ಔಷಧಿ ತಿಂದುಂಬಭ್ಯಾಸ ಬೇಡ! (ಉ) 3(1002)
-ಷಃ ಕಾಲದಲ್ಲೇಳದಿರಬೇಡ! (ಅ)
-ಧಿಪತಿಯ ಧ್ಯಾನ ಬಿಡಬೇಡ!
ತಿಂಡಿ, ತೀರ್ಥದಿಚ್ಛೆ ಆಗಬೇಡ! (ಔ)
-ದುಂಬರದ ಪೂಜೆ ಬಿಡಬೇಡ!
ಬಹುದೇನದರಿಂದೆನಬೇಡ! (ಅ)
-ಭ್ಯಾಸ ಮಾಡದೇನೂ ಹೇಳಬೇಡ!
ಸದಾಚಾರಕ್ಕನಾದರ ಬೇಡ!
ಬೇಡಿ, ಕಾಡಿ ಕೆಟ್ಟು ಹೋಗಬೇಡ! (ಮಾ)
-ಡ, ನಿರಂಜನಾದಿತ್ಯ ಪವಾಡ!!!
ಔಷಧಿಯನ್ನವಲಂಬಿಸಿರಬೇಡ! (ದೋ) 4(1626)
-ಷವದರ ಮೇಲೆ ಆರೋಪಿಸಬೇಡ! (ಅ)
-ಧಿಕಾರ ಶಾಶ್ವತವೆಂದರಿಯಬೇಡ!
ಯಮ, ನಿಯಮದಭ್ಯಾಸ ಬಿಡಬೇಡ! (ಅ)
-ನ್ನದಗತ್ಯವಿಲ್ಲದಾಗ ಉಣ್ಣಬೇಡ!
ವಸ್ತ್ರ, ಭೂಷಣದತ್ಯಾಡಂಬರ ಬೇಡ!
ಲಂಚದಿಂದಲ್ಪ ಸ್ವಾರ್ಥ ಸಾಧಿಸಬೇಡ!
ಬಿಟ್ಟಿಯಾಗಿ ಯಾರನ್ನೂ ದುಡಿಸಬೇಡ!
ಸಿರಿತನಕ್ಕಹಂಕಾರ ಪಡಬೇಡ! (ಪ)
-ರ ದಾರಾ, ಧನಕ್ಕೆಂದೂ ಆಶಿಸಬೇಡ!
ಬೇಕು ಸದ್ಗುರು ಸೇವೆ! ಮರೆಯಬೇಡ! (ಆ)
-ಡ ನಿರಂಜನಾದಿತ್ಯನೃತವನ್ನಾಡ!!!

ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
