ಅಂಗಳದಗಳಿಗೆಲ್ಲರಿಗೂ ಹಕ್ಕು!   6(4254)

ದಸಿದ್ರೆ ಹೋಗದವರ ಹಕ್ಕು! (ಆ)
-ಳವಾದಾಲೋಚನೆಯಿಂದದರಿವಕ್ಕು!
ಯೆಯಿಂದ ಎಲ್ಲಕ್ಕೂ ಉಣಲಿಕ್ಕಿಕ್ಕು! (ಭ)
-ಗವಂತ ನೀನೆಂಬುದು ಆಗರಿವಕ್ಕು! (ಅ)
-ಳಿಲಿನಂತೆ ಕಾಗೆಗೂ ಯಿದೆಲ್ಲಾ ಹಕ್ಕು! (ಕಾ)
-ಗೆಯನ್ನು ನೀನೀಗಟ್ಟದರೆ ತಪ್ಪಕ್ಕು! (ಬ)
-ಲ್ಲವ ನೀನಾಗಿ ನೋಡ್ತಿರ್ನಕ್ಕು! (ಅ)
-ರಿತಿರೆಲ್ಲಕ್ಕೂಟ ಸಿಕ್ಕಿ ಶಾಂತಿಯಕ್ಕು! (ಗಂ)
-ಗೂ ತಾಯಿಯಮೃತ ಪಾನಾರಿಗೆ ಹಕ್ಕು?
ರಿ, ಹರಾದಿ ದೇವರ್ಗಳ್ಗೆಲ್ಲಾ ಹಕ್ಕು! (ಸೊ)
-ಕ್ಕುಡುಗಿಪುದ್ನಿರಂಜನಾದಿತ್ಯ ಹಕ್ಕು!!!

ಅಂಗಿ ತೆಗೆದೊಗೆದು ಬಿಗಿಯಾಗಪ್ಪು! (ಸಂ)   4(1928)

-ಗಿಗಂಗಿಯಡಚಣೆಯೆಂದರಿತಪ್ಪು! (ಕ)
-ತೆ, ಪುರಾಣ ಮರೆತಾನಂದದಿಂದಪ್ಪು! (ಬೇ)
-ಗೆ ಸಹಿಸ್ಯನನ್ಯ ವಿಶ್ವಾಸದಿಂದಪ್ಪು!
ದೊರಕುವುದು ನಿತ್ಯ ಶಾಂತಿಯೆಂದಪ್ಪು! (ಗಂ)
-ಗೆ, ಪಾರ್ವತಿಯರಂತೆ ಪ್ರೀತಿಯಿಂದಪ್ಪು!
ದುರ್ವ್ಯಾಪಾರಕ್ಕೆಡೆಗೊಡದೆ ಬಂದಪ್ಪು!
ಬಿಸಿಯುಸಿರ್ಬಿಡದಾರಾಮದಿಂದಪ್ಪು!
ಗಿರಿಜಾಪತಿಯೇ ನಾನೆಂದರಿತಪ್ಪು! (ದ)
-ಯಾಸಾಗರ ಪರಮೇಶ್ವರನೆಂದಪ್ಪು! (ಯೋ)
-ಗಭಾಗ್ಯ ಸ್ಥಿರವಾಗಿರಬೇಕೆಂದಪ್ಪು! (ಕ)
-ಪ್ಪು ನಿರಂಜನಾದಿತ್ಯನಲ್ಲವೆಂದಪ್ಪು!!!

ಅಂಗೈ ಮೇಲಾಡು ಸುಂದರಮ್ಮಾ! (ಲಿಂ)   4(1948)

-ಗೈಕ್ಯ ಗುರುಪಾದದಲ್ಲಮ್ಮಾ!
ಮೇರೆಯಿಲ್ಲದಾನಂದದಮ್ಮಾ! (ಲೀ)
-ಲಾವತಾರಿ ನಿರಂಜನಮ್ಯಾ! (ನೋ)
-ಡು ಅವನಾಕಾರೊಳಗಮ್ಮಾ! (ವ)
-ಸುಂಧರಾ ಸ್ವಾಮಿ ಅವನಮ್ಮಾ!
ತ್ತ ಸ್ವರೂಪ ಗುರುವಮ್ಮಾ! (ವ)
-ರ ಸಾಯುಜ್ಯಪ್ರದವನಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾತಮ್ಮಾ!!!

ಅಂಜೂರವೊಂದೊಳ್ಳೆಯ ಹಣ್ಣು! [ಆ]   4(2392)

-ಜೂ, ಬಾಜೂ ಸಿಕ್ಕುವುದಾ ಹಣ್ಣು! (ವ)
-ರಗುರುದತ್ತಗಿಷ್ಟಾ ಹಣ್ಣು! (ಸಾ)
-ವೊಂದ ತಪ್ಪಿಸದಾವ ಹಣ್ಣು!
ದೊರೆ ಮೇಲೂ ಯಮನ ಕಣ್ಣು! (ಸು)
-ಳ್ಳೆಲ್ಲವನ್ನೂ ಸುಡ್ವುದಾ ಕಣ್ಣು! (ಭ)
-ಯಪಡ್ವುದನಂತಗಾ ಕಣ್ಣು!
ರಿನಾಮನಂತನಾ ಕಣ್ಣು! (ಹ)
-ಣ್ಣು, ನಿರಂಜನಾದಿತ್ಯಾಗುಣ್ಣು!!!

ಅಂತಃಕಲಹವೆಂದಿಗೆ ಶಾಂತಿ? (ಅಂ)   4(1902)

-ತಃಕರಣ ಶುದ್ಧಾದಾಗ ಶಾಂತಿ!
ರ್ತವ್ಯ ನಿಷ್ಠನಾದಾಗ ಶಾಂತಿ! (ಕಾ)
-ಲಲೀಲೆಯನ್ನರಿತಾಗ ಶಾಂತಿ!
ರಿನಾಮ ಹಾಡಿದಾಗ ಶಾಂತಿ! (ಹಾ)
-ವೆಂದ ಹಗ್ಗ ನೋಡಿದಾಗ ಶಾಂತಿ!
ದಿವ್ಯಾತ್ಮ ರೂಪನಾದಾಗ ಶಾಂತಿ! (ಬ)
-ಗೆ ಬಗೆಯಾಸೆ ಸತ್ತಾಗ ಶಾಂತಿ!
ಶಾಂಭವಿ ತಾನೊಲಿದಾಗ ಶಾಂತಿ! (ಶಾಂ)
-ತಿ ನಿರಂಜನಾದಿತ್ಯಾತ್ಮ ಶಾಂತಿ!!!

ಅಂತರಂಗ, ಬಹಿರಂಗಾತೀತ, ಶುದ್ಧಾಂತರಂಗ!   6(3835)

ತವಿದರಿತಿರುವವನೆಂದೆಂದೂ ನಿಸ್ಸಂಗ!
ರಂಗ, ಸಾರಂಗ, ಪಾಂಡುರಂಗ, ವಿಮಲಾಂತರಂಗ!
ರ್ವದಿಂದೆಲ್ಲರನು ವಂಚಿಸುವವನನಂಗ!
ರಲನೇಕಜನ್ಮ ಕಾರಣ ಇವನ ಸಂಗ!
ಹಿತೈಷಿ ತಾನೆನಿಸಿ ಮಾಡುವನು ಮಾನ ಭಂಗ!
ರಂಗುರಂಗಿನಿವನಾಟಕೆ ಸೋತ ಋಷ್ಯಶೃಂಗ!
ಒನೆ ಲಿನೆ ಮಿ

ಸಿ
ತೀರ್ಥಳಾದಳವನ ಸಹವಾಸದಿಂದ ಗಂಗ!
ಪೋನಿಧಿ ಗಿರಿಜಾಧವನೀತ ಸುಂದರಾಂಗ!
ಶುಕಾದಿಗಳಿಗೆ ಆಗಿತ್ತು ಅವನ ಸತ್ಸಂಗ! (ಶು)
-ದ್ಧಾಂತರಂಗ ಸಿದ್ಧಿಗೆ ಪೂಜಿಸ್ಬೇಕು ಶಿವಲಿಂಗ!
ತ್ವ ಸಿದ್ಧಿಗೆ ಅನುಕೂಲ ಅಷ್ಟಾಂಗ ಯೋಗಾಂಗ!
ರಂಭೆ, ಊರ್ವಶಿ ಮೊದ್ಲಾದವರಿಂದ ತಪೋಭಂಗ!
ಭಾಸ್ಥಿ ಶ್ರೀ ನಿರಂಜನಾದಿತ್ಯ ಶುದ್ಧಾಂತರಂಗ!!!

ಅಂತರಂಗದ ಚಿಂತೆ ಅಂತರ್ಯಾಮಿ ಬಲ್ಲ!   3(1163)

ನು, ಮನೆಂದ್ರಿಯಕ್ಕೆಲ್ಲಾ ಅವನೇ ನಲ್ಲ!
ರಂಗನಿವನ ಆಳ ಅರಿತವರಿಲ್ಲ! (ಆ)
-ಗಣದೀಗಿಲ್ಲ ಈಗಿನದು ಆಮೇಲಿಲ್ಲ!
ಯೆ, ದಾಕ್ಷಿಣ್ಯಕ್ಕೆ ಏನೂ ಕಡಿಮೆಯಿಲ್ಲ!
-ಚಿಂತೆ ಮನಸ್ಸಿನಿಂದಿನ್ನೂ ದೂರವಾಗಿಲ್ಲ!
ತೆರೆಯೊಳಗಾಗುತಿದೆ ಸನ್ನಾಹವೆಲ್ಲ!
ಅಂಕದ ಪರದೆಯಿನ್ನೂ ಮೇಲಕ್ಕೆತ್ತಿಲ್ಲ!
ಳಮಳದಿಂದೇನೂ ಪ್ರಯೋಜನವಿಲ್ಲ! (ಕಾ)
-ರ್ಯಾರ್ಥಿ ತಾಳ್ಮೆಯಿಂದಿರದೆ ನಿರ್ವಾಹವಿಲ್ಲ!
ಮಿಗಿಲಾದಾತ್ಮ ಚಿಂತನೆ ಬೇಕಿದಕೆಲ್ಲ!
ರಡಾಸೆ ಹೋಗದೆ ಇದಾಗುವುದಿಲ್ಲ! (ಬ)
-ಲ್ಲ ನಿರಂಜನಾದಿತ್ಯಗತಿ ಜಗಕೆಲ್ಲ!!!

ಅಂತರಂಗವನ್ನಾಳುವವ ಶ್ರೀರಂಗ!   6(4011)

ನ್ನಿಂದಾಗುತಿದೆಲ್ಲಾ ಎಂಬುದೀ ಮಂಗ!
ರಂಗನೂ ಮಾಯೆಯೊಳಗೆಂಬುದೀ ಮಂಗ!
ರ್ವ ಮುರಿವುದಿದರದ್ಯಿವಲಿಂಗ! (ಭು)
-ವನೇಶ್ವರಿಯೆದ್ರೂ ದಿಗಂಬರಾ ಲಿಂಗ! (ನ)
-ನ್ನಾಧೀನ ನೀನೆನ್ನುದಾ ಆತ್ಮಲಿಂಗ! (ಗೋ)
-ಳು, ನಿನ್ನದದಕ್ಕಂಟದೆಂಬುದಾ ಲಿಂಗ! (ಭು)
-ವನಾದ್ಯೆಲ್ಲಾ ಲೋಕಗಳಿಗಾಧಾರಾ ಲಿಂಗ!
ರ್ಣಿಸಲಸದಳ ಆ ಮಹಾ ಲಿಂಗ!
ಶ್ರೀಕರ, ಶುಭಕರ ಆ ತೇಜೋ ಲಿಂಗ!
ರಂಗ, ಶ್ರೀರಂಗ, ಪಾಂಡುರಂಗ ಆ ಲಿಂಗ!
ಭಸ್ತಿ ನಿರಂಜನಾದಿತ್ಯಾ ಶ್ರೀರಂಗ!

ಅಂತರಿಕ್ಷವನ್ನಳೆವ ಸಾಹಸ ಸಾಕಪ್ಪಾ! (ಅಂ)   6(3330)

-ತರಂಗ ಶುದ್ಧವಾದರೆಲ್ಲಾ ಅಳೆದಂತಪ್ಪಾ!
ರಿಸಿ, ಮುನಿಗಳಿಂದಾಯ್ತು ತಪಸ್ಸದಕ್ಕಪ್ಪಾ!
ಕ್ಷಣಿಕವೀ ಚರಾಚರವೆಂದರಿತಿರಪ್ಪಾ!
ರಗುರುಕೃಪೆಯಿಂದ ಧನ್ಯರಾದರಪ್ಪಾ! (ಉ)
-ನ್ನತದ ಆತ್ಮ ಸಾಕ್ಷಾತ್ಕಾರ ಪಡೆದರಪ್ಪಾ! (ಇ)
-ಳೆಯ ವ್ಯಾಮೋಹದಿಂದ ಉದ್ಧಾರವಾದರಪ್ಪಾ!
ಜ್ರಕವಚ ತೊಟ್ಟವರೂ ಸತ್ತುಹೋದ್ರಪ್ಪಾ!
ಸಾಯುಜ್ಯವೆಂಬ ಅದೇ ಚಿರಂಜೀವಿತ್ವವಪ್ಪಾ!
ದಿನಾಲ್ಕುಲೋಕ, ಸುಖಕ್ಕಿಂತದು ಮೇಲಪ್ಪಾ!
ಚ್ಚಿದಾನಂದ ಪರಬ್ರಹ್ಮವೇ ಎಲ್ಲೆಲ್ಲಪ್ಪಾ!
ಸಾಧಿಸಬೇಕಿದನ್ನೀ ನರಜನ್ಮದಲ್ಲಪ್ಪಾ!
ಲಿಮಲಹರ ಶ್ರೀರಾಮ ಭಜನೆಯಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯಾನಂದವೇ ಗುರಿಯಪ್ಪಾ!!!

ಅಂತರ್ಮುಖೀ! ನೀನೇ ಪರಮ ಸುಖಿ!   4(2241)

ನುಭಾವ ಮರೆತ ನೀನೇ ಸುಖಿ! (ಆ)
-ರ್ಮುಖನನ್ನೊಡಗೂಡಿ ನೀನೇ ಸುಖಿ! (ಸ)
-ಖೀಜನರನ್ಬಿಟ್ಟಂದ ನೀನೇ ಸುಖಿ!
ನೀತಿವಂತೆ ನೀನಾಗಿ ನೀನೇ ಸುಖಿ!
ನೇಮವಿದೇ ಇದ್ದರೆ ನೀನೇ ಸುಖಿ!
ತಿಸೇವಾ ನಿರತೆ ನೀನೇ ಸುಖಿ! (ವ)
-ರ ಗುರುಕೃಪೆಯಿಂದ ನೀನೇ ಸುಖಿ! (ನಾ)
-ಮಜಪ ಬಲದಿಂದ ನೀನೇ ಸುಖಿ!
ಸುವಿಚಾರಿ ನೀನಾಗಿ ನೀನೇ ಸುಖಿ! (ಸು)
-ಖಿ ನಿರಂಜನಾದಿತ್ಯಾತ್ಮ ಮುಖಿ!!!

ಅಂತರ್ಯಾಮಿಗಾಗಿ ಮನ ಕರಗಲಮ್ಮಾ!   2(959)

ರತರದಾಸೆಗಳೆಲ್ಲಾ ಹೋಗಲಮ್ಮಾ! (ಕಾ)
-ರ್ಯಾದರ್ಶವಿದು ಭಾರ್ಯೆಯಾದವಳಿಗಮ್ಮಾ!
ಮಿತ್ರ ಪ್ರಿಯಪತಿಯೊಬ್ಬನೆಂದರಿಯಮ್ಮಾ! (ಯೋ)
-ಗಾನಂದದಿಂದ ಸದ ಸುಖಿ ನೀನಾಗಮ್ಮಾ!
ಗಿರಿಧರ ರೂಪ ನಿನ್ನ ಪತಿ ಕಾಣಮ್ಮಾ!
ನೋವಕ್ಕಾಯದಿಂದವನ ಪೂಜಿಸಮ್ಮಾ!
ಲ್ಲನೊಲಿದರೆ ಗುರುವೊಲಿದಂತಮ್ಮಾ!
ರ್ಮವಿನ್ನೇನೂ ಸತಿಗೆ ಬೇಕಿಲ್ಲವಮ್ಮಾ!
ಮಾದೇವಿ ಸದಾ ಸುಖಿಯಿದರಿಂದಮ್ಮಾ!
ತಿಗೆಡಬಾರದನ್ಯ ದಾರಿಯಿಂದಮ್ಮಾ!
ವಕುಶರ ತಾಯಿಯಂತಾಗಬೇಕಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯಾತ್ಮಾಂತರ್ಯಮಿಯಮ್ಮಾ!!!

ಅಂತರ್ಯಾಮಿಗೇಕೆ ವದಂತಿ?   6(3322)

ನಗದರಿಂದ ಅಶಾಂತಿ! (ಭಾ)
-ರ್ಯಾ ಮಕ್ಕಳಿಲ್ದಾತ ಏಕಾಂತಿ!
ಮಿತ್ರ, ಶತ್ರುದೂರಾ ವೇದಾಂತಿ!
ಗೇಣಿ ಅಳೆಯ್ದಾತ ಭೂಪತಿ!
ಕೆರೆ, ಭಾವ್ಯವಗೆ ಸಂಗಾತಿ!
ರ ಗುರುದತ್ತಾ ಶ್ರೀಪತಿ!
ದಂಡ, ಕಮಂಡ್ಲುಧಾರೀ ಯತಿ! (ಯ)
-ತಿ ನಿರಂಜನಾದಿತ್ಯ ಗತಿ!!!

ಅಂತ್ಯಕಾಲ ಬಂದಾಗಂತಕನ ಪಾಲು! (ನಿ)   4(2034)

-ತ್ಯ ಕೊಲ್ಲುವೆನೆಂದರವನಿಗೂ ಸೋಲು!
ಕಾಲನಾದರೂ ಕಾಲಚಕ್ರದ ಪಾಲು! (ಅ)
-ಲಕ್ಷ್ಯದಿಂದಹಂಕಾರಿಯಾದರೆ ಸೋಲು!
ಬಂಧು ಬಾಂಧವರೆಲ್ಲಾ ಕಾಲನ ಪಾಲು!
ದಾಶರಥಿಯಿಂದ ರಾವಣಗೆ ಸೋಲು!
ಗಂಗೆ ಗುರು ಸಂಗಮೇಶ್ವರನ ಪಾಲು!
ರಣಿ ಕರುಣಿಸದಿದ್ದರೆ ಸೋಲು!
ಮಲಾಂಬೆ ಕಮಲನಾಭನ ಪಾಲು! (ಮ)
-ನಸಿಜಗೆ ಮದನಾರಿಯಿಂದ ಸೋಲು!
ಪಾದ ಭಜನಾನಂದ ಭಕ್ತನ ಪಾಲು (ಬ)
-ಲುಮೆ ನಿರಂಜನಾದಿತ್ಯಾತ್ಮನ ಪಾಲು!!!

ಅಂತ್ಯಕಾಲಕ್ಕಾರಿಗಾರರುಹಯ್ಯಾ! (ಅಂ)   4(2466)

-ತ್ಯ ಸಂಸ್ಕಾರೊಡಲಿಗಾಗ್ಲೇಬೇಕಯ್ಯಾ!
ಕಾಲಿಗೆ ಬಿದ್ದ್ರೂ ಕಾಲ ಬಿಡನಯ್ಯಾ! (ಛ)
-ಲ, ಬಲವನ ಮುಂದೆ ಫಲಿಸ್ದಯ್ಯಾ! (ಧಿ)
-ಕ್ಕಾರವನನ್ನು ಮಾಡಬಾರದಯ್ಯಾ! (ಹ)
-ರಿಭಕ್ತ ಸಾವಿಗಂಜ್ಬೇಕಿಲ್ಲವಯ್ಯಾ! (ಸಂ)
-ಗಾತಿ ಅವನ ದಿವ್ಯನಾಮವಯ್ಯಾ! (ಪ)
-ರಮಪದವಿಯದು ಕೊಡ್ವುದಯ್ಯಾ! (ಗು)
-ರು ಭೋಧೆ ಕೇಳಿ ನಿಶ್ಚಿಂತನಾಗಯ್ಯಾ!
ರಿ, ಹರಾದಿ ರೂಪವನದಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯನವನಯ್ಯಾ!!!

ಅಂತ್ಯಕಾಲದ ದತ್ತ ನೆನಪು! [ಸ]   2(723)

-ತ್ಯ ಶ್ರೀ ಲಕ್ಷ್ಮಿಪತಿಯ ನೆನಪು!
ಕಾ

ಳಿವಾಗಿದೇ ನೆನಪು!
ಕ್ಷ್ಯದಲಿರಬೇಕೀ ನೆನಪು!
ತ್ತಾನುಗ್ರಹದಿಂದೀ ನೆನಪು! (ಮ)
-ದ, ಮತ್ಸರ ನಾಶಕೀ ನೆನಪು! (ಅ)
-ತ್ತ, ಇತ್ತ ಸರ್ವತ್ರವೀ ನೆನಪು!
ನೆರೆ ಶಾಂತಿಪ್ರದವೀ ನೆನಪು!
ರ ಜನ್ಮ ಸಾರ್ಥಕಾ ನೆನಪು! (ಭಾ)
-ಪು! ನಿರಂಜನಾದಿತ್ಯ ನೆನಪು!!!

ಅಂದ, ಗಂಧವಿಲ್ಲದ ಕುಸುಮ ನಾನಮ್ಮಾ!   2(803)

ರ್ಶನಾಕರ್ಷಣೆಯನಗೇನಿಲ್ಲವಮ್ಮಾ!
ಗಂಗೋದಕಾಹಾರವೀಗ ಬೇಕಿಲ್ಲವಮ್ಮಾ!
ನಾಗಮವೇನೂ ಬರಲಾರದಮ್ಮಾ!
ವಿಧಿಯಾಜ್ಞಾಬದ್ಧನಾಗಿ ಬಾಳಿಹೆನಮ್ಮಾ! (ಬೆ)
-ಲ್ಲವೀಗೆಲ್ಲಾ ಬತ್ತಿಹುದೆನ್ನಿಂದಮ್ಮಾ!
ಯೆ ಬಂದಾಗ ಉದುರಿ ಹೋಗುವೆನಮ್ಮಾ!
ಕುಮತಿಗೆನ್ನ ನಿಜ ಅಳವಡದಮ್ಮಾ!
ಸುವಿಚಾರಕೆನ್ನಲಿಹುದು ಪಾಠವಮ್ಮಾ!
ನ ಮಾಡಬೇಕೆನ್ನ ಜೀವನವಮ್ಮಾ!
ನಾಮ, ರೂದಪಸ್ಥಿರತೆ ಅರಿವುದಮ್ಮಾ!
ನ್ನಂತಾದಾಗ ಪರಮ ಪದವಿಯಮ್ಮಾ! [ಅ]
-ಮ್ಮಾ! ನಿರಂಜನಾದಿತ್ಯನೆಲ್ಲಾ ಬಲ್ಲವಮ್ಮಾ!!!

ಅಂದ, ಚಂದ ನೋಡುವ ಕಣ್ಣೆನಗಿಲ್ಲ!   6(3816)

ಯೆ ದಾಕ್ಷಿಣ್ಯಕ್ಕೊಳಗೆ ಜಾಗವಿಲ್ಲ!
ಚಂಚಲ ಸ್ವಭಾವದ ಮನಸ್ಸೀಗಿಲ್ಲ!
ರಿದ್ರ ಶ್ರೀಮಂತರಲ್ಲಿ ಭೇದವಿಲ್ಲ!
ನೋಡ್ದೇ ನಂಬ್ಲಿಕ್ಕೆ ಮನಸ್ಸೊಪ್ಪುವುದಿಲ್ಲ!
ಡುಮ್ಕಿ ಹೊಡೆಯುವಷ್ಟು ಅಶ್ರದ್ಧೆಯಿಲ್ಲ!
ರ ಗುರುಭಕ್ತಿಯೇನೂ ಕಮ್ಮಿಯಿಲ್ಲ!
ನಿಕರವೇಕೋ ಅವಗೆ ಬಂದಿಲ್ಲ! (ಬೆ)
-ಣ್ಣೆಯಂತಿದ್ದರೂ ಸುಣ್ಣ ಬೆಣ್ಣೆಯೇನಲ್ಲ!
ಶ್ವರದ ದೇಹಕ್ಕಾಶಿಸುವುದಿಲ್ಲ!
ಗಿ .............................! (ತ)
-ಲ್ಲಣ ನಿರಂಜನಾದಿತ್ಯನಿಗೇನಿಲ್ಲ!!!

ಅಂದ, ಚಂದ, ಕಂದಕದ ಪಾಲಿಗಾಯ್ತು!   6(4037)

ಯೆ, ದಾಕ್ಷಿಣ್ಯ ಮೃತ್ಯುವಿಗಿಲ್ಲದಾಯ್ತು!
ಚಂದ್ರಲೋಕಕ್ಕೆ ಹೋದದ್ದೂ ವ್ಯರ್ಥವಾಯ್ತು!
ಶೇಂದ್ರಿಯದ ಚಪಲ ಹೆಚ್ಚಿ ಹೋಯ್ತು!
ಕಂಡವರ ಮನೆಯ ಭಿಕ್ಷೆಗೀಡಾಯ್ತು!
ಬ್ಬಿಸಿ ಹಲ್ಲು ಮುರಿಸಿಕೊಂಡದ್ದಾಯ್ತು!
ಳ್ಳ, ಸುಳ್ಳನೆಂದೆನಿಸಿಕೊಂಡದ್ದಾಯ್ತು!
ಫೇದಾರನಿಂದೊದೆಸಿಕೊಂಡದ್ದಾಯ್ತು!
ಪಾಪಿ ಮಾನವನ ಪಾಡೀ ರೀತಿಯಾಯ್ತು! (ಆ)
-ಲಿಸುವವರಿವನ ಮಾತಿಲ್ಲದಾಯ್ತು!
ಗಾಡಿ ಬಹಳಾಳಕ್ಕೆ ಉರುಳಿಹೋಯ್ತು! (ಆ)
-ಯ್ತು ನಿರಂಜನಾದಿತ್ಯನೇ ಕಾಯ್ಬೇಕಾಯ್ತು!!!

ಅಂದ, ಚಂದಕ್ಕೆ ಮರುಳಾಗಬೇಡ! (ಕ)   4(1892)

-ದ ತೆರೆದು ಮೈ ಮರೆತಿರಬೇಡ!
ಚಂಚಲ ಮನಕ್ಕಾಳಗೊಡಬೇಡ! (ಸೋ)
-ದರರಿಗನ್ಯಾಯ ಬಗೆಯಬೇಡ! (ಬೆ)
-ಕ್ಕೆ ಗೀಡಾಗಿ ಕಗ್ಗೊಲೆ ಮಾಡಬೇಡ!
ಸೂದೆಗೆದುರಾಳಿಯಾಗಬೇಡ! (ತು)
-ರು, ಕರುಗಳ ಕೊಂದು ತಿನಬೇಡ! (ಬೋ)
-ಳಾದ ತಲೆ ಮೇಲೇನೂ ಹೇರಬೇಡ!
ಟ್ಟಿಗನೆಂಬಹಂಕಾರವೇ ಬೇಡ!
ಬೇಗೆಗಂಜಿ ವೈರಾಗ್ಯ ಬಿಡಬೇಡ! (ಬಿ)
-ಡ ನಿರಂಜನಾದಿತ್ಯಯೋಗ ಬಿಡ!!!

ಅಂದವರಾರೋ ಬಂದವರಾರೋ!   3(1330)

ರ್ಶನ ಪಡೆದವರು ಯಾರೋ! (ಶಿ)
-ವ ನಾಮ ಭಜಿಸಿದವರಾರೋ! (ವೈ)
-ರಾಗ್ಯ ಬಲಿಸಿದವರು ಯಾರೋ! (ಸು)
-ರೋರಗರಾತ್ಮಾನೆಂದವರಾರೋ!
ಬಂಧ ಹರಿದ ಬಾಂಧವರಾರೋ!
ಯಾನಿಧಿಗಳಾದವರಾರೋ!
ರ ಗುರು ಸೇವಾಸಕ್ತರಾರೋ!
ರಾರಾಜಿಪ ಜೀವನ್ಮುಕ್ತರಾರೋ! (ಬಾ)
-ರೋ, ನಿರಂಜನಾದಿತ್ಯನ ಸೇರೋ!!!

ಅಂದಾದಂತಿಂದಾಗದೆಂದೆಂದೂ!   6(4324)

ದಾರಿ ಸಾಗಿದೆ ಮುಂದೆ ಇಂದು!
ದಂಡ ಧರಿಸಬೇಕಿತ್ತಂದು!
ತಿಂಡಿಗಳಾಸೆ ಇತ್ತು ಅಂದು!
ದಾಹವಾಗಿದೆ ಹೆಚ್ಚು ಇಂದು!
ತಿ, ಸ್ಥಿತಿ ಉತ್ತಮ ಇಂದು!
ದೆಂಟಿಗಂಟಿತ್ತು ಎಲೆ ಅಂದು!
ದೆಂಟು ಬಿಟ್ಟು ಗಾಳಿಗದಿಂದು! (ಹಿಂ)
-ದೂ ನಿರಂಜನಾದಿತ್ಯ ಮುಂದೂ!!!

ಅಂದಿಂದೆಂಬ ಭೇದ ನಿನಗಿದೆಯೇನು?   6(3988)

ದಿಂಬು ತಲೆಗಿಂಬು ಕೊಡಬೇಡವೇನು?
ದೆಂಟಿಗೆಲೆಯಂಟಿಕೊಂಡರೆ ತಪ್ಪೇನು?
ಲಾಬಲ ಪರೀಕ್ಷೆಯಗತ್ಯವೇನು?
ಭೇದ ಬುದ್ಧಿ ತೋರ್ಬಾರದ ತಂದೆ ನೀನು!
ರ್ಶನ ಕೊಡದಿರಬಾರದು ನೀನು!
ನಿಗಮಾಗಮ ಗೋಚರನಾದರೇನು?
ಡು ನೀರಲ್ಲಿ ಕೈ ಬಿಡ್ಬಾರದು ನೀನು!
ದೆವ್ವಗಳಿಗೂ ಸ್ಥಾನವಿತ್ತಿಹೆ ನೀನು! (ತಾ)
-ಯೆ ಮೃತ್ಯುವಾದಾಗ ರಕ್ಷಿಸಿದ್ದೆ ನೀನು! (ಭಾ)
-ನು ನಿರಂಜನಾದಿತ್ಯನೆಂದಪ್ಪು ನೀನು!!!

ಅಂದಿನ “ಗೀತೆ” ಇಂದಿನ “ಧ್ಯಾನಮಿಂಚಮ್ಮಾ”!   1(371)

ದಿನಕೊಂದು ಸಂದೇಶವೀ ಧ್ಯಾನಮಿಂಚಮ್ಮಾ!
ಲವಿಂದಾದಿತ್ಯನೀವಾ ಧ್ಯಾನಮಿಂಚಮ್ಮಾ!
ಗೀತಾಮೃತ ಸಾರವಿದು ಧ್ಯಾನಮಿಂಚಮ್ಮಾ!
ತೆಗೆವುದಜ್ಞಾನವಿದು ಧ್ಯಾನಮಿಂಚಮ್ಮಾ!
ಂದಿನ ಅಗತ್ಯವಿದು ಧ್ಯಾನಮಿಂಚಮ್ಮಾ!
ದಿನ ಪಾರಾಯಣಕಿದು ಧ್ಯಾನಮಿಂಚಮ್ಮಾ!
ಮಸ್ಕಾರರ್ಕನಿಗಿದು ಧ್ಯಾನಮಿಂಚಮ್ಮಾ!
ಧ್ಯಾನ ಬೆಳೆಗಿಸಲಿದೆ ಧ್ಯಾನಮಿಂಚಮ್ಮಾ!
ಡೆ, ನುಡಿ ತಿದ್ದಲಿದು ಧ್ಯಾನಮಿಂಚಮ್ಮಾ!
ಮಿಂಚಲಿ ಎಲ್ಲರಲಿದು ಧ್ಯಾನಮಿಂಚಮ್ಮಾ!
ರಣಕರ್ಪಣವಿದು ಧ್ಯಾನಮಿಂಚಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯನೇ ಧ್ಯಾನಮಿಂಚಮ್ಮಾ!!!

ಅಂದಿನ ಬಣ್ಣ ಶ್ರೀರಾಂ ಬಣ್ಣ! (ಇಂ)   3(1389)

-ದಿನ ಬಣ್ಣ “ಓಂ ದ್ರಾಂ ಓಂ” ಬಣ್ಣ! (ದಿ)
-ನಕರ ಸಮಾನವೀ ಬಣ್ಣ!
ಹು ಮನೋಹರವೀ ಬಣ್ಣ! (ಕ)
-ಣ್ಣಲ್ಲಾಕರ್ಷಣವಿರ್ಪ ಬಣ್ಣ!
ಶ್ರೀರಾಮನೊಲಿಸಿದ ಬಣ್ಣ! (ತಾ)
-ರಾಂಗಣಕ್ಕಾಧಾರವೀ ಬಣ್ಣ! (ಅ)
-ಬಲಾಂತರಂಗೋಜ್ವಲ ಬಣ್ಣ! (ಬ)
-ಣ್ಣ ನಿರಂಜನಾದಿತ್ಯ ಬಣ್ಣ!!!

ಅಂದಿನ ಸುಲ್ತಾನನ ಪಟ್ಟಣವೆಂತಿತ್ತು? (ಇಂ)   4(1700)

-ದಿನ ಅದರ ರೂಪ ಮಾರ್ಪಾಟವೆಂತಾಯ್ತು?
ನ್ನದೆಂಬಹಂಕಾರವೇನುಳಿದಂತಾಯ್ತು?
ಸುತ್ತಲಿದ್ದೆತ್ತರದ ಕೋಟೆ ಬಿದ್ದು ಹೋಯ್ತು! (ಸು)
-ಲ್ತಾನನರಮನೆ ಹೆಸರಿಲ್ಲದಂತಾಯ್ತು!
ಗರದಂದಿನ ಶೋಭೆ ಗಬ್ಬೆದ್ದು ಹೋಯ್ತು!
ಗಾರಿ, ನೌಬತ್ತಿನ ಸದ್ದಿಲ್ಲದಂತಾಯ್ತು!
ರಿಪರಿಯಾಟ, ನೋಟಗಳಿಲ್ಲದಾಯ್ತು! (ಪ)
-ಟ್ಟದಾನೆ, ಕುದುರೆಯೋಡಾಟ ನಿಂತತಾಯ್ತು! (ರ)
-ಣದುಂದುಭಿಯಾರ್ಭಟಕ್ಕೆಡೆಯಿಲ್ಲದಾಯ್ತು! (ಹಾ)
-ವೆಂದದ್ದೆಲ್ಲಾ ಹಗ್ಗವಾಗಿ ಚೂರಾದಂತಾಯ್ತು!
ತಿರುಗುವಾ ಕಾಲಚಕ್ರಕ್ಕೆಲ್ಲಾಹುತ್ಯಾಯ್ತು! (ಸೊ)
-ತ್ತು ನಿರಂಜನಾದಿತ್ಯಾತ್ಮನುಳಿದಂತಾಯ್ತು!!!

ಅಂದಿನಾ ರೂಪವನ್ನಿಂದಿನೀ ರೂಪ ನೋಡಲಿ!   6(4095)

ದಿವ್ಯ ಸಂದೇಶವ ಲೋಕಕ್ಕಾಮೇಲೆ ಸಾರಲಿ!
ನಾಸ್ತಿಕರೆಲ್ಲರೂ ಆಸ್ತಿಕರಾಗಿ ಬಾಳಲಿ!
ರೂಪಗಳಲ್ಲಿ ಸಹಾಕಾರವನ್ನು ಕಾಣಲಿ!
ರಮಾರ್ಥ ಪ್ರಪಂಚ ಸದಾ ವಿರಾಜಿಸಲಿ!
ರ ಗುರುಕೃಪೆಯಿಂತೆಲ್ಲರಿಗೀಗಾಗಲಿ! (ತ)
-ನ್ನಿಂದಲೇ ತನ್ನುದ್ಧಾರವೆಂಬರಿವುಂಟಾಗಲಿ!
ದಿಕ್ಕು ತಪ್ಪಿ ಕಾಡದಾರಿ ಹಿಡಯದಿರಲಿ!
ನೀತಿ, ರೀತಿ, ಜಗತ್ತಿಗೆಲ್ಲಾ ಒಂದೇ ಇರಲಿ! (ಯಾ)
-ರೂ ಇದಕ್ಕೆ ವ್ಯತಿರಿಕ್ತವಾಗಿರದಿರಲಿ!
ಶುಗಳಿಗಿಂತುತ್ತಮ ಜನ್ಮವಿದಾಗಲಿ!
-ಡನಣುಗರಿಂತು ನಿತ್ಯಾನಂದದಲ್ಲಿರಲಿ! (ಒ)
-ಲಿದು ನಿರಂಜನಾದಿತ್ಯ ನೆರವು ನೀಡಲಿ!!!

ಅಂದು ಬರಬೇಕಾದವನಿಂದು ಬಂದ!   3(1350)

ದುರಿತದೂರ ಗುರುದೇವ ನೀನೆಂದ!
ರಡಾಯಿತೆನ್ನ ಬದುಕು ಬಾಳೆಂದ! (ಪ)
-ರಮಾರ್ಥ ಜೀವನಾನುಗ್ರಹ ಮಾಡೆಂದ!
ಬೇರಿನ್ಯಾರೂ ನನಗಿಲ್ಲ ಗತಿಯೆಂದ!
ಕಾಲಚಕ್ರದೇಟು ಸಹಿಸೆ ನಾನೆಂದ!
ಯೆದೋರಿ ಕಾಪಾಡಬೇಕು ನೀನೆಂದ! (ಭ)
-ವಬಂಧ ಸಂಬಂಧ ಸಾಕಿನ್ನೆನಗೆಂದ!
ನಿಂದಿಸುತನ್ಯರನು ಕೆಟ್ಟೆ ನಾನೆಂದ!
ದುರ್ವಿಷಯ ವ್ಯಾಪಾರ ಕಠಿಣವೆಂದ!
ಬಂಧು, ಬಾಂಧವರೆಲ್ಲಾ ಕೈ ಬಿಟ್ಟರೆಂದ!
ತ್ತ ನಿರಂಜನಾದಿತ್ಯ ಸಲಹೆಂದ!!!

ಅಂದು ಮದುವೆಯಾಗ್ಲಿಕೋಡಾಟ! (ಇಂ)   5(3223)

-ದು ಮದುವೆ ಮಾಡ್ಲಿಕ್ಕೆ ಪೇಚಾಟ!
ಡದಿ ಬಂದಾಗಾಪ್ತರ ಕೂಟ! (ಮ)
-ದುವೆ ಮಗಳಿಗೆಂದಾಗ ಕಾಟ! (ಇ)
-ವೆಲ್ಲಾ ಸಂಸಾರಿಗೆ ಒಳ್ಳೆ ಪಾಠ! (ದ)
-ಯಾಮಯ ದೇವರೆಂಬುದು ದಿಟ! (ಆ)
-ಗ್ಲಿ ಅವನಿಗಾನಂದವನಾಟ! (ನೆ)
-ಕ್ಕೋದವನ ಪಾದ ಭಕ್ತಗೂಟ!
ಡಾಕು ತಾನುಣ್ಣುವ ಪಾಪದೂಟ! (ಘ)
-ಟ ನಿರಂಜನಾದಿತ್ಯಗೆ ಮಠ!!!

ಅಂದು ಹಾರ ಹಾಕಿಸಿಕೊಂಡಾ ಗಂಡ! (ಇಂ)   4(2115)

-ದು ಹಾರ ಹಾಕಿ ನಿಂತು ಬೇಡಿಕೊಂಡ!
ಹಾರಾಟವಾರಿಗೂ ಬೇಡವೆಂದ್ಕೊಂಡ! (ಪ)
-ರಮಾರ್ಥಿಯೇ ನಿತ್ಯ ಸುಖಿಯೆಂದ್ಕೊಂಡ! (ದೇ)
-ಹಾಭಿಮಾನವಿರಬಾರದೆಂದ್ಕೊಂಡ!
ಕಿರುಕುಳ ಸಂಸಾರ ಸಾಕೆಂದ್ಕೊಂಡ! (ಘಾ)
-ಸಿಯಾಗುವುದಜ್ಞಾನದಿಂದೆಂದ್ಕೊಂಡ!
ಕೊಂದಿಕ್ಕಬೇಕರಿಗಳನ್ನೆಂದ್ಕೊಂಡ! (ದುಂ)
-ಡಾವರ್ತನೆಯಿರಬಾರದೆಂದ್ಕೊಂಡ!
ಗಂಡಾಗುಂಡಿಯಿಂದಶಾಂತಿಯೆಂದ್ಕೊಂಡ! (ಗಂ)
-ಡ ನಿರಂಜನಾದಿತ್ಯಾದರ್ಶದ್ಕೊಂಡ!!!

ಅಂದು, ಇಂದು, ಮುಂದು, ಎಂದೆಂದೂ!   4(2294)

ದುಸ್ಸಂಗ ಮಾಡ್ಬಾರದೆಂದೂ!
ಇಂದಿನದ್ದಿಂದೇ ಮಾಡೆಂದೆಂದೂ! (ಅಂ)
-ದು, ಮುಂದಿನಾಸೆ ಬೇಡೆಂದೆಂದೂ!
ಮುಂಗೋಪಿಯಾಗ್ಬಾರದೆಂದೆಂದೂ!
ದುರ್ವಿಧಿಯೆನಬೇಡೆಂದೆಂದೂ!
ಎಂಟಂಗ ಯೋಗಿಯಾಗೆಂದೆಂದೂ! (ನಿಂ)
-ದೆಂಬುದ ಬಿಡಬೇಕೆಂದೆಂದೂ! (ಇಂ)
-ದೂ ನಿರಂಜನಾದಿತ್ಯೆಂದೆಂದೂ!!!

ಅಂದೂ, ಇಂದೂ, ಅದೊಂದು ಪೂವಯ್ಯಾ!   4(1408)

ದೂರದಲ್ಲೂ ಸುಗಂಧಾ ಪೂವಯ್ಯಾ!
ಇಂಬು ಸಕಲರಿಗಾ ಪೂವಯ್ಯಾ! (ಹಿಂ)
-ದೂ ಮಸಲ್ಮಾನಾನಂದಾ ಪೂವಯ್ಯಾ!
ನ್ಯೋನ್ಯ ಪ್ರೇಮಭಾವಾ ಪೂವಯ್ಯಾ! (ಒಂ)
-ದೊಂದೆಸಳೂ ಸಾರ್ಥಕಾ ಪೂವಯ್ಯಾ!
ದುರಭಿಮಾನ ಶೂನ್ಯಾ ಪೂವಯ್ಯಾ!
ಪೂರ್ವಾಪರ ನೋಡದಾ ಪೂವಯ್ಯಾ! (ಶಿ)
-ವ ಸೇವೆಗಾಗಿಹುದಾ ಪೂವಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಾ ಪೂವಯ್ಯಾ!!!

ಅಂದೊಡೆದ ಕಾಯಿಗಿಂದು ಮೋಕ್ಷ!   3(1157)

ದೊರಕಿತಾ ಜೀವಗಿಂದು ಮೋಕ್ಷ! (ಕ)
-ಡೆಗಂಡರಪ್ಪನಾಗದು ಮೋಕ್ಷ!
ತ್ತನೊಲಿದಾಗುವುದು ಮೋಕ್ಷ!
ಕಾಮ್ಯಕರ್ಮಕ್ಕಿಲ್ಲಗತಿ ಮೋಕ್ಷ! (ಬಾ)
-ಯಿಯುಪಚಾರಕ್ಕದಾವ ಮೋಕ್ಷ? (ತ್ಯಾ)
ಗಿಂಗಳವಡದಿರದು ಮೋಕ್ಷ!
ದುರ್ವಿದ್ಯೆಯಿಂದ ಆಗದು ಮೋಕ್ಷ! (ವ್ಯಾ)
-ಮೋಹ ಬಿಟ್ಟರಾಗುವುದು ಮೋಕ್ಷ! (ಮೋ)
-ಕ್ಷ ನಿರಂಜನಾದಿತ್ಯ ಕಟಾಕ್ಷ!!!

ಅಂಬರದಲಿರುವಂಬುಜ ಸಖ!   1(259)

ಲರಾಮಾನುಜ ವಿಜಯ ಸಖ!
ಘುಕುಲತಿಲಕ ಧರ್ಮ ಸಖ!
ರ್ಶನವಿತ್ತರೆ ಪರಮ ಸಖ!
ಲಿಪಿಗಾರರ ಸ್ಫೂರ್ತಿ ಸುಧಾರಕ!
ರುಧಿರ ಶುದ್ಧಿಗೆ ದಿವ್ಯೌಷಧಿಕ!
ವಂದಿಸುವರ ಕಷ್ಟ ನಿವಾರಕ!
ಬುದ್ಧಿ ವೃದ್ಧಿಗಾದರ್ಶ ದಾರ್ಶನಿಕ!
ರಾಮರಣ ಕಳೆವ ಆತ್ಮೀಕ!
{ಒ

}

ಳ ಕುಲಕೆ ನಿರಂಜನಾಂತಕ!
ರೆ! ನಿರಂಜನಾದಿತ್ಯ ತಾರಕ!!!

ಅಂಬರಾ! ಹೇ! ದಿಗಂಬರಾ! (ದಿವ್ಯಾಂ)   2(478)

-ಬರಾ ಗುರು ದಿಗಂಬರಾ!!
ರಾತ್ರಿ ದಿನ ಏಕಾಂಬರಾ!!
ಹೇತು ನಾಥ ವಿಶ್ವಂಭರಾ!! (ಆ)
-ದಿ, ಮಧ್ಯ, ಅಂತ್ಯ ವಿದೂರಾ!
ಗಂಗಾ ಜಲಧಾರಾಪಾರಾ!!
ಹು ಬಲ, ಧೀರಾ, ವೀರಾ (ಆ)
-ರಾ ನಿರಂಜನಾಂಗಾಂಗಾರಾ!!!

ಅಕಾರ, ಉಕಾರ, ಮಕಾರ, ಓಂಕಾರ!   4(2175)

ಕಾಲ, ದೇಶಾವಸ್ಧಾತೀತಾಕಾರೋಂಕಾರ!
ಮೇಶ, ಉಮೇಶ, ವಾಣೀಶರೋಂಕಾರ!
ಚ್ಚ, ನೀಚ, ಸ್ವಚ್ಛಾಸ್ವಚ್ಛಾಕಾರೋಂಕಾರ!
ಕಾರ್ಯ, ಕಾರಣಕರ್ತಾಕಾರ ಓಂಕಾರ! (ಸು)
-ರ, ನರ, ಕಿನ್ನರೋರಗಾಕಾರೋಂಕಾರ! (ಕಾ)
-ಮ, ರಾಮ, ಶ್ಯಾಮ, ಸೋಮರಾಕಾರೋಂಕಾರ!
ಕಾಮಾಕ್ಷಿ, ಮೀನಾಕ್ಷಿಯರಾಕಾರೋಂಕಾರ! (ವ)
-ರಗುರು ದತ್ತಾತ್ರೇಯಾಕಾರ ಓಂಕಾರ!
“ಓಂ, ಐಂ, ಕ್ಲೀಂ, ಸೌ” ಸರಸ್ವತ್ಯಾಕಾರೋಂಕಾರ!
ಕಾಶ್ಯಪ, ವಿಶ್ವಾಮಿತ್ರಾದ್ಯಾಕಾರೋಂಕಾರ! (ವ)
-ರದನಿರಂಜನಾದಿತ್ಯಾಕಾರೋಂಕಾರ!!!

ಅಕಾರಣವಾಗನ್ಯರ ದೂರ್ವುದೇಕೆ?   6(3341)

ಕಾರ್ಯಕ್ಕವ್ನೇ ಕಾರಣವೆಂದಿರ್ಬಾರ್ದೇಕೆ?
ಚನಾತ್ಮಕಸೇವೆ ಮಾಡುದ್ಧಾರಕ್ಕೆ!
(ತೃ)-ಣ ಸಮಾನ ವಿಘ್ನಗಳವ್ನ ಚಿತ್ತಕ್ಕೆ!
ವಾರ, ತಿಥಿ, ಮಾಸ, ಲೆಃಖ ಬೇಡದಕ್ಕೆ!
ಡ್ಡ, ಮೀಸೆ, ಕಿತ್ರೇನು, ಬಿಟ್ರೇನದಕ್ಕೆ?
(ಧ)-ನ್ಯನಾಗ್ಬೇಕಾದ್ರೆ ಇರಬಾರದು ಬೆಕ್ಕೆ!
ಕ್ಕಸರಾದ್ರೂ ಜೀವರೀಕಾರಣಕ್ಕೆ!
ದೂರ್ವಾಸರ ಸಿಟ್ಟೇ ಹೇತು ಪತನಕ್ಕೆ! (ಇ)
-ರ್ವುದು ಗುರುಸೇವೆಯೊಂದೇ ಉದ್ಧಾರಕ್ಕೆ!
ದೇಶದೇಳಿಗೆಗೆ ಬೇಕಿದೇ ಸಧ್ಯಕ್ಕೆ! (ಅಂ)
-ಕೆಯಿಲ್ಲ ನಿರಂಜನಾದಿತ್ಯಾನಂದಕ್ಕೆ!!!

ಅಕ್ಕ, ತಂಗಿಯರೈಕ್ಯ ಮುಖ್ಯ! [ತ]   2(975)

-ಕ್ಕ ಸತಿಯಾಗುವುದು ಮುಖ್ಯ!
ತಂದೆ, ತಾಯಿ ಸೇವೆ ಮುಖ್ಯ!
ಗಿರಿಧರನ ಧ್ಯಾನ ಮುಖ್ಯ! (ಕಾ)
-ಯ, ಮನಸು, ವಾಕ್ಯುದ್ಧಿ ಮುಖ್ಯ! (ಈ)
-ರೈದಿಂದ್ರಿಯ ನಿಗ್ರಹ ಮುಖ್ಯ! (ವಾ)
-ಕ್ಯ ಗುರುವಿನದತಿ ಮುಖ್ಯ! (ಕಾ)
-ಮುಕರಾಗದಿರ್ಪುದು ಮುಖ್ಯ! (ಮು)
-ಖ್ಯ ನಿರಂಜನಾದಿತ್ಯ ಸಖ್ಯ!!!

ಅಕ್ಕ, ಪಕ್ಕ ಚೊಕ್ಕವಾಗಿರ್ಲಿ ಲಕ್ಕಪ್ಪಾ! (ಮ)   5(2845)

-ಕ್ಕಳೆಲ್ಲರಿಗೆ ಮಾರ್ಗದರ್ಶಿಯಾಗಪ್ಪಾ!
ರರಾಸ್ತಿಪಾಸ್ತಿಗಾಶಿಸ ಬೇಡಪ್ಪಾ! (ಒ)
-ಕ್ಕಲುತನಕ್ಕೆ ಶ್ರದ್ಧಾ, ಭಕ್ತಿ, ಬೇಕಪ್ಪಾ! (ಹಂ)
-ಚೊಬ್ಬೊಬ್ಬರಿಗೂ ಅವರ ಪಾಲನ್ನಪ್ಪಾ! (ಬೊ)
-ಕ್ಕಸ ಬರಿದಾದ ಮೇಲಾರಿಗಾರಪ್ಪಾ?
ವಾದಿ, ಪ್ರತಿವಾದಿಗಳಾಟ ಸಾಕಪ್ಪಾ!
ಗಿರ್ವಿಯೊಡವೆ ದುರ್ವಿನಿಯೋಗೇಕಪ್ಪಾ? (ಬ)
-ರ್ಲಿ, ಹೋಗ್ಲಿ ಧನಪಿಶಾಚಿಯನ್ನಟ್ಟಪ್ಪಾ!
ಕ್ಷ್ಯ ಸಿದ್ಧಿಗಾಗಿ ಸದಾ ದುಡಿಯಪ್ಪಾ! (ಸಿ)
-ಕ್ಕಲಾರದೀ ನರಜನ್ಮ ಆಮೇಲಪ್ಪಾ! (ಅ)
-ಪ್ಪಾ ನಿರಂಜನಾದಿತ್ಯ ನೀನೀಗಾಗಪ್ಪಾ!!!

ಅಕ್ಕನ ಪಕ್ಕ ಬೆಕ್ಕಿಗೆ ಚೊಕ್ಕ! (ಅ)   6(3359)

-ಕ್ಕರೆಯಿಂದಿಕ್ಕುವಳ್ಹಾಲನ್ನಕ್ಕ!
ಯವಾದ ಮೈ ಹೆಸ್ರಿಗೆ ತಕ್ಕ!
ತಿ ಗೃಹಸೇರಿಲ್ಲಿನ್ನೂ ಅಕ್ಕ! (ದ)
-ಕ್ಕಬಾರದು ಅವಳಿಗೀ ಠಕ್ಕ!
ಬೆಕ್ಕೆಗೊಳಗಾಗಿಲ್ಲೆಂಬಳಕ್ಕ! (ಪ)
-ಕ್ಕಿವಾಹನ ತಾನೇಕಿನ್ನೂ ಸಿಕ್ಕ?
ಗೆಳೆಯನವ್ನೊಬ್ಬಳೆಂಬಳಕ್ಕ!
ಚೊಕ್ಕಮ್ಮನೆದುರವನು ಪುಕ್ಕ! (ಅ)
-ಕ್ಕ! ನಿರಂಜನಾದಿತ್ಯನಾಗಕ್ಕ!!!

ಅಕ್ಕಮ್ಮಾ ಬೆಕ್ಕು ಸಾಕಮ್ಮಾ! (ಹೊ)   4(2021)

-ಕ್ಕದರೊಳಗೆ ನೋಡಮ್ಮಾ! (ದು)
-ಮ್ಮಾನವಿಬ್ಬರಿಗೊಂದಮ್ಮಾ!
ಬೆಸ್ತರ್ಬಲೆ ಬೀಸ್ವರಮ್ಮಾ! (ಇ)
-ಕ್ಕು ಅದಕ್ಕೊಳಗನ್ನಮ್ಮಾ!
ಸಾವಿಗಂಜುವರೆಲ್ಲಮ್ಮಾ!
ರುಣಾಳು ನೀನಾಗಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಮ್ಮಾ!!!

ಅಕ್ಕಯ್ಯಾ ಸಕ್ಕರೆಯಾಗಿರಕ್ಕಯ್ಯಾ (ಅ)   2(480)

-ಕ್ಕ ಪಕ್ಕಕೆ ಚೊಕ್ಕವಾಗಿರಕ್ಕಯ್ಯಾ! (ಕೈ)
-ಯ್ಯಾರೆ ಸೇವೆಯಾಗುತಿರಲಕ್ಕಯ್ಯಾ!
ತ್ಯವಂತರ ಸಂಘ ಮಾಡಕ್ಕಯ್ಯಾ! (ಅ)
ಕ್ಕರೆಯಲಾತ್ಮಭಾವ ಬೇಕಕ್ಕಯ್ಯಾ (ಕ)
-ರೆಯದೆಲ್ಲೂ ಹೋಗಬಾರದಕ್ಕಯ್ಯಾ!
ಯಾವುದೂ ಅಪ್ಪನೊಪ್ಪಿದರಕ್ಕಯ್ಯಾ! (ರಾ)
-ಗಿ ಗೋಧಿ ಹಸನಾಗಬೇಕಕ್ಕಯ್ಯಾ!
ಗಳೆ ಮಾಡದಿರಬೇಕಕ್ಕಯ್ಯಾ! (ಸ)
-ಕ್ಕರೆರುಚಿ ನಾಮಜಪಕಕ್ಕಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ನಿನ್ನಕ್ಕಯ್ಯಾ!!!

ಅಕ್ಕರೆಯ ಸಕ್ಕರೆಯ ಬಿಟ್ಟಾಯ್ತು! (ಅ)   5(3231)

-ಕ್ಕ ಪಕ್ಕದವರಿಗೆ ದುಃಖವಾಯ್ತು! (ದೊ)
-ರೆತದ್ದರಲ್ಲೇ ತೃಪ್ತಿಯೀಗುಂಟಾಯ್ತು!
ಶಸ್ಸಿಗಿದರಿಂದ ನಾಂದಿಯಾಯ್ತು!
ದಾಶಿವ ಭಜನಾನಂದವಾಯ್ತು!
(ಚೊ)ಕ್ಕಟವಾದ ಮನೆಯಿದರಿಂದಾಯ್ತು! (ಮ)
ರೆಯಬಾರ್ದವನನ್ನೆಂಬರಿವಾಯ್ತು! (ಸಾ)
ಲೇಬೇಕೀ ದೇಹವೆಂದರಿವಾಯ್ತು!
ಬಿಡ್ಬೇಕಿದ್ರ ಮೋಹವೆಂದಿದ್ದದ್ದಾಯ್ತು! (ಗು)
-ಟ್ಟಾಗೀಗ ಸಾಧನೆ ಸಾಗುವಂತಾಯ್ತು! (ಆ)
-ಯ್ತು ನಿರಂಜನಾದಿತ್ಯಗೊಪ್ಪಿಸ್ಯಾಯ್ತು!!!

ಅಕ್ಕಾ! ಮಹಾದೇವಿ ನೀನಾಗಕ್ಕಾ! (ತ)   4(1962)

-ಕ್ಕಾಚಾರ, ವಿಚಾರವಿರಲಕ್ಕಾ!
ಲ್ಲಿಕಾರ್ಜುನನ ಭಜಿಸಕ್ಕಾ!
ಹಾಲಭಿಷೇಕವಗೆ ಮಾಡಕ್ಕಾ!
ದೇಹ ದೇವಾಲಯ ತಿಳಿಯಕ್ಕಾ!
ವಿಶ್ವೇಶ್ವರ ನಿನ್ನಾತ್ಮ ಕಾಣಕ್ಕಾ!
ನೀಲಕಂಠನೆಂಬರವನಕ್ಕಾ!
ನಾನು, ನೀನೆಂಬುದವಗಿಲ್ಲಕ್ಕಾ!
ಣಾಧಿಪ ತಾನಾಗಿಹನಕ್ಕಾ! (ಅ)
-ಕ್ಕಾ ನಿರಂಜನಾದಿತ್ಯವನಕ್ಕಾ!!!

ಅಕ್ರಮಾತಿಕ್ರಮಗಳಿಂದಶಾಂತಿ!   4(2054)

ಕ್ರಮಬದ್ಧವಾಗಿಹುದು ಪ್ರಕೃತಿ!
ಮಾವು ಬೇವಾಗದಿರುದೇ ಶಾಂತಿ!
ತಿಳಿನೀರ್ತಂಪಾಗಿರ್ಪುದು ಪ್ರಕೃತಿ! (ಅ)
-ಕ್ರಮದಿಂದ ಮರಳಿಸಿದ್ರಶಾಂತಿ!
ದ, ಮತ್ಸರಾತೀತಾತ್ಮ ಪ್ರಕೃತಿ! (ರಾ)
-ಗ, ದ್ವೇಷಗಳಿಂದಾಗುವುದಶಾಂತಿ! (ಕಾ)
-ಳಿಂದ ಬೆಳೆಯಾಗುವುದು ಪ್ರಕೃತಿ! (ಅ)
-ದಗ್ನಿಯಲಿ ಬೆಂದರಾಗ್ವುದಶಾಂತಿ!
ಶಾಂಭವಿಗೆ ಸಾಂಬ ಸೇವೆಪ್ರಕೃತಿ! (ಪ್ರೀ)
-ತಿ, ನಿರಂಜನಾದಿತ್ಯನಿಗೆ ಶಾಂತಿ!!!

ಅಕ್ಷರ ಮಾಲಾರ್ಪಣೆ ಕಂಠಕ್ಕೆ! (ದ)   6(3364)

-ಕ್ಷತಾನಾಗಿ ಶೋಭಿಸುವುದಕ್ಕೆ!
ಕ್ಷಕನೆಲ್ಲರಿಗಾಗ್ವುದಕ್ಕೆ!
ಮಾರ್ಗದರ್ಶಕನಾಗುವುದಕ್ಕೆ!
ಲಾಭ, ನಷ್ಟ, ಸಮದರ್ಶಿತ್ವಕ್ಕೆ! (ಬೇ)
-ರ್ಪಡದೆ ಸತಿಯೊಡನಿರ್ಲಿಕ್ಕೆ! (ಹ)
-ಣೆಗಣ್ಣ ತಾನೆಂದರಿತಿರ್ಲಿಕ್ಕೆ!
ಕಂದ, ಗಣೇಶರ್ಪುತ್ರರಾಗ್ಲಿಕ್ಕೆ!
ಕ್ಕು, ಠವಳಿಗಳ, ಸುಟ್ಟುಹಾಕ್ಲಿಕ್ಕೆ (ಅ)
-ಕ್ಕೆ ಶಿವ, ನಿರಂಜನಾದಿತ್ಯರೊಂದಕ್ಕೆ!!!

ಅಖಂಡ ಭಜನಾ ಗದ್ದಲ!   1(299)

ಖಂಡ, ತಂಡಗಳ್ಕೋಲಾಹಲ!
ಕ್ಕಾ, ಡಮರುಗ, ಮದ್ದಲ!
ಕ್ತಿ, ಭಾವಗಳು ಉಜ್ವಲ!
ಪ, ತಪಗಳ್ಕುತೂಹಲ!
ನಾಮ ಸಂಕೀರ್ತನಾ ಗೊಂದಲ!
ಮನ ದತ್ತನಲಚಲ! (ಆ)
-ದ್ದರಿಂದದರಿಂದೆಲ್ಲಾ ಬಲ! (ಅ)
-ಲಖ್ಕಿರಂಜಾದಿತ್ಯ ಲೋಲ!!!

ಅಗಲಿದ ಪತಿಯಾತ್ಮಕ್ಕೆ ಶಾಂತಿ! (ಭ)   3(1352)

ವಂತನ ಪೂಜೆಯಿಂದದು ಪ್ರಾಪ್ತಿ! (ಮ)
-ಲಿನಾಚಾರದಿಂದೊದಗದಾ ಶಾಂತಿ! (ಹೃ)
-ದಯ ಶುದ್ಧಿಯರ್ಘ್ಯದಿಂದದು ಪ್ರಾಪ್ತಿ!
ರಮಾನ್ನ, ಭಕ್ಷ್ಯದಿಂದಲ್ಲಾ ಶಾಂತಿ! (ಪ)
-ತಿಯಾಜ್ಞೆ ಪಾಲಿಸಿದರದು ಪ್ರಾಪ್ತಿ! (ಬಾ)
-ಯಾರಿದಾಗನ್ನದಿಂದಾಗದು ಶಾಂತಿ! (ಆ)
-ತ್ಮ ನಿಷ್ಠೆಯಿಂದ ನಿತ್ಯ ಶಾಂತಿ ಪ್ರಾಪ್ತಿ! (ಮಿ)
-ಕ್ಕೆಲ್ಲಾ ಕರ್ಮಗಳಿಂದಾಗದಾ ಶಾಂತಿ! (ಅ)
-ಶಾಂತಿಯಾಶಾ ನಾಶಾದಾಗದು ಪ್ರಾಪ್ತಿ! (ಸ್ಥಿ)
-ತಿ ನಿರಂಜನಾದಿತ್ಯಾನಂದಾ ಶಾಂತಿ!!!

ಅಗಲಿರಲಾರೆನು ನಾ!   6(3523)

(ಗ)-ಗನ ಮಣಿಯದವನಾ!
(ಒ)-ಲಿದೆನ್ನ ಪಾಲಿಸುವನಾ!
ವಿ ಕುಲ ಲಲಾಮನಾ!
ಲಾವಣ್ಯಮಯ ರೂಪನಾ!
(ಬೆ)-ರೆತೆನ್ನೊಳಗಿರ್ಪವನಾ!
(ಅ)-ನುಪಮಾದ್ವೈತ ಶಿವನಾ!
ನಾ, ನಿರಂಜನಾದಿತ್ಯನಾ!!!

ಅಗಲಿಹೋದಳೆಮ್ಮ ತುಳಸಿ! (ಸಂ)   4(1692)

-ಗಡಿಗಳಾಗಿದ್ದಳಾ ತುಳಸಿ! (ಮ)
-ಲಿನ ವಾಸನಾ ಶೂನ್ಯಾ ತುಳಸಿ!
ಹೋಗಿ ಸೇರ್ದಳಾಣ್ಮನಾ ತುಳಸಿ!
ತ್ತಾತ್ರೇಯ ಭಕ್ತಳಾ ತುಳಸಿ! (ಸೆ)
-ಳೆದಳೆಲ್ಲರ ಮನಾ ತುಳಸಿ! (ಅ)
-ಮ್ಮನಾಗಿದ್ದಳೆಲ್ಲರ್ಗಾ ತುಳಸಿ! (ಮಾ)
-ತು ಬಿಟ್ಟರುತಿದ್ದಳಾ ತುಳಸಿ! (ತ)
-ಳಮಳ ರಹಿತಳಾ ತುಳಸಿ! (ದಾ)
-ಸಿ ನಿರಂಜನಾದಿತ್ಯ ತುಳಸಿ!!!

ಅಗ್ರಪೂಜೆ ಅಂಬುಜಮಿತ್ರನಿಗಾಗ್ಲಿ!   5(3130)

ಗ್ರಹಶಾಂತಿ ಅವನ ಮೂಲಕ ಆಗ್ಲಿ!
ಪೂರ್ವದಿಕ್ಕಿನಲ್ಲವನ ಸ್ವಾಗತಾಗ್ಲಿ! (ಸಂ)
-ಜೆ ಪಶ್ಚಿಮದಿಕ್ಕವನ ಪ್ರಯಾಣಸಾಗ್ಲಿ!
ಅಂಬರ ಮಾರ್ಗವಾಗಿ ವಾಹನ ಹಾರ್ಲಿ!
ಬುಧ ಜನರಿಂದ ವೇದಘೋಷವಾಗ್ಲಿ!
ಗದಾದ್ಯಂತ ಮಲರಹಿತವಾಗ್ಲಿ!
ಮಿಥ್ಯಾ ಮೋಹ ಸತ್ಯಪ್ರೇಮದಿಂದ ತುಂಬ್ಲಿ!
ತ್ರಯಮೂರ್ತಿ ದತ್ತಾತ್ರೇಯ ಗುರುವಾಗ್ಲಿ!
ನಿಶಿ, ದಿನಾಖಂಡ ಸಂಕೀರ್ತನೆಯಾಗ್ಲಿ!
ಗಾಣಾಪತ್ಯಾಕ್ಕಿದಧ್ಯಾತ್ಮ ಶಕ್ತಿ ತುಂಬ್ಲಿ! (ಆ)
-ಗ್ಲಿ ನಿರಂಜನಾದಿತ್ಯನಿಚ್ಛೆಯಂತಾಗ್ಲಿ!!!

ಅಗ್ಸನಾರೋಪ ಲವ, ಕುಶರ್ಸ್ವರೂಪ!   6(3383)

(ವಾ)-ಗ್ಸಮರ್ಥನೆ ತೋರಿಸಿದ, ನಿಜರೂಪ!
ನಾರದ ಬಲ್ಲ ನಾರಯಣನ ರೂಪ!
ರೋಗಿಯ ಕಣ್ಣಿಗೆಲ್ಲವೂ ಯಮರೂಪ!
ರಮಾರ್ಥಿ ಬಲ್ಲ ಪರಮಾತ್ಮರೂಪ!
ಕ್ಷ್ಮಣನ ಬಲ್ಲುದು ಊರ್ಮಿಳಾರೂಪ!
ನಜಕ್ಕಾನಂದ ಆದಿತ್ಯರೂಪ!
ಕುಹಕರಿಗೆ ಅದೇ ಮೃತ್ಯುಸ್ವರೂಪ!
ಬರಿಗೆ ಶ್ರೀರಾಮ ಗುರುಸ್ವರೂಪ!
(ಅ)-ರ್ಸ್ವಧರ್ಮನಿಷ್ಠರೋ ಅವರದೇರೂಪ!
ರೂಪ, ರೇಖೆಯೆಲ್ಲಾ ಅಶಾಶ್ವತರೂಪ!
ರಮಾತ್ಮ ನಿರಂಜನಾದಿತ್ಯರೂಪ!!!

ಅಚ್ಚರಿಯ ಮೆಚ್ಚುವವರಿಲ್ಲ! (ಮ)   4(1712)

-ಚ್ಚರಿಪ ಸ್ವಭಾವಚ್ಚುತಗಿಲ್ಲ!
ರಿಪುಗಳಾಧೀನೇಂದ್ರಿಯವಿಲ್ಲ!
ಜ್ಞೇಶ್ವರನೆಂದಾಹುತಿಯೆಲ್ಲ! (ರ)
-ಮೆಯರಸನೆಂದೊರೆವರೆಲ್ಲ! (ಮು)
-ಚ್ಚು ಮರೆಯಿಲ್ಲದಿರ್ಪನೆಲ್ಲೆಲ್ಲ! (ಭ)
-ವರೋಗಕ್ಕನ್ಯ ವೈದ್ಯರಾರಿಲ್ಲ!
ರಗುರುದತ್ತನೊಬ್ಬನೆಲ್ಲ! (ಹ)
-ರಿ, ಹರ, ಬ್ರಹ್ಮ ಭೇದವಗಿಲ್ಲ! (ನ)
-ಲ್ಲ, ನಿರಂಜನಾದಿತ್ಯ ಪ್ರಪುಲ್ಲ!!!

ಅಚ್ಚುಕಟ್ಟಿದ್ದಲ್ಲಿ ಬೆಚ್ಚಿ ಬೀಳುವುದಿಲ್ಲ! (ಬಿ)   6(4013)

-ಚ್ಚು ಮನಸ್ಸಿನಿಂದ ಒಡನಾಡಬೇಕೆಲ್ಲಾ!
ಪಟ, ವಂಚನೆಗಳ ಬಿಡಬೇಕೆಲ್ಲಾ! (ದಿ)
-ಟ್ಟಿ ಗುರು ಪರಮಾತ್ಮನಲ್ಲಿಡಬೇಕೆಲ್ಲಾ! (ಬಿ)
-ದ್ದರೂ, ಎದ್ದರೂ ಸ್ಮರಿಸಬೇಕವ್ನನ್ನೆಲ್ಲಾ! (ಹ)
-ಲ್ಲಿರುವಾಗಲೇ ಕಡಲೆ ತಿನ್ನಬೇಕೆಲ್ಲಾ!
ಬೆಡಗಿನ ಹಲ್ಲಿಂದಗಿಯಲಾಗ್ವುದಿಲ್ಲ! (ನೆ)
-ಚ್ಚಿದನ್ನು ತಿಂದರೆ ಜೀರ್ಣವಾಗುವುದಿಲ್ಲ!
ಬೀಳ್ಬಾರದು ಬಲಿ ಕೃತಕಗಳಿಗೆಲ್ಲಾ! (ಗೋ)
-ಳು ಸಮಾಜದಲ್ಲಿಂದಿದರಿಂದಲೇ ಎಲ್ಲಾ! (ಸಾ)
-ವು, ನೋವು ಹೆಚ್ಚಾಯಿತಿದರಿಂದಲೇ ಎಲ್ಲಾ!
ದಿವ್ಯ, ಶುದ್ಧ ಜೀವನಕಣಿಯಾಗಿರೆಲ್ಲಾ! (ಪು)
-ಲ್ಲ ನಿರಂಜನಾದಿತ್ಯ ಧ್ಯಾನ ಮಾಡಿರೆಲ್ಲಾ!!!

ಅಚ್ಚುಕಟ್ಟು ಆರ್ಯರಾಚಾರಚ್ಚುಕಟ್ಟು (ಹು)   3(1009)

-ಚ್ಚು ಹರಟೆ ಬಿಟ್ಟನುಷ್ಠಾನಚ್ಚುಕಟ್ಟು!
ರ್ಮ, ಧರ್ಮ, ನೇಮ, ನಿಷ್ಠೆಯಚ್ಚುಕಟ್ಟು! (ಒ)
-ಟ್ಟು ಸೇರಿಹಪರ ಸಾಧಿಪಚ್ಚುಕಟ್ಟು!
ದರೋಪಚಾರಾತ್ಮಭಾವಚ್ಚುಕಟ್ಟು! (ಧೈ)
-ರ್ಯ, ಸ್ಥೈರ್ಯವರ್ಧಕ ದಾರಿಯಚ್ಚುಕಟ್ಟು!
ರಾಜ, ಮಂತ್ರಿಯಾಳುಗಳೈಕ್ಯಚ್ಚುಕಟ್ಟು!
ಚಾಡಿ, ಚೌರ್ಯಕ್ಕೆಡೆಗೊಡದಚ್ಚುಕಟ್ಟು! (ವ)
-ರ ಗುರುಭಕ್ತಿ ಪಿರಿದೆಂಬಚ್ಚುಕಟ್ಟು! (ಬಿ)
-ಚ್ಚು ಹೃದಯದುಚ್ಛ ಭಾವದಚ್ಚುಕಟ್ಟು!
ಷ್ಟ, ಸುಖ ಪ್ರಸಾದವೆಂಬಚ್ಚುಕಟ್ಟು! (ಗು)
-ಟ್ಟು ನಿರಂಜನಾದಿತ್ಯ ಪ್ರೇಮಚ್ಚುಕಟ್ಟು!!!

ಅಚ್ಚುತನ ಸೇರಲೆಚ್ಚರದಿಂದ ಬಾ! (ಚು)   5(2586)

-ಚ್ಚುವ ಮುಳ್ಳುಗಿಡಗಳ ಸರಿಸಿ ಬಾ!
ನ್ನ ಸುಖಕ್ಕಾಗ್ಯದ ನೋಯಿಸದೆ ಬಾ!
ನ್ನಾನಂದಾಮೇಲೆ ಅನುಭವಿಸು ಬಾ!
ಸೇವೆಯಿಂದ ಸಾಯುಜ್ಯವೆಂದರತು ಬಾ!
ಘುಪತಿಯ ಭಜನೆ ಮಾಡುತ್ತ ಬಾ! (ತ)
-ಲೆಬಾಗಿ ಶ್ರೀ ಪಾದಕ್ಕೆ ಭಕ್ತಿಯಿಂದ ಬಾ! (ಮ)
-ಚ್ಚರ ಬಿಟ್ಟ ಸಚ್ಚರಿತನಾಗೀಗ ಬಾ! (ತ)
-ರತರದಾಸೆಗಳ ಸವರುತ್ತ ಬಾ!
ದಿಂಬು ಹಾಸಿಗೆಗಳೊತ್ತಟ್ಟಿಗಿಟ್ಟು ಬಾ! (ಉ)
-ದಯ ಕಾಲಕ್ಕೆ ಮೊದಲೆದ್ದಿತ್ತನೀ ಬಾ!
ಬಾ! ನಿರಂಜನಾದಿತ್ಯಾಚ್ಚುತನಾಗು ಬಾ!!!

ಅಜ, ಹರಿ, ಹರರೊಂದಾಗಿ ನಾನೆಂದೆ!   3(1320)

ನನ, ಮರಣ, ರಹಿತ ನಾನೆಂದೆ!
ಸ್ತ, ಪಾದಗಳಿಲ್ಲದವ ನಾನೆಂದೆ! (ಕ)
-ರಿವದನ ಕಾರ್ತಿಕೇಯಾತ್ಮ ನಾನೆಂದೆ!
ದಿನಾಲ್ಕು ಲೋಕಗಳಾತ್ಮ ನಾನೆಂದೆ! (ಪ)
-ರಮಗುರು ಪರಮಹಂಸ ನಾನೆಂದೆ! (ಬೇ)
-ರೊಂದಿಲ್ಲದಖಂಡ ಬ್ರಹ್ಮಾಂಡ ನಾನೆಂದೆ! (ಸ)
-ದಾ ಸರ್ವಕಾರ್ಯಕಾರಣಾತ್ಮ ನಾನೆಂದೆ!
ಗಿಡ, ಮರ, ಪಶು, ಪಕ್ಷ್ಯಾತ್ಮ ನಾನೆಂದೆ!
ನಾಮ, ರೂಪಾತೀತನಂತಾತ್ಮ ನಾನೆಂದೆ!
ನೆಂಟ, ಭಂಟ, ತುಂಟರಲ್ಲೆಲ್ಲಾ ನಾನೆಂದೆ! (ಅಂ)
-ದೆ

, ನಿರಂಜನಾದಿತ್ಯಾನಂದ ನಾನೆಂದೆ!!!

ಅಜೀರ್ಣ ಹೊಟ್ಟೆಗೆ ಅಮೃತವೂ ಕಹಿ!   4(1440)

ಜೀರ್ಣವಾದರೆ ವಿಷವಾದರೂ ಸಿಹಿ! (ವ)
-ರ್ಣಧರ್ಮ ಹಾಳಾದರೆ ಸಮಾಜ ಕಹಿ!
ಹೊಣೆಯರಿತು ಬಾಳಿದರೆಲ್ಲಾ ಸಿಹಿ! (ಬ)
-ಟ್ಟೆಯಾಡಂಬರದ ಪರಿಣಾಮ ಕಹಿ (ಹೇ)
-ಗೆ ಇರಬೇಕೋ ಹಾಗಿದ್ದರೆಲ್ಲಾ ಸಿಹಿ!
ನಾವಶ್ಯದಾಶೆಯಿಂದ ಬಾಳು ಕಹಿ!
ಮೃತ್ಯುಂಜಯನ ಸೇವೆಯಿಂದೆಲ್ಲಾ ಸಿಹಿ!
ನು ಮನಕ್ಕಂಟಿಕೊಂಡುದೆಲ್ಲಾ ಕಹಿ! (ಮಾ)
-ವೂ, ಬೇವೂ, ಪ್ರಸಾದವೆಂದರೆಲ್ಲಾ ಸಿಹಿ!
ನಕ, ಕಾಂಚನೈಶ್ವರ್ಯವೆಲ್ಲಾ ಕಹಿ! (ಸ್ನೇ)
-ಹಿ ನಿರಂಜನಾದಿತ್ಯನೆಂದೆಂದೂ ಸಿಹಿ!!!

ಅಜ್ಜ ಬಂದ, ಕಜ್ಜಾಯ ತಿಂದ! [ಸ]   4(2484)

-ಜ್ಜನ ಸಂಗದಲ್ಲಿದ್ದು ತಿಂದ!
ಬಂದೆ ದೂರದಿಂದೆಂದು ತಿಂದ!
ತ್ತನಿಷ್ಟವಿದೆಂದು ತಿಂದ!
ಷ್ಟೇಷ್ಟವ್ನಿಷ್ಟವೆಂದು ತಿಂದ! (ಕ)
-ಜ್ಜಾಯಾತ್ಮಧ್ಯಾನವೆಂದು ತಿಂದ! (ಕ್ರ)
-ಯಕ್ಕೆ ಸಿಕ್ಕದಿದೆಂದು ತಿಂದ!
ತಿಂದು ತೇಗಿದೆನೆಂದು ತಿಂದ! (ತಿಂ)
-ದ, ನಿರಂಜನಾದಿತ್ಯಾನಂದ!!!

ಅಜ್ಜಿಯ ಬಾಳು ಆದರ್ಶವಮ್ಮಾ! (ಮ)   5(2772)

-ಜ್ಜಿಗೆಯಲ್ಲಿ ಬೆಣ್ಣೆಯಿದ್ದಂತಮ್ಮಾ!
ಮನ ಭಯಾಕೆಗಿಲ್ಲವಮ್ಮಾ!
ಬಾಯ್ಕೈ ಅವಳದು ಶುದ್ಧವಮ್ಮಾ! (ಹು)
-ಳುಕು ಬುದ್ಧಿಯಿಲ್ಲವಳಿಗಮ್ಮಾ!
ತ್ಮೀಯರೆಲ್ಲರವಳಿಗಮ್ಮಾ!
ತ್ತನವಳಿಗೆ ಗುರುವಮ್ಮಾ! (ದ)
-ರ್ಶನದಿಂದವಳು ಧನ್ಯಳಮ್ಮಾ! (ಭ)
-ವ ಸಾಗರದಿಂದೀಗ ಪಾರಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯ ದತ್ತಮ್ಮಾ!!!

ಅಜ್ಞಾತವಾಸಿಗಿಲ್ಲ ಗೌರವ!   6(4099)

ಜ್ಞಾನಿಯಾದರೂ ಆತ ಲಾಘವ!
ರಣಿಸುತಗಿದನುಭವ!
ವಾಯುಸುತ ಪಾಚಕ ಮಾನವ!
ಸಿರಿವಂತ ದುರಳು ಆಳುವ!
ಗಿರಿಧಾರಿಯ ಲಕ್ಷ್ಯ ಮಾಡುವ! (ಗೊ)
ಲ್ಲನೆಂದು ಶಿಶುಪಾಲ ಜರಿವ!
ಗೌಪ್ಯ ಹರಿದಾಗವ ಸಾಯುವ!
ಣಧೀರ ಶ್ರೀಕೃಷ್ಣ ಮೆರೆವ! (ಅ)
-ವ ನಿರಂಜನಾದಿತ್ಯನೆಂಬವ!!!

ಅಜ್ಞಾನ ಪಾತಾಳದಿಂದೇರು ಜ್ಞಾನಾಕಾಶಕ್ಕೆ! (ಪ್ರ)   5(3162)

-ಜ್ಞಾರಾಧಕನಾಗದವ ಬೀಳ್ವ ಭೂತಲಕ್ಕೆ!
ಶ್ವರದಾಸೆ ಸುಟ್ಟು ಬಿಡ್ಬೇಕು ವಿಜಯಕ್ಕೆ!
ಪಾರಮಾರ್ಥಿಕಾಭ್ಯಾಸ ಸದಾ ಮಾಡ್ಬೇಕಿದಕ್ಕೆ!
ತಾಮಸಾಹಾರ, ವಿಹಾರಗಳ್ವಿರೋಧದಕ್ಕೆ! (ಕೆ)
-ಳಗಿಂದೊಂದೊಂದೇ ಮೆಟ್ಲುಹತ್ತಿ ಹೋಗು ಮೇಲಕ್ಕೆ! (ಅಂ)
-ದಿಂದಿನನುಭವ ಸಹಾಯವಾಗ್ಲೀಗದಕ್ಕೆ! (ಒಂ)
-ದೇ ನೆಗೆತ ಸಾಕಾಕಾಶಕ್ಕೆಂಬುದು ನಾಶಕ್ಕೆ!
ರುಜುಮಾರ್ಗಗಾಮಿಯಾಗ್ಬೇಕಿದು ಸಿದ್ಧಿಸ್ಲಿಕ್ಕೆ! (ಆ)
-ಜಾ

ಧಾರಕನಾಗಿರಬೇಕು ಗುರುಚಿತ್ತಕ್ಕೆ!
ನಾಮ, ರೂಪದ ಭೇದವಿರಬಾರದಿದಕ್ಕೆ!
ರಣಾಗಬೇಕು ಗುರುಶಿವನ ಪಾದಕ್ಕೆ! (ಅ)
-ಕ್ಕೆ, ಸುಜ್ಞಾನ ನಿರಂಜನಾದಿತ್ಯನಿಂದೆಲ್ಲಕ್ಕೆ!!!

ಅಟ್ಟ ಮೇಲುರಿಯಯ್ಯಾ! (ಕೆ)   1(376)

-ಟ್ಟ ಮೇಲೆ ಬುದ್ಧಿಯಯ್ಯಾ!
ಮೇಡೂ ನೆಲಸಮಯ್ಯಾ! (ಅ)
-ಲುಗದಿರ್ನೇಗಿಲಯ್ಯಾ! (ಅ)
-ರಿವಾಗಲಾಮೇಲಯ್ಯಾ!
ತ್ನ ಫಲಪ್ರದಯ್ಯಾ! (ಅ)
-ಯ್ಯಾದಿತ್ಯ ಸಾಕ್ಷಿಯಯ್ಯಾ!!!

ಅಡಿಗಡಿಗೊಡಲಿಗಾಯಾಸವೇಕೆ? (ಅ)   4(1410)

-ಡಿಗಡಿಗಪಚಾರದಕಪ್ಪುದಕೆ!
ಮನವಿಳೆಯ ಕಡೆಗಾದುದಕೆ! (ಹಾ)
-ಡಿ, ಪಾಡಿ, ಕೂಡಿಯೊಡನಾಡದುದಕ್ಕೆ!
ಗೊಡ್ಡಾಚಾರಗಳ ಬಿಡದಿದ್ದುದಕೆ!
ಮರುಗೇಶನ ಮರೆತಿದ್ದುದಕೆ! (ಕ)
-ಲಿಮಲದ ಲೇಪನ ಹೆಚ್ಚಾದುದಕೆ!
ಗಾಳಿಗೋಪುರ ಕಟ್ಟಲೆತ್ನಿಸಿದಕೆ! (ಛಾ)
-ಯಾಪತಿಯ ಕಿರಣ ಬೀಳದುದಕೆ!
ರ್ವನಾಮವೊಂದೆಂಬರಿವಿಲ್ಲದಕೆ!
ವೇದಾಂತ ಬರೀ ಬಾಯಿ ಮಾತಾದುದಕೆ! (ಏ)
-ಕೆ?ನಿರಂಜನಾದಿತ್ಯನರಿಯದಕೆ!!!

ಅಡಿಗೆ ಮಾಡಮ್ಮಾ ಸರಸ್ವತಿ! (ಅ)   4(1942)

-ಡಿಗೆರಗಿಕ್ಕಮ್ಮಾ ಸರಸ್ವತಿ! (ನ)
-ಗೆಮೊಗ ತೋರಮ್ಮಾ ಸರಸ್ವತಿ!
ಮಾತಂಗಿ ನೀನಮ್ಮಾ ಸರಸ್ವತಿ! (ತ)
-ಡಮಾಡಬೇಡಮ್ಮಾ ಸರಸ್ವತಿ! (ದು)
-ಮ್ಮಾನವದೇಕಮ್ಮಾ ಸರಸ್ವತಿ?
ದಾ ಸುಖಿಯಮ್ಮಾ ಸರಸ್ವತಿ! (ಸ್ವ)
-ರ ಮಾಧುರಿಯಮ್ಮಾ ಸರಸ್ವತಿ!
ಸ್ವರೂಪಾನಂದಮ್ಮಾ ಸರಸ್ವತಿ! (ಅ)
-ತಿಥಿ ನಿರಂಜನಾದಿತ್ಯ, ಸತಿ!!!

ಅಡಿಗೆ ಮಾಡುವುದೇತಕ್ಕೆ? (ಬ)   4(1453)

-ಡಿಸಿ ಹಸಿವಿಂಗಿಪುದಕ್ಕೆ! (ಬ)
-ಗೆಬಗೆ ಶಾಖಪಾಕದಕ್ಕೆ!
ಮಾಡದಿದ್ದರೂಟದೇತಕ್ಕೆ? (ಮಾ)
-ಡು ಧ್ಯಾನದು ನೀನಾಗಲಿಕ್ಕೆ! (ಗೋ)
-ವು ಇರ್ಪುದು ಕ್ಷೀರ ಪಾನಕ್ಕೆ!
ದೇಗುಲ ದೇವನಿರ್ಪುದಕ್ಕೆ!
ತ್ವ “ತತ್ವಂ” ಆಗುವುದಕ್ಕೆ! (ಅ)
-ಕ್ಕೆ, ನಿರಂಜನಾದಿತ್ಯನಕ್ಕೆ!!!

ಅಡಿಗೆಗಿದೊಂದು ಗಡಿಗೆ! (ಹಾ)   5(2936)

-ಡಿ ಶಿವನಾಮ ಮಾಡಡಿಗೆ! (ಹಾ)
-ಗೆ ಮಾಡಿಕ್ಕಿದ್ದೊಳ್ಳೇ ಕೊಡುಗೆ! (ಯೋ)
-ಗಿಯಾಗಿ ಹೋಗ್ಯಿವನೆಡೆಗೆ!
ದೊಂಬರಾಟ ಕಾಸಿನೆಡೆಗೆ!
ದುಡಿ ಕೃಪಾ ಸಂಪಾದನೆಗೆ!
ಣ್ಯನಾಗ್ವಾಸೇಕೆ ನಿನಗೆ? (ಕೂ)
-ಡಿ ಮಾಡದ್ಯಾಗ್ಬೇಕವನಿಗೆ! (ಹೀ)
-ಗೆ ನಿರಂಜನಾದಿತ್ಯನಾಗೆ!!!

ಅಡಿಯಾಳು ಮಹಾಬಲೇಶ್ವರಗೆ ನೀನಾಶಾ! (ಅ)   5(2769)

-ಡಿಗಡಿಗೆ ನೆನೆಯಬೇಕವನ ಪಾದಾಶಾ!
ಯಾಗ ಯೋಗಗಳಿಗಿಂತತ್ಯಧಿಕವಿದಾಶಾ!
(ಬಾ)ಳು ಹೊನ್ನಾಗಲವನ ಕೃಪೆ ಸದಾ ಬೇಕಾಶಾ!
ದನ ಮರ್ದನ ಸ್ವಾಮಿ ಮಹಾಬಲೇಶಾಶಾ!
ಹಾಡಿ, ಹೊಗಳಿ ಒಲಿಸಿಕೊಳ್ಳವನನ್ನಾಶಾ!
ಹು ಕರುಣಾಳು ಕೈಲಾಸಾಧಿಪತಿಯಾಶಾ!
ಲೇಸು ನಿನಗಹುದವನಿಂದ ನಂಬಿರಾಶಾ! (ನ)
-ಶ್ವರದಾಸೆಗಳ ಬಿಟ್ಟವನ ಪೂಜಿಸಾಶಾ! (ವ)
-ರ ಗುರುಸ್ವರೂಪನವನದೆಂದರಿ ನೀನಾಶಾ! (ಹ)
-ಗೆತನವಾರಲ್ಲೂ ಸಾಧಿಸದಿರಬೇಕಾಶಾ!
ನೀಚೋಚ್ಚವೆನ್ನದೆ ಸೇವೆ ಸಾಗುತಿರಲಾಶಾ!
ನಾಮವನದು ಪಾವನವೆಂದು ಸ್ಮರಿಸಾಶಾ! (ಈ)
-ಶಾ ನಿರಂಜನಾದಿತ್ಯ ಸದ್ಗುರು ಸರ್ವೇಶಾ!!!

ಅಡ್ಡಿ ಮಾಡದೆ ಬಡ್ಡೀಗೆ ಕೊಡು! [ಕ]   5(2948)

-ಡ್ಡಿ, ಕಸವೆತ್ತಿದ ದುಡ್ಡಿದ್ಕೊಡು!
ಮಾತಿನ ಬೆಲೆಯುಳ್ಸೀಗ ಕೊಡು! (ಬ)
-ಡವನಿಗನ್ಯಾಯ ಮಾಡ್ಬೇಡ್ಕೊಡು!
ದೆವ್ವವಾಗ್ಬಾರ್ದು ಸತ್ಮೇಲೆ ಕೊಡು!
ಲು ಕಷ್ಟದಾರ್ಜನೆನ್ನದ್ಕೊಡು! (ಮ)
-ಡ್ಡೀ, ಮಾಂಸ ತಿಂದವ್ನಲ್ಲ ನಾನ್ಕೊಡು!
ಗೆಡ್ಡೆ, ಗೆಣಸು ತಿಂದವ ನಾನ್ಕೊಡು!
ಕೊಡ್ಡಿದ್ರಪಕೀರ್ತಿ ನಿನ್ಗೆ, ಕೊಡು! (ಹಾ)
-ಡು ನಿರಂಜನಾದಿತ್ಯನ ಕೂಡು!!!

ಅಣ್ಣನ ಬಣ್ಣವಾಗ್ಬೇಕ್ನಿನ್ಬಣ್ಣ! [ಕ]   5(2732)

-ಣ್ಣ ಕೋರೈಸುವಂತಿರ್ಬೇಕಾ ಬಣ್ಣ! (ಅ)
-ನಸೂಯೆಯಾಗಿರ್ಬೇಕ್ನೋಡೀ ಬಣ್ಣ! (ಡಂ)
-ಬದ ಕೊಂಬ ಮುರಿಯ್ಬೇಕೀ ಬಣ್ಣ! (ಬ)
-ಣ್ಣನೆಗ್ಮರುಳಾಗ್ಬಾರದೀ ಬಣ್ಣ!
ವಾಸುದೇವಗಾನಂದವೀ ಬಣ್ಣ! (ಸಾ)
-ಗ್ಬೇಕ್ಯಾತ್ರೆ ಅವ್ನಂತೆಂಬುದೀ ಬಣ್ಣ! (ಬೇ)
-ಕ್ನಿನಗೀಗೆಂಬೆ ನಾನಾ ಹೊಂಬಣ್ಣ! (ನಿ)
-ನ್ಬಣ್ಣಣ್ಣನ ಬಣ್ಣಾದಾಗೇಳ್ಬಣ್ಣ! (ಅ)
-ಣ್ಣ ನಿರಂಜನಾದಿತ್ಯಗೇಕ್ಬಣ್ಣ???

ಅಣ್ಣಯ್ಯಾ! ಸದ್ಗುಣಿಯಾಗಣ್ಣಯ್ಯಾ! (ಅ)   2(481)

-ಣ್ಣಗೆ ಸಣ್ಣತನ ಬೇಡಣ್ಣಯ್ಯಾ! (ಆ)
-ಯ್ಯಾ! ಕರ್ತವ್ಯನಿಷ್ಠನಾಗಣ್ಣಯ್ಯಾ!
ರಳ ಸ್ವಭಾವಿಯಾಗಣ್ಣಯ್ಯಾ (ಸ)
-ದ್ಗುಣದಿಂದೆಲ್ಲಾ ಜಯವಣ್ಣಯ್ಯಾ! (ಮ)
-ಣಿಯಬೇಕು ಶ್ರೀಪಾದಕ್ಕಣ್ಣಯ್ಯಾ!
ಯಾರಲ್ಲೂ ವಿರೋಧ ಬೇಡಣ್ಣಯ್ಯಾ
ಗನಮಣಿಯಾದರ್ಶಣ್ಣಯ್ಯಾ! (ಬ)
ಣ್ಣ ಬಣ್ಣದುಡುಪು ಬೇಡಣ್ಣಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ಅಣ್ಣಯ್ಯಾ!!!

ಅಣ್ಣಾ! ರಾವಣಾ! ಏಕೀ ಬುದ್ಧಿ ಭ್ರಮಣ? (ಹೆ)   3(1087)

-ಣ್ಣಾಸೆ, ಮಣ್ಣಾಸೆಯಲ್ಲಾ ಬುದ್ಧಿ ಭ್ರಮಣ!
ರಾಗ, ದ್ವೇಷಾಸೂಯೆಯೂ ಬುದ್ಧಿ ಭ್ರಮಣ!
ರ ಭಕ್ತನಿಗೇಕೀ ಬುದ್ಧಿ ಭ್ರಮಣ? (ಗು)
-ಣಾಢ್ಯನಾದವಗಿಲ್ಲ ಬುದ್ಧಿ ಭ್ರಮಣ!
ಸಪಚಾರವಾಯ್ತೀ ಬುದ್ಧಿ ಭ್ರಮಣ?
ಕೀಳಾಸೆಯಿಂದಾಗ್ವುದು ಬುದ್ಧಿ ಭ್ರಮಣ!
ಬುಧಾದಿ ಗ್ರಹ ದ್ವೇಷ ಬುದ್ಧಿ ಭ್ರಮಣ! (ನಿ)
-ದ್ಧಿಗಡ್ಡಿ ಮಾಡುವುದು ಬುದ್ಧಿ ಭ್ರಮಣ!
ಭ್ರಷ್ಠನೆನಿಸುವುದು ಬುದ್ಧಿ ಭ್ರಮಣ!
ಹಾತ್ಮನಿಗಾಗದು ಬುದ್ಧಿ ಭ್ರಮಣ! (ಮಾ)
-ಣ, ನಿರಂಜನಾದಿತ್ಯ ಬುದ್ಧಿ ಭ್ರಮಣ!!!

ಅತಿ ಆದ್ರೆ ಶ್ರೀಪತಿಗೂ ಅಪಖ್ಯಾತಿ! (ದಿ)   4(2500)

-ತಿಸುತೇಂದ್ರತಿಕಾಮಿಯಾಗ್ಯೇನಾಯ್ತ್ಗತಿ?
ರಾದರೇನೆಲ್ಲಕ್ಕಿರಬೇಕೊಂದ್ಮಿತಿ! (ನಿ)
-ದ್ರೆಯತಿಯಾದ್ಕುಂಭಕರ್ಣಗಧೋಗತಿ!
ಶ್ರೀವತ್ಸ ಹೋಗ್ಯಾಯ್ತು ಭೃಗುಗೆ ದುಃಸ್ಥಿತಿ!
ರಮೇಶ್ವರಗಾಯ್ತು ಕಾಪಾಲಿ ಸ್ಥಿತಿ! (ಸ)
-ತಿಪತಿಯರ ಐಕ್ಯವೇ ಮುಕ್ತಿ ಸ್ಥಿತಿ!
ಗೂಡೊಳಗಿನ ಗಿಳಿಗಾರಾಮ ಗತಿ!
ನವರತದಕ್ಕವನದೇ ಸ್ಮೃತಿ!
ತಿತ ಪಾವನನಪ್ಪುದೇ ಸಂಸ್ಕೃತಿ!
ಖ್ಯಾತಿಯಾತನಿಗೆ ನಿರತಾತ್ಮ ಶಾಂತಿ! (ಪ್ರೀ)
-ತಿ, ನಿರಂಜನಾದಿತ್ಯನ ನಿಜಸ್ಥಿತಿ!!!

ಅತಿ ಆಸೆ ಗತಿಗೇಡು!   6(3543)

ತಿಳಿದಿದ ಕಾರ್ಯ ಮಾಡು!
ತ್ಮ ಧ್ಯಾನ ಸದಾ ಮಾಡು!
ಸೆಣಸಾಟ ಬಿಟ್ಟು ಬಿಡು!
ಭಸ್ತಿಯಂತೆಲ್ಲಾ ಮಾಡು!
ತಿರುಗಾಟ ಸಾಕು ಮಾಡು! (ಯೋ)
-ಗೇಶ್ವರನ ಸಂಗ ಮಾಡು! (ನೋ)
-ಡು ನಿರಂಜನಾದಿತ್ಯಾಡು!!!

ಅತಿಕ್ರಮಕ್ಕೆ ಪ್ರತಿಕ್ರಮ ಶಿಕ್ಷೆ!   6(4067)

ತಿಳಿಗೇಡಿ ಬಯಸುವನು ರಕ್ಷೆ!
ಕ್ರಮ ಬದ್ಧತೆಗಿರಬೇಕಪೇಕ್ಷೆ!
ನುಜ ಮಾಡಿಹನಿದಕ್ಕುಪೇಕ್ಷೆ! (ಇ)
-ಕ್ಕೆನನ್ಯರ್ಗೆಂಬವಗೇಕೆ ನಿರೀಕ್ಷೆ?
ಪ್ರಪಂಚದಲ್ಲಿ ಇದೊಂದು ಪರೀಕ್ಷೆ!
ತಿರಿದುಂಬುವಗೂ ಮಹತ್ವಾಕಾಂಕ್ಷೆ!
ಕ್ರಯ, ವಿಕ್ರಯದಲ್ಲೆಲ್ಲಾ ಉತ್ಪ್ರೇಕ್ಷೆ!
ರ್ತರಿಂತಿದ್ದರಾಗದು ಸುಭಿಕ್ಷೆ!
ಶಿವೆಯಾಗಬೇಕು ನಮಗಧ್ಯಕ್ಷೆ! (ದೀ)
-ಕ್ಷೆ ನಿರಂಜನಾದಿತ್ಯಗೀಯ್ಲಾ ದಕ್ಷೆ!!!

ಅತಿಯಾದರಮೃತವೂ ವಾಂತಿ!   1(307)

ತಿಳಿ! ಮಿತ ಜೀವನವೇ ಶಾಂತಿ!
ಯಾಚನಾ ವೃತ್ತಿಯಿಂದ ಅಶಾಂತಿ! (ಇ)
-ದಕಾಗಿದ್ದುದರಲಾಗು ತೃಪ್ತಿ! (ಇ)
-ರಲಿ ದಿವ್ಯ ಜೀವನಕೆ ಪ್ರೀತಿ!
ಮೃತ್ಯುಗಂಜನು ನಿಜ ವೇದಾಂತಿ!
ತ್ವ ದರ್ಶನದ ಬಾಳೇ ಶಾಂತಿ!
ವೂನ, ನ್ಯೂನವೆಲ್ಲಾ ಮನೋಭ್ರಾಂತಿ!
ವಾಂಛಲ್ಯ ಮಾಯೆಗಾದರಶಾಂತಿ!
ತಿತಿ, ನಿರಂಜನಾದಿತ್ಯ ಪ್ರೀತಿ!!!

ಅತಿಯಾಸೆಯಾಯ್ತು, ಸ್ಥಿತಿ, ಗತಿ ಹೋಯ್ತು!   5(2821)

ತಿಳಿದವರನ್ನೆಲ್ಲಾ ತುಳಿದದ್ದಾಯ್ತು!
ಯಾತ್ರೆ, ಜಾತ್ರೆಗಳ ನಾಟಕ ಹೆಚ್ಚಾಯ್ತು!
ಸೆರೆ, ಸೇಂದಿಯ ಕುಡಿತ ಮಾಮೂಲಾಯ್ತು!
ಯಾಚನೆಯ ಯೋಚನೆ ಹೆಚ್ಚಿ ಹುಚ್ಚಾಯ್ತು! (ಆ)
-ಯ್ತು, ಆದರ್ಶ ಸಂಸ್ಕೃತಿಯ ನಾಶವಾಯ್ತು!
ಸ್ಥಿರತೆ ಮನಸ್ಸಿಗೆ ಇಲ್ಲದಂತಾಯ್ತು!
ತಿಪ್ಪೆ,ಗುಂಡಿಗಳಮ್ಮಯ್ಯಗಳಿಗಾಯ್ತು!
ದ್ದೆ, ಹೊಲಗಳುಳುವವರಿಗಾಯ್ತು!
ತಿನ್ನುವುದಕ್ಕೆ ಮಣ್ಣು ಬೆರೆಸಿಟ್ಟಾಯ್ತು!
ಹೋಯ್ತು ಭಾರತದ ಪ್ರಾಣ ಹಾರಿಹೋಯ್ತು! (ಆ)
-ಯ್ತು ನಿರಂಜನಾದಿತ್ಯ ಗತಿಯೆಂದಾಯ್ತು!!!

ಅತೀತನಾದಾಗ ಮುಕ್ತಿಯಯ್ಯಾ!   3(1045)

ತೀವ್ರವಾದ ಸಾಧನೆ ಬೇಕಯ್ಯಾ!
ನ್ನರಿವಿದಕಿರಬೇಕಯ್ಯಾ!
ನಾದ, ಬಿಂದು ಕಲಾತೀತದಯ್ಯಾ!
ದಾರಿ ಬಹುದೂರವಿದಕಯ್ಯಾ!
ದ್ದಲವಲ್ಲೇನೇನಿಲ್ಲವಯ್ಯಾ!
ಮುಕುಂದನಾವಾಸದೇ ಕಾಣಯ್ಯಾ! (ಭ)
-ಕ್ತಿಯಿಂದಾಗಬೇಕು ಧ್ಯಾನವಯ್ಯಾ! (ಕಾ)
-ಯ, ಮನ, ಕರಗಿಸಬೇಕಯ್ಯಾ! (ಅ)
-ಯ್ಯಾ,! ನಿರಂಜನಾದಿತ್ಯ ಮುಕ್ತಯ್ಯಾ!!!

ಅತೃಪ್ತ ಬಯಕೆಯಿಂದ ಯೋಗ ಭ್ರಷ್ಟ!   6(4370)

ತೃಪ್ತಿ ಜೀವನ ಸತತ ಸರ್ವೋತ್ಕೃಷ್ಟ! (ವ್ಯಾ)
-ಪ್ತ ಸರ್ವತ್ರ ಪರಮಾಪ್ತಾತ್ಮ ಆಪ್ತೇಷ್ಟ!
ಳಲುವನಿದನ್ನರಿಯದೇ ದುಷ್ಟ! (ಕಾ)
-ಯ ಮೋಹದಿಂದವನಿಗೆ ಸದಾ ಕಷ್ಟ!
ಕೆಡುಕನ್ಯರಿರ್ಗೆಣಿಪುದವಗಿಷ್ಟ! (ಬಾ

)
-ಯಿಂದಾಡಿ ಮಾಡದವನಿಗೆಲ್ಲಾ ನಷ್ಟ!
ಯೆ ಅವನಿಗಿಲ್ಲವೆಂಬುದು ಸ್ಪಷ್ಟ!
ಯೋಗೇಶ್ವರ ಶ್ರೀ ಕೃಷ್ಣ ಕರ್ತವ್ಯ ನಿಷ್ಠ!
ಗನಸದೃಶಾತ್ಮ ಪುರುಷ ಶ್ರೇಷ್ಠ!
ಭ್ರಮೆಯಿಂದಾದಹಂಕಾರ ದುರದೃಷ್ಟ! (ಇ)
-ಷ್ಟ ನಿರಂಜನಾದಿತ್ಯನೆಲ್ಲರಾಪ್ತೇಷ್ಟ!!!

ಅತೃಪ್ತಿಯಳ್ತೆಕೋಲನ್ನತ್ತೆಸೆಯಯ್ಯಾ!   6(3357)

ತೃಣವೂ ಗುರುಚಿತ್ತವಿಲ್ದಲ್ಲಾಡದಯ್ಯಾ! (ವ್ಯಾ)
-ಪ್ತಿಯವನದ್ದೀರೇಳು ಲೋಕದಲ್ಲಯ್ಯಾ!
ಮನೂ ಅವನಾಜ್ಞೆ ಮೀರಲಾರಯ್ಯಾ!
(ಅ)-ಳ್ತೆ ಅವನದ್ದೆಂದಿಗೂ ತಪ್ಪಾಗದಯ್ಯಾ!
ಭ್ಯಕ್ಕಾಗಿ ಸದಾ ಪ್ರಾರ್ಥಿಸಬೇಕಯ್ಯಾ!
(ಚಿ)-ನ್ನ ಬೆಳ್ಳಿ ಬೇಡಿ ದುಃಖಿಯಾಗಬೇಡಯ್ಯಾ!
(ಮ)-ತ್ತೆ, ಮತ್ತೆ, ಸತ್ತು, ಹುಟ್ಟಲೇಬಾರದಯ್ಯಾ!
ಸೆರೆ ಕುಡಿದ ಕೋತಿಯಂತೀ ಮನ್ಸಯ್ಯಾ!
ಮನಿಯಮದಿಂದದ ಕಟ್ಟೇಕಯ್ಯಾ!
(ಅ)-ಯ್ಯಾ, ನಿರಂಜನಾದಿತ್ಯಾನಂದವೆಲ್ಲಯ್ಯಾ!!!

ಅತೃಪ್ತಿಯೆಂಬುದಜ್ಞಾನ ಚಿಹ್ನೆ! (ಮಾ)   4(2421)

-ತೃಭಕ್ತನಲ್ಲೆಲ್ಲಾ ಜ್ಞಾನ ಚಿಹ್ನೆ! (ವ್ಯಾ)
-ಪ್ತಿವಳದೆಲ್ಲೆಲ್ಲೆಂಬುದಾ ಚಿಹ್ನೆ! (“ಕಾ”)
-ಯೆಂದ ಮಾತ್ರಕ್ಕೆ ಕಾಯ್ವುದಾ ಚಿಹ್ನೆ! (ಕಂ)
-ಬುಕಂಠಿ ಮಹೇಶ್ವರಿಯಾ ಚಿಹ್ನೆ!
ಯಾಮಯಿಯಾಕೆಂಬುದಾ ಚಿಹ್ನೆ!
ಜ್ಞಾನವೇ ಗುರುವೆಂಬುದಾ ಚಿಹ್ನೆ! (ಅ)
-ನನ್ಯ, ಭಕ್ತಿಯಿಂದಾಗ್ವುದಾ ಚಿಹ್ನೆ!
ಚಿದಾನಂದ ಪರಿಪೂರ್ಣಾ ಚಿಹ್ನೆ! (ಚಿ)
-ಹ್ನೆ, ನಿರಂಜನಾದಿತ್ಯಾತ್ಮಾ ಚಿಹ್ನೆ!!!

ಅತ್ತತ್ತು ಸುಸ್ತಾಗಿ ಹತ್ತಿ ಹೋಯ್ತಾ ಮರ್ಯಳಿಲು! (ಅ)   6(4178)

-ತ್ತತ್ತೋಡಾಡಿ ಪಥ ಕಾಣದಾಯ್ತಾ ಮರ್ಯಳಿಲು! (ಸು)
-ತ್ತು ಮುತ್ತಿನ ಕಾಗೆಗಳ್ಗಂಜಿತಾ ಮರ್ಯಳಿಲು!
ಸುಳಿವ್ತಾಯಿಯದು ಕಾಣದಾಯ್ತಾ ಮರ್ಯಳಿಲು! (ಪ್ರ)
-ಸ್ತಾಪಿಸುವುದಾರಲ್ಲಿದನ್ನೆಂತಾ ಮರ್ಯಳಿಲು?
ಗಿಡವ ಹತ್ತಲಾರಂಭಿಸಿತಾ ಮರ್ಯಳಿಲು!
ತಾಶೆ, ನಿರಾಶೆಗೀಡಾಯಿತಾ ಮರ್ಯಳಿಲು! (ಹ)
-ತ್ತಿ, ಬಿದ್ದು, ಹತ್ತಿ, ಬೀಳ್ವುದಾಯಿತಾ ಮರ್ಯಳಿಲು!
ಹೋರಾಟದೆದೆ ಗಟ್ಟಿ ಮಾಡಿತಾ ಮರ್ಯಳಿಲು! (ತಾ)
-ಯ್ತಾನಾಗಿ ಬರಲೆಂದಾಶಿಸಿತಾ ಮರ್ಯಳಿಲು!
ಮತಾ ಬಂಧಕ್ಕೆ ಕಟ್ಟುಬಿತ್ತಾ ಮರ್ಯಳಿಲು! (ಧೈ)
-ರ್ಯ ದೂರ ಸರಿವುದ ಕಂಡಿತಾ ಮರ್ಯಳಿಲು! (ಉ)
-ಳಿಸಿದ್ರುಳಿಸೆಂದು ಸುಮ್ಮಗಾಯ್ತಾ ಮರ್ಯಳಿಲು! (ಒ)
-ಲುಮೆ, ನಿರಂಜನಾದಿತ್ಯಗಿರ್ಲೆಂದಿತಳಿಲು!!!

ಅತ್ತಿ ಮರದ ನಿರಂಜನಾದಿತ್ಯ! (ಅ)   1(294)

-ತ್ತಿತ್ತಾಡದೆ ನೋಡುತಲಿಹ ಕೃತ್ಯ!
ರೆಯದಿಹನಾರನಿದು ಸತ್ಯ!
ಮಿಸುತಿಹನಾದರದಾರತ್ಯ!
ಮಿಸುತಿಹನಿಂದ್ರಿಯದಾಸಕ್ತ್ಯ!
ನಿರಾಕಾರನಾಗಿ ಇಲ್ಲೆಲ್ಲೂ ಸಾಕ್ಷ್ಯ!
ರಂಗಿನಿಂದೆಸೆವನೊಳಗೆ ಪ್ರೀತ್ಯ!
ನಮನದಾನಂದವಗಗತ್ಯ!
ನಾಮಜಪವಲ್ಲಾಗುತಿದೆ ಭಕ್ತ!
ದಿನ, ರಾತ್ರಿ ಅವನ ಸೇವೆ ಸ್ತುತ್ಯ! (ಸ)
-ತ್ಯ, ನಿರಂಜನಾದಿತ್ಯನಿರ್ಪ ನಿತ್ಯ!!!

ಅತ್ತು ಫಲವಿಲ್ಲ ಸತ್ತಿರುವುದಿಲ್ಲ! (ಕಿ)   6(3614)

-ತ್ತು ತಿನ್ನುವವರೀ ಬಳಗಗಳೆಲ್ಲಾ!
ಲಾಪೇಕ್ಷೆ ಬಿಟ್ಟು ಕರ್ಮಮಾಡಿರೆಲ್ಲ!
ಕ್ಷ್ಯ ಸಿದ್ಧಿಯಾಗದೇನಿರುವುದಿಲ್ಲ!
ವಿವೇಕ, ವೈರಾಗ್ಯದಿಂದ ಬಾಳಿರೆಲ್ಲ! (ಅ)
-ಲ್ಲ, ಕಲ್ಲುಗೊಂಬೆ ದೇವರೆಂದಿಗೂ ಅಲ್ಲ! (ಆ)
-ಸತ್ತಿನಲ್ಲೂ ಪರಮಾತ್ಮನಿಲ್ಲದಿಲ್ಲ! (ಹ)
-ತ್ತಿ ಜ್ಞಾನಗಿರಿ ನೋಡೀಶ್ವರನನ್ನೆಲ್ಲಾ! (ದ)
-ರುಶನ ವಿನಾ ಭವ ಹರಿವುದಿಲ್ಲ! (ಹಾ)
-ವು ಎಂದು ಹಗ್ಗಕ್ಕಂಜಿ ಓಡ್ಬೇಕಾಗಿಲ್ಲ!
ದಿವ್ಯ ಜ್ಞಾನಾನಂದ ಕಂದರಾಗಿರೆಲ್ಲಾ! (ಎ)
-ಲ್ಲರಾತ್ಮ ನಿರಂಜನಾದಿತ್ಯ ಸುಳ್ಳಲ್ಲ!!!

ಅತ್ತೆಯೊಡೆದ ಪಾತ್ರೆಗೆ ಬೆಲೆಯಿಲ್ಲ! (ಸ)   4(2207)

-ತ್ತೆನೆಂದರೂ ಸೊಸೆಯ ಕೇಳ್ವವರಿಲ್ಲ! (ತಾ)
-ಯೊಡನಿರುವ ಭಾಗ್ಯ ಅವಳಿಗಿಲ್ಲ! (ಒ)
-ಡೆಯನಧಿಕಾರಕ್ಕೆ ಪಾರವೇ ಇಲ್ಲ!
ರಿದ್ರ ದಾಸನಿಗೆ ದೇಶವೇ ಇಲ್ಲ!
ಪಾಪಿ ನೀನೆಂದು ಮೂದಲಿಸುವರೆಲ್ಲ! (ಯಾ)
-ತ್ರೆ ಮುಗಿಸುವುದೆಂತೆಂದೆಂಬವರಿಲ್ಲ!
ಗೆಳೆಯ ಕೃಷ್ಣಲ್ಲದನ್ಯ ಗತಿಯಿಲ್ಲ!
ಬೆಟ್ಟವನೆತ್ತಿದವ ಸಾಮಾನ್ಯನಲ್ಲ! (ಲೀ)
-ಲೆಯವನದು ಬಣ್ಣಿಸಲಳವಲ್ಲ! (ಬಾ)
-ಯಿಯಲ್ಲಿ ಬ್ರಹ್ಮಾಂಡ ತೋರಿಸಿದಾ ಗೊಲ್ಲ! (ಬ)
-ಲ್ಲ ನಿರಂಜನಾದಿತ್ಯನನ್ನಾ ಪ್ರಪುಲ್ಲ!!!

ಅತ್ಯಾಚಾರನಾಚಾರ ಹೆಚ್ಚಿ ಹೋಯಿತು! (ನಿ)   6(4091)

-ತ್ಯಾನುಷ್ಠಾನಕ್ಕೆ ಫಲ ಸಿಕ್ಕದಾಯಿತು!
ಚಾತುರ್ವರ್ಣಾಶ್ರಮ ಬಾಯಿ ಮಾತಾಯಿತು! (ಪ)
-ರಮಾತ್ಮನ ವ್ಯವಸ್ಥೆ ಕೆಟ್ಟ ಹೋಯಿತು!
ನಾಥರಿಲ್ಲದ ಸ್ಥಿತಿ ನಮ್ಮದಾಯಿತು!
ಚಾಪಲ್ಯದಿಂದ ನೆಮ್ಮದಿ ಹಾಲಾಯಿತು! (ಶ)
-ರಣಾಗುವುದನಿವಾರ್ಯವಾಯಿತು!
ಹೆತ್ತ ತಾಯ್ತಂದೆ ದೇವರೆನ್ಬೇಕಾಯಿತು! (ಮು)
-ಚ್ಚಿದಂಧಕಾರಳಿಸೆನಬೇಕಾಯಿತು! (ಅ)
-ಹೋರಾತ್ರಿ ಈ ರೀತಿ ಪ್ರಾರ್ಥನೆಯಾಯಿತು! (ಬಾ)
-ಯಿ ತೆರೆಯದಷ್ಟೂ ದುರ್ಬಲವಾಯಿತು! (ಇಂ)
-ತು ನಿರಂಜನಾದಿತ್ಯಾರ್ಪಣವಾಯಿತು!!!

ಅತ್ಯಾಶಾಸಕ್ತ ಜೀವರಿಂದಾಯ್ತು ಪ್ರಕೃತಿ ವಿಕೃತಿ! (ಸ)   6(4101)

-ತ್ಯಾಸತ್ಯ ಜ್ಞಾನವಿಲ್ಲದೇ ನರರಿಗಾಯ್ತು ದುರ್ಗತಿ!
ಶಾಪದಂತಿದವರ ಕಾಡುತ್ತಿಹುದು ದಿನಂಪ್ರತಿ!
ಜ್ಜನ, ದುರ್ಜನರೆಲ್ಲಾದರು ಪ್ರವಾಹಕ್ಕಾಹುತಿ! (ಯು)
-ಕ್ತ ಸೇವಾ ಪರಿಹಾರದಿಂದಾಗ ಬೇಕೀಗ ವಸತಿ!
ಜೀವನೋಪಾಯಕ್ಕಿರಬೇಕು ಒಳ್ಳೆಯ ರೀತಿ, ನೀತಿ!
ಸ್ತ್ರಾಭರಣಾದ್ಯಲ<ಕಾರಕ್ಕೋಡಬಾರದು ಮತಿ! (ಊ)
-ರಿಂದೂರಿಗೆ ತಿರುಗುತ್ತಿದ್ದರೆ ಆಗದು ಪ್ರಗತಿ!
ದಾರಿ ಸದ್ಗುರು ಸನ್ನಿಧಿಗೆ ಸಾಗಿದರೆ ಉನ್ನತಿ! (ಹೋ)
-ಯ್ತು ಹಾಲಾಗಿ ನಮ್ಮ ಪವಿತ್ರಾದರ್ಶ ಹಿಂದೂ ಸಂಸ್ಕೃತಿ!
ಪ್ರಪಂಚದಲ್ಲೆಲ್ಲೆಲ್ಲೂ ಇಂದ್ರಿಯ ತೃಪ್ತಿಗಾಗೀಗ ಕ

ತಿ!
ಕೃತಿ, ತ್ರೇತಾದಿಗಳಲ್ಲಿದ್ದಂತಿಲ್ಲೀಗ ಸತಿ ಪತಿ!
ತಿಕ್ಕಾಟ, ಕುಕ್ಕಾಟಗಳೇ ಆದರೆಂತುಹುದು ಶಾಂತಿ?
ವಿವೇಕ, ವೈರಾಗ್ಯ ಜೀವನದಿಂದಲೇ ಚಿರ ಶಾಂತಿ!
ಕೃಷ್ಣನಿತ್ತ ಗೀತೋಪದೇಶವೀವುದು ಮನಃ ಶಾಂತಿ!
ತಿಳಿದಿರದೇ ನಿರಂ

ನಾದಿತ್ಯಾನಂದಕ್ಕೆ ಗತಿ!!!

ಅತ್ಯಾಸೆಯ ಕಪ್ಪು ಕಾಗೆಯಪ್ಪ ಕಾಗೆ! (ನಿ)   5(2502)

-ತ್ಯಾನಂದದ ದಾರಿ ತೋರುವಪ್ಪ ಕಾಗೆ! (ದೋ)
-ಸೆ ಚೂರ್ಗಳೊಂದೇ ತಿನ್ಬಾರ್ದೆಂಬಪ್ಪ ಕಾಗೆ! (ಸಾ)
-ಯ ಬೇಡಿ ಕುಕ್ಕ್ಯೊಬ್ರನ್ನೊಬ್ರೆಂಬಪ್ಪ ಕಾಗೆ!
ಳ್ಳರಂತೊಳಗ್ಬರ್ಬೇಡ್ಯೆಂಬಪ್ಪ ಕಾಗೆ! (ತ)
-ಪ್ಪು ಮಾಡಿದ್ರೆ ಶಿಕ್ಷೆಯಿದೆಂಬಪ್ಪ ಕಾಗೆ!
ಕಾಯ್ವನೆಲ್ಲರ ನಾನೆಂಬಪ್ಪ ಕಾಗೆ!
ಗೆಳೆಯಾನೆಲ್ಲಾ ಲೋಕಕ್ಕೆಂಬಪ್ಪ ಕಾಗೆ! (ಗಾ)
-ಯ ಮಾಯಿಸುವವ ನಾನೆಂಬಪ್ಪ ಕಾಗೆ! (ಹ)
-ಪ್ಪಳ ಸೆಂಡಿಗೆನಗಿಷ್ಟೆಂಬಪ್ಪ ಕಾಗೆ!
ಕಾರ್ಯ ಕಾರಣ ಕರ್ತಾನೆಂಬಪ್ಪ ಕಾಗೆ! (ಕಾ)
-ಗೆ ನಿರಂಜನಾದಿತ್ಯನೆಂಬಪ್ಪ ಕಾಗೆ!!!

ಅತ್ಯುತ್ತಮ ಬಾಳೆಂತಹುದು? (ಮೃ)   6(3753)

-ತ್ಯುವನು ಜೈಸಿದರಹುದು! (ಚಿ)
-ತ್ತವೃತ್ತಿ ಸತ್ತರದಹುದು!
ನನಾತ್ಮನದ್ದಾದ್ರಹುದು!
ಬಾಯ್ಕೈ, ಕಚ್ಚೆ, ಶುದ್ಧಾದ್ರಹುದು! (ಕೀ)
-ಳೆಂಬಹಂಕಾರ ಬಿಟ್ಟ್ರಿಹುದು!
“ತತ್ವಮಸಿ” ಯಾದಾಗಹುದು!
ಹುಸಿಗಧೀನಾಗ್ದಿದ್ದ್ರಹುದು! (ಅ)
-ದು ನಿರಂಜನಾದಿತ್ಯಾಗ್ವುದು!!!

ಅತ್ರಿಕಂಡ ರೂಪ ನಾನೂ ನೋಡ್ಬೇಕಯ್ಯಾ!   6(3703)

ತ್ರಿಲೋಕ ಸುಖಕ್ಕೂ ತಿಲಾಂಜಲಿಯಯ್ಯಾ!
ಕಂಡಮೇಲೊಂದುಕ್ಷಣವೂ ಇರ್ಬಾರ್ದಯ್ಯಾ! (ದಂ)
-ಡ, ಕಮಂಡಲು ಎಲ್ಲಾ ಇರಬೇಕಯ್ಯಾ!
ರೂಪ, ನಾಮ, ಅಸ್ಥಿರವಾದ್ರೂ ತೋರಯ್ಯಾ!
ರಬ್ರಹ್ಮ ನಿರಾಕಾರ ನಿಜವಯ್ಯಾ!
ನಾನೂ ನಿನ್ನವನೆಂದಾರೂಪ ತೋರಯ್ಯಾ!
ನೂರಾರು ಜನ್ಮದಿಂದೀ ಹಂಬಲವಯ್ಯಾ!
ನೋಯಿಸ್ಬೇಡ ಈ ದಿನ ದಾಸನನ್ನಯ್ಯಾ! (ಮಾ)
-ಡ್ಬೇಡೀಗಲಾದರೂ ಉದಾಸೀನವಯ್ಯಾ!
ರ ಮುಗಿದು ಮೊರೆಯಿಡುವೆನಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಾನಂದ ನೀನಯ್ಯಾ!!!

ಅದಾಗಿಲ್ಲ, ಇದಾಗಿಲ್ಲೆಂದು ಗೊಣಗಬೇಡ [ಅ]   2(512)

-ದಾಗ ಆಗಲೆಂಬ ನಂಬಿಗೆಯ ಬಿಡಬೇಡ! (ಆ)
-ಗಿನ ವೇಳೆಗಾದುದನೀಗ ಯೋಚಿಸಬೇಡ! (ನ)
-ಲ್ಲನೆಲ್ಲಾ ಬಲ್ಲನೆಂಬುದಕೆ ಸಂದೇಹ ಬೇಡ!
ರಿಸಿದಂತೀಗಿರದತೃಪ್ತನಾಗ ಬೇಡ!
ದಾತ, ನಾಥನವನೆಂಬುದ ಮರೆಯಬೇಡ! (ಭಾ)
-ಗಿಯವನೆಲ್ಲಾ ಸುಖ, ದುಃಖಕಂಜಿಕೆ ಬೇಡ! (ಒ)
-ಲ್ಲೆಂದಧ್ಯಾತ್ಮಾಭಾಸಕ್ಕೆ ಅಶ್ರದ್ಧೆ ಮಾಡಬೇಡ!
ದುರ್ಮದ ಮರ್ದನಕನ್ಯ ದಾರಿ ನೋಡಬೇಡ!
ಗೊತ್ತಿಲ್ಲದಂತಾಗ್ವ ಕೃಪೆ ಕಳಕೊಳ್ಳಬೇಡ! (ಗ)
-ಣ, ಗಣ ಘಂಟೆ ಬಾರಿಸಿದೆಂದೆಣಿಸಬೇಡ!
ಮನ ಗುರುವಿನಲಿರಿಸದಿರಬೇಡ!
ಬೇರೆ ವೃತ್ತಿಗೆ ಮನದಲೆಡೆ ಕೊಡಬೇಡ (ಆ)
-ಡ, ನಿರಂಜನಾದಿತ್ಯನೆಂಬಾ ಗುರು ಕೈ ಬಿಡ!!!

ಅದಿತ್ಯ ಬಂದಾ, ಅದಿತಿಯ ಕಂದ ಬಂದಾ!   2(670)

ದಿತಿ ಸುತರ ಆಪ್ತ ಛಾಯಾಪತಿ ಬಂದಾ!
ತ್ಯಜಿಸುತ ನಿಶಿಯನುದಿಸುತ ಬಂದಾ!
ಬಂದಾ ನಗುನಗುತ ಮೇಲೇರುತ ಬಂದಾ!
ದಾಸಾರುಣ ಸಾರಥಿಯೊಡಗೂಡಿ ಬಂದಾ!
ನಾವರಣದಾ ನೀಲಾಂಬರಕೆ ಬಂದಾ!
ದಿನಕರ ಕರುಣಾಕರನಾಗಿ ಬಂದಾ!
ತಿಥಿ, ವಾರ, ನಿತ್ಯಕರ್ಮದಾಚಾರ್ಯ ಬಂದಾ!
ಮ ನಿಯಮಾಸನವ ಮುಗಿಸಿ ಬಾದಾ!
ಕಂದ, ಕಶ್ಯಪಾದಿತಿಯರಾನಂದ ಬಂದಾ!
ರ್ಶನವೀಯುತ ಕಲ್ಯಾಣಕಾಗಿ ಬಂದಾ!
ಬಂದಾಂಬುಜ ಮಿತ್ರ ವಿಮಲಾನಂದ ಬಂದಾ!
ದಾತ, ನಾಥ ಶ್ರೀ ನಿರಂಜನಾದಿತ್ಯ ಬಂದಾ!
ಅಥವಾ
ದಾನವಾಂತಕ ನಿರಂಜನಾದಿತ್ಯ ಬಂದಾ!!! ೬೭೧

ಅದಿದು, ನನ್ನದೆಂಬಭಿಮಾನಿ ನಾನು!   6(3580)

ದಿನ, ರಾತ್ರೆರಡೂ ನನ್ನದೆಂಬೆ ನಾನು!
ದುಡಿವವ ನಾನು, ದುಡಿಸ್ವವ ನಾನು!
ರನೂ, ನಾರಿಯೂ ನಾನೆನ್ನುವೆ ನಾನು! (ನ)
-ನ್ನ ಬಿಟ್ಟಿನ್ನೊಂದಿಲ್ಲೆಂದರಿತಿಹೆ ನಾನು! (ಎಂ)
-ದೆಂದಿಗೂ, ಎಲ್ಲೆಲ್ಲಿಯೂ, ಎಲ್ರಲ್ಲೂ ನಾನು!
ಡವನು ನಾನು, ಬಲ್ಲಿದವನೂ ನಾನು!
ಭಿಕ್ಷುಕನೂ ನಾನು, ರಕ್ಷಕನೂ ನಾನು!
ಮಾನಿಯೂ ನಾನು, ಮಾನಹೀನನೂ ನಾನು!
ನಿಗ್ರಹಾನುಗ್ರಹ ಸಮರ್ಥನೂ ನಾನು!
ನಾನೂ, ನೀನೂ, ಒಂದಾದುದೇ ಕಾಮಧೇನು!
ನುಡಿವೆಣ್ಣು ನಿರಂಜನಾದಿತ್ಯ ನಾನು!!!

ಅದುಮಬೇಕಾವೇಶವನೆಲ್ಲಾ!   4(2105)

ದುರ್ಬಲಕಾರಿ ಮನಕದೆಲ್ಲಾ! (ಕಾ)
-ಮ ಕಾರಣವೆಂಬೆನಿದಕೆಲ್ಲಾ!
ಬೇಟೆಯಾಡು ವೃತ್ತಿಗಳನೆಲ್ಲಾ! (ಆ)
-ಕಾಶ ಸದೃಶಾಗ ಮನವೆಲ್ಲಾ!
ವೇದಾಂತವಿಂತಾನಂದಿಸಿರೆಲ್ಲಾ! (ವ)
-ಶವಾಗುವುದಾಗ ಲೋಕವೆಲ್ಲಾ!
ರ ಗುರುವೇ ಆಗ ಎಲ್ಲೆಲ್ಲಾ! (ಮ)
-ನೆ, ಮಠಗಳಾಗ ಜಗವೆಲ್ಲಾ! (ಪು)
-ಲ್ಲಾ ನಿರಂಜನಾದಿತ್ಯ ತಾನೆಲ್ಲಾ!!!

ಅದೃಷ್ಟ ಹೀನ ಭಕ್ತ ಶ್ರೇಷ್ಟ!   5(3052)

ದೃಶ್ಯಾದೃಶ್ಯ ಭಗವದಿಷ್ಟ! (ಕ)
-ಷ್ಟ, ಸುಖ, ಮಾಯೆಯಾಟ, ಸ್ಪಷ್ಟ!
ಹೀನ ವೃತ್ತಿಯಿಂದೆಲ್ಲಾ ಕಷ್ಟ!
ವವಿಧ ಭಕ್ತಿಯೂ ಶ್ರೇಷ್ಟ!
ಸ್ಮವಾಗುವುದೆಲ್ಲಾ ಕಷ್ಟ! (ಮು)
-ಕ್ತನಾಗುವುದೇ ಭಕ್ತಗಿಷ್ಟ!
ಶ್ರೇಯಸ್ಸೆಂಬುದದೊಂದೇ ಸ್ಪಷ್ಟ! (ತು)
-ಷ್ಟ ನಿರಂಜನಾದಿತ್ಯಾಪ್ತೇಷ್ಟ!!!

ಅದೇಕಿಂದು ವಿರಾಮ?   1(354)

ದೇಶ, ಕಾಲೇಚ್ಛಾರಾಮ!
ಕಿಂಚಿದಿರಲಾರಾಮ!
ದುರ್ಬಲಕ್ಕೆ ವಿರಾಮ!
ವಿಜಯಕ್ಕಿದಾರಾಮ!
“ರಾಮ ಜೈ ಸೀತಾರಾಮ”!
ಮಾದಿತ್ಯನಾರಾಮ!!!

ಅದೇಕಿನ್ನೂ ಉದ್ಯೋಗ ಸಿಕ್ಕಿಲ್ಲ?   4(1404)

ದೇವರಚಿತ್ತಕ್ಕದು ಬಂದಿಲ್ಲ! (ಬಾ)
-ಕಿ ಕಾರಣ ನಂಬತಕ್ಕದಲ್ಲ! (ತ)
-ನ್ನೂರಲ್ಲಾದರೆ ಕಷ್ಟವೇ ಇಲ್ಲ!
ದ್ಯೋಗಾತನೇ ಕೊಡಬೇಕ

ಲ್ಲ! (ಉ)
-ದ್ಯೋಗಾಸಕ್ತಿ ಕಡಿಮೆಯೇನಿಲ್ಲ!
ರ್ವಿಷ್ಟ ತಾನಾಗಿರುವುದಿಲ್ಲ! (ಪು)
-ಸಿಯಾಡುವಭ್ಯಾಸ ತನಗಿಲ್ಲ! (ಸಿ)
-ಕ್ಕಿದ್ದೇನನ್ನೂ ಬೇಡೆನ್ನುವುದಿಲ್ಲ! (ಬ)
-ಲ್ಲ,ನಿರಂಜನಾದಿತ್ಯಾಪ್ತನೆಲ್ಲ!!!

ಅದೇನಾ ಹೊಲಸು ವಾಸನೆ? (ಅ)   4(2364)

-ದೇ ಕೆಟ್ಟ ವಿಷಯ ವಾಸನೆ!
ನಾಶ ಹೇತುವಾದಾ ವಾಸನೆ!
ಹೊರಗೊಳಗೆಲ್ಲಾ ವಾಸನೆ!
ಕ್ಷ್ಯ ಸಿದ್ಧಿಗಡ್ಡೀ ವಾಸನೆ!
ಸುಸಂಸ್ಕೃತಿಗಿಲ್ಲಾ ವಷನೆ! (ಯಾ)
-ವಾಗ್ಲಿರಬೇಕಾತ್ಮ ವಾಸನೆ!
ರ್ವರುದ್ಧಾರಕ್ಕೀ ವಾಸನೆ! (ನೆ)
-ನೆ, ನಿರಂಜನಾದಿತ್ಯಾತ್ಮಾನೇ!!!

ಅದೇನು ಭರ್ಭರೆನ್ನುವುದು? [ಅ]   4(2389)

-ದೇ ಯಾತ್ರೆಯಾತುರೆನ್ನುವುದು! (ತ)
-ನುವಿಗಾಯಾಸದಾಗಿಹುದು!
ಯವದು ತಂದೊಡ್ಡುವುದು! (ಗ)
-ರ್ಭಕ್ಕೂ ದಕ್ಕೆಯುಂಟಾಗುವುದು! (ಮೇ)
-ರೆ ಮೀರಿ ಮೋಟಾರೋಡುವುದು! (ತ)
-ನ್ನುದ್ಧಾರದರಿವೆಲ್ಲಿಹುದು? (ಸಾ)
-ವು ಬೆನ್ನ ಹಿಂದೆ ಕಾದಿಹುದು (ಇ)
-ದು ನಿರಂಜನಾದಿತ್ಯಗಾಗ್ದು!!!

ಅಧರ್ಮಾಚರಣೆಗೆಡೆ ಕೊಡುವುದೇತಕ್ಕೆ?   6(4074)

ರ್ಮಸ್ಥಾಪನೆಗೆ ಬರ್ತೇನೆನ್ನುವುದೇತಕ್ಕೆ? (ಕ)
-ರ್ಮಾನುಷ್ಠಾನ ನಿಷ್ಠನಿಗೆ ಕಷ್ಟಗಳೇತಕ್ಕೆ?
ರಾಚರಾತ್ಮನಿಗೇನು ಕಮ್ಮಿ ಸಾಮರ್ಥ್ಯಕ್ಕೆ?
ಹಸ್ಯ ಭೇದಿಸಿಷ್ಟಾರ್ಥಾನುಗ್ರಹವೀಗಕ್ಕೆ! (ಹೊ)
-ಣೆ ಗೊತ್ತವನಿಗಿದು ಸದಾ ಭೂಷಣವಕ್ಕೆ! (ಬ)
-ಗೆಬಗೆಯರಿಷ್ಟಗಳೆಲ್ಲಾ ನಿರ್ನಾಮವಕ್ಕೆ! (ಒ)
-ಡೆಯನ ಮಕ್ಕಳಿಗೆ ಬಡತನವೇತಕ್ಕೆ?
ಕೊಡಬೇಕು ಸಮಪಾಲು ಎಲ್ಲಾ ಸಂತಾನಕ್ಕೆ! (ದು)
-ಡುಕದಂತಿರ್ಪ ಭಾರವೆಲ್ಲರದ್ದೂ ಪಾದಕ್ಕೆ! (ಸಾ)
-ವು ನಿರಾಯಾಸವಾಗಿ ಬರಲೀ ಶರೀರಕ್ಕೆ!
ದೇವರ ಲೀಲೆಯಾನಂದಕ್ಕಳುವುದೇತಕ್ಕೆ?
ತ್ವ ಚಿಂತನೆಯಿಂದ ಹೋಗ್ಬೇಕು ಸಾಯುಜ್ಯಕ್ಕೆ! (ಅ)
-ಕ್ಕೆ ನಿರಂಜನಾದಿತ್ಯಾನಂದ ಮಕ್ಕಳೆಲ್ಲಕ್ಕೆ!!!

ಅಧಿಕಾರ ತಪ್ಪಿದರರಸೂ ಹೆಣ!   4(2427)

ಧಿಕ್ಕಾರಾರನ್ನೂ ಮಾಡದಿರ್ಪುದೇ ಗುಣ!
ಕಾಲಚಕ್ರದಡಿಯಲ್ಲೆಲ್ಲವೂ ತೃಣ! (ವ)
-ರ ಗುರುಭಕ್ತನಾಗಿರ್ಪವನೇ ಜಾಣ!
ತ್ವಾರ್ಥ ತಿಳಿಯದವನೊಬ್ಬ ಕೋಣ! (ತ)
-ಪ್ಪಿ ನಡೆವವನೆಂದಿಗೂ ಸುಖ ಕಾಣ! (ಕ)
-ದನ ವಿರಾಮಕ್ಕೆ ಸುಜ್ಞಾನವೇ ತ್ರಾಣ! (ಪ)
-ರರಾಸ್ತಿಯಾಸೆಯಿಂದುಳಿಯದು ಪ್ರಾಣ! (ಕ)
-ರ, ಚರಣಕ್ಕಾಳಾದ್ರೆ ಬುದ್ಧಿ ಭ್ರಮಣ!
ಸೂಕರನಾಗುವನು ಕಾಲ ಕ್ರಮೇಣ!
ಹೆದರದೇ ಮಾಡೀಗ ಧ್ಯಾನ ಧಾರಣ! (ತ್ರಾ)
-ಣ, ನಿರಂಜನಾದಿತ್ಯಾನಂದ ಸ್ಮರಣ!!!

ಅಧಿಕಾರ ದಾಹದಾಡಳಿತಾರಿಗೇನು ಸುಖ? (ದ)   6(3953)

-ಧಿ ಮಥನ ತಾಳ್ಮೆಗೆಟ್ಟು ಬೆಣ್ಣೆ ಕಾಣದ ಸುಖ!
ಕಾಟಾಚಾರದ ಸ್ವಾರ್ಥಿಯಿಂದಾಗದಾರಿಗೂ ಸುಖ! (ಪ)
ಮಾರ್ಥದಿಂದಲೇ ಸರ್ವಸಮಾನಾನಂದ ಸುಖ!
ದಾಯಾದಿ ಮತ್ಸರದಿಂದಾರಿಗೆಂದಾಗಿದೆ ಸುಖ?
ಗರಣದ ಹುಟ್ಟಡಗದೆ ಆಗದು ಸುಖ!
ದಾಶರಥಿ, ಮಾರುತಿಯಂತಿದ್ದರೆಲ್ಲಾ ಸುಖ! (ಬ)
-ಡವ, ಬಲ್ಲಿದರಲ್ಲನ್ಯೋನ್ಯವುಂಟಾದಾಗ ಸುಖ! (ಹು)
-ಳಿ ರಸದೊಂದು ತೊಟ್ಟು ಬಿದ್ದ್ರೂ ಇಲ್ಲ ಕ್ಷೀರ ಸುಖ!
ತಾವೆಲ್ಲರವರೆಂದೆಲ್ಲರೂ ತಿಳಿದಾಗ ಸುಖ!
ಒನೆ ಲಿನೆ ಮಿ

ಸಿ
ಗೇಯ್ಮೆ ಅವರದ್ದಾಗಿತ್ತು ಸರ್ವ ಕಲ್ಯಾಣ ಸುಖ!
ನುಡಿಯದೇ ನೀಡುತ್ತಿದ್ದರವರು ಪೂರ್ಣ ಸುಖ!
ಸುದರ್ಶನಧಾರಿಯ ವಿಶ್ವರೂಪದಿಂದಾ ಸುಖ!
ಗ ನಿರಂಜನಾದಿತ್ಯ ಸಾಕ್ಷಿಯೆಂದಿದ್ದ್ರಾ ಸುಖ!!!

ಅಧಿಕಾರಕ್ಕಾಗಿ ಅಧರ್ಮಿಯಾಗ್ಬೇಡ!   6(4342)

ಧಿಕ್ಕಾರ ಮನೋಭಾವದಿಂದ ಕೆಡ್ಬೇಡ!
ಕಾರಣವರಿಯದೇ ಕಾರ್ಯ ಮಾಡ್ಬೇಡ!
ತಿಸುಖಕ್ಕಾಗಿ ರಾಕ್ಷಸನಾಗ್ಬೇಡ! (ವಾ)
-ಕ್ಕಾಯ, ಮನಸ್ಸು, ಶುದ್ಧವಿಡದಿರ್ಬೇಡ!
ಗಿರಿಯಂತಚಲ ಭಕ್ತಿಲ್ಲದಿರ್ಬೇಡ!
ವರಿವರ ಮಾತಿಗೆ ಬಾ

ಹಾಕ್ಬೇಡ!
ರ್ಮವನ್ಯರದ್ದನ್ನನುಸರಿಸ್ಬೇಡ! (ಊ)
-ರ್ಮಿಳೇಶನ ಭ್ರಾತೃ ಭಕ್ತಿ ಮರೆಯ್ಬೇಡ!
ಯಾದವೇಂದ್ರನ ಗೀತಾಧ್ಯಾನ ಬಿಡ್ಬೇಡ! (ಆ)
-ಗ್ಬೇಡ, ಕೌರವರಂತೆಂದೆಂದೂ ಆಗ್ಬೇಡ! (ಮಾ)
-ಡ, ನಿರಂಜನಾದಿತ್ಯಕೃಷ್ಣ ಕೇಡ್ಮಾಡ!!!

ಅಧಿಕಾರಕ್ಕಾಗಿ ಅಳುತ್ತಿರಬೇಡ! (ಅ)   4(2085)

-ಧಿಕಾರಿಯಾದಾಗನ್ಯಾಯ ಮಾಡಬೇಡ!
ಕಾಲ, ಕರ್ಮ, ಧರ್ಮ, ಮರೆತಿರಬೇಡ!
ಕ್ಕಸರನ್ನೊಕ್ಕಲಿಕ್ಕದಿರಬೇಡ! (ಬೆ)
-ಕ್ಕಾಗಿ, ಬೆಕ್ಕೆಗೀಡಾಗಿ ಹಾಳಾಗಬೇಡ!
ಗಿರಿಧರನಾದರ್ಶ ಬಿಟ್ಟಿರಬೇಡ!
ನಾಥರಿಗನಾಶ್ರಯನಾಗಬೇಡ! (ಕಿ)
-ಳು, ಮೇಲೆಂಬಹಂಕಾರಿ ನೀನಾಗಬೇಡ! (ಹ)
-ತ್ತಿ, ಕುಳಿತ ಪೀಠದಿಂದುರಳಬೇಡ! (ವ)
-ರ ಗುರುಸೇವೆಯನ್ನೆಂದೂ ಬಿಡಬೇಡ! (ಕು)
-ಬೇರನಾದ್ರೂ ಕೌರವನಂತಾಗಬೇಡ! (ಮೃ)
-ಡ ನಿರಂಜನಾದಿತ್ಯ ಬಿಟ್ಕೆಡ್ಬೇಡ!!!

ಅಧಿಕಾರಕ್ಕೊಂದವಧಿ ಉಂಟು!   5(3226)

ಧಿಕ್ಕರಿಸಿದ್ರನ್ಯರ ಕೇಡುಂಟು!
ಕಾತುರಾತುರದಿಂದ ಸೋಲುಂಟು!
ತಿ ರೂಪಕ್ಕೂ ವೃದ್ಧಾಪ್ಯವುಂಟು! (ತ)
-ಕ್ಕೊಂಡವ ಕೊಡಬೇಕಾದದ್ದುಂಟು!
ಡ ಸೇರದಿದ್ರಪಾಯ ವುಂಟು!
ರ ಗುರುವಿಂದಾದಾಯಉಂಟು! (ವಿ)
-ಧಿ ನಿಯಮವೂ ಸುಳ್ಳಾಗ್ವುದುಂಟು!
ಉಂಬಾಹಾರಕ್ಕೊಂದಳತೆಯುಂಟು! (ಗಂ)
-ಟು ನಿರಂಜನಾದಿತ್ಯಗೇನುಂಟು???

ಅಧಿಕಾರನಾಯಾಸವಾಗಿ ಬರಲಿ! (ಬ)   4(1713)

-ಧಿರನಾಲಿಸುವ ಚಪಲ ಬಿಡಲಿ!
ಕಾಮ್ಯ ಭಾವ ಕರ್ಮದಲ್ಲಿಲ್ಲದಿರಲಿ! (ಪ)
-ರ ಪೀಡೆಯಿಂದೇನೂ ಬೇಕಾಗದಿರಲಿ!
ನಾಮಸ್ಮರಣೆ ಸದಾ ಸಾಗುತ್ತಿರಲಿ! (ಕಾ)
-ಯಾಭಿಮಾನವಿಲ್ಲದೆ ಸೇವೆ ಸಾಗಲಿ!
ತ್ಸಂಗಾಸಕ್ತಿ ಬಲವಾಗುತ್ತಿರಲಿ!
ವಾಗಾಡಂಬರಕ್ಕೆಡೆಯಿಲ್ಲದಿರಲಿ! (ತ್ಯಾ)
-ಗಿಯಾಗಿ ಸ್ಥಾನ, ಮಾನ, ಸ್ಥಿರವಾಗಲಿ!
ಲ ಸಾತ್ವಿಕಾಹಾರದಿಂದುಂಟಾಗಲಿ!
ಸನೇಂದ್ರಿಯ ಹತೋಟಿಯಲ್ಲಿರಲಿ! (ಮಾ)
-ಲಿಕ ಶ್ರೀ ನಿರಂಜನಾದಿತ್ಯನಾಗಲಿ!!!

ಅಧಿಕಾರವಿದ್ದರೆ ಖೋಜನೂ ರಾಜ! (ಅ)   6(4168)

-ಧಿಕಾರ ತಪ್ಪಿದರೆ ರಾಜನೂ ಖೋಜ!
ಕಾಯ್ಬೇಕನ್ಯರ ಕೈ, ಬಾಯಿ ಮಾಜಿ ರಾಜ!
ಣಧೀರ ತಾನಾದರೂ ಈಗ ಖೋಜ!
ವಿಧಿವಿಲಾಸವನ್ನರಿಯ ಯೋನಿಜ! (ಸ)
-ದ್ದಡಗಿಹೋದ ಮೇಲೆ ಹೆಣ ಮನುಜ! (ಮ)
-ರೆತಿದ ತಾನಾಗಬಾರದು ದನುಜ! (ದುಃ)
-ಕೋತ್ಪತ್ತಿಗೆ ಕಾರಣ ದುರ್ಗಣ ಬೀಜ!
ರಾಜನ್ಮ ದುಃಖೌಘಾತೀತ ಅತ್ರಿಜ! (ತಾ)
-ನೂರ್ಧ್ವರೇತನೆನಿಸಿದ ಯೋಗಿರಾಜ!
ರಾರಾಜಿಸಿರ್ಪನಾ ಭಾನುಕೋಟಿ ತೇಜ!
ಯ ನಿರಂಜನಾದಿತ್ಯ ದತ್ತರಾಜ!!!

ಅಧಿಕಾರವಿದ್ದಾಗ ಹುಲಿ! (ಅ)   6(3327)

-ಧಿಕಾರವಿಲ್ಲದಾಗ ಇಲಿ!
ಕಾರ್ಯಾಸಕ್ತಿ ಸೂರ್ಯನಿಂದ್ಕಲಿ! (ಪ)
-ರಮಾರ್ಥವರಿತು ನೀನುಲಿ!
ವಿವೇಕಿ, ವಿರಾಗಿಯಾಗ್ಬಲಿ! (ಇ)
-ದ್ದಾಗ ದಾನಮಾಡ್ಲಿಕ್ಕೆ ಕಲಿ!
ದ್ದೆಯುತ್ತು, ಬಿತ್ತಿದ ಕೂಲಿ!
ಹುಟ್ಟಿ, ಸಾಯ್ವ ಮೊದ್ಲೇ ಸಿಗಲಿ! (ಉ)
-ಲಿ ನಿರಂಜನಾದಿತ್ಯಾಲಿಸ್ಲಿ!!!

ಅಧಿಕಾರವಿರುವಾಗಾರ್ತರಾಧಾರನಾಗಪ್ಪಾ!   4(1918)

ಧಿಕ್ಕರಿಸಿ ಅವರನ್ನು ಹೊರಗಟ್ಟಬೇಡಪ್ಪಾ!
ಕಾಲಚಕ್ರದ ಮುಂದೆ ಯಾವುದು ಶಾಶ್ವತವಪ್ಪಾ? (ಪ)
-ರರ ಕಷ್ಟಕ್ಕೀಗಾದರೂ ನೆರವಾಗುತ್ತಿರಪ್ಪಾ!
ವಿಷಯಯೀಗಿತರರನ್ನು ನೋಯಿಸಬೇಡಪ್ಪಾ! (ಕ)
-ರುಣಾ ಬುದ್ಧಿಯುಳ್ಳವನಾಗಿ ಸೇವೆ ಸಲ್ಲಿಸಪ್ಪಾ!
ವಾಕ್ಚಾತುರ್ಯದಾ

ವೆಷ್ಟು ದಿನ ನಡೆದೀತಪ್ಪಾ?
ಗಾಳಿಗೆ ಬಿಟ್ಟ ಪಟದಂಥಾ ಬಾಳಿದಪ್ಪಾ! (ವ)
-ರ್ತಕ ನಾಗ್ಯನ್ಯಾಯದಿಂದಪಾರ ಲಾಭ ಬೇಡಪ್ಪಾ!
ರಾಗ, ದ್ವೇಷದಿಂದ ಯಾರಿಗೂ ಸುಖವಿಲ್ಲವಪ್ಪಾ! “(ರಾ)
-ಧಾಕೃಷ್ಣಜೈಕುಂಜವಿಹಾರಿ”ಯೆಂದು ಕುಣಿಯಪ್ಪಾ! (ಪ)
-ರತರ ಪರಮಾನಂದ ಪ್ರಾಪ್ತಿಯಾಗುವುದಪ್ಪಾ!
ನಾಮಸಂಕೀರ್ತನೆಯಿಂದ ಸರ್ವ ಕಲ್ಯಾಣವಪ್ಪಾ (ತ್ಯಾ)
-ಗರಾನನಿದನ್ನನುಭವಿಸಿ ತೋರಿಹನಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯಾನಂದವದರಿಂದಪ್ಪಾ!!!

ಅಧಿಕಾರಾನುಕೂಲವಿದೆ ನಿನಗೆ!   6(3838)

ಧಿಕ್ಕಾರ ಮಾಡುವುದೇಕೆಮ್ಮನ್ನು ಹೀಗೆ?
ಕಾಮ್ಯಾರ್ಥಿ ನಾನಲ್ಲ; ಗೊತ್ತಿದೆ ನಿನಗೆ!
ರಾತ್ರಿ, ದಿನ ಮೊರೆಯಿಡುವೆ ನಿನಗೆ! (ತ)
-ನು ಮನಗಳರ್ಪಿಸಿಹೆನು ನಿನಗೆ!
ಕೂಡಬೇಕು ನಿನ್ನನ್ನೆಂಬಾಸೆ ನನಗೆ!
ಕ್ಷ್ಯವಿಲ್ಲ ಇನ್ನಾವುದಕ್ಕೂ ನನಗೆ!
ವಿಧಿ, ಹರಿ, ಹರರೆಲ್ಲಾ ನೀನೆನಗೆ! (ತಂ)
-ದೆ, ತಾಯಿ, ಬಂಧು, ಬಳಗ ನೀನೆನಗೆ!
ನಿಸ್ವಾರ್ಥಿ ಸುಪುತ್ರನು ನಾನು ನಿನಗೆ!
ನ್ನನ್ನೇಕಿಗ ನೂಕಿರುವೆ ಧರೆಗೆ? (ತೆ)
-ಗೆದಪ್ಪು ನಿರಂಜನಾದಿತ್ಯಾ! ಎದೆಗೆ!!!

ಅಧಿಕಾರಿಗಧಿಕಾರವಿಲ್ಲ! (ಅ)   6(3464)

-ಧಿಕಾರನಧಿಕಾರಿಗೀಗೆಲ್ಲ!
ಕಾಳಿ, ಬೋಳಿ ನ್ಯಾಯವೀಗೆಲ್ಲೆಲ್ಲಾ! (ವೈ)
-ರಿನಿಗ್ರಹಕ್ಕೆ ಶಕ್ತಿಯೇ ಇಲ್ಲ!
ರ್ವಕ್ಕೆ ಮಾತ್ರ ಅಳತೆ ಇಲ್ಲ!
ಧಿಕ್ಕಾರ ಸತ್ಪುರುಷರಿಗೆಲ್ಲ!
ಕಾರಾಗ್ರಹವಾಸವರಿಗೆಲ್ಲಾ!
ಹಸ್ಯ ಬಾಳಿನದ್ದರಿವಿಲ್ಲ!
ವಿಕಲ್ಪ, ಸಂಕಲ್ಪ ಹೆಚ್ಚಿತಲ್ಲಾ! (ಬ)
-ಲ್ಲ ನಿರಂಜನಾದಿತ್ಯ ಪ್ರಪುಲ್ಲ!!!

ಅಧ್ಯಾತ್ಮ ಪ್ರಚಾರವಾರಿಂದಾಗಬೇಕು?   5(3028)

ಧ್ಯಾನ ಧಾರಣಾ ನಿಷ್ಠರಿಂದಾಗ್ಬೇಕು! (ಆ)
-ತ್ಮಸ್ಥಿತಿಯನುಭವಿಗಳಿಂದಗಾಗ್ಬೇಕು!
ಪ್ರಪಂಚ ಸುಖ ಬಿಟ್ಟವರಿಂದಾಗ್ಬೇಕು!
ಚಾರಿತ್ರ್ಯ ಶುದ್ಧವಿದ್ದವರಿಂದಾಗಬೇಕು! (ವ)
-ರ ಗುರುವಿನ ಭಕ್ತರಿಂದಾಗಬೇಕು!
ಪಾರಿಜ ಮಿತ್ರನ ದಾಸರಿಂದಾಗ್ಬೇಕು! (ಯಾ)
-ರಿಂದೇನೂ ಬಯಸದವರಿಂದಾಗ್ಬೇಕು!
ದಾಸರ ದಾಸರಾದವರಿಂದಾಗ್ಬೇಕು!
ರ್ವವೆಳ್ಳಷ್ಟಿಲ್ಲದವರಿಂದಾಗ್ಬೇಕು!
ಬೇಕುಗಳಿಲ್ಲದವರಿಂದಾಗಬೇಕು! (ಟಾ)
-ಕು ನಿರಂಜನಾದಿತ್ಯನಾಗಿರಬೇಕು!!!

ಅನಂತ ಭಾವದನಂತ ರೂಪಾನಂತ ನಾಮಿ!   1(91)

ನಂಬೀ ಜಗಕೊಬ್ಬನೇ ದೇವ ಸರ್ವಾಂತರ್ಯಾಮಿ!
ರತರದ ಭಾವದಿಂದಾದ ವಿಶ್ವಪ್ರೇಮಿ!
ಭಾವ, ರೂಪಗಳಿಂದವನಾದನಂತ ನಾಮಿ! (ಇ)
-ವನೊಂದೆಡೇಕ ರೂಪದಲಿರದಾಪ್ತ ಸ್ವಾಮಿ!
ರ್ಶನ ಕೊಡುವನು ಭಾವನಾನುಸಾರ ನಾಮಿ!
ನಂದಿ ಏಶ್ವರನಾದನೀಶರ ಗುಣ ಪ್ರೇಮಿ!
ರಣಿ ದಿನಕರನಾದನಾ ಗುಣ ನಾಮಿ!
ರೂಪವೊಂದನಂತನಾಗುವುದಾ ಗುಣ ನಾಮಿ!
ಪಾಡು ಪಡುತಿಹನಜ್ಞಾನಿ ದರ್ಶನ ಪ್ರೇಮಿ!
ನಂದಕಂದನುಪದೇಶ ಗೀತೆಯಿದೇ ಸ್ವಾಮಿ!
ನ್ನ ವಿಶ್ವರೂಪ ತೋರಿದಾತ್ಮ ಭಾವ ಪ್ರೇಮಿ!
“ನಾಮ” ಹನುಮನ “ರಾಮ” ಮಾಡಿತಿಂತು ನಾಮಿ!
ಮಿತ್ರ ನಿರಂಜನಾದಿತ್ಯಾ ಯೋಗಾ ಗುಣ ಸ್ವಾಮಿ!!!

ಅನಂತ ವ್ರತಾನಂತರಾರಾಮ! (ನೀ)   4(1509)

-ನಂತರ್ಯಾಮಿಯೆಂಬರಿವಾರಾಮ!
ನು, ಮನ, ಪ್ರಾಣವಲ್ಲಾರಾಮ! (ತೀ)
-ವ್ರ ಸಾಧನೆಯಿಂದಹುದಾರಾಮ!
ತಾಳ್ಮೆಯಿಂದಿದ್ದರಹುದಾರಾಮ!
ನಂಬಿದರೆ ಗುರುವನ್ನಾರಾಮ!
ರಣಿಯಾದರ್ಶ ಸದಾರಾಮ!
ರಾಗ, ದ್ವೇಷ ರಹಿತಾತ್ಮಾರಾಮ!
ರಾವಣ ಮದ ಮರ್ದನಾರಾಮ! (ವಿ)
-ಮಲ ನಿರಂಜನಾದಿತ್ಯಾರಾಮ!!!

ಅನಂತಮೂರ್ತಿ ಸ್ಥಾಪಕ ಗುರುಮೂರ್ತಿ!   2(527)

ನಂಬಿ ತನ್ನತಾಗಿರೆಂಬಾ ಗುರುಮೂರ್ತಿ!
ರಲೆ ಮಾತು ಸಾಕೆಂಬಾ ಗುರುಮೂರ್ತಿ!
ಮೂಜಗದೊಡೆಯ ತಾನಾ ಗುರುಮೂರ್ತಿ! (ಕೀ)
-ರ್ತಿಗಾಶಿಸುವವನಲ್ಲಾ ಗುರುಮೂರ್ತಿ!
ಸಾ

ವರ ಜಂಗಮಾತ್ಮನಾ ಗುರುಮೂರ್ತಿ!
ರಮಹಂಸ ಸ್ವರೂಪಾ ಗುರುಮೂರ್ತಿ!
ರುಬತಿ ಹೇಯವೆಂಬಾ ಗುರುಮೂರ್ತಿ!
ಗುಡಿಯವನಿಗೆಲ್ಲೆಲ್ಲಾ ಗುರುಮೂರ್ತಿ! (ಇ)
-ರುವನೆಲ್ಲರಲ್ಲಾ ವರ ಗುರುಮೂರ್ತಿ!
ಮೂಳೆ ಮಾಂಸ ಗೊಂಬೆಯಲ್ಲಾ ಗುರುಮೂರ್ತಿ! (ಮೂ)
-ರ್ತಿ ಆ ನಿರಂಜನಾದಿತ್ಯ ಗುರುಮೂರ್ತಿ!!!

ಅನಂತಾಚಾರ್ಯರನಂತ ಯಜ್ಞ! (ಆ)   2(921)

-ನಂದವೇನಂದರಿಯದ ಯಜ್ಞ!
ತಾಪ, ಕೋಪ, ಪಾಪಕೂಪ ಯಜ್ಞ! (ಆ)
-ಚಾರೋಪಚಾರಪಚಾರ ಯಜ್ಞ! (ಕಾ)
-ರ್ಯ, ಕಾರಣದಾವರಣ ಯಜ್ಞ! (ಕ)
-ರ, ಚರಣಾದ್ಯವಯವ ಯಜ್ಞ! (ಅ)
-ನಂತಾತ್ಮಾನಂದಾರ್ಥ ನಿಜ ಯಜ್ಞ! (ಮ)
-ತ ಭೇದವಿಲ್ಲದಮರ ಯಜ್ಞ! [ಕಾ]
-ಯ ಭಾವಾಂತ್ಯ ಪೂರ್ಣಾಹುತೀ ಯಜ್ಞ! (ತ)
-ಜ್ಞ, ನಿರಂಜನಾದಿತ್ಯಗೀ ಯಜ್ಞ!!!

ಅನಂತಾತ್ಮನಿರುವನೊಳಗಂತರ್ಯಾಮಿಯಾಗಿ!   4(2235)

ನಂದಕಂದನಾಗಿ ನಿನ್ನೊಳಗಂತರ್ಯಾಮಿಯಾಗಿ!
ತಾಮಸಾದಿ ಗುಣಾತೀತನಾಗ್ಯಂತರ್ಯಾಮಿಯಾಗಿ! (ಆ)
-ತ್ಮ ಸಚ್ಚಿದಾನಂದರೂಪಿಯಾಗ್ಯಂತರ್ಯಾಮಿಯಾಗಿ!
ನಿರವಧಿ ಸುಖಾನಂದನಾಗ್ಯಂತರ್ಯಾಮಿಯಾಗಿ! (ಗು)
-ರುಸ್ವರೂಪನಾಗಿ ಚರಾಚರಾಂತರ್ಯಾಮಿಯಾಗಿ!
ರ್ಣಾಶ್ರಮಾತೀತ ಪದ್ಮನಾಭಾಂತರ್ಯಾಮಿಯಾಗಿ! (ತಾ)
-ನೊಡೆಯನೀರೇಳ್ಲೋಕಕ್ಕೆನಿಸ್ಯಂತ ರ್ಯಾಮಿಯಾಗಿ! (ಒ)
-ಳ, ಹೊರಗೆಲ್ಲಾ ತಾನಾಗಿ ನಿನ್ನಂತರ್ಯಾಮಿಯಾಗಿ!
ಗಂಗಾ, ಯಮುನಾ, ಕಾವೇರಿಯ್ಯಾಗ್ಯಂತರ್ಯಾಮಿಯಾಗಿ!
ಪೋನಿರತ ಶಿವ ತಾನಾಗ್ಯಂತರ್ಯಾಮಿಯಾಗಿ! (ಧೈ)
-ರ್ಯಾದ್ಯೆಲ್ಲಾ ಗುಣ ಸಂಪನ್ನನಾಗ್ಯಂತರ್ಯಾಮಿಯಾಗಿ!
ಮಿತ್ರ, ಶತ್ರುಭಾವ ವರ್ಜನಾಗ್ಯಂತರ್ಯಾಮಿಯಾಗಿ! (ಮಾ)
-ಯಾನಾಟಕ ಸೂತ್ರಧಾರನಾಗ್ಯಂತರ್ಯಾಮಿಯಾಗಿ! (ತ್ಯಾ)
-ಗಿ, ಯೋಗಿ, ನಿರಂಜನಾದಿತ್ಯಾ ತ್ಮಾಂತರ್ಯಾಮಿಯಾಗಿ!!!

ಅನಂತಾಶ್ರಮದಲ್ಲಿ ನಿರಂಜನ ವಾಣಿ!   2(952)

ನಂಬಿದವರಿಗಿಂಬು ದೊರಕುವ ವಾಣಿ!
ತಾಯಿ, ತಂದೆ, ಬಂಧು ಮಿತ್ರ ತಾನೆಂಬ ವಾಣಿ! (ಆ)
-ಶ್ರಯವಿದೆಲ್ಲರಿಗೆ ಶ್ರೀಧರನ ವಾಣಿ!
ದ, ಮತ್ಸರಕ್ಕಿದು ರಾಮಬಾಣ ವಾಣಿ!
ತ್ತಾವಧೂತನಾಪ್ತರಾಗಲಿಕಾ ವಾಣಿ! (ಬ)
-ಲ್ಲಿದ ಬಡವರೆಲ್ಲರಿಗಾಧಾರಾ ವಾಣಿ!
ನಿಶ್ಚಲ ಭಕ್ತಿಯಿಂದಾಲಿಸಬೇಕಾ ವಾಣಿ!
ರಂಗನಾಥನನುಗ್ರಹ ಸಿದ್ಧಿಗಾ ವಾಣಿ!
ನ್ಮಕೋಟಿಯಘನಾಶಗೈವುದಾ ವಾಣಿ!
ರನಾರಿಯರೆಲ್ಲರಿಗಮೃತಾ ವಾಣಿ! (ದಿ)
-ವಾಕರನುರು ವಾರದಲ್ಲಾಗ್ವುದಾ ವಾಣಿ! (ವಾ)
-ಣಿ ನಿರಂಜನನಾದಿತ್ಯಾನಂದ ನಂತರ್ವಾಣಿ!!!

ಅನತನಿಗೆ ಸುಸ್ವಾಗತ!   5(3292)

ತದೃಷ್ಟನಿಗನ್ಯೋನ್ಯತಾ!
ತ್ವಚಿಂತನಯೇ ಸತ್ಪಥ!
ನಿಸ್ಸಂಗ, ನಿರ್ಮೋಹ ಸ್ವಸ್ಥತಾ!
ಗೆಲ್ಬೇಕಿಂದ್ರಿಯಂಗಳನ್ನಾತ!
ಸುದರ್ಶನ ಜೀವನ್ಮುಕ್ತತಾ!
ಸ್ವಾಮಿ, ಭಕ್ತರ ಸಾಯುಜ್ಯತಾ!
ತಿ, ಸ್ಥಿತಿ, ಲಯಾತೀತತಾ!
ತ್ವ ನಿರಂಜನಾದಿತ್ಯತಾ!!!

ಅನಧಿಕಾರಿಗಧಿಕಾರವಿತ್ತರನರ್ಥ!   5(3261)

ಶ್ವರವಿದೆಂದರಿತಾಳದಿದ್ದರನರ್ಥ!
ಧಿಕ್ಕಾರ ಅಂಥಾ ಸರ್ಕಾರಕ್ಕೆಂದರೂ ಅನರ್ಥ!
ಕಾರ್ಯತತ್ಪರನಾಗಿರುವರಸ ಸಮರ್ಥ!
ರಿಪುಗಳಾರನೂ ಜೈಸಿರಬೇಕಾ ಸಮರ್ಥ!
ಣಸಮುದಾಯಕ್ಕೆ ಶಿವನಾಗಾ ಸಮರ್ಥ! (ಸಾ)
-ಧಿಸಿದರೆ ಪ್ರಜಾಹಿತವನ್ನಾತ ಸಮರ್ಥ!
ಕಾಮಿನೀ ಕಾಂಚನಕ್ಕಾಳಾಗ್ಬಾರದಾ ಸಮರ್ಥ!
ಕ್ಕಸರಿಗೆ ಶ್ರೀರಾಮನಾಗ್ಬೇಕಾ ಸಮರ್ಥ!
ವಿಕಲ್ಪ ಶೀಲನಾಗಿರಬಾರದಾ ಸಮರ್ಥ! (ದ)
-ತ್ತ ಗುರುವಿಗೆ ಗುಲಾಮನಾದವ ಸಮರ್ಥ!
ಘುವಿರನಿದನ್ನರಿತಿದ್ದಾದ ಸಮರ್ಥ!
ಯ, ವಿನಯದಿಂದಿದ್ದಾರ್ತರಲ್ಲಾ ಸಮರ್ಥ! (ಸಾ)
-ರ್ಥಕ ನಿರಂಜನಾದಿತ್ಯಾನಂದದಾ ಸಮರ್ಥ!!!

ಅನನ್ಯ ಪ್ರೀತಿ ಅನ್ಯೋನ್ಯವಿರಬೇಕು!   6(3442)

ನ್ನ, ನಿನ್ನ, ಬೆಸುಗೆ ಬಿಡದಿರ್ಬೇಕು!
(ಧ)-ನ್ಯರು ನಾವೆಂಬ ಸಂತೃಪ್ತಿಯಿರಬೇಕು!
ಪ್ರೀತಿಯಿದನ್ನು ಸಾಯುಜ್ಯವೆನ್ನಬೇಕು!
ತಿಟ್ಟು, ಹಳ್ಳವಿದ್ರೇನು? ಫಸ್ಲಾಗ್ಬೇಕು!
ಪ್ಪ, ಮಗ, ಇಬ್ಬರೂ ದುಡಿಯಬೇಕು!
(ಮಾ)-ನ್ಯೋಪಯುಕ್ತ ರೀತಿಯಿಂದದಾಗಬೇಕು!
(ಶೂ)-ನ್ಯವೃತ್ತಿಯಲ್ಲಿ ಅದು ಐಕ್ಯವಾಗ್ಬೇಕು!
ವಿಧಿ, ಹರಿ, ಹರರೊಂದಾಗಿರಬೇಕು!
ತಿಪತಿಯ ಚಿಂತೆ ಬಿಟ್ಟಿರಬೇಕು!
ಬೇಡಿದ್ರೆ ಇಂಥಾ ವರವನ್ನೇ ಬೇಡ್ಬೇಕು!
(ಬೇ)-ಕು, ನಿರಂಜನಾದಿತ್ಯಾನಂದಕ್ಕಿದ್ಬೇಕು!!!

ಅನನ್ಯ ಭಕ್ತಿಗಪ್ರತಿಮ ಶಕ್ತಿ! (ಮ)   4(2477)

-ನಸ್ಸನ್ನು ಸಡಿಲು ಬಿಟ್ಟಿರಶಕ್ತಿ! (ಜ)
-ನ್ಯಗುಣವಾಗಿ ಬಂದಿದೆ ಕುಯುಕ್ತಿ!
ಗವತ್ಸೇವೆಯಿಂದದಕ್ಕೆ ಮುಕ್ತಿ! (ಭು)
-ಕ್ತಿಗಾಗ್ಯಲ್ಲ ಭಕ್ತಿಯೆಂಬುದಾರ್ಯೋಕ್ತಿ! (ಯೋ)
-ಗಸಾಧಕನೊಬ್ಬ ಆದರ್ಶ ವ್ಯಕ್ತಿ!
ಪ್ರಭುವಿನ ರೀತಿ, ನೀತಿ ಮೇಲ್ಪಂಕ್ತಿ! (ಭ್ರಾಂ)
-ತಿ ಜೀವನ ಬಿಡುವುದೇ ವಿರುಕ್ತಿ!
ಹಾಮಾಯೆಯೇ ಜಗದಾದಿ ಶಕ್ತಿ! (ವ)
-ಶವದಕ್ಕೆಲ್ಲಾ ಸುರಾಸುರ ಶಕ್ತಿ! (ಶ)
-ಕ್ತಿ, ನಿರಂಜನಾದಿತ್ಯನಿಚ್ಛಾ ಶಕ್ತಿ!!!

ಅನರ್ಘ್ಯ ರತ್ನಗಳು ಗಂಗೆಯ ಪಾಲು! (ದಿ)   5(2671)

-ನ, ರಾತ್ರಿ ತೇಲ್ತಿವೆ ಹೆಣಗಳ ಸಾಲು! (ಅ)
-ರ್ಘ್ಯಪಾದ್ಯಾದಿಗಳಲ್ಲಿವಳ ಕೈ ಮೇಲು! (ಪ)
-ರಶಿವನಿಗವಳ ನಿತ್ಯ ಹವಾಲು! (ಯ)
-ತ್ನವಿಲ್ಲದೆ ಹೊತ್ತವಳಾತ ಕಂಗಾಲು!
ಭಸ್ತಿ ಹೀರುವನವಳ ದಿನಾಲು! (ಬಾ)
-ಳು ಹಾಳಾಯ್ತೆಂದಾಕೆ ಸೇರ್ವಳು ಕಡಲು!
ಗಂಡನನ್ನೊಲಿಸ್ಬೇಕೆಂದಲ್ಲಿ ಹಂಬಲು!
ಗೆಳೆಯನೌದಾರ್ಯದಿಂದ ಮೇಲೇರಲು! (ಭ)
-ಯಪಡುವಳು ಮುಗಿಲು ತಾನಾಗಲು!
ಪಾವನೆಯಿವಳ್ಮಳೆಯಾಗಿ ಬೀಳಲು! (ಕೀ)
-ಲು ನಿರಂಜನಾದಿತ್ಯ ತಿರುಗಿಸಲು!!!

ಅನಸೂಯಾ ತಾಯಿ ನೀನಾಗಮ್ಮಾ!   3(1396)

ಮಿಸು ನಿತ್ಯ ಶ್ರೀ ಪಾದಕ್ಕಮ್ಮಾ! (ಅ)
-ಸೂಯೆಗೆ ಕಾರಣ ದ್ವೈತವಮ್ಮಾ! (ಕಾ)
-ಯಾಭಿಮಾನಳಿದಾಗದಿಲ್ಲಮ್ಮಾ!
ತಾನೇ ಸಕಲವಾಗಬೇಕಮ್ಮಾ! (ಬಾ)
-ಯಿ ಮಾತು ಪ್ರಯೋಜನವಿಲ್ಲಮ್ಮಾ!
ನೀನನುಭವಿಸ್ಯಾನಂದಿಸಮ್ಮಾ!
ನಾಮ, ರೂಪಕ್ಕಾಳಾಗಬೇಡಮ್ಮಾ! (ಭ)
-ಗವಂತ ನಿರ್ವಿಕಾರ ಕಾಣಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾತ್ಮದಮ್ಮಾ!!!

ಅನಾಥೋ ದೈವ ರಕ್ಷಕನೆಂಬರಿವಾಗ್ಲಿ! [ಅ]   4(2358)

-ನಾಗರೀಕರ್ಗೂ ಇದರನುಭವವಾಗ್ಲಿ! (ವೃ)
-ಥೋಪದೇಶಕ ನೀನಲ್ಲೆಂಬರ್ಥವಾಗ್ಲಿ!
ದೈನ್ಯ, ಭಕ್ತಿ ನಿನ್ನಲ್ಲೆಲ್ಲರ್ಗಧಿಕವಾಗ್ಲಿ!
ರ ಗುರುದತ್ತ ನೀನೆಂಬರಿವುಂಟಾಗ್ಲಿ! (ಕ)
-ರಣತ್ರಯಗಳು ಶುದ್ಧವಾಗುತ್ತಲಿರ್ಲಿ! (ಪ)
-ಕ್ಷದ್ವೇಷಗಳೆಲ್ಲಾ ಸಮೂಲನಾಶವಾಗ್ಲಿ!
ರುಣಾ ಸ್ವಭಾವವೆಲ್ಲೆಲ್ಲೂ ತೋರಿ ಬರ್ಲಿ! (ನೀ)
-ನೆಂಬ, ನಾನೆಂಬ ಅಜ್ಞಾನ ನಿರ್ನಾಮವಾಗ್ಲಿ!
ರೀ ಗುಲ್ಲು ನಿದ್ದೆಗೇಡೆಂದದ ನಿಲ್ಲಿಸ್ಲಿ! (ದಾ)
-ರಿಯಿದು ಸುಖ ಪ್ರಯಾಣಕ್ಕನುಕೂಲವಾಗ್ಲಿ! (ಭ)
-ವಾಬ್ಧಿ ಭಯ ತಪ್ಪಿ ಎಲ್ಲರೂ ಮುಕ್ತರಾಗ್ಲಿ! (ಆ)
ಗ್ಲಿ, ಶ್ರೀ ನಿರಂಜನಾದಿತ್ಯನಿಷ್ಟದಂತಾಗ್ಲಿ!!!

ಅನಾರೋಗ್ಯ ಸದಾ ಹಬ್ಬದೂಟ!   6(4125)

ನಾರಿಯಿದನ್ನರಿಯದೇ ಕಾಟ!
ರೋಗಕ್ಕೆ ಕಾರಣ ರುಚಿ ಚಟ! (ಯೋ)
-ಗ್ಯ ಸಸ್ಯಾಹಾರದೂಟ!
ಮಯಾನುಸಾರ ಭಕ್ಷ್ಯದೂಟ!
ದಾರಿ ಹಿರಿಯರದ್ದಿದು ದಿಟ!
ಳಬರಲ್ಲಿ ಇಲ್ಲ ಕಪಟ! (ದ)
-ಬ್ಬಬಾರದವರನ್ನು ದುಷ್ಕೂಟ! (ಹಿಂ)
-ದೂ ಮತದ ಈ ಪದ್ಧತಿ ಶ್ರೇಷ್ಟ! (ದಿ)
-ಟ ನಿರಂಜನಾದಿತ್ಯೋಕ್ತಿ ಸ್ಪಷ್ಟ!!!

ಅನಾವರಣಾನಂದೋತ್ಸವವಯ್ಯಾ!   2(555)

ನಾಮ, ರೂಪ ಬಿಡುಗಡೆಯಿದಯ್ಯಾ!
ರ ಗುರುಕೃಪೆ ಬೇಕಿದಕಯ್ಯಾ!
ತ್ನಮಂಟಪ ಹೃದಯದಲಯ್ಯಾ! (ಗು)
-ಣಾತಿಶಯ ವರ್ಣನಾತೀತವಯ್ಯಾ!
ನಂದಕಂದನ ಗೀತಾನಂದವಯ್ಯಾ!
ದೋಷದೂರ ನಿಜರೂಪವಿದಯ್ಯಾ! (ಸ)
-ತ್ಸಹವಾಸವಿದಕಗತ್ಯವಯ್ಯಾ!
ಸ್ತುವಾಹನ ಬೇಕಿಲ್ಲದಕಯ್ಯಾ! (ಭಾ)
-ವ ಭಕ್ತಿಯೊಂದಿದ್ದರದೇ ಸಾಕಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯೋತ್ಸವದಯ್ಯಾ!!!

ಅನಿವಾರ್ಯಕ್ಕೆ ಆಳಾಗಬೇಕು!   6(3840)

ನಿರ್ಲಕ್ಷ್ಯ ಸ್ಥಾನ, ಮಾನಕ್ಕಾಗ್ಬೇಕು!
ವಾದಕ್ಕೆಡೆ ಕೊಡದಿರಬೇಕು! (ಕಾ)
-ರ್ಯ ತತ್ಪರನಾಗುತ್ತಿರಬೇಕು! (ಬೆ)
-ಕ್ಕೆಗೆ ಜಾಗವಿಲ್ಲದಿರಬೇಕು!
ತ್ಮ ಭಾವ ಸ್ಫುರಿಸುತ್ತಿರ್ಬೇಕು! (ವೇ)
-ಳಾ ವೇಳೆ ಎಣಿಸದಿರಬೇಕು!
ಟ್ಟಿ ಮನಸ್ಸುಳ್ಳವನಾಗ್ಬೇಕು!
ಬೇರಾರನ್ನೂ ದೂಷಿಸದಿರ್ಬೇಕು! (ಬೇ)
-ಕು, ನಿರಂಜನಾದಿತ್ಯನಾಗ್ಬೇಕು!!!

ಅನಿಷ್ಟದಂಟೆಳ್ಳಷ್ಟಿಲ್ಲದಿಷ್ಟ ಮೂರ್ತಿ!   6(3600)

ನಿಶಿ, ದಿನಾರ್ತರುದ್ಧಾರಾಸಕ್ತಾ ಮೂರ್ತಿ! (ದು)
-ಷ್ಟರನ್ನು ನಿಗ್ರಹಿಸುವುದಾ ಮೂರ್ತಿ!
ದಂಭ, ದರ್ಪವಿಲ್ಲದಿರುವುದಾ ಮೂರ್ತಿ! (ಸ)
-ಟೆಯಾಡಿ ದಿಟವ ಮರೆಸದಾ ಮೂರ್ತಿ! (ಕು)
-ಳ್ಳ ವಾಮನನಾಗಿಯೂ ಬಂದಿತ್ತಾ ಮೂರ್ತಿ! (ಸೃ)
-ಷ್ಟಿ, ಸ್ಥಿತಿ, ಲಯಕ್ಕಾಗಿ ಆಯ್ತು ತ್ರಿಮೂರ್ತಿ! (ಗೊ)
-ಲ್ಲ ಬಾಲನಾಗಿ ಗೋವ್ಗಳ ಕಾಯ್ತಾ ಮೂರ್ತಿ! (ಬಿ)
-ದಿದ್ದಹಲ್ಯೆಯನ್ನೆತ್ತಿತಾ ರಾಮ ಮೂರ್ತಿ! (ಅ)
-ಷ್ಟ ಮದಗಳ ಜೈಸಿತಾ ದತ್ತ ಮೂರ್ತಿ!
ಮೂರು ಲೋಕಕ್ಕೂ ಇದೇ ಸದ್ಗುರು ಮೂರ್ತಿ! (ಸ್ಫೂ)
-ರ್ತಿದಾತ ಶ್ರೀ ನಿರಂಜನಾದಿತ್ಯ ಮೂರ್ತಿ!!!

ಅನುಕಂಪಂತರಂಗಕ್ಕೆ ಅಲಂಕಾರ!   3(1216)

ನುಡಿಯಂತೆ ನಡೆ ದೇಹಕ್ಕಲಂಕಾರ!
ಕಂದರ್ಪ ವಿಜಯ ಯೋಗಕ್ಕಲಂಕಾರ!
ಪಂಕಜ ಸರೋವರಕ್ಕೆ ಅಲಂಕಾರ!
ತ್ವಾರ್ಥ ಚಿಂತನೆ ಆತ್ಮಕ್ಕಲಂಕಾರ!
ರಂಗನಾಥ ಶ್ರೀರಂಗಕ್ಕೆ ಅಲಂಕಾರ!
ಣನಾಯಕ ಕುಲಕ್ಕೆ ಅಲಂಕಾರ! (ಅ)
-ಕ್ಕೆ, ಸದ್ಗುರು ಸೇವೆ ಬಾಳಿಗಲಂಕಾರ!
ನುದಿನ ಸಾಧನೆ ಸರ್ವಾಲಂಕಾರ! (ಅ)
ಲಂಕಾರ ಶಂಕರಗೋಂಕಾರಾಲಂಕಾರ!
ಕಾಮಾಕ್ಷಿ ಕೈವಲ್ಯ ಧಾಮಕ್ಕೆ ಅಲಂಕಾರ! (ವ)
-ರ ನಿರಂಜನಾದಿತ್ಯಾದರ್ಶಾಲಂಕಾರ!!!

ಅನುಕಂಪವಿಲ್ಲದಧಿಕಾರವೇಕೆ? (ಮ)   5(3054)

-ನುಜರಿದನ್ನರಿತಿರಬಾರದೇಕೆ?
ಕಂಕಣಬದ್ಧರೆಂಬರೆಲ್ಲಾಳಲಿಕ್ಕೆ!
ಕ್ಷಪಾತವೇಕೆಂದರಾಡರದಕ್ಕೆ!
ವಿಶ್ವದಾದ್ಯಂತ ಇದೇ ಗತಿ ಜನಕ್ಕೆ! (ಕೊ)
-ಲ್ಲಲೆತ್ನಿಪರಿಷ್ಟು ಮಾತ್ರ ಕೇಳಿದ್ದಕ್ಕೆ!
ಯಾಮಯ ದೇವರೇ ಸಾಕ್ಷಿಯಿದಕ್ಕೆ!
ಧಿಕ್ಕಾರವಿರಲಿಂಥಾ ಆಡಳಿತಕ್ಕೆ!
ಕಾಲ ಬರಲಿದೆ ಬುದ್ಧಿ ಬರಲಿಕ್ಕೆ! (ಮಾ)
-ರಹರನೇ ಬರುವನು ತಿದ್ದಲಿಕ್ಕೆ!
ವೇಷ, ಭೂಷಣ ಮುಖ್ಯವಲ್ಲ ಅದಕ್ಕೆ! (ಜೋ)
-ಕೆ ನಿರಂಜನಾದಿತ್ಯ ಕಾರಣದಕ್ಕೆ!!!

ಅನುಕೂಲವಿದ್ದರಾಗುತ್ತದೆ!   6(3352)

(ಅ)-ನುಕೂಲವಿಲ್ದಿದ್ರೆ ಹೋಗುತ್ತದೆ!
ಕೂತ್ರೇಳ್ವುದಕ್ಕೂ ಅದು ಬೇಕಾಗ್ತದೆ!
ಭ್ಯಾನ್ಕೂಲವೆರ್ಡೂ ಬೇಕಾಗಿದೆ!
ವಿಶ್ವಾಸ ದೇವ್ರಲ್ಲಿರ್ಬೇಕಾಗಿದೆ!
(ಇ)-ದ್ದದ್ದರಲ್ಲಿ ತೃಪ್ತಿ ಬೇಕಾಗಿದೆ!
ರಾಗ, ದ್ವೇಷ, ಬಿಡಬೇಕಾಗಿದೆ!
ಗುರುಕೃಪೆ ಬೇಕೇ ಬೇಕಾಗಿದೆ!
(ಉ)-ತ್ತಮ ನಡತೆಯಿರ್ಬೇಕಾಗಿದೆ! (ತಂ)
-ದೆ ನಿರಂಜನಾದಿತ್ಯ ನೀನೆಂದೆ!!!

ಅನುಗ್ರಹ ಬಯಸುವುದು ಮನಸು! (ಅ)   4(1818)

-ನುಗ್ರಹ ಮಾಡುವುದು ಶುದ್ಧ ಮನಸು!
ಗ್ರಹಿಸಿದ ತೊಳೆಯಬೇಕು ಮನಸು!
ರಿ ನಾಮ ಜಪಿಸಬೇಕು ಮನಸು!
ಹಳ ಶೋಭಿಸುವುದಾಗ ಮನಸು! (ಭ)
-ಯ, ಭಕ್ತಿಯಿಂದ ತುಂಬಬೇಕು ಮನಸು!
ಸುಧಾರಿಸಿಕ್ಕೊಳ್ಳುವುದಾಗ ಮನಸು! (ಆ)
-ವುದಕ್ಕೂ ಅಂಜದಿರಬೇಕು ಮನಸು!
ದುಸ್ಸಂಗ ದೂರ ಮಾಡಬೇಕು ಮನಸು!
ಮಕಾರ ವರ್ಜಿಸಬೇಕು ಮನಸು!
ವೋದಯ ನೋಡುವುದಾಗ ಮನಸು!
ಸುಖಿ ನಿರಂಜನಾದಿತ್ಯಾತ್ಮ ಮನಸು!!!

ಅನುಗ್ರಹಕ್ಕೆ ದೇಶ, ಕಾಲವಿಲ್ಲಾ! (ಅ)   1(332)

-ನುಮಾನಿಸದೆ ಭಜಿಸಿ ನೀವೆಲ್ಲಾ!
ಗ್ರಹ ಶಾಂತಿಗೆಲ್ಲೂ ಹೋಗಬೇಕಿಲ್ಲಾ!
ಲಿರಗುಳಿಲ್ಲೇ ಆಗುವುದೆಲ್ಲಾ! (ಅ)
-ಕ್ಕೆ, ಸರ್ವ ಮಂಗಳ, ಜೀವರಿಗೆಲ್ಲಾ! (ಆ)
-ದೇಶವಿದ ನಂಬಿ ಸಜ್ಜನರೆಲ್ಲಾ!
ರಣರ ಶಿವ ಕಾಯ್ವನೆಲ್ಲೆಲ್ಲಾ!
ಕಾಲ, ಕರ್ಮ, ಗತಿ, ವಿಚಿತ್ರವೆಲ್ಲಾ! (ಅ)
-ಲಕ್ಷ್ಯ ಮಾಡಬಾರದೀ ಮಾತನ್ನೆಲ್ಲಾ!
ವಿಶ್ವಾಸಕ್ಕೆ ದೂರ, ಬಳಿಯೆಂದಿಲ್ಲಾ! (ಅ)
-ಲ್ಲಾಡ ನಿರಂಜನಾದಿತ್ಯ ಹಾಗೆಲ್ಲಾ!!!

ಅನುಗ್ರಹಿಸಿ ಜ್ಞಾಪಕ ಶಕ್ತಿ! (ಅ)   4(2394)

-ನುಗ್ರಹಕಾರಿ ಗಾಯತ್ರೀ ಶಕ್ತಿ! (ಉ)
-ಗ್ರ ತಪಸ್ಸಿಗೊಲಿವುದಾ ಶಕ್ತಿ! (ಆ)
-ಹಿತವೆಂದಿಗೂ ಮಾಡದಾ ಶಕ್ತಿ! (ಪು)
-ಸಿ ಮಾತುಗಳನ್ನೊಪ್ಪದಾ ಶಕ್ತಿ!
ಜ್ಞಾನ ನಿಧಿಯಾ ವಿಮಲ ಶಕ್ತಿ!
ದಕೆರಗಿ ಪಡೆಯಾ ಶಕ್ತಿ!
ರುಣಾಮಯಿಯಾ ದಿವ್ಯ ಶಕ್ತಿ!
ರಣರ ಪೊರೆವುದಾ ಶಕ್ತಿ! (ಶ)
-ಕ್ತಿ, ನಿರಂಜನಾದಿತ್ಯಾನಂದೋಕ್ತಿ!!!

ಅನುದಿನದಭ್ಯಾಸದಿಂದಾಯ್ತೆನ್ನ ರೂಪ! (ಅ)   4(2265)

-ನುಭವಿಸಿದೆನದಕಾಗಿ ಬಹು ತಾಪ!
ದಿವ್ಯ ನಾಮಸ್ಮರಣೆಯಿಂದ ಹೋಯ್ತು ಕೋಪ! (ದಿ)
-ನಮಣಿ ಬೆಳಗಿದನು ಹೃದಯ ದೀಪ!
ತ್ತ ಕೃಪೆಯಿಂದ ನಾಶವಾಯ್ತೆಲ್ಲಾ ಪಾಪ! (ಅ)
-ಭ್ಯಾಸ ಬಲದಿಂದಾದೆ ನಾನೀಗ ನಿರ್ಲೇಪ!
ಚ್ಚಿದಾನಂದದಲ್ಲಿರ್ಪಾಗಿಲ್ಲಾವ ಲೋಪ! (ಸ)
-ದಿಂಬಿನಿಂದ ಕರಗಿ ಹೋಗುವುದು ಶಾಪ!
ದಾಶರಥಿಯಿಹನಿದಕೆ ಹೊತ್ತು ಚಾಪ! (ಕಾ)
-ಯ್ತೆಲ್ಲನಾಥರನ್ನವನಮಿತ ಪ್ರತಾಪ! (ಉ)
-ನ್ನತಿಯನೆಲ್ಲರಿಗೆ ಮಾಡುವಾತ ಭೂಪ!
ರೂಢಿಸಿದ್ದನಿದ ಚಕ್ರವರ್ತಿ ದಿಲೀಪ! (ದೀ)
-ಪ ನಿರಂಜನಾದಿತ್ಯಾತ್ಮಾನಂದ ಪ್ರದೀಪ!!!

ಅನುಪಮಾತ್ಮ ಪರಮಾತ್ಮ! [ಅ]   2(676)

-ನುಮಾನವಿಲ್ಲದಿಹನಾತ್ಮ!
ರಿತಾಪೇಂದ್ರಿಯ ಜಯಾತ್ಮ!
ಮಾಡಬೇಕು ಕರ್ಮ ಜೀವಾತ್ಮ! [ಆ]
-ತ್ಮ ಚಿಂತನೆಯಿಂದಪ್ಪನಾತ್ಮ!
ರ ಧರ್ಮದಿಂದ ದುಃಖಾತ್ಮ!
ಘುರಾಮಾತ್ಮ ವಿಜಯಾತ್ಮ!
ಮಾರಹರ ಶಿವ ಯೋಗಾತ್ಮ! [ಆ]
-ತ್ಮ, ನಿರಂಜನಾದಿತ್ಯಾಪ್ತಾತ್ಮ!!!

ಅನುಬವಕಿಲ್ಲದಮೃತವೇನಾದರೇನಯ್ಯ? (ಅ)   1(356)

-ನುಕೂಲಮರರಿಗಾದರೆ ನಮಗೇನಯ್ಯಾ? (ಅ)
-ಭಯವಚನದರಿವಾಗದಿದ್ದರೇನಾಯ್ತಯ್ಯಾ?
ರ ಋಷಿಗಳಂಶಜರು ನಾನಲ್ಲವೇನಯ್ಯಾ?
ಕಿರಿಯರಿಗವರ ಬೆಂಬಲ ಬೇಡವೇನಯ್ಯಾ? (ಅ)
-ಲ್ಲದಿರೆಲ್ಲಾ ಬರೀ ಕಂತೆ, ಬೊಂತೆಯಲ್ಲವೇನಯ್ಯಾ?
ಳಪತಿ ಮೈಮರೆತ ಸೈನ್ಯವೆಂತಿಹುದಯ್ಯಾ?
ಮೃದು ನುಡಿ ಮಾತ್ರದಿಂದ ಹಸಿವಡೆಗದಯ್ಯಾ?
ರಳರುಪಚರಿಸದಾಕೆ ತಾಯಿಯೇನಯ್ಯಾ?
ವೇದ, ಪುರಾಣಗಳೂಟ ನಾವೂ ಉಣಬೇಕಯ್ಯಾ! (ಅ)
-ನಾಥರನಾದರ ಅಪ್ಪನಿಗೊಪ್ಪುವುದೇನಯ್ಯಾ?
ಯೆದೋರಿ ಕಾಪಾಡುವುದವನ ಧರ್ಮವಯ್ಯಾ!
ರೇಗುವುದಾತನಾರಮೇಲಾವ ತಪ್ಪಿಗಯ್ಯಾ?
ತರಾದವರನೊದ್ದು ನೋಯಿಸಬಾರದಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನಿಗಿನ್ನೂ ರಾತ್ರಿಯೇನಯ್ಯಾ???

ಅನುಭವವಾಗಲಿ ಪ್ರಸಾದ ಮಹಿಮೆ! (ಅ)   3(1218)

-ನುಮಾನ ಜೀವಗರಿವಾಗದಾ ಮಹಿಮೆ!
ಕ್ತನರಿತಾನಂದಿಸುವನಾ ಮಹಿಮೆ!
ರ ಮಾರುತಿ ರೂಪಾನುಗ್ರಹ ಮಹಿಮೆ!
ವಾನರ ಪರಬ್ರಹ್ಮತಾನಾದ ಮಹಿಮೆ!
ಗನಮಣಿಯಂಶಾತ್ಮನಾದ ಮಹಿಮೆ! (ಕ)
-ಲಿ ರಾವಣನ ನಿಗ್ರಹಿಸಿತಾ ಮಹಿಮೆ!
ಪ್ರತಿಭಟರನೆದುರಿಸಿತಾ ಮಹಿಮೆ!
ಸಾಧ್ವೀಸೀತೆಯರಿತಳಾ ವರ ಮಹಿಮೆ!
ತ್ತ ಭಕ್ತಲರ್ಕನರಿತನಾ ಮಹಿಮೆ!
ಗು

ವರಾಯಗರಿವಾಯ್ತಾ ಮಹಿಮೆ!
ಹಿಮ ಗಿರಿ ತನಯೆಯಾಕಾರಾ ಮಹಿಮೆ!
ಮೆರೆವ ನಿರಂಜನಾದಿತ್ಯಾತ್ಮಾ ಮಹಿಮೆ!!!

ಅನುಭವವಿದ್ದರೂ ಅಳುವುದು ಪ್ರಾರಬ್ಧ!   6(4182)

ನುಡಿ ನಡೆಯೊಂದು ಮಾಡಾಗೊಡದು ಪ್ರಾರಬ್ಧ!
ವಾಬ್ಧಿ ದಾಟ್ಬೇಕೆ

ದ್ರೂ ಅದ್ದುವುದು ಪ್ರಾರಬ್ಧ!
ಜ್ರಕವಚವಿದ್ದ್ರೂ ವಂಚಿಪುದು ಪ್ರಾರಬ್ಧ!
ವಿವೇಕವಿದ್ದ್ರೂ ಹಗ್ಗ ಹಾವೆಂಬುದು ಪ್ರಾರಬ್ಧ! (ತ)
-ದ್ದ

ನಾನಂದದಲ್ಲಿರ ಬಿಡದು ಪ್ರಾರಬ್ಧ! (ಗು)
-ರೂಪದೇಶ ತಲೆಗಂಟಿಸದಿದೆ ಪ್ರಾರಬ್ಧ!
ವರಿವರ ತನ್ನವರೆಂಬುದು ಪ್ರಾರಬ್ಧ! (ಕೀ)
-ಳು ವ್ಯಾಮೋಹಕ್ಕಾಳೆನಿಸಿರುವುದು ಪ್ರಾರಬ್ಧ! (ಬೇ)
-ವು ಬೆಲ್ಲದಲ್ಲಿ ಭೇದ ಕಾಣುವುದು ಪ್ರಾರಬ್ಧ!
“ದುರ್ವಿಧಿ, ದೌರ್ಭಾಗ್ಯ, ಅದೃಷ್ಟ” ಎಲ್ಲಾ ಪ್ರಾರಬ್ಧ!
ಪ್ರಾಮಾಣಿಕನನ್ನೂ ಕಳ್ಳವೆಂಬುದು ಪ್ರಾರಬ್ಧ! (ಚಿ)
-ರಕಾಲ ಬೆರೆತರಾತ್ಮನಲ್ಲಿಲ್ಲ ಪ್ರಾರಬ್ಧ! (ಶ)
-ಬ್ಧ, ಸ್ಪರ್ಶಾದ್ಯತೀತ ನಿರಂಅ

ನಾದಿತ್ಯ ಸಿದ್ಧ!!!

ಅನುಭವಿಯೊಂದು ಮಾತು ಸಾಕುದ್ಧಾರಕ್ಕೆ!   4(1926)

ನುಡಿ ಪಂಡಿತನದ್ಬೇಕು ವ್ಯವಹಾರಕ್ಕೆ!
ಗವದ್ಭಕ್ತನ ಸಂಗ ಬೇಕುದ್ಧಾರಕ್ಕೆ!
ವಿಷಯಿಯ ಸಂಗ ಸಾಕು ವ್ಯವಹಾರಕ್ಕೆ! (ಬಾ)
-ಯೊಂದರ ಸಂಯಮಗತ್ಯ ಬೇಕುದ್ಧಾರಕ್ಕೆ! (ಅ)
-ದು ಜೋರಾಗಿದ್ದರೆ ಸಾಕು ವ್ಯವಹಾರಕ್ಕೆ!
ಮಾಯಾ ಸುಖದಾಸೆ ಬಿಡಬೇಕುದ್ಧಾರಕ್ಕೆ! (ಹೇ)
-ತುವಾಗ್ಯದೊಂದೇ ಸಾಕೆಲ್ಲಾ ವ್ಯವಹಾರಕ್ಕೆ!
ಸಾಧನೆಡೆಬಿಡದಾಗಬೇಕುದ್ಧಾರಕ್ಕೆ!
ಕುಲ, ಗೋತ್ರದಾಟ ಸಾಕು ವ್ಯವಹಾರಕ್ಕೆ! (ಉ)
-ದ್ಧಾಮ ಗುರುವಿನಾಶ್ರಯ ಬೇಕುದ್ಧಾರಕ್ಕೆ! (ಊ)
-ರ ಗಣ್ಯರಿದ್ದರೆ ಸಾಕು ವ್ಯವಹಾರಕ್ಕೆ! (ಅ)
-ಕ್ಕೆ ನಿರಂಜನಾದಿತ್ಯಾತ್ಮಾನಂದುದ್ಧಾರೆಕ್ಕೆ!!!

ಅನುಮಾನವಿದ್ದರೆ ಅದೆಂಥಾ ಭಕ್ತಿ?   1(292)

ನುಸುಳಿದರೆ ಬೀಸುವುದೆಂತಾ ಕತ್ತಿ?
ಮಾಲಿಕನಿಲ್ಲದೆಂತಿಹುದು ವಸತಿ?
ಡೆ, ನುಡಿ ವ್ಯತ್ಯಾಸದಿಂದ್ಯಾವ ಕೀರ್ತಿ?
ವಿಚಾರವಿಲ್ಲದ ಜ್ಞಾನಕ್ಕಿಲ್ಲ ಸ್ಫೂರ್ತಿ! (ಇ)
-ದ್ದರಿರಬೇಕು ಒಂದಾಗಿ ಸತಿ, ಪತಿ!
ರೆಪ್ಪೆ ಬಡಿದರೆಂತು “ತ್ರಾಟಕ” ಸ್ಥಿತಿ?
ರೆವ ಕಲ್ಲಲುಗಬಾರದೆಂದುಕ್ತಿ! (ಇ)
-ದೆಂಥಾ ಭಕ್ತಿ, ಯುಕ್ತಿ ಬೆರೆತಿಹ ಪ್ರೀತಿ? (ಯ)
-ಥಾರ್ಥ ಸ್ಥಿತಿಗಿರಬೇಕು ಶುದ್ಧ ಪ್ರೀತಿ!
ಕ್ತಿಗಿರಬೇಕು ನಿಸ್ಸಂಶಯ ವೃತ್ತಿ! (ಉ)
-ಕ್ತಿ, ನಿರಂಜನಾದಿತ್ಯಗಿದು ಸಂತೃಪ್ತಿ!!!

ಅನುರೂಪನಾದ ವರನೆನಗಾರಪ್ಪಾ? (ಅ)   4(1668)

-ನುಭವವಿಲ್ಲದ ದೀನಬಾಲೆ ನಾನಪ್ಪಾ!
ರೂಪ, ಲಾವಣ್ಯಗಳೇ ಪ್ರಾಮುಖ್ಯವಲ್ಲಪ್ಪಾ!
ರಮಾರ್ಥದಭ್ಯಾಸಿಯಾಗಿರ ಬೇಕಪ್ಪಾ!
ನಾನಾ ತರದಾಸೆಗಳಿರಬಾರದಪ್ಪಾ!
ರಿದ್ರ ತಾನಾದರೂ ಪರವಾಯಿಲ್ಲಪ್ಪಾ!
ಸ್ತ್ರ, ಭೂಷಣಾದ್ಯಲಂಕಾರದಿಂದೇನಪ್ಪಾ? (ವಾ)
-ರ ಗುರುಭಕ್ತನಾಗಿದ್ದರೊಳ್ಳೆಯದಪ್ಪಾ!
ನೆಲ, ಹೊಲ, ಮನೆಯಾಸೆ ನನಗಿಲ್ಲಪ್ಪಾ!
ಗುನಗುತೊಡಗೂಡಿದ್ದರೆ ಸಾಕಪ್ಪಾ!
ಗಾನಾನಂದನಾಗಿದ್ದರೆ ನೆಮ್ಮದಿಯಪ್ಪಾ!
ಮೇಶ, ಉಮೇಶರಂತಿದ್ದರಾನಂದಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯನುರೂಪ ಕಾಣಪ್ಪಾ!!!

ಅನೃತ ನಾನಲ್ಲ ಖಚಿತಾ!   4(2012)

ನೃಸಿಂಹ ಸ್ವರೂಪಿ ಸವಿತಾ!
ನು, ಮನದಲ್ಲ ಖಚಿತಾ!
ನಾರಾಯಣಮೂರ್ತಿ ಸವಿತಾ!
ಶ್ವರವದಲ್ಲ ಖಚಿತಾ! (ಎ)
-ಲ್ಲರೊಳಗಿರುವ ಸವಿತಾ! (ಸು)
-ಖ, ದುಃಖವಗಿಲ್ಲ ಖಚಿತಾ!
ಚಿದಾಕಾಶ ವಾಸ ಸವಿತಾ!
ತಾ ನಿರಂಜನಾದಿತ್ಯಾತಾ!!!

ಅನೃತವೇನು ನೀನಮೃತ?   3(1086)

ನೃಪೋತ್ತಮನು ನೀನಮೃತ!
ನು, ಮನ ನಿನ್ನದಮೃತ!
ವೇಷವೆಲ್ಲಶಾಶ್ವತಮೃತ!
ನುಡಿಗಳವಡದಮೃತ!
“ನೀ” “ನಾ” ನೆಂಬುದಿಲ್ಲದ್ದ ಮೃತ!
ಯನಕ್ಕ ಗೋಚರಮೃತ!
ಮೃಡಾಣಿಯಾಗಿ ನೀನಮೃತ! (ಪಿ)
-ತ ನಿರಂಜನಾತ್ಯಮೃತ!!!

ಅನೇಕರೊಪ್ಪಿ ಅಪ್ಪಿದರು ಕೃಷ್ಣನನ್ನು!   6(3985)

ನೇಮ ನಿಷ್ಠೆಯಿಂದ ಪೂಜಿಸಿದ್ರವನನ್ನು!
ಳ್ಳ ಸುಳ್ಳನೆಂದೂ ನಿಂದಿಸಿದ್ರವನನ್ನು! (ನೀ)
-ರೊಳಗೆ ಕಾಳಿಂಗನ ತುಳಿದವನನ್ನು! (ತ)
-ಪ್ಪಿತಸ್ಥ ಮಾವ ಕಂಸನ ಕೊಂದವನನ್ನು!
ಹಂಕಾರೀಂದ್ರನಡಗಿಸಿದವನನ್ನು! (ಅ)
-ಪ್ಪಿ ಕುಚೇಲನನ್ನಾದರಿಸಿದವನನ್ನು!
ಯಾನಿಧಿ ವಿದುರನ ಅತಿಥಿಯನ್ನು! (ಕು)
-ರು ಕುಲವ ನಿರ್ಮೂಲ ಮಾಡಿದವನನ್ನು!
ಕೃಷ್ಣೆಯ ಸೀರೆ ಅಕ್ಷಯ ಗೈದವನನ್ನು! (ಪೂ)
-ಷ್ಣನಿಗೆ ಚಕ್ರ ಅಡ್ಡ ಹಿಡಿದವನನ್ನು!
ರನಿಗೆ ತತ್ವ ಬೋಧಿಸಿದವನನ್ನು! (ಸ)
-ನ್ನುತ ನಿರಂಜನಾದಿತ್ಯ ಗೋಪಾಲನನ್ನು!!!

ಅನ್ನ ನೀರ್ಬಿಟ್ಟವ್ರೆಲ್ಲಾ ಶಿವನ ಕಂಡ್ರಾ?   6(3451)

(ಅ)-ನ್ನ, ಸಾರು, ಹುಳಿ, ಮಾಡಿಟ್ಟವ್ರೆಲ್ಲಾ ಉಂಡ್ರಾ!
ನೀವೇ ಎಲ್ಲಕ್ಕೂ ಕಾರಣವೆಂದಂದ್ಕೊಂಡ್ರಾ!
(ಕ)-ರ್ಬಿದವರುದ್ಧಾರವಾದದ್ದನ್ನು ಕಂಡ್ರಾ?
(ನೆ)-ಟ್ಟ ಗಿಡಗಳೆಲ್ಲಾ ಬದುಕಿದ್ದು ಕಂಡ್ರಾ?
(ದೇ)-ವ್ರೆಲ್ಲಕ್ಕೂ ಕಾರಣವೆಂದರಿತುಕೊಂಡ್ರಾ?
(ಕ)-ಲ್ಲಾದಹಲ್ಯೆಯನೆಬ್ಸಿದ ರಾಮಚಂದ್ರಾ!
ಶಿಕ್ಷಿಸಲ್ಪಟ್ಟವಳಿಗಾಗಿ ದೇವೇಂದ್ರಾ!
(ಪ)-ವನಸುತ ಮಾರುತಿ ಆದ ಬ್ರಹ್ಮೇಂದ್ರಾ!
ರನಾದರ್ಜುನ ತಾನಾದ ವೀರೇಂದ್ರ!
ಕಂಸ ಮಾವನನ್ನು ಕೊಂದ ಯಾದವೇಂದ್ರಾ!
(ಕಂ)-ಡ್ರಾ? ಶ್ರೀ ನಿರಂಜನಾದಿತ್ಯ ತಾಪಸೇಂದ್ರಾ!!!

ಅನ್ನ, ಪಾನ ಬಿಟ್ಟು ಕಟ್ಟಿದಂದಿನ ಗುಡಿ! (ಚಿ)   4(2248)

-ನ್ನ, ಬೆಳ್ಳಿ ವ್ಯಾಪಾರಕ್ಕಾಗಿಹುದಿಂದಂಗಡಿ!
ಪಾಪ, ಪುಣ್ಯದಡಿಗಟ್ಟಿನಂದಿನಾಗುಡಿ! (ಜ)
-ನರ ಹೊಟ್ಟೆ, ಬಟ್ಟೆಗಾಗಿಹುದಿಂದಂಗಡಿ! (ನಂ)
-ಬಿಗೆ ದೇವರಲ್ಲಿಡಿರೆಂದಂದಿನಾ ಗುಡಿ! (ಗು)
-ಟ್ಟು, ವಂಚನೆಗಳಿಗಾಗಿಹುದಿಂದಂಗಡಿ!
ಲಿ, ಮಲ ಕಳೆಯುತ್ತಿದ್ದಂದಿನಾ ಗುಡಿ! (ಹು)
-ಟ್ಟಿ, ಸಾಯುವ ಬಾಳಿಗಾಗಿಹುದಿಂದಂಗಡಿ!
ದಂಡಯಾತ್ರೆಯಡಗಿಸಿದಂದಿನಾ ಗುಡಿ!
ದಿನ, ರಾತ್ರಿ ಕಳ್ಳರ್ಗಾಗಿಹುದಿಂದಂಗಡಿ! (ಕ)
-ನಸು, ನೆನಸಿನಲ್ಲಾನಂದಂದಿತ್ತಾ ಗುಡಿ! (ಜಿ)
-ಗುಪ್ಸೆಯಿಂದಳ್ವುದಕ್ಕಾಗಿಹುದಿಂದಂಗಡಿ! (ಮಾ)
-ಡಿ ನಿರಂಜನಾದಿತ್ಯಗಾಗೀ ದೇಹ ಗುಡಿ!!!

ಅನ್ನದಾತನಿಗಾರದೇನಾಜ್ಞೆ? (ಉ)   4(2251)

-ನ್ನತದಲ್ಲಿಹುದವನ ಪ್ರಜ್ಞೆ!
ದಾನಿ ತಾನಾಗಿ ಮಾಡುವನಾಜ್ಞೆ! (ಆ)
-ತನಂತಿರ್ಬೇಕೆಲ್ಲರಿಗೆ ಪ್ರಜ್ಞೆ!
ನಿತ್ಯ ಪಾಲಿಸಬೇಕವನಾಜ್ಞೆ! (ಯೋ)
-ಗಾಭ್ಯಾಸಿಗಾಗ್ವುದು ಸ್ಥಿತಪ್ರಜ್ಞೆ! (ಪ)
-ರಮ ಪಾವನ ಗುರುವಿನಾಜ್ಞೆ!
ದೇಶ, ಕಾಲಾತೀದುದಾ ಪ್ರಜ್ಞೆ!
ನಾಮ, ರೂಪವೆಲ್ಲಾ ಅವನಾಜ್ಞೆ! (ಆ)
-ಜ್ಞೆ, ನಿರಂಜನಾದಿತ್ಯಾತ್ಮ ಪ್ರಜ್ಞೆ!!!

ಅನ್ನದಾನಾನಂದಾ ಶ್ರಿಕೃಷ್ಣ! [ತ]   3(1272)

-ನ್ನವರೆಲ್ಲರೆಂಬವಾ ಕೃಷ್ಣ!(ಉ)
-ದಾರ ಗುಣ ಸಂಪನ್ನಾ ಕೃಷ್ಣ! (ಅ)
-ನಾದರವಿಲ್ಲವದವಾ ಕೃಷ್ಣ!
ನಂದ ಕಂದ ಗೋವಿಂದಾ ಕೃಷ್ಣ!
ದಾಸರ ದಾಸಾ ರಾಧಾ ಕೃಷ್ಣ!
ಶ್ರೀಹರಿ ಸ್ವರೂಪಾ ಶ್ರೀ ಕೃಷ್ಣ!
ಕೃಪಾಕರಾ ಗೋಪಾಲ ಕೃಷ್ಣ! (ಕೃ)
-ಷ್ಣ, ನಿರಂಜನಾದಿತ್ಯಾ ಕೃಷ್ಣ!!!

ಅನ್ನಪಾನವೆಲ್ಲಾ ನಿನ್ನಿಂದ [ನಿ]   2(711)

-ನ್ನ ಸೇವೆಗೀದೇಹ ಸಂಬಂಧ!
ಪಾಪ ಪುಣ್ಯ ನಿನಗಾನಂದ!
ನ್ನದೇನಿಹುದು ಗೋವಿಂದ? (ನಾ)
-ವೆಯ ನಾಯಕ ನೀ ಮುಕುಂದ! (ಉ)
-ಲ್ಲಾಸವಿತ್ತರೆ ಯಾತ್ರಾನಂದ!
ನಿನ್ನ ನಾಮವೆನಗಾನಂದ! [ನಿ]
-ನ್ನಿಂದ ಜಗಕೆಲ್ಲಾ ಆನಂದ! [ಪಾ]
-ದ ನಿರಂಜನಾದಿತ್ಯಾನಂದ!!!

ಅನ್ನಾಶ್ರಯವೀವಾತಾತ! (ಮ)   2(757)

-ನ್ನಾಥ ಶ್ರೀ ಗುರು ದತ್ತಾತ!
ಶ್ರಮ ಪೋಗೊಳಿಪಾತಾತ!
ದುನಾಥ ಶ್ರೀ ಕೃಷ್ಣಾತ!
ವೀರ್ಯವೃದ್ಧಿ ಗೈವಾತಾತ!
ವಾಸನಾ ಕ್ಷಯ ಕರ್ತಾತ!
ತಾಯಿ, ತಂದೆ, ಬಂಧುವಾತ! (ಪಿ)
-ತ ನಿರಂಜನಾದಿತ್ಯಾತ!!!

ಅನ್ಯ ದ್ವೇಷಕ್ಕೆ ತನ್ನಾಸೆ ಕಾರಣ! [ವ]   3(1240)

-ನ್ಯ ಮೃಗದಂತಾದರೆಂಥಾ ಜೀವನ? (ಉ)
-ದ್ವೇಗ ಅಶಾಂತಿಗೆ ಮೂಲ ಕಾರಣ!
ಡ್ರಿಪುಗಳಿಂದ ವ್ಯರ್ಥ ಜೀವನ! (ಅ)
-ಕ್ಕೆ ಸದಾ ಶಿವ ಜಪವೀ ಕಾರಣ!
ತನು ಭಾವಲ್ಪ ಮಾನವ ಜೀವನ! (ಅ)
-ನ್ನಾಹಾರವಲ್ಲ ಜನ್ಮಕ್ಕೆ ಕಾರಣ! (ಆ)
-ಸೆಗಳಿಂದ ಹಾಳಾಯ್ತಿಹ ಜೀವನ
ಕಾಲ ಪೋಲಾಗಬಾರದೀ ಕಾರಣ! (ವ)
-ರ ಗುರು ಸೇವಾ ನಂದಾತ್ಮ ಜೀವನ! (ತ್ರಾ)
-ಣ ನಿರಂಜನಾದಿತ್ಯಾತ್ಮ ಧಾರಣ!!!

ಅನ್ಯ ಸಮಾಚಾರವೇತಕಯ್ಯಾ? (ಧ)   1(360)

-ನ್ಯ ವಿಚಾರ ಮಾಡುತಿರಯ್ಯಾ!
ರ್ವ ಸುಖ ನಿನ್ನಲ್ಲಿಹುದಯ್ಯಾ!
ಮಾತಿನ ಮಲ್ಲಿಗೆ ಬೇಡವಯ್ಯಾ!
ಚಾಕ, ಚಕ್ಯವೆಲ್ಲೈಹಿಕವಯ್ಯಾ!
ಮಿಸು ನಿನ್ನಲಿ ನೀನಿದ್ದಯಾ!
ವೇದಾಂತಾಚಾರವಾಗಬೇಕಯಾ!
ರ್ಕ, ವಿತರ್ಕಕಂತ್ಯವಿಲ್ಲಯ್ಯಾ!
ರ್ಮಶುದ್ಧಿಯಿಂದ ಸಿದ್ಧಿಯಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನಂತಯ್ಯಾ!!!

ಅನ್ಯರನು ತುಳಿಯಲೆತ್ನಿಸಬೇಡ! (ಧ)   4(1510)

-ನ್ಯ ನೀನಾಗುವುದಕೆ ಮರೆಯಬೇಡ! (ಪ)
-ರನಿಂದೆ, ಪರಹಿಂಸೆ ಮಾಡಲೂ ಬೇಡ! (ಅ)
-ನುಪಮಾತ್ಮ ಚಿಂತನೆ ಬಿಡಲೂ ಬೇಡ!
ತುಚ್ಛ ಮನೋಭಾವಕ್ಕೆಡೆ ಕೊಡಬೇಡ! (ಗಾ)
-ಳಿಗೋಪುರ ಕಟ್ಟಿ ಕೆಟ್ಟು ಹೋಗಬೇಡ! (ಕಾ)
-ಯದಭಿಮಾನವೆಳ್ಳಷ್ಟೂ ಇಡಬೇಡ! (ಜ್ವಾ)
-ಲೆ ವಿಷಯಾಸೆಗಳಿಗಾಳಾಗ ಬೇಡ! (ಪ)
-ತ್ನಿ ಪುತ್ರ, ಪುತ್ರಿಯರಿಗಾಶಿಸಬೇಡ!
ರ್ವಾತ್ಮ ಸಾಕ್ಷತ್ಕರಿಸದಿರಬೇಡ!
ಬೇರೆಯವರೇಳ್ಗೆಗಸಹನೆ ಬೇಡ! (ಮಂ)
-ಡಲಾಧಿಪತಿ ನಿರಂಜನಾದಿತ್ಯಾಡ!!!

ಅನ್ಯರನುಷ್ಟಾನಕ್ಕಡ್ಡಿ ಮಾಡಬೇಡ! [ಮಾ]   3(1274)

-ನ್ಯವಾದ ನಿನ್ನ ದಾರಿ ನೀ ಬಿಡಬೇಡ! (ವ)
-ರ ಗುರುವಿನಾಜ್ಞೆಯುಲ್ಲಂಘಿಸಬೇಡ! (ಅ)
-ನು ದಿನದ ಸೇವೆಗನಾಸಕ್ತಿ ಬೇಡ! (ಶಿ)
-ಷ್ಟಾಚಾರವನ್ನುಪೇಕ್ಷಿಸಿ ಕೆಡಬೇಡ!
ಶ್ವರ ಸುಖಕ್ಕಪೇಕ್ಷೆ ಪಡಬೇಡ! (ಅ)
-ಕ್ಕ ತಮ್ಮಂದಿರೆಂಬಕ್ಕರೆ ಬಿಡಬೇಡ! (ದು)
-ಡ್ಡಿಗಾಗನ್ಯಾಯವಾಗಿರೂ ಮಾಡಬೇಡ!
ಮಾತಾಡಿದಂತೆ ನಡೆಯದಿರಬೇಡ! (ಒ)
-ಡನಾಟ ದುರ್ಜನರದು ಮಾಡಬೇಡ!
ಬೇಕಾಗಿರುವಾತ್ಮಧ್ಯಾನ ಬಿಡಬೇಡ! (ಮೃ)
-ಡ ನಿರಂಜನಾದಿತ್ಯ ಸಂದೇಹ ಬೇಡ!!!

ಅನ್ಯರನ್ನಲ್ಲಗಳೆವುದೊಂದು ರೋಗ! (ಧ)   6(4251)

-ನ್ಯರನ್ನಾಗಗೊಡದೀ ಭವದ ರೋಗ! (ಪ)
-ರಮಾರ್ಥವರಿಯದೀ ಅಜ್ಞಾನ ರೋಗ! (ತ)
-ನ್ನ ತಾನರಿತವನಿಗಿಲ್ಲ ಈ ರೋಗ! (ಎ)
-ಲ್ಲರಲ್ಲೂ ತನ್ನನ್ನು ನೋಡುವುದೇ ಯೋಗ!
ರ್ವಾಂಧನಿಗೆ ಲಭಿಸದೀ ಸುಯೋಗ! (ಸೂ)
-ಳೆಯಂತಾತನಿಗೆ ವ್ಯಭಿಚಾರ ರೋಗ! (ಸಾ)
-ವು, ಸಂಕಟಕ್ಕೀಡು ಮಾಡುವುದಾ ರೋಗ! (ಒಂ)
-ದೊಂದು ಮಹದುದ್ದೇಶಕ್ಕಡ್ಡಿ ಆ ರೋಗ!
ದುರ್ವಿಧಿಯೆಸಿಕೊಳ್ಳುವುದಾ ರೋಗ! (ನಿ)
-ರೋಧ ಚಿತ್ತವೃತ್ತಿಗಾದಾಗದೇ ಯೋಗ! (ಖ)
-ಗ ನಿರಂಜನಾದಿತ್ಯಾನಂದಗಾ ಯೋಗ!!!

ಅನ್ಯರೇಳಿಗೆಗೆ ಕರುಬುವುದೇಕೆ? (ಧ)   5(2908)

-ನ್ಯವಾದ ಅರ್ಪಿಸಲು ಅರಿಯದ್ದಕ್ಕೆ!
ರೇಚಕ, ಪೂರಕ ಜಪವಾಗದ್ದಕ್ಕೆ! (ಬಾ)
-ಳಿನುದ್ದೇಶದರಿವಿಲ್ಲದಾದುದಕ್ಕೆ!
ಗೆಳೆತನ ದುರ್ಜನರಲ್ಲಾದದ್ದಕ್ಕೆ!
ಗೆಲಬೇಕಿಂದ್ರಿಯಚಾಪಲ್ಯ ಸುಖಕ್ಕೆ!
ಡ್ಡಾಯ ಸತತ ಜಪ ಮಾಡದಕ್ಕೆ! (ಗು)
-ರುವಿನಾಜ್ಞಾ ಪಾಲನೆ ಮುಖ್ಯವದಕ್ಕೆ!
ಬುತ್ತಿಕಟ್ಟು ಸ್ವದೇಶದ ಪ್ರಯಾಣಕ್ಕೆ!
(ಗಾ)ವುದಗಳಳತೆ ಮಿತಿಯಿಲ್ಲದಕ್ಕೆ! (ವಿ)
-ದೇಶ ಯಾತ್ರೆಯ ಹುಚ್ಚು ಬಿಡೀಗದಕ್ಕೆ! (ಏ)
-ಕೆ? ನಿರಂಜನಾದಿತ್ಯನಿಲ್ಲಿರ್ಪುದಕ್ಕೆ!!!

ಅನ್ಯರೊಡವೆಗಾಶಿಸಬೇಡ! (ಅ)   5(2600)

-ನ್ಯ ದೇವರ ಪೂಜೆ ಮಾಡಬೇಡ! (ಬೇ)
-ರೊಬ್ಬರನ್ನೆಂದೂ ನೋಯಿಸಬೇಡ! (ಮೃ)
-ಡನ ಸೇವೆ ವ್ಯರ್ಥವೆನಬೇಡ!
(ಶಿ)ವೆ ನೀನಾಗಿ ಶವವಾಗಬೇಡ!
ಗಾಳಿ ಗೋಪುರ ಕಟ್ಟಲೇಬೇಡ!
ಶಿಷ್ಟ ಸಂಪ್ರದಾಯ ಬಿಡಬೇಡ!
ದಾಶಿವನ ಮರೆಯಬೇಡ!
ಬೇರಿನ್ನೇನನ್ನೂ ಬಯಸಬೇಡ! (ಗಂ)
-ಡ ನಿರಂಜನಾದಿತ್ಯ ಮಾರ್ತಾಂಡ!!!

ಅನ್ಯರೊಡವೆಗಾಶಿಸಬೇಡ! [ಧ]   5(2601)

-ನ್ಯನಾಗುವ ದಾರಿ ಬಿಡಬೇಡ! (ಯಾ)
-ರೊಡನೆಯೂ ಜಗಳಾಡಬೇಡ! (ಬ)
-ಡವನಾದರೂ ಒದ್ದಾಡಬೇಡ! (ಸಾ)
-ವೆ ನಾನೆಂಬ ಭಯಪಡಬೇಡ! (ಯೋ)
-ಗಾಭ್ಯಾಸ ಮಾಡದಿರಲೇಬೇಡ!
ಶಿವನೇ ನೀನಾಗದಿರಬೇಡ!
ಮಯ ವ್ಯರ್ಥ ಕಳೆಯಬೇಡ!
ಬೇಡಿ ಕಾಡಿ ದುಃಖಿಯಾಗಬೇಡ! (ಸು)
-ಡ, ನಿರಂಜನಾದಿತ್ಯ ಕೈ ಬಿಡ!!!

ಅನ್ಯರೊಡವೆಗಾಶಿಸಬೇಡಿ! [ಧ]   5(2602)

-ನ್ಯರಾಗುವ ದಾರಿ ಬಿಡಬೇಡಿ!
ರೊಕ್ಕಕ್ಕಾಗಕ್ಕರೆ ತೋರಬೇಡಿ! (ಒ)
-ಡನಾಟಲ್ಪರದು ಮಾಡಬೇಡಿ!
(ಸೇ)ವೆ ಗುರುವಿನದು ಬಿಡಬೇಡಿ!
ಗಾಢಾಂಧಕಾರದಲ್ಲಿರ ಬೇಡಿ!
ಶಿವ, ಜೀವೈಕ್ಯ ಸುಳ್ಳೆನಬೇಡಿ!
ಜ್ಜನರನ್ನು ಪೀಡಿಸಬೇಡಿ!
ಬೇಡಿ, ಕಾಡಿ, ಉಡಿ ತುಂಬಬೇಡಿ! (ಹಾ)
-ಡಿ, ನಿರಂಜನಾದಿತ್ಯನ ಕೂಡಿ!!!

ಅನ್ಯಾವಲಂಬನದಿಂದತೃಪ್ತಿ! [ಸ]   3(1291)

-ನ್ಯಾಸ ಧರ್ಮದಿಂದ ಆತ್ಮತೃಪ್ತಿ! (ಅ)
-ವರಿವರ ಹಾರೈಸಲತೃಪ್ತಿ!
ಲಂಕೇಶ್ವರಾರಿಯಾಶ್ರಯತೃಪ್ತಿ!
ಗೆ ಬಗೆಯಾಸೆಯಿಂದತೃಪ್ತಿ! (ಅ)
-ನವರತ ಆತ್ಮಾನಂದ ತೃಪ್ತಿ! (ಅಂ)
-ದಿಂದು ಮುಂದೇನೆಂದಿದ್ದರತೃಪ್ತಿ!
-ದತ್ತನಿಷ್ಟವೆಂದರೆಲ್ಲಾ ತೃಪ್ತಿ! (ಭ್ರಾ)
-ತೃ ಪ್ರೇಮವಿಲ್ಲದಿದ್ದರತೃಪ್ತಿ! (ತೃ)
-ಪ್ತಿ, ಶ್ರೀ ನಿರಂಜನಾದಿತ್ಯ ಪ್ರಾಪ್ತಿ!!!

ಅನ್ಯೋನ್ಯತೆಯೇ ಶಾಂತಿಯ ಮೂಲ ಮಂತ್ರ! (ಕ)   6(4004)

-ನ್ಯೊಪದೇಶದಲ್ಲಿದೇ ಮೊದಲ ಮಂತ್ರ! (ಧ)
-ನ್ಯನಾದನನ್ಯೋನ್ಯತೆಯಿಂದ ಸೌಮಿತ್ರ!
ತೆಗಳಿಕೆ ಹೊಗಳಿಕೆ ತೂತು ಪಾತ್ರೆ! (ತಾ)
-ಯೇ ಈ ಶಾಂತಿ ನೀತಿಗೆ ಸ್ತೋತ್ರಾರ್ಹ ಪಾತ್ರ!
ಶಾಂಭವೀ, ಗಣೇಶಾನ್ಯೋನ್ಯತೆ ಪವಿತ್ರ!
ತಿಳಿಯಬೇಕೀ ತತ್ವ ಮಾನವ ಪುತ್ರ!
ಮ, ಸಾವಿತ್ರಿಯರ್ತೆರೆದಿಹರ್ನೇತ್ರ! (ತ್ರಿ)
-ಮೂರ್ತಿ ದತ್ತ ತೋರಿದನಿದ ಸರ್ವತ್ರ!
ಕ್ಷ್ಮೀ ನರಸಿಂಹರಲ್ಲಿಟ್ಟ್ರೂ ಸ್ವತಂತ್ರ!
ಮಂತ್ರ, ಯಂತ್ರ, ತಂತ್ರಕ್ಕಿದೇ ಮುಖ್ಯ ಸೂತ್ರ! (ಪಾ)
-ತ್ರನಿದಕ್ಕೆ ನಿರಂಜನಾದಿತ್ಯ ಪುತ್ರ!!!

ಅನ್ಯೋನ್ಯನುಕಂಪವಿರಬೇಕು! (ಮಾ)   4(1682)

-ನ್ಯೋಪದೇಶ ಕೇಳುತ್ತಿರಬೇಕು! (ಅ)
-ನ್ಯ ದೂಷಣೆ ಮಾಡದಿರಬೇಕು! (ಅ)
-ನುದಿನಾಭ್ಯಾಸಿಯಾಗಿರಬೇಕು!
ಕಂಡಲ್ಲೆಲ್ಲಾ ಓಡದಿರಬೇಕು!
ರಮಾತ್ಮ ಭಕ್ತಿ ಇರಬೇಕು!
ವಿಚಾರಶೀಲನಾಗಿರಬೇಕು! (ವ)
-ರ ಗುರು ಸೇವಾಳಾಗಿರಬೇಕು!
ಬೇಗನೇ ತನ್ನೂರು ಸೇರಬೇಕು! (ಬೇ)
-ಕು ನಿರಂಜನಾದಿತ್ಯ ಪರಾಕು!!!

ಅಪಖ್ಯಾತ ಆಪ್ತನಿಗೂ ಅಲಕ್ಷ್ಯ!   5(2990)

ತಿತತೋದ್ಧಾರಪಖ್ಯಾತಗೆ ಲಕ್ಷ್ಯ!
ಖ್ಯಾತಿ ಅವನಿಗೆ ಸದಾ ಅಲಕ್ಷ್ಯ!’
ನು, ಮನ, ಧನವನಿಗುಪೇಕ್ಷ್ಯ (ಲಿ)
-ಪ್ತನಾಗಿರುವುದವನಿಗುಪೇಕ್ಷ್ಯ!
ನಿಷ್ಠೆ ಅವನದು ಸತತಪೇಕ್ಷ್ಯ!
ಗೂನ್ಬೆನ್ನಿನ ಕುಬ್ಜೆಯ ಭಕ್ತ್ಯಪೇಕ್ಷ್ಯ!
ಪ್ಪಿಕೊಂಡ ಕೃಷ್ಣನ ಪ್ರೀತ್ಯಪೇಕ್ಷ್ಯ!
ಕ್ಷ್ಯವನ್ನಲಕ್ಷಿಸುವುದುಪೇಕ್ಷ್ಯ! (ಲ)
-ಕ್ಷ್ಯ ನಿರಂಜನಾದಿತ್ಯಗಾತ್ಮ ಲಕ್ಷ್ಯ!!!

ಅಪಚಾರ ಕೂಟ ಅನಾದರಕಟ್ಟ   1(131)

ಡುತಲಿದೆ ಮನ ಕೂಟದಾ ಕಷ್ಟ!
ಚಾಕರರಪಚಾರದಿಂದಾಗಿಕ್ಕೂಟ! (ಅ)
-ರಗದೆ ಅಜೀರ್ಣವಾದರೂ ತಿಕ್ಕಾಟ!
ಕೂಗಾಟ, ಹಾರಾಟ, ಓಡಾಟ, ಭಂಡಾಟ! (ಅ)
-ಟಕಿಸಿದನಟ್ಟಿದರೆ ಸಿಗ್ವುದಟ್ಟ!
ನಾದರವೊಂದೇ ಇದಕೆಲ್ಲಾ ಶ್ರೇಷ್ಠ!
ನಾಳೆ, ಮತ್ತೆನ್ನದಿರಬೇಕೀ ನಿರ್ದಿಷ್ಟ!
ಣಿದು ಸಾಯಬೇಕುಪವಾಸಾ ಕೂಟ!
ಗಳೆ ಮಾಡ್ಲಿ! ಬಿಡಬಾರದು ಹಠ!!
ಡೆಗಟ್ಟದಾ ಪಟ್ಟ ಸಿದ್ಧಿಪುದಿಷ್ಟ! (ಅ)
-ಟ್ಟ! ನಿರಂಜನಾದಿತ್ಯಗಿಟ್ಟರದಿಷ್ಟ!!!

ಅಪಚಾರವನುಪಚಾರವೆಂದರಿತು ನಿರ್ವಿಚಾರನಾಗಪ್ಪಾ!   2(720)

ರಮಾತ್ಮನೆಲ್ಲಕ್ಕೂ ಕಾರಣಕರ್ತನಾಗಿರುತಿರುವನಪ್ಪಾ!
ಚಾಡಿಮಾತುಗಳನೆಂದೆಂದಿಗೂ ಕೇಳದಿರುವವನಾಗಿರಪ್ಪಾ!
ಘುಪತಿ ರಾಘವ ರಾಜಾರಾಮ ಪತಿತ ಪಾವನನೆನ್ನಪ್ಪಾ!
ರ ಮಾರುತಿ ಬಲ ಭೀಮನಾಗಿರುವುದು ಶ್ರೀರಾಮನಿಂದಪ್ಪಾ!
ನುಡಿ, ನಡೆಗಳ ನಿರತ ಪರಿಶುದ್ಧವಾಗಿರಿಸಬೇಕಪ್ಪಾ!
ರನಿಂದೆಯಿಂದಾರಿಗೂ ಯಾವ ಲಾಭವೂ ಆಗದೆಂದರಿಯಪ್ಪಾ!
ಚಾತುರ್ಯದಿಂದ ಎಂದಿಗೂ ಮನಕೆ ಚಿರಶಾಂತಿ ದೊರಕದಪ್ಪಾ!
ಮಿಸಬೇಕು ಸತತವೀ ಮನಸು ಹರಿ ಭಜನೆಯಲಪ್ಪಾ!
ವೆಂಕಟರಮಣ ಸಂಕಟಹರಣನೆಂಬುದ ನಂಬಿ ಬಾಳಪ್ಪಾ!
ಶೇಂದ್ರಿಯಾಟದಲಿ ಜನ್ಮ ವ್ಯರ್ಥ ಹಾಳುಮಾಡದಿರ ಬೇಕಪ್ಪಾ!
ರಿಪುಗಳಾರದಿಂದನ್ಯ ಶತ್ರುಗಳು ಬೇರಿಲ್ಲವೆಂದರಿಯಪ್ಪಾ!
ತುರೀಯಾತೀತನಾಗಲಿದನೆಲ್ಲಾ ಜೈಸಲೇಬೇಕು ತಿಳಿಯಪ್ಪಾ!
ನಿತ್ಯ, ಸತ್ಯ, ಸಚ್ಚಿದಾನಂದ ಸ್ವರೂಪವೇ ತುರೀಯಾತೀತವಪ್ಪಾ! (ನಿ)
-ರ್ವಿಕಲ್ಪ, ನಿರಂಜನ ಪರಮಾತ್ಮನ ರೂಪವಿದೆಂದರಿಯಪ್ಪಾ!
ಚಾಮುಂಡಾಂಬೆ ಸತತವೀ ರೂಪಿನಲಿ ತಲ್ಲೀನಳಾಗಿಹಳಪ್ಪಾ!
ಮಣೀಯವಾಗಿಹವಳನುಗ್ರಹವೆಲ್ಲರಿಗಿರಬೇಕಪ್ಪಾ!
ನಾಥರಿಲ್ಲದನಾಥರನುದ್ಧರಿಪ ಜಗನ್ಮಾತೆಯವಳಪ್ಪಾ!
ರ್ವ ಬಿಟ್ಟವಳಡಿಗಳಿಗೆ ಶರಣಾಗದುಪಾಯವಿಲ್ಲಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯ ನಿತ್ಯವಳ ಮಡಿಲ ಮುದ್ದು ಮಗುವಪ್ಪಾ!!!

ಅಪಮಾನಪವಾದದಂಗಿ ನಿರ್ಮೋಹ ನಿಸ್ಸಂಗಿ!   1(42)

ರೇಚ್ಛಾ, ಸ್ವೇಚ್ಛಾ, ಪ್ರಾರಬ್ಧ ಫಲಪಮಾನದಂಗಿ!
ಮಾಯಾಜಾಲ ಹಾಕುವುದು ಅಪವಾದದ ಅಂಗಿ!
ರ, ನಾರಾಯಣನಾಗುವುದಕಿದೊಳ್ಳೆ ಅಂಗಿ!
ರಶಿವ ತಾನಾಗುವುದಕಿದುತ್ತಮದಂಗಿ!
ವಾಸನಾರಹಿತ ನಿಸ್ಸಂಗಕಿದು ಶಾಖದಂಗಿ!
ಯೆ, ಶಮೆಗಳಿಗಿದು ಗುರುಕೃಪೆಯ ಅಂಗಿ!
ದಂಭ, ದರ್ಪವಳಿದ ನಿರ್ಮೋಹಕೆ ಚಿಂದಿಯಂಗಿ!
ಗಿರಿ, ಗುಹೆಗಳ ಸೇರಲಿದು ವಿರಕ್ತಿಯಂಗಿ!
ನಿತ್ಯಾನುಷ್ಠಾನದಲಿರಿಸಲಿದು ರೇಷ್ಮೆಯಂಗಿ! (ಧ)
ರ್ಮೋಜ್ವಲನಕಿದುರಿ ಬಿಸಿಲ ಕಿರಣದಂಗಿ!
ರಯ ಭ್ರಮೆಯ ಹರಿಸಲಿದು ಮಂತ್ರದಂಗಿ!
ನಿರ್ವಿಷಯ ಪ್ರೇಮಕಿದು ಅನುಗ್ರಹದ ಅಂಗಿ! (ದು)
ಸ್ಸಂಘ ಬಿಡಿಸಲಿದು ಆಯುಧ ಕವಚದಂಗಿ!
ಗಿರಿಧರ, ನಿರಂಜನಗಿದು ಪ್ರೀತಿಯ ಅಂಗಿ!!!

ಅಪವಾದದಿಂದುಪಕಾರವಾಯಿತು!   4(1500)

ರಮಾತ್ಮ ಸೇವೆಯೊಂದೇ ಉಳಿಯಿತು!
ವಾಸನೆಗಳೆಲ್ಲಾ ತೊಳೆದು ಹೋಯಿತು!
ಮ, ಶಮಾದಿಗಳು ಬಲವಾಯಿತು! (ಸ)
-ದಿಂಬು ಸರ್ವದಾ ಲಭಿಸುವಂತಾಯಿತು!
ದುರ್ಜನ ಸಹವಾಸ ತಪ್ಪಿ ಹೋಯಿತು!
ದ್ಮಪ್ರಿಯನನುಗ್ರಹವುಂಟಾಯಿತು!
ಕಾಯದಭಿಮಾನ ನಿರ್ನಾಮವಾಯಿತು! (ವ)
-ರ ಗುರು ಸೇವಾಸಕ್ತಿ ನೂರ್ಮಡ್ಯಾಯಿತು!
ವಾಜ್ಮನಗಳವನಲ್ಲೈಕ್ಯವಾಯಿತು! (ಬಾ)
-ಯಿ ವೇದಾಂತದಲ್ಲಿ ಜಿಗುಪ್ಸೆಯಾಯಿತು!
ತುರಿಯಾತೀತ ನಿರಂಜನಾದಿತ್ಯಾಯ್ತು!!!

ಅಪೇಕ್ಷೆ, ಉಪೇಕ್ಷೆಗಳೆರಡೂ ಬೇಡ!   5(3057)

ಪೇಚಾಟದ ಸಂಸಾರದಲ್ಲೊದ್ದಾಡ್ಬೇಡ! (ರ)
-ಕ್ಷೆಗಾಗಿ ತಂತ್ರ, ಯಂತ್ರ ಮಾಡಿಸ್ಬೇಡ!
ತ್ತಮ ರಕ್ಷೆ “ಸದಾಜಪ”! ಬಿಡ್ಬೇಡ!
ಪೇಟೆ ಬೀದಿಯಲ್ಲಿ ವೃಥಾ ಓಡಾಡ್ಬೇಡ! (ದೀ)
-ಕ್ಷೆಯಾಗಿದೆಯೆಂದಹಂಕಾರ ಪಡ್ಬೇಡ!
ದ್ದಲವಿಲ್ಲದ ಸಾಧನೆ ಬಿಡ್ಬೇಡ! (ಹ)
-ಳೆಯ ಕೊಳೆಯ ತೊಳೆಯದೇ ಇರ್ಬೇಡ! (ಮ)
-ರ ಮರಕ್ಕೆ ನೆಗೆವ ಕಪಿಯಾಗ್ಬೇಡ! (ಉಂ)
-ಡೂಟ ಜೀರ್ಣವಾಗದೆ ಏನೂ ತಿನ್ಬೇಡ!
ಬೇಳೆ ಬೇಯದಿದ್ದಾಗ ಹುಳಿ ಹಿಂಡ್ಬೇಡ! (ಮೃ)
-ಡ ನಿರಂಜನಾದಿತ್ಯಗೆರಡೂ ಬೇಡ!!!

ಅಪೇಕ್ಷೆಯ ಪಕ್ಷ ನಿರೀಕ್ಷೆ, ಪರೀಕ್ಷೆ!   6(3714)

ಪೇಚಾಟ ತಂದಿಡುವುದು ನಿರೀಕ್ಷೆ! (ರ)
-ಕ್ಷೆ, ಶಿಕ್ಷೆಗಳ ತೀರ್ಮಾನಕ್ಕೆ ಪರೀಕ್ಷೆ!
ಜ್ಞ, ಯಾಗಗಳಿಗುಂಟೊಂದು ಅಪೇಕ್ಷೆ!
ರಮಾರ್ಥ ಸಿದ್ಧಿಗನಪೇಕ್ಷಾ ದೀಕ್ಷೆ!
ಕ್ಷಯಿಸಿದಾಗ ವಾಸನೆ ಕಾಮೋಪೇಕ್ಷೆ!
ನಿಯಮಬದ್ಧವಾಗಿರಬೇಕು ದೀಕ್ಷೆ!
ರೀತಿ, ನೀತಿಗಳ್ತಪ್ಪಿದಾಗ ದುರ್ಭಿಕ್ಷೆ! (ಶಿ)
-ಕ್ಷೆ ತಪ್ಪಿಸುವುದು ದತ್ತಾತ್ರೇಯ ರಕ್ಷೆ!
ರಮಾರ್ಥ ಸಾಧನೆಗೆ ಇರ್ಲೊಂದ್ನಕ್ಷೆ! (ನಿ)
-ರೀಕ್ಷೆ ವ್ಯರ್ಥವಾದಾಗಾಗ್ವುದು ಉಪೇಕ್ಷೆ! (ರ)
-ಕ್ಷೆ, ಶ್ರೀ ನಿರಂಜನಾದಿತ್ಯ ಸೇವಾದೀಕ್ಷೆ!!!

ಅಪ್ಪ ಕಾಶಿಗೆ, ಮಗ ಪಾಶಿಗೆ! (ತ)   6(4080)

-ಪ್ಪದು ಪ್ರಾರಬ್ಧವರಿಬ್ಬರಿಗೆ!
ಕಾಮ ಹರನ ಕಣ್ಣಿನಗ್ನಿಗೆ!
ಶಿವ ಭಕ್ತ ಶ್ರೀರಾಮ ಕೃಪೆಗೆ!
ಗೆರೆ ಮೀರಿದ್ರೆಲ್ಲಾ ದುರ್ಗತಿಗೆ!
ನನಕ್ಕಿದು ನಮ್ಮೆಲ್ಲರಿಗೆ!
ರ್ವ ಅಡ್ಡಿ ಕಾಶಿಯ ದಾರಿಗೆ!
ಪಾಪಿ ಹೋಗುವ ಯಮನೂರಿಗೆ!
ಶಿವಭಕ್ತಿ ದಾರಿ ಸರ್ವರಿಗೆ! (ಆ)
-ಗೆ, ನಿರಂಜನಾದಿತ್ಯನಂತಾಗೆ!!!

ಅಪ್ಪನಂತಾಗಬೇಕು ಮಗನೇ! (ಅ)   3(1333)

-ಪ್ಪಣೆ ಮೀರಬಾರದು ಮಗನೇ!
ನಂದ ಕಂದನಂತಿರು ಮಗನೇ!
ತಾಯಿ, ತಂದೆ ದೇವರು ಮಗನೇ!
ಟ್ಟಿ ಮಾಡು ಮನಸು ಮಗನೇ!
ಬೇಕೇನೆಂದವ ಬಲ್ಲ ಮಗನೇ!
ಕುಲತಿಲಕನಾಗು ಮಗನೇ!
ದ, ಮತ್ಸರ ಬೇಡ ಮಗನೇ!
ರ್ವವಿರಬಾರದು ಮಗನೇ (ನೀ)
-ನೇ ನಿರಂಜನಾದಿತ್ಯ ಮಗನೇ!!!

ಅಪ್ಪನಂತಿಪ್ಪುದು ಸುದರ್ಶನಪ್ಪಾ! (ಅ)   2(556)

-ಪ್ಪಣೆ ಪಾಲಿಪುದು ಸುದರ್ಶನಪ್ಪಾ!
ನಂದಕಂದಾನಂದ ಸುದರ್ಶನಪ್ಪಾ!
ತಿಳಿದುಳಿವದು ಸುದರ್ಶನಪ್ಪಾ! (ತ)
-ಪ್ಪ ಮಾಡದಿಪ್ಪದು ಸುದರ್ಶನಪ್ಪಾ!
ದುಸ್ಸಂಘ ದೂರದು ಸುದರ್ಶನಪ್ಪಾ!
ಸುಗುಣ ಭಾಂಡದು ಸುದರ್ಶನಪ್ಪಾ! (ಆ)
-ದರ್ಶದ ಬಾಳದು ಸುದರ್ಶನಪ್ಪಾ! (ದ)
-ರ್ಶನಾನಂದವದು ಸುದರ್ಶನಪ್ಪಾ!
ಶ್ವರವಲ್ಲದು ಸುದರ್ಶನಪ್ಪಾ! (ಅ)
-ಪ್ಪಾ ನಿರಂಜನಾದಿತ್ಯಾದರ್ಶನಪ್ಪಾ!!!

ಅಪ್ಪನಾ ಸ್ಥಾನಕ್ಕಧಿಕಾರಿ ಪುತ್ರ! (ಆ)   1(352)

-ಪ್ಪನಾದರ್ಶದಂತಿರಬೇಕಾ ಪುತ್ರ! (ಅ)
-ನಾಚಾರಿಯಾಸ್ಥಾನಕ್ಕಯೋಗ್ಯ ಪುತ್ರ!
ಸ್ಥಾನ ಬೆಳಗಿಪನು ಧರ್ಮ ಪುತ್ರ! (ಅ)
-ನವರತ ಸ್ವಕರ್ಮನಿಷ್ಠಾ ಪುತ್ರ! (ಅ)
-ಕ್ಕರೆಯಲಿಪ್ಪನಪ್ಪಂತಾ ಪುತ್ರ! (ಅ)
-ಧಿಕಾರ ಮನವಿಲ್ಲದಿಹಾ ಪುತ್ರ!
ಕಾಲ, ಧರ್ಮ, ಕರ್ಮ ಜ್ಞಾನಿ ಆ ಪುತ್ರ!
ರಿಪುಕುಲ ಕಾಲನಾ ಆರ್ಯ ಪುತ್ರ!
ಪುಣ್ಯಾಪುಣ್ಯಾತೀತನಾ ಗುರು ಪುತ್ರ!
ತ್ರಯಂಬಕ ನಿರಂಜನಾರ್ಕ ಪುತ್ರ!!!

ಅಪ್ಪನಿಗಾಗದ ಮನೆ ಮಗನಿಗೇಕಪ್ಪಾ? (ಅ)   1(423)

-ಪ್ಪನ ಇಷ್ಟದಂತೆ ಮಗನಿದ್ದಿರಬೇಕಪ್ಪಾ!
ನಿಜವಿದ ಮಗ ಮರೆಯದಿರಬೇಕಪ್ಪಾ!
ಗಾಡಿ, ಎತ್ತು ಎಳೆದ ಕಡೆ ಹೋಗುವುದಪ್ಪಾ!
ರ್ವದಿಂದೇನೇನೋ ಪ್ರಯೋಜನವಿಲ್ಲವಪ್ಪಾ!
ಶರಥನಿಷ್ಟ ರಾಮ ಸಲಿಸಿದನಪ್ಪಾ!
ಮತಾಶೆಗಳನೆಲ್ಲಾ ಆತ ಬಿಟ್ಟಿನಪ್ಪಾ!
ನೆಚ್ಚಿ, ಮೆಚ್ಚಿ ವನವಾಸ ಮಾಡಿದನಾತಪ್ಪಾ!
ರಣಕಾದರೂ ಸಿದ್ಧನಾಗಿದ್ಧಿದ್ದನಪ್ಪಾ!
ತಿಗೇಡಿನ ಬಾಳಿಗಿಂತ ಇದು ಲೇಸಪ್ಪಾ!
ನಿಜ ಸುಖವಿರದಿರೇಕೆ ಇರಬೇಕಪ್ಪಾ?
ಗೇಣುಹೊಟ್ಟೆಗಾಗಿ ನರಜನ್ಮವಲ್ಲವಪ್ಪಾ!
ಲಿಸಿಹನಿದ ಜಗಕೆ ಗುರುದೇವಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯಗಿದೊಂದೇ ಗುರಿಯಪ್ಪಾ!!!

ಅಪ್ಪನೆಂದಪ್ಪಿ ತಪ್ಪಬಾರದಯ್ಯಾ! [ಅ]   2(497)

-ಪ್ಪಣೆಯಾದಂತೆ ನಡೆಯಬೇಕಯ್ಯಾ!
ನೆಂಟ, ಭಂಟನೆಲ್ಲಾ ಅವ ತಾನಯ್ಯಾ! (ಆ)
-ದರಿಪವಗಸಡ್ಡೆ ಸಲ್ಲದಯ್ಯಾ! (ಒ)
-ಪ್ಪಿ, ತಪ್ಪಿದರದು ಅಶ್ರೇಯಸ್ಸಯ್ಯಾ! (ಆ)
-ತನನುರಾಗ ಹೋಗಬಾರದಯ್ಯಾ! (ಅ)
-ಪ್ಪ, ಶಿವ ಸ್ವರೂಪವೆಂದರಿಯಯ್ಯಾ!
ಬಾಯಿ ಬೆಲ್ಲದಿಂದೇನು ಸುಖವಯ್ಯಾ! (ಕ)
-ರ ಚರಣವನಿಗಾಗಿರಲಯ್ಯಾ! (ಆ)
-ದ ಮಾತಿನ ಕಥೆ ಈಗೇತಕಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ನಮ್ಮಪ್ಪಯ್ಯಾ!!!

ಅಪ್ಪನೆಂದೊಪ್ಪಿಕೋ ಅಮ್ಮನೆಂದಪ್ಪಿಕೋ! (ತ) !   2(878)

-ಪ್ಪದಪ್ಪನಿಷ್ಟದಂತೆ ಸದಾ ಇದ್ದುಕೋ!
ನೆಂಟರಿಷ್ಟರೆಲ್ಲಾತನೆಂದರಿತುಕೋ!
ದೊಡ್ಡವನೆಂಬಹಂಕಾರ ಕಳೆದುಕೋ! (ಅ)
-ಪ್ಪಿ ತಪ್ಪಿಂದ್ರಿಯ ವಶನಾಗದಿದ್ದುಕೋ!
ಕೋರಳಿಗುರುಳದೆಂದೆಚ್ಚರಿಸಿಕೋ!
ಮ್ಮನ ಸೇವೆ ಪ್ರೇಮದಿಂದ ಮಾಡಿಕೋ! (ಅ)
-ಮ್ಮನುಣಿಸಿದ್ದುದುಂಡಾನಂದದಿಂದಿದ್ದುಕೋ! (ಏ)
-ನೆಂದರೂ ಪ್ರತಿ ಮಾತನಾಡದಿದ್ದುಕೋ!
ಯಾಮಯಿಯವಳೆಂದು ನಂಬಿದ್ದುಕೋ! (ಅ)
-ಪ್ಪಿಕೊಂಡೆತ್ತಿಕೊಳ್ಳದಿರಳೆಂದಿದ್ದುಕೋ! (ಅ)
-ಕೋ! ನಿರಂಜನಾದಿತ್ಯಪ್ಪ ಬಂದನಕೋ!!!

ಅಪ್ಪಿಸಿಕೊಂಡು ತಾನಪ್ಪಿಕೊಳ್ಳದಿದ್ದ್ರದೆಂಥಾ ಪ್ರೀತಿ? (ಮು)   6(4124)

-ಪ್ಪಿನ ವರೆಗೂ ಹೀಗೇ ಆದರೆ ಅದೇಕೆ ಆ ಪ್ರೀತಿ?
ಸಿರಿಯರಸನಿಗಿರಬಾರದಿಂಥಾ ಸ್ವಾರ್ಥ ಪ್ರೀತಿ!
ಕೊಂಡಾಡಿ ಹಾಡಿದರೂ ತೋರಬಾರದೇ ತನ್ನ ಪ್ರೀತಿ? (ಕೊ)
-ಡುವ ಕೈ ಮೊಂಡಾದರೆ ಉಳಿಯದು ಅವನ ಖ್ಯಾತಿ!
ತಾಳ್ಮೆಗೂ ಇರಬೇಡವೇ ಅನಾಥನಿಗೊಂದು ಮಿತಿ?
ಶ್ವರದ ನರದೇಹಕ್ಕೆ ಹೀಗಾದರೇನು ಗತಿ? (ತ)
-ಪ್ಪಿ ದಾರಿ ಆಗದೇ ಇರದು ಅವನಿಗಧೋಗತಿ!
ಕೊರತೆಯಿದನ್ನು ಹೊತ್ತುಕೊಳ್ಳಲೇಬೇಕು ಶ್ರೀಪತಿ! (ಕ)
-ಳ್ಳ ಸುಳ್ಳರನ್ನಡಿಗಿಸದವನೆಂಥಾ ಸಭಾಪತಿ?
ದಿವ್ಯ ಜೀವನಕ್ಕೆಂದು, ಅದೆಂತಾಗುವುದು ಉನ್ನತಿ? (ಇ)
-ದ್ದ್ರದಕ್ಕೆ ಬೆಲೆ ಬೆಳಗಲೀಗ ಗುರುಮಂತ್ರ ಜ್ಯೋತಿ! (ಎಂ)
-ದೆಂದಿಗೂ ಅಚ್ಚಳಿಯದಿರಲಿ ಅದರ ಪ್ರಕ್ಯಾತಿ! (ಕ)
-ಥಾ ಶ್ರವಣ ಮಾತ್ರದಿಂದ ಉಲಿಯದದರ ಖ್ಯಾತಿ!
ಪ್ರೀತಿಯಲ್ಲಿ ಪ್ರೀತಿ ಬೆರೆತರೆ ಮಾತ್ರಾದರ್ಶ ಪ್ರೀತಿ! (ಇ)
-ತಿ ನಿರಂಜನಾದಿತ್ಯ, ದತ್ತಾತ್ರೇಯರಾದರ್ಶ ಪ್ರೀತಿ!!!

ಅಬ್ಬರಾರ್ಭಟವಿಲ್ಲದುಣ್ಣು ಹಬ್ಬದೂಟ! (ಇ)   5(2741)

-ಬ್ಬರನ್ಯಾಯ ಒಬ್ಬಗಾದಾಯಾಗ್ಬಾರ್ದಾ ಊಟ!
ರಾತ್ರಿ, ದಿನ ದುಡಿದು ತಯಾರಾಯ್ತಾ ಊಟ! (ನಿ)
-ರ್ಭಯವಾಗುಣಬೇಕೆಲ್ಲರಾ ರುಚಿಯೂಟ! (ಕಾ)
-ಟ ನಿವಾರಣೆ ಮಾಳ್ಪುದೀ ಪ್ರಸಾದದೂಟ!
ವಿಶ್ರಾಂತಿಪ್ರದವೀ ವಿಶ್ವಾಸಪೂರ್ಣದೂಟ! (ಅ)
-ಲ್ಲವಿದು ವಿಷ ಬೆರೆಸಿದ ಮೋಸದೂಟ!
ದುರ್ವಿಷಯಕ್ಕೆಳೆಯದೀ ನಿರ್ಮಲ ಊಟ! (ಹ)
-ಣ್ಣು ಹಂಪಲಿನೂಟ ದೈವೀಸಂಪತ್ತಿನೂಟ!
ರಿ, ಹರ, ಅಜರೊಂದಾಗಿ ಉಂಬ ಊಟ! (ಕೊ)
-ಬ್ಬ ಕರಗಿಸುವುದೀ ಧನ್ವಂತರಿಯೂಟ!
ದೂಷಿಸಬಾರ್ದನ್ಯರನ್ನುಂಡ ಮೇಲೀ ಊಟ! (ದಿ)
-ಟ ನಿರಂಜನಾದಿತ್ಯಾನಂದವೇ ಆ ಊಟ!!!

ಅಬ್ಬೆಯನಗಲಿದ ತಬ್ಬಲಿ ಮೇಕೆ! (ಎ)   1(128)

-ಬ್ಬೆಲದಾರಿಲ್ಲದಿದಿಲ್ಲಿ ಬಂತೇತಕೆ?
ತ್ನವಿಲ್ಲದಗೇ ಮನೆಯಾಗಬೇಕೆ?
ಡೆವಿಲ್ಲದಗೀ ಮನೆಯಾಗಬೇಕೆ?
ಗನಮಣಿಪೋದನು ಪಶ್ಚಿಮಕೆ! (ಆ)
-ಲಿಸದಿಹನಿನ್ನೂ ಮಾಲಿಕನದೇಕೆ?
ಣಿದು ಅಳುತಲಿದೆ ಮರಿ ಮೇಕೆ!
ಪ್ಪಿಸಿ ಹೋಯಿತೆತ್ತೆಂತೋ ತಾಯಿ ಮೇಕೆ! (ಇ)
-ಬ್ಬರ ಋಣವಿನ್ನೂ ಇರಬಾರದೇಕೆ?
ಲಿಪಿಗಾರನಗಿಷ್ಟು ಕಾಠಿಣ್ಯವೇಕೆ?
ಮೇಸ್ತ್ರಿಯ ಮರಿ ಹೋಯ್ತವನ ವಶಕೆ!
ಕೆಟ್ಟಿತೇ? ನಿರಂಜನಾದಿತ್ಯನಾ ಮೇಕೆ???

ಅಭಯ ಹಸ್ತ ಮಸ್ತಕದಲ್ಲಿಟ್ಟಾಗ!   6(4147)

ವಭಯ ಗೋಚರಿಸದಾಯಿತಾಗ!
ಮನ ಭೀತಿ ತಪ್ಪಿದಂತಾಯಿತಾಗ!
ರಿ, ಹರ, ಭೇದ ಕಾಣದಾಯಿತಾಗ!
ಸ್ತನ್ಯ ಪಾನ ಮಾಡುತ್ತಿರುವಂತಾಯ್ತಾಗ!
ಮತಾಹಂಕಾರವಿಲ್ಲದಾಯ್ತಾಗ!
ಸ್ತವನ ಕವನಕ್ಕಾರಂಭವಾಯ್ತಾಗ!
ರ್ಮಾಕರ್ಮ ವಿಕರ್ಮದರಿವಾಯಿತಾಗ!
ತ್ತಸ್ವರೂಪ ದರ್ಶನವಾಯಿತಾಗ! (ಕ)
-ಲ್ಲಿನ ಗೊಂಬೆ ತಾನಲ್ಲೆಂದಂತಾಯಿತಾಗ! (ಸು)
-ಟ್ಟಾಗ ಬೂದಿಯಾಗ್ವುದಿಲ್ಲೆಂದರಿತಾಯ್ತಾಗ! (ಖ)
-ಗ ನಿರಂಜನಾದಿತ್ಯ ನಾನಾದೆನಾಗ!!!

ಅಭಯಪ್ರದಾನದನುಭವವೆಂದಿಗಯ್ಯಾ?   1(406)

ರವಸೆಯ ನಂಬಿ ಬದುಕುತಿಹೆನಯ್ಯಾ!
ತ್ನ ನೀನು ಮಾಡಿಸಿದಂತಾಗುತಿದೆ ಅಯ್ಯಾ!
ಪ್ರತಿ ನಿಮಿಷವೂ ಪ್ರತ್ಸಾಹ ನೀಡಬೇಕಯ್ಯಾ!
ದಾತ ನೀನು ಉದಾಸೀನ ಮಾಡುಬಾರದಯ್ಯಾ!
ನಗೆ ನೀನಲ್ಲದಿನ್ಯಾರು ಗತಿ ಹೇಳಯ್ಯಾ!
ರ್ಶನಾನುಗ್ರಹಕಾಗಿ ಕಾದಿರುವೆನಯ್ಯಾ! (ಅ)
-ನುಸರಿಸಿಹೆನು ಪೂರ್ವಜರಾಚಾರವಯ್ಯಾ!
ಕ್ತಿ, ಭಾವ, ಪ್ರಜ್ವಲಿಸಬೇಕು ನಿನ್ನಿಂದಯ್ಯಾ! (ಅ)
-ವ ಠಾವಿನಲೆಂತಿರಬೇಕೋ ಅಂತಿಹೆನಯ್ಯಾ!
ವೆಂಕಟೇಶ ನೀನು ಸಂಕಟ ದೂರ ಮಾಡಯ್ಯಾ!
ದಿಗಂಬರ ಗುರು ಗಂಗಾಧರನು ನೀನಯ್ಯಾ! (ಅ)
-ಗಣಿತ ಗುಣಗಣ ಪ್ರಾಣ ಸಾಂಬಶಿವಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯ ನೀನೆಂದಿರುವೆನಯ್ಯಾ!!!

ಅಭಿರುಚಿಗೆ ತಕ್ಕಂತೆ ಕೂಟ!   6(3623)

ಭಿಕ್ಷುಕರ್ಭೋಜನದಲ್ಲಿ ಕೂಟ!
ರುದ್ರ ಭೂಮಿಯಲ್ಲಿ ನರಿ ಕೂಟ!
ಚಿತ್ರಕರ್ಕಲಾಶಾಲೆಯಲ್ಕೂಟ!
ಗೆಳೆಯರೇಕಾಂತದಲ್ಲಿ ಕೂಟ!
ಸ್ಕರರಣ್ಯಗಳಲ್ಲಿ ಕೂಟ! (ಚಿ)
-ಕ್ಕಂದಿನಲ್ಲೆಲ್ಲರಲ್ಲೊಡನಾಟ!
ತೆಪ್ಪಗಳಲ್ಲಿ ನೀರಲ್ಲೋಡಾಟ!
ಕೂಗು ಹಾಕ್ಯೆಲ್ಲರ ಸೇರ್ಸುವಾಟ! (ಕಾ)
-ಟ ನಿರಂಜನಾದಿತ್ಯಗೆ ಕೂಟ!!!

ಅಭ್ಯಾಸವೇ ಬಾಳಿನ ಸ್ವರೂಪ! (ಲ)   6(3871)

-ಭ್ಯಾನುಸಾರ ಪ್ರಾಪ್ತ ಈ ಸ್ವರೂಪ!
ರ್ವಕ್ಕೂ ಸಂಚಿತವೆಂಬ ನೆಪ!
ವೇದಾನುಷ್ಠಾನ ವಿಪ್ರ ಸ್ವರೂಪ!
ಬಾಳಿದರಿಂದ ಬ್ರಹ್ಮ ಸ್ವರೂಪ! (ಅ)
-ಳಿವಿಲ್ಲದ ಇದೇ ನಿಜ ರೂಪ!
ಶ್ವರವೆಲ್ಲಾ ಸ್ಥೂಲ ಸ್ವರೂಪ!
ಸ್ವಚ್ಛವಾಗಿದ್ದರೊಳ್ಳೇದೀ ರೂಪ!
ರೂಪ, ನಾಮಕ್ಕಾಧಾರಾತ್ಮ ರೂಪ! (ಶ್ರೀ)
-ಪತಿ ನಿರಂಜನಾದಿತ್ಯ ರೂಪ!!!

ಅಭ್ಯಾಸೀ! ನೀನಾಗು ಮಿತಭಾಷಿ! (ಅ)   4(1888)

-ಭ್ಯಾಗತರಾದರಿಸು ಸುಭಾಷಿ!
ಸೀತಾಪತಿಯತಿಥಿ ನಿರ್ದೋಷಿ!
ನೀಗಾಡು ಕಾಮ, ಕ್ರೋಧ ಹಿತೈಷಿ!
ನಾಸ್ತಿಕನಾಗ್ಬೇಡ ಸತ್ಯಾನ್ವೇಷಿ!
ಗುಣಾತೀತ ಸದ್ಗುರು ಹಿತೈಹಿ!
ಮಿಥ್ಯೈಹಿಕ ಸುಖ ಸತ್ಯಾನ್ವೇಷಿ!
ತ್ವಾರ್ಥ ಸಾಧಿಸು ಮಿತಭಾಷಿ!
ಭಾವ, ಭಕ್ತಿ ಬಲಿಸು ಸುಭಾಷಿ! (ಋ)
-ಷಿ, ನಿರಂಜನಾದಿತ್ಯ ನಿರ್ದೋಷಿ!!!

ಅಮನಸ್ಕನಾಗುವುದೆಂದಯ್ಯಾ?   1(387)

ನದಮಾಟ ಕಠಿಣವಯ್ಯಾ!
ಟೆನೆಮಾಡಿ ಕುಣಿವುದಯ್ಯಾ! (ತ)
-ಸ್ಕರನಂತೆ ವಂಚಿಪುದಿದಯ್ಯಾ!
ನಾಯಿಯಂತಮೇಧ್ಯಕೋಡ್ವುದಯ್ಯಾ!
ಗುರಿಯನು ಮರೆಯುವುದಯ್ಯಾ! (ಆ)
-ವುದು ಸುಖವೆಂದರಿಯದಯ್ಯಾ! (ಅ)
-ದೆಂಥಾ ಮಾಯಾಜಾಲ ನಿನ್ನದಯ್ಯಾ?
ಯಾನುಗ್ರಹ ಮಾಡಿ ಕಾಯಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಮನಯ್ಯಾ!!!

ಅಮೃತ ಕುಡಿದು ಅನೃತ ಆಡ್ಬಹುದೇನಯ್ಯಾ?   6(3764)

ಮೃತ್ಯುಂಜಯ ಶಿಕ್ಷಿಸದೆ ಎಂದಿಗೂ ಬಿಡನಯ್ಯಾ!
ಬ್ಬಲಿಯನ್ನು ತಬ್ಬಿಕೊಳುವುದು ಧರ್ಮವಯ್ಯಾ!
ಕುಚೇಷ್ಟೆ, ಕುಕಲ್ಪನೆ ಕಾರಣ ಪತನಕ್ಕಯ್ಯಾ!
ಡಿಕ್ಕಿ ಹೊಡೆದು ಸತ್ತರೆ ಸದ್ಗತಿಯಿಲ್ಲವಯ್ಯಾ!
ದುರ್ಬುದ್ಧಿ ಬಿಟ್ಟೀಗಲಾದರೂ ಸಜ್ಜನನಾಗಯ್ಯಾ!
ನವರತ ಸದ್ಗುರು ಪಾದಸೇವೆ ಮಾಡಯ್ಯಾ!
ನೃತ್ಯ, ನಾಟಕಾದಿಗಳ ಹುಚ್ಚು ಬಿಟ್ಟುಬಿಡಯ್ಯಾ!
ತ್ವ ಜೀವನದಿಂದ ಪರಮಾತ್ಮನಾಗೀಗಯ್ಯಾ!
ತ್ಮಾನಂದವೊಂದೇ ಶಾಶ್ವತವೆಂದು ತಿಳಿಯಯ್ಯಾ! (ಆ)
-ಡ್ಬಹುದು ಸಾವಿರ, ಒಂದಾದ್ರೂ ಮಾಳ್ಪವರಾರಯ್ಯಾ?
ಹುಡುಗಾಟಕ್ಕೆ ಗುಡುಗಾಟ ನಿಲ್ಲಲಾರದಯ್ಯಾ!
ದೇವರ ದಯೆಯಿಂದಲೇ ಕಷ್ಟ ತಪ್ಪಬೇಕಯ್ಯಾ!
ಯ, ವಿನಯದಿಂದವನ ಪಾರ್ಥನೆ ಮಾಡಯ್ಯಾ! (ಅ)
-ಯ್ಯಾ ನಿರಂಜನಾದಿತ್ಯ ಆಗ ಒಲಿಯುವನಯ್ಯಾ!!!

ಅಮೃತ ಕುಡಿಸುವಾ ತಾಯಿ ಬೇಕು!   6(3773)

ಮೃತ್ಯುಗೀವವಳೇಕೆ ಬೇಕು?
ನ್ನ ತಾ ತಿಳಿವಂತಾಗ್ಬೇಕು!
ಕುಲ, ಗೋತ್ರದಾಟ ಬಿಡ್ಬೇಕು! (ದು)
-ಡಿಮೆ ಫಲ ಕಾಣಲೇ ಬೇಕು!
ಸುಖ ಸ್ಥಿರವಾಗಿರಬೇಕು!
ವಾಸುದೇವ ತಾನಾಗಬೇಕು!
ತಾಯ್ಗೀತೆಯೆಂದರಿಯಬೇಕು! (ಬಾ)
-ಯಿ ಸದಾ ತೆರೆದಿರಬೇಕು!
ಬೇರಿನ್ನೇನೂ ಬೇಡೆನಬೇಕು! (ಬೇ)
-ಕು, ನಿರಂಜನಾದಿತ್ಯಾಗ್ಬೇಕು!!!

ಅಮೃತ ಕುಡಿಸ್ಲಾರೆಯಾದರೆ ಬೇಡ!   6(3439)

ಮೃತವಪ್ಪ ವಿಷಮಾತ್ರ ಕುಡಿಸ್ಬೇಡ!
ಪ್ಪುಗಳನ್ನು ಅಳಿಸದಿರಬೇಡ!
ಕುಲ, ಶೀಲ, ನಿನ್ನದುಳಿಸದಿರ್ಬೇಡ!
(ದು)-ಡಿಮೆ ನಿನಗಾಗಿ ಮಾಡಿಸದಿರ್ಬೇಡ!
(ಈ)-ಸ್ಲಾಗದ ಭವಸಾಗರದಲ್ಲದ್ಬೇಡ!
(ಕ)-ರೆದಾನಂದದಿಂದ ತೋರು ನಿನ್ನ ನಾಡಾ!
ಯಾಕೆನ್ನನ್ನಿಲ್ಲಿ ಮುಚ್ಚಬೇಕು ಕಾರ್ಮೊಡ?
ರ್ಶನಕ್ಕಿನ್ನಾದರೂ ತಡ ಮಾಡ್ಬೇಡ!
(ತೊ)-ರೆದು ಶ್ರೀಪಾದ ಜೀವಿಸುವುದೇ ಬೇಡ!
ಬೇರೇನನ್ನೂ ನೀನೆನಗೆ ಕೊಡಬೇಡ!
(ಗಂ)-ಡ ನಿರಂಜನಾದಿತ್ಯ ನೀನಾಗ್ದಿರ್ಬೇಡ!!!

ಅಮೃತ ಬರುವ ತನಕ ಮಥನ!   2(729)

ಮೃತ್ಯು ವಿಷಕಂಜಿ ಬಿಟ್ಟರೇ ಮಥನ?
ಡವೇಕೆಂದು ನಿಂದಿತೇನಾ ಮಥನ?
ಸವಳಿದರೂ ಸಾಗಿತು ಮಥನ! (ತಿ)
-ರುಪತೀಶನಿಷ್ಟದಂತಾಯ್ತು ಮಥನ!
ರ ಲಕ್ಷ್ಮಿ ಬಂದರೂ ಆಯ್ತು ಮಥನ!
ಣ್ಗದಿರನೆದ್ದರೂ ಆಯ್ತು ಮಥನ!
ತಾಶರಾಗದೆ ಗೈದರು ಮಥನ! (ಅ)
-ಕಳಂಕಮೃತ ಸಿದ್ಧಿಗಾಗಿ ಮಥನ!
ಹೇಶ್ವರಾನುಗ್ರಹದಿಂದಾ ಮಥನ! (ಪ)
-ಥ ವ್ಯತ್ಯಾಸ ಮಾಡದೆ ಮಾಡು ಮಥನ!
ರ ನಿರಂಜನಾದಿತ್ಯಪ್ಪ ಮಥನ!!!

ಅಮೃತಾ! ತೋರು ನೀನು ನಮ್ರತಾ!   4(2308)

ಮೃಡಾಣಿಯಂತಿರ್ಬೇಕು ಸತತಾ!
ತಾಳ್ಮೆಯಿಂದವಳು ಪೂಜ್ಯ ಮಾತಾ! (ವ್ರ)
-ತೋಪವಸಗಳ್ಗಧಿ ದೇವತಾ! (ಗು)
-ರು ಶಿವನಲ್ಲಿ ಪರವಶೆ ತಾ!
ನೀತಿ, ರೀತಿಲಾದರ್ಶ ವನಿತಾ! (ಅ)
-ನುದಿನ ಭಜಿಪಳ್ರಾಮ ಸೀತಾ! (ತ)
-ನಯರುದ್ಧಾಕ್ಕವಳ್ವಿಖ್ಯಾತ್ಯಾ! (ನ)
-ಮ್ರತೆಯಿಂದ ಬುದ್ಧಿ ಪ್ರಚೋದಿತಾ!
ತಾ, ನಿರಂಜನಾದಿತ್ಯ ನಮ್ರತಾ!!!

ಅಮೃತಾ! ನೀನಿರನವರತಾ || ಪ ||   1(164)

ಮೃತ ನೀನಲ್ಲ ಭಜಿಸಿರುತಾ || ಅ.ಪ ||
ತಾಳ, ಮೇಳ ಸರಿಯಾಗಿರುತಾ!
ನೀತಿಲೆನ್ನನನುಸರಿಸುತ || ೧ ||
ನಿಜದಲೆನ್ನನರಿತಿರುತ!
ಸವೆಲ್ಲರಿಗುಣಿಸಿರುತಾ || ೨ ||
ಡೆ, ನುಡಿ ಸರಿಪಡಿಸುತ!
ಡಲಿಗಾಶಿಸದೆ ಇರುತಾ || ೩ ||
ಮಣ ರಮಿಪನಿದನಾತಾ!
ತಾ! ನಿರಂಜನಾದಿತ್ಯ ವೀಣಾ ತಾ ೪

ಅಮ್ಮ ಸುಳ್ಳಾಡುವಳೇನಪ್ಪಾ? (ಬೊ)   5(2811)

-ಮ್ಮ ನೀನೆಂದು ತೂಗಿದ್ದಳಪ್ಪಾ!
ಸುಮ್ಮನಾದೆ ಕೇಳುತ್ತದಪ್ಪಾ! (ಸು)
-ಳ್ಳಾಡಿ ಲಾಭವೆನಗೇನಪ್ಪಾ? (ಮಾ)
-ಡು ನನ್ನನ್ನಮ್ಮನಂದಂತಪ್ಪಾ!
ಯಸ್ಸೆಷ್ಟಾದರೇನಾಯ್ತಪ್ಪಾ? (ಹ)
-ಳೇ ವಾಸನೆ ಹೋದರಾಯ್ತುಪ್ಪಾ!
ನ್ನೆಲ್ಲಾ ಭಾರ ನಿನಗಪ್ಪಾ! (ಅ)
-ಪ್ಪಾ ನಿರಂಜನಾದಿತ್ಯಾನಪ್ಪಾ!!!

ಅಮ್ಮನಂಥಾಪ್ತರಿನ್ಯಾರಿಹರು? [ತ]   4(2416)

-ಮ್ಮ ಸ್ವಾರ್ಥ ಬಿಟ್ಟವರ್ಯಾರಿಹರು!
ನಂಬಿದವರ್ಧನ್ಯರಾಗುವರು? (ವೃ)
-ಥಾಲಾಪಿಗಳೆಲ್ಲಾ ಸೋಲುವರು! (ಆ)
-ಪ್ತತೆಯ ಕಳೆದುಕೊಳ್ಳುವರು!
ರಿಪು ಸಮೂಹಕ್ಕಾಳಾಗುವರು!
ನ್ಯಾಯಬಾಹಿರರ್ತಾವಾಗುವರು! (ಪ)
-ರಿಪರ್ಯರಿಷ್ಟಕ್ಕೀಡಾಗುವರು! (ಅ)
-ಹರ್ನಿಶ್ಯಳಲಾರಂಭಿಸುವರು! (ಸೇ)
-ರು ನಿರಂಜನಾದಿತ್ಯಮ್ಮನೂರು!!!

ಅಮ್ಮಯ್ಯ! ಚಿರಕಾಲ ಬಾಳು ತಮ್ಮಯ್ಯಾ!   2(479)

(ಅ)-ಮ್ಮ, ಅಪ್ಪ, ನರಹರಿ ಗುರು ತಮ್ಮಯ್ಯಾ!
(ಅ)-ಯ್ಯಾ! ಭಜಿಸವನ ಸತತ ತಮ್ಮಯ್ಯಾ!
ಚಿತೆಗೊಡ್ಡುವೀದೇಹನಿತ್ಯ ತಮ್ಮಯ್ಯಾ!
ಕ್ತಬಲವೆಲ್ಲಾ ಕ್ಷಣಿಕ ತಮ್ಮಯ್ಯಾ!
ಕಾಲಚಕ್ರ ತಿರುಗುತಿದೆ ತಮ್ಮಯ್ಯಾ!
(ಅ)-ಲಕ್ಷ್ಯ ಮಾಡಬೇಡೊಡೆಯನ ತಮ್ಮಯ್ಯಾ!
ಬಾರಿ ಬಾರಿಗವಗೆ ಬಾಗು ತಮ್ಮಯ್ಯಾ!
(ಆ)-ಳು, ಕಾಳು ಮಾತ್ರವೇ ಬಾಳಲ್ಲ ತಮ್ಮಯ್ಯಾ!
ನ್ನಂತೆ ಎಲ್ಲರನು ನೋಡು ತಮ್ಮಯ್ಯಾ!
(ಸ)-ಮ್ಮತವಿತ್ತು ಸರಿಯಬೇಡ ತಮ್ಮಯ್ಯಾ!
(ಅ)-ಯ್ಯಾ! ನಿರಂಜನಾದಿತ್ಯಮ್ಮಯ್ಯ ತಮ್ಮಯ್ಯಾ

ಅಮ್ಮಾ!, ವಿಮಲ, ವಿಜಯ, ನಾಗಮ್ಮಾ! (ಅ)   1(82)

-ಮ್ಮಾ! ಜಯ, ಕಾಮಾಕ್ಷಿ, ಭಿಕ್ಷೆ ಹಾಕಮ್ಮಾ!
ವಿಶಾಲ, ಸುಮತಿ, ಶಕುಂತಲಮ್ಮಾ!
ಲಗಿರುವಿರೇಕೆ ಸುಂದರಮ್ಮಾ!
ಕ್ಷ್ಮಮ್ಮ, ದೇವಮ್ಮ, ಸರಸ್ವತಮ್ಮಾ!
ವಿಶಾಂತಿ ಸಾಕಿನ್ನು ಎದ್ದೇಳಿರಮ್ಮಾ!
ಗಲವಿನ್ನೂ ನಿಂತಿಲ್ಲವೇನಮ್ಮಾ!
ತಿಪತಿ ಅತ್ರಿಯ ತನಯಮ್ಮಾ!
ನಾಳೆ, ನೆನ್ನೆ ಅನ್ನದೆ ನೀಡಿರಮ್ಮಾ!
ಂಟಲೊಣಗಿ ಹಸಿದಿಹೆನಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯ ನಿಮ್ಮವಮ್ಮಾ!!!

ಅಯ್ದೆಯಲ್ಲವೇನೇ ನೀನು ಮುಗ್ಧೆ? [ಬಾ]   3(1203)

-ಯ್ದೆರೆಯ ಬೇಡಾಣ್ಮನೆದುರಯ್ದೆ!
ದುನಾಥ ಸ್ವರೂಪಾತನಯ್ದೆ! (ನ)
-ಲ್ಲನೇ ನಿನ್ನ ಸರ್ವ ಸೌಭಾಗ್ಯಯ್ದೆ!
ವೇದಕಾಲದ ಸ್ತ್ರೀ ನೀನಾಗಯ್ದೆ!
ನೇಮದಿಂದಾಗಲಿ ಸೇವೆಯಯ್ದೆ!
ನೀತಿ, ರೀತಿಗಾದರ್ಶಳಾಗಯ್ದೆ!
ನುಡಿ, ನಡೆಯೊಂದಾಗಬೇಕಯ್ದೆ!
ಮುನಿಜನರಾತಿಥ್ಯ ಮಾಡಯ್ದೆ! (ಮು)
-ಗ್ಧೆ, ನಿರಂಜನಾದಿತ್ಯಾತ್ಮಾಗಯ್ದೆ!!!

ಅಯ್ಯಪ್ಪ ಬಂದಿರುವನಿಲ್ಲಿ! (ಅ)   4(1749)

-ಯ್ಯನ ಚಿಂತನಾನಂದದಲ್ಲಿ! (ತ)
-ಪ್ಪನೆಣಿಸದಾರ ಮೇಲಿಲ್ಲಿ!
ಬಂಧು, ಬಳಗ ತಾನಾಗಿಲ್ಲಿ! (ಆ)
-ದಿತ್ಯನಮಲ ಜ್ಯೋತಿಯಲ್ಲಿ! (ಗು)
-ರು ಸೇವಾವಕಾಶವಿತ್ತಿಲ್ಲಿ! (ದೇ)
-ವ ಶ್ರೀ ರಂಗನಾಥನೂರಲ್ಲಿ!
ನಿಜಾನಂದಾನುಭವದಲ್ಲಿ! (ಎ)
-ಲ್ಲಿ? ನಿರಂಜನಾದಿತ್ಯನಲ್ಲಿ!!!

ಅಯ್ಯಪ್ಪನ ಸೇವೆ ಮಾಡಿ ಬಾರಪ್ಪಾ! (ಕೈ)    4(1561)

-ಯ್ಯನವನೆಂದೆಂದಿಗೂ ಬಿಡನಪ್ಪಾ! (ಇ)
-ಪ್ಪನವ ಶಬರಿಮಲೆಯಲ್ಲಪ್ಪಾ!
ಡೆದೇ ಬೆಟ್ಟವನ್ನೇರಬೇಕಪ್ಪಾ!
ಸೇವೆಯನವನದು ದುರ್ಲಭವಪ್ಪಾ! (ನಾ)
-ವೆಯವನು ಭವಸಾಗರಕ್ಕಪ್ಪಾ!
ಮಾರಹರ, ಹರಿಯಂಶವನಪ್ಪಾ! (ಅ)
-ಡಿಗಡಿಗವನನ್ನು ಭಜಿಸಪ್ಪಾ!
ಬಾಗವನ ಶ್ರೀಪಾದ ಪದ್ಮಕ್ಕಪ್ಪಾ! (ಸು)
-ರ, ನರೋರಗ ವಂದ್ಯನವನಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯಾತ್ಮವನಪ್ಪಾ!!!

ಅಯ್ಯೋಪಾಪವೆಂದಾಶ್ರಯ ಕೊಟ್ಟೆ! (ಬೈ)   6(3388)

-ಯ್ಯೋದಕ್ಕೆಲ್ರನ್ನೂ ಶುರುಮಾಡ್ಬಿಟ್ಟೆ!
ಪಾವನವಾಗಲೆಂದಿಚ್ಛೆಪಟ್ಟೆ!
ತಿತನಾಗಿ ನೀನೀಗ ಕೆಟ್ಟೆ!
ವೆಂಕಟೇಶನಿಷ್ಟತಿಳ್ಸಿಬಿಟ್ಟೆ!
ದಾರಿಸಂಕಟಕ್ಕೆ ಹಿಡಿದ್ಬಿಟ್ಟೆ!
ಶ್ರವಣ, ಮನನಕ್ಕಾಜ್ಞೆಕೊಟ್ಟೆ!
ಮ, ನಿಯಮವೆಲ್ಲಾ ಬಿಟ್ಬಿಟ್ಟೆ!
ಕೊಡ್ಬೇಕಾದದ್ದೆಲ್ಲವನ್ನೂ ಕೊಟ್ಟೆ! (ಕೆ)
-ಟ್ಟೆ, ನಿರಂಜನಾದಿತ್ಯನ ಬಿಟ್ಟೆ!!!

ಅರಳಿತೊಂದಂದದ ಗುಲಾಬಿ! (ಆ)   5(2760)

-ರ ಕೈಗೂ ಸಿಗಲಿಲ್ಲಾ ಗುಲಾಬಿ! (ಬಾ)
-ಳಿನಾನಂದ ಪಟ್ಟಿತಾ ಗುಲಾಬಿ!
(ಕೂ)ತೊಂದೆಡೆ ಧ್ಯಾನಿಸಿತಾ ಗುಲಾಬಿ!
ದಂಭಕ್ಕೆಡೆಗೊಟ್ಟಿಲ್ಲಾ ಗುಲಾಬಿ! (ಬಂ)
-ದ ದಾರಿ ಹಿಡಿಯಿತಾ ಗುಲಾಬಿ!
ತ್ತ ಗತಿಯೆಂದಿತಾ ಗುಲಾಬಿ!
ಗುರುತೇ ಹತ್ತದಾಯ್ತಾ ಗುಲಾಬಿ! (ಲೀ)
-ಲಾನಾಟಕಕ್ಕೆ ಸಾಕ್ಷೀ ಗುಲಬಿ! (ನಂ)
-ಬಿ ನಿರಂಜನಾದಿತ್ಯಾ ಗುಲಾಬಿ!!!

ಅರವತ್ತೆರಡರ ಶ್ರೀಧರ ಸೇವೆ!   2(962)

ಥದಲ್ಲೂರೂರು ಮೆರೆಸಿದ ಸೇವೆ!
ರ ಗುರುಭಕ್ತರ ಸುಯೋಗ ಸೇವೆ! [ಎ]
-ತ್ತೆತ್ತಿಂದ ಸಂದೇಶ ತಂದಾತ್ಮೀಯ ಸೇವೆ! (ತ)
-ರತರದ ಕಾರ್ಯಕ್ರಮಾರಾಮ ಸೇವೆ! (ಬ)
-ಡಬಗ್ಗರಿಗನ್ನ ವಸ್ತ್ರ ದಾನ ಸೇವೆ!
ವಿ, ಶಶಿಯರಚ್ಚುಮೆಚ್ಚಿನ ಸೇವೆ!
ಶ್ರೀಕರ ಲೋಕ ಕಲ್ಯಾಣ ಗುರು ಸೇವೆ!
ರ್ಮ, ಕರ್ಮಾಚರಣೆಯಾದರ್ಶ ಸೇವೆ!
ಘುವೀರನ ಭಜನಾನಂದ ಸೇವೆ!
ಸೇನಾನಾಯಕ ಶೇಷನುತ್ಸಾಹ ಸೇವೆ! (ಸೇ)
-ವೆ, ಶ್ರೀಧರ ನಿರಂಜನಾದಿತ್ಯ ಸೇವೆ!!!

ಅರವಿಂದ ಸಖಾನಂದ ನಿಂದೆಯಿಂದ!   1(99)

ವಿ ತೆರೆದೆನ್ನ ಅಂಧ ನಿಂದೆಯಿಂದ!
ವಿಂಧ್ಯಾದ್ರಿ ನಾನಾದಾನಂದ ನಿಂದೆಯಿಂದ!
ತ್ತನಾದಿತ್ಯನೆಂದಂದ ನಿಂದೆಯಿಂದ!
ತತವನ ಸಂಬಂಧ ನಿಂದೆಯಿಂದ!
ಖಾಸಾತ್ಮಜನೆಂಬ ಬಂಧ ನಿಂದೆಯಿಂದ!
ನಂಬಿಗೆಯ ಬಲ ಬಂಧ ನಿಂದೆಯಿಂದ!
ರ್ಶನಾನುಭವದಂದ ನಿಂದೆಯಿಂದ!
ನಿಂದೆಯೇ ಗುರುವೆಂಬಂದ ನಿಂದೆಯಿಂದ!
ದೆಸೆಗೇಡಳಿದಾನಂದ ನಿಂದೆಯಿಂದ!
ಯಿಂಬಿನಾತ್ಮಾರಾಮಾನಂದ ನಿಂದೆಯಿಂದ!
ತ್ತ ನಿರಂಜನಾನಂದ ನಿಂದೆಯಿಂದ!!!

ಅರಿ ವಾಯುಗಳಿಗೆ ಶ್ಯಾಮನ ಹರಿ ವಾಯು! (ಜೀ)   4(1699)

-ರಿಕಾದಿ ರಸಾಯನ ನಾಮದಾ ಹರಿ ವಾಯು!
ವಾತ, ಪಿತ್ಥ ಕತ್ತರಿಪಾ ದಿವ್ಯ ಹರಿ ವಾಯು!
ಯುಕ್ತೌಷಧ ಜಠರ ವ್ಯಾಧಿಗೀ ಹರಿ ವಾಯು!
ಗನಾದ್ಯೆಲ್ಲಾ ಲೋಕ ವ್ಯಾಪಕಾ ಹರಿ ವಾಯು! (ಆ)
-ಳಿನಿಂದರಸರ ಪರ್ಯಂತವಾ ಹರಿ ವಾಯು! (ಹ)
-ಗೆತನದ ರೋಗ ವಿನಾಶಕ್ಕೀ ಹರಿ ವಾಯು!
ಶ್ಯಾಮಸುಂದರ ಮನಮೋಹನಾ ಹರಿ ವಾಯು!
ಲ ನಿರ್ಮೂಲನಕ್ಕುಪಕಾರೀ ಹರಿ ವಾಯು!
ರ, ನಾರಿಯರಿಗೆಲ್ಲಾಧಾರೀ ಹರಿ ವಾಯು!
ರಿ, ಹರ, ಬ್ರಹ್ಮಾದಿಗಳೆಲ್ಲಾ ಹರಿ ವಾಯು! (ಗಿ)
-ರಿ, ನದಿ, ಕರಿ, ತುರಗವೆಲ್ಲಾ ಹರಿ ವಾಯು! (ಭ)
-ವಾಬ್ಧಿ ತಾರಕಾ, ಸುಖಕಾರಕಾ ಹರಿ ವಾಯು! (ಆ)
-ಯುರ್ವೇದಾತ್ಮಾ ನಿರಂಜನಾದಿತ್ಯ ಹರಿ ವಾಯು!!!

ಅರಿತವನಿವನಾಗಬೇಕಂತೆ!   4(1672)

ರಿವಾಜೆಂಬುದರುದ್ದೇಶವಿದಂತೆ!
ನು, ಮನದಿಂದಿವ ಹೊರಗಂತೆ!
ರ ಸದ್ಗುರು ಸ್ವರೂಪವಿದಂತೆ!
ನಿತ್ಯ ನೇಮ, ನಿಷ್ಠೆಗಳಿದಕಂತೆ!
ರ್ಣಾಶ್ರಮದಾತಂಕವಿಲ್ಲವಂತೆ!
ನಾಮ, ರೂಪಾತೀತ ನಮ್ಮಾತ್ಮನಂತೆ! (ತ್ಯಾ)
-ಗ ಬುದ್ಧಿಯಿದರ ಸಾಧನೆಗಂತೆ!
ಬೇಕಿದಕೆ ಸಜ್ಜನ ಸಂಗವಂತೆ! (ಏ)
-ಕಂಬರೇಶ್ವರಾ ದಿಗಂಬರನಂತೆ! (ಅಂ)
-ತೆ ನಿರಂಜನಾದಿತ್ಯನಿವನಂತೆ!!!

ಅರಿತು ಸೇವೆ ಮಾಡಬೇಕು! (ಬ)   3(1016)

-ರಿಯುಪಚಾರ ಬಿಡಬೇಕು! (ಮಾ)
-ತುಗಳು ಕಮ್ಮಿಯಾಗಬೇಕು!
ಸೇವಾತ್ಮ ಭಾವದಿಂದಾಗ್ಬೇಕು! (ಗೈ)
-ವೆನಾನೆಂಬ ಗರ್ವ ಸುಡ್ಬೇಕು!
ಮಾಧವನ ಧ್ಯಾನ ಸಾಗ್ಬೇಕು! (ಒ)
-ಡಲಿನಾಸೆ ನಿಲಿಸಬೇಕು!
ಬೇಸರವಿರದಿರಬೇಕು! (ಬೇ)
-ಕು, ನಿರಂಜನಾದಿತ್ಯಬೇಕು!!!

ಅರಿತುಕೋ! ನಡೆದುಕೋ ಆನಂದದಿದ್ದುಕೊ!!! (ಹ) !!   2(732)

-ರಿ ಹರರೆಲ್ಲಾ ನಿನ್ನೋಳಗೆಂದು ಅರಿತುಕೊ! (ಮಾ)
-ತು ಕಥೆಯಿಂದವರು ಸಿಗರೆಂದರಿತುಕೊ!
ಕೋಬ್ಬಿ ಕುಣಿದರಾನಂದವಲ್ಲೆಂದರಿತುಕೊ!
ಯ ವಿನಯದಿಂದೆಲ್ಲರಲಿ ನಡೆದುಕೊ! (ಪ)
-ಡೆದ ತಾಯ್ತಂದೆಯರಾಜ್ಞೆಯಂತೆ ನಡೆದುಕೊ!
ದುಷ್ಟ ಸಹವಾಸವಿಲ್ಲದಂತೆ ನಡೆದುಕೊ!
ಕೋಟ್ಟು ಕೆಟ್ಟೆನ್ನದೆಚ್ಚರದಿಂದ ನಡೆದುಕೊ!
ನಂದಕಂದನ ನೆನೆದಾನಂದದಿದ್ದುಕೊ!
ನಂಬಿ ಗುರು ಚರಣವನಾನಂದದಿದ್ದುಕೊ!
ತ್ತ ಭಜನೆ ನಿತ್ಯ ಮಾಡ್ಯಾನಂದದಿದ್ದುಕೊ!
ದಿವ್ಯಾತ್ಮ ಚಿಂತನೆಯಿಂದ ಆನಂದದಿದ್ದುಕೊ! (ಸ)
-ದ್ದು ಮಾಡದೆ ಒಂದೆಡೆ ಜಪಾನಂದದಿದ್ದುಕೊ! (ಅ)
-ಕೊ! ನಿರಂಜನಾದಿತ್ಯನಂತಾನಂದದಿದ್ದುಕೊ!!!

ಅರಿಯೋ ಶ್ರೀಹರಿಯ ನೀನರಿಯೋ! (ಪ)   5(3239)

-ರಿಪರಿ ಹೆಸರವಗೆಂದರಿಯೋ!
ಯೋಗೇಶ್ವರ ತಾನವನೆಂದರಿಯೋ!
ಶ್ರೀದೇವಿಗರಸವನೆಂದರಿಯೋ!
ರನ ಮೋಹಿನೀತನವನೆಂದರಿಯೋ! (ಅ)
-ರಿಕುಲಾಂತಕನವನೆಂದರಿಯೋ!
ದುವೀರಾ ರಾಧಾವರ! ಅರಿಯೋ!
ನೀಲಮೇಘಶ್ಯಾಮಾರಾಮ! ಅರಿಯೋ! (ತ್ರಿ)
-ನಯನನಿಷ್ಟಮೂರ್ತಿಯೆಂದರಿಯೋ! (ಹ)
-ರಿ ನಾರದನ ತಾತನೆಂದರಿಯೋ!
ಯೋಗಿ ನಿರಂಜನಾದಿತ್ಯೆಂದರಿಯೋ!!!

ಅರಿವಾಯ್ತು ಪೀಡೆಗೆ ಕಾರಣ!   5(3201)

ರಿಪುಗಳುಳಿದದ್ದೇ ಕಾರಣ!
ವಾತಾತ್ಮಜ ಬಾರದ್ದೇ ಕಾರಣ! (ಆ)
-ಯ್ತು ಬರಲ್ಕಾಲಾದಿತ್ಯ ಕಾರಣ!
ಪೀಡಾ ಪರಿಹಾರಕ್ಕದೇ ಬಾಣ! (ಹೆ)
-ಡೆಯೆತ್ತಲ್ಸುಟ್ಟುಹೋಗ್ವುದಾಕ್ಷಣ! (ಕಾ)
-ಗೆ, ಕೋಗಿಲೆಯನ್ನಟ್ಟಲ್ನಿತ್ರಾಣ!
ಕಾಲಕ್ಕಾಳೇನಲ್ಲ ಮುಖ್ಯ ಪ್ರಾಣ!
ಘುರಾಮ ಗೈವ ಸಂರಕ್ಷಣಾ! (ಗು)
-ಣ ನಿರಂಜನಾದಿತ್ಯಗೀಕ್ಷಣ!!!

ಅರಿವಿಲ್ಲದ ಮುಂಡಕ್ಕಿನ್ನೂ ಮೊಂಡಾಟವೇ?   4(1634)

ರಿವಾಜೆನ್ನ ಬೇಡೆಂದರಿನ್ನೂ ಮೊಂಡಾಟವೆ?
ವಿದ್ಯಾರ್ಥಿ ನೀನಾಗೆಂದರಿನ್ನೂ ಮೊಂಡಾಟವೇ? (ನ)
-ಲ್ಲನಲ್ಲೊಂದಾಗಿರೆಂದರಿನ್ನೂ ಮೊಂಡಾಟವೇ?
ತ್ತಜಪ ಮಾಡೆಂದರಿನ್ನೂ ಮೊಂಡಾಟವೇ?
ಮುಂಗೋಪವದೇಕೆಂದರಿನ್ನೂ ಮೊಂಡಾಟವೇ? (ಸ)
-ಡಗರ ಸಾಕಿನ್ನೆಂದರಿನ್ನೂ ಮೊಂಡಾಟವೇ? (ಇ)
-ಕ್ಕಿದ್ದನ್ನುಣ್ಣಬೇಕೆಂದರಿನ್ನೂ ಮೊಂಡಾಟವೇ?(ನಿ)
-ನ್ನೂರಿಗೇ ಹೋಗಿರೆಂದರಿನ್ನೂ ಮೊಂಡಾಟವೇ?
ಮೊಂಡಿ ಮುಂಡೇಕಾಗ್ವೆಂದರಿನ್ನೂ ಮೊಂಡಾಟವೇ? (ಓ)
-ಡಾಡಬೇಡಲ್ಲಿಲ್ಲೆಂದರಿನ್ನೂ ಮೊಂಡಾಟವೇ? (ನೆಂ)
-ಟ ಶ್ರೀರಾಮಗೆ ನೀನಾಗಿನ್ನೂ ಮೊಂಡಾಟವೇ?
ವೇದಾಂತಿ ನಿರಂಜನಾದಿತ್ಯನಾಗ್ಬೇಡವೇ???

ಅರಿಶಿನ ಹರಸುತ ಹಚ್ಚಿದಾಶೀರ್ವಾದ!   1(229)

ರಿವಿವಾರ ಸುಮಂಗಲಿಯರಿಗಾಶೀರ್ವಾದ!
ಶಿರ, ಹಣೆಗಿದ ತೀಡಿ ಮಾಡಿದಾಶೀರ್ವಾದ!
ರ್ತಆದಾಗ ಶ್ರೀಪಾದದಿಂದಾಶೀರ್ವಾದ!
ಸ್ತಪಾದಕ್ಕೆಲ್ಲಾ ತಿಕ್ಕಿ ಸ್ನಾನದಾಶೀರ್ವಾದ!
ಮಣಿಯರಿಗಿಂದಾನಂದದಾಶೀರ್ವಾದ!
ಸುಭೋಜ್ಯ ಪೊಂಗಲ್ಮರುದಿವಸಾಶೀರ್ವಾದ!
ರಣಿ ಕಿರಣ ಸುರಿದಾನಂದಾಶೀರ್ವಾದ!
ರಿದ್ರಾ ಕುಂಕುಮ ತಿಲಕದಿಂದಾಶೀರ್ವಾದ! (ಸ)
-ಚ್ಚಿದಾನಂದ ಗುರು ಕರುಣಿಸಿದಾಶೀರ್ವಾದ!
ದಾರಿ, ಧರ್ಮ, ಕರ್ಮ ಪಾಲನೆಯೆಂದಾಶೀರ್ವಾದ!
ಶೀಲ ಸರಳವಾಗಿರಬೇಕೆಂದಾಶೀರ್ವಾದ! (ಸ)
-ರ್ವಾತ್ಮ ಭಾವ ಬಲಿಯುತಿರಲೆಂದಾಶೀರ್ವಾದ!
ತ್ತ ನಿರಂಜನಾದಿತ್ಯನೊಂದೆಂದಾಶೀರ್ವಾದ!!!

ಅರು ದಶದೆರಡರೀ ರೂಪ!   2(808)

ರುಧಿರ, ಮಾಂಸದಸ್ಥಿರ ರೂಪ!
ತ್ತನಾಟಕಾಗಿರುವೀ ರೂಪ!
ಬರಿಗೊಲಿದಾನಂದ ರೂಪ! (ನಿಂ)
-ದೆ, ವಂದನೆಯಲಕ್ಷ್ಯದೀ ರೂಪ!
ತಿಪತಿಪಿತನಂಶ ರೂಪ!
ಮರುಧರನಾ ಶಿವರೂಪ!
ರೀತಿ, ನೀತಿಯಾದರ್ಶಸ್ವರೂಪ!
ರೂಪಾರೂಪವಿಲ್ಲದಾತ್ಮ ರೂಪ! (ದೀ)
-ಪ, ಶ್ರೀ ನಿರಂಜನಾದಿತ್ಯ ರೂಪ!!!

ಅರುಚಿಯಾಹಾರ ಗುರುಕೃಪೆ!   4(1458)

ರುಚಿ ಸಾಯಲಿಕ್ಕೀ ಕೃಪೆ!
ಚಿದಾನಂದಕ್ಕನುಕೂಲಾ ಕೃಪೆ!
ಯಾತನಾನಾಶಕ್ಕಿದೊಂದು ಕೃಪೆ! (ದೇ)
ಹಾಭಿಮಾನ ಹೋಗಲಿಕ್ಕೀ ಕೃಪೆ! (ವ)
-ರ ಗುರು ಧ್ಯಾನಾಭ್ಯಾಸಕ್ಕೀ ಕೃಪೆ!
ಗುಹಾನಂದ ಜೀವನಕ್ಕೀ ಕೃಪೆ! (ಕ)
-ರುಣೆಯೆಂಬರಿವವನ ಕೃಪೆ!
ಕೃತಕೃತ್ಯನಾಗಲಿಕ್ಕೀ ಕೃಪೆ (ಕೃ)
-ಪೆ ನಿರಂಜನಾದಿತ್ಯಾತ್ಮ ಕೃಪೆ!!!

ಅರುಣಾಚಲ ಭಕ್ತನಯ್ಯಾ! (ಗು)   2(568)

-ರುಸೇವಾ ಧುರೀಣಾತನಯ್ಯಾ! (ಗು)
-ಣಾತಿಶಯ ಬಣ್ಣಿಪೆನಯ್ಯಾ! (ಅ)
-ಚಲ ವಿಶ್ವಾಸಿಯವನಯ್ಯಾ! (ಅ)
-ಲಕ್ಷ್ಯವಗಿಹ ಜೀವನಯ್ಯಾ!
ಜನಾಸಕ್ತನವನಯ್ಯಾ! (ಭ)
-ಕ್ತನೀತಾದಿತ್ಯ ಭಕ್ತನಯ್ಯಾ!
ಯ, ವಿನಯಾ ದರ್ಶನಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯನಯ್ಯಾ!!!

ಅರುವತ್ತಾರಾರಂಭವಾಯ್ತೀಗ! (ಗು)   5(2542)

-ರುಕೃಪೆಯಾಗಲೆಲ್ಲರಿಗೀಗ! (ಜೀ)
-ವಭಾವ ಹರಿದು ಹೋಗಲೀಗ! (ದ)
-ತ್ತಾವತಾರಕ್ಕೆ ಶಿರಬಾಗೀಗ!
ರಾಗ, ದ್ವೇಷ ಬಿಟ್ಟುಬಿಡ್ಬೇಕೀಗ!
ರಂಗನಾಥ ಸಾಕ್ಷಿಯದಕೀಗ!
ಕ್ತಿ ನಿಶ್ಚಲವಾಗ ಬೇಕೀಗ!
ವಾದ, ಭೇದ ಹುಟ್ಟಡಗ್ಬೇಕೀಗ! (ಆ)
-ಯ್ತೀಶ್ವರನಿಂದಾಜ್ಞೆ ನಮಗೀಗ! (ಈ)
-ಗ ನಿರಂಜನಾದಿತ್ಯನೆಲ್ಲಾಗ!!!

ಅರ್ಕನುದಿಸದಿದ್ದರೇನು? (ತ)   4(1478)

-ರ್ಕದಿಂದಾಗುವ ಲಾಭವೇನು? (ತ)
-ನುಮಾನವಿನ್ನೂ ಹೋಗಿಲ್ಲೇನು?
ದಿವ್ಯ ಧ್ಯಾನವೆಲ್ಲಾದರೇನು?
ರ್ವೇಶನದನೊಪ್ಪನೇನು? (ಕಾ)
-ದಿದ್ದು ಕಾರ್ಯ ಸಾಧಿಸು ನೀನು! (ಇ)
-ದ್ದಣ್ಣು ತೃಪ್ತಿಯಿಂದ ನೀನು!
ರೇಗಿ ಹಾಳಾಗಬೇಡ ನೀನು! (ನೀ)
-ನು, ನಿರಂಜನಾದಿತ್ಯ ಸೂನು!!!

ಅರ್ಕೇಶ್ವರಗಂಬರಾಲಂಕಾರ! (ತ)   6(3941)

-ರ್ಕೇಶ್ವರನಿಗೆ ಸಭಾಲಂಕಾರ!
ಶ್ವಶುರ ಗೃಹಕ್ಕಳ್ಯಾಲಂಕಾರ!
ಘುಪತಿಗೆ ಧರ್ಮಾಲಂಕಾರ!
ಗಂಗೆಗೆ ಶಿವಲಿಂಗಾಲಂಕಾರ!
ಸವನಿಗೆ ಸೇವಾಲಂಕಾರ!
ರಾಸಲೀಲೆ ಕೃಷ್ಣಗಲಂಕಾರ!
ಲಂಬೋದರಗೆ ಇಂಬಲಂಕಾರ!
ಕಾಮಿನಿಗೆ ಕಾಮ ಅಲಂಕಾರ! (ಅ)
-ರ ನಿರಂಜನಾದಿತ್ಯಾಲಂಕಾರ!!!

ಅರ್ಜುನನಾರ್ಜುನೆ ಕದನದಲಿ ವೆಚ್ಚ! (ಅ)   1(61)

-ರ್ಜುನಗೆ ಪ್ರಸಾದವಾದರೂ ಮನಕಚ್ಚ!
ರಗೆ ಶಿವನಿತ್ತ ಪಾಶುಪತದಿಚ್ಛಾ!
ನಾರಾಯಣನ ಸಾರಥ್ಯ ಪರಮ ಉಚ್ಛಾ!
(ಆ) -ರ್ಜುನೆಯೆಲ್ಲಾ ಲೌಕಿಕವಾಗಿ ವ್ಯಥ್ಯ ವೆಚ್ಚ!
ನೆನೆ ಹರಿಯ, ಹರಿಗಾಗಿದುವೇ ಸ್ವಚ್ಛ!
ಳವಳ ಕಳೆವುದು ಸತ್ಸಂಘದಿಚ್ಛಾ!
ರ್ಪ, ದಂಭದ ಕರ್ಮದಿಂದ ಮನಕಚ್ಚ!
ಶ್ವರವಿದಿಹ ಸೌಖವೆಂಬುದೇ ಸ್ವಚ್ಛ!
ಣಿದರೂ ದುಡಿಯಬೇಕಿದಕಾಗಿಚ್ಛಾ!
ಲಿಂಗಭೇದವಿದಕೇನಿಲ್ಲವಿದು ಸವಚ್ಛ!
ವೆಗ್ಗಳದೀ ಭಾಗ್ಯಕಿರಬೇಕಾರ್ಜನೇಚ್ಛಾ! (ಆ)
-ಚ್ಚಳಿಯದ ನಿರಂಜನಾರ್ಜನೆ ಸ್ವಚ್ಛ!!!

ಅರ್ಥ ಮಾಡೋ ನನ್ನ, ಸ್ವಾರ್ಥ ಬಿಡೋ ನಿನ್ನ! [ವ್ಯ]   5(2857)

-ರ್ಥ ಹಾಳುಮಾಡಬೇಡವೋ ಜನ್ಮ ನಿನ್ನ!
ಮಾಡೋ ಭಕ್ತಿ ನನ್ನ, ಬಿಡೋ ಯುಕ್ತಿ ನಿನ್ನ! (ಹಾ)
-ಡೋ ಗೀತೋಕ್ತಿಯನ್ನ, ಬಿಡೋ ಖತಿಯನ್ನ!
ನ್ನ ನಿನ್ನ ಸಂಬಂಧಕ್ಕೆ ಇದು ಚೆನ್ನ!
(ತ)ನ್ನ ತಾನರಿಯದಿದ್ದರೆ ಬಹು ಬನ್ನ!
ಸ್ವಾಧೀನ ಮಾಡಿಕೋ ಇಂದ್ರಿಯವ ನಿನ್ನ! (ಸಾ)
-ರ್ಥಕವದರಿಂದೀ ನರಜನ್ಮ ನಿನ್ನ!
ಬಿರುಗಾಳಿ ಬೀಸುವುದಕ್ಕಿಂತ ಮುನ್ನ! (ಬಿ)
-ಡೋ ದ್ವೇಷಾಸೂಯೆಗಳನ್ನೀಗಲೇ ನಿನ್ನ!
ನಿನ್ನ ಹಿತೈಷಿ ನಾನೆಂದು ನಂಬು ನನ್ನ! (ನ)
-ನ್ನ ನಿರಂಜನಾದಿತ್ಯಾತ್ಮಾನಂದನನ್ನ!!!

ಅರ್ಥಕ್ಕಪಾರ್ಥವಾಗಿ ಅನರ್ಥ! (ವ್ಯ)   6(4371)

-ರ್ಥಕಾಲಕ್ಷೇಪದಿಂದ ಅನರ್ಥ! (ಠ)
-ಕ್ಕರಸಹವಾಸದಿಂದನರ್ಥ!
ಪಾನದ ಅಮಲಿನಿಂದ ಅನರ್ಥ! (ಅ)
-ರ್ಥದತಿಯಾಸೆಯಿಂದ ಅನರ್ಥ!
ವಾದ, ಭೇದಗಳಿಂದ ಅನರ್ಥ! (ಭೋ)
-ಗಿಯ ಜೀವನವೆಲ್ಲಾ ಅನರ್ಥ!
ನಂಗ ಸಂಗದಿಂದ ಅನರ್ಥ!
ಶ್ವರವ ನಂಬಿದರನರ್ಥ! (ಸಾ)
-ರ್ಥಕ ನಿರಂಜನಾದಿತ್ಯನರ್ಥ!

ಅರ್ಥವರಿತನರ್ಥದಿಂದ ಪಾರಾಗು! (ವ್ಯ)   3(1052)

-ರ್ಥ ಕಾಮ್ಯಾರ್ಥಿಯಾಗದೆ ಎದ್ದು ಪಾರಾಗು!
ರ ಗುರುರೂಪ ನಂಬಿ ಪಾರಾಗು! (ಹ)
-ರಿ ಹರ ಬ್ರಹ್ಮವದೆಂದಿದ್ದು ಪಾರಾಗು!
ನುಮನ ಪ್ರಾಣಾರ್ಪಿಸುತ ಪಾರಾಗು! (ತ್ರಿ)
-ನಯನನಾಶೀರ್ವಾದ ಹೊಂದಿ ಪಾರಾಗು! (ಅ)
-ರ್ಥನರ್ಥಕಾರಿಯೆಂದರಿತು ಪಾರಾಗು! (ಅ)
-ದಿಂಬಾಗಿಹಾತ್ಮ ಪ್ರೇಮಿಯಾಗಿ ಪಾರಾಗು!
ರ್ಶನವಿದೇ ಮುಕ್ತಿಯೆಂದು ಪಾರಾಗು!
ಪಾಪ ಪುಣ್ಯದಕಿಲ್ಲೆಂದು ಪಾರಾಗು!
ರಾಮದಾಸಾನಂದವಿದೆಂದು ಪಾರಾಗು! (ಬಾ)
-ಗು ನಿರಂಜನಾದಿತ್ಯನಾಗಿ ಪಾರಾಗು!!!

ಅರ್ಪಿಸಿದೆ ತನು, ಮನ, ಧನ, ನಾನು! (ತೋ)   6(3475)

-ರ್ಪಿ ಅನಾದರವನ್ನು ನನ್ನಲ್ಲಿ ನೀನು!
ಸಿಟ್ಟು ಮಾಡಲಪರಾಧ ನನ್ನಲ್ಲೇನು? (ತಂ)
-ದೆ, ತಾಯಿ, ಬಂಧು, ಮಿತ್ರ ನನಗೆ ನೀನು!
ತ್ವ ಚಿಂತನೆ ಮಾಡುತ್ತಿಹೆನು ನಾನು! (ಅ)
-ನುಪಮ ಕರುಣಾಸಾಗರನು ನೀನು!
ಲಿನವಾಸನೆಯುಳ್ಳವನು ನಾನು!
ಶ್ವರ ಸುಖದಾಸೆ ಕೀಳ್ಬೇಕು ನೀನು!
(ಅಂ)-ಧ ಕಾರಾವೃತನಾಗಿರುವೆನು ನಾನು!
ಭೋಮಣಿ ಜ್ಯೋತಿರಾತ್ಮರೂಪಿ ನೀನು!
ನಾನೂ, ನೀನೂ, ಒಂದಾಗಿರ್ಬೇಕೆಂಬೆ ನಾನು!
(ನೀ)-ನು, ನಿರಂಜನಾದಿತ್ಯಾನಂದ ಭಾನು!!!

ಅರ್ವತಾರರ ಮೊತ್ತವೀರಾರು! (ಸ)   5(2544)

-ರ್ವರಂತರ್ಯಾಮಿಯಾಗಿರ್ಪಾ ಗುರು! (ಹ)
-ತ್ತಾವತಾರವೆತ್ತಿದನಾ ಗುರು! (ಕ)
-ರ, ಚರಣಾದಿಂದ್ರಿಯಲ್ಲಾ ಗುರು! (ಹ)
-ರ, ಹರಿ, ಬ್ರಹ್ಮಾದ್ಯರೆಲ್ಲಾ ಗುರು!
ಮೊರೆಯಿಡಲೊಲಿವನಾ ಗುರು! (ಉ)
-ತ್ತಮಾತ್ಮ ಸ್ಥಿತಿಯವನಾ ಗುರು!
ವೀತರಾಗೀ ಯೋಗೀಶ್ವರಾ ಗುರು!
ರಾಮನಾಮಾರಾಮವೆಂಬಾ ಗುರು! (ಗು)
-ರು ನಿರಂಜನಾದಿತ್ಯನೂರ್ಸೇರು!!!

ಅರ್ವತಾರೀಗಿಲ್ಲರ್ವತ್ತೇಳಾಗಿಲ್ಲ! (ಓ)   5(2718)

-ರ್ವ ದೇವನೆಂಬುದಲ್ಲಗಳೆದಿಲ್ಲ! (ದ)
-ತ್ತಾತ್ರೇಯನವನೆಂಬುದು ಸುಳ್ಳಲ್ಲ!
ರೀತಿ, ನೀತಿ, ಗೀತೆ ಹೇಳಿದಂತೆಲ್ಲ! (ಬಾ)
-ಗಿ ಪೂಜಿಸ್ಬೇಕವ್ನ ಪಾದವನ್ನೆಲ್ಲ! (ಇ)
-ಲ್ಲ ಗರ್ವವನಲ್ಲೆಂದರಿಯಿರೆಲ್ಲ! (ಸ)
-ರ್ವರಂತರ್ಯಾಮ್ಯವನಾಗಿಲ್ಲದಿಲ್ಲ! (ಸ)
-ತ್ತೇನು, ಹುಟ್ಯೇನೆಂದಾತನ್ನುವುದಿಲ್ಲ! (ಕ)
-ಳಾನಿಧಿಯದೀಯುಗಾಯುಗವೆಲ್ಲ! (ಆ)
-ಗಿರ್ಲವನಂತವನ ಮಕ್ಕಳೆಲ್ಲ! (ಬ)
-ಲ್ಲ ನಿರಂಜನಾದಿತ್ಯ ದತ್ತನೆಲ್ಲ!!!

ಅರ್ವತ್ತಾರರ ಆರ್ಯೋಕ್ತಿ! (ಓ)   5(2540)

-ರ್ವ ದೇವರಲ್ಲಿರ್ಬೇಕ್ಭಕ್ತಿ! (ಹೊ)
-ತ್ತಾದ್ರೂ ಆಗ್ಬೇಕ್ನಿತ್ಯ ವೃತ್ತಿ! (ಪ)
-ರಮಾರ್ಥದಿಂದಾತ್ಮ ತೃಪ್ತಿ! (ವ)
-ರಗುರುಸೇವೆ ಸದ್ವೃತ್ತಿ!
ಗ್ಬೇಕದ್ರಿಂದ ನಿವೃತ್ತಿ! (ವೀ)
-ರ್ಯೋರ್ಧ್ವಮುಖವಾದ್ರೆ ಶಕ್ತಿ! (ಶ)
-ಕ್ತಿ ನಿರಂಜನಾದಿತ್ಯೋಕ್ತಿ!!!

ಅರ್ವತ್ತಾರರಾದೇಶಾಲಿಸಿರಿ! (ಸ)   5(2539)

ರ್ವ ಸಮನ್ವಯನುಸರಿಸಿರಿ! (ಕಿ)
-ತ್ತಾಡದೇ ಜೀವನ ಸಾಗಿಸಿರಿ! (ವ)
-ರ ಗುರುವಿನಾಜ್ಞೆ ಪಾಲಿಸಿರಿ!
ರಾಮಜಪ ಸದಾ ಸಾಧಿಸಿರಿ!
ದೇಶಭಾವವನ್ನು ವರ್ಜಿಸಿರಿ!
ಶಾಶ್ವತದಾತ್ಮನನ್ನೊಲಿಸಿರಿ! (ಮ)
-ಲಿನ ವಾಸನೆಯನ್ನೋಡಿಸಿರಿ!
ಸಿರಿಯರಸನ ಧ್ಯಾನಿಸಿರಿ! (ಹ)
-ರಿ, ನಿರಂಜನಾದಿತ್ಯರ್ಚಿಸಿರಿ!!!

ಅರ್ವತ್ತಾರರುದಯವಾಯ್ತು! (ಸ)   5(2537)

-ರ್ವರ ಕಾಲ್ಯಾಣಕ್ಕದೀಗಾಯ್ತು! (ದ)
-ತ್ತಾವತಾರದೆಂಬರಿವಾಯ್ತು! (ನಿ)
-ರತದಭ್ಯಾಸದಿಂದದಾಯ್ತು! (ಗು)
-ರು ಶಿವನಿಚ್ಛೆಯಂತದಾಯ್ತು!
ರ್ಶನಾನಂದವೆಲ್ಲರ್ಗಾಯ್ತು! (ಜ)
-ಯಘೋಷದಿಂದಜ್ಞಾನ ಹೋಯ್ತು! (ದೇ)
-ವಾದಿ ದೇವನೇ ಎಲ್ಲೆಲ್ಲಾಯ್ತು! (ಆ)
-ಯ್ತು, ನಿರಂಜನಾದಿತ್ಯೇರ್ಯಾಯ್ತು!!!

ಅರ್ವತ್ತೆರಡರ ಉದಯ! [ಸ]   2(806)

-ರ್ವರಿಗೂ ಆನಂದ ಸಮಯ! (ಎ)
-ತ್ತೆತ್ತಲೂ ನಿರಂಜನ ಮಯ!
ಮಿಸಲವನಲ್ಲಿ ಜಯ! (ಬ)
-ಡತನಕಾಗೇತಕ್ಕೆ ಭಯ?
ಘುನಾಥನಾತನಾಶ್ರಯ!
ಳಿಸದಾವ ತಾಪತ್ರಯ!
ತ್ತಗುರು ಕರುಣಾಮಯ! (ಜೀ)
-ಯ, ನಿರಂಜನಾದಿತ್ಯ ರಾಯ!!!

ಅರ್ವತ್ತೆರಡರ ನಿರಂಜನಾನಂದ! [ಸ]   2(807)

-ರ್ವರಂತರ್ಯಾಮಿಯಾಗಿಹೆನೆಂಬಾನಂದ! (ಎ)
-ತ್ತೆತ್ತಲೂ ವ್ಯಾಪಿಸಿರುವ ಬ್ರಹ್ಮಾನಂದ!
ಸ, ವಿರಸೆಲ್ಲಾ ಸಮರಸಾನಂದ! (ಬ)
-ಡವ, ಬಲ್ಲಿದರೆನ್ನದಭೇದಾನಂದ!
ಸನೆಯಲಿಹುದು ಭಜನಾನಂದ!
ನಿರತ, ನಿರ್ಮಲ ರವಿ ಪ್ರೇಮಾನಂದ!
ರಂಗನಾಥನಾಪ್ತೇಷ್ಟನೆಂಬಾತ್ಮಾನಂದ!
ನನ, ಮರಣ ದೂರಮರಾನಂದ!
ನಾದ, ಬಿಂದು, ಕಳಾತೀತತುಳಾನಂದ!
ನಂದ ಕಂದನ ಗೀತಾನುಭವಾನಂದ!
ತ್ತ ನಿರಂಜನಾದಿತ್ಯ ನಿತ್ಯಾನಂದ!!!

ಅರ್ವತ್ತೆರಡರ ಬಾಲ ರೂಪ! [ಸ]   2(809)

-ರ್ವಶಕ್ತ ವರಮಾತ್ಮ ಸ್ವರೂಪ! (ಎ)
-ತ್ತೆತ್ತಲೂ ತುಂಬಿಹೆ ನಿತ್ಯರೂಪ! (ವ)
-ರ ಗುರುದತ್ತನೆಂಬಿಷ್ಟ ರೂಪ! (ಮ)
-ಡದಿ ಮಾತಂಗಿಯಾರಾಧ್ಯ ರೂಪ! (ಅ)
-ರಸಿ ಸತ್ಯಭಾಮೆಗಾಪ್ತ ರೂಪ!
ಬಾನ್ಮಣಿ ವಂಶ ಶ್ರೀರಾಮ ರೂಪ! (ಬಾ)
-ಲ ಧೃವಗೊಲಿದ ಹರಿ ರೂಪ!
ರೂಪಾರೂಪವಿಲ್ಲದಾತ್ಮ ರೂಪ! (ದೀ)
-ಪ ಶ್ರೀ ನಿರಂಜನಾದಿತ್ಯ ರೂಪ!!!

ಅರ್ವತ್ತೆರಡರಂತರ್ವಾಣಿ! (ಈ)   2(804)

-ರ್ವರಿಲ್ಲೆಂಬದ್ವೈತಾಂತರ್ವಾಣಿ! (ಇ)
-ತ್ತೆತ್ತ ತಾನೆಂಬುವಂತರ್ವಾಣಿ! (ಇ)
-ರಲೀ ಜ್ಞಾನೆಲ್ಲರ್ಗೆಂಬ ವಾಣಿ! (ಬಿ)
-ಡಬೇಕೆಲ್ಲಾಸೆಯೆಂಬ ವಾಣಿ! (ನಿ)
-ರಂಜನನಿಂತೆಂಬಂತರ್ವಾಣಿ!
ಪವಿದಕಾಗೆಂಬ ವಾಣಿ! (ಗೀ)
-ರ್ವಾಣಿ ನಿರಂಜನಾಂತರ್ವಾಣಿ! (ತ್ರಾ)
-ಣಿ, ನಿರಂಜನಾದಿತ್ಯ ವಾಣಿ!!!

ಅರ್ವತ್ತೆರಡರಮೃತ ವಚನ! (ಸ)   2(805)

-ರ್ವ ಕಾರಣ ಕರ್ತ ನಿರಂಜನನ! (ಎ)
-ತ್ತೆತ್ತರಸುವುದೇತಕ್ಕ ಅವನ?
ಮಿಸುತೆಲ್ಲರೊಳಗಿರ್ಪವನ! (ತ)
-ಡ ಮಾಡದರಿತುಕೊಳ್ಳಿರವನ!
ಘುಪತಿ ರಾಘವನಾಗಿಹನ!
ಮೃತ್ಯುಂಜಯನಾ ಪರಮೇಶ್ವರನಾ!
ನುವಿನಾಶಾ ಪಾಶಳಿದವನ!
ರ ಭಕ್ತಿಯಿಂದರಿಯಿರವನ!
ಪಲ ಚಿತ್ತ ಬೇಡಿನ್ನನುದಿನ!
ಮೋ ನಿರಂಜನಾದಿತ್ಯಾಪ್ತಾನನ!!!

ಅರ್ವತ್ತೇಳರಲ್ಲಡಿಯಿಡುವೆ ನಾನು! (ಓ)   5(2716)

-ರ್ವ ದೇವ ಜಗತ್ತಿಗೆಲ್ಲವೆಂಬೆ ನಾನು! (ಮ)
-ತ್ತೇನ ಬೇಡದಿರವನನ್ನೆಂಬೆ ನಾನು! (ಕಾ)
-ಳ ಸಂತೆಗಳೇಳದಂತಾಗ್ಲೆಂಬೆ ನಾನು!
ಸ ವಿರಸವಾಗದಿರ್ಲೆಂಬೆ ನಾನು! (ಬ)
-ಲ್ಲವರ ಮಾತು ಬೆಲ್ಲವಾಗ್ಲೆಂಬೆ ನಾನು! (ನು)
-ಡಿದಂತೆ ನಡೆಯುವಂತಾಗ್ಲೆಂಬೆ ನಾನು! (ತಾ)
-ಯಿ, ತಂದೆ ಪ್ರತ್ಯಕ್ಷ ದೇವರೆಂಬೆ ನಾನು!(ದು)
-ಡುಕುವಭ್ಯಾಸ ಬಿಡಬೇಕೆಂಬೆ ನಾನು! (ಸೇ)
-ವೆಯಿಂದ ಸಂಚಿತ ನಾಶವೆಂಬೆ ನಾನು!
ನಾಮಜಪ ಮಾಡಲೇಬೇಕೆಂಬೆ ನಾನು! (ನೀ)
-ನು ನಿರಂಜನಾದಿತ್ಯನಾಗೆಂದೆ ನಾನು!!!

ಅರ್ವತ್ತೇಳರಾಗಮನವೇಕಾಯ್ತು? (ಅ)   5(2720)

-ರ್ವತ್ತಾರರ ಮೇಲದಿರಬೇಕಾಯ್ತು! (ಪ)
-ತ್ತೇದಾರಧ್ಯಾತ್ಮ ತತ್ವಕ್ಕೆ ಬೇಕಾಯ್ತು! (ಕೇ)
-ಳಲೀ ಸಂದೇಶ ಬರಲೇ ಬೇಕಾಯ್ತು! (ಆ)
-ರಾಮ ತಪಸ್ಸಿನಿಂದಾಗಬೇಕಾಯ್ತು! (ರಂ)
-ಗ ಸಾರಂಗರೈಕ್ಯ ಕಾಣಬೇಕಾಯ್ತು!
ದ, ಮತ್ಸರ ಮರ್ದಿಸಬೇಕಾಯ್ತು!
ಶ್ವರದಾಸೆ ನಶಿಸಬೇಕಾಯ್ತು!
ವೇದಾಂತ ಸಾರ ರೂಪಾಗಬೇಕಾಯ್ತು! (ಸಾ)
-ಕಾರ ದರ್ಶನ ಪಡೆಯಬೇಕಾಯ್ತು! (ಆ)
-ಯ್ತು ನಿರಂಜನಾದಿತ್ಯನ ಕಂಡಾಯ್ತು!!!

ಅರ್ವತ್ತೇಳು ಸಂದೇಶಾನುಗ್ರಹ! (ಸ)   5(2717)

-ರ್ವ ಕಲ್ಯಾಣಕ್ಕೀಶ್ವರಾನುಗ್ರಹ! (ಎ)
-ತ್ತೇನಾದ್ರನು ದತ್ತನಾನುಗ್ರಹ! (ಬಾ)
-ಳ್ರಮ್ಯಾಗ್ಲಿದು ಮಂಗಳಾನುಗ್ರಹ!
ಸಂಪತ್ಭಕ್ತಿಯಾಗ್ಲೆಂಬಾನುಗ್ರಹ!
ದೇವ ದೇಹವಲ್ಲೆಂಬಾನುಗ್ರಹ! (ಅ)
-ಶಾಪಾಶ ನಾಶಾಗ್ಲೆಂಬಾನುಗ್ರಹ! (ಮ)
-ನುಜನಜನಾಗ್ಲೆಂಬಾನುಗ್ರಹ! (ಉ)
-ಗ್ರ ಕೋಪ ಶಾಂತ್ಯಾಗ್ಲೆಂಬಾನುಗ್ರಹ! (ಸ್ನೇ)
-ಹ ನಿರಂಜನಾದಿತ್ಯಾನುಗ್ರಹ!!!

ಅರ್ವತ್ತೇಳೋಡುತ್ತೋಡುತಾ ಬಂತು! (ಸ)   5(2719)

-ರ್ವವೂ ಕಾಲಾಧೀನನ್ನುತ್ತಾ ಬಂತು! (ಹೊ)
-ತ್ತೇನೆಲ್ಲಾಭಾರವೆನ್ನುತ್ತಾ ಬಂತು! (ಖ)
-ಳೋನ್ಮತ್ತತೆ ಹೋಗ್ಲೆನ್ನುತ್ತಾ ಬಂತು! (ಗುಂ)
-ಡು, ಮದ್ದಿನ್ನು ಸಾಕೆನ್ನುತ್ತಾ ಬಂತು! (ದ)
-ತ್ತೋಪದೇಶವಿದೆನ್ನುತ್ತಾ ಬಂದು! (ಕೇ)
-ಡು ಮಾಡ್ಬೇಡನ್ಯರ್ಗೆನ್ನುತ್ತಾ ಬಂತು! (ಭ)
-ತ್ತಾದಿ ಧಾನ್ಯ ಹೆಚ್ಲೆನ್ನುತ್ತಾ ಬಂತು!
ಬಂಧು ಗೋವಿಂದನೆನ್ನುತ್ತಾ ಬಂತು! (ಬಂ)
-ತು ನಿರಂಜನಾದಿತ್ಯಾಗೀಗ್ಬಂತು!!!

ಅಲಕ್ಷ್ಯದಿಂದಾಪ್ತನ ನಿರ್ಗಮನ!   6(3695)

ಕ್ಷ್ಯ ಸರಿ ಇದ್ರೆ ಸಹಗಮನ! (ಸಾ)
-ಕ್ಷ್ಯನೇಕವಿದೆ ಅದಕ್ಕನುದಿನ! (ಬಂ)
-ದಿಂದುದ್ಧಾರ ಮಾಡ್ಬೇಕು ತರಳನ!
ದಾಸರ ದಾಸ ನೀನೆಂಬ ವಚನ! (ಆ)
-ಪ್ತನಿಗನುಭವವಾಗ್ಬೇಕೀ ದಿನ!
ಡೆ, ನುಡಿಯಂತಿದ್ದ್ರೆ ಪ್ರಯೋಜನ!
ನಿನ್ನಡಿಗೆನ್ನ ಅನಂತ ನಮನ! (ಸ್ವ)
-ರ್ಗ ಸುಖವನ್ನೂ ಹೇಸುವುದೀ ಮನ!
ದಾಂಧತೆಯಿಂದಿರ್ಬಾರ್ದು ಜೀವನ!
ಮೋ ನಿರಂಜನಾದಿತ್ಯ ಪಾವನಾ!!!

ಅಲೆಗಳಾರ್ಭಟ ಎಷ್ಟು ಹೊತ್ತು? (ಅ)   6(3536)

-ಲೆದಾಗ್ದೆ ಗಾಳಿ ಇರ್ವಷ್ಟು ಹೊತ್ತು!
ಟ್ಟಿ ಮುಟ್ಟಾಗಿರ್ವುದೆಷ್ಟು ಹೊತ್ತು? (ಗೋ)
-ಳಾಟನ್ನಕ್ಕಿಲ್ಲದಿರ್ವಷ್ಟು ಹೊತ್ತು! (ನಿ)
-ರ್ಭಯ ಆತ್ಮನಿಗೆ ಎಲ್ಲಾ ಹೊತ್ತು! (ನ)
-ಟ, ವಿಟರ್ಗೆ ಭಯ ಎಲ್ಲಾ ಹೊತ್ತು!
-ಎಡರ್ಗಂಜಬಾರದು ಯಾವತ್ತೂ! (ನಿ)
-ಷ್ಟುರ ಸ್ವಭಾವದಿಂದ ವಿಪತ್ತು!
ಹೊಡೆದಾಟ, ಬಡಿದಾಟಾಪತ್ತು! (ಹೊ)
-ತ್ತು, ನಿರಂಜನಾದಿತ್ಯ ಸಂಪತ್ತು!!!

ಅಲ್ಪ ಮಾನವನೇನು ಬಲ್ಲ ನರನ ಸ್ಥಾನ? [ಸ್ವ]   5(2927)

-ಲ್ಪವೂ ಅರ್ಥವಿಲ್ಲದಿಹುದವನ ಜೀವನ!
ಮಾಡುವುದೊಂದಾಡುವುದಿನ್ನೊಂದು ಪ್ರತಿದಿನ!
ಶ್ವರವೀ ದೇಹವೆಂಬುದರಿಯದಾ ಮನ!
ನಿತಾಸಕ್ತನಾಗಿ ವೆಚ್ಚ ಮಾಳ್ಪನು ಧನ!
ನೇಮ ನಿಷ್ಠೆಯಿಲ್ಲದ ಪಶು, ಪಕ್ಷಿ, ಜೀವನ! (ಅ)
-ನುಭವಿಗಳ ಮಾತವನಿಗಗ್ನಿಸಮಾನ!
ರಲೀಗಲಾದರೂ ಅವನಿಗೆ ಸುಜ್ಞಾನ! (ಎ)
-ಲ್ಲಿರಲ್ಲಿಹನು ಪರಮಾತ್ಮನೆಂಬಾತ್ಮಜ್ಞಾನ! (ಅ)
-ನವರತಾತ್ಮ ಚಿಂತನೆಯಿಂದಾತ ಪಾವನ! (ಪ)
-ರರವಹೇಳನಕ್ಕಲ್ಲ ನರನ ಜೀವನ!
ಮಿಸಬೇಕು ಸದ್ಗುರು ಪಾದಕ್ಕನುದಿನ!
ಸ್ಥಾನ ಮಾನಕ್ಕೆ ಭೂಷಣ ಸತ್ಪಾತ್ರಕ್ಕೆ! (ಜ್ಞಾ)
-ನ ಶ್ರೀ ನಿರಂಜನಾದಿತ್ಯನ ವರ ಪ್ರದಾನ!!!

ಅಲ್ಪರ ಸಂಗಭಿಮಾನ ಭಂಗ! (ಕ)   4(1501)

-ಲ್ಪನೆಗಳಿಂದೆಲ್ಲಾ ಶಾಂತಿ ಭಂಗ! (ಪ)
-ರಮಾರ್ಥಕ್ಕಿರಬೇಕು ಸತ್ಸಂಗ!
ಸಂಪತ್ತೆಂಬುದಾ ಸಜ್ಜನ ಸಂಗ (ರಂ)
-ಗ ನೀನಾಗು, ಬಿಟ್ಟನಂಗ ಸಂಗ! (ಸ್ವಾ)
-ಭಿಮಾನಿ ಬ್ರಹ್ಮಾನಂದಾ ಸಾರಂಗ!
ಮಾಯಾ, ಮೋಹ ನಿಸ್ಸಂಗಾ ಸಾರಂಗ!
ಲಿದಾಡಿ ಪಾಡಿದಾ ಗೌರಂಗ!
ಭಂಜನಾ, ತ್ರಿಲೋಚನಾ ಸಾರಂಗ! (ಖ)
-ಗ ನಿರಂಜನಾದಿತ್ಯ ಸಾರಂಗ!!!

ಅಲ್ಪರ ಸಂಘ ಅಭಿಮಾನ ಭಂಗ! [ಅ]   2(702)

-ಲ್ಪ ವಿಷಯ ಸಂಬಂಧ ಶಾಂತಿ ಭಂಗ! [ತ]
-ರ ತರಾಸೆಗಳಿಂದಾನಂದ ಭಂಗ!
ಸಂತತವಿರಬೇಕುತ್ತಮ ಸಂಘ!
ರ್ಷಣೆ ಇರುವುದೆಲ್ಲಾ ದುಸ್ಸಂಘ!
ವರಿವರಮಾತೆಲ್ಲಾ ದುಸ್ಸಂಘ! (ಆ)
-ಭಿನ್ನಾತ್ಮನ ಚಿಂತನೆಯೇ ಸತ್ಸಂಘ!
ಮಾನ, ಸ್ಥಾನವೆಲ್ಲಾ ಲೌಕಿಕ ರಂಗ!
ನ್ನದೆಂಬುದೆಲ್ಲಾ ಮಾಯಾ ತರಂಗ! (ಅ)
-ಭಂಗ, ನಿಸ್ಸಂಘ, ಸದ್ಗುರು ಶ್ರೀರಂಗ!
ತಿ ನಿರಂಜನಾದಿತ್ಯಾಂತರಂಗ!!!

ಅಲ್ಪಾವಧಿ ಶಕ್ತಿ ಭುಕ್ತಿ!   6(3448)

(ಕ)-ಲ್ಪಾದ್ಯತೀತ ಶಕ್ತಿ ಮುಕ್ತಿ!
ರಗುರು ಭಕ್ತಿ ಶಕ್ತಿ!
(ಅ)-ಧಿಕಾರ ಅಜ್ಞಾನಾಸಕ್ತಿ!
ರಣಶಕ್ತಿ ವಿರಕ್ತಿ!
(ಸಿ)-ಕ್ತಿದರಿಂದ ಶಿವಶಕ್ತಿ!
ಭುಜಬಲ ದೇಹಶಕ್ತಿ!
(ಶ)-ಕ್ತಿ ನಿರಂಜನಾದಿತ್ಯೋಕ್ತಿ!!!

ಅಲ್ಲಲ್ಲಿನದು ಅಲ್ಲಲ್ಲಿಗೆ! (ಎ)   4(1905)

-ಲ್ಲರಿಗಿದರರ್ಥರಿವಾಗೆ! (ಬಿ)
-ಲ್ಲಿಗೆ ಬಾಣೋಪಯೋಗವಾಗೆ!
ಲ್ಲಗೆ ನಲ್ಲೆ ನೆರವಾಗೆ!
ದುರ್ಬುದ್ಧಿ ಸದ್ಬುದ್ಧಿ ತಾನಾಗೆ!
ನಲನಿಂದಡಿಗೆಯಾಗೆ! (ಪು)
-ಲ್ಲ ಸದ್ವಿಚಾರಗಳಿಂದಾಗೆ! (ಬ)
-ಲ್ಲಿದ ಗುರುಕೃಪೆಯಿಂದಾಗೆ! (ಸೀ)
-ಗೆ ನಿರಂಜನಾದಿತ್ಯನಾಗೆ!!!

ಅಲ್ಲಿದ್ದಾಗಿಲ್ಲಿನ ಚಿಂತೆ! (ಇ)   2(918)

-ಲ್ಲಿದ್ದಾಗ ಅಲ್ಲಿನ ಚಿಂತೆ! (ಬಿ)
-ದ್ದಾಗೆದ್ದಾಗೊಂದೊಂದು ಚಿಂತೆ! (ಆ)
-ಗಿ ನದೀಗಿಲ್ಲದ ಚಿಂತೆ! (ಇ)
-ಲ್ಲಿನದಲ್ಲಿಲ್ಲದ ಚಿಂತೆ!
ಡೆವಾಗೋಡುವ ಚಿಂತೆ!
ಚಿಂತೆ, ಮನಕೆಲ್ಲಾ ಚಿಂತೆ! (ಮಾ)
-ತೆ, ನಿರಂಜನನಾದಿತ್ಯಂತೆ!!! ೯೧೯

ಅಲ್ಲಿನ ಮಾತಿಲ್ಲಾಡಬೇಡ! (ಇ)   4(2290)

-ಲ್ಲಿನ ಮಾತು ಅಲ್ಲಾಡಬೇಡ! (ದಿ)
-ನ, ರಾತ್ರಿ ಜಪ ಬಿಡಬೇಡ!
ಮಾಯೆಗೆ ಮರುಳಾಗಬೇಡ!
ತಿಕ್ಕಾಟಕ್ಕೆಡೆಗೊಡಬೇಡ! (ಅ)
-ಲ್ಲಾಡುವ ಮನೋಸ್ಥಿತಿ ಬೇಡ! (ಒ)
-ಡನಾಟಯೋಗ್ಯರದು ಬೇಡ! (ಕು)
-ಬೇರನಾಗಲೆತ್ನಿಸಬೇಡ! (ಗಂ)
-ಡ ನಿರಂಜನಾದಿತ್ಯಖಂಡ!!!

ಅಲ್ಲಿನದು ಇಲ್ಲಿ! ಇಲ್ಲಿನದು ಅಲ್ಲಿ! (ಇ)   1(182)

-ಲ್ಲಿರುವ ಗುರುದೇವನಿಹಲ್ಲೆಲ್ಲಿ!
ಡೆಯುವುದೆಲ್ಲಾ ಅವನಂತೆಲೆ

ಲ್ಲಿ!
ದುರಿತದೂರ ನೀ ಗುರುಕಾರ್ಯದಲ್ಲಿ!
ದರಿಯದಾಗಿದೆ ಕಳವಳದಲ್ಲಿ! (ಇ)
-ಲ್ಲಿ ವ್ಯವಸ್ಥೆಯಾಗುತಿದೆ ಜನರಲ್ಲಿ!
ದನುಭವಿಸಿದಾಗಾನಂದವಿಲ್ಲಿ! (ಇ)
-ಲ್ಲಿದೆಯೊಂದು ಸುಯೋಗ ಭಾವನೆಯಲ್ಲಿ!
ಯನಕಿದದೃಶ್ಯವಾಗಿಹುದಿಲ್ಲಿ!
ದುರ್ಭಾವವಳಿದಾಗಾನಂದವೆಲ್ಲೆಲ್ಲಿ!
ದಕಿರಬೇಕು ಸದಾ ಜಪದಲ್ಲಿ! (ಇ)
-ಲ್ಲಿಹ ನಿರಂಜನಾದಿತ್ಯಾ ರೀತಿಯಲ್ಲಿ!!!

ಅಲ್ಲಿಲ್ಲಲೆವವನಲ್ಲ ಸೂರ್ಯಪ್ಪಾ! (ಅ)   1(305)

-ಲ್ಲಿಲ್ಲಲೆವುದಿಳೆಯವಗಾಪಪ್ಪಾ! (ಅ)
-ಲ್ಲವಗುನ್ನತ ಸ್ಥಾನವಿಹುದಪ್ಪಾ! (ಅ)
-ಲೆವ ಮುಗಿಲು ಮುಚ್ಚಿರುವುದಪ್ಪಾ!
ರ ನಿರ್ಧರಾತ್ಮನಾಗಿಹೆನಪ್ಪಾ! (ಅ)
-ವನಾವರಣಕಂಜದವನಪ್ಪಾ! (ಅ)
-ನವರತದಾ ಸೇವೆ ನಿಸ್ವಾರ್ಥಪ್ಪಾ! (ಅ)
-ಲ್ಲಗಳೆವವರಾರು ಅರುಹಪ್ಪಾ!
ಸೂತ್ರಧಾರಿಯ ಪಾತ್ರವನದಪ್ಪಾ! (ಆ)
-ರ್ಯ ಋಷಿಗಳಿದ ಸಾರಿಹರಪ್ಪಾ! (ಅ)
-ಪ್ಪಾ! ನಿರಂಜನಾದಿತ್ಯದೇವರಪ್ಪಾ!!!

ಅಲ್ಲಿಲ್ಲಿ ಹೋದರಶಾಂತಿ ಕಾಣಮ್ಮಾ! (ಗ)   4(2030)

-ಲ್ಲಿಗಲ್ಲಿಯಲ್ಲೂ ಕುಚೋದ ನೋಡಮ್ಮಾ! (ಗು)
-ಲ್ಲಿನಲ್ಲಿ ನಿಜಸೊಲ್ಲು ಕೇಳದಮ್ಮಾ!
ಹೋಗ್ವಾಗಿದ್ದಾನಂದ ಬರ್ವಾಗಿಲ್ಲಮ್ಮಾ! (ಮಂ)
-ದಮತಿಗಳ ಸಂಗ ಬಿಡ್ಬೇಕಮ್ಮಾ! (ಊ)
-ರವರ ಮಾತಿನಿಂದೇನು ಲಾಭಮ್ಮಾ?
ಶಾಂತಿದಾತನೆಡೆ ಬಿಡಬೇಡಮ್ಮಾ! (ಭೀ)
-ತಿದಾಯಕ ಅಲ್ಪರೊಡನಾಟಮ್ಮಾ!
ಕಾಯುವವ ಗುರುದೇವನೊಬ್ಬಮ್ಮಾ! (ಪ್ರಾ)
-ಣನಾಥನವನೆಂದರಿತಿರಮ್ಮಾ! (ಅ)
-ಮ್ಮಾ ನಿರಂಜನಾದಿತ್ಯನವನಮ್ಮಾ!!!

ಅಲ್ಲಿಲ್ಲೋಡಾಡೀಗ್ಮಗ್ಬನೆಂದ್ಯಾ? (ಮ)   5(2641)

-ಲ್ಲಿಕಾರ್ಜುನನ ಕಾಣ್ಬಂದ್ಯಾ? (ಅ)
-ಲ್ಲೋಲಕಲ್ಲೋಲ ಮಾಡೀಗ್ಬಂದ್ಯಾ? (ಗಂ)
-ಡಾಗುಂಡಿ ಸುಖವಿಲ್ಲೆಂದ್ಬಂದ್ಯಾ? (ಮೋ)
-ಡೀಗಾರರ ಸಂಗ ಬಿಟ್ಬಂದ್ಯಾ? (ಬೇ)
-ಗ್ಮಡಿ ಮಾಡಿಕೊಳ್ಬೇಕೆಂದ್ಬಂದ್ಯಾ? (ನೆ)
-ನೆದ್ಪತಿ ಪಾದವನ್ನೀಗ್ಬಂದ್ಯಾ? (ದಿ)
-ಗ್ಬಂಧನವಾಗ್ಬಾರದೆಂದ್ಬಂದ್ಯಾ? (ವಂ)
-ದ್ಯಾ, ನಿರಂಜನಾದಿತ್ಯಂದ್ಬಂದ್ಯಾ???

ಅಲ್ಲೋಲ ಕಲ್ಲೋಲ ಮನಕ್ಕೀಗುಲ್ಲಾಸ! (ಅ)   6(4346)

-ಲ್ಲೋಟ, ಇಲ್ಲೋಟ ನಿಲ್ಲಲಾಗೀಗುಲ್ಲಾಸ!
ಕ್ಷ್ಯದಲ್ಲಿ ನಿಲುಗಡೆಯಿಂದುಲ್ಲಾಸ!
ನಕಾಭರಣದಾಸೆ ಸತ್ತುಲ್ಲಾಸ! (ಅ)
-ಲ್ಲೋ, ಇಲ್ಲೋ, ಎಲ್ಲಾದರಿದ್ರಾಯ್ತೆಂದುಲ್ಲಾಸ!
ಜ್ಜೆ, ಮಾನ, ಅವಮಾನ ಬಿಟ್ಟುಲ್ಲಾಸ!
ದ, ಮತ್ಸರ, ಲೋಭವಿಲ್ಲದುಲ್ಲಾಸ!
ಶ್ವರ ದೃಕ್ದೃಶ್ಯವೆಂದರಿತುಲ್ಲಾಸ! (ಉ)
-ಕ್ಕೀಗ ಹೊಮ್ಮುತಿದೆ ಆತ್ಮಾನಂದೋಲ್ಲಾಸ!
ಗುರು ಸೇವೆ ಸಾರ್ಥಕವಾಯ್ತೆಂದುಲ್ಲಾಸ (ಚೆ)
-ಲ್ಲಾಟ ಮಾಯೆಯದ್ದು ತಪ್ಪಿತೆಂದುಲ್ಲಾಸ!
ವಿತೃ ನಿರಂಜನಾದಿತ್ಯಗುಲ್ಲಾಸ!!!

ಅಲ್ಲೋಲ ಕಲ್ಲೋಲಲೆಗಳಿಂದ ಪಾರು! (ತ)   4(1426)

-ಲ್ಲೋಲಾಂತರಂಗರಿಷ್ಟಗಳಿಂದ ಪಾರು! (ಸ)
-ಲಸಲಕ್ಕೂ ನಿಮಿಷಾರ್ಧದಲ್ಲಿ ಪಾರು!
ರುಣಾಮಯನ ಕೃಪೆಯಿಂದ ಪಾರು! (ತ)
-ಲ್ಲೋಪವಾದರೆಂದಿಗೂ ಆಗದು ಪಾರು! (ಬ)
-ಲವಾದ ಭಕ್ತಿಯಿಂದಾಗುವುದು ಪಾರು! (ಅ)
-ಲೆದಾಟ ತಪ್ಪಿಸಿ ಮಾಳ್ಪುದು ಪಾರು!
ರ್ವನಾಶವಾಗದಾಗದೆಂದೂ ಪಾರು! (ಕಾ)
-ಳಿಂದ ಮರ್ದನನ ಸೇವೆಯಿಂದ ಪಾರು! (ಪಾ)
-ದ ಭಜನೆಯಿಂದ ದುಃಖದಿಂದ ಪಾರು!
ಪಾಪಪುಣ್ಯಾದಿ ಬಂಧನದಿಂದ ಪಾರು! (ಪಾ)
-ರು ನಿರಂಜನಾದಿತ್ಯನಿಂದೆಲ್ಲಾ ಪಾರು!!!

ಅಳತೆಯಿಲ್ಲದ ವ್ಯಾಪಾರಕ್ಕುಳಿತಾಯವಿಲ್ಲ! [ಬ]   4(2346)

-ಳಸಬೇಕು ಮಾನ್ಯವಾದಳತೆ ಪಾತ್ರೆಗಳೆಲ್ಲ! (ಸಂ)
-ತೆಯಲ್ಲಾದರೂ ನಿಶ್ಚಿಂತೆಯಿಂದಿರಲಿಕ್ಕಿದೆಲ್ಲ! (ಬಾ)
-ಯಿ, ಕೈಗಳ ಶುದ್ಧವಾದರಾರಿಗೂ ಲಾಭವಿಲ್ಲ! (ಚಿ)
-ಲ್ಲರೆ ವ್ಯಾಪಾರಿಗಳೂ ಗಮನಿಸಬೇಕಿದೆಲ್ಲ!
ಡ್ಡರಾದರೂ ಮೋಸ ಹೋಗದಂತಿರಬೇಕೆಲ್ಲ!
ವ್ಯಾಜ್ಯವಿಲ್ಲದೇ ವ್ಯವಹಾರ ನಡೆಸಬೇಕೆಲ್ಲ!
ಪಾಪ ಭೀತಿಯಿಲ್ಲದಾರ್ಜನೆಯಿಂದ ಸುಖವಿಲ್ಲ! (ಪ)
-ರಮಾರ್ಥ ಸಾಧಕರಿಗಾರದೇನೂ ಭಯವಿಲ್ಲ! (ಸಿ)
-ಕ್ಕುವಾದಾಯಲ್ಪವಾದರೂ ಅವರತೃಪ್ತರಲ್ಲ! (ತಾ)
-ಳಿದವ ಬಾಳ್ಯಾನೆಂಬುದವರ ಸಿದ್ಥಾಂತವೆಲ್ಲ!
ತಾಳ್ಮೆಯೇ ಅವರ ಕ್ಷೇಮನಿಧಿ! ತಿಳಿಯಿರೆಲ್ಲ! (ಮಾ)
-ಯ, ಮಂತ್ರಗಳ ಹುಚ್ಚು ಅವರಿಗೆಳ್ಳಷ್ಟೂ ಇಲ್ಲ!
ವಿಕಲ್ಪದಿಂದವರ್ವಿರೋಧ ಸಾಧಿಸುವುದಿಲ್ಲ (ಘು)
-ಲ್ಲ, ನಿರಂಜನಾದಿತ್ಯನಾಗಲ್ಕಗತ್ಯವಿದೆಲ್ಲ!!!

ಅಳಿಯದು ಸತ್ಯ, ಉಳಿಯದು ಮಿಥ್ಯ! (ಹೂ)   4(2483)

-ಳಿಟ್ಟು ಕೊಳೆಸದಂತಿರುವುದು ಸತ್ಯ! (ಜ)
-ಯ, ಅಪಜಯಾದಿ ದ್ವಂದ್ವವೆಲ್ಲಾ ಮಿಥ್ಯ!
ದುಷ್ಟ ದಾನವಧ್ವಂಸಿ ಸದ್ಗುರು ಸತ್ಯ!
ಮಸ್ತ ಜಾತಿ, ಮತಾಚಾರವೂ ಮಿಥ್ಯ! (ಅ)
-ತ್ಯಮ್ಯೂಲ್ಯ ನಿಶ್ಚಲಾತ್ಮಾನಂದವೇ ಸತ್ಯ!
ದಾನಾಪಾನಾದಿ ಪ್ರಾಣವೆಲ್ಲಾ ಮಿಥ್ಯ! (ಆ)
-ಳಿ, ಬಾಳ್ಯಳಿದವರಂತರಾತ್ಮ ಸತ್ಯ! (ಪ್ರಾ)
-ಯ, ವೃದ್ಧಾಪ್ಯಾದ್ಯವಸ್ಥೆಗಳೆಲ್ಲಾ ಮಿಥ್ಯ!
ದುರ್ವಿಷಯ ಲೇಪವಿಲ್ಲದಾತ್ಮ ಸತ್ಯ!
ಮಿತಿಯಿಲ್ಲದ ಸಮಿತಿಗ್ಳೆಲ್ಲಾ ಮಿಥ್ಯ! (ಮಿ)
-ಥ್ಯ, ಸತ್ಯಾತ್ಮ ನಿರಂಜನಾದಿತ್ಯ ಸತ್ಯ!!!

ಅಳಿಯನದೇಕಮ್ಮಾ ಗೆಳೆಯ? (ಚ)   4(2491)

-ಳಿ, ಮಳೆಗಂಜಳಿಯಾ ಗೆಳೆಯ! (ಕಾ)
-ಯ ಮೋಹಳಿದಳಿಯಾ ಗೆಳೆಯ! (ಆ)
-ನತೋದ್ಧಾರನಳಿಯಾ ಗೆಳೆಯ!
ದೇವನಾದವಳಿಯಾ ಗೆಳೆಯ!
ಪಟಾತೀತಳಿಯಾ ಗೆಳೆಯ! (ಅ)
-ಮ್ಮಾನೆಂಬಾತ್ಮನಳಿಯಾ ಗೆಳೆಯ! (ಹ)
-ಗೆತನ ಬಿಟ್ಟಳಿಯಾ ಗೆಳೆಯ! (ಇ)
-ಳೆಯಧಿನಾಥಳಿಯಾ ಗೆಳೆಯ! (ಪ್ರಿ)
-ಯ, ನಿರಂಜನಾದಿತ್ಯಾ ಗೆಳೆಯ!!!

ಅಳಿಯಾ ನರಸಪ್ಪಯ್ಯಳಿಯ! [ಗಾ]   4(2316)

-ಳಿ, ಮಳೆಗಂಜದವನಳಿಯ!
ಯಾತ್ರಾ ಕ್ಷೇತ್ರಪ್ರಿಯನವಳಿಯ!
ಶ್ವರಕ್ಕಾಶಿಸದವಳಿಯ! (ವ)
-ರ ಗುರು ಸ್ವರೂಪ ತಾನಳಿಯ!
ಮದರ್ಶಿಯಾದಾತ್ಮನಳಿಯ! (ಅ)
-ಪ್ಪನಾದರ್ಶ ಮಗ ತಾನಳಯ! (ಕೈ)
-ಯ್ಯ ಪಿಡಿದೆತ್ತುವಾತಳಿಯ! (ಬಾ)
-ಳಿನ ಗುರಿಯರಿತವಳಿಯ! (ಜೀ)
-ಯ ನಿರಂಜನಾದಿತ್ಯಾತ್ಮಳಿಯ!!!

ಅಳಿಲ ಬಾ

ರೊಟ್ಟಿ ಕಾಗೆ ಬಾ

ಗೆ! (ಘ)
   6(3993)

-ಳಿಸಿದವ್ಗಿಲ್ಲ ತನ್ನ ಹೊಟ್ಟೆಗೆ! (ಬ)
-ಲಶಾಲಿಯಾದವನ ಪಾಲಿಗೆ!
ಬಾ

ಯ್ಬಾಯ್ಬಡ್ಕೊಂಡ್ರಿಲ್ಲ ಬಡವಗೆ!
ರೊಕ್ಕ ಸಿಕ್ಕುವುದಿಲ್ಲವನಿಗೆ! (ಹಿ)
-ಟ್ಟಿಲ್ಲದ ದುಡಿಮೆ ಅವನಿಗೆ!
ಕಾಲದ ಮಹಿಮೆ ಈಗ ಹೀಗೆ!
ಗೆದ್ದೆತ್ತಿನ ಬಾಲೆತ್ತುವ ಹಾಗೆ!
ಬಾ

ಬಡಾಯಿ ನಿಲ್ಲುವುದು ಹೇಗೆ?
ಗೆಳೆಯ ನಿರಂಜನಾದಿತ್ಯಾಗೆ!!!

ಅಳಿಲಣ್ಣ ಬಂದ, ರೊಟ್ಟಿ ತಿಂದ! (ನ)   6(3685)

-ಳಿನನಾಭನೇ ನಾನು ನೋಡೆಂದ!
ಕ್ಷ್ಮಿಗೆ ಹೇಳದೇ ಬಂದೆನೆಂದ! (ಉ)
-ಣ್ಣಲಾರೆನು ನಾನೊಬ್ಬನೇ ಎಂದ!
ಬಂದ, ತಿಂದ, ಹೋದ, ಮತ್ತೆ ಬಂದ!
ರ್ಶನ ಅವನದ್ಬಹು ಚಂದ!
ರೊಟ್ಟಿಯೊಂದೇ ನನಗಿಷ್ಟವೆಂದ! (ಗ)
-ಟ್ಟಿ ಹೆಚ್ಚಾಗಿ ಇರಬಾರದೆಂದ!
ತಿಂದರೆಷ್ಟು ದಿನ ತಿಂದೇನೆಂದ!
ತ್ತ ನಿರಂಜನಾದಿತ್ಯಾನಂದ!!!

ಅಳಿಲಾಹಾರಕ್ಕಾಗಿ ಬಂದಿದೆ! [ಬಾ]   5(2952)

-ಳಿನಲ್ಲದಕ್ಕಿನ್ನೇನ್ಬೇಕಾಗಿದೆ?
ಲಾಭಾಲಾಭ ಅಲಕ್ಷ್ಯವಾಗಿದೆ!
ಹಾಯಾಗೊಂದೆಡೆ ಕೂತಿರುತ್ತದೆ! (ಮ)
-ರದಿಂದ ಮರಕ್ಕೆ ನೆಗೆಯುತ್ತದೆ! (ಬೆ)
-ಕ್ಕಾಗಾಗ ಹೊಂಚು ಹಾಕುತ್ತಲಿದೆ! (ಮಾ)
-ಗಿದ ಹಣ್ತಿಂದಾನಂದ ಪಡ್ತದೆ!
ಬಂದದ್ದನ್ನುನುಭವಿಸುತ್ತದೆ!
ದಿನ ಬಂದಾಗ ದೇಹ ಬಿಡ್ತದೆ! (ತಂ)
-ದೆ ನಿರಂಜನಾದಿತ್ಯದಾಗಿದೆ!!!

ಅಳಿಲಿನಳಲ ಕೇಳುವವರಾರು? (ನ)   6(4197)

-ಳಿನನಾಭ ಶ್ರೀ ರಾಮಚಂದ್ರ ದೇವರು! (ಒ)
-ಲಿದನದರ ಸೇವೆಗಂದಾ ದೇವರು!
ರರಿಗೆ ಮಾತ್ರವೇನಲ್ಲಾ ದೇವರು! (ಒ)
-ಳ, ಹೊರ, ನಿರ್ಮಲಕ್ಕೊಲಿವಾ ದೇವರು! (ಕು)
-ಲ, ಗೋತ್ರ, ಜಾತಿ, ಮತ ನೋಡಾ ದೇವರು!
ಕೇಳಿದ ಶಬರಿಯ ಗೋಳಾ ದೇವರು! (ಕೀ)
-ಳು ಜಾತಿಯವಳೆಂಜಲ್ತಿಂದಾ ದೇವರು!
ನವಾಸದಲ್ಲೂ ತತ್ವಜ್ಞಾ ದೇವರು! (ಪ)
-ವನಸುತನಿಷ್ಟ ಮೂರ್ತಿ ಆ ದೇವರು!
ರಾವಣನಿಗೆ ಯಮನಾದಾ ದೇವರು! (ಗು)
-ರು ನಿರಂಅಜನಾದಿತ್ಯನೆಂದಾ ದೇವರು!!!

ಅಳುವ ಮಕ್ಕಳ ವಿಚಾರ್ಸಿಕೊಳ್ಳಮ್ಮಾ! (ಕೇ)   4(2249)

-ಳುವವರಿನ್ಯಾರು ನೀ ಕೈ ಬಿಟ್ಟರಮ್ಮಾ?
ರದೆ ನೀನೆಂಬುದ ನಿಜ ಮಾಡಮ್ಮಾ! (ನೇ)
-ಮ, ನಿಷ್ಠೆ ನೀನೇ ಕಲಿಸಿ ಕಾಪಾಡಮ್ಮಾ! (ತ)
-ಕ್ಕ ಮಕ್ಕಳಾದ್ರೆ ನಿನಗೇ ಕೀರ್ತಿಯಮ್ಮಾ! (ತ)
-ಳಮಳಗೊಳಿಸಬೇಡೆನ್ನ ನೀನಮ್ಮಾ!
ವಿದ್ಯಾ, ಬುದ್ಧಿ ನಿನ್ನ ಸೇವೆಗಿರಲಮ್ಮಾ! (ಆ)
-ಚಾರ, ವಿಚಾರ ನಿನ್ನೊಲುಮೆಗಾಗ್ಲಮ್ಮಾ! (ಹೊ)
-ರ್ಸಿ ಅಪರಾಧಗಳ ಕೊಲ್ಲಬೇಡಮ್ಮಾ!
ಕೊಲೆಗಾರ್ತಿ ನೀನಾದ್ರಾರುಳಿವರಮ್ಮಾ? (ಉ)
-ಳ್ಳವಳೆಲ್ಲಾ ಜಗಕ್ಕೆ ನೀನೊಬ್ಬಳಮ್ಮಾ! (ಅ)
-ಮ್ಮಾ, ಶ್ರೀ ನಿರಂಜನಾದಿತ್ಯ ಪರಬ್ರಹ್ಮ!!!

ಅಳೆವ, ಸುರಿವ, ಸೇರಿಗಮೃತ ಸಿಗದಯ್ಯಾ! (ಆ)   1(272)

-ಳೆನುತ ಹೀನೆ

ಸಲ್ತಾ ವಿಧೇಯನಾಗನಯ್ಯಾ!
ರಿಸಿದರಸಿಯೂ ಹಿಂಸೆಗಳವಡೆಳಯ್ಯಾ!
ಸುತನಿಂದ ಪಿತೃಸೇವೆ ಕಶ್ಯಪಗಾಯ್ತೇನಯ್ಯಾ? (ಅ)
-ರಿ, ಹರಿಯೆಂದ ಶಿಶುಪಾಲನೇನಾದ ಹೇಳಯ್ಯಾ!
ಸ್ತ್ರಾಪಹರಣದ ಗರ್ವಿಗೇನಾಯ್ತರಿಯಯ್ಯಾ!
ಸೇನಾಬಲಳೆದು, ಸುರಿದಾಳ್ಲಿಲ್ಲ ಕೌರವಯ್ಯಾ!
-ರಿತ ಪಂಡಿತ ಮಂಡನಮಿಶ್ರನೂ ಸೋತನಯ್ಯಾ!
ಣೇಶನೂ ಗರ್ವದಿ ಗಜಮುಖನಾದನಯ್ಯಾ! (ಅ)
-ಮೃತ ಮಥನದಿಂದಸುರರಮರರೇನಯ್ಯಾ?
ರಣಿಯೇ ಕಾರಣಿ! ಧೋರಣೆಗಲಭ್ಯನಯ್ಯಾ!
ಸಿರಿಯರಸನೂ ಅತ್ರಿಗೆ ಪುತ್ರನಾದಬಯ್ಯಾ!
ರಳಧರನೂ ಕಾಪಾಲಿಯಾಗಬೇಕಾಯ್ತಯ್ಯಾ!
ತ್ತ ಗುರುವೇ ಅಳೆಯಲಾಗದಮೃತವಯ್ಯಾ! (ಅ)
-ಯ್ಯಾ! ಗುರುದೇವನೇ ನಿರಂಜನಾದಿತ್ತಾತ್ಮನಯ್ಯಾ!!!

ಅಳೆವುದು, ಸುರಿವುದೆಷ್ಟು ಹೊತ್ತು? (ಬೇ)   6(3494)

-ಳೆ, ಕಾಳುಗಳು ಇರುವಷ್ಟು ಹೊತ್ತು! (ಸಾ)
-ವು ಹೊತ್ತುಕೊಂಡು ಹೋಗುವಷ್ಟು ಹೊತ್ತು!
ದುರ್ವಿದಿಯಾಟ ನಡೆವಷ್ಟು ಹೊತ್ತು!
ಸುದರ್ಶನನು ಬರುವಷ್ಟು ಹೊತ್ತು!
ರಿಪುಗಳಿಗಾಳಾಗುವಷ್ಟು ಹೊತ್ತು! (ಬೇ)
-ವು, ಬೆಲ್ಲ, ಬೇರೆ ಬೇರೆಂದಷ್ಟು ಹೊತ್ತು!
(ತಂ)-ದೆ, ತಾಯಿ, ಯಾರೆಂದರಿವಷ್ಟು ಹೊತ್ತು! (ಅ)
-ಷ್ಟು ಬೇಕು, ಇಷ್ಟು ಬೇಕೆಂಬಷ್ಟು ಹೊತ್ತು!
ಹೊರಗೊಳಗೊಂದೇ ಎಂಬಷ್ಟು ಹೊತ್ತು!
(ಹೊ)-ತ್ತು ನಿರಂಜನಾದಿತ್ಯನ ಸಂಪತ್ತು!!!

ಅವತಾರಗಳಾದುವು ಬಹಳ! (ಅ)   3(1252)

-ವರ ಕಥೆಗಳೆಲ್ಲೆಲ್ಲೂ ಬಹಳ! (ಮ)
-ತಾಚಾರ್ಯರೆನಿಸಿದರು ಬಹಳ (ಧ)
-ರಣಿಯಲ್ಲಾಯ್ತು ಪಂಗಡ ಬಹಳ!
ತಿಗೆಟ್ಟಿತಿದರಿಂದ ಬಹಳ! (ಕೀ)
-ಳಾಸೆಯುಂಟಾಯ್ತಿದರಿಂದ ಬಹಳ!
ದುಡಿಮೆ ವಿಫಲವಾಯ್ತು ಬಹಳ! (ಸಾ)
ವು, ಸುಲಿಗೆಗಳೆಲ್ಲೆಲ್ಲೂ ಬಹಳ!
ಲವೀಯಲೀಗ ಗುರು ಬಹಳ!
ಬ್ಬಲಿ ಗುರು ಭಜನೆ ಬಹಳ! (ತೌ)
-ಳ ನಿರಂಜನಾದಿತ್ಯನಿಷ್ಟ ಮೇಳ!!!

ಅವತಾರಿಗಳೆಲ್ಲರನಿಂದು ಕಂಡೆ!   3(1081)

ರ ಧ್ಯಾನದಲ್ಲಿ ಅವರನ್ನು ಕಂಡೆ!
ತಾವೆಲ್ಲೆಲ್ಲೂ ಇದ್ದಾರೆಂಬುದನ್ನು ಕಂಡೆ! (ಬ)
-ರಿಸುತವರನೆನ್ನಲ್ಲಿಂದಿಲ್ಲಿ ಕಂಡೆ!
ಮನಾಗಮನಾನಂದವನ್ನು ಕಂಡೆ! (ವೇ)
-ಳೆಯನುಸರಿಸಿ ಬಂದುದನ್ನು ಕಂಡೆ! (ಅ)
-ಲ್ಲ, ಏಸು, ಮೊದಲಾದವರನ್ನು ಕಂಡೆ! (ವ)
-ರ ಗುರುಕೃಪೆಯಿದೆಂಬುದನ್ನು ಕಂಡೆ! (ನಾ)
-ನಿಂದು, ಮುಂದೆಂದೆಂದೊಂದೆಂಬುದನ್ನು ಕಂಡೆ!
ದುಡಿಮೆಗೀ ಫಲವೆಂಬುದನ್ನು ಕಂಡೆ!
ಕಂಡದ್ದು ಹೇಳುವಾನಂದವನ್ನು ಕಂಡೆ! (ಕಂ)
-ಡೆ, ನಿರಂಜನಾದಿತ್ಯನಾಗಿದ ಕಂಡೆ!!!

ಅವತಾರಿಗೂ ಸುಖ ದುಃಖ ಬೆರಕೆ! (ಭ)   6(3425)

-ವ ಬಂಧವೆಂಬುದೊಂದು ಕಲಬೆರಕೆ!
ತಾನೇ ತಾನಾಗಿರ್ಲಿಕ್ಕೊಪ್ಪದಾ ಬೆರಕೆ! (ವೈ)
-ರಿ ನಿಗ್ರಹ ಕಷ್ಟ ಸಂಸಾರೀ ಮನಕ್ಕೆ!
ಗೂಳಿಯಂತೋಡಾಡುವುದಿಷ್ಟ ಅದಕ್ಕೆ!
ಸುತಾದಿಗಳ ಸುಖ ಸ್ವಲ್ಪದಿನಕ್ಕೆ!
ತಿಗೊಳ್ಳುವನವರ ಸ್ವಭಾವಕ್ಕೆ!
ದುಃಖಿಸುವನೀ ಸಂಸಾರ ಬಂಧನಕ್ಕೆ!
ಗವಾಹನನ ಬೇಡ್ವನುದ್ಧಾರಕ್ಕೆ!
ಬೆದರುವನವ ಯಮನ ಪಾಶಕ್ಕೆ! (ವ)
-ರ ಗುರುಕೃಪೆ ಬೇಕು ನಿತ್ಯ ಸುಖಕ್ಕೆ!
(ಏ)-ಕೆ ಶಂಕೆ ನಿರಂಜನಾದಿತ್ಯಾನಂದಕ್ಕೆ!!!

ಅವನಾರೆಂದರಿತೆಯೇನಮ್ಮಾ? (ಭ)   4(1949)

-ವರೋಗ ವೈದ್ಯ ಸದಾಶಿವಮ್ಮಾ!
ನಾಮ, ರೂಪಾತೀತನವನಮ್ಮಾ!
ರೆಂಬೆ, ಕೊಂಬೆಗಾಧಾರವನಮ್ಮಾ!
ಶಕಂಠನಿಷ್ಟಮೂರ್ತ್ಯವನಮ್ಮಾ!
ರಿಪುಕುಲ ಕಾಲೇಶ್ವರನಮ್ಮಾ! (ಸ)
-ತಿ ಪಾರ್ವತಿಯ ಪ್ರಾಣವನಮ್ಮಾ! (ಪ್ರಾ)
-ಯೇಚ್ಛಾನುಸಾರವಾಗಿರ್ಪುದಮ್ಮಾ!
ಗೇಂದ್ರಾಗ್ರದಲ್ಲಿ ವಾಸವಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಾನಂದಮ್ಮಾ!!!

ಅವರವರಭಿರುಚಿಗೆ ತಕ್ಕಾಟ, ಊಟ!   6(3798)

ಧು, ವರರಲ್ಲಿರಬಾರ್ದಾದ್ರಿಂದ ತಿಕ್ಕಾಟ!
ಸಭರಿತ ಹಣ್ಣು, ಹಾಲ್ಕೆಲವರಿಗಿಷ್ಟ!
ಡೆ, ಕೋಡ್ಬಳೆ, ಚಕ್ಕುಲಿ ಕೆಲವರಿಗಿಷ್ಟ!
ಣಾಂಗಣದ ಹೋರಾಟ ಕೆಲವರಿಗಿಷ್ಟ!
ಭಿಕ್ಷೆ, ಉಪೇಕ್ಷೆ, ತಿತಿಕ್ಷೆ, ಕೆಲವರಿಗಿಷ್ಟ!
ರುಧಿರ, ಮಾಂಸಗಳೂಟ ಕೆಲವರಿಗಿಷ್ಟ!
ಚಿರೋಟಿ, ಒಬ್ಬಟ್ಟಿನೂಟ ಕೆಲವರಿಗಿಷ್ಟ!
ಗೆಡ್ಡೆ, ಗೆಣಸು, ತರ್ಕಾರಿ ಕೆಲವರಿಗಿಷ್ಟ!
ಡೆಯಲಿಕ್ಕಸಾಧ್ಯ ಒಬ್ಬರಿನ್ನೊಬ್ಬರಿಷ್ಟ! (ಹ)
-ಕ್ಕಾರಿಗಾವುದಕ್ಕೆನ್ನುವುದು ಬಹಳ ಕಷ್ಟ! (ಘ)
-ಟಕ್ಕಾಹಾರ, ವಿಹಾರ ಬೇಕೆಂಬುದೇನೋ ಸ್ಪಷ್ಟ!
ಟ ತಾಮಸವಾದಷ್ಟೂ ಜೀವ ಕೋಟಿ ದುಷ್ಟ! (ದಿ)
-ಟ, ನಿರಂಜನಾದಿತ್ಯಾನಂದರಿತಾಗ್ಬಲಿಷ್ಟ!!!

ಅವರವರಿಷ್ಟದಂತವರವರಯ್ಯಾ!   2(447)

ರ ಗುರುವಿಗಾಗಿಹರಾರಿಹರಯ್ಯಾ?
ಸದೂಟ ಬೇಕೆಲ್ಲರಿಗೆ ನಿತ್ಯವಯ್ಯಾ!
ನವಾಸವೆಂದರೆ ಹಿಂಜರಿವರಯ್ಯಾ!
ರಿವಾಜು, ಮುಲಾಜು, ಆರದು, ಆರಿಗಯ್ಯಾ (ಅ)
-ಷ್ಟವಸರದಾಸಕ್ತಿ ಈಗಿಲ್ಲ ಕಾಣಯ್ಯಾ!
ದಂಗೆ, ದರೋಡೆಗಳಿಗೇ ಕಾಲವಿದಯ್ಯಾ!
ನ್ನಂತೆಲ್ಲರಿಗೂ ಸುಖ, ದುಃಖಗಳಯ್ಯಾ!
ಳಗೊಂದು, ಹೊರಗೊಂದಾದರಾಗಯ್ಯಾ!
ಗಳೆ ಹೂಡಿ ರಾಜ್ಯಭಾರ ಬೇಡವಯ್ಯಾ!
ರಧರ್ಮ, ಕರ್ಮಬುದ್ಧಿ ಇರಬೇಕಯ್ಯಾ!
‘ರಘುಪತಿ ರಾಘವ ರಾಜಾರಾಮ’ನ್ನಯ್ಯಾ! (ಅ)
-ಯ್ಯಾ! ನಿರಂಜನಾದಿತ್ಯಗಿದು ಹಿತವಯ್ಯಾ!!!

ಅವರವರೂರಲ್ಲವರವರಧಿಕಾರ!   4(1964)

ರ ಗುರುಚಿತ್ತವೆಲ್ಲಕ್ಕಾದಿ ಮೂಲಾಧಾರ!
ಹಸ್ಯವಿದನರಿತರಾಗದಪಚಾರ!
ಲಸೆಗಾರರಿಗಾಗಬಾರದು ಧಿಕ್ಕಾರ!
ರೂಢಮೂಲ ಹಕ್ಕನ್ನುಳಿಸಬೇಕು ಸರ್ಕಾರ!
ಗಳೆಯಾಗದಂತಿರಬೇಕು ರಾಜ್ಯಭಾರ! (ಎ)
-ಲ್ಲರೂ ಸದ್ಗುರು ಪರಮಾತ್ಮನ ಪರಿವಾರ!
ಸ್ತ್ರಾನ್ನವೆಲ್ಲರಿಗೀವಾ ದೀನಜನೋದ್ಧಾರ!
ಘುಪತಿಯ ಭಜಿಸಬೇಕೆಲ್ಲಾ ಸಂಸಾರ!
ರಾಂಜನೇಯನಂತಿರಬೇಕು ಸದಾಚಾರ! (ಭ)
-ರತ ಬಂಧುವಿನಂತಿರಬೇಕು ಭಕ್ತ್ಯಪಾರ! (ವಿ)
-ಧಿ ಸೃಷ್ಟ್ಯಾಗ ಸಮಸ್ತ ಸುಖ, ಶಾಂತಿಗಾಗಾರ!
ಕಾರ್ಯಕರ್ತ, ಧರ್ಮವೀರ ರಾಮ ರಘುವೀರ! (ಧು)
-ರ ಧೀರ ಗಂಭೀರಾ ನಿರಂಜನಾದಿತ್ಯಾಕಾರ!!!

ಅವರಿವರ ನಿರೀಕ್ಷೆ ಏತಕ್ಕೆ?   5(2666)

ರ ಗುರುಧ್ಯಾನ ಬೇಕು ಸುಖಕ್ಕೆ! (ಪ)
-ರಿಪರ್ಯಾಸೆಯಿಂದಶಾಂತಿ ಜೀವಕ್ಕೆ! (ಶಿ)
-ವನೊಲಿದ ರಾಮ ಬಂದ ರಾಜ್ಯಕ್ಕೆ! (ಮಾ)
-ರ ಗುರಿಯಾದ ಶಿವನ ಕೋಪಕ್ಕೆ!
ನಿಶಿ, ದಿನ ಕಾಯ್ಬೇಕ್ದರ್ಶನವ್ನಕ್ಕೆ! (ಪ)
-ರೀಕ್ಷೆ ಅವನದು ಬಹಳದಕ್ಕೆ!
(ಶಿ)ಕ್ಷೆಯಾಗಲೇ ಬೇಕರಿಗಳಾರಕ್ಕೆ!
ರಿಳ್ತ ಸಹಜಜೀವಭಾವಕ್ಕೆ!
ಪ್ಪು ತಿದ್ದಿಕೊಂಡಾಗಾತ್ಮ ರೂಪಕ್ಕೆ! (ಅ)
-ಕ್ಕೆ ನಿರಂಜನಾದಿತ್ಯಾನಂದೆಲ್ಲಕ್ಕೆ!!!

ಅವರಿವರ ಮಾತಿನಿಂದ ಶಾಂತಿ!   1(288)

ರ ನಾಮಜಪದಿಂದಲೇ ಶಾಂತಿ!
ರಿಪುಕುಲಾಂತಕಾದಿತ್ಯನೇ ಕಾಂತಿ!
ರ ಪ್ರಸಾದ ಕಳೆವುದು ಭ್ರಾಂತಿ! (ಇ)
-ರಲೇಕಾಂತದಲಾಗುವುದು ಶಾಂತಿ!
ಮಾಡಿದರೆ ವ್ಯರ್ಥಾಲಾಪ ಅಶಾಂತಿ!
ತಿದ್ದಿಕೋ ನಿನ್ನನದರಿಂದ ಶಾಂತಿ!
ನಿಂದಕರ ಸಹವಾಸ ಅಶಾಂತಿ!
ರ್ಶನದ ಮರ್ಮ ತಿಳಿಯೆ ಶಾಂತಿ!
ಶಾಂತಿ ಮನೋವೃತ್ತಿ ಸ್ಥಿತಿಯೇ ಶಾಂತಿ!
ತಿಳಿ! ನಿರಂಜನಾದಿತ್ಯ ನೀ ಶಾಂತಿ

ಅವಶ್ಯ, ಲೋಕವಶ್ಯ, ನಾನಾವಶ್ಯ!   2(674)

ಸುಮತೀಶನಾಶೆ ಅತ್ಯಾವಶ್ಯ! (ವ)
-ಶ್ಯನವ ಸರ್ವಾಂತರ್ಯಾಮಿ ಆವಶ್ಯ!
ಲೋಭ, ಮೋಹನಾಶನಿಗಾತವಶ್ಯ!
ರ್ಮ, ಧರ್ಮ, ಮರ್ಮರಿವುದಾವಶ್ಯ!
ರ ಗುರುಸೇವೆ ಇದಕಾವಶ್ಯ! (ವ)
-ಶ್ಯನಿವ ನಿತ್ಯಾತ್ಮಾರಾಮ ಆವಶ್ಯ!
‘ನಾ’ ನವನೆಂಬನುಭವತ್ಯಾವಶ್ಯ!
ನಾಶವಾಗುವುದೆಲ್ಲಾ ಪಾಶಾವಶ್ಯ!
ರ ನಾಮ ಜಪ ಇದಕಾವಶ್ಯ! (ವ)
-ಶ್ಯ, ನಿರಂಜನಾದಿತ್ಯ ಸರ್ವವಶ್ಯ!!!

ಅವಿಧೇಯತೆಗಧೋಗತಿ ಫಲ!   4(2310)

ವಿದ್ಯಾರ್ಥಿಗೆ ವಿನಯ ಮಹಾಬಲ!
ಧೇನು ಕ್ಷೀರ ಪಾನ ಬುದ್ಧಿಗೆ ಬಲ!
ಮ, ನಿಯಮಗಳಿಂದಾತ್ಮ ಬಲ! (ಕ)
-ತೆಗಾರನಿಗೆ ಸದ್ವಿಚಾರ ಬಲ! (ಮಂ)
-ಗಳಕ್ಕೆ ಶ್ರದ್ಧಾ, ಭಕ್ತ್ಯುತ್ತಮ ಬಲ! (ವ್ಯಾ)
-ಧೋನ್ನತಿಗಹಿಂಸಾಚಾರತಿ ಬಲ! (ಯೋ)
-ಗಸಿದ್ಧಿಗೆ ತ್ಯಾಗ ಬುದ್ದಿಯೇ ಬಲ!(ಸ)
-ತಿಗೆ ಪತಿಸೇವೆ ಪರಮ ಬಲ!
ಲಾಫಲ ಕರ್ಮಧರ್ಮದ ಬಲ! (ಬ)
-ಲ ನಿರಂಜನಾದಿತ್ಯ ಕೃಪಾ ಫಲ!!!

ಅವಿರೋಧದಾಯ್ಕೆಯಾಗ್ಬೇಕು!   5(3196)

ವಿವೇಕಿಯವನಾಗಿರ್ಬೇಕು!
ರೋಗಿಯಲ್ಲದವನಾಗ್ಬೇಕು!
ರ್ಮ, ಕರ್ಮನಿಷ್ಠನಾಗ್ಬೇಕು!
ದಾಶರಥಿಯಂತೆ ಆಳ್ಬೇಕು! (ಆ)
-ಯ್ಕೆಯುದ್ದೇಶ ಸಿದ್ಧಿಯಾಗ್ಬೇಕು!
ಯಾರ ಚಾಡಿಯೂ ಕೇಳ್ದಿರ್ಬೇಕು! (ಆ)
-ಗ್ಬೇಕು ಶಾಂತಿ, ತಾಂಡವಾಡ್ಬೇಕು! (ಟಾ)
-ಕು ನಿರಂಜನಾದಿತ್ಯಾಗ್ಬೇಕು!!!

ಅವಿವೇಕಿಯಪಚಾರವೆನಗುಪಕಾರ!   1(95)

ವಿಷಯೇಂದ್ರಿಯಗಳೊಡನಾಟ ಅಪಚಾರ!
ವೇದ್ಯವಾದರೆ ಇದೊಂದು ಮಹದುಪಕಾರ!
ಕಿರುಕುಳದ ಜಗದಿಂದೆಲ್ಲಾ ಅಪಚಾರ!
ಮ, ನಿಯಮವಿದಕೆ ಬಹಳುಪಕಾರ!
ರಮಾರ್ಥವರಿಯದಾಗಿದೆ ಅಪಚಾರ!
ಚಾಗಿಯಾಗುವುದಿದಕೆ ಅತಿ ಉಪಕಾರ!
ಸದೂಟದಾಸೆ ಮಡುವುದು ಅಪಚಾರ! (ಠಾ)
-ವೆನಗಿಹುದು ಗುರುಕರುಣೆಯುಪಕಾರ!
ನನ್ಯಾರಿನ್ನೇನು ಮಾಡುವರಪಚಾರ?
ಗುಡಿ, ಗುಡಾರಗಳಂಟಿಲ್ಲದಾಯ್ತುಪಕಾರ!
ಡಲಾರೆ ನಾನದಕಿಷ್ತ! ಅದಪಚಾರ!
ಕಾಲ ಕಳೆಯುವುದಿಂತೆನಗೆ ಉಪಕಾರ!
ಕ್ಷಕ ನಿರಂಜನದಿತ್ಯಾಗದಪಚಾರ!!!

ಅವಿಶ್ವಾಸದಿಂದ ಒಡಕು ತೊಡಕು!   1(238)

ವಿಕಲ್ಪದಿಂದಾಗುವುದೆಲ್ಲಾ ಕೆಡೆಕು!
ಶ್ವಾನ, ಸೂಕರರಂತೊದ್ದಾಟ ಬದುಕು!
ಮನ್ವಯವಿಲ್ಲದೆಲ್ಲೆಲ್ಲೂ ಉಡಕು! (ಸ್ವಾ)
-ದಿಂಬಿಗಾಗುತಿದೆಲ್ಲಾ ತಲೆ ಹೊಡಕು!
ಯೆ, ದಾಕ್ಷಿಣ್ಯಕಾಗುತಿದೆ ತಡಕು!
ಬ್ಬರ ಮೇಲಿನ್ನೊಬ್ಬರಿಗೆ ಕುದಕು!
ಕಾಯಿತರಿಗಾಗುತಿದೆ ಸರಕು!
ಕುಲ, ಶೀಲಗಳಿಗೆ ಬಂತು ಕೊರಕು!
ತೊಗಲ ಮೋಹ ಹೆಚ್ಚಾಗಾಯ್ತು ಕೊಳಕು! (ಸ)
-ಡಗರದಾಡಂಬರವೆಲ್ಲಾ ಥಳಕು! (ಬೇ)
-ಕು, ನಿರಂಜನಾದಿತ್ಯನಿಂದ ಬೆಳಕು!!!

ಅವ್ಯವಹಾರಕ್ಕೆಡೆ ಕೊಡ್ಬೇಡ!   6(3839)

ವ್ಯವಸ್ಥೆಗೆ ತಪ್ಪಿ ನಡೆಯ್ಬೇಡ!
ಶ ಮೋಹಿನಿಯಾಟಕ್ಕಾಗ್ಬೇಡ!
ಹಾಳು, ಹರಟೆ ಮಾತನ್ನಾಡ್ಬೇಡ!
ಫ್ತಿನಲ್ಲಿ ವಂಚನೆ ಮಾಡ್ಬೇಡ! (ಹ)
-ಕ್ಕೆಮ್ಮದೇನೆಂದರಿಯದಿರ್ಬೇಡ! (ಒ)
-ಡೆಯನಲ್ಲವಿಶ್ವಾಸ ಪಡ್ಬೇಡ!
ಕೊಟ್ಟವನಿಗೆ ಮೋಸ ಮಾಡ್ಬೇಡ! (ಬೇ)
-ಡ್ಬೇಡ, ನಾಮ ಸ್ಮರಣೆ ಬಿಡ್ಬೇಡ! (ಮೃ)
-ಡ, ನಿರಂಜನಾದಿತ್ಯಲ್ಲೆನ್ಬೇಡ!!!

ಅವ್ರವ್ರ ವಿಶ್ವಾಸದಂತವ್ರವ್ರಾಗ್ಹೋಗು!   5(3204)

ವ್ರತೋಪವಾಸದಿಂದಾರೋಗ್ಯವಂತನಾಗು!
ವ್ರಜ ಸ್ತ್ರೀಯರಂತಚಲ ಭಕ್ತನಾಗು!
ವಿಶ್ವಾಮಿತ್ರನ ಹಾಗೆ ತಪಸ್ವಿಯಾಗು!
ಶ್ವಾನ, ಸೂಕರರಂತಿರದವನಾಗು!
ತೀ ಸಾವಿತ್ರಿಯಂತೆ ಸಾಹಸಿಯಾಗು!
ದಂಭ, ದರ್ಪ ಮೆಟ್ಟಿ ನಿಲ್ಲುವವನಾಗು!
ತ್ವ ಚಿಂತೆನೆ ಸದಾ ಮಾಳ್ಪವನಾಗು! (ತೀ)
-ವ್ರ ಸಾಧನೆಯಿಂದೀಗಲೇ ಮುಕ್ತನಾಗು! (ದೇ)
-ವ್ರಾಗಿ ನಿಗ್ರಹಾನುಗ್ರಹ ಶಕ್ತನಾಗು! (ಆ)
-ಗ್ಹೋದ ದುರ್ದೆಶೆಯ ಮರೆತವನಾಗು!
ಗುರು ನಿರಂಜನಾದಿತ್ಯನಂತೀಗಾಗು!!!

ಅವ್ರವ್ರಿಷ್ಟದಂತೆ ಅವ್ರವ್ರ ತೀರ್ಮಾನ!   6(3319)

ವ್ರತಾನುಷ್ಠಾನಕ್ಕೆ ನಂಬಿಕೆ ಪ್ರಧಾನ! (ಅ)
-ವ್ರಿವ್ರಿಗೆ, ಇವ್ರವ್ರಿಗೆ, ಮಾರ್ಗದರ್ಶನ! (ಇ)
-ಷ್ಟ ಸಿದ್ಧಿಗಾಗ್ಬೇಕು ದೇವರ ದರ್ಶನ!
ದಂಭ ದರ್ಪದಿಂದಾಗ್ದು ಕಾರ್ಯಸಾಧನ!
ತೆನೆ ಬಲಿತು ಹಣ್ಣಾದ್ರೆ ಪ್ರಯೋಜನ!
ಕಾಲದ ಕೊ

ಲೆಲ್ಲಾ ನಿಷ್ಪ್ರಯೋಜನ!
ವ್ರಜನಾರಿಯರಂತಿರ್ಬೇಕು ಸಹನ! (ಅ)
-ವ್ರ ಬಾಳು ಅದರಿಂದಾಯ್ತು ರಸಾಯನ!
ತೀರ್ಥ ಪ್ರಸಾದ ಶ್ರೀಪಾದದ್ದು ಪಾವನ! (ದು)
-ರ್ಮಾರ್ಗಾವಲಂಬನದಿಂದಧಃ ಪತನ!
ಮೋ ನಿರಂಜನಾದಿತ್ಯ ಸನಾತನಾ!!!

ಅವ್ರಿವ್ರ ಸಂಗಕ್ಕಾಶಿಪುದೊಂದು ರೋಗ! (ದೇ)   5(3218)

-ವ್ರಿಗಾದರಾ ಆಸೆ, ಇಲ್ಲ ಭವರೋಗ!
ವ್ಯಯವಾಗಲ್ವೀರ್ಯ ಕಾರಣಾನುರಾಗ!
ಸಂಚಯವಾದರದೇ ತ್ರಿನೇತ್ರ ಯೋಗ!
ತಿಗೇಡ ತಂದೊಡ್ಡುವುದಿಹ ಭೋಗ! (ಹೊ)
-ಕ್ಕಾಗಿ, ಹಾಸಾಗಿರ್ಬೇಕ್ಸದಾ ಜಪ ಯೋಗ!
ಶಿವ, ಜೀವರೈಕ್ಯಕ್ಕಿದ್ದು ಉಪಯೋಗ!
ಪುಣ್ಯ, ಪಾಪ ಭೀತಿ ಹರಾ ಭಕ್ತಿಯೋಗಾ!
ದೊಂಬರಾಟವೆಲ್ಲದಿನ್ನೇನ್ಹಠಯೋಗ!
ದುರ್ಬಲ ಶರೀರಕ್ಕದೊಂದೊಳ್ಳೇ ಯೋಗ!
ರೋಗ ನಿವಾರಣೋಪಕಾರಿ ಈ ಯೋಗ! (ಯೋ)
-ಗ ನಿರಂಜನಾದಿತ್ಯನಾಗ್ವುದ್ಸುಯೋಗ!!!

ಅಶಕ್ತ ಯಾರಿಗೇನ್ಮಾಡಬಲ್ಲ?   6(3858)

ಕ್ತ ಏನ್ಬೇಕಾದ್ರೂ ಮಾಡ್ಬಲ್ಲ! (ಭ)
-ಕ್ತನಾದವ ಇನ್ನೇನ್ಹೇಳ್ಬಲ್ಲ?
ಯಾತನೆಯ ಸಹಿಸಲೊಲ್ಲ!
ರಿಪುಗಳಾರ್ಭಟವೇ ಎಲ್ಲ!
ಗೇಲಿ ಮಾಳ್ಪವರನ್ಯರನ್ನೆಲ್ಲ! (ಸ)
-ನ್ಮಾರ್ಗಿಗಳಿಗೆ ಸ್ಥಾನ ಇಲ್ಲ! (ಆ)
-ಡಹುದು, ಮಾಡುವವರಿಲ್ಲ! (ಬ)
ಒನೆ ಲಿನೆ ಮಿ

ಸಿ
-ಲ್ಲ ನಿರಂಜನಾದಿತ್ಯ ಪುಲ್ಲ!!!

ಅಶಕ್ತನಾಗ್ಯಡ್ಡಾಡಬೇಡ! (ಪಾ)   4(1977)

-ಶದಲ್ಲಿ ಬಿದ್ದೊದ್ದಾಡಬೇಡ! (ಭ)
-ಕ್ತನಾಗಿ ಬಾಳದಿರಬೇಡ!(ಅ)
-ನಾವಶ್ಯ ಮಾತನ್ನಾಡಬೇಡ! (ಯೋ)
-ಗ್ಯರೊಡನಾಟ ಬಿಡಬೇಡ! (ಗೊ)
-ಡ್ಡಾಚಾರಕ್ಕೆಡೆಗೊಡಬೇಡ! (ಮೃ)
-ಡನಡಿ ಸೇವೆ ಬಿಡಬೇಡ!
ಬೇಡಿ, ಕಾಡ್ಯೇನೂ ತಿನ್ನಬೇಡ! (ಕಾ)
-ಡ, ನಿರಂಜನಾದಿತ್ಯ ಬೇಡ!!!

ಅಶಾಂತಿಗವಕಾಶ ಕೊಡಬೇಡ!   4(1427)

ಶಾಂಭವೀಶ್ವರನಾಜ್ಞೆ ಮೀರಬೇಡ!
ತಿಕ್ಕಾಟದಿಂದ ಬಡವಾಗಬೇಡ!
ದ್ದು ವಾಸನೆಯಿರಗೊಡಬೇಡ!
ರ ಸೇವೆಯ ಕಳಕೊಳ್ಳಬೇಡ!
ಕಾಟಾಚಾರಕ್ಕಾಗ್ಯೇನೂ ಮಾಡಬೇಡ!
ಮ, ದಮದಭ್ಯಾಸ ಬಿಡಬೇಡ!
ಕೊಲೆಗಡಕರೊಡಗೂಡಬೇಡ!
ಬ್ಬಿಯ ನಿಧಿ ಹೊರಗಿಡಬೇಡ!
ಬೇಡಿದಿಷ್ಟ ಪಡೆಯದಿರಬೇಡ! (ಗಂ)
-ಡ ನಿರಂಜನಾದಿತ್ಯಗಾವ ಖಂಡ???

ಅಶಾಂತಿಗೆ ಅಸಹಕಾರ ಕಾರಣ! (ಆ)   4(1738)

-ಶಾಂತರಂಗಸಹಕಾರಕ್ಕೆ ಕಾರಣ! (ಪ್ರೀ)
-ತಿಯನ್ಯೋನ್ಯವಿಲ್ಲದ್ದಾಶೆಗೆ ಕಾರಣ! (ಬ)
-ಗೆಬಗೆಯ ಮತ ದ್ವೇಷಕ್ಕೆ ಕಾರಣ!
ಜ್ಞಾನವೇ ಮತಭೇದಕ್ಕೆ ಕಾರಣ!
ತ್ಯಾನಂದಾಭಾವಾಜ್ಞಾನಕ್ಕೆ ಕಾರಣ! (ದೇ)
-ಹ ಮೋಹಾತ್ಮಾನಂದಾಭಾವಕ್ಕೆ ಕಾರಣ!
ಕಾಮಾಸಕ್ತಿ ದೇಹ ಮೋಹಕ್ಕೆ ಕಾರಣ! (ವಿ)
-ರಕ್ತಿಯಭಾವ ವ್ಯಾಮೋಹಕ್ಕೆ ಕಾರಣ!
ಕಾಸು ವಿರಕ್ತಿಯಭಾವಕ್ಕೆ ಕಾರಣ! (ವ)
-ರಗುರುಚಿತ್ತ ಸಕಲಕ್ಕೆ ಕಾರಣ! (ಗ)
-ಣಪ, ನಿರಂಜನಾದಿತ್ಯಾದಿ ಕಾರಣ!!!

ಅಷ್ಟಕ ಹಾಡಿದ ಪುಟ್ಟಣ್ಣಯ್ಯ! (ಇ)   2(979)

-ಷ್ಟ ಬಾಂಧವ ಮಿತ್ರ ಪುಟ್ಟಣ್ಣಯ್ಯ!
ಷ್ಟ ಕಾಲಕ್ಕೆಲ್ಲಾ ಪುಟ್ಟಣ್ಣಯ್ಯ!
ಹಾನಿ, ವೃದ್ಧಿಗೀಶ ಪುಟ್ಟಣ್ಣಯ್ಯ! (ಕೂ)
-ಡಿಯಾಡಿ ಒಲಿವ ಪುಟ್ಟಣ್ಣಯ್ಯ!
ಯೆ, ದಾಕ್ಷಿಣ್ಯಾತ್ಮ ಪುಟ್ಟಣ್ಣಯ್ಯ!
ಪುಣ್ಯ, ಪಾಪದೂರ ಪುಟ್ಟಣ್ಣಯ್ಯ! (ಹು)
-ಟ್ಟ, ಸಾವ ಸುಟ್ಟವ ಪುಟ್ಟಣ್ಣಯ್ಯ! (ಕ)
-ಣ್ಣ ತೆರೆವ ಗಣ್ಯ ಪುಟ್ಟಣ್ಣಯ್ಯ! (ಅ)
-ಯ್ಯಾ, ನಿರಂಜನಾದಿತ್ಯಾ ಅಣ್ಣಯ್ಯ!!!

ಅಷ್ಟಮಿಯರ್ಧರಾತ್ರಿಯಲ್ಲಿ ಕೃಷ್ಣ ಬಂದ! (ದು)   4(2177)

-ಷ್ಟ ಸಂಹಾರ ಮಾಡುವೆನು ನಾನೆಂದು ಬಂದ!
ಮಿತ್ರಾರ್ಜುನನಜ್ಞಾನ ಕಳೆಯಲ್ಕೆ ಬಂದ!
ದುವಂಶ ಶಿರೋಮಣಿಯಾಗಿ ತಾ ಬಂದ! (ದು)
ರ್ಧರ ಸ್ಥಿತಿ ಮಾತಾ, ಪಿತರ್ಗಾದಾಗ ಬಂದ!
ರಾಧೆಯ ಮನೋರಥ ಪೂರ್ತಿಗಾಗಿ ಬಂದ!
ತ್ರಿಲೋಕನಾಥನಾಗ್ಯವತರಿಸಿ ಬಂದ! (ಜ)
-ಯ ಪಾಂಡುಪುತ್ರರಿಗೀಯಲಿಕ್ಕಾಗಿ ಬಂದ! (ಅ)
-ಲ್ಲಿಲ್ಲೆಲ್ಲೆಲ್ಲಾನೆಂದು ತೋರಲಿಕ್ಕಾಗಿ ಬಂದ! (ಸು)
-ಕೃತಶಾಲಿ ಸುಧಾಮೋದ್ಧವರ್ಗಾಗಿ ಬಂದ! (ಕೃ)
-ಷ್ಣವೇಣಿಯ ಪರಮಾಪ್ತ ತಾನಾಗಿ ಬಂದ!
ಬಂಧು ಗೋಪಾಲಕರಿಗಾಗಿ ತಾನು ಬಂದ! (ನಂ)
-ದಕಂದ ನಿರಂಜನಾದಿತ್ಯನಾಗಿ ಬಂದ!!!

ಅಸಂಖ್ಯ ಜನಕ್ಕಸಂಖ್ಯ ಬುದ್ಧಿ!   6(3389)

ಸಂಭಾವನೆಗಾಶಿಪುದಾ ಬುದ್ಧಿ! (ಸೌ)
-ಖ್ಯ ವಿಷಯದಿಂದೆಂಬುದಾ ಬುದ್ಧಿ!
ಗದಲ್ಲಿದರಿಂದ ದುರ್ಬುದ್ಧಿ!
ರ, ನಾರಿಗಹಂಕಾರ ವೃದ್ಧಿ! (ಸಿ)
-ಕ್ಕ ಬೇಕೆನ್ನುವರು ರಿದ್ಧಿ, ಸಿದ್ಧಿ!
ಸಂಜೆ, ಮುಂಜಾನೆಲ್ಲೆಲ್ಲದೇ ಸುದ್ಧಿ! (ಸೌ)
-ಖ್ಯವಿದೆಂದು ಬಂಧನಕ್ಕೆ ಬಿದ್ದಿ!
ಬುಧ್ಯಾತ್ಮನಿಗಾದ್ರೆ ಮೋಕ್ಷ ಸಿದ್ಧಿ! (ಸಿ)
-ದ್ಧಿ ನಿರಂಜನಾದಿತ್ಯಾತ್ಮ ಬುದ್ಧಿ!!!

ಅಸಡ್ಡೆಯಿಂದ ಹಳ್ಳ ದಿಣ್ಣೆ ಸಮವಾಗದು!   6(3948)

ರ್ವಾತ್ಮ ಭಾವವಿಲ್ಲದೆ ಸಾಧನೆ ಸಾಗದು! (ಗೆ)
-ಡ್ಡೆ, ಗೆಣಸು ತಿಂದ ಮಾತ್ರಕ್ಕೆ ಮುಕ್ತಿಯಾಗದು! (ಬಾ

)
-ಯಿಂದಾಡಿದ್ದು ಕಾರ್ಯದಲ್ಲಿದ್ದ್ರೆ ಕಷ್ಟ ಕಾಣದು!
ಡ ಸೇರ್ವತನಕ ಹುಟ್ಟು ಹಾಕ್ದಿರ್ಲಾಗದು!
ಗ್ಗವೆಂದು ಮನಗಾಣದೆ ಭಯ ಹೋಗದು! (ಬೆ)
-ಳ್ಳಗೆ ಕಂಡದ್ದೆಲ್ಲವನ್ನೂ ಹಾಲೆನ್ನಲಾಗದು!
ದಿತಿ ಸುತರೆಲ್ಲವರೂ ಸಭ್ಯರೆನ್ನಲಾಗದು! (ಹೆ)
-ಣ್ಣೆಲ್ಲಕ್ಕೂ ಹೊಣೆಯೆಂದವಳ ಬಿಟ್ಟಿರ್ಲಾಗದು!
ಹಕಾರವಿಲ್ಲದೆ ಸಂಸಾರ ನಡೆಯದು!
ಮಕಾರಾತಿರೇಕದಿಂದ ಸುಖವಾಗದು!
ವಾರ್ಧಿಕ್ಯಾದ್ಯವಸ್ಥೆಗಳ ಮರೆತಿರ್ಲಾಗದು!
ತಿ, ಸ್ಥಿತಿಗೆ ಪರಿಸ್ಥಿತ್ಯೇಕೆನ್ನಲಾಗದು!
ದುರಾಗ್ರಹಿ ನಿರಂಜನಾದಿತ್ಯನೆನ್ಲಾಗದು!!!

ಅಸಮಾಧಾನ ಪರಿಹಾರವೆಂತು?   4(1836)

ರ್ವವೂ ಗುರುಚಿತ್ತವೆಂದರಿತು!
ಮಾಯಾಮೋಹದಾಟವಿದೆಂದರಿತು!
ಧಾಮವೀ ದೇಹ ಅದಕ್ಕೆಂದರಿತು! (ಮೌ)
-ನದಿಂದ ಪ್ರಾರ್ಥಿಸಬೇಕು ನೀನಿಂತು!
ತಿತನೆಂಬೀ ನರಜನ್ಮವಾಯ್ತು!
ರಿಪುಗಳಾಟ ಬಲಿಯುತ್ತಾ ಹೋಯ್ತು!
ಹಾಲಿನಂತಿದ್ದ ಮನ ಮಲಿನಾಯ್ತು! (ವ)
-ರ ಗುರುಪಾದ ಸೇವೆ ತಪ್ಪಿ ಹೋಯ್ತು! (ಹೂ)
-ವೆಂಬ ಹೃದಯ ಅರಳದಂತಾಯ್ತು! (ಸೋ)
-ತು, ನಿರಂಜನಾದಿತ್ಯಾ ಶರಣಿಂತು!!!

ಅಸಹನೆ ಅಜ್ಞಾನದಿಂದಮ್ಮಾ!   1(373)

ರ್ವೇಶ್ವರ ಎಲ್ಲರವನಮ್ಮಾ!
ಗಲಿರುಳವನಾಜ್ಞೆಯಮ್ಮಾ!
ನೆನೆಯುತಿರಬೇಕವನಮ್ಮಾ!
ನ್ಯಥಾಲೋಚಿಸಬಾರದಮ್ಮಾ!
ಜ್ಞಾನದಿಂದ ಸಖವಿದೆಯಮ್ಮಾ!
ಶ್ವರವಿದೆಲ್ಲಾ ಬೋಗವಮ್ಮಾ!
ದಿಂಬಾಗಬೇಕು ತತ್ವಗಳಮ್ಮಾ!
ತ್ತಸೇವೆ ವ್ಯರ್ಥವಾಗದಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯ ತಾಯಮ್ಮಾ!

ಅಸಹನೆಯಿಂದಪಾರ ನಷ್ಟ!   4(2144)

ಹನೆಯಿಂದ ಸದಾ ಸಂತುಷ್ಟ!
ಠ ಸಾಧನೆಯಿಂದ ಸಂಕಷ್ಟ! (ಮ)
-ನೆಮನೆ ಸುತ್ತಾಟತಿ ನಿಕೃಷ್ಟ! (ತಾ)
-ಯಿಂದಾಗದೆಂದೆಂದಿಗೂ ಅನಿಷ್ಟ!
ತ್ತ ಕಳೆವನೆಲ್ಲಾ ಅರಿಷ್ಟ!
ಪಾದಸೇವೆ ಸದಾ ಸರ್ವೋತ್ಕೃಷ್ಟ!
ತಿಪತಿಯಿಷ್ಟ ಬಹು ಕಷ್ಟ!
ಳಿನಸಖನೆಲ್ಲರಾಪ್ತೇಷ್ಟ! (ಶ್ರೇ)
-ಷ್ಟ, ನಿರಂಜನಾದಿತ್ಯಾನಂದೇಷ್ಟ!!!

ಅಸುರ ನಾಶ, ವಿಜಯ ಘೋಷ!   1(353)

ಸುರರಾವೇಶ, ಅಮೃತ ಪ್ರಾಶ!
ಮೇಶಗಾಶ, ಮೋಹಿನಿ ವೇಶ!
ನಾಟ್ಯದುಲ್ಲಾಸ, ರಾಹು ಹತಾಶ!
ಶಿಯ ಹಾಸ, ಕೇತುಗಾಕ್ರೋಶ!
ವಿಧಿ ವಿಲಾಸ, ಜೀವರಾಭಾಸ!
ನನ ದೋಷ, ಜಗದ ಪಾಶ!
ತಿಪತೀಶ, ತ್ರಿಭುವನೇಶ!
ಘೋರ ಫಣೀಶ, ವಿಷ ಹರೇಶ!
ಣ್ಮುಕ ನಿರಂಜನಾದಿತ್ಯೇಶ!!!

ಅಸ್ಥಿರದ ದೇಹಕ್ಕೆ ಎಷ್ಟೊಂದೇರ್ಪಾಡು? (ಸ್ವ)   6(3799)

-ಸ್ಥಿತಿ ತಪ್ಪಿ ಹುಟ್ಟಿದ್ದ್ರಿಂದ ಈ ಮಾರ್ಪಾಡು!
ತಿಸುಖವೆಂಬುದಿದ್ದದ್ದ್ರಿಂದೀ ಪಾಡು!
ಶೇಂದ್ರಿಯಗಳಿಗೆ ಇದೊಂದು ಗೂಡು!
ದೇವರ ದರ್ಶನಕ್ಕಿದೇ ನಂಜನ್ಗೂಡು!
ರಕೆ ಹೊತ್ತು ಪ್ರಯತ್ನ ಪಟ್ಟು ನೋಡು! (ಹ)
-ಕ್ಕೆಲ್ಲರಿಗಾಗಿರುವುದೀ ಶಿವನ ಬೀಡು!
ಡವಿ ಬೀಳದಂತೆ ವರವ ಬೇಡು! (ಇ)
-ಷ್ಟೊಂದನ್ಕೂಲವಿಲ್ಲಿರುವಾಗೇಕೆ ಕಾಡು?
ದೇವರನ್ನು ನೋಡಿ ಊರಿಗೆ ಹೊರಡು! (ದ)
-ರ್ಪಾದಿಗಳೆಲ್ಲವನ್ನೂ ಇಲ್ಲೇ ಬಿಟ್ಬಿಡು! (ಆ)
-ಡು, ಶಿವ ನಿರಂಜನಾದಿತ್ಯನೆಂದ್ಹಾಡು!!!

ಅಸ್ಥಿರದ ಮನವ ನಂಬಿ ಕೆಡ್ಬೇಡ!   6(3817)

ಸ್ಥಿರ ಮನಸ್ಸಿನಾತ್ಮಾನಂದ ಬಿಡ್ಬೇಡ!
ಜಸ್ತಮನ್ಸಿನಾಹಾರ ಸೇವಿಸ್ಬೇಡ!
ರ್ಶನಕ್ಕಿದನಗತ್ಯವೆನಬೇಡ!
ಡದಿ, ಮಕ್ಕಳಲ್ಲಿ ವ್ಯಾಮೋಹ ಬೇಡ!
ಯನಾದಿಂದ್ರಿಯಾನಂದಕ್ಕಾಳಾಗ್ಬೇಡ!
ರ ಗುರುವಿನಾಜ್ಞೆ ಮೀರಲೇ ಬೇಡ!
ನಂಬಿ ನೀನೇ ನಂಜುಂಡ ತಾನಾಗ್ದಿರ್ಬೇಡ!
ಬಿಧಿ, ಹರಿ, ಹರರ್ಬೇರ್ಬೇರೆಂದೆನ್ಬೇಡ!
ಕೆಲ್ಸಕ್ಕಪ್ಪ ಹೆಸ್ರೆಂದರಿಯದಿರ್ಬೇಡ! (ಕೂ)
-ಡ್ಬೇಡ, ದುರ್ಜನರಿಷ್ಟಕ್ಕೊಳಗಾಗ್ಬೇಡ! (ಮೃ)
-ಡ ನಿರಂಜನಾದಿತ್ಯ ನೀನಾಗ್ದಿರ್ಬೇಡ!!!

ಅಸ್ಥಿರದಂದ, ಚಂದ ನಂಬಿ ಎಲ್ಲೆಲ್ಲೂ ದೊಂಬಿ!   6(3884)

ಸ್ಥಿರ ಶಾಂತಿ ಸುಖಕ್ಕೆ ಪರಮಾತ್ಮನ ನಂಬಿ!
ಸ ಜೇನಿಗಾಗಿ ಅರವಿಂದ ಬಂಧಿ ದುಂಬಿ!
ದಂಭ, ದರ್ಪ ತೋರಿ ಕೌರವಗೇನಾಯಿತೆಂಬಿ?
ಶರಥಗೆ ಪುತ್ರವಿಯೋಗವೆಂತಾಯ್ತೆಂಬಿ?
ಚಂದಕ್ಕೆ ಮರುಳಾದರಿಂಥಾ ಫಲವನ್ನುಂಬಿ!
ತ್ತ ದರ್ಶನವಾಯ್ತತ್ರಿಗೆ ನಿಜವ ನಂಬಿ!
ನಂದಕಂದನಿಂದುದ್ಧಾರವಾದರ್ಜುನ, ನಂಬಿ!
ಬಿದ್ದು ಹೋದ ದುರ್ಯೋಧನ ಮಯೆಯನ್ನು ನಂಬಿ!
ಲ್ಲೆಲ್ಲೂ ಪರಮಾತ್ಮನಿರುವನೆಂದು ನಂಬಿ! (ಗು)
-ಲ್ಲೆಬ್ಬಿಸಬೇಡಿ ವೇಷಧಾರಿಗಳನ್ನು ನಂಬಿ! (ಕೊ)
-ಲ್ಲೂರು ಮೂಕಾಂಬಿಕೆ ನಿಮ್ಮ ಮನಸ್ಸೆಂದೇ ನಂಬಿ! (ಒಂ)
-ದೊಂದು ಗುಣವನ್ನೂ ಅಳವಡ್ಸಿದನ್ನು ನಂಬಿ! (ನಂ)
-ಬಿ, ನಿರಂಜನಾದಿತ್ಯ ನೀವಾಗಲಿದ ನಂಬಿ!!!

ಅಸ್ಥಿರದಲ್ಲಸ್ಥಿರ ವಿಜ್ಞಾನ ಯುಗ!   6(3926)

ಸ್ಥಿತಿ, ಗತಿಯ ಸಂಶೋಧನೆಯ ಯುಗ!
ತಿ ಸುಖಕ್ಕೆ ವಿವಿಧಾಟದ ಯುಗ!
ರಿದ್ರ, ಶ್ರೀಮಂತ ಹೋರಾಡುವ ಯುಗ! (ಇ)
-ಲ್ಲ ಸಲ್ಲದಪಾರ್ಥ ಕಲ್ಪಿಸುವ ಯುಗ! (ಸ್ವ)
-ಸ್ಥಿತಿಯಲ್ಲಿರಲಿಕ್ಕಿಚ್ಛಿಸದ ಯುಗ!
ಮ್ಯ ನೋಟ, ಕೂಟ ನಿರ್ಮಾಣದ ಯುಗ!
ವಿಷ ಮಿಶ್ರಾಹಾರ ಪದಾರ್ಥದ ಯುಗ!
ಜ್ಞಾನ ಕೆಡಿಪಮಲು ಸೇವನಾ ಯುಗ!
ರ, ನಾರಿಯರಿಗಿದಿಷ್ಟದ ಯುಗ!
ಯುವತಿ ಸ್ಥಾನ, ಮನಕ್ಕಾಶಿಪ ಯುಗ! (ಯೋ)
-ಗ ನಿರಂಜನಾದಿತ್ಯೈಕ್ಯವೆಂದ ಯುಗ!!!

ಅಹಂ ಮದ ಮಹಮ್ಮದಗಿಲ್ಲಾ!   3(1114)

ಹಂಸಾತ್ಮನವನಾಗಿದ್ದಾನಲ್ಲಾ!
ದ, ಮತ್ಸರಗಳವಗಿಲ್ಲಾ!
ಯಾ ಹೃದಯನಾಗಿರ್ಪನಲ್ಲಾ!
ನೆ, ಮಠದಾಸೆಯೊಲ್ಲನಲ್ಲಾ!
ಗಲಿರುಳಲ್ಲಲ್ಲ ತಾನೆಲ್ಲಾ! (ತ)
-ಮ್ಮವರೆಲ್ಲರಾಗಿರುವರಲ್ಲಾ!
ನ, ಕರೂ ತಾನಾಗಿಹನಲ್ಲಾ (ತ್ಯಾ)
-ಗಿಯಿವ ಸಾಮಾನ್ಯ ಜೀವನಲ್ಲಾ! (ಎ)
-ಲ್ಲಾ ಶ್ರೀ ನಿರಂಜನಾದಿತ್ಯನಲ್ಲಾ!!!

ಅಹಂಕಾರಕ್ಕನಾದರೌಷಧಿ! [ಸೋ]   4(2314)

-ಹಂ ಮಂತ್ರಕ್ಕಹಂಕಾರಿ ವಿರೋಧಿ!
ಕಾಮಾಂಧತೆಯಿಂದವಪರಾಧಿ! (ಪ)
-ರನಿಂದೆಯವಗಾಕಳ ದಧಿ! (ಅ)
-ಕ್ಕಪಕ್ಕದ, ಹೊಲ್ಸವನ ನಿಧಿ!
‘ನಾ’, “ನೀ”ನೆಂಬರ್ಗವ ಪ್ರತಿನಿಧಿ! (ಮ)
-ದ, ಮಾತ್ಸರ್ಯವನ ಪೂಜಾವಿಧಿ!
ರೌದ್ರ ಸ್ವರೂಪವನ ಸನ್ನಿಧಿ!
ಡ್ರಿಪುಗಳ್ಗಾತಾಪ್ತ ಸಂಬಂಧಿ! (ಅ)
-ಧಿಪ ನಿರಂಜನಾದಿತ್ಯಕ್ಕ್ರೋಧಿ!!!

ಅಹಂಕಾರಕ್ಕೆ ಪ್ರಸಾದವಿಲ್ಲಮ್ಮಾ!   2(499)

ಹಂಗಿಸಿದರೆ ಇದು ಸಿಗದಮ್ಮಾ!
ಕಾದಿದ್ದವರಿಗಿದು ಲಭ್ಯವಮ್ಮಾ (ಅ)
-ರಸಿ ಬಹರಿದಕೂರೂರಿಂದಮ್ಮಾ!
ಕ್ಕೆಲಸವಿದಕೆಂತ ಬೇರೇನಮ್ಮಾ!
ಪ್ರಯತ್ನವಿಲ್ಲದೇನೂ ಸಿಗದಮ್ಮಾ!
ಸಾಬರೂ ಸಾಧುಗಳಿದರಿಂದಮ್ಮಾ!
ತ್ತನಿಗಾವ ಭೇದವೂ ಇಲ್ಲಮ್ಮಾ!
ವಿಚಾರವಿದನರಿತು ಬಾಳಮ್ಮಾ! (ಅ)
-ಲ್ಲದೊಲ್ಲದ ವಿವಾದ ಬೇಡವಮ್ಮಾ! (ಅ)
-ಮ್ಮಾ! ನಿರಂಜನಾದಿತ್ಯ ಪ್ರಸಾದಮ್ಮಾ!!!

ಅಹಂಕಾರದಿಂದಖಂಡ ಖಂಡ!   4(2458)

ಹಂಸಾತ್ಮನ ಮರೆತಾಯ್ತು ಖಂಡ!
ಕಾಮ ಕಾರಣವಾಗ್ಯಾಯ್ತು ಖಂಡ! (ಹ)
-ರ, ಹರಿ ಭೇದಗಳೆಲ್ಲಾ ಖಂಡ! (ತ)
-ದಿಂಗಿತವರಿತರಿಲ್ಲಾ ಖಂಡ!
ತ್ತ ದರ್ಶನದಿಂದದಖಂಡ!
ಖಂಡ ತುಂಡಕ್ಕಾಗಿ ಕರ್ಮಕಾಂಡ! (ಮಾ)
-ಡದಾದನಿದ ಮಾನವ ಭಂಡ! (ಅ)
-ಖಂಡಾತ್ಮವೀ ತೋರುವ ಬ್ರಹ್ಮಾಂಡ! (ಗಂ)
-ಡ, ನಿರಂಜನಾದಿತ್ಯನಖಂಡ!!!

ಅಹಂಕಾರದಿಂದಲಂಕಾರಮ್ಮಾ!   5(2688)

ಹಂಬಲ ಗುರುವಿನದ್ದಿಲ್ಲಮ್ಮಾ!
ಕಾಮ್ಯ ಜೀವನದ ಫಲದಮ್ಮಾ!
ಕ್ತ, ಮಾಂಸದ ಗೊಂಬೆಯಿದಮ್ಮಾ!
ದಿಂಡಾಗಿ ಬೆಳೆಸಿದ್ರೇನ್ಸುಖಮ್ಮಾ?
ತ್ತಗೀತೆಯನ್ನೊಮ್ಮೆ ಓದಮ್ಮಾ!
ಲಂಕೇಶನ ಗತಿಯೇನಾಯ್ತಮ್ಮಾ?
ಕಾರುಣ್ಯಮೂರ್ತಿ ಸೀತಾರಾಮಮ್ಮಾ!
ಮಣನವನಮರನಮ್ಮಾ (ಅ)
-ಮ್ಮಾ! ನಿರಂಜನಾದಿತ್ಯಾರಾಮಮ್ಮಾ!!!

ಅಹಿತವಾಗದು ನಿನಗೆ ನನ್ನಿಂದ!   5(2864)

ಹಿರಿಯರ ಹಿರಿಯನಾದ ನನ್ನಿಂದ!
ತ್ವೋಪದೇಶವಾಗಿಹುದು ನನ್ನಿಂದ!
ವಾದಿಸಿ ಬೇರೆಯಾಗದಿರು ನನ್ನಿಂದ!
ತಿ, ಸ್ಥಿತಿಗೆ ಹೇತುವಾದ ನನ್ನಿಂದ!
ದುರಿತದೂರನಾಗಿರುವ ನನ್ನಿಂದ!
ನಿನಗೆ ಬರುತಿದೆ ಶಕ್ತಿ ನನ್ನಿಂದ!
ಶ್ವರದಾಸೆಗಳಳಿದ ನನ್ನಿಂದ!
ಗೆಲುವಾಗುವುದು ನಿನಗೆ ನನ್ನಿಂದ!
ರಹರಿಯಾಗುವೆ ನೀನು ನನ್ನಿಂದ! (ನಿ)
-ನ್ನಿಂದನ್ಯ ನಾನೆನಲಾಗದು ನನ್ನಿಂದ! (ಕಂ)
-ದ ನಿರಂಜನಾದಿತ್ಯಗಾಗಿಂದಿನಿಂದ!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ