ಉಂಡಾದ್ಮೇಲೈದ್ನಿಮಿಷ ವಿರಾಮ! (ಉ) 6(3573)
-ಡಾಹಿಸಿದ್ಮೇಲ್ವಿಮಾನ ದಿಗ್ಭ್ರಮ! (ಹೋ)
-ದ್ಮೇಲೆ ಬಹಳದೂರ ವಿಕ್ರಮ! (ಓ)
-ಲೈಸಿದ್ಮೇಲೊಡ್ಡೋಲಗ ಸಂಭ್ರಮ! (ಇ)
-ದ್ನಿನ್ನ, ನನ್ನ ಯೋಗದೊಂದು ಕ್ರಮ!
ಮಿತ್ರಗಿದ್ರ ಪೂರ್ಣ ಪರಿಶ್ರಮ!
ಷಣ್ಮುಖಗಾನಂದ ಪರಾಕ್ರಮ!
ವಿರಕ್ತ ದತ್ತಾವಧೂತಾಶ್ರಮ!
ರಾತ್ರಿ, ಹಗಲನುಷ್ಠಾನ ಪ್ರೇಮ! (ಪ್ರೇ)
-ಮ ನಿರಂಜನಾದಿತ್ಯ ಸುನಾಮ!!!
ಉಂಡು ತಿಂದು ಭಂಡನಾಗಬೇಡ! [ಗಂ] 2(735)
-ಡುಗಲಿ ನೀನಾಗದಿರಬೇಡ!
ತಿಂಗಳು ದಿನವೆಣಿಸಬೇಡ! (ಬ)
-ದುಕು ಬಾಳಿಗಾಗಿ ಅಳಬೇಡ! [ಅ]
-ಭಂಗ ಹಾಡ್ಯನಂಗನಾಗಬೇಡ! (ಹ)
-ಡಗು ಹತ್ತಿ ಎದೆಗೆಡಬೇಡ!
ನಾಮ ಜಪ ಮಾತ್ರ ಬಿಡಬೇಡ! (ಹ)
-ಗಲಿರುಳೆಂಬ ಭೇದ ಬೇಡ!
ಬೇರೆ ಯೋಚನೆಯ ಮಾಡಬೇಡ! (ಬಿ)
-ಡ ನಿರಂಜನಾದಿತ್ಯ ಕೈ ಬಿಡ!!!
ಉಂಡು, ತಿಂದುಟ್ಟಳುವ ಬಾಳೇತಕಯ್ಯಾ? 1(266)
-ಡುವುದೊಂದು ಮಾಡುವುದಿನ್ನೊಂದೇಕಯ್ಯಾ?
ತಿಂದಜೀರ್ಣ ಮಾಡಿಕೊಳಬಾರದಯ್ಯಾ!
ದುರಿತಾಂತಕನ ಸೇವೆಗಾಗುಣ್ಣಆ! (ಅ)
-ಟ್ಟಹಾಸದ ಬಟ್ಟೆ, ಬರೆ ವ್ಯರ್ಥವಯ್ಯಾ! (ಆ)
-ಳುಗಳವಲಂಬನದ ಬಾಳ್ಗೋಳಯ್ಯಾ!
ವಡೆವೆ, ವಸ್ತು ಕಳ್ಳರ ಪಾಲಿಗಯ್ಯಾ!
ಬಾಗಿ ಗುರು ಪಾದಕ್ಕೆ ಬಾಳಬೇಕಯ್ಯಾ! (ಆ)
-ಳೇ ತನಗೆ ತಾನಾಗಿ ಅನದಿಸಯ್ಯಾ!
ತತ್ವ ಚಿಂತನೆ ನಿರಂತರಮಾಡಯ್ಯಾ!
ಕಮಲ ಮಿತ್ರನಿಂದಿದ ಕಲಿಯಯ್ಯಾ! (ಅ)
-ಯ್ಯಾ! ಆತನೇ ನಿರಂಜನಾದಿತ್ಯನಯ್ಯಾ!!!
ಉಂಡುಂಡೆಯಾದ ಸೆಂಡಿಗೆಯುಂಡೆ! (ಆ) 4(2325)
-ಡುಂಬೊಲದಲ್ಲಿ ಜೀರ್ಣಿಸಿಕೊಂಡೆ! (ಕ)
-ಡೆಗೊಂದೆಡೆ ವಿಶ್ರಮಿಸಿಕೊಂಡೆ!
ಯಾಕಿನ್ನಾಟವೆಂದು ನಾನಂದ್ಕೊಂಡೆ!
ದತ್ತನೇ ಗತಿ ನನಗಂದ್ಕೊಂಡೆ! (ಆ)
-ಸೆಂಬುದಿರಬಾರದೆಂದುಕೊಂಡೆ! (ಅ)
-ಡಿಗೆರಗಿ ವರ ಬೇಡಿಕೊಂಡೆ! (ಕಂ)
-ಗೆಡದೆ ಸಾಧನೆ ಮಾಡಿಕೊಂಡೆ! (ತಾ)
-ಯುಂಬೆಡೆಗೋಡಿ ನಾ ಕೂದಿಕೊಂಡೆ! (ಕಂ)
-ಡೆ ನಿರಂಜನಾದಿತ್ಯನಂದ್ಕೊಂಡೆ!!!
ಉಂಡೆ, ಚಕ್ಕುಲಿಗಳುಂಡೆಯೇನು? (ಉಂ) 4(1633)
-ಡೆನವುಗಳೀಗದರಿಂದೇನು? (ವಂ)
-ಚನೆಯದಾರೋಗ್ಯಕ್ಕಲ್ಲವೇನು? (ಇ)
ಕ್ಕುವಾಗೆಚ್ಚರವಿರಬೇಡ್ವೇನು? (ಕ)
-ಲಿತವ ನಿನ್ನಂತೆ ಅವನೇನು? (ಸಂ)
-ಗಡಿಗ ನೀನಾಗಿರಲಿಲ್ಲೇನು? (ಗೋ)
-ಳುಂಬಾಗ ಬೇಡವೆಂದಿದ್ದೆ ನಾನು! (ಬಿ)
-ಡೆ ನಾನದರಾಸೆ ಹೋಗು ನೀನು!
ಯೇನೆಂಬೆ ನಿನ್ನವಿವೇಕಕ್ಕಾನು? (ನೀ)
-ನು ನಿರಂಜನಾದಿತ್ಯಾಗ್ಬಾರ್ದೇನು???
ಉಂಬಲಾರದಾಗಾಹಾರಂಬಲಿ! 4(1676)
ಬಡವರ ಪ್ರಾಣಾಧಾರಂಬಲಿ!
ಲಾಭದಾಯಕ ರೋಗಿಗಂಬಲಿ!
ರಕ್ತದೋಟಕ್ಕನುಕುಲಂಬಲಿ!
ದಾನವಾಗಲನುದಿನಂಬಲಿ!
ಗಾಯ ಮಾಯಲಿಕ್ಕೆ ಬೇಕಂಬಲಿ!
ಹಾಯಾಗಿರುವುದೂಟಕ್ಕಂಬಲಿ!
ರಂಗಗಾನಂದ ಮೊಸರಂಲಲಿ!
ಬಲವೆಲ್ಲರಿಗೀವುದಂಬಲಿ! (ಮಾ)
-ಲಿಕ ನಿರಂಜನಾದಿತ್ಯಾಂಬಲಿ!!!
ಉಗುಳದ ಆಹಾರ ಬಾಯಿಗಿರಲಿ! 1(201)
ಗುರುವಿನನುಗ್ರಹ ಬಾಳಿಗಿರಲಿ! (ಸೀ)
-ಳದಂಥಾ ಮರಗಳು ಉಳಿದಿರಲಿ!
ದಯಾಪೂರ್ಣವಾದ ಮನಸಿರಲಿ!
ಆಳಲಾಗುವ ಪ್ರಜೆಗಳು ಇರಲಿ!
ಹಾದರವರಿಯದ ಸತಿ ಇರಲಿ!
ರತ್ನಹಾರ ಸತ್ಯಭಾಮೆಗೇ ಇರಲಿ!
ಬಾನಿನಲಾದಿತ್ಯನೇ ವಿರಾಜಿಸಲಿ!
ಯಿಷ್ಟ ಅವನೊಬ್ಬನಲ್ಲೇ ಆಗಿರಲಿ!
ಗಿರಿಧರನಾಪದ್ಬಂಧುವಾಗಿರಲಿ!
ರಘುನಾಥನಾಥ ನಾಥನಾಗಿರಲಿ (ಅ)
-ಲಿಪ್ತ ನಿರಂಜನಾದಿತ್ಯನಾಗಿರಲಿ!!!
ಉಗ್ರಾಣದಲ್ಲಿದೆ ಹೆಗ್ಗಣದ ಹೆಣ! 5(2508)
ಗ್ರಾಮಸ್ಥರೊಂದಾಗ್ಯೆತ್ತಿಹಾಕ್ಬೇಕಾ ಹೆಣ! (ಕ್ಷ)
-ಣಕ್ಷಣಕ್ಕೂ ಕೊಳೆಯುತ್ತಿಹುದಾ ಹೆಣ!
ದಫೇದಾರಗೆ ಹೆದ್ರಿ ಓಡದಾ ಹೆಣ! (ಅ)
-ಲ್ಲಿ, ಇಲ್ಲಿ ತಡಕಿದ್ರೆ ಸಿಕ್ಕದಾ ಹೆಣ! (ಎ)
-ದೆಗೆಡ್ದರಸ್ಬೇಕುಗ್ರಾಣದಲ್ಲಾ ಹೆಣ!
ಹೆಚ್ಚು ವಿಳಂಬವಾದ್ರನಾರೋಗ್ಯಾ ಹೆಣ! (ಜ)
ಗ್ಗದಾವ ಯಂತ್ರ, ಮಂತ್ರ, ತಂತ್ರಕ್ಕಾ ಹೆಣ! (ಜಾ)
-ಣತನದಿಂದ ಹೊರಗೆ ತಂದ್ರೆ ಗುಣ!
((ತಂ)) ದಮೇಲೊಳಗೆಲ್ಲಾ ತೊಳೆದ್ರೆಲ್ಲಾ ಗುಣ!
ಹೆರವರಿಗೂ, ತನಗೂ ಆಗ ಗುಣ! (ಹೆ)
-ಣ, ನಿರಂಜನಾದಿತ್ಯಗೆ ರೋಗ ಗಣ!!!
ಉಚ್ಚೆ ಕುಡಿದ್ರೂ ತನ್ನಿಚ್ಛೆಯಲ್ಲಿರ್ಬೇಕು! [ಕೆ] 5(3178)
-ಚ್ಚೆದೆಗಾರಬಲರ ಕಾಡದಿರ್ಬೇಕು!
ಕುಲೀನೆ ವೇಶ್ಯಾ ಸ್ನೇಹ ಮಾಡದಿರ್ಬೇಕು! (ನೀ)
-ಡಿದ್ರೂ ಬೀಡಿ, ಸಿಗ್ರೇಟು ಸೇದದಿರ್ಬೇಕು! (ತ)
-ದ್ರೂಪ ಸಿದ್ಧಿಗಿದನ್ನೆಲ್ಲಾ ಪಾಲಿಸ್ಬೇಕು!
ತತ್ವ ಚಿಂತನೆ ಸದಾ ಮಾಡುತ್ತಿರ್ಬೇಕು! (ತಿ)
-ನ್ನಿಸಲ್ತಂದ್ರೂ ಮಾಂಸಾಹಾರ ವರ್ಜಿಸ್ಬೇಕು! (ಇ)
-ಚ್ಛೆಗಳೈಹಿಕಕ್ಕೆ ಕಡಿಮೆಯಾಗ್ಬೇಕು! (ಪ್ರಾ)
-ಯಕ್ಕೆ ತಕ್ಕ ವ್ಯಾಯಾಮ ನಿತ್ಯ ಮಾಡ್ಬೇಕು!
(ಎ)ಲ್ಲಿ, ಹೇಗೆ ನಡ್ಕೊಳ್ಬೇಕೆಂದರಿತಿರ್ಬೇಕು! (ಬ)
-ರ್ಬೇಕ್ಸನ್ನಿಧಿಯಲ್ಲಿಷ್ಟ ಜಪ ಮಾಡ್ಬೇಕು!
ಕುಲ ನಿರಂಜನಾದಿತ್ಯನದ್ದಾಗ್ಬೇಕು!!!
ಉಣಿಸಿ, ಕುಣಿಸಿ, ದಣಿಸಿತು ಹೆಣ್ಣು! (ಮ) 6(3766)
-ಣಿಸಿ ಗೋಣೂ ಮುರಿಯಿತಾ ಮಾಯೆ ಹೆಣ್ಣು!
ಸಿರಿ ಸಂಪತ್ತಿತ್ತು ಮೆರೆಸಿತಾ ಹೆಣ್ಣು!
ಕುತಂತ್ರದಿಂದ ಬಂಧಿಸಿತು ಆ ಹೆಣ್ಣು! (ಗ)
-ಣಿಕೆಯಾಗಿ ಬಹು ಭೋಗಿಯಾಯ್ತಾ ಹೆಣ್ಣು!
ಸಿಪ್ಪೆಯುಳಿದಾಗಪ್ಪಳಿಸಿತಾ ಹೆಣ್ಣು!
ದಶರಥನ ಪ್ರಾಣ ಹೀರಿತಾ ಹೆಣ್ಣು! (ರಾ)
-ಣಿಯಾಗಿ ರಾಜ್ಯಭಾರ ಮಾಡಿತಾ ಹೆಣ್ಣು!
ಸಿಕ್ಕಿಬಿದ್ದಾಗ ಕಕ್ಕಾಬಿಕ್ಕ್ಯಾಯ್ತಾ ಹೆಣ್ಣು!
ತುದಿ ಮೊದಲಿಲ್ಲದ ಆಟದ್ದೀ ಹೆಣ್ಣು!
ಹೆತ್ತು ಜಗತ್ತಿಗೇ ತಾಯಿಯಾಯ್ತೀ ಹೆಣ್ಣು! (ಕ)
-ಣ್ಣುರ್ವಿಗೆ ನಿರಂಜನಾದಿತ್ಯಾಗೀ ಹೆಣ್ಣು!!!
ಉಣಿಸುವಳು, ತಣಿಸುವಳಾ ಗಂಗೆ! (ಎ) 2(980)
-ಣಿಸಳುಚ್ಛ, ನೀಚ ಗುಣಗಳಾ ಗಂಗೆ!
ಸುಪುತ್ರ, ಪುತ್ರಿಯರಿತ್ತವಳಾ ಗಂಗೆ!
ವರ ಯೋಗೀಶ್ವರನಿಗಾಪ್ತಳಾ ಗಂಗೆ! (ಪಾ)
-ಳು ಭೂಮಿಯ ಪಾವನ ಗೈವಳಾ ಗಂಗೆ!
ತಳಮಳಗಳಿಲ್ಲದವಳಾ ಗಂಗೆ! (ಪ್ರಾ)
-ಣಿ ಕೋಟಿಯ ಪ್ರಾಣಕ್ಕಾಧಾರಳಾ ಗಂಗೆ!
ಸುರ, ನರೋರಗರಿಷ್ಟಾರ್ಥಳಾ ಗಂಗೆ!
ವರ ಭಗೀರಥಗಿತ್ತವಳಾ ಗಂಗೆ! (ಆ)
-ಳಾದವಗಡಿಯಾಳಾದವಳಾ ಗಂಗೆ!
ಗಂಗಾಧರ ಶಿರ ಶೋಭಾಂಗಳಾ ಗಂಗೆ! (ಬ)
-ಗೆ, ನಿರಂಜನಾದಿತ್ಯನೆಂಬಳಾ ಗಂಗೆ!!!
ಉತ್ತಮ ಕಾಲ ... ಅಂತ್ಯ ಕಾಲ! 1(10)
ಉತ್ತಮ ಲಕ್ಷ್ಯ ... ನಿರ್ಲಕ್ಷ!
ಉತ್ತಮ ಚಕ್ರ ... ಕಾಲ ಚಕ್ರ!
ಉತ್ತಮ ಕ್ರಮ ... ತ್ರಿವಿಕ್ರಮ!
ಉತ್ತಮಾ ಪುರುಷೋತ್ತಮ! (ಅ) 2(560)
-ತ್ತ ಇತ್ತಾ ಪುರುಷೋತ್ತಮ!
ಮಾಧವಾ ಪುರುಷೋತ್ತಮ!
ಪುರಾಣ ಪುರುಷೋತ್ತಮ! (ಗು)
-ರುರಾಮಾ ಪುರುಷೋತ್ತಮ! (ವೇ)
-ಷೋತ್ತಮಾ ಪುರುಷೋತ್ತಮ! (ಉ)
-ತ್ತಮಾಂಗಾ ಪುರುಷೋತ್ತಮ! (ಮ)
-ಮ ನಿರಂಜನಾ ಉತ್ತಮ!!!
ಉತ್ತಮೋತ್ತಮ,ಅಧಮಾಧಮ ನೀನೇ! (ಹ) 4(1559)
-ತ್ತವತಾರವೆತ್ತಿದತ್ಯುತ್ತಮ ನೀನೇ!
ಮೋಸ, ಕೃತ್ರಿಮದಧಮಾಧಮ ನೀನೇ! (ಚಿ)
-ತ್ತ ಶುದ್ಧಿಯ ಪುರುಷೋತ್ತಮನೂ ನೀನೇ!
ಮದ, ಮತ್ಸರದ ಮಾನವನೂ ನೀನೇ!
ಅರಸನಾಗಿ ಮೆರೆವಾತನೂ ನೀನೇ
ಧನಹೀನನಾದ ದರಿದ್ರನೂ ನೀನೇ!
ಮಾರಹರ ಪರಮೇಶ್ವರನೂ ನೀನೇ! (ಅಂ)
-ಧಕಾರಾವೃತ ನರಕುರಿಯೂ ನೀನೇ!
ಮಮಕಾರ ರಹಿತ ವಿರಕ್ತನೂ ನೀನೇ!
ನೀತಿಬಾಹಿರಾಚಾರಸಕ್ತನೂ ನೀನೇ! (ನೀ)
-ನೇ ನಿರಂಜನಾದಿತ್ಯ ಸರ್ವಾತ್ಮ ನೀನೇ!!!
ಉತ್ತರಾಧಿಕಾರ್ಯುತ್ತರನಾಗ್ಬಾರದು! (ಮ) 4(2094)
-ತ್ತನಾದವ ಸಿಂಹಾಸನವೇರ್ಬಾರದು!
ರಾಣೀವಾಸದಲ್ಲಿ ಸದಾ ಇರ್ಬಾರದು!
ಧಿಕ್ಕಾರಾರನ್ನೂ ಮಾಡ್ವವನಾಗ್ಬಾರದು!
ಕಾಲು ಕೆದ್ರಿ ಜಗಳಕ್ಕೆ ಹೋಗ್ಬಾರದು! (ವೈ)
-ರುಗ್ರನಾಗಿಹನೆಂದು ಅಂಜಿರ್ಬಾರದು! (ಕ)
-ತ್ತರಿಸದೇ ಅವನನ್ನು ಬಿಡ್ಬಾರದು! (ಶ)
-ರಣಾಗತರನ್ನೆಂದೂ ನೋಯಿಸ್ಬಾರದು!
ನಾಮ ಭಜನೆಯನ್ನುಪೇಕ್ಷಿಸ್ಬಾರದು! (ಹೋ)
-ಗ್ಬಾರದ ಜಾಗಕ್ಕೇನಾದ್ರೂ ಹೋಗ್ಬಾರದು! (ವ)
-ರ ಗುರು ದ್ರೋಹಿಯನ್ನೆಂದೂ ನೊಡ್ಬಾರದು! (ತಿಂ)
-ದು, ನಿರಂಜನಾದಿತ್ಯಗೆ ಕೊಡ್ಬರದು!!!
ಉತ್ಸವಾ ಸಚ್ಚಿದಾನಂದಾತ್ಮೋತ್ಸವ! (ಸ) 2(561)
-ತ್ಸಹವಾಸ ಸತತಾನಂದೋತ್ಸವ! (ಭಾ)
-ವಾನಂದಾ ಶ್ರೀರಾಮ ಭಜನೋತ್ಸವ!
ಸಹಜಾನಂದಾರಾಮ ಜನ್ಮೋತ್ಸವ! (ಸ)
-ಚ್ಚಿದಾತ್ಮಾನಂದ ಸ್ಥಿತಿ ನಿತ್ಯೋತ್ಸವ! (ಸ)
-ದಾನಂದಾ ನಾಮ ಸಂಕೀರ್ತನೋತ್ಸವ! (ಆ)
-ನಂದತ್ಯಾನಂದಾ ಪಾದ ಪೂಜೋತ್ಸವ!
-ದಾತ, ನಾಥಾಂಜನೇಯ ಭಾವೋತ್ಸವ! (ಆ)
-ತ್ಮೋತ್ಸವಾರಾಮ ಸರ್ನೋತ್ತಮೋತ್ಸವ! (ಉ)
-ತ್ಸವಾರಾಮ ಪಟ್ಟಾಭಿಷೇಕೋತ್ಸವ!
ವರ ನಿರಂಜನಾದಿತ್ಯನುತ್ಸವ!!!
ಉತ್ಸಾಹ ಭಂಗ, ಭಯ ತರಂಗ! (ತ) 3(1177)
-ತ್ಸಾಧನೆಗಭಯಾಂಗಾ ಶ್ರೀರಂಗ!
ಹದ್ದು ಮೀರಬಾರದಾ ತರಂಗ!
ಭಂಗಿಸಬೇಕದನಾ ಶ್ರೀರಂಗ!
ಗತಿಗೆಡಿಸುವುದಾ ತರಂಗ!
ಭಕ್ತಗೆ ಗತಿಯಾಗಾ ಶ್ರೀರಂಗ!
ಯಮ ಸ್ವರೂಪ ಮಾಯಾ ತರಂಗ!
ತತ್ವಾರ್ಥಾತ್ಮ ಪ್ರಮೇಯಾ ಶ್ರೀರಂಗ!
ರಂಗ, ವಿಷಯ ರಂಗಾ ತರಂಗ! (ರಂ)
-ಗ, ನಿರಂಜನಾದಿತ್ಯಾ ಶ್ರೀರಂಗ!!!
ಉತ್ಸಾಹ ರಹಿತ ಸೇವೆ ವ್ಯರ್ಥ! (ತಾ) 6(4148)
-ತ್ಸಾರ ಮನೋಭಾವವಿದೆಂದರ್ಥ!
ಹರಿ, ಹರರಿಗೂ ಇದೆ ಸ್ವಾರ್ಥ!
ರಹಿತ, ಸಹಿತನಾಗ್ಲೆಂದರ್ಥ!
ಹಿತೈಷಿಗೆ ಬೇಕಿಲ್ಲನ್ಯರರ್ಥ!
ತಪಸ್ಸಿನ ಫಲವುಂಡ ಪಾರ್ಥ!
ಸೇವಕನಿಂತಾದರೆ ಕೃತಾರ್ಥ!
ವೆಸನ ನಾಶಕ್ಕೆ ಪರಮಾರ್ಥ!
ವ್ಯಭಿಚಾರದಿಂದಾಗ್ವುದನರ್ಥ!!!
ಉತ್ಸಾಹಕ್ಕೆ ಪ್ರೋತ್ಸಾಹವಿರಬೇಕು! (ಪ್ರೋ) 5(3053)
-ತ್ಸಾಹಕ್ಕೆ ಉತ್ಸಾಹವೂ ಇರಬೇಕು!
ಹಗಲಿರುಳ್ದುಡಿವಾಗಿಂತಿರ್ಬೇಕು! (ಧ)
-ಕ್ಕೆ ಧರ್ಮಕ್ಕುಂಟು ಮಾಡದಿರಬೇಕು!
ಪ್ರೋತ್ಸಾಹೋತ್ಸಾಹ ಅನ್ಯೋನ್ಯವಿರ್ಬೇಕು! (ತಾ)
-ತ್ಸಾರವೀರ್ವರಲ್ಲೂ ಇಲ್ಲದಿರ್ಬೇಕು! (ಇ)
-ಹ, ಪರ ಸಾಧನೆ ಹೀಗೆ ಸಾಗ್ಬೇಕು!
ವಿಶ್ವಾಸ ಗೀತೆ ಉಳಿಸಿಕೊಡ್ಬೇಕು! (ಪ)
-ರ ಮತದ ಹುಚ್ಚು ಬಿಡಿಸಬೇಕು!
ಬೇಡಿಕೆಯಿದು ಪೂರ್ತಿಯಾಗಬೇಕು! (ಸಾ)
-ಕು ನಿರಂಜನಾದಿತ್ಯಗಿನ್ನೇನ್ಬೇಕು???
ಉತ್ಸಾಹವಿದ್ದರೆಲ್ಲಾ ಕೇಶವ! (ಉ) 6(4216)
-ತ್ಸಾಹವಿಲ್ಲದಿದ್ದರೆಲ್ಲಾ ಶಿವ!
ಹರ್ಷಕ್ಕಾಗಿಡು ಸ್ವಚ್ಛ ಮನವ!
ವಿಷಯ ಮುಕ್ತ ಮಾನವ ಶಿವ! (ವ)
-ದ್ದದಕ್ಕೆ ರಾಮ ಜಪ ನೀಡುವ! (ಧ)
-ರೆಯ ವ್ಯವಹಾರ ತ್ಯಜಿಸುವ! (ಎ)
-ಲ್ಲಾ ರಾಮಮಯವೆಂದರಿಯುವ!
ಕೇಡು ಯಾರಿಗೂ ಮಾಡದಿರುವ!
ಶರಣನಾದಾತ ಹೀಗಿರುವ! (ಅ)
-ವ ನಿರಂಜನಾದಿತ್ಯನಾಗುವ!!!
ಉತ್ಸಾಹವಿಲ್ಲ ಕರ್ಮಕ್ಕೆ ಪ್ರೋತ್ಸಾಹವಿಲ್ಲ! (ತಾ) 3(1139)
-ತ್ಸಾರ ಮಾಡಿದರಾವುದೂ ಸಾಗುವುದಿಲ್ಲ!
ಹರಿ ಕೃಪೆಯಿಂದಲೇ ನಡೆಯಬೇಕೆಲ್ಲ!
ವಿಧಿಯೆಂದಳುತ್ತ ಹಾಳಾಯ್ತು ಕಾಲವೆಲ್ಲ! (ಬ)
-ಲ್ಲವರ ಮಾತನುಭವಕ್ಕೆ ಬರುತ್ತಿಲ್ಲ!
ಕರ್ಮ ಹೀಗಾಗಿ ಕೆಡುತ್ತಿರುವುದೆಲ್ಲೆಲ್ಲ! (ಮ)
-ರ್ಮವರಿತವರ ದರ್ಶನವಾಗುತ್ತಿಲ್ಲ! (ಧ)
-ಕ್ಕೆಯಿದರಿಂದಾರ್ಯ ಸಂಸ್ಕೃತಿಗಳಿಗೆಲ್ಲಾ!
ಪ್ರೋತ್ಸಾಹೋತ್ಸಾ ಹಕ್ಕಗತ್ಯೆಂದರೆ ತಪ್ಪಿಲ್ಲ! (ಉ)
-ತ್ಸಾಹ ಹೀನರೆಂದು ಜರೆದು ಫಲವಿಲ್ಲ! (ಅ)
-ಹರ್ನಿಶಿಯಿದೇ ಚಿಂತೆ ಸಾಧಕರಿಗೆಲ್ಲ!
ವಿಶ್ವನಾಥ ತಾನೇ ಬಗೆ ಹರಿಸಲೆಲ್ಲ! (ಬ)
-ಲ್ಲ ನಿರಂಜನಾದಿತ್ಯನಲ್ಲೀ ಹವಾಲೆಲ್ಲ!!!
ಉತ್ಸಾಹವಿಲ್ಲದುತ್ಸವವಾಗದು! (ಪ್ರೋ) 4(1638)
-ತ್ಸಾಹವೀಯದೆ ಉತ್ಸಾಹ ತೋರದು!
ಹರಿ ಭಕ್ತನಲಕ್ಷಿಸಬಾರದು!
ವಿಧಿಯೆಂದವನ ತಳ್ಳಕೂಡದು! (ಬ)
-ಲ್ಲ ಸುಜ್ಞಾನಿಗೆ ಕಾಠಿಣ್ಯ ಸಲ್ಲದು!
ದುಡಿಸ್ಯುಪವಾಸವಿಡಲಾಗದು! (ಸ)
-ತ್ಸಹವಾಸ ವ್ಯರ್ಥವಾಗಬಾರದು! (ಭ)
-ವಪಾಶವೇಕಿನ್ನೂ ಬಂಧಿಸಿಹುದು?
ವಾದಿಸದ ಸಾಧನೆ ಬೇಕಿಹುದು!
ಗತಿ, ಸ್ಥಿತಿ ಸ್ಥಿರವಾಗಾಗುವುದು! (ಜಾ)
-ದು, ನಿರಂಜನಾದಿತ್ಯಗಾಗದು!!!
ಉತ್ಸಾಹವೆಷ್ಟಿದ್ದರೇನೋ ಮಿತ್ರಾ? (ಪ್ರೋ) 4(1969)
-ತ್ಸಾಹ ನೀಡಬೇಡವೇನೋ ಮಿತ್ರಾ?
ಹರ್ಷವಾಗಿರುವುದೆಂತೋ ಮಿತ್ರಾ? (ಸ)
-ವೆಯುತಿದೆ ದೇಹ ನೋಡೋ ಮಿತ್ರಾ! (ದೃ)
-ಷ್ಟಿಯಿನ್ನೂ ಬಿದ್ದಿಲ್ಲವೇಕೋ ಮಿತ್ರಾ? (ಇ)
-ದ್ದ ಮಾತಾಡಿಹೆನು, ಕೇಳೋ ಮಿತ್ರಾ! (ಆ)
-ರೇನ ಗೈವರೀ ವಿಧಿಗೆ? ಮಿತ್ರಾ!
ನೋವೆಲ್ಲಾ ತೊಡೆದು ಹಾಕೋ ಮಿತ್ರಾ!
ಮಿತ್ರಧರ್ಮದಲ್ಲವೇನೋ ಮಿತ್ರಾ?
ತ್ರಾಹಿ, ನಿರಂಜನಾದಿತ್ಯ ಮಿತ್ರಾ!!!
ಉದಯವಾಯ್ತರ್ವತ್ತಾರೆನ್ನುವರು! 5(2536)
ದರ್ಶನವಿದು ಭಾಗ್ಯವೆನ್ನುವರು! (ಭ)
-ಯ, ಭಕ್ತಿಯಿಂದ ಕಾಪಾಡೆನ್ನುವರು! (ಭ)
-ವಾಬ್ಧಿಯಿಂದುದ್ಧಾರ ಮಾಡೆನ್ನುವರು! (ಹೋ)
-ಯ್ತಜ್ಞಾನ ನಿನ್ನಾಜ್ಞೆಯಿಂದೆನ್ನುವರು! (ಸ)
-ರ್ವ ಕಾರಣಕರ್ತ ನೀನೆನ್ನುವರು!
(ಕಿ)ತ್ತಾಟ, ಸುತ್ತಾಟ ಸಾಕಿನ್ನೆನ್ನುವರು! (ಕ)
-ರೆಸಿಕೋ ನಿನ್ನ ಪಾದಕ್ಕೆನ್ನುವರು! (ತಿ)
-ನ್ನುವೆವ್ನಾವ್ನಿನ್ನ ಪ್ರಸಾದೆನ್ನುವರು! (ಗು)
-ರು ನಿರಂಜನಾದಿತ್ಯನೆನ್ನುವರು!!!
ಉದ್ಯೋಗಿ ನೀನಾಗಿರಬೇಕಮ್ಯಾ! (ಪಾ) 4(1406)
-ದ್ಯೋಪಚಾರ ಪೂಜೋದ್ಯೋಗವಮ್ಮಾ! (ತ್ಯಾ)
-ಗಿಯಾಗಿರಬೇಕುದ್ಯೋಗಕ್ಕಮ್ಮಾ!
ನಿಚೋಚ್ಛವೆಣಿಸಬಾರದಮ್ಮಾ!
ನಾಮಸ್ಮರಣೆ ಮಾಡಬೇಕಮ್ಮಾ!
ಗಿರಿಜೆಗಾರಾಮ ಮಂತ್ರವಮ್ಮಾ! (ಪ)
-ರಮ ಪಾವನೆಯದರಿಂದಮ್ಮಾ!
ಬೇಡನ್ಯಕಸುಬು ನಿನಗಮ್ಮಾ!
ಕನಕಾಭರಣದೇ ಕಾಣಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯೋದ್ಯೋಗ್ಯಮ್ಮಾ!!!
ಉದ್ಯೋಗಿಯಾಗ್ಬೇಕು ನೀನಿಲ್ಲೇ! (ಸ) 4(2296)
-ದ್ಯೋಜಾತ ಕೊಡಬೇಕದಿಲ್ಲೇ! (ಮು)
-ಗಿಸಬೇಕು ಜನ್ಮವನ್ನಿಲ್ಲೇ! (ನ್ಯಾ)
-ಯಾನ್ಯಾಯವರಿಯಬೇಕಿಲ್ಲೇ! (ಆ)
-ಗ್ಬೇಕು ದಿಗ್ವಿಜಯವಿದ್ದಲ್ಲೇ!
ಕುರುಕುಲಾಂತ್ಯವಾಗ್ಬೇಕಿಲ್ಲೇ!
ನೀ, ನಾನೆಂಬುದಳಿಯಲಿಲ್ಲೇ!
ನಿತ್ಯಾನಂದವೊದಗಲಿಲ್ಲೇ! (ಇ)
-ಲ್ಲೇ ನಿರಂಜನಾದಿತ್ಯನಲ್ಲೇ!!!
ಉದ್ರೇಕ ಶಾಂತಿಯಿಂದ ತದ್ರೂಪ ಸಿದ್ಧಿ! (ಭ) 6(3556)
-ದ್ರೇಶ್ವರನೇ ಅದು ತಾನೆಂಬ ಪ್ರಸಿದ್ಧಿ!
ಕರ್ಮ, ಧರ್ಮ ಬದ್ಧವಾದ್ರೆ ಮನಶ್ಯುದ್ಧಿ!
ಶಾಂಭವಿಯಾದರ್ಶದಿಂದ ಭಕ್ತಿ ವೃದ್ಧಿ! (ತಿ)
-ತಿಕ್ಷಾಪತಿ ಸೇವೆಯಿಂದದ್ವೈತ ಸಿದ್ಧಿ! (ತಾ)
-ಯಿಂದಧಿಕ ದೈವವಿಲ್ಲೆಂದು ಪ್ರಸಿದ್ಧಿ!
ದರ್ಪ, ದಂಭದಿಂದ ಕೆಡುವುದು ಬುದ್ಧಿ!
ತತ್ವ ಜೀವನಕ್ಕಿದೆರಡೂ ಉಪಾಧಿ! (ಚಿ)
-ದ್ರೂಪವೆಂಬುದೊಂದೇ ನಿತ್ಯ, ಸತ್ಯ, ನಿಧಿ!
ಪರಮಾರ್ಥ ಸಿದ್ಧನಿಗಿಲ್ಲ ದುರ್ವಿಧಿ!
ಸಿದ್ಧಿ, ರಿದ್ಧಿಗಿಂತಧಿಕ ಯೋಗಸಿದ್ಧಿ! (ಸಿ)
-ದ್ಧಿ, ನಿರಂಜನಾದಿತ್ಯಗಧ್ಯಾತ್ಮ ಸಿದ್ಧಿ!!!
ಉದ್ವೇಗ ಮಾಯೆಗಂದನುದ್ವೇಗೀಶ್ವರಗಂದ! (ಉ) 1(100)
-ದ್ವೇಗಕಿರುವುದು ಮರ್ಯಾದೆ ಜಗದಿಂದ!
ಗತಿಯಿದನುದ್ವೇಗದಿಂದ ವಂದ್ಯ ಗೋವಿಂದ!
ಮಾಯೆ ಮಾಡುವುದು ಅನಿತ್ಯದಾ ಮೋಹಾನಂದ!
ಯೆಲ್ಲಾ ಸುಳ್ಳು, ಪೊಳ್ಳೆಂದಿರಲದೇ ಆತ್ಮಾನಂದ!
ಗಂಗೆ ಧರಣಿಗಿಳಿದಳು ಉದ್ವೇಗದಿಂದ! (ಅ)
-ದ ಧರಿಸಿಹನು, ಶಿವ ಅನುದ್ವೇಗದಿಂದ! (ಅ)
-ನುದ್ವೇಗ ನೀಡುವುದು ಸತ್ಯ ಸಹಜಾನಂದ!
ದ್ವೇಷಾಸೂಯೆಗೆಡೆಯಾಗುವುದುದ್ವೇಗದಿಂದ!
ಗೀತೆಯುಸುರಿದೀ ನುಡಿ ನಿಜವದರಿಂದ! (ಅ)
-ಶ್ವಮೇಧಾದಿಗಳಾನಂದವೆಲ್ಲುದ್ವೇಗದಿಂದ!
ರಮಿಸಬೇಕದರಿಂದನುದ್ವೇಗಾತ್ಮಾನಂದ!
ಗಂಗಾಧರ ಕಾಪಾಲಿಯಾದುದುದ್ವೇಗದಿಂದ! (ಅ)
-ದರಿಂದ ನಿರಂಜನಾದಿತ್ಯನುದ್ವೇಗಾನಂದ!!!
ಉಪಕಾರ ಸ್ಮರಣೆ ಮಾಡು! (ಅ) 5(2935)
-ಪಕಾರ ಬುದ್ಧಿಯನ್ನು ಸುಡು!
ಕಾಲಚಕ್ರದ ಗತಿ ನೋಡು!
ರಕ್ತಪಾತ ನಾಡಿಗೆ ಕೇಡು!
ಸ್ಮರಿಸಿ ದತ್ತನ ಕೊಂಡಾಡು! (ಪ)
-ರರ ವಿತ್ತಾಪಹಾರ ಬಿಡು! (ಜಾ)
-ಣೆ ನೀನಾಗಿ ಬಿಟ್ಟಿಡು ಸೇಡು!
ಮಾಯಾ ಮೋಹ ಬಿಟ್ಟೊಡನಾಡು! (ಬೀ)
-ಡು ನಿರಂಜನಾದಿತ್ಯ ನಾಡು!!!
ಉಪಕಾರ ಸ್ಮರಣೆಯಿಲ್ಲದ ಕಾಲ! 3(1256)
ಪರಮಾರ್ಥ ಚಿಂತನೆಗುಪೇಕ್ಷಾ ಕಾಲ!
ಕಾಮಾತಿರೇಕದಿಂದೊದ್ದಾಡುವ ಕಾಲ! (ಪ)
-ರ ಪೀಡೆಯೇ ಧರ್ಮವಾಗಿರುವ ಕಾಲ! (ವಿ)
-ಸ್ಮಯ, ವಿಚಿತ್ರ ಪ್ರದರ್ಶನದ ಕಾಲ!
ರವಿ, ಚಂದ್ರರನ್ನು ಕೆಣಕುವ ಕಾಲ! (ಕಾ)
-ಯಿದೆ, ಕಾನೂನು ಹದಗೆಟ್ಟಿಹ ಕಾಲ! (ಬ)
-ಲ್ಲವರಿಗೆಲ್ಲಾ ಕಲ್ಲೆಸೆಯುವ ಕಾಲ!
ದಯಾ, ದಾಕ್ಷಿಣ್ಯಕ್ಕೆಡೆಯಿಲ್ಲದ ಕಾಲ!
ಕಾದಾಟದಿಂದ ಕಂಗೆಟ್ಟಿರುವ ಕಾಲ! (ಕಾ)
-ಲ, ನಿರಂಜನಾದಿತ್ಯನಿಗೊಂದು ಲೀಲ!!!
ಉಪಕಾರ ಸ್ಮರಿಸುವವರ್ವಿರಳ! 6(3684)
ಪರಮಾತ್ಮ ಕೊಡುತ್ತಿಹನು ಬಹಳ!
ಕಾರ್ಯವಾದ್ಮೇಲ್ಮರೆಯದವರ್ವಿರಳ!
ರಕ್ತಗತವಾದಾ ಗುಣ ನರ ಕೀಳ!
ಸ್ಮರಿಸುವನು ಆದಾಗ ಕಿರುಕುಳ!
ರಿಪುಗಳ ಸಂಹರಿಸೆಂದಿಡ್ವ ಗೋಳ!
ಸುಖ ಬಂದಾಗ ದೇವರ ಹೆಸ್ರು ಹೇಳ!
ವರ ಗುರುಸೇವೆ ಮಾಡೆಂದರೆ ಕೇಳ! (ಭ)
-ವ ಸಾಗರದಿಂದ ಹೀಗಾಗಿ ಮೇಲೇಳ! (ಗ)
-ರ್ವಿಯಾಗಲ್ಲಿಲ್ಲಿ ತಿರುಗುವಾ ಮರುಳ!
ರಕ್ಕಸನ ಕೈಯಿಂದ ಪಾರಾದ ಬಾಳ! (ಬಾ)
-ಳ ಪ್ರಹ್ಲಾದ ನಿರಂಜನಾದಿತ್ಯ ಬಾಳ!!!
ಉಪಚಾರ ಮಾನ್ಯವಮ್ಮಾ! 3(1133)
ಪಡಬೇಡ ದುಃಖವಮ್ಮಾ!
ಚಾಮುಂಡಾಂಬೆ ವಿಮಲಮ್ಮಾ!
ರಗಳೆ ಯೋಗಿಯೊಲ್ಲಮ್ಮಾ!
ಮಾರ್ಗದರ್ಶಿ ನೀನಾಗಮ್ಮಾ! (ಅ)
-ನ್ಯರಿಂದಾಗದೀ ಕಾರ್ಯಮ್ಮಾ!
ವರಗುರು ಶಿವನಮ್ಮಾ! (ಅ)
-ಮ್ಮಾ, ನಿರಂಜನಾದಿತ್ಯಮ್ಮಾ!!!
ಉಪನಯನವಾಗಬೇಕು! ಜ್ಞಾನ ಬರಬೇಕು! 1(108)
ಪರದಾಸ್ಯ ಹೋಗಬೇಕು! ಸ್ವತಂತ್ರ ಇರಬೇಕು!
ನರಳಾಟ ತಪ್ಪಬೇಕು! ಆರೋಗ್ಯವಾಗಬೇಕು!
ಯಮ ನಿಯಮವಿರಬೇಕು! ತಪ ಸಾಗಬೇಕು!
ನಗುಮೊಗವಿರಬೇಕು! ಸದಾ ಜಪಿಸಬೇಕು!
ವಾಸವಾಗಿರಬೇಕು! ಬಾಳು ಬೆಳಕಾಗಬೇಕು!
ಗತಿ ಸ್ಥಿರವಿರಬೇಕು! ಗುರುಕರುಣೆ ಬೇಕು!
ಬೇಡದಿರಬೇಕು! ಬಂದುದಕಾನಂದಿಸಬೇಕು!
ಕುಪಿತನಾಗದಿರಬೇಕು! ಶಾಂತಿ ಕಾಣಬೇಕು!
ಜ್ಞಾನ ಮೂಡುತಿರಬೇಕು! ಮಾಯೆಯಡಗಬೇಕು!
ನಯ, ವಿನಯ ಬೇಕು! ನಡೆ ಶುದ್ಧವಾಗಬೇಕು!
ಬಯಲಾಸೆ ಬಿಡಬೇಕು! ಬ್ರಹ್ಮ ತಾನಾಗಬೇಕು!
ರಜ ಧರಿಸಬೇಕು! ಬುದ್ಧಿ ವೃದ್ಧಿಯಾಗಬೇಕು!
ಬೇಕುಲ, ನಿರಂಜನಾದಿತ್ಯನದೆಂದು ಇರಬೇಕು!!!
ಉಪವಾಸ ಮಾಡದೆ ಗತ್ಯಂತರವಿಲ್ಲ! (ನೆ) 4(2411)
-ಪಮಾತ್ರಕ್ಕೇನಾದ್ರೂ ತಿಂದ್ರೂ ಪರವಾ ಇಲ್ಲ!
ವಾಸನೆ ಹೊಟ್ಟೆಯದು ಹೋಗಲೇಬೇಕೆಲ್ಲ!
ಸಡಿಲ್ಪಿಟ್ರೆ ಮನಸ್ಸ ಉಳಿಗಾಲವಿಲ್ಲ!
ಮಾಯಾಜಾಲ ಕತ್ತರಿಸ್ಬೇಕ್ವಿವೇಕಿಗ್ಳೆಲ್ಲ! (ಒ)
-ಡನಾಡ್ಬೇಕು ಸಾಧು, ಸತ್ಪುರುಷರಲ್ಲೆಲ್ಲ!
ದೆವ್ವಗಳಲ್ಲಿ ನಂಬಿಗೆ ಬಿಡಬೇಕೆಲ್ಲ! (ತ್ಯಾ)
-ಗಬುದ್ದಿಯಿಂದ ನೆಮ್ಮದಿ! ಸಂಶಯವಿಲ್ಲ! (ಅ)
-ತ್ಯಂತೋಪಕಾರಿ ಯೋಗಾಭ್ಯಾಸ, ಮಾಡಿರೆಲ್ಲ!
ತತ್ವ ಚಿಂತನೆಗೆ ದಾರಿಯಾಗ್ವುದಿದೆಲ್ಲ! (ವ)
-ರಗುರುಸೇವೆ ತಪ್ಪದೇ ಮಾಡಬೇಕೆಲ್ಲ!
ವಿಘ್ನಗಳನ್ನವನೇ ತಪ್ಪಿಸುವನೆಲ್ಲ! (ಸೊ)
-ಲ್ಲ ನಿರಂಜನಾದಿತ್ಯನದ್ದು ಕೇಳಿರೆಲ್ಲ!!!
ಉಪವಾಸ ಮಾಡ್ಲೇಬೇಕ್ನಾನಿಂದು! 4(2475)
ಪಡಲಾರೆ ಕಷ್ಟವಿನ್ನು ಮುಂದು! (ಹ)
-ವಾಮಾನ ಸರಿಯಾಗಿಲ್ಲವಿಂದು! (ಅ)
-ಸಮಾಧಾನ ಚಿತ್ತವಿದೆ ಇಂದು!
ಮಾಡಲಾರೆನಾವ ಕೆಲ್ಸವಿಂದು! (ಬಿ)
-ಡ್ಲೇಬಾರದಾರನ್ನೂ ಒಳಗಿಂದು!
ಬೇಸರ ಪಡ್ಬಾರ್ದಾರಿದಕ್ಕಿಂದು! (ಬೇ)
-ಕ್ನಾನಾದ್ರೆ ಕರೆದಾಗ್ಬನ್ನಿ ಮುಂದು!
ನಿಂದೆಗಲಕ್ಷ್ಯ ನನಗೆಂದೆಂದು! (ಇ)
-ದು ನಿರಂಜನಾದಿತ್ಯೇಚ್ಛೆಯಿಂದು!!!
ಉಪಾಯವನ್ನಪಾಯ ಬಿಟ್ಟಿರದಯ್ಯಾ! 4(1882)
ಪಾರಮಾರ್ಥಿಕದಲ್ಲುಪಾಯವಿಲ್ಲಯ್ಯಾ!
ಯಮ, ನಿಯಮದಿಂದದು ಶುದ್ಧವಯ್ಯಾ!
ವರ ಗುರುಭಕ್ತಿ ಕಾವಲವದಕಯ್ಯಾ! (ಉ)
-ನ್ನತಾತ್ಮ ಸಾಕ್ಷಾತ್ಕಾರವೇ ಗುರಿಯಯ್ಯಾ! (ಅ)
-ಪಾಯೈಹಿಕೋಪಾಯಕ್ಕೆ ನಿಶ್ಚಯವಯ್ಯಾ!(ಕಾ)
-ಯಸುಖಕ್ಕಾಗಿ ವಿವಿಧೋಪಾಯವಯ್ಯಾ!
ಬಿದ್ದೆದ್ದೊದ್ದಾಡುವ ಪರಿಣಾಮವಯ್ಯಾ! (ಕೆ)
-ಟ್ಟಿಹ ಜೀವ ಅನಿತ್ಯ ಸ್ವಾರ್ಥದಿಂದಯ್ಯಾ! (ಪ)
-ರಮಾನಂದ ಪ್ರಾಪ್ತಿ ಪರಮಾರ್ಥಕಯ್ಯಾ!
ದಮೆ, ಶಮೆಗಳಂಗರಕ್ಷಕರಯ್ಯಾ! (ಅ)
-ಯ್ಯಾ, ನಿರಂಜನಾದಿತ್ಯಗಿಲ್ಲಪಾಯಯ್ಯ!!!
ಉಪ್ಪಿಟ್ಟಿಡ್ಲಿ ದೋಸೆ ಬೇಕೇನಪ್ಪಾ? (ಒ) 3(1063)
-ಪ್ಪಿಗೆಯಾದದ್ದು ತಿನ್ನ ಬೇಕಪ್ಪಾ! (ರೊ)
-ಟ್ಟಿ ಬೇಕಾದರದನ್ನೇ ತಿನ್ನಪ್ಪಾ! (ಕೊ)
-ಡ್ಲಿ, ಬಿಡ್ಲಿ, ನಿನ್ನಿಷ್ಟ ತಿಳಿಸಪ್ಪಾ!
ದೋಷ ನಿನಗಾಗಬಾರದಪ್ಪಾ! (ಆ)
-ಸೆ ನಿನಗೇನಿಲ್ಲೆಂದು ಗೊತ್ತಪ್ಪಾ!
ಬೇಕೇನಾದರೊಂದೀ ದೇಹಕ್ಕಪ್ಪಾ!
ಕೇಳದಿದ್ದರೂ ತಾಯ್ಬಿಡಳಪ್ಪಾ!
ನಮಸ್ಕಾರ ಅಪ್ಪನಡಿಗಪ್ಪಾ! (ಅ)
-ಪ್ಪಾ, ನಿರಂಜನಾದಿತ್ಯ ನಮ್ಮಪ್ಪಾ!!!
ಉಪ್ಪು ಹಾಕಿಲ್ಲ, ಸಪ್ಪೆ ಬೇಕಿಲ್ಲಾ! (ತ) 4(1526)
-ಪ್ಪು ತಬ್ಬಲಿ ಮಕ್ಕಳ ಮೇಲೆಲ್ಲಾ!
ಹಾಸು, ಹೊಕ್ಕಾಗಿರ್ಪಾತ್ಮನೆಲ್ಲೆಲ್ಲಾ!
ಕಿರುಕುಳ ಅನ್ಯೋನ್ಯ ತಪ್ಪಿಲ್ಲಾ! (ಬ)
-ಲ್ಲವರಿಗೇನೂ ಕಡಿಮೆಯಿಲ್ಲಾ!
ಸತ್ಯ, ಧರ್ಮಾಚರಣೆಯಲ್ಲಿಲ್ಲಾ! (ಕ)
-ಪ್ಪೆ, ಹಾವುಗಳ ಬಾಳೇ ಎಲ್ಲೆಲ್ಲಾ!
ಬೇರಾರೂ ಕಾರಣರಿದಕಲ್ಲಾ!
ಕಿವಿ, ಬಾಯ್ಕಣ್ಣಿತ್ತು ಕೊಂದಾ!! “ಅಲ್ಲಾ”! (ಎ)
-ಲ್ಲಾ, ನಿರಂಜನಾದಿತ್ಯಾನಂದಲ್ಲಾ!!!
ಉಬ್ಬೆಗೆ ಹಾಕಿದ ಮೇಲೆ ಗಬ್ಬಿನ ಮಾತೇಕೆ? (ಅ) 4(2031)
-ಬ್ಬೆಯ ಬಳಿಯಿರುವಾಗ ತಬ್ಬಲ್ಯೆನಲೇಕೆ?
ಗೆಳೆಯ ಸದ್ಗುರುವಾಗಿರುವಾಗ್ಭಯವೇಕೆ?
ಹಾರ ಹಾಕಿ ವರಿಸಿದ ಮೇಲ್ಸಂದೇಹವೇಕೆ?
ಕಿವುಡಾದ ಮೇಲೆ ಕೇಳುವ ಚಪಲವೇಕೆ?
ದನ ಕರೆವಾಗ ಹಾಲಿಲ್ಲವೆನುವುದೇಕೆ?
ಮೇಳ ತಾಳ, ಗಂಟಲಿದ್ದೂ ಹಾಡಬಾರದೇಕೆ? (ಒ)
-ಲೆಯುರಿಯಿರುವಾಗಡಿಗೆ ಮಾಡ್ಬಾರದೇಕೆ?
ಗಗನಮಣಿಯಿರುವಾಗೊದ್ದೆಯುಡ್ವುದೇಕೆ? (ಡ)
-ಬ್ಬಿಯಲ್ಲೂಟಾರೋಗ್ಯವಿರ್ಪಾಗುಪವೇಕೆ?
ನದಿ ನೀರಿರುವಾಗ ಸ್ನಾನಬಿಡುವುದೇಕೆ?
ಮಾರ್ಗದರ್ಶಿಯಿರುವಾಗ ಅನುಮಾನವೇಕೆ?
ತೇಲ್ಬುರ್ಡೆಯಿರ್ಪಾಗ ಮುಳುಗುವ ಭಯವೇಕೆ? (ಏ)
-ಕೆ ನಿರಂಜನಾದಿತ್ಯನಂತಿಬಾರದೇಕೆ???
ಉಮಾ ಮಹೇಶ್ವರೀ ರಾಜೇಶ್ವರಿ! 3(1305)
ಮಾರಿ ಗರ್ವದಿಂದೀ ಮಹೇಶ್ವರಿ!
ಮಹೇಶನರಸೀ ರಾಜೇಶ್ವರಿ!
ಹೇರಂಬ ಜನನೀ ಮಹೇಶ್ವರಿ! (ನ)
-ಶ್ವರಾಶಾ ವಿಜಯೀ ರಾಜೇಶ್ವರಿ! (ನಾ)
-ರೀ ಶಿರೋಮಣಿ ಈ ಮಹೇಶ್ವರಿ! (ಕ)
-ರಾಳ ಭದ್ರಕಾಳೀ ರಾಜೇಶ್ವರಿ! (ಅ)
-ಜೇಯ ಮಾಯಾಶಕ್ತೀ ಮಹೇಶ್ವರಿ! (ವಿ)
-ಶ್ವದಾದ್ಯಂತ ರೂಪೀ ರಾಜೇಶ್ವರಿ! (ಹ)
-ರಿನಿರಂಜನಾದಿತ್ಯಾತ್ಮೇಶ್ವರಿ!!!
ಉರಿಯ ಕಾರಣವನ್ನಾರಿಸು! 6(4047)
ರಿಪುಗಳನ್ನು ದೂರ ಓಡಿಸು!
ಯಶಸ್ಸಿಗಿರ್ಬೇಕ್ಜಿತ ಮನಸ್ಸು!
ಕಾಲಾಕಾಲ ಆಮೇಲೆ ಎಣಿಸು!
ರಣಧೀರನೆನಿಸಿ ಜಯಿಸು! (ತೃ)
-ಣ ಸಮಾನ ಹಣವೆಂದೆಣಿಸು!
ವರ ಗುರುಪಾದಕ್ಕೆ ನಮಿಸು! (ಮ)
-ನ್ನಾಥ, ಶ್ರೀಕಾಂತ ನೀನೆಂದೊಪ್ಪಿಸು! (ಹ)
-ರಿ, ಹರ, ಬ್ರಹ್ಮನೆಂದವ್ನರ್ಚಿಸು! (ಅ)
-ಸು, ನಿರಂಜನಾದಿತ್ಯಗರ್ಪಿಸು!!!
ಉರಿಯಿತು ಶರೀರ, ಸುರಿಯಿತು ಬೆವರು! 6(3996)
ರಿಸಿಗಳ್ಯಾರಿಂತು ತಪಸ್ಸು ಮಾಡಿಹರು? (ಆ)
-ಯಿತದಕ್ಕೇನೇನೆಂದರುಹ ಬೇಕೀಗವರು!
ತುಟಿ ಎರಡು ಮಾಡದೇಕಿರುವರವರು?
ಶರಣಾಗತಿಯನ್ನೊದ್ದಿರುವರೀಗವರು!
ರೀತಿ, ನೀತಿ, ಕಲಿಸದೇ ಬಾಯಿ ಮುಚ್ಚಿಹರು! (ಪ)
-ರಮಾರ್ಥದ ಹಿರಿಮೆ ತೋರದಿರುತಿಹರು!
ಸುಖ, ದುಃಖಕ್ಕಾಗದವರೆಂಥಾ ಹಿರಿಯರು? (ಯಾ)
-ರಿದಕ್ಕೆಲ್ಲಾ ಪರಿಹಾರ ತೋರಿಸುವವರು? (ತಾ)
-ಯಿ, ತಂದೆ ನಮ್ಮೆಲ್ಲರಿಗಾಗಿರುವಾ ದೇವರು!
ತುರೀಯಾತೀತನವನೆಂಬರು ಬಲ್ಲವರು!
ಬೆಟ್ಟದ ಶಿಖರವೇರಿರುತ್ತಿಹನೆಂಬರು!
ವರ ಗುರು ದತ್ತಾತ್ರೇಯನವನೆನುವರು!
ರುಜು ಮಾರ್ಗಿ ನಿರಂಜನಾದಿತ್ಯಾತೆನ್ನುವರು!!!
ಉಷಾ! ಅನಿರುದ್ಧ ತಾನೊಬ್ಬ ಪುರುಷ! (ದೋ) 5(3164)
-ಷಾರೋಪಣೆ ಮಾಡುವುದಲ್ಲ ಪೌರುಷ!
ಅಪ್ಪನಮೇಲೆ ಬಂತು ನಿನಗೆ ರೋಷ! (ಅ)
-ನಿರುದ್ಧನೊಡನಾಟ ನಿನಗೆ ತೋಷ! (ಗು)
-ರು ಗೋಪಾಲ ನಿಮಗಿತ್ತ ಪಾರಿತೋಷ! (ಶು)
-ದ್ಧವಾದುದಾಗ ಬಾಣನಸು ಸಂತೋಷ!
ತಾಮಸ ಬುದ್ಧಿಯಲ್ಲಿ ತುಂಬಿತ್ತು ದ್ವೇಷ! (ತಾ)
-ನೊಪ್ಪದಿದ್ದನು ಬಾಣ ವೈಷ್ಣವ ವೇಷ! (ಕೊ)
-ಬ್ಬ ಮುರಿದು ಕೃಷ್ಣ ಕಳೆದನು ದೋಷ!
ಪುರಾಣದರ್ಥ ತಿಳಿದ್ಬಾಳ್ಬೇಕ್ಮಾನುಷ! (ಪ)
-ರುಷ ಸ್ಪರ್ಶದಿಂದ ಪಾಷಾಣ ನಿರ್ದೋಷ! (ದೋ)
-ಷದೂರ ನಿರಂಜನಾದಿತ್ಯಾ ಪರುಷ!!!
ಉಸಿರಲ್ಲ, ಮನಸಲ್ಲ, ನಾನೆಲ್ಲೆಲ್ಲಾ! 4(1416)
ಸಿಹಿಯಲ್ಲ, ಕಹಿಯಲ್ಲ, ನಾನೆಲ್ಲೆಲ್ಲಾ!
ರಸವಲ್ಲ, ಕಸವಲ್ಲ, ನಾನೆಲ್ಲೆಲ್ಲಾ! [ಪ]
-ಲ್ಲವವಲ್ಲ, ಫಲವಲ್ಲ, ನಾನೆಲ್ಲೆಲ್ಲಾ!
ಮರವಲ್ಲ, ಗಿಡವಲ್ಲ, ನಾನೆಲ್ಲೆಲ್ಲಾ!
ನರನಲ್ಲ, ನಾರಿಯಲ್ಲ, ನಾನೆಲ್ಲೆಲ್ಲಾ!
ಸಟೆಯಲ್ಲ, ದಿಟವಲ್ಲ, ನಾನೆಲ್ಲೆಲ್ಲಾ! [ಕ]
-ಲ್ಲದುವಲ್ಲ, ಹುಲ್ಲದಲ್ಲ, ನಾನೆಲ್ಲೆಲ್ಲಾ!
-ನೆಲವಲ್ಲ, ಜಲವಲ್ಲ ನಾನೆಲ್ಲೆಲ್ಲಾ! [ನ]
-ಲ್ಲೆಯಾನಲ್ಲ, ನಲ್ಲಾನಲ್ಲ, , ನಾನೆಲ್ಲೆಲ್ಲಾ! [ಅ]
-ಲ್ಲಾ ನಿರಂಜನಾದಿತ್ಯಾನಂದನೆಲ್ಲೆಲ್ಲಾ!!!
ಉಸಿರಾಟವಿರುವವರೆಗೆಲ್ಲಾ! 6(3575)
ಸಿಹಿ, ಕಹಿ, ಹುಳಿ, ಖಾರಗಳೆಲ್ಲಾ!
ರಾತ್ರಿ, ಹಗಲು, ಉದಯಾಸ್ತವೆಲ್ಲಾ! (ಕೂ)
-ಟ, ನೋಟ, ಆಟ, ಪಾಠಾದಿಗಳೆಲ್ಲಾ!
ವಿಕಲ್ಪ, ಸಂಕಲ್ಪಾರೋಪಗಳೆಲ್ಲಾ!
ರುಚಿ, ಶುಚಿ, ಹಸಿವೆ, ದಾಹವೆಲ್ಲಾ!
ವಸನ, ಅಶನಗಳಿಚ್ಛೆಯೆಲ್ಲಾ!
ವರ್ಣಾಶ್ರಮ ಧರ್ಮದಾರ್ಭಟವೆಲ್ಲಾ! (ಹ)
-ರೆಯ, ವೃದ್ಧಾಪ್ಯಾದ್ಯವಸ್ಥೆಗಳೆಲ್ಲಾ!
ಗೆಳೆಯ, ಗೆಳತಿಯರ್ಮೋಹವೆಲ್ಲಾ! (ಬ)
-ಲ್ಲಾ, ನಿರಂಜನಾದಿತ್ಯಾನಂದವೆಲ್ಲಾ!!!
ಉಸಿರೆಳೆಯುತಿದೆ ನೋಡು! 6(3488)
ಸಿರಿ ಸಹಿತೀ ಬೀಡ ಬಿಡು! (ಮ)
-ರೆಯದೀಗಾದ್ರು ಜಪಮಾಡು! (ವೇ)
-ಳೆ ಕಾದು ಅಪ್ಪನನ್ನು ಕೂಡು!
ಯುಗವಾವುದಾದ್ರೇನು? ಓಡು!
ತಿರುಗಿ ನೋಡ್ಬೇಡ ಈ ನಾಡು! (ಹಿಂ)
-ದೆ, ಮುಂದಿನ ಮಾತನ್ನು ಸುಡು!
ನೋಟ, ಕೂಟಾನಂದ ಸಾಕ್ಮಾಡು! (ಪಾ)
-ಡು, ನಿರಂಜನಾದಿತ್ಯ ಹಾಡು!!!

ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
