ಮೇಲೆ ಲಿಂಗಕೆ! (ಅ)
-ಣಿಮಾದ್ಯಷ್ಟ ಸಿದ್ಧಿ ಅದಕ್ಕಾಮೇಲೇಕೆ? (ಏ)
-ಕೆ? ನಿರಂಜಾನದಿತ್ಯಾನಂದಾಯ್ತದಕೆ!!!

ಎಣ್ಣೆ ನೀರಿನ್ನೇತಕಮ್ಮಾ? (ಕ)   2(505)

-ಣ್ಣೆನಗೆ ಚೆನ್ನಾಗಿದಮ್ಮಾ!
ನೀನೇಕೆ ಚಿಂತಿಪುದಮ್ಮಾ? (ಹ)
-ರಿ ಕೃಪೆ ಪೂರ್ಣವಿದಮ್ಮಾ! (ಅ)
-ನ್ನೇನೂ ಅಪದ್ಧ ನಾನಮ್ಮಾ!
ರಣಿ ರಶ್ಮಿ ಸಾಕಮ್ಮಾ!
ಷ್ಟವೆನಗೇನಿಲ್ಲಮ್ಮಾ (ಅ)
-ಮ್ಮಾ! ನಿರಂಜನಾದಿತ್ಯಮ್ಮಾ!!!

ಎಣ್ಣೆ ನೀರು ಹಾಕಿಕೊಂಡು ದತ್ತ! (ಎ)   4(2017)

-ಣ್ಣೆ ಗುರುವಾಯೂರು ಕೃಷ್ಣನಿತ್ತ!
ನೀಲಾಕಾಶದಲ್ಲಿಂದಿರುತ್ತತ್ತ! (ನೀ)
-ರು ಬಿಸಿಬಿಸಿಯಾಗ್ಯೆರೆಯುತ್ತ!
ಹಾಡು ಗುರುನಾಮ ನೀನೆನುತ್ತ! (ಬೇ)
-ಕಿಲ್ಲ ನಿನಗನ್ಯ ಸೇವೆನುತ್ತ!
ಕೊಂಚ ಹೊತ್ತಿಂತಿರಬೇಕೆನುತ್ತ!
ಮರಧರ ನೀ ಮತ್ತೆನುತ್ತ!
ಯಾನುಗ್ರಹವಾಯಿತೆನುತ್ತ!(ದ)
-ತ್ತ ನಿರಂಜನಾದಿತ್ಯನೆನುತ್ತ!!!

ಎಣ್ಣೆ ಮಜ್ಜನಕಣಿಯಾದ ದಿಗಂಬರ ಸ್ವಾಮಿ’ (ಕ)    2(507)

-ಣ್ಣೆದುರು ನಿಂತಿದ್ದನಾ ಪರಾತ್ಪರ ಗುರುಸ್ವಾಮಿ!
ಹಾ ತೇಜಸ್ವಿಯಾಗಿರುತಿದ್ದನಾ ಪೂಜ್ಯ ಸ್ವಾಮಿ! (ಸ)
-ಜ್ಜನನಾಗಿ, ಮೌನಿಯಾಗಿ, ನಗುತಿದ್ದನಾ ಸ್ವಾಮಿ! (ಕ)
-ನಕ ಸುವರ್ಣನಾಗಿ ಶೋಭಿಸುತಿದ್ದನಾ ಸ್ವಾಮಿ!
ರ ಚರಣಗಳು ಪುಷ್ಟಿಯಾಗಿದ್ದನಾ ಸ್ವಾಮಿ! (ಅ)
-ಣಿಯಾಗಿದ್ದನಭ್ಯಂಜಾನ ಸ್ನಾನಕಾಗಿ ಆ ಸ್ವಾಮಿ!
ಯಾರ ನೆರವಿಗಾಗಿ ಕಾದಿರದಿದ್ದನಾ ಸ್ವಾಮಿ!
ತ್ತನವನಲ್ಲದಿನ್ಯಾರಿರಬಹುದಾ ಸ್ವಾಮಿ? (ಅ)
-ದಿದ ನಾಡದವನ ಬಳಿಗ್ಯೆದಿದನೀ ಸ್ವಾಮಿ! (ದಿ)
-ಗಂಬರಗೆ ಸ್ನಾನ ಮಾಡಿಸುವೆನೆಂದನೀ ‘ಸ್ವಾಮಿ’!
ಚ್ಚಲ ನಲ್ಲಿ ತಿರುವಲನುವಾದನೀ ಸ್ವಾಮಿ! (ವ)
-ರ ಪ್ರಸನ್ನಾನಂದ ಮುದ್ರೆಯಿಂದ ಇದ್ದನಾ ಸ್ವಾಮಿ!
‘ಸ್ವಾಮಿಗೆ ಸ್ವಾಮಿ’ ಸ್ನಾನ ಮಾಳ್ಪೆನೆಂದಾಗಿಲ್ಲಾ ಸ್ವಾಮಿ! (ಪ್ರೇ)
-ಮಿ ನಿರಂಜನಾದಿತ್ಯನಲೊಂದಾಗಿ ಹೋದಾ ಸ್ವಾಮಿ!!!

ಎತ್ತರದ್ದಕ್ಕಾಶಿಸಬೇಡ! (ಹ)   6(3875)

-ತ್ತರದ್ದಕ್ಕನಾದರ ಬೇಡ!
ಹಸ್ಯವರಿಯದಿರ್ಬೇಡ! (ಎ)
-ದ್ದ ಮೇಲೆಚ್ಚರ ತಪ್ಪಬೇಡ!! (ಮಿ)
-ಕ್ಕಾರನ್ನೂ ಅವಲಂಬಿಸ್ಬೇಡ!
ಶಿವನನ್ನಲ್ಲಿಲ್ಲರಸ್ಬೇಡ!
ದಾಶಿವ ನೀನಾಗ್ದಿರ್ಬೇಡ!
ಬೇರೆ ನೀನವನಿಂದೆನ್ಬೇಡ! (ಮೃ)
-ಡ ನಿರಂಜನಾದಿತ್ಯನಾಡ!!!

ಎತ್ತಲೂ ಕತ್ತೆತ್ತಿ ನೋಡದಾನೇ! (ಚಿ)   5(3089)

-ತ್ತ ವೃತ್ತಿಗಳೇನೂ ಇಲ್ಲದಾನೇ! (ಹಾ)
-ಲೂ, ತುಪ್ಪ, ರೊಟ್ಟಿಗಳುಣ್ಣುವಾನೇ!
ಪ್ಪು, ಬಿಳುಪು ಬಣ್ಣಗಳಾನೇ! (ಸ)
-ತ್ತೆ ಸದೆಯನ್ನೆತ್ತಿ ಹಾಕುವಾನೇ! (ಸು)
-ತ್ತಿ ಬೇಸತ್ತು ಕಾಡಿಗೋಡುವಾನೇ!
ನೋಯಿಸಿದವನ ಸಾಯ್ಸುವಾನೇ!
ಮರುನಾದಕ್ಕಾನಂದಿಪ್ಪಾನೇ!
ದಾಸರಿಗೆ ದಾಸ ತಾನಪ್ಪಾನೇ! (ನಾ)
-ನೇ ನಿರಂಜನಾದಿತ್ಯಾನಂದಾನೇ!!!

ಎದೆ ನೋವು ಹೇಗಿದೆಯಮ್ಮಾ? (ಬಂ)   4(2039)

-ದೆ ನೀನಿಲ್ಲಿಗೀಗೇತಕಮ್ಮಾ?
ನೋಡಿ ಹೋಗಬೇಕೆಂದೇನಮ್ಮಾ? (ಗೋ)
-ವು ಕರೆದವರಾರಿಂದಮ್ಮಾ?
ಹೇಳಿ ಸಂತೋಷಪಡಿಸಮ್ಮಾ!
ಗಿರಿಧಾರಿ ಭಕ್ತಾಧೀನಮ್ಮಾ! (ಎ)
-ದೆಯೊಳಗಿರಿಸವನಮ್ಮಾ! (ಭ)
-ಯ ನಿವಾರಕನವನಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯಾತಮ್ಮಾ!!!

ಎದ್ದರೂ ಮಲಗೆನುತಿದೆ ಮೆತ್ತಗೆ ಹಾಸಿಗೆ! (ಎ)   1(313)

-ದ್ದಮೇಲೆ ಸದ್ದಿಲ್ಲದಾಗುವುದಾಕರೆ ಹೇಸಿಗೆ!
ರೂಡಿಯನುಷ್ಠಾನಕಾ ಕರೆ ಅಡ್ಡಿ ಮನಸಿಗೆ!
ಲಗದಿರು ಮತ್ತೆ! ಎದ್ದನುವಾಗು ರೂಡಿಗೆ!
ಕ್ಷ್ಯಸಿದ್ಧಿಗಿದತ್ಯಾವಶ್ಯಕ ಸಾಧಕನಿಗೆ!
ಗೆಜ್ಜೆ ಕಟ್ಟಿದ ನಂತರ ಸ್ಫೂರ್ತಿ ನರ್ತಕನೊಗೆ!
ನುರಿತರಿಂತಪ್ಪುದು ಸಿದ್ಧಿ ನಿಷ್ಠಾವಂತನಿಗೆ!
ತಿತಿಕ್ಷೆಯಿಲ್ಲದಾಗದು ನಿಜರೂಪ ಸ್ಥಿತಿಗೆ! (ಎ)
-ದೆಗೆಡದಡಿಯಿಡುತಿರಬೇಕು ಆ ಕಡೆಗೆ!
ಮೆರೆವಾಸೆ, ಇರುವಾಸೆಗಳಾತಂಕ ಗುರಿಗೆ! (ಎ)
-ತ್ತಲೂ ಗಮನವಿರಸದಿರಬೇಕಾ ಸ್ಥಿತಿಗೆ!
ಗೆಳೆಯನಿದಕೆ ಗುರುನಾಮ ಜಪ! ನಿನಗೆ!
ಹಾಡುತಿಹುದವನ ಗುಣಾನಂದ ಮನಸಿಗೆ!
ಸಿರಿತನದಗ ಸುಖ ಅಲಕ್ಷ್ಯ ಯೋಗಿಗೆ!
ಗೆಳೆಯ ನಿರಂಜನಾದಿತ್ಯ ಸರ್ವ ಜೀವರಿಗೆ!!!

ಎದ್ದರೂ, ಬಿದ್ದರೂ ನಿನಗಾಗಿ! (ಗೆ)   2(724)

-ದ್ದರೂ, ಸೋತರೂ ನಾ ನಿನಗಾಗಿ!
ರೂಪ ನಾಮವಿದು ನಿನನಾಗಿ!
ಬಿಡಬೇಡೆನ್ನ ನಾ ನಿನಗಾಗಿ! (ಇ)
-ದ್ದರಿರಬೇಕು ನಾ ನಿನಗಾಗಿ! (ನಿ)
-ರೂಪ ನೀಡೆನಗೆ ನಿನಗಾಗಿ! (ಅ)
-ನಿತ್ಯ ಸಾಕೆನಗೆ ನಿನಗಾಗಿ! (ಅ)
-ನನ್ಯ ಭಕ್ತಿ ಕೊಡು ನಿನಗಾಗಿ!
ಗಾನ, ಧ್ಯಾನವೆಲ್ಲಾ ನಿನಗಾಗಿ! (ತ್ಯಾ)
-ಗಿ, ನಿರಂಜನಾದಿತ್ಯನಿಗಾಗಿ!!!

ಎದ್ದವರೀರ್ವರು, ಮಲಗಿದವರ್ಮೂವರು!(ಇ)   6(4341)

-ದ್ದವರೀಗ ಮತ್ತೆ ಇರುವೆವೆಂಬವರಾರು? (ಭ)
-ವ ಸಾಗರದಲ್ಲೊದ್ದಾಡುವವರೇ ಎಲ್ಲರು!
ರೀತಿ, ನೀತಿಗಳಲ್ಲಿ ಭಿನ್ನರು ಮಾನವರು! (ಸ)
-ರ್ವರೊಳಗಿರ್ಪವ ಒಬ್ಬನೇ ಒಬ್ಬ ದೇವರು! (ಅ)
-ರುಹಲಳವಲ್ಲ ಮಹಿಮೆಯೆಂದರ್ವ್ಯಾಸರು!
ನಸ್ಸಿನಂತರ್ಮುಖದಿಂದ ಕಂಡರ್ಸಂತರು! (ಮ)
-ಲ ಮನಸ್ಸಿನದ್ದು ತೊಳೆಯಿರೆಂದರವರು!
ಗಿರಿಧಾರಿಯಿಂದ ಗೋಪಿಯರುದ್ಧಾರಾದರು!
ಯಾಪಾತ್ರರಾದರು ಪುರಂದರದಾಸರು! (ಜ)
-ವನಾಕ್ರೋಶದಿಂದ ಮಾರ್ಕಂಡೇಯಪಾರಾದರು! (ನಿ)
-ರ್ಮೂಲರಾದರು ಶಿಶುಪಾಲಾದಿ ರಾಕ್ಷಸರು!
ರದರಾಜನಿಗಾಗ್ಬೇಕ್ನಾವು ಸೇವಕರು! (ಗು)
-ರು ನಿರಂಜನಾದಿತ್ಯರಾ ವರದರಾಜರು!!!

ಎದ್ದು ಬರಲಾರೆ ನಾನೀಗಿದ್ದಲ್ಲಿಂದ! (ಜಿ)   5(2998)

-ದ್ದು ಬಿಟ್ಟು ಬಂದಿಹೆನು ಪ್ರಯಾಸದಿಂದ!
ಹಳಾನಂದವಿಲ್ಲಿ ಬಂದಂದಿನಿಂದ!
ಮಣನ ಪ್ರಿತ್ಯೋಪಚಾರಗಳಿಂದ!
ಲಾಭವಿದುಪೇಕ್ಷಿಸಲಾಗದೆನ್ನಿಂದ! (ತೊ)
-ರೆದು ಜೀವಿಸಲಾರೆ ಚಪಲದಿಂದ!
ನಾರಾಯಣ ನನ್ನಾಪ್ತನಾದುದರಿಂದ!
ನೀರಸ ಬಾಹ್ಯ ಜಗತ್ತಾದುದರಿಂದ! (ಯೋ)
-ಗಿರಾಜನ ಸಂಗ ಸಿಕ್ಕಿದುದರಿಂದ! (ಸ)
-ದ್ದಡಗಿ ಶುದ್ಧಾತ್ಮನಾಗ್ಬೇಕಿದರಿಂದ! (ಇ)
-ಲ್ಲಿಂದ ಜಗದ್ವ್ಯಾಪಕಾತ್ಮಾನಂದದಿಂದ!
ತ್ತ ನಿರಂಜನಾದಿತ್ಯನೈಕ್ಯಾನಂದ!!!

ಎದ್ದೆ ನಾನಿಂದು ಬಹು ಬೇಗ! (ಸ)   4(2287)

-ದ್ದೆಳ್ಳಷ್ಟಿಲ್ಲವಾಗಿತ್ತು ಆಗ! (ನಾ)
-ನಾನಂದಿಸಿದೆನಾಗ ಯೋಗ!
ನಿಂದಾ, ಸ್ತುತಿ ದತ್ತಗಾಯ್ತಾಗ!
ದುರ್ದೈವವೆಂಬುದೊಂದು ರೋಗ!
ಹುಕಾಲದಿಂದಾಯ್ತಾ ಭೋಗ!
ಹುಮ್ಮಸ್ಸಿಲ್ಲ ಬಾಳಿನಲ್ಲೀಗ!
ಬೇಕು ಪರಿಹಾರದಕ್ಕೀಗ!
ತಿ ನಿರಂಜನಾದಿತ್ಯಾಗ!!!

ಎಪ್ಪತ್ತರಾರಂಭ ಈ ದೇಹಕ್ಕೆ! (ದ)   5(3060)

-ಪ್ಪ ಸಣ್ಣವೆಂಬುದೆಲ್ಲಾ ಅದಕ್ಕೆ! (ಚಿ)
-ತ್ತಶುದ್ಧಿಯಿಂದ ಬೆಲೆ ಅದಕ್ಕೆ!
ರಾತ್ರಿ, ದಿನ ದುಡಿಯ್ಬೇಕದಕ್ಕೆ! (ಸಾ)
-ರಂಗನೇ ಶಕ್ತಿ ಕೊಡ್ಬೇಕದೆಕ್ಕೆ!
ಜಿಸಿ ಬದುಕಬೇಕದಕ್ಕೆ!
ಷಾ, ಸೂಯೆ ಬಿಡಬೇಕದಕ್ಕೆ!
ದೇಗುಲವೆಂಬ ನಾಮಾಗದಕ್ಕೆ!
ರಿ, ಹರಾಗಮನಾಗದಕ್ಕೆ! (ಅ)
-ಕ್ಕೆ ನಿರಂಜನಾದಿತ್ಯ ವರಕ್ಕೆ!!!

ಎಪ್ಪತ್ತಾದರೇನಾದಂತಾಯ್ತು? (ಅ)   5(3061)

-ಪ್ಪಣೆ ಪಾಲಿಸ್ಬೇಕೆಂಬಂತಾಯ್ತು! (ದ)
-ತ್ತಾತ್ರೇಯ ಗುರುವೆಂಬಂತಾಯ್ತು!
ರ್ಶನಕ್ಕಾಗಿರೆಂಬಂತಾಯ್ತು!
ರೇಗಿ ಫಲವಿಲ್ಲವೆಂಬಂತಾಯ್ತು!
ನಾಮ ಜಪ ಮಾಡೆಂಬಂತಾಯ್ತು!
ದಂಭ, ದರ್ಪ ಬೇಡೆಂಬಂತಾಯ್ತು!
ತಾನವನಾಗಿರುವಂತಾಯ್ತು!
-ಯ್ತು ನಿರಂಜನಾದಿತ್ಯನಾಯ್ತು!!!

ಎಪ್ಪತ್ತೊಂದರಲ್ಲಿ ತಪ್ಪಿತೊಂದು! (ಅ)   6(3728)

-ಪ್ಪನಿಗಾನಂದವದರಿಂದಿಂದು! (ಮ)
-ತ್ತೊಂದು ಸಲ ಪೂಜೆಯಾಗ್ಬೇಕೆಂದು!
ತ್ತ, ನಿವನೊಂದೆಂಬುದಕ್ಕಂದು! (ಈ)
-ರಹಸ್ಯ ಆನಂದಪಡಿಸ್ಲಿಂದು! (ನಿ)
-ಲ್ಲಿಸಿ ದುಃಖವನ್ನದಕ್ಕಾಗಿಂದು!
ತ್ವವರಿತ್ಮುಕ್ತರಾಗ್ಬೇಕೆಂದು! (ಅ)
-ಪ್ಪಿಕೊಳ್ಳಿ ಅಪ್ಪನನ್ನು ನೀವಂದು!
ತೊಂದ್ರೆಯಾಗದು ನಿಮಗೆಂದೆಂದೂ! (ಇಂ)
-ದು ನಿರಂಜನಾದಿತ್ಯ! ದತ್ತಂದು!!!

ಎಬ್ಬಿಸಿದಾಗ ಮಲಗಬೇಡ! (ಹ)   1(308)

-ಬ್ಬಿಸಿದ ಬಳ್ಳಿ ಕೆಡಿಸಬೇಡ!
ಸಿರಿವಂತನಾಗಿ ಲೋಭ ಬೇಡ!
ದಾರಿ ತಪ್ಪಿದಾಗಾತುರ ಬೇಡ
ತಿಗೆಟ್ಟಾಗ ಮುನ್ನುಡಿ ಬೇಡ! (ಅ)
-ಲಗುವಾಗ ಮರ ಹತ್ತಬೇಡ!
ತಿಗೆಟಾಗೂರು ಬಿಡಬೇಡ!
ಬೇಯುವಾಗುರಿಯಾರಿಸಬೇಡ! (ಅ)
-ಡಗಿ ನಿರಂಜನಾದಿತ್ಯ ಆಡ!!!

ಎಬ್ಬಿಸಿದಾಗೇಳದಿದ್ದರಿಲ್ಲ ಹಬ್ಬ! (ತ)   4(2288)

-ಬ್ಬಿಬ್ಬಾದಾಗ ಗತಿ ಗುರುದೇವನೊಬ್ಬ! (ಬ)
-ಸಿರಲ್ಲಿ ಕೂಸಿಲ್ಲದಿದ್ದರೇಕಾ ಗಬ್ಬ?
ದಾರಿಯಲ್ಲಿರಬಾರದು ಹಳ್ಳ ದಿಬ್ಬ!
ಗೇಣಿಯೆಳೆವಾಗ ಬೇಡ ತೂತು ಡಬ್ಬ! (ಬೆ)
-ಳಕ ಬೀರದಿದ್ದರದು ವ್ಯರ್ಥ ಕಬ್ಬ! (ಹಂ)
-ದಗೇಕುತ್ತಮ ರೇಶ್ಮೆಯ ಶುಭ್ರ ಜುಬ್ಬ? (ಗ)
-ದ್ದಲವಿಲ್ಲದೆ ಕರಗಿಸಬೇಕು ಕೊಬ್ಬ! (ಹ)
-ರಿಶರಣ ಕಾಮದಿಂದಾರನ್ನೂ ತಬ್ಬ! (ಎ)
-ಲ್ಲರಲ್ಲೂ ತಾನೆಂಬುದವನಿಗೆ ಹಬ್ಬ!
ದಿಬದೆ ಹಾರಿಸುವಳೇನು ಹುಬ್ಬ? (ಒ)
-ಬ್ಬ ನಿರಂಜನಾದಿತ್ಯನೆಂದೆಲ್ಲಾ ಹಬ್ಬ!!!

ಎಲೆ ಹುಲ್ಲೆ! ನಾನೇ ಮೇಲೆ ಮೊಲ್ಲೆ! [ಮಾ]   5(2891)

-ಲೆ ನಾನಾಗಿ ಮೇಲ್ಮನೆ ಸೇರ್ಬಲ್ಲೆ!
ಹುಲ್ಲು ನೀನಾಗಿಲ್ಲೇ, ನೆಲದಲ್ಲೆ! (ಮೊ)
-ಲ್ಲೆ! ನಿಜತತ್ವ ನೀನೇನು ಬಲ್ಲೆ?
ನಾಳೆ ನೀನು ತಿಪ್ಪೆ ಪಾಲಾಗ್ಬಲ್ಲೆ! (ಅ)
-ನೇಕಾಕಳಿಗೆ ನಾ ಮೇವಾಗ್ಬಲ್ಲೆ!
ಮೇಲ್ಕೀಳೆಂಬುದ ಬಿಟ್ಟಿಡು ಮೊಲ್ಲೆ!
(ಬೆ)ಲೆಯಿಲ್ಲದ್ದಾವುದಿದೆ, ಹೇಳ್ಮೊಲ್ಲೆ!
ಮೊಟ್ಮೊದ್ಲು ನೀ, ನಾ, ನೊಂದೆಡೆಯಲ್ಲೆ! (ಇ)
-ಲ್ಲೆ ನಿರಂಜನಾದಿತ್ಮಾತ್ಮನಲ್ಲೆ!!!

ಎಲೆ ಹುಲ್ಲೇ! ಮೊಲ್ಲೆ ನನ್ನ ನೀನೇನ್ಬಲ್ಲೆ? [ಬಾ]   5(2892)

-ಲೆಯರ್ಮುಡಿದ್ಕೊಳ್ಳುವ ನಾ ನಿತ್ಯ ಮೊಲ್ಲೆ!
ಹುಳು ಹತ್ತಿ ಸಾಯುವೆ ನೀನು ಇದ್ದಲ್ಲೆ! (ಮೊ)
-ಲ್ಲೇ ನಿಜಸಂಗತಿಯ ನೀನೇನು ಬಲ್ಲೆ?
ಮೊಟ್ಟಮೊದಲು ನೀನೂ ಹುಟ್ಟದ್ದು ಇಲ್ಲೆ! (ಬ)
-ಲ್ಲೆ ನಾ ನಿನ್ನ ತಾಯ್ತಂದೆ ಯಾರೆಂದು ಮೊಲ್ಲೆ!
ನ್ನ ನಿನ್ನಾಟೋರ್ವ ತಾಯ ಮಡಿಲಲ್ಲೆ! (ಉ)
-ನ್ನತಿ, ಅವನತಿ, ಅಶಾಶ್ವತ ಮೊಲ್ಲೆ!
ನೀನು ನಾಳೆ ಮಲಗುವೆ ತಿಪ್ಪೆಯಲ್ಲೆ! (ಅ)
-ನೇಕಾಕಳ ಮೇವಾಗುವೆನು ನಾನಿಲ್ಲೆ! (ಧೇ)
-ನ್ಬಲಕ್ಕೆ ನೆರವಾದ ನಾ ಧನ್ಯ ಮೊಲ್ಲೆ! (ಮೊ)
-ಲ್ಲೆ! ನಿರಂಜನಾದಿತ್ಯಾನಂದೆನಗಿಲ್ಲೆ!!!

ಎಲೆಯುದ್ರ ಬೇಕಾದಾಗದುದ್ರೀತು! (ಕೊ)   6(3378)

-ಲೆ ನೀನದನ್ನು ಕಿತ್ತರುಂಟಾದೀತು! (ಆ)
-ಯುಷ್ಯಮಿತಿಯೆಲ್ಲಕ್ಕುಂಟೆಂದಂದೀತು! (ಭ)
-ದ್ರ ಸರಕಾರವೂ, ಛಿದ್ರವಾದೀತು!
ಬೇಸಾಯ ತಾಳ್ಮೆಯಿದ್ರೆ ಫಲಿಸೀತು!
ಕಾಲಕಾಯದಿದ್ರೆ ನಷ್ಟವಾದೀತು!
ದಾಹವೆಂದುಚ್ಚೆಕುಡಿದ್ರೇನಾದೀತು?
ತಿಗೇಡು, ಮತಿಗೇಡುಂಟಾದೀತು!
ದುಡುಕಿದರೆಲ್ಲಾ ಕುಲಗೆಟ್ಟೀತು! (ಬ)
-ದ್ರೀ ನಾರಾಯಣನಿಚ್ಛೆಯಂತಾದೀತು! (ಹೇ)
-ತು ನಿರಂಜನಾದಿತ್ಯಾಗ್ಬೇಕಾದೀತು!!!

ಎಲ್ಲ ಹಸುವಿನಂತಲ್ಲ ಕಾಮಧೇನು! (ಎ)   6(3790)

-ಲ್ಲಾ ಕಲ್ಲಿನಂತಲ್ಲ ತಿಮ್ಮಪ್ಪೆಂಬವನು!
ಣವಂತ ಗುಣವಂತನೂ ಆಗನು!
ಸುಕೃತಶಾಲಿಯಾಗಿರ್ಬೇಕ್ಮಾನವನು!
ವಿವೇಕ, ವಿಚಾರಾತ್ಮನಾಗ್ಬೇಕವನು!
ನಂಬಿಕೆ ದ್ರೋಹಿಯಾಗಬಾರದವನು!
ನ್ನ ತಾನು ತಿಳಿದಿರಬೇಕವನು! (ತ)
-ಲ್ಲಣಗೊಂಡು ಅಧೀರನಾಗಾಗವನು!
ಕಾಮಹರಶಿವನೇತಾನಾಗುವನು!
ನಸ್ಸು ಪಾರ್ವತಿಯೆಂದರಿಯುವನು! (ವಿ)
-ಧೇಯಳಾದವಳಲ್ಲೈಕ್ಯಗೊಳ್ಳುವನು! (ತಾ)
-ನು ನಿರಂಜನಾದಿತ್ಯಾನಂದಾಗುವನು!!!

ಎಲ್ಲಕ್ಕೂ ಕಾರಣನವನೇ! (ಹು)   4(2326)

-ಲ್ಲ ತಂದ ಗೋಪಾಲನವನೇ! (ತ)
-ಕ್ಕೂಳಿಗವಿತ್ತಾಳ್ವವವನೇ!
ಕಾಳಿಂಗಮರ್ದನನವನೇ! (ಪ)
-ರಮಾರ್ಥ ಬೋಧಕನವನೇ! (ರ)
-ಣಧೀರ ರಾಘವನವನೇ!
ರ ನಾರಾಯಣನವನೇ!
ರ ಗುರುದತ್ತನವನೇ! (ತಾ)
-ನೇ, ನಿರಂಜನಾದಿತ್ಯ ತಾನೇ!!!

ಎಲ್ಲಕ್ಕೂ ನಂಬಿಗೆ ಆಧಾರ! (ನ)   5(2961)

-ಲನಲ್ಲಿರ್ಬಾರದನಾದರ! (ಸ)
-ಕ್ಕೂಬಾಯ್ಕಂಡದ್ದೇಕೀಗ್ನಕಾರ? (ಆ)
-ನಂದಾ ನಂದಕಂದನಾಕಾರ!
ಬಿಸಿಲ್ಗೊಣಗಿತೀ ಆಕಾರ! (ಹೀ)
-ಗೆ ನಂಬಿಗೆಗಾಯ್ತುಪಕಾರ!
ರಿಗಾಗೀ ಮಾಯಾ ಮಂದಿರ?
(ಬು)ಧಾಧಿಗಳ್ಗೇಕಿಷ್ಟು ನಿಷ್ಟುರ? (ಹ)
-ರ ನಿರಂಜನಾದಿತ್ಯಾಕಾರ!!!

ಎಲ್ಲರಂತೆ ನಾನಲ್ಲ ಗಣೇಶಾ! (ಬ)   4(2208)

-ಲ್ಲವಗೇನೆಂದೆನಲಿ ಗಣೇಶಾ?
ರಂಭಾ ಫಲ ತಿನ್ನು ಬಾ ಗಣೇಶಾ! (ಕ)
-ತೆ, ಪುರಾಣಾಮೇಲಾಗ್ಲಿ ಗಣೇಶಾ!
ನಾ ನಿನ್ನ ನೊಡ್ಲೇಬೇಕು ಗಣೇಶಾ!
ನ್ನಣ್ಣ ನೀನಲ್ಲವೇ ಗಣೇಶಾ? (ಅ)
-ಲ್ಲವಾದರಲ್ಲವೆನ್ನು ಗಣೇಶಾ!
ತಿಸುತಿದೆ ಕಾಲ ಗಣೇಶಾ! (ಹ)
-ಣೇ ಬರಹವಾರಿಗೆ ಗಣೇಶಾ? (ಈ)
-ಶಾ ನಿರಂಜನಾದಿತ್ಯ ಗಣೇಶಾ!!!

ಎಲ್ಲರೂ ಕ್ಷೇಮವೇನಮ್ಮಾ? (ಬ)   4(1616)

-ಲ್ಲಮ್ಮ ನೀನಲ್ಲವೇನಮ್ಮಾ? (ಆ)
-ರೂ ಮರೆತಿಲ್ಲ ನಿನ್ನಮ್ಮಾ!
ಕ್ಷೇಮದಾಯಕಿ ನೀನಮ್ಮಾ!
ಹಿಮಾನ್ವಿತಳ್ನೀನಮ್ಮಾ!
ವೇದ ಮಾತೆ ನೀ ನಮ್ಮಮ್ಮಾ!
ಮಸ್ಕಾರ ನಿನಗಮ್ಮಾ! (ಅ)
-ಮ್ಮಾ ನಿರಂಜನಾದಿತ್ಯಮ್ಮಾ!!!

ಎಲ್ಲವನು ಕೊಡುವವನವನಲ್ಲಾ! (ಅ)   2(502)

-ಲ್ಲಹಮ್ಮುದು ಸುಭಾನಲ್ಲ ತಿಳಿಯಲ್ಲಾ! (ಅ)
-ವ, ಇವ, ಶಿವ, ಕೇಶವ ಎಲ್ಲಾನಲ್ಲಾ! (ಅ)
-ನುಮಾನವಿದರಲೇನೂ ಇಲ್ಲವಲ್ಲಾ! (ಅ)
-ಕೊ

, ಇಕೋ, ಬಂದು ಹೋದೆಂಬುದಿಲ್ಲವಲ್ಲಾ!
ಡುಮುಡುಂ ಡಕ್ಕಾಕರೆ ಬೇಕಿಲ್ಲವಲ್ಲಾ!
ರ ಗುರುಕೃಪೆ ಸದಾ ಇರಲಲ್ಲಾ! (ಅ)
-ವನಿಗಾಗೀ ಬಾಳೆಲ್ಲಾ ಕಳೆಯಲಲ್ಲಾ!
ನ್ನ ನಿನ್ನದೆಂಬುದಿದೆಲ್ಲಾ ಸುಳ್ಳಲ್ಲಾ! (ಜ)
-ವನ ಹಂಗು ಅವನಿಗೇನಿಲ್ಲವಲ್ಲಾ!
ಮಿಸಿ ಶರಣಾಗಿರಾ ಪಾದಕೆಲ್ಲಾ! (ಅ)
-ಲ್ಲಾ! ನಿರಂಜನಾದಿತ್ಯನೊಬ್ಬನೆಲ್ಲೆಲ್ಲಾ!!!

ಎಲ್ಲಾ ಆಯಿತಂತೆ! (ಎ)   1(148)

-ಲ್ಲಾ ದರೇನಾದಂತೆ?
ಗೋದಿದೆಯಂತೆ!
ಯಿದಿರು ನೋಡಂತೆ!
ತಂದೆ, ತಾಯ್ನಾನಂತೆ!
ತೆರೆ ಮರೆಯಂತೆ!!!

ಎಲ್ಲಾ ಕ್ಷೇತ್ರವೆನ್ನ ಡಬ್ಬದಲ್ಲಿ! (ಅ)   2(774)

-ಲ್ಲಾತನಿಲ್ಲಾತನಾ ಡಬ್ಬದಲ್ಲಿ!
ಕ್ಷೇಮ ಪ್ರಸಾದವಾಡಬ್ಬದಲ್ಲಿ!
ತ್ರಯಂಬಕನಿಷ್ಟಾ ಡಬ್ಬದಲ್ಲಿ! (ಠಾ)
-ವೆನಗೆಲ್ಲೆಲ್ಲೀಗಾ ಡಬ್ಬದಲ್ಲಿ! (ಉ)
-ನ್ನತಿಯ ಸಾಧನಾ ಡಬ್ಬದಲ್ಲಿ!
ಮರುಧರನಾ ಡಬ್ಬದಲ್ಲಿ! [ಅ]
-ಬ್ಬರವೇನೇನಿಲ್ಲಾ ಡಬ್ಬದಲ್ಲಿ!
ತ್ತನಿಹ ಸದಾ ಡಬ್ಬದಲ್ಲಿ! (ಇ)
-ಲ್ಲಿ ನಿರಂಜನಾದಿತ್ಯದರಲ್ಲಿ!!!

ಎಲ್ಲಾ ದೇವರು ಎಲ್ಲೆಲ್ಲೂ ತುಂಬಿಹನು! (ಎ)   4(2086)

-ಲ್ಲಾರಲ್ಲೂ ಸದಾ ಬಂದು, ಹೋಗುತ್ತಿಹನು!
ದೇಶ, ಕಾಲಗಳ ಹಂಗಿಲ್ಲದಿಹನು! (ಅ)
-ವರವರ ಇಷ್ಟಮೂರ್ತಿಯಾಗಿಹನು! (ಉ)
-ರು ಭಕ್ತಿಯ ಕೂಗಿಗೊಳಿಯುತಿಹನು!
ಡೆಬಿಡದಾದರವ ನೀನಹನು! (ನ)
-ಲ್ಲೆಯಾಗಿ, ನಲ್ಲನಾಗ್ಯೆಲ್ಲಾ ತಾನಹನು! (ಕೊ)
-ಲ್ಲೂರಮ್ಮ, ಬೇಲೂರಯ್ಯ, ಎಲ್ಲವಹನು!
ತುಂಗೆಯೂ ಅಹನು, ಗಂಗೆಯೂ ಅಹನು!
ಬಿಳಿ, ಕಪ್ಪು, ಕೆಂಪು ಹಳದ್ಯಾದ್ಯಹನು!
ರಿ, ಹರ, ಸುರ, ನರರೆಲ್ಲಹನು! (ಅ)
-ನುಪಮ ನಿರಂಜನಾದಿತ್ಯಾಗಿಹನು!!!

ಎಲ್ಲಾ ನನ್ನಿಂದ ನೀನಾಗು ನನ್ನಂದ! (ಸ)   2(476)

ಲ್ಲಾಪವಿನ್ನೇತಕೆನುತಾಗು ನನ್ನಂದ!
ಡೆ ನನ್ನಂತಾಗುತಾಗು ನನ್ನಂದ! (ನ)
-ನ್ನಿಂದನ್ಯ ನೆನೆಯದಾಗು ನನ್ನಂದ! (ಅ)
-ದಕಾಸೆಗಳ ಬಿಟ್ಟಾಗು ನನ್ನಂದ!
ನೀರುಗುಳ್ಳೆ ಬಾಳೆಂದಾಗು ನನ್ನಂದ!
ನಾಮ, ರೂಪ ಸಾಕೆಂದಾಗು ನನ್ನಂದ!
ಗುರು ಶಿಷ್ಯರೊಂದೆಂದಾಗು ನನ್ನಂದ! (ಅ)
-ನಧಿಕಾರಿಯಲ್ಲೆಂದಾಗು ನನ್ನಂದ! (ನ)
-ನ್ನಂದ, ನಿನ್ನಂದವೆಂದಾಗು ನನ್ನಂದ! (ಆ)
-ದರ್ಶ, ನಿರಂಜನಾದಿತ್ಯ ನನ್ನಂದ!!!

ಎಲ್ಲಾ ನಿನಗೊಪ್ಪಿಸಿ ಮಾಳ್ಪುದೆನ್ನ ಧರ್ಮ! (ಕ)   6(3950)

-ಲ್ಲಾದಹಲ್ಯೆಯನ್ನೆಬ್ಬಿಸಿದ್ದು ನಿನ್ನ ಧರ್ಮ!
ನಿತ್ಯಾನಿತ್ಯ ವಿಚಾರಿಯಾಗ್ವುದೆನ್ನ ಧರ್ಮ! (ದಿ)
-ನ, ರಾತ್ರಿ, ನಿನ್ನ ನೆನೆವುದು ನನ್ನ ಧರ್ಮ!
ಗೊಡ್ಡಾಕಳನ್ನು ಕರೆವುದು ನಿನ್ನ ಧರ್ಮ! (ಅ)
-ಪ್ಪಿಕೊಂಡೆನ್ನನ್ನುದ್ಧರಿಪುದು ನಿನ್ನ ಧರ್ಮ!
ಸಿರಿ, ಸಂಪತ್ತಿನಾಸೆ ಬಿಡ್ವುದೆನ್ನ ಧರ್ಮ!
ಮಾಟ, ಮಾರಣ, ಮಾಡದಿರ್ಪುದೆನ್ನ ಧರ್ಮ! (ಕೀ)
-ಳ್ಪುಣ್ಯ, ಪಾಪ ತಪ್ಪಿಸುವುದು ನಿನ್ನ ಧರ್ಮ! (ತಂ)
-ದೆ! ನಿನ್ನಂತೆನ್ನ ಮಾಡುವುದು ನಿನ್ನ ಧರ್ಮ! (ಉ)
-ನ್ನತಿಯನ್ನೇ ಬಯಸುವುದು ನನ್ನ ಧರ್ಮ!
ರ್ಮ ಕರ್ಮವೇನೆಂದರಿವುದೆನ್ನ ಧರ್ಮ! (ಕ)
-ರ್ಮ ನಿರಂಜನಾದಿತ್ಯನಂತಿದ್ದ್ರೆ ಸ್ವಧರ್ಮ!!!

ಎಲ್ಲಾ ಬಣ್ಣ ಮಸಿ ನುಂಗಿತು! (ಕ)   5(3154)

-ಲ್ಲಾಗ್ಯಹಲ್ಯೆ ಬೀಳಬೇಕಾಯ್ತು!
ಹು ಯೋನೀಂದ್ರ ದೇಹವಾಯ್ತು! (ಹೆ)
-ಣ್ಣ ನೆಪಕ್ಕೆ ಲಂಕೆ ಹಾಳಾಯ್ತು!
ದನಾಂಗ ಸುಟ್ಟು ಬೂದಿಯಾಯ್ತು!
ಸಿಟ್ಟಿನಿಂದ ದಾಕ್ಷಾಯ್ಣಿ ಸತ್ತಾಯ್ತು! (ತಾ)
-ನುಂಡಮೃತಾನ್ನ ವ್ಯರ್ಥವಾಯ್ತು!
ಗಿರಿಜೆ ಕಾಮಾಕ್ಷ್ಯಾಗ್ಬೇಕಾಯ್ತು! (ಹೇ)
-ತು, ನಿರಂಜನಾದಿತ್ಯ ಆಯ್ತು!!!

ಎಲ್ಲಾ ಬಣ್ಣ ಮಸಿ ನುಂಗಿತು! (ಚೆ)   4(2302)

-ಲ್ಲಾಟ ಮನಸ್ಸಿಗತಿಯಾಯಿತು!
ಲಗುಂದಿ ದೇಹ ಹಾಳಾಯ್ತು! (ಉ)
-ಣ್ಣಲಿಕಿಸ್ಕಿದನ್ನು ಬೇಡಾಯ್ತು!
ಹೇಶನ ನೆನಪಾಗಾಯ್ತು! (ಹು)
-ಸಿ ಮಾಯಾ ಸಂಗ ತಪ್ಪಿಯೋಯ್ತು! (ತಾ)
-ನುಂಡನ್ನ ಅಗಮೃತವಾಯ್ತು! (ಭೋ)
-ಗಿಯಾಗ ಯೋಗಿಯಾದಂತಾಯ್ತು! (ಹೇ)
-ತು ನಿರಂಜನಾದಿತ್ಯನಾಯ್ತು!!!

ಎಲ್ಲಾ ಬಿಟ್ಟವನನ್ನೇನು ನೋಡುವುದು? (ಉ)   4(1737)

-ಲ್ಲಾಸ ಸಲ್ಲಾಪಕ್ಕಾಸ್ಪದವೇನಿಹುದು?
ಬಿಸಿಯೂಟೋಪಚಾರ ಅಲ್ಲೇನಿಹುದು? (ಹು)
-ಟ್ಟಡಗಬೇಕೆಂಬವನಲ್ಲೇನಿಹುದು?
ಸ್ತ್ರಬಿಟ್ಟವನನ್ನು ನೋಡ್ಯೇನಹುದು?
ಮ್ಮ ಸುಖಕ್ಕೆ ಅವನಿಂದೇನಹುದು? (ಇ)
-ನ್ನೇತಕ್ಕಾಗಿ ಅವನ ಬಯಸಿಹುದು? (ಅ)
-ನುದಿನ ನಾವೇ ದುಡಿಯಬೇಕಿಹುದು!
ನೋಡಿದವರ ಪಾಡು ಏನಾಗಿಹುದು? (ನಾ)
-ಡು, ಬೀಡು ನಮಗೆಲ್ಲಾ ಬೇಕಾಗಿಹುದು! (ಸಾ)
-ವು, ನೋವು ಯಾರನ್ನೇನೆಲ್ಲಿ ಬಿಟ್ಟಹುದು? (ಹೌ)
-ದು! ನಿರಂಜನಾದಿತ್ಯಗರಿವಿಹುದು!!!

ಎಲ್ಲಾ ಮೂರ್ತಿಗಳ ಕೊಂಡಾಡ ಬೇಕು! (ಕ)   6(4372)

-ಲ್ಲಾಗಿವುಗಳೇಕೆ ಕೂತಿರ ಬೇಕು?
ಮೂಕರು ಮಾತಾಡುವಂತಾಗ ಬೇಕು! (ಮೂ)
-ರ್ತಿಗಳಿಗೆ ದಯೆಯುಂಟಾಗ ಬೇಕು!
ರುಡವಾಹನನ ನೋಡ ಬೇಕು! (ತ)
-ಳಮಳ, ಕಳವಳ ತಪ್ಪ ಬೇಕು!
ಕೊಂಡಾಡ್ವುದು ಕಂಡಮೇಲಾಗ ಬೇಕು! (ಬ)
-ಡಾಯಿ ಮಾತುಗಳಾಡದಿರ ಬೇಕು!
ಮ್ಬಾಚಾರವಿಲ್ಲದಂತಿರಬೇಕು!
ಬೇರೆಯವರನುಕರಣೇಕ್ಬೇಕು?? (ಬೇ)
-ಕು, ನಿರಂಜನಾದಿತ್ಯಾನಂದಾಗ್ಬೇಕು!!!

ಎಲ್ಲಾದರೂ, ಹೇಗಾದರೂ ಇರು! ನೀನೆನಗೆ ಗುರು!   1(38)

(ಉ)-ಲ್ಲಾ ಸುತ್ಸಾಹಗಳಾ ತುಂಬುತಿರು! ನಿನೆನಗೆ ಗುರು!
ದತ್ತ ನೀನಲ್ಲದೆ ಬೇರಿನ್ಯಾರು? ನೀನೆನಗೆ ಗುರು!
ರೂಪವಿರಲೇಬೇಕೆನ್ನುವರು! ನೀನೆನಗೆ ಗುರು!
ಹೇಳಿದಿರಾ ಮಾತನೆನ್ನುವರು! ನೀನೆನಗೆ ಗುರು!
ಗಾಯಕಿಕ್ಕದಿರು ಉಪ್ಪು ನೀರು! ನೀನೆನಗೆ ಗುರು!
ದಯೆಯೆನ್ನ ಮೇಲಿರಿಸುತಿರು! ನೀನೆನಗೆ ಗುರು!
ರೂಡಿಯೇನದನರುಹುತಿರು! ನೀನೆನಗೆ ಗುರು!
ಇಲ್ಲ ಗತಿಯಿತರರಿನ್ಯಾರು! ನೀನೆನಗೆ ಗುರು!
(ಉ)-ರುತರದಾಪ್ತನೆನಗೆ ಗುರು ಶ್ರೀ ನಿರಂಜನ ಗುರು!
ಅಥವಾ
ನೀ ನಿರಂಜನ ಗುರು!

ಎಲ್ಲಿ ನೋಡಿದರಲ್ಲಿ ಪದ್ಮನಾಭ (ಕ)   4(1557)

-ಲ್ಲಿನ ಮೂರ್ತಿಯಲ್ಲೂ ಆ ಪದ್ಮನಾಭ! (ಘ)
-ನೋದ್ದೇಶದಿಂದಿಹನಾ ಪದ್ಮನಾಭ! (ಮ)
-ಡಿ ಮೈಲಿಗೆಯರಿಯಾ ಪದ್ಮನಾಭ!
ತ್ತಾತ್ರೇಯ ಸ್ವರೂಪಾ ಪದ್ಮನಾಭ!
ಘುಪತಿ ರಾಘವಾ ಪದ್ಮನಾಭ! (ಬ)
-ಲ್ಲಿದರಿಗೆಲ್ಲಾ ನಲ್ಲಾ ಪದ್ಮನಾಭ!
ಯೋನಿಧಿ ಶಯನಾ ಪದ್ಮನಾಭ! (ಪ)
-ದ್ಮಪಾದ ಸದ್ಗುರುವಾ ಪದ್ಮನಾಭ!
ನಾಮ ಭಜನಾನಂದಾ ಪದ್ಮನಾಭ! (ಶು)
-ಭ ನಿರಂಜನಾದಿತ್ಯಾ ಪದ್ಮನಾಭ!!!

ಎಲ್ಲಿ ಹೋದರೂ ಮನೆಗೇ ಬರಬೇಕು! (ಮ)   2(957)

-ಲ್ಲಿಕಾರ್ಜುನನಡಿಗೆರಗಲೇ ಬೇಕು!
ಹೋದಲ್ಲಿ, ಬಂದಲ್ಲವನ ಧ್ಯಾನ ಬೇಕು!
ಣಿವಾರಲಿಕಿದೊಂದೇ ಇರಬೇಕು!
ರೂಪ, ನಾಮವೆಲ್ಲವನದೆನಬೇಕು!
ನೆ, ಮಠವೆಲ್ಲವನದಾಗಬೇಕು!
ನೆಮ್ಮದಿಗೀ ದಾರಿಯೆಂದರಿಯಬೇಕು!
ಗೇದುದವನ ಪಾದಕ್ಕೊಪ್ಪಿಸಬೇಕು!
ಯಲಾಡಂಬರವೆಲ್ಲಾ ಬಿಡಬೇಕು!
ತ್ನಾತ್ಮಾರಾಮನಾಗಿ ಶೋಭಿಸಬೇಕು!
ಬೇರಿನ್ನಾವುದಕ್ಕಾಶಿಸದಿರಬೇಕು! (ಬೇ)
-ಕು, ನಿರಂಜನಾದಿತ್ಯನಂತಾಗ ಬೇಕು!!!

ಎಲ್ಲೆಲ್ಲೂ ಅಣ್ಣ ತಮ್ಮಂದಿರಲ್ಲೊಡಕು! (ನ)   5(3234)

-ಲ್ಲೆಯರ ಮಾತು ಕೇಳಿದ್ರೆಲ್ಲಾ ತೊಡಕು! (ಕೊ)
-ಲ್ಲೂರಮ್ಮನ ಬಳಿಯಲ್ಲೂ ಈ ಬದುಕು!
ವಳಿಂದಾರಿಗೂ ಆಗದು ಕೆಡಕು! (ಉ)
-ಣ್ಣಲಿದೆ ಕರ್ಮಫಲ! ಇದು ನಿರಖು!
ನ್ನ ತಾನರಿಯದೇ ಎಲ್ಲಾ ಥಳಕು! (ನ)
-ಮ್ಮಂತೆಲ್ಲರೆಂಬ ಸದ್ಬುದ್ಧಿ ಬಂದ್ರೆ ಸಾಕು!
ದಿವ್ಯೋಪದೇಶವಿದರಂತಿರಬೇಕು!
ಕ್ಕಸರಿಗೆದೆಂತರಿವಾಗಬೇಕು? (ಬಿ)
-ಲ್ಲೊಳಗಿನ ಬಾಣ ಎದೆ ಸೀಳಬೇಕು! (ಕೆಂ)
-ಡಗಣ್ಣಿಂದುರಿದು ಬೂದಿಯಾಗಬೇಕು!
ಕುತಂತ್ರ, ನಿರಂಜನಾದಿತ್ಯ ಸುಡ್ಬೇಕು!!!

ಎಲ್ಲೆಲ್ಲೂ ಇರುವವ ನಿನ್ನಲ್ಲೂ! (ನ)   5(3260)

-ಲ್ಲೆಗಿದನೆಂದ ಶಿವ ನಿನ್ನಲ್ಲೂ! (ಇ)
-ಲ್ಲೂಟಲ್ಲೂಟವಗೂಟ ನಿನ್ನಲ್ಲೂ!
ಕ್ಕಾನಂದದಿಂದೂಟವಿಂದಿಲ್ಲೂ!
ರುಚಿ, ಶುಚಿಯೂಟ ನಿತ್ಯದಲ್ಲೂ!
ರ ಗುರು ಪ್ರಸಾದವಾಗ್ಲಿಲ್ಲೂ!
ಶವರ್ತಿಯಾಗ್ತ್ರಿಕಾಲದಲ್ಲೂ!
ನಿತ್ಯ, ಶುದ್ಧ, ಬುದ್ಧ ತಾನೆಲ್ಲೆಲ್ಲೂ! (ತಿ)
-ನ್ನನವ ತಾಮಸಾಹಾರವೆಲ್ಲೂ! (ಎ)
-ಲ್ಲೂರ ನಿರಂಜನಾದಿತ್ಯನಿಲ್ಲೂ!!!

ಎಲ್ಲೆಲ್ಲೂ ನಿರಂಜನಾದಿತ್ಯ ಕಿರಣ! [ಹ]   5(2970)

-ಲ್ಲೆಗಾರರನ್ನಡಗಿಪುದೀ ಕಿರಣ! (ಹು)
-ಲ್ಲೂಡಿ ಕಾಪಾಡ್ವುದಾಕಳನ್ನೀ ಕಿರಣ!
ನಿಗಮಾಗಮ ಸಾರಾದಿತ್ಯ ಕಿರಣ!
ರಂಜಿಪುದಿದರಲ್ಲಿ ರಾಮಾಯಣ!
ಗತ್ತಿನಲ್ಲಿದೊಂದುತ್ಕೃಷ್ಟ ಪುರಾಣ!
ನಾನಾ ಭಾಷೆಯಲ್ಲಿದರ ಪ್ರಕಟಣ!
ದಿವ್ಯಜೀವನಕ್ಕೆ ಬೇಕಾ ಪಾರಾಯಣ! (ನಿ)
-ತ್ಯಸುಖಿಯಾದದರಿಂದ ವಿಭೀಷಣ!
ಕಿವಿ, ಕಣ್ಣಿನಾಳಾಗಿ ಸತ್ತ ರಾವಣ! (ವೀ)
-ರ ಮಾರುತಿಗೆ ಶ್ರೀರಾಮ ಪಂಚಪ್ರಾಣ! (ತ್ರಾ)
-ಣ, ನಿರಂಜನಾದಿತ್ಯನಿಗೀ ಕಿರಣ!!!

ಎಲ್ಲೋಡಿ ಹೋಗಿ ಬಂದೆ ಕಂದಯ್ಯಾ! (ಅ)   5(2590)

-ಲ್ಲೋಲ ಕಲ್ಲೋಲ ಮಾಡಬೇಡಯ್ಯಾ! (ಅ)
-ಡಿದಾವರೆಯಲ್ಲೇಕೆ ಧೂಳಯ್ಯಾ!
ಹೋಳಿಯಾಗೆಷ್ಟ ದಿನವಾಯ್ತಯ್ಯಾ!
ಗಿರಿಧರ ಗೋಪಾಲ ಬಾರಯ್ಯಾ!
ಬಂಡು ಮಾಡಿ ಭಂಡನಾಗ್ಬೇಡಯ್ಯಾ! (ತಂ)
-ದೆ, ತಾಯಿ, ಬಂಧು, ಮಿತ್ರ ನೀನಯ್ಯಾ!
ಕಂದೆರೆದೊಮ್ಮೆ ನನ್ನ ನೋಡಯ್ಯಾ!
ರ್ಶನಾಪೇಕ್ಷಿ ದಾಸಿ ನಾನಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯ ಕೃಷ್ಣಯ್ಯಾ!!!

ಎಷ್ಟಾಗಬೇಕೋ ಅಷ್ಟಾಗಲಿ! (ಅ)   5(2865)

-ಷ್ಟಾಗ್ಬೇಕಿಷ್ಟಾಗ್ಬೇಕೆನ್ನದಿರ್ಲಿ! (ಮ)
-ಗ ಗುರುದೇವನಿಗಾಗಿರ್ಲಿ!
ಬೇರಾವ ಮಾತೇ ಇಲ್ಲದಿರ್ಲಿ!
ಕೋರಿಕೆ ಪರಮಾರ್ಥಕ್ಕಿರ್ಲಿ!
ದನ್ನು ಈಡೇರಿಸುತ್ತಿರ್ಲಿ! (ದು)
-ಷ್ಟಾರಾಧನೆಗಳಿಲ್ಲದಿರ್ಲಿ! (ಸಂ)
-ಗ ಸಜ್ಜನರದ್ದೊಂದೇ ಇರ್ಲಿ! (ಬ)
-ಲಿಷ್ಟ ನಿರಂಜನಾದಿತ್ಯಾಗ್ಲಿ!!!

ಎಷ್ಟು ಕೂಗಿದರೂ ಬದಿರಲೇಕೊಲ್ಲೆ? (ನಿ)   6(4257)

-ಷ್ಟುರ ಸ್ವಭಾವಿ ನೀನೆಂದು ನಾನು ಬಲ್ಲೆ!
ಕೂಟ ನಿನ್ನದುಸರಿಯಿಲ್ಲೆಂದೂ ಬಲ್ಲೆ! (ಯೋ)
-ಗಿರಾಜ ನಿನ್ನವನೆಂದು ನೀನು ಬಲ್ಲೆ!
ಯಾನಿಧಿ ಅವನೆಂದು ನೀನು ಬಲ್ಲೆ!
ರೂಪಕ್ಕಾಳಲ್ಲವನೆಂದೂ ಓಡಿಹೋಗಲೊಲ್ಲೆ!
ದಿಕ್ಕಿಲ್ಲದ ನಿನಗೆ ನಾಥಾತ ಬಲ್ಲೆ!
ಸಗೆಡಿಸಿ ಕಲ್ಲಾದಳು ಅಹಲ್ಯೆ!
ಲೇಸಾಗಿ ಬಂದು ಬಾಲಾನಂದದಿಂದಿಲ್ಲೇ!
ಕೊರವಂಜಿಯಾಟ ಸಾಕೀಗೆನ್ನ ನಲ್ಲೆ! (ನ)
-ಲ್ಲೆ ನಿರಂಜನಾದಿತ್ಯಗೆ ನೀನೆಂದ್ಬಲ್ಲೆ!!!

ಎಷ್ಟು ದಿನ ಈ ಚೇಷ್ಟೆಯಮ್ಯಾ? (ಎ)   4(1858)

-ಷ್ಟು ಹೇಳಬೇಕು ನಿನಗಮ್ಮಾ? (ಸಂ)
-ದಿತಾಯುಷ್ಯ ವ್ಯರ್ಥವಾಗ್ಯಮ್ಮಾ!
ಲ್ಲನಲ್ಲೈಕ್ಯಳಾಗಿರಮ್ಮಾ!
ಗಾದ್ರೂ ವಿವೇಕಿಯಾಗಮ್ಮಾ!
ಚೇತರಿಸಿ ಸುಖಿಯಾಗಮ್ಮಾ! (ದು)
-ಷ್ಟೆಯಾದರೇನು ಸುಖವಮ್ಮಾ?
ದುನಾಥ ನಿನ್ನವನಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾತಮ್ಮಾ!!!

ಎಷ್ಟು ನಾಮ, ಎಷ್ಟು ರೂಪ ನಿನಗಿಷ್ಟ? (ಅ)   5(3249)

-ಷ್ಟು, ಇಷ್ಟು ಅನ್ನುವುದೇ ಬಹಳ ಕಷ್ಟ!
ನಾಶವಾಗದ್ದಾವುದೆಂದು ಹೇಳು ಸ್ಪಷ್ಟ!
ನೆ, ಮಠ ಕಟ್ಟಿಸಿ ಆಯ್ತಲ್ಲಾ ನಷ್ಟ!
ನ್ನವರೆಂಬವರಿಂದ ಆದೆ ಭ್ರಷ್ಟ! (ಇ)
-ಷ್ಟು ಆದ್ರೂ ಅನ್ನಿಸುತ್ತಿದೆ ಅದೇ ಶ್ರೇಷ್ಟ!
ರೂಪಮೋಹದಿಂದಾದ ಮಾನವ ದುಷ್ಟ!
ಡದಾದ ತಾನೆಷ್ಟಿದ್ದರೂ ಸಂತುಷ್ಟ!
ನಿತ್ಯಾನಿತ್ಯವರಿತವ ನರ ಶ್ರೇಷ್ಟ!
ಡೆ, ನುಡಿಯಲ್ಲಿ ಆತ ಆತ್ಮನಿಷ್ಟ! (ತ್ಯಾ)
-ಗಿಯಾದವನಿಗುಂಟೇನು ಇಷ್ಟಾನಿಷ್ಟ? (ಇ)
-ಷ್ಟ ನಿರಂಜನಾದಿತ್ಯನಮರ ಸ್ಪಷ್ಟ!!!

ಎಷ್ಟು ಮುದ್ದು ಮಾಡಿದ್ರೇನು ನಾಯಿಯನ್ನು? (ಅ)   6(3688)

-ಷ್ಟು, ಇಷ್ಟುಂಬಾಗಲ್ಲಾಡಿಸ್ವುದ್ಬಾಲವನ್ನು!
ಮುದ್ದೆ ಕಮ್ಮಿಯಾದ್ರೆ ಕಚ್ಚುವುದ್ನಿನ್ನನ್ನು! (ಕ)
-ದ್ದು ತಿಂದೂ ಮಾಡುವುದು ವಂಚನೆಯನ್ನು!
ಮಾಲಿಕನೆಂತು ಸಹಿಸುವನಿದನ್ನು? (ಓ)
-ಡಿಸುವನು ದೂರ ಮನೆಯಿಂದದನ್ನು! (ಭ)
-ದ್ರೇಶ್ವರಗ್ಬಗೆಯಬಾರದೆರಡನ್ನು!
ನುಡಿದಂತೆ ನಡೆದ್ಸೇವಿಸ್ಬೇಕವ್ನನ್ನು!
ನಾಳೆ ಎನ್ನದೆ ಇಂದೇ ಮಾಡ್ಬೇಕದನ್ನು! (ತಾ)
-ಯಿಯಾಗಿ ನಿನ್ನ ಮುದ್ದಾಡಿದವನನ್ನು!
ಮನಿಗೂ ತಂದೆಯೆನ್ಸಿದವನನ್ನು! (ಸ)
-ನ್ನುತ ನಿರಂಜನಾದಿತ್ಯ ಸ್ವಾಮಿಯನ್ನು!!!

ಎಷ್ಟು ಯೋಚನೆ ಮಾಡಿದರೇನು? [ಎ]   3(1384)

-ಷ್ಟುತ್ತಮನಾಗಿ ನೀನಿದ್ದರೇನು?
ಯೋಗೀಶ್ವರನೆನಿಸಿದರೇನು? (ವಾ)
-ಚಸ್ಪತಿ ತಾನೇ ನೀನಾದರೇನು?
ನೆನೆಸಿದಂತೆಲ್ಲಾಗುವುದೇನು?
ಮಾಡಿಟ್ಟದ್ದುಣ ಬೇಕಲ್ಲವೇನು? (ಬ)
-ಡಿಸು ಬೇರೆಂದರಾಗುವುದೇನು?
ಯೆಯೆಂದು ತೃಪ್ತನಾಗು ನೀನು! (ಹ)
-ರೇಚ್ಛೆಗೆ ಶಿರಬಾಗಿರು ನೀನು! (ನೀ)
-ನು ನಿರಂಜನಾದಿತ್ಯಾಗ್ಬೇಡೇನು??

ಎಷ್ಟು ಸುಂದರಾ ಗುರುದತ್ತ ಮಂದಿರಾ! (ಎ)   4(1795)

-ಷ್ಟು ಮನೋಹರಾ ಶ್ರೀ ಗುರು ದಿಗಂಬರಾ!
ಸುಂದರಾಂಗನುಟ್ಟಿಹ ಕಾಷಾಯಾಂಬರಾ!
ರ್ಶನಾಪೇಕ್ಷಿಗಳಾನಂದಾ ಶೃಂಗಾರಾ!
ರಾತ್ರಿ, ದಿನ ಬಗೆ ಬಗೆಯಾಲಂಕಾರಾ!
ಗುರುಭಕ್ತರ ಭಕ್ತಿ ಪೂಜೋಪಚಾರಾ! (ಗು)
-ರುನಾಮ ಸಂಕೀರ್ತನೆಯಾನಂದಾಪಾರಾ!
ತ್ತ ಪ್ರಸಾದವೆಲ್ಲರ ಪ್ರಾಣಾಧಾರಾ! (ಹ)
-ತ್ತವತಾರವೆತ್ತಿದ ಹರಿಯಾಚಾರಾ!
ಮಂದಮತಿಗರಿವಾಗದ ವಿಚಾರಾ!
ದಿವ್ಯಜೀವಿಗಳಿಗಿದೊಂದು ವಿಹಾರಾ!
ರಾರಾಜಿಪ ನಿರಂಜನಾದಿತ್ಯಾಗಾರಾ!!!

ಎಷ್ಟು ಹೇಳಿದರೂ ಇಷ್ಟ ಸಿದ್ಧಿಗೆ ನಿಷ್ಠೆ ಬೇಕು    1(235)

-ಷ್ಟುರದ ಮಾತೆಲ್ಲಾ ಬಿಟ್ಟು ಇಷ್ಟದಭ್ಯಾಸ ಬೇಕು!
ಹೇಳುವ ಚಪಲ ಕಡಿಮೆಯಾಗುತಿರಬೇಕು! (ಕೇ)
-ಳಿ, ಆಲಕ್ಷ್ಯ ಮಾಡುವುದನು ಬಿಡತಿರಬೇಕು!
ಯೆಗಾಗಿ ಸದಾ ಶ್ರದ್ಧಾವಂತನಾಗಿರಬೇಕು!
ರೂಪ ಭ್ರಾಂತಿಯನು ಸಮೂಲ ಕತ್ತರಿಸಬೇಕು!
ದಕ್ಕಾಗಿ ಶ್ರವಣ ಆಚಾರಕ್ಕೆ ಬರಬೇಕು! (ಕ)
-ಷ್ಟವಾದರೂ ಸಾಧನೆ ಸದಾ ಆಗುತಿರಬೇಕು!
ಸಿಕ್ಕುವುದು ಫಲವೆಂಬ ನಂಬಿಗೆ ಇರಬೇಕು! (ಬು)
-ದ್ಧಿ, ವಿಚಾರದಿಂದ ವಿಶುದ್ಧವಾಗುತಿರಬೇಕು!
ಗೆಳೆತನ ಸಾಧು, ಸಜ್ಜನರದು ಮಾಡುಬೇಕು!
ನಿಬಿಡವಾದಜ್ಞಾನವಿದರಿಂದ ಹೋಗಬೇಕು! (ನಿ)
ಷ್ಠೆಯಿಂದ ಗುರುವಿನುಪದೇಶ ಸಾಧಿಸಬೇಕು!
ಬೇಡದೇ ಸಿಕ್ಕಿದುದರಿಂದ ತೃಪ್ತಿಯಾಗಬೇಕು!
ಕುರುಹು ನಿರಂಜನಾದಿತ್ಯನದು ಇರಬೇಕು!!!

ಎಷ್ಟು ಹೇಳಿದರೇನು ನಿನಗೆ ಮೂರ್ಖಾ? (ಇ)   5(2689)

-ಷ್ಟು ಓದಿದ್ರೂನೂ ನೀನು ಕಾಮಾಂಧ ಮೂರ್ಖಾ!
ಹೇಯವಾಗಿಹುದು ನಿನ್ನೀ ಬಾಳು ಮೂರ್ಖಾ! (ಉ)
-ಳಿಗಾಲವಿಲ್ಲ ನಿನಗಿದ್ರಿಂದ ಮೂರ್ಖಾ!
ಯೆ ದುರುಪಯೋಗಾಗದಿರ್ಲಿ ಮೂರ್ಖಾ!
ರೇಗಾಡಿ, ಕೂಗಾಡಿ ಹಾಳಾಗ್ಬೇಡ ಮೂರ್ಖಾ! (ಮ)
-ನುಜನಾಗಿ ಗುರಿ ಸೇರಬೇಕು ಮೂರ್ಖಾ!
ನಿನ್ನ ನಿಜರೂಪವೇ ಆಗುರಿ ಮೂರ್ಖಾ!
ಶ್ವರ ಮಾಯೆಗೊಳಗಾಗ್ಬೇಡ ಮೂರ್ಖಾ! (ಬ)
-ಗೆ ಬಗೆಯಾಸೆ ಅವಳ ಬಲೆ ಮೂರ್ಖಾ!
ಮೂರುಲೋಕದ ಸುಖವೂ ಮಾಯೆ ಮೂರ್ಖಾ! (ಮೂ)
ರ್ಖಾ! ನಿರಂಜನಾದಿತ್ಯಾನಂದಾ ಬಾಲಾರ್ಕ!!!

ಎಷ್ಟುದಿನ ವೀಪಥ್ಯ ಸ್ವಾಮಿ? [ಅ]   4(2391)

-ಷ್ಟು ಕಷ್ಟವೇನಾಗಿದೆ ಪ್ರೇಮಿ?
ದಿಕ್ಕೇ ತೋಚದಾಗಿದೆ ಸ್ವಾಮಿ!
ಗ್ನಗುತ್ತಿರಬೇಕು ಪ್ರೇಮಿ! (ಭಾ)
-ವೀ ಜೀವನವದೆಂತು ಸ್ವಾಮಿ?
ರಮಾತ್ಮನ ನಂಬು ಪ್ರೇಮಿ! (ಮಿ)
-ಥ್ಯ, ಸತ್ಯದರ್ಥವೇನು ಸ್ವಾಮಿ?
ಸ್ವಾಮಿಯೊಬ್ಬನೇ ಸತ್ಯ ಪ್ರೇಮಿ! (ಪ್ರೇ)
-ಮೀ ನಿರಂಜನಾದಿತ್ಯ ಸ್ವಾಮಿ!!!

ಎಷ್ಟೆಚ್ಚರವಾಗಿದ್ದರೇನು! (ಚೇ)   6(3353)

-ಷ್ಟೆ ವಿಧಿಯದು ತಪ್ಪೀತೇನು? (ಬೆ)
-ಚ್ಚಬಾರದು ಇದಕ್ಕೆ ನೀನು!
ಘುಪತಿಯ ನೆನೆ ನೀನು!
ವಾತಾತ್ಮಜನಂತಾಗು ನೀನು!
ಗಿರಿಯನ್ನೆತ್ತಿ ತಂದ್ನವನು! (ಎ)
-ದ್ದನವನಿಂದ ರಾಘವನು! (ಹ)
-ರೇ ರಾಮ ಜಪಮಾಡು ನೀನು! (ನೀ)
-ನು ನಿರಂಜನಾದಿತ್ಯಸೂನು!!!

ಎಷ್ಟೊಂದು ಹೆಸರು ನಿನಗಪ್ಪಾ? (ಎ)   4(2299)

-ಷ್ಟೊಂದು ರೂಪ ಧರಿಸಿರ್ಪೆಯಪ್ಪಾ?
ದುರಿತದೂರ ನೀನೆಂಬರಪ್ಪಾ!
ಹೆಚ್ಚಾಯ್ತು ಕಷ್ಟಾಸೆಗಳಿಂದಪ್ಪಾ!
ಹಜ ಸ್ಥಿತಿಯಲ್ಲಿರಿಸಪ್ಪಾ! (ಕ)
-ರುಣಾಕರ ನೀನಲ್ಲವೇನಪ್ಪಾ?
ನಿಶ್ಚಲ ಭಕ್ತಿ ಇನ್ನೂ ಹೇಗಪ್ಪಾ?
ನ್ನಲ್ಲಿನ್ನೇನು ತಪ್ಪಿಹುದಪ್ಪಾ? (ಸಂ)
-ಗ ಸರ್ವದಾ ನಿನ್ನದೇ ನೀಡಪ್ಪಾ! (ಅ)
-ಪ್ಪಾ ನಿರಂಜನಾದಿತ್ಯನೆನ್ನಪ್ಪಾ!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ