ಊಟ ನಿಧಾನವಾದರೇನಮ್ಮಾ? [ಕಾ]   2(580)

-ಟವಿರದಿರುವುದಗತ್ಯಮ್ಮಾ!
ನಿತ್ಯ ಸೇವೆ ಬಿಡಲಾಗದಮ್ಮಾ! (ನಿ)
-ಧಾನವಿದಕಾದರಾಗದಮ್ಮಾ! (ಮ)
-ನವಿದನರಿತಿರಬೇಕಮ್ಮಾ!
ವಾದಿಸಿ ಫಲವೇನಿಲ್ಲವಮ್ಮಾ!
ಮನ ಶಕ್ತಿ ಹೆಚ್ಚಬೇಕಮ್ಮಾ! (ಆ)
-ರೇನೆಂದರೂ ಕೇಳಬಾರದಮ್ಮಾ!
ಶ್ವರವೀ ಶರೀರ ಕಾಣಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯಾನಂದಮ್ಮಾ!!!

ಊಟ ಬಲ್ಲವನಿಗೆ ರೋಗವಿಲ್ಲ! (ಕೂ)   4(2450)

-ಟ, ನೋಟ ಬಿಟ್ಟವಗೆ ಕಾಟವಿಲ್ಲ!
ಟ್ಟಬಯಲ್ಮನಕ್ಕಿಷ್ಟವೇನಿಲ್ಲ! (ಎ)
ಲ್ಲರಾತ್ಮನಾದವಗನ್ಯ ಸೊಲ್ಲಿಲ್ಲ!
ರಗುರುಸ್ವರೂಪವನದೆಲ್ಲ!
ನಿತ್ಯ ತೃಪ್ತಿಯ ಬಾಳವನದೆಲ್ಲ!
ಗೆಳೆಯ ಸೂರ್ಯನಂತಾಚಾರವೆಲ್ಲ!
ರೋದನಜೀವನವನದೇನಲ್ಲ!
ರ್ವಕ್ಕವನಲ್ಲಿ ಜಾಗವೇ ಇಲ್ಲ!
ವಿಕಲ್ಪ, ಸಂಕಲ್ಪದ ಸುಳಿವಿಲ್ಲ! (ಘು)
-ಲ್ಲ ನಿರಂಜನಾದಿತ್ಯಾತ್ಮ ಪ್ರಪುಲ್ಲ!!!

ಊಟ ಬಲ್ಲವನಿಗೆ ರೋಗವಿಲ್ಲ! (ಕೂ)   5(3040)

-ಟ ಬಿಟ್ಟವನಿಗೆ ಪೇಚಾಟವಿಲ್ಲ!
ಬಲ್ಲವನೊಬ್ಬ ಗುರುದೇವನೆಲ್ಲ! (ಎ)
-ಲ್ಲರಂತಾತ ಮಾಯೆಗೆ ಭೀತನಲ್ಲ! (ಭ)
-ವಬಂಧಕ್ಕಾತ ಕಟ್ಟುಬಿದ್ದೇ ಇಲ್ಲ!
ನಿಶ್ಚಲ ತತ್ವವವನ ಬಾಳೆಲ್ಲ!
ಗೆಳೆತನಲ್ಪರಲ್ಲವನಿಗಿಲ್ಲ!
ಗರಿಷ್ಠ ತಾನೆಂಬ ಗರ್ವವಗಿಲ್ಲ!
ವಿರಕ್ತ ದತ್ತ ತಾನಾಗಿಹನಲ್ಲ! (ಅ)
-ಲ್ಲ, ನಿರಂಜನಾದಿತ್ಯ ಅನ್ಯನೇನಲ್ಲ!!!

ಊಟಕ್ಕಿಕ್ಕದುಪ್ಪಿನಕಾಯಿ ಮತ್ತೇತಕ್ಕೆ?   6(4046)

ಗರು ಸುಸ್ತಾದ್ಮೇಲೆ ಕಾಳಗವೇತಕ್ಕೆ? (ಹ)
-ಕ್ಕಿ ಹಾರಿದ ಮೇಲೆ ಗೂಡಿನ ಚಿಂತೇತಕ್ಕೆ? (ದ)
-ಕ್ಕಲಾರದ ಹಕ್ಕ ಸಾಧಿಸುವುದೇತಕ್ಕೆ?
ದುರಾಗ್ರಹದಿಂದ ಕೆಡುಕು ಜೀವನಕ್ಕೆ! (ಉ)
-ಪ್ಪಿಲ್ಲದಿದ್ದರಿದೆಯೇನು ರುಚಿ ಊಟಕ್ಕೆ!
ರರು ಹೊಂದಿಕೊಳ್ಳಬೇಕು ಸಂದರ್ಭಕ್ಕೆ!
ಕಾಯಿದೆ, ಕಾನೂನುಗಳು ಬರೀ ನೆಪಕ್ಕೆ! (ಬಾ)
-ಯಿ ಬಡಾಯಿಯಧಿಕಾರ ಎಷ್ಟು ದಿನಕ್ಕೆ?
ನಶ್ಯುದ್ಧಿಯಿರ್ಬೇಕ್ಯಾಂತಿ ಜೀವನಕ್ಕೆ! (ಕಿ)
-ತ್ತೇನ್ಬಡಿದೇನೆಂಬವ ಹೋಗ್ಲಿ ಸ್ಮಶಾನಕ್ಕೆ!
ರಣಿಯಿರ್ಪಾಗ ಸಕಾಲ ಉದ್ಯೋಗಕ್ಕೆ! (ಅ)
-ಕ್ಕೆ ನಿರಂಜನಾದಿತ್ಯ ಕೃಪೆಯೆಲ್ಲಕ್ಕೆ!!!

ಊಟಕ್ಕಿಲ್ಲದುಪ್ಪಿನಕಾಯ್ಮತ್ತೇತಕ್ಕೆ? (ಮಾ)   5(3074)

-ಟ, ಕಾಟ ಮಾರ್ಗವಲ್ಲ ನಿಜಾನಂದಕ್ಕೆ! (ಸೊ)
-ಕ್ಕಿದವರನ್ನಿಳಿಸಬೇಕ್ಪಾತಾಳಕ್ಕೆ! (ಎ)
-ಲ್ಲರುದ್ಧಾರದಿಂದ ಶೋಭೆ ಭೂತಳಕ್ಕೆ!
ದುರ್ದಶೆ ಬಂದಿಹುದು ಗಣರಾಜ್ಯಕ್ಕೆ! (ಹಿ)
-ಪ್ಪಿಗಳಾದರ್ಶ ಬೇಕಿಲ್ಲ ಭಾರತಕ್ಕೆ!
ರಹರಿಯ ಭಜನೆ ಸಾಕದಕ್ಕೆ!
ಕಾಲಕಾಲಕ್ಮಳೆ, ಬೆಳೆಯಾಗಲಿಕ್ಕೆ! (ಬಾ)
-ಯ್ಮನಾದಿಂದ್ರಿಯ ಗಳ್ಳುಚಿಯಾಲಿಕ್ಕೆ! (ಚಿ)
-ತ್ತೇಕಾಗ್ರತೆಗುತ್ತೇಜನವೀಯಲಿಕ್ಕೆ!
ನ್ನ ತಾ ತಿಳಿದಾನಂದ ಪಡಲಿಕ್ಕೆ! (ಅ)
-ಕ್ಕೆ, ನಿರಂಜನಾದಿತ್ಯ ಕೃಪೆಯದಕ್ಕೆ!!!

ಊಟದೆಲೆಯ್ಮುಂದೆ ಹರಟ್ಬೇಡ! (ಊ)   6(3822)

-ಟ ಕೊಟ್ಟವ್ನ ನೆನೆಯದಿರ್ಬೇಡ! (ತಂ)
-ದೆ, ತಾಯಿ ಅವನೇ! ಮರೆಯ್ಬೇಡ! (ಮೇ)
-ಲೆ, ಕೆಳ್ಗೆ ನೋಡಿ ಕಾಲ ಹಾಕ್ಬೇಡ! (ತಾ)
-ಯ್ಮುಂದೆಚ್ಚರ ತಪ್ಪಿರಲೇ ಬೇಡ! (ಹಿಂ)
-ದೆ ಮುಂದಿನದ್ದೇನೂ ಯೋಚಿಸ್ಬೇಡ!
ರಿನಾಮ ಸ್ಮರಣೆ ಬಿಡ್ಬೇಡ!
ಹಸ್ಯನುಭವಿಸದಿರ್ಬೇಡ! (ಹು)
-ಟ್ಬೇಡ, ಸಾಯ್ಬೇಡ ಪಾರಾಗ್ದಿರ್ಬೇಡ! (ಮೃ)
-ಡ ನಿರಂಜನಾದಿತ್ಯ ಕೈ ಬಿಡ!!!

ಊದಿ, ಊದಿ, ಊದಿತ್ತು ಕಣ್ಣು!   6(3452)

ದಿಕ್ಕಿಲ್ಲದಾದಳೀಗಾ ಹೆಣ್ಣು!
ರಲ್ಲೇನಿದೆ ಒಣ ಮಣ್ಣು! (ಮಂ)
-ದಿಯ ಮಾತಿಂದೊಡ್ಲೆಲ್ಲಾ ಹುಣ್ಣು!
ಳಿಗ ಮಾಡ್ಬಲ್ಲಳಾ ಹೆಣ್ಣು! (ಕಾ)
-ದಿಹಳೀಗಾ ಓದಿದ ಹೆಣ್ಣು! (ಮು)
-ತ್ತುತ್ತಿದೆ ಅವ್ಳ ನೀಚ ಕಣ್ಣು!
ರುಣೆ ತೋರ್ಲೀಗಾ ಮುಕ್ಕಣ್ಣು!
(ಉ)-ಣ್ಣು ನಿರಂಜನಾದಿತ್ಯ ಹಣ್ಣು!!!

ಊದಿನ ಕಡ್ಡಿ ತಂದಿಟ್ಟರಾಯ್ತೇನು? (ಅ)   4(1685)

-ದಿಟ್ಟು ಕಡ್ಡಿ ಪೊಟ್ಣವಿಡಬೇಡ್ವೇನು? (ದಾ)
-ನವಿಲ್ಲದ ಧನವೆಷ್ಟಿದ್ದರೇನು?
ರ್ಮಕ್ಕೆ ಧರ್ಮವಿರದಾಗ್ವುದೇನು? (ಬ)
-ಡ್ಡಿ ಸಿಕ್ಕದ ಠೇವಣಾತಿಯಿಂದೇನು?
ತಂದೆಗೆದುರಾಡ್ವ ಮಗನಿಂದೇನು?
ದಿಕ್ಕಿಲ್ಲದಗೆ ಸಿಟ್ಟಿರ್ಬಹುದೇನು? (ಪ)
-ಟ್ಟ ಹೋದ ಮೇಲಟ್ಟಹಾಸದಿಂದೇನು?
ರಾಗ, ದ್ವೇಷಾಸಕ್ತ ವಿರಕ್ತನೇನು? (ಆ)
-ಯ್ತೇನು ಸಾರ್ಥಕವೀ ಜನ್ಮದಿಂದೇನು? (ನಾ)
-ನು, ನಿರಂಜನಾದಿತ್ಯನಲ್ಲವೇನು???

ಊರಿಗಿನ್ನೂ ಬರಬಾರದೇನಮ್ಮಾ? (ದಾ)   4(1810)

-ರಿ ಖರ್ಚಿಗೇರ್ಪಾಡು ಮಾಡಿತ್ತಲ್ಲಮ್ಮಾ! (ಹೋ)
-ಗಿ ಹೊರಗೆಷ್ಟು ಕಾಲವಿರ್ಪುದಮ್ಮಾ? (ನಿ)
ನ್ನೂರು ನಿನಗೆ ಕಾಶಿಯಲ್ಲೇನಮ್ಮಾ?
ಲು ಹಿಂಸೆ ಪರದೇಶವಾಸಮ್ಮಾ! (ಮ)
-ರಳಿ ಶಿವನ ದರ್ಶನ ಮಾಡಮ್ಮಾ!
ಬಾಗಿಲು ಸದಾ ತೆರೆದಿಹುದಮ್ಮಾ! (ಹ)
-ರ ಸೇವೆಗಿಂತ ಮಿಗಿಲಾವುದಮ್ಮಾ?
ದೇವಿ ನೀನಾಗಿ ಶೋಭಿಸುವೆಯಮ್ಮಾ!
ಷ್ಟ, ಕಷ್ಟಕ್ಕೊಳಗಾಗ ಬೇಡಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯನ ಸೇರಮ್ಮಾ!!!

ಊರು ಕಂಡವ ನೇರದಾರಿ ತೋರ್ಬಲ್ಲ!   6(3662)

ರುಜು ಮಾರ್ಗಿಗೆ ಗಜ, ಧ್ವಜ ಬೇಕಿಲ್ಲ!
ಕಂಡದ್ದೆಂದ್ರೆ ಮಂಡೆಯೊಡೆಯುವರೆಲ್ಲ!
ಕಾಯಿತರಿಗೆ ಧರ್ಮಾಧರ್ಮವಿಲ್ಲ!
ನವಾಸಿಗಳಿಗಾರ ಹಂಗೂ ಇಲ್ಲ!
ನೇಮ ನಿಷ್ಠೆಗೆ ಜಾತಿ, ಮತವೇನಿಲ್ಲ!
ಹಸ್ಯವಿದರಿಯ್ಲಿ ಕಿರಿಯರೆಲ್ಲಾ!
ದಾಸರಿಗೆ ವೇಷದ ಅಗತ್ಯವಿಲ್ಲ!
ರಿಪುಕುಲಾಂತಕಗರಿ ಭಯವಿಲ್ಲ!
ತೋರ್ಕೆಗಾಗಿ ಏನೂ ಮಾಡಬೇಕಾಗಿಲ್ಲ! (ದು)
-ರ್ಬಲರ ಸೇವೆ ಸಬಲರ್ಮಾಡಲೆಲ್ಲಾ! (ಪು)
-ಲ್ಲ ನಿರಂಜನಾದಿತ್ಯಗದೇ ಹಗ್ಲೆಲ್ಲಾ!!!

ಊಹಾಪೋಹ ಮಾಡುವವ ದೇವರಲ್ಲ!   6(4276)

ಹಾರೈಸುವ ಅಭ್ಯಾಸ ಅವನಿಗಿಲ್ಲ!
ಪೋಗುವವ ಬರುವವ ಅವನಲ್ಲ!
ರಿ, ಹರರ ಭೇದ ಅವನಿಗಿಲ್ಲ!
ಮಾತೆಯೂ, ಪಿತನೂ ಅವನೇ ಎಲ್ಲೆಲ್ಲಾ! (ಕ)
-ಡು ಪಾಪಿಗೂ ಅನ್ನ, ಬಟ್ಟೆ ನೀಡಲ್ಲ! (ಅ)
-ವನಿಗೆ ಯಾರ ಶಿಫಾರಸೂ ಬೇಕಿಲ್ಲ! (ಅ)
-ವನಿಗೆ ಕಣ್ಣು, ಕಿವಿ ಜಗತ್ತಲ್ಲೆಲ್ಲಾ!
ದೇವರು ಇಲ್ಲದ ದೇಹಗಳೇ ಇಲ್ಲ! (ಅ)
-ವನೇ ನಾವಾಗ್ವ ತನಕ ಶಾಂತಿಯಿಲ್ಲ! (ವ)
-ರ ಗುರೂಪದೇಶ್‍ ಸಾಧಿಸಬೇಕೆಲ್ಲಾ! (ಫು)
-ಲ್ಲ ನಿರಂಜನಾದಿತ್ಯೋಕ್ತಿ ಸುಳ್ಳೇನಲ್ಲ!!!

ಊಹಾಪೋಹಕ್ಕಾಸೆ ಕಾರಣ!   6(3777)

ಹಾಳಾಯ್ತದರಿಂದ ಸದ್ಗುಣ!
ಪೋಲಾಯ್ತು ಇದರಿಂದ ಹಣ!
ಗಲಿರುಳು ಹಗರಣ! (ತಿ)
-ಕ್ಕಾಟದ್ದೆಲ್ಲೆಲ್ಲೂ ಪ್ರಕರಣ!
ಸೆರೆಮನೆಗವ್ರ ದಿಬ್ಬಣ!
ಕಾರ್ಯೋನ್ಮುಖನಾಗ್ಬೇಕ್ತರುಣ! (ಪ)
ಮಾರ್ಥಿ ನರನುರು ಜಾಣ! (ಜಾ)
-ಣ, ನಿರಂಜನಾದಿತ್ಯ ರಾಣ!!!

ಊಹಾಪೋಹದಿಂದಲ್ಲ ದಾಹ ಶಾಂತಿ!   2(888)

ಹಾದಿ ಸಾಗಿಷ್ಟ ಸಿಕ್ಕಿದಾಗ ಶಾಂತಿ! (ಆ)
-ಪೋಶನದಿಂದ ತುಸು ಮಾತ್ರ ಶಾಂತಿ!
ಸಿದಾಗೂಟ ದೊರೆತರೆ ಶಾಂತಿ! (ದಾ)
-ದಿಂಬಾಗ್ಯುಣ ಬಡಿಸಿದರೆ ಶಾಂತಿ!
ತ್ತನೊಲಿದದನಿತ್ತರೆ ಶಾಂತಿ! (ಅ)
-ಲ್ಲದಿದ್ದರಾಗದು ಸಂಪೂರ್ಣ ಶಾಂತಿ!
ದಾಸನಾಗದಿದ್ದರಲಭ್ಯಾ ಶಾಂತಿ!
ಗಲಿರುಳವನ ಸೇವೆ ಶಾಂತಿ!
ಶಾಂತಿ ಸದಾ ಗುರುಪ್ರಸಾದ ಶಾಂತಿ! (ಪ)
-ತಿ ನಿರಂಜನಾದಿತ್ಯ ಭಕ್ತಿ ಶಾಂತಿ!!!

ಊಹಿಸುವುದೊಂದಾಗುವುದಿನ್ನೊಂದು!   5(2788)

ಹಿತೈಷೀಶ್ವರನೆಂದರಿನ್ನು ಮುಂದು!
ಸುಖ, ದುಃಖವನ ಪ್ರಸಾದವೆಂದು! (ಆ)
-ವುದೂ ಬೇಡೆನಗೆಂದಿರು ಎಂದೆಂದು!
ದೊಂಬಿ, ದರೋಡೆ ಮಾಡಬೇಡೆಂದೆಂದು!
ದಾಸಾನುದಾಸನಾಗಿ ಬಾಳೆಂದೆಂದು!
ಗುಹ್ಯಾಚಾಪಲ್ಯಕ್ಕಾಳಾಗ್ಬೇಡೆಂದೆಂದು! (ಸಾ)
-ವು ಇಲ್ಲದಾತ್ಮ ನೀನೆಂದಿರೆಂದೆಂದು!
ದಿವ್ಯ ನಾಮ ಜಪ ಬಿಡ್ಬೇಡೆಂದೆಂದು! (ಹ)
-ನ್ನೊಂದು ಜೈಸಿ ಹನ್ನೆರಡಾಗೆಂದೆಂದು! (ಬಂ)
-ದು ನಿರಂಜನಾದಿತ್ಯನಾಗೆಂದೆಂದು!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ