ಋಣ ಶೇಷ ತೀರಿಸುವ ರೀತಿ ನಾನಾ ತರ! (ಹ)   6(4225)

-ಣ ಕಾಸಿನಲ್ಲಿ ಸಂದಾಯವಾಗ್ವುದೊಂದು ತರ!
ಶೇಷ ವಸ್ತ್ರದಾನರೂಪದಿಂದಿನ್ನೊಂದು ತರ!
ಡ್ರಸಾನ್ನ ದಾನ ರೂಪ ಮಗುದೊಂದು ತರ!
ತೀರ್ಥ, ಕ್ಷೇತ್ರ ಯಾತ್ರೆ ಮಾಡುವುದೂ ಒಂದು ತರ! (ಹ)
-ರಿ ಗುಣಗಾನ ಮಾಡುತ್ತಿರುವುದೊಂದು ತರ!
ಸುಜನರ ಸಂಗದಾನಂದವಿನ್ನೊಂದು ತರ! (ಭ)
-ವಸಾಗರದಲ್ಲಿದ್ದೊದ್ದಾಡುವುದೊಂದು ತರ!
ರೀತಿ, ನೀತಿ ತಪ್ಪಿ ಕಳ್ಳನಾಗ್ವುದೊಂದು ತರ!
ತಿವಿತ, ಇರಿತ, ಜೀವನವಿನ್ನೊಂದು ತರ!
ನಾನಾ ವ್ರತೋಪವಾಸ ಮೂಲಕದೊಂದು ತರ!
ನಾದಾನಂದ ಯೋಗದಲ್ಲಿರುವುದೊಂದು ತರ!
ತ್ವಜ್ಞನಾಗಿ ಮೈಮರೆವುದಿನ್ನೊಂದು ತರ! (ತ)
-ರತರಾತೀತ ನಿರಂಜನಾದಿತ್ಯ ಆಧಾರ!!!

ಋಣ ಸಂದಾಯವಾಗುವುದೆಂತು? (ಹ)   3(1104)

-ಣ ಕೊಟ್ಟು ರಸೀತಿ ಪಡೆಯಿಂತು!
ಸಂಗ ಸಜ್ಜನರದೊಂದು ಕಂತು!
ದಾಸನಾಗುವುದಿನ್ನೊಂದು ಕಂತು!
ಮಾಭ್ಯಾಸ ಮಗುದೊಂದು ಕಂತು!
ವಾಸುದೇವ ಭಕ್ತಿಯೊಂದು ಕಂತು!
ಗುರು ಪಾದಾ ಶ್ರಯ ದೊಡ್ಡ ಕಂತು! (ಠಾ)
-ವು ಅದೆಂಬಾನಂದದ್ಯಂತ ಕಂತು! (ಎಂ)
-ದೆಂದೂಬಿಡುಗಡೆ ಗೈವ ಕಂತು! (ಆಂ)
-ತು, ನಿರಂಜನಾದಿತ್ಯನಾಗಿಂತು!!!

ಋಣ ಸಂಬಂಧ ತೀರಿದರಿರೇನಯ್ಯಾ! (ಹ)   5(3136)

-ಣ, ಕಾಸು, ಕೀರ್ತಿಯಾಸೆನಗಿಲ್ಲವಯ್ಯಾ!
ಸಂಗ ಸಜ್ಜನರದ್ದಿದ್ದರಿರಲಯ್ಯಾ!
ಬಂಧು, ಬಳಗ ಕೈಲಿ ಕಾಸಿದ್ದರಯ್ಯಾ!
ರ್ಮ, ಕರ್ಮ ಯಾರಿಗೂ ಬೇಕಿಲ್ಲವಯ್ಯಾ!
ತೀರ್ಥಕ್ಷೇತ್ರ ಯಾತ್ರೆ ನೇತ್ರಾನಂದಕ್ಕಯ್ಯಾ!
ರಿಪುಕುಲವ ಜೈಸಿರ್ಪವರಾರಯ್ಯಾ?
ತ್ತಗುರು ಕೃಪೆಯಿಂದ ಜಯವಯ್ಯಾ!
ರಿಕ್ತಹಸ್ತನಿಗವನೇ ದಾತನಯ್ಯಾ!
ರೆಕ್ಕೆ, ಪುಕ್ಕ ಕೀಳ್ವ ರಕ್ಕಸಾತ್ನಲ್ಲಯ್ಯಾ!
ರಹರಿಯಿಂದುದ್ಧಾರ ಪ್ರಹ್ಲಾದಯ್ಯಾ! (ಅ)
-ಯ್ಯಾ ನಿರಂಜನಾದಿತ್ಯಾನಂದಾತನಯ್ಯಾ!!!

ಋಣ ಸಂಬಂಧ ತೀರಿದರೇನಾಗುತ್ತೆ?   6(3427)

(ಗು)-ಣಸಂಪನ್ನ ಪತಿಯಿಂದ ದೂರಾಗತ್ತೆ!
ಸಂಘ ವಿಷಯಗಳಲ್ಲಿ ಉಂಟಾಗುತ್ತೆ
ಬಂಧನ ದುಃಖ ಕ್ಷಣ ಕ್ಷಣ ಹೆಚ್ಚುತ್ತೆ!
ರ್ಮ ಬುದ್ಧಿಗೆ ಜಾಗವಿಲ್ಲದಾಗುತ್ತೆ!
ತೀಟೆ, ವ್ಯಾಜ್ಯದಲ್ಲೇ ಕಾಲಕಳೆಯುತ್ತೆ!
ರಿಪುಗಳ ಆಕ್ರಮಣ ಹೆಚ್ಚಾಗುತ್ತೆ!
ರಿದ್ರಾವಸ್ಥೆಗಾಮಂತ್ರಣವಾಗತ್ತೆ!
ರೇಖೆ, ರೂಪಾದಿಗಳೆಲ್ಲಾ ಮಂಕಾಗುತ್ತೆ!
ನಾಮ ಜಪವಂತೂ ಮರೆತೇಹೋಗುತ್ತೆ!
ಗುರಿತಪ್ಪಿ ಪಾತಾಳಕ್ಕೆ ಉರುಳತ್ತೆ! (ಕ)
-ತ್ತೆತ್ತಿದ್ರೆ ನಿರಂಜನಾದಿತ್ಯ ಕಾಣುತ್ತೆ!!!

ಋಣ ಸ್ವಾಮಿ, ಭೃತ್ಯರೀರ್ವರಿಗೂ ಉಂಟು! (ತೃ)   6(3962)

-ಣ ಸಮಾನ ಮುಕ್ತನಿಗೀ ಗಂಟು!
ಸ್ವಾರ್ಜಿತ, ಪಿತ್ರಾರ್ಜಿತಕ್ಕೆಲ್ಲಾ ಇದುಂಟು!
ಮಿತಿಯಿಲ್ಲದಿದು ಅನಾದಿಯ ಗಂಟು!
ಭೃಗುವೂ ಇದನ್ನು ಅಂದು ತೀರ್ಸಿದ್ದುಂಟು!
ತ್ಯಜಿಸಿದಾಗಾಸೆಗಳ ನೀರೀಗಂಟು!
ರೀತಿಯಿದಕ್ಕೆ ತರತರದಲ್ಲುಂಟು! (ಪಾ)
-ರ್ವತೀಶನ ಭಜನೆ ಸುಲಭವುಂಟು! (ಅ)
-ರಿತಿದ ಮಾರ್ಕಂಡೇಯ ಬದುಕಿದ್ದುಂಟು!
ಗೂಢವಿದ್ದ್ರದ್ದರಿಯ ಬೇಕಾದದ್ದುಂಟು!
ಉಂಡು, ತಿಂದು, ಮಲಗುವುದ್ರಲ್ಲೇನುಂಟು? (ಗಂ)
-ಟು ನಿರಂಜನಾದಿತ್ಯ ಕರಗ್ಸಿದ್ದುಂಟು!!!

ಋಣಾನುಬಂಧ ಕಾರಣ ವ್ಯಾಮೋಹಕ್ಕೆ! (ಪ್ರಾ)   6(3701)

-ಣಾ ಪಾನಾದಿಯಿಂದ ಚಾಲಿತ ದೇಹಕ್ಕೆ (ಮ)
-ನು ಮೊದಲಾದವರ ಈ ಸಂತಾನಕ್ಕೆ!
ಬಂಧ ವಿಮೋಚನೆ ಈ ಜನ್ಮದಲ್ಲಕ್ಕೆ!
ರ್ಮ, ಕರ್ಮಕ್ಕೆ ಧಕ್ಕೆಯುಂಟಾಗದಕ್ಕೆ!
ಕಾಮನ ನಿರ್ಮೂಲ ಈಗಾದರೂ ಅಕ್ಕೆ!
ತಿಸುಖದಾಸೆ ನಿಶ್ಯೇಷ ನಾಶಕ್ಕೆ! (ತೃ)
-ಣ, ಕಾಷ್ಠ ವ್ಯಾಪಕಾತ್ಮಾನೆಂಬಅರಿವಕ್ಕೆ!
ವ್ಯಾಧಿ ಪೀಡೆಯಿಂದ ಬಿಡುಗಡೆಯಕ್ಕೆ!
ಮೋಕ್ಷವೆಂಬಾತ್ಮ ಸಾಕ್ಷಾತ್ಕಾರವೀಗಕ್ಕೆ!
ರಿ, ಹರ, ಬ್ರಹ್ಮೈಕ್ಯ ದರ್ಶನವಕ್ಕೆ! (ಅ)
-ಕ್ಕೆ, ನಿರಂಜನಾದಿತ್ಯ ಸಾಕ್ಷಿಯಿದಕ್ಕೆ!!!

ಋಣಾನುಬಂಧದ ಜನ್ಮವಿದು! (ಗ)   6(4211)

-ಣಾಧಿಪಗಿಷ್ಟ ನಾಟಕವಿದು! (ಮ)
-ನುಜರ್ಗರಿವಾಗದಿಹುದು!
ಬಂಧನ ಸಂಸಾರವಾಗಿಹುದು!
ನದಾಶೆ ಬಹಳಾಗಿಹುದು!
ಶೇಂದ್ರಿಯಕ್ಕೆ ಆಳಾಗಿಹುದು!
ನನ, ಮರಣದಿಂದಹುದು! (ಮ)
-ನ್ಮಥನಾಟಾಕರ್ಷಕಾಗಿಹುದು!
ವಿವೇಕ, ವಿಚಾರೊಲ್ಲದಿಹುದು! (ಇ)
-ದು ನಿರಂಅಜನಾದಿತ್ಯಗೊಪ್ಪದು!!!

ಋಣಾನುಬಂಧದಿಂದ ಸಂಬಂಧ! (ಗು)   5(2528)

-ಣಾತೀತನಿಗೆ ಶೂನ್ಯ ಸಂಬಂಧ! (ತ)
-ನು ತಾನೆಂಬವಗೆ ಭವಬಂಧ! (ನಿ)
-ಬಂದನೆಯಿಂದಲ್ಲಾತ್ತ ಸಂಬಂಧ!
ರ್ಮಕರ್ಮದಿಂದಾ ಸತ್ಸಂಬಂಧ! (ತ)
-ದಿಂಗಿತಜ್ಞಗದ್ವೈತಾ ಸಂಬಂಧ!
ಮೆ, ಶಮೆಗಳಿಂದಾ ಸಂಬಂಧ!
ಸಂಕಟ ಪರಿಹಾರಾ ಸಂಬಂಧ!
ಬಂಧು, ಬಳಗ ದೇಹ ಸಂಬಂಧ! (ಬಂ)
-ಧ, ನಿರಂಜನಾದಿತ್ಯಗಿಲ್ಲೆಂದ!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ